text
stringlengths 0
61.5k
|
---|
ವಿಕ ಸುದ್ದಿಲೋಕ | Updated: Dec 26, 2016, 07:03AM IST |
ಹಿರಿಯೂರು : ವಿಚ್ಛಿದ್ರಕಾರಿ ಶಕ್ತಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ನೀಡಿ ದೇಶದ ಯುವಕರನ್ನು ತಪ್ಪು ದಾರಿಗೆ ಎಳೆಯುವ ದುಷ್ಕೃತ್ಯದ ವಿರುದ್ಧ ಎಚ್ಚರ ವಹಿಸಬೇಕಿದೆ ನ್ಯಾ.ಎಸ್.ಬಿ.ವಸ್ತ್ರಮಠ ಎಚ್ಚರಿಸಿದರು. |
ತಾಲೂಕಿನ ಬಬ್ಬೂರುಫಾರಂ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರ ಮಹಾವಿದ್ಯಾಲಯಗಳ ಯುವ ಜನೋತ್ಸವದಲ್ಲಿ ಭಾನುವಾರ ಮಾತನಾಡಿದರು. |
ಮಾದಕ ವಸ್ತುಗಳಿಂದ ಸಮಾಜದಲ್ಲಿ ಶಾಂತಿಕದಡಿ ಅಶಾಂತಿಗೆ ಎಡೆ ಮಾಡಿಕೊಡುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳು ಮಾಡುವ ದುಶëಟಗಳಿಂದ ದೂರಿವಿದ್ದು ಸತ್ಪ್ರಜೆಗಳಾಗಬೇಕೆಂದು ತಿಳಿಸಿದರು. |
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಶಾಲಾ ಕಾಲೇಜು ಹಂತದಲ್ಲಿ ಯುವ ಸಂಭ್ರಮ ಕಾರ್ಯಕ್ರಮ ಆಚರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ನಿವಾರಣೆಗೊಂಡು ನವ ಚೈತನ್ಯ ಮೂಡುವುದು. ಅಭ್ಯಾಸದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯಕ. ಇದರಿಂದ ವ್ಯಕ್ತಿತ್ವ ಬೆಳವಣಿಗೆ, ನವೋಲ್ಲಾಸ ಮೂಡುವುದು. |
ಯುವಕರು ಜೀವ ಕೊಟ್ಟ ತಂದೆ-ತಾಯಿ, ಕಲಿಸಿದ ಗುರುಗಳು, ಕಲಿತಶಾಲೆ, ಉದ್ಯೋಗ ನೀಡುವ ಸರಕಾರವನ್ನು ಪ್ರೀತಿಸಿ, ಗೌರವಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು. |
ಕೃಷಿ ತೋಟಗಾರಿಕೆ ವಿವಿ ಕುಲಪತಿ ಡಾ.ಸಿ.ವಾಸುದೇವಪ್ಪ ಮಾತನಾಡಿ, ಜೀವನ ಮೌಲ್ಯ, ಸಂಸ್ಕಾರ, ಸಂಸ್ಕೃತಿ ಅರಿಯಲು ಯುವ ಸಂಭ್ರಮ ಉತ್ತಮ ವೇದಿಕೆ. ಕ್ರೀಡೆ, ಅಭ್ಯಾಸ, ಜೀವನದಲ್ಲಿ ಸೋಲು ಗೆಲುವು ಸಹಜ. ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸನ್ನಡತೆ, ವಾಕ್ ಚತುರತೆ ಕಲಿಯಬೇಕು ಎಂದು ತಿಳಿಸಿದರು. |
ಕೃಷಿ ವಿದ್ಯಾರ್ಥಿಗಳು ಓದಿನ ಜತೆಗೆ ಕೌಶಲ್ಯತೆ ಬೆಳೆಸಿಕೊಂಡು ರೈತರಿಗೆ ನೆರವಾಗಬೇಕು. ದೇಶದಲ್ಲಿ ಸಣ್ಣ, ಅತಿ ಸಣ್ಣ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. |
ಡಾ.ವಿಶ್ವನಾಥ್‌ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ ಖಿನ್ನತೆ ನಿವಾರಣೆಗೆ ಸೃಜನಶೀಲ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ ಸಹಕಾರಿ. ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ 'ಯುವ ಸಂಭ್ರಮ ಉತ್ತಮ ವೇದಿಕೆ ಎಂದು ತಿಳಿಸಿದರು. |
ಕತ್ತಲಗೆರೆ, ಶಿವಮೊಗ್ಗ, ಮೂಡಿಗೆರೆ, ಪೊನ್ನಂಪೇಟೆ, ಬ್ರಹ್ಮಾವರ ತೋಟಗಾರಿಕೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ನಾನಾ ಸ್ಪರ್ಧೆ, ಆಟೋಟಗಳಲ್ಲಿ ಪಾಲ್ಗೊಂಡು ಸಭಿಕರನ್ನು ನಗಿಸಿ, ತಾವೂ ಹರ್ಷಪಟ್ಟರು. |
ಡಾ.ಸಿದ್ದರಾಮೇಗೌಡ, ಡಾ.ಗೌಡ, ಡಾ.ನಾರಾಯಣಸ್ವಾಮಿ, ಡಾ.ಮಾದಯ್ಯ, ಡಾ.ಹನುಮಂತಪ್ಪ, ಡಾ.ಆನಂದ್‌ಕುಮಾರ್, ಡೀನ್ ಬಸವರಾಜಪ್ಪ, ಡಾ.ಸರ್ವಜ್ಞ ಸಾಲಿಮಠ, ಡಾ.ಓಂಕಾರಪ್ಪ, ಪ್ರಾಚಾರ್ಯ ಡಾ.ಧರಣೀಂದ್ರಯ್ಯ ಇತರರು ಉಪಸ್ಥಿತರಿದ್ದರು. |
ಕುವೈತ್ ಕನ್ನಡಿಗರಿಂದ ಕನ್ನಡ ರಾಜ್ಯೋತ್ಸವ | Kannada Rajyotsava | Kuwait | Uday Jadugar | Magic show | ಕನ್ನಡ ರಾಜ್ಯೋತ್ಸವ | ಉದಯ್ ಜಾದೂಗಾರ್ | ಕುವೈತ್ - Kannada Oneindia |
ಕುವೈತ್ ಕನ್ನಡಿಗರಿಂದ ಕನ್ನಡ ರಾಜ್ಯೋತ್ಸವ |
| Published: Monday, October 11, 2010, 13:52 [IST] |
ಕುವೈತಿನಲ್ಲಿ ನೆಲಸಿರುವ ಕರ್ನಾಟಕದ ನಾಡಿಗರು 2010ರ ಕನ್ನಡ ರಾಜ್ಯೋತ್ಸವವನ್ನು ಅಮೆರಿಕನ್ ಇಂಟರ್ ನ್ಯಾಶನಲ್ ಸ್ಕೂಲಿನ ಡಾ. ಕಮಾಲ್ ಅಲ್-ರಾಯಿಸ್ ಸಭಾಂಗಣದಲ್ಲಿ ಇದೇ ನವೆಂಬರ್ ದಿನಾಂಕ 12ರಂದು ಆಚರಿಸುತ್ತಿದ್ದಾರೆ. ಸಂಜೆ 4ರಿಂದ ರಾತ್ರಿ 9.15ರತನಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಕುವೈತಿನಲ್ಲಿ ಭಾರತದ ರಾಯಭಾರಿ ಆಗಿರುವ ಅಜಯ್ ಮಲ್ಹೋತ್ರ ಹಾಗೂ ವಿಶೇಷ ಅತಿಥಿಗಳಾಗಿ ಭಾರತ ಸರ್ಕಾರದ ಅನಿವಾಸಿ ಭಾರತೀಯ ವೇದಿಕೆಯ ಕರ್ನಾಟಕ ಶಾಖೆಯ ಉಪಾಧ್ಯಕ್ಷರಾದ ಕ್ಯಾ.ಗಣೇಶ್ ಕಾರ್ಣಿಕ್ ರವರು ಆಗಮಿಸಲಿದ್ದಾರೆ. |
ರಾಜ್ಯೋತ್ಸವದ ವಿಶೇಷ ಆಕರ್ಷಣೆಯಾಗಿ ಕೂಟದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈ ಎಲ್ಲ ಚಟುವಟಿಕೆಗಳನ್ನು ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಸಿಕೊಡುವ ನಿರೂಪಣಾ ಮಾಲಿಕೆಯ ಹಂದರದಲ್ಲಿ ಪೋಣಿಸಿ ಪ್ರಸ್ತುತ ಪಡಿಸಲಾಗುವುದು. ಕಾರ್ಯಕ್ರಮಗಳಲ್ಲಿ ನೂರಕ್ಕೂ ಅಧಿಕ ಚಿಣ್ಣರು ಹಾಗೂ ಹಿರಿಯ ಸದಸ್ಯರು ಭಾಗವಹಿಸಲಿದ್ದಾರೆ. |
ಕನ್ನಡ ನಾಡಿನ ವಿಶ್ವವಿಖ್ಯಾತ ಯಕ್ಷಿಣಿ, ಮಾತನಾಡುವ ಗೊಂಬೆ ಮತ್ತು ಕಲೆ/ನೆರಳು (ಶಾಡೊ ಪ್ಲೇ) ಮುಂತಾದವುಗಳಲ್ಲಿ ಸಿದ್ಧಹಸ್ತರಾದ ಉದಯ್ ಜಾದೂಗರ್ ಅವರ ಕಾರ್ಯಕ್ರಮ ಎಲ್ಲವಯಸ್ಸಿನ ಮತ್ತು ಎಲ್ಲ ಭಾಷೆಯವರ ಆಕರ್ಷಣೆಯಾಗಲಿದೆ. ಉದಯ್ ರವರು ಬಾಲ್ಯದಿಂದಲೇ ಜಾದೂ ಮತ್ತು ಯಕ್ಷಿಣಿಯಲ್ಲಿ ಆಸಕ್ತರಾಗಿದ್ದು ಈ ವಿದ್ಯೆಯನ್ನು ಭಾರತದ ಪ್ರಖ್ಯಾತ ಜಾದೂಗಾರರಿಂದ ಕರಗತ ಮಾಡಿಕೊಂಡು ನಾಡಿನ ಹೆಸರನ್ನು ವಿಶ್ವದೆಲ್ಲೆಡೆ ಪ್ರಸಿದ್ಧಿಗೊಳಿಸಿದ್ದಾರೆ. ಇವರು ಇಗಾಗಲೇ ಎಂಟು ಸಾವಿರಕ್ಕೂ ಅಧಿಕ ವೇದಿಕೆಗಳ ಮೇಲೆ ಭಾರತ ಹಾಗೂ ಹೊರದೇಶಗಳಲ್ಲಿ ಪ್ರದರ್ಶನ ನೀಡಿ ಅನೇಕ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ. |
ಇವರು ನಾಟಕ ಹಾಗೂ ಚಲನಚಿತ್ರಗಳಲ್ಲಿ ಪಾತ್ರವಹಿಸಿದ್ದು ಇವರು ನಿರ್ವಹಿಸಿದ "ಗುರುಗೋವಿಂದ ಭಟ್ಟ"ನ ಪಾತ್ರ ದೂರದರ್ಶನದ ಧಾರಾವಾಹಿ "ಈಶ್ವರ ಅಲ್ಲಾ ನೀನೇ ಎಲ್ಲಾ" ಸಕಲ ಕನ್ನಡಿಗರ ಮನೆ ಮಾತಾಗಿದೆ. ಉದಯ್ ರವರು ಈಗಾಗಲೇ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು ಇವುಗಳು ಮ್ಯಾಜಿಕ್, ಹಾಸ್ಯ, ಸೊಡಕು ಹಾಗೂ ವ್ಯಕ್ತಿತ್ವ ವಿಕಾಸ ವಿಷಯಗಳನ್ನೊಳಗೊಂಡಿವೆ. ಕಲಾತ್ಮಕ ಚಲನ ಚಿತ್ರವಾದ "ಯುದ್ಧ ಮತ್ತು ಸ್ವಾತಂತ್ರ್ಯ" ವನ್ನು ನಿರ್ಮಾಣಮಾಡಿ "ದರೋಡೆ" ಎಂಬ ಚಲನ ಚಿತ್ರವನ್ನು ನಿರ್ದೇಶಿಸಿದ್ದಾರೆ. |
ಕುವೈತ್ ಕನ್ನಡ ಕೂಟ 26 ವರ್ಷಗಳಿಂದ ಕುವೈತಲ್ಲಿ ಅಸ್ತಿತ್ವದಲ್ಲಿದ್ದು ನಿರಂತರವಾಗಿ ದೇಶದ ಮತ್ತು ವಿಶೇಷತಃ ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಯುವ ಪೀಳಿಗೆಗೆ ಮನದಟ್ಟು ಮಾಡುವುದರ ಜೊತೆಗೆ ಕುವೈತಿನ ಜನರಲ್ಲಿ ನಮ್ಮ ಸಂಸ್ಕೃತಿಯ ಪರಿಚಯವನ್ನೂ ನೀಡುತ್ತಿದೆ. ಕುವೈತ್ ಕನ್ನಡ ಕೂಟವು 2007ರಲ್ಲಿ ವಿಶ್ವ ಕನ್ನಡ ಸ್ಮಮೇಳನ ಹಾಗೂ 2009ರಲ್ಲಿ ರಜತ ಮಹೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿತ್ತು. |
ಎಂಪೈರ್ ಸ್ಟೇಟ್ ಬಿಲ್ಡಿಂಗ್ ಪಾಪ್-ಅಪ್ ಮಾರಾಟಗಾರರಿಗೆ 90 ವರ್ಷಗಳನ್ನು ಆಚರಿಸಲು |
ಮುಖಪುಟ » ಇತ್ತೀಚಿನ ಸುದ್ದಿ ಲೇಖನಗಳು » ಇದು ನಿಮ್ಮ ಪತ್ರಿಕಾ ಪ್ರಕಟಣೆಯಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ! » ಎಂಪೈರ್ ಸ್ಟೇಟ್ ಬಿಲ್ಡಿಂಗ್ ಪಾಪ್-ಅಪ್ ಮಾರಾಟಗಾರರಿಗೆ 90 ವರ್ಷಗಳನ್ನು ಆಚರಿಸಲು |
ಬ್ರಾಂಕ್ಸ್‌ನ ಪೋರ್ಟ್ ಮೋರಿಸ್ ನೆರೆಹೊರೆಯ ಪ್ರಶಸ್ತಿ ವಿಜೇತ ಕರಕುಶಲ ತಯಾರಿಕೆಯು ನಾಲ್ಕು ಆಯ್ದ ಬಿಯರ್‌ಗಳನ್ನು ಮಾರಾಟ ಮಾಡುತ್ತದೆ-ಅವರ ಅಮೇರಿಕನ್ ಪೇಲ್ ಅಲೆ, ವರ್ಲ್ಡ್ ಗಾನ್ ಹಜಿ ಐಪಿಎ, ಸ್ಮೈಲ್ ಮೈ ಗೈ ಐಪಿಎ, ಮತ್ತು ದಾಸ್ ಬ್ರಾಂಕ್ಸ್ ಆಕ್ಟೋಬರ್‌ಫೆಸ್ಟ್-ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ 90 ನೇ ವಾರ್ಷಿಕೋತ್ಸವದ ಕಾರ್ಟ್‌ನಿಂದ ಮಹಡಿ. |
ತನ್ನ 90 ನೇ ವರ್ಷದಲ್ಲಿ, ಎಂಪೈರ್ ಸ್ಟೇಟ್ ಬಿಲ್ಡಿಂಗ್ (ಇಎಸ್‌ಬಿ) ಗೆ ಹೆಚ್ಚಿನ ಟೋಸ್ಟ್ ಇದೆ ಏಕೆಂದರೆ ಇದು ಅಕ್ಟೋಬರ್ 86 ರಿಂದ ಶನಿವಾರದವರೆಗೆ ಬ್ರೊಂಕ್ಸ್ ಬ್ರೂವರಿಯೊಂದಿಗೆ ತನ್ನ ಐಕಾನಿಕ್ 14 ನೇ ಮಹಡಿ ವೀಕ್ಷಣಾಲಯಕ್ಕೆ ಅಕ್ಟೋಬರ್ 30-5 ರಿಂದ 9-XNUMX ಗಂಟೆಗೆ ಪಾಪ್-ಅಪ್ ಅಂಕಗಳನ್ನು ನೀಡುತ್ತದೆ ಕಟ್ಟಡದ ಇತಿಹಾಸದಲ್ಲಿ ಮೊದಲ ಬಾರಿಗೆ ವೀಕ್ಷಣಾಲಯದ ಅನುಭವದಲ್ಲಿ ಪಾನೀಯಗಳನ್ನು ನೀಡಲಾಗುತ್ತದೆ. |
"ನಾವು ವಿಶ್ವದ ಅತ್ಯಂತ ಪ್ರಸಿದ್ಧ ಕಟ್ಟಡದ 90 ನೇ ವಾರ್ಷಿಕೋತ್ಸವದ ಆಚರಣೆಯನ್ನು ಸ್ಥಳೀಯ ನೆಚ್ಚಿನ ಬ್ರಾಂಕ್ಸ್ ಬ್ರೂವರಿಯ ಸಹಭಾಗಿತ್ವದಲ್ಲಿ ಮುಂದುವರಿಸುತ್ತೇವೆ" ಎಂದು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅಬ್ಸರ್ವೇಟರಿಯ ಅಧ್ಯಕ್ಷ ಜೀನ್-ವೈವ್ಸ್ ಘಾಜಿ ಹೇಳಿದರು. "ನಮ್ಮ ಉದ್ಯಮದ ಪ್ರಮುಖ ಒಳಾಂಗಣ ಪರಿಸರದ ಗುಣಮಟ್ಟದ ಅನುಷ್ಠಾನದೊಂದಿಗೆ, ನಮ್ಮ ಅತಿಥಿಗಳು ಸಂಜೆಯ ಪಾನೀಯದೊಂದಿಗೆ ವಿಶ್ರಾಂತಿ ಪಡೆಯುವ ಮೊದಲು ಆತ್ಮವಿಶ್ವಾಸದಿಂದ ನಮ್ಮ ಹೊಸ ಮರುವಿನ್ಯಾಸಗೊಳಿಸಿದ, ತಲ್ಲೀನಗೊಳಿಸುವ ಡಿಜಿಟಲ್ ಮತ್ತು ಸ್ಪರ್ಶ ಪ್ರದರ್ಶನಗಳನ್ನು ಆನಂದಿಸಬಹುದು ಮತ್ತು 360 ಡಿಗ್ರಿ, ನ್ಯೂಯಾರ್ಕ್‌ನ ಅತ್ಯಂತ ಅದ್ಭುತವಾದ XNUMX ಡಿಗ್ರಿ, ಬಯಲು ನೋಟಗಳು ನಗರವು ನೀಡಬಹುದು. " |
ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಸ್ವಂತ ಸ್ಟೇಟ್ ಗ್ರಿಲ್ ಮತ್ತು ಬಾರ್ ಬ್ರೂವರ್‌ನ ಆಯ್ಕೆಗಳ ಜೊತೆಗೆ $ 10 ಮಿನಿ NY ಶೈಲಿಯ ಚೀಸ್‌ಕೇಕ್‌ಗಳನ್ನು ನೀಡುತ್ತದೆ. ಬ್ರಾಂಕ್ಸ್ ಬ್ರೂವರಿ ಮೈ ಕುಕೀ ಡೀಲರ್‌ನೊಂದಿಗೆ ಆಗಸ್ಟ್‌ನಲ್ಲಿ ಯಶಸ್ವಿಯಾಗಿ ನಡೆಸಿದ ನಂತರ ಕಟ್ಟಡದ ವೀಕ್ಷಣಾಲಯ ಪಾಪ್-ಅಪ್ ಕಾರ್ಯಕ್ರಮದಲ್ಲಿ ಎರಡನೇ ಮಾರಾಟಗಾರರಾಗಿದ್ದಾರೆ. |
"ನ್ಯೂಯಾರ್ಕ್ ನಗರದ ಹೃದಯಭಾಗದಲ್ಲಿರುವ ಆಕ್ಟೊಬರ್ ಫೆಸ್ಟ್ ಅನ್ನು ಆಚರಿಸಲು ಎಂಪೈರ್ ಸ್ಟೇಟ್ ಬಿಲ್ಡಿಂಗ್ನೊಂದಿಗೆ ಸೇರಲು ನಾವು ಹೆಮ್ಮೆಪಡುತ್ತೇವೆ" ಎಂದು ಬ್ರಾಂಕ್ಸ್ ಬ್ರೂವರಿಯ ವಕ್ತಾರ ಸೀನ್ ವ್ಯಾಲೆಂಟಿ ಹೇಳಿದರು. "ನಮ್ಮ ಕೆಲಸವು ಸಮುದಾಯ, ಸೃಜನಶೀಲತೆ ಮತ್ತು ಒಳಗೊಳ್ಳುವಿಕೆಯ ಸುತ್ತ ಸುತ್ತುತ್ತದೆ, ಇವೆಲ್ಲವೂ ನಾವು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಬಗ್ಗೆ ಯೋಚಿಸಿದಾಗ ನೆನಪಿಗೆ ಬರುತ್ತದೆ." |
ಅತಿಥಿಗಳು ತಮ್ಮ ಪಾನೀಯಗಳನ್ನು ಐಕಾನ್ 86 ನೇ ಮಹಡಿಯ ವೀಕ್ಷಣಾಲಯದಲ್ಲಿ ಸಿಪ್ ಮಾಡಲು ಪ್ರೋತ್ಸಾಹಿಸಲಾಗುತ್ತದೆ ಮತ್ತು ಇಎಸ್‌ಬಿ ಸಾಮಾಜಿಕ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಅವಕಾಶಕ್ಕಾಗಿ ಫೋಟೋಗಳನ್ನು #PopUpTop ನೊಂದಿಗೆ ಟ್ಯಾಗ್ ಮಾಡಿ. ಎಂಪೈರ್ ಸ್ಟೇಟ್ ಬಿಲ್ಡಿಂಗ್ ವೀಕ್ಷಣಾಲಯದಲ್ಲಿ ಭವಿಷ್ಯದ ಮಾಸಿಕ ಪಾಪ್-ಅಪ್‌ಗಳನ್ನು ಪ್ರತ್ಯೇಕವಾಗಿ ಘೋಷಿಸಲಾಗುತ್ತದೆ. |
ಇಂಡೋನೇಷ್ಯಾದಲ್ಲಿ ಸುನಾಮಿ ಸಾವಿನ ಸಂಖ್ಯೆ 1200 – Karavali Kirana |
ಪಾಲು (ಇಂಡೋನೇಷ್ಯಾ): ಇಲ್ಲಿನ ಸುಲಾವೇಸಿಯಲ್ಲಿ ಶುಕ್ರವಾರ ಸಂಭವಿಸಿದ್ದ ಪ್ರಬಲ "ಭೂಕಂಪ-ಸುನಾಮಿ'ಯಲ್ಲಿ ಸಾವಿಗೀಡಾದವರ ಸಂಖ್ಯೆ 1200 ದಾಟಿದೆೆ. ಶನಿವಾರದ ಹೊತ್ತಿಗೆ ನಾಲೂ°ರರ ಸನಿಹದಲ್ಲಿದ್ದ ಸಾವಿನ ಸಂಖ್ಯೆ ರವಿವಾರಕ್ಕೆ ಮೂರು ಪಟ್ಟಾಗಿರುವುದು ಸುನಾಮಿಯ ಭೀಕರತೆಯನ್ನು ಬಿಚ್ಚಿಟ್ಟಿದೆ. ಇದರ ನಡುವೆಯೇ, ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರರಾದ ಸುಟೊಪೊ ಪುವೊì ನುಗ್ರೊಹೊ ಅವರು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಂಭವವಿದ್ದು, ರವಿವಾರದಿಂದಲೇ ಅನೇಕ ಶವಗಳನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಡೆಸಲು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. |
ಲವ್ ಜಿಹಾದ್ ವಿರುದ್ಧ ಬಹುದೊಡ್ಡ ನಿರ್ಧಾರದ ಬಳಿಕ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಲು ಮುಂದಾದ ಯೋಗಿ ಸರ್ಕಾರ! | Viral Suddi |
ಲಖನೌ: ಮದುವೆಯ ಹೆಸರಿನಲ್ಲಿ ಮತಾಂತರ ಮಾಡುವ ಪ್ರಕ್ರಿಯೆಯ (ಲವ್ ಜಿಹಾದ್) ವಿರುದ್ಧ ಬಹುದೊಡ್ಡ ನಿರ್ಧಾರ ತೆಗೆದುಕೊಂಡು ಕಾನೂನು ಜಾರಿಗೆ ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ವಿವಾಹಕ್ಕೆ ಸಂಬಂಧಿಸಿದಂತೆಯೇ ಇನ್ನೊಂದು ಯೋಜನೆ ಇದಾಗಿದೆ. 44 ವರ್ಷಗಳ ಹಿಂದಿನ ಯೋಜನೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಇದು! 1976ರಲ್ಲಿನ ಈ ಯೋಜನೆಯನ್ನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ. 1976ರಲ್ಲಿ ಜಾರಿಗೆ ತಂದ ಯೋಜನೆಯ ಅನ್ವಯ, ಅಂತರ್ಧರ್ಮೀಯ ವಿವಾಹವಾದರೆ 50 ಸಾವಿರ ರೂಪಾಯಿಗಳ ಧನಸಹಾಯ ನೀಡಲಾಗುತ್ತಿತ್ತು. ಉತ್ತರ ಪ್ರದೇಶ ರಾಷ್ಟ್ರೀಯ ಏಕೀಕರಣ ಇಲಾಖೆ ಇದನ್ನು ಶುರು ಮಾಡಿತ್ತು. ಅದನ್ನೀಗ ರದ್ದು ಮಾಡಲು ಯೋಗಿ ಸರ್ಕಾರ ಚಿಂತನೆ ನಡೆಸಿದೆ. |
ಬೇರೆ ಬೇರೆ ಧರ್ಮದವರು ವಿವಾಹವಾದರೆ ಮದುವೆಯಾದ ಎರಡು ವರ್ಷಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಅರ್ಜಿ ಸಲ್ಲಿಸುವ ಮೂಲಕ ಸಹಾಯಧನವನ್ನು ಪಡೆಯಲು ಇದರಲ್ಲಿ ಅವಕಾಶ ಇದೆ. ಇಂಥ ದಂಪತಿಗೆ 50ಸಾವಿರ ರೂಪಾಯಿಗಳ ಸಹಾಯಧನ ನೀಡಲಾಗುತ್ತಿದೆ. ಈ ರೀತಿ ಅರ್ಜಿ ಬಂದರೆ ಅದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ರಾಷ್ಟ್ರೀಯ ಏಕೀಕರಣ ಇಲಾಖೆಗೆ ಕಳುಹಿಸುತ್ತಾರೆ. ನಂತರ ದಂಪತಿಗೆ ಸಹಾಯಧನ ನೀಡಲಾಗುತ್ತದೆ. 2017ರಲ್ಲಿ ಯೋಗಿ ಸರ್ಕಾರ ಈ ಯೋಜನೆಗೆ ಒಂದು ಉಪನಿಯಮ ಸೇರಿಸಿತ್ತು. ಅದೇನೆಂದರೆ ಈ ರೀತಿ ಅಂತರ್ಧರ್ಮಿಯರು ಮದುವೆಯಾದರೆ, ಮತಾಂತರಗೊಳ್ಳಲು ಸಾಧ್ಯವಿಲ್ಲ. ಹೀಗಾದರೆ ಮಾತ್ರ ಅಂಥವರಿಗೆ ಹಣ ನೀಡಲಾಗುವುದು ಎಂದು ತಿದ್ದುಪಡಿ ಮಾಡಲಾಗಿದೆ. ಕಳೆದ ವರ್ಷ 11 ದಂಪತಿ ಈ ಸಹಾಯಧನ ಪಡೆದಿದ್ದು, ನಾಲ್ಕು ಅರ್ಜಿಗಳು ಬಾಕಿ ಇವೆ. ಈ ವರ್ಷ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಇದೀಗ ಈ ಯೋಜನೆಯ ರದ್ದತಿಗೆ ಚಿಂತನೆ ನಡೆಸಲಾಗಿದೆ. |
'ದಕ್ಷಿಣ ಕನ್ನಡಕ್ಕೆ ಕೃಷಿ ಜಿಲ್ಲೆ ಎಂಬ ಪಟ್ಟ ಬೇಕು'-ಸರ್ಕಾರ ಒಪ್ಪುತ್ತದಾ? | Govt urged to declare South canara as horticulture dist - Kannada Oneindia |
1 min ago ಬೆಂಗಳೂರು-ವಿಜಯವಾಡ ಸೇರಿದಂತೆ ಸ್ಪೈಸ್ ಜೆಟ್ ಹೊಸ ಮಾರ್ಗಗಳು |
'ದಕ್ಷಿಣ ಕನ್ನಡಕ್ಕೆ ಕೃಷಿ ಜಿಲ್ಲೆ ಎಂಬ ಪಟ್ಟ ಬೇಕು'-ಸರ್ಕಾರ ಒಪ್ಪುತ್ತದಾ? |
ಮಂಗಳೂರು : 'ದಕ್ಷಿಣ ಕನ್ನಡಕ್ಕೆ ಕೃಷಿ ಜಿಲ್ಲೆ ಎಂಬ ಪಟ್ಟ ಬೇಕು'- ಇದು ಸರಕಾರದ ಮುಂದಿರುವ ಹೊಸ ನಮೂನೆಯ ಬೇಡಿಕೆ. ಸಾಲ, ಪರಿಹಾರ, ಮೂಲಭೂತ ಸೌಕರ್ಯಗಳಿಗಾಗಿ ಈ ಆಗ್ರಹ ಅಲ್ಲ. ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೃಷಿ ಜಿಲ್ಲೆ ಎಂದು ಘೋಷಿಸಬೇಕು ಎಂಬ ಬೇಡಿಕೆಯನ್ನು ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಸರಕಾರವನ್ನು ಆಗ್ರಹಿಸಿದೆ. |
ರಾಜ್ಯದಲ್ಲೆಲ್ಲೂ ಮಳೆಯಾಗದಿದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಬರ ಪರಿಸ್ಥಿತಿ ಬರುವಷ್ಟು ಮಳೆಯ ಕೊರತೆ ಈ ಬಾರಿ ಬಂದಿಲ್ಲ. ಸುಗ್ಗಿ ಬೆಳೆಗೆ ಮಳೆ ಕಾಣದೇ ದಕ್ಷಿಣ ಕನ್ನಡದಲ್ಲಿ ರೈತರು ಪಂಪ್‌ಗಳ ಮೊರೆ ಹೋದರೂ ಸಾಲಗಾರ ರೈತರ ಆತ್ಮ ಹತ್ಯೆಯಂತಹ ಪ್ರಕರಣಗಳು ದಕ್ಷಿಣ ಕನ್ನಡದಿಂದ ವರದಿಯಾಗಿಲ್ಲ. |
ಆದರೆ ವಾಣಿಜ್ಯ ಮಂಡಳಿಯ ಸದಸ್ಯರು ಈ ಕಾರಣವನ್ನೇ ಅಷ್ಟಾಗಿ ಮುಂದೊಡ್ಡುತ್ತಿಲ್ಲ. ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೃಷಿ ಜಿಲ್ಲೆಯೆಂದು ಘೋಷಿಸುವುದರ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯಾಗುತ್ತದೆ ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಗಿರಿಧರ್ ಪ್ರಭು ಅವರ ಅಭಿಪ್ರಾಯ. |
ಈ ಆಗ್ರಹಕ್ಕೆ ಪೂರಕವಾಗಿ ಕೇಂದ್ರ ಕೃಷಿ ಸಚಿವ ಶ್ರೀಪಾದ್ ನಾಯಕ್ ಈಗಾಗಲೇ ದಕ್ಷಿಣಕನ್ನಡವನ್ನು ಕೃಷಿ ಜಿಲ್ಲೆ ಎಂದು ಘೋಷಿಸುವುದಾಗಿ ವಾಣಿಜ್ಯ ಮಂಡಳಿಗೆ ಭರವಸೆ ಇತ್ತಿದ್ದಾರಂತೆ. ಆದರೆ ಈ ರೀತಿಯ ಬೇಡಿಕೆ ರಾಜ್ಯ ಸರಕಾರದ ಮೂಲಕ ಕೇಂದ್ರವನ್ನು ತಲುಪಬೇಕು ಎಂಬ ಷರತ್ತನ್ನೂ ಸಚಿವರು ಹಾಕಿದ್ದರಿಂದ ವಾಣಿಜ್ಯ ಮಂಡಳಿಯವರ ಸದ್ಯದ ಬೇಡಿಕೆ ಮತ್ತು ಮನವಿ ರಾಜ್ಯ ಸರಕಾರದ ಮುಂದಿದೆ. |
ದಕ್ಷಿಣ ಕನ್ನಡ ಕೃಷಿ ಜಿಲ್ಲೆ ಎಂಬುದರಲ್ಲಿ ಎರಡನೇ ಮಾತಿಲ್ಲ ಎನ್ನುವುದು ಗಿರಿಧರ್ ಅವರ ಅಂಬೋಣ. ಯಾಕೆಂದರೆ ವಾಣಿಜ್ಯ ಬೆಳೆಗಳಾದ ಗೇರು, ಅಡಿಕೆ , ತೆಂಗು, ಭತ್ತ, ಕಬ್ಬು, ವೆನಿಲ್ಲ, ಮಾವು, ಕಾಳು ಮೆಣಸು ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಈ ಕೃಷಿ ಬೆಳೆಗಳನ್ನು ಇನ್ನಷ್ಟು ಆಧುನಿಕ ರೀತಿಯಲ್ಲಿ ಹೆಚ್ಚು ಹೆಚ್ಚು ಬೆಳೆಯುವ ಕುರಿತು ಸರಕಾರ ಯೋಚಿಸಬೇಕು ಎಂಬುದು ಮಂಡಳಿಯ ನಿವೇದನೆ. |
ಕುಂದಗೋಳ, ಚಿಂಚೋಳಿ ಉಪಚುನಾವಣೆ ಕಣ; ದೋಸ್ತಿ-ಬಿಜೆಪಿ ನಡುವೆ ನೇರ ಹಣಾಹಣಿ - TruthIndia |
ಇದೇ ಮೇ 19ರಂದು ಮತದಾನ ನಡೆಯಲಿರುವ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನೆರಡು ದಿನ ಬಾಕಿ ಇದೆ. ಪ್ರಚಾರದ ಭರಾಟೆ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ಎರಡೂ ಕ್ಷೇತ್ರಗಳ ಚಿತ್ರಣದತ್ತ ಕಣ್ಣು ಹಾಯಿಸಿದರೆ, ಸದ್ಯಕ್ಕೆ ಎರಡೂ ಕಡೆ ಮೈತ್ರಿ ಪಕ್ಷಗಳು ಮತ್ತು ಬಿಜೆಪಿ ನಡುವೆ ಬಿರುಸಿನ ನೇರ ಹಣಾಹಣಿ ಎದ್ದುಕಾಣುವ ಸಮಾನ ಅಂಶ. |
ರಾಜ್ಯದ ದಕ್ಷಿಣದ ತುದಿ ಬೆಂಗಳೂರಿನಲ್ಲಿ ದೋಸ್ತಿ ಸರ್ಕಾರದ ಪ್ರಮುಖ ನಾಯಕರ ನಡುವೆ ಪರಸ್ಪರ ಮುಷ್ಟಿಯುದ್ಧ ನಡೆಯುತ್ತಿದ್ದರೆ, ಉತ್ತರದ ತುದಿಯ ಚಿಂಚೋಳಿ ಮತ್ತು ಕುಂದಗೋಳದಲ್ಲಿ ದೋಸ್ತಿ ನಾಯಕರ ಕುಚುಕು ಒಗ್ಗಟ್ಟು ಪ್ರತಿಪಕ್ಷ ಬಿಜೆಪಿಗೆ ಬೆವರಿಳಿಸತೊಡಗಿದೆ. |
ಲೋಕಸಭಾ ಚುನಾವಣೆಯ ಎರಡು ಸುತ್ತಿನ ಮತದಾನ ಮುಗಿದು ಇನ್ನೇನು ಎಲ್ಲವೂ ನಿರಾಳ ಎಂದುಕೊಳ್ಳುವ ಹೊತ್ತಿಗೇ ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿತ್ತು. ಪೌರಾಡಳಿತ ಸಚಿವ ಸಿ ಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾದ ಕುಂದುಗೋಳದಲ್ಲಿ ಉಪ ಚುನಾವಣೆ ಬಂದೊದಗಿದ್ದು ಆಕಸ್ಮಿಕ. ಆದರೆ, ಕಲಬುರಗಿಯ ಚಿಂಚೋಳಿಯಲ್ಲಿ; ಕೇವಲ ಹತ್ತು ತಿಂಗಳ ಹಿಂದೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಡಾ ಉಮೇಶ್ ಜಾಧವ್ ಆಪರೇಷನ್ ಕಮಲದ ಆಮಿಶಕ್ಕೆ ಬಿದ್ದು ಪಕ್ಷ ತೊರೆದು ಬಿಜೆಪಿ ಸೇರಿದ್ದ ಪರಿಣಾಮವಾಗಿ ಉಪ ಚುನಾವಣೆಯಲ್ಲಿ ಜನರ ಮೇಲೆ ಹೇರಲಾಗಿದೆ. ಹಾಗಾಗಿ ಒಂದು ಕ್ಷೇತ್ರದಲ್ಲಿ ಅನುಕಂಪದ ಅಲೆಯ ಪ್ರಭಾವವಿದ್ದರೆ, ಮತ್ತೊಂದು ಕಡೆ ಅಸಹನೆ ಬೂದಿಮುಚ್ಚಿದ ಕೆಂಡವಾಗಿದೆ. |
ಲೋಕಸಭಾ ಚುನಾವಣಾ ಪ್ರಚಾರದ ದಣಿವು ಆರಿಸಿಕೊಳ್ಳುವ ಮುನ್ನವೇ ಪ್ರತಿಷ್ಠೆಯ ಪ್ರಶ್ನೆಯಾಗಿ ಎರಡು ಕ್ಷೇತ್ರಗಳ ಉಪಚುನಾವಣೆ ಬಂದೇ ಬಿಟ್ಟಿತು ಎಂಬುದು ದೋಸ್ತಿ ಪಕ್ಷಗಳ ವಲಯದಲ್ಲಿದ್ದರೆ, ಲೋಕಸಭಾ ಚುನಾವಣೆ ಮುಗಿಯುತ್ತಲೇ ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಚಾಲನೆ ನೀಡಿ, ದೋಸ್ತಿ ಸರ್ಕಾರ ಪತನಕ್ಕೆ ಮತ್ತೊಂದು ಮುಹೂರ್ತ ಫಿಕ್ಸ್ ಮಾಡೋಣ ಅನ್ನೋದ್ರೊಳಗೆ ಇದೊಳ್ಳೆ ಉಪಚುನಾವಣೆ ಬಂತಲ್ಲಾ ಅನ್ನೋದು ಬಿಜೆಪಿ ಪಾಳೆಯದ ಗುನುಗು. |
ಆದರೆ, ಈ ಉಪಚುನಾವಣೆಯನ್ನು ತಮ್ಮ ಬಲವೃದ್ಧಿಗೆ ಹೇಗೆ ಬಳಸಿಕೊಳ್ಳುವುದು ಎಂಬ ಬಗ್ಗೆ ಎರಡೂ ಕಡೆಯವರು ಅತ್ಯಂತ ಲೆಕ್ಕಾಚಾರದ ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ. ಕಾಂಗ್ರೆಸ್ ಪಾಲಿಗೆ ತನ್ನ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕಾಯ್ದುಕೊಳ್ಳುವ ಅನಿವಾರ್ಯತೆ ಇದ್ದರೆ, ಬಿಜೆಪಿಗೆ ತನ್ನ ಸ್ಥಾನ ಬಲವನ್ನು 104ರಿಂದ 106ಕ್ಕೆ ಏರಿಸಿಕೊಳ್ಳುವ ಸವಾಲು. ಹಾಗಾಗಿ ದಕ್ಷಿಣ ಕರ್ನಾಟಕದ ಪಾಲಿಗೆ ರಾಜಧಾನಿಯ ರಾಜಕೀಯ ಕೆಸರೆರಚಾಟವೇ ದೊಡ್ಡದಾಗಿ ಕಾಣುತ್ತಿದ್ದರೂ, ರಾಜಧಾನಿಯ ಗದ್ದುಗೆಯ ಗಟ್ಟಿಗೊಳಿಸಿಕೊಳ್ಳುವ ಮತ್ತು ಉರುಳಿಸುವ ಹಾವುಏಣಿ ಆಟದಲ್ಲಿ ನಿರತರಾಗಿರುವವರ ಪಾಲಿಗೆ ಉತ್ತರದ ಈ ವಿದ್ಯಮಾನಗಳೇ ಮುಖ್ಯವಾಗಿವೆ. |
ಮೇ 19ರಂದು ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನೆರಡು ದಿನ ಬಾಕಿ ಇದೆ. ಪ್ರಚಾರದ ಭರಾಟೆ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ಎರಡೂ ಕ್ಷೇತ್ರಗಳ ಚಿತ್ರಣದತ್ತ ಕಣ್ಣು ಹಾಯಿಸಿದರೆ, ಸದ್ಯಕ್ಕೆ ಎರಡೂ ಕಡೆ ಮೈತ್ರಿ ಪಕ್ಷಗಳು ಮತ್ತು ಬಿಜೆಪಿ ನಡುವೆ ಬಿರುಸಿನ ನೇರ ಹಣಾಹಣಿ ಎದ್ದುಕಾಣುವ ಸಮಾನ ಅಂಶ. |
ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿಯ ಸಾಂಪ್ರದಾಯಿಕ ಪ್ರತಿಸ್ಪರ್ಧೆಯ ಕಣ. ಕಳೆದ ಒಂದು ದಶಕದಿಂದಲೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯೇ ವಿಶೇಷ. 2008ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಗೆಲುವು ಪಡೆದಿದ್ದ ಎಸ್ ಐ ಚಿಕ್ಕನಗೌಡರ್, 2013ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. ಆ ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸಿ ಎಸ್ ಶಿವಳ್ಳಿ ವಿರುದ್ಧ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ತೊಡೆತಟ್ಟಿದ್ದರು. ಆದರೆ, ಶಿವಳ್ಳಿ ಅವರು 634 ಮತಗಳ ಅಂತರದ ಜಯ ಗಳಿಸುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಉಳಿಸಿಕೊಂಡಿದ್ದರು. |
ಉತ್ತಮ ಶಾಸಕರಾಗಿ, ಸಚಿವರಾಗಿ ಕ್ಷೇತ್ರದಲ್ಲಿ ಜನಸಾಮಾನ್ಯರ ಅಭಿಮಾನಕ್ಕೆ ಪಾತ್ರರಾಗಿದ್ದ ಶಿವಳ್ಳಿ ಸಭ್ಯ ಮತ್ತು ಸಜ್ಜನಿಕೆ ಹಾಗೂ ಸರಳತೆ ಕಾರಣಕ್ಕೆ ಪಕ್ಷಾತೀತವಾಗಿ ತಮ್ಮ ವರ್ಚಸ್ಸು ವೃದ್ಧಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಇದೀಗ ಶಿವಳ್ಳಿ ಅವರ ಪರವಾದ ಜನಸಾಮಾನ್ಯರ ಆ ಅಭಿಮಾನ ಮತ್ತು ಅನುಕಂಪವನ್ನೇ ನೆಚ್ಚಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರನ್ನೇ ಕಣಕ್ಕಿಳಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಕುರುಬ ಸಮುದಾಯಕ್ಕೆ ಸೇರಿದ ಶಿವಳ್ಳಿ ಅವರ ಬಳಿಕ ಇದೀಗ ಅವರ ಪತ್ನಿಗೆ ಟಿಕೆಟ್ ನೀಡಿರುವುದು ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸ್ಥಳೀಯ ನಾಯಕರಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿಯೇ ಬರೋಬ್ಬರಿ ಒಂಭತ್ತು ಮಂದಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊತ್ತುಕೊಂಡಿರುವ ಡಿ ಕೆ ಶಿವಕುಮಾರ್ ಅವರ ಸಂಧಾನದ ಫಲವಾಗಿ ಇದೀಗ ಎಲ್ಲಾ ಬಂಡಾಯ ಅಭ್ಯರ್ಥಿಗಳೂ ನಾಮಪತ್ರ ವಾಪಸು ಪಡೆದಿದ್ದು, ಕುಸುಮಾವತಿ ಅವರ ದಾರಿ ಸುಗಮವಾಗಿದೆ. |
ಅತ್ತ ಬಿಜೆಪಿ ಕೂಡ, ಈ ಬಾರಿ ಮತ್ತೆ ಎಸ್ ಐ ಚಿಕ್ಕನಗೌಡರ್ ಅವರನ್ನೇ ಕಣಕ್ಕಿಳಿಸಿದ್ದು, ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಕಮಲ ಪಾಳೆಯದ ಅತಿರಥ ಮಹಾರಥರೆಲ್ಲ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಹಗಲಿರುಳೆನ್ನದೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಿಜೆಪಿಯಲ್ಲಿಯೂ ಯಡಿಯೂರಪ್ಪ ಸಂಬಂಧಿಗೇ ಮತ್ತೆ ಟಿಕೆಟ್ ನೀಡಲಾಗಿದೆ ಎಂಬ ಅಸಮಾಧಾನ ಕೆಲವರಲ್ಲಿದೆ. ಆ ಕಾರಣಕ್ಕೇ ಈಗಾಗಲೇ ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜ ಅಬರಗೊಂಡ ಸೇರಿದಂತೆ ಸಾಕಷ್ಟು ಮಂದಿ ಸ್ಥಳೀಯ ಪ್ರಭಾವಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಡಿಕೆ ಶಿವಕುಮಾರ್ ಅವರ ತಂತ್ರಗಾರಿಕೆಯ ಮುಂದೆ ಬಿಜೆಪಿ ನಾಯಕರು ಕಂಗೆಟ್ಟಿದ್ದು, ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಎದುರೇಟು ನೀಡುವ ತಂತ್ರದ ಭಾಗವಾಗಿಯೇ ಐಟಿ ದಾಳಿ ಕೂಡ ನಡೆದಿದೆ ಎನ್ನಲಾಗುತ್ತಿದೆ. |
ಒಟ್ಟು 1.90 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಮೇಲುಗೈ ಹೊಂದಿದ್ದರೂ, ಕುರುಬ ಸಮುದಾಯದ ಮತಗಳು ನಿರ್ಣಾಯಕ. ಅಲ್ಲದೆ, ಮುಸ್ಲಿಂ ಮತ್ತು ಇತರ ಹಿಂದುಳಿದ ಮತ್ತು ದಲಿತ ಮತಗಳೂ ಸಾಕಷ್ಟು ಪ್ರಮಾಣದಲ್ಲಿದ್ದು, ಬಿಜೆಪಿ ಸದ್ಯಕ್ಕೆ ಹಿಂದುತ್ವ ಮತ್ತು ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದರೆ, ದೋಸ್ತಿ ಪಕ್ಷಗಳು ದೋಸ್ತಿ ಸರ್ಕಾರದ ರೈತ ಪರ ನೀತಿ, ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ಹಾಗೂ ಸ್ವತಃ ಶಿವಳ್ಳಿ ಅವರ ಒಳ್ಳೆತನವನ್ನೇ ಕಣದಲ್ಲಿ ಬಂಡವಾಳ ಮಾಡಿಕೊಂಡಿವೆ. |
ಸಿದ್ದರಾಮಯ್ಯ ಅವರು ಈ ಚುನಾವಣೆಯಲ್ಲಿ ತಮ್ಮ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಖುದ್ದು ಪ್ರಚಾರದ ನೇತೃತ್ವ ವಹಿಸಿದ್ದರೆ, ಸಚಿವ ಡಿ ಕೆ ಶಿವಕುಮಾರ್, ಜಮೀರ್ ಅಹಮದ್, ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ ಮುಂತಾದ ನಾಯಕರು ಪಕ್ಷದ ಪರ ಗಟ್ಟಿಯಾಗಿ ನಿಂತಿದ್ದಾರೆ. ಅತ್ತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ತಮ್ಮ ಪ್ರತಿಷ್ಠೆಯ ಪಣವಾಗಿ ಕ್ಷೇತ್ರವನ್ನು ಪರಿಗಣಿಸಿದ್ದು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಸೋಮಣ್ಣ, ಶ್ರೀರಾಮುಲು ಮುಂತಾದ ನಾಯಕರ ಪಡೆಯೊಂದಿಗೆ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಕುಂದಗೋಳದಲ್ಲಿ ಭಾರೀ ಪೈಪೋಟಿಯ ನೇರ ಹಣಾಹಣಿ ಏರ್ಪಟ್ಟಿದೆ. |
ಇನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯ ಚಿಂಚೋಳಿ ಉಪ ಚುನಾವಣೆ ಕೂಡ ಅವರ ಪಾಲಿಗೆ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಾಗಿದೆ. |
ತಮ್ಮದೇ ನೆರಳಿನಲ್ಲಿ ಬೆಳೆದ ಡಾ ಉಮೇಶ್ ಜಾಧವ್, ಆಪರೇಷನ್ ಕಮಲದ ಆಮಿಶಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ, ತಮ್ಮ ವಿರುದ್ಧವೇ ಲೋಕಸಭಾ ಕಣದಲ್ಲಿ ತೊಡೆತಟ್ಟಿದ್ದಾರೆ ಎಂಬುದು ಅವರು ಪ್ರತಿಷ್ಠೆಯನ್ನು ಕೆಣಕಿದ ಸಂಗತಿ. ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪುತ್ರ ಅವಿನಾಶ್ ಜಾಧವ್ ಅವರನ್ನು ಕಣಕ್ಕಿಳಿಸುವಲ್ಲಿ ಉಮೇಶ್ ಜಾಧವ್ ಯಶಸ್ವಿಯಾಗಿದ್ದಾರೆ. ಪಕ್ಷದ ಸ್ಥಳೀಯ ನಾಯಕರ ವಿರೋಧದ ನಡುವೆಯೂ ಅವರು ಪುತ್ರನಿಗೆ ಟಿಕೆಟ್ ದಕ್ಕಿಸಿಕೊಟ್ಟಿದ್ದಾರೆ. ರಾಜಕೀಯವಾಗಿ ಅನನುಭವಿ ಅವಿನಾಶ್ ಎದುರು ಕಾಂಗ್ರೆಸ್ಸಿನಿಂದ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸುಭಾಶ್ ರಾಥೋಡ್ ಕಣಕ್ಕಿಳಿದಿದ್ದಾರೆ. ಒಂದರ್ಥದಲ್ಲಿ ಇದು ಅದಲು ಬದಲಿನ ಆಟ. |
ಕಣದಲ್ಲಿರುವುದು ರಾಥೋಡ್ ಆದರೂ, ಆ ಹಣಾಹಣಿ ತಮ್ಮ ಮತ್ತು ಉಮೇಶ್ ಜಾಧವ್ ನಡುವಿನ ಸಮರವೆಂದೇ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಭಾವಿಸಿದ್ದು, ಅದರಂತೆಯೇ ತಂದೆ ಮಕ್ಕಳಿಬ್ಬರೂ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಲೋಕಸಭೆಯಲ್ಲಿ ತಂದೆಯನ್ನು, ವಿಧಾನಸಭೆಯಲ್ಲಿ ಮಗನನ್ನು ಮಣಿಸುವ ಮೂಲಕ ಅವರ ರಾಜಕೀಯಕ್ಕೆ ವಿರಾಮ ಹಾಕುವ ಜಿದ್ದು ಖರ್ಗೆಯವರದ್ದು ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಸ್ಥಳೀಯವಾಗಿ ಸಾಕಷ್ಟು ಆಂತರಿಕ ಬಂಡಾಯದ ಸವಾಲುಗಳಿದ್ದರೂ, ಅಂತಿಮವಾಗಿ ಪಕ್ಷದ ದೃಷ್ಟಿಯಿಂದ ಈ ಸ್ಥಾನ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆಪರೇಷನ್ ಕಮಲವನ್ನು ಸಮರ್ಥಿಸಿಕೊಳ್ಳಲು ಈ ಗೆಲುವು ಅವರಿಗೆ ಅನಿವಾರ್ಯ ಕೂಡ. |
1.93 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಲಂಬಾಣಿ ಸಮುದಾಯಕ್ಕೇ ಇಬ್ಬರೂ ಅಭ್ಯರ್ಥಿಗಳು ಸೇರಿದ್ದು, ಇನ್ನುಳಿದಂತೆ ನಿರ್ಣಾಯಕ ಸಂಖ್ಯೆಯಲ್ಲಿರುವ ಮುಸ್ಲಿಂ, ಲಿಂಗಾಯತ ಮತ್ತು ಇತರ ದಲಿತ ಮತಗಳು ಫಲಿತಾಂಶ ನಿರ್ಧರಿಸಲಿವೆ. ಲೋಕಸಭಾ ಚುನಾವಣೆಯಲ್ಲಿ ಜಾಧವ್ ಪರ ಗಟ್ಟಿಯಾಗಿ ನಿಂತಿದ್ದ ಲಂಬಾಣಿ ಸಮುದಾಯ, ಈ ಬಾರಿಯೂ ಅದೇ ಒಗ್ಗಟ್ಟು ಪ್ರದರ್ಶಿಸಲಾರದು ಎಂಬುದು ಗಮನಾರ್ಹ. 2018ರ ಚುನಾವಣೆಯಲ್ಲಿ ಬಿಜೆಪಿಯ ಸುನಿಲ್ ವಲ್ಕಾಪುರೆ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಉಮೇಶ್ ಜಾಧವ್ ಸುಮಾರು 20 ಸಾವಿರ ಮತಗಳ ಅಂತರದ ಜಯ ದಾಖಲಿಸಿದ್ದರು. |
ಒಟ್ಟಾರೆ ಸದ್ಯದ ಸ್ಥಿತಿಯಲ್ಲಿ ಚಿಂಚೋಳಿಯಲ್ಲಿ ಕೂಡ ಮೈತ್ರಿ ಅಭ್ಯರ್ಥಿ ರಾಥೋಡ್ ಮತ್ತು ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ನಡುವೆ ನೇರ ಹಣಾಹಣಿಯ ವಾತಾವರಣವಿದ್ದು, ಮತದಾನ ಸಮೀಪಿಸುತ್ತಿದ್ದಂತೆ ನಡೆಯಬಹುದಾದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಮೇಲೆ ಅಂತಿಮ ಫಲಿತಾಂಶ ನಿಂತಿದೆ. |
ಮೇ 19ರಂದು ಮತದಾನ ನಡೆಯುವ ಎರಡೂ ಕ್ಷೇತ್ರಗಳ ಮತ ಎಣಿಕೆ ಕೂಡ ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನ; ಮೇ 23ರಂದೇ ನಡೆಯಲಿದೆ. ಹಾಗಾಗಿ ಈ ಕ್ಷೇತ್ರಗಳ ಮತದಾರರಿಗೆ ಅಂದು ಈ ಬಾರಿ ಎರಡೆರಡು ಕುತೂಹಲ! |
ಪ್ರಾಥಮಿಕ ಶಾಲೆಯಿಂದಲೇ ಚೂಡಿದಾರ್ ಕಡ್ಡಾಯವಾಗಲಿ : ಸ್ನೇಕ್ ಶ್ಯಾಮ್ – ಮೈಸೂರು ಟುಡೆ |
Home/ ನಮ್ಮೂರು/ ಮೈಸೂರು/ಪ್ರಾಥಮಿಕ ಶಾಲೆಯಿಂದಲೇ ಚೂಡಿದಾರ್ ಕಡ್ಡಾಯವಾಗಲಿ : ಸ್ನೇಕ್ ಶ್ಯಾಮ್ |
ಪ್ರಾಥಮಿಕ ಶಾಲೆಯಿಂದಲೇ ಚೂಡಿದಾರ್ ಕಡ್ಡಾಯವಾಗಲಿ : ಸ್ನೇಕ್ ಶ್ಯಾಮ್ |
CT BUREAU October 19, 2016 |
ಸರ್ಕಾರವು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಚೂಡಿದಾರ್ ಅನ್ನು ವಸ್ತ್ರ ಸಂಹಿತೆಯಾಗಿ ಜಾರಿಗೊಳಿಸಿರುವುದು ಸಂತೋಷಕರ ಸಂಗತಿಯಾಗಿದ್ದು ಪ್ರಾಥಮಿಕ ಶಾಲಾ ಮಕ್ಕಳಿಂದಲೇ ಇದನ್ನು ಕಡ್ಡಾಯಗೊಳಿಸಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುವುದು ಎಂದು ಮಹಾನಗರಪಾಲಿಕೆ ಸದಸ್ಯ ಹಾಗೂ ಉರಗಪ್ರೇಮಿ ಸ್ನೇಕ್ ಶ್ಯಾಮ್ ಅಭಿಪ್ರಾಯಪಟ್ಟರು. |
ಅವರು ನಗರದ ಪತ್ರಕರ್ತರ ಭವನದಲ್ಲಿ ಇಂದು (ಅ.19) ಸುದ್ದಿಗೋಷ್ಠಿ ನಡೆಸಿ, ಚೂಡಿದಾರನ್ನು ವಸ್ತ್ರ ಸಂಹಿತೆಯಾಗಿ ಅಳವಡಿಸುವ ಬಗ್ಗೆ ಕಳೆದ ಐದು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಈಗ ಜಾರಿಯಾಗಿರುವುದು ಸಂತೋಷಕರ ಸಂಗತಿಯಾಗಿದೆ. ನಾನೊಬ್ಬ ಆಟೋ ಚಾಲಕನಾಗಿದ್ದು ಮಕ್ಕಳು (ಹೆಣ್ಣು) ಅದರಲ್ಲೂ ಶಾಲಾ ಮಕ್ಕಳ ಮನಸ್ಥಿತಿ ಹಾಗೂ ಸಮಸ್ಯೆ ಬಗ್ಗೆ ತೀರ ಹತ್ತಿರದಿಂದ ಬಲ್ಲೆ. ಹಿಂದೆಲ್ಲ 16 ವರ್ಷದ ನಂತರ ಋತುಮತಿಯಾಗುತ್ತಿದ್ದರು, ಈಗಿನ ಆಹಾರದ ವ್ಯತ್ಯಾಸವೋ ಅಥವಾ ಅಸಹಜ ಬೆಳೆವಣಿಗೆಯಿಂದಲೋ ಅತಿ ಚಿಕ್ಕ ವಯಸ್ಸಿಗೆ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಋತುಮತಿಯಾಗುತ್ತಿದ್ದು ಪೋಷಕರಲ್ಲಿ ಆತಂಕವುಂಟು ಮಾಡಿದೆ. |
ಅವರು ಮುಂದುವರೆದು, ಪ್ರಾಥಮಿಕ ಶಾಲಾ ಮಕ್ಕಳಿಗೆ ದೈಹಿಕ ಬೆಳವಣಿಗೆಯಿರುವುದೇ ಹೊರತು ಮಾನಸಿಕ ಪ್ರಬುದ್ಧತೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಮಾಜಘಾತಕರು ವಂಚಿಸಿ ದಾರಿ ತಪ್ಪಿಸುವರು. ಯಾಂತ್ರಿಕ ಯುಗದಲ್ಲಿ ಪೋಷಕರಿಬ್ಬರು ದುಡಿಮೆಗೆ ಶರಣಾಗಿದ್ದು ಮಕ್ಕಳ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸುವರು ಎಂದು ತಿಳಿಸಿದ ಸ್ನೇಕ್ ಶ್ಯಾಮ್, ಎಷ್ಟೋ ಪೋಷಕರು ಪೋನ್ ಕರೆ ಮಾಡಿ ಮಕ್ಕಳ ಬಗ್ಗೆ ಕೇರ್ ತೆಗೆದುಕೊಳ್ಳಿ ಎಂದು ನನಗೆ ತಿಳಿಸುವುದುಂಟು. ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸುವಂತೆ ಜಾರಿಗೊಳಿಸಿರುವ ವಸ್ತ್ರ ಸಂಹಿತೆಯನ್ನು ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು. |
ಸ್ವಯಂ ಶ್ರೀಮಂತ ಉದ್ಯಮಿಗಳಲ್ಲಿ ಶೇ.50ರಷ್ಟು ಬೆಂಗಳೂರಿಗರು! | India wealthiest self made entrepreneurs under 40 in which 50percent are from bengaluru pod |
ಸ್ವಯಂ ಶ್ರೀಮಂತ ಉದ್ಯಮಿಗಳಲ್ಲಿ ಶೇ.50ರಷ್ಟು ಬೆಂಗಳೂರಿಗರು! |
ಸ್ವಯಂ ಶ್ರೀಮಂತ ಉದ್ಯಮಿಗಳಲ್ಲಿ ಶೇ.50ರಷ್ಟು ಬೆಂಗಳೂರಿಗರು!| ಜೀರೋದಾ ಸಂಸ್ಥಾಪಕ ಕಾಮತ್ ಸೋದರರು ನಂ.1| ಹುರೂನ್ ಇಂಡಿಯಾ ವರದಿಯಲ್ಲಿ ಅಚ್ಚರಿಯ ಅಂಶ |
Bangalore, First Published Oct 14, 2020, 8:23 AM IST |
ಮುಂಬೈ(ಅ.14): ಸ್ವಂತ ಪರಿಶ್ರಮದಿಂದ ಕಂಪನಿ ಸ್ಥಾಪಿಸಿ ತಮ್ಮ 40ನೇ ವಯಸ್ಸಿನೊಳಗೆ ಒಂದು ಸಾವಿರ ಕೋಟಿ ರು.ಗಿಂತ ಅಧಿಕ ಆಸ್ತಿ ಸಂಪಾದನೆ ಮಾಡಿದ ಪ್ರಮುಖ 16 ವ್ಯಕ್ತಿಗಳ ಪಟ್ಟಿಯೊಂದು ಬಿಡುಗಡೆಯಾಗಿದೆ. ವಿಶೇಷ ಎಂದರೆ, ಅದರಲ್ಲಿ ಶೇ.50ರಷ್ಟುಅಂದರೆ 8 ಮಂದಿ ದೇಶದ ಸ್ಟಾರ್ಟಪ್‌ಗಳ ತವರೂರು ಎನಿಸಿಕೊಂಡಿರುವ ಬೆಂಗಳೂರಿನವರಾಗಿದ್ದಾರೆ! |
ಐಐಎಫ್‌ಎಲ್ ವೆಲ್ತ್ ಹಾಗೂ ಹುರೂನ್ ಇಂಡಿಯಾ ಸಂಸ್ಥೆಗಳು '40 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಸ್ವಯಂಪರಿಶ್ರಮದ ಶ್ರೀಮಂತರ ಪಟ್ಟಿ2020' ಅನ್ನು ಬಿಡುಗಡೆ ಮಾಡಿವೆ. ಈ ಪಟ್ಟಿಯಲ್ಲಿ 16 ರಾರಯಂಕ್‌ಗಳನ್ನು 17 ವ್ಯಕ್ತಿಗಳಿಗೆ ನೀಡಲಾಗಿದೆ. ಇವರೆಲ್ಲರ ಒಟ್ಟಾರೆ ಆಸ್ತಿ 45 ಸಾವಿರ ಕೋಟಿ ರು. ಆಗುತ್ತದೆ ಎಂದು ಪಟ್ಟಿತಿಳಿಸಿದೆ. |
ಬೆಂಗಳೂರಿಗರೇ ನಂ.1: |
ಜೀರೋಧಾ ಎಂಬ ಷೇರು ವ್ಯವಹಾರ ಕಂಪನಿಯನ್ನು ಸ್ಥಾಪಿಸಿ, ಜನಸಾಮಾನ್ಯರು ತೀರಾ ಕಡಿಮೆ ವೆಚ್ಚದಲ್ಲಿ ಷೇರು ವ್ಯವಹಾರ ಮಾಡುವುದಕ್ಕೆ ಅನುಕೂಲ ಕಲ್ಪಿಸಿಕೊಟ್ಟಬೆಂಗಳುರಿನ ನಿತಿನ್ ಕಾಮತ್ (40) ಹಾಗೂ ನಿಖಿಲ್ ಕಾಮತ್ (34) ಅವರು ಜಂಟಿಯಾಗಿ ಸ್ವಯಂ ಪರಿಶ್ರಮದ ಉದ್ಯಮಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಬ್ಬರ ಒಟ್ಟಾರೆ ಆಸ್ತಿ 24 ಸಾವಿರ ಕೋಟಿ ರು. |
ದುಬೈ ಮೂಲದ ದಿವ್ಯಾಂಕ್ ತುರಾಖಿಯಾ ಅವರು ಮೀಡಿಯಾ.ನೆಟ್ ಕಂಪನಿ ಸ್ಥಾಪಿಸಿ, 14 ಸಾವಿರ ಕೋಟಿ ರು.ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಉದ್ಯಮಗಳಿಂದ ವ್ಯಾಪಾರಿಗಳಿಗೆ ವಸ್ತು ಪೂರೈಸುವ ಉಡಾನ್ ಕಂಪನಿಯ ಸ್ಥಾಪಕರಾದ ಬೆಂಗಳೂರಿನ ಅಮೋದ್ ಮಾಳವೀಯ, ಸುಜೀತ್ ಕುಮಾರ್, ನವದೆಹಲಿಯ ವೈಭವ್ ಕುಮಾರ್ ಅವರು 3ನೇ ಸ್ಥಾನವನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ. ಈ ಮೂವರೂ ತಲಾ 13,100 ಕೋಟಿ ರು. ಆಸ್ತಿ ಹೊಂದಿದ್ದಾರೆ. ಬೈಜು ಆನ್‌ಲೈನ್ ತರಗತಿಗಳ ಮೂಲಕ ಹೆಸರುವಾಸಿಯಾಗಿರುವ ಬೆಂಗಳೂರು ಮೂಲದ ರಿಜು ರವೀಂದ್ರನ್ ಅವರು 7800 ಕೋಟಿ ರು. ಆಸ್ತಿಯ ಮಾಲೀಕರಾಗಿ 6ನೇ ಸ್ಥಾನದಲ್ಲಿದ್ದಾರೆ. |
ಫ್ಲಿಪ್‌ಕಾರ್ಟ್ ಕಂಪನಿಯನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿ ಅದರಿಂದ ಸದ್ಯ ನಿರ್ಗಮಿಸಿರುವ ಬಿನ್ನಿ ಬನ್ಸಲ್ ಹಾಗೂ ಸಚಿನ್ ಬನ್ಸಲ್ ತಲಾ 7500 ಕೋಟಿ ರು. ಆಸ್ತಿಯೊಂದಿಗೆ 7ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ದೆಹಲಿ ಮೂಲದ ಒರಾವೆಲ್ ಸ್ಟೇಯ್‌್ಸ ಕಂಪನಿಯ ರಿತೇಶ್ ಅಗರ್‌ವಾಲ್ 4500 ಕೋಟಿ ರು.ಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ. ಓಲಾ ಕ್ಯಾಬ್ಸ್ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಮುನ್ನಡೆಸುತ್ತಿರುವ ಭವೀಶ್ ಅಗರ್‌ವಾಲ್ 3500 ಕೋಟಿ ರು.ಗಳೊಂದಿಗೆ 10ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದಲ್ಲದೆ, ಅದೇ ಕಂಪನಿಯ ಅಂಕಿತ್ ಭಾತಿ ಅವರು 1600 ಕೋಟಿ ರು.ಗಳೊಂದಿಗೆ 14ನೇ ಸ್ಥಾನದಲ್ಲಿದ್ದಾರೆ. |
ಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗ್ತಿದೆ ಈ ಸ್ಮಾರ್ಟ್ಫೋನ್ | Kannada Dunia | Kannada News | Karnataka News | India News |
HomeBusinessಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗ್ತಿದೆ ಈ… |
ಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗ್ತಿದೆ ಈ ಸ್ಮಾರ್ಟ್ಫೋನ್ |
24-08-2018 12:36PM IST / No Comments / Posted In: Business, Latest News |
ಲಾವಾ ಗುರುವಾರ ಝೆಡ್ ಶ್ರೇಣಿಯ ಹೊಸ ಸ್ಮಾರ್ಟ್ಫೋನ್ ಲಾವಾ ಝೆಡ್ 60 ಎಸ್ ಬಿಡುಗಡೆ ಮಾಡಿದೆ. ಲಾವಾದ ಝೆಡ್ ಸರಣಿಯ 6ನೇ ಸ್ಮಾರ್ಟ್ಫೋನ್ ಇದಾಗಿದೆ. ಕಂಪನಿ ಹಿಂದಿನ ವರ್ಷ ಅಕ್ಟೋಬರ್ ನಲ್ಲಿ Lava Z60, Lava Z70, Lava Z80, and Lava Z90 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತ್ತು. |
ಲಾವಾದ ಹೊಸ ಸ್ಮಾರ್ಟ್ಫೋನ್ ಲಾವಾ ಝೆಡ್ 60 ಎಸ್ ಬೆಲೆ 4,949 ರೂಪಾಯಿ. ಲಾವಾ ಝೆಡ್ 60 ಎಸ್ ಮೊಬೈಲ್ ಗೆ ಶಾರ್ಫ್ ಕ್ಲಿಕ್ ಕ್ಯಾಮರಾ ನೀಡಲಾಗಿದೆ. 2500 mAh ಬ್ಯಾಟರಿ ಇದೆ. 1 ಜಿಬಿ ರ್ಯಾಮ್ ಹೊಂದಿದೆ. 2ಜಿಬಿ ರ್ಯಾಮ್ ರೂಪಾಂತರವನ್ನು 6 ತಿಂಗಳ ನಂತ್ರ ಬಿಡುಗಡೆ ಮಾಡಲಿದೆ. |
ಐದು ಮೆಗಾಪಿಕ್ಸಲ್ ನ ರಿಯರ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ನ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. 1 ಜಿಬಿ ರ್ಯಾಮ್ ಫೋನ್ ಗೆ 16 ಜಿಬಿ ಸ್ಟೋರೇಜ್ ಸಿಗ್ತಿದೆ. ಇದನ್ನು 64 ಜಿಬಿಯವರೆಗೆ ಹೆಚ್ಚಿಸಬಹುದಾಗಿದೆ. ಮೊಬೈಲ್ ಅಂಗಡಿಗಳಲ್ಲಿ ಹೊಸ ಫೋನ್ ಸಿಗಲಿದೆ. ಕಂಪನಿ 2,200 ರೂಪಾಯಿ ಕ್ಯಾಶ್ಬ್ಯಾಕ್ ಆಫರನ್ನೂ ನೀಡ್ತಿದೆ. ಈ ಆಫರ್ ನವೆಂಬರ್ 15,2018 ರವರೆಗೆ ಲಭ್ಯವಿರಲಿದೆ. |
ಅಂಚೆ ಕಚೇರಿ ಠೇವಣಿ | Udayavani – ಉದಯವಾಣಿ |
Saturday, 08 Aug 2020 | UPDATED: 12:36 PM IST |
Team Udayavani, Jan 13, 2020, 5:27 AM IST |
ಗ್ರಾಮಗಳ ಮೂಲಕ ಇಡೀ ದೇಶವನ್ನು ಬೆಸೆದಿರುವ ಅಂಚೆ ಇಲಾಖೆ ಇಂದು ಪತ್ರವ್ಯವಹಾರಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ಜನರ ಭವಿಷ್ಯಕ್ಕಾಗಿ ಹಲವು ಆರ್ಥಿಕ ಕ್ರಮಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಒಳ್ಳೆಯ ಸೇವೆಗಳನ್ನು ನೀಡುತ್ತಿವೆ. |
ಬ್ಯಾಂಕ್‌ಗಳಲ್ಲಿ ದೊರೆಯುವ ಎಲ್ಲ ಉಳಿತಾಯ ಯೋಜನೆಗಳೂ ಅಂಚೆ ಕಚೇರಿಗಳಲ್ಲಿ ತುಂಬಾ ಸರಳವಾದ ರೀತಿಯಲ್ಲಿ (Simple Procedure) ಲಭ್ಯ ಇರು ವುದರಿಂದ ಜನಸಾಮಾನ್ಯರಿಗೆ ತುಂಬಾ ಅನು ಕೂಲವಾಗಿದೆ. ಇಂದು ಬ್ಯಾಂಕ್‌ಗಳು ಹಲವು ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಆ ಊರುಗಳಲ್ಲಿ ಅಂಚೆ ಕಚೇರಿಗಳು ಇರುವುದ ರಿಂದ ಈ ವ್ಯವಸ್ಥೆಯ ಸದುಪಯೋಗ ಪಡೆ ಯಬಹುದು. ಶೇ. 4 ರಿಂದ ಶೇ.8.3ರ ವರೆಗೆ ಬಡ್ಡಿ ದರ ನೀಡುವ ಯೋಜನೆಗಳು ಇವೆ. ಉಳಿತಾಯ ಖಾತೆ, ಚಾಲ್ತಿ ಖಾತೆ, ಹಿರಿಯ ನಾಗರಿಕರ ಖಾತೆ, ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಸುಕನ್ಯ ಸಮೃದ್ಧಿ ಯೋಜನೆ. ಈ ರೀತಿ ಹಲವು ವಿಭಾಗಗಳಲ್ಲಿ ಯೋಜನೆ ಯನ್ನು ನೀಡಲಾಗಿದೆ. |
ಅಂಚೆ ಕಚೇರಿಗಳಲ್ಲಿ ಅವಧಿ ಠೇವಣಿ (Term Deposit) ಇರುವುದು ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಮಾಸಿಕ ಆದಾಯ ಯೋಜನೆ, ಕಿಸಾನ್ ಪತ್ರ, ಎನ್.ಎಸ್.ಸಿ.ಇವೆಲ್ಲವೂ ಎಲ್ಲ ವರ್ಗದವರಿಗೆ ಬಹು ಉಪಕಾರಿ. ಆದಾಯ ತೆರಿಗೆ ಉಳಿಸುವ ದೃಷ್ಟಿಯಿಂದ ಪಿ.ಪಿ.ಎಫ್., ಎನ್.ಎಸ್.ಸಿ., ಹಿರಿಯ ನಾಗರಿಕರ ಠೇವಣಿ, 5 ವರ್ಷಗಳ ಅವಧಿ ಠೇವಣಿ ಹಾಗೂ ಕಿಸಾನ್ ವಿಕಾಸ ಪತ್ರ ಉಪಯುಕ್ತವಾಗಿದೆ. ಅಂಚೆ ಕಚೇರಿ ಠೇವಣಿಗಳನ್ನು ಸಣ್ಣ ಉಳಿತಾಯ ಏಜೆಂಟರ ಮುಖಾಂತರ ಮಾಡಬಹುದು. ಇದರಿಂದ ಏಜೆಂಟರಿಗೂ ಠೇವಣಿದಾರರಿಗೂ ಅನುಕೂಲವಾಗುತ್ತದೆ. ಇಲ್ಲಿ ತೊಡಗಿಸಿದ ಹಣಕ್ಕೆ ಭಾರತ ಸರ್ಕಾರದ ಶೇ. 100 ಭದ್ರತೆ ಇರುತ್ತದೆ. ಆ ವಿಚಾರದಲ್ಲಿ ಬೇರೊಂದು ಮಾತಿಲ್ಲ. |
ವಿವಾದಾತ್ಮಕ ತೀರ್ಪು- ಅಂಪೈರ್‌ಗೆ ತಿರುಗೇಟು ನೀಡಿದ ರೋಹಿತ್ ಶರ್ಮಾ! |
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು. ಅಂಪೈರ್ ವಿರುದ್ಧ ಹಲವು ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. |
Bengaluru, First Published Jun 28, 2019, 5:13 PM IST |
ಮ್ಯಾಂಚೆಸ್ಟರ್(ಜೂ.28): ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ರೋಹಿತ್ ಇನ್‌ಸೈಡ್ ಎಡ್ಜ್ ಆಗಿಲ್ಲದಿದ್ದರೂ, ತೀರ್ಪು ಮರುಪರಿಶೀಲನೆಯ ವೇಳೆ ಸ್ನಿಕೋ ಮೀಟರ್ ಎಡ್ಜ್ ಸುಳಿವು ನೀಡಿತ್ತು. ಹೀಗಾಗಿ 3ನೇ ಅಂಪೈರ್ ಹಿಂದು ಮುಂದು ನೋಡದೆ ಔಟ್ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. |
ಇದನ್ನೂ ಓದಿ: ಭಾರತ-ವೆಸ್ಟ್ ಇಂಡೀಸ್- ವಿವಾದಕ್ಕೆ ಕಾರಣವಾಯ್ತು ರೋಹಿತ್ ಔಟ್! |
ರೋಹಿತ್ ಶರ್ಮಾ ಔಟ್ ತೀರ್ಪು ಬೆನ್ನಲ್ಲೇ ಆಕ್ರೋಶಗಳು ವ್ಯಕ್ತವಾಗಿತ್ತು. ಮಾಜಿ ಕ್ರಿಕೆಟಿಗರು, ಅಭಿಮಾನಿಗಳು DRS ಹಾಗೂ 3ನೇ ಅಂಪೈರ್ ವಿರುದ್ಧ ಕಿಡಿ ಕಾರಿದ್ದರು. ಇದೀಗ ಸ್ವತಃ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್ ಮೂಲಕ ವಿವಾದಾತ್ಮಕ ಔಟ್‌ಗೆ ತಿರುಗೇಟು ನೀಡಿದ್ದಾರೆ. ರೋಹಿತ್ ಶರ್ಮಾ ನಾಟೌಟ್ ಅನ್ನೋದಕ್ಕೆ ರೋಹಿತ್ ಸಾಕ್ಷಿ ಒದಗಿಸಿದ್ದಾರೆ. ಫೋಟೋ ಪೋಸ್ಟ್ ಮಾಡೋ ಮೂಲಕ ಅಂಪೈರ್ ವಿರುದ್ದ ಗುಡುಗಿದ್ದಾರೆ. |
ಇದನ್ನೂ ಓದಿ: ವಿಶ್ವಕಪ್ 2019 ಕೊಹ್ಲಿ ತೆಕ್ಕೆಗೆ ಮತ್ತಷ್ಟು ದಾಖಲೆಗಳು ಸೇರ್ಪಡೆ |
ರೋಹಿತ್ ಶರ್ಮಾ 23 ಎಸೆತದಲ್ಲಿ 18 ರನ್ ಸಿಡಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು. ರೋಹಿತ್ ವಿಕೆಟ್ ಪತನದಿಂದ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಅಫ್ಘಾನಿಸ್ತಾನ ಪಂದ್ಯದ ಬಳಿಕ ಭಾರತದ ಮಧ್ಯಮ ಕ್ರಮಾಂಕ ಮತ್ತೆ ವೈಫಲ್ಯ ಅನುಭವಿಸಿತು. ಆದರೆ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಭಾರತ 125 ರನ್ ಗೆಲುವು ಸಾಧಿಸಿತು. |
ನಮ್ಮ ಮೊಸರನ್ನದಲ್ಲಿದೆ ಆರೋಗ್ಯದ ಗುಟ್ಟು! ತಪ್ಪದೇ ಸೇವಿಸಿ | Here's Why You Should Include Curd Rice In Your Diet - Kannada BoldSky |
ನಮ್ಮ ಮೊಸರನ್ನದಲ್ಲಿದೆ ಆರೋಗ್ಯದ ಗುಟ್ಟು! ತಪ್ಪದೇ ಸೇವಿಸಿ |
ಮೊಸರಿನ ಸೇವನೆಯಿಂದ ಎಷ್ಟೋ ಬಗೆಯ ಆರೋಗ್ಯಕರ ಪ್ರಯೋಜನಗಳಿವೆ ಎಂಬುದನ್ನು ನೂರಾರು ವರ್ಷಗಳಿಂದ ಅರಿತು ಬಂದ ವಿಷಯವಾಗಿದೆ. ಆದರೆ ಮೊಸರನ್ನವನ್ನು ನಿತ್ಯವೂ, ಇದು ಸಾಧ್ಯವಾಗದಿದ್ದರೆ ಆದಷ್ಟೂ ನಿಯಮಿತವಾಗಿ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಮಾತ್ರವಲ್ಲ, ಒಟ್ಟಾರೆ ಆರೋಗ್ಯವೂ ವೃದ್ಧಿಸುತ್ತದೆ. ಮೊಸರನ್ನ ದಕ್ಷಿಣ ಭಾರತದಲ್ಲಿ ಮೊದಲಾಗಿ ಪ್ರಾರಂಭವಾಯಿತು ಎಂದು ತಿಳಿದುಬರುತ್ತದೆ. ಆದರೆ ಇದರ ಆರೋಗ್ಯಕರ ಗುಣವನ್ನು ಕಂಡುಕೊಂಡ ಬಳಿಕ ಇಡಿಯ ದೇಶದ ಜನರು ಈಗ ಸೇವಿಸುತ್ತಿದ್ದಾರೆ. ಇಂದು ಉತ್ತರ ಭಾರತದಲ್ಲಿ ಅತಿ ಜನಪ್ರಿಯ ತಿನಿಸಾಗಿದ್ದು, ವಿಶೇಷವಾಗಿ ಬೇಸಿಗೆಯಲ್ಲಿ ಜನರು ಹೆಚ್ಚಾಗಿ ಸೇವಿಸುತ್ತಾರೆ. |
ಅದರಲ್ಲೂ ಹೊಟ್ಟೆ ಕೆಟ್ಟಿದ್ದರೆ ಮೊಸರನ್ನವೇ ಅತಿ ಸೂಕ್ತವಾದ ಆಹಾರವಾಗಿದೆ ಎಂದು ಇಂದು ಎಲ್ಲರೂ ತಿಳಿದುಕೊಂಡಿರುವುದರಿಂದ ಹೊಟ್ಟೆಯ ಸಾಮಾನ್ಯ ತೊಂದರೆಗಳಿಗೆ ವೈದ್ಯರ ಬಳಿ ಹೋಗುವ ಮುನ್ನ ಮೊಸರನ್ನವನ್ನು ಸೇವಿಸುವುದನ್ನು ಪ್ರಥಮ ಚಿಕಿತ್ಸೆಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬನ್ನಿ, ತಯಾರಿಸಲು ಅತ್ಯಂತ ಸುಲಭವಾದ ಈ ಮೊಸರನ್ನ ಸೇವಿಸುವ ಮೂಲಕ ಎಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆ ಎಂಬುದನ್ನು ನೋಡೋಣ: |
Subsets and Splits
No community queries yet
The top public SQL queries from the community will appear here once available.