text
stringlengths
0
61.5k
ಡ್ರೆಡ್ ಮಿಲ್, ಕ್ರಾಸ್ ಟ್ರೈನರ್ ಅಥವಾ ಮೆಟ್ಟಿಲು ಹತ್ತುವಯಂತ್ರಗಳಂತಹ ಡಂಬಲ್ಸ್, ಎಲಾಸ್ಟಿಕ್ ಬ್ಯಾಂಡ್ ಗಳು ಮತ್ತು ಪ್ರತಿರೋಧಕ ಯಂತ್ರಗಳನ್ನು ಬಳಸಿಕೊಂಡು ಪ್ರತಿರೋಧಕ ವ್ಯಾಯಾಮಗಳು "ಮೂಳೆಯನ್ನು ಲೋಡ್ ಮಾಡಲು" ಸಹಾಯ ಮಾಡುತ್ತದೆ, ಆ ಮೂಲಕ ಮೂಳೆಯ ರಚನೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ತೂಕ ಕಡಿಮೆ ಯಾಗುವುದನ್ನು ತಪ್ಪಿಸಿ, ಹೆಚ್ಚಿನ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯು ಸಹ ಸಹಾಯ ಮಾಡುತ್ತದೆ. ಹೊಸ ರೀತಿಯ ವ್ಯಾಯಾಮ ಅಥವಾ ಡಯಟ್ ಆರಂಭಿಸುವ ಮೊದಲು ವೈದ್ಯರಸಲಹೆ ಯನ್ನು ಪಡೆಯಿರಿ.
ಆಸ್ಟಿಯೊಪೊರೋಸಿಸ್ ಗೆ ಯಾವುದೇ ಒಂದೇ ಚಿಕಿತ್ಸೆಇಲ್ಲ, ಆದರೆ ನಿಮ್ಮ ಮೌಲ್ಯಮಾಪನದ ಫಲಿತಾಂಶಗಳನ್ನು ಆಧರಿಸಿ, ನಿಮ್ಮ ವೈದ್ಯರು ಔಷಧೋಪಚಾರ, ಫಿಸಿಯೋಥೆರಪಿ ಮತ್ತು ಜೀವನಶೈಲಿಯ ಬದಲಾವಣೆಗಳನ್ನೊಳಗೊಂಡ ಬಹುಮುಖಿ ಯೋಜನೆಯನ್ನು ಜಾರಿಗೊಳಿಸುತ್ತಾರೆ. ಈ ಎಲ್ಲಾ ಕ್ರಮಗಳು ದೇಹದಲ್ಲಿ ಮೂಳೆಯ ವಿಘಟನೆಯನ್ನು ನಿಧಾನಗೊಳಿಸುವ, ಹೊಸ ಮೂಳೆಯ ರಚನೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಮೂಳೆಗಳ ಬಲ ಮತ್ತು ರಕ್ಷಣೆಯನ್ನು ಹೆಚ್ಚಿಸಲು ನೆರವಾಗುತ್ತವೆ.
ಸಾಮಾನ್ಯವಾಗಿ ಬಳಸಲಾಗುವ ಔಷಧಗಳೆಂದರೆ ಬಿಸ್ಫಾಸ್ಫೋನೇಟ್ಸ್. ಮೂಳೆಗಳ ದ್ರವ್ಯರಾಶಿಯನ್ನು ಅವು ತಡೆಯುತ್ತದೆ, ಆದರೆ ಮೂಳೆಗಳ ರಚನೆಯನ್ನು ಪ್ರಾರಂಭಿಸಲು ಬಳಸಲಾಗುವ ಇತರ ಕೆಲವು ಔಷಧಗಳೆಂದರೆ ಟೆರಿಪಾರಾಟೈಡ್, ಡೆನೊಸುಮಾಬ್, ಟೆಸ್ಟೋಸ್ಟೆರಾನ್, ರಾಲಾಕ್ಸಿಫೆನ್- ಪ್ರತಿಯೊಂದೂ ವಿಭಿನ್ನ ಕಾರ್ಯವಿಧಾನವನ್ನು ಹೊಂದಿದೆ.
ಆಸ್ಟಿಯೊಪೊರೋಸಿಸ್ ಎಂಬುದು ಯಾವುದೇ ತೊಡಕುಗಳನ್ನು ಮತ್ತು ಜೀವನದ ಗುಣಮಟ್ಟದಲ್ಲಿ ಅನಗತ್ಯ ಇಳಿಕೆಯನ್ನು ತಪ್ಪಿಸಲು, ಮುಂದಿನ ದಿನಗಳಲ್ಲಿ ಪರಿಹರಿಸಬೇಕಾದ ಒಂದು ಸ್ಥಿತಿಯಾಗಿದೆ. ಒಳ್ಳೆಯ ಸುದ್ದಿಯೆಂದರೆ, ಆಸ್ಟಿಯೊಪೊರೋಸಿಸ್ ಅನ್ನು ಸಾಕಷ್ಟು ಮತ್ತು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದಾಗ ಆಸ್ಟಿಯೊಪೊರೋಸಿಸ್ ಅನ್ನು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ಮಾಡಬಹುದಾದ ಸ್ಥಿತಿಯಾಗಿದೆ.
ನೀವು ಅಪಾಯದಲ್ಲಿದ್ದೀರಿ ಅಥವಾ ಈಗಾಗಲೇ ಇದನ್ನು ಪತ್ತೆ ಹಚ್ಚಲಾಗಿದೆ ಎಂದು ನೀವು ಭಾವಿಸಿದರೆ, ಸರಿಯಾದ ಔಷಧೋಪಚಾರದೊಂದಿಗೆ ಚಿಕಿತ್ಸಾ ಯೋಜನೆಯನ್ನು ರೂಪಿಸಲು ನಿಮ್ಮ ವೈದ್ಯರೊಂದಿಗೆ ಮಾತನಾಡಿ, ಇದು ಮೂಳೆಗಳ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅನಗತ್ಯ ತೊಂದರೆಗಳು ಉದ್ಭವಿಸದಂತೆ ತಡೆಯಬಹುದು.
ಮಮತಾ ಬ್ಯಾನರ್ಜಿ ಸಿಎಂ ಸ್ಥಾನದ ಭವಿಷ್ಯ ಸೆ. 30 ಕ್ಕೆ ನಿರ್ಧಾರ; ಉಪಚುನಾವಣೆ ದಿನಾಂಕ ಘೋಷಣೆ - ಸವಿ ಕನ್ನಡ ನ್ಯೂಸ್
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬೈ ಎಲೆಕ್ಷನ್​ ಅಖಾಡಕ್ಕೆ ದಿನಾಂಕ ಫಿಕ್ಸ್​ ಆಗಿದೆ. ಸೆಪ್ಟೆಂಬರ್ 30 ರಂದು ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ನಡೆಯಲಿದೆ. ಈ ಉಪ ಚುನಾವಣೆ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೋ ಇಲ್ಲವೋ ಅನ್ನೋದನ್ನ ನಿರ್ಧರಿಸಲಿದೆ.
ಇದನ್ನೂ ಓದಿ: 'ಭಾರತದ ಆಸ್ತಿ ಮೋದಿಗೆ ಸೇರಿದ್ದಲ್ಲ, ಸಾರ್ವಜನಿಕರದ್ದು'; ಸಿಎಂ ಮಮತಾ ಬ್ಯಾನರ್ಜಿ ಕಿಡಿ
ಭವಾನಿಪುರ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು ಈ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಕಣಕ್ಕಿಳಿಯಲಿದ್ದಾರೆ. ಸಿಎಂ ಆಗಿ ಉಳಿಯಲು ಮಮತಾ ಗೆಲ್ಲಲೇಬೇಕಿದೆ. ಇನ್ನು ಅಕ್ಟೋಬರ್ 3 ರಂದು ಉಪ ಚುನಾವಣೆ ಮತ ಎಣಿಕೆ ನಡೆಯಲಿದೆ. ಕೋವಿಡ್ -19 ಹಿನ್ನೆಲೆ ಇತರೆ 31 ಕ್ಷೇತ್ರಗಳ ಎಲೆಕ್ಷನ್ ಮುಂದೂಡಲಾಗಿದೆ.
ಇದನ್ನೂ ಓದಿ: ನಂದಿಗ್ರಾಮದಲ್ಲಿ ಸೋಲುಂಡ ಮಮತಾ ಬ್ಯಾನರ್ಜಿ 'ಘರ್ ವಾಪ್ಸಿ'
ಕೆಲವು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸುವೇಂದು ಅಧಿಕಾರಿಯ ವಿರುದ್ಧ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಇನ್ನು ಪಕ್ಷ ಭಾರೀ ಜಯಭೇರಿ ಬಾರಿಸಿದ ಹಿನ್ನೆಲೆ ಟಿಎಂಸಿ ಪಕ್ಷ ಅಧಿಕಾರಕ್ಕೆ ಬಂದು ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಮಮತಾ ಬ್ಯಾನರ್ಜಿ ಉಪಚುನಾವಣೆಯಲ್ಲಿ ಗೆಲಲ್ಲೇಬೇಕಾದ ಅನಿವಾರ್ಯತೆ ಇದೆ.
ಹುಡುಗಿಯರೆಂದರೇ ಅಲರ್ಜಿಯಾಗಿಬಿಟ್ಟಿ | Karavali Ale / ಕರಾವಳಿ ಅಲೆ | ಕರಾವಳಿಯ ಪರ್ಯಾಯ ಮಾಧ್ಯಮ
Home ಯುವ ಹುಡುಗಿಯರೆಂದರೇ ಅಲರ್ಜಿಯಾಗಿಬಿಟ್ಟಿ
ಪ್ರ : ನನ್ನ ವಯಸ್ಸೀಗ 27. ಕಾಲೇಜು ದಿನಗಳಲ್ಲಿ ಎಲ್ಲರಂತೆ ನನಗೂ ಹುಡುಗಿಯರ ಬಗ್ಗೆ ಅಟ್ರಾಕ್ಷನ್ ಇತ್ತು. ಇಷ್ಟರವರೆಗೆ ಮೂರು ಹುಡುಗಿಯರು ನನ್ನ ಜೀವನದಲ್ಲಿ ಬಂದು ಹೋಗಿದ್ದಾರೆ. ಅವರೆಲ್ಲರ ಗುಣನಡತೆಯಿಂದ ನನಗೆ ಹುಡುಗಿಯರ ಬಗ್ಗೆಯೇ ಅಲರ್ಜಿ ಹುಟ್ಟಿಬಿಟ್ಟಿದೆ. ಒಬ್ಬಳು ಮಾತುಮಾತಿಗೆ ಅಳುಮುಂಜಿಯಾದರೆ ಇನ್ನೊಬ್ಬಳು ಬರೀ ಸ್ವಾರ್ಥಿಯಾಗಿದ್ದಳು. ಮತ್ತೊಬ್ಬಳು ಸಿಕ್ಕಾಪಟ್ಟೆ ಡಾಮಿನೇಟಿಂಗ್ ಇದ್ದಳು. ಅವರ ಜೊತೆ ಕೆಲವು ತಿಂಗಳು ಡೇಟಿಂಗ್ ಮಾಡುವಷ್ಟರಲ್ಲಿಯೇ ನನಗೆ ಸಾಕುಬೇಕಾಯಿತು. ನಾನು ಅವರ ಜೊತೆ ಬೇರೆ ಸಂಬಂಧ ಎಂದೂ ಹೊಂದಿರಲಿಲ್ಲ. ಆದ್ದರಿಂದ ನನಗೆ ಅವರ ಸಂಪರ್ಕ ಕಡಿದುಕೊಳ್ಳಲೂ ಕಷ್ಟವಾಗಿರಲಿಲ್ಲ. ಈಗ ಯಾರ ಜೊತೆಯೂ ರಿಲೇಶನ್ಶಿಪ್ ಇಟ್ಟುಕೊಳ್ಳದೇ ನನ್ನಷ್ಟಕ್ಕೆ ನಾನು ಹಾಯಾಗಿದ್ದೇನೆ. ಆದರೆ ಮನೆಯವರು ಕೇಳಬೇಕಲ್ಲ. ನನ್ನ ಮದುವೆಯ ತರಾತುರಿ ಅವರಿಗೆ. ದಿನಾ ಮದುವೆಯಾಗುವಂತೆ ತಲೆತಿನ್ನುತ್ತಿದ್ದಾರೆ. ಮದುವೆಯಾದ ನಂತರ ಹೆಂಡತಿಯನ್ನು ಸಂಭಾಳಿಸುವ ಬಗ್ಗೆ ಯೋಚಿಸಿದರೇ ತಲೆಬಿಸಿಯಾಗುತ್ತಿದೆ. ಮದುವೆಯಾದರೆ ಅವಳ ಜೊತೆ ಹೇಗೆ ಮಾತಾಡಬೇಕೋ, ಅವಳನ್ನು ಎಷ್ಟು ಓಲೈಸಬೇಕೋ ಒಂದೂ ಅರ್ಥವಾಗುವುದಿಲ್ಲ. ಗರ್ಲ್‍ಫ್ರೆಂಡ್ ಜೊತೆ ಬ್ರೇಕ್‍ಅಪ್ ಮಾಡಿಕೊಂಡಂತೆ ಹೆಂಡತಿಯನ್ನು ಬಿಡಲು ಸಾಧ್ಯವಿಲ್ಲವಲ್ಲ. ಲೋಕಾಭಿರಾಮವಾಗಿ ಆಡಿದ ಮಾತೇ ಹುಡುಗಿಯರಿಗೆ ಕೋಪ ಬರಿಸುತ್ತದೆ. ಇಲ್ಲಾ ಕಣ್ಣೀರು ತರಿಸುತ್ತದೆ. ಅದಕ್ಕೆ ಮದುವೆಯಗುವುದೆಂದರೇ ಹೆದರಿಕೆಯಾಗುತ್ತದೆ. ನನಗೆ ಇಬ್ಬರು ತಮ್ಮಂದಿರು ಮಾತ್ರವಾದ್ದರಿಂದ ನನಗೀಗ ಆ ಕಷ್ಟವಿಲ್ಲ. ಹೊಡೆದಾಡಿಕೊಳ್ಳುತ್ತಾ ಮತ್ತೆ ರಾಜಿಯಾಗುತ್ತಾ ನಾವೀಗ ಹಾಯಾಗಿದ್ದೇವೆ. ಈ ಸ್ವಾತಂತ್ರ್ಯವನ್ನೇ ನಾನು ಇಟ್ಟುಕೊಳ್ಳಲು ಆಶಿಸುತ್ತೇನೆ. ನಿಮ್ಮ ಅಭಿಪ್ರಾಯವೇನು?
ಉ : ಹುಡುಗಿಯರು ಜಾಸ್ತಿ ಸೆಂಟಿಮೆಂಟಲ್ ಅನ್ನುವುದು ನಿಜವಾದರೂ ಅದಕ್ಕಾಗಿ ಹುಡುಗಿಯರಿಂದಲೇ ದೂರವಿರುತ್ತೇನೆ, ಮದುವೆಯನ್ನೇ ಆಗುವುದಿಲ್ಲ ಅನ್ನುವುದೆಲ್ಲ ಅಸಂಬದ್ಧ. ನಿನ್ನ ತಾಯಿಯೂ ಒಬ್ಬಳು ಹೆಣ್ಣು ಅನ್ನುವುದನ್ನು ಮರೆಯಬೇಡ. ನಿನ್ನ ತಂದೆ ಅವರ ಜೊತೆ ಇಷ್ಟು ವರ್ಷ ಜೀವನ ಸಾಗಿಸಿಲ್ಲವೇ? ನೀವೆಲ್ಲ ಅಮ್ಮನ ಜೊತೆಯೇ ಇಷ್ಟು ಕಾಲ ಇದ್ದಿದ್ದು ತಾನೇ. ನಿನಗೆ ಸಹೋದರಿಯರಿಲ್ಲದಿರುವುದರಿಂದ ನಿಮ್ಮ ಜನರೇಶನ್ನಿನ ಹುಡುಗಿಯರ ಬಗ್ಗೆ ಹೆಚ್ಚು ನಿಮಗೆ ಗೊತ್ತಿಲ್ಲದೇ ಇದ್ದರೂ ಈಗ ಮೂರು ಹುಡುಗಿಯರ ಜೊತೆ ಡೇಟಿಂಗ್ ಮಾಡಿ ಅವರ ಮನಸ್ಥಿತಿಯ ಅರಿವಾದರೂ ನಿನಗೆ ಉಂಟಾಯಿತಲ್ಲ. ಹುಡುಗಿಯರ ಭಾವನೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಿದರೆ ಎಲ್ಲವೂ ಸರಿಹೋಗುತ್ತದೆ. ಎಲ್ಲ ಹುಡುಗಿಯರೂ ಒಂದೇ ತರದ ಗುಣಸ್ವಭಾವ ಹೊಂದಿರುವುದಿಲ್ಲ. ಮೊದಲು ನಿನಗೆ ಗರ್ಲ್‍ಫ್ರೆಂಡಾಗಿದ್ದ ಹುಡುಗಿಯರ ನೇಚರ್ ನಿನಗೆ ಹಿಡಿಸಿಲ್ಲ ಅಂತ ಹೆಣ್ಣು ಜಾತಿಯ ಬಗ್ಗೆಯೇ ಹೀಗೆ ಅಲರ್ಜಿ ಬೆಳೆಸಿಕೊಂಡರೆ ಹೇಗೆ? ನಿನ್ನ ಸ್ವಭಾವಕ್ಕೆ ಹೊಂದಬಲ್ಲ ಹುಡುಗಿಯನ್ನೇ ಹುಡುಕು. ಸ್ವಲ್ಪ ದಿನ ಒಡನಾಡಿದ ನಂತರವೇ ಕಮಿಟ್ ಆಗು. ಮದುವೆಯೇ ಬೇಡ ಅಂತ ಈಗ ಅನಿಸಿದರೂ ಮುಂದೆ ವಯಸ್ಸು ಇಳಿದ ನಂತರ ಒಂಟಿತನ ಭಾದಿಸಬಹುದು. ಜೀವನವೇ ಬೋರ್ ಆಗಬಹುದು. ಸಿಹಿ-ಕಹಿ ಎಲ್ಲವೂ ಇದ್ದರೇನೇ ಜೀವನ ಚೆನ್ನ. ಬೇಕಿದ್ದರೆ ಮದುವೆಯನ್ನು ಸ್ವಲ್ಪ ವರ್ಷ ಮುಂದೂಡಬಹುದು.
ಹನಿಟ್ರ್ಯಾಪ್ ಮೂಲಕ ವೈದ್ಯನನ್ನ ಸುಲಿಗೆ ಮಾಡಿದ್ದವರಿಗಾಗಿ ಶೋಧ – EESANJE / ಈ ಸಂಜೆ
May 27, 2022 Sunil Kumar Honeytrap Doctor money ccb police
ಬೆಂಗಳೂರು, ಮೇ 27- ವಂಚಿಸಿದ ಹಣ ಕೇಳಿದ್ದಕ್ಕೆ ವೈದ್ಯರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿಕೊಂಡು 50 ಲಕ್ಷ ರೂ. ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಇನ್ನು ಮೂರ್ನಾಲ್ಕು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು , ಅವರುಗಳ ಹುಡುಕಾಟ ಮುಂದುವರೆದಿದೆ. ಕಲಬುರಗಿ ಮೂಲದ ವೈದ್ಯರೊಬ್ಬರು ಕಿಡಿಗೇಡಿಗಳ ಸಂಚಿಗೊಳಗಾಗಿ ಹಣವೂ ಕಳೆದುಕೊಂಡು, ಮುಜುಗರಕ್ಕೊಳಗಾಗಿ ಇದೀಗ ಪೊಲೀಸರ ಮೊರೆ ಹೋಗಿರುವ ಹಿನ್ನೆಲೆಯಲ್ಲಿ, ಸಿಸಿಬಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಂಡು ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿ ಹಲವು ವಿವರಗಳನ್ನು ಕಲೆ ಹಾಕಿದ್ದಾರೆ.
ಮಗನಿಗೆ ಹೇಗಾದರೂ ಮಾಡಿ ವೈದ್ಯಕೀಯ ಸೀಟು ಕೊಡೆಸಬೇಕೆಂಬ ವೈದ್ಯರ ಭಾವನೆಗಳೊಂದಿಗೆ ಚೆಲ್ಲಾಟವಾಡಿ 66 ಲಕ್ಷ ರೂ. ಪಡೆದು ಸೀಟು ಕೊಡಿಸದೆ ಹಣವೂ ಹಿಂದಿರುಗಿಸದೆ ವಂಚಿಸಿದಲ್ಲದೆ, ಮತ್ತಷ್ಟು ಹಣ ಪೀಕುವ ದುರುದ್ದೇಶದಿಂದ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸುವ ಹೀನಕೃತ್ಯಕ್ಕಿಳಿದು ತಲೆ ಮರೆಸಿಕೊಂಡಿರುವ ಉಳಿದವರಿಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ಹನಿಟ್ರ್ಯಾಪ್‍ನ ಸುಳಿಗೆ ಸಿಕ್ಕಿ ಹೊರ ಬರಲಾಗದ ವೈದ್ಯ ತನ್ನ ಮನೆಯನ್ನು ಬ್ಯಾಂಕ್‍ಗೆ ಅಡಮಾನವಿಟ್ಟು , 50 ಲಕ್ಷ ಸಾಲ ಪಡೆದು ಆ ಹಣವನ್ನು ವಂಚಕರ ಕೈಗಿಟ್ಟಿದ್ದರೂ, ಅವರಿಗೆ ಸಮಾಧಾನವಾಗಿಲ್ಲ. ಮತ್ತೆ ಸಬೂಬು ಹೇಳುತ್ತಾ 20 ಲಕ್ಷ ಹಣಕ್ಕೆ ಪೀಡಿಸುತ್ತಾ ವೈದ್ಯನ ನೆಮ್ಮದಿ ಹಾಳು ಮಾಡಿದ ವಂಚಕರಿಗಾಗಿ ಸಿಬಸಿಬಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಭಾರತದಲ್ಲಿ ಆತ್ಮಗಳು ಇರುವ ಭಯಂಕರವಾದ ಪ್ರದೇಶಗಳು | Haunted Places In India - Kannada Nativeplanet
»ಭಾರತದಲ್ಲಿ ಆತ್ಮಗಳು ಇರುವ ಭಯಂಕರವಾದ ಪ್ರದೇಶಗಳು
ಭಾರತದಲ್ಲಿ ಆತ್ಮಗಳು ಇರುವ ಭಯಂಕರವಾದ ಪ್ರದೇಶಗಳು
Updated: Wednesday, May 2, 2018, 17:06 [IST]
ಸಿನಿಮಾದಲ್ಲಿ ದೆವ್ವಗಳ ದೃಶ್ಯ ಬಂದರೆ ಸಾಕು ಭಯದಿಂದ ಕಣ್ಣು ಮುಚ್ಚಿಕೊಳ್ಳುತ್ತೇವೆ. ಹಾಗೆ ನೋಡಿದರೆ ನಮ್ಮ ಭಾರತ ದೇಶದಲ್ಲಿ ನಿಜವಾಗಿಯೂ ದೆವ್ವಗಳು ಇರುವ ಅನೇಕ ಸ್ಥಳಗಳು ಇವೆ. ಒಂದು ವೇಳೆ ಇದ್ದರೆ ಕೇವಲ ಪಾಳು ಬಿದ್ದ ಬಂಗಲೆಗಳಲ್ಲಿ ಇರುತ್ತವೆಯೇ? ಅಥವಾ ಖಾಲಿ ಜಾಗದಲ್ಲಿ ತಿರುಗುತ್ತಾ ಇರುತ್ತದೆಯೋ? ಎಂಬ ಹಲವಾರು ಪ್ರೆಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು.
ಇಂದಿಗೂ ನಮ್ಮ ಭಾರತ ದೇಶದಲ್ಲಿ ಆ ಸ್ಥಳಕ್ಕೆ ಕಾಲು ಇಡಲು ಕೂಡ ಭಯ ಪಡುವವರು ಕೂಡ ಇದ್ದಾರೆ. ಅವುಗಳು ಯಾವುವು ಎಂಬುದನ್ನು ನೋಡೋಣ. ಆ ಸ್ಥಳವೆಲ್ಲಾ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಆ ಸ್ಥಳಕ್ಕೆ ಹಗಲಿನ ಸಮಯದಲ್ಲಿ ಪಿಕ್ನಿಕ್‍ಗಾಗಿ ಭೇಟಿ ನೀಡುತ್ತಿರುತ್ತಾರೆ. ಸಂಜೆ 6 ಗಂಟೆ ದಾಟಿದರೆ ಮಾತ್ರ ಒಂದು ಪ್ರಾಣಿ ಕೂಡ ಇಲ್ಲಿರುವುದಿಲ್ಲ. ಇಲ್ಲಿನ ಸುತ್ತಮುತ್ತ ಇರುವವರ ಪ್ರಕಾರ ಇಲ್ಲಿ ಆತ್ಮದ ಸಂಚಾರವಿದೆ ಎಂದು ಹೇಳುತ್ತಾರೆ. ಆ ಆತ್ಮದ ಕಥೆ ಏನೆಂದರೆ ಒಂದು ವರ್ಷದ ಹಿಂದೆ ಒಬ್ಬ ಮಹಿಳೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದಳಂತೆ. ಆಕೆಯೇ ಇಲ್ಲಿ ಆತ್ಮವಾಗಿ ತಿರುಗುತ್ತಿದ್ದಾಳೆ ಎಂದು ಸುತ್ತ-ಮುತ್ತಲ ಜನರು ವಾದಿಸುತ್ತಿದ್ದಾರಂತೆ.
1. ಆರ್ಯ ಮಿಲ್ಕ ಕಾಲೋನಿ ರಸ್ತೆ
ಎಲ್ಲೇ ನೋಡಿದರು ಕೂಡ ಹಚ್ಚ ಹಸಿರಿನಿಂದ ಕೂಡಿರುವ ಆ ಸ್ಥಳಕ್ಕೆ ಅನೇಕ ಮಂದಿ ಹಗಲಿನ ಸಮಯದಲ್ಲಿ ಪಿಕ್ನಿಕ್‍ಕ್ಕಾಗಿ ಭೇಟಿ ನೀಡುತ್ತಿರುತ್ತಾರೆ, ಸಂಜೆ 6 ದಾಟಿದರೆ ಸಾಕು ಅಲ್ಲಿ ಒಬ್ಬರು ಕೂಡ ಕಾಣಿಸುವುದಿಲ್ಲ. ಇಲ್ಲಿನ ಸುತ್ತಮುತ್ತಲಿರುವವರು ಹೇಳುವ ಪ್ರಕಾರ ಇಲ್ಲಿ ಒಂದು ಆತ್ಮವು ಸಂಚಾರ ಮಾಡುತ್ತಿದೆ ಎಂದು.
2. ಆರ್ಯ ಮಿಲ್ಕ ಕಾಲೋನಿ ರಸ್ತೆ
ಆ ಆತ್ಮದ ಹಿಂದೆ ಇರುವ ಕಥೆ ಏನೆಂದರೆ ಕೆಲವು ವರ್ಷಗಳ ಹಿಂದೆ ಒಬ್ಬ ಮಹಿಳೆ ಅಪಘಾತವಾಗಿ ಮೃತಳಾದಳು. ಆ ಆತ್ಮವೇ ಇಲ್ಲಿ ಸಂಚಾರ ಮಾಡುತ್ತಿದೆ ಎಂದು ನಂಬಲಾಗಿದೆ. ಇಲ್ಲಿ ದಿನನಿತ್ಯವು ಬಸ್ಸನ್ನು ನಡೆಸುತ್ತಿದ್ದ ಒಬ್ಬ ಡ್ರೈವರ್ ಒಂದು ಸಂಜೆ ಇಲ್ಲಿ ಆತನ ಬಸ್ ಟ್ರಿಪ್ ಆದನಂತರ ಮನೆಗೆ ತೆರಳುವ ಸಮಯದಲ್ಲಿ ಒಂದು ಮಹಿಳೆ ಮರದ ಹಿಂಭಾಗದಲ್ಲಿ ಕೂತು ಅಳುತ್ತಿದ್ದ ಶಬ್ಧ ಕೇಳಿಸುತ್ತಿತ್ತಂತೆ.
3. ಆರ್ಯ ಮಿಲ್ಕ ಕಾಲೋನಿ ರಸ್ತೆ
ಆಕೆಯು ಏಕೆ ಅಳುತ್ತಿದ್ದಾಳೆ ಎಂದು ತಿಳಿದುಕೊಳ್ಳಬೇಕು ಎಂದು ಆ ಸ್ಥಳಕ್ಕೆ ಹೋದರೆ ಆ ಮಹಿಳೆಯು ದಾಳಿ ಮಾಡಿತಂತೆ. ಈ ಬಸ್ ಡ್ರೈವರ್ ಒಬ್ಬನಿಗೆ ಅಲ್ಲ, ಆ ಸ್ಥಳದಲ್ಲಿ ಹೋಗುವವರಿಗೆಲ್ಲರಿಗೂ ಕೂಡ ಹೀಗೆಯೇ ಮಾಡಿ ಹಿಂಸೆ ನೀಡುತ್ತಿದೆ ಎಂತೆ. ಇಷ್ಟೇ ಅಲ್ಲ ದಾರಿಯಲ್ಲಿ ಹೋಗುತ್ತಿರುವವರಿಗೆಲ್ಲಾ ಲಿಫ್ಟ್ ಕೂಡ ಕೇಳುತ್ತದೆ ಎಂತೆ. ಆ ಆತ್ಮ ಆ ದಾರಿಯಲ್ಲಿ ಹೋಗುವವರಿಗೆಲ್ಲಾ ಹಿಂಸಿಸುತ್ತಿದೆ. ಅನೇಕ ಬಾರಿ ಈ ಆತ್ಮದಿಂದಾಗಿ ರಸ್ತೆ ಅಪಘಾತಗಳು ಕೂಡ ನಡೆದಿವೆ ಎಂತೆ.
4. ರಾಜ್ ಕಿರಣ್ ಹೋಟೆಲ್
ರಾಜ್ ಕಿರಣ್ ಹೋಟೆಲ್ ಅನ್ನು ಭೂತದ ಹೋಟೆಲ್ ಎಂದೂ ಸಹ ಕರೆಯುತ್ತಾರೆ. ಇದು ಮಹಾರಾಷ್ಟ್ರದಲ್ಲಿನ ಅತ್ಯಂತ ಭಯಂಕರವಾದ ಸ್ಥಳವಾಗಿದೆ. ಇಲ್ಲಿ ದೆವ್ವವಿದೆ ಎಂಬ ವಿಷಯ ತಿಳಿಯದೇ ಅನೇಕ ಪ್ರವಾಸಿಗರು ಇಲ್ಲಿ ತಂಗಿದ್ದರು. ಅವರು ಏನು ಹೇಳಿದರು ಎಂದರೆ...
5. ರಾಜ್ ಕಿರಣ್ ಹೋಟೆಲ್
"ನಮಗೆ ಒಂದು ರೂಂ ಏರ್ಪಾಟು ಮಾಡಿದರು. ಆ ರೂಂನಲ್ಲಿ ತೆರಳಿದ ನಂತರ ನಾವು ನಿದ್ರೆಗೆ ಜಾರಿದೆವು. ಆ ಸಮಯದಲ್ಲಿ ಹೊದಿಕೆಯನ್ನು ಯಾರೋ ಎಳೆದ ಹಾಗೆ ಅನುಭವವಾಗುತ್ತದೆ ಎಂತೆ. ನಾವು ತಂದ ಸಾಮಾನುಗಳು ರಾತ್ರಿ ಒಂದು ಕೊಠಡಿಯಲ್ಲಿ ಇಟ್ಟಿದ್ದರೆ ಬೆಳಗಿನ ಜಾವ ಮತ್ತೊಂದು ಕೊಠಡಿಯಲ್ಲಿ ಇರುತ್ತದೆ ಎಂತೆ.
6. ರಾಜ್ ಕಿರಣ್ ಹೋಟೆಲ್
ಸಡನ್ ಆಗಿ ಬಾತ್ರೂಂ ಲಾಕ್ ಆಗುತ್ತದೆ. ಎಂದು ಅನೇಕ ಪ್ರವಾಸಿಗಳು ಅವರು ಆ ಹೋಟೆಲ್‍ನಲ್ಲಿ ಪಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಹೋಟೆಲ್‍ನ ಒಂದು ಕೊಠಡಿಯಲ್ಲಿ 21 ವರ್ಷದ ಹುಡುಗಿಯು ಆತ್ಮಹತ್ಯೆ ಮಾಡಿಕೊಂಡಳು. ಅದೇ ಆತ್ಮ ಈ ಹೋಟೆಲ್‍ನಲ್ಲಿ ಸಂಚಾರಿಸುತ್ತಿದೆ ಎಂದು ಪ್ರಚಾರದಲ್ಲಿದೆ. ಈ ದಿನಕ್ಕೂ ಅಲ್ಲಿನ ಪರಿಸ್ಥಿತಿ ಇದೇ ರೀತಿಯಲ್ಲಿಯೇ ಇದೆಯಂತೆ. ರಾಜ್ ಕಿರಣ್ ಹೋಟೆಲ್ ಅನ್ನು ಭೂತಗಳ ಹೋಟೆಲ್ ಎಂದೇ ಮಾರ್ಪಾಟು ಮಾಡಿದ್ದಾರೆ ಅಲ್ಲಿನ ಜನರು.
7. ರಬಿಂದರ್ ನಗರ್
ಹೈದ್ರಾಬಾದ್‍ನ ರಬಿಂದರ್ ನಗರದ ಬಗ್ಗೆ ಸೀತಾಫಲ ಮಂಡಿಯಲ್ಲಿ ಪ್ರತಿಯೊಬ್ಬರಿಗೂ ತಿಳಿದಿದೆ. 2012 ರಲ್ಲಿ 4 ಜನ ಬ್ಯಾಚುಲರ್ಸ್ ಆತ್ಮಹತ್ಯೆ ಮಾಡಿಕೊಂಡರು. ಈ ಆತ್ಮಹತ್ಯೆ ನಡೆದ ದಿನ ಈ ಪ್ರದೇಶದಲ್ಲಿ ಏನೇನೂ ವಿಚಿತ್ರಗಳು ನಡೆದವಂತೆ.
8. ರಬಿಂದರ್ ನಗರ್
ಅರ್ಧರಾತ್ರಿಯ ಸಮಯದಲ್ಲಿ ಯಾರೂ ನಡೆಯುತ್ತಿರುವ ಹಾಗೆ ಕಾಣಿಸುತ್ತದೆ ಎಂತೆ. ಇನ್ನು ಅಂದಿನಿಂದ ಈ ರಬಿಂದ್ರ ನಗರದಲ್ಲಿರುವ ಜನರು ಆ ಪ್ರದೇಶದಲ್ಲಿರುವ ಜನರೆಲ್ಲರು ಜೈ ಶ್ರೀರಾಮ್ ಎಂಬ ಹೆಸರಿನ ಧ್ವಜವನ್ನು ಪ್ರತಿ ಬೀದಿಯಲ್ಲಿ ನೆಟ್ಟಿದ್ದಾರಂತೆ.
9. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ
ಈ ಅಪಾರ್ಟ್‍ಮೆಂಟ್ ರಸ್ತೆ ಮೇಲೆಯೇ ಇದೆ. 4 ಅಂತಸ್ತಿನ ಅಪಾರ್ಟ್‍ಮೆಂಟ್. ಆದ್ದರಿಂದ ಈ ಅಪಾರ್ಟ್‍ಮೆಂಟ್‍ನ 2 ನೇ ಫ್ಲೋರ್‍ನಲ್ಲಿ ಆತ್ಮವಿರುತ್ತದೆ ಎಂದು ಆ ಬಿಲ್ಡಿಂಗ್ ಅವರು ಹೇಳುತ್ತಿದ್ದಾರೆ. ಒಂದು ಕಾಲದಲ್ಲಿ ಆ ಬಿಲ್ಡಿಂಗ್‍ನಲ್ಲಿ ಏರ್ ಹಾಸ್ಟೇಸ್ ಇರುತ್ತಿದ್ದಳಂತೆ. ಒಂದು ದಿನ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ.
10. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ
ಆ ನಂತರ ಕೆಲವು ದಿನಗಳ ನಂತರ ಅದೇ ರೂಂನಲ್ಲಿ ಮತ್ತೊಂದು ಏರ್ ಹಾಸ್ಟೇಸ್ ಬಂದಳಿದಳಂತೆ. ಆಕೆಯು ಕೆಲವು ದಿನಗಳು ಕಳೆದ ನಂತರ ಯಾರೋ ಅವಳನ್ನು ಹಿಂಬಾಲಿಸುತ್ತಿರುವ ಹಾಗೆ ಹಾಗು ಆಕೆಯ ಮೇಲೆ ಯಾರೋ ನಿಗಾ ವಹಿಸುತ್ತಿರುವ ಹಾಗೆ ಅನ್ನಿಸುತ್ತಿತ್ತಂತೆ. ಆಕೆ ನಿದ್ರೆ ಮಾಡುತ್ತಿದ್ದ ಸಮಯದಲ್ಲಿ ಯಾರೋ ಅಳುತ್ತಿರುವ ಶಬ್ಧ ಆಕೆಗೆ ಕೇಳಿಸುತ್ತಿತ್ತಂತೆ. ತ್ವರಿತವಾಗಿ ಯಾರಪ್ಪ ಎಂದು ನೋಡಿದರೆ ರಭಸವಾಗಿ ಟೆರ್ರಸ್‍ನ ಮೇಲೆ ಹೋಗುತ್ತಿತ್ತಂತೆ.
11. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ
ಅಲ್ಲಿ ಒಂದು ಮೂಲೆಯಲ್ಲಿ ಯಾರೋ ಕುಳಿತುಕೊಂಡು ಅಳುತ್ತಿದ್ದರಂತೆ. ಆ ಏರ್ ಹಾಸ್ಟೆಸ್ ಸಮೀಪಕ್ಕೆ ತೆರಳಿದರೆ ಅಲ್ಲಿ ಯಾರು ಕೂಡ ಇರುತ್ತಿರಲಿಲ್ಲವಂತೆ. ಈ ಭಯಾನಕತೆಯಾದ ನಂತರ ಯಾರು ಕೂಡ ಆ ಕೊಠಡಿಯ ಸಮೀಪದಲ್ಲಿ ಭೇಟಿ ನೀಡುತ್ತಿಲ್ಲ.
12. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ
ಇಲ್ಲಿರುವ ಬಾಡಿಗೆದಾರರು ಕೂಡ ಹೌದು ಇಲ್ಲಿ ಯಾರೋ ಅಳುತ್ತಿರುವ ಶಬ್ಧ, ವಿಚಿತ್ರವಾದ ಶಬ್ಧಗಳು ಕೇಳಿಸುತ್ತಿರುತ್ತವೆ ಎಂದು ಹೇಳಿಕೊಂಡಿದ್ದಾರೆ. ಇವುಗಳನ್ನು ಕೆಲವರು ನಂಬುತ್ತಾರೆ, ಕೆಲವರು ನಂಬುವುದಿಲ್ಲ. ನಂಬಿಕೆ ಎನ್ನುವುದು ಅವರವರಿಗೆ ಬಿಟ್ಟಿದ್ದು.
ಮಗುವಿನ ತ್ವಚೆಯ ಸಮಸ್ಯೆಗೆ ನೈಸರ್ಗಿಕ ಪರಿಹಾರಗಳು! - Tinystep
ಮಗುವಿನ ತ್ವಚೆಯ ಸಮಸ್ಯೆಗೆ ನೈಸರ್ಗಿಕ ಪರಿಹಾರಗಳು!
ಯಾರು ಹೇಳಿ ಕೊಡದೆ ತನ್ನ ಕೆಲಸವನ್ನು ತಾನೇ ಅಚ್ಚುಕಟ್ಟಾಗಿ ನಿಭಾಯಿಸುವುದು ತಾಯಿ ಮಾತ್ರ. ಮಗುವಿನ ಯಾವುದೇ ಕೆಲಸವನ್ನು ತಾನು ಬಹಳ ಎಚ್ಚರಿಕೆ ಇಂದ ನಿಭಾಯಿಸುವಳು. ಅದು ಏನೇ ಆದರೂ ಮಗುವು ಹೊರ ಜಗತ್ತಿಗೆ ಹೊಸದಾಗಿ ಹೊಂದಿಕೊಳ್ಳಲು ಸಮಯ ಬೇಕು ಮತ್ತು ಮಗುವಿನ ತ್ವಚೆಯು ತುಂಬಾ ಸೂಕ್ಷ್ಮವಾಗಿದ್ದು, ಅದರ ಕಾಳಜಿಯನ್ನು ಮಾಡುವಾಗ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ನಿಮಗೆ ಮಗುವಿನ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ತ್ವಚೆಯನ್ನು ಕಾಪಾಡಲು ಕೆಲವು ಸಲಹೆಗಳು.
ಈ ಕೆಳಗಿನ ಸಲಹೆಗಳು ನಿಮ್ಮ ಮಗುವಿನ ತ್ವಚೆಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳಾಗಿದ್ದು ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.
೧.ಬಿಸಿ ನೀರು
ಮಗುವಿನ ದೈಪರ್ ನಿಂದ ತ್ವಚೆಯ ಸಮಸ್ಯೆ ಉಂಟಾಗಿದ್ದರೆ, ಇದೊಂದು ಸುಲಭ ಪರಿಹಾರವಾಗಿದೆ. ಉಗುರು ಬೆಚ್ಚನೆಯ ನೀರಿನಲ್ಲಿ ಮಗುವಿನ ತ್ವಚೆಯನ್ನು ತೊಳೆಯುವುದರಿಂದ ತ್ವಚೆಯ ಕಿರಿಕಿರಿ ಕಡಿಮೆ ಆಗುತ್ತದೆ. ಅಥವಾ ಮಗುವನ್ನು ಉಗುರು ಬೆಚ್ಚನೆಯ ನಿರಿನಲ್ಲಿ 10-15 ನಿಮಿಷ ಕುರಿಸಿ. ನಂತರ ಮಗುವನ್ನು ಒಂದು ಶುದ್ಧ ಬಟ್ಟೆಯಿಂದ ಹೊರಿಸಿ.
೨.ಎದೆಹಾಲು
ತ್ವಚೆಯ ಸಮಸ್ಯೆ ಅದರಲ್ಲೂ ದೈಪರ್ ಅಥವಾ ತ್ವಚೆಯ ಅಲರ್ಜಿ ಆಗಿದ್ದರೆ, ಆ ಜಾಗಕ್ಕೆ ಸ್ವಲ್ಪ ಎದೆಹಾಲನ್ನು ಸವರುವುದರಿಂದ ತ್ವಚೆಯ ಉರಿ ಅಥವಾ ಕಿರಿಕಿರಿ ಕಡಿಮೆಯಾಗುತ್ತದೆ ಮತ್ತು ಅದು ಮಗುವಿನ ತ್ವಚೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದು ಅಲ್ಕಲೈನ್ ಎಂಬ ಅಂಶವನ್ನು ಹೊಂದಿದ್ದು, ಇದು ಮೂತ್ರದಿಂದ ಉಂಟಾಗುವ ನವೆ ಮತ್ತು ಕಿರಿಕಿರಿಯನ್ನು ದೂರಮಾಡುತ್ತದೆ. ಒಂದು ಬಟ್ಟಲಿಗೆ ಅಡುಗೆ ಸೋಡಾ ಅಥವಾ ಬೇಕಿಂಗ್ ಸೋಡಾವನ್ನು ನೀರಿನ ಜೊತೆ ಮಿಶ್ರಣ ಮಾಡಿ, ಒಂದು ಹತ್ತಿಯನ್ನು ಆ ಮಿಶ್ರಣದಲ್ಲಿ ಹಜ್ಜಿ ತ್ವಚೆಯ ಗುಳ್ಳೆ ಅಥವಾ ನವೆ ಇರುವ ಅಥವಾ ಸಮಸ್ಯೆ ಇರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ.
೪.ಲೋಗಸರ
ಇದರಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು ಇದ್ದು, ಮಗುವಿನ ಸೂಕ್ಷ್ಮ ತ್ವಚೆಯ ಸೂಕ್ಷ್ಮತೆಯನ್ನು ಕಾಪಾಡಲು ಸಹಾಯವಾಗುತ್ತದೆ. ಲೋಗಸರದ ಲೋಳೆಯನ್ನು ಮಗುವಿನ ತೊಂದರೆ ಇರುವ ಜಾಗಕ್ಕೆ ಹಚ್ಚಿ, ಸ್ವಲ್ಪ ಸಮಯದ ನಂತರ ಶುಚಿಮಾಡಿ.
೫.ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಅಥವಾ ಸ್ವಲ್ಪ ಬಿಸಿ ಮಾಡಿ, ಉಗುರು ಬೆಚ್ಚಗೆ ಇರುವಾಗ ಅದನ್ನು ಮಗುವಿನ ತ್ವಚೆಗೆ ಹಚ್ಚಿ, ಇದರಿಂದ ಮಗುವಿನ ತ್ವಚೆಯ ಹೊಳಪು ಹೆಚ್ಚಾಗುತ್ತದೆ. ಇದನ್ನು ಮಗುವಿನ ತ್ವಚೆ ಪೂರ್ತಿ ಹಚ್ಚಿ, ಮಗುವನ್ನು ಎತ್ತಿಕೊಳ್ಳುವಾಗ ತುಂಬಾ ಎಚ್ಚರವಹಿಸಿ, ಏಕೆಂದರೆ ಮಗುವಿನಲ್ಲಿನ ಎಣ್ಣೆ ಜಾರುವಂತೆ ಮಾಡಿ ಹಾನಿಯಾಗಬಹುದು.
ನೆತನ್ಯಾಹು: ಇಸ್ರೇಲ್ ಗೆದ್ದ ಚೌಕೀದಾರ್ | Prajavani
Benjamin Netanyahu Re elected
'ಬೀಬಿ' ಪುನರಾಯ್ಕೆಯು ಭಾರತ– ಇಸ್ರೇಲ್ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಬಹುದು
ಸುಧೀಂದ್ರ ಬುಧ್ಯ Updated: 02 ಮೇ 2019, 01:30 IST
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಂದು ದಾಖಲೆ ಬರೆದಿದ್ದಾರೆ. ಇಸ್ರೇಲ್ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೆತನ್ಯಾಹು ನೇತೃತ್ವದ ಬಲಪಂಥೀಯ ಪಕ್ಷಗಳ ಒಕ್ಕೂಟ ಹೆಚ್ಚು ಸ್ಥಾನ ಗಳಿಸಿದೆ. ನೆತನ್ಯಾಹು (ಬೀಬಿ) ಐದನೇ ಬಾರಿಗೆ ಇಸ್ರೇಲಿನ ಪ್ರಧಾನಿಯಾಗಲಿದ್ದಾರೆ ಮತ್ತು ಇಸ್ರೇಲ್ ಸ್ಥಾಪಕ ಪ್ರಧಾನಿ ಡೇವಿಡ್ ಬೆನ್ಗುರಿಯನ್ ಅವರ ನಾಲ್ಕು ಅವಧಿಯ ದಾಖಲೆ ಮುರಿಯಲಿದ್ದಾರೆ. 1996ರಲ್ಲಿ ಮೊದಲ ಬಾರಿಗೆ ನೆತನ್ಯಾಹು ಇಸ್ರೇಲಿನ ಪ್ರಧಾನಿಯಾದಾಗ, ಅತಿ ಕಿರಿ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆ ಅವರದ್ದಾಗಿತ್ತು. ಇಸ್ರೇಲ್ ಕಂಡ ಓರ್ವ ಅನನುಭವಿ ಪ್ರಧಾನಿ ಎಂದೂ ಆಗ ರಾಜಕೀಯ ವಿಶ್ಲೇಷಕರು ಕರೆದಿದ್ದರು.
ನೆತನ್ಯಾಹು ರಾಜಕೀಯ ಪ್ರವೇಶಿಸಿದ ಮೇಲೆ ಅವರಿಗೆ ಏಣಿಗಳೇ ಹೆಚ್ಚು ದೊರೆತವು. ಇಸ್ರೇಲಿನ ಟೆಲ್ ಅವೀವ್‌ನಲ್ಲಿ ನೆತನ್ಯಾಹು ಜನಿಸಿದರೂ, ಅವರ ಕುಟುಂಬ 1963ರ ಹೊತ್ತಿಗೆ ಅಮೆರಿಕಕ್ಕೆ ವಲಸೆ ಹೋಗಬೇಕಾಯಿತು. ತಮ್ಮ 18ನೆಯ ವಯಸ್ಸಿನಲ್ಲಿ ಬೀಬಿ ಇಸ್ರೇಲಿಗೆ ಮರಳಿದರು. ಐದು ವರ್ಷ ಸೇನೆಯಲ್ಲಿದ್ದರು. 73ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಭಾಗವಹಿಸಿದರು. 76ರಲ್ಲಿ ನೆತನ್ಯಾಹು ಸಹೋದರ ಜೊನಾಥನ್, ಇಸ್ರೇಲ್ ಸೇನಾಪಡೆಯು ಉಗಾಂಡದ ಎಂಟೆಬೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಪ್ರಾಣಾರ್ಪಣೆ ಮಾಡಿದ್ದರು. ಇದರಿಂದಾಗಿ ಜೊನಾಥನ್ ಹೆಸರು ಮನೆಮಾತಾಯಿತು. ಬೀಬಿ ತಮ್ಮ ಸಹೋದರನ ಹೆಸರಿನಲ್ಲಿ ಉಗ್ರನಿಗ್ರಹ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಇಸ್ರೇಲ್ ಹಿತಾಸಕ್ತಿಯನ್ನು ಅಮೆರಿಕದಲ್ಲಿ ಪ್ರತಿಪಾದಿಸುವ ನಾಯಕನಾಗಿ ಹೊರಹೊಮ್ಮಿದರು. ಅಮೆರಿಕದಲ್ಲಿ ಪಡೆದ ವಿದ್ಯಾಭ್ಯಾಸ, ಸೇನಾ ಹಿನ್ನೆಲೆಯು ನೆತನ್ಯಾಹು ಅವರ ಸಹಾಯಕ್ಕೆ ಬಂತು. ಅಮೆರಿಕದ ಆ್ಯಕ್ಸೆಂಟ್‌ನಲ್ಲಿ ಇಂಗ್ಲಿಷ್ ಮಾತನಾಡಬಲ್ಲ ಸಾಮರ್ಥ್ಯ ಅವರಿಗೆ ಆಯಕಟ್ಟಿನ ಹಲವು ಹುದ್ದೆಗಳು ದೊರೆಯುವುದಕ್ಕೆ ಕಾರಣವಾಯಿತು. ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಕಾಯಂ ಪ್ರತಿನಿಧಿಯಾಗಿ ನೆತನ್ಯಾಹು 1984ರಲ್ಲಿ ನೇಮಕವಾದರು.
ಇಂಗ್ಲಿಷ್ ಮತ್ತು ಹಿಬ್ರೂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಬೀಬಿ, 1988ರ ನಂತರ ಇಸ್ರೇಲಿನ ಸ್ಥಳೀಯ ರಾಜಕೀಯದಲ್ಲಿ ತೊಡಗಿಸಿಕೊಂಡರು. ಸಂಸತ್ತಿಗೆ ಆಯ್ಕೆಯಾದರು. ಲಿಕುಡ್ ಪಕ್ಷದ ಮಧ್ಯಮ ಮತ್ತು ಎಡಪಂಥೀಯ ನಾಯಕರು 1992ರ ಚುನಾವಣೆ ಬಳಿಕಬದಿಗೆ ಸರಿದ ಮೇಲೆ ನೆತನ್ಯಾಹು, ಲಿಕುಡ್ ಪಕ್ಷದ ನೇತೃತ್ವ ವಹಿಸಿಕೊಂಡರು. 1996ರಲ್ಲಿ ಪ್ರಧಾನಿಯಾದರು. ಮಿತ್ರಪಕ್ಷಗಳನ್ನು ಸಂಭಾಳಿಸುವುದರಲ್ಲೇ ಹೆಚ್ಚು ಸಮಯ ಹೋಯಿತು. ಅವಧಿಗೆ ಮುನ್ನವೇ ಚುನಾವಣೆ ಘೋಷಿಸಿ ಪರಾಭವಗೊಂಡರು. 2001ರ ಚುನಾವಣೆಯಲ್ಲಿ ಏರಿಯಲ್ ಶೆರಾನ್ ಅವರು ಲಿಕುಡ್ ಪಕ್ಷದ ನೇತೃತ್ವವಹಿಸಿ ಪ್ರಧಾನಿಯಾದಾಗ, ನೆತನ್ಯಾಹು ರಾಜಕೀಯ
ವಾಗಿ ತೆರೆಮರೆಗೆ ಸರಿದಂತೆ ಎಂದೇ ಭಾವಿಸಲಾಗಿತ್ತು. ಆದರೆ ಶೆರಾನ್ ಸಂಪುಟದಲ್ಲಿ ಬೀಬಿ ವಿದೇಶಾಂಗ ಮಂತ್ರಿ
ಯಾದರು. ಶೆರಾನ್ ಆಡಳಿತವು ಗಾಜಾಪಟ್ಟಿಯಿಂದ ಇಸ್ರೇಲ್ ಸೇನೆಯನ್ನು ಹಿಂಪಡೆದಾಗ, ಅದನ್ನು ವಿರೋಧಿಸಿ ರಾಜೀನಾಮೆ ಇತ್ತರು. ನಂತರ ತೀವ್ರ ರಾಷ್ಟ್ರೀಯವಾದದ ಪ್ರತಿಪಾದಕರಾಗಿ ಗುರುತಿಸಿಕೊಂಡರು. ಈ ಹೊರಳುವಿಕೆ ನೆತನ್ಯಾಹುರನ್ನು 2009ರಲ್ಲಿ ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ಕೂರುವಂತೆ ಮಾಡಿತು.
ಬೀಬಿ ತಮ್ಮ ರಾಜಕೀಯ ಜಾಣ್ಮೆಯಿಂದ ಅಧಿಕಾರವನ್ನು ಸತತವಾಗಿ ಕಾಯ್ದುಕೊಂಡರು. ತಮ್ಮ ಬಳಿಯೇ ರಕ್ಷಣೆ, ವಿದೇಶಾಂಗ ಮತ್ತು ಆರೋಗ್ಯ ಖಾತೆಗಳನ್ನು ಇಟ್ಟುಕೊಂಡರು. ಇಸ್ರೇಲ್ ದೇಶದ ಮುಖ್ಯ ರಾಜಕೀಯ ಧೋರಣೆ ಸೇನೆ ಮತ್ತು ಭದ್ರತಾ ವಿಷಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ನೆತನ್ಯಾಹು ತಮ್ಮನ್ನು 'Mr ಸೆಕ್ಯುರಿಟಿ' (ಚೌಕೀದಾರ್) ಎಂದು ಕರೆಯುವಷ್ಟರ ಮಟ್ಟಿಗೆ ಭದ್ರತೆಯ ವಿಷಯವಾಗಿ ಮಾತನಾಡಿದರು. ಆರ್ಥಿಕವಾಗಿ, ಸಾಮರಿಕವಾಗಿ ಮತ್ತು ತಂತ್ರಜ್ಞಾನದಲ್ಲಿ ಇಸ್ರೇಲ್ ಶಕ್ತವಾಗಿದ್ದರೆ ಮಾತ್ರ ಜಗತ್ತು ಇಸ್ರೇಲ್ ಹಿತಾಸಕ್ತಿಗೆ ಪೂರಕವಾಗಿ ಪ್ರತಿಸ್ಪಂದಿಸಲಿದೆ ಎಂಬುದನ್ನು ನೆತನ್ಯಾಹು ಪ್ರತಿಪಾದಿಸಿದರು. ಪ್ರತೀ ಚುನಾವಣೆಯ ಸಂದರ್ಭದಲ್ಲೂ ಭದ್ರತಾ ವಿಷಯ ಮುನ್ನೆಲೆಗೆ ಬರುವಂತೆ ನೋಡಿಕೊಂಡರು. 2012ರ ಚುನಾವಣೆಯ ಹೊಸ್ತಿಲಲ್ಲಿ ಇಸ್ರೇಲ್, ಗಾಜಾಪಟ್ಟಿಯ ಭಾಗದಲ್ಲಿ ಕ್ಷಿಪ್ರ ಮಿಲಿಟರಿ ಕಾರ್ಯಾಚರಣೆ ನಡೆಸಿತು. ಇದು ಸೇನೆಯ ಸಾಮರ್ಥ್ಯ ಪ್ರದರ್ಶನ ಮಾತ್ರ ಆಗದೆ ರಾಜಕೀಯವಾಗಿ ನೆತನ್ಯಾಹು ನೆರವಿಗೆ ಬಂತು. 2015ರ ಚುನಾವಣೆಯಲ್ಲಿ ನೆತನ್ಯಾಹು 'ಅರಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದಾರೆ' ಎಂದು ಯಹೂದಿಗಳನ್ನು ಮತಗಟ್ಟೆಗೆ ಹೆಚ್ಚೆಚ್ಚು ತರುವ ಪ್ರಯತ್ನ ಮಾಡಿದರು. ಗೆಲುವು ಸುಲಭವಾಯಿತು.
ತಮ್ಮ ರಾಜಕೀಯ ಬದುಕಿನ ತೀವ್ರ ಪೈಪೋಟಿಯ ಚುನಾವಣೆಯನ್ನು ನೆತನ್ಯಾಹು ಈ ಬಾರಿ 2019ರಲ್ಲಿ ಎದುರಿಸಿದರು. 2009ರಿಂದ ಸತತವಾಗಿ ಅಧಿಕಾರದಲ್ಲಿರುವ ಲಿಕುಡ್ ಪಕ್ಷ ಈ ಬಾರಿ ಹಿನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆಗಳು ಷರಾ ಬರೆದಿದ್ದವು. ನೆತನ್ಯಾಹು ಬೆನ್ನಿಗೆ ಬಿದ್ದ ಭ್ರಷ್ಟಾಚಾರದ ಆರೋಪ ಚುನಾವಣೆಯ ಪ್ರಮುಖ ವಿಷಯವಾಯಿತು. ನೆತನ್ಯಾಹು ಅವಧಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಮೂವರು ಸೇನಾ ಅಧಿಕಾರಿಗಳು ಸೇನೆಯಿಂದ ಹೊರಬಂದು, ಇಸ್ರೇಲಿನ ಧ್ವಜದ ಬಣ್ಣ ನೀಲಿ ಮತ್ತು ಬಿಳಿಯನ್ನು ಸಾಂಕೇತಿಕವಾಗಿಸಿ, ಬ್ಲೂ ಅಂಡ್ ವೈಟ್ ಪಕ್ಷ ಸ್ಥಾಪಿಸಿದರು. ನೆತನ್ಯಾಹುರ ಲಿಕುಡ್ ಪಕ್ಷಕ್ಕೆ ಪ್ರಬಲ ಸ್ಪರ್ಧೆಯೊಡ್ಡಬಲ್ಲ ಪಕ್ಷವಾಗಿ ಕಡಿಮೆ ಅವಧಿಯಲ್ಲಿ ಬ್ಲೂ ಅಂಡ್ ವೈಟ್ ಪಕ್ಷ ಹೊರಹೊಮ್ಮಿತು. ಪುನಃ ರಾಷ್ಟ್ರೀಯ ಭದ್ರತೆ, ಪ್ಯಾಲೆಸ್ಟೀನ್ ಬಿಕ್ಕಟ್ಟು, ಇರಾನ್ ಎಂಬ ಗುಮ್ಮ ಚುನಾವಣೆಯ ವಿಷಯಗಳಾದವು. ಇಸ್ರೇಲ್ ಚುನಾವಣೆಗೆ ಎರಡು ವಾರಗಳಿರುವಾಗ, ಇದುವರೆಗೆ ಇಸ್ರೇಲ್ ಆಕ್ರಮಿತ ಪ್ರದೇಶ ಎಂದು ಕರೆಯಲಾಗುತ್ತಿದ್ದ 'ಗೋಲನ್ ಹೈಟ್ಸ್' ಪ್ರದೇಶವನ್ನು ಇಸ್ರೇಲ್ ಒಡೆತನದ ಭೂಭಾಗ ಎಂದು ಅಮೆರಿಕ ಗುರುತಿಸಿತು. ಇದು ಚುನಾವಣೆಯಲ್ಲಿ ನೆತನ್ಯಾಹು ನೆರವಿಗೆ ಬಂತು.
ಮುಖ್ಯವಾಗಿ, ನೆತನ್ಯಾಹು ಜಗತ್ತಿನ ಬಲಾಢ್ಯ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಬಯಸುವ ನಾಯಕ. ಅಮೆರಿಕ, ರಷ್ಯಾ, ಚೀನಾ ಮತ್ತು ಭಾರತದ ಜೊತೆ ಇಸ್ರೇಲ್ ಸಂಬಂಧ ಹಿಂದೆಂದಿಗಿಂತಲೂ ನೆತನ್ಯಾಹು ಅವಧಿಯಲ್ಲಿ ಗಾಢವಾಯಿತು. ಜೆರುಸಲೇಮ್ ನಗರವನ್ನು ಇಸ್ರೇಲಿನ ರಾಜಧಾನಿ ಎಂದು ಅಮೆರಿಕ ಗುರುತಿಸಿದ್ದು, ನೆತನ್ಯಾಹು ಆಡಳಿತದ ರಾಜತಾಂತ್ರಿಕ ಗೆಲುವು. ಭಾರತದ ವಿಷಯವಾಗಿ ನೋಡುವುದಾದರೆ, ನೆತನ್ಯಾಹು- ಮೋದಿ ಗೆಳೆತನ ಟ್ವಿಟರ್ ಸಂದೇಶಗಳಾಚೆ ಕೆಲಸ ಮಾಡಿತು. ಮೊದಲಿಗೆ ಅರಬ್- ಇಸ್ರೇಲಿ ಬಿಕ್ಕಟ್ಟನ್ನು ಕೇಂದ್ರದಲ್ಲಿಟ್ಟುಕೊಂಡೇ ಇಸ್ರೇಲಿನೊಂದಿಗೆ ವ್ಯವಹರಿಸುವ ವಿದೇಶಾಂಗ ನೀತಿಯನ್ನು ಭಾರತ ಹೊಂದಿತ್ತು. ಆದರೆ ಮೋದಿ 2017ರಲ್ಲಿ ಅದನ್ನು ಮುರಿದರು. ಇಸ್ರೇಲಿಗೆ ಭೇಟಿ ಕೊಟ್ಟರು. ಯುದ್ಧೋಪಕರಣಗಳ ಆಧುನೀಕರಣ, ಆ ಮೂಲಕ ಭಾರತದ ಸೇನಾ ಸಾಮರ್ಥ್ಯ ಹೆಚ್ಚಿಸುವುದು, ಇಸ್ರೇಲನ್ನು ಮೇಕ್-ಇನ್-ಇಂಡಿಯಾ ಯೋಜನೆಯಲ್ಲಿ ಜೋಡಿಸಿಕೊಂಡು ಬಂಡವಾಳ ಆಕರ್ಷಿಸುವುದು ಭಾರತದ ಆದ್ಯತೆಯಾಯಿತು. ಹಾಗಾಗಿ ನೆತನ್ಯಾಹು ಪುನರಾಯ್ಕೆಯು ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಬಹುದು.
ಅದೇನೇ ಇರಲಿ, ಇಸ್ರೇಲ್ ಪ್ರಧಾನಿಯಾಗಿ ದಾಖಲೆಯ ಅವಧಿಗೆ ಆಯ್ಕೆಯಾಗಿರುವ ನೆತನ್ಯಾಹು, ಮಧ್ಯಪ್ರಾಚ್ಯದ ಮಟ್ಟಿಗೆ ಪ್ರಬಲ ನಾಯಕನಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದಾರೆ. ಒಂದೊಮ್ಮೆ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾದರೆ, ಅಧಿಕಾರದಲ್ಲಿದ್ದಾಗ ದೋಷಾರೋಪಣೆಗೆ, ಶಿಕ್ಷೆಗೆ ಒಳಗಾದ ಮೊದಲ ಇಸ್ರೇಲ್ ಪ್ರಧಾನಿ ಎಂದೂ ಅವರು ಕರೆಸಿಕೊಳ್ಳಬಹುದು. ಇಸ್ರೇಲ್ ಚುನಾವಣಾ ಫಲಿತಾಂಶದ ಬಳಿಕ ಟ್ರಂಪ್, ನೆತನ್ಯಾಹು, ಪುಟಿನ್ ಮತ್ತು ಮೋದಿ ಅವರನ್ನು ಒಂದೇ ಸಾಲಿನಲ್ಲಿಟ್ಟು ಜಾಗತಿಕ ರಾಜಕೀಯ ತಜ್ಞರು ಚುನಾವಣಾ ವಿಶ್ಲೇಷಣೆ ನಡೆಸಿದ್ದಾರೆ. ಮೇ 23ರಂದು ಹೊರಬೀಳಲಿರುವ ಭಾರತದ ಚುನಾವಣೆಯ ಫಲಿತಾಂಶ ಆ ವಿಶ್ಲೇಷಣೆಗೆ ಮತ್ತಷ್ಟು ಹೂರಣ ಒದಗಿಸಬಹುದು.
ಇಸ್ರೇಲ್ | ಪ್ರಧಾನಿ ನೇತನ್ಯಾಹು ವಿರುದ್ಧ ಜೆರುಸಲೆಂನಲ್ಲಿ ಬೃಹತ್ ಪ್ರತಿಭಟನೆ
ಕೊರೊನಾ ವೈರಸ್: ಇಸ್ರೇಲ್‌ನಿಂದ ಭಾರತಕ್ಕೆ ವೈದ್ಯಕೀಯ ಸಲಕರಣೆಗಳ ಪೂರೈಕೆ
ಇಸ್ರೇಲ್‌ನಲ್ಲಿ ಚೀನಾ ರಾಯಭಾರಿ ಸಾವು
ಕೋವಿಡ್ ಆತಂಕಕ್ಕೆ 'ನಮಸ್ತೆ' ಮುನ್ನೆಚ್ಚರಿಕೆ: ಇಸ್ರೇಲ್ ಪ್ರಧಾನಿಯ ಸಲಹೆ
ಇಸ್ರೇಲ್ | ಸ್ಪಷ್ಟ ಬಹುಮತ ಪಡೆಯಲು ಬೆಂಜಮಿನ್‌ ವಿಫಲ: ಮತ್ತೆ ರಾಜಕೀಯ ಬಿಕ್ಕಟ್ಟು
'); $('#div-gpt-ad-633480-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-633480'); }); googletag.cmd.push(function() { googletag.display('gpt-text-700x20-ad2-633480'); }); },300); var x1 = $('#node-633480 .field-name-body .field-items div.field-item > p'); if(x1 != null && x1.length != 0) { $('#node-633480 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-633480').addClass('inartprocessed'); } else $('#in-article-633480').hide(); } else { _taboola.push({article:'auto', url:'https://www.prajavani.net/columns/seemoollanghana/benjamin-netanyahu-re-elected-633480.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-633480', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-633480'); }); googletag.cmd.push(function() { googletag.display('gpt-text-300x20-ad2-633480'); }); // Remove current Outbrain //$('#dk-art-outbrain-633480').remove(); //ad before trending $('#mob_rhs1_633480').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-633480 .field-name-body .field-items div.field-item > p'); if(x1 != null && x1.length != 0) { $('#node-633480 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-633480 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-633480'); }); } else { $('#in-article-mob-633480').hide(); $('#in-article-mob-3rd-633480').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-633480','#in-article-757623','#in-article-750282','#in-article-741703','#in-article-732689']; var twids = ['#twblock_633480','#twblock_757623','#twblock_750282','#twblock_741703','#twblock_732689']; var twdataids = ['#twdatablk_633480','#twdatablk_757623','#twdatablk_750282','#twdatablk_741703','#twdatablk_732689']; var obURLs = ['https://www.prajavani.net/columns/seemoollanghana/benjamin-netanyahu-re-elected-633480.html','https://www.prajavani.net/columns/seemoollanghana/whats-behind-arab-israeli-relationship-757623.html','https://www.prajavani.net/columns/seemoollanghana/amid-china-tension-india-hails-taiwans-late-mr-democracy-president-lee-teng-hui-750282.html','https://www.prajavani.net/columns/seemoollanghana/john-bolton-book-the-room-where-it-happened-741703.html','https://www.prajavani.net/columns/seemoollanghana/ladakh-issue-between-india-and-china-732689.html']; var vuukleIds = ['#vuukle-comments-633480','#vuukle-comments-757623','#vuukle-comments-750282','#vuukle-comments-741703','#vuukle-comments-732689']; // var nids = [633480,757623,750282,741703,732689]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
`ಟೆಕ್ನೋ ಸ್ಪಾರ್ಕ್-18′ ಸ್ಪರ್ಧೆ: ಆಳ್ವಾಸ್‍ಗೆ ಪ್ರಥಮ ಬಹುಮಾನ | GulfKannadiga | ಗಲ್ಫ್ ಕನ್ನಡಿಗ
Home Karavali `ಟೆಕ್ನೋ ಸ್ಪಾರ್ಕ್-18′ ಸ್ಪರ್ಧೆ: ಆಳ್ವಾಸ್‍ಗೆ ಪ್ರಥಮ ಬಹುಮಾನ
ಮೂಡಬಿದಿರೆ: ಶ್ರೀದೇವಿ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ `ಟೆಕ್ನೋ ಸ್ಪಾರ್ಕ್-18′ ಎಂಬ ರಾಷ್ಟ ಮಟ್ಟದ ವಿಜ್ಞಾನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜ್ಞಾನ ಮಾದರಿಯಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ರಾಷ್ಟ್ರ ಮಟ್ಟದ ಈ ಸ್ಪರ್ಧೆಯಲ್ಲಿ ಒಟ್ಟು 80 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಳಾದ ರಾಜಂತ್, ವರುಣ್ ಜೆ, ತೇಜನ್ ಶಿಂದೆ, ಪ್ರತೀಕ್ ಶೆಟ್ಟಿ ತಂಡ ತಯಾರಿಸಿದ 'ಎಕ್ಸ್ ಎಲ್ ಆರ್ 8' ವಿಜ್ಞಾನ ಮಾದರಿ ಪ್ರಥಮ ಸ್ಥಾನ ಗಳಿಸಿ, 20,000 ರೂ.ಗಳನ್ನು ಬಹುಮಾನ ರೂಪದಲ್ಲಿ ಪಡೆದುಕೊಂಡಿದೆ.
ಇದೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ವಿದ್ಯಾಥಿಗಳಾದ ಅನುಷ್, ಸುಪ್ರೀತ್, ಗಜಾನನ, ಈಶ್ವರ್, ರಾಕೇಶ್, ಶ್ರೀಶಾ ತಂಡ ತಯಾರಿಸಿದ 'ಅಪ್‍ಗ್ರೆಡೆಶನ್ ಆಫ್ ಎಲ್.ಡಿ.ಆರ್' ಮಾದರಿ ಗಳಿಸಿತು. ರೂಪಾಯಿ 15,000 ಬಹುಮಾನ ದ್ವಿತೀಯ ಸ್ಥಾನಕ್ಕೆ ಲಭಿಸಿದೆ. ಪ್ರಮಂತ್ ಮೋಗಿ, ಶ್ರೇಯಾಂಕ್ ಶೇಟ್, ನಿತಿನ್ ವಿಜ್ಞಾನ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ ಗಳಿಸಿ ರೂಪಾಯಿ 6000 ನಗದು ಬಹುಮಾನ ಪಡೆದಿದ್ದಾರೆ.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಲೆಕ್ಟ್ರೋನಿಕ್ಸ್ ವಿಭಾಗದ ಉಪನ್ಯಾಸಕರಾದ ರತಿಕಾ ನಾಯಕ್, ರೇಖಾ ಗೋರ್ಪಡೆ, ರಮ್ಯ ಇವರಿಗೆ ಮಾರ್ಗದರ್ಶನ ನೀಡಿದ್ದರು. ''ಇನೋವೇಶನ್ ಆ್ಯಂಡ್ ಸೈನ್ಸ್'' ಎಂಬ ಮೂಲಚಿಂತನೆಯಲ್ಲಿ, ವಿಜ್ಞಾನ ಮಾದರಿ ಸ್ಪರ್ಧೆಗಳನ್ನು ನೆರವೇರಿಸಲಾಗಿತ್ತು. ವಿದ್ಯಾರ್ಥಿಗಳು ತಃಖ್ತೆಗಳ ಸಹಾಯದಿಂದ ವಿಷಯದ ವಿವರಣೆ ನೀಡಬಹುದಾಗಿತ್ತು. ಸೃಜನಾಶೀಲತೆ, ವೈಜ್ಞಾನಿಕ ಚಿಂತನೆ ಮತ್ತು ಆಳವಡಿಕೆ, ಮೂಲ ವೈಜ್ಞಾನಿಕ ಆವಿಷ್ಕಾರ, ತಾಂತ್ರಿಕ ಕೌಶಲ್ಯತೆ ಹಾಗೂ ವಿಷಯದ ಪ್ರಸ್ತುತಪಡಿಸುವಿಕೆ ಬಹುಮಾನವನ್ನು ನಿರ್ಧರಿಸಲು ಆಳಡಿಸಲಾದ ಮಾನದಂಡಗಳಾಗಿದ್ದವು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿದ್ಯಾರ್ಥಿಗಳು ಎಳವೆಯಲ್ಲಿಯೇ ವೈಜ್ಞಾನಿಕ ಮನೋಭಾವ ಬೆಳಸಿಕೊಂಡು, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಭವಿಷ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳ ಲಭಿಸುತ್ತವೆ. ಆಳ್ವಾಸ್ ಇಂತಹ ಪ್ರತಿಭಾನ್ವಿತರನ್ನು ಸದಾ ಪ್ರೋತ್ಸಾಹಿಸುತ್ತದೆ ಎಂದರು. ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್ ಶೆಟ್ಟಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಈ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ: ಡಿ.ಕೆ ಶಿವಕುಮಾರ್ - Times of Deenabandhu
ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಶಿರಾದಲ್ಲಿ ಪ್ರಚಾರ ನಡೆಸುತ್ತಿರುವ ಡಿ.ಕೆ ಶಿವಕುಮಾರ್ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತಾನಾಡಿ ಈ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ. ಈ ಸರ್ಕಾರದ ದುರಾಡಳಿತ ವಿರುದ್ಧ ಸಂದೇಶ ರವಾಣಿಸಬೇಕಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಇರಲಿ, ಇಲ್ಲದಿರಲಿ ಜನರು ಹಾಗೂ ಸಮಾಜಕ್ಕಾಗಿ ಹೋರಾಟ ಮಾಡಲಿದೆ.