text
stringlengths
0
61.5k
• ಹೊಟ್ಟೆಯುಬ್ಬರಿಕೆಯಾದರೆ ಇದಕ್ಕೆ ತಕ್ಷಣದ ಪರಿಹಾರವೆಂದರೆ ಮೊಸರನ್ನದ ಸೇವನೆ. ಅಜೀರ್ಣತೆ ಅಥವಾ ಹೊಟ್ಟೆ ಕೆಟ್ಟಿರುವ ಯಾವುದೇ ಸೂಚನೆ ಕಂಡು ಬಂದರೆ ಮೊದಲಾಗಿ ಮೊಸರನ್ನವನ್ನು ಸೇವಿಸಿಬಿಡಬೇಕು. ಅಲ್ಲದೇ ಮೊಸರನ್ನ ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಕಾರಣ ಎಲ್ಲಾ ವಯಸ್ಸಿನವರೂ ಇದನ್ನು ಯಾವುದೇ ಅಳುಕಿಲ್ಲದೇ ಸೇವಿಸಬಹುದು.
ಮೊಸರನ್ನ ತಣ್ಣಗಿರುವಾಗಲೇ ಸೇವಿಸಿ
• ಮೊಸರನ್ನವನ್ನು, ತಣ್ಣಗಿದ್ದಂತೆಯೇ, ನಿತ್ಯವೂ ಸೇವಿಸಬೇಕೆಂದು ಆಹಾರತಜ್ಞರ ಅಭಿಪ್ರಾಯವಾಗಿದೆ. ಇದರಿಂದ ದೇಹವನ್ನು ಒಳಗಿನಿಂದ ತಪಾಗಿರಿಸಲು ಸಾಧ್ಯವಾಗುತ್ತದೆ ಹಾಗೂ ದೇಹದ ತಾಪಮಾನವನ್ನೂ ಆರೋಗ್ಯಕರ ಮಿತಿಗಳಲ್ಲಿರಿಸಬಹುದು. ವಿಶೇಷವಾಗಿ ಜ್ವರ ಆವರಿಸಿದಾಗ ಸೇವಿಸಲು ಮೊಸರನ್ನ ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ, ಬೇಸಿಗೆಯ ದಿನಗಳಲ್ಲಿ, ಮೊಸರನ್ನದ ಸೇವನೆಯಿಂದ ದೇಹ ಅತಿ ಶೀಘ್ರವಾಗಿ ತಾಪವೇರದಂತೆ ನೋಡಿಕೊಳ್ಳುವ ಮೂಲಕ ಬಿಸಿಲ ಝಳವನ್ನು ಸಹಿಸಿಕೊಳ್ಳಲೂ ನೆರವಾಗುತ್ತದೆ.
ಮೊಸರಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು
ಮೊಸರಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು, ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳು ಹಾಗೂ ಕೊಬ್ಬುಗಳು ಎಲ್ಲವೂ ಆರೋಗ್ಯಕ್ಕೆ ಉತ್ತಮವೇ ಆಗಿವೆ. ಅಲ್ಲದೇ ಮೊಸರಿನ ಸೇವನೆಯಿಂದ ಮಾನಸಿಕ ಒತ್ತಡವನ್ನೂ ಸುಲಭವಾಗಿ ನಿರ್ವಹಿಸಬಹುದು. ಇದೇ ಕಾರಣಕ್ಕೆ ಮೊಸರನ್ನು ಒತ್ತಡ ನಿವಾರಕವೆಂದೂ ಕರೆಯುತ್ತಾರೆ. ಅಲ್ಲದೇ ಭಾವನೆಗಳ ಮೂಲಕ ಮೆದುಳಿಗೆ ಎದುರಾಗುವ ನೋವು ಮತ್ತು ವೇದನೆಯನ್ನೂ ನಿರ್ವಹಿಸಲು ಮೊಸರು ನೆರವಾಗುತ್ತದೆ.
ತೂಕ ಕಳೆದುಕೊಳ್ಳುವ ಯತ್ನದಲ್ಲಿರುವ ವ್ಯಕ್ತಿಗಳು ಅತಿ ಹೆಚ್ಚು ಜನರು ಬಯಸುವ ಆಹಾರವಾಗಿರುವ ಮೊಸರನ್ನ ದಿನದ ಒಂದು ಹೊತ್ತಿನಲ್ಲಾದರೂ, ಕೊಂಚ ಪ್ರಮಾಣದಲ್ಲಿಯಾದರೂ ಇರಬೇಕೆಂದು ಬಯಸುತ್ತಾರೆ. ಒಂದು ಕಪ್ ನಷ್ಟು ಮೊಸರನ್ನ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ ಹಾಗೂ ಅನಗತ್ಯವಾಗಿ ಹೆಚ್ಚಿನ ಕ್ಯಾಲೋರಿ ಇರುವ ಅನಾರೋಗ್ಯಕರ ಆಹಾರ ಸೇವನೆಯಿಂದ ತಡೆಯುತ್ತದೆ. ಅನ್ನದಿಂದ ತಯಾರಿಸುವ ಇತರ ಖಾದ್ಯಗಳಾದ ಪಲಾವ್, ಘೀ ರೈಸ್ ಮೊದಲಾದವುಗಳಿಗೆ ಹೋಲಿಸಿದರೆ ಮೊಸರನ್ನದಲ್ಲಿ ನಗಣ್ಯ ಪ್ರಮಾಣದ ಕ್ಯಾಲೋರಿಗಳಿವೆ.
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳ ಕಾರಣ ಅನಾರೋಗ್ಯದ ಸಮಯದಲ್ಲಿ ಸೇವಿಸಲು ನೀಡುವ ಪ್ರಮುಖ ಆಹಾರವಾಗಿ ಮೊಸರನ್ನವನ್ನು ಆಯ್ಕೆ ಮಾಡಲಾಗುತ್ತದೆ. ಮೊಸರನ್ನದ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ದಿಸುತ್ತದೆ ಹಾಗೂ ಹಲವಾರು ಸೋಂಕುಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಶಕ್ತಿಯನ್ನು ನೀಡುವ ಮೂಲಕ ಅನಾರೋಗ್ಯದಿಂದ ಶೀಘ್ರವೇ ಚೇತರಿಸಿಕೊಳ್ಳಲೂ ಸಹಕರಿಸುತ್ತದೆ.
ಇನ್ನೂ ಕೆಲವು ಕಾರಣಗಳಿವೆ
ಮೇಲೆ ವಿವರಿಸಿದ ಕಾರಣಗಳಿಗೆ ಹೊರತಾಗಿ, ಮೊಸರನ್ನವನ್ನು ಕಡ್ಡಾಯವಾಗಿ ಏಕೆ ಸೇವಿಸಬೇಕೆಂದು ನಿರೂಪಿಸಲು ಇನ್ನೂ ಕೆಲವು ಕಾರಣಗಳಿವೆ. ಮೊಸರನ್ನವನ್ನು ಹಾಲುಹಲ್ಲಿನ ಪುಟ್ಟ ಮಕ್ಕಳಿಗೂ ಸೇವಿಸಲು ನೀಡಬಹುದು. ಮೊಸರನ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರ್ಬೋಹೈಡ್ರೇಟುಗಳು ಹಾಗೂ ಪ್ರೋಟೀನುಗಳು ದೇಹದ ಅಗತ್ಯತೆಯನ್ನು ಪೂರೈಸುತ್ತದೆ ಹಾಗೂ ವಿಶೇಷವಾಗಿ ಹುರಿದ ಅಥವಾ ಖಾರವಾಗಿರುವ ಆಹಾರಗಳ ಸೇವನೆಯ ಬಳಿಕ ಮೊಸರನ್ನವನ್ನು ಸೇವಿಸಿದರೆ ಜೀರ್ಣಕ್ರಿಯೆ ನೆರವಾಗುತ್ತದೆ ಹಾಗೂ ಮರುದಿನದ ಬಹಿರ್ದೆಸೆಯ ಸಮಯದಲ್ಲಿ ಉರಿಯಾಗದಂತೆ ರಕ್ಷಿಸುತ್ತದೆ. ವಿಶೇಷವಾಗಿ ಮೊಸರಿನ ಸೇವನೆಯಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ ಹಾಗೂ ಇದೇ ಕಾರಣಕ್ಕೆ ಮುಖಕ್ಕೆ ಲೇಪಿಸುವ ಕೆಲವಾರು ಮುಖಲೇಪಗಳಲ್ಲಿ ಮೊಸರನ್ನು ಬಳಸಲಾಗುತ್ತದೆ.
ಮೊಸರನ್ನವನ್ನು ತಯಾರಿಸುವುದು ಹೇಗೆ?
ಮೊಸರನ್ನವನ್ನು ಸುಲಭವಾಗಿ, ಕೆಲವೇ ಕ್ಷಣಗಳಲ್ಲಿ ತಯಾರಿಸಬಹುದು. ಒಂದು ಚಿಕ್ಕ ಪಾತ್ರೆಯಲ್ಲಿ ಸರಿಸುಮಾರು ಸಮಪ್ರಮಾಣದಲ್ಲಿ ಅನ್ನ ಮತ್ತು ಮೊಸರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಹುರಿಯುವ ಪಾತ್ರೆಯಲ್ಲಿ ಕೊಂಚ ಎಣ್ಣೆ ಬಿಸಿ ಮಾಡಿ ಕೊಂಚ ಸಾಸಿವೆ, ಜೀರಿಗೆ, ಕಡ್ಲೆ ಬೇಳೆ ಹಾಗೂ ಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಕೊಡಿ. ಬಳಿಕ ಇದರಲ್ಲಿ ಮಿಶ್ರಣ ಮಾಡಿಟ್ಟಿದ್ದ ಮೊಸರನ್ನವನ್ನು ಬೆರೆಸಿ ಚೆನ್ನಾಗಿ ಕಲಕಿ. ಕೊಂಚವೇ ಉಪ್ಪನ್ನು ಬೆರೆಸಿ. ಮೊಸರನ್ನ ಸೇವಿಸಲು ಸಿದ್ಧವಾಗಿದೆ. ರುಚಿಗಾಗಿ ಶೇಂಗಾಬೀಜಗಳನ್ನೂ ಸೇರಿಸಬಹುದು. ತಯಾರಿಸಲು ಸುಲಭ ಹಾಗೂ ವಿಶೇಷವಾಗಿ ಜ್ವರ ಬಂದ ವ್ಯಕ್ತಿಯೂ ಯಾರ ಸಹಾಯವೂ ಇಲ್ಲದೇ ಮೊಸರನ್ನವನ್ನು ತಾನೇ ತಯಾರಿಸಿಕೊಳ್ಳಬಹುದು.
ಕಡಿಮೆ ಸಮಯದಲ್ಲಿ ತಯಾರಿಸಬಹುದು
ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಕಾರಣ ಸುಸ್ತಾಗುವ ಅಥವಾ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯೂ ಇಲ್ಲ. ನಿಮ್ಮ ಅಭಿರುಚಿಗೆ ತಕ್ಕಂತೆ ಮೊಸರನ್ನಕ್ಕೆ ಕೊಂಚ ಹಸಿಮೆಣಸು, ಒಣದ್ರಾಕ್ಷಿ, ಗೋಡಂಬಿ, ಚಿಕ್ಕದಾಗಿ ಹೆಚ್ಚಿದ ಕ್ಯಾರೆಟ್ ತುರಿ, ದಾಳಿಂಬೆ ಹಣ್ಣಿನ ಕಾಳುಗಳು, ದ್ರಾಕ್ಷಿ, ಹಸಿ ಮಾವಿನಕಾಯಿಯನ್ನು ತುರಿದು, ಕೊಂಚ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಅಥವಾ ನಿಮ್ಮ ನೆಚ್ಚಿನ ಇತರ ಹಣ್ಣಿನ ತಿರುಳನ್ನೂ ಬೆರೆಸಿ ವೈವಿಧ್ಯಮಯವಾಗಿಸಬಹುದು.
ಅತಿಸಾರ ಎದುರಾದಾಗ
ಅತಿಸಾರ ಎದುರಾದಾಗ ಸೇವಿಸಲು ಅತ್ಯುತ್ತಮ ಆಹಾರವಾಗಿರುವ ಮೊಸರನ್ನಕ್ಕೆ ಕೊಂಚ ಮೆಂತೆಯನ್ನು ಸೇರಿಸಬೇಕಾಗುತ್ತದೆ. ಇದರಿಂದ ಹೊಟ್ಟೆಯ ತೊಂದರೆ ತಕ್ಷಣವೇ ಇಲ್ಲವಾಗುತ್ತದೆ. ಅಲ್ಲದೇ ರಜೋನಿವೃತ್ತಿ ಸಮೀಪಿಸುತ್ತಿರುವ ಮಹಿಳೆಯರಿಗೆ ಮೊಸರನ್ನವನ್ನು ಸೇವಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಏಕೆಂದರೆ ಈ ಸಮಯದಲ್ಲಿ ಮಹಿಳೆಯರ ದೇಹಕ್ಕೆ ಹೆಚ್ಚಿನ ಕ್ಯಾಲ್ಸಿಯಂ ಅಗತ್ಯವಿದ್ದು ಮೊಸರನ್ನ ಈ ಕೊರತೆಯನ್ನು ನೀಗಿಸುತ್ತದೆ.
ಹಾಲಿಗೆ ಹೋಲಿಸಿದರೆ
ಹಾಲಿಗೆ ಹೋಲಿಸಿದರೆ ಮೊಸರು ಉತ್ತಮವಾದ ಆಯ್ಕೆಯಾಗಿದೆ. ಮೊಸರನ್ನು ಮೊಸರನ್ನದ ರೂಪದಲ್ಲಿ ಸೇವಿಸುವುದು ಅತ್ಯುತ್ತಮವಾಗಿದೆ. ಅಲ್ಲದೇ ಹಾಲು ಕುಡಿದಾದ ಬಳಿಕ ಎದುರಾಗುವ ಹೊಟ್ಟೆಯ ಭಾರವಾಗುವ ಭಾವನೆ ಅದೇ ಪ್ರಮಾಣದ ಮೊಸರನ್ನು ಸೇವಿಸಿದ ಬಳಿಕ ಎದುರಾಗುವುದಿಲ್ಲ. ಅಲ್ಲದೇ ಮೊಸರು ಅತಿ ಸುಲಭವಾಗಿ ಹಾಗೂ ಹಾಲಿಗಿಂತಲೂ ಶೀಘ್ರವಾಗಿ ಜೀರ್ಣಿಸಲ್ಪಡುತ್ತದೆ ಎಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.
ಅಲ್ಲದೇ ಇದರಲ್ಲಿರುವ ಪೊಟ್ಯಾಶಿಯಂ ರಕ್ತದ ಒತ್ತಡವನ್ನೂ ಆರೋಗ್ಯಕರ ಮಿತಿಯಲ್ಲಿರಿಸಲು ನೆರವಾಗುತ್ತದೆ. ಮೊಸರಿನೊಂದಿಗೆ ಕೊಂಚವೇ ಜೇನನ್ನು ಬೆರೆಸಿ ಸೇವಿಸುವುದರಿಂದ ಕಾಮಾಲೆ ರೋಗ ಗುಣವಾಗುವುದನ್ನೂ ಕಂಡುಕೊಳ್ಳಲಾಗಿದೆ. ಮೊಸರನ್ನ ದೇಹವನ್ನು ತಂಪುಗೊಳಿಸುವ ಆಹರವಾಗಿರುವ ಕಾರಣ ಬೇಸಿಗೆಯಲ್ಲಿ ಸೇವಿಸಲು ಅತ್ಯುತ್ತಮವಾಗಿದೆ ಹಾಗೂ ಪ್ರತಿಯೊಬ್ಬರೂ ಮೊಸರನ್ನವನ್ನು ವಿಶೇಷವಾಗಿ ಬೇಸಿಗೆಯಲ್ಲಿ ಕೊಂಚ ಪ್ರಮಾಣದಲ್ಲಿಯಾದರೂ ಸರಿ, ನಿತ್ಯದ ಆಹಾರದಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಬೇಕು.
ರಾಜ್ಯದಲ್ಲಿ 65 ಸಾವಿರ ಕೋಟಿ ರೂ. ಹೂಡಿಕೆ; ದಾವೋಸ್‌ನ 25 ಕಂಪೆನಿ ಜತೆ ಸಿಎಂ ಮಾತುಕತೆ | Udayavani – ಉದಯವಾಣಿ
Monday, 27 Jun 2022 | UPDATED: 06:01 PM IST
ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ
ಪಠ್ಯ ಪುಸ್ತಕದಲ್ಲಿ ಕನಕದಾಸರ ಕಡೆಗಣನೆ : ಕಾಗಿನೆಲೆ ಶ್ರೀ ಆಕ್ರೋಶ
ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ ಪಠ್ಯ ಪುಸ್ತಕದಲ್ಲಿ ಕನಕದಾಸರ ಕಡೆಗಣನೆ : ಕಾಗಿನೆಲೆ ಶ್ರೀ ಆಕ್ರೋಶ ಬಿಜೆಪಿಯವರು ಯಾಕೆ ದಲಿತರನ್ನ ಸಿಎಂ ಮಾಡಲಿಲ್ಲ?: ಎಂ.ಬಿ ಪಾಟೀಲ್ ಮಹಾಬಲದ ಜಟಾಪಟಿ: 9 ಬಂಡಾಯ ಸಚಿವರ ಖಾತೆಗಳು ವಜಾ ರೋಹಿತ್ ಶರ್ಮಾ ನಾಯಕತ್ವ ತ್ಯಜಿಸಬೇಕು: ಸಲಹೆ ನೀಡಿದ ಸೆಹವಾಗ್ ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ ಕೋಲ್ಕತಾ ವೈದ್ಯಕೀಯ ಕಾಲೇಜಿನಲ್ಲಿ ಕೊನೆ ಕ್ಷಣದಲ್ಲಿ ಪರೀಕ್ಷೆ ರದ್ದು ಕೆಂಪೇಗೌಡರ ಆಶಯ ಈಡೇರಿಸುತ್ತಿರುವ ಪ್ರಧಾನಿ ಮೋದಿ: ನಳಿನ್‍ಕುಮಾರ್ ಕಟೀಲ್ ಬಂಡಾಯ ಶಾಸಕರ ಮನವಿ : ಮಹಾ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ;ಲಕ್ಷ್ಮಣ ನಿಂಬರಗಿ, ಹರಿರಾಂ ಶಂಕರ್ ಸೇರಿ ಹಲವರ ವರ್ಗಾವಣೆ ಕಾರವಾರ: ನೈಲಾನ್ ಬಲೆ ನುಂಗಿ ಸಾವನ್ನಪ್ಪಿದ ಡಾಲ್ಫಿನ್ ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ ಚಿಕ್ಕಮಗಳೂರು : ಯುವಕರ ವೀಲಿಂಗ್ ಹುಚ್ಚಾಟ ; ಪೊಲೀಸರಿಂದ ಕಠಿಣ ಕ್ರಮ ರಾವುತ್ ಗೆ ಇಡಿ ಸಮನ್ಸ್; ತಲೆ ಕಡಿದರೂ ಗುವಾಹಟಿಯತ್ತ ಬರುವುದಿಲ್ಲ !
Team Udayavani, May 27, 2022, 10:38 PM IST
ಬೆಂಗಳೂರು: ರಾಜ್ಯದಲ್ಲಿ ಅಂದಾಜು 65 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಕಂಪೆನಿಗಳು ಮುಂದೆ ಬಂದಿವೆ. ಕೈಗಾರಿಕೆ ಸ್ಥಾಪನೆಗೆ ರಾಜ್ಯ ನೀಡುತ್ತಿರುವ ಪ್ರೋತ್ಸಾಹ ಹಾಗೂ ನೀತಿ ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ದಾವೋಸ್‌ನಿಂದ ಬೆಂಗಳೂರಿಗೆ ಆಗಮಿಸಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ -2022ಕ್ಕೆ ಸಂಬಂಧಿಸಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿರುವ ಪೂರಕ ಪರಿಸರ, ನೀತಿ ನಿಯಮಗಳು, ತಂತ್ರಜ್ಞಾನ ಆಧಾರ, ಕೌಶಲದ ಮಾನವ ಸಂಪನ್ಮೂಲ, ಆರ್‌ಎಂಡ್‌ಡಿ ಕೇಂದ್ರಗಳು, ಉದ್ದಿಮೆಗಳಿಗೆ ನೀಡಲಾಗುವ ಪ್ರೋತ್ಸಾಹಕಗಳು, ಭೂಮಿಯ ಲಭ್ಯತೆಗಳಿಂದಾಗಿ ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ ರಾಜ್ಯದ ಮೇಲೆ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಲವು ಜಾಗತಿಕ ಉದ್ದಿಮೆದಾರರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಸುಮಾರು 25 ಕಂಪೆನಿಗಳೊಂದಿಗೆ ಚರ್ಚಿಸಲಾಗಿದೆ. ಭಾರತವನ್ನು ಹೊಸ ಆರ್ಥಿಕ ಶಕ್ತಿಯಾಗಿ ವಿಶ್ವ ಎದುರು ನೋಡುತ್ತಿದೆ. ಕರ್ನಾಟಕ ರಾಜ್ಯದ ಎಲ್ಲ ರಂಗಗಳಲ್ಲಿ ಹೂಡಿಕೆದಾರರು ಆಸಕ್ತಿ ತೋರಿದರು ಎಂದರು.
ರೆನ್ಯೂ ಪವರ್‌ ಪ್ರೈ.ಲಿ. ಕಂಪೆನಿಯು 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್‌, ಗ್ರೀನ್‌ ಹೈಡ್ರೋಜನ್‌ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 30 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ ಎಂದರು.
ಲುಲು ಗ್ರೂಪ್‌, ಜ್ಯೂಬಿಲಿಯಂಟ್‌ ಗ್ರೂಪ್‌, ಹಿಟಾಚಿ ಎನರ್ಜಿ, ಸೀಮೆನ್ಸ್‌ , ಅಬ್‌ ಇನ್ಬೇವ್‌, ದಸ್ಸಾಲ್ಟಸಿಸ್ಟಂ, ಆರ್ಸೆಲಾರ್‌ ಮಿತ್ತಲ್‌ ಸಂಸ್ಥೆ ಭಾರ್ತಿ ಎಂಟರ್‌ ಪ್ರೈಸಸ್‌ ಮುಂತಾದವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡುವ ಭರವಸೆ ನೀಡಿವೆ ಎಂದರು.
ಇದಲ್ಲದೆ ಅದಾನಿ ಗ್ರೂಪ್‌, ದಾಲಿ¾ಯಾ ಸಿಮೆಂಟ್‌, ಜಾನ್ಸನ್‌ ಕಂಟ್ರೋಲ್ಸ್‌, ಹನಿವೆಲ್ ಐಬಿಎಂ, ಐಕಿಯ ಸ್ಟೋರ್ಸ್‌, ಪೇಪಾಲ್ , ಆಕ್ಸಿಸ್‌ ಬ್ಯಾಂಕ್‌ ಸಂಸ್ಥೆಗಳು ರಾಜ್ಯದ ವಿವಿಧ ವಲಯಗಳಲ್ಲಿ ಹೂಡಿಕೆ ಅವಕಾಶ ಬಗ್ಗೆ ಆಸಕ್ತಿ ತೋರಿರುವುದಾಗಿ ತಿಳಿಸಿದರು.
ಸ್ಥಿರ ಸರಕಾರ ಗೊಂದಲವಿಲ್ಲ
ರಾಜ್ಯದಲ್ಲಿ ಸ್ಥಿರ ಸರಕಾರವಿದ್ದು ಲಕ್ಷ್ಮೀ ಮಿತ್ತಲ್‌ ಅವರು ಸ್ವಾಭಾವಿಕವಾಗಿ ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ಹೆಚ್ಚು ಪ್ರಚಾರ ನೀಡಲಾಗಿದೆ. ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಈ ಪ್ರಶ್ನೆ ಕೇಳಿದ್ದಾರೆ. ರಾಜ್ಯದಲ್ಲಿ ಸ್ಥಿರ ಸರಕಾರ ಇರುವ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೇವೆ. ಕಾನೂನು ಸರಳಗೊಳಿಸಿರುವ ಬಗ್ಗೆಯೂ ಅವರಿಗೆ ತಿಳಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಬೆಂಗಳೂರಿನಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಪ್ರವಾಹದಿಂದ ಬಂಡವಾಳ ಹೂಡಿಕೆದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಿಂದಿನ ಸರಕಾರಗಳು ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಈಗ ನಾವು ವ್ಯವಸ್ಥೆ ಸರಿಪಡಿಸಬೇಕಿದೆ. ನವೆಂಬರ್‌ ವೇಳೆಗೆ ನಗರದ ಮೂಲಸೌಲಭ್ಯವನ್ನು ಸರಿಪಡಿಸಲಾಗುವುದು. ಇದಕ್ಕಾಗಿ ಕಾರ್ಯಪಡೆ ರಚಿಸಲಾಗಿದೆ.
ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ಅವಶ್ಯಕ: ಸಿದ್ದಲಿಂಗಸ್ವಾಮಿ – Bc suddi (ಬಿಸಿಸುದ್ದಿ)
ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ಅವಶ್ಯಕ: ಸಿದ್ದಲಿಂಗಸ್ವಾಮಿ
761 Views March 21, 2018 No Comments ಪ್ರಮುಖ ಸುದ್ದಿ admin
ಚಿತ್ರದುರ್ಗ: ಇಂದಿನ ದಿನದಲ್ಲಿ ನ್ಯಾಕ್ ಮಾನ್ಯತೆ ಪಡೆಯುವುದು ಅಗತ್ಯವಾಗಿದೆ ಇದು ಇದ್ದರೆ ಮಾತ್ರ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಹಾಯವಾಗುತ್ತದೆ ಎಂದು ನ್ಯಾಕ್ ರಾಜ್ಯ ಸಂಯೋಜಕರಾದ ಸಿದ್ದಲಿಂಗಸ್ವಾಮಿ ತಿಳಿಸಿದರು.
ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಕಾಲೇಜು ಶಿಕ್ಷಣ ಸಂಸ್ಥೆ, ಜಂಟಿ ನಿರ್ದೇಶಕರ ಕಛೇರಿ ಶಿವಮೊಗ್ಗ ಮತ್ತು ಸರ್ಕಾರಿ ವಿಜ್ಞಾನ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ಮತ್ತು ದಾವಣಗೆರೆ ಕಾಲೇಜುಗಳ ಪ್ರಾಂಶುಪಾಲರು ಮತ್ತು ನ್ಯಾಕ್ ಸಂಯೋಜಕರ ಒಂದು ದಿನದ ನ್ಯಾಕ್ ಹೊಸ ಆಯಾಮಗಳ ಕುರಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈ ಮುಂಚೆ ಕಾಲೇಜುಗಳಿಗೆ ಅನುದಾನ ಇರಲಿಲ್ಲ ತದ ನಂತರ ಸರ್ಕಾರದಿಂದ ಅನುದಾನ ಬರಲಾರಂಭಿಸಿತು, ಇದರ ಬದಲಾಗಿ ಸರ್ಕಾರ ನ್ಯಾಕ್ ಪದ್ದತಿಯನ್ನು ಜಾರಿ ಮಾಡುವುದರ ಮೂಲಕ ಕಾಲೇಜುಗಳಿಗೆ ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದರು ಇದನ್ನು ಪಡೆಯಲು ಕಾಲೇಜು ನ್ಯಾಕ್ ನೀಡಿದ ನಿಬಂಧನೆಗಳನ್ನು ಪೂರ್ಣ ಮಾಡಬೇಕಿತು, ೨೦೦೬ರಿಂದ ನ್ಯಾಕ್ ಪ್ರಾರಂಭವಾಗಿದ್ದು ಆಗ ೧೭೦೦೦ ಕಾಲೇಜುಗಳು ಮಾತ್ರ ಇದರ ವ್ಯಾಪ್ತಿಗೆ ಒಳಪಡಲಾಯಿತು ೨೦೧೭ರ ಡಿಸೆಂಬರ್‌ಗೆ ಪ್ರಪಂಚದಲ್ಲಿ ೪೦೦೦೦ ಕಾಲೇಜುಗಳು ಇದರ ವ್ಯಾಪ್ತಿಗೆ ಒಳಪಡಲಿವೆ ಎಂದರು.
ಯಾವುದೇ ಕಾಲೇಜುಗಳಾದರು ಸಹಾ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಉಸ್ತುವಾರಿಯನ್ನು ನ್ಯಾಕ್ ಮಾಡುತ್ತದೆ, ಇಲ್ಲಿ ಶಿಕ್ಷಣದ ಪಠ್ಯ, ಅದರ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ತನ್ನ ಬದುಕನ್ನು ರೂಪಿಸಿಕೊಳ್ಳುವಂತಿರಬೇಕಿದೆ ಅದಕ್ಕೆ ಮಾನ್ಯತೆಯನ್ನು ನೀಡಲಾಗುತ್ತದೆ ಇದರಿಂದ ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆ ಮಾಡಲಾಗುತ್ತದೆ ಇದನ್ನು ತಿಳಿಸುವ ಕೆಲಸವನ್ನು ಈ ರೀತಿಯಾದ ಕಾರ್ಯಗಾರವನ್ನು ಮಾಡುವುದರ ಮೂಲಕ ತಿಳಿಸಲಾಗುತ್ತದೆ ಎಂದು ಸಿದ್ದಲಿಂಗಸ್ವಾಮಿ ತಿಳಿಸಿದರು.
ಪದವಿ ಕಾಲೇಜುಗಳು ಹೊಸ ಬೋಧನಾ ವಿಧಾನ ಆಳವಡಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕಿದೆ ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ರೂಪಿಸಲು ಪದವಿ ಶಿಕ್ಷಣ ಮಹತ್ವದ ಘಟ್ಟವಾಗಿದೆ. ಹಳೇ ಪದ್ಧತಿಗೆ ಜೋತು ಬೀಳದೆ ಹೊಸದಾಗಿ ಕಲಿಕೆ ಕ್ರಮ ರೂಢಿಸಿಕೊಂಡಲ್ಲಿ ಕಾಲೇಜಿಗೆ ಕೀರ್ತಿ ಬರುತ್ತದೆ ಎಂದ ಅವರು ಶಿಕ್ಷಣ, ಪಠ್ಯ ಪದ್ಧತಿಗಳು ಜೀವನ ಕ್ರಮ ಹಾಗೂ ಉದ್ಯೋಗ ಸೃಷ್ಠಿಗೆ ದಾರಿಯಾಗಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯವಾಗುವ ಜತೆಗೆ ಜಿಡಿಪಿ ದರ ಸಹ ಏರಿಕೆ ಕಾಣುತ್ತದೆ ಎಂದು ತಿಳಿಸಿದರು.
ಪದವಿ ಶಿಕ್ಷಣ ಶಿವಮೊಗ್ಗ ವಿಭಾಗದ ಜಂಟಿ ನಿರ್ದೇಶಕ ಕೆ.ಪ್ರಸಾದ್ ಸೇರಿದಂತೆ ಕಾರ್ಯಗಾರದಲ್ಲಿ ಎಸ್‌ಕ್ಯೂಎಸಿಯ ಸಹ ಸಂಚಾಲಕರಾದ ಅನುಪಮ ಸಭಾಪತಿ, ಜಂಟಿ ನಿರ್ದೇಶಕರ ಕಛೇರಿಯ ವಿಶೇಷ ಅಧಿಕಾರಿ ವೇಣುಗೋಪಾಲ್, ವಿದ್ಯಾಚನ್ನ ಭಾಗವಹಿಸಿದ್ದರು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸಣ್ಣಮ್ಮ ವಹಿಸಿದ್ದರು. ಪ್ರೋ,ಕೆ.ಕೆ.ಕಮಾನಿ ಸ್ವಾಗತಿಸಿದರೆ, ಶ್ರೀನಿಧೀ ಸ್ವರ್ಣ ಪ್ರಾರ್ಥಿಸಿದರು. ರತ್ನಗಿರಿ
ಸಿನಿ ಸುದ್ದಿ Archives - Page 189 of 197 - ಸಿನಿ ಲಹರಿ
Category: ಸಿನಿ ಸುದ್ದಿ
ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬ ವಾಖ್ಯಾನದ ಪ್ರಯತ್ನವೇ ಬಿರಿಯಾನಿ – ಸಜಿನ್ ಬಾಬು
No Comments on ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬ ವಾಖ್ಯಾನದ ಪ್ರಯತ್ನವೇ ಬಿರಿಯಾನಿ – ಸಜಿನ್ ಬಾಬು
ಅಂತಾರಾಷ್ಟ್ರೀಯ ಮಟ್ಟದಲ್ಲಿ‌ ಸಾಕಷ್ಟು ಸದ್ದು ಮಾಡುತ್ತಿರುವ ಮಲಯಾಳಂನ 'ಬಿರಿಯಾನಿ‌' ಚಿತ್ರದ ನಿರ್ದೇಶಕ ಸಜಿನ್ ಬಾಬು ಜತೆಗೆ ' ಸಿನಿ ಲಹರಿ' ನಡೆಸಿದ ವಿಶೇಷ ಸಂದರ್ಶನ
ಸಂದರ್ಶನ – ರಮೇಶ್ ಎಚ್.ಕೆ. ಶಿವಮೊಗ್ಗ
1. ನಮಸ್ತೆ ಸರ್, ಬಿರಿಯಾನಿ ಸಿನಿಮಾಗೆ ಸತತವಾಗಿ ಪ್ರಶಸ್ತಿಗಳು ಬರುತ್ತಿವೆ. ಹೇಗನಿಸುತ್ತಿದೆ?
ಈ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಅತೀವ ಸಂತೋಷ ತಂದಿದೆ.‌ ಬಿರಿಯಾನಿ ಸಿನಿಮಾ ಈಗಾಗಲೇ ಬಹಳಷ್ಟು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವು ಪ್ರಶಸ್ತಿಗಳೂ‌ ಬಂದಿವೆ. ಆದರೆ ನಮ್ಮದೇ ಊರಿನಲ್ಲಿ ಪ್ರಶಸ್ತಿ ಪಡೆಯುವುದು ಒಂಥರಾ ವಿಶೇಷ ಅನುಭವ.‌ ಅದು ಅತೀವ ಖುಷಿ ಕೊಟ್ಟಿದೆ.
2. ನಿಮ್ಮ ಹಾಗೂ ನಿಮ್ಮ ಕೌಟುಂಬಿಕ ಹಿನ್ನೆಲೆಯ ಬಗ್ಗೆ ತಿಳಿಸಿ?
ಕೇರಳದ ಕೂಪ್ಪು ಎನ್ನುವ ಸಣ್ಣ ಹಳ್ಳಿಯಿಂದ ಬಂದವನು. ನನ್ನ ಶಾಲೆಯ ಬಳಿಕ ಪದವಿ ಪಡೆಯಲು ಟ್ರಿವೇಂಡ್ರಂ ಗೆ ಬಂದೆ. ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ತ್ರಿವೇಂಡ್ರಂ ನಲ್ಲಿ ಇದ್ದಾಗ iffk ಮುಖಾಂತರ ಜಾಗತಿಕ ಸಿನಿಮಾಗಳನ್ನು ನೋಡುವ ಮತ್ತು ಸಿನಿಮಾಗಳ ಕುರಿತ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಇದಾದ ಮೇಲೆ ನಾನೂ ಸಹ ಕ್ಯಾಂಪಸ್ ಸಿನಿಮಾಗಳು ಮತ್ತು ಕೆಲ ಡಾಕ್ಯುಮೆಂಟರಿಗಳನ್ನು ಮಾಡಿದೆ. ನಾನು 26 ನೇ ವಯಸ್ಸಿನವನಾಗಿದ್ದಾಗ Unto The Dusk ಎನ್ನುವ ಸಿನಿಮಾ ಮಾಡಿದೆ. ಈ ಸಿನಿಮಾಗೆ ಬೆಂಗಳೂರು ಚಿತ್ರೋತ್ಸವದಲ್ಲಿ ಚಿತ್ರಭಾರತಿ ಪ್ರಶಸ್ತಿ ಹಾಗೂ iffk ನಲ್ಲಿ ರಜತಚಾಜೋರಂ ಪ್ರಶಸ್ತಿ ಲಭಿಸಿತು. ನನ್ನ ಎರಡನೇ ಚಿತ್ರ ನಟ ಶ್ರೀನಿವಾಸನ್ ಅವರೊಂದಿಗೆ ನಿರ್ಮಿಸಿದ ಅಯಾಲ್ ಸಾಸ್ಸಿ. ಇದು ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದಾದ ಮೇಲೆ ನಾನು ಮಾಡಿರುವ 3 ನೇ ಚಿತ್ರ ಬಿರಿಯಾನಿ ಆಗಿದ್ದು ಇದೊಂದು ಸ್ವತಂತ್ರ ಚಿತ್ರವಾಗಿದೆ.
3. ನಿಮ್ಮ ನೆಚ್ಚಿನ ನಟ, ಲೇಖಕ ಹಾಗೂ ಪುಸ್ತಕಗಳು ಯಾವು?
ಮಲಯಾಳಂನಲ್ಲಿ ಯಾರೋ ಒಬ್ಬ ನಟನ ಹೆಸರನ್ನು ಹೇಳುವುದು ಕಷ್ಟ‌. ಜತೆಗೆ ಹಾಗೆ ಹೇಳುವುದಕ್ಕೂ ಇಷ್ಟವಿಲ್ಲ. ಭಾರತೀಯ ಹಾಗೂ ಜಾಗತಿಕ ಸಿನಿಮಾ ರಂಗದಲ್ಲಿ ಬಹಳಷ್ಟು ಮಂದಿ ನಟರು ನನಗೆ ಇಷ್ಟವಾಗುತ್ತಾರೆ. ನನಗೆ ವರ್ನರ್ ಹೆರ್ಜಾರ್ಗ್ ನ 'ಅಕ್ವಿರೆ' ಸಿನಿಮಾದಲ್ಲಿ ಕ್ಲಾಸ್ ಕಿನ್ ಸ್ಕಿ ಪಾತ್ರ ಇಷ್ಟವಾಗುತ್ತದೆ. ಜೊತೆಗೆ ಕಮಲ್ ಹಾಸನ್, ಮೋಹನ್ ಲಾಲ್ ಹಾಗೂ ಅಮೀರ್ ಖಾನ್ ಅವರ ನಟನೆಗಳು ಇಷ್ಟವಾಗುತ್ತವೆ. ಇನ್ನು ಪುಸ್ತಕ ಮತ್ತು ಲೇಖಕರ ವಿಷಯದಲ್ಲೂ ಬಹಳಷ್ಟು ಜನರಿದ್ದು ಯಾವುದೋ ಒಂದು ಹೆಸರು ಹೇಳಲು ನನಗೆ ಸಾಧ್ಯವಿಲ್ಲ.
4. ಸಿನಿಮಾ ಕ್ಷೇತ್ರವನ್ನು ಆರಿಸಿಕೊಳ್ಳಲು ಕಾರಣ?
ವಿದ್ಯಾರ್ಥಿ ಆದಾಗಿನಿಂದಲೂ ಸಿನಿಮಾಗಳು ನನ್ನ ಮನಸ್ಸಿನಲ್ಲಿದೆ. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ. ನಾನು ಅಮ್ಮನ ಬಳಿ ಒಪ್ಪಿಗೆ ಪಡೆದು ಮನೆ ಕೆಲಸ ಮಾಡಿ, ಭಾನುವಾರದಂದು ದೂರದರ್ಶನದಲ್ಲಿ ಬರುತ್ತಿದ್ದ ಸಿನಿಮಾಗಳನ್ನು ನೋಡಲು ಪಕ್ಕದ ಮನೆಗೆ ಹೋಗುತ್ತಿದ್ದೆ. ಕೆಲವೊಮ್ಮೆ ಮನೆಯಲ್ಲಿ ಒಪ್ಪದೇ ಇದ್ದ ಕಾರಣಕ್ಕೆ ಸಿನಿಮಾಗಳನ್ನು ನೋಡಲು ಕಷ್ಟವಾಗುತ್ತಿತ್ತು. ಆದರೆ ಆಗಲೇ ಹೇಳಿದಂತೆ ಪದವಿಯ ವೇಳೆ ನಾನು ಹೆಚ್ಚು ಸಿನಿಮಾಗಳನ್ನು ನೋಡಿದೆ ಮತ್ತು ಸಿನಿಮಾ ಮಾಡುವ ಅವಕಾಶಗಳನ್ನು ಪಡೆದೆ
5. ಬಿರಿಯಾನಿಯಂತ ಸಿನಿಮಾ ಮಾಡಲು ಕಾರಣವೇನು?
ಈ ರೀತಿಯ ಸಿನಿಮಾ ಮಾಡಬೇಕೆಂಬ ಆಲೋಚನೆ ಬಂದಿದ್ದು ಯಾವಾಗ ಎಂದು ನನಗೆ ನೆನಪಿಲ್ಲ. 25-26 ನೇ ವಯಸ್ಸಿನಲ್ಲಿ ನಾನು ನನ್ನ ಮೊದಲ ಸಿನಿಮಾ ಮಾಡಿದಾಗ ನನಗೂ ಕೂಡಾ ಸಿನಿಮಾ ನಂತರದಲ್ಲಿ ಬಹಳಷ್ಟು ಪ್ರಶ್ನೆಗಳು ಮೂಡುತ್ತಿದ್ದವು. ಈ ಪ್ರಶ್ನೆಗಳು ನನ್ನದೇ ಸಿನಿಮಾ ನೋಡಿದಾಗಲೂ ಉದ್ಭವಿಸುತ್ತಿತ್ತು.‌ ನಾನು ಎಲ್ಲಾ ಧರ್ಮಗಳೂ ಇರುವಂತಹ ಒಂದು ಹಳ್ಳಿಯಲ್ಲಿ ಬೆಳೆದವನು. ಹೀಗಾಗಿ ಧರ್ಮಗಳೇ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಯಾವುದೇ ಧರ್ಮದ ಹಂಗಿಲ್ಲದೇ ನಾನು ಬದುಕಬೇಕು ಎಂಬುದನ್ನು ರೂಢಿಸಿಕೊಂಡೆ. ಈಗಲೂ ಕೂಡಾ ಬಹಳಷ್ಟು ಮಂದಿ ನನ್ನ ಹೆಸರಿನಿಂದ ನನ್ನ ಧರ್ಮವನ್ನು ಗುರುತಿಸಲು ಪ್ರಯತ್ನಿಸಿ ಸೋತಿದ್ದಾರೆ.‌ ಹೀಗಾಗಿಯೇ ನನ್ನ Unto The Dusk ಸಿನಿಮಾ ಮಾಡಿದಾಗ ನನಗೇ ಗೊತ್ತಿಲ್ಲದೇ ನನ್ನನ್ನು ಕ್ರಿಶ್ಚಿಯನ್ ಎಂದು ಸಂಬೋಧಿಸಿದ್ದಾರೆ. ಈಗ ಬಿರಿಯಾನಿ ಸಿನಿಮಾದ ನಂತರ ನನ್ನನ್ನು ಮುಸ್ಲಿಂ ಎಂದುಕೊಳ್ಳಲೂಬಹುದು. ಇಂತಹ ಗೊಂದಲಮಯವಾದಂತಹ ಬೇಸರದ ವಿದ್ಯಮಾನದೊಳಗೆ ಒಬ್ಬ ಜಾತ್ಯಾತೀತ ಎನಿಸಿಕೊಂಡಂತಹ ವ್ಯಕ್ತಿಯೇ ಧಾರ್ಮಿಕ ಮೂಲಭೂತವಾದಿಯೊಬ್ಬನಿಗಿಂತ ಹೆಚ್ಚಾಗಿ ಧರ್ಮದ ಬಗ್ಗೆ ಮಾತನಾಡುತ್ತಾನೆ. ಹೀಗಾಗಿ ಇಂತಹದ್ದನ್ನೆಲ್ಲಾ ಕಂಡು ಅನುಭವಿಸಿದ ಬಳಿಕ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ವಾಖ್ಯಾನಿಸಲು ಬಿರಿಯಾನಿ ಎಂಬ ಸಿನಿಮಾವನ್ನು ತೆರೆದ ಪುಸ್ತಕವಾಗಿ ರೂಪಿಸಲು ಯತ್ನಿಸಿದ್ದೇನೆ. ಸಮಾಜದ ನೈಜ ಸಂಗತಿಗಳಲ್ಲಿ ನನಗೆ ಹೆಚ್ಚಿನ ಆಸಕ್ತಿಯಿದ್ದು ಇವುಗಳನ್ನೇ ನಾನು ಹೆಚ್ಚು ನಂಬುತ್ತೇನೆ.
6. ನಿರ್ದೇಶಕ ಸಜಿನ್ ಬಾಬು ಅವರು ಬಿರಿಯಾನಿ ಸಿನಿಮಾದಲ್ಲಿ ತಾವಂದುಕೊಂಡ ಎಲ್ಲವನ್ನೂ ಅಳವಡಿಸಿದ್ದಾರೆಯೇ?
ನಾನಂದುಕೊಂಡ ಹಾಗೇ ಸಿನಿಮಾ ಬಂದಿದೆ ಎಂದು ಹೇಳಲಾರೆ.‌ ಆದರೆ ನಾನಂದುಕೊಂಡಿದ್ದರಲ್ಲಿ ಕನಿಷ್ಟ ಪಕ್ಷ 80% ಅಷ್ಟನ್ನಾದರೂ ನಾನು ಸಿನಿಮಾದಲ್ಲಿ ಅಳವಡಿಸಿದ್ದೇನೆ.
7. ನೀವು ಈ ಸಿನಿಮಾ ಬಗ್ಗೆ ಹೇಳಿದಾಗ ಕನಿ ಕುಸ್ರುತಿ ಅವರ ಪ್ರತಿಕ್ರಿಯೆ ಹೇಗಿತ್ತು?
ಮೊದಲು ಈ ಕತೆಯನ್ನು ಕನಿ ಅವರಿಗೆ ಹೇಳಿದಾಗ ಅವರು ಸುತಾರಾಂ ಒಪ್ಪಿರಲಿಲ್ಲ. ಆದರೆ ನಾನು ಮತ್ತೆ ಮತ್ತೆ ಅವರನ್ನು ಭೇಟಿ ಮಾಡಿ ಈ ಸಿನಿಮಾದಲ್ಲಿನ ಖದೀಜಾ ಪಾತ್ರ ಮಾಡುವಂತೆ ಒಪ್ಪಿಸಿದೆ. ಇನ್ನು ಪಾತ್ರದ ರಚನೆಯ ಬಗ್ಗೆ ಅವರಿಗೆ ತಕರಾರುಗಳಿವೆ. ಹೀಗಾಗಿಯೇ ನಾನು ಬೇರೆ ಖದೀಜಾ ಬೇರೆ ಎಂಬುದು ಕನಿ ಅವರ ನಿಲುವಾಗಿದೆ.
" ನಮ್ಮ ಸಮಾಜವು ಯಾವಾಗಲೂ ಸಹ ಸಮಸ್ಯೆಯ ಒಂದೇ ಮಗ್ಗುಲನ್ನು ನೋಡುತ್ತದೆ. ಐಸಿಸ್ ಜೊತೆ ನಂಟಿರುವ ಆರೋಪಿತ ವ್ಯಕ್ತಿಯನ್ನು ನೋಡುವಾಗ ಅವನನ್ನು ಸಮಾಜ ಹಾಗೂ ಮಾಧ್ಯಮಗಳು ತೀವ್ರವಾಗಿ ಗುರಿಪಡಿಸುತ್ತವೆ.‌‌ ಆದರೆ ಈ ಗುರಿ ಪಡಿಸುವ ಭರದಲ್ಲಿ ಅವನ ಕುಟುಂಬದ ಪರಿಸ್ಥಿತಿ ಏನಾಯಿತು ಎಂಬುದನ್ನು ಸಮಾಜ ಮತ್ತು ಮಾಧ್ಯಮಗಳು ಮರೆಯುತ್ತವೆ"
8. ಖದೀಜಾ ಪಾತ್ರದ ಮೂಲಕ ನೀವು ಸಮಾಜಕ್ಕೆ ಯಾವ ಸಂದೇಶ ನೀಡಲು ಬಯಸುತ್ತೀರ ?
ನಮ್ಮ ಸಮಾಜವು ಯಾವಾಗಲೂ ಸಹ ಸಮಸ್ಯೆಯ ಒಂದೇ ಮಗ್ಗುಲನ್ನು ನೋಡುತ್ತದೆ. ಐಸಿಸ್ ಜೊತೆ ನಂಟಿರುವ ಆರೋಪಿತ ವ್ಯಕ್ತಿಯನ್ನು ನೋಡುವಾಗ ಅವನನ್ನು ಸಮಾಜ ಹಾಗೂ ಮಾಧ್ಯಮಗಳು ತೀವ್ರವಾಗಿ ಗುರಿಪಡಿಸುತ್ತವೆ.‌‌ ಆದರೆ ಈ ಗುರಿ ಪಡಿಸುವ ಭರದಲ್ಲಿ ಅವನ ಕುಟುಂಬದ ಪರಿಸ್ಥಿತಿ ಏನಾಯಿತು ಎಂಬುದನ್ನು ಸಮಾಜ ಮತ್ತು ಮಾಧ್ಯಮಗಳು ಮರೆಯುತ್ತವೆ
ಅದರಲ್ಲೂ ಆ ಕುಟುಂಬದ ಮಹಿಳೆಯರು ಯಾರಿಗೂ ಬೇಡವಾಗುತ್ತಾರೆ. ಅವರನ್ನು ಚಿತ್ರಹಿಂಸೆ ಮಾಡಲಾಗುತ್ತದೆ. ಆದರೆ ಈ ಸಂಗತಿಯನ್ನು ಒಂದು ಯಾರೂ ಚರ್ಚಿಸುವುದಿಲ್ಲ. ಇದು ಇಲ್ಲಷ್ಟೇ ಅಲ್ಲ ಸಮಾಜದಲ್ಲಿ ಅಪರಾಧಗಳು ಎಲ್ಲಿ ನಡೆಯುತ್ತದೋ ಅಲ್ಲೆಲ್ಲಾ ಇದು ಸಾಮಾನ್ಯವಾಗಿ ಕಾಣಬರುವ ವಿದ್ಯಮಾನವಾಗಿದೆ. ನಮ್ಮ ಸಮಾಜದಲ್ಲಿ ಹೀಗೆ ಆರೋಪಿತರಾದ ವ್ಯಕ್ತಿಗಳ ಕುಟುಂಬವನ್ನು ಸಂತೈಸುವ ಅಥವಾ ಅವರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಇಲ್ಲ.‌ ಯಾರೋ ಮಾಡುವ ತಪ್ಪಿಗೆ ಕುಟುಂಬದ ಇತರೆ ಜನರಿಗೆ ಇನ್ನಿಲ್ಲದ ತೊಂದರೆ ಆದರೂ ಸಹ ಅವರಿಗೆ ಯಾವ ರಕ್ಷಣೆಯೂ ಇರುವುದಿಲ್ಲ. ಹೀಗಾಗಿ ಈ ಸೂಕ್ಷ್ಮಗಳನ್ನೆಲ್ಲಾ ನಾನು ಬಿರಿಯಾನಿ ಸಿನಿಮಾ ಮೂಲಕ ಹೇಳಲು ಯತ್ನಿಸಿದ್ದೇನೆ.
" ಈಗಲೂ ಕೂಡಾ ಬಹಳಷ್ಟು ಮಂದಿ ನನ್ನ ಹೆಸರಿನಿಂದ ನನ್ನ ಧರ್ಮವನ್ನು ಗುರುತಿಸಲು ಪ್ರಯತ್ನಿಸಿ ಸೋತಿದ್ದಾರೆ.‌ ಹೀಗಾಗಿಯೇ ನನ್ನ Unto The Dusk ಸಿನಿಮಾ ಮಾಡಿದಾಗ ನನಗೇ ಗೊತ್ತಿಲ್ಲದೇ ನನ್ನನ್ನು ಕ್ರಿಶ್ಚಿಯನ್ ಎಂದು ಸಂಬೋಧಿಸಿದ್ದಾರೆ. ಈಗ ಬಿರಿಯಾನಿ ಸಿನಿಮಾದ ನಂತರ ನನ್ನನ್ನು ಮುಸ್ಲಿಂ ಎಂದುಕೊಳ್ಳಲೂಬಹುದು. ಇಂತಹ ಗೊಂದಲಮಯವಾದಂತಹ ಬೇಸರದ ವಿದ್ಯಮಾನದೊಳಗೆ ಒಬ್ಬ ಜಾತ್ಯಾತೀತ ಎನಿಸಿಕೊಂಡಂತಹ ವ್ಯಕ್ತಿಯೇ ಧಾರ್ಮಿಕ ಮೂಲಭೂತವಾದಿಯೊಬ್ಬನಿಗಿಂತ ಹೆಚ್ಚಾಗಿ ಧರ್ಮದ ಬಗ್ಗೆ ಮಾತನಾಡುತ್ತಾನೆ"
9. ಖದೀಜಾ ಪಾತ್ರದ ಪ್ರತಿರೋಧದಿಂದಾಗಿ ಅವಳಿಗೆ ನ್ಯಾಯ ಸಿಕ್ಕಿದೆ ಎಂದು ನಿಮಗೆ ಅನ್ನಿಸುವುದೇ?
ಆಕೆ ತೋರಿದ ಪ್ರತಿರೋಧದಿಂದ ಅವಳಿಗೆ ನ್ಯಾಯ ಸಿಕ್ಕಿತು ಎಂದು ನಾನು ಭಾವಿಸುವುದಿಲ್ಲ. ಆದರೆ ವಾಸ್ತವವಾಗಿ ನೋಡಿದಾಗ ಅಷ್ಟು ಅಸಹಾಯಕಳಾದ ಹೆಣ್ಣಿನ ಆಕ್ರೋಶವು ಆಕೆಯ ಮಿತಿಯೊಳಗೆ ಅಷ್ಟೇ ಇರುವ ಸಾಧ್ಯತೆ ಇದೆ. ಇದು ಅವಳ ಮನಸ್ಸಿನ ದುಃಖವನ್ನು ಹೋಗಲಾಡಿಸದೇ ಇದ್ದರೂ ಸಹ ಅವಳ ಪ್ರತಿರೋಧವನ್ನು ಅವಳೇ ದಾಖಲಿಸುವ ಮಟ್ಟಿಗೆ ಅದನ್ನು ನಾವು ಒಪ್ಪಿಕೊಳ್ಳಬಹುದು.
10. ಈ ಚಿತ್ರದ ಬಗ್ಗೆ ಸಂಪ್ರದಾಯವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು ಎತ್ತುವ ಪ್ರಶ್ನೆಗೆ ಉತ್ತರಿಸಲು ನೀವು ಸಿದ್ಧವಾಗಿದ್ದೀರಾ?
ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ನಾನು ಕೇವಲ ವಾಸ್ತವಗಳನ್ನು ತೋರಿಸಲು ಯತ್ನಿಸಿದ್ದೇನೆ. ನಾನು ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದನಾಗುವ ಅಗತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ.
11. ನಿಮ್ಮ ಪ್ರಕಾರ ಒಳ್ಳೆಯ ಚಿತ್ರ ಎಂದರೆ ಏನು?
ಒಂದು ಚಿತ್ರ ನನಗೆ ಉತ್ತಮವಾಗಿ ಕಂಡರೆ ಮತ್ತೊಬ್ಬರಿಗೆ ಕೆಟ್ಟದಾಗಿ ಅನಿಸುತ್ತದೆ. ಇದಕ್ಕೆ ಆಯಾ ವ್ಯಕ್ತಿಗಳ ಇಷ್ಟ ಕಷ್ಟಗಳು ಮತ್ತು ಸಿನಿಮಾಗಳನ್ನು ನೋಡುವ ರೀತಿ ಕಾರಣವಾಗುತ್ತದೆ. ಹೀಗಾಗಿ ನನ್ನ ಪ್ರಕಾರ ಉತ್ತಮ ಅಥವಾ ಕೆಟ್ಟ ಚಿತ್ರ ಎನ್ನುವುದಕ್ಕೆ ಸಿದ್ಧಸೂತ್ರಗಳು ಇರುವುದಿಲ್ಲ ಎಂಬುದು ನನ್ನ ಭಾವನೆ.
12. ಮಲಯಾಳಂ ಸಿನಿಮಾಗಳನ್ನು ಬಿಟ್ಟರೆ ನಿಮಗೆ ಯಾವ ಭಾಷೆಯ ಚಿತ್ರಗಳು ಇಷ್ಟವಾಗುತ್ತವೆ?
ನನಗೆ ಹಲವು ಕಾರಣಗಳಿಗೆ ಮರಾಠಿ ಸಿನಿಮಾಗಳೆಂದರೆ ಇಷ್ಟ.
13 ನಿಮ್ಮ ಮುಂದಿನ ಚಿತ್ರಗಳು ಮತ್ತು ಯೋಜನೆಗಳ ಬಗ್ಗೆ ಹೇಳಿ ?
ನಾನೀಗ ಕೆಲವೊಂದು ಸಿನಿಮಾಗಳನ್ನು ಮಾಡಲು ಯೋಚಿಸಿದ್ದೇನೆ. ಆದರೆ ಯಾವುದೂ ಸಹ ಪೂರ್ಣವಾಗಿ ನಿರ್ಧಾರವಾಗಿಲ್ಲ. ಸದ್ಯ ಥ್ರಿಲ್ಲರ್ ಮಾದರಿಯಲ್ಲಿ ಮೂರು ಕತೆಗಳನ್ನು ಹೆಣೆದಿರುವೆ.
14. ಬಿರಿಯಾನಿ ಸಿನಿಮಾಗೆ ಈ ಬಾರಿ ರಾಷ್ಟ್ರ ಪ್ರಶಸ್ತಿ ಯನ್ನು ನಿರೀಕ್ಷಿಸಬಹುದೇ?
ಈಗಾಗಲೇ ಬಹಳಷ್ಟು ಸಿನಿಮಾ ಉತ್ಸವಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆಗಳು ಲಭಿಸಿದ್ದು ಈ ಬಾರಿ ಪ್ರಶಸ್ತಿ ಬರಬಹುದೆಂಬ ನಿರೀಕ್ಷೆ ಖಂಡಿತಾ ಇದೆ.
15. ಕೊನೆಯದಾಗಿ ಏನು ಹೇಳಲು ಬಯಸುತ್ತೀರಿ?
ಕೊನೆಯದಾಗಿ ಹೇಳಬೇಕೆಂದರೆ, ನನ್ನ ಸಂದರ್ಶನಕ್ಕಾಗಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ಉತ್ತಮವಾಗಿ ಯೋಚಿಸೋಣ, ಸಮಾಜದ ಅತಿ ಕ್ಲಿಷ್ಟ ಪರಿಸ್ಥಿತಿಗಳನ್ನು ಮೊದಲು ಸರಿಯಾಗಿ ಅರಿಯೋಣ ನಂತರ ಸ್ಪಂದಿಸಲು ಯತ್ನಿಸೋಣ.ಥ್ಯಾಂಕ್ ಯೂ.
ಬಾಲಿವುಡ್ ಗೆ ಹೊರಟ 'ದಿಯಾ' ನಿರ್ದೇಶಕ
No Comments on ಬಾಲಿವುಡ್ ಗೆ ಹೊರಟ 'ದಿಯಾ' ನಿರ್ದೇಶಕ
ದಿಯಾ ಹಿಂದಿ ರಿಮೇಕ್ ಗೆ ಅಶೋಕ್ ಆ್ಯಕ್ಷನ್ ಕಟ್
ಸೂಪರ್ ಹಿಟ್ ಚಿತ್ರ' ದಿಯಾ ' ಅಕ್ಟೋಬರ್ 23 ಕ್ಕೆ ಮರು ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಚಿತ್ರಮಂದಿರಗಳ ರೆಸ್ಪಾನ್ಸ್ ನೋಡಿಕೊಂಡು ರಿಲೀಸ್ ಹೇಗೆ,ಏನೂ ಎನ್ನುವುದನ್ನು ಚಿತ್ರ ತಂಡ ನಿರ್ಧಾರ ಮಾಡಲಿದೆಯಂತೆ. ಆದರೆ ಈಗ ದಿಯಾ ನೋಡುವವರಿಗೆ ಒಂದು ಸಿಹಿ ಸುದ್ದಿ ಕಾದಿದೆ‌. ಕ್ಲೈಮ್ಯಾಕ್ಸ್ ಬದಲಾಗಿ ಚಿತ್ರ ಮರು‌‌ಬಿಡುಗಡೆ ಆಗುತ್ತಿದೆ. ಹಾಗಾದ್ರೆ ಕ್ಲೈಮ್ಯಾಕ್ಸ್ ಏನಾಗಬಹುದು? ಅದಕ್ಕೆ ಚಿತ್ರ ನೋಡಲೇ ಬೇಕು.
ಇನ್ನು‌ ದಿಯಾ ಚಿತ್ರ ತಂಡದಿಂದ ಮತ್ತೊಂದು‌ ಸಿಹಿ ಸುದ್ದಿ ಹೊರಬಿದ್ದಿದೆ. 'ದಿಯಾ' ಈಗಾಗಲೇ ತೆಲುಗು, ತಮಿಳಿಗೆ ರಿಮೇಕ್ ಆಗುವ ಸುದ್ದಿಯಿತ್ತು.‌ಇದೀಗ ಅದು ಹಿಂದಿಗೂ ರಿಮೇಕ್ ಆಗುತ್ತಿದ್ದು, ಅಲ್ಲಿ ನಿರ್ದೇಶಕ ಅಶೋಕ್ ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ‌. ಈಗಾಗಲೇ ಒಂದು ಹಂತದ ಮಾತುಕತೆ ಕೂಡ ನಡೆದಿದೆಯಂತೆ.‌ ಹಾಗೊಂದು ವೇಳೆ ಅವರೇ ಅಲ್ಲಿ ನಿರ್ದೇಶನ ಮಾಡುವುದಾದರೆ ಅದೊಂದು ಬಂಪರ್ ಅವಕಾಶ.
ಈ ಕುರಿತು ನಿರ್ದೇಶಕ ಅಶೋಕ್ ಏನ್ ಹೇಳ್ತಾರೆ? ' ಫೈನಲ್ ಆಗಿಲ್ಲ. ಒಂದು ಹಂತದ ಮಾತುಕತೆ ಆಗಿದ್ದು‌ನಿಜ. ಆದ್ರೆ ಸಿನಿಮಾದ‌ಮಾತುಕತೆ ಗೊತ್ತಲ್ವಾ, ಅಧಿಕೃತ ವಾಗಲೇ ಅದು‌ನಿಜವಾಗುತ್ತೆ. ಆದರೆ ಅಲ್ಲಿನ ಒಂದು‌ದೊಡ್ಡ ಸಂಸ್ಥೆಯೇ ರಿಮೇಕ್ ಹಕ್ಕು ಪಡೆದಿದೆ.ಚಿತ್ರ ಚೆನ್ನಾಗಿ ಮಾಡಬಹುದು ಎನ್ನುವ ನಂಬಿಕೆ ಯಿದೆಮ ಅವರಿಗೆ ನಾನೇ ನಿರ್ದೇಶನ ಮಾಡಿದರೆ ಚೆನ್ನಾಗಿರುತ್ತೆ ಎನ್ನುವ ನಂಬಿಕೆ. ಅ‌ನಿಟ್ಟಿನಲ್ಲೇ ಮಾತುಕತೆ ಆಗಿದೆ. ಫೈನಲ್ ಆಗುವುದು ಬಾಕಿಯಿದೆ' ಎನ್ನುವುದು ಅಶೋಕ್ ಅವರ ಪ್ರತಿಕ್ರಿಯೆ.
ಚಿರಂಜೀವಿ, ತಮನ್ನಾ ಸೇರಿ ಹೆಸರಾಂತ ಸ್ಟಾರ್ ಗಳ ಮನಸ್ಸು ಗೆದ್ದ ಅಸಾಧಾರಣ ಡಾನ್ಸರ್!
No Comments on ಚಿರಂಜೀವಿ, ತಮನ್ನಾ ಸೇರಿ ಹೆಸರಾಂತ ಸ್ಟಾರ್ ಗಳ ಮನಸ್ಸು ಗೆದ್ದ ಅಸಾಧಾರಣ ಡಾನ್ಸರ್!
ಟಾಲಿವುಡ್ ಗೆ ಇಷ್ಟ, ಕನ್ನಡಕ್ಕೆ ಕಷ್ಟ, ಯಾಕೆ ಹೀಗೆ ಅನ್ನೋದೇ ಈಕೆಯ ಪೋಷಕರ ಸಂಕಷ್ಟ!
ನಟರ ಮಕ್ಕಳು ನಟರಾಗೋದು, ಡಾನ್ಸರ್ ಮಕ್ಕಳು ಡಾನ್ಸರ್ ಆಗೋದು, ಸಿಂಗರ್ ಮಕ್ಕಳು ಸಿಂಗರ್ ಆಗೋದು ವಿಶೇಷವೇನಲ್ಲ. ಅದೆಲ್ಲ ಈಗ ಮಾಮೂಲು. ಆದರೆ ಹಳ್ಳಿಯೊಂದರ ಬಡ ಮೆಕಾನಿಕ್ ಯೊಬ್ಬನ ಮಗಳು ಪುಟಾಣಿ ಬಾಲಕಿ ಜಗತ್ ಪ್ರಸಿದ್ಧ ಸ್ಟಾರ್ ಗಳೇ ಅಚ್ಚರಿಪಟ್ಟು ಹಾಡಿ- ಹೊಗಳುವಷ್ಟು ಸಾಧನೆ ಮಾಡುತ್ತಾಳೆಂದರೆ ಅದು ನಿಜವಾದ ಸಾಧನೆ. ಆ ಸಾಧಕಿ ಮಹಾಲಕ್ಷ್ಮಿ. ಹೆಸರಿಗೆ ತಕ್ಕಂತೆ 'ಮಹಾ' ಪ್ರತಿಭೆ‌. ಈ ಹಳ್ಳಿ ಪ್ರತಿಭೆಯ ಸಾಧನೆಯ ಹಿಂದಿದೆ ಒಂದು ರೋಚಕ ಕತೆ, ಅದೇನು ಅಂತ ಗೊತ್ತಾಗ ಬೇಕಾದ್ರೆ ಈ ಸ್ಟೋರಿ ಓದಿ.
ಅಸಾಧಾರಣ ಪ್ರತಿಭೆ ಈ ಪುಟಾಣಿ…
ಹೆಸರು ಮಹಾಲಕ್ಷ್ಮಿ .ಕನ್ನಡ ಹಾಗೂ ತೆಲುಗು ಕಿರುತೆರೆಗೆ ಚಿರಪರಿಚಿತ ಹೆಸರು. ಆಕೆಗೀಗ ಹತ್ತು ವರ್ಷ. ಈಗಷ್ಟೇ ಐದನೇ ತರಗತಿ ವಿದ್ಯಾರ್ಥಿನಿ. ನಾಲ್ಕನೇ ವರ್ಷದಿಂದಲೇ ಡಾನ್ಸ್ ಅಭ್ಯಾಸ ಆರಂಭಿಸಿದವಳು. ಕಲಿಕೆಗೆ ಗುರು ಇಲ್ಲ . ಕುಟುಂಬದ ದೊಡ್ಡ ಹಿನ್ನೆಲೆಯೂ ಇಲ್ಲ‌. ಮನೆಯಲ್ಲೇ ಟಿವಿ ಶೋ ನೋಡಿ ಡಾನ್ಸ್ ಹುಚ್ಚು ಹಿಡಿಸಿಕೊಂಡವಳು, ಮುಂದೆ ಅದರಲ್ಲೇ ದೊಡ್ಡ ಸಾಧನೆ ಮಾಡಿದ್ದಾಳೆ. ಮಹಾಲಕ್ಣ್ಮಿ ಎನ್ನುವ ಹೆಸರಿನ ಬಲವೋ, ದೇವರೇ ಕೊಟ್ಟ ವರವೋ ಮಹಾಲಕ್ಣ್ಮಿಗೆ ಡಾನ್ಸ್ ಎನ್ನುವುದು ನೀರು ಕುಡಿದಷ್ಟೇ ಸುಲಭ. ಮೊದಲು ಊರಿನ ವಿವಿಧ ಕಾರ್ಯಕ್ರಮಗಳಲ್ಲಿ ಕುಣಿದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದೇ ದೊಡ್ಡ ಪ್ರೇರಣೆ ನೀಡಿದೆ. ಕನ್ನಡ ಮತ್ತು ತೆಲುಗಿನ ಜನಪ್ರಿಯ ಟಿವಿ ಡಾನ್ಸ್ ಶೋಗಳಿಗೆ ಹೋಗಿ, ಗೆದ್ದು ಬಂದಿದ್ದಾಳೆ. ರಾಜ್ಯ, ಹೊರ ರಾಜ್ಯದ ದೊಡ್ಡ ಸ್ಟಾರ್ ಗಳೇ ಹಾಡಿ- ಹೊಗಳಿದ್ದಾರೆ. ಆದರೆ ಈಗ, ಕನ್ನಡದಲ್ಲೇಕೆ ಆಕೆಯ ಪ್ರತಿಭೆಗೆ ತಕ್ಕಂತೆ ಯಾವುದೇ ಮನ್ನಣೆ ಸಿಗುತ್ತಲ್ಲ ಎನ್ನುವ ಅಳಲು ಆಕೆಯ ಪೋಷಕರದ್ದು. ಹಾಗಾದ್ರೆ ಏನಾಯ್ತು? ಅದಕ್ಕೂ ಮೊದಲು, ಆಕೆಯ ಹಿನ್ನೆಲೆ, ನೃತ್ಯ ಕಲಿತ ಸಾಹಸ, ಆ ಮೂಲಕ ಸಾಧಿಸಿದ ಯಶಸ್ಸಿನ ಕತೆ ಕೇಳಿ.
ಇಷ್ಟಕ್ಕೂ ಆಕೆ ಶ್ರೀಮಂತ‌ ಕುಟುಂಬದ ಮಗಳಲ್ಲ…
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಊಳವಿ ಮಹಾಲಕ್ಣ್ಮಿ ಊರು. ತಂದೆ ಉಮೇಶ್ ಗೌಡ. ತಾಯಿ ಉಷಾ. ಉಮೇಶ್ ಗೌಡ್ರು ಉಳವಿಯಲ್ಲೇ ಸಣ್ಣದೊಂದು ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ತಾಯಿ ಉಷಾ ಹಾಲಿನ ಡೈರಿಯಲ್ಲಿ ವರ್ಕರ್. ಇದೊಂದು ಕೆಳ ಮಧ್ಯಮ ವರ್ಗದ ಫ್ಯಾಮಿಲಿ .ಅಂತಹ ಕುಟುಂಬದಲ್ಲಿ ಹುಟ್ಟಿ ಡಾನ್ಸ್ ನಲ್ಲಿ ದೊಡ್ಡ ಸಾಧನೆಯ ಕನಸು ಕಂಡವಳು ಈ ಮಹಾಲಕ್ಣ್ಮಿ. ‌ಆದರೆ ಆಕೆಯ ಕನಸು ನನಸಾಗಿಸುವ ಪೂರಕವಾದ ವಾತಾವರಣ ಮನೆಯಲ್ಲಿಲ್ಲ. ಡಾನ್ಸ್ ಕಲಿಸುವುದಕ್ಕಾಗಲಿ ಅಥವಾ ತರಬೇತಿ ಕೊಡಿಸುವುದಕ್ಕಾಗಲಿ ಪೋಷಕರಿಗೆ ಆರ್ಥಿಕ ಶಕ್ತಿ ಇಲ್ಲ. ಮೇಲಾಗಿ ಸಮಯವೂ ಇರಲಿಲ್ಲ. ಒಂದೊತ್ತಿನ ಊಟ ಬೇಕಾದರೆ ಅವರು ದುಡಿಯ ಲೇಬೇಕು. ಆದರೆ ಮಗಳ ಇಚ್ಚಾಶಕ್ತಿಯಂತೆ ದೊಡ್ಡ ಡಾನ್ಸರ್ ಮಾಡ್ಲಿಕ್ಕೆ ಬೇಕು ಎನ್ನುವ ಛಲ ಮಾತ್ರ ಅವರಲ್ಲಿತ್ತು. ಆಗ ಮಹಾಲಕ್ಷ್ಮಿ ಗೆ ಒಬ್ಬ ಗುರುವಾಗಿ ನಿಂತವರು ಆಕೆಯ ಮಾವ ಕಡೆನಂದಿ ಹಳ್ಳಿಯ ಕರಿಬಸಪ್ಪ ಅಲಿಯಾಸ್ ಕಬಿ ಮುತ್ತಿಗಿ.
ಮಾವ ಕಬಿ ಮುತ್ತಿಗಿ‌ ಜೊತೆಗೆ ಮಹಾಲಕ್ಷ್ಮಿ
ಅಂಗವಿಕಲತೆಯನ್ನೇ ಮೀರಿ, ಗುರುವಾಗಿ ನಿಂತರು…
ಮಹಾಲಕ್ಣ್ಮಿಯ ಮಾವ ಕಬಿ ಮುತ್ತಿಗಿ ಅಂಗ ವಿಕಲ. ಒಂದು ಕಾಲಿಲ್ಲ. ಆಕ್ಸಿಡೆಂಟ್ ನಲ್ಲಿ ಕಾಲು ಕಳೆದು ಕೊಂಡು ಶಾಶ್ವತವಾಗಿ, ಊನವಾಗುಂತಾಗಿದೆ. ಅದಕ್ಕಾಗಿಯೇ ಆಗವರು ಮನೆಹಿಡಿದಿದ್ದರು. ಅವರ ಆರೈಕೆಗೆ ಅವರ ಅಕ್ಕ-ಮಾವ ಸಾಥ್ ನೀಡಿದ್ದರು. ಅದರ ಋಣ ತೀರಿಸುವ ಅವಕಾಶವನ್ನೇ ಬಳಸಿಕೊಂಡು, ಸೊಸೆಯನ್ನು ದೊಡ್ಡ ಡಾನ್ಸರ್ ಮಾಡಲು ಹೊರಟರು.' ಮಹಾಲಕ್ಷ್ಮಿ‌ ನಂಗೆ ಸೊಸೆಯಲ್ಲ ಮಗಳು. ಆಕೆ ನಾಲ್ಕು ವರ್ಷದಲ್ಲಿದ್ದಾಗಲೇ ಡಾನ್ಸ್ ಕಲಿಯಲು ಶುರು ಮಾಡಿದಳು. ಅದು ಆಕೆಗೆ ದೇವರೇ ಕೊಟ್ಟ ವರ. ಟಿ ವಿಗಳಲ್ಲಿ‌ ನೋಡಿದ್ದನ್ನು ಪಟ್ಟಂತೆ ನಮ್ಮೆದುರು ಮಾಡಿ ತೋರಿಸುತ್ತಿದ್ದಳು. ನಮಗೆಲ್ಲ ಒಂದ್ರೀತಿ ಅಚ್ಚರಿ. ಇನ್ನೊಂದು ರೀತಿಯಲ್ಲಿ ಸಂತೋಷ.‌ ಅದನ್ನೇ ಗಂಬೀರವಾಗಿ ಪರಿಗಣಿಸಿ, ಆಕೆಗೆ ಒಂದಷ್ಟು ಜಿಮ್ನಾಸ್ಟಿಕ್ ತರಬೇತಿ ನೀಡತೊಡಗಿದೆ. ಜತೆಗೆ ಡಾನ್ಸ್ ತರಬೇತಿಯೂ ಅಗತ್ಯ ಎನಿಸಿತು. ಅದಕ್ಕೂ ಅಲೆದಾಡಿದೆ. ನುರಿತ ಡಾನ್ಸ್ ಮಾಸ್ಟರ್ ಹತ್ತಿರದಲ್ಲಿ ಸಿಗಲಿಲ್ಲ. ‌ಅಲೆದಾಡಿದೆ. ಸೊರಬದಲ್ಲಿ ಒಂದಷ್ಟು ದಿನ ಡಾನ್ಸ್ ಕಲಿತಳು. ಆಕೆಯ ಡಾನ್ಸ್ ಸಾಮಾರ್ಥ್ಯ ಕ್ಕೆ ನುರಿತ ನೃತ್ಯ ನಿರ್ದೇಶಕರೇ ಸೂಕ್ತ ಎನಿಸಿತು. ಕೊನೆಗೆ ಪರಿಚಿತರೊಬ್ಬರ ಬಳಿ ಕರೆದುಕೊಂಡು ಹೋದೆ. ಅವರು ಕೊಟ್ಟ ಸಲಹೆಯೇ ಟಿವಿ ಶೋ ಗಳಿಗೆ ಎಂಟ್ರಿ' ಎನ್ನುವ ಮೂಲಕ ಹಳ್ಳಿ ಡಾನ್ಸ್ ಪ್ರತಿಭೆ ಮಹಾಲಕ್ಣ್ಮಿ ಡಾನ್ಸರ್ ಆಗಿ ರಿಯಾಲಿಟಿ ಶೋಗೆ ಎಂಟ್ರಿಯಾದ ಹಿಂದಿನ ಕತೆ ಬಿಚ್ವಿಡುತ್ತಾರೆ ಕಬಿ ಮುತ್ತಿಗಿ.
ವೈಲ್ಡ್ ಕಾರ್ಡ್ ಎಂಟ್ರಿ ಎಂಬ ಅದೃಷ್ಟ ದ ಬಾಗಿಲು…