text
stringlengths 0
61.5k
|
---|
ಗಾಂಧೀಜಿ ನೂಲುತ್ತಿರುವುದು |
ಕರುವಿನ ಮೇಲಿನ ಕರುಣೆಯಿಂದಲೇ ಕೊಲ್ಲಲು ಗಾಂಧೀಜಿಯವರೇ ಅನುಮತಿ ಕೊಟ್ಟದ್ದುಂಟು. ಪೋಲೀಸಿ ನವರಿಂದ ತಮ್ಮ ಹೆಂಡತಿ ಮಕ್ಕಳ ಮಾನಭಂಗವಾದದ್ದನ್ನು ಅಹಿಂಸಾಚರಣೆಯ ಹೆಸರಿನಲ್ಲಿ ಮೂಕ ಪ್ರೇಕ್ಷಕರಂತೆ ನೋಡಿ ಬಂದ ಬೆಟ್ಟೆಯ ಎಂಬ ಗ್ರಾಮದ ಜನರ ನಡತೆಯನ್ನು 'ಇದು ಕೇವಲ ಅಹಿಂಸೆಯ ದುರುಪಯೋಗ' ಎಂದು ಗಾಂಧೀಜಿಯವರೇ ಖಂಡಿಸಿದರು. ಅಹಿಂಸೆ ಸಾಧ್ಯವಾಗದಿದ್ದಾಗ ಹಿಂಸೆಯಿಂದಲಾದರೂ ಅವರ ಮಾನರಕ್ಷಣೆ ಮಾಡಬೇಕಾಗಿದ್ದಿತೆಂಬುದೇ ಗಾಂಧೀಜಿಯವರ ಅಭಿಮತ. ಅಹಿಂಸೆಯ ಹೆಸರಿನಲ್ಲಿ ಮಾನವ ಹೇಡಿಯಾಗಬೇಕೆಂದು ಗಾಂಧೀಜಿ ಎಂದೂ ಬಯಸಲಿಲ್ಲ. ಹಿಂಸೆಯನ್ನು ಆತ್ಮಬಲದಿಂದ ಎದುರಿಸಲು ಕಲಿಯಬೇಕೆಂಬುದೇ ಅಹಿಂಸೆಯ ಮೂಲ ಸಂದೇಶ. ಹೇಡಿತನ ಮತ್ತು ಹಿಂಸೆ ಈ ಎರಡರ ನಡುವೆ ಯಾವುದಾದರೂ ಒಂದನ್ನು ಆರಿಸಬೇಕಾದಲ್ಲಿ ನಾನು ಹಿಂಸೆಯ ಮಾರ್ಗವನ್ನೆ ತುಳಿದೇನು ಎಂದು ಗಾಂಧೀಜಿ ಹೇಳಿದ್ದರು. ಅಂದಮೇಲೆ ಅಹಿಂಸೆ ಸಾಧ್ಯವಾಗದಾಗ ಹಿಂಸೆಯೇ ಮೇಲು, ಹೇಡಿತನವಂತೂ ಎಂದಿಗೂ ಕೂಡದು. ಗುಣಮಟ್ಟದಿಂದ ನಿರ್ಣಯಿಸಬಹುದಾದರೆ ಅಹಿಂಸೆಯೇ ಪರಮಧರ್ಮ, ಅದಕ್ಕೆ ಕೀಳಾದದ್ದು ಹಿಂಸೆ, ಹೇಡಿತನವಂತೂ ಅದಕ್ಕಿಂತ ಕೀಳಾದದ್ದು, ಅಂದಮೇಲೆ ಅಹಿಂಸೆಯನ್ನು ಗುರುತಿಸುವಾಗ ಕೇವಲ ಒಂದು ಕಾರ್ಯದ ಸ್ಥೂಲ ರೂಪವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅದರಲ್ಲಡಗಿರುವ ಉದ್ದೇಶ ಅದರಿಂದಾಗುವ ಫಲ ಮತ್ತು ಅದು ಅನುಸರಿಸುವ ಮಾರ್ಗ ಇವುಗಳ ಸಮಗ್ರ ಚಿತ್ರ ನಮ್ಮ ಕಲ್ಪನೆಗೆ ಬರಬೇಕು. |
ಪೂರ್ಣ ಅಹಿಂಸೆಯ ಆಚರಣೆ ಒಂದು ಮಹದಾದರ್ಶ ಎನ್ನುವುದಂತೂ ನಿಜ. ಮಾನವನ ಬದುಕು ಸಾಧ್ಯವಾಗಬೇಕಾದರೆ ಸ್ವಲ್ಪಮಟ್ಟಿನ ಹಿಂಸೆ ಅನಿವಾರ್ಯ ವೆಂದೇ ಕಾಣುತ್ತದೆ. ಇದನ್ನು ವ್ಯಾವಹಾರಿಕವಾಗಿ ಗುರುತಿಸಿದ ಗಾಂಧೀಜಿ, ಹಿಂಸೆಯ ವಲಯವನ್ನು ಆದಷ್ಟು ಕಡಿಮೆ ಮಾಡುವುದು ಮಾನವನ ಪ್ರಗತಿಯ ಚಿಹ್ನೆ ಎಂದರು. ಈ ರೀತಿಯ ಅತ್ಯಲ್ಪ ಹಿಂಸೆ ತನ್ನ ಬದುಕಿಗೆ ಅನಿವಾರ್ಯ ಹಾಗೂ ಇದು ತನ್ನ ದೌಬಲ್ಯವೇ ಸರಿ ಎಂದರಿತು ಮಾನವ ಹೆಚ್ಚು ನಮ್ರತೆಯಿಂದ ಜಗತ್ತಿನಲ್ಲಿ ವ್ಯವಹರಿಸು ವಂತಾಗಬೇಕು ಎಂದು ಗಾಂಧೀಜಿ ಹೇಳಿದರು. ತಮ್ಮ ಬಾಳಪರ್ಯಂತ ಗೌರವಿಸಿ ಆಚರಿಸುತ್ತಿದ್ದ ಅಸ್ತೇಯ, ಅಸಂಗ್ರಹ, ಬ್ರಹ್ಮಚರ್ಯ, ಶರೀರಶ್ರಮ, ಸರ್ವಧರ್ಮಸಮಾನತ್ವ, ಸ್ವದೇಶಿ ಮುಂತಾದ ಏಕಾದಶ ವ್ರತಗಳೂ ಮೂಲತಃ ಸತ್ಯ ಮತ್ತು ಅಹಿಂಸೆಯ ಪುರಕ ತತ್ತ್ವಗಳೇ ಎಂದು ಗಾಂಧೀಜಿ ಗ್ರಹಿಸಿದ್ದರು. ನಮ್ಮ ಅವಶ್ಯಕತೆಗಿಂತಲೂ ಹೆಚ್ಚಾಗಿ ಸಂಗ್ರಹಿಸಿಡುವುದು ಅನ್ಯರ ಅವಶ್ಯಕತೆಗಳನ್ನು ಮರೆತು ನಾವು ಅವರಿಗೆಸಗಿದ ಹಿಂಸೆ ಇಲ್ಲವೇ ಅಪಚಾರ, ತಮ್ಮ ಬಳಕೆಗೆ ಬೇಕಾಗುವುದಕ್ಕಿಂತಲೂ ಮಿಗಿಲಾಗಿ ಸಂಗ್ರಹಿಸಿಡುವ ಪೀಠೋಪಕರಣ, ಉಡುಪು ವಸ್ತ್ರಗಳಿಂದಲೂ ತಾವು ಅಹಿಂಸಾಚರಣೆಯ ಉಲ್ಲಂಘನೆ ಮಾಡುತ್ತೇವೆಂದೂ ಗಾಂಧೀಜಿ ಯೋಚಿಸಿದರು. ಈ ಭಾವನೆಯ ಫಲವಾಗಿಯೇ ತಮ್ಮ ವಸ್ತ್ರ ಉಡುಪುಗಳಲ್ಲಿವರು ನಿರಾಡಂಬರವನ್ನು ಕ್ರಮಕ್ರಮವಾಗಿ ಸಾಧಿಸಿದರು. ಅಹಿಂಸೆಯ ತತ್ತ್ವದಲ್ಲಿ ಅಂತರ್ಗತವಾಗಿರುವ ಸೂಕ್ಷ್ಮ ಅಂಶಗಳು ಇನ್ನೂ ಅಗಾಧವಾಗಿದ್ದು ಅವುಗಳ ಸಂಶೋಧನೆ ಮಾನವವಂಶ ಇರುವವರೆಗೂ ನಡೆದುಕೊಂಡು ಹೋಗುತ್ತದೆಂಬುದಕ್ಕೆ ಗಾಂಧೀಜಿ ಮತ. ಅಹಿಂಸೆಯತ್ತ ಕ್ರಮಗತಿಯಲ್ಲಿ ಬೆಳೆಯುತ್ತಿರುವುದೇ ಮಾನವನ ಇತಿಹಾಸ. ಮೃಗಗಳ ಬೇಟೆಯಿಂದ ಜೀವಿಸುತ್ತಿದ್ದ ಆದಿಮಾನವ ಅಹಿಂಸೆಯ ಜಾಡನ್ನು ತುಳಿದಂತೆಲ್ಲ ಕೃಷಿಯಿಂದ ಬದುಕಲು ಕಲಿತ. ಸೂಕ್ಷ್ಮಸಂವೇದಿಯಾದ ಮಾನವನಿಗೆ ಹಿಂಸೆ ಏಕೋ ಮುಜುಗರವೆನಿಸಿತೆಂಬುದು ಮಾನವನ ಇತಿಹಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮಗೆ ಕಂಡುಬರುತ್ತದೆ. |
ಅಹಿಂಸೆ ಹಾಗೂ ಸತ್ಯಾಗ್ರಹ[ಬದಲಾಯಿಸಿ] |
1930 ರ ಏಪ್ರಿಲ್ 5 ರಂದು ಗಾಂಧಿ ರಸ್ತೆಯನ್ನು ಸ್ವಚ್ಛಗೊಳಿಸುತ್ತಿರುವುದು. |
ಅಸತ್ಯದೊಡನೆ ಮಾಡುವ ಅಸಹಕಾರವನ್ನು ಅಥವಾ ಸತ್ಯಕ್ಕಾಗಿ ಎಸಗುವ ಆಗ್ರಹವನ್ನು ಗಾಂಧೀಜಿ ಸತ್ಯಾಗ್ರಹ ಎಂದು ಕರೆದರು. ಈ ಅಸಹಕಾರ ಯಾವ ಕಾರಣದಿಂದಲೂ ಅಹಿಂಸೆಗೆ ವಿರುದ್ಧವಾಗುವಂತಿಲ್ಲ. ಅದು ಹಿಂಸಾತ್ಮಕವಾದರೆ ಆಗ ಅದು ದುರಾಗ್ರಹವೆನಿಸುತ್ತದೆ. ಆದ್ದರಿಂದಲೇ ಸತ್ಯಾಗ್ರಹಿ ಪುರ್ಣ ಅಹಿಂಸವಾದಿಯಾಗಬೇಕೆಂಬ ನಿಯಮ. ತಾನು ಮಾಡುವ ಅಸಹಕಾರದಿಂದ ಎದುರಾಳಿಗೆ ಯಾವ ರೀತಿಯಿಂದಲೂ ಕೆಡುಕಾಗಬಾರದು. ಸತ್ಯಾಗ್ರಹಿ ಸದಾ ಎದುರಾಳಿಯ ಒಳಿತನ್ನೇ ಗಮನದಲ್ಲಟ್ಟಿರಬೇಕು. ಅಸತ್ಯಕ್ಕಂಟಿದ ಅವನ ಮನಸ್ಸನ್ನು ಪರಿವರ್ತಿಸಿ ಅವನ ಆತ್ಮೋನ್ನತಿಗೆ ಸಹಾಯ ಮಾಡುವುದೇ ಈ ಸತ್ಯಾಗ್ರಹದ ಮೂಲ ಉದ್ದೇಶ. ಎದುರಾಳಿಯಿಂದ ಸತ್ಯಾಗ್ರಹಿಗೆ ಎಷ್ಟೇ ನೋವಾದರೂ ಅದನ್ನು ಸಹಿಸುವ ಹೊಣೆಗಾರಿಕೆ ಇವನದು. ಸತ್ಯಾಗ್ರಹಿಯಲ್ಲಿ ಯಾವ ರಹಸ್ಯ, ಗುಟ್ಟು ಇಲ್ಲವೇ, ಕುತಂತ್ರವೂ ಇರಬಾರದು. ಸತ್ಯಾಗ್ರಹಿ ತಾನು ಮಾಡುವ ಕಾರ್ಯವಿಧಾನಗಳನ್ನೆಲ್ಲ ಪೂರ್ವಭಾವಿ ಯಾಗಿ ಎದುರಾಳಿಗೆ ತಿಳಿಸಿ ಅವನು ಅದಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲ ಮಾಡಿಕೊಳ್ಳಲು ನೆರವಾಗಬೇಕು. ಆ ಕಾರಣದಿಂದಲೇ ಗಾಂಧೀಜಿಯವರು ತಾವೆಸಗಿದ ಎಲ್ಲ ಸತ್ಯಾಗ್ರಹಗಳಿಗೂ ಮುನ್ನ ಅದರ ಕ್ರಮ ಮತ್ತು ಉದ್ದೇಶಗಳನ್ನು ಬ್ರಿಟಿಷ್ ಸರ್ಕಾರಕ್ಕೆ ತಿಳಿಸಿ ಅವರಿಗೆ ಯಾವ ರೀತಿಯ ಇಕ್ಕಟ್ಟೂ ಆಗದಂತೆ ನೋಡಿಕೊಳ್ಳ್ಳುತ್ತಿದ್ದರು. |
ಗಾಂಧೀಜಿಯವರ ಅಭಿಪ್ರಾಯ ಅಹಿಂಸಾಚರಣೆಯ ಹೊಣೆಗಾರಿಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತಲೂ ಭಾರತಕ್ಕೆ ಹೆಚ್ಚು - ಎಂದು. ಅನೇಕ ಶತಮಾನಗಳ ದಾರ್ಶನಿಕ ಪರಂಪರೆಯನ್ನು ಹೊಂದಿರುವ ಭಾರತ ಅಹಿಂಸಾಚರಣೆಯಲ್ಲಿ ಮಿಕ್ಕ ರಾಷ್ಟ್ರಗಳಿಗಿಂತಲೂ ಮುಂದೆ ಹೋಗಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡುವಂತಾಗಬೇಕು. - ಗಾಂಧೀಜಿಯವರ ಈ ನಂಬಿಕೆಗೆ ಪುಷ್ಟಿ ದೊರೆಯುವಂಥ ಕೆಲವು ನಿದರ್ಶನಗಳು ಇತ್ತೀಚಿನ ಕಾಲದಲ್ಲಿ ನಡೆಯುತ್ತಿರುವುದು ಒಂದು ಆಶಾದಾಯಕ ಚಿಹ್ನೆ. ಅಮೆರಿಕದ ನೀಗ್ರೋ ಜನ ವರ್ಣ ವೈಷಮ್ಯಕ್ಕೆ ಸಿಲುಕಿ ತೊಳಲಾಡುತ್ತಿದ್ದಾಗ ಗಾಂಧೀಜಿಯವರ ಅಹಿಂಸಾತತ್ತ್ವದಿಂದ ಪ್ರೇರಿತನಾದ ಮಾರ್ಟಿನ್ ಲೋಥರ್ ಕಿಂಗ್ ದ್ವೇಷರಹಿತ ಹೋರಾಟದಿಂದ ಬಿಳಿ ಜನರ ಮನಸ್ಸನ್ನೂ ಮಾರ್ಪಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ನಿದರ್ಶನ ಇನ್ನೂ ಅಚ್ಚ ಹಸುರಾಗಿದೆ. 20ನೆಯ ಶತಮಾನದಲ್ಲಿ ಬಹು ವಿಚಾರಪರ ದಾರ್ಶನಿಕನೆನಿಸಿದ ಬರ್ಟ್ರೆಂಡ್ ರಸಲ್ ಯುದ್ಧ ದಾಹದಿಂದ ಉನ್ಮತ್ತರಾಗಿ, ವಿನಾಶಕಾರಕವಾದ ಅಣ್ವಸ್ತ್ರಗಳನ್ನು ಸೃಷ್ಟಿಸಿ, ಸರ್ವನಾಶಕ್ಕೆ ಉದ್ಯುಕ್ತರಾಗಿದ್ದ ಶಕ್ತ ರಾಷ್ಟ್ರಗಳ ಮನ ಒಲಿಸಲು ಬಳಸಿದ ಅಸ್ತ್ರದ ಸ್ವರೂಪವಾದರೂ ಏನು? ಶಾಂತಿಪ್ರಿಯರಾದ ಜನರೆನ್ನೆಲ್ಲ ತಮ್ಮ ಹಿಂದೆ ಸಾಲ್ಗೂಡಿಸಿ ಲಂಡನ್ ನಗರದ ಬೀದಿಗಳಲ್ಲಿ ಕಿಲೋಮೀಟರ್ ಗಟ್ಟಳೆ, ಮಳೆ ಚಳಿಯನ್ನು ಲೆಕ್ಕಿಸದೆ, ಪಾದಯಾತ್ರೆ ನಡೆಸಿ ವಿಶ್ವದ ಜನತೆಯ ಅಭಿಪ್ರಾಯವನ್ನೆಲ್ಲ ಶಾಂತಿಯ ಸಂದೇಶದತ್ತ ವಾಲುವಂತೆ ಮಾಡಿದ ರಸಲ್ಲನ ಈ ಮಾರ್ಗ ಗಾಂಧೀಜಿಯವರ ದಂಡಿಯಾತ್ರೆಯ ಪುನಃ ಸ್ಮರಣೆಯಂತಿದೆ. |
ಹಾಗೆ ನೋಡುವುದಾದರೆ ಮಾನವ ಅನಾದಿಕಾಲದಿಂದ ಹಿಂಸಾಮಾರ್ಗವನ್ನು ತುಳಿದು ಅದರಲ್ಲಿ ನೂರಾರು ಪ್ರಯೋಗಗಳನ್ನು ಮಾಡಿ ಅದರಿಂದ ಈಗ ಬೇಸತ್ತಿದ್ದಾನೆ. ಅದು ಈಗ ಗತಕಾಲದ ಪಳೆಯುಳಿಕೆಯಂತಿದೆ. ಆದ್ದರಿಂದಲೇ ಈಗ ಅವನು ಅಹಿಂಸೆಯ ಅರುಣೋದಯದತ್ತ ಆಶಾವಾದಿಯಾಗಿ ಕಣ್ತೆರೆಯುತ್ತಿದ್ದಾನೆ.[೧] |
ಮುತ್ತೂಟ್ ಫೈನಾನ್ಸ್ ಠೇವಣಿಗೂ ಬಿತ್ತು ನಿಷೇಧ | RBI warns Muthoot Fincorp to stop Public Deposits, ಮುತ್ತೂಟ್ ಎಸ್ಟೇಟ್ ಠೇವಣಿಗೂ ಬಿತ್ತು ನಿಷೇಧ - Kannada Oneindia |
ಮುತ್ತೂಟ್ ಫೈನಾನ್ಸ್ ಠೇವಣಿಗೂ ಬಿತ್ತು ನಿಷೇಧ |
| Published: Tuesday, April 3, 2012, 8:29 [IST] |
ಮುಂಬೈ, ಏ.3: ಒಂದೂವರೆ ತಿಂಗಳ ಹಿಂದೆ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಬಾರದು ಎಂದು ಕೇರಳ ಮೂಲದ ಮಣಪ್ಪುರಂ ಫೈನಾನ್ಸ್ ಕಂಪನಿ ಬಗ್ಗೆ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮುತ್ತೂಟ್ ಫಿನ್‌ಕಾರ್ಫ್ ಲಿಮಿಟೆಡ್‌ನ ಅಂಗ ಸಂಸ್ಥೆ ಮುತ್ತೂಟ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಕಂಪನಿಗೂ ಅದೇ ಎಚ್ಚರಿಕೆ ರವಾನಿಸಿದೆ. ಇನ್ನು ಠೇವಣಿದಾರರು ಜಾಗೃತರಾಗಬೇಕು ಅಷ್ಟೇ. |
ಇದೂ ಕೇರಳ ಮೂಲದ್ದೇ ಆದ ಮುತ್ತೂಟ್ ಫಿನ್‌ಕಾರ್ಪ್ ಕಂಪನಿಗೆ ಸಾರ್ವಜನಿಕರಿಂದ ಯಾವುದೇ ಸ್ವರೂಪದಲ್ಲಿ ಠೇವಣಿ ಸಂಗ್ರಹಿಸಬಾರದು ಎಂದು ಆರ್‌ಬಿಐ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕಂಪನಿಯು ಬ್ಯಾಂಕೇತರ ಹಣಕಾಸು (ಎನ್‌ಬಿಎಫ್‌ಸಿ) ಸಂಸ್ಥೆಯಾಗಿದ್ದು, ಮುತ್ತೂಟ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್‌ನ ಪ್ರವರ್ತಕ ಸಂಸ್ಥೆಯೂ ಆಗಿದೆ. |
ಈ ಸಂಸ್ಥೆಯು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ನೀಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಠೇವಣಿ ಸಂಗ್ರಹಿಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದೂ ಆರ್‌ಬಿಐ ಪ್ರಕಟಣೆ ತಿಳಿಸಿದೆ. ಈ ಕುರಿತು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. |
ಕಳೆದ ಫೆಬ್ರವರಿಯಲ್ಲಿ ಆರ್‌ಬಿಐ ಕಿವಿ ಹಿಂಡಿದ್ದೇ ತಡ ಮಣಪ್ಪುರಂ ಫೈನಾನ್ಸ್ ಕಂಪನಿಯು 'ಇಲ್ಲ ಇಲ್ಲ ನಮ್ಮಲ್ಲಿ ಯಾರೂ ಠೇವಣಿ ಇಡ್ತಾನೂ ಇಲ್ಲ. ಇಡಲೂ ಬೇಡಿ' ಎಂದು ಅಲವತ್ತುಕೊಂಡಿತು. 2011ರ ಮಾರ್ಚ್ ತಿಂಗಳಿನಿಂದಲೇ ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ' ಎಂದು ಸ್ಪಷ್ಟಪಡಿಸಿತ್ತು. |
ಚಿನ್ನ ಷೇರುಪೇಟೆ ಆರ್ ಬಿಐ ಬ್ಯಾಂಕ್ ಮುಂಬೈ ಆರ್ಥಿಕ ಬಿಕ್ಕಟ್ಟು share gold financial crisis bank mla |
After cautioning the Kerala-based gold loans company, Manappuram Finance (MFL) in February against accepting any public deposits the RBI has now cracked the whip on Muthoot Fincorp (MFCL). |
ನೌಕರಿಯಲ್ಲಿ ಬಡ್ತಿ ಸಿಗದಿರಲು ಕಾರಣಗಳೇನು ಗೊತ್ತೆ? | 10 reasons why you didn't get a Promotion? - Kannada Goodreturns |
| Published: Saturday, May 25, 2019, 9:45 [IST] |
ಕೆಲವೊಮ್ಮೆ ಕಂಪನಿಗಳು ಹಲವಾರು ಉದ್ಯೋಗಿಗಳಿಗೆ ಸಂಬಳ ಏರಿಕೆ ಹಾಗೂ ಹುದ್ದೆಯ ಬಡ್ತಿ ಸೌಲಭ್ಯಗಳಿಗೆ ಕತ್ತರಿ ಹಾಕುತ್ತವೆ. ಬೇರೆಯವರಿಗೆ ಬಡ್ತಿ ದೊರಕಿದರೂ ಕೆಲವರಿಗೆ ಮಾತ್ರ ಇದು ಸಿಗುವುದೇ ಇಲ್ಲ. ಆದರೆ ಹೀಗೆ ಆದಾಗ ಉದ್ಯೋಗಿಯು ಸುಮ್ಮನೆ ಕುಳಿತುಕೊಳ್ಳಕೂಡದು. ತನಗೆ ಯಾಕೆ ಸಂಬಳ ಹೆಚ್ಚಳ ಹಾಗೂ ಬಡ್ತಿ ಸಿಕ್ಕಿಲ್ಲ ಎಂಬುದರ ಪರಿಶೀಲನೆಗೆ ಮುಂದಾಗಬೇಕು. ಆದರೆ ಅದಕ್ಕೂ ಮುನ್ನ ಯಾವೆಲ್ಲ ಕಾರಣಗಳಿಗಾಗಿ ಈ ಸೌಲಭ್ಯಗಳನ್ನು ಕಂಪನಿಗಳು ಕೆಲವೊಮ್ಮೆ ನೀಡುವುದಿಲ್ಲ ಎಂಬುದನ್ನು ತಿಳಿಯುವುದು ಸೂಕ್ತ. ಅಂಥ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದು, ಆ ಸಂದರ್ಭಗಳಲ್ಲಿ ಏನು ಮಾಡಬೇಕೆಂಬುದನ್ನೂ ಇಲ್ಲಿ ತಿಳಿಸಿದ್ದೇವೆ. ನೀವೂ ಬಡ್ತಿ ವಂಚಿತ ನತದೃಷ್ಟರಾಗಿದ್ದಲ್ಲಿ ಇದನ್ನು ಓದಿ ಪ್ರಯತ್ನಕ್ಕೆ ಮುಂದಾಗಿ. |
1. ನೀವು ಕೇಳಲಿಲ್ಲ, ಅವರು ಕೊಡಲಿಲ್ಲ ! |
ನೀವು ಕಂಪನಿಯಲ್ಲಿ ಅತ್ಯಂತ ಶ್ರದ್ಧೆ ಹಾಗೂ ಪರಿಶ್ರಮದಿಂದ ಕೆಲಸ ಮಾಡುವವರಲ್ಲಿ ಒಬ್ಬರಾಗಿರುವಿರಿ. ನೀವು ನಿಮ್ಮ ಕೆಲಸದಿಂದ ಕಂಪನಿಗೆ ಸಾಕಷ್ಟು ಲಾಭ ಮಾಡಿಕೊಟ್ಟಿರುವಿರಿ ಎಂಬುದನ್ನು ಸಹ ಒಪ್ಪಿಕೊಳ್ಳೋಣ. ಆದರೆ ಇದನ್ನೆಲ್ಲ ಕಂಪನಿ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ನಿಮಗೆ ವೇತನ ಹೆಚ್ಚಳ ಹಾಗೂ ಬಡ್ತಿ ನೀಡುತ್ತಾರೆ ಎಂಬುದು ನಿಮ್ಮ ನಿರೀಕ್ಷೆಯಾಗಿದ್ದರೆ ಅದು ತಪ್ಪಾದೀತು. ಎಲ್ಲಿಯವರೆಗೆ ನೀವು ಕೇಳುವುದಿಲ್ಲವೋ ಅಲ್ಲಿಯವರೆಗೆ ನಿಮಗೆ ಅದು ಸಿಗಲಾರದು. ನೀವು ಸಂಬಳ ಹೆಚ್ಚಳ ಹಾಗೂ ಬಡ್ತಿ ಡಿಮ್ಯಾಂಡ್ ಮಾಡಿಲ್ಲವೆಂದಾದರೆ ನೀವು ಈಗಿರುವ ಹುದ್ದೆ ಹಾಗೂ ಪಡೆಯುತ್ತಿರುವ ಸಂಬಳದಿಂದ ಖುಷಿಯಾಗಿರುವಿರಿ ಎಂದೇ ಕಂಪನಿ ತಿಳಿದುಕೊಳ್ಳುತ್ತದೆ. ಅಷ್ಟೇ ಏಕೆ, ನೀವು ಬಡ್ತಿ ಕೇಳಿಲ್ಲವೆಂದಾದರೆ ಬಡ್ತಿ ಪಡೆಯಬಹುದಾದ ಮಟ್ಟಕ್ಕೆ ನೀವು ಕೆಲಸವನ್ನೇ ಮಾಡಿರಲಿಕ್ಕಿಲ್ಲ ಎಂದೂ ಕಂಪನಿ ಭಾವಿಸುತ್ತದೆ. ಹೀಗಾಗಿ ನೀವು ಕಂಪನಿಗೆ ಸಲ್ಲಿಸುತ್ತಿರುವ ವಿಶೇಷ ಸೇವೆಗಳ ಬಗ್ಗೆ ಬಾಸ್‌ಗೆ ತಿಳಿಸುತ್ತ ಇರಿ ಹಾಗೂ ನೀವು ವೇತನ ಹೆಚ್ಚಳ ಹಾಗೂ ಬಡ್ತಿ ಬಯಸುತ್ತಿರುವುದನ್ನು ನೇರವಾಗಿ ಹೇಳಿ. |
2. ಸಂಬಳ ಹೆಚ್ಚಳಕ್ಕೆ ನೀವು ಅರ್ಹರಾ? |
ಮನೆ ಕೊಳ್ಳಲು ಅಥವಾ ಕುಟುಂಬದಲ್ಲಿನ ಯಾವುದೋ ಹಣಕಾಸು ಸಮಸ್ಯೆ ನಿಭಾಯಿಸಲು ವೇತನ ಹೆಚ್ಚಳವನ್ನು ನೀವು ಬಯಸುತ್ತಿದ್ದರೆ ಅದು ತಪ್ಪಾದೀತು. ವೇತನ ಹೆಚ್ಚಳ ಹಾಗೂ ಬಡ್ತಿ ಇವು ಸಂಪೂರ್ಣ ವ್ಯವಹಾರಿಕ ಪ್ರಕ್ರಿಯೆಗಳಾಗಿದ್ದು ನಿಮ್ಮ ಉತ್ತಮ ಪ್ರದರ್ಶನ ಹಾಗೂ ಇನ್ನೂ ಕೆಲ ವಾಸ್ತವಿಕ ಅಂಶಗಳ ಮೇಲೆ ಆಧರಿತವಾಗಿರುತ್ತವೆ. ಹೀಗಾಗಿ ಬಡ್ತಿ ಕೇಳುವ ಮುನ್ನ ಕಂಪನಿಗೆ ನಿಮ್ಮಿಂದಾದ ಲಾಭ ಅಥವಾ ಅನುಕೂಲಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಅವುಗಳ ಆಧಾರದಲ್ಲಿ ಮಾತನಾಡಿ. ನೀವು ಹೆಚ್ಚಳಕ್ಕೆ ಅರ್ಹರಾಗಿರುವುದನ್ನು ಸಾಬೀತು ಪಡಿಸದೇ ಇದ್ದಲ್ಲಿ ಬಡ್ತಿ ಸಿಗಲಾರದು. |
3. ನೀವು ಇತರರೊಂದಿಗೆ ಸರಿಯಾಗಿ ಬೆರೆಯುತ್ತಿಲ್ಲವೆ? |
ಕೆಲಸದ ಸ್ಥಳದಲ್ಲಿ ಸದಾ ಕಿರಿಕಿರಿ ಮಾಡುವ ಸಹೋದ್ಯೋಗಿಯನ್ನು ಯಾರೂ ಬಯಸುವುದಿಲ್ಲ. ಆಗಾಗ ಇತರರೊಂದಿಗೆ ವಾಗ್ವಾದ ನಡೆಸುವುದು, ಪದೆ ಪದೆ ಯಾವುದಾದರೂ ವಿಷಯಕ್ಕೆ ದೂರು ನೀಡುವುದು ಮುಂತಾದುವುಗಳನ್ನು ಮಾಡುತ್ತಿದ್ದರೆ ಅಂಥವರು ಒಂದು ರೀತಿಯ ಅಪ್ರಿಯ ವ್ಯಕ್ತಿಗಳಾಗಿ ಬಿಡುತ್ತಾರೆ. ವೇತನ ಹೆಚ್ಚಳ ಹಾಗೂ ಬಡ್ತಿ ನೀಡುವಿಕೆ ಸಂದರ್ಭದಲ್ಲಿ ಸಹಜವಾಗಿಯೇ ಇಂಥವರು ನಿರ್ಲಕ್ಷಿಸಲ್ಪಡುತ್ತಾರೆ. ನಿಮಗೆ ಬಡ್ತಿ ಬೇಕಿದ್ದಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ಬೆರೆತು ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಿ. |
4. ಎಲ್ಲವನ್ನೂ ನೀವೊಬ್ಬರೆ ಮಾಡುವುದು |
ಎಲ್ಲ ಕೆಲಸವನ್ನು ಒಬ್ಬರೇ ಮಾಡುವುದಕ್ಕಿಂತ ತಂಡವಾಗಿ ಕೆಲಸ ಮಾಡುವವರಿಗೆ ಬೇಗನೆ ಬಡ್ತಿ ಸಿಗುತ್ತವೆ. ಆದರೆ ತಂಡದಲ್ಲಿದ್ದರೂ ಯಶಸ್ಸನ್ನು ಎಲ್ಲರೊಂದಿಗೆ ಹಂಚಿಕೊಳ್ಳದಿರುವುದು ಅಥವಾ ಚಿಕ್ಕ ಪುಟ್ಟ ವಿಷಯಗಳಿಗೆ ಬೇರೆಯವರನ್ನು ಹೊಣೆ ಮಾಡುವುದು ಮುಂತಾದ ಕಾರಣಗಳಿಂದ ನಿಮಗೆ ಬಡ್ತಿ ದೊರಕದಿರಬಹುದು. ತಂಡದಲ್ಲಿದ್ದರೂ ತಂಡದ ಎಲ್ಲ ಯಶಸ್ಸನ್ನು ಒಬ್ಬನೇ ಕ್ರೆಡಿಟ್ ಪಡೆಯಲು ಯತ್ನಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ದೀರ್ಘಾವಧಿಯಲ್ಲಿ ನಿಮ್ಮ ವೇತನ ಹೆಚ್ಚಳ ಹಾಗೂ ಬಡ್ತಿ ಸೌಲಭ್ಯಗಳಿಗೆ ಕತ್ತರಿ ಬೀಳುವ ಸಂಭವಗಳೇ ಜಾಸ್ತಿ. |
5. ಅತಿಯಾದ ನಿರೀಕ್ಷೆ ಸಲ್ಲದು |
ನಿಮ್ಮ ಕಾರ್ಯಕ್ಷಮತೆಯನ್ನು ನೀವು ತೀರಾ ಉತ್ಪ್ರೇಕ್ಷೆಯಾಗಿ ತೆಗೆದುಕೊಳ್ಳುವುದು ಸಹ ಕೆಲವೊಮ್ಮೆ ಬಡ್ತಿ ತಡೆಗೆ ಕಾರಣವಾಗುತ್ತದೆ. ಕಂಪನಿಗೆ ಏನೋ ದೊಡ್ಡ ಲಾಭ ಮಾಡಿರುವೆ ಎಂದು ನೀವಂದುಕೊಂಡಿದ್ದರೂ ಬಾಸ್‌ಗೆ ಹಾಗೆ ಅನಿಸದಿರಬಹುದು. ಒಟ್ಟಾರೆ ಮಾರುಕಟ್ಟೆ ಸ್ಥಿತಿಗತಿ ಹಾಗೂ ಕಂಪನಿಯ ಕಾರ್ಯನಿರ್ವಹಣೆ ಕುರಿತಾಗಿ ನಿಮಗೆ ಸರಿಯಾದ ಮಾಹಿತಿ ಇಲ್ಲದಿರುವಾಗಲೂ ಹೀಗಾಗುತ್ತದೆ. ನೀವು ಶೇ.15 ರಷ್ಟು ಸಂಬಳ ಹೆಚ್ಚಳ ಬಯಸುತ್ತಿರಬಹುದು. ಆದರೆ ಒಟ್ಟಾರೆ ನಿಮ್ಮ ಕಂಪನಿಯ ಉತ್ಪಾದನಾ ವಲಯವು ಆ ನಿರ್ದಿಷ್ಟ ವರ್ಷದಲ್ಲಿ ತೀರಾ ಕಳಪೆ ಸಾಧನೆ ಮಾಡಿದ್ದಲ್ಲಿ ನಿಮಗೆ ಅಷ್ಟೊಂದು ಹೆಚ್ಚಳ ಸಿಗಲಾರದು. ನಿಮ್ಮ ನಿರೀಕ್ಷೆಗಳು ಆದಷ್ಟೂ ವಾಸ್ತವಕ್ಕೆ ಹತ್ತಿರವಾಗಿರಬೇಕು. |
6. ಪದೇ ಪದೇ ತಪ್ಪು ಮಾಡುತ್ತಿರುವುದು |
ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ನಿಖರವಾದ ಕಾರ್ಯಕ್ಷಮತೆಗಳು ಓರ್ವ ಉದ್ಯೋಗಿಯಲ್ಲಿ ಇರಲೇಬೇಕಾದ ಮೂಲ ಅಂಶಗಳಾಗಿವೆ. ಪ್ರಾಜೆಕ್ಟ್ ವರದಿ ತಯಾರಿಸುವಾಗ ಆಗಾಗ ತಪ್ಪುಗಳನ್ನು ಮಾಡುವುದು, ಅದರಿಂದ ಕಂಪನಿಗೆ ನಷ್ಟವಾಗುವುದು ಅಥವಾ ಮುಖಭಂಗವಾಗುವುದು ಮುಂತಾದ ಘಟನೆಗಳಿಂದ ನಿಮ್ಮ ವೇತನ ಹೆಚ್ಚಳಕ್ಕೆ ತಡೆ ಉಂಟಾಗಬಹುದು. ಇಂಥ ಸಂದರ್ಭಗಳಲ್ಲಿ ನಿಮ್ಮ ನೌಕರಿ ಉಳಿದರೆ ಅದೇ ಹೆಚ್ಚು ಎನ್ನುವಂತಾಗಬಹುದು, ಹೀಗಾಗಿ ಗಮನವಿಟ್ಟು ನಿಖರವಾಗಿ ಕೆಲಸ ಮಾಡಬೇಕು. |
7. ಅರ್ಹತೆಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದರೆ? |
ನಿಮಗೆ ವೇತನ ಹೆಚ್ಚಳ ಅಥವಾ ಬಡ್ತಿ ಸಿಗದಿದ್ದಲ್ಲಿ ಕಂಪನಿಯ ಪ್ರಾಮುಖ್ಯತೆಯ ಲಿಸ್ಟ್‌ನಲ್ಲಿ ನಿಮ್ಮ ಸ್ಥಾನ ಎಲ್ಲಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿ. ನೀವು ಈಗಾಗಲೇ ನಿಮ್ಮದೇ ಹುದ್ದೆಯ ಬೇರೆ ಉದ್ಯೋಗಿಗಳಿಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದಲ್ಲಿ ಅಥವಾ ನಿಮ್ಮ ಹುದ್ದೆ ಅರ್ಹತೆಗಿಂತಲೂ ಹೆಚ್ಚಾಗಿದ್ದರೆ ಸಹಜವಾಗಿಯೇ ಕಂಪನಿ ನಿಮ್ಮ ಸೌಲಭ್ಯಗಳನ್ನು ಕೆಲ ವರ್ಷಗಳವರೆಗೆ ತಡೆಹಿಡಿಯಬಹುದು. ಇನ್ನು ಕೆಲ ಬಾರಿ ನಿಮ್ಮ ಕಾರ್ಯಕ್ಷಮತೆಯನ್ನು ಆಧರಿಸಿ ನಿಮಗೆ ಸಂಬಳ ಎಂಬ ಆಧಾರದಲ್ಲಿ ನೇಮಕವಾಗಿದ್ದರೆ ಸಹ ಬಡ್ತಿ ಸಿಗಲಾರವು. ಇತರರಿಗಿಂತ ತೀರಾ ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನು ನೀವು ತೋರಿಸಿದಲ್ಲಿ ಬಡ್ತಿ ಸಿಗಬಹುದು. |
8. ಎಷ್ಟು ಬೇಕೋ ಅಷ್ಟೆ ಕೆಲಸ ಮಾಡುವುದು |
ಸದ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಕೆಲಸ ಮಾಡುವುದು ಒಬ್ಬ ಕಳಪೆ ಉದ್ಯೋಗಿಯ ಲಕ್ಷಣವಾಗಿದೆ. ನಿಮಗೆ ವಹಿಸಿದ ಕೆಲಸವನ್ನೂ ಮೀರಿ ಮತ್ತಷ್ಟು ಜವಾಬ್ದಾರಿಗಳನ್ನು ಹೊತ್ತುಕೊಂಡು ಶ್ರದ್ಧೆಯಿಂದ ನಿಭಾಯಿಸಿದಲ್ಲಿ ಮಾತ್ರ ಕಂಪನಿ ನಿಮ್ಮತ್ತ ನೋಡುತ್ತದೆ. ಒಂದು ವೇಳೆ ಕಳೆದ ಕೆಲ ವರ್ಷಗಳಿಂದ ನಿಮಗೆ ವೇತನ ಹೆಚ್ಚಳ ಹಾಗೂ ಬಡ್ತಿ ಸಿಕ್ಕಿಲ್ಲವೆಂದಾದರೆ ಮೊದಲು ನಿಮ್ಮ ಕಾರ್ಯಕ್ಷಮತೆಯನ್ನು ಪರೀಕ್ಷಿಸಿಕೊಳ್ಳಿ. |
9. ಹೊಸ ಕೌಶಲ್ಯಗಳನ್ನು ಕಲಿಯದಿರುವುದು |
ಹೊಸ ಕೌಶಲಗಳನ್ನು ಕಲಿತು ಕಂಪನಿಗೆ ಲಾಭ ಮಾಡಿಕೊಡುವ ಉದ್ಯೋಗಿ ನೀವಾಗಿದ್ದಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಹಾಗೆಯೇ ಉದ್ಯಮ ವಲಯದ ಬದಲಾವಣೆಗಳು, ತಾಂತ್ರಿಕತೆ ಇವುಗಳಲ್ಲಿ ಪಳಗಿದಲ್ಲಿ ಮತ್ತಷ್ಟು ಅನುಕೂಲವಾಗುತ್ತದೆ. ಆದರೆ ನೀವು ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳದಿದ್ದಲ್ಲಿ ಬಡ್ತಿ ಸಿಗುವುದು ಕಷ್ಟ. ಬಡ್ತಿ ಸಿಗುವುದು ಬಿಡಿ, ಇರುವ ಕೆಲಸವೂ ಹೋಗಬಹುದು. |
10. ಬರೀ ಸಮಸ್ಯೆಗಳನ್ನು ಸೃಷ್ಟಿಸುವ ಉದ್ಯೋಗಿಯಾದರೆ ಕಷ್ಟ |
ಆಗಾಗ ಯಾವುದಾದರೂ ದೂರು ಅಥವಾ ಸಮಸ್ಯೆಗಳನ್ನು ಹೊತ್ತುಕೊಂಡು ಬಾಸ್ ಬಳಿಗೆ ಹೋಗುವ ಉದ್ಯೋಗಿ ನೀವಾಗಿರುವಿರಾ? ನಿಮ್ಮ ಕೆಳಹಂತದವರು ಯಾವುದಾದರೂ ಸಮಸ್ಯೆ ಹೊತ್ತು ನಿಮ್ಮಲ್ಲಿಗೆ ಬಂದಾಗ ಅದನ್ನು ಪರಿಹರಿಸುವುದು ನಿಮಗೆ ಸಾಧ್ಯವಾಗುವುದಿಲ್ಲವೆ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಹೌದು' ಎಂದಾಗಿದ್ದಲ್ಲಿ ನಿಮಗೆ ವೇತನ ಹೆಚ್ಚಳ ಹಾಗೂ ಬಡ್ತಿ ದೊರಕುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬೇಕು. ಉನ್ನತ ಹುದ್ದೆಯಲ್ಲಿರುವವರು ಎಂಥದೇ ಸಮಸ್ಯೆ ಎದುರಾದರೂ ಅದನ್ನು ತಕ್ಷಣ ಪರಿಹರಿಸುವ ಸಾಮರ್ಥ್ಯ ಹೊಂದಿರಲೇಬೇಕು. ನಿಮಗೆ ಆ ಚಾಲಾಕಿತನ ಇದ್ದಲ್ಲಿ ನಿಮ್ಮ ಬಡ್ತಿ ಹಾಗೂ ವೇತನ ಹೆಚ್ಚಳವನ್ನು ಯಾರೂ ತಡೆಯಲಾರರು. |
Read more about: job money employment |
10 reasons why you didn't get a Promotion? |
If you have been ignored for an increment or a promotion for a couple of years in succession, it's time to get to the root of the problem and find a solution. |
ಚಳಿಗಾಲದ ಅಧಿವೇಶನ; ಕಾಂಗ್ರೆಸ್ ನಾಯಕರ ಮಹತ್ವದ ಸಭೆ | Congress Leaders Meeting Ahead Of Winter Session - Kannada Oneindia |
15 min ago ಭಾರತದಲ್ಲಿ 97 ದಿನಗಳ ಕೊರೊನಾವೈರಸ್ ಲಸಿಕೆ ವರದಿ |
18 min ago ಹರಿಯಾಣದ ಆಸ್ಪತ್ರೆಯಲ್ಲಿ ಕದ್ದ ಲಸಿಕೆಯನ್ನು ಟೀ ಅಂಗಡಿಯಲ್ಲಿಟ್ಟ ಕಳ್ಳ! |
20 min ago ಕೊರೊನಾ 2ನೇ ಅಲೆ ಆರ್ಥಿಕ ಪುನಶ್ಚೇತನಕ್ಕೆ ಅಪಾಯಕಾರಿ: ಆರ್‌ಬಿಐ ಗವರ್ನರ್ |
karnataka congress winter session assembly session ಕರ್ನಾಟಕ ಕಾಂಗ್ರೆಸ್ ವಿಧಾನಸಭೆ ಅಧಿವೇಶನ ಚಳಿಗಾಲದ ಅಧಿವೇಶನ politics |
| Updated: Sunday, December 6, 2020, 15:29 [IST] |
ಬೆಂಗಳೂರು, ಡಿಸೆಂಬರ್ 6 : ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಗೋಹತ್ಯೆ ನಿಷೇಧ, ಲವ್ ಜಿಹಾದ್ ನಿಷೇಧ ಸೇರಿದಂತೆ ಹಲವಾರು ಪ್ರಮುಖ ಮಸೂದೆಗಳನ್ನು ಮಂಡನೆ ಮಾಡಲಾಗುತ್ತಿದೆ. |
ಭಾನುವಾರ ಕಾಂಗ್ರೆಸ್ ನಾಯಕರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು. ಅಧಿವೇಶನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಷಯಗಳು ಹಾಗೂ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. |
ಡಿಸೆಂಬರ್ 7 ರಿಂದ 15ರ ತನಕ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಕೋವಿಡ್ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿದ್ದು, ಸದಸ್ಯರು ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ಧತೆಗಳನ್ನು ಪರಿಶೀಲಿಸಿದರು. |
ಲವ್ ಜಿಹಾದ್ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ಒಂದು ದೇಶ, ಒಂದು ಚುನಾವಣೆಯ ಬಗ್ಗೆ ಎರಡು ದಿನಗಳ ಕಾಲ ಚರ್ಚೆ ನಡೆಸಲು ಅವಕಾಶವನ್ನು ನೀಡಲಾಗಿದೆ. |
ರೈತರ ಪ್ರತಿಭಟನೆ; ನಡೆಯಲಿದೆ ವಿಶೇಷ ಲೋಕಸಭೆ ಅಧಿವೇಶನ? |
ಸಚಿವ ಸಂಪುಟ ವಿಸ್ತರಣೆ, ಗ್ರಾಮ ಪಂಚಾಯಿತಿ ಚುನಾವಣೆ ಮುಂತಾದ ವಿಚಾರಗಳಲ್ಲಿ ಆಡಳಿತ ಪಕ್ಷ ಬಿಜೆಪಿ ಬ್ಯುಸಿಯಾಗಿದೆ. ಎರಡು ಕ್ಷೇತ್ರಗಳ ಉಪ ಚುನಾವಣೆ ಗೆದ್ದು ಬಿಜೆಪಿ ಉತ್ಸಾಹದಲ್ಲಿದೆ. |
ಲವ್ ಜಿಹಾದ್ ನಿಷೇಧ, ಗೋಹತ್ಯೆ ವಿಚಾರದಲ್ಲಿ ವಿಧಾನ ಸಭೆಯಲ್ಲಿ ಭಾರೀ ಚರ್ಚೆ ನಡೆಯುವ ನಿರೀಕ್ಷೆ ಇದೆ. ವಿಧಾನ ಪರಿಷತ್‌ನಲ್ಲಿ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ. |
Karnataka Congress leader meeting ahead of the winter session. Karnataka assembly winter session to be held from December 7 to 15, 2020. |
ಗಾಂದಿಯವರಿಂದ ಎರಡನೇ ಬಿಡುಗಡೆಯ ಹೋರಾಟ? – ಹೊನಲು |
ಇಂದು ಮಾಹಾತ್ಮ ಗಾಂದಿಯವರ 144ನೇ ಹುಟ್ಟುಹಬ್ಬ. ದೇಶದ ಜನರ ಬೇಗುದಿಗೆ ತುಡಿಯುವ ಮನಸ್ಸು, ಅವರುಗಳನ್ನು ಆ ನೋವಿನಿಂದ ಬಿಡಿಸಿ ಮೇಲೆತ್ತಬೇಕೆಂಬ ಕಾಳಜಿ, ಬ್ರಿಟೀಶರ ಹಿಡಿತದಿಂದ ದೇಶವನ್ನು ಬಿಡುಗಡೆಗೊಳಿಸಬೇಕೆಂಬ ಹಂಬಲ, ಹೆಬ್ಬಯಕೆಗಳು ಗಾಂದಿಯವರನ್ನು ಹೋರಾಟದ ಹಾದಿಯನ್ನು ಹಿಡಿಯುವಂತೆ ಮಾಡಿದವು. ಮತ್ತು ಇವೆಲ್ಲಕ್ಕಾಗಿ ತಮ್ಮ ಎಲ್ಲವನ್ನೂ ಬಿಟ್ಟು ತಮ್ಮ ಬದುಕನ್ನೇ ಒಂದು ತಪಸ್ಸನ್ನಾಗಿ ಮಾಡಿಕೊಂಡರು ಗಾಂದಿಯವರು. ಅವರ ಈ ತ್ಯಾಗ ಬಲಿದಾನಗಳನ್ನು ಗವ್ರವದಿಂದ ನೆನೆದು ಅವರಿಗೆ ಮಣಿಯಬೇಕಾದ ದಿನ ಇದು. |
ಇಂದು ದೇಶದ ಒಕ್ಕೂಟ ವ್ಯವಸ್ತೆ ಮತ್ತು ನುಡಿನೀತಿಗಳ ಬಗ್ಗೆ ಚರ್‍ಚೆಗಳಾಗುತ್ತಿರುವ ಹಿನ್ನೆಲೆಯಲ್ಲೇ, ನುಡಿನೀತಿಯ ಬಗ್ಗೆ ಗಾಂದಿಯವರ ಅನಿಸಿಕೆಗಳೇನಾಗಿದ್ದವೆಂಬುದನ್ನು ನೋಡೋಣ. |
Thus Hindi is destined to be the national language. We have made use of it as such in times gone by. |
ಬಾರತಕ್ಕೆ ಒಂದು ರಾಶ್ಟ್ರ ಬಾಶೆ ಬೇಕೇ, ಹಾಗಿದ್ದರೆ ಅಂತಹ ಬಾಶೆಯ ಲಕ್ಶಣಗಳೇನಿರಬೇಕು, ಮತ್ತು ಆ ಬಾಶೆ ಯಾವುದಿರಬೇಕು ಎಂಬುದರ ಬಗ್ಗೆ ಚರ್‍ಚೆ ಮಾಡುತ್ತ, ಗಾಂದಿಯವರು ಹೇಳಿದ ಮಾತುಗಳಿವು. ದೇಶಕ್ಕೊಂದು ಬಾಶೆಯ ಅಗತ್ಯವಿದೆ, ಅಂತಹ ಒಂದು ರಾಶ್ಟ್ರಬಾಶೆಯಾಗುವ ಯೋಗ್ಯತೆ ಇರುವುದು ಬರೀ ಹಿಂದಿಗೆ ಮಾತ್ರ ಮತ್ತು ದೇಶದ ಒಗ್ಗಟ್ಟಿಗಾಗಿ ದೇಶದ ಎಲ್ಲರೂ ಅದನ್ನು ಕಲಿಯಬೇಕು ಎಂಬುದು ಅವರ ನಿಲುವಾಗಿತ್ತು. ಹಾಗಾಗಿ ಬಿಡುಗಡೆಯ ಹೋರಾಟದ ಜೊತೆಯಲ್ಲೇ ದೇಶದೆಲ್ಲೆಡೆ ಹಿಂದಿಯ ಪ್ರಚಾರ ಮಾಡುವ ಕೆಲಸವನ್ನೂ ಕಯ್ಗೊಂಡರು. ದೇಶವನ್ನು ಒಗ್ಗೂಡಿಸುವ ಅವರ ಈ ಕಾಳಜಿಯನ್ನೇ ಬಿಡುಗಡೆಯ ಬಳಿಕ ನಮ್ಮ ಒಕ್ಕೂಟ ಸರಕಾರವೂ ಮುಂದುವರಿಸುತ್ತ ಹಿಂದಿಯನ್ನು ಎಲ್ಲೆಡೆ ಹಬ್ಬಲು ಎಡೆಬಿಡದೆ ಯತ್ನಿಸಿದೆ. ಇದರಿಂದ ಕಳೆದ 66 ವರುಶಗಳಲ್ಲಿ ನಾವು ಒಗ್ಗಟ್ಟನ್ನು ಸಾದಿಸಿದ್ದೇವೆಂದು ಹೇಳಲಾಗಿದೆಯಾದರೂ ನಿಜವಾಗಿಯೂ ಹೆಚ್ಚು ಒಡಕುಗಳೇ ಉಂಟಾಗಿವೆ. |
ಹಿಂದಿಯನ್ನು ರಾಶ್ಟ್ರಬಾಶೆಯನ್ನಾಗಿಸುವ ಪ್ರಸ್ತಾಪ ಬಂದಾಗಿನಿಂದ ಬಂಗಾಳ, ತೆಂಕಣ ಬಾರತ, ಅದರಲ್ಲೂ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಹೋರಾಟಗಳಾಗಿವೆ. 1965ರಲ್ಲಂತೂ ಹಲವರು ಈ ಹೋರಾಟದ ಸಲುವಾಗಿ ತಮ್ಮ ಜೀವವನ್ನು ಕಳೆದುಕೊಂಡರು. ಹೋರಾಟಗಳು ಇಂತಹ ಕಡು ಸ್ವರೂಪವನ್ನು ಮಯ್ತಳೆದುದರ ಕಾರಣ ಹಿಂದಿಯನ್ನು ರಾಶ್ಟ್ರಬಾಶೆಯನ್ನಾಗಿಸುವ ಇರಾದೆಯನ್ನು ಕಯ್ ಬಿಡಲಾಯಿತು. ಆದರೆ ಇದರಿಂದಾದ ಗಾಯಗಳು, ಕಹಿ ಅನುಬವಗಳು, ಹಿಂದಿ ಮತ್ತು ಹಿಂದಿಯೆತರರ ನಡುವೆ ಬಿರುಕುಗಳನ್ನು ಹೆಚ್ಚು ಮಾಡಿದವು. ಇದಾಗಿ ಹಲವು ವರುಶಗಳಾಗಿರುವುದರಿಂದ ಇದರ ನೆನಪುಗಳು ಮಾಸಿವೆ ನಿಜ. ಆದರೆ ಹಿಂದಿಯನ್ನು ರಾಶ್ಟ್ರಬಾಶೆಯನ್ನಾಗಿ ಮಾಡದಿದ್ದರೂ ಅದನ್ನು ಹಬ್ಬುವುದಕ್ಕೆ ಅನುಕೂಲವಾಗುವಂತೆ (ಬೇರೆ ನುಡಿಯಾಡುಗರ ಹಕ್ಕುಗಳಿಗೆ ತೊಂದರೆಯುಂಟಾದರೂ) ದೇಶದ ನುಡಿನೀತಿಯನ್ನು ರೂಪಿಸಿರುವುದು ಮೆಲ್ಲನೆ ದಿನೇ ದಿನೇ ಮಂದಿಯ ಮನಸಲ್ಲಿ ಅನುಮಾನ, ದ್ವೇಶಗಳ ನಂಜು ಆಳವಾಗಿ ಬೇರೂರುವಂತೆ ಮಾಡುತ್ತಿದೆ. ಈ ನಂಜಿನ ಕಹಿ ಹೆಚ್ಚಾದಾಗ, ಆಗಾಗ ತಮ್ಮ ನುಡಿ ಹಕ್ಕುಗಳನ್ನು ಕೇಳುವುದಕ್ಕಾಗಿ ಹಲವು ರಾಜ್ಯಗಳಲ್ಲಿ ಹೋರಾಟಗಳಾಗಿವೆ. ಈ ಹೋರಾಟಗಳು ಹಿಂಸೆಗೂ ತಿರುಗಿವೆ. ಆದರೆ ನಮ್ಮಲ್ಲಿ ಹಲವರು ಈ ಹೋರಾಟಗಳನ್ನು ನುಡಿಹಕ್ಕುಗಳ ನೋಟದಿಂದ ನೋಡದೇ, ಬರೀ ಕೆಲವು ಹಿತಾಸಕ್ತಿಗಳ ರಾಜಕೀಯ ದಕ್ಕುಗಳ ದುರಾಸೆಯೇ ಇವುಗಳ ಮೂಲ ಕಾರಣ ಎಂದು ತಪ್ಪಾಗಿ ಬಗೆದಿದ್ದಾರೆ. |
ಆದರೆ ಯಾವುದೇ ಒಂದು ನುಡಿ ಸಮುದಾಯದ ಹಕ್ಕುಗಳನ್ನು ಕಸಿದುಕೊಂಡರೆ ಅದು ಹೋರಾಟಕ್ಕಿಳಿಯುವುದು ಸಹಜ. ಬದಲಾಗಿ ಎಲ್ಲ ನುಡಿ ಹಕ್ಕುಗಳು ಅದಕ್ಕೆ ಸಿಕ್ಕರೆ, ಇತರೆ ನುಡಿಯಾಡುಗರಿಂದ ಸಿಗಬೇಕಾದ ಗವ್ರವ ದೊರಕಿದರೆ ಅದು ಹೋರಾಟಕ್ಕಿಳಿಯುವ ಅವಶ್ಯಕತೆಯೇ ಇರುವುದಿಲ್ಲ. ಪ್ರಪಂಚದೆಲ್ಲೆಡೆ, ಈ ಬಗೆಯಲ್ಲಿ, ನುಡಿ ಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿರುವುದನ್ನು ಅರಿತುಕೊಂಡೇ ವಿಶ್ವ ಸಂಸ್ತೆಯು ನುಡಿ ಹಕ್ಕುಗಳ ಗೋಶಣೆಯನ್ನು ಮಾಡಿದೆ. ಆದರೆ ನಮ್ಮ ಒಕ್ಕೂಟ ಸರಕಾರವು ಇದಾವುದನ್ನೂ ಗೊತ್ತಿದ್ದೂ ಗಮನಿಸದೆ ತನ್ನ ಹಿಂದಿ ಹೇರಿಕೆಯ ವಾಡಿಕೆಯನ್ನು ಒಗ್ಗಟ್ಟಿನ ಸುಳ್ಳು ಮುಕವಾಡ ಹಾಕಿಕೊಂಡು, ಗಾಂದಿಯವರ ಹೆಸರನ್ನೂ ಹೇಳಿಕೊಂಡು ಮುಂದುವರಿಸುತ್ತಿದೆ. |
ಆದರೆ ನಮ್ಮ ದೇಶದ ಮಂದಿಯ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟ ಮಹಾತ್ಮ ಗಾಂದಿಯವರು, ಈ ಬಗೆಯಲ್ಲಿ ತಮ್ಮ ಜನರ ನುಡಿ ಹಕ್ಕುಗಳ ಕಸಿಯುವಿಕೆ ತಮ್ಮ ಒಕ್ಕೂಟ ಸರಕಾರದಿಂದಲೇ ನಡೆಯುತ್ತಿದೆ ಎಂದು ಅವರು ಕಂಡಿದ್ದರೆ ಸುಮ್ಮನಿರುತ್ತಿದ್ದರೆ? ಕಂಡಿತವಾಗಿಯೂ ಇಲ್ಲ. ತಮ್ಮ ಜೀವಮಾನದಲ್ಲಿ ತಮ್ಮ ಕೆಲವು ಅನಿಸಿಕೆ-ನಂಬಿಕೆಗಳನ್ನು, ಅವು ತಪ್ಪೆಂದು ತಿಳಿದ ಬಳಿಕ, ಗಾಂದಿಯವರು ಬದಲಿಸಿಕೊಂಡಿದ್ದರು. ಮೇಲು ವ್ಯಕ್ತಿಗಳ ಲಕ್ಶಣವೇ ಅದು. ಅವರು ಎಂದಿಗೂ ಒಂದು ವಾಡಿಕೆ ಇಲ್ಲವೇ ನಂಬಿಕೆಗೆ ಕಟ್ಟು ಬೀಳುವುದಿಲ್ಲ. ಹೊಸ ಸತ್ಯಗಳು ಅವರ ಕಣ್ಣಿಗೆ ಬಿದ್ದಂತೆ ಅದರ ತಕ್ಕಂತೆ ತಮ್ಮ ನಂಬಿಕೆಗಳನ್ನು ಬದಲಿಸಿಕೊಳ್ಳುತ್ತಾರೆ, ಮತ್ತು ಅದರೊಂದಿಗೆ ತಮ್ಮ ಸುತ್ತಲಿನ ಕೂಡಣವನ್ನೂ ಬದಲಿಸಲು ಮುಂದಾಗುತ್ತಾರೆ. |
ಗಾಂದಿಯವರು ಇಂದು ಬದುಕಿದ್ದರೆ ಬಹುಶಹ, ತಾವು ಹಿಂದೆ ಹಿಂದಿಯನ್ನು ಹಬ್ಬಲು ಹೊರಟಿದ್ದು ಸರಿಯಿಲ್ಲವೆಂದು ಒಪ್ಪಿಕೊಂಡು ಹಿಂದಿ ಹೇರಿಕೆಯಿಂದ ಬಿಡುಗಡೆಗಾಗಿ ಹೋರಾಟ ನಡೆಸುತ್ತಿದ್ದರೇನೋ. ಮಹಾತ್ಮರ ಹುಟ್ಟುಹಬ್ಬವಾದ ಇಂದು ಅವರ ಆದರ್‍ಶಗಳು ಎಲ್ಲ ನಾಡುಗಳ ಮಂದಿಯನ್ನೂ ಪ್ರೇರೇಪಿಸಲಿ. ನಾಡು ನಾಡುಗಳಲ್ಲಿಯೂ ಗಾಂದಿಯರು ಮತ್ತೆ ಹುಟ್ಟಿ ಬರಲಿ. ಬ್ರಿಟೀಶರ ಆಡಳಿತದಿಂದ ಬಿಡುಗಡೆ ಹೊಂದಿ, ಒಂದು ಹಂತದ ಬಿಡುಗಡೆಯನ್ನು ಕಂಡ ನಾವು, ಎಲ್ಲ ಹಂತಗಳಲ್ಲೂ ಎಲ್ಲ ಬಗೆಯಲ್ಲೂ ಬಿಡುಗಡೆಯನ್ನು ಕಾಣುವಂತಾಗಲಿ. |
(ಮಾಹಿತಿ ಸೆಲೆ: mkgandhi.org) |
(ಚಿತ್ರ ಸೆಲೆ: cbrainard.blogspot.in) |
ಟ್ಯಾಗ್‌ಗಳು: :: ಸಂದೀಪ್ ಕಂಬಿ ::, Bengal, British, Gandhi Jayanti, Hindi, hindi imposition, India, language policy, Language Rights, Mahatma Gandhi, Octobber 2, South India, Tamil Nadu, Union Government, ಅಕ್ಟೋಬರ್ 2, ಒಕ್ಕೂಟ ಸರಕಾರ, ತಮಿಳುನಾಡು, ತೆಂಕಣ ಬಾರತ, ನುಡಿ ಹಕ್ಕುಗಳು, ನುಡಿನೀತಿ, ಬಂಗಾಳ, ಬಾರತ, ಬಿಡುಗಡೆ, ಬ್ರಿಟೀಶರು, ಮಹಾತ್ಮ ಗಾಂಧಿ, ರಾಶ್ಟ್ರ ಬಾಶೆ, ಹಿಂದಿ, ಹಿಂದಿ ಹೇರಿಕೆ, ಹುಟ್ಟುಹಬ್ಬ |
ಮೂಳೆಯಲ್ಲಿನ ಬಿರುಕುಗಳು ಮತ್ತು ಆಸ್ಟಿಯೊಪೊರೋಸಿಸ್ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal |
ಮೂಳೆಯಲ್ಲಿನ ಬಿರುಕುಗಳು ಮತ್ತು ಆಸ್ಟಿಯೊಪೊರೋಸಿಸ್ |
ಡಾ. ಆದಿತ್ಯ ಪ್ರೇಮ್ ಕುಮಾರ್,ಆರ್ಥೋಪೆಡಿಕ್ ಸರ್ಜನ್,ಎಂಬಿಬಿಎಸ್, ಡಿ. ಆರ್ಥೋ, ಡಿಎನ್‌ಬಿ (ಆರ್ಥೋ),ಅಪೊಲೊ ಕ್ಲಿನಿಕ್,ಇಂದ್ರನಗರ, ಬೆಂಗಳೂರು |
ಆಸ್ಟಿಯೊಪೊರೋಸಿಸ್ Osteoporosis ಅನ್ನು "ಮೂಳೆಯ ಮೈಕ್ರೊ ಆರ್ಕಿಟೆಕ್ಚರಲ್ ಗುಣಮಟ್ಟದಲ್ಲಿನ ಇಳಿಕೆ" ಎಂದು ವ್ಯಾಖ್ಯಾನಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಮೂಳೆಯ ಬಲವು ಕಳೆದುಹೋಗಿದೆ ಎಂದರ್ಥ. ಹಳೆಯ ಮೂಳೆಯನ್ನು ಸಾಕಷ್ಟು ಬದಲಿಸದ ಹೊಸ ಮೂಳೆಯ ರಚನೆಯು ಕಡಿಮೆಯಾಗುವುದೇ ಇದಕ್ಕೆ ಕಾರಣ. ಇದು ಮೂಳೆ ದುರ್ಬಲವಾಗಿರುತ್ತದೆ ಮತ್ತು ಶಕ್ತಿಗಳು ಮತ್ತು ಒತ್ತಡಗಳಿಗೆ ಕಡಿಮೆ ನಿರೋಧಕವಾಗಿರುತ್ತದೆ, ಇದು ಸಾಮಾನ್ಯ ಚಟುವಟಿಕೆಗಳನ್ನು ಮಾಡುವಾಗ ಹೆಚ್ಚಿನ ಪ್ರಮಾಣದ ಮುರಿತಗಳಿಗೆ ಕಾರಣವಾಗುತ್ತದೆ. |
ಆಸ್ಟಿಯೊಪೊರೋಸಿಸ್ ಪುರುಷರು ಮತ್ತು ಮಹಿಳೆಯರು ಅಥವಾ ಎಲ್ಲಾ ಜನಾಂಗದವರ ಮೇಲೆ, ವಿಶೇಷವಾಗಿ ಏಷ್ಯನ್ನರು ಮತ್ತು ಬಿಳಿಯರ ಮೇಲೆ ಪರಿಣಾಮ ಬೀರಬಹುದು. ಇದು ಸಾಮಾನ್ಯವಾಗಿ ಸೊಂಟ, ಬೆನ್ನು ಮತ್ತು ಮಣಿಕಟ್ಟಿನ ಮುರಿತಗಳಿಗೆ ಕಾರಣವಾಗುತ್ತದೆ. ಕೆಮ್ಮು ಅಥವಾ ಬಾಗುವಿಕೆಯ ಸರಳ ಕ್ರಿಯೆಯು ಬೆನ್ನುಮೂಳೆಯ ಮುರಿತಕ್ಕೆ ಕಾರಣವಾಗಬಹುದು. |
ಆಸ್ಟಿಯೊಪೊರೋಸಿಸ್ನ ಒಂದು ಸಮಸ್ಯೆಯೆಂದರೆ ಅದು ತೆರೆಮರೆಯಲ್ಲಿ ಸಂಭವಿಸುತ್ತದೆ. ಆಘಾತದ ಶಾಸ್ತ್ರೀಯ ಇತಿಹಾಸದೊಂದಿಗೆ ರೋಗಿಯು ಸಹ ಪ್ರಸ್ತುತಪಡಿಸುವುದಿಲ್ಲ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಅವರು ಮೂಳೆ ಮುರಿಯಲು ಕಾರಣವಾಗದ ಕ್ಷುಲ್ಲಕ ಆಘಾತದ ಏಕೈಕ ಅಥವಾ ಬಹು ಪ್ರಸಂಗದೊಂದಿಗೆ ಪ್ರಸ್ತುತಪಡಿಸುತ್ತಾರೆ. |
ಆಸ್ಟಿಯೊಪೊರೋಟಿಕ್ ಕಶೇರುಖಂಡದ ಮುರಿತಗಳಿಗೆ ಸಂಬಂಧಿಸಿದಂತೆ, ಸಾಮಾನ್ಯವಾಗಿ ರೋಗಿಯು ಮಧ್ಯಂತರ ಬೆನ್ನುನೋವಿನೊಂದಿಗೆ ಕಾಣಿಸಿಕೊಳ್ಳಬಹುದು, ಅದು ಅನೇಕ ಕಶೇರುಖಂಡಗಳನ್ನು ಒಳಗೊಂಡಿದ್ದರೆ, ಅದು ನಿಂತಿರುವ ಭಂಗಿಗೆ ಮತ್ತು ಎತ್ತರಕ್ಕೆ ಇಳಿಯಬಹುದು. ಇವುಗಳನ್ನು ಬೆನ್ನುಮೂಳೆಯ ಸಂಕೋಚನ ಮುರಿತ ಎಂದು ಕರೆಯಲಾಗುತ್ತದೆ. |
• ಪುರುಷರಿಗಿಂತ ಸ್ತ್ರೀಯರಲ್ಲಿ ಹೆಚ್ಚಿನ ಅಪಾಯವಿದೆ |
• ಹಳೆಯ ವಯಸ್ಸು |
ಕಡಿಮೆ ದೇಹದ ತೂಕ |
ಕಡಿಮೆ ಲೈಂಗಿಕ ಹಾರ್ಮೋನುಗಳು |
ಅಕಾಲಿಕ ಋತುಬಂಧ |
ಪ್ಯಾರಾಥೈರಾಯ್ಡ್ ಅಥವಾ ಮೂತ್ರಜನಕಾಂಗದ ಗ್ರಂಥಿಗಳ ಅತಿಯಾದ ಚಟುವಟಿಕೆ |
ಆಹಾರ ಸಮಸ್ಯೆಗಳು |
ಕಡಿಮೆ ಕ್ಯಾಲ್ಸಿಯಂ ಸೇವನೆ |
ಜಠರಗರುಳಿನ ಶಸ್ತ್ರಚಿಕಿತ್ಸೆ |
ತಿನ್ನುವ ಅಸ್ವಸ್ಥತೆಗಳು |
• ದೀರ್ಘಕಾಲದ ಸ್ಟೀರಾಯ್ಡ್ ಸೇವನೆ |
•ವೈದ್ಯಕೀಯ ಸ್ಥಿತಿಗಳು |
ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ಕಾಯಿಲೆ |
ಉದರದ ಕಾಯಿಲೆ |
ಉರಿಯೂತದ ಕರುಳಿನ ಕಾಯಿಲೆ |
• ಜೀವನಶೈಲಿ |
ಜಡ ಜೀವನಶೈಲಿ |
ಅತಿಯಾದ ಆಲ್ಕೊಹಾಲ್ ಸೇವನೆ |
• ತೊಡಕುಗಳು |
ಸೊಂಟ, ಸೊಂಟ ಅಥವಾ ಮಣಿಕಟ್ಟಿನ ಮುರಿತಗಳು ಅಂಗವೈಕಲ್ಯಕ್ಕೆ ಕಾರಣವಾಗುತ್ತವೆ |
ಬೆನ್ನುಮೂಳೆಯ ಮುರಿತಗಳು ಉಸಿರಾಟದ ಸಾಮರ್ಥ್ಯ ಅಥವಾ ಶಕ್ತಿಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ. |
ಆಸ್ಟಿಯೊಪೊರೋಸಿಸ್ ಅನ್ನು ತಳ್ಳಿಹಾಕಲು ಅಥವಾ ಧ್ರುಢೀಕರಿಸಲು, ನಿಮ್ಮ ವೈದ್ಯರು ವೈದ್ಯಕೀಯ ಇತಿಹಾಸವನ್ನು ನಿಖರವಾಗಿ ಪರಿಶೀಲಿಸಬೇಕು, ಆಸ್ಟಿಯೊಪೊರೋಸಿಸ್ನ ದ್ವಿತೀಯಕ ಕಾರಣಗಳನ್ನು ತಳ್ಳಿಹಾಕಬೇಕು ಮತ್ತು ಕ್ಲಿನಿಕಲ್ ಪರೀಕ್ಷೆಯನ್ನು ಮಾಡಬೇಕಾಗುತ್ತದೆ. ಲುಂಬೊ-ಸ್ಯಾಕ್ರಲ್ ಬೆನ್ನು ಮತ್ತು ಸೊಂಟದ ಎಕ್ಸರೆ ಧ್ರುಢೀಕರಿಸಲು ಜೊತೆಗೆ ಮೂಳೆ ಡೆನ್ಸಿಟೋಮೆಟ್ರಿ ಪರೀಕ್ಷೆ ಸಾಕಾಗುತ್ತದೆ,. |
ಇದನ್ನು ಸಾಮಾನ್ಯವಾಗಿ ಡೆಕ್ಸಾ ಸ್ಕ್ಯಾನ್ ಎಂದು ಕರೆಯಲಾಗುತ್ತದೆ, ಇದನ್ನು ಹೆಚ್ಚಾಗಿ DEXA ಸ್ಕ್ಯಾನ್ ಎಂದು ಕರೆಯಲಾಗುತ್ತದೆ, ಇದು ನೋವು ರಹಿತ-ಮೂಳೆಯಸಾಂದ್ರತೆಯನ್ನು ನಿರ್ಧರಿಸಲು ಎಕ್ಸ್-ರೇ ಗಳನ್ನು ಬಳಸುವ ಒಂದು ಆಕ್ರಮಣಶೀಲ ಪರೀಕ್ಷೆಯಾಗಿದೆ. ಇದನ್ನು ಸಾಮಾನ್ಯವಾಗಿ ಬೆನ್ನುಮೂಳೆ, ಸೊಂಟ ಮತ್ತು ಮಣಿಕಟ್ಟಿನ ಮೇಲೆ ಮಾಡಲಾಗುತ್ತದೆ. ಈ ಪರೀಕ್ಷೆಯ ಫಲಿತಾಂಶಗಳನ್ನು ಆಧರಿಸಿ, ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. |
ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಕೆಲವು ಅತ್ಯುತ್ತಮ ವಿಧಾನಗಳೆಂದರೆ, ನಿಮ್ಮ ಆಹಾರ ಕ್ರಮದಲ್ಲಿ ಕ್ಯಾಲ್ಸಿಯಂ ಮತ್ತು ಡಿ ಜೀವಸತ್ವದ ಸಾಕಷ್ಟು ಸೇವನೆ, ಸಾಕಷ್ಟು ತೂಕ ಹೊಂದಿರುವ ವ್ಯಾಯಾಮಗಳಾದ ವಾಕಿಂಗ್, ಜಾಗಿಂಗ್ ಮತ್ತು ಮೆಟ್ಟಿಲುಗಳನ್ನು ಹತ್ತುವುದು. |
Subsets and Splits
No community queries yet
The top public SQL queries from the community will appear here once available.