text
stringlengths
0
61.5k
ಶಿರಾ ಕ್ಷೇತ್ರದ ಜನ ನಮಗೆ ಯಾವರೀತಿ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ನಾವು ಹೇಳುವುದಕ್ಕಿಂತ ನೀವೇ ಬಂದು ನೋಡಬೇಕು. ಜನ ಬೆಂಬಲ ಇಲ್ಲ ಅಂತಾ ಬಿಜೆಪಿ ಬೆಳ್ಳಗ್ಗೆಯೇ ದುಡ್ಡು ಹಂಚುತ್ತಿದ್ದಾರೆ. ಅವರು ಹತಾಶರಾಗಿದ್ದಾರೆ. ಹೀಗಾಗಿ ಅವರು ದುಡ್ಡಿನಿಂದ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು, ಪೊಲೀಸರು ಅವರಿಗೆ ಸಹಕಾರ ನೀಡುತ್ತಿದ್ದಾರೆ.
ನಮ್ಮ ನಾಯಕರು ಪ್ರಚಾರ ಮಾಡಿದಷ್ಟು ಬಿಜೆಪಿ ಅಭ್ಯರ್ಥಿ ಸೋಲುತ್ತಾರೆ ಎಂಬ ಆತಂಕದಲ್ಲಿ ಪ್ರಚಾರಕ್ಕೆ ಅಡ್ಡಿಪಡಿಸಲಾಗಿದೆ. ಇದು ಬಿಜೆಪಿಯ ಸಂಸ್ಕೃತಿ ಏನು ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಕೇಳುವ ಹಕ್ಕಿದೆ.
ಮಾಜಿ ಮುಖ್ಯಮಂತ್ರಿಗಳಿಗೆ ಅಡ್ಡ ಹಾಕಿ ಪ್ರಚಾರ ಮಾಡಬೇಡ ಎನ್ನುತ್ತಾರೆ. ಪೊಲೀಸ್ ಅಧಿಕಾರಿಗಳು ಹಿಂಬಾಗಿಲಿನಿಂದ ಹೋಗಿ ಎಂದು ತಿಳಿಸುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಈ ಕಾರಣದಿಂದಲೇ ಸರ್ಕಾರವನ್ನು ವಜಾ ಮಾಡಬೇಕು.
ಇದಕ್ಕೆ ಸಹಕಾರ ಕೊಟ್ಟ ಪೊಲೀಸ್ ಅಧಿಕಾಗಳನ್ನು ವಜಾಗಿಳಿಸಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಡಿಸಿಪಿ ಏನು ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳದಿದ್ದರೆ ನಾವು ಅವರ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುತ್ತೇವೆ. ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾಳೆ ಕ್ಷೇತ್ರದ ಜನ ಅವರ ಸಭೆಗೂ ಅಡ್ಡಿ ಪಡಿಸುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆಮೇಲೆ ನಮ್ಮ ಕಾರ್ಯಕರ್ತರು ಏನು ಅಂತಾ ತೋರಿಸುತ್ತಾರೆ.
ಬಿಜೆಪಿ ಅವರು ದುಡ್ಡು ಹಂಚುತ್ತಿರುವುದು ಆರೋಪ ಅಲ್ಲ, ನಿಜ. ಮಾಧ್ಯಮಗಳು ಇದನ್ನು ಜನರಿಗೆ ತಿಳಿಸಬೇಕೇ ಹೊರತು ಅದನ್ನು ಮುಚ್ಚಿಹಾಕಬಾರದು. ಪ್ರಜಾಪ್ರಭುತ್ವ ಉಳಿಸಲು ಮಾಧ್ಯಮಗಳೇ ಚುನಾವಣಾ ಆಯೋಗಕ್ಕೆ ದೂರು ನೀಡಬೇಕು.
ಜನ ಸರ್ಕಾರದ ವಿರುದ್ಧ ಮತ ಹಾಕಲಿದ್ದಾರೆ. ಸರ್ಕಾರ ಉಳಿಯುತ್ತದೋ ಇಲ್ಲವೋ ಎಂಬುದನ್ನು ಬಿಜೆಪಿ ಶಾಸಕರು, ಮಾಜಿ ಮಂತ್ರಿ, ನಾಯಕರೇ ಹೇಳುತ್ತಿದ್ದಾರೆ. ನಾವು ಇದನ್ನು ಗಮನಿಸುತ್ತಿದ್ದೇನೆ.
ಆಶಾವಾದಿ ರಾಜಕಾರಣ ಇರಬೇಕು. ಹೀಗಾಗಿ ಕುಮಾರಸ್ವಾಮಿ ಅವರಿಗೆ ಶುಭಕೋರುತ್ತೇನೆ. ನಮಗೆ ಎರಡೂ ಪಕ್ಷಗಳು ನೇರ ಎದುರಾಳಿಗಳೇ, ಒಬ್ಬರು ಶಕ್ತಿಶಾಲಿ, ಮತ್ತೊಬ್ಬರು ದುರ್ಬಲ ಎಂದು ಹೇಳುವುದಿಲ್ಲ. ಎರಡೂ ಪಕ್ಷದ ಅಭ್ಯರ್ಥಿಗಳು ಸೋತು, ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದಿದ್ದಾರೆ
ಬ್ಯಾಂಗಲೂರ್‌ಗೆ ಬೈಬೈ ಹೇಳಿ.. ಬೆಂಗಳೂರಿಗೆ ಜೈಜೈ ಎನ್ನಿ! | Call me Bangaluru and not Bangalore!! - Kannada Oneindia
55 min ago ಅಭ್ಯರ್ಥಿ ನೋಡಿ ಮತಹಾಕಿ, ಮೋದಿ ನೋಡಿ ಅಲ್ಲ: ಸಿದ್ದರಾಮಯ್ಯ
ಬ್ಯಾಂಗಲೂರ್‌ಗೆ ಬೈಬೈ ಹೇಳಿ.. ಬೆಂಗಳೂರಿಗೆ ಜೈಜೈ ಎನ್ನಿ!
ಬೆಂಗಳೂರು : ಸುವರ್ಣ ಕರ್ನಾಟಕ ಸಂಭ್ರಮದ ಹಿನ್ನೆಲೆಯಲ್ಲಿ ರಾಜಧಾನಿ ನಗರ ಸೇರಿದಂತೆ ವಿವಿಧ ನಗರಗಳ ಹೆಸರುಗಳನ್ನು ಬುಧವಾರ(ನ.1) ಕನ್ನಡೀಕರಿಸಲಾಗುತ್ತಿದೆ.
ಇನ್ನು ಮುಂದೆ ಬ್ಯಾಂಗಲೂರ್‌, ಬೆಂಗಳೂರು ಆಗಲಿದೆ. ಅದೇ ರೀತಿ ಆವರಣದಲ್ಲಿ ಸೂಚಿಸಿರುವಂತೆ ಮೈಸೂರ್‌(ಮೈಸೂರು), ಬೆಲ್ಗಂ(ಬೆಳಗಾವಿ), ಗುಲ್ಬರ್ಗ(ಕಲ್ಪುರ್ಗಿ), ಹಾಸ್‌ಪೇಟ್‌(ಹೊಸಪೇಟೆ), ಹುಬ್ಲಿ(ಹುಬ್ಬಳ್ಳಿ), ಮ್ಯಾಂಗಲೂರ್‌(ಮಂಗಳೂರು), ಶಿಮೊಗ್ಗ(ಶಿವಮೊಗ್ಗ), ಚಿಕ್‌ಮಗಗೂರ್‌(ಚಿಕ್ಕಮಗಳೂರು) ಹೆಸರುಗಳು ಬದಲಾಗಲಿವೆ.
ಯು.ಆರ್‌.ಅನಂತಮೂರ್ತಿ ಸೇರಿದಂತೆ ನಾಡಿನ ಪ್ರಜ್ಞಾವಂತರು ಹೆಸರು ಬದಲಾವಣೆಗೆ ಸಲಹೆ ನೀಡಿದ್ದರು. ಕುಮಾರಸ್ವಾಮಿ ಸರ್ಕಾರ, ಬೆಳಗಾವಿ ಅಧಿವೇಶನದಲ್ಲಿ ಹೆಸರು ಬದಲಾವಣೆ ಬಗ್ಗೆ ತಾತ್ವಿಕ ತೀರ್ಮಾನ ಕೈಗೊಂಡಿದ್ದರು.
ಹೆಸರು ಬದಲಾವಣೆ ಪ್ರಕ್ರಿಯೆಗಳು ಸರ್ಕಾರದಿಂದ ಆರಂಭವಾಗುತ್ತವೆ. ಈ ಬಗ್ಗೆ ಅಧಿಕೃತ ಪ್ರಕಟಣೆ, ಅಧಿಸೂಚನೆಗಳು ಹೊರಡುತ್ತವೆ. ಅಂತಿಮವಾಗಿ ಈ ಬದಲಾವಣೆಯಾದ ಹೆಸರುಗಳನ್ನು ಬಳಸುವವರು, ಜನಪ್ರಿಯಗೊಳಿಸುವವರು ನಾವು ಮತ್ತು ನೀವು. ಹೀಗಾಗಿ ಇಂದಿನಿಂದಲೇ ಹೊಸ ಹೆಸರುಗಳನ್ನು ಬಳಸೋಣ.. ಕನ್ನಡತನ ಉಳಿಸೋಣ.
ಟಾಟಾಸ್ಕೈನಲ್ಲಿ ಕನ್ನಡ ಚಾನೆಲ್‌ಗಳ ತಿಂಗಳ ಪ್ಯಾಕ್‌ ಶುಲ್ಕ 249.ರೂ ಮಾತ್ರ! | Tata Sky Kannada Pack adds Two New Plans, Monthly, Long term Price and other details - Kannada Gizbot
ದೇಶದ ಡಿಟಿಎಚ್‌ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾಸ್ಕೈ ಈಗಾಗಲೇ ಗ್ರಾಹಕರಿಗೆ ಭಿನ್ನ ಭಿನ್ನ ಪ್ಯಾಕೆಜ್‌ಗಳಲ್ಲಿ ತಿಂಗಳ ಪ್ಲ್ಯಾನ್‌ಗಳನ್ನು ನೀಡಿದೆ. ಗ್ರಾಹಕರಿಗೆ ಅನುಕೂಲವಾಗಲೆಂದು ತಿಂಗಳ ಪ್ರಾದೇಶಿಕ ಚಾನೆಲ್ ಪ್ಯಾಕ್‌ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ಆದ್ರೆ ಇದೀಗ ಮತ್ತೆ ಮೂರು ತಿಂಗಳ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದ್ದು, ಅವು ಕನ್ನಡ ಚಾನೆಲ್‌ಗಳನ್ನು ಒಳಗೊಂಡಿವೆ.
ಹೌದು, ಟಾಟಾಸ್ಕೈ ಸಂಸ್ಥೆಯು ಹೊಸದಾಗಿ ಮೂರು ಕನ್ನಡ ಚಾನೆಲ್‌ಗಳ ವಿಶೇಷ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳು ಕ್ರಮವಾಗಿ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್, ಕನ್ನಡ ವ್ಯಾಲ್ಯೂ ಪ್ಲಸ್‌ ಪ್ಯಾಕ್ ಮತ್ತು ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್ ಹೆಸರಿನಲ್ಲಿವೆ. ಈ ಮೂರು ವಿಶೇಷ ಪ್ಯಾಕ್‌ಗಳು ತಿಂಗಳ, ಆರು ತಿಂಗಳ ಮತ್ತು ವಾರ್ಷಿಕ ಆಯ್ಕೆಯ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿವೆ. ಹಾಗಾದರೇ ಟಾಟಾಸ್ಕೈ ಪರಿಚಯಿಸಿರುವ ಹೊಸ ಕನ್ನಡ ಪ್ಯಾಕ್‌ಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.
ಟಾಟಾಸ್ಕೈನ ಈ ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ ಅಧಿಕ ಡೇಟಾ ಸಿಗುತ್ತೆ!
The Kannada plan from Tata Sky offers a total of 45 SD channels which includes 1 Hindi movie and 3 knowledge channels. to know more visit to kannada.gizbot.com
ಕನ್ನಡಿಗರೇ ಉದ್ಯೋಗ ಬೇಕೆ? ಕಸಾಪ ವೆಬ್ ತಾಣಕ್ಕೆ ಭೇಟಿ ಕೊಡಿ | Kannada Sahitya Parishat platform to provide Jobs for Kannadigas - Kannada Oneindia
» ಕನ್ನಡಿಗರೇ ಉದ್ಯೋಗ ಬೇಕೆ? ಕಸಾಪ ವೆಬ್ ತಾಣಕ್ಕೆ ಭೇಟಿ ಕೊಡಿ
Published: Monday, June 19, 2017, 13:16 [IST]
ಬೆಂಗಳೂರು, ಜೂನ್ 19: ಕನ್ನಡಿಗರಿಗೆ ಉದ್ಯೋಗ ನೀಡಲು ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿದೆ. ಕಸಾಪ ವೆಬ್ ಸೈಟ್ ನಲ್ಲಿ ಇದಕ್ಕಾಗಿ ಒಂದು ಅರ್ಜಿ ನಮೂನೆ ನೀಡಲಾಗಿದೆ.
ಇಲ್ಲಿ ವಿವರ ಸಲ್ಲಿಸಿದ ಆಕಾಂಕ್ಷಿಗಳಿಗೂ ಉದ್ಯೋಗದಾತ ಸಂಸ್ಥೆಗಳಿಗೂ ನಡುವೆ ಕಸಾಪ ಸಂಪರ್ಕ ಸೇತುವೆಯಾಗಲಿದೆ. ಈ ವ್ಯವಸ್ಥೆಯಿಂದ ಸುಮಾರು 125ಕ್ಕೂ ಅಧಿಕ ಮಂದಿಗೆ ಉದ್ಯೋಗ ಲಭಿಸಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದ್ದಾರೆ.
ಅಧ್ಯಕ್ಷರ ಕನಸು : ಡಾ. ಮನು ಬಳಿಗಾರ್ ಅವರು ಕಸಾಪ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಾಗ ಹೀಗೊಂದು ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಈಗ ಕಸಾಪದ ಅಧಿಕೃತ ವೆಬ್ ಸೈಟ್ ನಲ್ಲಿ ಉದ್ಯೋಗ ಒದಗಿಸುವ ವೇದಿಕೆ ನಿರ್ಮಾಣವಾಗಿದೆ. ವೆಬ್ ಸೈಟ್ ನ ಬಲಗಡೆಯಲ್ಲಿ 'ಉದ್ಯೋಗ ಅರ್ಜಿ' ಎಂಬ ವಿಭಾಗದಲ್ಲಿ ಕ್ಲಿಕ್ ಮಾಡಿ ಅರ್ಜಿ ತುಂಬಿ, ಸ್ವವಿವರವನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಕಳಿಸಿದ ಮೇಲೆ ?: ಆಕಾಂಕ್ಷಿಗಳು ಸಲ್ಲಿಸಿದ ವಿವರಗಳನ್ನು ಸೂಕ್ತವಾದ ಸಂಸ್ಥೆಗಳಿಗೆ ಕಳಿಸಲಾಗುವುದು. ನಂತರ ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆಯಬಹುದಾಗಿದೆ. ದುಬೈನಲ್ಲಿರುವ ತಿರು ಶ್ರೀಧರ್ ಎಂಬುವರು ಈ ವ್ಯವಸ್ಥೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ರಾಜ್ಯದ ಗ್ರೂಪ್ 'ಸಿ' ಹಾಗೂ 'ಡಿ' ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ನಿಯಮವಿದೆ. ಇನ್ನೂ ಅನೇಕ ಕಡೆ ಉದ್ಯೋಗ ಮೀಸಲಾತಿ ಇದ್ದರೂ ಕನ್ನಡಿಗರಿಗೆ ಮಾಹಿತಿ ಕೊರತೆ ಉಂಟಾಗಿದೆ ಎಂದು ಡಾ. ಮನು ಬಳಿಗಾರ್ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕಿಸಿಕೊಡಬೇಕು" ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಮಹತ್ವದ ಯೋಜನೆಗಳಲ್ಲೊಂದಾಗಿದೆ.
ಈ ನಿಟ್ಟಿನಲ್ಲಿ 'ಸಿ' ಮತ್ತು 'ಡಿ' ವಿಭಾಗದ ಉದ್ಯೋಗಗಳ ಆಕಾಂಕ್ಷಿ ಕನ್ನಡಿಗರಿಂದ ವಿವರಗಳನ್ನು ಪಡೆದು ಆ ವಿವರಗಳನ್ನು ಕನ್ನಡ ನಾಡಿನಲ್ಲಿರುವ ಎಲ್ಲಾ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ತಲುಪಿಸುವ ವ್ಯವಸ್ಥೆಗೆ ಈ ತಾಣದಲ್ಲಿ ಚಾಲನೆಯನ್ನು ನೀಡಲಾಗಿದೆ. 'ಕನ್ನಡವು ಅನ್ನದ ಭಾಷೆಯಾಗಬೇಕು' ಎಂಬ ನಾಡಿನ ಹಿರಿಯರ ಆಶಯದಂತೆ ರೂಪಿಸಲಾಗಿರುವ ಈ ಯೋಜನೆಯನ್ನು, ಉದ್ಯೋಗಾಂಕ್ಷಿ ಕನ್ನಡ ಯುವಜನತೆ ಸದುಪಯೋಗಪಡಿಸಿಕೊಳ್ಳುತ್ತಾರೆಂಬ ಆಶಯ ನಮ್ಮದು. -ಮನು ಬಳಿಗಾರ್, ಕಸಾಪ ಅಧ್ಯಕ್ಷ. ಕಸಾಪದ ಅಧಿಕೃತ ವೆಬ್ ಸೈಟ್ ಲಿಂಕ್
kannada sahitya parishat, jobs, kannada, manu baligar, ಕನ್ನಡ ಸಾಹಿತ್ಯ ಪರಿಷತ್ತು, ಉದ್ಯೋಗ, ಕನ್ನಡ, ಮನು ಬಳಿಗಾರ್
ಬಜೆಟ್ ಎಫೆಕ್ಟ್: ನಿಮ್ಮ ಸಂಬಳ ಮತ್ತು ಪಿಎಫ್​ಗೆ ಬೀಳಲಿದೆ ಕತ್ತರಿ | Employees to get lesser take-home salary and PF amount after Wage Code and Budget come to effect– News18 Kannada
ಏಪ್ರಿಲ್​ನಿಂದ ಜಾರಿಗೆ ಬರಲಿರುವ ವೇಜ್ ಕೋಡ್ ಮತ್ತು ನಿನ್ನೆ ಪ್ರಕಟವಾದ ಬಜೆಟ್ ಎಫೆಕ್ಟ್​ನಿಂದ ತಿಂಗಳ ಸಂಬಳದ ಉದ್ಯೋಗಿಗಳಿಗೆ ಡಬಲ್ ಶಾಕ್ ಕಾದಿದೆ. ಕೈಸೇರುವ ಸಂಬಳ ಹಾಗೂ ಪಿಎಫ್ ಹಣ ಎರಡಕ್ಕೂ ಸಂಚಕಾರ ಬರಲಿದೆ.
Last Updated : February 02, 2021, 13:13 IST
ನವದೆಹಲಿ: ಸಂಬಳ ನೆಚ್ಚಿ ಜೀವನ ನಡೆಸುವವರಿಗೆ ಡಬಲ್ ಶಾಕ್ ಕಾದಿದೆ. ಕೇಂದ್ರ ಬಜೆಟ್​ನ ಕೆಲ ನಿರ್ಧಾರಗಳು ಹಾಗೂ ಹೊಸದಾಗಿ ಜಾರಿಯಾಗಿರುವ ವೇಜ್ ಕೋಡ್ ನಿಯಮಗಳಿಂದಾಗಿ ಉದ್ಯೋಗಿಯ ಕೈಸೇರುವ ತಿಂಗಳ ಸಂಬಳಕ್ಕೆ ಕತ್ತರಿ ಬೀಳಲಿದೆ. ಹಾಗೆಯೇ, ನಿವೃತ್ತಿ ಪಿಂಚಣಿಯ ಮೊತ್ತವೂ ತುಸು ಕಡಿಮೆಯಾಗಲಿದೆ. ಟ್ಯಾಕ್ಸ್ ಫ್ರೀ ರಿಟರ್ನ್ ಪಡೆಯಲು ಪ್ರಾವಿಡೆಂಟ್ ಫಂಡ್ ಮೇಲೆ ಮಾಡುವ ಹೂಡಿಕೆಗೆ ನಿನ್ನೆಯ ಬಜೆಟ್​ನಲ್ಲಿ 2.5 ಲಕ್ಷ ರೂಗೆ ಮಿತಿ ಹಾಕಲಾಗಿದೆ. ಅಂದರೆ ನಿಮ್ಮ ಪಿಎಫ್ ಖಾತೆಗೆ ಕಂಪನಿಗಳು ಹಾಕುವ ಹಣದ ಮೊತ್ತ ವರ್ಷಕ್ಕೆ 2.5 ಲಕ್ಷಕ್ಕಿಂತ ಹೆಚ್ಚು ಇದ್ದರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ಕಳೆದ ಬಜೆಟ್​ನಲ್ಲಿ ಈ ಮಿತಿ ವರ್ಷಕ್ಕೆ 7.5 ಲಕ್ಷ ರೂ ಎಂದು ನಿಗದಿ ಮಾಡಲಾಗಿತ್ತು. ಈಗ ಈ ಮಿತಿ ಮೀರಿದರೆ ವಿಧಿಸಲಾಗುವ ತೆರಿಗೆಯು ಉದ್ಯೋಗಿಯಿಂದಲೇ ವಸೂಲಿ ಆಗುತ್ತದೆ. ಅಂದರೆ ಪಿಎಫ್ ಹಿಂಪಡೆಯುವಾಗ ಈ ತೆರಿಗೆಯನ್ನ ಕಡಿದುಕೊಳ್ಳಲಾಗುತ್ತದೆ.
ಇನ್ನು, ಸಂಸತ್​ನ ಅನುಮೋದನೆ ಪಡೆದಿರುವ ವೇತನ ಸಂಹಿತೆ (ವೇಜ್ ಕೋಡ್) ಜಾರಿಗೆ ಬಂದರೆ ಅದೂ ಕೂಡ ಉದ್ಯೋಗಿಗೆ ತುಸು ಹಿನ್ನಡೆ ತರಬಹುದು. ಈ ಕಾಯ್ದೆ ಪ್ರಕಾರ ಕಂಪನಿ ತನ್ನ ಉದ್ಯೋಗಿಗೆ ನೀಡುವ ಸಂಬಳದಲ್ಲಿ ಭತ್ಯೆ ಪ್ರಮಾಣವನ್ನ ಶೇ. 50ಕ್ಕೆ ಮಿತಿಗೊಳಿಸಿದೆ. ಉದ್ಯೋಗಿಗೆ ನೀಡುವ ಪಿಎಫ್ ಪ್ರಮಾಣವನ್ನ ಹೆಚ್ಚಿಸಬೇಕಾಗುತ್ತದೆ. ಹೀಗಾಗಿ, ಅವರ ಸಂಬಳದಿಂದಲೇ ಈ ಹಣವನ್ನ ಕಂಪನಿಗಳು ಕಡಿದುಕೊಳ್ಳುತ್ತವೆ. ಇದರಿಂದ ಉದ್ಯೋಗಿಯ ಕೈ ಸೇರುವ ಸಂಬಳ ಇಳಿಕೆಯಾಗುತ್ತದೆ.
ಇದನ್ನೂ ಓದಿ: Gold Price: ಬಜೆಟ್ ಘೋಷಣೆ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದರ ಮತ್ತೆ ಏರಿಕೆ
ಅತ್ತ, ವರ್ಷಕ್ಕೆ 2.5 ಲಕ್ಷಕ್ಕಿಂತ ಹೆಚ್ಚು ಪಿಎಫ್ ಮೊತ್ತ ಇದ್ದರೆ ಅದಕ್ಕೂ ಸರ್ಕಾರ ತೆರಿಗೆಯ ಕತ್ತರಿ ಹಾಕುತ್ತದೆ. ಇದು ಒಂದು ರೀತಿಯಲ್ಲಿ ಉದ್ಯೋಗಿ ಅಡಕತ್ತರಿಯಲ್ಲಿ ಸಿಕ್ಕ ಸ್ಥಿತಿಯಾಗಿದೆ. ಅತ್ತ ಕೈ ಸೇರುವ ಸಂಬಳವೂ ಕಡಿಮೆ, ಪಿಂಚಣಿ ಹಣವೂ ಕಡಿಮೆ ಆಗುತ್ತದೆ.
ಸಾವು-ಬದುಕಿನ ನಡುವೆ ಅಥ್ಲೀಟ್ | Prajavani
ಸಾವು-ಬದುಕಿನ ನಡುವೆ ಅಥ್ಲೀಟ್
Published: 28 ಜೂನ್ 2012, 15:25 IST
Updated: 28 ಜೂನ್ 2012, 15:25 IST
ಹುಬ್ಬಳ್ಳಿ: ಚಿಗರೆಯಂತೆ ಓಡುತ್ತಾ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದ ದೂರದ ಓಟಗಾರ್ತಿ ಕಲ್ಲವ್ವ ಸಿಂಧೋಗಿ ಇದೀಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ. ಆಕೆಯನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಆಕೆ, ಈ ವರ್ಷವಷ್ಟೇ ಪದವಿ ಪೂರೈಸಿದ್ದಾಳೆ. ರಾಷ್ಟ್ರೀಯ ಕಿರಿಯರ ಶಿಬಿರಕ್ಕೆ ಆಯ್ಕೆಯಾಗಿದ್ದ ಕಲ್ಲವ್ವ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದಳು. ಕಳೆದ ಸಲದ ಕರ್ನಾಟಕ ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲೂ ಆಕೆ ಬಂಗಾರದ ಪದಕ ಗಳಿಸಿದ್ದಳು.
ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರಿಂದ ಆಕೆ ಅಸ್ವಸ್ಥಗೊಂಡಿದ್ದಳು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಎರಡೂ ಕಾಲುಗಳ ಸ್ಪರ್ಶಜ್ಞಾನವನ್ನೇ ಆಕೆ ಕಳೆದುಕೊಂಡಿದ್ದು, ಹೊಟ್ಟೆ ನೋವಿನಿಂದಲೂ ಬಳಲುತ್ತಿದ್ದಾಳೆ.
ಧಾರವಾಡ ಹೊರವಲಯದ ಉಪ್ಪಿನ ಬೆಟಗೇರಿ ಗ್ರಾಮದ ಈ ಹುಡುಗಿ, ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕೋಚ್ ಶ್ಯಾಮಲಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಸುತ್ತಿದ್ದಳು. 3-4 ದಿನಗಳಿಂದ ಕಲ್ಲವ್ವ ಅಭ್ಯಾಸಕ್ಕೆ ಬಾರದ್ದರಿಂದ ಆತಂಕಗೊಂಡ ಶ್ಯಾಮಲಾ, ಪತಿ ಸುಜಯಕುಮಾರ್ ಮತ್ತು ಆಕೆಯ ಗೆಳತಿಯರೊಂದಿಗೆ ಉಪ್ಪಿನ ಬೆಟಗೇರಿಗೆ ಹೋದರು. ಮನೆಯ ಪುಟ್ಟ ಕೊಣೆಯಲ್ಲಿ ಕಲ್ಲವ್ವ ಚಿಂತಾಜನಕ ಸ್ಥಿತಿಯಲ್ಲಿ ಹಾಸಿಗೆ ಹಿಡಿದ ದೃಶ್ಯ ಕಂಡು ಅವರೆಲ್ಲ ಬೆಚ್ಚಿಬಿದ್ದರು.
ಕಲ್ಲವ್ವ ಅನುಭವಿಸುತ್ತಿದ್ದ ತೊಂದರೆಯ ಗಾಂಭೀರ್ಯವನ್ನು ಗ್ರಹಿಸದ ಆಕೆಯ ಪಾಲಕರು ಮನೆಯಲ್ಲೇ ಸುಮ್ಮನೆ ಮಲಗಿಸಿದ್ದರು. ಆಕೆಯ ಪಾಲಕರಿಗೆ ವಿಷಯವನ್ನು ಮನವರಿಕೆ ಮಾಡಿಕೊಟ್ಟ ಜೆಎಸ್‌ಎಸ್ ಕಾಲೇಜು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ ಕೋಚ್‌ಗಳು ಹಾಗೂ ಆಕೆಯ ಸಹವರ್ತಿಗಳ ಸಹಾಯದಿಂದ ಕಲ್ಲವ್ವಳನ್ನು ಚಿಕಿತ್ಸೆಗೆ ಕರೆತಂದರು. ಮೊದಲು ಧಾರವಾಡದ ಹೋಮಿಯೋಪತಿ ಆಸ್ಪತ್ರೆ ಹಾಗೂ ಬಳಿಕ ಹುಬ್ಬಳ್ಳಿಯ ಕಿಮ್ಸಗೆ ಆಕೆಯನ್ನು ದಾಖಲಿಸಲಾಯಿತು. ಎರಡು ದಿನಗಳ ನಂತರ ಆಕೆಯನ್ನು ಕೆಎಲ್‌ಇ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು.
ಈ ಅಪೂರ್ವ ಕ್ರೀಡಾ ಪ್ರತಿಭೆಯ ತಂದೆ-ತಾಯಿಗಳು ಕೂಲಿ ಕಾರ್ಮಿಕರಾಗಿದ್ದು, ಅವಳ ಚಿಕಿತ್ಸಾ ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿ ಇಲ್ಲ. ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿರುವ ಕಲ್ಲವ್ವ ವೈದ್ಯಕೀಯ ವೆಚ್ಚಕ್ಕಾಗಿ ಕ್ರೀಡಾ ಪೋಷಕರ ನೆರವಿನ ನಿರೀಕ್ಷೆಯಲ್ಲಿದ್ದಾಳೆ. ಈ ಹುಡುಗಿಯ ಎಲ್ಲ ಸಹಪಾಠಿಗಳು ತಮ್ಮ ತಲಾ ರೂ 2,000 ಕ್ರೀಡಾ ಶಿಷ್ಯ ವೇತನವನ್ನು ಚಿಕಿತ್ಸೆಗಾಗಿ ದೇಣಿಗೆ ನೀಡುವ ಮೂಲಕ ಹೃದಯ ವೈಶಾಲ್ಯ ಮೆರೆದರು. ತಮ್ಮ ಗೆಳತಿಯ ಬಗೆಗೆ ಕಾಳಜಿಯನ್ನೂ ವ್ಯಕ್ತಪಡಿಸಿದರು. ಕೆಎಲ್‌ಇ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರುವ ಈ ಹುಡುಗಿ ಇನ್ನೂ ಪ್ರಾಣಾಪಾಯದಿಂದ ಪಾರಾಗಿಲ್ಲ. ಜೆಎಸ್‌ಎಸ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಸ್. ಭೀಮಣ್ಣವರ, ಹಾಲಿ ನಿರ್ದೇಶಕ ಜಿನ್ನಪ್ಪ ಮತ್ತಿತರರು ಅವಳ ಸಹಾಯಕ್ಕೆ ಧಾವಿಸಿದ್ದಾರೆ. ಶ್ಯಾಮಲಾ ಅವರ ಕಾಳಜಿಗೆ ಕ್ರೀಡಾ ವಲಯ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಮಧ್ಯೆ ಮಾಜಿ ಕ್ರೀಡಾಪಟುವೂ ಆಗಿರುವ ಪಾಲಿಕೆ ಸದಸ್ಯ ಶಿವು ಹಿರೇಮಠ ನೇತೃತ್ವದಲ್ಲಿ ಕೋಚ್‌ಗಳು, ಕ್ರೀಡಾಪಟುಗಳು ಹಾಗೂ ಕ್ರೀಡಾಪ್ರಿಯರು ಸಭೆ ಸೇರಿ ಕಲ್ಲವ್ವಳ ಸಹಾಯಕ್ಕೆ ಧಾವಿಸಲು ನಿರ್ಧರಿಸಿದರು. ಕೆಲವರು ಸ್ಥಳದಲ್ಲೇ ದೇಣಿಗೆಯನ್ನೂ ನೀಡಿದರು.
ಪ್ರತಿಭೆಗೆ ನೆರವಾಗಿ
ಅಪಾರ ವೆಚ್ಚದ ಚಿಕಿತ್ಸೆ ಪಡೆಯುತ್ತಿರುವ ಈ ಪ್ರತಿಭಾನ್ವಿತ ಕ್ರೀಡಾ ಪಟುವಿಗೆ ನೆರವಿನ ಹಸ್ತ ನೀಡಲು ಇಚ್ಛೆ ಯುಳ್ಳವರು ಎಸ್.ಎಸ್. ಅಗಡಿ (99161 88603) ಇಲ್ಲವೆ ಶಿವು ಹಿರೇಮಠ (97400 24123) ಅವರನ್ನು ಸಂಪರ್ಕಿಸಬಹುದು.
ಸಿಂಹ ರಾಶಿಯ ಮಕ್ಕಳ ಸ್ವಭಾವ ಹೇಗಿರುತ್ತೆ? | Webdunia Kannada
ಬೆಂಗಳೂರು| guna| Last Modified ಗುರುವಾರ, 23 ಜೂನ್ 2016 (14:14 IST)
ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ತರಗತಿಯಲ್ಲಿರಬಹುದು. ಎಲ್ಲಿದ್ದರೂ ತಂಡಕ್ಕೆ ಸಿಂಹ ರಾಶಿಯ ಮಗುವೇ ಪುಟಾಣಿ ಹೀರೋ/ ಹೀರೋಯಿನ್. ಈ ರಾಶಿಯ ಮಕ್ಕಳು ತುಂಬ ಬುದ್ಧಿವಂತರಾಗಿರುತ್ತಾರೆ. ಖುಷಿಯಿಂದಿರುತ್ತಾರೆ. ಜಗಳದಲ್ಲೂ ಅಷ್ಟೆ, ಸಿಟ್ಟಿಗೆದ್ದ ಸಿಂಹದಂತೆಯೇ ಸಿಂಹ ರಾಶಿಯ ಮಕ್ಕಳು ಕಾದಾಡುತ್ತಾರೆ. ಹಾಗಾಗಿ ಜಗಳಕ್ಕೆ ಇವರನ್ನು ಉತ್ತೇಜಿಸುವುದು ಬೇಡ.
ಸಿಂಹ ರಾಶಿಯ ಮಕ್ಕಳಲ್ಲಿ ಹುಡುಗರು ತುಂಬ ಗಟ್ಟಿಮುಟ್ಟಾದ ಶರೀರ ಹೊಂದಿರುತ್ತಾರೆ. ಹುಡುಗಿಯರು ಚೆಂದದ ಶರೀರ, ಮುಖ ಹೊಂದಿರುತ್ತಾರೆ. ತುಂಬ ಬೇಗ ಯಾವುದನ್ನೂ ಕಲಿತುಕೊಳ್ಳಬಲ್ಲ ಬುದ್ಧಿಮತ್ತೆ ಇವರಿಗಿರುತ್ತದೆ. ಆದರೆ ತಮಗಿಷ್ಟವಾದರೆ ಮಾತ್ರ ಕಲಿಯುತ್ತಾರೆ. ಇಲ್ಲವಾದರೆ ಒತ್ತಾಯಿಸಿದರೂ ಇವರು ಕಲಿಯುವುದಿಲ್ಲ. ಆದರೆ ಇವರು ಕಲಿತಾಗ ಇವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಆಗ ಅವರ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ತಮ್ಮ ಗೆಳೆಯರಿಗೆ, ಗೆಳತಿಯರಿಗೆ ಹಣವನ್ನು ಸಾಲವಾಗಿಯೂ ಇವರು ಕೆಲವೊಮ್ಮೆ ನೀಡುತ್ತಾರೆ. ಆದರೆ, ಅದನ್ನು ವಾಪಸ್ ಪಡೆಯಲು ಮರೆತೇ ಹೋಗುತ್ತದೆ. ಪಾರ್ಟಿಗೆ ಹೋಗುವುದು, ಮಜಾ ಮಾಡೋದು ಎಲ್ಲ ಇವರಿಗಿಷ್ಟ. ಇಂಥ ಮಕ್ಕಳನ್ನು ತುಂಬ ಪ್ರೀತಿಯಿಂದ, ಸ್ವಲ್ಪ ಸ್ಟ್ರಿಕ್ಟ್ ಆಗಿ ಬೆಳೆಸಬೇಕು. ಹಾಗಾದರೆ ಇವರು ಸರಿಯಾಗಿ ಮುಂದೆ ಸಾಗಬಲ್ಲರು.
ಸ್ಯಾಂಡಲ್‍ವುಡ್‍ನ ಹಿರಿಯ ನಟ ಶಂಕರ್ ರಾವ್ ವಿಧಿವಶ..! – EESANJE / ಈ ಸಂಜೆ
October 18, 2021 Sunil Kumar Veteran actor Shankar Rao passes away
ಬೆಂಗಳೂರು, ಅ. 18- ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಜನಪ್ರಿಯ ನಟರಾಗಿದ್ದ ಶಂಕರ್‍ರಾವ್ ಅವರು ಇಂದು ಬೆಳಗ್ಗೆ 6.30ರಲ್ಲಿ ಅರಕೆರೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಂಕರ್‍ರಾವ್ (84) ಅವರು ಕನ್ನಡ ಚಿತ್ರರಂಗದ ಮೇರು ನಟರುಗಳಾದ ಡಾ.ರಾಜ್‍ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಷ್, ಶ್ರೀನಾಥ್, ಶಿವರಾಜ್‍ಕುಮಾರ್, ರಮೇಶ್, ಪುನೀತ್ ಸೇರಿದಂತೆ ಹಲವಾರು ನಟರ ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಧ್ರುವ ಚಿತ್ರದ ಲೆಕ್ಚರರ್ ಪಾತ್ರದಲ್ಲಿ ಗಮನ ಸೆಳೆದಿದ್ದ ಶಂಕರ್‍ರಾವ್ ಅವರು ಸಿದ್ಧಾರ್ಥ, ಪರಮಶಿವ, ದಿಲ್‍ವಾಲಾ, ಸಿದ್ಲಿಂಗು, ಸ್ನೇಹಿತರು, ರಾಜಕುಮಾರ, ಕನ್ನಡದ ಕಿರಣ್ ಬೇಡಿ, ಅರಸು, ವಂಶಿ, ಮಿಲನ, ಉಪ್ಪಿ ದಾದಾ ಎಂಬಿಬಿಎಸ್, ನಾಗರಹಾವು, ಕುರುಬನರಾಣಿ, ಗೆಲುವಿನ ಸರದಾರ, ಉಲ್ಟಾ ಪಲ್ಟಾ, ಬಿಸಿಬಿಸಿ,ಜೀವನಚಕ್ರ, ಬ್ಯಾಂಕರ್ ಮಾರ್ಗಯ್ಯ, ಮೂಗನ ಸೇಡು, ಮುಯ್ಯಿಗೆ ಮುಯ್ಯಿ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹಿರಿತೆರೆಯಲ್ಲದೆ ಕಿರುತೆರೆಯಲ್ಲೂ ತಮ್ಮ ನಟನೆಯ ಛಾಪನ್ನು ಮೂಡಿಸಿದ್ದ ಶಂಕರ್‍ರಾವ್ ಅವರು ಚಿದಾನಂದ್ ಹಾಗೂ ಶಾಲಿನಿ ಮುಖ್ಯ ಭೂಮಿಕೆಯಲ್ಲಿರುವ ಪಾಪಾ ಪಾಂಡು ಧಾರಾವಾಹಿಯಲ್ಲಿ ಬಾಸ್ ಬಾಲರಾಜ್ ಆಗಿ ಗಮನ ಸೆಳೆದಿದ್ದರಲ್ಲದೆ, ಸಿಲ್ಲಿ ಲಲ್ಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.
ತುಮಕೂರು ಮೂಲದವರಾದ ಶಂಕರ್‍ರಾವ್ ಅವರು ಚಿಕ್ಕ ವಯಸ್ಸಿನಿಂ ದಲೇ ತೆಲುಗು ಸಿನಿಮಾಗಳನ್ನು ನೋಡುವ ಮೂಲಕ ಮುಂದೊಂದು ದಿನ ತಾನು ಕೂಡ ನಟನಾಗಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದರು. ಶಾಲಾ ದಿನಗಳಲ್ಲೇ ನಟನೆಯ ಗೀಳು ಹಚ್ಚಿಸಿಕೊಂಡ ಶಂಕರ್‍ರಾವ್ ಅವರು ನಟರಂಗ ತಂಡದೊಂದಿಗೆ ಗುರುತಿಸಿ ಕೊಂಡು ಹವ್ಯಾಸಿ ಕಲಾವಿದರಾದರು. ಶಂಕರರಾವ್‍ರ ಅಂತ್ಯಕ್ರಿಯೆಯು ಬನಶಂಕರಿ ಚಿತಾಗಾರದಲ್ಲಿ ನೆರವೇರಿದ್ದು ಚಿತ್ರರಂಗ ಹಾಗೂ ಕಿರುತೆರೆಯ ಹಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.
ಶಾಸಕ ಝಮೀರ್ ಅಹ್ಮದ್ ಖಾನ್ ನಿವಾಸದ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸಂಸದ ಡಿ.ಕೆ.ಸುರೇಶ್ | ಜನತಾ ನ್ಯೂಸ್ | DK Suresh
ಶಾಸಕ ಝಮೀರ್ ಅಹ್ಮದ್ ಖಾನ್ ನಿವಾಸದ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸಂಸದ ಡಿ.ಕೆ.ಸುರೇಶ್ | ಜನತಾ ನ್ಯೂಸ್
ಬೆಂಗಳೂರು : ಎರಡು ವರ್ಷಗಳ ಹಿಂದಿನ ಐಎಂಎ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಶಾಸಕ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಅವರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ನಡೆಸಿರುವ ದಾಳಿ ರಾಜಕೀಯ ಪ್ರೇರಿತ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಅವರು ಬಹಳ ಹಿಂದೆಯೇ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆದರೆ, ಎರಡು ವರ್ಷಗಳ ನಂತರ ದಿಲ್ಲಿ ಕಚೇರಿ ಇಡಿ ಅಧಿಕಾರಿಗಳು ಮತ್ತೆ ದಾಳಿ ನಡೆಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ಪ್ರತಿಕ್ರಿಯೆ ನೀಡಿದರು.
ದೊಂದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಕಾರಣ, ಬೆಂಗಳೂರಿನಲ್ಲೇ ಇಡಿ ಕಚೇರಿ ಇದೆ. ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಹಿತಾಸಕ್ತಿ ಪ್ರೇರಿತ ಪ್ರಕರಣವನ್ನು ದೆಹಲಿಗೆ ವರ್ಗಾವಣೆ ಮಾಡಿಕೊಂಡು, ಸಂಬಂಧಪಟ್ಟವರಿಗೆ ರಾಜಕೀಯ ತೊಂದರೆ ನೀಡುವ ಪರಿಪಾಠವನ್ನು ಕೇಂದ್ರ ಸರ್ಕಾರ ಪಾಲಿಸುತ್ತಾ ಬಂದಿದೆ. ಇದನ್ನು ನಾವು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಇದು ದ್ವೇಷದ ರಾಜಕಾರಣ ಎಂದರು.
#ಡಿ.ಕೆ.ಸುರೇಶ್ , #ಝಮೀರ್ ಅಹ್ಮದ್ ಖಾನ್ , #ಇಡಿ ದಾಳಿ
English summary :DK Suresh
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#
ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರೈಸ್ತ ಮಷನರಿಗಳಿಂದ ಮತಾಂತರ, ನನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ! | ಜನತಾ ನ್ಯೂ&#
ಬಿಎಸ್‌ಎಫ್‌ ಕ್ಯಾಂಪ್​ನ 51 ಯೋಧರಲ್ಲಿ ಕೋವಿಡ್ ಪಾಸಿಟಿವ್​! | ಜನತಾ ನ್ಯೂ&#
ಫ್ಲ್ಯಾಟ್​ನಲ್ಲಿ ಸಿಲಿಂಡರ್​ ಸ್ಫೋಟಿಸಿ ಅಗ್ನಿ ಅವಘಡ, ಮಹಿಳೆಯೊಬ್ಬರ ಸಜೀವ ದಹನ | ಜನತಾ ನ್ಯೂ&#
ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾರಿ ಅಗೌರವ : 9 ನೌಕರರು ಕೆಲಸದಿಂದ ವಜಾ, 2 ಅಮಾನತು, ಎಫ್ಐಆರ್ ದಾಖಲು | ಜನತಾ ನ್ಯೂ&#
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 26,115 ಪ್ರಕರಣ ಪತ್ತೆ, 252 ಮಂದಿ ಸಾವು! | ಜನತಾ ನ್ಯೂ&#
ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಆರೋಪ: ತಹಶೀಲ್ದಾರ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು | ಜನತಾ ನ್ಯೂ&#
ರೈತರ ಪ್ರತಿಭಟನೆಗಳಿಗೆ ಕಾಂಗ್ರೆಸ್ ಅಥವಾ ದೇಶದಲ್ಲಿರುವ ವಿದೇಶಿ ಏಜೆಂಟರೇ ಪ್ರಾಯೋಜಕರು - ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಹೈ ಟೆಕ್ ಆಗಲಿದೆ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ | plan for Tyavarekoppa tiger and lion Safari Development MP Raghavendra
Bengaluru, First Published Jan 18, 2020, 9:49 AM IST
ಶಿವಮೊಗ್ಗ[ಜ.18]: ತ್ಯಾವರೆಕೊಪ್ಪ ಹುಲಿ-ಸಿಂಹಧಾಮವನ್ನು ಮೈಸೂರು ಮೃಗಾಲಯ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಅಭಿವೃದ್ಧಿ ಕಾರ್ಯ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಂಹಧಾಮವನ್ನು ರಾಜ್ಯದ ವಿಶೇಷ ಪ್ರಾಣಿ ಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಕೇಂದ್ರದ ಸಚಿವ ಜಾವ್ಡೇಕರ್‌ ಅವರಿಗೆ ಮನವಿ ಮಾಡಲಾಗಿದೆ. ಪ್ರಸ್ತುತ 80 ಹೆಕ್ಟೇರ್‌ ವಿಸ್ತೀರ್ಣ ಹೊಂದಿರುವ ಸಿಂಹಧಾಮವನ್ನು 250 ಹೆಕ್ಟೇರ್‌ಗೆ ವಿಸ್ತರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಸಿಂಹಧಾಮದಿಂದ ಬರುತ್ತಿರುವ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದೆ. ಇದನ್ನು ಸರ್ಕಾರವೇ ಭರಿಸುತ್ತಿದ್ದು, ವೆಚ್ಚ ಸರಿದೂಗಿಸಬೇಕಿದೆ. ಮುಂದೆ ಸಿಂಹಧಾಮವನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ತಾಣವಾಗಿ ಮಾರ್ಪಡಿಸುವ ಚಿಂತನೆ ಇದೆ ಎಂದರು.
ಗಣಪತಿ ಕೆರೆಗೆ ಕಾಯಕಲ್ಪ, ಹಾಲಪ್ಪ-ಕಾಗೋಡು ಜತೆಯಾದ್ರಪ್ಪ!.
ಸಿಂಹಧಾಮ ಅಭಿವೃದ್ಧಿಗೆ 40 ರಿಂದ 50 ಕೋಟಿ ರು. ಬೇಕಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸ್ತುತ 9 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಇದರಲ್ಲಿ 4 ಕೋಟಿ ರು. ವೆಚ್ಚದಲ್ಲಿ ವಿವಿಧ ಪ್ರಾಣಿಗಳನ್ನು ಇಡಲಾಗಿರುವ ಬೋನ್‌ಗಳಿಗೆ ಹೊಸ ರೂಪ ನೀಡುವ ಕೆಲಸ ಸಾಗಿದೆ. ಮಾಚ್‌ರ್‍ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ 13 ಪ್ರಾಣಿಗಳಿಗೆ ಹೊಸ ಜಾಗದಲ್ಲಿ ಅವಕಾಶವಾಗಲಿದೆ. ಉಳಿದಂತೆ 5 ಕೋಟಿ ರು. ವೆಚ್ಚದಲ್ಲಿ ಸಿಂಹಧಾಮದ ಇತರೆ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಪ್ರಸ್ತುತ ಹುಲಿ-ಸಿಂಹಧಾಮದಲ್ಲಿ ವಿವಿಧ 67 ಜಾತಿ 450 ಪ್ರಾಣಿ ಪಕ್ಷಿಗಳಿವೆ. ಅಭಿವೃದ್ಧಿ ನಂತರ ಇದು ಇನ್ನು ಹೆಚ್ಚಾಗಲಿದೆ ಎಂದರು.
ಸಂಸದರು ಹುಲಿ- ಸಿಂಹಧಾಮದ ಸಫಾರಿಯಲ್ಲಿ ಪ್ರಯಾಣ ಬೆಳೆಸಿ ಪ್ರಾಣಿಗಳ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮೃಗಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಮೋದಿ ಶ್ರೇಷ್ಠ ನಾಯಕ, ಅವರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ: ಟ್ರಂಪ್ | News13
News13 > ಸುದ್ದಿಗಳು > ರಾಷ್ಟ್ರೀಯ > ಮೋದಿ ಶ್ರೇಷ್ಠ ನಾಯಕ, ಅವರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ: ಟ್ರಂಪ್
ಮೋದಿ ಶ್ರೇಷ್ಠ ನಾಯಕ, ಅವರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ: ಟ್ರಂಪ್
Saturday, September 5th, 2020 ರಾಷ್ಟ್ರೀಯ Admin
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರಭಾರತೀಯ ಅಮೆರಿಕನ್ನರು ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಾನು ಹೊಂದಿರುವ ಮಹತ್ವದ ಬಾಂಧವ್ಯದ ಬಗ್ಗೆ ಒತ್ತಿ ಹೇಳಿದ್ದಾರೆ. ಅಲ್ಲದೇ, ನವೆಂಬರ್ 3 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ-ಅಮೆರಿಕನ್ನರು ತನಗೆ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
"ನಮಗೆ ಭಾರತ ಮತ್ತು ಪ್ರಧಾನಿ ಮೋದಿ ಅವರಿಂದ ಹೆಚ್ಚಿನ ಬೆಂಬಲವಿದೆ. ಭಾರತೀಯ ಜನರು ಟ್ರಂಪ್‌ಗೆ ಮತ ಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ಪಿಎಂ ಮೋದಿಯವರೊಂದಿಗೆ ತನಗೆ ಉತ್ತಮ ಸಂಬಂಧವಿದೆ ಎಂದು ಹೇಳಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನನ್ನ ಸ್ನೇಹಿತ ಮತ್ತು ಶ್ರೇಷ್ಠ ನಾಯಕ" ಎಂದಿದ್ದಾರೆ.
"ಪ್ರಧಾನಿ ಮೋದಿ ನನ್ನ ಸ್ನೇಹಿತ ಮತ್ತು ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದು ಸುಲಭದ ಮಾತಲ್ಲ, ಆದರೆ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಭಾರತೀಯರಿಗೆ ಒಬ್ಬ ಮಹಾನ್ ನಾಯಕ ಸಿಕ್ಕಿದ್ದಾನೆ ಮತ್ತು ಒಬ್ಬ ಮಹಾನ್ ವ್ಯಕ್ತಿ ಸಿಕ್ಕಿದ್ದಾನೆ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರೊಂದಿಗೆ ನಡೆಸಿದ ಎರಡು ದಿನಗಳ ಭಾರತ ಭೇಟಿಯನ್ನು ಟ್ರಂಪ್ ಉಲ್ಲೇಖಿಸಿ, "ನಮಗೆ ನಂಬಲಾಗದ ಸಮಯ ಅದಾಗಿತ್ತು ಮತ್ತು ಜನರ ಪ್ರೀತಿ ನಂಬಲಾಗದ್ದು, ಅದು ಅಮೋಘ ಸ್ಥಳ ಮತ್ತು ದೇಶ, ಅದು ಖಂಡಿತವಾಗಿಯೂ ದೊಡ್ಡದಾಗಿದೆ" ಎಂದು ಭಾರತದ ಬಗ್ಗೆ ಟ್ರಂಪ್‌ ಹೇಳಿದ್ದಾರೆ.
ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ ಎರಡೂ ಕಡೆಯವರು ಭಾರತೀಯ ಅಮೆರಿಕನ್ ಸಮುದಾಯವನ್ನು ಹೆಚ್ಚು ಹೆಚ್ಚು ಆಕರ್ಷಿಸುವ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಇನ್ಫೋಸಿಸ್ ಆರ್ಕೈವ್ಸ್ - ಟ್ಯುಟೋರಿಯಲ್ ಕಪ್
ಸಮಸ್ಯೆಯ ಹೇಳಿಕೆ "O (n) ನಲ್ಲಿ ಹೆಚ್ಚುವರಿ ಜಾಗವನ್ನು ಬಳಸದೆ ಸ್ಟಾಕ್ ಅನ್ನು ಹಿಮ್ಮುಖಗೊಳಿಸಿ" ನಿಮಗೆ ಸ್ಟಾಕ್ ಡೇಟಾ ರಚನೆಯನ್ನು ನೀಡಲಾಗಿದೆ ಎಂದು ಹೇಳುತ್ತದೆ. ಹೆಚ್ಚುವರಿ ಒ (ಎನ್) ಜಾಗವನ್ನು ಬಳಸದೆ ಕೊಟ್ಟಿರುವ ಸ್ಟ್ಯಾಕ್ ಅನ್ನು ಹಿಮ್ಮುಖಗೊಳಿಸಿ. ಉದಾಹರಣೆ 5 4 3 2 1 1 2 3 4 5 80 60 10 20 20 10 60 80…
ವರ್ಗಗಳು ಸಂದರ್ಶನ ಪ್ರಶ್ನೆಗಳನ್ನು ಜೋಡಿಸಿ ಟ್ಯಾಗ್ಗಳು ಸುಲಭ, ಫ್ಯಾಕ್ಟ್‌ಸೆಟ್, ಇನ್ಫೋಸಿಸ್, ಲಿಂಕ್ಡ್-ಲಿಸ್ಟ್, MAQ, ಸ್ಟಾಕ್
ಸಮಸ್ಯೆಯ ಹೇಳಿಕೆ "ಒಂದೇ ಕ್ಯೂ ಬಳಸಿ ಸ್ಟಾಕ್ ಅನ್ನು ಕಾರ್ಯಗತಗೊಳಿಸಿ" ಒಂದು ಕ್ಯೂ (ಎಫ್‌ಐಎಫ್‌ಒ) ದತ್ತಾಂಶ ರಚನೆಯನ್ನು ಬಳಸಿಕೊಂಡು ಸ್ಟಾಕ್ (ಎಲ್‌ಐಎಫ್‌ಒ) ದತ್ತಾಂಶ ರಚನೆಯನ್ನು ಕಾರ್ಯಗತಗೊಳಿಸಲು ಕೇಳುತ್ತದೆ. ಇಲ್ಲಿ LIFO ಎಂದರೆ ಲಾಸ್ಟ್ ಇನ್ ಫಸ್ಟ್ Out ಟ್ ಎಂದಾದರೆ FIFO ಎಂದರೆ ಫಸ್ಟ್ ಇನ್ ಫಸ್ಟ್ .ಟ್. ಉದಾಹರಣೆ ಪುಶ್ (10) ಪುಶ್ (20) ಟಾಪ್ () ಪಾಪ್ () ಪುಶ್ (30) ಪಾಪ್ () ಟಾಪ್ () ಟಾಪ್: 20…
ವರ್ಗಗಳು ಸಂದರ್ಶನ ಪ್ರಶ್ನೆಗಳನ್ನು ಜೋಡಿಸಿ ಟ್ಯಾಗ್ಗಳು ಅಮೆಜಾನ್, ಸುಲಭ, ಫೋರ್‌ಕೈಟ್‌ಗಳು, ಗೂಗಲ್, ಇನ್ಫೋಸಿಸ್, MAQ, ಮೈಕ್ರೋಸಾಫ್ಟ್, ಕ್ಯೂ, ಸ್ಟಾಕ್
ಪ್ರಸ್ತುತ ಗರಿಷ್ಠ ಅಂಶವನ್ನು ಸ್ಟ್ಯಾಕ್‌ನಲ್ಲಿ ಟ್ರ್ಯಾಕ್ ಮಾಡಲಾಗುತ್ತಿದೆ