text
stringlengths 0
61.5k
|
---|
ಹಣವನ್ನು ಹೇಗೆ ಬಳಸಬೇಕೆಂಬುದನ್ನು ರೈತರು ನಿರ್ಧರಿಸಲಿ. ಡಿಬಿಟಿಯ ಲಾಭದೊಂದಿಗೆ ರೈತರು ಉತ್ತಮ ಬೀಜ ಖರೀದಿಸಬಹುದು. ಹೊಸ ಮಾದರಿಯ ಗೊಬ್ಬರಗಳನ್ನು ಬಳಸಬಹುದು. ನೀರಿನ ಬಳಕೆಯನ್ನು ಉತ್ತಮಗೊಳಿಸಬಹುದು ಎಂದು ಶ್ರೀರಾಮ್ ಸಲಹೆ ನೀಡಿದರು. |
ಅನೇಕ ಭಾರತೀಯ ಉದ್ಯಮಗಳು ಕೃಷಿ-ತಂತ್ರಜ್ಞಾನ ಜಾಗದಲ್ಲಿ ಹೂಡಿಕೆ ಮಾಡಿವೆ. ಈ ಕಂಪನಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಇತ್ತೀಚಿನ ತಂತ್ರಗಳನ್ನು ಅಳವಡಿಸಿಕೊಳ್ಳುವ ನೀತಿ ಪ್ರತಿಪಾದಿಸಿದರು. |
ಸ್ಥಳೀಯ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯಿಂದ (ಆರ್&ಡಿ) ಇತ್ತೀಚಿನ ವರ್ಷಗಳಲ್ಲಿ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ. ಇದು ಸಂಪನ್ಮೂಲ ಬಿಕ್ಕಟ್ಟಿನ ಕಾರಣದಿಂದಾಗಿರಬಹುದು. |
ತಕ್ಷಣದ ಗಮನ ಹರಿಸಬೇಕಾದ ಎರಡು ಕ್ಷೇತ್ರಗಳಲ್ಲಿ ಮೊದಲನೆಯದ್ದು ಕೃಷಿ ಸಂಶೋಧನೆಯನ್ನು ಉದ್ಯಮದ ಅಗತ್ಯತೆಗಳೊಂದಿಗೆ ಜೋಡಿಸುವುದು, ಎರಡನೆಯದಾಗಿ ಜಿಎಂ ಬೆಳೆಗಳಂತಹ ಹೊಸ-ಯುಗದ ತಂತ್ರಜ್ಞಾನಗಳಿಗೆ ಸೈದ್ಧಾಂತಿಕ ಪ್ರತಿರೋಧ ತಪ್ಪಿಸುವುದು ಎಂದು ಹೇಳಿದರು. |
ರೈತರ ಆದಾಯವನ್ನು ಹೆಚ್ಚಿಸಲು ಜಾನುವಾರು ಸಾಕಣೆ ಒಂದು ಪ್ರಮುಖ ಆಧಾರಸ್ತಂಭವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಒಂದು ದೊಡ್ಡ ಅಡೆತಡೆ ಎಂದರೆ ಮರಣ, ಉತ್ಪಾದಕತೆ ಮತ್ತು ಒಟ್ಟಾರೆ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ವಿವಿಧ ರೋಗಗಳ ಹಬ್ಬುವಿಕೆ. |
ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಲಸಿಕೆಗಳ ಪೂರೈಕೆ ಸಮರ್ಪಕವಾಗಿಲ್ಲ. ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ರಚಿಸಲು ಈ ಬಜೆಟ್‌ನಲ್ಲಿ ಹಣದ ಅವಶ್ಯಕತೆಯಿದೆ ಎಂದು ಡೆಲಾಯ್ಟ್ ಹೇಳಿದರು. |
ಸಲಹಾ ಸಂಸ್ಥೆ ಡೆಲಾಯ್ಟ್ ಇಂಡಿಯಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಹಣ ವಿನಿಯೋಗಿಸುವುದರ ಜೊತೆಗೆ ಅಡುಗೆ ಎಣ್ಣೆಗಳ ಆಮದನ್ನು ಕಡಿಮೆ ಮಾಡಲು ತೈಲ ಬೀಜಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಸೂಚಿಸಿದೆ. |
ಸಾವಯವ ಕೃಷಿ ಅಳವಡಿಸಿಕೊಳ್ಳಲು ಸರ್ಕಾರ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಆರ್ಗನಿಸ್ಟ್ ಸಂಸ್ಥಾಪಕ ಚಿರಾಗ್ ಅರೋರಾ ಹೇಳಿದರು. ಈ ಡೊಮೇನ್‌ಗೆ ಪ್ರವೇಶಿಸುವ ಸ್ಟಾರ್ಟ್ಅಪ್‌ಗಳಿಗೆ ತೆರಿಗೆ ಪ್ರೋತ್ಸಾಹ ನೀಡುವ ಮೂಲಕ ಖಾಸಗಿ ವಲಯವನ್ನು ಪ್ರೋತ್ಸಾಹಿಸುವುದು ಅವಶ್ಯಕತೆಯಾಗಿದೆ. |
ಕೋಲ್ಡ್-ಚೈನ್‌ಗಳ ರಚನೆಗೆ ಹೂಡಿಕೆ ಹೆಚ್ಚಿಸಲು ಮತ್ತು ಶೇಖರಣಾ ಸಾಮರ್ಥ್ಯ ಹೆಚ್ಚಿಸುವುದು ಅಗತ್ಯವಾಗಿದೆ ಎಂದರು. ಕಳೆದ ತಿಂಗಳು ಹಣಕಾಸು ಸಚಿವಾಲಯದ ವರ್ಚ್ಯುವಲ್ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ಭಾರತ್ ಕೃಷಿಕ್ ಸಮಾಜ (ಬಿಕೆಎಸ್), ಯೂರಿಯಾ ಬೆಲೆ ಹೆಚ್ಚಿಸುವ ಮೂಲಕ ಮತ್ತು ರಂಜಕಗಳ ಸಮತೋಲಿತ ಬಳಕೆ ಪ್ರೋತ್ಸಾಹಿಸಬೇಕು. ಫಾಸ್ಫಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ಪೋಷಕಾಂಶಗಳ ದರ ಕಡಿಮೆ ಮಾಡಿ ಎಂದರು. |
ಬಿಕೆಎಸ್ ಅಧ್ಯಕ್ಷ ಅಜಯ್ ವೀರ್ ಜಖರ್ ಅವರು ಡೀಸೆಲ್ ಮೇಲಿನ ತೆರಿಗೆ ಕಡಿತ ಮತ್ತು ಹಣ್ಣು ಮತ್ತು ತರಕಾರಿಗಳ ಮೇಲಿನ ಸಾರಿಗೆ ಸಬ್ಸಿಡಿ ಕಡಿತಗೊಳಿಸಲು ಕೋರಿದ್ದರು. ಆದರೆ, ಅನಾರೋಗ್ಯಕರ ಆಹಾರಗಳ ಮೇಲೆ ತೆರಿಗೆ ವಿಧಿಸಬೇಕೆಂದು ಒತ್ತಾಯಿಸಿದ್ದರು. |
ಹುಮ್ನಾಬಾದ್ | Teachers of India |
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ ಬಿಸಿಯೂಟದ ತಯಾರಿ ಆಗಲೇ ಶುರುವಾಗಿದ್ದವು. ಶಿಕ್ಷಕರಾದ ರಾಮನ ಗೌಡ ಅವರು ತರಗತಿಯಲ್ಲಿ ಹಾಜರಾತಿಯನ್ನು ಪಡೆದುಕೊಳ್ಳುತ್ತಿದ್ದರು. ನಾವು ನೇರವಾಗಿ ಮುಖ್ಯ ಶಿಕ್ಷಕಿಯವರ ಕೊಠಡಿಯತ್ತ ಹೋದೆವು. ಮುಖ್ಯ ಶಿಕ್ಷಕಿ ಅನುರಾಧಾ ನಮ್ಮ ನಿರೀಕ್ಷೆಯಲ್ಲಿದ್ದರು. |
ಈ ಶಾಲೆಯಲ್ಲಿರುವ ಶಿಕ್ಷಕರ ಸಂಖ್ಯೆ ಕೇವಲ ಮೂರು. ಇಲ್ಲಿ ೫೫ ವಿದ್ಯಾರ್ಥಿಗಳಿದ್ದಾರೆ. ಈ ಗ್ರಾಮದ ಒಟ್ಟು ಜನಸಂಖ್ಯೆ ೭೬೫. ಈ ಶಾಲೆಗೆ ಬರುವವರೆಲ್ಲ ಈ ಗ್ರಾಮದ ಮಕ್ಕಳೇ. ಇಲ್ಲಿರುವ ೮೬ ಕುಟುಂಬಗಳ ಪೈಕಿ ಅಲ್ಪಸಂಖ್ಯಾತ ಸಮುದಾಯದ ಹತ್ತು ಕುಟುಂಬಗಳನ್ನು ಹೊರತುಪಡಿಸಿದರೆ ಉಳಿದವೆಲ್ಲ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು. |
ಬ್ರಿಟಿಷ್ ಮನಸ್ಥಿತಿಯಿಂದಲೂ ಸ್ವಾತಂತ್ರ್ಯ ಬೇಕಿದೆ | News13 |
News13 > ಸುದ್ದಿಗಳು > ರಾಷ್ಟ್ರೀಯ > ಬ್ರಿಟಿಷ್ ಮನಸ್ಥಿತಿಯಿಂದಲೂ ಸ್ವಾತಂತ್ರ್ಯ ಬೇಕಿದೆ |
Saturday, August 15th, 2020 ರಾಷ್ಟ್ರೀಯ News13 |
ಬ್ರಿಟಿಷರ ಆಡಳಿತದಿಂದ ಮುಕ್ತಿ ಹೊಂದಿದ ನಮ್ಮ ದೇಶ ಸ್ವತಂತ್ರವಾಗಿ ಉಸಿರಾಡಿ ಇಂದಿಗೆ 74 ವರ್ಷ. ಆಂಗ್ಲರ ಕಪಿಮುಷ್ಠಿಯಲ್ಲಿದ್ದ ದೇಶ ಅನೇಕ ಮಂದಗಾಮಿ, ತೀವ್ರಗಾಮಿ, ಅಹಿಂಸಾತ್ಮಕ ಹೋರಾಟಗಳ ಮೂಲಕ ಬಿಡುಗಡೆಗೊಂಡು ನಾವಿನ್ನು ಸ್ವತಂತ್ರರು ಎಂದು ಘೋಷಿಸಿಕೊಂಡ ಪರ್ವ ದಿನ. ಪರಕೀಯರ ದಾಸ್ಯದ ಸಂಕೋಲೆಯಲ್ಲಿ ಕಣ್ಣೀರಿಡುತ್ತಿದ್ದ ತಾಯಿ ಭಾರತಿಯನ್ನು ಸ್ವಾತಂತ್ರ್ಯಗೊಳಿಸಿ ಆಕೆಯ ಕಣ್ಣೀರೊರೆಸಿದ ಸುದಿನ. ಸರ್ವತಂತ್ರ ಸ್ವತಂತ್ರದ ಕಲ್ಪನೆಯ ಸ್ವಾತಂತ್ರ್ಯ, ಭಾರತೀಯರಾದ ನಮಗೆ ನಮ್ಮ ಹಿರಿಯರನೇಕರ ಹೋರಾಟದ ಫಲವಾಗಿ ದೊರೆತು 74 ವರುಷಗಳಾಗಿವೆ. ಈ ಸುಸಂದರ್ಭದ ಶುಭಾಷಯಗಳನ್ನು ತಿಳಿಸುತ್ತಾ… |
ಭಾರತ 1947 ರಲ್ಲಿಯೇ ಪರಕೀಯರ ಆಡಳಿತದಿಂದ ಮುಕ್ತವಾಗಿದೆ. ಆದರೆ ಅವರ ಆಡಳಿತದಲ್ಲಿ ಭಾರತ ಕಳೆದುಕೊಂಡ ಎಲ್ಲಾ ನಷ್ಟಗಳನ್ನು ಭರಿಸಲು ಸಾಧ್ಯವಾಗಿದೆಯೇ ಎಂದು ಕೇಳಿದರೆ ಅದಕ್ಕುತ್ತರ ಇಲ್ಲ ಎಂಬುದೇ ಸರಿಯಾಗುತ್ತದೆ. ಏಕೆಂದರೆ ಸಂಪದ್ಭರಿತ ರಾಷ್ಟ್ರ ಭಾರತದಲ್ಲಿ ವ್ಯಾಪಾರ ವಹಿವಾಟು ನಡೆಸಲು ಬಂದ ಬ್ರಿಟಿಷರು ಇಲ್ಲಿನ ಸಂಪತ್ತಿನ ಜೊತೆಗೆ ಜನರ ಬುದ್ಧಿಶಕ್ತಿ, ಮುಗ್ಧತೆ, ನಂಬಿಕೆಗಳನ್ನೇ ಅಸ್ತ್ರವಾಗಿರಿಸಿಕೊಂಡು ವ್ಯಾಪಾರ ಬಿಟ್ಟು ಸಂಪೂರ್ಣ ದೇಶದ ಹಿಡಿತವನ್ನೇ ತಮ್ಮ ಕೈಯಲ್ಲಿಟ್ಟುಕೊಂಡವರು. ಇಲ್ಲಿನ ಜನರ ಧಾರ್ಮಿಕ ನಂಬಿಕೆಗಳೂ ಸೇರಿದಂತೆ ಇನ್ನಿತರ ನಂಬಿಕೆಗಳನ್ನು ಬಳಸಿಕೊಂಡು ಆ ಮೂಲಕವೇ ಒಡೆದಾಳುವ ನೀತಿಯನ್ನು ಅನುಸರಿಸಿಕೊಂಡು, ಇಲ್ಲಿನ ಜನರ ಬೆವರನ್ನು ದೋಚಿ ಕೊನೆಗೆ ನಮಗೇ ಮಾರಿ ಹಣ ಗಳಿಸುವುದನ್ನು ಕರಗತ ಮಾಡಿಕೊಂಡಿದ್ದವರು ಬ್ರಿಟಿಷರು. |
ಎಲ್ಲಿ ಒಗ್ಗಟ್ಟಿರುತ್ತದೆಯೋ ಅಲ್ಲಿ ಪರಕೀಯ ಕುತಂತ್ರಿಗಳ ಬೇಳೆ ಬೇಯದು. ಈ ನೀತಿಯನ್ನು ಅರಿತ ಬ್ರಿಟಿಷರು ಧರ್ಮದ ಆಧಾರದಲ್ಲಿ ಜನರನ್ನು ಒಡೆದರು. ಇದರ ಫಲವೇ ಅಖಂಡ ಭಾರತ ಎರಡು ಹೋಳಾಗಿ ಭಾರತ-ಪಾಕಿಸ್ಥಾನಗಳಾಗಿರುವುದು. ಇಲ್ಲಿನ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕಾದರೆ ಜನರ ಮನಸ್ಸುಗಳನ್ನು ಒಡೆಯಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದವರು ಬ್ರಿಟಿಷರು. ಅದಕ್ಕಾಗಿ ಭಾರತೀಯ ಶಿಕ್ಷಣ ಪದ್ಧತಿಯ ಬದಲು ಪಾಶ್ಚಾತ್ಯ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಕ್ರೈಸ್ತ ಮತಕ್ಕೆ ಮತಾಂತರ ಪ್ರಕ್ರಿಯೆಗಳನ್ನು ನಡೆಸಿದರು. ಅವರ ಬಹುಕಾಲದ ಪ್ರಯತ್ನದ ಫಲವಾಗಿ ಭಾರತ, ಭಾರತೀಯರು ಅವರ ಕೈವಶವಾದರು. ಭಾರತದ ಆಡಳಿತ ಆಂಗ್ಲರ ಪಾಲಾಯಿತು. |
ಈ ನೀತಿಯ ವಿರುದ್ಧ ಭಾರತದ ಅನೇಕ ಮಹಾತ್ಮರ ಹೋರಾಟದ ಫಲವಾಗಿ ನಾವು ಸ್ವತಂತ್ರರಾದೆವು. ಆದರೆ ಇಲ್ಲಿಂದ ಲೂಟಿ ಮಾಡಿದ ಸಂಪತ್ತು ಮತ್ತೆ ಭಾರತ ಸೇರಲೇ ಇಲ್ಲ. ಇಲ್ಲಿನ ಹಳೆಯ ಪರಂಪರೆ, ಸಂಸ್ಕೃತಿಯ ಮೇಲೆಯೂ ಆಂಗ್ಲರ ಹೆಜ್ಜೆ ಗುರುತು ಇಂದಿಗೂ ಹಾಗೆಯೇ ಇದೆ. ಭಾರತದ ಶಿಕ್ಷಣ ಪದ್ಧತಿಯ ಮೇಲೆಯೂ ಇಂಗ್ಲಿಷರ ಪ್ರಭಾವ ಅಪಾರ. ಇಂದು ಇಂಗ್ಲಿಷ್ ಇಲ್ಲದೆ ಶಿಕ್ಷಣವೇ ಇಲ್ಲವೇನೋ ಎಂಬಲ್ಲಿಯವರೆಗಿನ ಸ್ಥಿತಿ ನಮ್ಮದಾಗಿದೆ. |
ಇದೆಲ್ಲವೂ ಹಾಗಿರಲಿ. ಸ್ವಾತಂತ್ರ್ಯ ಸಿಕ್ಕ 74 ವರ್ಷಗಳ ಬಳಿಕವೂ ನಾವು ಯೋಚಿಸಬೇಕಾದ ಹಲವು ಸಂಗತಿಗಳಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರಲ್ಲಿ ಒಂದು ಒಗ್ಗಟ್ಟಿತ್ತು. ಯಾವ ಬೇಧಭಾವವೂ ಇಲ್ಲದೆ ಎಲ್ಲರೊಂದು ಎಂಬ ಭಾವನೆಯೂ ಇತ್ತು. ಸ್ವಾತಂತ್ರ್ಯದ ಬಳಿಕ ನಮ್ಮಲ್ಲಿ ಧಾರ್ಮಿಕ, ವೈಚಾರಿಕ ಹೀಗೆ ಹತ್ತು ಹಲವು ವಿಚಾರಗಳು ಅಸಹನೆಯ ಮಟ್ಟಕ್ಕೆ ಬೆಳೆದು ಬಿಟ್ಟಿವೆ. ಯಾವ ರಾಷ್ಟ್ರ ಎಲ್ಲರೂ ಒಂದೆ ಎಂಬ ಪರಿಕಲ್ಪನೆಯ ಭದ್ರ ಅಡಿಪಾಯ ಹೊಂದಿತ್ತೋ, ಅದೇ ರಾಷ್ಟ್ರ ಆಂತರಿಕ ಶತ್ರುಗಳ ಕುತಂತ್ರಕ್ಕೂ ನೋವನುಭವಿಸುವಂತಾಗಿದೆ. ದೇಶಭಕ್ತರ ಗುಂಪು ಒಂದು ಕಡೆಯಿಂದ ರಾಷ್ಟ್ರವನ್ನು ಉಳಿಸಿ, ಅಭಿವೃದ್ಧಿ ಪಥದಲ್ಲಿ ಸಾಗಿಸುವ ಸದುದ್ದೇಶದಿಂದ ಸಾಗುತ್ತಿದ್ದರೆ, ಹಣ್ಣಿನೊಳಗಿನ ಹುಳಗಳು ಹೇಗೆ ದೇಶವನ್ನು ಒಡೆಯುವುದು, ಜನರ ನಡುವೆ ಬೆಂಕಿ ಹಚ್ಚುವುದು ಎಂಬುದನ್ನು ಯೋಚಿಸಿ, ಅದನ್ನು ಸಾಧಿಸುವಲ್ಲಿ ಪ್ರಯತ್ನ ನಡೆಸುತ್ತಿರುವುದು, ಅದಕ್ಕಾಗಿ ಬಾಹ್ಯ ಶತ್ರುಗಳ ಜೊತೆಗೆ ಕೈ ಜೋಡಿಸುವುದು ನಮ್ಮ ದುರಂತ. |
ಹಾಗಾದರೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥವೇನು?. ಈ ಪ್ರಶ್ನೆ ಎಲ್ಲರಲ್ಲೂ ಹುಟ್ಟಬಹುದು. ಇಲ್ಲಿ ನಾವು ಅರಿಯಬೇಕಾಗಿರುವುದು ನಮಗೆ ಬ್ರಿಟಿಷರಿಂದ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಅದು ನೂರು ಪ್ರತಿಶತಃ ನಿಜ. ಆದರೆ ಬ್ರಿಟಿಷ್ ಮನಸ್ಥಿತಿಯಿಂದಲ್ಲ. ಒಡೆದಾಳುವ ನೀತಿ ಇಂದು ನಮ್ಮ ಕೆಲವು ರಾಜಕೀಯ ಪಕ್ಷಗಳಲ್ಲಿಯೇ ನಾವು ಕಾಣಬಹುದಾಗಿ. ರಾಜಕೀಯ ನಾಯಕರು ಜಾತಿ, ಧರ್ಮದ ಆಧಾರದಲ್ಲಿ ಜನರ ನಡುವೆ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುವುದನ್ನೂ ನಾವು ಕಾಣಬಹುದು. ಜೊತೆಗೆ ಯಾರೋ ಒಬ್ಬ ನಾಯಕ ನನಗೆ ದೇಶ ಮೊದಲು, ದೇಶದ ಅಭಿವೃದ್ಧಿ ಮೊದಲು ಎಂದು ಕೆಲಸ ಮಾಡುತ್ತಿದ್ದರೆ, ಆತನನ್ನು ವಿರೋಧಿಸಿ ಅಭಿವೃದ್ಧಿಗೆ ಅಡ್ಡಗಾಲು ಹಾಕುವಂತಹ ನಿಸ್ಸೀಮ ನಾಯಕರೂ ನಮ್ಮಲ್ಲಿ ಇನ್ನೂ ಇದ್ದಾರೆ ಎಂಬುದು ನಾಚಿಗೇಡಿನ ವಿಚಾರ. |
ಹೌದು, ನಾವು ಬದಲಾಗಬೇಕು. ನಮ್ಮ ವೈಚಾರಿಕತೆ, ಧಾರ್ಮಿಕತೆ ಏನೇ ಇರಲಿ. ರಾಷ್ಟ್ರದ ವಿಚಾರವಾಗಿ ಬಂದಾಗ ನಮ್ಮಲ್ಲಿ ಒಗ್ಗಟ್ಟಿನ ಮನೋಭಾವ ಬೇಕು. ಹೀಗಾದಲ್ಲಿ ಯಾವ ಬಾಹ್ಯ ಶತ್ರುವೂ ನಮ್ಮ ವಿರುದ್ಧ ಉಸಿರೆತ್ತಲಾರ. ನಮ್ಮ ರಾಜಕೀಯ ವೈಷಮ್ಯಗಳೇನೇ ಇರಬಹುದು, ಆದರೆ ದೇಶ, ಜನರ ವಿಚಾರ ಬಂದಾಗ ನಮ್ಮ ವೈರಿಯೇ ಉತ್ತಮ ಕಾರ್ಯ ಮಾಡಿದರೆ ಅವನನ್ನು ಒಪ್ಪಿಕೊಳ್ಳುವ, ಅವನಿಗೆ ಬೆಂಬಲ ನೀಡುವ ಮನಸ್ಸು ನಮ್ಮದಾಗಬೇಕು. |
ಭಾರತ ಒಂದು ಮನೆ ಇದ್ದಂತೆ. ಇಲ್ಲಿರುವ ಎಲ್ಲರೂ ಸೋದರ ಸಂಬಂಧಿಗಳೇ. ನಮ್ಮೊಳಗಿನ ತಿಕ್ಕಾಟಗಳು ಹೊರಗಿನ ಇನ್ನಾರಿಗೋ ಬೇಳೆ ಬೇಯಿಸಿಕೊಳ್ಳುವ ಬೆಂಕಿಯಾಗಿ ಪರಿವರ್ತನೆಯಾಗಲು ಬಿಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಇದು ನಮ್ಮ ಇಂದಿನ ಆದ್ಯತೆಯೂ ಹೌದು. ಎಲ್ಲರನ್ನೊಳಗೊಂಡ ಅಭಿವೃದ್ಧಿಗೂ ಇದೇ ಪೂರಕ ದಾರಿ ಎನ್ನುವುದರಲ್ಲೂ ಯಾವುದೇ ಸಂದೇಹವಿಲ್ಲ. |
ನಮ್ಮ ಸ್ಥಿತಿ 'ಏನು ಮಾಡಲಿ ಮನೆಯ ಮಕ್ಕಳೆ ಮಲಗಿ ನಿದ್ರಿಸುತಿದ್ದರೆ' ಎಂಬಂತಾಗಬಾರದು. ಕಳ್ಳ ಬೆಕ್ಕು ಬಂದು ಹಾಲು ಕುಡಿದ ಮೇಲೆ ಶಪಿಸುತ್ತಾ ಕೂರುವುದಕ್ಕಿಂತ, ಮೊದಲೇ ಜಾಗೃತರಾದರೆ ಒಳ್ಳೆಯದಲ್ಲವೇ. ನಮ್ಮ ಒಳ ಜಗಳಗಳ ಸಂದರ್ಭ ಬಳಸಿಕೊಂಡು ಭಯೋತ್ಪಾದಕ ಶಕ್ತಿಗಳಾದ ಕಳ್ಳ ಬೆಕ್ಕುಗಳು ನಮ್ಮ ಪಾಲಿನ ಹಾಲು ಕದ್ದು ಕುಡಿಯುವ ಮುನ್ನ ಜಾಗೃತರಾಗೋಣ. |
ಕಳೆದ 5-6 ವರ್ಷಗಳಿಂದ ನಿಜವಾದ ಸ್ವಾತಂತ್ರ್ಯದ ಅರ್ಥ ನಮಗೆ ಅರಿವಾಗುತ್ತಿದ್ದು, ಅಂತಹ ಅಭಿವೃದ್ಧಿಯ ಕನಸು ಹೊತ್ತ ನಾಯಕರಿಗೆ ನಮ್ಮ ಬೆಂಬಲ ನೀಡೋಣ. ಆಗ ನಾವು ಪಡೆದ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ. ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗುತ್ತದೆ. ಇದರಲ್ಲಿ ಯಾವ ಸಂಶಯವೂ ಬೇಡ. ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತದಲ್ಲಿ ಜನಿಸಿದ ನಾವೆಲ್ಲರೂ ಒಂದೇ ಎಂಬ ಭಾವವನ್ನು ಎಲ್ಲರೂ ಹೊಂದುವಂತಾಗಲಿ. ದೇಶ ನಮ್ಮದು, ಹಾಗಾಗಿ ಎಲ್ಲಾ ದೇಶವಾಸಿಗಳಲ್ಲಿಯೂ ರಾಷ್ಟ್ರ ಮೊದಲು ,ಉಳಿದೆಲ್ಲವೂ ಮತ್ತೆ ಎಂಬ ಭಾವನೆ ಹುಟ್ಟಲಿ ಎಂಬ ಆಶಯ ಹುಟ್ಟುವಂತಾಗಲಿ ಎಂದು ತಾಯಿ ಭಾರತಿಯನ್ನು ಪ್ರಾರ್ಥಿಸೋಣ. |
ಮನಸ್ಸಿನ ಪಾರತಂತ್ರ್ಯದ ಗೋಡೆ ಒಡೆದು ಸ್ವಾತಂತ್ರ್ಯ ಗಳಿಸಿಕೊಳ್ಳೋಣ ಎಂಬ ಸದಾಶಯದ ಜೊತೆಗೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರಿಗೂ ಗೌರವ ನಮನಗಳನ್ನು ಸಮರ್ಪಿಸುತ್ತಾ, ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭ ಕಾಮನೆಗಳು. |
ಸಿದ್ಧಗಂಗಾ ಮಠಕ್ಕೆ News: Latest ಸಿದ್ಧಗಂಗಾ ಮಠಕ್ಕೆ News & Updates on ಸಿದ್ಧಗಂಗಾ ಮಠಕ್ಕೆ | Vijaya Karnataka - Page 5 |
October,23,2019, 10:17:32 |
ಮಹದಾಯಿಗಾಗಿ ಸೈಕಲ್ ಜಾಥಾ |
ಕಾವೇರಿ, ಮಹದಾಯಿ ನದಿ ಸಮಸ್ಯೆಗಳು ಪರಿಹಾರಗೊಳ್ಳಲಿ ಎಂದು ಹಾರೈಸಿ ವಿದ್ಯಾರ್ಥಿಯೊಬ್ಬರು ಬಾಗಲಕೋಟದಿಂದ ಬೆಂಗಳೂರಿಗೆ ಸೈಕಲ್ ಜಾಥಾ ಕೈಗೊಂಡಿದ್ದಾರೆ. |
ಮತ ಕೇಳಲು ಬರುವ ಶಾಸಕ, ಸಂಸದರಿಗೆ ಹೊಡೆಯಿರಿ..! ಸರಕಾರಗಳು ಜೀವಂತ ಸಮಾಧಿ: ರೈತರ ಆಕ್ರೋಶ |
Aug 14, 2016, 03.38 PM |
ರೈತರು ಬೆಳೆದ ಬೆಳೆಗಳಾದ ಅಡಕೆ, ಕೊಬ್ಬರಿಗೆ ಬೆಂಬಲ ಬೆಲೆ ನೀಡದೆ ಬೆಳೆಗಾರರನ್ನು ಆತ್ಮಹತ್ಯೆಯೆಡೆಗೆ ದೂಡುತ್ತಿರುವ ರಾಜಕೀಯ ಪಕ್ಷ ಗಳು, ರಾಜಕಾರಣಿಗಳು, ರಾಜ್ಯದ ಶಾಸಕರು, ಸಂಸದರು ಬದುಕಿದ್ದೂ ಜೀವಂತ ಸಮಾಧಿಗಳಾಗಿದ್ದಾರೆ. ರೈತರ ಸಹಾಯಕ್ಕೆ ಬಾರದಿರುವ ಶಾಸಕ, ಸಂಸದರು ಮತ ಕೇಳಲು ಬಂದರೆ ಹೊಡೆಯಿರಿ ಎಂದು ಹಸಿರು ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಕೆಂಕೆರೆ ಸತೀಶ್ ತಮ್ಮ ಸಹನೆ ಕಳೆದುಕೊಂಡು ಆಕ್ರೋಶದ ಮಾತುಗಳನ್ನಾಡಿದರು. |
ಆಟದ ಮೂಲಕ ಪಾಠ — ವಿಕಾಸ್‌ಪಿಡಿಯಾ |
ಮೂಲನೆಲೆ / ಶಿಕ್ಷಣ / ಮಕ್ಕಳ ಮೂಲೆ / ಆಟದ ಮೂಲಕ ಪಾಠ |
ಚಟುವಟಿಕೆ ಕೊಠಡಿ |
ಚಟುವಟಿಕೆ ಕೊಠಡಿಯು ಒಂದು ಇಡೀ ತರಗತಿಯು ತನಗೆ ಕೊಟ್ಟ ಕಾಲಾವಧಿಯಲ್ಲಿ ಕೆಲಸಮಾಡುವ ಸ್ಥಳವಾಗಿದೆ. ಕೊಠಡಿಯನ್ನು ಸಾಂಪ್ರದಾಯಿಕ ಬೋಧನೆ / ಕಲಿಕೆ ಮತ್ತು ಪಠ್ಯಕ್ರಮಕ್ಕೆ ಸರಿಹೊಂದುವಂತೆಮಾಂಟೆಸ್ಸರಿವಿಧಾನದ ವ್ಯವಸ್ಥಿತ ಮತ್ತು ಸಂಘಟಿತವಾಗಿ ಕೆಲಸ ಮಾಡುವ ಮೂಲ ಪರಿಕಲ್ಪನೆಯನ್ನು ಬಳಸಿಕೊಂಡು ಆಯೋಜಿಸ ಬಹುದು. |
ಮುಖ್ಯವಾಗಿ ಬೇಕಾಗುವ ಸಾಧನಗಳೆಂದರೆ |
ಉದಾಹರಣೆಗೆ ಬ್ಲಾ ಕುಗಳು, ಶ್ರೇಯಾಂಕ ಟ್ರೇಗಳು, ಆಕಾರ ಕಟ್ ಔಟ್ಗಳು,ಟ್ರೇ,ಚತುರ ಸಮಸ್ಯೆಗಳು, ಹೊಂದಾಣಿಕೆಯ ಕಾರ್ಡ್ ಗಳು, ಕತ್ತರಿ, ಬಣ್ಣದ ಕಾಗದದ ಹಾಳೆಗಳು, ಬಣ್ಣಗಳು, ಕುಂಚ, ಮರಳುಟ್ರೇಗಳು, ಟ್ರೇಸಿಂಗ್ ಕಡ್ಡಿಗಳು, ಮಣಿಗಳು, ಬಟನ್ ಗಳು, ಸಣ್ಣ ಪೊರಕೆಗಳು, ಡಸ್ಟರ್ಗಳು ಮುಂತಾದವಸ್ತುಗಳ ಒಂದು ಸಂಪೂರ್ಣ ಶ್ರೇಣಿ , ಇವು ಚಟುವಟಿಕೆ ಕೋಣೆಗೆ ಲವಲವಿಕೆ ತರುತ್ತವೆ |
ಒಂದು ಕೆಲಸದ ವಾತಾವರಣ ಸೃಷ್ಟಿಮಾಡುವುದು: ಮಕ್ಕಳಿಗೆ ಒಟ್ಟುಗೂಡಿ ಮತ್ತು ಒಬ್ಬೊಬ್ಬರೇ ಹೇಗೆ ಕೆಲಸ ಮಾಡಬೇಕೆಂದು ತೋರಿಸಿಕೊಡಿ. ಅವರು ಉಪಕರಣಗಳನ್ನು ಜವಾಬ್ದಾರಿಯಿಂದ ಮತ್ತು ಪರಿಣಾಮಕಾರಿಯಾಗಿ ಹಾಗು ಸುರಕ್ಷಿತವಾಗಿನಿರ್ವಹಿಸುವ ಸಾಮರ್ಥ್ಯ ಕಲಿಸಿಕೊಡಿ. ಆರಂಭದಲ್ಲಿ ಅವರಿಗೆ ಕೊಠಡಿಯಲ್ಲಿರುವ ವಸ್ತುಗಳನ್ನುಪರಿಚಯ ಮಾಡಿಕೊಡಿ ಮತ್ತುಅವನ್ನು ಎಲ್ಲಿಡ ಬೇಕೆಂದು ತೋರಿಸಿಕೊಡಿ. ಸ್ವಲ್ಪ ಸಮಯ ವಿನಿಯೋಗಿಸಿ ಅವರು ಎಲ್ಲಿಂದ ಆ ವಸ್ತು ತೆಗೆದುಕೊಳ್ಳಬಹುದುಮತ್ತು ಹೇಗೆ ಅದನ್ನು ಮತ್ತೆ ಆ ಸ್ಥಳದಲ್ಲಿರಿಸಬೇಕು ಎಂಬುದನ್ನು ಮನದಟ್ಟು ಮಾಡಿಸಿರಿ. ಒಂದು ಚಟುವಟಿಕೆ ಆಧಾರಿತಕಲಿಕೆಯ ವಾತಾವರಣವನ್ನು ರಚಿಸುವಲ್ಲಿ ಇದು ಪ್ರಮುಖ ಭಾಗವಾಗಿರುತ್ತದೆ. ಇಲ್ಲಿ ಕೆಲಸದ ವಾತಾವರಣದ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ. |
ಒಂದು ಗುಂಪಿನಲ್ಲಿ ಒಬ್ಬೊಬ್ಬನೇ ಕೆಲಸ ಮಾಡುವುದು : ಈ ಸಂದರ್ಭದಲ್ಲಿ, ಪ್ರತಿ ಮಗು ತನ್ನದೇ ವಸ್ತು ಹೊಂದಿರುತ್ತದೆ, ಆದರೆಶಿಕ್ಷಕರೊಡನೆ ಒಂದು ಗುಂಪಿನಲ್ಲಿ ಕೆಲಸ ಮಾಡುತ್ತದೆ. |
ಒಬ್ಬನೇ ಕೆಲಸ ಮಾಡುವುದು |
ಇಲ್ಲಿ ಮಗುವೇ ಒಂದು ಚಟುವಟಿಕೆಯನ್ನು ಆಯ್ಕೆಮಾಡಿಕೊಂಡು ಮತ್ತು ತಾನೇ ಕೆಲಸ ಮಾಡುತ್ತಾನೆ. |
ಒಂದು ಗುಂಪಾಗಿ ಕೆಲಸ ಮಾಡುವುದು: ಆರಂಭದಲ್ಲಿ ಎರಡು ಮಕ್ಕಳ ಒಂದು ಗುಂಪು ರಚಿಸಬೇಕು ಮತ್ತು ಅವರಿಬ್ಬರೂ ಸೇರಿ ಒಂದು ಚಟುವಟಿಕೆಯನ್ನು ಮಾಡಬೇಕು. ಈ ಸಂಖ್ಯೆಯನ್ನು ಕ್ರಮೇಣ ಹೆಚ್ಚಿಸಬಹುದು. |
ಗದ್ದಲ ನಿಯಂತ್ರಣ |
ಮಕ್ಕಳು ತರಗತಿಯಲ್ಲಿ ಗದ್ದಲಮಾಡುವುದು ಸಹಜ. ಇದನ್ನು ಶಿಕ್ಷಕರು ಗದ್ದರಿಸಿ ಮಾತನಾಡದೇ ನಿಯಂತ್ರಿಸಬಹುದು. ಮಕ್ಕಳು ಗುಂಪುಗಳಲ್ಲಿ ಕೆಲಸ ಮಾಡುವಾಗ ಸಾಮಾನ್ಯವಾಗಿ ಉತ್ಸುಕರಾಗಿರುತ್ತಾರೆ. ಒಂದು ಗಂಟೆಬಳಸಿಮತ್ತು ಇದನ್ನು ಬಾರಿಸಿದಾಗ ಮಕ್ಕಳು ಗಲಾಟೆ ನಿಲ್ಲಿಸಬೇಕೆಂದು ಮಕ್ಕಳಿಗೆ ತಿಳಿಸಿ. ಆರಂಭದಲ್ಲಿ ಇದೊಂದು ಆಟವಾಗುತ್ತದೆಮತ್ತು ಅಂತಿಮವಾಗಿ ಒಂದು ಅಭ್ಯಾಸ ಆಗುತ್ತದೆ. ಮಕ್ಕಳು ಪ್ರತಿಕ್ರಿಯೆ ನೀಡಿ ಕೆಲವು ಕ್ಷಣಗಳಲ್ಲಿ ಮೌನ ಆನಂದಿಸುವುದನ್ನುವೀಕ್ಷಿಸುವುದು ಬಹಳ ಕುತೂಹಲಕಾರಿಯಾಗಿರುತ್ತದೆ. ಮಕ್ಕಳಿಗೆ ಗಂಟೆ ಯ ಬಳಕೆ ಅಭ್ಯಾಸ ವಾದ ಮೇಲೆಅವರಿಗೆ ಒಂದುಮೌನದ ಚಟುವಟಿಕೆಯನ್ನು ಏರ್ಪಡಿಸಿರಿ.. ಕೆಳಗಿನ ಉದಾಹರಣೆ ನೋಡಿ |
ನೀವೆಲ್ಲ ನಿಶ್ಶಬ್ದವಾಗಿದ್ದರೆ, ನಾನು ಮರೆಮಾಡಿ ಏನಾದರೂ ಬಳಸಿ ಶಬ್ದ ಮಾಡುತ್ತೇನೆ . ಅದೇನು ಎಂದುನೀವುಊಹಿಸಬೇಕು. |
ಮಕ್ಕಳು ಮತ್ತೆ ಗದ್ದಲ ಮಾಡದಂತೆ ತಡೆಯಲು, ಎಚ್ಚರಿಕೆಯ ಮಾತೊಂದನ್ನು ದೃಢವಾಗಿ ಹೇಳಿ: "ನೀವು ಉತ್ತರಿಸುವಾಗ ಮೆಲು ಧ್ವನಿಯಲ್ಲಿ ಉತ್ತರಿಸಬೇಕು." |
ಸೂಚನೆ: ಈ ಎಲ್ಲಾ ಚಟುವಟಿಕೆಗಳನ್ನು ತರಗತಿಯ ಪರಿಸರಕ್ಕೆ ತಕ್ಕಂತೆ ಮಾರ್ಪಡಿಸಬಹುದಾಗಿದೆ. |
ಚಿತ್ರನೋಡಿ ಅಕ್ಷರಗಳನ್ನು ಗುರುತಿಸುವುದು: ಅ ಎಂಬ ಅಕ್ಷರವನ್ನು ಸಾಮಾನ್ಯವಾಗಿ ಕಪ್ಪು ಹಲಗೆಯ ಮೇಲೆಸಂಬಂಧಿತಚಿತ್ರಗಳನ್ನು ಬರೆದು ಪರಿಚಯಿಸಲಾಗುತ್ತದೆ. ಶಿಕ್ಷಕರು'ಅ ' ಎಂದು ಬರೆದು "ಇದು ಅ" "ಅ ಎಂದರೆ ಅರಸ" 'ಅ ಎಂದರೆ ಅನ್ನ" ಎಂದು ಶಿಕ್ಷಕರು ಹೇಳುತ್ತಾರೆ. ಈ ಮಕ್ಕಳು ಕೇಳಿಕೊಂಡು ಅದನ್ನೇ ಪುನರುಚ್ಚರಿಸುತ್ತಾರೆ. |
ಪರ್ಯಾಯವಾಗಿ ಮಕ್ಕಳಲ್ಲಿ ಅ ಅಕ್ಷರಕ್ಕೆ ಸಂಬಂಧಿಸಿದ ಚಿತ್ರದ ಕಾರ್ಡ್ ಗಳನ್ನು ವಿತರಣೆ ಮಾಡಬಹುದು. ಈಗ, ಚಿತ್ರಗಳನ್ನು ನೋಡಲು ಮತ್ತು ಅವನ್ನು ಗುರುತಿಸಿಹೆಸರುಗಳನ್ನು ಹೇಳಲು ಮಕ್ಕಳಿಗೆ ಹೇಳಿ. ಹೇಳಿ. ಅವರು ಪರಿಚಿತವಾಗಿರುವ ಹೆಸರುಗಳುಪರಿಚಯಿಸಲು. ಈಗ ಕಪ್ಪು ಹಲಗೆಯ ಮೇಲೆ ಒಂದು ಬರೆಯಲು ಮತ್ತು ನಾನುಕಪ್ಪು ಹಲಗೆಯ ಮೇಲೆ ಕೆಲವು ಚಿತ್ರಗಳನ್ನು ಸೆಳೆಯಲು ನಾನು ", ಹೇಳುತ್ತಾರೆ. ನೀವು ನೀವು ಮತ್ತು ನನಗೆ ಅದರ ಹೆಸರು ಹೇಳಿರಿ ನನ್ನ ಚಿತ್ರವನ್ನು ತೋರಿಸಬೇಕಿದೆ."ಹೀಗೆಮಕ್ಕಳು ಸಕ್ರಿಯವಾಗಿ ಕಪ್ಪುಹಲಗೆಯ ಸಹಾಯದಿಂದ ನಡೆಸಲಾಗುತ್ತದೆ ಬೋಧನೆ / ಕಲಿಕೆಯ ಪ್ರಕ್ರಿಯೆಯಲ್ಲಿಭಾಗವಹಿಸಲು ಅವಕಾಶ ಪಡೆಯುತ್ತಾನೆ. ಇದೇಚಟುವಟಿಕೆಗಳನ್ನು ಸಂಖ್ಯೆಗಳು ಮತ್ತು ಮೌಲ್ಯಗಳು ಯೋಜನೆ ಮಾಡಬಹುದು. |
ಉಕ್ತ ಲೇಖನ |
ದಿನನಿತ್ಯದ ಪದ್ಧತಿಯಿಂದ ವ್ಯತ್ಯಾಸವಾದ ಉಕ್ತ ಲೇಖನ ಕಲಿಯುವವರಿಗೆ ಸ್ವಾಗತ ಬದಲಾವಣೆ |
ನಾನು ಒಂದು ಚಿತ್ರ ತೋರಿಸಿ ಅದನ್ನು ಮರೆಮಾಡುತ್ತೇನೆ. ನೀವು ಅದರ ಹೆಸರನ್ನು ಬರೆಯಬೇಕು. ಮಕ್ಕಳು ಸಾಕಷ್ಟುಅಭ್ಯಾಸ ಹೊಂದಿದ ನಂತರ, ಇದುತುಂಬಾ ಸವಾಲಿನ ನೆನಪಿನ ಆಟ ಆಗುವಂತೆ, ಅವರಿಗೆ ಬೇರೆ ಎರಡು ಚಿತ್ರಗಳನ್ನು ತೋರಿಸಿ. |
ತಂಡದಲ್ಲಿ ಕಾಗುಣಿತ ಕಲಿಯುವುದು: ಇದಕ್ಕೆ ಕಾರ್ಡ್ಗಳ ಎರಡು ಸೆಟ್ ಅಗತ್ಯವಿದೆ. ಎರಡು ತಂಡಗಳು ವಿಂಗಡಿಸಬೇಕು ಮತ್ತುಪ್ರತಿ ಚಟುವಟಿಕೆ ತಂಡದಲ್ಲಿ ಒಂದು ಮಗುವಿಗೆಒಂದೊಂದು ಸೆಟ್ ನೀಡಿ. |
"ಶುರು ಮಾಡಿ" ಎಂದು ನಾನು ಹೇಳಿದಾಗ, ನೀವು, ಒಂದು ಕಾರ್ಡ್ ಎತ್ತಿಕೊಂಡು ಒಂದು ಹೆಸರನ್ನು ಬರೆದುಮುಂದಕ್ಕೆ ಕಳಿಸಿ . ಮುಂದಕ್ಕೆ ಕಳಿಸಿದ ತಕ್ಷಣ , ನೀವು ಮುಂದಿನ ಕಾರ್ಡ್ ತೆಗೆದುಕೊಳ್ಳಿ ಕೊನೆಯ ವ್ಯಕ್ತಿ ಎಲ್ಲಾ ಕಾರ್ಡ್ಇಟ್ಟುಕೊಂಡಿರುತ್ತಾನೆ ಮೊದಲು ಮುಗಿಸಿದ ತಂಡವು ಆಟವನ್ನು ಗೆಲ್ಲುತ್ತದೆ. |
ಇದರ ಪ್ರಮುಖ ಲಾಭವೆಂದರೆ ಮಕ್ಕಳು ತಮ್ಮ ತಂಡದ ನಿಧಾನವಾಗಿ ಕೆಲಸ ಮಾಡುವ ಸಹಪಾಠಿಗಳು ಕೆಲಸ ಮಾಡುವಂತೆ ಮಾಡುತ್ತಾರೆ . ಅವರು ಈ ಆಟ ಆಡುವಾಗ ಎಷ್ಟು ಹುರುಪಿನಿಂದ ಇರುತ್ತಾರೆ ಎಂದರೆ ಅವರು ನಿಜವಾಗಿ ಕಾಗುಣಿತಉಚ್ಚರಿಸಲುಕಲಿಯುತ್ತಿದ್ದೇವೆ ಎಂದು ತಿಳಿದಿರುವುದಿಲ್ಲ. |
ಇವು ಕೇವಲ ಕೆಲವು ಉದಾಹರಣೆಗಳು ಮತ್ತು ಬಹಳ ನಾವೀನ್ಯತೆ ಮಾಡಿಕೊಳ್ಳಬಹುದು. ಆದ್ದರಿಂದ ಶಿಕ್ಷಕರು ತಮ್ಮವಿದ್ಯಾರ್ಥಿಗಳ ಆಸಕ್ತಿಗಳಿಗೆ ತಕ್ಕಂತೆ ಈ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳಬಹುದು. ಇದು ಎಲ್ಲಾ ಆದ ಮೇಲೆ ಕೊನೆಯಲ್ಲಿ,ಮಕ್ಕಳು, "ನಾನೇ ಸ್ವಂತ ಮಾಡಬಲ್ಲೆ " ಎಂಬ ಸಾಧನೆಯ ಭಾವನೆಯನ್ನುಅನುಭವಿಸುತ್ತಾರೆ ಇಂತಹ ಭಾವನೆ ಪರಿಣಾಮಕಾರಿ ಕಲಿಕೆಯ ಮತ್ತು ಜ್ಞಾನ ಮನದಟ್ಟಾಗಲು ಪ್ರಮುಖ ಅಂಶವಾಗಿದೆ. |
ಸಾಧಾರಣ ಕಡಿಮೆ ತೂಕದ ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರ | ಸುದ್ದಿ ಬೆಳ್ತಂಗಡಿ |
ಉಜಿರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬೆಳ್ತಂಗಡಿ, ರೋಟರಿ ಕ್ಲಬ್ ಮತ್ತು ಆಯನ್ಸ್ ಕ್ಲಬ್ ಬೆಳ್ತಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಉಜಿರೆ, ಕೋಟ್ಯಾನ್ಸ್ ಏಜೆನ್ಸೀಸ್ ಬಿ.ಸಿ.ರೋಡ್, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘ, ಶಾರದಾ ಸೇವಾ ಟ್ರಸ್ಟ್ ಉಜಿರೆ, ಭಾರತೀಯ ದಂತ ವೈದ್ಯಕೀಯ ಸಂಘ, ಪುತ್ತೂರು ಶಾಖೆ ಹಾಗೂ ಜಾನ್ಸನ್&ಜಾನ್ಸನ್ ಇವುಗಳ ಜಂಟಿ ಆಶ್ರಯದಲ್ಲಿ ಸಾಧಾರಣ ಕಡಿಮೆ ತೂಕದ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ ಹಾಗೂ ದಂತ ತಪಾಸಣಾ ಶಿಬಿರವು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು. |
ರೊಟರಿ ಕ್ಲಬ್ ನ ಅಧ್ಯಕ್ಷ ಡಿ.ಎಂ.ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಗೀತಾ ಪ್ರಭು ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಆನ್ಸ್ ಕ್ಲಬ್ ಅಧ್ಯಕ್ಷೆ ಡಾ.ಆಶಾ ರಾಘವೇಂದ್ರ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಸರಸ್ವತಿ. ಪಿ. ಕಾರ್ಯಕ್ರಮ ಉದ್ಘಾಟಿಸಿದರು ಅತಿಥಿಗಳಾದ ಶ್ರೀಮತಿ ಸುಧಾ, ಮಕ್ಕಳ ತಜ್ಞೆ ಡಾ.ಗೋವಿಂದ ಕಿಶೋರ್, ಅಮರ್ ಡ್ರಗ್ ಹೌಸ್ ಉಜಿರೆ ಮಾಲಕ ಕೇಶವ ಭಟ್ ಹಾಗೂ ಜಾನ್ಸನ್ ಎಂಡ್ ಜಾನ್ಸನ್ ಕಂಪನಿಯ ಶಿವಕುಮಾರ್ ಅವರು ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು. |
ನಂತರ ನಡೆದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಗೋವಿಂದ ಕಿಶೋರ್, ಡಾ.ವಿನಯಾ ಕಿಶೋರ್, ಡಾ| ಸುಷ್ಮಾ ಡೋಂಗ್ರೆ, ಡಾ| ಸ್ಮಿತಾ ಜೈನ್, ಡಾ| ಭಾರತೀ.ಜಿ.ಕೆ. ಹಾಗೂ ದಂತ ವೈದ್ಯರಾದ ಡಾ| ರಾಘವೇಂದ್ರ ಪಿದಮಲೆ, ಡಾ| ಆಶಾ ರಾಘವೇಂದ್ರ, ಡಾ| ಅನಿತಾ ದಯಾಕರ್, ಡಾ| ದೀಪಾಲೀ ಡೋಂಗ್ರೆ ಇವರು ಗಳು ಭಾಗವಹಿಸಿದ್ದರು. |
ರೊ.ಪ್ರಕಾಶ್ ಪ್ರಭು ಅವರು ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಜಾನ್ಸನ್ ಕಂಪನಿಯ ವತಿಯಿಂದ ಕಿಟ್‌ಗಳನ್ನು ವಿತರಿಸಲಾಯಿತು. ರೊ.ಯೋಗೀಶ್ ಭಿಡೆ ಹಾಗೂ ರೊ.ಶ್ರೀಧರ್ ಕೆ.ವಿ ಅವರು ಕಾರ್ಯಕ್ರಮ ಸಂಯೊಜಿಸಿದ್ದರು. |
ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ: 15 ಜನರ ಮೇಲೆ ಪ್ರಕರಣ ದಾಖಲು | Udayavani – ಉದಯವಾಣಿ |
ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ: 15 ಜನರ ಮೇಲೆ ಪ್ರಕರಣ ದಾಖಲು |
Team Udayavani, Mar 30, 2020, 1:23 PM IST |
ಬಳ್ಳಾರಿ: ಕೋವಿಡ್-19 ಹಿನ್ನೆಲೆ ಈಗಾಗಲೇ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿಆರ್ ಪಿಸಿ ಸೆಕ್ಷನ್ 144 ಅನ್ವಯ ಕರ್ಪ್ಯೂ ಜಾರಿಗೊಳಿಸಲಾಗಿದ್ದರೂ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿಯಲ್ಲಿ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ 15 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. |
ಗೊಲ್ಲರಹಳ್ಳಿ ಗ್ರಾಮದ ಮುಖಂಡರಾದ ಕಾಳಪ್ಪ ಫಕ್ಕಿರಪ್ಪ (ವ:42), ಜಿ.ಬಿ.ನಾಗರಾಜ (50), ದಾಸರ ವೆಂಕಟೇಶ (46), ಕೋಮಾರಪ್ಪ(70), ಅನಂತಪ್ಪ ಡಿ.ಕೆ(58), ಸುರೇಶ ಮೈಲಪ್ಪ(36), ಕೆಂಚಪ್ಪ ಕಾಳಪ್ಪ(45), ಸಣ್ಣ ಹನುಮಂತಪ್ಪ(85),ನಾಗರಾಜ ಬನ್ನಿಯಪ್ಪ(40),ಈರಮ್ಮನವರ್ ಕೆಂಚಪ್ಪ(70),ಪುರ್ಲಿ ಕಾಳಶ್ರಪ್ಪ(40),ಸೋಮಪ್ಪ ಹುಚ್ಚಪ್ಪ(32),ಸುಣಗಾರ ದುರ್ಗೇಶ(37),ಗುರಿಕಾರ ಕಾಳಪ್ಪ ಮತ್ತು ಬಲವಂತಪ್ಪ ಅವರ ಮೇಲೆ ಪ್ರಕರಣ ದಾಖಲಾಗಿದೆ. |
ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ನಿರ್ಲಕ್ಷ್ಯ ವಹಿಸಿ, ಸಂಜೆ 6ರ ಸುಮಾರಿಗೆ ಎಳೆಯುವ ತೇರನ್ನು ಮಧ್ಯಾಹ್ನ 3:30ಕ್ಕೆ ಎಳೆಯಲಾಗಿದೆ. ರಥ ಎಳೆಯುವ ಸಮಯದಲ್ಲಿ ಗ್ರಾಮದ ಜಿ.ಬಿ.ನಾಗರಾಜ ಇವರ ಕಾಲಿನ ಮೇಲೆ ರಥದ ಚಕ್ರ ಹಾಯ್ದು ಕಾಲಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. |
ಗ್ರಾಮದಲ್ಲಿ ಒಂದು ದಿನ ಮುಂಚೆ ತೆರಳಿ ರಥೋತ್ಸವ ಜರುಗಿಸದಂತೆ ಹಾಗೂ ಕೋವಿಡ್-19 ವೈರಸ್ ಕುರಿತು ತಿಳಿವಳಿಕೆ ನೀಡಿ ಬರಲಾಗಿದೆ. ಆದರೂ ಮಾ.29ರಂದು ಆದೇಶ ಉಲ್ಲಂಘಿಸಿ ರಥೋತ್ಸವ ಜರುಗಿಸಲಾಗಿದೆ ಎಂದು ಡಣಾಯನಕೇರೆ ಪಿಡಿಒ ಜಿಲಾನ್ ರಜಾಕ್ ಸಾಬ್ ಅವರು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. |
ಈ ಆರೋಪಿಗಳ ಮೇಲೆ ಸೆಕ್ಷನ್ 188, 269, 337 ಹಾಗೂ ಇನ್ನಿತರ ಸೆಕ್ಷನ್ ಗಳಡಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. |
ಕೊನೆಗೂ ಫಲ ನೀಡಿತು ಗಂಗೂಲಿ ಪ್ರಯತ್ನ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ | Udayavani – ಉದಯವಾಣಿ |
Thursday, 09 Dec 2021 | UPDATED: 06:47 PM IST |
Team Udayavani, Oct 16, 2021, 9:27 AM IST |
ದುಬೈ: ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಗುವ ಸಮಯ ಬಂದಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸತತ ಪ್ರಯತ್ನದ ಫಲವಾಗಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. |
ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಮಾಡಿದೆ. |
ಶುಕ್ರವಾರ ದುಬೈ ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಅವರು ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಸ್ಥಾನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ. |
ರಾಹುಲ್ ದ್ರಾವಿಡ್ ಅವರಿಗೆ ಈ ಮೊದಲು ಮೂರು ಬಾರಿ ಬಿಸಿಸಿಐ ಕೋಚ್ ಸ್ಥಾನದ ಆಫರ್ ನೀಡಿತ್ತು. ಆದರೆ ದ್ರಾವಿಡ್ ಅವರು ನಿರಾಕರಿಸಿದ್ದರು. ಬೆಂಗಳೂರಿನಲ್ಲಿರುವ ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯಬೇಕಾದ ಕಾರಣ ಬೆಂಗಳೂರಿನಲ್ಲಿಯೇ ಇರುವ ಎನ್ ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಯ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದರು. |
ಬಂದಿದೆ ಎಕೆ-47ಗೆ ಎದೆಯೊಡ್ಡುವ ಹೆಲ್ಮೆಟ್! - Andolana |
ಬಂದಿದೆ ಎಕೆ-47ಗೆ ಎದೆಯೊಡ್ಡುವ ಹೆಲ್ಮೆಟ್! |
February 7, 2020 February 7, 2020 Andolana |
ಉಗ್ರರ ವಿರುದ್ಧ ಹೋರಾಟದ ಸಂದರ್ಭದಲ್ಲಿ ದೇಶದ ಸೈನಿಕರ ಆತ್ಮರಕ್ಷಣೆಗೆ ಭಾರತದ ಸೈನಿಕರ ಮಿಲಿಟರಿ ಎಂಜಿನಿಯರಿಂಗ್ ಕಾಲೇಜು ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. |
ಕಾಲೇಜು ರೂಪಿಸಿರುವ ಹೊಸ ತಂತ್ರಜ್ಞಾನವು, ಶತ್ರುಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಹಾಗೂ ಆತ್ಮರಕ್ಷಣೆ ಮಾಡಿಕೊಳ್ಳಲು ಭಾರತೀಯ ಸೈನಿಕರಿಗೆ ಸಹಕಾರಿಯಾಗಲಿದೆ. |
ಏನಿದು ಹೊಸ ತಂತ್ರಜ್ಞಾನ, ಅದರ ಪ್ರಯೋಜನಗಳೇನು? |
ಭಾರತದ ಸೈನಿಕರ ಮಿಲಿಟರಿ ಎಂಜಿನಿಯರಿಂಗ್ ಕಾಲೇಜು ವಿಶ್ವದಲ್ಲೇ ಮೊದಲ ಬಾರಿಗೆ ಸೈನಿಕರಿಗಾಗಿ ಹೆಲ್ಮೆಟ್‍ನ್ನು ಅಭಿವೃದ್ಧಿಪಡಿಸಿದೆ. ಇದು 10 ಮೀಟರ್ ದೂರದಿಂದ ಹೊಮ್ಮುವ ಎಕೆ-47 ಬುಲೆಟ್‍ನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ. ಎದುರಾಳಿಯ ದಾಳಿಯಿಂದ ಸೈನಿಕ ರಕ್ಷಣೆ ಪಡೆದುಕೊಳ್ಳಲು ಇದು ಸಹಕಾರಿ. ಇದರ ತೂಕ ಕೇವಲ 1.4 ಕೆ.ಜಿ.ಯಷ್ಟೆ. |
ಅದೇ ರೀತಿ 'ಗನ್‍ಶೂಟ್ ಲೊಕೇಟರ್' ಅಭಿವೃದ್ಧಿಪಡಿಸಲಾದ ಮತ್ತೊಂದು ತಂತ್ರಜ್ಞಾನ. ಇದು ಭಾರತದಲ್ಲೇ ಮೊದಲು ಹಾಗೂ ವಿಶ್ವದಲ್ಲಿ ಅತೀ ಕಡಿಮೆ ಬೆಲೆಗೆ ಸಿಗಬಹುದಾದ ತಾಂತ್ರಿಕ ವಸ್ತುವಾಗಿದೆ. ದೂರದ ಸ್ಥಳದಲ್ಲಿ ನಿಂತು ಎದುರಾಳಿಯನ್ನು ಸುಲಭವಾಗಿ ಮಟ್ಟಹಾಕಲು ಇದು ಪೂರಕವಾಗಿದೆ. |
ಸುಮಾರು 400 ಮೀಟರ್ ದೂರದಲ್ಲಿ ನಿಂತು ಎದುರಾಳಿಯನ್ನು ನಿಖರವಾಗಿ ಗುರುತಿಸಿ ಗುಂಡುಹಾರಿಸಬಹುದು. ಈ ಲೊಕೇಟರ್ ಸಹಾಯದಿಂದ ಉಗ್ರರ ವೇಗದ ದಾಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ. |
ಕಷ್ಟಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಜೊತೆ ನಿಲ್ಲುತ್ತೇನೆ: ಶಾಸಕ ಎನ್.ಮಹೇಶ್ |
ಸಂಪುಟದಲ್ಲಿ ಹಿರಿತನಕ್ಕೆ ಗೌರವ ಸಿಕ್ಕಿಲ್ಲ: ಅಪ್ಪಚ್ಚು ರಂಜನ್ |
BREAKING NEWS (1190) SOMETHING ಸ್ಪೆಷಲ್ (4) Uncategorized (16) ಅಪರಾಧ & ಕಾನೂನು (442) ಉದ್ಯೋಗಗಳು (1) ಕಟಕಟೆಯ ಕಥೆಗಳು (3) ಕಾನೂನು ಅರಿವು (6) ಕೃಷಿ ಯೋಜನೆಗಳ ಮಾಹಿತಿ (1) ಕೊಡಗು (70) ಕೋರ್ಟ್ ತೀರ್ಪುಗಳು (39) ಕ್ರೀಡೆ (13) ಚಾಮರಾಜನಗರ (40) ಚಾಲಾಕಿ ಕಳ್ಳರು (17) ಚಿತ್ರ ಮಂಜರಿ (21) ಜಿಲ್ಲಾ ಸುದ್ದಿ (1) ತಿಳಿಯಿರಿ-ಬೆಳೆಯಿರಿ (1) ನಾಮಾವಳಿ (5) ಪೈರು (14) ಪ್ರಾಣಿ ಪ್ರಪಂಚ (37) ಮಂಡ್ಯ (77) ಮಹಿಳೆ (6) ಮಾದರಿ ಬೆಳೆಗಾರರು (3) ಮೈಸೂರು (546) ಮೈಸೂರು ಸ್ಪೆಷಲ್ (19) ರಾಜಕೀಯ (458) ವಾಣಿಜ್ಯ (36) ವಿಜ್ಞಾನ ಮತ್ತು ತಂತ್ರಜ್ಞಾನ (21) ವಿಶೇಷ ಬೆಳೆಗಳು (3) ಶಿಕ್ಷಣ & ಯುವಜನ (35) ಹಾಸನ (6) |
ಯಶವಂತಪುರ, ಆರ್‍ಆರ್ ವಲಯದ ಕೋವಿಡ್ ಕೇರ್ ಸೆಂಟರ್‌ಗೆ ಡಿವಿಎಸ್, ಎಸ್‌ಟಿಎಸ್ ಭೇಟಿ – Savi Kannada News |
– ಕೋವಿಡ್ ಕೇರ್ ಸೆಂಟರ್ ಗಳ ಮೂಲ ಸೌಕರ್ಯ, ಸ್ಥಿತಿಗತಿ ವಿಕ್ಷಣೆ |
– ಸರ್ಕಾರದಿಂದ ಕೈಗೊಳ್ಳಲಾದ ಕ್ರಮಗಳ ವಿವರಿಸಿದ ಸಚಿವ ಸೋಮಶೇಖರ್ |
– ಜನಸೇವಾ ವಿದ್ಯಾಕೇಂದ್ರದ ನೂತನ ಕೇರ್ ಸೆಂಟರ್ಗೆ 16 ಬೆಡ್‍ಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಮಾಡಿಸಿದ ಎಸ್‍ಟಿಎಸ್ |
– ಶಾಶ್ವತ ಸೌಕರ್ಯಗಳ ಬಗ್ಗೆ ಚಿಂತನೆ |
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯದ ಕೋವಿಡ್ ಕೇರ್ ಸೆಂಟರ್‌ಗಳ ವ್ಯವಸ್ಥೆಗಳ ಬಗ್ಗೆ ಶನಿವಾರ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. |
ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಸಚಿವರುಗಳು, ಅಲ್ಲಿ ನೂತನವಾಗಿ ಪ್ರಾರಂಭಿಸಲು ಉದ್ದೇಶಿಸಿರುವ 100 ಆಕ್ಸಿಜನ್ ಬೆಡ್‍ಗಳ ಪರಿಶೀಲನೆ ನಡೆಸಿದರು. ಜೊತೆಗೆ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಹೇಗೆ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಯಾವ ಯಾವ ವ್ಯವಸ್ಥೆಗಳನ್ನು ಮಾಡಲಾಗಿದೆ. ಇನ್ನೂ ಏನೇನು ಬೇಡಿಕೆಗಳು ಇವೆ ಎಂಬೆಲ್ಲ ಮಾಹಿತಿಗಳನ್ನು ಸಚಿವರಾದ ಸೋಮಶೇಖರ್ ಅವರು ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರಿಗೆ ವಿವರಿಸಿದರು. |
ಬೆಂಗಳೂರಿನ ಚನ್ನೆನಹಳ್ಳಿ ಜನಸೇವಾ ವಿದ್ಯಾಕೇಂದ್ರದ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದೆ. |
ನೈಸರ್ಗಿಕ ವಿಕೋಪವೇ ಇರಲಿ OR ದೇಶಕ್ಕೆ ಯಾವುದೇ ವಿಪತ್ತು ಬರಲಿ – ತಕ್ಷಣವೇ ಸಂಘದ ಕಾರ್ಯಕರ್ತರು ನೆರವಿಗೆ ದಾವಿಸುತ್ತಾರೆ. ಈಗಲೂ ಅಷ್ಟೇ. ಜೀವದ ಹಂಗು ತೊರೆದು ಇಂತಹ ಅನೇಕ ಕೇಂದ್ರಗಳನ್ನು ತೆರೆದಿದ್ದಾರೆ. ಧನ್ಯವಾದಗಳು @friendsofrss pic.twitter.com/d86MqCPe4K |
Subsets and Splits
No community queries yet
The top public SQL queries from the community will appear here once available.