text
stringlengths 0
61.5k
|
---|
» ಗಣಪತಿ ಆತ್ಮಹತ್ಯೆ : ನ್ಯಾಯಾಂಗ ತನಿಖೆಗೆ ವ್ಯವಸ್ಥೆಗಳೇ ಇಲ್ಲ! |
ಗಣಪತಿ ಆತ್ಮಹತ್ಯೆ : ನ್ಯಾಯಾಂಗ ತನಿಖೆಗೆ ವ್ಯವಸ್ಥೆಗಳೇ ಇಲ್ಲ! |
Updated: Thursday, August 4, 2016, 20:12 [IST] |
ಬೆಂಗಳೂರು, ಆಗಸ್ಟ್ 04 : ಕರ್ನಾಟಕ ಸರ್ಕಾರ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ. ಆದರೆ, ಈ ಆದೇಶ ಹೊರಬಿದ್ದು ಸುಮಾರು 20 ದಿನಗಳು ಕಳೆದರೂ ತನಿಖೆ ನಡೆಸಲು ಅಗತ್ಯ ಸೌಕರ್ಯಗಳನ್ನು ನೀಡಿಲ್ಲ. |
ಸರ್ಕಾರ ಜುಲೈ 16ರಂದು ನ್ಯಾಯಮೂರ್ತಿ ಕೇಶವನಾರಾಯಣ ಅವರ ನೇತೃತ್ವದಲ್ಲಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಆದೇಶ ಹೊರಡಿಸಿತ್ತು. ಆದರೆ, ಇದುವರೆಗೂ ತನಿಖೆಗೆ ಅಗತ್ಯವಾದ ಸಿಬ್ಬಂದಿ, ಕಚೇರಿ, ವಾಹನಗಳ ವ್ಯವಸ್ಥೆಯನ್ನು ಮಾಡಿಲ್ಲ.[ಕೇಂದ್ರ ಸೇವೆಗೆ ಹೊರಟು ನಿಂತ ಪ್ರಣಬ್ ಮೊಹಾಂತಿ] |
ಬಾಲಬ್ರೂಯಿ ಅತಿಥಿಗೃಹದಲ್ಲಿ ತನಿಖೆಗೆ ಅಗತ್ಯವಾದ ಕಚೇರಿ, ಸಿಬ್ಬಂದಿ, ಕೋರ್ಟ್ ಹಾಲ್, ದೂರವಾಣಿ ಸಂಪರ್ಕ ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಡಿ ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಜುಲೈ 20ರಂದು ಪತ್ರ ಬರೆಯಲಾಗಿತ್ತು. ಆದರೆ, ಯಾವ ವ್ಯವಸ್ಥೆಗಳೂ ಆಗಿಲ್ಲ.[ಗಣಪತಿ ಸಾವಿನ ಪ್ರಕರಣದ Timeline] |
ಸಿಐಡಿ ತನಿಖೆಗೆ ಸೂಚನೆ : ಎಂ.ಕೆ.ಗಣಪತಿ ಅವರ ಪುತ್ರ ನೇಹಾಲ್ ಅವರು ಮಡಿಕೇರಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ, ಎ.ಎಂ.ಪ್ರಸಾದ್ ಮತ್ತು ಕೆ.ಜೆ.ಜಾರ್ಜ್ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಎಂದು ಖಾಸಗಿ ದೂರು ಸಲ್ಲಿಸಿದ್ದರು.[ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ] |
ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸುವಂತೆ ಮಡಿಕೇರಿ ನಗರ ಪೊಲೀಸರಿಗೆ ಸೂಚನೆ ನೀಡಿತ್ತು. ಕರ್ನಾಟಕ ಹೈಕೋರ್ಟ್ ಆಗಸ್ಟ್ 4ರಂದು ಮಡಿಕೇರಿ ಪೊಲೀಸರು ತನಿಖೆ ನಡೆಸುವುದು ಬೇಡ. ಸಿಐಡಿ ತಂಡವೇ ತನಿಖೆ ನಡೆಸಬೇಕು ಎಂದು ಆದೇಶ ನೀಡಿದೆ. |
ಅಂದಹಾಗೆ ಜುಲೈ 7ರಂದು ಮಂಗಳೂರು ಐಜಿ ಕಚೇರಿಯ (ಪಶ್ಚಿಮ ವಲಯ) ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರ ಮೊದಲು ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ನಂತರ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. |
mk ganapati, madikeri, karnataka, ಮಡಿಕೇರಿ, ಎಂಕೆ ಗಣಪತಿ, ಕರ್ನಾಟಕ, ಆತ್ಮಹತ್ಯೆ |
Karnataka government had formed judicial commission on July 16, 2016 to enquiry about the suicide committed by deputy superintendent of police (DySP), M.K.Ganapati. But Justice Keshavanarayana commission is yet to be allotted space, staff, and vehicle for the purpose. |
ಎಸ್‌ಎಸ್‌ಲ್‌ಸಿ ಪರೀಕ್ಷೆಯ ಸಮಯ ಹೆಚ್ಚಳ..! – EESANJE / ಈ ಸಂಜೆ |
ಎಸ್‌ಎಸ್‌ಲ್‌ಸಿ ಪರೀಕ್ಷೆಯ ಸಮಯ ಹೆಚ್ಚಳ..! |
December 25, 2019 Sunil Kumar SSCE examination time, SSLC Exam, sslctimeing |
ಬೆಂಗಳೂರು,ಡಿ.25- ವಿದ್ಯಾರ್ಥಿಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಮುಂಬರುವ ಮಾರ್ಚ್-ಏಪ್ರಿಲ್‍ನಲ್ಲಿ ನಡೆಯುವ ಎಸ್‌ಎಸ್‌ಲ್‌ಸಿ ಪರೀಕ್ಷೆಯ ಸಮಯದ ಅವಧಿಯನ್ನು 15ರಿಂದ 30 ನಿಮಿಷ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಬಾರಿ ಪ್ರಶ್ನೆ ಪತ್ರಿಕೆಗಳು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಾರದೆಂಬ ಕಾರಣಕ್ಕಾಗಿ ಪ್ರಥಮ ಹಾಗೂ ಐಚ್ಚಿಕ ಭಾಷಾ ವಿಷಯಗಳಿಗೆ 15 ನಿಮಿಷ ಹೆಚ್ಚಳ ಮಾಡಲಾಗಿದೆ. |
ಇನ್ನು ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಕ್ಕೆ 30 ನಿಮಿಷ ಹೆಚ್ಚುವರಿ ಸಮಯವನ್ನು ನೀಡಲಾಗಿದ್ದು, ಇದು ಪ್ರಸಕ್ತ ವರ್ಷಕ್ಕೆ ಅನ್ವಯವಾಗುತ್ತದೆ ಎಂದು ಪ್ರೌಢಶಿಕ್ಷಣ ಮಂಡಳಿಯ ಅಧಿಕಾರಿ ಖಚಿತಪಡಿಸಿದ್ದಾರೆ. ಈವರೆಗೂ ಪ್ರತಿ ವಿಷಯಕ್ಕೆ 3 ಗಂಟೆ ಸಮಯವನ್ನು ನಿಗದಿಪಡಿಸಲಾಗಿತ್ತು. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಶ್ನೆ ಪತ್ರಿಕೆಯ ಸ್ವರೂಪ ಬದಲಾಗಿದೆ. |
ಈ ಬಾರಿ ಪ್ರಥಮ ಭಾಷೆಗೆ 3 ಗಂಟೆ 15 ನಿಮಿಷ ಹೆಚ್ಚಳ ಮಾಡಿದ್ದರೆ, ದ್ವಿತೀಯ ಮತ್ತು ತೃತೀಯ ಭಾಷೆಗೆ 2 ಗಂಟೆ 30 ನಿಮಿಷ ನೀಡಲಾಗುತ್ತಿದುದ್ದನ್ನು ಈಗ 30 ನಿಮಿಷ ಹೆಚ್ಚಳ ಮಾಡಿರುವ ಪರಿಣಾಮ 3 ಗಂಟೆಯಲ್ಲಿ ವಿದ್ಯಾರ್ಥಿಗಳು ಉತ್ತರ ಬರೆಯಬಹುದು. ಐಚ್ಛಿಕ ವಿಷಯಗಳ ಸಮಯವೂ ಹೆಚ್ಚಳ ಮಾಡಲಾಗಿದೆ. ಈ ಬಾರಿ ವಿದ್ಯಾರ್ಥಿಗಳ ಜ್ಞಾನ ಹೆಚ್ಚಳ ಮಾಡಲು ಪ್ರಶ್ನೆಪತ್ರಿಕೆಯ ಸ್ವರೂಪ ಬದಲಾಯಿಸಲಾಗಿದೆ. ಮೊದಲು ಬಹು ಆಯ್ಕೆ ಮಾದರಿ ಮತ್ತು ಒಂದೇ ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೆಗಳಿಗೆ ಆದ್ಯತೆ ನೀಡಲಾಗಿತ್ತು. ಆದರೆ ಈ ಬಾರಿ ಇದನ್ನು ಕಡಿತ ಮಾಡಲಾಗಿದೆ. |
ಪ್ರಥಮ ಭಾಷೆ ಪತ್ರಿಕೆಯಲ್ಲಿ ಒಂದು ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೆಗಳನ್ನು 23 ಅಂಕದಿಂದ 17 ಅಂಕಕ್ಕೆ ಇಳಿಸಲಾಗಿದೆ. ಇದೇ ರೀತಿ ಮೂರು ಅಂಕದಲ್ಲಿ ಉತ್ತರಿಸುವ 33 ಪ್ರಶ್ನೆಗಳನ್ನು 27 ಪ್ರಶ್ನೆಗಳಿಗೆ ಉಳಿಕೆ ಮಾಡಲಾಗಿದೆ. 2ನೇ ಭಾಷಾ ಪತ್ರಿಕೆಯಲ್ಲಿ 1 ಅಂಕಕ್ಕೆ ಉತ್ತರಿಸಬಹುದಾದ ಬಹು ಆಯ್ಕೆ ಪ್ರಶ್ನೆಗಳನ್ನು 8ರಿಂದ 4ಕ್ಕೆ ಇಳಿಕೆ ಮಾಡಲಾಗಿದ್ದು , ಒಂದೇ ವಾಕ್ಯದಲ್ಲಿ ಉತ್ತರಿಸಬಹುದಾದ 16 ಪ್ರಶ್ನೆಗಳನ್ನು 12ಕ್ಕೆ ಹಾಗೂ 2 ವಾಕ್ಯದಲ್ಲಿ ಉತ್ತರಿಸಬಹುದಾದ 24 ಪ್ರಶ್ನೆಗಳ ಬದಲಿಗೆ 16ಕ್ಕೆ ಇಳಿಸಲಾಗಿದೆ. |
3 ಅಂಕಗಳಲ್ಲಿ ಉತ್ತರಿಸಬಹುದಾದ ಪ್ರಶ್ನೆಗಳನ್ನು 12ಕ್ಕೆ ಹೆಚ್ಚಳ ಮಾಡಲಾಗಿದ್ದು ಜೊತೆಗೆ ಸಾಮಾಜಿಕ ವಿಜ್ಞಾನ, ಗಣಿತ, 3ನೇ ಭಾಷಾ ಪತ್ರಿಕೆ ಮತ್ತು ವಿಜ್ಞಾನ ಪತ್ರಿಕೆಗಳಲ್ಲಿ 5 ಅಂಕದ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಎಲ್ಲ ಶಾಲೆಗಳಿಗೂ ಮಾಹಿತಿ ಒದಗಿಸಲಾಗಿದ್ದು ವಿದ್ಯಾರ್ಥಿಗಳಿಗೆ ಇದೇ ಮಾದರಿಯಲ್ಲಿ ಪರೀಕ್ಷೆಗೆ ಸಿದ್ದರಾಗುವಂತೆ ಶಿಕ್ಷಕರಿಗೆ ತಯಾರಿ ಮಾಡಬೇಕೆಂದು ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. |
ಫೆಬ್ರವರಿಯಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ದತಾ ಪಶ್ನೆ ಪತ್ರಿಕೆ ಇದೇ ಮಾದರಿಯಲ್ಲಿರಲಿದೆ. ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ.27ರಿಂದ ಏಪ್ರಿಲ್ 9ರವರೆಗೆ ನಡೆಯಲಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. |
ಪ್ರತಿ ದಿನ ಯೊಗ! ಯೋಗವಾಗಲಿ ನಿತ್ಯ ಜೀವನದ ಭಾಗ! | Satwadhara News |
Home Special ಪ್ರತಿ ದಿನ ಯೊಗ! ಯೋಗವಾಗಲಿ ನಿತ್ಯ ಜೀವನದ ಭಾಗ! |
ಪ್ರತಿ ದಿನ ಯೊಗ! ಯೋಗವಾಗಲಿ ನಿತ್ಯ ಜೀವನದ ಭಾಗ! |
ಯೋಗ ಎಂಬುದು ನಮ್ಮ ಋಷಿಮುನಿಗಳು ಕಂಡುಕೊಂಡ ಒಂದು ಜೀವನ ಶೈಲಿ. ಅದರ ಮೂಲಕ ನಮ್ಮೊಳಗಿರುವ ಅಂತಃಶಕ್ತಿಯ ಜಾಗೃತಿ ಮತ್ತು ಅರಿವು ಮೂಡುವುದು. ಅರಿವು ಎಂದರೆ ಜ್ಞಾನ, ಜ್ಞಾನ ಎಂದರೆ ಸತ್ಯ, ಈ ಸತ್ಯ ಮಾರ್ಗದಲ್ಲಿ ನಡೆಯುವುದೇ ಯೋಗ. ಆದರೆ ಆಸನ, ಪ್ರಾಣಾಯಾಮ ಮತ್ತು ಧ್ಯಾನ ಇತ್ಯಾದಿಗಳು ಖಾಯಿಲೆಗಳನ್ನು ವಾಸಿ ಮಾಡುವುದಕ್ಕೆ, ಸ್ಪರ್ಧೆಗೆ, ತೋರಿಕೆಗೆ ಯೋಗವನ್ನು ಸೀಮಿತವಾಗಿರುವುದು ಒಂದು ವಿಪರ್ಯಾಸವೇ ಸರಿ. ಯೋಗ ಎಂಬುದು ಜಗತ್ತಿನ ಎಲ್ಲರ ಆತ್ಮೋನ್ನತಿಗೆ ಸಂಬಂಧಪಟ್ಟದ್ದು. ಅದರ ನಿಜವಾದ ಅರಿವು ನಮಗಿರಬೇಕು. |
ಸರಳ ಜೀವನ, ಉದಾತ್ತ ಚಿಂತನೆ ಇದು ಯೋಗದ ಒಂದು ವಿಧಾನ. ಈ ರೀತಿಯಲ್ಲಿ ಬದುಕಿ ಜಗತ್ತಿಗೆ ಬೆಳಕು ನೀಡಿದವರು ನಮ್ಮ ಋಷಿಮುನಿಗಳು. ಇದರ ಒಳ ಅರಿವನ್ನು ಅರಿತುಕೊಂಡಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವಕ್ಕೆ ಯೋಗದ ಮಹತ್ವ ತಿಳಿಸಲು ಮುಂದಾದರು ಮತ್ತು ಅದರಲ್ಲಿ ಯಶಸ್ವಿಯೂ ಆದರು. ಜೂ. 21 ವಿಶ್ವ ಯೋಗ ದಿನವನ್ನಾಗಿ ಆಚರಿಸಲು ವಿಶ್ವದ 175ಕ್ಕೂ ಹೆಚ್ಚು ದೇಶಗಳು ಒಪ್ಪಿಗೆ ನೀಡಿದವು. ಅದರ ಮೂಲಕ ಭಾರತೀಯ ಋಷಿಮುನಿಗಳ ವಿಚಾರಧಾರೆಯನ್ನು ಸ್ವೀಕರಿಸಲು ಮುಂದಾದರು. ಈಗಿರುವ ಪರಿಸ್ಥಿತಿಗೆ ಇದರ ಅವಶ್ಯಕತೆಯೂ ಇದೆ. ಇದರಿಂದ ಕೂಡಲೇ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಾಗದಿದ್ದರೂ ಜಗತ್ತು ಶಾಂತಿಮಯ ಆಗುವುದರಲ್ಲಿ ಸಂಶಯವೇ ಇಲ್ಲ. ಯೋಗ ಜೀವನ ನಮ್ಮದಾದಲ್ಲಿ ಅದು ಸತ್ಯ ಮಾರ್ಗವಾಗಿರುತ್ತದೆ. ಸರಳ ಜೀವನ ಉದಾತ್ತ ಚಿಂತನೆಯದಾಗಿರುತ್ತದೆ. ಈ ರೀತಿಯ ಭಾವನೆ ಪ್ರತಿಯೊಬ್ಬರಲ್ಲೂ ಬಂದಿದ್ದೇ ಆದಲ್ಲಿ ಯಾವುದೇ ಅಹಂಕಾರ, ದ್ವೇಷ, ಅಸೂಯೆ, ಮೋಸ ಇಲ್ಲದೇ ಪ್ರತಿಯೊಬ್ಬರೂ ಮತ್ತೊಬ್ಬರನ್ನು ಬಂಧು ಮಿತ್ರರಂತೆ ಕಾಣುತ್ತಾರೆ. ಜಗತ್ತೇ ಒಂದು ಕುಟುಂಬದ ರೀತಿ ಆಗುತ್ತದೆ. ಆಗ ಭಾರತೀಯರ ಕಲ್ಪನೆಯ ವಸುಧೈವ ಕುಟುಂಬಕಂ ನಿರ್ಮಾಣವಾಗುತ್ತದೆ. ಬಹುಶಃ ಈ ದೂರದೃಷ್ಟಿ ಇಟ್ಟುಕೊಂಡೇ ಮೋದಿಜೀಯವರು ಈ ಕಾರ್ಯಕ್ಕೆ ಕೈ ಹಾಕಿದ್ದಾರೆ ಅನ್ನಿಸುತ್ತದೆ. |
ವಿಶೇಷವಾಗಿ ಮಕ್ಕಳಲ್ಲಿ ನಿಜವಾದ ಯೋಗದ ಅರಿವನ್ನು ಮೂಡಿಸುವುದು ಅವಶ್ಯವಾಗಿದೆ. ಬಾಲ್ಯದಲ್ಲಿ ಕಲಿತ ವಿದ್ಯೆ ಜೀವನದಲ್ಲಿ ಶಾಶ್ವತವಾಗಿ ಉಳಿಯುವುದು. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ ಎಂಬ ನಾಣ್ನುಡಿಯಂತೆ ಮಕ್ಕಳಾಗಿದ್ದಾಗ ಕಲಿಯದೇ ಇದ್ದದ್ದು, ದೊಡ್ಡವರಾದಾಗ ಕಲಿಯುವುದು ಸ್ವಲ್ಪ ಕಷ್ಟವೇ ಸರಿ. ಹಾಗಾದರೆ ಮಕ್ಕಳು ಕಲಿಯಬೇಕಾಗಿರುವ ಯೋಗವಾದರೂ ಯಾವುದು? ಮೊದಲನೆಯದೇ ಬೇಗ ಏಳುವುದು, ಸೂರ್ಯೋದಯಕ್ಕಿಂತ ಮುಂಚೆ ಏಳುವುದು. ಹೌದು, ಇದು ಬಹಳ ಮುಖ್ಯವಾದದ್ದು, ಇದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾತ್ರಿ ಹನ್ನೊಂದರ ಒಳಗೆ ಮಲಗಬೇಕು. ಇಲ್ಲವಾದಲ್ಲಿ ದಣಿದಿದ್ದ ಶರೀರ ನಿಧಾನವಾಗಿ ದುರ್ಬಲವಾಗುತ್ತಾ ಹೋಗುತ್ತದೆ, ಚೈತನ್ಯ ಕುಂದುತ್ತದೆ, ನರಗಳು ಶಕ್ತಿಹೀನವಾಗುತ್ತವೆ, ಮನಸ್ಸು ಒತ್ತಡಕ್ಕೆ ಸಿಲುಕುತ್ತದೆ, ಬುದ್ದಿ ಕುಂಠಿತವಾಗುತ್ತದೆ. ಅದಕ್ಕೇ ನಮ್ಮ ಹಿರಿಯರು ಹೇಳಿದ್ದು, ನಿದ್ದೆಗೆಟ್ಟರೆ ಬುದ್ಧಿಗೆಟ್ಟಂತೆ. ಹಾಗಾಗಿ ಬೇಗ ಮಲಗಬೇಕು. |
ಬೆಳಗ್ಗೆ ಬೇಗ ಎದ್ದರೆ ಶರೀರ ಮತ್ತು ನರಗಳು ಚೈತನ್ಯಗೊಳ್ಳುವುವು, ಮನಸ್ಸು ನಿರ್ಮಲವಾಗುವುದು, ಬುದ್ಧಿ ಚುರುಕಾಗುವುದು. ಇಷ್ಟು ಮಾತ್ರವಲ್ಲದೇ, ಉದಯ ಸೂರ್ಯನ ಎಳೆಯ ಕಿರಣಗಳಲ್ಲಿರುವ ವಿಟಮಿನ್ 'ಡಿ'ಯು ನಮಗೆ ಯಥೇಚ್ಛವಾಗಿ ಸಿಗುತ್ತದೆ. ಇದರಿಂದ ಮಲಬದ್ಧತೆ, ಸಂಧಿವಾತ, ತಲೆನೋವು, ಕಣ್ಣಿನ ದೋಷ, ಮಾನಸಿಕ ಒತ್ತಡ ನಿವಾರಣೆಯಾಗುವುದು. ನಂತರ ನಮ್ಮ ನಿತ್ಯಕರ್ಮಾದಿಗಳನ್ನು ಮುಗಿಸಿ ಕನಿಷ್ಠ ಅರ್ಧಗಂಟೆಯಾದರೂ ವ್ಯಾಯಾಮ, ಸೂರ್ಯನಮಸ್ಕಾರ, ಆಸನ, ಪ್ರಾಣಾಯಾಮ ಮಾಡಬೇಕು. ಇದರಿಂದ ಶರೀರ ಸದೃಢಗೊಳ್ಳುವುದು. ನಾವು ಯಾವುದೇ ಕಾರ್ಯ ಮಾಡಬೇಕಾದಲ್ಲಿ ಸದೃಢವಾದ ಶರೀರ ಬಹಳ ಮುಖ್ಯ. ದುರ್ಬಲ ಶರೀರದಿಂದ ಯಾವ ಕಾರ್ಯ ಮಾಡಲೂ ಸಾಧ್ಯವಿಲ್ಲ. ಹಾಗಾಗಿಯೇ ನಮ್ಮ ಹಿರಿಯರು ಹೇಳಿದ್ದು ಶರೀರ ಮಾದ್ಯಂ ಖಲು ಧರ್ಮ ಸಾಧನಂ. |
ನಂತರ ಸ್ನಾನ ಮಾಡಬೇಕು. ಸ್ನಾನ ಎಂಬುದು ಒಂದು ಸಂಸ್ಕಾರ. ಸ್ನಾನವು ನಮ್ಮ ಶರೀರದ ಹೊರಭಾಗವನ್ನು ಸ್ವಚ್ಛಗೊಳಿಸಿ, ಒಳಭಾಗವನ್ನು ಚೈತನ್ಯಗೊಳಿಸುವುದು. ಶರೀರದಲ್ಲಿದ್ದ ದಣಿವನ್ನು ನಿವಾರಿಸುವುದು. ಬುದ್ಧಿಯನ್ನು ಚುರುಕುಗೊಳಿಸುವುದು. ನಂತರ ದೇವರ ಮನೆಗೆ ಹೋಗಿ ದೀಪ ಹಚ್ಚಿ, ಸ್ವಲ್ಪ ಸಮಯ ಅಲ್ಲಿಯೇ ಕುಳಿತು ಭಗವಂತನ ನಾಮಸ್ಮರಣೆ ಅಥವಾ ಮಂತ್ರೋಚ್ಛಾರಣೆ, ಜಪ ಯಾವುದಾದರೂ ಒಂದನ್ನು ಮಾಡಬಹುದು. ಇದರಿಂದ ಚಂಚಲವಾದ ಮನಸ್ಸು ಸ್ಥಿರವಾಗುವುದು. ಒತ್ತಡದ ಮನಸ್ಸು ನಿರ್ಮಲವಾಗುವುದು. ಆ ನಂತರ ಮನೆಯಲ್ಲಿ ಇರುವ ಹಿರಿಯರಿಗೆ ಪಾದಗಳಿಗೆ ನಮಸ್ಕರಿಸಬೇಕು. ಇದರಿಂದ ಅನೇಕ ಲಾಭಗಳಿವೆ. |
ನಾವು ಹಿರಿಯರಿಗೆ ನಮಸ್ಕರಿಸಿದಾಗ ಅವರು ನಮ್ಮ ತಲೆಯ ನೆತ್ತಿಯ ಮೇಲೆ ಕೈಯಿಟ್ಟು ಒಳ್ಳೆಯದಾಗಲಿ ಎಂದು ಆಶೀರ್ವದಿಸುವರು. ಆಗ ಅವರಲ್ಲಿರುವ ಚೈತನ್ಯ ಶಕ್ತಿಯು ಅವರ ಅಂಗೈಯಿಂದ ನಮ್ಮ ತಲೆಯ ನೆತ್ತಿಯಲ್ಲಿರುವ ಬ್ರಹ್ಮರಂಧ್ರದ ಮೂಲಕ ನಮ್ಮ ಶರೀರವನ್ನು ಪ್ರವೇಶಿಸುವುದು. ಇದರಿಂದ ನಮ್ಮ ಶರೀರದಲ್ಲಿ ಶಕ್ತಿ ಮತ್ತಷ್ಟು ಹೆಚ್ಚುವುದು. ಮತ್ತು ನಮ್ಮೊಳಗಿರುವ ಅಹಂಕಾರವು ನೀಗಿ ವಿನಯತೆ ಬೆಳೆಯುವುದು. ಇದು ತುಂಬಾ ಅವಶ್ಯಕ ಕೂಡಾ. ಹಾಗೆಯೇ ಗುರುಗಳಲ್ಲಿಯೂ ಇದೇ ರೀತಿ ನಡೆದುಕೊಳ್ಳುವುದು. |
ಶಾಲೆಯಿಂದ ಮನೆಗೆ ಬಂದ ನಂತರ ಕನಿಷ್ಠ ಒಂದು ಗಂಟೆಯಾದರೂ ಶಾರೀರಿಕವಾದ ಆಟಗಳನ್ನು ಆಟಬೇಕು. ಇದರಿಂದ ಶರೀರದಲ್ಲಿನ ಜಡತ್ವ ನೀಗಿ ಮನಸ್ಸಿನಲ್ಲಿ ಉಲ್ಲಾಸ ಹೆಚ್ಚಾಗುವುದು, ಸಾಹಸ ಪ್ರವೃತ್ತಿ ಬೆಳೆಯುವುದು. ನಾಯಕತ್ವ ಗುಣ, ಬುದ್ಧಿವಂತಿಕೆ, ಸಹಬಾಳ್ವೆ, ಸಾಮರಸ್ಯ, ಹೆಚ್ಚು ಜನರ ಸಂಪರ್ಕ ಮತ್ತು ಧೈರ್ಯ ಬೆಳೆಯುವುದು. ಮಕ್ಕಳು ಆಟ ಆಡುವುದಕ್ಕೆ ಪೋಷಕರು ಸಹಕರಿಸಬೇಕು. ಇಲ್ಲದಿದ್ದರೆ ಮಗು ಏಕಾಂಗಿಯಾಗಿ ಭಯ ಮತ್ತು ಒತ್ತಡದಿಂದ ಹೇಡಿಯಾಗಿ ಬದುಕುವ ಸಂಭವ ಹೆಚ್ಚು . ಕವಿ ಒಂದು ಕಡೆ ಹೇಳುತ್ತಾರೆ: |
'ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನಾ |
ತೆಂಗೀನ ನೀರ ತೆಕ್ಕೊಂಡು ಬಂಗಾರದ ಮಾರಿ ತೊಳೆದೆನಾ' ಎಂಥ ಅದ್ಭುತ ಮಾತು. |
ಆದರೆ ಈಗಿನ ತಾಯಂದಿರು ಹೇಳುವ ಮಾತು – ಆಟಗೀಟ ಅಂತ ಗೇಟ್ ಹಾರಿದರೆ ಕೈಕಾಲು ಮುರಿತೀನ, ಕೈ ಕಾಲು ಮುಖ ತೊಳೆದ್ಕೊಂಡು ಬಂದು ಸುಮ್ಮೆ ಓದ್ಕೋ ಕುತ್ಕೊಂಡು! ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡಕ್ಕೆ ಸಿಲುಕಿರುವ ಮಕ್ಕಳಿಗೆ ಮನೆಯು ಉಸಿರುಕಟ್ಟುವ ವಾತಾವರಣ ಆಗದಿರಲಿ. |
ಆಟದಿಂದ ಬಂದ ನಂತರ ಕೈ – ಕಾಲು ತೊಳೆದು, ದೀಪ ಹಚ್ಚಿ, ಸಾಧ್ಯವಾದರೆ ಒಂದು ಭಜನೆಯನ್ನೋ ಅಥವಾ ಶ್ಲೋಕವನ್ನೋ ಹೇಳಿ ನಂತರ ಓದಲು ಕುಳಿತುಕೊಂಡಾಗ ಓದಿದ್ದು ತಲೆಯಲ್ಲಿ ಹಾಗೇ ಉಳಿಯುವುದು. ವಸ್ತುಗಳನ್ನು ನೀಟಾಗಿ ಜೋಡಿಸಿಟ್ಟುಕೊಳ್ಳುವುದು, ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸುವುದು, ಸುಳ್ಳುಗಳನ್ನು ಹೇಳದಿರುವುದು, ಅವಶ್ಯಕತೆ ಇಲ್ಲದೇ ಇರುವ ವಸ್ತುಗಳನ್ನು ಇಟ್ಟುಕೊಳ್ಳದಿರುವುದು, ಕಷ್ಟದಲ್ಲಿ ಇರುವವರಿಗೆ ಸಾಧ್ಯವಾದ ಸಹಾಯ ಮಾಡುವುದು, ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು ಇತ್ಯಾದಿಗಳ ಜೊತೆಗೆ ಉತ್ತಮವಾದ ನೀತಿ ಕಥೆಗಳನ್ನು ಮತ್ತು ಮಹಾ ಪುರುಷರ ಕಥೆಗಳನ್ನು ಓದುವುದರಿಂದ ಉತ್ತಮ ಪ್ರಜೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯೋಗ ಎಂದರೆ ಕೇವಲ ಆಸನ ಪ್ರಾಣಾಯಾಮವಲ್ಲ. ಅದು ಯೋಗದ ಒಂದು ಭಾಗ ಎಂಬುದು ಮನಸ್ಸಿನಲ್ಲಿರಲಿ. |
ಮೇಲೆ ಹೇಳಿರುವ ಎಲ್ಲ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯೋಗ ಎಂಬ ಶಬ್ದಕ್ಕೆ ನಿಜವಾದ ಅರ್ಥ ಬರುತ್ತದೆ. ಅದಕ್ಕೇ ರೈತನನ್ನು ನೇಗಿಲ ಯೋಗಿ ಎಂದು ಕರೆದಿದ್ದು. ರೈತನ ದಿನಚರಿಯನ್ನು ಗಮನಿಸಿದರೆ ಇದರ ಅರ್ಥ ನಮಗೆ ತಿಳಿಯುತ್ತದೆ. ಮೇಲೆ ಹೇಳಿರುವ ಎಲ್ಲ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಿಜವಾದ ಯೋಗಿಗಳಾಗೋಣ. ಮತ್ತೊಬ್ಬರಿಗಾಗಿ ಅಥವಾ ತೋರಿಕೆಗೆ, ಪ್ರಶಂಸೆಗಾಗಿ ಮಾಡುವುದು ಬೇಡ. ನಿಜವಾದ ಯೋಗ ನಮ್ಮ ಜೀವನದ ಒಂದು ಭಾಗವಾಗಲಿ. |
ಖಾಲಿ ಹುದ್ದೆ ಭರ್ತಿಗೆ ಒತ್ತಾಯ; ಕಾರ್ಮಿಕರ ಪಾದಯಾತ್ರೆ | Prajavani |
ಖಾಲಿ ಹುದ್ದೆ ಭರ್ತಿಗೆ ಒತ್ತಾಯ; ಕಾರ್ಮಿಕರ ಪಾದಯಾತ್ರೆ |
ಚನ್ನಪಟ್ಟಣ: ತೋಟಗಾರಿಕೆಗೆ ಇಲಾಖೆಯಲ್ಲಿ ಖಾಲಿ ಇರುವ 9ಸಾವಿರ ಹುದ್ದೆಗಳ ಭರ್ತಿಗೆ ಸರಕಾರ ಕೂಡಲೇ ಮುಂದಾಗಬೇಕೆಂದು ಆಗ್ರಹಿಸಿ ರಾಜ್ಯ ತೋಟಗಾರಿಕಾ ತರಬೇತುದಾರರ ಒಕ್ಕೂಟ ಮೈಸೂರಿನಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಬುಧವಾರ ನಗರಕ್ಕೆ ಆಗಮಿಸಿತು. |
ತಾಲ್ಲೂಕಿನ ಜೆಡಿಎಸ್ ಮುಖಂಡ ಸಿಂ.ಲಿಂ. ನಾಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಾರೇಗೌಡ, ಚಿನ್ನಗಿರಿಗೌಡ, ಜನಪರ ವೇದಿಕೆ ಅಧ್ಯಕ್ಷ ಬೇವೂರು ಯೋಗೀಶ್ ಅವರು ಪಾದಯಾತ್ರಿಗಳನ್ನು ಪಟ್ಟಣದಲ್ಲಿ ಸ್ವಾಗತಿಸಿದರು. |
ಬಸ್ ನಿಲ್ದಾಣದ ವೃತ್ತದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮೂಗನಹುಂಡಿ ಯೋಗೀಶ್, 1987ರಿಂದ ಸೇವೆ ಸಲ್ಲಿಸುತ್ತಿರುವ ತೋಟಗಾರಿಕಾ ತರಬೇತುದಾರರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. |
ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದು ಸರ್ಕಾರ ಈ ಕೂಡಲೇ ನಮಗೆ ಉದ್ಯೋಗ ಕಲ್ಪಿಸಬೇಕೆಂದು ಆಗ್ರಹಿಸಿದರು. |
`ಈ ಬಗ್ಗೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ~ ಎಂದರು. |
ಸರ್ಕಾರ ಇನ್ನಾದರೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. ಪಾದಯಾತ್ರೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಂಕೇಗೌಡ, ಖಜಾಂಚಿ ರಾಚಯ್ಯ, ಸಿ.ವಿ. ದ್ವಾರಕೀಶ್, ಕೆ. ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು. |
ವೀಣಾ ಅಚ್ಚಯ್ಯ ಸಹೋದರಿ ಎಂದು ಕೈ ಮುಟ್ಟಿದ್ದೇನೆ: ಕಾಂಗ್ರೆಸ್ ಮುಖಂಡ | GulfKannadiga | ಗಲ್ಫ್ ಕನ್ನಡಿಗ |
Home Karnataka ವೀಣಾ ಅಚ್ಚಯ್ಯ ಸಹೋದರಿ ಎಂದು ಕೈ ಮುಟ್ಟಿದ್ದೇನೆ: ಕಾಂಗ್ರೆಸ್ ಮುಖಂಡ |
ವೀಣಾ ಅಚ್ಚಯ್ಯ ಸಹೋದರಿ ಎಂದು ಕೈ ಮುಟ್ಟಿದ್ದೇನೆ: ಕಾಂಗ್ರೆಸ್ ಮುಖಂಡ |
on: August 19, 2017 In: KarnatakaNo CommentsViews: |
ಕಾಂಗ್ರೆಸ್ ಪಕ್ಷಕ್ಕೆ ಮುಜುಗುರವಾಗುವ ಘಟನೆಯೊಂದರಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಹಿರಿಯ ಕಾಂಗ್ರೆಸ್ ಮುಖಂಡನೊಬ್ಬ, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. .. |
ಮಡಿಕೇರಿ: ನಗರದ ಹಳೆಯ ಕೋಟೆ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಕೈಮುಟ್ಟಿ ಮಾತನಾಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. |
ಧ್ವಜಾರೋಹಣದ ಬಳಿಕ ಇಬ್ಬರೂ ವೇದಿಕೆಯ ಮೇಲೆ ಅಕ್ಕಪಕ್ಕವೇ ಆಸೀನರಾಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ರಮೇಶ್ ಅವರು ವೀಣಾ ಕೈಮುಟ್ಟಿ ಮಾತನಾಡಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಆಕ್ಷೇಪಿಸಿ ಕೈಅನ್ನು ತಳ್ಳುವ ದೃಶ್ಯವೊಂದು ವೈರಲ್ ಆಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ರಮೇಶ್ ಕ್ಷಮೆಯಾಚಿಸಿದ್ದಾರೆ. |
'ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದು ಬಂದ ಬಳಿಕ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಅವರ ಆರೋಗ್ಯ ವಿಚಾರಿಸಿದ್ದೇನೆಯೇ ಹೊರತು ಅಸಭ್ಯವಾಗಿ ನಡೆದುಕೊಂಡಿಲ್ಲ. ನನ್ನ ಭಾವನೆಯೂ ಕೆಟ್ಟರೀತಿಯಲ್ಲಿ ಇರಲಿಲ್ಲ. ಮೂವತ್ತು ವರ್ಷಗಳಿಂದ ಇಬ್ಬರೂ ಕಾಂಗ್ರೆಸ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಅವರಿಗಿಂತ ವಯಸ್ಸಿನಲ್ಲಿ ನಾನು ದೊಡ್ಡವನು. ರಾಜಕೀಯ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಯಾವುದೇ ದುರುದ್ದೇಶ ಇರಲಿಲ್ಲ' ಎಂದು ರಮೇಶ್ ಸ್ಪಷ್ಟಪಡಿಸಿದ್ದಾರೆ. |
'ವೀಣಾ ಅವರೊಂದಿಗೂ ಫೋನ್‌ನಲ್ಲಿ ಮಾತನಾಡಿರುವೆ. ಘಟನೆಯಿಂದ ಅವರ ಕುಟುಂಬಕ್ಕೆ ಆಗಿರುವ ಮುಜುಗರಕ್ಕೆ ವಿಷಾದ ವ್ಯಕ್ತಪಡಿಸಿರುವೆ' ಎಂದೂ ತಿಳಿಸಿದ್ದಾರೆ. |
'ವೇದಿಕೆಯಲ್ಲಿ ನನ್ನ ಆರೋಗ್ಯ ವಿಚಾರಿಸಿದರು. ಚಿಕಿತ್ಸೆಗೆ ಹೋಗಿಬಂದ ಬಳಿಕ ಇಷ್ಟೊಂದು ಸಣ್ಣಗಾಗಿರುವೆ ಎಂದು ಸಹೋದರತ್ವ ಭಾವನೆಯಿಂದ ಕೈಮುಟ್ಟಿ ಕೇಳಿದರು. ಒಳ್ಳೆಯ ಭಾವನೆಯಿಂದ ಕೈಮುಟ್ಟಿದ್ದರೂ ಸಾರ್ವಜನಿಕ ವಲಯದಲ್ಲಿ ಕೆಟ್ಟ ರೀತಿಯಲ್ಲಿ ಬಿಂಬಿತ ಆಗುತ್ತಿರುವುದು ನೋವು ತಂದಿದೆ. ರಮೇಶ್ ಅವರು ಯಾರೊಂದಿಗೂ ಅಸಭ್ಯವಾಗಿ ನಡೆದುಕೊಂಡವರಲ್ಲ. ವೇದಿಕೆಯಲ್ಲಿ ಈ ರೀತಿ ಘಟನೆ ಆಗಿರುವುದು ಕೆಲವರ ಕಣ್ಣಿಗೆ ಅಸಭ್ಯವಾಗಿ ಕಾಣಿಸುತ್ತಿದೆ' ಎಂದು ವೀಣಾ ಪ್ರತಿಕ್ರಿಯಿಸಿದ್ದಾರೆ. |
ಈ ಬೆಳವಣಿಗೆಯನ್ನು ಕುರಿತು ಪಕ್ಷದ ರಾಜ್ಯವರಿಷ್ಠರಿಗೂ ಮಾಹಿತಿ ನೀಡಲಾಗುವುದು ಎಂದು ವೀಣಾ ಅವರು ತಿಳಿಸಿದ್ದಾರೆ. |
'ಗೌರವಯುತ ವೇದಿಕೆ ಮೇಲೆ ಈ ವರ್ತನೆ ತೋರಿರುವುದು ಸರಿಯಲ್ಲ. ಶಾಲಾ– ಮಕ್ಕಳು, ಸಾರ್ವಜನಿಕರು ಸೇರಿರುವ ಕಡೆ ಗಣ್ಯರು ಮಾದರಿ ಆಗಬೇಕು. ಇಂತಹ ವ್ಯಕ್ತಿಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ' ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಭಾರತೀಶ್ ಘಟನೆ ಖಂಡಿಸಿದ್ದಾರೆ. |
ವೀಕೆಂಡ್ ಕರ್ಫ್ಯೂಗೆ ಕಟ್ಟುನಿಟ್ಟಿನ ಕ್ರಮ: ಎಸಿಪಿ ಮಹೇಶ್ ಕುಮಾರ್ – V4 News |
June 25, 2021 31 No comment |
ಸರಕಾರದ ಆದೇಶದಂತೆ ದಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವ ಕುರಿತಾಗಿ ಪೋಲಿಸರಿಗೆ ಮುಂಜಾಗ್ರತಾ ನಿಯಮಗಳ ಕುರಿತಾಗಿ ಪಣಂಬೂರು ಉಪವಿಭಾಗ ಮಟ್ಟದ ಪೋಲೀಸರಿಗೆ ಮಾಹಿತಿ ಕಾರ್ಯಕ್ರಮವು ಬೈಕಂಪಾಡಿ ಎಪಿ ಎಮ್ ಸಿ ಸಂಕೀರ್ಣ ಕಟ್ಟಡದ ಬಳಿ ಜರುಗಿತು. |
ಪಣಂಬೂರು ಸಹಾಯಕ ಪೋಲೀಸ್ ಆಯುಕ್ತ ಎಸ್ ಮಹೇಶ್ ಕುಮಾರ್ ಅವರು ಮಾತನಾಡಿ, ಸರಕಾರದ ಹಾಗೂ ದಕ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಶುಕ್ರವಾರ ಸಂಜೆ ೭ ರಿಂದ ಕಟ್ಟುನಿಟ್ಟಿನ ಕ್ರಮ ಪಾಲಿಸಲು ಆದೇಶ ನೀಡಲಾಗಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಸಬ್ ಇನ್ಸ್ ಪೆಕ್ಟರ್ ಒಳಗೊಂಡ ಸುಮಾರು 15 ಪೋಲಿಸರ ತಂಡವು ಪ್ರತಿ ವಾಹನ ಚೆಕ್ ಪಾಯಿ೦ಟ್ ನಲ್ಲಿ ಕಾರ್ಯಾಚರಿಸಲಿದ್ದಾರೆ. ಅಲ್ಲದೇ ಎಲ್ಲೂ ಕೂಡಾ ವಾಹನದ ಸವಾರರು ಸೂಕ್ತ ಮಾಹಿತಿ ನೀಡದಿದ್ದರೆ ಅಂತವರ ವಾಹನವನ್ನು ಸೀಝ್ ಮಾಡಲು ಆದೇಶಿಸಲಾಗಿದೆ. ಅಲ್ಲದೇ ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ತೆರೆದಿದ್ದರೆ ಅಂತವರಿಗೆ ದಂಡ ಇಲ್ಲವೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸರಕಾರದ ಆದೇಶದಂತೆ ಯಾವುದೆಲ್ಲಾ ಕಾರ್ಯರಂಭಿಸಲು ವಿನಾಯಿತಿ ನೀಡಲಾಗಿದೆಯೋ ಅದನ್ನು ಬಿಟ್ಟು ಇತರ ಕಾರ್ಯಗಳಿಗೆ ವಾಹನವನ್ನು ಬಳಸಿದರೆ ಅಂತಹ ವಾಹನವನ್ನು ಜಪ್ತಿ ಮಾಡಲಾಗುವುದು. ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗಿನವರೆಗೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವಾಹನ ಸಂಚರಿಸುವ ಚೆಕ್ ಪಾಯಿ೦ಟ್ ನಲ್ಲೂ ಪೋಲೀಸರ ಬಿಗಿ ಬಂದೋಬಸ್ತ್ ಗೊಳಿಸಲಾಗಿದೆ. ಅಲ್ಲದೇ ಈ ಬಗ್ಗೆ ಎಲ್ಲಾ ಠಾಣಾ ವ್ಯಾಪ್ತಿಯ ಪೋಲೀಸ್ ಸಿಬ್ಬಂದಿಗಳಿಗೂ ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುರತ್ಕಲ್ ಪೋಲೀಸ್ ಠಾಣಾಧಿಕಾರಿ ಕೆ. ಚಂದ್ರಪ್ಪ, ಪಣಂಬೂರು ಪೋಲೀಸ್ ಠಾಣಾಧಿಕಾರಿ ಅಜ್ಮತ್ ಅಲಿ, ಬಜ್ಪೆ ಪೋಲೀಸ್ ಠಾಣಾಧಿಕಾರಿ ಸಂದೇಶ್ ಪಿಜಿ, ಮುಲ್ಕಿ ಪೋಲೀಸ್ ಠಾಣಾಧಿಕಾರಿ ವಿನಾಯಕ್ ತೋರಗಲ್, ಕಾನೂನು ಸುವ್ಯವಸ್ಥೆ ವಿಭಾಗದ ಎಸ್ ಐ ಪುನೀತ್ ಗಾವ್ಂಕರ್, ಮಂಗಳೂರು ಉತ್ತರ ಸಂಚಾರಿ ಪೋಲೀಸ್ ಠಾಣಾ ಕೆ. ಎಸ್ ಶರೀಫ್, ಕಾವೂರು ಪಿಎಸ್ ಐ ಪ್ರತಿಭಾ ಹಾಗೂ ಸುರತ್ಕಲ್, ಪಣಂಬೂರು, ಮುಲ್ಕಿ, ಬಜ್ಪೆ ಪೋಲೀಸ್ ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು. |
ಗ್ಲೋಬಲ್ ಕಣ್ಗಾವಲು ಪ್ರಕಟಣೆಗಳು ಎನ್ಎಸ್ಎ |
24 ಮಾಯ್ 2016 |
ಸ್ಟಿಕಿ ಪೋಸ್ಟ್ By ಆಲಿವರ್ Bienkowski ರಲ್ಲಿ ದಿನಾಂಕ ಶಿಬಿರಗಳು ಪರ್ಮಾಲಿಂಕ್ |
24. ಮೇ 2016 ಆಲಿವರ್ Bienkowski |
ಸ್ಟಿಕಿ ಪೋಸ್ಟ್ By ಆಲಿವರ್ Bienkowski On 24. ಮೇ 2016 |
ಪತ್ರಿಕಾ ಲೇಖನಗಳ ಚಿತ್ರಗಳು |
ರೇಡಿಯೋ ಮತ್ತು ದೂರದರ್ಶನದಿಂದ ವೀಡಿಯೊ ವರದಿಗಳು |
13 ಬೆಳಕಿನ ಪ್ರಕ್ಷೇಪಗಳ ನಂತರ ಮತ್ತು ಮೆಡಿಯನ್ನಲ್ಲಿ ಮುಖ್ಯ ಸಿಐಎ ಮನುಷ್ಯ ಜರ್ಮನಿಯಿಂದ ಹೊರಬಂದರು. ಡಾ ಹೌಸ್ ಅಥವಾ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಜಾಗತಿಕ ವ್ಯಾಪ್ತಿಯ ಎನ್ಎಸ್ಎ, |
ಕನ್ನಡಿಯಲ್ಲಿ (ದಿ ಪ್ಯಾಕ್ಟ್) ಕವರ್ ಸ್ಟೋರಿನಲ್ಲಿ ZDF 37 ° |
ಆಲಿವರ್ ಬೈನ್ಕೋವ್ಸ್ಕಿ: ನಮ್ಮ ಮಾಹಿತಿಯ ಗೂಢಚಾರ ವಿರುದ್ಧ ಸಾಬೀತುಪಡಿಸಲು. ಹಲವಾರು ಮಾಧ್ಯಮಗಳು ಅದನ್ನು ವರದಿ ಮಾಡಿದೆ. ನಮ್ಮ ವೀಡಿಯೊಗಳ ಅವಲೋಕನ ಇಲ್ಲಿದೆ. ಈ ವಿಷಯದ ಬಗ್ಗೆ ವರದಿಗಳನ್ನು ಒತ್ತಿ Google ಸುದ್ದಿಗಳಲ್ಲಿ ಕಾಣಬಹುದು. ನಾವು ಇಲ್ಲಿ ಬರುವ ದಿನಗಳಲ್ಲಿ ಇದನ್ನು ಕಾಪಾಡಿಕೊಳ್ಳುತ್ತೇವೆ. |
[ಗ್ಯಾಲರಿ_ಬ್ಯಾಂಕ್ ಪ್ರಕಾರ = "ಚಿತ್ರಗಳು" ಸ್ವರೂಪ = "ಕಲ್ಲು" ಶೀರ್ಷಿಕೆ = "ನಿಜ" ಡೆಸ್ಕ್ = "ಸುಳ್ಳು" ಸ್ಪಂದಿಸುವ = "ನಿಜವಾದ" ಪ್ರದರ್ಶನ = "ಆಯ್ಕೆಮಾಡಲಾಗಿದೆ" no_of_images = "13 ″ sort_by =" ಯಾದೃಚ್ "ಿಕ" ಅನಿಮೇಷನ್_ ಪರಿಣಾಮ = "ಬೌನ್ಸ್" ಆಲ್ಬಮ್_ಶೀರ್ಷಿಕೆ = " ನಿಜವಾದ "album_id =" 1] |
ಕ್ಯಾಂಪೇನ್ ವೀಡಿಯೊಗಳು ಮತ್ತು TV ಪ್ರದರ್ಶನಗಳು | ಡಾಯ್ಚ ವೆಲ್ಲೆ | |
ಆಲಿವರ್ ಲೋವರ್ ವಾಹನಾಂತರಣ ತಾಣಗಳಲ್ಲಿ ಒಂದು TED ಟಾಕ್ ತೋರಿಸುತ್ತದೆ, ಅವರು ನೇಮಕಗೊಂಡಿದ್ದಾರೆ ಯಾವ ಯೋಜನೆಗಳಿಗಾಗಿ: ಬಡತನವನ್ನು ಗೋಚರತೆಯನ್ನು ತರಲು ಹ್ಯಾಕಿಂಗ್ ಮಾಧ್ಯಮದ ಬೆಳಕಿನ ಕಲಾ ಉತ್ಸವದ, ಕ್ರಿಯಾವಾದ, ಉದಾಹರಣೆಗೆ, ಸೌದಿ ಅರೇಬಿಯಾ, ಎನ್ಎಸ್ಎ, ಇತ್ಯಾದಿ ವಿರುದ್ಧ ಲೈಟ್ ವ್ಯಂಗ್ಯಚಿತ್ರ, ಮತ್ತು ಮಾಧ್ಯಮದಿಂದ ಕಡೆಗಣಿಸಲ್ಪಟ್ಟ ಇತರ ವಿಷಯಗಳು. |
ZDF 37 on ನಲ್ಲಿನ ಒಂದು ಸಣ್ಣ ಸಾಕ್ಷ್ಯಚಿತ್ರದಲ್ಲಿ ಅವರು ಬರ್ಲಿನ್‌ನ ಅಮೇರಿಕನ್ ರಾಯಭಾರ ಕಚೇರಿಯಲ್ಲಿ ಲೈಟ್ ಪ್ರೊಜೆಕ್ಷನ್ ಅನ್ನು ಆಯೋಜಿಸಿದ್ದರಿಂದ ಪಿಕ್ಸೆಲ್‌ಗಳ ಸಹಾಯಕ ಮತ್ತು ಆಲಿವರ್ ಅನ್ನು ತೋರಿಸಿ. ಡಸೆಲ್ಡಾರ್ಫ್‌ನ ಬಂಕರ್‌ನಲ್ಲಿ ತನ್ನ ಪ್ರೊಜೆಕ್ಟರ್‌ನಿಂದ ಸಂಗ್ರಹದಿಂದ, ಪತ್ರಿಕಾ ಜೊತೆಗಿನ ಸಭೆ, "ಎನ್‌ಎಸ್‌ಎ ಇನ್ ಡಾ ಹೌಸ್" ಲೈಟ್ ಆರ್ಟ್ ಕಾರ್ಟೂನ್‌ನಿಂದ ನಿಜವಾದ ಪ್ರಕ್ಷೇಪಣವು ಪೊಲೀಸರ ಆಗಮನದೊಂದಿಗೆ ಕೊನೆಗೊಳ್ಳಬೇಕು. |
ARTE ಟ್ರ್ಯಾಕ್‌ಗಳಲ್ಲಿ ಪಿಕ್ಸೆಲ್ ಸಹಾಯಕ. ಬರ್ಲಿನ್‌ನ ಫೆಡರಲ್ ಇಂಟೆಲಿಜೆನ್ಸ್ ಸೇವೆಯಲ್ಲಿ ಲೈಟ್ ಪ್ರೊಜೆಕ್ಷನ್. ಈ ಕಿರು ವೀಡಿಯೊ ಲಘು ದಾಳಿಯನ್ನು ತೋರಿಸುತ್ತದೆ, ಬರ್ಲಿನ್‌ನ ಫೆಡರಲ್ ಇಂಟೆಲಿಜೆನ್ಸ್ ಸೇವೆಯ ಕಟ್ಟಡದಲ್ಲಿ ಆಲಿವರ್ ಆಯೋಜಿಸಿದ್ದಾರೆ. ಜನಸಂಖ್ಯೆಯ ವಿರುದ್ಧ ರಹಸ್ಯ ಸೇವೆಗಳನ್ನು ಅನ್ವಯಿಸುವ ಮಾನಿಟರಿಂಗ್ ವಿಧಾನಗಳನ್ನು ಪ್ರತಿಭಟಿಸಲು ಪ್ರೊಜೆಕ್ಷನ್ "ಬಿಎಂಡಬ್ಲ್ಯು ಬದಲಿಗೆ ಬಿಎನ್‌ಡಿ" ಅನ್ನು ತೋರಿಸುತ್ತದೆ. |
[Ut_video_youtube url = "A2Yb3gWmm2I"] ಯುಎಸ್ ರಾಯಭಾರ ಕಚೇರಿಯಲ್ಲಿ ಕಿಮ್ ಡಾಟ್‌ಕಾಮ್‌ನೊಂದಿಗೆ ಪಿಕ್ಸೆಲ್ ಸಹಾಯಕ. ಅಮೆರಿಕದ ಯುನೈಟೆಡ್ ಸ್ಟಾಸಿ. ಡೆರ್ ಸ್ಪೀಗೆಲ್ "ಡರ್ಪಾಕ್ಟ್" ನಲ್ಲಿ ಪ್ರಕಟಿಸಲಾಗಿದೆ. ಬರ್ಲಿನ್‌ನಲ್ಲಿರುವ ಅಮೇರಿಕನ್ ರಾಯಭಾರ ಕಚೇರಿಯ ವಿರುದ್ಧದ ಕ್ರಮವನ್ನು ಈ ಮನೆಯಲ್ಲಿ ಮಾಡಿದ ವೀಡಿಯೊದಲ್ಲಿ ತೋರಿಸಲಾಗುತ್ತದೆ. ಗೋಡೆಯ ಮೇಲಿನ ದೀಪಗಳು: "ಯುನೈಟೆಡ್ ಸ್ಟ್ಯಾಸಿ ಆಫ್ ಅಮೇರಿಕಾ", ಆದರೆ ಪೊಲೀಸರು ಬರುವವರೆಗೆ ಮಾತ್ರ. |
ಡಬ್ಲ್ಯೂಡಿಆರ್ ಪ್ರಸ್ತುತ ಗಂಟೆಯಲ್ಲಿ ಪಿಕ್ಸೆಲ್‌ಗಳ ಸಹಾಯಕರು, ಬಿಎನ್‌ಡಿ ಮತ್ತು ಎನ್‌ಎಸ್‌ಎ. |
ಡಬಲ್ ಪ್ರೊಜೆಕ್ಷನ್ ಅಂಕೆ ಎಂಗಲ್ಕೆ ಅವರ ಲೈವ್ ಡಬ್ಲ್ಯೂಡಿಆರ್ ಸ್ಟುಡಿಯೋ. ಈ ಮನೆಯಲ್ಲಿ ಮಾಡಿದ ವೀಡಿಯೊವು "ಎನ್ಎಸ್ಎ ಇನ್ ಡಾ ಹೌಸ್" ಎಂದು ಹೆಸರಿಸಲಾದ ಸ್ಲೈಡ್‌ಗಳನ್ನು ಹೇಗೆ ಸ್ಥಾಪಿಸಲಾಗಿದೆ ಮತ್ತು ಬಾನ್ ಮತ್ತು ವಿಯೆನ್ನಾದಲ್ಲಿನ ಯುಎನ್ ಕಟ್ಟಡದ ಮೊದಲು ಕಾನ್ಫಿಗರ್ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ. |
ಯುಎಸ್ ದೂತಾವಾಸ ಹ್ಯಾಂಬರ್ಗ್ನಲ್ಲಿ ಬೆಳಕು ಚೆಲ್ಲುತ್ತದೆ, ಪೆಡಲ್ ಪೋಲಿಸ್ ಬೋಟ್ ಅನ್ನು ಭೇಟಿ ಮಾಡುತ್ತದೆ.ಈ ವಿಡಿಯೋ ಆಲಿವರ್ ಅನ್ನು ತೋರಿಸುತ್ತದೆ ಮತ್ತು ವಿಯೆನ್ನಾದಲ್ಲಿ ಎನ್ಎಸ್ಎ ವಿರುದ್ಧ ಪ್ರತಿಭಟಿಸಲು ಆಸ್ಟ್ರೇಲಿಯನ್ನರನ್ನು ಕರೆದು ಸುಂದರ ಆಸ್ಟ್ರಿಯನ್ ಫಾರ್ಮ್ನಲ್ಲಿ ಬೇರ್ಪಡಿಸುತ್ತದೆ. ಅದರ ನಂತರ, ಅಮೆರಿಕಾ ಸಂಯುಕ್ತ ಸಂಸ್ಥಾನದ ಮುಂಚೆಯೇ ಅವರು ಹ್ಯಾಂಬರ್ಗ್ನಲ್ಲಿ ನೆಲೆಗೊಂಡಿದ್ದಾರೆ, ಅವುಗಳು ದೋಣಿಯಲ್ಲಿ ತಲುಪಿದವು. ನೀವು ಆಸ್ಟ್ರಿಯಾದ ಧ್ವಜವನ್ನು ಸಂರಚಿಸುತ್ತೀರಿ, ಅಲ್ಲಿ NSA ಲಾಂಛನವಾಗಿದೆ. ಈ ಕ್ರಮವು ಇತರರಂತೆ ಕೊನೆಗೊಳ್ಳುತ್ತದೆ: ಪೊಲೀಸರೊಂದಿಗೆ. |
ಹೌದು ನಾವು ಸ್ಕ್ಯಾನ್ ಮಾಡುತ್ತೇವೆ! ಷ್ಲಾಗ್ ಡೆನ್ ರಾಬ್, ಪ್ರೊಸಿಬೆನ್ ಟಿವಿ ಪ್ರಾಂಕ್. ಕಲೋನ್‌ನ "ಶ್ಲಾಗ್ ಡೆನ್ ರಾಬ್" ನಲ್ಲಿ ವಿಶೇಷ ಕೊಡುಗೆ ನೀಡಲು ಆಲಿವರ್ ಮತ್ತು ಅವರ ತಂಡವು ಯುವಕರಿಂದ ದೇಹವನ್ನು ಹೇಗೆ ಚಿತ್ರಿಸಲಾಗಿದೆ ಎಂಬುದನ್ನು ವೀಡಿಯೊ ವಿವರಿಸುತ್ತದೆ. "ಹೌದು ನಾವು ಪತ್ತೇದಾರಿ" ಎಂಬ ಘೋಷಣೆಯ ದೇಹದ ಮೇಲೆ ಮತ್ತು ಒಬಾಮಾಗೆ ಮುಖವನ್ನು ಚಿತ್ರಿಸಲಾಗಿದೆ. ದುರದೃಷ್ಟವಶಾತ್ ಈ ಕ್ರಮವು ಭದ್ರತೆಯಿಂದ ಪತ್ತೆಯಾಗಿದೆ. |
ನಮ್ಮ ಬೆಳಕಿನ ಪ್ರಕ್ಷೇಪಗಳು ಅಂತರರಾಷ್ಟ್ರೀಯ ಮಾಧ್ಯಮಗಳ ಗಮನವನ್ನು ಸೆಳೆಯುತ್ತವೆ ಮತ್ತು ಈ ಪ್ರಮುಖ ಮಾನವೀಯ ಸಮಸ್ಯೆಗಳನ್ನು ಮರೆಯದಂತೆ ನೋಡಿಕೊಳ್ಳುತ್ತವೆ. ದಯವಿಟ್ಟು ನಮ್ಮ ಯೋಜನೆಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಿ! ನಮ್ಮ ಕಾರಣಗಳನ್ನು ನೀವು ಬೆಂಬಲಿಸಿದರೆ, ನಮ್ಮ ಅಭಿಯಾನಗಳನ್ನು ಮುಂದುವರಿಸಲು ಅನುವು ಮಾಡಿಕೊಡುವ ಯಾವುದೇ ದೇಣಿಗೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ಕೆಲವು ಯುರೋಗಳು ಸಹ ವ್ಯತ್ಯಾಸವನ್ನುಂಟುಮಾಡುತ್ತವೆ! ಹಂಚಿಕೆ ಕಾಳಜಿಯಾಗಿದೆ. ದಯವಿಟ್ಟು ನಮ್ಮ ಲಾಭರಹಿತ ಸಂಸ್ಥೆಯನ್ನು ಬೆಂಬಲಿಸಿ. / ಸ್ಟ್ರಾಂಗ್> |
ಗಮ್ಯದೆಡೆಗೆ ಗಮನ – Bayalu |
Articles July 5, 2019 ಡಾ. ಪಂಚಾಕ್ಷರಿ ಹಳೇಬೀಡು |
ಮಾನವನ ವ್ಯಕ್ತಿತ್ವ ಆತನ ಬಹಿರಂಗದ ಚಟುವಟಿಕೆಗಳು/ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಆಚರಣೆಗಳು ಆತನ ಅಂತರಂಗದ ಅರಿವಿನ ನೆಲೆಯ ಬಿಂಬವಾಗಿದ್ದರೆ, ಅಂತರಂಗದ ಅರಿವಿನ ನೆಲೆಯು ಆತನ ಮನಸ್ಸಿನ ಸ್ವಾಸ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಘನ ವ್ಯಕ್ತಿತ್ವಕ್ಕೆ ಸ್ವಸ್ಥ ಮನಸ್ಸು ಅತ್ಯವಶ್ಯ. ಅಂಥಾ ಸ್ವಸ್ಥ ಮನವನ್ನು ಹೊಂದುವುದು ಹೇಗೆ? |
ಆದಯ್ಯ ಶರಣರು "ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು ನಿಂದಾತ ಸುಖಿ, ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ. ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ, ಮನವಂತರ್ಮುಖವಾದಡವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಡಾತ ಮುಕ್ತನು. ಮನೋಲಯವಾದಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು" ಎಂದಿದ್ದಾರೆ. ಇಂದ್ರಿಯಗಳು ತಮ್ಮಷ್ಟಕ್ಕೆ ತಾವೇ ಏನೂ ಮಾಡಲಾರವು. ಅವು ಏನನ್ನೇ ಮಾಡಬೇಕಾದರೂ, ಏನನ್ನೇ ಗ್ರಹಿಸಬೇಕಾದರೂ ಅವಕ್ಕೆ ಮನಸ್ಸಿನ ಒಡನಾಟ ಬೇಕು. ಮನಸ್ಸು ಕಣ್ಣಿನಲ್ಲಿ ನೆಲೆ ನಿಂತಾಗ ನೋಟ, ಕಿವಿಯಲ್ಲಿ ನೆಲೆ ನಿಂತಾಗ ಶಬ್ಧ, ನಾಲಿಗೆಯಲ್ಲಿ ನಿಂತಾಗ ರುಚಿ, ಚರ್ಮದೊಡನೆ ಬೆರೆತಾಗ ಸ್ಪರ್ಶ, ಮೂಗಿನೊಡನೆ ವ್ಯವಹರಿಸುವಾಗ ವಾಸನೆಗಳನ್ನು ಈ ದೇಹವು ಗ್ರಹಿಸುವುದು. ಸಕಲ ವಿಷಯಗಳ ಗ್ರಹಿಕೆಗೆ ಕಾರಣವಾಗಿರುವ ಮನಸ್ಸು ವಿಕಾರವಾಗಿದ್ದರೆ ಗ್ರಹಿಸಲ್ಪಡುವ ವಿಷಯಗಳು ತಾಮಸದಿಂದ ಕೂಡಿರುತ್ತವೆ. ತಾಮಸ ವಿಷಯಗಳು ಮಾನವನ ಅಧೋಮುಖ ಪ್ರವೃತ್ತಿಗೆ ಕಾರಣವಾಗುತ್ತವೆ. ಆದರೆ ಅದೇ ಮನಸ್ಸು ನಿರ್ವಿಕಾರವಾಗಿದ್ದರೆ ಅದು ಸಾತ್ವಿಕ ವಿಷಯಗಳನ್ನು ಮಾತ್ರ ಗ್ರಹಿಸುತ್ತದೆ, ಸಾತ್ವಿಕ ವಿಷಯಗಳು ಮಾನವನ ಊರ್ಧ್ವಮುಖ ಪ್ರವೃತ್ತಿಗೆ ಕಾರಣವಾಗುತ್ತವೆ. ವಿಕಾರಿಸುವ ಮನವನ್ನು ಸೆಳೆದು ನಿಲ್ಲಿಸಿ ಅದನ್ನು ನಿರ್ವಿಕಾರವಾಗಿಸಿ ಪ್ರಸಾದಮಯ ಮಾಡಿಕೊಂಡು ಸಮಚಿತ್ತವನ್ನು ಹೊಂದಿದಾಗ ನಮಗೆ ಶಾಂತಿ ಸಮಾಧಾನ ಲಭಿಸುವುದು. ಮನಸ್ಸು ಯಾವಾಗ ಕೇವಲ ಬಹಿರ್ಮುಖವಾಗಿ ಲೌಕಿಕ ಚಿಂತೆಗಳಲ್ಲೇ ಮುಳುಗಿದಾಗ ಬರೀ ದುಃಖ ನೋವುಗಳೇ ತುಂಬಿರುತ್ತವೆ. ಅದೇ ಮನಸ್ಸು ಅಂತರ್ಮುಖವಾಗಿ ತನ್ನನ್ನೇತಾನು ವಿವೇಚನೆಗಳಿಗೊಳಪಡಿಸಿಕೊಂಡಾಗ ತನ್ನೊಳಗೇ ಅವಿರಳವಾಗಿ ಹುದುಗಿರುವ ಜ್ಞಾನವು ಅನುಭಾವವಾಗಿ ಹೊರಹೊಮ್ಮುವುದು. ಮನವು ತನ್ನ ಸ್ವಭಾವತಃ ಹೊಯ್ದಾಟಗಳನ್ನು ಕಳೆದುಕೊಂಡು ನಿಶ್ಚಲವಾದರೆ ಅದೇ ಮುಕ್ತಿ, ಮನವು ನಿಶ್ಚಲವನ್ನೂ ಮೀರಿ ಸಂಪೂರ್ಣವಾಗಿ ಲಯವಾಗಿ ಲಿಂಗದೊಡಲು ಸೇರಿದರೆ ಆತನೇ ಲಿಂಗಸ್ವರೂಪಿ, ಆತನೇ ಶರಣನೆನಿಸುವನು. |
ಶರಣೆ ಲಿಂಗಮ್ಮ ತಾಯಿ ಆಧ್ಯಾತ್ಮದ ತುಟ್ಟತುದಿಯನ್ನು ಏರಿದ ಹನ್ನೆರಡನೇ ಶತಮಾನದ ಮಹಾಶರಣೆ. ಧರ್ಮಗುರು ಬಸವಣ್ಣನವರಿಗೆ ಸರಿಸಮಾನವಾಗಿ ಚಿಂತಿಸಬಲ್ಲ ಶಕ್ತಿಯನ್ನು ಪಡೆದುಕೊಂಡಂಥ ಶರಣೆ. ಇವರ ಪತಿ ಹಡಪದ ಕಾಯಕ ಮಾಡುವ ಅಪ್ಪಣ್ಣ. ಶರಣ ಹಡಪದ ಅಪ್ಪಣ್ಣ ಬಸವಣ್ಣನವರ ಆಪ್ತಕಾರ್ಯದರ್ಶಿ. ಶರಣ ದಂಪತಿಗಳು ಇಹಲೋಕದಲ್ಲಿದ್ದು ಅಲೌಕಿಕ ದಾಂಪತ್ಯ ನಡೆಸಿದವರು. ಶರಣೆ ಲಿಂಗಮ್ಮ ತಾಯಿ ಆಧ್ಯಾತ್ಮ ಸಾಧನೆಗೆ ಮನಸ್ಸನ್ನು ಹೇಗೆ ಅಣಿಗೊಳಿಸಬೇಕು ಎಂದು ತಮ್ಮ ವಚನಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. |
"ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ. ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು. ಬಿಂದುವೆಂದಡೆ ಆಗುಮಾಡುವಂತಹದು. ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು, ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು. ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ." |
ದೇಹದಲ್ಲಿ ಮನಸ್ಸು ಉತ್ಪತ್ತಿ ಸ್ಥಾನ ಸಹಸ್ರಾರಚಕ್ರ (ಸಾಸಿರದಳಕಮಲ) ಎಂದು ಈ ವಚನದಲ್ಲಿ ಲಿಂಗಮ್ಮ ತಾಯಿ ತಿಳಿಸುತ್ತಾರೆ. ಮನಸ್ಸಿನ ಸ್ಥಾನವನ್ನು ಇದುವರೆಗೂ ಯಾರೂ ಸರಿಯಾಗಿ ತಿಳಿಸಿದಂತೆ ಕಾಣುವುದಿಲ್ಲ. ಆದರೆ ಅದರ ಸ್ಥಾನ ಸಹಸ್ರಾರ ಎಂದು ಈ ವಚನದಲ್ಲಿ ತಿಳಿಸಿದ್ದಾರೆ. ಮನಸ್ಸು ಎಲ್ಲೆಡೆ ಹರಿದಾಡಿದರೂ ಅದರ ಪ್ರಮುಖ ನೆಲೆ ಸಹಸ್ರಾರ. ದೇಹದ ಒಳಹೊರಗೆ ನಿರಂತರ ಚಲಿಸುವ ವಾಯು, ದೇಹೇಂದ್ರಿಯಗಳ ಮೂಲಕ ಮನಸ್ಸು ಸೇರಿ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುವುದು, ಇದೇ ಬಿಂದು. ಮನಸ್ಸು, ದೇಹದಲ್ಲಿ ನಿರಂತರ ಸುಳಿದಾಡುವ ಗಾಳಿ ಹಾಗೂ ಚೈತನ್ಯಾತ್ಮಕ ಶಕ್ತಿ ಇವು ಮೂರೂ ಒಂದೇ ನೆಲೆಯಲ್ಲಿ ಕೇಂದ್ರೀಕೃತವಾದಲ್ಲಿ ಪರಂಜ್ಯೋತಿ ಪ್ರಕಾಶದ ಬೆಳಗು ಇಷ್ಟಲಿಂಗದಲ್ಲಿ ಕಾಣಬರುವುದು, ಆ ಬೆಳಗಿನಲ್ಲಿ ತಲ್ಲೀಯವಾದಡೆ ನಮ್ಮ ಒಳಗೂ ಹೊರಗೂ ಬೆಳಗಿನ ಬಟ್ಟೆ ಉಟ್ಟಂತಾಗುವುದೆಂದು ತಿಳಿಸಿದ್ದಾರೆ. |
ಒಂದು ಬಿಳಿಯ ವಸ್ತ್ರ ಶುದ್ಧವಾಗಿರಬೇಕಾದರೆ ಅದು ಕೊಳಚೆ, ಕಸ, ಹೊಗೆ ಮುಂತಾದ ಅಶುದ್ಧತೆಗಳಿಂದ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ, ಹಾಗೆಯೇ ಮನವು ಮಹದಲ್ಲಿ ನಿಲ್ಲಬೇಕಾದರೆ ಅದು ನಿರ್ಮಲವಾಗಿರಬೇಕು ಜಗದ ಕೊಳಕು ಅದಕ್ಕಂಟಬಾರದು. ಇದಕ್ಕೆ ಮನವು ಅಧೋಮುಖವಾಗಿ ಹರಿಯದೆ ಊರ್ಧ್ವಮುಖಿಯಾಗಿ ಉನ್ಮನವಾಗಬೇಕು. ಶರಣೆ ಲಿಂಗಮ್ಮ ತಾಯಿಯವರು- |
"ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ, ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?" ಎಂದು ಮನಸ್ಸನ್ನು ಭವದಿಂದ ವಿಮುಖವಾಗಿಸುವ ಮಾರ್ಗವನ್ನು ಅರುಹಿದ್ದಾರೆ. ಲೌಕಿಕ ವಿಷಯಾಸಕ್ತಿಯನ್ನು ಕಳೆದುಕೊಂಡ ಶರಣನ ತನುವದುವೇ ಬಟ್ಟಬಯಲು ಅದು ನಿರ್ಮಲತನು, ಆ ನಿರ್ಮಲ ತನುವೆಂಬ ಬಯಲೊಳಗೊಂದು ನಿಶ್ಚಿಂತವಾದ ಮನವೆಂಬ ಸರೋವರ, ಆ ಸರೋವರದಲ್ಲಿ ಆಗಾಗ ಅಪ್ಪಳಿಸುವ ಅಲೆಗಳಿಲ್ಲ, ಅದು ಸದಾ ನಿಶ್ಚಲ, ನಿರಾಳ. ಆ ನಿಶ್ಚಿಂತ ನಿರಾಳ ಸರೋವರದ ಮಧ್ಯದಲ್ಲಿ ಪ್ರಸನ್ನ ಪ್ರಸಾದವೆಂಬ ಸುಗಂಧ ಬೀರುವ ಕಮಲ. ನಮ್ಮೊಳಗೇ ಕಂಡು ಅನುಭವಿಸಬಹುದಾದ ಇಂಥಾ ಪ್ರಸನ್ನ ಪ್ರಸಾದದ ನೆಲೆಯನರಿಯದೇ ಅದನ್ನರಸಿಕೊಂಡು ಜಗದ ಗುಡಿಗಳನ್ನೆಲ್ಲಾ ಸುತ್ತಿ, ಬೇಡಿ, ಬಳಲಿ ಬೆಂಡಾದವರನ್ನು ಕಂಡು ನೊಂದುಕೊಳ್ಳುತ್ತಾರೆ ಲಿಂಗಮ್ಮತಾಯಿ. |
ಮನವೆಂಬ ಮರ್ಕಟ ತನ್ನ ಮರ್ಕಟ ಬುದ್ಧಿಯನ್ನು ಹಿಂಗಿ ಶಾಂತವಾಗಿ ಒಂದೆಡೆ ನಿಲ್ಲುವಂತೆ ಮಾಡುವುದು ನಮ್ಮಂಥವರಿಗೆ ನಿಜಕ್ಕೂ ಸವಾಲೇ ಸರಿ. ಆದರೆ ಶರಣರು ಅದನ್ನು ಬಹಳ ಸುಲಭವಾಗಿ ಸಾಧಿಸಿದರು. ಅವರು ಮನಸ್ಸನ್ನು ಶಾಂತಗೊಳಿಸಲು ಮಾಡಿದುದೇನೆಂದರೆ, ಮನಸ್ಸು ಅತ್ತಲಿತ್ತ ಹರಿಯದಂತೆ ಇಂದ್ರಿಯಗಳ ಬಾಗಿಲಲ್ಲಿ ಲಿಂಗಗಳನ್ನು ನೆಲೆಗೊಳಿಸಿದರು. ಆ ಲಿಂಗದ ಮೂಲಕವೇ ಪ್ರತಿಯೊಂದು ಪದಾರ್ಥವೂ ದೇಹವನ್ನು ಪ್ರವೇಶಿಸುವುದರಿಂದ ಅದು ಲಿಂಗಾರ್ಪಿತವಾಗಿ ಪದಾರ್ಥ ರೂಪದಿಂದ ಪಲ್ಲಟಗೊಂಡು ಪ್ರಸಾದವಾಗುವುದು. ಅಂಥಾ ಪ್ರಸಾದವನ್ನು ಸವಿದಾತನ ಮನ ಸದಾ ನಿಶ್ಚಲವಾಗಿರುವುದು. ಶರಣ ದೇಶಿಕೇಂದ್ರ ಸಂಗನಬಸವಯ್ಯನವರು- |
"ನಾಸಿಕದಲ್ಲಿ ಆಚಾರಲಿಂಗವನರಿದರ್ಪಿಸಿಕೊಂಡು ಅನ್ಯವಾಸನೆಯ ನೆನೆವ ಮನ ಶೂನ್ಯ ಕಾಣಾ. ಜಿಹ್ವೆಯಲ್ಲಿ ಗುರುಲಿಂಗವನರಿದರ್ಪಿಸಿಕೊಂಡು ಅನ್ಯರುಚಿಯ ಭಾವಿಪ ಮನ ಶೂನ್ಯ ಕಾಣಾ. ನೇತ್ರದಲ್ಲಿ ಶಿವಲಿಂಗವನರಿದರ್ಪಿಸಿಕೊಂಡು ಅನ್ಯದೃಷ್ಟಿಗೆಳಸುವ ಮನವಿರಹಿತ ಕಾಣಾ. ತ್ವಕ್ಕಿನಲ್ಲಿ ಜಂಗಮಲಿಂಗವನರಿದರ್ಪಿಸಿಕೊಂಡು ಅನ್ಯಸ್ಪರ್ಶನಕ್ಕಾಸ್ಪದವಾದ ಮನ ನಾಸ್ತಿ ಕಾಣಾ. ಶೋತ್ರದಲ್ಲಿ ಪ್ರಸಾದಲಿಂಗವನರಿದರ್ಪಿಸಿಕೊಂಡು ಅನ್ಯಶಬ್ದರಮಿಸಲು ಮನವಿಲ್ಲ ಕಾಣಾ. ಹೃದಯದಲ್ಲಿ ಮಹಾಲಿಂಗವನರಿದರ್ಪಿಸಿಕೊಂಡು ಅನ್ಯಪರಿಣಾಮಕ್ಕೆಳಸುವ ಮನವಿರಹಿತ ಕಾಣಾ. ಕಾಯ ಕಾರಣ ಪ್ರಾಣಶೂನ್ಯ ಲಿಂಗಮಯ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿ" ಎಂದು ಆರು ಲಿಂಗಗಳನ್ನು ಆರು ಸ್ಥಾನಗಳಲ್ಲಿ ಅಳವಡಿಸಿಕೊಳ್ಳುವುದರ ಕುರಿತು ವಿವರವಾಗಿ ತಿಳಿಸಿದ್ದಾರೆ. |
ಮನಸ್ಸು ನೀರಿನಂತೆ, ಸ್ವಾಭಾವಿಕವಾಗಿ ಅಧೋಮುಖವಾಗಿ ಹರಿಯುವುದು, ಅದೇ ನೀರನ್ನು ಮೇಲೆತ್ತಲು ಹೆಚ್ಚಿನ ಶ್ರಮಬೇಕಾಗುವುದು. ಹಾಗೇ ಮನಸ್ಸನ್ನು ಅಧೋಮುಖವಾಗಿ ಹರಿಯಗೊಡದೆ ಊರ್ಧ್ವಮುಖವಾಗಿ ಚಲಿಸುವಂತೆ ಮಾಡಲು ಶಿವಜ್ಞಾನ, ಶಿವಚಿಂತನೆಗಳಿಂದ ಮಾತ್ರ ಸಾಧ್ಯ. "ಮನವೆಂದಡೆ ಮರವೆಗೆ ಒಳಗುಮಾಡಿತ್ತು. ತನುವೆಂದಡೆ ತಾಮಸಕ್ಕೊಳಗುಮಾಡಿತ್ತು. ಧನವೆಂದಡೆ ಆಶೆಯೆಂಬ ಪಾಶಕ್ಕೊಳಗುಮಾಡಿತ್ತು. ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತನಿರ್ಮಲನಾಗಿ ನೋಡಿ ಕಂಡ ಶರಣಂಗೆ ತನುವೆ ಗುರುವಾಯಿತ್ತು. ಮನವೆ ಘನವಾಯಿತ್ತು, ಧನವೆ ಜಂಗಮವಾಯಿತ್ತು. ಈ ತ್ರಿವಿಧವನು ತ್ರಿವಿಧಕಿತ್ತು, ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು. ಇದರ ನೆಲೆಯನರಿಯದೆ, ಆ ಮನದ ಬೆಂಬಳಿಗೊಂಡಾಡಿದವರೆಲ್ಲ ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ." ಮನವು ಮರವೆಗೆ ಒಳಗಾದಾಕ್ಷಣ ತನುವಿನಲ್ಲಿ ತಾಮಸ ಪ್ರವೃತ್ತಿ ಮನೆಮಾಡುತ್ತದೆ, ಧನ ಬಂಧನಕ್ಕೀಡುಮಾಡುತ್ತದೆ. ಶಿವಜ್ಞಾನದಿಂದ ಯಾವಾಗ ಮನಸ್ಸು ಊರ್ಧ್ವಮುಖಿಯಾಗುವುದೋ ಆಗ ತನು ಗುರುವಾಗುವದು, ಧನ ಜಂಗಮಕ್ಕೆ ಸವೆಯುವುದು. ತ್ರಿವಿಧಕ್ಕೆ ತ್ರಿವಿಧವನ್ನಿತ್ತಾಗ ಮಾನವನು ಶರಣನಾಗಿ ಬಯಲದೇಹಿಯಾಗುವನು. |
"ಮನವ ನಿರ್ಮಲವ ಮಾಡಿದೆ. ಬೆಳಗಿದ ದರ್ಪಣದಂತೆ ಚಿತ್ತ ಶುದ್ಧವಾದಲ್ಲಿ, ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ". ಮನದಲ್ಲಿ ಲೌಕಿಕ ಕೊಳಕು ತುಂಬಿದ್ದಾಗ ದೇಹವು ಶಿವಾಲಯವಾಗುವುದೆಂತು? ಎಲ್ಲಾ ಕೊಳಕನ್ನು ತೊಳೆದು ಅಥವಾ ಕೊಳಕನ್ನು ಮೆತ್ತಿಕೊಳ್ಳದೆ ಮನವು ನಿರ್ಮಲವಾಗಿರಲು ಅಲ್ಲಿ ಶಿವನ ನಿವಾಸ ಉಂಟಾಗುವುದು. "ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ, ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ. ಅದೇನು ಕಾರಣವೆಂದಡೆ, ಸುಖದ ಮುಖ ಕಂಡಿತ್ತು; ಜಗದ ರಚನೆಯ ನೋಡಿತ್ತು; ಇಚ್ಫೆಯ ಮೆಚ್ಚಿತ್ತು; ಮನವ ನಿಶ್ಚಯವ ಮಾಡದು; ಅಂಗಸುಖವ ಬಯಸಿತ್ತು; ಕಂಗಳ ಕಾಮವನೆ ಮುಂದುಮಾಡಿತ್ತು ಇದರಿಂದ ಲಿಂಗವ ಮರೆಯಿತ್ತು; ಜಂಗಮವ ತೊರೆಯಿತ್ತು. ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು. ಇವೆಲ್ಲವನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು. ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು". ಅರಿತು ನೋಡಿದರೆ ಎಲ್ಲಾ ಬಯಲು, ನಾನೆಂಬುವುದಿಲ್ಲ ನನ್ನದೆಂಬುವುದಿಲ್ಲ. ಅರಿಯದ ಕಾರಣ ಈ ಅನಂತ ಜಗತ್ತು ವಿಘಟನೆಗೊಂಡು, ವಿರೂಪಗೊಂಡಂತೆ ನಮಗೆ ಕಾಣುತ್ತಿದೆ. ತಾಮಸದಿಂದಾಗಿ, ಭ್ರಮೆಯಿಂದಾಗಿ ಜಗದ ಜನರು ವಾಸ್ತವವನ್ನು ಮರೆತು ಭವಿಗಳಾಗಿ ಬಂಧನಕ್ಕೊಳಗಾಗಿದ್ದಾರೆ. ಶರಣರು ಭ್ರಮೆ ತಾಮಸಗಳು ಅಳಿದು ಲಿಂಗವನೊಡಗೂಡಿದವರು. |
ಅತ್ಯಂತ ಸರಳವಾಗಿ ಲಿಂಗಮ್ಮ ತಾಯಿಯವರು ದೇವನನ್ನು ತನ್ನೊಳಗೆ ಅನುಭವಿಸುವ ಸಾಧಕನ ಸ್ಥಿತಿಯನ್ನು ಬಹಳ ಸುಂದರವಾಗಿ ಈ ವಚನದಲ್ಲಿ ಚಿತ್ರಿಸಿದ್ದಾರೆ: "ಅಯ್ಯಾ, ಈ ಮಹಾಘನವ ಕಾಂಬುದಕ್ಕೆ ಹಸಿವು ಕೆಡಬೇಕು; ತೃಷೆಯಡಗಬೇಕು; ವ್ಯಸನ ನಿಲ್ಲಬೇಕು; ನಿದ್ರೆ ಹರಿಯಬೇಕು; ಜೀವನ ಬುದ್ಧಿ ಹಿಂಗಬೇಕು; ಮನ ಪವನ ಬಿಂದು ಒಡಗೂಡಬೇಕು; ಚಿತ್ತ ಒತ್ತಟ್ಟಿಗೆ ಹೋಗದಿರಬೇಕು. ಹೊತ್ತು ಹೊತ್ತಿಗೆ ಉತ್ತರವನೇರಿ ಬಿಚ್ಚು ಬೇರಿಲ್ಲದೆ ಲಿಂಗದೊಳಗೆ ಅಚ್ಚೊತ್ತಿದಂತೆ ಬೆರೆದಡೆ, ಕತ್ತಲೆ ಹರಿವುದು, ಮರವೆ ಹಿಂಗುವುದು, ನಿದ್ರೆ ಹರಿವುದು, ಹಸಿವು ಕೆಡುವುದು, ತೃಷೆಯಡಗುವುದು, ವ್ಯಸನ ನಿಲುವುದು. ಇವೆಲ್ಲವನು ಹಿಂಗಿಸಿ ತಾ ಲಿಂಗವ್ಯಸನಿಯಾಗಬಲ್ಲಡೆ, ಮುಂದೆ ಮಹಾಮಂಗಳದ ಬೆಳಗು ಕಾಣಿಪುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ." |
ಈ ವಚನ ಮೊದಲಾರ್ಧದಲ್ಲಿ ಸಾಧಕನು ತನ್ನನ್ನು ತಾನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಮೂಲಕ ಆಧ್ಯಾತ್ಮ ಪಥಕ್ಕೆ ಅಡಿಯಿಡಬೇಕು ಎಂದು ತಿಳಿಸುತ್ತದೆ. ತನ್ಮೂಲಕ ಅಧೋಮುಖಿಯಾದ ಮನವು ಊರ್ಧ್ವಮುಖಿಯಾಗಿ ಅಂತರಂಗದ ಸುವಿಚಾರಗಳು ಬಹಿರಂಗದ ಸದಾಚಾರಗಳಾಗಿ ವ್ಯಕ್ತವಾಗಿ ಆ ಸದಾಚಾರವೇ ಲಿಂಗವಾದಾತನ ಅನುಭಾವದೊಡಗೂಡಿ ಎಲ್ಲಾ ಚಟುವಟಿಕೆಗಳೂ ಸ್ವಯಂನಿಯಂತ್ರಣಕ್ಕೆ ಬರುವವು ಎಂದು ಅತ್ಯಂತ ಸರಳವಾಗಿ ತಿಳಿಸಿದ್ದಾರೆ. ಆದರೆ ಅಂತರಂಗ ಮತ್ತು ಬಹಿರಂಗಗಳ ಸಮೀಕರಣ ಅಷ್ಟು ಸರಳವಾದುದಲ್ಲವೆಂಬುದನ್ನು ನಾವು ಅರಿಯಬೇಕು. ಅಂತರಂಗ ಬಹಿರಂಗ ಸಮೀಕರಣವಾಗದ ಹೊರತು ಕೇವಲ ಧ್ಯಾನ, ಪ್ರಾಣಾಯಾಮ ಮುಂತಾದ ಮಾರ್ಗಗಳಿಂದ ಶಿವನೊಲುಮೆ ಸಾಧ್ಯವಾಗದೆಂಬುದು ಶರಣರ ಗಟ್ಟಿ ನಿಲುವು. |
ಮನವನ್ನು ಉನ್ಮನವಾಗಿ ಏರಿಸಲು ಶರಣೆ ಲಿಂಗಮ್ಮ ತಾಯಿಯವರು ಅನೇಕ ವಚನಗಳಲ್ಲಿ ಮಾಡಿರುವ ಮಾರ್ಗದರ್ಶನವನ್ನು ನೋಡಬಹುದು: |
"ಮದ ಮತ್ಸರ ಬಿಡದು, ಮನದ ಕನಲು ನಿಲ್ಲದು, ಒಡಲಗುಣ ಹಿಂಗದು. ಇವ ಮೂರನು ಬಿಡದೆ ನಡೆಸುವನ್ನಕ್ಕ ಘನವ ಕಾಣಬಾರದು. ಘನವ ಕಾಂಬುದಕ್ಕೆ ಮದಮತ್ಸರವನೆ ಬಿಟ್ಟು, ಮನದ ಕನಲನೆ ನಿಲಿಸಿ, ಒಡಲಗುಣ ಹಿಂಗಿ, ತಾ ಮೃಢರೂಪಾದಲ್ಲದೆ ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ". |
"ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?" "ಮನವ ನಿಲಿಸಿಹೆನೆಂದು, ಆ ಮನದ ನೆಲೆಯ ಕಾಣದೆ, ಅರುಹು ಮರವೆಗೊಳಗಾಗಿ, ಕಳವಳವ ಮುಂದುಮಾಡಿ, ಚಿಂತೆ ಸಂತೋಷವನೊಡಲುಮಾಡಿ, ಭ್ರಾಂತುಗೊಂಡು ತಿರುಗುವ ಮನುಜರಿರಾ, ನೀವು ಕೇಳಿರೊ. ಮನವ ನಿಲಿಸುವುದಕ್ಕೆ ಶರಣರ ಸಂಗಬೇಕು, ಜನನಮರಣವ ಗೆಲಬೇಕು. ಗುರುಲಿಂಗಜಂಗಮದಲ್ಲಿ ವಂಚನೆಯಿಲ್ಲದೆ, ಮನಸಂಚಲವ ಹರಿದು, ನಿಶ್ಚಿಂತವಾಗಿ ನಿಜವ ನಂಬಿ ಚಿತ್ತ ಸುಯಿದಾನವಾದಲ್ಲದೆ, ಮನದೊಳಗೆ ಲಿಂಗವು ಅಚ್ಚೊತ್ತಿದಂತಿರದೆಂದರು ಬಸವಣ್ಣನ ಶರಣರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ." |
"ಕಂಡು ಕೇಳಿಹೆನೆಂಬ ದಂದುಗವ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು ತಾ ನಿಜಸುಖಿಯಾದಲ್ಲದೆ ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ." |
"ಮನವ ನಿರ್ಮಲವ ಮಾಡಿಹೆನೆಂದು ತನುವ ಕರಗಿಸಿ ಮನವ ಬಳಲಿಸಿ ಕಳವಳಿಸಿ, ಕಣ್ಣುಕಾಣದ ಅಂಧಕರಂತೆ ಮುಂದುಗಾಣದೆ, ಸಂದೇಹದಲ್ಲಿ ಮುಳುಗಿರುವ ಮನುಜರಿರಾ, ನೀವು ಕೇಳಿರೊ, ಹೇಳಿಹೆನು. ಮನವ ನಿರ್ಮಲವ ಮಾಡಿ, ಆ ಘನವ ಕಾಂಬುದಕ್ಕೆ ಆ ಮನವೆಂತಾಗಬೇಕೆಂದಡೆ ಗಾಳಿಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ, ಬೆಳಗಿದ ದರ್ಪಣದಂತೆ ಮನ ನಿರ್ಮಲವಾದಲ್ಲದೆ ಆ ಮಹಾಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ". |
Subsets and Splits
No community queries yet
The top public SQL queries from the community will appear here once available.