text
stringlengths 0
61.5k
|
---|
ನಿಜಕ್ಕೂ ಇದು ಅದೃಷ್ಟದಾಟ. ಕಿರುತೆರೆಯ ರಿಯಾಲಿಟಿ ಶೋ ಗಳಿಗೆ ಹೋಗುವುದು ಅಂದುಕೊಂಡಷ್ಟು ಸುಲಭ ಅಲ್ಲ.ಅಲ್ಲಿ ಏನೇನೋ ಕತೆಗಳಿವೆ. ಅದರಲ್ಲೂ ಹಳ್ಳಿ ಪ್ರತಿಭೆಗಳಿಗೆ ಕೈ ಗೆಟುಕದ ಜಗತ್ತು. ಅಂತಹದರಲ್ಲಿ ಮಹಾಲಕ್ಷ್ಮಿ ಗೆ ರಿಯಾಲಿಟಿ ಶೋ ಬಾಗಿಲು ತೆರೆದಿದ್ದು ವೈಲ್ಡ್ ಎಂಟ್ರಿ ಮೂಲಕ.' ಪರಿಚಿತ ಡಾನ್ಸ್ ಮಾಸ್ಟರ್‌ಸಲಹೆಯಂತೆ ಟಿವಿ ಶೋಗಳ ಬಗ್ಗೆ ಗಮನಹ ರಿಯಿತು. ಫಸ್ಟ್ ಟೈಮ್ 'ಕಲರ್ಸ್ ಕನ್ನಡ' ದ ಮಾಸ್ಟರ್ ಡಾನ್ಸ್ ಗೆ ಆಡಿಷನ್ ನಡೆಯಿತು. ಆದರೆ, ಅಲ್ಲಿ ಮಹಾಲಕ್ಷ್ಮಿ ರಿಜೆಕ್ಟ್ ಆದಳು. ನಿರಾಸೆಯಿಂದ ವಾಪಾಸ್ ಬರುವಾಗ ಒಬ್ರು ಡಾನ್ಸ್ ಮಾಸ್ಟರ್ ಕಾಂಟ್ಯಾಕ್ಟ್ ನಂಬರ್ ತೆಗೆದುಕೊಂಡಿದ್ದರು . ಅದಾಗಿ ಒಂದಷ್ಟು ದಿನ ಕಳೆಯುವ ಹೊತ್ತಿಗೆ ಫೋನ್ ಬಂತು. ಮಾಸ್ಟರ್ ಡಾನ್ಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿಯಿದೆ. ಬನ್ನಿ ಅಂದ್ರು. ಆಗ ನನ್ನೆಲ್ಲ ನೋವುಗಳು ಮರೆತು, ಸಂಭ್ರಮದಲ್ಲಿ ಬೆಂಗಳೂರುಬಸ್ ಹತ್ತಿದೆವು ' ಎನ್ನುವಾಗ ಕಬಿ ಮುತ್ತಿಗಿ ಭಾವುಕರಾಗುತ್ತಾರೆ. ಅವರ ಕಣ್ಣಾಲೆಗಳು ತುಂಬಿಕೊಳ್ಳುತ್ತವೆ. |
ಆಟ ಜೂನಿಯರ್ಸ್ ನಲ್ಲಿಗೆದ್ದ ಕ್ಷಣ |
ವೇದಿಕೆ ಏರಿಸಿದ್ದು ಕಲರ್ಸ್ ಕನ್ನಡ, ಬಹುಮಾನ ನೀಡಿದ್ದು ಝೀ ತೆಲುಗು.. |
ಮಹಾಲಕ್ಷ್ಮಿ ವೈಲ್ಡ್ ಕಾರ್ಡ್ ಮೂಲಕ ಮಾಸ್ಟರ್ ಡಾನ್ಸರ್ ಎಂಟ್ರಿಯಾದಳು. ಅಲ್ಲಿ ನುರಿತ ನೃತ್ಯ ನಿರ್ದೇಶಕರ ಮೂಲಕ ಜನಪ್ರಿಯ ಗೀತೆಗಳಿಗೆ ತೀರ್ಪುಗಾರರೇ ಅಚ್ವರಿ ಪಡುವಂತೆ ಕುಣಿದಳು. ಹೆಸರಾಂತ ನೃತ್ಯಗಾರ್ತಿ ಮಯೂರಿ ಸೇರಿದಂತೆ ನಟರಾದ ಯೋಗಿ, ವಿಜಯ್ ರಾಘವೇಂದ್ರ ಅವರ ಮೆಚ್ಚುಗೆ ಪಡೆದುಕೊಂಡಳು. ಆದರೆ ಅಲ್ಲಿ ಅವಳು ರನ್ನರ್ ಆಗಿ ತೃಪ್ತಿಪಟ್ಟು ಕೊಳ್ಳಬೇ ಕಾಯಿತು.ಮುಂದೆ ತೆಲುಗು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಳು. ಝೀ ತೆಲುಗು ಚಾನೆಲ್ ' ಆಟ ಜೂನಿಯರ್ಸ್' ನಲ್ಲಿ ಮಹಾಲಕ್ಷಿಯದ್ದೇ ಅಬ್ಬರ. ಅದೇನು ಡಾನ್ಸ್ ಅಂತೀರಾ, ಭಾರತೀಯ ಚಿತ್ರರಂಗದ ಹೆಸರಾಂತ ಕೋರಿಯೋಗ್ರಾಫರ್ ಮುಗೂರು ಸುಂದರ್ ಅವರೇ ಶಹಬ್ಬಾಸ್ ಅಂದ್ರು. ಮೆಗಾಸ್ಟಾರ್ ಚಿರಂಜೀವಿ, ಮಿಲ್ಕಿ ಬ್ಯೂಟಿ ತಮ್ಮನ್ನಾ, ಪ್ರಿಯಾಮಣಿ, ರಶ್ಮಿಕಾಮಂದಣ್ಣ ಮುಂತಾದವರೆಲ್ಲ ಮಹಾಲಕ್ಣ್ಮಿ ನೃತ್ಯಕ್ಕೆ ಅಚ್ವರಿಪಟ್ಟರು. ಅಪಾರ ಮೆಚ್ಚುಗೆ ಫಲ ನೀಡಿತು. ಆ ಶೋ ವಿನ್ನರ್ ಆದಳು ಮಹಾಲಕ್ಣ್ಮಿ. ಮುಂದೆ ಅಲ್ಲಿಯೇ ಕಪಲ್ ಸೆಲಿಬ್ರಟಿಶೋ ನಲ್ಲೂ ನರ್ತಿಸಿದಳು ಈ ನಾಟ್ಯ ಮಯೂರಿ. |
ಪ್ರೀ ಸ್ಟೈಲ್ ಡಾನ್ಸರ್.. |
ಶೂಟಿಂಗ್ ಸೆಟ್ ನಲ್ಲಿ ಮಹಾಲಕ್ಣ್ಮಿ |
ಮಹಾಲಕ್ಣ್ಮಿ ಪ್ರೀ ಸ್ಟೈಲ್ ಡಾನ್ಸರ್. ಇಂತಹದೇ ಕಲಾ ಪ್ರಕಾರ ಅಂತಿಲ್ಲ. ಯಾವುದೇ ನೃತ್ಯ ಹೇಳಿಕೊಟ್ಟರೂ, ಅದನ್ನು ಕ್ಷಣ ಮಾತ್ರದಲ್ಲಿ ಕಲಿತು, ನೋಡುಗರು ಅಚ್ಚರಿ ಪಡುವಂತೆ ಮಾಡಿ ತೋರಿಸುವ ಸಾಮಾರ್ಥ್ಯ ಮತ್ತು ಬುದ್ದಿವಂತಿಕೆ ಆಕೆಯಲ್ಲಿದೆ. ಅದೇ ಅವಳ ಕರಿಯರ್ ಗೆ ವರವಾಗಿದೆ. ಶೋ ವೇದಿಕೆ ಮೇಲೆ ಬಂದರೆ ಮಹಾಲಕ್ಣ್ಮಿಅವರದ್ದು ಅಕ್ಷರಶಃ ಡಾನ್ಸ್ ವಾರ್. ಚೈನಿ ಜಿಮ್ನಾಸ್ಟಿಕ್ ಪಟುಗಳೇ ಬೆಚ್ಚಿ ಬೀಳುವ ಹಾಗೆ ಮೈ ಯನ್ನು ರಬ್ಬರ್ ನಂತೆ ಬಾಗಿಸುತ್ತಾಳೆ. ಚೆಂಡಿನಂತೆ ಪುಟಿದೇಳುತ್ತಾಳೆ. ಟ್ರೆಡಿಷನಲ್ ಗೀತೆಗಳಾಗಲಿ, ಮಾರ್ಡನ್ ಗೀತೆಗಳಾಗಲಿ ಎಲ್ಲದಕ್ಕೂ ಸೈ ಈ ಮಹಾಲಕ್ಣ್ಮಿ. |
ಇವರೆಲ್ಲ ಮಹಾಲಕ್ಷ್ಮಿಗುರುಗಳು |
ಸ್ಥಳೀಯವಾಗಿ ಮಹಾಲಕ್ಷ್ಮಿ ಹಲವು ಡಾನ್ಸ್‌ಮಾಸ್ಟರ್ ಬಳಿ ತರಬೇತಿ ಪಡೆದಳು.ಶಿರಾಳಕೊಪ್ಪದ ಅಂಜಿ, ಆನವಟ್ಟಿಯ ಅಮಿತ್, ಸೊರಬದ ನೀಯಾಜ್ ಆ್ಯಂಡ್ ಸ್ಟಿವನ್ ಹಾಗೂ ಹಿರೇಕೆರೂರ ನ ಅರುಣ್ ಅವರ ಬೆಂಬಲ ಮಹಾಲಕ್ಷ್ಮಿ ಯ ಸಾಧನೆಗೆ ಸಾಥ್ ನೀಡಿತು.ಅಲ್ಲಿಂದಲೇ ಆಕೆರಿಯಾಲಿಟಿ ಶೋ ವೇದಿಕೆ ಏರುವಂತಾಯಿತು. ಮುಂದೆ ಕಲರ್ಸ್ ಸೂಪರ್ ನಲ್ಲಿ ಮಾಸ್ಟರ್ ಡ್ಯಾನ್ಸರ್ ಪವನ್, ಝೀ ತೆಲುಗು ಆಟಜೂನಿಯರ್ಸ್ ನಲ್ಲಿ ಯಶವಂತ್ ಮಾಸ್ಟರ್, |
ಅದೇ ಚಾನೆಲ್ ನ ' ಡ್ಯಾನ್ಸ್ ಜೋಡಿ ಡ್ಯಾನ್ಸ್ ' ಸೆಲೆಬ್ರೆಟಿ ರಿಯಾಲಿಟಿ ಶೋ ನಲ್ಲಿ ಸುದರ್ಶನ್ ಮಾಸ್ಟರ್ ಕೊಟ್ಟ ಟ್ರೈನಿಂಗ್ ಅತ್ಯಾದ್ಬುತ ಎನ್ನುವ ಮಾತು ಕಬಿಮುತ್ತಿಗಿ ಅವರದು. |
ಮಹಾಲಕ್ಣ್ಮಿ ಗೆ ಬಂದಿವೆ ಸಿನಿಮಾ ಅವಕಾಶ.. |
ಮಹಾಲಕ್ಷ್ಮಿ ಈಗ ಸಿನಿಮಾನಟಿ. ಹೌದು, ಪುಟಾಣಿಗೆ ಈಗ ಸಿನಿಮಾ ಬೇಡಿಕೆ ಬಂದಿವೆ. ಈಗಾಗಲೇ ವಿಶಾಲ್ ರಾಜ್ ನಿರ್ದೇಶನದ 'ದಂತ ಪುರಾಣ 'ಚಿತ್ರದಲ್ಲಿ ಮಹಾಲಕ್ಣ್ಮಿ ಅಭಿನಯಸಿದ್ದಾಳೆ. ಮತ್ತೆರೆಡು ಸಿನಿಮಾಗಳಿಗೂ ಆಫರ್ ಬಂದಿವೆ. ಹಾಗೆಯೇ ತೆಲುಗಿನಲ್ಲೂಒಂದು ಚಿತ್ರದಲ್ಲಿ ಅಭಿನಯಿಸಲು ಕೇಳಿದ್ದಾರಂತೆ.ಆದರೆ ಇವೆಲ್ಲ ಲಾಕ್ ಡೌನ್ ಆರಂಭಕ್ಕೂ ಮುಂಚೆ ಆದ ಮಾತುಕತೆ. ಈಗ ಇವೆಲ್ಲ ಮತ್ತೆ ಹೇಗೆ ಅನ್ನೋದು ಗೊತ್ತಿಲ್ಲ ಎನ್ನುವ ಮಾತು ಆಕೆಯಮಾವ ಕಬಿಮುತ್ತಿಗೆ ಅವರದು. |
ನಿರೀಕ್ಷಿತ ಪ್ರೋತ್ಸಾಹ ಸಿಕ್ಕಿಲ್ಲ ಎಂಬ ಕೊರಗು.. |
ನೋ ಡೌಟ್, ಪುಟಾಣಿ ಮಹಾಲಕ್ಣ್ಮಿ ಒಬ್ಬ ಅಸಾಧಾರಣ ಪ್ರತಿಭೆ. ಯಾವುದೇ ಸೂಕ್ತ ತರಬೇತಿ ಇಲ್ಲದೆ, ಆಕೆ ರಿಯಾಲಿಟಿ ಶೋಗಳಲ್ಲಿ ಕುಣಿಯುವುದನ್ನು ನೋಡಿದರೆ ಎಂತವರಿಗೂ ಮೈ ಝುಮ್ ಎನ್ನುತ್ತೆ. ಅಷ್ಟು ನೃತ್ಯ ಪ್ರವೀಣೆ. ಇದೆಲ್ಲ ಯಾರೋ ಕಲಿಸಿದ್ದುಎನ್ನುವುದಕ್ಕಿಂತ ಅದೊಂದು ಗಾಡ್ ಗಿಫ್ಟ್ ಎಂದೇ ನಂಬಿದ್ದಾರೆ ಆಕೆಯ ಪೋಷಕರು. ಆದರೂ ಆಕೆಗೆ ಒಳ್ಳೆಯ ತರಬೇತುದಾರರು ಬೇಕಿದೆ. ಹಾಗೆಯೇ ಅವಳಲ್ಲಿರುವ ಆಸಕ್ತಿಗೆ ದೊಡ್ಡ ಪ್ರೋತ್ಸಾಹ ವೂ ಬೇಕಿದೆ. ಅದೆಲ್ಲ ಸಿಕ್ಕರೆ ರಾಜ್ಯ ಮಾತ್ರವಲ್ಲ ಇಡೀ ದೇಶವೇ ಮೆಚ್ಚುವ ಡಾನ್ಸರ್ ಆಗುತ್ತಾಳೆಂಬ ಆಸೆ ಆಕೆಯ ಮಾವ ಕಬಿ ಮುತ್ತಿಗೆ ಅವರದು. ಆದರೆ ಅದೇ ಇಲ್ಲಿ ಆಕೆಗೆ ಸರ್ಕಾರದಿಂದಾಗಲಿ, ಮಾಧ್ಯಮದಿಂದಾಗಲಿ ಒಳ್ಳೆಯ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನುವುದು ಅವರ ಬೇಸರ.' ಹಳ್ಳಿ ಪ್ರತಿಭೆಗೆ ಪ್ರೋತ್ಸಾಹ ಇಲ್ಲ ಸರ್.ಅದೇ ಮಹಾಲಕ್ಣ್ಮಿ ಪಟ್ಟಣದ ಯಾವುದಾದರೂ ಅನುಕೂಲಸ್ಥ ಕುಟುಂಬದ ಲ್ಲಿ ಹುಟ್ಟಿದ್ದರೆ ದೊಡ್ಡ ಅವಕಾಶಗಳೇ ಸಿಗುತ್ತಿದ್ದವೋ ಏನೋ. ಮಾಧ್ಯಮದವರಂತೂ ನಮ್ಮಕಡೆ ತಿರುಗಿಯೂ ನೋಡಿಲ್ಲ. ಎಷ್ಟೇ ಆದ್ರೂ ಹಳ್ಳಿ ಪ್ರತಿಭೆಯಲ್ಲವೇ, ಅವರಿಗೆ ಇದು ಬೇಡ' ಎನ್ನುತ್ತಾ ತಮ್ಮೊಳಗಿನ ಅಗಾಧ ನೋವನ್ನು ಹೊರ ಚೆಲ್ಲುತ್ತಾರೆ ಕಬಿಮುತಿಗೆ.ಇನ್ನಾದರೂ ಈ ಪ್ರೋತ್ಸಾಹ ಸಿಗಬಹುದೇ ಎನ್ನುವುದು ಅವರ ನಿರೀಕ್ಷೆ. |
ಶುಭಾರಂಭವೋ, ಮತ್ತದೇ ಆತಂಕವೋ.!? |
No Comments on ಶುಭಾರಂಭವೋ, ಮತ್ತದೇ ಆತಂಕವೋ.!? |
ಚಿತ್ರರಂಗಕ್ಕೆ ಪರ್ವಕಾಲ, ಹಾಗೆಯೇ ಅಗ್ನಿಪರೀಕ್ಷೆಯ ಕಾಲವೂ ಹೌದು |
ಚಿತ್ರ ರಂಗಕ್ಕೆ ನಾಳೆ ಪರ್ವ ಕಾಲ. ಒಂದ್ರೀತಿ ಅಗ್ನಿಪರೀಕ್ಷೆಯ ಕಾಲವೂ ಹೌದು. ಹೆಚ್ಚು ಕಡಿಮೆ ಏಳು ತಿಂಗಳ ನಂತರ ಚಿತ್ರಮಂದಿರಗಳು ಒಪನ್ ಆಗುತ್ತಿವೆ. ಆ ಮೂಲಕ ಸಿನಿಮಾಗಳೂ ರಿಲೀಸ್ ಆಗುತ್ತಿವೆ. ಹಾಗಂತ ರಿಲೀಸ್ ಆದ ಸಿನಿಮಾಗಳೆಲ್ಲ ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲೂ ಬಿಡುಗಡೆ ಆಗುತ್ತಿವೆ ಎನ್ನುವ ನಂಬಿಕೆಯಾಗಲಿ, ಒಪನ್ ಆದ ಚಿತ್ರಮಂದಿ ರಗಳಿಗೆ ಪ್ರೇಕ್ಷಕರು ಬರುತ್ತಾರೆನ್ನುವ ಖಾತರಿ ಯಾರಿಗೂ ಇಲ್ಲ. ಆದರೂ ಮುಂದಿನ ಒಂದಷ್ಟು ಕಾಲದ ಭವಿಷ್ಯ ನಾಳೆ ನಿರ್ಧಾರವಾಗುತ್ತೆ. |
ಒಂದು ಪ್ರಯೋಗವಷ್ಟೇ.. |
ಕೊರೋನಾ ಬಗ್ಗೆ ಜನರಿಗೆ ಮೊದಲಿನಷ್ಟು ಭಯ ಇಲ್ಲ ಎನ್ನುವುದು , ಅದರ ಜತೆಗೆ ಬಹುತೇಕ ಚಟುವಟಿಕೆ ಮೊದಲಿನಂತಾಗುತ್ತಿರುವುದು ಒಂದಷ್ಟು ನಂಬಿಕೆ ಹುಟ್ಟಿಸಿದ್ದು.ಆದರ ವಾಸ್ತವ ನಾಳೆ ಮತ್ತು ನಾಡಿದ್ದು ಗೊತ್ತಾಗಲಿದೆ. ಯಾಕಂದ್ರೆ ನಾಳೆ ಒಂದಷ್ಟು ಸಿನಿಮಾಗಳು ರಿಲೀಸ್ ಆಗುತ್ತಿದ್ದರೆ, ನಾಡಿದ್ದು ಒಂದೆರೆಡು ಚಿತ್ರಗಳು ತೆರೆ ಕಾಣುತ್ತಿವೆ. ಎಲ್ಲವೂ ಪ್ರಯೋಗ. ಜತೆಗೆ ರಿ ರಿಲೀಸ್. |
ಮತ್ತೊಂದು ಅವಕಾಶ ಸಿಕ್ಕ ಖುಷಿ.. |
ಸದ್ಯಕ್ಕೀಗ ಗೊತ್ತಾಗಿರುವ ಪ್ರಕಾರ 'ಲವ್ ಮಾಕ್ಟೆಲ್, 'ಶಿವಾರ್ಜುನ', :'ಶಿವಾಜಿ ಸುರತ್ಕಲ್", ಕಾಣದಂತೆ ಮಾಯವಾದನು' ಹಾಗೂ' ಥರ್ಢ್ ಕ್ಲಾಸ್' ಹಾಚಿತ್ರಗಳು ಬಿಡುಗಡೆ ಘೋಷಿಸಿವೆ . ಮುಂದಿನ ವಾರಕ್ಕೆ 'ದಮಯಂತಿ ' ಫಿಕ್ಸ್ ಆಗಿದೆ.ಇವೆಲ್ಲ ಲಾಕ್ ಡೌನ್ ಆರಂಭಕ್ಕೂ ಮುನ್ನವೇ ರಿಲೀಸ್ ಆದ ಚಿತ್ರಗಳು. ಕೆಲವು ಚಿತ್ರಗಳಿಗೆ ಒಳ್ಳೆಯ ಒಪನಿಂಗ್ ಕೂಡ ಸಿಕ್ಕಿತ್ತು. ಇನ್ನು ಕೆಲವು ರಿಲೀಸ್ ಆದ ಒಂದೇ ವಾರದಲ್ಲಿ ಲಾಕ್ ಡೌನ್ ಹೊಡೆತಕ್ಕೆ ಸಿಲುಕಿದವು. ಈಗ ಅವೆಲ್ಲವಕ್ಕೂ ಮತ್ತೊಂದು ಅವಕಾಶ ಸಿಕ್ಕಿದೆ. ಅದು ಎಷ್ಡರ ಮಟ್ಟಿಗೆ ಸಫಲವಾಗುತ್ತೆ ಎನ್ನುವುದು ಸಹಜವಾಗಿಯೇ ಕುತೂಹಲ ಹುಟ್ಟಿಸಿದೆ. |
200 ಟಾಕೀಸ್ ಗಳು ಒಪನ್ ಆಗುವುದೇ ಡೌಟಂತೆ.. |
ಮೊದಲೇ ರಾಜ್ಯದಲ್ಲಿ ಚಿತ್ರಮಂದಿರಗಳ ಪರಿಸ್ಥಿತಿ ಭೀಕರವಾಗಿತ್ತು. ಬೆಂಗಳೂರಿನ ಕೆ.ಜಿ ರಸ್ತೆಯ ಚಿತ್ರಮಂದಿರಗಳು ಸೇರಿ ರಾಜ್ಯದ ಹಲವೆಡೆ ಚಿತ್ರಮಂದಿರಗಳು ಉರುಳಿಬಿದಿದ್ದವು. ಅದೇ ಹಾದಿಯಲ್ಲಿ ಸಾಕಷ್ಟು ಚಿತ್ರಮಂದಿರಗಳು ಇದ್ದವು. ಅವುಗಳಿಗೆಲ್ಲ ಕೊರೋನಾ ಅನ್ನೋದೇ ಒಂದು ನೆಪವಾಗಿದೆ. ಲಾಕ್ ಡೌನ್ ಕಾರಣಕ್ಕೆ ಬಾಗಿಲು ಮುಚ್ವಿರುವ ರಾಜ್ಯದ 700 ಕ್ಕೂ ಹೆಚ್ಚು ಚಿತ್ರಮಂದಿರಗಳ ಪೈಕಿ 200 ಚಿತ್ರಮಂದಿರಗಳು ಇನ್ನು ಮುಂದೆ ಒಪನ್ ಆಗುವುದೇ ಡೌಟು ಎನ್ನುವ ಮಾತು ಚಿತ್ರೋದ್ಯಮದವರಿಂದಲೇ ಕೇಳಿಬಂದಿದೆ. |
ಕೆಲವು ತೆರೆಗೆ ವಿನಾಯಿತಿಗೂ ಜೀವ ಉಳಿಸಿಕೊಂಡಿವೆ…. |
ರಾಜ್ಯದ ಚಿತ್ರಮಂದಿರಗಳ ಮಾಲೀಕರು ಈಗ ಸರ್ಕಾರದ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರಂತೆ. ಲಾಕ್ ಡೌನ್ ಅವಧಿಯಲ್ಲಿ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲುಮುಚ್ವಿದ್ದರಿಂದ ತೀವ್ರ ಆರ್ಥಿಮ ಸಂಕಷ್ಟ ಎದುರಾಗಿದೆ. ಸಿಬ್ಬಂದಿ ಸಂಬಳ, ನಿತ್ಯ ನಿರ್ವಹಣೆಗೆ ತೊಂದರೆಯಾಗಿದೆ. ಅಂತಹದರಲ್ಲಿ ಕರೆಂಟ್ ಬಿಲ್ಲು ಸೇರಿ ಸರ್ಕಾರವು ಟಾಕೀಸ್ ಮಾಲೀಕರಿಗೆ ವಿಧಿಸಿರುವ ಇತರೆ ತೆರಿಗೆಗೆ ವಿನಾಯಿತಿ ಕೊಡಬೇಕು. ಲಾಕ್ ಡೌನ್ ಕಾಲದ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಸರ್ಕಾರ ಹಾಗೊಂದು ಭರವಸೆ ನೀಡುವ ತನಕ ಚಿತ್ರಮಂದಿರಗಳನ್ನು ಬಂದ್ ಮಾಡಬೇಕೆಂಬ ನಿರ್ಧಾರ ಮಾಡಿರುವ ಸುದ್ದಿಯಿದೆ. ಸರ್ಕಾರ ಅದನ್ನು ಎಷ್ಟರಮಟ್ಟಿಗೆ ಪರಿಗಣಿಸುತ್ತೋ ಗೊತ್ತಿಲ್ಲ. ಆದರೆ, ಸರ್ಕಾರ ನಿರ್ಧಾರದ ಮೇಲೆ ರಾಜ್ಯದ ಟಾಕೀಸ್ ಗಳ ಅಸ್ತಿತ್ವವೂ ಅಡಗಿದೆ ಎನ್ನುವ ಮಾತುಗಳನ್ನು ಕೇಳಿದರೆ, ಟಾಕೀಸ್ ಗಳು ಉಳಿತ್ರವೋ ಇಲ್ಲವೋ? ನೆನೆಸಿಕೊಂಡರೆ ಭಯ ಶುರುವಾಗುತ್ತೆ. |
ಭೂಮಿಗೆ ತೆರೆಯಿತು ಬೆಳ್ಳಿತೆರೆಯ ಬಾಗಿಲು ! |
No Comments on ಭೂಮಿಗೆ ತೆರೆಯಿತು ಬೆಳ್ಳಿತೆರೆಯ ಬಾಗಿಲು ! |
ಪೇಪರ್ ಬೋಟ್ ಏರಿ ಸಿನಿ ಅಂಗಳಕ್ಕೆ ಬಂದ ಭೂಮಿಕಾಳ ಸಿನಿ ಎಂಟ್ರಿಗಿದೆ ಒಂದು ರೋಚಕ ಟ್ವಿಸ್ಟ್ |
ಭೂಮಿಕಾ, ಕನ್ನಡ ಚಿತ್ರರಂಗಕ್ಕೆ ಇದೇನು ಹೊಸ ಹೆಸರು ಅಲ್ಲ. ಕನ್ನಡ ಚಿತ್ರರಂಗಕ್ಕೆ ಮತ್ತೆ ಬಂದರು ಭೂಮಿಕಾ ಅಂದರೆ, ತಕ್ಷಣ ನೆನಪಾಗುವುದು ಬಹುಭಾಷೆ ನಟಿ ಭೂಮಿಕಾ ಚಾವ್ಲಾ.ಆದರೆ ಈಗ ಕನ್ನಡ ಚಿತ್ರರಂಗಕ್ಕೆಬಂದಿದ್ದು ಬಹುಭಾಷೆ ನಟಿ ಭೂಮಿಕಾ ಅಲ್ಲ.ಬದಲಿಗೆ ಬೆಂಗಳೂರು ಮೂಲದ ಕ್ಲಾಸಿಕಲ್ ಡಾನ್ಸರ್ ಭೂಮಿಕಾ. ಅಲಿಯಾಸ್ ಭೂಮಿಕಾ ರಮೇಶ್. |
ಡಿಸೆಂಬರ್ 24 ಚಿತ್ರದಲ್ಲಿನ ಲುಕ್ |
ಆಸಕ್ತಿ ಅಥವಾ ಅಭಿರುಚಿ ಎನ್ನುವುದಕ್ಕಿಂತ ಸಿನಿಮಾ ಅನ್ನೋದೇ ಒಂದು ಆಕರ್ಷಣೀಯ ಕ್ಷೇತ್ರ. ನೇಮ್ ಆ್ಯಂಡ್ ಫೇಮ್ ಇಲ್ಲಿ ಬಹುಬೇಗ ಸಿಗುತ್ತೆ. ಅದಕ್ಕಾಗಿಯೇ ಇಲ್ಲಿಗೆ ಬಂದವರಿಗೇನು ಕಮ್ಮಿ ಇಲ್ಲಮ ಹಾಗೆಯೇ ಆಕಸ್ಮಿಕವಾ ಗಿಯೂ ಎಂಟ್ರಿಯಾದವರಿದ್ದಾರೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ನಟಿ ಭೂಮಿಕಾ ರಮೇಶ್. ಈಗಷ್ಟೇ ಚಿತ್ರೀಕರಣದ ಹಂತದಲ್ಲಿರುವ 'ಪೇಪರ್ ಬೋಟ್' ಹಾಗೂ ' ಡಿಸೆಂಬರ್ 24 ' ಚಿತ್ರಗಳಿಗೆ ನಾಯಕಿಯಾಗಿ ಚಂದನವನದಲ್ಲಿ ಕುತೂಹಲ ಮೂಡಿಸಿದ್ದಾರೆ ಈ ನಟಿ ಕಮ್ ಕ್ಲಾಸಿಕಲ್ ಡಾನ್ಸರ್. |
ಭೂಮಿಕಾ ಎಂಬ ಮೈಸೂರು ಮಲ್ಲಿಗೆ… |
ಭೂಮಿಕಾ ರಮೇಶ್ , ಮೂಲತಃ ಮೈಸೂರು ಹುಡುಗಿ. ಸದ್ಯಕ್ಕೆ ಬೆಂಗಳೂರಿನಲ್ಲೇ ಸೆಟ್ಲ್ . ಇದೀಗ ಡಿಗ್ರಿ ಓದುತ್ತಿದ್ದಾರೆ. ಆದರೆ ಬಾಲ್ಯದಿಂದಲೇ ಕಿರುತೆರೆಯ ಡಾನ್ಸ್ ರಿಯಾಲಿಟಿ ಶೋನಲ್ಲಿ ಇವರು ಸಾಕಷ್ಟು ಫೇಮಸ್. ಝೀ ತೆಲುಗು ಚಾನಲ್ ನ 'ಆಟ ಜೂನಿಯರ್ಸ್ ' ಡಾನ್ಸ್ ರಿಯಾಲಿಟಿ ಶೋ ವಿನ್ನರ್ ಕೂಡ ಹೌದು. ಅಷ್ಟೇ ಅಲ್ಲ, ಭರತ ನಾಟ್ಯ ಪ್ರವೀಣೆ. 2018 ರಲ್ಲಿ ಕ್ಲಾಸಿಕಲ್ ಡಾನ್ಸ್ ಕಾಂಪಿಟೀಷ್ ನಲ್ಲಿ ' ಒರಿಸ್ಸಾ ಮಿಸ್ ಮೊನಾಲಿಸಾ' ಗೆದ್ದ ಹೆಗ್ಗಳಿಕೆ ಇವರದು. ಅದೇ ಜನಪ್ರಿಯತೆ ಯೊಂದಿಗೀಗ 'ಪೇಪರ್ ಬೋಟ್' ಏರಿ ಸಿನಿ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಅಂದ ಹಾಗೆ ' ಪೇಪರ್ ಬೋಟ್ ' ಭೂಮಿಕಾ ಅಭಿನಯದ ಮೊದಲ ಚಿತ್ರ. ಅದೀಗ ಚಿತ್ರೀಕರಣದ ಹಂತದಲ್ಲಿದೆ. ಅದರ ಜತೆಗೀಗ 'ಡಿಸೆಂಬರ್ 24 'ನಲ್ಲಿ ಬ್ಯುಸಿಯಾಗಿದ್ದಾರೆ. ಅದು ಕೂಡ ಎರಡನೇ ಹಂತದ ಚಿತ್ರೀಕರಣ ಶುರು ಮಾಡಿದೆ. ಯಾರಿಗುಂಟು ಈ ಅವಕಾಶ? ಮೊದಲ ಚಿತ್ರವಿನ್ನು ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ಚಿತ್ರಕ್ಕೆ ನಾಯಕಿ. ಅದೃಷ್ಟ ಅಂದ್ರೆ ಹೀಗೆಯೇ.ಅದಿರಲಿ, ಇಲ್ಲಿನ ಇಂಟರೆಸ್ಟಿಂಗ್ ವಿಷಯ ಅಂದ್ರೆ, ಅವರು ಡಾನ್ಸರ್ ಆಗಿ, ಸಿನಿಮಾ ಜಗತ್ತಿಗೆ ಬಂದಿದ್ದು. |
ತಿನ್ನೋದಿಕ್ಕೆ ಡಾನ್ಸರ್ ಅಗಿದ್ದು, ಸಿನಿಮಾಕ್ಕೂ ಬಂದಳು… |
ನೀವು ನಂಬ್ತೀರಾ? ಹೆಚ್ಚೆಚ್ಚು ತಿನ್ನೋದಿಕ್ಕೆ ಭೂಮಿಕಾ ಡಾನ್ಸರ್ ಆದ್ರಂತೆ. ಡಾನ್ಸರ್ ಆಗಿ ಒಂದಷ್ಟು ಹೆಸರು ಮಾಡಿದ ಕಾರಣಕ್ಕೆ ಸಿನಿಮಾಕ್ಕೂ ಬಂದ್ರಂತೆ. ಹಾಗಂತ ಭೂಮಿಕಾ ಹೇಳ್ತಾರೆ. ' ಇದು ನಿಜವೇ. ಚಿಕ್ಕವಳಿದ್ದಾಗ ನಾನು ತುಂಬಾ ಸಣ್ಣಕ್ಕಿದ್ದೆ. ಊಟ, ತಿಂಡಿ ಅಂದ್ರೆ ಅಲರ್ಜಿ ಅನ್ನೋಥರ ಇತ್ತು. ಕೊನೆಗೆ ಅಪ್ಪ- ಅಮ್ಮ ಡಾಕ್ಟರ್ ಭೇಟಿ ಮಾಡಿದಾಗ ಅವರು ಒಂದು ಸಲಹೆ ಕೊಟ್ರಂತೆ. ' ಸುಸ್ತಾದ್ರೆ ಏನಾದ್ರೂ ತಿಂತಾಳೆ, ಡಾನ್ಸ್ ಕ್ಲಾಸ್ ಗೆ ಕಳುಹಿಸಿ, ಚೆನ್ನಾಗಿ ತಿಂತಾಳೆ. ಡಾನ್ಸ್ ಕೂಡ ಕಲಿತಾಳೆ ಅಂದ್ರಂತೆ. ಹಂಗೆ ಶುರುವಾಗಿದ್ದು ಡಾನ್ಸಿಂಗ್ ಕಲಿಕೆ.ಅಲ್ಲಿಂದ ಕಿರುತೆರೆ ಡಾನ್ಸ್ ರಿಯಾಲಿಟಿ ಶೋ ಗೆ ಹೋದೆ. ಮೊದಲು ಕಲರ್ಸ್ ಕನ್ನಡದ ಡಾನ್ಸಿಂಗ್ ಸ್ಟಾರ್ ಗೆ ಆಡಿಷನ್ ಮೂಲಕ ಕಂಟೆಸ್ಟೆಂಟ್ ಆಗಿಸೆಲೆಕ್ಟ್ ಆದೆ. ಅಲ್ಲಿ ಒಳ್ಳೆಯ ರೆಸ್ಪಾನ್ಸ್ ಕೂಡ ಬಂತು. ಅಲ್ಲಿಂದ ತೆಲುಗು ಝೀ ಚಾನೆಲ್ ನ ' ಆಟ ಜೂನಿಯರ್ಸ್ 'ಗೂ ಕಂಟೆಸ್ಟೆಂಟ್ ಆಗಿ ಸೆಲೆಕ್ಟ್ ಆದೆ. ಅದೃಷ್ಟ ಎನ್ನುವ ಹಾಗೆ ಅಲ್ಲಿ ವಿನ್ನರ್ ಕೂಡ ಆದೆ. ಅಲ್ಲಿಂದ ಕರಿಯರ್ ಗೆ ಟರ್ನಿಂಗ್ ಪಾಯಿಂಟ್ ಸಿಗ್ತು ಅಂತ ನಟಿಯಾಗುವ ಮುಂಚಿನ ಭೂಮಿಕೆಯನ್ನು ಬಿಚ್ಚಿಡುತ್ತಾರೆ ನಟಿ ಭೂಮಿಕಾ. |
ಕೇಳಿ ಪಡೆದಿದ್ದಲ್ಲ ಈ ಆಫರ್… |
ಭೂಮಿಕಾ ಹೇಳುವ ಹಾಗೆ ಅವರ ಕರಿಯರ್ ಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು 'ಆಟ ಜೂನಿಯರ್ಸ್ ' ಡಾನ್ಸ್ಬರಿಯಾಲಿಟಿ ಶೋ ನಲ್ಲಿ ವಿನ್ನರ್ ಆಗಿದ್ದು. ಸಹಜವಾಗಿಯೇ ಅದು ಅವರಿಗೆ ಒಂದಷ್ಟು ಹೆಸರು ತಂದುಕೊಟ್ಟಿತು. ಕನ್ನಡದ ಹುಡುಗಿಯೊಬ್ಬಳಿಗೆ ತೆಲುಗಿನಲ್ಲಿ ಮಾನ್ಯತೆ ಸಿಕ್ಕಿತು. ಆ ಮೂಲಕ ಅಲ್ಲಿಯೇ ಭೂಮಿಕಾ ಮತ್ತೊಂದು ಡಾನ್ಸ್ ರಿಯಾಲಿಟಿ ಶೋ ಸೆಲೆಕ್ಟ್ ಆಗಿದ್ರಂತೆ. ಆದ್ರೆ ಈ ವೇಳೆಗೆ ರಾಷ್ಟ್ರೀಯ ಮಟ್ಟದ ಕ್ಲಾಸಿಕಲ್ ಡಾನ್ಸ್ ಕಾಂಪಿಟೇಷನ್ಗೆ ಹೋಗ ಬೇಕಾಗಿದ್ರಿಂದ , ಅದು ಸ್ಕಿಪ್ ಆಯ್ತು ಎನ್ನುವ ಭೂಮಿಕಾ, ಮುಂದೆ ಆಡಿಷನ್ ಮೂಲಕವೇ 'ಪೇಪರ್ ಬೋಟ್ 'ಹಾಗೂ 'ಡಿಸೆಂಬರ್ 24 ' ಚಿತ್ರಗಳಿಗೆ ನಾಯಕಿ ಆಗುವ ಮೂಲಕ ಚಿತ್ರರಂಗಕ್ಕೆ ಬಂದಿದ್ದರ ಕುರಿತು ಮಾತನಾಡುತ್ತಾ ದುಂಡು ಮುಖದಲ್ಲಿ ಸೂಜಿಮಲ್ಲಿಗೆಯಂತಹ ನಗುಬೀರುತ್ತಾರೆ. |
ಪ್ರತಿಭೆಯೇ ಭೂಮಿಕಾಳ ಹಿನ್ನೆಲೆ… |
ಭೂಮಿಕಾಗೆ ಚಿತ್ರರಂಗ ಹೊಸದು. ಅವರ ಕುಟುಂಬದಲ್ಲಿಯೇ ಬಣ್ಣ ಹಚ್ಚಿದ ಮೊದಲ ಕುಡಿ.ಭೂಮಿಕಾ ತನ್ನದೇ ಪ್ರತಿಭೆಯೊಂದಿಗೆ ಡಾನ್ಸಿಂಗ್, ಮಾಡೆಲಿಂಗ್ ನಲ್ಲಿ ದೊಡ್ಡ ಹೆಸರು ಮಾಡಿದ್ದು ಆಕೆಯ ಪೋಷಕರಿಗೂ ಖುಷಿ ತಂದಿದೆ. ಕಿರುತೆರೆಯಾಗಲಿ, ಸಿನಿಮಾವಾಗಲಿ ಶ್ರದ್ದೆಯಿಟ್ಟು ಸಾಧನೆ ಮಾಡುತ್ತಾಳೆಂದೆ ನಂಬಿದ್ದಾರೆ. ಅದನ್ನು ಉಳಿಸಿಕೊಳ್ಳುವ ಅಪಾರ ವಿಶ್ವಾಸ ಭೂಮಿಕಾ ಅವರದು ಕೂಡ.' ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇ ಮನೆಯವರ ಸಲಹೆ-ಸಹಕಾರದಿಂದ. ಸಿನಿಮಾರಂಗಕ್ಕೂ ಬರಲು ಅವರೇ ಕಾರಣ. ಮಗಳು ಒಳ್ಳೆಯ ಕಲಾವಿದೆಯಾಗಬೇಕೆನ್ನುವುದು ಅವರ ಆಸೆ. ಅದಕ್ಕೆ ತಕ್ಕಂತೆಯೇ ನನ್ನ ಪಾತ್ರಗಳ ಆಯ್ಕೆ ಇರಲಿದೆ. ಈಗ ಚಿತ್ರೀಕರಣದಲ್ಲಿರುವ ಎರಡು ಚಿತ್ರಗಳು ಚೆನ್ನಾಗಿವೆ. ಕತೆ ನನ್ನ ಪಾತ್ರ ಮುದ್ದಾಗಿವೆ. ಗ್ಲಾಮರ್ ಗ್ಲಿಮರ್ ಎನ್ನುವುದಕ್ಕಿಂತ ನಾನಿಲ್ಲಿ ಪಕ್ಕಾಟ್ರೆಡಿಷನಲ್ ಹುಡುಗಿ. ಅಂತಹದೇ ಪಾತ್ರಗಳಲ್ಲಿ ಅಭಿನಯಿಸಬೇಕೆನ್ನುವುದು ನನ್ನಾಸೆ ' ಎನ್ನುತ್ತಾರೆ ಭೂಮಿಕಾ.ಏನೇ ಆಗಲಿ ಡಾನ್ಸಿಂಗ್ ನಿಂದ ಸಿನಿ ದುನಿಯಾಕ್ಕೂ ಕಾಲಿಟ್ಟ ನವತಾರೆ ಭೂಮಿಕಾ ಎಂಟ್ರಿಯಲ್ಲೆ ಎರಡು ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಒಂದೆಡೆ ಮಾಡೆಲ್, ಮತ್ತೊಂದೆಡೆ ಕ್ಲಾಸಿಕಲ್ ಡಾನ್ಸರ್. ನಟಿಯಾಗುವ ಎಲ್ಲಾ ಕ್ವಾಲಿಪಿಕೇಷನ್ ಕೂಡ ಇವೆ.ಆಮೂಲಕ ಹೆಚ್ಚೇಚು ಅವಕಾಶಗಳು ಸಿಗಲಿ, ಅವರ ಪೋಷಕರು ಬಯಸಿದಂತೆ ಒಳ್ಳೆಯ ಕಲಾವಿದೆಯಾಗಲಿ ಎನ್ನುವುದು 'ಸಿನಿಲಹರಿ ' ಹಾರೈಕೆ. |
ಸಿನಿ ಸುದ್ದಿ ಸೌತ್ ಸೆನ್ಸೇಷನ್ |
ಸಿನಿಮಾವಾಗಲೀ, ರಾಜಕೀಯವಾಗಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಲಿ – ಕನಿ ಕುಸ್ರುತಿ |
No Comments on ಸಿನಿಮಾವಾಗಲೀ, ರಾಜಕೀಯವಾಗಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಲಿ – ಕನಿ ಕುಸ್ರುತಿ |
'ಸಿನಿ ಲಹರಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಲಯಾಳಂ ನ 'ಬಿರಿಯಾನಿ' ಚಿತ್ರದ ಖ್ಯಾತಿಯ ನಟಿ ಕನಿ ಕುಸ್ರುತಿ ಅಭಿಮತ. |
ಮಲಯಾಳಂ ಚಿತ್ರರಂಗದಲ್ಲಿ ಭಾರೀ ಸುದ್ದಿಯಲ್ಲಿರುವ ಚಿತ್ರ ಬಿರಿಯಾನಿ. ಇದು ಇನ್ನು ಬಿಡುಗಡೆ ಆಗಿಲ್ಲ. ಅದರೆ ಈ ಚಿತ್ರ ಬೆಂಗಳೂರು ಸೇರಿದಂತೆ ಜಗತ್ತಿನ ಹಲವು ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು, ಭಾರೀ ಮೆಚ್ಚುಗೆ ಪಡೆಯುತ್ತಿದೆ. ಚಿತ್ರದ ನಾಯಕಿ ಕನಿ ಕುಸ್ರುತಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 'ಸಿನಿ ಲಹರಿ ' ಗಾಗಿ ಕನಿ ಕುಸ್ರುತಿ ಅವರೊಂದಿಗೆ ರಮೇಶ್ ಎಚ್.ಕೆ.ನಡೆಸಿದ ಅಪರೂಪದ ಸಂದರ್ಶನ ಇಲ್ಲಿದೆ. |
ಹೇಗಿದ್ದೀರಿ, ಎಲ್ಲಿದ್ದೀರಿ,ಹೇಗಿದೆ ಸಿನಿಮಾ ಜರ್ನಿ? |
ಕನಿ : ನಮಸ್ಕಾರ ನಾನು ಚೆನ್ನಾಗಿದ್ದೀನಿ. ಸದ್ಯ ಗೋವಾದಲ್ಲಿ ವಾಸವಾಗಿದ್ದೀನಿ |
ನಿಮ್ಮ ಹಿನ್ನೆಲೆ ಏನು? ಅಂದ್ರೆ ನಿಮ್ನ ಪರಿಚಯ? |
ಕನಿ : ನಾನು ಮೂಲತಃ ಕೇರಳದವಳು. ನಾನು ರಂಗಭೂಮಿಯ ಹಿನ್ನಲೆಯವಳು. ನಾನು ಓದಿದ್ದು ರಂಗಭೂಮಿ ವಿಷಯವನ್ನೇ. ಪ್ಯಾರಿಸ್ ನಲ್ಲಿ ಈ ವಿಷಯದ ಕುರಿತು ನಾನು ವ್ಯಾಸಂಗ ಮಾಡಿದ್ದು ಯುರೋಪ್ ನಲ್ಲಿ 2 ವರ್ಷಗಳ ಕಾಲ ನಾನು ಕೆಲಸ ಮಾಡಿದ್ದೇನೆ. ನಾನು ತುಂಬಾ ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದು ಈ ಸದ್ಯ ಗೋವಾಗೆ ಬಂದಿದ್ದೇನೆ. ಕೆಲವೊಮ್ಮೆ ನಾನು ಸಿನಿಮಾ ಮಾಡುತ್ತೇನೆ, ಇನ್ನು ಕೆಲವೊಮ್ಮೆ ರಂಗಭೂಮಿಯಲ್ಲಿ ತೊಡಗುತ್ತೇನೆ. |
ಸಿನಿಮಾ ಎನ್ನುವ ಗ್ಲಾಮರ್ ಜಗತ್ತಿಗೆ ಬಂದಿದ್ದು ಹೇಗೆ? ಯಾಕೆ? |
ಕನಿ : ನಾನು ಸಿನಿಮಾ ಕ್ಷೇತ್ರವನ್ನು ಆರಿಸಿಕೊಳ್ಳಲಿಲ್ಲ. ನಾನು ಶಾಲಾ ದಿನಗಳಿಂದಲೂ ಸಹ ರಂಗಭೂಮಿಯಲ್ಲೇ ಹೆಚ್ಚು ಆಸಕ್ತಿ ಕೆಲಸ ಮಾಡುತ್ತಿದ್ದೆ. ಆಗ ಸಿನಿಮಾಗಳಲ್ಲಿ ನಟಿಸಲು ಕರೆ ಬರುತ್ತಿತ್ತು. ಆದರೆ 2010 ರ ವರೆಗೂ ಸಹ ನನಗೆ ನಟಿಸಲು ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಆದರೆ ನಂತರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಾನು ಈ ಸಿನಿಮಾ ಕ್ಷೇತ್ರವನ್ನು ಆರಿಸಿಕೊಂಡೆ. ಹೀಗೆ ನಾನು ಆಕಸ್ಮಿಕವಾಗಿ ಸಿನಿಮಾ ಕ್ಷೇತ್ರಕ್ಕೆ ಬರುವಂತೆ ಆಯಿತು. |
ಬಿರಿಯಾನಿ ಸಿನಿಮಾದ ಅನುಭವದ ಬಗ್ಗೆ ಹೇಳಿ |
ಕನಿ : ಧನ್ಯವಾದಗಳು. ಬಿರಿಯಾನಿ ಸಿನಿಮಾ ಒಂದು ಸಣ್ಣ ಬಜೆಟ್ ನ ಸಿನಿಮಾ. ಇಲ್ಲಿ ಎಲ್ಲರೂ ಕೂಡಾ ಒಂದು ತಂಡವಾಗಿ ಸರಿಯಾಗಿ ಸಹಕರಿಸಿದರು. ಇಡೀ ತಂಡವು ಕುಟುಂಬದಂತೆ ಇತ್ತು. ಎಷ್ಟೋ ಸಲ ನಮಗೆ ಶೂಟಿಂಗ್ ಗೆ ಒಪ್ಪಿಗೆ ಸಿಗದ ಜಾಗದಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೀಗಾಗಿ ಇದೊಂತರ ಗೋರಿಲ್ಲಾ ಶೂಟಿಂಗ್ ಎನಿಸಿದರೂ ಒಂದರ್ಥದಲ್ಲಿ ಚೆನ್ನಾಗಿತ್ತು. |
ಬಿರಿಯಾನಿ ಸಿನಿಮಾದಲ್ಲಿನ ನಿಮ್ಮ ಅಭಿನಯದ ಬಗ್ಗೆ ಮೊದಲ ಪ್ರತಿಕ್ರಿಯೆ ಹೇಗಿತ್ತು? ಸ್ನೇಹಿತರು ಮತ್ತು ಕುಟುಂಬದವರ ಪ್ರತಿಕ್ರಿಯೆ ಏನಾಗಿತ್ತು? |
ಕನಿ: ನಿಜ ಹೇಳಬೇಕೆಂದರೆ ನನ್ನ ಸ್ನೇಹಿತರಾಗಲೀ ಅಥವಾ ಕುಟುಂಬ ವರ್ಗದವರಾಗಲೀ ಈ ಚಿತ್ರವನ್ನು ನೋಡಿಲ್ಲ. ಇದು ಕೇರಳದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ಅಲ್ಲದೇ ನಾನೇ ಇನ್ನೂ ಈ ಸಿನಿಮಾ ನೋಡಿಲ್ಲ. ಆದರೆ ನನಗೆ ಈ ಸಿನಿಮಾಗೆ ಸಂಬಂಧಿಸಿದಂತೆ 2 ಪ್ರಶಸ್ತಿಗಳು ಬಂದಿದ್ದಕ್ಕೆ ಅವರು ಸಂತೋಷವಾಗಿದ್ದಾರೆ. |
ಬಿರಿಯಾನಿ ಸಿನಿಮಾ ನಿಮ್ಮ ಸಿನಿಮಾ ಬದುಕು ಜತೆಗೆ ಖಾಸಗಿ ಬದುಕಿನಲ್ಲಿ ತಂದ ಬದಲಾವಣೆ ಏನು? |
ಕನಿ: ಚಿತ್ರ ಇನ್ನೂ ಬಿಡುಗಡೆ ಕಾಣದ ಕಾರಣ ಇನ್ನೂ ಅಂತಹ ಬದಲಾವಣೆಗಳೇನೂ ಆಗಿಲ್ಲ. ಆದರೆ ಒಂದು ವೇಳೆ ಹಾಗೇನಾದರೂ ಆದರೆ ಅದು ಇಡೀ ತಂಡಕ್ಕೆ ಆಗಲಿ ಮತ್ತು ಪ್ರತಿಭಾವಂತರಾದ ಎಲ್ಲರಿಗೂ ಒಂದು ಸಮಾನ ಅವಕಾಶ ಸಿಗಲಿ.ಆದರೆ ನನಗೆ ತಿಳಿದ ಮಟ್ಟಿಗೆ ಸದ್ಯ ಸಮಾನ ಅವಕಾಶಗಳು ಸಿಗುವ ವಾತಾವರಣ ನಿರ್ಮಾಣವಾಗಿಲ್ಲ. |
ಬಿರಿಯಾನಿ ಸಿನಿಮಾ ನಂತರ ನೀವು ಮುಂಬೈಗೆ ಹೋದ್ರಿ ಎನ್ನುವ ಸುದ್ದಿ ನಿಜವಾ? ಹೋಗಿದ್ದು ನಿಜವಾದ್ರೆ ಯಾಕೆ? |
ಕನಿ: ಇಲ್ಲ ನಾನು ಬಿರಿಯಾನಿ ಚಿತ್ರದ ನಂತರ ಮುಂಬೈಗೆ ಹೋಗಲಿಲ್ಲ. ಆದರೆ ನಾನು ಬಿರಿಯಾನಿ ಸಿನಿಮಾಗೂ ಮುಂಚೆ ಅಲ್ಲಿದ್ದೆ. ಬಿರಿಯಾನಿ ಸಿನಿಮಾ ಶೂಟಿಂಗ್ ವೇಳೆ ನಾನು ಕೊಚ್ಚಿಯಲ್ಲಿದ್ದೆ. ಆ ಸಿನಿಮಾ ಶೂಟಿಂಗ್ ಆದ ನಂತರದಲ್ಲಿ ನಾನು ಗೋವಾಗೆ ಬಂದೆ. ಹೀಗಾಗಿ ನಾನು ಬಹಳಷ್ಟು ಸಮಯದ ಹಿಂದೆ ಮುಂಬೈನಲ್ಲಿ ಇದ್ದೆ ಅಷ್ಟೇ. |
ನೀವು ಅಭಿನಯಿಸಿದ ಖದೀಜಾ ಪಾತ್ರದ ಮೂಲಕ ಸಮಾಜಕ್ಕೆ ಏನಾದ್ರೂ ಸಂದೇಶ ಹೇಳಬಹುದೇ? |
ಕನಿ: ಖದೀಜಾ ಪಾತ್ರದ ಮೂಲಕ ನಾನೇನೂ ಸಹ ಸಂದೇಶವನ್ನು ನೀಡಲಾರೆ. ಕಾರಣ ನಾನೇ ಬೇರೆ ಖದೀಜಾನೇ ಬೇರೆ. ಇದು ನಿರ್ದೇಶಕ ಸಜಿನ್ ಬಾಬು ಅವರ ಕಲ್ಪನೆಯಾದ ಕಾರಣ ಅವರೇ ಈ ಪ್ರಶ್ನೆಗೆ ಉತ್ತರಿಸಬೇಕು. |
ಹಾಗಾದ್ರೆ, ನೀವು ಆ ಪಾತ್ರವನ್ನು ಹೇಗೆ ರಿಲೇಟ್ ಮಾಡಿಕೊಳ್ಳುತ್ತೀರಿ? |
ಕನಿ: ನಿಜ ಹೇಳಬೇಕೆಂದರೆ ನಾನು ಆ ಪಾತ್ರದೊಂದಿಗೆ ನನ್ನನ್ನು ಕಲ್ಪಿಸಿಕೊಳ್ಳಲಾರೆ. ಆದರೆ ಈ ದೇಶದಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ನಾನು ಭಾವನಾತ್ಮಕವಾಗಿ ನನ್ನನ್ನು ಕಲ್ಪಿಸಿಕೊಳ್ಳಬಲ್ಲೆ. |
ಬಿರಿಯಾನಿ ಸಿನಿಮಾ ಮೂಲಭೂತವಾದಿಗಳು ಮತ್ತು ಸಂಪ್ರದಾಯವಾದಿಗಳಿಂದ ಅನೇಕ ವಿವಾದಗಳನ್ನು ಹುಟ್ಟು ಹಾಕುವ ಸಾಧ್ಯತೆಗಳಿವೆ ಎನ್ನುವ ಅನುಮಾನ .. |
ಕನಿ : ಈ ಸಿನಿಮಾ ಇನ್ನೂ ಬಿಡುಗಡೆಯಾಗದ ಕಾರಣ ಮೂಲಭೂತಿವಾದಿಗಳು ಮತ್ತು ಸಂಪ್ರದಾಯವಾದಿಗಳು ಏನೆನ್ನುತ್ತಾರೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಸೆನ್ಸಾರ್ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಏನಾಗುತ್ತದೆ ಎಂಬುದು ನಮಗೆ ತಿಳಿಯಲಿದೆ. |
ಮಲಯಾಳಂ ಚಿತ್ರ ರಂಗವು ಸೇರಿ ಭಾರತೀಯ ಚಿತ್ರರಂಗದ ಇವತ್ತಿನ ವಿದ್ಯಮಾನಗಳ ಬಗ್ಗೆ ಏನ್ ಹೇಳ್ತೀರಾ? |
ಕನಿ : ನಾನು ಮೂಲತಃ ಕೆಲವೇ ಕೆಲವು ಕನ್ನಡ, ತಮಿಳು, ಬಂಗಾಳಿ ಹಾಗೂ ಮರಾಠಿ ಸಿನಿಮಾಗಳನ್ನು ನೋಡಿದ್ದೇನೆ. ಹೀಗಾಗಿ ಭಾರತದ ಚಿತ್ರರಂಗದ ಕುರಿತು ಮಾತನಾಡುವಷ್ಟು ತಿಳುವಳಿಕೆ ನನಗಿಲ್ಲ.ಆದರೆ ನಾನು ಹೆಚ್ಚು ಹೆಚ್ಚು ಮಲೆಯಾಳಂ ಸಿನಿಮಾಗಳನ್ನು ನೋಡುತ್ತೇನೆ. ಕಳೆದ 10 ವರ್ಷಗಳಲ್ಲಿ ಮಲೆಯಾಳಂ ಸಿನಿಮಾವು ತನ್ನ ವೈಭವಕ್ಕೆ ಮರಳಿದ್ದು ಒಳ್ಳೆಯ ಕಥೆಗಳು ಮೂಡಿ ಬರುತ್ತಿವೆ. ಇನ್ನು ನನ್ನ ಇಷ್ಟದ ನಿರ್ದೇಶಕ ಎಂದರೆ ಅದು ಪದ್ಮರಾಜನ್. |
ಎಲ್ಲಾ ಕ್ಷೇತ್ರಗಳಲ್ಲೂ ಇರುವ ಹಾಗೆ ಸಿನಿಮಾ ರಂಗದಲ್ಲೂ ಹೆಣ್ಣಿನ ಮೇಲೆ ಶೋಷಣೆ, ದಬ್ಬಾಳಿಕೆ, ತಾರತಮ್ಯ ನಡೀತಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೀರಾ? |
ಕನಿ: ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಬಹಳ ಕಡಿಮೆ ಪ್ರಮಾಣದ ಹೆಣ್ಣು ಮಕ್ಕಳನ್ನು ನಾವು ಕಾಣ್ತೀವಿ. ಆದರೆ ಇತ್ತೀಚಿನ ಮಲೆಯಾಳಂ ಚಿತ್ರಗಳಲ್ಲಿ ನಾವು ಅಲ್ಲಲ್ಲಿ ಕೆಲವು ಮಹಿಳಾ ಸಹ ನಿರ್ದೇಶಕರು, ಎಡಿಟರ್ ಗಳು, ಹಾಗೂ ಕ್ಯಾಮೆರಾ ಸಹಾಯಕರು ಇರುವುದನ್ನು ಕಾಣಬಹುದು. ಆದರೆ ಅದು 50% ಗೆ ಮುಟ್ಟಬೇಕೆಂಬುದು ನನ್ನ ಆಸೆ. ಸಿನಿಮಾ ಅಷ್ಟೇ ಅಲ್ಲ ರಾಜಕೀಯ ಪಕ್ಷಗಳು ಮತ್ತು ಶಾಸನ ಸಭೆಗಳಲ್ಲಿ 50% ಗೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಇರಬೇಕೆಂದು ನಾನು ಬಯಸುತ್ತೇನೆ.ಜೊತೆಗೆ ಈಗಿರುವ ಜಾತಿ ಮತ್ತು ವರ್ಗದ ತಾರತಮ್ಯ ಹೊರಟುಹೋಗಿ ಇಂದು ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು. |
ನಿಮ್ಮ ಹೊಸ ಸಿನಿಮಾಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಹೇಳಿ. |
ಕನಿ : ಪ್ರಶಾಂತ್ ನಾಯರ್ ಅವರ Trust with destiny ( ಇದು ಟ್ರೈಬೇಕಾನಲ್ಲಿ ಪ್ರದರ್ಶನವಾಗಿದೆ) ಇದಾದ ಮೇಲೆ ಬಿರಿಯಾನಿ ಹಾಗೂ ನಂತರದಲ್ಲಿ ಹಾಟ್ ಸ್ಟಾರ್ ನಲ್ಲಿ ಕೆಲ ಸಣ್ಣ ಪುಟ್ಟ ವೆಬ್ ಸೀರೀಸ್ ಗಳು ಬಿಡುಗಡೆಗೊಳ್ಳಲಿವೆ. ಇದಾದ ನಂತರ ಮಲೆಯಾಳಂ ನ ಚಿತ್ರದ ಶೂಟಿಂಗ್ ಇದ್ದು, ತಮಿಳು ಚಿತ್ರದಲ್ಲಿ ನಟಿಸುವ ಮಾತುಕತೆ ನಡೆಯುತ್ತಿದೆ. ಆದರೆ ಕರೋನಾ ಕಾರಣದಿಂದಾಗಿ ಇಂದು ಎಲ್ಲವೂ ಸ್ಥಗಿತಗೊಂಡಿದೆ. |
ಸಾಕಷ್ಟು ಪ್ರಶಸ್ತಿಗೆ ಪಾತ್ರರಾಗುತ್ತಿದ್ದೀರಿ, ಈ ಪ್ರಶಸ್ತಿಗಳು ಸಂತೋಷ ಮೂಡಿಸಿರಬೇಕು ಅಲ್ವಾ? |
ಕನಿ : ನಾನು ಸಾಮಾನ್ಯವಾಗಿ ಪ್ರಶಸ್ತಿಯನ್ನು ನಿರೀಕ್ಷೆ ಮಾಡುವವಳಲ್ಲ. ಆದರೆ ಪ್ರಶಸ್ತಿಗಳು ಯಾವಾಗಲೂ ಸಹ ಅನಿರೀಕ್ಷಿತವಾಗಿರಬೇಕು, ನಮ್ಮೊಳಗೆ ಅಚ್ಚರಿ ಮೂಡಿಸಬೇಕು. ಆಗ ಮಾತ್ರ ಅದು ನಮಗೆ ಸಂತೋಷ ನೀಡುತ್ತದೆ. ಆದರೆ ನಮ್ಮ ಸುತ್ತ ಬಹಳಷ್ಟು ಜನ ಪ್ರತಿಭಾವಂತ ನಟ ನಟಿಯರು ಇದ್ದಾರೆ. ಹೀಗಾಗಿ ಪ್ರಶಸ್ತಿ ಅನ್ನುವುದನ್ನು ನಾನು ಅನಿರೀಕ್ಷಿತವಾಗಿ ಬರುವ ಪ್ರೋತ್ಸಾಹದ ಸಂಗತಿಯಾಗಿ ಮಾತ್ರ ಕಾಣುತ್ತೇನೆ ಅಷ್ಟೇ. |
ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಎಷ್ಟು ಗೊತ್ತು? ಈ ಉದ್ಯಮದ ಬಗ್ಗೆ ಏನ್ ಹೇಳ್ತೀರಾ? |
ಕನಿ : ನಾನು ಅಷ್ಟಾಗಿ ಕನ್ನಡ ಸಿನಿಮಾಗಳನ್ನು ನೋಡಿಲ್ಲ. ನಾನು ಕೇವಲ ಗಿರೀಶ್ ಕಾರ್ನಾಡ್ ಅವರ ಹಯವದನ ಹಾಗೂ ಇನ್ನಿತರೆ ನಾಟಕಗಳನ್ನು ನೋಡಿದ್ದೇನೆ. ಅವರ ನಾಟಕಗಳು ನನ್ನ ಆಲೋಚನೆಯನ್ನು ಬದಲಿಸಿವೆ. |
ಕೊನೆಯದಾಗಿ ಒಂದೆರಡು ಮಾತುಗಳು |
ಕನಿ : ಕೊನೆಯದಾಗಿ ಹೇಳಬಹುದಾದರೆ ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು ಮತ್ತು ಈ ದೇಶದಲ್ಲಿ ಎಲ್ಲರಿಗೂ ಕೆಲಸ ಮಾಡಲು ಸಮಾನ ಅವಕಾಶಗಳು ದೊರೆಯಲಿ ಎಂದು ನಾನು ಆಶಿಸುತ್ತೇನೆ. |
ಹಾಸ್ಯದ ಚೇತೋಹಾರಿ… ಚೇತನ್ ಫ್ರಮ್ ದುರ್ಗ |
No Comments on ಹಾಸ್ಯದ ಚೇತೋಹಾರಿ… ಚೇತನ್ ಫ್ರಮ್ ದುರ್ಗ |
ಸಿನಿಮಾನೇ ಹಾಗೆ. ಇಲ್ಲಿಗೆ ಒಂದು ಬಾರಿ ಬಂದು ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಂತರೆ ಸಾಕು, ಕಲೆ ಆವರಿಸಿಕೊಂಡುಬಿಡುತ್ತೆ. ಎಷ್ಟೇ ಕಷ್ಟ ಬಂದರೂ ಬಣ್ಣದ ಮೇಲಿನ ಪ್ರೀತಿ |
ಹೋಗುವುದಿಲ್ಲ. ಹೀಗೆ ಕಲೆಯೇ ನನ್ನುಸಿರು ಅಂದುಕೊಂಡು ಇಲ್ಲಿಗೆ ಬಂದಿರುವ ಅದೆಷ್ಟೋ ಮನಸ್ಸುಗಳು ಇಂದು ಅಂದುಕೊಂಡಿದ್ದನ್ನು ಸಾಧಿಸಿ ನಿಟ್ಟುಸಿರು ಬಿಟ್ಟಿವೆ. ಆ ಸಾಲಿಗೆ ಈಗ ಕೋಟೆ ನಾಡಿನ ಪ್ರತಿಭೆ ಕೂಡ ಸೇರಿದೆ. |
ಹೆಸರು ಚೇತನ್. ಸದಾ ಉತ್ಸಾಹಿ. ಸಿಕ್ಕಾಪಟ್ಟೆ ಮಾತುಗಾರ. ಯಾವಾಗಲೂ ಒಂದಿಲ್ಲೊಂದು ಸಿನಿಮಾ ಚಟುವಟಿಕೆಗಳಲ್ಲಿರುವ ಅಪ್ಪಟ ದೇಸಿ ಪ್ರತಿಭೆ. ಮೊದಲೇ ಹೇಳಿದಂತೆ ಚೇತನ್ ಚಿತ್ರದುರ್ಗದ ಹುಡುಗ. ಚಿತ್ರದುರ್ಗ ಅಂದಾಕ್ಷಣ ನೆನಪಾಗೋದೇ "ನಾಗರಹಾವು". ಹೀಗಾಗಿ ಆ ನೆಲದ ಬಹುತೇಕ ಹುಡುಗರು ಸಹಜವಾಗಿಯೇ ನಟನೆಯತ್ತ ವಾಲಿದ್ದುಂಟು. ಆ ಕಲೆಯ ನಂಟು ಈ ಚೇತನ್ಗೂ ಇದೆ. ಹೀಗಾಗಿಯೇ ಚೇತನ್ ತಮ್ಮ ಹೆಸರ ಮುಂದೆ "ದುರ್ಗ"ಹೆಸರು ಸೇರಿಸಿಕೊಂಡಿದ್ದಾರೆ. ಈ ಹೆಸರಲ್ಲೇ ಅವರು ಗುರುತಿಸಿಕೊಂಡಿರುವುದೂ ಉಂಟು. ಚೇತನ್ ದುರ್ಗ ಇದೀಗ ಸೋಶಿಯಲ್ ಮೀಡಿಯಾದಲ್ಲೇ ಹೆಚ್ಚು ಸುದ್ದಿಯಾಗಿರುವ ಪ್ರತಿಭೆ. ಫೇಸ್ಬುಕ್ ಹಿಡಿದವರಿಗೆ ಈ ಹುಡುಗನ ಪರಿಚಯ ಇದ್ದೇ ಇರುತ್ತೆ. ಚೇತನ್ ಮಾತುಗಳಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ಹಾವ-ಭಾವದಲ್ಲೂ ನಗಿಸೋ ಗುಣ ಈ ಪ್ರತಿಭೆಯಲ್ಲಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಚೇತನ್ ದುರ್ಗ ಎಲ್ಲರ ಫೇವರೇಟ್. |
ಚೇತನ್ ಸಿನಿ ಜರ್ನಿ |
ಚೇತನ್ ದುರ್ಗ ಇಂಜಿನಿಯರಿಂಗ್ ಓದಿದ್ದಾರೆ. ಆದರೆ, ಎಲ್ಲರಂತೆ ಸಾಫ್ಟ್ವೇರ್ ಕಂಪೆನಿಯತ್ತ ಮುಖ ಮಾಡಬೇಕಿದ್ದ ಹುಡುಗ ಗಾಂಧಿನಗರದ ಕಡೆ ಮುಖ ಮಾಡಿದೆ. ಮೊದಲೇ ಹೇಳಿದಂತೆ ಕೋಟಿ ನಾಡಿನ ಹುಡುಗನಾಗಿದ್ದರಿಂದ ಅಲ್ಲಿ ರಾಮಾಚಾರಿಯ ಗಾಳಿ ತುಸು ಜೋರಾಗಿಯೇ ಬೀಸಿದೆ. ಆದ್ದರಿಂದಲೇ, ಅವರು ಕೆಲಸ ಪಕ್ಕಕ್ಕಿಟ್ಟು, ಧೈರ್ಯ ಮಾಡಿ ಸಿನಿರಂಗಕ್ಕೆ ಎಂಟ್ರಿಯಾದರು. ಮೊದಲು ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. ಮಾಸ್ಟರ್ ಆನಂದ್ ನಿದರ್ೇಶನದಲ್ಲಿ ಮೂಡಿಬಂದ "ರೋಬೋ ಫ್ಯಾಮಿಲಿ" ಧಾರಾವಾಹಿಯಲ್ಲಿ ಇವರದು ಹಾಸ್ಯ ಪಾತ್ರ. ಆ ಮೂಲಕ ಭರವಸೆ ಮೂಡಿಸಿದ ಚೇತನ್ ದುರ್ಗ ಮೆಲ್ಲನೆ ಅವಕಾಶ ಗಿಟ್ಟಿಸಿಕೊಳ್ಳುತ್ತಾ ಹೋದರು. |
ಆ ನಂತರದಲ್ಲಿ ಸಿನಿಮಾ ರಂಗ ಕೂಡ ಕೈ ಬೀಸಿ ಕರೆದಿದ್ದರಿಂದ ಅತ್ತ ಮುಖ ಮಾಡಿದರು. ನಿದರ್ೇಶನ ತಂಡದಲ್ಲೂ ಇವರು ಕೆಲಸ ಶುರುಮಾಡಿದರು. "ಲೈಫು ಸೂಪರ್", "ಕನ್ನಡಕ್ಕಾಗಿ ಒಂದನ್ನು ಒತ್ತಿ", "ಗೌಡ್ರು ಹೋಟೆಲ್", "ವ್ಹೀಲ್ ಚೇರ್ ರೋಮಿಯೊ" ಚಿತ್ರದಲ್ಲಿ ಬರಹ ಕೆಲಸ ಮಾಡಿದರು. ಇನ್ನು, ಇವುಗಳ ಜೊತೆ ಜೊತೆಯಲ್ಲೇ ಹಲವು ಜಾಹಿರಾತು ಕಂಪೆನಿಗಳಲ್ಲಿ ಒಂದು ವರ್ಷ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯ ಹಲವು ಪ್ರೋಮೋಗಳಿಗೂ ಚೇತನ್ ದುರ್ಗ ಸಹ ನಿದರ್ೇಶಕರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. |
ಚಿತ್ರಗಳಲ್ಲೂ ನಟನೆ ಶುರು ಮಾಡಿದ ಚೇತನ್ ದುರ್ಗ ಅಲ್ಲೂ ಎಲ್ಲರ ಮನಗೆದ್ದಿದ್ದಾರೆ. "ರಾಗ", "ತಿರುಪತಿ ಎಕ್ಸ್ಪ್ರೆಸ್", "ಟೆರರಿಸ್ಟ್" , "ಕನ್ನಡಕ್ಕಾಗಿ ಒಂದನ್ನು ಒತ್ತಿ", "ಮೃಗಶಿರ" ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಅಭಿನಯಿಸಿರುವ "ಕಿರಾತಕ-2", "ಖಾಸಗಿ ಪ್ರೇಮ ಕಥೆ", "ದಿ ರಿಟನ್ಸರ್್ ಆಫ್ ಕರ್ಮ", "ಗಜಾನನ ಅಂಡ್ ಗ್ಯಾಂಗ್" ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. "ಗಜಾನನ ಅಂಡ್ ಗ್ಯಾಂಗ್" ಚಿತ್ರದಲ್ಲಿ ಚೇತನ್ ದುರ್ಗ ಐವರಲ್ಲಿ ಇವರೂ ಒಬ್ಬರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. |
ಟ್ರೋಲ್ ವಿಡಿಯೋ ಕಿಂಗ್! |
ಈಗಂತೂ ಎಲ್ಲೆಡೆ ಸೋಶಿಯಲ್ ಮೀಡಿಯಾದ್ದೇ ಹವಾ. ಅದರಲ್ಲೂ ಟ್ರೋಲ್ ವಿಡಿಯೊಗಳಿಂದ ಸಾಕಷ್ಟು ಸುದ್ದಿಯಾಗಿರುವ ಚೇತನ್ ದುರ್ಗ, ಮೆಚ್ಚುಗೆ ಪಡೆದುಕೊಂಡಿರುವುದೂ ಉಂಟು. ನೋಡದೇ ಇರೋರು, ಅವರ ಚೇತನ್ ದುರ್ಗ ಫೇಸ್ ಬುಕ್ ಪೇಜ್ಗೆ ಹೋಗಿ ನೋಡಿದರೆ, ಇವರೊಳಗಿರುವ ಹಾಸ್ಯ ಕಲಾವಿದನ ಬಗ್ಗೆ ತಿಳಿಯುತ್ತೆ. ಈಗಾಗಲೇ ಇವರ ಟ್ರೋಲ್ ವಿಡಿಯೋಗಳನ್ನು ನೋಡಿ, ನಟರಾದ ಧ್ರುವ ಸಜರ್ಾ, ಸಂಚಾರಿ ವಿಜಯ್, "ರಾಜಾಹುಲಿ" ಗಿರೀಶ್, ಸುಚೇಂದ್ರ ಪ್ರಸಾದ್, ನಿದರ್ೇಶಕರಾದ ಸಿಂಪಲ್ ಸನಿ, ಮಂಜು ಸ್ವರಾಜ್ ಮೆಚ್ಚಿದ್ದಾರೆ. ಸದ್ಯಕ್ಕೆ ನಟನಾಗಿ ಗುರುತಿಸಿಕೊಳ್ಳಬೇಕೆಂದಿರುವ ಚೇತನ್ ದುರ್ಗ, "ತಾರೆ" ಹೆಸರಿನ ವಿಡಿಯೊ ಆಲ್ಬಂನಲ್ಲೂ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿರುವ ಚೇತನ್ ದುರ್ಗ ಅವರಿಗೆ ಇಲ್ಲಿ ಗಟ್ಟಿನೆಲೆ ಕಾಣುವ ಭವ್ಯಭರವಸೆಯಂತೂ ಇದೆ |
ನನ್ನದು ರಾಧಿಕಾ ಪಂಡಿತ್ ಇಷ್ಟಪಟ್ಟಿದ್ದ ಪಾತ್ರ- ಆರೋಹಿ ನಾರಾಯಣ್ |
No Comments on ನನ್ನದು ರಾಧಿಕಾ ಪಂಡಿತ್ ಇಷ್ಟಪಟ್ಟಿದ್ದ ಪಾತ್ರ- ಆರೋಹಿ ನಾರಾಯಣ್ |
'ಭೀಮಸೇನ ನಳಮಹಾರಾಜ' ತಮಗೆ ಯಾಕಷ್ಟು ಇಂಪಾರ್ಟೆಂಟ್ ಎನ್ನುವುದರ ಕುರಿತು ' ಸಿನಿಲಹರಿ' ಜತೆ ಮನಬಿಚ್ಚಿ ಮಾತನಾಡಿದ 'ದೃಶ್ಯ ' ಖ್ಯಾತಿಯ ನಟಿ |
'ದೃಶ್ಯ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಟಿಯಾಗಿ ಎಂಟ್ರಿಯಾದ ಹೊಸ ಪ್ರತಿಭೆ ಆರೋಹಿ ನಾರಾಯಣ್ ಸಂಭ್ರಮದಲ್ಲಿದ್ದಾರೆ. ಹಾಗಂತ ಅವರಿಗೇನು ಮದುವೆ ಫಿಕ್ಸ್ ಆಯ್ತಾ? ಹೊಸ ಮನೆ ಕಟ್ಟಿದ್ರಾ? ಇಲ್ಲವೇ ಹೊಸ ಕಾರು ಖರೀಸಿದ್ರಾ? ಹಾಗೆಲ್ಲ ಭಾವಿಸಿಕೊಳ್ಳಬೇಕಿಲ್ಲ. ಬದಲಿಗೆ ಅವರು ಅಭಿನಯಿಸಿದ ಎರಡು ಚಿತ್ರಗಳು ಈ ತಿಂಗಳು ಬಿಡುಗಡೆ ಆಗುತ್ತಿವೆ. ಅದೇ ಅವರ ಸಂಭ್ರಮಕ್ಕೆ ಕಾರಣ. |
ತೆರೆ ಕಾಣುತ್ತಿರುವ ಚಿತ್ರಗಳಿವು… |
ಬಹು ದಿನಗಳಿಂದ ಒಂದೇ ಉಸಿರಿನಲ್ಲಿ ಅವರು ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಚಿತ್ರ ' ಭೀಮಸೇನ ನಳಮಹಾರಾಜ' ಅಕ್ಟೋಬರ್ 29 ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ತೆರೆ ಕಾಣುತ್ತಿದೆ. ಮತ್ತೊಂದೆಡೆ ಕೊರೋನಾ ಆರಂಭಕ್ಕೂ ಮುನ್ನವೇ ಚಿತ್ರಮಂದಿರಕ್ಕೆ ಬಂದು ಜನ ಮೆಚ್ಚುಗೆ ಪಡೆದಿದ್ದ 'ಶಿವಾಜಿ ಸುರತ್ಕಲ್' ಕೂಡ ಈಗ ಟಾಕೀಸ್ ಗಳಲ್ಲಿಯೇ ರೀ ರಿಲೀಸ್ ಆಗುತ್ತಿದೆ. ಒಂದೆಡೆ ಆನ್ ಲೈನ್ ಪ್ಲಾಟ್ ಫಾರ್ಮ್ ಮತ್ತೊಂದೆಡೆ ಟಾಕೀಸ್, ಎರಡು ಕಡೆಗಳಲ್ಲೂ ಧೂಳೆಬ್ಬಿಸಲು ಬರುತ್ತಿದ್ದಾರೆ ನಟಿ ಆರೋಹಿ ನಾರಾಯಣ್. |
ಯಾರಿಗೆ ಖುಷಿಯಾಗಲ್ಲ ಹೇಳಿ… |
ನಟರೋ ಅಥವಾ ನಟಿಯರೋ ಹೊಸಬರ ಮಟ್ಟಿಗೆ ಇದೊಂದು ಥ್ರಿಲ್ ಕೊಡುವ ವಿಷಯ. ಜತೆಗೆ ಕೊರೋನಾ ಕಾರಣಕ್ಕೆ ಸಿನಿಮಾ ಕೆಲಸ ಇಲ್ಲದೆ ಎಲ್ಲವೂ ಸ್ಥಬ್ದವಾಗಿರುವ ಸಂದರ್ಭದಲ್ಲಿ ಮತ್ತೆ ಶುರುವಾದ ಚಟುವಟಿಕೆಗಳ ಮೂಲಕ ತಾವು ಅಭಿನಯಿಸಿದ ಸಿನಿಮಾ ರಿಲೀಸ್ ಆಗುತ್ತಿವೆ ಅಂದ್ರೆ, ಯಾರಿಗೆ ಖುಷಿಯಾಗಲ್ಲ? ಆ ಖುಷಿ ಈಗ ನಟಿ ಆರೋಹಿ ನಾರಾಯಣ್ ಮೊಗದಲ್ಲಿ ಕಾಣುತ್ತಿದೆ. |
ಇದು ಸಹಜವಾದ ಸಂಭ್ರಮ.. |
ಏನ್ ಹೇಳ್ಬೇಕೋ ಗೊತ್ತಾಗುತ್ತಿಲ್ಲ. ಎರಡು ಈಗ ಎರಡು ಚಿತ್ರಗಳು ಜನರದೆ ಮುಂದೆ ಬರುತ್ತಿವೆ. ಬದಲಾದ ಸಂದರ್ಭವೋ, ನನ್ನ ಅದೃಷ್ಟವೋ ಗೊತ್ತಿಲ್ಲ. ಇದು ತುಂಬಾ ಅನಿರೀಕ್ಷಿತ. ಒಂದಂತೂ ಹೌದು, ತುಂಬಾ ಖುಷಿಯಾಗುತ್ತಿದೆ. ಹೀಗಾಗುತ್ತೆ ಅಂತ ನಾನು ಕನಸಲ್ಲೂ ಎಣಿಸಿರಲಿಲ್ಲ .' ಶಿವಾಜಿ ಸುರತ್ಕಲ್' ಈಗಾಗಲೇ ರಿಲೀಸ್ ಆಗಿತ್ತು. ಕೊರೋನಾ ಕಾರಣಕ್ಕೆ ಅರ್ಧದಲ್ಲೇ ಪ್ರದರ್ಶನ ನಿಂತು ಹೋಗಿದ್ದವು. ಅದು ತೀವ್ರಬೇಸರ ತರಿಸಿತ್ತು.ಆದ್ರೆಇಡೀ ಜಗತ್ತೇ ಸ್ಥಬ್ಧವಾಗಿತ್ತಲ್ಲ, ನಾವೇನು ಮಾಡೋದಿಕ್ಕೆ ಸಾಧ್ಯ? ಈಗ ಅದು ಮತ್ತೆ ರಿಲೀಸ್ ಆಗುತ್ತಿದೆ. ಅದರ ಜತೆಗೆ ' ಭೀಮಸೇನ ನಳಮಹಾರಾಜ' ಕೊಂಚ ತಡವಾಗಿ ಬರುತ್ತಿದೆ. ತಡವಾದರೂ ಚಿತ್ರದ ಕಂಟೆಂಟ್ ಹಾಗೂ ಮೇಕಿಂಗ್ ಅದ್ಬುತವಾಗಿದೆ. ಜನ ಅದನ್ನು ಇಷ್ಟ ಪಡುವ ಬಗ್ಗೆ ಅಪಾರ ನಂಬಿಕೆಯಿದೆ. ಹಾಗೆಯೇ ದೇವರ ಆಶೀರ್ವಾದವೂ ಬೇಕಿದೆ' ಎನ್ನುತ್ತಾರೆ ನಟಿ ಆರೋಹಿ ನಾರಾಯಣ್. |
ಪಾತ್ರಗಳ ವೈಶಿಷ್ಟ್ಯ ತೆಯೇ ವಿಶೇಷ.. |
'ಶಿವಾಜಿ ಸುರತ್ಕಲ್' ಸಿನಿಮಾದ ಕತೆಯೇನು, ಅಲ್ಲಿ ನಾನೇನು ಅನ್ನೋದು ಬಹುತೇಕ ಜನರಿಗೆ ಗೊತ್ತು. ಯಾಕಂದ್ರೆ ಅದು ಈಗಾಗಲೇ ರಿಲೀಸ್ ಆದ ಸಿನಿಮಾ. ಒಂದು ಡಿಫೆರೆಂಟ್ ಕಥಾ ಹಂದರ ಚಿತ್ರವದು. ರಮೇಶ್ ಸರ್ ಅಲ್ಲಿ ತನಿಖಾಧಿಕಾರಿ. ನಾನು ಸೈಕಾಲಜಿಸ್ಟ್. ರಮೇಶ್ ಸರ್ ಕಾರಣಕ್ಕೆ ನಾನು ಆ ಸಿನಿಮಾ ಒಪ್ಪಿಕೊಂಡಿದ್ದೆ. ನಟಿಯಾಗಿ ಆ ಪಾತ್ರ ಸಾಕಷ್ಟು ಖುಷಿ ಕೊಟ್ಟಿದೆ. ಇನ್ನು ' ಭೀಮಸೇನ ನಳಮಹಾರಾಜ' ತುಂಬಾ ಡಿಫೆರೆಂಟ್ ಕಥಾ ಹಂದರದ ಚಿತ್ರ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮನೋರಂಜನೆಯ ನಳಪಾಕ.ಇಲ್ಲಿ ನಾನು ಅಯ್ಯಂಗಾರ್ ಬ್ರಾಹ್ಮಣರ ಹುಡುಗಿ. ಆಕೆ ತನ್ನ ಹುಟ್ಟು, ಸಂಸ್ಕೃತಿಗೆ ವಿರುದ್ಧ ವಾದ ಹುಡುಗಿ. ಒಂಥರ ಟಾಮ್ ಬಾಯ್. ಹಾಗೆ ನೋಡಿದರೆ ಈ ಪಾತ್ರದಲ್ಲಿ ರಾಧಿಕಾ ಪಂಡಿತ್ ಅಭಿನಯಿಸಬೇಕಿತ್ತಂತೆ. ಪ್ರಿಯಾಂಕಾ ಅಭಿನಯಿಸಿದ ಪಾತ್ರಕ್ಕೆ ರಾಧಿಕಾ ಅವರನ್ನು ನಿರ್ಮಾಪಕರು ಭೇಟಿಮಾಡಿದ್ದಾಗ ಕತೆ ಕೇಳಿ, ನಾನು ನಿರ್ವಹಿಸಿದ ಪಾತ್ರ ಚೆನ್ನಾಗಿದೆ ಅಂದಿದ್ರಂತೆ. ಕಾರಣಾಂತರಗಳಿಂದ ಅವರು ಅಭಿನಯಿಸಲು ಆಗಲಿಲ್ಲ. ಆ ಪಾತ್ರವೇ ನಂದು.ಹಾಗಾಗಿ ತುಂಬಾ ಎಚ್ಚರಿಕೆ ಯಿಂದ ಅಭಿನಯಿಸಿದ್ದೇನೆ. ಪ್ರೇಕ್ಷಕರಿಗೆ ಇಷ್ಟವಾಗುತ್ತೆ' ಎನ್ನುತ್ತಾ ನಗು ಬೀರುತ್ತಾರೆ ಚೆಲುವೆ ಆರೋಹಿ ನಾರಾಯಣ್. |
Subsets and Splits
No community queries yet
The top public SQL queries from the community will appear here once available.