text
stringlengths 0
61.5k
|
---|
ಕಳೆದ ಬುಧವಾರ ಬೆಂಜನಪದವು ಎಂಬಲ್ಲಿ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆಯತ್ನ ನಡೆಸಲಾಗಿದೆ ಎಂಬ ಸಂದೇಶವೊಂದು ಎಲ್ಲಾ ಗುಂಪುಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಎಸ್ಪಿ ಸುಧೀರ್ ರೆಡ್ಡಿ ಇದೊಂದು ಸುಳ್ಳು ಸುದ್ದಿ ಎಂಬುದನ್ನು ಮಾಧ್ಯಮಗಳಿಗೆ ಸ್ಪಷ್ಟಪಡಿಸಿ ಇಂತಹ ಸಂದೇಶಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸಾರ್ವಜನಿಕರು ಪೊಲೀಸರಿಗೆ ತಿಳಿಸುವಂತೆ ಕೋರಿದ್ದಾರೆ. |
25 ವರ್ಷ ಬಳಿಕ ಒಂದಾದ ಗೆಳೆಯರು | Udayavani – ಉದಯವಾಣಿ |
Monday, 10 May 2021 | UPDATED: 08:04 AM IST |
25 ವರ್ಷ ಬಳಿಕ ಒಂದಾದ ಗೆಳೆಯರು |
Team Udayavani, Jul 28, 2019, 12:11 PM IST |
ಕೊಪ್ಪಳ: ಭಾಗ್ಯನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. |
ಕೊಪ್ಪಳ: ಶಿಕ್ಷಕನಾದವ ವಿದ್ಯಾರ್ಥಿಗಳಿಗೆ ಕಲಿಸುವ ಜೊತೆಗೆ ತಾನು ಕೂಡ ನಿರಂತರವಾಗಿ ಕಲಿಯುತ್ತಾ ಸಾಗುತ್ತಾನೆ. ಯಾವುದೇ ಮತ್ಸರ ಭಾವಗಳಿಗೆ ಅವಕಾಶವಿಲ್ಲದ ಏಕೈಕ ವೃತ್ತಿ ಶಿಕ್ಷಕರದ್ದಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎ.ಎಂ. ಮದರಿ ಹೇಳಿದರು. |
ತಾಲೂಕಿನ ಭಾಗ್ಯನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶನಿವಾರ ಏರ್ಪಡಿಸಿದ್ದ ರಜತ ಮಹೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು. |
25 ವರ್ಷಗಳ ನಂತರ ಅಂದಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಿರುವುದು ಭಾವುಕ ಸಂದರ್ಭವಾಗಿದೆ. ಭಾಗ್ಯನಗರದಲ್ಲಿ 4 ದಶಕಗಳ ಹಿಂದೆ ಸರಕಾರಿ ಪ್ರೌಢಶಾಲೆ ಆರಂಭವಾದಾಗ ಶಿಕ್ಷಣ ಗುಣಮಟ್ಟದ ಬಗ್ಗೆ ಉದಾಸೀನ ಭಾವನೆ ಹೊಂದಿದ್ದವರೇ ಹೆಚ್ಚಾಗಿದ್ದರು. ಶಾಲೆಯ ಮೊದಲ ಮುಖ್ಯೋಪಾಧ್ಯಾಯ ಚನ್ನಬಸವಯ್ಯ ಹಾಗೂ ಸಿಬ್ಬಂದಿ ಬಿ.ಜಿ. ಮಡಿವಾಳರ್ ಅಂತಹವರ ಶ್ರಮದಿಂದ ಕ್ರಮೇಣ ಈ ಶಾಲೆಗೆ ಉತ್ತಮ ಹೆಸರು ಪ್ರಾಪ್ತಿಯಾಯಿತು. ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಹುಡುಕಿಕೊಂಡು ಈ ಶಾಲೆಯಲ್ಲಿ ಪ್ರವೇಶ ಪಡೆಯಲು ತುದಿಗಾಲಲ್ಲಿ ನಿಲ್ಲುವ ಮಟ್ಟಕ್ಕೆ ಬೆಳೆಯಲು ಇಲ್ಲಿನ ಅಂದಿನ ಶಿಕ್ಷಕರ ಕೊಡುಗೆ ಕಾರಣ ಎಂದರು. |
ಭಾಗ್ಯನಗರ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಪಾಟೀಲ ಮಾತನಾಡಿ, ಜಿಲ್ಲಾದ್ಯಂತ ಕಳೆದ ಏಳೆಂಟು ವರ್ಷಗಳಿಂದ ಗುರುವಂದನಾ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ನೋಡಿದಾಗ ನಮ್ಮಲ್ಲಿ ಸಂಸ್ಕಾರ ಮತ್ತೇ ಜಾಗೃತವಾಗುತ್ತಿರುವುದು ಸ್ಪಷ್ಟ. ಶಿಕ್ಷಣ ಎಂದರೆ ಕಲಿಯುವ ಅವಧಿಯ ನಂತರ ನಮ್ಮಲ್ಲಿ ಉಳಿಯುವ ಭಾವನೆಗಳಾಗಿವೆ. ಗಟ್ಟಿಯಾದ ನೆನಪುಗಳು ಬಿಡದೇ ಕಾಡುತ್ತವೆ ಎಂದರು.ನಿವೃತ್ತ ಉಪನ್ಯಾಸಕ ಡಿ.ಎಂ. ಬಡಿಗೇರ ಮಾತನಾಡಿದರು. |
ಪ್ರಭಾರಿ ಮುಖ್ಯೋಪಾಧ್ಯಾಯೆ ಭಾರತಿ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಶಿಕ್ಷಕರಾಗಿದ್ದ ನಿಂಗಪ್ಪ ಬ್ಯಾಳಿಶೆಟ್ಟರ್, ವೀರಣ್ಣ ಶಿಗೇನಹಳ್ಳಿ, ಶಿವಪ್ಪ ತೊಂಡಿಹಾಳ, ಸೋಮಣ್ಣ ಚಿತ್ರಗಾರ, ಬಿ.ಜೆ. ಮಡಿವಾಳರ್, ಎ.ವಿ. ಉಪಾಧ್ಯಾಯ, ಶರಣಬಸಪ್ಪ ಹಳ್ಳಿಕೇರಿ, ಖಾಜಾಸಾಬ್ ಬೂದಗುಂಪಿ, ಈಶ್ವರಪ್ಪ ನಾಲವಾಡ ಸೇರಿದಂತೆ ಇತರರಿಗೆ ಗುರುವಂದನೆ ಸಲ್ಲಿಸಲಾಯಿತು. |
ರೇಣುಕಾ ಮಣ್ಣೂರ, ಜಗದೀಶ ಹನುಮನಾಳ, ಜ್ಯೋತಿ ತುಂಬಳದ, ಗುರುರಾಜ ಬನ್ನಿಗೋಳ, ಶರಣು ತಿಳಿಗೋಳ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಭಾಕರ ಪಟವಾರಿ, ಮಾರುತಿ ಚಿತ್ರಗಾರ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯತ್ರಿ ಹಾಗೂ ಸುಮಿತ್ರಾ ಬೆಟಗೇರಿ ಪ್ರಾರ್ಥಿಸಿದರು. ಪರಶುರಾಮ ನಾಯಕ ಸ್ವಾಗತಿಸಿದರು. ಡಿ.ಗುರುರಾಜ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಡೊಳ್ಳಿನ್ ಆಶಯ ನುಡಿಗಳನ್ನಾಡಿದರು. ರವಿ ಕುರಗೋಡ ವರದಿ ವಾಚಿಸಿದರು. ಬಸವರಾಜ ಕರುಗಲ್ ನಿರೂಪಿಸಿದರು. ಗಿರೀಶ್ ಪಾನಘಂಟಿ ವಂದಿಸಿದರು. |
ವಿದೇಶದಿಂದ ಬಂದ ಗೆಳೆಯರು: |
ಹಳೆಯ ವಿದ್ಯಾರ್ಥಿ ಚಂದ್ರಕಾಂತ್ ಜಾಧವ್ ಬಹ್ರೇನ್‌ನಿಂದ ಆಗಮಿಸಿ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇವರು ಬಹ್ರೇನ್ ದೇಶದಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದು, 25 ವರ್ಷಗಳ ಬಳಿಕ ತಾನು ಕಲಿತ ಶಾಲೆಗೆ ಮರಳಿ ಭೇಟಿ ನೀಡಿದ ಕುರಿತು ಪ್ರಸ್ತಾಪಿಸಿದರು. ಇನ್ನೂ ಜರ್ಮನಿ ದೇಶದಲ್ಲಿ ನೆಲೆಸಿದ ಸಾಫ್ಟವೇರ್ ಇಂಜನಿಯರ್ ಪ್ರಶಾಂತ ಮಾದಿನೂರು ವೀಡಿಯೋ ಮೂಲಕ ತಮ್ಮ ಸಂದೇಶ ಕಳಿಸಿ ಅಂದಿನ ನೆನಪು ಮೆಲುಕು ಹಾಕಿದರು. |
ಸಹಾಯ ಹಸ್ತ: |
ಹಳೆಯ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ತೆರೆದಿದ್ದು, ಖಾತೆಗೆ ಹಳೆಯ ವಿದ್ಯಾರ್ಥಿಗಳು ಪ್ರತಿ ತಿಂಗಳು ಸಾಧ್ಯವಾದಷ್ಟು ಹಣ ಹಾಕಿದರೆ ಆ ಖಾತೆಯಲ್ಲಿ ಜಮೆಯಾಗುವ ಹಣದಲ್ಲಿ ಪ್ರತಿ ವರ್ಷ ಸ್ನೇಹಿತರ ಕುಟುಂಬದ ಆರ್ಥಿಕ ಸಂಕಷ್ಟಗಳಿಗೆ ಸಹಾಯ ಹಸ್ತ ಚಾಚುವ ಯೋಜನೆಗೆ ಚಾಲನೆ ನೀಡಲಾಯಿತು. ಗುರುವಂದನೆ ಸಲ್ಲಿಸಿದ ವಿದ್ಯಾರ್ಥಿಗಳು ಕಾರ್ಯಕ್ರಮದ ಸ್ಮರಣಾರ್ಥ ಭಾಗ್ಯನಗರ ಪ್ರೌಢಶಾಲೆಗೆ ಊಟದ ತಟ್ಟೆ-ಲೋಟ್ ದೇಣಿಗೆ ನೀಡಿದರು. |
9 ಆಗಸ್ಟ್ 2019 - Current Affairs |
9 ಆಗಸ್ಟ್ 2019 - ಪ್ರಚಲಿತ ಘಟನೆಗಳು |
👉🌹 ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ ಈಗ ಮಹಾರಾಷ್ಟ್ರದಲ್ಲಿ..! |
👉🌹 ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳಕ್ಕೆ ಸಂಸತ್ ಒಪ್ಪಿಗೆ ================== |
👉🌹 ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳಕ್ಕೆ ಸಂಸತ್ ಒಪ್ಪಿಗೆ |
ವಿಚಾರಣೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವುದು ಇದರ ಉದ್ದೇಶ. 'ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ 2019' ಅನ್ನು ಮಂಡಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, 'ಸದನ ಈ ಮಸೂದೆ ಪರಿಗಣಿಸಬೇಕೆಂದು ಕೋರುತ್ತೇನೆ' ಎಂದರು. |
'ಉಗ್ರವಾದಕ್ಕೆ ವಿಶೇಷಾಧಿಕಾರ ಕಾರಣ' : ಪ್ರಧಾನಿ ನರೇಂದ್ರ ಮೋದಿ |
ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರ ರದ್ದತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವಿಶೇಷಾಧಿಕಾರವು ಪ್ರತ್ಯೇಕತಾವಾದ, ಭ್ರಷ್ಟಾಚಾರ ಮತ್ತು ವಂಶಾಡಳಿತಕ್ಕೆ ನೆರವಾಗಿತ್ತು, ಭಯೋತ್ಪಾದನೆ ಹರಡಲು ಪಾಕಿಸ್ತಾನದ ಕೈಯಲ್ಲಿನ ಉಪಕರಣವಾಗಿತ್ತು. ಇವಿಷ್ಟು ಬಿಟ್ಟರೆ, ವಿಶೇಷಾಧಿಕಾರದಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದು ಹೇಳಿದ್ದಾರೆ. |
ಸುದ್ದಿವಾಹಿನಿ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಗುರುವಾರ ಮಾತನಾಡಿದರು. ವಿಶೇಷಾಧಿಕಾರ ರದ್ದತಿಯು ಐತಿಹಾಸಿಕ ತೀರ್ಮಾನ ಎಂದ ಅವರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಹೊಸ ಯುಗ ಆರಂಭವಾಗಿದೆ ಎಂದರು. |
ಶ್ಯಾಮಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಸರ್ದಾರ್ ಪಟೇಲ್ ಮತ್ತು ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ ಎಂದು ಹೇಳಿದರು. |
ಇಡೀ ದೇಶಕ್ಕಾಗಿ ಮಾಡಿದ ಕಾನೂನುಗಳ ಪ್ರಯೋಜನಗಳು 370ನೇ ವಿಧಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ 1.5 ಕೋಟಿ ಜನರಿಗೆ ಅನ್ವಯವೇ ಆಗುತ್ತಿರಲಿಲ್ಲ. ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರವು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲಿದೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಹಿಡಿತದಿಂದ ಈ ಪ್ರದೇಶವನ್ನು ಬಿಡಿಸುತ್ತೇವೆ ಎಂದು ಹೇಳಿದರು. |
ಕಸ್ತೂರಿ ರಂಗನ್‌ಗೆ ಭಾಸ್ಕರ್ ಪ್ರಶಸ್ತಿ |
ಸಿಂದಗಿಯ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ 'ಭಾಸ್ಕರ್ ಪ್ರಶಸ್ತಿ'ಗೆ ಹಿರಿಯ ವಿಜ್ಞಾನಿ ಕಸ್ತೂರಿ ರಂಗನ್ ಅವರನ್ನು ಆಯ್ಕೆ ಮಾಡಲಾಗಿದೆ. |
'ಸಿಂದಗಿ ಪಟ್ಟಣದಲ್ಲಿ ಇದೇ 25ರಂದು ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ₹ 1 ಲಕ್ಷ ನಗದು, ಬೆಳ್ಳಿಯ ಫಲಕ ಒಳಗೊಂಡಿದೆ' ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. |
ಸಿಂದಗಿ ಸಾರಂಗಮಠ, ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆಶಯದಂತೆ ನಾಲ್ಕು ವರ್ಷಗಳಿಂದ ಹೆಸರಾಂತ ವಿಜ್ಞಾನಿಗಳಿಗೆ ಈ ಪ್ರಶಸ್ತಿ ನೀಡುತ್ತಿದೆ ಎಂದರು. |
ಕಾಶ್ಮೀರ: ಸಂಯಮ ವಹಿಸಲು ವಿಶ್ವಸಂಸ್ಥೆ ಮುಖ್ಯಸ್ಥರ ಸಲಹೆ |
ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ಈ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ಹೆಚ್ಚಿನ ಸಂಯಮ ಕಾಪಾಡಿಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಗುರುವಾರ ಹೇಳಿದ್ದಾರೆ. |
ಕಾಶ್ಮೀರ ವಿಷಯದಲ್ಲಿ ಶಿಮ್ಲಾ ಒಪ್ಪಂದವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಳ್ಳಿಹಾಕುತ್ತದೆ ಎಂದಿದ್ದಾರೆ. |
ಭಾರತವು 370ನೇ ವಿಧಿ ರದ್ದುಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಉಭಯ ರಾಷ್ಟ್ರಗಳು ಈ ವಿಷಯದಲ್ಲಿ ಗರಿಷ್ಠ ಸಂಯಮ ಕಾಪಾಡಬೇಕು ಎಂದು ಮನವಿ ಮಾಡಿರುವುದಾಗಿ ವಕ್ತಾರ ಸ್ಟಿಫನ್ ಡುಜಾರಿಕ್ ಹೇಳಿದ್ದಾರೆ. |
ಕಾಶ್ಮೀರ ಸಮಸ್ಯೆಯನ್ನು ಉಭಯ ದೇಶಗಳು ಶಾಂತಿಯುತವಾಗಿ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. |
ಜಮ್ಮು ಮತ್ತು ಕಾಶ್ಮೀರ ವಿವಾದ ಕುರಿತು ಮಧ್ಯಸ್ಥಿಕೆ ವಹಿಸುವ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಲಿಲ್ಲ. |
ಆರ್ಥಿಕ ವೃದ್ಧಿಗೆ ಒತ್ತು: ಉದ್ದಿಮೆ ದಿಗ್ಗಜರ ಸಭೆಯಲ್ಲಿ ಸರ್ಕಾರದ ಭರವಸೆ |
ಕೈಗಾರಿಕಾ ವಲಯದ ಪುನಶ್ಚೇತನ ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲು ಸದ್ಯದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರವು ಉದ್ಯಮ ಪ್ರಮುಖರಿಗೆ ಭರವಸೆ ನೀಡಿದೆ. |
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೈಗಾರಿಕಾ ವಲಯ ಮತ್ತು ಒಟ್ಟಾರೆ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗುರುವಾರ ಇಲ್ಲಿ ಕೈಗಾರಿಕೋದ್ಯಮಿಗಳ ಜತೆ ಸಭೆ ನಡೆಸಿ ಚರ್ಚೆ ನಡೆಸಿದರು. |
'ಸರ್ಕಾರ ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಪರಿಹಾರ ಕಂಡುಕೊಳ್ಳಲು ವಿಳಂಬಿಸುವುದಿಲ್ಲವೆಂದು ಅವರು ಭರವಸೆ ನೀಡಿದ್ದಾರೆ' ಎಂದು ಜೆಎಸ್‌ಡಬ್ಲ್ಯು ಗ್ರೂಪ್‌ನ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದ್ದಾರೆ. |
'ಕೈಗಾರಿಕೆಗಳಿಗೆ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು' ಎಂದು ಪಿರಾಮಲ್ ಎಂಟರ್‌ಪ್ರೈಸಸ್ ಅಧ್ಯಕ್ಷ ಅಜಯ್ ಪಿರಾಮಲ್ ಹೇಳಿದ್ದಾರೆ. |
'ಬ್ಯಾಂಕ್‌ಗಳಲ್ಲಿ ನಗದು ಕೊರತೆ ಇಲ್ಲ. ಸಾಲ ವಿತರಣೆಯು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸಂಬಂಧಿಸಿದಂತೆ ನಗದು ಬಿಕ್ಕಟ್ಟು ಇದೆ. ಇದು ವಾಹನ, ಗೃಹ ಸಾಲ ಖರೀದಿ ಮತ್ತು ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಈ ಬಿಕ್ಕಟ್ಟು ಪರಿಹರಿಸಲು ಸರ್ಕಾರ ಕಾರ್ಯೋನ್ಮುಖವಾಗುವುದನ್ನು ಎದುರು ನೋಡಲಾಗುತ್ತಿದೆ' ಎಂದು ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. |
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಕಂಪನಿಗಳು ಹಣ ವೆಚ್ಚ ಮಾಡದಿರುವುದಕ್ಕೆ ಸಂಬಂಧಿಸಿದಂತೆ ಕಂಪನಿ ಕಾಯ್ದೆಯಲ್ಲಿ ಇರುವ ದಂಡನಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದೂ ಸರ್ಕಾರ ಸಭೆಯಲ್ಲಿ ಭರವಸೆ ನೀಡಿದೆ. 'ಸಿಎಸ್‌ಆರ್' ವೆಚ್ಚಕ್ಕೆ ಸಂಬಂಧಿಸಿದ ಅಜಾಗರೂಕತೆ ಕಾರಣಕ್ಕೆ ಜೈಲು ಶಿಕ್ಷೆ ವಿಧಿಸುವುದನ್ನು ಕೈಬಿಡಬೇಕು ಎಂದು ಉದ್ಯಮವು ಸರ್ಕಾರವನ್ನು ಒತ್ತಾಯಿಸಿತ್ತು. |
ಸೌರವ್ ಭಾರತದ ನಂ.1 ಆಟಗಾರ |
ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಸೌರವ್ ಕೊಠಾರಿ ಅವರು ಭಾರತದ ನಂಬರ್ ಒನ್ ಬಿಲಿಯರ್ಡ್ಸ್ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. |
ರಾಷ್ಟ್ರೀಯ ಆಯ್ಕೆ (ಸೆಲೆಕ್ಸನ್) ಚಾಂಪಿಯನ್‌ಷಿಪ್‌ನ ಎರಡು ಮಾದರಿಗಳಲ್ಲಿ ಪ್ರಶಸ್ತಿ ಗೆದ್ದು ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಅಲಂಕರಿಸಿದ್ದಾರೆ. |
ಸೌರವ್, ಮುಂದಿನ ತಿಂಗಳು ಮ್ಯಾನ್ಮಾರ್‌ನಲ್ಲಿ ನಡೆಯುವ ಚುಟುಕು ಮಾದರಿಯ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಮತ್ತು ನವೆಂಬರ್‌ನಲ್ಲಿ ಮೆಲ್ಬರ್ನ್‌ನಲ್ಲಿ ನಿಗದಿಯಾಗಿರುವ ದೀರ್ಘ ಮಾದರಿಯ ವಿಶ್ವ ಚಾಂಪಿಯನ್ ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. |
'ಎಂಜೆಐಎಲ್'ನಿಂದ ಚಹಾ ಬ್ರ್ಯಾಂಡ್ ಸ್ವಾಧೀನ |
ಚಹಾ ಉದ್ಯಮದ ಮಧು ಜಯಂತಿ ಇಂಟರ್‍ನ್ಯಾಷನಲ್ ಲಿಮಿಟೆಡ್ ತನ್ನ ವಹಿವಾಟು ವಿಸ್ತರಿಸಲು ಎವರೆಡಿ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್‌ನ (ಎಂಜೆಐಎಲ್) ಪ್ಯಾಕೇಜ್ಡ್ ಟೀ ಬ್ರ್ಯಾಂಡ್‍ಗಳಾದ ತೇಜ್ ರೆಡ್, ಪ್ರೀಮಿಯಂ ಗೋಲ್ಡ್ ಮತ್ತು ಜಾಗೊ ಬ್ರ್ಯಾಂಡ್‍ಗಳನ್ನು ಸ್ವಾಧೀನಪಡಿಸಿಕೊಂಡಿದೆ. |
ಈ ಬ್ರ್ಯಾಂಡ್ ಸ್ವಾಧೀನ ಪ್ರಕ್ರಿಯೆ ಮೂಲಕ ಎಂಜೆಐಎಲ್' ಚಹಾ ವಹಿವಾಟಿನಲ್ಲಿ ರಾಷ್ಟ್ರೀಯ ಮಟ್ಟದ ಪ್ರಮುಖ ಕಂಪನಿಯಾಗಲಿದೆ. |
ಹಫೀಜ್ ಸಯೀದ್ ತಪ್ಪಿತಸ್ಥ: ಪಾಕಿಸ್ತಾನ ಸಿಟಿಡಿ ಘೋಷಣೆ |
ಮುಂಬೈ ದಾಳಿಯ ಸಂಚುಕೋರ ಹಾಗೂ ಜಮಾತ್–ಉದ್– ದಾವಾ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬುಧವಾರ ಹೇಳಿದೆ. |
ಹಫೀಜ್‌ನನ್ನು ಭಾರಿ ಭದ್ರತೆಯಲ್ಲಿ ಗುಜ್ರನ್‌ವಾಲಾದಲ್ಲಿರುವ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. |
ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಸಂಬಂಧ ಆರೋಪ ಪಟ್ಟಿಯನ್ನು ಈ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಆದರೆ ಪ್ರಕರಣ ಪಂಜಾಬ್ ಪ್ರಾಂತದ ಮಂಡಿ ಬಹಾಉದ್ದೀನ್ ವ್ಯಾಪ್ತಿಗೆ ಬರುವುದರಿಂದ, ಗುಜರಾತ್ ಎಟಿಸಿಗೆ ವರ್ಗಾಯಿಸಬೇಕೆಂದು ಪೊಲೀಸ್ ಅಧಿಕಾರಿ ಇದೇ ವೇಳೆ ನ್ಯಾಯಾಲಯಕ್ಕೆ ಮನವಿ ಮಾಡಿದರು. |
1173: ಪೀಸಾ ಗೋಪುರದ ನಿರ್ಮಾಣ ಆರಂಭವಾಯಿತು. ಈ ಕಾಮಗಾರಿಯುಪೂರ್ಣಗೊಳ್ಳಲು ಎರಡು ಶತಮಾನಗಳನ್ನು ತೆಗೆದುಕೊಂಡಿತು. |
1655: ಲಾರ್ಡ್ ಪ್ರೊಟೆಕ್ಟರ್ ಆಲಿವರ್ ಕ್ರಾಮ್ವೆಲ್ ಇಂಗ್ಲೆಂಡನ್ನು 11 ಜಿಲ್ಲೆಗಳಾಗಿ ವಿಭಜಿಸಿದರು. |
1790: ಕೊಲಂಬಿಯಾ ಹಡಗು ಸತತ ಮೂರು ವರ್ಷಗಳ ಪ್ರಯಾಣ ಮುಗಿಸಿ ಬೋಸ್ಟನ್ನಿಗೆ ಮರಳಿತು. ಅಮೇರಿಕಾದ ಧ್ವಜವನ್ನು ಹೊತ್ತು ವಿಶ್ವವನ್ನು ತಿರುಗಿದ ಮೊದಲ ಹಡಗು ಇದಾಗಿತ್ತು. |
1803: ರಾಬರ್ಟ್ ಫುಲ್ಟನ್ ತನ್ನ ಉಗಿ ಪ್ಯಾಡಲ್ ದೋಣಿಯನ್ನು ಫ್ರಾನ್ಸಿನ ನದಿಯಾದ ಸೀನ್ ಮೇಲೆ ಪರೀಕ್ಷಿಸಿದರು. |
1859: ಓಟಿಸ್ ಟಫ್ಟ್ ಮೊದಲ ಮಾನವ ಉಪಯೋಗಿಸುವ "ಎಲಿವೇಟರ್" ಅನ್ನು ಪೇಟೆಂಟ್ ಮಾಡಿದರು. |
1898: ಜರ್ಮನಿಯ ರುಡಾಲ್ಫ್ ಡೀಸಲ್ ಅವರು ಡೀಸಲ್ ಆಂತರಿಕ ದಹನಕಾರಿ ಇಂಜಿನ್ನಿಗೆ ಪೇಟೆಂಟ್ ಪಡೆದರು. |
1904: ರೊಚೆಸ್ಟರ್ ನ್ಯೂಯಾರ್ಕಿನ ಲಿಬಾನಸ್ ಮ್ಯಾಕ್ಲೌತ್ ಟೊಡ್ ತನ್ನ ಚೆಕ್ ಬರೆಯುವ ಯಂತ್ರಕ್ಕೆ ಪೇಟೆಂಟ್ ಪಡೆದರು. |
1910: ವಿದ್ಯುತ್ ಬಟ್ಟೆ ಒಗೆಯುವ ಯಂತ್ರಕ್ಕೆ ಆಲ್ವಾ ಫಿಶರ್ ಪೇಟೆಂಟ್ ಪಡೆದರು. |
1925: ಹಿಂದುಸ್ಥಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸದಸ್ಯರು ಉತ್ತರ ಪ್ರದೇಶದ ಲಕ್ನೋನಿಂದ 22 ಕಿ.ಮೀ ದೂರದಲ್ಲಿರುವ ಕಾಕೋರಿ ಬಳಿ ಅಂಚೆ ರೈಲಿನಿಂದ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿದರು. |
1942: ಮಹಾತ್ಮಾ ಗಾಂಧಿಯವರನ್ನು ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದ ನಂತರಬ್ರಿಟೀಷರು ಅವರನ್ನು ಬಾಂಬೆಯಲ್ಲಿ ಬಂಧಿಸಿದರು. |
1945: ಅಮೇರಿಕಾ ತನ್ನ 2ನೇ ಪರಮಾಣು ಬಾಂಬನ್ನು ಜಪಾನಿನ ನಾಗಸಾಕಿಯ ಮೇಲೆ ಹಾರಿಸಿತು. |
1952: ಬೆಳೆಗಳ ವೈಫಲ್ಯದಿಂದ 20 ಮಿಲಿಯನ್ ಭಾರತೀಯ ರೈತರು ತೊಂದರೆಗೊಳಗಾಗಿರುವ ಬಗ್ಗೆ ನವದೆಹಲಿಯಲ್ಲಿ ವರದಿಯಾಯಿತು. |
1969: ಕಲ್ಕತ್ತಾದಲ್ಲಿನ ಒಚ್ಚಲೋರ್ನಿ ಸ್ಮಾರಕವನ್ನು "ಶಾಹಿದ್ ಮಿನಾರ್" ಎಂದು ಮರುನಾಮಕರಣ ಮಾಡಲಾಯಿತು. |
1980: ಬೆಲ್ಜಿಯಂ ದೇಶದ ಸಂವಿಧಾನವನ್ನು ಪರಿಷ್ಕರಿಸಲಾಯಿತು. |
1892: ಮದರಾಸು ವಿಶ್ವವಿದ್ಯಾಲಯದ ಮೊದಲ ಗ್ರಾಂಥಪಾಲಕರಾಗಿದ್ದ ಶ್ರೀ ಶಿಯಾಲಿ ರಾಮಾಮೃತ ರಂಗನಾಥನ್ ಜನಿಸಿದರು. |
1893: ಪ್ರಸಿದ್ದ ಹಿಂದಿ ಕಥೆಗಾರ ಮತ್ತು ಕಾದಂಬರಿಕಾರರಾಗಿದ್ದ ಶಿವಪುಜನ್ ಸಹಾ ಜನಿಸಿದರು. |
1909: ಹಿರಿಯ ವಿದ್ವಾಂಸ, ಲೇಖಕ, ಶಿಕ್ಷಣತಜ್ಞ ಜ್ಞಾನಪೀಠ ಪುರಸ್ಕೃತ ವಿ.ಕೆ.ಗೋಕಾಕ್ ಅವರು ಜನಿಸಿದರು. |
1911: ಭಾರತೀಯ ಕ್ರಿಕೆಟಿಗರಾದ ಖುರ್ಷಿ ದ್ ಜಿ ರುಸ್ತಂಜಿ ಮೆಹೆರ್ ಹೋಮ್ಜಿ ಜನಿಸಿದರು. |
1971: ಬಿಹಾರದ ಮಾಜಿ ಮುಖ್ಯಮಂತ್ರಿ ವಿನೋದಾನಂದ ಝಾ ನಿಧನರಾದರು. |
1975: ತೆಲಗು ಚಲನಚಿತ್ರ ಖ್ಯಾತ ನಟ ಮಹೇಶಬಾಬು ಜನಿಸಿದರು. |
2015: ಹಿರಿಯ ಪತ್ರಕರ್ತ, ಲೇಖಕ ಮತ್ತು ಕವಿ ಕಯ್ಯಾರ ಕಿಞ್ಞಣ್ಣ ರೈ ನಿಧನರಾದರು. |
ಸಂಬಂಧ ಮೊಟಕು ವಿಷಾದನೀಯ | ಗಂಭೀರ ಸ್ಥಿತಿ ಎಂದು ಬಿಂಬಿಸಲು ಪಾಕಿಸ್ತಾನದ ಯತ್ನ: ಭಾರತ ಆರೋಪ |
ರಾಜತಾಂತ್ರಿಕ ಸಂಬಂಧವನ್ನು ಮೊಟಕುಗೊಳಿಸುವ ಮೂಲಕ ದ್ವಿಪಕ್ಷೀಯ ಸಂಬಂಧವು ಗಂಭೀರ ಸ್ಥಿತಿಯಲ್ಲಿದೆ ಎಂದು ಬಿಂಬಿಸುವುದು ಪಾಕಿಸ್ತಾನದ ಉದ್ದೇಶ ಎಂದು ಭಾರತ ಆರೋಪಿಸಿದೆ. ಸಂಬಂಧ ಮೊಟಕು ಮಾಡಿದ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆಯೂ ಭಾರತ ಕೋರಿದೆ. |
ಪಾಕಿಸ್ತಾನದ ನಿರ್ಧಾರವು ವಿಷಾದನೀಯ. ಜಮ್ಮು ಮತ್ತು ಕಾಶ್ಮೀರವು ಭಾರತದ ಆಂತರಿಕ ವಿಚಾರ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. |
ಅಭಿವೃದ್ಧಿಗಾಗಿ ಭಾರತವು ಕೈಗೊಂಡಿರುವ ಕ್ರಮವನ್ನು ಪಾಕಿಸ್ತಾನವು ಕೆಟ್ಟದಾಗಿ ಬಿಂಬಿಸಿದ್ದರಲ್ಲಿ ಆಶ್ಚರ್ಯ ಏನೂ ಇಲ್ಲ. ಭಾವನೆಗಳನ್ನು ಕೆರಳಿಸುವ ಮೂಲಕ ಗಡಿಯಾಚಿನ ಭಯೋತ್ಪಾದನೆಯನ್ನು ಆ ದೇಶವು ಯಾವಾಗಲೂ ಸಮರ್ಥಿಸುತ್ತದೆ ಎಂದು ಆರೋಪಿಸಿದೆ. |
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತವು ಸೋಮವಾರ ರದ್ದುಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ, ಭಾರತೀಯ ಹೈಕಮಿಷನರ್ ಅಜಯ್ ಬಿಸರಿಯ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸೂಚಿಸಿತ್ತು. ಹಾಗೆಯೇ ದ್ವಿಪಕ್ಷೀಯ ಸಂಬಂಧವನ್ನು ಮೊಟಕು ಮಾಡಿತ್ತು. |
ನೆರವಿಗೆ ಮನವಿ: ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡಲು ಮನವಿ |
ಸ್ನೇಹಿತರೆ ದಯವಿಟ್ಟು ನೆರೆ ಸಂತ್ರಸ್ತರಿಗೆ ನೇರವಾಗಿ ಮುಖ್ಯಮತ್ರಿಗಳ ಪರಿಹಾರ ನಿಧಿ ಗೆ ನಿಮ್ಮ ಕೈಲಾದಷ್ಟು ಹಣ ವರ್ಗಾವಣೆ ಮಾಡಿ |
ಗಾಂಧಿ ಮತ್ತು ಅಹಿಂಸೆ - ವಿಕಿಪೀಡಿಯ |
ಗಾಂಧೀಜಿಯವರ ಭಾವಚಿತ್ರ |
೧ ಗಾಂಧಿ ಮತ್ತು ಅಹಿಂಸೆ |
೨ ಅಹಿಂಸೆಯ ಅರ್ಥ |
೩ ಅಹಿಂಸೆಯ ಸಹಕಾರಿ ಧರ್ಮಗಳು |
೪ ಅಹಿಂಸೆಯ ದಾರ್ಶನಿಕ ಸ್ವರೂಪ |
೫ ಅಹಿಂಸೆ ಹಾಗೂ ಸತ್ಯಾಗ್ರಹ |
ಗಾಂಧಿ ಮತ್ತು ಅಹಿಂಸೆ[ಬದಲಾಯಿಸಿ] |
ಗಾಂಧೀಜಿಯವರ ಜೀವನದರ್ಶನದಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ ಅಹಿಂಸೆಗೆ ದ್ವಿತೀಯ ಸ್ಥಾನ. ಸತ್ಯಶೋಧನೆಯಲ್ಲಿ ತೊಡಗಿದ ಇವರು ಅನುಸರಿಸಿದ ಏಕೈಕ ಮಾರ್ಗವೇ ಅಹಿಂಸೆ. ಅಹಿಂಸೆ ಸಾಧನ, ಸತ್ಯವೇ ಅದರ ಸಿದ್ಧಿ. ಸತ್ಯದ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಅಹಿಂಸೆಯಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮನಗಂಡ ಇವರು ಅಹಿಂಸೆಯ ಆಚರಣೆಗೆ ತಮ್ಮ ಬಾಳಿನ ಸರ್ವಸ್ವವನ್ನೂ ಪಣವಾಗಿಟ್ಟರು. ಇವರ ಅಂತರಂಗ ಬಹಿರಂಗ ಜೀವನವನ್ನೆಲ್ಲಾ ಇದು ವ್ಯಾಪಿಸಿತು. ತ್ರಿಕರಣಪುರ್ವಕ ಅಹಿಂಸೆಯ ಆಚರಣೆಯಲ್ಲಿ ತೊಡಗಿದ ಇವರು ಅಹಿಂಸೆಯನ್ನು ಕುರಿತು ಹೇಳಿರುವ ಮಾತುಗಳು ಋಷಿ ವಾಣಿಯಂತೆ ಪ್ರಮಾಣವಾಕ್ಯಗಳಾಗಿವೆ. |
ಅಹಿಂಸೆಯ ಅರ್ಥ[ಬದಲಾಯಿಸಿ] |
ಗಾಂಧೀಜಿಯವರೇನು ಅಹಿಂಸಾತತ್ತ್ವದ ಜನಕರಲ್ಲ. ಏಕೆಂದರೆ ಭಾರತೀಯ ದರ್ಶನದಲ್ಲಿ ಅದರಲ್ಲಿಯೂ ಜೈನ ಮತ್ತು ಬೌದ್ಧದರ್ಶನದಲ್ಲಿ, ಅಹಿಂಸಾತತ್ತ್ವ ಮತ್ತು ಅದರ ಆಚರಣೆ ಅತ್ಯಂತ ಸಮರ್ಥರೀತಿಯಲ್ಲಿ ನಿರೂಪಿತವಾಗಿದೆ. ಆದರೂ ಗ್ರಂಥಸ್ಥವಾದ ಈ ತತ್ತ್ವ ಗಾಂಧಿಜಿಯವರ ಬದುಕಿನಲ್ಲಿ ಜೀವಂತಗೊಂಡು ನಮ್ಮ ಸಮಕಾಲೀನ ಯುಗದಲ್ಲಿ ಒಂದು ಪವಾಡವನ್ನೇ ಎಸಗಿದೆ. ಸ್ಥೂಲವಾಗಿ ನೋಡಿದಾಗ ಅಹಿಂಸೆ ಎಂದರೆ ಕೊಲ್ಲದಿರುವುದು ಅಥವಾ ಹಿಂಸಿಸದಿರುವುದು ಎಂದಾದರೂ ಇದರ ಸೂಕ್ಷ್ಮ ಹಾಗೂ ವಿಸ್ತುೃತವಾದ ಅರ್ಥವನ್ನು ಗ್ರಹಿಸಲು ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೆರಡನ್ನೂ ಅವಲೋಕಿಸಬೇಕಾಗುತ್ತದೆ. ಸತ್ಯನಿಷ್ಠನಾದ ಹಾಗು ಅಹಿಂಸೆಯ ಪ್ರಯೋಗದಲ್ಲಿ ತೊಡಗಿದ ಗಾಂಧೀಜಿ ಯವರು ಇದು ಕೇವಲ ಒಂದು ಧಾರ್ಮಿಕ ನಿಯಮ ಮಾತ್ರವಲ್ಲ; ಇದು ಆರ್ಥಿಕ, ಸಾಮಾಜಿಕ, ರಾಜಕೀಯವೇ ಮುಂತಾದ ಎಲ್ಲ ರಂಗಗಳಲ್ಲಿಯೂ ಪ್ರತಿಧ್ವನಿತವಾಗುವಂಥ ವಿಶ್ವವ್ಯಾಪಿತತ್ತ್ವ. ಚರಾಚರಾತ್ಮಕವಾದ ಜಗತ್ತೆಲ್ಲವೂ ಈ ತತ್ತ್ವಕ್ಕೆ ತಲೆಬಾಗಿ ನಡೆಯುತ್ತದೆ- ಎಂಬುದನ್ನು ಕಂಡುಕೊಂಡರು. ಅಹಿಂಸೆಯ ವಿಶ್ವರೂಪದರ್ಶನ ಇವರಿಗಾದಂತೆಲ್ಲ. ಈ ಮಹತ್ತತ್ತ್ವದ ಪೂರ್ಣ ವ್ಯಾಖ್ಯಾನ ಮಾನವನಿಂದ ಸಾಧ್ಯವಾಗದು, ತಮ್ಮಿಂದಂತೂ ಸಾಧ್ಯವಾಗಿಲ್ಲ ಎಂಬುದನ್ನು ಬಹುದುಃಖದಿಂದ ಹೇಳಿಕೊಂಡರು. ಆದರೂ ಅಹಿಂಸೆಯ ಸಾಧನೆ ತಮಗೆ ಅಳವಟ್ಟಷ್ಟರಿಂದಲೇ. ಅದಕ್ಕಿರುವ ಅಗಾಧ ಶಕ್ತಿಯ ಅರಿವು ತಮಗಾಯಿತೆಂಬ ತೃಪ್ತಿಯೂ ಇವರಲ್ಲಿ ಕಾಣತ್ತದೆ. ವಿನಾಶಕಾರಿ ಅಸ್ತ್ರಗಳಿಂದೊದಗುವ ಯಾವ ಶಕ್ತಿಯೂ ಈ ಅಹಿಂಸೆಯ ಶಕ್ತಿಗೆ ಸರಿಸಮನಾಗಲಾರದೆಂದು ಇವರು ಹೇಳಿದರು. ಅಹಿಂಸೆಯಿಂದ ಸಾಧಿಸಲಾರದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದೇ ಇವರ ಅನುಭವ. ಆದರೆ ಅಹಿಂಸೆಯ ಸಾಧಕನಲ್ಲಿ ಅಮಿತವಾದ ಸಾಮರ್ಥ್ಯವಿರಬೇಕೆಂಬುದನ್ನು ಹೇಳಲು ಇವರು ಮರೆತಿಲ್ಲ. |
ಅಹಿಂಸೆಯ ಸಹಕಾರಿ ಧರ್ಮಗಳು[ಬದಲಾಯಿಸಿ] |
ಗಾಂಧೀಜಿ ಕಂಡಂತೆ, ಅಹಿಂಸೆಯ ಆಚರಣೆಯಲ್ಲಿ ಪ್ರೇಮ, ತ್ಯಾಗ, ಸಹನೆ ಮತ್ತು ಧೈರ್ಯ ಎಂಬ ಮೂಲಧಾತುಗಳು ಅಡಗಿವೆ. ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತಸ್ವರೂಪವೇ ಅಹಿಂಸೆ. ಪ್ರೀತಿ ಇರುವಲ್ಲಿ ಹಿಂಸೆಗೆ ಸ್ಥಾನವಿಲ್ಲ. ನಮಗೆ ಪ್ರಿಯವಾದುದನ್ನು ನಾವು ಎಂದೂ ನಾಶಪಡಿಸುವುದಿಲ್ಲ. ಪ್ರೀತಿಯ ಅಭಾವವಿದ್ದಲ್ಲಿ ಮಾತ್ರವೇ ಹಿಂಸೆ ಸಾಧ್ಯ. ದ್ವೇಷಕ್ಕೆ ದ್ವೇಷ ಪರಿಹಾರವಲ್ಲ. ಕ್ರೌರ್ಯಕ್ಕೆ ಏಕೈಕ ಪರಿಹಾರವೆಂದರೆ ಪ್ರೇಮ. ಈ ಅಂಶವನ್ನು ಗಾಂಧೀಜಿಯವರ ಮಾತಿನಲ್ಲಿಯೇ ಹೇಳುವುದಾದರೆ 'ಶಸ್ತ್ರಸನ್ಯಾಸ ಮಾಡಿರುವ ನನ್ನಲ್ಲಿ ನನ್ನನ್ನು ದ್ವೇಷಿಸುವವರಿಗೆ ಕೊಡಲು ಪ್ರೇಮ ತುಂಬಿದ ಬಟ್ಟಲಲ್ಲದೆ ಬೇರೇನೂ ಇಲ್ಲ'. ಈ ಮಾತು ಅಹಿಂಸೆಗೆ ಇವರು ಕೊಟ್ಟ ಒಂದು ವ್ಯಾಖ್ಯಾನ. ಪುನರ್ಜನ್ಮದಲ್ಲಿ ನಂಬಿಕೆ ಇದ್ದ ಇವರು ಈ ಜನ್ಮದಲ್ಲಲ್ಲದಿದ್ದರೆ ಅನೇಕ ಜನ್ಮಗಳ ಅನಂತರವಾದರೂ ವಿಶ್ವದ ಜೀವಜಂತುಗಳನ್ನೆಲ್ಲ ತಮ್ಮ ಪ್ರೇಮಬಾಹುಗಳಿಂದ ಅಪ್ಪಲು ಬಯಸುತ್ತಾರೆ. |
ಅಹಿಂಸೆಯ ಸಾಧನೆ ತಕ್ಕ ಮಟ್ಟಿಗಾದರೂ ಫಲಪ್ರದವಾಗಬೇಕಾದರೆ ತ್ಯಾಗ ಅತ್ಯಂತ ಆವಶ್ಯಕವೆಂಬುದನ್ನು ಗಾಂಧೀಜಿ ಮನಗಂಡಿದ್ದರು. ಸ್ವಾರ್ಥವೆಂಬುದು ಒಂದು ರೀತಿಯ ಹಿಂಸೆ. ಶರೀರ ಸುಖ, ಕೀರ್ತಿ, ಲಾಭ, ಇಲ್ಲವೆ ಅಹಂಕಾರದ ಆಡಂಬರ, ಇವುಗಳಿಗಾಗಿಯೇ ಒಬ್ಬರು ಮತ್ತೊಬ್ಬರನ್ನು ಹಿಂಸಿಸುವುದು. ವ್ಯಕ್ತಿಗಳಷ್ಟೇ ಏಕೆ, ರಾಷ್ಟ್ರಗಳೂ ಇದರಿಂದ ಮುಕ್ತವಲ್ಲ. ಕಾಮ, ಕ್ರೋಧ, ಮದ, ಮತ್ಸರಗಳಿಗೆ ಒಳಗಾಗಿರುವ ಮಾನವನಿಗೆ ಶುದ್ಧ ಅಹಿಂಸೆಯ ಅಚರಣೆ ಕೇವಲ ಮರೀಚಿಕೆಯೇ ಸರಿ. ಯಾವ ರೀತಿಯಿಂದಲೇ ಆಗಲಿ ತನ್ನ ಹಿತಕ್ಕಾಗಿ ಅನ್ಯರನ್ನು ಬಳಸುವುದು ಸ್ವಾರ್ಥ. ಇದೊಂದು ಮೃಗಧರ್ಮ. ಅನ್ಯರ ಒಳಿತಿಗಾಗಿ ತಾನು ಶ್ರಮಿಸುವುದೇ ತ್ಯಾಗ. ಆದ್ದರಿಂದ ಅಹಿಂಸೆ ಅಥವಾ ವಿಶ್ವಪ್ರೇಮಕ್ಕೆ ಯಾವ ತ್ಯಾಗವೂ ಹೆಚ್ಚೆನಿಸಲಾರದು. ಅಹಿಂಸೆಯ ಆಚರಣೆಗೆ ಬೇಕಾದ ಮತ್ತೊಂದು ಸಹಕಾರಿ ಧರ್ಮವೆಂದರೆ ಸಹನೆ. ತನ್ನನ್ನು ದ್ವೇಷಿಸುವವನನ್ನು ತಾನು ಪ್ರೀತಿಸಬೇಕೆಂದರೆ ಆಗ ಅವನಲ್ಲಿ ಬೆಟ್ಟದಷ್ಟು ಸಹನೆ ಬೇಕು. ಕೋಪ ಮತ್ತು ಮಾತ್ಸರ್ಯ ಅಹಿಂಸೆಯ ಪರಮ ವೈರಿಗಳು. ನಿರಹಂಕಾರಿಯಾದವನಿಗೆ ಮಾತ್ರ ಈ ಸಹನೆ ಸಾಧ್ಯ. ಗಾಂಧೀಜಿ ಉದಾಹರಿಸಿದಂತೆ, ತಾಯಿಯ ಪ್ರೇಮ ಸಹನೆಯ ಪ್ರತೀಕ. |
ಇನ್ನು ಅಹಿಂಸೆಯ ಆಚರಣೆ ಹೇಡಿಯಾದವನಿಗೆ ಎಂದೂ ಸಾಧ್ಯವಿಲ್ಲ. ಗೀತೆಯಲ್ಲಿ ಹೇಳಿರುವ ಅಭಯತ್ವ ಕೈಗೂಡದವನು ಹಿಂಸೆಗೆ ಅಹಿಂಸೆಯನ್ನು ಹಿಂದಿರುಗಿಸಲು ಎಂದೂ ಶಕ್ತನಾಗುವುದಿಲ್ಲ. ಹಿಂಸಾವಾದಿಗಳಿಂದ ತನಗಾಗುವ ಎಲ್ಲ ರೀತಿಯ ಅಘಾತಗಳನ್ನೂ ಸಹಿಸಿಕೊಂಡು ಹಿಂಸಾವಾದಿಗಳ ಹೃದಯ ಪರಿವರ್ತನೆಯಾಗುವಂತೆ ಮಾಡುವುದೇ ಅಹಿಂಸೆಯ ಉದ್ದೇಶ. ಸತ್ಯಕ್ಕೆ ಹೊರತಾಗಿ ಮತ್ತಾವುದಕ್ಕೂ ಅಂಜೆನೆಂಬ ಎದೆಗಾರಿಕೆ ಇರುವವನಿಗೆ ಮಾತ್ರ ಈ ಸಾಹಸ ಸಾಧ್ಯ. ಸತ್ಯಕ್ಕಾಗಿ ಅಹಿಂಸಾಚರಣೆಯಲ್ಲಿ ತೊಡಗಿರುವವನು ಸಾಕ್ರಟಿಸ್ನಂತೆ, ಏಸುವಿನಂತೆ, ಸತ್ಯಕ್ಕಾಗಿ ಸಾವನ್ನೂ ಸ್ವಾಗತಿಸುತ್ತಾರೆ. ವಿಶ್ವದಲ್ಲಿಯೇ ಅಜೇಯವೆನಿಸಿದ ಬ್ರಿಟಿಷ ಸಾಮ್ರಾಜ್ಯದೆದುರು ಗಾಂಧೀಜಿಯವರ ಹೋರಾಟದ ಜೀವನ ಹಾಗೂ ವಿಜ್ಞಾನಿಯ ಗುಂಡಿಗೆ ಬಲಿಯಾದ ಇವರ ಧೀರಮರಣ ಇವು ಇವರ ಅಭಯತ್ವದ ಜೀವಂತಸಾಕ್ಷಿ. ಅಹಿಂಸಾಚರಣೆಗೆ ಬೇಕಾದ ಅಭಯತ್ವಕ್ಕೆ ಈ ಮಹನೀಯರ ಇಡೀ ಜೀವನವೇ ನಿದರ್ಶನ. |
ಅಹಿಂಸೆಯ ದಾರ್ಶನಿಕ ಸ್ವರೂಪ[ಬದಲಾಯಿಸಿ] |
ಅಹಿಂಸೆ ಎಂಬುದು ಒಂದು ಆತ್ಮಕಶಕ್ತಿ. ಅತ್ಯಂತ ಕ್ರೂರಿಯ ಹೃದಯದಲ್ಲಿಯೂ ಭಗವಂತನ ಅಂಶ ಇದೆ ಎಂಬುದೇ ಇದರ ಬುನಾದಿ. ಇದು ಯಾವಾಗಲೂ ಯಾರಿಗೂ ಕೆಟ್ಟದ್ದನ್ನು ಮಾಡುವಂಥದಲ್ಲ. ಇದನ್ನು ಅರಿತು ಅಚರಿಸುವವರೂ ಉಂಟು. ಅರಿಯದೇ ಆಚರಿಸುವ ಮುಗ್ಧ ಚೇತನಗಳೂ ಉಂಟು. ಇದನ್ನು ಎಷ್ಟೇ ಅಪೂರ್ಣವಾಗಿ ಆಚರಿಸಿದರೂ ಅದರಿಂದ ಸಾಕಷ್ಟು ಉತ್ತಮ ಫಲ ದೊರೆತೇ ದೊರೆಯುತ್ತದೆ. ಇದರ ಆಚರಣೆಗೆ ಪಂಡಿತನ ಪಾಂಡಿತ್ಯವೇ ಬೇಕೆಂದಿಲ್ಲ. ಸತ್ಯದಲ್ಲಿ ನಿಷ್ಠೆಯೊಂದಿದ್ದರೆ ಮಿಕ್ಕೆಲ್ಲ ಮಾರ್ಗದರ್ಶನವೂ ತಾನೇ ತಾನಾಗಿ ದೊರೆಯುತ್ತದೆ. ಇದನ್ನು ಆಚರಿಸುವವನು ಮಾತ್ರವಲ್ಲದೆ ಅವನ ಪರಿಸರವೂ ಇದರಿಂದ ಪ್ರಭಾವಿತವಾಗುತ್ತದೆ. ಜೀವ ಜಂತುಗಳಲ್ಲೆಲ್ಲ ಸುಪ್ತವಾಗಿರುವ ದಿವ್ಯಶಕ್ತಿಯನ್ನು ಸಚೇತನ ಗೊಳಿಸುವ ಶಕ್ತಿ ಅಹಿಂಸೆಗಿದೆ. ಶುದ್ಧ ಅಹಿಂಸಾವ್ರತಿಗೆ ವಿಷ ತುಂಬಿದ ಹಾವಿನೊಂದಿಗೂ ಸಖ್ಯಸಾಧ್ಯವಾಗಬೇಕು. ಆದರೆ ತಾವು ಆ ಆದರ್ಶ ಸ್ಥಿತಿಯಿಂದ ಬಹು ಹಿಂದೆ ಬಿದ್ದಿರುವುದಾಗಿ ಗಾಂಧೀಜಿ ಒಮ್ಮೆ ಮನನೊಂದು ಹೇಳಿದ್ದಾರೆ. ಅಹಿಂಸೆಯ ಆಚರಣೆಯಿಂದ ಶತ್ರು ಮಿತ್ರನಾಗುತ್ತಾನೆ. ದ್ವೇಷಿಸುವವ ಪ್ರೀತಿಸಲು ಕಲಿಯುತ್ತಾನೆ. ನಿಂದಕನಲ್ಲಿ ಪಶ್ಚಾತ್ತಾಪ ಮೂಡುತ್ತದೆ. ಜೀವಂತ ನಿದರ್ಶನವಿಲ್ಲದಿದ್ದಾಗ ಈ ಮಾತು ಕೇವಲ ಕಲ್ಪನೆಯಂತೆ ಕಾಣಬಹುದು. ಅಹಿಂಸೆಯನ್ನು ನಂಬಿ ತುಸು ದೂರ ಆ ಮಾರ್ಗದಲ್ಲಿ ನಡೆದ ಭಾರತರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಟ್ಟಾಗಲೂ ಅನಂತರವೂ ಬ್ರಿಟಿಷ್ ಸಾಮ್ರಾಜ್ಯ ಹಾಗೂ ಅಲ್ಲಿನ ವಿಚಾರವಂತ ಜನರಲ್ಲಿ ಕಂಡ ಪ್ರೇಮ ಮತ್ತು ಮೈತ್ರಿಗಳು ವಿಶ್ವದ ಇತಿಹಾಸದಲ್ಲಿಯೇ ಕಂಡರಿಯದ ಒಂದು ವಿನೂತನ ಅನುಭವ. ಪೂರ್ಣ ಅಹಿಂಸೆ ಸಾಧ್ಯವೇ? ನೂರಕ್ಕೆ ನೂರರಷ್ಟು ಅಹಿಂಸೆಯ ಆಚರಣೆ ಮಾನವ ಮಾನವನಾಗಿರುವವರೆಗೂ ಸಾಧ್ಯವಾಗದೆಂಬುದೇ ಗಾಂಧೀಜೀಯವರ ಮತ. ಮಾನವ ತನ್ನ ಶರೀರ ಪೋಷಣೆಗಾಗಿ ಅನ್ನಪಾನೀಯಗಳನ್ನು ತೆಗೆದುಕೊಳ್ಳುವಾಗ ಅನೇಕ ಸಸ್ಯ ಹಾಗೂ ಸೂಕ್ಷ್ಮ ಕ್ರಿಮಿಗಳ ನಾಶ ಅವನಿಗರಿವಿಲ್ಲದೇ ನಡೆಯುತ್ತದೆ. ಆಹಾರಧಾನ್ಯಗಳನ್ನು ಬೆಳೆಯುವಾಗ ಮತ್ತು ದವಸಧಾನ್ಯಗಳನ್ನು ರಕ್ಷಿಸುವಾಗ ಅನೇಕ ಕ್ರಿಮಿಕೀಟಗಳ ನಾಶ ಅನಿವಾರ್ಯ. ಹುಚ್ಚಿದ್ದ ವ್ಯಕ್ತಿಯೊಬ್ಬ ತನ್ನೆದುರಿಗೆ ಕಂಡವರನ್ನೆಲ್ಲಾ ಕೊಲ್ಲುತ್ತ ಹೋಗುವಾಗ ಅವನನ್ನು ಗುಂಡಿಕ್ಕಿ ಕೊಲ್ಲುವುದು ಯುಕ್ತವಾಗಿಯೇ ಕಾಣುತ್ತದೆ. ಹಾಗೆಯೇ ವೈದ್ಯಕೊಟ್ಟ ಯಾವ ಔಷಧಿಗೂ ಮಣಿಯದ ನಿರಂತರ ವೇದನೆಯಿಂದ ಯಾತನೆಗೊಳ್ಳುತ್ತಿದ್ದ ತಮ್ಮ ಆಶ್ರಮದ ಕರು ಒಂದನ್ನು, |
Subsets and Splits
No community queries yet
The top public SQL queries from the community will appear here once available.