text
stringlengths 0
61.5k
|
---|
As you are aware, ABIDe (Agenda for Bengaluru Infrastructure & Development) Task Force, with the involvement of government, has been constituted to revive and rebuild Bengaluru through a combination of Comprehensive planning, improved municipal services and new investments into infrastructure. ABIDe also owns the task of providing a blue-print for sustainable and orderly development of Bangalore under Bengaluru Vision 2020. |
I and Ashwin Mahesh (IIM-B), are entrusted with the task of suggesting solutions to the Traffic and Transport issues of Bangalore – A tough job indeed :). Please visit http://abidebengalu ru.in/report/ show/7 to read and give suggestions on our recommendations. |
Priority Bus Lanes, Bus Bays, Paved Footpaths, Safe Pedestrian Crossings, Cycle Lanes (proposed) will also be introduced on these Big-10 routes. We have 3, 6, 12, 18 and 24 month deadlines to accomplish all these Road Infrastructure Improvement objectives on all Big-10 Corridors. Please visit ABIDe website for corridor and other details. – http://www.abideben galuru.in |
PS: Please share this information with your friends and colleagues. We need to popularize public transport through media, blogs, personal contacts and word of mouth, to save Bangalore from traffic chaos. |
ಫೆಬ್ರವರಿ 24, 2009 |
ಟ್ರಾಫಿಕ್ ಕಿರಿಕಿರಿ, ನಮ್ಮ ಬೆಂಗಳೂರು |
ಸೆಂಟ್ರಲ್ ಜೈಲಲ್ಲಿ ನಮ್ಮ ಯುಗಾದಿ ಸೆಲೆಬ್ರೇಶನ್ನು… |
9 thoughts on "ಗೊಣಗೋದು ಬಿಟ್ಟು ನಾವೂ ಏನಾದರೂ ಮಾಡಬಹುದು!" |
ಫೆಬ್ರವರಿ 25, 2009 ರಲ್ಲಿ 12:56 ಫೂರ್ವಾಹ್ನ |
ಬೆಂಗಳೂರಿಗೆ ಬಂದಾಗಲೆಲ್ಲಾ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಲೇ ಮನೆಗೆ ವಾಪಸಾಗುವಷ್ಟರಲ್ಲಿ ಕಣ್ಣು ಕೆಂಪಗಾಗಿಸಿಕೊಂಡಿರುವೆ. |
ನನ್ನ ಮಗನಿಗಂತೂ ಬೆಂಗಳೂರಿನಿಂದ ಬಂದ ಕೂಡಲೇ ಕೆಮ್ಮು ಶುರುವಾಗುತ್ತದೆ. ಆದರು ವಿಧಿಯಿಲ್ಲ. ಬರಲೇಬೇಕಲ್ಲ! |
"ಸಂಗತ್ಯ" ಬ್ಲಾಗ್ ಚೆನ್ನಾಗಿದೆ. ಮಾಹಿತಿ ಕೊಟ್ಟದ್ದಕ್ಕೆ ಥ್ಯಾಂಕ್ಸ್. |
ಫೆಬ್ರವರಿ 25, 2009 ರಲ್ಲಿ 6:36 ಫೂರ್ವಾಹ್ನ |
ನಿಜ ಚೇತನಾರೇ, ನೀವು ಹೇಳುವುದು ನಿಜ. ನಾವು ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಭಾಗಿಯಾಗದಿದ್ದರೆ ಗೊಣಗುವ ಅಧಿಕಾರವೂ ಇಲ್ಲ. ಆದರೆ ವಿಪರ್ಯಾಸದ ಸಂಗತಿಯೆಂದರೆ "ಬುದ್ಧಿವಂತರ ಸರಕಾರ" (ಎಜುಕೇಟೆಡ್) ಬಂದು ಒಂದಿಷ್ಟು ನಾಗರಿಕರ ಸಹಕಾರ ಪಡೆಯುತ್ತೆ ಅಂತ ತಿಳ್ಕೊಂಡಿದ್ದೆವು. ಆದರೆ ಅದು ಸುಳ್ಳಾಗಿದೆ. ಒಂದಷ್ಟು ನಾಗರಿಕ ಸಮಿತಿಗಳನ್ನು ರಚಿಸಿ, ಅವುಗಳಿಂದ ಪರಿಹಾರ ಹುಡುಕಿಕೊಂಡು ಅದನ್ನು ಕಾರ್ಯ ಸಾಧ್ಯವಾಗುವತ್ತ ಸರಕಾರಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ದಿಲ್ಲಿಯ ಮೆಟ್ರೋ ರೈಲಿಗೆ ಸಲಹೆ ಕೊಟ್ಟ ನಿವೃತ್ತ ಎಂಜಿನಿಯರ್ ಗಳೂ ಇದ್ದಾರೆ. ಅಂಥವರನ್ನು ಕನಿಷ್ಠ ಮಾತನಾಡಿಸುವ ಕೆಲಸವೂ ಸರಕಾರಗಳಿಂದ ನಡೆಯೋದಿಲ್ಲ. ನಮ್ಮಲ್ಲಿ ಯೋಜನೆಗಿಂತ ಮೊದಲು ಅದರ ಕಾರ್ಯಸಾಧ್ಯ, ಪರಿಣಾಮಗಳ ಬಗ್ಗೆ ಯೋಚಿಸೋದಿಲ್ಲ. ಮೊದಲು ಜಾಗ ಹುಡುಕುತ್ತೇವೆ, ಜಾಗ ಕಂಡಕೂಡಲೇ ಯೋಜನೆ ಸಿದ್ಧವಾಗುತ್ತದೆ, ಜಾರಿಯಾಗುತ್ತದೆ. ಇಲ್ಲಿ ಈ ಯೋಜನೆ ಕಾರ್ಯಗತಗೊಳ್ಳುವ ಅಗತ್ಯವಿದೆಯೇ ಎಂದು ಸ್ಥಳೀರನ್ನಾರೂ ಕೇಳುವುದಿಲ್ಲ. ಏಕಾಏಕಿ ಯೋಜನೆ ಸಿದ್ಧ. ಅಂಥ ಅಪ್ರಯೋಜಕ ಯೋಜನೆ ಬೇಕಾದಷ್ಟು ಬೆಂಗಳೂರಿನಲ್ಲಿ ಕಾರ್ಯಗತಗೊಂಡಿವೆ. ಹಾಗಾಗಿ ಸಮಸ್ಯೆ ಬಗೆಹರಿದಿಲ್ಲ.ಉದಾಹರಣೆಗೆ ರಿಚ್ಮಂಡ್ ಸರ್ಕಲ್ ಫ್ಲೈ ಒವರ್ ನೋಡಿ. ನಮ್ಮ ಅತ್ಯಂತ ಕೆಟ್ಟ ಯೋಜನೆ, ಭ್ರಷ್ಟತೆಗೆ ಸ್ಪಷ್ಟ ಉದಾಹರಣೆ. |
ಫೆಬ್ರವರಿ 27, 2009 ರಲ್ಲಿ 3:12 ಫೂರ್ವಾಹ್ನ |
Traffic problem will be solved if all the proposed projects get implemented. Problem is in executing the plans, not in lack of proper ideas. |
Every city has traffic problem. For me, there are bigger problems in Bangalore – lack of employment opportunities, lay-offs, cutting of salaries, youth turning criminals, increasing crime rate etc. |
By the way I heard RK is supposed to contest elections this time..? |
ಮಾರ್ಚ್ 10, 2009 ರಲ್ಲಿ 10:56 ಫೂರ್ವಾಹ್ನ |
"ಮನುಷ್ಯನ ಆಸೆಗಳನೆಲ್ಲಾ ಪುರೈಸಬಲ್ಲ ಸಂಪತ್ತು ಈ ಭೂಮಿ ಮೇಲೆ ಇದೆ ಆದರೆ ದುರಾಸೆಗಾಗಿ ಅಲ್ಲ" – M.K Gandhi |
ಹರೀಶ ಮಾಂಬಾಡಿ ಹೇಳುತ್ತಾರೆ: |
ಮಾರ್ಚ್ 13, 2009 ರಲ್ಲಿ 2:10 ಅಪರಾಹ್ನ |
ಬೆಂಗಳೂರಲ್ಲಿ ಅನಿವಾರ್ಯವಾಗಿ ವಾಸ ಮಾಡುವವರೇ ಕ್ಷಮಿಸಿ. ವರ್ಷಕ್ಕೊಮ್ಮೆ(ಪುರುಸೊತ್ತಾದರೆ) ಬೆಂಗಳೂರಿಗೆ ಬರುವ ನನ್ನಂಥವರಿಗೂ ಆ ಊರೇ ಅಲರ್ಜಿ(ಧೂಳಿನಿಂದ )ಅನಿಸುತ್ತದೆ. ಆದಸ್ಟು ಬೇಗ ಊರಿಗೆ ಹೋಗುವ ಅಂದುಕೊಳ್ಳುತ್ತೇನೆ. ನಿಜಕ್ಕಾದರೆ ಊರು ಸುಂದರವಾಗೇ ಇದೆ. ಆದರೆ ಕಾಂಕ್ರೀಟು ತುಂಬಿದೆ. ಟಿ.ವಿ.ಯವರು ಅದನ್ನು ಉದ್ಯಾನನಗರಿ ಎಂದಾಗ ನಗು ಬರುತ್ತದೆ. ನನ್ನೂರು ಮಂಗಳೂರು ಸಹ ಮತ್ತೊಂದು ಬೆಂಗಳೂರು ಆಗುತ್ತೆ ಅನಿಸುತ್ತದೆ. |
ಮಾರ್ಚ್ 14, 2009 ರಲ್ಲಿ 8:48 ಫೂರ್ವಾಹ್ನ |
elli hogiddira madam, dina hosa post ide anta bandu nodi nodi bejaraagutte. i am addicted to ur blog 😦 |
ಮಾರ್ಚ್ 18, 2009 ರಲ್ಲಿ 9:23 ಫೂರ್ವಾಹ್ನ |
ಕಣ್ಣು ತೆರೆಸಿದ ಲೇಖನ. ಹೌದು, ಬರೇ ಗೊಣಗಾಟ ಮುಂದುವರಿಸ್ತಾ ಇದ್ರೆ ಮತ್ತು ಸಮಷ್ಟಿಯ ಹಿತದ ಬಗ್ಗೆ ಆಲೋಚಿಸದೇ ಇದ್ರೆ… ಬೆಂಗಳೂರು ಇಲ್ಲಾ ಇನ್ಯಾವುದೇ ಊರಿಗೂ 'I am leaving' ಅಂತಾನೇ ಹೇಳಬೇಕಾಗಬಹುದು. ಜನರಿಗೂ ಒಂದಿನಿತು ಜವಾಬ್ದಾರಿ ಬೇಡವೇ… ಈ ಬಗ್ಗೆ ಯೋಚಿಸಲು ಸಮಯ ಮಾಡಿಕೊಳ್ಳಬೇಕಷ್ಟೆ. |
ಮಾರ್ಚ್ 22, 2009 ರಲ್ಲಿ 12:06 ಅಪರಾಹ್ನ |
ಜನಸಂಖ್ಯೆಗಿಂತ ಡಬಲ್ ವೇಗದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟನೆಯೇ ಟೆರಿರಿಸ್ಮ್ ಗಿಂತ ದೊಡ್ಡ ಸಮಸ್ಯೆ ಅಂತ ವಿಶ್ವೇಶ್ವರ ಭಟ್ಟರ ಲೇಖನದಲ್ಲೊಮ್ಮೆ ಓದಿದ ನೆನಪು. |
ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ವೇಗದ ದಾರಿ ಎಂದರೆ ನಡೆದು ಹೋಗುವುದೇ ಎಂಬ ಕಾಲ ಬರಬಹುದು. ( ಕಾರಲ್ ಹೋದ್ರೆ ಒಂದ್ ಘಂಟೆ ಸಾರ್… ನಡ್ಕಂಡಾದ್ರೆ ಐದು ನಿಮ್ಷ ಸಾಕು!) |
ಸಾರ್ವಜನಿಕ ಸಾರಿಗೆಯ ಹೆಚ್ಚು ಬಳಕೆ, ಹತ್ತಿರದ ದೂರಗಳಿಗೆ ಸೈಕಲ್ ಬಳಸುವುದೇ ಪರಿಹಾರ ಅನ್ನಿಸುತ್ತದೆ. |
ಎಚ್ ಆನಂದರಾಮ ಶಾಸ್ತ್ರೀ ಹೇಳುತ್ತಾರೆ: |
ಮಾರ್ಚ್ 25, 2009 ರಲ್ಲಿ 3:26 ಅಪರಾಹ್ನ |
ನೀವು ಬರೆದ ಕಥೆ, ಕವಿತೆ ಓದಿದ್ದೇನೆ, ಮೆಚ್ಚಿದ್ದೇನೆ. ಹೃದಯಕ್ಕವು ಆಪ್ತ. |
ನಿಮ್ಮ ಬ್ಲಾಗ್‌ಗೆ ಇದೇ ಮೊದಲ ಸಲ ಬಂದದ್ದು. ಬ್ಲಾಗೂ ಆಪ್ತವೆನ್ನಿಸಿತು. |
ನಿಮ್ಮ ಕಥನಕಲೆಯನ್ನು ಮತ್ತು ಕವಿಭಾವವನ್ನು ಗ್ರಹಿಸಿದ್ದ ನನಗಿಂದು ನಿಮ್ಮ ಆಸಕ್ತಿವೈವಿಧ್ಯ, ಸಾಮಾಜಿಕ ಕಳಕಳಿ ಮತ್ತು ಅಪರಿಮಿತ ಚೇತನ ಇವುಗಳ ಅರಿವು ಈ ಬ್ಲಾಗ್ ಮೂಲಕ ಆಯಿತು. |
'ಸದಸ್ಯರ ಬೆದರಿಸಿ ಜೆಡಿಎಸ್ ಅಧಿಕಾರಕ್ಕೆ' | BJP NR Santhosh Allegation Against JDS Leaders snr |
'ಸದಸ್ಯರ ಬೆದರಿಸಿ ಜೆಡಿಎಸ್ ಅಧಿಕಾರಕ್ಕೆ' |
Bengaluru, First Published Feb 2, 2021, 12:50 PM IST |
ಆಣೆ ಪ್ರಮಾಣ ಮಾಡಿಸಿಕೊಂಡು ಜೆಡಿಎಸ್ ಅಧಿಕಾರ ಹಿಡಿದಿದೆ. ಸದಸ್ಯರ ಸಮ್ಮತಿಯಂತೆ ಅಧಿಕಾರಕ್ಕೆ ಏರಿಲ್ಲ ಎಂದು ಗಂಭೀರ ಆರೋಪ ಮಾಡಲಾಗಿದೆ. |
ಅರಸೀಕೆರೆ (ಫೆ.02): ಪಕ್ಷದ ಚಿಹ್ನೆ ಇಲ್ಲದೆ ಚುನಾಯಿತರಾದ ಗ್ರಾಪಂ ಸದಸ್ಯರಿಂದ ಶಾಸಕ ಶಿವಲಿಂಗೇಗೌಡ ಆಣೆ ಪ್ರಮಾಣ ಮಾಡಿಸಿಕೊಂಡು, ಗುಂಪು ಗಲಭೆ ಮಾಡಿ ಬೆದರಿಸಿ 32 ಗ್ರಾಪಂಗಳಲ್ಲಿ ಜೆಡಿಎಸ್ ಅಧಿಕಾರ ಹಿಡಿದಿರಬಹುದು. ಆದರೆ, ಜನತೆ ಹಾಗೂ ಚುನಾಯಿತ ಸದಸ್ಯರ ಅಪೇಕ್ಷೆಯಂತೆ ಅಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್. ಆರ್.ಸಂತೋಷ್ ಆರೋಪಿಸಿದರು. |
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಲಾಟೆ ಗದ್ದಲದಿಂದಲೇ ಜನರನ್ನ ಹಿಡಿದಿಟ್ಟುಕೊಳ್ಳಬಹುದು ಎಂಬ ಶಿವಲಿಂಗೇಗೌಡ ಭ್ರಮೆ ರಾಜಕಾರಣಕ್ಕೆ ಬಿಜೆಪಿ ಇತಿಶ್ರೀ ಆಡಲಿದೆ. ಅಲ್ಲದೆ ಗ್ರಾಪಂ ಚುನಾವಣೆಯ ಪೂರ್ವದಿಂದ ಹಿಡಿದು ಇತ್ತೀಚೆಗೆ ಗೀಜಿಹಳ್ಳಿಯಲ್ಲಿ ನಡೆದಂತ ಹಲ್ಲೆ ಪ್ರಕರಣ. ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೆಲ್ಲಾದರು ನಡೆದರೆ ಶಾಸಕರ ಮನೆಯ ಮುಂದೆ ಐದು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಆಮರಣಾಂತರ ಉಪವಾಸ ಕೈಗೊಳ್ಳುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. |
'ಬಿಜೆಪಿಯನ್ನು ಟೀಕಿಸುತ್ತಿರುವ ವಿಶ್ವನಾಥ್ ಯಾವ ಪಕ್ಷಕ್ಕೆ ಹೋಗ್ತಾರೆ'? |
ಗ್ರಾಪಂ ಅಧಿಕಾರ ಹಿಡಿಯಲು ಜೇನುಕಲ್ ಸಿದ್ದೇಶ್ವರ ಕ್ಷೇತ್ರದಲ್ಲಿ ಗ್ರಾಪಂ ಸದಸ್ಯರಿಂದ ಆಣೆ ಪ್ರಮಾಣ ಮಾಡಿಸಿಕೊಂಡ ಶಾಸಕರು, ಮುಂದಿನ ವಿಧಾನಸಭೆ ಚುನಾವಣೆ ಅಷ್ಟರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಆಣೆ ಮಾಡಲಿ ಎಂದು ಸವಾಲು ಹಾಕಿದ ಅವರು, ಈಗ ಒಲ್ಲದ ಮನಸ್ಸಿನಿಂದ ಶಾಸಕರಿಂದ ಹಾರ ಶಾಲು ಹಾಕಿಸಿಕೊಂಡಿರುವ ಗ್ರಾಪಂ ಸದಸ್ಯರು ಮುಂದಿನ ದಿನಗಳಲ್ಲಿ ಅವರ ಹಿಂದೆಯೇ ಇರುತ್ತಾರೋ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು. |
ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಎಂಜಿನಿಯರಿಂಗ್ ಕಾಲೇಜು ಕಾಮಗಾರಿಗೆ ನನ್ನ ಹಾಗೂ ಪಕ್ಷದ ವಿರೋಧವಿಲ್ಲ. ಆದರೆ, ಪ್ರತಿಭಟನಾನಿರತ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರು ಮುಂದುವರಿಯಲಿ. ಪ್ರತಿಭಟನಾಕಾರರ ಮನವೊಲಿಸಲು ಕರೆದರೆ ನಾನು ಸಹ ಬರುತ್ತೇನೆ ಎಂದು ಹೇಳಿದರು. |
ಅರಸೀಕೆರೆ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರ ಘೋಷಣೆಯನ್ನು ನ್ಯಾಯಾಲಯದ ಮೂಲಕ ತಡೆದು ನಿಲ್ಲಿಸಿರುವ ಶಾಸಕರು ಮತ್ತು ಅವರ ಬೆಂಬಲಿಗರು ತಾವು ಸಲ್ಲಿಸಿರುವ ತಡೆಯಾಜ್ಞೆಯನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ ಅವರು, ಭಂಡತನವನ್ನು ಮುಂದುವರಿಸಿದರೆ ನ್ಯಾಯಾಲಯದಿಂದಲೇ ನಮ್ಮ ಪರವಾಗಿ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. |
ಅಕ್ರಮ ಮದ್ಯ ನಾಶಪಡಿಸಿದ ಅಧಿಕಾರಿಗಳು · |
ಅಕ್ರಮ ಮದ್ಯ ನಾಶಪಡಿಸಿದ ಅಧಿಕಾರಿಗಳು |
Mandya December 14, 2018 5:00 AM |
ಕೆ.ಆರ್.ಪೇಟೆ: ಮದ್ಯ ಅಕ್ರಮ ಮಾರಾಟಗಾರರು ಮತ್ತು ಸಾಗಣೆದಾರರ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಮದ್ಯವನ್ನು ತಾಲೂಕು ಅಬ ಕಾರಿ ವಲಯ ಅಧಿಕಾರಿಗಳು ನಾಶಪಡಿಸಿದ್ದಾರೆ. |
ತಾಲೂಕಿನಲ್ಲಿ 2011ರಿಂದ 2018ರವರೆಗೆ 267 ಪ್ರಕರಣಗಳನ್ನು ದಾಖಲಿಸಿ ವಿವಿಧ ಬ್ರಾಂಡ್‌ನ 764 ಲೀಟರ್ ಮದ್ಯ, 20.330 ಲೀಟರ್ ಬಿಯರ್ ಅನ್ನು ವಶಕ್ಕೆ ಪಡೆದಿದ್ದರು. 207 ಪ್ರಕರಣದಲ್ಲಿ ಆರೋಪಿಗಳಿಗೆ ದಂಡ ಹಾಕಿ ಸುಮಾರು 4.20 ಲಕ್ಷ ರೂಪಾಯಿಯನ್ನು ಸರ್ಕಾರಕ್ಕೆ ಕಟ್ಟಿದ್ದಾರೆ. ಉಳಿದ 60 ಪ್ರಕರಣಗಳು ಘೋರ ಪ್ರಕರಣಗಳಾಗಿದ್ದು, ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. |
ಅಬಕಾರಿ ಉಪ ಅಧೀಕ್ಷಕ ಕೆ.ವಿ.ದಿವಾಕರ್ ನೇತೃತ್ವದಲ್ಲಿ ತಾಲೂಕಿನ ತೇಗನಹಳ್ಳಿ ಬಳಿ ಇರುವ ಅರಣ್ಯ ಜಾಗದಲ್ಲಿ ಮದ್ಯವನ್ನು ನಾಶ ಮಾಡಲಾಯಿತು. ತಾಲೂಕು ಅಬಕಾರಿ ವಲಯ ಸಬ್‌ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ, ಪಟ್ಟಣ ಠಾಣೆ ಎಎಸ್‌ಐ ರಾಮಚಂದ್ರನಾಯಕ್, ಕಂದಾಯ ಇಲಾಖೆಯ ಶಿರಸ್ತೇದಾರ್ ಮಹದೇವಗೌಡ, ಪಾಂಡವಪುರದ ಕೆಎಸ್‌ಬಿಸಿಎಲ್ ಮ್ಯಾನೇಜರ್ ಎಂ.ಸಿ.ರಮೇಶ್ ಮೊದಲಾದವರು ಹಾಜರಿದ್ದರು. |
ಹಂಫ್ರಿ ಡೇವಿ - ವಿಕಿಪೀಡಿಯ |
ಹಂಫ್ರಿ ಡೇವಿ(7 ದಶಂಬರ 1778 – 29 ಮೇ 1829)ಇಂಗ್ಲೆಂಡ್‌ನ ರಸಾಯನಶಾಸ್ತ್ರಜ್ಞ.ಇವರು ಡೇವಿ ಲ್ಯಾಂಪ್ ಎಂಬ ಗಣಿಗಳಲ್ಲಿ ಕೆಲಸಮಾಡುವವರಿಗೆ ಉಪಯೋಗವಾಗುವ ದೀಪದ ಆವಿಷ್ಕಾರ ಮಾಡಿದುದರಿಂದ ಪ್ರಖ್ಯಾತಿಯನ್ನು ಪಡೆದರು.ಇದರೊಂದಿಗೆ ಹಲವಾರು ಕ್ಷಾರಗಳನ್ನು ಹಾಗೂ ಕ್ಷಾರೀಯ ಭಸ್ಮ ಲೋಹ(Alkaline earth metals)ಗಳನ್ನು ಕಂಡುಹಿಡಿದರು.ಅರಿವಳಿಕೆ(anaesthetic)ಯಾಗಿ ನೈಟ್ರಸ್ ಆಕ್ಸ್‌ಡ್‌ನ್ನು ಉಪಯೋಗಿಸಿದವರಲ್ಲಿ ಮೊದಲಿಗರು.ಇವರು ಮ್ಯಗ್ನೀಶಿಯಮ್, ಬೊರಾನ್,ಬೇರಿಯಮ್ ಗಳನ್ನು ಕಂಡುಹಿಡಿದರು. |
ಡೇವಿ ಲ್ಯಾಂಪ್ |
ಹಂಫ್ರಿಡೇವಿ ಇಂಗ್ಲೆಂಡಿನ ಪ್ರಸಿದ್ಧ ರಸಾಯನಶಾಸ್ತ್ರ ವಿಜ್ಞಾನಿ. ಇವರು ಕ್ರಿ.ಶ ೧೭೭೮ ರಲ್ಲಿ ಇಂಗ್ಲೆಂಡಿನ ಹಳ್ಳಿಯೊಂದರಲ್ಲಿ ಜನಿಸಿದರು. ಬೋರ್ಲಾನ್ ಎಂಬ ಸ್ಥಳೀಯ ವೈದ್ಯರ ಆಶ್ರಯ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಶರೀರ ವಿಜ್ಞಾನದಿಂದ ಆರಂಭಗೊಂಡು ರಸಾಯನ, ತತ್ವಜ್ಞಾನದವರೆಗೆ ಇವರು ಸಂಶೋಧನೆಗಳನ್ನು ಕೈಗೊಂಡರು. [೧] |
ಕ್ರಿ.ಶ ೧೭೯೮ ರಲ್ಲಿ ಬ್ರಿಸ್ಟಲ್ ನಗರದ ವೈದ್ಯಕೀಯ ಸಂಸ್ಥೆಯಲ್ಲಿ ನೈಟ್ರೋಜನ್, ಹೈಡ್ರೋಜನ್, ಆಕ್ಸಿಜನ್ ಮೊದಲಾದ ಅನಿಲಗಳನ್ನು ರೋಗ ನಿವಾರಣೆಗೆ ಯಾವ ರೀತಿ ಉಪಯೋಗಿಸಿಕೊಳ್ಳಬಹುದೆಂದು ಕಂಡುಹಿಡಿದರು. ಇವರ ಬಹುದೊಡ್ಡ ಸಾಧನೆಯೆಂದರೆ ನಗೆ ಅನಿಲವೆಂದೇ ಹೆಸರಾದ ನೈಟ್ರಸ್ ಆಕ್ಸೈಡ್ ಅನ್ನು ಕಂಡುಹಿಡಿದದ್ದು. [೨] |
ಹಲವು ಪ್ರಯೋಗಗಳನ್ನ ಮಾಡಿ ಪೊಟಾಸಿಯಂ ಧಾತುವನ್ನು ಕಂಡುಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ೧೮೧೫ ರಲ್ಲಿ ಇವರು ಗಣಿಕಾರ್ಮಿಕನ ಸುರಕ್ಷತೆಗಾಗಿ ಸೇಫ್ಟಿ ಟ್ಯಾಂಕ್ ಕಂಡುಹಿಡಿದರು, ಈ ಪ್ರಯೋಗದಿಂದಾಗಿ ಸಾವಿರಾರು ಕಾರ್ಮಿಕರ ಪ್ರಾಣ ಉಳಿಸಿದಂತಾಗಿದೆ. ಅಷ್ಟೇ ಅಲ್ಲದೆ ನೀರಿನ ಮೂಲಕ ವಿದ್ಯುತ್ ಹರಿಸಿದಾಗ ಆಮ್ಲ ಮತ್ತು ಕ್ಷಾರ ಉತ್ಪತ್ತಿಯಾಗಲು ಕಾರಣವೇನು ಎಂಬುದನ್ನು ಸಹ ಇವರು ಕಂಡುಹಿಡಿದರು. |
ದೆಹಲಿ ಹಿಂಸಾಚಾರ; ಶಾಲಾ-ಕಾಲೇಜುಗಳಿಗೆ ನಾಳೆ ರಜೆ; ಸಿಬಿಎಸ್‌ಇ ಪರೀಕ್ಷೆ ಮುಂದೂಡಿಕೆ CBSE Postpones Tomorrows Board Exams in Northeast Delhi, Schools in Area to Remain Closed on Wednesday– News18 Kannada |
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು ಹೇಳಿಕೆ ನೀಡಿದ್ದಾರೆ. ಗಲಭೆ ಪೀಡಿತ ಪ್ರದೇಶದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. |
Updated:February 26, 2020, 7:35 AM IST |
Last Updated: February 26, 2020, 7:35 AM IST |
ನವದೆಹಲಿ: ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ನಡೆಸುತ್ತಿದ್ದ ಹೋರಾಟ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ದೆಹಲಿಯಲ್ಲಿ ಸಾವನ್ನಪಿದವರ ಸಂಖ್ಯೆಯೇರುತ್ತಲೇ ಇದೆ. ಇಲ್ಲಿಯವರೆಗೂ ಸುಮಾರು 150ಕ್ಕೂ ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿನ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಕೈಮೀರುತ್ತಿರುವ ಹಿಂಸಾಚಾರ ತಹಬದಿಗೆ ದೆಹಲಿ ಪೊಲೀಸರು ಕಂಡಲ್ಲಿ ಗುಂಡು ಆದೇಶ ಜಾರಿಗೊಳಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ಸಿಬಿಎಸ್‌ಇ ಫೆಬ್ರವರಿ 26ರಂದು ನಡೆಯಬೇಕಿದ್ದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ. |
ಮೂರು ದಿನಗಳ ಹಿಂದೆ ದೆಹಲಿಯಲ್ಲಿ ಸಿಎಎ ಮತ್ತು ಎನ್ಆರ್ಸಿ ಪರ-ವಿರೋಧಿ ಗುಂಪುಗಳ ನಡುವೆ ಶುರುವಾದ ಸಂಘರ್ಷ ಮೂರನೇ ದಿನವೂ ಮುಂದುವರಿದಿದೆ. ಇಲ್ಲಿನ ಈಶಾನ್ಯ ಭಾಗದಲ್ಲಿ ಇರುವ ಮೌಜ್ಪುರದಲ್ಲಿ ಇಂದು ಕೂಡ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿವೆ. ನಿನ್ನೆ ಕಲ್ಲು ತೂರಾಟದ ವೇಳೆ ಪೊಲೀಸ್ ಕಾನ್ಸ್ಟೇಬಲ್ ಓರ್ವ ಸಾವನ್ನಪ್ಪಿದ್ದಾರೆ. ಈಗ ಪೊಲೀಸ್ ಕಾನ್ಸ್ಟೇಬಲ್ ಬೆನ್ನಲ್ಲೇ 12 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ಮುಂದುವರಿದ ಹಿಂಸಾಚಾರ: ಸಾವಿನ ಸಂಖ್ಯೆ 13ಕ್ಕೇರಿಕೆ; ಉದ್ವಿಘ್ನ ಪರಿಸ್ಥಿತಿ |
ನಿನ್ನೆ ಸೋಮವಾರ(24) ಸಿಎಎ ಬೆಂಬಲಿಗರು ಎನ್ನಲಾದ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ್ದರು. ಹೀಗೊಂದು ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಪತ್ರಕರ್ತ ದಾನಿಶ್ ಸಿದ್ದಿಕಿ ಎಂಬುವರ ಕ್ಯಾಮರಾದಲ್ಲಿ ಈ ಭಯಾನಕ ದಾಳಿಯ ದೃಶ್ಯ ಸೆರೆಯಾಗಿದೆ ಎಂದು ವರದಿಯಾಗಿದೆ. ಇದರಿಂದ ದೆಹಲಿಯ ಈಶಾನ್ಯ ಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಿಎಎ ಪರ-ವಿರೋಧಿ ಗುಂಪುಗಳ ನಡುವಿನ ಘರ್ಷಣೆ ತಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ಧಾರೆ. |
ಇತ್ತೀಚೆಗೆ ಭಾನುವಾರ(ನಿನ್ನೆ) ದೆಹಲಿಯ ಈಶಾನ್ಯ ಭಾಗದಲ್ಲಿರುವ ಜಫ್ರಾಬಾದ್ನಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿತ್ತು. ಪರಸ್ಪರ ಕಲ್ಲುತೂರಾಟದಲ್ಲಿ ತೊಡಗಿದ್ದ ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಬಳಕೆ ಮಾಡಿದ್ದರು. ಕೆಲ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರವೂ ಕೂಡ ನಡೆಸಲಾಗಿತ್ತು. ಈ ಬೆನ್ನಲ್ಲೇ ಸೋಮವಾರ ಕೂಡ ಇದೀ ಪರಿಸ್ಥಿತಿ ನಿರ್ಮಾಣವಾಗಿದೆ. |
ಹಾಕಿ ಪ್ರೊ ಲೀಗ್ ಭಾರತದ ಪಂದ್ಯಗಳ ತಾಣ ಭುವನೇಶ್ವರ | Udayavani – ಉದಯವಾಣಿ |
bhuvaneshvar stadium |
ಹೊಸದಿಲ್ಲಿ: ಮುಂದಿನ ವರ್ಷದ ಹಾಕಿ ಪ್ರೊ ಲೀಗ್ ಪಂದ್ಯಾವಳಿಯಲ್ಲಿ ಭಾರತದ ತವರಿನ ಪಂದ್ಯಗಳ ಆತಿಥ್ಯ ಭುವನೇಶ್ವರ ಪಾಲಾಗಿದೆ. ಇಂಟರ್‌ನ್ಯಾಶನಲ್ ಹಾಕಿ ಫೆಡರೇಶನ್ (ಎಫ್ಐಎಚ್) ಸೋಮವಾರ ಇದನ್ನು ಪ್ರಕಟಿಸಿತು. 2020ರ ಜನವರಿ 11ರಿಂದ ಜೂನ್ 28ರ ವರೆಗೆ ವಿಶ್ವದ ಅನೇಕ… |
2019 ಐಪಿಎಲ್ ಮುನ್ನೋಟ – ಆರ್.ಸಿ.ಬಿ - Broken Cricket |
by Broken Cricket Kannada ಮಾರ್ಚ್ 18, 2019 ಮಾರ್ಚ್ 18, 2019 |
By BrokenCricket by Broken Cricket Kannada ಮಾರ್ಚ್ 18, 2019 ಮಾರ್ಚ್ 18, 2019 |
Image credit: AB de Villiers/Instagram |
ಪ್ರತಿ ಬಾರಿ ಆರ್.ಸಿ.ಬಿ ಅಂದರೆ ಮೊದಲು ಕಣ್ಣ ಮುಂದೆ ಬರುವ ಹೆಸರುಗಳು ಎಬಿಡಿ ಮತ್ತು ವಿರಾಟ್ ಕೊಹ್ಲಿ ,ಮತ್ತು ತಂಡದ ಅದ್ಭುತವಾದ ಬೆಂಬಲಿಗರು, ಈ ಬಾರಿಯೂ ಸಹ ಬ್ಯಾಟಿಂಗ್ ಇವರಿಬ್ಬರ ಸುತ್ತಲು ಸುತ್ತುವ ಹಾಗಿದೆ ಏಕೆಂದರೆ, ಉತ್ತಮ ಆರಂಭಿಕ ಬ್ಯಾಟ್ಸ್‌ಮನ್ ಕೊರತೆ ಹಾಗೂ ಹೆಟ್ಮಯರ್ ನಂತರ ಬ್ಯಾಟಿಂಗ್ ಮಾಡುವ ಬ್ಯಾಟ್ಸ್ಮನ್ಗಳು ಯಾರು ಎನ್ನುವ ಪ್ರಶ್ನೆ. |
ಈ ಮೊದಲು ತಂಡದಲ್ಲಿ ಗೇಲ್ ಇದ್ದಾಗ ಉತ್ತಮ ಆರಂಭದ ನಿರೀಕ್ಷೆ ಇರುತ್ತಿತ್ತು ಈಗ ಪರಿಸ್ಥಿತಿ ಬದಲಾಗಿದೆ, ಪಾರ್ಥಿವ್ ಜೊತೆ ಮೊಯಿನ್ ಅಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ .ಆಲ್ರೌಂಡರ್ ಆದ ಕಾರಣ ಬೌಲಿಂಗ್ ಕೂಡ ಮಾಡಬಲ್ಲರು, ಸ್ಟೋಯ್ನಿಸ್ ಅವರು ಸೀಸನ್ ಆರಂಭಿಕ ಹಂತದಲ್ಲಿ ಲಭ್ಯರಿರುವುದಿಲ್ಲ, ಅವರು ಮರಳಿದ ಮೇಲೆ ಓಪನ್ ಮಾಡುವ ಸಾಧ್ಯತೆ ಇದೆ, ಮೂರು ಮತ್ತು ನಾಲ್ಕನೇ ಸ್ಥಾನ ಕೊಹ್ಲಿ ಮತ್ತು ಎಬಿಡಿ ಆಡಿದರೇ , ಐದನೇ ಕ್ರಮಾಂಕದಲ್ಲಿ ಹೆಟ್ಮಯರ್ ಆಡುತ್ತಾರೆ, ಈ ಬಾರಿ ಹರಾಜಿನಲ್ಲಿ ದೊಡ್ಡ ಮೊತ್ತ ವೆಚ್ಚ ಮಾಡಿ ಖರೀದಿಸಿದ ಶಿವಮ್ ದೂಬೆ ಮೇಲೆ ಆತ್ಮವಿಶ್ವಾಸ ಹೆಚ್ಚಾಗಿದೆ, ಬೌಲಿಂಗ್ ಆಲ್ರೌಂಡರ್ ಆಗಿ ನೇಗಿ ಅಥವಾ ಸುಂದರ್ ಅವಕಾಶ ಪಡೆಯಬಹುದು . |
ಇನ್ನು ಉಳಿದಂತೆ ತಂಡದ ನ್ಯೂನತೆ ಎಂದೇ ಹೇಳಬಹುದಾದ ಬೌಲಿಂಗ್ ವಿಭಾಗದ ಕಡೆ ಬಂದರೆ ಮೂರು ವಿದೇಶಿ ಆಟಗಾರರ ಸ್ಥಾನ ಭರ್ತಿಯಾಗಿದ್ದು, ಉಳಿದ ಒಂದು ಸ್ಥಾನ ಸೌಥಿ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಕೌಲ್ಟರ್ ನೈಲ್ ಮರಳಿದ ನಂತರ ಕೆಲವು ಪಂದ್ಯಗಳಲ್ಲಿ ಇವರಿಗೆ ಸ್ಥಾನ ಸಿಗಲಿದೆ. ಇನ್ನು ಉಳಿದಂತೆ ಉಮೇಶ್ ಯಾದವ್, ಸೀರಾಜ್ ವೇಗದ ಬೌಲಿಂಗ್ ಹೊಣೆ ಹೊರಲಿದ್ದಾರೆ, ತಂಡದ ಪ್ರಥಮ ಸ್ಪಿನ್ನರ್ ಆಗಿ ಎಂದಿನಂತೆ ಚಹಾಲ್ ಕಣಕ್ಕೆ ಇಳಿಯುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸೀಸನ್ ಕಳೆದ ಹಾಗೆ ಭಾರತೀಯ ಬೌಲರ್ಗಳು ಹೇಗೆ ಬೌಲಿಂಗ್ ಮಾಡುತ್ತಾರೆಯೋ ಹಾಗೆ ತಂಡದ ಸ್ಥಿತಿ ಇರಲಿದೆ. |
ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡ ಅಲ್ಲದೆ ಹೋದರೂ ಆರ್ ಸಿ ಬಿ ಅಭಿಮಾನಿಗಳು ಮುಂದಿನ ಬಾರಿ ಗೆಲ್ಲುತ್ತೇವೆ ಎಂದು ಹೇಳುವ ಅವಶ್ಯಕತೆ ಇಲ್ಲ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮತೋಲನ ಈ ತಂಡದ ಶಕ್ತಿ, ಮತ್ತೊಮ್ಮೆ ಈ ಸಲ ಕಪ್ ನಮ್ದೆ. |
ಸರ್ವಪಕ್ಷಗಳ ಸಭೆ : ನೂತನ ತೆರಿಗೆ ಪದ್ಧತಿ ? | Yeddyurappa | All Party Meet | Rain | Flood | North Karnataka | Deluge| Flood Relief| ಸರ್ವಪಕ್ಷಗಳ ಸಭೆ : ನೂತನ ತೆರಿಗೆ ಪದ್ಧತಿ ? - Kannada Oneindia |
ಸರ್ವಪಕ್ಷಗಳ ಸಭೆ : ನೂತನ ತೆರಿಗೆ ಪದ್ಧತಿ ? |
| Published: Sunday, October 11, 2009, 16:52 [IST] |
ಬೆಂಗಳೂರು, ಅ. 11 : ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದಿಂದ ನಲುಗಿರುವ ಜನತೆಗೆ ಪುನರ್ವಸತಿ ಕಲ್ಪಿಸಲು ಸರಕಾರ ಕೈಗೊಳ್ಳುವ ಪ್ರತಿಯೊಂದು ನಿರ್ಧಾರಗಳಲ್ಲೂ ಪಕ್ಷಭೇದ ಮರೆತು ಕೈಜೋಡಿಸುವುದರೊಂದಿಗೆ ಎಲ್ಲ ರಾಜಕೀಯ ಪಕ್ಷಗಳು ಇಂದಿಲ್ಲಿ ಒಗ್ಗಟ್ಟು ಪ್ರದರ್ಶಿಸಿವೆ. |
ಪರಿಹಾರದ ಬಗ್ಗೆ ಟೀಕೆ ಟಿಪ್ಪಣಿಗಳು ಬೇಡ. ಪಕ್ಷಭೇದ ಮತ್ತು ರಾಜಕೀಯ ಲಾಭದ ಉದ್ದೇಶಗಳನ್ನು ಬಿಟ್ಟು ಮೊದಲು ಬೀದಿ ಪಾಲಾಗಿರುವ ಕುಟುಂಬಗಳನ್ನು ರಕ್ಷಿಸುವುದು ನಮ್ಮ ಹೊಣೆ. ಎಲ್ಲರೂ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಪ್ರತಿಪಕ್ಷದ ಮುಖಂಡರು ಸಲಹೆ ನೀಡಿದರು. |
ಕೂಡಲೇ ಹಾನಿಗೊಳಗಾದ ಪ್ರತಿ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಪರಿಹಾರ ಕಾರ್ಯ ರೂಪಿಸುವುದು. ಸಂಕಷ್ಟಕ್ಕೆ ಒಳಗಾಗಿರುವವರಿಗೆ ತಕ್ಷಣ ಪರಿಹಾರ ಕಲ್ಪಿಸುವುದು. ಪದೇಪದೇ ಪ್ರವಾಹಕ್ಕೆ ಸಿಲುಕದಂತೆ ಶಾಶ್ವತ ಪರಿಹಾರ ಒದಗಿಸುವುದು. ಕೇಂದ್ರ ಸರಕಾರದಿಂದ ಹೆಚ್ಚಿನ ಪರಿಹಾರಕ್ಕೆ ಒತ್ತಾಯ. ಶೀಘ್ರದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡುವುದೂ ಸೇರಿದಂತೆ ಸರಕಾರ ಹಲವರು ಕ್ರಮಗಳನ್ನು ಕೈಗೊಳ್ಳಬೇಕೆಂದು ವಿರೋಧ ಪಕ್ಷಗಳ ಮುಖಂಡರು ಮನವಿ ಮಾಡಿಕೊಂಡರು. |
ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಕೆಎಚ್ ಮುನಿಯಪ್ಪ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಮೇಲ್ಮನೆ ಪ್ರತಿಪಕ್ಷದ ನಾಯಕ ವಿಎಸ್ ಉಗ್ರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದಗೌಡ, ಸಂಸದರಾದ ಅನಂತಕುಮಾರ್, ಚೆಲುವರಾಯಸ್ವಾಮಿ, ರಾಜಶೇಖರಮೂರ್ತಿ, ಎಂಪಿ ನಾಡಗೌಡ, ಮಾರಸಂದ್ರ ಮುನಿಯಪ್ಪ, ಎಂಸಿ ನಾಣಯ್ಯ, ಬಂಡೆಪ್ಪ ಕಾಶೆಂಪೂರ್, ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದರು. |
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಂತ್ರಸ್ಥರ ಪರಿಹಾರ ಕಾರ್ಯಕ್ಕೆ ಸರ್ವಪಕ್ಷಗಳ ನಾಯಕರೊಂದಿಗೆ ಚರ್ಚಿಸಲಾಗಿದೆ. ಅನೇಕ ಸಲಹೆಗಳನ್ನು ವಿರೋಧಪಕ್ಷಗಳು ನೀಡಿವೆ ಎಂದರು. ಅಲ್ಲದೇ, ಶ್ರೀಸಾಮಾನ್ಯರನ್ನು ಹೊರತುಪಡಿಸಿ ಶ್ರೀಮಂತರ ಎನಿಸಿಕೊಂಡವರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಲು ನೂತನ ತೆರಿಗೆ ಪದ್ಧತಿ ತರಲು ಸರಕಾರ ಚಿಂತನೆ ನಡೆಸಿದೆ. ನೂತನ ಪದ್ಧತಿ 6 ತಿಂಗಳಿಂದ 1 ವರ್ಷದೊಳಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಯಡಿಯೂರಪ್ಪ ವಿವರಿಸಿದರು. |
yeddyurappa ಯಡಿಯೂರಪ್ಪ ಉತ್ತರ ಕರ್ನಾಟಕ ತೆರಿಗೆ north karnataka rain ಮಳೆ flood ಪ್ರವಾಹ ಪರಿಹಾರ all party meet ಜಲಪ್ರಳಯ |
ಪ್ರಸ್ತುತ 15 ವರ್ಷದ ಬಾಲಕನಿಂದ ಹೈಸ್ಕೂಲ್ ನಲ್ಲಿ ಗುಂಡಿನ ದಾಳಿ | ಮೂವರು ವಿದ್ಯಾರ್ಥಿಗಳು ಮೃತ್ಯು – Prasthutha |
15 ವರ್ಷದ ಬಾಲಕನಿಂದ ಹೈಸ್ಕೂಲ್ ನಲ್ಲಿ ಗುಂಡಿನ ದಾಳಿ | ಮೂವರು ವಿದ್ಯಾರ್ಥಿಗಳು ಮೃತ್ಯು |
ಅಮೆರಿಕ : 15ವರ್ಷದ ಬಾಲಕನೊಬ್ಬಇಲ್ಲಿನ ಮಿಚಿಗನ್ನಲ್ಲಿರುವ ಆಕ್ಸ್ಫರ್ಡ್ ಹೈಸ್ಕೂಲ್ ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಅಲ್ಲದೇ ಗುಂಡಿನ ದಾಳಿಯಲ್ಲಿ ಶಿಕ್ಷಕರೂ ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ. ಮೃತ ವಿದ್ಯಾರ್ಥಿಗಳಲ್ಲಿ ಇಬ್ಬರು ಬಾಲಕರು ಮತ್ತು ಓರ್ವ ಬಾಲಕಿ ಸೇರಿದ್ದಾಳೆ ಎಂದು ಓಕ್ಲ್ಯಾಂಡ್ ಕೌಂಟಿ ಉಪ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿ ಮೈಕೆಲ್ ಜಿ ಮೆಕ್‌ಕೇಬ್ ಮಾಹಿತಿ ನೀಡಿದ್ದಾರೆ. |
ಗಾಯಗೊಂಡ 8 ಮಂದಿಯಲ್ಲಿ ಆರು ಮಂದಿ ಸ್ಥಿತಿ ಸ್ಥಿರವಾಗಿದ್ದು, ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ. ಶಾಲೆಯಲ್ಲಿ 15-20 ಬಾರಿ ಗುಂಡು ಹಾರಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಸ್ಕೂಲ್ ನಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಶಂಕಿತನೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅವರು ಮಾಧ್ಯಮ ವರದಿಗಾರರಿಗೆ ತಿಳಿಸಿದ್ದಾರೆ. |
ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ್ದು ಒಬ್ಬನೇ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದೂ ಮೆಕ್ಕೇಬ್ ಹೇಳಿದ್ದಾರೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಶೀಘ್ರವೇ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರನ್ನು ಸಮೀಪದ ದೊಡ್ಡ ಸ್ಟೋರ್ವೊಂದಕ್ಕೆ ಸ್ಥಳಾಂತರ ಮಾಡಲಾಯಿತು ಎಂದು ಹೇಳಿದ್ದಾರೆ. |
ಕುಡಿತ ನಿಷೇಧ: ಕೇರಳ ಮಾದರಿಯಾದೀತೇ? | Vartha Bharati- ವಾರ್ತಾ ಭಾರತಿ |
ಕುಡಿತ ನಿಷೇಧ: ಕೇರಳ ಮಾದರಿಯಾದೀತೇ? |
ವಾರ್ತಾ ಭಾರತಿ Jan 04, 2016, 11:18 PM IST |
ಸಾಮಾಜಿಕ ಮತ್ತು ಕೌಟುಂಬಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಮಹಾತ್ಮರ ಕನಸನ್ನು ನನಸಾಗಿಸುವಲ್ಲಿ ಕೇರಳ ರಾಜ್ಯದ ಹೆಜ್ಜೆ ಸ್ತುತ್ಯಾರ್ಹ. ಇತರ ರಾಜ್ಯಗಳೂ ಇದೇ ಹೆಜ್ಜೆ ಹಾಕಿದರೆ ದೇಶದ ಹಲವು ಸಾಮಾಜಿಕ ಮತ್ತು ಬಡ- ಮಧ್ಯಮ ವರ್ಗದ ಅರ್ಥಿಕ ಸಮಸ್ಯೆಗಳು ಪರಿಹಾರ ಕಾಣುವುದರಲ್ಲಿ ಸಂದೇಹವಿಲ್ಲ. |
ರಾಜ್ಯದಲ್ಲಿ ಸುಮಾರು 1,700 ಮದ್ಯದ ಅಂಗಡಿ ಗಳನ್ನು ತೆರೆಯಲು ಅನುಮತಿ ದೊರಕುವ ನಿರೀಕ್ಷೆ ಇದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಹೊಸ ಅಂಗಡಿಗಳನ್ನು ತೆರೆಯಲು ಅನುಮತಿ ಕೊಡದೇ ಇರುವುದು ಮತ್ತು ಈ ನಿಟ್ಟಿನಲ್ಲಿ ಸಾಕಷ್ಟು ಬೇಡಿಕೆಗಳು ಮತ್ತು ಒತ್ತಾಸೆಗಳಿದ್ದು ಮತ್ತು ತನ್ಮೂಲಕ ರಾಜ್ಯದ ಬೊಕ್ಕಸಕ್ಕೆ ಆದಾಯವನ್ನು ಹೆಚ್ಚಿಸಲು, ಸರಕಾರ ಇಂತಹ ಚಿಂತನೆ ಇಲ್ಲವೆಂದು ಹೇಳಿದರೂ, ಈ ಸಾಧ್ಯತೆಯನ್ನು ಪ್ರಸಕ್ತ ವಿದ್ಯಮಾನದಲ್ಲಿ ತಳ್ಳಿಹಾಕಲಾಗದು. ರಾಜ್ಯದ ಬೊಕ್ಕಸಕ್ಕೆ ಸುಮಾರು ಶೇ. 22 ವರಮಾನವನ್ನು ತಂದು ಕೊಡುವ ಮದ್ಯವನ್ನು ಹಗುರವಾಗಿ ತೆಗೆದುಕೊಳ್ಳುವ ಮಾತೇ ಇಲ್ಲ ಎನ್ನುವ ಸಮಾಜ ಸುಧಾರಕರೊಬ್ಬರ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಈ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಲು ಸ್ವಲ್ಪ ವಿಳಂಬವಾಗಬಹುದು. ಸಾರ್ವಜನಿಕರ ಮತ್ತು ಪ್ರಜ್ಞಾವಂತರ ವಿರೋಧದ ಹೊರತಾಗಿಯೂ ಈ ನಿಟ್ಟಿನಲ್ಲಿ ಸಕಾರಾತ್ಮಕ ನಿರ್ಣಯ ಖಂಡಿತ ಎಂದು ರಾಜಕೀಯ ವೀಕ್ಷಕರು ಒಕ್ಕೊರಳಿನಿಂದ ಹೇಳುತ್ತಾರೆ. |
ಸರಕಾರ ಮದ್ಯ ಕುಡಿಯಿರಿ ಎಂದು ಜನತೆಗೆ ನೇರವಾಗಿ ಹೇಳದಿದ್ದರೂ, ಅದರ ಧೋರಣೆ ಪರೋಕ್ಷವಾಗಿ ಇದನ್ನೇ ಹೇಳುತ್ತಿದೆ. ಮುಖ್ಯವಾಗಿ ಟೆಕ್ಕಿಗಳ ಬೇಡಿಕೆಗೆ ಸ್ಪಂದಿಸಿ, ವಾರಾಂತ್ಯ ಎರಡು ದಿನ ರಾತ್ರಿ ಒಂದು ಘಂಟೆಯವರೆಗೂ ಬಾರ್ ಮತ್ತು ರೆಸ್ಟಾರೆಂಟ್‌ಗಳು ತೆರೆದಿಡಲು ಅನುಮತಿ ಕೊಟ್ಟಿದೆ. ಟೆಕ್ಕಿಗಳನ್ನು ಮತ್ತು ಇತರರನ್ನು ಈ ನಿಟ್ಟಿನಲ್ಲಿ ಬೇರ್ಪಡಿಸಲು ಸಾಧ್ಯವೇ? ಕುಡಿದು ಹೊರಬಂದು ವಾಹನ ಅಪಘಾತಗಳಾಗುವುದನ್ನು ತಪ್ಪಿಸಲು ಸಿಟಿ ಬಸ್ಸುಗಳನ್ನು ಕೆಲವು ಮಾರ್ಗದಲ್ಲಿ ಮಧ್ಯರಾತ್ರಿ ನಂತರವೂ ಓಡಿಸಲು ಬೇಡಿಕೆ ಇದ್ದು, ಇದೂ ಕೂಡಾ ಮುಂದಿನ ದಿನಗಳಲ್ಲಿ ಕಾರ್ಯಗತವಾದರೆ ಆಶ್ಚರ್ಯವಿಲ್ಲ. ಅಬಕಾರಿ ಇನ್‌ಸ್ಪೆಕ್ಟರ್‌ಗಳು ಮಾರಾಟ ಹೆಚ್ಚಿಸಿ ಎಂದು ಮದ್ಯದ ಅಂಗಡಿಯ ಮೇಲೆ ಒತ್ತಡ ಹೇರುತ್ತಿದ್ದಾರಂತೆ. ಸರಿಯಾದ ಒಳ ''ರೂಟ್'' ಗೊತ್ತಿದ್ದರೆ ವೈನ್ ಶಾಪ್ ಹೊರತಾಗಿ ಕೆಲವು ದಿನಸಿ ಅಂಗಡಿಯಲ್ಲೂ ಮದ್ಯ ಸಿಗುತ್ತದೆಯಂತೆ. ಹೊಸ ವರ್ಷದ ಆಚರಣೆ ಸಮಯದಲ್ಲಿ ಕುಡಿದು ತೂರಾಡುತ್ತ ಪಾರ್ಟಿಗಳಿಂದ ಹೊರಬರುವವರನ್ನು ವ್ಯಾಲೆಟ್ ಪಾರ್ಕಿಂಗ್ ಮಾದರಿ ಸುರಕ್ಷಿತವಾಗಿ ಮನೆಮುಟ್ಟಿಸುವ ಚಿಂತನೆ ಕೂಡಾ ಇದೆಯಂತೆ. |
ಮಹಾತ್ಮಾ ಹುಟ್ಟಿದ ನಾಡಿನಲ್ಲಿ, ಅವರ ತತ್ವ ಮತ್ತು ಆದರ್ಶಗಳ ಹಿನ್ನೆಲೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷಗಳು, ಮದ್ಯಪಾನ ಸಂಯಮ ಮಂಡಳಿಗಳನ್ನೂ ಇಟ್ಟುಕೊಂಡು, ಕುಡಿತಕ್ಕೆ ಈ ರೀತಿ ಪ್ರೇರೇಪಿಸುವುದು ಪ್ರಜ್ಞಾವಂತರನ್ನು ಕಂಗೆಡಿಸಿದೆ. ಹಾಗಿದ್ದರೆ ಈ ಮದ್ಯಪಾನ ಸಂಯಮ ಮಂಡಳಿಗಳಾದರೂ ಏಕೆ? ಬಾಟಲಿ ತೆರೆದಿಟ್ಟು ಕಡಿಮೆ ಕುಡಿಯಿರಿ ಎಂದು ಹೇಳುವುದು ಹಾಸ್ಯಾಸ್ಪದವಲ್ಲವೇ? ತಂಬಾಕು ಅವುಗಳನ್ನು ಬಳಸುವವರನ್ನು ಮಾತ್ರ ಸಾವಿನ ದವಡೆಗೆ ನೂಕಬಹುದು. ಆದರೆ, ಮದ್ಯ ಇಡೀ ಕುಟುಂಬವನ್ನು ಬೀದಿಗೆ ದೂಡುತ್ತದೆ ಎನ್ನುವ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಬಹುತೇಕ ಪ್ರತಿಯೊಂದು ಕ್ರಿಮಿನಲ್ ಅಪರಾಧಗಳ ಹಿಂದೆ ಕುಡಿತದ ಪರಿಣಾಮ ಇರುತ್ತದೆ ಮತ್ತು ಕುಡಿತದ ಮೂಲಕ ಮಾನಸಿಕ ಸಮತೋಲನ ಕಳೆದುಕೊಂಡಾಗಲೇ ಮನುಷ್ಯ ಅಪರಾಧ ಎಸಗುತ್ತಾನೆ ಎಂದು ಸಮಾಜ ವಿಜ್ಞಾನಿಗಳು ಹೇಳುತ್ತಾರೆ. ಕುಡಿತದ ದುಷ್ಪರಿಣಾಮವನ್ನು ಕಣ್ಣಾರೆ ಕಂಡ ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಪಾನನಿರೋಧಕ್ಕೆ ಹೆಚ್ಚಿನ ಒತ್ತು ಕೊಡಲು ಒಮ್ಮೆ ಚಿಂತಿಸಿದ್ದರಂತೆ |
ನೂರಕ್ಕೆ ನೂರರಷ್ಟು ಸಾಕ್ಷರತೆ ಇರುವ ಕೇರಳದಲ್ಲಿ ಮದ್ಯದ ವಾರ್ಷಿಕ ವ್ಯವಹಾರ 20,000 ಕೋಟಿ ರೂ.ಗಳು ಅಗಿದ್ದು, ದೇಶದ 16% ಅಲ್ಕೋಹಾಲ್ ಇಲ್ಲಿ ಖರ್ಚಾಗುತ್ತಿತ್ತಂತೆ. ಈ ಪ್ರಮಾಣವನ್ನು ನೋಡಿದ ಅಲ್ಲಿನ ಸರಕಾರ, ಕುಡಿತದಿಂದಾಗುವ ಸಾಮಾಜಿಕ ಪರಿಣಾಮವನ್ನು ಗ್ರಹಿಸಿ, ಮುಖ್ಯವಾಗಿ ಬಡ ಮಹಿಳೆ ಮತ್ತು ಮಕ್ಕಳ ಒತ್ತಾಸೆಗೆ ಸ್ಪಂದಿಸಿ ರಾಜ್ಯಾದ್ಯಂತ ಮದ್ಯವನ್ನು ನಿಷೇಧಿಸಿದೆ. ಈಗ ಸುಪ್ರಿಮ್ ಕೋರ್ಟ್ ಕೂಡಾ ಈ ನಿಷೇಧವನ್ನು ಎತ್ತಿ ಹಿಡಿದಿದೆ. ಈ ನಿಷೇಧ ಜಾರಿಗೆ ಬಂದ ಮೇಲೆ ಸುಮಾರು 730 ಹೊಟೇಲ್ ಬಾರ್ ಮತ್ತು ರೆಸ್ಟಾರೆಂಟ್‌ಗಳು ಮುಚ್ಚಿದ್ದು, ಮದ್ಯ ಸೇವನೆಯಲ್ಲಿ 20-21% ಕಡಿಮೆಯಾಗಿದೆಯಂತೆ. ಹಾಗೆಯೇ ಸರಕಾರದ ಬೊಕ್ಕಸಕ್ಕೆ 4,000 ಕೋ.ರೂ. ಆದಾಯ ಖೋತಾ ಆಗಿದೆಯಂತೆ. ಈಗ ಕೇರಳ ದಲ್ಲಿ ಕೇವಲ ಪಂಚತಾರಾ ಹೊಟೇಲ್‌ಗಳಲ್ಲಿ ಮಾತ್ರ ಮದ್ಯ ಲಭ್ಯವಿದೆ. ಮುಂದಿನ ದಿನಗಳಲ್ಲಿ ಶೇ. 42 ಆಲ್ಕೋಹಾಲ್ ಇರುವ ಮದ್ಯದ ಬದಲಿಗೆ ಶೇ. 8 ಆಲ್ಕೋಹಾಲ್ ಇರುವ ಬಿಯರ್ ಮತ್ತು ವೈನ್ ಬಾರ್‌ಗಳನ್ನು ರಾಜ್ಯಾದ್ಯಂತ ಕಾಣಬಹುದು. ಅದರೆ, ಶೇ. 8 ಆಲ್ಕೋಹಾಲ್ ಇರುವ ಬಿಯರ್ ಮತ್ತು ವೈನ್‌ನಿಂದ ಕುಡಿಯುವವರು ತೃಪ್ತಿ ಹೊಂದಬಹುದೇ? |
ಈ ನಿಷೇಧ ಯಾವ ರೀತಿ ಜಾರಿಗೆ ಬರಬಹುದು ಎನ್ನುವುದು ಚರ್ಚಾಸ್ಪದ ವಿಷಯ. ಅದರೆ ಸಾಮಾಜಿಕ ಮತ್ತು ಕೌಟುಂಬಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನ ಲ್ಲಿ, ಮಹಾತ್ಮರ ಕನಸನ್ನು ನನಸಾಗಿಸುವಲ್ಲಿ ಕೇರಳ ರಾಜ್ಯದ ಈ ಹೆಜ್ಜೆ ಸ್ತುತ್ಯಾರ್ಹ. ಇತರ ರಾಜ್ಯಗಳೂ ಇದೇ ಹೆಜ್ಜೆ ಹಾಕಿದರೆ ದೇಶದ ಹಲವು ಸಾಮಾಜಿಕ ಮತ್ತು ಬಡ- ಮಧ್ಯಮ ವರ್ಗದ ಆರ್ಥಿಕ ಸಮಸ್ಯೆಗಳು ಪರಿಹಾರ ಕಾಣುವುದರಲ್ಲಿ ಸಂದೇಹವಿಲ್ಲ. ಅದರೆ, ಆ ರಾಜಕೀಯ ಇಚ್ಛಾ ಶಕ್ತಿ ಇದೆಯೇ? |
Subsets and Splits
No community queries yet
The top public SQL queries from the community will appear here once available.