text
stringlengths
0
61.5k
ಅಂಜನಾದ್ರಿ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಾಣ: ಬಸವರಾಜ ಬೊಮ್ಮಾಯಿ ಘೋಷಣೆ | CM Basavaraj Bommai announce to build wind tower on Anjanadri Hill - Kannada Oneindia
just now ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ 'ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ
5 min ago ಉಪಯೋಗಿಸಿದ ಕಾರು ಮಾರಾಟ ನಿಲ್ಲಿಸಿದ ಓಲಾ!
15 min ago ಸಾಲುಮರದ ತಿಮ್ಮಕ್ಕನಿಗೆ ಬಿಡಿಎ ಸೈಟ್ ದಾಖಲೆ ಹಸ್ತಾಂತರ
| Published: Sunday, May 15, 2022, 21:38 [IST]
ಧಾರವಾಡ, ಮೇ 15: ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ.‌ ಮೀಸಲಿಡಲಾಗಿದೆ, ಜೊತೆಗೆ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯ ಗೋಕುಲದಲ್ಲಿ ಜೀರ್ಣೋದ್ಧಾರವಾಗಿರುವ ದಾರಾವತಿ ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮಂತ ದೇವರ ಆಶೀರ್ವಾದ ಪಡೆದ ನಂತರ ಏರ್ಪಡಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹನುಮಂತ ಹುಟ್ಟಿದ್ದು ಕರ್ನಾಟಕದಲ್ಲಿ. ಆತ ಕನ್ನಡ ನಾಡಿನ ವರ ಪುತ್ರ. ಹೊಸಪೇಟೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಈ ಸಾಲಿನ ಬಜೆಟ್‌ನಲ್ಲಿ 100 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ. ಬೆಟ್ಟಕ್ಕೆ ರೋಪ್ ವೇ ಇಂದ ಹಿಡಿದು, ಕ್ಷೇತ್ರಕ್ಕೆ ಭೇಟಿ ನೀಡುವ ಜನರ ಅನುಕೂಲಕ್ಕಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದರು.
ಆಂಜನೇಯನ ದೇವಸ್ಥಾನದ ಅಭಿವೃದ್ಧಿಯಾಗುತ್ತಿದೆ
ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಿಸಲಾಗುತ್ತಿದ್ದರೆ, ಇಲ್ಲಿ ಆಂಜನೇಯನ ದೇವಸ್ಥಾನದ ಅಭಿವೃದ್ಧಿಯಾಗುತ್ತಿದೆ. ಈ ರಾಜ್ಯದ ಸೇವೆ ಮಾಡುವ ದೊಡ್ಡ ಅವಕಾಶ ಲಭಿಸುವಲ್ಲಿ ಹುಬ್ಬಳ್ಳಿ ಜನರ ಹಾಗೂ ಶಿಗ್ಗಾವಿ ಕ್ಷೇತ್ರದ ಜನರ ಆಶೀರ್ವಾದ ಇದೆ. ಜನರು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ನಡೆದುಕೊಳ್ಳುವುದಾಗಿ ತಿಳಿಸಿ, ಕನ್ನಡ ನಾಡಿನ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುವುದಾಗಿ ಬೊಮ್ಮಾಯಿ ಹೇಳಿದರು. ದೇವಸ್ಥಾನದ ಹಾಗೂ ಸುತ್ತಲಿನ ಬಡಾವಣೆಗೆ ಸಂಬಂಧಿಸಿದಂತೆ ಮಾಡಿರುವ ಬೇಡಿಕೆಯನ್ನು ಪರಿಗಣಿಸಿ, ಅಗತ್ಯವಿರುವ ಕಾನೂನಿನ ಬದಲಾವಣೆ ತಂದು ಅನುಕೂಲ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಮಕ್ಕಳಿಗೆ ವಿದ್ಯೆ ನೀಡಿ
ಗೋಕುಲದಲ್ಲಿ ಈ ಪುಣ್ಯದ ಕೆಲಸ ಮಾಡಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದ ಮುಖ್ಯ ಮಂತ್ರಿಗಳು ಗೋಕುಲ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿರುವುದನ್ನು ಮೆಲುಕು ಹಾಕಿದರು. ಗೋಕುಲ ಅತ್ಯಂತ ಕ್ರಿಯಾಶೀಲ ಗ್ರಾಮ. ಕಿರ್ಲೋಸ್ಕರ್ ಕಂಪನಿ ಬಂದ ನಂತರ ಗೋಕುಲ ಗ್ರಾಮದ ಪ್ರತಿ ಮನೆಯವರು ಕಿರ್ಲೋಸ್ಕರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ದುಡಿಮೆಯನ್ನು ನಂಬಿರುವ ದೊಡ್ಡ ಯುವಕರ ಪಡೆ ಇಲ್ಲಿದೆ. 21ನೇ ಶತಮಾನ ಜ್ಞಾನದ ಶತಮಾನ. ಮಕ್ಕಳಿಗೆ ವಿದ್ಯೆ ನೀಡಿದರೆ ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ಈ ಬಗ್ಗೆ ಲಕ್ಷ್ಯ ನೀಡಬೇಕೆಂದು ಕಿವಿ ಮಾತು ಹೇಳಿದರು.
ಹನುಮಾನ್ ಚಾಲೀಸ ಓದಿದರೆ ಮನಸ್ಸಿಗೆ ನೆಮ್ಮದಿ
ಹನುಮಾನ್ ಚಾಲೀಸ ಓದಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದ ಸಿಎಂ ಬೊಮ್ಮಾಯಿ, ಶ್ರದ್ಧೆ ಭಕ್ತಿಯಿಂದ ಆರಾಧನೆ ಮಾಡಿದರೆ ಹನುಮಂತ ಒಲಿಯುತ್ತಾನೆ. ಮನಸ್ಸಿನಲ್ಲಿರುವುದನ್ನು ತಿಳಿದು ವರ ಕೊಡುವುದು ಹನುಮ ದೇವರ ವೈಶಿಷ್ಟ್ಯ. ಹನುಮನಿಗೆ ಶ್ರದ್ದಾ ಭಕ್ತಿಯಿಂದ ನಡೆದುಕೊಂಡರೆ ಸಾಕು. ಕೇಳದೆ ಪಡೆಯುವ ಮನೋಶಕ್ತಿ ಇರಬೇಕು. ದುಡಿಮೆ, ಬೆವರಿನಿಂದ ಕಟ್ಟಿರುವ ದೇವಸ್ಥಾನದಲ್ಲಿ ಬೇಡಿದ್ದು ದೊರಕುತ್ತದೆ ಎಂದರು.
ತಮ್ಮ ಸಾರ್ವಜನಿಕ ಜೀವನದ ಮೊದಲ ಭಾಷಣವನ್ನು ಗೋಕುಲದಲ್ಲಿ ಮಾಡಿದ್ದಾಗಿ ಸ್ಮರಿಸಿದರು ಸಿಎಂ, ಅಲ್ಲಿಂದ ಪ್ರಾರಂಭವಾಗಿದ್ದು ಇನ್ನೂ ಮಾತನಾಡುವುದನ್ನು ನಿಲ್ಲಿಸಿಲ್ಲ ಎಂದು ಗೋಕುಲದಲ್ಲಿನ ಹಲವಾರುವಾ ಘಟನೆಗಳನ್ನು ಮೆಲುಕು ಹಾಕಿದರು.
ಮೋದಿಯವರು ಸಂಕಲ್ಪ ಪುರುಷ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಕಲ್ಪ ಪುರುಷರು. ಹಲವಾರು ವರ್ಷಗಳು ಆಗದಿದ್ದ ಅಭಿವೃದ್ಧಿಯನ್ನು ಭಾರತ ದೇಶದಲ್ಲಿ ಸಾಧ್ಯವಾಗಿಸಿದ್ದಾರೆ. ಅವರ ಪ್ರಯತ್ನದಿಂದಾಗಿ ಅಯೋಧ್ಯೆಯಲ್ಲಿರುವ ದೇವಸ್ಥಾನದ ನಿರ್ಮಾಣ, ಸರ್ವರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಶ್ರೀರಾಮನ ದೇವಸ್ಥಾನ ಅದ್ಭುತವಾಗಿ ನಿರ್ಮಾಣವಾಗುತ್ತಿದೆ. ಕಾಶಿ ವಿಶ್ವನಾಥನ ಅಭಿವೃದ್ಧಿಯನ್ನು ನಾವು ಅಲ್ಲಿಗೆ ಭೇಟಿ ನೀಡಿಯೇ ನೋಡಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಶಾಸಕ ಅರವಿಂದ ಬೆಲ್ಲದ, ಹು- ಧಾ ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ಹು ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿ ಮಠ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.
basavaraj bommai dharawad karnataka budget ayodhya politics bjp ಬಸವರಾಜ ಬೊಮ್ಮಾಯಿ ಧಾರವಾಡ ಕರ್ನಾಟಕ ಬಜೆಟ್ ಅಯೋಧ್ಯೆ ರಾಜಕೀಯ ಬಿಜೆಪಿ
Chief Minister Basavaraj Bommai Announced on Sunday(May 15), that decided Wind Tower Will Be Built On Anjanadri Hill.
ಸಾಹಿತಿಗಳಲ್ಲದವರಿಂದಲೂ ಕನ್ನಡ ಬೆಳೆಯುತ್ತಿದೆ : ಪ್ರೊ.ನಿರಂಜನ ವಾನಳ್ಳಿ – ಮೈಸೂರು ಟುಡೆ
Home/ ನಮ್ಮೂರು/ ಮೈಸೂರು/ಸಾಹಿತಿಗಳಲ್ಲದವರಿಂದಲೂ ಕನ್ನಡ ಬೆಳೆಯುತ್ತಿದೆ : ಪ್ರೊ.ನಿರಂಜನ ವಾನಳ್ಳಿ
ಸಾಹಿತಿಗಳಲ್ಲದವರಿಂದಲೂ ಕನ್ನಡ ಬೆಳೆಯುತ್ತಿದೆ : ಪ್ರೊ.ನಿರಂಜನ ವಾನಳ್ಳಿ
ಕನ್ನಡವನ್ನು ಬೆಳೆಸುತ್ತಿರುವವರು ಕೇವಲ ಸಾಹಿತಿಗಳು ಮಾತ್ರವಲ್ಲ, ಸಾಹಿತಿಗಳಲ್ಲದವರೂ ಸಹ ಕನ್ನಡವನ್ನು ಉಳಿಸಿ, ಬೆಳೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ನಿರಂಜನ್ ವಾನಳ್ಳಿ ತಿಳಿಸಿದರು.
ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಮಂಗಳವಾರ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ 6ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡಾಂಬೆಗೆ ಪುಷ್ಪಾರ್ಚನೆಗೈದು, ದೀಪ ಬೆಳಗಿಸುವ ಮೂಲಕ ನಿರಂಜನ ವಾನಳ್ಳಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಲ್ಲರೂ ಕನ್ನಡ ಬೆಳೆಸುತ್ತಿರುವವರು ಕೇವಲ ಸಾಹಿತಿಗಳು ಅಂತ ತಿಳಿದುಕೊಂಡಿದ್ದಾರೆ. ಆದರೆ ಸಾಹಿತಿಗಳಲ್ಲದವರೂ ಕನ್ನಡವನ್ನು ಬೆಳೆಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಥಹವರಿಂದಲೇ ಇಂದು ಕನ್ನಡ ಉಳಿದುಕೊಂಡಿದೆ ಎಂದರು.
ಪ್ರವಾಸಿ ವಾಹನ ಚಾಲಕರು ಬೇರೆಡೆಯಿಂದ ಬರುವ ಜನರಿಗೆ ಕನ್ನಡವನ್ನು ಕಲಿಸುವ, ಕನ್ನಡದಲ್ಲಿಯೇ ವಿವರಣೆಗಳನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಇಷ್ಟಪಟ್ಟರೆ ಕನ್ನಡ ಬೆಳೆಸಲೂಬಹುದು. ಕನ್ನಡವನ್ನು ಅಳಿಸಲೂಬಹುದು ಎಂದರು. ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅದನ್ನು ಉಳಿಸಿಬೆಳೆಸಿಕೊಂಡು ಹೋಗುವ ಕೆಲಸವಾಗಬೇಕು. ಇಂದಿನ ಮಕ್ಕಳಿಗೆ ಕನ್ನಡವೆಂದರೆ ಅಸಡ್ಡೆ. ಆದರೆ ಅವರಲ್ಲಿಯೂ ಕನ್ನಡಾಭಿಮಾನವನ್ನು ಬೆಳೆಸುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ 2017ರ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಜೆಡಿಎಸ್ ಮುಖಂಡ ಹರೀಶ್ ಗೌಡ, ಎಂ.ಡಿ.ಟಿ.ವಿ.ಡಿ.ಒ.ಡಬ್ಲ್ಯೂ.ಎ ಗೌರವಾಧ್ಯಕ್ಷ ಬಿ.ಎಸ್.ಪ್ರಶಾಂತ್, ಎಂ.ಡಿ.ಟಿ.ವಿ.ಡಿ.ಒ.ಡಬ್ಲ್ಯೂ.ಎ ಅಧ್ಯಕ್ಷ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಕೋವಿಡ್ 19 ಸೋಂಕಿತ ವ್ಯಕ್ತಿಯ ಸಹೋದರ, ಗ್ರಾಮ ಸೇವಕ ತಾಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸಿದ ಹಿನ್ನಲೆ : ಮಿನಿವಿಧಾನಸೌಧದ ಎಲ್ಲಾ ಕಚೇರಿ ಬಂದ್
ಮೊದಲಬಾರಿಗೆ ಎದೆಹಾಲು ಉಣಿಸುವಾಗ ಬರುವ ಭಾವನೆಗಳು - Tinystep
10th August 2017 • 4 min read
ಮೊದಲಬಾರಿಗೆ ಎದೆಹಾಲು ಉಣಿಸುವಾಗ ಬರುವ ಭಾವನೆಗಳು
ಎದೆಹಾಲು ಉಣಿಸುವುದು ಹೆಣ್ಣಿಗೆ ಒಂದು ತುಂಬಾ ಭಾವನಾತ್ಮಕ ಅನುಭವ ಆಗಿರುತ್ತದೆ. ನಿಮ್ಮ ಸ್ತನಗಳ ಅಸ್ತಿತ್ವಕ್ಕೆ ಒಂದು ಕಾರಣವಿತ್ತು, ಕೊನೆಗೂ ಈಗ ಅದು ನಿಮ್ಮ ಪುಟ್ಟ ಕಂದಮ್ಮನ ಪೋಷಣೆಯ ಮೂಲಕ ಈಡೇರಿತು.
ಎದೆಹಾಲು ಉಣಿಸುವುದು ಒಂದು ನೈಸರ್ಗಿಕ ವಿದ್ಯಮಾನ ಆಗಿದ್ದು, ಇದು ನಿಮ್ಮ ತಾಯ್ತನದ ಆರಂಭವನ್ನ ಸೂಚಿಸುತ್ತದೆ. ಒಂದು ಮಗುವು ತನ್ನ ತಾಯಿಯೊಂದಿಗೆ ಮೊದಲ ಬಾರಿ ಸಂಪರ್ಕ ಹೊಂದುವುದು ಸ್ತನಗಳಿಂದಲೇ. ಮಗುವು ತನಗೆ ಸಿಗಬೇಕಾದ ಪೋಷಕಾಂಶಗಳನ್ನು ಪಡೆಯಲು ಹಾಗು ತನ್ನ ಪ್ರತಿರಕ್ಷಣ ವ್ಯವಸ್ತೆ ವೃದ್ಧಿಸಿಕೊಳ್ಳಲು ನೀವು ಎದೆಹಾಲು ಮೊದಲಬಾರಿ ಉಣಿಸುವಾಗ ಬರುವ ಕಲಾಸ್ಟ್ರುಂ ಬೇಕು.
ಮಗುವಿಗೆ ಎದೆಹಾಲು ಉಣಿಸುವಾಗ ತಾಯಿಯಲ್ಲಿ ಹಲವು ಭಾವನೆಗಳ ಸಾಗರವೇ ತುಂಬಿರುತ್ತದೆ. ತಾಯಿಯು ಭಾವನೆಗಳ ಜೋಕಾಲಿ ಏರಿರುತ್ತಾಳೆ. ಏಕೆಂದರೆ ತಾಯಿಯು ಎದೆಹಾಲು ನೀಡುವಾಗ ಎರೆಡು ಹಾರ್ಮೋನ್ ಗಳು ಬಿಡುಗಡೆ ಹೊಂದುತ್ತವೆ, ಅವುಗಳೇ - ಆಕ್ಸಿಟೋಸಿನ್ ಹಾಗು ಪ್ರೋಲಾಕ್ಟಿನ್. ಆಕ್ಸಿಟೋಸಿನ್ ಅನ್ನು ಖುಷಿಯ ಹಾರ್ಮೋನ್ ಎಂದು ಕರೆಯಲ್ಪಡುವುದು ಹಾಗು ಬಿಡುಗಡೆ ಹೊಂದಿದಾಗ ತಾಯಿಯು ಸಂತಸ ಹಾಗು ಕೃತಜ್ಞತ ಭಾವ ಹೊಂದುತ್ತಾಳೆ. ಆಕ್ಸಿಟೋಸಿನ್ ಮತ್ತು ಪ್ರೋಲಾಕ್ಟಿನ್ ಎರೆಡು ಕೂಡಿದರೆ ಆಗುವುದೇ ಎದೆಹಾಲು !
ಹೀಗಾಗಿ, ಹೇಳುವುದಾದರೆ ತಾಯಿಯು ತನ್ನ ಮಗುವಿಗೆ ಈ ಜಗತ್ತಿನಲ್ಲಿ ಬದುಕಲು ಪ್ರತಿರಕ್ಷಣೆಯೊಂದಿಗೆ ಬಹಳಷ್ಟು ಹರ್ಷವನ್ನು ಕೂಡ ನೀಡುವಳು. ಇದು ತಾಯಿ ಹಾಗು ಮಗುವಿನ ನಡುವೆ ಬಾಹ್ಯವಾಗಿ ಆಗುವ ಮೊದಲ ಸಂಪರ್ಕ ಆಗಿರುವುದರಿಂದ, ಇದು ತಾಯಿಗೆ ಅತ್ಯಂತ ವಿಶೇಷ ಸಂದರ್ಭ ಆಗಿದ್ದು ತನ್ನ ಮಗುವಿನೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಸದಾವಾಕಾಶ ಆಗಿರುತ್ತದೆ.
ತನ್ನ ಮಡಿಲಿನಲ್ಲಿ ಮಗುವನ್ನ ಇಟ್ಟುಕೊಂಡು, ಅದನ್ನು ಸವರುತ್ತಾ ಹಾಲು ಕುಡಿಸುವುದಕ್ಕಿಂತ ಸಂತಸದ ವಿಷಯ ತಾಯಿಗೆ ಮತ್ತೊಂದಿಲ್ಲ. ನಾವು ಮಾನವರು ಪ್ರಕೃತಿಯ ಈ ಮುದ್ದಾದ ವಿದ್ಯಮಾನವನ್ನ ಅನುಭವಿಸುವ ಭಾಗ್ಯ ಇದ್ದು, ಇದರ ಬಗ್ಗೆ ಹೇಳಲು ಪದಗಳು ಸಿಗುವುದಿಲ್ಲ.
ಮಾನಸಿಕವಾಗಿ ತಾಯಿಯು ಒಂದು ಪರಂಪರೆಯನ್ನೇ ಹುಟ್ಟು ಹಾಕುತ್ತಿರುವೆ ಎಂಬ ಭಾವನೆಯಿಂದ, ಆಕೆಯಲ್ಲಿ ದೃಢವಾದ ವಿಶ್ವಾಸದ ಮತ್ತು ಶೌರ್ಯದ ಭಾವನೆ ಹುಟ್ಟುತದೆ. ಅವಳು ಎದೆಹಾಲು ಉಣಿಸುತ್ತಲೇ, ಅವಳ ಮಗು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಎತ್ತರವಾಗಿ, ಗಟ್ಟಿಯಾಗಿ, ಚುರುಕಾಗಿ ಬೆಳೆಯುತ್ತದೆ. ಅವಳ ಕುಟುಂಬವು ಬೆಳೆಯುವುದಕ್ಕೆ ಅವಳು ಸಾಕ್ಷಿಯಾಗಿದ್ದಾಳೆ!
ಆದರೆ ಎಲ್ಲಾದಕ್ಕೂ ಇನ್ನೊಂದು ಕೋನ ಇದ್ದೇ ಇರುತ್ತದೆ ನೋಡಿ, ಹಾಗಾಗಿ ಇದು ಕೇಳಲು ಎಷ್ಟು ಅಮೋಘ, ಎಷ್ಟು ಆರಾಧನೀಯ ಎನಿಸಬಹುದು. ಆದರೆ ಬಹಳಷ್ಟು ಹೆಂಗಸರು ಒಂದು ಮಾನಸಿಕ ದುಸ್ತಿತಿಯನ್ನ ಎದುರಿಸುತ್ತಾರೆ. ಅದುವೇ ಪ್ರಸವನಂತರದ ಅಸ್ವಸ್ತತೆ ಅಥವಾ ಪೋಸ್ಟ್-ಪಾರ್ಟಂ ಬ್ಲೂಸ್. ಇದು ಒಂದು ತಾತ್ಕಾಲಿಕ ಸಮಸ್ಯೆ ಆಗಿದ್ದು, ಇದಾದಾಗ ತಾಯಂದಿರು ನಕಾರಾತ್ಮಕ ಭಾವನೆಗಳಾದ ಆತಂಕ, ಒತ್ತಡ, ಹಾಗು ಖಿನ್ನತೆಯನ್ನ ಅನುಭವಿಸುತ್ತಾರೆ.
ಈ ಸ್ತಿತಿಯಲ್ಲಿ ತಾಯಂದಿರು ಮಾನಸಿಕ ಅಸಮತೋಲನ, ಅಳುವುದು, ಹಸಿವಿಲ್ಲದಂತೆ ಆಗುವುದು, ನಿದ್ರಾಹೀನತೆಗಳನ್ನ ಅನುಭವಿಸುವರು. ಇಷ್ಟೇ ಅಲ್ಲದೆ ಅವೆಲ್ಲವುಗಳಿಗಿಂತ ಇನ್ನೂ ದುರದೃಷ್ಟಕರ ವಿಷಯ ಅಂದರೆ ಅದು ತಾಯಿಗೆ ತನ್ನ ಮಗುವಿನ ಜೊತೆಯಲ್ಲೇ ಬಾಂಧವ್ಯ ಹೊಂದಲು ಆಗದೆ ಇರುವುದು. ಆದರೆ ಇವೆಲ್ಲವುಗಳಿಗೂ ಪರಿಹಾರ ಇದ್ದೇ ಇದೆ !
ಎದೆಹಾಲು ಉಣಿಸುವುದು ತಾಯಿಗೆ ಮಗುವಿನ ಜೊತೆಗೆ ಬಾಂಧವ್ಯ ಬೆಳೆಸಿಕೊಳ್ಳಲು ಸಹಾಯ ಮಾದುವದಷ್ಟೇ ಅಲ್ಲದೆ ತಾಯ್ತನದ ಅಗಾಧತೆಗೆ ಒಗ್ಗಿಕೊಳ್ಳಲು ಸಹಾಯ ಮಾಡುತ್ತದೆ.
ತಾಯಿಯ ಹೃದಯದಲ್ಲಿ ಹಾಗು ಮನಸಿನಲ್ಲಿ ಆಕೆಗೆ ತಿಳಿಯದೆಯೇ ತಾಯ್ತನದ ಸಹಜ ಪ್ರವೃತ್ತಿಗಳು ನೆಲೆಯೂರುತ್ತವೆ. ಒಂದು ಕ್ಷಣವೂ ಅತ್ತಿತ್ತ ನೋಡದೆ ಆಕೆಯ ಮಗುವಿಗೆ ಒಂದು ಭಾಷೆ ನೀದುವಳು. ಅದುವೇ "ನಾನು ನಿನ್ನನ್ನು ನನ್ನ ಕೋಣೆಯ ಉಸಿರು ಇರುವವರೆಗೂ ರಕ್ಷಿಸುತ್ತೇನೆ ಮತ್ತು ಪ್ರೀತಿಸುತ್ತೇನೆ" ಎಂದು ! ಒಂದು ಹೆಣ್ಣು ಅನುಭವಿಸುವ ತಾಯ್ತನದ ಈ ಅಗಾಧ ಭಾವನೆಯನ್ನ ಬೇರೇ ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ.
ಮಹಲಿಂಗರಂಗ ಕನ್ನಡದ ಸಾಂಸ್ಕೃತಿಕ ವೀರ | Prajavani
ಮಹಲಿಂಗರಂಗ ಕನ್ನಡದ ಸಾಂಸ್ಕೃತಿಕ ವೀರ
Published: 01 ಜನವರಿ 2012, 16:40 IST
Updated: 01 ಜನವರಿ 2012, 16:40 IST
ದಾವಣಗೆರೆ: ಪಂಡಿತರಿಗಷ್ಟೇ ಮೀಸಲೆಂಬಂತೆ ಸಂಸ್ಕೃತ ಭಾಷೆಯಲ್ಲಿ ಮುಚ್ಚಿಟ್ಟಿದ್ದ ಅದ್ವೈತ ಸಿದ್ಧಾಂತವನ್ನು ಕನ್ನಡದಲ್ಲಿ ಬಿಚ್ಚಿಟ್ಟು ಜನಸಾಮಾನ್ಯರಿಗೆ ಹಂಚಿದ ಕೀರ್ತಿ ದಾವಣಗೆರೆಯ ಕನ್ನಡದ ಉದ್ದಾಮ ಕವಿ `ಮಹಲಿಂಗರಂಗ~ ಅವರಿಗೆ ಸಲ್ಲುತ್ತದೆ ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಸಿದ್ದಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗೌರಮ್ಮ ಪಿ. ರಾಮರಾವ್ ಚಾರಿಟಬಲ್ ಟ್ರಸ್ಟ್ ನಗರದ ತರಳಬಾಳು ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಮಹಲಿಂಗರಂಗ ಪ್ರಶಸ್ತಿ~ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
`ಸಂಸ್ಕೃತ~ ಮಡಿಭಾಷೆಯೆಂದು, ಕನ್ನಡ ಬಳಸಿದರೆ ಮೈಲಿಗೆಯಾಗುತ್ತದೆ ಎಂದು ನಂಬಿದ್ದ ಸಂಸ್ಕೃತ ಪಂಡಿತರಿಗೆ ಸವಾಲು ಎಸೆದ ಕವಿ ಮಹಲಿಂಗರಂಗ, ಉಪನಿಷತ್ತಿನ ತತ್ವವನ್ನು ಕನ್ನಡದಲ್ಲಿ ಪ್ರತಿಬಿಂಬಿಸಿದ್ದಾರೆ. ಪರಕೀಯ ಎನ್ನಿಸುವ ಸಂಸ್ಕೃತಕ್ಕಿಂತ, ತಾಯಿಯ ಹಾಲಿನಂತೆ ಸಹಜವಾಗಿ ಒಲಿದಿರುವ ತಾಯ್ನುಡಿಯಾದ ಕನ್ನಡದಿಂದಲೇ ಮೋಕ್ಷ ಸಾಧ್ಯ ಎಂಬುದನ್ನು ತಮ್ಮ `ಅನುಭಾವಾಮೃತ~ ಕೃತಿಯಿಂದ ಸಾಧಿಸಿ ತೋರಿಸಿದ್ದಾರೆ. ಹಾಗಾಗಿ, ಮಹಲಿಂಗರಂಗ ಕನ್ನಡದ ಸಾಂಸ್ಕೃತಿಕ ವೀರ ಎಂದರೂ ಅತಿಶೋಕ್ತಿಯಲ್ಲ ಎಂದು ಬಣ್ಣಿಸಿದ ಅವರು, ಕನ್ನಡ ಬರೀ ಸಾಹಿತ್ಯ ಭಾಷೆಯಾಗಿ ಅಭಿವೃದ್ಧಿಯಾದರೆ ಸಾಲದು; ಕನ್ನಡ ತಂತ್ರಜ್ಞಾನದ ವಿಜ್ಞಾನ ಭಾಷೆಯಾಗಿ ಬೆಳೆಯಬೇಕು ಎಂದರು.
ಸಾಧುಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್. ಜಯದೇವಪ್ಪ ಮಾತನಾಡಿ, ಮಹಲಿಂಗರಂಗರ ಅದ್ವೈತಕ್ಕೂ, ಲೇಖಕ ಕೆ.ಜಿ. ಗುರುಮೂರ್ತಿ ಅವರ ಮಾನವ ಶಾಸ್ತ್ರಕ್ಕೂ ಸಾಮ್ಯತೆ ಇದೆ. ಹಾಗಾಗಿ, ಗುರುಮೂರ್ತಿ ಅವರಿಗೆ `ಮಹಲಿಂಗರಂಗ ಪ್ರಶಸ್ತಿ~ ನೀಡಿರುವುದು ಅರ್ಥಪೂರ್ಣ ಎಂದರು.
ಶಾಯಿರಿ ಕವಿ ಪ್ರೊ.ಇಟಗಿ ಈರಣ್ಣ ಮಾತನಾಡಿ, ಭಾಷಾ ರಾಜಕಾರಣದಿಂದ ಕನ್ನಡ ಅವಜ್ಞೆ, ತುಳಿತಕ್ಕೆ ಒಳಗಾಗಿದ್ದ ಕಾಲದಲ್ಲಿ ಉದಯಿಸಿದ ನಾರಾಯಣಪ್ಪ, ಚಾಮರಸರ ಸಾಲಿನಲ್ಲಿ ನಿಲ್ಲುವಂತಹ ವ್ಯಕ್ತಿತ್ವ ಕವಿ ಮಹಲಿಂಗರಂಗ ಅವರಿಗೆ ಇತ್ತು. `ಅನುಭವಾಮೃತ~ ಕೃತಿಗೆ ಅವರು ಭಾಮಿನೀ ಷಟ್ಪದಿಯಲ್ಲಿ ವಿಶ್ವಶಕ್ತಿಯನ್ನು ತುಂಬಿದ್ದಾರೆ. ಇದು ಗಹನವಾದ ಅಧ್ಯಾತ್ಮವನ್ನು ಸರಳ ಶೈಲಿಯಲ್ಲಿ ದೇಸಿ ಉಪಮೆಗಳೊಡನೆ ಅನಾವರಣಗೊಳಿಸುವ ಮೌಲಿಕ ಕೃತಿಯಾಗಿದೆ ಎಂದರು.
ಸಾಹಿತ್ಯ ಹೃದಯ ಶ್ರೀಮಂತಿಕೆಯನ್ನು ಬೆಳೆಸುತ್ತದೆ. ಕೇವಲ ವಿಜ್ಞಾನದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ಭ್ರಮೆಯಿಂದ ಹೊರಬರಬೇಕಿದೆ. ಅಭಿವೃದ್ಧಿ ಎಂದು ಬಡಿದಾಡುವ; ಸೂರ್ಯ-ಚಂದ್ರರನ್ನು ಬದಲಿಸುವ ಶಕ್ತಿ ಪ್ರದರ್ಶಿಸುವ ನಾವು ಇದುವರೆಗೂ ನಮ್ಮ ರೈತರನ್ನೇಕೆ ಬದಲಿಸಿಲ್ಲ. ನಾಗರಿಕತೆಯ ಆದಿಯಲ್ಲಿದ್ದ ರೈತರ ನೇಗಿಲು; ಕೂರಿಗೆ -ಕುಂಟೆ, ಬಂಡಿಗಳಲ್ಲೇಕೆ ಬದಲಾವಣೆ ಕಂಡಿಲ್ಲ. ಭ್ರಷ್ಟಾಚಾರ, ದೌರ್ಜನ್ಯ, ತಾರತಮ್ಯಗಳಿಗೇಕೆ ಕಡಿವಾಣ ಬಿದ್ದಿಲ್ಲ. ಹೃದಯ ಶ್ರೀಮಂತಿಕೆ, ಸಾಂಸ್ಕೃತಿಕ ಬದುಕು, ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡ ದೇಶವೇ ನಿಜವಾದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬಲ್ಲದೇ ಹೊರತು, ವಿಜ್ಞಾನದ ಅಭಿವೃದ್ಧಿಯಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಸದಾಶಿವಪ್ಪ ಶ್ಯಾಗಲೆ ಮಾತನಾಡಿ, ರೂ 2 ಕೋಟಿ ವೆಚ್ಚದಲ್ಲಿ ಕನ್ನಡ ಭವನದ ನಿರ್ಮಾಣ ಕಾರ್ಯ ಸಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಅವರು ವಾಚನಾಲಯ ಮತ್ತು ಗ್ರಂಥಾಲಯಕ್ಕೆ ರೂ 7ಲಕ್ಷ ಅನುದಾನ ನೀಡಿದ್ದಾರೆ. ದಾನಿಗಳಿಂದ ರೂ 2ಲಕ್ಷದಷ್ಟು ಹಣ ಸಂಗ್ರಹಿಸಲಾಗಿದೆ. ಉಳಿದಂತೆ ಪರಿಷತ್ತಿನ ರೂ 3ಲಕ್ಷ ಹಣ ಸಂಗ್ರಹವಿದೆ. ಶೀಘ್ರ ಕನ್ನಡ ಭವನ ನಿರ್ಮಾಣ ಕಾರ್ಯಕ್ರವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಘಟಕ ಶ್ರಮಿಸುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿದರು. ಲೇಖಕ ಡಾ.ಕೆ.ಜಿ. ಗುರುಮೂರ್ತಿ ಅವರಿಗೆ `ಮಹಲಿಂಗರಂಗ ಪ್ರಶಸ್ತಿ~ ಪ್ರದಾನ ಮಾಡಲಾಯಿತು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕ ಮಾತನಾಡಿದರು.
ಪ್ರೊ.ಎಸ್.ಬಿ. ರಂಗನಾಥ್, ಮೋತಿ ರಾಮರಾವ್, ಬಿ.ವಿ. ವೀರಭದ್ರಪ್ಪ, ಮಳಲ್ಕೆರೆ ಗುರುಮೂರ್ತಿ, ಕುಂ.ಬಾ. ಸದಾಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು. ಎಂ.ಡಿ. ದೀಪಾ ಪ್ರಾರ್ಥಿಸಿದರು. ಎಚ್.ಎನ್. ಪ್ರದೀಪ ಕಾರ್ಯಕ್ರಮ ನಿರೂಪಿಸಿದರು. ಎಲ್. ನಾಗರಾಜ್ ವಂದಿಸಿದರು.
'ಆ ಪಾತ್ರ ನನ್ನಿಂದ ಮಾಡಲು ಆಗೊಲ್ಲ' ಎಂದು ಬಾಲಿವುಡ್ ಸಿನಿಮಾ ತಿರಸ್ಕರಿಸಿದ್ದ ರಶ್ಮಿಕಾ ಮಂದಣ್ಣ | Actress Rashmika Mandanna On Jersey Hindi Remake Makers Deserve More - Kannada Filmibeat
| Published: Friday, April 3, 2020, 13:39 [IST]
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಹರಿದಾಡಿತ್ತು. ತೆಲುಗಿನ ಹಿಟ್ ಸಿನಿಮಾ ಜೆರ್ಸಿಯ ಹಿಂದಿ ರೀಮೇಕ್‌ನ ಮುಖ್ಯ ಪಾತ್ರದಲ್ಲಿ ರಶ್ಮಿಕಾ ನಟಿಸುವುದು ಖಚಿತವಾಗಿತ್ತು. ಈ ಸಿನಿಮಾಕ್ಕಾಗಿ ರಶ್ಮಿಕಾ ತೆಲುಗು, ತಮಿಳು, ಕನ್ನಡ ಸೇರಿದಂತೆ ದಕ್ಷಿಣದ ಅನೇಕ ಪ್ರಮುಖ ಚಿತ್ರಗಳ ಆಫರ್‌ಗಳನ್ನು ತಿರಸ್ಕರಿಸಿದ್ದರು ಎಂದು ಹೇಳಲಾಗಿತ್ತು.
ಆದರೆ ಹಿಂದಿ ರೀಮೇಕ್ ಮಾಡುತ್ತಿರುವ ಚಿತ್ರತಂಡ ಅಧಿಕೃತವಾಗಿ ಸಿನಿಮಾದ ಕಲಾವಿದರು ಹಾಗೂ ತಂತ್ರಜ್ಞರ ಹೆಸರನ್ನು ಬಹಿರಂಗಪಡಿಸಿದ್ದು, ಅದರಲ್ಲಿ ರಶ್ಮಿಕಾ ಅವರ ಹೆಸರು ಇರಲಿಲ್ಲ. ಇದಕ್ಕೆ ಕಾರಣವನ್ನು ರಶ್ಮಿಕಾ ಅವರೇ ನೀಡಿದ್ದಾರೆ. ರಶ್ಮಿಕಾ ಅವರನ್ನು ಚಿತ್ರತಂಡ ಕೈಬಿಟ್ಟಿಲ್ಲ, ಬದಲಾಗಿ ಅವರೇ ಸಿನಿಮಾದಿಂದ ಹೊರನಡೆದಿದ್ದಾರೆ. ಶ್ರದ್ಧಾ ಶ್ರೀನಾಥ್ ನಿರ್ವಹಿಸಿದ್ದ ಆ ಪಾತ್ರಕ್ಕೆ ತಮ್ಮಿಂದ ನ್ಯಾಯ ಒದಗಿಸಲು ಕಷ್ಟ ಎಂದು ರಶ್ಮಿಕಾಗೆ ಅನಿಸಿದೆಯಂತೆ. ಇದು ಕಷ್ಟಕರ ಪಾತ್ರ ಎಂದು ಅವರು ಹಿಂದೆ ಸರಿದಿದ್ದಾಗಿ ಹೇಳಿಕೊಂಡಿದ್ದಾರೆ. ಮುಂದೆ ಓದಿ...
'ಆಚಾರ್ಯ'ದಲ್ಲಿ ರಾಮ್ ಚರಣ್ ಜತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?
ನ್ಯಾಯ ಸಲ್ಲಿಸಲಾಗದು
'ಜೆರ್ಸಿಯಂತಹ ಸಿನಿಮಾದಲ್ಲಿ ನಟಿಸುವುದನ್ನು ಕಲ್ಪಿಸಿಕೊಳ್ಳಿ. ಅದಕ್ಕೆ ತಕ್ಕ ನ್ಯಾಯ ಸಲ್ಲಿಸುವುದು ನನಗೆ ಸಾಧ್ಯವಾಗುವುದಿಲ್ಲ' ಎಂದು ರಶ್ಮಿಕಾ ಮಂದಣ್ಣ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಚಿತ್ರದ ನಿರ್ದೇಶಕರು ಇನ್ನಷ್ಟು ನಟನಾ ಸಾಮರ್ಥ್ಯವುಳ್ಳ ನಟಿಯನ್ನು ಬಳಸಿಕೊಳ್ಳಬೇಕಿತ್ತು ಎಂದು ಅವರು ಹಿಂದಡಿ ಇರಿಸಿದ್ದಾರೆ.
ಬೇರೆ ಯಾರಾದರೂ ಮಾಡಬಹುದು
'ನನ್ನಿಂದ ಅತ್ಯುತ್ತಮವಾದುದ್ದನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಎನಿಸುವ ಯಾವುದೇ ಸಿನಿಮಾವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಜೆರ್ಸಿ ರೀಮೇಕ್ ಬಹಳ ದೊಡ್ಡದು. ಅದನ್ನು ಬೇರೆ ಯಾರಾದರೂ ಮಾಡಬಹುದು. ಆದರೆ ನಾನು ಸೆಟ್‌ಗೆ ಹೋಗಿ ಎಲ್ಲರಿಗೂ ಕಷ್ಟ ಕೊಡಲು ಬಯಸಿರಲಿಲ್ಲ' ಎಂದು ರಶ್ಮಿಕಾ ತಿಳಿಸಿದ್ದಾರೆ.
ಸವಾಲಿನ ಪಾತ್ರ ಆಗೊಲ್ಲ
ಕನ್ನಡದಲ್ಲಿ ನಟಿಸಿ, ತೆಲುಗಿನಲ್ಲಿ ದೊಡ್ಡ ಸ್ಟಾರ್‌ಗಳ ಜತೆಗೂ ಸೈ ಎನಿಸಿಕೊಂಡ ರಶ್ಮಿಕಾ, ಪಾತ್ರವೊಂದನ್ನು ತಮ್ಮಿಂದ ನಿಭಾಯಿಸಲಾಗುವುದಿಲ್ಲ ಎಂದು ಸೋಲೊಪ್ಪಿಕೊಂಡಿರುವುದು ವಿಶೇಷ. ಹಾಗೆಯೇ ಪಾತ್ರವು ಬಯಸುವ ಎನರ್ಜಿಯನ್ನೂ ಅವರು ಗ್ರಹಿಸಿ ಮುಂಚೆಯೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್
ಈ ಚಿತ್ರದ ಫಿಲ್ಮ್ ಮೇಕರ್ ಇನ್ನೂ ಉತ್ತಮ ನಟಿಯನ್ನು ಆಯ್ಕೆ ಮಾಡುವುದು ಸೂಕ್ತ. ಆ ಪಾತ್ರಕ್ಕೆ ಎನರ್ಜಿಯನ್ನು ನೀಡುವಂತಹ ನಟಿ ಬೇಕು ಎಂದು ರಶ್ಮಿಕಾ ಅಭಿಪ್ರಾಯಪಟ್ಟಿದ್ದಾರೆ. ಗೌತಮ್ ತಿನ್ನನುರಿ ನಿರ್ದೇಶನದ ಜೆರ್ಸಿ ರೀಮೇಕ್‌ನಲ್ಲಿ ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕ್ರೀಡಾ ಕಥಾಹಂದರದ ಜೆರ್ಸಿ
2019ರಲ್ಲಿ ಬಿಡುಗಡೆಯಾಗಿದ್ದ ತೆಲುಗಿನ ಜೆರ್ಸಿ ಕ್ರೀಡಾ ಕಥಾಹಂದರವನ್ನು ಒಳಗೊಂಡಿತ್ತು. ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 30ನೇ ವಯಸ್ಸು ದಾಟಿದ ಬಳಿಕ ಅರ್ಜುನ್ ಎಂಬ ಕ್ರಿಕೆಟಿಗ ಭಾರತ ತಂಡವನ್ನು ಪ್ರತಿನಿಧಿಸುವುದು ಈ ಚಿತ್ರದ ಕಥಾವಸ್ತು.
Read more about: rashmika mandanna bollywood shraddha srinath tollywood ರಶ್ಮಿಕಾ ಮಂದಣ್ಣ ಬಾಲಿವುಡ್ ಶ್ರದ್ಧಾ ಶ್ರೀನಾಥ್ ಟಾಲಿವುಡ್
Actress Rashmika Mandanna on rejecting Hindi remake of Telugu movie Jersey, I can't pull off that role, the makers deserve more.
'ಥ್ರೆಶೋಲ್ಡ್' ಕ್ಲಿಪ್ ಈ ಭಯೋತ್ಪಾದನೆ ತುಂಬಿದ ರಸ್ತೆ ಪ್ರವಾಸದಲ್ಲಿ "ಎಲ್ಲಿಯೂ ಸುರಕ್ಷಿತವಲ್ಲ" - iHorror
ಮುಖಪುಟ ಬ್ಲೂ ಕಿರಣಗಳು 'ಥ್ರೆಶೋಲ್ಡ್' ಕ್ಲಿಪ್ ಈ ಭಯೋತ್ಪಾದನೆ ತುಂಬಿದ ರಸ್ತೆ ಪ್ರವಾಸದಲ್ಲಿ "ಎಲ್ಲಿಯೂ ಸುರಕ್ಷಿತವಲ್ಲ" ಎಂದು ತಿಳಿಸುತ್ತದೆ
'ಥ್ರೆಶೋಲ್ಡ್' ಕ್ಲಿಪ್ ಈ ಭಯೋತ್ಪಾದನೆ ತುಂಬಿದ ರಸ್ತೆ ಪ್ರವಾಸದಲ್ಲಿ "ಎಲ್ಲಿಯೂ ಸುರಕ್ಷಿತವಲ್ಲ" ಎಂದು ತಿಳಿಸುತ್ತದೆ
ಆಚರಣೆಗಳು, ಆರಾಧನೆಗಳು ಮತ್ತು ಮಾಟಮಂತ್ರಗಳು ಈ ರೀತಿ ಬರುತ್ತವೆ
by ಟ್ರೆ ಹಿಲ್ಬರ್ನ್ III ಸೆಪ್ಟೆಂಬರ್ 13, 2021 149 ವೀಕ್ಷಣೆಗಳು
ಬಾಣ ವೀಡಿಯೊಗಳು ತ್ರೆಶೋಲ್ಡ್ ಅದ್ಭುತವಾಗಿ ಕಾಣುತ್ತಿದೆ. ಕೆಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ನಂತರ, ಇದು ಬ್ಲೂ-ರೇಗೆ ಬಂದಿದೆ ಮತ್ತು ನಾವು ಅದನ್ನು ಪರೀಕ್ಷಿಸಲು ಕಾಯಲು ಸಾಧ್ಯವಿಲ್ಲ. ಕಥೆಯು ನಿಧಾನವಾದ ಬರ್ನರ್ ಆಗಿದ್ದು ಅದು ಗೋಡೆಯಿಂದ ಗೋಡೆಯ ರಹಸ್ಯ, ಭಯೋತ್ಪಾದನೆ ಮತ್ತು ಸಂಭಾವ್ಯ ವಾಮಾಚಾರದಿಂದ ತುಂಬಿದ ರಸ್ತೆ ಪ್ರವಾಸದ ಸುತ್ತ ಸುತ್ತುತ್ತದೆ.
ನಾನು ನನಗೆ ಒಳ್ಳೆಯ ರಸ್ತೆ ಪ್ರವಾಸದ ಚಲನಚಿತ್ರವನ್ನು ಪ್ರೀತಿಸುತ್ತೇನೆ ಮತ್ತು ಕಠಿಣ ಕಥನ ರೇಖೆಯನ್ನು ಸಮತೋಲನಗೊಳಿಸುವ ಕೆಲಸವನ್ನು ಹೊಂದಿರುವ ಚಲನಚಿತ್ರವನ್ನು ನಾನು ಪ್ರೀತಿಸುತ್ತೇನೆ. ಈ ಸಂದರ್ಭದಲ್ಲಿ, ಲಿಯೋನ ಅಕ್ಕ ವರ್ಜೀನಿಯಾ ಇನ್ನೂ ಮಾದಕ ದ್ರವ್ಯ ಸೇವಿಸುತ್ತಿದ್ದಾಳೆ ಅಥವಾ ಅವಳು ಆರಾಧನೆ ಮತ್ತು ನಿಗೂious ನಾಯಕನ ಬಗ್ಗೆ ಹೇಳುತ್ತಿರುವುದು ನಿಜವೇ? ಇದು ವರ್ಜೀನಿಯಾ ಅನುಭವಿಸುವ ಮಿತಿಮೀರಿದ ಪ್ರಮಾಣವೇ ಅಥವಾ ಇದು ಹೆಚ್ಚು ಕೆಟ್ಟದ್ದೇ?
ಕೆಳಗಿನ ಕ್ಲಿಪ್ ಬೇರ್ಪಟ್ಟ ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವನ್ನು ಮತ್ತು ಈ ಎರಡು ಪಾತ್ರಗಳು ಪರಸ್ಪರ ಹೊಂದಿರುವ ತೀವ್ರವಾದ, ಆಕರ್ಷಕ ಬಂಧವನ್ನು ಪರಿಶೋಧಿಸುತ್ತದೆ.
ಗಾಗಿ ಸಾರಾಂಶ ತ್ರೆಶೋಲ್ಡ್ ಈ ರೀತಿ ಹೋಗುತ್ತದೆ:
ನೀಲಿ ಬಣ್ಣದಿಂದ ದೂರವಾಣಿ ಕರೆ ಮಾಡಿದಾಗ ಲಿಯೋ (ಜೋಯಿ ಮಿಲ್ಲಿನ್) ತನ್ನ ಸಹೋದರಿ ವರ್ಜೀನಿಯಾ (ಮ್ಯಾಡಿಸನ್ ವೆಸ್ಟ್) ನೊಂದಿಗೆ ಮತ್ತೆ ಸಂಪರ್ಕಕ್ಕೆ ಬಂದಾಗ, ಆಕೆಯ ಮಾದಕ ವ್ಯಸನದಿಂದಾಗಿ ಆಕೆಯ ಕುಟುಂಬದಿಂದ ದೂರವಾಗಿದ್ದಾಗ, ಅವನು ಅವಳನ್ನು ಒಂಟಿಯಾಗಿ ಹುಡುಕಲು ಬರುತ್ತಾನೆ ಅಪಾರ್ಟ್ಮೆಂಟ್ ಸ್ಪಷ್ಟವಾಗಿ ಮಿತಿಮೀರಿದ ಪ್ರಮಾಣದಲ್ಲಿದೆ. ಸೆಳೆತ ಮತ್ತು ವಾಕರಿಕೆ ಕಡಿಮೆಯಾದ ನಂತರ, ವರ್ಜೀನಿಯಾ ನಿಗೂious ಗುಂಪಿನ ಸಹಾಯದಿಂದಾಗಿ ತಾನು 8 ತಿಂಗಳುಗಳ ಕಾಲ ಸ್ವಚ್ಛವಾಗಿದ್ದೇನೆ ಎಂದು ಲಿಯೋಗೆ ಒತ್ತಾಯಿಸಿದಳು. ಆಕೆ ತನ್ನ ಸಿನಿಕ ಸಹೋದರನಿಗೆ ತನ್ನ ಹಠಮಾರಿತನ ಮತ್ತು ವ್ಯಾಮೋಹವು ತನ್ನನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಕರೆದೊಯ್ಯುವ ಮತ್ತು ಅಂತಿಮವಾಗಿ ತಮ್ಮನ್ನು ತಾವು ಆರಾಧನೆ ಎಂದು ಬಹಿರಂಗಪಡಿಸಿದ ಗುಂಪು ನಡೆಸುವ ಕೆಟ್ಟ ಆಚರಣೆಯಿಂದ ಹುಟ್ಟಿಕೊಂಡಿದೆ ಎಂದು ಒಪ್ಪಿಕೊಳ್ಳುತ್ತಾಳೆ. ಈ ಶಾಪವು ಅವಳ ಭಾವನೆಗಳನ್ನು ಮತ್ತು ದೈಹಿಕ ಸಂವೇದನೆಗಳನ್ನು ಅವಳು ಹಿಂದೆಂದೂ ಭೇಟಿಯಾಗದ ಪುರುಷನಿಗೆ ಬಂಧಿಸಿತು. ಬಂಡೆಗಳ ಮೇಲೆ ತನ್ನ ಮದುವೆಯೊಂದಿಗೆ, ಲಿಯೋ ತನ್ನದೇ ಆದ ರಾಕ್ಷಸರನ್ನು ಎದುರಿಸುತ್ತಾನೆ. ಅದೇನೇ ಇದ್ದರೂ, ಈ ನೆರಳಿನ ಅಪರಿಚಿತನನ್ನು ಎಲ್ಲಿಯೂ ಇಲ್ಲದಿದ್ದಲ್ಲಿ ಮತ್ತು ಅವಳ ತಲೆಯಲ್ಲಿದ್ದರೆ, ಅವಳು ಪುನರ್ವಸತಿಗೆ ಹೋಗುತ್ತಾಳೆ ಎಂಬ ಎಚ್ಚರಿಕೆಯ ಅಡಿಯಲ್ಲಿ ಈ ನೆರಳಿನ ಅಪರಿಚಿತನನ್ನು ಪತ್ತೆಹಚ್ಚಲು ಆತ ವರ್ಜೀನಿಯಾ ಮೂಲಕ ಕ್ರಾಸ್-ಕಂಟ್ರಿ ರೋಡ್ ಟ್ರಿಪ್ ಆರಂಭಿಸಲು ಇಷ್ಟವಿಲ್ಲದೆ ಮನವೊಲಿಸಿದನು. ಆದಾಗ್ಯೂ, ವಿಧಿಯೊಂದಿಗೆ ಅವರ ದಿನಾಂಕವು ಹತ್ತಿರವಾಗುತ್ತಿದ್ದಂತೆ, ಲಿಯೋ ತನ್ನ ಸಹೋದರಿಯ ಎತ್ತರದ ಕಥೆಯು ಕೆಲವು ವಿಷಯವನ್ನು ಹೊಂದಿರಬಹುದೆಂದು ಅನುಮಾನಿಸಲು ಪ್ರಾರಂಭಿಸುತ್ತಾನೆ.
ಬ್ಲೂ-ರೇನ ವೈಶಿಷ್ಟ್ಯಗಳು ಹೀಗಿವೆ:
ಹೈ ಡೆಫಿನಿಷನ್ (1080 ಪಿ) ಬ್ಲೂ-ರೇ ಪ್ರಸ್ತುತಿ
ಮೂಲ 5.1 DTS-HD ಮಾಸ್ಟರ್ ಆಡಿಯೋ
ಕಿವುಡರಿಗೆ ಮತ್ತು ಕೇಳುವವರಿಗೆ ಐಚ್ al ಿಕ ಇಂಗ್ಲಿಷ್ ಉಪಶೀರ್ಷಿಕೆಗಳು
ನಿರ್ದೇಶಕರಾದ ಪೊವೆಲ್ ರಾಬಿನ್ಸನ್ ಮತ್ತು ಪ್ಯಾಟ್ರಿಕ್ ಆರ್. ಯಂಗ್, ನಿರ್ಮಾಪಕ ಲಾರೆನ್ ಬೇಟ್ಸ್ ಮತ್ತು ಪ್ರಮುಖ ನಟರಾದ ಜೋಯಿ ಮಿಲ್ಲಿನ್ ಮತ್ತು ಮ್ಯಾಡಿಸನ್ ವೆಸ್ಟ್ ಅವರೊಂದಿಗೆ ಹೊಚ್ಚ ಹೊಸ ಆಡಿಯೋ ವ್ಯಾಖ್ಯಾನ
ನಿರ್ದೇಶಕರಾದ ಪೊವೆಲ್ ರಾಬಿನ್ಸನ್ ಮತ್ತು ಪ್ಯಾಟ್ರಿಕ್ ಆರ್ ಯಂಗ್ ಮತ್ತು ಸಂಪಾದಕ ವಿಲಿಯಂ ಫೋರ್ಡ್-ಕಾನ್ವೇ ಜೊತೆ ಹೊಚ್ಚಹೊಸ ಆಡಿಯೋ ವ್ಯಾಖ್ಯಾನ
ಹೊಸ್ತಿಲನ್ನು ದಾಟುವುದು, ಥ್ರೆಶೋಲ್ಡ್ ತಯಾರಿಕೆಯ ವೈಶಿಷ್ಟ್ಯ-ಉದ್ದದ ಸಾಕ್ಷ್ಯಚಿತ್ರ
ಐಫೋನ್ ಫೂಟೇಜ್ ಅನ್ನು ಹೆಚ್ಚಿಸುವುದು: ಬಣ್ಣ ತಿದ್ದುಪಡಿ ಸ್ಥಗಿತ
ಯಾವುದೋ ಏನೋ )
ದಿ ಪವರ್ ಆಫ್ ಇಂಡೀ ಭಯಾನಕ - ನಟರಾದ ಮ್ಯಾಡಿಸನ್ ವೆಸ್ಟ್ ಮತ್ತು ಜೋಯಿ ಮಿಲ್ಲಿನ್ (ಥ್ರೆಶೋಲ್ಡ್), ಕೆಲ್ಸಿ ಗ್ರಿಸ್ವೊಲ್ಡ್ (ಫಾಲೋ ಮಾಡಿದ), ಗೇಬ್ರಿಯೆಲ್ ವಾಲ್ಶ್ ಮತ್ತು ರಯಾನ್ ಶೂಸ್ ಜೊತೆ enaೆನಾ ಡಿಕ್ಸನ್ ಅವರಿಂದ ಮಾಡರೇಟ್ ಮಾಡಲಾಗದ ಅಸಾಂಪ್ರದಾಯಿಕ ಚಲನಚಿತ್ರ ರೌಂಡ್ ಟೇಬಲ್ ಚರ್ಚೆಗೆ ನಟಿಸುವುದು
2ನೇ ದಿನವೂ ಬಂದ್‌ ನೀರಸ | Udayavani – ಉದಯವಾಣಿ
ಬೆಂಗಳೂರು: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌ಗೆ ಎರಡನೇ ದಿನ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆ ಬೆಂಗಳೂರಿನಲ್ಲಿ 58 ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.
ಬಳ್ಳಾರಿಯಲ್ಲೂ 4 ಬಸ್‌ಗಳಿಗೆ ಹಾನಿಯಾಗಿದೆ. ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಎಂಟಿಸಿ ಸಂಚಾರ ಸ್ಥಗಿತಗೊಳಿಸಲಾಗಿತ್ತಾದರೂ, ಯಾವುದೇ ಕಚೇರಿ ಅಥವಾ ಅಂಗಡಿ ಮುಂಗಟ್ಟು ಮುಚ್ಚಿರಲಿಲ್ಲ. ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗ್ಗೆ 8 ಗಂಟೆ ನಡುವಿನಲ್ಲಿ ಹೆಬ್ಟಾಳ, ಕಸ್ತೂರಿ ನಗರ, ಕೆಂಗೇರಿ, ಬಾಪೂಜಿ ನಗರ, ಮೂಡಲ ಪಾಳ್ಯ, ಕುಂಬಳಗೋಡು ಸೇರಿ ಹಲವು ಪ್ರದೇಶಗಳಲ್ಲಿ ಕಿಡಿಗೇಡಿಗಳು 46 ಬಿಎಂಟಿಸಿ ಬಸ್‌ ಹಾಗೂ ಕೆಎಸ್‌ಆರ್‌ಟಿಸಿಯ 12 ಬಸ್‌ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದವು.ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಿದ್ದರೂ,ಬಹುತೇಕ ಜಿಲ್ಲೆಗಳಲ್ಲಿ ಶೈಕ್ಷಣಿಕ ಕಾರ್ಯ ಚಟುವಟಿಕೆ ಹಾಗೂ ತರಗತಿಗಳು ಎಂದಿನಂತೆ ನಡೆದಿದೆ. ಬೆಂಗಳೂರು ನಗರದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಬುಧವಾರ ಕಾರ್ಯನಿರ್ವಹಿಸಿವೆ.
ಗಾರ್ಮೆಂಟ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಗಳವಾರ ಬಹುತೇಕ ಎಲ್ಲ ಗಾರ್ಮೆಂಟ್‌ಗೆ ರಜಾ ನೀಡಲಾಗಿತ್ತು.ಆದರೆ, ಬುಧವಾರ ಎಂದಿನಂತೆ ಕಾರ್ಯನಿರ್ವಹಿಸಿವೆ.
ಕೆಎಸ್‌ಆರ್‌ಟಿಸಿಗೆ ಕೋಟ್ಯಂತರ ನಷ್ಟ
ಭಾರತ್‌ ಬಂದ್‌ ಹಾಗೂ ಕಾರ್ಮಿಕರ ಮುಷ್ಕರದ ಪರಿಣಾಮವಾಗಿ ಕೆಎಸ್‌ಆರ್‌ಟಿಸಿಯ 2,171 ಬಸ್‌ ರದ್ದಾಗಿ, 2.42ಕೋಟಿ ರೂ. ಹಾಗೂ ಬಸ್‌ ಹಾನಿಯಿಂದ 2.32 ಲಕ್ಷ ರೂ ನಷ್ಟವಾಗಿದೆ.ಬಿಎಂಟಿಸಿಗೆ ಬಸ್‌ ರದ್ದಾಗಿದ್ದರಿಂದ 3 ಕೋಟಿ ರೂ. ಹಾಗೂ ಬಸ್‌ ಹಾನಿಯಿಂದ 7.5 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಗಣಪತಿ ಆತ್ಮಹತ್ಯೆ : ನ್ಯಾಯಾಂಗ ತನಿಖೆಗೆ ವ್ಯವಸ್ಥೆಗಳೇ ಇಲ್ಲ! | DySP Ganapati suicide : Judicial commission yet to get space, staff - Kannada Oneindia