text
stringlengths
0
61.5k
ಅರುಣ್: ಜಾನಪದ ಅಧ್ಯಯನಗಳನ್ನು ಅಭಿವೃದ್ಧಿ ಅಧ್ಯಯನ ವಿಧಾನಗಳ ಮೂಲಕ ಅಂತರ್ ಶಿಸ್ತೀಯ ಅಧ್ಯಯನ ಮಾಡಲು ಸಾದ್ಯವೆ? ಹಾಗಿದ್ದಲ್ಲಿ ಒಂದೆರಡು ಸಲಹೆಗಳನ್ನು ಕೊಡಿ.
ಡಾ..ಟಿ.ಆರ್.ಸಿ: ಇದಕ್ಕೆ Anthropology ಯ ತರಬೇತಿ, ಸೈದ್ಧಾಂತಿಕ ತಿಳುವಳಿಕೆ, ವ್ಯಾಪಕ ಅಧ್ಯಯನ ಬೇಕು. ನಮಗೆ ಇಷ್ಟವಿರಲಿ ಇಲ್ಲದಿರಲಿ ಇಂಗ್ಲೀಷ್ ಭಾಷೆಯ ಅಗತ್ಯವಿದೆ. ಈಗ ನಮ್ಮಲ್ಲಿ ಅಭಿವೃದ್ಧಿ ಅಧ್ಯಯನ ಎಂದರೆ ಉತ್ಪಾದನೆ, ಹಣ, ಬ್ಯಾಂಕು ಮುಂತಾದ ಸಂಗತಿಗಳಿಗೆ ಮೀಸಲಾದುದು ಮತ್ತು ಜಾನಪದವು ಭಾವುಕವಾದ ಸಂಗತಿಗಳಿಗೆ ಸಂಬಂಧಿಸಿದುದು ಎಂಬ ನಂಬಿಕೆ ಹಬ್ಬಿ ಬಿಟ್ಟಿದೆ. ಇದು ಹೋಗಬೇಕು. ಈ ಬಗೆಯ ರಿಸ್ಕಿಗೆ, ಸಾಹಸಕ್ಕೆ ನಾವು ಸಿದ್ದವಿದ್ದೇವೆಯೇ? ಇದು ಮಿಲಿಯನ್ ಡಾಲರ್ ಪ್ರಶ್ನೆ.
ಅರುಣ್: ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಅಭಿವೃದ್ದಿ ಅಧ್ಯಯನ ವಿಭಾಗದ ಚಿಂತಕರಾದ ನೀವು ಜಾನಪದ ವಿವಿಯ ಮೊದಲ ಆದ್ಯತೆಯ ಕೆಲಸಗಳು ಏನಾಗಿರಬೇಕು, ನಿಮ್ಮ ಕನಸಿನ ಜಾನಪದ ವಿವಿ ಹೇಗಿರುತ್ತೆ?
ಡಾ.ಟಿ.ಆರ್.ಸಿ:
೧. ಅಲ್ಲಿ ಮೊದಲು Anthropology ವಿಭಾಗವನ್ನು ಆರಂಭಿಸಬೇಕು. ಪ್ರತಿ ವಿಭಾಗದಲ್ಲಿ ಸಮಾಜಶಾಸ್ತ್ರದ ತಜ್ಞರು ಇರಬೇಕು. ಅಧ್ಯಯನ ವಿಧಾನದ ಬಗ್ಗೆ ಹೆಚ್ಚು ಮಹತ್ವ ನೀಡಬೇಕು.
೨. ಅಲ್ಲಿ ಸೇರುವವರೆಲ್ಲರಿಗೂ ಇಂಗ್ಲೀಷನ ಜ್ಞಾನ ಇರಲೆಬೇಕೆಂದೇನಿಲ್ಲ. ಆದರೆ ಜಾನಪದ ವಿವಿಯು ತನ್ನಲ್ಲಿ ಒಂದು ಪೂರ್ಣ ಪ್ರಮಾಣದ ಇಂಗ್ಲೀಷ್ ವಿಭಗವನ್ನು ಆರಂಭಿಸಬೇಕು. ಅಲ್ಲಿ ಅಧ್ಯಯನ ನಡೆಯಬೇಕಾಗಿಲ್ಲ. ಅಲ್ಲಿ ವಿದ್ವಾಂಸರಿಗೆ Functional English ತರಬೇತಿ ನೀಡಬೇಕು.
೩. ಒಂದು ತಿಂಗಳ, ಒಂದು ವರ್ಷದ ಅಧ್ಯಯನಗಳಿಗೆ ಪ್ರತಿಯಾಗಿ ದೀರ್ಘಕಾಲೀನ ಅಧ್ಯಯನಗಳನ್ನು ಅದು ಪ್ರೋತ್ಸಾಹಿಸಬೇಕು.
೪. ಮಹಿಳಾ ಜಾನಪದ ಅಧ್ಯಯನ ವಿಭಾಗವನ್ನು ಅದು ಅರಂಭಿಸಬೇಕು.
೫. ಜನಪದ ಆಚರಣೆಗಳನ್ನು ಗಣ್ಯರನ್ನು ಬರಮಾಡಿಕೊಳ್ಳುವುದಕ್ಕೆ, ವೈಭವೀಕರಣಕ್ಕೆ, ಬಳಸಿಕೊಳ್ಳಬಾರದು.
ರಲ್ಲಿ ಜುಲೈ 25, 2011 3 ಕಾಮೆಂಟ್‌ಗಳು:
ಮೊನ್ನೆ ಕಮಲಾಪುರದ ಓಣಿಯಲ್ಲಿ ಆರೇಳು ಹುಡುಗುರು, ತಲೆಯ ಮೇಲೆ ಮಣ್ಣಿನಿಂದ ಮಾಡಿದ ಬಸವಣ್ಣನನ್ನು ಮಾಡಿಕೊಂಡು ಹಾಡೇಳುತ್ತಾ, ನೀರು ಹಾಕಿಸಿಕೊಳ್ಳುತ್ತಾ, ಬಸವ ಬಸವ ಬಂದಾನ ಎನ್ನುವ ಹಾಡು ಹೇಳುತ್ತಾ ಬರುತ್ತಿದ್ದರು. ಅವರನ್ನು ನೋಡಿದಾಕ್ಷಣ ನಾವು ಬಾಲ್ಯದಲ್ಲಿ ಮಾಡುತ್ತಿದ್ದ ಗುರ್ಜವ್ವನ ನೆನಪಾಯಿತು.
ನಮಗಾಗ ಗುರ್ಜವ್ವನನ್ನು ಮಾಡುವ ಸಂಭ್ರಮ. ಸೆಗಣಿಯಿಂದ ಐದು ಗುರ್ಜವ್ವನ ಮೂರ್ತಿ ಮಾಡಿಕೊಂಡು, ಅದಕ್ಕೆ ಗರಿಕೆ, ತಂಗಡಕಿ ಹೂ ಸಿಕ್ಕಿಸಿಕೊಂಡು, ಹರಿಷಿಣ ಕುಂಕುಮ ಹಚ್ಚಿಕೊಂಡು ಮಣೆ ಮೇಲೆ ಇಟ್ಟುಕೊಂಡು ಗುರ್ಜವ್ವನನ್ನು ಮಾಡುತ್ತಿದ್ದೆವು. ಗುರ್ಜಿ ಹೋರುವವರೊಬ್ಬರನ್ನು ಆಯ್ಕೆ ಮಾಡುತ್ತಿದ್ದೆವು. ಹಾಗೆ ಹೊತ್ತವನ ಹಿಂದೆ ಸುಮಾರು ಮುವತ್ತಕ್ಕಿಂತ ಹೆಚ್ಚು ಹುಡುಗರು ಹುಯ್ಯೋ ಎನ್ನುವ ಕೇಕೆ ಹಾಕಿಕೊಂಡು ಮನೆಮನೆಗೆ ಹೋಗುತ್ತಿದ್ದೆವು. ಹಾಗೆ ಮನೆ ಮನೆಗೆ ಹೋದಾಗ ಮನೆಯವರು ಗುರ್ಜಿ ಹೊತ್ತವನ ಮೇಲೆ ನೀರು ಹಾಕುತ್ತಿದ್ದರು, ಹೊತ್ತವ ನೀರು ಹಾಕಿದಂತೆ ತಿರುಗುತ್ತಿದ್ದನು. ಆಗ ನೀರು ಚೆಲ್ಲನೆ ಸುತ್ತಲೂ ಚೆಲ್ಲಿ ಮಳೆಯ ನೆನಪನ್ನು ತರುತ್ತಿತ್ತು. ಒಂಬತ್ತು ದಿನಗಳ ಕಾಲ ಹೀಗೆ ಮನೆ ಮನೆಗೆ ಹೋಗಿ ನೀರು ಹಾಕಿಸಿಕೊಂಡು, ಗುರ್ಜಿಯ ಹಾಡನ್ನು ರಾಗಬದ್ದವಾಗಿ ಹಾಡುತ್ತಿದ್ದೆವು.
ಗುರ್ಜವ್ವ ಗುರ್ಜವ್ವಾ ಎಲ್ಯಾಡಿಬಂದೆ
ನೀರಿಲ್ಲತ್ತಾಗ ನಿಂತಾಡಿ ಬಂದೆ
ಸುರಿಯೋ ಸುರಿಯೋ ಮಳ್ರಾಯೋ.. ಮಳ್ರಾಯಾ..||
ಮಳೆರಾಯ್ನ ಹೆಂಡ್ತಿ ಏನ್ ಹಡದ್ಲು, ಗಂಡು ಹಡದ್ಲು..
ಗಂಡಿನ್ ತೆಲಿಗೆ ಎಣ್ಣಿಲ್ಲ ಬೆಣ್ಣಿಲ್ಲ
ಬೆತ್ತಲೆಯಾಗಿದ್ದ ಗುರ್ಜಿ ಹೊತ್ತವನನ್ನು ಉಳಿದ ಹುಡುಗರು ಕಿಚಾಯಿಸುವುದು ನಡೆಯುತ್ತಿತ್ತು. ಹೀಗೆ ಮನೆಮನೆಯಲ್ಲಿ ಜೋಳ,ರಾಗಿ,ನವಣಕ್ಕಿ, ನೆಲ್ಲಕ್ಕಿ, ಬೇಳೆ, ಉಣಸೆ ಹಣ್ಣು, ಬೆಲ್ಲ, ಉಳ್ಳಿ, ಅಲಸಂದಿ,ಮಡಕಿಕಾಳು, ಹಿಟ್ಟು ಮುಂತಾದವುಗಳನ್ನು ಸಂಗ್ರಹಿಸಿ, ಕೊನೆ ದಿನ ಕಡುಬು ಅನ್ನ ಸಾಂಬಾರು ಮಾಡಿಕೊಂಡು, ಹಳ್ಳಕ್ಕೆ ಹೋಗಿ ಗುರ್ಜಿಯನ್ನು ಬಿಟ್ಟು ಕಡುಬು ತಿಂದು ನಾವುಗಳೆಲ್ಲಾ ಓಡೋಡಿ ಬರುತ್ತಿದ್ದೆವು. ಆಗ ಗುರ್ಜಿ ಹೊತ್ತವ ಕೋಲು ಹಿಡಿದು ನಮ್ಮನ್ನು ಹೊಡೆಯಲು ಬೆನ್ನಟ್ಟಿ ಬರುತ್ತಿದ್ದನು. ಒಮ್ಮೆಮ್ಮೆ ಹೀಗೆ ನಾವುಗಳೆಲ್ಲಾ ಓಡಿ ಮನೆ ಮುಟ್ಟುವ ಹೊತ್ತಿಗೆ ಕಾಕತಾಳೀಯವೆನ್ನುವಂತೆ ಮಳೆ ಬರುವ ಪ್ರಸಂಗಗಳು ನಡೆಯುತ್ತಿದ್ದವು. ಆಗ ಹಳ್ಳಿಗರು ಗುರ್ಜಿ ಮಾಡಿದ್ರಿಂದ ಮಳೆ ಬಂತು ಎಂದು ಸಂಭ್ರಮಿಸುತ್ತಿದ್ದರು. 'ಮಕ್ಲು ಗುರ್ಜಿ ಹೊತ್ರ ಮಳಿರಾಯ ಬರದಂಗ ಇರತಾನ' ಎಂದು ಪ್ರೀತಿಯಿಂದಲೇ ಮಳೆರಾಯನನ್ನು ಕೊಂಡಾಡುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಗುರ್ಜಿ ಹೋರುವ ಪದ್ದತಿ ಇದೆ. ಮೊದಲಿನ ಲವಲವಿಕೆ, ಆಪ್ತತೆ ಸ್ವಲ್ಪಮಟ್ಟಿಗೆ ಕಡಿಮೆಯಾದಂತಿದೆ.
ಕಮಲಾಪುರದ ಹುಡುಗರ ಆಚರಣೆಯು ಗುರ್ಜವ್ವನಂತೆಯೇ ಇದ್ದರೂ, ಅವರು ಬಸವಣ್ಣನನ್ನು ಹೊತ್ತಿದ್ದರು. ಇದು ಮಣೆಣೆತ್ತಿನ ಅಮವಾಸ್ಯೆಯಲ್ಲಿ ಮಾಡುವ ಒಂದು ಆಚರಣೆ. ಮಣ್ಣಿನ ಬಸವನನ್ನು ಮಾಡಿಕೊಂಡು, ಮಣೆಯ ಮೇಲೆ ಕೂರಿಸಿಕೊಂಡು 'ಬಸವ ಬಸವ ಬಂದಾನೆ' ಎನ್ನುವ ಪದವನ್ನು ಹಾಡಿಕೊಂಡು ಮನೆ ಮನೆಗೆ ಹೋಗಿ ದವಸ ಧಾನ್ಯವನ್ನು ನೀಡಿಸಿಕೊಂಡು ಬರುತ್ತಾರೆ. ಈ ಬಸವ ಕೂಡ ಮಳೆಯನ್ನು ಕರೆಯುವವನೆ. ಹಾಗಾಗಿ ಈ ಆಚರಣೆ ಗುರ್ಜಿಯ ಆಚರಣೆಯನ್ನೇ ಹೋಲುವಂತಹದ್ದು. ಕಮಲಾಪುರದ ಈ ಹುಡುಗರನ್ನು ಮಾತಿಗೆಳೆದೆ. ಜಗದೀಶ, ಗಜೇಂದ್ರ, ಅಕ್ಷಯ ಕುಮಾರ, ಪ್ರವೀಣ್, ಕಾಳಿದಾಸ ಇವರುಗಳೆಲ್ಲಾ ನಾಲ್ಕರಿಂದ ಹತ್ತನೆ ತರಗತಿಯಲಿ ಓದುವ, ಸರಕಾರಿ ಶಾಲೆಯ ಹುಡುಗರು. ವಿಶೇಷ ಅಂದರೆ ಇವರೆಲ್ಲಾ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಮಕ್ಕಳು. ಗುರ್ಜಿಯನ್ನು ಮಾಡುವಾಗ ಎಲ್ಲಾ ಜಾತಿಯ ಹುಡುಗರು ಇರುತ್ತಿದ್ದರು. ಆದರೆ ಬಸವಣ್ಣನನ್ನು ಹೋರಲು ಒಂದೇ ಜಾತಿಯ ಹುಡುಗರು ಹೋರುತ್ತಿದ್ದುದ ಕಂಡು ಯಾಕೆ ಹೀಗೆ ಎಂದು ಅರ್ಥವಾಗಲಿಲ್ಲ. ಮಕ್ಕಳಲ್ಲೂ ಜಾತಿಯ ವಿಂಗಡಣೆಯಾಯಿತೆ ಎಂದು ಒಂದು ಕ್ಷಣ ಭಯವಾಯಿತು.
'ಊರಲ್ಲಿ ಎಲ್ಲರ ಮನೆಗಳಿಗೂ ಹೋಗುತ್ತೀರಾ ?' ಎಂದು ಕೇಳಿದೆ. ಅದರಲ್ಲಿ ಬಸವನನ್ನು ಹೊತ್ತ ಕಾಳಿದಾಸ ಎನ್ನುವ ಹುಡುಗ 'ಸಾಬರ ಮನೆಗೆ ಮಾತ್ರ ಹೋಗಲ್ರಿ' ಎಂದನು. 'ಮೊದಲಿಂದಲೂ ಹೋಗೋದಿಲ್ವಾ ಈಗ ಮಾತ್ರ ಹೋಗಲ್ವಾ' ಎಂದೆ. ಆಗ 'ಇಲ್ರಿ ಮೊದ್ಲು ಹೋಗ್ತಿದ್ವಿ ಈಗ ಹೋಗಲ್ಲ' ಎಂದನು. 'ಯಾಕೆ ಹೋಗಲ' ಎಂದೆ, ಆಗ ಆ ಹುಡುಗ 'ಒಮ್ಮೆ ಸಾಬರ ಮನೆಗೆ ಹೋದಾಗ ಸಾಬರ ಹೆಣ್ಮಗಳು ಬೈದಿದ್ರು..ರಿ ಅದಕ್ಕ ಹೋಗಲ್ಲ' ಎಂದ. ತಕ್ಷಣ ಹತ್ತನೆ ತರಗತಿಯಲ್ಲಿ ಓದುತ್ತಿದ್ದ ಗಜೇಂದ್ರ ನನ್ನ ಜತೆ ಮಾತಾಡುತ್ತಿದ್ದ ಹುಡುಗನಿಗೆ ಚಿವುಟಿ..'ಇಲ್ರಿ ನಾವು ಎಲ್ರು ಮನೆಗೂ ಹೋಗ್ತೀವಿ.. ಯಾರ ಮನಿನೂ ಬಿಡಲ್ಲ' ಅಂದ. ಆಗ ಅವನು ಆ ಹುಡುಗರಿಗೆ ಕಿವಿ ಮಾತಿನಂತೆ 'ಆ ಅಣ್ಣರು ಪೇಪರಿನ್ಯಾಗ ಬರೀತಾರ ಅವರಿಗೆ ನಾವು ಸಾಬರ ಮನೆಗೆ ಹೋಗಲ್ಲ ಅಂತ ಹೇಳಬಾರ‍್ದಲೆ' ಎಂದನು. ಇದನ್ನು ನೋಡಿ ನಾನು ಆ ವಿಷಯವನ್ನು ಮಟುಕುಗೊಳಿಸಿದೆ. ಮಾತು ಬದಲಿಸಿ 'ಈಗ ಮನೆಯಲ್ಲಿ ಏನೇನಿ ನೀಡಿಸಿಕೊಳ್ಳುತ್ತೀರಿ' ಎಂದೆ. ಆಗ ಅವರಲ್ಲೊಬ್ಬ 'ಬರೀ ಅಕ್ಕಿ, ರೊಕ್ಕ ಎರಡಾರೀ' ಅಂದ. ನಾನು ಜೋಳ ರಾಗಿ ಬೇಳೆ ಇವ್ಯಾವನ್ನೂ ನೀಡಿಸ್ಕೊಳ್ಳಲ್ವಾ ? ಎಂದೆ . ಪ್ರವೀಣ್ ಎನ್ನುವ ಹುಡುಗ 'ಸಾರ್..ಈಗ ಜೋಳ ರಾಗಿ ಯಾರು ಉಣ್ತಾರ ಸಾ..ಮೊದ್ಲು ನೀಡಿಸ್ಕಳ್ತಿದ್ವಿ ಈಗ ಆವ್ಯಾವನ್ನು ನೀಡಿಸ್ಕೊಳ್ಳಲ್ಲ' ಎಂದು ಮುಗ್ದವಾಗಿಯೇ ಹೇಳಿದ.
ಇದು ಬದಲಾದ ಆಹಾರ ಕ್ರಮದ ಬಗ್ಗೆ ಮಕ್ಕಳು ತುಂಬಾ ಸೂಕ್ಷ್ಮವಾಗಿ ನೀಡಿದ ಪ್ರತಿಕ್ರಿಯೆಯಂತಿತ್ತು. ನಂತರ ನೀವ್ಯಾಕೆ ಬರಿ ಸರಕಾರಿ ಸಾಲಿ ಹುಡುಗ್ರಾ ಬಂದೀರಿ? ಕಾನ್ವೆಂಟ್‌ಗೆ ಹೋಗೋ ಇಂಗ್ಲೀಷ್ ಮೀಡಿಯಂ ಹುಡುಗ್ರು ನಿಮ್ಮ ಜತೆ ಬರಲ್ವಾ ಎಂದೆ. 'ಇಲ್ರಿ..ಇಂಗ್ಲೀಸ್ ಮೀಡಿಯಂ ಹುಡುಗ್ರಿಗೆ ಜಾಸ್ತಿ ಹೋಮ್ ವರ್ಕ ಕೊಡ್ತಾರಲ್ಲ, ಅದುಕಾ ಅವರು ಬರೋದಿಲ್ಲ. ಅವರು ಬಂದರು ಮನಿಯವರು ಕಳಸಲ್ಲ' ಎಂದ. ನನಗೆ ಜನಪದ ಆಚರಣೆ ಕೇವಲ ಸರ್ಕಾರಿ ಶಾಲಾ ಮಕ್ಕಳಿಂದ ಮಾತ್ರ ಉಳಿತಿರೋ ಹಾಗನ್ನಿಸಿತು. ಕೊನೆಗೆ ಆ ಹುಡುಗರು ಬಸವ ಬಸವ ಬಂದಾನ ಎನ್ನುವ ಹಾಡು ಹೇಳಿದರು.
ಬಸವ ಬಸವ ಬಂದಾನ
ಜ್ವಾಳ ಫಲವ ಹಾಕ್ಯಾನ
ಸಜ್ಜಿ ಫಲವ ಹಾಕ್ಯಾನ
ರಾಗಿ ಫಲವ ಹಾಕ್ಯಾನ
ಗೋದಿ ಫಲವ ಹಾಕ್ಯಾನ
ತೊಗರಿ ಫಲವ ಹಾಕ್ಯಾನ॒
ಬಸವೇನಂದ..ಮಳಿ ಬರಲೆಂದ ||
ಎಂದು ಹಾಡು ಹೇಳಿದ ಹುಡುಗರು ಸಾರ್..ಪೇಪರಿನಾಗ ನನ್ನ ಫೋಟೋ ಹಾಕ್ರಿ ಎಂದ. ಇನ್ನೊಬ್ಬ ರೀ ಇಷ್ಡೆಲ್ಲಾ ಕೇಳೀರಿ ಹತ್ರುಪಾಯದ್ರು ಕೊಡ್ರಿ..ಅಂದ. ಸರಿನಪ್ಪ ಅಂತೇಳಿ ಹತ್ತು ರುಪಾಯಿ ಕೊಟ್ಟು, ಕಡುಬು ಮಾಡೋ ದಿನ ಮರಿಬ್ಯಾಡ್ರೋ ನನ್ನು ಕರೀರಿ ನಾನು ಬರ್ತೀನಿ ಅಂದೆ. ಆಗ್ಲಿ ರೀ ಕರೀತಿವಿ ಬರಾಕು ನೋಡ್ರಿ ಅಂತೇಳಿ ಮಣ್ಣಿನ ಬಸವನ ಹೊತ್ತ ಹುಡುಗರು ಮುಂದಿನ ಮನೆಗೆ ಹೋದರು..
ರಲ್ಲಿ ಜುಲೈ 22, 2011 ಕಾಮೆಂಟ್‌ಗಳಿಲ್ಲ:
2010 ರ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭ
ರಲ್ಲಿ ಜುಲೈ 18, 2011 ಕಾಮೆಂಟ್‌ಗಳಿಲ್ಲ:
(ಕೂಡ್ಲಿಗಿ ತಾಲೂಕಿನ ದಿಬ್ಬದಹಳ್ಳಿಯ ಕೃಷಿ ಸಲಕರಣೆಗಳನ್ನು ಸಿದ್ಧಪಡಿಸುವ ಬಡಗಿ ಶರಣಪ್ಪ ಹಾಗೂ ಸಣ್ಣರಂಗಪ್ಪ)
ಮುಂಗಾರು ಆರಂಭವಾದರೆ ಕೃಷಿ ಚಟುವಟಿಕೆಗಳು ಆರಂಭವೆಂದೇ ಅರ್ಥ. ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸಲಕರಣೆಗಳಿಗಾಗಿ ರೈತರು ಬಡಗಿಗಳನ್ನು ಹುಡುಕಾಡಿದಂತೆಯೇ, ಅಳಿದುಳಿದ ಬಡಗಿಗಳೂ ರೈತರನ್ನು ಹುಡುಕಬೇಕಾದ ಪ್ರಸಂಗವೊದಗಿದೆ.
ಈ ಮೊದಲು ಬಂಡಿ, ಕುಂಟೆ, ಕೂರಿಗೆಗಳ ಕೆಲಸ ಮಾಡಿದ ಬಡಗಿಗಳು ಬೇಡಿಕೆಯಿಲ್ಲದೇ ಬೇರೆ ಕೆಲಸಗಳಲ್ಲಿ ವಾಲುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಯಂತ್ರೋಪಕರಣಗಳು ಬಂದಂತೆ, ರೈತರ ಕೃಷಿ ಸಲಕರಣೆಗಳ ತಯಾರಿಕೆಯಲ್ಲೂ ಯಂತ್ರೋಪಕರಣಗಳು ಬೇಕು ಎನ್ನುವುದು ಬಡಗಿಗಳ ಬಯಕೆಯಾಗಿದೆ. ಕುಂಟೆ, ಕೂರಿಗೆ ಮಾಡುವುದು ಕಷ್ಟದ ಕೆಲಸ. ಅವುಗಳನ್ನು ಸಿದ್ಧಪಡಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು ಎಂದು ತಾಲೂಕಿನ ದಿಬ್ಬದಹಳ್ಳಿಯ ಬಡಗಿ ಶರಣಪ್ಪ ಹೇಳುತ್ತಾರೆ.
ಸುಮಾರು 30 ವರ್ಷಗಳಿಂದ ಕೃಷಿ ಸಲಕರಣೆಗಳನ್ನೇ ಸಿದ್ಧಪಡಿಸುತ್ತಿರುವ ಶರಣಪ್ಪ, `ಮೊದಲಿನ ಬೇಡಿಕೆ ಈಗಿಲ್ಲ' ಎನ್ನುತ್ತಾರೆ. ಕೇವಲ 2 ರೂ.ಗಳಿಗೆ ಕೂರಿಗೆ ಮಾಡಿಕೊಡುತ್ತಿದ್ದೆ, ಈಗ ಅದಕ್ಕೆ 200 ರೂ.ಗಳಾಗುತ್ತದೆ ಎನ್ನುತ್ತಾರೆ. ಕುಂಟೆ ಮಾಡಿಸಲು 200 ರೂ.ಗಳನ್ನು ರೈತರು ಕೊಡಬೇಕು. ಕಟ್ಟಿಗೆಯನ್ನು ಅವರೇ ತರಬೇಕು. ಕಟ್ಟಿಗೆಯನ್ನು ನೀವೇ ತರಬಹುದಲ್ಲ ಎಂದರೆ, `ಕಾಡೆಲ್ಲ ನಾಸ ಆಗೋಯ್ತು, ಈಗೆಲ್ಲಿಂದ ಕಟಿಗಿ ಹೊಂದಿಸ್ಲಿ ಸರ್, ಅದಕ್ಕೆ ನೀವೇ ಏನರ ಮಾಡ್ಕೊಳ್ರಿ, ಕಟಿಗೆ ತಂದುಕೊಟ್ರ ನೀವು ಹೇಳ್ದಿದು ಮಾಡಿಕೊಡ್ತೀನಿ ಅಂತ ಹೇಳ್ತೀನಿ' ಎಂದು ಶರಣಪ್ಪ ಹೇಳಿದರು.
ಈಗಾಗಲೇ ಟ್ರ್ಯಾಕ್ಟರ್ಗಳು ಬಂದು ಕೃಷಿ ಕಾರ್ಯವನ್ನು ಸುಲಭಗೊಳಿಸಿವೆಯಾದರೂ, ಅದರ ಪೆಟ್ಟು ಬಿದ್ದದ್ದು ಮಾತ್ರ ಬಡಗಿಗಳಿಗೇ. ಈಗ ಇದರಲ್ಲಿ ಯಾವ ಲಾಭವೂ ಇಲ್ಲವೆಂದು ಬಡಗಿಗಳೆಲ್ಲ ಮನೆಯ ಬಾಗಿಲು, ಕಿಟಕಿಗಳನ್ನು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳತೊಡಗಿದ್ದಾರೆ. ಹೀಗಾಗಿ ಎಡೆಕುಂಟೆ, ಕೂರಿಗೆ ಮಾಡಿಸಬೇಕಾದರೆ ರೈತರು, ಹಳೆಯ ಬಡಗಿಗಳನ್ನೇ ಹುಡುಕುತ್ತ ಹೋಗುವ ಪರಿಸ್ಥಿತಿ ಬಂದೊದಗಿದೆ. `ಎಷ್ಟೋ ವರ್ಸದಿಂದ ಇದೇ ಬದುಕನ್ನೇ ಮಾಡ್ಕೊಂಡು ಬಂದೀವಿ, ಈಗ ಒಮ್ಮೆಲೇ ಕೆಲ್ಸ ನಿಂತುಬಿಟ್ರೆ ನಾವು ಬದ್ಕೋದಾದ್ರು ಹೆಂಗೆ?' ಎಂದು ಪ್ರಶ್ನಿಸುತ್ತಾರೆ ದಿಬ್ಬದಹಳ್ಳಿಯ ಬಡಗಿ ಸಣ್ಣರಂಗಪ್ಪ. `ನಾವು ಇದೇ ಕೆಲ್ಸದಾಗೇ ಬಂದ್ವಿ, ಕೈಯಿಂದ ಕೆಲ್ಸ ಮಾಡೋದು ಹೆಂಗಂತ ನಾವು ತಿಳ್ಕೊಂಡೀವಿ, ಈಗಿನ ಹುಡುಗ್ರು ಇದ್ಕೆಲ್ಲ ಮಾಡ್ತಾರನ್ನೋ ನಂಬ್ಕಿ ನಮಗ್ಲಿಲ್ಲ, ಈಗಿನವ್ರು ಶ್ರಮ ಬ್ಯಾಡಂತಾರ, ನಮ್ಮ ಕಾಲಕ್ಕ ಇದೆಲ್ಲ ಮುಗ್ದೋಗಿಬಿಡ್ತು ಅನ್ನಿಸ್ತದೆ' ಎಂದು ಶರಣಪ್ಪ, ಸಣ್ಣರಂಗಪ್ಪ ವಿಶಾದ ವ್ಯಕ್ತಪಡಿಸಿದರು.
(ಕೂಡ್ಲಿಗಿಯಲ್ಲಿ ಕೃಷಿ ಸಲಕರಣೆಗಳನ್ನು ಸಿದ್ಧಪಡಿಸುವ ಬಡಗಿ ಮಾಬುಸಾಬ್)
ಮುಂಗಾರು ಆರಂಭವನ್ನು ಹೊರತುಪಡಿಸಿದರೆ, ನಂತರ ಕೃಷಿ ಸಲಕರಣೆಗಳ ಕೆಲಸವೇ ಇಲ್ಲ ಎಂಬುದು ಕೂಡ್ಲಿಗಿಯ ಬಡಗಿ ಮಾಬುಸಾಬ್ರ ಹೇಳಿಕೆ. ಮೂರು ತಲೆಮಾರುಗಳಿಂದಲೂ ಇದೇ ವೃತ್ತಿಯನ್ನು ಅವಲಂಬಿಸಿದ್ದೇವೆ, ಬಂಡಿಗೆ ಈ ಮೊದಲಿದ್ದ ಬೇಡಿಕೆ ಈಗ ಇಲ್ಲ. ಇತ್ತೀಚೆಗೆ ಟೈರ್ ಬಂಡಿಗಳು ಹೆಚ್ಚಾಗಿವೆ. ಎತ್ತುಗಳ ಸಂಖ್ಯೆಯೂ ಕಡಿಮೆಯಾಗಿ, ಈಗ ಎಲ್ಲದಕ್ಕೂ ರೈತರು ಮಿನಿಲಾರಿಯನ್ನೇ ಬಳಸುತ್ತಾರೆ ಎಂದು ಮಾಬುಸಾಬ್ ಹೇಳಿಕೆ. ಯಂತ್ರಗಳ ಬಳಕೆಯಿಂದಾಗಿ ನಮ್ಮಂತಹ ಸಣ್ಣ ಕೆಲಸಗಾರರಿಗೆ ಕುತ್ತು ಬಂದಿದೆ ಎಂದು ಮಾಬುಸಾಬ್ ನಿಟ್ಟುಸಿರುಬಿಡುತ್ತಾರೆ. `ಎಲ್ಲದ್ಕೂ ಮಿಶಿನ್ ಬಂದ್ಬಿಟ್ವು ಸರ್, ನೆಲಾ ಉಳೊದಕ್ಕೆ, ಬಿತ್ನೆ ಮಾಡಾಕೆ, ರಾಸಿ ಒಕ್ಕಾಕೆ, ಇನ್ನೇನು ತುತ್ತು ಮಾಡಿ ಉಣಿಸೋ ಮಿಶಿನ್ ಬಂದ್ಬಿಟ್ರೆ, ನಾವೆಲ್ಲ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕ್ಕೊಳೋದೆ' ಎಂದು ಮಾಬುಸಾಬ್ ವ್ಯಥೆಯಿಂದ ಹೇಳುತ್ತಾರೆ.
ಹಣವಿದ್ದವರು ಯಂತ್ರಗಳನ್ನು ಬಳಕೆ ಮಾಡಿದರೆ, ಸಣ್ಣ ರೈತರು ಹಳೆಯ ಕೃಷಿ ಸಲಕರಣೆಗಳನ್ನೇ ಬಳಸುತ್ತಾರೆ. ಅಂತಹವರು ಮಾತ್ರ ಈಗ ಕೃಷಿ ಸಲಕರಣೆಗಳ ಬಡಗಿಗಳನ್ನು ಹುಡುಕುತ್ತಾರೆ. ಹೀಗಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದರೂ, ಬಡಗಿಗಳು ಮೊದಲಿನ ಬೇಡಿಕೆ ಇಲ್ಲದೇ ನಿರುದ್ಯೋಗಿಗಳಂತಾಗಿದ್ದಾರೆ. ರೈತರಿಗೆ ಕೃಷಿ ಕಷ್ಟಕರವಾಗುತ್ತಿರುವಂತೆಯೇ, ಅವರನ್ನೇ ಅವಲಂಬಿಸಿರುವ ಸಣ್ಣ ಕೆಲಸಗಾರರಿಗೂ ಕಷ್ಟಗಳು ಬರುತ್ತಿವೆ.
ನಿಮ್ಮ ಪದಗಳಿಗೆ ನೀವೇ ರಾಜ, ರಾಣಿ - Pratham Books
(This post was written by Vanamala Viswanatha. Vanamala, Professor of English Studies at Azim Premji University, is an award-winning translator, working with Kannada and English. Prof. Viswanatha formerly taught Translation Studies and Indian Literatures in Translation in Bangalore University. Apart from publishing seminal articles on various issues in Translation Studies, she has translated and introduced Sara Aboobacker's Kannada novel Chandragiriya Teeradalli (Breaking Ties) and an anthology of Lankesh's short stories (When Stone Melts) and co-edited Routes: Representations of the West in Short Fiction from South India; and J Krishnamurti's writing into Kannada. She has co-translated Ananthmurthy's Samskara into Swedish (Samskara – rit for en dod man) and Torgny Lindgren's Swedish novel into Kannada (Haavina Donku). Her vachanas of Akka Mahadevi and other women saint poets is also published. Prof. Viswanatha has translated the first Kannada social novel 'Indira Bai' for OUP and 'Harischandra Kavyam', a 13th century, medieval Kannada work for Harvard University Press, for the Murthy Classical Library of India Series.)
Vanamala Vishwanatha wants us to 'FREAK OUT!' when translating for kids. What does she mean?
"ನಿರ್ಭಿಡೆ" ಯಾಗಿ ಬರೆಯಿರಿ/ ನಿಮ್ಮ ಕಲ್ಪನೆಗೆ ಯಾವ ಕಡಿವಾಣವನ್ನೂ ಹಾಕಿಕೊಳ್ಳದೇ ಅನುವಾದಿಸಿ/ ಯಾವ ಲಂಗೂಲಗಾಮೂ ಇಲ್ಲದೇ ಭಾಷಾಂತರ ಮಾಡಿ/ ಮೊದಲು ನಿಮ್ಮ ಮನಸ್ಸಿಗೆ ಬಂದ ಹಾಗೆ ಬರೀರಿ, ಆಮೇಲೆ ಅದನ್ನು ತಿದ್ದೋದು ನೋಡ್ಕೊಳ್ಳೋಣ/ ನಿರಾಳವಾಗಿ ಬರೀತಾ ಹೋಗಿ/
ಅನುವಾದಿಸುವಾಗ, ಅದು ನಿಮ್ಮ ಟೆಕ್ಸ್ಟು, ನೀವೇ ರಾಣಿ/ರಾಜ; ಬೇಏಏಕಾದ್ದು ಮಾಡಿ…. ಪದಗಳೊಂದಿಗಿನ ನಿಮ್ಮ ಮಾತುಕತೆ ಸ್ಥಿರ, ಸಂಪೂರ್ಣ ವಾಗಿರಲಿ. ನಿಮ್ಮೆಲ್ಲಾ ಧ್ಯಾನ, ಮನವನ್ನು ಒಂದೆಡೆ ಕೇಂದ್ರೀಕರಿಸಿ ಮೊದಲ ಪ್ರತಿಯನ್ನು ಬರೆದುಬಿಡಿ. ಆನಂತರ ಮೂಲ ಕತೆಯೊಂದಿಗೆ ಪರಿಶೀಲಿಸಿ ಯಾವುದು ಎಲ್ಲಿ, ಎಷ್ಟು ಹೊಂದುತ್ತೆ?, ಅಂತಿಮ ರೂಪಕ್ಕಾಗಿ ಅದರಿಂದ ಅಳಿಸಬಹುದಾದ್ದು, ಬದಲಿಸಬಹುದಾದ್ದು ಏನೇನು? ಅಂತ ನಿರ್ಧರಿಸಿದರೆ ಆಯಿತು.. ಇವಿಷ್ಟೇ ಸಾಲುಗಳಲ್ಲಿ ಭಾಷಾಂತರದ ಗಾಂಭೀರ್ಯ ಮತ್ತು ಸರಳತೆಯ ಒಗಟನ್ನು ಸಮರ್ಥವಾಗಿ ಬಿಡಿಸಿದ್ದಾರೆ ಖ್ಯಾತ ಅನುವಾದಕಿ ವನಮಾಲಾ ವಿಶ್ವನಾಥ.
17ನೇ ಲೋಕಸಭಾ ಸದಸ್ಯರಾಗಿ ಸೋನಿಯಾ, ಮೇನಕಾ, ಹೇಮಮಾಲಿನಿ ಪ್ರಮಾಣವಚನ | ಸಂಜೆವಾಣಿಗೆ ಸ್ವಾಗತ
ನವದೆಹಲಿ, ಜೂ 18 – ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಸಂಸದೆ ಮೇನಕಾ ಗಾಂಧಿ ಹಾಗೂ ಮಥುರಾ ಸಂಸದೆ ಹೇಮಾಮಾಲಿನಿ ಸೇರಿದಂತೆ ಇತರ ಮಹಿಳಾ ಸಂಸದರು ಮಂಗಳವಾರ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸೋನಿಯಾ ಗಾಂಧಿ ಅವರು ಪ್ರಮಾಣವಚನ ಸ್ವೀಕರಿಸಿದಾಗ ಕಾಂಗ್ರೆಸ್, ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಅಭಿನಂದಿಸಿದರು. ಕಾಂಗ್ರೆಸ್ ಅಧ್ಯಕ್ಷ ಹಾಗೂ ಸೋನಿಯಾ ಪುತ್ರ ರಾಹುಲ್ ಗಾಂಧಿ ಅವರು ಈ ಮಂದಸ್ಮಿತರಾಗಿ ಈ ದೃಶ್ಯವನ್ನು ಕಣ್ತುಂಬಿಕೊಂಡರು. ಕಾಂಗ್ರೆಸ್ ಪಕ್ಷದ ನೂತನ ನಾಯಕ ಅಧಿರ್ ರಂಜನ್ ಚೌಧರಿ ಎದ್ದು ನಿಂತು ಮೇಜು ಕುಟ್ಟುವ ಮೂಲಕ ಗೌರವ ತೋರಿದರು.
ನಂತರ, ಸುಲ್ತಾನಪುರದ ಸಂಸದೆ ಮೇನಕಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಏರಿದ ಮೇನಕಾ, ತಮ್ಮ ಕನ್ನಡಕ ಮರೆತಿದ್ದರಿಂದ ಅದನ್ನು ಪಡೆಯಲು ತಮ್ಮ ಸ್ಥಾನಕ್ಕೆ ಹಿಂದಿರುಗಬೇಕಾಯಿತು. ಆಗ ಸದನದಲ್ಲಿ ಕೆಲ ಕಾಲ ತಿಳಿ ಹಾಸ್ಯದ ವಾತಾವರಣ ಸೃಷ್ಟಿಯಾಯಿತು. ನಂತರ, ಅವರ ಸಹೋದ್ಯೋಗಿ ಎಸ್. ಎಸ್. ಅಹ್ಲುವಾಲಿಯಾ ಮುಂದೆ ಬಂದು ಕನ್ನಡಕ ನೀಡಿದರು.
ನಂತರ, ಮೇನಕಾ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಔಪಚಾರಿಕ ಮಾತುಕತೆ ನಡೆಸಿದರು. ನಂತರ, ನಟಿ ಹಾಗೂ ರಾಜಕಾರಣಿ ಹೇಮಮಾಲಿನಿ ಪ್ರಮಾಣವಚನ ಸ್ವೀಕರಿಸಿದರು.
ಮಧ್ಯಾಹ್ನದ ನಂತರ, ಕೆಲ ಸಂಸದರು ಪ್ರಮಾಣವಚನ ಸ್ವೀಕರಿಸುವಾಗಿ ಘೋಷಣೆಗಳನ್ನು ಕೂಗಿದ್ದು ವಿವಾದಕ್ಕೂ ಕಾರಣವಾಯಿತು.
ಅನೇಕ ಬಿಜೆಪಿ ಸಂಸದರು, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಸಂಸದೆ ಸಾಕ್ಷಿ ಮಹಾರಾಜ್ ಅವರು, ಅದರೊಂದಿಗೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದಾಗ, ಕೆಲ ಸದಸ್ಯರು 'ಮಂದಿರ ಅಲ್ಲೇ ಕಟ್ಟುತ್ತೇವೆ' ಎಂದು ಕೂಗಿದರು.
ಈ ನಡುವೆ ಸಮಾಜವಾದಿ ಪಕ್ಷದ ಸದಸ್ಯ ಶಫಿಕುರ್ ರೆಹಮಾನ್ ಬಾರ್ಕ್ ಅವರು ಘೋಷಣೆಗೆ ಬಿಜೆಪಿಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಆದರೆ, ಅಧ್ಯಕ್ಷ ಸ್ಥಾನದಲ್ಲಿದ್ದ ಕೆ.ಸುರೇಶ್ ಅವರು ನಿರ್ಧಿಷ್ಟ ಹೇಳಿಕೆಗಳು ಮಾತ್ರ ಕಡತ ಸೇರುತ್ತವೆ ಎಂದು ಸ್ಪಷ್ಟಪಡಿಸಿದರಲ್ಲದೇ, ಸದನದ ಎರಡೂ ಪಕ್ಷಗಳಿಗೆ ಘೋಷಣೆಗಳನ್ನು ಕೂಗದಂತೆ ಮನವಿ ಮಾಡಿದರು.
ಇದೇ ತಿಂಗಳು ನಡೆಯಲಿದೆ ಬೆಂಗಳೂರು ಬೆಂಗಾಲಿ ಫಿಲ್ಮ್ ಫೆಸ್ಟಿವಲ್ | 2nd Bengaluru Bengali and Kannada Film Festival 2018 - Kannada Filmibeat
'ಬೆಂಗಳೂರು ಬೆಂಗಾಲಿ ಹಾಗೂ ಕನ್ನಡ ಫಿಲ್ಮ್ ಫೆಸ್ಟಿವಲ್' ಇದೇ ತಿಂಗಳು ನಡೆಯಲಿದೆ. ಜೂನ್ 8, 9 ಮತ್ತು 10 ರಂದು ಮೂರು ದಿನಗಳ ಕಾಲ ಬೆಂಗಳೂರಿನ ಗಾಂಧಿ ಭವನ ಹಾಗೂ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಸತ್ಯಜಿತ್ ರೇ ಫಿಲ್ಮ್ ಸೊಸೈಟಿ ಬೆಂಗಳೂರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಸಹಯೋಗದೊಂದಿಗೆ 2 ನೇ ಬೆಂಗಳೂರು ಬಂಗಾಳಿ ಮತ್ತು ಕನ್ನಡ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ. ಜೂನ್ 8 ರಂದು ಸಂಜೆ 5.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಚಿತ್ರೋತ್ಸವದ ಮೊದಲ ಸಿನಿಮಾವಾಗಿ ಬೆಂಗಾಳಿ ಭಾಷೆಯ 'Asha Jwar Maje' ಚಿತ್ರ ಪ್ರದರ್ಶನ ಆಗಲಿದೆ.
ಜೂನ್ 9 ರಂದು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ, ಜೂನ್ 10ಕ್ಕೆ 'ಒಂದು ಮೊಟ್ಟೆಯ ಕಥೆ' ಸಿನಿಮಾ ಪ್ರದರ್ಶನ ಆಗಲಿದೆ. ಇತ್ತೀಚೆಗಷ್ಟೇ ರಾಜ್ಯ ಪ್ರಶಸ್ತಿ ಪಡೆದ 'ಹೆಬ್ಬೆಟ್ ರಾಮಕ್ಕ' ಸಿನಿಮಾ ಸಹ ಚಿತ್ರೋತ್ಸವದಲ್ಲಿ ಸ್ಥಾನ ಪಡೆದಿದೆ. ಕನ್ನಡ ಮತ್ತು ಬಂಗಾಳಿ ಭಾಷೆಯ 17 ಸಿನಿಮಾಗಳು (ಮೂರು ಕಿರುಚಿತ್ರ ಸೇರಿದಂತೆ) ಪ್ರದರ್ಶನ ಆಗಲಿದೆ. ಜೂನ್ 10 ರಂದು ಸಮಾರೋಪ ಸಮಾರಂಭ ನಡೆಯಲಿದೆ.
Read more about: film festival film fest karnataka chalanachitra academy sandalwood ಫಿಲ್ಮ್ ಫೆಸ್ಟಿವಲ್ ಕರ್ನಾಟಕ ಚಲನಚಿತ್ರ ಅಕಾಡಮಿ ಚಲನಚಿತ್ರೋತ್ಸವ ಸ್ಯಾಂಡಲ್ ವುಡ್
Satyajit Ray Film Society Bengaluru in collaboration with Karnataka Chalanachitra Academy and Film Federation of India (SR) is organising '2nd Bengaluru Bengali and Kannada Film Festival 2018 to be held on 8th June 2018 onwards and will last till 10th June 2018.
ಚಿಟ್‌ಫ‌ಂಡ್‌ ಸ್ಕ್ಯಾಮ್‌;ಸಿಬಿಐ ತಂಡವನ್ನೇ ಬಂಧಿಸಿದ ಕೋಲ್ಕತಾ ಪೊಲೀಸರು | Udayavani – ಉದಯವಾಣಿ
ಚಿಟ್‌ಫ‌ಂಡ್‌ ಸ್ಕ್ಯಾಮ್‌;ಸಿಬಿಐ ತಂಡವನ್ನೇ ಬಂಧಿಸಿದ ಕೋಲ್ಕತಾ ಪೊಲೀಸರು
Team Udayavani, Feb 3, 2019, 1:49 PM IST
ಕೋಲ್ಕತಾ: ಚಿಟ್‌ ಫ‌ಂಡ್‌ ಹಗರಣದ ತನಿಖೆಯ ಅಂಗವಾಗಿ ಸಿಬಿಐ ಅಧಿಕಾರಿಗಳು ಭಾನುವಾರ ಸಂಜೆ ಕೋಲ್ಕತಾ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಐವರು ಸಿಬಿಐ ಅಧಿಕಾರಿಗಳನ್ನು ಪೊಲೀಸರು ಗೇಟ್‌ ಬಳಿ ತಡೆದು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಂಡನ್‌ ಸ್ಟ್ರೀಟ್‌ನಲ್ಲಿರುವ ಕುಮಾರ್‌ ಅವರ ನಿವಾಸಕ್ಕೆ ದೌಡಾಯಿಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಶ್ಚಿಮ ಬಂಗಾಳದ ಡಿಜಿಪಿ ಮತ್ತು ಕೋಲ್ಕತಾ ಮೇಯರ್‌ ಉಪಸ್ಥಿತರಿದ್ದರು.
ರೋಸ್‌ ವ್ಯಾಲಿ ಹಗರಣ ಮತ್ತು ಶಾರದಾ ಚಿಟ್‌ ಫ‌ಂಡ್‌ ಹಗರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆಸುತ್ತಿದ್ದು , ರಾಜೀವ್‌ ಕುಮಾರ್‌ ಅವರನ್ನು ಬಂಧಿಸಲು ಆಗಮಿಸಿದ್ದರು ಎನ್ನಲಾಗಿದೆ.
ಐಪಿಎಸ್‌ ಅಧಿಕಾರಿಯಾಗಿದ್ದ ರಾಜೀವ್‌ ಕುಮಾರ್‌ ಅವರು ಪಶ್ಚಿಮ ಬಂಗಾಳ ಸರಕಾರ ರಚಿಸಿದ್ದ ಎಸ್‌ಐಟಿಯಲ್ಲಿ ತನಿಖಾಧಿಯಾಗಿದ್ದರು. ಹಗರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿರುವ ಕಡತಗಳು ಮತ್ತು ಮಹತ್ವದ ದಾಖಲೆಗಳಿಗೆ ಸಂಬಂಧಿಸಿ ಅವರನ್ನು ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ.
ಚೀನಾ ಪಂಪ್ ಪಾರ್ಟ್ಸ್ ಕಾರ್ಖಾನೆ ಮತ್ತು ತಯಾರಕರು | ಲೋಹಗಳು ಮತ್ತು ಎಂಜಿನಿಯರಿಂಗ್
ಉತ್ಪನ್ನ ವಿವರಣೆ : ಪಂಪ್ ಮತ್ತು ವಾಲ್ವ್ ಎರಕದ ಭಾಗಗಳು
ನಮ್ಮ ಪಂಪ್ ಮತ್ತು ವಾಲ್ವ್ ಎರಕದ ಭಾಗಗಳನ್ನು ಯುರೋಪಿಯನ್ ದೇಶಗಳಿಗೆ ಒಇಎಂ ಆಗಿ ಅಥವಾ 30 ವರ್ಷಗಳಿಗಿಂತ ಹೆಚ್ಚು ಕಾಲ ಮಾರುಕಟ್ಟೆ ಭಾಗಗಳ ನಂತರ ಸರಬರಾಜು ಮಾಡಲಾಗಿದೆ ಮತ್ತು ಸ್ಥಿರತೆ ಗುಣಮಟ್ಟ, ಸಮಯೋಚಿತ ವಿತರಣೆ, ಸಮಂಜಸವಾದ ಬೆಲೆಯ ಉತ್ತಮ ನಿಯಂತ್ರಣದೊಂದಿಗೆ ಉತ್ತಮ ಹೆಸರು ಗಳಿಸುತ್ತದೆ.
-ಕಾಸ್ಟಿಂಗ್ ವಸ್ತುಗಳು: ಎರಕಹೊಯ್ದ ಕಬ್ಬಿಣ, ಡಕ್ಟೈಲ್ ಐರನ್, ಅಲಾಯ್ ಕಬ್ಬಿಣ, ಕಾರ್ಬನ್ ಸ್ಟೀಲ್, ಅಲಾಯ್ ಸ್ಟೀಲ್, ಸ್ಟೇನ್ಲೆಸ್ ಸ್ಟೀಲ್, ಹಿತ್ತಾಳೆ, ಕಂಚು, ಅಲ್ಯೂಮಿನಿಯಂ, ……
ನಾವು ಬಳಸುವ ಪ್ರಕ್ರಿಯೆ: ಹಸಿರು ಮರಳು ಎರಕಹೊಯ್ದ, ರಾಳದ ಮರಳು ಎರಕದ, ಶೆಲ್ ಅಚ್ಚು ಎರಕದ, ಹೂಡಿಕೆ ಎರಕದ (ನೀರು-ಗಾಜಿನ ಎರಕದ, ಸಿಲಿಕಾ-ಸೋಲ್ ಎರಕದ, ಕಳೆದುಹೋದ ಫೋಮ್ ಎರಕದ), ಶಾಶ್ವತ ಅಚ್ಚು, ಡೈ ಎರಕದ, ಆಟೋ-ಮೋಲ್ಡಿಂಗ್ ಲೈನ್, ಇತ್ಯಾದಿ… ..
ಅಕ್ಟೋಬರ್ 13, 2020 – BIG TV NEWS
Home / 2020 / ಅಕ್ಟೋಬರ್ / 13
Daily Archives: ಅಕ್ಟೋಬರ್ 13, 2020
ಬಿಜೆಪಿ ಅಭ್ಯರ್ಥಿಗಳ ಘೋಷಣೆ : ಪೈಪೋಟಿ ನೀಡಿದ್ದ ತುಳಸಿ ಮುನಿರಾಜುಗೌಡಗೆ ನಿರಾಸೆ
ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಆರ್.ಆರ್. ನಗರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಡಾ. ರಾಜೇಶ್ ಗೌಡ …
ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯ ಆರು ಪಥದ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಸುಮಾರು 117 ಕಿ.ಮೀ ಉದ್ದದ ರಸ್ತೆಗೆ 2+2 ಸರ್ವೀಸ್‌ ರಸ್ತೆ ಸೇರುವುದರಿಂದ ಒಟ್ಟು 10 ಪಥ ಆಗಲಿದೆ. ಬೆಂಗಳೂರು ನೈಸ್‌ ರಸ್ತೆಯಿಂದ …
ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ನ್ಯಾಯ ದೊರಕಿದೆ. 2018ರಿಂದ ಇಂದಿನವರೆಗೆ ನಾನು ಅನುಭವಿಸಿದ್ದ ನೋವಿಗೆ ಇಂದು ಮುಕ್ತಿ ಸಿಕ್ಕಿದೆ ಎಂದು ಮುನಿರತ್ನ ತಿಳಿಸಿದ್ದಾರೆ. ಚುನಾವಣೆ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಮುನಿರತ್ನ ವಿರುದ್ಧ ಸುಪ್ರೀಂ …
ಬಿಹಾರ ಸಚಿವ 'ವಿನೋದ್ ಕುಮಾರ್ ಸಿಂಗ್' ಇನ್ನಿಲ್ಲ
ಪಾಟ್ನಾ: ಬಿಹಾರದ ಹಿಂದುಳಿದ ವರ್ಗದ ಕಲ್ಯಾಣ ಸಚಿವ ವಿನೋದ್ ಕುಮಾರ್ ಸಿಂಗ್ (55) ಸೋಮವಾರ ನಿಧನರಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಕತಿಹಾರ್ …
ಹುಬ್ಬಳ್ಳಿಯಲ್ಲಿ ಬ್ಲಾಕ್ ಅಧ್ಯಕ್ಷರುಗಳ ಸಭೆ
Shaikh BIG TV NEWS, Hubballi 2 ವಾರಗಳು ago Breaking News, ಕರ್ನಾಟಕ, ಜಿಲ್ಲೆ, ಸುದ್ದಿ, ಹುಬ್ಬಳ್ಳಿ 0 15002
ಹುಬ್ಬಳ್ಳಿ; ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಬರುವ ಬ್ಲಾಕ್ ಅಧ್ಯಕ್ಷರುಗಳ ಸಭೆಯನ್ನು ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ದೃಷ್ಟಿಯಿಂದ ಹುಬ್ಬಳ್ಳಿಯ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ನಡೆಸಲಾಯಿತು. ಈ …
ಹಣಕಾಸು ‌ಅನುದಾನದಲ್ಲಿ ‌ಅವ್ಯವಹಾರ : ಗ್ರಾ.ಪಂ ಮುತ್ತಿಗೆ ಹಾಕಿ ಪ್ರತಿಭಟನೆ
Shaikh BIG TV NEWS, Hubballi 2 ವಾರಗಳು ago Breaking News, ಸುದ್ದಿ 0 9809
ಕಲಘಟಗಿ:ತಾಲೂಕಿನ ಗಳಗಿ ಗ್ರಾ ಪಂ ನಲ್ಲಿ ಹದಿನಾಲ್ಕನೇ ಹಣಕಾಸು ‌ಅನುದಾನದಲ್ಲಿ ‌ಅವ್ಯಹಾರವಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ‌ ತನಿಖೆಗೆ ಒತ್ತಾಯಿಸಿದ ಘಟನೆ ಜರುಗಿದೆ. ಗಳಗಿ ಗ್ರಾಮ ಪಂಚಾಯತಿಯ 2018-2019,2019-2020,2020-2021 …
ಸಲೂನ್ ಹೆಸರಿನಲ್ಲಿ ವೈಶ್ಯವಾಟಿಕೆ ದಂಧೆ! ಇಬ್ಬರು ಯುವತಿ ರಕ್ಷಣೆ!
Shaikh BIG TV NEWS, Hubballi 2 ವಾರಗಳು ago Breaking News, ಕರ್ನಾಟಕ, ಜಿಲ್ಲೆ, ಸುದ್ದಿ, ಹುಬ್ಬಳ್ಳಿ 0 20195
ಹುಬ್ಬಳ್ಳಿ:ವೈಶ್ಯವಾಟಿಕೆ ನಡೆಸುತ್ತಿದ್ದ ಆರೋಪದ‌ ಮೇಲೆ ಸಿದ್ದೇಶ್ವರ ಪಾರ್ಕ್ ನಲ್ಲಿರುವ ಲಕ್ಕಿಸ್ ಸಲೂನ್ ಮೇಲೆ ದಾಳಿ ನಡೆಸಿದ ವಿದ್ಯಾನಗರ ಪೊಲೀಸರು ಸ್ಪಾ ಮಾಲಕಿಯನ್ನು ಬಂದಿಸಿ ಇಬ್ಬರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.ಇನ್ನು ಹಲವು ದಿನಗಳಿಂದ ಈ ಒಂದು …
ನೆಲಮಂಗಲ: ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‍ಗಾಗಿ ಟವಲ್ ಹಾಸಿರುವ ಮಾಜಿ ಶಾಸಕರ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 2008ರಲ್ಲಿ ನೆಲಮಂಗಲದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಎಂ.ವಿ.ನಾಗರಾಜ್ ನಂತರ ನಡೆದ ಚುನಾವಣೆಯಲ್ಲಿ …
ರಾಜ್ಯದ 'ಪ್ರಾಥಮಿಕ ಶಾಲಾ ಶಿಕ್ಷಕ'ರಿಗೆ ಗುಡ್ ನ್ಯೂಸ್
ಬೆಂಗಳೂರು : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿ ಎಸ್ ಇ ಆರ್ ಟಿ)ಯಿಂದ ಮುಖಾಮುಖಿ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದ್ರೇ ಅಕ್ಟೋಬರ್ 30ರವರೆಗೆ ಪ್ರಾಥಮಿಕ ಹಾಗೂ …
'ಕಟ್ಟಡ ಕಾರ್ಮಿಕ'ರಿಗೆ ಭರ್ಜರಿ ಗುಡ್‌ ನ್ಯೂಸ್
ಮೈಸೂರು: ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕಟ್ಟಡ ಕಾರ್ಮಿಕರಿಗೆ ಗುಡ್‌ ನ್ಯೂಸ್‌ ನೀಡಿದ್ದು, ಉಚಿತ ಪಾಸ್‌ ನೀಡುವುದು ಸೇರಿದಂತೆ ಅನೇಕ ಸುಧಾರಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ …
ಅನಂತಪುರಂ(ಆಂಧ್ರ ಪ್ರದೇಶ): ಹದಿನಾರು ವರ್ಷದ ಬಾಲಕಿ ಶ್ರಾವಣಿ ಒಂದು ದಿನದ ಮಟ್ಟಿಗೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ವಿಶಿಷ್ಟ ಅನುಭವ ತನ್ನದಾಗಿಸಿಕೊಂಡರು. ಶ್ರಾವಣಿ ಮೊದಲಿಗೆ ಸಂತ್ರಸ್ತ ಬಾಲಕಿಗೆ ಎಸ್/ಎಸ್ ಟಿ ದೌರ್ಜನ್ಯ …
ವಾಷಿಂಗ್ಟನ್‌: ಭೂಮಿಗೆ ಇನ್ನು ಕೆಲವೇ ದಿನಗಳಲ್ಲಿ ಬಂದು ಅಪ್ಪಳಿಸುತ್ತದೆ ಎಂಬ ಭೀತಿ ಸೃಷ್ಟಿಸಿದ್ದ, ಅಂತರಿಕ್ಷದಲ್ಲಿ ಅತಿ ವೇಗವಾಗಿ ಸಾಗಿಬರುತ್ತಿದ್ದ ನಿಗೂಢ ಆಕಾಶಕಾಯದ ನಿಜ ಸ್ವರೂಪ ಪತ್ತೆಯಾಗಿದೆ. ಅದು, 54 ವರ್ಷಗಳ ಹಿಂದೆ ಅಮೆರಿಕ ಬಾಹ್ಯಾಕಾಶ …
ನವದೆಹಲಿ: ಗ್ರಾಮೀಣ ಭಾಗದಲ್ಲಿ ಆಸ್ತಿ ಹಕ್ಕಿನ ಕಾರ್ಡ್ ನೀಡುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದಾಗಿ ರೈತರಿಗೆ, ಹಳ್ಳಿಗಾಡಿನ ಜನರಿಗೆ ಹೇಗೆ ನೆರವಾಗುತ್ತದೆ ಎಂಬುದಕ್ಕೆ ಮಾಹಿತಿ …
ಗ್ರಾಮ ಪಂಚಾಯಿತಿ ಚುನಾವಣೆಗೆ ವೇಳಾಪಟ್ಟಿ ರೆಡಿ
ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ವೇಳಾಪಟ್ಟಿ ಸಿದ್ದಪಡಿಸಲಾಗಿದೆ. ಸಂಭಾವ್ಯ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದಿಂದ ಹೈಕೋರ್ಟ್ ಗೆ ಸಲ್ಲಿಕೆ ಮಾಡಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗದ ವತಿಯಿಂದ ಹೈಕೋರ್ಟ್ ಗೆ ವೇಳಾಪಟ್ಟಿಯನ್ನು ಸಲ್ಲಿಕೆ …
ಈ 3 ರಾಶಿಯವರಿಗೆ ಅದೃಷ್ಟ ಅನ್ನೋದು ಅವರ ಜಾತಕದಲ್ಲೇ ಇರುತ್ತಂತೆ – ಅರಳಿ ಕಟ್ಟೆ