text
stringlengths
0
61.5k
ಚಿತ್ರೀಕರಣದ ಅನುಭವವೇ ಅದ್ಬುತ, ವಿಭಿನ್ನ..
'ಶಿವಾಜಿ ಸುರತ್ಕಲ್ ' ಚಿತ್ರೀಕರಣ ಪಕ್ಕಾ ಪ್ರೊಪೆಷನಲ್ ಆಗಿತ್ತು. ರಮೇಶ್ ಸರ್ ಅಂದ್ರೆ ಹೇಳ್ಬೇಕೆ, ಅವರ ಕೆಲಸವೇ ಹಾಗೆ, ಎಲ್ಲದೂ ಅಚ್ಚುಕಟ್ಟು, ಪಕ್ಕಾ ಪ್ರೊಪೆಷನಲ್. ನಿರ್ದೇಶಕರು ಹಾಗೆಯೇ ಚಿತ್ರೀಕರಣ ಮುಗಿಸಿದರು. ಅನೇಕ‌ ಸಂಗತಿಗಳನ್ನು‌ನಾವು ಕಲಿಯುವುದಕ್ಕೆ ಸಾಧ್ಯವಾಯಿತು. ಇನ್ನು 'ಭೀಮಸೇನ ನಳ‌ಮಹಾರಾಜ' ತುಂಬಾ ಸಮಯ ತೆಗೆದುಕೊಂಡಿತು. ಆದರೂ‌ ನಂಗೆ ಎಲ್ಲೂ ಬೇಸರ ಎನಿಸಿಲ್ಲ. ನಿರ್ಮಾಪಕರಾದ ಪುಷ್ಕರ್ ಅವರಾಗಲಿ, ನಿರ್ದೇಶಕ ಕಾರ್ತಿಕ್ ಅವರಾಗಲಿ ಕಿಂಚಿತ್ತು ಬೇಜಾರು ತರಿಸಿಲ್ಲ. ಇಡೀ ಸೆಟ್ ವಾತಾವರಣವೇ ಫ್ಯಾಮಿಲಿ ಥರ ಇತ್ತು. ಇವತ್ತಿಗೂ ನಂಗೆ ಅವರೆಲ್ಲರ ಜತೆಗೆ ತುಂಬಾ ಕಂಫರ್ಟ್ ಫೀಲ್ ಇದೆ. ಸೆಟ್ ಗಳಲ್ಲಿ ಇಂತಹ ವಾತಾವರಣ ಇರೋದೆ ಅಪರೂ‌ಪ. ಬಟ್ ನಮಗೆ‌ ಇದು ಸಿಕ್ಕಿದೆ ಎನ್ನುವ ಮಾತು‌ ಆರೋಹಿ ನಾರಾಯಣ್ ಅವರದು.
ನಾನು ಕಾದಿದ್ದಕ್ಕೂ ಕಾರಣವಿತ್ತು…
ನಿಜ , ತುಂಬಾ ತಾಳ್ಮೆ‌ಬೇಕು.‌ಹಾಗಂತ ಅದು‌ ಬೇಕಂತಲೇ‌ ಆಗಿದ್ದಲ್ಲ. ಅದಕ್ಕೆ ಅದರದ್ದೇಯಾದ ಹಲವು ಕಾರಣವಿದೆ. ಹಾಗಾಗಿ‌ ತಡವಾಗಿದೆ. ಇನ್ನು ನಾನು ಬೇಕಂತಲೇ ಆ ಸಿನಿಮಾಕ್ಕಾಗಿ‌ ಕಾದಿದ್ದೇನೆ. ಕಾರಣ ಆ ಚಿತ್ರದಲ್ಲಿನ‌ ನನ್ನ ಪಾತ್ರ. ನಾನಿನ್ನು ಅಭಿನಯದ ಮೂಲಕ ನಟಿಯಾಗಿ ಗುರುತಿಸಿಕೊಂಡಿಲ್ಲ .‌ಹೊಸಬರು ಅಂತ ಸಾಕಷ್ಟು ಆಫರ್ ಬಂದಿವೆ. ಅವೆಲ್ಲ ನನಗೆ ಇಷ್ಟವಾಗದ ಪಾತ್ರಗಳು. ಬಂದವರಿಗೂ ನನ್ನ ನಟನೆ ಗೊತ್ತಿಲ್ಲ. 'ಭೀಮಸೇನ‌‌ ನಳ‌ಮಹಾರಾಜ 'ತೆರೆ‌ಕಂಡರೆ ನಾನೇನು, ನನ್ನ‌ಪಾತ್ರ ಆಯ್ಕೆಯ ಅಭಿರುಚಿಯೇನು ಅಂತ ಗೊತ್ತಾಗಲಿದೆ. ಹಾಗಾಗಿಯೇ ಈ ಸಿನಿಮಾ‌ ಒಪ್ಪಿಕೊಂಡ‌ ನಂತರದ‌ ದಿನಗಳಲ್ಲಿ ಯಾವುದೇ ಸಿನಿಮಾ‌ ಒಪ್ಪಿಕೊಂಡಿಲ್ಲ. ರಮೇಶ್ ಕಾರಣಕ್ಕೆ ಮಾತ್ರ ' ಶಿವಾಜಿ ಸುರತ್ಕಲ್' ಒಪ್ಪಿಕೊಂಡಿದ್ದೆ‌. ಅದು ಬಿಟ್ಟರೆ ' ಭೀಮಸೇನ ನಳಮಹಾರಾಜ ' ನನ್ನ ಸಿನಿ‌ಜರ್ನಿಗೆ ಟರ್ನಿಂಗ್ ನೀಡುವುದು ಗ್ಯಾರಂಟಿ‌ ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ ದೃಶ್ಯ ಖ್ಯಾತಿಯ ನಟಿ.
ಮಾಸ್ಕೋ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನಿ‌ ಕುಸ್ರುತಿ‌ ಅತ್ಯುತ್ತಮ ನಟಿ‌
No Comments on ಮಾಸ್ಕೋ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನಿ‌ ಕುಸ್ರುತಿ‌ ಅತ್ಯುತ್ತಮ ನಟಿ‌
* ಮಾಸ್ಕೋ ಪ್ರಶಸ್ತಿ ಗೆದ್ದ ಮೊದಲ‌ ಮಲಯಾಳಂ ಚಿತ್ರ
* ಭಾರತದ ಮೊ‌ದಲ‌ ದಲಿತ ನಟಿ‌ ಪಿ.ಕೆ. ರೋಸಿಗೆ ಪ್ರಶಸ್ತಿ ಅರ್ಪಿಸಿದ ಕನಿ‌ಕುಸ್ರುತಿ
* ಚಿತ್ರರಂಗದಲ್ಲೀಗ ಸಾಮಾರ್ಥ್ಯಕ್ಕೆ ತಕ್ಕಂತಹ ಪಾತ್ರ ಸಿಗುತ್ತಿಲ್ಲ ಎನ್ನುವ ಬೇಸರ ಹೊರಹಾಕಿದ ನಟಿ
* ಜಾತಿ, ಧರ್ಮ, ವರ್ಗ, ಮೈಬಣ್ಣದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ – ಕನಿ‌ಮಾತು
* ಖದೀಜಾ" ಎಂಬ ಪಾತ್ರವನ್ನು ಬರೆಯುವಾಗ ನಾನು ಕೇವಲ ಕನಿ ಕುಸ್ರುತಿ ಅವರನ್ನೇ ಗಮನದಲ್ಲಿಟ್ಟು ಕೊಂಡಿದ್ದೆ- ನಿರ್ದೇಶಕ ಸಜಿನ್ ಬಾಬು
ಬರಹ- ರಮೇಶ್ ಹೆಚ್.ಕೆ. ಶಿವಮೊಗ್ಗ
ಸಜಿನ್ ಬಾಬು ಅವರ "ಬಿರಿಯಾನಿ" ಚಿತ್ರದಲ್ಲಿನ ತಮ್ಮ ಅತ್ಯುತ್ತಮ ನಟನೆಗಾಗಿ ನಟಿ ಕನಿ ಕಸ್ರುತಿ , 42 ನೇ ಮಾಸ್ಕೋ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ‌ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆನೇ, ಮಾಸ್ಕೋ ಸಿನಿಮೋತ್ಸವದಲ್ಲಿ ಪ್ರಶಸ್ತಿ‌ ಗೆದ್ದ ಮೊದಲ ಮಲೆಯಾಳಂ ಚಿತ್ರ ಎಂಬ ಹೆಗ್ಗಳಿಕೆ ಬಿರಿಯಾನಿ ಚಿತ್ರದ ಪಾಲಾಗಿದೆ.
ಮೊನ್ನೆ ಮೊನ್ನೆಯಷ್ಟೇ ಮ್ಯಾಂಡ್ರಿಡ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಗೆ ಪಾತ್ರವಾಗಿದ್ದ ನಟಿ‌ ಕನಿಗೆ ಈಗ ಮಾಸ್ಕೋ‌ ಫೆಸ್ಟಿವಲ್ ಪ್ರಶಸ್ತಿ ಸಂದಿದೆ. ಹಾಗೆಯೇ ಈ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಮೊದಲ‌ ನಟಿ ಹಾಗೂ ಭಾರತೀಯ ಚಿತ್ರರಂಗದ ಮೊದಲ ದಲಿತ ನಟಿ ಪಿ.ಕೆ. ರೋಸಿ ಅವರಿಗೆ ಅರ್ಪಿಸಿರುವುದು ವಿಶೇಷ.
ಪ್ರಶಸ್ತಿಯ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಕನಿ ‌ಕುಸ್ರುತಿ " ಈ ಪ್ರಶಸ್ತಿಯನ್ನು ನಾನು ಮಲಯಾಳಂನ ಮೊದಲ ನಾಯಕಿ ನಟಿ, ಹಾಗೂ ಭಾರತದ ಸಿನಿಮಾ ರಂಗದ ಮೊದಲ ದಲಿತ ನಟಿಯಾದ ಪಿಕೆ ರೋಸಿ, ಅವರಿಗೆ ಅರ್ಪಿಸುತ್ತೇನೆ. ಇತ್ತೀಚೆಗೆ ಚಿತ್ರರಂಗದಲ್ಲಿ ಬಹುತೇಕ ನಟ ನಟಿಯರಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾದ ಪಾತ್ರ ದೊರೆಯದೇ ಇರುವಂತಹ ಪರಿಸ್ಥಿತಿಯಿದ್ದು ಸಂಪನ್ಮೂಲಗಳ ಕಾರಣಕ್ಕೇ ಅವರಿಗೆ ಸಿಗಬೇಕಾದ ಪಾತ್ರಗಳು ದೊರೆಯದಂತಾಗಿದೆ. ಹೀಗಾಗಿ ಈ ಪ್ರಶಸ್ತಿಯನ್ನು ಅಂತಹ ಪ್ರತಿಭಾನ್ವಿತ ನಟ ನಟಿಯರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಮೂಲಕ ನಾನು ಎಲ್ಲಾ ನಟ ನಟಿಯರಿಗೆ ಜಾತಿ, ಧರ್ಮ, ವರ್ಗ, ಮೈಬಣ್ಣದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ ಎಂದು ನಾನು ಆಶಿಸುತ್ತೇನೆ" ಎಂದು‌ ನಟಿ ಕನಿ ಪ್ರತಿಕ್ರಿಯೆ ನೀಡಿದ್ದಾರೆ.
"ಬಿರಿಯಾನಿ" ಸಿನಿಮಾವು ಖದೀಜಾ ಎಂಬ ಬಡ ಮುಸ್ಲಿಂ ಮಹಿಳೆಯೊಬ್ಬಳ ಬದುಕಿನ ಪಯಣದ ಕುರಿತಾಗಿದ್ದು ಆಕೆ ಜಾತಿ ಧರ್ಮಾಧಾರಿತವಾಗಿ ರಚನೆಗೊಂಡಿರುವ ಸಮಾಜದಲ್ಲಿ ಇರುವಂತಹ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಜೀವಿಸುವ ಚಿತ್ರಣವಿದೆ. ಈ ಚಿತ್ರವು ಸಂಪೂರ್ಣವಾಗಿ ಮಹಿಳೆಯ ದೃಷ್ಟಿಕೋನದಲ್ಲಿ ಇದ್ದು ಯಾವ ಕಾರಣಕ್ಕಾಗಿ ಖದೀಜಾ ಈ ಸಾಮಾಜಿಕ ಹಾಗೂ ಧಾರ್ಮಿಕ ನಿಯಮಗಳ ವಿರುದ್ಧ ಬಂಡೇಳುತ್ತಾಳೆ ಎಂಬುದರ ಕುರಿತಾಗಿದೆ.
ಈ ಸಿನಿಮಾವು ಈ ವರ್ಷ ರೋಮ್ ನಲ್ಲಿ ನಡೆದ ಏಷಿಯಾಟಿಕ್ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದ್ದು ನೆಟ್ ಪ್ಯಾಕ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಳಿಸಿದೆ.
ಇದಕ್ಕಿಂತ ಮುಂಚೆ ಕನಿ ಅವರು ಮ್ಯಾಡ್ರೀಡ್ ನಲ್ಲಿ ನಡೆದ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರವಾಗಿದ್ದರು. ನ್ಯೂಯಾರ್ಕ್ ನಲ್ಲಿ ನಡೆದ ಟ್ರುಬೆಕಾ ಸಿನಿಮೋತ್ಸವದಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು. ಇನ್ನು ಚಿತ್ರದ ನಿರ್ದೇಶಕ ಸಜಿನ್ ಬಾಬು ಸಂದರ್ಶನವೊಂದೆಲ್ಲಿ ಹೇಳುವಂತೆ "ಇಂತಹ ಪ್ರಭಾವಿ ಚಿತ್ರಕ್ಕೆ "ಖದೀಜಾ" ಎಂಬ ಪಾತ್ರವನ್ನು ಬರೆಯುವಾಗ ನಾನು ಕೇವಲ ಕನಿ ಕುಸ್ರುತಿ ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಬರೆದಿದ್ದೆ, ಎಂದು ಹೇಳಿಕೊಂಡಿದ್ದಾರೆ
ಕರೋನಾ ಕಾರಣದಿಂದಾಗಿ ಕನಿ ಅವರಿಗೆ ಖುದ್ಧಾಗಿ ತೆರಳಿ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕನಿ ಅವರು "ನಾನು ಮನೆಯಲ್ಲೇ ಹಸಿರು ವಾತಾವರಣದ ನಡುವೆ ಇರಲು ಇಷ್ಟ ಪಡುತ್ತೇನೆ, ನನಗೆ ಪ್ರಯಾಣ ಎಂದರೆ ಆಗಿ ಬರುವುದಿಲ್ಲ" ಎಂದಷ್ಟೇ ಹೇಳಿ ನಗುತ್ತಾರೆ." ಇನ್ನು ಈ ವರ್ಷ "Tryst with Destiny, ಮತ್ತು OK Computer ಎಂಬ ಇವರ ಎರಡು ಚಿತ್ರಗಳು ಬಿಡುಗಡೆಗೊಳ್ಳಲಿದ್ದು ಈ ಚಿತ್ರಗಳನ್ನು ಕ್ರಮವಾಗಿ ಪೂಜಾ ಶೆಟ್ಟಿ, ಹಾಗೂ ನೀಲ್ ಪಾಗೇದಾರ್ ಅವರು ನಿರ್ದೇಶಿಸಿದ್ದಾರೆ. ಆನಂದ್ ಗಾಂಧಿ ನಿರ್ಮಾಣ ಮಾಡಿದ್ದಾರಂತೆ.
ಚಿತ್ರರಂಗಕ್ಕೆ‌ ಮತ್ತೊಬ್ಬಳು ಬೇಬಿ ಡಾಲ್‌ ಎಂಟ್ರಿ !
No Comments on ಚಿತ್ರರಂಗಕ್ಕೆ‌ ಮತ್ತೊಬ್ಬಳು ಬೇಬಿ ಡಾಲ್‌ ಎಂಟ್ರಿ !
ಪುಟಾಣಿ ಸಿಂಗರ್ ಈಗ ಪುಟಾಣಿ‌ ನಟಿ ! ಯಾರು ಈ ಬಾಲಕಿ? ಈ ಸ್ಟೋರಿ ನೋಡಿ
ಭೀಮ ಸೇನ ಸೆಟ್ ನಲ್ಲಿ ನಟ ಅಚ್ಯುತ್ ಕುಮಾರ್ ಜತೆಗೆ ಆದ್ಯಾ
ಕನ್ನಡ ಸಿನಿಮಾದ‌ ಮಟ್ಟಿಗೆ ಒಂದು‌ ಕಾಲದಲ್ಲಿ‌ ಪುಟಾಣಿ ಬಾಲಕಿ ಅಂದಾಕ್ಷಣ ನೆನಪಾಗುತ್ತಿದದ್ದು ಬೇಬಿ ಶಾಮಿಲಿ. ಯಾಕಂದ್ರೆ, ಆಕೆ‌ ಆಗ ಪರದೆ ಮೇಲಿನ ಫ್ಯಾಮಿಲಿಯ ಖಾಯಂ ಮಗಳು. ಕಾಲ ಬದಲಾದಂತೆ ಶಾಮಿಲಿ ಜಾಗಕ್ಕೆ ಸಾಕಷ್ಟು ಪುಟಾಣಿಗಳು ಬಂದರು. ಆದರೆ ಬೇಬಿ ಶಾಮಿಲಿ‌ಯಷ್ಟು ಯಾರು ಸೌಂಡು ಮಾಡಲಿಲ್ಲ. ಆ ಕತೆ‌ ಬೇರೆ. ಈಗ ಶಾಮಿಲಿ‌ ಜಾಗಕ್ಕೆ‌ ಮತ್ತೊಬ್ಬಳು ಪುಟಾಣಿ ಬೇಬಿ‌ ಡಾಲ್ ಎಂಟ್ರಿ ಆಗುತ್ತಿದ್ದಾಳೆ. ಆಕೆ ಅಭಿನಯಿಸಿದ ಸಿನಿಮಾ‌ ಈ‌ ತಿಂಗಳ‌ 29ಕ್ಕೆ ಆನ್ ಲೈನ್ ಮೂಲಕ‌ ಬಿಡುಗಡೆ ಆಗುತ್ತಿದೆ. ಈ ಸಿನಿಮಾ‌‌ ಮೂಲಕ ಈ ಬೇಬಿ ಡಾಲ್ ಎಷ್ಟು ಸುದ್ದಿ ಮಾಡಬಲ್ಲರು ಎನ್ನುವುದೀಗ ಕುತೂಹಲದ ವಿಷಯ.
ಬೇಬಿ ಡಾಲ್ ಅಂದ್ರೆ‌ ಇವಳೇ‌….!!
ಅಂದ ಹಾಗೆ, ಈ ಬೇಬಿ ಡಾಲ್ ಬೇರಾರು‌ ಅಲ್ಲ, ಝೀ‌ ಕನ್ನಡದ‌ ' ಸರಿಗಮಪ ಲಿಟಲ್ ಚಾಂಪ್ಸ್ ' ಖ್ಯಾತಿಯ ಬೇಬಿ ಡಾಲ್ ಪುಟಾಣಿ ಆದ್ಯಾ. ಕಿರುತೆರೆಯಲ್ಲಿ ಸಿಂಗರ್ ಆಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಬಾಲಕಿ ಇವಳು. ಆಕೆಯ‌ ಮುದ್ದು ಮುದ್ದಾದ ಮಾತು, ಕ್ಯೂಟ್ ಫೇಸು, ಮಧುರವಾದ ಧ್ವನಿಗೆ ಫಿದಾ ಆಗದವರೇ ಇಲ್ಲ. ಅದೇ ಜನಪ್ರಿಯತೆಯೊಂದಿಗೆ ಸಿನಿಮಾ‌ ರಂಗದಲ್ಲೋ ಈಕೆ ಮೋಡಿಬಲ್ಲಳೇ ಎನ್ನುವುದು ಕಿರುತೆರೆ ವೀಕ್ಷಕರಲ್ಲಿ ಸಹಜವಾಗಿ ಮೂಡುವ ಕ್ಯೂರಿಯಾಸಿಟಿ
ನಿರ್ಮಾಪಕ ಪುಷ್ಕರ್ ಜತೆಗೆ ಆದ್ಯಾ
ಭೀಮಸೇನ ದೊಂದಿಗೆ ತೆರೆ ಮೇಲೆ ಆದ್ಯಾ!
ಇನ್ನು, 'ಸರಿಗಮಪ ಲಿಟಲ್ ಚಾಂಪ್ಸ್' ರಿಯಾಲಿಟಿ ಶೋ ನಂತರ ಪುಟಾಣಿ ಆದ್ಯಾ ಅಭಿನಯಿಸಿದ ಮೊದಲ‌ ಚಿತ್ರ ' ಭೀಮಸೇನ ನಳ‌ಮಹಾರಾಜ' . ಈ ಚಿತ್ರ ಅಂದುಕೊಂಡಿದ್ದಕ್ಕಿಂತ ಕೊಂಚ ತಡವಾಗಿಯೇ ತೆರೆಗೆ ಬರುತ್ತಿದೆ. ಎಲ್ಲವೂ ಸರಿಯಾಗಿಯೇ ನಡೆದಿದ್ದರೆ, ಈ ಚಿತ್ರ ತೆರೆಗೆ ಬಂದು‌ ಹಳೇ ಮಾತೇ ಆಗಿರುತ್ತಿತ್ತೇನೋ, ಆದರೆ ಕೆಲವು ತಾಂತ್ರಿಕ ಕೆಲಸಗಳ ಜತೆಗೆ‌ ಕೋರೋನಾ ಕಾರಣದಿಂದಲೂ ಈಗ ಆನ್ ಲೈನ್ ಮೂಲಕ‌ ಬಿಡುಗಡೆ ಆಗುತ್ತಿದೆ. ಚಿತ್ರ ಮಂದಿರಕ್ಕೆ ಬರುತ್ತಿಲ್ಲ ಎನ್ನುವುದನ್ನು‌ಬಿಟ್ಟರೆ ಈ ಚಿತ್ರ ಹಲವು ಕಾರಣಕ್ಕೆ ಕುತೂಹಲ ಮೂಡಿಸಿ, ಅಕ್ಟೋಬರ್ 29 ಕ್ಕೆ ಬಿಡುಗಡೆ ಆಗುತ್ತಿದೆ. ಅಮೆಜಾನ್ ಪ್ರೈಮ್ ಗೆ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿಯೂ ಇದೆ.
ಪ್ರತಿಷ್ಟಿತ ಸಂಸ್ಥೆಯ ಚಿತ್ರ ಎನ್ನುವುದರ ಜತೆಗೆ ಕಥೆ ಇಲ್ಲಿನ ಕುತೂಹಲ ಅಂಶ‌. ಇಂತಹ ಚಿತ್ರದ ಮೂಲಕ‌ ಆದ್ಯಾ‌ಕನ್ನಡ ಚಿತ್ರರಂಗಕ್ಮೆ ಪರಿಚಯವಾಗುತ್ತಿದ್ದಾಳೆ ಎನ್ನುವುದು ಆಕೆಯ ಪೋಷಕರಲ್ಲಿ ಸಾಕಷ್ಟು ಎಕ್ಸೈಟ್ ಮೆಂಟ್ ಮೂಡಿಸಿದೆ.
ಪ್ರತಿಷ್ಟಿತ ಸಂಸ್ಥೆ ಅನ್ನೋದೆ ಕಾರಣ…
' ಆದ್ಯಾಳನ್ನು ಸಿನಿಮಾ‌ರಂಗಕ್ಕೆ ಪರಿಚಯಿಸಬೇಕೆಂದು ನಾವು ಅಂದುಕೊಂಡವರೇ ಅಲ್ಲ.‌ಸರಿಗಮಪ‌‌ಲಿಟಲ್ ಚಾಂಪ್ಸ್ ಮುಗಿದ ತಕ್ಷಣ ಸಾಕಷ್ಟು ಫೋನ್ ಕಾಲ್ ಬಂದರೂ ನಾವು ಮನಸು‌ಮಾಡಿರಲಿಲ್ಲ. ಆದರೆ‌ ಒಂದಿನ ನಿರ್ಮಾಪಕ‌ ಪುಷ್ಕರ್ ಹಾಗೂ‌ನಿರ್ದೇಶಕ ಕಾರ್ತಿಕ್ ಮನೆಗೇ ಬಂದು, ‌ನಿಮ್ಮ‌ಮಗಳು‌ನಮ್ಮ ಸಿನಿಮಾದಲ್ಲಿ‌ ಅಭಿನಯಿಸಬೇಕು ಅಂತ ಪಟ್ಟು‌ಹಿಡಿದರು. ಆನಂತರ ಕತೆ ಹೇಳಿದರು. ಹಾಗಾಗಿ ಆಕೆಯನ್ನು ‌ಭೀಮಸೇನ ನಳ‌ಮಹಾರಾಜ‌ ಚಿತ್ರಕ್ಕೆ ಕಳುಹಿಸಬೇಕಾಯಿತು. ಅಲ್ಲಿಂದ
ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್‌' , ಸುದೀಪ್ ಅಭಿನಯದ 'ಕೋಟಿಗೊಬ್ಬ 3 'ನಲ್ಲೂ‌ ಇದ್ದಾಳೆ. ಒಳ್ಳೆಯ‌ಸಂಸ್ಥೆಯ ಸಿನಿಮಾ, ಸ್ಟಾರ್ ಸಿನಿಮಾಗಳು ಎನ್ನುವ ಕಾರಣಕ್ಕೆ ನಾವು ಒಪ್ಪಿಕೊಂಡೆವು. ಅದು‌ಬಿಟ್ಟರೆ
ಆಕೆಯ ಶಿಕ್ಷಣಕ್ಕೆ ತೊಂದರೆವೊಡ್ಡಿ ಸಿನಿಮಾ‌ಕ್ಕೆ ಕಳುಹಿಸುವುದಕ್ಕೆ‌ನಮಗೂ‌ ಇಷ್ಟ ಇಲ್ಲ.‌ ಉಳಿದಂತೆ ಈ‌ಮೂರರಲ್ಲಿ ಈಗ 'ಭೀಮಸೇನ‌ ನಳ ಮಹಾರಾಜ ' ಮೊದಲ ಸಿನಿಮಾವಾಗಿ ತೆರೆಗೆ ಬರುತ್ತಿದೆ.‌ಆಕೆಯನ್ನು‌ಜನ‌ ಹೇಗೆ ಸ್ವೀಕರಸುತ್ತಾರೆನ್ನುವ ಕುತೂಹಲ , ಒಂಥರ ಭಯ ನಮಗೂ‌ಇದೆ ' ಎನ್ನುತ್ತಾರೆ ಬೇಬಿ‌ ಆದ್ಯಾಳ ತಾಯಿ‌ ಅಶ್ವಿನಿ ಉಡುಪಿ.
ಭೀಮಸೇನನ ಮಗಳು…
ಭೀಮ‌ಸೇನ‌ ನಳ‌ಮಹಾರಾಜ‌ ಶೀರ್ಷಿಕೆ ಯೇ ಹೇಳುವ ಹಾಗೆ ಇದು ನಳ ಪಾಕದ ಸಿನಿಮಾ.‌ಇಲ್ಲಿ ಅರವಿಂದ್ ಅಯ್ಯರ್, ಪ್ರಿಯಾಂಕಾ ತಿಮ್ಮೇಶ್, ಆರೋಹಿ ನಾರಾಯಣ್ ಸೇರಿ ಹಲವರ ತಾರಗಣ ಈ ಚಿತ್ರಕ್ಕಿದೆ. ಇಲ್ಲಿ ಆದ್ಯಾ ನಾಯಕ‌ ಅರವಿಂದ್ ಅಯ್ಯರ್ ಮಗಳು. ಉಳಿದಂತೆ‌ಇಬ್ಬರು‌ನಾಯಕಿಯರಲ್ಲಿ ಆಕೆಯ ತಾಯಿ ಯಾರು ಎನ್ನುವುದು ಸಸ್ಪೆನ್ಸ್ . ಕತೆಯಲ್ಲಿ ಹಾಗೊಂದು‌ ಟರ್ನ್ ಆ್ಯಂಡ್ ಟ್ವಿಸ್ಟ್ ಇರುವ ಪಾತ್ರ ಆದ್ಯಾ ಳದು. ಪಾತ್ರ‌ತುಂಬಾ ಚೆನ್ನಾಗಿದೆ. ಚಿತ್ರವೂ ಸೊಗಸಾಗಿ ಬಂದಿದೆ. ಸರಿ ಸುಮಾರು 30 ದಿನ ಚಿತ್ರೀಕರಣಕ್ಕೆ ಹೋಗಿದ್ದೆವು. ಕೊಡಚಾದ್ರಿ, ಬೆಂಗಳೂರಿನಲ್ಲಿ ಚಿತ್ರೀಕರಣ ಇತ್ತು.‌ ಚಿತ್ರ ತಂಡ ನಮ್ಮನ್ನು ಒಂದು ಫ್ಯಾಮಿಲಿ‌ಮೆಂಬರ್ ಥರ ಟ್ರಿಟ್ ಮಾಡಿತು ಎನ್ನುವ ಮೂಲಕ ಮಗಳ‌ಸಿನಿಮಾ‌ಬಗ್ಗೆ ಅತೀವ ಭರವಸೆ ಹೊರ ಹಾಕುತ್ತಾರೆ ಅಶ್ಬಿನಿ. ಅವರು ಬಯಸಿದಂತೆ ಪುಟಾಣಿ ಆದ್ಯಾ 'ಸಿನಿಲಹರಿ‌' ಕಡೆ ಯಿಂದಲೂ‌ ಬೆಸ್ಟ್ ವಿಶಷ್.
ಆತ್ಮಹತ್ಯಾ ಬಾಂಬ್ ದಾಳಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದ ಉಗ್ರ | Kannada Dunia | Kannada News | Karnataka News | India News
HomeLive NewsIndiaಆತ್ಮಹತ್ಯಾ ಬಾಂಬ್ ದಾಳಿಗೂ ಮುನ್ನ ವಿಡಿಯೋ ರೆಕಾರ್ಡ್…
ಆತ್ಮಹತ್ಯಾ ಬಾಂಬ್ ದಾಳಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದ ಉಗ್ರ
01-01-2018 1:50PM IST / No Comments / Posted In: India, Featured News
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಿನ್ನೆಯಷ್ಟೆ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದ ಉಗ್ರರು, ಐವರು CRPF ಯೋಧರನ್ನು ಹತ್ಯೆ ಮಾಡಿದ್ದರು. ಇದೀಗ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ.
ಮುಸಲ್ಮಾನರು ಅದರಲ್ಲೂ ಕಾಶ್ಮೀರದ ಯುವಕರೆಲ್ಲ ಒಟ್ಟಾಗಿ ಭಾರತದ ವಿರುದ್ಧ ಹೋರಾಡೋಣ ಅಂತಾ ವಿಡಿಯೋದಲ್ಲಿ ಉಗ್ರ ಕರೆ ನೀಡಿದ್ದಾನೆ. ತನ್ನ ಸುತ್ತಲೂ ಬಂದೂಕು ಮತ್ತು ಮದ್ದುಗುಂಡುಗಳನ್ನಿಟ್ಟುಕೊಂಡು 17 ವರ್ಷದ ಫರ್ದೀನ್ ಅಹ್ಮದ್ ಈ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ವಿಡಿಯೋ ರಿಲೀಸ್ ಆಗುವಷ್ಟರಲ್ಲಿ ತಾನು ಸ್ವರ್ಗದಲ್ಲಿರುತ್ತೇನೆ ಅಂತಾನೂ ಹೇಳಿಕೊಂಡಿದ್ದಾನೆ. ಉಗ್ರ ಸಂಘಟನೆ ಸೇರಿರೋ ಫರ್ದೀನ್ ಪೊಲೀಸ್ ಅಧಿಕಾರಿಯೊಬ್ಬರ ಮಗ ಅನ್ನೋದು ವಿಪರ್ಯಾಸ. ಮೂರು ತಿಂಗಳ ಹಿಂದಷ್ಟೆ ಈತ ಭಯೋತ್ಪಾಕ ಸಂಘಟನೆಯನ್ನು ಸೇರಿದ್ದ.
ಆದ್ರೆ ನಿನ್ನೆ ಸಿ ಆರ್ ಪಿ ಎಫ್ ನೆಲೆ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ಮಾಡುವ ಮೂಲಕ ಇವನ ಬದುಕು ಅಂತ್ಯವಾಗಿದೆ. ಧರ್ಮ ನಿಂದಕರು ನಮ್ಮ ಭೂಮಿಯನ್ನು ಕಬಳಿಸಿದ್ದಾರೆ. ಮಹಿಳೆಯರ ಗೌರವಕ್ಕೆ ಧಕ್ಕೆಯಾಗ್ತಿದೆ. ಜಿಹಾದ್ ಈಗ ನಮ್ಮ ಕರ್ತವ್ಯ, ಕಾಶ್ಮೀರದ ಯುವಕರೇ ನಿಮ್ಮ ಕರ್ತವ್ಯವನ್ನು ಅರಿತುಕೊಳ್ಳಿ ಅಂತೆಲ್ಲಾ ವಿಡಿಯೋದಲ್ಲಿ ಹೇಳಿದ್ದಾನೆ.
ಬಡವರಿಗೆ ಕಡಿಮೆ ದರದಲ್ಲಿ ಮರಳು ಪೂರೈಕೆ: ಸಚಿವ ಮುರುಗೇಶ ನಿರಾಣಿ - Varthabharati
ಬಡವರಿಗೆ ಕಡಿಮೆ ದರದಲ್ಲಿ ಮರಳು ಪೂರೈಕೆ: ಸಚಿವ ಮುರುಗೇಶ ನಿರಾಣಿ
ಮಂಗಳೂರು, ಎ.8: ಆರ್ಥಿಕವಾಗಿ ಹಿಂದುಳಿದವರಿಗೆ ಅತ್ಯಂತ ಕಡಿಮೆ ದರದಲ್ಲಿ ಮರಳು ದೊರಕಿಸುವ ಉದ್ದೇಶದಿಂದ 10 ಲಕ್ಷ ರೂ. ಗಿಂತ ಕಡಿಮೆ ಖರ್ಚಿನ ಮನೆ, ನಿರ್ಮಾಣ ಕಾರ್ಯಗಳಿಗೆ 1 ಟನ್‌ಗೆ 100 ರೂ. ನಂತೆ ಮರಳು ವಿತರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಗುರುವಾರ ಇಲಾಖೆಯ ಪ್ರಗತಿ ಪರಿಶೀಲನೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಹೊಸ ಗಣಿ ನೀತಿಯ ಕರಡು ಸಿದ್ಧವಾಗಿದ್ದು, ಈ ಬಗ್ಗೆ ವಿವಿಧ ಕ್ಷೇತ್ರದ ತಜ್ಞರ ಅಭಿಪ್ರಾಯ ಪಡೆದು ಈ ತಿಂಗಳಾಂತ್ಯದೊಳಗೆ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿದೆ. ಈ ನೀತಿಯಲ್ಲಿ ದ.ಕ., ಉಡುಪಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ ಇರಲಿದೆ. 10 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ನಿರ್ಮಾಣ ಕಾರ್ಯಗಳಿಗೆ ಹಾಗೂ ಸರಕಾರಿ ಕಾಮಗಾರಿಗಳಿಗೆ ಪ್ರತ್ಯೇಕ ರಾಯಲ್ಟಿ ನಿಗದಿಪಡಿಸಲಾಗುವುದು. ಇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಈ ಗಣಿ ನೀತಿಯಲ್ಲಿ ಸೇರಿಸಲಾಗಿದೆ ಎಂದು ಮುರುಗೇಶ್ ನಿರಾಣಿ ನುಡಿದರು.
ಶಿವಮೊಗ್ಗ, ಚಿಕ್ಕಬಳ್ಳಾಪುರ ಗಣಿಗಾರಿಕೆ ಪ್ರದೇಶದೊಳಗೆ ಸಾಗಾಟದ ವೇಳೆ ಸ್ಪೋಟ ನಡೆದ ಕಾರಣ ಸ್ಥಗಿತಗೊಳಿಸಲಾಗಿದ್ದ ಇತರ ಗಣಿಗಾರಿಕೆಗಳ ಕಾರ್ಯಾರಂಭಕ್ಕೆ ಆದೇಶಿಸಲಾಗಿದೆ ಎಂದ ಸಚಿವರು, ಗಣಿಗಾರಿಕೆಗೆ ಪರವಾನಗಿ ನೀಡುವಾಗ ಎನ್‌ಒಸಿ ಪಡೆಯಲು ಹಲವು ಕಚೇರಿಗಳಿಗೆ ಹೋಗುವುದನ್ನು ತಪ್ಪಿಸಲು ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗುವುದು ಎಂದರು.
5 ಕಡೆ ಗಣಿ ಅದಾಲತ್: ಗಣಿಗಾರಿಕೆ ಕ್ಷೇತ್ರದ ಸಮಸ್ಯೆ ಮತ್ತು ಇದರಿಂದ ಜನರಿಗೆ ಆಗುವ ಸಮಸ್ಯೆಗಳನ್ನು ನಿವಾರಿಸಲು ರಾಜ್ಯದ ಐದು ಕಡೆಗಳಲ್ಲಿ ಗಣಿ ಅದಾಲತ್ ನಡೆಸಲಾಗುವುದು. ಎ.30ರಂದು ಬೆಂಗಳೂರಿನಲ್ಲಿ ಅದಾಲತ್ ನಡೆಸಲಾಗುತ್ತಿದ್ದು, ಬಳಿಕ ರಾಜ್ಯದ ನಾಲ್ಕೂ ವಿಭಾಗಗಳಲ್ಲಿ ನಡೆಯಲಿದೆ. ಸಮಸ್ಯೆಗಳ ಬಗ್ಗೆ ಮನವಿ ನೀಡಿದರೆ ಅದಾಲತ್‌ನಲ್ಲಿ ಸ್ಥಳದಲ್ಲೇ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಿರಾಣಿ ತಿಳಿಸಿದರು.
ಚಿನ್ನದ ನಾಣ್ಯ: ಹಟ್ಟಿಯಲ್ಲಿರುವ ಚಿನ್ನದ ಗಣಿಯನ್ನು ಕರ್ನಾಟಕ ರಾಜ್ಯ ಹಟ್ಟಿ ಚಿನ್ನದ ಕಂಪೆನಿ ಎಂದು ಮರುನಾಮಕರಣ ಮಾಡಿ ರಾಜ್ಯದ್ದೇ ಆದ ಚಿನ್ನದ ಬ್ರಾಂಡ್ ರೂಪಿಸಲು ಉದ್ದೇಶಿಸಲಾಗಿದೆ. ಚಿನ್ನದ ಗಟ್ಟಿಯ ಬದಲಾಗಿ ರಾಷ್ಟ್ರ ಲಾಂಛನ, ವಿವಿಧ ಕ್ಷೇತ್ರಗಳ ಮಹಾಪುರುಷರ ಭಾವ ಚಿತ್ರಗಳುಳ್ಳ ಚಿನ್ನದ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ನಿರಾಣಿ ಹೇಳಿದರು.
ನೌಕರರಿಗೆ ಸಮವಸ್ತ್ರ: ಗಣಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಗಣಿಗಾರಿಕೆ ಪ್ರದೇಶಗಳಿಗೆ ಕಾರ್ಯಾಚರಣೆಗೆ ತೆರಳುವಾಗ ಅವರನ್ನು ಗುರುತಿಸದೆ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಗಣಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್, ಅರಣ್ಯ ಇಲಾಖೆಯಂತೆ ರ್ಯಾಂಕ್ ಆಧರಿಸಿಕೊಂಡು ಸಮವಸ್ತ್ರ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಕೇಂದ್ರೀಕೃತ ಜಿಪಿಎಸ್, ವಾಕಿಟಾಕಿ ನೀಡುವುದಕ್ಕೂ ತೀರ್ಮಾನಿಸಲಾಗಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.
ಕರಾವಳಿ ಗಣಿಗಳು ನಿರಾಳ
ದ.ಕ. ಉಡುಪಿ ಜಿಲ್ಲೆಯಲ್ಲಿ ಕಲ್ಲು ಗಣಿಗಳು ಬಹುತೇಕ 2 ಎಕರೆಗಿಂತ ಕಡಿಮೆ ಪ್ರದೇಶದಲ್ಲಿರುವ ಕಾರಣ ಅಂತಹ ಕಡೆಗೆ ಸ್ಫೋಟಕ ಲೈಸೆನ್ಸ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಹಾಗಾಗಿ ಜಲ್ಲಿಕಲ್ಲು ಸಮಸ್ಯೆ ಉಂಟಾಗದು. ರಾಜ್ಯದಲ್ಲಿ ಜೆಲಟಿನ್ ಸ್ಪೋಟ ಉಂಟಾದ ಕಾರಣ ದೊಡ್ಡ ಗಣಿಗಳು ಕಡ್ಡಾಯವಾಗಿ ಡಿಜಿಎಂಎಸ್ ಲೈಸೆನ್ಸ್ ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ಅದರಲ್ಲಿ 2 ಎಕ್ರೆ ಕೆಳಗಿನ ಗಣಿಗಳಿಗೆ ವಿನಾಯಿತಿ ಇದೆ. ಇತರರು 90 ದಿನದೊಳಗೆ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ ಎಂದು ನಿರಾಣಿ ಹೇಳಿದರು.
ವಿಷನ್ 2050: ವಿವಿಧ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿಯ ಮೂಲಕ ಮುಂದಿನ 30 ವರ್ಷಗಳಲ್ಲಿ ಗಣಿ ನಿರ್ವಹಣೆ ಹೇಗಿರಬೇಕು? ಹೂಡಿಕೆಯನ್ನು ಹೇಗೆ ಆಕರ್ಷಿಸಬೇಕು? ಅಭಿವೃದ್ಧಿ, ಪರಿಸರ ರಕ್ಷಣೆ, ಪರ್ಯಾಯದ ಬಗ್ಗೆ 'ವಿಷನ್-2050' ಅನ್ನು ಸಿದ್ಧಪಡಿಸಲಾಗುವುದು ಎಂದರು.
ಕೇಂದ್ರ ಗಣಿ ಮಹಾವಿದ್ಯಾಲಯವನ್ನು ಸಂಡೂರು ಅಥವಾ ಚಿತ್ರದುರ್ಗದಲ್ಲಿ ಸ್ಥಾಪಿಸುವ ಚಿಂತನೆ ಇದೆ. ಇಲ್ಲಿ ಗಣಿ ಕುರಿತ ಸಮಗ್ರ ಅಧ್ಯಯನ, ತರಬೇತಿ, ಕೋರ್ಸ್‌ಗಳು ಇರಲಿವೆ ಎಂದರು.
ಪೂಜಾ ಹೆಗ್ಡೆ - ವಿಕಿಪೀಡಿಯ
Hegde at Lakme Fashion Week in 2018
(1990-10-13) 13 October 1990 (age 31)
ಎಮ್ ಕಾಮ್
ನಟಿ, ಮಾದರಿ
೨೦೧೦ - ಇಂದಿನವರೆಗೆ
ಪೂಜಾ ಹೆಗ್ಡೆ ಭಾರತೀಯ ರೂಪದರ್ಶಿ ಮತ್ತು ಚಲನಚಿತ್ರ ನಟಿ. ಮುಖ್ಯವಾಗಿ ಇವರು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಮಿಸ್ ಯೂನಿವರ್ಸ್ ಇಂಡಿಯಾ ೨೦೧೦ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಕಿರೀಟವನ್ನು ಪಡೆದರು. ಮಿಸ್ಕಿನ್ ಅವರ ತಮಿಳು ಸೂಪರ್ಹೀರೋ ಚಿತ್ರ ಮುಗಮುಡಿ (೨೦೧೨) ಚಿತ್ರದಲ್ಲಿ ನಟಿಸಲು ತೆರಳಿದರು. ನಂತರ ಅವರು ತೆಲುಗು ಚಿತ್ರಗಳಾದ ಓಕಾ ಲೈಲಾ ಕೋಸಮ್ ಮತ್ತು ಮುಕುಂದ (೨೦೧೪) ನಲ್ಲಿ ಕಾಣಿಸಿಕೊಂಡರು. ಹೃತಿಶ್ ಗೋವಾರಿಕರ್ ಅವರ ಮೊಹೆಂಜೊದಾರೊ (೨೦೧೬) ಚಿತ್ರದಲ್ಲಿ ಹೃತಿಕ್ ರೋಷನ್ ಅವರೊಂದಿಗೆ ಪ್ರಮುಖ ನಟಿಯಾಗಿ ನಟಿಸಲು ಸಹಿ ಹಾಕಿದರು.[೧]
ಪೂಜಾ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದ ಮುಂಬೈನಲ್ಲಿ. ಆಕೆಯ ಪೋಷಕರಾದ ಮಂಜುನಾಥ್ ಹೆಗ್ಡೆ ಮತ್ತು ಲತಾ ಹೆಗ್ಡೆ ಕರ್ನಾಟಕದ ಮಂಗಳೂರಿನವರು. ಅವಳ ಮಾತೃಭಾಷೆ ತುಳು. ಮತ್ತು ಇವರು ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಯನ್ನು ಮಾತನಾಡುತಿದ್ದರು.[೨] ಇವರು ಎಂ.ಎಂ.ಕೆ ಕಾಲೇಜಿಗೆ ಹೋದರು. ಇವರು ನಿಯಮಿತವಾಗಿ ಇಂಟರ್ಕಾಲೇಜಿಯೇಟ್ ಸ್ಪರ್ಧೆಗಳಲ್ಲಿ ಪ್ರವೇಶಿಸಲು ಪ್ರಯತ್ನಿಸಿದರು. ಇವರು ನೃತ್ಯ ಮತ್ತು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದರು.[೩]
బాంబే టైమ్స్ ఫ్యాషన్ వీక్‌లో పూజా హెగ్డే
ಇವರು ಮಿಸ್ ಇಂಡಿಯಾ ೨೦೦೯ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ಆದರೆ ಮಿಸ್ ಇಂಡಿಯಾ ಟ್ಯಾಲೆಂಟೆಡ್ ೨೦೦೯ ಗೌರವವನ್ನು ಗೆದ್ದರೂ ಆರಂಭಿಕ ಸುತ್ತಿನಲ್ಲಿ ಹೊರಹಾಕಲ್ಪಟ್ಟರು. ಇವರು ಮುಂದಿನ ವರ್ಷ ಮತ್ತೆ ಅರ್ಜಿ ಸಲ್ಲಿಸಿದರು ಮತ್ತು ಮಿಸ್ ಯೂನಿವರ್ಸ್ ಇಂಡಿಯಾ ೨೦೧೦ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿದ್ದರು. ಮಿಸ್ ಇಂಡಿಯಾ ಸೌತ್ ಗ್ಲಾಮರಸ್ ಹೇರ್ ೨೦೧೦ ಕಿರೀಟವನ್ನು ಪಡೆದರು. ಜೀವಾ ಎದುರು ಮಿಸ್ಕಿನ್‌ನ ತಮಿಳು ಸೂಪರ್ಹೀರೋ ಚಿತ್ರ ಮುಗಮುಡಿ (೨೦೧೨) ಚಿತ್ರದಲ್ಲಿ ನಟಿಸಿದ ಅವರು, ಸಮಾಜದ ಬಗೆಗಿನ ತನ್ನ ದೃಷ್ಟಿಕೋನವನ್ನು ಬದಲಿಸಲು ಪುರುಷ ಪಾತ್ರಕ್ಕೆ ಪ್ರೇರಣೆ ನೀಡುತ್ತಾರೆ.
ಇವರ ಎರಡನೇ ತೆಲುಗು ಚಿತ್ರ ಓಕಾ ಲೈಲಾ ಕೋಸಮ್ (೨೦೧೪), ಅವರ ಎದುರು ನಾಗ ಚೈತನ್ಯ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಪ್ರಶಂಸೆಗೆ ಪಾತ್ರರಾದರು. ಅದೇ ಸಮಯದಲ್ಲಿ, ಅವರು ೬೨ ನೇ ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿ (ದಕ್ಷಿಣ) ಅತ್ಯುತ್ತಮ ನಟಿಗಾಗಿ ನಾಮನಿರ್ದೇಶನಗೊಂಡರು.[೪] ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕ ವಿಜಯ್ ಕೊಂಡಾ ಅವರ ಹಿಂದಿನ ಸಾಹಸದ ಯಶಸ್ಸಿನ ನಂತರ ಈ ಯೋಜನೆಯಲ್ಲಿ ಕೆಲಸ ಮಾಡಲು ಅವಳನ್ನು ಪ್ರೇರೇಪಿಸಿತು. ಪ್ರಮುಖ ಮಹಿಳಾ ಪಾತ್ರವನ್ನು ಚಿತ್ರಿಸಲು ಸಹಾಯ ಮಾಡಲು ಅವರು ತೆಲುಗು ಪಾಠಗಳನ್ನು ಕೈಗೊಂಡರು. ತನ್ನ ಎರಡನೇ ತೆಲುಗು ಚಿತ್ರದಲ್ಲಿ ಹೆಗ್ಡೆ ಮುಕುಂದ ಅವರ ಗೋಪಿಕಮ್ಮ ಹಾಡಿನಲ್ಲಿ ಅವರ ಸ್ಮರಣೀಯ ಅಭಿನಯದಿಂದ ಅನೇಕರನ್ನು ಮೆಚ್ಚಿಸಿದರು.
ಜುಲೈ ೨೦೧೪ ರಲ್ಲಿ, ಸಿಂಧೂ ಕಣಿವೆಯ ನಾಗರಿಕತೆಯ ಹಿನ್ನೆಲೆಯ ವಿರುದ್ಧ ಹೊಂದಿದ ಅಶುತೋಷ್ ಗೋವಾರಿಕರ್ ಅವರ ಮುಂಬರುವ ಅವಧಿಯ ಚಲನಚಿತ್ರ ಮೊಹೆಂಜೊದಾರೊ ಚಿತ್ರದಲ್ಲಿ ಹೃತಿಕ್ ರೋಷನ್ ಎದುರು ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಹೆಗ್ಡೆ ಒಪ್ಪಿಕೊಂಡರು.[೫] ಗೋವಾರಿಕರ್ ಅವರ ಪತ್ನಿ ಜಾಹೀರಾತಿನಲ್ಲಿ ಅವಳನ್ನು ಗುರುತಿಸಿ ಆಡಿಷನ್ಗೆ ಕರೆದ ನಂತರ ಅವಳು ಆಯ್ಕೆಯಾದಳು. ಅದನ್ನು ಅವಳು ಯಶಸ್ವಿಯಾಗಿ ಪೂರ್ಣಗೊಳಿಸಿದಳು. ಚಿತ್ರದ ಬಗೆಗಿನ ಅವರ ಬದ್ಧತೆಯ ಪರಿಣಾಮವಾಗಿ, ತನ್ನ ಹಿಂದಿ ಚಿತ್ರ ಬಿಡುಗಡೆಯಾಗುವವರೆಗೂ ಪ್ರಾದೇಶಿಕ ಭಾರತೀಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸ್ವಲ್ಪ ವಿರಾಮ ತೆಗೆದುಕೊಳ್ಳುವುದಾಗಿ ಬಹಿರಂಗಪಡಿಸಿದಳು ಮತ್ತು ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶವನ್ನು ತಿರಸ್ಕರಿಸಿದಳು.[೬][೭]
ಮುಗಮುಡಿ
ಶಕ್ತಿ ತಮಿಳು
ಒಕಾ ಲೈಲಾ ಕೋಸಮ್
ನಂದನ ತೆಲುಗು
ಮೊಹೆಂಜೊದಾರೊ
ಚಾನಿ ಹಿಂದಿ
ದುವಾಡ ಜಗನ್ನಾಧಂ
ಪೂಜಾ ತೆಲುಗು [೮]
ಐಟಂ ನಂಬರ್ "ಜಿಗೆಲು ರಾಣಿ" ಹಾಡಿನಲ್ಲಿ ವಿಶೇಷ ಪಾತ್ರ
ಸಾಕ್ಷ್ಯಾಮ್
ಅರವಿಂದ ಸಮೇತ ವೀರ ರಾಘವ
TBA ತೆಲುಗು
ಹೌಸ್‌ಫುಲ್ 4
ಪ್ರಿಯಾ ರಾಣಾ ಹಿಂದಿ ಚಿತ್ರೀಕರಣ[೯]
ಅಲಾ ವೈಕುಂತಪುರಂಲೊ
TBA ತೆಲುಗು [೧೦].
↑ https://www.hindustantimes.com/fashion-and-trends/mohenjo-daro-star-pooja-hegde-gives-us-a-sneak-peek-into-her-wardrobe/story-YCUCyypjNuuRkLuBj3seuM.html
↑ https://web.archive.org/web/20120922042647/http://www.coolage.in/2012/09/19/working-with-bal-asha-was-amazing-pooja-hegde/
↑ https://www.thehindu.com/todays-paper/tp-features/tp-cinemaplus/picture-of-confidence/article3793545.ece
↑ http://www.filmfare.com/features/nominations-for-the-62nd-britannia-filmfare-awards-south-9405-2.html
↑ https://www.bollywoodhungama.com/news/2576198
↑ https://timesofindia.indiatimes.com/entertainment/kannada/movies/news/Pooja-Hegde-focuses-on-Hrithik-Roshans-Mohenjo-daro/articleshow/40565452.cms
↑ www.thehindu.com/features/metroplus/it-is-pooja-hedges-turn-in-world-of-movies/article6435611.ece?secname=entertainment&secpage=true
↑ "'Housefull 4': All you need to know about the film". m.timesofindia.com. Archived from the original on 18 July 2018. Retrieved 12 August 2018. Unknown parameter |dead-url= ignored (help)
↑ "AA 19 First Glimpse: అల్లు అర్జున్ 'అల వైకుంఠపురములో'.. ఫస్ట్ పంచ్ పేలిందే!". Telugu Samayam. Retrieved 2019-08-13.
ರೈತರಿಗೆ ಕೈತುಂಬ ಹಣ ಕೊಡಿ : ಕೇಂದ್ರಕ್ಕೆ ತಜ್ಞರ ಸಲಹೆ | All India News Online
Home ಕೃಷಿ ರೈತರಿಗೆ ಕೈತುಂಬ ಹಣ ಕೊಡಿ : ಕೇಂದ್ರಕ್ಕೆ ತಜ್ಞರ ಸಲಹೆ
Posted By: site adminon: January 13, 2021 In: ಕೃಷಿ
ಕೃಷಿ ಕ್ಷೇತ್ರದ ಸಂಪೂರ್ಣ ಬೆಳವಣಿಗೆಗೆ ಸ್ಥಳೀಯ ಕೃಷಿ ಸಂಶೋಧನೆ, ಎಣ್ಣೆಕಾಳು ಉತ್ಪಾದನೆ, ಆಹಾರ ಸಂಸ್ಕರಣೆ ಮತ್ತು ಸಾವಯವ ಕೃಷಿ ಉತ್ತೇಜಿಸಲು ಸರ್ಕಾರ ಮುಂಬರುವ ತನ್ನ ಬಜೆಟ್‌ನಲ್ಲಿ ಹೆಚ್ಚುವರಿ ಹಣ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಉದ್ಯಮ ತಜ್ಞರು ಒತ್ತಾಯಿಸಿದ್ದಾರೆ. ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಸಬ್ಸಿಡಿ ನೀಡುವ ಬದಲು ರೈತರ ಬೆಂಬಲವನ್ನು ವ್ಯಾಪಕಗೊಳಿಸಬೇಕು ಎಂದು ಪ್ರತಿಪಾದಿಸಿದರು.
ಆಹಾರ ಸಂಸ್ಕರಣಾ ಉದ್ಯಮವು ರೈತನಿಗೆ ಉತ್ತಮ ಬೆಲೆ ಮತ್ತು ಮಧ್ಯವರ್ತಿಗಳ ವೆಚ್ಚ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಡ್ಡಿ ಸಬ್ವೆನ್ಷನ್, ಕಡಿಮೆ ತೆರಿಗೆ, ತಂತ್ರಜ್ಞಾನದ ಪ್ರವೇಶದಂತಹ ಮುಂತಾದ ಪ್ರೋತ್ಸಾಹಕಗಳ ಮೂಲಕ ಆಹಾರ ಸಂಸ್ಕರಣೆಗೆ ಬಜೆಟ್ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಡಿಸಿಎಂ ಶ್ರೀರಾಮ್ ಅಧ್ಯಕ್ಷ ಮತ್ತು ಎಂಡಿ ಅಜಯ್ ಶ್ರೀರಾಮ್ ಹೇಳಿದರು.
ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ 6,000 ರೂ. ನೇರವಾಗಿ ಪಾವತಿಸುವ ಪಿಎಂ-ಕಿಸಾನ್ ಯೋಜನೆಯನ್ನು ಉಲ್ಲೇಖಿಸಿದ ಅವರು, ಡಿಬಿಟಿ ಕಾರ್ಯವಿಧಾನ ಉತ್ತಮವಾಗಿ ಹೊಂದಿಸಬೇಕು. ಕ್ರಮೇಣ ಇತರ ಸಬ್ಸಿಡಿಗಳಿಗೆ ಬದಲಾಗಿ ರೈತರನ್ನು ಬೆಂಬಲಿಸಲು ಬಳಸಿಕೊಳ್ಳಬೇಕು ಎಂದರು.