text
stringlengths 0
61.5k
|
---|
ಮೂಲ ಸೌಲಭ್ಯ ಬಗ್ಗೆ ಮಾಹಿತಿ : |
ಜ್ಞಾನಭಾರತಿ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದ ಕೇಂದ್ರ ಸಚಿವರಾದ ಸದಾನಂದಗೌಡ ಅವರು ಹಾಗೂ ಸೋಮಶೇಖರ್ ಅವರು, ಅಲ್ಲಿನ ಮೂಲ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ, ಆಕ್ಸಿಜನ್ ಸಿಲಿಂಡರ್‍ಗಳ ಪೂರೈಕೆ, ರೋಗಿಗಳಿಗೆ ಲಭ್ಯವಾಗುತ್ತಿರುವ ಚಿಕಿತ್ಸೆ, ಔಷಧಗಳು, ವೈದ್ಯಕೀಯ ಕಿಟ್‍ಗಳು, ನೀರು-ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಯಾವ ರೀತಿಯಾಗಿ ಕಲ್ಪಿಸಲಾಗಿದೆ. ತುರ್ತು ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವ ರೀತಿ ಆಸ್ಪತ್ರೆ ಸಜ್ಜಾಗಿದೆ ಎಂಬ ಬಗ್ಗೆ ಸಚಿವರಾದ ಸೋಮಶೇಖರ್ ಅವರು ಕೇಂದ್ರ ಸಚಿವರಿಗೆ ವಿವರಣೆ ನೀಡಿದರು. ಅಲ್ಲದೆ, ಅಚ್ಚುಕಟ್ಟಿನ ವ್ಯವಸ್ಥೆ ಬಗ್ಗೆ ಈ ವೇಳೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. |
ಸಹಕಾರ ಸಚಿವ ಶ್ರೀ ಎಸ್ ಟಿ ಸೋಮಶೇಖರ್ ಅವರೊಂದಿಗೆ ಯಶ್ವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜ್ಞಾನಭಾರತಿ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಪರಿಶೀಲಿಸಲಾಯಿತು. |
ಕ್ಷೇತ್ರದಲ್ಲಿ ಇಂತಹ ಹಲವು ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಭಿನಂದನೆಗಳು @STSomashekarMLA pic.twitter.com/HVU7MHP3eE |
ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಿದ ಎಸ್ ಟಿ ಎಸ್: |
ಜನಸೇವಾ ವಿದ್ಯಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭವಾಗಿರುವ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದ ಕೇಂದ್ರ ಸಚಿವರಾದ ಸದಾನಂದಗೌಡ ಅವರು ಹಾಗೂ ಸಚಿವರಾದ ಸೋಮಶೇಖರ್ ಅವರು, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ವೇಳೆ 16 ಬೆಡ್‍ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ವ್ಯವಸ್ಥೆಗೆ ಬಿಬಿಎಂಪಿ ಮೂಲಕ ಸಚಿವರಾದ ಸೋಮಶೇಖರ್ ಅವರು ವ್ಯವಸ್ಥೆ ಮಾಡಿದ್ದರ ಬಗ್ಗೆ ವೈದ್ಯಾಧಿಕಾರಿಗಳು ಕೇಂದ್ರ ಸಚಿವರ ಗಮನಕ್ಕೆ ತಂದರು. |
ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಹಾಲಿ ಎಲ್ಲ ಕಡೆಗಳಿಂದ ಸೌಲಭ್ಯಗಳನ್ನು ಒದಗಿಸಿಕೊಂಡು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಆಕ್ಸಿಜನ್ ಬೆಡ್ ಗಳು, ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು, ಮೆಡಿಕಲ್ ಕಿಟ್ ಗಳು ಸೇರಿದಂತೆ ಆಸ್ಪತ್ರೆಗಳಲ್ಲಿ ಕೋವಿಡ್‍ಗೆ ಸಂಬಂಧಪಟ್ಟಂತೆ ಮೂಲಸೌಕರ್ಯವನ್ನು ಶಾಶ್ವತವಾಗಿ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇನೆ. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ ಮುಂಬರುವ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು. |
ಈ ಸಂದರ್ಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ವೈದ್ಯಾಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು. |
The post ಯಶವಂತಪುರ, ಆರ್‍ಆರ್ ವಲಯದ ಕೋವಿಡ್ ಕೇರ್ ಸೆಂಟರ್‌ಗೆ ಡಿವಿಎಸ್, ಎಸ್‌ಟಿಎಸ್ ಭೇಟಿ appeared first on Public TV. |
ಕೋಲಾರದ ಒಂಟಿ ಮನೆಯಲ್ಲಿ ಕೋಟ್ಯಂತರ ರೂ ಮೌಲ್ಯದ ಗಾಂಜಾ ಪತ್ತೆ | Drug Mafia: Police Seized 190 KG Marijuana in KGF - Kannada Oneindia |
ಕೋಲಾರ, ಸೆಪ್ಟೆಂಬರ್ 9: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ವಿಚಾರ ಈಗ ಎಲ್ಲೆಲ್ಲೂ ಚರ್ಚಿತವಾಗುತ್ತಿದೆ. ಈ ಹಿನ್ನೆಲೆ ಪೊಲೀಸರು ಕೂಡ ಹೈ ಅಲರ್ಟ್ ಆಗಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೊಲೀಸರು ಮಾದಕ ವಸ್ತುಗಳ ಜಾಡು ಹಿಡಿದಿದ್ದಾರೆ. |
ಮಾದಕ ವಸ್ತುಗಳನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂಬ ಉದ್ದೇಶದಿಂದ ಹಳೆಯ ಪ್ರಕರಣಗಳಲ್ಲಿ ಇದ್ದವರನ್ನು ಹಾಗೂ ಅನುಮಾನವಿರುವ ವ್ಯಕ್ತಿಗಳನ್ನು ಕರೆಸಿ ಕೋಲಾರದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆಂಧ್ರ ಹಾಗೂ ತಮಿಳುನಾಡಿಗೆ ಅಂಟಿಕೊಂಡಿರುವ ಗಡಿ ಜಿಲ್ಲೆ ಕೋಲಾರದಲ್ಲಿ ಡ್ರಗ್ಸ್ ಮಾಫಿಯಾ ಜೋರಾಗಿ ನಡೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ಮಫ್ತಿಯಲ್ಲಿ ದಾಳಿ ನಡೆಸುತ್ತಿದ್ದು, ನಿನ್ನೆ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಗಾಂಜಾ ಜೊತೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. |
ಖಚಿತ ಮಾಹಿತಿ ಮೇರೆಗೆ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಒಂದೂವರೆ ಕೋಟಿಗೂ ಅಧಿಕ ಮೌಲ್ಯದ 190 ಕೆ.ಜಿ.ಯಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ. ಕೆಜಿಎಫ್ ನ ನೂತನ ಎಸ್ಪಿ ಇಲಕ್ಕಿಯಾ ಕರುಣಾಕರನ್ ಸೂಚನೆ ಮೇರೆಗೆ ದಾಳಿ ನಡೆಸಿದ ಪೊಲೀಸರು, ಜೋಸೆಫ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. |
ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಗಿರಿ ಲೈನ್ ಮನೆಯಲ್ಲಿ ಗಾಂಜಾ ಪತ್ತೆಯಾಗಿದ್ದು, ಆರೋಪಿ ಜೋಸೆಫ್ ಗೆ ಸೇರಿದ್ದ ಒಂಟಿ ಮನೆಯಲ್ಲೇ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕೆಜಿಎಫ್ ನಲ್ಲಿ ರೌಡಿ ಶೀಟರ್ ಆಗಿ ಎನ್ ಕೌಂಟರ್ ಆಗಿದ್ದ ತಂಗಂ ಸಹೋದರನೇ ಜೋಸೆಫ್. ಜೋಸೆಫ್ ಪಕ್ಕದ ಆಂಧ್ರ, ತಮಿಳುನಾಡು ಭಾಗದಿಂದ ಗಾಂಜಾ ಶೇಖರಿಸಿ ರಾಜ್ಯ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದ. ಜೋಸೆಫ್ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. |
drugs kolar police ಡ್ರಗ್ ಕೋಲಾರ ಪೊಲೀಸ್ |
Kolar police have started operation against drug mafia. They have arrested one and seized 190 kg marijuana |
ಈ ಚಲನಚಿತ್ರವನ್ನು ಅಧಿಕೃತವಾಗಿ ಫೆಬ್ರವರಿ 6, 2017 ರಂದು ಪ್ರಾರಂಭಿಸಲಾಯಿತು ಮತ್ತು ಪ್ರಧಾನ ಛಾಯಾಗ್ರಹಣವು ಒಂದು ವಾರದ ನಂತರ ಪ್ರಾರಂಭವಾಯಿತು. ಈ ಚಿತ್ರದ ಟ್ರೈಲರ್ ಅನ್ನು 2017 ರ ನವೆಂಬರ್ 24 ರಂದು ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಆಡಿಯೊ ಕಂಪನಿಯಲ್ಲಿ ಬಿಡುಗಡೆಗೊಂಡಿತು. [೬] |
ತಮಿಳು ಚಲನಚಿತ್ರ ಪೂಜಾಯಿ ಚಿತ್ರದ ರಿಮೇಕ್ ಆಗಿರುವ ಆಂಜನಿಪುತ್ರ, ರಾಜ ಕುಟುಂಬಕ್ಕೆ ಸೇರಿದ ವಿರಾಜ್ ಎಂಬ ವ್ಯಕ್ತಿ ಬಗ್ಗೆ ಈ ಚಲನಚಿತ್ರದ ಕಥಾವಸ್ತು. ಅಂಜನಿ ಪುತ್ರ ಕೌಟಂಬಿಕ ಸನ್ನಿವೇಶ ಇರುವ ಪ್ರಣಯ ಚಿತ್ರ.[೮] ಅವನ ತಂದೆಯು ಮೃತಪಟ್ಟ ನಂತರ ಅವರು ತಮ್ಮ ತಂದೆಯ ಜವಳಿ ಉದ್ಯಮವಾದ ರಾಜ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಮಾಲೀಕರಾದರು. ಒಮ್ಮೆ ಕುಟುಂಬದಲ್ಲಿ ಆದ ಸಮಾರಂಬದಲ್ಲಿ ವಿರಾಜ್ ನ ಚಿಕ್ಕಪ್ಪನ ಮಗಳು, ಅವನ ಸೋದರ ಸಂಬಂಧಿ, ಕೋಣೆಯ ಒಳಗಡೆ ಅವಳು ವಿರಾಜನ್ನು ಮದುವೆಯಾಗಬೇಕೆಂದು ಬಯಸುತ್ತಾಳೆ ಎಂದು ಹೇಳುತ್ತಾಳೆ. ಅವಳನ್ನು ತಡೆಯಲು ಪ್ರಯತ್ನಿಸುವಾಗ, ಅವಳ ಸೀರೆ ವಿರಾಜನ ಕೈಯಲ್ಲಿ ಬರುತ್ತೆ. ಆಗ, ಆಕೆಯ ತಂದೆ, ವಿರಾಜ ಆಕೆಗೆ ಕಿರುಕುಳ ನೀಡುತ್ತಿದ್ದಾಳೆಂದು ವಿರಾಜನ ಅಮ್ಮನ ಹತ್ತಿರ ಹೇಳುತ್ತಾರೆ. ಅದೇ ಸಮಯದಲ್ಲಿ ವಿರಾಜನ ತಾಯಿ ಬಂದು ವಿರಾಜನ್ನು ಮನೆ ಇಂದ ಹೊರಗೆ ಹಾಕುತ್ತಾರೆ. ಅಂಜನಾ ದೇವಿ ತನ್ನ ಮಗ ವೀರಾಜ್ ಅನ್ನು ತುಂಬಾ ಪ್ರೀತಿಸುತ್ತಾರೆ. ಅವನ ಒಳ್ಳೆತನ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ, ಅವನು ಮಾಡದ ತಪ್ಪಿಗೆ ಅಂಜನಾ ದೇವಿ ಹಿಂದೆ ಮುಂದೆ ನೋಡದೆ ಮನೆಯಿಂದ ಹೊರಹಾಕುತ್ತಾರೆ. ವಿರಾಜ್ ಒಬ್ಬ ಪ್ರಾಮಾಣಿಕನಾಗಿದ್ದರಿಂದ, ತನ್ನ ಅಮ್ಮನ ಮಾತಿಗೆ ವಿಧೇಯವಾಗಿ , ಮನೆಯಿಂದ ಹೊರನಡೆಯುತ್ತಾನೆ. [೯] |
ರವಿ ಬಸ್ರೂರ್ ಈ ಚಲನಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.[೧೦][೧೧] ಈ ಚಲನಚಿತ್ರದ ಸಂಗೀತವನ್ನು ಪುನೀತ್ ರಾಜ್‍ಕುಮಾರ್ (ನಟ) ಒಡೆತನದ ಪಿ.ಆರ್.ಕೆ ಆಡಿಯೊ ಖರೀದಿಸಿತ್ತು. ಈ ಚಲನಚಿತ್ರದ ಸಂಗೀತವನ್ನು ೨೪ ನವೆಂಬರ್ ೨೦೧೭ ರಂದು ಪಿ.ಆರ್.ಕೆ ಆಡಿಯೊ ಬಿಡುಗಡೆಗೊಳಿಸಿತು. |
ನ.22ರಂದು ಹಿರೇಬೆಟ್ಟಿನಲ್ಲಿ ಕೃಷಿ, ಹೈನುಗಾರಿಕೆ ಮಾಹಿತಿ ಶಿಬಿರ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Nov 21, 2020, 5:29 PM IST |
ಉಡುಪಿ, ನ.21: ಉಡುಪಿ ಜಿಲ್ಲಾ ಕೃಷಿಕ ಸಂಘದ ಹಿರಿಯಡ್ಕ ವಲಯ ಸಮಿತಿ ಮತ್ತು ಪ್ರಗತಿ ಫ್ರೆಂಡ್ಸ್ ಹಿರೇಬೆಟ್ಟು ಪಟ್ಲ ನ.22ರ ರವಿವಾರ ಸಂಜೆ 4:00ಗಂಟೆಗೆ ಪಟ್ಲದ ಗಣೇಶ್ ಕ್ಯಾಶ್ಯೂ ಇಂಡಸ್ಟ್ರೀಸ್ ವಠಾರದಲ್ಲಿ ವೈಜ್ಞಾನಿಕ ಕೃಷಿ ಮತ್ತು ಹೈನುಗಾರಿಕೆ ಮಾಹಿತಿ ಶಿಬಿರವನ್ನು ಆಯೋಜಿಸಿದೆ. |
ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ. ಕಡಿಮೆ ವೆಚ್ಚದಲ್ಲಿ ಲಾಭದಾಯಕವಾಗಿ ಸಾವಯವ ಭತ್ತ, ತೆಂಗು, ಅಡಿಕೆ, ಬಾಳೆ, ಗೇರು, ಮಾವು ಮೊದಲಾದ ಬೆಳೆಗಳ ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಕೀಟ-ರೋಗ ಬಾಧೆಗಳ ನಿರ್ವಹಣೆ ಮತ್ತು ಹೈನುಗಾರಿಕೆ ಕುರಿತ ಸಮಗ್ರ ಮಾಹಿತಿಯನ್ನು ಶಿಬಿರದಲ್ಲಿ ನೀಡಲಾಗುವುದು ಎಂದು ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ. |
ಹಾಕಿ – Big Tv News |
Home / ಕ್ರೀಡೆ / ಹಾಕಿ |
ಹಾಕಿಗೆ ಗುಡ್ ಬೈ ಹೇಳಿದ ಸುನೀತಾ ಲಾಕ್ರಾ. |
Admin BIG TV NEWS January 3, 2020 Breaking News, ಕ್ರೀಡೆ, ದೇಶ-ವಿದೇಶ, ಸುದ್ದಿ, ಹಾಕಿ 0 100398 |
ಹೊಸದಿಲ್ಲಿ: ಭಾರತೀಯ ವನಿತಾ ತಂಡದ ಖ್ಯಾತ ಡಿಫೆಂಡರ್ ಸುನೀತಾ ಲಾಕ್ರಾ ಅಂತಾರಾಷ್ಟ್ರೀಯ ಹಾಕಿಗೆ ಗುರುವಾರ ವಿದಾಯ ಘೋಷಿಸಿದರು. ಸತತವಾಗಿ ಕಾಡುತ್ತಿರುವ ಮಂಡಿನೋವಿನಿಂದಾಗಿ ತಾನು ಈ ಕಠಿನ ನಿರ್ಧಾರ ತೆಗೆದುಕೊಳ್ಳ ಬೇಕಾಯಿತು ಎಂದರು. ಇದರೊಂದಿಗೆ ಅವರ ಟೋಕಿಯೊ ಒಲಿಂಪಿಕ್ಸ್ ಕನಸು ಛಿದ್ರಗೊಂಡಿದೆ. "ಇಂದು ನನ್ನ ಬದುಕಿನ ಅತ್ಯಂತ ದುಃಖದ ದಿನ. ನಾನು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳುತ್ತಿದ್ದೇನೆ' ಎಂದರು. ಸುನೀತಾ ಲಾಕ್ರಾ 2008ರಲ್ಲಿ ಮೊದಲ ಸಲ ಭಾರತ ತಂಡವನ್ನು ಪ್ರವೇಶಿಸಿದ್ದರು. 2018ರ … |
ಹಾಕಿ ಪ್ರೊ ಲೀಗ್: ರಾಷ್ಟ್ರೀಯ ಶಿಬಿರದಲ್ಲಿ ಕರ್ನಾಟಕದ ಎಸ್.ವಿ. ಸುನಿಲ್. |
Admin BIG TV NEWS December 29, 2019 Breaking News, ಕ್ರೀಡೆ, ದೆಹಲಿ, ದೇಶ-ವಿದೇಶ, ಸುದ್ದಿ, ಹಾಕಿ 0 128094 |
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಹಾಕಿ ಪ್ರೊ ಲೀಗ್‌ಗಾಗಿ 32 ಸಂಭವನೀಯ ಆಟಗಾರರ ಭಾರತ ತಂಡ 2 ವಾರಗಳ ಕಾಲ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ಕರ್ನಾಟಕದ ಎಸ್.ವಿ. ಸುನಿಲ್ ಸೇರಿದಂತೆ 32 ಆಟಗಾರರ ಪಟ್ಟಿಯನ್ನು ಶನಿವಾರ ಹಾಕಿ ಇಂಡಿಯಾ ಪ್ರಕಟಿಸಿದೆ. ಯುವ ಸ್ಟ್ರೈಕರ್ ದಿಲ್‌ಪ್ರೀತ್‌ಗೆ ಹಿರಿಯರ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುವ ಆಟಗಾರರು ಹಾಗೂ ಹಿರಿಯ ಆಟಗಾರರಿಂದ ತಂಡ ಕೂಡಿದೆ. ಸಂಭವನೀಯ ತಂಡ: ಶ್ರೀಜೇಶ್, ಕ್ರಿಶನ್, ಹರ್ಮನ್‌ಪ್ರೀತ್, ದಿಲ್‌ಪ್ರೀತ್, ಸುರೇಂದರ್, ಬೀರೇಂದ್ರ, ರುಪೀಂದರ್, … |
ಟೋಲಿಯೋ ಒಲಂಪಿಕ್ಸ್: ಭಾರತ ಹಾಕಿ ತಂಡಕ್ಕೆ ನ್ಯೂಜಿಲೆಂಡ್ ಎದುರಾಳಿ. |
Admin BIG TV NEWS December 18, 2019 Breaking News, ಕ್ರೀಡೆ, ದೇಶ-ವಿದೇಶ, ಸುದ್ದಿ, ಹಾಕಿ 0 94628 |
ಟೋಕಿಯೊ: ಜಪಾನ್ ನ ಟೋಕಿಯೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ನಲ್ಲಿ ಭಾರತದ ಪುರುಷರ ತಂಡವು ಬಲಿಷ್ಠ ನ್ಯೂಜಿಲೆಂಡ್ ನ್ನು ಎದುರಿಸಲಿದ್ದು, ಮಹಿಳಾ ತಂಡಕ್ಕೆ ನೆದರ್ಲೆಂಡ್ ಸವಾಲು ಒಡ್ಡಲಿದೆ.ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್ ಐಎಚ್) ಈ ಪ್ರಕಟನೆ ಹೊರಡಿಸಿದೆ. ಜುಲೈ 25ರಿಂದ ಪಂದ್ಯಗಳು ಆರಂಭವಾಗಲಿದೆ. ಭಾರತದ ಪುರುಷರ ಹಾಗೂ ಮಹಿಳಾ ತಂಡಗಳಿಗೆ ಮೊದಲ ದಿನವೇ ಪಂದ್ಯಗಳಿವೆ.ಎ ಗುಂಪಿನಲ್ಲಿರುವ ಭಾರತ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಜು.26ರಂದು ಎದುರಿಸಲಿದೆ. ಇದರ ಬಳಿಕ ಜು.28ರಂದು ಸ್ಪೇನ್, … |
ಭಾರತಕ್ಕೆ ಒಲಿದ 2023 ರ ಪುರುಷರ ವಿಶ್ವಕಪ್ ಹಾಕಿ ಆತಿಥ್ಯ. |
ramu BIG TV NEWS, Kolar November 9, 2019 ದೇಶ-ವಿದೇಶ, ಹಾಕಿ 0 148866 |
ಲಾಸನ್ನೆ: ಪುರುಷರ ವಿಶ್ವಕಪ್ ಹಾಕಿ ಕೂಟದ ಆತಿಥ್ಯ ಸತತ ಎರಡನೇ ಸಲ ಭಾರತಕ್ಕೆ ಒಲಿದು ಬಂದಿದೆ. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ 2023ರ ಹಾಕಿ ವಿಶ್ವಕಪ್ ಆತಿಥ್ಯಕ್ಕೆ ಭಾರತವನ್ನು ಆಯ್ಕೆ ಮಾಡಿದೆ. 2023ರ ಜನವರಿ 13ರಿಂದ 29ರ ತನಕ ಹಾಕಿ ಪಂದ್ಯಗಳು ನಡೆಯಲಿವೆ. ಇದೇ ವೇಳೆ 2022ರ ವನಿತಾ ಹಾಕಿ ವಿಶ್ವಕಪ್‌ನ ಆತಿಥ್ಯವನ್ನು ಸ್ಪೇನ್ ಮತ್ತು ನೆದರ್‌ಲ್ಯಾಂಡ್ಸ್‌ಗೆ ಜಂಟಿಯಾಗಿ ವಹಿಸುವ ಪ್ರಮುಖ ನಿರ್ಧಾರವನ್ನು ಫೆಡರೇಶನ್‌ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಹಾಕಿ … |
ಹಾಕಿ ತಂಡಕ್ಕೆ ಮರಳಿದ ಲಲಿತ್ , ರೂಪಿಂದರ್ ಪಾಲ್. |
Shaikh BIG TV NEWS, Hubballi September 21, 2019 ಕ್ರೀಡೆ, ಹಾಕಿ 0 173100 |
ಹೊಸದಿಲ್ಲಿ: ಫಾರ್ವರ್ಡ್ ಆಟಗಾರ ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ಡ್ರ್ಯಾಗ್ ಫ್ಲಿಕರ್ ರೂಪಿಂದರ್‌ಪಾಲ್ ಸಿಂಗ್ ಭಾರತ ಹಾಕಿ ತಂಡಕ್ಕೆ ಮರಳಿದ್ದಾರೆ. ಮುಂಬರುವ ಬೆಲ್ಜಿಯಂ ಹಾಗೂ ಸ್ಪೇನ್ ಪ್ರವಾಸಕ್ಕೆಂದು ಶುಕ್ರವಾರ ಪ್ರಕಟಿಸಲಾದ 20 ಸದಸ್ಯರ ತಂಡದಲ್ಲಿ ಇವರಿಬ್ಬರೂ ಸ್ಥಾನ ಸಂಪಾದಿಸಿದ್ದಾರೆ.ಒಂದು ವಾರದ ಈ ಪ್ರವಾಸದಲ್ಲಿ ಬೆಲ್ಜಿಯಂ ವಿರುದ್ಧ 3, ಸ್ಪೇನ್ ವಿರುದ್ಧ 2 ಪಂದ್ಯಗಳನ್ನು ಭಾರತ ಆಡಲಿದೆ.ಲಲಿತ್ ಉಪಾಧ್ಯಾಯ ಭುವನೇಶ್ವರದಲ್ಲಿ ನಡೆದ ವಿಶ್ವಕಪ್ ಬಳಿಕ ಭಾರತವನ್ನು ಪ್ರತಿನಿಧಿಸಿರಲಿಲ್ಲ. ರೂಪಿಂದರ್‌ಪಾಲ್ ಕಳೆದ ಒಲಿಂಪಿಕ್ … |
ಅಮೇರಿಕ: ಅಕ್ರಮ ವಲಸಿಗರ 565 ಮಕ್ಕಳು ಇನ್ನೂ ಬಂಧನ ಕೇಂದ್ರದಲ್ಲಿ | Vartha Bharati- ವಾರ್ತಾ ಭಾರತಿ |
ಅಮೇರಿಕ: ಅಕ್ರಮ ವಲಸಿಗರ 565 ಮಕ್ಕಳು ಇನ್ನೂ ಬಂಧನ ಕೇಂದ್ರದಲ್ಲಿ |
ವಾರ್ತಾ ಭಾರತಿ Aug 18, 2018, 8:53 PM IST |
ವಾಶಿಂಗ್ಟನ್, ಆ. 18: ಅಕ್ರಮ ವಲಸಿಗರ ಮಕ್ಕಳನ್ನು ಅವರ ಹೆತ್ತವರಿಗೆ ಮರಳಿಸಲು ನ್ಯಾಯಾಲಯವೊಂದು ನೀಡಿದ ಗಡುವು ಮುಗಿದು ಮೂರು ವಾರಗಳಾದರೂ, ಅಮೆರಿಕ ಸರಕಾರವು ಅಕ್ರಮ ವಲಸಿಗರ 565 ಮಕ್ಕಳನ್ನು ಇನ್ನೂ ತನ್ನ ಸುಪರ್ದಿಯಲ್ಲೇ ಇಟ್ಟುಕೊಂಡಿದೆ. |
ಈ ಪೈಕಿ, ಐದು ವರ್ಷ ಹಾಗೂ ಅದಕ್ಕಿಂತಲೂ ಚಿಕ್ಕ 24 ಮಕ್ಕಳನ್ನು ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ನಿರಾಶ್ರಿತ ಪುನರ್ವಸತಿ ಕಚೇರಿ ನೋಡಿಕೊಳ್ಳುತ್ತಿದೆ. |
565 ಮಕ್ಕಳ ಪೈಕಿ 366 ಮಕ್ಕಳ ಹೆತ್ತವರು ಅಮೆರಿಕದಿಂದ ಹೊರಗಿದ್ದಾರೆ, ಹಾಗಾಗಿ ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸುವುದು ಅಸಾಧ್ಯವಾಗಿದೆ ಎಂದು ನಿರಾಶ್ರಿತ ಪುನರ್ವಸತಿ ಕಚೇರಿ ತಿಳಿಸಿದೆ. |
ಮಕ್ಕಳೊಂದಿಗೆ ಮರುಸೇರ್ಪಡೆಗೊಳ್ಳಲು ತಾವು ಬಯಸುವುದಿಲ್ಲ ಎಂಬುದಾಗಿ 154 ಮಕ್ಕಳ ಹೆತ್ತವರು ಹೇಳಿದ್ದಾರೆ ಎಂದು ಅದು ಹೇಳಿದೆ. |
180ಕ್ಕೂ ಅಧಿಕ ಮಕ್ಕಳ ಹೆತ್ತವರನ್ನು ಮಕ್ಕಳಿಗೆ ಬೆದರಿಕೆ ಎಂಬುದಾಗಿ ಪರಿಗಣಿಸಲಾಗಿದ್ದು, ಅವರಿಗೆ ಮಕ್ಕಳನ್ನು ಹಸ್ತಾಂತರಿಸಲಾಗುವುದಿಲ್ಲ. |
ಭಾರತ v/s ಲಂಕಾ: ಟಿ-20 ಮ್ಯಾಚ್‌ನಲ್ಲಿ ಭಾರತಕ್ಕೆ ಜಯ; ಧೋನಿಯನ್ನು ನೆನಪಿಸಿತು ಇಶಾನ್ ಕಿಶನ್ ಆಟ! |
Breaking News Cricket International Sports |
ಭಾರತ v/s ಲಂಕಾ: ಟಿ-20 ಮ್ಯಾಚ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ; ಧೋನಿಯನ್ನು ನೆನಪಿಸಿದ ಇಶಾನ್ ಕಿಶನ್! |
July 26, 2021 July 26, 2021 Sunil Sirasangi 0 Comments india, Shilanka, T-20, team India |
ಶ್ರೀಲಂಕಾ ವಿರುದ್ದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ತನ್ನ ಗೆಲುವಿನ ಓಟವನ್ನು ಟಿ-20 ಸರಣಿಯಲ್ಲೂ ಮುಂದುವರೆಸಿದೆ. ಭಾನುವಾರ ನಡೆದ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 38 ರನ್‌ಗಳ ಅಂತರದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. |
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 164 ರನ್‌ಗಳನ್ನು ಕಲೆ ಹಾಕಿತ್ತು. 164 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 18.3 ಓವರ್‌ಗಳಲ್ಲಿ 126 ರನ್ ಗಳಿಸಿ, ಆಲ್‌ಔಟ್ ಆಯಿತು. ಇದರಿಂದಾಗಿ ಟೀಂ ಇಂಡಿಯಾ ಮೊದಲ ಮ್ಯಾಚ್‌ನಲ್ಲಿಯೇ ಗೆಲುವಿನ ನಗೆ ಬೀರಿದೆ. |
ಆಟದಲ್ಲಿ ವಿಕೆಟ್ ಕೀಪರ್ ಆಗಿ ನಿಂತಿದ್ದ ಇಶಾನ್ ಕಿಶನ್ ಚುರುಕಿನ ಆಟ ಪ್ರದರ್ಶಿಸಿದ್ದು, ಕ್ರಿಕೆಟ್ ಅಭಿಮಾನಿಗಳು ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನೇ ನೋಡಿದಂತೆ ಭಾಸಗೊಂಡಿದ್ದಾರೆ. |
18ನೇ ಓವರ್‌ನಲ್ಲಿ ವರುಣ್ ಚಕ್ರವರ್ತಿ ಮಾಡಿದ ಬೌಲಿಂಗ್ಅನ್ನು ಲಂಕಾ ನಾಯಕ ದಸುನ್ ಶನಕಾ ಕೊಂಚ ಮುಂದೆಬಂದು ಪುಶ್ ಮಾಡಲು ಪ್ರಯತ್ನಿಸಿದರು. ಅದರೆ, ಅವರ ಬ್ಯಾಟ್‌ಗೆ ಸಿಗಲ ಚೆಂಡು ಕೀಪರ್ ಆಗಿ ನಿಂತಿದ್ದ ಕೀಪರ್ ಕಿಶನ್ ಕೈ ಸೇರಿತು. ಕ್ಷಣಾರ್ಧದಲ್ಲೇ ಚೆಂಡನ್ನು ವಿಕೆಟ್‌ಗೆ ಎಸಿದು ಸ್ಟಂಪ್ ಔಟ್ ಮಾಡಿದರು. ಇದು ಧೋನಿ ಅವರ ಚಾಕಚಕ್ಯತೆಯನ್ನು ಮತ್ತೊಮ್ಮೆ ನೋಡಿದಂತಿತ್ತು. |
ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ - Sanjevani |
Home ಜಿಲ್ಲೆ ದಾವಣಗೆರೆ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ |
ದಾವಣಗೆರೆ.ಏ.೨೯; ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿ, ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿ ಕಾಮಗಾರಿಯನ್ನು ನಡೆಸುತ್ತಿರುವುದರ ಕುರಿತು ಯುವ ಭಾರತ ಗ್ರೀನ್ ಬ್ರಿಗೇಡ್ ಸಂಘದವತಿಯಿಂದ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೊಕ್ಕದ್ದಮೆ ದಾಖಲಿಸಲಾಗಿದೆ. ನಮ್ಮ ಮನವಿಯನ್ನು ಪುರಸ್ಕರಿಸಿರುವ ಕರ್ನಾಟಕ ಹೈ ಕೋರ್ಟ್‍ನ ಮುಖ್ಯ ನ್ಯಾಯ ಮೂರ್ತಿಗಳ ಪೀಠ, ತತಕ್ಷಣದಿಂದ ಮುಂದಿನ ಆದೇಶದವರೆಗೂ ಕೆರೆಯ ಎಲ್ಲಾ ಕಾಮಕಾರಿಗಳನ್ನು ಸ್ಥಗಿತಗೊಳಿಸುವಂತೆ ತಡೆಯಾಜ್ಞೆ ನೀಡಿದ್ದು, ಈ ಕೂಡಲೆ ಕೆರೆಯಲ್ಲಿ ನಡೆಸುತ್ತಿರುವ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದುಬ್ರೀಗೆಡ್ ಅಧ್ಯಕ್ಷ ನಾಗರಾಜ್ ಸುರ್ವೆ ಹೇಳಿದರು.ಕುಂದುವಾಡ ಕೆರೆಯ ಉತ್ತರ-ಪಶ್ಚಿಮ ಭಾಗದಲ್ಲಿ ಇರುವ ಒಬ್ಬ ಪ್ರಭಾವಿ ಉದ್ಯೋಮಿ ರವರ ಲೇವೌಟ್ ಗೆ ಅನುಕೂಲವಾಗಲು ನೀರು ಸೋರಿಕೆ ನೆಪದಲ್ಲಿ ಕಾಮಗಾರಿ ಮಾಡಲಾಗುತ್ತಿದೆ.ನಿಯಮದಂತೆ ಎನ್ವಿರಾಂನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಮಾಡಸಿ ನಂತರ, ಅನುಮತಿ ದೊರಕಿದ ನಂತರವೇ ಈ ಕಾಮಗಾರಿಯನ್ನು ನಡೆಸಬೇಕಿದ್ದು. ಆದರೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಕುಂದುವಾಡ ಕೆರೆ ಒಂದು ಕೆರೆಯಲ್ಲಾ, ಇದೊಂದು ಕೇವಲ ನೀರು ಸಂಗ್ರಹಿಸುವ ಟ್ಯಾಂಕ್ ಎಂದು ಸುಳ್ಳು ದಾಖಲೆಗಳನ್ನು ಶೃಷ್ಟಿಸಿ, ಈ ಕಾಮಗಾರಿಗೆ ಇ.ಐ.ಎ ನಡೆಸುವ ಪ್ರಶ್ನೆ ಉದ್ಭವಿಸುವುದಿಲ್ಲಾ ಎಂದು ನೆಪ ಒಡ್ಡಿ ಈ ಕಾಮಗಾರಿಯ ಗುತ್ತಿಗೆಯನ್ನು ಕಾನೂನು ಬಾಹಿರವಾಗಿ ನೀಡಿದ್ದಾರೆ. |
ಈ ಕಾಮಗಾರಿ ನಡೆಯುವ ಕಾಲವಧಿ 15 ತಿಂಗಳು ಎಂದು ನಿಗದಿಯಾಗಿದೆ. ಕಾಮಗಾರಿ ಪೂರ್ಣ ಗೊಳ್ಳುವವರೆಗೂ ನಗರಕ್ಕೆ ಕುಡಿಯುವ ನೀರಿಗೆ ಬದಲೀ ವ್ಯವಸ್ಥೆ ಮಾಡಲಾಗಿದೆ, ಎಂದು ಸ್ಮಾರ್ಟ್ ಸಿ.ಟಿ ವತಿಯಿಂದಲೇ ದಿನಾಂಕ: 27-01-2021 ರ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಆದ್ದರಿಂದ, ಕುಡಿಯುವ ನೀರಿನ ಸಮಸ್ಯೆ ಉದ್ಭಸುವ ಪ್ರಶ್ನೆಯೇ ಇಲ್ಲಾ. |
ಎಂ.ಪಿ ಮತ್ತು ಎಂ.ಎಲ್.ಎ ಗಳಿಂದ ಕಾಮಗಾರಿಗಳನ್ನು ವೀಕ್ಷಣೆ ಮಾಡಿಸಿ, ಅವರಿಂದ ಎಲ್ಲಾ ಸರಿಯಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ ತಕ್ಷಣ, ಎಲ್ಲವೂ ಸರಯಾಗಿ ಬಿಡುವುದಿಲಾ. ಅವರು ವೀಕ್ಷಿಸಿ ಎಲ್ಲಾ ಸರಿಯಿದೆ ಎಂದು ಪ್ರಮಾಣ ಪತ್ರ ನೀಡಿರುವ ಸ್ಮಾರ್ಟ್ ಸಿ.ಟಿಯ ಎಲ್ಲಾ ಕಾಮಗಾರಿಗಳೂ, ಅವೈಜ್ಞಾನಿಕ ಹಾಗು ಭ್ರಷ್ಟಾಚಾರದಿಂದ ಕೂಡಿದೆ. |
ಎಲ್.ಡಿ.ಪಿ.ಇ ಪ್ಲಾಸ್ಟಿಕ್ ಲೇಪನ ಮಾಡಿ ಕೆರೆಯನ್ನು ಮಾಲೀನ್ಯ ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಕೆರೆಯಲ್ಲಿನ ನೀರಿನೊಳಗೆ ಪ್ಲಾಸ್ಟಿಕ್ ಮಿಶ್ರಣವಾಗಲೀದೆ, ಇದು ಜನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ, ಎಂಬುದು ನಮ್ಮ ಕಾಳಜಿ. |
ಈ ಕಾಮಗಾರಿಯು ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದ್ದು ಇದರ ಸೂಕ್ತ ತನಿಖೆಯಾಗಬೇಕು ಮತ್ತು ಸ್ಮಾರ್ಟ್ ಸಿ.ಟಿ ಯ ಭ್ರಷ್ಟ, ಬೇಜವಾಬ್ದಾರಿ ಅಧಿಕಾರಿಗಳ ವಿರುಧ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿದೆ, ಈ ನಮ್ಮ ಮನವಿಯನ್ನು ಪರಿಗಣಿಸಿರುವ ಮಾನ್ಯ ನ್ಯಾಯಾಲಯವು, ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸುತ್ತಿರುವುದನ್ನು ತತಕ್ಷಣದಿಂದ ಮುಂದಿನ ಆದೇಶದ ಎಲ್ಲಾ ಕಾಮಕಾರಿಗಳನ್ನು ಸ್ತಗಿತಗೊಳಿಸುವಂತೆ ಮಾನ್ಯ ಕರ್ನಾಟಕ ಹೈ ಕೋರ್ಟ್‍ನ ಮುಖ್ಯ ನ್ಯಾಂiÀiಮೂರ್ತಿಗಳ ಪೀಠ ತಡೆಯಾಜ್ಞೆ ನೀಡಿದ್ದು ಮತ್ತು ಕೆರೆ ಸುತ್ತ ಮುತ್ತಲೂ 30 ಮೀ ವ್ಯಾಪ್ತಿಯಲ್ಲಿ ಬಫರ್ ಜೋನ್ ನಲ್ಲೂ ಸಹ ಯಾವುದೇ ಕಾಮಗಾರಿಗಳನ್ನು ನಡೆಸದಿರಲು ಆದೇಶ ನೀಡಿದೆ. ಆದ್ದರಿಂದ ಈ ಕೂಡಲೆ ಕೆರೆ ಅಂಗಳದಲ್ಲಿನ ಹಾಗೂ ಕೆರೆ ಸುತ್ತ 30 ಮೀ ಬಫರ್ ಜೋನ್ ನಲ್ಲೂ ಸಹ ನಡೆಸುತ್ತಿರುವ ಕಾನೂನು ಬಾಹೀರ ಮಳೆ ನೀರು ಚರಂಡಿ ಕಾಮಗಾರಿಗಳನ್ನು ಸೇರಿ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಬೇಕೆಂದು ಮಾನ್ಯ ಎಂ.ಡಿ ಸ್ಮಾರ್ಟ್ ಸಿ.ಟಿ ಹಾಗು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. |
ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ - Kannada DriveSpark |
Updated: Wednesday, March 14, 2018, 19:02 [IST] |
ಕಳೆದ ತಿಂಗಳಷ್ಟೇ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳುವ ಮೂಲಕ ಸ್ಕೂಟರ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಆಧುನಿಕ ತಂತ್ರಜ್ಞಾನಗಳ ಪ್ರೇರಿತ ಹೋಂಡಾ ಆಕ್ಪಿವಾ 5ಜಿ ಸ್ಕೂಟರ್‌ಗಳು ಭಾರತದಲ್ಲಿ ಇದೀಗ ಭರ್ಜರಿಯಾಗಿ ಬಿಡುಗಡೆಯಾಗಿವೆ. |
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮಾದರಿಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆಕ್ಟಿವಾ 5ಜಿ ಎಸ್‌ಟಿಡಿ ಆವೃತ್ತಿಯು ರೂ.52,460 ಬೆಲೆ ಪಡೆದುಕೊಂಡಿದ್ದರೇ ಆಕ್ಟಿವಾ 5ಜಿ ಡಿಎಲ್‌ಎಕ್ಸ್ ಮಾದರಿಯು ರೂ.54,325ಕ್ಕೆ ಬಿಡುಗಡೆ ಮಾಡಲಾಗಿದೆ. |
ಸ್ಕೂಟರ್ ಮಾರಾಟ ವಿಭಾಗದಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಆಕ್ಟಿವಾ ಸರಣಿಗಳು ಇದೀಗ ಹೊಸ ಹೊಸ ತಂತ್ರಜ್ಞಾನಗಳ ಪ್ರೇರಣೆಯೊಂದಿಗೆ 5ಜಿ ಸ್ಕೂಟರ್ ಆವೃತ್ತಿಗಳು ನಿರ್ಮಾಣವಾಗಿದ್ದು, ವಿನೂತನ ಬಣ್ಣಗಳ ಆಯ್ಕೆ, ಫುಲ್ ಎಲ್ಇಡಿ ಹೆಡ್‌ಲೈಟ್ ಸೇರಿದಂತೆ ಹಲವು ಬದಲಾವಣೆ ಹೊಂದಿವೆ. |
ಒಟ್ಟು 8 ಬಣ್ಣಗಳಲ್ಲಿ ಹೊಸ ಆಕ್ಟಿವಾ 5ಜಿ ಸ್ಕೂಟರ್ ಲಭ್ಯವಿದ್ದು, ಡ್ಯಾಜೆಲ್ ಯೆಲ್ಲೋ ಮೆಟಾಲಿಕ್, ಮೆಜೆಸ್ಟಿಕ್ ಬ್ರೌನ್ ಮೆಟಾಲಿಕ್, ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ಲ್ಯಾಕ್, ಮ್ಯಾಟೆ ಸೆಲೆನಿ ಸಿಲ್ವರ್, ಪರ್ಲ್ ಅಮೇಜಿಂಗ್ ವೈಟ್, ಪರ್ಲ್ ಸ್ಪ್ಯಾರ್ಟನ್ ರೆಡ್ ಮತ್ತು ಟ್ರಾನ್ಸ್ ಬ್ಲೂ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಸಬಹುದು. |
ಹಿರಿಯ ಮಹಿಳಾ ಸಾಹಿತಿ ಗೀತಾ ನಾಗಭೂಷಣ್ ನಿಧನ - Saaksha TV |
ಹಿರಿಯ ಮಹಿಳಾ ಸಾಹಿತಿ ಗೀತಾ ನಾಗಭೂಷಣ್ ನಿಧನ |
ಕಲ್ಬುರ್ಗಿ, ಜೂನ್ 29: ಕರೋನಾಗಿಂತ ಭೀಕರವಾಗಿ ಹೃದಯಾಘಾತ ಕೊಲ್ಲುತ್ತಿದೆ. ಹಿರಿಯ ಮಹಿಳಾ ಸಾಹಿತಿ ಗೀತಾ ನಾಗಭೂಷಣ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಜೀವ ತೊರೆದ ಗೀತಾ ನಾಗಭೂಷಣ್ ನಮ್ಮ ನಾಡಿನ ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರು. |
ಕಲ್ಬುರ್ಗಿ ಮೂಲದವರಾದ ಗೀತಾ ನಾಗಭೂಷಣ್ 2010ರ ಗದಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ನಾಡೋಜ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳಾ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೊದಲ ಮಹಿಳಾ ಸಾಹಿತಿ ಅನ್ನುವ ಹೆಗ್ಗಳಿಕೆ ಇವರದ್ದು (ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಲಭಿಸಿತ್ತು) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊತ್ತ ಮೊದಲ ಮಹಿಳೆಯೂ ಇವರೇ. |
ಕಲ್ಬುರ್ಗಿಯ ಅತ್ಯಂತ ಕುಗ್ರಾಮದಲ್ಲಿ 25 ಮಾರ್ಚ್ 1942ರಲ್ಲಿ ಜನಿಸಿದ ಗೀತಾ ನಾಗಭೂಷಣ್ ಆಗಿನ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನು ನಿರ್ಲಕ್ಷಿಸಿ ಶಾಲೆ ಕಲಿತವರು. ಬಿಎ, ಬಿಎಡ್ ಹಾಗೂ ಎಂಎ ಪದವಿ ಕಲಿತ ಅವರು ಕೆಲ ಕಾಲ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. |
ನಾಡೋಜ ಗೀತಾ ನಾಗಭೂಷಣ್ ತಮ್ಮ ಸುದೀರ್ಘ ಸಾಹಿತ್ಯ ಕೃಷಿಯಲ್ಲಿ ಒಟ್ಟು 27 ಕಾದಂಬರಿಗಳನ್ನು, 50 ಸಣ್ಣ ಕಥೆಗಳು, ಎರಡು ಕವನ ಸಂಕಲನಗಳು, 12 ನಾಟಕಗಳು, ಜೊತೆಗೆ ತಲಾ ಒಂದು ಸಂಪಾದನಾ ಕೃತಿ ಹಾಗೂ ಸಂಶೋಧನಾ ಕೃತಿ ರಚಿಸಿದ್ದಾರೆ. ಇವರ ಹಸಿಮಾಂಸ ಮತ್ತು ಹದ್ದು ಕೃತಿ ಹೆಣ್ಣಿನ ಕೂಗು ಎನ್ನುವ ಕನ್ನಡ ಸಿನಿಮಾ ಆಗಿತ್ತು |
Tags: gita nagabhushan Kalburgi Kannada karnataka poet |
Previous ರಾಜ್ಯಕ್ಕೆ ಅಪ್ಪಳಿಸಿದ ಕೊರೊನಾ ಸುನಾಮಿ : ಒಂದೇ ದಿನ 1267 ಮಂದಿಗೆ ಕೊರೊನಾ ದೃಢ |
Next ಮನುಕುಲದ ಮಾರಣಹೋಮಕ್ಕೆ ಮಹೂರ್ತ ನಿಗದಿಯಾಗಿದೆ; ಈಗಲಾದರೂ ಎಚ್ಚೆತ್ತುಕೊಳ್ಳಿ ಇಲ್ಲವೇ ನಮ್ಮ ಮುಂದಿನ ಪೀಳಿಗೆಗೆ ಸಾವನ್ನು ಮಾತ್ರ ಬಳುವಳಿ ನೀಡಬೇಕಾಗುತ್ತದೆ |
| ಗಣಿತದಲ್ಲೂ ಸುಲಭವಾಗಿ ಪಾಸಾಗಬಹುದು - chitradurga - News in kannada, vijaykarnataka |
ಗಣಿತದಲ್ಲೂ ಸುಲಭವಾಗಿ ಪಾಸಾಗಬಹುದು |
ವಿಕ ಸುದ್ದಿಲೋಕ | Updated: Jan 18, 2017, 07:27AM IST |
ಚಿತ್ರದುರ್ಗ : ಎಸ್‌ಎಸ್‌ಎಲ್‌ಸಿಯಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಸವಾಲಾಗುವ ವಿಷಯ ಎಂದರೆ ಗಣಿತ. ಗಣಿತ ಕಷ್ಟ ಎನ್ನುವ ಕಾರಣಕ್ಕೆ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳುವಾಗಲೂ ಅದರ ಅಧ್ಯಯನಕ್ಕೆ ಬೇಕಾದ ಸಮಯ ಮೀಸಲಿಡದೇ, ಸುಲಭವಾಗಿ ಗ್ರಹಿಸುವ ವಿಷಯಗಳತ್ತಲೇ ಹೆಚ್ಚು ಕೇಂದ್ರೀಕರಿಸುತ್ತಾರೆ. ಈಗ ಇನ್ನು ಎರಡೂವರೆ ತಿಂಗಳು ಕಾಲಾವಕಾಶ ಇದೆ. ವಿದ್ಯಾರ್ಥಿಗಳು ಈಗಿನಿಂದ ದಿನಕ್ಕೆ ಇಂತಿಷ್ಟು ಸಮಯ ಎಂದು ಗಣಿತಕ್ಕೆ ಮೀಸಲಿಟ್ಟು, ಅಧ್ಯಯನ, ಅಭ್ಯಾಸ ಮಾಡಿದಲ್ಲಿ ಗಣಿತ ಪರೀಕ್ಷೆಯಲ್ಲಿ ಪಾಸಾಗುವುದು, ಉತ್ತಮ ಅಂಕ ಪಡೆಯುವುದು ಇತರೆ ವಿಷಯಗಳಷ್ಟೇ ಸುಲಭ. ಆದ್ದರಿಂದ ಪರೀಕ್ಷೆಯ ದೃಷ್ಟಿಯಿಂದ ಮುಖ್ಯ ಎನಿಸುವ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ. |
ಗಣಿತ ವಿಷಯದಲ್ಲಿ ಅಂಕಗಣಿತದಲ್ಲಿ 14 ಪ್ರಶ್ನೆಗಳು, 26 ಅಂಕ. ಬೀಜಗಣಿತದಲ್ಲಿ 8 ಪ್ರಶ್ನೆಗಳು 17 ಅಂಕ. ರೇಖಾಗಣಿತದಲ್ಲಿ 18 ಪ್ರಶ್ನೆ 37 ಅಂಕ ಇರುತ್ತವೆ. ಒಟ್ಟು ಬಹು ಆಯ್ಕೆಯ ಒಂದೊಂದು ಅಂಕದ 8 ಪ್ರಶ್ನೆ, ಒಂದು ಅಂಕದ 6 ಪ್ರಶ್ನೆ, 2 ಅಂಕದ 16 ಪ್ರಶ್ನೆ, 3 ಅಂಕದ 6 ಪ್ರಶ್ನೆ, 4 ಅಂಕದ 4 ಪ್ರಶ್ನೆ ಒಟ್ಟಾರೆ 40 ಪ್ರಶ್ನೆಗಳು 80 ಅಂಕ ಇರುತ್ತವೆ. ಇದು ಒಟ್ಟಾರೆ ಪ್ರಶ್ನೆಯ ಪತ್ರಿಕೆಯ ಸ್ವರೂಪ. ಈ ವಿಭಾಗೀಕರಣವನ್ನು ನೀವು ಸರಿಯಾಗಿ ಗ್ರಹಿಸಿದಲ್ಲಿ ನೀವು ಆದ್ಯತೆ ನೀಡಬೇಕಾದ ಘಟಕಗಳತ್ತ ಹೆಚ್ಚು ಗಮನ ಕೇಂದ್ರೀಕರಿಸಬಹುದು. |
ಪ್ರಶ್ನೆಯ ಪತ್ರಿಕೆಯಲ್ಲಿ ಮೊದಲು ಬಹು ಆಯ್ಕೆಯ 8 ಪ್ರಶ್ನೆಗಳು ಇರುತ್ತವೆ. ಒಂದೊಂದು ಪ್ರಶ್ನೆಗೆ ನಾಲ್ಕು ಉತ್ತರಗಳಿದ್ದು, ಸೂಕ್ತ ಉತ್ತರ ಆಯ್ಕೆ ಮಾಡಿ ಬರೆಯಬೇಕು. ಸಾಮಾನ್ಯವಾಗಿ ಸೂತ್ರಗಳನ್ನು ಉಪಯೋಗಿಸಿಕೊಂಡು ಲೆಕ್ಕಾಚಾರ ಮಾಡುವ ಸರಳ ಪ್ರಶ್ನೆಗಳು ಇರುತ್ತವೆ. ಶ್ರೇಣಿ ಘಟಕದಲ್ಲಿ ಮಾಧ್ಯಮಗಳಿಗೆ ಸಂಬಂಧಿಸಿದ ಸೂತ್ರ, ಶ್ರೇಣಿಯ ಮುಂದಿನ ಪದ ಕಂಡು ಹಿಡಿಯುವುದು, ಮಾರ್ಪಿನ ಗುಣಾಂಕ ಕಂಡು ಹಿಡಿಯುವುದು, ಬಹುಪದೋಕ್ತಿಯ ಮಹತ್ತರ ಘಾತ, ಮೌಲ್ಯ, ಶೂನ್ಯತೆ ಇವು ಮೂರರಲ್ಲಿ ಯಾವುದಾದರರೊಂದನ್ನು ಕಡ್ಡಾಯವಾಗಿ ಕೇಳುತ್ತಾರೆ. ಉಳಿದಂತೆ ಇತರೆ ಘಟಕಗಳ ಸರಳ ಸೂತ್ರಗಳನ್ನು ಮನನ ಮಾಡಿಕೊಳ್ಳಬೇಕು. |
ಒಂದು ಅಂಕದ ಆರು ಪ್ರಶ್ನೆ ವಿಭಾಗದಲ್ಲಿ ನೀವೇ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಬೇಕಿರುತ್ತದೆ. ಪರಿಕಲ್ಪನೆಯ ವ್ಯಾಖ್ಯಾನ, ಸೂತ್ರ ಬರೆಯುವುದು, ಸರಳ ಲೆಕ್ಕಾಚಾರ ಇರುತ್ತದೆ. ಥೇಲ್ಸ್ ಪ್ರಮೇಯದ ನಿರೂಪಣೆ, ಪೈಥಾಗೊರಸ್ ಪ್ರಮೇಯ/ವಿಲೋಮದ ನಿರೂಪಣೆ, ಸಿಲಿಂಡರ್, ಶಂಖು, ಗೋಳ, ಅರ್ಧಗೋಳ, ಶಂಖುವಿನ ಭಿನ್ನಕದ ಪಾರ್ಶ ಮೇಲ್ಮೈ ವಿಸ್ತೀರ್ಣ, ಪೂರ್ಣ ಮೇಲ್ಮೈ ವಿಸ್ತೀರ್ಣ, ಘನ ಫಲದ ಸೂತ್ರ ಬರೆಯುವುದು. ಈ ಘಟಕದಲ್ಲೂ ಸುಲಭವಾಗಿ ಅಂಕಗಳು ನಿಮ್ಮ ಕೈವಶ ಆಗುತ್ತವೆ. |
ಲಘು ಉತ್ತರ ಬಯಸುವ 2 ಅಂಕದ 16 ಪ್ರಶ್ನೆಗಳು ಒಟ್ಟು 32 ಅಂಕಗಳಿಗೆ ಇರುತ್ತವೆ. ರಚನೆಗಳು, ಸೂತ್ರಗಳ ಸಹಾಯದಿಂದ ಲೆಕ್ಕಾಚಾರ ಸಮಸ್ಯೆ ಬಿಡಿಸುವುದು ಈ ತೆರನಾಗಿರುತ್ತವೆ. ಕಾರ್ಡಿನಲ್ ಸಂಖ್ಯೆಗಳ ಸಂಬಂಧದ ಮೇಲಿನ ಸಮಸ್ಯೆಗಳು. ವಾಸ್ತವ ಸಂಖ್ಯೆಗಳು ಘಟಕದಲ್ಲಿ ತ್ರಿಪದ ಕರಣಿಯನ್ನು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸುವುದು. ಸಂಭವನೀಯತೆ ಘಟಕದಲ್ಲಿ ಯಾದೃಚ್ಛಿಕ ಪ್ರಯೋಗ, ಪೂರಕ ಘಟನೆ ಅಥವಾ ವಜ್ರ್ಯ ಘಟನೆ ಆಧಾರಿತ ಸಂಬಂಧಿಸಿದಂತ ಸಮಸ್ಯೆಗಳು. ಕರಣಿಗಳು ಘಟಕದಲ್ಲಿ ದ್ವಿಪದ ಕರಣಿಗಳ ಅಕರಣೀಕರಣ ಹಾಗೂ ಬೇರೆ ಬೇರೆ ಕ್ರಮಗಳನ್ನು ಹೊಂದಿರುವ ಕರಣಿಗಳ ಗುಣಲಬ್ಧ ಕಂಡು ಹಿಡಿಯುವುದು. ವರ್ಗ ಸಮೀಕರಣ ಘಟಕದಲ್ಲಿ ಸೂತ್ರದ ಸಹಾಯದಿಂದ ವರ್ಗ ಸಮೀಕರಣದ ಮೂಲ ಕಂಡು ಹಿಡಿಯುವುದು. |
ವೃತ್ತಗಳು ಘಟಕದಲ್ಲಿ ವ್ಯಾಸ, ತ್ರಿಜ್ಯ, ಜ್ಯಾದ ಅಂತ್ಯಗಳಲ್ಲಿ ಸ್ಪರ್ಶಕದ ರಚನೆ, ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಸ್ಪರ್ಶಕ ರಚಿಸುವುದು, ತ್ರಿಜ್ಯಗಳ ನಡುವಿನ ಕೋನ, ಸ್ಪರ್ಶಕಗಳ ನಡುವಿನ ಕೋನ ಕೊಟ್ಟಾಗ ತ್ರಿಜ್ಯದ ಅಂತ್ಯ ಬಿಂದುವಿನಲ್ಲಿ ಸ್ಪರ್ಶಕ ರಚಿಸುವುದು. ಕ್ಷೇತ್ರಗಣಿತ ಘಟಕದಲ್ಲಿ ದತ್ತಾಂಗಳಿಗೆ ಪ್ರಮಾಣ ನಕ್ಷೆ ರಚಿಸುವುದು ಇವುಗಳು ಕಡ್ಡಾಯವಾಗಿ ಕೇಳುವ ಪ್ರಶ್ನೆಗಳಾಗಿದ್ದು ವಿದ್ಯಾರ್ಥಿಗಳು ಹೆಚ್ಚೆಚ್ಚು ಅಭ್ಯಾಸ ಮಾಡಬೇಕು. ಶಿಕ್ಷಕರೂ ಸಹಾ ಈ ಸುಲಭ ವಿಭಾಗದಲ್ಲಿ ಪುನರಾವರ್ತನೆ ಮಾಡಿಸಬೇಕು. |
ದೀರ್ಘ ಉತ್ತರದ 3 ಅಂಕದ 6 ಪ್ರಶ್ನೆಗಳು ಒಟ್ಟು 18 ಅಂಕಗಳ ವಿಭಾಗದಲ್ಲೂ ಕೆಲವು ಘಟಕಗಳ ಪ್ರಶ್ನೆಗಳನ್ನು ಪದೇ ಪದೇ ಕೇಳುತ್ತಾರೆ. ಸಂಖ್ಯಾಶಾಸ್ತ್ರ ಘಟಕದಲ್ಲಿ ಮಾನಕ ವಿಚಲನೆ ಕಂಡು ಹಿಡಿಯುವುದು. ಮಾನಕ ವಿಚಲನೆ ಕಂಡು ಹಿಡಿಯಲು 4 ವಿಧಾನಗಳಿವೆ. ಎಲ್ಲ ವಿಧಾನ ಅಭ್ಯಾಸ ಮಾಡುವ ಬದಲು ನಿಮ್ಮ ಗ್ರಹಿಕೆಗೆ ಅನುಕೂಲವಾಗುವ ಒಂದು ವಿಧಾನವನ್ನು ಚೆನ್ನಾಗಿ ಅಭ್ಯಾಸ ಮಾಡಿ. ವೃತ್ತಗಳು ಘಟಕದಲ್ಲಿ ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕಗಳು ಸಮ, ಎರಡು ವೃತ್ತಗಳು ಬಾಹ್ಯವಾಗಿ, ಅಂತಸ್ಥವಾಗಿ ಸ್ಪರ್ಶಿಸಿದಾಗ ವೃತ್ತ ಕೇಂದ್ರಗಳು ಮತ್ತು ಸ್ಪರ್ಶ ಬಿಂದು ಏಕರೇಖಾಗತವಾಗಿರುತ್ತವೆ ಎಂದು ಸಾಧಿಸುವುದು. |
ದೀರ್ಘ ಉತ್ತರದ 4 ಪ್ರಶ್ನೆಗಳ ವಿಭಾಗದಲ್ಲಿ 4 ಅಂಕದ 4 ಪ್ರಶ್ನೆಗಳು ಒಟ್ಟು 16 ಅಂಕಗಳು ಇರುತ್ತವೆ. ಇದರಲ್ಲಿ ರಚನೆ, ಪ್ರಮೇಯ, ಗ್ರಾಫ್(ನಕ್ಷೆ) ಮುಖ್ಯವಾದವು. ವೃತ್ತಗಳು ಘಟಕದಲ್ಲಿ ನೇರ ಸಾಮಾನ್ಯ ಅಥವಾ ವ್ಯತ್ಯಸ್ಥ ಸ್ಪರ್ಶಕಗಳ ರಚನೆ ಇವೆರಡರಲ್ಲಿ ಯಾವುದಾದರೂ ಒಂದು ಕಡ್ಡಾಯ ಪ್ರಶ್ನೆಯಾಗಿರುತ್ತದೆ. ವರ್ಗ ಸಮೀಕರಣ ಘಟಕದಲ್ಲಿ ನಕ್ಷೆಯ ವಿಧಾನದಿಂದ ವರ್ಗ ಸಮೀಕರಣದ ಮೂಲಗಳನ್ನು ಕಂಡು ಹಿಡಿಯುವುದು. ಸಮಾರೂಪ ತ್ರಿಭುಜಗಳು ಘಟಕದಲ್ಲಿ ಎರಡು ತ್ರಿಭುಜಗಳು ಸಮಕೋನಿಯಗಳಾಗಿದ್ದರೆ, ಅವುಗಳ ಅನುರೂಪ ಬಾಹುಗಳು ಸಮಾನುಪಾತದಲ್ಲಿ ಇರುತ್ತವೆ. ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು, ಅವುಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತದಲ್ಲಿ ಇರುತ್ತವೆ. ಪೈಥಾಗೊರಸ್ ಪ್ರಮೇಯ ಘಟಕದಲ್ಲಿ ಪ್ರಮೇಯದ ನಿರೂಪಣೆ ಮತ್ತು ಸಾಧನೆ ಎರಡನ್ನೂ ಕೇಳಬಹುದು. |
- ಎಲ್ಲ ಪ್ರಶ್ನೆಪತ್ರಿಕೆಗಳ 20 ಪುಟಗಳ ಉತ್ತರ ಪತ್ರಿಕೆ ಒಳಗೊಂಡಿರುತ್ತದೆ. ಗಣಿತ ವಿಷಯದಲ್ಲಿ 28 ಪುಟಗಳ ಉತ್ತರ ಪತ್ರಿಕೆ ಇರುತ್ತದೆ. |
- ಪ್ರಮೇಯಗಳನ್ನು ಸಾಧಿಸಬೇಕಾದಾಗ ಕರಡು ರೇಖಾಚಿತ್ರ, ದತ್ತ, ಸಾಧನೀಯ, ರಚನೆ, ಸಾಧನೆ ಹಂತಗಳಲ್ಲಿಯೇ ಉತ್ತರಿಸಬೇಕು. |
- ಗ್ರಾಫ್‌ನಲ್ಲಿ ವರ್ಗ ಸಮೀಕರಣದ ಪರ ವಲಯ( ಎರಡು ವಿಧಾನಗಳಲ್ಲಿ ಯಾವುದಾದರೊಂದು ವಿಧಾನ ಬಳಸುವುದು)ದ ನಕ್ಷೆಯೊಂದಿಗೆ ಮೂಲಗಳನ್ನು ನಮೂದಿಸುವುದನ್ನು ಮೆರೆಯಬಾರದು. |
- ಸ್ಪರ್ಶಕಗಳ ರಚನೆಗಳ ನಂತರ ಸ್ಪರ್ಶಕಗಳನ್ನು ತಪ್ಪದೇ ಹೆಸರಿಸಿ. |
- ಕರಣಿಗಳು ಘಟಕದಲ್ಲಿ ಛೇದವನ್ನು ಅಕರಣೀಕರಿಸುವಾಗ ಪ್ರಶ್ನೆಯನ್ನು ಕಡ್ಡಾಯವಾಗಿ ಬರೆದು, ಸಮತ್ವ (=) ಚಿನ್ಹೆ ಹಾಕಿ, ಮತ್ತೊಮ್ಮೆ ಪ್ರಶ್ನೆಯನ್ನು ಬರೆದು ಅಕರಣೀಕರಿಸುವುದು. ಪ್ರಶ್ನೆಯಿಂದಲೇ ನೇರವಾಗಿ ಉತ್ತರಿಸುವುದು ಸರಿಯಲ್ಲ. |
- ಗ್ರಾಫ್ ಹಾಳೆಯನ್ನು ಪ್ರತ್ಯೇಕವಾಗಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಗ್ರಾಫ್ ಹಾಳೆಗೆ ನೋಂದಣಿ ಸಂಖ್ಯೆಮತ್ತು ಪ್ರಶ್ನೆ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ, ಕೊಠಡಿ ಮೇಲ್ವಿಚಾರಕರಿಂದ ಸಹಿ ಪಡೆದು ಮೂಲ ಉತ್ತರ ಪತ್ರಿಕೆಗೆ ಲಗತ್ತಿಸುವುದು ಕಡ್ಡಾಯ. |
ಜಿಲ್ಲೆಯ: ಜಿಲ್ಲೆಯ ವಿವಿಧೆಡೆ ಮಳೆ: ತಲೇಖಾನ್‌ನಲ್ಲಿ 50.2ಮಿ.ಮೀ ಮಳೆ - 50.2 mm rainfall in talekhan | Vijaya Karnataka |
50.2 mm rainfall in talekhan |
ರಾಯಚೂರು : ಜಿಲ್ಲೆಯ ನಾನಾಕಡೆ ಮಂಗಳವಾರ ಮಧ್ಯಾಹ್ನ ಮಳೆ ಸುರಿದಿದ್ದು, ರೈತರಲ್ಲಿ ಹರ್ಷ ಉಂಟು ಮಾಡಿದೆ. ತಡವಾಗಿ ಆರಂಭಗೊಂಡ ಮುಂಗಾರು ಹಲವೆಡೆ ಅವಾಂತರ ಸೃಷ್ಟಿಸಿದ್ದು, ಲಿಂಗಸುಗೂರು ತಾಲೂಕಿನ ತಲೇಖಾನ್‌ನಲ್ಲಿ 50.2ಮಿ.ಮೀ ಮಳೆಯಾಗಿದೆ. |
ಮಳೆಯ ಪ್ರಮಾಣ: ರಾಯಚೂರು ನಗರದಲ್ಲಿ 14ಮಿ.ಮೀ, ತಾಲೂಕಿನ ಯರಮರಸ್‌ನಲ್ಲಿ 10.2ಮಿ.ಮೀ, ಚಂದ್ರಬಂಡಾದಲ್ಲಿ 38.1ಮಿ.ಮೀ, ಜೇಗರಕಲ್‌ನಲ್ಲಿ 5.4ಮಿ.ಮೀ, ಕಲ್ಮಲಾದಲ್ಲಿ 22ಮಿ.ಮೀ, ಯರಗೇರಾದಲ್ಲಿ 9ಮಿ.ಮೀ, ಗಿಲ್ಲೇಸೂಗೂರಿನಲ್ಲಿ 6.5ಮಿ.ಮೀ, ಲಿಂಗಸ್ಗೂರು ಪಟ್ಟಣದಲ್ಲಿ 28ಮಿ.ಮೀ, ತಾಲೂಕಿನ ಗುರಗುಂಟಾದಲ್ಲಿ 11ಮಿ.ಮೀ, ಮುದ್ಗಲ್‌ನಲ್ಲಿ 23.6ಮಿ.ಮೀ, ಮಸ್ಕಿಯಲ್ಲಿ 29.8 ಮಿ.ಮೀ, ತಲೇಖಾನ್‌ನಲ್ಲಿ 50.2ಮಿ.ಮೀ ಹಾಗೂ ಹಟ್ಟಿಯಲ್ಲಿ 10ಮಿ.ಮೀ ಮಳೆ ದಾಖಲಾಗಿದೆ. |
ಮಾನ್ವಿ: ಅದೇ ರೀತಿ ಮಾನ್ವಿ ಪಟ್ಟಣದಲ್ಲಿ 45ಮಿ.ಮೀ, ಕುರ್ಡಿಯಲ್ಲಿ 5.4ಮಿ.ಮೀ, ಪಾಮನಕಲ್ಲೂರಿನಲ್ಲಿ 5.2ಮಿ.ಮೀ, ಕವಿತಾಳದಲ್ಲಿ 21.3ಮಿ.ಮೀ, ಕುರಕುಂದಾದಲ್ಲಿ 22ಮಿ.ಮೀ, ಮಲ್ಲಟದಲ್ಲಿ 23ಮಿ.ಮೀ, ಕಲ್ಲೂರಿನಲ್ಲಿ 14.2ಮಿ.ಮೀ, ರಾಜಲಬಂಡಾದಲ್ಲಿ 8ಮಿ.ಮೀ ಮಳೆ ಸುರಿದಿದೆ. |
Subsets and Splits
No community queries yet
The top public SQL queries from the community will appear here once available.