text
stringlengths 0
61.5k
|
---|
ಒಂದು ರೀತಿಯಲ್ಲಿ ಕವಿಯ ಘೋಷವಾಕ್ಯದಲ್ಲಿರುವ 'ಪ್ರಾರ್ಥನೆ' ಎಂಬ ಅವನ ಕವನ ಪದಗಳ ನಿಸ್ಸಂಕೋಚ ಬಳಕೆಯಿಂದ ಮಡಿವಂತರನ್ನು ಆಘಾತಗೊಳಿಸಿತು. ಅದು ಅವರ ಮಹತ್ಕೃತಿಗಳಲ್ಲಿ ಒಂದಲ್ಲದಿದ್ದರೂ ಅಚ್ಚೊತ್ತಿ ನಿಲ್ಲಬಲ್ಲ ಪ್ರಯೋಗವಾಗಿದೆ. ಈ ಕವನದ ಪ್ರತಿಮೆಗಳೆಲ್ಲಾ ಮಾನವನ ದೈಹಿಕ ಕಾಮ ಮತ್ತು ರೋಗ ಇವುಗಳ ವಿವಿಧ ವ್ಯಾಪಾರಗಳಿಂದ ಆಯ್ದುಕೊಂಡವು. ಕವನದ ಮೂಲ ಸೆಳೆತ ಮಾತ್ರ ಆರೋಗ್ಯ, ಸಹಜತೆ ಮತ್ತು ಸಮತೋಲ. ಇಲ್ಲಿನ ಸ್ವಗತಭಾಷಿಯ ವ್ಯಂಗ್ಯ ಆತ್ಮಪರೀಕ್ಷೆ ಒಂದು ಕರ್ಷಣಕ್ಷೇತ್ರವನ್ನು ಸೃಷ್ಟಿಸಿದೆ. ಇಬ್ಬಂದಿತನವನ್ನು ವ್ಯಕ್ತಪಡಿಸುವ ಪ್ರತೀಕಗಳು ಒಂದಕ್ಕೊಂದು ಎದುರಾಗುತ್ತ, ಒಳಪಡುತ್ತ ಕವಿಯ ಸದ್ಯದ ಸತ್ಯವನ್ನೂ ಹಂಬಲವನ್ನೂ ಏಕಕಾಲದಲ್ಲಿ ಅಭಿವ್ಯಕ್ತಿಸುತ್ತವೆ. ಸೃಷ್ಟಿಗೆ ಮೊದಲು ಮತ್ತು ಆಮೇಲೆ ಯೋಗನಿದ್ರೆಯಲ್ಲಿ ಆತ್ಮಾರಾಮನಾಗುವ ಬ್ರಹ್ಮ ಮತ್ತು ಆತ್ಮಕ್ಷಯಕ್ಕೆ ಹಾದಿಕೊಟ್ಟ ನಿಸ್ಸಂಗಿ ಮನುಷ್ಯ: ಒಂದೇ ನಾಣ್ಯದ ಎರಡು ಮಗ್ಗಲುಗಳಂತಿರುವ ಈ ಎರಡೂ, ಆತ್ಮಶೋಧ ಮತ್ತು ಆತ್ಮಗುಪ್ತಿ ಸ್ಥಿತಿಗಳ ಸಂಕೇತವಾಗಿವೆ. ಅಂತರ್ಮುಖಿಯ ಆತ್ಮಶೋಧ ಅಪೇಕ್ಷಣೀಯವೇ, ಆದರೆ ಆತ್ಮಗುಪ್ತಿ ಹಾಗಲ್ಲ. ಅದರಂತೆಯೇ, ಸಹಜ ಸಂಭೋಗ ಬಹಿರ್ಮುಖ ಸೃಷ್ಟಿಯ ಹಾಗಲ್ಲ. ಅದರಂತೆಯೇ, ಸಹಜ ಸಂಭೋಗ ಬಹಿರ್ಮುಖ ಸೃಷ್ಟಿಯ, ನಿರೋಗದ ಕುರುಹು; ಆದರೆ ಈ ಬಹುರ್ಮುಖತೆಯ ಅತಿರೇಕ 'ಪರಂಗಿ ರೋಗ'ಕ್ಕೆ ಸೆಳೆಯುವಂಥದ್ದು. (ಇಲ್ಲಿ 'ಪರಂಗಿರೋಗ' ಒಂದರ್ಥದ ಸಿಫಿಲಿಸ್, ಇನ್ನೊಂದು ಅರ್ಥದಲ್ಲಿ ಅನಾರೋಗ್ಯ ಕರವಾದ ರೋಗರೂಪವಾದ ಪಾಶ್ಚಾತ್ಯೀಕರಣ. ) ಆತ್ಮಾರಾಮತ್ವ (ಸಹಜವಾದ್ದು ಮತ್ತು ರೋಗರೂಪವಾದ್ದು) – ಹಾಗೂ ಬಹಿರ್ಮುಖತೆ (ಪುನಃ ಅದರಲ್ಲೂ ಸಹಜವಾದ್ದು, ರೋಗರೂಪವಾದ್ದು) ಈ ವಿರುದ್ಧತತ್ವಗಳ ಸುತ್ತ ಈ ಕವನದ ಎಲ್ಲ ಪ್ರತಿಮೆಗಳೂ ಕಲ್ಪಿತವಾಗಿವೆ. ಎರಡರಲ್ಲೂ ಸಫಲತೆ ಹಾಗೂ ವಿಫಲತೆಗಳೆರಡರ ಸಾಧ್ಯತೆಯೂ ಕಾಣುತ್ತದೆ. ವ್ಯಂಗ್ಯವಾಗಿ ದೇವರನ್ನು ಪ್ರಾರ್ಥಿಸಿ ಕೊಳ್ಳುತ್ತಿರುವ ಇಲ್ಲಿನ ಸ್ವಗತಭಾಷಿ ತಾನು ಅಪ್ರಾಮಾಣಿಕನಾಗಿರಲು ತಿರಸ್ಕರಿಸಿದವನು, ತನ್ನ ಸುತ್ತಣ ಸಮಾಜದ ಇಚ್ಛೆಗೆ ತನ್ನನ್ನು ದತ್ತು ಕೊಟ್ಟುಕೊಳ್ಳಲು ಧಿಕ್ಕರಿಸಿದವನು ಎಂಬ ಹೆಮ್ಮೆಯಿಂದ ಉಬ್ಬಿದವನು. ಇದು – ಇದಕ್ಕೆ ವಿರುದ್ಧವಾದ ಗುಲಾಮೋಸ್ಮಿ ಮನೋಭಾವದಂತೆಯೇ ಅಹಮ್ಮಿನ ಒಂದು ರೋಗವಾಗಿ ಕಾಣಿಸಿಕೊಂಡಿದೆ. ಕವನ ಸಮತೋಲದತ್ತ ಚಲಿಸುತ್ತದೆ: ಒಳ ಮುದುಡಿಕೊಳ್ಳುವುದು, ಹೊರಹೊಮ್ಮುವುದು, ಬಾಗುವುದು ಮತ್ತು ಬಾಗದೆ ಸೆಟೆದು ನಿಲ್ಲುವುದು ಮುಂತಾದುವುಗಳಿಂದ ಕಲ್ಪಿತವಾದ ಒಂದು ಸೃಜನಶೀಲ ಲಯದತ್ತ, ಯಾವ ಕಡೆಗೂ ಒಗ್ಗಾಲಿಯಾಗದ ಹದದತ್ತ. ಕವನದ ಇತರ ಎಲ್ಲ ಪ್ರತಿಮೆಗಳನ್ನೂ ಒಗ್ಗೂಡಿಸಿ ಕಟ್ಟುವ ಕೇಂದ್ರ ಪ್ರತಿಮೆ ಪುರಾಣದಿಂದ ಎತ್ತಿಕೊಂಡದ್ದು. ಅಂತರ್ಮುಖ ಆತ್ಮನಿರೀಕ್ಷಣೆ ಹಾಗೂ ಬಹಿರ್ಮುಖ ಸೃಷ್ಟಿ – ಇವುಗಳ ಸಂವಾದ ಸಾಂಗತ್ಯವನ್ನು ಸಾಧಿಸಿದ ಬ್ರಹ್ಮನನ್ನು ಆವಾಹಿಸುತ್ತ ಮುಂದಿನ ಹಾಗೂ ಕೊನೆಯ ಮೂರು ಸಾಲುಗಳಲ್ಲಿ ಗರುಡನ ಕಥೆಯನ್ನು ಸ್ಮರಿಸಲಾಗುತ್ತದೆ. ಮೊದಲು ಹುಟ್ಟಿದ ಅರುಣ "ಅರೆಹೊರದ ಮೊಟ್ಟೆ" ಯಾಗಿ ಹೆಳವನಾಗಿದ್ದರೆ, ಪೂರ್ಣಗರ್ಭದ ಅನಂತರ ಹುಟ್ಟಿದ ವಿನತಾಪುತ್ರ ಗರುಡ ಪೂರ್ಣ ಆವಿಷ್ಕೃತಿಯ ಸಂಸೃಷ್ಟಿಯಾಗಿದ್ದಾನೆ. (ಕವಿ ಎಂಥ ಕೃತಿಯನ್ನು ಸೃಷ್ಟಿಸಲಿಚ್ಛಿಸುತ್ತಾನೆ ಎಂಬುದನ್ನೂ ಈ ಕವಿತೆ ಸೂಚಿಸುತ್ತದೆ. ) ಬಲಿಷ್ಠ ಪಕ್ಷಗಳ ವೈನತೇಯ ಅಜೇಯನಾಗಿದ್ದಾನೆ; ಆದರೂ ಆ ಸೃಷ್ಟಿಯೊಡೆಯನಿಗೆ ತನ್ನನ್ನು ಸ್ವೇಚ್ಛೆಯಿಂದ ಒಪ್ಪಿಸಿಕೊಂಡು ಆತನ ತೊಡೆಹೊರೆಯ ಕೆಳಗಿನ ಸಡಿಲು ಮೆತ್ತೆಯಾಗಿದ್ದಾನೆ. |
ಇದು ಈ ಕವನದ ಅಸಮಗ್ರ ವ್ಯಾಖ್ಯೆಯೆನ್ನುವುದನ್ನು ನಾನಿಲ್ಲಿ ಎಚ್ಚರಿಸಿ ಹೇಳಬೇಕಾಗಿದೆ. ಈ ಕವಿತೆ ತಾನೇ ಎಲ್ಲೂ ಸ್ಪಷ್ಟವಾದ ಹೇಳಿಕೆಗಳನ್ನು ಕೊಡುವುದಿಲ್ಲ. ಕವನದ ಅರ್ಥ ಸಮಸ್ತವೂ ಅದರ ಲಯ ಮತ್ತು ಪ್ರತಿಮೆಗಳಲ್ಲಿ ಅಭಿನಯಗೊಳ್ಳುತ್ತದೆ. ಕವನದ ಯಾವುದೇ ಮಜಲಿನಲ್ಲೂ, ಅಲ್ಲಿನ ಘನವೂ ಇಂದ್ರಿಯಗ್ರಾಹ್ಯವೂ ಆದ ಪ್ರತಿಮೆಯಿಂದ ಅಲ್ಲಲ್ಲಿನ ಅರ್ಥಗಳನ್ನು ಪ್ರತ್ಯೇಕಿಸಲು ಸಾಧ್ಯವಾಗುವುದಿಲ್ಲ. ನಾನು ಇಲ್ಲಿ ಸೂಚಿಸುತ್ತಿರುವ ಅಡಿಗರ ಇತರ ಕವಿತೆಗಳ ಬಗ್ಗೆ ಈ ಅಂಶವನ್ನೂ ನೆನಪಿಡಬೇಕೆಂದು ಆಶಿಸುತ್ತೇನೆ. ಈ ಲೇಖನದಲ್ಲಿ ಚರ್ಚಿಸುತ್ತಿರುವ ಅಂಶಗಳ ದೃಷ್ಟಿಯಿಂದ ಅತ್ಯಂತ ಗಮನಾರ್ಹವಾದ ಕವನ 'ಭೂತ' ಎಂಬುದು. 'ಭೂತ' ಎಂಬುದಕ್ಕೆ ಭೂತಕಾಲ ಮತ್ತು ದೆವ್ವ – ಈ ಎರಡೂ ಅರ್ಥಗಳಿವೆ. ಕವಿ ಭೂತಕಾಲದ ಬಗ್ಗೆ ತನಗಿರುವ ವಿರುದ್ಧ (ದ್ವಂದ್ವ) ಮನೋವೃತ್ತಿಗಳನ್ನು ಈ ಕವನದಲ್ಲಿನ ಪ್ರತಿಮೆ ಶ್ಲೇಷಯ ಮೂಲಕ ಅನ್ವೇಷಣ ಮಾಡಿಕೊಂಡಿದ್ದಾರೆ. ಈ ಕವನದಲ್ಲಿನ ಪ್ರತಿಮೆಗಳು, ಸಂಗೀತದಲ್ಲಿನ ಸ್ವರಗಳಂತೆ, ಕ್ರಮಕ್ರಮವಾಗಿ ಪ್ರಯೋಗವಾಗುತ್ತ ಮರುಕಳಿಸುತ್ತ ಕವನದ ಸಮಗ್ರಾರ್ಥವನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತವೆ. ವರ್ತಮಾನಕಾಲದ ಕ್ರಿಯಾಪದಗಳು ಸೂಚಿಸುತ್ತಿರುವ ನೇತಿಸ್ಥಿತಿಯಿಂದ ಪ್ರಾರಂಭವಾಗಿ ತುದಿಯಲ್ಲಿ ಕ್ರಿಯಾಪದಗಳೇ ಇಲ್ಲದೆ ಸೂಚಿತವಾಗುವ ಸಾಧ್ಯಸ್ಥಿತಿಯೊಂದರ ಕಡೆಗೆ ಅರ್ಥಗಳು ಬೆಳೆಯುತ್ತಾ ಹೋಗುವಂಥ ಕವನ ಇದು: ವರ್ತಮಾನವನ್ನು ಕಾಡುತ್ತಿರುವ ಭೂತದ ಭ್ರೂಣಗೂಢಗಳ ಗಂಭೀರ ಸ್ಥಿತಿ ವರ್ಣಿತವಾಗಿರುವ ಮೊದಲನೆ ಸಾಲಿನಿಂದ ದೇಗುಲದ ಬಂಗಾರದ ಗೋಪುರದ ಪ್ರತಿಮೆಯಿರುವ ಕೊನೆಯ ಸಾಲಿನಕಡೆ ಕವನ ಚಲಿಸುತ್ತದೆ. ಈ ಕವನದಲ್ಲಿ ಬಂಗಾರದ ಪ್ರತೀಕ ಮೇಲಿಂದ ಮೇಲೆ ಮರುಕಳಿಸುವುದನ್ನು ಒಂದು ಉದಾಹರಣೆಯಾಗಿ ನೋಡಬಹುದು. ಕವನದ ಮೊದಲನೇ ಭಾಗದಲ್ಲಿ ಈ ಬಂಗಾರ ಕತ್ತಲೆಯಲ್ಲಿ ಇಣುಕುವಾಗ ಕ್ಷಣಮಾತ್ರ ಕೋರೈಸುವ ರೇಖೆಯಷ್ಟೇ ಆಗಿದೆ. ಅನಂತರ ಮುಂದೆ ಇದು ಅಗೆದು ತೆಗೆಯಬೇಕಾದ – ಕ್ರಮೇಣ ಶುದ್ಧಿಗೊಳಿಸಲ್ಪಟ್ಟ ಇಷ್ಟದೇವತಾ ಪ್ರತಿಮೆಯಾಗಿ ಬಡಿದು ಬಗ್ಗಿಸಬೇಕಾದ ಅದಿರಾಗಿದೆ. (ವೈಯಕ್ತಿಕ ಪೂಜೆಗೆ ಸಲ್ಲುವ ಈ ಇಷ್ಟದೇವತಾ ಪ್ರತಿಮೆ ಕವಿ ವೈಯಕ್ತಿಕ ಪ್ರಜ್ಞೆಗೆ ಕೊಡುವ ಮಹತ್ವವನ್ನು ಸಂಕೇತಿಸುತ್ತದೆ. ) ಮೊದಲು ಯಾವುದು ಕೇವಲ ಹೊಳೆದಿತ್ತೋ ಮತ್ತು ಸತತ ಯತ್ನ ಹಾಗೂ ಸಾರಾಸಾರ ವಿವೇಕಗಳಿಂದ ಯಾವುದು ಅನಂತರ ಇಷ್ಟದೇವತಾ ಪ್ರತಿಮೆಯಾಗಿ ರೂಪುಗೊಂಡಿತೋ ಅದು ಕವನದ ಕೊನೆಯ ಸಾಲಿನಲ್ಲಿ ಸಾಮೂಹಿಕ ಪ್ರಜ್ಞೆಯ ಅಭಿವ್ಯಕ್ತಿಯನ್ನು ಸಂಕೇತಿಸುವ ಬಂಗಾರದ ಗೋಪುರವು ಆಗುತ್ತದೆ. ಈ ಕವನದ ಮೊದಲ ಭಾಗದ 'ಹಳೆಬಾವಿ'ಯ 'ನಿಂತನೀರು' ಕೊನೆಯಲ್ಲಿ ಮೋಡವಾಗಿ, ಅಗೆದು ಉತ್ತ ಗದ್ದೆಗಳ ನಿಷೇಕ ಭೂಮಿಯ ಮೇಲೆ ಮಳೆಗರೆ ಯುತ್ತದೆ. ಹೀಗೆ ವಿಫಲತೆಯಿಂದ ಚಲಿಸಿ ಫಲತ್ವ ಸಾಧ್ಯತೆಗೆ ಬೆಳೆಯುತ್ತದೆ ಕವನ. |
ಕವನದಲ್ಲಿ ಗರುಡಪುರಾಣದಿಂದ ಎತ್ತಿಕೊಂಡ ತರ್ಪಣ ಸಿಕ್ಕದಿರುವ ಪಿತೃಗಳ ತಿರುಗು ಮುರುಗು ಪಾದದ ಭೂತದೇಹಿಗಳ ಪ್ರತಿಮೆಗಳಿವೆ. ಫಲತ್ವ, ವರ್ತಮಾನದಲ್ಲಿ ಕಲ್ಯಾಣವಾಗಿ ಮೈತುಂಬಿ ಬರುವ ಭೂತದ ಸಾಧ್ಯತೆ, ವ್ಯಕ್ತಿಸೌಷ್ಟವದ ಜೊತೆ ಸಮೂಹಸೌಷ್ಟವ ಶ್ರುತಿಗೂಡಿ ಬೆಳೆಯುವುದು – ಇವೇ ಕವನದ ಮೂಲ ಚಿಂತನೆಗಳಾಗಿವೆ. ಬಂಗಾರವನ್ನು ಅಗೆದು ಶುದ್ಧಿಗೊಳಿಸಿ ಇಷ್ಟದೇವತಾ ವಿಗ್ರಹಕ್ಕೆ ಬಡಿದು ಬಗ್ಗಿಸುವುದನ್ನು ಹೇಳುವ ಭಾಷೆ ಮತ್ತು ಅನುಭವಗಳ ಮೂಲದ್ರವ್ಯಗಳಿಂದ ಕವಿತೆ ಮೂಡಿಬರುವಂಥ ಸೃಷ್ಟಿಕಾರ್ಯವನ್ನು ಸಂಕೇತಿಸುತ್ತದೆ. |
ನವ್ಯಕಾವ್ಯ ಬರೆಯುವುದಕ್ಕೆ ಪ್ರಾರಂಭಿಸಿದಾಗಿನಿಂದ ಅಡಿಗರಲ್ಲಿ ಸತ್ಯವನ್ನು ಅನುಸಂಧಾನ ಮಾಡುವ ಮಾರ್ಗ ಬದಲಾಗಿದೆ. ಆದರೆ ಮೊದಲಿನಿಂದಲೂ ಅವರ ಕಾವ್ಯದ ಕಾಳಜಿಗಳು ಬದಲಾಗದೆ ಅಖಂಡಿತವಾಗಿ ಉಳಿದಿವೆ ಎಂಬುದು ಸತ್ಯ. ಅವರ ಮೊದಲ ಕವನಸಂಕಲನದಲ್ಲಿನ ಹೃದಯಸ್ಪರ್ಶಿ ಕವನಗಳಲ್ಲೊಂದಾದ 'ಒಳತೋಟಿ'ಯ ವಸ್ತು ಪರಕೀಯತೆ, 'ಭೂಮಿ ಗೀತೆ'ದಲ್ಲಿ ನಾವು ಕಾಣುವ ವಸ್ತುವೂ ಅದೇ – ಆದರೆ ಅದಕ್ಕಿಂತ ಹೆಚ್ಚು ಪ್ರಬುದ್ಧ ಸ್ಥಿತಿಯಲ್ಲಿ ಪ್ರೌಢವಾಗಿ, 'ಭೂಮಿಗೀತೆ' ಒಂದು ಮಹತ್ಕೃತಿ. ಮನುಷ್ಯನ ಇರವನ್ನು ಅಸ್ತಿತ್ವವಾದದ ದೃಷ್ಟಿಕೋನದಿಂದ ಅನ್ವೇಷಿಸುವ ಈ ವೈಯಕ್ತಿಕ ಕವನ ಅತ್ಯಂತ ತೀವ್ರವಾಗಿದೆ, ಪ್ರಕ್ಷುಬ್ಧಗೊಳಿಸುವಂತದಾಗಿದೆ. ಮನುಷ್ಯ ಸ್ವಕೀಯ ಪ್ರಜ್ಞೆಗೆ ಬೆಳೆಯುವ ತನಕ ಆತ ಭೂಮಿತಾಯಿಯ ಹಸುಗೂಸು; ಆದರೆ ಸ್ವಕೀಯ ಪ್ರಜ್ಞೆ ಬೆಳೆಯುತ್ತ ಬಂದಹಾಗೆ ಸುತ್ತಮುತ್ತ ವಿರುದ್ಧ ದ್ವಂದ್ವಗಳನ್ನೇ ಕಾಣತೊಡಗುತ್ತಾನೆ; ಹೆಳವನ ಹೆಗಲಮೇಲೆ ಕುರುಡ ಕೂತು ಹೊರಟಿರುವ ಮನಸ್ಸನ್ನು ಅತಿ ಮಹತ್ವದ ಕವನಗಳಲ್ಲೊಂದಾದ ಈ ಕವಿತೆಗೆ ಹೀಗೆ ತಾತ್ಪರ್ಯ ಹೇಳುವುದು ನಿಷ್ಪ್ರಯೋಜಕ ಎಂದು ಬಲ್ಲೆ. ಈ ಕವನವನ್ನು ಮೂಲದಲ್ಲೇ ಓದಬೇಕು; ಆಗ, ಏಕೆ ಈ ಕವನ ಅದರ ಯಾವುದೇ ವ್ಯಾಖ್ಯೆ ಹೇಳಬಲ್ಲದಕ್ಕಿಂತ ಹೆಚ್ಚನ್ನು ಹೇಳುವಂತೆ ತೋರುತ್ತಿದೆ ಮತ್ತು ಹೆಚ್ಚು ದೊಡ್ಡದಾಗಿ ಉಳಿಯುತ್ತದೆ ಎಂಬುದು ಕಂಡೀತು. ಕನ್ನಡದಲ್ಲೇ ಇನ್ನಾವುದಕ್ಕಿಂತಲೂ ಹೆಚ್ಚು ವಿಸ್ತಾರವಾದ ಚರ್ಚೆಗೆ ಒಳಗಾದ ಕವನ ಇದು; ಮತ್ತು ವಿಮರ್ಶೆಯ ಹೊಸ ಪದ್ಧತಿಯಲ್ಲಿ ತಯಾರಾಗಿರುವ ವಿಮರ್ಶಕರಿಗೆ ಅತ್ಯಂತ ಪ್ರಿಯವೆನಿಸಿದ್ದು. |
ಇತರ ದನಿಗಳು: |
ಅಡಿಗರ ಯಾವುದೇ ಕವನವೂ ತೀರ ವೈಯಕ್ತಿಕವೇ ಎಂದು ತೋರಬಹುದಾದರೂ ಅವುಗಳ ಅರ್ಥವ್ಯಾಪ್ತಿ ಸಾಮಾನ್ಯವಾಗಿ ನಮ್ಮ ಈವೊತ್ತಿನ ಸಾಮಾಜಿಕ – ರಾಜಕೀಯ ಸ್ಥಿತಿಗೆ ಕೂಡ ಹಬ್ಬಿ ಹೆಸರಿಸಿಕೊಂಡುಬಿಡುತ್ತದೆ. ಆದ್ದರಿಂದ ಅವರು ನಮ್ಮ ಕವಿಗಳಲ್ಲಿ ತೀರ ವೈಯಕ್ತಿಕ ಕವಿಯಾಗಿರುವಂತೆಯೇ ಅತ್ಯಂತ ರಾಜಕೀಯ ಕವಿ ಕೂಡ ಹೌದು. ಈ ಎರಡೂ ಅವರಲ್ಲಿ ಬೇರೆ ಬೇರೆಯಾಗಿಲ್ಲ; ಏಕೆಂದರೆ ಅವರ ಎಲ್ಲ ಆಸ್ಥೆಗಳಿಗೂ ಒಂದು ಕೇಂದ್ರ ಬಿಂದುವಿದೆ, ಸ್ವಂತ ತ್ವರೆಯ ಕಳಕಳಿಯ ಪ್ರಜ್ಞೆಯಿದೆ. ಬದುಕನ್ನು ಕುರಿತ ಅವರ ದೃಷ್ಟಿ ತೀವ್ರ ನೈತಿಕ ದೃಷ್ಟಿ; ಕಾಳಜಿಗಳಿಗೆ ತಮ್ಮನ್ನು ಮುಡಿಪು ಕಟ್ಟಿಕೊಂಡ ದೃಷ್ಟಿ. ಕಾವೈಕ್ಯ ದೃಷ್ಟಿ ಎಂಬಂಥದರಲ್ಲಿ ಅವರಿಗೆ ವಿಶ್ವಾಸವಿಲ್ಲ. ಅಥವಾ ತಮ್ಮ ಕಾಳಜಿಗಳನ್ನು ಕಲಾತ್ಮಕವಾಗಿ ಪ್ರಕಟಿಸಿ ಕೈ ತೊಳೆದುಕೊಳ್ಳುವುದರಿಂದಲೂ ಅವರಿಗೆ ತೃಪ್ತಿಯಿಲ್ಲ. ಅವರು ತಮ್ಮ ನಿಜಜೀವನದಲ್ಲಿ ಕೂಡ ತಮ್ಮ ಕಾವ್ಯಕ್ಕೆ ಮೂಲದ್ರವ್ಯಗಳಾದ ಸೆಣಸುಗಳನ್ನು ಹೋರಾಡುತ್ತಾ ಬಂದಿದ್ದಾರೆ. |
ತಮ್ಮ ಪ್ರೇಮಗೀತಗಳಿಂದ ಜನಪ್ರಿಯರಾದ ಕೆ. ಎಸ್. ನರಸಿಂಹಸ್ವಾಮಿ ಈಗ ನವ್ಯ ಕಾವ್ಯ ಬರೆಯುತ್ತಿದ್ದಾರೆ. ಅಡಿಗರ ಸಮಕಾಲೀನ ಕವಿಗಳಲ್ಲಿ ಸ್ವಂತ ಶೈಲಿ ಪಡೆದಿರುವ ಒಬ್ಬರೇ ಕವಿ ಇವರು. ಅಡಿಗರು ತಮ್ಮ ಸತ್ವವನ್ನು ಗ್ರಾಮ ಹಾಗೂ ಅರ್ಧ ನಾಗರಿಕ ಮೂಲಗಳಿಂದ ಪಡೆಯುವರು; ಕೆಲವು ಸಲ ಕಾಡು ಸೊಕ್ಕಿನಂತೆ ಕಾಣುವ ಪುಷ್ಕಲ ಬೆಂಗಳೂರು ಮೈಸೂರುಗಳಂಥ ನಮ್ಮ ನಗರಗಳಲ್ಲಿನ ಕಲಿತ ಸಾಹಿತ್ಯಭಾಷೆಯಲ್ಲಿ – ಶಕ್ತ ಪಡೆದಿರುವವರು. ನರಸಿಂಹ ಸ್ವಾಮಿಯವರಾದರೋ ನಾಜೂಕಿನ ಭಾಷೆಯಲ್ಲಿ ಬರೆಯುವವರು. ಅವರ ಕವನಗಳು ಓದಲು ತುಂಬಾ ಹಿತ. ಆದರೆ ಅದರ ನವ್ಯ ಕಾವ್ಯ ಸಂವೇದನೆಯೇ ಬದಲಾದ್ದರಿಂದ ಅನಿವಾರ್ಯವಾಗಿ ಆವಿಷ್ಕಾರಗೊಂಡಿದ್ದೇ – ಎಂದು ಕೆಲಸಮಯ ಆಶ್ಚರ್ಯಪಡುವಂತಾಗುತ್ತದೆ. ಈ ನನ್ನ ಹೇಳಿಕೆ ಮೌಲ್ಯಕ್ಕೇ ಸಂಬಂಧಿಸಿದ್ದಾದ್ದರಿಂದ ಇದನ್ನು ಪ್ರಶ್ನಿಸುವುದು ಸಾಧ್ಯವೆಂದು ನನಗೆ ಗೊತ್ತು. ಯಾಕೆಂದರೆ ನವ್ಯತೆಗೂ ಪ್ರಕ್ಷುಬ್ಧವಾದ ಜಟಿಲವಾದ ಪ್ರಜ್ಞೆಗೂ ಅತ್ಯವಶ್ಯ ಸಂಬಂಧವಿದೆ, ಎಂಬ ನನ್ನ ಧೋರಣೆಯಿಂದ ಹುಟ್ಟಿದ ವಿವೇಚನೆಯಿದು. ಇಲ್ಲಿ ವಿ. ಜಿ. ಭಟ್ಟ, ಗಂಗಾಧರ ಚಿತ್ತಾಲ ಇವರನ್ನು ಉಲ್ಲೇಖಿಸಬೇಕು. ಹಾಸ್ಯ ಕವಿತಾ ಪ್ರಪಂಚದಲ್ಲಿ ಭಟ್ಟರ ಕಡುವಿಡಂಬನಾ ಶೈಲಿ ಆರೋಗ್ಯಕರ ಪರಿಣಾಮವನ್ನು ಉಂಟುಮಾಡಿದೆ. ಚಿತ್ತಾಲರು ಪ್ರವೃತ್ತಿಯಲ್ಲಿ ಮಾನವತಾವಾದಿ. ಅವರು ಗೋಕಾಕರ ಶೈಲಿಯಲ್ಲಿ ಕೆಲವು ಅತ್ಯುತ್ತಮ ಕವನಗಳನ್ನು ಬರೆದಿದ್ದಾರೆ. ಅವರ ಕಾವ್ಯದಲ್ಲಿ ಜೀವಂತ ಭಾಷಾಸೂಕ್ಷ್ಮವನ್ನು ಬಳಸಿಕೊಳ್ಳಬೇಕಾದ ಸಮಸ್ಯೆ ಮಾತ್ರ ಅಪರಿಹಾರ್ಯವಾಗಿಯೇ ಉಳಿದಿದೆ. ಇಷ್ಟಾಗಿಯೂ ಆ ಮಿತಿಯ ಒಳಗಿನಲ್ಲಿ, ನಮ್ಮ ಅಸ್ತಿತ್ವದ ಸಮಸ್ಯೆಗಳ ಬಗ್ಗೆ ಸಂವೇದನಶೀಲ ಜೀವಂತಿಕೆಯುಳ್ಳ ಒಂದು ಮನೋವೃತ್ತಿಯನ್ನು, ಜೀವನದ ಬಗ್ಗೆ ದುರಂತವೂ ಗಂಭೀರವೂ ಆದ ದೃಷ್ಟಿಯನ್ನು ಅಭಿವ್ಯಕ್ತಿಗೊಳಿಸಲು ಶಕ್ತರಾಗಿದ್ದಾರೆ. ಈ ಸನ್ನಿವೇಶದಲ್ಲಿ, – ಎಂದರೆ ಭಾಷೆಯನ್ನು ಅಲಂಕಾರವಾಗಿ ಬಳಸುವ ಹಾಗೂ ಕಾವ್ಯವನ್ನು ಕಲ್ಪನಾತ್ಮಕ ಚಿಂತನೆಯ ವಾಹಕವಾಗಿಸುವ ರೀತಿಯ ಬಗ್ಗೆ ತ್ವೇಷ ತುಂಬಿರುವ ಸನ್ನಿವೇಶದಲ್ಲಿ – ಪ್ರಾಯಶಃ ಚಿತ್ತಾಲರಿಗೆ ಎಷ್ಟು ಸಿಗಬೇಕೋ ಅಷ್ಟು ಗಮನ ಸಿಗುವುದು ಸಾಧ್ಯವಾಗಿಲ್ಲ. ರಾಮಚಂದ್ರಶರ್ಮ ಪ್ರತಿಮಾವಾದಿ ಕವಿ, ಅಡಿಗರ ಜೊತೆಯಲ್ಲಿ ತುಂಬಾ ಪ್ರಭಾವಿಯಾಗಿದ್ದವರು: ಈಗಲೂ ನಾಗರಿಕ ಸಂವೇದನೆಯನ್ನು ಅಭಿವ್ಯಕ್ತಿಗೊಳಿಸುವ ಬಗ್ಗೆ ಭಾಷೆಯ ಕೂಡ ಹೆಣಗುತ್ತಿರುವವರು. ಸುಂದರವಾದ ಕೆಲವು ಭಾವಗೀತೆಗಳನ್ನು ಬರೆದಿರುವ ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿ ಈಗ ಕೂಡ ಹೊಸತು ಹಳತುಗಳ ಮಧ್ಯೆ ಹರಿದು ಹಂಚಾಗಿದ್ದಾರೆ; ಮತ್ತು ತಮ್ಮ ಕವಿತೆಗಳಲ್ಲಿ ಇರಬೇಕಾದ ಕರ್ಷಣಗಳನ್ನು ಸುರಳೀತ ಪರಿಹಾರಗಳ ಸಲುವಾಗಿ ಸಡಿಲಿಸಿ ಬಿಡುವ ಚಪಲದಿಂದ ಪಾರಾಗಲು ಶಕ್ತರಾಗಿಲ್ಲ. |
ಅಡಿಗರ ಅನಂತರದ ಕವಿ ಹಾಗೂ ವಿಮರ್ಶಕರ ಹೊಸ ಪೀಳಿಗೆಯವರು, ಸಾಹಿತಿಯು ಅಸ್ತಿತ್ವದ ಸತ್ಯವನ್ನು ತನ್ನ ಕೃತಿಯಲ್ಲಿ ನಿಷ್ಠುರವಾಗಿ ಶೋಧಿಸುವ ವ್ಯಕ್ತಿಯಾಗಬೇಕು; ಸುಲಭವಾದ ಅಮೂರ್ತವಾದ ಪರಿಹಾರಗಳನ್ನು ಒಪ್ಪಕೂಡದು ಎಂಬ ಧೋರಣೆಗೆ ಬದ್ಧರಾಗಿದ್ದಾರೆ. ಹಿಂದಿನ ಅಮೂರ್ತ ಆಧ್ಯಾತ್ಮದ ವಿರುದ್ಧ ಎಷ್ಟು ಜೋರಾದ ಪ್ರತಿಕ್ರಿಯೆಯುಂಟಾಗಿದೆಯೆಂದರೆ, ಕೆಲವು ಹೊಸ ಬರಹಗಾರರು ಲೈಂಗಿಕ ಮನುಷ್ಯನೇ ಏಕೈಕ ಸತ್ಯ ಎನ್ನುವಂತೆ ಬರೆಯತೊಡಗಿದ್ದಾರೆ. ಹೊಸ ಬರಹಗಾರರ ಯೋಗ್ಯತೆಯನ್ನು ನಿರ್ಧರಿಸಲು ಇನ್ನೂ ಕಾಳ ಬೇಕು. ಆದರೂ, ನಿಜವಾದ ಭಾವಗೀತದ ನೆಗಸುಕ್ಕಿ ಬರೆಯುತ್ತಿರುವ ಲಂಕೇಶ್ ಮತ್ತು ಕಂಬಾರ, ಮನುಷ್ಯನ ಕಾಮಿತ್ವವನ್ನು ತಮ್ಮ ವಿಲಂಬಿತ ಲಯವಿನ್ಯಾಸಗಳಲ್ಲಿ ಶೋಧಿಸುತ್ತಿರುವ ಚೆನ್ನಯ್ಯ, ವ್ಯಂಗ್ಯದಲ್ಲಿ ಸ್ವಂತವನ್ನೂ ಅನ್ವೇಷಿಸಕೊಳ್ಳುತ್ತಿರುವ ಚಂದ್ರಶೇಖರ ಪಾಟೀಲ, ಗಮನಾರ್ಹ ಲಯವಿನ್ಯಾಸಗಳನ್ನು ಪ್ರಯೋಗಿಸಿ ನೋಡುತ್ತಿರುವ ನಾಡಿಗ ಮತ್ತು ನಿಸಾರ್ ಅಹಮದ್ – ಇವರೆಲ್ಲ ನಮ್ಮ ಸಾಹಿತ್ಯದ ವಾತಾವರಣವನ್ನು ಜೀವಂತವಾಗಿಟ್ಟಿದ್ದಾರೆ. ಇವರು ಮತ್ತು ಇಲ್ಲಿ ನಾನು ಉಲ್ಲೇಖಿಸಲು ಸಾಧ್ಯವಾಗದಿರುವ ಈ ಸಾಲಿನ ಇತರ ಅನೇಕ ಕವಿಗಳು ರೂಢಿ ಜಡದ ವಿರುದ್ಧ ಅತಿಭಾವುಕತೆಯ ರಮ್ಯೈಕ ದೃಷ್ಟಿಯ ವಿರುದ್ಧ ಆದರ್ಶವಾದೀ ಆತ್ಮಕಲ್ಪನೆಯ ವಿರುದ್ಧ ಬಂಡೆದ್ದವರು. ನಾವು ಈಗ ನಮ್ಮ ಕಾವ್ಯದ ಅಡಿಗೋತ್ತರ ನೆಲೆಯಲ್ಲಿದ್ದೇವೆ; ಕುವೆಂಪು ಬೇಂದ್ರೆಯಂಥ ಕವಿಗಳೂ ಕೂಡ ನವ್ಯ ಕಾವ್ಯದ ತಂತ್ರವನ್ನು ಬಳಸಲು ತೊಡಗಿದ್ದಾರೆ. |
ಈ ಲೇಖನವನ್ನು ಹೇಗೆ ಮುಗಿಸಬೇಕೋ ತಿಳಿಯದು. ನಾವು ತ್ವರಿತಗತಿಯಲ್ಲಿ ಬದಲಾಗುತ್ತಿರುವ ಕಾರಣ ಕನ್ನಡ ಕಾವ್ಯದ ಭವಿಷ್ಯ ಕುರಿತು ಊಹಾಪೋಹ ನಡೆಸುವುದು ಕಷ್ಟ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಥವಾ ಬೇಂದ್ರೆ ಮುಂತಾದ ಕವಿಗಳಿಗೂ ಮತ್ತು ನಮ್ಮ ಪೀಳಿಗೆಯ ಒಬ್ಬ ಕವಿಗೂ ಕೇವಲ ಒಂದೆರಡು ದಶಕಗಳ ಅಂತರವಿರಬಹುದು. ಆದರೆ ಚಿಂತನೆ ಹಾಗೂ ಸಂವೇದನೆಗಳ ದೃಷ್ಟಿಯಿಂದ ಹೇಳುವುದಾದರೆ ಪಶ್ಚಿಮದಲ್ಲಿನ ಒಂದೆರಡು ಶತಮಾನಗಳ ಅಂತರವೇ ಇಲ್ಲಿ ನಡುವೆ ಕಾಣಿಸುತ್ತದೆ. ಅಡಿಗರು ಈಗಲೂ ಒಂದು ಜೀವಂತ ಪ್ರಭಾವವಾಗಿ ಉಳಿದಿದ್ದಾರೆ – ಅವರ ಕಾವ್ಯದಲ್ಲಿನ ಉತ್ಕಟತೆ ಇಂದಿಗೆ ಕೂಡ ಅರ್ಥವತ್ತಾಗಿಯೇ ಇರುವುದರಿಂದ. ಆದರೂ ಬದಲಾಗುತ್ತಿರುವ ಆಧುನಿಕ ಭಾರತದ ಬಗ್ಗೆ ಅವರ ಪ್ರತಿಕ್ರಿಯೆಯ ಭಂಗಿ – ಉದಾರವಾದ ಮತ್ತು ಸಂಪ್ರದಾಯವಾದಗಳು ಕೂಡಿ ಮೂಡಿದ ಭಂಗಿ – ನಿಶ್ಚಲವಾಗಿಬಿಟ್ಟಿದೆಯೇನೊ ಎಂದು ಒಮ್ಮೊಮ್ಮೆ ಅನುಮಾನವಾಗುತ್ತದೆ. ಉದಾಹರಣೆಗೆ ಅಡಿಗರ ಶಿಕ್ಷಣ ಮಾಧ್ಯಮದ ಬಗೆಗಿನ ಧೋರಣೆ, ಬಂಡವಾಳಶಾಹೀ ಆರ್ಥಿಕ ವ್ಯವಸ್ಥೆಯನ್ನು ಪುರಸ್ಕರಿಸುವ ಅವರ ಕನ್ಸರ್ವೇಟಿವ್ ವಿಚಾರ ಇತ್ಯಾದಿ. ಆದರೆ ತಾವು ಗದ್ಯದಲ್ಲಿ ಪ್ರಕಟಿಸುವ ಚಿಂತನೆಗಳಿಗಿಂತಲೂ ಕಾವ್ಯದಲ್ಲಿ ಹೆಚ್ಚು ಮಹತ್ತಾದ ಚೇತರಿಕೆ ತೋರುಸುವಂಥ ಅಡಿಗರ ಭವಿಷ್ಯದ ಬಗ್ಗೆ ಹೀಗೇ ಎಂದು ಹೇಳುವುದು ಅನ್ಯಾಯವಾದ ಈತು. ಹೊಸ ಕವಿಗಳಾದರೂ ಅಡಿಗರಿಗಿಂತ ಬೇರೆಯಾಗಿ ಬರೆಯಲೆಂದು ಹೊಸ ಹಾದಿ ಹುಡುಕುತ್ತಿದ್ದರೂ ತಾವು ಹೇಳಿದ್ದನ್ನೇ ಮತ್ತೆ ಹೇಳುತ್ತಿರುವಂತೆ ಕಾಣುತ್ತದೆ. ಪ್ರಾಯಶಃ ಈಗ ಇನ್ನೊಂದು ಬದಲಾವಣೆಗೆ ಕಾಲ ಮಾಗಿರಬಹುದು ಎನ್ನಿಸುತ್ತದೆ. |
[ಪೂನಾದ Centre for Indian Writersನ ಆಶ್ರಯದಲ್ಲಿ ೧೯೬೭ನೇ ಡಿಸೆಂಬರ್ ತಿಂಗಳಿನಲ್ಲಿ ಭಾರತೀಯ ಕವಿ ಹಾಗೂ ಲೇಖಕರ ಸೆಮಿನಾರಿನಲ್ಲಿ ಓದಿದ ಇಂಗ್ಲಿಷ್ ಪ್ರಬಂಧದ ಅನುವಾದ ಇದು. ಸೆಮಿನಾರಿನ ಚರ್ಚೆಯ ಶೀರ್ಷಿಕೆ: The Changing Idiom in Modern Indian Poetry. 'ಪ್ರಜ್ಞೆ ಮತ್ತು ಪರಿಸರ' (೧೯೭೧)] |
ರಿಯಲ್ ಡ್ರಾಮಾ ಮಾಡೋರ್ಗಿಂತ ಸಕತ್ತಾಗಿ ರಾಹುಲ್ ಗಾಂಧಿ ನಾಟಕ ಮಾಡ್ತಾರೆ : ಅನಂತ್ ಹೆಗಡೆ |
March 12, 2018 Devu Pattar 0 Comments Ananth Kumar Hegde, belgaum, drama, rahul gandhi, real drama, said |
ಬೆಳಗಾವಿ : ರಾಹುಲ್ ಗಾಂಧಿ ಒಳ್ಳೆಯ ನಾಟಕಕಾರ. ರಿಯಲ್ ಡ್ರಾಮಾ ಮಾಡುವವರಿಗಿಂತ ಚೆನ್ನಾಗಿ ರಾಹುಲ್ ಗಾಂಧಿ ಡ್ರಾಮಾ ಮಾಡುತ್ತಾರೆ. ನಿಮಗೆ ಮನರಂಜನೆ ಬೇಕಾದರೆ ಹೇಳಿ ರಾಹುಲ್ ಗಾಂಧಿಗೆ ನಾನೇ ಪತ್ರ ಬರೆದು ಖಾನಾಪುರಕ್ಕೆ ಬರಲು ಹೇಳುತ್ತೇನೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವ್ಯಂಗ್ಯ ಮಾಡಿದ್ದಾರೆ. |
ರಾಹುಲ್ ಕಾಲಿಟ್ಟಲೆಲ್ಲ ಬಿಜೆಪಿ ನಾಶವಾಗುತ್ತಿದೆ. ಮನೆ ಕೆಡವಲು ಜೆಸಿಬಿ ಬೇಕಾಗಿಲ್ಲ, ರಾಹುಲ್ ಗಾಂಧಿನ ಕಳಿಸಿದರೆ ಅದಾಗಿಯೇ ಬೀಳುತ್ತದೆ. ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳು ಕೆಲಸ ಮಾಡುಲ ಆಗುತ್ತಿಲ್ಲ ಎಂದು ಪತ್ರ ಬರೆಯುತ್ತಿದ್ದಾರೆ. ಶಾಸಕರು ಮತ್ತು ಮಂತ್ರಿಗಳು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದು, ದಯನೀಯ ಸ್ಥಿತಿ ನಮ್ಮ ರಾಜ್ಯದಲ್ಲಿದೆ. |
ಹುಡುಕಿ ಹುಡುಕಿ ಹಿಂದೂ ಕಾರ್ಯಕರ್ತರನ್ನ ಕೊಲೆ ಮಾಡುತ್ತಿದ್ದಾರೆ ಇದಕ್ಕೆ ಸಿದ್ದರಾಮಯ್ಯ ಅವರನ್ನ ಮನೆಗೆ ಕಳುಹಿಸುವ ಮೂಲಕ ಉತ್ತರಕೊಡಬೇಕಿದೆ. ಕೆಲ ಕಾಂಗ್ರೆಸ್ ಸ್ನೇಹಿತರಿಗೆ ಹೇಳಿದ್ದೀವಿ, ನಮ್ಮ ಜೊತೆಗೆ ಬನ್ನಿ ಅಂತ. ಒಂದು ವೇಳೆ ನೀವು ಬರಲ್ಲಾ ಅಂದ್ರೆ ನಿಮ್ಮನ್ನ ಎತ್ತಾಕ್ಕೊಂಡಾದ್ರೂ ನಮ್ಮ ಜೊತೆಗೆ ಕರೆದುಕೊಂಡು ಹೋಗ್ತಿವಿ ಎಂದಿದ್ದಾರೆ. |
ಸಂಪಾದಕೀಯ: ನಿತ್ಯಾನಂದನಿಗೆ ಗಂಟುಬಿದ್ದ ಪತ್ರಕರ್ತರು ಆ ಹುಡುಗಿಯನ್ನೇಕೆ ಮರೆತರು? |
ನಿತ್ಯಾನಂದನಿಗೆ ಗಂಟುಬಿದ್ದ ಪತ್ರಕರ್ತರು ಆ ಹುಡುಗಿಯನ್ನೇಕೆ ಮರೆತರು? |
ಇದನ್ನು ನಿರೀಕ್ಷಿಸಿದ್ದೆವು. ನಿನ್ನೆಯಿಂದ ಒಂದು ರಾಶಿ ಇ-ಮೇಲ್‌ಗಳು. ಎಲ್ಲವೂ ಒಂದೇ ಮಾದರಿಯವು. ನಿನ್ನೆ ಪ್ರಕಟಿಸಿದ ಪೋಸ್ಟ್ ಅಷ್ಟೊಂದು ಪ್ರಭಾವಶಾಲಿಯಾಗಿತ್ತಾ ಎಂಬ ಅಚ್ಚರಿ ನಮ್ಮದು. ಈ ದ್ವೇಷದ ಇ-ಮೇಲ್‌ಗಳನ್ನು ಪ್ರಕಟಿಸುವುದೂ ಸಾಧ್ಯವಿಲ್ಲ, ಹೀಗಾಗಿ ಪ್ರಕಟಿಸುವ ಗೋಜಿಗೆ ಹೋಗಿಲ್ಲ. ಎಲ್ಲ ಅಭಿಮಾನಿ ಬಂಧುಗಳಿಗೂ ಕೃತಜ್ಞತೆಗಳು. |
ಆದರೆ ಪ್ರಶ್ನೆಗಳು ಹಾಗೇ ಉಳಿದಿವೆ. |
ನಿತ್ಯಾನಂದ ಸ್ವಾಮೀಜಿಯ ಲೈಂಗಿಕ ಹಗರಣದ ವಿಷಯಕ್ಕೆ ಬನ್ನಿ. ನಿತ್ಯಾನಂದ ಮತ್ತು ರಂಜಿತಾರ ನಡುವಿನ ಸಂಬಂಧವನ್ನು ಬಯಲು ಮಾಡುವ ಟೇಪ್ ನೋಡಿದ ಎಲ್ಲರಿಗೂ ಅರ್ಥವಾಗುವುದೇನೆಂದರೆ ಅದು ಇಬ್ಬರಿಗೂ ಒಪ್ಪಿತ ಸಂಬಂಧ. ನಿತ್ಯಾನಂದನಾಗಲಿ, ರಂಜಿತಾ ಆಗಲಿ ಒಬ್ಬರನ್ನೊಬ್ಬರು ಬಲವಂತದಿಂದ ಕಾಮಕ್ರಿಯೆಗೆ ತೊಡಗಿಸಿದಂತೆ ಕಾಣುವುದಿಲ್ಲ. ಮೇಲಾಗಿ ರಂಜಿತಾ ಈ ಕುರಿತು ಯಾವ ಪೊಲೀಸ್ ಠಾಣೆಯಲ್ಲೂ ದೂರು ಸಲ್ಲಿಸಲಿಲ್ಲ. ನಿಜ, ಇದರಲ್ಲಿ ನೈತಿಕತೆಯ ಪ್ರಶ್ನೆಗಳಿದ್ದವು. ಹೀಗಾಗಿ ನಿತ್ಯಾನಂದ ಜನಸಾಮಾನ್ಯರ ದೃಷ್ಟಿಯಲ್ಲಿ ಪಾತಾಳಕ್ಕೆ ಕುಸಿದುಬಿದ್ದಿದ್ದ. |
ಆದರೆ ಟೇಪ್ ಬಯಲಿಗೆ ಬಂದ ನಂತರ ಅದನ್ನು ನಮ್ಮ ಟಿವಿ ವಾಹಿನಿಗಳು ಅದೆಷ್ಟು ಬಾರಿ ತೋರಿಸಿದವು? ಯಾವ ಚಾನೆಲ್ ಹಾಕಿದರೂ ಇದೇ ವಿಡಿಯೋ. ನಮ್ಮ ಟೀವಿಗಳಲ್ಲಿ ಗಂಟೆಗಟ್ಟಲೆ ಆ ಕುರಿತೇ ಸರಣಿಯೋಪಾದಿಯಲ್ಲಿ ಕಾರ್ಯಕ್ರಮಗಳು ಪ್ರಸಾರವಾದವು. ಪತ್ರಿಕೆಗಳಲ್ಲಿ ಪುಟಗಟ್ಟಲೆ ಇದೇ ಪುರಾಣ. ಮಣಗಟ್ಟಲೆ ಬರೆದೂ ಬರೆದೂ ನಮ್ಮ ಪತ್ರಕರ್ತರು ಸುಸ್ತಾಗಿ ಹೋದರು. ಹೇಳಿದ್ದನ್ನೇ ಹೇಳಿ ಟೀವಿ ವರದಿಗಾರರು, ನಿರೂಪಕರು ತಲೆಚಿಟ್ಟು ಹಿಡಿಸಿದರು. |
ನಿತ್ಯಾನಂದ ಶರಣಾಗಿದ್ದು ಸುದ್ದಿ, ಕೋರ್ಟಿಗೆ ಕರೆದೊಯ್ಯಲಾಗಿದ್ದು ಸುದ್ದಿ, ಸಿಓಡಿಯವರು ತನಿಖೆ ಮಾಡಿದ್ದು ಸುದ್ದಿ, ಜೈಲು ಸೇರಿದ್ದೂ ಸುದ್ದಿ, ನಿತ್ಯಾನಂದ ಬಿಡುಗಡೆಯಾಗಿದ್ದೂ ಸುದ್ದಿ, ಬಿಡದಿ ಆಶ್ರಮದಲ್ಲಿ ಪೂಜೆ ಮಾಡಿದ್ದೂ ಸುದ್ದಿ... ನಮ್ಮ ಮಾಧ್ಯಮಗಳೆಲ್ಲವೂ ನಿತ್ಯಾನಂದಮಯ. |
ಆದರೆ ಇಲ್ಲಿ ಸಾಗರವೆಂಬ ಪುಟ್ಟ ಊರಿನಲ್ಲಿ ಪಾನಿಪುರಿ ಮಾರುವ ಬಡ ಬ್ರಾಹ್ಮಣ ದಂಪತಿಗಳ ಪುಟ್ಟ ಮಗಳು ಮಠವೊಂದರ ಗುರುಕುಲದಲ್ಲಿ ಗುರುವಿನ ಕಾಮತೃಷೆಗೆ ಬಲಿಯಾಗುವುದು ಸುದ್ದಿಯಾಗೋದೇ ಇಲ್ಲ. ಆಕೆ ಕೊಟ್ಟ ಕಂಪ್ಲೇಂಟು ಏನು ಎಂಬುದನ್ನು ಯಾವ ಪತ್ರಿಕೆಗಳು ಬರೆಯುವುದಿಲ್ಲ. ಪೊಲೀಸಿನವರು ತನಿಖೆ ನಡೆಸಿದರಾ ಇಲ್ಲವಾ? ಆರೋಪಿಯನ್ನು ಬಂಧಿಸಲಾಯಿತಾ? ಜೈಲಿಗೆ ಕಳಿಸಲಾಯಿತಾ? ಆರೋಪಿ ಈಗೇನು ಮಾಡುತ್ತಿದ್ದಾನೆ? ಹುಡುಗಿಯ ಪೋಷಕರು ಮಾನವ ಹಕ್ಕು ಆಯೋಗಕ್ಕೆ, ಮಹಿಳಾ ಆಯೋಗಗಳಿಗೆ ಕೊಟ್ಟ ದೂರುಗಳ ಫಾಲೋ ಅಪ್ ಏನು? ಮಠವನ್ನು ಎದುರು ಹಾಕಿಕೊಂಡ ಬಡ ದಂಪತಿಗಳ ಕಥೆ ಏನಾಯಿತು? ಅವರಿಗೆ ರಕ್ಷಣೆ ಕೊಡುವವರು ಯಾರು? |
ಯಾಕೆ ಈ ಯಾವುದನ್ನೂ ನಮ್ಮ ಮಾಧ್ಯಮಗಳು ಟ್ರಾಕ್ ಮಾಡುವುದಿಲ್ಲ? ಯಾಕೆ ಇದೆಲ್ಲ ಸುದ್ದಿಗಳು ಶಿವಮೊಗ್ಗದ ಕೆಲವು ಸ್ಥಳೀಯ ಪತ್ರಿಕೆಗಳು ಮತ್ತು ಬೆಂಗಳೂರಿನಿಂದ ಪ್ರಕಟಗೊಳ್ಳುವ ಕೆಲವು ವಾರಪತ್ರಿಕೆಗಳಲ್ಲಿ ಮಾತ್ರ ಅಷ್ಟೋ ಇಷ್ಟೋ ಪ್ರಕಟಗೊಂಡವು? ಉಳಿದ ಪತ್ರಿಕೆಗಳು, ಚಾನೆಲ್‌ಗಳ ಪಾಲಿಗೆ ಇದು ಯಾಕೆ ಮಹತ್ವದ ಸುದ್ದಿಯಾಗಲಿಲ್ಲ? |
ಎಲ್ಲೋ ನಡೆದ ಅರುಷಿ, ಜಸ್ಸಿಕಾ ಲಾಲ್ ಪ್ರಕರಣಗಳ ಕುರಿತು ನಮ್ಮ ಕನ್ನಡ ಮಾಧ್ಯಮಗಳು ಖರ್ಚು ಮಾಡಿದ ನ್ಯೂಸ್ ಪ್ರಿಂಟ್‌ನ ಪೈಕಿ ಕನಿಷ್ಟ ಐದು ಪರ್ಸೆಂಟಾದರೂ ನಮ್ಮ ರಾಜ್ಯದಲ್ಲೇ ಇರುವ ಸಾಗರದ ಅಮಾಯಕ ಹುಡುಗಿಗೂ ಖರ್ಚು ಮಾಡಬಹುದಿತ್ತಲ್ಲವೆ? |
ಯಾವ ವಿಧಾನದಲ್ಲಿ ಯೋಚಿಸಿದರೂ ನಿತ್ಯಾನಂದನ ಪ್ರಕರಣಕ್ಕಿಂತ ಸಾಗರದ ಹುಡುಗಿ ಮೇಲೆ ನಡೆದ ಅತ್ಯಾಚಾರ ಯತ್ನದ ಪ್ರಕರಣವೇ ಹೆಚ್ಚು ಗಂಭೀರವಾದ, ಹೆಚ್ಚು ಚರ್ಚೆಗೆ ಗುರಿಯಾಗಬೇಕಾದ ವಿಷಯ. ಹೀಗಿದ್ದಾಗ್ಯೂ ನಮ್ಮ ಮಾಧ್ಯಮಗಳು ಸುಮ್ಮನಿದ್ದುದೇಕೆ? ಸುಮ್ಮನಿರುವುದೇಕೆ? |
ಪತ್ರಕರ್ತರು, ಮಾಧ್ಯಮ ಸಂಸ್ಥೆಗಳ ಮಾಲೀಕರು ಈಚೀಚಿನ ದಿನಗಳಲ್ಲಿ ಸುದ್ದಿಯನ್ನು ಮಾರುವುದನ್ನು ಕಲಿತಿದ್ದಾರೆ. ಅಂದರೆ ಬೇಗ ಸೇಲ್ ಆಗುವ ಸುದ್ದಿಗಳು ಅವರಿಗೆ ಬೇಕು. ನಿತ್ಯಾನಂದನ ಸುದ್ದಿ ಬೇಗ ಬೇಗ ಸೇಲ್ ಆಗುವ ಸುದ್ದಿ. ಹೀಗಾಗಿ ಅದಕ್ಕವರು ಗಂಟುಬಿದ್ದು ಕುಳಿತಿದ್ದಾರೆ. |
ಸುದ್ದಿಯನ್ನು ಸೇಲ್ ಮಾಡುವುದನ್ನು ಹೊರತುಪಡಿಸಿ ಮತ್ತೊಂದು ಮಾರ್ಗವೂ ಇದೆ. ತಾವೇ ಸೇಲ್ ಆಗಿ ಬಿಡೋದು. ಸಾಗರದ ಹುಡುಗಿಯ ವಿಷಯದಲ್ಲೇ ಇದೇ ಆಗಿ ಹೋಯ್ತಾ? |
ಪಾನಿಪುರಿ ಮಾರುವಾತನ ಮಗುವಿಗೆ ನ್ಯಾಯ ಪಡೆಯುವ ಹಕ್ಕಿಲ್ಲವಾ? |
Got a little confused. in the post yesterday, you said the girl was sexually harassed by someone called Jagadish. Today's post says it was the guru himself who did it. And the picture is also that of the so called guru and not his relative accused in the case. |
I am not subtly trying to question you for writing about the mutt or the so called swamiji. I hate their tribe but for rare exceptions. But if this discrepancy in the posts is not inadvertent I should conclude that you are biased. |
sampadakeeya January 8, 2011 at 6:28 PM |
ಗೊಂದಲ ಮಾಡಿಕೊಳ್ಳಬೇಡಿ. ಮಠವೊಂದರ ಗುರುಕುಲದ ಗುರು ಎಂದು ಬರೆದಿದ್ದೇವೆ. ಮಠಾಧೀಶರೆಂದಲ್ಲ. |
ಉದಯ January 9, 2011 at 12:56 AM |
??????ಯಾಕೆ ಈ ಯಾವುದನ್ನೂ ನಮ್ಮ ಮಾಧ್ಯಮಗಳು ಟ್ರಾಕ್ ಮಾಡುವುದಿಲ್ಲ? ಯಾಕೆ ಇದೆಲ್ಲ ಸುದ್ದಿಗಳು ಶಿವಮೊಗ್ಗದ ಕೆಲವು ಸ್ಥಳೀಯ ಪತ್ರಿಕೆಗಳು ಮತ್ತು ಬೆಂಗಳೂರಿನಿಂದ ಪ್ರಕಟಗೊಳ್ಳುವ ಕೆಲವು ವಾರಪತ್ರಿಕೆಗಳಲ್ಲಿ ಮಾತ್ರ ಅಷ್ಟೋ ಇಷ್ಟೋ ಪ್ರಕಟಗೊಂಡವು? ಉಳಿದ ಪತ್ರಿಕೆಗಳು, ಚಾನೆಲ್‌ಗಳ ಪಾಲಿಗೆ ಇದು ಯಾಕೆ ಮಹತ್ವದ ಸುದ್ದಿಯಾಗಲಿಲ್ಲ?????? |
ಏಕೆಂದರೆ ಇದರಲ್ಲಿ ಸತ್ವವಿಲ್ಲ ಎಂಬುದು ಜನರಿಗೆ ಗೊತ್ತಿದೆ. ಈ ಬಗ್ಗೆ ಒಮ್ಮೆ ಹೋಗಿ ಸಾಗರದ ಜನರಲ್ಲಿ ವಿಚಾರಿಸಿದರೆ ಸತ್ಯ ತಿಳಿಯಬಹುದು. ಕನ್ನಡ ಪತ್ರಿಕೆಗಳು ಈ ತರಹ ಅನಗತ್ಯ ಸುದ್ದಿಗಳನ್ನು ವೈಭವೀಕರಿಸುವುದಿಲ್ಲ ಎಂಬುದೇ ಸಮಾಧಾನ. |
ಉದಯ ಅವರಿಗೆ ಪ್ರಕರಣದಲ್ಲಿ ಸತ್ಯವಿಲ್ಲ ಎಂದು ಯಾರು ಹೇಳಿದರೋ? ಸ್ವತಃ ಜಡ್ಜ್‌ಮೆಂಟ್ ಕೊಡಲು ಅವರು ಯಾರು? ಸಾಗರದಲ್ಲಿ ವಿಚಾರಿಸಿದರೆ ಗೊತ್ತಾಗುತ್ತದೆ ಎಂದಿದ್ದಾರೆ. ಸಾಗರದವರೇ ಕಂಪ್ಲೇಂಟು ಕೊಟ್ಟಿರುವುದಲ್ಲವೆ? ಸಮರ್ಥನೆಗೂ ಒಂದು ರೀತಿನೀತಿ ಬೇಡವೇ? |
udaya January 10, 2011 at 11:02 AM |
ಸುಗುಣ, |
ಸತ್ಯ ಅಲ್ಲ ಸತ್ವ. ದೂರು ಕೊಟ್ಟಿರುವುದು 'ಸಾಗರದ ಜನ' ಅಲ್ಲ. ಅದು ಸಾರ್ವಜನಿಕ ಹಿತಾಸಕ್ತಿಯ ದೂರಲ್ಲ. ಅದು ವೈಯಕ್ತಿಕ ದೂರು. ಧನ್ಯವಾದಗಳು. |
idu bekende maadikonda confusion. bere enu sigade idda kaaranakke heege barediddeeri. sariyagi kannu bittu odidare ella artha agutte. |
Nimmanthavarigoo, a swaaamigaligoo, avara baalabadukarigoo enenoo vatyaasavilla. Neevellaaa bere bere reetiya extremist gale. Olle paalegaree shailiyalli barediddeeri...nimage shubhavaagali |
ನಾಯಿಗಳಿಗೂ ಆರಂಭವಾಗಿದೆ ತರಬೇತಿ ಕೇಂದ್ರ ! | KANNADIGA WORLD |
Home ಕನ್ನಡ ವಾರ್ತೆಗಳು ರಾಷ್ಟ್ರೀಯ ನಾಯಿಗಳಿಗೂ ಆರಂಭವಾಗಿದೆ ತರಬೇತಿ ಕೇಂದ್ರ ! |
ಸುಂದ್ರಾನ್ (ದೆರಾಬಸ್ಸಿ): ತುತ್ತು ಅನ್ನ ಹಾಗೂ ಮಾಲಿಕನ ಪ್ರೀತಿಗಾಗಿ ನಿಷ್ಠೆಯಿಂದ ಕೆಲಸಮಾಡುವ ಸಾಕು ನಾಯಿಗಳು ವೈರಿಗಳಿಗೆ ದುಸ್ವಪ್ನವೂ ಆಗಬಲ್ಲವು. ಮಾಲಿಕನನ್ನು ಕೊಲ್ಲುವುದಿರಲಿ ಆತನಿಗೆ ಕೆಡಕು ಮಾಡುವ ಏನೇ ಅಪಾಯಗಳಿದ್ದರೂ ಅವನ್ನು ಪತ್ತೆ ಮಾಡಿ ಮುನ್ಸೂಚನೆ ಕೊಡುವ ರೀತಿಯಲ್ಲಿ ನಾಯಿಗಳನ್ನು ಪಳಗಿಸಿದರೆ ಹೇಗಿರುತ್ತೆ? |
ಪಂಜಾಬ್‌ನ ದೆರಾಬಸ್ಸಿಯಲ್ಲಿ ಇಂತಹ ಒಂದು ತರಬೇತಿ ಕೇಂದ್ರ ಪ್ರಾರಂಭವಾಗಿದೆ. ಪಂಜಾಬ್ ಸರಕಾರವು ಖಾಸಗಿ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಈ ಸಂಸ್ಥೆಯ ಹೆಸರೇ ಇಂಟರ್‌ನ್ಯಾಶನಲ್ ಟ್ಯಾಕ್ಟಿಕಲ್ ಆ್ಯಂಡ್ ಕೆನೈನ್ ಟ್ರೇನಿಂಗ್ ಸೆಂಟರ್ (ಐಟಿಎಸಿ) . |
ಭಾರತೀಯ ಬಿಲೇನಿಯರ್‌ವೊಬ್ಬರ ನಾಯಿಯೊಂದು ಇತ್ತೀಚೆಗೆ ತನ್ನ ತರಬೇತಿ ಮುಗಿಸಿ ಹೊರಬಂದಿದೆ. ಇದರ ಹೆಸರು ಅಂಗಾರ್. ಐಟಿಎಸಿಯ ಮೊದಲ ಸ್ಟೂಡೆಂಟ್ ಆದ ಅಂಗಾರ್ ಈಗ ಜೀವಂತ ಬಾಂಬ್‌ಗಳನ್ನು ಪತ್ತೆಮಾಡಬಲ್ಲದು. ಡ್ರಗ್ ಅಥವಾ ರಾಸಾಯಿನಿಕ ವಸ್ತುಗಳನ್ನು ಗುರುತುಹಿಡಿಯಬಲ್ಲದು. ಅಷ್ಟೇ ಅಲ್ಲ ಬಣ್ಣಗಳನ್ನೂ ಗುರುತಿಸಿ ಸನ್ನೆಗಳ ಮೂಲಕ ಸಂವಹಿಸಬಲ್ಲದು. ಇದರ ಚಾಕಚಕ್ಯತೆಯನ್ನು ಹತ್ತಿರದಿಂದ ಗಮನಿಸಿರುವ ತರಬೇತಿದಾರರು ಜೀವನ ಸಾರ್ಥಕವಾಯಿತು ಎಂದುಕೊಳ್ಳುತ್ತಿದ್ದಾರೆ. |
ಚಂಡೀಗಢ ಮೂಲದ ಉದ್ಯಮಿ ನ್ಯೂಟನ್ ಸಿಧು ಎಂಬ ಉದ್ಯಮಿ ಈ ಹೊಸ ಐಡಿಯಾದೊಂದಿಗೆ ಈ ತರಬೇತಿ ಕೇಂದ್ರವನ್ನು ಆರಂಭಿಸಿದ್ದಾರೆ.ಆದೃಷ್ಟಕ್ಕೆ ಪಂಜಾಬ್ ಸರಕಾರ ಸಂಸ್ಥೆಯ ಬೆನ್ನಿಗೆ ನಿಂತಿದೆ. |
ಅಂಗಾರ್‌ನಂತೆಯೇ ಈ ಕೇಂದ್ರಕ್ಕೆ ನೂರಾರು ಉದ್ಯಮಿಗಳ ನಾಯಿಗಳು ತರಬೇತಿಗಾಗಿ ಬಂದಿವೆ. ಸದ್ಯ ಈ ನಾಯಿಗಳಿಗೆ ಮಿಲಿಟರಿ ಟ್ರೇನಿಂಗ್ ಕೊಡಲಾಗುತ್ತಿದ್ದು, ಮುಂದಿನವಾರ ಅವುಗಳ ತರಬೇತಿ ಅವಧಿ ಮುಗಿಯಲಿದೆ. |
"ಅಂಗಾರ್‌ನ ಸ್ನೇಹಿತರು ಹಾಗೂ ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿದ ಶೇರು, ಏಂಜೆಲ್, ಬಾಬ್, ಬಾರ್ದಿ ಮತ್ತು ಕ್ಯಾರಿ ಮುಂದಿನವಾರ ತರಬೇತಿ ಮುಗಿಸಲಿವೆ. ಅವುಗಳು ವಾಸನೆಗಳನ್ನು ಗುರುತು ಹಚ್ಚುವ ತರಬೇತಿಯಲ್ಲಿ ನಿರತವಾಗಿವೆ. ಕೊಕೇನ್, ಹೆರಾಯಿನ್‌ನಂತಹ ಮಾದಕ ವಸ್ತುಗಳನ್ನು ಅವು ಗುರುತುಹಿಡಿಯಬಲ್ಲವು. ಮಿಲಿಟರಿ ಟ್ರೇನಿಂಗ್‌ನಲ್ಲಿ ನಾಯಿಗಳಿಗೆ ಜೀವಂತ ಬಾಂಬ್ ಪತ್ತೆ ಮಾಡುವ ನಿಯೋಜಿತ ಕಾರ‌್ಯ ವಹಿಸಲಾಗುತ್ತದೆ. ಅದೇ ರೀತಿ ಇಲ್ಲಿಯೂ ಸಹ ತರಬೇತಿ ನೀಡಲಾಗುತ್ತಿದೆ. ತರಬೇತಿ ಮುಗಿಸಿರುವ ಅಂಗಾರ್ ಆರ್‌ಡಿಎಕ್ಸ್ ಸೇರಿದಂತೆ ಆರು ಬಗೆಯ ಸ್ಫೋಟಕಗಳ ವಾಸನೆಯನ್ನು ಗುರುತುಹಿಡಿಯುತ್ತಾನೆ" ಎಂದು ಐಟಿಎಸಿ ಸಂಸ್ಥಾಪಕ ಸಿಧು ತಿಳಿಸಿದ್ದಾರೆ. |
ಸುಮಾರು ಹತ್ತು ಕೋಟಿ ರೂ ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣ ಮಾಡಲಾಗಿದ್ದು ಪ್ರತೀ ನಾಯಿಗೂ ಐದು ವಾರಗಳ ಕಾಲ ತರಬೇತಿ ನೀಡಲಾಗುತ್ತದೆ. ಅವರನ್ನು ಸಾಕುವವರಿಗೂ ಕೂಡ 6-10 ವಾರಗಳ ಕಾಲ ತರಬೇತಿ ಕೊಡಲಾಗುವುದು. |
ಸಾಮಾನ್ಯದವರಲ್ಲ… ಈ ಕೇಂದ್ರದಲ್ಲಿ ನಾಯಿಗಳಿಗೆ ಟ್ರೇನಿಂಗ್ ಕೊಡುವ ತರಬೇತಿದಾರರು ಸಾಮಾನ್ಯದವರಲ್ಲ. ಕೆಲವರು ಹಾಲಿವುಡ್‌ನಲ್ಲಿ ಹೊಸ ಭಾಷ್ಯ ಬರೆದ ಟೇಕನ್ ಹಾಗೂ ದಿ ಬೋರ್ನ್ ಐಡೆಂಟಿಫೈ ಚಿತ್ರದ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ ಕೆಲಸ ಮಾಡಿದವರು. ಇನ್ನೂ ಅನೇಕರು ಅಮೆರಿಕ ಪೊಲೀಸರೊಂದಿಗೆ ಕೆಲಸ ದುಡಿದವರು. |
ಇವರಿಂದ ತರಬೇತಿ ಪಡೆದ ನಾಯಿಗಳ ಪರಿಣತಿಯನ್ನು ಗಮನಿಸಿರುವ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ನಾಯಿಗಳ ಭದ್ರತಾ ತಂಡವೇ ಬೆಟರ್ ಎಂಬ ನಿರ್ಧಾರಕ್ಕೆ ಬಂದಿವೆ. ಹಾಗಾಗಿ ಅವರೆಲ್ಲರೂ ಸಾಕು ನಾಯಿಗಳನ್ನು ಈ ತರಬೇತಿ ಕೇಂದ್ರದಲ್ಲಿ ತಂದು ಬಿಡುತ್ತಿದ್ದಾರೆ. |
"ಇದು ವಿಶ್ವದ ಉನ್ನತ ತರಬೇತಿ ಕೇಂದ್ರವಾಗಬೇಕು ಎಂಬುದು ನಮ್ಮ ಉದ್ದೇಶ. ನಾಯಿಗಳು ಸೆಲ್ಯೂಟ್, ಶೇಕ್ ಹ್ಯಾಂಡ್ ಮಾಡವುದು. ಮಾಲಿಕ ಹೇಳಿದಂತೆ ಕೂರುವುದು, ನಿಲ್ಲುವುದಷ್ಟಕ್ಕೇ ಸೀಮಿತವಾಗಿರಬಾರದು. ಮನುಷ್ಯನಿಗೆ ಇರದ ಹಲವು ಶಕ್ತಿಗಳು ನಾಯಿಗಳಿಗಿವೆ. ಹಾಗಾಗಿ ಅವನ್ನು ಹೆಚ್ಚಿನ ಕಾರ‌್ಯಗಳಲ್ಲಿ ತೊಡಗಿಸಿಕೊಳ್ಳಬೇಕು," ಎಂದು ಐಟಿಎಸಿ ಸಂಸ್ಥೆಯ ಉಪ ನಿರ್ದೇಶಕ ಮೈಕೆಲ್ ಫಾಟೆಕ್ಸ್ ತಿಳಿಸಿದ್ದಾರೆ. |
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶತಮಾನ ಪೂರೈಸಿದ ವಿದ್ಯಾಸಂಸ್ಥೆಗಳಿಗೆ ಅಭಿನಂದನೆ – ಶೇ.100ಫಲಿತಾಂಶ ಪಡೆದ ಕನ್ನಡ ಶಾಲೆಗಳಿಗೆ ಗೌರವಾರ್ಪಣೆ. |
ಕನ್ನಡ ಜಾನಪದ karnataka folklore: ಜುಲೈ 2011 |
ಜಾನಪದ ವಿಶ್ವವಿದ್ಯಾಲಯ ಪುಟ್ಟ ಸಂಶೋಧನ ಕೇಂದ್ರವಾಗಬೇಕು: ಪ್ರೊ.ರಹಮತ್ ತರೀಕೆರೆ ಅವರೊಂದಿಗೆ ಮಾತುಕತೆ. |
ಅರುಣ್:ಇಂದು ಜಾನಪದ ಅಧ್ಯಯನಗಳನ್ನು ಸಂಸ್ಕೃತಿ ಚಿಂತನೆಯ ಭಾಗವಾಗಿ ಒಳಗು ಮಾಡಿಕೊಳ್ಳುವ ವಿಧಾನ ಯಾವುದು? |
ರಹಮತ್ ತರೀಕೆರೆ: ಈಗ ಕನ್ನಡದಲ್ಲಿ ಸಂಸ್ಕೃತಿ ಚಿಂತನೆಯ ಹೊಸ ಹಾದಿಗಳು ಮೂಡುತ್ತಿವೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಚಿಂತನೆಯಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಆಕರ ಜಾನಪದದ್ದೇ ಆಗಿದೆ. ಆದರೆ ಈ ಚಿಂತನೆಯನ್ನು ನಮ್ಮ ಸಮುದಾಯಗಳ ಚಿಂತನಾಕ್ರಮದ ಭಾಗವಾಗಿ, ಮತ್ತಷ್ಟು ಸೃಜನಶೀಲವಾಗಿ ಜೀವಂತವಾಗಿ ಮಾಡಬೇಕಿದೆ. ಚರಿತ್ರೆ, ಭಾಷಾವಿಜ್ಞಾನ, ಸಮಾಜವಿಜ್ಞಾನ, ಸಾಹಿತ್ಯ, ಶಿಲ್ಪ, ಚಿತ್ರಕಲೆ ಸಿನಿಮಾ- ಹೀಗೆ ಹಲವು ಶಿಸ್ತು ಮತ್ತು ಮಾಧ್ಯಮಗಳ ಮೂಲಕ ಪ್ರವೇಶಿಸುವ ಹಾದಿಗಳನ್ನು ಹುಡುಕಬೇಕಿದೆ. ಇದು ಯಾರೊ ಒಬ್ಬಿಬ್ಬರು ಗಣ್ಯವಿದ್ವಾಂಸರು ಮಾಡುವ ಕೆಲಸವಲ್ಲ. ಇದೊಂದು ಟೀಂ ವರ್ಕ್ಸ್. |
ಅರುಣ್: ಈತನಕದ ಕರ್ನಾಟಕದ ಜಾನಪದ ಅಧ್ಯಯನಗಳನ್ನು ನೀವು ಹೇಗೆ ಗ್ರಹಿಸುತ್ತೀರಿ? ಈಗ ಜಾನಪದ ಅಧ್ಯಯನಗಳು ಹೊರಳಿಕೊಳ್ಳಬೇಕಾದ ದಿಕ್ಕು ಯಾವುದು? |
ರಹಮತ್ ತರೀಕೆರೆ: ಕರ್ನಾಟಕದ ಜಾನಪದ ಅಧ್ಯಯನಗಳಲ್ಲಿ ಅನೇಕರು ತೊಡಗಿದ್ದಾರೆ ಮತ್ತು ಅದ್ಭುತವಾದ ಹಾದಿಗಳನ್ನು ಸೋಸಿದ್ದಾರೆ. ಆದರೆ ಎರಡು ಸಮಸ್ಯೆಗಳಿವೆ. ೧. ಜಾನಪದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಕೆಲವರಲ್ಲಿ ಅದು ಪಶ್ಚಿಮದ ಸಿದ್ಧಾಂತ ನೆರಳಿನಲ್ಲಿ ನಡೆಯುತ್ತಿರುವುದು. ೨. ಮತ್ತೆ ಕೆಲವರಲ್ಲಿ ಅದು ಸ್ವವಿಮರ್ಶೆಯಿಲ್ಲದ ವೈಭವೀಕರಣದ ದೇಶೀಯ ಸ್ವಗತಗಳಲ್ಲಿ ನರಳುತ್ತಿರುವುದು. ನಮ್ಮಲ್ಲಿ ಕಳೆದ ಒಂದು ಶತಮಾನದಿಂದ ನಡೆದಿರುವ ಸಂಗ್ರಹ ಮತ್ತು ಸಂಪಾದನೆ ಅದ್ಭುತವಾಗಿದೆ. ಮೊದಲ ಸಲಕ್ಕೆ ಹಳ್ಳಿಗಳಿಗೆ ಹೋಗಿ ಜನರ ಜತೆ ಕುಳಿತು ಕೆಲಸ ಮಾಡಿದ ಆ ಮಹನೀಯರನ್ನು ಕೃತಜ್ಞತೆಯಿಂದ ನೆನೆಯಬೇಕು. ಆದರೆ ಸಂಗ್ರಹವಾಗಿ ಪ್ರಕಟವಾಗಿರುವ ಈ ಆಕರಗಳಲ್ಲಿ ಶೇಕಡ ೫ರಷ್ಟೂ ವಿಶ್ಲೇಷಣೆಗೆ ಒಳಗಾಗಿಲ್ಲ. ಜನಪದ ಕತೆಗಳ ವಿಶ್ಲೇಷಣೆಯಂತೂ ಬಹಳ ಕಡಿಮೆ ಆಗಿದೆ. ಈ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ವಿದ್ವತ್ ಸಾಧನೆಗಾಗಿ ಅಲ್ಲ, ನಮ್ಮ ದುಡಿವ ಜನ ಸಮುದಾಯಗಳ ಅನುಭವ ಮತ್ತು ಸೃಜನಶೀಲತೆಯನ್ನು ಮಥಿಸಿ ತಿಳಿವನ್ನು ಮತ್ತು ವಿವೇಕವನ್ನು ಪಡೆಯುವುದಕ್ಕಾಗಿ ಮಾಡಬೇಕಿದೆ. ಇದನ್ನು ಹೇಳುವಾಗ ಸಂಗ್ರಹ ಮಾಡುವವರೊಬ್ಬರು ವಿಶ್ಲೇಷಣೆ ಮತ್ತು ವ್ಯಾಖ್ಯಾನ ಮಾಡುವವರು ಮತ್ತೊಬ್ಬರು ಎಂಬ ಶ್ರೇಣೀಕೃತ ಬೌದ್ಧಿಕ ಶ್ರಮವಿಭಜನೆ ತೊಲಗಿ, ಅವೆರಡೂ ಏಕೀಭವಿಸುವುದು ಸಾಧ್ಯವಾಗಬೇಕು. ಜನರೊಟ್ಟಿಗೆ ಕುಳಿತು ಆಕರವನ್ನು ಪಡೆಯುವಾಗಲೇ ಅದನ್ನು ವಿಶ್ಲೇಷಿಸಲು ಬೇಕಾದ ಚೌಕಟ್ಟು ಮತ್ತು ಚಿಂತನೆ ಕೂಡ ಹುಟ್ಟುತ್ತಿರುತ್ತದೆ. |
ಅರುಣ್:ಈಗ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಆರಂಭವಾಗಿದೆ ಸಂಸ್ಕೃತಿ ಚಿಂತಕರಾಗಿ ನೀವು ಜಾನಪದ ವಿಶ್ವವಿದ್ಯಾಲಯದ ಮೊದಲ ಆದ್ಯತೆ ಏನಾಗಬೇಕೆಂದು ಬಯಸುತ್ತೀರಿ? ನಿಮ್ಮ ಕನಸಿನ ಜಾನಪದ ವಿವಿ ಹೇಗಿರಬೇಕು? |
ರಹಮತ್ ತರೀಕೆರೆ: ನನಗೆ ತಕ್ಷಣಕ್ಕೆ ಅನಿಸುವಂತೆ, ಅದೊಂದು ಪುಟ್ಟ ಸಂಶೋಧನ ಕೇಂದ್ರವಾಗಬೇಕು. ಅದರೊಳಗೆ ಕರ್ನಾಟಕದಲ್ಲಿ ಜೀವಚಿತವಾಗಿ ಚಿಂತನೆ ಮಾಡಬಲ್ಲ ಕರ್ನಾಟಕದ ಎಲ್ಲ ಭಾಗಗಳಿಂದ ಬಂದ ತರುಣ ಸಂಶೋಧಕರ ಪಡೆಯೊಂದು ಕೆಲಸ ಮಾಡುವಂತಿರಬೇಕು. ಸಂಶೋಧನೆಗೆ ಪೂರಕವಾಗಿ ಎಂಫಿಲ್ ಪಿಎಚ್‌ಡಿ ಡಿಲಿಟ್ ಕೋರ್ಸುಗಳನ್ನು ನಡೆಸಬಹುದು. ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುವವರಿಗಿಂತ, ತಾವಿರುವ ಸ್ಥಳಗಳಿಂದಲೇ ವಿಶ್ವವಿದ್ಯಾಲಯಕ್ಕಾಗಿ ಸಂಶೋಧನೆ ಮಾಡುವವರು ಹೆಚ್ಚಾಗಬೇಕು. ವಿಶ್ವವಿದ್ಯಾಲಯ ಅದಕ್ಕೊಂದು ವೇದಿಕೆಯಾಗಬೇಕು. ಕನ್ನಡದಲ್ಲಿ ಕವಿತೆ ಕತೆ ಬರೆಯುವ ಬಹಳ ತರುಣರಿದ್ದಾರೆ. ಸಂಶೋಧನೆ ಮಾಡುವವರು ಕಡಿಮೆಯಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬಂದಿರುವ ನೆಪದಲ್ಲಿ ಸಂಶೋಧನೆಗೆ ಹೆಚ್ಚು ಅವಕಾಶಗಳು ಕಲ್ಪಿತವಾಗುತ್ತಿವೆ. ಇಂತಹ ಹೊತ್ತಲ್ಲಿ ಈ ವಿದ್ವತ್ ಬರ ಬಂದಿದೆ. ಈ ಪರಿಸ್ಥಿತಿಯನ್ನು ನಾವೆಲ್ಲ ಸೇರಿ ಬದಲಾಯಿಸಬೇಕು. ಬದಲಾಯಿಸಬಹುದು ಕೂಡ. ಕರ್ನಾಟಕದ ಬೇರೆಬೇರೆ ಭಾಗದಲ್ಲಿರುವ ಹೊಸ ಪ್ರತಿಭೆಗಳನ್ನು ಆರಿಸಿ, ಅವಕ್ಕೆ ಹೊಸ ಅಧ್ಯಯನ ವಿಧಾನಗಳ, ಹೊಸ ಜನರೊಡನಾಟದ ತರಬೇತಿ ಕೊಡುವುದು ಸಾಧ್ಯವಿದೆ. |
ಅರುಣ್:ಈಗ ಸಾಂಸ್ಕೃತಿಕ ಅಧ್ಯಯನಗಳಿಗೆ ಪ್ರವೇಶ ಪಡೆಯುವ ಯುವ ಚಿಂತಕರಿಗೆ ಯಾವ ಬಗೆಯ ಸಿದ್ದತೆಗಳ ಅಗತ್ಯವಿದೆ? |
ರಹಮತ್ ತರೀಕೆರೆ: ಅಧ್ಯಯನ ಮತ್ತು ತಿರುಗಾಟ-ಇದೊಂದು ಜೋಡಿ ಪರಿಕಲ್ಪನೆ. ಅಧ್ಯಯನ ಮತ್ತು ಚಿಂತನೆಯಿಲ್ಲದ ತಿರುಗಾಟ ಗೊಡ್ಡಾಗುತ್ತದೆ. ತಿರುಗಾಟ ಮತ್ತು ಜನರ ಒಡನಾಟವಿಲ್ಲದ ಅಧ್ಯಯನಕ್ಕೆ ಬೇಗನೇ ಮಂಕುಹಿಡಿಯುತ್ತದೆ. ಕನ್ನಡದಲ್ಲಿ ಎಷ್ಟೊಂದು ಬಗೆಯ ತಿಳುವಳಿಕೆ ಸೃಷ್ಟಿಯಾಗುತ್ತ್ತಿದೆ? ಅದನ್ನು ವಶಪಡಿಸಿಕೊಳ್ಳುವುದು ಮತ್ತು ಅದರ ಜತೆಗೆ ವಾಗ್ವಾದ ಆರಂಭಿಸುವುದು ನಮ್ಮ ಯುವಕರಿಗೆ ಸಾಧ್ಯವಾಗಬೇಕು. ಬೌದ್ಧಿಕವಾದ ಆರೋಗ್ಯಕರವಾದ ಜಗಳವಿಲ್ಲದೆ, ಪಿತ್ರಾರ್ಜಿತ ಆಸ್ತಿಯಂತೆ ಪರಂಪರೆಯ ತಿಳುವಳಿಕೆಯನ್ನು ಪಡೆದುಕೊಂಡರೆ, ಅದು ಕಟ್ಟಿಕೊಟ್ಟ ಬುತ್ತಿಯಂತೆ. ಆದರೆ ಅದರ ಜತೆ ವಿಮರ್ಶಾತ್ಮಕ ಒಟನಾಟ ಮಾಡುತ್ತಿದ್ದಂತೆ, ತಿಳುವಳಿಕೆಗೆ ನಾವೂ ಸೇರಿಸುವುದಿದೆ ಎಂದು ಹೊಳೆಯತೊಡಗುತ್ತದೆ. ಇಂತಹ ಕಸುವನ್ನು ಕೆಲವಾದರೂ ಯುವಕರು ತೋರುತ್ತಿದ್ದಾರೆ ಎನ್ನುವುದು ನೆಮ್ಮದಿಯ ಸಂಗತಿ. |
ರಲ್ಲಿ ಜುಲೈ 29, 2011 2 ಕಾಮೆಂಟ್‌ಗಳು: |
ಪ್ರೊ.ರಹಮತ್ ತರೀಕೆರೆ |
(ಪ್ರೊ.ರಹಮತ್ ತರೀಕೆರೆ ಅವರು ಜಾನಪದ ಅಧ್ಯಯನವನ್ನು ಸಾಂಸ್ಕೃತಿಕ ಅಧ್ಯಯನದ ವ್ಯಾಪ್ತಿಯಲ್ಲಿ ವಿಸ್ತರಿಸುತ್ತಿರುವವರಲ್ಲಿ ಪ್ರಮುಖರು. ಅವರ ಸವಾಲ್ ಜವಾಬ್ ಕುರಿತ ಈ ಬರಹ ಜನಪದ ಕಾವ್ಯ ಮೀಮಾಂಸೆಯನ್ನು ಜನಸಮುದಾಯದ ನೆಲೆಯಲ್ಲಿ ಹುಡುಕಲು ಪ್ರಯತ್ನಿಸಿದೆ. ವಿವಿಧ ಧರ್ಮ ಪಂಥದ ಜನ ಹೇಗೆ ಜನಪದ ಕಲಾಪ್ರಕಾರವೊಂದರಲ್ಲಿ ತಮ್ಮ ಗಡಿರೇಖೆಗಳನ್ನು ಮುರಿದು ಕೂಡಿ ಬಾಳುತ್ತಾರೆ ಎನ್ನುವುದನ್ನು ಈ ಬರಹ ಶೋಧಿಸಿದೆ. ಇದು ಪ್ರಜಾವಾಣಿಯ ಮೆ 15 2011 ರ ಸಾಪ್ತಾಹಿಕ ಪುರವಣಿಯ ನಡೆದಷ್ಟೂ ನಾಡು ಅಂಕಣದಲ್ಲಿ ಪ್ರಕಟವಾಗಿತ್ತು. –ಅರುಣ್) |
ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ನಡೆಯುವ ರಾಜಾಬಾಗ್ ಸವಾರನ ಉರುಸು ಖ್ಯಾತವಾಗಿದೆ. ಈ ಸೀಮೆಯ ಜನಪ್ರಿಯ ಸಂತರಲ್ಲಿ ಒಬ್ಬನಾದ ರಾಜಾಬಾಗ್ ಸವಾರನು ಸೂಫಿ ಸಂತನೊ ಮಹಾನುಭಾವ ಪಂಥದ ಯೋಗಿಯೊ ಇನ್ನೂ ಅಸ್ಪಷ್ಟ. ಈತ ತಿರುಗಾಡುವಾಗ ಕೂತಿದ್ದ ಜಾಗಗಳು ತೋರುಗದ್ದಿಗೆಗಳಾಗಿದ್ದು, ಅಲ್ಲಿ ಉರುಸು ನಡೆಯುತ್ತದೆ. ಮುಖ್ಯ ದರ್ಗಾ ನವಲಗುಂದ ತಾಲೂಕು ಯಮನೂರಿನಲ್ಲಿದ್ದರೆ, ಹಡಗಲಿಯದು ಅದರ ಶಾಖೆ. ಜನರ ನಂಬಿಕೆ ಪ್ರಕಾರ, ಬಾಗಸವಾರನದು ಅತಿಮಾನುಷ ವ್ಯಕ್ತಿತ್ವ. ಈತ ಚೇಳಿನ ಕಡಿವಾಣ ಹಾಕಿದ ಹುಲಿಸವಾರಿ ಮಾಡುತ್ತ, ಹಾವಿನ ಚಾಟಿ ಹಿಡಿದು ಸಂಚರಿಸುತ್ತಿದ್ದವನು. ಪ್ರಾಣಾಂತಿಕ ಮೃಗಜಂತುಗಳನ್ನು ಹತ್ಯಾರ ಮಾಡಿಕೊಂಡಿರುವ ಈ ಸಂತನ ಉರುಸುಗಳು ಮಾತ್ರ, ಜನರನ್ನು ಜಾತಿಮತಗಳ ನಂಜಿನ ವರ್ತುಲದಾಚೆ ತಂದು ಮಿಲನಿಸುವಂತಹವು. |
'ಬಾಗ್‌ಸವಾರ್' ಪದದಲ್ಲೇ ಮಿಲನದ ಚಿಹ್ನೆಯಿದೆ. ಸಂಸ್ಕೃತದ ವ್ಯಾಘ್ರವು ಬಾಗ್ ಆಗಿ, ಅದಕ್ಕೆ ಸವಾರನೆಂಬ ಫಾರಸಿ ಶಬ್ದ ಕೂಡಿದೆ. |
ಈ ಉರುಸಿನ ವಿಶೇಷತೆಯೆಂದರೆ ಇಲ್ಲಿ ಏರ್ಪಡುವ 'ಸವಾಲ್ ಜವಾಬ್' ಹಾಡಿಕೆ. ಇದೊಂದು ಜಿದ್ದಾಜಿದ್ದಿ ಹಾಡಿಕೆ. ಇದು ಉತ್ತರ ಕರ್ನಾಟಕದ ಅನೇಕ ಊರುಗಳಲ್ಲಿ ಜರುಗುತ್ತದೆ. ಆದರೆ ಹಡಗಲಿಯ ವೈಭವವೇ ಬೇರೆ. ಇಲ್ಲಿ ಮೂವತ್ತರಷ್ಟು ಶಾಹಿರರು ಮತ್ತು ಗಾಯಕರು ನೆರೆಯುವರು. ನಮ್ಮ ಎರಡು ಜನಪದ ಹಾಡು ಸಂಪ್ರದಾಯಗಳಲ್ಲಿ, ಗಾಯಕರು ಎದುರಾಳಿಗಳಾಗಿ ನಿಂತು, ಪರಸ್ಪರ ಸವಾಲು ಹಾಕುತ್ತ ವಾಗ್ವಾದ ಮಾಡುವ ವಿನ್ಯಾಸವಿದೆ. ಅವೆಂದರೆ- ಹರದೇಶಿ ನಾಗೇಶಿ ಹಾಗೂ ಸವಾಲ್-ಜವಾಬ್. ಮೊದಲನೆಯದರಲ್ಲಿ ಗಂಡ್ಹೆಚ್ಚೊ ಹೆಣ್ಹೆಚ್ಚೊ ಎಂಬ ವಾಗ್ವಾದವಿದ್ದರೆ, ಎರಡನೆಯದರಲ್ಲಿ ಒಬ್ಬರು ಇಟ್ಟ ಸಮಸ್ಯೆಯನ್ನು ಮತ್ತೊಬ್ಬರು ಬಿಡಿಸುವ ಕ್ರಮವಿದೆ. |
ಎರಡೂ ಕಡೆ, ತಂತಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತ ಎದುರಾಳಿಗಳ ಮೇಲೆ ಆಕ್ರಮಣ ಮಾಡುವ ಕದನಗುಣವಿದೆ. ಇದೊಂದು ಅಣಕು ಕದನ. ಕೆಲವೊಮ್ಮೆ ಇದು ಖರೇ ಕದನವೂ ಆಗಿರುವುದುಂಟು. ಎದುರಾಳಿಯಿಟ್ಟ ತೊಡಕನ್ನು ಬಿಡಿಸಲು ಸೋತವರು, ಹಾಡಿಕೆ ತ್ಯಜಿಸಿ, ಜೀವಮಾನವಿಡೀ ಗೆದ್ದವರಿಗೆ ಜೀತ ಮಾಡಿದ ನಿದರ್ಶನಗಳಿವೆ. ಇಂಥದೊಂದು ಪ್ರಕರಣದ ಮೇಲೆ ಮಧುರಚೆನ್ನರು 'ರಮ್ಯಜೀವನ' ಎಂಬ ಅಪೂರ್ವ ಲೇಖನ ಬರೆದಿದ್ದಾರೆ. ಅದರಲ್ಲಿ ಹಲಸಂಗಿಯ ಪ್ರತಿಭಾವಂತ ಗಾಯಕ ಖಾಜಾಸಾಬನು ಹದರಿಯ ಬಡೇಸಾಬನನ್ನು ಸೋಲಿಸಿದ ಪ್ರಕರಣವಿದೆ. |
ಸೋತ ಬಡೇಸಾಬನು ಹಾಡಿಕೆಬಿಟ್ಟು, ಖಾಜಾಸಾಬನನ್ನು ಗುರುವೆಂದು ಧ್ಯಾನಿಸುತ್ತ, ದಾರುಣ ಸ್ಥಿತಿಯಲ್ಲಿ ಪ್ರಾಣಬಿಡುತ್ತಾನೆ. ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿ ನಾನು ಭೇಟಿಯಾದ ಪ್ರಸಿದ್ಧ ಗಾಯಕ ಅಲ್ಲಾಬಕ್ಷ ಅವರೂ, ಚಿಕ್ಕಪ್ರಾಯದಲ್ಲೇ ಹಿರಿಯ ಗಾಯಕನೊಬ್ಬನನ್ನು ಸೋಲಿಸಿದವರು. ಸೋತ ಆ ಗಾಯಕ ಸಾಯುವ ತನಕ ಹಾಡಲಿಲ್ಲವೆಂದು, ಅವರು ಜಯದ ಹುಮ್ಮಸ್ಸು ಮತ್ತು ವಿಷಾದ ಬೆರೆತ ದನಿಯಲ್ಲಿ ಹೇಳಿದರು. ಜನಪದ ಕಾವ್ಯಪ್ರಪಂಚ ಇಂತಹ ನೂರಾರು ಕದನ ಕೋಲಾಹಲಗಳಿಂದ ತುಂಬಿದೆ. |
ನಾನು ಹಡಗಲಿಗೆ ಹೋದಾಗ ಮುಸ್ಸಂಜೆ ಕಳೆದು, ಉರುಸಿನ ಗದ್ದಲವೆಲ್ಲ ಮುಗಿಯುತ್ತಿತ್ತು. ಜನರು ಊಟಮುಗಿಸಿ ಚಾಪೆ ಚೀಲ ಪಾಣಿಗಳಾಗಿ, ದರ್ಗಾ ಮುಂದಣ ಬಯಲಲ್ಲಿ ಜಾಗ ಹಿಡಿಯುತ್ತಿದ್ದರು. ಬಯಲ ತುದಿಗೆ, ಹಲಗೆ ಹಾಸಿದ ಅಟ್ಟ ಕಟ್ಟಿ, ನಡುವೆ ಮೈಕನ್ನಿಟ್ಟು ಅದರ ಸೊಂಟಕ್ಕೊಂದು ಮಲ್ಲಿಗೆಹಾರ ಹಾಕಲಾಗಿತ್ತು. |
ಗಾಯಕರೆಲ್ಲ ಚಹಾ ಕುಡಿದು, ಚುಟ್ಟ ಸೇದಿ, ಹಾಡಿಕೆಗೆ ತಯಾರಾಗುತ್ತಿದ್ದರು. ಉರುಸು ಕಮಿಟಿಗೆ ಸೇರಿದ ಆಜಾನುಬಾಹುಗಳಾದ ಇಬ್ಬರು ಹಿರಿಯರು, ಟಗರುಕೊಂಬಿನಂತೆ ನುಲಿದ ಮೀಸೆಯನ್ನು ತೀಡುತ್ತ, ಅಟ್ಟದ ಬಳಿ ಕುಳಿತಿದ್ದರು. ಅವರು ಹಡಗಲಿಯ ಮಾಜಿ ಪೈಲ್ವಾನರಂತೆ. ಏನಾದರೂ ದಾಂಧಲೆಯಾದರೆ ಪೋಲಿಸರ ನೆರವಿಲ್ಲದೆ ಸ್ವತಃ ನಿಭಾಯಿಸುವಂತಿದ್ದರು. |
ರಾತ್ರಿ 11 ಹೊಡೆಯಿತು. 25ರಿಂದ 80ರ ತನಕ ವಯೋಮಾನವಿದ್ದ ಗಾಯಕರೆಲ್ಲ ಅಟ್ಟವನ್ನೇರಿ ಕುಳಿತರು. ಹಡಗಲಿಯ ಆಸುಪಾಸಿನ ಊರುಗಳಿಂದ ಬಂದಿದ್ದ ಅವರು, ಸಣ್ಣ ರೈತರು ಇಲ್ಲವೇ ಸಣ್ಣವ್ಯಾಪಾರ, ದರ್ಜಿ, ಬಡಗಿ, ಗೌಂಡಿ ಕೆಲಸ ಮಾಡಿಕೊಂಡಿದ್ದವರು. ಅವರಲ್ಲಿ ನಾನು ಹಿಂದೆ ಭೇಟಿಯಾಗಿದ್ದ ಸತ್ತೂರ ಇಮಾಂಸಾಬ್, ಕವಲೂರ ಗೌಸ್‌ಸಾಬ್, ಮುಂಡರಗಿಯ ಜಿಂದೀಪೀರಾ ಮೊದಲಾದ ಶಾಹಿರರೂ ಇದ್ದರು. ಹಾಡುಕಟ್ಟುವ ಶಾಹಿರರೇ ಬಂದಿದ್ದ ಕಾರಣ, ಮೇಳಕ್ಕೊಂದು ಖದರು ಬಂದಿತ್ತು. |
ಹಾಡಿಕೆ ಶುರುವಾಯಿತು. ವ್ಯವಸ್ಥಾಪಕರು ಒಬ್ಬೊಬ್ಬ ಗಾಯಕನ ಹೆಸರನ್ನು ಹಿಡಿದು ಕರೆದಂತೆ, ಗಾಯಕರೆದ್ದು ತಮ್ಮ ಮೇಳದ ಜತೆ ಹಾಡಲಾರಂಭಿಸಿದರು. ಮುಶಾಯಿರ, ಹಿಂದೂಸ್ತಾನಿ ಸಂಗೀತ ಹಾಗೂ ಖವ್ವಾಲಿಗಳಲ್ಲಿ ಇರುವಂತೆ, ಇಲ್ಲೂ ರಸಿಕರು ನಡುವೆಯೇ ಕಲಾವಿದರನ್ನು ಉತ್ತೇಜಿಸುವ ಪ್ರತಿಕ್ರಿಯೆ ಕೊಡುತ್ತಿದ್ದರು. ಸರಿಯಾಗಿ ಹಾಡದಿದ್ದರೆ 'ಏ ಸಾಕು ಮಾಡಪ್ಪೋ ಯಪ್ಪಾ ನಿಂದು' ಎಂದು ತಡೆಯುತ್ತಿದ್ದರು. |
ಕವಲೂರ ಗೌಸ್‌ಸಾಬ್ ಬಂದಾಗ ಕೇಕೆ ಸಿಳ್ಳು ಕೇಳಿಬಂದವು. ಗೌಸ್‌ಸಾಬರು ಕವಲೂರಿನ ಪ್ರಖ್ಯಾತ ಶಾಹಿರ ಕುಟುಂಬಕ್ಕೆ ಸೇರಿದ ಆರನೆಯ ತಲೆಮಾರಿನ ಕವಿ. ಅವರ ಹಾಡಿಕೆಯಲ್ಲಿ, ಎಲ್ಲಮ್ಮನಾಟದಲ್ಲಿ ಇರುವಂತೆ ಆಂಗಿಕ ಅಭಿನಯ ಬಹಳ. |
ಹೋದ ವರ್ಷ ಕೊಟ್ಟೂರಿನ ಮೊಹರಮ್ಮಿನಲ್ಲಿ ಒಬ್ಬ ಮುದುಕಿ, ಗೌಸ್‌ಸಾಬರು ಹಾಡುವಾಗ 'ಇವನೊಬ್ಬ ಬಂದ ತಿಕ್ಕ. ಯೇ! ಯಾಕ್ಹಂಗ ನುಲೀತಿಯೋ? ನೆಟ್ಟಗ ನಿಂತು ಹಾಡೊ' ಎಂದು ಕುಟುಕಿದ್ದಳು. ಆಗ ಕವಲೂರ ಶಾಹಿರನು ತನ್ನ ಹಾಡಲ್ಲೇ ಆಕೆಗೆ ಝಾಡಿಸಿ ಪ್ರತ್ಯುತ್ತರ ನೀಡಿದ್ದರು. ಆದರೆ ಇಲ್ಲಿ ಅಂಥ ಚಕಮಕಿಯೇನೂ ಸಂಭವಿಸಲಿಲ್ಲ. ನಂತರ ಒಬ್ಬ ಹಣ್ಣಾದ ಗಾಯಕ, ಸಾಥಿಯಿಲ್ಲದೆ, ನಡುಗುವ ದನಿಯಲ್ಲಿ ಬಹಳ ಹೊತ್ತು ರಿವಾಯತ್ ಹಾಡಿದ. ಆಗೊಬ್ಬ ಶ್ರೋತೃ ಎದ್ದುನಿಂತು 'ಏ ಮುದ್ಯಾತ, ಸವಾಲ್ ಜವಾಬಿದ್ದರೆ ಹಾಡು, ಅಲಾವಿ ಪದ ಬ್ಯಾಡ? ಎಂದು ಅಪ್ಪಣೆ ಮಾಡಿದ. ಕೆಲವು ಕೇಳುಗರು ತಮ್ಮ ಪ್ರಿಯ ಗಾಯಕರಿಗೆ ಅವಕಾಶ ಕೊಡಬೇಕು ಎಂದು ಅರಚುತ್ತಿದ್ದರು. |
ಮೌಖಿಕ ಕಾವ್ಯ ಸಂಪ್ರದಾಯದಲ್ಲಿ ನಿಜವಾದ ಧಣಿಗಳೆಂದರೆ ಕೇಳುಗರೇ ಇರಬೇಕು. ಅದಕ್ಕೆಂದೇ ಜನಪದ ಗಾಯಕರು ಹಾಡಿನ ಮೊದಲ ಭಾಗದಲ್ಲೇ ದೈವಕ್ಕೆ ಕಡ್ಡಾಯವಾಗಿ ಗೌರವ ಸಲ್ಲಿಸುತ್ತಾರೆ. ಇಲ್ಲಿ 'ದೈವ' ಎಂದರೆ ಕೇಳುಗರು; ಊರಿನ ಸಮಸ್ತರು. ದೈವಸ್ಥರ ಮುಂದೆ ತಾನು ಅಲ್ಪಬುದ್ಧಿಯವನೆಂದೂ ಎಳಸು ಬಾಲಕನೆಂದೂ, ತಾನು ತಪ್ಪಿದರೆ ಉದಾರ ಮನಸ್ಸಿನಿಂದ ತಿದ್ದಬೇಕೆಂದೂ ಅವರು ವಿನಂತಿಸುತ್ತಾರೆ. ಜಗತ್ತಿನ ಕಾವ್ಯಪರಂಪರೆಯಲ್ಲಿ ಸಹೃದಯರಿಗೆ ಸಲ್ಲಿಕೆಯಾದ ಆತ್ಯಂತಿಕ ಮನ್ನಣೆಯಿರಬೇಕು ಇದು. |
ಹಡಗಲಿಯಲ್ಲಿ ಕೇಳುಗರು, ಬೀಡಿಸೇದಿ ಗಗನಕ್ಕೆ ಹೊಗೆ ಬಿಡುತ್ತ, ಚಹ ಕುಡಿಯುತ್ತ, ಬೇಸರ ಬಂದಾಗ ಅಲ್ಲೇ ಚಾಪೆಯ ಮೇಲೆ ಅಡ್ಡಾಗುತ್ತ, ಒಳ್ಳೇ ಗಾಯಕ ಬಂದಾಗ ಎದ್ದು ಕೂರುತ್ತ, ಬಹುರೂಪಿಗಳಾಗಿದ್ದರು. ಕೆಲವರು ಗಾಯಕರಿಗೆ ಚಹಾ ಮಿರ್ಚಿ ಒಗ್ಗಾಣಿ ಬೀಡಿ ಇತ್ಯಾದಿ ಸೇವೆಯನ್ನೂ ಸಲ್ಲಿಸುತ್ತಿದ್ದರು. ಹಾಡು ಹಿಡಿಸಿದರೆ, ಧಿಗ್ಗನೆದ್ದು ಜೇಬಿನಿಂದ ಹತ್ತರ ನೋಟು ತೆಗೆದು ಗಾಯಕನಿಗೆ ಆಹೇರಿ ಮಾಡುತ್ತಿದ್ದರು. ಅವರಿತ್ತ ನೋಟನ್ನು ಗಾಯಕರು ಕಣ್ಣಿಗೊತ್ತಿಕೊಂಡು ಇಟ್ಟುಕೊಳ್ಳುತ್ತಿದ್ದರು. ಹಾಡಿನ ನಡುವೆಯೇ ಆಹೇರಿ ಬಂದರೆ, 'ಹೊಳಲಿನ ವೀರಯ್ಯನವರು ಹತ್ತ ರೂಪಾಯಿ ಆಹೇರಾ ಮಾಡ್ಯಾರಲ್ಲಾ' ಎಂಬ ಸಾಲನ್ನು, ಹಾಡಿನ ಕೊನೆಪ್ರಾಸ ಛಂದಸ್ಸು ಕೆಡದಂತೆ ಸೇರಿಸಿ, ಹಾಡಿಬಿಡುತ್ತಿದ್ದರು; ಕೆಲವರು 'ಸೋಗಿಯ ಕೊಟ್ರಪ್ಪನವರು ನಮ್ಮ ಅಲ್ಪಕಲೆಯನ್ನು ಕಂಡು ಹತ್ತ ರೂಪಾಯಿ ಕೊಟ್ಟಿರುತ್ತಾರೆ. ಅದು ಹತ್ತ ರೂಪಾಯಲ್ಲ, ಹತ್ತ ಸಾವಿರ ಅಂದುಕೊಂಡು ಅವರಿಗೆ ನನ್ನ ಸಲಾಮು ಮಾಡುತ್ತೇನೆ' ಎಂದು ಕೃತಜ್ಞತೆ ಸಲ್ಲಿಸುತ್ತಿದ್ದರು. ಕೆಲವರು ಪಿನ್ನಿನಲ್ಲಿ ನೋಟನ್ನು ಸಿಕ್ಕಿಸಿಕೊಂಡು ತಂದು, ಗಾಯಕರ ಅಂಗಿಯ ಮೇಲೆ, ರಾಷ್ಟ್ರಪತಿಗಳು ಪದ್ಮಭೂಷಣದ ಪದಕವನ್ನು ಸಿಕ್ಕಿಸುವಂತೆ ಸಿಕ್ಕಿಸುತ್ತಿದ್ದರು. ಗಾಯಕರೊ, ಅದನ್ನು ಸೈನ್ಯದ ಜನರಲ್‌ಗಳು ಎದೆಮೇಲೆ ಪದಕಗಳನ್ನು ಧರಿಸುವಂತೆ ಧರಿಸಿ ಮೆರೆಸುತ್ತ, ಹಾಡುತ್ತಿದ್ದರು. |
ಕೆಲವು ರಸಿಕರು ತಮ್ಮ ಬೆರಳಲ್ಲಿದ್ದ ಉಂಗುರವನ್ನೇ ಕಳಚಿ ಆಹೇರಿ ಮಾಡಿರುವ, ತೋಡೆ ಮಾಡಿಸಿ ತೊಡಿಸಿರುವ, ಹೊಲ ಬರೆದುಕೊಟ್ಟಿರುವ ನಿದರ್ಶನಗಳಿವೆ. ರೋಣ ತಾಲೂಕಿನ ಪ್ರಸಿದ್ಧ ಶಾಹಿರರಾಗಿದ್ದ ಮೆಣಸಿಗಿಯ ರುದ್ರಗೌಡರಿಗೆ ಅಭಿಮಾನಿಯೊಬ್ಬರು, ಚಿನ್ನದ ಮೆಡಲನ್ನೇ ಆಹೇರಿ ಮಾಡಿದ್ದರು. 'ಅಬ್ದುಲ್ ಹಕ್ ಸಾಹೇಬರ ನೋಡಿ ಮಿಗಿಲಾ, ಭದ್ರ ಮೊಹರ ಮಾಡಿಸಿಕೊಟ್ಟಾರಾ, ತಮ್ಮ ಹೆಸರ ಹಾಕಿಸಿ ಮಿಡಲಾ' ಎಂದು ಅದನ್ನು ಉಲ್ಲೇಖಿಸುತ್ತ ರುದ್ರಗೌಡರು ಹಾಡುತ್ತಿದ್ದರು. |
ನಾನು ಖದರಮಂಡಲಗಿ ಅಲ್ಲಾಬಕ್ಷರನ್ನು ಕಂಡಾಗ, ಅವರು ತಮಗೆ ಆಹೇರಿಯಾಗಿ ಬಂದ ವಸ್ತುಗಳನ್ನೆಲ್ಲ ತೋರಿಸಿದರು. ಕಷ್ಟಕಾಲದಲ್ಲಿ ಮಾರಿದ್ದರಿಂದ ಬೆಳ್ಳಿತೋಡೆಯಿರಲಿಲ್ಲ. ಆದರೆ ನೀರಿನ ಹಂಡೆ ಇನ್ನೂಇತ್ತು. |
ಹಡಗಲಿಗೆ ಬಂದಿದ್ದ ಕವಿಗಳು, ಉರುಸುಗಳಲ್ಲಿ ಮಾತ್ರವಲ್ಲದೆ, ಮೊಹರಮ್ಮಿನ ಖತಲರಾತ್ರಿಯಲ್ಲೂ ಸವಾಲ್ ಜವಾಬ್ ಮೇಳಗಳಲ್ಲೂ ಹೋಗಿ ಹಾಡುವವರು. ಹಡಗಲಿಗೆ ಬಂದಿದ್ದ ಹ್ಯಾರಡದ ಚಮನ್‌ಸಾಹೇಬರು, ಯುವಮೇಳಗಳಲ್ಲೂ ರೇಡಿಯೊ ಟೀವಿಗಳಲ್ಲೂ ಹೋಗಿ ಹಾಡಿದವರು. ಅದರೂ ಸಾಮಾನ್ಯವಾಗಿ ಈ ಗಾಯಕರು ತಾವು ಹಾಡಿಕೆಗಾಗಿ ತಿರುಗುವ ಒಂದು ವಲಯವನ್ನು, ಹುಲಿಗಳು ತಮ್ಮ ಬೇಟೆಗೊಂದು ಸೀಮೆ ನಿರ್ಮಿಸಿಕೊಂಡಂತೆ, ನಿರ್ಮಿಸಿಕೊಂಡಿರುತ್ತಾರೆ. ಒಂದು ವಲಯದವರು ಇನ್ನೊಂದು ವಲಯದ ಎಲ್ಲೆಯನ್ನು ಮೀರುವುದಿಲ್ಲ. ಕರ್ನಾಟಕದಲ್ಲಿ ಇಂತಹ 10-15 ವಲಯಗಳಿದ್ದು, ಪ್ರತಿವಲಯವೂ ಪ್ರಸಿದ್ಧ ಹಾಡುಗಾರರನ್ನು ಸೃಷ್ಟಿಸಿದೆ. ಸೇಡಂ ಚಿತಾಪುರ ವಲಯದಲ್ಲಿ ಅರ್ಜುನಪ್ಪ ದಂಡೋತಿ ಎಂಬ ದೊಡ್ಡ ಗಾಯಕ ಆಗಿಹೋದರು. ಈಗ ಬದಾಮಿ ಭಾಗದಲ್ಲಿ ಕೆರೂರು ನದಾಫಸಾಹೇಬರು ಖ್ಯಾತರಾಗಿದ್ದಾರೆ. |
ಜನಪದ ಕವಿಗಳನ್ನು ಕುರಿತು ಕನ್ನಡದ ಮೊದಲ ಕೃತಿಕಾರ, ಕವಿರಾಜಮಾರ್ಗಕಾರನು, 'ಕುರಿತೋದದೆಯುಂ ಕಾವ್ಯಪ್ರಯೋಗ ಮತಿಗಳ್' ಎಂದು ಕೊಂಡಾಡಿರುವನಷ್ಟೆ. ಆದರೆ ಈ ವ್ಯಾಖ್ಯಾನ ಈ ಶಾಹಿರರಿಗೆ ಅನ್ವಯಿಸುವುದಿಲ್ಲ. ಕಾರಣ, ಈ ಶಾಹಿರರು ಸನ್ನಿವೇಶಕ್ಕೆ ತಕ್ಕಂತೆ ನಿಂತಲ್ಲೇ ಪದಕಟ್ಟಿ ಹಾಡಬಲ್ಲ ಆಶುಕವಿಗಳಾದರೂ, ಇವರಿಗೆ ಪುರಾಣ ಗ್ರಂಥಗಳ ಓದಿನ ಹಿನ್ನೆಲೆಯಿದೆ. ತಾವು ರಚಿಸಿದ ಪದವನ್ನು ಬರೆದಿಡುವ ಅಕ್ಷರ ಸಂಸ್ಕೃತಿಯೂ ಇದೆ. ಹಡಗಲಿಯಲ್ಲಿ ಬಹುತೇಕ ಶಾಹಿರರು ನೋಟುಬುಕ್ಕನ್ನು ಹಿಡಿದೇ ಹಾಡಿದರು. ಸಾಮಾನ್ಯವಾಗಿ ಈ ಶಾಹಿರರು ತಾವು ರಚಿಸಿದ್ದನ್ನು, ಶಿಷ್ಯರಿಗಲ್ಲದೆ ಉಳಿದವರಿಗೆ ತೋರಿಸುವುದಿಲ್ಲ. ಪದಗಳನ್ನು ತಮಗೆ ಮಾತ್ರ ಅರ್ಥವಾಗುವಂತೆ ಮೋಡಿಯಲ್ಲಿ ಬರೆದುಕೊಂಡಿರುವುದೂ ಉಂಟು. ಇದರ ಉದ್ದೇಶ, ತಾವು ಒಡ್ಡುವ ಸವಾಲು ಎದುರಾಳಿಗೆ ತಿಳಿಯದಂತೆ ರಹಸ್ಯ ಕಾಪಾಡಿಕೊಳ್ಳುವುದು. ಹಡಗಲಿಯಲ್ಲಿ ಒಡ್ಡಲಾದ ಕೆಲವು ಸವಾಲುಗಳು ಹೀಗಿದ್ದವು: ಮೆಹಬೂಬ ಶರಣರಿಗೆ ವಿದ್ಯೆ ಕಲಿಸಿದ ಗುರುವಿನ ಹೆಸರೇನು? ಪೈಗಂಬರರ ನಿಕಾ ಓದಿಸಿದ ಮೌಲವಿಯ ಹೆಸರೇನು? ಅಶೋಕವನದಲ್ಲಿ ಯಾವ ಮರದ ಕೆಳಗೆ ಸೀತೆ ಕುಳಿತಿದ್ದಳು? ರಾಮನಿಗೆ ನದಿ ದಾಟಿಸಿದ ಅಂಬಿಗನ ಹೆಸರು ಏನು? |
ಸವಾಲ್ ಜವಾಬ್ ಹಾಡಿಕೆಯಲ್ಲಿ ಶಾಹಿರರು ಮತ್ತು ಗಾಯಕರ ನಡುವೆ ಒಂದು ಸಣ್ಣಭೇದವಿದೆ. ವಸ್ತಾದಿ (ಉಸ್ತಾದ್) ಎಂದು ಕರೆಯಲಾಗುವ ಶಾಹಿರರಿಗೆ ಗುರುವಿನ ಸ್ಥಾನಮಾನ. ಇವರು ಪದಕಟ್ಟಿ, ಅದಕ್ಕೆ ಧಾಟಿ ಕೂಡಿಸಿ, ಶಿಷ್ಯರಿಗೆ ಕಲಿಸುವರು. ಶಿಷ್ಯರು ಗುರುವಿನ ಹಿಂದೆ ಹಿಮ್ಮೇಳದಲ್ಲಿ ಹಾಡಿಕೊಂಡು ತಿರುಗುತ್ತ, ಎಷ್ಟೋ ವರ್ಷಗಳ ಬಳಿಕ, ಸ್ವತಂತ್ರ ಹಾಡಿಕೆ ಶುರುಮಾಡುವರು. ಹಡಗಲಿಯಲ್ಲಿ ಸತ್ತೂರು ಇಮಾಂಸಾಹೇಬರು, ಕಾನಳ್ಳಿ ಮುಸ್ತಫಾ ಮೊದಲಾದ ಶಿಷ್ಯರ ಜತೆ, ತುಂಡುದೊರೆಗಳು ಸೈನ್ಯವನ್ನು ಬೆನ್ನಹಿಂದೆ ಕಟ್ಟಿಕೊಂಡು ರಣರಂಗದಲ್ಲಿ ತಿರುಗುವಂತೆ ತಿರುಗುತ್ತಿದ್ದರು. |
ಸವಾಲ್ ಜವಾಬ್ ಪದಗಳ ರೋಚಕ ಭಾಗವೆಂದರೆ, ಹಾಡುಗಾರರು ಎದುರಾಳಿಯನ್ನು ನಿಂದಿಸುವುದು; ಎದುರಾಳಿಯ ಹಾಡು ಕರ್ಣಕಠೋರ ಆಗಿದೆಯೆಂದೂ, ಅದರಲ್ಲಿ ಸ್ವಂತಿಕೆಯಿಲ್ಲವೆಂದೂ, ಆತ ಗುರುವಿನಿಂದ ಶಾಸ್ತ್ರೋಕ್ತವಾಗಿ ಕಲಿತಿಲ್ಲವೆಂದೂ ಟೀಕೆಗಳಿರುತ್ತವೆ. ಕೆಲವೊಮ್ಮೆ ಈ ಟೀಕೆಗಳು ಬೈಗುಳದ ಮಟ್ಟಕ್ಕೂ ಇಳಿಯುವುದುಂಟು. ಬಯಲಾಟ-ಯಕ್ಷಗಾನಗಳಲ್ಲಿ ವೀರರು ಯುದ್ಧಕ್ಕೆ ಮೊದಲು ತಂತಮ್ಮ ಬಡಾಯಿ ಕೊಚ್ಚಿಕೊಳ್ಳುವುದನ್ನು ನೆನಪಿಸುವ ಈ ವಾಕ್ಸಮರವು, ಹಾಡಿಕೆಯನ್ನು ನಾಟಕೀಯಗೊಳಿಸುತ್ತದೆ; ಬಹುಶಃ ಕೇಳುಗರು ನಿದ್ದೆಗೆ ಜಾರದಂತೆ ಎಚ್ಚರದಲ್ಲೂ ಇಡುತ್ತದೆ. ಪ್ರಾಚೀನ ಕವಿಗಳಲ್ಲೂ ಸ್ವಕವಿ ಪ್ರಶಂಸೆ ಮತ್ತು ಕುಕವಿ ನಿಂದೆಯ ಪದ್ಧತಿಯಿದೆಯಷ್ಟೆ. ಪ್ರಾಚೀನರೇಕೆ, ಆಧುನಿಕ ಕವಿಯಾದ ಅಡಿಗರು ಕೆ.ಎಸ್.ನರಸಿಂಹಸ್ವಾಮಿ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದರೆನ್ನಲಾಗುವ 'ಪುಷ್ಟಪಕವಿಯ ಪರಾಕು' ಪದ್ಯದಲ್ಲಿರುವ ಟೀಕೆಗಳು ಏನು ಕಡಿಮೆ ಕಹಿಯಾಗಿವೆಯೇ? ಉರುಸುಗಳಲ್ಲಿ ಜಿದ್ದಾಜಿದ್ದಿ ಖವಾಲಿ ಏರ್ಪಡಿಸುವ ಸಂಘಟಕರು, ಮುದ್ದಾಮಾಗಿ ಪರಸ್ಪರ ಸೆಣಸುವ ತಂಡಗಳನ್ನೇ ಕರೆಯಿಸುವುದುಂಟು. ಅದರಂತೆ ಹಡಗಲಿಗೂ ಪರಸ್ಪರ ಹುರುಡಿಸುವ ಮೇಳಗಳು ಬಂದಿದ್ದವು. ಕೆಲವರಂತೂ 'ಸವಾಲು ಕೇಳಿದರೆ ಜವಾಬು ಇಲ್ಲ ಕಡೀತಾನರಿ ಹಲ್ಲಾ, ಹ್ಞಾಂ! ತುಂಬಿದ ಕೊಡಾ ತುಳಕುವುದಿಲ್ಲಾ' ಎಂದು ಎದುರಾಳಿ ನಿಂದೆಯಿಂದಲೇ ಹಾಡನ್ನು ಶುರುಮಾಡುತ್ತಿದ್ದರು. ದನಿಗೆ ವ್ಯಂಗ್ಯವನ್ನು ಬೆರೆಸಿ, ಎದುರಾಳಿಯತ್ತ ಕೈತೋರಿಸಿ ಗೇಲಿ ಮಾಡುತ್ತ ಅವರು ಹಾಡುತ್ತಿದ್ದರು. ಚಮಕಿ ಕೆಲಸ ಮಾಡಿದ ಮಿರುಗುವ ಸಾಲ್ಟಿನ್ ಅಂಗಿತೊಟ್ಟು, ಶೋಕಿಲಾಲನಂತೆ ಕಂಗೊಳಿಸುತ್ತಿದ್ದ ಕವಲೂರ ಗೌಸಸಾಹೇಬರಂತೂ, ಎದುರಾಳಿಗಳನ್ನು ಬಗೆಬಗೆಯಲ್ಲಿ ಚುಚ್ಚಿ ರಂಜಿಸುತ್ತಿದ್ದರು. ಈ ಗಾಯಕರು ಸಾಮಾನ್ಯವಾಗಿ ಬಯಲಾಟದ ನಟರೂ ಆಗಿರುವುದರಿಂದ ಅವರಲ್ಲಿ ಸಹಜವಾಗಿ ಅಭಿನಯವಿದೆ. ಇದಕ್ಕೆ ಹೋಲಿಸಿದರೆ, ಹರದೇಶಿ-ನಾಗೇಶಿ ಹಾಡಿಕೆಯಲ್ಲಿ ಪುರುಷವಾದ-ಸ್ತ್ರೀವಾದಗಳ ಮುಖಾಮುಖಿ ಇದ್ದು, ಅಲ್ಲಿ ಸಂಘರ್ಷ ಇನ್ನೂ ತೀಕ್ಷ್ಣವಾಗಿರುತ್ತದೆ; ಭಾಷೆ ಮತ್ತು ಆಂಗಿಕ ಅಭಿನಯಗಳು ಒರಟಾಗಿದ್ದು 'ಲೈಂಗಿಕ' ಆಯಾಮ ಪಡೆದಿರುತ್ತವೆ. |
ಹಡಗಲಿಯಲ್ಲಿ ರಾತ್ರಿಯೆಲ್ಲ ತುಂಗಭದ್ರೆಯ ಹರಿವಿನಂತೆ ಹಾಡಿನ ಹೊಳೆ ಹರಿಯಿತು. ಕೆಲವರು ಇಂಪಾಗಿ ಹಾಡಿದರು; ಕೆಲವರು ದೊಡ್ಡದನಿಯಲ್ಲಿ ನೀರಸವಾಗಿ ಹಾಡಿದರು. ಪ್ರತಿಯೊಬ್ಬರಿಗೂ ಬಹುಶಃ ಆ ರಾತ್ರಿ ತಲಾ ಎರಡೆರಡು ಸಲ ಛಾನ್ಸ್ ಸಿಕ್ಕಿರಬೇಕು ಅಷ್ಟೆ. ಅಷ್ಟರಲಿ ಮೂಡಣದಲ್ಲಿ ಬೆಳಕಿನ ಚಿಹ್ನೆ ಕಾಣಲಾರಂಭಿಸಿದವು. ಇದು ಹಾಡಿಕೆ ಮುಗಿಸುವ ಸೂಚನೆ. ಮೊದಲ ನಮಾಜಿನ ಕರೆ ಕೂಗುವ ಮುನ್ನ ಕಾರ್ಯಕ್ರಮ ಮುಗಿಯಲೇಬೇಕು. ಚದುರಿಹೋಗಿದ್ದ ಗಾಯಕರೆಲ್ಲ ಮಂಚದ ಮೇಲೆ ನೆರೆದರು. |
ರಾತ್ರಿಯೆಲ್ಲ ನಡೆದ ಕದನ ಮರೆತವರಂತೆ ಒಟ್ಟಿಗೆ ನಿಂತು ಏಕಸ್ವರದಲ್ಲಿ ಸಲಾಂಪದ ಹಾಡಿದರು. ಅಲ್ಲೇ ಪಕ್ಕದಲ್ಲಿ ಫೋಟೊ ತೆಗೆಯುತ್ತ ನಿಂತಿದ್ದ ನನ್ನನ್ನು, ಒಬ್ಬ ಗಾಯಕ ಸನ್ನೆಯಿಂದ ಕರೆದು, ಕೈನೀಡಿ ಅಟ್ಟದ ಮೇಲೆ ಎಳೆದುಕೊಂಡನು. ಮತ್ತೊಬ್ಬ ಗಾಯಕ ತನ್ನ ಕೊರಳಲ್ಲಿದ್ದ ಹಾರವನ್ನು ತೆಗೆದು ನನಗೆ ಹಾಕಿದನು. ಮಂಗಳ ಹಾಡಿದ ಮೇಲೆ ಗಾಯಕರೆಲ್ಲ ಅಪ್ಪಿಗೆ ಮಾಡಿ, ಹೋಟೆಲಿಗೆ ಹೋಗಿ ಚಹ ಕುಡಿದು, ತಂತಮ್ಮ ಊರುಗಳಿಗೆ ಚದುರಿಹೋದರು. |
18 ವರ್ಷಗಳ ಹಿಂದೆ ಹಡಗಲಿಗೆ ಉರುಸಿಗೆ ನಾನು ಬಂದಿದ್ದೆ. ಆಗಿದ್ದ ಎಷ್ಟೋ ಗಾಯಕರು ಈಗಿರಲಿಲ್ಲ. ಮದಿಸಿದ ಸಲಗದಂತೆ ತಮ್ಮ ಅಭಿಮಾನಿಗಳ ಗುಂಪು ಕಟ್ಟಿಕೊಂಡು ಅಡ್ಡಾಡುತ್ತಿದ್ದ ಅದ್ಭುತ ಗಾಯಕ, ಇಟಗಿ ಕಾಸಿಂಸಾಹೇಬರು ತೀರಿಕೊಂಡಿದ್ದರು; ವಯಸ್ಸಾದ ಕಾರಣದಿಂದ ಹೊಳಲಿನ ಶಾಹಿರ್ ಫಕ್ರುದ್ದೀನ್ ಸಾಹೇಬರು ಬಂದಿರಲಿಲ್ಲ. ಆದರೇನಂತೆ, ಹರೆಯದ ಅನೇಕ ತರುಣರು ಹೊಸದಾಗಿ ಪದ ಕಲಿತು ಬಂದಿದ್ದರು. ಹೊಳೆ ತನ್ನ ಹರಿವು ನಿಲ್ಲಿಸಿಲ್ಲ ಅನಿಸಿತು. |
ಆದರೆ ಅದರ ಹರಿವಿಗೆ ಅಲ್ಲಲ್ಲಿ ತಡೆಗಳು ಉಂಟಾಗುತ್ತಿವೆ ಎಂದು- ಒಬ್ಬ ಗಾಯಕ ತನ್ನ ಅಳಲನ್ನು ತೋಡಿಕೊಂಡ ಬಳಿಕ- ಅನಿಸಿತು. ಬಯಲಾಟದ ಕಲಾವಿದನೂ ಆಗಿದ್ದ ಆತ ಮದ್ದಲೆ ಬಾರಿಸುವುದರಲ್ಲಿ ನುರಿತವ. ಅವನ ಮಗ, ಉರುಸು ಮತ್ತು ಮೊಹರಂ ನಿಷೇಧಿಸುವ ಇಸ್ಲಾಮಿಕ್ ಪಂಥಕ್ಕೆ ಸೇರಿದವನಂತೆ; ಅವನು 'ಅಪ್ಪಾ, ಬೇಕಾದರೆ ಸವಾಲ್ ಜವಾಬ್ ಹಾಡು; ಬಯಲಾಟ ಬೇಡ' ಎಂದು ತಾಕೀತು ಮಾಡಿರುವನಂತೆ. |
ಇದೇನು ಸೋಜಿಗವಲ್ಲ. ಉರುಸು- ಮೊಹರಂಗಳನ್ನು ಮನ್ನಿಸದ ಧಾರ್ಮಿಕ ಮೂಲಭೂತವಾದವು ಊರೂರುಗಳಲ್ಲಿ ಶುರುವಾಗಿದೆ. ಇದನ್ನೆಲ್ಲ ನೋಡುವಾಗ ಹುಲಿಸವಾರಿ ಮಾಡಿರುವುದು ರಾಜಾಬಾಗ್ ಸವಾರನಲ್ಲ; ಅವನ ಉರುಸಿನಲ್ಲಿ ಹಾಡುತ್ತಿರುವ ಈ ಗಾಯಕರು ಅನಿಸಿತು. ಪ್ರಶ್ನೆಯೆಂದರೆ, ಈ ಹಾಡು/ಕಾವ್ಯ ಸಂಪ್ರದಾಯವು, ತಾನೇರಿರುವ ಹುಲಿಯನ್ನು ತನ್ನ ಕಸುವಿನಿಂದ ಪಳಗಿಸುತ್ತದೆಯೊ ಅಥವಾ ಹುಲಿಯೇ ಇದನ್ನು ಕೆಳಕ್ಕೆ ಕೆಡವಿ ತಿಂದುಹಾಕುತ್ತದೆಯೊ? |
ಈ ಸವಾಲಿಗೆ ಕಾಲವೇ ಜವಾಬು ಕೊಡಬೇಕು. |
ರಲ್ಲಿ ಜುಲೈ 26, 2011 1 ಕಾಮೆಂಟ್: |
ಡಾ.ಟಿ.ಆರ್. ಚಂದ್ರಶೇಖರ್ ಅವರು ಅಭಿವೃದ್ಧಿ ಅಧ್ಯಯನಗಳನ್ನು ಕರ್ನಾಟಕದ ಪ್ರಾದೇಶಿಕ ಅಭಿವೃದ್ಧಿಯ ನೆಲೆಯಲ್ಲಿ ನಿರ್ವಚಿಸುತ್ತಿರುವವರಲ್ಲಿ ಪ್ರಮುಖರು. ಇವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಈ ನಾಡಿನ ಎಲ್ಲ ಬಗೆಯ ಆತಂಕಕಾರಿ ಬೆಳವಣಿಗೆಗೆ ಭಿನ್ನವಾಗಿ ದ್ವನಿಯಾಗುತ್ತಿರುವವರು. ನಮ್ಮಂಥಹ ಯುವ ಸಮುದಾಯವನ್ನು ನಾಚಿಸುವಂತೆ ದಣಿವರಿಯದೆ ನಿರಂತರ ದುಡಿಮೆಯಲ್ಲಿ ತೊಡಗಿಸಿಕೊಂಡ ವಿದ್ವಾಂಸರು. ವಚನ ಚಳವಳಿಯನ್ನು, ಪ್ರಾದೇಶಿಕ ಅಸಮಾನತೆಯನ್ನು, ಬಡಜನರ ಶೋಚನೀಯ ಸ್ಥಿತಿಗಳನ್ನು ಅಭಿವೃದ್ಧಿ ಅಧ್ಯಯನದ ವಿಧಾನಗಳಲ್ಲಿ ಭಿನ್ನವಾಗಿ ಎದುರುಗೊಳ್ಳುತ್ತಿರುವವರು. ಕನ್ನಡ ವಿಶ್ವವಿದ್ಯಾಲಯದ ದೇಸಿ ಆಲೋಚನ ಕ್ರಮವನ್ನು ಅಭಿವೃದ್ಧಿ ಅಧ್ಯಯನಗಳ ಮೂಲಕ ಹೊಸ ನೆಲೆಗಟ್ಟನ್ನು ಕೊಡಲು ಶ್ರಮಿಸುತ್ತಿರುವವರು. ಅವರ ಬರಹಗಳಲ್ಲಿರುವ ಪ್ರಭುತ್ವದ ವಿರುದ್ಧದ ಕಿಡಿಗಳು ನನ್ನಂಥವರಿಗೆ ಹೊಸ ಬೆಳಕಾಗುತ್ತಿವೆ. ಅವರು ಜಾನಪದ ಅಧ್ಯಯನ, ಅನ್ವಯ, ಮತ್ತು ಸದ್ಯದ ಮುಖಾಮುಖಿ ಕುರಿತಂತೆ ಒಳನೋಟಗಳಿರುವ ಮಾತುಕತೆ ಇಲ್ಲಿದೆ. ಈ ಮಾತುಕತೆಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡ ಅವರಿಗೆ ಕನ್ನಡ ಜಾನಪದ ಬ್ಲಾಗ್ ಪರವಾಗಿ ಧನ್ಯವಾದಗಳು |
ಅರುಣ್: ಸಾರ್ ಇಂದು ಅಭಿವೃದ್ಧಿ ಎನ್ನುವ ಪದವೇ ಬಂಡವಾಳಶಾಹಿಗಳ ಪರವಾದ ಪದ ಎನ್ನುವಂತಿರುವ ಈ ಹೊತ್ತಲ್ಲಿ ಅದೇ ಪದವನ್ನು ಜನಸಾಮಾನ್ಯರ ಒಳಿತಿನ ಅಭಿವೃದ್ಧಿಯ ನೆಲೆಯಲ್ಲಿ ಹೊಸ ಅರ್ಥವನ್ನು ಕೊಡುತ್ತಿದ್ದೀರಿ. ಈ ನೆಲೆಯಲ್ಲಿ ನೀವು ಜಾನಪದವನ್ನು ಹೇಗೆ ಅರ್ಥೈಸಲು ಪ್ರಯತ್ನಿಸುತ್ತೀರಿ? |
ಡಾ.ಟಿ.ಆರ್.ಸಿ: ನಿಜ, ಅಭಿವೃದ್ಧಿ ಎಂಬ ನುಡಿಯು ಬಂಡವಾಳಶಾಹಿ-ಪರವಾದುದು. ಅದರಿಂದ ಅದನ್ನು ರಕ್ಷಿಸುವುದು ಹೇಗೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಹೊಸ ಅರ್ಥ ಮಾತ್ರವಲ್ಲ. ಅದಕ್ಕೆ ಹೊಸ ಸಿದ್ಧಾಂತವನ್ನೇ ರೂಪಿಸಬೇಕಾಗಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಅಭಿವೃದ್ಧಿಯನ್ನು ಸ್ಥಳೀಯತೆಗೆ ನಿಷ್ಠವನ್ನಾಗಿ ಮಾಡಬೇಕು. ಅದು ಪ್ರಧಾನವಾಗಿ ಪ್ರದೇಶ-ನಿರ್ದಿಷ್ಟವಾಗಿರಬೇಕು. ಆಗ ಸಹಜವಾಗಿ ಅದು ಸ್ಥಳಿಯ ಕಲೆ, ಕಾಯಕ, ದುಡಿಮೆ, ಸಂಪನ್ಮೂಲ, ಕಸುಬುದಾರಿಕೆ, ವಾಸ್ತು, ಸಂಸ್ಕೃತಿ ಹೀಗೆ ಎಲ್ಲವನ್ನೂ ಒಳಗೊಳ್ಳುವಂತಾಗುತ್ತದೆ. ಜಾನಪದವೆಂಬುದು ನನಗೆ ತೋರಿದಂತೆ ಸ್ಥಳಿಯ ಬದುಕನ್ನು ಕುರಿತ ಅಧ್ಯಯನ. ಸ್ಥಳೀಯ ತಂತ್ರಜ್ಞಾನ, ಸ್ಥಳೀಯ ಸಂಪನ್ಮೂಲ, ಸ್ಥಳೀಯ ಬಂಡವಾಳ, ಸ್ಥಳೀಯ ಕುಶಲತೆ, ಸ್ಥಳೀಯ ಶಿಕ್ಷಣ, ಸ್ಥಳೀಯ ಮನೆ ಕಟ್ಟುವ ತಂತ್ರ, ಜಾನುವಾರುಗಳನ್ನು ಸಾಕುವ ಕ್ರಮ ಮುಂತಾದವುಗಳನ್ನು ಕುರಿತ ಅಧ್ಯಯನವನ್ನು ನಾನು ಜಾನಪದ ಅಧ್ಯಯನವೆಂದು ಕರೆಯಲು ಇಷ್ಟಪಡುತ್ತೇನೆ. ಇಲ್ಲಿ ಒಂದು ಎಚ್ಚರ: ಸ್ಥಳಿಯತೆ ಎಂದಾಗ ಅದು ಬಾಹ್ಯದಿಂದ ಸಂಪೂರ್ಣವಾಗಿ ಪ್ರತ್ಯೇಕಗೊಂಡಿರಬೇಕಿಲ್ಲ. ವಿಶ್ವಾತ್ಮಕತೆ(ಅಖಂಡತೆ) ಮತ್ತು ವಿಶಿಷ್ಟತೆಗಳನ್ನು(ಖಂಡ ನೆಲೆಗಟ್ಟು) ಹೇಗೆ ಸಂಯೋಜಿಸಿಕೊಳ್ಳಲಾಗುತ್ತದೆ ಎಂಬುದು ಇಲ್ಲಿ ಮುಖ್ಯ. ಮತ್ತೊಂದು ಎಚ್ಚರವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು: ಅದೇನೆಂದರೆ ನಮ್ಮ ಜಾನಪದ ಎಂಬುದು ಅನೇಕ ಅಮಾನವೀಯ ಸಂಗತಿಗಳನ್ನು ಕಾಲಕ್ರಮೇಣ ಬೆಳೆಸಿಕೊಂಡು ಬಿಟ್ಟಿದೆ. ಅವುಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಸ್ವ-ವಿಮರ್ಶೆ/ಆತ್ಮ-ನಿರೀಕ್ಷಣೆ ಎಂಬುದು ಇಂದಿನ ಅಧ್ಯಯನಗಳ ಮೂಲದಲ್ಲಿರಬೇಕಾದ ಒಂದು ಸಂಗತಿ. ಪರಂಪರೆಯ ವೈಭವೀಕರಣವಾಗಲಿ ಅಥವಾ ಆಧುನಿಕತೆ ಬಗ್ಗೆ ವಿಮರ್ಶಾ-ರಹಿತ ಸ್ವೀಕರಣೆಯಾಗಲಿ ಅಪೇಕ್ಷಣೀಯವಲ್ಲ. |
ಅರುಣ್: ಸಾರ್, ನೀವು ನಿಮ್ಮ ಬರಹಗಳು ಬಹುಪಾಲು ಕ್ಷೇತ್ರ ಕಾರ್ಯ ಮತ್ತು ಸರಕಾರದ ಯೋಜನೆಯ ವಾಸ್ತವದ ಅನುಷ್ಠಾನದ ನೆಲೆಯಲ್ಲಿ ಆಲೋಚಿಸುತ್ತಿದ್ದೀರಿ. ಹಾಗಾಗಿ ಜಾನಪದ ವೃತ್ತಿ ಮತ್ತು ನಂಬಿಕೆಯ ಜಗತ್ತನ್ನು ಆಧರಿಸಿ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಾದ್ಯವೆ? |
ಡಾ..ಟಿ.ಆರ್.ಸಿ: ಜಾನಪದ ಅಧ್ಯಯನ ಎಂದರೆ ಅದು ಇನ್ವೆರಿಯಬಲಿ ಕ್ಷೇತ್ರ ಅಧ್ಯಯನವೇ ಆಗಿರುತ್ತದೆ. ಅದಕ್ಕೆ ಬೇರೆ ಬದಾರಿಯೇ ಇಲ್ಲ. ಜಾನಪದ ವೈದ್ಯ, ಜಾನಪದ ಆಟಗಳು, ಜಾನುವಾರುಗಳ ಸಾಕಣಿಕೆ, ಜಾನಪದ ಕರಕುಶಕಕಲೆ, ಮಹಿಳೆಯರ ಜಾನಪದ ಹಸೆಯ ಕಲೆ, ಸ್ಥಳಿಯ ತಿನುಸುಗಳನ್ನು ಸಿದ್ದಪಡಿಸುವುದು, ಕೃಷಿ, ಮೀನುಗಾರಿಕೆ, ಕೋಳಿ ಸಾಕಣಿಕೆ, ಹಂದಿ ಸಾಕಣಿಕೆ ಇತ್ಯಾದಿ ಇತ್ಯಾದಿ ಸಂಗತಿಗಳನ್ನು ಒಳಗು ಮಾಡಿಕೊಂಡು ಜಾನಪದ ಅಧ್ಯಯನಗಳನ್ನು ನಡೆಸಬಹುದು. ನನ್ನನ್ನು ಹೀಗೆ ಒಂದೇ ಸಾರಿ ಜಾನಪದವನ್ನು ಆದರಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ ಎಂದರೆ ಸಾಧ್ಯವಾಗುವುದಿಲ್ಲ. ಅದನ್ನು ನಾನು ಕೂಡ ಅಧ್ಯಯನ ಮಾಡಬೇಕು. |
ಈಗ ಏನಾಗಿದೆಯೆಂದರೆ ಜಾನಪದವನ್ನು ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಅವುಗಳ ಕೃಪಾಪೋಷಿತ ಸಂಸ್ಥೆಗಳು ವಸ್ತು ಸಂಗ್ರಹಾಲಯದ ಸಂಗತಿಗಳನ್ನಾಗಿ ನೋಡುವ ಕ್ರಮವನ್ನು ಬೆಳೆಸಿಬಿಟ್ಟಿದ್ದಾರೆ. ಜಾನಪದ ಕಲಾವಿದರನ್ನು ಒಂದು ವಿಧದಲ್ಲಿ 'ನಮ್ಮಿಂದ ಬದುಕುವವರು' ಎನ್ನುವಂತೆ ಕಾಣಲಾಗುತ್ತಿದೆ. ಅಲ್ಲಿ 'ಘನತೆ' ಎಂಬುದು ಗೈರುಹಾಜರಾಗಿ ಬಿಟ್ಟಿದೆ. ಇದನ್ನು ಅಮರ್ತ್ಯ, ಚಟರ್ಜಿ `Patient Approach' ಅಂತಾ ಕರೆಯುತ್ತಾನೆ. ಇಲ್ಲಿ ಅಗತ್ಯವಾಗಿರುವುದು`Agency Approach'. ಜನಪದರು ತಮ್ಮನ್ನು ತಾವು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಂಡು ಬದುಕುವಂತೆ ಮಾಡಬೇಕು. ಅವರನ್ನು ಈಗ ಪರಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಅವರು ಸದಾ ನಮ್ಮ ಕೃಪೆಯಲ್ಲಿರಬೇಕು ಎಂದು ತಿಳಿಯುವುದಿದೆಯ್ಲಾ ಅದು ಅತ್ಯಂತ ಅಪಾಯಕಾರಿ. ಅದು ಅಭಿವೃದ್ಧಿಯಲ್ಲ. |
Subsets and Splits
No community queries yet
The top public SQL queries from the community will appear here once available.