text
stringlengths 0
61.5k
|
---|
ನವದೆಹಲಿ, ನವೆಂಬರ್ 12: ರಾಜ್ಯ ರಾಜಕಾರಣದ ಅಗ್ರಪಂಕ್ತಿಯ ನಾಯಕರ ಸಾಲಲ್ಲಿ ಒಬ್ಬರಾಗಿದ್ದ ಅನಂತ್ ಕುಮಾರ್ ಅವರ ಹಠಾತ್ ನಿಧನ ಅವರ ಅಭಿಮಾನಿಗಳಲ್ಲಿ, ಸಹೋದ್ಯೋಗಿಗಳಲ್ಲಿ ಸಾಕಷ್ಟು ಆಘಾತವನ್ನುಂಟು ಮಾಡಿದೆ. |
ಮೂರ್ನಾಲ್ಕು ತಿಂಗಳ ಹಿಂದೆ ದಿನ ದಿನವೂ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ, ಸದಾ ಹಸನ್ಮುಖಿಯಾಗಿಯೇ ಇರುತ್ತಿದ್ದ ಅನಂತ್ ಕುಮಾರ್ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ, ಸೋಮವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. |
ಅನಂತ್ ಕುಮಾರ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ನೂರಾರು ಗಣ್ಯರು ಭಾವುಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. |
ಕೇಂದ್ರ ಸಚಿವ ಮತ್ತು ಅತ್ಯುತ್ತಮ ಸಂಸದೀಯ ಪಟು ಎಚ್ ಎನ್ ಅನಂತಕುಮಾರ್ ಅವರ ನಿಧದ ಸುದ್ದಿ ಕೇಳಿ ಸಾಕಷ್ಟು ಬೇಸರವಾಯಿತು. ಇದು ನಮ್ಮ ದೇಶದ ಸಾರ್ವಜನಿಕ ಬದುಕಿನ ಅತೀ ದೊಡ್ಡ ನಷ್ಟ. ಅದರಲ್ಲೂ ಕರ್ನಾಟಕ ರಾಜ್ಯಕ್ಕೆ ಭರಿಸಲಾರದ ನಷ್ಟ. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅಸಂಖ್ಯ ಅಭಿಮಾನಿಗಳಿಗೆ ನನ್ನ ಸಂತಾಪಗಳು- ರಾಮನಾಥ್ ಕೋವಿಂದ್, ರಾಷ್ಟ್ರಪತಿ |
ಅನಂತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರು ಕೆಲದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು, ಆದರೆ ಇಷ್ಟು ಬೇಗ ನಮ್ಮನ್ನಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರು ಗುಣಮುಖರಾಗಿ ಮತ್ತೆ ನಮ್ಮೊಂದಿಗೆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿದ್ದೆವು. ಅವರ ಪತ್ನಿ ಮತ್ತು ಮಕ್ಕಳಿಗೆ ನನ್ನ ಸಂತಾಪಗಳು- ಎಂ ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ |
ಕೇಂದ್ರ ಸಚಿವ ಮತ್ತು ಹಿರಿಯ ನಾಯಕ ಅನಂತ್ ಕುಮಾರ್ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ನನಗೆ ಸಾಕಷ್ಟು ಆಘಾತವಾಯಿತು. ಅದ್ವಿತೀಯ ಎಂಬಂತೆ ಅವರು ಪಕ್ಷ ಮತ್ತು ಸಂಘಕ್ಕಾಗಿ ದುಡಿದವರು, ತಮ್ಮ ಬದುಕನ್ನು ಸಮರ್ಪಿಸಿದರು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟುವಲ್ಲಿ ಅವರ ಅವಿರತ ಶ್ರಮವನ್ನು ಎಂದಿಗೂ ಮರೆತುವುದಕ್ಕೆ ಸಾಧ್ಯವಿಲ್ಲ- ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ |
ಅನಂತ್ ಕುಮಾರ್ ಜೀ ಅವರ ಅಗಲಿಕೆಯ ಸುದ್ದಿ ತಿಳಿದು ತೀವ್ರ ಬೇಸರವಾಯಿತು. ಅವರ ಕುಟುಂಬಕ್ಕೆ ಮತ್ತು ಬಂಧು, ಸ್ನೇಹಿತರಿಗೆ ನನ್ನ ಸಂತಾಪಗಳು. ಅವರ ಆಟ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ |
उन्होंने सरकार व संगठन में अपने दायित्वों का हमेशा कुशलतापूर्वक निर्वहन किया। श्री अनंत कुमार जी की सेवाओं को सदैव याद किया जायगा। ईश्वर से दिवंगत आत्मा की शांति की प्रार्थना एवं शोकाकुल परिवार के प्रति अपनी संवेदनाएं व्यक्त करता हूँ। |
ಇದು ನಿಜಕ್ಕೂ ಒಂದು ಆಘಾತಕಾರಿ ಘಟನೆ. ಇದು ಸರ್ಕಾರ ಮತ್ತು ಪಕ್ಷಕ್ಕೆ ಅತೀ ದೊಡ್ಡ ನಷ್ಟ. ಒಬ್ಬ ಅತ್ಯುತ್ತಮ ಆಡಳಿತಗಾರ ಮತ್ತು ಜನಪ್ರಿಯ ನಾಯಕರಾಗಿ ಅನಂತ್ ಕುಮಾರ್ ಜೀ ಎಂದಿಗೂ ನೆನಪಿನಲ್ಲುಳಿಯುತ್ತಾರೆ. ಉತ್ತರ ಪ್ರದೇಶ ಸರ್ಕಾರದ ಪರವಾಗಿ ನಾನು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ- ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ |
ananth kumar new delhi bjp amit shah ramnath kovind rahul gandhi cancer ಅನಂತ್ ಕುಮಾರ್ ನವದೆಹಲಿ ಬಿಜೆಪಿ ಅಮಿತ್ ಶಾ ರಾಮನಾಥ್ ಕೋವಿಂದ್ ರಾಹುಲ್ ಗಾಂಧಿ ಕ್ಯಾನ್ಸರ್ |
National leaders including president Ramnath Kovind, BJP national president Amit Shah, Congress president Rahul Gandhi express their condolence to union minister Ananth Kumar who passed away on Nov 12 due to cancer. |
'ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು' - ಮದ್ರಾಸ್ ಹೈಕೋರ್ಟ್ |
Mon, Apr 26 2021 03:21:09 PM |
ಚೆನ್ನೈ, ಏ.26 (DaijiworldNews/MB) : ಕೊರೊನಾ ಹರಡುತ್ತಿರುವಾಗಲೂ ರಾಜಕೀಯ ರ್‍ಯಾಲಿಗಳನ್ನು ನಡೆಸಲು ಅವಕಾಶ ನೀಡಿದ್ದ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ಖಂಡಿಸಿದೆ. |
ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಅವರು, ರ್‍ಯಾಲಿಯಲ್ಲಿ ನಿಯಮ ಪಾಲನೆ ಆಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವಲ್ಲಿ ಆಯೋಗ ವಿಫಲವಾಗಿದೆ ಎಂದು ಟೀಕಿಸಿರುವುದು ಮಾತ್ರವಲ್ಲದೇ ಜನರ ಸಾವಿಗೆ ಚುನಾವಣಾ ಆಯೋಗವೇ ಕಾರಣ. ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ. |
ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ಪರ ವಕೀಲ ಕೊರೊನಾ ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದು, ಆ ಸಂದರ್ಭ ಆಕ್ರೋಶಗೊಂಡ ನ್ಯಾಯಮೂರ್ತಿಗಳು, ರಾಜಕೀಯ ರ್‍ಯಾಲಿಗಳು ನಡೆಯುತ್ತಿದ್ದಾಗ ನೀವು ಇನ್ನೊಂದು ಗ್ರಹದಲ್ಲಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ. |
ಪ್ರಸ್ತುತ ಪರಿಸ್ಥಿತಿ ಉಳಿವು ಮತ್ತು ರಕ್ಷಣೆಯಾಗಿದೆ ಎಂದು ಹೇಳಿದರುವ ಹೈಕೋರ್ಟ್ ರಾಜ್ಯ ಆರೋಗ್ಯ ಕಾರ್ಯದರ್ಶಿಯೊಂದಿಗೆ ಸಮಾಲೋಚನೆ ನಡೆಸಿ ಏಪ್ರಿಲ್ 30ರೊಳಗೆ ಎಣಿಕೆ ದಿನದಂದು ಪಾಲಿಸಬೇಕಾದ ಮಾರ್ಗಸೂಚಿಯನ್ನು ಜಾರಿಗೆ ಯೋಜನೆಯನ್ನು ನೀಡುವಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. |
ಈ ವರ್ಷ ಏಪ್ರಿಲ್ 6ರಂದು ಚುನಾವಣೆ ನಡೆದ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದಾಗಿದೆ. ಕೊರೊನಾ ಮುಂಜಾಗ್ರತಾ ಕ್ರಮವನ್ನು ಸರಿಯಾಗಿ ಜಾರಿಗೆ ತರದಿದ್ದರೆ, ಮೇ 2 ರಂದು ಎಣಿಕೆ ಕಾರ್ಯಕ್ರಮಕ್ಕೆ ತಡೆ ನೀಡುವುದಾಗಿ ಹೈಕೋರ್ಟ್ ಎಚ್ಚರಿಸಿದೆ. |
ಶಿಕ್ಷಕರು ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬಿತ್ತಬೇಕು: ಸಚಿವ ಎಸ್.ಟಿ.ಸೋಮಶೇಖರ್ - HosadiganthaWeb |
ಮೈಸೂರು: ಶಿಕ್ಷಕರು ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. |
ಶನಿವಾರ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಟೆರಿಷಿಯನ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, |
ಭಾರತ ದೇಶದ ಪರಂಪರೆಯಲ್ಲಿ ಗುರು ಎಂಬ ಪದಕ್ಕೆ ವಿಶೇಷವಾದ ಅರ್ಥವಿದೆ. ಪ್ರತಿಯೊಬ್ಬರಲ್ಲಿರುವ ಅಜ್ಞಾನದ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ನೀಡುವಲ್ಲಿ ಗುರುತರ ಜವಬ್ದಾರಿ ಇರುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಹಾಗಾಗಿ |
ಇಂದಿನ ವಿದ್ಯಮಾನದಲ್ಲಿ ಶಿಕ್ಷಕರು ಪಠ್ಯಕ್ಕೆ ಸೀಮಿತವಾಗಿರದೆ, ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ ಎಂದು ಶಿಕ್ಷಕರಿಗೆ ಸಲಹೆ ನೀಡಿದರು. |
ಕೋವಿಡ್-೧೯ ಬಿಕ್ಕಟ್ಟಿನಲ್ಲಿಯೂ ಜಿಲ್ಲೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದು ಅತ್ಯಂತ ಶ್ಲಾಘನೀಯ. ಈ ತಂಡದಲ್ಲಿ ಶ್ರಮಿಸಿದ ಅಧಿಕಾರಿಗಳು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಅವಿಸ್ಮರಣೀಯ ಎಂದರು. |
ಸರ್ಕಾರವು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಹೀಗಾಗಿ ಕಲಿಕೆಯಿಂದ ಯಾವುದೇ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. |
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಕೋವಿಡ್-೧೯ ಸಂಕಷ್ಟ ಕಾಲದಲ್ಲಿಯೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ಸಲುವಾಗಿ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಈ ಕೆಲಸವು ಸರ್ಕಾರದ ಗಮನ ಸೆಳೆದಿದೆ ಎಂದು ಹೇಳಿದರು. |
ಕೇಂದ್ರ ಸರ್ಕಾರವು ಈ ಬಾರಿ ರಾಷ್ಟೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಅದರ ಸಾಕಾರಕ್ಕಾಗಿ ಪ್ರತಿಯೊಬ್ಬ ಶಿಕ್ಷಕರು ಹೆಚ್ಚಿನ ಸಿದ್ಧತೆ ಹಾಗೂ ತರಬೇತಿಯನ್ನು ಪಡೆಯಬೇಕಿದೆ. ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿ ಹೊರತಾಗಿಯೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಮತ್ತು ಕೌಶಲ್ಯವನ್ನು ಧಾರೆ ಎರೆಯುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಸಲಹೆ ನೀಡಿದರು. |
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಮೃಗಾಲಯದ ಪ್ರಾಣಿ, ಪಕ್ಷಿಗಳ ಆಹಾರ ಪೂರೈಕೆ ಹಾಗೂ ನಿರ್ವಹಣೆಗೆ ದಾನಿಗಳಿಂದ ಹಣ ಸಂಗ್ರಹಿಸಿ ಮೃಗಾಲಯಕ್ಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದಾರವಾದ ಗುಣ ನಿಜಕ್ಕೂ ಪ್ರಶಂಸನೀಯವಾದದ್ದು ಎಂದು ಹೇಳಿದರು. |
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಇತ್ತೀಚಿನ ಕೋವಿಡ್ ಸಂಕಷ್ಟದ ದಿನಗಳಲ್ಲಿ ಶಿಕ್ಷಕರು ಮಕ್ಕಳಿಗಲ್ಲದೆ, ಎಲ್ಲರಿಗೂ ಶಿಕ್ಷಕರಾಗಿದ್ದಾರೆ. ಕಲಿಕಾ ಸಮಯದಲ್ಲಿ ಶಿಕ್ಷಕರ ಪ್ರಭಾವ ಹೆಚ್ಚಿನ ಮಟ್ಟದಲ್ಲಿ ಮಕ್ಕಳ ಮೇಲೆ ಬೀರುತ್ತದೆ ಎಂದು ತಿಳಿಸಿದರು. |
ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ೨೬ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಈ ವೇಳೆ ಶಾಸಕ ಎಲ್.ನಾಗೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ, ನಗರಪಾಲಿಕೆಯ ಮೇಯರ್ ತಸ್ನೀಂ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ಶರತ್ ಬಿ., ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಡಿಡಿಪಿಐ ಡಾ.ಪಾಂಡುರಂಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. |
Previous articleಸಿಎಂ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಸುಳ್ಳು ಆರೋಪ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಎಫ್ ಐಆರ್ ದಾಖಲು |
ಕೊಂಕಣದ ಎಟಿಎಲ್‌ನಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಎಕ್ಸ್ಪೋ 2022 – Konkan Education Trust (R) – Kumta |
ಕುಮಟಾ: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್(ಎಟಿಎಲ್)ನ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ(ಎಕ್ಸ್ಪೋ 2022)ವನ್ನು ಏರ್ಪಡಿಸಲಾಗಿತ್ತು. |
ಜೆ.ಸಿ.ಕಾಲೇಜ್ ಅಂಕೋಲಾದ ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ವಿ.ಆರ್.ವೆರ್ಣೇಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳ ಒತ್ತಡದ ಬದುಕು ಹಾಗೂ ಸ್ಮರಣಶಕ್ತಿಯ ಕುರಿತಾಗಿ ಮನೋಜ್ಞವಾಗಿ ವಿವರಿಸಿದರು. ಸ್ಮರಣಶಕ್ತಿ ವಂಶಪಾರಂಪರ‍್ಯವಲ್ಲ, ಅದು ನಮ್ಮ ಸ್ವಂತ ಶಕ್ತಿ. ಪಂಚೇಂದ್ರಿಯಗಳಿಗೆ ಸಂಸ್ಕಾರ ನೀಡಿ ಅದನ್ನು ವರ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಹತ್ತು-ಹಲವು ಉದಾಹರಣೆಗಳೊಂದಿಗೆ ವಿವರಿಸಿ, ಕಲಿಕೆಯಲ್ಲಿ ಕಠಿಣ ಪರಿಶ್ರಮ ಅಗತ್ಯ ಹಾಗೂ ಅನಿವಾರ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಂತರ ಮಾತನಾಡಿದ ಇನ್ನೋರ್ವ ಅತಿಥಿಗಳಾದ ಮಂಗಳೂರು ಇನಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿ ಆಂಡ್ ಎಂಜಿನಿಯರಿಂಗ್ ರಸಾಯನಶಾಸ್ತೃ ವಿಭಾಗದ ನಿಕಟಪೂರ್ವ ಹಿರಿಯ ಸಹಾಯಕ ಉಪನ್ಯಾಸಕರಾದ ಡಾ. ಅಪರ್ಣಾ ಪಿ.ಐ.ಭಟ್ಟ, ಪ್ರಶ್ನೆಗಳನ್ನು ಮಾಡುವುದರ ಮೂಲಕ ವಿಷಯ ಜ್ಞಾನವನ್ನು ಪಡೆದು ಕುತೂಹಲವನ್ನು ಬಗೆಹರಿಸಿಕೊಳ್ಳಬೇಕು. ಜೀವನದಲ್ಲಿ ಯಾವ ರೀತಿಯ ಕನಸನ್ನು ಕಾಣಬೇಕೆಂಬುದರ ಕುರಿತು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಉದಾಹಣೆಯ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಹಲವು ರೀತಿ ಹಾಗೂ ಮಜಲುಗಳಲ್ಲಿ ನಾನಾ ವಿಜ್ಞಾನದ ಮಾದರಿಗಳನ್ನು ತಯಾರುಮಾಡುವುದರ ಮೂಲಕ ಭದ್ರ ಬುನಾದಿ ನಿರ್ಮಿಸಿ ಆ ಮೂಲಕ ವಿಜ್ಞಾನಿಯಾಗುವುದರ ಕುರಿತು ಆರಂಭದಲ್ಲಿಯೇ ಕನಸು ಕಾಣಬೇಕೆಂದು ವಿಶ್ಲೇಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಂಕಣ ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕ ಮಾತನಾಡಿ, ವಿಜ್ಞಾನದಲ್ಲಿ ಕ್ರಿಯಾಶೀಲತೆಯಿಂದ ಯಶಸ್ಸನ್ನು ಪಡೆಯಿರಿ ಎನ್ನುತ್ತ, ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಫಲರಾಗಲಿ ಎಂದು ಹಾರೈಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಅವರು ವಿಜ್ಞಾನದ ಕುರಿತು ಮಾತನಾಡಿ, ವಿಜ್ಞಾನ ಮಾನವನ ಭೌತಿಕ ಜೀವನವನ್ನೇ ಬದಲಾಯಿಸಿದೆ ಎಂದು ಸಾಂದರ್ಭಿಕವಾಗಿ ವಿವರಿಸಿದರು. |
ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್. ಭಟ್ಟರವರು ಮಾದರಿಗಳ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. |
ವೇದಿಕೆಯಲ್ಲಿ ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು ಉಪಸ್ಥಿತರಿದ್ದರು. ವಿಜ್ಞಾನದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಿಕ್ಷಕಿ ಶಾಹಿದಾ ಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಪ್ರಕಾಶ ಗಾವಡಿ ನಿರೂಪಿಸಿದರು. ಶಿಕ್ಷಕ ಚಿದಾನಂದ ಭಂಡಾರಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳಾಗ ಶಾಂತಿಕಾ ಭಟ್ಟ ಸಂಗಡಿಗರು ಪ್ರಾರ್ಥನೆ ಹಾಡಿದರು. |
ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು, ವಿಜ್ಞಾನ ಶಿಕ್ಷಕರು, ವಿಜ್ಞಾನದಲ್ಲಿ ಆಸಕ್ತಿ ಹೊಂದಿದ ಅನೇಕರು ಪ್ರದರ್ಶನಕ್ಕಾಗಮಿಸಿ ಪ್ರಯೋಜನ ಪಡೆದುಕೊಂಡರು. |
ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ | Kannadamma |
Home ಕಾರವಾರ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ |
ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ |
ಕನ್ನಡಮ್ಮ ಸುದ್ದಿ-ಹೊನ್ನಾವರ: ತಾಲೂಕಿನ ಕಡ್ನೀರಿನ ದಕ್ಷಿಣಕಾಳಿ ಕ್ರೀಡಾ ಸಮಿತಿ ಆಶ್ರಯದಲ್ಲಿ ಹೊನಲು ಬೆಳಕಿನ ಕೌಂಟಿ ಕ್ರಿಕೆಟ್ ಪಂದ್ಯಾವಳಿಯು ಕಡ್ನೀರಿನ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದಕ್ಷಿಣಕಾಳಿ ಕ್ರೀಡಾ ಸಮಿತಿಯವರು ಮನರಂಜನೆಗಾಗಿ ಕೌಂಟಿ ಕ್ರಿಕೆಟ್ ಎಂಬ ಚಿಕ್ಕ ಆವೃತ್ತಿಯ ಕ್ರಿಕೆಟ್ ನ್ನು ಚಿಕ್ಕದಾದ ಕ್ರೀಡಾಂಗಣದಲ್ಲಿನ ಚೊಕ್ಕವಾಗಿ ಆಯೋಜಿಸಿದ್ದಾರೆ. |
ಈ ಸಂದರ್ಭದಲ್ಲಿ ಟ್ರೋಫಿ ಅನಾವರಣಗೊಳಿಸಿದ ರವಿಕುಮಾರ ಶೆಟ್ಟಿ ಮಾತನಾಡಿ ಸಂಘಟನೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಈ ಸಮಿತಿಯವರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ಜರುಗಲಿ ಎಂದರು. ತಿಮ್ಮಪ್ಪ ನಾಯ್ಕ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಂಕಣ ಉದ್ಘಾಟಕರಾಗಿ ಆಗಮಿಸಿದ ಜಿ. ಪಂ. ಸದಸ್ಯ ಪ್ರದೀಪ ನಾಯಕ ದೇವರಬಾವಿ, ಚಂದಾವರ ಗ್ರಾ. ಪಂ. ಸದಸ್ಯರಾದ ವಿನಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. |
ಗುರು ಬಲ (2016 - 2017) (ಮೊದಲ ಹಂತ) ರಾಶಿ ಫಲ (Guru Gochara Rasi Phala) for Karka Rasi (ಕರ್ಕ ರಾಶಿ) - KTAstro.com |
ಗುರು ಬಲ (2016 - 2017) (ಮೊದಲ ಹಂತ) ರಾಶಿ ಫಲ (Guru Gochara Rasi Phala) for Karka Rasi (ಕರ್ಕ ರಾಶಿ) |
Aug 11, 2016 ಸೆಪ್ಟೆಂಬರ್ 20, 2016 ಲವ್ ನೋವು (15 / 100) |
ಗುರು ಸಾರಿಗೆ ಆರಂಭದಲ್ಲಿ ಮಂಗಳ, ಶನಿ ಮತ್ತು ರಾಹು ಮತ್ತು ಕೇತುವಿನ ಸ್ಥಿತಿ ಕೂಡ ಹದಗೆಟ್ಟಿತ್ತು ಹುಡುಕುತ್ತಿರುವ ರಿಂದ ಬಹಳ ಕೆಟ್ಟದಾದ ನೋಡುತ್ತಿರುತ್ತದೆ. ಈ ಬಗ್ಗೆ 6 ವಾರಗಳ ಒಂದು ಅಲ್ಪಾವಧಿಯ, ಆದರೆ ಅಹಿತಕರ ಘಟನೆಗಳು ಈ ಸಮಯದಲ್ಲಿ ಸಂಭವಿಸಬಹುದು ಸಾಧ್ಯತೆಯಿದೆ. ನಿಮ್ಮ ದೈಹಿಕ ಆರೋಗ್ಯ ಹೆಚ್ಚು ಪರಿಣಾಮ ಪಡೆಯಲು ಹೋಗುತ್ತಿಲ್ಲ ಇದೆ ಸಹ, ನಿಮ್ಮ ಮಾನಸಿಕ ಒತ್ತಡ ಮತ್ತು ನೋವು ಈಗ ಗರಿಷ್ಠ ಗರಿಷ್ಠ ತಲುಪಲಿದೆ. ನಿಮ್ಮ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ ಕೆಲವು ಪ್ರಬಲ ಮಾನಸಿಕ ಬೆಂಬಲ ಪಡೆಯಬೇಕು. ಕಿರಿಯ ಮಕ್ಕಳು ಸಂದರ್ಭದಲ್ಲಿ ಪೋಷಕರು ಲೈಕ್. |
ನಿಮ್ಮ ಸಂಗಾತಿಯ ಸಂಬಂಧ ಅತ್ಯಂತ ಕೆಟ್ಟದಾಗಿ ಪರಿಣಾಮ ಆಗುತ್ತದೆ. ಅಸ್ತಿತ್ವದಲ್ಲಿರುವ ಸಮಸ್ಯೆಗಳಿಗೆ ಉಲ್ಬಣಗೊಳಿಸಬಹುದು ಯಾವುದೇ ವೈವಾಹಿಕ ಆನಂದ ಇರುವುದಿಲ್ಲ. ಹೊಸದಾಗಿ ಮದುವೆಯಾದ ಜೋಡಿಗಳು ಇನ್ನಷ್ಟು ಗುರಿಯಾಗಬಹುದೆಂದು. ನೀವು ಎಚ್ಚರಿಕೆಯಿಂದ, ಈ ಅವಧಿಯಲ್ಲಿ ತಾತ್ಕಾಲಿಕ ಬೇರ್ಪಡಿಕೆ ಅಥವಾ ಮೊಕದ್ದಮೆ ಆರಂಭಿಸುತ್ತಾರೆ. ಪ್ರೇಮಿಗಳು ಪ್ರಣಯ ಕೆಟ್ಟ ಸಮಯ ಹೊಂದಿರುತ್ತದೆ. ಸಿಂಗಲ್ಸ್ ಪಂದ್ಯದಲ್ಲಿ ಹುಡುಕುತ್ತಿರುವ ತಪ್ಪಿಸಲು ಅಗತ್ಯವಿದೆ. ಈ ಯಾವುದೇ subha karyas ನಡೆಸಲು ಕೆಟ್ಟ ಸಮಯ. |
ನೀವು ವೈಯಕ್ತಿಕ ಸಮಸ್ಯೆಗಳು ತೀವ್ರತೆಯನ್ನು ಹೆಚ್ಚು ಎಂದು ಏಕೆಂದರೆ, ನಿಮ್ಮ ಕೆಲಸ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಆದ್ದರಿಂದ ನೀವು ಕೆಲಸ ಅಷ್ಟೊಂದು ಆಸಕ್ತಿ ಬೀರುವುದಿಲ್ಲ ಮತ್ತು ನಿಮ್ಮ ಬಾಸ್ ನಿಮ್ಮ ಪ್ರದರ್ಶನ ಸಂತೋಷ ಎಂದು. ನೀವು ಸುಮಾರು ಜನರು ನಿಮ್ಮ ದುರ್ಬಲ ಸ್ಥಾನದ ಲಾಭ ಮತ್ತು ತಮ್ಮ ದೋಷಗಳು ನೀವು ಬೈದುಕೊಳ್ಳುತ್ತಾ ಪ್ರಾರಂಭವಾಗುತ್ತದೆ. ನೀವು ಯಾವುದೇ ಪ್ರಚಾರಗಳು ಅಥವಾ ಸಂಬಳ ಏರಿಕೆಯ ನಿರೀಕ್ಷಿಸಬಹುದು ಇರಬಹುದು. ಇದು ವ್ಯಾಪಾರ ಜನರು ಒಂದು ಕೆಟ್ಟ ಸಮಯ ಎಂದು ನಾನು. ನೀವು ಹಠಾತ್ ನೂಕುನುಗ್ಗಲು ಮತ್ತು ಪ್ರಮುಖ ಆರ್ಥಿಕ ನಷ್ಟ ನೋಡಲು ಬಯಸುತ್ತಾನೆ. ಈ 6 ವಾರಗಳ ಪ್ರಯಾಣ ತಪ್ಪಿಸಲು ಸಾಧ್ಯವಿಲ್ಲ, ಅದು ಉತ್ತಮ ಎಂದು! |
ನಿಮ್ಮ ಹಣಕಾಸು ಮತ್ತು ಹೂಡಿಕೆ ಮೇಲೆ ಜಾಗ್ರತೆಯಿಂದಿರಬೇಕು ಅಗತ್ಯವಿದೆ. ವೆಚ್ಚಗಳು ಸಂಪೂರ್ಣವಾಗಿ ನಿಮ್ಮ ಉಳಿತಾಯ ಔಟ್ ಹರಿಸುತ್ತವೆ ಕಾಣಿಸುತ್ತದೆ. ನೀವು ಕಾರು, ಮನೆ ದುರಸ್ತಿ ಮತ್ತು ಶಾಪಿಂಗ್ ದುಬಾರಿ ಆದರೆ ಅನುಪಯುಕ್ತ ವಸ್ತುಗಳನ್ನು ಮೇಲೆ ದೊಡ್ಡ ಹಣ ಖರ್ಚು ಮಾಡಬೇಕು. ಇದು ನಂತರ ನೀವು ಯಾವುದೇ ಅದೃಷ್ಟ ಮತ್ತು ಷೇರು ಬೆಲೆ ಮೇಲ್ವಿಚಾರಣೆ ಯಾವುದೇ ಸಮಯ ಹೊಂದಿಲ್ಲ ದೂರ ಷೇರು ಮಾರುಕಟ್ಟೆ ವ್ಯಾಪಾರ ಉಳಿಯಲು ಉತ್ತಮ. |
ಭೀಮಕಟ್ಟೆ ಮಠ ನವೀಕರಣಕ್ಕೆ ಶಿಲಾನ್ಯಾಸ | Prajavani |
Published: 11 ನವೆಂಬರ್ 2018, 19:24 IST |
Updated: 11 ನವೆಂಬರ್ 2018, 19:24 IST |
ಉಡುಪಿ: ಶ್ರೀ ಕೃಷ್ಣಮಠ ರಥಬೀದಿಯಲ್ಲಿರುವ ಭೀಮನಕಟ್ಟೆ ಮಠದ ನವೀಕರಣಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು. |
ಹೆರ್ಗ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಬೆಳಗ್ಗೆ ನವಗ್ರಹ ಹೋಮ ಸೇರಿದಂತೆ ಇತರೆ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಬೆಳಗ್ಗೆ 11:30ರ ಮುಹೂರ್ತದಲ್ಲಿ ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಮಠಧೀಶ ಈ ಶಪ್ರಿಯ ತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠ ರಘುವರೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಸಂಪನ್ನಗೊಂಡಿತು. |
ಅದಮಾರು ಮಠ ಮತ್ತು ಸೋಸಲೆ ವ್ಯಾಸರಾಜ ಮಠದ ಮಧ್ಯಭಾಗದಲ್ಲಿ ಭೀಮನಕಟ್ಟೆ ಮಠಕ್ಕೆ ಸೇರಿದ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು.ಇಲ್ಲಿನ 16 ಸೆಂಟ್ಸ್ ಸ್ಥಳದಲ್ಲಿ 300 ವರ್ಷ ಹಳೆಯ ಕಟ್ಟಡ ಕೆಡವಿ 22 ಕೋಟಿ ವೆಚ್ಚದಲ್ಲಿ ನೂತನ ಮಠ ನಿರ್ಮಿಸಲಾಗುತ್ತಿದೆ. ಇಲ್ಲಿ ರಾಮ ದೇವರನ್ನು ಪ್ರತಿಷ್ಠಾಪಿಸಿ, ವೈದಿಕ ಕರ್ಮ, ನಿತ್ಯ ಪೂಜೆ, ಪಾಠ, ಪ್ರವಚನಕ್ಕೆ ವ್ಯವಸ್ಥೆ ಕಲ್ಪಿಸುವುದು ತೀರ್ಥಹಳ್ಳಿ ಭೀಮನಕಟ್ಟೆ ಮಠದ ಪೀಠಾಧಿಪತಿ ರಘುವರೇಂದ್ರ ತೀರ್ಥ ಸ್ವಾಮೀಜಿ ಉದ್ದೇಶವಾಗಿದೆ. |
ಶಾಸಕ ರಘುಪತಿ ಭಟ್, ಪರ್ಯಾಯ ಪಲಿಮಾರು ಮಠದ ಶ್ರೀಶ ಕಡೆಕಾರು, ಭೀಮನಕಟ್ಟೆ ಮಠದ ಹರೀಶ್ ಭಟ್, ಸಾಗರ್ ಭಟ್, ವೆಂಕಟೇಶ್, ಜನಾರ್ಧನ್, ಗುರುರಾಜಣ್ಣ ಉಪಸ್ಥಿತರಿದ್ದರು. |
ಸಾರ್ವಜನಿಕರಿಗೆ ಸೇವೆಸಲ್ಲಿಸುತ್ತಿರುವವರ ಮೇಲೆ ಹಲ್ಲೆ ನಡೆಸಿದರೆ ಜೈಲು ಖಾಯಂ ; ಸಂಸದ ಜಿ.ಎಂ.ಸಿದ್ದೇಶ್ವರ ಎಚ್ಚರಿಕೆ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal |
ಸುದ್ದಿದಿನ,ದಾವಣಗೆರೆ : ವೈದ್ಯಕೀಯ ಸಿಬ್ಬಂದಿ, ನರ್ಸ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕೊರೊನಾ ಲಾಕ್‍ಡೌನ್ ವೇಳೆ ಇವರ ಮೇಲೆ ಯಾರಾದರೂ ಹಲ್ಲೆ ಹಾಗೂ ತಂಟೆ ತಕರಾರು ಮಾಡಿದಲ್ಲಿ ಜೈಲಿಗೆ ಕಳುಹಿಸಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಎಚ್ಚರಿಸಿದರು. |
ಮಂಗಳವಾರ ನ್ಯಾಮತಿಯ ವೀರಶೈವ ಮಹಾಂತೇಶ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಕೊರೊನಾ ವೈರಸ್ ನಿಯಂತ್ರಣ ಕುರಿತು ಹೊನ್ನಾಳಿ-ನ್ಯಾಮತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. |
ಬೆಂಗಳೂರಿನ ಪಾದರಾಯನಪುರದಲ್ಲಿ ಆಗಿರುವ ಘಟನೆಗೆ ಸಂಬಂಧಿಸಿದಂತೆ ಗಲಾಟೆ ನಡೆಸಿದ ಹಲ್ಲೆಕೋರರಲ್ಲಿ ಇಂದು ಸಹ 80 ಜನರನ್ನು ಬಂಧಿಸಿ ಕಾನೂನು ರೀತಿಯ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಅಧಿಕಾರಿಗಳೊಂದಿಗೆ ಸಂಯಮದಿಂದ ವರ್ತಿಸಬೇಕು. ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಪ್ರಮುಖ ಪಾತ್ರ ವಹಿಸಿದೆ. |
ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೇ 3ರವೆರೆಗೆ ಯಾರೊಬ್ಬರು ಹೊರಗೆ ಬಾರದೇ ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಕಡ್ಡಾಯವಾಗಿ ಮಾಸ್ಕ್ ಬಳಸುವುದರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ನಿಯಂತ್ರಿಸಬೇಕು ಎಂದು ಹೇಳಿದರು. |
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಸಿಇಒ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು. |
ಅಪಘಾತವಾಗಿ 40 ನಿಮಿಷಗಳ ಕಾಲ ವಿಲವಿಲ ಎಂದು ಒದ್ದಾಡಿ ನಿಧನ ಹೊಂದಿದ ನಟ ಸುನಿಲ್.! – Good morning Karnataka |
ಅಪಘಾತವಾಗಿ 40 ನಿಮಿಷಗಳ ಕಾಲ ವಿಲವಿಲ ಎಂದು ಒದ್ದಾಡಿ ನಿಧನ ಹೊಂದಿದ ನಟ ಸುನಿಲ್.! |
December 28, 2019 By Basavaraj Gowda 455 |
ಹುಡುಗಿಯರ ಎದೆಗೆ ಕನ್ನ ಹಾಕಿದ ಚಾಕ್ಲೇಟ್ ಹೀರೋ. ತನ್ನ ಮುದ್ದು ಮುಖದ ಚೆಲುವಿನಿಂದ ಹುಡುಗಿಯರ ನಿದ್ದೆ ಕದ್ದ ಚೋರನೀತ. ಹುಡುಗ ಅಂದ್ರೆ ಇವನ ತರ ಸುಂದರವಾಗಿರಬೇಕು ಅಂತ ಹುಡುಗಿಯರ ಮನದಲ್ಲಿ ಆಸೆ ಹುಟ್ಟಿಸಿದವ. ಅವನೇ ಸುನಿಲ್. ಬೆಳ್ಳಿಕಾಲುಂಗುರ ಸುನಿಲ್ ಅಂತಾನೆ ಇವತ್ತಿಗೂ ಫೇಮಸ್. ಮಂಗಳೂರು ಮೂಲದವರಾದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ದ್ವಾರಕೀಶ್ ಅವರ ನಿರ್ದೇಶನದ ಶ್ರುತಿ ಚಿತ್ರದ ಮೂಲಕ ಎಂಟ್ರಿ ಕೊಡ್ತಾರೆ. ನಂತರ ಕನಸಿನ ರಾಣಿ ಮಾಲಾಶ್ರಿ ಜೊತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಾರೆ. ತೊಂಬತ್ತರ ದಶಕದಲ್ಲಿ ಇವರಿಬ್ಬರದು ಹಿಟ್ ಜೋಡಿ. |
ಸುನಿಲ್ ಮತ್ತು ಮಾಲಾಶ್ರೀ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು. ಬೆಳ್ಳಿ ಕಾಲುಂಗುರ ,ಸಿಂಧೂರ ತಿಲಕ, ಮನಮೆಚ್ಚಿದ ಸೊಸೆ ,ಮರಣ ಮೃದಂಗ ಹೀಗೆ ಅನೇಕ ಚಿತ್ರಗಳಲ್ಲಿ ಈ ಜೋಡಿ ರೊಮ್ಯಾಂಟಿಕ್ ಆಗಿ ನಡೆಸಿ ಸೈ ಎನಿಸಿಕೊಂಡರು ಈ ಜೋಡಿ ತೆರೆಯ ಮೇಲೆ ಬಹಳ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಿತ್ತು. ಮಾಲಾಶ್ರೀ ಸ್ವಲ್ಪ ಜೋರು ಅನಿಸ್ಸಿದ್ರು ಸುನಿಲ್ ಅವರ ಚಾಕಲೇಟು ಹೀರೊ ಇಮೇಜ್ ಅದಕ್ಕೆ ಹೇಳಿ ಮಾಡಿಸಿದ ಹಾಗೆ ಇರ್ತಿತ್ತು. |
ಶ್ರುತಿ ಚಿತ್ರದಿಂದ ಪ್ರಾರಂಭವಾದ ಸುನಿಲ್ ಅವರ ಸಿನಿ ಪಯಣ ತದನಂತರ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಬೆಳ್ಳಿ ಕಾಲುಂಗುರ, ಮಾಂಗಲ್ಯ, ನಗು ನಗುತಾ ನಲಿ, ನಗರದಲ್ಲಿ ನಾಯಕರು, ಸಿಡಿದೆದ್ದ ಶಿವ ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ಸುನಿಲ್ ತೆಲುಗು ಚಿತ್ರರಂಗದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಮಾಲಾಶ್ರೀ ಮತ್ತು ಸುನೀಲ್ ಅವರ ಜೋಡಿ ಆ ಸಮಯದಲ್ಲಿ ಕನ್ನಡ ಚಿತ್ರರಂಗದ ಮೋಸ್ಟ್ ಫೇವರಿಟ್ ಜೋಡಿಯಾಗಿತ್ತು. |
ಇವರು ಒಟ್ಟಾಗಿ ಅಭಿನಯಿಸಿದ ಚಿತ್ರಗಳು ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ ನಿಜಜೀವನದಲ್ಲಿ ಒಂದಾಗಬೇಕು ಎಂದು ಅದೆಷ್ಟೋ ಅಭಿಮಾನಿಗಳು ಕನಸು ಕಂಡಿದ್ದರು. ಅಂತೆಯೇ ಸುನೀಲ್ ಮತ್ತು ಮಾಲಾಶ್ರೀ ಪ್ರೇಮದಲ್ಲಿದ್ದಾರೆ ಎಂಬ ವಿಷಯ ಸಿನಿಮಾ ರಂಗದಲ್ಲಿ ಹರಡಿತ್ತು. ಮೂಲಗಳ ಪ್ರಕಾರ ತಾವು ವಿವಾಹವಾಗುತ್ತೇನೆ ಎಂದು ಹೇಳಿಕೊಂಡಿದ್ದರಂತೆ. |
ಯಶಸ್ಸಿನ ಮೆಟ್ಟಿಲು ಹತ್ತುತ್ತಿರಬೇಕಾದರೆನೇ ಜವರಾಯ ಸುನೀಲ್ ಗಾಗಿ ಕಾಯುತ್ತಿದ್ದ ಅನ್ಸತ್ತೆ. 1994 ರಂದು ಸುನಿಲ್ ಮಾಲಾಶ್ರೀ ಮತ್ತು ಪ್ರೊಡ್ಯೂಸರ್ ಸಚಿನ್ ಮಲ್ಲಿ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಲ್ಲಿ ಬರಬೇಕಾದರೆ ಟ್ರಕ್ಕೊಂದು ಸುನೀಲ್ ಅವರ ಕಾರಿಗೆ ಗುದ್ದತ್ತೆ. ಸುನಿಲ್ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. |
ದುಃಖಕರ ವಿಷಯವೇನೆಂದರೆ ಅಪಘಾತವಾದ ನಂತರ ನಲವತ್ತು ನಿಮಿಷಗಳ ಕಾಲ ಸುನೀಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಆದರೆ ಸುನೀಲ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಾವಿನಿಂದ ಚಿತ್ರರಂಗ ಬಹಳ ಭಾವುಕದಿಂದ ಕೂಡಿತ್ತು. |
ಸುನೀಲ್ ಅವರ ಸಮಾಧಿಯಲ್ಲಿ ಒಂದು ಮರವನ್ನು ನೆಟ್ಟಿದ್ದ ಸುನಿಲ್ ತಾಯಿ, ಈಗಲೂ ಕೂಡ ಆ ಮರವನ್ನೆ ತನ್ನ ಮಗ ಎಂದು ನಂಬಿ ಜೀವನ ಸಾಗಿಸುತ್ತಿದ್ದಾರೆ.! ಮಗನ ಸಾವಿನಿಂದ ಮನ ನೊಂದಿರುವ ಆ ವಯಸ್ಸಾದ ತಾಯಿ, ನನ್ನ ಮಗನ ಸಾವಿಗೆ ಇಲ್ಲಸಲ್ಲದ ಬಣ್ಣಗಳನ್ನು ಕಟ್ಟಬೇಡಿ, ಇಡೀ ಚಿತ್ರರಂಗ ನನ್ನ ಮಗನ ಜೊತೆ ಆತ್ಮೀಯವಾಗಿತ್ತು. ಅವನ ಸಾವು ಆಕಸ್ಮಿಕ ,ಅವನ ಹಣೆಯಲ್ಲಿ ಬರೆದದ್ದು ಇಷ್ಟೇ ಇದು ವಿಧಿಲಿಖಿತ. ಎಂದು ಭಾವುಕರಾಗಿದ್ದಾರೆ. ಅಂದು ಕರ್ನಾಟಕ ಫಿಲಂ ಇಂಡಸ್ಟ್ರಿ ಒಂದು ಒಳ್ಳೆಯ ನಾಯಕನನ್ನು ಕಳೆದುಕೊಳ್ಳುತ್ತೆ. ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತ ಹೇಳಕಾಗಲ್ಲ. ಯಾರೇ ಆದ್ರು ಸಾವಿಗೆ ಸೋಲಲೇ ಬೇಕು. ಆದ್ರೆ ಇನ್ನು ಬಾಳಿ ಬದುಕಬೇಕಾಗಿದ್ದ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಸುನಿಲ್ ಅವರ ಸಾವು ಕನ್ನಡ ಚಿತ್ರ ರಂಗಕ್ಕೆ ತುಂಬಾಲಾರದ ನಷ್ಟ ಅಂತಾನೆ ಹೇಳಬಹುದು. |
ಚುಕ್ಕೆ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ, ನಿಮಗೆ ತಿಳಿದಿಲ್ಲ ಇದರ ಈ ರಹಸ್ಯ.! December 27, 2019 By Basavaraj Gowda |
ಉದ್ಯೋಗ ನಷ್ಟ, ಅರ್ಧ ಕಟ್ಟಿದ ಮನೆ, ಚಿಂತೆಯ ಮನ..! ಬೆಂಗ್ಳೂರಲ್ಲಿ ಕೊರೋನಾ ಟೈಂನಲ್ಲಿ ಹೃದಯಾಘಾತ ಹೆಚ್ಚಳ | Bengaluru sees more heart attacks as Covid-19 pandemic bites dpl |
ಕೊರೋನಾ ಸಮಯದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ | ಪೂರ್ತಿಯಾಗದ ಮನೆ, ಉದ್ಯೋಗ ನಷ್ಟ, ವೇತನ ಕಡಿತ | ಹೆಚ್ಚಿದ ಮಾನಸಿಕ ಒತ್ತಡದಿಂದ ಹೃದಯಕ್ಕೆ ಅಪಾಯ | ಚಿಂತೆ ಬಿಡಿ, ಎಲ್ಲವೂ ಸರಿಯಾಗುತ್ತೆ | ಹೃದಯದ ಬಗ್ಗೆ ಇರಲಿ ಕಾಳಜಿ |
Bangalore, First Published Sep 29, 2020, 2:08 PM IST |
ಕೊರೋನಾ ಕಾಲಾವಧಿಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ. ಕಳೆದ 2 ತಿಂಗಳಲ್ಲಿ ಹಾಟ್ ಎಟ್ಯಾಕ್ ಘಟನೆಗಳು ಶೇ.30ರಷ್ಟು ಹೆಚ್ಚಾಗಿದೆ. ಕೊರೋನಾ ಕುರಿತ ಮಾನಸಿಕ ಒತ್ತಡ, ಆರ್ಥಿಕ ತೊಂದರೆ, ಜಡ ಜೀವನಶೈಲಿಯಿಂದ ಹೃದಯಾಘಾತ ಘಟನೆ ಹೆಚ್ಚಾಗಿದೆ ಎನ್ನಲಾಗಿದೆ. |
ಕೊರೋನಾ ಭಯದಿಂದಾಗಿ ಬಹಳಷ್ಟು ಜನರು ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದರಿಂದಾಗಿ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕ್ರಿಟಿಕಲ್ ಅಗಿ ಹೃದಯಾಘಾತದಲ್ಲಿ ಕೊನೆಯಾಗುತ್ತಿವೆ. |
ಆರ್ಥಿಕ ಸಮಸ್ಯೆ, ಉದ್ಯೋಗವಿಲ್ಲದೆ, ವೇತನ ಕಡಿತ, ಹೆಚ್ಚಾದ ಕೆಲಸದ ಕಾಲಾವಧಿಯಿಂದ ಮಾನಸಿಕ ಒತ್ತಡ, ಫಸ್ಟ್ರೇಷನ್, ಅಭದ್ರತೆ ಹೆಚ್ಚಾಗಿದೆ. ಇದರಿಂದಾಗಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. |
ಹೃದಯಾಘಾತಕ್ಕೆ ಸಂಬಂಧಿಸಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ರೋಗಿಗಳು ಬರುತ್ತಿಲ್ಲ. ಅಸಮಯವಾಗಿ ಬರುವವರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಚಿಕಿತ್ಸೆಗೆ ಬರುವ ಅಂತಹ ರೋಗಿಗಳ ಸಂಖ್ಯೆಯಲ್ಲಿ 30% ಹೆಚ್ಚಳ ಕಂಡುಬಂದಿದೆ ಎಂದಿದ್ದಾರೆ ಕಾರ್ಡಿಯಾಲಜಿಸ್ಟ್ ಶ್ರೀಕಾಂತ್ ಶೆಟ್ಟಿ. |
ವ್ಯಾಯಾಮದ ಕೊರತೆ: ಕೊರೋನಾ ಸಂದರ್ಭದಲ್ಲಿ ಆರೋಗ್ಯ ಕುರಿತ ನಿರ್ಲಕ್ಷ್ಯ ಮತ್ತು ವ್ಯಾಯಾಮದ ಕೊರತೆಯಿಂದ ಬಹಳಷ್ಟು ಸಮಸ್ಯೆಗಳು ಉಂಟಾಗಿದೆ. ಯುವ ರೋಗಿಗಳು ಬಹಳ ಆರೋಗ್ಯವಾಗಿದ್ದು, ಹಿಂದೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇಲ್ಲದವರಲ್ಲಿಯೂ ಹೃದಯಾಘಾತದಂತಹ ಸಮಸ್ಯೆಯಾಗುತ್ತಿದೆ. |
ಐಟಿ ಸೆಕ್ಟರ್‌ಗಳಲ್ಲಿ ಕೆಲಸ ಸಮಯ ಹೆಚ್ಚಿ ಮಾನಸಿಕ ಒತ್ತಡ ಹೆಚ್ಚಾಗಿದೆ. ಇದು ಮುಖ್ಯವಾಗಿ ಹೃದಯವನ್ನು ಬಾಧಿಸುತ್ತಿದೆ. ಮನೆ ಕೆಲಸ ಪೂರ್ತಿ ಮಾಡಲಾಗದೆ, ಹೆಚ್ಚಿನ ಬಿಲ್‌ಗಳ ಪಾವತಿ ಇವೆಲ್ಲವನ್ನೂ ಯೋಚಿಸಿ ಜನರು ಒತ್ತಡ ಹೆಚ್ಚಿಸಿಕೊಳ್ತಿದ್ದಾರೆ. ಆಸ್ಪತ್ರೆಗೆ ಜನರು ಬರುವುದರಲ್ಲಿ ಶೇ 34ರಷ್ಟು ಇಳಿಕೆಯಾಗಿದ್ದರೆ, ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ 4 ಹೆಚ್ಚಾಗಿದೆ. |
ಕೆನಡಾ ಸಂಸತ್ತಿನಲ್ಲಿ ಕನ್ನಡ ಕಲರವ; ಕನ್ನಡ ಪ್ರೇಮ ಮೆರೆದ ಸಂಸದ ಚಂದ್ರ ಆರ್ಯ – Diksoochi News |
ಬೆಂಗಳೂರು: ಕೆನಡಾ ಸಂಸತ್ತಿನಲ್ಲಿ, ಕನ್ನಡಿಗ ಸಂಸದ ಚಂದ್ರ ಆರ್ಯ ಕನ್ನಡ ಪ್ರೇಮವನ್ನು ತೋರಿದ್ದಾರೆ. ಸಂಸತ್ ನಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡ ಕಂಪನ್ನು ಹಬ್ಬಿದ್ದಾರೆ. ಈ ಕುರಿತ ವೀಡಿಯೋ ವೈರಲ್ ಆಗಿದೆ. |
ಮಾನ್ಯ ಸಭಾಪತಿ, |
ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತದ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ. ರಾಜಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತೀದ್ದೇನೆ. |
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.. |
ಧನ್ಯವಾದಗಳು ಸಭಾಪತಿ ಎಂದು ತಮ್ಮ ಮಾತು ಮುಗಿಸಿದ್ದಾರೆ. ಚಂದ್ರ ಆರ್ಯ ಕನ್ನಡ ಪ್ರೇಮಕ್ಕೆ ಇದೀಗ ನಾಡಿನೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. |
ಟೆನಿಸ್: ಕ್ವಾರ್ಟರ್ ಫೈನಲ್‌ಗೆ ನಿಕ್ಷೇಪ್ |
ನವದೆಹಲಿ: ಕರ್ನಾಟಕದ ಬಿ.ಆರ್. ನಿಕ್ಷೇಪ್ ಇಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್ ಬಾಲಕರ 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. |
ಬುಧವಾರ ನಡೆದ ಪಂದ್ಯದಲ್ಲಿ ಅವರು 6-0, 6-0 ರಲ್ಲಿ ಮಿಂಗ್‌ಕಿ ತಲೊಮ್ ವಿರುದ್ಧ ಗೆದ್ದರು. ಆದರೆ ಬಾಲಕರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ 4-6, 3-6 ರಲ್ಲಿ ಗಾರ್ವಿತ್ ಬಾತ್ರ ಎದುರು ಪರಾಭವಗೊಂಡರು. |
ಚೆಸ್ ಫೆಡರೇಷನ್, ಕ್ರೀಡಾ ಇಲಾಖೆಗೆ ನೋಟಿಸ್ |
ನವದೆಹಲಿ (ಪಿಟಿಐ): ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ `ಅನರ್ಹ~ ಸ್ಪರ್ಧಿಗಳಿಗೆ ಅವಕಾಶ ನೀಡಿ ಕ್ರೀಡಾ ಕೋಟಾವನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. |
ಮುಖ್ಯ ನ್ಯಾಯಮೂರ್ತಿ ಡಿ. ಮುರುಗೇಶನ್ ಮತ್ತು ನ್ಯಾಯಮೂರ್ತಿ ರಾಜೀವ್ ಸಹಾಯ್ ಅವರನ್ನೊಳಗೊಂಡ ಪೀಠ ಕೇಂದ್ರ ಕ್ರೀಡಾ ಇಲಾಖೆ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್‌ಗೆ (ಎಐಸಿಎಫ್) ಬುಧವಾರ ನೋಟಿಸ್ ಜಾರಿಗೊಳಿಸಿದೆ. ಮಾತ್ರವಲ್ಲ ಡಿಸೆಂಬರ್ 12ರ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ. |
`ಎಐಸಿಎಫ್ ಅನರ್ಹ ಸ್ಪರ್ಧಿಗಳಿಗೆ ಅವಕಾಶ ನೀಡಿ ಬಳಿಕ ಅವರಿಗೆ ಪ್ರಮಾಣಪತ್ರ ನೀಡುತ್ತಿದೆ. ಅವರು ಈ ಪ್ರಮಾಣಪತ್ರ ಬಳಸಿ ಕ್ರೀಡಾಕೋಟಾದಡಿ ಲಭಿಸುವ ಪ್ರಯೋಜನ ಪಡೆಯವರು~ ಎಂದು ಇಬ್ಬರು ಅಂತರರಾಷ್ಟ್ರೀಯ ಚೆಸ್ ಆಟಗಾರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. |
ಬಂದ್ಯಾ ಕಾಕಡೆ ನಿಧನ |
ಮುಂಬೈ (ಪಿಟಿಐ): ಭಾರತ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಬಂದ್ಯಾ ಕಾಕಡೆ (67) ಹೃದಯಾಘಾತದಿಂದ ಬುಧವಾರ ಮೃತಪಟ್ಟರು. |
ಬ್ಯಾಂಕಾಕ್‌ನಲ್ಲಿ 1970ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಅವರು ಗೋಲ್ ಕೀಪರ್ ಆಗಿದ್ದರು. ಕಾಕಡೆ ಎರಡು ದಶಕ ಕಾಲ ಟಾಟಾ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ್ದರು. |
ತಿರುವನಂತಪುರ: ಎಚ್.ಪಿ.ಸಂಧ್ಯಾ ಗಳಿಸಿದ ಎಂಟು ಗೋಲುಗಳ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್ ಜೂನಿಯರ್ ಟೂರ್ನಿ ಬಾಲಕಿಯರ ವಿಭಾಗದ ಪಂದ್ಯದಲ್ಲಿ 27-0 ಗೋಲುಗಳಿಂದ ಪುದುಚೇರಿ ತಂಡವನ್ನು ಪರಾಭವಗೊಳಿಸಿದರು. ಬಾಲಕರ ವಿಭಾಗದ ಪಂದ್ಯದಲ್ಲಿ ಕನ್ನಡ ನಾಡಿನ ತಂಡ 9-0 ಗೋಲುಗಳಿಂದ ಪುದುಚೇರಿ ತಂಡವನ್ನು ಮಣಿಸಿತು. |
ಜೀವನಹಳ್ಳಿಗೆ ಪ್ರಶಸ್ತಿ |
Subsets and Splits
No community queries yet
The top public SQL queries from the community will appear here once available.