text
stringlengths
0
61.5k
4) ಮಾತು, ಸಂಗೀತ:
ಗರ್ಭದಲ್ಲಿರುವ ಶಿಶುಗಳಿಗೆ ತಮ್ಮ ತಾಯಿಯ ಧ್ವನಿಯ ಅನುಭವಾಗುತ್ತದೆ. ನೀವು ಮಾತನಾಡುತ್ತಿರುವುದು ಏನು ಎಂಬುದು ಅದಕ್ಕೆ ಗೊತ್ತಾಗದೇ ಹೋದರೂ, ನಿಮ್ಮ ಮಾತಿನಿಂದ ಅದು ಪ್ರಭಾವಿತಗೊಳ್ಳುತ್ತದೆ. ನೀವು ಹಾಡು ಹಾಡಿದಾಗಲೂ ಅದರ ಪ್ರಭಾವವು ಶಿಶುವಿನ ಮೇಲಾಗುತ್ತದೆ. ಶಿಶುಗಳಿಗೆ ಹಾಡು ಬಹಳ ಇಷ್ಟವಂತೆ. ಜೊತೆಗೆ, ಅದು ಶಿಶುವಿನ ಏಕಾಗ್ರತೆಗೆ ಸಹಾಯವಾಗುತ್ತದೆ. ಹೀಗಾಗಿ, ನೀವು ಒಳ್ಳೆಯ ಮಾತುಗಳನ್ನಾಡುತ್ತಿರಬೇಕು; ಹಾಡು ಹಾಡುತ್ತಿರಬೇಕು. ಹಾಡಲು ಬರದಿದ್ದರೂ ಒಳ್ಳೆಯ ಸಂಗೀತವನ್ನು ಕೇಳುತ್ತಿರಬೇಕು.
5) ಥೈರಾಯ್ಡ್ ಬಗ್ಗೆ ಹುಷಾರ್..!
ಮನುಷ್ಯನ ದೇಹಕ್ಕೆ ಥೈರಾಯ್ಡ್ ಬಹಳ ಮುಖ್ಯ. ಗರ್ಭಿಣಿಯರಲ್ಲಿ ಥೈರಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸವಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಥೈರಾಯ್ಡ್ ಪರೀಕ್ಷೆ ನಡೆಸಿ, ಅದರ ಪ್ರಮಾಣ ಸಹವಾಗಿದೆಯೇ ಎಂದು ತಿಳಿದುಕೊಳ್ಳಿ. ಥೈರಾಯ್ಡ್ ಕಡಿಮೆಯಾದರೆ ಸೋಡಿಯಂ ಅಂಶವಿರುವ ಆಹಾರಗಳನ್ನು ಸೇವಿಸಿ. ಅಯೋಡಿನ್'ಯುಕ್ತ ಉಪ್ಪು, ಯೋಗರ್ಟ್ (ಒಂದು ರೀತಿಯ ಮೊಸರು) ಸೇವಿಸಿ.
6) ವೈದ್ಯರ ಔಷಧವೂ ಮುಖ್ಯ:
ಗರ್ಭಿಣಿಯರಿಗೆ ಹಲವು ಪೌಷ್ಟಿಕಾಂಶಗಳು ಬೇಕಾಗುತ್ತವೆ. ಇವುಗಳ ಸೇವನೆಯಲ್ಲೂ ಸಮತೋಲನ ಇರಬೇಕಾಗುತ್ತದೆ. ಎಲ್ಲವನ್ನೂ ನೈಸರ್ಗಿಕ ಆಹಾರದಿಂದಲೇ ನಿಭಾಯಿಸುವುದು ಕಷ್ಟ. ಹೀಗಾಗಿ, ವೈದ್ಯರು ಗರ್ಭಿಣಿಯರಿಗೆ ಅಗತ್ಯ ಪೌಷ್ಟಿಕಾಂಶಗಳ ಮಾತ್ರೆಗಳನ್ನು ನೀಡಿರುತ್ತಾರೆ. ಅನೇಕರು ಇದನ್ನು ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷಿಸುತ್ತಾರೆ. ಆದರೆ, ಇದು ಸರಿಯಲ್ಲ. ವೈದ್ಯರು ನೀಡುವ ಪೌಷ್ಟಿಕಾಂಶದ ಟ್ಯಾಬ್ಲೆಟ್'ಗಳನ್ನು ತಪ್ಪದೇ ಸೇವಿಸಿ. ಇವು ಶಿಶು ಬೆಳವಣಿಗೆಗೆ ಸಹಕಾರಿಯಾಗುತ್ತವೆ.
7) ಬಿಸಿಲಿಗೆ ಮೈಯೊಡ್ಡಿ:
ದೇಹಕ್ಕೆ ವಿಟಮಿನ್ ಡಿ ಅತ್ಯವಶ್ಯ. ಸೂರ್ಯನ ರಶ್ಮಿಯಲ್ಲಿ ವಿಟಮಿನ್ ಡಿ ಪೋಷಕಾಂಶವಿರುತ್ತದೆ. ಗರ್ಭಿಣಿಯರು ದಿನಕ್ಕೆ ಕನಿಷ್ಠ 20 ನಿಮಿಷವಾದರೂ ಬಿಸಿಲಿಗೆ ಮೈಯೊಡ್ಡಬೇಕು ಎನ್ನುತ್ತಾರೆ ವೈದ್ಯರು.
8) ಹೊಟ್ಟೆಗೆ ಮಸಾಜ್:
ಗರ್ಭದಲ್ಲಿರುವ ಶಿಶುವಿಗೆ ಹೊರಗಿನ ಸ್ಪರ್ಶದ ಅನುಭವವೂ ಆಗುತ್ತದೆ. ಹೊಟ್ಟೆಯನ್ನು ಮುಟ್ಟಿದರೆ ಅದಕ್ಕೆ ಮಗು ರಿಯಾಕ್ಟ್ ಮಾಡುತ್ತದೆ. ತಾಯಿಯ ಸ್ಪರ್ಶ, ತಂದೆಯ ಸ್ಪರ್ಶದ ವ್ಯತ್ಯಾಸವನ್ನೂ ಅದು ಗ್ರಹಿಸಬಲ್ಲುದು. ಈ ಹಿನ್ನೆಲೆಯಲ್ಲಿ ಗರ್ಭಿಣಿಯ ಹೊಟ್ಟೆಯನ್ನು ಹಗುರವಾಗಿ ಮಸಾಜ್ ಮಾಡಿದಾಗ ಮಗುವಿಗೆ ಒಂದು ರೀತಿಯಲ್ಲಿ ಉತ್ತೇಜನ ಸಿಕ್ಕಂತಾಗುತ್ತದೆ. ಮಸಾಜ್'ಗೆ ಬಾದಾಮಿ ಎಣ್ಣೆ ಬಳಸಿದರೆ ಇನ್ನೂ ಒಳ್ಳೆಯದಂತೆ.
ಈಶ್ವರ ಚಂದ್ರ ವಿದ್ಯಾಸಾಗರ - ವಿಕಿಪೀಡಿಯ
(ಈಶ್ವರಚಂದ್ರ ವಿದ್ಯಾಸಾಗರ ಇಂದ ಪುನರ್ನಿರ್ದೇಶಿತ)
ಈಶ್ವರ ಚಂದ್ರ ವಿದ್ಯಾಸಾಗರ (ಸೆಪ್ಟೆಂಬರ್ ೨೬ ೧೮೨೦ - ಜುಲೈ ೨೯ ೧೮೯೦) ಮಹಾನ್ ವಿದ್ವಾಂಸರಾಗಿದ್ದ ಈಶ್ವರಚಂದ್ರರು ಅಷ್ಟೇ ಮಹಾನ್ ದೇಶಪ್ರೇಮಿಯಾಗಿದ್ದರು.ಬಂಗಾಳದ ಲೇಖಕ, ಸಮಾಜ ಸುಧಾರಕ. ಮಿಡ್ನಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಇವರ ಜನನ. ಒಂಬತ್ತನೆಯ ವಯಸ್ಸಿನಲ್ಲಿ ಇವರನ್ನು ಕಲ್ಕತ್ತೆಗೆ ಕರೆತಂದು ಅಲ್ಲಿನ ಸಂಸ್ಕøತ ಮಹಾಪಾಠಶಾಲೆಗೆ ಸೇರಿಸಲಾಯಿತು. ಇವರು ಕಷ್ಟಗಳ ನಡುವೆಯೇ ವ್ಯಾಸಂಗ ಮುಂದುವರಿಸಿದರು. 19ನೆಯ ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಿದ್ಯಾಸಾಗರರೆಂಬ ಪ್ರಶಸ್ತಿ ಗಳಿಸಿದರು. ಮೂವತ್ತನೆಯ ವಯಸ್ಸಿನಲ್ಲಿ ಫೋರ್ಟ್ ವಿಲಿಯಂ ಕಾಲೇಜಿನ ಮುಖ್ಯ ಪಂಡಿತರಾದರು. ಇವರು ಇಂಗ್ಲೀಷ್ ಭಾಷೆಯನ್ನೂ ಕಲಿತಿದ್ದರು. ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದ ಇವರನ್ನು ಬಂಗಾಳದ ಮಹಾನ್ ಹೋರಾಟಗಾರರಲ್ಲಿ ಒಬ್ಬರೆಂದು ಗುರುತಿಸುತ್ತಾರೆ. ಶಿಕ್ಷಣ ತಜ್ಞ, ತತ್ವಜ್ಞಾನಿ, ವ್ಯಾಪಾರಿ, ಬರಹಗಾರ, ಸಮಾಜ ಸುಧಾರಕ ಮತ್ತು ದಾನಿಯೂ ಆಗಿದ್ದರು. 1820—1891.
೩ ಸಣ್ಣ ಪುಸ್ತಕಗಳ
೪ =ಸೇವೆಗಳು
ಬೇತಾಳ ಪಂಚವಿಂಶತಿ ಎಂಬ ಇವರ ಬಂಗಾಳಿ ಗದ್ಯಕೃತಿ 1846ರಲ್ಲಿ ಪ್ರಕಟವಾಯಿತು. ಶಾಕುಂತಲ 1855ರಲ್ಲೂ ಸೀತಾಪರಿತ್ಯಾಗ 1862ರಲ್ಲೂ ಬೆಳಕಿಗೆ ಬಂದುವು. ಕೊನೆಯ ಪುಸ್ತಕ ಇವರ ಅತ್ಯುತ್ಕøಷ್ಟ ಕೃತಿಯೆಂದು ಪರಿಗಣಿತವಾಗಿದೆ. ಈಶ್ವರಚಂದ್ರರು ಆ ಕಾಲಕ್ಕೆ ಕ್ರಾಂತಿಕಾರಿಯೆನಿಸಿದ್ದ ವಿಚಾರ ತಳೆದಿದ್ದರು. ಇವರು ಫೋರ್ಟ್ ವಿಲಿಯಮ್ ಕಾಲೇಜಿನ ಪ್ರಿನ್ಸಿಪಾಲರಾದಾಗ, ಅಲ್ಲಿ ಬ್ರಾಹ್ಮಣೇತರರಿಗೆ ಸಂಸ್ಕøತ ವಿದ್ಯಾಭ್ಯಾಸದ ಅವಕಾಶವಿರಲಿಲ್ಲ. ಇಲ್ಲಿ ನೆಲೆಸಿದ್ದ ಕೆಲವು ಐರೋಪ್ಯರಿಗೆ ಸಂಸ್ಕøತ ಪಂಡಿತರು ಖಾಸಗಿಯಾಗಿ ಸಂಸ್ಕøತ ಪಾಠ ಹೇಳುವ ಪದ್ಧತಿ ಇತ್ತು; ಮತ್ತು ಬಂಗಾಳದ ವೈದ್ಯ (ವೈಶ್ಯ) ಜಾತಿಯವರಿಗೂ ಸಂಸ್ಕøತ ಕಲಿಯುವ ಅವಕಾಶವಿತ್ತು. ಸರ್ಕಾರ ಸ್ಥಾಪಿಸಿದ ಈ ಕಾಲೇಜಿನಲ್ಲಿ ಬ್ರಾಹ್ಮಣೇತರರಿಗೆ ಸಂಸ್ಕøತ ಕಲಿಯಲು ಯಾವ ನಿಷೇಧವೂ ಇರಬಾರದೆಂದು ಈಶ್ವರಚಂದ್ರರು ತೀವ್ರವಾಗಿ ವಾದಿಸಿದರು. ತಮ್ಮ ನಿಲುವನ್ನು ಒಪ್ಪದಿದ್ದರೆ ತಮ್ಮ ಹುದ್ದೆ ಬಿಡುವುದಾಗಿಯೂ ಹೇಳಿದರು. ಹಳೆಯ ಕಾಲದ ಸಂಪ್ರದಾಯ ಶರಣರಿಂದ ಇದಕ್ಕೆ ವಿರೋಧವಿದ್ದರೂ ಈಶ್ವರಚಂದ್ರರ ದಿಟ್ಟ ನಿಲುವಿಗೆ ಜಯ ದೊರಕಿತು.
ತಾವು ವ್ಯಾಸಂಗ ಮಾಡುತ್ತಿದ್ದ ಸಂಸ್ಕøತ ಮಹಾಪಾಠಶಾಲೆಯಲ್ಲಿ ವ್ಯಾಕರಣ ಪ್ರಾಧ್ಯಾಪಕರ ಜಾಗ ತೆರವಾದಾಗ ಅದಕ್ಕೆ ಈಶ್ವರಚಂದ್ರರೇ ಅರ್ಹರೆಂದು ಕಾಲೇಜಿನ ತಮ್ಮ ವ್ಯವಸ್ಥಾಪಕರು ತೀರ್ಮಾನಿಸಿ ಅವರಿಗೆ ಆಮಂತ್ರಣವನ್ನಿತ್ತರು. ಇದರಿಂದ ಮಾಸಿಕ ವೇತನ ರೂ. 50 ರಿಂದ ರೂ. 90ಕ್ಕೆ ವೃದ್ಧಿಯಾಗುವ ಅವಕಾಶವಿತ್ತು. ಆದರೆ ಈಶ್ವರಚಂದ್ರರು ಈ ಹುದ್ದೆಗೆ ತಮಗಿಂತಲೂ ತಾರಾನಾಥ ತರ್ಕವಾಚಸ್ಪತಿಯವರೇ ಹೆಚ್ಚು ಅರ್ಹರೆಂದು ಬಗೆದರು. ತಮಗೆ ಬಂದ ಆಮಂತ್ರಣವನ್ನು ನಮ್ರತೆಯಿಂದ ನಿರಾಕರಿಸಿದ್ದು ಮಾತ್ರವಲ್ಲ ತಾರಾನಾಥರು ವಾಸಿಸುತ್ತಿದ್ದ, ನೂರು ಮೈಲಿ ದೂರದಲ್ಲಿದ್ದ ಸ್ಥಳಕ್ಕೆ ತಾವೇ ಕಾಲುನಡಿಗೆಯಿಂದ ಹೋಗಿ ಅವರನ್ನು ಈ ಹುದ್ದೆಗೆ ಒಪ್ಪಿಸಿದರು. ಈಶ್ವರಚಂದ್ರರ ನಿಸ್ಪøಹತೆಗೂ ದೈಹಿಕ ಶ್ರಮಕ್ಕೆ ಹಿಂಜರಿಯದ ಸ್ವಭಾವಕ್ಕೂ ಇದೊಂದು ಉತ್ತಮ ನಿದರ್ಶನ. ತಾರಾನಾಥರೂ ಅವರ ತಂದೆಯವರೂ ಈಶ್ವರಚಂದ್ರರನ್ನು ಮಾನುಷರೂಪಿ ದೈವವೆಂದು ಹೊಗಳಿದರೆಂದು ಹೇಳಲಾಗಿದೆ.
ಭಾರತೀಯ ಮಹಿಳೆಯರ ಉದ್ಧಾರಕ್ಕಾಗಿ ಈಶ್ವರಚಂದ್ರರು ಕೈಗೊಂಡ ಕಾರ್ಯಕ್ರಮಗಳು ಅವರನ್ನು ಚಿರಸ್ಮರಣೀಯರನ್ನಾಗಿ ಮಾಡಿವೆ. ಸ್ತ್ರೀ ವಿದ್ಯಾಭ್ಯಾಸಕ್ಕಾಗಿ ಚಳುವಳಿ ನಡೆಸುತ್ತಿದ್ದ ಡ್ರಿಂಕ್ ವಾಟರ್ ಬೆಥೂನ್ ಎಂಬುವರೊಂದಿಗೆ ವಿದ್ಯಾಸಾಗರರೂ ಸೇರಿದ್ದರು. ಬೆಥೂನರ ಹೆಸರಿನಲ್ಲಿ ನಡೆಯುತ್ತಿದ್ದ ಬಾಲಿಕಾಶಾಲೆಯ ವ್ಯವಸ್ಥೆಯ ಹೊಣೆ 1851ರಲ್ಲಿ ಇವರ ಮೇಲೆ ಬಿತ್ತು. ರೊಸೊಮೊಯ್‍ದತ್ತರು ಕಲ್ಕತ್ತೆಯ ಸಂಸ್ಕøತ ಮಹಾಪಾಠಶಾಲೆಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯಿತ್ತಾಗ ಪ್ರಿನ್ಸಿಪಾಲರ ಹುದ್ದೆಯೊಂದು ನಿರ್ಮಿತವಾಗಿ, ಅದಕ್ಕೆ ವಿದ್ಯಾಸಾಗರರ ನೇಮಕವಾಯಿತು. 1854ರ ಕಾಯಿದೆಯನ್ವಯ ಇವರು ಬಂಗಾಳದಲ್ಲಿ ಖಾಸಗಿ ಶಾಲೆಗಳನ್ನು ಸ್ಥಾಪಿಸಿದರು. 1858ರಲ್ಲಿ ವಿದ್ಯಾಸಾಗರರು ಸರ್ಕಾರದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಲ್ಕತ್ತೆಯ ಖಾಸಗಿ ಕಾಲೇಜೊಂದರ ವ್ಯವಸ್ಥಾಪಕರಾದರು.
ಸಣ್ಣ ಪುಸ್ತಕಗಳ[ಬದಲಾಯಿಸಿ]
ಹೆಣ್ಣುಮಕ್ಕಳ ಮತ್ತೊಂದು ಸಮಸ್ಯೆ ಈಶ್ವರಚಂದ್ರರ ಮನಸ್ಸನ್ನು ಬಲವಾಗಿ ಬಾಧಿಸುತ್ತಿತ್ತು. ಬಾಲ್ಯವಿವಾಹ ಪದ್ಧತಿಯಿರುವ ಹಿಂದೂ ಜಾತಿಗಳಲ್ಲಿ ಅನೇಕರು ಎಳೆ ವಯಸ್ಸಿನಲ್ಲೇ ವಿಧವೆಯಾಗುವ ಸಂಭವವಿತ್ತು. ಬಾಲವಿಧವೆಯ ಬಾಳಿನ ನೋವನ್ನು ಈಶ್ವರಚಂದ್ರರು ಮನಗಂಡರು. ವಿಧವಾ ವಿವಾಹದ ಪರವಾಗಿ ಇವರು ತೀವ್ರವಾಗಿ ಪ್ರಚಾರ ಕೈಗೊಂಡರು. ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಗಾಧ ಪಾಂಡಿತ್ಯ ಪಡೆದ ಈಶ್ವರಚಂದ್ರರು ಇಂಥ ಪುನರ್ವಿವಾಹಕ್ಕೆ ಧರ್ಮಶಾಸ್ತ್ರಗಳಿಂದ ಯಾವ ಅಡ್ಡಿಯೂ ಇಲ್ಲವೆಂದು ಸಾರಿದರು. ಈ ವಿಚಾರವನ್ನು ಪ್ರಚುರಪಡಿಸಲು ಬಂಗಾಳಿ ಭಾಷೆಯಲ್ಲಿ ಸಣ್ಣ ಪುಸ್ತಕಗಳನ್ನು ಬರೆದರು: ಉಪನ್ಯಾಸಗಳನ್ನು ಕೊಟ್ಟರು; ಒಂದು ಆಂದೋಲನವನ್ನೇ ಪ್ರಾರಂಭಿಸಿದರು. ಪ್ರಾಯಶಃ ಈ ಸುಧಾರಣೆಯೇ ಈಶ್ವರಚಂದ್ರರಿಗೆ ಅಖಿಲ ಭಾರತ ಕೀರ್ತಿಯನ್ನು ಸಂಪಾದಿಸಿಕೊಟ್ಟಿತು. ಮಹರ್ಷಿ ದೇವೇಂದ್ರನಾಥ ಠಾಕೂರರು ಸ್ಥಾಪಿಸಿದ ತತ್ವ ಬೋಧಿನಿ ಪತ್ರಿಕೆಯಲ್ಲಿ ಈಶ್ವರಚಂದ್ರರು 1854ರಲ್ಲಿ ಈ ಸುಧಾರಣೆಯನ್ನು ಸಮರ್ಥಿಸಿ ಒಂದು ಲೇಖನ ಬರೆದರು. 1855ರ ಜನವರಿಯಲ್ಲಿ ಈ ವಿಷಯವಾಗಿ ಒಂದು ಸಣ್ಣ ಪುಸ್ತಕವನ್ನೇ ಪ್ರಕಟಿಸಿದರು. ಇದೊಂದು ವಾದಗ್ರಸ್ಥ ವಿಷಯವೇ ಆಯಿತು. ಅನೇಕ ಪಂಡಿತರು ಇದನ್ನು ವಿರೋಧಿಸಿ ಲೇಖನ ಬರೆದರು. 1855ರ ಅಕ್ಟೋಬರ್ ತಿಂಗಳಲ್ಲಿ ಈಶ್ವರಚಂದ್ರರು ಈ ಆಕ್ಷೇಪಣೆಗಳಿಗೆಲ್ಲ ಉತ್ತರ ಕೊಟ್ಟು ವಿದ್ವತ್ಪೂರ್ಣವೂ ಗಂಭೀರವೂ ಆದ ಮತ್ತೊಂದು ಸಣ್ಣ ಪುಸ್ತಕವನ್ನು ಪ್ರಕಟಪಡಿಸಿದರು. ಆ ತಿಂಗಳ 4ನೆಯ ದಿನಾಂಕದಂದು ಸುಮಾರು 1,000 ಜನರ ಸಹಿಯಿದ್ದ ಮನವಿಯೊಂದನ್ನು ಸರ್ಕಾರದ ಶಾಸನ ಸಭೆಯ ಕಾರ್ಯದರ್ಶಿಗಳಿಗೆ ಕಳುಹಿಸಿದರು. ಹಿಂದೂ ವಿಧವೆಯ ವಿವಾಹಕ್ಕೆ ಯಾವ ಅಡಚಣೆಯೂ ಇಲ್ಲದಂತೆ ಹಾಗೂ ವಿವಾಹಿತರ ಸಂತಾನದ ಹಕ್ಕುಬಾಧ್ಯತೆಗೆ ಧಕ್ಕೆ ಒದಗದಂತೆ ಸೂಕ್ತ ಕಾಯಿದೆ ರಚಿಸಬೇಕೆಂದು ಮನವಿಯಲ್ಲಿ ಪ್ರಾರ್ಥಿಸಲಾಗಿತ್ತು. 1855ರ ನವೆಂಬರ್ 17ನೆಯ ತಾರೀಖು ಕಲ್ಕತ್ತೆಯ ಶಾಸನಸಭೆಯಲ್ಲಿ ಈ ವಿಷಯವಾಗಿ ಜೆ.ಪಿ.ಗ್ರ್ಯಾಂಟ್ ಒಂದು ವಿಧೇಯಕ ಮಂಡಿಸಿದರು. ಇದು ಇತರ ಪ್ರಾಂತ್ಯಗಳ ಮುಖಂಡರ ಗಮನ ಸೆಳೆಯಿತು. ಪುಣೆ, ಸಿಕಂದರಾಬಾದ್, ಸತಾರಾ, ಧಾರವಾಡ, ಮುಂಬಯಿ, ಅಹಮದಾಬಾದ್, ಸೂರತ್ ಮತ್ತು ಬಂಗಾಳದ ಅನೇಕ ನಗರಗಳಿಂದ ಈ ಮಸೂದೆಯ ಪರವಾಗಿಯೂ ವಿರುದ್ಧವಾಗಿಯೂ ಸರ್ಕಾರಕ್ಕೆ ಪತ್ರಗಳು ಬಂದುವು. ವಿರುದ್ಧವಾದುವೇ ಹೆಚ್ಚು ಸಂಖ್ಯೆಯಲ್ಲಿದ್ದವೆನ್ನಬಹುದು. 1856ರ ಜುಲೈ 26ನೆಯ ತಾರೀಖು ಗೌರ್ನರ್ ಜನರಲನ ಅನುಮತಿ ಪಡೆದು ಇದು ಅಧಿನಿಯಮವಾಯಿತು. ಇದಕ್ಕನುಸಾರವಾಗಿ ಮೊದಲನೆಯ ಪುನರ್ವಿವಾಹ ಕಲ್ಕತ್ತೆಯಲ್ಲಿ ಅದೇ ಡಿಸೆಂಬರ್ 7ರಂದು ನೆರವೇರಿತು. ವಿದ್ಯಾಸಾಗರರೂ ಇತರ ಸುಧಾರಕರೂ ಈ ವಿವಾಹದಲ್ಲಿ ಬಹಳ ಆಸಕ್ತಿ ವಹಿಸಿದರು. ಅನಂತರವೂ ಒಂದೆರಡು ವಿವಾಹ ಜರುಗಿದುವು. ಈ ಸುಧಾರಣೆಯಲ್ಲಿ ನಿರ್ಭೀತರಾಗಿ ಮುಂದುವರಿದವರೆಂದರೆ ಬ್ರಹ್ಮ ಸಮಾಜದವರು. ಹಿಂದೂ ಸಮಾಜದಲ್ಲಿ ಈ ವಿವಾಹಗಳು ಕೋಲಾಹಲವನ್ನೇ ಎಬ್ಬಿಸಿದುವು. ಸುಧಾರಣಾವಾದಿಗಳೂ ವಿರೋಧಿಗಳೂ ಲೇಖನ ಬರೆದು ತೀವ್ರವಾದ ವಾದವಿವಾದಗಳಲ್ಲಿ ತೊಡಗಿದರು. ವಿರೋಧಿಗಳು ಸುಧಾರಕರನ್ನು ಹೆದರಿಸಿ, ಅವರ ಮೇಲೆ ಹಿಂಸಾಕೃತ್ಯ ನಡೆಸುವುದಕ್ಕೂ ಹಿಂಜರಿಯಲಿಲ್ಲ, ಈಶ್ವರಚಂದ್ರರು ಕಲ್ಕತ್ತೆಯಲ್ಲಿ ಸುರಕ್ಷಿತವಾಗಿ ಓಡಾಡುವುದೂ ಕಷ್ಟವಾಗಿತ್ತು. ಆದರೆ ಇದರಿಂದ ಅವರು ಭೀತರಾಗಲಿಲ್ಲ. ಸ್ಥೈರ್ಯದಿಂದ ಈ ಸುಧಾರಣಾ ಕಾರ್ಯವನ್ನು ಮುಂದುವರಿಸಿದರು. ತಮ್ಮ ಆಯುಷ್ಯದಲ್ಲಿ ತಾವು ನಡೆಸಿದ ಕಾರ್ಯಗಳಲ್ಲಿ ಇದೇ ಮಹತ್ತರವಾದದ್ದೆಂದು ಅವರ ಅಭಿಪ್ರಾಯವಾಗಿತ್ತು. ಈ ಸುಧಾರಣೆಯ ಪ್ರಭಾವ ಬಂಗಾಳದಾಚೆಗೂ ಹಬ್ಬಿತು. ಮಹಾರಾಷ್ಟ್ರದಲ್ಲಿ ರಾನಡೆ, ಮಲಬಾರಿ, ವಿಷ್ಣುಶಾಸ್ತ್ರಿ, ಕರ್ವೆ ಮುಂತಾದವರು ಇದಕ್ಕೆ ಬೆಂಬಲ ಕೊಟ್ಟರು. ವಿಧವಾ ವಿವಾಹದ ಪ್ರಚಾರಕ್ಕಾಗಿಯೇ 1861ರಲ್ಲಿ ಒಂದು ಸಂಸ್ಥೆ ಸ್ಥಾಪಿತವಾಯಿತು. 1899ರಲ್ಲಿ ಕರ್ವೆಯವರು ಹಿಂದೂ ವಿಧವೆಯರ ವಸತಿ ಗೃಹವೊಂದನ್ನು ಸ್ಥಾಪಿಸಿದರು. ಆಂಧ್ರದಲ್ಲಿ ಈ ಸುಧಾರಣೆಗಾಗಿ ಬಹಳ ಶ್ರಮಿಸಿದವರೆಂದರೆ ವೀರೇಶಲಿಂಗಂ ಪಂತುಲು. ಇವರೆಲ್ಲರಿಗೂ ಈಶ್ವರಚಂದ್ರರೇ ಸ್ಫೂರ್ತಿ ಕೇಂದ್ರ. ಇಂಥ ವಿವಾಹ ಏರ್ಪಡಿಸುವ ಸಲುವಾಗಿ ಈಶ್ವರಚಂದ್ರರು ಬಹಳ ಕಷ್ಟನಷ್ಟ ಅನುಭವಿಸಿದರು. ತಮ್ಮ ಸ್ವಂತ ಹಣವನ್ನು ಇವುಗಳಿಗಾಗಿ ಒದಗಿಸುತ್ತಿದ್ದು ಕೊನೆಗೆ ಸಾಲದ ಭಾರವನ್ನೂ ಹೊತ್ತರು.[೧] ಬಂಗಾಳದ ಕುಲೀನರೆನ್ನಿಸಿಕೊಂಡವರಲ್ಲಿದ್ದ ಬಹುಪತ್ನೀತ್ವವನ್ನು ತೊಡೆದುಹಾಕುವುದಕ್ಕ್ಕೂ ಈಶ್ವರಚಂದ್ರರು ಶ್ರಮಿಸಿದರು. ಸಾಮಾನ್ಯ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರು ತಮ್ಮ ಹೆಣ್ಣುಮಕ್ಕಳನ್ನು ಶ್ರೇಷ್ಠ ಕುಲದವರಿಗೆ ಕೊಡಬೇಕೆಂಬ ಹಂಬಲವೂ ಕನ್ಯಾವಿವಾಹ ನಿರ್ಬಂಧವೂ ಇದಕ್ಕೆ ಕಾರಣ. ಕುಲೀನರೆನಿಸಿಕೊಂಡ ಗಂಡಸರು ಎಷ್ಟು ಮದುವೆ ಮಾಡಿಕೊಳ್ಳುವುದಕ್ಕೂ ನಿರ್ಬಂಧವಿರಲಿಲ್ಲವಷ್ಟೇ ಅಲ್ಲ, ಅದೊಂದು ಲಾಭದಾಯಕ ವ್ಯಾಪಾರವೂ ಆಗಿತ್ತು. ಈ ವ್ಯಾಪಾರದಲ್ಲಿ ನಿರತರಾಗಿದ್ದ ದಳ್ಳಾಳಿಗಳಿಗೂ ಹೇರಳ ಲಾಭ ಸಿಗುತ್ತಿತ್ತು. ಈ ಕುಲೀನ ಗಂಡಸರು ಸತ್ತರೆ ಏಕಕಾಲಕ್ಕೆ ಅನೇಕರು ವಿಧವೆಯರಾಗುತ್ತಿದ್ದರು. ಇಂಥವರಲ್ಲಿ ಬಾಲವಿಧವೆಯರೂ ಅನೇಕ. ಆದ್ದರಿಂದ ವಿಧವಾ ವಿವಾಹದ ಸುಧಾರಣೆಗೂ ಈ ಬಹುಪತ್ನೀತ್ವ ವಿರೋಧಕ್ಕೂ ನಿಕಟ ಸಂಬಂಧವಿತ್ತು.
=ಸೇವೆಗಳು[ಬದಲಾಯಿಸಿ]
ಈಶ್ವರಚಂದ್ರರು 25,000 ಜನರ ಸಹಿಯಿದ್ದ ಮನವಿಯೊಂದನ್ನು 1855ರ ಡಿಸೆಂಬರ್ 27ರಂದು ಸರ್ಕಾರಕ್ಕೆ ಸಮರ್ಪಿಸಿದರು. ಇದರ ಬಗೆಗೆ ಸರ್ಕಾರದವರು ಸಹಾನುಭೂತಿಯುಳ್ಳವರಾಗಿದ್ದರು. ಆದರೆ 1857ರಲ್ಲಿ ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸಂಭವಿಸಿದ್ದರಿಂದ ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಲಿಲ್ಲ. 1863ರಲ್ಲಿ 21,000 ಜನರ ಸಹಿಯಿದ್ದ ಇನ್ನೊಂದು ಮನವಿಯನ್ನು ಸರ್ಕಾರಕ್ಕೆ ಒಪ್ಪಿಸಲಾಯಿತು. 1866ರಲ್ಲಿ ವಿದ್ಯಾಸಾಗರರು ಮತ್ತೊಂದು ಮನವಿಯನ್ನು ಸಿದ್ಧಗೊಳಿಸಿ, ಅದಕ್ಕೆ 21,000 ಜನರ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಕೊಟ್ಟರು. ಆ ವರ್ಷದ ಮಾರ್ಚ್ 19ರಂದು ಈಶ್ವರಚಂದ್ರರು ಇನ್ನು ಕೆಲವು ಪ್ರಮುಖರೊಂದಿಗೆ ಸರ್ಕಾರಕ್ಕೆ ನಿಯೋಗ ಹೋದರು. ಆಗ ಸರ್ಕಾರ ಈ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ಒಂದು ಸಮಿತಿ ನೇಮಿಸಿತು. ಬಹುಪತ್ನೀ ವಿವಾಹವನ್ನು ಕಾಯಿದೆಯ ಮೂಲಕ ನಿಷೇಧಿಸುವ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಈ ವಿಚಾರವಾಗಿ ಕಾಯಿದೆ ಮಾಡುವುದು ಉಚಿತವಲ್ಲವೆಂದು ಇಂಗ್ಲೆಂಡ್ ಸರ್ಕಾರದ ಇಂಡಿಯಾ ಕಾರ್ಯದರ್ಶಿಯ ಅಭಿಪ್ರಾಯವಾಗಿತ್ತು. ಜನರಲ್ಲಿ ವಿದ್ಯಾಪ್ರಸಾರವಾದಂತೆಲ್ಲ ಈ ದುಷ್ಟಪದ್ಧತಿ ತಾನಾಗಿಯೇ ಮಾಯವಾಗುವುದೆಂಬ ವಿಶ್ವಾಸ ಅನೇಕರಲ್ಲಿತ್ತು. ಅಂತೂ ಈ ವಿಷಯದಲ್ಲಿ ಯಾವ ಕಾಯಿದೆ ರಚಿಸಲೂ ಕಾಲ ಒದಗಿಬರಲಿಲ್ಲ. ಈಶ್ವರಚಂದ್ರರು ಮಾತ್ರ ಸುಮ್ಮನಿರಲಿಲ್ಲ. ಮುಂದೆಯೂ ಈ ಬಗ್ಗೆ ಪ್ರಚಾರ ಮಾಡುತ್ತಲೇ ಇದ್ದರು.
ತ್ವಚೆಯ ಬಂಗು ನಿವಾರಣೆಗೆ ಪ್ರಾಕೃತಿಕ ಪರಿಹಾರ | best-natural-ingredients-to-fade-away-dark-spots - Kannada BoldSky
ತ್ವಚೆಯ ಬಂಗು ನಿವಾರಣೆಗೆ ಪ್ರಾಕೃತಿಕ ಪರಿಹಾರ
| Updated: Tuesday, August 20, 2019, 16:53 [IST]
ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಅಸ್ಥೆಯನ್ನು ವಹಿಸಿರುತ್ತಾರೆ. ಮುಖದಲ್ಲಿ ಮೂಡುವ ಸಣ್ಣ ಗುಳ್ಳೆ ಕೂಡ ಅವರನ್ನು ಇನ್ನಷ್ಟು ಚಿಂತೆಗೆ ತಳ್ಳುತ್ತದೆ. ಅಲ್ಲದೆ ಸಾಧ್ಯವಾದಷ್ಟು ಇದಕ್ಕೆ ವಿಶೇಷ ಕಾಳಜಿ ವಹಿಸಿ ಬ್ಯೂಟಿಪಾರ್ಲರ್‌ಗೆ ಹೋಗಿ ಬೇಕಾದ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಮುಖದ ಕಾಳಜಿಯನ್ನು ನೀವು ಹೆಚ್ಚಿನ ಖರ್ಚು ಮಾಡದೆಯೇ ಮನೆಯಲ್ಲಿಯೇ ದೊರೆಯುವ ಸೌಂದರ್ಯ ಪರಿಕರಗಳಿಂದ ಮಾಡಿಕೊಳ್ಳಬಹುದು ಎಂಬ ಕಿವಿಮಾತನ್ನು ನಾವು ಇಲ್ಲಿ ನೀಡುತ್ತಿದ್ದೇವೆ.
ನಿಮ್ಮ ಮುಖದಲ್ಲಿ ನಿಮ್ಮ ಸೌಂದರ್ಯವನ್ನು ಹಾಳುಗೆಡಹುವ ಯಾವುದೇ ಅಂಶಗಳಾಗಿರಬಹುದು ಉದಾಹರಣೆಗೆ, ಮೊಡವೆ, ಗುಳ್ಳೆಗಳು, ಡಾರ್ಕ್ ಸ್ಪಾಟ್‌ಗಳು ಅಥವಾ ಬಂಗು (ಕಪ್ಪು ಕಲೆ)ಗಳನ್ನೆಲ್ಲಾ ನೀವು ನೈಸರ್ಗಿಕವಾಗಿ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ನಮ್ಮ ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ನೈಸರ್ಗಿಕ ಉತ್ಪನ್ನಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ. ನೀವು ನಿತ್ಯವು ಉಪಯೋಗಿಸುವ ಹಣ್ಣು ತರಕಾರಿಗಳು ನಿಮ್ಮ ತ್ವಚೆಯ ಮೇಲೆ ಜಾದೂವನ್ನೇ ಮಾಡಲಿವೆ. ಹಾಗಿದ್ದರೆ ಈ ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ಕಪ್ಪು ಕಲೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ...
ಇಂತಹ ಗಾಢ ವರ್ತುಲಗಳು ನಿಮ್ಮ ಮುಖವನ್ನು ಆವರಿಸಿಕೊಳ್ಳುವುದು ಕಲುಷಿತ ವಾತಾವರಣ, ಧೂಳು, ವಯಸ್ಸಾಗುವಿಕೆ, ಹೆಚ್ಚು ರಾಸಾಯನಿಕ ಪ್ರಸಾಧನಗಳ ಬಳಕೆ ಮೊದಲಾದ ಕಾರಣಗಳಿಂದ ಆಗಿದೆ. ಹಾಗಿದ್ದರೆ ಇಂತಹ ಕಪ್ಪು ವರ್ತುಲಗಳು ಇಲ್ಲವೇ ಡಾರ್ಕ್ ಸ್ಪಾಟ್‌ಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯೋಣ....
*ಪಪ್ಪಾಯದ ತಿರುಳನ್ನು ತೆಗೆದುಕೊಳ್ಳಿ
*ಹಾನಿಯಾಗಿರುವ ಸ್ಥಳಕ್ಕೆ ಇದನ್ನು ಹಚ್ಚಿಕೊಳ್ಳಿ
*30 ನಿಮಿಷಗಳ ಕಾಲ ಹಾಗೆಯೇ ಬಿಡಿ
*ನಿತ್ಯವೂ ಈ ವಿಧಾನವನ್ನು ಅನುಸರಿಸಿ
*ತಂಪಾದ ಮಜ್ಜಿಗೆಯನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್‌ ಇರುವ ಕಡೆ ಹಚ್ಚಿ
*ಇದು 15 ನಿಮಿಷ ಹಾಗೆಯೇ ಇರಲಿ
*ದಿನಕ್ಕೊಮ್ಮೆ ಈ ವಿಧಾನವನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್‌ನಿಂದ ರಕ್ಷಣೆ ಪಡೆದುಕೊಳ್ಳಿ
ಟೊಮೇಟೊ ಪಲ್ಪ್
*ಟೊಮೇಟೋದಿಂದ ಪಲ್ಪ್ ಹೊರತೆಗೆಯಿರಿ
*ಕಪ್ಪು ಕಲೆ ಇರುವ ಕಡೆ ಹಚ್ಚಿ
*15 ನಿಮಿಷ ಇದನ್ನು ಹಾಗೆಯೇ ಬಿಡಿ
*ನಿತ್ಯವೂ ಈ ವಿಧಾನವನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್‌ನಿಂದ ಮುಕ್ತಿ ಪಡೆಯಿರಿ
ಲಿಂಬೆ ರಸವನ್ನು ಡಾರ್ಕ್ ಸ್ಪಾಟ್ ಇರುವ ಕಡೆ ಹಚ್ಚಿಕೊಳ್ಳಿ
10-15 ನಿಮಿಷಗಳ ಕಾಲ ಹಾಗೆಯೇ ಬಿಡಿ
ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ
ನಿತ್ಯವೂ ಈ ವಿಧಾನವನ್ನು ಮುಖಕ್ಕೆ ಮಾಡುವುದರಿಂದ ಡಾರ್ಕ್ ಸ್ಪಾಟ್ ಅನ್ನು ನಿವಾರಿಸಿಕೊಳ್ಳಬಹುದು.
ಇನ್ನೊಂದು ಟ್ರಿಕ್ಸ್ ಇದೆ ನೋಡಿ..
ಉಪಯೋಗಿಸುವ ವಿಧಾನ ಒಂದು ಚಮಚ ಬ್ರೌನ್ ಶುಗರ್ ಅನ್ನು ಮೊಟ್ಟೆಯ ಬಿಳಿಯ ಅಂಶದೊಂದಿಗೆ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಚಮಚ ಲಿಂಬೆ
ರಸವನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ನಂತರ ತಿಳಿನೀರಿನಿಂದ
ಮುಖವನ್ನು ಸ್ವಚ್ಛಗೊಳಿಸಿ.
ವಿಟಮಿನ್ ಇ ಕ್ಯಾಪ್ಸುಲ್‌ನಿಂದ ಎಣ್ಣೆಯನ್ನು ಹೊರತೆಗೆಯಿರಿ
ಕಪ್ಪು ಕಲೆ ಸುತ್ತ ಇದನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಯಿರಿ
ಡಾರ್ಕ್ ಸ್ಪಾಟ್‌ನಿಂದ ಮುಕ್ತಿ ಪಡೆದುಕೊಳ್ಳಲು ದಿನಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ
ಆಲೂಗಡ್ಡೆಯಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ ಸತ್ವ, ಪೊಟಾಷಿಯಮ್, ಮೆಗ್ನೀಷಿಯಮ್, ಜಿಂಕ್ ಮತ್ತು ಫಾಸ್ಫರಸ್ ಸತ್ವಗಳು ಹೇರಳವಾಗಿದ್ದು ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ಬಣ್ಣವನ್ನು ಅಂದಗೊಳಿಸುವ ಗುಣ ಹೊಂದಿದೆ. ವಿಟಮಿನ್-ಬಿ-ಕಾಂಪ್ಲೆಕ್ಸ್ ಭಾಗವಾದ ನಿಯಾಸಿನ್ ಅಮೈಡ್ ನಿಂದ ಜೀವಕೋಶಗಳು ನವೀಕರಣಗೊಳ್ಳಲು ಹೆಚ್ಚು ನೆರವಾಗುತ್ತದೆ.
ಆಲೂಗಡ್ಡೆಯ ಹೋಳುಗಳನ್ನು ಮುಖದ ಮೇಲೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ಆಲೂಗಡ್ಡೆಯ ಹೋಳುಗಳು ಒಣಗಿದಲ್ಲಿ ಮತ್ತೊಂದು ತಾಜಾ ಹೋಳನ್ನು ಬಳಸಿ.
ಒಂದು ಕಪ್‌ನಲ್ಲಿ ಒಂದು ದೊಡ್ಡಚಮಚ ಓಟ್ಸ್ ಪುಡಿ, ಎರಡು ದೊಡ್ಡಚಮಚ ಲಿಂಬೆರಸ ಮತ್ತು ಒಂದು ದೊಡ್ಡಚಮಚ ಮೊಸರು ಹಾಕಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಈಗತಾನೇ ತೊಳೆದು ಒರೆಸಿದ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಕಪ್ಪುಬಣ್ಣಕ್ಕೆ ಕಾರಣವಾದ ವರ್ಣದ್ರವ್ಯಗಳನ್ನು ತಿಳಿಗೊಳಿಸುವ ಗುಣ ಹೊಂದಿರುವ ಕಾರಣ ಮುಖದ ಮೇಲಿರುವ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ಸುಮಾರು ಹತ್ತರಿಂದ ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನದಲ್ಲೊಂದು ಬಾರಿ, ರಾತ್ರಿ ಮಲಗುವ ಮುನ್ನ ಪಾಲಿಸಿ. ಸುಮಾರು ನಾಲ್ಕರಿಂದ ಆರು ವಾರಗಳಲ್ಲಿ ಉತ್ತಮವಾದ ಫಲಿತಾಂಶ ಕಂಡುಬರುತ್ತದೆ.
ಕಿತ್ತಳೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ಮುಖದ ಮತ್ತು ಕುತ್ತಿಗೆಯ ಕಲೆಗಳನ್ನು ನಿವಾರಿಸಲೂ ಶಕ್ತವಾಗಿದೆ. ದಿನಕ್ಕೊಂದು ಲೋಟ ಕಿತ್ತಳೆ ರಸವನ್ನು ಕುಡಿಯುವ ಜೊತೆಗೇ ಕಿತ್ತಳೆಯ ಸಿಪ್ಪೆಯನ್ನು ಹಿಸುಕಿದರೆ ಚಿಮ್ಮುವ ದ್ರವವನ್ನು ಕಲೆಗಳ ಮೇಲೆ ಬೀಳುವಂತೆ ಮಾಡುವ ಮೂಲಕ ಅಥವಾ ಕಿತ್ತಳೆಸಿಪ್ಪೆಯ ಮೇಲ್ಭಾಗವನ್ನು ಕೆರೆದು ತೆಗೆದು ಮಿಕ್ಸಿಯಲ್ಲಿ ಅರೆದು ಮುಖಲೇಪದಂತೆ ಹಚ್ಚಿಕೊಳ್ಳುವ ಮೂಲಕವೂ ಉತ್ತಮ ಫಲಿತಾಂಶ ಕಂಡುಬರುತ್ತದೆ. ಈ ವಿಧಾನವನ್ನೂ ದಿನಕ್ಕೊಂದು ಬಾರಿ ಅನುಸರಿಸಬಹುದು.
ಹಸಿಹಾಲನ್ನು ನೆನೆಸಿದ ಹತ್ತಿಯಲ್ಲಿ ಅದ್ದಿ ಕಲೆಗಳ ಮೇಲೆ ಇರುವಂತೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಇಡಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ.ಈ ವಿಧಾನ ವಯಸ್ಸಿನ ಕಾರಣದಿಂದ ಮೂಡುವ ಕಲೆಗಳಿಗೆ ಉತ್ತಮವಾಗಿದೆ. ಪ್ರತಿದಿನ ರಾತ್ರಿ ಈ ವಿಧಾನವನ್ನು ಅನುಸರಿಸುತ್ತಾ ಬಂದರೆ ಸುಮಾರು ಆರು ವಾರಗಳಲ್ಲಿ ಉತ್ತಮ ಫಲ ಕಂಡುಬರುತ್ತದೆ.
best-natural-ingredients-to-fade-away-dark-spots
We've simplified things for you by curating a list of 100% natural ingredients that are considered to be best for dealing with stubborn dark spots on your skin. The key components present in all these home remedies can make the dark spots on your skin a thing of the past. Just include them in your beauty routine to lighten the appearance of dark spots. Take a look at them here:
ಜನರಿಗೆ ಕೇಂದ್ರ ಸರ್ಕಾರದ ವೈಫಲ್ಯ ತಿಳಿಸಿ: ವಿನಯ ಕುಮಾರ್ ಸೊರಕೆ | Prajavani
ಜನರಿಗೆ ಕೇಂದ್ರ ಸರ್ಕಾರದ ವೈಫಲ್ಯ ತಿಳಿಸಿ: ವಿನಯ ಕುಮಾರ್ ಸೊರಕೆ
Published: 02 ಆಗಸ್ಟ್ 2018, 21:20 IST
Updated: 02 ಆಗಸ್ಟ್ 2018, 21:20 IST
ಹಿರಿಯಡ್ಕ: ಜನರಿಗೆ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರ ಮುಂದಿಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಈಚೆಗೆ ಹಿರಿಯಡ್ಕದ ಗಣೇಶ ಕಲಾಮಂದಿರದಲ್ಲಿ ನಡೆದ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ, ನಿರುದ್ಯೋಗ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಗರಿಷ್ಠ ಮುಖಬೆಲೆಯ ನೋಟು ಅಮಾನ್ಯದಿಂದ ದೇಶದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣುಚಿಕೊಳ್ಳುತ್ತಿದೆ ಎಂದು ಟೀಕಿಸಿದರು.
ರಫೇಲ್ ಯುದ್ಧವಿಮಾನಗಳ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿದೆ. 4 ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಲಾಗಲಿಲ್ಲ. ಇಂತಹ ವಿಚಾರಗಳನ್ನು ಜನರ ಮನೆಗಳಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.
ರಾಜ್ಯ ಸರ್ಕಾರ 5 ವರ್ಷಗಳ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾದರೂ ಜನರ ಮದ್ಯೆಯಿದ್ದು, ಪಕ್ಷವನ್ನು ಸಂಘಟಿಸುವಲ್ಲಿ ಕೆಲಸವನ್ನು ಮಾಡುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಕಾರ್ಯಕರ್ತರು ಒಟ್ಟಾಗಿ ಪಕ್ಷವನ್ನು ಬೂತ್ ಮಟ್ಟದಿಂದಲೇ ಸಂಘಟಿಸಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಕೇಳ್ಕರ್, ಸುಧಾಕರ ಶೆಟ್ಟಿ ಮೈರ್ಮಾಡಿ, ತಾಲೂಕು ಪಂಚಾಯತ್ ಸದಸ್ಯರಾದ ಸಂಧ್ಯಾ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಮುರಳಿ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸೇವಾದಳ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಲೀಗಲ್ ಸೆಲ್ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಷನ್ ಹೆಗ್ಡೆ ಕೊಳ್ಕೆಬೈಲ್ ಅವರೂ ಇದ್ದರು.
ಬದಲಾಗುತ್ತಿದ್ದಾಳೆ, ಭಾರತದ "ಆಂಟಿ'! | Udayavani - ಉದಯವಾಣಿ
ನಿಮಗೆ ಹಾಗೆ ಕರೆಸಿಕೊಳ್ಳಲು ಮುಜುಗರವೇ?
ಬಹಳಷ್ಟು ಹೆಣ್ಣುಮಕ್ಕಳು ತಾವು ಮೊದಲ ಬಾರಿ "ಆಂಟಿ' ಎಂದು ಕರೆಸಿಕೊಂಡ ಘಟನೆಯನ್ನು ನೆನಪಿಟ್ಟುಕೊಂಡಿರುತ್ತಾರೆ! ಅವರಲ್ಲಿ ಹೆಚ್ಚಿನವರಿಗೆ ತುಂಬಾ ವಯಸ್ಸೂ ಆಗಿರುವುದಿಲ್ಲ ಅನ್ನೋದು ಬೇರೆ ವಿಷಯ! ಹುಡುಗರಿಗೆ ತಾವು ಅಂಕಲ್‌ ಎಂದು ಕರೆಸಿಕೊಂಡಾಗ ಆಗದಷ್ಟು ನೋವು, ಹಿಂಸೆ ಹುಡುಗಿಯರಿಗೆ ತಾವು "ಆಂಟಿ' ಎಂದು ಕರೆಸಿಕೊಂಡಾಗ ಆಗುತ್ತೆ. ಯಾಕೆ ಹೀಗೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ?
ಮೊನ್ನೆ ಬೇಕರಿಗೆ ಬ್ರೆಡ್‌ ಖರೀದಿಸಲು ಹೋಗಿದ್ದೆ. ಅಲ್ಲಿದ್ದ ಹುಡುಗರು ಪ್ರತಿಯೊಬ್ಬರಿಗೂ ಅವರವರಿಗೆ ಬೇಕಾದ ವಸ್ತು ನೀಡುವಾಗ ಬಳಸುತ್ತಿದ್ದ ಪದ "ಮೇಡಂ' ಅಥವಾ "ಅಕ್ಕ'. ಬೇಕರಿಯ ಮಾಲೀಕನನ್ನು ವಿಚಾರಿಸಿದೆ. "ಏನ್ರೀ ನಿಮ್ಮ ಹುಡುಗರನ್ನು ಚೆನ್ನಾಗಿ ತಯಾರು ಮಾಡಿದ್ದೀರಾ?!'. ಅದಕ್ಕೆ ಆತ ನಕ್ಕು ಹೇಳಿದ್ದು: "ನೋಡಿ ಮೇಡಂ, ಈಗ ಕಾಂಪಿಟೇಷನ್‌ ಭಾಳ. ನಮ್ಮ ಕಸ್ಟಮರ್ನ್ನು ನಾವು ಕಾಪಾಡ್ಕೊಬೇಕು ಎಂದರೆ ಅವರಿಗೆ ಬೇಕಾದ ಹಾಗೆ ನಡ್ಕೊಬೇಕು. ಈಗಿನ ಹುಡುಗಿಯರಿಗೆ- ಹೆಂಗಸರಿಗೆ "ಆಂಟಿ' ಅಂದ್ರೆ ಆಗಲ್ಲ. ಹಿಂದೆ ಬೇಜಾರಾಗಿದ್ರೂ ಸುಮ್ಮನೆಯಾದ್ರೂ ಇರೋವ್ರು, ಆದರೆ ಈಗ ಹಾಗಲ್ಲ, ಆಂಟಿ ಅಂತ ಕರೆದ್ರೆ ಸಾಕು, ಸಿಡಾರನೆ ನಮನ್ನು ಅಂಕಲ್ಲೋ, ಅಜ್ಜಾನೋ ಅಂತ ಕರೆದುಬಿಡ್ತಾರೆ. ಒಬ್ರು ಹಾಗೆ ಮಾಡಿದ್ರೆ ಉಳಿದವ್ರಿಗೂ ಧೈರ್ಯ ಬಂದ್ಬಿಟ್ಟು ಅವರೂ ಹಾಗೇ ಬೈತಾರೆ. ನಮಗೇನು ಅವರನ್ನು "ಮೇಡಂ', "ಅಕ್ಕ' ಅಂತ ಕರೆಯೋಕ್ಕೆ? ಸರಿ, ನಮ್ಮ ಎಲ್ಲಾ ಹುಡುಗರಿಗೂ ತಾಕೀತು ಮಾಡ್ಬಿಟ್ಟಿದ್ದೀನಿ. ಯಾರನ್ನೂ "ಆಂಟಿ' ಅನ್ನಕೂಡ್ದು ಅಂತ!'.
ಭಾರತದ "ಆಂಟಿ' ಬದಲಾಗುತ್ತಿದ್ದಾಳೆ! ನಿಧಾನವಾಗಿ "ಆಂಟಿ'ಯನ್ನು ಜನ ದೂರ ತಳ್ಳುತ್ತಿದ್ದಾರೆ! "ಆಂಟಿ' ಪಟ್ಟ ಮಹಿಳೆಯರಿಗೆ ದೊರಕುವುದಕ್ಕೆ ಅವರಿಗೆ ವಯಸ್ಸಾಗಿರಬೇಕೆಂದೇನೂ ಇಲ್ಲ ಅಥವಾ ವಯಸ್ಸಾದಂತೆ ಕಾಣುತ್ತಿರಬೇಕು ಎಂದೂ ಇಲ್ಲ. "ಆಂಟಿ' ಎಂಬ ಪದವನ್ನು ನಮ್ಮ ಸಮಾಜದಲ್ಲಿ ನಾಲ್ಕು ಮುಖ್ಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಮೊದಲನೆಯದು "ಚಿಕ್ಕಮ್ಮ', "ದೊಡ್ಡಮ್ಮ'ನಿಗೆ ಬದಲಾಗಿ ಆಂಟಿಯ ಬಳಕೆ. ಇಲ್ಲಿ ಸಂಬಂಧದಿಂದ "ಆಂಟಿ' ಬಲಗೊಳ್ಳುತ್ತಾಳೆ! ಎರಡನೆಯದು, ತನಗಿಂತ ವಯಸ್ಸಿನಲ್ಲಿ ಅಪರಿಚಿತ ಮಹಿಳೆ ಸಾಕಷ್ಟು ಹಿರಿಯರು ಎಂದೆನಿಸಿ "ಆಂಟಿ' ಎಂಬ ಪದವನ್ನು ಗೌರವಸೂಚಕವಾಗಿ ಬಳಸುವುದು. ಮೂರನೆಯದು, ಕೆಲವೊಮ್ಮೆ ಅಜ್ಞಾನ/ ಇಂಗ್ಲಿಷ್‌ ಬಳಕೆಯ ವ್ಯಾಮೋಹ/ ಮತ್ತೆ ಕೆಲವೊಮ್ಮೆ ಕುಹಕ- ಇನ್ನೊಬ್ಬರನ್ನು ಪೀಡಿಸುವ ಉದ್ದೇಶದಿಂದ "ಆಂಟಿ' ಎಂದು ಸಂಬೋಧಿಸುವುದು. ನಾಲ್ಕನೆಯದು ಒಂದು ನಿರ್ದಿಷ್ಟ ಕೆಲಸ ಮಾಡುವ, ಸಾಮಾನ್ಯವಾಗಿ ಸಹಾಯಕಿಯರನ್ನು ಆಸ್ಪತ್ರೆಗಳಲ್ಲಿ, ನರ್ಸರಿಗಳಲ್ಲಿ, ಶಾಲೆಗಳಲ್ಲಿ "ಆಯಾ' ಎಂಬ ಹೆಸರಿನ ಬದಲಾಗಿ "ಆಂಟಿ' ಎಂದು ಕರೆಯುವುದು!
ಸುಮ್ಮನೇ, ಸುತ್ತಮುತ್ತಲ ಮಹಿಳೆಯರು- ಹುಡುಗಿಯರ ಬಳಿ ಈ ಬಗ್ಗೆ ಮಾತನಾಡಿದರೆ ಹಲವು ಸ್ವಾರಸ್ಯಕರ ಪ್ರಸಂಗಗಳು ಹೊರಹೊಮ್ಮುತ್ತವೆ. ಪುರುಷರಿಗೆ, ಹುಡುಗರಿಗೆ "ಆಂಟಿ' ಎಂದು ಕರೆದರೆ ಈ ಹೆಣ್ಣುಮಕ್ಕಳು, ಇಷ್ಟೊಂದು ತಲೆಕೆಡಿಸಿಕೊಳ್ಳುವುದು ಏಕೆ ಎಂದು ಅಚ್ಚರಿಯೂ ಆಗುತ್ತದೆ. ಬಹಳಷ್ಟು ಹೆಣ್ಣುಮಕ್ಕಳು ತಾವು ಮೊದಲ ಬಾರಿ "ಆಂಟಿ' ಎಂದು ಕರೆಸಿಕೊಂಡ ಘಟನೆಯನ್ನು (ಅದೂ ಹೆಚ್ಚಿನ ಬಾರಿ ಅವರಿನ್ನೂ "ಹುಡುಗಿ'ಯರಾಗಿದ್ದಾಗ!) ನೆನಪಿಟ್ಟುಕೊಂಡಿರುತ್ತಾರೆ! ಏಕೆ?! ಏಕೆಂದರೆ ಸಮಾಜ ಹುಡುಗಿಯರ "ವಯಸ್ಸಾಗುವಿಕೆ', "ಸೌಂದರ್ಯ', "ದೈಹಿಕ ಸೌಷ್ಟವ'ಗಳ ಬಗ್ಗೆ ತೋರುವ ಕಾಳಜಿ ಹುಡುಗರಿಗಿಂತ ಹೆಚ್ಚು. ಮಹಿಳೆಯರಲ್ಲಿಯೇ ಇರುವ ಈ ವಿಷಯಗಳ ಬಗೆಗಿನ ಕೀಳರಿಮೆ, ಎಚ್ಚರ, ಚಿಕ್ಕ ಮಕ್ಕಳು ಅರಿಯದೆ ಹುಡುಗಿಯರಿಗೆ ಆಂಟಿ, ಹುಡುಗರಿಗೆ ಅಂಕಲ್‌ ಎಂದು ಕರೆದಾಗಲೂ ಜಾಗೃತವಾಗಿಬಿಡುತ್ತದೆ. ಹುಡುಗರಿಗೆ "ಅಂಕಲ್‌' ಅನ್ನು ತಳ್ಳಿ ಹಾಕುವುದೂ ಸುಲಭ, ಹಾಗೆಯೇ ಅವರನ್ನು "ಅಣ್ಣ', "ಸಾರ್‌' ಎಂದೇ ಸಂಬೋಧಿಸುವ ಸಾಧ್ಯತೆಯೇ ಹೆಚ್ಚು.
ನಾವೇ ಸ್ವಲ್ಪ ಹಿಂತಿರುಗಿ ಗಮನಿಸಿ ನೋಡಿದರೆ, ಬಾಲ್ಯದಲ್ಲಿ ಹಿರಿಯರ ವಯಸ್ಸಿನ ಅಂದಾಜು ಸುಲಭವಲ್ಲ. ಅಥವಾ ಅಪ್ಪ- ಅಮ್ಮನ ಜೊತೆ ಒಡನಾಡುವ ಕಿರಿಯ ಸಹೋದ್ಯೋಗಿಗಳನ್ನೂ, ಅವರು ವಯಸ್ಸಿನಲ್ಲಿ ನಮಗಿಂತ ಕೆಲವೇ ವರ್ಷಗಳ ಅಂತರದಲ್ಲಿದ್ದರೂ, "ಅವರು ಅಪ್ಪ- ಅಮ್ಮನ ಫ್ರೆಂಡ್ಸ್‌' ಎಂದು ಭಾವಿಸಿ ಅವರನ್ನು "ಅಂಕಲ್‌- ಆಂಟಿ' ಎಂದು ಕರೆದುಬಿಡುತ್ತೇವೆ! ಇದರ ಹಿಂದೆ ದುರುದ್ದೇಶವಿರದಿದ್ದರೂ, ಕ್ರಮೇಣ ನಮ್ಮ ಅರಿವಿಗೆ ಅವರ "ಕಿರಿತನ' ಬರುವ ವೇಳೆಗೆ ನಾವೂ "ಆಂಟಿ- ಅಂಕಲ್‌' ಆಗಿಬಿಟ್ಟಿರುತ್ತೇವೆ! ಅದೇಕೋ "ಮಾಮ- ಅತ್ತೆ'ಗಳು, "ಅಕ್ಕ- ಅಣ್ಣ'ಗಳು, ನಮ್ಮ ಮಕ್ಕಳ ಬಾಯಿಗೆ ಸಹಜವಾಗಿ ಬರುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವು ಅಪರೂಪವಾಗಿ ಬಿಟ್ಟಿವೆ ಅಥವಾ ಅವು ರಕ್ತಸಂಬಂಧಕ್ಕೆ ಮಾತ್ರ ಸೀಮಿತವಾಗಿವೆ.
"ನಿಮ್ಮನ್ನು ಅಪರಿಚಿತರೊಬ್ಬರು ಬಂದು, ಆಂಟಿ ಎಂದು ಕರೆದರೆ ನೀವೇನು ಮಾಡುತ್ತೀರಿ?' ಎಂಬ ಪ್ರಶ್ನೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಹೆಚ್ಚಿನ ಹುಡುಗಿಯರು ಹೇಳಿದ್ದೇನು ಗೊತ್ತೆ? "ಕೆನ್ನೆಗೆ ಬಾರಿಸುತ್ತೇವೆ!' ಎಂದು. ಅಂದರೆ, ಹಿಂದಿನ ತಲೆಮಾರಿನ ಮಹಿಳೆಯರು ಆಂಟಿಯನ್ನು ಒಪ್ಪಿಕೊಂಡ, ಅಥವಾ "ಅಜ್ಜಿ/ಪಾಟಿ' ಎನಿಸಿಕೊಳ್ಳುವುದರ ಬದಲು ಆಂಟಿ ಎಷ್ಟೋ ಮೇಲು ಎಂದು ಸಮಾಧಾನ ಪಡುವ ಬದಲು, "ಆಂಟಿ'ಯನ್ನೂ ಗೌರವಸೂಚಕ ಎಂದು ಸ್ವೀಕರಿಸುವ ಬದಲು, ಇಂದಿನ ಹುಡುಗಿಯರು- ಮಹಿಳೆಯರು "ಅಕ್ಕ'ನಾಗಲು ಅಥವಾ ಹೆಸರು ಹಿಡಿದೇ ಕರೆಸಿಕೊಳ್ಳಲು ಕಾತರರಾಗಿದ್ದಾರೆ. ಇಂದಿನ ತಲೆಮಾರಿನ ಹುಡುಗರು- ಪುರುಷರೂ ಅಷ್ಟೇ, ಮಹಿಳೆಯರ ಮನಸ್ಸಿನ ಭಾವನೆಗಳಿಗೆ ಬೆಲೆ ನೀಡಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ!
ಸಂಬಂಧಗಳಲ್ಲಿ ಆಯಾ ಸಂಬಂಧವನ್ನು ಗುರುತಿಸಿ ಕರೆಯುವುದನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಸಂಬಂಧಗಳನ್ನು ಕಳೆದುಕೊಳ್ಳುವ ಪ್ರಥಮ ಹಂತ, ಅವುಗಳ ಹೆಸರುಗಳನ್ನು ಬಿಡುವುದು! ಪಾಶ್ಚಾತ್ಯರ ಎಷ್ಟೋ ಕ್ರಮಗಳನ್ನು ಥಟ್ಟನೆ ಗುರುತಿಸಿ, ನಮ್ಮದಾಗಿಸಿಕೊಳ್ಳುವ ನಾವು, ಅವರ ಸಂಬೋಧನಾ ಕ್ರಮದ ಬಗೆಗೆ ಖಂಡಿತ ಗಮನಿಸಬೇಕಿದೆ. ವೃತ್ತಿಪರ ಸಂಬಂಧಗಳಲ್ಲಿ ಸರ್‌ ಅಥವಾ ಮೇಡಂ ಬಳಕೆ, ಆತ್ಮೀಯತೆಯಿದ್ದಾಗ- ವಯಸ್ಸು ಕೆಲವೇ ವರ್ಷಗಳ ಅಂತರದಲ್ಲಿದ್ದಾಗ ಹೆಸರು ಹಿಡಿದು ಮಾತನಾಡಿಸುವುದು ಮತ್ತು ಆತ್ಮೀಯತೆಯಿದ್ದು, ವಯಸ್ಸಿನ ಅಂತರ ಹೆಚ್ಚಿದ್ದಾಗ "ಅಕ್ಕ-ಅಣ್ಣ'ಂದಿರ ಬಳಕೆ ಸೂಕ್ತ ಎನಿಸಬಲ್ಲದು.
"ಆಂಟಿ'ಯ ಬಗ್ಗೆ ಇಷ್ಟೆಲ್ಲಾ ತಲೆಯಲ್ಲಿ ಹರಿದಾಡುತ್ತಿರುವಾಗಲೇ ಬೇಕರಿಯ ಹುಡುಗ "ತೊಗೊಳ್ಳಿ ಮೇಡಂ, ನಿಮ್ಮ ಐಟಂ ಎಲ್ಲಾ ಪ್ಯಾಕ್‌ ಆಗಿದೆ' ಎಂದಿದ್ದ. ಮಗಳು ಭೂಮಿ ಆ ಹುಡುಗನಿಗೆ "ಅಂಕಲ್‌ ಅಂಕಲ್‌ ಕಾಲು ಕೆಜಿ ರಸ್ಕ್ ಕೊಡಿ' ಎಂದಿದ್ದಳು! ತಕ್ಷಣ ನಾನು ಗದರಿಸಿ "ಅಣ್ಣ ಅಂತ ಕರಿ, ಅಂಕಲ್‌ ಅಲ್ಲ' ಎಂದೆ. ಆ ಹುಡುಗ ನಕ್ಕು ಕಣ್ಣರಳಿಸಿದ!
ನಿಮ್ಮನ್ನು "ಆಂಟಿ' ಅಂತ ಕರೆದಾಗ...
- "ಆಂಟಿ' ಎಂದು ಯಾರಾದರೂ ಕರೆದಾಗ ಕೋಪಗೊಳ್ಳಬೇಕಿಲ್ಲ, ಕೆನ್ನೆಗೆ ಹೊಡೆಯಬೇಕಾಗಿಲ್ಲ, ನಿಜ! ಆದರೆ ಅವರನ್ನು ತಿದ್ದಬೇಕು.
ಕುಹಕ- ವ್ಯಂಗ್ಯಗಳಿಂದ "ಆಂಟಿ' ಎಂದು ಕರೆದಾಗ ನಾವೇ ಮುಜುಗರದಿಂದ ಸುಮ್ಮನಿರಬೇಕಾಗಿಲ್ಲ. ಬದಲಾಗಿ ನೇರವಾಗಿ "ಹಾಗೆ ಕರೆಯಬೇಡಿ' ಎಂದು ಹೇಳುವುದು, "ನಮಗೆ ಹೇಗೆ ಬೇಕೋ ಹಾಗೆ ಕರೆಸಿಕೊಳ್ಳುವುದು ನಮ್ಮ ಹಕ್ಕು' ಎಂದು ಸ್ವಷ್ಟಪಡಿಸುವುದು ಉತ್ತಮ.
- ಸ್ವತಃ ತಾಯಂದಿರು ತಮಗೆ "ಆಂಟಿ' ಎಂದು ಕರೆದಾಗ ಆದ ಮುಜುಗರವನ್ನು ನೆನಪಿಟ್ಟು, ಚಿಕ್ಕ ಮಕ್ಕಳು ಆಂಟಿ- ಅಂಕಲ್‌ಗ‌ಳನ್ನು ಎಲ್ಲೆಂದರಲ್ಲಿ ಪ್ರಯೋಗಿಸಿದಾಗ ಅದನ್ನು ತಿದ್ದುವುದು ಮುಖ್ಯ.
- ಮಕ್ಕಳು "ಅಕ್ಕ- ಅಣ್ಣ' ಎನ್ನಲು ಅನುಮಾನಿಸಿದಾಗ ಅವರನ್ನು ಹಾಗೆ ಕರೆಯಲು ಪ್ರೋತ್ಸಾಹಿಸುವುದು, ಮಕ್ಕಳು 14 ವರ್ಷ ದಾಟುತ್ತಿದ್ದಂತೆ "ಆಂಟಿ-ಅಂಕಲ್‌' ಗಳನ್ನು ಸಂಪೂರ್ಣವಾಗಿ ಕೈಬಿಡುವಂತೆ ಹೇಳುವುದು ಮುಖ್ಯ.
- ಒಂದೊಮ್ಮೆ ಹಾಗೆ ಕರೆಸಿಕೊಳ್ಳುತ್ತಿದ್ದ ವ್ಯಕ್ತಿ "ತನ್ನನ್ನು ಹಾಗೆಯೇ ಸಂಬೋಧಿಸಬೇಕು, ತನಗೆ ಸಂತಸ' ಎಂದು ಸ್ಪಷ್ಟಪಡಿಸಿದಾಗ ಮಾತ್ರ ಹಾಗೆ ಕರೆಯುವುದನ್ನು ಆ ವ್ಯಕ್ತಿಗೆ ಸಂಬಂಧಿಸಿದಂತೆ ಮುಂದುವರಿಸುವುದು, ಇವುಗಳನ್ನು ಮಕ್ಕಳ ಬೆಳವಣಿಗೆಯ ಭಾಗವಾಗಿ ಕಲಿಸಬೇಕು.
- ಆಸ್ಪತ್ರೆ, ನರ್ಸರಿ ಶಾಲೆಗಳಲ್ಲಿಯೂ ಅಷ್ಟೆ: "ಆಯಾ' ಎಂಬ ಪದಕ್ಕೆ ಅಂಟಿರುವ ಕೀಳರಿಮೆಯನ್ನು ಬದಲಿಸಲು "ಆಂಟಿ' ಎಂಬ ಪದದ ಪ್ರಯೋಗವೇ ಆಗಬೇಕಿಲ್ಲ. ಆಯಾಗಳನ್ನು ಅಮ್ಮ, ಅಕ್ಕ ಎಂದೂ ಕರೆದು ಅವರಿಗೆ ವಿಶೇಷ ಗೌರವ ನೀಡಬಹುದು.
ಸಂಸ್ಕೃತಿ ಮತ್ತು ಅಡಿಗ : ಬದಲಾಗುತ್ತಿರುವ ಕನ್ನಡ ಕಾವ್ಯಮಾರ್ಗ – ಒಂದು ಸಮೀಕ್ಷೆ – ಕಣಜ
ಮುಖಪುಟ/Posts/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ/ಡಾ. ಯು.ಆರ್. ಅನಂತಮೂರ್ತಿ/ಸಂಸ್ಕೃತಿ ಮತ್ತು ಅಡಿಗ : ಬದಲಾಗುತ್ತಿರುವ ಕನ್ನಡ ಕಾವ್ಯಮಾರ್ಗ – ಒಂದು ಸಮೀಕ್ಷೆ
ಸಂವೇದನೆ ಮತ್ತು ಸತ್ಯದ ವಿನ್ಯಾಸ: ಒಂದು ಹಿನ್ನೆಲೆ
ಹತ್ತೊಂಬತ್ತನೆಯ ಶತಮಾನದ ಕೊನೆಗೆ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭಕ್ಕೆ ಕನ್ನಡದಲ್ಲಿ ಕೆಲವು ಇಂಗ್ಲಿಷ್‌ ಭಾವಗೀತೆಗಳನ್ನು ಅನುವಾದಿಸುವ ಪ್ರಯತ್ನ ನಡೆಯಿತು, ಆದರೆ ಅವು ಜಡ್ಡುಕಟ್ಟಿದ ಆ ಕಾಲದ ಕಾವ್ಯ ಸಂಪ್ರದಾಯದ ಮೇಲೆ ಪರಿಣಾಮ ಬೀರಿದ್ದು ತೀರ ಕಮ್ಮಿ. ಇದಕ್ಕೆ ಕಾರಣ ಅಂಥ ಅನುವಾದಗಳು ಸಾಂಪ್ರದಾಯಿಕ ಛಂದಸ್ಸುಗಳ ಚೌಕಟ್ಟಿನಲ್ಲಿದ್ದದ್ದು. ಮುಂದೆ ಬಿ. ಎಂ. ಶ್ರೀಕಂಠಯ್ಯನವರು ಹೊಸ ಭಾಷೆ ಮತ್ತು ಹೊಸ ಲಯವನ್ನು ಬಳಸಿಕೊಂಡು ಇಂಗ್ಲಿಷ್‌ ರೊಮ್ಯಾಂಟಿಕ್‌ ಪದ್ಯಗಳ ತಮ್ಮ ಅನುವಾದವನ್ನು ಪ್ರಕಟಿಸುವ ತನಕ ಸ್ಥಿತಿ ಬದಲಾಗಲಿಲ್ಲ. ಸಂವೇದನೆ ಬದಲಾದರೂ ಬದಲಾದ ಭಾಷೆ ಲಯಗಳಿಲ್ಲದೆ ಅದು ಪರಿಣಾಮಕಾರಿಯಾಗದೆ ಹೋದ ದೃಶ್ಯ ಇದು. ಪ್ರಾಯಶಃ ಇದರ ಇನ್ನೊಂದು ಮುಖವೂ ನಿಜ; ಕವಿಯ ಸಂವೇದನೆಯೇ ಬದಲಾಗದೆ ಅವನು ಪ್ರಯೋಗಶೀಲತೆಗಾಗಿ ಭಾಷೆ ಲಯಗಳನ್ನು ಮಾತ್ರ ಬದಲಿಸಿದಾಗಲೂ ಪರಿಣಾಮವಾಗದೆ ಹೋಗುತ್ತದೆ. ಕನ್ನಡದಲ್ಲಿ ಐತಿಹಾಸಿಕವಾಗಿ ನವ್ಯಕಾವ್ಯವನ್ನು ಪ್ರಾರಂಭಿಸಿದವರು ಗೋಕಾಕರು. ನವ್ಯಕಾವ್ಯ ಎಂದು ಹೆಸರು ಕೊಟ್ಟವರೂ ಅವರೇ. ಆದರೆ ನವ್ಯತೆ ಅವರಿಗೆ ಇನ್ನೊಂದು ಹೊಸ ತಂತ್ರವಷ್ಟೇ ಆಗಿತ್ತು. ಆದ್ದರಿಂದ ಲಯ ಮತ್ತು ಪ್ರತಿಮಾ ಕಲ್ಪನೆಗಳಲ್ಲಿನ ಅವರ ಕುತೂಹಲಕಾರಿ ಪ್ರಯೋಗಗಳೂ ಕೂಡ ರೂಢಿಯ ಕೊರಕಲಿಗೆ ಬಿದ್ದಿದ್ದ ಆಗಿನ ಕಾವ್ಯದ ಸ್ಥಿತಿಯನ್ನು ಕಲಕಲಿಲ್ಲ. ತಾವು ವಾಸ್ತವವನ್ನು ನೋಡುವ ದೃಷ್ಟಿಯಲ್ಲೇ ಬದಲಾವಣೆಯಾದದ್ದರ ಪರಿಣಾಮವಾಗಿ ಅಡಿಗರು ಹೊಸ ರೀತಿಯಲ್ಲಲಿ ಬರೆಯತೊಡಗುವ ತನಕ ಸ್ಥಿತಿ ಹೀಗೇ ಇತ್ತು. ಅಡಿಗರು ತಂದ ಹೊಸ ಲಯ, ಹೊಸ ಸಂವೇದನೆ ನಮ್ಮ ಸಾಹಿತ್ಯ ಸಂದರ್ಭವನ್ನೇ ಬದಲಾಯಿಸಿತು. ಪರಿಣಾಮವಾಗಿ ಈ ಶತಮಾನದ ಮೊದಲೆರಡು ದಶಕಗಳಲ್ಲಿ ಸಾಂಪ್ರದಾಯಿಕ ಛಂದಸ್ಸುಗಳನ್ನು ತಿರಸ್ಕರಿಸಿ ಬರೆಯುತ್ತಿದ್ದ ಬಿ. ಎಂ. ಶ್ರೀ. ಮತ್ತು ಗೋವಿಂದ ಪೈಯವರಂತೆಯೇ ಕಳೆದ ಒಂದು ದಶಕದ ಹಿಂದೆ ಅಡಿಗರೂ ವಿವಾದಾಸ್ಪದ ಕವಿಯಾಗಿದ್ದರು.
ಕವಿಯ ಜೀವನವನ್ನು ಹಾಗೂ ಮನಸ್ಸನ್ನು ಹಬ್ಬಿ ಅವರಿಸಿರುವ ವಾಸ್ತವತೆಯಲ್ಲಿ ಬದಲಾವಣೆಯಾದಂತೆ ಕವಿಯ ಸಂವೇದನೆಯಲ್ಲಿ ಬದಲಾವಣೆಯಾಗಬೇಕಾಗುತ್ತದೆ; ಮತ್ತು ಬದಲುಗೊಂಡ ಸಂವೇದನೆ, ಪ್ರತಿಯಾಗಿ ಹೊಸ ಲಯವನ್ನೂ ಹೊಸ ಭಾಷಾ ವಿನ್ಯಾಸವನ್ನೂ ಅಗತ್ಯವಾಗಿಸುತ್ತದೆ; ಹೊಸ ಸಂವೇದನೆ ಇಡಿಯಾಗಿ ಭಾಷೆಯಲ್ಲಿ ಮೈದಾಳಿ ಬರುವಂತೆ ಅನುಭವದ ನೂತನ ಸಂಘಟನಾ ರೀತಿಯನ್ನೂ ಅಗತ್ಯವಾಗಿಸುತ್ತದೆ. ಈ ಮಾತು ಸುಸ್ಪಷ್ಟ ಸತ್ಯ ವೆಂದು ಬಹುಶಃ ಎಲ್ಲ ವಿಮರ್ಶಕರೂ ಒಪ್ಪುತ್ತಾರೆ. ಹಾಗಿದ್ದರೂ, ನಮ್ಮದುರಿಗೆ ಇರುವ 'ಹೊಸ' ಕವನ, ನಮ್ಮ ಸುತ್ತಣ ಸತ್ಯದ ವಿನ್ಯಾಸ ಬದಲುಗೊಂಡಿದ್ದೇ ಕಾರಣವಾಗಿ, ಅನಿವಾರ್ಯವಾಗಿ ಮೈದಾಳಿದ್ದೋ ಅಥವಾ ಸತ್ಯವನ್ನೂ ಧಿಕ್ಕರಿಸಿ ಕವಿ ಸ್ವೇಚ್ಛೆಯಾಗಿ ಕಲ್ಪಿಸಿದ್ದೋ ಎಂಬುದನ್ನು ನಿರ್ಧರಿಸುವುದು ಮಾತ್ರ ತುಂಬಾ ತೊಡಕಿನ ವಿಷಯ. ಪುಟದ ಮೇಲಿರುವ ಶಬ್ದಗಳಿಗೇ ನಿಷ್ಠುರವಾಗಿ ಅಂಟಿದ ಕೃತಿವಿಮರ್ಶೆ ಕೂಡ ಈ ತೊಡಕನ್ನು ಸುಲಭವಾಗಿ ಪರಿಹರಿಸಲಾರದು.
ಹದಿನೈದು ವರ್ಷಗಳ ಹಿಂದೆ ಅಡಿಗರು ತಮ್ಮ ಹಿಂದಣವರ ಮೇಲೆ, ಮತ್ತು ಅದಕ್ಕಿಂತ ಮುಖ್ಯವಾಗಿ ತಮ್ಮ ಆ ವರೆಗಿನ ಸ್ವಂತದ ಕಾವ್ಯೋದ್ಯೋಗದ ಮೇಲೆ ಬಂಡೆದ್ದರು. ಹೀಗೆ ಮಾಡಲು ಅವರ ರಸಪ್ರಜ್ಞೆ ಎಷ್ಟು ಮಟ್ಟಿಗೆ ಕಾರಣವಾಗಿತ್ತೋ ಅಷ್ಟು ನೈತಿಕ ಪ್ರಜ್ಞೆಯೂ ಕಾರಣವಾಗಿತ್ತು. ಕಾರ್ಯತಃ ಮೈದಾಳದಿದ್ದ, ಸ್ವಾತಂತ್ಯ್ರಪೂರ್ವ ಯುಗದ ಆದರ್ಶವಾದ ಒಂದು ಕಡೆ; ಹಾಗೆ, ಕವನದ ಭಾಷೆ ಲಯಗಳ ಗಾತ್ರದಲ್ಲಿ ಮೈದಾಳದಿದ್ದ, ಸ್ವಂತ ಗಳಿಸದ, ಕಡತಂದ ಭಾವನೆಗಳು ಇನ್ನೊಂದು ಕಡೆ – ಈ ಎರಡನ್ನೂ ಅವರು ಒಟ್ಟಿಗೇ ತಿರಸ್ಕರಿಸಿದರು. ಅಮೂರ್ತವಾಗಿರತಕ್ಕ ಭಾಷೆಯ ವಿಜೃಂಭಣೆಯನ್ನು ಕಳೆದು ಕೊಟ್ಟು ಕಾವ್ಯವಸ್ತುತ್ವ ಪಡೆದುಕೊಳ್ಳತಕ್ಕದ್ದು, ನೆಲದ್ದಾಗತಕ್ಕದ್ದು, ಮೂರ್ತವಾಗತಕ್ಕದ್ದು ಎಂದು ಅವರು ಬಯಸಿದರು. ಗಾಂಧೀಯುಗ ಕೊನೆಗೊಂಡಿತ್ತು. ಸ್ವಾತಂತ್ಯ್ರಪೂರ್ವದ ಹೇರಾಸೆಗಳ ರಮ್ಯ ಭ್ರಮೆ ಹರಿದು ನಿರಾಶೆ ವಿಸ್ತಾರ ವ್ಯಾಪಿಸಿತ್ತು. ಅಮೂರ್ತ ಭಾವನೆಗಳ ಹುಸಿ ಭಂಗಿಗಳ, ಅಸ್ತಿತ್ವದ ಸತ್ಯಕ್ಕೆ, ಅರ್ಥಾತ್‌ ಸಂಬಂಧವಿಲ್ಲದ ಅತಿಭಾವುಕತೆಯ ಕಾವ್ಯ ಸ್ವಾತಂತ್ಯ್ರ ಹೋರಾಟದ ಭಾವೋದ್ವೇಗದ ಸಂದರ್ಭದಲ್ಲಿ ತಾನು ಉಂಟುಮಾಡುತ್ತಿದ್ದ ಪರಿಣಾಮ ಭ್ರಮೆಯನ್ನು ಕಳೆದುಕೊಂಡಿದೆ ಎಂಬುದೇ ಇದರ ಅರ್ಥವಾಗಿತ್ತು. ವಿಜ್ಞಾನ ಮತ್ತು ಉದ್ಯಮೀಕರಣಗಳ ಒತ್ತಡಗಳಲ್ಲಿ ಹಳೆಯ ಮೌಲ್ಯಗಳು ಮುರಿದು ಬೀಳುತ್ತಿರುವುದನ್ನೂ, ಆಧ್ಯಾತ್ಮಿಕ ತುಡಿತದಲ್ಲಿ ಹೇಗೋ ಹಾಗೆ ಸಮಕಾಲೀನ ಸಂದರ್ಭದಲ್ಲೂ ಮನುಷ್ಯ ಪರಕೀಯ ಪ್ರಾಣಿಯಾಗಿರುವುದನ್ನೂ ಈ ಕವಿ ಕಂಡುಕೊಂಡರು. ಇಂಥ ಸನ್ನಿವೇಶದಲ್ಲಿ ಹಿಂದೆ ಕಣ್ಣುಹಾಯಿಸುವ ಪ್ರಾಚ್ಯ ಶ್ರದ್ಧೆಯಾಗಲೀ ಮುಂದಕ್ಕೆ ಕಣ್ಣೂರಿದ ಸರಳ ಪ್ರಗತಿವಾದವಾಗಲಿ (ಆಧುನಿಕ ಭಾರತದಲ್ಲಿ ಸುಲಭ ಕಂಗೊಳಿಸುವ ಎರಡು ಸವಕಲು ಭಂಗಿಗಳು ಇವು) ಆಧುನಿಕ ಕಾಲದ ವ್ಯಗ್ರ ಒತ್ತಡಗಳನ್ನು ಎದುರಿಸಲು ಅಸಮರ್ಥವಾಗಿದ್ದವು. ಸಮಕಾಲೀನ ಅಸ್ತಿತ್ವದ ಸ್ವಕೀಯ ಸತ್ವವನ್ನು ನಿಷ್ಠುರವಾಗಿ ಪ್ರಕಟಗೊಳಿಸಬಲ್ಲ ಕಾವ್ಯದ ಭಾಷೆ ಕೇವಲ ವಿಷಯವಾಹಕವೋ, ಅಥವಾ ಆವೇಶಪೂರಿತ ವಾಗ್ಮಿತೆಯೋ ಆದರೆ ಸಾಲದಾಗಿತ್ತು; ಅಂದರೆ ಭಾಷೆ ಅಂಥಲ್ಲಿ ಶೋಧಕವಾಗಿ ಬಳಕೆಯಾಗುವುದು ಅವಶ್ಯವಾಯಿತು ಮತ್ತು – ಪ್ರತಿ ಕವನದ ತುದಿ ಸಾಲುಗಳಲ್ಲಿ ಸರಳ ಠರಾವುಗಳನ್ನು ಕಡ್ಡಾಯ ಮಂಡಿಸುವ ಚಟವನ್ನು ಬಿಟ್ಟುಕೊಡಬೇಕಾಗಿತ್ತು. (ನಮ್ಮ ಕವಿಗಳು ಬಹಿರಂಗ ವ್ಯಕ್ತಿಗಳಾಗಿ ತಪ್ಪು ಕಲ್ಪನೆಯಿಂದ ರೂಢಿಸಿಕೊಂಡು ಬಂದ ಯಜಮಾನಿಕೆಯ ಮನೋವೃತ್ತಿ ಈ ಚಟಕ್ಕೆ ಮೂಲ. ) ಇದರ ಫಲವಾಗಿ ಅಡಿಗರು ಎರಡು ದಿಕ್ಕಿನಿಂದ ಶತ್ರುಗಳನ್ನೆದುರಿಸಬೇಕಾಯಿತು: ಒಂದು ಕಡೆ – ಭಾರತೀಯ ತತ್ವಜ್ಞಾನ ಅವಿಚ್ಛಿನ್ನವೆಂದು ನಂಬಿದವರು, ಮತ್ತು ಅರವಿಂದರ ಅನುಯಾಯಿಗಳು; ಇನ್ನೊಂದು ಕಡೆ, ಮಾರ್ಕ್ಸ್‌ವಾದ ನಂಬಿದ ಪ್ರಗತಿಶೀಲರು. ನಿರಾಶಾವಾದಿ ಯೆಂದು ಭಾರತೀಯ ತತ್ವಜ್ಞಾನವನ್ನು ಅರ್ಥಕೆಡಿಸಿ ದುರುಪಯೋಗಿಸಿದವರು ಎಂದು, ಸಮರ್ಥ ಕವಿಯಾಗಿದ್ದು ಎಲಿಯಟ್‌ ಪ್ರಭಾವದಲ್ಲಿ ಸ್ವಂತಿಕೆಯನ್ನು ಕಳೆದುಕೊಂಡವರು ಎಂದು – ಅವರಿಗೆ ಹೆಸರು ಹಚ್ಚಲಾಯಿತು. ನಮ್ಮ ಪ್ರಸ್ತುತ ಧಾರ್ಮಿಕ, ರಾಜಕೀಯ, ಸಾಮಾಜಿಕ ಚಿಂತನೆಗಳ ಕ್ಲೀಶೆಗಳನ್ನು ಮಾತಿಲ್ಲದೆ ಒಪ್ಪಿಕೊಂಡು ನೆಮ್ಮದಿಯಲ್ಲಿ ಸುರಳೀತ ಬದುಕುವ, ರೂಢಿಜಡವಾದ, ಸವಕಲು ಪೀಳಿಗೆಯ ಜನಕ್ಕೆ ಅಡಿಗರ ಕಾವ್ಯದ ವಸ್ತು, ತಂತ್ರಗಳೆರಡೂ ಗೊಂದಲವೆಬ್ಬಿಸುವಂತಿದ್ದುವು. ನಮ್ಮ ;ಹಿರಿಯ ಕವಿಗಳಿಗೆ ಇದು ಸಹಜವಾಗಿಯೆ ಅತಿಯಾಗಿ ಕಾಣಿಸಿತು. ಏಕೆಂಧರೆ ಯೋಗ್ಯತೆಯ ತಾರತಮ್ಯಗಳನ್ನು ಬಲ್ಲ ನಿಷ್ಠ ವಿಮರ್ಶೆಗೆ ಎಂದೂ ಮೈಚೆಲ್ಲಿಕೊಳ್ಳದೆ ಸಂತರಂತೆ, ಆಧ್ಯಾತ್ಮಿಕ ಗುರುಗಳಂತೆ ಉತ್ಸವಗೊಂಡವರು ಅವರು. ಈಗಲೋ, ಅಡಿಗರು ಆಧ್ಯಾತ್ಮಿಕ ಗುರುಗಳಂತೆ ಉತ್ಸವಗೊಂಡವರು ಅವರು. ಈಗಲೋ, ಅಡಿಗರು ಕಾವ್ಯಪ್ರಯೋಜನದ ಬಗ್ಗೆ ಇದ್ದ ಕಲ್ಪನೆಯ ಮೂಲವನ್ನೆ ಬದಲಿಸಿಬಿಡಲು ಟೊಂಕಕಟ್ಟಿ ನಿಂತವರಾಗಿದ್ದರು. ಇದನ್ನು ಕೇಳಿದಾಗ ಭಾರತದ ಇನ್ನಿತರ ಕಡೆಗಳಲ್ಲಿ ಕೂಡ ನಡೆದಿರಬಹುದದ ಹಳೇ ಕಥೆಯನ್ನೆ ಕೇಳಿದಂತಾದರೆ ಆಶ್ಚರ್ಯವಿಲ್ಲ.
ರಾಷ್ಟ್ರರಂಗದಲ್ಲಿ ಕಾಣುತ್ತಿದ್ದ ನೆಹರೂಫ ಯುಗದ ಪೊಳ್ಳು ಆದರ್ಶವಾದಿತನವನ್ನೂ ನಮ್ಮ ಕಾವ್ಯ ಸಂಪ್ರದಾಯದಲ್ಲಿ ಬೇರೂರಿದ್ದ ಭಾಷೆ ಲಯಗಳ ಜಳ್ಳುತನವನ್ನೂ, ಒಂದೇ ರೋಗದ ಎರಡು ಮುಖಗಳಾಗಿ ಅಡಿಗರು ಕಂಡರು. ಹಿಂದಣವರ ಭಾಷೆ ಲಯಗಳ ವಿನ್ಯಾಸ ವಾಸ್ತವದ ಸಂಬಂಧ ಕಳೆದುಕೊಂಡು ಕೇವಲ 'ಮನಸ್ವೀ ರೂಢಿ'ಯಷ್ಟೇ ಆಗಿಬಿಟ್ಟಿತ್ತು. ಕಾವ್ಯಮಯವಾಗಿ ತೋರಬೇಕೆಂದು ಸಂಗೀತದ ಹಂದರ ಹತ್ತಿದ ಭಾಷಾ ವಿನ್ಯಾಸ ತೀರ ಸಲೀಸೂ ನುಣುಪೂ ಆಗಿಬಿಟ್ಟಿತ್ತು; ಪರಿಣಾಮವಾಗಿ ವಾಸ್ತವತೆಯನ್ನು ನಿಚ್ಚಳವಾಗಿ ಅನನ್ಯ ರೀತಿಯಲ್ಲಿ ಎದುರಿಸಿ ಅರ್ಥಮಾಡಿಕೊಳ್ಳಲು ಬಯಸುವ ಮನಸ್ಸು ಅಭಿವ್ಯಕ್ತಿಗೊಳಿಸಲು ಅಸಮರ್ಥವಾಗಿತ್ತು. ಕಾವ್ಯ ರಚನೆ ರೂಢಿಯ ಆಟವಾಗಿತ್ತು: ಆಧ್ಯಾತ್ಮ ಕೂಡ – ಅದು ಅರವಿಂದರದ್ದಿರಲಿ ಅಥವಾ ಬೇರೆ ಮಾದರಿಯದ್ದಿರಲಿ – ಪದ್ಯ ಹೊಸೆಯುವುದಕ್ಕೆ ಒಂದು ವಸ್ತುವಾಗಿತ್ತಲ್ಲದೆ, ಈಷತ್ತಾದರೂ ಸ್ವಂತ ತುರ್ತಿನಿಂದ ಅನುಭವಿಸಿದ ಕಾವ್ಯವಸ್ತುವಾಗಿರಲಿಲ್ಲ. ಅಂಥ ಕಾಲದಲ್ಲಿ ಹಳೆಯ ರೀತಿಯನ್ನೇ ಮುಂದುವರಿಸಿಕೊಂಡು ಬರೆಯುತ್ತ ಹೋಗುವುದೆಂದರೆ, ಹಾಗೇ ವಿಚಾರಗಳನ್ನೂ ಹಾಡಲು ಬರುವಂತೆಯೋ ನಾಟಕೀಯ ಆಡಂಬರದಲ್ಲಿ ಪಠಿಸಿ ಹೇಳಲು ಬರುವಂತೆಯೋ ಪದ್ಯ ಕಟ್ಟುತ್ತ ಹೋಗುವುದೆಂದರೆ, ಕವಿ ದೃಷ್ಟಿಯಿಂದ ತಿಳಿದೋ ತಿಳಿಯದೆಯೋ ಆದ ಅಪ್ರಾಮಾಣಿಕತೆಯಾಗುತ್ತಿತ್ತು. ಆಗ ಅಡಿಗರ ಪಕ್ಷದಲ್ಲಿ ನಿಂತು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದವರು 'ಅಪ್ರಾಮಾಣಿಕತೆ' ಎಂಬ ಪದವನ್ನು ಮೇಲಿಂದ ಮೇಲೆ ಪ್ರಯೋಗಿಸುತ್ತಿದ್ದುದುಂಟು. ಆದರೆ ಸಾಹಿತ್ಯಕ್ಕೆ ಸಂಬಂಧಿಸಿ ಬಳಸಿದಾಗ 'ಅಪ್ರಾಮಾಣಿಕತೆ' ಎಂಬ ಪದಕ್ಕೆ ಯಾವ ಒಂದು ವಿಸ್ತಾರವಾದ ಅರ್ಥವ್ಯಾಪ್ತಿ ದೊರಕಬೇಕಿತ್ತೋ ಅಂಥದು ಅನೇಕವೇಳೆ ಅಲ್ಲಿ ದೊರಕದೆ ಹೋಯಿತು. ಆ ಪದವನ್ನೂ ಬಹು ಸರಳಗೊಳಿಸಿ ಬಳಸಿರುವ ತಪ್ಪಿಗೆ ನಾವೆಲ್ಲ ಅಪರಾಧಿಗಳೇ. ಆ ಪದಕ್ಕೆ ನಮ್ಮ ಸರಳ ಅರ್ಥ ಇಷ್ಟೇ ಆಗಿತ್ತು: ನಮ್ಮ ಅನುಭವದ ಸತ್ಯ ಬದಲಾಗಿದೆ; ಅದೇ ರೀತಿ ಆ ಬದಲಾದ ಸತ್ಯವನ್ನು ಬಿಂಬಿಸದೆ ಕವಿಗಳು ಒಂದೋ ತಿಳಿದೂ ಮೋಸಗಾರರು (ಸರಕಾರದಿಂದ ಸ್ಥಾಪಿತವಾದ ಸಾಹಿತ್ಯ ಅಕಾಡಮಿ ಮುಂತಾದವು ಪ್ರಚಾರಗಳಿಗೆ ಬಹುಮಾನಗಳನ್ನು ಕೊಡುತ್ತವೆ ಎಂಬ ಕಾರಣದಿಂದ ಬರೆಯುವವರು); ಇಲ್ಲವೆ ತಮ್ಮ ಸುತ್ತಣ ಸತ್ಯವನ್ನು ಕಾಣದಷ್ಟು ಅಕುಶಲರು – ಇಷ್ಟೇ ಆಗಿನ 'ಅಪ್ರಾಮಾಣಿಕತೆ'ಯ ವ್ಯಾಖ್ಯೆ. ಈಗ ಕೂಡ ಸಾಹಿತ್ಯ ಕ್ಷೇತ್ರದ ನಮ್ಮ ಖಾಸಗೀ ಸಂಭಾಷಣೆಗಳಲ್ಲಿ ಆ ಪದವನ್ನು ಇದೇ ಸರಳ ಅರ್ಥದಲ್ಲಿ ಬಳಸುವುದುಂಟಾದರೂ, ಸಾಹಿತ್ಯ ವಿಮರ್ಶೆಯಲ್ಲಿ ಅಂಥ ಮುಗ್ಧ ಅರ್ಥಕ್ಕೆ ಬೆಲೆಯಿಲ್ಲವೆನ್ನುವುದು ನಮ್ಮಲ್ಲನೇಕರಿಗೆ ಮನದಟ್ಟಾಗಿದೆ.
ವರ್ತಮಾನ ಪ್ರಪಂಚದಲ್ಲಿ ಬದುಕುವುದು ಏನೆಂಬ ಬಗ್ಗೆ ನಮಗಿರುವ ಸ್ವಂತದ ಅರಿವೇ ಸಾಹಿತ್ಯದಲ್ಲಿನ ನಮ್ಮ ಒಲವುಗಳನ್ನು ಹಾಗೂ ತೀರ್ಮಾನಗಳನ್ನು ನಿರ್ದೇಶಿಸಬೇಕಾಗುತ್ತದೆ; ಆ ಅರಿವಿನಿಂದಲೇ ನಮ್ಮ ವಿಮರ್ಶೆಗೆ ವೈಯಕ್ತಿಕವಾದ ಅಧಿಕೃತತ್ವವೂ, ಕಳಕಳಿಯೂ, ತ್ವರೆಯೂ ದೊರೆಯುತ್ತದೆ. ಹಾಗಿದ್ದರೂ, ಒಂದು ಹೊಸ ಕವನವನ್ನು ಸಮರ್ಥಿಸುವ ಬಗ್ಗೆ ತತ್ಕಾಲೀನ ಸಾಮಾಜಿಕ – ಆರ್ಥಿಕ – ಸಾಂಸ್ಕೃತಿಕ ಸತ್ಯದ ನಮ್ಮ ಪ್ರಜ್ಞೆಯನ್ನು ನೇರ ತೊಡಗಿಸುವುದು ನಿಷ್ಫಲವೇ. ಏಕೆಂದರೆ, ನಮ್ಮನ್ನು ಸುತ್ತಿರುವ ಸತ್ಯಕ್ಕೆ ಯಾವಾಗಲೂ ಒಂದಕ್ಕಿಂತ ಹೆಚ್ಚುವ್ಯಾಖ್ಯೆ ಅರ್ಥ ಇರಲು ಸಾಧ್ಯ – ಒಂದಕ್ಕೊಂದು ವಿರುದ್ಧವಾದಂಥದ್ದು ಕೂಡ.
ಕಲಾಕೃತಿಯೊಂದನ್ನು ಬೆಲೆಕಟ್ಟುವಾಗ ಸಮಕಾಲೀನ ಸತ್ಯದ ಬಗೆಗಿನ ನಮ್ಮ ಧೋರಣೆಯಷ್ಟನ್ನೇ ಮುಂದೊಡ್ಡುವುದು ನಿಷ್ಫಲ ಎಂದೆನಷ್ಟೆ. ಭಾರತೀಯ ಕಾವ್ಯವನ್ನು ಕುರಿತಾಗಂತೂ ಈ ಮಾತು ಹೆಚ್ಚು ನಿಜ. ಕಾರಣ, ನಾಟಕ ಕಥೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳಿಗಿಂತ ಬೇರೆಯಾಗಿ ಕಾವ್ಯ ನಮ್ಮ ಅನುಭವದ ಶುದ್ಧತರವಾದ, ಹೆಚ್ಚು ಅಪರೂಪವಾದ ಭಾಗಕ್ಕೆ ಮಾತ್ರ ಮೀಸಲಾದದ್ದು ಎಂಬ ಭಾವನೆ ಅನೇಕರಲ್ಲಿ ಬೇರುಬಿಟ್ಟಿದೆ. ನಮ್ಮ ದೊಡ್ಡ ಲೇಖಕರಾದ ಕುವೆಂಪು, ಪು. ತಿ. ನ. ಮುಂತಾದವರು ವೀರ್ಯವತ್ತಾದ ಗಂಡುಗದ್ಯ ಬರೆಯುತ್ತಾರೆ: ಅಲ್ಲಿ, ಸೃಷ್ಟಿ ಕಾರ್ಯದಲ್ಲಿ, ಅವರ ಇಡೀ ವ್ಯಕ್ತಿತ್ವ ತೊಡಗಿರುವಂತೆ ಭಾಸವಾಗುತ್ತದೆ. ಆದರೆ ಅವರ ಕವನಗಳ ಒಲವು ಮಾತ್ರ ತೆಳುವಿನ ಕಡೆ, ತುಂಬಾ ನಾಜೋಕಿನ ಕಡೆ, ಅಸ್ಪಷ್ಟ ಅಭೌತಿಕದ ಕಡೆ. ಇದಕ್ಕೆ ಕಾರಣ ಅವರು ಕವಿತೆಯಲ್ಲಿ ಬಯಸುವುದು ತುಂಬಾ ಅಮೂರ್ತವಾದದ್ದನ್ನೇ; ಅಥವಾ ಬೇರೆ ಮಾತಿನಲ್ಲಿ ಹೇಳುವುದಾದರೆ, ಅವರ ಕಾಂಕ್ಷೆ ತುಂಬಾ ಸೀಮಿತವಾದ್ದು. ನಮ್ಮ ಲೇಖಕರಲ್ಲಿ ಬಹುಮಂದಿ, ಬುದ್ಧಿಪೂರ್ವಕವಾಗಿ, ಅಥವಾ ಹಾಗಿಲ್ಲದೆಯೇ, ಶಂಕರರ ವೇದಾಂತದ ಬೋಧೆ ಗಳನ್ನು ಮೈಗೂಡಿಸಿಕೊಂಡು ಬಂದಿರುವವರಾದ್ದರಿಂದ ಇದು ಆಶ್ಚರ್ಯದ ಮಾತಲ್ಲ. ಕವಿಗೆ ಸುಖಕೊಡುವ, ದುಃಖಕೊಡುವ ಈ ವಾಸ್ತವ ಜಗತ್ತು ಮಿಥ್ಯೆ, ಭ್ರಮೆ ಹಾಗೂ ಅವನ ಆತ್ಮ ಮಾತ್ರ ಅವಿಕಾರ್ಯವಾದ್ದು ನಿತ್ಯವಾದ್ದು ಎಂದು ಪ್ರತಿಪಾದಿಸುವ ಶಾಂಕರ ತತ್ವ ನಿತ್ಯ – ಅನಿತ್ಯಗಳ ನಡು ನಿಷ್ಕೃಷ್ಟ ಭೇದವನ್ನು ಗುರುತಿಸುತ್ತದೆ. ಆದರೆ ಕಾವ್ಯಕ್ಕೆ ಅರ್ಥಕೊಡುವ ಚಿತ್ತವೃತ್ತಿಗಳು, ಒತ್ತಡಗಳು ಹುಟ್ಟುವುದೆಲ್ಲಿ? ವೈಯಕ್ತಿಕ ಅನುಭವ, ಆವರಣದ ಸತ್ಯ, ಮತ್ತು ಭಾಷೆ – ಇವುಗಳ ನಡುವೆ ಒಂದು ಸಂಬಂಧವನ್ನು ಕಲ್ಪಿಸಲು ಹೋರಾಡುವಾಗಲೇ ಅಲ್ಲವೆ? ಈ ಮೂರರಲ್ಲಿ ಯಾವೊಂದನ್ನು ಅಮುಖ್ಯವೆಂದಾಗಲಿ ಭ್ರಮೆಯೆಂದಾ ಗಲಿ ತಿಳಿಯುವವನು ಸೃಷ್ಟಿಸುವುದು ಒಂದೋ ಅಸ್ಪಷ್ಟ ಸ್ಪೂರ್ತವಾದ ಆಧ್ಯಾತ್ಮಿಕ ಪದಾರ್ಥ, ಇಲ್ಲವೆ ತನ್ನ ಸ್ವಂತಕ್ಕಾಗಲಿ ಹೊರಗಣ ಪ್ರಪಂಚಕ್ಕಾಗಲಿ ಸಂಬಂಧವಿರದ ರಮ್ಯ ಕೇವಲವಾದ ಕಸಬುಗಾರಿಕೆ. ಸುತ್ತಣ ಜಗತ್ತಿಗೆ ತೆರೆದಿಟ್ಟ ಹಾಗೂ ಅದರಿಂದ ರೂಪತಿವಾಗುತ್ತಿರುವ ಕವಿಯ ಪ್ರಜ್ಞೆಗೂ ಈ ಸಂಬಂಧದ ನವುರುಗಳನ್ನು ಅಭಿವ್ಯಕ್ತಿಗೊಳಿಸಬೇಕಾದ ಭಾಷೆಗೂ ಇರತಕ್ಕ ನಂಟನ್ನು ನಮ್ಮ ಹಿಂದಣ ಕವಿಗಳಲ್ಲಿ ಅನೇಕರು ಸ್ವಂತ ತುರ್ತಿನದಾಗಿ ಅನುಭವಿಸಿದ್ದಿಲ್ಲ. ಹೀಗಾಗಿ ಅವರು ತಮ್ಮ ಕಡೆಗೇ ತಲೆಯೆತ್ತಿ ಕಾಯುತ್ತಿರುವ ರಸಿಕರಿಗೆ ರುಚಿರುಚಿಯಾದ ಸಾರ್ವತ್ರಿಕ ಸತ್ಯಗಳನ್ನು ಪದ್ಯಕಟ್ಟಿ ಎಸೆಯುವ ಬಹಿರಂಗ ವ್ಯಕ್ತಿಗಳಾಗುತ್ತಾರೆ; ಮತ್ತು ತಮ್ಮ ಲೇಖನೋದ್ಯೋಗದ ಅವಧಿಯುದ್ಧವೂ ಬದಲಾಗದಂಥ, ಬರವಣಿಗೆಗೇ ಮೀಸಲಾದ, ಒಂದು 'ಪಾತ್ರರೂಪ'ವನ್ನು ರೂಢಿಸಿಕೊಂಡು ಬಿಡುತ್ತಾರೆ. ಹೆಜ್ಜೆ ಹೆಜ್ಜೆಗೆ ಬದಲಿಸುವ, ನೋವುತಿನ್ನುವ ಮನುಷ್ಯನಿಗೂ ಆ ಪಾತ್ರರೂಪಕ್ಕೂ ಸಂಬಂಧವಿರುವುದಿಲ್ಲ. ನಮ್ಮ ಕವಿಗಳೆಲ್ಲಾ ತಮ್ಮ ಕಾವ್ಯ ಜೀವನದುದ್ದಕ್ಕೆ ಒಳ್ಳೆಯದಾಗಿ ಬರೆದಿದ್ದಾರೆ, ಕೆಟ್ಟದಾಗಿ ಬರೆದಿದಾರೆ. ಉದಾಸೀನರಾಗಿ ಬರೆದಿದ್ದಾರೆ. ಕಾದಂಬರಿಕಾರ ಕಾರಂ ಹಳೆಯ ಲೇಖಕರಲ್ಲಿ ಯಾರೂ ತಮ್ಮ ಬರಹದಲ್ಲಿ ಬೆಳವಣಿಗೆ ತೋರಿಸಿಲ್ಲ ಎನ್ನಬಹುದು. ನಮ್ಮ ಕವಿಗಳಲ್ಲೆಲ್ಲಾ ಅತ್ಯಂತ ಬಹುಮುಖಿ ಎನ್ನಬಹುದಾದ, ಮುಕ್ತ ಸಂವೇದನೆಯುಳ್ಳವರೆನ್ನ ಬಹುದಾದ ಬೇಂದ್ರೆಯವರ ಬಗ್ಗೂ ಈ ಮಾತು ಸತ್ಯವೇ. ಬೇಂದ್ರೆಯವರ ಕವನಸಂಕಲನಗಳಲ್ಲಿ ಅಸಮಾನ ಸೌಂದರ್ಯದ ಅನೇಕ ಭಾವ ಗೀತೆಗಳು ಚದರಿಕೊಂಡಿವೆ. ಏಕಾಂತದಲ್ಲಿನ ಅವರ ವಿಧವಿಧವಾದ ಲೋಲುಪ್ತಿಗಳನ್ನು ಚಂದವಾಗಿ ಮೂಡಿಸುವವು ಅವು. ಅವುಗಳಲ್ಲಿಯೂ, ಅವರ ಇಡೀ ವ್ಯಕ್ತಿತ್ವ ಅಮರುತ್ತಿರುವಂತೆ ತೋರುವಂಥವು ಮಾತ್ರ ಹೆಚ್ಚಿಲ್ಲ. ಅವರನ್ನು ಬಿಟ್ಟು ನಮ್ಮ ಉಳಿದ ಕವಿಗಳಲ್ಲಿ, ಅನುಭವಗಳನ್ನು ಹುಷಾರಾಗಿ ಆಯ್ದು ಆಯ್ದು ಪಟ್ಟಿಹಚ್ಚಿ ಗೂಡು ತುಂಬಿಡುವುದನ್ನು ಕಾಣುತ್ತೇವೆ. ಪರಿಣಾಮವಾಗಿ ಕಾವ್ಯದೊಳಕ್ಕೆ ಬರಲು ಅರ್ಹವಾದಂಥ ಅನುಭವಗಳು ಮಾತ್ರ ಅಭಿವ್ಯಕ್ತಿ ಪಡೆಯುತ್ತವೆ. ಹಾಗಿಲ್ಲದೆ ಆ 'ಮನುಷ್ಯನ' ಸ್ವಂತಕ್ಕೆ ಮಾತ್ರ ಸಂಬಂಧಿಸಿದ ಖಾಸಗಿಯವು ಹೊರಗುಳಿಯುತ್ತವೆ. ಮುಖ್ಯವಾಗಿ, ಕುವೆಂಪು ಮತ್ತು ಪು. ತಿ. ನ. ಅವರಲ್ಲಿ ಅನುಭವ ಪವಿತ್ರವಾಗಿದ್ದಷ್ಟೂ, ಅಪರೂಪವಾಗಿದ್ದಷ್ಟೂ ಭಾಷೆ ಕೂಡ ಸಂಸ್ಕೃತಮಯವಾಗುತ್ತದೆ, ಅತಿ ಕೃತಕ ಕನ್ನಡವಾಗುತ್ತದೆ. ಕಾರಣ, ಅಂಥ ಭಾಷೆ ಮಾತ್ರವೇ ಗೊಂದಲಗೊಳಿಸಿಬಿಡುವ ವಾಸ್ತವತೆಯ ಸ್ಪರ್ಶದಿಂದ ಕವನವನ್ನು ರಕ್ಷಿಸುತ್ತದೆ, ಕವಚ ಕಟ್ಟಿ.
ಮತ್ತು ಹೇಳುವುದಾದರೆ – ವಾಸ್ತವ ಸತ್ಯ, ಕವಿಯ ಸಂವೇದನೆ, ಕಾವ್ಯ, ಭಾಷೆ ಇವುಗಳ ಸಂಬಂಧ ಎಲ್ಲಿಯೂ ಸಂಕೀರ್ಣವಾದದ್ದೇ. ಅದೂ ಕನ್ನಡದಂಥ ಭಾರತೀಯ ಭಾಷೆಯಲ್ಲಿ ಬರೆಯುವ ಭಾರತೀಯ ಕವಿಗಂತೂ ಈ ಸಂಕೀರ್ಣತೆ ಇನ್ನೂ ಹೆಚ್ಚು. ಏಕೆಂದರೆ ಪ್ರಸ್ತುತ ಭಾರತ ಪಶ್ಚಿಮದ ಮೂರು ನಾಲ್ಕು ಶತಮಾನಗಳ ಪ್ರಾತಿನಿಧಿಕ ಸಂಕ್ಷೇಪಿಕೆಯಂತಿದೆ. ಭಾರತದ ಒಂದು ಹಳ್ಳಿಯಲ್ಲಿ ಹುಟ್ಟಿ ನಗರ ಪ್ರದೇಶದಲ್ಲಿ ವಿದ್ಯೆ ಕಲಿತ ಒಬ್ಬ ಕವಿ ವಾಸ್ತವತೆಯ ಹಲವಾರು ಕಟ್ಟಳೆಗಳಿಗೆ, ವ್ಯಾಖ್ಯೆಗಳಿಗೆ ಮೈಚೆಲ್ಲಿದವನಾಗಿರುತ್ತಾನೆ. ನಮ್ಮ ಧಾರ್ಮಿಕ ಮನೋವೃತ್ತಿಗಳು, ಕರ್ಮಕಾಂಡ, ಮೂಢನಂಬಿಕೆಗಳು ಇಂದಿಗೂ ಮಧ್ಯಯುಗದ ವಾಗಿವೆ; ನಮ್ಮ ಅರ್ಥವ್ಯವಸ್ಥೆ ಹತ್ತೊಂಬತ್ತನೆಯ ಶತಮಾನಕ್ಕೆ ಅಂಟಿಕೊಂಡಿದ್ದು ಮತ್ತು – ತಾನು ಪ್ರತ್ಯೇಕ ವ್ಯಕ್ತಿ ಎನ್ನುವ ಪ್ರಜ್ಞೆಗಿಂತ ಹೆಚ್ಚಾಗಿ ಒಂದು ಕುಟುಂಬಕ್ಕೆ ಸೇರಿದವನೆಂಬ ಪ್ರಜ್ಞೆಯೇ ತುರ್ತಾಗಿ ಅನುಭವಕ್ಕೆ ಬರುವ ಸಮಾಜವ್ಯವಸ್ಥೆ, ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿ ನೆಲೆಸಿರುವ ನಮ್ಮಲ್ಲಿ ಅನೇಕರಿಗೆ ಅತಿ ಸ್ಪಷ್ಟ ನೆನಪಾಗಿದೆ. ಲೀವಿಸ್‌ನ ಕಾಲದ ಇಂಗ್ಲೆಂಡ್‌ ಹೀಗಿಲ್ಲ. ಆದ್ದರಿಂದ ಕುಟುಂಬದಂತಹ ಸಮಾಜವ್ಯವಸ್ಥೆ ನಶಿಸಿಹೋಗಿ ಜೀವನ ಮತ್ತು ಸಾಹಿತ್ಯ ಜಳ್ಳಾಗುತ್ತಿದೆಯೆಂದು ಅವನು ಶೋಕಿಸುತ್ತಾನೆ. ಆದರೆ ನಮ್ಮ ಬರಹಗಾರ ವಾಸ್ತವತೆಯ ಒಂದೊಂದು ಮಗ್ಗಲಿಂದ ಚೋದಿತನಾಗಿ ಕೌಟುಂಬಿಕವಾದ ಸಮಾಜಪ್ರಜ್ಞೆ ಜಾಗೃತವಾಗಿದ್ದ ವರ್ಡ್ಸ್‌ವರ್ತ್‌‌ನಂತೆಯೋ, ಡಿಕನ್ಸನಂತೆಯೋ, ಜಾರ್ಜ್ ಎಲಿಯಟ್‌ಳಂತೆಯೋ, ಜಾನ್‌ ಬನಿಯನ್‌ನಂತೆಯೋ ಅಥವಾ ವ್ಯಕ್ತಿಯನ್ನು ಅವನ ಪರಕೀಯತೆಯಲ್ಲಿಯೆ ಮುಖ್ಯವಾಗಿ ಗುರುತಿಸುವ ಕಾಮೂನಂತೆ ಅಥವಾ ಬ್ರೆಕ್ಟ್‌ನಂತೆ ಕೂಡ ಬರೆಯುವುದು ಸಾಧ್ಯ. ಯಾಕೆಂದರೆ ನಮ್ಮಲ್ಲಿ ಹಳ್ಳಿಗಳಲ್ಲಿ ಹುಟ್ಟಿ ಬಂದು ನಗರಗಳಲ್ಲಿ ಬದುಕುವವರಿಗೆ ಪರಕೀಯವಾಗಿರುವ ಹಾಗೂ ಬೇರಿಲ್ಲದಿರುವ ಪ್ರಜ್ಞೆ ಎಷ್ಟು ಸಹಜವಾಗಿರ ಬಲ್ಲದೋ ಅಷ್ಟೇ ಸಹಜವಾಗಿ ಆಳಕ್ಕೆ ಬೇರಿಳಿದ ಧಾರ್ಮಿಕ ಉತ್ತರಾಧಿಕಾರಿಯ ಹಾಗ ಊ ಸಾಮೂಹಿಕ ಸಮಷ್ಟಿಯ ನೆನಪು ಇರಬಲ್ಲದು. ಹೀಗೆ ಭಾರತದ ಇಂದಿನ ವಾಸ್ತವತೆಯ ಇಡೀ ವರ್ಣಶ್ರೇಣಿಯನ್ನು ಗಮನಿಸಿದಾಗ ಭಾರತೀಯ ಲೇಖಕ ಪಾಶ್ಚಿಮಾತ್ಯ ಲೇಖಕರಿಗಿಂತ – ಅವರು ಹಿಂದಿನವರಾಗಲಿ ಈಗಿನವರಾಗಲಿ – ಬೇರೆಯಾಗಿಯೇ ಬರೆಯಬೇಕಾಗಿದೆ ಎಂಬುದನ್ನೂ ಮನಗಾಣಬಹುದು. ಪಶ್ಚಿಮದಲ್ಲಿ ಬದಲಾವಣೆಗಳು ಇಲ್ಲಿಗಿಂತ ನಿಧಾನವಾಗಿ, ಕ್ರಮೇಣವಾಗಿ, ಸಮೂಲವಾಗಿ ಆಗಿವೆ ಎಂಬುದನ್ನು ಮರೆಯುವಂತಿಲ್ಲ. ಬೇರೆಯಾಗಿ ಹೊಸತಾಗಿ ಬರೆಯುತ್ತೇನೆ ಎನ್ನುವವನಿಗೆ ನಮ್ಮ ಇಂದಿನ ಸತ್ಯಗಳ ವರ್ಣಶ್ರೇಣಿಯನ್ನು ಇದ್ದುದಿದ್ದಂತೆ ಕಂಡು ಎದುರಾಗುವ ಸ್ಥೈರ್ಯಬೇಕು. ಸಂಕೀರ್ಣ ವಾಸ್ತವತೆಯ ವಿರುದ್ಧ – ಕಟ್ಟಳೆಗಳಿಗೆ ಸಿಕ್ಕಿ ಬದುಕುವಾಗ, ತೊಡರಿಕೊಳ್ಳುವ ದ್ವಂದ್ವಗಳನ್ನು ಹೇಗೋ ವಿವರಿಸಿ ಕೈ ತೊಳೆದುಕೊಂಡುಬಿಡೋಣವೆಂಬ ಆಸೆಯಿಂದ 'ಭಾರತೀಯ ಸಹನೆ' 'ಏಕತೆಯಲ್ಲಿ ವೈವಿಧ್ಯತೆ' ಮುಂತಾದ ಸರಳ ಕಲ್ಪನೆಗಳ ಆಶ್ರಯ ಪಡೆಯುವುದನ್ನು ತೊರೆಯಬೇಕು. ಆದ್ದರಿಂದ ಇವತ್ತು ಬರೆವ ಕವಿತೆಯ ರೂಪವಿನ್ಯಾಸ ತನ್ನೊಳಗೆ ಸಂಘರ್ಷಗಳಿರುವಂತದ್ದಾಗಬೇಕು ಎಂಬ ಅಂಶವನ್ನು ಒತ್ತಿಹೇಳಬೇಕು. ಒಟ್ಟಿನಲ್ಲಿ – ಕನ್ನಡದಲ್ಲಿ ಹೊಸ ರೀತಿಯಿಂದ ಬರೆಯುವವರು ಸರ್ವತ್ರ ಗೊತ್ತಿರುವ ವಿಶ್ವಸತ್ಯಗಳನ್ನು ಹೆಜ್ಜೆ ನಡೆಯದೆಯೇ ತಲುಪುವ (ವಾಸ್ತವದ ಅನುಭವವನ್ನು ಶಬ್ದಗಳಲ್ಲಿ ಶೋಧಿಸಿಕೊಳ್ಳದ) ಸುಲಭ ಸಾಂತ್ವನವನ್ನು ನಿರಾಕರಿಸಬೇಕಾಗುತ್ತದೆ.
ಅಷ್ಟೇ ಅಲ್ಲದೆ ಯುರೋಪಿನ ಮೂರು ನಾಲ್ಕು ಶತಮಾನಗಳ ಸಂಕ್ಷೇಪಿಕೆಯಾದ ಇಂದಿನ ಭಾರತ ಗ್ರಹಿಕೆಗೆ ಸಿಗದಷ್ಟು ಧಾವಂತದಲ್ಲಿ ಬದಲಾಗುತ್ತದೆ. ಆದ್ದರಿಂದ ಪ್ರಾಯಶಃ ಯುರೋಪಿನಲ್ಲಿಗಿಂತ ಇಲ್ಲಿನ ಕಾವ್ಯ ಹೆಚ್ಚು ಕಷ್ಟವೂ ಸಂಕಲಿತವೂ ಆಗಬೇಕು. ಎಲಿಯಟ್‌ ತನ್ನ 'ವೇಸ್ಟಲ್ಯಾಂಡ್‌'ನಲ್ಲಿ ಯುರೋಪಿನ ಪೂರ್ವಯುಗವನ್ನು ವಿದ್ವತ್‌ಸೂಚನೆಗಳ ಮೂಲಕವೇ ಕಟ್ಟಬೇಕಾಯಿತು. ಆದರೆ, ಇಂದಿನ ಭಾರತೀಯನಿಗಾದರೋ ಭಾರತದ ಭೂತಕಾಲ ಬದಿಯಲ್ಲಿ ಸುಳಿವ ವಾಸ್ತವತೆಯೇ ಆಗಿದೆ: ಅವನ ತಾಯಿಯಲ್ಲಿ, ಅವನು ಹಳ್ಳಿಯ ಕುಟುಂಬದಿಂದ ಬಂದು ಅವನ ಜೊತೆ ವಾಸಿಸುತ್ತಿರಬಹುದಾದ ದೂರದ ಸಂಬಂಧಿಯಲ್ಲಿ, ತನ್ನ ಮದುವೆಯಾದ ರೀತಿಯಲ್ಲಿ, ಮತ್ತು ಹಿರಿಯರ ಇಚ್ಛೆಗೆ ಕಟ್ಟುಬಿದ್ದು ತನ್ನ ಮಕ್ಕಳಿಗೆ ಮದುವೆ ಮಾಡುವ ರೀತಿಯಲ್ಲಿ – ಮುಂತಾಗಿ. ಹೀಗೆ ವಿಲಕ್ಷಣ ವಿಚಿತ್ರವಾಗಿರುವ ಕಲಸುಕಲಕಾಗಿರುವ ವಾಸ್ತವತೆಗೆ ಎದುರಾಗಿರುವುದಷ್ಟೇ ಅಲ್ಲದೆ ನಮ್ಮ ಮನಸ್ಸು ಪಶ್ಚಿಮದ ಅತ್ಯಾಧುನಿಕ ಸಾಹಿತ್ಯ ಪ್ರಯೋಗಗಳ ಪ್ರಭಾವಕ್ಕೂ ಅನಿವಾರ್ಯವಾಗಿ ತೆರೆದುಕೊಂಡಿದೆ. ಆ ಸಾಹಿತ್ಯ ಪ್ರಯೋಗಗಳಾದರೂ ಮುಂದೆ ನಾವು ಏನಾಗಲಿದ್ದೇವೆ ಎಂಬುದನ್ನು ನಿಜವಾಗಿ ಪ್ರತಿಬಿಂಬಿಸುವಂಥವು. ಉದ್ಯಮೀಕೃತ ವಾಗುತ್ತಿರುವ ಭಾರತ ಈಗಾಗಲೇ ಆ ಭವಿಷ್ಯದ ವಾಸನೆ ಹಿಡಿದಿದೆ.
ಕಾವ್ಯ ಸುತ್ತಣ ಸತ್ಯವನ್ನು ಒಳಗೊಂಡದ್ದಾಗಬೇಕು ಎಂದು ಯತ್ನಿಸುವ ಕನ್ನಡ ಕವಿಗೆ (ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ಎಲ್ಲ ಕವಿಗಳಿಗೂ ಬಹುಶಃ) ಭಾಷೆಯ ಸಮಸ್ಯೆಯೊಂದು ಎದುರಾಗುತ್ತದೆ. ಹನ್ನೆರಡನೆಯ ಶತಮಾನದ ವೀರಶೈವ ಕವಿಗಳು ತಮ್ಮ ಕಲಾವಿಷಯಕ ಆಸಕ್ತಿಗಳಿಗೆ ಹೇಗೋ ಹಾಗೆ ಬೌದ್ಧಿಕ ಆಸಕ್ತಿಗಳಿಗೂ ಕನ್ನಡವನ್ನೇ ಆಶ್ರಯಿಸಿದರು. ಅದೊಂದನ್ನು ಬಿಟ್ಟರೆ ಬೇರೆ ಯಾವಾಗಲೂ ಕನ್ನಡ ಬೌದ್ಧಿಕ ಚಿಂತನೆಗೆ ಮಾಧ್ಯಮವಾದದ್ದೆ ಇಲ್ಲ. ಕನ್ನಡದ ತತ್ವಜ್ಞಾನಿ ಮಧ್ವಾಚಾರ್ಯ ಬರೆದದ್ದು ಸಂಸ್ಕೃತದಲ್ಲಿ. ಈಗಲಾದರೂ ನಾವು ನಮ್ಮ ಖಾಸಗಿ ಮಾತುಕತೆಗಳಲ್ಲಿ ಕೂಡ ಚರ್ಚೆ ಬೌದ್ಧಿಕಕ್ಕೆ ಏರಿದೊಡನೇ ಇಂಗ್ಲಿಷನ್ನು ಬಳಸುತ್ತೇವೆ. ನಮ್ಮ ಹಿಂದಣ ಸಾಹಿತ್ಯ ಪರಂಪರೆ ಮಹತ್ತಿನದಾದರೂ ಕನ್ನಡ ಜೀವಂತವಾಗಿ ಉಳಿದುಬಂದದ್ದು ಅನಕ್ಷರಸ್ಥರಿಂದಾಗಿ ಎನ್ನಲೇಬೇಕು. ಕನ್ನಡ ಇವತ್ತಿಗೂ ಗಂಡು ನುಡಿಕಟ್ಟುಗಳಿಂದ ಶಕ್ತಿ ಹೊಮ್ಮಿ ಬಳಕೆಯಾಗುತ್ತಿರುವುದು ಹಳ್ಳಿಯ ಭಾಗಗಳಲ್ಲೇ. ತ್ವರಿತ ಗತಿಯಲ್ಲಿ ಔದ್ಯೋಗೀಕೃತವಾಗುತ್ತಿರುವ ನಗರಗಳಲ್ಲಿ ಮತ್ತು ನಮ್ಮ ಬಹುಮಂದಿ ಲೇಖಕರು ಕಾಣಸಿಗುವ ಅಧ್ಯಾಪನ ಸಂಸ್ಥೆಗಳಲ್ಲೂ ನಮ್ಮ ಜಾಗೃತ ಅಸ್ತಿತ್ವದ ಹೆಚ್ಚಿನ ಭಾಗ ಇಂಗ್ಲಿಷ್‌ ಭಾಷೆಯಲ್ಲೆ ಅಭಿವ್ಯಕ್ತವಾಗುತ್ತದೆ. ಸಾಹಿತ್ಯಕೃತಿಗಳಲ್ಲಿ ಉದ್ದೇಶ ಪೂರ್ವಕವಾಗಿ ಬಳಸುವುದನ್ನು ಬಿಟ್ಟರೆ ಕನ್ನಡವನ್ನು ಅನ್ಯತ್ರ ಬಳಸುತ್ತಿಲ್ಲ. ಇದು ಭಾಷೆ ಬೆಳೆಯುವ ದಾರಿಯಲ್ಲ. ಗೃಹಕೃತ್ಯಗಳಲ್ಲಿ ಮಾತ್ರ ಕನ್ನಡ; ಇತರ ಆಸ್ಥೆ ಆಸಕ್ತಿಗಳಿಗೆ ಇಂಗ್ಲಿಷ್‌, – ಹೀಗಾಗಿ, ನಮ್ಮ ದೈನಂದಿನ ಜೀವನದ ಸಂಪರ್ಕ ಪಡೆಯದೆ ನಮ್ಮ ಇಂಗ್ಲಿಷ್‌ ಸಹಜವಾಗಿ ಕೃತಕವಾಗುತ್ತದೆ; ಮತ್ತು ಬೌದ್ಧಿಕ ಆಸಕ್ತಿಗಳ ಜೀವಂತ ಸಂಪರ್ಕವಿಲ್ಲದೆ ನಮ್ಮ ಕನ್ನಡ ಅಲ್ಪದ್ದಾಗುತ್ತದೆ. ಯಾವಾಗ ಅಂಥ ಭಾಷೆ ನಮ್ಮ ವಿರುದ್ಧ ಸತ್ಯಗಳ ಪ್ರಜ್ಞೆಯನ್ನು ಶೋಧಿಸುತ್ತ ಹೋಗಬೇಕಾಗುತ್ತದೋ ಆಗ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಕಾರಣ, ನಾವು ಯಾವುದೇ ಒಂದು ಭಾಷೆಯನ್ನು ಹಿಡಿದು ಈ ಸತ್ಯಗಳಲ್ಲಿಳಿದು ಬದುಕುವುದಿಲ್ಲ. ಹಳ್ಳಿಗಳಲ್ಲಿ ಆಡುವ ಕನ್ನಡ ಶಕ್ತಿಯುತವಾಗಿದೆ, ಹೌದು. ಆದರೆ ಅದನ್ನು ಪಾಶ್ಚಾತ್ಯ ಪ್ರಭಾವಗಳಿಗೆ ತೆರೆದಿರುವಂಥ ನಮ್ಮ ಅನುಭವಗಳ ಸೂಕ್ಷ್ಮಾತಿಸೂಕ್ಷ್ಮಗಳಿಗೆ ಮೆಯ್‌ಗೂಡುವಂತೆ ಬಗ್ಗಿಸುವುದು ಕಷ್ಟ. ನಮ್ಮ ನವೋದಯ ಕಾಲದ ದೊಡ್ಡ ವ್ಯಕ್ತಿ ಬಿ. ಎಂ. ಶ್ರೀಕಂಠಯ್ಯನವರಾದರೂ ಈ ಸಮಸ್ಯೆಯನ್ನು ಇಡಿಯಾಗಿ ಎದುರಿಸಲಿಲ್ಲ. ಅವರು ಇಂಗ್ಲಿಷ್‌ ಭಾವಗೀತೆಗಳ ತಮ್ಮ ಅನುವಾದದಲ್ಲಿ ನಗರ ಭಾಗದ ಆಧುನಿಕ ಕನ್ನಡವನ್ನು ಬಳಸಿದರು ಮತ್ತು ತಮ್ಮ ಇತರ ಕೆಲವು ಪ್ರಭಾವಶಾಲಿ ರೂಪಾಂತರಗಳಿಗೆ ಈಗ ಬಳಕೆಯೇ ಇಲ್ಲದ ಹಳಗನ್ನಡವನ್ನು ಆಶ್ರಯಿಸಿದರು. ಇನ್ನೊಂದು ಮಾತೆಂದರೆ ಅವರು ಶ್ರೇಷ್ಠ ಅನುವಾದಕರಾಗಿದ್ದರಲ್ಲದೆ ಸ್ವತಃ ಕವಿಯಾಗಿರಲಿಲ್ಲ. ಕುವೆಂಪು, ಪು. ತಿ. ನ. . , ಗೋಕಾಕ ಇವರುಗಳು ತಮ್ಮ ಕೃತಿಗಳಲ್ಲಿ ತಮ್ಮ ತಮ್ಮ ಸ್ವಂತದ್ದೇ ಆದ ಸಂಸ್ಕೃತಮಯ ಕನ್ನಡವನ್ನು ಸೃಷ್ಟಿಸಿಕೊಂಡರು. ಅಲಂಕಾರವೇ ಪ್ರಯೋಜನವೆಂದು ತಿಳಿದಾಗ ಅವು ಯಶಸ್ವಿಯಾಗಿದೆಯೆನ್ನ ಬಹುದು. ಆದರೆ ಅಂಥ ಭಾಷಾರೂಪಗಳ ಮೂಲಕ ಯಾವುದೇ ವಿಧವಾದ ಶೋಧನೆಯ ಪ್ರಯತ್ನ ನಡೆಯಬೇಕೆಂದರೆ ಆಗ ಭಾಷೆ ಮುಗ್ಗರಿಸುತ್ತದೆ. ಕಾವ್ಯಮಯವಾಗಿರತಕ್ಕದ್ದು ಎಂಬ ಎಚ್ಚರದ ಭಾಷೆ ಮುಗ್ಗರಿಸುತ್ತದೆ. ಕಾವ್ಯಮಯವಾಗಿರತಕ್ಕದ್ದು ಎಂಬ ಎಚ್ಚರದ ಭಾಷೆ ಅದು, ಕವಿಸಮಯವಾಗಿರುವಂಥದು; ವಾಸ್ತವವಾದ ಜೀವನ ಸಂದರ್ಭಗಳ ಅಧಿಕಾರಮುದ್ರೆ ಆ ಭಾಷೆಗಿಲ್ಲ.
ಬೇಂದ್ರೆಯವರೊಬ್ಬರೇ ಇದಕ್ಕೆ ಪರಿಹಾರ ಕಂಡುಕೊಂಡವರು. ಆದರೆ ಆ ಪರಿಹಾರ ಇವೊತ್ತು ಮತ್ತೂ ಹೆಚ್ಚಿನ ಸ್ವಂತಿಕೆಯ ಪ್ರಜ್ಞೆಯಿಂದ ಬರೆಯುತ್ತಿರುವ ಕವಿಗಳಿಗೆ ಬಹಳ ಉಪಯೋಗವಾಗದು. ಬೇಂದ್ರೆಯವರು ಉತ್ತರ ಕರ್ನಾಟಕದ ಆಡುಮಾತನ್ನೂ ಜಾನಪದ ಕಾವ್ಯದ ಮಟ್ಟುಗಳನ್ನು ಎತ್ತಿಕೊಂಡು ಅತಿ ನವುರಾದ ಭಾವಗೀತೆ – ಸಂವೇದನೆಯ ಅಭಿವ್ಯಕ್ತಿಗೆ ಅದನ್ನು ಹದಗೊಳಿಸಿಕೊಂಡರು. ತೀವ್ರತೆಯಲ್ಲಿ, ಚೆಲುವಿನಲ್ಲಿ ಬ್ಲೇಕನ ಕವನಗಳಿಗೆ ಸಮಸಮ ಎನ್ನಿಸುವಂಥ ಕೆಲವು ಶ್ರೇಷ್ಠ ಕವನಗಳನ್ನು ಅವರು ಬರೆದರು. ಜೀವಂತವಾದ ಜಾನಪದ ಕಾವ್ಯ ಸಂಪ್ರದಾಯದ ಜೊತೆ ಆಧುನಿಕ ಕವಿಯೊಬ್ಬನ ಒಡನಾಟ ತೀರ ಹೊಸದೇ ಆದ ಒಂದು ಕಾವ್ಯರೂಪವನ್ನು ನಮಗೆ ದೊರಕಿಸಿಕೊಟ್ಟಿತು. ಆದರೆ – ಜಾನಪದ ಕಾವ್ಯದ ಅಚ್ಚು ಅಂಥದಾದ್ದರಿಂದ ಅದರ ಅಂಕಿತಕ್ಕೆ ಒಳಗಾಗಿ ಬೇಂದ್ರೆಯವರ ಕವನಗಳು ಸಹಜವಾಗಿ ಅನುಭವದ ಉತ್ತಮ 'ಕೀರ್ತನೆ'ಗಳಾಗಿ ಬಿಡುತ್ತವೆ ಮತ್ತು ಕವಿಯ ವೈಯಕ್ತಿಕ ಪ್ರಜ್ಞೆ ಸಮೂಹ ಪ್ರಜ್ಞೆಯಲ್ಲಿ ಲಯವಾಗಿ ಬಿಡುತ್ತದೆ. ಬೇಂದ್ರೆಯವರ ಮಟ್ಟಿಗೆ ಹೇಳುವುದಾದರೆ ಇದು ಸರಿಯೇ ಆಗಿದೆ. ಅವರು ಸಮಾಜದ ಸಮಷ್ಟಿಯಿಂದಲೇ ಬಂದವರು. ಶ್ರೀಮಂತ ಸ್ಮೃತಿಗಳನ್ನು ಹೊತ್ತು ಕಾವ್ಯರೂಪಗಳಲ್ಲೆ ಬರೆಯುವವರು. ಅವರ ಜೀವನದರ್ಶನ, ಅದರ ಅಭಿವ್ಯಕ್ತಿಗಾಗಿ ಅವರು ಬಳಸುವ ಕಾವ್ಯರೂಪ ಮತ್ತು ಭಾಷೆ – ಎಲ್ಲ ಏಕಮೇವ ಒಂದೇ ತುಂಡು. ಆದರೆ ಬೇಂದ್ರೆ ಕೂಡ ತಮ್ಮ ಇನ್ನು ಕೆಲವು ಕವನಗಳಲ್ಲಿ ನಾಗರಿಕ ಹಾಗೂ ಸಾಹಿತ್ಯಕ ಕನ್ನಡವನ್ನು ಬಳಸುತ್ತಾರೆ. ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. – ಎರಡು ಶೈಲಿಗಳಲ್ಲಿ ಬರೆಯುವ ಇಬ್ಬರು ಬೇಂದ್ರೆ ಇದ್ದಾರೇನೋ ಎಂದು; ಒಬ್ಬ ಹಿಂಡು ಅಗಲದ ಗಾಯಕ ಕವಿ, ಇನ್ನೊಬ್ಬ ಕ್ರೋಧ ಕುದಿಯುವ ವ್ಯಕ್ತಿವಾದಿ. ನಿಸರ್ಗದ ಕೂಡ ಅವರ ಅವಿಭಕ್ತ ಸಂಬಂಧವನ್ನು ಮೆರೆಸುವ, ಜಾನಪದ ಮಟ್ಟಗಳಲ್ಲೆ ಇರುವ ಅವರ ಕೆಲವು ಈಚಿನ ಕವನಗಳು ಕೆಲವು ಸಲ ಕಳೆದಿದ್ದರ ಬಗ್ಗೆ ಪಡುವ ಬರಿಯ ಹಂಬಲ ಮಾತ್ರವಾಗಿ ನಮಗೆ ತೋರುತ್ತವೆ. ಇದಕ್ಕೆ ಕಾರಣ, ಅವುಗಳನ್ನೋದುವಾಗ ಉತ್ತರ ಕರ್ನಾಟಕದ ಬದಲಾಗುತ್ತಿರುವ ಈಗಿನ ವಾಸ್ತವತೆ ನಮ್ಮ ಪ್ರಜ್ಞೆಯಲ್ಲಿ ಕೆಲಸಮಾಡುತ್ತಿರುತ್ತದೆ. ಬಹು ಸಮರ್ಥರಲ್ಲೊಬ್ಬರದ ಕಂಬಾರದಂಥ ನಮ್ಮ ಈಚಿನ ಕವಿ ಬೇಂದ್ರೆ ಬಳಸಿದಂಥ ಕವಿತಾರೂಪಗಳನ್ನು ಬಳಸಲೆತ್ನಿಸಿದಾಗ ಅದರಲ್ಲಿ ಪೂರ್ಣ ಯಶಸ್ಸು ಪಡೆದಂತೆ ಕಾಣುವುದಿಲ್ಲ. ಏಕೆಂದರೆ ಅವರ ಅಭೀಪ್ಸೆ ಬೇಂದ್ರೆಯವರದ್ದರಕ್ಕಿಂತ ಬೇರೆಯೇ ಆದದ್ದು: ತನ್ನ ಬಗ್ಗೆ ಎಚ್ಚರವುಳ್ಳಂಥದ್ದು – ಎಂದರೆ, ಸುತ್ತಣ ಪ್ರಪಂಚದಿಂದ ಬೇರೆಯಾಗಿ ಪರಕೀಯನಾಗಿ ನಿಂತಿರುವೆನೆಂಬ ಅನ್ನಿಸಿಕೆಯನ್ನು ವ್ಯಕ್ತಗೊಳಿಲಿಚ್ಛಿಸುವಂಥದ್ದು. ಬೇಂದ್ರೆಗಿರುವಂಥದೇ ರೀತಿಯ ಪ್ರಜ್ಞೆಯಿಂದಲ್ಲದೆ ಅವರು ಬಳಸಿದ ಕವಿತಾ ರೂಪವನ್ನು (ಭಾಷೆಯನ್ನಲ್ಲ) ಬಳಸುವುದು ಅಸಾಧ್ಯ.
ನಮ್ಮ ನವ್ಯ ಕಾವ್ಯದ ವಿಷಯದಲ್ಲಿ ಕೂಡ, ಬಹಳ ಪಾಲು ಗ್ರಾಮೀಣವೂ ಅರ್ಧ ನಾಗರಿಕವೂ ಆದ ಒಂದು ಭಾಷೆಯನ್ನು ಸಮಕಾಲೀನ ಸಂವೇದನೆಯ ಅಭಿವ್ಯಕ್ತಿಗಾಗಿ ದುಡಿಸಿಕೊಳ್ಳಬೇಕಾದ ಸಮಸ್ಯೆಯೇ ತುಂಬಾ ಮುಖ್ಯವಾದದ್ದು. ಹದಿನೈದು ವರ್ಷಗಳ ಹಿಂದೆ ಅಡಿಗರು ಚಂಡೆ ಮದ್ದಳೆ ಎಂಬ ಕವನಸಂಕಲನವನ್ನು ಪ್ರಕಟಿಸಿದರು. ಅದರಲ್ಲಿನ ಹೆಚ್ಚು ಕವನಗಳು ತುಂಬ ನಾಗರಿಕವೆನ್ನುವಂಥ ಪ್ರತಿಮೆಗಳಿಂದಲೇ ಕಟ್ಟಿದವು. ದೃಷ್ಟಿಯಲ್ಲಿ ಆಧುನಿಕವೂ ಪ್ರತಿಮಾ ವಿವರಗಳಲ್ಲಿ ಸಮಕಾಲೀನವೂ ಆಗಿರಲು ಹೆಣಗುವ ಕುತೂಹಲಕಾರಿ ಪ್ರಯೋಗಗಳು ಅವು. ಹಾಗಿದ್ದರೂ ಅವು ಅಡಿಗರ ಸಂವೇದನೆಗೆ ಅಧಿಕೃತ ಕನ್ನಡ ಶರೀರವನ್ನು ಕೊಡಲು ಪೂರಾ ಸಮರ್ಥವಾದಂತೆ ಕಾಣುವುದಿಲ್ಲ. ಆದರೆ ಅವರ ಭೂಮಿಗೀತ (ಪ್ರಕಟಣೆ: ೧೯೫೯) ದಲ್ಲಿನ ಕವನಗಳು ದೃಷ್ಟಿಯಲ್ಲಿ ತುಂಬಾ ಆಧುನಿಕವಾಗಿದ್ದರೂ ಅಲ್ಲಿನ ಪ್ರತಿಮಾ ಶೈಲಿಯನ್ನು ಸಮಕಾಲೀನವೆಂದು ಕರೆಯುವುದಕ್ಕಾಗುವುದಿಲ್ಲ. ಅಲ್ಲಿನ ಪ್ರತಿಮೆಗಳು ಕಾಲದ ಕಟ್ಟಿಗೆ ಸಿಕ್ಕುವಂಥವಲ್ಲ; ನಿಸರ್ಗದಿಂದಲೋ ಪುರಾಣದಿಂದಲೋ ಎತ್ತಿಕೊಂಡಂಥವು. ಭೂಮಿಗೀತ ದಲ್ಲಿನ ಉತ್ತಮವಾದ ಕವನಗಳ ಮಟ್ಟಿಗಂತೂ ಈ ಮಾತು ತೀರಾ ಸತ್ಯ. ಈ ಕವನಗಳ ಭೂಮಿಕೆ ಹೆಚ್ಚು ಪಕ್ಷ ಹಳ್ಳಿಯದು. (ಉದಾಹರಣೆಗೆ ಸಂಕಲನಕ್ಕೆ ಹೆಸರುಕೊಟ್ಟ "ಭೂಮಿಗೀತ" ಎಂಬ ಪದ್ಯವನ್ನೇ ನೋಡಬಹುದು; ಅಥವಾ ಸಂಕಲನಕ್ಕೆ ಈಚಿನ "ಕೂಪಮಂಡೂಕ" ಎಂಬ ಪದ್ಯವನ್ನು ನೋಡಬಹುದು. ) ಅವು ಅಡಿಗರ ಮಹತ್ಕೃತಿಗಳು. ಅಡಿಗರಿಗೆ ಒಮ್ಮೆಗೇ ಸಮಕಾಲೀನವೂ ಆಧುನಿಕವೂ ಆಗಿರುವಂಥ ಒಂದು ಮಹತ್ಕವಿತೆಯನ್ನು (The Waste Land) ನ್ನು ಅಂಥ ಕವನವೆನ್ನಬಹುದು) ಬರೆಯಲು ಸಾಧ್ಯವಾಗಿಲ್ಲ ಎನ್ನುವುದು ಮುಖ್ಯವಾಗಿ ನಮ್ಮ ಭಾಷೆಯ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವಂಥಿದೆ. ಇದು ಅಡಿಗರಿಗಾಗಲಿ ಅಥವಾ ಬೇರೆ ಕವಿಗಳಿಗಾಗಲಿ ಗೆಲ್ಲಲು ಸಾಧ್ಯವೇ ಇಲ್ಲದಂಥ ಸಮಸ್ಯೆ ಎಂಬುದು ನನ್ನ ಅಭಿಪ್ರಾಯವಲ್ಲ. ಕನ್ನಡದಲ್ಲಿರುವ ಭಾಷೆ ಮತ್ತು ಸಂವೇದನೆಗಳ ನಡುವಣ ಸಮಸ್ಯೆಯ ಕಡೆಗೆ ಗಮನ ಸೆಳೆಯಬೇಕೆನ್ನುವುಷ್ಟೆ ನನ್ನ ಇಚ್ಛೆ. ತುಂಬಾ ನಾಗರಿಕವಾದ ಆಧುನಿಕ ಸಂವೇದನೆಗಳಿಂದಲೇ ಬರೆಯುವಂಥ ಲಂಕೇಶ್‌, ರಾಮಚಂದ್ರಶರ್ಮ ಮತ್ತು ನಾಡಿಗ ಮುಂತಾದ ಕವಿಗಳಿಗೆ ಇದು ಒಂದು ಸೃಜನಾತ್ಮಕ ಸವಾಲನ್ನು ಎದುರೊಡ್ಡುವಂತಿದೆ. ರಾಮಾನುಜಂ ಕವನಗಳ ಭಾಷೆ ಈ ದೃಷ್ಟಿಯಿಂದ ಗಮನಾರ್ಹ. ತಿರುಮಲೇಶರ ಕವನಗಳಲ್ಲಿ ಕೂಡ ನಾಗರಿಕ ಭಾಷೆಯ ಕುತೂಹಲಕಾರೀ ಪ್ರಯೋಗಗಳನ್ನು ನೋಡಬಹುದು.
ಅಡಿಗರ ಯಾವುದೇ ಒಂದು ಕವನವನ್ನೂ ಎತ್ತಿಕೊಂಡು ಇಲ್ಲಿ ವಿವರವಾಗಿ ವಿಶ್ಲೇಷಿಸಲು ನಮಗೆ ಸಾಧ್ಯವಿಲ್ಲ. ಕಾರಣ, ಅವರ ಕವನದ ಅತ್ಯಂತ ಉತ್ಕೃಷ್ಟ ಅನುವಾದ ಕೂಡ ಅಲ್ಲಿನ ಸಾಧನೆಯ ಅಸ್ಥಿಚಿತ್ರವನ್ನು ಮಾತ್ರ ಕೊಟ್ಟೀತು. ಅನುಪ್ರಾಸ, ಧ್ವನಿ, ಸಾಮ್ಯ, ಶ್ಲೇಷೆ, ವಿಡಂಬಕವಾಗಿ ಶಬ್ದಗಳನ್ನೂ ಚಿತ್ರಗಳನ್ನೂ ಹತ್ತಿರ ಹತ್ತಿರ ಇಡುವುದು ಮುಂತಾದುವುಗಳನ್ನು ಬೆಳೆಸಿಕೊಂಡು ಕನ್ನಡ ಭಾಷೆಯ ಸಾಧ್ಯತೆಗಳನ್ನು ಪೂರಾ ಸೂರೆಗೊಳ್ಳುವುದಕ್ಕೆ ಯತ್ನಿಸುವ ಅವರ ಕವನಗಳು ಅನುವಾದಕ್ಕೆ ಅತೀತವಾದವು. ಕೇವಲ ನಮ್ಮ ಭಾಷೆಯ ಜಾಯಮಾನಕ್ಕೆ ಒಗ್ಗುವಂತಿರುವ ಲಯ, ಗತಿ, ಶಬ್ದ, ರೂಪಕಗಳು ಮುಂತಾದುವು ಗಳಿಂದ ಭಾವದ (ಅರ್ಥದ ಅನುಭವದ) ಪುನರಭಿನಯವಾಗುವುದೇ ಅಡಿಗರ ಕಾವ್ಯದ ಮುಖ್ಯ ಲಕ್ಷಣವಾಗಿದೆ. ಅವರ ಶಬ್ದಕೋಶದ ಭಾಷಾವ್ಯಾಪ್ತಿ – ಆದ್ದರಿಂದ ಅನುಭವದ ವ್ಯಾಪ್ತಿ – ಆಶ್ಚರ್ಯ ಹುಟ್ಟಿಸುವಷ್ಟು ಸ್ವಕೀಯವಾಗಿದೆ. ಅವರ ಕವನದ ಒಂದೇ ಸಾಲಿನ ಅನೇಕಸಲ ಸಂಸ್ಕೃತ ಅಥವಾ ಉರ್ದು ಅಥವಾ ಇಂಗ್ಲಿಷ್‌ ಪದ ಕನ್ನಡದ ಒಂದು ಗ್ರಾಂಥಿಕ ಪದದ ಜೊತೆಗೊ ಇಲ್ಲವೆ ಆಡುಮಾತಿನ ಪದದ ಜೊತೆಗೂ ಕೂಡಿ ವಿಲಕ್ಷಣವೂ ಅರ್ಥಪೂರ್ಣವೂ ಆಗಿ ಹೊಂದಿಕೊಂಡಿರುವುದನ್ನೂ ಕಾಣಬಹುದು. ಹೀಗೆ ಅವರ ಭಾಷೆ ಸಹಜವಾಗಿರುವುದರ ಜೊತೆಗೆ ಸಂಕೋಚಗಳನ್ನು ಬಿಟ್ಟಿದ್ದೂ ಆಗಿ ಅವರ ಅನುಭವ ಶೋಧಕವಾದ ಸೃಜನೋದ್ದೇಶಗಳಿಗೆ ಸಮರ್ಥ ಮಾಧ್ಯಮವಾಗುತ್ತದೆ.