text
stringlengths
0
61.5k
ಈ 3 ರಾಶಿಯವರಿಗೆ ಅದೃಷ್ಟ ಅನ್ನೋದು ಅವರ ಜಾತಕದಲ್ಲೇ ಇರುತ್ತಂತೆ
ಅದೃಷ್ಟವನ್ನು ಹುಟ್ಟಿನಿಂದಲೇ ಪಡೆದುಕೊಂಡು ಜನಿಸಿರುತ್ತಾರೆ ಈ ಮೂರು ರಾಶಿಯವರು. ಇವರು ಭಾಗ್ಯವಂತರು.
ಈ ಜಗತ್ತಿನಲ್ಲಿ ತುಂಬಾ ಜನರು ಅವರ ಅದೃಷ್ಟವನ್ನು ಜನ್ಮದಿಂದಲೇ ಪಡೆದುಕೊಂಡು ಹುಟ್ಟಿರುತ್ತಾರೆ. ಅನೇಕ ಬಾರಿ ಇದನ್ನು ನಾವು ನೋಡಿರುತ್ತೇವೆ .ಜನರು ಅದೃಷ್ಟದ ಗಣಿಯನ್ನೇ ಅವರ ಜೊತೆ ಹೊತ್ತುಕೊಂಡು ಜನಿಸಿರುತ್ತಾರೆ. ಇಂತಹ ಜನರು ಹೇಗಿರುತ್ತಾರೆ ಎಂದರೆ, ಶ್ರೀಮಂತರಾಗಲು ಇವರು ತುಂಬಾ ಕಷ್ಟವನ್ನು ಪಡಬೇಕಾಗಿಲ್ಲ ಮತ್ತು ಅವರ ಜನ್ಮ ಶ್ರೀಮಂತರ ಕುಟುಂಬದಲ್ಲಿಯೇ ಆಗಿರುತ್ತದೆ. ಆದ್ದರಿಂದ ಅವರು ಶ್ರೀಮಂತರಾಗುತ್ತಾರೆ.
ಆದರೆ ಪ್ರತಿಯೊಬ್ಬ ಮನುಷ್ಯನಿಗೂ ಅವರ ಹಣೆ ಬರಹದಲ್ಲಿ ಈ ಸುಖವಿರುವುದಿಲ್ಲ. ಇದು ಒಬ್ಬ ವ್ಯಕ್ತಿಯು ಜನ್ಮದಿಂದಲೇ ಅದೃಷ್ಟವನ್ನು ಪಡೆದುಕೊಂಡು ಹುಟ್ಟಿರುತ್ತಾರೆ. ಈ ಜಗತ್ತಿನಲ್ಲಿ ತೊಂಬತ್ತೈದು ಪ್ರತಿಶತ ಜನರು ತಾವು ಶ್ರೀಮಂತರಾಗಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಕೆಲವು ಜನರು ಹೇಗೆ ಇವರು ಅವರ ಜನ್ಮದಿಂದಲೇ ಶ್ರೀಮಂತರಾಗುವ ಅದೃಷ್ಟವನ್ನು ಹೊತ್ತುಕೊಂಡು ಹುಟ್ಟಿರುತ್ತಾರೆ.
ಶಾಸ್ತ್ರಗಳ ಪ್ರಕಾರ ಹನ್ನೆರಡು ರಾಶಿಯವರು ಇವೆ. ನಮ್ಮ ಜೀವನದಲ್ಲಿ ನಡೆಯುವ ಪ್ರತ್ಯೇಕ ಘಟನೆಯೂ ನಮ್ಮ ರಾಶಿಗೆ ಹೊಂದಿಕೊಂಡಿರುತ್ತದೆ. ಹನ್ನೆರಡು ರಾಶಿಗಳಲ್ಲಿ ಮೂರು ಆ ರೀತಿಯ ರಾಶಿಗಳಿವೆ. ಅವರ ಜಾತಕವೂ ಹುಟ್ಟಿನಿಂದಲೇ ರಾಜ ಯೋಗದ ವರದಾನವನ್ನು ಹೊತ್ತು ಕೊಂಡಿರುತ್ತದೆ. ಆದ್ದರಿಂದ ನಾವು ಇಂದು ನಿಮಗೆ ಅದೇ ರೀತಿಯ ಜನರ ಬಗ್ಗೆ ಹೇಳುತ್ತಿದ್ದೇವೆ. ಅವರ ಹುಟ್ಟಿನಿಂದಲೇ ನಕ್ಷತ್ರದಂತೆ ಹೊಳೆಯುವ ಅದೃಷ್ಟವನ್ನು ಹೊತ್ತುಕೊಂಡಿರುತ್ತಾರೆ.ಜ್ಯೋತಿಷ್ಯದ ಪ್ರಕಾರ ಯಾವ ವ್ಯಕ್ತಿಯ ಕುಂಡಲಿಯಲ್ಲಿ ಅಥವಾ ಜನ್ಮ ಜಾತಕದಲ್ಲಿ ಈ ರೀತಿಯ ಯೋಗವೂ ಇರುತ್ತದೆಯೋ, ಅವರು ಎಂಥದ್ದೇ ಬಡ ಕುಟುಂಬದಲ್ಲಿ ಹುಟ್ಟಿದರೂ ಕೂಡ, ಅವರ ಅದೃಷ್ಟದ ಸಹಾಯದಿಂದ ತಮ್ಮ ಜೀವನದಲ್ಲಿ ಯಶಸ್ಸು, ವೃದ್ದಿಸಿ ಧನಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರೂ ಕೂಡ ಶ್ರೀಮಂತರಾಗಬೇಕೆಂದು ಯೋಚಿಸುತ್ತಾರೆ.
ವ್ಯಕ್ತಿಯು ಶ್ರೀಮಂತನಾಗುತ್ತಾನೆ, ಯಾಕೆಂದರೆ ಅದು ಅವನ ಅದೃಷ್ಟದ ಕಾರಣದಿಂದ ಅಥವಾ ಅವನ ಉತ್ತಮವಾದ ಕರ್ಮದ ಫಲದಿಂದ, ಆದರೆ ಆಗಾಗ್ಗೆ ಇದು ವ್ಯರ್ಥ ಸಿದ್ಧಾಂತವಾಗುತ್ತದೆ. ಇಂದು ನಾವು ಆ ಮೂರು ರಾಶಿಗಳ ಬಗ್ಗೆ ಹೇಳುತ್ತಿದ್ದೇವೆ, ಅವರು ಹುಟ್ಟಿನಿಂದಲೇ ಅದೃಷ್ಟವಂತರಾಗಿರುತ್ತಾರೆ.
ಮಿಥುನ ರಾಶಿ:ಈ ರಾಶಿಯವರು ಹೆಚ್ಚು ಅದೃಷ್ಟವಂತರಾಗಿರುತ್ತಾರೆ. ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಥವಾ ಹಣ ಹಾಕಿದರೂ ಇವರಿಗೆ ಎರಡು ಪಟ್ಟು ಹೆಚ್ಚಿನಷ್ಟು ಲಾಭ ಬರುತ್ತದೆ. ಅಷ್ಟೇ ಅಲ್ಲ ಇವರು ಜಮೀನು ಅಥವಾ ವ್ಯವಸಾಯ, ಕೃಷಿ ಕೆಲಸಗಳಲ್ಲಿ ಹಣ ಹಾಕಿದರೂ ಕೂಡ ಅದರಿಂದ ಲಾಭ ಸಂಪತ್ತನ್ನು ಗಳಿಸುತ್ತಾರೆ . ಇದರ ಜೊತೆಗೆ ಇವರು ಹುಟ್ಟಿನಿಂದಲೇ ಅದೃಷ್ಟವಂತ ರಾಗಿರುತ್ತಾರೆ. ಇವರ ಅದೃಷ್ಟ ಸದಾ ಇವರ ಜತೆಯಲ್ಲೇ ಇರುತ್ತದೆ.
ಸಿಂಹ ರಾಶಿ:ಈ ರಾಶಿಯ ಜನರು ಸ್ವಲ್ಪ ಜಿಪುಣರಾಗಿರುತ್ತಾರೆ. ಇದರಿಂದ ಈ ರಾಶಿಯವರು ಹಣದ ಉಳಿತಾಯವನ್ನು ಹೆಚ್ಚಾಗಿ ಮಾಡುತ್ತಾರೆ. ಇದೇ ಕಾರಣದಿಂದ ಹಣದ ವಿಷಯದಲ್ಲಿ ಇವರಿಗೆ ಎಂದಿಗೂ ನಷ್ಟವನ್ನು ಅನುಭವಿಸುವುದಿಲ್ಲ. ಹೆಚ್ಚಿನದಾಗಿ ಇವರು ಹಣವನ್ನು ಉಳಿಸುತ್ತಾರೆ. ಹಂತ ಹಂತವಾಗಿ ಇವರು ಹಣವನ್ನು ಕೂಡಿಡುತ್ತಾರೆ. ಈ ರಾಶಿಯವರು ಯಾರ ಮುಂದೆಯೂ ತಲೆ ಬಾಗುವುದಿಲ್ಲ.
ಕುಂಭ ರಾಶಿ:ಈ ರಾಶಿಯವರು ಯಾವುದೇ ವಿಷಯಗಳಲ್ಲಿ ಭಾಗಿಯಾಗುವ ಮುನ್ನ ತುಂಬಾ ಯೋಚನೆ ಮಾಡಿ ವಿಚಾರ ಮಾಡಿ ಮುಂದುವರಿಯುತ್ತಾರೆ. ಇದೇ ಕಾರಣದಿಂದ ಈ ರಾಶಿಯವರನ್ನು ಸೋಲಿಸುವುದು ತುಂಬಾ ಕಷ್ಟವಾಗುತ್ತದೆ. ಈ ಜನರು ಮುಖ್ಯವಾಗಿ ಅವರ ಮಾತಿನಲ್ಲಿ ಪಕ್ಕಾ ನಿಷ್ಠಾವಂತರಾಗಿರುತ್ತಾರೆ. ಯಾವುದೇ ರೀತಿಯಲ್ಲಾದರೂ ಕಷ್ಟಪಟ್ಟು ದುಡಿದು ಕೆಲಸ ಮಾಡಿ ಹಣವನ್ನು ಗಳಿಸುತ್ತಾರೆ.
ಈ ಜನರು ಬುದ್ಧಿಯು ಯಾವ ರೀತಿಯಲ್ಲಿ ಇರುತ್ತದೆ ಎಂದರೆ ಇವರು ಮಣ್ಣನ್ನು ಕೂಡ ಚಿನ್ನವನ್ನಾಗಿ ಮಾಡುವಂತಹ ಶಕ್ತಿ ,ಬುದ್ಧಿ, ಸಾಮರ್ಥ್ಯ ಮತ್ತು ಗುಣ ಇವರಿಗೆ ಇರುತ್ತದೆ. ಆದ್ದರಿಂದ ಇವರೂ ಕೂಡ ಹುಟ್ಟಿನಿಂದಲೇ ಅದೃಷ್ಟವಂತರು.
ಇಂದು ಬಾದ್ರಪದ ಪಿತೃ ಪಕ್ಷದ ಸಂಕಷ್ಟಹರ ಚತುರ್ಥಿ ,ನೀವು ಮಾಡಿರುವ ತಪ್ಪುಗಳಿಗೆ ಪ್ರಾಯಶ್ಚಿತ ಮಾಡ್ಕೋಬೇಕು ಅಂದ್ರೆ ಈ ದಿನ ಸುದಿನ ,ಹೇಗೆ ಅಂತೀರಾ, ಮುಂದೆ ಓದಿ
ನಾಳೆ ಬಿಎಸ್‌ವೈ ದಿಲ್ಲಿ ಭೇಟಿ | Udayavani – ಉದಯವಾಣಿ
Tuesday, 04 Aug 2020 | UPDATED: 11:10 AM IST
ನಾಳೆ ಬಿಎಸ್‌ವೈ ದಿಲ್ಲಿ ಭೇಟಿ
Team Udayavani, Mar 7, 2019, 1:22 AM IST
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ದೆಹಲಿಗೆ ತೆರಳಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತಂತೆ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದು, ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಸದ್ಯ 15 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ (ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಅವರ ಅಕಾಲಿಕ ನಿಧನದಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ತೆರವಾಗಿದೆ). ಹಾಲಿ ಬಿಜೆಪಿ ಸಂಸದರಿರುವ ಕ್ಷೇತ್ರಗಳ ಪೈಕಿ ಕೆಲ ಕ್ಷೇತ್ರಗಳಲ್ಲಿ ಬದಲಾವಣೆ ಬಗ್ಗೆ ಪಕ್ಷದ ನಾಯಕರು ಈ ಹಿಂದೆ ಸುಳಿವು ನೀಡಿದ್ದರು. ಹಾಗಾಗಿ, ಹಾಲಿ ಸಂಸದರಿರುವ ಕ್ಷೇತ್ರ ಹಾಗೂ ಬಿಜೆಪಿ ಸಂಸದರಿಲ್ಲದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಒಮ್ಮತದ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವರು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸುವ ಸಂಭವವಿದೆ. ಈಗಾಗಲೇ ವಿಭಾಗ, ಜಿಲ್ಲಾಮಟ್ಟದ ಪದಾಧಿಕಾರಿಗಳು, ಲೋಕಸಭಾ ಕ್ಷೇತ್ರವಾರು ಪ್ರಭಾರಿಗಳು ಪ್ರತ್ಯೇಕವಾಗಿ ಸಂಭಾವ್ಯ ಅಭ್ಯರ್ಥಿಗಳ ವಿವರ ಸಲ್ಲಿಸಿದ್ದಾರೆ.
ಈ ನಡುವೆ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆ ನಡೆಸಿ, ಪಕ್ಷದ ಹಾಲಿ ಸಂಸದರ ಬಗೆಗಿನ ಅಭಿಪ್ರಾಯ ಹಾಗೂ ಇತರ ಪಕ್ಷಗಳ ಸಂಸದರಿರುವ ಕ್ಷೇತ್ರದಲ್ಲಿನ ಸಮರ್ಥ ಅಭ್ಯರ್ಥಿಗಳು, ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಅದರ ಆಧಾರದ ಮೇಲೆ ಸಂಭಾವ್ಯ ಅಭ್ಯರ್ಥಿಗಳ ವಿವರದೊಂದಿಗೆ ದೆಹಲಿಗೆ ತೆರಳಿ, ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲಿದ್ದಾರೆಎಂದು ಮೂಲಗಳು ಹೇಳಿವೆ.
ಮದ್ಯಂತರ ಪರಿಹಾರ: ಸದ್ಬಳಕೆಯಾಗಲಿ ಹಣ | Udayavani – ಉದಯವಾಣಿ
Monday, 25 May 2020 | UPDATED: 09:55 AM IST
Team Udayavani, Oct 5, 2019, 5:42 AM IST
ಕರ್ನಾಟಕಕ್ಕೆ ನೆರೆ ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ, ನಿರ್ಲಕ್ಷ್ಯ ಮಾಡುತ್ತಿದೆ, ರಾಜ್ಯ ಸರ್ಕಾರ ನಷ್ಟದ ಅಂದಾಜು ಕುರಿತು ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕರಿಸಿದೆ ಎಂಬ ವಿಷಯಗಳು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಗೆ ಪೂರಕ ಎಂಬ ಮಾತು ರಾಜ್ಯದ ಮಟ್ಟಿಗೆ ಸುಳ್ಳಾಗಿದೆ ಎಂಬ ಭಾವನೆ ರಾಜ್ಯದ ಜನತೆಯಲ್ಲಿ ಮೂಡಿ ಅದು ಆಕ್ರೋಶಕ್ಕೆ ತಿರುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡು ಮಧ್ಯಂತರ ಪರಿಹಾರವಾಗಿ 1200 ಕೋಟಿ ರೂ. ಬಿಡುಗಡೆ ಮಾಡಿದೆ.
ಇದು ಒಂದು ರೀತಿಯಲ್ಲಿ ಸಮಾಧಾನಕರ. ಆದರೂ ರಾಜ್ಯ ಸರ್ಕಾರವು 3800 ಕೋಟಿ ರೂ. ಗೆ ಬೇಡಿಕೆ ಇಟ್ಟಿತ್ತು. ಇದು ಮಧ್ಯಂತರ ಪರಿಹಾರ ಎಂದು ಹೇಳಿರುವುದರಿಂದ ಮುಂದೆ ಮತ್ತಷ್ಟು ಪರಿಹಾರ ಬರುವ ವಿಶ್ವಾಸವನ್ನು ರಾಜ್ಯ ಸರ್ಕಾರ ಹೊಂದಿದೆ.
ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿತ ರಾಜ್ಯದ ನಾಯಕರು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಮನವಿ ಕೊಟ್ಟು ಬಂದು ಜತೆಗೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ಮಾಡಿ ಕೇಂದ್ರ ತಂಡದ ಅಧ್ಯಯನ ಮುಗಿದರೂ ಪರಿಹಾರ ಘೋಷಣೆಯಾಗದ ಬಗ್ಗೆ ಪ್ರವಾಹ ಸಂತ್ರಸ್ತರಷ್ಟೇ ಅಲ್ಲದೆ ಜನರ ಆಕ್ರೋಶಕ್ಕೂ ಕಾರಣವಾಗಿತ್ತು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು "ಒಂದು ರೀತಿಯಲ್ಲಿ ನಾನು ತಂತಿಯ ಮೇಲೆ ನಡೆಯುತ್ತಿದ್ದೇನೆ' ಎಂದು ಹೇಳುವ ಮೂಲಕ ಅಸಹಾಯಕತೆ ಹೊರಹಾಕಿದ್ದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ ಎಂದೂ ಹೇಳಿದ್ದರು.
ಇದರ ನಡುವೆ ಬಿಜೆಪಿ ಸಂಸದ ಹಿರಿಯ ಮುಖಂಡ ಶ್ರೀನಿವಾಸಪ್ರಸಾದ್‌, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹ ಕೇಂದ್ರ ಸರ್ಕಾರದ ಧೋರಣೆ ಹಾಗೂ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವಲ್ಲಿ ಆಗುತ್ತಿರುವ ಲೋಪದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲದರ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಹೈಕಮಾಂಡ್‌ ಮಾಹಿತಿ ಪಡೆದಿತ್ತು.
ರಾಜ್ಯದ ಜನತೆಯ ಆಕ್ರೋಶ ಬೇರೆ ಸ್ವರೂಪ ಪಡೆದು ಅದು ಪ್ರತಿಪಕ್ಷಗಳಿಗೆ ರಾಜಕೀಯ ಅಸ್ತ್ರವಾಗುವುದು ಬೇಡ ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡು 1200 ಕೋಟಿ ರೂ. ಪರಿಹಾರ ಘೋಷಿಸಿದೆ.
ಏನೇ ನಿಯಮಾವಳಿ ಇದ್ದರೂ ಮಾನವೀಯತೆ ದೊಡ್ಡದು. ಒಕ್ಕೂಟ ವ್ಯವಸ್ಥೆಯಲ್ಲಿ ಬರ ಹಾಗೂ ಪ್ರವಾಹ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ನೆರವಿಗೆ ಧಾವಿಸುವುದು ಅತ್ಯಗತ್ಯ.
ಪ್ರತಿಪಕ್ಷಗಳು ಸಹ ಈ ವಿಚಾರದಲ್ಲಿ ಹೆಚ್ಚು ರಾಜಕೀಯ ಮಾಡಲು ಹೋಗದೆ ರಾಜ್ಯಕ್ಕೆ ಪರಿಹಾರ ಬಿಡುಗಡೆಯಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಎಲ್ಲ ರೀತಿಯ ಸಹಕಾರ ನೀಡಿ ಕಷ್ಟದಲ್ಲಿರುವ ಜನತೆಗೆ ಸ್ಪಂದಿಸುವ ಗುರಿಯೊಂದಿಗೆ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪ್ರವಾಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಿ ಮತ್ತಷ್ಟು ನೆರವಿಗಾಗಿ ಪಕ್ಷಾತೀತವಾಗಿ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟು ಕಷ್ಟಕ್ಕೊಳಗಾಗಿರುವ ಜನರ ಜೀವನ ಸುಧಾರಣೆಗೆ ಹೆಚ್ಚು ಗಮನಹರಿಸಬೇಕಾಗಿದೆ.
ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿರುವ ಮಾವು – ಹಲಸು ಮೇಳ | Mango and Jackfruit mela back to Mysuru - Kannada Oneindia
» ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿರುವ ಮಾವು – ಹಲಸು ಮೇಳ
ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿರುವ ಮಾವು – ಹಲಸು ಮೇಳ
Published: Friday, June 1, 2018, 18:35 [IST]
ಮೈಸೂರು, ಜೂನ್ 1 : ಈಗ ಎಲ್ಲೆಲ್ಲೂ ಹಣ್ಣುಗಳ ರಾಜ ಮಾವಿನದ್ದೇ ಸುದ್ದಿ. ಬಾಯಿಗೆ ರುಚಿ ಜೊತೆಗೆ ಆರೋಗ್ಯಕ್ಕೂ ಉತ್ತಮವಾದ ಈ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಇತ್ತೀಚೆಗೆ ಕೆಮಿಕಲ್ ಕಾಟ, ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ.
ಇದನ್ನು ತಪ್ಪಿಸಿ ಮಧ್ಯವರ್ತಿಗಳಿಗೆ ಅವಕಾಶ ಕೊಡದೆ ರೈತರಿಂದ ಗ್ರಾಹಕರಿಗೆ ನೇರ ಶುಚಿ ಮತ್ತು ರುಚಿಯಾದ ಹಣ್ಣನ್ನು ತಲುಪಿಸುವ ದೃಷ್ಟಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾವಿನ ಮೇಳ ನಡೆಸಲಾಗುತ್ತಿದೆ.
ತೋಟಗಾರಿಕಾ ಇಲಾಖೆ ವತಿಯಿಂದ ಇಂದಿನಿಂದ ಅರಮನೆಯ ಬಳಿಯ ಕರ್ಜನ್ ಪಾರ್ಕ್ ಆವರಣದಲ್ಲಿ ಮಾವು ಹಾಗೂ ಹಲಸು ಮೇಳ ಆರಂಭಿಸಲಾಗಿದೆ.
ಬಾದಾಮಿ, ರಸಪೂರಿ, ಸಿಂಧೂರ, ಮಲಗೋವ, ಮಲ್ಲಿಕಾ, ನೀಲಂ, ಬಂಗನಪಲ್ಲಿ, ಬೆನಿಷಾ, ಕೇಸರ್, ಐಶ್ವರ್ಯ, ಸಕ್ಕರ ಬುತ್ತಿ ಹಾಗೂ ಸಕ್ಕರೆ ಗೂಟ್ಲಾ, ಸೀಬಾ ಸೇರಿದಂತೆ 15ಕ್ಕೂ ಹೆಚ್ಚು ತಳಿಯ ಹಳ್ಳಿಗಳು ಮೇಳದಲ್ಲಿ ಗ್ರಾಹಕರನ್ನ ಕೈಬಿಸಿ ಕರೆಯುತ್ತಿವೆ.
ಒಂದೇ ಸೂರಿನಡಿ ತರಹೇವಾರಿ ಮಾವನ್ನು ಖರೀದಿಸಲು ಗ್ರಾಹಕರು ಸಹ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ಪ್ರವಾಸಿಗರು ಕೂಡಾ ಮೇಳದತ್ತ ಆಕರ್ಷಿತರಾಗುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ.
ಅಂದಹಾಗೆ ಮಾವು ಬೆಳೆಯಲ್ಲಿ ವಿಶ್ವದಲ್ಲಿಯೇ ಭಾರತ ದ್ವಿತೀಯ ಸ್ಥಾನದಲ್ಲಿದ್ದು, ಭಾರತದಲ್ಲಿ ಸುಮಾರು 4 ಸಾವಿರ ವರ್ಷಗಳಿಂದಲೂ ಮಾವು ಬೆಳೆಯಲಾಗುತ್ತಿದೆ. ಇನ್ನು ನೂರೈವತ್ತಕ್ಕೂ ಹೆಚ್ಚು ತಳಿಯ ಹಣ್ಣುಗಳಿಗೆ ತವರೂರಾಗಿದೆ.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿಲ್ಲೆಗಳ ಮಾವು ತಳಿಗಳ ಜೊತೆಯಲ್ಲಿ ಬೇರೆ ರಾಜ್ಯದ ಮಾವುಗಳನ್ನು ಕೂಡ ಈ ಮೇಳದಲ್ಲಿ ಕಾಣಬಹುದಾಗಿದೆ. ಸೀಜನಲ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರ ಮೂಲಕ ಮಾವು ಬೆಳಗಾರರಿಗೆ ನೆರವಾಗಬೇಕು ಎಂದು ಹೇಳಿದರು.
ನಿಪಾಹ್ ವೈರಸ್ ಬಗ್ಗೆ ಎಲ್ಲ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅತಂಕವಿಲ್ಲದೆ ಜನತೆ ಮಾವು ಸೇವನೆ ಮಾಡಬಹುದಾಗಿದೆ. ಕೃತಕವಾಗಿ ಮಾವುಗಳನ್ನು ಮಾಗಿಸದೆ ಮಾವುಗಳನ್ನು ನೈಸರ್ಗಿಕವಾಗಿ ಮಾಗಿಸಲಾಗಿದ್ದು ಕೃತಕವಾಗಿ ಮಾಗಿಸಿ ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.
ನಿಪಾಹ್ ವೈರಸ್ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಗೊಂದಲ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇನ್ನು ಮಾವಿನ ಹಣ್ಣಿನ ಜೊತೆ -ಜೊತೆಗೆ ಮೂಗಿಗೆ ಘಮ್ಮೆನಿಸುವ ಹಲಸು ಹಾಗೂ ಅದರಿಂದ ತಯಾರಿಸಲ್ಪಡುವ ಹಪ್ಪಳ, ಚಿಪ್ಸ್ ಗಳು ನೋಡುಗರನ್ನು ಕೈ ಬೀಸಿ ಕರೆಯುತ್ತಿತ್ತು.
mango mysuru district news ಮಾವು ಹಲಸು ಮೇಳ ಮೈಸೂರು ಜಿಲ್ಲಾ ಸುದ್ದಿ
The King of Fruits arrived in the market some time ago, but the prohibitive cost may have deterred many from buying it. However, the HOPCOMS is not only bringing several varieties of mangoes closer to people but also intends to sell them at a discounted price. Mango mela is held in Mysuru Karzen park ground.
ನೀವು ಆರೋಗ್ಯವಂತರಾಗಬೇಕೇ..? ಇಲ್ಲಿವೆ ಸ್ಮಾರ್ಟ್‌ ಟೂಲ್ಸ್‌..!-Gizbot-Latest-Kannada-WSFDV
Gizbot | 21st Oct, 2019 07:05 AM
ನೀವು ವ್ಯಾಯಾಮ, ವಾಕಿಂಗ್, ರನ್ನಿಂಗ್‌ ಅಥವಾ ಯಾವುದೇ ದೈಹಿಕ ಚಟುವಟಿಕೆ ನಡೆಸುತ್ತಿದ್ದರೆ ನಿಮ್ಮೊಂದಿಗೆ ಇರಬೇಕಾದ ತಂತ್ರಜ್ಞಾನದಲ್ಲಿ ಮುಖ್ಯವಾದದ್ದು ಸ್ಮಾರ್ಟ್ ವಾಚ್. ವಿಭಿನ್ನ ಬೆಲೆಯ ಆಯ್ಕೆಗಳೊಂದಿಗೆ ನಿಮಗೆ ಹಲವಾರು ಆಯ್ಕೆಗಳು ಸಿಗುತ್ತವೆ. ಐಫೋನ್ ಬಳಕೆದಾರರು ಆಪಲ್ ವಾಚ್‌ ಕಡೆ ಮುಖ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಸ್ಯಾಮ್‌ಸಂಗ್ ಸ್ಮಾರ್ಟ್‌ವಾಚ್‌ಗಳು, ಫಿಟ್‌ಬಿಟ್, ಫಾಸಿಲ್‌ ಮತ್ತಿತರ ಉತ್ಪನ್ನಗಳನ್ನು ಧರಿಸಬಹುದು. ಅದು ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಗಾ ಇಡುವುದಲ್ಲದೆ ನೊಟಿಫಿಕೇಷನ್‌ ನೀಡುವ ಮೂಲಕ ಉತ್ಪಾದಕತೆ ಹೆಚ್ಚಿಸುತ್ತದೆ.
ಆರೋಗ್ಯ ಆಪ್‌ಗಳು
ನಿಮ್ಮ ಆರೋಗ್ಯದ ಬಗ್ಗೆ ನೀವು ನಿಜವಾಗಿಯೂ ಗಂಭೀರತೆಯನ್ನು ಹೊಂದಿದ್ದರೆ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಯಲು ಬಯಸಿದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕನಿಷ್ಠ ಒಂದು ಆರೋಗ್ಯ ಆಪ್‌ನ್ನು ನೀವು ಹೊಂದಿರಲೇಬೇಕು. ಕೆಲವು ಆಪ್‌ಗಳು ಪ್ರಗತಿಯನ್ನು ಗಮನಿಸಿದರೆ, ಇತರ ಆಪ್‌ಗಳು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಹ ಶಿಫಾರಸು ಮಾಡುತ್ತವೆ. ಅವುಗಳಲ್ಲಿ ಕೆಲವುಗಳೆಂದರೆ ಆಕ್ಟಿವಿಟಿ, ಮೈ ಫಿಟ್‌ನೆಸ್‌ಪಾಲ್, ಮಿ ಫಿಟ್, ನೈಕ್ ರನ್ ಕ್ಲಬ್ ಮತ್ತಿತರ ಆಪ್‌ಗಳಾಗಿವೆ.
ಆಡಿಯೋ ಉತ್ಪನ್ನಗಳು
ನೆಕ್‌ಬ್ಯಾಂಡ್‌ಗಳು ವೈದ್ಯಕೀಯ ಸಾಧನಗಳೂ ಆಗಿಲ್ಲವೆಂದರೂ ನೀವು ಜಿಮ್‌ನಲ್ಲಿ ಅಥವಾ ಬೇರೆಡೆ ಕೆಲಸ ಮಾಡುತ್ತಿರುವಾಗ ನಿಜವಾಗಿಯೂ ಅವು ಉಪಯುಕ್ತವಾಗಿರುತ್ತವೆ. ರಿಯಲ್‌ಮಿ ಬಡ್ಸ್, ಸ್ಯಾಮ್‌ಸಂಗ್ ಇಯರ್‌ಬಡ್‌ಗಳು ಮತ್ತು ಏರ್‌ಪಾಡ್‌ಗಳು ಈ ವಿಭಾಗದಲ್ಲಿ ಕೆಲವು ಪ್ರಮುಖ ಉದಾಹರಣೆಗಳಾಗಿವೆ.
ಏರ್ ಪ್ಯೂರಿಫೈಯರ್‌ಗಳು
ಏರ್ ಪ್ಯೂರಿಫೈಯರ್‌ಗಳನ್ನು ಎಲ್ಲಾ ಸಮಯದಲ್ಲೂ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಿಲ್ಲ. ಆದರೆ, ನಿಮಗೆ ತಾಜಾ ಗಾಳಿಯನ್ನು ಉಸಿರಾಡಲು ನೀಡಿ ಮನೆಯಲ್ಲಿ ವ್ಯತ್ಯಾಸ ಸೃಷ್ಟಿಸುತ್ತದೆ. ಇವುಗಳು ಎಲ್ಲಾ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತವೆ, ನಿಮಗೆ ಅಗತ್ಯವಿರುವ ಏರ್‌ ಫ್ಯೂರಿಪೈಯರ್‌ನ್ನು ಖರೀದಿಸುವುದು ನಿಮಗೆ ಬಿಟ್ಟಿದ್ದು. ಇವುಗಳು 'ಸ್ಮಾರ್ಟ್' ಆಗಿರುವುದರಿಂದ ನಿಮ್ಮ ಸಮಯವನ್ನು ಉಳಿಸುವುದರ ಜೊತೆ ನಿಮ್ಮ ಸುತ್ತಲಿನ ಪರಿಸರವನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.
ಇತ್ತೀಚೆಗೆ ಹಲವು ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಬಳಕೆದಾರರ ಆರೋಗ್ಯದತ್ತ ಗಮನ ಹರಿಸಿದ್ದು, ಮಾನವನನ್ನು ಸದೃಢವಾಗಿಡಲು ಸಹಾಯ ಮಾಡುತ್ತಿವೆ. ಕೆಲವು ಕಂಪನಿಗಳು ನಿಮ್ಮ ದಿನಚರಿಯೊಂದಿಗೆ ಹೊಂದಾಣಿಕೆ ಮಾಡುವ ಸಾಫ್ಟ್‌ವೇರ್‌ಗಳನ್ನು ಪರಿಚಯಿಸಿದ್ದರೆ, ಕೆಲವರು ಆರೋಗ್ಯದ ಮೇಲೆ ಖಾಳಜಿ ತೋರಲು ನಿಖರವಾದ ಧರಿಸಬಹುದಾದ ಉತ್ಪನ್ನಗಳನ್ನು ನಿಮಗೆ ನೀಡಿದ್ದಾರೆ. ಇನ್ನೂ ಕೆಲವು 'ಸ್ಮಾರ್ಟ್ ಹೋಮ್' ಉತ್ಪನ್ನಗಳು ಸಹ ಇವೆ. ನಿಮ್ಮ ಆರೋಗ್ಯವನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ಆರೋಗ್ಯಕರ ಜೀವನ ನಡೆಸಲು ಅಗತ್ಯವಿರುವ ಆಪ್‌ಗಳು ಮತ್ತು ಸಾಧನಗಳನ್ನು ಇಲ್ಲಿ ಪಟ್ಟಿ ಮಾಡಿದ್ದು, ಆಪ್‌ಗಳಿಂದಿಡಿದು ಸ್ಮಾರ್ಟ್‌ವಾಚ್‌ಗಳು ಮತ್ತು ನೆಕ್‌ಬ್ಯಾಂಡ್‌ಗಳವರೆಗೆ ಎಲ್ಲವನ್ನೂ ಇಲ್ಲಿ ನೀವು ನೋಡಬಹುದು.
ಅಭಿಮಾನಿ – Page 5 – Public TV
ಮುಂಬೈ: ಬಾಲಿವುಡ್ ಸನ್ನಿ ಲಿಯೋನ್ ಅವರು ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ 25 ಮಿಲಿಯನ್ (2.5 ಕೋಟಿ) ಫಾಲೋವರ್ಸ್ ಹೊಂದಿದ್ದು, ಈ ಕುರಿತು ಸಂತಸ ವ್ಯಕ್ತಪಡಿಸಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಂತರ್ಜಾಲದಲ್ಲಿ...
ಚಿಕ್ಕೋಡಿ/ಬೆಳಗಾವಿ: ಸಿನಿಮಾ ನಟರ ಕೆಲ ಅಭಿಮಾನಿಗಳ ರೀತಿ ಸಚಿವ ಲಕ್ಷ್ಮಣ ಸವದಿ ಅವರ ಅಭಿಮಾನಿ ಸಹ ವಿಚಿತ್ರ ಹರಕೆಯನ್ನು ತೀರಿಸಿದ್ದಾರೆ. ಲಕ್ಷ್ಮಣ್ ಸವದಿ ಅವರು ಸಚಿವರಾಗುವವರೆಗೆ ತಲೆಗೆ ಕಟ್ಟಿದ ಬಟ್ಟೆಯನ್ನು ಬಿಚ್ಚುವದಿಲ್ಲ ಎಂದು ಅಭಿಮಾನಿಯೊಬ್ಬರು ಹರಕೆ...
ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡಿದ್ದಾನೆ. ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ...
ಸಿಂಧೂರ, ತಾಳಿ ಹಾಕಿ ಅಭಿಮಾನಿಗಳ ಮುಂದೆ ಬಂದ ರಾಖಿ ಸಾವಂತ್
ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಹಣೆಯಲ್ಲಿ ಸಿಂಧೂರ ಇಟ್ಟು, ತಾಳಿ ಕಟ್ಟಿಸಿಕೊಂಡು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ರಾಖಿ ಸಾವಂತ್ ಮದುವೆ ಮಾಡಿಕೊಂಡರಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ....
ಕಾರವಾರ: ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಸ್ಥಾನದಿಂದ ಅತೃಪ್ತರನ್ನು ಅನರ್ಹಗೊಳಿಸಿದ್ದು, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ ಕಾರ್ಯಕರ್ತರಿಗೆ ಸ್ವಷ್ಟನೆ ನೀಡಿದ್ದಾರೆ. ಸ್ಪೀಕರ್ ನಿರ್ಣಯ ಅತೀ ಶೀಘ್ರದಲ್ಲೇ...
ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರ ವಿಕಲಚೇತನ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ನಟನ ಚಿತ್ರವನ್ನು ಕಾಲಿನಲ್ಲಿ ಬಿಡಿಸಿದ್ದಾರೆ. ಸಲ್ಮಾನ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಭಾವುಕ ಸಂದೇಶ ಪ್ರಕಟಿಸಿದ್ದಾರೆ. ಅಭಿಮಾನಿ ತನ್ನ ಮೊಬೈಲಿನಲ್ಲಿ...
ಸಲ್ಫರ್ ಬ್ಲ್ಯಾಕ್, 2-ಅಮೈನೊ -4-ನೈಟ್ರೊಫೆನಾಲ್, ಸಲ್ಫರ್ ಬ್ಲ್ಯಾಕ್ ಬಿಆರ್ - ಫೊರಿಂಗ್
ನಮ್ಮ ಸಸ್ಯವು ಸಲ್ಫರ್ ಬ್ಲ್ಯಾಕ್ ಬಿ, ಸಲ್ಫರ್ ಬ್ಲ್ಯಾಕ್ ಬಿಆರ್, 2, 4-ಡೈನಿಟ್ರೋಕ್ಲೋರೋಬೆನ್ಜೆನ್ ಮತ್ತು 2-ಅಮೈನೊ -4-ನೈಟ್ರೊಫೆನಾಲ್ ಉತ್ಪಾದಿಸಲು ಹೈಟೆಕ್ ವಿಧಾನವನ್ನು ಹೊಂದಿದೆ.
ವಿಭಿನ್ನ ಶಕ್ತಿಯೊಂದಿಗೆ ಪ್ರಕಾಶಮಾನವಾದ-ಕಪ್ಪು ಪದರ ಅಥವಾ ಧಾನ್ಯ. ಮುಖ್ಯವಾಗಿ ಹತ್ತಿ, ವಿಸ್ಕೋಸ್, ವಿನೈಲಾನ್ ಮತ್ತು ಕಾಗದದ ಮೇಲೆ ಬಣ್ಣ ಬಳಿಯುವುದು.
ಸಲ್ಫರ್ ಬ್ಲ್ಯಾಕ್ ಬಿಆರ್ನೊಂದಿಗೆ ವಿಭಿನ್ನ ನೆರಳು.
ತಿಳಿ ಹಳದಿ ಬಣ್ಣದಿಂದ ತಿಳಿ ಕಂದು ಬಣ್ಣದ ಸ್ಫಟಿಕ. ಬಣ್ಣಗಳು, ಕೀಟನಾಶಕ ಮತ್ತು medicine ಷಧ ಮಧ್ಯಂತರ ತಯಾರಿಸಲು.
ಹಳದಿ ಸ್ಫಟಿಕ, ಪುಡಿ. ಬಣ್ಣಗಳು ಮತ್ತು medicine ಷಧ ಮಧ್ಯಂತರವನ್ನು ತಯಾರಿಸಲು. ಮುಖ್ಯವಾಗಿ ಆಸಿಡ್ ಬ್ರೌನ್ ಆರ್ಹೆಚ್, ಆಸಿಡ್ ಗ್ರೀನ್ 3 ಜಿ, ಬ್ಲ್ಯಾಕ್ ಬಿಎಲ್, ಬಿಆರ್ಎಲ್, ಬಿಜಿಎಲ್ ನಲ್ಲಿ ಬಳಸಲಾಗುತ್ತದೆ.
ಫೊರಿಂಗ್ ಆಮದು ಮತ್ತು ರಫ್ತು ಕಂ, ಲಿಮಿಟೆಡ್ ಅನ್ನು 2004 ರಲ್ಲಿ ಸ್ಥಾಪಿಸಲಾಯಿತು. ನಮ್ಮ ಕಂಪನಿ ಐಎಸ್ಒ 9001: 2006 ಮತ್ತು ಐಎಸ್ಒ 14000 ಅನ್ನು ಪಡೆದುಕೊಂಡಿದೆ. ಚೀನಾದ ಉತ್ತಮ ರಾಸಾಯನಿಕ ಉತ್ಪನ್ನಗಳನ್ನು ರಫ್ತು ಮಾಡಲು ನಾವು ಶ್ರೀಮಂತ ಅನುಭವವನ್ನು ಸಂಗ್ರಹಿಸಿದ್ದೇವೆ. ನಮ್ಮ ಶಕ್ತಿಯುತ ಸ್ಥಾವರವನ್ನು ಆಧರಿಸಿ, ಸಲ್ಫರ್ ಬ್ಲ್ಯಾಕ್ ಮತ್ತು ಅದರ ಮಧ್ಯವರ್ತಿಗಳನ್ನು ಸಾಗರೋತ್ತರ ಮಾರುಕಟ್ಟೆಗೆ ಬೆಂಬಲಿಸಲು ನಾವು ಸಮರ್ಥರಾಗಿದ್ದೇವೆ.
ಉತ್ತಮ ವೇಗದ ಗುಣಲಕ್ಷಣಗಳು, ವೆಚ್ಚದ ಪರಿಣಾಮಕಾರಿತ್ವ ಮತ್ತು ವಿಭಿನ್ನ ಸಂಸ್ಕರಣಾ ಪರಿಸ್ಥಿತಿಗಳಲ್ಲಿ ಅನ್ವಯಿಸುವ ಸುಲಭತೆ ನಿಷ್ಕಾಸ, ಅರೆ-ನಿರಂತರ ಮತ್ತು ನಿರಂತರ ಇದು ಅತ್ಯಂತ ಜನಪ್ರಿಯ ವರ್ಣದ್ರವ್ಯಗಳಲ್ಲಿ ಒಂದಾಗಿದೆ.
ಮುಖ್ಯವಾಗಿ ಹತ್ತಿ, ವಿಸ್ಕೋಸ್, ವಿನೈಲಾನ್ ಮತ್ತು ಕಾಗದದ ಮೇಲೆ ಬಣ್ಣ ಬಳಿಯುವುದು.
38 ನೇ ಡೈ + ಕೆಮ್ ಬಾಂಗ್ಲಾದೇಶ ಎಕ್ಸ್‌ಪೋ 2019
4 ಸೆಪ್ಟೆಂಬರ್, 2019 ರಿಂದ ಸೆಪ್ಟೆಂಬರ್ 7, 2019 ರವರೆಗೆ ಇಂಟರ್ನ್ಯಾಷನಲ್ ಕನ್ವೆನ್ಷನ್ ಸಿಟಿ ಬಶುಂಧರಾ, ಇಂಟರ್ನ್ಯಾಷನಲ್ ಕನ್ವೆನ್ಷನ್ ಸಿಟಿ ಬಶುಂಧರಾ, ಪುರಬಚಲ್ ಎಕ್ಸ್‌ಪ್ರೆಸ್ ಹೆಚ್‌ವೈ, ka ಾಕಾ, ಬಾಂಗ್ಲಾದೇಶದಲ್ಲಿ. ಸಿಇಎಂಎಸ್-ಗ್ಲೋಬಲ್ ಯುಎಸ್ಎಯ ಅಂತರರಾಷ್ಟ್ರೀಯ `ಡೈ + ಕೆಮ್ ಸರಣಿ ಪ್ರದರ್ಶನಗಳು 'ಅದರ ...
ಕಲರ್ & ಕೆಮ್ ಎಕ್ಸ್‌ಪೋ ಎನ್ನುವುದು ರಾಸಾಯನಿಕಗಳು, ವರ್ಣಗಳು ಮತ್ತು ಸಂಬಂಧಿತ ಉದ್ಯಮಗಳಿಗೆ ಬ್ರಾಂಡ್ ಸ್ಥಾಪಿಸಲು, ಹೊಸ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಮಾರಾಟವನ್ನು ಹೆಚ್ಚಿಸಲು ಸಮಗ್ರ ಮತ್ತು ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವ ಒಂದು ವಿಶೇಷ ಕಾರ್ಯಕ್ರಮವಾಗಿದೆ. ಕಲರ್ & ಕೆಮ್ ಎಕ್ಸ್‌ಪೋ 2019 ಸಹ ಇದರ ಒಳನೋಟವನ್ನು ನೀಡುತ್ತದೆ ...
ಸಿಪಿಐಐ ಸ್ಥಾಪಿತ pharma ಷಧೀಯ ಘಟನೆಯಾಗಿದ್ದು, ಫಾರ್ಮಾದಲ್ಲಿ ಸಾಗಣೆದಾರರು ಮತ್ತು ಅಲುಗಾಡುವವರನ್ನು ಒಟ್ಟುಗೂಡಿಸುವ 30 ವರ್ಷಗಳ ಅನುಭವವನ್ನು ಹೊಂದಿದೆ. ಉದ್ಯಮದಲ್ಲಿ ಸ್ಥಾಪಿತವಾದ ಹೆಸರು, ಸಿಪಿಐಐ ವರ್ಲ್ಡ್‌ವೈಡ್ ಫಾರ್ಮಾ ಕ್ಯಾಲೆಂಡರ್‌ನ ಒಂದು ಪ್ರಮುಖ ಅಂಶವಾಗಿದೆ.
"ಮೊದಲು ಜೈಲಿನ ಆಹಾರ ಸೇವಿಸಿ": ಅನಿಲ್ ದೇಶಮುಖ್‌ ಮನವಿಗೆ ಕೋರ್ಟ್ ಹೇಳಿಕೆ | "Eat Jail Food First": Court On Maharashtra Ex-Home Minister's Request - Kannada Oneindia
6 min ago ಎಕ್‌ಯುವಿ 700 ಬೇಗ ಕಳುಹಿಸಿ ಎಂದ ಥಾಮಸ್‌ ಕಪ್ ವಿನ್ನರ್‌: ಮಹೀಂದ್ರ ಪ್ರತಿಕ್ರಿಯೆ ಹೀಗಿತ್ತು
10 min ago ತಮಿಳುನಾಡು; ಸ್ಮಗ್ಲರ್ಸ್ ಕೈಯಲ್ಲಿದ್ದ ಶಿವನ ವಿಗ್ರಹಕ್ಕೆ 500 ವರ್ಷಗಳ ಇತಿಹಾಸ!
14 min ago ಬೆಂಗಳೂರು ಮಳೆ: ಸಂತ್ರಸ್ತ 1500 ಕುಟುಂಬಗಳಿಗೆ ಸಚಿವ ಗೋಪಾಲಯ್ಯ ಫುಡ್ ಕಿಟ್ ವಿತರಣೆ
| Updated: Monday, November 15, 2021, 17:12 [IST]
ಮುಂಬೈ, ನವೆಂಬರ್ 15: ಈ ತಿಂಗಳ ಆರಂಭದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ವೇಳೆ ವಿಶೇಷ ನ್ಯಾಯಾಲಯವು ಅನಿಲ್ ದೇಶಮುಖ್ ಅವರು ಮನೆ ಊಟಕ್ಕಾಗಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ. "ನೀವು ಮೊದಲು ಜೈಲಿನ ಆಹಾರವನ್ನು ತಿನ್ನಿರಿ. ನಂತರ ನಾನು ನಿಮ್ಮ ಮನವಿಯನ್ನು ಪರಿಗಣಿಸುತ್ತೇನೆ" ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದಾಗ್ಯೂ, 71 ವರ್ಷ ವಯಸ್ಸಿನವರ ಅನಿಲ್ ದೇಶಮುಖ್ ಅವರ ವೈದ್ಯಕೀಯ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಸಿಗೆಗಾಗಿ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ಸ್ವೀಕರಿಸಿದೆ.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪವಿದೆ. ಏಪ್ರಿಲ್ 21ರಂದು ಸಿಬಿಐ ತಂಡದಿಂದ ಎನ್‌ಸಿಪಿ ನಾಯಕ ಅನಿಲ್ ದೇಶ್ ಮುಖ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪವನ್ನು ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಮಾಜಿ ಸಚಿವ ಅನಿಲ್‌ ದೇಶ್‌ಮುಖ್‌ಗೆ ಸುಮಾರು ಐದು ಬಾರಿ ಸಮನ್ಸ್‌ ಕಳುಹಿಸಿತ್ತು. ಆದರೆ ಅನಿಲ್‌ ದೇಶ್‌ಮುಖ್‌ ಹಾಜರಾಗಿರಲಿಲ್ಲ. ಹಾಗೆಯೇ ಸಮನ್ಸ್‌ಗೆ ಯಾವುದೇ ಉತ್ತರವನ್ನೂ ನೀಡಿರಲಿಲ್ಲ. ಈ ಹಿನ್ನೆಲೆ ಬಳಿಕ ಲುಕ್‌ಔಟ್‌ ನೋಟಿಸ್‌ ಹೊರಡಿಸಲಾಗಿತ್ತು. ಲುಕ್‌ಔಟ್‌ ನೋಟಿಸ್‌ ಬಳಿಕ ಅನಿಲ್‌ ದೇಶ್‌ಮುಖ್‌ ತನ್ನ ವಿರುದ್ಧದ ಸಮನ್ಸ್‌ ರದ್ದು ಮಾಡುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಾಂಬೆ ಹೈಕೋರ್ಟ್ ದೇಶ್‌ಮುಖ್‌ರ ಅರ್ಜಿಯನ್ನು ವಜಾ ಮಾಡಿತ್ತು. ಹಾಗೆಯೇ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ತನಿಖೆಯನ್ನು ಮುಂದುವರಿಸುವಂತೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿತ್ತು. ಇನ್ನು ಈ ಬೆನ್ನಲ್ಲೆ ಅನಿಲ್‌ ದೇಶ್‌ಮುಖ್‌ ತನ್ನ ವಿರುದ್ಧ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿರುವುದನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪ ಮಾಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಅನಿಲ್‌ ದೇಶ್‌ಮುಖ್‌ 100 ಕೋಟಿ ಹಫ್ತಾ ವಸೂಲಿ ಮಾಡುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಪರಮ್‌ ಬೀರ್‌ ಸಿಂಗ್‌ ಇದಕ್ಕೂ ಮುನ್ನ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಸಮೀಪದಲ್ಲಿ ವಾಹನದಲ್ಲಿ ಸ್ಪೋಟಕ ಪತ್ತೆಯಾದ ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ನಿಭಾವಣೆ ಮಾಡಿರಲಿಲ್ಲ ಎಂಬ ಕಾರಣದಿಂದಾಗಿ ಮಹಾರಾಷ್ಟ್ರ ನಗರ ಪೊಲೀಸ್‌ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದರು. ಆ ಬಳಿಕ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಈ ಪತ್ರವನ್ನು ಬರೆದಿದ್ದಾರೆ.
ಮುಂಬೈ‌ನ ಹುಕ್ಕಾ ಪಾರ್ಲರ್‌ಗಳ ಕುರಿತಾಗಿ ಸಭೆ ನಡೆಸಿದ್ದ ಸಂದರ್ಭದಲ್ಲಿ ಸಭೆಯ ಬಳಿಕ ಗೃಹ ಸಚಿವರ ವೈಯಕ್ತಿಕ ಕಾರ್ಯದರ್ಶಿ ಪಲಾಂಡೆ, "ಗೃಹ ಗೃಹಸಚಿವರು ಮುಂಬೈನಲ್ಲಿರುವ ಅಂದಾಜು 1750 ಬಾರ್‌, ರೆಸ್ಟೋರೆಂಟ್‌ಗಳು ಮತ್ತಿತರ ವ್ಯಾಪಾರಿಗಳಿಂದ ಸುಮಾರು 40ರಿಂದ 50 ಕೋಟಿ ರೂಪಾಯಿ ಸಂಗ್ರಹದ ಗುರಿಹೊಂದಿದ್ದಾರೆ," ಎಂದು ತಿಳಿಸಿರುವುದಾಗಿ ಪತ್ರದಲ್ಲಿ ಆರೋಪ ಮಾಡಲಾಗಿದೆ. ಈ ಆರೋಪವನ್ನು ಮಾಜಿ ಸಚಿವ ಅನಿಲ್‌ ದೇಶ್‌ಮುಖ್‌ ನಿರಾಕರಿಸಿದ್ದಾರೆ. ವಿಚಾರಣೆ ವೇಳೆ ಅವರನ್ನು ಬಂಧಿಸಲಾಗಿತ್ತು.
ದೇಶಮುಖ್ ಅವರ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಂದು ಆರೋಪಿ ಮಾಜಿ ಸಚಿವರನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯ ಆರೋಪಿಯ ಹೆಚ್ಚಿನ ವಿಚಾರಣೆಯ ಅಗತ್ಯ ಇಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ದೇಶಮುಖ್ ಅವರನ್ನು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
maharashtra mumbai ed arrest ಮಹಾರಾಷ್ಟ್ರ ಮುಂಬೈ ಇಡಿ ಬಂಧನ ಜಾರಿ ನಿರ್ದೇಶನಾಲಯ
Former Maharashtra minister Anil Deshmukh -- arrested in a corruption case earlier this month -- was sent to judicial custody for 14 days today. The special court, however, turned down his request for home-cooked meals.
ನವೆಂಬರ್ 26: ಕಾನೂನು ದಿನ - ಈಗ - ಸಂವಿಧಾನ ದಿನ - Newsnap Kannada
ನವೆಂಬರ್ 26: ಕಾನೂನು ದಿನ – ಈಗ – ಸಂವಿಧಾನ ದಿನ
ಸಂವಿಧಾನ ಎಂದರೇನು ?
ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ?
ನೀತಿ ನಿಯಮಗಳೇ ? ಬದುಕೇ ?
ಜೀವನ ವಿಧಾನವೇ ? ರಕ್ಷಾ ಕವಚವೇ ? ಮಾರ್ಗಸೂಚಕಗಳೇ ?
ನಾಗರಿಕ ಮಾನದಂಡಗಳೇ ? ಧರ್ಮದ ಮುಂದುವರಿದ ಭಾಗವೇ ? ಅನಿವಾರ್ಯ ಹಕ್ಕು ಮತ್ತು ಕರ್ತವ್ಯಗಳೇ ? ದುಷ್ಟ ಶಿಕ್ಷೆ ಶಿಷ್ಟ ರಕ್ಷಣೆಯ ಸೂತ್ರಗಳೇ ? ಸ್ವಾತಂತ್ರ್ಯ – ಸಮಾನತೆಯ ಲಕ್ಷಣಗಳೇ ? ಮಾನವೀಯ ಮೌಲ್ಯಗಳೇ ? ಸೃಷ್ಟಿಯ ನಿಷ್ಠೆಯೇ ? ಜೀವಪರ ನಿಲುವುಗಳೇ ? ದೇಶ ಮತ್ತು ಜನತೆಯ ನೆಮ್ಮದಿಯ ತಂತ್ರಗಳೇ ?
ಅಥವಾ ಇವುಗಳೆಲ್ಲವುಗಳ ಒಟ್ಟು ಸಮೀಕರಣವೇ ?
ಬಹುಶಃ ಭಾರತದ ಸಂವಿಧಾನದ ಪೀಠಿಕೆ ಮತ್ತು ಅದರ ಆಳ ಅಗಲಗಳನ್ನು ಗಮನಿಸಿದಾಗ ಈ ಎಲ್ಲಾ ಸಾರಾಂಶಗಳ ಒಟ್ಟು ಮೊತ್ತ ಎಂದು ನಿರ್ಧರಿಸಬಹುದು.
ಧರ್ಮ ಮತ್ತು ಸಂವಿಧಾನ…….
ಧರ್ಮದ ಮುಂದುವರಿದ ಭಾಗವೇ ಸಂವಿಧಾನ ಎಂದೂ ಅರ್ಥೈಸಬಹುದು. ಆದರೆ ಧರ್ಮವನ್ನು ಮೀರಿದ ಸ್ವಾತಂತ್ರ್ಯ ಸಮಾನತೆ ಮಾನವೀಯತೆ ಸಹಜತೆ ಸಂವಿಧಾನದಲ್ಲಿ ಅಡಕವಾಗಿರುತ್ತದೆ. ಅನೇಕ ಕಾರಣಗಳಿಗಾಗಿ ಎಲ್ಲಾ ಧರ್ಮದಲ್ಲಿ ಒಂದಷ್ಟು ಅಮಾನವೀಯ ಅಸ್ವಾಭಾವಿಕ ಹುಳುಕುಗಳು ಸೇರಿರುತ್ತವೆ. ಶ್ರೇಷ್ಠತೆಯ ವ್ಯಸನ ಧರ್ಮಗಳ ಬಹುದೊಡ್ಡ ಲೋಪ. ಹಾಗೆಯೇ ಸಾಮಾನ್ಯವಾಗಿ ಧರ್ಮಗಳು ಬದಲಾವಣೆಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ.