text
stringlengths 0
61.5k
|
---|
ನಾನೇ ಸ್ವದೇಶಿ ನೀನೇ ಪರದೇಶಿ |
ಎಂದು ಹಾಡಿ ನಲಿದಿದ್ದಾರೆ.. ನಾವು ದೈವದ ಅವತಾರ ಎನ್ನುವ ಕೃಷ್ಣನನ್ನ ನಾವೇ ಬೆಣ್ಣೆ ಕಳ್ಳ, ಕಪಟಿ ಎನ್ನುತ್ತೇವೆ. ಯಾವ ದೈವವನ್ನೆ ನಂಬುವುದಿಲ್ಲ, ನಾಸ್ತಿಕ ಎಂದರೂ ಅವರಿಚ್ಚೆಗೆ ಬಿಡುತ್ತೇವೆ. ಇಲ್ಲಿ ದೈವದ ಅವತಾರಗಳು ಹೇಳಿದ ದಾರಿಯಲ್ಲೋ, ಸನ್ಯಾಸಿಗಳು ಕಂಡು ಕೊಂಡ ದಾರಿಯಲ್ಲೋ, ವೈದಿಕ ದಾರಿಯಲ್ಲೋ, ಅಥವಾ ನಾನೇ ದಾರಿ ಕಂಡುಕೊಳ್ಳುವೆ ಎಂದು ಹೇಳಿ ಹೊರಟರೆ ಅದಕ್ಕೂ ಅವಕಾಶವಿದೆ. ನನಗಾವ ಮುಕ್ತಿಯ ದಾರಿಯೂ ಬೇಕಿಲ್ಲ ಎಂಬ ನಾಸ್ತಿಕನಿಗೂ ಅವಕಾಶವಿದೆ. ನನಗೆ ತಿಳಿದಂತೆ ಇನ್ನೆಲ್ಲೂ ಇಷ್ಟು ಅವಕಾಶಗಳಿಲ್ಲ.. ನಾವು ಪ್ರೀತಿಸುವುದು ನಮ್ಮನ್ನ ಪ್ರೀತಿಸುವ, ದಾರಿ ತೋರುವ, ನಮ್ಮೊಳಗೊಂದಾಗಿ ನಮ್ಮ ನೋವು ನಲಿವು ಹಂಚಿಕೊಳ್ಳುವ ಕರುಣಾಮಯಿ ದೈವವೇ ಹೊರತು, ಈಗ ಪರೀಕ್ಷೆಗೆಂದು ಏನೇನೋ ಪ್ರಶ್ನೆಪತ್ರಿಕೆಗಳನ್ನಿಟ್ಟು ನಾವು ಸತ್ತ ನಂತರ, ಎಂದೋ ಒಂದು ದಿನ ಎಲ್ಲರನ್ನೂ ಸಮಾಧಿಯಿಂದೆಬ್ಬಿಸಿ, ನಿನಗೆ ನರಕದ ಬೆಂಕಿ, ನಿನಗೆ ಸ್ವರ್ಗದ ಅಪ್ಸರೆ ಎನ್ನುವ ಕರುಣಾಮಯಿ ದೈವವಲ್ಲ. |
ಇನ್ನು ಅಪರಿಪೂರ್ಣ ಪರಿಕಲ್ಪನೆಗಳೆನಿದ ನಂಬಿಕೆಗಳಂತೂ ನಿಮಗೆ ಬೇಡ (ಅವು ಎಷ್ಟೇ ಆದರೂ ಸೋಲಿನ ಕಡೆಗೆ ಒಯ್ಯುವಂತಹುದು). ಖಂಡಿತ ನಿಮಗೆ ಶುಭ್ರತೆ ವಿಶ್ವಾಸ ಕಂಡ ನಂಬಿಕೆಯೇ ಸರಿ. ನನಗೆ ನಿಮ್ಮ ಆ ನಂಬಿಕೆಗಳು ನನ್ನನ್ನು ಸಂಪೂರ್ಣ ಸೆಳೆಯಲು ವಿಫಲವಾಯಿತು. ಅದಕ್ಕೆ ಅಹಂ ನಿಂದ ಹಿಡಿದು ಹಲವು ಕಾರಣಗಳಿರಬಹುದು., ನಿಜಕ್ಕೂ ನಮ್ಮೊಡನಿರುವ ದೈವ ನಮ್ಮ ಭ್ರಮೆಯಾಗಿದ್ದು, ದೈವ ಮೇಲೆ ಕುಳಿತು ಪರೀಕ್ಷೆಯನ್ನೇ ಕೊಡುತ್ತಿದ್ದರೂ, ನ್ಯಾಯ ತೀರ್ಮಾನದ ದಿನ ಯೋಚನೆ ಇಲ್ಲದೆ ದೈವಕ್ಕೆ ಉತ್ತರಿಸಬಲ್ಲೆ ಎಂಬ ಆತ್ಮವಿಶ್ವಾಸ ಈ ಪರೀಕ್ಷಾ ಜೀವನದಲ್ಲಿ ಅಪರಿಪೂರ್ಣ ಪರಿಕಲ್ಪನೆಗಳೆ ಅಪ್ಯಾಯಮಾನವೆನಿಸುವಂತೆ ಮಾಡಿದೆ,, |
ಇನ್ನು ಸೌದಿಯ ಮುತಾವಾ ಇಕಾಮಾಗಳ ವಿಷಯ ನೀವು ವಿಶ್ಲೇಷಿಸುವುದು ಕಷ್ಟ, ಆದರೆ ಮುಸ್ಲಿಮನಾದ ಮೇಲೆ ನಮಾಜ್ ಮಾಡದಿರುವುದು ತಪ್ಪು, ಜವಾಬ್ದಾರಿಯುತ ಮನುಷ್ಯನಂತೆ ಹೇರಿಕೆ ಮಾಡಿಯಾದರೂ ಸರಿ ಸರಿಪಡಿಸಬೇಕು, ಆದ್ದರಿಂದ ಮುತಾವಾ ಇಕಾಮಾಗಳು ತಪ್ಪುಮಾಡುತ್ತಿಲ್ಲ ಎಂಬ ವಾದ ಮಂಡಿಸಿದ್ದೀರಿ.. ನಿಮ್ಮ ವಾದವನ್ನ ಒಪ್ಪಿದೆ. |
# "ಇಸ್ಲಾಮಿಯಾ ಆಡಳಿತ ಇರುವ ರಾಜ್ಯದಲ್ಲಿ ಅಮುಸ್ಲಿಮರಿಗೆ ಹೆಚ್ಚಿನ ರಕ್ಷಣೆ, ಗೌರವ ಆದ್ಯತೆ ಕೊಡಬೇಕು. ಅವರೆಂದೂ ವಂಚಿಸಲ್ಪಟ್ಟವರೆಂಬ ಬಾವನೆಗೆ(ವಂಚಿಸಲ್ಪಡುವೂದು ದೂರದ ಮಾತು) ತುತ್ತಾಗ ಬಾರದು" ಇದು ಪ್ರವಾದಿಯರ(ಸ.ಅ) ಉಪದೇಶವಾಗಿತ್ತು. |
ಪ್ರವಾದಿಯವರ ಸ್ವಂತ ನಾಡು ಸೌದಿಯಲ್ಲಂತೂ ಈ ಉಪದೇಶದ ಪಾಲನೆ ಕಾಣಲಿಲ್ಲ. ಅಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನ ಸೌದಿಯ ನೆಲದಲ್ಲಿ ಕಿತ್ತು ಕೊಂಡಿರುವ ಬಗ್ಗೆ, ಅವರ ಮೇಲೂ ಸೌದಿಯ ಆಗಸದಲ್ಲೇ ಬುರ್ಖಾ ಹೇರುವ ಬಗ್ಗೆ ನೀವು ಹೇಳಲಿಲ್ಲ.. ಆದರೆ ವಿಶ್ಲೇಷಿಸುವುದು ಕಷ್ಟ ಎಂದಿರುವುದರಿಂದ ಪರವಾಗಿಲ್ಲ.. ಬಹುಷಃ ಅವರು ಮಾಡುವುದು ಸರಿ.. ಇಲ್ಲದಿದ್ದರೆ ಇನ್ನೇನು ಆಗುತ್ತಿತ್ತೋ.. bhgteರವರು ಸಂವಾದದಲ್ಲಿ ಹಾಕಿದಂತೆ (ಇದೇ ಬ್ಲಾಗಿನ ಮಹಾಮಂಥನ -4ರಲ್ಲಿ ಅದು ಸಿಗುತ್ತದೆ) ಆ ನೆಲದಲ್ಲಿ ದೌರ್ಜನ್ಯ ತಡೆಗೆ ಅಮುಸ್ಲಿಮ್ ಹೆಣ್ಣು ಮಕ್ಕಳಿಗೂ ಬುರ್ಖಾ ಬೇಕೇ ಬೇಕು ಎಂದು ವೇದ್ಯವಾಗುತ್ತದೆ. ಆದ್ದರಿಂದ ಸೌದಿಯಲ್ಲಿ ನಡೆಯುವ ಬಹುತೇಕ ವಿಷಯಗಳು ಸರಿಯಾದದ್ದೇ ಎನಿಸಿಬಿಡುತ್ತಿದೆ. |
ಗಂಡು ಕಣ್ಣು, ಕಿವಿ, ಮನಸ್ಸುಗಳಿಂದ ಹೆಣ್ಣಿನ ಸೌಂದರ್ಯವನ್ನ ವ್ಯಭಿಚರಿಸುತ್ತಾನೆ, ಹೆಣ್ಣು ಆಕರ್ಷಕ, ಹಾಗಾಗಿ ಬುರ್ಖಾ ಎಂದಿರಿ, ಅದನ್ನ ರಕ್ಷಣೆ ಎಂದರೂ ಅದು ಗಂಡಿನ ಪಾಪಕ್ಕೆ ಹೆಣ್ಣಿಗೆ ಶಿಕ್ಷೆ ಎಂಬ ನನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲಾಗುತ್ತಿಲ್ಲ... |
ಹೆಣ್ಣು ಕಣ್ಣು, ಕಿವಿ, ಮನಸ್ಸುಗಳಿಂದ ಗಂಡನ್ನು ವ್ಯಭಿಚರಿಸಲಾರಳೇ?? ಆ ಹೆಣ್ಣಿನ ಪಾಪಕ್ಕೆ ಗಂಡಿಗೆ ಏನು ಶಿಕ್ಷೆ ಇದೆ?? ಅದಕ್ಕೂ ಶಿಕ್ಷೆ ಹೆಣ್ಣಿಗೇ ಎನ್ನುವಿರಾ, ಅವಳನ್ನ ಮನೆಯಲ್ಲೇ ಇಟ್ಟು, ತರಕಾರಿ ತರಲು ಹೋದರು ಲಿಖಿತ ಪರವಾನಗಿ ಪಡೆದು ಹೊರಬರಬೇಕಾದ ಸ್ಥಿತಿಯಲ್ಲಿ ಹೆಣ್ಣನ್ನಿಟ್ಟು, ಹೆಣ್ಣಿನ ಮಾನಸಿಕ ವ್ಯಭಿಚಾರದಿಂದ ಹೀಗೆ ಹೆಣ್ಣು ಗಂಡನ್ನ ದೂರ ಇಟ್ಟಿರುವುದು ಎಂಬ ವಾದವೇ?? |
bhgteರವರ ಮಾತು ಕೇಳಿದ ಮೇಲೆ ಹೆಣ್ಣು ಮಕ್ಕಳು ಅಲ್ಲಿ ಬುರ್ಖಾದೊಳಗೇ, ಇನ್ನೂ ಹೇಳಬೇಕೆಂದರೆ ಮನೆಯಿಂದ ಹೊರಬರದಿದ್ದರೇ ಹೆಚ್ಚು ಸುರಕ್ಷಿತ ಎಂದೆನಿಸುತ್ತಿದೆ. ಅಲ್ಲಿಗೆ ಆ ನಿಯಮ ಕೂಡ ಸರಿ ಎಂದೇ ಒಲ್ಲದ ಮನಸ್ಸಿನಿಂದ ಒಪ್ಪುವೆ. |
ಯಾತ್ರಿಕ 27 June 2011 at 17:49 |
ನನ್ನ ಪ್ರೀತಿಯ ಸಹೋದರನಿಗೆ ನನ್ನ ನಮಸ್ಕಾರ. ನಿಮ್ಮಲ್ಲಿ ಇನ್ನೂ ಮನೆ ಮಾಡಿರುವ ಹಾರ್ಡ್ ಕೋಡ್ ಎಂಬ ಶೀರ್ಷಿಕೆ ಕಂಡಿತವಾಗಿಯೂ ತಪ್ಪು. ಹಾರ್ಡ್ ಕೋಡ್ ಎನ್ನ ಬೇಕಾದರೆ ಆ ಒಂದು ಕೋಡ್ ಯಾವುದೇ ಸನ್ನಿವೇಶದಲ್ಲೂ ಒಂದೇ ಆಗಿರಬೇಕು. ಈ ಒಂದು ಗುಣ ಇಸ್ಲಾಮಿನ ನಿಯಮಗಳಲ್ಲಿ ಕಾಣಲಾಗದು (ಕೆಲವೊಂದು ಹಾರ್ಡ್ ಆಗಲೇ ಬೇಕು, ಇಲ್ಲದಿದ್ದರೆ ಸಿಸ್ಟಮ್ ರನ್ ಆಗುವುದೇ ಇಲ್ಲ: ಆರಾಧ್ಯನೊಬ್ಬನೇ ಎಂಬಂತೆ). ಉದಾಹರಣೆಗೆ ನಿಮ್ಮ ಮನಸಿನಲ್ಲಿದ್ದ ಕಡ್ಡಾಯ ಎಂಬ ಹಾರ್ಡ್ ಕೋಡ್ ಪರಿಕಲ್ಪನೆ ನಾನು ವಿವರಿಸಿರುವೆ. ಎಲ್ಲಲ್ಲಿಯೂ ಮನುಷ್ಯ ಜೀವನದ ಸಾದ್ಯತೆಗಳ ಮೇಲೆ ಇಸ್ಲಾಮಿನ ನಿಯಮ ಅವಲಂಬಿತವಾಗಿ ಆದರೆ ತನ್ನ ಸ್ಪಷ್ಟತೆ ಕ್ಶೀಣಿಸದೆ ನಿಲ್ಲುತ್ತದೆ. its like a "pre designed code with support for handling all possible conditions". ನೀವು ಜೀವನದ ಯಾವುದೇ ಪರಿಸ್ತಿತಿ ತೆಗೆದುಕೊಂಡು ಇಸ್ಲಾಮಿನ ವೀಕ್ಶಣೆ ನೋಡಿ ಅದಕಲ್ಲಿ ಉತ್ತರ ಸಿಕ್ಕೇ ಸಿಗುತ್ತದೆ. ಕಾರಣ ಇಸ್ಲಾಮ್ ಮನುಷ್ಯನ ಸಕಲ ಸ್ತರಗಳನ್ನು ತನ್ನಲ್ಲಿ ಒಳಗೊಳಿಸಿದೆ. ಅಲ್ಲಿ ಎಲ್ಲರನ್ನೂ ಬುದ್ದಿವಂತನೆಂದೋ(ನಿಮ್ಮ ಪ್ರಕಾರ ಮನುಷ್ಯ ಮನಸಿಗೆ ತಪ್ಪು ಸರಿಗಳ ಪಟ್ಟಿ ಬೇಡ ಅವನವನೇ ಅದನ್ನು ತೀರ್ಮಾನಿಸುವನು. ಅದು ಎಲ್ಲರೂ ಬುದ್ದಿವಂತರಾದಾಗ ಮಾತ್ರ ಸಾದ್ಯ.) ಬುದ್ದಿ ಹೀನರೆಂದೋ ಕಲ್ಪಿಸಿ ಸರಿ ತಪ್ಪುಗಳ ಹೇಳಲಿಲ್ಲ. ಮೂತ್ರ ವಿಸರ್ಜನೆ ಮಾಡಿ ಅಲ್ಪ ಸ್ವಲ್ಪ ಮೂತ್ರ ನಮ್ಮ ವಸ್ತ್ರದಲ್ಲಿ ಇಟ್ಟುಕೊಳ್ಳುವುದು ಬೇಡ ಶುಚಿತ್ವ ಕಾಪಾಡಲು ಶುಚಿಗೊಳಿಸಿ ಎನ್ನುತ್ತದೆ. ಇದೊಂದೇ ಉದಾಹರಣೆ ಸಾಕು. ಎಷ್ಟು ಜನರಿಗೆ ಈ ಶುಚಿತ್ವದ ಬಗ್ಗೆ ಕಾಳಜಿ ಇದೆ? ಎಷ್ಟು ಜನರಿಗೆ ಈ ಶುಚಿತ್ವ ಗೊತ್ತು? ಇಲ್ಲೇ ನಿಮ್ಮ ಹಾರ್ಡ್ ಕೋಡ್ ಕಲ್ಪನೆಗೊಂದು ವಿಶ್ಲೇಶಣೆ ಇದೆ. ನೀವು ಯೊಚಿಸಿರಬಹುದು ನೀರಿಲ್ಲದ ಜಾಗದಲ್ಲಿ ಏನು ಮಾಡಲಿ!!! ಅದಕ್ಕೂ ಇದೆ ಪರಿಹಾರ, ಮೂತ್ರ ಹೀರಿಕೊಳ್ಳುವ ಕಲ್ಲೋ, ಮತ್ಯವುದೋ ವಸ್ತುವಿನಿಂದ ಮೂತ್ರದ ಬಾಕಿ ಅಂಶ ಹೀರುವಂತೆ ಮಾಡಿ ಶುಚಿತ್ವ ಕಾಪಾಡಿ ಕೊಳ್ಲಬೇಕು.ಇನ್ನೂ ನಿಮಗೆನೆಲ್ಲಾ ಪರಿಸ್ತಿತಿ ಬರುತ್ತದೋ ಅದಕೆಲ್ಲಾ ಅನುಸಾರ ಯೋಗ್ಯವಾದ ನಿಯಮ ಇದೆ. ಇದನ್ನೆಲಾ ಹಾರ್ಡ್ ಕೋಡ್ ಎಂದರೆ ಹೇಗೆ ಸಹೋದರಾ! ಒಟ್ಟಿನಲ್ಲಿ ಎಲ್ಲರಿಗು ಜೀವನದ ತಪ್ಪು ಒಪ್ಪುಗಳ ತಿಳಿಸಿ ಹೇಳುವ ನಿಯಮಗಳ ಬಂಡಾರವೇ ಇಸ್ಲಾಮಿನಲ್ಲಿದೆ. ಈಗ ನಿಮ್ಮ ಕಲ್ಪನೆಗಳೆಡೆಗೆ ಒಂದು ನೋಟ, ಬೇಕಾದ ಸಮಯದಲ್ಲಿ ನೀವೇ ತೀರ್ಮಾನಿಸುತ್ತೀರ ಯಾವುದು ಒಳ್ಳೆಯದು ಯಾವುದು ತಪ್ಪು ಎಂಬುದು ಅದೂ ನಿಮ್ಮ ಜ್ಞಾನ ಬಂಡಾರಕ್ಕನುಸಾರ(ಎಲ್ಲವೂ ವಿವಿದ ರೀತಿಯಲ್ಲಿ ನಿಮಗೆ ಸಿಕ್ಕವು, ಅದೂ ಭೂಲೂಕ ಕಂಡ ಜ್ಞಾನಿಗಳ ಪಳೆಯುಳಿಕೆ). ಇದು ಸರಿ ಅನಿಸಬಹುದು ಯವಾಗ ಅಂದರೆ ಎಲ್ಲರೂ ಜ್ಞಾನಿಗಳಾದಾಗ!!! ನಿಯಮಗಳು ಯಾವತ್ತೂ ಒಳ್ಳೆಯವರಿಗೋ ಕೆಟ್ಟವರಿಗೋ ಅಲ್ಲ, ಅದು ಇದೆರೆಡರ ಮದ್ಯೆ ಇರುವ ಜನಗಳನ್ನು ಕೆಟ್ಟವರಾಗದಂತೆ ತಡೆಯಲು. ಉದಾ 20% ಸಾತ್ವಿಕರು, 20% ಕಳ್ಳರು ಬಾಕಿ 60% ಎರಡೂ ಕಡೆ ಸರಿದಾಡುವವರೂ ಇರುವಾಗ, ಕಳ್ಳರೆಂದೂ ಅವರ ಬುದ್ದಿ ಬಿಡಲಾರರು (ಕೆಲವರು ಬಿಡುತ್ತಾರೆ ಅದು ಅತ್ಯಲ್ಪ). ಅದೇ ರೀತಿ ಸಾತ್ವಿಕರೂ. ಆದರೆ ನಡುವಿನವರು ಸನ್ನಿವೇಶಗಳಿಗನುಸಾರ ನಡೆಯುವರು. ಇವರನ್ನು ಸರಿ ದಾರಿಯಲ್ಲಿಡಲು ನಿಯಮಗಳು, ಉಪದೇಶಗಳೂ ... ಎಲ್ಲಾ ಬೇಕು. ಆದರಿಂದ ನೀವು ಹಾರ್ಡ್ ಕೋಡ್ ಅಂದುಕೊಂಡಿರುವ, ಆದರೆ ಹಾರ್ಡ್ ಕೋಡ್ ಅಲ್ಲದ ನಿಯಮಗಳೆ ಸೂಕ್ತ ಎನ್ನುವೆ ಈ ಜ್ಞಾನ ಲೋಕದ ಹಸುಳೆ. |
ಯಾತ್ರಿಕ 27 June 2011 at 17:50 |
ನಾವು ನಂಬುವೆವು ನಮ್ಮನ್ನು ಸೃಷ್ಟಿಸಿರುವುದು ಆರಾಧ್ಯನಿಗೆ ಆರಾಧನೆ ಅರ್ಪಿಸಲು. ಇಲ್ಲಿ ಇನ್ನೊಂದು ವಿಷಯ ತಿಳಿದಿರಲಿ. ತನ್ನ ಮಗನಿಗೊಂದು ಅಕ್ಷರ ಕಲಿಸುವುದು, ದಾರಿಯಲ್ಲಿ ಬಿದ್ದ ಮುಳ್ಳ ಎತ್ತಿ ದಾರಿ ಶುದ್ದ ಗೊಳಿಸುವುದು... ಎಲ್ಲವೂ ಈ ಆರಾಧನೆಯಲ್ಲಿ ಸೇರುತ್ತದೆ. ಬರೀ ನಮಾಜ್ ಮಾತ್ರ ಆರಾಧನೆ ಅಲ್ಲ. ಒಟ್ಟಿನಲ್ಲಿ ಹೇಳ ಬೇಕೆಂದರೆ ಶುಬ್ರವಾದ ಜೀವನವೇ ಆರಾಧನೆ, ಅಲ್ಲಿ ನಮಾಜು, ಉಪವಾಸ ಎಂಬಂತೆ ಕೆಲವಾರು ಸ್ಪಷ್ಟ ಆರಾದನೆಗಳೂ ಕೂಡಿವೆ ಅಷ್ಟೆ. ನಿಮ್ಮ ಪ್ರಕಾರ ಈ ಜೀವನದ ಉದ್ದೇಶವೆನೋ? ಯಾತಕ್ಕಾಗಿ ಸೃಷ್ಟಿಸಿದನೋ? ಸೃಷ್ಟಿ ಗುಟ್ಟುಗಳ ಕೆದಕುತ್ತಾ ಹೋದಾಗ ಹಿಡಿತವೇ ಇಲ್ಲದ ಲೋಕದೊಳಗೆ ಸಿಕ್ಕಿ ಕೊಳ್ಳುತ್ತೇವೆ, ಕಾರಣ ಮಾನವನ ಪರಿದಿ ಅಷ್ಟೆ ಅದರಾಚೆಗೆ ಚಿಂತಿಸುವ ಶಕ್ತಿ ಅವನಿಗಿಲ್ಲ, ಹೀಗಿರುವಾಗ ನನಗೆ ಹಿಡಿಸಿರುವ, ಗೊತ್ತಿರುವ ಇಸ್ಲಾಮಿನ ಹೇಳಿಕೆ "ಮನುಷ್ಯನು ಆರಾದಿಸಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟವನು, ಲೋಕವೇ ಮಾನವನಿಗಾಗಿ ಸಂವೃದ್ದಿಗೊಳಿಸಲ್ಪಟ್ಟಿದೆ, ಅಣು ಮಾತ್ರ ಒಳಿತಿಗೂ, ಅಣುಮಾತ್ರ ತಪ್ಪಿಗೂ ತಕ್ಕುದಾದ ಪ್ರತಿಫಲ ನ್ಯಾಯ ತೀರ್ಮಾನದ ದಿನ ಸಿಗುತ್ತದೆ, ಅದರ ನಂತರ ಸಾಶ್ವತ ಜೀವನವಿದೆ" ಎಂಬೆಲ್ಲ ವಾಕ್ಯಗಳು ಮನುಷ್ಯ ಮನಸಿನ ತುತ್ತ ತುದಿಯವುಗಳು ಅದ್ರಾಚೆಗೆ ಹೊಗಲೆತ್ನಿಸಿ ನೋಡಿ ಅಥವಾ ಇದು ನಂಬದವರು ಇದಕ್ಕೆ ಸರಿಸಮಾನವಾದ ಚಿಂತೆ ಮಾಡಿ ಆಗ ನಿಮ್ಮ ಮನ್ಸಿನಾಳದಲ್ಲಿ ನಡೆಯುವ ಕ್ರಿಯೆ ನಿಮ್ಮಿಂದ ಸಹಿಸಲಾಗದು. ಹಾಂ ನಿಮ್ಮ ವಾದ ಮರಣದೊಂದಿಗೆ ಎಲ್ಲವೂ ಮುಗಿಯಿತು ಎಂದೋ, ಪುನರ್ಜನ್ಮವೆಂದೋ ಅಲ್ಲವೇ. ಈ ವಾದಗಳು ನಿಮಗೇಗೆ ಹಿಡಿಸಿತೋ ಗೊತ್ತಿಲ್ಲ, ಆದರೆ ನನಗಂತೂ ಒಪ್ಪಲಸಾದ್ಯ, ನ್ಯಾಯ ಎಲ್ಲರಿಗೂ ಸಮಾನವಾಗಿ ಕೊಟ್ಟೇ ಕೊಡುವ ಸೃಷ್ಟಿಕರ್ತ ಹೀಗೆ ಮಾಡುವನೆಂಬುದ ಯೋಚಿಸಲೂ ಸಾದ್ಯವಿಲ್ಲ.(ಧರ್ಮಾಂದತೆ ಅನ್ನಬಹುದೇನೋ! ನಿಜ ಇಸ್ಲಾಮ್ ಹೇಳಿದೆ, ನನಗರ್ಥವಾಗಿದೆ, ಇದನ್ನೇ ಅಂಧತೆ ಎನ್ನುವುದಾದರೆ ಸರಿ, ಇನ್ನೊಂದು ವಿಷಯ ಬುದ್ದಿ/ಜ್ಞಾನ ಇಲ್ಲದವರು ಇರುವವರು ಹೇಳಿದನ್ನು ಒಪ್ಪಬೇಕು, ಆ ರೀತಿಯಲ್ಲಿ ಜ್ಞಾನದ ಬಂಡಾರವೆಂದು ನನಗರ್ಥವಾದ ಇಸ್ಲಾಮಿನ ಹೇಳಿಕೆ ಒಪ್ಪುವುದರಲ್ಲಿ ನನಗೇನು ಮೂರ್ಖತನ ಕಾಣುತ್ತಿಲ್ಲ) |
ಇನ್ನು ನಿಮ್ಮ ದೈವ ವಿಡಂಬನೆಯ ಸ್ವಾತಂತ್ರ್ಯ!!! ಹುಲ್ಲು ತಿನಿಸಿದರೂ ಸರಿಯೆ, ಕಲ್ಲು ತಿನಿಸಿದರೂ ಸರಿಯೆ, ಮೃಷ್ಟಾನ್ನ ಕೊಟ್ಟರು ಸರಿಯೆ ನನ್ನ ಸೃಷ್ಟಿಕರ್ತ ಕೊಡುವುದೆಲ್ಲವೂ ಒಳಿತೇ ಎನ್ನುವ ಅಚಂಚಲ ವಿಶ್ವಾಸದ, ಭಕ್ತಿಯ ಮುಂದೆ ನಿಮ್ಮಿ ವಾದಕ್ಕೆ ಹುಲು ಮಾನವನ ಅಜ್ಞಾನ ಎನ್ನುವೆ ಅಷ್ಟೆ. ಯೋಚಿಸಲೂ ಸಾದ್ಯವಿಲ್ಲದಷ್ಟು ತೃಣಮಾತ್ರವಾದ ಮನುಷ್ಯನಿಗೆ ಅವನಂತದೇ ಒಡೆಯನಿರಬೇಕೆನ್ನುವುದು ಎಷ್ಟು ಸರಿ! ಅವನ ಶಕ್ತಿಗೆ ಅಧೀನವಾದ ನಮ್ಮ ಸ್ಪಂದನೆಗಳು ಕಂಡಿತಾ ಅವನಿಗರಿಯುತ್ತದೆ, ಅದಕ್ಕಾಗಿ ಅವನೇ ಅವತಾರ ತಾಳಿ ಬರಬೇಕೇನು? ಬೇಕಾದುದನ್ನೆಲಾ ಒಳಗೊಳಿಸಿ ಆದರ್ಶ ಮಾನವನೊಬ್ಬನ ಸೃಷ್ಟಿಸಿದರಾಯಿತಲ್ಲವೇ! ಅದುವೇ ನಮ್ಮಲ್ಲಿರುವ ಪ್ರವಾದಿ ಪರಿಕಲ್ಪನೆ, ಆದರೆ ನೀವದನ್ನು ದೈವಾವತಾರ ಎಂದು ಪೂಜಿಸಿ ನಿಜ ದೈವವನ್ನು ಎಲ್ಲೋ ಮರೆತವರಂತಾಗುತ್ತೀರ. ಎಂದೂ ಆರಾಧ್ಯ ಒಬ್ಬನೇ. ಮತ್ತೇಗೆ ಬಂತು ನಾಗ, ಗೋವುಗಳಲ್ಲಿ ದೈವ ಲೀಲೆ!! ಹೆಂಡತಿ ಮಕ್ಕಳ ಸಮೇತ, ಸೃಷ್ಟಿ ವಾಹನದೊಂದಿಗೆ!!! ಇದು ನಿಮ್ಮ ಮನಸಿಗೆ ನೋವು ಕೊಡದಿರಲಿ ಎಂದು ಕೊಳ್ಳುತ್ತಿರುವೆ. ಸನ್ನಿವೇಶ ಹೀಗೆ ಹೇಳಿಸಿತು ಅಷ್ಟೆ. ಕ್ಷಮೆ ಇರಲಿ ನನ್ನ ಸಹೋದರರೇ.. ಅದೇ ರೀತಿ ನಾನೆಂದೂ ಸೌದಿಯ ಅಥವಾ ಇನ್ನಾವುದೇ ಕಾನೂನನ್ನು ಸರಿಯೆಂದು ಮುದ್ರೆ ಇಡಲು ಇಷ್ಟ ಪಡಲಾರೆ, ಆದರೆ ಅದರ ಕೊಂಕುಗಳನ್ನಿಡಿದು ಇಸ್ಲಾಮಿನ ಮೇಲೆ ಮಸಿಬಳಿಯುವುದ ಸಹಿಸಲಾರೆ. ಅವರು ಹೇಳ ಬಹುದು ಇದು ಇಸ್ಲಾಮಿಯಾ ನಿಯಮ ಎಂದು ಆದರೆ ಅದನ್ನೇ ಹಿಡಿದು ಸಾಗುವ ಜನಗಳೆ ಯೊಚಿಸಿ, ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಗೋವದೆ ನಿಷೇದ, ಇದಕ್ಕೆ ಕಾರಣ ಅದರಲ್ಲಿರುವ ದೈವಿಕತೆ!(ನಿಮ್ಮ ನಂಬಿಕೆ ಹಾಗೂ ಇದನ್ನು ತಾಳೆ ಹಾಕಿದರೆ ಮನುಷ್ಯ ಸಮೂಹ ನಿರ್ನಾಮ, ಎಲ್ಲವೂ ದೈವಿಕತೆ ಹೊಂದಿದೆಯಲ್ಲವೇ!). ಇದನ್ನು ಯಾವೊಬ್ಬನೂ ಹಿಂದು ಧರ್ಮದಲ್ಲಿಲ್ಲ ಎನ್ನಲಿಲ್ಲ. ಎಷ್ಟೋ ಜನರ ಪೊಷಕಾಂಶದ ಬಂಡಾರಕ್ಕೆ ಕತ್ತರಿ ಹಾಕುವಷ್ಟು ಅವಕಾಶ ಇಲ್ಲಿರುವಾಗ, ಆಡಳಿತದ ಅಮಲಿನಲ್ಲಿರುವ(ಸೌದಿಯಂತ ರಾಜ್ಯದಲ್ಲಿ) ಜನ ಧರ್ಮದ ಕಾರಣ ಕೊಟ್ಟು ಬೇಳೆ ಬೇಯಿಸುವುದರಲ್ಲಿ ಆಶ್ಚರ್ಯವೇನು! ಅಲ್ಲಿ ತಮಗೊಂದು ಅವನಿಗೊಂದು ಎಂಬಂತೆ ಕಾನೂನು ರೂಪಿಸಿದರೆ ಆಶ್ಚರ್ಯವೇನು! ನಮ್ಮಲ್ಲಿ ರಾಮನ ಹೆಸರು ಹೇಳಿ ರಾವಣ ಲೀಲೆ ಮಾಡುವ ಜನರಿಗೆ ಶಬ್ಬಾಸ್ಗಿರಿ ಕೊಡುವ ಜನರೆಷ್ಟಿಲ್ಲ? ಇದೆಲ್ಲಾ ಮಾನವ ಲೀಲೆಗಳು ಅದಕ್ಕೆ ಪರಿಶುದ್ದವಾದವುಗಳನ್ನ ಹೇಳಿ ಪ್ರಯೋಜನವೇನು? ಆ ಕಾಲದಲ್ಲೊಬ್ಬ ರಾಜ ಇಸ್ಲಾಮಿನ ಹೆಸರು ಹೇಳಿ ಹಿಂದುವ ಕೊಂದನಂತೆ, ಆದರಿಂದ ಆ ಕಾಲಗಳು ದಾಟಿ ಪ್ರಜಾಪ್ರಭುತ್ವವೆಂಬ ಒಗ್ಗೂಡಿಕೆ ಬಂದರು ಅದೇ ಆ ಕಾಲಗಳ ಮರಳಿ ತಂದು ಪ್ರತಿಕಾರದತ್ತ ನೋಟ ಆರಿಸುವ ಜನಗಳಿಗೇನ ಹೇಳಲಿ. |
ಇನ್ನು ಗಂಡು ಹೆಣ್ಣಿನ ತಾರತಮ್ಯ ಎನ್ನುವ ನೀವು ಮೊದಲು ಅರ್ಥೈಸಿಕೊಳ್ಳಬೇಕಾದುದು ಮಾನವನ ಪೂರ್ಣತೆ ಒಂದು ಗಂಡು ಒಂದು ಹೆಣ್ಣು ಸೇರಿದಾಗ ಮಾತ್ರ. ಅದಕ್ಕನುಸಾರವಾಗಿ ಸೃಷ್ಟಿ ನಿಯಮಗಳು ಅವೆರಡನ್ನೂ ಒಂದಕ್ಕೊಂದರಂತೆ ಪೋಣಿಸಿವೆ. ಗುಲಾಬಿ ಪ್ರಿಯನು ಆತನ ಪ್ರೀತಿಯ ಮನಸಿನಾಳದಲ್ಲಿಟ್ಟು ಸಾಗುತ್ತಾನೆ, ಎಂದಾದರೂ ಗುಲಾಬಿಯು ಅವನಿಗೆ ಕಾಣಿಸಿದರೆ, ಹಾತೊರೆಯುವನು ಅದನ್ನ ಪಡೆಯುವುದಕ್ಕಾಗಿ. ಆ ಗುಲಾಬಿ ಎಷ್ಟು ಹತ್ತಿರವೋ, ಎಷ್ಟು ಅಕರ್ಶಣೀಯವೋ ಅದಕ್ಕನುಸಾರ ಅವನ ಆಸೆಗಳು ಹೆಚ್ಚುತ್ತಾ ಹೋಗುತ್ತದೆ. ಆದರಿಂದ ಗುಲಾಬಿಯ ನಾವು ರಕ್ಶಣೆಯಲ್ಲಿಟ್ಟಿರಬೇಕು(ಗುಲಾಬಿಗೇಕೆ ಹಿಂಸೆ ಅನ್ನುವ ನಿಮ್ಮ ವಾದ ನನಗಂತೂ ವಿಚಿತ್ರ). ಇಲ್ಲಿ ಗಂಡಿನ ತಪ್ಪು ಎನ್ನುವ ಮೊದಲು ಸೃಷ್ಟಿ ನಿಯಮಕ್ಕೂ ಬೆಲೆ ಇರಲಿ, ಅದಕ್ಕನುಸಾರ ಒಬ್ಬರನ್ನೊಬ್ಬರು ಸಹಾಯ ಮಾಡಲೇ ಬೇಕು. ಹೆಣ್ಣು ಸಂರಕ್ಷಿಸಲ್ಪಡಬೇಕಾದವಳು(ಕೆಲವರು ಅವಳಿಗೆ ಸಂರಕ್ಷಣೆ ಬೇಕಿಲ್ಲ ಅವಳೂ ಸಮರ್ತಳು ಎನ್ನಬಹುದು, ಇದಕ್ಕೂ ಉತ್ತರ ಅವರೇ ಕಂಡುಕೊಳ್ಲಬೇಕು!!).ಗಂಡಿನ ಈ ತಪ್ಪಿನಿಂದ(ನೈಸರ್ಗಿಕ ಆಕರ್ಶಣೆಯಿಂದಾದರೂ ನಿಯಂತ್ರಿಸದ ತಪ್ಪು) ರಕ್ಶಿಸಿಕೊಳ್ಳಲು ಹೆಣ್ಣಿಗೆ ಈ ರೀತಿಯ ರಕ್ಷಣೆ(ನಿಮ್ಮ ಪ್ರಕಾರ ಹಿಂಸೆ), ಹಾಗೆಯೇ ತೋರಿಸಿದರೂ(ಹೆಣ್ಣಿನ ತಪ್ಪು, ಇದೂ ನೈಸರ್ಗಿಕ ಆದರೂ ಅದನ್ನು ತೋರಿಸಿದ ತಪ್ಪು) ನೋಡಬೇಡ ಎಂಬ ಸ್ಪಷ್ಟ ತಾಕೀತು ಪುರುಶರ ಮೇಲಿದೆ(ಇದೆಷ್ಟು ಹಿಂಸೆ ಎಂದನಿಸುವುದೊ ನಿಮಗೆ!!!), ನೀವು ಒಲ್ಲದ ಮನಸಿನಿಂದ ಒಪ್ಪುವಿರಾ!!! ನಿಮ್ಮ ಪ್ರಕಾರ ಬಲವಂತವಾದರೆ ಮಾತ್ರ ತಪ್ಪು, ಸಹಮತದಿಂದ ಏನು ಮಾಡಿದರು ತಪ್ಪಿಲ್ಲ!!! ಬಲವಂತ ಮಾಡುವವರು ನಾನು ಹೇಳಿದ ನೀಚ ವಿಬಾಗ, ಆದರೆ ನಮ್ಮ ಲಕ್ಷ್ಯ ಅರಿತೋ ಅರಿಯದೆಯೊ ಸಹಮತದಂತೆ ತಪ್ಪಿನಲ್ಲಿ ಮುಳುಗುವವರ ರಕ್ಷಿಸುವುದು. ಯೊಚಿಸಿ ಅರ್ಥವಾಗಬಹುದು ಇಂದಲ್ಲದಿದ್ದರೂ ನಾಳೆ :) ಮೊದಲೇ ಹೇಳಿದಂತೆ ನಿಯಮಗಳು ಮದ್ಯಮರನ್ನು ರಕ್ಷಿಸಲು, ನೀವು ಹೇಳುವ ಸಾತ್ವಿಕರಿರಬಹುದು ಆದರೆ ಎಲ್ಲರೂ ಸಾತ್ವಿಕರಿರುವುದಿಲ್ಲ. ನಿಮ್ಮ ಈಚೆಗಿನ ಬ್ಲಾಗ್ ಪೋಸ್ಟ್ ನೋಡಿದೆ. ಅದರಲ್ಲಿ ನಾನು ಹೇಳಿದ ಕೆಟ್ಟವರ ಲೋಕ ಬಿಂಬಿತವಾಗಿದೆ, ಅದನ್ನೆಲ್ಲಾ ಇಲ್ಲ ಅನ್ನಲು ನಾನಿಲ್ಲ. ಆಗಲೇ ನೀವು ಇನ್ನೊಂದು ಮುಖ ಯೋಚಿಸಬೇಕು, ಈಗೀಗ ಹೆಚುತ್ತಿರುವ ಸಾದಾರಣ ಎನಿಸಿರುವ ಬಂದಗಳು, ಅದನ್ನೇ ನ್ಯಾಯೀಕರಿಸುವ ವಿಶಾಲ ಮನಸ್ಕ ವಾದಗಳು. ಇದೆಲ್ಲಾ ಹೇಳಿಕೊಟ್ಟರೇನೂ ಅಷ್ಟಾಗಿ ಅರ್ಥವಾಗಲಾರದು, ಅದು ಆತ್ಮ ಸಾಕ್ಷಿಯಾಗಿ ಯೂಚಿಸಿದಾಗ ತಿಳಿಯುತ್ತದೆ. ಆ ಬರಹದಲ್ಲಿ ಬರುವ ಯಾವುದೇ ಸನ್ನಿವೇಶ ಇಸ್ಲಾಮಿನಲ್ಲಿ ಸಮ್ಮತಿಸಿರುವವೇ? ಯೊಚಿಸಿ, ಇಸ್ಲಾಮಿನ ನಾಮ ಹೇಳಿ ಕಂಠಪೂರ್ತಿ ಕುಡಿದವನಿಗೂ ಇಸ್ಲಾಮಿಗೂ ಏನಾದರೂ ಸಂಬಂದ ಇರುತ್ತದೆಯೇ? ಇಸ್ಲಾಮ್ ಇಷ್ಟೆಲ್ಲಾ ಕಾನುನು ನಿಯಮಗಳ ಹೇಳಿದ ನಂತರ ಎಚ್ಚರಿಕೆಯನ್ನೂ ಕೊಟ್ಟಿದೆ, "ಎಚ್ಚರವಿರಲಿ ಮುಂದೊಂದು ಕಾಲ(ಅಂತಿಮ ಕಾಲ) ಬರಲಿದೆ ಅಂದು ಮನುಶ್ಯರು ಪ್ರಾಣಿಗಳಿಗಿಂತ ಕೀಳಾಗುವರು, ಆ ಕಾಲದಲ್ಲೂ ಇರುವರು ಸತ್ಯ ನೀತಿ ನ್ಯಾಯ ಒಳಿತನ್ನು ಮೈಗೂಡಿಸಿಕೊಂಡವರು" ಇಂದು ನಡೆಯುವ ಹಿಂಸೆಗಳು, ರಾಜಾರೋಷವಾಗಿ ಮೆರೆಯುವ ಅಶ್ಲೀಲತೆಗಳು ಕಂಡಿತಾ ಪ್ರಾಣಿಗಳನ್ನೂ ಹಿಂದಿಕ್ಕುತ್ತವೆ, ಇನ್ನೇನೆಲ್ಲಾ ಬರಲಿದೆಯೋ.. ಇಸ್ಲಾಮ್ ಯಾವತ್ತೂ "prevention is better than cure" ಎಂಬ ಹಾದಿಯಲ್ಲೇ ಇದೆ. ಯಾವತ್ತೂ ತಪ್ಪಿನೆಡೆಗೆ ಆಕರ್ಶಿತವಾಗುವುದನ್ನೂ ಕೂಡ ಅನುವದಿಸಿಲ್ಲ, ಇದೇ ಅನೇಕರ ಕಣ್ಣು ಕೆಂಪಾಗಿಸಿದ ಕಟು ಸತ್ಯ, ಕಾರಣ ಅವರಲ್ಲಿರುವ ನಾ ಉತ್ತಮ ಎಂಬ ಗರ್ವ. |
ರಾಜಿ 1 July 2011 at 21:28 |
ಪ್ರಿಯ ಆಲೀಫ್, ನಿಮ್ಮ ಬರಹ ನನಗೆ ಒಂದೇ ಹೊಡೆತದಲ್ಲಿ ಓದಿಸಿಕೊಂಡು ಹೋಯಿತು. ಪ್ರತಿ ಸಾಲು, ಪ್ರತಿ ಅಕ್ಷರ, ಪ್ರತಿ ಮಾತೂ ಕಣ್ಣರಳಿಸಿದವು. ನೀವು ಹೇಳಿದ ಪ್ರೀತಿಯ ನಿಯಮಗಳ ಬಗ್ಗೆ ನನ್ನ ಮನಸೋತಿದ್ದು ಬರೆದಿದ್ದೆ. ಶುಭ್ರತೆಯ ನಿಯಮಗಳೂ, ಅದರ exception clause ಗಳೂ ಮೆಚ್ಚುವಂತಹುದೇ. ನಾ ಹೇಳುತ್ತಿದ್ದ ಹಾರ್ಡ್‌ಕೋಡ್, ಹಾರ್ಡ್‌ಕೋಡ್ ಅಲ್ಲವೇ ಅಲ್ಲ ಎಂಬ ನಿಮ್ಮ ವಾದಕ್ಕೆ ನಿಜವಾಗಲೂ ನನ್ನ ಬಳಿ ಪ್ರತ್ಯುತ್ತರ ಇಲ್ಲ.. ನಿಮ್ಮ ಮಾತಿಗೆ ಒಪ್ಪಿಗೆಯಷ್ಟೇ ಹೇಳಬಲ್ಲೆ.. |
ಹಾರ್ಡ್‌ಕೋಡ್ ಎಂಬ ಪದವನ್ನ ನಾನು ಬಳಸುತ್ತಿರುವುದು, ಬದಲಿಸಲಾರದ, ಬದಲಿಸಲು ಯೋಚಿಸಬಾರದ, ಸತ್ಯವೇ ಇದು ಎಂದು ಒಪ್ಪಬೇಕಾದ ವಿಷಯಗಳ ಬಗ್ಗೆ, ಮಾನವ ವಿಕಾಸದ ಬದಲು ಆದಾಮ್-ಹವ್ವಾ (ಆಡಂ-ಈವ್) ಕಥೆಯನ್ನ ಒಪ್ಪಬೇಕಾದ, ಏಳು ದಿನಗಳಲ್ಲಿ ಭಗವಂತ ಜಗತ್ತನ್ನ ಸೃಷ್ಠಿಸಿದ ಎಂಬ ಮಾತುಗಳನ್ನ ಒಪ್ಪಬೇಕಾದ ಸ್ಥಿತಿಯನ್ನ. ನಮ್ಮಲ್ಲೂ ಅಂಥದ್ದೇ ಒಂದು ಕಥೆ ಪುರಾಣಗಳಲ್ಲಿ ಬರುತ್ತದೆ, (ಮನು-ಶತರೂಪಾ ಕಥೆ.) ಆದರೆ ಮಾನವ ವಿಕಾಸ ಸಿದ್ದಾಂತ ಬಂದ ಮೇಲೆ ಆ ಕಥೆಗಳು ಕಾಗಕ್ಕ ಗುಬ್ಬಕ್ಕನ ಕಥೆಯಾಯಿತು.. ನಮ್ಮ ಪುರಾಣಗಳನ್ನ ನಾವು ಎಷ್ಟು ಬೇಕೋ ಅಷ್ಟು, ಬಳಸಿಕೊಳ್ಳಬಲ್ಲೆವು.. ಹಾರ್ಡ್‌ಕೋಡ್‍ನಲ್ಲಿ ಅದು ಎಷ್ಟೇ ಪರಿಸ್ಥಿತಿಗನುಸಾರವಾಗಿ ಸೌಲಭ್ಯಗಳನ್ನ ನೀಡಿದರೂ ಅದನ್ನ ಮೀರುವ ಪರಿಸ್ಥಿತಿ ಬಂದರೆ ಅದು ಸಾಧ್ಯವಿಲ್ಲವಷ್ಟೆ. |
ದೈವಕ್ಕೆ ನಾವು ಆರೋಪಿಸುವ ವಿಗ್ರಹ, ರೂಪಗಳು, ಗಂಡ ಹೆಂಡತಿ, ವಾಹನ ಇವುಗಳ ಬಗ್ಗೆ ಹೇಳಿದ್ದೀರಿ, ನಮ್ಮ ಹಿಂದಿನ ಚರ್ಚೆಯಲ್ಲೇ ನಾನು ವಿವರವಾಗಿ ಬರೆದಿದ್ದೇನೆ. ಆ ಚರ್ಚೆ ಈಗ ಭಾಗಗಳಲ್ಲಿ ಹಾಕುತಿದ್ದೇನೆ, ಇನ್ನೂ ಆ ಭಾಗ ಬಂದಿಲ್ಲ.. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ದೈವಕ್ಕೆ ಆ ರೂಪಗಳನ್ನ ಆರೋಪಿಸಲೇ ಬೇಕೆಂಬ ನಿಯಮವಿಲ್ಲ. ಮನಸ್ಸಿನ ತೃಪ್ತಿಗಾಗಿ, ನಾನಗಲೇ ಹೇಳಿದಂತೆ ದೈವ ನಮ್ಮೊಳಗೆ ಒಂದು ಎಂದು ನಂಬುವ ಆಸೆಯ ಮನಸ್ಥಿತಿಯ ದ್ಯೋತಕವಷ್ಟೆ.. ಅವರ ತೃಪ್ತಿ ಅವರಿಗೆ. ಬೇರೆಯವರಿಗೆ ತೊಂದರೆ ಇಲ್ಲವಲ್ಲ.. ಕುರಾನ್ ಬಗ್ಗೆ ಗೊತ್ತಿಲ್ಲ, ಮತ್ತೊಂದು ಸೆಮೆಟಿಕ್ ಧರ್ಮಗ್ರಂಥವಾದ ಬೈಬಲ್‌ನಲ್ಲಂತೂ ನಾನು ನೋಡಿದ್ದೇನೆ, ದೇವ "ಯಹೋವಾ" ಹೇಳುತ್ತಾನೆ, ಬೇರೆ ದೇವರುಗಳನ್ನ ಪೂಜಿಸಕೂಡದು, ಅವರೆಲ್ಲ, ಪಾಷಾಣ (ಕಲ್ಲು) ಮತ್ತು ಮರದಿಂದ ಮಾಡಲ್ಪಟ್ಟವರು, ಪಶುವಾಹಕರು, ಸ್ವಂತ ಚಲನೆ ಇಲ್ಲದೆ ಮಾನವರ ಮೇಲೇ ಸಾಗಿಸಬೇಕಾದವರು… ಮುಂತಾಗಿ ಸಾಗುತ್ತದೆ ಅವನ ದೋಷಾರೋಪಣೆ.. "Thy God is Jealous God" ಎನ್ನುತ್ತಾನೆ. ಯಹೋವನಿಗೆ ಅರಿವಿರಲಿಲ್ಲ ಹಾಗೆ ಪೂಜಿಸುವವರ ಅಂತರಂಗ, ಭಕ್ತರ ಅಂತರಂಗ ಅರಿಯದ ಅವನೆಂಥಾ ದೇವನೋ ಆ ದೇವರಿಗೇ ಪ್ರೀತಿ.. |
ನನ್ನ ಮುಸ್ಲಿಂ ಗೆಳೆಯ ಕಲೀಂನಿಗೆ (ಆತ MBA ಸ್ನಾತಕ) ಬ್ಯಾಂಕ್‌ಗಳಲ್ಲಿ ಕೆಲಸ ಸಿಕ್ಕಿದರೂ ಹೋಗುತ್ತಿರಲ್ಲಿಲ್ಲ. ಇಸ್ಲಾಂ ಬಡ್ಡಿ ವ್ಯವಹಾರವನ್ನ ನಿಷೇದಿಸಿದೆ (ಇಸ್ಲಾಂನಲ್ಲಿ ನನಗೆ ಮೆಚ್ಚುಗೆಯ ಮತ್ತೊಂದು ನಿಯಮವಿದು), ಬಡ್ಡಿ ವ್ಯವಹಾರ ಮಾಡುವ ಬ್ಯಾಂಕ್‌ನ ಕೆಲಸ ಒಪ್ಪಿದರೆ, ನೇರವಾಗಿ ಅಲ್ಲದ್ದಿದ್ದರೂ ನಿಷೇದಿತ ಕೆಲಸದಲ್ಲಿ ಭಾಗಿಯಾದಂತೆ ಎನ್ನುತ್ತಿದ್ದ. ಬೇರೆ ಎಲ್ಲಿಯೂ ಕೆಲಸ ಸಿಗುತ್ತಿರಲಿಲ್ಲ. ಕೊನೆಗೆ ವಿಮಾಕಂಪನಿಯಲ್ಲಿ ಸಿಕ್ಕಿತು, ಅಲ್ಲಿಯೂ ಒಲ್ಲದ ಮನಸ್ಸಿನಿಂದ ಸೇರಿದ.. "ಏಕಪ್ಪಾ!! ಇಲ್ಲೇನು ಚಿಂತೆ??" ಎಂದರೆ ನಮಗೆ ದೇವರ ಆಜ್ಞೆ ಇದೆ. ನಮ್ಮ care taker ಅಲ್ಲಾಹ್ ನಮ್ಮನ್ನು ನೋಡಿಕೊಳ್ಳುತ್ತಾನೆ, ನಮ್ಮ ನಂತರ ನಮ್ಮ ಕುಂಟುಬದ ಜವಾಬ್ದಾರಿ ಅವನದೇ." ವಿಮೆ ತೆಗೆದುಕೊಳ್ಳುವುದು ಅವನ ಮೇಲಿನ ಅಪನಂಬಿಕೆ ತೋರಿದಂತೆ. ಅದಕ್ಕೆ ಅವನು "ಮೂಸಾ" ಅಥವಾ "ಇಬ್ರಾಹಿಂ" ಗೆ ಮಾರ್ಗದರ್ಶನದಿಂದ ಉದರ ಶೂಲೆ ವಾಸಿ ಮಾಡಿದ ಅಲಾಹನ ಗಿಡದ ಕಥೆ ಹೇಳಿದ, [ಆ ಪ್ರವಾದಿಗೆ ಹೊಟ್ಟೆ ನೋವು ಬಂದಾಗ ಅಲ್ಲಾಹನ ಬಳಿ ಬೇಡಿದರಂತೆ, ಅಲ್ಲಾಹ್ ಯಾವುದೋ ದಿಬ್ಬದ ಮೇಲಿನ ಗಿಡದ ಎಲೆ ತಿನ್ನು ಎಂದನಂತೆ. ಪ್ರವಾದಿಗಳು ಹೋಗಿ ತಿಂದರು, ಹೊಟ್ಟೆನೋವು ವಾಸಿಯಾಯಿತು. ಕೆಲವು ದಿನಗಳ ನಂತರ ಮತ್ತೆ ಅವರಿಗೆ ಹೊಟ್ಟೆ ನೋವು ಬಂತು, ಪ್ರವಾದಿಗಳು ಅಲ್ಲಾಹ್ ಗೆ ಈ ಬಾರಿ ಕಷ್ಟ ಕೊಡಲೇ ಇಲ್ಲ. ತಾವೇ ಮತ್ತೆ ಹೋಗಿ ಆ ಗಿಡದ ಎಲೆ ಕಿತ್ತು ತಿಂದರು. ಹೊಟ್ಟೆ ನೋವು ಹೋಗಲಿಲ್ಲ, ಆದರೆ ದೈವ ಸಂದೇಶವಾಯಿತು. "ಗಿಡದಲ್ಲಿ ಹೊಟ್ಟೆನೋವನ್ನು ಹೋಗಿಸುವ ಶಕ್ತಿ ಇಲ್ಲ. ಅದು ಅಲ್ಲಾಹನ ಕರುಣೆ. ಕಳೆದ ಬಾರಿ ಅಲ್ಲಾಹ ಹೇಳಿದ್ದರಿಂದ ನೋವು ಹೋಯಿತಷ್ಟೇ, ಅಲ್ಲಾಹನೇ ಸಕಲಕ್ಕೂ ರಕ್ಷಕ ಮತ್ತು care taker, ನೀನು ಗಿಡವನ್ನ ನಂಬುವೆಯೋ, ಅಲ್ಲಾಹನ ಶರಣಿಗೆ ಬರುವವನೋ ಎಂದು" ಪ್ರವಾದಿಗಳು, ಅಲ್ಲಾಹನಿಗೆ ಶರಣಾದರು. ಕರುಣಾಮಯಿ ಅಲ್ಲಾಹ ಪರೀಕ್ಷೆಗೆ ಒಡ್ಡಿದ ನಂತರ ಉದರಶೂಲೆ ಹೋಯಿತು.] ಅಲ್ಲಾಹನೇ ನಮ್ಮ ರಕ್ಷಕ care taker ಎಂಬ ನಾವೇ ವಿಮೆ ಮಾಡಿಸದಿರುವಾಗ ಬೇರೆಯವರಿಗೆ ವಿಮೆ ಮಾಡಿಸಿ ಎಂದು ಹೇಳುವ ನೈತಿಕತೆ ಎಲ್ಲಿದೆ ಎಂದ… ವಿಮೆಯ ಮೊದಲ ಪಾಠವಾದ "Principle of Good Faith" ಅವನೂ ಓದಿದ್ದವನೇ. ವಿಮೆ ಎಂಬುದು ಎಷ್ಟು ಉತ್ತಮ ವಿಚಾರ ಎಂದು ಅರಿತವನು. ಆದರೆ ಅದು ಎಲ್ಲಿ ದೈವದ ಅಪನಂಬಿಕೆಯಾದೀತೋ ಎಂದು ಚಿಂತಿಸುವಷ್ಟು ಮೂಲಭೂತವಾದಿ ಮುಸ್ಲಿಂ. ಆತ ಅಲ್ಲಿ ಕೆಲಸ ಮಾಡುವಷ್ಟೂ ದಿನ ತೊಳಲಾಡಿ ಹೋದ. ಆತನ ನಂಬುಗೆ ಆತನಿಗೆ ಹೆಚ್ಚೇ, ನಾನದನ್ನ ಗೇಲಿ ಮಾಡುತ್ತಿಲ್ಲ.. ಆದರೆ ಅಲ್ಲಾಹನೇ ವಿಮೆ ಎಂಬುದನ್ನ ಜನರ ಬಳಿ ಬರುವಂತೆ ಮಾಡುತ್ತಿದ್ದಾನೆ ಎಂಬ ಮನಸ್ಥಿತಿಯೂ ಬಾರದಂತೆ ಮನಸ್ಸನ್ನ ಕಟ್ಟಿಬಿಡುತದ್ದಲ್ಲ ಅದರ ಬಗ್ಗೆ. |
# ನಾವು ನಂಬುವೆವು ನಮ್ಮನ್ನು ಸೃಷ್ಟಿಸಿರುವುದು ಆರಾಧ್ಯನಿಗೆ ಆರಾಧನೆ ಅರ್ಪಿಸಲು. ಇಲ್ಲಿ ಇನ್ನೊಂದು ವಿಷಯ ತಿಳಿದಿರಲಿ. ತನ್ನ ಮಗನಿಗೊಂದು ಅಕ್ಷರ ಕಲಿಸುವುದು, ದಾರಿಯಲ್ಲಿ ಬಿದ್ದ ಮುಳ್ಳ ಎತ್ತಿ ದಾರಿ ಶುದ್ದ ಗೊಳಿಸುವುದು... ಎಲ್ಲವೂ ಈ ಆರಾಧನೆಯಲ್ಲಿ ಸೇರುತ್ತದೆ. ಬರೀ ನಮಾಜ್ ಮಾತ್ರ ಆರಾಧನೆ ಅಲ್ಲ. ಒಟ್ಟಿನಲ್ಲಿ ಹೇಳ ಬೇಕೆಂದರೆ ಶುಬ್ರವಾದ ಜೀವನವೇ ಆರಾಧನೆ, ಅಲ್ಲಿ ನಮಾಜು, ಉಪವಾಸ ಎಂಬಂತೆ ಕೆಲವಾರು ಸ್ಪಷ್ಟ ಆರಾದನೆಗಳೂ ಕೂಡಿವೆ ಅಷ್ಟೆ. |
ಇವುಗಳಿಗೂ ನನ್ನ ಮನ ಸೋತೆ... ಇಸ್ಲಾಂ ಒಳ್ಳೆಯ ethics ಹೇಳಿಕೊಡುತ್ತಿದೆ.. ಕೆಲವು ಸ್ಪಷ್ಟ ಆರಾಧನೆಗಳು ಇಸ್ಲಾಂ ಪರಿಧಿಯ ಹೊರಗಿರುವ ನನ್ನಂಥವರಿಗೆ ಹೇರಿಕೆ ಎನಿಸಬಹುದು. ಆದರೆ ಇಸ್ಲಾಂ ಒಪ್ಪಿದವರಿಗೆ ಹೇರಿಕೆ ಎನಿಸದಿರುವಾಗ, ಭಕ್ತಿ, ಪ್ರೀತಿಯಿಂದ ಅನುಸರಿಸುತ್ತಿರುವಾಗ ಅವರು ಧನ್ಯರೇ ಹೊರತು ಭಾಧಿತರಲ್ಲ.. |
# ಇಸ್ಲಾಮಿನ ಹೇಳಿಕೆ "ಮನುಷ್ಯನು ಆರಾದಿಸಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟವನು, ಲೋಕವೇ ಮಾನವನಿಗಾಗಿ ಸಂವೃದ್ದಿಗೊಳಿಸಲ್ಪಟ್ಟಿದೆ, ಅಣು ಮಾತ್ರ ಒಳಿತಿಗೂ, ಅಣುಮಾತ್ರ ತಪ್ಪಿಗೂ ತಕ್ಕುದಾದ ಪ್ರತಿಫಲ ನ್ಯಾಯ ತೀರ್ಮಾನದ ದಿನ ಸಿಗುತ್ತದೆ, ಅದರ ನಂತರ ಸಾಶ್ವತ ಜೀವನವಿದೆ" |
ಆರಾಧನೆ ಪದಕ್ಕೆ ನಿಮ್ಮ ವ್ಯಾಖ್ಯಾನ ಕಂಡ ಮೇಲೆ "ಆರಾಧಿಸಲಿಕ್ಕೆಂದೇ ಸೃಷ್ಟಿಸಲ್ಪಟ್ಟವನು" ಎಂಬ ಮಾತಿಗೆ ಅಭ್ಯಂತರವೇನೂ ಇಲ್ಲ. ಆದರೆ "ಲೋಕವೇ ಮಾನವನಿಗಾಗಿ ಸಂವೃದ್ದಿಗೊಳಿಸಲ್ಪಟ್ಟಿದೆ" ಎಂಬ ಮಾತನ್ನ ಒಪ್ಪುವುದು ಕಷ್ಟ. ಮಾನವ ಬುದ್ದಿವಂತ ಜೀವಿ ಮತ್ತು ಲೋಕವನ್ನೇ ಆಕ್ರಮಿಸಿಕೊಂಡಿದ್ದಾನೆ.. ಆದರೆ ಮಾನವನ ಹೊರತಾಗಿ ಅಸಂಖ್ಯ ಜೀವ ಸಂಕುಲಗಳು, ಮಾನವನ ಉಗಮಕ್ಕೆ ಮೊದಲಿನಿಂದಲೂ ಭೂಲೋಕದಲ್ಲಿವೆ, ಮಾನವನ ವಿನಾಶದ ನಂತರವೂ ಉಳಿಯುತ್ತದೆ, ಅವುಗಳಿಗೂ ಆ ದೈವವೇ ಕಾರಣ ಮತ್ತು ರಕ್ಷಕ ಎಂಬ ನಂಬಿಕೆ ನನಗಿದೆ. ಮತ್ತು ಮಾನವನಷ್ಟೆ ಬದುಕುವ ಹಕ್ಕು ಹೊಂದಿದೆ ದಬ್ಬಾಳಿಕೆಯಿಂದ ಅವುಗಳ ಮೇಲೆ ಹತೋಟಿ ಸಾಧಿಸಿದ್ದೇವೆ, ಮತ್ತು ಆ ಬಗ್ಗೆ ಇದು ನಮಗಾಗೇ ಸಂವೃದ್ದಿಗೊಳಿಸಲ್ಪಟ್ಟಿದೆ ಎಂದು ಭಾವಿಸಿದ್ದೇವೆ. (ಈ ಅರಣ್ಯನ್ಯಾಯದಲ್ಲಿ, ದಬ್ಬಾಳಿಕೆಯಿಂದ ಕೂಡಿದ ಜೀವಸಂಕುಲದ ಮೇಲಿನ ಹತೋಟಿಯಲ್ಲಿ, ನನ್ನದೂ ಪಾಲಿದೆ. ನಾನೂ ಅದರ ಭೋಗಿಯೇ ತನ್ಮೂಲಕ ನೈತಿಕವಾಗಿ ಅಪರಾಧಿ). ಸಾವಿನಾಚೆಗೆ |
ಇನ್ನು ಒಳಿತು ಕೆಡುಕುಗಳಿಗೆ ನ್ಯಾಯತೀರ್ಮಾನದ ದಿನದ ಬಗ್ಗೆ ಹೇಳಿದ್ದೀರಿ.. ನೀವದನ್ನ ನಂಬುತ್ತೀರಿ, (ನಾಸ್ತಿಕರನ್ನುಳಿದು) ನಾವೂ ಅದನ್ನ ನಂಬುತ್ತೇವೆ. ಆದರೆ ನಮಗೆ ಸ್ವರ್ಗ, ನರಕ, ಮರ್ತ್ಯವೆಂಬ 3 ಲೋಕಗಳಿದ್ದರೆ, ನಿಮಗೆ ಸ್ವರ್ಗ ನರಕಗಳೆರಡೇ ಲೋಕ. ಇದೊಂದು ನಂಬಿಕೆಯ ಪ್ರಶ್ನೆ ಅಷ್ಟೇ. ಆ |
ನಮ್ಮ ಪುನರ್ಜನ್ಮ ಸಿದ್ದಾಂತ ಮತ್ತು ನಿಮ್ಮ ನ್ಯಾಯನಿರ್ಣಯ ದಿನದ ಸಿದ್ದಾಂತ ಎರಡೂ ಇರುವುದು ನೀವು ಹೇಳುವ ಮಧ್ಯಮರಿಗಾಗಿ ಅಷ್ಟೇ ಎಂದು ನನ್ನ ಅಭಿಮತ.. ನ್ಯಾಯ ನೀತಿಯಲ್ಲಿ ಬದುಕಬಲ್ಲ ಸಾತ್ವಿಕನಿಗೆ ಸ್ವರ್ಗದ ಆಸೆ, ಅಥವಾ ಮುಂದಿನ ಜನ್ಮದಲ್ಲಿ ಒಳ್ಳೆಯ ಜೀವನದ ಆಸೆ ಎರಡರ ಆಮಿಷವೂ ಬೇಕಿಲ್ಲ, ಕಳ್ಳನಿಗೆ ನರಕದ ಭಯ, ದುರ್ಬರ ಬದುಕು ಎರಡೂ ಕಾಡಿಸುವುದಿಲ್ಲ.. ಮಧ್ಯಮರು ಯೋಚಿಸಲಾರರು, ಅವರಿಗೊಂದು ಗೈಡ್ ಬೇಕು.. ಆ ಗೈಡ್ ಬುಕ್ ಸ್ವರ್ಗ ಸುಖ – ನರಕದ ಬೆಂಕಿಯ ಸಿದ್ದಾಂತ ಹೇಳಿದರೂ ನಂಬುತ್ತಾರೆ, ಸ್ವರ್ಗ-ನರಕ-ಮರ್ತ್ಯದಲ್ಲಿನ ಪುನರ್ಜನ್ಮದ ಸಿದ್ದಾಂತ ಹೇಳಿದರೂ ನಂಬುತ್ತಾರೆ. ಅವರಿಗೆ ಚಿಂತನೆ ಬೇಕಿಲ್ಲ.. ಚಿಂತಿಸುವ ಆಸಕ್ತಿಯೂ ಅವರಲ್ಲಿಲ್ಲ.. ಆದ್ದರಿಂದ ಅವರಿಗಾಗಿರುವ ಗೈಡ್ ಬುಕ್ ನ ಸಾವಿನಾಚೆಗಿನ ಸಿದ್ದಾಂತಗಳ ಬಗ್ಗೆ ನನಗೆ ಆಸಕ್ತಿಯಿಲ್ಲ.. (ನಾನು ಪುನರ್ಜನ್ಮ ಸಿದ್ದಾಂತವನ್ನ ನಂಬಿದರೂ, ಮುಂದೆ ನಾನು ಸತ್ತ ನಂತರ ಅಕಸ್ಮಾತ್ ಅದು ಸುಳ್ಳೆಂದು ಗೊತ್ತಾದರೂ ನನಗೆ ಬೇಸರವೂ ಇಲ್ಲ.) |
ಯಾತ್ರಿಕ 4 July 2011 at 18:06 |
ಸಂತೋಷ, ನಿಮ್ಮಂತೆ ಕೆಲವರಾದರೂ ಇಸ್ಲಾಮಿನ ಪ್ರೀತಿಯ ನಿಯಮಗಳನ್ನ ಅರಿತು ಇನ್ನಾದರೂ ಇಸ್ಲಾಮನ್ನು ದೂಷಿಸುವುದು ನಿಲ್ಲಿಸಲಿ ಎಂಬ ಮನದಾಳದ ಬಯಕೆ ನನ್ನದು. ಅದೇ ರೀತಿ ಇತರ ಧರ್ಮ ಧೂಷಕರು ಕೂಡಾ. ಕಾರಣ ತಪ್ಪಿಲ್ಲದವನ ಮೇಲೆ ತಪ್ಪು ಆಪಾದಿಸಿದಾಗ ಉಂಟಾಗುವ ವೇದನೆ ಅನುಬವಿಸಿದವನಿಗೆ ಮಾತ್ರ ಗೊತ್ತು. ಬಾರತೀಯನಾದ ಪ್ರತಿಯೊಬ್ಬನೂ ಧರ್ಮ ಜಾತಿ ಮರೆತು ಕೈ ಕೈ ಹಿಡಿದು ದುಷ್ಟರ ವಿರುದ್ದ ಸಮರ ಸಾರುವ, ಈ ಭಾರತವ ಪ್ರಜ್ವಲಿಸುವಂತೆ ಮಾಡುವ, ಜಗತಿನೆಲ್ಲೆಡೆ ನಾನೊಬ್ಬ ಭಾರತೀಯ ಎಂದು ಎದೆ ತಟ್ಟಿ ಹೇಳುವ ಕನಸು ಈ ನನ್ನ ಮನದಾಳದಲ್ಲಿ. |
ಅದೇ ನಿಮ್ಮ ಆ ಕಟ್ಟಿ ಹಾಕಲ್ಪಟ್ಟ ಮನ ನನ್ನ ಮುಂದೆ ಕಾಣುತ್ತಿದೆ, ಅದೇಕೋ ನಾನರಿಯೆ, ತಿಳಿದವನೆಂಬ ಮನಸ್ತಿತಿಯೋ, ಬೇಡವೆಂಬ ನಿರಾಕರಣೆಯೋ, ಎಲ್ಲೋ ಜಾರುವೆನೆಂಬ ಭಯವೋ. ಎಷ್ಟೊಂದು ಚಿಕ್ಕ ವಿಚಾರಗಳೂ ನಿಮ್ಮ ವಾದದಲ್ಲಿ ತಿಳಿಯದವನ ವಾದದಂತೆ ಮುಂದೆ ಬರುತಿದೆ. ಹೇಗೆಂದರೆ ಸಾವಿರ ವರ್ಷಗಳ ಹಿಂದೆ ಭೂಮಿಯ ಸ್ವರೂಪದ ಬಗ್ಗೆ ಇಸ್ಲಾಮ್ ಹೇಳಿದಾಗ ಕೇಳಿದ ಅದೇ ವಾದವಿದು, ಅಂದು ಭೂಮಿ ಸಮತಟ್ಟಾಗಿದೆ ಎಂದು ನಂಬಿದ್ದ ಜನಕ್ಕೆ ಅದೆಲ್ಲಾ ನಿರರ್ತಕ ಅನಿಸಿದ್ದವು. ಅದೇ ರೀತಿ ಇನ್ನೂ ವಿಜ್ಞಾನಕ್ಕೆ ಕಂಡು ಕೊಳ್ಳಲಾಗದ, ಸಮರ್ತಿಸಲಾಗದ ಜೀವ ರಹಸ್ಯ, ಮಾನವ ಉಗಮದ ಬಗ್ಗೆ ನೀವು ಹೀಗೆ ಹೇಳಿದರಲ್ಲಿ ಅಶ್ಚರ್ಯವೇ ಇಲ್ಲ. ವಿಜ್ಞಾನ ಎನ್ನುವುದು ಮಾನವ ನಿರ್ಮಿತ, ಅದು ಅವನ ಜ್ಞಾನ ಪರಿಧಿಯೊಳಗೆ ಸುತ್ತುತಿರುತ್ತದೆ, ಒಂದೊಂದು ಅನ್ವೇಷಣೆಯೂ ಅದರದೇ ಆದ ಇತಿ ಮಿತಿಗಳನ್ನೊಳಗೊಂಡಿರುತ್ತದೆ. ಇಂದು ಕಂಡುಕೊಂಡದ್ದು ನಾಳೆ ತಪ್ಪಗುತ್ತಾ, ನಾಳಿನದು ನಾಡಿದ್ದು ತಪ್ಪಾಗಿ ಸಾಗುತ್ತದೆ. ಎಂದೂ ಅದು ಉತ್ತುಂಗಕ್ಕೆ ಏರುವುದೇ ಇಲ್ಲ. ವಿಕಾಸ ವಾದವಂತೂ ಅಸಹಾಯಕ ವಿಜ್ಞಾನ ಲೋಕಕ್ಕೆ ಮಾನವನ ಕಲ್ಪನಾ ಲೋಕದ ಸಹಾಯ ಅಷ್ಟೆ. 1400 ವರ್ಷದ ಹಿಂದೆ ವೈಜ್ಞಾನಿಕ ಪುರಾವೆ ಇಲ್ಲದಿದ್ದರೂ ಕೂಡ ವಿಶ್ವಾಸದಿಂದಿದ್ದರು ಭೂಮಿ, ಗೋಳಗಳ ಬಗ್ಗೆ. ಈಗ ಅದು ಪುರಾವೆ ಸಹಿತ ಸರಿಯಾಯಿತು. ಹಾಗೆಯೇ ಮುಂದೊಂದು ದಿನ ಈ ವಾದಗಳು ಕೂಡ, ಅಥವಾ ಎಂದೆಂದಿಗೂ ಸಾದ್ಯವಗದೆಯೂ ಇರಬಹುದು. ಮಾನವನ ಯೊಚನಾಶಕ್ತಿಗೆ(ಪ್ರಾವರ್ತಿಕ ಎಷ್ಟೋ ಕೆಳಗೆ) 7ದಿನ ಅತ್ಯಲ್ಪವಾಗಬಹುದು ಆದರೆ ಸೃಷ್ಟಿಕರ್ತನಿಗೆ ಇದೆಲ್ಲಾ ಬೇಕೆ? ವಿಜ್ಞಾನದ ಅಪ್ಪುಗೆ ಅರಿಯುವ ನಿಮಗೆ ಅದರ ನಾಗಾಲೊಟ ಕಂಡು ಎನೂ ಅನಿಸುದಿಲ್ಲವೇ? ತೃಣ ಮಾತ್ರದ ಮಾನವನಿಗೆ ಇಷ್ಟೊಂದು ಸಾದ್ಯ, ಆಗ ಇದೆಲ್ಲದರ ಸೃಷ್ಟಿಕರ್ತನಿಗೆ! ನೀವೇನೋ ಯುಕ್ತಿವಾದ ಮಿಶ್ರಿತ ಆಸ್ತಿಕ ಮಹಾಶಯರೆ ಸರಿ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಗಣಿತದ ಪ್ರಶ್ನೆ ಹಾಗು ಉತ್ತರ ನಿರೂಪಿಸಲು ಕೊಟ್ಟಾಗ ವಿದ್ಯಾರ್ಥಿಗಳ ಮನದಲ್ಲಾಗುವ ಯೊಚನೆಯಂತೆ :D ಉತ್ತರ ತಪ್ಪಾಗಿರಬಹುದು, ನಾನಿಷ್ಟು ಹೊತ್ತು ಒಂದುವರೆ ಪುಟ ಬಿಡಿಸಿದ ಲೆಕ್ಕ ಸರಿಯಾಗಿದೆ ಆದರಿಂದ ಇದೇ ಇದರ ಉತ್ತರ ಎಂಬಂತೆ(ಗಣಿತದ ನಿಯಮಗಳ ಸ್ವಂತ ನಿರೂಪಣೆ ಮಾಡಲೆತ್ನಿಸಿದವರಿಗೆ ಕೂಡ ಈ ಅನುಬವ ಇರಬಹುದು). ಆದರೆ ಇಲ್ಲಿ ಬಿಡಿಸಿ ನಿರೂಪಿಸುವ ಅವಶ್ಯಕತೆ ಇಲ್ಲ, ಬೇಕಾದರೆ ಶ್ರಮಿಸಿ, ಆದರೆ ಎಂದೂ ಇದು ತಪ್ಪೆನ್ನಬೇಡಿ ಎನ್ನುತ್ತದೆ, ಕಾರಣ ಇದು ಅದರ ಕರ್ತ್ರ್ ನಿರೂಪಿಸಿದ ಉತ್ತರ. |
ಒಬ್ಬ ಪ್ರಜ್ಞಾವಂತನಿಗೆ ತಾನೊಬ್ಬ ಸರಿಯಾದರೆ ಸಾಕು ಎಂಬ ತರ್ಕ ಇರಲಾರದು, ಆದರಿಂದ ನಿಮಗರ್ಥವಾದರೂ ಅರಾದ್ಯನನ್ನು ನಿಮ್ಮೊಳಗೇ ಬೇಕೆನ್ನುವ ಹಠ ಇತರರನ್ನು ಸಂಕುಚಿತಗೊಳಿಸುವುದೇ ವಿನಃ ಇನ್ನಾವುದೇ ಪ್ರಯೋಜನ ನಿಮಗೋ ಅವರಿಗೋ ಇಲ್ಲ. ನೈಜತೆಯನ್ನು ಮರೆತು ಹೊಗುವಷ್ಟು ಸಂಕುಚಿತತೆ ಬೇಕೇ? ನನಗೆ ತಿಳಿದಂತೆ ಆ ಆರೋಪಗಳು ಅವುಗಳನ್ನು ದೈವ ಎನ್ನುವುದಕ್ಕೆ, ಕಾರಣ ಅದರ ಮೂಲಕ ಅನೇಕರಿಗೆ ಸರಿಯಾದ ದೈವವನ್ನು ಮರೆಮಾಚಿದಂತಾಗುತ್ತದೆ. ನನಗಂತೂ ತಿಳಿಯಲಿಲ್ಲ ಅವುಗಳನೆಲ್ಲಾ ದೇವರ ಸ್ವರೂಪಗಳೋ, ದೇವರೋ ಎಂದೆಲ್ಲಾ ನಂಬಿದವರು ಅದರ ಮುಂದೆ ನಿಂತು ನಿಜ ಸೃಷ್ಟಿಕರ್ತನ ಹೇಗೆ ನೆನೆಯುವನೆಂದು! ಇರುವನೊಬ್ಬನೇ ಮತ್ತೆಲ್ಲಿ ಇತರ ದೈವದ ಮಾತು! |
ಯಾತ್ರಿಕ 4 July 2011 at 18:18 |
ಕೇರ್ ಟೇಕರ್ ಎಂಬುದರ ಬಗ್ಗೆ ಹೇಳುವ ಮೊದಲು ಮಾನವ ಸಮೂಹದ ಸಂಘಜೀವನ, ಅದರ ಕೊಂಡಿಗಳ ಬಗ್ಗೆ ಅರಿತಿರಬೇಕು. ಬಡ್ಡಿಯಿಂದಾಗಿ ಪಾತಳಕ್ಕೆ ತಳ್ಳಲ್ಪಡುವವರು ಬಡವರು, ಅವರರೆಂದೂ ಮೇಲೆ ಬರಲಾಗದೆ ತೊಳಲಾಡುವಂತಾಗಿದೆ. ಧನಿಕರು ಮತ್ತೆ ಮತ್ತೆ ಉನ್ನತಿಯತ್ತ ದಾಪುಗಲಿಡುತ್ತಾ ಸಾಗುವರು. ಇಂತದೊಂದು ನೀಚ ಪ್ರವೃತಿ ನಿಮ್ಮ ಜೊತೆಗಿರಲೇ ಬಾರದು ಎಂಬುದೇ ಇಸ್ಲಾಮಿನ ಈ ನಿಯಮದ ಸಾರ. ಇದೊಂದು ಸೂಕ್ಷ್ಮ ವಿಚಾರ, ನೈಜತೆಯ ಯೊಚಿಸುವವರಿಗೆ ಬಹಳ ಸರಳ, ಬಡ್ಡಿ ರಹಿತ ಸಮಾಜದಿಂದ ಬಡವರ ಏಳಿಗೆ ಕಂಡಿತಾ ಸಾದ್ಯ (ಯಾರು ಬಡವರಿಗೆ ಸಾಲ ಕೊಡಬೇಡಿ ಎಂದರೆ ಅದು ಇದರಲ್ಲಿ ಬರಲಾರದು,ಬಡವರ ಸಹಾಯದ ಬಗ್ಗೆ ಎಷ್ಟೊ ನಿಯಮಗಳು ಇಸ್ಲಾಮಿನಲ್ಲಿದೆ ಅದು ಮರೆಯದಿರಿ). ಸ್ವಾರ್ಥಿಯಾದ ಮಾನವ ತನಗೆ ಮಾತ್ರವಲ್ಲದೆ ತನ್ನ ನಾಳೆಗಳಿಗೆ ಶೇಕರಿಸುತ್ತ ಸಾಗುತ್ತಿರುತ್ತಾನೆ, ಆದರಿಂದ ಅಂತಹ ಶೇಕರಣೆಗೆ ಪ್ರಜ್ಞಾವಂತರಾದ ನಿಮ್ಮ ಸಹಾಯ ಇರಕೂಡದು ಎಂಬುದೇ ವಿಮೆಯ ವಿಚಾರ, ಸಾವಿರಾರು ಜನ ಒಂದು ಹೊತ್ತಿನ ಊಟ ಇಲ್ಲದೆ ನೀರು ಕುಡಿದು(ಅದು ಇಲ್ಲದವರಿದ್ದಾರೆ) ಬದುಕುವಾಗ ಈ ಸ್ವಾರ್ಥಿಗಳಿಗೆ ತನ್ನ ನಾಳೆಯ ಚಿಂತೆ!!! ಹೇಗೆ ತಾನೆ ಮಾನವನನ್ನು ನಿಜ ಮಾನವನಾಗಿಸಲು ಬಂದ ಧರ್ಮ ಇದನ್ನು ಪ್ರೊತ್ಸಾಹಿಸಲು ಸಾದ್ಯ? ಮನುಷ್ಯನಿಗೆ ಅವನ ಜ್ಞಾನವಾಗಲೀ ವಿಜ್ಞಾನವಾಗಲೀ ಅವನ ನಾಳೆಗಳ ಬಗ್ಗೆ ಸ್ಪಷ್ಟನೆ ಕೊಡುವುದಿಲ್ಲ, ಆದರೆ ಅವನ ವಿಶ್ವಾಸ ಕೊಡುತ್ತದೆ. ವರ್ತಮಾನ ಕಡೆಗಣಿಸಿ ಭವಿಷ್ಯವನ್ನು ಕಟ್ಟಲು ಹೊರಟ ಮೂರ್ಖ ಮಾನವರೇ ಈ ಭೂಮಿಯ ಅಧೋಗತಿಗೆ ಕಾರಣ. ಯೊಚಿಸಿ ನನ್ನ ಪ್ರಿಯ ಮಾನವರೇ! ಯಾಕಿದು ನಿಮಗರ್ಥವಾಗುತಿಲ್ಲ? ಎಲ್ಲವನ್ನೂ ಬಿಟ್ಟುಕೊಡಬೇಕೆಂಬ ಭಯವೋ? |
"ಆದರೆ ಅಲ್ಲಾಹನೇ ವಿಮೆ ಎಂಬುದನ್ನ ಜನರ ಬಳಿ ಬರುವಂತೆ ಮಾಡುತ್ತಿದ್ದಾನೆ ಎಂಬ ಮನಸ್ಥಿತಿಯೂ ಬಾರದಂತೆ ಮನಸ್ಸನ್ನ ಕಟ್ಟಿಬಿಡುತದ್ದಲ್ಲ" ಎಂಬ ನಿಮ್ಮ ಮಾತು ಹೇಳಿತು, ನಿಜವಾಗಿಯೂ ನೀವೆಂತ ಸ್ವಾರ್ಥಿ! ಇದನ್ನು ಸೃಷ್ಟಿಕರ್ತನ ಮೇಲೆ ಹಾಕಿಬಿಡುವುದೇ!!! ಯಾಕೆ ವಿಮೆ? ಯಾರು ಯಾರಿಗಾಗಿ ಪ್ರಾರಂಬಿಸಿದರು? ಯೊಚಿಸಿ.. ನೀವು ಕೇಳಬಹುದು ಎಲ್ಲವೂ ರಾರಾಜಿಸುತ್ತಿರುವ ಈ ಲೊಕದಲ್ಲೇಕೆ ಈ ರೀತಿಯ ನಿಯಮಗಳ ಪೀಡನೆ ಎಂದು! ಅದು, ನಾ ಸರಿಯಾದರೇನು ಸಮಾಜ ಸರಿಯಾದೀತೆ? ಎಂಬ ವಾದದಂತೆ. |
"ಲೋಕವೇ ಮಾನವನಿಗಾಗಿ ಸಂವೃದ್ದಿಗೊಳಿಸಲ್ಪಟ್ಟಿದೆ" ಎಂಬ ಮಾತು ನಿಮಗಿಷ್ಟವಾಗಲಿಲ್ಲವೋ ಅಥವಾ ತಪ್ಪೆನಿಸಿದೆಯೋ! ಏನೇ ಆದರೂ ತಪ್ಪಂತೂ ಅಲ್ಲವೇ ಅಲ್ಲ. ಈ ಮಾತಿನ ಅರ್ಥ ನೀವು ನ್ಯಾಯ ನೀತಿ ಕರುಣೆ ಇಲ್ಲದಂತೆ ಲೋಕವನ್ನು ಲೂಟಿ ಹೊಡೆಯಿರಿ ಎಂದಲ್ಲ. ಹೊರತು ಮಾನವನಿಗೆ ಬೇಕಾದವುಗಳೆಲ್ಲವೂ ಇಲ್ಲಿ ಇದೆ, ಅದರಲ್ಲಿ ಒಳಿತು ಕೆಡುಕುಗಳೂ ಇವೆ. ನಾನಾಗಲೇ ಹೇಳಿರುವೆ, ಇರುವೆಗಳ ಗುಂಪ ಬೇರ್ಪಡಿಸುವುದು ಕೂಡ ಇಸ್ಲಾಮಿನಲ್ಲಿ ತಪ್ಪು. ಇಲ್ಲೆ ಇನ್ನೊಂದು ವಿಚಾರ ಹೇಳಿ ಬಿಡುವೆ, ಒಂದು ಗಿಡ ನಡುವವನಿಗಿರುವ ಒಳಿತನ್ನು ಇಸ್ಲಾಮಿನಲ್ಲಿ ಹೇಳಿದ ರೀತಿ, ಆ ಮರದಿಂದಾಗುವ ಪ್ರತಿ ಅಣುಮಾತ್ರದ ಉಪಯೋಗಕ್ಕೂ ಈ ಬೆಳೆಗಾರನಿಗೆ ದಾನದ ಪ್ರತಿಫಲ. ಯೊಚಿಸಿ ಲೊಕದಲ್ಲಿ ಇದುವರೆಗೆ ಯಾವುದೆ ಸಂಘಟನೆಯೊ ಪರಿಸರವಾದಿಗಳೋ ಹೆಳಿರಲಾರರು! ರೈತ ಅಥವಾ ಬೆಳೆಗಾರನ ಬಗ್ಗೆ ವಿಶಾಲವಾಗಿ ಅವನಿಗೆ ಪುಣ್ಯದ ಕಡಲನ್ನೇ ಗೋಷಿಸಿದೆ. ಅದೇ ರೀತಿ ಪ್ರಾಣಿಗಳಿಗೆ ಕರುಣೆ ತೋರಿಸುವುದನ್ನೂ ಕೂಡ.. ಈಗಲಾದರೂ ಯೊಚಿಸಿ. ಕಣ್ಣು ಮುಚಿ ಹೇಳುವ ಮೊದಲೊಮ್ಮೆ ಯೊಚಿಸಿ. |
ನಿಮ್ಮ ಬಗ್ಗೆ ನೀವೇನು ಭಾವಿಸಿರುವಿರೋ ನಾ ಕಾಣೆ. ಮದ್ಯಮರಿಗೆ ನಿಯಮಗಳ ಹೇರಿ ಎಲ್ಲೂ ಹೋಗ ಬೇಡಿ, ಕಾರಣ ಅವರಿಗೆ ಅನುಕರಿಸಲು ಆದರ್ಶರು ಬೇಕು, ನಿಯಮಗಳ ಎದೆಗೇರಿಸಿ ಒಳಿತನ್ನು ಸಾರುವ ಸಜ್ಜನರ ಅವಶ್ಯಕತೆ ಇದೆ, ಆದರಿಂದ ಅವರಿಗೆ ಮಾತ್ರ ಸೀಮಿತವಲ್ಲ ನಿಯಮಗಳು. ಕೆಟ್ಟವರಿಗೆ ಬೇಕೇ ಬೇಕು, ಅಲ್ಪವಾದರೂ ಸರಿಯಾದರೆ!!! ಮದ್ಯಮರಿಗೆ ದಾರಿದೀಪವೂ ದುರ್ಜನರಿಗೆ ಆಶಾಕಿರಣವೂ ಆಗಿ ಸಜ್ಜನರ ಇರುವಿಕೆ ಅಗತ್ಯ.ಅದೆ ರೀತಿ ಜ್ಞಾನ ಅಜ್ಞಾನದ ಮಾತಿನಲ್ಲೂ.. ಸಜ್ಜನನಿಗೆ ತನ್ನ ಸಾತ್ವಿಕತೆಯ ಅರಿವಿಲ್ಲದಿದ್ದರೂ ಅವನಿಗೆ ಅವನ ಸೃಷ್ಟಿಕರ್ತನ ನೊಡುವಾಸೆ, ಈ ಲೋಕದ ರಹಸ್ಯ ತಿಳಿಯುವ ಆಸೆ, ಎಲ್ಲರೂ ಸಂತ್ರುಪ್ತರಾಗಿರುವ ಅವನ ಕನಸು ನನಸಾಗಿ ಕಾಣುವ ಆಸೆ.. ಅದಕ್ಕಾಗಿ ದುಡಿಯುವನು ಎಲ್ಲಾದರೂ ನನ್ನಿಂದ ತಪ್ಪಾಗುವುದೋ ಎಂದು, ಕೆಲವು ತಪ್ಪು ಸರಿಗಳ ಉತ್ತುಂಗ ಅವನರಿಯ, ಅದು ಸೃಷ್ಟಿಕರ್ತನಿಂದಲೇ ತಿಳಿಯಬೇಕು. ಯಾವೊಬ್ಬ ಮಾನವನು ಸೃಷ್ಟಿಕರ್ತನ ಅನುಗ್ರಹವಿಲ್ಲದೆ ಪರಿಪೂರ್ಣನಾಗಲಾರ.. ಆಸ್ತಿಕರಿಗಿದು ಅರ್ಥವಾಗುತ್ತದೆ. |
ರಾಜಿ 13 July 2011 at 00:53 |
ನನ್ನ ಪ್ರತಿಕ್ರಿಯೆ ತಡವಾಯಿತು ಕ್ಷಮಿಯಿರಲಿ ಸೋದರ, |
#ವಿಜ್ಞಾನ ಎನ್ನುವುದು ಮಾನವ ನಿರ್ಮಿತ, ಅದು ಅವನ ಜ್ಞಾನ ಪರಿಧಿಯೊಳಗೆ ಸುತ್ತುತಿರುತ್ತದೆ, ಒಂದೊಂದು ಅನ್ವೇಷಣೆಯೂ ಅದರದೇ ಆದ ಇತಿ ಮಿತಿಗಳನ್ನೊಳಗೊಂಡಿರುತ್ತದೆ. ಇಂದು ಕಂಡುಕೊಂಡದ್ದು ನಾಳೆ ತಪ್ಪಗುತ್ತಾ, ನಾಳಿನದು ನಾಡಿದ್ದು ತಪ್ಪಾಗಿ ಸಾಗುತ್ತದೆ. ಎಂದೂ ಅದು ಉತ್ತುಂಗಕ್ಕೆ ಏರುವುದೇ ಇಲ್ಲ. |
ನಿಜ, ಹಾಗಾಗಿರುವುದುಂಟು. ಇಂದು ಕಂಡು ಕೊಂಡದ್ದು ನಾಳೆ ತಪ್ಪು, ನಾಳಿನದು ನಾಡಿದ್ದು ತಪ್ಪಾಗಿದ್ದುಂಟು.. ಸತ್ಯದಲ್ಲಿ ತತ್ಕಾಲೀನ ಸತ್ಯ ಮತ್ತು ಸಾರ್ವಕಾಲಿಕ ಸತ್ಯ ಎಂಬ ಎರಡು ಬಗೆಗಳಿವೆ.. ಭೂಮಿ ಸಮತಟ್ಟು ಎಂಬ ಸತ್ಯ, ನಂತರ ಅದು ಗೋಳ ಎಂಬ ಸತ್ಯ, ನಂತರ ಇಲ್ಲ ಅದು ಕಿತ್ತಳೆ ಹಣ್ಣಿನಂತೆ ನಡುವೆ ಗೋಳ ಮತ್ತು ಧ್ರುವ ಪ್ರದೇಶದಲ್ಲಿ (Poler Regions) ಸಮತಟ್ಟು ಎಂಬ ವಾದಗಳು ಬಂದು ತತ್ಕಾಲೀನ ಸತ್ಯಗಳು. ಭೂಮಿ ಶೀತಲ ಯುಗ (Ice Age) ದಾಟಿತು. ಶೀತಲ ಯುಗ ಸಾವಿರಾರು ವರ್ಷಗಳಿದ್ದರೂ, ಅದೂ ಸಾರ್ವಕಾಲಿಕ ಸತ್ಯವಲ್ಲ. ತತ್ಕಾಲೀನ ಸತ್ಯವಷ್ಟೆ… |
ಅಂತೆಯೇ 2+2=4 ಎಂಬುದು ಸಾರ್ವಕಾಲಿಕ ಸತ್ಯ.. ಅದು ದಿನ, ಕಾಲ, ಸ್ಥಳಗಳಿಗನುಸಾರವಾಗಿ ಬದಲಾಗದು. ದಿನಕ್ಕೆ 24ಗಂಟೆಗಳ ವಿಂಗಡಣೆ ನಮ್ಮ ಅನುಕೂಲವಷ್ಟೆ… ದಿನ ರಾತ್ರಿಗಳು ಭೂಮಿ ಸೂರ್ಯ ಚಂದ್ರರಿರುವರೆಗೂ ಇರುವ ಸತ್ಯ.. ಅಂದರೆ ದಿನ-ರಾತ್ರಿಗಳನ್ನ ಲೆಕ್ಕ ಹಾಕುವುದು ಸೂರ್ಯನ ಸುತ್ತ ಭ್ರಮಿಸುತ್ತಾ ಪರಿಭ್ರಮಿಸುವ ಭೂಮಿಯ ಒಂದು ಭ್ರಮಣಕ್ಕೆ ಒಂದು ದಿನವೆಂದು ಹೆಸರು… (ಒಂದು ಪರಿಭ್ರಮಣಕ್ಕೆ = 1 ವರ್ಷ.) ಅಂದರೆ ದಿನ-ರಾತ್ರಿಗಳು ಸಾರ್ವಕಾಲಿಕ ಸತ್ಯವಲ್ಲ. ಭೂಮಿ, ಸೂರ್ಯರ ಸೃಷ್ಠಿಯಾದ ನಂತರದ ಕಾಲಮಾನದ ಒಂದು ಗಣನೆ ಅಷ್ಟೆ… ಅಂದರೆ ಭೂಮಿ-ಸೂರ್ಯ ಹುಟ್ಟಿದ ನಂತರವಷ್ಟೇ ದಿನಮಾನಗಳ ಲೆಕ್ಕ. ದೈವ ಸೃಷ್ಠಿ 7 ದಿನಗಳಲ್ಲಿ ನಡೆದಿದ್ದರೆ ಆಗಿನ್ನೂ ಸೂರ್ಯನ ಸೃಷ್ಠಿಯೇ ಆಗಿರಲಿಲ್ಲ. ದಿನ ರಾತ್ರಿಗಳ ಗಣನೆ ಹೇಗೆ. ಮಾನವ ಅರಿಯದ ಅರಿಯಲಾರದ ವಿಷಯಗಳು ಹಲವಿವೆ ನಿಜ. ಸಾರ್ವಕಾಲಿಕ ಸತ್ಯಗಳು ತತ್ಕಾಲೀನ ಸತ್ಯಗಳಿಗಿಂತ ಬಹಳ ಸರಳ, ಭೂಮಿಯ ಗೋಳತ್ವದ ಅರಿವಿನಂತಹ ತತ್ಕಾಲೀನ ಸತ್ಯಕ್ಕಿಂತ, ಸೂರ್ಯನಿಲ್ಲದೆ ದಿನಗಣನೆ ಸಾಧ್ಯವಿಲ್ಲ ಎಂಬ ತರ್ಕ 2+2=4 ಎಂಬಷ್ಟೇ ಸರಳ ಸಾರ್ವಕಾಲಿಕ ಸತ್ಯ.. ಭೂಗೋಳವೆಂದು ಹಲವಾರು ಮತಗ್ರಂಥಗಳಲ್ಲಿ ಇದೆ. ಪುರಾತನ ವೇದಗಳು, ಅರಿಸ್ಟಾಟಲ್, ಪ್ಲೇಟೋಗಳ ಮೇಲೂ ಈ ತತ್ವವನ್ನ ಪ್ರತಿಪಾದಿಸಿದ್ದಾರೆಂಬ ಹೇಳಿಕೆಗಳು ನಿಮಗೆ ಅಂತರಜಾಲದಲ್ಲೇ ದೊರಕುತ್ತವೆ.. ಮತ್ತು ಅವರು ಕ್ರಿಸ್ತಪೂರ್ವಕ್ಕೆ ಸೇರಿದವರು 1400ವಲ್ಲ 2000ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆಯೇ ಇದ್ದ ಪ್ರತಿಪಾದನೆ ಅದು. |
ಪ್ರಶ್ನೆ ಇರುವುದು ಹಾಗೆ ಏಳು ದಿನಗಳ ಸೃಷ್ಠಿಕಾರ್ಯದಲ್ಲಿ ಭಗವಂತ ಶಕ್ತನೋ ಅಲ್ಲವೋ ಎಂಬುದರಲ್ಲಲ್ಲ… ಆ ಪರಾಶಕ್ತಿ ಕ್ಷಣ ಮಾತ್ರದಲ್ಲಿ ಸೃಷ್ಠಿಕಾರ್ಯವನ್ನ ನಡೆಸಿತು ಎಂದರೂ ನನಗೆ ತಕರಾರಿಲ್ಲ.… ಆದರೆ ಸೂರ್ಯನ ಅಸ್ತಿತ್ವದಲ್ಲಿ ಇರದಿದ್ದಾಗ ದಿನ ರಾತ್ರಿಗಳ ಲೆಕ್ಕ ಹಾಕುವುದು ಅಸಂಬದ್ದ ಎನ್ನುವುದು ನನ್ನ ನಂಬಿಕೆ. ಏಕೋ ನನ್ನ ವಿಚಾರಶಕ್ತಿ ಅದನ್ನ ಒಪ್ಪಲು ಬಿಡುತ್ತಿಲ್ಲ.. ಒಪ್ಪದಿರಲು ನನಗೇನೋ ಸ್ವಾತಂತ್ರ್ಯವಿದೆ. |
ರಾಜಿ 13 July 2011 at 00:54 |
ಇನ್ನು ಬಡ್ಡಿ ವ್ಯವಹಾರದ ಬಗ್ಗೆ ನಾನಾಗಲೇ ಹೇಳಿದೆ… ನಾನು ಬಹುವಾಗಿ ಮೆಚ್ಚಿದ ಇಸ್ಲಾಂನ ನಿಯಮವದು. ಅದನ್ನ ಇಡಿ ಇಡಿಯಾಗಿ ಚಂದದಲ್ಲಿ ವಿಮರ್ಶಿಸಿ ಬರೆದಿದ್ದೀರಿ… ಬರವಣಿಗೆ ನನ್ನ ಮನಸೂರೆ ಹೊಡೆಯಿತು… |
ಆದರೆ ಒಂದು ವಿಚಾರ; ನನ್ನ ಗೆಳೆಯ, ದೈವ ನಮ್ಮ ಕುಟುಂಬದ ಕೇರ್ ಟೇಕರ್ ಆದ್ದರಿಂದ ವಿಮೆ (Insurance) ಮಾಡಿಸುವುದು ದೈವದ ಮೇಲೆ ಅಪನಂಬಿಕೆಯಿದ್ದಂತೆ ಎಂದು ಅದಕ್ಕೊಂದು "ಎಲೆ ತಿಂದು ಹೊಟ್ಟೆ ನೋವು ತೀರಿಸಿಕೊಳ್ಳಲ್ಲು ಪ್ರಯತ್ನಿಸಿದ ಪ್ರವಾದಿಯೊಬ್ಬರ ಕಥೆ" ಹೇಳಿದ್ದು ಏಕೋ ಮನದಾಳಕ್ಕೆ ಇಳಿಯುತ್ತಿಲ್ಲ. ನೀವೂ ಮದರಸದಲ್ಲಿ ಆ ಕಥೆ ಕೇಳಿರಬಹುದು, ನಾನೂ ಆ ಕಥೆಯನ್ನ ನನ್ನ ಹಿಂದಿನ ಪ್ರತಿಕ್ರಿಯೆಯಲ್ಲಿ ಹಾಕಿದ್ದೆ.. |
ವಿಮೆ (Insurance) ಮಾಡಿಸುವುದು ನಮ್ಮ ದುರ್ಮರಣವೇನಾದರೂ ಸಂಭವಿಸಿದರೆ, ಅಥವಾ ನಾವು ಕುಟುಂಬ ನಿರ್ವಹಣೆ ಮಾಡಲಾಗದ ಸ್ಥಿತಿ ತಲುಪಿದರೆ ನಮ್ಮನ್ನು ನಂಬಿದ ಕುಟುಂಬ ಬೀದಿಪಾಲಾಗದಿರಲಿ. ಸ್ವಲ್ಪ ಆರ್ಥಿಕವಾಗಿ ಚೇತರಿಸಿಕೊಳ್ಳಲಿ ಎಂದು… ನಿಜ, ನೀವು ಹೇಳಿದಂತೆ "ಸಾವಿರಾರು ಜನ ಒಂದು ಹೊತ್ತಿನ ಊಟ ಇಲ್ಲದೆ ನೀರು ಕುಡಿದು(ಅದು ಇಲ್ಲದವರಿದ್ದಾರೆ) ಬದುಕುವಾಗ ಈ ಸ್ವಾರ್ಥಿಗಳಿಗೆ ತನ್ನ ನಾಳೆಯ ಚಿಂತೆ!!!" ಆದರೆ ಸೋದರ, ಆ ವಿಮೆ ಮಾಡಿಸುವ ಆ ಸ್ವಾರ್ಥಿಗಳು ಯೋಚಿಸುತ್ತಿರುವುದು, ತಮ್ಮನ್ನು ನಂಬಿಕೊಂಡ ಕುಟುಂಬದವರಿಗಲ್ಲವೇ… ಯೋಚಿಸದಿದ್ದರೆ ಆ ಸಾವಿರಾರು ಒಂದು ಹೊತ್ತಿನ ಊಟ ಇಲ್ಲದ ಜನರ ಗುಂಪಿನಲ್ಲಿ ತನ್ನ ಕುಟುಂಬವೂ ಒಂದಾಗಬಾರದೆಂಬ ಆಲೋಚನೆ ವರ್ಜ್ಯವಾಗಬಾರದು ಎಂದು ನನ್ನ ಅನಿಸಿಕೆ… ಖಂಡಿತವಾಗಿಯೂ ವಿಮೆ ಭಗವಂತನಿಗೆ ಬದಲಿಯಲ್ಲ… ಭಗವಂತ ಕಷ್ಟವನ್ನೇ ಕೊಡಬೇಕೆಂದು ತೀರ್ಮಾನಿಸಿದರೆ, ವಿಮೆಯ ಹಣ ಏನೂ ಮಾಡಲಾಗದು. ಆದರೆ ವಿಮೆ ಎಂಬುದು ಕುಟುಂಬದವರಿಗೆ ನಾವು ತೋರಬಲ್ಲ ಕಾಳಜಿ, ಜವಾಬ್ದಾರಿಯಲ್ಲವೇ… ಏಕೋ ವಿಮೆಯನ್ನ ದೈವವಿರೋಧಿ ಕ್ರಮ ಎಂದು ಯೋಚಿಸಲು ಮನಸ್ಸು ಒಪ್ಪುತ್ತಿಲ್ಲ… |
#ಒಂದು ಗಿಡ ನಡುವವನಿಗಿರುವ ಒಳಿತನ್ನು ಇಸ್ಲಾಮಿನಲ್ಲಿ ಹೇಳಿದ ರೀತಿ, ಆ ಮರದಿಂದಾಗುವ ಪ್ರತಿ ಅಣುಮಾತ್ರದ ಉಪಯೋಗಕ್ಕೂ ಈ ಬೆಳೆಗಾರನಿಗೆ ದಾನದ ಪ್ರತಿಫಲ. |
ಎಂತಹಾ ಅದ್ಭುತ ವಿಚಾರಧಾರೆ… ನಾನಂತೂ ಮಾರು ಹೋದೆ… ನಿಜ, ಯಾವ ಪರಿಸರವಾದಿಯೂ ಈ ಮಟ್ಟಕ್ಕೆ ಮಾತನ್ನ ಹೇಳಲಾರ. (ಪರಿಸರವಾದಿ ಧಾರ್ಮಿಕ ನಾಯಕನಲ್ಲದ್ದಿರಿಂದ ದಾನದ ಪ್ರತಿಫಲ, ಪುಣ್ಯ ಮೊದಲಾದ ವಿಷಯಗಳು ಅವನಿಗೆ ಅತೀತ ಎಂಬ ಮಾರ್ಜಿನ್ ಅವನಿಗೆ ಕೊಡಬಹುದಾದರೂ ನಾನು ಈ ಬಗ್ಗೆ ಹೀಗೆ ಯೋಚಿಸಿದ ಮಹಾ ಮಸ್ತಿಷ್ಕಕ್ಕೆ ಬೆರಗಾದೆ) ನಿಜಕ್ಕೂ ನೀವು ಪ್ರತಿಬಾರಿ ಬರೆದಾಗಲೂ ಒಂದಲ್ಲಾ ಒಂದು ಈ ರೀತಿಯ ಮಾತುಗಳಿಂದ ಮನ್ನಸ್ಸನ್ನ ಪ್ರಫುಲ್ಲಿತಗೊಳಿಸುತ್ತೀರಿ… ನೀವು ಕ್ರೆಡಿಟ್ ನನಗಲ್ಲ ಕುರಾನ್ ಗೆ ಎನ್ನಬಹುದೇನೋ, ಆದರೆ ಅದನ್ನ ಎದೆಗೆರಿಸಿದ ಮೇಲೆ ಇವು ನಿಮ್ಮವೇ ಮಾತುಗಳು… |
ನಿಮ್ಮ ಅನಿಸಿಕೆಯ ಕೊನೆಯ ಪ್ಯಾರವನ್ನ ಅದೆಷ್ಟು ಸಲ ಓದಿದೆನೋ ಲೆಕ್ಕವಿಲ್ಲ… ಪ್ರತಿ ಪದ ಮುತ್ತಿನ ಹಾರ, ಅದಕ್ಕೆ ಬದಲಿ ಹೇಳುವ ಜ್ಞಾನವಾಗಲೀ, ಬುದ್ದಿಯಾಗಲೀ ನನಗಿಲ್ಲವೇ ಇಲ್ಲ… ನೀವು ನನ್ನ ಮೇಲೆ ಆರೋಪಿಸುವ ಯುಕ್ತವಾದ ಕಣ್ಣು ಮುಚ್ಚಿ ನಿಮ್ಮ ಆ ಮಾತುಗಳಿಗೂ ಒಪ್ಪಿಗೆ ಸೂಚಿಸಿತು. |
ಯಾತ್ರಿಕ 20 July 2011 at 19:16 |
ನನಗೇನೋ ಸಂತಸ, ಸಾರ್ಥಕತೆ. ಶೇ 50 ರಷ್ಟಾದರೂ ನೀವು ಅರ್ಥಮಾಡಿಕೊಳ್ಳುತ್ತಿದ್ದೀರ ಎಂದು. ಸ್ಪಷ್ಟವಾದ ಒಳಿತನ್ನು ಸ್ವೀಕರಿಸುವ ನಿಮ್ಮ ಗುಣಕ್ಕೆ ಧನ್ಯವಾದಗಳು. ಕ್ಲಿಷ್ಟವಾದ ಒಳಿತನ್ನು ಅರಿಯುವವರಾಗುವಿರ ಎಂಬ ನಂಬಿಕೆ, ಹಾರೈಕೆ. |
ನೀವೆಷ್ಟು ವಿರುದ್ದವಾಗಿ ಯೊಚಿಸುವಿರ ಎಂಬುದು ನಿಮ್ಮ "ಭೂಮಿ-ಸೂರ್ಯ ಹುಟ್ಟಿದ ನಂತರವಷ್ಟೇ ದಿನಮಾನಗಳ ಲೆಕ್ಕ. ದೈವ ಸೃಷ್ಠಿ 7 ದಿನಗಳಲ್ಲಿ ನಡೆದಿದ್ದರೆ ಆಗಿನ್ನೂ ಸೂರ್ಯನ ಸೃಷ್ಠಿಯೇ ಆಗಿರಲಿಲ್ಲ. ದಿನ ರಾತ್ರಿಗಳ ಗಣನೆ ಹೇಗೆ" ಎಂಬ ಪ್ರಶ್ನೆ ಹೇಳಿತು. ಮಾನವನಿಗದು ಸರಿ, ಆದರೆ ಸೃಷ್ಟಿಕರ್ತನಿಗೆ ಅದು ಬಾದಕವಲ್ಲ ಪ್ರಿಯ ಸಹೋದರ. ಸ್ರುಷ್ಟಿಸುವಾತನಿಗೆ ಅವನ ಸೃಷ್ಟಿಯ ಬಗ್ಗೆ ಅರಿವಿರುವುದಿಲ್ಲವೇ. ಆದರಿಂದ ಮಾನವನಿಗಾಗಿ ದಿನಗಳ ಲೆಕ್ಕದಲ್ಲಿ ಸೃಷ್ಟಿಕರ್ತನು ಅವನ ಸೃಷ್ಟಿಯ ಬಗ್ಗೆ ಹೇಳಿದರೆ ಅದರಲ್ಲಿ ಕೊಂಚವೂ ಆಶ್ಚರ್ಯ ಎನಗಿಲ್ಲ ಸಹೂದರ. ನನಗೆ ಬರೀ ನಾಲ್ಕು ದಿಕ್ಕುಗಳಲ್ಲ ಆರು ದಿಕ್ಕುಗಳಿವೆ, ಎಲ್ಲ ಕಡೆಯಿಂದಲೂ ವೀಕ್ಷಿಸಿ ಹೇಳುತ್ತಿರುವೆ. ನೀವು ಇನ್ನೆರಡು ದಿಕ್ಕುಗಳ ಮರಿಯುತ್ತಿರುವಂತೆ ತೂಚುತ್ತಿದೆ ನನಗೆ. ಗಮನವಿರಲಿ ಸಹೂದರಾ. ಇಡೀವಿಶ್ವದಲ್ಲೇ ಇದ್ದರೂ ಮಾನವನ ತಲೆಯಲ್ಲಿಲ್ಲದಿದ್ದರೇನು ಪ್ರಯೂಜನ!!! ಅನೇಕಾನೇಕ ಗ್ರಂಥ ಸಾಲುಗಳಲ್ಲಿದ್ದರೂ ಮನುಶ್ಯನಿಗದು ಬೇಕಿರಲಿಲ್ಲ (ಇದ್ದಿರಬಹುದು ಕೆಲವರು ). ಆದರೆ ಎಲ್ಲವನ್ನೂ ಪೂರ್ಣ ವಿಶ್ವಾಸ ಯೊಗ್ಯವಾಗಿ ಹೇಳಲು, ಸತ್ಯವನ್ನು ಕಳಂಕ ರಹಿತವಾಗಿ ಎಲ್ಲರೂ ನಂಬುವಂತೆ ಹೇಳಲು ಬಂದ ಧರ್ಮವೇ ಇಸ್ಲಾಮ್. 2+2=4 ಸರ್ವಕಾಲಿಕ ಸತ್ಯ ಆದರೆ ಮಂಗನಿಂದ ಮಾನವ ಎಂಬಂತವು ಸರ್ವಕಾಲಕ್ಕೂ ಕಾಲ್ಪನಿಕ. ಇನ್ನು ವಿಶ್ವಾಸ ಎಂಬ ಲೆಕ್ಕಕ್ಕೆ ಬಂದರೆ 1+1=3 ಎಂದರೂ (ಉದಾಹರಣೆಯಷ್ಟೆ, ಎಂದೂ ಸತ್ಯಮಾತ್ರವಿರುವುದು) ವಿಶ್ವಾಸ ಇಡುವವನೇ ವಿಶ್ವಾಸಿ. IC ಯ ರಚನೆಯ ಬಗ್ಗೆ ಒಬ್ಬ ಅರಿವಿಲ್ಲದವನು ಯೂಚಿಸಿದರೆ ಅವನಿಗದು ಸಾವಿರ ವರ್ಷಗಳ ಶ್ರಮ ಅನಿಸಬಹುದು, ಆದರೆ ಅವನದೇ ಶಕ್ತಿಯಿರುವ ಇನ್ನೊಬ್ಬ/ಕೆಲವರು ದಿನಗಳಲ್ಲಿ ಅದನ್ನ ತಯಾರಿಸುವ ಸತ್ಯವನ್ನು ಅವನೂ ನಂಬುವನು. ಇಲ್ಲಿ ನಿಮಗೆ ತಯಾರಿಸುವವನ ಅರಿವು, ಅದರ ಉಗಮ, ಅಲ್ಲಿ ಬರುವ ಉಪಕರಣ ಎಂಬೆಲ್ಲ ಯೋಚನೆ ಬರಬಹುದು. ಆದರೆ ವಿಶ್ವ ಸೃಷ್ಟಿಸಿದ ಸೃಷ್ಟಿಕರ್ತನಿಗೆ ಅರಿವು ಪಡೆಯಬೇಕಿಲ್ಲ,ಉಗಮವೋ, ಉಪಕರಣವೋ ಬೇಕಿಲ್ಲ ಅದೆಲ್ಲ ತೃಣ ಮಾನವನಿಗೆ ಮಾತ್ರ ಬೇಕಾದವು. ಸೃಷ್ಟಿಕರ್ತನ ಮೇಲೆ ವಿಶ್ವಾಸ ನಿಮಗಿದೆ ಎಂದು ನಂಬಿರುವೆ. ಹಾಗೆಯೇ ಆ ಆರಾಧ್ಯನ ಅರಿವು ನಿಮಗಿದೆ ಎಂದುಕೊಂಡಿರುವೆ. |
ಬಡ್ಡಿಯ ವಿಷಯ ಒಪ್ಪಿರುವ ನಿಮಗೆ ಒಳಿತಾಗಲಿ. ಹಾಗೆಯೇ ಯೋಚಿಸಿ, ವಿಮಾ ಹಣ ಎಲ್ಲಿ ಹೊಗುತ್ತದೆಂದು, ಹೆಚ್ಚಿನದು ಬಡ್ಡಿಯ ಕಡೆಯಲ್ಲವೇ? ಹಾಗೆಯೇ ನೀವು ಒಂದು ಸ್ವೀಕರಿಸಿ ಇನ್ನೊಂದ ನಿರಾಕರಿಸುವಾಗ ಉಂಟಾಗುವ ಕಲರವವೇ ಇದು. ಇಲ್ಲಿ ನಾನು ಕಂಡದ್ದು ನಿಮ್ಮ ಸಂಕುಚಿತತೆ, ಯಾರು ಏನೇ ಆದರೂ ನನ್ನವರು ಸುಕವಾಗಿರಬೇಕು ಎಂಬ ಮನಸ್ಸು! ಅದು ಇರಬೇಕು ಆದರೆ ಅದು "ಬೆಂಕಿ ಹಿಡಿದ ಗಡ್ಡದಿಂದ ಬೀಡಿ ಹೊತ್ತಿಸಿದಂತಿರಬಾರದು" ನೀವು ಇರುವಾಗ ಕೂಡಿಡುವ ಬದಲು ಇಲ್ಲದವರಿಗೆ ಕೊಡಿ, ನಿಮಗಿಲ್ಲದಾದಾಗ ಇರುವವ ನಿಮಗೆ ಕೊಡುವನು. ಇದು ಮಾನವತಾ ವಾದ ಅದೇ ಇಸ್ಲಾಮಿನ ನಿಯಮ. ವಿಮೆಯಲ್ಲಿಟ್ಟ ಹಣ ಎಂದೂ ಬಡವರತ್ತ ಚಲಿಸಲಾರದು, ಅದು ಹಣದ ಔನತ್ಯದಲ್ಲಿ ರಾರಾಜಿಸುತ್ತಿರುತ್ತವೆ. ಆದರೆ ನಿಜ ಮಾನವನಿಗೆ ಬೇಕಾದುದು ಅದಲ್ಲ, ಪ್ರಕೃತಿ ನಿಯಮ ಸಾಂದ್ರತೆ ಹೆಚ್ಚಿರುವಲ್ಲಿಂದ ಕಡಿಮೆಯಿರುವ ಕಡೆ ಹರಿಯಬೇಕು.ಇಲ್ಲೇ ನಿಮಗಾಗಿ ಒಂದು ಪುಟ್ಟ ಕನಸ ಕಾಣುವೆ! ಯೊಚಿಸಿ ನಿಮ್ಮೂರಲ್ಲಿ ಒಂದು ಉಗ್ರಾಣ ಅಲ್ಲಿ ಎಲ್ಲ ಜನರು ಅವರ ಅನಿವಾರ್ಯತೆಯ ಮೇಲೆ ಬರುವ ಸಂಪತ್ತು ಕೂಡಿಡುವರು, ಅದೇ ರೀತಿ ಅನಿವಾರ್ಯತೆಗಿಂತ ಕಡಿಮೆ ಇರುವವರು ಅಲ್ಲಿಂದಲೇ ತೆಗೆಯುವರು. ಎಲ್ಲರೂ ಸಾತ್ವಿಕರಾಗಿ (ಕಡ್ಡಾಯ ಎಂಬ ನಿಯಮದಿಂದಲೋ) ವಾಸಿಸುವಾಗ ಆ ಊರೆಷ್ಟು ಸುಂದರ ಅಲ್ಲವೇ! ಅಲ್ಲಿ ನಾನು ನನ್ನವರೆಂಬ ಸ್ವಾರ್ಥ ಇಲ್ಲವೇ ಇಲ್ಲ. ಅವನ ಕೈಯ ನೋವು ನಮ್ಮ ಹೃದಯಕ್ಕೆ ತಟ್ಟುವುದು ಸತ್ಯ. ಅದೊಂದು ನಿಜ ಮಾನವ ಲೋಕ ಅಲ್ಲವೇ! |
ಇಲ್ಲೇ ನಿಮ್ಮ ಒಂದು ಕಾಮೆಂಟ್ ಬಗ್ಗೆ ಬರೆದು ಬಿಡುವೆ ಏಕೆಂದರೆ ನನಗತ್ತಿರ ಇರುವವರ ತಪ್ಪ ಕಂಡು ಸುಮ್ಮನಿರಲು ಆಗುತಿಲ್ಲ. ಯಮುನೆಗೆ ದಕ್ಕದ ಬಾಗ್ಯ ದಕ್ಕಿದ ಹೆಣ್ಣಿನ ವಾರ್ತೆ ನಿಮಗೆಷ್ಟು ಸಂತೋಷ ತಂದಿದೆಯೋ ತಿಳಿಯದು! ಆದರೆ ಅದರ ಸುತ್ತಲಿರುವ ಆರು ದಿಕ್ಕುಗಳ ಯೋಚನೆ ಇರಲಿ ಸಹೋದರ. ಹೀಗಾದಲ್ಲಿ ರಕ್ಷಕ ಬಕ್ಶಕರೆಂಬ ಬೇದವಿಲ್ಲ! ನಿಜ ನಿಮ್ಮ ವಿಸ್ತೃತ ಮನಸ್ಸು(ಬ್ರಾಡ್ ಮೈಂಡ್) ಇದನ್ನೆಲ್ಲ ಮಾನವನ ಮೂಲಭೂತ ಅವಶ್ಯಕತೆ ಆದರಿಂದ ಅದು ಎಲ್ಲಿಂದ ಯಾರಿಂದ ಎಂಬ ಲೆಕ್ಕಚಾರ ಬೇಡ ಎನ್ನಬಹುದೆನೋ! ಪ್ರಿಯ ಸಹೋದರ ಬುದ್ದಿ ಉಪಯೋಗಿಸಿ ಆದರೆ ಅದನ್ನ ವಿವೇಚನೆಯಿಂದ ಬಳಸಿ. ಮಾನವ ವಿವೇಚನೆ ಬಿಟ್ಟರೆ ಅವನು ಪ್ರಾಣಿಗಿಂತ ಕಡೆಯಾಗುವನು, ಆದರೂ ಬುದ್ದಿವಂತನೆಂಬ ಭ್ರಮೆ ತಲೆಯಲ್ಲಿ ಗಟ್ಟಿಯಗಿರುತ್ತದೆ! ತಂದೆ ತಾಯಿ ಸಹೋದರ ಸಹೋದರಿ ಎಂಬುದಿಲ್ಲ ಎಲ್ಲರೂ ಅವನಿಗೆ ಸಾಮಾನ್ಯರಾಗಿ ಬಿಡುವರು!!! |
ರಾಜಿ 26 July 2011 at 17:52 |
ಪ್ರಿಯ ಆಲಿಫ್, ನನಗೆ ಆರಾಧ್ಯನಲ್ಲಿ ನಂಬಿಕೆ ಇದೆ. ನಾನಾಗಲೇ ಬರೆದಿದ್ದೆ. "ಆ ಪರಾಶಕ್ತಿ ಕ್ಷಣ ಮಾತ್ರದಲ್ಲಿ ಸೃಷ್ಠಿಕಾರ್ಯವನ್ನ ನಡೆಸಿತು ಎಂದರೂ ನನಗೆ ತಕರಾರಿಲ್ಲ.… ಆದರೆ ಸೂರ್ಯನ ಅಸ್ತಿತ್ವದಲ್ಲಿ ಇರದಿದ್ದಾಗ ದಿನ ರಾತ್ರಿಗಳ ಲೆಕ್ಕ ಹಾಕುವುದು ಅಸಂಬದ್ದ ಎನ್ನುವುದು ನನ್ನ ನಂಬಿಕೆ." ಎಂದು. |
ಆ ಏಳು ದಿನಗಳು ಕೇವಲ ಮಾನವ ಅರ್ಥ ಮಾಡಿಕೊಳ್ಳಲು ಮಾನವನ ಲೆಕ್ಕಾಚಾರದ ಆಳತೆಯಲ್ಲಿ ಎಂದು ಮಾತ್ರವಾದರೆ ಸರಿಯೇ.. ಆಗ ಒಂದು ಧರ್ಮದ(faith) ನಂಬಿಕೆಯಾಗಿ ಅದನ್ನ ಗೌರವಿಸುವೆ. ಆದರೆ ಸೃಷ್ಠಿಮೂಲವನ್ನ ಹುಡುಕ ಹೊರಟ ಹಲವಾರು ಸಂಸ್ಕೃತಿಗಳು ಹುಡುಕಾಡಿದ ದಾರಿಗಳಲ್ಲಿ ಅರಬಸ್ತಾನದ ಜನರು (ಬೈಬಲ್‌ನ ಹಳೆ ಒಂಡಬಂಡಿಕೆ ಇಂದ ಕುರಾನ್‌ವರೆಗೆ ದೈವವಾಣಿಯೆಂದು) ಕಂಡುಕೊಂಡ, ನಂಬಿದ ಸತ್ಯವದು. (ಸಾರ್ವಕಾಲಿಕವೋ, ತಾತ್ಕಾಲಿಕವೋ ಆ ಚರ್ಚೆ ಬೇರೆ, ದೈವವಾಣಿಯೆಂದು ನಂಬಿದ ಮೇಲೆ ಅದನ್ನ ಪ್ರಶ್ನಿಸುವುದು ನಂಬಿದವರಲ್ಲಿ ಅಸಹನೆಯನ್ನ ತರಿಸಬಹುದು. ನೀವೇ ಹೇಳಿದಂತೆ ಕೆಲವು ಸತ್ಯಗಳು ಮಾನವ ತರ್ಕಕ್ಕೆ ನಿಲುಕ್ಕದ್ದು. ಆದರೆ ಕೆಲವುಬಾರಿ ಅಸತ್ಯಗಳೂ ಕೂಡ ಇದೇ ಕಾರಣದ ಮಾರ್ಜಿನ್ ಪಡೆದು ನುಸುಳಿ ಹೋಗಿಬಿಡುತ್ತದೆ) |
#ಇನ್ನು ವಿಶ್ವಾಸ ಎಂಬ ಲೆಕ್ಕಕ್ಕೆ ಬಂದರೆ 1+1=3 ಎಂದರೂ (ಉದಾಹರಣೆಯಷ್ಟೆ, ಎಂದೂ ಸತ್ಯಮಾತ್ರವಿರುವುದು) ವಿಶ್ವಾಸ ಇಡುವವನೇ ವಿಶ್ವಾಸಿ |
ಹೌದು ನನ್ನ ಗೆಳೆಯ ಕಲೀಂ ಕೂಡ ಇದನ್ನೇ ಬಾರಿ ಬಾರಿ ಹೇಳುತ್ತಾನೆ. ಅವನೊಡನೆಯ ಸಂಭಾಷಣೆಯ ತುಣುಕೊಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುವೆ.. |
ಕಲೀಂ: ವಿಶ್ವಾಸ ಇಡಬೇಕು. ಹೇಳಿದಂತೆ ನಡೆಯಬೇಕು, ಪ್ರತಿಯೊಂದಕ್ಕೂ ನಿಯಮವಿದೆ. ಕುಳಿತೇ ನೀರು ಕುಡಿಯಬೇಕು, ಮೂರು ಗುಟುಕಿನಲ್ಲಿ ನೀರು ಕುಡಿಯಬೇಕು. ಸೀನಿದಾಗ "ಅಲ್ ಹಮ್ ದುಲಿಲ್ಲಾ " ಹೇಳಬೇಕು. ಹೀಗೆ ಪ್ರತಿಯೊಂದಕ್ಕೂ ನಿಯಮವಿದೆ. ನಮ್ಮ ಒಳ್ಳೆಯದಕ್ಕೇ ನಿಯಮ. ಪ್ರಶ್ನಿಸದೇ ಪಾಲಿಸಿದರೆ ಸರಿ. ಪ್ರಶ್ನಿಸಿ, ತಿಳಿದು ನಂತರ ಅನುಸರಿಸಿದರೆ ನಂಬಿಕೆಗೆ ಬೆಲೆ ಎಲ್ಲಿ??? |
ಕುಳಿತು ನೀರು ಕುಡಿಯಬೇಕು, ತಕರಾರಿಲ್ಲ.. ಒಳ್ಳೆಯದಕ್ಕೇ ಹೇಳಿರಬಹುದು. ಮೂರು ಗುಟುಕಿನಲ್ಲಿ ಕುಡಿಯಬೇಕು, ಏನೋ, ಮಕ್ಕಳಿಗೆ ಹೇಳಿದಂತೆ ಆಯಿತು.. ಆದರೂ ಪರವಾಗಿಲ್ಲ.. ಏನೋ ಒಟ್ಟಿಗೆ ಗಟಗಟ ಕುಡಿದು ನೆತ್ತಿಗೆ ಹತ್ತದಿರಲಿ ಎಂದಿರಬೇಕು. ನೀರು ಹೆಚ್ಚಿಗೆ ಬೇಕಾದರೋ?! ಹೋಗಲಿ ಆ ಪ್ರಶ್ನೆ ಬೇಡ… ನನ್ನದು ಅಧಿಕ ಪ್ರಸಂಗ ಎನಿಸಿಕೊಳ್ಳುತ್ತದೆ. (ನೀರು ಹೇಗೆ ಕುಡಿಯಬೇಕು ಎಂದು ಧರ್ಮಗ್ರಂಥದ ಮೂಲಕ ಹೇಳಿಸಿದರೆ ಅದು ಅಧಿಕಪ್ರಸಂಗವಲ್ಲವೇ ಎನ್ನುವ ಜನರೂ ಇದ್ದಾರೆ.. ನಾನೂ ಹಾಗೇ ಹೇಳುತ್ತಿದ್ದೆ… ಆದರೆ ನೀವು ಮಧ್ಯಮರ ಬಗ್ಗೆ ಹೇಳಿದ ಮೇಲೆ ಧರ್ಮಗ್ರಂಥ ಹೇಳಿದರೆ ತಪ್ಪೇನು ಇಲ್ಲ ಎಂಬ ಮಟ್ಟಿಗೆ ಲಿಬರಲ್ ಆಗಿದ್ದೇನೆ.) ಆದರೆ ಸೀನಿದಾಗ ಅಲ್ ಹಮ್ ದುಲಿಲ್ಲಾ ಹೇಳಬೇಕು ಅಂದೆಯಲ್ಲ ಏಕೆ? ಹಾಗೆಂದರೆ ಏನು? |
ಕಲೀಂ: ಭಗವಂತನಿಗೆ ಧನ್ಯವಾದ ಎಂದಂತೆ. |
ನಾನು: ಸೀನಿದಾಗ ಏಕೆ ಹೇಳಬೇಕು? ಭಗವಂತನಿಗೆ ಧನ್ಯವಾದ ಹೇಳುವಂತಹುದು ಏನಿದೆ ಅದರಲ್ಲಿ..?? |
ಕಲೀಂ: ಇದನ್ನೇ ನಂಬಿಕೆ ಎನ್ನುವುದು. ನಿಯಮವಿದೆ. ಹೇಳಬೇಕು. ಅಷ್ಟೇ… |
ನಾನು: ಕಾರಣ ತಿಳಿಯದೇ ಏಕೆ ಹೇಳಬೇಕು??? ನಿಯಮ ಮಾಡಿದ ಮಸ್ತಿಷ್ಕಕ್ಕೇನೋ ಕಾರಣವಿರಬೇಕು. ಕಾರಣ ತಿಳಿಯದೆ ಪಾಲಿಸಿದರೆ ಮೂರ್ಖತೆ ಎನಿಸುತ್ತದೆ. |
ಕಲೀಂ: ಕಾರಣ ತಿಳಿಯದೆಯೂ ಪಾಲಿಸುವುದು ನಂಬಿಕೆ, ನಿನ್ನ ಪ್ರಶ್ನೆಗೆ ಉತ್ತರಿಸಲೇ ನಾನು ಈ ವಿಚಾರವೆಳೆದೆ. ಸೀನುವುದು ಒಳ್ಳೆಯ ಸುಖಕರವಾದ ಅನುಭೂತಿಯೇನೂ ಅಲ್ಲ ಹಾಗಿರುವಾಗ ಅದಕ್ಕೆ ಭಗವಂತನಿಗೆ ಧನ್ಯವಾದ ಏಕೆ ಹೇಳಬೇಕು. ಇದು ಬಹಳ ಜನರಿಗೆ ಗೊತ್ತಿಲ್ಲ. ಒಬ್ಬ ಸರ್ಜನ್ ಊಹೆ ನಿನ್ನ ಮುಂದಿಡುತ್ತಿದ್ದೇನೆ. ಸೀನಿದಾಗ ಹೃದಯ ನಿಂತು ಬಿಡುತ್ತದೆ ಎಂದು ಗೊತ್ತಿರಬಹುದು. ಆ ಸರ್ಜನ್ ಒಂದು ತೆರೆದೆ ಹೃದಯದ ಶಸ್ತ್ರ ಚಿಕಿತ್ಸೆ (0pen heart surgery) ನಡೆಸುತ್ತಿದ್ದನಂತೆ. ಅನಿಯಂತ್ರಿತದವಾದ ಸೀನು ಆ ಸಮಯದಲ್ಲೇ ರೋಗಿಗೆ ಬಂತು. ರೋಗಿಯ ಹೃದಯ ಕ್ಷಣಕಾಲ ನಿಂತು ಮತ್ತೆ ಬಡಿದುಕೊಳ್ಳಲು ಶುರುಮಾಡಿತು. ಹಾಗೆ ನಿಂತ ಹೃದಯವನ್ನ ಮತ್ತೆ ಬಡಿದುಕೊಳ್ಳುವಂತೆ ಮಾಡುವ ಶಕ್ತಿ ದೈವಕ್ಕಲ್ಲದೇ ಇನ್ಯಾರಿಗೆ. ನಾವು ಸೀನಿದಾಗ ನಾವೆಲ್ಲಾ ಸತ್ತು ಬದುಕುತ್ತೇವೆ. ಜೀವನವನ್ನ ಮರಳಿ ನಮಗೆ ಕೊಟ್ಟ ದೈವಕ್ಕೆ ವಂದನೆ ಅರ್ಪಿಸುವುದೇ ಆ ಅಲ್-ಹಮ್-ದುಲಿಲ್ಲಾ ಇರಬೇಕು ಎಂಬುದು ಆ ಶಸ್ತ್ರಚಿಕಿತ್ಸಕನ ತರ್ಕ… ಅದೇ ಕಾರಣ ಇರಬಹುದು, ಅಥವಾ ಇಲ್ಲದಿರಬಹುದು. ನಾವು ನಿಯಮಗಳನ್ನಷ್ಟೇ ಪಾಲಿಸುತ್ತೇವೆ. ಪ್ರಶ್ನಿಸಿ ಅಲ್ಲ. |
ನನಗೂ ಅವನ ಮಾತು ಚಂದ ಎನಿಸಿತು. ಆದರೆ ಒಪ್ಪಿಕೊಳ್ಳಲಾಗಲಿಲ್ಲ.. ನಾ ಬೆಳೆದ ಸಂಸ್ಕೃತಿಯಲ್ಲಿ ಪ್ರಶ್ನಿಸುವುದನ್ನ ಪ್ರೋತ್ಸಾಹಿಸಲಾಗುತ್ತದೆ.. ರಾಮಾಯಣ ಮಹಾಭಾರತಗಳಲ್ಲಿ ಕಥೆ ಮುಖ್ಯವಲ್ಲ.. ಅಲ್ಲಿ ನಡೆಯುವ ಪ್ರಶ್ನೋತ್ತರ sessions, (ಯಕ್ಷ ಪ್ರಶ್ನೆ, ಅಜಗರನ ಕಥೆ, ವಸ್ತ್ರಾಪಹರಣದ ವಿಫಲ ಯತ್ನದ ನಂತರ ದ್ರೌಪದಿಯ ಪ್ರಶ್ನೆ, ಅಗ್ನಿಪರೀಕ್ಷೆಯಲ್ಲಿ ಸೀತೆಯ ಮಾತುಗಳು) ಅವುಗಳಿಗಾಗಿ ಕಥೆ ಅಷ್ಟೇ.. ಆ ಗ್ರಂಥಗಳಿಂದ ಹಿಡಿದು, ಆಮೇಲೆ ಬಂದ ಪಂಚತಂತ್ರ, ವಿಕ್ರಮ-ಬೇತಾಳ ಕಥೆಗಳವರೆಗೂ ನೀತಿಗಾಗಿ ಪ್ರಶ್ನೋತ್ತರಗಳು, ಆ ಪ್ರಶ್ನೋತ್ತರ ನಡೆಸಲು ಪಾತ್ರಗಳು ಬೇಕಲ್ಲ ಅದಕ್ಕಾಗಿ ಕಥೆ ಅಷ್ಟೇ… "ಪ್ರಶ್ನಿಸದೇ ಪಾಲಿಸಿದರೆ ಸರಿ. ಪ್ರಶ್ನಿಸಿ, ತಿಳಿದು ನಂತರ ಅನುಸರಿಸಿದರೆ ನಂಬಿಕೆಗೆ ಬೆಲೆ ಎಲ್ಲಿ???" ಎಂಬುದು ಚಂದದ ಮಾತಾದರೂ ನನಗೆ ಪೂರ್ಣ ಸಮ್ಮತಿಯಿಲ್ಲ. ನೂರಕ್ಕೆ 60-70% ಈಗಾಗಲೇ ಸಾಬೀತಾಗಿದೆ. ಕೆಲವು ಮುಂದಾಗಲಿದೆ, ಕೆಲವನ್ನ ಸಾಬೀತು ಪಡಿಸಲು ಮಾನವನ ತರ್ಕಕ್ಕೆ ಸಾಧ್ಯವೇ ಇಲ್ಲ ಎಂದರೂ, ಒಪ್ಪಲು ಮನಸ್ಸು ವಿರೋಧಿಸುತ್ತಿದೆ. ಏನು ಮಾಡಲಿ, ಹಾರ್ಡ್‌ಕೋಡ್ ಬಂಧ ಎಂದು ಬೇರೆಯವರ ಬಗ್ಗೆ ಹೇಗೆ ಹೇಳುವೆನೋ ಹಾಗೇ ನಾನೂ ಪ್ರಶ್ನಿಸುವ ಸಂಸ್ಕೃತಿಯ ಬಂಧನದಲ್ಲಿ ಬಂಧಿ. |
ರಾಜಿ 26 July 2011 at 18:02 |
ವಿಮೆಯ ಬಗ್ಗೆ ವಿಮೆಯ ಹಣ ಹೋಗುವುದರ ಬಗ್ಗೆ ನಿಮ್ಮ ತಾರ್ಕಿಕ ನೆಲೆಗಟ್ಟನ್ನ ವಿವರಿಸಿದ್ದೀರಿ.. ವಿಮೆಗೆ ಹಣ ಹಾಕಿದರೆ ಬಡ್ಡಿ ವ್ಯವಹಾರಕ್ಕೇ ಹೋಗುತ್ತದೆ, ಆ ಕಾರಣ ಪರೋಕ್ಷವಾಗಿ ಬಡ್ಡಿ ವ್ಯವಹಾರಕ್ಕೆ ಪ್ರೋತ್ಸಾಹಿಸಿದಂತೆ , "#ಬೆಂಕಿ ಹಿಡಿದ ಗಡ್ಡದಿಂದ ಬೀಡಿ ಹೊತ್ತಿಸಿದಂತಿರಬಾರದು", ಎಂಬ ಮಾತು ಮನ ತಟ್ಟಿತು. ಆದರೆ ನೀವು ತೋರಿದ ಆ ಚಂದದ ಕನಸಿನ ಲೋಕ ನಿಜವಾಗುವವರೆಗೂ ವಿಮೆ ನಾವು ನಮ್ಮವರಿಗೆ ತೋರುವ ಕಾಳಜಿ, ಆ ಮಟ್ಟದ ಸ್ವಾರ್ಥವಾದರೂ ನಮ್ಮಲ್ಲಿರಲಿ ಎಂದೇ ನನ್ನ ಅಭಿಮತ. |
ಇನ್ನು ಯಮುನೆಯ ಕಥೆ. ನಾನು ಯಮಿ ಸೋತಳು, ಆದರೆ ಇವಳು ಗೆದ್ದಳು ಎಂದು ಬರೆದದ್ದು ವ್ಯಂಗ್ಯವಾಗಿ. ನನಗೆ ನೆನಪಾಯಿತಷ್ಟೇ, ನಾನು ಸಮರ್ಥಿಸ ಹೋಗಲಿಲ್ಲ.. ಸಗೋತ್ರ ವಿವಾಹವನ್ನೇ ಖಂಡತುಂಡ ವಿರೋಧಿಸುವ ನಾನು ಇದನ್ನ ಸಮರ್ಥಿಸುವುದಿಲ್ಲ. ಪುರಾಣದ ಆ ಕಥೆಯಲ್ಲಿ ಯಮ ಯಮಿಯರ ನಡುವೆ ಒಂದು ವಾಗ್ವಾದವೇ ಇದೆ. (ಯಮ-ಯಮಿಯರ ವಾಗ್ವಾದದ ಪೂರ್ಣಪಾಠವನ್ನ ಇನ್ನೂ ಹುಡುಕುತ್ತಿದ್ದೇನೆ…) ಅದೊಂದು ಹೃದಯ ವಿದ್ರಾವಕ ಕಥೆ. ನಾನಗಲೇ ಹೇಳಿದಂತೆ ಋತದ ದಾರಿ ಏನೆಂದು ತಿಳಿಸಲು ಕಥೆಗಳು. ಅ ಕಥೆಯಲ್ಲಿ ಯಮಿ ಹಲವು ವಾದ ಮಂಡಿಸುತ್ತಾಳೆ.. ಅವಳೇನೂ ಯಮನನ್ನ ಕಾಮಿಸಿದ್ದಲ್ಲ… ತನ್ನ ಗಂಡ ಜಗತ್ತಿನ್ನಲ್ಲೇ ಅತಿ ಧರ್ಮಿಷ್ಠನಾಗಿರಬೇಕೆಂದು ಆಸೆ… ಅದಕ್ಕೆ ಭಗವಂತನನ್ನ ಕುರಿತು ತಪಗೈದಳು… ತಪಕ್ಕೊಲಿದ ಜಗದೊಡೆಯ ಹೇಳುತ್ತಾನೆ, ಜಗತ್ತಿನ ಅತಿ ಧರ್ಮಪುರುಷ ಋತವೇ ಮೂರ್ತಿವೆತ್ತಂತಿರುವ ನಿನ್ನಣ್ಣ ಯಮ. ಆಕಾರಣಕ್ಕಾಗಿಯೇ ಆತ್ಮಗಳ ಸ್ವರ್ಗ ನರಕಗಳ ನ್ಯಾಯನಿರ್ಣಯದ ಜವಾಬ್ದಾರಿಯನ್ನ ಅವನಿಗೆ ವಹಿಸಲಾಗಿದೆ. ಆದರೆ ಆತ ನಿನ್ನ ಮದುವೆಯಾಗುವುದೆಂತು. ಬೇರೆ ವರ ಕೇಳು, ಯಮಿ ಹಠ ಮಾಡುತ್ತಾಳೆ, ಧರ್ಮಪುರುಷನೇ ನನ್ನ ಪತಿಯಾಗಬೇಕು. ಎರಡನೇ ಸ್ಥಾನದ ಅತಿ ಧರ್ಮಪುರುಷನೂ ನನಗೆ ಬೇಡ. ಭಗವಂತ ಹೇಳುತ್ತಾನೆ, ನಿನ್ನಣ್ಣ ಒಪ್ಪಿದರೆ ನೋಡು… ಆ ಹುಚ್ಚು ಆಸೆಗೆ ಬಿದ್ದ ಯಮಿ (ಅಲ್ಲಿ ಲವಲೇಶವೂ ಕಾಮವಿರಲಿಲ್ಲ.) ಅಣ್ಣನನ್ನೇ ಕಾಡುತ್ತಾಳೆ. ಆತ್ಮಗಳಿಗೆ ಸ್ವರ್ಗ-ನರಕಗಳ ನ್ಯಾಯನಿರ್ಣಯದ ಹೊಣೆ ಹೊತ್ತ ಧರ್ಮ-ದೇವತೆಯೆಂದು ಹೆಸರಾದ ಯಮ ಒಪ್ಪುವನೇ, ತನ್ನ ಹಲವಾರು ವಾದಗಳನ್ನ ಯಮಿ ಮುಂದಿಡುತ್ತಾಳೆ. ಯಮನೂ ತನ್ನ ಮಾತುಗಳನ್ನೆಲ್ಲಾ ಹೇಳುತ್ತಾನೆ.. (ಈ ರೀತಿಯ ಕಥೆಗಳ ಮೂಲಕವೇ ಗುರುಕುಲಗಳಲ್ಲಿ ಧರ್ಮದ ಜಿಜ್ಞಾಸೆ ಗುರುಶಿಷ್ಯರಲ್ಲಿ ನಡೆಯುತ್ತಿತ್ತು. ) ಕೊನೆಗೂ ಯಮ ಒಪ್ಪಲಿಲ್ಲ.. ಯಮಿಯ ಧರ್ಮಿಷ್ಠನನ್ನು ಮದುವೆಯಾಗುವ ಕನಸು ಕನಸಾಗೇ ಉಳಿಯಿತು. ಕೊರಗಿದಳು ಕರಗಿದಳು, ನೀರಾಗಿ ಹರಿದಳು.. ಯಮುನೆಯಾಗಿ ಹರಿದಳು… |
ಇಂಥದ್ದೇ ಇನ್ನೊಂದು ಕಥೆ ಇತಿಹಾಸದ್ದು… ಕ್ಲಿಯೋಪಾತ್ರ, ಈಜಿಪ್ಟಿನ ಸಾಮ್ರಾಜ್ಞಿ. ಅವಳ ಮೊದಲ ಗಂಡ ಅವಳ ಸ್ವಂತ ಆಣ್ಣನೇ ಆಗಿದ್ದ.. ಅಲ್ಲಿನ ಅಂದಿನ ಸಂಸ್ಕೃತಿಯಲ್ಲಿ ಅದು ಊರ್ಜಿತವೂ ಸಹ ಆಗಿತ್ತು. (ನಂತರ ತನ್ನ ಗಂಡ (ಅಣ್ಣ)ನನ್ನ ಕೊಲ್ಲಿಸಿದಳು/ಅಥವಾ ಇನ್ಯಾವುದೋ ಪಿತೂರಿಯಲ್ಲಿ ಅವನು ಸತ್ತ, ನಂತರ ಒಂದು ರಾಜತಾಂತ್ರಿಕ ನಿರ್ಧಾರದಲ್ಲಿ ಜೂಲಿಯಸ್ ಸೀಸರ್‌ನನ್ನ ಮದುವೆಯಾದಳು, ಅವನ ಕೊಲೆಯ ನಂತರ ಆಂಟೋನಿಯೋನನ್ನ ಮದುವೆಯಾದಳು). ಈ ಬಗ್ಗೆ ಏಕೆ ಹೇಳಿದೆನೆಂದರೆ, ಬಹಳ ಸಂಸ್ಕೃತಿಗಳು ಬಹಳ ಸಂಪ್ರದಾಯವನ್ನ ಅಳವಡಿಸಿಕೊಂಡಿರುತ್ತವೆ… ನಮ್ಮ ದಕ್ಷಿಣ ಭಾರತದಲ್ಲಿ ಸೋದರ ಮಾವನ ಮಗಳು, ಅಕ್ಕನ ಮಗಳನ್ನ ಮದುವೆಯಾಗುವುದು ವರ್ಜ್ಯವಲ್ಲ. ಹಾಗೆ ನೋಡಿದರೆ ಮೊದಲ ಹಕ್ಕು ಎಂಬ ಮಾನ್ಯತೆ… ಉತ್ತರ ಭಾರತದಲ್ಲಿ ಅದು ವರ್ಜ್ಯ… |
ಖಂಡಿತವಾಗಿಯೂ ನಾನು ಯಮ-ಯಮಿಯ ವೈವಾಹಿಕ ಸಂಬಂಧವನ್ನ ಸಮರ್ಥಿಸಲಿಲ್ಲ. ನಮಗೂ ಪ್ರಾಣಿಗಳಿಗೂ ವ್ಯತ್ಯಾಸವಿರಬೇಕು… ದೈವಕ್ಕಾಗಿ, ಧರ್ಮಕ್ಕಾಗಿ ಅಲ್ಲದಿದ್ದರೂ, ಮಾನವೀಯತೆ ನಾಗರೀಕತೆಗಳಿಗಾಗಿ… |
hilll 1 September 2011 at 13:37 |
ಸೊಗಸಾದ ಚರ್ಚೆಗಳು... |
ರಾಜಿ 2 September 2011 at 22:13 |
ಧನ್ಯವಾದಗಳು hilll, ಅನಘ ಮಾನಸಕ್ಕೆ ಭೇಟಿ ಕೊಡುತ್ತಿರಿ.. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಹಂಚಿಕೊಳ್ಳಿ. ತಪ್ಪುಗಳನ್ನು ತಿದ್ದಿ. ಸರಿಯೆನಿಸಿದ್ದನ್ನ ಪ್ರೋತ್ಸಾಹಿಸಿ. |
Anonymous 29 October 2011 at 23:56 |
Nanage ondu doubt ide... Lingayataru Hindugale? Athava avara swamigalu helidante BASAVA Dharama Bereye ondu dharmave. Adannu poshisuva Lingayata nayakarugalu entavaru? |
Anonymous 30 October 2011 at 00:00 |
Naanu Hindu... Aadre ondu visya antu naavu tilkobeku, Jagattinalli Muslimaru namaginta tumbaa Jasti iddare...Ellara devaroo onde, Naanu Neevu namma devare shreshta ennuvudu tappaguttade. |
ರಾಜಿ 30 October 2011 at 22:34 |
ಪ್ರಿಯ Anonymous, ಮೊದಲು ನಿಮ್ಮ ಲಿಂಗಾಯತರು ಹಿಂದೂಗಳೇ ಪ್ರಶ್ನೆಯನ್ನ ನೋಡಿಬಿಡೋಣ, ಲಿಂಗಾಯತರೂ ಹಿಂದೂಗಳೇ ಎಂದು ನನ್ನ ಅಭಿಪ್ರಾಯ. ಕಾರಣವಿಷ್ಟೇ. ಹಿಂದೂ ಎನ್ನುವುದು ಮತವಲ್ಲ... ಒಂದು ಜೀವನ ವಿಧಾನ. ಹಲವಾರು ಪರಂಪರೆ ಮತ್ತು ಸಂಸ್ಕೃತಿಗಳ ಸಮುದಾಯ. ಹಿಂದೂಗಳು ಮೂರ್ತಿ ಪೂಜೆ ಮಾಡುತ್ತಾರೆ, ಮತ್ತು ಮಾಡದಿರುವವರನ್ನೂ ಮಾನ್ಯ ಮಾಡುತ್ತಾರೆ. ಸಾಕಾರ ಮತ್ತು ನಿರಾಕಾರಗಳೆರಡೂ ಪರಂಪರೆಗಳೂ ಇಲ್ಲಿ ಮಾನ್ಯ. ಆ ಸಾಕಾರ ಶಿಲ್ಪವಾಗಿರಬಹುದು, ಅಥವಾ ಲಿಂಗವಾಗಿರಬಹುದು. |
ದೇವನಿಲ್ಲ ಎಂಬ ಚಾರ್ವಾಕ (ನಾಸ್ತಿಕ) ಸಿದ್ದಾಂತವನ್ನ ಮಂಡಿಸಿದವನು ದೇವರಾಜನೆಂದು ಪುರಾಣಗಳಲ್ಲಿ ಬಣ್ಣಿಸಲ್ಪಟ್ಟ ಇಂದ್ರ ಎಂಬ ಹೇಳಿಕೆಯೂ ಇದೆ. ಬಸವ ಧರ್ಮ ಬೇರೆಯಾಗಿ ಕಾಣುವುದು, ವರ್ಣಾಶ್ರಮ ಸಿದ್ದಾಂತವನ್ನ ಒಪ್ಪಲಿಲ್ಲ, ಮನುಜರೆಲ್ಲಾ ಒಂದೇ ಎಂಬ ತತ್ವವನ್ನ ಸಾರಿತು, ಬಸವಣ್ಣನವರು ಅಂತರ್ಜಾತಿ ವಿವಾಹಗಳನ್ನು ಮಾಡಿಸಿ ಜಾತಿ ನಿರ್ಮೂಲನೆಗೆ ಪ್ರಯತ್ನಿಸಿದರು ಎಂಬ ಕಾರಣಕ್ಕಿರಬಹುದು. ಆದರೆ ಗಮನಿಸಿ, ವರ್ಣಾಶ್ರಮ ಸಿದ್ದಾಂತಕ್ಕೆ ಮೊದಲೂ ಜನರಲ್ಲಿ ಶಾಸ್ತ್ರ-ಪರಂಪರೆಗಳಿದ್ದವು, ವಿಗ್ರಹಾರಾಧನೆ ಇರಲಿಲ್ಲ. ಕಾಲಕಳೆದಂತೆ ಯಾವ ಬಂಧನವೂ ಇಲ್ಲದ, ತಮ್ಮ ತಮ್ಮ ಕುಟುಂಬ ಪರಂಪರೆ, ಪದ್ದತಿಗಳಂತೆ, ಅಲ್ಪ ಸ್ವಲ್ಪ ಬೇರೆಯದಾಗಿದ್ದ ಸಮುದಾಯಗಳು, ಆವೇ ವೃತ್ತಿ ವಿಷಯಗಳನ್ನು ಮಾಡಲು ಪ್ರಾರಂಭವಾದಾಗ ವರ್ಣಾಶ್ರಮ ಹುಟ್ಟಿತು. ಅಲ್ಲಿ ಮೇಲು ಕೀಳುಗಳಿರಲಿಲ್ಲ. ವಿಭಾಗಗಳಷ್ಟೇ ಇತ್ತು.. ಯಾವ ವೃತ್ತಿ-ವಿದ್ಯೆಯೂ ಲುಪ್ತವಾಗದಿರಲೆಂದು ಈ ವ್ಯವಸ್ಥೆ ಬಂದಿತು. ಮತ್ತು ಅದು ಸರಳವೂ ಆಗಿತ್ತು. ಬಡಗಿಯ ಮಗ ಬಡಗಿಯಾಗುವುದು ಮತ್ತು ಆ ವಿದ್ಯೆಯನ್ನ ಮನೆಯ ವಾತಾವರಣ ಪ್ರಭಾವದಿಂದ ಬಾಲ್ಯದಿಂದಲೇ ಕಲಿಯುವುದು ಸ್ವಾಭಾವಿಕವಾಯಿತು. ಹಾಗೆಯೇ ಕುಂಬಾರನ ಮಗ ಕುಂಬಾರಿಕೆ, ಪುರೋಹಿತನ ಮಗ ಪೌರೋಹಿತ್ಯ, ಯೋಧನ ಮಗ ಯುದ್ದಕಲೆಗಳನ್ನ ಸ್ವಾಭಾವಿವಕವಾಗೇ ಕಲಿಯುತ್ತಿದ್ದರು. ಅಲ್ಲಿಂದ ಹೊರಟ ವರ್ಣಾಶ್ರಮ, ಮುಂದೆ ಜಾತಿಪದ್ದತಿಯ ಮಟ್ಟಿಗೆ ಒಡೆದಾಗ, ಮೇಲುಕೀಳು ವಿಷ ಬೀಜವೊಂದು ಎಲ್ಲೋ ಹುಟ್ಟಿಕೊಂಡಿತು. ಬುದ್ದಿವಂತರು ಒಂದೆಡೆ ಸೇರಿದರೆ, ಬಲಶಾಲಿಗಳು ಗುಂಪು ಬೇರಾಯಿತು. ಲಾಭ ಚಿಂತನೆಯ ವಾಸ್ತವಾದಿಗಳು ಸಮುದಾಯ ಬೇರಾದರೆ, ಯಾವ ಚಿಂತೆ-ಚಿಂತನೆಗೂ ತಲೆ ಕೆಡಿಸಿಕೊಳ್ಳದ ಗುಂಪು ಬೇರಾಯಿತು... ವೃತ್ತಿ ಸಂಬಂಧವಾಗಿ, ರಾಜ್ಯಾಧಿಕಾರದ ಸಂಭಂಧದಿಂದಾಗಿ ಆ ವರ್ಣಗಳು ತಮ್ಮಲ್ಲೇ ಒಡೆದು ತಮ್ಮ ತಮ್ಮಲೇ ಮೇಲು ಕೀಳು ರೂಪುಗೊಂಡವು. ಹೀಗೆ ಹೋಳಾದ ಸಮಾಜವನ್ನ ಒಂದುಗೂಡಿಸಲು ನಡೆದ ಹಲವು ಪ್ರಯತ್ನಗಳಲ್ಲಿ ಒಂದು ಬಹಳವಾಗಿ ಯಶಗಳಿಸಿದ್ದು ಬಸವಕ್ರಾಂತಿ. (ಆದರೆ ಮುಂದೆ ಲಿಂಗಾಯತರಲ್ಲೇ ಹಲವು ಜಾತಿಗಳಾಗಿ ಒಡೆದು ಹೋಗಿ, ಇದ್ದ ಜಾತಿಗಳ ಸಂಖ್ಯೆಗೆ ಮತ್ತಷ್ಟು ಸೇರಿದ್ದು ವಿಪರ್ಯಾಸ.) |
ಲಿಂಗಾಯತರು ಅನುಸರಿಸುವ ಜೀವನ ವಿಧಾನ ಹಿಂದೂ, |
ಹಿಂದೂಗಳಲ್ಲೇ ಅದ್ವೈತಿ (ಶಂಕರಾಚಾರ್ಯರ ಅನುಯಾಯಿಗಳು), ದ್ವೈತಿಗಳು (ಮಧ್ವರ ಅನುಯಾಯಿಗಳು), ವಿಶಿಷ್ಟಾದ್ವೈತಿಗಳು (ರಾಮಾನುಜರ ಅನುಯಾಯಿಗಳು), ಹೀಗೆ ಹಲವು ಮತಗಳಿವೆ. ಬಸವ ಮತವೂ ಇವುಗಳಲ್ಲಿ ಒಂದು. |
ಗಾಣಪತ್ಯರು (ಗಣಪತಿಯೇ ಮೂಲ ದೈವವೆಂದು ನಂಬಿದವರು), ಶಾಕ್ತರು (ಶಕ್ತಿ ಮಾತೆ ದುರ್ಗೆಯೇ ಮೂಲ ದೈವವೆನ್ನುವವರು), ಶೈವರು, ವೈಷ್ಣವರು, ಮೊದಲೇ ಹೇಳಿದ ಚಾರ್ವಾಕರು (ನಾಸ್ತಿಕರು) ಎಲ್ಲರೂ ಒಂದಲ್ಲಾ ಒಂದು ರೀತಿಯಿಂದ ಈ ಜೀವನ ವಿಧಾನಕ್ಕೆ ಬೆಸೆದುಕೊಂಡವರೇ.. ಆ ಜೀವನ ವಿಧಾನದ ತತ್ವವೆಂದರೆ, ನಿನ್ನ ನಂಬುಗೆಯನ್ನ ಹೊರಗಿನವರ ಮೇಲೆ ಹೇರದಿರು ಎಂದು. ಅದೂ ಯಾರೂ ಹೇಳಿದ್ದಲ್ಲ.. ಯಾವ ಗ್ರಂಥದ ಹೇರಿಕೆಯೂ ಅಲ್ಲ. ಅದು ಹಿಂದೂ ಜೀವನ ವಿಧಾನದ ಪರಂಪರೆ ಅಷ್ಟೆ. |
ಈಗಲೂ ಸಾಯಿಬಾಬನೇ ದೈವವೆಂದು ನಂಬಿದವರೋ, ಕಲ್ಕಿಯ ಭಕ್ತರೋ, ನೀವು ನೋಡಿರಬಹುದು, ಅವರೆಲ್ಲರೂ ನಂಬುಗೆಯಲ್ಲಿ ಅವರ ಅನುಸಾರಿಗಳು, ಆದರೆ ಜೀವನ ವಿಧಾನದಲ್ಲಿ ಹಿಂದೂಗಳು. |
ಇನ್ನು ಸಂಖ್ಯೆ, ಸಂಖ್ಯೆಯಿಂದ ಏನಾಗಾಬೇಕಿದೆ. ಯಹೂದಿಗಳಿರುವುದು ಬೆರಳಿಣಿಕೆಯಷ್ಟು, ಅಮೆರಿಕ ಅವರ ಕೈಯಲ್ಲಿ ಆಡುತ್ತದೆ. ಪಾರ್ಸಿಗಳ ಜನಸಂಖ್ಯೆ ಬಹಳ ಕಡಿಮೆ, ಅವರ ಖ್ಯಾತಿಯಲ್ಲ. ಮೇಲಾಗಿ ೭೦೦ ಕೋಟಿ ವಿಶ್ವದ ಜನಸಂಖ್ಯೆಯಲ್ಲಿ ೧೦೦ ಕೋಟಿಗೂ ಮೇಲೆ ಹಿಂದುಗಳು, ಹಿಂದೂ ಧರ್ಮದ ಶಾಖೆಯೇ ಆಗಿ ಹುಟ್ಟಿದ ಜೈನ, ಬೌದ್ದ ಸಿಖ್ ಮೊದಲಾದ ಪೌರಾತ್ಯ ಮತಗಳೆಲ್ಲಾ ರಾಜಕೀಯ ಕಾರಣಗಳಿಂದ ಬೇರೆಯವೆನಿಸದರೂ ಎಲ್ಲದರ ಜೀವಾಳವೂ ಒಂದೇ.. ಅವು ವೇದಗಳನ್ನ ನಿರಾಕರಿಸಿದವು ಅಷ್ಟೇ.. ವೇದವನ್ನೇ ಏಕೆ, ದೈವವನ್ನ ನಿರಾಕರಿಸಿದರೂ ಜೀವನ ವಿಧಾನ ಬೇರೆಯಲ್ಲವಾದರೆ, ಅವರೆಲ್ಲರೂ ಹಿಂದೂಗಳೇ.. ಖಂಡಿತವಾಗಿಯೂ ನೀವೆಂದಂತದೆ ಎಲ್ಲರ ದೇವರೂ ಒಂದೇ.. ನಾನು ಈಶ್ವರ ಅಲ್ಲಾಹ್ ತೇರೇ ನಾಮ್ ಹಾಡಬಲ್ಲೆ. ದೇವರೊಬ್ಬನೇ, ಹಾಗೆಂದ ಮೇಲೆ ನಿಮ್ಮ ದೇವರು ನಮ್ಮ ದೇವರು ಎಂದು ಬಡಿದಾಡಿ ಪ್ರಯೋಜನವೇನು. |
ನಿಮ್ಮ ದೇವರು ದೇವರಲ್ಲ ಎಂಬ ಮಾತನಾಡುವವರಿಗೆ ಉತ್ತರಕೊಡಲಷ್ಟೇ ಹೊರಡುವೆ. ಖಂಡಿತವಾಗಿಯೂ ಈಶ್ವರನೋ ಅಲ್ಲಾಹನೋ, xyz ಏನಾದರೂ ಹೆಸರಿಡಿ. ಆ ಶಕ್ತಿ ಒಂದೆ. ಇಲ್ಲವೆಂದರೆ ತಪ್ಪಾಗುತ್ತೆ. |
Kotian 12 January 2012 at 11:03 |
ನಮಸ್ಕಾರ ರಾಜೇಶ್... |
ಹೇಗಿದ್ದೀರಿ.. |
ಒಂದು ವಿಚಾರ ಸ್ಪಷ್ಟವಾಯಿತು... ಅಂದು ಮೊದಲಾದ ಓಘ ಇಂದಿಗೂ ನಿಂತಿಲ್ಲವೆಂದಾಯ್ತು... ನಡೆಯಲಿ.. ನಡೆಯಲಿ... ಎಲ್ಲಿಗೆ ಮುಟ್ಟಬೇಕೆಂದಿದೆಯೋ ಮುಟ್ಟಲಿ.. |
ಅಲೀಫ್, |
ನೀವಂದಿಗೆ ಏನೇನು ಪ್ರತಿಪಾದಿಸಿದ್ದೀರೋ ಆ ಪ್ರತಿಪಾದನೆಗೇ ಇಂದಿಗೂ ಅಂಟಿಕೊಂಡೇ ಇದ್ದೀರಿ.. ನಿಮ್ಮ ಬಿಗ್ಗಬಿಗಿ ನಿಲುವಿಗೆ ಧನ್ಯೋಸ್ಮಿ... ಆದರೆ.. ಅಲೀಫ್.. ಮಾನವಾಲೋಚನೆಯ ಹಂತವನ್ನು ದಾಟಿ ಬಂದು ನಿಂತು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಒಮ್ಮೆ ಅವಲೋಕಿಸಿ ನೋಡಿದರೆ... ಆಗ ಅವು ತುಂಬಾ "ಗೌಣ" ಅನಿಸಿಬಿಡುತ್ತವೆ.. ಏಕೆಂದರೆ... |
Human Interpretationನಿಂದ ನೀವು ಹೇಳಿದ ಅಷ್ಟೂ ವಿಷಯಗಳು ಮಹತ್ವದ್ದೇ... ಆದರೆ... ಭೂಮಿಗೆ ಮಾತ್ರ ಸೀಮಿತವಾದ ಈ ವಾದ ಸರ್ವಲೋಕಗಳಲ್ಲೂ acceptable ಅಲ್ಲ... Soul Levelನಲ್ಲಿ ಬೇರೆಯದೇ ಅರ್ಥ... bodylessness level ಅಥವಾ God Levelನಲ್ಲಿ ಬೇರೆಯದೇ ಅರ್ಥ... ಮತ್ತು ಕಟ್ಟಕಡೆಯದಾಗಿ Supreme Consciousness Levelನಲ್ಲಿ ಅರ್ಥಹೀನ ವಾದವಾಗಿ ಮಾರ್ಪಡುತ್ತವೆ.. |
ಇಡೀ ಜಗತ್ತು ಆ Supreme Consciousnessನ "ಆಲೋಚನಾ ಲಹರಿ" ಅಷ್ಟೇ... ಅಷ್ಟೇ.. |
ನಾವು ಘೋರ ಕನಸೊಂದನ್ನು ಕಂಡು ಬೆಚ್ಚಿಬಿದ್ದು ನಿದ್ರೆಯಿಂದ ಏಳುವಂತೆ... ಜೀವಾತ್ಮ ಕೂಡಾ ದೇಹವನ್ನು ತೊರೆದಾಕ್ಷಣ ಇದೇ ರೀತಿಯ ಅನುಭವವನ್ನು ಹೊಂದುತ್ತದೆ.. ಹಾಗೆಂದು ಅರಿತ ಮರುಕ್ಷಣ ನಾನು ನಾನಾಗಿರಲಿಲ್ಲ.. ನನ್ನೊಳು ಬದುಕಿನೆಡೆಗೆ ಒಂದು ಅಮೋಘ ಪರಿಕಲ್ಪನೆಯನ್ನು ಉಂಟುಮಾಡಿದ ಕ್ಷಣವದು... |
ಅಂದು.. ಈ ಎಳೆಯಲ್ಲಿ ನಾನು, ನೀವು, pkbys, bhgte, crusadeರವರು ಮಾಡಿದ ವಾದಗಳೆಲ್ಲವೂ ನಿರರ್ಥಕ ಎಂದೆನ್ನಿಸಿಬಿಟ್ಟಿತ್ತು... ಎಲ್ಲೋ ಒಂದು ಕಡೆ... ಅರಿವಿನ ಪಥದಲ್ಲಿ ಸಾಗುತ್ತಿರುವವರಿಗೆ ಸಣ್ಣ ಊರುಗೋಲು ಅಷ್ಟೇ... ಆ ಸಂವಾದಗಳು... ನಮ್ಮ ಹಿಂದೆ ಬರುತ್ತಿರುವ.. ನಮ್ಮನ್ನು ಅನುಸರಿಸುತ್ತಿರುವ ಆ ಪೀಳಿಗೆಗೆ ನಾವು ಬಿಟ್ಟು ಹೋಗಬಹುದಾದ ಸಣ್ಣೇಸಣ್ಣ ಮಾಹಿತಿ... |
ಇರಲಿ... |
ಪಾರವಿಲ್ಲದ ಸಂತಸ ಸದಾ ನಿಮ್ಮದಾಗಲಿ.. ಎಂಬುದು ನನ್ನ ಹಾರೈಕೆ... |
Subsets and Splits
No community queries yet
The top public SQL queries from the community will appear here once available.