text
stringlengths
0
61.5k
ಏನಿದ್ದರೂ ಗ್ರೌಂಡ್‌ ಲೆವೆಲ್‌ – ಅರ್ಥ ಆದ್ರೆ ಆಗ್ಬೋದು ಹೋದ್ರೆ ಹೋಗ್ಬೋದು. ನಾನು ತಿಳ್ಕೊಂಡಿದ್ದೆ ಅರ್ಧ ಅಂತ ನಾನು ಭಾವಿಸಿಕೊಳ್ಳೋದು. ಅರ್ಥ ಆಗದಿದ್ದರೆ ಸೀದಾ ಮುಂದಿನ ಪಂಕ್ತಿಗೆ, ಅದೂ ಅರ್ಥ ಆಗಲಿಲ್ಲ ಅಂದ್ರೆ ಮುಂದಿನ ಪುಟ ಅಥವಾ ಮುಂದಿನ ಪಾಠ – ಹೀಗೆ ಎಗರಿಸಿ, ಲಾಂಗ್‌ ಜಂಪ್‌ ಹೈ ಜಂಪ್‌ ಮಾಡಿ ಓದಿದ್ದು, ಓದೋದು. ಆ ಮಟ್ಟದ ಗಹನಿಕೆ ಖಂಡಿತ ಇಲ್ಲ. ಯಾವಾಗಲೂ ಇರ್ಲಿಲ್ಲ.
ನಾನೂ ಕೂಡ ಪದಜ್ಞಾನಿ ಅಂತ ತಿಳ್ಕೊಂಡು ಮರಿ ಕೇಳ್ತಾ ಇರಬೇಕಾದ್ರೆ ಸುಮ್ನೆ ಹೇಗೆ ಇರೋಕ್ಕಾಗುತ್ತೆ?!
ನಾನು 'ಜಸ್‌್ಟ ಮಾತ್‌' ಕೇಳಿದ್ದೆ. 'ಜಸ್‌್ಟ ಮಾತ್‌ ಮಾತಲ್ಲಿ' ಅಂತ ರಮ್ಯಾ–ಸುದೀಪ್‌ ಕಿತ್ತಾಡಿಕೊಂಡಿದ್ದು ಕೇಳಿದ್ದೆ. 'ಕೆಟ್ಟ ಮಾತ್‌' ಕೇಳಿದ್ದೆ. 'ಪಾಲಿಮಾತ್‌' ಕೇಳಿರಲಿಲ್ಲ. 'ಪೋಲಿಮಾತ್‌' ಕೂಡ ಕೇಳಿದ್ದೆ.
ಒಂದು ಸಣ್ಣ ಸಂಶಯ ಬಂತು. ಈ ರ‍್ಯಾಂಕಿ, ಪೋಲಿಮಾತ್‌ ಅನ್ನೋದನ್ನು ಕನ್‌ಫ್ಯೂಸ್‌ ಮಾಡ್ಕೊಂಡು ಪಾಲಿಮಾತ್‌ ಅಂತಿದ್ದಾನಾ? ಪ್ರಾಣೇಶ್‌ ಹೇಳ್ತಾ ಇರ್‍ತಾರೆ – ರ‍್ಯಾಂಕಿಗಳಿಗೆ ಕಾಮನ್‌ಸೆನ್ಸ್‌ ಅನ್ನೋದು ಇರಾಂಗ್ಹಿಲ್ಲ ಅಂತ. ಆತನ ಮುಖ ನೋಡಿದೆ, ಗೌರವದಿಂದ ನನ್ನ ಕಡೆ ನೋಡ್ತಾ ಇದ್ದ. ನಂಗೇನೆ ಸ್ವಲ್ಪ ಕಿಚಾಯಿಸೋಣ ಅನ್ನಿಸ್ತು. 'ಪೋಲಿಮಾತಾ?' ಅಂದೆ, ಹಲ್ಲು ಕಿರಿಯದೆ, ಸಾಧ್ಯವಾದಷ್ಟು ಮುಗುಳ್ನಗುವನ್ನು ಮರೆಮಾಚುತ್ತಾ.
ಮರಿ, ಸಭ್ಯ ಭಾಷೆಯ ವಾರಸುದಾರ. ನಾನು ಹೇಳಿದ್ದು ಅವನಿಗೆ ಅರ್ಥ ಆಗಲಿಲ್ಲ. ಅವನೇ ಒಮ್ಮೆ ಹೇಳಿದಂತೆ, ಆತ ಎಂದೂ ಸ್ನೇಹಿತರ ಜೊತೆ ಒಂದು ರಸ್ತೆಯನ್ನು ಸುತ್ತಿದವನೂ ಅಲ್ಲ, ಸಿನಿಮಾಗೆ ಹೋದವನೂ ಅಲ್ಲ, ಪುಸ್ತಕ ಬಿಟ್ಟು ತಲೆಗೆ ಬೇರೆ ಏನನ್ನೂ ತುರುಕಿಕೊಂಡವನಲ್ಲ. ಗಾಂಭೀರ್ಯದಲ್ಲಿ, ಘನತೆಯಲ್ಲಿ ಮಾರ್ಕ್ಸ್‌ ತುಂಬಿಕೊಂಡಿದ್ದ ಚಿನ್ನತಂಬಿ. ನಾನು ಪೋಲಿಮಾತ್‌ ಅಂದದ್ದು ಅವನ ತಲೆಗೆ ಹೋಗಲೇ ಇಲ್ಲ.
'ಮ್ಯಾಮ್‌, ನೋ ನೋ... ಅದನ್ನು ಪೋಲಿಮಾತ್‌ ಅಂತ ಉಚ್ಚರಿಸಬಾರ್‍ದು. ಪಾಲಿಮಾತ್‌ ಅಂತಾನೇ ಹೇಳಬೇಕು' ಅಂದ. ಉಚ್ಚಾಣೆಯಲ್ಲೂ ಪ್ರಾವೀಣ್ಯತೆ ಸಂಪಾದಿಸಿದ್ದ ಆ ಉಚ್ಚಾರಕ. ತರಲೆ ಮಾತುಗಳಿಗೆ ಅವನಲ್ಲಿ ಜಾಗವಿರಲಿಲ್ಲ.
'ಆ ವಾಕ್ಯ ಓದ್ತೀನಿ ಕೊಡು, ತಿಳೀಬಹುದು' ಅಂತ ಅವನಲ್ಲಿದ್ದ ಹಾಳೇನ ಎತ್ತಿಕೊಂಡು ನೋಡಿದೆ. ಅದು ಒಬ್ಬ ವಿಜ್ಞಾನಿಯ ಸಂಕ್ಷಿಪ್ತ ಜೀವನ ಚರಿತ್ರೆ. ಅದರಲ್ಲಿ ಒಂದು ವಾಕ್ಯ – 'ಹಿ ವಾಸ್‌ ಎ ಪಾಲಿಮಾತ್‌' ಅಂತ ಇತ್ತು.
ನನ್ನ ಇಂಗ್ಲಿಷ್‌ ಜ್ಞಾನ ಅಷ್ಟಕ್ಕಷ್ಟೇ. ಆ ಪದಕ್ಕೆ ಕನ್ನಡದ ಅರ್ಥವನ್ನೇ ಬಳಿದರಾಯ್ತು ಅಂತ, 'ಅದನ್ನ ಪಾಲಿಮಾತ್‌ ಅಂತಾನೇ ಯಾಕೆ ಓದ್ಕೋತ್ತೀಯ. ಸ್ವಲ್ಪ ಬದಲಾಯಿಸ್ಕೊಂಡು ಹಿ ವಾಸ್‌ ಎ ಪೋಲಿಮಾತ್‌ ಅಂತಾನು ಓದ್ಕೋ. ಕನ್ನಡದಲ್ಲೇ ಅರ್ಥಮಾಡ್ಕೋ ಆ ವಿಜ್ಞಾನಿ ಪೋಲಿಮಾತು' ಅಂದೆ. ತಮಾಷೆಯಿಂದ ಮರಿ ತುಸು ಮುಗುಳ್ನಕ್ಕರೂ, 'ಮ್ಯಾಮ್‌ ನಿಮ್ಮ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇದೆಯಾ?' ಅಂದ.
ಆ ದಿನ ಅವನ ಮೊಬೈಲ್‌ಗೆ ಏನೋ ಟೆಕ್ನಿಕಲ್‌ ತೊಂದರೆಯಾಗಿತ್ತು. ಅದಕ್ಕೆ ಅಂತರ್ಜಾಲ ಜಾಲಾಡಲಾಗಿರಲಿಲ್ಲ ಅವನಿಗೆ. ನಾನು ಹೋಗಿದ್ದು ನೋಡಿ ಅಂತರ್ಜಾಲಕ್ಕೊಂದು ಪರ್‍ಯಾಯ ಬಂದಿದೆ ಅಂತ ನನ್ನ ಮಿದುಳಿನ ಕೀಬೋರ್ಡ್‌ ಮೇಲೆ ಕೈಯಾಡಿಸಿ ಅರ್ಥ ಹುಡುಕಲು ಯತ್ನಿಸಿದ್ದ. ಆದರೆ ಅದು ಬಾಯಿ–ಕೀಬೋರ್ಡ್‌ಗೆ ವರ್ಗಾವಣೆ ಆಗಿ ಏನೇನೋ ಅರ್ಥ ಬಿತ್ತರಿಸಲು ತಯಾರಾಗಿತ್ತು.
ಅಷ್ಟು ಸಲೀಸಾಗಿ ಬಿಟ್ಟುಕೊಡಲಾಗಲಿಲ್ಲ. ಬಾಯಿಕೋಶ ಅದು. ಮತ್ತೆ ತೆರೆಯಿತು. 'ಪಾಲಿಮಾತ್‌ ಅಂತ ಯಾವುದಾದ್ರೂ ಧರ್ಮ ಇರಬಹುದಾ?' ಅಂದೆ. ಯಾಕೆಂದರೆ ಕೆಲವು ಮಹಾನ್‌ ವ್ಯಕ್ತಿಗಳ ಚಿತ್ರಣದಲ್ಲಿ 'ಹಿ ವಾಸ್‌ ಎ ಜ್ಯೂ, ಹಿ ವಾಸ್‌ ಎ ಪಾರ್ಸಿ' ಅಂತ ಇರುವುದನ್ನು ಓದಿದ್ದೆ. 'ಇಲ್ಲ ಮ್ಯಾಮ್‌, ಬೇರೆ ಏನೋ ಅರ್ಥ ಇದೆ' ಅಂದ.
'ಹಿ ವಾಸ್‌ ಎ ಲೀಡರ್‌ ಅನ್ನೋ ತರಹ ಏನಾದ್ರೂ ಇರಬಹುದಾ?' ಅಂದೆ. ಈಗ ನನ್ನಲ್ಲೂ ಹುಡುಗಾಟಿಕೆ ಹೋಗಿ, ಆ ಪದದ ಅರ್ಥ ತಿಳೀಬೇಕು ಅನ್ನುವ ಕುತೂಹಲ ಇಣುಕಲು ಶುರುವಾಗಿತ್ತು.
'ಆ ರೀತಿಯ ಅರ್ಥ ಕೊಡುವಂತಹದ್ದೇ ಏನೋ ಇರಬಹುದು. ನಾನು ಬಹಳ ಪುಸ್ತಕಗಳನ್ನು ಓದಿದ್ದೇನೆ. ಇದೇ ಪ್ರಥಮಬಾರಿಗೆ ಈ ಪದ ಓದಿರೋದು, ನಿಮ್ಮ ಮೊಬೈಲ್‌, ರೂಮಲ್ಲಿ ಇದೆಯಾ?' ಅಂದ, ನನ್ನ ಎರಡೂ ಕೈ ಬೆರಳುಗಳು ಆರಾಮವಾಗಿರೋದನ್ನ ಗಮನಿಸುತ್ತಾ. ಅವನಿಗೆ ವಿನಾಕಾರಣ ಸಮಯ ಹಾಳುಮಾಡುವುದು ಬೇಕಿರಲಿಲ್ಲ, ತಕ್ಷಣವೇ ಅವನಿಗೆ ಪದದ ಅರ್ಥ ಬೇಕಿತ್ತು. ಅದನ್ನು ತಿಳಿಯುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದ.
ನನ್ನ ಮೊಬೈಲ್‌ ಫೋನ್‌ ವಿಷಯ ಅವನಿಗೆ ಗೊತ್ತಿಲ್ಲ. ಅದು ದಶಕದ ಹಿಂದಿನದು. ಅದರಲ್ಲಿದದ್ದು ಪ್ರಾಥಮಿಕ ಅಗತ್ಯಗಳು ಮಾತ್ರ. ಅದರೊಳಗೆ ಯಾವ ಜಾಲವೂ ಬಲೆಯೂ ಇರಲಿಲ್ಲ. ವಿಶೇಷ ಸಂಪರ್ಕ ಸಾಧನ, ಸಾರಿಗೆ ವ್ಯವಸ್ಥೆಯಿಲ್ಲದ ಗ್ರಾಮೀಣ ಫೋನ್‌ ನನ್ನದು. ಅದು ಸವಲತ್ತು ಪಡೆಯದ ಹಿಂದುಳಿದ ವರ್ಗಕ್ಕೆ ಸೇರಿತ್ತು. ಅವನಿಗೆ ಅನುಕೂಲವಾಗುವಂತಿರಲಿಲ್ಲ. ಅದನ್ನೇ ತಿಳಿಸಿದೆ.
'ನನ್ನ ಮೊಬೈಲ್‌ ವಿಶ್ವಕೋಶವಲ್ಲ, ಕಂಪ್ಯೂಟರ್‌ನಲ್ಲಿ ನೋಡೋಣ ಬಾ 'ಎಂದು ಆಫೀಸ್‌ ರೂಮ್‌ನತ್ತ ಕರೆದೊಯ್ದೆ. ಅತೀ ಸುಲಭದ ಬೇಟೆಯ ದಾರಿಯತ್ತ. ಕಂಪ್ಯೂಟರ್‌ ಕೀಬೋರ್ಡ್‌ ಮೇಲೆ ಕೈಯಾಡಿಸಿ ಆ ಪದದ ಅಕ್ಷರ ಒತ್ತುತ್ತಿದ್ದಂತೆ, ಪರದೆ ಅನಾವರಣಗೊಂಡಿತು, 'ಬಹುಮುಖ ಪ್ರತಿಭೆ' ಅಂತ ಹಿಡಿದು ನಮ್ಮ ಮುಂದೆ ನಿಲ್ಲಿಸಿತು.
'ಓಹ್‌, ಪಾಲಿಮಾತ್‌ ಅಂದ್ರೆ ಬಹುಮುಖ ಪ್ರತಿಭೆ' ಎಂದು ಸಂತಸ ವ್ಯಕ್ತಪಡಿಸಿದ. ಈ ಪದಬೇಟೆ ಸುಖಕರವಾಗಿ ಪರಿಣಮಿಸಿತ್ತು. ಆತನ ಮೊಬೈಲ್‌ ಆ ದಿನ ಹಾಳಾಗಿದ್ದಕ್ಕೆ ನನಗೂ ಪದಬೇಟೆ ಮಾಡಲು ಅವಕಾಶ ಸಿಕ್ಕಿತ್ತು.
ದಿಗ್ಗಜರ ಬೆಳೆಸಿದ ಕೋಚ್‌ | Prajavani
ದಿಗ್ಗಜರ ಬೆಳೆಸಿದ ಕೋಚ್‌
Published: 03 ಜನವರಿ 2019, 00:25 IST
Updated: 03 ಜನವರಿ 2019, 08:30 IST
ಮುಂಬೈ: ಅವರು ಸ್ವತಃ ಆಡಿದ್ದು ಒಂದೇ ಪ್ರಥಮ ದರ್ಜೆ ಪಂದ್ಯ. ಆದರೆ ದಿಗ್ಗಜ ಆಟಗಾರರನ್ನು ಬೆಳೆಸಲು ಅವರಿಗೆ ಸಾಧ್ಯವಾಯಿತು. ದಾಖಲೆಗಳ ಮಾಲೆ ಕಟ್ಟಿದ ಸಚಿನ್ ತೆಂಡೂಲ್ಕರ್‌ ಅವರ ಸಾಧನೆಯ ಹಿಂದಿನ ಶಕ್ತಿ ಎನಿಸಿಕೊಂಡರು. ರಮಾ ಕಾಂತ್‌ ಅಚ್ರೇಕರ್‌ ಅವರ ಕಣ್ಣಿಗೆ ಬಿದ್ದ ತೆಂಡೂಲ್ಕರ್ ವಿಶ್ವದಾಖಲೆಯ ವೀರನಾದರು. ಸರ್ ಡೊನಾಲ್ಡ್ ಬ್ರಾಡ್ಮನ್‌ ಅವರ ನಂತರ ಕ್ರಿಕೆಟ್‌ನ ದಂತಕತೆಯಾದರು.
ಟೆಸ್ಟ್‌ನಲ್ಲಿ 15,921 ರನ್ ಸಂಪಾದಿಸಿರುವ ಸಚಿನ್ ತೆಂಡೂಲ್ಕರ್‌ ಏಕದಿನ ಕ್ರಿಕೆಟ್‌ನಲ್ಲಿ 18,426 ರನ್‌ ಗಳಿಸಿದ್ದಾರೆ. ವಿಶ್ವ ಕ್ರಿಕೆಟ್‌ನ ಬ್ಯಾಟಿಂಗ್ ವಿಭಾಗದ ಬಹುತೇಕ ಎಲ್ಲ ದಾಖಲೆಗಳೂ ಅವರ ಹೆಸರಿನಲ್ಲಿವೆ. ತಮ್ಮ ಸಾಧನೆಯ ಹಿಂದೆ ಅಚ್ರೇ ಕರ್ ಅವರ ಮಾರ್ಗದರ್ಶನದ ಬಲ ಇದೆ ಎಂದು ಸಚಿನ್ ಸದಾ ಹೇಳುತ್ತಿದ್ದರು.
* ಸಚಿನ್ ತೆಂಡೂಲ್ಕರ್ ಅವರ ಗುರು ರಮಾಕಾಂತ್ ಅಚ್ರೇಕರ್ ನಿಧನ
ದಾದರ್‌ನ ಪ್ರಸಿದ್ಧ ಶಿವಾಜಿ ಪಾರ್ಕ್‌ ಕ್ರೀಡಾಂಗಣದಲ್ಲಿ ತೆಂಡೂಲ್ಕರ್ ಅವರಿಗೆ ಅಚ್ರೆಕರ್‌ ಕೋಚಿಂಗ್ ನೀಡಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ಸಮೀರ್ ದಿಘೆ ಮತ್ತು ಬಲ್ವಿಂದರ್ ಸಿಂಗ್‌ ಸಂಧು ಅವರಿಗೂ ಅಚ್ರೇಕರ್ ತರಬೇತಿ ನೀಡಿದ್ದಾರೆ.
'ಚೆನ್ನಾಗಿ ಆಡಿದ್ದಿ ಎಂದು ಸರ್ ನನಗೆ ಎಂದೂ ಹೇಳುತ್ತಿರಲಿಲ್ಲ. ಆದರೆ ಭೇಲ್ ಪೂರಿ ಮತ್ತು ಪಾನಿಪೂರಿ ತಿನ್ನಿಸಲು ಕರೆದುಕೊಂಡು ಹೋಗುತ್ತಿದ್ದಾಗ ಸರ್ ಖುಷಿಯಾಗಿದ್ದಾರೆ ಎಂದು ನನಗೆ ತಿಳಿಯುತ್ತಿತ್ತು' ಎಂದು ತೆಂಡೂಲ್ಕರ್‌ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದರು.
ಅಚ್ರೇಕರ್ ಗರಡಿಯಲ್ಲಿ ಬೆಳೆದಿದ್ದ ಸಚಿನ್ ಮತ್ತು ಕಾಂಬ್ಳಿ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ವಿಶ್ವ ದಾಖಲೆಯ 664 ರನ್‌ಗಳ ಜೊತೆಯಾಟ ಆಡಿ ಗಮನ ಸೆಳೆದಿದ್ದರು.
ಬ್ಯಾಂಕ್‌ ನೌಕರನಾಗಿದ್ದ ರಮಾ ಕಾಂತ್ ಅಚ್ರೇಕರ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕೇವಲ ಒಂದು ಪಂದ್ಯ ಆಡಿದ್ದರು. ನಂತರ ತರಬೇತಿಗೆ ಒತ್ತು ನೀಡಿದರು. ಅವರಿಗೆ 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದಿತ್ತು. ‌
ತಿಮ್ಮಕ್ಕ ವೃಕ್ಷೊದ್ಯಾನ ಲೋಕಾರ್ಪಣೆ | Udayavani – ಉದಯವಾಣಿ
Team Udayavani, Dec 10, 2018, 4:37 PM IST
ಮೈಸೂರು: ಅರಣ್ಯ ಇಲಾಖೆ ವತಿಯಿಂದ ಲಿಂಗಾಂಬುದಿ ನಗರದಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನವನ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷೊದ್ಯಾನವನ್ನು ಸಂಸದ ಪ್ರತಾಪ ಸಿಂಹ ಭಾನುವಾರ ಲೋಕಾರ್ಪಣೆಗೊಳಿಸಿದರು.
ಲಿಂಗಾಂಬುದಿ ನಗರ ಉದ್ಯಾನವನದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ 87.54 ಹೆಕ್ಟೇರ್‌ ಪ್ರದೇಶದಲ್ಲಿ ಉದ್ಯಾನವನ ಹಾಗೂ ವೃಕ್ಷೊಧ್ಯಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ 1.39 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ 35ಲಕ್ಷ ರೂ. ಅನುದಾನದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಪ್ರಮುಖವಾಗಿ ವಾಯುವಿಹಾರ ರಸ್ತೆಗಳು, ವಿಶ್ರಾಂತಿ ಆಸನಗಳು, ಸಸ್ಯ ಸಂಗ್ರಹಾಲಯ, ವ್ಯಾಯಾಮ ಸಲಕರಣೆಗಳು, ಪಕ್ಷಿವೀಕ್ಷಣೆ, ಸೂಚನಾಫ‌ಲಕಗಳು, ಮಕ್ಕಳ ಆಟಿಕೆ ಮೈದಾನ, ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಿಸಲಾಗಿದೆ.
ಜತೆಗೆ ಉದ್ಯಾನವನದ ವಿವಿಧ ಭಾಗಗಳಲ್ಲಿ 422 ಹಣ್ಣಿನ ಗಿಡ ಸೇರಿದಂತೆ ಅಪರೂಪದ 25 ಜಾತಿಯ ಸಸಿಗಳನ್ನು ನೆಟ್ಟು ಸಸ್ಯ ಸಂಗ್ರಹಾಲಯ ಮಾಡಲಾಗಿದೆ.
ಮಳಲವಾಡಿ ಕೆರೆಯಲ್ಲಿ ವೃಕ್ಷೋದ್ಯಮ: ನಗರದ ಮಳಲವಾಡಿ ಕೆರೆಯಲ್ಲಿ ಅರಣ್ಯ ಇಲಾಖೆಯ 33 ಎಕರೆ ಪ್ರದೇಶದಲ್ಲಿ ವೃಕ್ಷೊಧ್ಯಾನ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ 61 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಿದ್ದು, ವಾಯುವಿಹಾರ ರಸ್ತೆಗಳು, ಮಕ್ಕಳ ಆಟಿಕೆ ಮೈದಾನ, ಶೌಚಾಲಯ, ಮುಂಭಾಗದ ಗೇಟ್‌, ಬೆಂಚ್‌ಗಳು, ಸಂದೇಶ ಸೂಚನಾಫ‌ಲಕ ಅಳವಡಿಸಲಾಗಿದೆ. ಆಲದಮರ, ಅರಳಿಮರ, ಅತ್ತಿಮರ, ನೇರಳೆ ಮೊದಲಾದ ಹಣ್ಣು ಬಿಡುವ ಹಾಗೂ 180 ಗಿಡಗಳನ್ನು ನೆಡಲಾಗಿದೆ.
ಉತ್ತಮ ವ್ಯವಸ್ಥೆ: ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಮಾತನಾಡಿ, ಕುಕ್ಕರಹಳ್ಳಿ, ಕಾರಂಜಿಕೆರೆಗಿಂತ ಲಿಂಗಾಬುದಿ ಕೆರೆಗೆ 280-320 ಪ್ರಬೇಧದ ಪಕ್ಷಿಗಳು ಬಂದು ಸೇರುತ್ತದೆ. ವಾಯುಮಾಲಿನ್ಯದಿಂದ ಅತಿ ಹೆಚ್ಚಿನ ಮೃತಪ್ರಕರಣ ನಡೆಯುತ್ತಿರುವುದಲ್ಲಿ ಭಾರತ ಎರಡನೇ ಸ್ಥಾನವಾಗಿದೆ. ನಾವು ಮುಕ್ತ ಜಾಗದಲ್ಲಿ ಸಸಿ ನೆಟ್ಟು ರಕ್ಷಿ$ಸಿದಷ್ಟು ಉತ್ತಮ ಗಾಳಿ ಬರಲಿದೆ. 8-10 ಜಾತಿಯ ಮರಗಳನ್ನು ನೆಟ್ಟರೂ ಅನುಕೂಲವಾಗಲಿದೆ ಎಂದು ಹೇಳಿದರು. ಲಿಂಗಾಂಬುದಿಕೆರೆಗೆ ಎಸ್‌ಟಿಪಿ ಪ್ಲಾಂಟ್‌ ಬದಲು ಕಬಿನಿುಂದ ನೇರವಾಗಿ ಶುದ್ಧ ನೀರು ಬರುವಂತೆ ಮಾಡಿದರೆ ಮುಂದೆ ಅನುಕೂಲವಾಗಲಿದೆ ನಗರಪಾಲಿಕೆ ಈ ಚಾರದಲ್ಲಿ ಗಮನಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಸ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ಸಸಿಗಳನ್ನು ನೆಡುವಲ್ಲಿ ಶ್ರಮಿಸಿದ ಹಲವರನ್ನು ಸನ್ಮಾನಿಸಲಾಯಿತು. ಟಿ.ಇ.ಜಯಕುಮಾರ್‌, ಕಾಳಸ್ವಾಮಿ, ಎಂ.ಎಸ್‌.ಗಿರಿಗೌಡ, ಬಿ.ಎನ್‌.ದರ್ಶನ್‌, ಪುಟ್ಟರಾಜು, ಬೀರಪ್ಪ, ಚಿಕ್ಕಣ್ಣ, ಅಂಬರೀಶ್‌, ನಂಜುಂಡ, ಎಂ.ಆನಂದ, ಲಿಂಗರಾಜು, ಕೃಷ್ಣ, ಅಂಕಯ್ಯ, ಆರ್‌. ಮಂಜುನಾಥ್‌, ನವೀನ ಕುಮಾರ್‌, ನಾಗೇಶ್‌, ಕುಮಾರ್‌, ಪಿ.ಬಸವೇಗೌಡ, ಶಿವಣ್ಣ, ಎನ್‌.ರಾಜು ಅವರುಗಳನ್ನು ಅಭಿನಂದಿಸಲಾಯಿತು. ಮೇಯರ್‌ ಪುಷ್ಪಲತಾ ಜಗನ್ನಾಥ್‌, ನಗರಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಪಾಲಿಕೆ ಸದಸ್ಯರಾದ ಎಂ.ಎಸ್‌.ಶೋಭಾ, ಆರ್‌.ಕೆ.ಶರತ್‌ಕುಮಾರ್‌, ಡಿಸಿಎಫ್ ಗಳಾದ ಮಹೇಶ್ವರನ್‌, ಹನುಮಂತಪ್ಪ ಹಾಜರಿದ್ದರು.
ಚರ್ಚಿಸಿ ಗಿಡ ನೆಡಿ ಆರೋಗ್ಯ ಕಾಪಾಡಲು ಹೆಚ್ಚಿನ ಮರಗಳನ್ನು ನೆಡಬೇಕು. ಈ ಹಿಂದೆ ತಾವು ಜಿಪಂ ಅಧ್ಯಕ್ಷರಾಗಿದ್ದಾಗ ಕೆಆರ್‌ಎಸ್‌ ಹಿನ್ನೀರು, ದಡದಕಲ್ಲಹಳ್ಳಿ ಬಳಿ ನೆಡಸಿದ್ದ 4500 ಸಸಿ ಇಂದು ಸಾಮಾಜಿಕ ಅರಣ್ಯ ವಲಯವಾಗಿದೆ. ಮರಗಳನ್ನು ನೆಡುವ ಜತೆಗೆ ಮಳೆ ನೀರು ನಿಲ್ಲುವಂತೆ ಪಾತ್‌ಗಳನ್ನು ಮಾಡಬೇಕಿದೆ. ಮೈಸೂರು ನಗರ, ರಿಂಗ್‌ರಸ್ತೆಯ ಅಕ್ಕಪಕ್ಕದಲ್ಲಿರುವ ಉದ್ಯಾನವನ, ರಸ್ತೆಗಳಲ್ಲಿ ಮರಗಳನ್ನು ನೆಟ್ಟು ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಬೇಕು. ಅಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಬೇಕು. ಅರಣ್ಯ ಇಲಾಖೆ ಜತೆ ನಗರಪಾಲಿಕೆ, ಮುಡಾ
ಅಧಿಕಾರಿಗಳು ಕುಳಿತು ಚರ್ಚಿಸಿ ಸಸಿ ನೆಡಬೇಕು ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ರನ್‌ವೇ ವಿಸ್ತರಣೆ: ಹೊಸ ವರ್ಷಕ್ಕೆ ಭೂಮಿಪೂಜೆ ನಗರದ ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸುವ ಕಾಮಗಾರಿಗೆ ಮುಂದಿನ ಜನವರಿಯಲ್ಲಿ ಗುದ್ದಲಿಪೂಜೆ ನೆರವೇರಿಸಲಾಗುತ್ತದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ತಿಮ್ಮಕ್ಕ ವೃಕ್ಷೊಧ್ಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ ವೇ ಅಭಿವೃದ್ಧಿಗೆ ಎದುರಾಗಿದ್ದ ಭೂಮಿಯ ಸಮಸ್ಯೆ ನಿವಾರಣೆಯಾಗಿದೆ. ಈ ಹಿಂದೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಣ್ಣ ಸಣ್ಣ ವಿಮಾನಗಳು ಹಾರಾಟ ಮಾಡುತ್ತಿದ್ದವು. ಆದರೆ ದೊಡ್ಡ ವಿಮಾನಗಳು ಮೈಸೂರಿನಿಂದ ಚೆನ್ನೈ, ಮುಂಬಯಿ, ದೆಹಲಿ ಇನ್ನಿತರ ಪ್ರದೇಶಗಳಿಗೆ ಹಾರಾಡಲು ಈಗಿರುವ 1.7 ಕಿ.ಮೀ ರನ್‌ ವೇ ಅನ್ನು 2.7 ಕಿ.ಮೀ ರನ್‌ವೇ ವಿಸ್ತರಣೆ ಮಾಡಬೇಕಾಗಿತ್ತು. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರಿಂದ ಸಮಸ್ಯೆಯಾಗಿತ್ತು.
ಈ ವಿಚಾರದಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ ಬಳಿಕ ಎನ್‌ಎಸ್‌ಎ ಅವರು ರನ್‌ವೇ ವಿಸ್ತರಿಸಲು ಅನುಮತಿ ನೀಡಿದ್ದಾರೆ. ರನ್‌ವೇ ವಿಸ್ತರಣೆಗೆ 280 ಎಕರೆ ಭೂಮಿಬೇಕೆಂದು ಸಚಿವ ಜಿ.ಟಿ.ದೇವೇಗೌಡರಲ್ಲಿ ಪ್ರಸ್ತಾಪಿಸಿದ್ದ ಬಳಿಕ, ಈ ಸಂಬಂಧ ಸಭೆ ನಡೆಸಿ 300ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಕೊಡಿಸಿದ್ದಾರೆ. ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿದ ಕೂಡಲೇ ಜನವರಿಯಲ್ಲಿ ಕಾಮಗಾರಿ ಗುದ್ದಲಿಪೂಜೆ ನಡೆಯಲಿದೆ. ಕೇಂದ್ರ ಸರ್ಕಾರ 700 ಕೋಟಿ ಅನುದಾನ ಮಂಜೂರು ಮಾಡಿದೆ ಎಂದರು.
ಹತ್ತು ಪಥದ ರಸ್ತೆ ಕಾಮಗಾರಿಗೆ ಜ.8ಕ್ಕೆ ಚಾಲನೆ ಮೈಸೂರು-ಬೆಂಗಳೂರು ನಡುವಿನ ಹತ್ತು ಪಥದ ರಸ್ತೆ ಕಾಮಗಾರಿಗೆ ಜ.8ಕ್ಕೆ ಚಾಲನೆ ಕೊಡಲಾಗುತ್ತದೆ. ಈಗಾಗಲೇ ಭೂಮಿಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಕೇಂದ್ರ ಸರ್ಕಾರವೇ 7 ಸಾವಿರ ಕೋಟಿ ಅನುದಾನ ಖರ್ಚು ಮಾಡುತ್ತಿದ್ದು, 2020ಕ್ಕೆ ಮುಕ್ತಾಯವಾಗಲಿದೆ. ಈ ನಡುವೆ ಬಿಳಿಕೆರೆಯಿಂದ ಬೇಲೂರು ತನಕ ಹೊಸ ರಸ್ತೆ ನಿರ್ಮಾಣವಾಗಲಿದ್ದು, ಅದಕ್ಕಾಗಿ 1875 ಕೋಟಿ ಮಂಜೂರು ಮಾಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ರಸ್ತೆಗಾಗಿಯೇ 1.44 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಮೊದಲು ಆರು ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇತ್ತು, ಇದೀಗ 13,500 ಕಿ.ಮೀ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಹಳ್ಳಿ ಹೈದನಾದ ಡಿಸಿಎಂ: ಪೈಲಟ್ ದೇಸೀ ಲುಕ್‌ಗೆ ನೆಟ್ಟಿಗರು ಫುಲ್ ಫಿದಾ
First Published 10, Jun 2019, 4:39 PM IST
ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಹಾಗೂ ಡಿಸಿಎಂ ಸಚಿನ್ ಪೈಲಟ್ ದೇಸೀ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಳ್ಳಿಯೊಂದರಲ್ಲಿ ಪೈಲಟ್ ತನ್ನ ಬೆಂಬಲಿಗರ ನಡುವೆ ಮಂಚವೊಂದರ ಮೇಲೆ ಹಳ್ಳಿ ಹೈದನಂತೆ ಕುಳಿತು ಹರಟೆ ಹೊಡೆದಿದ್ದಲ್ಲದೇ, ಗ್ರಾಮಸ್ಥರು ತಯಾರಿಸಿದ್ದ ಅಡುಗೆ ಸೇವಿಸಿ. ರಾತ್ರಿ ಹೊತ್ತು ಅದೇ ಮಂಚದಲ್ಲಿ ಚಂದ್ರನನ್ನು ನೋಡುತ್ತಾ ನಿದ್ದೆಗೆ ಜಾರಿರುವ ಫೋಟೋಗಳು ಭಾರೀ ವೈರಲ್ ಆಗಿವೆ. ರಾಜಸ್ಥಾನದ ಕಸೇಲಾ ಹಳ್ಳಿಯ ರೈತ ಜಯ್ ಕಿಶನ್ ಮನೆಯಲ್ಲಿ ಹಳ್ಳಿ ಹೈದನಾದ ಡಿಸಿಎಂ ಫೋಟೋಗಳು ಇಲ್ಲಿವೆ ನೋಡಿ.
ಒಂದೆಡೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ದಿಲ್ಲಿಗೆ ಹಾರಿ, ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುವುದರಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಇತ್ತ ಯುವ ನಾಯಕ, ಡಿಸಿಎಂ ಹಳ್ಳಿಗಳಿಗೆ ಭೇಟಿ ನೀಡಿ ಜನರ ನಡುವೆ ಸಮಯ ಕಳೆಯುತ್ತಿದ್ದಾರೆ.
ಭಾನುವಾರದಂದು ಡಿಸಿಎಂ ಸಂಚೌರಾದ ಕಸೇಲಾ ಹಳ್ಳಿಯ ಜನರನ್ನು ಭೇಟಿಯಾಗಿದ್ದಾರೆ.
ರೈತ ಜಯ್ ಕಿಶನ್ ಮನೆಯಲ್ಲಿ ಉಳಿದುಕೊಂಡ ಸಚಿನ್ ಪೈಲಟ್ ರನ್ನು ಹಳ್ಳಿಯ ಜನರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಎರಡು ವರ್ಷದ ಹಿಂದೆಯೂ ಸಚಿನ್ ಈ ಹಳ್ಳಿಗೆ ಭೇಟಿ ನೀಡಿದ್ದರು.
ರೈತನ ಮನೆಯಲ್ಲೇ ತಯಾರಾದ ಸಾದಾ ಊಟವನ್ನು ಸೇವಿಸಿದ ಸಚಿನ್ ಪೈಟಲ್, ಸೋಮವಾರದಂದು ಹಳ್ಳಿಯ ಜನರ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕೃತಜ್ಞತೆ ಸಲ್ಲಿಸಿದ್ದಾರೆ.
ಇದೇ ವೇಳೆ ತನ್ನ ಹಳೆ ಗೆಳೆಯ ಜಯ್ ಕಿಶನ್ ಬಿಶ್ನೋಯಿ ಭೇಟಿಯಾಗಿ, ಅವರೊಂದಿಗೇ ಗದ್ದೆಯಲ್ಲಿ ಮಂಚದ ಮೇಲೆ ಹಳ್ಳಿ ಹೈದನಂತೆ ಕುಳಿತು ಊಟ ಮಾಡಿದ್ದಾರೆ.
ಜನಸಾಮಾನ್ಯರನ್ನು ಭೇಟಿಯಾಗುವುದರೊಂದಿಗೆ ಅಧಿಕಾರಿಗಳನ್ನೂ ಭೇಟಿಯಾಗಿದ್ದಾರೆ.
ಜನಸಾಮಾನ್ಯರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿದ ಡಿಸಿಎಂ ಪೈಲಟ್ ಅಧಿಕಾರಿಗಳ ಸಭೆ ನಡೆಸಿ ಜನರ ಸಮಸ್ಯೆ ಶೀಘ್ರವಾಗಿ ನಿವಾರಿಸುವಂತೆ ಆದೇಶಿಸಿದ್ದಾರೆ.
ಸೋಮವಾರ ಮುಂಜಾನೆ ಎದ್ದ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಜನ ಸಾಮಾನ್ಯರಂತೆ ಬೇವಿನ ಕಡ್ಡಿಯಲ್ಲೇ ಹಲ್ಲುಜ್ಜಿದ್ದಾರೆ. ಜನ ನಾಯಕನ ಈ ದೇಸೀ ಲುಕ್ ಗ್ರಾಮಸ್ಥರಿಗೆ ಬಹಳಷ್ಟು ಇಷ್ಟವಾಗಿದೆ.
ಕಳೆದ 2 ವರ್ಷಗಳ ಹಿಂದೆ ಪೈಲಟ್ ತನ್ನ ಗೆಳೆಯ ಜಯ್ ಕಿಶನ್ ಗೆ ನೀಡಿದ ಮಾತಿನಂತೆ ಮತ್ತೆ ಹಳ್ಳಿಗೆ ಭೇಟಿ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಸಚಿನ್ ಪೈಲಟ್ ಕೇವಲ ಒಬ್ಬ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂದು ಕಸೇಲಾಗೆ ಭೇಟಿ ನೀಡಿದ್ದ ಅವರು ಇದೇ ಗದ್ದೆಯಲ್ಲಿ ರಾತ್ರಿ ಕಳೆದಿದ್ದರು. ಇಂದು ಡಿಸಿಎಂ ಆಗಿರುವ ಸಚಿನ್ ಹಳ್ಳಿಗೆ ಭೇಟಿ ನೀಡುವುದನ್ನು ಮಾತ್ರ ಮರೆತಿಲ್ಲ.
ಭಾನುವಾರದಂದು ಕೊಂಚವೂ ವಿಶ್ರಾಂತಿ ಪಡೆಯದ ಸಚಿನ್ ಪೈಲಟ್ ಜನರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಸಂಜೆಯಾಗುತ್ತಿದ್ದಂತೆಯೇ ಗದ್ದೆಗೆ ಮರಳಿದ ಅವರು ಹಳ್ಳಿ ಹೈದನಾಗಿದ್ದಾರೆ. ಈ ಮೂಲಕ ಹಳ್ಳಿ ಜನರು ಹಾಗೂ ಸರ್ಕಾರದ ನಡುವಿನ ಅಂತರ ಕಡಿಮೆಗೊಳಿಸುವ ಯತ್ನ ನಡೆಸಿದ್ದಾರೆ.
ಮಹಿಳೆಯರೇ! ಮುಖದ ಮೇಲಿನ ಅನಗತ್ಯ ಕೂದಲಿನಿಂದ ಬೇಸತ್ತಿದ್ದೀರಾ? ಇಲ್ಲಿದೆ ಕೆಲವು ಸುಲಭ ವಿಧಾನ!!! - Hosakananda
ಮಹಿಳೆಯರೇ! ಮುಖದ ಮೇಲಿನ ಅನಗತ್ಯ ಕೂದಲಿನಿಂದ ಬೇಸತ್ತಿದ್ದೀರಾ? ಇಲ್ಲಿದೆ ಕೆಲವು ಸುಲಭ ವಿಧಾನ!!!
Leave a Comment / ಲೈಫ್ ಸ್ಟೈಲ್ / By ಹೊಸ ಕನ್ನಡ / May 22, 2022 May 22, 2022 / 2 minutes of reading
ಎಲ್ಲಾ ಯುವತಿ/ಮಹಿಳೆಯರಿಗೂ ಸುಂದರಿಯಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ಹಾಗಾಗಿ ಹಲವಾರು ಸೌಂದರ್ಯವರ್ಧಕ ವಸ್ತುಗಳನ್ನು ಬಳಸುತ್ತಾರೆ. ಈ ಸೌಂದರ್ಯದ ವಿಷಯ ಬಂದಾಗ ಮೊದಲಿಗೆ ಮುಖದ ಮೇಲಿನ ಬೇಡದ ಕೂದಲ ಬಗ್ಗೆ ಮಾತಾಡಲೇಬೇಕು. ಹೌದು, ಅನೇಕ ಯುವತಿ/ ಮಹಿಳೆಯರಿಗೆ ಇದೊಂದು ಸಮಸ್ಯೆ ಅಂತಾನೇ ಹೇಳಬಹುದು. ಇದರ ನಿವಾರಣೆಗೆ ಕೆಲವೊಂದು ಸಲಹೆಗಳನ್ನು ನಾವು ಇಲ್ಲಿ ನೀಡುತ್ತೇವೆ. ಏನದು ? ಇಲ್ಲಿದೆ ಉತ್ತರ.
ಮುಖದ ಮೇಲೆ ಹಲವು ಭಾಗಗಳಲ್ಲಿ ಅನಗತ್ಯ ಕೂದಲುಗಳಿದ್ದರೆ ಸಾಕಷ್ಟು ಇರಿಟೇಟ್ ಆಗುವುದು ಸಹಜ. ಕೆಲವರು ಅನಗತ್ಯ ಕೂದಲನ್ನು ತೆಗೆದು ಹಾಕಲು ಇಲ್ಲದ ಪಾಡು ಪಡುತ್ತಾರೆ. ಕೆಲವರು ಮುಖದ ಮೇಲಿನ ಅನಗತ್ಯ ಕೂದಲು ತೆಗೆದು ಹಾಕಲು ವ್ಯಾಕ್ಸಿಂಗ್, ಶೇವಿಂಗ್, ಥ್ರೆಡ್ಡಿಂಗ್ ಮಾಡಿಕೊಳ್ಳುತ್ತಾರೆ.
ಇನ್ನು ಕೆಲವರು ಮುಖದ ಮೇಲಿನ ಅನಗತ್ಯ ಕೂದಲು ಮರೆ ಮಾಚಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ಹೆಚ್ಚಿನ ಮಹಿಳೆಯರು ಬ್ಲೀಚ್ ಬಳಸುತ್ತಾರೆ. ಬ್ಲೀಚ್ ಮಾಡಿಕೊಳ್ಳುವುದು ಉತ್ತಮ ಆದರೂ ಸಹ ಇದರ ರಾಸಾಯನಿಕ-ಸಮೃದ್ಧ ಉತ್ಪನ್ನ ಚರ್ಮವನ್ನು ಹಾನಿಗೊಳಿಸುತ್ತದೆ.
ಮುಖದ ಮೇಲಿನ ಅನಗತ್ಯ ಕೂದಲು ತೆಗೆದು ಹಾಕಲು ಶೇವಿಂಗ್ ಉತ್ತಮ ಪರಿಹಾರ ಅಂತಾನೇ ಹೇಳಬಹುದು. ಕೂದಲು ತೆಗೆದು ಹಾಕಲು ನೀವು ಸುಲಭ ಮತ್ತು ಅಗ್ಗದ ಪರಿಹಾರ ಹುಡುಕುತ್ತಿದ್ದರೆ, ಕ್ಷೌರಕ್ಕಿಂತ ಉತ್ತಮವಾದ ಪರಿಹಾರ ಯಾವುದೂ ಇಲ್ಲ ಅಂತಾನೇ ಹೇಳಬಹುದು.
ಈಗ ಮಹಿಳೆಯರು ಕೂಡ ಮುಖದ ಮೇಲಿನ ಅನಗತ್ಯ ಕೂದಲು ತೆಗೆದು ಹಾಕಲು ಶೇವಿಂಗ್ ಅವಲಂಬಿಸಿದ್ದಾರೆ.
ಅನಗತ್ಯ ಮುಖದ ಕೂದಲನ್ನು ತೆಗೆದು ಹಾಕಲು ಥ್ರೆಡ್ಡಿಂಗ್ ಅಥವಾ ವ್ಯಾಕ್ಸಿಂಗ್ ನ ಮೊರೆ ಹೋಗುತ್ತಾರೆ. ಆದರೆ ಕೆಲವು ಮಹಿಳೆಯರು ಮೊಡವೆ, ದದ್ದು ಮತ್ತು ಇತರ ಚರ್ಮದ ಸಮಸ್ಯೆಗೆ ಗುರಿಯಾಗುತ್ತಾರೆ. ಹಾಗಾಗಿ ಶೇವಿಂಗ್ ನಿಮಗೆ ಉತ್ತಮ ಆಯ್ಕೆ.
ಶೇವಿಂಗ್ ನಿಮ್ಮ ಮುಖದ ಕೂದಲು ದಪ್ಪವಾಗಿಸುತ್ತದೆ
ಶೇವಿಂಗ್ ಮಾಡುವುದರಿಂದ ಕೂದಲು ದಪ್ಪವಾಗಿ ಮತ್ತು ವೇಗವಾಗಿ ಬೆಳೆಯುವುದಿಲ್ಲ. ನಿಮ್ಮ ರೇಜರ್
ಮೇಲಿನಿಂದ ಕೂದಲನ್ನು ಮಾತ್ರ ಶೇವ್ ಮಾಡುತ್ತದೆ.
ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕಪ್ಪು ಅಥವಾ ದಪ್ಪ ಕೂದಲು ನಿಮ್ಮ ಆನುವಂಶಿಕ ಮತ್ತು
ಹಾರ್ಮೋನುಗಳ ಜೀವನಶೈಲಿ ಅವಲಂಬಿಸಿದೆ.
ಶೇವಿಂಗ್ ನಿಂದಾಗುವ ಪ್ರಯೋಜನಗಳು :
ಶೇವಿಂಗ್ ಒಂದಲ್ಲ ಹಲವು ಪ್ರಯೋಜನ ಹೊಂದಿದೆ. ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದಲ್ಲದೇ, ಸತ್ತ ಜೀವಕೋಶಗಳನ್ನು ಚರ್ಮದಿಂದ ತೆಗೆದು ಹಾಕುತ್ತದೆ.
ಸತ್ತ ಜೀವಕೋಶಗಳ ಪದರ ಅಥವಾ ಕೊಳಕು ಚರ್ಮದ ಮೇಲೆ ಸಂಗ್ರಹವಾದ ನಂತರ ಯಾವುದೇ ಕ್ರೀಮ್ ಅಥವಾ ಪೌಡರ್ ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗಲ್ಲ. ಕ್ಷೌರದ ನಂತರ ಇದು ಉತ್ತಮವಾಗಿ ಹೀರಿಕೊಳ್ಳುತ್ತದೆ. ಮೇಕಪ್ ಸರಿಯಾಗಿ ಹೊಂದಿಸಲು ಇದು ಸಹಾಯ ಮಾಡುತ್ತದೆ.
ಶೇವಿಂಗ್ ಮಾಡುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿಡಿ
ರೇಜರ್ ಬಳಸುವ ಮೊದಲು ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
ಶುದ್ಧವಾದ ಮತ್ತು ತೀಕ್ಷ್ಮವಾದ ರೇಜರ್ ಬಳಸಿ.
ಯಾವಾಗಲೂ ಕೆಳಮುಖವಾಗಿ ಕ್ಷೌರ ಮಾಡಿ.
ಶೇವಿಂಗ್ ಮೊದಲು ಮುಖಕ್ಕೆ ಅಲೋವೆರಾ ಜೆಲ್ ಅಥವಾ ಫೇಶಿಯಲ್ ಆಯಿಲ್ ಅನ್ವಯಿಸಿ.
ನೀವು ಎಷ್ಟು ಬಾರಿ ಶೇವಿಂಗ್ ಮಾಡಬಹುದು
ನಿಮ್ಮ ಕೂದಲಿನ ಬೆಳವಣಿಗೆ ಅನುಗುಣವಾಗಿ ನೀವು ಶೇವಿಂಗ್ ಮಾಡಬಹುದು. ಕೆಲವರು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಶೇವ್ ಮಾಡುತ್ತಾರೆ. ನಿಮಗೆ ಕೂದಲು ಉದುರುವುದು ತಡವಾಗಿದ್ದರೆ ತಿಂಗಳಿಗೊಮ್ಮೆ ಸಾಕು. ಶೇವಿಂಗ್ ಬೇಡವಾದರೆ ನೀವು ಲೇಸರ್ ಚಿಕಿತ್ಸೆ ಪಡೆಯಿರಿ.
ಬೆಳೆ ಸಮೀಕ್ಷೆ ವಿನೂತನ ಕೃಷಿ ಆ್ಯಪ್ ಬಿಡುಗಡೆಗೊಳಿಸಿದ ಡಾ.ಭರತ್ ಶೆಟ್ಟಿ ವೈ – V4 News
August 24, 2021 38 No comment
ಸುರತ್ಕಲ್: ರೈತರಿಗೆ ಮಾಹಿತಿ ನೀಡುವ ಸಲುವಾಗಿ, ಬೆಳೆ ಸಮೀಕ್ಷೆ, ಹಾನಿಯಾದಲ್ಲಿ ಪರಿಹಾರ ಪಡೆಯಲು ಅನುಕೂಲವಾಗುವಂತೆ ದಾಖಲೀಕರಣಕ್ಕೆ ಸರಕಾರ ಹೊಸ ತಂತ್ರಜ್ಞಾನ ಬಳಸಿ ಕೃಷಿ ಆಪ್ ಹೊರ ತಂದಿದ್ದು ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡುವ ಮೂಲಕ ಇದರ ಸದುಪಯೋಗ ಆಗಬೇಕಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಅವರು ಕಾವೂರಿನಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಆಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತ ತಾನು ಬೆಳೆಯುವ ಬೆಳೆಯ ಬಗ್ಗೆ ಈ ಆಪ್‍ನಲ್ಲಿ ಹಾಕಿ ಮಾಹಿತಿ ನೀಡಿದರೆ ಆರ್ಟಿಸಿಯಲ್ಲಿ ದಖಲೀಕರಣಗೊಂಡು ಅನಿರೀಕ್ಷಿತವಾಗಿ ಮಳೆ ಹಾನಿ ಸಂಭವಿಸಿದಲ್ಲಿ ಪರಿಹಾರ, ಸಾಲ ಸೌಲಭ್ಯ ಮತ್ತಿತರ ಪ್ರಯೋಜನಪಡೆಯಬಹುದಾಗಿದೆ. ವಿವಿಧ ಇಲಾಖೆಗಳ ಅಡಿಯಲ್ಲಿ ಈ ಆ್ಯಪ್ ನಲ್ಲಿಇರುವ ಮಾಹಿತಿ ರವಾನೆಯಾಗಿ ದಾಖಲೆಯಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ ಎಂದರು. ರೈತರು ಸ್ವಯಂ ಆಗಿ ಇದನ್ನು ಉಪಯೋಗಿಸಿಕೊಂಡು ಸೌಲಭ್ಯ ಪಡೆಯಬಹುದು ಎಂದರು. ಉಪಮೇಯರ್ ಸುಮಂಗಳ ರಾವ್, ರಣ್‍ದೀಪ್ ಕಾಂಚನ್, ಕೃಷಿ ಅಧಿಕಾರಿ ಬಷೀರ್ ಅಹ್ಮದ್, ಬಿಜೆಪಿ ಸ್ಥಳೀಯ ಮುಖಂಡರಾದ ಶಿತೇಶ್ ಕೊಂಡೆ,ಶಾನ್ವಾಜ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಆತಂಕದಲ್ಲಿದ್ದ ಟೀಂ ಇಂಡಿಯಾ ಮುಖದಲ್ಲಿ ಚಹಾಲ್ ನಗು ತರಿಸಿದ್ದೇಗೆ?
ಲಾರ್ಡ್ಸ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಖಚಿತವಾಗುತ್ತಿದ್ದಂತೆ, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲರು ಸೋಲಿನ ನೋವಿನಲ್ಲಿದ್ದರು. ಹೀಗೆ ಆತಂಕದಲ್ಲಿ ಮುಳಿಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ಮುಖದಲ್ಲಿ ಚಾಹಲ್ ನಗು ತರಿಸಿದ್ದು ಹೇಗೆ? ಇಲ್ಲಿದೆ.
ಲಂಡನ್(ಜು.15): ಲಾರ್ಡ್ಸ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತದ ಸೋಲು ಅಭಿಮಾನಿಗಳಿಗೆ ಮಾತ್ರವಲ್ಲ ಟೀಂ ಇಂಡಿಯಾಗೂ ನೋವು ತರಿಸಿದೆ. ಇದೀಗ 3ನೇ ಪಂದ್ಯದ ಗೆಲುವಿಗೆ ಕೊಹ್ಲಿ ಸೈನ್ಯ ತಯಾರಿ ಆರಂಭಿಸಿದೆ.
2ನೇ ಏಕದಿನದಲ್ಲಿ ಭಾರತ ಸೋಲಿನತ್ತ ಮುಖಮಾಡುತ್ತಿದ್ದಂತೆ, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 48ನೇ ಓವರ್ ವೇಳೆಗೆ ಟೀಂ ಇಂಡಿಯಾ ಸೋಲು ಖಚಿತವಾಗಿತ್ತು. ಯಾಕೆಂದರೆ ಯಜುವೆಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಕ್ರೀಸ್‌ನಲ್ಲಿದ್ದರು. ಹೀಗಾಗಿ ಬೃಹತ್ ಮೊತ್ತ ಬೆನ್ನಟ್ಟೋದು ಸಾಧ್ಯವಿಲ್ಲ ಅನ್ನೋದು ತಂಡಕ್ಕೂ ಖಚಿತವಾಗಿತ್ತು.
ಡ್ರೆಸ್ಸಿಂಗ್ ರೂಂ ನಲ್ಲಿ ಎಲ್ಲರು ತಂಡ ಸೋಲುತ್ತಿರವ ನೋವಿನಲ್ಲಿದ್ದರು. ಆದರೆ ಈ ವೇಳೆ ಕ್ರೀಸ್‌ನಲ್ಲಿದ್ದ ಚಾಹಲ್ , ಡ್ರೆಸ್ಸಿಂಗ್ ರೂಂನಲ್ಲಿದ್ದ ಆತಂಕವನ್ನ ದೂರಮಾಡಿ ಹೀರೋ ಆಗಿದ್ದಾರೆ. 48ನೇ ಓವರ್‌ನಲ್ಲಿ ಡೇವಿಡ್ ವಿಲೆ ಎಸೆತದಲ್ಲಿ ಯಜುವೇಂದ್ರ ಚಾಹಲ್ ಬೌಂಡರಿ ಸಿಡಿಸಿದರು. ಬಳಿಕ ಬ್ಯಾಟ್ ಎತ್ತಿ ಸಂಭ್ರಮಿಸಿದರು. ಈ ಘಟನೆ ಆತಂಕದಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ನಗು ತರಿಸಿತ್ತು.
ಚಾಹಲ್ ಸಂಭ್ರಮಾಚರಣೆ ವೀಡಿಯೋ ಇದೀಗ ವೈರಲ್ ಆಗಿದೆ. ಚೆಹಾಲ್ ಸಂಭ್ರಮಕ್ಕೆ ಟೀಂ ಇಂಡಿಯಾ ಸಹ ಆಟಗಾರರು ಖುಷಿಯಾಗಿದ್ದಾರೆ. ಜೊತೆಗೆ ಡ್ರೆಸ್ಸಿಂಗ್ ರೂಂನಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬುದ್ಧಿವಂತ ಮಗು ಹುಟ್ಟಬೇಕೆ? ಇಲ್ಲಿದೆ ಗರ್ಭಿಣಿಯರು ಮಾಡಬೇಕಾದ 8 ಕೆಲಸಗಳು
ಬುದ್ಧಿವಂತ ಮಗು ಹುಟ್ಟಬೇಕೆ? ಗರ್ಭಿಣಿಯರು ಮಾಡಬೇಕಾದ 8 ಕೆಲಸಗಳು
By Suvarna Web Desk | 03:19 PM March 26, 2017
ಗರ್ಭದಲ್ಲಿರುವ ಶಿಶುವಿಗೆ ಹೊರಗಿನ ಸ್ಪರ್ಶದ ಅನುಭವವೂ ಆಗುತ್ತದೆ. ಹೊಟ್ಟೆಯನ್ನು ಮುಟ್ಟಿದರೆ ಅದಕ್ಕೆ ಮಗು ರಿಯಾಕ್ಟ್ ಮಾಡುತ್ತದೆ. ತಾಯಿಯ ಸ್ಪರ್ಶ, ತಂದೆಯ ಸ್ಪರ್ಶದ ವ್ಯತ್ಯಾಸವನ್ನೂ ಅದು ಗ್ರಹಿಸಬಲ್ಲುದು.
ಜನ್ಮತಃ ಎಲ್ಲವೂ ನಮಗೆ ಸಿದ್ಧಿಸಿರುವುದಿಲ್ಲ. ವಂಶಪಾರಂಪರ್ಯವಾಗಿ ಕೆಲ ಗುಣಗಳು ಮುಂದಿನ ಸಂತಾನಗಳಿಗೆ ವರ್ಗಾವಣೆಯಾಗುತ್ತವಾದರೂ, ಮಗುವಿನ ಗುಣಗಳ ಮೇಲೆ ಪರಿಸರದ ಪ್ರಭಾವವೂ ಇರುತ್ತದೆ. ಹೊಟ್ಟೆಯಲ್ಲಿರುವಾಗಲೇ ಮಗು ಕಲಿಕೆ ಆರಂಭಿಸುತ್ತದೆ ಎಂಬ ಮಾತನ್ನು ಕೇಳಿರುತ್ತೇವೆ. ಮಹಾಭಾರತದಲ್ಲಿ ಶ್ರೀಕೃಷ್ಣ ಪರಮಾತ್ಮನು ಗರ್ಭಿಣಿ ಸುಭದ್ರೆಯ ಬಳಿ ಚಕ್ರವ್ಯೂಹ ಭೇದಿಸುವ ಕುರಿತು ಮಾತುಗಳನ್ನಾಡಿರುತ್ತಾನೆ. ಹೊಟ್ಟೆಯಲ್ಲಿದ್ದ ಭ್ರೂಣ(ಅಭಿಮನ್ಯು) ಇದನ್ನು ಗ್ರಹಿಸುತ್ತದೆ ಎಂದು ಹೇಳಲಾಗಿದೆ. ಪುರಾಣಗಳ ಮಾತಿರಲಿ, ನಮ್ಮ ಆಧುನಿಕ ಸಂಶೋಧನೆಯಲ್ಲೂ ಗರ್ಭದೊಳಗಿನ ಶಿಶುವಿಗೆ ಹೊರಗಿನ ಪರಿಸರದ ಪ್ರಭಾವ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಹೊಟ್ಟೆಯಲ್ಲಿದ್ದಾಗಲೇ ಮಗುವಿಗೆ ಸಕರಾತ್ಮಕವಾಗಿ ಹೇಗೆ ಪ್ರಭಾವ ಬೀರಬಹುದು ಎಂಬ ಟಿಪ್ಸ್ ಇಲ್ಲಿದೆ. ಎಲ್ಲಾ ಗರ್ಭಿಣಿಯರು ಇದನ್ನು ಪ್ರಯತ್ನಿಸುವುದರಲ್ಲಿ ಯಾವ ನಷ್ಟವೂ ಇಲ್ಲ.
1) ಕಥೆ ಹೇಳಿರಿ:
6-9 ತಿಂಗಳ ಗರ್ಭಾವಸ್ಥೆಯಲ್ಲಿರುವಾಗ ಮಗು ಭಾಷೆಯನ್ನು ಗ್ರಹಿಸುವ ಶಕ್ತಿ ಹೊಂದಿರುತ್ತದಂತೆ. ಇದನ್ನು ಸಂಶೋಧಕರು ತಮ್ಮ ಅಧ್ಯಯನದಿಂದ ನಿರೂಪಿಸಿದ್ದಾರೆ. 6-9 ತಿಂಗಳ ಗರ್ಭಿಣಿಯರಿಂದ ಸತತವಾಗಿ ಕಥೆಯ ಕೆಲ ಸಾಲುಗಳನ್ನು ಹೇಳಿಸಲಾಗುತ್ತದೆ. ಪ್ರಸವದ ಬಳಿಕ ಮಕ್ಕಳಲ್ಲಿ ಆ ಕಥೆ ಸಾಲುಗಳನ್ನು ಉಚ್ಚರಿಸಿದಾಗ ಅವು ಗುರುತಿಸುತ್ತವೆ.
ಈ ಹಿನ್ನೆಲೆಯಲ್ಲಿ, ಮಹಿಳೆಯರೇ ನೀವು ತುಂಬು ಗರ್ಭಿಣಿಯಾದಾಗ ಒಳ್ಳೆಯ ಪುಸ್ತಕಗಳಲ್ಲಿನ ಸಾಲುಗಳನ್ನು ಬಾಯಿಬಿಟ್ಟು ಓದಿರಿ. ಅವು ನಿಮ್ಮ ಮಗುವಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಭಾಷೆಯ ಕಲಿಕೆಗೆ ಸಹಾಯವಾಗುತ್ತದೆ.
2) ಆರೋಗ್ಯಯುತ ಆಹಾರ:
ಮಗುವಿನ ಮಿದುಳ ಬೆಳವಣಿಗೆಗೆ ಒಮೇಗಾ 3 ಫ್ಯಾಟಿ ಆ್ಯಸಿಡ್'ಗಳು ಬಹಳ ಮುಖ್ಯ. ಮೀನು, ಸೋಯಾಬೀನ್ಸ್, ಪಾಲಾಕ್ ಸೊಪ್ಪು, ಬಾದಾಮಿ, ವಾಲ್'ನಟ್'ಗಳಲ್ಲಿ ಈ ಪೋಷಕಾಂಶ ಯಥೇಚ್ಛವಾಗಿರುತ್ತವೆ. ಗರ್ಭಿಣಿಯರು ಇಂಥವನ್ನು ಸೇವನೆ ಮಾಡಬೇಕು. ವೈದ್ಯರು ನೀಡುವ ಮಾತ್ರೆಗಿಂತ ನೈಸರ್ಗಿಕವಾಗಿ ದೊರಕುವ ಈ ಆಹಾರಗಳು ಉತ್ತಮವಲ್ಲವೇ?
3) ಕ್ರಿಯಾಶೀಲರಾಗಿ:
ಗರ್ಭಿಣಿಯಾದಾಕ್ಷಣ ಕುಳಿತಲ್ಲೇ ಕೂರಬೇಕು, ಮಲಗಬೇಕು ಎಂಬ ಸಲಹೆಗಳನ್ನು ಕೇಳುತ್ತೇವೆ. ಆದರೆ, ಇದು ಶುದ್ಧ ತಪ್ಪು. ಗರ್ಭಿಣಿಯರು ಸೋಂಬೇರಿಗಳಾದಷ್ಟೂ ಅದು ಮಗುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಾಯಾಮ, ಕೆಲಸ ಇತ್ಯಾದಿಗಳಿಂದ ಕ್ರಿಯಾಶೀಲರಾದಾಗ ಮೈತುಂಬಾ ರಕ್ತದ ಚಲನೆಯ ಪ್ರಮಾಣ ಹೆಚ್ಚಾಗುತ್ತದೆ. ಇದು ಗರ್ಭಕ್ಕೂ ಅನ್ವಯಿಸುತ್ತದೆ. ಇದರಿಂದ ಗರ್ಭದಲ್ಲಿನ ಶಿಶುವಿನ ಬೆಳವಣಿಗೆಗೆ ಅನುಕೂಲವಾಗುತ್ತದೆ. ಸಂಶೋಧನೆ ಪ್ರಕಾರ, ಕ್ರಿಯಾಶೀಲರಾಗಿರುವ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳು ಬುದ್ಧಿವಂತಿಕೆ ಹೊಂದಿರುತ್ತವಂತೆ.