text
stringlengths 0
61.5k
|
---|
ತಮಿಳು ನಾಡಿನ ರಾಜಕೀಯದಲ್ಲಿ ಆದ ಹಲವು ಚಮತ್ಕಾರಗಳನ್ನು ಸಿದ್ದರಾಮಯ್ಯ ಮಾಡಲು ಪ್ರಯತ್ನ ಮಾಡಿದರು ಆದರೆ ಇದು ಕರ್ನಾಟಕವಾದ್ದರಿಂದ ಅವುಗಳು ಕೈಗೂಡಲಿಲ್ಲ ಎಂಬ ಮಾತು ಅಷ್ಟೆ ಸತ್ಯ. ಹಿಂದುಳಿದ ಜನಾಂಗದ ಪರವಾಗಿರುವ ಅವರ ಅನೇಕ ಯೋಜನೆಗಳಿಂದ ಸಿದ್ದರಾಮಯ್ಯ ಜನರ ಮನಸ್ಸಲ್ಲಿ ಉಳಿಯುವಂತಾದರು ಆದರೆ ಯೋಜನೆಗಳನ್ನು ಸರಿಯಾದ ಅನುಷ್ಠಾನ ಹಾಗೂ ಅನುಪಾಲನೆಯಲ್ಲಿ ತುಂಬಾ ಎಡವಿದರು ಅಲ್ಲದೇ ಕೆಲವೊಂದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮುಖಭಂಗ ಕೂಡ ಅನುಭವಿಸಿದರು. |
ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ಸಿದ್ದರಾಮಯ್ಯ ಸರ್ಕಾರ, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನೇ ಸಾಧನೆಗಳನ್ನಾಗಿ ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತ ತನ್ನ ತನವನ್ನು ಕೊಚ್ಚಿಕೊಳ್ಳುತ್ತಲೇ ಬಂದಿತು. ತಮ್ಮ ಚುನಾವಣೆ ಸಮಯದಲ್ಲಿನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 165 ಭರವಸೆಗಳಲ್ಲಿ 90 ಭರವಸೆಗಳನ್ನು ಈಡೇರಿಸಿರುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುತ್ತಾ ಬಂದಿತು. ಬಿಪಿಎಲ್ ಕಾರ್ಡ್'ದಾರರಿಗೆ ಅನ್ನಭಾಗ್ಯ ಎಂಬ ಯೋಜನೆ ಒಂದೆಡೆ ರುಚಿಯಾಗಿದ್ದರೆ ಇನ್ನೊಂದೆಡೆ ಅಕ್ರಮ ಅಕ್ಕಿ ಮಾರಾಟವಾಗಿ ಹಲವು ರೀತಿಯ ಅವ್ಯವಹಾರ ನಡೆದು ಹೋದವು ನಡೆದ ಅವ್ಯವಹಾರಗಳಿಗೆ ಯಾವುದೇ ರೀತಿಯ ಶಿಕ್ಷೆಯಾಗಲಿ ತನಿಖೆಯಾಗಲಿ ಆಗಲಿಲ್ಲ ಆದರೂ ಯಾರಿಗೂ ತಿಳಿಯಲು ಇಲ್ಲ. |
ಕರ್ನಾಟಕದ ಅಪೌಷ್ಠಿಕತೆ ಹೋಗಲಾಡಿಸುವ ಕನಸು ಹೊತ್ತ ಸಿದ್ದರಾಮಯ್ಯ ಯೋಜನೆಯ ದೂರದೃಷ್ಠಿ ರಚಿಸಿದೇ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಎಂಬ ಯೋಜನೆ ಘೋಷಿಸಿದರು. ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯಿಂದ ಆದ ಸಾಧಕ ಬಾಧಕಗಳನ್ನು ಗಮನಿಸಲಿಲ್ಲ ಮಕ್ಕಳು, ಶಿಕ್ಷಕರು, ಸಮುದಾಯದ ಮೇಲೆ ಆದ ಕೆಲವು ಅಹಿತಕರ ಪರಿಣಾಮಗಳನ್ನು ಅವಸ್ಥೆಗಳನ್ನು ಕೊನೆಯವರೆಗೂ ಸರಿಮಾಡಲೇಯಿಲ್ಲ. ಪ್ರಾಥಮಿಕ ಹಂತದ ಮಕ್ಕಳಿಗೆ ಈ ಬಾರಿ ವಿಶೇಷವಾಗಿ ಶಾಲಾ ಬ್ಯಾಗ್ ವಿತರಣೆಯಾಯಿತು. ಅದು ಎಸ್.ಸಿ. ಮಕ್ಕಳಿಗೆ ಮಾತ್ರ ಪ್ರಾಥಮಿಕ ಹಂತದಲ್ಲಿ ಮಕ್ಕಳು ಕೆಲವು ತಾರತಮ್ಯಗಳನ್ನು ಅನುಭವಿಸಿದರು ಎಂಬ ವಿಷಯ ಸಿದ್ದರಾಮಯ್ಯ ಗಮನಿಸಲಿಲ್ಲ ಎನಿಸುತ್ತದೆ. |
ರಾಜ್ಯ ಎಲ್ಲಾ ಜಾತಿ ಜನಾಂಗಗಳನ್ನು ಒಳಗೊಂಡಿದೆ. ಒಂದು ಸರಕಾರ ರಚನೆಯಾಗಿ ಅಧಿಕಾರಿಕ್ಕೆ ಬರಲು ಎಲ್ಲಾ ಜಾತಿಗಳು ಮೂಲಕಾರಣವಾಗುತ್ತವೆ ಆದರೆ ಸಿದ್ದರಾಮಯ್ಯ ಎಸ್ಸಿ-ಎಸ್ಟಿಗೆ ಹಣ ಮೀಸಲಿಡುವ ಕಾಯ್ದೆ ಜಾರಿ ಮಾಡಬೇಕೆಂಬ ಹೊಸ ನೀತಿ ಅನೇಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಮೊದಲಿನಿಂದಲು ಜಾತಿ ಲೆಕ್ಕಾಚಾರವೇ ಮೇಲು ಮಾಡಿಕೊಂಡು ಅಧಿಕಾರ ನಡೆಸುತ್ತಿರುವರು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡಿತು. ಈ ಕಾಯ್ದೆ ಅದೆಷ್ಟು ಸಮಂಜಸವಾಗಿ ಜಾರಿಗೆ ತರುವರೊ ಕಾದು ನೋಡಬೇಕು. ಈ ಕಾಯ್ದೆಯನ್ನು ಫಲಾನುಭವಿಗಳು ಸರಿಯಾಗಿ ಬಳಕೆ ಮಾಡಿಕೊಳ್ಳಲು ಅನುಪಾಲನೆ ಮಾಡದೇ ಹೋದಲ್ಲಿ ದುರುಪಯೋಗವಾಗುವದಂತು ಶತ ಪ್ರತಿಶತ ಸಿದ್ದ ಮಾನ್ಯ ಸಿದ್ದರಾಮಯ್ಯನವರೇ! |
ಮುಖ್ಯಮಂತ್ರಿಗಳ ಇನ್ನೊಂದು ಪ್ರಮುಖ ಯೋಜನೆಯೆಂದರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ, ಈ ಯೋಜನೆಯಲ್ಲಿ ಅನೇಕ ವಿಧ್ಯಾರ್ಥಿಗಳು ಲಾಭ ಪಡೆದಿರುವರು ಎಂಬ ಸತ್ಯದ ಜೊತೆಗೆ ಅದೆಷ್ಟೊ ಜನ ಇದನ್ನು ದುರುಪಯೋಗ ಪಡೆಸಿಕೊಂಡರು ಎಂಬ ಸತ್ಯ ಸರಕಾರ ಮರೆಯಿತು. ಅವರ ಪ್ರಣಾಳಿಕೆಯಂತೆ ಯೋಜನೆ ಘೋಷಣೆ ಮಾಡುವುದಷ್ಟೆ ಅವರ ಕೆಲಸವಾಗಿತ್ತು ಅದನ್ನು ಚಾಚುತಪ್ಪದೇ ಮಾಡಿ ಮುಗಿಸಿದ ಸಿದ್ದರಾಮಯ್ಯ ಎರಡು ವರ್ಷ ಮುಗಸಿದ ತೃಪ್ತಿಯಿದೆ ಎಂದಿದ್ದಾರೆ ಆದರೆ ಆ ಯೋಜನೆಗಳ ಸರಿಯಾದ ಅನುಪಾಲನೆ ಹಾಗೂ ಮೌಲ್ಯ ಮಾಪನ ಮಾಡುವಲ್ಲಿ ಸರಕಾರ ಸೋತಿದೆ ಎಂದು ಹೇಳಬಹುದು. |
ರಾಜ್ಯ ಹಾಗೂ ಕೇಂದ್ರ ಸರಕಾರದ ನೇತೃತ್ವದಲ್ಲಿ ಚಾಲನೆಗೊಂಡ ಈ ದೇಶದ ಇನ್ನೊಂದು ದೌರಭಾಗ್ಯದ ಯೋಜನೆಯೆಂದರೆ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ ಮತ್ತು ಅದರ ಬಳಕೆ. ಕುಡಿಯುವ ನೀರಿಗಾಗಿ ಆಹಾಕಾರ ಎದ್ದಿರುವಾಗ ಶೌಚಾಲಯ ಕಟ್ಟಿ ಅದಕ್ಕೆ ನೀರು ಬಳಿಸಿ ಅದನ್ನು ಉಪಯೋಗಿಸುವರೇ ನಮ್ಮ ಜನ ಎಂಬ ಕನಿಷ್ಠ ಆಲೋಚನೆ ಸರಕಾರಗಳು ಮಾಡಲೇಯಿಲ್ಲ. ಹಳ್ಳಿಗಳಲ್ಲಿ ಈ ಯೋಜನೆ ಹೇಗೆ ಹಳ್ಳ ಹಿಡಿದಿದೆ ಎಂಬ ವಿಷಯ ಯೋಚಿಸಿದರೆ ಅರ್ಥವಾಗುತ್ತದೆ. ಶೌಚಾಲಯ ನಿರ್ಮಾಣ ಹಾಗೂ ಜಳಕದ ಕೋಣೆ ನಿರ್ಮಾಣ ಹಳ್ಳಿಗಳಲ್ಲಿ ಹಳ್ಳಕ್ಕೆ ಹರೆದು ನೀರಲ್ಲಿ ನೀರಾಗಿ ಮುಳಗಿ ಹೋಗುತ್ತಿವೆ ಎಂಬ ವಿಚಾರ ಯಾರು ಮಾಡಲೇಯಿಲ್ಲ. |
ಗ್ರಾಮ ಪಂಚಾಯತಿಯ ದಾಖಲೆಗಳ ಪ್ರಕಾರ ಪ್ರತಿ ಹಳ್ಳಿಯಲ್ಲಿಯೂ ಶೌಚಾಲಯಗಳ ನಿರ್ಮಾಣವಾಗಿವೆ ಮತ್ತು ಬಳಕೆಯಾಗುತ್ತಿವೆ ಆದರೆ ನೈಜವಾಗಿ ಯಾವುದೇ ಗ್ರಾಮಮದಲ್ಲಿ ಈ ಶೌಚಾಲಯಗಳು ಬಳಕೆಯಾಗುತ್ತಿಲ್ಲ ಎಂಬ ಸತ್ಯ ಮಾತ್ರ ಮರೆಯುವಂತಿಲ್ಲ.. ಹೀಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿರುವ ಮುಖ್ಯಮಂತ್ರಿಗಳು ಅನುಪಾಲನೆ, ಅನುಷ್ಠಾನ, ಮೌಲ್ಯಮಾಪನ ಎಂಬ ಮುಖ್ಯ ವಿಷಯಗಳತ್ತ ಗಮನ ಕೊಡಲೇಬೇಕು. ಈ ಎರಡು ವರ್ಷದುದ್ದಕ್ಕೂ ಗಮನ ಕೊಡಲೇಯಿಲ್ಲ ಇನ್ನು ಮೂರು ವರ್ಷಗಳಲ್ಲಿ ಬರಿ ಹೊಸ ಯೋಜನೆಗಳು ಘೋಷಣೆ ಮಾಡುತ್ತಾ ಹೋದರೆ ಕರ್ನಾಟಕ ಅಭಿವೃದ್ಧಿಯಾಗುವುದಿಲ್ಲ ಎಂಬ ಸತ್ಯ ಮುಖ್ಯಮಂತ್ರಿಗಳು ಅರೆಯಬೇಕು ಮತ್ತು ಅನುಷ್ಠಾನಕ್ಕೆ ತರಬೇಕು. |
ಬೆಂಗಳೂರಿನಲ್ಲಿ ಇಂಟರ್ನೆಟ್ ಮೂಲಕ ವಿದ್ಯುತ್ ಬಿಲ್ ಪಾವತಿ | Now you can pay power bill thru Net - Kannada Oneindia |
ಬೆಂಗಳೂರಿನಲ್ಲಿ ಇಂಟರ್ನೆಟ್ ಮೂಲಕ ವಿದ್ಯುತ್ ಬಿಲ್ ಪಾವತಿ |
| Published: Sunday, July 8, 2001, 5:30 [IST] |
ಬೆಂಗಳೂರು : ಬೆಳಗಿನಿಂದ ಸಂಜೆವರೆಗೆ ದುಡಿದು ಬಂದು ಮನೆ ಬಾಗಿಲು ತೆರೆವಾಗಲೇ ಕರೆಂಟ್ ಬಿಲ್ ಕಣ್ಣಿಗೆ ಬೀಳುತ್ತದೆ. ಅವಧಿ ಮೀರುವ ಮುನ್ನ ಬಿಲ್ ಕಟ್ಟಲು ಇನ್ನು ಮೇಲೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಐಸಿಐಸಿಐ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸೋ, ಇನ್ನು ಮುಂದೆ ಬೆಂಗಳೂರಿನಲ್ಲಿ ಇಂಟರ್ನೆಟ್ ಮೂಲಕ ಕರೆಂಟ್ ಬಿಲ್‌ಕಟ್ಟಬಹುದು. |
ಐಸಿಐಸಿಐ ಬ್ಯಾಂಕ್‌ನ ಬಳಕೆದಾರರಿಗೆ ಈ ಸೇವೆ ಉಚಿತ. ಬೆಂಗಳೂರಿನಲ್ಲಿ ಸುಮಾರು ಒಂದುವರೆ ಲಕ್ಷ ಮಂದಿ ಐಸಿಐಸಿಐ ಬ್ಯಾಂಕ್ ಬಳಕೆದಾರರಿದ್ದು ಶೇ 60ರಷ್ಟು ಮಂದಿ ಇಂಟರ್‌ನೆಟ್ ಬಳಕೆದಾರರು. |
ಬಿಲ್ ಚುಕ್ತಮಾಡುವ ಕೆಲಸವನ್ನಷ್ಟೇ ಬ್ಯಾಂಕ್ ಮಾಡುತ್ತದೆ. ಬಿಲ್‌ನಲ್ಲಿ ಯಾವುದೇ ವೆತ್ಯಾಸಗಳಿದ್ದರೆ ಅದನ್ನು ಕೆಪಿಟಿಸಿಎಲ್‌ನ ಪ್ರಾದೇಶಿಕ ಕಚೇರಿಯಲ್ಲಿ ಸರಿಪಡಿಸಿಕೊಳ್ಳಬಹುದು. ಇಂಟರ್‌ನೆಟ್ ಮೂಲಕ ಬಿಲ್ ಕಟ್ಟುವ ಈ ವ್ಯವಸ್ಥೆಯಿಂದಾಗಿ ವಿದ್ಯುತ್ ಬಳಕೆದಾರರಿಗೆ ಕೆಪಿಟಿಸಿಎಲ್‌ನ ಉದ್ಯೋಗಿಗಳಿಂದ ತೊಂದರೆಯಾಗುವುದು ತಪ್ಪುತ್ತದೆ ಎಂದು ಕೆಪಿಟಿಸಿಎಲ್‌ನ ಅಧ್ಯಕ್ಷ ವಿ.ಪಿ. ಬಳಿಗಾರ್ ಹೇಳುತ್ತಾರೆ. ಈ ವ್ಯವಸ್ಥೆ ಜುಲೈ ತಿಂಗಳಲ್ಲೇ ಜಾರಿಯಾಗಲಿದೆ. |
ಈ ರೀತಿ ಈ- ಕಾಮರ್ಸ್ ಸೇವೆಗಳನ್ನು ನೀರು ಸರಬರಾಜು ವಿಭಾಗ, ಮಹಾನಗರ ಪಾಲಿಕೆ, ಟೆಲಿಕಾಂ, ಮತ್ತಿತರ ಕ್ಷೇತ್ರಗಳಿಗೂ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಐಸಿಐಸಿಐನ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ವಿ. ಕಾಮತ್ ಹೇಳುತ್ತಾರೆ. ಪ್ರಾದೇಶಿಕ ಕಚೇರಿಗಳಲ್ಲಿಯೂ ಕಂಪ್ಯೂಟರೀಕರಣ ಕೆಲಸ ಮುಗಿದ ತಕ್ಷಣ ಈ ವ್ಯವಸ್ಥೆಯನ್ನು ಮೈಸೂರು, ಬೆಳಗಾವಿ, ಮಂಗಳೂರು ಮತ್ತು ಹುಬ್ಬಳ್ಳಿಗೂ ವಿಸ್ತರಿಸಲಾಗುವುದು. ಕೆಪಿಟಿಸಿಎಲ್‌ಗೆ 500 ಕೋಟಿ ರೂಪಾಯಿಗಳಷ್ಟು ಸಾಲ ನೀಡಲು ಐಸಿಐಸಿಐ ಬ್ಯಾಂಕ್ ಮುಂದಾಗಿರುವ ಬಗ್ಗೆಯೂ ವಿ.ಪಿ. ಬಳಿಗಾರ್ ಹೇಳಿದರು. |
ನೀವು ಇಂಟರ್‌ನೆಟ್‌ನಲ್ಲಿ ಬಿಲ್ ಕಟ್ಟುತ್ತೀರಾ ? |
ಈ ವ್ಯವಸ್ಥೆಯನ್ನು ನೀವು ಬಳಸುತ್ತಿರುವುದಾಗಿ ಕೆಪಿಟಿಸಿಎಲ್‌ಗೆ ಒಂದು ಪತ್ರ ಬರೆಯಿರಿ. |
ವಿದ್ಯುತ್ ನಿಗಮ ಈ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ನೀಡುತ್ತದೆ. ನಂತರ ನಿಮ್ಮ ಮನೆ ಕರೆಂಟ್ ಬಿಲ್ ಕಂಪ್ಯೂಟರ್ ಮೂಲಕ ಐಸಿಐಸಿಐ ಬ್ಯಾಂಕ್‌ಗೆ ವರ್ಗಾವಣೆಯಾಗುತ್ತದೆ. |
ಐಸಿಐಸಿಐ ಬ್ಯಾಂಕ್ ಮೂಲಕ ಬಿಲ್ ಕಟ್ಟ ಬಯಸುವ ಪ್ರತಿಯಾಬ್ಬ ಇಂಟರ್ ನೆಟ್ ಬಳಕೆದಾರನಿಗೆ ಒಂದು ಪಾಸ್ ವರ್ಡ್ ನೀಡಲಾಗುತ್ತದೆ. ಒಂದು ವರ್ಷದವರೆಗಿನ ಬಿಲ್‌ನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸುವ ಅವಕಾಶ ಇರುತ್ತದೆ. ಬಿಲ್ ಪಾವತಿಯಾಗಿರುವ ಬಗ್ಗೆಯೂ ಕೆಪಿಟಿಸಿಎಲ್, ಐಸಿಐಸಿಐ ಮೂಲಕ ನಿಮಗೆ ಈ ಮೇಯ್ಲ್ ಕಳುಹಿಸುತ್ತದೆ. |
ಕರಕುಶಲ ವಸ್ತುಗಳ ಮಾರಾಟಕ್ಕೆ ವೇದಿಕೆ ಕುಶಲಕರ್ಮಿಗಳಿಗೆ ಬದುಕು ಕಟ್ಟಿಕೊಟ್ಟ ` exqzt' |
ಕೊಲ್ಹಾಪುರಿ ಚಪ್ಪಲಿ, ಚಂದೇರಿ ಕಾಟನ್, ಚನ್ನಪಟ್ಟಣದ ಆಟಿಕೆಗಳು, ಕಾಂಚೀಪುರಮ್ ಸೀರೆ ಇವೆಲ್ಲವೂ ವಿಶಿಷ್ಟವಾದ ಉತ್ಪನ್ನಗಳು, ಆಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಕೈಯಿಂದಲೇ ತಯಾರಿಸಿದ ಈ ಅನನ್ಯ ಉತ್ಪನ್ನಗಳು ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಇಂತಹ ಸಾವಯವ, ಸಾಂಪ್ರದಾಯಿಕ ವಸ್ತುಗಳು ಸುಲಭವಾಗಿ ಗ್ರಾಹಕರಿಗೆ ದೊರೆಯುವಂತೆ ಮಾಡಲೆಂದೇ ` exqzt' ಜನ್ಮ ತಳೆದಿದೆ. ` exqzt'ನ ಆರಂಭದ ಉದ್ದೇಶ ಕುಶಲಕರ್ಮಿಗಳನ್ನು ಪರಸ್ಪರ ಸಂಪರ್ಕಿಸುವುದು ಮಾತ್ರವಲ್ಲ, ಅವರು ಬದುಕು ಕಟ್ಟಿಕೊಳ್ಳಲು ನೆರವಾಗಬಲ್ಲ ಎನ್‍ಜಿಓಗಳು ಹಾಗೂ ಉತ್ಪಾದಕರನ್ನು ಪರಿಚಯಿಸುವುದು ಕೂಡ. |
` exqzt' ಪರಿಕಲ್ಪನೆಯ ಜನ್ಮ... |
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುತ್ತಾಡುತ್ತಿದ್ದಾಗ ಕಣ್ಣಿಗೆ ಬಿದ್ದ ದೃಶ್ಯವೊಂದು ಅವಿನಾಶ್ ವನ್‍ಪಾಲ್ ಅವರಿಗೆ ಇಂಥದ್ದೊಂದು ವಿನೂತನ ಪರಿಕಲ್ಪನೆ ಹೊಳೆದಿತ್ತು. ಕುಶಲಕರ್ಮಿಗಳು ಸೆಣಬಿನಿಂದ ಮಾಡಿದ ಸುಂದರ ವಸ್ತುಗಳನ್ನು ಕುಟುಂಬ ಸಮೇತರಾಗಿ ಬೀದಿ ಬದಿಯಲ್ಲಿ ನಿಂತು ಮಾರಾಟ ಮಾಡುತ್ತಿದ್ರು. ಆದ್ರೆ ಯಾರೊಬ್ಬರೂ ಆ ಅನನ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಿರಲಿಲ್ಲ, ಎಲ್ಲರೂ ಬೇಡ ಎಂಬಂತೆ ತಲೆಯಲ್ಲಾಡಿಸಿ ಮುಂದಕ್ಕೆ ಸಾಗುತ್ತಿದ್ರು. ಈ ಘಟನೆ ನಡೆದು ಮೂರ್ನಾಲ್ಕು ದಿನಗಳಾಗುವಷ್ಟರಲ್ಲಿ, ಅವಿನಾಶ್ ಅವರ ಸಹೋದ್ಯೋಗಿ ಒಬ್ಬರಿಗೆ ಕೊಲ್ಹಾಪುರಿ ಚಪ್ಪಲಿ ಬೇಕಿತ್ತು. ಅವಿನಾಶ್ ಅವರ ತವರು ಪುಣೆಯಿಂದ ಚಪ್ಪಲಿ ತಂದುಕೊಡುವಂತೆ ಅವರು ಮನವಿ ಮಾಡಿದ್ರು. ಇದನ್ನೆಲ್ಲ ನೋಡಿದ ಅವಿನಾಶ್ ಅವರಿಗೆ, ಕರಕುಶಲ ವಸ್ತುಗಳ ಮಾರಾಟಕ್ಕೆ ವೇದಿಕೆಯೊಂದನ್ನ ಸ್ಥಾಪಿಸುವ ಯೋಚನೆ ಬಂದಿತ್ತು. |
` exqzt' ಅನುಸರಿಸುವ ಮಾದರಿ... |
ಸದ್ಯ ` exqzt' ದಾಸ್ತಾನು ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಎರಡು ತಿಂಗಳುಗಳಲ್ಲಿ ಮಾರುಕಟ್ಟೆ ಸ್ಥಳದ ಮಾದರಿಯಲ್ಲಿ ` exqzt' ಕಾರ್ಯಾರಂಭ ಮಾಡಲಿದೆ. ಕರಕುಶಲತೆಯಲ್ಲಿ ವೈಶಿಷ್ಟ್ಯತೆಯುಳ್ಳ, ಅತ್ಯಂತ ಜನಪ್ರಿಯವಾದ ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಕೂಡ ಅವಿನಾಶ್ ವನ್‍ಪಾಲ್ ಯೋಜನೆ ರೂಪಿಸಿದ್ದಾರೆ. ಪೂರೈಕೆ ಸರಣಿಯಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಬಗೆಹರಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ ಅನ್ನೋದು ಅವಿನಾಶ್ ವನ್‍ಪಾಲ್ ಅವರ ಅಭಿಪ್ರಾಯ. ಕರಕುಶಲ ಉದ್ಯಮ ಭೌಗೋಳಿಕ ವೈವಿಧ್ಯತೆಯನ್ನು ಹೊಂದಿದೆ. ` exqzt' ಒಂದು ತರಬೇತಿ ಕೇಂದ್ರವಾಗಿ ಮಾರ್ಪಡಲಿದ್ದು, ಅವುಗಳ ವೈಶಿಷ್ಟ್ಯತೆ ಮತ್ತು ಜನಪ್ರಿಯತೆ ದುಪ್ಪಟ್ಟಾಗಲಿದೆ. ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಗೂ ಇದು ತರಬೇತಿ ಸ್ಥಳವಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ. ಅದರ ಜೊತೆಗೆ ಮಾರ್ಕೆಟಿಂಗ್ ಹಾಗೂ ಉಳಿದ ಮಹತ್ವದ ವಿಷಯಗಳಿಗೂ ವೇದಿಕೆಯಾಗಲಿದೆ. ಆನ್‍ಲೈನ್‍ನಲ್ಲಿ ಉತ್ಪನ್ನಗಳ ಮಾರಾಟ ಸುಲಭವಾಗಲಿದ್ದು, ಕುಶಲ ಕರ್ಮಿಗಳಿಗೆ ಪರಿಸರ ಸ್ನೇಹಿ ಉತ್ಪನ್ನಗಳನ್ನು ಒದಗಿಸುವ ವಿಶ್ವಾಸ ಅವಿನಾಶ್ ವನ್‍ಪಾಲ್ ಅವರಿಗಿದೆ. |
` exqzt' ಮುಂದಿರುವ ಸವಾಲುಗಳು ಮತ್ತು ತಂಡದ ಯೋಜನೆ |
ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿರುವ ಸ್ಥಳಗಳಲ್ಲಿ, ಕುಶಲಕರ್ಮಿಗಳಿಗಾಗಿ ` exqzt' ತಂಡ ಹುಡುಕಾಟ ನಡೆಸುತ್ತಲೇ ಇದೆ. ಸ್ಥಳೀಯ ಕುಶಲಕರ್ಮಿಗಳಲ್ಲಿ ತಂತ್ರಜ್ಞಾನದ ಅರಿವು, ಡಿಜಿಟಲ್ ಅಳವಡಿಕೆಯ ಕೊರತೆಯಿದೆ. ಇದರ ಪರಿಣಾಮ ಪ್ರತಿಭೆ ಇದ್ರೂ ಅದರ ಸದುಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಪರಿಣಾಮಕಾರಿ ಕಲೆ ಅವರಿಗೆ ಗೊತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಅವನ್ನೆಲ್ಲ ಮಾರಾಟ ಮಾಡಿದರೆ, ಕುಶಲ ಕರ್ಮಿಗಳೆಲ್ಲ ಉತ್ತಮ ಜೀವನ ನಡೆಸಲು ಸಾಧ್ಯವಿದೆ. ಮಾರುಕಟ್ಟೆ ಸ್ಥಳ ಮಾದರಿಯನ್ನು ಅಳವಡಿಸಲು ಇದು ಅಡ್ಡಿಯಾಗಿದೆ ಎನ್ನುತ್ತಾರೆ ಅವಿನಾಶ್. ಹಾಗಾಗಿ ತಮ್ಮದೇ ಆದ ತಂಡವೊಂದನ್ನು ಕಟ್ಟಲು ಅವಿನಾಶ್ ಮುಂದಾಗಿದ್ದಾರೆ, ಮುಂದಿನ ತಿಂಗಳು ಈ ಪ್ರಯತ್ನವೂ ನಡೆಯಲಿದೆ. ಗ್ರಾಹಕರ ಬೆಂಬಲ, ಮಾರಾಟ ಮತ್ತು ಮಾರಾಟಗಾರರ ಜಾಲ ವಿಸ್ತರಣೆಗೆ ನೆರವಾಗಬಲ್ಲ 4-6 ಸಿಬ್ಬಂದಿಯನ್ನು ಅವಿನಾಶ್ ನೇಮಕ ಮಾಡಿಕೊಳ್ಳಲಿದ್ದಾರೆ. |
ಒಟ್ನಲ್ಲಿ ಘಟನೆಯೊಂದರಿಂದ ಪ್ರೇರಣೆ ಪಡೆದು ಕುಶಲಕರ್ಮಿಗಳಿಗೆ ಬದುಕು ಕಟ್ಟಿಕೊಡಲು ಹೊರಟಿರುವ ಅವಿನಾಶ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ನಮ್ಮ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯದ ಉಳಿವಿಗೂ ಅವರು ಈ ಮೂಲಕ ಕೊಡುಗೆ ನೀಡುತ್ತಿದ್ದಾರೆ. |
ವಿ.ಎಸ್.ಉಗ್ರಪ್ಪ – KNP |
Tag: ವಿ.ಎಸ್.ಉಗ್ರಪ್ಪ |
ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.06; ಗಮನ ಸೆಳೆದಿದ್ದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಲ್ಕು ಕ್ಷೇತ್ರಗಳಲ್ಲಿ ಜಯ ... |
ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ,19; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುಪ್ರಿಂ ಆದೇಶದಂತೆ ಇಂದು ಸಂಜೆ 4ಗಂಟೆಗೆ ವಿಧಾನಸೌಧದಲ್ಲಿ ಬಹುಮತ ಸಾಬೀತು ಪಡಿಸಬೇಕಿದೆ. ಈ ನಿಟ್ಟಿನಲ್ಲಿ ಬಿ.ಎಸ್.ಯಡಿಯೂರಪ್ಪ ಸಿ.ಎಂ. ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ... |
ಕೊಚ್ಚಿ ಹೋಗುತ್ತಿರುವ ಬೆಳಗಾವಿ ಯಾರದು? - Varthabharati |
ಮಳೆಯ ಕೊರತೆಯೇ ಈ ಬಾರಿ ನಾಡಿನ ಹಾಹಾಕಾರಕ್ಕೆ ಕಾರಣವಾಗುತ್ತದೆಯೋ ಎಂಬ ಭಯ ಇದೀಗ ತಿರುಗುಬಾಣವಾಗಿದೆ. ಕಳೆದ ಬಾರಿ ಕೊಡಗು ಸೇರಿದಂತೆ ಮಲೆನಾಡನ್ನು ಕಾಡಿದ ಅತಿವೃಷ್ಟಿ ಈ ಬಾರಿ ಅರ್ಧ ಕರ್ನಾಟಕವನ್ನೇ ಮುಳುಗಿಸಿ ಬಿಟ್ಟಿದೆ. ಉತ್ತರ ಕರ್ನಾಟಕ ಒಂದೆಡೆ ಮಳೆ, ಮಗದೊಂದೆಡೆ ಮಹಾರಾಷ್ಟ್ರ ಸೃಷ್ಟಿಸಿದ ಕೃತಕ ನೆರೆ ಎರಡರ ನಡುವೆ ಸಿಲುಕಿ ತತ್ತರಿಸಿದೆ. ಇಂದಿನವರೆಗೆ ಸುಮಾರು 23 ಗ್ರಾಮಗಳ 28,000ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇತ್ತ ಮಲೆನಾಡಿನಲ್ಲಿ ಚಾರ್ಮಾಡಿ ಘಾಟ್ ಸೇರಿದಂತೆ ಹಲವು ಪ್ರಮುಖ ಹೆದ್ದಾರಿಗಳು ಮುಚ್ಚಲ್ಪಟ್ಟ ಕಾರಣದಿಂದ ವ್ಯಾಪಾರ ವ್ಯವಹಾರಗಳ ಮೇಲೂ ಅತಿವೃಷ್ಟಿ ತೀವ್ರ ಪರಿಣಾಮಗಳನ್ನು ಬೀರುತ್ತಿದೆ. ಕರ್ನಾಟಕದಲ್ಲಿ ಈ ಹಿಂದೆ ಇಂತಹ ಪರಿಸ್ಥಿತಿ ಬಂದೇ ಇಲ್ಲ ಎಂದಲ್ಲ. ಉತ್ತರ ಕರ್ನಾಟಕವಂತೂ ಹತ್ತು ಹಲವು ಬಾರಿ ಇಂತಹ ನೆರೆ ಮಾತ್ರವಲ್ಲದೆ, ಬರದ ಕಾರಣಗಳಿಗಾಗಿಯೂ ನೊಂದು ಬೆಂದಿದೆ. ಮಳೆಗಾಲವಿರಲಿ, ಬೇಸಿಗೆಯಿರಲಿ ಅದನ್ನು ಸಮರ್ಥವಾಗಿ ಎದುರಿಸಲು ಸರಕಾರ ಸಕಲ ಸಿದ್ಧತೆ ಮಾಡಿದ್ದೇ ಆದರೆ ಅರ್ಧ ಅನಾಹುತಗಳನ್ನು ತಡೆಯಬಹುದು. ಆದರೆ ದುರದೃಷ್ಟಕ್ಕೆ, ಇಂದು ನಾಡು ಎದುರಿಸುತ್ತಿರುವ ಪ್ರಕೋಪಗಳನ್ನು ತಡೆಯಲು ಅಧಿಕೃತ ಸರಕಾರವೇ ಇಲ್ಲ. |
ಈ ವಿಕೋಪಗಳನ್ನು ತಡೆಯಲು ಕನಿಷ್ಠ ಎರಡು ತಿಂಗಳ ಹಿಂದೆಯೇ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ, ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಕಳೆದ ಬಾರಿ ಕೊಡಗು ಸೇರಿದಂತೆ ವಿವಿಧೆಡೆ ಸಂಭವಿಸಿರುವ ಮಳೆಹಾನಿಯಿಂದ ರಾಜಕಾರಣಿಗಳು ಪಾಠ ಕಲಿತಿದ್ದರೆ ಇಂದು ಸರಕಾರ ದಾನಿಗಳ ಕಡೆಗೆ ಕೈ ತೋರಿಸಬೇಕಾಗಿರಲಿಲ್ಲ. ಮುಖ್ಯವಾಗಿ ಇಂತಹದೊಂದು ಸಿದ್ಧತೆ ನಡೆಸಲು ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲೇ ಇದ್ದಿರಲಿಲ್ಲ. ಒಬ್ಬರು ಸರಕಾರ ಬೀಳಿಸುವ ಕಾರ್ಯತಂತ್ರದಲ್ಲಿ ಮಗ್ನರಾಗಿದ್ದರೆ, ಇನ್ನೊಬ್ಬರು ಸರಕಾರವನ್ನು ಉಳಿಸಲು ಹರಸಾಹಸ ಪಡುತ್ತಿದ್ದರು. ಕಳೆದ ಮೂರು ತಿಂಗಳು ವಿಧಾನಸಭೆ ದೂರದ ಮುಂಬೈಯ ರೆಸಾರ್ಟ್‌ಗಳಿಗೆ ವರ್ಗಾವಣೆಯಾಗಿತ್ತು. ತಾನು ಮುಖ್ಯಮಂತ್ರಿಯಾಗಿ ಉಳಿಯುತ್ತೇನೋ ಇಲ್ಲವೋ ಎನ್ನುವುದು ಸ್ಪಷ್ಟವಿಲ್ಲದ ಕುಮಾರಸ್ವಾಮಿ, ಇನ್ನೇನು ಸರಕಾರವನ್ನು ಉರುಳಿಸಿ ಅಧಿಕಾರಕ್ಕೇರಿಯೇ ಬಿಡುತ್ತೇನೆ ಎಂದು ಹಠತೊಟ್ಟು ಹಗಲಿರುಳು ಅದಕ್ಕಾಗಿ ಶ್ರಮಿಸುತ್ತಿದ್ದ ಯಡಿಯೂರಪ್ಪ, ಬ್ಲಾಕ್‌ಮೇಲ್ ಮಾಡುತ್ತಿದ್ದ ಶಾಸಕರನ್ನು ಒಲಿಸಲು ರೆಸಾರ್ಟ್ ಬಾಗಿಲ ಮುಂದೆ ನಿಂತಿದ್ದ ಡಿ.ಕೆ. ಶಿವಕುಮಾರ್ ಇವರ ನಡುವೆ ಸಿಲುಕಿಕೊಂಡು ಆಡಳಿತ ಯಂತ್ರ ಸ್ತಬ್ಧವಾಗಿತ್ತು. ತಮ್ಮನ್ನು ವಿಚಾರಿಸುವವರೇ ಇಲ್ಲವೆಂದ ಮೇಲೆ, ಅಧಿಕಾರಿಗಳಾದರೂ ಮುಂಬರುವ ವಿಕೋಪಗಳ ಕುರಿತಂತೆ ಅತಿ ಆಸಕ್ತಿಯನ್ನು ಯಾಕೆ ತೋರಿಸಿಯಾರು? ಹವಾಮಾನ ಇಲಾಖೆ ನೀಡುತ್ತಿದ್ದ ನೆರೆ, ಚಂಡಮಾರುತದ ಎಚ್ಚರಿಕೆಗಳೆಲ್ಲ ಅರಣ್ಯರೋದನವಾಯಿತು. ಜಿಲ್ಲಾಡಳಿತ ತಮ್ಮ ಕರ್ತವ್ಯವನ್ನು ನಿಭಾಯಿಸಿಲ್ಲ ಎಂದು ಅರ್ಥವಲ್ಲ. ಆದರೆ ಸ್ಪಷ್ಟ ಮಾರ್ಗದರ್ಶನ ನೀಡಲು ಒಂದು ಸರಕಾರವೇ ಇಲ್ಲವಾಗಿರುವಾಗ, ಅಧಿಕಾರಿಗಲಾದರೂ ಯಾವ ಧೈರ್ಯದ ಮೇಲೆ ಮುಂದೆ ಹೆಜ್ಜೆ ಇಟ್ಟಾರು. |
ಸದ್ಯ ಮೈತ್ರಿ ಸರಕಾರವನ್ನು ಇಳಿಸಿ ಬಿಜೆಪಿ ರಾಜ್ಯದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿದೆ. ಇನ್ನಾದರೂ ನಾಡಿನ ಪರಿಸ್ಥಿತಿ ಸುಧಾರಿಸೀತು ಎಂದು ಜನರು ಭಾವಿಸಿದ್ದರೆ , ಅಂತಹ ಯಾವ ಬೆಳವಣಿಗೆಗಳೂ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಿತಿ 'ಮೊಸಳೆಯನ್ನು ನುಂಗಿದ ಹೆಬ್ಬಾವಿನಂತೆ' ಆಗಿದೆ. ಗಂಟಲಿನಿಂದ ಹೊಟ್ಟೆಗಿಳಿಸಿ ಜೀರ್ಣಿಸಿಕೊಳ್ಳುವುದಕ್ಕೆ ಅವರಿಂದ ಇನ್ನೂ ಸಾಧ್ಯ ಆಗಿಲ್ಲ. ಮುಖ್ಯಮಂತ್ರಿಯಾಗಿ ಎರಡುವಾರ ಕಳೆದಿದೆಯಾದರೂ ಅವರಿಗೆ ಸಂಪುಟ ವಿಸ್ತರಣೆ ಸಾಧ್ಯವಾಗಿಲ್ಲ. ಸಂಪುಟ ವಿಸ್ತರಣೆಯಾಗದೆ ಆಡಳಿತ ಯಂತ್ರ ಚುರುಕಾಗುವುದು ಸಾಧ್ಯವೇ ಇಲ್ಲ. ಸಂಪುಟ ವಿಸ್ತರಣೆಯ ಸಾಹಸಕ್ಕಿಳಿದರೆ ಎಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದು ಸರಕಾರ ಉರುಳಿ ಬಿಡುತ್ತದೆಯೋ ಎನ್ನುವ ಭಯ ವರಿಷ್ಠರನ್ನು ಕಾಡುತ್ತಿದೆ. ಹಾಗೆಂದು, ಕೇವಲ ಯಡಿಯೂರಪ್ಪ ಅವರೊಬ್ಬರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಾಧ್ಯವೇ? 'ವರಿಷ್ಠರು ಆದೇಶ ನೀಡಿದಾಕ್ಷಣ ಸಂಪುಟ ವಿಸ್ತರಣೆ ಮಾಡಲಿದ್ದೇನೆ' ಎಂದು ಯಡಿಯೂರಪ್ಪ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ಅತ್ತ ದಿಲ್ಲಿಯ ಬಿಜೆಪಿ ನಾಯಕರು ಕಾಶ್ಮೀರದ 'ವಿಧಿ'ಯೊಂದಿಗೆ ಗುದ್ದಾಡುತ್ತಿದ್ದಾರೆ. ಯಡಿಯೂರಪ್ಪರ ಮಾತುಗಳನ್ನು ಆಲಿಸುವ ಜನರೇ ದಿಲ್ಲಿಯಲ್ಲಿ ಇಲ್ಲ ಎಂಬಂತಾಗಿದೆ. ಎರಡು ದಿನಗಳ ಹಿಂದೆ ಸಂಪುಟ ವಿಸ್ತರಣೆಯ ಕುರಿತಂತೆ ಚರ್ಚೆ ನಡೆಸಲು ದಿಲ್ಲಿಗೆ ಧಾವಿಸಿದ್ದ ಯಡಿಯೂರಪ್ಪ ಬರಿಗೈಯಲ್ಲಿ ವಾಪಸಾಗಿದ್ದಾರೆ. ಇದೀಗ ನೋಡಿದರೆ, ರಾಜ್ಯ ಅತಿವೃಷ್ಟಿಗೆ ಕೊಚ್ಚಿ ಹೋಗುತ್ತಿದೆ. ಎಲ್ಲ ಹೊಣೆಗಾರಿಕೆಯೂ ಯಡಿಯೂರಪ್ಪ ಅವರೇ ನಿಭಾಯಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪರ ಸದ್ಯದ ಸ್ಥಿತಿಗೆ ವಿರೋಧ ಪಕ್ಷಗಳಿರಲಿ, ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಸಂಭ್ರಮಿಸುತ್ತಿದ್ದಾರೆ. ತನ್ನೆಲ್ಲ ಮಿತಿಯ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರಾದರೂ ಅದು ನಿರೀಕ್ಷಿತವಾದ ಪರಿಣಾಮಗಳನ್ನು ಬೀರುತ್ತಿಲ್ಲ. ಸಾಧಾರಣವಾಗಿ ಸರಕಾರ ನೆರೆಪರಿಹಾರ ವ್ಯವಸ್ಥೆಯನ್ನು ಮಾಡಿದ ಬಳಿಕ 'ದಾನಿಗಳ ಕಡೆಗೆ' ಕೈ ಚಾಚುತ್ತದೆ. ಆದರೆ ಯಡಿಯೂರಪ್ಪ ಸರಕಾರ, ಎಲ್ಲವನ್ನೂ ದಾನಿಗಳ ತಲೆಗೆ ಹಾಕಿ ಕೈ ಚೆಲ್ಲಲು ಮುಂದಾಗಿದೆ. |
ಒಂದು ಸರಕಾರವನ್ನು ಉರುಳಿಸುವುದಕ್ಕಾಗಿ ರೆಸಾರ್ಟ್ ರಾಜಕಾರಣ ನಡೆಸಿ ಕೋಟಿ ಕೋಟಿ ಹಣವನ್ನು ಉಡಾಯಿಸಲು ಸಾಧ್ಯವಿರುವ ಪಕ್ಷ, ಇದೀಗ ಪರಿಹಾರ ಕಾರ್ಯಕ್ಕಾಗಿ ದಾನಿಗಳ ಮೊರೆ ಹೋಗಿರುವುದು ವಿಪರ್ಯಾಸವೇ ಸರಿ. ಬೆಳಗಾವಿಯ ನೂರಾರು ಗ್ರಾಮಗಳು ಕೊಚ್ಚಿ ಹೋಗುವುದಕ್ಕೆ ಕಾರಣ, ಅತಿವೃಷ್ಟಿ ಅಷ್ಟೇ ಅಲ್ಲ. ಮಹಾರಾಷ್ಟ್ರದ ಅಣೆಕಟ್ಟಿನಿಂದ ಹೊರಗೆ ಬಿಡಲಾಗುತ್ತಿರುವ ಭಾರೀ ಪ್ರಮಾಣದ ನೀರು ಈ ಭಾಗದಲ್ಲಿ ಕೃತಕ ನೆರೆಯನ್ನು ಸೃಷ್ಟಿಸಿದೆ. ದುರಂತವೆಂದರೆ, ಇದೇ ಬೆಳಗಾವಿ ಗಡಿಭಾಗದ ಪ್ರದೇಶಗಳಿಗಾಗಿ ಕರ್ನಾಟಕ ಮತ್ತು ಮಹಾರಾಷ್ಟ ಎರಡೂ ರಾಜ್ಯಗಳು ಬಡಿದಾಡಿಕೊಳ್ಳುತ್ತಿವೆ. ಬೆಳಗಾವಿಯಲ್ಲಿ ಮರಾಠಿಗರು ಕನ್ನಡ ಧ್ವಜಕ್ಕೆ ಅವಮಾನಿಸಿದಾಕ್ಷಣ ಬೆಂಗಳೂರಿನಲ್ಲಿರುವ ಕನ್ನಡ ಪ್ರೇಮಿಗಳ ಕನ್ನಡತನ ಉಕ್ಕಿ ಹರಿಯುತ್ತದೆ. 'ಬೆಳಗಾವಿ ನಮ್ಮದು' ಎಂದು ಕೂಗೆಬ್ಬಿಸುತ್ತಾರೆ. ಇದೇ ಸಂದರ್ಭದಲ್ಲಿ ಬೆಳಗಾವಿಗಾಗಿ ಮಹಾರಾಷ್ಟ್ರವೂ ಸದಾ ಕೂಗೆಬ್ಬಿಸುತ್ತಾ ಬಂದಿದೆ. ಆದರೆ ಇಂದು ತನ್ನದೇ ಕಾರಣದಿಂದಾಗಿ ಬೆಳಗಾವಿಯ ಜನರು ನೆರೆಯಿಂದ ತತ್ತರಿಸುತ್ತಿದ್ದಾರಾದರೂ, ಆ ಬಗ್ಗೆ ಮಹಾರಾಷ್ಟ್ರ ಯಾವುದೇ ಭರವಸೆಯ ಹೇಳಿಕೆಯನ್ನು ನೀಡುತ್ತಿಲ್ಲ. ಬೆಂಗಳೂರಿನ ಜನರಿಗೂ 'ಬೆಳಗಾವಿ ನಮ್ಮದು' ಅನ್ನಿಸಿಲ್ಲ. ನಿಜಕ್ಕೂ ಬೆಳಗಾವಿ ಯಾರದು? ಎನ್ನುವುದು ನಿರ್ಧಾರವಾಗುವುದು ಇಂತಹ ಸಂಕಷ್ಟಗಳ ಸಂದರ್ಭಗಳಲ್ಲಿ. ಬೆಳಗಾವಿಯೆಂದರೆ ಅಲ್ಲಿನ ಜನಸಾಮಾನ್ಯರ ಬದುಕು. ಆ ಬದುಕಿಗೆ ಧಕ್ಕೆ ಬಂದಾಗ 'ಬೆಳಗಾವಿ ನಮ್ಮದು' ಎಂದು ಬೊಬ್ಬಿಡುವವರು ನೆರವಿಗೆ ಧಾವಿಸಬೇಕಾಗಿದೆ. ಆದುದರಿಂದ, ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲವಾದರೂ, ಕನ್ನಡಿಗರೆಂದು ಹೆಮ್ಮೆಯಿಂದ ಕರೆದುಕೊಳ್ಳುವ, ಬೆಳಗಾವಿ ನಮ್ಮದೆಂದು ಕೊಚ್ಚಿಕೊಳ್ಳುವ ನಾವೆಲ್ಲರೂ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಪರಸ್ಪರ ಕೈ ಜೋಡಿಸಿ ನೆರವಿಗೆ ಧಾವಿಸಬೇಕಾಗಿದೆ. ಆ ಮೂಲಕ ಬೆಳಗಾವಿಯನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾಗಿದೆ. |
ಬೊಂದೆಲ್ ದಂಪತಿಗಳು ಅಡವಿಟ್ಟ ಚಿನ್ನದಲ್ಲಿ ಎಷ್ಟು ಅಪ್ಪಟ – ಎಷ್ಟು ನಕಲಿ? – ಓದಿ | GulfKannadiga | ಗಲ್ಫ್ ಕನ್ನಡಿಗ |
Ad Here: 386x107 |
Home Business ಬೊಂದೆಲ್ ದಂಪತಿಗಳು ಅಡವಿಟ್ಟ ಚಿನ್ನದಲ್ಲಿ ಎಷ್ಟು ಅಪ್ಪಟ – ಎಷ್ಟು ನಕಲಿ? – ಓದಿ |
ಬೊಂದೆಲ್ ದಂಪತಿಗಳು ಅಡವಿಟ್ಟ ಚಿನ್ನದಲ್ಲಿ ಎಷ್ಟು ಅಪ್ಪಟ – ಎಷ್ಟು ನಕಲಿ? – ಓದಿ |
on: August 02, 2017 In: Business, KaravaliNo CommentsViews: |
ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕಿಗೆ ಬರೋಬ್ಬರಿ 4.5 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ ಅಸಲಿ ಚಿನ್ನದ ಮೌಲ್ಯ ಎಷ್ಟು ಗೊತ್ತೇ? ಕೇವಲ 70 ಲಕ್ಷ ರೂ. ಅಂದರೆ ಸರಿಸುಮಾರು 4 ಕೋಟಿ ರೂ. ಮೊತ್ತದ ಆಭರಣ ಬರೀ ಬೆಳ್ಳಿ ಮತ್ತು ತಾಮ್ರದ್ದು! |
ಆರೋಪಿ ವಿದ್ಯಾನಂದ ರಾವ್ 2016ರ ಆಗಸ್ಟ್ 20ರಿಂದ 2017 ಜು. 6ರ ತನಕ ಒಟ್ಟು 38 ಬಾರಿ ಹಾಗೂ ಲಲಿತಾ ಅವರು 9 ಬಾರಿ ನಕಲಿ ಚಿನ್ನವನ್ನು ಫಳ್ನೀರ್‌ನಲ್ಲಿರುವ ಕೇರಳ ಮೂಲದ ಕೆಥೋಲಿಕ್ ಸಿರಿಯನ್ ಬ್ಯಾಂಕ್ ಶಾಖೆಯಲ್ಲಿ ಅಡವಿಟ್ಟಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಡವಿಟ್ಟ ಆಭರಣಗಳ ಪೈಕಿ ಪ್ರತಿಯೊಂದರಲ್ಲೂ ಬೇರೆ ಬೇರೆ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಮತ್ತು ತಾಮ್ರದ ಅಂಶವಿದೆ. ಅವುಗಳಲ್ಲಿ ಚಿನ್ನ ಅಥವಾ ಬೆಳ್ಳಿಯ ಪ್ರಮಾಣ ಕನಿಷ್ಠವಾಗಿದ್ದು, ತಾಮ್ರದ ಅಂಶವು ಗರಿಷ್ಠವಾಗಿದೆ. ಚಿನ್ನದ ಲೇಪನ ಮಾತ್ರ ಇದೆ. |
ಉದಾಹರಣೆಗೆ 190 ಗ್ರಾಂ ತೂಕದ ಒಂದು ಚೈನ್‌ನಲ್ಲಿ ಚಿನ್ನದ ಪ್ರಮಾಣ ಶೇ. 1.27, ಬೆಳ್ಳಿ ಶೇ. 2.80 ಹಾಗೂ ತಾಮ್ರ ಶೇ. 95.93ರಷ್ಟಿದೆ. ಇಲ್ಲಿನ ಚಿನ್ನದ ಕ್ಯಾರೆಟ್ 0.30 ಮಾತ್ರ ಇದೆ. 484.800 ಗ್ರಾಂ ತೂಕದ ಚೈನ್‌ನಲ್ಲಿ ಚಿನ್ನ ಶೇ. 5.49, ಬೆಳ್ಳಿ ಶೇ. 1.64 ಹಾಗೂ ತಾಮ್ರ ಶೇ. 77.87. ಇದರಲ್ಲಿ ಚಿನ್ನದ ಕ್ಯಾರೆಟ್ ಶೇ. 1.32ರಷ್ಟು ಇದೆ. ಇನ್ನು 1,331.800 ಗ್ರಾಂ ತೂಕದ ಚೈನ್‌ನಲ್ಲಿ ಚಿನ್ನ ಶೇ. 9.22, ಬೆಳ್ಳಿ ಶೇ. 2.61 ಹಾಗೂ ತಾಮ್ರ ಶೇ. 88.14ರಷ್ಟಿದೆ. ಚಿನ್ನದ ಕ್ಯಾರೆಟ್ ಶೇ. 2.21ರಷ್ಟು ಆಗಿರುತ್ತದೆ. |
ಸಿರಿಯನ್ ಬ್ಯಾಂಕ್ ಮಂಗಳೂರು ಶಾಖೆಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಆರೋಪಿ ವಿದ್ಯಾನಂದ ರಾವ್ 3,73,54,750 ರೂ. ಹಾಗೂ ಅವರ ಪತ್ನಿ ಲಲಿತಾ ರಾವ್ 94,42,755 ರೂ. ಸೇರಿದಂತೆ ಒಟ್ಟು 4,67,97,505 ರೂ. ಸಾಲ ಪಡೆದಿದ್ದರು. ವಿದ್ಯಾನಂದ ರಾವ್ 2016 ಆಗಸ್ಟ್ 20 ರಿಂದ 2017 ಜು. 6ರ ತನಕ ಒಟ್ಟು 38 ಬಾರಿ ಹಾಗೂ ಲಲಿತಾ ಅವರು 9 ಬಾರಿ ನಕಲಿ ಚಿನ್ನವನ್ನು ಅಡವಿಟ್ಟಿದ್ದರು. ಬೆಳ್ಳಿ ಮತ್ತು ತಾಮ್ರದ ಆಭರಣಕ್ಕೆ ಚಿನ್ನದ ಲೇಪನ ನೀಡಿ ನಕಲಿ ಚಿನ್ನ ತಯಾರಿಸಿದ್ದರು. ಆರೋಪಿಗಳು ನಕಲಿ ಚಿನ್ನ ಅಡವಿಟ್ಟು 4.5 ಕೋಟಿ ರೂ. ಸಾಲ ಪಡೆದಿದ್ದು, ಅಡವಿಟ್ಟಿರುವ ಆಭರಣಗಳಲ್ಲಿ ಲಭ್ಯವಿರುವ ಚಿನ್ನದ ಒಟ್ಟು 70 ಲಕ್ಷ ರೂ. ಮಾತ್ರ ಎಂದು ಈ ಆಭರಣಗಳ ಪರೀಕ್ಷೆಯಿಂದ ತಿಳಿದು ಬಂದಿದೆ. |
ಉಡುಪಿಯಲ್ಲಿ ಶಂಕರಾಚಾರ್ಯ ಅವರು ಸಹಕಾರಿ ಬ್ಯಾಂಕ್ ಒಂದರಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 65 ಲಕ್ಷ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಥೋಲಿಕ್ ಸಿರಿಯನ್ ಬ್ಯಾಂಕ್ ತನ್ನಲ್ಲಿರುವ ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ನಕಲಿ ಚಿನ್ನಾಭರಣ ಪತ್ತೆಯಾಗಿದೆ. ಕಳೆದ ಜು. 25ರಂದು ಈ ಬಗ್ಗೆ ಬಂದರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. |
ಆರ್‌ಬಿಐಗೆ ಮಾಹಿತಿ |
ಕೆಥೋಲಿಕ್ ಸಿರಿಯನ್ ಬ್ಯಾಂಕಿನಲ್ಲಿ ನಡೆದ ವಂಚನೆ ಪ್ರಕರಣದ ತನಿಖೆ ನಡೆಯುತ್ತಿದೆ. ಅಡವಿಟ್ಟ ಆಭರಣಗಳ ಚಿನ್ನ ಪರೀಕ್ಷಕರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಒಬ್ಬ ವ್ಯಕ್ತಿ ಎಷ್ಟು ಬಾರಿ ಚಿನ್ನವನ್ನು ಬ್ಯಾಂಕಿನಲ್ಲಿ ಅಡವು ಇರಿಸಬಹುದು, ಎಷ್ಟು ಪ್ರಮಾಣದ ಮತ್ತು ಎಷ್ಟು ಮೊತ್ತದ ಚಿನ್ನವನ್ನು ಗಿರವಿ ಇರಿಸಲು ಅವಕಾಶವಿದೆ, ಬಡ್ಡಿದರ ಎಷ್ಟು ನಿಗದಿ ಮಾಡಬಹುದು, ಈ ಕುರಿತಂತೆ ನಿಯಮಗಳೇನಾದರೂ ಇವೆಯೇ, ನಿಯಮಗಳಿದ್ದರೆ ಅವುಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಕ್ರಮ ಜರಗಿಸಲು ಅವಕಾಶವಿದೆಯೇ ಇತ್ಯಾದಿ ಸಮಗ್ರ ವಿವರಗಳನ್ನು ನಮೂದಿಸಿ ವರದಿ ಒಪ್ಪಿಸುವಂತೆ ರಿಸರ್ವ್ ಬ್ಯಾಂಕಿಗೆ ಬರೆಯಲಾಗು ವುದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಬಂದರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಾಂತಾರಾಮ ತಿಳಿಸಿದ್ದಾರೆ. |
ಮಂಗಳೂರು ಟೆಸ್ಟಿಂಗ್ ಸೆಂಟರ್ |
ಅಡವಿಟ್ಟ ಆಭರಣಗಳು ನಕಲಿ ಎಂಬುದಾಗಿ ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ಮಂಗಳೂರು ಟೆಸ್ಟಿಂಗ್ ಸೆಂಟರ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಿತ್ತು. ಈ ಪರೀಕ್ಷಾ ಕೇಂದ್ರಕ್ಕೆ ಬರುವ ಮೊದಲು ಕೆಥೋಲಿಕ್ ಸಿರಿಯನ್ ಬ್ಯಾಂಕಿನವರು ಹಲವು ಸ್ವರ್ಣಾಭರಣ ಮಳಿಗೆಗಳಿಗೆ ತೆರಳಿ ಈ ಚಿನ್ನವನ್ನು ಪರೀಕ್ಷಿಸಿದ್ದರು. ಆದರೆ ಯಾವುದೇ ಸ್ವರ್ಣಾಭರಣ ಮಳಿಗೆಯವರು ಇದು ನಕಲಿ ಚಿನ್ನ ಎಂದು ತಿಳಿಸುವ ಧೈರ್ಯವನ್ನು ಮಾಡಿಲ್ಲ. ಉದ್ದೇಶಪೂರ್ವಕವಾಗಿ ಅವರು ಹಾಗೆ ಮಾಡಿದರೇ ಅಥವಾ ಅವರ ಬಳಿ ಇರುವ ಚಿನ್ನ ಪರೀಕ್ಷಕ ಯಂತ್ರದ ಪರೀಕ್ಷಾ ಸಾಮರ್ಥ್ಯವೇ ಅಷ್ಟೇ? ಎಂಬುದು ಉತ್ತರಿಸಲಾಗದ ಪ್ರಶ್ನೆ. |
ಮಂಗಳೂರು ಟೆಸ್ಟಿಂಗ್ ಸೆಂಟರ್ ಚಿನ್ನದ ನೈಜತೆಯನ್ನು ಆಳವಾಗಿ ಪರೀಕ್ಷಿಸಿ ಅದರ ಮೌಲ್ಯವನ್ನು ತಿಳಿಸುತ್ತದೆ. ನಕಲಿ ಚಿನ್ನವಾಗಿದ್ದರೆ ಅದರಲ್ಲಿ ಇರುವ ಚಿನ್ನ ಮತ್ತು ಇತರ ಎಲ್ಲ ಲೋಹಗಳ ನಿಖರವಾದ ಶೇಕಡಾವರು ಪ್ರಮಾಣವನ್ನು ತಿಳಿಸುವ ಅತ್ಯಾಧುನಿಕ ಯಂತ್ರವನ್ನು ಸಂಸ್ಥೆಯು ಹೊಂದಿದೆ. |
'ನಮ್ಮಲ್ಲಿ ಚಿನ್ನದ ನಿಖರತೆಯನ್ನು ತಿಳಿಸುವ ಅಮೆರಿಕದಿಂದ ತರಿಸಿದ ಅತ್ಯಾಧುನಿಕ ಯಂತ್ರೋಪಕರಣಗಳಿವೆ. ಫೋಟೊ ಸಮೇತ ಪರೀಕ್ಷೆ ಮಾಡಿ ಕೊಡಲಾಗುತ್ತದೆ. ಡಿಜಿಟಲ್ ವ್ಯವಸ್ಥೆ ಇರುವುದರಿಂದ ನಿಖರ ಮಾಹಿತಿ ಕೊಡಲು ಸಾಧ್ಯವಾಗುತ್ತದೆ. ಪರಿಶುದ್ಧತೆಯನ್ನು ಕ್ಯಾರೆಟ್‌ಗೆ ಪರಿವರ್ತಿಸಿ ಮೌಲ್ಯವನ್ನು ತಿಳಿಸಲಾಗುತ್ತದೆ. ಲೇಸರ್ ವೆಲ್ಡಿಂಗ್ ಸೌಲಭ್ಯವೂ ಇದೆ. ಕಳೆದ 7 ವರ್ಷಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಹಲವು ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು, ಸಾರ್ವಜನಿಕರು ಇಲ್ಲಿಗೆ ಬಂದು ಚಿನ್ನ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಯಂತ್ರವನ್ನು ಸ್ಥಳಕ್ಕೇ ಕೊಂಡೊಯ್ದು ಚಿನ್ನ ಪರೀಕ್ಷಿಸುವ ವ್ಯವಸ್ಥೆ ಇರುವುದರಿಂದ ಚಿನ್ನಾಭರಣಗಳನ್ನು ಹೊಂದಿರುವ ದೇವಸ್ಥಾನಗಳು ಇದರ ಪ್ರಯೋಜನ ಪಡೆಯಬಹುದು. ರಾಜ್ಯದಲ್ಲಿಯೇ ಇಂತಹ ಸೌಲಭ್ಯ ಬೇರೆ ಕಡೆ ಇಲ್ಲ. ಮುಜರಾಯಿ ಇಲಾಖೆಯ ಅಧೀನ ಇರುವ ದೇವಾಲಯಗಳಲ್ಲಿನ ಚಿನ್ನವನ್ನು ಪರೀಕ್ಷೆಗೆ ಒಳಪಡಿಸುವ ಬಗ್ಗೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಮಂಗಳೂರು ಟೆಸ್ಟಿಂಗ್ ಸೆಂಟರ್‌ನ ಪಾಲುದಾರ ಸತೀಶ್ ರಾವ್ ತಿಳಿಸಿದ್ದಾರೆ. |
ನಾಳೆಯಿಂದ ರಂಗೇರಲಿದೆ ಬೆಳಗಾವಿ ಅಧಿವೇಶನ – EESANJE / ಈ ಸಂಜೆ |
December 16, 2018 Sunil Kumar #Belgaumsession |
ಬೆಂಗಳೂರು, ಡಿ.16- ಈವರೆಗೂ ಅಷ್ಟೇನೂ ಕಳೆಗಟ್ಟದಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ನಾಳೆಯಿಂದ ರಂಗೇರಲಿದೆ. ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರದ ವಿರುದ್ಧ ಮುಗಿ ಬೀಳಲು ಸಜ್ಜಾಗಿರುವ ಬಿಜೆಪಿ ಉಭಯ ಸದನಗಳಲ್ಲಿ ಉತ್ತರ ಕರ್ನಾಟಕ ಹಾಗೂ ಕೆಲವು ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದೆ. ಕಳೆದ ಸೋಮವಾರದಿಂದ ಆರಂಭವಾದ ಕಲಾಪದಲ್ಲಿ ಈವರೆಗೂ ಯಾವುದೇ ಪ್ರಮುಖ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆದಿಲ್ಲ. ಕೇವಲ ಬರಗಾಲದ ಬಗ್ಗೆ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಬೆಳಕು ಚೆಲ್ಲಿದ್ದಾರೆ. ಅದನ್ನು ಹೊರತು ಪಡಿಸಿದರೆ ಕಬ್ಬು ಬೆಳೆಗಾರರು, ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಆತ್ಮಹತ್ಯೆ, ರೈತರ ಬೆಳೆ ಸಾಲ ಮನ್ನಾ ಸೇರಿದಂತೆ ಹತ್ತು, ಹಲವು ವಿಷಯಗಳು ನಾಳೆಯಿಂದ ಸದನದಲ್ಲಿ ಪ್ರತಿಧ್ವನಿಸಲಿವೆ |
ನಾಳೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 35 ಸಾವಿರ ಕೋಟಿಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಸಿಎಜಿ ವರದಿಯನ್ನು ಮುಂದಿಟ್ಟು ಕೊಂಡು ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದೆ. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮುಜುಗರ ಉಂಟು ಮಾಡಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಇನ್ನು ಉಳಿದಂತೆ ಕಲಾಪದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಂಭವವಿದೆ. ಮುಖ್ಯವಾಗಿ ಈ ಭಾಗದ ನೀರಾವರಿ ಯೋಜನೆಗಳು, ಕೃಷಿ, ಕೈಗಾರಿಕೆ ಸೇರಿದಂತೆ ಅನ್ನದಾತ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟು ಕೊಂಡು ಸದನದಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಸರ್ಕಾರವನ್ನು ಒತ್ತಾಯಿಸಲಿದೆ. ಹುಬ್ಬಳ್ಳಿ, ಧಾರವಾಡ, ಗದಗ ಹಾಗೂ ಬೆಳಗಾವಿ ಮಹಾನಗರಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನದಿ ನೀರು ವಿವಾದವನ್ನು ಪರಿಹರಿಸಲು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂಬ ಬೇಡಿಕೆಯನ್ನು ಬಿಜೆಪಿ ಮುಂದಿಡಲಿದೆ. |
ಗೋವಾ ಸರ್ಕಾರ ಈ ಯೋಜನೆಗೆ ಎಷ್ಟೇ ಅಡ್ಡಿ ಪಡಿಸಿದರೂ ಕಾನೂನಿನ ಚೌಕಟ್ಟಿನಲ್ಲಿಯೇ ಮಹದಾಯಿ ನದಿ ನೀರು ಯೋಜನೆಯನ್ನು ಅನುಷ್ಠಾನಗೊಳಿಸಿ ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಸರ್ಕಾರದ ಗಮನ ಸೆಳೆಯಲಿದೆ. ಉಳಿದಂತೆ ಈ ಬಾರಿ ಬರ ಪೀಡಿತ ತಾಲ್ಲೂಕುಗಳಲ್ಲಿ ಉತ್ತರ ಕರ್ನಾಟಕ ಭಾಗವೇ ಹೆಚ್ಚಾಗಿರುವುದರಿಂದ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ, ಕೃಷ್ಣಾನದಿ ನೀರು ಸದ್ಬಳಕೆ, ಶಾಶ್ವತ ಪುನರ್ವÀಸತಿ ಸೇರಿದಂತೆ ಮತ್ತಿತರ ಸಮಸ್ಯೆಗಳು ಕೂಡ ಚರ್ಚೆಯಾಗಲಿವೆ. |
ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ:ಬೆಳಗಾವಿಯ ಹೊರ ಭಾಗದಲ್ಲಿ ನಿರ್ಮಾಣ ವಾಗಿರುವ ಸುವರ್ಣ ಸೌಧದಲ್ಲಿ ಪೂರ್ತಿ ಕಾರ್ಯ ನಿರ್ವಹಿಸುವಂತೆ ಬೆಂಗಳೂರಿನಿಂದ ಕೆಲವು ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡುವಂತೆ ಬಿಜೆಪಿ ಪಟ್ಟು ಹಿಡಿಯಲಿದೆ. ಸುವರ್ಣ ಸೌಧ ಕೇವಲ ಅಧಿವೇಶನಕ್ಕೆ ಮಾತ್ರ ಸೀಮಿತ ವಾಗದೆ ವರ್ಷ ಪೂರ್ತಿ ಕಾರ್ಯನಿರ್ವಹಿಸಬೇಕು. ನೀರಾವರಿ, ಕಂದಾಯ, ಲೋಕೋಪಯೋಗಿ ಸೇರಿದಂತೆ ಕೆಲವು ಇಲಾಖೆಗಳನ್ನು ಸುವರ್ಣ ಸೌಧಕ್ಕೆ ವರ್ಗಾ ಯಿಸಬೇಕು, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ ಕೆಲವು ಕಚೇರಿಗಳನ್ನು ಸುವರ್ಣ ಸೌಧಕ್ಕೆ ವರ್ಗಾಯಿಸುವುದಾಗಿ ಸದನದಲ್ಲೇ ಘೋಷಣೆ ಮಾಡಿದ್ದರು. ಆದರೆ, ಘೋಷಣೆ ಕಾಗದದ ಮೇಲೆ ಉಳಿದಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಆರೋಪವಿದೆ. |
ಗಡಿವಿವಾದವನ್ನು ಮುಂದಿಟ್ಟುಕೊಂಡು ಕರ್ನಾಟಕದ ವಿರುದ್ಧ ಪದೇ ಪದೇ ಖ್ಯಾತೆ ತೆಗೆಯುವ ಮಹಾರಾಷ್ಟ್ರ ಹಾಗೂ ಪ್ರತಿ ಚುನಾವಣೆಯಲ್ಲೂ ಇದೇ ವಿಷಯವನ್ನು ಇಟ್ಟುಕೊಂಡು ಕನ್ನಡಿಗರಿಗೆ ಇರಿಸುಮುರುಸು ಉಂಟು ಮಾಡುವ ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕಬೇಕಾದರೆ ಬೆಳಗಾವಿಯ ಸುವರ್ಣ ಸೌಧ ವರ್ಷಪೂರ್ತಿ ಕಾರ್ಯ ನಿರ್ವಹಿಸಬೇಕು. ಇದರಿಂದ ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಗೊತ್ತಾಗುತ್ತದೆ. ಬೆಳಗಾವಿ ಜನತೆ ಜತೆಗೆ ಕರ್ನಾಟಕ ಇರಲಿದೆ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕಚೇರಿಗಳ ವರ್ಗಾವಣೆಗೆ ಬಿಜೆಪಿ ಸದನದಲ್ಲಿ ಒತ್ತಾಯಿಸಲಿದೆ. |
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪ್ರಕಾಶ್ ರೈ ನಾಮಪತ್ರ ಸಲ್ಲಿಕೆ | Prakash raj filled nomination as Bengaluru central independent candidate - Kannada Oneindia |
Movies ಅಲ್ಲಿ ಭಾಷೆಗಾಗಿ ಹೋರಾಟ, ಇಲ್ಲಿ ಸ್ಟಾರ್ ಗಳ ನಡುವೆ ಕಿತ್ತಾಟ! |
| Published: Friday, March 22, 2019, 15:50 [IST] |
ಬೆಂಗಳೂರು, ಮಾರ್ಚ್ 22: ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪ್ರಕಾಶ್ ರೈ ಅವರು ಪಕ್ಷೇತರರಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. |
ಬಿಬಿಎಂಪಿ ಕಚೇರಿಯಲ್ಲಿ ಪ್ರಕಾಶ್ ರೈ ಅವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನಾ ಮಸೀದಿ, ಚರ್ಚ್ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. |
ನೀತಿ ಸಂಹಿತೆ ಉಲ್ಲಂಘನೆ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು |
ಬೆಂಗಳೂರು ಕೇಂದ್ರ (ಸೆಂಟ್ರಲ್) ಕ್ಷೇತ್ರದಿಂದ ಅವರು ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು, ಹಲವು ದಿನಗಳ ಮುಂಚೆಯಿಂದಲೇ ಅವರು ಪ್ರಚಾರ ಆರಂಭಿಸಿದ್ದಾರೆ. |
ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಅವರು ಬಿಜೆಪಿಯ ಪಿ.ಸಿ.ಮೋಹನ್ ಅವರನ್ನು ಎದುರಿಸಲಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. |
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ |
ಪ್ರಕಾಶ್ ರೈ ಅವರು ಕಾಂಗ್ರೆಸ್‌ನ ಬೆಂಬಲವನ್ನು ಕೇಳಿದ್ದರು, ಬೆಂಗಳೂರು ಸೆಂಟ್ರಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕದೆ ತಮಗೆ ಬೆಂಬಲ ನೀಡಬೇಕೆಂಬ ಮನವಿಯನ್ನು ಅವರು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ಮುಂದಿಟ್ಟಿದ್ದರು ಆದರೆ ಪ್ರಕಾಶ್ ರೈ ಬೇಡಿಕೆಗೆ ಕಾಂಗ್ರೆಸ್ ಒಪ್ಪಿರಲಿಲ್ಲ. |
ಮೋದಿ ಅವರನ್ನು ವಿರೋಧಿಸುತ್ತಲೇ ಬರುತ್ತಿರುವ ಪ್ರಕಾಶ್ ರೈ ಅವರಿಗೆ ರಾಜ್ಯದ ಎಡ ಚಿಂತನೆಗಳ ಹಲವರು ಬೆಂಬಲ ಸೂಚಿಸಿದ್ದಾರೆ. |
prakash raj bengaluru central nomination ಪ್ರಕಾಶ್ ರಾಜ್ ಪ್ರಕಾಶ್ ರೈ ನಾಮಪತ್ರ ಪಕ್ಷೇತರ |
Actor Prakash Raj filled nomination to contest from Bengaluru central lok sabha constituency as independent candidate. |
ಭಾನುವಾರ, 8 ಜುಲೈ 2018 (08:26 IST) |
ಬೆಂಗಳೂರು: ಮತ್ತೆ ಮಳೆರಾಯನ ಅಬ್ಬರ ಜೋರಾಗಿದೆ. ನಿನ್ನೆ ಇಡೀ ದಿನ ಕರಾವಳಿ ಮತ್ತು ಮುಂಬೈ ನಗರಿಯಲ್ಲಿ ಧಾರಾಕಾರ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. |
ದ.ಕ. ಜಿಲ್ಲೆಯಲ್ಲಿ ಮತ್ತೆ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಿನ್ನೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಈ ಬಾರಿ ಕರಾವಳಿಯಲ್ಲಿ ದಾಖಲೆಯ ಮಳೆಯಾಗಿದೆ. |
ಇನ್ನು ವಾಣಿಜ್ಯ ನಗರಿ ಮುಂಬೈನಲ್ಲೂ ಭಾರೀ ಮಳೆಯಾಗಿದೆ. ಮೊನ್ನೆಯಷ್ಟೇ ಭಾರೀ ಮಳೆಯಿಂದಾಗಿ ರೈಲ್ವೇ ಮೇಲ್ಸೇತುವೆ ಕುಸಿದು ಬಿದ್ದು ಹಲವರು ಗಾಯಗೊಂಡಿದ್ದರು. ಇದೀಗ ಇನ್ನೂ ಐದು ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. |
ರಾಜ್ಯದಲ್ಲಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬೆಡ್ಗಳು ಖಾಲಿಯೇ ಉಳಿದಿವೆ | Pratidhvani |
ರಾಜ್ಯದಲ್ಲಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬೆಡ್ಗಳು ಖಾಲಿಯೇ ಉಳಿದಿವೆ |
ಎರಡನೇ ಅಲೆಯ ರೂಪಾಂತರಿ ಕರೋನಾ ವೈರಸ್ ಖಾಯಿಲೆಯು ಉಲ್ಪಣಗೊಂಡಿರುವ ಕಾರಣದಿಂದಾಗಿ ಇಡೀ ದೇಶಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಹೋಗುತ್ತಿದೆ. ಜತೆಗೇ ಸೋಂಕಿತರ ಸಾವುಗಳೂ ಹೆಚ್ಚಾಗಿದ್ದು ರುದ್ರ ಭೂಮಿಗಳಲ್ಲಿ ಸಂಸ್ಕಾರಕ್ಕೂ ಉದ್ದನೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ. ಶೇಕಡಾ 90 ರಷ್ಟು ಸೋಂಕಿತರು ಮೃತರಾಗುತ್ತಿರುವುದು ಆಕ್ಸಿಜನ್ ಕೊರತೆಯಿಂದ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದುದರಿಂದ ಮಾತ್ರ. ಇಡೀ ದೇಶದಲ್ಲಿ ಹಾಸಿಗೆ ಮತ್ತು ಆಕ್ಸಿಜನ್ ಕೊರತೆ ಇರುವುದು ಜಗಜ್ಜಾಹೀರು ಆಗಿದೆ. ಆದರೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹಾಸಿಗೆ ಕೊರತೆ ಅಗಿಲ್ಲ. |
ಈ ಹಾಸಿಗೆಗಳನ್ನು ಪಡೆದುಕೊಳ್ಳುವವರು ಬಹಳ ಕಡಿಮೆ ಇದ್ದರೂ, ರಾಜ್ಯ ಸರ್ಕಾರ ಮತ್ತು ಅನೇಕ ಖಾಸಗಿ ಸಂಸ್ಥೆಗಳು ಈಗಲೂ ರಾಜ್ಯದಾದ್ಯಂತ ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಸ್ಥಾಪನೆಯಲ್ಲಿ ನಿರತವಾಗಿವೆ. ಸಿಸಿಸಿಗಳು ಸೌಮ್ಯ ಅಥವಾ ಲಕ್ಷಣರಹಿತ ರೋಗಿಗಳಿಗೆ ಮಾತ್ರ ಆಗಿದ್ದು ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಕಳೆದ ಎರಡು ವಾರಗಳಲ್ಲಿ ರಾಜ್ಯದಾದ್ಯಂತ ಒಟ್ಟು 10,000 ಹಾಸಿಗೆಗಳನ್ನು ಹೊಂದಿರುವ ಸಿಸಿಸಿಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ, ಆದರೆ ಕೆಲವರು ಮಾತ್ರ ಆಮ್ಲಜನಕಯುಕ್ತ ಹಾಸಿಗೆಗಳನ್ನು ಹೊಂದಿದ್ದಾರೆ. ಪರಿಣಾಮವಾಗಿ, ಸಿಸಿಸಿ ಗಳಲ್ಲಿ 30% ಕ್ಕಿಂತ ಕಡಿಮೆ ಹಾಸಿಗೆಗಳು ಮಾತ್ರ ರೋಗಿಗಳನ್ನು ಹೊಂದಿದ್ದು ಉಳಿದ ಶೇಕಡಾ 70 ರಷ್ಟು ಹಾಸಿಗೆಗಳು ಖಾಲಿಯೇ ಉಳಿದಿವೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಬೆಂಗಳೂರಿನಲ್ಲಿ ಮಾತ್ರ 30 ಸಿಸಿಸಿಗಳಲ್ಲಿ ಸುಮಾರು 2,500 ಹಾಸಿಗೆಗಳಿವೆ, ಇದರಲ್ಲಿ ಕೇವಲ 500 ಮಾತ್ರ ಆಮ್ಲಜನಕಯುಕ್ತ ಹಾಸಿಗೆಗಳಿವೆ. ಒಟ್ಟು 750 ಹಾಸಿಗೆಗಳಲ್ಲಿ ಮಾತ್ರ ಸೋಂಕಿತರು ಇದ್ದಾರೆ. |
ಜನರು ಸಿಸಿಸಿಗಳಿಗಿಂತ ಮನೆಯಲ್ಲೇ ಕ್ವಾರಂಟೈನ್ ಆಗುವುದಕ್ಕೆ ಆದ್ಯತೆ ನೀಡುತ್ತಾರೆ ಎಂದು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯ ಸಿ.ಸಿ.ಸಿ ಯ ಸಿಬ್ಬಂದಿಗಳ ಅಭಿಪ್ರಾಯ ಆಗಿದೆ. ಕುಟುಂಬದಿಂದ ದೂರ ಇರುವ ಭಯವು ಇದಕ್ಕೆ ಕಾರಣವಾಗಿದೆ ಮತ್ತು ಅನೇಕ ರೋಗಿಗಳು ತಮ್ಮ ಅರೋಗ್ಯ ಸ್ಥಿತಿಯು ಇದ್ದಕ್ಕಿದ್ದಂತೆ ಹದಗೆಟ್ಟರೆ ಆಸ್ಪತ್ರೆಯಲ್ಲಿ ತ್ವರಿತ ಚಿಕಿತ್ಸೆಯ ಭರವಸೆ ಇರುವುದರಿಂದ ಸಿಸಿಸಿಗಿಂತ ಆಸ್ಪತ್ರೆಯಲ್ಲಿ ರೋಗಿಗಳನ್ನು ಸೇರಿಸುವುದು ಸುರಕ್ಷಿತವೆಂದು ಭಾವಿಸುತ್ತಾರೆ. ಸೋಮವಾರ, ಪ್ಲೇಟ್ಲೆಟ್ ಕಡಿಮೆ ಇದ್ದ ರೋಗಿಯೊಬ್ಬರನ್ನು ಸಿಸಿಸಿಗೆ ಸೇರಿಸಲು ರೆಫರ್ ಮಾಡಲಾಗಿತ್ತು. ಸಿಸಿಸಿಯಲ್ಲಿ ಆಮ್ಲಜನಕಯುಕ್ತ ಹಾಸಿಗೆಯೂ ಲಭ್ಯವಿತ್ತು. ಆದರೆ ರೋಗಿಯನ್ನು ರೆಫರ್ ಮಾಡಿದ ಆಸ್ಪತ್ರೆಯಲ್ಲಿ ಹಾಸಿಗೆಗಳು ಲಭ್ಯವಿರಲಿಲ್ಲ. ಆದರೆ ಕುಟುಂಬ ಸದಸ್ಯರು ರೋಗಿಯನ್ನು ಸಿ.ಸಿ.ಸಿ ಯಲ್ಲಿ ದಾಖಲಿಸಲು ನಿರಾಕರಿಸಿದರು ಎಂದು ಸಿಸಿಸಿ ವ್ಯವಸ್ಥಾಪಕರೊಬ್ಬರು ತಿಳಿಸಿದರು. |
ಕಳೆದ ವರ್ಷ ನಡೆದ ಮೊದಲ ಕೋವಿಡ್ -19 ತರಂಗದಲ್ಲೂ ಸರ್ಕಾರ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 10,000 ಹಾಸಿಗೆಗಳ ಕೇಂದ್ರವನ್ನು ತೆರೆಯಿತು. ಆದರೆ ವರ್ಷವಿಡೀ, 10% ಹಾಸಿಗೆಗಳು ಕೂಡ ಭರ್ತಿ ಆಗಲಿಲ್ಲ. ಇದಲ್ಲದೆ, ದೇಶದ ಅತಿದೊಡ್ಡ ಸಿಸಿಸಿ ಎಂದು ರಾಜ್ಯ ಸರ್ಕಾರ ಭಾರೀ ಪ್ರಚಾರವನ್ನೂ ಮಾಡಿತ್ತು. ನಂತರ ಕೋವಿಡ್ ಪ್ರಕರಣಗಳು ಕಡಿಮೆ ಆದ ಹಿನ್ನೆಲೆಯಲ್ಲಿ ಅದನ್ನು ಮುಚ್ಚಲಾಯಿತು. ಅನೇಕ ಆರೋಗ್ಯ ತಜ್ಞರು ಹೇಳುವಂತೆ ಸಿಸಿಸಿಗಳನ್ನು ತೆರೆಯುವ ಮತ್ತು ಹಣವನ್ನು ವ್ಯರ್ಥ ಮಾಡುವ ಬದಲು, ಆಮ್ಲಜನಕಯುಕ್ತ ಹಾಸಿಗೆಗಳನ್ನು ಹೆಚ್ಚಿಸಲು ಮತ್ತು ಹೆಚ್ಚಿನ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಕುರಿತು ಸರ್ಕಾರ ಗಮನಹರಿಸಬೇಕು. ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡುವ ಮತ್ತು ಬಹಳ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಮಾತ್ರ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಉತ್ತಮಪಡಿಸಬೇಕು. ಹೀಗೆ ಮಾಡುವುದರಿಂದ ನಾವು ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆ ಮಾಡಬಹುದು. ಹೆಚ್ಚಿನ ಐಸಿಯು ಹಾಸಿಗೆಗಳನ್ನು ಒದಗಿಸುವ ಬಗ್ಗೆಯೂ ಸರ್ಕಾರ ಗಮನಹರಿಸಬೇಕು, ಅದು ಈ ಸಮಯದ ಅಗತ್ಯವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. |
ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ನೇತೃತ್ವದ ರಾಜ್ಯ ಸರ್ಕಾರದ ಟಾಸ್ಕ್ ಫೋರ್ಸ್ ಪ್ರಕಾರ ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 7,000 ಹಾಸಿಗೆಗಳಿಗೆ ಬೇಡಿಕೆ ಇದೆ. ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾದವರಿಗೆ ತಪಾಸಣೆ ಮಾಡಲು, ಈ ಹಾಸಿಗೆ ಅವಶ್ಯಕತೆಯುಳ್ಳವರನ್ನು ಮೊದಲ ಹಂತದ ಮತ್ತು ಎರಡನೇ ಹಂತದ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲೆವೆಲ್-ಒನ್ ಕೇಂದ್ರಗಳಲ್ಲಿ ಹೆರಿಗೆ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಮತ್ತು ಸಿಸಿಸಿಗಳು ಸೇರಿವೆ, ಆದರೆ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಲೆವೆಲ್ ಟೂ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪರಿಣಾಮಕಾರಿಯಾದ ಚಿಕಿತ್ಸೆಯ ಮೂಲಕ ಪ್ರತಿದಿನ ಅಗತ್ಯವಿರುವ ಹಾಸಿಗೆಗಳ ಬೇಡಿಕೆ ಮತ್ತಷ್ಟು ಕಡಿಮೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 5,87,452. ಬೆಂಗಳೂರು ನಗರದಲ್ಲಿ 3,62,696. ಆದರೆ ಜನರು ಕುಟುಂಬದೊಂದಿಗೆ ಇರಲು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ ಹೋಂ ಐಸೋಲೇಷನ್ ಆಯ್ಕೆಯನ್ನು ಬಯಸುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ಗೆ ಬರುವ ಬದಲು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. |
ಸರ್ಕಾರ ಮೊದಲ ಮತ್ತು ದ್ವಿತೀಯ ಹಂತದ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಸುಮಾರು 6 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ. ಇದನ್ನು ನಿರ್ವಹಣೆ ಮಾಡುವುದು ಕೂಡ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಕಳಪೆ ಸಾಂಕ್ರಮಿಕ ನಿರ್ವಹಣೆಯ ಕಾರಣದಿಂದಾಗಿ ಹಣ ವೆಚ್ಚವಾಗುತ್ತಿದೆಯಲ್ಲದೆ ರೋಗಿಗಳಿಗೆ ಸೂಕ್ತ ಸವಲತ್ತು ದೊರೆಯುತ್ತಿಲ್ಲ. |
ಒಂದೇ ವೇದಿಕೆ ಹಂಚಿಕೊಂಡರೂ ಮಾತನಾಡದ ಸಿದ್ದು-ಎಚ್.ವಿಶ್ವನಾಥ್ | Siddaramaiah and H Vishwanath did not talk to each other - Kannada Oneindia |
22 min ago ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ: ಜಲಾಶಯಗಳ ನೀರಿನ ಮಟ್ಟ ಹೇಗಿದೆ? |
26 min ago ಸೋನಿಯಾ ಗಾಂಧಿ ನೇತೃತ್ವದ ''ಗಾಂಧಿ'' ಟ್ರಸ್ಟಿಗಳ ಅವ್ಯವಹಾರ ತನಿಖೆಗೆ |
31 min ago ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ: ರಾಜ್ಯದ 6 ಸೇತುವೆಗಳು ಜಲಾವೃತ |
| Updated: Monday, September 24, 2018, 17:56 [IST] |
ಮೈಸೂರು, ಸೆಪ್ಟೆಂಬರ್.24: ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಒಂದೇ ಸಮುದಾಯದ ಇಬ್ಬರು ನಾಯಕರಾದ ಸಿದ್ದರಾಮಯ್ಯ ಮತ್ತು ಎಚ್.ವಿಶ್ವನಾಥ್ ಒಂದೇ ವೇದಿಕೆಯನ್ನು ಹಂಚಿಕೊಂಡರೂ ಇಬ್ಬರು ಪರಸ್ಪರ ಮಾತನಾಡದೆ ಬದ್ಧ ವೈರಿಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ. |
ಕೆ.ಆರ್.ನಗರದ ಕಾಗಿನೆಲೆ ಕನಕಗುರು ಪೀಠದ ಆವರಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಿರ್ಮಾಣ ಮಾಡಿರುವ ಸಂಗೊಳ್ಳಿರಾಯಣ್ಣ ಸಮುದಾಯ ಭವನ ಉದ್ಘಾಟನೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. |
ಈ ಕಾರ್ಯಕ್ರಮದ ವೇದಿಕೆಯನ್ನು ಇಬ್ಬರು ಹಂಚಿಕೊಳ್ಳುತ್ತಿರುವುದು ತಿಳಿದು ಅವರು ಹೇಗೆ ವರ್ತಿಸಬಹುದು ಎಂದು ಜನ ಕುತೂಹಲದಿಂದ ಕಾದಿದ್ದರು. ಹೀಗೆ ಕಾದವರಿಗೆ ಕೊನೆಗೂ ಅವರಿಬ್ಬರು ಎರಡು ಗಂಟೆಗಳ ಕಾಲ ಒಂದೇ ವೇದಿಕೆಯಲ್ಲಿದ್ದರೂ ಒಬ್ಬರನೊಬ್ಬರು ನೋಡಿಕೊಳ್ಳದೆ ಇಡೀ ಕಾರ್ಯಕ್ರಮವನ್ನು ಮುಗಿಸಿ ಹೋಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. |
ಒಂದೇ ಪಕ್ಷದಲ್ಲಿದ್ದು ಸಿದ್ದರಾಮಯ್ಯ ಸಿಎಂ ಆದ ಬಳಿಕ ರಾಜಕೀಯವಾಗಿ ಪರಸ್ಪರ ದೂರವಾದ ಎಚ್.ವಿಶ್ವನಾಥ್ ಬಳಿಕ ಜೆಡಿಎಸ್ ಸೇರಿ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ವಿರುದ್ಧ ಭಾರೀ ಆರೋಪ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. |
ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಸೋಲಲು ಎಚ್.ವಿಶ್ವನಾಥ್ ಅವರು ಕೂಡ ಕಾರಣರಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬರುವ ಮೊದಲೇ ಎಚ್.ವಿಶ್ವನಾಥ್ ಅವರು ಮಾತು ಮುಗಿಸಿ ಬಿಟ್ಟಿದ್ದರು. |
ಆ ನಂತರ ಆಗಮಿಸಿದ ಸಿದ್ದರಾಮಯ್ಯ ಅವರು ಮಾತನಾಡಿ ಎಚ್.ವಿಶ್ವನಾಥ್ ಅವರಿಗೆ ಟಾಂಗ್ ಕೊಡುವುದನ್ನು ಮರೆಯಲಿಲ್ಲ. ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಜನಪರ ಕೆಲಸ ಮಾಡಿದ್ದರೂ ಅದರ ಬಗ್ಗೆ ವಿಪಕ್ಷಗಳ ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ಇನ್ನೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. |
ಪಕ್ಷ ರಾಜ್ಯದಲ್ಲಿ ಸೋತಿದ್ದಕ್ಕೆ ನನಗೆ ಬೇಸರವಿಲ್ಲ, ಜನತೆಗೆ ಉತ್ತಮ ಕಾರ್ಯಕ್ರಮ ನೀಡಿದ ತೃಪ್ತಿಯಿದೆ. ಇಲ್ಲಿ ಅಧಿಕಾರ ಶಾಶ್ವತವಲ್ಲ. ಕಾಲ ಚಕ್ರ ಉರುಳಿದಂತೆ, ಮೇಲಿದ್ದವರು ಕೆಳಗೆ ಇಳಿಯಲೇ ಬೇಕು ಕೆಳಗಿದ್ದವರು ಮೇಲೇರಬೇಕು. ನಾನು ಸದಾ ಪರಸ್ಪರ ಜಾತಿಗಳನ್ನು ಜೋಡಿಸುವ ಕೆಲಸವನ್ನು ಮಾಡಿದ್ದೇನೆ. ಒಡೆಯುವ ಕೆಲಸ ಮಾಡಿಲ್ಲ ಎಂದು ಹೇಳುವ ಮೂಲಕ ಗಮನಸೆಳೆದರು |
ಸಿದ್ದರಾಮಯ್ಯ ಅವರ ಮಾತು ಕೇಳುತ್ತಾ ವಿಶ್ವನಾಥ್ ತಮ್ಮ ಪಾಡಿಗೆ ಆಸೀನರಾಗಿದ್ದರಲ್ಲದೆ, ಕಾರ್ಯಕ್ರಮ ಮುಗಿದ ಬಳಿಕ ತಮ್ಮ ಪಾಡಿಗೆ ತಾವು ಎಂಬಂತೆ ಹೊರಟು ಹೋದರು. |
siddaramaiah h vishwanath mysuru district news ಸಿದ್ದರಾಮಯ್ಯ ಎಚ್ ವಿಶ್ವನಾಥ್ ಮೈಸೂರು ಜಿಲ್ಲಾಸುದ್ದಿ |
Siddaramaiah and H Vishwanath shared the same forum on Monday (September 24). But they did not talk to each other. This is due to everyone's surprise. |
|ಬಬ್ಬೂರು ಕಾಲೇಜಿನಲ್ಲಿ ಯುವ ಜನೋತ್ಸವ - chitradurga - News in kannada, vijaykarnataka |
Subsets and Splits
No community queries yet
The top public SQL queries from the community will appear here once available.