text
stringlengths
0
61.5k
ಆದರೆ ಸಂವಿಧಾನದಲ್ಲಿ ಆ ರೀತಿಯ ಲೋಪದೋಷಗಳು ತುಂಬಾ ಕಡಿಮೆ ಮತ್ತು ಕಾಲದ ಪ್ರವಾಹದಲ್ಲಿ ಆ ರೀತಿಯ ವ್ಯತ್ಯಾಸ ಕಂಡುಬಂದರೆ ತಿದ್ದುಪಡಿಗೆ ಸದಾ ಅವಕಾಶ ಇದ್ದೇ ಇರುತ್ತದೆ.
ಸಂವಿಧಾನ ಮತ್ತು ಧರ್ಮದ ಆಯ್ಕೆಯಲ್ಲಿ ನಮ್ಮ ನಿಲುವು ಯಾವುದಿರಬೇಕು ? ಬಹುಶಃ ಇದು ಪಂಥೀಯ ವಾದಗಳು ಹೆಚ್ಚು ಪ್ರಚಲಿತದಲ್ಲಿರುವ ಈ ಸಂದರ್ಭದಲ್ಲಿ ಬಹುಮುಖ್ಯ ಪ್ರಶ್ನೆಯಂತೆ ಕೆಲವರನ್ನು ಕಾಡುತ್ತಿರಬಹುದು. ಧಾರ್ಮಿಕ ಮೂಲಭೂತವಾದಿಗಳು ಧರ್ಮ ಎಂದರೆ, ಅತಿರೇಕದ ಎಡಪಂಥೀಯರು ಸಂವಿಧಾನ ‌ಎಂದರೆ, ಮಧ್ಯಮ ಮಾರ್ಗಿಗಳು ಎರಡೂ ಮುಖ್ಯ ಎಂದು ಹೇಳುವುದನ್ನು ಗಮನಿಸಿದ್ದೇನೆ. ಸಾಮಾಜಿಕ ರಾಜಕೀಯ ಸಾಮರಸ್ಯ ತೀರಾ ಕೆಳಹಂತದಲ್ಲಿ ಇಳಿದಿರುವಾಗ ಇದು ಸಹಜ.
ಹಾಗಾದರೆ ವಾಸ್ತವ ಏನು ?
ಧರ್ಮ ಮತ್ತು ಸಂವಿಧಾನ ಎರಡು ವಿರುದ್ಧ ಚಿಂತನೆಗಳೇನಲ್ಲ. ಸಾಮಾನ್ಯ ಜ್ಞಾನವನ್ನು ಉಪಯೋಗಿಸಿದರೆ ಸಾಕು ಅವು ಎರಡು ಒಂದಕ್ಕೊಂದು ಪೂರಕ. ಅದರಲ್ಲೂ ಭಾರತದ ಸಂವಿಧಾನ ಬಹುತೇಕ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಮುಖ್ಯವಾಗಿ ಧಾರ್ಮಿಕ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿದೆ ಎಂದು ಅರ್ಥವಾಗುತ್ತದೆ.
ಸಾಮಾನ್ಯ ಜನರಲ್ಲಿ ಸಂವಿಧಾನವನ್ನೇ ಒಂದು ಧರ್ಮ ಎಂದು ಆಚರಿಸುವುದು ಒಂದು ಸಮಸ್ಯೆಯಲ್ಲ. ಸಂವಿಧಾನದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಆಚರಣೆಗೆ ಎಲ್ಲಾ ಅವಕಾಶಗಳು ಇವೆ. ಆದರೆ ಸಮಸ್ಯೆ ಇರುವುದು ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದ ಮುಖಂಡರಿಂದ. ರಾಜಕೀಯ ಮೇಲಾಟಕ್ಕಾಗಿ ಧರ್ಮವನ್ನು ಎಳೆದು ತರುವುದು ಹಾಗೆಯೇ ಧರ್ಮಾಧಿಕಾರಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಧರ್ಮದ ಅಮಲನ್ನು ಜನರಲ್ಲಿ ತುಂಬುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಒಂದು ಸಣ್ಣ ಉದಾಹರಣೆ ನೋಡಿ.
ಧರ್ಮಗಳು ( ಮತಗಳು ) ಜನರನ್ನು ಹಿಂದು ಮುಸ್ಲಿಮ್ ಕ್ರಿಶ್ಚಿಯನ್ ಸಿಖ್ ಪಾರ್ಸಿ ಜೈನ್ ಬೌದ್ಧ ವೀರಶೈವ ಲಿಂಗಾಯತ ಎಂದು ವಿಂಗಡಿಸಿದರೆ ನಮ್ಮ ಸಂವಿಧಾನ ಎಲ್ಲರನ್ನೂ ಭಾರತೀಯರು ಎಂದು ಸಮನಾಗಿ ಕಾಣುತ್ತದೆ. ಹಾಗಾದರೆ ನಮ್ಮ ಆಯ್ಕೆ ವಿಭಜನೆಗೋ ಸಮಾನತೆಗೋ ಯೋಚಿಸಿ ನಿರ್ಧರಿಸಿ.
ಹಾಗಾದರೆ ಸಂವಿಧಾನದಿಂದ ಭಾರತದ ಎಲ್ಲಾ ಪ್ರಜೆಗಳಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ದೊರೆತಿದೆಯೇ ಎಂದರೆ ಖಂಡಿತ ಇಲ್ಲ ಎಂದೇ ಹೇಳಬೇಕಾಗುತ್ತದೆ. ತಾಂತ್ರಿಕವಾಗಿ ಮತ್ತು ಪುಸ್ತಕದಲ್ಲಿ ಸಮಾನತೆ ಇದ್ದರೂ ವಾಸ್ತವದಲ್ಲಿ ಅದು ಬಲಿಷ್ಠರ ಮತ್ತು ಅಪರಾಧಿಗಳ ಆಶ್ರಯ ತಾಣವೇ ಆಗಿದೆ. " ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರು ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು " ಎಂಬ ಉದಾತ್ತ ಧ್ಯೇಯದ ದುರುಪಯೋಗ ಎಲ್ಲೆಡೆಯೂ ಕಂಡುಬರುತ್ತಿದೆ. ಹಣ – ಸಾಕ್ಷಿ ಮತ್ತು ತಂತ್ರಗಾರಿಕೆಯೇ ಕಾನೂನಿನ ಮುಖ್ಯ ಆಧಾರ ಸ್ಥಂಭವಾಗಿ ನೈತಿಕತೆಗೆ ಯಾವ ಜಾಗವೂ ಇಲ್ಲ.
ಆದ್ದರಿಂದಲೇ ಸುಪ್ರೀಂ ಕೋರ್ಟ್ ಸಹ " Courts will delivers the law not the Justice " ( ನ್ಯಾಯಾಲಯಗಳು ಕಾನೂನು ನೀಡುತ್ತವೆಯೇ ಹೊರತು ನ್ಯಾಯವೇ ಆಗಿರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ " ಎಂಬ ಅರ್ಥದ ಮಾತುಗಳನ್ನು ಹೇಳಿದೆ ಎಂದು ವಕೀಲರೊಬ್ಬರು ಹೇಳಿದರು.
ಇದರ ಒಟ್ಟು ತಾತ್ಪರ್ಯ ಇಷ್ಟೇ. ಧರ್ಮವೇ ಇರಲಿ, ಕಾನೂನೇ ಇರಲಿ ವ್ಯಕ್ತಿಗಳಲ್ಲಿ ಮತ್ತು ಸಮಾಜದಲ್ಲಿ ನೈತಿಕತೆ ಮತ್ತು ಮಾನವೀಯತೆ ಕುಸಿದಾಗ ಎಲ್ಲವೂ ವಿಫಲವಾಗುತ್ತದೆ.
ಈ ಕ್ಷಣದಲ್ಲಿ ಸಂವಿಧಾನವೂ ಕೂಡ ಸಮಾಧಾನಕರವಾಗಿ ಜನರ ಹಿತ ರಕ್ಷಣೆಯನ್ನು ಮಾಡುತ್ತಿದೆ ಎಂದು ಆತ್ಮಸಾಕ್ಷಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲ.
ಯಾವುದೇ ಅಪರಾಧಗಳಲ್ಲಿ ಶೇಕಡಾ 90 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಪಕ್ಷಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಶಾಸಕರ ಮಾರಾಟ ಬಹಿರಂಗವಾಗಿ ನಡೆಯುತ್ತಿದೆ, ಭ್ರಷ್ಟಾಚಾರ ವಿರೋಧಿ ಕಾನೂನುಗಳು ಇದ್ದರೂ ಇಡೀ ವ್ಯವಸ್ಥೆ ಭ್ರಷ್ಟಗೊಂಡಿದೆ.
ಆದ್ದರಿಂದ ಸಂವಿಧಾನ ದಿನದ ಇಂದು ಕನಿಷ್ಠ
" ಸಂವಿಧಾನ ಎಂಬುದು ಕೇವಲ ಧರ್ಮವಲ್ಲ ಅಥವಾ ಕಾನೂನಲ್ಲ. ಅದು ಭಾರತೀಯ ಸಮಾಜದ ಜೀವನ ವಿಧಾನ. ನಾಗರಿಕ ಸಮಾಜದ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆ. ಮಾನವೀಯ ಮೌಲ್ಯಗಳ ವಿಕಾಸದ ಮಾರ್ಗ. ಅದನ್ನು ಗೌರವಿಸೋಣ – ಅನುಸರಿಸೋಣ – ಕಾಲಕ್ಕೆ ತಕ್ಕಂತೆ ಪ್ರಜಾಪ್ರಭುತ್ವ ನಿಯಮಗಳ ಅಡಿಯಲ್ಲಿ ತಿದ್ದುಪಡಿ ಒಪ್ಪಿಕೊಳ್ಳೋಣ – ಜನರ ಜೀವನಮಟ್ಟ ಸುಧಾರಿಸಲು ಮತ್ತಷ್ಟು ಬಲಪಡಿಸೋಣ " ಎಂದು ಆತ್ಮಸಾಕ್ಷಿಯ ಪ್ರತಿಜ್ಞೆ ಮಾಡೋಣ.
ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತ್ ಪಿಡಿಓ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jun 13, 2019, 11:59 PM IST
ಶಿವಮೊಗ್ಗ, ಜೂ. 13: ಜಮೀನು ಖಾತೆ ಮಾಡಿಕೊಡಲು ವ್ಯಕ್ತಿಯೋರ್ವರಿಂದ ಹಣ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಓ) ಯೋರ್ವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನೀಲಪ್ಪ ಬೂತಣ್ಣವರ್ ಎಸಿಬಿ ಬಲೆಗೆ ಬಿದ್ದ ಪಿಡಿಓ ಎಂದು ಗುರುತಿಸಲಾಗಿದೆ. ಜಮೀನು ಖಾತೆ ಮಾಡಿಕೊಡಲು ಪಿಡಿಓ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 10 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಪೊಲೀಸರು ದಾಳಿ ನಡೆಸಿ, ಹಣದ ಸಮೇತ ಪಿಡಿಓರನ್ನು ಬಂಧಿಸಿದೆ.
ಹರೆಯದವರಲ್ಲಿ ಕಂಡು ಬರುವ ಸಾಮಾನ್ಯ ಮಾನಸಿಕ ಅಸ್ವಸ್ಥತೆಗಳು | ಕನ್ನಡವೇ ಸತ್ಯ
ಹರೆಯದವರಲ್ಲಿ ಕಂಡು ಬರುವ ಸಾಮಾನ್ಯ ಮಾನಸಿಕ ಅಸ್ವಸ್ಥತೆಗಳು
ಸರಿಯಾದ ಪೂರ್ವ ಸಿದ್ಧತೆ ಮಾಡಿ, ಏನು ಮಾತಾಡಬೇಕು, ಏನು ಹಾಡಬೇಕು ಇತ್ಯಾದಿ. ನಿಮ್ಮ ಕೆಲವು ಸ್ನೇಹಿತರು/ಮನೆಯವರ ಮುಂದೆ ಮಾತನಾಡಿ/ ಹಾಡಿ, ಪ್ರಾಕ್ಟೀಸ್ ಮಾಡಿ. 'ನಾನು ಸರಿಯಾಗಿ ಸಿದ್ಧತೆ ಮಾಡಿದ್ದೇನೆ, ನನ್ನ ನಿರ್ವಹಣೆ-ಪರ್‌ಫಾರ್ಮ್‌ಮೆನ್ಸ್ ಚೆನ್ನಾಗೇ ಇರುತ್ತದೆ, ಎಂದು ಹೇಳಿಕೊಳ್ಳಿ. 'ನಾನು ಚೆನ್ನಾಗಿ ಮಾತನಾಡಲಾರೆ ಹಾಡಲಾರೆ. ತಪ್ಪುಗಳಾಗುತ್ತವೆ. ಸಭಿಕರು ನಗುತ್ತಾರೆ. ನಾನು ಅಪಹಾಸ್ಯ/ಅವಮಾನಕ್ಕೆ ಈಡಾಗುತ್ತೇನೆ ಎಂಬ ನಕಾರಾತ್ಮಕ ಆಲೋಚನೆಗಳಿಗೆ ಮನಸ್ಸಿನಲ್ಲಿ ಎಡೆ ಕೊಡಬೇಡಿ. ವೇದಿಕೆಗೆ ಹೋಗುವ ಮೊದಲು, ನೀವು ಕುಳಿತಲ್ಲೇ ಪ್ರಾಣಾಯಾಮ ಮಾಡಿ-ಕಣ್ಣು ಮುಚ್ಚಿ, ಆರಾಮವಾಗಿ ಮೈ ಸಡಿಲ ಬಿಡಿ, ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳಿ ಹಾಗೇ ನಿಧಾನವಾಗಿ ಉಸಿರನ್ನು ಬಿಡಿ. ವೇದಿಕೆಯ ಮೇಲೆ ಹೋದಾಗ, ಸಭಿಕರನ್ನೆಲ್ಲಾ ನೋಡಬೇಡಿ. ಕೆಲವೇ ಸಭಿಕರನ್ನು/ ನಿಮ್ಮ ಪರಿಚಿತರನ್ನು, ಆಯ್ಕೆ ಮಾಡಿಕೊಂಡು ಅವರತ್ತ ನೋಡುತ್ತಾ ಮಾತನಾಡಿ/ಹಾಡಿ.
ಭಾಷಾ ಸಾಮರ್ಥ್ಯ/ತಿಳುವಳಿಕೆ ಕಡಿಮೆ ಇರುವುದು. ಬಾಲ್ಯದಲ್ಲಿ ಜನರೊಂದಿಗೆ ವ್ಯವಹರಿಸುವ ತರಬೇತಿ ಇಲ್ಲದಿರುವುದು
ಸರಳವಾಗಿ ಸ್ಪಷ್ಟವಾಗಿ ಮಾತನಾಡುವ ಅಭ್ಯಾಸ ಮಾಡುವುದು. ಮೊದಲು ಕನ್ನಡಿಯ ಮುಂದೆ ಆನಂತರ ಪರಿಚಿತ ವ್ಯಕ್ತಿಗಳ ಜೊತೆ ಜ್ಞಾನ ತಿಳುವಳಿಕೆ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು, ವಿವಿಧ ವಿಷಯಗಳ ಬಗ್ಗೆ ಸಂಭಾಷಣೆ ನಡೆಸುವ ಕೌಶಲವನ್ನು ಪಡೆಯುವುದು. ನಾನು ಎಲ್ಲರನ್ನೂ ಮೆಚ್ಚಿಸಬೇಕಿಲ್ಲ, ನನಗೆ ಗೊತ್ತಿದ್ದಷ್ಟನ್ನು ಹೇಳುತ್ತೇನೆ. ಇತರರು ನನ್ನಿಂದ ಹೆಚ್ಚು ನಿರೀಕ್ಷೆ ಮಾಡಿದರೆ, ನಾನು ಏನು ಮಾಡಲು ಸಾಧ್ಯವಿಲ್ಲ. ನನ್ನನ್ನು ಕೆಲವರಾದರೂ ಮೆಚ್ಚುತ್ತಾರೆ ಅಷ್ಟು ಸಾಕು ಎಂಬ ಧೋರಣೆ ಇಟ್ಟುಕೊಳ್ಳುವುದು. ಎಲ್ಲರೂ ಸಮಾನರೇ, ನನ್ನೆದುರು ಇರುವ ವ್ಯಕ್ತಿ ದೊಡ್ಡವರಿರಬಹುದು, ಜ್ಞಾನಿ ಇರಬಹುದು. ಅಧಿಕಾರದಲ್ಲಿರಬಹುದು, ಅವರೂ ಮನುಷ್ಯರೇ, ಅವರಲ್ಲೂ ಕೆಲವು ಕುಂದು ಕೊರತೆಗಳು ಇರುತ್ತವೆ. ನಾನು ಚಿಕ್ಕವನಿರಬಹುದು. ನನ್ನಲ್ಲಿ ಅಧಿಕಾರ ಇಲ್ಲದಿರಬಹುದು, ಆದರೆ ನನ್ನ ಅನಿಸಿಕೆ, ಅಭಿಪ್ರಾಯ, ಬೇಕು, ಬೇಡಗಳನ್ನು ಹೇಳುವ ಹಕ್ಕು ನನಗಿದೆ ಎಂದು ಹೇಳಿಕೊಳ್ಳುವುದು. 'ಹೇಳಬೇಕಾದ್ದನ್ನು ವಿನಯ, ಗೌರವ, ಪ್ರೀತಿಯಿಂದ ಹೇಳುತ್ತೇನೆ. ಯಾರಿಗೂ ಅಗೌರವ, ಅವಮಾನ ಮಾಡುವ ಉದ್ದೇಶವಿಲ್ಲ ಆದ್ದರಿಂದ ನಾನು ಹೆದರುವ ಅಗತ್ಯವಿಲ್ಲ ಎಂದುಕೊಳ್ಳಿ. ಅಗತ್ಯಬಿದ್ದರೆ ಮನಶಾಸ್ತ್ರಜ್ಞರು ಅಥವಾ ಮನೋವೈದ್ಯರನ್ನು ಕಾಣಿ. ಆತಂಕವನ್ನು ತಗ್ಗಿಸುವ ಔಷಧಿ ಇದೆ , ನಡವಳಿಕೆ ಚಿಕಿತ್ಸೆ ಇದೆ.
ನಾಯಿ, ಬೆಕ್ಕು, ಜಿರಳೆ, ಇಲಿ, ಜೇಡದಂತಹ ಪ್ರಾಣಿ/ಕೀಟಗಳು, ಸೇತುವೆ, ಸುರಂಗ, ಗುಹೆ, ಟೆಲಿಫೋನ್ ಬೂತ್/ಲಿಫ್ಟ್‌ನಂತಹ ಚಿಕ್ಕ ಜಾಗಗಳು, ಕತ್ತಲೆ/ಒಂಟಿತನ, ಜನರ ಗುಂಪು, ರಕ್ತ, ಸೂಜಿ, ಆಪರೇಶನ್ ಥೇಟರ್, ಸ್ಕ್ಯಾನಿಂಗ್ ಅಥವಾ ಎಂ.ಆರ್.ಐ, ವಿಶೇಷ ತಪಾಸಣೆ ಯಂತ್ರಗಳು, ಆಸ್ಪತ್ರೆ, ವೈದ್ಯರು, ತುಂಬಾ ಜನಸಂದಣಿ ಇರುವ ಬಸ್/ಟ್ರೇನ್, ಎತ್ತರದ ಜಾಗಗಳು, ನೀರು, ಬೆಂಕಿ ಇತ್ಯಾದಿ.
ಯಾವಾಗಲೂ ಬೇಸರ, ದುಃಖದ ಭಾವನೆ, ಇದರಿಂದಾಗಿ ಅಳುಬರುವುದು. ಎಲ್ಲದರಲ್ಲೂ ನಿರಾಸಕ್ತಿ, ನಿರುತ್ಸಾಹ, ಉದಾಸೀನತೆ ಹಿಂದೆ ಸಂತೋಷ, ಉತ್ಸಾಹಗಳನ್ನು ನೀಡುತ್ತಿದ್ದ ಚಟುವಟಿಕೆಗಳಿಂದ ಕೂಡ ಈಗ ಸಂತೋಷವಿಲ್ಲ. ಸಂಭ್ರಮವಿಲ್ಲ. ಅಸಹಾಯಕ ಹಾಗೂ ನಿರಾಶಾಭಾವನೆ. ನಾನು ಅಪ್ರಯೋಜಕ, ಯಾವ ಕೆಲಸವೂ ನನ್ನಿಂದಾಗದು, ಇನ್ನೊಬ್ಬರಿಗೆ ಮನೆಯವರಿಗೆ, ಸಮಾಜಕ್ಕೆ ನಾನು ಹೊರೆ ಎಂಬ ಆಲೋಚನೆ, ತಪ್ಪಿತಸ್ಥ ಭಾವನೆಗಳು, ನಗು-ನಲಿವು, ಯಶಸ್ಸು, ಒಳ್ಳೆಯ ದಿನಗಳು ಇನ್ನೆಂದಿಗೂ ಬರುವುದಿಲ್ಲ ಎನಿಸುವುದು. ನಿದ್ರಾ ತೊಂದರೆಗಳು ಅಥವಾ ಹೆಚ್ಚು ನಿದ್ರೆ. ಹಸಿವು ಕಡಿಮೆಯಾಗುವುದು ಬಾಯಿ ರುಚಿ ಇಲ್ಲದಿರುವುದು. ತೂಕ ಕಡಿಮೆಯಾಗುವುದು.ದೇಹದ ಚಲನ-ವಲನಗಳು ನಿಧಾನವಾಗುವುದು. ಮನಸ್ಸಿನ ಆಲೋಚನೆ, ನಿರ್ಧಾರ ಮಾಡುವ ಪ್ರಕ್ರಿಯೆಗಳೂ ನಿಧಾನವಾಗಿ, ವ್ಯಕ್ತಿ ಮಂಕಾಗುವುದು. ಅಸ್ಪಷ್ಟ ಆದರೆ ತೀವ್ರವಾದ ಶಾರೀರಿಕ ನೋವುಗಳು, ಸುಸ್ತು, ನಿಶ್ಯಕ್ತಿ ಕಾಣಿಸಿಕೊಳ್ಳುವುದು, ಸಾಯುವ ಇಚ್ಚೆ, ಆತ್ಮಹತ್ಯೆಯ ಆಲೋಚನೆ, ಪ್ರಯತ್ನ. ಓದು, ಅಧ್ಯಯನದಲ್ಲಿ ಹಿಂದೆ ಬೀಳುವುದು, ತರಗತಿಗಳಿಗೆ ಕ್ರಮವಾಗಿ ಹೋಗದಿರುವುದು, ಮೊದಲಿನಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು.
ಭ್ರಮಾಧೀನ ಸ್ಥಿತಿಯಲ್ಲಿ ಮನೆಬಿಟ್ಟು, ಅಲೆದಾಡುವುದು, ತನ್ನ ಗುರುತು, ಪರಿಚಯವನ್ನು ಮರೆಯುವುದು, ಪರಿಚಿತರನ್ನು ಗುರುತಿಸಲು ವಿಫಲವಾಗುವುದು
ಗೊರಕೆ (Snoring): ಗೊರಕೆಗೆ ಕಾರಣವೇನು ಗೊತ್ತಾ? ಗೊರಕೆ ನಿವಾರಣೆ ಹೇಗೆ
Get rid of Snoring and causes of Snoring: ಗೊರಕೆ, ಗೊರಕೆಗೆ ಕಾರಣಗಳು ಬಹಳಷ್ಟು ಇದ್ದರೂ ಅದಕ್ಕೆ ಪರಿಹಾರ ಇದೆ, ಅಂದಹಾಗೆ ನಿದ್ದೆ ಮಾಡುವಾಗ, ಮೂಗಿನ ಹೊಳ್ಳೆಗಳಿಂದ ಕರ್ಕಶ ಶಬ್ದವು ಹೊರಹೊಮ್ಮುತ್ತದೆ, ಇದನ್ನು ಜನರು ಗೊರಕೆ ಎಂದು ಕರೆಯುತ್ತಾರೆ.
By Kannada News Today On ಅಕ್ಟೋಬರ್ 23, 2021 18:43
ಗೊರಕೆ (Snoring) - ಗೊರಕೆಗೆ ಕಾರಣವೇನು ಗೊತ್ತಾ ಗೊರಕೆ ನಿವಾರಣೆ ಹೇಗೆ
ಅನೇಕ ಜನರು ರಾತ್ರಿ ಮಲಗುವಾಗ ತೀವ್ರ ಗೊರಕೆ ಹೊಡೆಯಲು ಪ್ರಾರಂಭಿಸುತ್ತಾರೆ. ಇದರಿಂದ ಅಕ್ಕಪಕ್ಕದಲ್ಲಿ ಮಲಗುವವರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಅದರಿಂದಾಗಿ ಗೊರಕೆ ಹೊಡೆಯುವ ವ್ಯಕ್ತಿಯು ಕೆಲವೊಮ್ಮೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.
ಯಾವುದೇ ವ್ಯಕ್ತಿಯು ತನಗೆ ತಿಳಿದು ಗೊರಕೆ ಹೊಡೆಯುವುದಿಲ್ಲ, ಆದರೆ ಗೊರಕೆಗೆ ಹಲವು ಕಾರಣಗಳಿವೆ. ರಾತ್ರಿ ಮಲಗುವಾಗ ಗೊರಕೆಗೆ ಕಾರಣವೇನು ಮತ್ತು ಈ ಸಮಸ್ಯೆಯನ್ನು ಹೇಗೆ ಎದುರಿಸುವುದು ಎಂದು ತಿಳಿಯಿರಿ.
Get rid of Snoring and causes of Snoring
ಗೊರಕೆ ಸಮಸ್ಯೆಗೆ ಕಾರಣವೇನು ಮತ್ತು ಗೊರಕೆಗೆ ಪರಿಹಾರ
ರಾತ್ರಿಯಲ್ಲಿ ಮಲಗುವಾಗ ಗೊರಕೆ ಏಕೆ ಬರುತ್ತದೆ ಎಂದು ತಿಳಿಯಿರಿ
ಒಬ್ಬ ವ್ಯಕ್ತಿಯು ತುಂಬಾ ಆಳವಾದ ನಿದ್ರೆಯಲ್ಲಿದ್ದಾಗ, ನಮ್ಮ ಬಾಯಿ ಮತ್ತು ಗಂಟಲಿನ ಸ್ನಾಯುಗಳು ಸಡಿಲಗೊಳ್ಳುತ್ತವೆ, ಇದರಿಂದಾಗಿ ನಮ್ಮ ಗಂಟಲಿನ ಅಂಗಾಂಶಗಳು ಸಡಿಲಗೊಳ್ಳುತ್ತವೆ.
ಆ ಸಮಯದಲ್ಲಿ ನಾವು ಉಸಿರಾಡುವಾಗ, ಗಾಳಿಯ ಹರಿವಿನ ಸಮಯದಲ್ಲಿ, ಗಂಟಲಿನ ಮೂಲಕ ಗಾಳಿಯು ಹಾದುಹೋಗುತ್ತದೆ, ಗಂಟಲಿನ ಅಂಗಾಂಶಗಳಲ್ಲಿ ಕಂಪನವನ್ನು ಉಂಟುಮಾಡುತ್ತದೆ, ಈ ಕಾರಣದಿಂದಾಗಿ ಕರ್ಕಶ ಧ್ವನಿ ಹೊರಬರಲು ಪ್ರಾರಂಭವಾಗುತ್ತದೆ. ಇದನ್ನು ಗೊರಕೆ ಎಂದು ಕರೆಯಲಾಗುತ್ತದೆ.
ಗಾಳಿಯ ಹರಿವು ಹೆಚ್ಚಾದಾಗ ಮತ್ತು ಶ್ವಾಸನಾಳಗಳು ಹೆಚ್ಚು ಸಂಕುಚಿತಗೊಂಡಾಗ, ಈ ಅಂಗಾಂಶಗಳು ಮತ್ತಷ್ಟು ಕಂಪಿಸುತ್ತವೆ, ಇದರಿಂದಾಗಿ ಗೊರಕೆಯ ಶಬ್ದವು ಇನ್ನಷ್ಟು ಜೋರಾಗುತ್ತದೆ.
ಗೊರಕೆ ಸಮಸ್ಯೆಗೆ ಹಲವು ಕಾರಣಗಳಾಗಿರಬಹುದು. ಉದಾಹರಣೆಗೆ ಬೊಜ್ಜು, ಸೈನಸ್ ಸಮಸ್ಯೆಗಳು, ಅತಿಯಾದ ಮದ್ಯಪಾನ, ಅಲರ್ಜಿ ಇತ್ಯಾದಿ. ಗೊರಕೆ ಸಮಸ್ಯೆಯು ಅಸ್ವಸ್ಥತೆಗೆ ಸಂಬಂಧಿಸರಬಹುದು, ಇದನ್ನು ತಜ್ಞರ ಭಾಷೆಯಲ್ಲಿ (ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ) ಎಂದು ಕರೆಯಲಾಗುತ್ತದೆ. ಗೊರಕೆ ಸಮಸ್ಯೆಯನ್ನು ಹೇಗೆ ಹೋಗಲಾಡಿಸಬಹುದು ಎಂದು ತಿಳಿಯಿರಿ…
ಗೊರಕೆ – ಗೊರಕೆಗೆ ಸುಲಭ ಪರಿಹಾರಗಳು
ಕೆಲವರು ನೇರವಾಗಿ ಬೆನ್ನಿನ ಮೇಲೆ ಮಲಗುತ್ತಾರೆ. ಈ ಭಂಗಿಯಲ್ಲಿ ಮಲಗಿದಾಗ ನಾಲಿಗೆ ಮತ್ತು ಅಂಗುಳಗಳು ಶ್ವಾಸನಾಳಗಳನ್ನು ಸಂಕುಚಿತಗೊಳಿಸುತ್ತವೆ. ಗಾಳಿಯು ಸಂಕುಚಿತಗೊಂಡಾಗ ನಿದ್ರೆಯ ಸಮಯದಲ್ಲಿ ಕಂಪಿಸುವ ಶಬ್ದ ಉಂಟಾಗುತ್ತದೆ. ಆದ್ದರಿಂದ, ಒಂದು ಬದಿಯಲ್ಲಿ ಮಲಗುವುದರಿಂದ ನಿಮ್ಮ ಗೊರಕೆಯನ್ನು ಕಡಿಮೆ ಮಾಡಬಹುದು.
ಗೊರಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು, ನೀವು ಮಲಗುವಾಗ ನಿಮ್ಮ ದೇಹಕ್ಕೆ ಸಮಾನವಾದ ದಿಂಬನ್ನು ಇಟ್ಟುಕೊಂಡು ಮಲಗಬೇಕು, ಈ ಕಾರಣದಿಂದಾಗಿ ನಿಮ್ಮ ದೇಹದ ಸಮತೋಲನವು ಒಂದು ಬದಿಯಲ್ಲಿ ಸರಿಯಾಗಿ ಉಳಿಯುತ್ತದೆ ಮತ್ತು ನೀವು ಕಡಿಮೆ ಗೊರಕೆಯನ್ನು ಪಡೆಯುತ್ತೀರಿ.
ಮಲಗುವಾಗ ತಲೆಯನ್ನು ಮೇಲಕ್ಕೆ ಎತ್ತುವುದರಿಂದ ಶ್ವಾಸನಾಳಗಳು ತೆರೆದುಕೊಳ್ಳುತ್ತವೆ, ಇದು ನಿದ್ರೆಯ ಸಮಯದಲ್ಲಿ ಗೊರಕೆಯನ್ನು ಕಡಿಮೆ ಮಾಡುತ್ತದೆ, ಆದರೆ ದೀರ್ಘಕಾಲ ಈ ಸ್ಥಿತಿಯಲ್ಲಿ ಮಲಗುವುದರಿಂದ ಕುತ್ತಿಗೆ ನೋವು ಉಂಟಾಗುತ್ತದೆ.
ಗೊರಕೆ ನಿವಾರಣೆಗೆ ಇನ್ನಷ್ಟು ಪರಿಹಾರ ಮತ್ತು ಸಲಹೆಗಳು
ತೂಕವನ್ನು ನಿಯಂತ್ರಿಸಿ
ಯಾವುದೇ ತೂಕ ಹೊಂದಿರುವ ವ್ಯಕ್ತಿಗೆ ಗೊರಕೆಯ ಸಮಸ್ಯೆ ಇದ್ದರೂ, ಸ್ಥೂಲಕಾಯದಿಂದಾಗಿ, ಕೆಲವರಿಗೆ ಗೊರಕೆಯ ಸಮಸ್ಯೆಯೂ ಇರುತ್ತದೆ. ತೂಕ ಹೆಚ್ಚಾದ ನಂತರ ನಿಮಗೆ ಗೊರಕೆ ಸಮಸ್ಯೆ ಇದ್ದರೆ, ನಿಮ್ಮ ತೂಕವನ್ನು ನಿಯಂತ್ರಿಸಿ. ಇದರೊಂದಿಗೆ ನೀವು ಗೊರಕೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.
ಮದ್ಯಪಾನದಿಂದ ದೂರವಿರಿ :
ಅತಿಯಾಗಿ ಮದ್ಯಪಾನ ಅಥವಾ ಧೂಮಪಾನ ಮಾಡುವುದರಿಂದ ಗಂಟಲಿನ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ, ಇದರಿಂದಾಗಿ ರಾತ್ರಿ ಮಲಗುವಾಗ ಗೊರಕೆ ಪ್ರಾರಂಭವಾಗುತ್ತದೆ. ಮಲಗುವ ಸಮಯಕ್ಕೆ ನಾಲ್ಕರಿಂದ ಐದು ಗಂಟೆಗಳ ಮೊದಲು ಮದ್ಯಪಾನ ಮಾಡುವ ಜನರು ಗೊರಕೆ ಹೊಡೆಯುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಮದ್ಯ ಸೇವಿಸುವವರು ಹೆಚ್ಚು ಗೊರಕೆ ಹೊಡೆಯಲು ಪ್ರಾರಂಭಿಸುತ್ತಾರೆ.
ಸರಿಯಾಗಿ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ,
ತಡರಾತ್ರಿಯವರೆಗೂ ಎಚ್ಚರದಿಂದಿರುವವರು ಮತ್ತು ಮಲಗುವ ಸಮಯ ಸರಿಯಾಗಿಲ್ಲದವರು, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದ ಕಾರಣ ಗೊರಕೆಯ ಸಮಸ್ಯೆಯೂ ಹೆಚ್ಚಾಗುತ್ತದೆ. ನೀವು ದೀರ್ಘಕಾಲ ಎದ್ದ ನಂತರ ಮಲಗಿದಾಗ, ದೇಹವು ಸಂಪೂರ್ಣವಾಗಿ ಆಯಾಸಗೊಳ್ಳುತ್ತದೆ ಮತ್ತು ನಿದ್ರೆ ತುಂಬಾ ಆಳವಾಗಿ ಬರುತ್ತದೆ. ಈ ಸ್ಥಿತಿಯಲ್ಲಿಯೂ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ ಮತ್ತು ಗೊರಕೆ ಪ್ರಾರಂಭವಾಗುತ್ತದೆ.
ಮೂಗಿನ ಹೊಳ್ಳೆಗಳನ್ನು ಸ್ವಚ್ಛವಾಗಿಡಿ
ನಾವು ಮಲಗಿರುವಾಗ ಉಸಿರಾಡುವಾಗ, ಮೂಗಿನ ಶ್ವಾಸನಾಳದ ಅಡಚಣೆಯಿಂದಾಗಿ ಗೊರಕೆ ಉಂಟಾಗುತ್ತದೆ, ಆದ್ದರಿಂದ ಕೆಲವೊಮ್ಮೆ ಶೀತ ಅಥವಾ ಯಾವುದೇ ಕಾರಣದಿಂದ ಗೊರಕೆ ಹೆಚ್ಚು ಪ್ರಾರಂಭವಾಗುತ್ತದೆ. ಮೂಗಿನ ಹೊಳ್ಳೆಗಳನ್ನು ಸ್ವಚ್ಛವಾಗಿಡಲು, ಉಪ್ಪು ನೀರಿನಿಂದ ಸ್ವಚ್ಛಗೊಳಿಸುವುದರಿಂದ ಮೂಗು ತೆರೆದಿರುತ್ತದೆ. ಮಲಗುವ ಸ್ವಲ್ಪ ಸಮಯದ ಮೊದಲು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಮೂಗಿನ ಹೊಳ್ಳೆಗಳನ್ನು ತೆರೆಯುತ್ತದೆ. ಇದು ನಿಮಗೆ ಗೊರಕೆಯ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ದಿಂಬನ್ನು ಬದಲಾಯಿಸಿ
ನೀವು ಪ್ರತಿದಿನ ಒಂದೇ ದಿಂಬನ್ನು ಬಳಸಿದರೆ, ಅದರಲ್ಲಿರುವ ಧೂಳಿನ ಕಣಗಳಿಗೆ ಅಲರ್ಜಿ ಇರುವ ಕಾರಣ ನೀವು ಗೊರಕೆ ಹೊಡೆಯಬಹುದು. ಆದ್ದರಿಂದ, ಪ್ರತಿ ವಾರಕ್ಕೊಮ್ಮೆ, ನಿಮ್ಮ ದಿಂಬಿನ ಧೂಳನ್ನು ಸ್ವಚ್ಛಗೊಳಿಸಿ ಮತ್ತು ತೆರೆದ ಗಾಳಿಯಲ್ಲಿ ಇರಿಸಿ ಸೂರ್ಯನ ಬೆಳಕನ್ನು ತೋರಿಸಿ. ದಿಂಬನ್ನು ಪ್ರತಿ 6 ತಿಂಗಳಿಗೊಮ್ಮೆ ಬದಲಾಯಿಸಬೇಕು.
ದ್ರವದ ಪ್ರಮಾಣ ಹೆಚ್ಚಿಸಿ
ನಿರ್ಜಲೀಕರಣವು ಗೊರಕೆಗೆ ಕಾರಣವಾಗಬಹುದು ಏಕೆಂದರೆ ಇದು ನಿಮ್ಮ ಮೂಗಿನ ಹೊಳ್ಳೆಗಳು ಮತ್ತು ಗಂಟಲಿನಲ್ಲಿ ಶುಷ್ಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ ಮತ್ತು ನಿಮ್ಮ ಆಹಾರದಲ್ಲಿ ದ್ರವದ ಪ್ರಮಾಣವನ್ನು ಹೆಚ್ಚಿಸಿ.
2 ಪ್ರಮುಖ ವ್ಯಾಪಾರ ಕೇಂದ್ರದ ಮಧ್ಯದಲ್ಲಿದೆ ಬೆಳಗಾವಿ
ಬೆಳಗಾವಿ ಜಿಲ್ಲಾ ಅವಲೋಕನ
ನಾಲ್ಕನೇ ಅತಿದೊಡ್ಡ ನಗರ ಬೆಳಗಾವಿ, ಭಾರತದ ಮೊದಲ ಸೂಚಿತ ಏರೋಸ್ಪೇಸ್ ನಿಖರ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಕೇಂದ್ರದ ಎಸ್‍ಇಝಡ್‍ನ ತವರಾಗಿದೆ. ಅತ್ಯುನ್ನತ ಗುಣಮಟ್ಟದ ಅಲ್ಯುಮಿನಿಯಂ ಅದಿರಿನ ನೆಲ ಹಾಗೂ 70ಸಾವಿರ ಟನ್ ಆಟೋಮೋಟಿವ್ ಮತ್ತು ಇಂಡಸ್ಟ್ರಿಯಲ್ ಕಬ್ಬಿಣ ಎರಕ ಉತ್ಪಾದಿಸುವ 200 ಫೌಂಡ್ರಿಸ್ ಬೆಳಗಾವಿಯನ್ನು ಪ್ರಮುಖ ಭಾರ ಯಂತ್ರ ಉಪಕರಣ ಮತ್ತು ಅಧಿಕ ಒತ್ತಡದ ಆಯಿಲ್ ಹೈಡ್ರಾಲಿಕ್ಸ್ ಉತ್ಪಾದನಾ ಕೇಂದ್ರವನ್ನಾಗಿಸಿದೆ. ಬೆಂಗಳೂರು-ಮುಂಬೈ ಮಧ್ಯದಲ್ಲಿ ಬೆಳಗಾವಿ ಜಿಲ್ಲೆ ಇರುವುದರಿಂದ ಆಟೊಮೊಬೈಲ್ಸ್ ಮತ್ತು ಏರೋಸ್ಪೇಸ್ ಕೈಗಾರಿಕೆ ಅಭಿವೃದ್ಧಿ ಹೊಂದಲು ಸೂಕ್ತ ಸ್ಥಳವಾಗಿದೆ. ಬೆಳಗಾವಿಯು 13,433 ಚದರ ಕಿಮೀ ವಿಸ್ತೀರ್ಣ ಹೊಂದಿದ್ದು ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಖಾನಾಪುರ, ರಾಮದುರ್ಗ, ರಾಯಭಾಗ ಹಾಗೂ ಸವದತ್ತಿ ಎಂಬ 10 ತಾಲ್ಲೂಕುಗಳನ್ನು ಹೊಂದಿದೆ.
ರಾಜ್ಯದ ಎರಡನೇ ಅತಿದೊಡ್ಡ ರಫ್ತು ಜಿಲ್ಲೆಯಾಗಿದೆ ಬೆಳಗಾವಿ. ಜಿಲ್ಲೆಯ ಒಟ್ಟು ಜಿಡಿಪಿ ರೂ 159.65 ಶತಕೋಟಿ ಇದ್ದು ರಾಜ್ಯ ಜಿಎಸ್‍ಡಿಪಿಗೆ 5.3% ಕೊಡುಗೆ ನೀಡಿದೆ. ಇಲ್ಲಿನವರ ವಾರ್ಷಿಕ ತಲಾ ಆದಾಯ ರೂ 52,250 ಇದ್ದು 2007-08 ರಿಂದ 2012-13ರಲ್ಲಿ ಜಿಡಿಡಿಪಿ ಟ್ರೆಂಡ್ 4.3% ನಲ್ಲಿದೆ.
ವ್ಯವಸಾಯ ಪ್ರಾಮುಖ್ಯತೆ
ತನ್ನ ಒಟ್ಟು ಪ್ರದೇಶದ 48% ಭೂಮಿ ವ್ಯವಸಾಯಕ್ಕೆ ಮೀಸಲಿಡಲಾಗಿದೆ. ಹಾಸನ ಮತ್ತು ಕೋಲಾರದ ನಂತ್ರ ಹಣ್ಣು ಮತ್ತು ತರಕಾರಿಗೆ ಬೆಳಗಾವಿ ಹೆಸರುವಾಸಿಯಾಗಿದೆ. ಈರುಳ್ಳಿ, ಟೊಮೊಟೊ, ಆಲೂಗಡ್ಡೆ, ಮೆಣಸಿನಕಾಯಿ, ಕಾರೆಟ್, ಮಾವು, ಸಪೋಟ, ಬಾಳೆಹಣ್ಣು, ದ್ರಾಕ್ಷಿ ಮತ್ತು ಪಪ್ಪಾಯ ಇಲ್ಲಿನ ಪ್ರಮುಖ ಬೆಳೆಗಳು.
ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯವರು ಸುಮಾರು 300 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಭಾರತದ ಪ್ರಥಮ ಏರೋಸ್ಪೇಸ್ ನಿಖರ ಎಂಜಿನಿಯರಿಂಗ್ ಎಸ್‍ಇಝಡ್ ನಿಂದಾಗಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬೆಳಗಾವಿ ಮುಂಚೂಣಿಯಲ್ಲಿದೆ. 16 ಕೈಗಾರಿಕಾ ಎಸ್ಟೇಟ್‍ಗಳು 6 ಕೈಗಾರಿಕಾ ಪ್ರದೇಶಗಳು ಮತ್ತು 1 ಎಸ್‍ಇಝಡ್ ಜಿಲ್ಲೆಯಲ್ಲಿದೆ. ಜಿಲ್ಲೆಯಾದ್ಯಂತ 11,842 ಎಕರೆ ಲ್ಯಾಂಡ್ ಬ್ಯಾಂಕ್‍ನಲ್ಲಿದ್ದು ನಿರ್ದಿಷ್ಟ ಪ್ರದೇಶದ ಕೇಂದ್ರೀಕೃತ ಅಭಿವೃದ್ಧಿ ವಿಚಾರದಲ್ಲಿ ಹೂಡಿಕೆ ಮಾಡುವುದಕ್ಕೆ ಸೂಕ್ತ ತಾಣವಾಗಿದೆ. ಸುವರ್ಣ ಕರ್ನಾಟಕ ಅಭಿವೃದ್ಧಿ ಕಾರಿಡಾರ್ ಪ್ರಸ್ತಾವನೆಯಂತೆ ಐಟಿ-ಬಿಟಿ ವಲಯ ಮತ್ತು ಸಿದ್ಧ ಉಡುಪು ವಲಯಗಳಲ್ಲಿ ಹೆಚ್ಚಿನ ಸಾಮಥ್ರ್ಯವಿದ್ದು ಸುಮಾರು 30ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ.
ಜಿಲ್ಲೆಯಲ್ಲಿರೋ ಎರಕದ ಮನೆ ಹಾಗೂ ವಿದ್ಯುತ್ ಮಗ್ಗಗಳಿಂದ ಆಟದ ಸಾಮಾನುಗಳು, ಲೋಹದ ವಸ್ತುಗಳು, ಕರಕುಶಲ ಚಪ್ಪಲಿಗಳು, ಕುಂಬಾರಿಕೆ, ಮಣ್ಣಿನ ಬೊಂಬೆಗಳು ತಯಾರಾಗುತ್ತಿದ್ದು, ಜವಳಿ ಕಸೂತಿ ಸಮೂಹ ಕೈಗಾರಿಕೆಗಳು ಈ ಪ್ರದೇಶದ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಕೃಷಿ ಸಬಂಧಿತ ಉದ್ದಿಮೆಗಳ ಮೂಲಸೌಕರ್ಯ ಅಭಿವೃದ್ಧಿüಗೆ ಆದ್ಯತೆ ನೀಡಲಾಗ್ತಿದ್ದು ಶೀತಲೀಕರಣ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. 22 ಸಕ್ಕರೆ ಕಾರ್ಖಾನೆಗಳು, ಚಕ್ಕೋಡಿಯ ಬೆಲ್ಲದ ಉದ್ಯಮಗಳು ಬೆಳೆಯುತ್ತಿವೆ. ಪ್ರಸ್ತುತ ರೂ 385 ಶತಕೋಟಿ ಹೂಡಿಕೆಯಲ್ಲಿ 54 ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳು, 44,142 ವಿವಿಧ ಸಣ್ಣ ಪ್ರಮಾಣದ ಉದ್ದಿಮೆಗಳೊಂದಿಗೆ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದೆ.
ಭೂಮಿ ಮತ್ತು ಮಣ್ಣು: ಬೆಳಗಾವಿ ವಿವಿಧ ಕೃಷಿ ಹವಾಮಾನ ಮತ್ತು ಮಣ್ಣು ಹೊಂದಿದ್ದು ವ್ಯವಸಾಯ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳನ್ನು ಶಕ್ತಿಗೊಳಿಸಲು ಸಾಧ್ಯವಾಗಿದೆ. ಜಿಲ್ಲೆಯ 48% ಭೂಮಿ ಕೃಷಿಗೆ ಬಳಕೆಯಾಗುತ್ತಿದ್ದು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. 26% ಭೂಮಿ ಖಾಲಿ ಇದ್ದು ಇದರಲ್ಲಿ ಕೃಷಿ ಮಾಡಲಾಗದ ಭೂಮಿ 12% ಇದೆ ಹಾಗೂ 14% ಅರಣ್ಯ ಪ್ರದೇಶವಿದೆ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಖನಿಜ ನಿಕ್ಷೇಪಗಳಿವೆ. ಬಾಕ್ಸೈಟ್, ಯುರೇನಿಯಂ, ಸಿಲಿಕಾ ಸ್ಯಾಂಡ್, ಅಲ್ಯೂಮಿನಿಯಂ, ಲಾಟೆರೈಟ್, ಕ್ವಾರ್ಟ್ಜೈಟ್ ಗಳ ಅಪಾರ ನಿಕ್ಷೇಪಗಳಿವೆ.
ಬೆಳಗಾವಿ ಜಿಲ್ಲೆ ನೀರು ಸರಬರಾಜು ರಿಸರ್ವಾಯರ್, ಟ್ಯಾಂಕ್‍ಗಳು ಹಾಗೂ ಕಾಲುವೆಗಳ ಮೇಲೆ ಅವಲಂಬಿತವಾಗಿದೆ. ಕೃಷ್ಣ, ಮಲಪ್ರಭ ಮತ್ತು ಘಟಪ್ರಭ ಜಿಲ್ಲೆಯಲ್ಲಿ ಹರಿದು ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟಿದೆ.
ಬೆಳಗಾವಿಗೆ ವಿದ್ಯುತ್ ಸರಬರಾಜು ಮಾಡುವ ಜವಾಬ್ದಾರಿ ಹೆಸ್ಕಾಂ ಹೆಗಲ ಮೇಲಿದೆ. 3 ಮೆಗಾವಾಟ್ ಸಾಮರ್ಥ್ಯದ ರೂ 2,016 ಕೋಟಿ ಹೂಡಿಕೆಯ ಸೋಲರ್ ಫೋಟೋ ವೋಲ್ಟಿಕ್ ಪವರ್ ಪ್ಲಾಂಟ್ ನಿರ್ಮಾಣವಾದ ಮೇಲೆ ವಿದ್ಯುತ್ ಅವಲಂಬನೆ ಕಡಿಮೆಯಾಗಿದೆ. 700 ಮೆಗಾವಾಟ್ ಸಾಮಥ್ರ್ಯದ ಯೋಜನೆಗೆ ರಾಜ್ಯ ಸರ್ಕಾರದ ಅನುಮೋದನೆ ಸಿಕ್ಕಿದ್ದು ಮತ್ತೊಂದು ಖಾಸಗೀ ಹೂಡಿಕೆಯಡಿ ಪ್ರಾರಂಭವಾಗ್ತಿರೋ 1320 ಮೆಗಾವಾಟ್ ವಿದ್ಯುತ್ ಪ್ಲಾಂಟ್‍ಗೆ ಈಗಾಗಲೇ ಭೂಮಿ ಹಂಚಿಕೆಯಾಗಿದೆ.
ಜ್ಞಾನಕ್ಷೇತ್ರ
ಬೆಳಗಾವಿಯಲ್ಲಿ 3 ವಿಶ್ವವಿದ್ಯಾಲಯಗಳು ಇದ್ದು ಜಿಲ್ಲೆಯಲ್ಲಿ ಜ್ಞಾನಸಾಗರವನ್ನು ಹರಡಿದೆ. ವಿಶ್ವೇಶ್ವರಯ್ಯ ತಾಂತ್ರಿಯ ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಕೆಎಲ್‍ಇ ವಿಶ್ವವಿದ್ಯಾಲಯ ಇಲ್ಲಿ ವಿದ್ಯಾಕ್ರಾಂತಿಯನ್ನೇ ಮಾಡಿದೆ. 180 ಡಿಗ್ರಿ ಕಾಲೇಜುಗಳು ಸೇರಿದಂತೆ 9 ಎಂಜಿನಿಯರಿಂಗ್ ಕಾಲೇಜು, 15 ಪಾಲಿಟೆಕ್ನಿಕ್ ಕಾಲೇಜು, 2 ಡೆಂಟಲ್ ಕಾಲೇಜು, 2 ಮೆಡಿಕಲ್ ಕಾಲೇಜುಗಳು ಜಿಲ್ಲೆಯ ಹಿರಿಮೆಯನ್ನು ಎತ್ತಿಹಿಡಿದಿದೆ.
ಬೆಳಗಾವಿಯಲ್ಲಿ ಮೂಲಭೂತ ನಾಗರೀಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ. ಜಿಲ್ಲೆಯಲ್ಲಿ 139 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 344 ಖಾಸಗೀ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂ, 14 ಸಮುದಾಯ ಆರೋಗ್ಯ ಕೇಂದ್ರಗಳು, 39 ಸರ್ಕಾರಿ ಮತ್ತು ಆಯುರ್ವೇದ ಆಸ್ಪತ್ರೆಗಳು ಇಲ್ಲಿನ ಆರೋಗ್ಯ ವ್ಯವಸ್ಥೆಗೆ ಹೆಸರು ತಂದುಕೊಟ್ಟಿದೆ.
ಜಿಲ್ಲಿಗೆ ವಿವಿಧ ಭಾಗಳಿಂದ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ. ಪುಣೆ - ಬೆಂಗಳೂರು ನ್ಯಾಷನಲ್ ಹೈವೇಯ ಗೋಲ್ಡನ್ ಕ್ವಾಡ್ರಿಲಾಟೆರಲ್ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗಿದ್ದು, 3 ರಾಷ್ಟ್ರೀಯ ಹೆದ್ದಾರಿಗಳು ಜಲ್ಲೆಯಲ್ಲಿ ಹಾದುಹೋಗುತ್ತದೆ. ಜಿಲ್ಲೆ ತನ್ನದೇ ದೇಶೀಯ ವಿಮಾನ ನಿಲ್ದಾಣ ಹೊಂದಿದ್ದು, 43 ಅಂತರಾಷ್ಟ್ರೀಯ ಏರ್‍ಪೋರ್ಟ್ ಹಾಗೂ 2 ದೇಶೀಯ ಏರ್‍ಪೋರ್ಟ್‍ಗಳಿಗೆ ಸಂಪರ್ಕ ಹೊಂದಿದೆ ಅಲ್ಲದೇ ಗೋವಾದ 3 ಬಂದರುಗಳು ಜಿಲ್ಲೆಗೆ ಅತಿ ಸನಿಹದಲ್ಲಿದೆ.
ಕೊನೆ ಮಾತು: ಅತ್ಯುತ್ತಮ ಮೂಲಸೌಕರ್ಯ ಹೊಂದಿರೋ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವೂ ನಿರ್ಮಾಣವಾಗಿದ್ದು ರಾಜ್ಯದ ಎರಡನೇ ರಾಜಧಾನಿಯಂತೆ ಪ್ರತಿನಿಧಿಸುತ್ತಿದೆ. ಒಟ್ಟಾರೆ ಇಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ವಾತಾವಾರಣ ಇದೆ.
20ಕ್ಕೆ ನನ್ನ ನಿನ್ನ ನೆಂಟತನ ಪುಸ್ತಕ ಬಿಡುಗಡೆ | Prajavani
20ಕ್ಕೆ ನನ್ನ ನಿನ್ನ ನೆಂಟತನ ಪುಸ್ತಕ ಬಿಡುಗಡೆ
ದಾವಣಗೆರೆ:ಯುವ ಕಥೆಗಾರ ಎಚ್.ಬಿ. ಇಂದ್ರಕುಮಾರ್ ಅವರ ಎರಡನೇ ಕಥಾ ಸಂಕಲನ `ನನ್ನ ನಿನ್ನ ನೆಂಟತನ~ ಮೇ 20ರಂದು ನಗರದ ರೋಟರಿ ಬಾಲಭವನದಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿದೆ.
ಕಥೆಗಾರ ವಸುಧೇಂದ್ರ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೋಕೇಶ ಅಗಸನಕಟ್ಟೆ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಬಿದಿರಹಳ್ಳಿ ನರಸಿಂಹಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಾಶಕ ಎ.ಎಚ್. ಪ್ರಸನ್ನಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಲೇಖಕ ಇಂದ್ರಕುಮಾರ್ ಅವರು ತಾಲ್ಲೂಕಿನ ಕುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದು, ಶಿಕ್ಷಣ, ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಸಾಕಷ್ಟು ದೈನಿಕ, ಸಾಪ್ತಾಹಿಕಗಳಲ್ಲಿ ಅವರ ಕಥೆ, ಲೇಖನಗಳು ಪ್ರಕಟವಾಗಿವೆ. ವಿವಿಧ ರಾಜ್ಯಮಟ್ಟದ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.
ಮೊದಲ ಕಥಾ ಸಂಕಲನ `ಆ ಮುಖ~ವನ್ನು 2011ರಲ್ಲಿ ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆ ಬಿಡುಗಡೆ ಮಾಡಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಅವರ ಎರಡನೇ ಕಥಾ ಸಂಕಲನವನ್ನು ತಮ್ಮ ಪ್ರಕಾಶನ ಸಂಸ್ಥೆ ವತಿಯಿಂದ ಬಿಡುಗಡೆ ಮಾಡುತ್ತಿರುವುದಾಗಿ ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಲೇಖಕ ಇಂದ್ರಕುಮಾರ್, ಚಂದ್ರಶೇಖರ ತೋರಣಘಟ್ಟ, ಶಿವಯೋಗಿ ಹಿರೇಮಠ, ಪ್ರಕಾಶ್ ಕೊಡಗನೂರು ಉಪಸ್ಥಿತರಿದ್ದರು.
11 ಮಕ್ಕಳು ಸೇರಿ 21 ಮಂದಿ ರೆಫ್ರಿಜರೇಟೆಡ್ ಲಾರಿಯಲ್ಲಿ ಪತ್ತೆ | Vartha Bharati- ವಾರ್ತಾ ಭಾರತಿ
11 ಮಕ್ಕಳು ಸೇರಿ 21 ಮಂದಿ ರೆಫ್ರಿಜರೇಟೆಡ್ ಲಾರಿಯಲ್ಲಿ ಪತ್ತೆ
ವಾರ್ತಾ ಭಾರತಿ Nov 07, 2018, 9:16 PM IST
ನ್ಯೂಹವೆನ್, ನ.7: 11 ಮಕ್ಕಳು ಸೇರಿದಂತೆ 21 ಮಂದಿ ರೆಫ್ರಿಜರೇಟೆಡ್ ಲಾರಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ಬ್ರಿಟನ್ ನ ನ್ಯೂಹವೆನ್ ನಲ್ಲಿ ನಡೆದಿದ್ದು, ಈ ಲಾರಿ ಬ್ರಿಟನ್ ಗೆ ಪ್ರವೇಶಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ.
ಈ ಗುಂಪು ವಿಯೆಟ್ನಾಂನಿಂದ ಬಂದಿದೆ ಎಂದು ಶಂಕಿಸಲಾಗಿದ್ದು, ನೀರಿನ ಲೋಡ್ ನಡುವೆ ಈ 21 ಮಂದಿ ಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭವಾಗಿದೆ. 15 ಮಕ್ಕಳು ಲಾರಿಯೊಳಗೆ ಪತ್ತೆಯಾಗಿದ್ದಾರೆ ಎಂದು ಮೊದಲು ವರದಿಯಾಗಿತ್ತು.
12ರಿಂದ 17 ವರ್ಷದೊಳಗಿನ 17 ಜನರಿದ್ದು ಅವರು ತಮ್ಮ 'ವಿಯೆಟ್ನಾಂ'ನವರು ಎಂದು ಪರಿಚಯಿಸಿದ್ದಾರೆ. 11 ಮಂದಿ ಅಪ್ರಾಪ್ತರಾಗಿದ್ದು, ಅವರನ್ನು ಸಾಮಾಜಿಕ ಸೇವೆಯ ಸಂಸ್ಥೆಯೊಂದಕ್ಕೆ ಹಸ್ತಾಂತರಿಸಲಾಗಿದೆ.
ಸಾಧಕನಾಗ ಬಯಸುವವನು ಸತ್ಯಾನ್ವೇಷಿಯಾಗಬೇಕು: ಸಾಧಕನಾಗ ಬಯಸುವವನು ಸತ್ಯಾನ್ವೇಷಿಯಾಗಬೇಕು - sri ramkrishna paramahamsa's 185 jayanthi | Vijaya Karnataka
sri ramkrishna paramahamsa's 185 jayanthi
Vijaya Karnataka | Updated: 22 Feb 2020, 04:42:00 PM
ಶ್ರೀರಾಮಕೃಷ್ಣ ಪರಮಹಂಸರ 185 ನೇ ಜಯಂತ್ಯುತ್ಸವದ ಅಂಗವಾಗಿ ಬೆಂಗಳೂರಿನ ರಾಮಕೃಷ್ಣ ಆಶ್ರಮದ ಶ್ರೀ ಮಂಗಳನಾಥಾನಂದಜಿ ಮಹಾರಾಜ್‌ ಬೋಧಿವ್ರಕ್ಷಕ್ಕೆ ನೀಡಿದ ವಿಶೇಷ ಸಂದರ್ಶನ.
ಗೌರೀಪುರ ಚಂದ್ರು
ಭಗವಾನ್‌ ಶ್ರೀರಾಮಕೃಷ್ಣ ಪರಮಹಂಸರ ಜಯಂತಿಯ ಸಂದರ್ಭದಲ್ಲಿನಮ್ಮ ಓದುಗರಿಗೆ ನಿಮ್ಮ ಸಂದೇಶವೇನು?
ಶ್ರೀರಾಮಕೃಷ್ಣ ಪರಮಹಂಸರ ಜಯಂತಿಯ ಪ್ರಯುಕ್ತ ಎಲ್ಲರೂ ಅವರ ಜೀವನ ಸಂದೇಶಗಳನ್ನು ಓದಬೇಕು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದುವೇ ನಮ್ಮ ಜೀವನದ ಉಸಿರಾಗಬೇಕು. ಈ ನಿಟ್ಟಿನಲ್ಲೇ ನಮ್ಮೆಲ್ಲಾಪ್ರಯತ್ನಗಳು ಸಾಗಬೇಕು.
ಪರಮಹಂಸರ ಬೋಧನೆಗಳು ಇಂದಿಗೂ ಪ್ರಸ್ತುತವೇ?
ಶ್ರೀ ರಾಮಕೃಷ್ಣ ಪರಮಹಂಸರ ಬೋಧನೆಗಳು ಎಂದಿಗೂ ಪ್ರಸ್ತುತವೇ ಆಗಿದೆ. ಅದರಲ್ಲೂಇಂದಿನ ಕಾಲಮಾನವನ್ನು ಕಂಡಾಗ ಹೆಚ್ಚು ಪ್ರಸ್ತುತವೆನಿಸಿದರೆ ತಪ್ಪಾಗಲಾರದು. ಯಾಕೆಂದರೆ, ಶ್ರೀ ರಾಮಕೃಷ್ಣರು ಹೇಳುತ್ತಾರೆ 'ಜತೋ ಮತ್‌ ತಥೋ ಪಥ್‌' ಅಂತ. ಅಂದರೆ ಎಷ್ಟು ಮತಗಳೋ ಅಷ್ಟು ಪಥಗಳು ಅಂತ ತಮ್ಮ ಜೀವನದಲ್ಲಿತೋರಿಸಿದ್ದಾರೆ. ಅವರ ಇಡೀ ಜೀವನವನ್ನು ಅಧ್ಯಯನ ಮಾಡಿದಾಗ ಅವರು ಲೋಕಕ್ಕೆ ಅದ್ಭುತವಾದ ವಿವೇಕಾನಂದರಂತ ಶಿಷ್ಯರನ್ನು ಕೊಡುಗೆಯಾಗಿ ನೀಡಿದರು. ಅಮೆರಿಕದಲ್ಲಿ ಶಾಂತಿ ಸಂದೇಶವನ್ನು, ವೇದಾಂತದ ಸಂದೇಶವನ್ನು, ಭಾರತೀಯತೆಯ ಸಂದೇಶವನ್ನು ನೀಡಿದರು ವಿವೇಕಾನಂದರು. ಶ್ರೀ ರಾಮಕೃಷ್ಣರು ಯಾವತ್ತೂ ಕೂಡ ಜಾತಿ, ಮತ ಭೇದವನ್ನು ಒಪ್ಪಲೇ ಇಲ್ಲ. ಈಗಿನ ಕಾಲದಲ್ಲಿ ಮನುಷ್ಯ ಜಾತಿ, ಮತ, ಬೇಧಗಳಿಂದ ಮೃಗತ್ವವನ್ನು ಹೊಂದಿದ್ದಾರೆ. ಕೌಟುಂಬಿಕ ಸಾಮರಸ್ಯವೇ ಹದಗೆಟ್ಟಿದೆ. ತಂದೆ ತಾಯಿಗಳಲ್ಲಿಗೌರವ ಇಲ್ಲದಂತಾಗಿದೆ. ಇವೆಲ್ಲವನ್ನೂ ಗಮನಿಸಿದಾಗ ಸಮಾಜದಲ್ಲಿಅಸಹಿಷ್ಣುತೆ ಹೆಚ್ಚಿದೆ. ಸಾಕಷ್ಟು ನಕಾರಾತ್ಮಕ ಭಾವನೆಗಳು ಕಂಡು ಬರುತ್ತಿವೆ. ಶ್ರೀ ರಾಮಕೃಷ್ಣರ ಚಿಂತನೆಗಳಲ್ಲಿಸಕಾರಾತ್ಮಕ ಭಾವನೆಯಿದೆ. ಅವರ ಜೀವನವನ್ನು ನಾವು ಅಧ್ಯಯನ ಮಾಡಿದರೆ ಗಮನಿಸಬೇಕಾದ ಸಂಗತಿಯೆಂದರೆ ಸಾಧನೆಯ ತೀವ್ರತೆ. ವಿದ್ಯಾರ್ಥಿಗಳು ಈ ಅಂಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ತಾನಾಗೇ ಸಿದ್ಧವಾಗುತ್ತದೆ. ಮತ್ತೊಂದು ಸಂಗತಿಯೆಂದರೆ ಅವರು ಗೃಹಸ್ಥರಾಗಿ, ಸನ್ಯಾಸಿಯಾಗಿ, ಅಧ್ಯಾತ್ಮ ಸಾಧಕರಾಗಿ ಹೇಗಿರಬೇಕೆಂದು ನಮಗೆ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ದಾರಿದೀಪವಾಗಿದ್ದಾರೆ. ಆದರ್ಶ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ನಾವು ಅವರಿಂದ ತಿಳಿದುಕೊಳ್ಳಬೇಕಿದೆ.
ಸಾಮಾನ್ಯರಾದ ನಮಗೂ ಶ್ರೀ ರಾಮಕೃಷ್ಣರಂತೆ ದೇವರ ದರ್ಶನ ಸಾಧ್ಯವೇ?
ಶ್ರೀ ರಾಮಕೃಷ್ಣರಿಗೆ ಭಗವಂತನ ಸಾಕ್ಷಾತ್ಕಾರವಾದಂತೆ ಪ್ರತಿಯೊಬ್ಬರಿಗೂ ದೈವ ಸಾಕ್ಷಾತ್ಕಾರ ಸಾಧ್ಯ. ಈ ಅಂಶವನ್ನು ಸ್ವತಃ ಶ್ರೀ ರಾಮಕೃಷ್ಣರೇ ಹೇಳಿದ್ದಾರೆ. ಪ್ರತಿಯೊಬ್ಬ ಮಾನವ ಆದರ್ಶನಾಗಬೇಕು. ಅವರೆನ್ನುತ್ತಾರೆ ಸತ್ಯ ಶಾಶ್ವತ ಎಂದ ಮೇಲೆ, ಒಬ್ಬನಿಗೆ ಸತ್ಯ ದರ್ಶನವಾಗಿದೆ ಎಂದರೆ ಬೇರೆ ಎಲ್ಲರಿಗೂ ಸತ್ಯ ದರ್ಶನ ಸಾಧ್ಯ. ಆದರೆ ಅದನ್ನು ಕಂಡುಕೊಳ್ಳಲು ಎಲ್ಲರೂ ಆ ಮಾರ್ಗದಲ್ಲಿ ಸಾಗಬೇಕು. ಆ ರೀತಿಯಾಗಿ ಸಾಧನೆ ಮಾಡಿದರೆ, ಗುರುಗಳನ್ನು ಉಪಾಸನೆ ಮಾಡಿದರೆ ಎಲ್ಲರಿಗೂ ಭಗವಂತನ ದರ್ಶನ ನೂರಕ್ಕೆ ನೂರರಷ್ಟು ಸಾಧ್ಯವಿದೆ.
ಮುಮುಕ್ಷತ್ವ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಆಸೆ. ಆದರೆ ಆ ಗುರಿ ಸಾಧನೆ ಹೇಗೆ?
ಮುಮುಕ್ಷತ್ವ ಹೊಂದುವುದು ಪ್ರತಿಯೊಬ್ಬರ ಬಯಕೆ. ಶ್ರೀ ರಾಮಕೃಷ್ಣರಿಂದ ನಾವು ಕಲಿತುಕೊಳ್ಳಬೇಕಾದ ಸಂಗತಿ ಎಂದರೆ, ಈ ಹಾದಿಯಲ್ಲಿ ಸಾಗ ಬಯಸುವವರು ಮೊದಲಿಗೆ ಸತ್ಯಾನ್ವೇಷಿಯಾಗಿರಬೇಕು ಅಂದರೆ ಖಛಿಛಿkಛ್ಟಿ ಟ್ಛ ಠ್ಟ್ಠಿಠಿh ಆಗಿರಬೇಕು. ಶ್ರೀ ರಾಮಕೃಷ್ಣರಿಗೆ ಅದ್ವೈತ ಸಾಧನೆಯಾದ ನಂತರ ಅವರು ಯಾವ ಮಟ್ಟಕ್ಕೆ ಏರಿದ್ದರೆಂದರೆ ಸುಮಾರು ಆರು ತಿಂಗಳ ಕಾಲ ನಿದ್ದೆಯನ್ನು ಸಂಪೂರ್ಣವಾಗಿ ಬಿಟ್ಟೇ ಬಿಟ್ಟಿದ್ದರು. ಅವರಲ್ಲಿಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎಂದರೆ, ಅವರ ರೆಪ್ಪೆಗಳು ಕಣ್ಮುಚ್ಚುತ್ತಲೇ ಇರಲಿಲ್ಲ. ಸಾಧಾರಣವಾಗಿ ಇನ್‌ಸ್ಟಿಂಕ್ಟ್ ಆಗಿ ಕಣ್ಣಿನ ರೆಪ್ಪೆಗಳು ಮುಚ್ಚುತ್ತವೆ. ಅಂದರೆ ಪರಮಹಂಸರು ತಮ್ಮ ಸಾಧನೆಯಿಂದ ಪ್ರಕೃತಿ ಸಹಜವಾದ ಗುಣಗಳಿಂದಲೂ ಅತೀತರಾಗಿದ್ದರು. ಹೆಬ್ಬೆಟ್ಟನ್ನು ಅವರ ಕಣ್ಣೊಳಗೆ ಇಟ್ಟರೂ ಕೂಡ ರೆಪ್ಪೆಗಳು ಮುಚ್ಚುತ್ತಿರಲಿಲ್ಲವಂತೆ. ಅಷ್ಟರ ಮಟ್ಟಿಗೆ ಅವರು ತಮ್ಮ ಸಾಧನೆಯಲ್ಲಿಮುಳುಗಿದ್ದರು. ಹಾಗಾಗಿ ಮೋಕ್ಷವನ್ನು ಇಚ್ಛಿಸುವ ಪ್ರತಿಯೊಬ್ಬರು ಆ ಮಟ್ಟದ ಸಾಧನೆಯನ್ನು ಮಾಡಿದಾಗ ಭಗವಂತನ ದರ್ಶನ ಸಾಧ್ಯ ಎಂಬುದು ನಮಗೆ ಅರಿವಾಗುತ್ತದೆ.
ಪರಮಹಂಸರ, ವಿವೇಕಾನಂದರ ಬೋಧನೆಗಳನ್ನು ಪಸರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಶ್ರೀರಾಮಕೃಷ್ಣ ಮಠ ಕೈಗೊಂಡಿರುವ ಕಾರ್ಯಕ್ರಮಗಳೇನು?
ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಯುವ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ನಾವು ವರ್ಷದಲ್ಲಿ ಒಮ್ಮೆ ಯುವಕರಿಗಾಗಿ ರಿಟ್‌ ರಿಟರ್ನ್‌ ಅಂದರೆ ವಿವೇಕಾನಂದರ ಸಂದೇಶಗಳನ್ನು ಪ್ರಸಾರ ಮಾಡುವುದಕ್ಕಾಗಿಯೇ ಕೆಲವು ಉತ್ತಮವಾದ ವಾಗ್ಮಿಗಳಿಂದ ಉಪನ್ಯಾಸ ಕಾರ್ಯಕ್ರಮ ಇಟ್ಟುಕೊಂಡಿರುತ್ತೇವೆ. ಭಜನೆಗಳನ್ನು ಏರ್ಪಡಿಸುವ ಮೂಲಕ ಇಲ್ಲಿಯ ಸಂಸ್ಕೃತಿಯನ್ನು ಪರಿಚಯ ಮಾಡಿಸುತ್ತೇವೆ. ಹಾಗೂ ಯುವಜನರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಬೇಕೆನ್ನುವ ದೃಷ್ಟಿಯಿಂದ ಸಾಕಷ್ಟು ಕಿರು ಹೊತ್ತಿಗೆಗಳನ್ನು ಹೊರತರುತ್ತಿದ್ದೇವೆ. ನಮ್ಮ ಮೈಸೂರು ರಾಮಕೃಷ್ಣಾಶ್ರಮದಿಂದ ಯುವಕ ಪ್ರಭಾ ಎನ್ನುವ ಮ್ಯಾಗಜೀನ್‌ ಹೊರತರುತ್ತಿದ್ದೇವೆ. ಪ್ರತಿಯೊಂದು ಕಾಲೇಜಿಗೆ ಹೋಗಿ ಶ್ರೀ ರಾಮಕೃಷ್ಣರ, ವಿವೇಕಾನಂದರ ಸಂದೇಶಗಳನ್ನು ಪಸರಿಸುತ್ತಿದ್ದೇವೆ. ಬೆಂಗಳೂರಿನ ರಾಮಕೃಷ್ಣಾಶ್ರಮ ಶುರುವಾಗಿ ಈಗಾಗಲೇ 114 ವರ್ಷಗಳಾಗಿವೆ. ಅಂದಿನಿಂದಲೂ ಸಂದೇಶವನ್ನು, ಜಾಗೃತಿಯನ್ನು ಯುವಜನರಿಗೆ ತಲುಪಿಸುವ ಕೆಲಸವಾಗುತ್ತಿದೆ. ನಮ್ಮ ಜಾಲತಾಣದಲ್ಲೂ ವಾಯ್ಸ್‌ ಆಫ್‌ ವಿವೇಕಾನಂದ ಎನ್ನುವ ಆ್ಯಪ್‌ ಬಿಡುಗಡೆ ಮಾಡಿದ್ದೇವೆ. ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ವಿವೇಕಾನಂದರ ಜೀವನ ಸಂದೇಶವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳಬಹುದು. ನಮ್ಮಲ್ಲಿ ಸಾಕಷ್ಟು ಸಿಡಿ, ಕ್ಯಾಸೆಟ್‌, ಮ್ಯಾಗಜೀನ್‌ಗಳಿವೆ. ನಾವು ಸನ್ಯಾಸಿಗಳಾದರೂ ಸಹ ಶಾಲಾ, ಕಾಲೇಜಿಗೆ ಭೇಟಿಕೊಟ್ಟು ಶ್ರೀ ರಾಮಕೃಷ್ಣರ ಸಂದೇಶವನ್ನು ಪ್ರಚಾರ ಮಾಡುತ್ತಿದ್ದೇವೆ. ಜ.14 ರಂದು ನ್ಯಾಷನಲ್‌ ಯೂತ್‌ ಡೇ ಎಂದು ಆಚರಿಸುವ ಮೂಲಕ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶ್ರೀಮಠಕ್ಕೆ ಕರೆಯಿಸಿ ವಿವೇಕಾನಂದರ ವಿಚಾರಧಾರೆಗಳನ್ನು ತಿಳಿಸುವ ಪ್ರಯತ್ನವಾಗುತ್ತಿದೆ. ಶ್ರೀ ರಾಮಕೃಷ್ಣರ, ಶ್ರೀಮಾತೆ ಶಾರದೆಯವರ ಜಯಂತ್ಯುತ್ಸವವನ್ನು ಆಚರಿಸುತ್ತೇವೆ. ಈ ಸಂದರ್ಭದಲ್ಲಿಸುಮಾರು ಐದು ಸಾವಿರಕ್ಕೂ ಹೆಚ್ಚು ಜನರಿಗೆ ಸಂದೇಶವನ್ನು ತಿಳಿಸುವ ವ್ಯವಸ್ಥೆಯಿದೆ. ಹೀಗೆ ಬೆಂಗಳೂರಿನ ರಾಮಕೃಷ್ಣ ಆಶ್ರಮ ಸಾಕಷ್ಟು ಚಟುವಟಿಕೆಗಳಲ್ಲಿತನ್ನನ್ನು ತೊಡಗಿಸಿಕೊಂಡಿದೆ. ತನ್ಮೂಲಕ ದಿವ್ಯತ್ರಯರ ವಿಚಾರಧಾರೆಗಳನ್ನು ಪಸರಿಸುತ್ತಿದೆ.
ಗುರು ಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವ ಮುಂದಿನ ಲೇಖನ
ಸಾಧಕನಾಗ ಬಯಸುವವನು ಸತ್ಯಾನ್ವೇಷಿಯಾಗಬೇಕು ಶ್ರೀರಾಮಕೃಷ್ಣ ಪರಮಹಂಸರ ಜಯಂತಿ ಮಂಗಳನಾಥಾನಂದಜಿ ಮಹಾರಾಜ್‌ sri ramkrishna paramahamsa's 185 jayanthi mangalanathanandaji