text
stringlengths
0
61.5k
80 ಸೆ.ಮೀ. ಉದ್ದದ ದೊಡ್ಡ ಶಿಶ್ನದ ಆಕೃತಿಯು ಭೂತ!
ಸ್ಕೇರ್ ಕ್ರೌ ನನ್ನನ್ನು ರಕ್ಷಿಸುತ್ತದೆ ಎಂದು ಅವರು ನಂಬಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಹೀಗೆ ಮಾಡಲಾಗುತ್ತಿದೆ ಎಂದು 53ರ ಹರೆಯದ ಜಾನಿ ತಿಳಿಸಿದ್ದಾರೆ. 80 ಸೆ.ಮೀ. ಉದ್ದದ ದೊಡ್ಡ ಶಿಶ್ನದ ಆಕೃತಿಯು ಭೂತವು ಬಂದಾಗ ಹೆದರಿಸುತ್ತದೆ ಮತ್ತು ಇದನ್ನು ದಾಟಿ ಮುಂದೆ ಬರಲಾಗದು. ಇದರಿಂದ ಭೂತವು ದೂರವಿದ್ದು, ನಾವು ಸುರಕ್ಷಿತರಾಗಿರುತ್ತೇವೆ ಎಂದು ಅವರು ಹೇಳುತ್ತಾರೆ.
All Image courtesy-https://www.mirror.co.uk
Evil-widow-ghost-killing-young-men-Thai-village
Terrified villagers are forcing their husbands to wear women's clothing and makeup to bed in fear an evil widow ghost will kill them. Other residents of the remote hamlet in Nakhon Phanom, northeast Thailand, are hanging scarecrows with huge penises outside their homes. The village of 90 people flew into a panic after five fit and healthy young men died suddenly in their sleep in recent weeks. They believed a widow's ghost was terrorising the village by seducing men in their sleep and taking their spirits to the afterlife for her to have her way with them.
ಖಾಸಗಿ ಬಸ್ ನೌಕರರಿಗೆ ಮಾಲಕರು ಪರಿಹಾರಧನ ನೀಡಲಿ: ಡಿವೈಎಫ್‌ಐ - Varthabharati
ಮಂಗಳೂರು, ಮೇ 23: ಅವಿಭಜಿತ ದ.ಕ. ಜಿಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್‌ಗಳಲ್ಲಿ ಕನಿಷ್ಠ ಹದಿನೈದು ಸಾವಿರದಷ್ಟು ಚಾಲಕರು, ನಿರ್ವಾಹಕರು ಸೇರಿದಂತೆ ವಿವಿಧ ರೀತಿಯ ಕಾರ್ಮಿಕರಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳಲ್ಲಿ ಉದ್ಯೋಗ ಇಲ್ಲದೆ ಮನೆಯಲ್ಲಿ ಉಳಿದಿರುವ ಈ ವಿಭಾಗಕ್ಕೆ ಯಾವುದೇ ವೇತನ, ಸರಕಾರದ ಪ್ಯಾಕೇಜುಗಳು ದೊರಕಿಲ್ಲ. ಇದರಿಂದ ಬಸ್ ನೌಕರ, ಕಾರ್ಮಿಕರ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿದ್ದು ಬಸ್ ಮಾಲಕರು ತಕ್ಷಣವೇ ತಿಂಗಳಿಗೆ ತಲಾ ಐದು ಸಾವಿರದಂತೆ ಹತ್ತು ಸಾವಿರ ರೂ.ವನ್ನು ಬಸ್ ಮಾಲಕರು ತಾತ್ಕಾಲಿಕ ಪರಿಹಾರವಾಗಿ ನೀಡಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಲಾಕ್‌ಡೌನ್‌ನಿಂದ ಉಂಟಾದ ಬಿಕ್ಕಟ್ಟು ಖಾಸಗಿ ಬಸ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಲ್ಲಿ ದುಡಿಯುವ ಕಾರ್ಮಿಕರು ದುಡಿಮೆ ಇಲ್ಲದೆ ಮನೆಗಳಲ್ಲಿ ಉಳಿದಿದ್ದಾರೆ. ಖಾಸಗಿ ಸಾರಿಗೆ ಉದ್ಯಮಪತಿಗಳ ಗೊಂದಲಗಳಿಂದಾಗಿ ಬಹುತೇಕ ಬಸ್ ನೌಕರರು ಕಾರ್ಮಿಕ ಇಲಾಖೆಗಳಲ್ಲಿ ನೋಂದಣಿಗೊಂಡಿಲ್ಲ. ದಶಕಗಳ ಕಾಲದ ದುಡಿಮೆಯ ಹೊರತಾಗಿಯು ಕಾರ್ಮಿಕ ಕಾಯ್ಧೆಯ ಯಾವ ಸವಲತ್ತುಗಳೂ ಅವರಿಗೆ ದೊರಕುತ್ತಿಲ್ಲ. ಲಾಕ್‌ಡೌನ್ ಹಿನ್ನ್ನೆಲೆಯಲ್ಲಿ ಸರಕಾರ ಘೋಷಿಸಿದ ಪ್ಯಾಕೇಜುಗಳಲ್ಲೂ ಇವರನ್ನು ಹೊರಗಿಡಲಾಗಿದೆ. ಎಲ್ಲ ನೌಕರರಿಗೂ ಲಾಕ್‌ಡೌನ್ ಅವಧಿಯಲ್ಲಿ ರಜೆ ಸಹಿತ ಪೂರ್ಣ ವೇತನ ನೀಡಬೇಕು ಎಂದು ಸರಕಾರದ ಆದೇಶವಿದ್ದರೂ ಬಸ್ ಮಾಲಕರು ಆರ್ಥಿಕ ಸಂಕಷ್ಟದ ಕಾರಣ ಮುಂದಿಟ್ಟು ಸರಕಾರದ ಆದೇಶವನ್ನು ಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಸಂಘಟಿತ ವಲಯದ ಬಸ್ ಚಾಲಕ, ನಿರ್ವಾಹಕ ಸಹಿತ ಸಿಬ್ಬಂದಿ ವರ್ಗವು ವೇತನ ಸಹಿತ ಯಾವುದೇ ಆದಾಯವಿಲ್ಲದೆ ಕಠಿಣ ಪರಿಸ್ಥಿತಿಗೆ ಈಡಾಗಿದ್ದಾರೆ. ಅವರ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿವೆ. ದಿನದ 15-16 ತಾಸು ಯಾವುದೇ ಭದ್ರತೆ ಇಲ್ಲದೆ ದುಡಿಯುವ ಬಸ್ ನೌಕರರನ್ನು ಈ ರೀತಿ ಕಡೆಗಣಿಸುವುದು ಸರಿಯಲ್ಲ. ರಸ್ತೆ ತೆರಿಗೆ, ಆಸನ ತೆರಿಗೆ ವಿನಾಯತಿ, ಟಿಕೆಟ್ ದರ ಏರಿಕೆ ಸಹಿತ ಮಾಲಕರ ಪರವಾದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿರುವ ಖಾಸಗಿ ಬಸ್ ಮಾಲಕ ಸಂಘಗಳು ಅದೇ ಸಂದರ್ಭ ತಮ್ಮ ಬಸ್ಸುಗಳಲ್ಲಿ ದುಡಿಯುವ ಕಾರ್ಮಿಕರನ್ನು ಪೂರ್ಣವಾಗಿ ಕಡೆಗಣಿಸಿರುವುದು ಸರಿಯಲ್ಲ. ಮಾಲಕರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಲಾಕ್‌ಡೌನ್ ಅವಧಿಯ ವೇತನ, ಮುಂದಿನ ದಿನಗಳ ದುಡಿಮೆಯ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಬೇಕು. ಸರಕಾರದ ಜೊತೆಯ ಮಾತುಕತೆಗಳ ಸಂದರ್ಭ ನೌಕರರ ಬೇಡಿಕೆಗಳನ್ನು ಮುಂದಿಟ್ಟು ಚರ್ಚಿಸಬೇಕು ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗ್ರಾಮಸ್ಥರು | Prajavani
ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗ್ರಾಮಸ್ಥರು
Published: 23 ಫೆಬ್ರವರಿ 2019, 01:25 IST
Updated: 23 ಫೆಬ್ರವರಿ 2019, 01:25 IST
ಬೆಂಗಳೂರು: ರಾತ್ರಿ ವೇಳೆ ವಿದ್ಯುತ್‌ ಕಡಿತ ಮಾಡಿದರೆ ಮಕ್ಕಳು ಓದುವುದಾದರೂ ಹೇಗೆ? ಹೋದ ವರ್ಷದ ಸಬ್ಸಿಡಿಯನ್ನೇ ನೀಡದ ರೇಷ್ಮೆ ಇಲಾಖೆಯು ಪ್ರಸಕ್ತ ಸಾಲಿನ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿ ಎಂದು ಹೇಳುವ ಔಚಿತ್ಯವಾದರೂ ಏನು ಎಂಬ ಹತ್ತಾರು ಆಕ್ರೋಶಭರಿತ ಪ್ರಶ್ನೆಗಳು ಕೆ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಕೇಳಿ ಬಂದವು.
ಕೆ.ಗೊಲ್ಲಹಳ್ಳಿಯಲ್ಲಿ ಆಯೋಜಿಸಲಾದ ಮೊದಲನೇಸುತ್ತಿನ ಗ್ರಾಮಸಭೆಯಲ್ಲಿ ಜನರು ಕೇಳಿದ ಪ್ರಶ್ನೆಗಳು ಹಾಜರಿದ್ದ ಕೆಲ ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದವು. ಪಶು ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದ ಗ್ರಾಮಸ್ಥರು ಮೆಕ್ಕೆಜೋಳದ ಬೀಜ ಭೂಮಿಯಿಂದ ಮೇಲೆ ಏಳಲೇ ಇಲ್ಲ. ಈ ವರ್ಷವಾದರೂ ಗುಣಮಟ್ಟದ ಬೀಜ ನೀಡಿ ಎಂದು ಒತ್ತಾಯಿಸಿದರು. ಲೋಡ್ ಶೆಡ್ಡಿಂಗ್ ಆದೇಶ ಇಲ್ಲದ ಮೇಲೂ ವಿದ್ಯುತ್ ಕಡಿತಗೊಳಿಸುತ್ತಿರುವ ಬಗ್ಗೆ ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಂಪಾಪುರ ಬಳಿ ನಿರ್ಮಿಸಿರುವ ನೂತನ ರಸ್ತೆಯ ಕಳಪೆ ಕಾಮಗಾರಿ ಬಗ್ಗೆಯೂ ದೂರಿದ ಗ್ರಾಮಸ್ಥರು ಕಾಮಗಾರಿ ನಡೆಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ನೀಡಿದ ಉತ್ತರ ಗ್ರಾಮಸ್ಥರಿಗೆ ಸಮಾಧಾನ ತರದ ಕಾರಣ ಕೆಲ ಕಾಲ ವಾಗ್ವಾದ ನಡೆದು ಸಭೆಯು ಗೊಂದಲದ ಗೂಡಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಮಹೇಶ್ ಮಾತನಾಡಿ, 'ನೀರು. ವಿದ್ಯುತ್ ಹಾಗೂ ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ವಸತಿ ರಹಿತರಿಗೆ ಶೀಘ್ರದಲ್ಲಿ ಸೂರು ಒದಗಿಸುವ ಯೋಜನೆಯು ಪಂಚಾಯಿತಿಗೆ ಇದೆ. ಶೀಘ್ರದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾ ಶಿವಮಾದಯ್ಯ, ತಾಲೂಕು ಪಂಚಾಯಿತಿ ಸದಸ್ಯ ಕೆ.ವೈ.ಶಿವಣ್ಣ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಜಣ್ಣ, ಪಿಡಿಒ ರಾಮಕೃಷ್ಣ, ಬೆಸ್ಕಾಂ ಎಇಇ ಕಾಶಿರಾಮ್ ಪವಾರ್, ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.
ಬಂಧಿತ ಬಾಬಾ ರಾಮ್‌ಪಾಲ್‌ಗೆ ನಕ್ಸಲೀಯರ ಜತೆ ಸಂಪರ್ಕ ಬೆಳಕಿಗೆ | KANNADIGA WORLD
Home ಕನ್ನಡ ವಾರ್ತೆಗಳು ರಾಷ್ಟ್ರೀಯ ಬಂಧಿತ ಬಾಬಾ ರಾಮ್‌ಪಾಲ್‌ಗೆ ನಕ್ಸಲೀಯರ ಜತೆ ಸಂಪರ್ಕ ಬೆಳಕಿಗೆ
ಬಂಧಿತ ಬಾಬಾ ರಾಮ್‌ಪಾಲ್‌ಗೆ ನಕ್ಸಲೀಯರ ಜತೆ ಸಂಪರ್ಕ ಬೆಳಕಿಗೆ
Posted By: Gulf ReporterPosted date: November 20, 2014 In: ರಾಷ್ಟ್ರೀಯ
ನವದೆಹಲಿ, ನ.20: ಎರಡು ವಾರಗಳ ಹೈ ಡ್ರಾಮಾದ ಬಳಿಕ ಕಳೆದ ರಾತ್ರಿ ಪೊಲೀಸರು ಬಂಧಿಸಲ್ಪಟ್ಟಿದ್ದ ಸ್ವಯಂಘೊಷಿತ ದೇವಮಾನವ ಬಾಬಾ ರಾಮ್‌ಪಾಲ್‌ಗೆ ನಕ್ಸಲೀಯರ ಸಂಪರ್ಕವಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಕೊಲೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಬಾಬಾ ರಾಮ್‌ಪಾಲ್‌ಗೆ ಇದೀಗ ನಕ್ಸಲೀಯರ ಜತೆ ನಂಟು ಹೊಂದಿರುವುದು ಇನ್ನಷ್ಟು ಕಾನೂನಿನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕಳೆದ ಆಗಸ್ಟ್‌ನಲ್ಲಿ ಪೊಲೀಸರು ಬಂಧಿಸಿದ್ದ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಮಹಾವೀರ್ ಸಕ್ಲಾನಿಗೆ, ರಾಮ್‌ಪಾಲ್ ತನ್ನ ಆಶ್ರಮದಲ್ಲಿ ಉಳಿಯಲು ಆಶ್ರಯ ಕೊಟ್ಟಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಮೂಲತಃ ಬಿಹಾರದ ಪೂರ್ವಚಂಪಾರಣ್ಯ ಜಿಲ್ಲೆ ನಿವಾಸಿಯಾದ ಮಹಾವೀರ್ ಸಕ್ಲಾನಿ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ನಕ್ಸಲೀಯ ನಾಯಕ. ಈತನು ಈಶಾನ್ಯ ರಾಜ್ಯಗಳಲ್ಲಿ ನಕ್ಸಲೀಯ ಸಂಘಟನೆಗಳನ್ನು ಬಲಪಡಿಸುವ ಕಮಾಂಡರ್ ಆಗಿ ನೇಮಕಗೊಂಡಿದ್ದ. ನೇಪಾಳ ಮತ್ತು ಬಿಹಾರ ಗಡಿಯಲ್ಲಿ ತಲೆಮರೆಸಿಕೊಂಡಿದ್ದ ಸಕ್ಲಾನಿ ಅನೇಕ ಪೊಲೀಸರು ಮತ್ತು ಸಾರ್ವಜನಿಕರನ್ನು ಹತ್ಯೆಗೈದ ಆರೋಪಕ್ಕೆ ಗುರಿಯಾಗಿದ್ದ.
ಕೆಲ ವರ್ಷಗಳಿಂದ ನೇಪಾಳದಲ್ಲಿ ತಲೆಮರೆಸಿಕೊಂಡ ಬಳಿಕ ಈತ ಬಿಹಾರಕ್ಕೆ ಆಗಮಿಸಿದ್ದ. ಪೊಲೀಸರು ತನ್ನನ್ನು ಬಂಧಿಸಬಹುದೆಂಬ ಭೀತಿಯಿಂದಾಗಿ ರಾಮ್‌ಪಾಲ್ ನಡೆಸುತ್ತಿದ್ದ ಬರ್ವಾಲಾ ಆಶ್ರಮದಲ್ಲಿ ನೆಲೆಯೂರಿದ್ದ. ಪೊಲೀಸರಿಗೆ ಸುಳಿವು ನೀಡಿದ್ದೇ ಈತ: ಈತನ ಚಲನ-ವಲನಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಕಳೆದ ಆಗಸ್ಟ್‌ನಲ್ಲಿ ಸಕ್ಲಾನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪಂಜಾಬ್-ಹರಿಯಾಣ ಹೈಕೋರ್ಟ್ ರಾಮ್‌ಪಾಲ್‌ನನ್ನು ಶುಕ್ರವಾರದೊಳಗೆ ಬಂಧಿಸಬೇಕೆಂದು ತಾಕೀತು ಮಾಡಿತ್ತು. ಆಗ ಪೊಲೀಸರಿಗೆ ಆಶ್ರಮವನ್ನು ಒಳಹೊಕ್ಕುವುದು ಹೇಗೆ ಎಂಬ ಚಿಂತೆ ಎದುರಾಗಿತ್ತು. ತಕ್ಷಣವೇ ಹೊಳೆದದ್ದು ಸಕ್ಲಾನಿ ಹೆಸರು. ಕೂಡಲೇ ಆತನಿಗೆ ಪೊಲೀಸ್ ಟ್ರೀಟ್‌ಮೆಂಟ್ ನೀಡಿದ ಕೂಡಲೇ ಇಡೀ ಆಶ್ರಮದ ಚಿತ್ರಣವನ್ನು ಪೊಲೀಸರಿಗೆ ನೀಡಿದ. ಇದರಿಂದ ಕಾರ್ಯಪ್ರವೃತ್ತರಾದ ಪೊಲೀಸರು ಆಶ್ರಮದೊಳಗೆ ನುಗ್ಗಲು ಅನುಕೂಲವಾಯಿತು. ಅಲ್ಲದೆ, ದೇವಮಾನವನ್ನು ಬಂಧಿಸುವುದಕ್ಕೂ ಸಹಾಯವಾಯಿತು.
14ರಿಂದ ಅವಶ್ಯಕ ವಸ್ತು ಮಾರಾಟಕ್ಕೆ ಮಾತ್ರ ಅವಕಾಶ | Udayavani – ಉದಯವಾಣಿ
­ಬೆಳಗ್ಗೆ 6ರಿಂದ 12ರವರೆಗೆ ವಹಿವಾಟು: ಕಳಸದ­ಸಂಜೆ 7ರಿಂದ ಬೆಳಗ್ಗೆ 5 ಗಂಟೆಯವರೆಗೆ ನಿತ್ಯ ಕರ್ಫ್ಯೂ ಜಾರಿ: ಕಳಸದ
Team Udayavani, Jun 12, 2021, 4:25 PM IST
ಬಾಗಲಕೋಟೆ: ಜಿಲ್ಲೆಯಲ್ಲಿ ಜೂ. 14ರಿಂದ 21ರ ವರೆಗೆ ರಾಜ್ಯ ಸರಕಾರ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ವಿನಾಯಿತಿ ನೀಡಿದ್ದು, ಜಿಲ್ಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಅವಶ್ಯಕ ವಸ್ತುಗಳನ್ನು ಮಾರಾಟ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ವಿನಾಯಿತಿ ನೀಡಿದಂತೆ ಸರಕಾರಿ ಕಚೇರಿಯಲ್ಲಿ ಶೇ.50ರಷ್ಟು, ಕಾರ್ಖಾನೆಗಳು ಶೇ.50 ರಷ್ಟು ಹಾಗೂ ಗಾರ್ಮೆಂಟ್ಸ್‌ ಶೇ.30 ರಷ್ಟು ಸಿಬ್ಬಂದಿಯೊಂದಿಗೆ ಆರಂಭಿಸಲು ವಿನಾಯಿತಿ ಇರುತ್ತದೆ. ಅಗತ್ಯ ವಸ್ತುಗಳನ್ನು ಮಾರಾಟ, ಹೋಟೆಲ್‌ ಮತ್ತು ಮದ್ಯ ಮಾರಾಟ (ಪಾರ್ಸಲ್‌ ಮಾತ್ರ), ಸಿಮೆಂಟ್‌ ಮತ್ತು ಕಬ್ಬಿಣ ಮಾರಾಟ, ಬೀದಿ ಬದಿ ವ್ಯಾಪಾರಕ್ಕೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶವಿರುತ್ತದೆ ಎಂದರು. ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಮಾತನಾಡಿ, ಉದ್ಯಾನವನಗಳಲ್ಲಿ ಜನರು ವಾಯು ವಿಹಾರ ಮಾಡಲು ಅವಕಾಶ ನೀಡಲಾಗಿದೆ. ಸಂಜೆ 7ರಿಂದ ಬೆಳಗ್ಗೆ 5 ಗಂಟೆಯವರೆಗೆ ನಿತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದರ ಜತೆಗೆ ವಾರದ ಕರ್ಫ್ಯೂ ಯಥಾಸ್ಥಿತಿ ಇರಲಿದೆ ಎಂದ ಅವರು ಚಿನ್ನದ ಅಂಗಡಿ, ಬಟ್ಟೆ ಅಂಗಡಿಗಳನ್ನು ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ. ಹೋಟಲ್‌ ಮಧ್ಯದ ಅಂಗಡಿಗಳು (ಪಾರ್ಸಲ್‌) ಬೆಳಿಗ್ಗೆ 6 ಗಂಟೆಯಿಂದ 2 ಗಂಟೆಯವರೆಗೆ ಆರಂಭ ಮಾಡಬಹುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾತನಾಡಿ ಕಟ್ಟಡ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು, ನೈಟ್‌ ಕರ್ಫ್ಯೂ ವೇಳೆ ಹಿಂದೆ ಇದ್ದಂತೆ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ವಿರುತ್ತದೆ. ವಾರದಲ್ಲಿ ಶನಿವಾರ ಮತ್ತು ರವಿವಾರ ವಿಕೆಂಡ್‌ ಕರ್ಫ್ಯೂ ಜಾರಿಯಲ್ಲಿರಲಿದೆ. ಯಾವುದೇ ಮದುವೆ ಕಾರ್ಯಕ್ರಮಕ್ಕೆ ಅವಕಾಶವಿರುವದಿಲ್ಲ. ಮೊದಲಿನಂತೆ ನಿಷೇಧಾಜ್ಞೆ ಮುಂದುವರೆಯಲಿದೆ. ಜಾತ್ರೆ, ಸಂಜೆ ರದ್ದು ಮಾಡಲಾಗಿದ್ದು, ದೇವಸ್ಥಾನವು ತೆರೆಯುವಂತಿಲ್ಲ. ಕಟ್ಟಡ ಕಾರ್ಮಿಕರು ದ್ವಿಚಕ್ರ ವಾಹನಗಳ ಮೇಲೆ ಓಡಾಡುವಂಗಿಲ್ಲ. ಕೆಲಸಕ್ಕೆ ತೆರಳು ವಾಹನಕ್ಕೆ ಅನುಮತಿ ನೀಡಲಾಗುತ್ತಿದ್ದು, ಅದರಲ್ಲಿಯೇ ತೆರಳಬೇಕು. ಜಿ.ಪಂ ಸಿಇಓ ಟಿ. ಭೂಬಾಲನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್‌ .ದೇಸಾಯಿ ಉಪಸ್ಥಿತರಿದ್ದರು.
ಅನಘ ಮಾನಸ: ಕಟು ಸತ್ಯದೆಡೆಗೊಂದು ವಿಡಂಬನೆಯ ನೋಟ!!
Posted by ರಾಜೇಶ ಎನ್. at 02:03:00
chethan 2 June 2011 at 10:32
ಕ್ಷಮಿಸಿ pkbys ರವರೆ ಮುಸ್ಲಿಮ್ ಧರ್ಮದ ಬಗ್ಗೆ ಅಸ್ಟೊಂದು ತಿಳಿದಿಲ್ಲ ,ತಿಳಿಯದರ ಬಗ್ಗೆ ಹೇಳೋದು ಅಲ್ಲ,...ಅದು ಅವರವರ "ವಿಚಾರ ಮಂಥನೆಗೆ" ಬಿಟ್ಟದ್ದು,...
saroja 2 June 2011 at 11:11
pkbys ರವರೆ ನಿಮ್ಮ ಬರಹಗಳನ್ನು ವೆಬ್ನಲ್ಲಿ ಓದುತಿದ್ದೆ.
(ದಲಿತ ಕ್ರಿಶ್ಚಿಯನ್‌ರನ್ನು ಪೋಪ್ ಮಾಡ್ತೀರಾ?: ಪೇಜಾವರಶ್ರೀ) ಈ ಸುದ್ದಿಯಲ್ಲಿ ನಿಮ್ಮ ಹಾಗು crusade, manju, alif ಮುಂತಾದವರ ಸಂವಾದವನ್ನು ಓದಿ ತುಂಬಾ ವಿಷಯಗಳ ಬಗ್ಗೆ ನನಗಿದ್ದ ಅಜ್ಞಾನದ ಅರಿವಾಯಿತು, ಹಾಗೆಯೇ ನಿಮ್ಮಿಂದ ತುಂಬಾ ವಿಷಯಗಳು ತಿಳಿದ ಹಾಗಾಯಿತು, ಈಗ ನಿಮ್ಮ ಬ್ಲಾಗ್ ನೋಡಿದೆ, thx
ರಾಜಿ 2 June 2011 at 22:13
ಸ್ವಾಗತ ಚೇತನ್, ನೀವು ಇಲ್ಲಿಗೂ ಬಂದದ್ದು ಸಂತೋಷ, ಆಗಾಗ "ಅನಘ ಮಾನಸ"ಕ್ಕೆ ಬರುತ್ತಿರಿ.. ಹೊಸ ಪೋಸ್ಟ್‌ಗಳ ಮೇಲೆ ಕಾಮೆಂಟ್ ಮಾಡುವಿರಂತೆ... ಇನ್ನು ಧರ್ಮದ ವಿಚಾರ, ತಿಳಿಯದ್ದರ ಬಗ್ಗೆ ಹೇಳೋದು ಒಳ್ಳೆಯದಲ್ಲ, ಆದ್ದರಿಂದಲ್ಲೇ ತಿಳಿಯೋಣ, ತಿಳಿದದ್ದನ್ನ ತಿಳಿಸೋಣ. ದ್ವೇಷ ಭಾವನೆ ಬಿತ್ತೋದು, ಬೆಳೆಸೋದು ಬೇಡ. ವಿಚಾರ ಪ್ರಿಯರಾಗೋಣ. ಭಗವಂತ ಕೊಟ್ಟ ವಿವೇಕಕ್ಕೆ, ನಮ್ಮ ಸಂಸ್ಕೃತಿ, ಧರ್ಮ ನಮಗೆ ಕೊಟ್ಟ ವಿಚಾರಸ್ವಾತಂತ್ರ್ಯಕ್ಕೆ ಆಷ್ಟಾದರೂ ಬೆಲೆ ನೀಡೋದು ನ್ಯಾಯವಲ್ಲವೇ.
ರಾಜಿ 2 June 2011 at 22:20
ಸ್ವಾಗತ ಸರೋಜಾರವರೆ, ನೀವು ಹೇಳಿದ್ದನ್ನೂ ಬ್ಲಾಗ್‌ಗೆ ಹಾಕುವ ಉದ್ದೇಶವಿದೆ. ಆದರೆ ಅದು ಸುಮಾರು ಒಂದು ತಿಂಗಳು ನಡೆದ ಸಂವಾದ. ಯಾರ ವಾದಗಳೂ ಬಿಟ್ಟು ಹೋಗದಂತೆ, ಯಾರ ವಾದಗಳೂ ಮರುಕಳಿಸದಂತೆ, ಯಾರ ವಾದಗಳೂ ಕೇವಲ ತುತ್ತೂರಿ ಊದದಂತೆ, ಯಾರ ನೈಸರ್ಗಿಕ ನ್ಯಾಯಕ್ಕೂ ಧಕ್ಕೆ ಬರದಂತೆ ಅದನ್ನ ಇಲ್ಲಿ ಹಾಕುವುದು ಬಹಳ ಶ್ರಮದ ಕೆಲಸ. ಆದರೂ ಅದನ್ನ ಮಾಡುವ ಆಸಕ್ತಿ ಇದೆ. ಬಹಳ ಉದ್ದವಾಗುವುದರಿಂದ, ಭಾಗಗಳಲ್ಲಿ ಪೋಸ್ಟ್ ಮಾಡುವ ಉದ್ದೇಶ ಹೊಂದಿದ್ದೇನೆ. ನಮ್ಮೊಂದಿಗಿರಿ. ನಿಮ್ಮ ಗೆಳೆಯ, ಗೆಳತಿಯರಿಗೂ ಬ್ಲಾಗ್‌ ಬಗ್ಗೆ ತಿಳಿಸಿ. ನಿಮ್ಮ feedbackಗೆ ವಂದನೆಗಳು. ಮುಂದೆಯೂ ನಿಮ್ಮ ಅನಿಸಿಕೆ ತಿಳಿಸುತ್ತಿರಿ.
Veerendra Gowda 9 June 2011 at 01:23
Your blog is awesome..! Nimage Baashe mattu Baravanigeyalli tumba hiditavide..!
ರಾಜಿ 14 June 2011 at 11:33
ಧನ್ಯವಾದಗಳು ವೀರೇಂದ್ರರವರೆ, ಅನಘ ಮಾನಸಕ್ಕೆ ಭೇಟಿಕೊಡುತ್ತಿರಿ.. ಪೋಸ್ಟ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನ ತಿಳಿಸುತ್ತಿರಿ.
ಯಾತ್ರಿಕ 17 June 2011 at 19:29
I am Alif.
ಎನೆನ್ನಬೇಕೋ ತಿಳಿಯುತ್ತಿಲ್ಲ.... ಯಾವುದರ ಮೇಲಿನ ಪ್ರೀತಿಯೋ.. bhgte ಅವರ ಕೆಲವು ವ್ಯಾಖ್ಯಾನಗಳು ವಿಚಿತ್ರ.
ಇಂತಹ ವಿಚಿತ್ರ ನೋಟಗಳ ಉದಾಹರಣೆ:
ಮಗ ಪಾಪ, ಮಗನ ಹೆಂಡತಿ ಭಯಂಕರ, ಅವಳು ಯಾವ ಕೆಲಸವೂ ಮಾಡಲಾರಳು, ಮಗನೇ ಎಲ್ಲ ಕೆಲಸ ಮಾಡಬೇಕು.
ಇದನ್ನೆ ಇನ್ನೊಂದು ವಿದದಲ್ಲಿ, ಮಗಳು ಅದೃಷ್ಟವಂತೆ, ಅವಳ ಗಂಡನೆ ಎಲ್ಲ ಕೆಲಸ ಮಾಡುತ್ತಾನೆ.
ರಾಜಿ 17 June 2011 at 21:09
"ಯಾತ್ರಿಕ" ನೋಡುತ್ತಿರುವಂತೇ ಗೊತ್ತಾಯ್ತು Alif ಅದು ನೀವೇ ಎಂದು, I am also a follower of your blog. ನಿಮಗೆ ತುಂಬು ಹೃದಯದ ಸ್ವಾಗತ... ನಿಮ್ಮ ಕಾಮೆಂಟ್ ನೋಡುತ್ತಿರುವಂತೆಯೇ ಖುಷಿಯಾಯಿತು. You made my evening. :)
ನಿಜ ನಿಮ್ಮೊಡನೆ ಸಹಮತವಿದೆ.. ಮಗನ ತಾಯಿ ಮತ್ತು ಮಗಳ ತಾಯಿಯ ದೃಷ್ಠಿಕೋನ ಸರಿಯೇ... ಇಬ್ಬರದೂ ಸತ್ಯವೇ. ಆದರೆ ಪರಮಸತ್ಯ ಕೆಲಸ ಮಾಡುವ ಮಗ ಹೇಳುವುದೇ ಆಗಿರುತ್ತದಲ್ಲವೇ...
bhgte ಅವರು ಸೌದಿಯಲ್ಲಿದ್ದವರು, ಅವರು ಮಗನ ತಾಯಿಯಾಗಲೀ ಮಗಳ ತಾಯಿಯಾಗಲಿ ಆಗಿ ಬರೆದಿಲ್ಲ... ಅವರು ಆ ಕೆಲಸ ಮಾಡುವ ಮಗ(ಗಂಡ)ನಾಗಿ ಬರೆದವರು. ಆದ್ದರಿಂದ ಅವರ ವ್ಯಾಖ್ಯಾನಗಳಿಗೆ ಮಗನ ತಾಯಿ ಅಥವಾ ಮಗಳ ತಾಯಿಯ ದೃಷ್ಠಿಕೋನ ನೀಡುವುದು ಸರಿಯಲ್ಲ ಎಂದು ನನ್ನ ಅಭಿಮತ..
ಸೌದಿಯ ನಿಯಮಗಳು ಸೌದಿಯವರಿಗೆ ಸರಿ ಇರಬಹುದು... ಅಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಹೋದವರು ಅಲ್ಲಿನ ನಿಯಮಗಳು ಅದೆಷ್ಟೇ ಕಠೋರ, ಭಯಂಕರ, ವಿಚಿತ್ರ ಎನಿಸಿದರೂ ಪಾಲಿಸಬೇಕು ಎಂಬುದು ನಿರ್ವಿವಾದ. ಆದರೆ ದೇಶವೊಂದರ ಸಂವಿಧಾನವೇ, ಮತಗ್ರಂಥವಾದರೆ ಅದು ಆ ಮತದವರಲ್ಲದವರಿಗೆ ನೈಸರ್ಗಿಕ ಸ್ವಾತಂತ್ರ್ಯವನ್ನು(ತೊಡುವ, ನಿಲ್ಲುವ, ಮನರಂಜನೆಯ, ನಂಬಿಕೆಯ ಸ್ವಾತಂತ್ರ್ಯಗಳು) ನಿರಾಕರಿಸಿದರೆ ಹೊರಗಿನವರಿಗೆ ಉಸಿರುಕಟ್ಟಿಸುತ್ತದೆ... ಖಂಡಿತಾ ಹೇರಿಕೆ ಎನಿಸಿಬಿಡುತ್ತದೆ.. ಅದು ಆ ದೇಶದ ಕಾನೂನು, ಅವರ ಆತಂರಿಕ ವಿಚಾರ, ಅವರಿಷ್ಟ, ಬೇಕಿಲ್ಲದಿದ್ದರೆ ಅಲ್ಲಿಗೆ ಹೋಗೋದು ಬೇಡ. ಎಲೆ ಆಡಿಕೆ ಕೊಟ್ಟು ಕರೆದಿದ್ದರೆ? Be a Roman in Rome ಎನ್ನೋ ಹಾಗೆ Be an Arab in Arabia, if u cant then don't go ಎಂದೆಲ್ಲಾ ಹೇಳಬಹುದು. ಆದರೆ ಹೇಗೆ ಆ ದೇಶದ ಕಾನೂನು ಆತಂರಿಕ ವಿಚಾರವೋ ಹಾಗೇಯೇ ಅವನ್ನ ನೋಡಿ ಹೊರಗಿನವರಿಗೆ ಹಾಸ್ಯಾಸ್ಪದವೆನಿಸಿದರೆ ಅದು ಸರಿಯೇ ತಾನೆ.... ಅವರ ರಾಷ್ಟ್ರಪಕ್ಷಿ, Free style sword dance!! ಬಗೆಗಿನ ಕಾಮೆಂಟ್ಸ್ ಕೇವಲ ನಗು ತರಿಸಿತು, ಆದರೆ ಅವುಗಳ ಬಗ್ಗೆ ಯಾವ ವೈಯಕ್ತಿಕವಾಗಿ ನನಗೆ complaints ಇಲ್ಲ. ಆದರೆ ಒಂದು ಪ್ರಾಣಿಜಾತಿಯನ್ನೇ extinct ಮಾಡುವಷ್ಟು ದ್ವೇಷ, ಅನುಮತಿ ಪತ್ರ ಹೊಂದಿರಬೇಕಾದ ಅನಿವಾರ್ಯತೆಯ ಹೆಣ್ಣುಮಕ್ಕಳು, ಮತವಾ ಇಕಾಮಗಳ ರಾಜ್ಯಭಾರ, ಬೇರೆ ಧರ್ಮದ ಯಾವ ಲಾಂಛನ, ವಿಗ್ರಹ, ಉಂಗುರ ಮೊದಲಾವನ್ನೂ ಹೊಂದಲಾರದ ಮಟ್ಟಿಗಿನ ಅಸಹನೆ ಇವೆಲ್ಲಾ ಖಂಡಿತಾ ಹಾಸ್ಯಾಸ್ಪದವಲ್ಲ.. ಯಾವುದೇ ಕಾರಣಕ್ಕೂ ಸಮರ್ಥನೀಯವೂ ಅಲ್ಲ.. ಇವು extremity of a self love ..
ಯಾತ್ರಿಕ 17 June 2011 at 22:26
ನಾನು ಅವರ ಕಾಮೆಂಟ್ ಬಗ್ಗೆ ಹೇಳಲಿಲ್ಲ, ಆದರೆ ಅದನ್ನ ನಾನು(ನನ್ನಂತೆ ಹಲವರು) ಪ್ರೀತಿಯಿಂದ ಅರ್ಥಮಾಡಿಕೊಂಡು ಎದೆಗೇರಿಸಿದ ಧರ್ಮದ ನೇರಕ್ಕೆ ಹೇಳಿದ್ದರಿಂದ ಹೇಳಿದೆ. ಈಗ ದೃಷ್ಟಿಕೋನ ಗೊತ್ತಗಿರಬಹುದು ಅಲ್ಲವೇ.
ನನ್ನ ಪ್ರೀತಿಯ ಸಹೋದರ/ರಿಗೆ ನನಗೆ ಹೇಳಕ್ಕಿರುವುದು ಒಂದೇ ಇಸ್ಲಾಮ್ ನೀವು ಅರ್ಥಮಾಡಿಕೊಂಡಂತಲ್ಲ, ಸತ್ಯವಾಗಿಯೂ ಅದು ಬಹಳ ವಿಶಾಲ. ನೀವು ನಂಬಿದಂತೆ ಇಸ್ಲಾಮ್ ಒಬ್ಬನ ಸಂತೋಷಕಲ್ಲ ಅದು ಎಲ್ಲರ ಸಂತೋಷಕ್ಕಾಗಿ. ಪ್ರವಾದಿಗಲು ಅನ್ಯ ಧರ್ಮೀಯ ಯಾತ್ರಿಕನಿಗೆ ಅವನ ಪೂಜಾ ಕರ್ಮಕ್ಕಗಿ ಅವಕಾಶ ಕೊಟ್ಟಿದ್ದರು, ನಿಯಮಗಳು ಇಸ್ಲಾಮಿನ ಅನುಯಾಯಿಗಳಿಗೆ ಮಾತ್ರ. ಎಲ್ಲ ಕರ್ಮಗಳಿಗು ಇಸ್ಲಾಮ್ ನಿಯಮಗಳನ್ನು ಹೇಳಿವೆ, ಎಲ್ಲೂ ಅಮುಸ್ಲಿಮರಿಗೆ ಇದನ್ನು ಕಲ್ಪಿಸಿ ಎನ್ನಲಿಲ್ಲ,ಎಲ್ಲಲ್ಲೂ ಮುಸ್ಲಿಮರಿಗೆ ಮಾತ್ರ ಎನ್ನುತ್ತದೆ. ಅಲ್ಲಾಹನನ್ನು ಗಾಡ್,ದೈವ... ಹೀಗೆಲ್ಲಾ ಕರೆಯಲು ಮುಸ್ಲಿಮರು ಇಷ್ಟಪಡಲಾರರು ಏಕೆಂದರೆ ಅಲ್ಲಾಹನ ಏಕತೆ ಸಾರುವ ನಾಮ ಅದು.ಅದಕ್ಕೆ ಬಹು ವಚನ ಅಥವಾ ಲಿಂಗ ವ್ಯತ್ಯಾಸ ಇಲ್ಲ. ಅದರ ಅರ್ಥ ಆರಾಧ್ಯ. ನಿಮಗೆ ಅಂದಿನ ಚರ್ಚೆಯಲ್ಲೆ ಹೇರಲ್ಪಟ್ಟ ನಿಯಮ ಎಂಬುದರ ಬಗೆಗಿನ ಅಪಾರ್ಥದ ಬಗ್ಗೆ ಹೇಳಿದ್ದೆ.
ನಾನು ಕೆಲಸದ ನಡುವೆ 10ನಿಮಿಷ ಬಿಡುವು ಮಾಡಿ ನಮಾಜ್ ಮಾಡುವೆ.ಅತ್ಮಾರ್ತವಾಗಿ, ಕರ್ತವ್ಯ ನಿಷ್ಟೆಯಿಂದ ಕೆಲಸ ಮಾಡುವಾಗ ಕೋಟಿಗಟ್ಟಲೆ ಅನುಗ್ರಹ ಕೊಟ್ಟು ಅನುಗ್ರಹಿಸಿದ ನನ್ನ ಸೃಷ್ಟಿಕರ್ತನಿಗೆ ಒಂದಲ್ಪ ಸ್ತುತಿ ಅರ್ಪಿಸಿ, ನನ್ನ ಬೇಕು ಬೇಡಗಳನ್ನು ಅವನ ಮುಂದೆ ಹೇಳುವ ಆ ನಿಮಿಷಗಳು ಸಾರ್ಥಕ. ಕೆಲವೊಂದು ದಿನ ಯಾತ್ರೆಯಲ್ಲೆಲ್ಲ ಇದ್ದಾಗ ಬಿಟ್ಟು ಹೊಗಬಹುದು ಆದರೆ ಅದಕ್ಕೆ ಇಸ್ಲಾಮ್ ವಿರೊದಿಸಿಲ್ಲ, ಯಾತ್ರೆಯ ನಂತರ ಮಾಡಬಹುದು, ಇನ್ನೂ ಅನೇಕ ರೀತಿಯ ರಿಯಾಯಿತಿ ಇದೆ. ಇದಕ್ಕೆ ಹೇರಿಕೆ ಅನ್ನಲಾಗುವುದೆ?
ನಾಯಿಯನ್ನು ಹೀಯಾಳಿಸುವ ರೀತಿಯಲ್ಲಿ ಹೋಗು ನಾಯಿ ಅನ್ನುವುದು ಕೂಡ ಇಸ್ಲಮಿನಲ್ಲಿ ತಪ್ಪು. ಇರುವೆ ಕೊಲ್ಲುವುದಿರಲಿ ಅದರ ಗುಂಪು ಚದುರಿಸುವುದು ಕೂಡ ತಪ್ಪು. ಹೀಗೆ ಎಲ್ಲವೂ ಪ್ರೀತಿಯ ನಿಯಮಗಳು. ಇಸ್ಲಾಮಿನಲ್ಲಿ ಕೆಲವು ಮಾತ್ರ ಹೇಳಿಲ್ಲ, ಎಲ್ಲವೂ ಇದೆ, ಜನನದಿಂದ ಮರಣದವರೆಗೆ ಮಾತ್ರವಲ್ಲ,ನಂತರದ ಲೋಕವು ಕೂಡ ಹೇಳಲಾಗಿದೆ. ನಿಜವಾಗಿಯೂ ಇದೊಂದು ಪರೀಕ್ಷಾ ಲೋಕ,ನಿಜ ಜೀವನ ನಂತರ ಬರಲಿದೆ.
ರಾಜಿ 20 June 2011 at 22:32
ಪ್ರಿಯ ಸೋದರ, ನಿಮ್ಮ ಮಾತುಗಳನ್ನ ನಾ ಮೊದಲೂ ಕೇಳಿರುವೆ.. ನಿಮ್ಮ ಇಸ್ಲಾಂನ ಬಗ್ಗೆ ಸಂತೋಷ ಪಟ್ಟಿರುವೆ.. ಆದರೆ bhgte ಹೇಳಿರುವ ಸೌದಿ ಇಸ್ಲಾಂನ ಕಠೋರ ನಿಯಮಗಳನ್ನಷ್ಟೇ ಪಾಲಿಸುತ್ತಿದೆ.. ಪ್ರವಾದಿಗಳು ಅಮುಸ್ಲಿಮನೊಬ್ಬ ತನ್ನ ಪೂಜಾಸ್ಥಾನಕ್ಕೆ ಸ್ಥಳವಿಲ್ಲವೆಂದಾಗ ಮಸೀದಿಯಲ್ಲೇ ಜಾಗ ಮಾಡಿಕೊಟ್ಟರಂತೆ. ಅದು ನಿಜವೋ ಸುಳ್ಳೋ, ಆದರೆ ಆ ಕಥೆಯನ್ನ ಅದನ್ನು ಹೆಮ್ಮೆಯಿಂದ ಹೇಳಿದ ಮುಸಲ್ಮಾನನ ಹೃದಯ ಮಾತ್ರ ವಿಶಾಲ. ಆದರೆ ಇಂದು ಸೌದಿಯಲ್ಲಿ ಅಮುಸ್ಲಿಮರ ದೇವಾಲಯ ಹೋಗಲಿ, ಕೈಯಲ್ಲೋ, ಕತ್ತಿನಲ್ಲೋ ಇರುವ ಅಮುಸ್ಲಿಂ ಧಾರ್ಮಿಕ ಚಿಹ್ನೆಗಳೂ ಅಪಥ್ಯ. ಅವರಾರೂ ನಿಮ್ಮ ಇಸ್ಲಾಂನ ಮುಸ್ಲಿಮರಲ್ಲ, ನಾಮಧಾರಿಗಳು ಎಂದು ಬಿಡೋಣ.. bhgte ಆಡಿಕೊಂಡಿದ್ದು ನಾಮಧಾರಿಗಳನ್ನಷ್ಟೇ..
ಇನ್ನು ಗಾಡ್, ದೈವ ಎಂಬ ಹೆಸರುಗಳನ್ನ ಒಪ್ಪದ ವಿಷಯ. ನಿಜ. ಜಾಕಿರ್ ಕಾರ್ಯಕ್ರಮವೊಂದರದಲ್ಲಿ ನೀವು ಹೇಳಿದ ಕಾರಣವನ್ನ ಜಾಕಿರ್ ಬಾಯಲ್ಲೇ ನಾನು ಕೇಳಿದ್ದೆ. ನನಗನಿಸಿದ್ದು ನಾ ಹೇಳುತ್ತಿರುವೆ. ಖಂಡಿತ ಅಲ್ಲಾಹ್ ಹೆಸರಿನಲ್ಲಿ ವಚನ ಲಿಂಗ ವ್ಯತ್ಯಾಸವಿಲ್ಲವಾದ ಕಾರಣ ಮತ್ತು ಖುರಾನ್ ಆ ಪರದೈವಕ್ಕೆ ವಚನ ಲಿಂಗವನ್ನ ಆರೋಪಿಸಬಾರದು ಎಂದು ವಿಧಿಸಿರುವ ಕಾರಣ ಅದರ ಹೊರತಾಗಿ ಬೇರೆ ಭಾಷೆಯ ಸಂವಾದಿ ಪದದಲ್ಲಿ ಕರೆಯಬಾರದು ಎಂಬುದು ತರ್ಕವಿಹೀನ.. ಗಾಡ್, ದೈವ ಈ ಪದಗಳಿಗೆ ಲಿಂಗ ವಚನಗಳನ್ನ ಕೊಡಬಹುದು. ಆದರೆ ಅದು ಕೇವಲ ವ್ಯಾಕರಣ. ವ್ಯಾಕರಣದ ನಿಯಮಗಳನ್ನ ಧಾರ್ಮಿಕ ನಿಯಮಗಳೊಡನೆ ಮಿಶ್ರ ಮಾಡುವುದು extremity ಎನಿಸಿಬಿಡುತ್ತದೆ. ಮುಸ್ಲಿಮರ ಭಕ್ತಿ ಪರಾಕಾಷ್ಠೆಗೆ ನನ್ನ ಹೃದಯಪೂರ್ವಕ ನಮನಗಳಿವೆ. ಗೌರವವಿದೆ. ಆದರೂ ಈ ಭಾಷೆಯ ಮೇಲೆ ಆಧಾರಿತವಾದ ವ್ಯಾಕರಣದ ಮೇಲೂ ಹಿಡಿತ ಬಯಸುವ ಬಗ್ಗೆ ಧಾರ್ಮಿಕ ಪ್ರಜ್ಞೆ ಇದ್ದರೆ ಅದು "ಏನಪ್ಪಾ ಇದು!!" ಎನಿಸಿಬಿಡುತ್ತದೆ.. ದಯವಿಟ್ಟು ನಿಮ್ಮ ಭಾವನೆಗಳು ನೋವಾದರೆ ಕ್ಷಮಿಸಿ. ಮಾಂಸಾಹಾರಿಯಲ್ಲದವರು ಮಾಂಸಾಹಾರಿಗಳು ಮಾಂಸ ತಂದ ದಿನ ಅದೇ ಮೇಜಿನಲ್ಲಿ ಕುಳಿತಾಗ ಉಂಟಾಗುವ ಚಡಪಡಿಕೆ ಇದು. ಅವರ ಕೈ, ಅವರ ಬಾಯಿ, ನನಗೇನು ಎಂದು ಎಷ್ಟೇ ಅಂದುಕೊಂಡರೂ ಆ ಚಡಪಡಿಕೆಯಲ್ಲಿನ "ಏನಪ್ಪಾ ಇದು!!" ಎಂಬಲ್ಲಿನ extremity. ಇದು ನನಗರ್ಥವಾಗುತ್ತದೆ.
ನನಗೆ ಎಲ್ಲಕ್ಕಿಂತ ಹಿಡಿಸಿದ್ದು ನಿಮಗೆ ಸಂಸ್ಕೃತದ ಮೇಲಿರುವ ಹಿಡಿತ.. ಸರಿಯಾದ ಸಂವಾದಿ ಪದವನ್ನೆ ಹುಡುಕಿ "ಆರಾಧ್ಯ" ಎಂದು ತಂದಿರಿ.. ನಿಜ. ಅದಕ್ಕಿಂತ ಉತ್ತಮ ಸಂವಾದಿ ಪದ ಸಿಗುವುದು ನನ್ನ ಶಬ್ದ ಭಂಢಾರದಲ್ಲಂತೂ ಸಾಧ್ಯವಿಲ್ಲ. ನಿಮಗೆ ಮತ್ತು ನಿಮಗೆ ಸಂಸ್ಕೃತ ಕಲಿಸಿದ ಗುರುಗಳಿಗೆ ನನ್ನ ನಮನಗಳು.
ಇನ್ನು ನಮಾಝ್ ವಿಷಯ. ನಿಜ. ಮುಸ್ಲಿಮರಿಗೆ ಹೇರಿಕೆಯಲ್ಲದಿರಬಹುದು. ನಾಮಧಾರಿಗಳಿಗೆ ಖಂಡಿತಾ.. ನಿಮ್ಮ ಭಕ್ತಿಗೆ ತುಂಬು ಗೌರವ ಹೇಗೋ, ನಾಮಧಾರಿಗಳ ಅಭಿಪ್ರಾಯ ಸ್ವಾತಂತ್ರ್ಯಕ್ಕೂ ಬೆಲೆ ಇರಲಿ ಎಂದಷ್ಟೇ ಕೇಳುವೆ. ಮತ್ತು ಆ ಸಮಯದಲ್ಲಿ ಅಮುಸ್ಲಿಮರ ಮೇಲೆ ಮಜಾ ಮಾಡುತ್ತಾರೆ ಎಂದೆಲ್ಲಾ ಹೇಳುವುದು ಖಂಡಿತವಾಗಿ ನಿಮ್ಮ ಇಸ್ಲಾಂನ ದೃಷ್ಟಿಯಲ್ಲಿ ಅಪರಾಧ, ಮುತಾವಾ ಇಕಾಮಾಗಳು ಆದೇ ಅಪರಾಧ ಮಾಡುತಿರುತ್ತಾರೆ.
ಇಸ್ಲಾಂನ ಪ್ರೀತಿಯ ನಿಯಮಗಳ ಬಗ್ಗೆ ಹೇಳಿದ್ದೀರಿ. ಮನಸ್ಸು ಆರ್ದ್ರವಾಗಿ ಹೋಯಿತು. ನನ್ನ ವಿಚಾರಪರತೆ ಇಸ್ಲಾಂನ ಎಲ್ಲ ವಿಚಾರಗಳನ್ನ ಒಪ್ಪದಿದ್ದರೂ ನಿಮ್ಮ ಪ್ರೀತಿಯ ನಿಯಮಗಳು ನನ್ನನ್ನ ಗೆದ್ದವು.
ಯಾತ್ರಿಕ 21 June 2011 at 16:35
ಸಂತೋಷ. ನನಗೆ ಸಂಸ್ಕೃತ ಗುರು! ಹಾಗೇನೂ ಇಲ್ಲ. ಕಲಿತ ಕನ್ನಡವ ಮನಸಾರೆ ಅಪ್ಪಿಕೊಂಡಿರುವೆ(1 ರಿಂದ 12 ತನಕ). ನನಗೇಕೊ ನಿಮ್ಮ ನ್ಯಾಯಗಳು ಮೂರ್ಕತನವೇ ಅನಿಸುತ್ತದೆ!!! ಕ್ಷಮಿಸಿ, ನನ್ನ ವಿಮರ್ಶಣಾ ನೀತಿಗೆ ಕ್ಷಮೆ ಇರಲಿ. ನೀವು ಯುಕ್ತಿವಾದಿ ಮನಸ್ಸಿನವರು ಎಂದನಿಸುತಿದೆ. ನನ್ನ ಪ್ರಕಾರ ನೀವು ಹೇಳುವ ನ್ಯಾಯ ಎಷ್ಟೊಂದು ನಿರರ್ತಕವಾಗಿ ಕಾಣಿಸುವುದೆಂದರೆ!! ಹದಿ ಹರೆಯದವರು ಆಶಿಸುವ ಎಲ್ಲವನ್ನೂ ಅವರ ಸ್ವಾತಂತ್ರ್ಯ ಎಂದು ಕೊಡಲಾಗುವುದೇ!! ತಪ್ಪು ಸರಿ ಎಂಬುದಿಲ್ಲವೇ!! ಮುಂದೊಂದು ದಿನ(ಬಂದಾಗಿದೆ) ತಂದೆ ತಾಯಿಗೆ ಮಕ್ಕಳ ಮೇಲೆ ಯಾವ ಹಕ್ಕು ಇರಬಾರದೆಂಬ ವಾದ ಯುಕ್ತಿವಾದದಿಂದ ಕೇಳುವುದು ಕಚಿತ. ಏಕಂದ್ರೆ ಪೋಷಕರು ಮಕ್ಕಳನ್ನ ತಮ್ಮ ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಾರೆ, ಮಕ್ಕಳಿಗೆ ಹಲವು ರೀತಿಯ ಹೇರಿಕೆ ಹಾಕಿ ಕಟ್ಟುತ್ತಾರೆ ಎಂದು!!! ಇದೆಲ್ಲವೂ ಒಂದು ರೀತಿಯ ಯುಕ್ತಿವಾದದ ಕುಚೇಷ್ಟೆಗಳು!!! ಬುದ್ದಿ ಇದ್ದು ಇಲ್ಲದಂತಾಗುವ ಮೂರ್ಕತನ. ನೀವು ಹೇಳಿದ ನಾಮದಾರಿಗಳ ಮೇಲಿನ ಹೇರಿಕೆ, ಅದೇ ರೀತಿ ಪೋಷಕರಿಂದ ಹೇರಿಕೆ.. ಇದೆಲ್ಲಾ ಅದೇ ರೀತಿ ಬರುತ್ತದೆ. ಇದರೊಂದಿಗೆ ಇಲ್ಲೂ ದುರುಪಯೂಗ ಇದ್ದೇ ಇದೆ. ಆದರೆ ಇಲ್ಲೊಂದು ವಿಷಯ ನೆನಪಿರಲಿ, ಯಾವನೊಬ್ಬನು ತಪ್ಪು ಮಾಡುತಿದ್ದರೂ ನಾವು ತಡೆಯಬೇಕು, ಅದರ ಶ್ರಮ ಆ ತಪ್ಪಿನ ಮೇಲೆ ಅವಲಂಬಿತವಾಗಿರುತ್ತದೆ. ಎಂದೂ ನಮ್ಮ ವಿಶ್ವಾಸ, ಬಂಧಗಳನ್ನು ಯುಕ್ತಿಯಿಂದ ನೊಡಲೇ ಬಾರದು. ಅದು ನಮ್ಮನ್ನು ಯಂತ್ರಗಳನ್ನಾಗಿಸುತ್ತವೆ. ನಮ್ಮ ಭಾವನೆ ಸಂಬಂದಗಳ ಜೊತೆಗೆ ನಮ್ಮ ಆತ್ಮೀಯ(ಧಾರ್ಮಿಕ) ವಿಶ್ವಾಸ ನಮ್ಮ ಹೃದಯದಲ್ಲಿರಬೇಕೆ ಹೊರತು ಮೆದುಳಿನಲ್ಲಿರಬಾರದು. ಪ್ರೀತಿಸುವಾತ ಪ್ರೀತಿಯನ್ನು ಮೆದುಳಿನಲ್ಲಿಡುತ್ತಾನೆಯೇ!! ಇಟ್ಟರೂ ಅದನ್ನ ಪ್ರೀತಿ ಎನ್ನಬಹುದೇ!!! ಇದೆಲ್ಲವೂ ನಮ್ಮನ್ನು ಮನುಶ್ಯನಾಗಿಸಿದ ಗುಣಗಳು, ಅದು ನಮ್ಮನ್ನು ಮನುಷ್ಯರೆನಿಸುವ ಹೃದಯದಾಳದಲ್ಲಿರಬೇಕು.
ಇನ್ನು ಅಲ್ಲಾಹ್ ಎಂಬ ನಾಮದ ಮೇಲಿನ ನಿಮ್ಮ ವಿಮರ್ಶೆ, ಸತ್ಯವಾಗಿಯೂ ನೀವೇ ಸುರುಳಿ ಸುತ್ತುತ್ತಿರುವ ರೀತಿ ನೋಡಲಾಗುತಿಲ್ಲ, ನಿಮಗೆ ಪ್ರೀತಿ ಆದ್ರ ಗೌರವ ಇವುಗಳ ಬಗ್ಗೆ ಗೊತ್ತಿದೆಯೋ ಎಂಬ ಸಂಶಯ ಬರುತಿದೆ!!! ಅದೇ ನಾಮ ಎಂಬ ಕಡ್ಡಾಯವಿಲ್ಲ, ಅದು ಇಷ್ಟ ನಾಮ, ಅದಲ್ಲದೆ ಇನ್ನೂ 99 ವಿಶೇಷ ನಾಮಗಳಿವೆ. ಅರ್ಥಾತ್ ಇದರ ಕನ್ನಡ ಅರ್ಥವೂ ಉಪಯೊಗಿಸಬಹುದು. ಆದರೆ ಇತರರಿಗೆ ಹೇಳುವಾಗ ಅಲ್ಲಾಹ್ ಎಂದು ಹೆಸರಿಸುವುದು ಉತ್ತಮ. ಉದಾ: ನಾನು ಅಲ್ಲಾಹನೊಡನೆ ಓ "ದಯಾಮಯೀ ದಯೆ ತೂರಿಸು" ಎಂದು ಪ್ರಾರ್ಥಿಸುವೆ. ಕೇಳುವ ನಿಮಗೆ ನಾನು ಯಾರೊಂದಿಗೆ ಯಾಚಿಸುತಿದ್ದೇನೆ ಎಂದು ತಿಳಿಯಬೇಕಾದರೆ ನಾನು ನಿಮ್ಮೊಂದಿಗೆ ಹೇಳಬೇಕು " ನಾನು ಅಲ್ಲಾಹನೋಡನೆ ದಯೆ ತೋರಿಸು ಎಂದು ಯಾಚಿಸಿದೆ" ಎಂದು. ಇಂತಹ ಸಂದರ್ಬದಲ್ಲಿ ಸೂಕ್ತವಾದ ನಾಮ ಅಲ್ಲಾಹ್ ಎಂಬುದು. ಇಲ್ಲಿ ನಿಮ್ಮ ಯುಕ್ತಿವಾದ ಬರಬಹುದೊ ತಿಳಿಯದು!!!
ಇನ್ನು ನಿಮ್ಮ ಅರೆಬಿಕ್ ಮೇಲಿನ ವಿಮರ್ಶೆ, ಒಂದು ವಸ್ತುವನ್ನು ಗೌರವಿಸುವಾಗ, ಪ್ರೀತಿಸುವಾಗ ಅದರ ಮತ್ತು ಇನ್ನೊಂದರ ನಡುವಿನ ವ್ಯತ್ಯಾಸ ನೋಡುವುದು ಹುಚ್ಚುತನ. ಹೊರತು ಅದರ ಮತ್ತು ನಮ್ಮ ಸಂಬದ್ದ ಇಲ್ಲಿ ಮುಕ್ಯ. ಹಾಗೆಯೆ ಇಸ್ಲಾಮಿನೊಂದಿಗೆ ಹತ್ತಿರವಾದ ಭಾಷೆ ಅರೇಬಿಕ್, ಆದರಿಂದ ಅದಕ್ಕೆ ಗೌರವ ಕೊಡುತ್ತೇವೆ,ಅದನ್ನೇ ಹೆಚ್ಚಾಗಿ ದಾರ್ಮಿಕವಾಗಿ ಬಳಸುತ್ತೇವೆ. ಇದರಲ್ಲಿ ಇನ್ನೂ ವಿಮರ್ಶಿಸುವ ಬುದ್ದಿ ಇರುವುದೆ ಆದರೆ ಯೋಚಿಸಿ ನಾನು ನೀವು ಈ ನಮ್ಮ ಭಾರತವ ಗೌರವಿಸಿ ಪ್ರೀತಿಸುವುದು ಯಾತಕ್ಕೆಂದು.
ನಿಮ್ಮ ಎಕ್ಸಟ್ರಿಮಿಟಿ, ಬ್ರಾಡ್ ಮೈಂಡೆದ್ ಪದಗಳಿಗೆ ಮನುಷ್ಯ್ ಮನಸಿನಲ್ಲಿ ಸ್ಥಾನವಿಲ್ಲ. ಬ್ರಾಡ್ ಮೈಂಡ್ ಇನ್ನೂ ಬ್ರಾಡ್ ಮಾಡುತ್ತಾ ಹೋದರೆ ಅದು ಬೇರೆಯೇ ಆಗುತ್ತದೆ.
ಇಸ್ಲಾಮಿನಲ್ಲಿ ಪ್ರೀತಿಯ, ಶಾಂತಿಯ ನಿಯಮಗಳೆ ಇರುವುದು. ಆದರೆ ಅರ್ಥ ಮಾಡಿಕೊಳ್ಳುವವರು ಅದನ್ನ ಬೀಕರತೆಗೆ ಕೊಂಡೊಯ್ಯುತ್ತಾರೆ. ಇನ್ನು ಕೆಲವು ಯುಕ್ತಿವಾದದಿಂದ ವಕ್ರವಾಗಿ ಕಾಣುತ್ತದೆ.
ಮತ್ತೊಮ್ಮೆ ಕ್ಷಮೆ ಇರಲಿ ಈ ಸಹೂದರನ ವಿಮರ್ಶೆಯ ದಾಟಿಗೆ.
ರಾಜಿ 21 June 2011 at 20:02
ನನ್ನ ಸೋದರನ ಪ್ರೀತಿ, ಮತ್ತು ಮೊನಚು ಮಾತುಗಳೆರಡೂ ನನಗೆ ಪರಿಚಿತ. ಅಮುಸ್ಲಿಮನಿಗೆ ಮಸೀದಿಯಲ್ಲೇ ಪೂಜಾಸ್ಥಾನ ಮಾಡಿಕೊಟ್ಟ ಪ್ರವಾದಿಗಳ (ಆ ಕಥೆ ನಿಜವಿರಲಿ ಎಂದೇ ನಾನು ಬಯಸುತ್ತೇನೆ.) ಧರ್ಮಕ್ಕೂ, ಮತ್ತು ದೇವಾಲಯವಿರಲಿ ವಿಗ್ರಹ, ಧಾರ್ಮಿಕ ಚಿಹ್ನೆ ಮೊದಲಾದವುಗಳನ್ನು ಅಮುಸ್ಲಿಮರಿಂದ ಪ್ರತಿಬಂಧಿಸುವ ಸೌದಿಯ ಧರ್ಮಕ್ಕೂ ವ್ಯತ್ಯಾಸ ನನಗಂತೂ ಕಾಣುತ್ತಿದೆ.. ಇಲ್ಲೆಲ್ಲೂ ನಾನು ಇಸ್ಲಾಂ ವಿರೋಧಿಯಾಗಿ ಬರೆದಿಲ್ಲಾ ಸೋದರ.. ನಮ್ಮ ಪೇಜಾವರಶ್ರೀ ಸಂವಾದದ ನಂತರ ಸಾಕಷ್ಟು ಮುಸ್ಲಿಮರ ಬಗ್ಗೆ ಮೆತ್ತಗಾಗಿರುವೆ.. At least, ನಿಮ್ಮ ಇಸ್ಲಾಂ ಮತ್ತು ನಾಮಧಾರಿಗಳ ಇಸ್ಲಾಂ ಅಂತೂ ಗುರುತಿಸಬಲ್ಲೆ.. And all the credit goes to you, who showed a new and better view of Islam. ಆದ್ದರಿಂದಲೇ ಸೌದಿ ಆಡಳಿತ ಮತ್ತು ಮುತಾವ ಇಕಾಮಾಗಳನ್ನ ನಾನು ನಾಮಧಾರಿಗಳೆಂದಿದ್ದು.. ಇನ್ನು ಪೋಷಕರು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಹೇಳಬೇಕೆಂದರೆ ಚಿಕ್ಕವಯಸ್ಸಿನಿಂದಲೂ ಪೋಷಕರು ಜವಾಬ್ದಾರಿಯಿಂದ ಮಕ್ಕಳನ್ನ ತಿದ್ದಿ, ತೀಡಿ, ಎಲ್ಲಾ ಬಾಲ ಲೀಲೆಗಳನ್ನ ಸಹಿಸಿ ಬೆಳೆಸಿರುತ್ತಾರೆ. ಆದ್ದರಿಂದ ಅವರಿಗೆ ಸಿಗುವ ಹಕ್ಕು ನೈಸರ್ಗಿಕ ಮತ್ತು ನೈತಿಕವಾಗಿ ನ್ಯಾಯ. (ಬೇಜವಾಬ್ದಾರಿ ಪೋಷಕರೂ ಇರುತ್ತಾರೆ ಮತ್ತು ಅವರಿಗೆ ಖಂಡಿತಾ ಯಾವ ಹಕ್ಕೂ ಇಲ್ಲ, ಸಿಗಲೂ ಬಾರದು.) ಮುತಾವಾ ಇಕಾಮಾಗಳ ಹಕ್ಕು ನೈಸರ್ಗಿಕವಲ್ಲ. ಆಡಳಿತ ಕೊಟ್ಟದ್ದು. ತನ್ನ ಮತವನ್ನ ಅಮುಸ್ಲಿಮರ ಮೇಲೆ ಹೇರದಿದ್ದರೂ, ಆ ಮತದಿಂದಲೇ ದತ್ತವಾದ ಸಂಪ್ರದಾಯಗಳನ್ನ (ವಿಗ್ರಹ ಮೊದಲಾದವುಗಳನ್ನ ಇಡದ, ಬುರ್ಖಾ ಧರಿಸಲು ಸೂಚಿಸುವ) ಅಮುಸ್ಲಿಮರ ಮೇಲೆ ಹೇರುವುದು ಸರಿಯಲ್ಲವಷ್ಟೇ.. ಮೇಲಾಗಿ ನಾನು ನೀವು ಹೇಳುವ ಕ್ರೂರ ನಿಯಮಗಳಿಲ್ಲದ ಇಸ್ಲಾಂ ಬಗ್ಗೆ ಮಾತಾಡುತ್ತಿಲ್ಲ ಸೋದರ. ಕೇವಲ ಸೌದಿ ಆಚರಿಸುತ್ತಿರುವ ನಿಯಮಗಳ ಬಗ್ಗೆ ಹೇಳುತ್ತಿರುವೆ ಅಷ್ಟೆ.
ಇನ್ನು ಹೆಸರಿನ ಬಗ್ಗೆ, ಜಾಕಿರ್ ಕೂಡ ತನ್ನ ಕಾರ್ಯಕ್ರಮದಲ್ಲಿ ಇದನ್ನ ಹೇಳಿದ್ದ.. ಇನ್ನೂ 99 ಹೆಸರುಗಳಿವೆ ಎಂದೂ ಹೇಳಿದ್ದ. ಕಡ್ಡಾಯವಿಲ್ಲ, ಬೇರೆ ಭಾಷೆಯಲ್ಲಿನ ಪದದಲ್ಲೂ ಕರೆಯಬಹುದು ಎಂದು ತಿಳಿಸಿರುವಿರಿ. ಧನ್ಯವಾದಗಳು, ನನಗಿನ್ನು ಯಾವುದೇ complaints ಈ ಬಗ್ಗೆ ಇಲ್ಲ.. ಸೌದಿಯವರಿಗೆ ಈಶ್ವರ ಎಂಬುದು ಸಂಸ್ಕೃತದ ಪದ ಮತ್ತು ಅದರ ಅರ್ಥ "ಒಡೆಯ" ಎಂದು ತಿಳಿಯಬೇಕಷ್ಟೆ. ಬಹುಶಃ ಅರೇಬಿಕ್‌ನ 99 ಹೆಸರುಗಳಲ್ಲಿ "ಒಡೆಯ" ಎಂಬ ಅರ್ಥ ಕೊಡುವ ಪದವೂ ಇರಬಹುದು ಎಂದು ಭಾವಿಸುವೆ.. ಸೌದಿಯವರು ತಿಳಿದ ದಿನ ಅಲ್ಲೂ ನಿರ್ಭಯವಾಗಿ "ಈಶ್ವರ ಅಲ್ಲಾಹ್ ತೇರೇ ನಾಮ್" ಹೇಳಬಹುದೇನೋ.
ನನಗೊಂದು ಸಂದೇಹವಿದೆ, ಕಿರಿಕಿರಿಯಾಗಲಿಲ್ಲವೆಂದರೆ ತಿಳಿಸಿ;
ನನಗೊಬ್ಬ ಜೋರ್ಡಾನಿ ಗೆಳೆಯನಿದ್ದ.. ತುಂಬಾ emotional ವ್ಯಕ್ತಿ. ಅವನೊಡನೆ ಮಾತಾಡಿ ಮರಳಿ ಹೊರಡುವಾಗ "ಖುದಾ ಹಾಫಿಜ್" ಎಂದರೆ ಕೋಪ ಮಾಡಿಕೊಳ್ಳುತ್ತಿದ್ದ. ಖುದಾ ಅಲ್ಲ "ಆಲ್ಲಾಹ್ ಹಾಫಿಜ್" ಎಂದು ಹೇಳಬೇಕು.. "ಏನದು ಖುದಾ?! ಹಾಗೆಂದೂ ಹೇಳಬಾರದು, ಅದು ಅಪದ್ದ" ಎನ್ನುತ್ತಿದ್ದ..
ಮರುಕ್ಷಣವೇ ಶಾಂತಮೂರ್ತಿಯಾಗಿ ಬದಲಾಗಿ "ಆಲ್ಲಾಹ್ ಹಾಫಿಜ್" ಎಂದು ಪ್ರತಿವಂದನೆ ಸಲ್ಲಿಸಿ ನಗುತ್ತಾ ಕಳಿಸಿ ಕೊಡುತ್ತಿದ್ದ. ಕುತೂಹಲಕ್ಕೆ ಕೇಳುತ್ತಿರುವೆ. "ಖುದಾ" "ಆಲ್ಲಾಹ್" ಎರಡೂ ಆ "ಆರಾಧ್ಯ"ವನ್ನೇ ಸೂಚಿಸುತ್ತದೆ ಅಲ್ಲವೇ. ನಾನು "ಖುದಾ" ಬಹುಶಃ ಆ 99 ಹೆಸರುಗಳಲ್ಲಿ ಇಲ್ಲವೇನೋ, ಮತ್ತು ಅರಬೀ ಪದವಿರಲಾರದು.. ಪರ್ಷಿಯನ್ ಮೂಲದ ಉರ್ದು ಪದವಿರಬೇಕು ಅದಕ್ಕಾಗಿ ಅವನು ಹಾಗೆಂದಿರಬೇಕು ಎಂದುಕೊಂಡಿರುವೆ.. ಅವನಿಂದಂತೂ ಉತ್ತರ ಸಿಗಲಿಲ್ಲ.. ಸಾಧ್ಯವಾದರೆ ಈ ವಿಷಯದಲ್ಲಿ ನೀವು ಬೆಳಕು ಚೆಲ್ಲಿ.
ಇನ್ನು ಅರೇಬಿಕ್ ಪ್ರೀತಿಯ ಬಗ್ಗೆ ನಾನು ಹೇಳುತ್ತಲೆ ಇಲ್ಲ. ಅದು ವೈಯಕ್ತಿಕ. ಮತ್ತು ಅದರಲ್ಲಿ ಅಭ್ಯಂತರ ಪಡುವಂತದ್ದೇನೂ ಇಲ್ಲವೂ ಇಲ್ಲ.. ನನಗೆ ಸಂಸ್ಕೃತ ಪ್ರಿಯ. ಅದರ ಲಾಲಿತ್ಯ ಸೊಬಗಿಗೆ ನಾನು ಶರಣು.. ಸಂಸ್ಕೃತವನ್ನ ಶಾಲೆಯಲ್ಲಿ ಓದಿಲ್ಲ.. ಆದರೂ ಅದರ ಬಗ್ಗೆ ವಿಶೇಷ ಆಸ್ಥೆ. ಅಂತೆಯೇ ಮುಸ್ಲಿಮರಿಗೆ ಧಾರ್ಮಿಕ ಕಾರಣಗಳಿಂದಲೋ, ಅಥವಾ ನನ್ನಂತೆ ಅದರಲ್ಲಿ ಅವರಿಗೆ ಅನ್ನಿಸಬಹುದಾದ ಲಾಲಿತ್ಯ ಸೊಬಗಿನಿಂದ ಅವರಿಗೆ ಅರೇಬಿಕ್ ಬಗ್ಗೆ ಆಸ್ಥೆ ಇರಬಾರದೆಂದೇನೂ ಇಲ್ಲ. ಅದು ಅಪ್ಪಟ್ಟ ವೈಯಕ್ತಿಕ ವಿಚಾರ.
ಇನ್ನು ನನಗೆ ಪ್ರೀತಿ, ಆರ್ದ್ರ ಪದಗಳ ಅರ್ಥ ಗೊತ್ತಿದೆಯೇ ಎಂದು ಕೇಳಿದಿರಿ.. ನನಗೆ ಗೊತ್ತಿದೆಯೋ ಇಲ್ಲವೋ.. ಆದರೆ "ಇರುವೆ ಕೊಲ್ಲುವುದಿರಲಿ ಅದರ ಗುಂಪು ಚದುರಿಸುವುದು ಕೂಡ ತಪ್ಪು" ಎಂಬ ಇಸ್ಲಾಮಿನ ನಿಯಮ ಕಂಡು ನನ್ನ ಕಣ್ಣರಳಿದವು. ಮನಸ್ಸು "How Sweet!!" ಎಂದಿತ್ತು. ಮುಖದ ಸ್ನಾಯುಗಳು ಸ್ಪಂದಿಸಿದವು. ಆಲೋಚನೆಗಳು ಕೆಲವು ಕ್ಷಣ ಸ್ದಬ್ದವಾಯಿತು. ಅದನ್ನು ವಾಚ್ಯವಾಗಿ ಮನಸ್ಸು ಆರ್ದ್ರವಾಯಿತು ಎಂದು ಬರೆದೆ. ಬಹುಶಃ ಅದು ಸರಿಯಾದ ಪದವಲ್ಲವೇನೋ.. ಆದರೆ ಆ ಪ್ರೀತಿಯ ನಿಯಮ ನೋಡಿದಾಗ ನನಗಾದದ್ದನ್ನ ಈಗ ಬರೆದೇ ಬಿಟ್ಟಿರುವೆ. ಮತ್ತು ಆ ನಿಯಮ ನನ್ನನ್ನು ನಿಜವಾಗಿ ಗೆದ್ದು ಬಿಟ್ಟಿತು.
ಯಾತ್ರಿಕ 22 June 2011 at 17:08
ನಾನು ನಿಮಗೆ ತಿಳಿದಿದೆಯೋ ಅಂದದ್ದು ನಿಮ್ಮ ನಾಮ ವಿಮರ್ಶೆ ನೋಡಿ. ನೀವು ಈಶ್ವರ್, ಗಣಪತಿ,ಶಿವ..... ಎಂದೆಲ್ಲಾ ಹೆಸರಿಟ್ಟು ಎಲ್ಲದಕ್ಕೂ ಒಂದೊಂದು ರೂಪ ಕಲ್ಪನೆ ಮಾಡಿ, ಅವುಗಳನ್ನ ನಾವು ಒಪ್ಪಬೇಕು ಎಂದರೆ ಅರ್ಥ ಇದೆಯೇ! ಪದಗಳ ಅರ್ಥದ ಜೊತೆಗೆ ಆ ಪದದ ಬಗೆಗಿನ ಸಾಮೂಹಿಕ ಕಲ್ಪನೆ ಕೂಡ ನೋಡಬೇಕು. ಒಬ್ಬ ಈಶ್ವರ್ ಎನ್ನುವಾಗ ನಿಮ್ಮ ಮನದಲ್ಲಿ ಆ ನಿಮ್ಮ ಕಲ್ಪನಾ ರೂಪ ಬರುವುದಿಲ್ಲವೇ? ಇಂತಹ ಕಲ್ಪನೆ, ನೀವು ನಂಬುವ ಬಗವಂತನ ಅವತಾರಗಳು ಎಷ್ಟು ಸಂಕುಚಿತ! ಯೊಚಿಸಿ. ನಮ್ಮ ಪ್ರಕಾರ ಇದೆಲ್ಲ ಶುದ್ದ ತಪ್ಪು, ಆದರಿಂದ ಇವುಗಳೊಂದಿಗೆ ಬೆರೆತ ನಾಮಗಳೂ ನಮ್ಮಿಂದ ದೂರ.
ಖುದಾ ಎಂಬುದು ಉರ್ದು ಪದ ಅನಿಸುತ್ತದೆ, ನನಗೆ ಉರ್ದು ಅಷ್ಟಾಗಿ ಗೊತ್ತಿಲ್ಲ. ಆದರೂ ಆತ too specific ಆಗಿ ಹೇಳಬೇಕೆಂಬ ರೀತಿಯಲ್ಲಿ ಹೇಳಿರಬಹುದು ಅಥವಾ ಖುದಾ ಪದದ ಅರ್ಥ ತಿಳಿಯದಿದ್ದಿರಬಹುದು ಅಥವಾ ಅವನಿಗೆ ಈ ವಿಷಯದ ಬಗ್ಗೆ ಅರಿವಿನ ಕೊರತೆ ಇರಬಹುದು.
ಇನ್ನು ಅಲ್ಲಿನ ಕಟ್ಟುಪಾಡು, ನೀತಿ, ನಿಯಮಗಳ ಬಗೆ ಅಷ್ಟಾಗಿ ವಿಶ್ಲೇಶಿಸುವುದು ಕಷ್ಟ. ಇಸ್ಲಾಮಿನಲ್ಲಂತೂ ಪರ ಧರ್ಮ ಸಹಿಷ್ಣುತೆ ಇದ್ದೇ ಇದೆ. ನಾವು ನಿಮ್ಮ ಧರ್ಮ ತಪ್ಪು ಅದು ಸೋಲಿನೆಡೆಗೆ ಎನ್ನುವೆವು, ಇದು ನಮ್ಮ ವಿಶ್ವಾಸ, ನಾನು ಇಸ್ಲಾಮ್ ಅತುತ್ತಮ ಅದೇ ವಿಜಯದ ದಾರಿ ಎಂದು ಅರ್ಥಮಾಡಿಕೊಂಡು, ಪೂರ್ಣ ವಿಶ್ವಾಸದಿಂದ ಹೇಳುವೆ. ಆದರೆ ಎಂದೂ ಅಮುಸ್ಲಿಮರನ್ನು ನೊಯಿಸಬೇಕೆಂದೋ, ಕೊಲ್ಲಬೇಕೆಂದೋ ಯೊಚಿಸುವುದು ಇಲ್ಲ.
ನೀವು ಬೇರೆ ರೀತಿ ಹೇಳಬಹುದು, ಆದರೆ ಎಲ್ಲವೂ ಒಂದೇ ಅನ್ನುವುದು ಸರಿಯಾಗುದಿಲ್ಲವೆನೋ ಎಂದನಿಸುತ್ತದೆ ನನಗೆ. ನನ್ನ ಪ್ರಕಾರ ನಾನು ಇಸ್ಲಾಮಿನ ಬಗ್ಗೆ ನನಗೆ ಬೇಕಾದಷ್ಟು ತಿಳಿದಿರುವೆ (ಇನ್ನೂ ಇದೆ) ಅದರಲ್ಲಿ ನನಗೆ ಪರಿಪೂರ್ಣತೆ, ಶುಬ್ರತೆಯನ್ನು ಕಂಡಿರುವೆ. ಇದೇ ನನ್ನ ವಿಶ್ವಾಸ. ಇನ್ನುಳಿದವುಗಳಲ್ಲಿ ಕಂಡ ಅಪೂರ್ಣ ಪರಿಕಲ್ಪನೆಗಳು, ಅಸ್ಪಷ್ಟತೆ ನನ್ನನ್ನು ಅವುಗಳಿಂದ ದೂರ ಇರಿಸಿದೆ. ಆದರಿಂದ ಅವುಗಳನ್ನು ಹೊಗಳಲಾರೆ. ಇದನ್ನು ಸಂಕುಚಿತ ಮನೋಭಾವ ಎನ್ನಬಹುದು, ಆದರೆ ನಾನಿದನ್ನು ವಿಶ್ವಾಸ ಎನ್ನುವೆ.
ನಾನು ಇಲ್ಲಿ ಹೇಳಿದ ಹೇರಿಕೆ ಪರ ದರ್ಮೀಯರ ಮೇಲಿರುವುದರ ಬಗ್ಗೆ ಅಲ್ಲ. ನೀವು ಹೇಳಿದ ಮನಸಿನಲ್ಲಿ ಶಪಿಸುತ್ತಾ ನಮಾಜಿಗೆ ಹೋಗುವ ಜನರನ್ನ. ಮುಸ್ಲಿಮನಾದ ಮೇಲೆ ಅವನು ನಮಾಜ್ ಮಾಡದಿರುವುದು ತಪ್ಪು ಎಂದು ಒಪ್ಪಿದಂತೆ, ಆಗ ಅವನ ಮೇಲೆ ಅದನ್ನ ಹೇರಿಕೆ ಅನ್ನಲಾಗದು ತಾನೆ. ಮಾನವರು ಭೂಲೊಕದ ಆಡಂಬರ, ಮೋಜುಗಳಲ್ಲಿ ಮುಳುಗುತ್ತಾರೆ, ಇರುವ ಅಲ್ಪ ಬುದ್ದಿಯನ್ನೂ ದುರುಪಯೋಗ ಮಾಡಿ ಮೈಮರೆಯುತ್ತಾರೆ. ಇದನ್ನು ಕಂಡು ಜವಾಬ್ದಾರಿಯುತ ಮನುಷ್ಯನಿಗೆ ಸುಮ್ಮನಿರಲಾಗುವುದೇ? ಕೆಲವೆಡೆ ಹೇರಿಕೆ ಅನಿಸುವ ನಿಯಮದ ಮೂಲಕ, ಇನ್ನು ಕೆಲವೆಡೆ ಉಪದೇಶದ ಮೂಲಕ ಸರಿಪಡಿಸಲೆತ್ನಿಸಲೇ ಬೇಕು ತಾನೆ. ಏನಿಲ್ಲದಿದ್ದರೂ ನಾನು ನಿಮ್ಮೊಂದಿಗೆ ಸತ್ಯವನ್ನು ಹೇಳಿಕೊಡುವ ರೀತಿ ಮೋನಚು ಮಿಶ್ರಿತ ಪ್ರೀತಿಯಿಂದ (ಮುಳ್ಳಿನ ನಡುವೆ ಇರುವ ಗುಲಾಬಿಯಂತೆ) ಹೇಳಬೇಕಲ್ಲವೇ.
ನನಗಿನ್ನೂ ಅರ್ಥವಾಗದ ಇನ್ನೊಂದು ಆರೋಪ, ಬಲವಂತ ಮತಾಂತರ. ಇಸ್ಲಾಮಿನಲ್ಲಿ ಇದನ್ನ ಮತಾಂತರ ಎನ್ನಲಾಗದು. ಮತಾಂತರ ಎಂದರೆ ಅವನ ವಿಶ್ವಾಸ ಬಿಟ್ಟು, ಮನಸಾ ವಾಚಾ ಸರ್ವಶಕ್ತನಾದ ಅಲ್ಲಾಹನಲ್ಲಿ ಮತ್ತು ಅವನ ಪ್ರವಾದಿ ಮುಹಮ್ಮದ್ (ಸ.ಅ) ಅವರ ಮೇಲೆ ವಿಶ್ವಾಸ ಇಡುವುದು. ಬಲವಂತದಿಂದ, ಅಮಿಶದಿಂದ ಈ ನಿಯಮ ಸಿಂಧುವಾಗುವುದೇ? ಯೊಚಿಸಿ. ಯಾವನೋ ಒಬ್ಬ ಬುದ್ದಿಹೀನ ಬಲಿಷ್ಟ ಹಾಗೆ ಮಾಡಿದರೂ, ಹೆದರಿಕೆಗೆ ಒಪ್ಪಿರುವೆ ಎನ್ನುವ ಜನ ಅವರ ಮನಸಿನಾಳದ ವಿಶ್ವಾಸ ತೊರೆಯುವರೇ? ಹಾಗೇನಾದರೂ ಇದ್ದರೆ ಯೋಚಿಸಿ ಅಂತಿಮವಾಗಿ ಪ್ರವಾದಿ (ಸ.ಅ) ರಿಗೆ ಮಕ್ಕಾವನ್ನು ತಮ್ಮ ಅದೀನಕ್ಕೆ ಸಿಕ್ಕಾಗ ಅಲ್ಲಿನ ಸಾವಿರಾರು ಅಮುಸ್ಲಿಮರನ್ನ ದಂಡಿಸಲಿಲ್ಲ, ಮತಾಂತರಕ್ಕೆ ಒಟಾಟಾಯಿಸಲಿಲ್ಲ.(ನೆನಪಿರಲಿ ಅಲ್ಲಿನ ಅದೇ ಅಮುಸ್ಲಿಮರು ಪ್ರವಾದಿ ಮತ್ತವರ ಅನುಯಾಯಿಗಳನ್ನು ಹಿಂಸಿಸಿದವರು) "ಸಕಲ ಲೋಕಕ್ಕೂ ಕಾರುಣ್ಯವಾಗಿ ಬಂದ ಪ್ರವಾದಿ" ಎಂದು ಮುಸ್ಲಿಮರು ವಿಶ್ವಾಸ ಹೊಂದಿರುವ ಈ ಪ್ರವಾದಿಗಳ ಕರುಣೆಗೆ ಸಾಕ್ಷಿಗಳು ಹಲವು. ಇಂತಹ ಧರ್ಮದ ಬಗ್ಗೆ ನಮ್ಮ ಭಾರತದಲ್ಲಿ ಹೀಗೆಲ್ಲಾ ಕೇಳುವಾಗ ಮನಸಿನಾಳದಲ್ಲಿ ನೋವಿನ ಅನುಭವ ಇದ್ದೇ ಇದೆ.
ನಿಮಗೆ ಪ್ರವಾದಿ ಅಮುಸ್ಲಿಮನಿಗೆ ಪ್ರಾರ್ತನೆಗೆ ಸ್ತಳಾವಕಾಶ ಕೊಟ್ಟರು ಎಂಬುದು ನಂಬಲಾಗುತಿಲ್ಲವೇ! ಇದು ಕೇಳಿ, ಪ್ರವಾದಿಯ(ಸ.ಅ) ಕಾಲದಲ್ಲಿ ಒಬ್ಬ ಮುಸ್ಲಿಮನು ಅಮುಸ್ಲಿಮನೂ ವ್ಯಯುಕ್ತಿಕ ಕಾರಣಕ್ಕೆ ಜಗಳವಾಡಿದರು, ತೀರ್ಮಾನಕ್ಕಾಗಿ ಅವರು ಪ್ರವಾದಿಯರ(ಸ.ಅ) ಬಳಿಗೆ ಬಂದರು, ಸಮಸ್ಯೆ ಆಲಿಸಿದ ಪ್ರವಾದಿ(ಸ.ಅ) ಮುಸ್ಲಿಮ್ ವ್ಯಕ್ತಿಯನ್ನು ತಪಿತಸ್ತ ಎಂದು ತೀರ್ಮಾನಿಸಿದರು.(ನ್ಯಾಯ ನೀತಿಗಳು ಧರ್ಮ, ಜಾತಿಗಳಿಗೆ ಮಿಗಿಲಾದುದು ಅಥವಾ ಅದರ ಮೂಲ ಅನ್ನಬಹುದು). ಇನ್ನೊಂದು ಮಾತು ಇಲ್ಲಿ ಪ್ರಸ್ತುತ "ಇಸ್ಲಾಮಿಯಾ ಆಡಳಿತ ಇರುವ ರಾಜ್ಯದಲ್ಲಿ ಅಮುಸ್ಲಿಮರಿಗೆ ಹೆಚ್ಚಿನ ರಕ್ಷಣೆ, ಗೌರವ ಆದ್ಯತೆ ಕೊಡಬೇಕು. ಅವರೆಂದೂ ವಂಚಿಸಲ್ಪಟ್ಟವರೆಂಬ ಬಾವನೆಗೆ(ವಂಚಿಸಲ್ಪಡುವೂದು ದೂರದ ಮಾತು) ತುತ್ತಾಗ ಬಾರದು" ಇದು ಪ್ರವಾದಿಯರ(ಸ.ಅ) ಉಪದೇಶವಾಗಿತ್ತು.
ಇಲ್ಲೇ ಇನ್ನೊಂದು ಮಾತ ಹೇಳುವೆ ಬುರ್ಖಾ(ಅಥವಾ ದೇಹದ ಹುಬ್ಬು ತಗ್ಗುಗಳ ತೋರಿಸದ ವಸ್ತ್ರ ಎನ್ನಬಹುದು,ಅದು ಬೇರೆ ಹೆಸರಿನ ಉಡುಪು ಆಗ ಬಹುದು) ಇಸ್ಲಾಮಿನಲ್ಲಿ ಹೇಳಿರುವುದು ಮನುಷ್ಯನ ಕಾಮನೆಗಳ ನಿಯಂತ್ರಿಸಲು ಸಹಾಯವಾಗಲೀ ಎಂದು, ಪರ ಹೆಣ್ಣಿನ ಸೌಂದರ್ಯವೇ ಕಾಣದ ಊರಿನಲ್ಲಿ ಆಕರ್ಷಿಸುವ ರೀತಿಯ ಉಡುಪು ತೊಟ್ಟು ಸಾಗಿದರೆ ಏನದರ ವ್ಯಾಕ್ಯಾನ. ಹೇಳುವೆ ಒಂದು ಮಾತನ್ನು ಒಪ್ಪುವಿರಾದರೆ ಒಪ್ಪಿ, ನಿಮ್ಮ ಬುದ್ದಿ ನಿಮ್ಮ ಕೈಯಲ್ಲಿದೆ. ದಿನವು ಹೆಣ್ಣಿನ ಸೌಂದರ್ಯ ನೋಟದಲ್ಲಿ ಸವಿಯುತ್ತಾ, ಕಾಮೆಂಟ್ ಹಾಕುತ್ತಾ, ನೀಚ ಹಗಲು ಕನಸು ಕಾಣುತ್ತಾ ಸಾಗುವ ಪುರುಷ ರೂಪದ ಲೋಲ ಶಿಖಾಮಣಿಗಳೆಂದೂ (90% ಎನ್ನುವುದರಲ್ಲಿ ತಪ್ಪಿಲ್ಲ, ಇದಕ್ಕನುವು ಮಾಡುವುದು ಬ್ರಾಡ್‌ ಮೈಂಡ್/ಬಿಚ್ಚು ಹೃದಯಿ ಹೆಣ್ಣು ) ದೇಹ ಸೌಂದರ್ಯ ತೋರಿಸದ(ಉದಾಹರಣೆಗೆ ಬುರ್ಖಾ ದಾರಿಣಿ) ಹೆಣ್ಣಿನ ಕಡೆ ನೋಡಲಾರ ಅರ್ಥಾತ್ ಅವಳನ್ನು ಮನಸಿನಿಂದ ವ್ಯಭಿಚರಿಸಿರಲಾರ. ಸತ್ಯ ತಾನೆ? ಹೀಗೇ ದಿನವು ಕಣ್ಣು, ಕಿವಿ, ಮನಸು..‌ಗಳಿಂದ ವ್ಯಬಿಚರಿಸುವ ಗಂಡು, ಅದಕ್ಕನುವು ಮಾಡುವ ಹೆಣ್ಣು ನೀನಾಗಬೇಡ ಎಂದಷ್ಟೇ ಇಸ್ಲಾಮಿನ ಈ ನಿಯಮದ ಅರ್ಥ. ಇನ್ನು ಗಂಡಿಗೇಕೆ ಇದರಲ್ಲಿ ರಿಯಾಯಿತಿ ಎಂಬ ಸಂಶಯ ನಿಮಗಿರಲಾರದು ಎಂದು ಕೊಳ್ಳುವೆ. ಇಸ್ಲಾಮಿನಲ್ಲಿ ಹೆಣ್ಣು ಗಂಡು ಪರಸ್ಪರ ಅನಾವಶ್ಯಕವಾಗಿ ನೋಡುವುದು, ಮಾತನಾಡುವುದು ತಪ್ಪು. ಹೆಣ್ಣು ಹೆಚ್ಚು ಆಕರ್ಷಣೀಯ ಆದುದರಿಂದ ಆಕರ್ಷಣೆಯ ಶಕ್ತಿ ಕಡಿಮೆ ಮಾಡುವ ಉದ್ದೇಶವೇ ಒಳ್ಳೆಯ ವಸ್ತ್ರ ದಾರಣೆ, ಹಾಗೂ ಪರಸ್ಪರ ದೂರ ಇರುವುದು.
ಇಲ್ಲೂ ನಿಮ್ಮ ಬ್ರಾಡ್‌ ಮೈಂಡ್ ಎಂಬ ಬಲೂನ್ ಕಟ್ಟಬೇಡೀ ಪ್ಲೀಸ್‌. ಯಾಕೆಂದರೆ ಇನ್ನೂ ಅದನ್ನ ವಿಸ್ತರಿಸುತ್ತ ಹೋದರೆ ಅದು ಹೊಡೆದು ಹೂಗುತ್ತದೆ, ಮನಸಿನ ವ್ಯಬಿಚಾರ ದೇಹಕ್ಕೂ ಹರಡಿ ಸಾಮಾಜಿಕವಾಗಿ ಹೇಳುವ ವ್ಯಬಿಚಾರಿ ಪಟ್ಟ ಸಿಗುತ್ತದೆ!!! ಮಿತವಾಗಿ ಬ್ರಾಡ್‌ ಆದರೆ ಏನು ಆಗಲಾರದು ಎನ್ನುವಿರಾ? ಇಲ್ಲ ಇಲ್ಲ ಇದೊಂದು ರೀತಿಯ ಮತ್ತೇರಿಸುವ ಬಾವನೆ ಇದು ತಮಗರಿವಿಲ್ಲದೆಯೇ ಹೆಚುತ್ತಾ ಹೋಗುತ್ತದೆ. ಇರುವ ಬುದ್ದಿ ಸರಿಯಾಗಿ ಉಪಯೋಗಿಸಿ ನನ್ನ ಪ್ರೀತಿಯ ಮಿತ್ರರೇ....
ರಾಜಿ 27 June 2011 at 00:59
# ನೀವು ನಂಬುವ ಬಗವಂತನ ಅವತಾರಗಳು ಎಷ್ಟು ಸಂಕುಚಿತ!
ಹೌದು, ಏಕೆಂದರೆ ನಾವು ಹುಲು ಮಾನವರು, ಸಂಕುಚಿತ ಜನ, ನಮಗೆ ಭಗವಂತ ನಮ್ಮಂತಿರಬೇಕು, ನಮಗೆ ಹತ್ತಿರವಿರಬೇಕು, ನಮ್ಮಲ್ಲೊಬ್ಬ, ನಮ್ಮೊಡನಾಡಿ, ನಮ್ಮಂತೆ ಕಷ್ಟ ನಷ್ಟಗಳ ಅರಿವಿರುವವನು, ಅದನ್ನು ಅನುಭವಿಸುವುದು ಹೇಗೆಂದು ತೋರಿಸಲು ತಾನೇ ಅವತಾರವೆತ್ತಿ ಬಂದವನು ಎಂದು ನಂಬುವುದರಲ್ಲಿ ಭಗವಂತನ ಸಾನಿಧ್ಯ, ಸಾಯುಜ್ಯ ಪಡೆಯುವವರು.. ಆದರೆ ಖಂಡಿತಾ ಎಲ್ಲರೂ ಅದೇ ತತ್ವವನ್ನು ಒಪ್ಪಬೇಕು ಎಂದು ಹೇಳುವವರಂತೂ ಅಲ್ಲ.. ನಿಮಗೆ ಹೆಸರಿನೊಡನೆ ಬರುವ ರೂಪ ಕಲ್ಪನೆಯೊಂದಿಗೆ ಸಮಸ್ಯೆ ಆದ್ದರಿಂದ ಹೆಸರಿನ ಅರ್ಥವನ್ನೂ ಮಾನ್ಯ ಮಾಡಲಾರೆವು, ಎಂದರೂ ಸರಿಯೇ, ದೂರಿಲ್ಲ. ಸಾಕಾರ-ನಿರಾಕಾರವೆರಡನ್ನೂ ನಾವು ಮಾನ್ಯ ಮಾಡುವವರಾದ್ದರಿಂದ ನಾವಂತೂ ಈಶ್ವರ ಅಲ್ಲಾಹ್ ತೇರೇ ನಾಮ್ ಎಂಬುದನ್ನ ಯಾವ ಪಾಪಭಯವೂ ಇಲ್ಲದೇ ಹೇಳುವಷ್ಟು ಸ್ವಾತಂತ್ರ್ಯದೊಡನೆ ಬಾಳುವವರು.. ಆದರೆ ದೈವ ತನಗೆ ನಮಿಸಲಿಕ್ಕಾಗಿಯೇ ನಮ್ಮನ್ನು ಹುಟ್ಟಿಸಿದೆ, ವಿಚಾರ ಮಾಡದೇ (ಪುಸ್ತಕ ಹೇಳಿದೆಯೆಂದೋ, ಪುಸ್ತಕ ಬರೆದವರು/ಬರೆಸಿದವರು ಹೇಳಿದರೆಂದೋ) ನಂಬುವುದೇ ಭಕ್ತಿ, ನಂಬಿಕೆಯ ಹಿಂದಿನ ವಿಚಾರ ತಿಳಿಯಬಯಸಿ, ತಿಳಿದು ನಂತರ ನಂಬಿದರೆ ಪುಣ್ಯಭಾಗ ಕಡಿಮೆಯಾಗುತ್ತದೆ ಎಂದು, (ಮೂಸಾನಿಗೆ ಮರಳುಗಾಡಿನ ಸೊಪ್ಪು ಉದರಶೂಲೆಯನ್ನ ಪರಿಹರಿಸಿದ ಕಥೆಯನ್ನೋ, ರಾಜನೊಬ್ಬನಿಗೆ ಮಣ್ಣಿನ ಪುಟ್ಟ ಅರಮನೆ ಕಟ್ಟಿದ ಕಥೆಯನ್ನೋ, ಸೀನಿದಾಗ ಭಗವಂತನಿಗೆ ಧನ್ಯವಾದ ಹೇಳಬೇಕೆಂದು ವಿಧಿಸುವ ಧರ್ಮವಿಧಿಯ ಹಿಂದಿನ ಮರ್ಮ ತಿಳಿದ ವೈದ್ಯನ ಕಥೆಯನ್ನೋ ಹೇಳಿ) ವಿಚಾರಪರತೆಯನ್ನೇ ಮುಚ್ಚಿಬಿಡುವಷ್ಟು ಕೈ ಕಟ್ಟಿಕೊಳ್ಳಲಂತೂ ತಯಾರಿಲ್ಲದ ಸಂಕುಚಿತ ಜನ. ಖಂಡಿತಾ ಸಾಕಷ್ಟು ಮೂಢನಂಬಿಕೆಗಳು ನಮ್ಮಲ್ಲಿವೆ... ಅವುಗಳಿಂದ ವಿಮೋಚನೆ ಬೇಕಿದೆ. ಎಷ್ಟು ವಿಚಾರಪರತೆಯನ್ನ ಉದ್ದೀಪಿಸಿದರೂ ಕುರಿಗಳಂತೆ ಜನ ಬದುಕಬಯಸುತ್ತಾರೆ.. ಎಲ್ಲೆಡೆಯಂತೆ ನಮ್ಮಲ್ಲೂ ಅಂಥಾ ಜನಗಳಿದ್ದಾರೆ. ಮತ್ತು ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ. ಪುಣ್ಯಕ್ಕೆ ನಮ್ಮಲ್ಲಿ ಹಾರ್ಡ್‌ಕೋಡ್ ಇಲ್ಲ.. ಇದ್ದಿದ್ದರೆ ಅವರೆಂದೆಂದಿಗೂ ಹಾಗೇ ಉಳಿದುಬಿಡುತ್ತಿದ್ದರು.. ಎಂದೆದಾರೂ ಒಂದು ದಿನ ಅವರೂ ಯೋಚಿಸಬಹುದು ಎಂಬ ಆಶಾಭಾವವಂತೂ ಇದೆ...
ಇನ್ನು ದೈವಕ್ಕೆ ರೂಪ ಕಲ್ಪಿಸುವ ಮಾತು. ಅದರ ಬಗ್ಗೆ ವಿವರವಾಗಿ ನಮ್ಮ ಸಂವಾದದಲ್ಲಿ ತಿಳಿಸಿದ್ದೆ... ಅದೀಗ ಕಂತುಗಳಲ್ಲಿ ಈ ಬ್ಲಾಗ್‌ನಲ್ಲಿ ಹಾಕುತ್ತಿದ್ದೇನೆ. ಆ ಭಾಗವಿನ್ನೂ ಬಂದಿಲ್ಲ.. ದೈವಕ್ಕೆ ರೂಪ ನೀಡುವುದು ನಿಮಗೆ ಹಿಡಿಸದಿರಬಹುದು. ಭಗವಂತ ಆ ಬಗ್ಗೆ ಇಸ್ಲಾಂ ಸೇರಿದಂತೆ ಮರುಭೂಮಿ ಧರ್ಮಗಳೆಲ್ಲದರಲ್ಲೂ ಈ ಬಗ್ಗೆ ದೂರು ಹೇಳಿರಬಹುದು.. ವೇದಗಳಲ್ಲಿಯೂ ಆ ಬಗ್ಗೆ ರೆಫರೆನ್ಸ್ ಇದೆ ಎಂದು ಬಲ್ಲೆ. ಆದರೆ ಪೂಜಿಸುವ ಬಗೆ ದೈವೇಚ್ಚೆ ಅಲ್ಲ.. ಅದು ಭಕ್ತನಿಚ್ಚೆ, ಏಕೆಂದರೆ ಆರಾಧಿಸುವುದು ಭಕ್ತನ ಮನದ ಸಂತೃಪ್ತಿಗೇ ಹೊರತು ದೈವದ ಸಂತೃಪ್ತಿಗಲ್ಲ.. ಭಕ್ತನ ಇಚ್ಚೆಯ ವ್ಯಾಪ್ತಿಗೂ ದೈವ ಕೈ ಹಾಕಿದರೆ ಅದು ದೈವವೇ ಅಲ್ಲ. ದೈವವನ್ನ ನಿಂದಿಸುವ ಸ್ವಾತಂತ್ರ್ಯವನ್ನ ಯಾವ ಸೆಮೆಟಿಕ್ ಧರ್ಮ ಕೂಡ ಕೊಡುವುದಿಲ್ಲ.. ಆದರೆ ನಮ್ಮಲ್ಲಿ ದಾಸರ ಪದಗಳಿವೆ.. ನಿಂದಾಸ್ತುತಿ ಎಂಬ ಪ್ರಕಾರವೇ ಅಲ್ಲಿ ಬರುತ್ತದೆ.. ಒಂದು ಉದಾಹರಣೆ ಕೊಡುವೆ.. ಪುರಂದರ ದಾಸರು ತನ್ನ ದೈವಕ್ಕೆ ನಿಂದಾಸ್ತುತಿ ಒಂದರಲ್ಲಿ
ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ