text
stringlengths 0
61.5k
|
---|
🔷 ಗ್ರಾಮಗಳ ಜನಪ್ರತಿನಿಧಿಗಳಿಗೆ ಗೌರವ ಸಲ್ಲಿಸುವ ಗ್ರಾಮ ಸೇವಕ್ ಸಮಾವೇಶ ಆಯೋಜನೆ |
🔷 ಹಿರಿಯರಿಗೆ ಮತ್ತು ಪಕ್ಷದ ಪ್ರಮುಖರಿಗೆ ಹಾಗೂ ಸಮಾಜದ ವಿವಿಧ ವರ್ಗದ ಜನರಿಂದ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ "ಜನಾಶೀರ್ವಾದ ಯಾತ್ರೆ" ಆಯೋಜನೆ |
🔷 ಬೂತ್‍ಗಳಲ್ಲಿ ಪೇಜ್ ಪ್ರಮುಖರ ಪರಿಕಲ್ಪನೆಯ ಸಮರ್ಪಕ ಅನುಷ್ಠಾನ, ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರ ನೇಮಕ, ಪಂಚರತ್ನ ಸಮಿತಿ ರಚನೆ. |
'ಮೋದಿಗೆ ಪಟ್ಟ; ರಾಜ್ಯದಲ್ಲೂ ಮೋಡಿ ನಿರೀಕ್ಷೆ' | Prajavani |
'ಮೋದಿಗೆ ಪಟ್ಟ; ರಾಜ್ಯದಲ್ಲೂ ಮೋಡಿ ನಿರೀಕ್ಷೆ' |
ಹೊಸ ಧ್ರುವೀಕರಣ-–ಜೋಶಿ; ಯುವಜನರ ಆಶಾಕಿರಣ–ಶೆಟ್ಟರ್ |
Published: 14 ಸೆಪ್ಟೆಂಬರ್ 2013, 14:46 IST |
Updated: 14 ಸೆಪ್ಟೆಂಬರ್ 2013, 14:46 IST |
ಹುಬ್ಬಳ್ಳಿ: 'ಕಳೆದ 10 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ದೇಶವನ್ನು ಮುಕ್ತವಾಗಿಸುವ ನಿಟ್ಟಿನಲ್ಲಿ ಬಿಜೆಪಿಗೆ ನರೇಂದ್ರ ಮೋದಿ ಮೂಲಕ ಸೂಕ್ತ ನಾಯಕತ್ವ ಸಿಕ್ಕಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಸಂತಸ ವ್ಯಕ್ತಪಡಿಸಿದರು. |
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಕೋರ್ಟ್ ವೃತ್ತದಲ್ಲಿ ಪಕ್ಷದ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಶುಕ್ರವಾರ ನಡೆದ ಸಂಭ್ರಮಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, 'ಇದು ರಾಜ್ಯದಲ್ಲೂ ಹೊಸ ರಾಜಕೀಯ ಧ್ರುವೀಕರಣಕ್ಕೂ ನಾಂದಿ ಆಗಲಿದೆ' ಎಂದರು. |
'ಮೋದಿ ಅವರನ್ನು ಆಯ್ಕೆ ಮಾಡುವ ವಿಷಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆ, ಕುತೂಹಲಕ್ಕೆ ಪಕ್ಷದ ಸಂಸದೀಯ ಮಂಡಳಿ ಸರಿಯಾದ ನಿರ್ಣಯ ತೆಗೆದುಕೊಳ್ಳುವ ಮೂಲಕ ಅಂತ್ಯಹಾಡಿದೆ. ಮೋದಿ ದೇಶದ ಯುವಜನರ ಆಶಾಕಿರಣ. ವಾಜಪೇಯಿ ನಾಯಕತ್ವದ ಬಳಿಕ ಪರಿವರ್ತನೆಯ ಹಾದಿಯಲ್ಲಿದ್ದ ಪಕ್ಷಕ್ಕೆ ಯೋಗ್ಯ, ಉತ್ತಮ ವ್ಯಕಿತ್ವ, ಅರ್ಹತೆಯ ವ್ಯಕ್ತಿ ಸಿಕ್ಕಿದ್ದಾರೆ' ಎಂದರು. |
'ಮೋದಿ ಗುಜರಾತ್ ಮಾದರಿಯಲ್ಲಿ ದೇಶವನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದ್ದಾರೆ. ಅವರ ನಾಯಕತ್ವಕ್ಕೆ ರಾಜ್ಯದ ಜನರೂ ಸ್ಪಂದಿಸುವ ವಿಶ್ವಾಸವಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಪಕ್ಷ ಗೆಲ್ಲುವ ಭರವಸೆ ಇದೆ' ಎಂದರು. |
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, 'ಮೋದಿ ಭವಿಷ್ಯದ ಆಶಾಕಿರಣ. ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ಮಂಡಳಿ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದೆ' ಎಂದರು. |
'ಮೋದಿ ಆಯ್ಕೆ ಪ್ರಕಟವಾಗುತ್ತಿದ್ದಂತೆ ಯುವ ಜನಾಂಗದಲ್ಲಿ ಸಂಚಲನ ಉಂಟಾಗಿದೆ. ಕೇಂದ್ರದಲ್ಲಿ ಯುಪಿಎ ಆಡಳಿತವನ್ನು ನಿರ್ನಾಮ ಮಾಡಲು ಪರ್ಯಾಯ ನಾಯಕತ್ವ ಬೇಕಿತ್ತು. ಮೋದಿ ಮೋಡಿ ಮಾಡುವ ಮೂಲಕ ಆ ಸ್ಥಾನವನ್ನು ತುಂಬಲಿದ್ದಾರೆ. ಮೋದಿ ಅಲೆಯಿಂದಾಗಿ ಪಕ್ಷ ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. |
ಸ್ವಾತಂತ್ರ್ಯ ದಿನಾಚರಣೆ ಸಕಲ ಸಿದ್ಧತೆಗೆ ಸೂಚನೆ | Udayavani – ಉದಯವಾಣಿ |
Thursday, 24 Sep 2020 | UPDATED: 07:11 AM IST |
Team Udayavani, Aug 11, 2020, 9:50 AM IST |
ಗದಗ: ಜಿಲ್ಲಾಡಳಿತದಿಂದ ಆ. 15ರಂದು ಆಚರಿಸಲಾಗುತ್ತಿರುವ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಕೋವಿಡ್ -19 ಸಂದಿಗ್ಧ ಪರಿಸ್ಥಿಯಲ್ಲೂ ಅಚ್ಚುಕಟ್ಟಾಗಿ ಆಚರಿಸಲು ಕ್ರಮ ಕೈಗೊಳ್ಳಲು ಜಿಲ್ಲಾ ಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದರು. |
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯೊತ್ಸವ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಜಿಲ್ಲೆಯಾದ್ಯಂತ ಸ್ವಾತಂತ್ರ್ಯೊತ್ಸವ ವದ ಸಂಭ್ರಮವು ಪ್ಲಾಸ್ಟಿಕ್ ಮುಕ್ತವಾಗಿರಬೇಕು. ಆಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜ ಬಳಕೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ವೇಳೆ ಪ್ರತಿಯೊಬ್ಬರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಮೂಲಕ ಆಚರಿಸಬೇಕು ಎಂದು ಸೂಚಿಸಿದರು. ಗೌರವ ಧ್ವಜವಂದನೆಯ |
ಫರೇಡ್‌ನಲ್ಲಿ ಭಾಗವಹಿಸುವವರಿಗೆ ಕಡ್ಡಾಯವಾಗಿ ಕೊರೊನಾ ರ್ಯಾಪಿಡ್ ಟೆಸ್ಟ್ ಮಾಡಬೇಕು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರ್ಯೊತ್ಸವ ವದ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸುವವರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು. ನಗರದಲ್ಲಿ ಸ್ವತ್ಛತೆ ಕಾಪಾಡಬೇಕು. ಪ್ರಮುಖ ಬೀದಿ, ಕಟ್ಟಡ ಹಾಗೂ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ಧ್ವಜಾರೋಹಣ ಸಂದರ್ಭದಲ್ಲಿ ವ್ಯತಿರಿಕ್ತ ಘಟನೆಗಳು ಸಂಭವಿಸದಂತೆ ನಿಗಾವಹಿಸಬೇಕು. |
ಸಚಿವರ ಸಂದೇಶ, ಸಾಧಕರಿಗೆ ಸನ್ಮಾನ, ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆ ನಿರ್ಮಾಣ, ಬಂದೋಬಸ್ತ್, ಶಾಮಿಯಾನ ವ್ಯವಸ್ಥೆ ಹಾಗೂ ಉಪಾಹಾರ ವ್ಯವಸ್ಥೆಗಳನ್ನು ಶಿಷ್ಟಾಚಾರ ಮಾರ್ಗಸೂಚಿಗಳಂತೆ ನಿರ್ವಹಿಸಲು ಜಿಲ್ಲಾ ಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು. |
ಜಿ.ಪಂ. ಸಿಇಒ ಡಾ| ಆನಂದ್ ಕೆ., ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ್ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು |
ಏಪ್ರಿಲ್ 30 ಭಯಂಕರ ಸೂರ್ಯ ಗ್ರಹಣ!ಈ 6 ರಾಶಿಯವರಿಗೆ ಶನಿಯ ಕೃಪೆ! ರಾಜಯೋಗ ಗ್ರಹಣದ ಸಮಯ… – Upayuktamahiti.com |
April 21, 2022 April 21, 2022 adminLeave a Comment on ಏಪ್ರಿಲ್ 30 ಭಯಂಕರ ಸೂರ್ಯ ಗ್ರಹಣ!ಈ 6 ರಾಶಿಯವರಿಗೆ ಶನಿಯ ಕೃಪೆ! ರಾಜಯೋಗ ಗ್ರಹಣದ ಸಮಯ… |
ಏಪ್ರಿಲ್ 30 ನೇ ತಾರೀಕು ಶನಿವಾರ ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭಾವಿಸಲಿದೆ.ಈ ವರ್ಷದ ಮೊದಲ ಗ್ರಹಣ ಆಗಿರುವುದರಿಂದ ತುಂಬಾನೇ ವಿಶೇಷ ಹಾಗೂ ಭಯಾನಕವಾಗಿದೆ. ಈ ಗ್ರಹಣದ ಸಮಯದಲ್ಲಿ ಈ 6 ರಾಶಿಯವರಿಗೆ ಶನಿದೇವರ ನೇರ ಕೃಪೆ ಪ್ರಾಪ್ತಿ ಆಗುತ್ತದೆ. ಆದ್ದರಿಂದ ಇವರ ಜೀವನದಲ್ಲಿ ರಾಜಯೋಗ ಶುರು ಆಗುತ್ತದೆ.ಯಾವುದೇ ಕಷ್ಟಗಳು ಕಾರ್ಪಣ್ಯಗಳು ಇದ್ದರು ಕೂಡ ನಿವಾರಣೆ ಆಗುತ್ತದೆ.ಅಷ್ಟೇ ಅಲ್ಲದೆ ಶನಿ ದೇವರ ಕೃಪೆಯಿಂದ ಮುಕ್ತಿಯನ್ನು ಪಡೆಯುತ್ತಾರೆ. |
ಹೊಸ ಕೆಲಸವನ್ನು ಕೈಗೊಳ್ಳುವ ಅತ್ಯುತ್ತಮ ಅವಕಾಶ ಈ ರಾಶಿಯವರಿಗೆ ಸಿಗುತ್ತದೆ ಹಾಗೂ ಈ ರಾಶಿಯವರು ಕೋಪವನ್ನು ಸ್ವಲ್ಪ ಹಿಡಿತದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನಿಮ್ಮ ಮಿತ್ರರಿಂದ ಒಳ್ಳೆಯ ಸಹಾಯ ಸಹಕಾರ ದೊರೆಯುತ್ತದೆ.ಈ ಸಮಯದಲ್ಲಿ ಈ ರಾಶಿಯವರಿಗೆ ವಿವಾಹದ ಯೋಗ ಕೂಡಿ ಬರುತ್ತದೆ.ಈ ಸಮಯದಲ್ಲಿ ಯಾವುದೇ ಕೆಲಸವು ಕೂಡ ವಿಪರೀತ ಲಾಭವನ್ನು ತಂದು ಕೊಡುತ್ತದೆ.ನೀವು ಸಂಗೀತ ಕ್ಷೇತ್ರದಲ್ಲಿ ಆಸಕ್ತಿವುಳ್ಳವರು ಆಗಿದ್ದರೆ ತಮ್ಮ ಪ್ರತಿಭೆಯನ್ನು ಹೊರ ಹಾಕುವ ಅವಕಾಶ ದೊರೆಯುತ್ತದೆ.ಇದೆ ಏಪ್ರಿಲ್ 30ನೇ ತಾರೀಕು ಸೂರ್ಯ ಗ್ರಹಣದಂದು ಶನಿದೇವರ ಕೃಪೆಯಿಂದ ಯಾವೆಲ್ಲಾ ರಾಶಿಯವರು ಲಾಭವನ್ನು ಪಡೆಯುತ್ತಾರೆ ಎಂದರೆ ಮೇಷ ರಾಶಿ ಸಿಂಹ ರಾಶಿ ಕನ್ಯಾ ರಾಶಿ ಕುಂಭ ರಾಶಿ ಮಕರ ರಾಶಿ ಮತ್ತು ವೃಶ್ಚಿಕ ರಾಶಿ. |
ಕಾಂಗ್ರೆಸ್ 'ರೆಬೆಲ್' ಆನಂದ್ ಚೋಪ್ರಾ ಮೇಲೆ ಮಾರಣಾಂತಿಕ ಹಲ್ಲೆ | Savadatti : Attack on Congress rebel Anand Chopra - Kannada Oneindia |
33 min ago ಸೂರ್ಯ ಕಿರಣ್ ವಿಮಾನಗಳ ನಡುವೆ ಡಿಕ್ಕಿ, ಒಬ್ಬ ಸಾವು? |
| Updated: Sunday, July 29, 2018, 10:38 [IST] |
ಬೆಳಗಾವಿ, ಜುಲೈ 29: ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಆನಂದ್ ಚೋಪ್ರಾ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅವರ ಹತ್ಯೆಗೆ ಯತ್ನಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. |
ಶನಿವಾರ ರಾತ್ರಿ ವೇಳೆ ಸವದತ್ತಿಯ ಹೂಲಿ ರಸ್ತೆಯಲ್ಲಿ ಬೈಕಿನಲ್ಲಿ ಆನಂದ್ ಅವರು ತೆರಳುತ್ತಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು, ಏಕಾಏಕಿ ದಾಳಿ ನಡೆಸಿ ಲಾಂಗ್ ಮತ್ತು ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ. |
ಆನಂದ್ ಅವರ ಕುತ್ತಿಗೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಆನಂದ್ ಚೋಪ್ರಾ ಚಿಕಿತ್ಸೆ ಪಡೆಯುತ್ತಿದ್ದಾರೆ. |
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಆನಂದ್ ಮಾಮನಿ ವಿರುದ್ಧ ಆನಂದ್ ಚೋಪ್ರಾ ಅವರು 6291 ಮತಗಳ ಅಂತರದಿಂದ ಸೋಲು ಕಂಡಿದ್ದರು. ರಾಜಕೀಯ ವೈಷಮ್ಯದಿಂದಲೇ ಇವರ ಮೇಲೆ ಕೊಲೆಗೆ ಯತ್ನಿಸಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ. |
belagavi district news ಬೆಳಗಾವಿ ಜಿಲ್ಲಾಸುದ್ದಿ |
Savadatti: Congress rebel Candidate Anand Chopra attacked. Anand lost to BJP's Vishwanath Chandrashekhar Mamani in the last Assembly Elections 2018. Vishwanath mamani won Savadatti yellamma constituency by 6291 margin of votes. He has been admitted to private hospital in Hubballi. |
ನನ್ನ ಬುರ್ರಾ ಗಾಡಿಯನ್ನು ನಾನೇ ಕೊಂದದ್ದು.. – ಮೂರು ಊರಿನ ಸುತ್ತ… |
ತಿಮ್ಮಣ್ಣಪ್ಪಚ್ಚಿ (ತಿಮ್ಮಣ್ಣ ಅಪ್ಪಚ್ಚಿ(ಚಿಕ್ಕಪ್ಪ))ಯ ಮಗ ಶ್ರೀಧರ "ಪುರ್ರ್.." ಎಂದು "ಮರದ ಹ್ಯಾಂಡಲ್" ಹಿಡಿದು ಅದನ್ನೇ ಬೈಕ್ ಎಂದು ಭಾವಿಸಿ ಅತಿವೇಗದಲ್ಲಿ ನಮ್ಮ ಹಳೆಯ ಮನೆ ಹಿತ್ತಲಾಕಡೆಯ ಅಡಿಕೆ ಮರಗಳ ಸಂದುಗೊಂದುಗಳನ್ನೆಲ್ಲಾ ಅಡ್ಡಾದಿಡ್ಡಿಯಾಗಿ ತಿರುಗುತ್ತ ನಮ್ಮ ಮನೆಯ ಅಂಗಳದಲ್ಲಿ ಲ್ಯಾಂಡ್ ಆದ. ಅವ ನನಗಿಂತ ಒಂದು ವರ್ಷಕ್ಕೆಲ್ಲಾ ದೊಡ್ಡವನು. ಸಮಾನ ಮನಸ್ಕರು ನಾವು. ಕೋಲಿನ ಎರಡೂ ಬದಿಗೆ v ಅಕಾರದಲ್ಲಿ ಇನ್ನೆರಡು ಕೋಲನ್ನು ಕಟ್ಟಿದರೆ ನಮ್ಮ "ಗಾಡಿ" ರೆಡಿ. ಅದಕ್ಕೆ ನಾವಿಟ್ಟ ಹೆಸರು "ಬುರ್ರಾ ಗಾಡಿ". ಆ ದಿನಗಳಲ್ಲಿ ನಮ್ಮ ಹೆಚ್ಚಿನ ಲೊಕಲ್ ಪ್ರಯಾಣಗಳೆಲ್ಲಾ ಈ ಬುರ್ರಾಗಾಡಿಯಮೇಲೇ.. ಅದನ್ನು ಹಿಡಿದು "ಬುರ್ರ್ ರ್ರ್.." ಎಂದು ಬಾಯಲ್ಲಿ ಶಬ್ಢ ಮಾಡುತ್ತಾ ಓಡಿದರೆ ಮತ್ತೆ ನಿಲ್ಲುವುದು ನಮ್ಮ ಗುರಿ ತಲುಪಿದ ನಂತರವೆ. ನನಗೆ ಮತ್ತು ಮಳ್ಗೆ ಮನೆ ಯಂಟ್ರೋಣನಿಗೆ ಎಲ್ಲಿಗೆ ಹೋಗುವದಿದ್ದರೂ ಈ ಶ್ರೀಧರನೇ ಸಾಥಿ-ಸಾರಥಿ. "ಶ್ರೀಧರ ಸರ ಪರ ಟುರ್ರು ಟುಕ್ ಟುಕ್ " .. ನಾನು ಮತ್ತು ಯೆಂಕಟಿ – ಶ್ರೀಧರನನ್ನ ಕಂಡಾಗಲೆಲ್ಲಾ ಇದನ್ನೇ ಹೇಳುತ್ತಿದ್ದೆವು. ಇಂದಿನ ಚಲನಚಿತ್ರದ ಗೀತೆಗಳಂತೆ ಅದಕ್ಕೇನೂ ಅರ್ಥವಿಲ್ಲದಿದ್ದರೂ ಪ್ರಾಸ ಮಾತ್ರವಿತ್ತು. |
ಇವತ್ತು ನನ್ನ ಹಿರೊ ಹೋಂಡಾ ಬೈಕ್ ಅನ್ನು ಏರಿ ನನ್ನ ಆಫೀಸಿಗೆ ಹೊರಟಾಗ ಥಟ್ಟನೆ ನ್ನನ್ನ ಬೈಕ್ ಹ್ಯಾಂಡಲ್ ಮರವಾದಂತೆ ಭಾಸವಾಯಿತು. ಹೆಲ್ಮೇಟಿನ ಒಳಗೇ "ಬುರ್ರ್ ರ್ರ್ ರ್ರ್ ರ್ರ್….." ಎಂದಾಗ ಕಣ್ಣೆಲ್ಲ ಒದ್ದೆ ಒದ್ದೆ.. ಯಾಕೋ ಹೊಟ್ಟೆಯೆಲ್ಲಾ ತೊಳಸಿದಂತಾಯ್ತು. ನೆನಪಿನೆ ಆಳದಲ್ಲಿ ಮುಳುಗಿ ಹೋದೆ. ಗಟ್ಟಿಯಾಗಿ "ಶ್ರೀಧರ ಸರ ಪರ ಟುರ್ರ್ ಟುಕ್ ಟುಕ್.." ಎಂದೆ.. ಸಡನ್ನನೆ "ನಾನ್ಯಾಕೆ ಇಲ್ಲಿಗೆ ಬಂದೆ?? ಈ ಬೆಂಗಳೂರಿನಲ್ಲಿ ಬುರ್ರಾ ಗಾಡಿಯನ್ನು ಓಡಿಸುವಂತಾದನಲ್ಲಾ ! " ಎಂದು ಯಾಕೋ ನನ್ನನ್ನೇ ನಾನು ಕೇಳಿಕೊಂಡಂತಾಯಿತು. ಬೆಂಗ್ಳೂರಿಗೆ ಬಂದ ನಂತರ ನನ್ನ ಹಳೆಯ ಬುರ್ರಾ ಗಾಡಿ ಸತ್ತು ಹೆಣವಾಗಿ ಹೋಯಿತಲ್ಲಾ ಎಂದು ಬೇಜಾರಾಯಿತು. ಒಮ್ಮೆ ನನ್ನ ಅಕ್ಕ ಪಕ್ಕ ನೋಡಿಕೊಂಡೆ. ಸಾವಿರಾರು "ಬುರ್ರಾ ಗಾಡಿಗಳು!" .. .. .. ಎಲ್ಲರೂ ತಮ್ಮ ಹಳೆಯ ಬಾಲ್ಯದ ಬುರ್ರಾ ಗಾಡಿಗಳನ್ನು ಕೊಂದ ಕೊಲೆಗಾರರೆ.. ಒಬ್ಬರಿಗೂ ತಾವು ಮಾಡಿದ ಕೊಲೆಯ ಪರಿವೆಯೇ ಇಲ್ಲ. ಎಲ್ಲಾ ಇಲ್ಲಿ ಬೆಂಗ್ಳೂರಿಗೆ ಬಂದು ತಮ್ಮ ತಮ್ಮ ಚಕ್ರಾಧಿಪತ್ಯವನ್ನು ಸ್ಥಾಪಿಸಿ ಆಗಿದೆ – ಇನ್ನು ಕೆಲವರು ಓಡುತ್ತಿದ್ದಾರೆ ಆ ಓಯಾಸಿಸ್ ಅನ್ನು ಅರಸಿ. |
ಆದರೆ ನನಗೆ ಮತ್ತೆ ನನ್ನ ಹಳೆಯ ಬುರ್ರಾ ಗಾಡಿ ಬೇಕಾಗಿದೆ. ಯಂಟ್ರೋಣನಿಗೆ ಫೋನ್ ಮಾಡಿದೆ. ಅವನಲ್ಲಿ ಎನನ್ನೋ ಹೇಳಿಕೊಳ್ಳೊಣವೆನ್ನಿಸಿತು. ಮಾಡಿದರೆ ಅವನು ತನ್ನ ಹೊಚ್ಚ ಹೊಸ ಹೆಂಡತಿಯೊಂದಿಗೆ ಎಲ್ಲೋ ಹೊರಟು ನಿಂತಿದ್ದಾನೆ. ಹಾಗಾಗಿ ನನ್ನ ಮಾತು ಮಾತಾಡಲಿಲ್ಲ. ಇನ್ನು ಶ್ರೀಧರ ಎಲ್ಲಿದ್ದನೋ ಅದು ನಮ್ಮ ಮೂವರಲ್ಲಿ ಶ್ರೀಧರನಿಗೊಬ್ಬನಿಗೇ ಗೊತ್ತು. ಶ್ರೀಧರ ಸರ ಪರ ಟುರ್ರ್ ಟುಕ್ ಟುಕ್…. |
3 thoughts on "ನನ್ನ ಬುರ್ರಾ ಗಾಡಿಯನ್ನು ನಾನೇ ಕೊಂದದ್ದು.." |
ಬುಧವಾರ, 15-ಅಕ್ಟೋಬರ್ , 2008 ರಲ್ಲಿ 5:05 ಅಪರಾಹ್ನ |
nenapugaALE haage teera vichitra |
Rajavardhan ಹೇಳುತ್ತಾರೆ: |
ಮಂಗಳವಾರ, 27-ಜನವರಿ , 2009 ರಲ್ಲಿ 1:38 ಅಪರಾಹ್ನ |
balyada khushi dinagalannu mareyal agtille . avannella Nanga hege namma kayyare konda….yavyado aasegala hinde hogi. balyada burra gadige yavudoo traffic irlille, odisidre sonta novoo battittille…. adre eega !!!!? |
ಚೀರ್ನಾಬ್ ಜಾಮೀನಿಗೆ 12 ಕಾರಣಗಳು! - Varthabharati |
ಚೀರ್ನಾಬ್ ಬೂಸಾಮಿಗೆ ನ್ಯಾಯಾಲಯ ತುರ್ತಾಗಿ ಜಾಮೀನು ನೀಡಲು ಕಾರಣವೇನು? ಪತ್ರಕರ್ತ ಎಂಜಲು ಕಾಸಿ ಭೀಕರ ಸಂಶೋಧನೆಯೊಂದನ್ನು ನಡೆಸಿ, ಒಂದು ಸಂಶೋಧನಾ ವರದಿಯನ್ನು ತಮ್ಮ ಸಂಪಾದಕರ ಮುಂದಿಟ್ಟ. ಅವನು ಕಂಡು ಹಿಡಿದ ಕಾರಣಗಳು ಕೆಳಗಿನಂತಿವೆೆ. |
1. ಅವನಿಂದಾಗಿ ಜೈಲಿನಲ್ಲಿರುವ ಇತರೆಲ್ಲ ಅಪರಾಧಿಗಳು ಕೆಟ್ಟು ಹೋಗುವ ಅಪಾಯವಿತ್ತು. ಆದುದರಿಂದ, ಜೈಲಿನ ಸದ್‌ವಾತಾವರಣ ಉಳಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು. |
2. 'ಮುಜೇ ಡ್ರಗ್ಸ್ ದೇ...ಮುಜೇ ಡ್ರಗ್ಸ್ ದೇ' ಎಂಬ ಅವನ ಅರಚಾಟಗಳನ್ನು ಕೇಳಿ ಅಭ್ಯಾಸವಾಗಿದ್ದ ಒಂದಿಷ್ಟು ವೀಕ್ಷಕರು ಆತನ ಟಿವಿ ಚಾನೆಲ್ ಬಂದಾಗಿರುವುದರಿಂದ ಏಕಾಏಕಿ ಡ್ರಗ್ಸ್‌ನಿಂದ ವಂಚಿತರಾದವರಂತೆ ಆಡತೊಡಗಿದರು. ಆತನ ಬೊಬ್ಬೆ ಕೇಳಿ ಕೇಳಿ ಅಭ್ಯಾಸವಾಗಿದ್ದ ಜನರು, ದೇಶಾದ್ಯಂತ ಕವಿದಿರುವ ವೌನದಿಂದ ತೀವ್ರ ಆತಂಕಿತರಾಗಿ ಖಿನ್ನತೆಗೆ ಒಳಗಾಗಿದ್ದರು. ಆದುದರಿಂದ ಆತನನ್ನು ಬಿಡುಗಡೆಗೊಳಿಸಲಾಯಿತು. |
3. ಜೈಲಿನಲ್ಲಿ ಆತನ ಅರಚಾಟಗಳಿಂದ ಹಲವು ಪೊಲೀಸರ ಕಿವಿಯಲ್ಲಿ ರಕ್ತ ಸೋರತೊಡಗಿರುವುದರಿಂದ, ಕೈದಿಗಳು ತೀವ್ರ ಅಸ್ವಸ್ಥರಾದುದರಿಂದ ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆಗಾಗಿ ಆತನನ್ನು ಬಿಡುಗಡೆಗೊಳಿಸುವುದು ಅನಿವಾರ್ಯವಾಯಿತು. |
4. ನನಗೆ ಹೊಡೆದರು, ನನಗೆ ಹೊಡೆದರು....ಎಂದು ಕಂಡ ಕಂಡ ಕೈದಿಗಳ ಮುಂದೆಲ್ಲ ಗೋಗರೆಯುತ್ತಿದ್ದುದರಿಂದ, ಎಲ್ಲ ಕೈದಿಗಳು ಸೇರಿ ಪೊಲೀಸರಿಗೆ ಒತ್ತಡ ಹಾಕಿದ್ದುದರಿಂದ ಪೊಲೀಸರು ಕರುಣೆ ತೋರಿಸಿದರು. |
5. ದೇಶಾದ್ಯಂತ ಇರುವ ವಿವಿಧ ಡ್ರಗ್ಸ್ ಏಜೆಂಟರ್‌ಗಳೆಲ್ಲ ಒಟ್ಟು ಸೇರಿ ಸರಕಾರಕ್ಕೆ ಒತ್ತಡ ಹಾಕಿರುವುದು ಪರಿಣಾಮ ಬೀರಿತು. ಚೀರ್ನಾಬ್ ಇಲ್ಲದೆ ದೇಶದಲ್ಲಿ ಡ್ರಗ್ಸ್ ಮಾರಾಟ ತೀವ್ರ ಇಳಿಕೆಯಾಗಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿತು. ದೇಶದ ಡ್ರಗ್ಸ್ ಜಿಡಿಪಿ ಏರಿಸುವುದಕ್ಕಾಗಿಯೇ ಆತನನ್ನು ಅವಸರವಸರವಾಗಿ ಬಿಡುಗಡೆಗೊಳಿಸಲಾಯಿತು. |
6. ದೀಪಾವಳಿ ಹತ್ತಿರ ಬರುತ್ತಿದೆ. ಪಟಾಕಿಯನ್ನು ನಿಷೇಧಿಸಲಾಗಿದೆ. ದೇಶಾದ್ಯಂತ ಪಟಾಕಿಯ ಕೊರತೆಯನ್ನು ತುಂಬಲು ರಿ-ಪಬ್-ಲಿಕ್ ಪಟಾಕಿ ಅಂಗಡಿಯನ್ನು ತೆರೆಯುವುದು ಅತ್ಯಗತ್ಯವಾಗಿತ್ತು. ಇಲ್ಲವಾದರೆ ಸದ್ದುಗಳ ಕೊರತೆಯಿಂದ ಜನರು ಹಬ್ಬಗಳನ್ನು ಆಚರಿಸದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ದೀಪಾವಳಿಯನ್ನು ಯಶಸ್ವಿಗೊಳಿಸಲು ಚೀರ್ನಾಬ್‌ರನ್ನು ಬಿಡುಗಡೆಗೊಳಿಸ ಬೇಕಾಯಿತು. |
7. ಇನ್ನೊಬ್ಬರಿಗೆ ಹಣ ಕೊಡಲು ಬಾಕಿ ಇದ್ದರೆ ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ. ಈಗಾಗಲೇ ಮಲ್ಯ, ನೀರವ್ ಮೋದಿ ಮೊದಲಾದವರು ಬ್ಯಾಂಕ್‌ಗಳಿಗೆ ಕೋಟಿಗಟ್ಟಲೆ ಬಾಕಿ ಇಟ್ಟಿದ್ದಾರೆ. ಆದರೆ ಮಲ್ಯ, ಮೋದಿಯಾದಿಗಳು ಈವರೆಗೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸಾಲ ಪಡೆದುಕೊಂಡವರು ಹಣ ಕೊಡಲಿಲ್ಲ ಎಂದು ಯಾವುದೇ ಬ್ಯಾಂಕ್ ಮ್ಯಾನೇಜರ್‌ಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಹೀಗಿರುವಾಗ, ಚೀರ್ನಾಬ್ ಹಣ ಕೊಟ್ಟಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡರೆ ಚೀರ್ನಾಬ್ ಅವರದು ತಪ್ಪಲ್ಲ. ಆತ್ಮಹತ್ಯೆ ಕಾನೂನು ಪ್ರಕಾರ ಅಪರಾಧವಾಗಿರುವುದರಿಂದ, ಆತ್ಮಹತ್ಯೆಗೈದವರ ಕುಟುಂಬವನ್ನು ಜೈಲಿಗೆ ತಳ್ಳಿ, ಚೀರ್ನಾಬ್‌ನ್ನು ಬಿಡುಗಡೆಗೊಳಿಸಲು ತೀರ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಇನ್ನೊಬ್ಬರಿಗೆ ಹಣ ಕೊಡಲು ಬಾಕಿ ಇದ್ದರೂ, ಅದಕ್ಕಾಗಿ ಪಶ್ಚಾತ್ತಾಪ ಪಟ್ಟು, ಅವಮಾನದಿಂದ ಈವರೆಗೆ ಆತ್ಮಹತ್ಯೆ ಮಾಡಿಕೊಳ್ಳದ ಚೀರ್ನಾಬ್‌ಗೆ 'ಶೌರ್ಯ ಪ್ರಶಸ್ತಿ' ನೀಡಬೇಕಾಗಿದೆ. ವಂಚನೆಯೂ ಮೋದಿ ಅರ್ಥಶಾಸ್ತ್ರದ ಭಾಗವಾಗಿರುವುದರಿಂದ ಚೀರ್ನಾಬ್ ಅವರನ್ನು ಶಿಕ್ಷಿಸುವುದು ತಪ್ಪು. |
8. ದೇಶಾದ್ಯಂತ ಆರ್ಥಿಕ ಕುಸಿತ ಹೆಚ್ಚಿರುವುದರಿಂದ, ಲಾಕ್‌ಡೌನ್ ಕಾರಣದಿಂದಲೇ ಚೀರ್ನಾಬ್ ಅವರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಅವರು ಲಾಕ್‌ಡೌನ್ ಸಂತ್ರಸ್ತರು. ಆದುದರಿಂದ ಕೊರೋನ ಸಂತ್ರಸ್ತ ನಿಧಿಯಿಂದ ಹಣವನ್ನು ಚೀರ್ನಾಬ್ ಅವರಿಗೆ ನೀಡಬೇಕು. ಚೀರ್ನಾಬ್ ಸ್ಥಿತಿಗೆ ಕೊರೋನ ಮತ್ತು ಸರಕಾರ ಕಾರಣವಾಗಿರುವುದರಿಂದ ಅವರನ್ನು ಜೈಲಿಗೆ ತಳ್ಳಿರುವುದು ಅನ್ಯಾಯ. 9. ಇನ್ನೊಬ್ಬರಿಗೆ ವಂಚಿಸುವುದು, ಟಿಆರ್‌ಪಿ ವಂಚನೆ, ಇನ್ನೊಬ್ಬರನ್ನು ಅವಮಾನಿಸುವುದು ಪತ್ರಕರ್ತರ ಮೂಲಭೂತ ಹಕ್ಕಾಗಿರುವುದರಿಂದ ಅಭಿವ್ಯಕ್ತಿ ಸ್ವಾತಂತ್ರದ ದಮನವಾಗಬಾರದು ಎಂಬ ಕಾಳಜಿಯಿಂದ ಚೀರ್ನಾಬ್ ಅವರನ್ನು ಬಿಡುಗಡೆ ಮಾಡುವುದು ಅನಿವಾರ್ಯವಾಯಿತು. ಭವಿಷ್ಯದಲ್ಲಿ ಇವರನ್ನೇ ಆರ್ಥಿಕ ಸಚಿವರನ್ನಾಗಿಸಿ ವಿಶ್ವ ಬ್ಯಾಂಕ್‌ಗೆ ಹೇಗೆ ವಂಚಿಸಬೇಕು ಮತ್ತು ಆ ಬಳಿಕ ಹೇಗೆ ಚೀರಾಡಬೇಕು ಎನ್ನುವುದರ ಕುರಿತಂತೆ ಯೋಜನೆಗಳನ್ನು ರೂಪಿಸುವುದಕ್ಕೋಸ್ಕರ ಬಿಡುಗಡೆ ಮಾಡಲಾಯಿತು. 10. ಜೈಲಿನಲ್ಲಿರುವ ಕಳ್ಳರೆಲ್ಲ ಚೀರ್ನಾಬ್‌ನ್ನು ತಮ್ಮ ಜೊತೆಗೆ ಇರಿಸಿದ್ದಕ್ಕೆ ಅವಮಾನಿತರಾಗಿ ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ ಒಡ್ಡಿದ್ದರಿಂದ, ಕಳ್ಳರ ಘನತೆ, ಆತ್ಮಾಭಿಮಾನವನ್ನು ಕಾಪಾಡಲು ಚೀರ್ನಾಬ್‌ನ್ನು ಬಿಡುಗಡೆ ಮಾಡಲಾಯಿತು. |
11. ಶಿವಸೇನೆಯ ಭಾರೀ ಸಂಖ್ಯೆಯ ಕಾರ್ಯಕರ್ತರು ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಜೈಲಲ್ಲಿರುವುದರಿಂದ, ಚೀರ್ನಾಬ್ ಅವರ ಜೀವಕ್ಕೆ ಅವರಿಂದ ಅಪಾಯವಿದೆ. ಆದುದರಿಂದ ಚೀರ್ನಾಬ್ ಜೀವವನ್ನು ರಕ್ಷಿಸಲು ಅನಿವಾರ್ಯವಾಗಿ ಅವರಿಗೆ ಜಾಮೀನು ಕೊಡಬೇಕಾಯಿತು. |
12. ಈಗಾಗಲೇ ದೇಶಾದ್ಯಂತ ಮಾನವ ಹಕ್ಕು ಹೋರಾಟಗಾರರು ಮತ್ತು ಪತ್ರಕರ್ತರಿಂದ ಜೈಲು ತುಂಬಿ ಹೋಗಿದೆ. ನಿಜವಾದ ಪತ್ರಕರ್ತರನ್ನಷ್ಟೇ ಜೈಲಿಗೆ ಹಾಕುವ ಅವಕಾಶವಿದೆ. ಆದರೆ ಚೀರ್ನಾಬ್‌ರನ್ನು ಯಾವ ದಿಕ್ಕಿನಿಂದ ನೋಡಿದರೂ ಪತ್ರಕರ್ತರಂತೆ ಕಾಣದೇ ಇರುವುದರಿಂದ ಅವರನ್ನು ಜೈಲಿಗೆ ಹಾಕುವುದರಿಂದ ಜೈಲಿನ ಊಟ ವ್ಯರ್ಥವಾಗುತ್ತದೆ ಎಂದು ಬಿಡುಗಡೆ ಮಾಡಲಾಯಿತು. ಹೀಗೆ ನೂರಾರು ಕಾರಣಗಳು ಇದ್ದುದರಿಂದ ಚೀರ್ನಾಬ್ ಅವರಿಗೆ ಜಾಮೀನು ನೀಡುವುದು ಸುಪ್ರೀಂಕೋರ್ಟ್‌ಗೆ ಅನಿವಾರ್ಯವಾಯಿತು ಎಂಬಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಸಂಶೋಧನಾ ವರದಿ ಮುಗಿಯಿತು. |
ಆರೋಗ್ಯ ಕೇಂದ್ರವೇ ರೋಗಗ್ರಸ್ತ | Prajavani |
ಆರೋಗ್ಯ ಕೇಂದ್ರವೇ ರೋಗಗ್ರಸ್ತ |
Published: 22 ಜೂನ್ 2011, 12:20 IST |
Updated: 22 ಜೂನ್ 2011, 12:20 IST |
ರಾಮನಾಥಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. |
ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಇಲ್ಲಿಗೆ 2007ರಲ್ಲಿ ಅಂದಿನ ಶಾಸಕ ಎ.ಟಿ. ರಾಮಸ್ವಾಮಿ ಹೊಸ ಆಸ್ಪತ್ರೆ ಮಂಜೂರು ಮಾಡಿಸಿದರು. ಹಳೆಯ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಪ್ರಾರಂಭಿಸಲಾದ ಆಸ್ಪತ್ರೆಗೆ ಸರ್ಕಾರ ರೂ. 37 ಲಕ್ಷ ವೆಚ್ಚದಲ್ಲಿ ಸುಸುಜ್ಜಿತ ನೂತನ ಕಟ್ಟಡದ ಭಾಗ್ಯ ಕರುಣಿಸಿತು. ಆದರೆ, ಆಸ್ಪತ್ರೆಗೆ ಬೇಕಾದ ಸೌಲಭ್ಯ ಇಲ್ಲದಿದ್ದರೂ ಕಳೆದ ಮೇ ತಿಂಗಳಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ನೂತನ ಕಟ್ಟಡ ಉದ್ಘಾಟಿಸಿ, ಶೀಘ್ರವೇ ಆಸ್ಪತ್ರೆಗೆ ಅಗತ್ಯವಿರುವ ಮೂಲಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಶ್ವಾಸನೆ ನೀಡಿ ಹೊರಟರು. |
ಆಸ್ಪತ್ರೆ ಉದ್ಘಾಟನೆಯ ಭಾಗ್ಯ ಕಂಡಿತಾದರೂ ಆರೋಗ್ಯ ಸಚಿವರು ನೀಡಿದ ಭರವಸೆಗಳು ಮಾತ್ರ ಈಡೇರಿಲ್ಲ. ಒಂದು ಆಸ್ಪತ್ರೆಗೆ ಬೇಕಾದ ಸೌಲಭ್ಯಗಳು ಲಭ್ಯವಾಗದೇ ಆಸ್ಪತ್ರೆಯೇ ರೋಗಗ್ರಸ್ತವಾಗಿದೆ. ಪರಿಣಾಮ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಎನ್ನುವುದು ಇಲ್ಲಿ ಮರೀಚಿಕೆ. |
ನೂತನ ಕಟ್ಟಡದ ಮೇಲೆ ದಿನದ 24 ಗಂಟೆಗಳ ಕಾಲ ಹೆರಿಗೆ ಸೌಲಭ್ಯವಿರುವುದಾಗಿ ನಾಮಫಲಕ ಬರೆಸಲಾಗಿದೆ. ಆದರೆ ಆಸ್ಪತ್ರೆಯ ಒಳ ಹೊಕ್ಕರೆ ಹೆರಿಗೆ ವಾರ್ಡ್‌ನ ಕಾಮಗಾರಿ ಅಪೂರ್ಣಗೊಂಡ ಕಾರಣ ಆ ಸೌಲಭ್ಯ ಇಲ್ಲವೆಂದು ಕೈಬರಹದ ನಾಮಫಲಕ ಹಾಕಲಾಗಿದೆ. ರೋಗಿಗಳಿಗೆ ಬೇಕಿರುವ ಔಷಧಿಗಳು ಆಸ್ಪತ್ರೆಯಲ್ಲಿ ವಿತರಣೆ ಆಗುತ್ತಿಲ್ಲ. ಅಗತ್ಯ ಸೌಲಭ್ಯ ಕೊರತೆ, ತಜ್ಞ ವೈದ್ಯರಿಲ್ಲದಿರುವುದು, ಔಷಧ ಕೊರತೆ ಹೀಗೆ ಸಮಸ್ಯೆಗಳ ಸರಮಾಲೆಯೇ ಇರುವ ಪರಿಣಾಮ ಇಲ್ಲಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಕೊಣನೂರು ಇಲ್ಲವೇ ದೂರದ ಅರಕಲಗೂಡು, ಹಾಸನದ ದಾರಿ ತೋರಿಸಿ ಕೈತೊಳೆದುಕೊಳ್ಳುವುದು ಮಾಮೂಲಿಯಾಗಿದೆ. |
ಹಾಸನ, ಮೈಸೂರು, ಮಡಿಕೇರಿ, ಬೆಟ್ಟದಪುರ- ಪಿರಿಯಾಪಟ್ಟಣ ಮಾರ್ಗದ ರಸ್ತೆಗಳು ಕೂಡುವ ಸ್ಥಳವಾದ ಕಾರಣ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆದರೆ ಇಲ್ಲಿಗೆ ಬರುತ್ತಾರೆ. ಆದರೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ಸಿಗುವುದು ಕಷ್ಟ. ಪಟ್ಟಣದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕವಿಲ್ಲ. |
ಪ್ಲೊರೈಡ್ ಮಿಶ್ರಿತ ನೀರು ಸೇವಿಸಿ ಕೀಲು- ಮೈ- ಕೈ ನೋವು ಕಾಣಿಸಿಕೊಂಡು ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ತಕ್ಷಣವೇ ಅಗತ್ಯ ಸೌಲಭ್ಯ ಹಾಗೂ ತಜ್ಞ ವೈದ್ಯರನ್ನು ನೇಮಿಸುವ ಕೆಲಸ ಆಗಬೇಕಿದೆ. |
ವಿದಾಯವೆಂದರೆ ಆದಿ ಅಂತ್ಯಗಳ ನಡುವಿನ ಸಂಬಂಧದ ಭಾವನಾತ್ಮಕ ಬದುಕು- ಅಭಿನವ ನಾಗಲಿಂಗ ಮಹಾಸ್ವಾಮಿಗಳು | Times of Karnataka |
ಸವದತ್ತಿ: "ವೃತ್ತಿ ಬದುಕಿನಲ್ಲಿ ನಿವೃತ್ತಿ ವಿದಾಯವೆಂದರೆ ಆದಿ ಅಂತ್ಯಗಳ ನಡುವಿನ ಸಂಬಂಧದ ಭಾವನಾತ್ಮಕ ಬದುಕು.ಪ್ರತಿಯೊಬ್ಬರ ಬದುಕಿನಲ್ಲೂ ಒಂದಲ್ಲ ಒಂದು ಹುದ್ದೆಯಲ್ಲಿ ನಾವು ಜೀವನ ನಡೆಸುತ್ತೇವೆ.ಆ ವೃತ್ತಿ ಬದುಕಿನ ಅಂತ್ಯದವರೆಗೂ ಪುಣ್ಯದ ಕೆಲಸಗಳನ್ನು ಮಾಡುತ್ತ ಸಾಗಿದರೆ ವಿದಾಯ ಸಂದರ್ಭದಲ್ಲಿ ಅವರ ಸೇವೆಯನ್ನು ನೆನೆದು ಗ್ರಾಮದ ಜನರು ಸ್ಮರಿಸುವ ಮೂಲಕ ಬೀಳ್ಕೊಡುವ ಸಮಾರಂಭ ಏರ್ಪಡಿಸಿದ್ದಾದರೆ ಅದು ಸಾರ್ಥಕ.ಆ ರೀತಿಯ ಕಾರ್ಯ ಇಂದು ಚಿಕ್ಕುಂಬಿಯಲ್ಲಿ ಜರುಗಿದೆ.ಚಿಕ್ಕುಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ ಬೆಳವಡಿ. ಹಿರೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಐ.ಬಡಿಗೇರ. ನೀರಾವರಿ ಇಲಾಖೆಯ ನವಿಲುತೀರ್ಥದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವಪುತ್ರಯ್ಯ ಹಿರೇಮಠ ಇವರ ಬೀಳ್ಕೊಡುವ ಸಮಾರಂಭವನ್ನು ಗ್ರಾಮ ಪಂಚಾಯತಿಯವರು ಊರಿನ ಹಿರಿಯರು ಸೇರಿ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ.ಇದು ಮುಂದಿನವರಿಗೂ ಮಾದರಿ.ನಿವೃತ್ತಿಯ ನಂತರವೂ ಕೂಡ ನೀವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಈ ಕಾರ್ಯವನ್ನು ಮಾಡುತ್ತ ದಿನವನ್ನು ಕಳೆಯುವ ಮೂಲಕ ಬದುಕನ್ನು ರೂಢಿಸಿಕೊಳ್ಳಿರಿ' ಎಂದು ಚಿಕ್ಕುಂಬಿಯ ಅಜಾತ ನಾಗಲಿಂಗ ಮಹಾಸ್ವಾಮಿಗಳಮಠದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. |
ಅವರು ಚಿಕ್ಕುಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತ 'ಹುಟ್ಟು ಸಾವುಗಳ ಮಧ್ಯದಲ್ಲಿ ಇರುವ ನಮ್ಮ ಜೀವನ ಪುಣ್ಯದ ಕಾರ್ಯಗಳನ್ನು ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳುವ ಮೂಲಕ ಬಲ್ಲವರ ಬೆಲ್ಲವಾಗಿ ಬಾಳಬೇಕು ಈ ಜೀವನದಲ್ಲಿ'ಎಂದು ಹರಸಿದರು. |
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ.ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಸಿ.ವ್ಹಿ.ಬಾರ್ಕಿ.ವೈ.ಬಿ.ಕಡಕೋಳ.ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಫ್.ಜಿ.ನವಲಗುಂದ.ಸದಸ್ಯರಾದ ಎಚ್.ಆರ್.ಪೆಟ್ಲೂರ.ಸಿ.ಆರ್.ಪಿ ಎನ್.ಜಿ.ತೊಪ್ಪಲದ.ನಿವೃತ್ತ ಶಿಕ್ಷಕರಾದ ಪಿ.ಜಿ.ಅಬ್ಬೀಗೇರಿ.ಬಿ.ಎಂ.ಹೂಗಾರ. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಕ್ತುಂಬಿ ನರಗುಂದ.ಮಂಜುನಾಥ ಪವಾಡಶೆಟ್ಟಿ.ಶಂಕ್ರಣ್ಣ ವಾರಪ್ಪನವರ.ಮಂಜುನಾಥ ಸಂಗ್ರೇಶಿ.ನಾಗನಗೌಡ ಮೆಣಸಿನಕಾಯಿ.ಕೇದಾರಯ್ಯ ಹಿರೇಮಠ.ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಆರ್.ಎಂ.ಬೆಕ್ಕೇರಿ.ಶಿಕ್ಷಕರಾದ ಸುಧೀರ ವಾಘೇರಿ.ಶಾಲೆಯ ಗುರುಮಾತೆಯರಾದ ಚನ್ನವ್ವ ಮೀಶಿ.ರೇವತಿ ಸಿರಸಂಗಿ.ಮೀನಾಕ್ಷಿ ಮಾದಾರ ಮಾಜಿ ಎಸ್.ಡಿ.ಎಂ.ಸಿಯ ಪುಂಡಲೀಕ ಸಂಗ್ರೇಶಿ.ಪಿ.ಕೆ.ತೊರಗಲ್.ಎಂ.ಬಿ.ಸಂಗ್ರೇಶಿ ಗ್ರಾಮ ಪಂಚಾಯತಿ ಸದಸ್ಯರು ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು. |
ಕಾರ್ಯಕ್ರಮದಲ್ಲಿ ಎಸ್.ವ್ಹಿ.ಬೆಳವಡಿ.ಎಂ.ಐ.ಬಡಿಗೇರ. ಶಿವಪುತ್ರಯ್ಯ ಹಿರೇಮಠ.ರವರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ವ್ಹಿ.ಸಿ.ಹಿರೇಮಠ ಮಾತನಾಡಿ " ಸಮುದಾಯದಿಂದ ಸನ್ಮಾನ ಮಾಡಿರುವುದು ಸಂತಸದ ಕ್ಷಣ.ಬದುಕು ಸವಿಯಲು ಬೀಳ್ಕೊಡುವ ಕ್ಷಣಗಳು ಈ ಸಂದರ್ಭದಲ್ಲಿ ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಮಾತನಾಡಿರುವುದು ಶ್ಲಾಘನೀಯ'ಎಂದು ತಿಳಿಸಿದರು.ಎಪ್.ಜಿ.ನವಲಗುಂದ ಮಾತನಾಡಿ 'ಬೆಳವಡಿಯವರು ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಶಿಕ್ಷಕರ ಜನ ಮೆಚ್ಚುಗೆಗೆ ಪಾತ್ರರಾಗಿದ್ದು.ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ ಅವರ ಗುಣ ಮೆಚ್ಚುವಂತದ್ದು'ಎಂದು ತಿಳಿಸಿದರು. ಎಚ್.ಆರ್.ಪೆಟ್ಲೂರ ಮಾತನಾಡಿ 'ಬೆಳವಡಿಯವರು ಸಂಘದ ಅಧ್ಯಕ್ಷ ಎಂಬ ಹಮ್ಮುಬಿಮ್ಮು ಎಂದಿಗೂ ಹೊಂದಿಲ್ಲ.ಪ್ರತಿದಿನ ಶಾಲೆಗೆ ಸಾಮಾನ್ಯ ಶಿಕ್ಷಕರಂತೆ ಬಂದು ಶಾಲೆಯ ಕರ್ತವ್ಯ ನಿರ್ವಹಿಸಿ ನಂತರ ಸಂಘದ ಚಟುವಟಿಕೆಗಳನ್ನು ಕೂಡ ನಿರ್ವಹಿಸುವ ಮೂಲಕ ಜನಾನುರಾಗಿಯಾಗಿರುವರು.ಅವರು ಮೂರು ಅವಧಿ ಸಂಘದ ಅಧ್ಯಕ್ಷರಾಗಿದ್ದು ಕೂಡ ಅಭಿನಂದನಾರ್ಹ ಅವರ ನಿವೃತ್ತಿ ಜೀವನ ಸಂತಸದಿಂದ ಕೂಡಿರಲಿ'ಎಂದು ಆಶಿಸಿದರು.ಸಿ.ವ್ಹಿ.ಬಾರ್ಕಿ ಮಾತನಾಡಿ 'ಬೆಳವಡಿಯವರು ಎಲ್ಲಿಯೇ ಹೊರಟರೂ ಪೆಟ್ಲೂರ, ನವಲಗುಂದ, ಬಾರ್ಕಿಯವರಿಗೆ ಕರೆ ಮಾಡಿ ಬರಲು ತಿಳಿಸಿ ತಮ್ಮೊಡನೆ ಕರೆದುಕೊಂಡು ಹೋಗುತ್ತಿದ್ದರು.ಅವರ ಹಿರಿತನದಲ್ಲಿ ನಾವು ಬೆಳೆದದ್ದು ನಮ್ಮ ಸುದೈವ.ಅದೇ ರೀತಿ ಬಡಿಗೇರ ಗುರುಗಳು ನನ್ನ ಬದುಕಿನ ಮಾರ್ಗದರ್ಶಿಗಳು'ಎಂದು ಭಾವುಕ ನುಡಿಗಳನ್ನು ಹೇಳುತ್ತ ಗದ್ಗಿತರಾದರು. ವೈ.ಬಿ.ಕಡಕೋಳ ಮಾತನಾಡಿ "ಹಿರಿಯರಾದರೂ ಎಂದಿಗೂ ತಮ್ಮ ಹಿರಿತನವನ್ನು ಬೆಳವಡಿಯವರು ತೋರದೇ ಎಲ್ಲರೊಳಂದಾಗು ಮಂಕುತಿಮ್ಮ ಎಂಬಂತೆ ವೃತ್ತಿ ಜೀವನ ಸಾಗಿಸುವ ಜೊತೆಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ ಸ್ಮಿತಪ್ರಜ್ಞರಾಗಿದ್ದರು.ಅದೇ ರೀತಿ ಬಡಿಗೇರ ಅವರೂ ಕೂಡ ನಮಗೆ ಹಿರಿಯರಾಗಿ ನಮಗೆ ಮಾರ್ಗದರ್ಶಕರಾಗಿ ಸೇವೆಗೈದರು. |
ನೀರಾವರಿ ಇಲಾಖೆಯ ಹಿರೇಮಠರವರು ಕೂಡ ಪೂಜೆ ಪುನಸ್ಕಾರಗಳ ಅಧ್ಯಾತ್ಮಿಕ ಬದುಕಿನೊಂದಿಗೆ ವೃತ್ತಿ ಬದುಕನ್ನು ನಿರ್ವಹಿಸಿದ್ದು ಮೂವರು ಮಹನೀಯರಿಗೆ ದೇವರು ಆಯುರಾರೋಗ್ಯ ನೀಡಿ ಸಂತಸವನ್ನು ತುಂಬಲಿ' ಎಂದು ಆಶಿಸಿದರು. |
ಸುಧೀರ ವಾಘೇರಿ ಮಾತನಾಡಿ 'ವೃತ್ತಿಯಲ್ಲಿ ಆರಂಭವಾದಂತೆ ನಿವೃತ್ತಿಯೂ ಕಡ್ಡಾಯ ಈ ನಡುವಿನ ಬದುಕು ನಾಲ್ಕು ಜನರ ಮನದಲ್ಲಿ ಉಳಿಯುವಂತಾದರೆ ಅದು ಸಾರ್ಥಕ.ಅಂತಹ ಬದುಕನ್ನು ಮೂವರು ಮಹನೀಯರು ಸವೆಸಿದ್ದು ಅವರ ಬದುಕು ಸುಖ ಸಂತಸದಿಂದ ಕೂಡಿರಲಿ.ನಮಗೆಲ್ಲ ಈ ದಿನ ಗ್ರಾಮದ ಜನ ಈ ಕಾರ್ಯಕ್ರಮ ಹಮ್ಮಿಕೊಂಡು ಮಾದರಿಯಾಗಿರುವರು'ಎಂದು ಶುಭ ಕೋರಿದರು. |
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುರೇಶ ಬೆಳವಡಿಯವರು ' ಆರಂಭದ ಸೇವೆ ಚಿಕ್ಕುಂಬಿಯಲ್ಲಿ ಐದು ವರ್ಷ ನಂತರ ಸವದತ್ತಿ ಚಿಕ್ಕೋಡಿ ಜಿಲ್ಲೆ ಹೀಗೆ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ಸಂದರ್ಭದಲ್ಲಿ ಪದೋನ್ನತಿ ಪ್ರಧಾನ ಗುರುಗಳಾಗಿ ಚಿಕ್ಕುಂಬಿಯಲ್ಲಿ ಸೇವೆ ಸಲ್ಲಿಸುವಂತಾಗಿದ್ದು ನನ್ನ ಭಾಗ್ಯ.ಇಲ್ಲಿಯ ಜನರ ಸಹಕಾರ.ವೃತ್ತಿ ಬಾಂಧವರ ಒಡನಾಟ.ಮರೆಯಲಾಗದು. ನಿವೃತ್ತಿಯ ನಂತರದ ದಿನಗಳೂ ಕೂಡ ನನ್ನ ಸೇವೆ ಸದಾ ಈ ಶಾಲೆಗೆ ಇರುತ್ತದೆ.'ಎಂದು ಹೇಳಿದರು. ಎಂ.ಐ.ಬಡಿಗೇರ ಗುರುಗಳು ಮಾತನಾಡಿ ' ಸ್ವಂತ ಊರು ಚಿಕ್ಕುಂಬಿ ಬೇರೆ ಬೇರೆ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವ ಸಂದರ್ಭ ನಮ್ಮವನು ಎಂಬ ಅಭಿಮಾನದಿಂದ ತಾವೆಲ್ಲ ಗೌರವಿಸಿರುವಿರಿ.ಯುವಕ ಮಂಡಳದ ಅಧ್ಯಕ್ಷ ಸ್ಥಾನದಿಂದ ನಮ್ಮ ಊರಲ್ಲಿ ನನಗೆ ಅಂದು ಸಹಕಾರ ನೀಡಿ ಸೇವೆಗೈಯಲು ನೀಡಿದವರನ್ನು ಸ್ಮರಿಸುತ್ತ ಮುಂದೆಯೂ ನಮ್ಮ ಊರಲ್ಲಿ ನನ್ನ ಸೇವೆ ತಮಗೆ ಸದಾ ಸಿದ್ಧ'ಎಂದು ತಿಳಿಸಿದರು. ಶಿವಪುತ್ರಯ್ಯ ಹಿರೇಮಠ ಮಾತನಾಡಿ ' ನನ್ನ ಜೀವನದಲ್ಲಿ ವೃತ್ತಿಯ ಜೊತೆಗೆ ಅಧ್ಯಾತ್ಮವನ್ನು ಅಳವಡಿಸಿಕೊಳ್ಳಲು ಇಲ್ಲಿನ ನಾಗಲಿಂಗ ಮಠವೂ ಕಾರಣ.ಈ ಅಧ್ಯಾತ್ಮದ ಸೇವೆ ಮುಂದೆಯೂ ಮುಂದುವರೆಸುವೆ'ಎಂದು ತಿಳಿಸಿದರು. |
ಪಿಹೆಚ್‍ಸಿ ವೈದ್ಯರ ಹುದ್ದೆ ತೆರವಾದ ತಕ್ಷಣ ಭರ್ತಿಗೆ ಕ್ರಮ ಜರುಗಿಸಬೇಕು : ಜಿಲ್ಲಾಧಿಕಾರಿ | ಸಂಜೆವಾಣಿಗೆ ಸ್ವಾಗತ |
ಪಿಹೆಚ್‍ಸಿ ವೈದ್ಯರ ಹುದ್ದೆ ತೆರವಾದ ತಕ್ಷಣ ಭರ್ತಿಗೆ ಕ್ರಮ ಜರುಗಿಸಬೇಕು : ಜಿಲ್ಲಾಧಿಕಾರಿ |
ದಾವಣಗೆರೆ ಡಿ.7; ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವÀ ವೈದ್ಯರ ಹುದ್ದೆಗಳಿಗೆ ಎನ್‍ಹೆಚ್‍ಎಂ ಮತ್ತು ಸಾಧ್ಯವಿರುವ ಇತರೆ ವಿಧಾನದ ಮೂಲಕ ಕೂಡಲೇ ಅರ್ಜಿ ಆಹ್ವಾನಿಸಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಬೇಕೆಂದು ಡಿಹೆಚ್‍ಓ ಅವರಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚಿಸಿದರು. |
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾಜೀನಾಮೆ ಇತರೆ ಕಾರಣಗಳಿಂದ ತೆರವಾಗುವ ವೈದ್ಯರ ನೇಮಕಾತಿಯನ್ನು ಎನ್‍ಹೆಚ್‍ಎಂ ಅಡಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಆ ಹುದ್ದೆಗಳನ್ನು ಶೀಘ್ರವಾಗಿ ಅರ್ಜಿ ಆಹ್ವಾನಿಸಿ ತುಂಬಬೇಕು. ಆರೋಗ್ಯ ರಕ್ಷಾ ಸಮಿತಿಯಲ್ಲೇ ಅನುಮೋದನೆಯಾಗಬೇಕೆಂದು ಸಭೆ ಆಗುವವರೆಗೆ ಕಾಯದೇ ಘಟನೋತ್ತರ ಅನುಮೋದನೆ ಪಡೆಯುವುದರೊಂದಿಗೆ ನೇಮಕಾತಿ ಮಾಡಿಕೊಳ್ಳಬೇಕು. ಆಡಳಿತಾತ್ಮಕ ಕಾರಣ ಹೇಳುತ್ತಾ ವಿಳಂಬಿಸಬಾರದೆಂದರು. |
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ ಮಾತನಾಡಿ, ಕೆಪಿಎಂಇ ಅಡಿ ನೋಂದಣ ಗೆ ಜಿಲ್ಲೆಯಲ್ಲಿ ಪ್ರಸ್ತುತ ಮೂರು ಅರ್ಜಿಗಳು ಬಂದಿವೆ. ನವೀಕರಣಕ್ಕಾಗಿ 4 ಅರ್ಜಿಗಳು ಬಂದಿವೆ. ಪಿ.ಸಿ & ಪಿ.ಎನ್.ಡಿ.ಟಿ ಸಮಿತಿಯಿಂದ ನಿಯಮಿತವಾಗಿ ಜಿಲ್ಲೆಯಲ್ಲಿ ಆರೋಗ್ಯ ಸಂಸ್ಥೆಗಳ ಪರಿವೀಕ್ಷಣೆಗಳು ನಡೆಯುತ್ತಿವೆ ಎಂದರು. |
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಗಂಗಾಧರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಇದುವರೆಗೆ 48 ಹೆಚ್1ಎನ್1 ಪಾಸಿಟಿವ್ ಪ್ರಕರಣಗಳ ಪೈಕಿ ಮೂರು ಸಾವು ಸಂಭವಿಸಿದೆ. 2017 ರಲ್ಲಿ 80 ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ದಾವಣಗೆರೆಯಲ್ಲಿ 21 ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದರೆ ಹರಿಹರ 4, ಚನ್ನಗಿರಿ 11, ಹರಪನಹಳ್ಳಿ 6 ಮತ್ತು ಹೊನ್ನಾಳಿಯಲ್ಲಿ 6 ಸೇರಿದಂತೆ ಒಟ್ಟು 48 ಪಾಸಿಟಿವ್ ಪ್ರಕರಣ ಇಲ್ಲಿಯವರೆಗೆ ಕಂಡುಬಂದಿದೆ. |
ಸಕ್ಕರೆ ಕಾಯಿಲೆ, ಹೈಪರ್‍ಟೆನ್ಶನ್‍ನಂತಹ ನಾನ್ ಕಮ್ಯುನಿಕೇಬಲ್ ಡಿಸೀಸ್ ಕಾರ್ಯಕ್ರಮದಡಿ ಇದುವರೆಗೆ 22230 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ರಾಷ್ಟ್ರೀಯ ತಂಬಾಕು ಕಾರ್ಯಕ್ರಮದಡಿ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ತಂಬಾಕು ನಿಯಂತ್ರಣ ಕುರಿತು ಜಿಲ್ಲೆಯ ನೂರು ಶಾಲೆಗಳಲ್ಲಿ ಐಇಸಿ ಚಟುವಟಿಕೆ ಗುರಿ ಹೊಂದಲಾಗಿದೆ. ತಂಬಾಕು ನಿಯಂತ್ರಣ ತಂಡದಿಂದ ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಡೆಸಿದ ದಾಳಿಗಳಲ್ಲಿ 225 ಪಪ್ರಕರಣಗಳನ್ನು ದಾಖಲಿಸಿ ರೂ. 27200 ದಂಡ ವಸೂಲು ಮಾಡಲಾಗಿದೆ ಎಂದರು. |
ಜಿಲ್ಲೆಯಲ್ಲಿ ಬೋರ್, ನಲ್ಲಿಗಳಲ್ಲಿನ ನೀರಿನಲ್ಲಿನ ಮಾಲಿನ್ಯ ಮಟ್ಟವನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾದ ಒಟ್ಟು 737 ಸ್ಯಾಂಪಲ್‍ಗಳಲ್ಲಿ 717 ಯೋಗ್ಯ ಹಾಗೂ 20 ಯೋಗ್ಯವಲ್ಲದ್ದೆಂದು ವರದಿ ಬಂದಿದೆ. ಈ ಮಾಹಿತಿಯನ್ನು ಸ್ಥಳೀಯ ಸಂಸ್ಥೆಗಳಿಗೆ ಕಳುಹಿಸಲಾಗಿದ್ದು ಅವರು ಆ ನೀರಿನ ಮೂಲಗಳಿಗೆ ಅಗತ್ಯವಾದ ಕ್ಲೋರಿನೇಷನ್ ಇತರೆ ಕ್ರಮ ಕೈಗೊಳ್ಳುವರು ಎಂದರು. |
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಯೋಗ್ಯವಲ್ಲದ ನೀರು ಇರುವ ಪ್ರದೇಶಗಳ ಮಾಹಿತಿ ನೀಡಿದಲ್ಲಿ ತಾವು ಪರಿಶೀಲಿಸಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿವೀಕ್ಷಿಸುವುದಾಗಿ ಹೇಳಿದರು. |
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, 2018 ನೇ ಸಾಲಿನಲ್ಲಿ ಡೆಂಗ್ಯು ಸೋಂಕಿನಿಂದ ಯಾರೂ ಮರಣ ಹೊಂದಿಲ್ಲ. ಆದರೆ 2017 ರಲ್ಲಿ 3 ಮರಣ ಸಂಭವಿಸಿತ್ತು. ಚಿಕುನ್‍ಗುನ್ಯದಿಂದ ಜಗಳೂರಿನಲ್ಲಿ ಒಂದು ಮರಣ ಸಂಭವಿಸಿದೆ. 2017 ರಲ್ಲಿ 3787 ಸಂಶಯಾಸ್ಪದ ಡೆಂಗ್ಯು ಪ್ರಕರಣಗಳಲ್ಲಿ 972 ಪಾಸಿಟಿವ್ ಇತ್ತು. 2018 ರಲ್ಲಿ 851 ಸಂಶಯಾಸ್ಪದ ಪ್ರಕರಣಗಳಲ್ಲಿ 123 ಪ್ರಕರಣ ಪಾಸಿಟಿವ್ ಇದೆ. |
ಈ ಸಾಲಿನ ಅಕ್ಟೋಬರ್ ಅಂತ್ಯದವರೆಗೆ 12 ಮಲೇರಿಯಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕಳೆದ ಬಾರಿ 18 ಪ್ರಕರಣಗಳಿದ್ದವು. ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದ ಡೆಂಗ್ಯು ಮತ್ತು ಚಿಕುನ್‍ಗುನ್ಯ ಪ್ರಕರಣ ಹೆಚ್ಚಿತ್ತು. ನಗರ ಪ್ರದೇಶದಲ್ಲಿ ಸೋಂಕು ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ಐಇಸಿ, ಇತರೆ ಚಟುವಟಿಕೆಗೆ ಸಿಬ್ಬಂದಿ ಕೊರತೆಯೂ ಇದಕ್ಕೆ ಕಾರಣವಾಗಿದೆ. ಈ ಸೋಂಕುಗಳ ನಿಯಂತ್ರಣಕ್ಕೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. |
ಆರ್‍ಸಿಹೆಚ್ ಅಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ಈ ಸಾಲಿನಲ್ಲಿ ಜಿಲ್ಲೆಯ 14764 ಜೀವಂತ ಮಗು ಜನನಕ್ಕೆ 8 ತಾಯಿ ಮರಣ ಸಂಭವಿಸಿದ್ದು ಎಂಎಂಆರ್(ತಾಯಿ ಮರಣ ಪ್ರಮಾಣ) 54 ಇದೆ. ಹಾಗೂ ಐಎಂಆರ್ (ಶಿಶು ಮರಣ ಪ್ರಮಾಣ) 16 ಇದೆ. ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪ್ರತಿರಕ್ಷಣಾ ಲಸಿಕಾ ಕಾರ್ಯಕ್ರಮದಲ್ಲಿ ಈವರೆಗೆ ಶೇ. 99 ಗುರಿ ಸಾಧಿಸಲಾಗಿದೆ ಎಂದರು. |
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಅಕ್ಟೋಬರ್‍ವರೆಗೆ 8696 ಮಹಿಳೆಯರಿಗೆ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಹಾಗು 5 ಪುರಷರಿಗೆ ವ್ಯಾಸಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿ ಶೇ. 95.4 ಗುರಿ ಸಾಧಿಸಲಾಗಿದೆ ಎಂದರು. |
ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ. ಗಂಗಂ ಸಿದ್ದರೆಡ್ಡಿ ಮಾತನಾಡಿ, ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಚಿಗಟೇರಿ ಆಸ್ಪತ್ರೆಯಲ್ಲಿ ಅಕ್ಟೋಬರ್ ಮಾಹೆವರೆಗೆ 2640 ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದರು. |
ಜಿಲ್ಲಾಧಿಕಾರಿಗಳು ಮಾತನಾಡಿ, ಚನ್ನಗಿರಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಪ್ರಮಾಣ ಸೇರಿದಂತೆ ಇತÀರೆ ವಿಷಯದಲ್ಲೂ ಪ್ರಗತಿ ಕುಂಠಿತವಾಗಿದೆ. ಚನ್ನಗಿರಿ ತಾಲ್ಲೂಕು ವೈದ್ಯಾಧಿಕಾರಿಗಳ ನಿಯಮಿತವಾಗಿ ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲಿಸಿ ಕುಂದು ಕೊರತೆಗಳ ಕುರಿತು ಕ್ರಮ ವಹಿಸಬೇಕೆಂದರು. ಹಾಗೂ ಎಲ್ಲ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿಗದಿತ ಅವಧಿಯೊಳಗೆ ಅನುಷ್ಟಾನಗೊಳಿಸಿ ಪ್ರಗತಿ ಸಾಧಿಸಬೇಕೆಂದರು. |
ಸಭೆಯಲ್ಲಿ ಕುಷ್ಟರೋಗ ನಿಯಂತ್ರಣ, ಕ್ಷಯರೋಗ ನಿಯಂತ್ರಣ, ಅಂಧ ನಿವಾರಣೆ ಕಾರ್ಯಕ್ರಮ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಲಾಯಿತು. ಸಭೆಯಲ್ಲಿ ಎಲ್ಲಾ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು, ಎಸ್‍ಎಸ್‍ಐಎಂಎಸ್ ನ ಡಾ.ಕಾಳಪ್ಪನವರ್, ಡಾ. ಸರ್ವಮಂಗಳ, ವಿನುತಾ ರವಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು. |
'ನೆಮ್ಮದಿಯ ನೆಲೆ'-ಎಸಳು 6 – ಸುರಹೊನ್ನೆ |
'ನೆಮ್ಮದಿಯ ನೆಲೆ'-ಎಸಳು 6 |
by B.R.Nagarathna, rathna.br51@gmail.com · February 11, 2021 |
ಹುಟ್ಟಿ ಬೆಳೆದ ಮನೆಯನ್ನು, ಹೆತ್ತವರನ್ನು, ಒಡಹುಟ್ಟಿದವರನ್ನು ಬಿಟ್ಟು ಹೋಗುವಾಗ ನನಗೂ ಎಲ್ಲರಂತೆ ದುಃಖ ಮಡುಗಟ್ಟಿತ್ತು. ತಡೆಯಲಾರದೆ ಅಮ್ಮನನ್ನು ಅಪ್ಪಿಕೊಂಡು ಅತ್ತುಬಿಟ್ಟೆ. ಅಲ್ಲಿಯೇ ಇದ್ದ ಅಪ್ಪ ಶಲ್ಯದಲ್ಲಿ ಮುಖ ಮರೆಮಾಡಿಕೊಂಡು ದುಃಖವನ್ನು ತಡೆಯುತ್ತಿದ್ದರು. ಒಡಹುಟ್ಟಿದವರ ಕಣ್ಣುಗಳಲ್ಲೂ ನೀರು ತುಂಬಿತ್ತು. ಆದರೆ ಅವರು ತಮ್ಮ ಸಂಗಾತಿಗಳೊಡನೆ ನನ್ನ ಜೊತೆಯಲ್ಲಿ ಬಂದು ಅತ್ತೆಯ ಮನೆಯವರೆಗೆ ಬಿಟ್ಟು ಬರಲು ಹೊರಟಿದ್ದಾರೆಂಬ ಸತ್ಯ ಅರಿವಾಗಿ ಅಚ್ಚರಿಯಾಯಿತು. "ಇದು ನಿಜವೇ?" ಎಂದು ಅಕ್ಕನನ್ನು ಪಿಸುದನಿಯಲ್ಲಿ ಕೇಳಿದಾಗ "ಹಾ ! ನಿನ್ನನ್ನು ಕರೆದುಕೊಂಡು ಹೋಗುವುದಕ್ಕಿಂತ ನಿನ್ನ ಅತ್ತೆಯ ಮನೆಯವರ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಕುತೂಹಲ ಅವರಿಗಿದ್ದಂತಿದೆ. ನೀನೇನೂ ಅಡ್ಡ ಮಾತನಾಡಬೇಡ " ಎಂದಳು. |
ಕತ್ತಲಾಗುವುದರೊಳಗೆ ಊರು ಸೇರಬೇಕೆಂಬ ಮಾವನವರ ಸೂಚನೆಯಂತೆ ಹೊರಟ ನಾವು ದಾರಿ ಸವೆಸಿದ್ದೇ ಗೊತ್ತಾಗಲಿಲ್ಲ. ಅಷ್ಟರಮಟ್ಟಿಗೆ ಬಸ್ಸಿನಲ್ಲಿ ಮಾತುಕತೆ, ಹರಟೆ, ನಗೆ ತುಂಬಿತ್ತು. |
ಅತ್ತೆ ಮನೆ ತಲುಪಿದ ನನ್ನನ್ನು ಶಾಸ್ತ್ರೋಕ್ತವಾಗಿ ಮನೆ ತುಂಬಿಸಿಕೊಂಡರು. ಹೊಸ್ತಿಲಲ್ಲಿದ್ದ ಪಡಿಯಕ್ಕಿ ಒದ್ದು ಮನೆಯೊಳಗೆ ಪ್ರವೇಶಿಸುತ್ತಿದ್ದ ನನಗೆ ಆ ಮನೆ ಮೈಸೂರಿನಲ್ಲಿದ್ದ ನಾನು ಹುಟ್ಟಿಬೆಳೆದ ಮನೆಯಂತೆಯೇ ಗೋಚರಿಸಿತು. ಕೈಕಾಲು ತೊಳೆಯುತ್ತಿದ್ದಾಗ ಗಮನಕ್ಕೆ ಬಂದಿದ್ದು ತೊಟ್ಟಿಮನೆ, ದೇವರ ಕೋಣೆಯನ್ನು ಪ್ರವೇಶಿಸುವಾಗ ಕಂಡದ್ದು ಅದೇ ರೀತಿಯ ಸ್ವಲ್ಪಹಿತ್ತಲು, ಬಾವಿ. ನಮ್ಮದೋ ಪೂರಾ ಹೆಂಚಿನ ಮನೆ, ಆದರಿದು ಆರ್.ಸಿ.ಸಿ. ಮನೆ. ಶಾಸ್ತ್ರಿಗಳು ಹೈನುಗಾರಿಕೆಯನ್ನೂ ಮಾಡುತ್ತಾರೆ ಎಂದಿದ್ದರು. ಆದರೆ ಹಸುಗಳ ಕೊಟ್ಟಿಗೆ ಎಲ್ಲೂ ಕಾಣಬರಲಿಲ್ಲ. ನೋಡೋಣ ದಿನಗಳೆದಂತೆ ಎಲ್ಲವೂ ತಿಳಿಯುತ್ತೆ ಅಂದುಕೊಂಡೆ. ಅಷ್ಟರಲ್ಲಿ ನನ್ನಣ್ಣ ರಾಘವ ಮಾವನವರನ್ನು "ಹಸುಗಳನ್ನು ಸಾಕಿದ್ದಾರೆಂದಿದ್ದರು ಶಾಸ್ತ್ರಿಗಳು. ಎಲ್ಲಿ ಕಾಣುತ್ತಿಲ್ಲವಲ್ಲಾ? " ಎಂದು ಕೇಳಿದರು. |
"ಓ ಅದು ಒಂದು ಫರ್ಲಾಂಗ್ ದೂರದಲ್ಲಿ ನಮ್ಮ ಜಮೀನಿದೆ. ಅಲ್ಲಿ ಒಕ್ಕಲುಮಕ್ಕಳ ಕುಟುಂಬವಿದೆ. ಹಸುಗಳ ಸಾಕಾಣಿಕೆ, ಹಾಲುಕರೆದು ವಿತರಣೆಯ ಕಾರುಬಾರೆಲ್ಲ ಅವರದ್ದೇ ಎಂದರು." ಅಣ್ಣನಿಗೆ ಉತ್ತರ ಸಿಕ್ಕಿದಂತಾಯಿತು. ನನ್ನ ಅನುಮಾನವೂ ಪರಿಹಾರವಾಯಿತು. |
ಎಲ್ಲರೊಡಗೂಡಿ ದೇವಸ್ಥಾನಕ್ಕೆ ಹೋಗಿ ಶ್ರಿಕಂಠೇಶ್ವರನ ದರ್ಶನ ಪಡೆದುಬಂದೆವು. ಬರುವಷ್ಟರಲ್ಲಿ ಬಿಸಿಬಿಸಿ ಗಸಗಸೆ ಪಾಯಸ, ಚಿತ್ರಾನ್ನ, ತರಕಾರಿ ಹಾಕಿದ ಕೂಟು, ಸೌತೇಕಾಯಿ ಕೋಸಂಬರಿ, ಉಪ್ಪಿನಕಾಯಿ, ಮೊಸರು, ಸಿದ್ಧವಾಗಿತ್ತು. "ಮಧ್ಯಾಹ್ನದ ಊಟ ಹೆವಿಯಾಗಿದ್ದರಿಂದ ಈಗ ಸರಳ ಊಟ ಆಗಬಹುದೇ? " ಎಂದು ಎಲ್ಲರನ್ನೂ ಊಟಕ್ಕೆ ಆಹ್ವಾನಿಸಿದರು ನನ್ನವರ ದೊಡ್ಡ ಅತ್ತಿಗೆಯವರು. ಮನಸ್ಸಿನಲ್ಲಿ ದುಗುಡ ತುಂಬಿದ್ದರಿಂದ ನನಗೆ ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಾಗಿರಲಿಲ್ಲ. ಈಗ ಹೊಟ್ಟೆ ತಾಳಹಾಕುತ್ತಿತ್ತು. ಎಲ್ಲರೊಟ್ಟಿಗೇ ಊಟಕ್ಕೆ ಕೂಡಬಹುದೋ ಏನೋ? ಯಾರನ್ನು ಕೇಳುವುದು ಎನ್ನುವ ಜಿಜ್ಞಾಸೆಯಲ್ಲಿದ್ದ ನನ್ನನ್ನು ನನ್ನವರ ಅಕ್ಕ ಹತ್ತಿರ ಬಂದು "ಬಾ ಇಲ್ಲಿ ಅಂಥಹ ಕಟ್ಟುಪಾಡುಗಳೇನೂ ಇಲ್ಲ". ಎಂದು ಕೈಹಿಡಿದು ಪಂಕ್ತಿಯಲ್ಲಿ ಕೂಡಿಸಿಯೇ ಬಿಟ್ಟರು. ಸಂಕೋಚಬಿಟ್ಟು ಎಲ್ಲರೊಡನೆ ಊಟ ಮಾಡಿದೆ. ಅಡುಗೆ ತುಂಬಾ ಚೆನ್ನಾಗಿತ್ತೆಂದ ನನ್ನ ಅತ್ತಿಗೆಯರ ಮಾತಿಗೆ "ಹಾ ಅತ್ತೆಯವರ ಕೈ ರುಚಿ ಬೊಂಬಾಟ್, ನಾವೆಲ್ಲರೂ ಇಲ್ಲಿಗೆ ಬಂದರೆ ತಿಂದು ಹೋಗುವುದಷ್ಟೇ ಕೆಲಸ. ತಾಯಿಯ ಮನೆಗೆ ಹೋದಷ್ಟೇ ಸುಖ. ನಾವೇನಾದರೂ ಮಾಡಲು ಮುಂದಾದರೆ ಅತ್ತೆಯವರು ನನ್ನ ಕೈಲಾಗುವಷ್ಟು ದಿನ ಮಾಡಿ ಹಾಕುತ್ತೇನೆ, ಆಮೇಲೆ ನೀವುಗಳೇ ಅಲ್ಲವೇ ಎಂದು ಬಾಯಿ ಮುಚ್ಚಿಸುತ್ತಾರೆ ಎಂದರು "ನನ್ನವರ ಅತ್ತಿಗೆ. ಅದನ್ನು ಕೇಳಿದ ನನ್ನ ಅತ್ತಿಗೆಯಂದಿರು ಮೌನ ತಾಳಿದರು. |
ಅವರ ಮನೆಯ ಪದ್ಧತಿಯಂತೆ ಅಲ್ಲೇ ನನ್ನ ಪ್ರಥಮ ರಾತ್ರಿಗೆ ಏರ್ಪಾಡು ಮಾಡಿದ್ದರು. ನನಗೋ ಹೊಸಜಾಗ, ನನ್ನ ಕೈಹಿಡಿದವರೋ ಮೈಸೂರಿನಲ್ಲೇ ಕೆಲಸ ಮಾಡುತ್ತಿದ್ದರೂ ಒಂದು ದಿನವೂ ನಮ್ಮ ಮನೆಯ ಕಡೆ ಸುಳಿದಿರಲಿಲ್ಲ. ನನ್ನ ಸಹಪಾಠಿಗಳಲ್ಲಿ ಕೆಲವರಿಗೆ ಮದುವೆಯಾಗಿತ್ತು. ಅವರುಗಳ ಅನುಭವವನ್ನು ಕೇಳಿದ್ದ ನನ್ನೆದೆ ನಗಾರಿಯಂತೆ ಬಡಿದುಕೊಳ್ಳುತ್ತಿತ್ತು. ಹೀಗೆ ಚಡಪಡಿಸುತ್ತಿರುವಾಗಲೇ ನನ್ನ ಅತ್ತಿಗೆಯಂದಿರು ನೆನಪಾದರು. ಅವರಾದರೋ ನನ್ನೊಡನೆ ಇರಲಿಲ್ಲ. "ಸುಕನ್ಯಾ ಬಾಯಿಲ್ಲಿ" ಎಂದು ನನ್ನನ್ನು ಕರೆಯುತ್ತಾ ಹಾಲಿನಲ್ಲಿದ್ದ ಮೆಟ್ಟಿಲು ಹತ್ತುತ್ತಾ ನಡೆದಿದ್ದರು ನನ್ನವರ ದೊಡ್ಡ ಅತ್ತಿಗೆ. ಮಾತಾಡದಂತೆ ಅವರನ್ನು ಹಿಂಬಾಲಿಸಿದೆ. "ನೋಡು ಈ ಮನೆಯಲ್ಲಿ ಯಾರಿಗೂ ಅತಿಯಾದ ಶಾಸ್ತ್ರ ಸಂಪ್ರದಾಯಗಳು ಹಿಡಿಸೋಲ್ಲ. ಆ ರೂಮಿನಲ್ಲಿ ದಯಾ ಇದ್ದಾನೆ ಹೋಗು, ನಿಮ್ಮಿಬ್ಬರ ದಾಂಪತ್ಯ ಜೀವನ ಸುಖಮಯವಾಗಿರಲಿ" ಎಂದು ಹಾರೈಸಿ ಹಿಂದಿರುಗಿದರು. |
Subsets and Splits
No community queries yet
The top public SQL queries from the community will appear here once available.