text
stringlengths 0
61.5k
|
---|
ಸಿಂಧನೂರು: ಪಟ್ಟಣದಲ್ಲಿ 17.8ಮಿ.ಮೀ, ತಾಲೂಕಿನ ಗುಂಜಳ್ಳಿಯಲ್ಲಿ 16.3ಮಿ.ಮೀ, ಸಾಲಗುಂದಾದಲ್ಲಿ 24.4ಮಿ.ಮೀ, ಗುಡದೂರಿನಲ್ಲಿ 26.2ಮಿ.ಮೀ, ಬಾದರ್ಲಿಯಲ್ಲಿ 31.4ಮಿ.ಮೀ, ಬಳಗಾನೂರಿನಲ್ಲಿ 22ಮಿ.ಮೀ, ತುರ್ವಿಹಾಳದಲ್ಲಿ 17.4ಮಿ.ಮೀ, ಕುನಟಗಿಯಲ್ಲಿ 33.2ಮಿ.ಮೀ, ಹೆಡಗಿನಾಳದಲ್ಲಿ 10.4ಮಿ.ಮೀ, ಗೊರೇಬಾಳದಲ್ಲಿ 30ಮಿ.ಮೀ, ವಲ್ಕಂದಿನ್ನಿಯಲ್ಲಿ 13.6ಮಿ.ಮೀ ಮಳೆ ದಾಖಲಾಗಿದೆ. |
ದೇವದುರ್ಗ: ಪಟ್ಟಣದಲ್ಲಿ 42ಮಿ.ಮೀ, ತಾಲೂಕಿನ ಅರಕೇರಾದಲ್ಲಿ 17.4ಮಿ.ಮೀ, ಗಬ್ಬೂರಿನಲ್ಲಿ 11.3ಮಿ.ಮೀ, ಜಾಲಹಳ್ಳಿಯಲ್ಲಿ 12.4ಮಿ.ಮೀ, ಗಲಗದಲ್ಲಿ 34.2ಮಿ.ಮೀ ಮಳೆಯಾಗಿದೆ. |
ಸಂಗೀತ ನಿರ್ದೇಶಕ ಗುರುಕಿರಣ್‌ಗೆ ಕೆಂಪೇಗೌಡ ಪ್ರಶಸ್ತಿ | Kempegowda Award distributed to Music director Gurukiran - Kannada Filmibeat |
ಸಂಗೀತ ನಿರ್ದೇಶಕ ಗುರುಕಿರಣ್‌ಗೆ ಕೆಂಪೇಗೌಡ ಪ್ರಶಸ್ತಿ |
| Published: Wednesday, May 3, 2017, 18:18 [IST] |
ಚಿತ್ರರಂಗಕ್ಕೆ ಹಲವಾರು ಖ್ಯಾತನಾಮರನ್ನು ಕೊಟ್ಟಿರುವ ತುಳುನಾಡಿನ ಓರ್ವ ಪ್ರಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ 2017 ನೇ ಸಾಲಿನ ಅತ್ಯಂತ ಪ್ರತಿಷ್ಠಿತ 'ಕೆಂಪೇಗೌಡ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಈ ಮೂಲಕ ಅವರ ಪ್ರತಿಭೆಗೆ ಹೊಸದೊಂದು ಮನ್ನಣೆ ಸಿಕ್ಕಂತಾಗಿದೆ. ಈಗಾಗಲೇ ಮೂರು ಬಾರಿ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿ ರಾಜ್ಯ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಈಗ ಕೆಂಪೇಗೌಡ ಪ್ರಶಸ್ತಿ ಸಂದಿರುವುದು ಆ ಸಾಲಿಗೆ ಮತ್ತೊಂದು ಸೇರ್ಪಡೆ. |
ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಗುರುಕಿರಣ್ ರವರು ಹಲವಾರು ಟಿವಿ ರಿಯಾಲಿಟಿ ಶೋಗಳಲ್ಲೂ ತೀರ್ಪುಗಾರರಾಗಿದ್ದರು. ಒಂದು ಹಂತದಲ್ಲಿ ನಟನಾ ಕ್ಷೇತ್ರದಲ್ಲೂ ಮಿಂಚಿರುವ ಗುರುಕಿರಣ್ ತುಳುನಾಡಿನಿಂದಲೇ ಬೆಳೆದು ಬಂದಿರುವ ಪ್ರತಿಭೆ. ಇವರು ಈಗ ಪ್ರತ್ಯೇಕ ಸಂಗೀತ ತಂಡವೊಂದನ್ನು ಹೊಂದಿದ್ದು, ಅದಕ್ಕೆ ರಾಜ್ಯವ್ಯಾಪಿಯಾಗಿ ಭಾರೀ ಬೇಡಿಕೆಯಿದೆ. ಗುರುಕಿರಣ್ ರವರ ಸಂಗೀತ ಬ್ಯಾಂಡ್ ಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲದಷ್ಟು ಅವಕಾಶಗಳು ಬರುತ್ತಿರುವುದು ಇವರಿಗಿರುವ ಬೇಡಿಕೆ, ಅಭಿಮಾನಿ ವರ್ಗಕ್ಕೆ ಒಂದು ಉತ್ತಮ ಸಾಕ್ಷಿ. |
ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿರುವ ಇವರು ಇನ್ನೂ ಕುಡ್ಲದ ಹುಡುಗನಾಗಿ ಸರಳತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಮಂಗಳೂರಿಗೆ ಬಂದಾಗ ತನ್ನ ಹಳೆಯ ಗೆಳೆಯರನ್ನು ಭೇಟಿಯಾಗದೆ ಹೋಗುವುದೇ ಇಲ್ಲ. ಸಮಯ ಸಿಕ್ಕಾಗಲೆಲ್ಲ ಅವರೊಂದಿಗೆ ದೂರವಾಣಿ ಸಂಪರ್ಕದಲ್ಲೂ ಇರುವ ಇವರು ತುಳುನಾಡಿನ ಬಗ್ಗೆ ಅಪಾರ ಒಲವು, ಅಭಿಮಾನ, ಪ್ರೀತಿ ಹೊಂದಿರುವ ಕಲಾವಿದರು. |
ಕೆಂಪೇಗೌಡ ಪ್ರಶಸ್ತಿಯಿಂದ ಅಲಂಕೃತವಾಗಿರುವ ಅವರಿಗೆ ನಾವೆಲ್ಲರೂ ಶುಭ ಕೋರುವುದರೊಂದಿಗೆ ಸಿನಿಮಾ ರಂಗದಲ್ಲಿ ಇನ್ನಷ್ಟು ಸಾಧನೆ ಮಾಡಲಿ. ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳು ಗುರು ಕಿರಣ್ ರವರಿಗೆ ಲಭಿಸಲಿ ಎಂದು ಹಾರೈಸೋಣ. |
ಮೋದಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತ ಮನೇಲೇ ಕೂತು ನೀವೂ ಗಳಿಸಬಹುದು ಬರೋಬ್ಬರಿ 70 ಸಾವಿರ; – Google Guru |
ಮೋದಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತ ಮನೇಲೇ ಕೂತು ನೀವೂ ಗಳಿಸಬಹುದು ಬರೋಬ್ಬರಿ 70 ಸಾವಿರ; |
ಒಬ್ಬ ಸಾಮಾನ್ಯ ವ್ಯಕ್ತಿಯ ಆದಾಯದ ದೊಡ್ಡ ಮೊತ್ತದ ಪಾಲು ಆತನ ವೈದ್ಯಕೀಯ ಖರ್ಚು, ಔಷಧಿಗಳಿಗೆಂದೇ ಖರ್ಚಾಗುತ್ತದೆ. ಬಡವರಿಗಾಗಿ, ಸಾಮಾನ್ಯ ಜನರಿಗೆ ಕಡಿನೆ ದರದಲ್ಲಿ ಔಷಧಿಗಳನ್ನ ನೀಡಿವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ 1, 2015 ರಲ್ಲಿ 'ಜನೌಷಧಿ' ಯೋಜನೆಯನ್ನ ಜಾರಿಗೆ ತಂದಿದ್ದರು. |
ಈ ಯೋಜನೆಯಲ್ಲಿ ಸರ್ಕಾರದ ವತಿಯಿಂದ ಅತ್ಯುತ್ತಮ ಗುಣಮಟ್ಟದ ಜೆನರಿಕ್(Generic) ಔಷಧಿಗಳ ಬೆಲೆಯನ್ನ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ಮೋದಿ ಸರ್ಕಾರದ ವತಿಯಿಂದ 'ಜನೌಷಧಿ ಸ್ಟೋರ್' ಗಳನ್ನ ಪ್ರತಿಯೊಂದು ಊರುಗಳಲ್ಲೂ ತೆರೆಯಲಾಗಿದೆ. ಆ ಸ್ಟೋರ್ ಗಳಲ್ಲಿ ನಿಮಗೆ ಬೇಕಾದ ಔಷಧಿಗಳನ್ನ ನೀವು ಬೇರೆ ಮೆಡಿಕಲ್ ಸ್ಟೋರ್ ಗಳಿಗಿಂತಲೂ 90% ಕಡಿಮೆ ಬೆಲೆಯಲ್ಲಿ ಪಡೆಯಬಹುದಾಗಿದೆ. |
ಜನರಿಕ್ ಔಷಧಿಗಳ ಬ್ರ್ಯಾಂಡೆಡ್ ಅಥವ ಫಾರ್ಮಾ ದ ಔಷಧಿಗಳಿಗೆ ಹೋಲಿಕೆ ಮಾಡಿದರೆ ಜನೌಷಧಿ ಮಳಿಗೆಯಲ್ಲಿ ಸಿಗುವ ಔಷಧಗಳು ಭಾರೀ ಕಡಿಮೆಯಿವೆ. ಜನರಿಗೆ ಅರ್ಥ ಮಾಡಿಕೊಳ್ಳಬೇಕಿರುವ ಹಾತಿಳಿದುಕೊಳ್ಳಬೇಕಿರುವ ವಿಷಯವೇನೆಂದರೆ ಬ್ರ್ಯಾಂಡೆಡ್ ಮೆಡಿಸಿನ್ ಗಳ ಹೋಲಿಕೆಯಲ್ಲಿ ಜನರಿಕ್ ಮೆಡಿಸಿನ್ ಗಳ ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಹಾಗು ಅದರ ಜೊತೆ ಜೊತೆಗೆ ಬ್ರ್ಯಾಂಡೆಡ್ ಮೆಡಿಸಿನ್ ಗಳಿಗಿಂತಲೂ ಗುಣಮಟ್ಟವೂ ಅದ್ಭುತವಾಗಿದೆ. |
ಜನರಿಕ್ ಔಷಧಿಗಳು ಮಾರ್ಕೆಟ್ ನಲ್ಲಿ ಉಪಲಬ್ಧವಿದ್ದು ಪ್ರಧಾನಮಂತ್ರಿ ಜನೌಷಧಿ ಮಳಿಗೆಯಿಂದ ನೀವು ಖರೀದಿಸಬಹುದಾಗಿದೆ. ಈ ಯೋಜನೆಯನ್ನ ಬಡವರುಹಾಗು ಸಾಮಾನ್ಯ ಜನರು ಮಾರ್ಕೆಟ್ ಬೆಲೆಗಿಂತಲೂ 60 ರಿಂದ 70 ಹಾಗು ಕೆಲವೊಂದು ಔಷಧಿ, ಮೆಡಿಸನ್ ಗಳಂತೂ 90% ವರೆಗೂ ಕಡಿಮೆ ಬೆಲೆಯಲ್ಲಿ ಸಿಗುವಂತಾಗಲು ಕೇಂದ್ರ ಸರ್ಕಾರವು ದೇಶಾದ್ಯಂತ ಹೆಚ್ಚುವರಿ ಒಂದು ಸಾವಿರ ಜನೌಷಧಿ ಮಳಿಗೆಗಳನ್ನ ತೆರಯಲಿದೆ. |
ನೀವೂ ಜನೌಷಧಿ ಮಳಿಗೆಯನ್ನ ಸ್ಟಾರ್ಟ್ ಮಾಡಬಹುದು: |
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾಗಿರುವ ಜನೌಷಧಿ ಕೇಂದ್ರವನ್ನ ಯಾರು ಬೇಕಾದರೂ ಶುರು ಮಾಡಬಹುದಾಗಿದೆ. ಇದಕ್ಕೆ ಮೊಟ್ಟ ಮೊದಲ ಅರ್ಹತೆಯೆಂದರೆ ನೀವು ಭಾರತೀಯ ಪೌರತ್ವ ಹೊಂದಿರಬೇಕು. ಆಸ್ಪತ್ರೆ, ಸರ್ಕಾರೇತರ ಸಂಘಟನೆ, ಡಾಕ್ಟರ್ ಗಳ ಸಮೇತ ಸಾಮಾನ್ಯ ಜನರೂ ಕೂಡ ಜನೌಷಧಿ ಕೇಂದ್ರವನ್ನ ಶುರು ಮಾಡಬಹುದಾಗಿದೆ. ಒಂದು ವೇಳೆ ನೀವು SC/ST ಶ್ರೇಣಿ ಅಥವ ದಿವ್ಯಾಂಗ ವರ್ಗಕ್ಕೆ ಸೇರಿದವರಾಗಿದ್ದರೆ ಭಾರತ ಸರ್ಕಾರವೇ ನಿಮಗೆ 50 ಸಾವಿರ ರೂ.ಗಳ ವರೆಗೆ ಆರ್ಥಿಕ ಸಹಾಯ ಕೂಡ ಮಾಡುತ್ತೆ. |
ಇದಕ್ಕೆ ಬೇಕಾಗುವ ಅಗತ್ಯ ದಾಖಲಾತಿಗಳೇನು? |
ಒಂದು ವೇಳೆ ನೀವೂ ಕೂಡ ಜನೌಷಧಿ ಕೇಂದ್ರವನ್ನ ಶುರು ಮಾಡಲು ಇಚ್ಛಿಸಿದ್ದರೆ ನಿಮ್ಮ ಬಳಿ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಹೊಂದಿರಲೇಬೇಕು. ಒಂದು ವೇಳೆ ನೀವು ಯಾವುದಾದರೂ ಆಸ್ಪತ್ರೆ ಹಾಗು NGO ವತಿಯಿಂದ ಇದನ್ನ ಶುರು ಮಾಡಬೇಕಿದ್ದರೆ ನೀವು ಆ ಸಂಸ್ಥೆಯ ರೆಜಿಸ್ಟ್ರೇಶನ್ ಪ್ರಮಾಣಪತ್ರ ಹಾಗು ಪ್ಯಾನ್ ಕಾರ್ಡ್ ಹೊಂದಿರಬೇಕು. ಈ ಜನೌಷಧಿ ಕೇಂದ್ರ ತೆರೆಯಲು ನೀವು 10 Sq.ft ಜಾಗ ಅಥವ ನಿಮ್ಮದೇ ಅಥವ ಬಾಡಿಗೆಗಾಗಿ ಮಳಿಗೆಯನ್ನ ಹೊಂದಿರಬೇಕು. |
ಈ ರೀತಿಯಾಗಿ ಮಾಡಬಹುದು ಆನಲೈನ್ ರೆಜಿಸ್ಟ್ರೇಶನ್: |
ನೀವು ಕೂಡ ಜನೌಷಧಿ ಕೇಂದ್ರ ತೆರೆಯಲು ಚಿಂತಿಸಿದ್ದರೆ ಅದಕ್ಕಾಗು ಆನಲೈನ್ ಮೂಲಕ http://janaushadhi.gov.in/index.aspx ಲಿಂಕ್ ವಿಸಿಟ್ ಮಾಡಬಹುದು. ಕ್ಲಿಕ್ ಮಾಡಿದ ಬಳಿಕ ನಿಮ್ಮ screen ಮೇಲೆ Bureau of Pharma PSUs of India (BPPI) ನ ಪೇಜ್ ಓಪನ್ ಆಗುತ್ತೆ. ಈ ಪೇಜ್ ನಲ್ಲಿ ನಿಮಗೆ ಹಲವಾರು ಆಪ್ಷನ್ ಗಳು ಸಿಗುತ್ತವೆ. ಅಲ್ಲಿ ನಿಮಗೆ registration ಕೂಡ ಸಿಗುತ್ತೆ. Registration ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮಗೆ ಅಲ್ಲೂ ಹಲವಾರು option ಕಾಣಸಿಗುತ್ತವೆ. ಅಲ್ಲಿ ನೀವು offline registration ಹಾಗು online registration ಆಪ್ಷನ್ ಗಳ ಮೂಲಕ registration ಮಾಡಿಕೊಳ್ಳಬಹುದು. ವೆಬಸೈಟ್ ನಲ್ಲಿ ನಿಮಗೆ ಜನೌಷಧಿ ಕೇಂದ್ರ ತೆರೆಯಲು ಬೇಕಾದ ಮಾಹಿತಿಯನ್ನ guidelines ಮೂಲಕ ತಿಳಿದುಕೊಳ್ಳಬಹುದು. |
Online apply ಮಾಡಲು ನೀವು ಕ್ಲಿಲ್ ಮಾಡುತ್ತಲೇ ನಿಮ್ಮೆದುರು Login ಆಪ್ಷನ್ ಕಾಣುತ್ತೆ. ಅದರಲ್ಲಿ ಹೋದ ಬಳಿಕ ಅಲ್ಲಿ ನೀವು ನಿಮ್ಮ ಖುದ್ದು ಕೇಂದ್ರದ್ದಾಗಲಿ ಅಥವ ಸಂಸ್ಥೆಯ ಮೂಲಕ registration ಮಾಡಿಕೊಳ್ಳಬೇಕು. ಆ option ನಿಮಗೆ login ಬಟನ್ ಕೆಳಗಡೆಯೇ ನೀಡಲಾಗಿದೆ. Registration ಬಟನ್ ಮೇಲೆ ಕ್ಲಿಕ್ ಮಾಡುತ್ತಲೇ ನಿಮ್ಮ ಹೆಸರು, ಮೊಬೈಲ್ ನಂಬರ್, ಪರ್ಸನಲ್ ಡಿಟೇಲ್ಸ್ ಗಳನ್ನ ತುಂಬಬೇಕಾಗುತ್ತದೆ. |
ಇದಾದ ಬಳಿಕ ನೀವು ಜನೌಷಧಿ ಮಳಿಗೆ ತೆರೆಯಲು ರೆಜಿಸ್ಟರ್ಡ್ ಮೆಂಬರ್ ಆಗುವಿರಿ. ಈ ಪೂರ್ಣ ಪ್ರಕ್ರಿಯೆ ಮುಗಿದ ಬಳಿಕ ನೀವು ನಿಮ್ಮ ಆಧಾರ್ ನಂಬರ್ ಹಾಕಿ ನಿಮ್ಮಆಧಾರ್ ನಂಬರ್ ರೆಜಿಸ್ಟರ್ ಮಾಡಿಕೊಳ್ಳಬೇಕು. ನಿಮ್ಮ ಆಧಾರ್ ನಂಬರ್ ಧೃಢೀಕರಿಸಲು ನಿಮ್ಮ ಮೊಬೈಲ್ ಗೆ OTP ಆಪ್ಷನ್ ಕೂಡ ಸೆಲೆಕ್ಟ್ ಮಾಡಬಹುದಾಗಿದೆ. ಅದಾದ ಬಳಿಕ ನಿಮ್ಮೆದುರು ಒಂದು ಫಾರಂ ಓಪನ್ ಆಗುತ್ತೆ, ಅದನ್ನ ತುಂಬಿದ ಬಳಿಕ submit ಬಟನ್ ಕ್ಲಿಕ್ ಮಾಡಿ ಬಳಿಕ ಆ ಫಾರಂ ನ ಪ್ರಿಂಟ್ ತೆಗೆದುಕೊಳ್ಳಿ. ಈ ಪ್ರಿಂಟ್ ತಗೊಂಡು ನೀವು Bureau of Pharma PSU of India (BPPI) ನಲ್ಲಿ 2 ಸಾವಿರ ರೂ.ಗಳ ಫೀಸ್ ಕಟ್ಟಿ ರೆಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು. ಬಳಿಕ ವಿಲೇಜ್ ಲೆವೆಲ್ ಎಂಟರ್‌ಪ್ರಿನಿಯರ್(VLE) ಯಿಂದ ಲೈಸೆನ್ಸ್ ಪಡೆದುಕೊಳ್ಳಬೇಕು. |
ಏನಿದೆ ಇದರಿಂದ ಲಾಭ? |
ಜನೌಷಧಿ ಕೇಂದ್ರ ನಡೆಸಲಿಕ್ಕಾಗಿ ನಿಮಗೆ ಔಷಧಿಗಳ MRP ಮೇಲಿನ ಟ್ಯಾಕ್ಸ್ ನ ಹೊರತಾಗಿ 20% ಹೆಚ್ಚುವರಿ ಲಾಭವನ್ನ ನೀಡಲಾಗುವುದು. ಈ ಯೋಜನೆಯ ಇನ್ನೊಂದು ವಿಶೇಷತೆ, ಲಾಭವೇನೆಂದರೆ ಜನೌಷಧಿ ಕೇಂದ್ರ ತೆರೆಯಲು ಕೇಂದ್ರದ ಮೋದಿ ಸರ್ಕಾರವೇ ಪ್ರೋತ್ಸಾಹ ಧನವನ್ನೂ ನೀಡುತ್ತೆ. ಈ ಹಣ ಮಾಸಿಕ ಮಾರಾಟದ 15% ನ ದರದಿಂದ ಸಿಗುತ್ತೆ ಹಾಗು ಏನಿಲ್ಲವೆಂದರೂ ವಾರಕ್ಕೆ 10 ಸಾವಿರ ರೂ ಸಿಗುತ್ತೆ. ಇದರರರ್ಥ ಪ್ರತಿ ತಿಂಗಳೂ ನೀವು 60 ರಿಂದ 70 ಸಾವಿರ ರೂಪಾಯಿಗಳನ್ನ ಗಳಿಸೋದು ಮಾತ್ರ ಪಕ್ಕಾ. |
Previous ಕರ್ನಾಟಕದಲ್ಲಿ ಬಿಜೆಪಿ 25+1 ಸೀಟ್ ಗೆಲ್ಲಲು ಪ್ರಮುಖ ಕಾರಣವೇನು? ಕಳೆದ ವರ್ಷ ಯಡಿಯೂರಪ್ಪ ಈ ಬಗ್ಗೆ ಏನು ಹೇಳಿದ್ದರು ಗೊತ್ತಾ? |
ನದಿ ಪ್ರೀತಿ: 2008-08-03 |
ಪ್ರತಿ ಹುಡುಗಿಯ ಕನಸು, ನನಸು ಮತ್ತು ಈ ಮೊಗ್ಗಿನ ಮನಸು |
ನನ್ನನ್ನ ನೀನು ಎಷ್ಟು ಇಷ್ಟ ಪಡ್ತೀಯ? |
ನೀನು ನಿನ್ನನ್ನ ಎಷ್ಟು ಇಷ್ಟ ಪಡ್ತೀಯೋ ಅಷ್ಟು. |
ಹುಡುಗಿ ಕಣ್ಣಲ್ಲಿ ಭರವಸೆಯ ಬೆಳಕು ಫಳ್ ಅನ್ನುತ್ತದೆ. |
ಅದಾದ ಮೇಲೆ ಒಂದಿನ ಬಂದವಳೇ ನನ್ನನ್ನು ಮರೆತುಬಿಡು ಅಂದುಬಿಡುತ್ತಾಳೆ.ಹಾಗೆಲ್ಲ ಮರೆಯೋದಕ್ಕೆ ಸಾಧ್ಯಾನಾ? ಏನಾಗಿದೆ ನಿನಗೆ? ಅನ್ನುತ್ತಾನೆ ಹುಡುಗ. ನನ್ನನ್ನ ಏನೂ ಕೇಳಬೇಡ, ಏನೂ ಹೇಳಬೇಡ. ಜಸ್ಟ್ ಇಷ್ಟ ಇಲ್ಲ ಅಂದುಬಿಡುತ್ತಾಳೆ. ಹುಡುಗನಿಗೆ ಸಿಟ್ಟು ಬಂದು ನಿನ್ನನ್ನ ಕೊಂದಾಕಿಬಿಡ್ತೀನಿ ಅನ್ನುತ್ತಾನೆ. ಕೊಂದುಬಿಡು. ಇಲ್ಲ ನನ್ನನ್ನ ಮರೆತುಬಿಡು ಅನ್ನುತ್ತಾಳೆ ಹುಡುಗಿ ತಣ್ಣಗೆ. ಹುಡುಗ ಎರಡನ್ನು ಮಾಡುವುದಿಲ್ಲ. ಆದ ಶಾಕ್ನಿಂದ ಚೇತರಿಸಿಕೊಂಡು ತಿರುಗಿ ನೋಡುವಷ್ಟರಲ್ಲಿ ಅವಳು ಬಹಳ ದೂರ ನಡೆದುಬಿಟ್ಟಿರುತ್ತಾಳೆ. ಹೆಣ್ಣೆಂದ್ರೆ ಅಷ್ಟೊಂದು ನಿಭರ್ಾವುಕಾ ಮನಸ್ಸಾ? ಹುಡುಗರೆಂದ್ರೆ ಹೀಗೇನಾ? |
ಮೊಗ್ಗಿನ ಮನಸ್ಸು ನೋಡಿ ಬಂದಾಗಿನಿಂದ ಮನಸ್ಸು ಒಂದೊಳ್ಳೆ ಸಿನೆಮಾ ನೋಡಿದ ಖುಷಿಗೆ ಬಿದ್ದಿದೆ. ಇಷ್ಟು ಕ್ಲಿಯರ್ ಆಗಿ, ಇಷ್ಟು ಲವಲವಿಕೆಯಿಂದ, ಅದೂ ಇಷ್ಟು ಚಂದಕ್ಕೆ ಒಂದು ಸಿನೆಮಾ ಮಾಡಲು ಸಾಧ್ಯಾನಾ? ನಿಜ ಹೇಳಬೇಕೆಂದ್ರೆ, ಇಂಥದ್ದೊಂದು ಪಿಚ್ಚರ್ ನೋಡಿಯೇ ಎಷ್ಟೋ ವರ್ಷಗಳಾಗಿತ್ತು. ಅಸಲಿಗೆ ಮೊಗ್ಗಿನ ಮನಸ್ಸಿನ ನಿಜವಾದ ಸ್ಟಫ್ ಏನು?ನಾಲ್ಕು ಹುಡುಗೀರು. ಮತ್ತವರ ಮನಸ್ಸು. ಆ ಮನಸ್ಸಿನ ಕಾಂಕ್ಷೆ, ಧಾವಂತ. ತಳಮಳ ಮತ್ತು ಕೊನೆಗೆ ಒಡೆದ ಹೃದಯದ ರೋದನ. ಚಿಕ್ಕ ಚಿಕ್ಕ ಖುಷಿಗಳಿವೆ. ಆ ಖುಷಿಯ ಮಗ್ಗುಲಲ್ಲೆ ಅಡಗಿದ್ದ ದುಃಖದ ಛಾಯೆಯೂ ಇದೆ. ಅಗಲಿಕೆಯ ಜೊತೆಗೆ ಮತ್ತೆ ಸೇರಿದ ಖುಷಿ ಕೂಡ ಇದೆ. ಅದಕ್ಕೆ ಅಬ್ಬರವಿದೆಯಾ ಅಂದ್ರೆ ನೋ. ಎಲ್ಲಾ ತಣ್ಣಗಿನದ್ದು.ಹಾಗೆ ನೋಡಿದ್ರೆ ಇಡೀ ಚಿತ್ರದಲ್ಲಿ ಎಲ್ಲೂ ಅಬ್ಬರವಿಲ್ಲ. ಫೈಟ್ ಇಲ್ಲ. ತುಂಬಾ ಎಮೋಷನಲ್ ಅನ್ನುವ ಶಾಟ್ಸ್ಗಳಿಲ್ಲ. ಅಳುಮುಂಜೀ ಪಾತ್ರಗಳಿಲ್ಲ. ಆದರೂ ಕಣ್ಣು ಅಲ್ಲಲ್ಲಿ ಒದ್ದೆಯಾಗುತ್ತದೆ. ಹೀಗೆ ನನಗೂ ಆಗಿತ್ತಲ್ವಾ ಅಂತ ಹುಡುಗಿಯ ಮನಸ್ಸು ದಿಗ್ಗನೆದ್ದು ಕುಳಿತು ಕಾಡುತ್ತದೆ. ತೀರಾ ಘಾಸಿಗೊಂಡ ಮನಸ್ಸನ್ನಿಟ್ಟುಕೊಂಡು ಬಂದು ಅಮ್ಮನ ತೊಡೆಯ ಮೇಲೆ ಮಲಗಿ ಒಳಗೊಳಗೇ ದುಃಖಿಸುವ ಹುಡುಗಿಯ ಮನಸ್ಸು ನನ್ನದೂ ಏನೋ ಅನ್ನಿಸುವಷ್ಟು ಆಪ್ತವೆನಿಸಿಬಿಡುತ್ತದೆ. ಪ್ರೀತಿಸಿದ್ದು ತಪ್ಪಾ? ಪ್ರೀತಿಸಿದ ಮೇಲೆ ಕಾಮಿಸಿದ್ದು ತಪ್ಪಾ? ಯಾರು ಸರಿ? ಯಾರು ತಪ್ಪು? ಹುಡುಗರೆಂದ್ರೆ ಹೀಗೇನಾ? ಅಥವಾ ಹುಡುಗಿಯರೆಂದ್ರೆ ಹೀಗೀಗೇನಾ? ಪ್ರೀತಿ ನಂಬಿಕೆಯಾ, ಅಪನಂಬಿಕೆಯಾ? ಪ್ರೀತಿ ಸಾವಾ? ಗೆಲುವಾ? ಅವಕ್ಕೆಲ್ಲ ಪಾತ್ರಗಳೇ ಉತ್ತರ ಹೇಳುತ್ತಾ ಸುಮ್ಮನೆ ಎಲ್ಲವನ್ನೂ ಒಡಲಲ್ಲಿಟ್ಟುಕೊಂಡು ಸಾಗುವ ತಣ್ಣನೆಯ ನದಿಯ ಹಾಗೆ ಚಿತ್ರ ಸಾಗುತ್ತದೆ. |
ಹೇಳಬೇಕೆಂದ್ರೆ, ಮೊಗ್ಗಿನ ಮನಸ್ಸು ಪ್ರತಿಯೊಂದು ಹುಡುಗಿಯ ಮನಸ್ಸಿನ ಕ್ಯಾನ್ವಾಸ್. ಮೊದಲ ಸಲ ಪಿಯುಸಿ ಮೆಟ್ಟಿಲು ಹತ್ತುವ ಹುಡುಗಿಯರ ಧಾವಂತದಿಂದ ಹಿಡಿದು ಕಡೆಗೆ ತಾನು ಜೀವ ಹೋಗುವಷ್ಟು ಪ್ರೀತಿಸುವ ಹುಡುಗನನ್ನು ನಿರಕರಿಸುವ ತನಕ ಕ್ಯಾನ್ವಾಸ್ ವಿಸ್ತಾರಗೊಂಡಿದೆ. ಮೊದಲ ಕ್ರಷ್, ಮೊದಲ ಸ್ಪರ್ಶ, ಮೊದಲ ಮಾತು ಹುಡುಗಿ ಪುಳಕಗೊಳ್ಳುತ್ತಾಳೆ. ಇಡೀ ಮೊಗ್ಗಿನ ಮನಸು ನಿಲ್ಲುವುದು ಅದರ ಲವಲವಿಕೆಯಲ್ಲಿ. ನಾಲ್ಕೂ ಹುಡುಗಿಯರ ಮನಸ್ಸಿನ ಭಾವಗಳು ಎಲ್ಲೋ ಒಂದು ಕಡೆ ಒಬ್ಬಳದೆ ಅನ್ನುವಷ್ಟು ಒಂದು ಫ್ರೇಮ್ಗೆ ಒಳಗಾದರೂ ಹಾಗೇ ನೋಡ ನೋಡುತ್ತಲೇ ಅವು ಪ್ರತಿಯೊಂದು ಹುಡುಗಿಯ ಮನಸಿನ ಭಾವನೆಗಳೂ ಆಗಿಬಿಡುವ ಸಾಧ್ಯತೆಯೇ ಹೆಚ್ಚು. ನಿನಗೋಸ್ಕರ ಜೀವ ಬೇಕಾದ್ರೆ ಕೊಡ್ತೇನೆ ಅಂತಿದ್ದ ಹುಡುಗನೇ ಸುರಿವ ಮಳೆಯಲ್ಲಿ ನಿಂತು ನೀನು ನಿನ್ನ ಫ್ರೆಂಡ್ಸ್ ಜೊತೆ ಹಾಗೆಲ್ಲ ಚೆಲ್ಲು ಚೆಲ್ಲಾಗಿ ನಗುವುದು ನನಗಿಷ್ಟ ಇಲ್ಲ ಅಂದುಬಿಡುತ್ತಾನೆ. ಅರೆ ನನ್ನನ್ನ ಪ್ರೀತಿಸುತ್ತಿರುವ ಹುಡುಗ ಇವನೇನಾ? ಅಂತ ಹುಡುಗಿಗೆ ಕ್ಷಣ ತಬ್ಬಿಬ್ಬಾಗುತ್ತದೆ. ಹಾಗೆಲ್ಲ ಅನ್ನಬೇಡ ಕಣೋ ಅಂತಾಳೆ. ಅವನು ನಿನಗೆ ನನಗಿಂತ ಅವರೇ ಹೆಚ್ಚಾ ಅಂತ ಹುಚ್ಚಾಡುತ್ತಾನೆ. ಡೋಂಟ್ ಟ್ರೀಟ್ ಲೈಕ್ ಅ ಪ್ರಾಪಟರ್ಿ ಅಂತ ಗದರಿ ಎದ್ದುಹೋಗಿಬಿಡುತ್ತಾಳೆ. ಪ್ರೀತಿ ನೆಗೆದು ಬೀಳುತ್ತದೆ. ಇಡೀ ಚಿತ್ರದಲ್ಲಿ ಪ್ರೀತಿ ಗೆಲ್ಲುವ, ಪ್ರೀತಿ ಸೋಲುವ ಮತ್ತೆ ಪ್ರೀತಿ ಗೆಲ್ಲುವ ಅನುಭೂತಿ ಇದೆ. ವಂಡರ್ಫುಲ್ ಅನ್ನಿಸುವ ಲೊಕೇಷನ್ಗಳಿವೆ. ಯಾಣವನ್ನ, ಬೇಕಲ್ ಫೋಟರ್್ ಅನ್ನ ಅಷ್ಟು ಅದ್ಭುತ ಅನ್ನಿಸುವಷ್ಟರ ಮಟ್ಟಿಗೆ ತೋರಿಸಿದ್ದಾರೆ. ಹಾಡುಗಳು ತೀರಾ ಮೆಲೊಡಿ ಅನ್ನುವಂತಿಲ್ಲವಾದರೂ ಓಕೆ. |
ಅಷ್ಟೊಂದು ಚೆನ್ನಾಗಿ ಹುಡುಗಿಯರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಂಡಿರಿ ಅಂದ್ರೆ ಗೆಳೆಯ ಶಶಾಂಕ್, ಇದು ಸುಮ್ಮನೆ ಹೆಣೆದ ಕಥೆಯಲ್ಲ. ಪಕ್ಕಾ ರಿಯಲ್ ಇನ್ಸಿಡೆಂಟ್ಗಳನ್ನ ಸ್ಟಡಿ ಮಾಡಿದೀನಿ ಅಂತಾರೆ. ಅದಕ್ಕೆ ಅವರಿಗೆ ಪ್ರೇರಣೆಯೂ ಇದೆಯಂತೆ. ಹ್ಯಾಟ್ಸಾಫ್ ಟು ಯು ಶಶಾಂಕ್. ಹಾಗೆ ಇಂಥದ್ದೊಂದು ವಿಭಿನ್ನ ಚಿತ್ರಕ್ಕೆ ಹಣ ಹಾಕಿದ ಕೃಷ್ಣಪ್ಪನವರಿಗೂ ಒಂದು ಹ್ಯಾಟ್ಸಾಫ್. ಒಟ್ಟಿನಲ್ಲಿ ಮೊಗ್ಗಿನ ಮನಸು ಚಿತ್ರ ನೋಡಿ ಹೊರಬಂದ ಮೇಲೂ ಕಾಡುತ್ತದೆ. ಒಂದು ಚಿತ್ರ ಕಾಡಿತು ಅಂದ್ರೆ ಅದು ನಿಜಕ್ಕೂ ಗೆದ್ದಂತೆಯೇ. ಹಾಗಾಗಿ ಮೊಮ ಗೆದ್ದಿದೆ.ಬಿಡುವು ಮಾಡಿಕೊಂಡು ಒಮ್ಮೆ ಹೋಗಿ ಬನ್ನಿ. ಇಲ್ಲ ಅಂದ್ರೆ ಒಂದು ಒಳ್ಳೆ ಚಿತ್ರ ಖಂಡಿತಾ ಮಿಸ್ ಮಾಡಿಕೊಳ್ತೀರಿ. |
ಸದಸ್ಯ:Sinchan1940560/ನನ್ನ ಪ್ರಯೋಗಪುಟ - ವಿಕಿಪೀಡಿಯ |
ಸದಸ್ಯ:Sinchan1940560/ನನ್ನ ಪ್ರಯೋಗಪುಟ |
ಗೋಕರ್ಣ -ಉತ್ತರ ಕನ್ನಡ ಜಿಲ್ಲೆ[ಬದಲಾಯಿಸಿ] |
ನನ್ನ ಹೆಸರು ಸಿಂಚನ್ ಉಲ್ಲಾಸ್ ನಾಯಕ್. ನಾನು ೧೩-೦೫-೨೦೦೧ ರ ಕಾರವಾರ ಜಿಲ್ಲೆಯ ಹೊನ್ನಾವರ್ ತಾಲೂಕಿನಲ್ಲಿ ಜನಿಸಿದ್ದೆನೆ. ನನ್ನ ತಂದೆಯ ಹೆಸರು ಉಲ್ಲಾಸ್ ನಾಯಕ್ .ನನ್ನ ತಾಯಿಯ ಹೆಸರು ವೆದಿಕಾ ನಾಯಕ್. |
ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ಪ್ರಾಣಲಿಂಗ ಅಥವಾ ಆತ್ಮಲಿಂಗ ಎಂದು ಕರೆಯಲ್ಪಡುತ್ತದೆ ಇದಕ್ಕೆ ಕಾರಣ ಇಲ್ಲಿರುವ ಶಿವಲಿಂಗ ಇದರಿಂದ ಭಕ್ತರಲ್ಲಿ ಇದು ಜನಪ್ರಿಯವಾಗಿದೆ . ಈ ಧಾರ್ಮಿಕ ಕ್ಷೇತ್ರವನ್ನು ಕಾಶಿ ಅಥವಾ ವಾರಣಾಸಿಯ ಶಿವನ ದೇವಾಲಯಗಳಷ್ಟೇ ಪವಿತ್ರವಾದುದು ಎಂದು ಪರಿಗಣಿಸಲ್ಪಟ್ಟಿದೆ ಅದಲ್ಲದೆ ಪ್ರಸ್ತುತ ಏಳು ಮುಕ್ತಿಕ್ಷೇತ್ರಗಳಲ್ಲಿ ಇದು ಕೂಡಾ ಒಂದಾಗಿದೆ. ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಬರುವ ಭಕ್ತರು ಮೊದಲು ಅರಬ್ಬೀ ಸಮುದ್ರದಲ್ಲಿ ಒಮ್ಮೆ ಜಳಕ ಮಾಡಿ ಬರುವುದು ಇಲ್ಲಿನ ರೂಢಿ. ಬಿಳಿ ಗ್ರಾನೈಟ್ ಕಲ್ಲುಗಳನ್ನು ಬಳಸಿ ತಯಾರಿಸಲಾಗಿರುವ ಈ ರಚನೆಯು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಪ್ರತಿನಿಧಿಸುತ್ತದೆ.ದೇವಸ್ಥಾನ ತಲುಪಿದ ನಂತರ, ಪ್ರವಾಸಿಗರು ಮಧ್ಯ ಭಾಗದಲ್ಲಿ ರಂದ್ರವುಳ್ಳ ಚೌಕಾಕಾರದ ಸಾಲಿಗ್ರಾಮ ಪೀಠದಲ್ಲಿ ಶಿವಲಿಂಗವನ್ನು ಸ್ಥಾಪಿಸಿರುವುದನ್ನು ಗಮನಿಸಬಹುದು . ಈ ಕೇಂದ್ರಭಾಗದಲ್ಲಿನ ರಂದ್ರ ಶಿವಲಿಂಗವನ್ನು ಮೇಲಿನಿಂದ ವೀಕ್ಷಿಸಲು ಭಕ್ತರಿಗೆ ಸುಲಭವಾಗಿಸುತ್ತದೆ . ಇದಲ್ಲದೆ ಈ ದೇವಾಲಯದಲ್ಲಿ 1500 ವರ್ಷದ ಹಿಂದಿನ ಕಲ್ಲಿನಿಂದ ಕೆತ್ತಿದ ಶಿವನ ಒಂದು ಆಕೃತಿಯಿದೆ . ಹಿಂದೂ ಧರ್ಮದ ಜನರ ತಮ್ಮ ಮೃತ ಸಂಬಂಧಿಕರ ಅಂತಿಮ ಆಚರಣೆಗಳನ್ನು ಕೈಗೊಳ್ಳಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ . ಈ ಲಿಂಗದ ದರ್ಶನ ಪಡೆದವರಿಗೆ ಆಶೀರ್ವಾದದ ತುಂತುರುವಾಗುತ್ತದೆ ಎಂಬುದು ನಂಬಿಕೆ . ಮಹಾಬಲೇಶ್ವರ ದೇವಸ್ಥಾನವು ಶಿವರಾತ್ರಿಯ ಸಂದರ್ಭದಲ್ಲಿ ನೂರಾರು ಭಕ್ತರಿಂದ ತುಂಬಿ ತುಳುಕುತ್ತದೆ. |
ಆತ್ಮ ಲಿಂಗ ಕ್ಷೇತ್ರ |
ಗೋಕರ್ಣ ಒಂದು ಉಳಿದ ಎರಡು ಕ್ಷೇತ್ರಗಳೆಂದರೆ ವಾರಾಣಾಸಿ ಹಾಗೂ ರಾಮೇಶ್ವರ. ಗೋಕರ್ಣ ಕ್ಷೇತ್ರದ ಸುತ್ತ ಅರೇಬಿಯಾ ಸಮುದ್ರ, ಪೂರ್ವದಲ್ಲಿ ಸಿದ್ದೇಶ್ವರ ಕ್ಷೇತ್ರ, ಉತ್ತರದಲ್ಲಿ ಗಂಗಾವಳಿ ನದಿ, ದಕ್ಷಿಣದಲ್ಲಿ ಅಘನಾಶಿನಿ ನದಿಗಳಿವೆ. ಇಂಥಹ ಪ್ರಕೃತಿ ರಮಣೀಯತೆಯಿಂದ ಕಂಗೊಳಿಸುತ್ತಿರುವ ಈ ಕ್ಷೇತ್ರದಲ್ಲಿ ಶಿವನಆತ್ಮ ಲಿಂಗ ಕ್ಷೇತ್ರ. |
ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರುನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ ಎನ್ನಲಾಗುತ್ತದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ಸಮುದ್ರ ತಟದಲ್ಲಿರುವ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು. ಇಲ್ಲಿ ಈ ಕರದ ವಿರೋಧದ ಸಂಕೇತವಾಗಿ ನಿಬಂಧನೆಯ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಈ ಚಳುವಳಿಯು ೧೯೩೦ನೇ ಇಸವಿಯ ಮಾರ್ಚ್ ೧೨ ರಿಂದ ಏಪ್ರಿಲ್ ೬ರವರಗೆ ನಡೆಯಿತು. |
"https://kn.wikipedia.org/w/index.php?title=ಸದಸ್ಯ:Sinchan1940560/ನನ್ನ_ಪ್ರಯೋಗಪುಟ&oldid=931560" ಇಂದ ಪಡೆಯಲ್ಪಟ್ಟಿದೆ |
ರೆಡ್ಡಿ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ | HC reserves order Reddy Case | Gali Reddy Petition CBI Enquiry | Parappana Agrahara Jail Bangalore|ತೀರ್ಪು ಕಾಯ್ದಿರಿಸಿದ ಹೈಕೋರ್ಟ್| ಗಾಲಿ ರೆಡ್ಡಿ ಸಿಬಿಐ ತನಿಖೆ ಪ್ರಶ್ನೆ| ಪರಪ್ಪನ ಅಗ್ರಹಾರ ಬೆಂಗಳೂರು| - Kannada Oneindia |
ರೆಡ್ಡಿ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ |
| Published: Friday, March 16, 2012, 10:15 [IST] |
ಬೆಂಗಳೂರು, ಮಾ.16 : ಅಕ್ರಮ ಗಣಿ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ತಮ್ಮನ್ನು ಸಿಬಿಐ ಪೊಲೀಸ್ ಬಂಧನಕ್ಕೆ ನೀಡಿದ ಸಿಬಿಐ ನ್ಯಾಯಾಲಯ ಆದೇಶ ಪ್ರಶ್ನಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ. |
ಅಕ್ರಮ ಗಣಿ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಹೈದರಾಬಾದ್‌ನ ಚಂಚಲ ಗೂಡ ಜೈಲಿನಿಂದ ಕರೆತಂದಿದ್ದ ಸಿಬಿಐ ಪೊಲೀಸರು, ಮಾ.2ರಂದು ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪೊಲೀಸರ ಮನವಿ ಮೇರೆಗೆ ನ್ಯಾಯಾಲಯ ರೆಡ್ಡಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಾ.16ರವರೆಗೆ ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶಿಸಿತ್ತು. |
ಇದನ್ನು ಪ್ರಶ್ನಿಸಿದ್ದ ರೆಡ್ಡಿ , ಸಿಬಿಐ ನ್ಯಾಯಾಲಯದ ಆದೇಶ ರದ್ದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು. ಈ ಸಂಬಂಧ ಗುರುವಾರ ವಾದ-ಪ್ರತಿವಾದ ಆಲಿಸಿದ ನ್ಯಾ.ಎನ್.ಆನಂದ ಅವರ ಏಕ ಸದಸ್ಯ ಪೀಠ ತೀರ್ಪು ಕಾಯ್ದಿರಿಸಿತು. |
Karnataka High Court reserved order on Gali Reddy petition on question CBI enquiry. HC special judge N Anand heard the petition and reserved orders on the same on Thursday(Mar.15). |
ಕಾರು ಪ್ರಿಯರಿಗೆ ಸಿಹಿಸುದ್ದಿ! ಮಾರುತಿ ಸುಜುಕಿ, ಹುಂಡೈ, ಹೋಂಡಾ ಕಾರಿನ ಮೇಲೆ ಭರ್ಜರಿ ಆಫರ್ | Maruti Suzuki Baleno, Maruti Suzuki Swift, Hyundai Elite i20, Hyundai Grand i10, Honda Jazz: Check out offers– News18 Kannada |
ಕಾರು ಪ್ರಿಯರಿಗೆ ಸಿಹಿಸುದ್ದಿ! ಮಾರುತಿ ಸುಜುಕಿ, ಹುಂಡೈ, ಹೋಂಡಾ ಕಾರಿನ ಮೇಲೆ ಭರ್ಜರಿ ಆಫರ್ |
| October 12, 2019, 16:09 IST |
ದೀಪಾವಳಿ ಹಬ್ಬದಂದು ಅಟೋಮೊಬೈಲ್ ಸಂಸ್ಥೆಗಳು ಉತ್ಪಾದಿಸಿದ ಕೆಲ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಆಕರ್ಷಕ ಬೆಲೆಗೆ ಗ್ರಾಹಕರ ಕೈ ಸೇರಲು ದರ ಕಡಿತ ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ, ಹುಂಡೈ, ಹೋಂಡಾ ಕಂಪೆನಿಗಳು ಕೆಲ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.. |
ಮಾರುತಿ ಸುಜುಕಿ ಕಂಪೆನಿ ಉತ್ಪಾದಿಸುವ ಬಲೆನೋ ಪೆಟ್ರೋಲ್ ರೂಪಾಂತರ ಕಾರಿನ ಮೇಲೆ 35 ಸಾವಿರ ರೂ.ವಿನ ಪ್ರಯೋಜನವನ್ನು ನೀಡುತ್ತಿದೆ. ಅದರಲ್ಲಿ ಗ್ರಾಹಕರಿಗೆಂದು 15 ಸಾವಿರ ಡಿಸ್ಕೌಂಟ್ ನೀಡಿದರೆ, ಎಕ್ಸ್ಚೇಂಜ್ ಬೋನಸ್ಗಾಗಿ 15 ಸಾವಿರವನ್ನು ಕಂಪೆನಿ ನೀಡುತ್ತಿದೆ. ಜೊತೆಗೆ ಕಾರ್ಪೋರೇಟ್ ಆಫರ್ 5 ಸಾವಿರ ರೂ. ನೀಡುತ್ತಿದೆ |
ಗ್ರಾಹಕರು ಬಲೆನೋ ಡೀಸೆಲ್ ರೂಪಾಂತರ ಕಾರಿನ ಮೇಲೆ 62,400 ರೂ. ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ 20 ಸಾವಿರ ರೂ ಆಫರ್ ಒದಗಿಸಿದರೆ, ಎಕ್ಸ್ಚೇಂಜ್ ಬೋನಸ್ಗಾಗಿ 15 ಸಾವಿರ ರೂ. ನೀಡುತ್ತಿದೆ. ಜೊತೆಗೆ 10 ಸಾವಿರ ರೂ. ವಿನ ಕಾರ್ಪೋರೇಟ್ ಆಫರ್ ಮತ್ತು 5 ವರ್ಷದ ವ್ಯಾರಂಟಿ ನೀಡುತ್ತಿದೆ. |
ಮಾರುತಿ ಸುಜುಕಿ ಕಂಪೆನಿಯ ಪೆಟ್ರೋಲ್ ರೂಪಾಂತರ ಸ್ವಿಫ್ಟ್ ಕಾರಿನ ಮೇಲೆ 50 ಸಾವಿರ ರೂ. ನಿಂದ 25 ಸಾವಿರ ರೂ ವರೆಗೆ ಕನ್ಸೂಮರ್ ಆಫರ್ ನೀಡುತ್ತಿದೆ. ಇದರಲ್ಲಿ 20 ಸಾವಿರ ರೂ ಎಕ್ಸ್ಚೇಂಜ್ ಆಫರ್ ನೀಡಿದರೆ, 5 ಸಾವಿರ ಕಾರ್ಪೋರೇಟ್ ಆಫರ್ ನೀಡುತ್ತಿದೆ |
ಗ್ರಾಹಕರು ಸ್ವಿಫ್ಟ್ ಡೀಸೆಲ್ ಕಾರಿನ ಮೇಲೆ 77,600 ರೂ. ನಿಂದ 30 ಸಾವಿರದ ವರೆಗೆ ಪ್ರಯೋಜನವನ್ನು ಪಡೆಯಬಹುದಾಗಿದೆ. 20 ಸಾವಿರ ರೂ.ವಿನಷ್ಟು ಎಕ್ಸ್ಚೇಂಜ್ ಆಫರ್ ಜೊತೆಗೆ 10 ಸಾವಿರ ಕಾರ್ಪೋರೇಟ್ ಆಫರ್ ಮತ್ತು 5 ವರ್ಷ ವ್ಯಾರಂಟಿ ನೀಡುತ್ತಿದೆ. |
ಹುಂಡೈ ಕಂಪೆನಿ ಕೆಲ ಕಾರಿನ ಮೇಲೂ ಭರ್ಜರಿ ಆಫರ್ ನೀಡುತ್ತಿದೆ. ಹುಂಡೈ ಎಲೈಟ್ ಐ20 ಪೆಟ್ರೋಲ್ ಮತ್ತು ಡೀಸೆಲ್ ಕಾರಿನ ಮೇಲೆ 65 ಸಾವಿರ ರೂ.ವಿನಷ್ಟು ಪ್ರಯೋಜನವನ್ನು ನೀಡುತ್ತಿದೆ. ಜೊತೆಗೆ 4 ವರ್ಷ ವ್ಯಾರಂಟಿ ನೀಡುತ್ತಿದೆ. |
ಹುಂಡೈ ಗ್ರಾಂಡ್ ಐ10 ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರ ಕಾರಿನ ಮೇಲೂ 95 ಸಾವಿರ ರೂ.ವಿನಷ್ಟು ಪ್ರಯೋಜನವನ್ನು ಒದಗಿಸಿದೆ. ಜೊತೆಗೆ 4 ವರ್ಷ ವ್ಯಾರಂಟಿಯನ್ನು ನೀಡುತ್ತಿದೆ |
ಹೋಂಡಾ ಕಂಪೆನಿ ಪೆಟ್ರೊಲ್ ಮತ್ತು ಡಿಸೇಲ್ ರೂಪಾಂತರ ಜಾಜ್ ಕಾರಿನ ಮೇಲೆ 50 ಸಾವಿರದಷ್ಟು ಆಫರ್ ನೀಡಿದೆ, ಮಾತ್ರವಲ್ಲದೆ 25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು 25 ಸಾವಿರ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ |
ಯುಎಇ: ಬೇಹುಗಾರಿಕಾ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಮ್ಯಾಥ್ಯೂ ಹೆಡ್ಜಸ್ ಗೆ ಕ್ಷಮಾದಾನ | Sanmarga |
Home ವಿದೇಶ ರಂಗ ಯುಎಇ: ಬೇಹುಗಾರಿಕಾ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಮ್ಯಾಥ್ಯೂ ಹೆಡ್ಜಸ್ ಗೆ ಕ್ಷಮಾದಾನ |
ಯುಎಇ: ಬೇಹುಗಾರಿಕಾ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಮ್ಯಾಥ್ಯೂ ಹೆಡ್ಜಸ್ ಗೆ ಕ್ಷಮಾದಾನ |
ಬ್ರಿಟಿಷ್ ಸಂಶೋಧನಾ ವಿದ್ಯಾರ್ಥಿ ಮ್ಯಾಥ್ಯೂ ಹೆಡ್ಜಸ್ ರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಬಿಡುಗಡೆ ಮಾಡಿದೆ, ಬೇಹುಗಾರಿಕೆಗಾಗಿ ಕಳೆದ ವಾರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. |
ಮೂವತ್ತೊಂದು ವರ್ಷದ ಹೆಡ್ಜಸ್ ಅವರನ್ನು ಅಧ್ಯಕ್ಷರ ಕ್ಷಮೆ ನಂತರ, ಸೋಮವಾರ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
ಯುಎಇ ಯ ರಾಷ್ಟ್ರೀಯ ದಿನದಂದು ಅಧ್ಯಕ್ಷ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ರಿಂದ ಕ್ಷಮಾಪಣೆ ದೊರೆತ 700 ಕ್ಕೂ ಹೆಚ್ಚು ಜನರಲ್ಲಿ ಇವರು ಒಬ್ಬರಾಗಿದ್ದಾರೆ . |
ಕ್ಷಮಾಪಣೆ ಎಂಬುದು ನಾವು ಆಲಿಸಿದ ಅತ್ಯುತ್ತಮ ಸುದ್ದಿ ಎಂದು ಹೆಡ್ಜಸ್ ಪತ್ನಿ ಡೇನಿಯಲ್ ತೇಜಾಡಾ ಟ್ವೀಟ್ ಮಾಡಿದ್ದಾರೆ. ತನ್ನ ಪತಿ ಬೇಹುಗಾರನೆಂಬುದನ್ನು ನಾನು ನಂಬಲ್ಲ ಎಂದು ಬಿಬಿಸಿಗೆ ತಿಳಿಸಿದರು. |
ಅಂತರರಾಷ್ಟ್ರೀಯ ಒತ್ತಡ |
ಉತ್ತರ ಇಂಗ್ಲೆಂಡ್ ನ ಡರ್ಹಮ್ ವಿಶ್ವವಿದ್ಯಾನಿಲಯದ ಮಧ್ಯಪ್ರಾಚ್ಯ ಅಧ್ಯಯನದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ಹೆಡ್ಜಸ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಯುಎಇ ಅಂತರರಾಷ್ಟ್ರೀಯ ಒತ್ತಡಕ್ಕೆ ಒಳಗಾಯಿತು. |
ಎರಡು ವಾರದ ಸಂಶೋಧನಾ ಪ್ರವಾಸದ ನಂತರ ಅವರನ್ನು ಮೇ 5 ರಂದು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. |
ಹೆಡ್ಜಸ್ ಗೆ ಶಿಕ್ಷೆ ವಿಧಿಸಿರುವುದಕ್ಕೆ ಬ್ರಿಟನ್ ಆಕ್ಷೇಪ ವ್ಯಕ್ತಪಡಿಸಿದ ನಂತರ, ಯುಎಇ ಈ ಕ್ರಮ ಕೈಗೊಂಡಿದೆ. |
ಇದಕ್ಕಿಂತ ಮೊದಲು ತಾನು ಗೂಢಚಾರನೆಂಬುದನ್ನು ಹೆಡ್ಜಸ್ ಒಪ್ಪಿಕೊಳ್ಳುವ ಸಣ್ಣ ವಿಡಿಯೋ ತುಣುಕುಅಬುದಾಭಿ ಅಧಿಕಾರಿಗಳು ಬಿಡುಗಡೆ ಮಾಡಿದ್ದರು. |
ಒಂದು ವೀಡಿಯೊ ತುಣುಕಿನಲ್ಲಿ ಹೆಡ್ಜಸ್, MI-6 ನಲ್ಲಿ ತನ್ನನ್ನು ಕ್ಯಾಪ್ಟನ್ ಎಂದು ವಿವರಿಸುತ್ತಿದ್ದಾರೆ. |
ಮತ್ತೊಂದು ತುಣುಕಿನಲ್ಲಿ ಹೆಡ್ಜಸ್ ಯಾರೊಂದಿಗೋ ಕಚೇರಿಯಲ್ಲಿ ಮಾತನಾಡುವುದನ್ನು ತೋರಿಸುತ್ತದೆ ಮತ್ತು ಹೀಗೆ ಹೇಳುತ್ತಿದ್ದಾರೆ : "ಸಂಶೋಧನೆಯು ಸುಲಭ ರೀತಿಯಲ್ಲಿ ಸಾಗಲು ಇದು ಸಹಾಯ ಮಾಡುತ್ತದೆ. ನಂತರ ಅದು MI-6 ಆಗುತ್ತದೆ." ಎಂದು ಸೇರಿಸುತ್ತಾರೆ. |
"ಅವರು ಅರೆಕಾಲಿಕ ಪಿಎಚ್ ಡಿ ಸಂಶೋಧಕರು ಮತ್ತು ಅರೆಕಾಲಿಕ ಉದ್ಯಮಿಯಾಗಿದ್ದರು, ಆದರೆ ಅವರು 100 ಪ್ರತಿಶತ ಪೂರ್ಣಾವಧಿಯ ರಹಸ್ಯ ಸೇವಾ ಕಾರ್ಯಕರ್ತರಾಗಿದ್ದಾರೆ" ಎಂದು ಯುಎಇಯ ನ್ಯಾಷನಲ್ ಮೀಡಿಯಾ ಕೌನ್ಸಿಲ್ ನ ಅಧಿಕಾರಿಯಾದ ಜಾಬರ್ ಅಲ್-ಲಮ್ಕಿ ಹೇಳಿದ್ದಾರೆ. |
" ಹೆಡ್ಜಸ್ ತಪ್ಪಿತಸ್ಥರೆಂದು ತಿಳಿದುಬಂದಿದೆ. ಸೂಕ್ಷ್ಮ ಮಾಹಿತಿಯನ್ನು ಅವರು ಬಯಸಿದರು. ಅವರು ಯುಎಇಯ ರಾಷ್ಟ್ರೀಯ ಭದ್ರತೆಯ ಸೂಕ್ಷ್ಮ ರಹಸ್ಯಗಳನ್ನು ತನ್ನವರಿಗಾಗಿ ಕದಿಯಲು ಇಲ್ಲಿದ್ದರು 'ಎಂದು ಅಲ್-ಲಮ್ಕಿ ಹೇಳಿದರು. |
ಈ ಗ್ರಾಮದಲ್ಲಿ ಪುರುಷರು ಮಹಿಳೆಯರ ಬಟ್ಟೆ ಧರಿಸಿ ಮಲಗುತ್ತಾರೆ! ಯಾಕೆ ಗೊತ್ತೇ? | Evil-widow-ghost-killing-young-men-Thai-village - Kannada BoldSky |
ಈ ಗ್ರಾಮದಲ್ಲಿ ಪುರುಷರು ಮಹಿಳೆಯರ ಬಟ್ಟೆ ಧರಿಸಿ ಮಲಗುತ್ತಾರೆ! ಯಾಕೆ ಗೊತ್ತೇ? |
| Updated: Monday, June 25, 2018, 10:16 [IST] |
ಕೆಲವೊಂದು ಸಲ ಮೂಢನಂಬಿಕೆಗಳು ಕೂಡ ನಿಜವಾಗುತ್ತದೆಯಾ ಎನ್ನುವ ಪ್ರಶ್ನೆಗಳು ಕಾಡುವುದು ಇದೆ. ಈ ಲೇಖನ ಓದಿದ ಬಳಿಕ ಅದನ್ನು ನಿರ್ಧಿರಿಸುವುದು ನಿಮಗೆ ಬಿಟ್ಟಿರುವುದು. ಯಾಕೆಂದರೆ ಥೈಲ್ಯಾಂಡ್ ನ ಗ್ರಾಮವೊಂದರಲ್ಲಿ ಕೆಲವೇ ವಾರಗಳಲ್ಲಿ ಮಲಗಿದ್ದಲ್ಲೇ ಕೆಲವು ಪುರುಷರು ಮೃತಪಟ್ಟರು. ಇದು ವಿಧವೆ ಮಹಿಳೆಯೊಬ್ಬಳ ಪ್ರೇತದ ಕಾಟವೆಂದು ಅಲ್ಲಿನ ಜನರು ನಂಬಿದ್ದಾರೆ... ಮುಂದೆ ಓದಿ |
83 ಸೆ.ಮೀ. ಉದ್ದದ ಶಿಶ್ನಗಳನ್ನು ಮನೆಯ ಹೊರಗಡೆ ಇಡುತ್ತಾರಂತೆ! |
ಸಾವಿನ ಬಳಿಕ ತನ್ನೊಂದಿಗೆ ಪುರುಷರನ್ನು ಕರೆದೊಯ್ಯಲು ಆಕೆ ಹೀಗೆ ಮಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಭೂತ ಬಾಧೆ ನಿವಾರಣೆ ಮಾಡಲು ಗ್ರಾಮಸ್ಥರು ಸುಮಾರು 83 ಸೆ.ಮೀ. ಉದ್ದದ ಶಿಶ್ನಗಳನ್ನು ಮನೆಯ ಹೊರಗಡೆ ಇಟ್ಟಿದ್ದಾರೆ. ಇದರಿಂದ ವಿಧವೆ ಮಹಿಳೆಯ ಭೂತವು ಬೇರೆಡೆ ಹೋಗುತ್ತದೆ ಎನ್ನುವ ನಂಬಿಕೆ. ಇನ್ನು ಕೆಲವು ಮನೆಗಳಲ್ಲಿ ಪುರುಷರು ಮಲಗುವಾಗ ಮಹಿಳೆಯ ಬಟ್ಟೆ ಧರಿಸಿ ಮಲಗುವರು. ಈ ವಿಧಾನಗಳಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಕ್ಕಿದೆ ಎನ್ನುವರು ಇಲ್ಲಿನ ಗ್ರಾಮಸ್ಥರು. |
ಶಿಶ್ನಗಳ ಪ್ರತಿಕೃತಿ ತಯಾರಿಸಿ ಅದನ್ನು ನೇತಾಡಿಸುತ್ತಾರಂತೆ! |
ಥಾಯ್ಲೆಂಡ್ ನ ನಖೊನ್ ಫಾನೊಮ್ ಗ್ರಾಮದ ಜನರು ವಿಧವೆ ಮಹಿಳೆಯ ಭೂತದ ಬಗ್ಗೆ ಎಷ್ಟು ಭೀತಿಗೊಳಗಾಗಿದ್ದಾರೆ ಎಂದರೆ ಅಲ್ಲಿನ ಪುರುಷರನ್ನು ಮೇಕಪ್ ಮಾಡಿಸಿ, ಮಹಿಳೆಯರ ಬಟ್ಟೆ ಧರಿಸಿ ಮಲಗಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ತಮ್ಮ ಮನೆಯ ಮುಂದೆ ದೊಡ್ಡ ದೊಡ್ಡ ಆಕಾರದ ಶಿಶ್ನಗಳ ಪ್ರತಿಕೃತಿ ತಯಾರಿಸಿ ಅದನ್ನು ನೇತಾಡಿಸುತ್ತಿದ್ದಾರೆ. |
ಪುರುಷರು ಹಠಾತ್ ಆಗಿ ಮೃತಪಡುತ್ತಾರಂತೆ! |
ಕೆಲವೇ ವಾರಗಳಲ್ಲಿ ತುಂಬಾ ಆರೋಗ್ಯವಾಗಿದ್ದ ಪುರುಷರು ಹಠಾತ್ ಆಗಿ ಮೃತಪಟ್ಟ ಬಳಿಕ ಸುಮರು 90 ಮಂದಿ ಭೀತಿಯಿಂದಾಗಿ ಗ್ರಾಮವನ್ನೇ ಬಿಟ್ಟು ತೆರಳಿದ್ದಾರೆ. ವಿಧವೆ ಮಹಿಳೆಯ ಭೂತವು ಗ್ರಾಮದಲ್ಲಿ ತುಂಬಾ ಆತಂಕವನ್ನು ಉಂಟು ಮಾಡಿದೆ. ಇದು ನಿದ್ರಿಸಿರುವ ಪುರುಷರ ಕನಸಿನಲ್ಲಿ ಬಂದು ಅವರನ್ನು ಉದ್ರೇಕಿಸಿ ಸಾವಿನೆಡೆಗೆ ಕರೆದೊಯ್ಯುತ್ತಿದೆ ಎನ್ನುತ್ತಾರೆ ಇಲ್ಲಿನ ಜನರು. |
ಇಲ್ಲಿ ಅತಿಯಾದ ಮೂಢನಂಬಿಕೆ |
ಅತಿಯಾಗಿ ಮೂಢನಂಬಿಕೆಯಲ್ಲಿರುವಂತಹ ಇಲ್ಲಿನ ಗ್ರಾಮಸ್ಥರು ಸುಮಾರು 80 ಸೆ.ಮೀ. ಉದ್ದದ ಶಿಶ್ನದ ಪ್ರತಿಕೃತಿಯ ಜತೆಗೆ ಕೆಂಪು ಬಟ್ಟೆಗಳನ್ನು ಮನೆಯ ಮುಂದೆ ನೇತುಹಾಕುತ್ತಿದ್ದಾರೆ. ಇಲ್ಲಿ ಪುರುಷರು ಯಾರು ಇಲ್ಲ ಎಂದು ಕೆಲವು ಮಂದಿ ಮನೆ ಮುಂದೆ ಬರೆದಿದ್ದಾರೆ ಮತ್ತು ಇನ್ನು ಕೆಲವರು ತಮ್ಮ ಪತಿ ಮಹಿಳೆಯರ ಬಟ್ಟೆ ಧರಿಸಿ ಮಲಗುವಂತೆ ಮಾಡಿದ್ದಾರೆ. ಆದರೆ ಈ ಕ್ರಮಗಳ ಬಳಿಕ ಗ್ರಾಮದಲ್ಲಿ ಯಾವೊಬ್ಬ ಪುರುಷನು ಮೃತಪಟ್ಟಿಲ್ಲವೆಂದು ಹೇಳಲಾಗುತ್ತಿದೆ. |
ವಿಧವೆಯ ಭೂತವೇ ಗ್ರಾಮವನ್ನು ಕಾಡುತ್ತಿದೆಯಂತೆ |
68ರ ಹರೆಯದ ನೊಂಗ್ ಅಯು ಎನ್ನುವವರ ಪ್ರಕಾರ ವಿಧವೆಯ ಭೂತವೇ ಗ್ರಾಮವನ್ನು ಕಾಡುತ್ತಿದೆ. ಇದು ಈ ಗ್ರಾಮ ಮಾತ್ರವಲ್ಲದೆ ಹತ್ತಿರದ ಗ್ರಾಮದಲ್ಲೂ ಭೀತಿ ಮೂಡಿಸಿದೆ. ಅಲ್ಲಿ ಕೂಡ ಆರೋಗ್ಯವಂತ ಪುರುಷರು ಮೃತಪಟ್ಟಿದ್ದಾರೆ. ಇದು ಯಾಕೆಂದು ಯಾರಿಗೂ ತಿಳಿದಿಲ್ಲ. ಆದರೆ ಗ್ರಾಮದ ಹಿರಿಯರ ಪ್ರಕಾರ ಯುವಕರು ಸಾಯುವರು. ಈಗ ಇಲ್ಲಿ ಯಾವ ಪುರುಷನು ಉಳಿದುಕೊಂಡಿಲ್ಲವೆಂದು ಆಕೆ ಹೇಳುತ್ತಾಳೆ. |
ದು ಮಂದಿ ಆರೋಗ್ಯವಂತ ಪುರುಷರು ನಿದ್ರೆಯಲ್ಲೇ ಸಾವನ್ನಪ್ಪಿದ್ದರಂತೆ |
ಈ ತಿಂಗಳ ಆರಂಭದಲ್ಲಿ ಐದು ಮಂದಿ ಆರೋಗ್ಯವಂತ ಪುರುಷರು ನಿದ್ರೆಯಲ್ಲೇ ಸಾವನ್ನಪ್ಪಿದ್ದರು. ರಾತ್ರಿ ವೇಳೆ ಸ್ನಾನ ಮಾಡಿ ಮಲಗಿದ ಬಳಿಕ ನಿದ್ರೆಯಲ್ಲೇ ಅವರು ಸಾವನ್ನಪ್ಪಿದ್ದಾರೆ. ದೊಡ್ಡ ಗಾತ್ರದ ಶಿಶ್ನವು ಪುರುಷತ್ವ ಮತ್ತು ಬಲದ ಸಂಕೇತವಾಗಿದೆ ಮತ್ತು ಇದು ವಿಧವೆಯ ಭೂತದಿಂದ ಪುರುಷರನ್ನು ರಕ್ಷಿಸುವುದು. ಕೆಲವು ಪುರುಷರು ಮಹಿಳೆಯರ ಬಟ್ಟೆ ಧರಿಸಿ ಮಲಗಿರುವ ಕಾರಣದಿಂದ ಭೂತವು ಗೊಂದಲಕ್ಕೆ ಒಳಗಾಗುವುದು ಎನ್ನುತ್ತಾರೆ ಇಲ್ಲಿನವರು. |
ಐದು ಮಂದಿ ಆರೋಗ್ಯವಂತ ಪುರುಷರು ನಿದ್ರೆಯಲ್ಲೇ ಸಾವನ್ನಪ್ಪಿದ್ದರಂತೆ |
ದೈಹಿಕವಾಗಿ ತುಂಬಾ ಬಲಿಷ್ಠರಾಗಿದ್ದ 40ರ ಹರೆಯದ ಇಬ್ಬರು ಪುರುಷರು ಮೊದಲು ಸಾವನ್ನಪ್ಪಿದರು. ಇವರಿಗೆ ಯಾವುದೇ ರೀತಿಯ ಅನಾರೋಗ್ಯವಿರಲಿಲ್ಲ ಎಂದು 36ರ ಹರೆಯದ ಪಿಯಟಿಡಾ ವಾಯಿ ಹೇಳುತ್ತಾರೆ. ಇವರು ದಿನನಿತ್ಯದಂತೆ ರಾತ್ರಿ ವೇಳೆ ಸ್ನಾನ ಮಾಡಿಕೊಂಡು ಮಲಗಿದರು. ಆದರೆ ಬೆಳಗ್ಗೆ ಕುಟುಂಬಿಕರು ನೋಡುವಾಗ ಮೃತಪಟ್ಟಿದ್ದರು. |
ಶಿಶ್ನದ ಪ್ರತಿಕೃತಿಯು ಪುರುಷತ್ವದ ಸಂಕೇತವಾಗಿದೆ |
ನನ್ನ ಮಗನಿಗೆ ತನ್ನ ತಂದೆ ಸಾಯುತ್ತಾರೆನ್ನುವ ಭೀತಿಯಿದೆ. ನಮ್ಮ ಮನೆಯ ಹೊರಗಡೆ ಸ್ಕೇರ್ ಕ್ರೌಗಳನ್ನು ಇಟ್ಟಿದ್ದೇವೆ. ಇದರ ಮೇಲೆ ಮನೆಯಲ್ಲಿ ಪುರುಷರು ಇಲ್ಲವೆಂದು ಬರೆದಿದ್ದೇವೆ. ಶಿಶ್ನದ ಪ್ರತಿಕೃತಿಯು ಪುರುಷತ್ವದ ಸಂಕೇತವಾಗಿದೆ. ಇದನ್ನು ಮನೆಯ ಹೊರಗಡೆ ನೇತು ಹಾಕಿದ ಬಳಿಕ ಯಾವ ಪುರುಷನೂ ಇದುವರೆಗೆ ಮೃತಪಟ್ಟಿಲ್ಲ. ಗ್ರಾಮಸ್ಥರು ಇದನ್ನು ಮಾಡುತ್ತಲಿದ್ದಾರೆ ಮತ್ತು ನಮಗೆ ಇದರ ಬಗ್ಗೆ ನಂಬಿಕೆಯಿದೆ ಎನ್ನುತ್ತಾರೆ ವಾಯಿ. |
ಇಲ್ಲಿ ಈಗಾಗಲೇ ಐದು ಮಂದಿ ಮೃತಪಟ್ಟಿದ್ದಾರಂತೆ |
ಈ ಗ್ರಾಮವು ವಾಸಿಸಲು ತುಂಬಾ ಶಾಂತಿಯುತವಾಗಿತ್ತು. ಆದರೆ ಇತ್ತೀಚಿನ ಘಟನೆಗಳು ಎಲ್ಲರಿಗೆ ಆಘಾತ ಉಂಟು ಮಾಡಿದೆ. ಆರೋಗ್ಯವಂತ ಪುರುಷರ ಸಾವಿಗೆ ವಿಧವೆ ಮಹಿಳೆಯ ಭೂತವು ಕಾರಣವಾಗುತ್ತಿದೆ ಎನ್ನುವುದನ್ನು ನಾನು ನಂಬಿದ್ದೇನೆ. ಇಲ್ಲಿ ಈಗಾಗಲೇ ಐದು ಮಂದಿ ಮೃತಪಟ್ಟಿದ್ದಾರೆ. ನನ್ನ ಪತ್ನಿ ಮತ್ತು ಮಗು, ನಾನು ಸಾಯುತ್ತೇನೆಂದು ಭೀತಿಯಲ್ಲಿದ್ದಾರೆ. |
Subsets and Splits
No community queries yet
The top public SQL queries from the community will appear here once available.