text
stringlengths
0
61.5k
degree first year exam two types answer sheets alleged
ಪದವಿ ಪ್ರಥಮ ವರ್ಷಕ್ಕೆ ಎರಡು ಮಾದರಿಯ ಉತ್ತರ ಪತ್ರಿಕೆಗಳ ಬಳಕೆ
ಸಂಧ್ಯಾ ಹೆಗಡೆ Updated: 30 ಏಪ್ರಿಲ್ 2022, 01:01 IST
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ಹೊಸ ಹಾಗೂ ಹಳೆ ಸ್ಕೀಮ್ ಉತ್ತರ ಪತ್ರಿಕೆಗಳ ಗೊಂದಲದಿಂದಾಗಿ, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
ಎನ್‌ಇಪಿ ಅಡಿಯಲ್ಲಿ ಪದವಿ ಪ್ರಥಮ ವರ್ಷದ ಪರೀಕ್ಷೆಗಳು ನಡೆಯುತ್ತಿವೆ. ವಿಶ್ವವಿದ್ಯಾಲಯದ ಸುತ್ತೋಲೆ ಪ್ರಕಾರ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಳೆ ಸ್ಕೀಮ್ ಉತ್ತರ ಪತ್ರಿಕೆಗಳನ್ನು, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹೊಸ ಸ್ಕೀಮ್ ಉತ್ತರ ಪತ್ರಿಕೆಗಳನ್ನು ಒದಗಿಸಬೇಕು. ಆದರೆ, ಪರೀಕ್ಷೆ ಪ್ರಾರಂಭವಾಗಿದ್ದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಉತ್ತರ ಪತ್ರಿಕೆಗಳ ಪೂರೈಕೆ ಆಗದ ಕಾರಣ, ಕೆಲವು ಕಾಲೇಜುಗಳಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ನೀಡುವ ಹೊಸ ಸ್ಕೀಮ್ ಉತ್ತರ ಪತ್ರಿಕೆಗಳನ್ನೇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎನ್ನುತ್ತಾರೆ ಪ್ರಾಧ್ಯಾಪಕರೊಬ್ಬರು.
'ಎನ್‌ಇಪಿ ಅಡಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 12 ಅಂಕೆಗಳ ನೋಂದಣಿ ಸಂಖ್ಯೆ ನೀಡಲಾಗಿದೆ. ಹೊಸ ಸ್ಕೀಮ್ ಉತ್ತರ ಪತ್ರಿಕೆಗಳಲ್ಲಿ 9 ಅಂಕೆಗಳನ್ನು ಬರೆಯಲು ಮಾತ್ರ ಕಾಲಂಗಳಿದ್ದು, ಇನ್ನುಳಿದ ಮೂರು ಅಂಕೆಗಳನ್ನು ವಿದ್ಯಾರ್ಥಿಗಳೇ ಕಾಲಂ ಹಾಕಿ ಬರೆಯಬೇಕಾಗುತ್ತದೆ. ಕೆಲವು ವಿದ್ಯಾರ್ಥಿಗಳು ಇದನ್ನು ಬರೆಯುವಾಗ ಗೊಂದಲ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ತಪ್ಪಾಗಿ ಬರೆಯುವ ಸಾಧ್ಯತೆ ಇರುತ್ತದೆ' ಎಂದು ವಿವರಿಸಿದರು.
'ಎರಡು ಮಾದರಿಯ ಉತ್ತರ ಪತ್ರಿಕೆಗಳಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದರಿಂದ ಮೌಲ್ಯಮಾಪನದ ವೇಳೆ ಕೂಡ ಇದನ್ನು ಪ್ರತ್ಯೇಕಿಸುವಾಗ ಗೊಂದಲ ಸೃಷ್ಟಿಯಾಗಬಹುದು. ಅಲ್ಲದೆ, ಏ.18ರಿಂದ ಪರೀಕ್ಷೆಗಳು ಆರಂಭವಾಗಿದ್ದರೂ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ದೊರೆತಿಲ್ಲ' ಎಂದು ಇನ್ನೊಬ್ಬ ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದರು.
'ಮೇ 9ಕ್ಕೆ ಎಲ್ಲ ಪರೀಕ್ಷೆಗಳು ಮುಗಿಯುತ್ತವೆ. ಮೇ 12ರಿಂದ ಮುಂದಿನ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗುತ್ತವೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ. ಪರೀಕ್ಷೆ ಪೂರ್ಣಗೊಂಡ ಮೇಲೆ ಎಂದಿನಂತೆ ರಜೆ ಇರುತ್ತದೆ ಎಂದು ಭಾವಿಸಿ, ಊರಿಗೆ ಹೋಗಲು
ರೈಲ್ವೆ ಟಿಕೆಟ್ ಬುಕ್ ಮಾಡಿದ್ದೆವು. ಆದರೆ, ಈಗ ಅನಿವಾರ್ಯವಾಗಿ ಟಿಕೆಟ್ ರದ್ದುಗೊಳಿಸಬೇಕಾಗಿದೆ' ಎಂದು ವಿದ್ಯಾರ್ಥಿನಿಯೊಬ್ಬರು ಬೇಸರಿಸಿದರು.
'ಗೊಂದಲ ಇಲ್ಲ: ಕಾಲೇಜಿಗೆ ಸೂಚನೆ'
ವಿಶ್ವವಿದ್ಯಾಲಯವು ಸಿಂಡಿಕೇಟ್ ಅನುಮತಿ ಪಡೆದೇ ಪರೀಕ್ಷೆ ನಡೆಸುತ್ತಿದೆ. ಪದವಿ ಪ್ರಥಮ ವರ್ಷದ ಉತ್ತರ ಪತ್ರಿಕೆಗಳಲ್ಲಿ ಯಾವುದೇ ಗೊಂದಲ ಇಲ್ಲ. ಈ ಹಿಂದಿನ ಎಂಯು ಲಿಂಕ್ಸ್ ಇರುವಾಗ ಇದ್ದ ಹಾಗೆ ಯಯುಸಿಎಂಎಸ್‌ನಲ್ಲಿ ಸ್ಕ್ಯಾನ್ ಮಾಡುವ ಪ್ರಮೇಯವಿಲ್ಲ. ಉತ್ತರ ಪತ್ರಿಕೆಯಲ್ಲಿ ಬಾಟಮ್ ಸ್ಲಿಪ್ ಹರಿಯುವುದೂ ಬೇಕಾಗುವುದಿಲ್ಲ. ಸರ್ಕಾರದ ನಿಯಮದಂತೆ ಪರೀಕ್ಷೆಗಳು ನಡೆಯುತ್ತಿವೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ ಪ್ರತಿಕ್ರಿಯಿಸಿದರು. ಎರಡು ರೀತಿಯ ಉತ್ತರ ಪತ್ರಿಕೆಗಳನ್ನು ಕೂಡ ಬಳಸಿಕೊಳ್ಳಬೇಕಾಗಿದೆ. ಗೊಂದಲವಿಲ್ಲದಂತೆ ಉತ್ತರ ಪತ್ರಿಕೆಗಳಲ್ಲಿ ನೋಂದಣಿ ಸಂಖ್ಯೆ ಭರ್ತಿ ಮಾಡಲು ಸೂಕ್ತ ನಿರ್ದೇಶನ ನೀಡುವಂತೆ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗಿದೆ ಎಂದು 'ಪ್ರಜಾವಾಣಿ'ಗೆ ತಿಳಿಸಿದರು.
'ಸರಿದೂಗಿಸಲು ಪ್ರಯತ್ನ'
ಮೌಲ್ಯಮಾಪನ ಆರಂಭವಾದರೆ ಅದು ಮುಗಿಯುವ ತನಕ ತರಗತಿ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ತರಗತಿ ವಿಳಂಬ ಮಾಡಿದರೆ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗುತ್ತದೆ. ಈಗಾಗಲೇ ಕೋವಿಡ್ ಕಾರಣಕ್ಕೆ ಕೊಂಚ
ವ್ಯತ್ಯಯವಾಗಿರುವ ವೇಳಾಪಟ್ಟಿ
ಯನ್ನು ಸರಿದೂಗಿಲು ಈ ಬಾರಿ ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆ, ಮೇ 12ರಿಂದ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳ ಪರೀಕ್ಷೆ, ಅಸೈನ್‌ಮೆಂಟ್ ನೀಡಿ, ಕಾಲೇಜು ನಡೆಯುವ ನಡುವೆಯೇ ಹೊಂದಾಣಿಕೆ ಮಾಡಿಕೊಂಡು ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.
'); $('#div-gpt-ad-932655-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ //googletag.cmd.push(function() { googletag.display('gpt-text-700x20-ad-932655'); }); //googletag.cmd.push(function() { googletag.display('gpt-text-700x20-ad2-932655'); }); },300); var x1 = $('#node-932655 .field-name-body .field-items div.field-item > p'); if(x1 != null && x1.length != 0) { $('#node-932655 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-932655').addClass('inartprocessed'); } else $('#in-article-932655').hide(); } else { _taboola.push({article:'auto', url:'https://www.prajavani.net/district/dakshina-kannada/degree-first-year-exam-two-types-answer-sheets-alleged-932655.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-932655', placement: 'Below Article Thumbnails 1', target_type: 'mix' }); _taboola.push({flush: true}); // Text ad //googletag.cmd.push(function() { googletag.display('gpt-text-300x20-ad-932655'); }); //googletag.cmd.push(function() { googletag.display('gpt-text-300x20-ad2-932655'); }); // Remove current Outbrain //$('#dk-art-outbrain-932655').remove(); //ad before trending $('#mob_rhs1_932655').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-932655 .field-name-body .field-items div.field-item > p'); if(x1 != null && x1.length != 0) { $('#node-932655 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-932655 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-932655'); }); } else { $('#in-article-mob-932655').hide(); $('#in-article-mob-3rd-932655').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-932655','#in-article-951195','#in-article-951148','#in-article-951141','#in-article-951140']; var twids = ['#twblock_932655','#twblock_951195','#twblock_951148','#twblock_951141','#twblock_951140']; var twdataids = ['#twdatablk_932655','#twdatablk_951195','#twdatablk_951148','#twdatablk_951141','#twdatablk_951140']; var obURLs = ['https://www.prajavani.net/district/dakshina-kannada/degree-first-year-exam-two-types-answer-sheets-alleged-932655.html','https://www.prajavani.net/district/dakshina-kannada/heavy-rain-background-holiday-announced-for-schools-in-belthangadi-951195.html','https://www.prajavani.net/district/dakshina-kannada/use-of-plastic-creates-problem-for-life-and-dangerous-951148.html','https://www.prajavani.net/district/dakshina-kannada/damage-to-home-in-bantwal-of-dakshina-kannada-in-monsoon-951141.html','https://www.prajavani.net/district/dakshina-kannada/street-vendors-protest-in-dakshina-kannada-951140.html']; var vuukleIds = ['#vuukle-comments-932655','#vuukle-comments-951195','#vuukle-comments-951148','#vuukle-comments-951141','#vuukle-comments-951140']; // var nids = [932655,951195,951148,951141,951140]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
ಮೊನಾರ್ಕ್ ಚಿಟ್ಟೆ ಹಾಗೂ ಮಿಂಚುಳ: ಅಖಿಲೇಶ್ ಚಿಪ್ಪಳಿ - ಪಂಜು
ಮಲೆನಾಡಿನಲ್ಲಿ ಸತತ ಮೂರನೇ ವರ್ಷದ ಬರಗಾಲ ಧಾಂಗುಡಿಯಿಡುತ್ತಿದೆ. ನಿಜಕ್ಕೂ ಇದಕ್ಕೆ ಮರಗಾಲವೆಂದೇ ಕರೆಯಬೇಕು. ಪಶ್ಚಿಮಘಟ್ಟದ ಕಾಲಬುಡದಲ್ಲಿರುವ ನಮಗೆ ವಾಸ್ತವಿಕವಾಗಿ ಬರವೆಂಬ ಶಬ್ಧದ ಅರಿವೇ ಇರಬಾರದು. ಆದರೂ ಅದರ ಅರಿವಾಗುತ್ತಿದೆ, ನಿಧಾನಕ್ಕೆ ಇಲ್ಲಿಯ ಜನರ ಬದುಕನ್ನು ನುಂಗಲು ಹೊರಟಿರುವ ಈ ಮರದ ಅಭಾವದಿಂದಾಗುತ್ತಿರುವ ಈ ಪರಿಸ್ಥಿತಿಗೆ ಮರಗಾಲವೆಂದೇ ಹೇಳಬಹುದು. ಪಕ್ಕದ ಹೊಸನಗರದಲ್ಲಿ, ತೀರ್ಥಹಳ್ಳಿಯಲ್ಲಿ ಮಳೆಯಾದರೆ, ರಾಜ್ಯಕ್ಕೆ ವಿದ್ಯುತ್ ನೀಡುವ ಲಿಂಗನಮಕ್ಕಿ ಜಲಾಶಯ ತುಂಬುತ್ತದೆ. ಜೋಗದ ಸಿರಿ ಹೆಚ್ಚುತ್ತದೆ. ಆ ಎರಡೂ ತಾಲ್ಲೂಕುಗಳಲ್ಲೂ ಮಳೆಯಿಲ್ಲ. ಜೋಗದಲ್ಲಿ ನೀರಿಲ್ಲದ ಹೊತ್ತಿನಲ್ಲೇ ಜೋಗದ ಜಲಪಾತವನ್ನು ಸರ್ವಋತು ಆಕರ್ಷಣೆಯಾಗಿ ಮಾಡಲು 20 ಸಾವಿರ ಹೆಚ್.ಪಿ.ಸಾಮಥ್ರ್ಯದ ಪಂಪ್ ಅಳವಡಿಸಲು ಹಾಗೂ ಸೀತಾ ಕಟ್ಟೆಯಲ್ಲಿ ಸಂತುಲನ ಡ್ಯಾಂ ಕಟ್ಟಲು ಕೋಟಿಗಳ ಯೋಜನೆಗಳು ಜೋಗದ ಐಬಿಯಲ್ಲಿ ತಯಾರಾಗುತ್ತಿರುವ ಸಂದಂರ್ಭದಲ್ಲೇ ಅತ್ತ ಮೆಕ್ಸಿಕೋದ ಕಾಡುನಾಶದಿಂದ ಅವನತಿಸುತ್ತಿರುವ ಮೊನಾರ್ಕ್ ಚಿಟ್ಟೆಗಳ ದಾರುಣ ಕತೆಯನ್ನು ನೋಡಬೇಕು.
ವಲಸೆ ಹೋಗುವ ಚಿಟ್ಟೆಗಳಲ್ಲಿ ಮುಖ್ಯವಾದದು ಮೊನಾರ್ಕ್ ಚಿಟ್ಟೆಗಳು ಪ್ರತಿವರ್ಷ ಇವು ಕೆನಡಾ ಹಾಗೂ ಅಮೆರಿಕಾದಿಂದ ಕ್ಯಾಲಿಫೋರ್ನಿಯಾ ಹಾಗೂ ಮೆಕ್ಸಿಕೋಗಳಿಗೆ ವಲಸೆ ಹೋಗುತ್ತವೆ. ಸಾವಿರಾರು ಸಂಖ್ಯೆಯ ಬಣ್ಣದ ಚಿಟ್ಟೆಗಳು ಒಟ್ಟು ಕ್ರಮಿಸುವ ದೂರ ಸುಮಾರು 6000 ಕಿ.ಮಿ. ಹಾಗಂತ ಹೊರಟ ಚಿಟ್ಟೆಯೇ ಗಮ್ಯವನ್ನು ತಲುಪುತ್ತದೆ ಎಂದು ತಿಳಿಯಬಾರದು, ಇವು ದಾರಿಯುದ್ದಕ್ಕು ಮೊಟ್ಟೆಯಿಡುತ್ತಾ ಸಾಗುತ್ತವೆ. ಇದೇ ಮೊಟ್ಟೆಗಳೇ ಕಂಬಳಿಹುಳುಗಳಾಗುತ್ತಾ, ರೆಕ್ಕೆ ಬಿಚ್ಚಿ ಅಪ್ಪ-ಅಮ್ಮನ ಜಾಡು ಹಿಡಿದು ಗಮ್ಯ ತಲುಪುತ್ತವೆ. ಮಧ್ಯದಲ್ಲಿ ಅಪಾರ ಪ್ರಮಾಣದ ಪರಾಗಸ್ಪರ್ಶವೂ ಆಗುತ್ತದೆ. ಬಹಳ ಸೂಕ್ಷ್ಮತರದ ದೇಹ ರಚನೆಯನ್ನು ಹೊಂದಿರುವ ಚಿಟ್ಟೆಗಳನ್ನು ಸೂತಕ-ಸೂಚಕ ಜೀವಿಗಳೆಂದು ಅನ್ನುತ್ತಾರೆ. ಅಂದರೆ ವಾತಾವರಣದಲ್ಲಿ ಏರುಪೇರಾದರೆ ಅದರ ಪರಿಣಾಮ ಮೊದಲು ಇಂತಹ ಸೂತಕ-ಸೂಚಕ ಜೀವಿಗಳ ಮೇಲೆ ಆಗುತ್ತದೆ.
ಈ ವರ್ಷ ಆಗಿದ್ದು ಇದೇ. ಮೊನಾರ್ಕ್ ಚಿಟ್ಟೆಗಳಿಗೆ ಮೆಕ್ಸಿಕೊದ ದಕ್ಷಿಣ ಭಾಗದಲ್ಲಿ ಫಿರ್ ಮರಗಳಿರುವ ಅರಣ್ಯ ಪ್ರದೇಶ ಬೆಚ್ಚಗಿನ ವಾತಾವರಣವನ್ನು ನೀಡಿ, ಅಲ್ಲಿ ಸಂತಾನೋತ್ಪತ್ತಿಗೆ ಅವಕಾಶ ನೀಡುವ ಅಪರೂಪದ ಸ್ಥಳವಾಗಿದೆ. ಅಕ್ರಮವಾಗಿ ಕಡಿತಲೆಯಾಗುತ್ತಿರುವ ಈ ಫಿರ್ ಮರಗಳಿರುವ ಅರಣ್ಯ ಪ್ರದೇಶದಲ್ಲೀಗ ಚಿಟ್ಟೆಗಳಿಗೆ ಆವಾಸ್ಥಾನದ ಕೊರತೆಯಾಗಿದೆ ಅಲ್ಲದೇ ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಏರ್ಪಟ್ಟಿದೆ. ಜೊತೆಗೆ ಗಾಯದ ಮೇಲೆ ಬರೆಯೆಂಬಂತೆ ಹವಾಮಾನ ವೈಪರೀತ್ಯದ ಕಾರಣಕ್ಕಾಗಿ ಬೀಸಿದ ಚಂಡಮಾರುತ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನುಂಗಿ ಹಾಕಿದೆ. ಈ ಹೊತ್ತಿನಲ್ಲೇ ಆ ಪ್ರದೇಶವನ್ನು ಪ್ರವೇಶಿಸಿದ ಸುಮಾರು 65 ಲಕ್ಷ ಚಿಟ್ಟೆಗಳು ಆವಾಸಸ್ಥಾನದ ಕೊರತೆಯಿಂದ ಅಸುನೀಗಿವೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಈ ಚಿಟ್ಟೆಯ ಮತ್ತೊಂದು ವಿಶೇಷವೆಂದರೆ ಇದು ಮೊಟ್ಟೆಯಿಡುವುದು "ಮಿಲ್ಕ್ ವೀಡ್" ಎಂದು ಕರೆಯಲಾಗುವ ಪೊದೆಯ ಎಲೆಗಳಲ್ಲಿ ಮಾತ್ರ. ಮೊನಾರ್ಕ್ ಮೊಟ್ಟೆಗಳಿಂದ ಹೊರಬರುವ ಮರಿಗಳು ಅಥವಾ ಕಂಬಳಿಹುಳುಗಳು ಇದರ ಎಲೆಯನ್ನೇ ತಿಂದು ಜೀವಿಸುತ್ತವೆ. ಮನುಜಾತಿಗೆ ಈ ಹಾಲುಕಳೆಯೆಂಬುದು ಕೃಷಿ ಹಾಗೂ ತೋಟಗಾರಿಕೆ ಕ್ರಿಯೆಗಳಿಗೆ ಅಡ್ಡಿಯಾಗುವ ಕಳೆಗಿಡಗಳಷ್ಟೇ ಆಗಿವೆ. ಅಮೆರಿಕಾದಲ್ಲಿ ಮಾಂಸಕ್ಕಾಗಿ ಸಾಕುವ ಹಸುಗಳಿಗೆ ತಿನ್ನಿಸಲು ಕುಲಾಂತರಿ ಜೋಳ ಹಾಗೂ ಸೋಯಾವನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಕಳೆಗಳನ್ನು ಹತೋಟಿಯಲ್ಲಿಡಲು ವ್ಯಾಪಕವಾಗಿ ಮಾನ್ಸಂಟೋ ಕಂಪನಿ ತಯಾರಿಸಿದ ರೌಂಡ್ ಅಪ್ ಎಂಬ ಕಳೆನಾಶಕವನ್ನು ಅಲ್ಲಿನ ರೈತರು ಹೇರಳವಾಗಿ ಬಳಸುತ್ತಾರೆ. ಇದರಿಂದ ಮೊನಾರ್ಕ್ ಚಿಟ್ಟೆಗಳ ಮೊಟ್ಟೆಗಳು ಮರಿಯಾಗುವ ಮೊದಲೇ ಸತ್ತು ಹೋಗುತ್ತವೆ, ಒಂದೊಮ್ಮೆ ಮರಿಯಾದರೂ ಅದಕ್ಕೆ ತಿನ್ನಲು ಬೇಕಾದ ಎಲೆಗಳೇ ಇರುವುದಿಲ್ಲ. ಹೀಗೆ ಕೀಟನಾಶಕ, ಹವಾಮಾನ ವೈಪರೀತ್ಯ, ಅಕ್ರಮ ಕಡಿತಲೆಯಿಂದಾಗಿ ಅತ್ಯಂತ ಸುಂದರವಾದ ಹಾರುವ ಪಚ್ಚೆರತ್ನದ ಬಣ್ಣ-ಬಣ್ಣದ ಮೋಹಕ ಚಿಟ್ಟೆಗಳು ಅವಸಾನದಂಚಿಗೆ ಬಂದು ನಿಂತಿವೆ.
ಅಂಕಿ-ಅಂಶಗಳ ಪ್ರಕಾರ 15 ವರ್ಷಗಳ ಹಿಂದೆ 1 ಕೋಟಿ ಚಿಟ್ಟೆಗಳು ವಲಸೆ ಹೋಗುವ ಪ್ರಕ್ರಿಯೆಯಲ್ಲಿ ತೊಡಗುತ್ತಿದ್ದವು. ಲಕ್ಷಾಂತರ ಎಕರೆ ಕಾಡು ನಾಶದಿಂದಾಗಿ ಇದೀಗ ಇವುಗಳ ಸಂಖ್ಯೆ 15 ರಿಂದ 20 ಲಕ್ಷಕ್ಕೆ ಬಂದು ನಿಂತಿದೆ. ಹಾಗಂತ ಅಲ್ಲಿನ ಪರಿಸರ ಸಂರಕ್ಷಕರು ಮೊನಾರ್ಕ್ ಚಿಟ್ಟೆಗಳನ್ನು ಉಳಿಸಲು ಹಲವು ತರಹದ ಪ್ರಯತ್ನಗಳನ್ನು ನಡೆಸಿದ್ದಾರೆ. ಅಲ್ಲಿನ ಪೈನ್ ಹಾಗೂ ಫಿರ್ ಮರಗಳ ಕಾಡುಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲಿನ ಸರ್ಕಾರವೂ ಅಕ್ರಮ ಮರ ಕಡಿತಲೆಯ ವಿರುದ್ಧ ಪ್ರತ್ಯೇಕ ಪೋಲೀಸ್ ದಳವನ್ನು ನಿಯೋಜನೆ ಮಾಡುವುದಾಗಿ ಭರವಸೆ ನೀಡಿದೆ. ಪ್ರಕೃತಿ ಸಂರಕ್ಷಕರು ಹಳ್ಳಿಗೆ ಹಳ್ಳಿಗೆ ಹೋಗಿ ಇಲ್ಲಿನ ವೃಕ್ಷ ಸಂಪತ್ತಿನಿಂದಲೇ ನಿಮ್ಮ ಭವಿಷ್ಯ ಅಡಗಿದೆ. ಈ ಚಿಟ್ಟೆಗಳ ಸಮೂಹವೇ ನಿಮಗೆ ಹೆಚ್ಚಿನ ಆದಾಯ ತರಬಲ್ಲದು. ಆದ್ದರಿಂದ ಮರಗಳನ್ನು ಕಡಿಯುವ ಬದಲಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ಜನ-ಜಾಗೃತಿ ಮಾಡುತ್ತಿದ್ದಾರೆ.
ಚಿಕ್ಕವರಿದ್ದಾಗ ಮಳೆಗಾಲ ಶುರುವಾಯಿತು ಅಂದರೆ, ಮನೆಯ ಸುತ್ತ-ಮುತ್ತ ಸಂಜೆಯ ಗಾಡಂಧಕಾರದಲ್ಲಿ ಮಿಣುಕು ಹುಳುಗಳು ಹಾರುತ್ತಿದ್ದವು. ಸಾವಿರಾರು ಸಂಖ್ಯೆಯಲ್ಲಿ ಹಾರುತ್ತಿದ್ದ ಇವು ಮಿಣುಕುವ ನಕ್ಷತ್ರಗಳೇ ಧರೆಗಿಳಿದು ಬಂದಂತೆ ತೋರುತ್ತಿದ್ದವು. ನೂರಾರು ಕೀಟಸಂತತಿಗಳ ವಿವಿಧ ತರಹದ ವಾದ್ಯಮೇಳಕ್ಕೆ ತಕ್ಕಂತೆ ತಾಳ ಹಾಕುತ್ತಾ ಕುಣಿಯುತ್ತಿವೆಯೇನೋ ಎಂಬಂತೆ ತಮ್ಮ ದೇಹದ ಹಿಂಭಾಗದಿಂದ ಬೆಳಕನ್ನು ಹೊರಡಿಸುತ್ತಾ ಹಾರುತ್ತಿದ್ದವು. ಅದನ್ನೇ ದಿಟ್ಟಿಸುತ್ತಿದ್ದರೆ, ಸಮ್ಮೋಹನಕ್ಕೆ ಒಳಗಾದಂತೆ ಅನಿಸುತ್ತಿತ್ತು. ಚಿಮಣೆ ಬುಡ್ಡಿಯ ದೀಪ ಗಾಳಿಗೆ ಹೊಯ್ದಾಡುತ್ತಾ ಇರುವಾಗ ನಡು ಬಗ್ಗಿಸಿ ನೆಲಕ್ಕೆ ಕೈಕೊಟ್ಟು ಹೋಂ ವರ್ಕ್ ಮಾಡುವ ಮಧ್ಯದಲ್ಲಿ ಈ ಮಿಣುಕು ಹುಳುಗಳು ಆಕರ್ಷಣೆ ಮನಕ್ಕೆ ಮುದ ನೀಡುತ್ತಿದ್ದದ್ದು ಸುಳ್ಳಲ್ಲ. ಅಪ್ಪಿ-ತಪ್ಪಿ ಮನೆಯ ಒಳಗೂ ಮಿಣುಕು ಹುಳುಗಳ ಪ್ರವೇಶ ಆಗುತ್ತಿತ್ತು. ಆಗೆಲ್ಲ ಅದನ್ನು ಹಿಡಿದು ಬೆಂಕಿ ಪೊಟ್ಟಣದೊಳಗೆ ತುಂಬಿಡುತ್ತಿದ್ದ ನೆನಪು ಇನ್ನೂ ಇದೆ. ರಾತ್ರಿಯ ಕತ್ತಲನ್ನು ಓಡಿಸಲು, ಗದ್ದೆಗೆ ಹೋಗಲು ಇತ್ಯಾದಿಗಳಿಗಾಗಿ ನಮ್ಮಲ್ಲೊಂದು ಟಾರ್ಚ್ ಇತ್ತು. ಮೂರು ಸೆಲ್ಲಿನ ಆ ಟಾರ್ಚ್ ಹಾಕುವ ಸೆಲ್‍ಗಳು ತಿಂಗಳಲ್ಲೇ ಸೊರಗಿ, ದೀಪ ಮಬ್ಬಾಗುತ್ತಿತ್ತು. ಪ್ರತಿ ಬಾರಿ ಸೆಲ್ ಕೊಂಡು ತಂದಾಗಲೂ ಅದರ ಬೆಲೆ ಏರುತ್ತಲೇ ಇರುತ್ತಿತ್ತು. ಇದಕ್ಕೊಂದು ಉಪಾಯ ಮಾಡಿದರೆ ಹೇಗೆ, ಮಿಣುಕು ಹುಳುಗಳು ಪುಕ್ಕಟೆಯಾಗಿ ಬೆಳಕು ನೀಡುತ್ತವೆ. ಇವುಗಳನ್ನೇ ಒಂದು ಬಾಟಲಿಯಲ್ಲಿ ತುಂಬಿಸಿಟ್ಟರೆ ಆಯಿತು. ಬ್ಯಾಟರಿ ಸೆಲ್‍ಗೆ ಹಣ ಹಾಕುವುದು ತಪ್ಪುತ್ತಲ್ಲ ಎಂದು ಕಾರ್ಯಪ್ರವೃತ್ತನಾಗಿದ್ದೇ ಬಂತು. ಹುಡುಕಿದಾಗ ಸಿಕ್ಕಿದ್ದು ಖಾಲಿಯಾದ ಬ್ರಿಲ್ ಇಂಕಿನ ಬಾಟಲ್. ಬಾಟಲನ್ನು ಹಿಡಿದುಕೊಂಡು ಮಿಂಚು ಹುಳಕ್ಕಾಗಿ ಹೊಂಚು ಹಾಕಿ ಕುಳಿತಾಯಿತು. ಅದೃಷ್ಟಕ್ಕೆಂಬಂತೆ ಒಂದು ಹುಳ ಮನೆಯೊಳಗೆ ಬಂತು. ಅದನ್ನು ಹಿಡಿದು ಬ್ರಿಲ್ ಇಂಕಿನ ಬಾಟಲಿಯೊಳಗೆ ತುಂಬಿದ್ದಾಯಿತು. ಬಾಟಲಿಯೊಳಗೆ ಮಿಣುಕುತ್ತಿದ್ದ ಹುಳದ ಬೆಳಕು ಅದೇಕೋ ಕಡಿಮೆಯಾದಂತೆ ಎನಿಸಿತು. ಬಾಟಲಿಯಲ್ಲಿ ತುಂಬಿದ್ದರಿಂದ ಅದಕ್ಕೆ ಆಮ್ಲಜನಕದ ಕೊರತೆಯಾಯಿತೋ ಅಥವಾ ಬಾಟಲಿಯು ದಪ್ಪವಾಗಿದ್ದರಿಂದ ಬೆಳಕು ಕಡಿಮೆಯಾದಂತೆ ಅನಿಸಿತೋ ಅಂತೂ ಇನ್ನೊಂದು ಹುಳು ಬರಲಿಲ್ಲ. ಅಲ್ಲಿಗೆ ನಮ್ಮ ನೈಸರ್ಗಿಕ ಟಾರ್ಚಿನ ಪ್ರಯತ್ನ ಅಷ್ಟಕ್ಕೆ ನಿಂತು ಹೋಯಿತು. ಸಿಕ್ಕ ಒಂದು ಮಿಂಚುಹುಳುವನ್ನು ಹೊರಗೆ ಬಿಟ್ಟಾಯಿತು. ಅದೇಕೋ ನಮ್ಮಲ್ಲೂ ಈಗ ಮಿಂಚುಹುಳುಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಇತರೆ ಕೀಟಗಳನ್ನು ನಾಶ ಮಾಡಿದಂತೆ, ಮಿಂಚುಹುಳುಗಳು ಕೃಷಿಯಲ್ಲಿ ಬಳಸುವ ರಾಸಾಯನಿಕಗಳಿಂದಾಗಿ ನಾಶವಾದವೇ? ಇದೇ ಮಿಂಚು ಹುಳುಗಳು ಮೆಕ್ಸಿಕೋ ದೇಶದ ಒಂದು ಪ್ರದೇಶದ ಕಾಡನ್ನು ಉಳಿಸಲು ಕಾರಣವಾಗುತ್ತಿವೆ. ಅದು ಹೇಗೆಂದು ಕೊಂಚ ನೋಡೋಣ.
ನಾನಕ್ಯಾಮಿಪ್ಲಾ ಎಂಬುದೊಂದು ಅಲ್ಲಿಯ ಹಳ್ಳಿಯ ಹೆಸರು. ಈ ಹಳ್ಳಿಯಲ್ಲಿ ಸರ್ಕಾರಕ್ಕೆ ಸೇರಿದ ಒಂದು ಪಾರ್ಕ್ ಇದೆ. ನಮ್ಮಲ್ಲಿ ಹೋಂ ಸ್ಟೇ ತರಹದ ತಂಗುಕೋಣೆಗಳು ಅಲ್ಲಿವೆ. ಸರ್ಕಾರ ಹಾಗೂ ಹಳ್ಳಿಯ ಮಧ್ಯೆ ಆಗಿರುವ ಒಡಂಬಡಿಕೆಯಂತೆ ಸಹಕಾರಿ ತತ್ವದಲ್ಲಿ ಅಲ್ಲಿನ ಈ ಪಾರ್ಕ್‍ನ ಮೇಲ್ವಿಚಾರಣೆ ನಡೆಯುತ್ತದೆ. ಬಂದ ಪಾಲಿನಲ್ಲಿ ಈ ಹಳ್ಳಿಗರಿಗೂ ಪಾಲುಂಟು. ಇಂತಹ ಹಳ್ಳಿಗೆ, ಪಟ್ಟಣ ಒತ್ತಡದ ಜೀವನದಿಂದ ಪಾರಾಗಲು ವಾರದ ಕೊನೆಯಲ್ಲಿ ಇಲ್ಲಿಗೆ ಬಹಳಷ್ಟು ಪ್ರವಾಸಿಗರು ಬರುತ್ತಾರೆ. ಆದರೆ, ಅರಣ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ ಎದುರಾಗುತ್ತಿದ್ದದು ಮರಗಳ ಮಾರಣ ಹೋಮ. 42 ಕುಟುಂಬಗಳನ್ನು ಹೊಂದಿದ ಚಿಕ್ಕ ಹಳ್ಳಿಯ ಜನರ ಮುಖ್ಯ ಕಸುಬು ನಾಟ ಕಡಿಯುವುದು. ಕಡಿದ ನಾಟವನ್ನು ಸೈಜಿಗೆ ತಕ್ಕನಾಗಿ ಕತ್ತರಿಸಲು ಅಲ್ಲೊಂದು ಸಾಮಿಲ್ ಕೂಡಾ ಇದೆ. ಸಹಕಾರ ಸಂಘದ ಮಾದರಿಯಲ್ಲಿ ನಡೆಯುವ ಈ ಸಾಮಿಲ್ ಮ್ಯಾನೇಜರ್ ಹೆಸರು ಸಲ್ವಡಾರ್ ಮೊರಾಲೆ. ಈ ಹಳ್ಳಿಯ ಜನರ ಮುಖ್ಯ ಕಸುಬೇ ಅರಣ್ಯವನ್ನು ಕಡಿದು ಮಾರಾಟ ಮಾಡುವುದು. ಪ್ರತಿನಿತ್ಯ ಇಲ್ಲಿನ ಪೈನ್ ಮತ್ತು ಫಿರ್ ಮರಗಳು ಹಳ್ಳಿಗರ ಕೊಡಲಿಗೆ ಬಲಿಯಾಗಿ ನೆಲಕಚ್ಚಿ, ಸಾಮಿಲ್ ಮೂಲಕ ಪೇಟೆ ಪಟ್ಟಣ ಸೇರುತ್ತಿದ್ದವು. ಹಾಗಂತ ಇಲ್ಲಿನ ಜನರ ಬದುಕು ಮರ ಕಡಿತಲೆಯಿಂದ ಬಹಳ ಉನ್ನತಮಟ್ಟವನ್ನೇನು ಕಾಣಲಿಲ್ಲ. ಪ್ರತಿವರ್ಷ ಜೋರು ಮಳೆಗಾಲದ ಜೂನ್‍ನಿಂದ ಆಗಸ್ಟ್ ತಿಂಗಳವರೆಗೆ ಮರಕಡಿತಲೆಗೆ ತಾತ್ಕಾಲಿಕ ವಿರಾಮ ನೀಡಲಾಗುತ್ತಿತ್ತು. ಈ ಸಮಯದಲ್ಲಿ ಅಲ್ಲಿನ ಜನರಿಗೆ ಹೆಚ್ಚಿನ ಕೆಲಸವಿಲ್ಲ. ಇದೇ ಸಮಯದಲ್ಲಿ ಆ ಕಾಡಿನಲ್ಲಿ ರಾತ್ರಿಯ ವಾತಾವರಣ ರಮ್ಯಮನೋಹರವಾಗಿ ತೋರುತ್ತಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಮಿಣುಕುವ ಮಿಂಚುಹುಳುಗಳು ಇಡೀ ಪ್ರದೇಶಕ್ಕೆ ಒಂದು ತರಹದ ರಮಣೀಯತೆಯನ್ನು ತಂದು ಕೊಡುತ್ತಿದ್ದವು. ಹಾಗೂ ಮರಕಡಿತಲೆಯಿಂದಾಗಿ ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದನ್ನು ಆ ಹಳ್ಳಿಯ ಮುಖ್ಯಸ್ಥ ಗಮನಿಸುತ್ತಲೇ ಇದ್ದ. ತನ್ಮಧ್ಯೆ ಮಿಂಚುಹುಳುಗಳ ಮ್ಯೂಸಿಕಲ್ ಕಾರಂಜಿ ಪಟ್ಟಣಿಗರ ಮನ ಸೆಳೆದಿತ್ತು. ಈ ತಿಂಗಳಲ್ಲಿ ಮಿಂಚುಹುಳುಗಳ ದೀಪದಾಲಂಕಾರವನ್ನು ನೋಡಲು ಬರುವವರ ಸಂಖ್ಯೆಯು ಹೆಚ್ಚುತ್ತಿತ್ತು. 2011ರಲ್ಲಿ ಮುಖ್ಯಸ್ಥನ ತಲೆಗೊಂದು ಯೋಚನೆ ಬಂತು. ಮರಕಡಿಯುವುದರಿಂದ ನಮ್ಮ ಬದುಕೇನೋ ಹಸನಾಗಲಿಲ್ಲ. ಈ ಮಿಂಚುಹುಳುಗಳಿಂದಾದರೂ ನಮ್ಮ ಬದುಕು ಹಸನಾದೀತೇ ಎಂಬುದಷ್ಟೇ ಯೋಚನೆ ಹಾಗೂ ಯೋಜನೆಯ ಬೀಜ.
ಹಾಗೂ 2011ರಲ್ಲೆ ಈ ಯೋಜನೆ ಜಾರಿಗೆ ಬಂತು. ವರ್ಷಕ್ಕೆ 50 ಸಾವಿರ ಮರಗಳನ್ನು ಕಡಿಯುತ್ತಿದ್ದ ಹಳ್ಳಿಯಲ್ಲೀಗ 50 ಸಾವಿರ ಗಿಡಗಳನ್ನು ನೆಡುವ ಪರಿಪಾಠ ಪ್ರಾರಂಭವಾಗಿದೆ. 1530 ಎಕರೆಯ ಸಮೃದ್ಧ ಅರಣ್ಯವನ್ನು ಕಾಯ್ದಿಟ್ಟುಕೊಂಡ ಆ ಹಳ್ಳಿಯೀಗ ಆರ್ಥಿಕವಾಗಿ ಸಬಲವಾಗುತ್ತಿದೆ. ಬೆಳೆಯುವ ಬೆಳೆಗಳಿಗೆ ಅಲ್ಲಿ ಯಾರೂ ರಾಸಾಯನಿಕವನ್ನು ಸಿಂಪರಣೆ ಮಾಡುತ್ತಿಲ್ಲ. ಮರಕಡಿತಲೆಯ ಪ್ರಮಾಣ ಶೇ.70ರಷ್ಟು ಕಡಿಮೆಯಾಗಿದೆ. ಮಿಂಚುಹುಳದ ವೈವಿಧ್ಯಮಯ ನೃತ್ಯನೋಡಲು ಜನ ಮುಗಿ ಬೀಳುತ್ತಿದ್ದಾರೆ. ಪಾರ್ಕ್‍ನ ಎಲ್ಲಾ ಕೋಣೆಗಳು 4-5 ತಿಂಗಳು ಮುಂಚಿತವಾಗಿಯೇ ಕಾದಿರಿಸಲ್ಪಟ್ಟಿರುತ್ತವೆ. ಆ ಹಳ್ಳಿಯ ಎಲ್ಲಾ 42 ಕುಟುಂಬಗಳಿಗೂ ಮರ ಕಡಿಯುವುದಕ್ಕಿಂತ ಮರಗಳನ್ನು ಉಳಿಸಿ-ಬೆಳೆಸುವು ಕಾಯಕವೇ ಲಾಭದಾಯಕ ಎಂಬುದರ ಅರಿವಾಗಿದೆ. ಹಾಗಂತ ವ್ಯವಹಾರವನ್ನು ಬಾಚಿಕೊಂಡು ಚಿನ್ನದ ಮೊಟ್ಟೆಯಿಡುವ ಕೋಳಿಯ ಕತೆಯಾಗಲು ಅವರು ತಯಾರಿಲ್ಲ. ಒಂದು ರಾತ್ರಿಗೆ 250ಕ್ಕಿಂತ ಹೆಚ್ಚು ಜನರನ್ನು ಒಳಕ್ಕೆ ಬಿಡುವುದಿಲ್ಲ. ಹೆಚ್ಚು-ಹೆಚ್ಚು ಪ್ರವಾಸಿಗರಿಂದ ಅತ್ಯುತ್ತಮ ಲಾಭವೇನೋ ಬರಬಹುದು. ಹಾಗಂತ ಇದೇ ಪ್ರವಾಸಿಗರ ಕಾರಣದಿಂದ ಮಿಂಚುಹುಳುಗಳಿಗೇನಾದರೂ ತೊಂದರೆಯಾದರೆ. ಹಾಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ, ಪ್ರವಾಸಿಗರ ಮನತಣಿಸುವಲ್ಲಿ ಅಲ್ಲಿನ ಸಹಕಾರಿ ಸಂಘ ಯಶಸ್ವಿಯಾಗಿದೆ.
ಜೂನ್ 21ರಂದು ಡೆಹ್ರಾಡೂನ್‌ನಲ್ಲಿ 50 ಸಾವಿರ ಮಂದಿಯೊಂದಿಗೆ ಮೋದಿ ಯೋಗ | News13
News13 > ಸುದ್ದಿಗಳು > ರಾಷ್ಟ್ರೀಯ > ಜೂನ್ 21ರಂದು ಡೆಹ್ರಾಡೂನ್‌ನಲ್ಲಿ 50 ಸಾವಿರ ಮಂದಿಯೊಂದಿಗೆ ಮೋದಿ ಯೋಗ
ಡೆಹ್ರಾಡೂನ್: ಜೂನ್ 21ರಂದು ನಡೆಯಲಿರುವ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬೃಹತ್ ಯೋಗ ಸಮಾವೇಶವನ್ನು ಆಯೋಜನೆಗೊಳಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ 50 ಸಾವಿರ ಮಂದಿಯ ಜೊತೆಗೂಡಿ ಯೋಗಾಭ್ಯಾಸ ನಡೆಸಲಿದ್ದಾರೆ.
ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಈ ಬೃಹತ್ ಯೋಗ ಸಮಾವೇಶ ನಡೆಯಲಿದೆ. ಈಗಾಗಲೇ ಇದಕ್ಕಾಗಿ ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಆವರಣದೊಳಗಿರುವ ಮಂಗ, ಹಾವು ಇತ್ಯಾದಿ ಪ್ರಾಣಿಗಳನ್ನು ಖಾಲಿ ಮಾಡುವ ಕಾರ್ಯವೂ ನಡೆಯುತ್ತಿದೆ.
ಅರಣ್ಯ ಸಂಶೋಧನಾ ಸಂಸ್ಥೆ ಸುಮಾರು 450 ಎಕರೆ ವಿಸ್ತಾರದಲ್ಲಿ ಇದ್ದು, ಸುತ್ತಮುತ್ತ ದಟ್ಟ ಅರಣ್ಯ ಇದೆ. ಹೀಗಾಗಿ ಇಲ್ಲಿ ವನ್ಯಜೀವಿಗಳ ಓಡಾಟ ಸಾಮಾನ್ಯವಾಗಿದೆ.
ಜಾತಿ-ಧರ್ಮದ ಸಂಘರ್ಷ ಹೆಚ್ಚುತ್ತಿದೆ: ರಂಭಾಪುರಿ ಶ್ರೀ ವಿಷಾದ | Udayavani – ಉದಯವಾಣಿ
Monday, 25 Oct 2021 | UPDATED: 07:51 PM IST
ಜಾತಿ-ಧರ್ಮದ ಸಂಘರ್ಷ ಹೆಚ್ಚುತ್ತಿದೆ: ರಂಭಾಪುರಿ ಶ್ರೀ ವಿಷಾದ
Team Udayavani, Aug 18, 2017, 2:24 PM IST
ಕಡೂರು: ಧರ್ಮ ಮತ್ತು ಜಾತಿಗಳ ಮಧ್ಯೆ ಇಂದು ಸಂಘರ್ಷ ಹೆಚ್ಚುತ್ತಿದೆ ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಸಾಣೆಹಳ್ಳಿ ಆರಾಧ್ಯರವರ ಮನೆಯಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಧರ್ಮ,ಜಾತಿಗಳ ಮಧ್ಯೆ ನಡೆಯುತ್ತಿರುವ ಸಂಘರ್ಷದಿಂದ ಎಲ್ಲರೂ ಹೊರ ಬರಬೇಕು. ಶಾಂತಿ ಭಾವೈಕ್ಯತೆಯಿಂದ ಮುನ್ನೆಡೆದರೆ ಭವಿಷ್ಯವನ್ನು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಕಡೂರಿನಲ್ಲಿ ನಡೆಯಲಿರುವ ಶರನ್ನವರಾತ್ರಿ ದಸರಾ ಮಹೋತ್ಸವವು ಶಾಂತಿ, ಭಾವೈಕ್ಯತೆ ಸಾರುವ ಸಮಾರಂಭ ಇದಾಗಲಿದೆ ಎಂದರು.
ಶ್ರೀ ರಂಭಾಪುರಿ ಪೀಠದ ಪರಂಪರೆಯಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ ವಿಶೇಷ ಪ್ರಾಧಾನ್ಯತೆ ಪಡೆದಿದೆ. 9 ದಿನಗಳ ಕಾಲ ಶಕ್ತಿಯ ಆರಾಧನೆ ನೆರವೇರಿಸಿ ಕೊನೆಯ ದಿನ ವಿಜಯದಶಮಿ ಹಬ್ಬದ ಆಚರಣೆ ನಡೆಯಲಿದೆ. 10 ದಿನಗಳ ಕಾಲ ಧಾರ್ಮಿಕ, ಸಾಮಾಜಿಕ, ರಚನಾತ್ಮಕ ಚಿಂತನೆಗಳು ನಡೆಯಲಿದ್ದು, ವಿದ್ವಾಂಸರು, ವಾಗ್ಮಿಗಳು, ಗುರುಗಳು, ಕವಿಗಳು, ರಾಜಕಾರಣಿಗಳು ಪಾಲ್ಗೊಳ್ಳುವರು. ಕೊನೆಯ ದಿನ ಜಗದ್ಗುರುಗಳ ಶುಭಾಶಿರ್ವಾದದ ಸಂದೇಶದೊಂದಿಗೆ ಶರನ್ನವರಾತ್ರಿ ಸಂಪನ್ನವಾಗಲಿದೆ ಎಂದರು.
1992ರಲಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ನಿಡಗುಂದಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಿದ್ದು, ಅಂದಿನಿಂದ ಇಲ್ಲಿಯವರೆಗೆ ಪ್ರತಿವರ್ಷ ದಸರಾ ಮಹೋತ್ಸವವನ್ನು ಭಕ್ತರು ನಡೆಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ಕಡೂರು ಪಟ್ಟಣದಲ್ಲಿ ( ಸೆ.21 ರಿಂದ 30ರವರೆವಿಗೆ ) 26 ನೇ ದಸರಾ ಮಹೋತ್ಸವ ನಡೆಯಲಿದೆ. ಮಹೋತ್ಸವವು ಜಾತ್ಯತೀತವಾಗಿ, ಪಕ್ಷಾತೀತವಾಗಿ ನಡೆಯುವಂತೆ ಸಮಾಜದ ಎಲ್ಲ ವರ್ಗದವರು, ಸಮುದಾಯದವರು ಸಕ್ರಿಯವಾಗಿ ಭಾಗವಹಿಸುವ ಅವಕಾಶವಿದೆ. ಲೋಕಕಲ್ಯಾಣಕ್ಕಾಗಿ 10 ದಿನಗಳ ಕಾಲ ಬೆಳಗ್ಗೆ ಗುರುಗಳಿಂದ ಇಷ್ಟಲಿಂಗ ಪೂಜೆ ನಡೆಯಲಿದೆ. ಭಕ್ತರಿಗೆ ಧಾರ್ಮಿಕ ಸಂಸ್ಕಾರ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.
ಶಿವನಿಲ್ಲದ ಶಕ್ತಿಯಾಗಲು, ಶಕ್ತಿಇಲ್ಲದ ಶಿವನಾಗಲು ಯಾರು ಬಯಸುವುದಿಲ್ಲ "ಶಿವಶಕ್ತಿ' ಯಿಂದ ಜಗತ್ತು ನಿರ್ಮಾಣಗೊಂಡಿದೆ. ಆಧುನಿಕ, ವೈಚಾರಿಕತೆಯ ಯುಗದಲ್ಲಿ ಸಂಪ್ರದಾಯ ಪರಂಪರೆ ಉಳಿಸಿಬೆಳೆಸುವ ಜವಾಬ್ದಾರಿ ಪೀಠಕ್ಕೆ ಸೇರಿದೆ. ಆದ್ದರಿಂದ ಶಾಂತಿ ನೆಮ್ಮದಿಯ
ಬದುಕಿಗೆ ಆಧ್ಯಾತ್ಮದ ಹಸಿವು ಇಲ್ಲದೆ ಹೋದರೆ ಜೀವನ ನಿರರ್ಥಕ. ಜೀವನ ವಿಕಾಸಕ್ಕೆ ಧರ್ಮ ದಿಕ್ಸೂಚಿಯಾಗಿದ್ದು ಸನ್ಮಾರ್ಗದಲ್ಲಿ ಕರೆದೊಯ್ಯುವ ಪಥವಾಗಿದೆ. ವೀರಶೈವ ಧರ್ಮ ಆಚಾರ ವಿಚಾರ ಪ್ರಧಾನ ಧರ್ಮವಾಗಿದ್ದು ಸಾಮಾಜಿಕ ಸಂವಿಧಾನಶೀಲ ವ್ಯಕ್ತಿತ್ವವನ್ನು ಒಳಗೊಂಡಿರುತ್ತದೆ.
ಶ್ರೀ ಜಗದ್ಗುರು ರೇಣುಕಚಾರ್ಯರು ಭೋದಿಸಿದ ತತ್ವಸಿದ್ದಾಂತಗಳನ್ನು ಇಂದಿಗೆ ಅಷ್ಟೆ ಅಲ್ಲ ಮುಂದಿನ ಭವಿಷ್ಯತ್ತಿಗೂ ಕೂಡ ದಾರಿ ದೀಪವಾಗಿದೆ. ಸಕಲ ಜೀವಾತ್ಮದ ಒಳಿತನ್ನು ಮಾಡುವುದು ವೀರಶೈವ ಧರ್ಮದ ಗುರಿಯಾಗಿದೆ ಎಂದರು. ಕಡೂರು ಪಟ್ಟಣದಲ್ಲಿ ನಡೆಯಲಿರುವ 26 ನೇ ದಸರಾ ಮಹೋತ್ಸವವು ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಯಶಸ್ವಿಯಾಗಲಿ ಎಂಬ ಆತ್ಮವಿಶ್ವಾಸದಿಂದ ದಸರಾ ಮಹೋತ್ಸವ ಸಮಿತಿಯ ಎಲ್ಲ ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗಿ ಎಂದು ಆಶಿಸಿದರು. ದಸರಾ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್‌.ಎಂ.ಲೋಕೇಶ್‌, ಸಾಣೆಹಳ್ಳಿ ಆರಾಧ್ಯರು, ಕುಪ್ಪಾಳು ರೇಣುಕರಾಧ್ಯ, ನಂಜುಂಡರಾಧ್ಯ, ಶಿಕ್ಷಕ ಯತೀಶ್‌, ಪೊಲೀಸ್‌ ವೇದಮೂರ್ತಿ, ಕುಬೇರಣ್ಣ, ಹೂವಿನ ಗೋವಿಂದಪ್ಪ ಮತ್ತಿತರರು ಇದ್ದರು.
ಗರ್ಭಿಣಿಯರಿಗೆ ಯಾಕೆ ವಾಕರಿಕೆ ಬರುತ್ತೆ ಗೊತ್ತಾ? | Satwadhara News
Home Health ಗರ್ಭಿಣಿಯರಿಗೆ ಯಾಕೆ ವಾಕರಿಕೆ ಬರುತ್ತೆ ಗೊತ್ತಾ?
ಗರ್ಭಿಣಿಯರಿಗೆ ಯಾಕೆ ವಾಕರಿಕೆ ಬರುತ್ತೆ ಗೊತ್ತಾ?
ಬಹುತೇಕ ಗರ್ಭಿಣಿಯರು ತಮ್ಮ ಪ್ರಥಮ ಗರ್ಭಾವಸ್ಥೆಯಲ್ಲಿ ವಾಕರಿಕೆ ಅಥವಾ ವಾಂತಿಯಿಂದ ಬಳಲುತ್ತಾರೆ. ಅತಿಯಾದ ತೊಂದರೆಗೆ ಒಳಪಡಿಸದೆ, ಚಿಕಿತ್ಸೆಯ ಆವಶ್ಯಕತೆ ಇಲ್ಲದೆ ಕ್ರಮೇಣ ಕಡಿಮೆಯಾಗುವ ಈ ಲಕ್ಷಣವು ಕೆಲವರಲ್ಲಿ ಮಾತ್ರ ಹೆಚ್ಚಾದ ವಾಂತಿಯ ವೇಗದಿಂದಾಗಿ ವಿಶೇಷ ಚಿಕಿತ್ಸೆ ಪಡೆಯುವಂತೆ ಮಾಡುತ್ತದೆ. ಅತಿಯಾದ ವಾಂತಿಯಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ದೈಹಿಕವಾಗಿ ಬಳಲಬೇಕಾಗುತ್ತದೆ.
ಇದು ಯಾಕಾಗಿ?: ಗರ್ಭಾವಸ್ಥೆಯ ಮೊದಲ ಕೆಲವು ತಿಂಗಳುಗಳಲ್ಲಿ ವಾಕರಿಕೆಯ ಮನೋಭಾವ, ಸುಸ್ತು, ಹೊಟ್ಟೆನೋವು, ಆಹಾರಸೇವನೆಯ ಮೇಲೆ ನಿರಾಸಕ್ತಿ, ರುಚಿ ಇಲ್ಲದಿರುವುದು ಹಾಗೂ ವಾಂತಿಯಿಂದ ಗರ್ಭಿಣಿ ಬಳಲುತ್ತಾಳೆ. ಗರ್ಭಾವಸ್ಥೆಯಲ್ಲಿನ ಸಹಜ ಕ್ರಿಯೆಯಾದ ಇದಕ್ಕೆ ಮಾರ್ನಿಂಗ್ ಸಿಕ್​ನೆಸ್ ಎನ್ನಲಾಗುವುದು. ಬೆಳಗ್ಗೆ ಮಾತ್ರವಲ್ಲದೆ ದಿನದ ಯಾವುದೇ ಸಮಯದಲ್ಲೂ ಬರಬಹುದಾದ ಈ ಲಕ್ಷಣಗಳು ಹೆಚ್ಚಿನವರಲ್ಲಿ ಒಂದರಿಂದ ನಾಲ್ಕು ಗಂಟೆಗಳ ಕಾಲ ಇದ್ದು ನಂತರ ಬೇಗ ಮರೆಯಾಗುತ್ತದೆ.
ಆದರೆ ಕೆಲವರಲ್ಲಿ ಸತತ, ದೀರ್ಘಕಾಲಿಕ ಹಾಗೂ ಅತಿಯಾದ ವಾಂತಿಯಿಂದಾಗಿ ದೇಹವು ಸುಸ್ತಾಗುತ್ತದೆ. ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಗರ್ಭಾವಸ್ಥೆಯ ಒಂಭತ್ತು ವಾರಗಳ ಮೊದಲು ವಾಂತಿಯೊಂದಿಗೆ ಸುಸ್ತು ವ್ಯಕ್ತವಾಗುತ್ತದೆ. ಹತ್ತರಲ್ಲಿ ಒಂಭತ್ತು ಸ್ತ್ರೀಯರಲ್ಲಿ ಈ ಎಲ್ಲ ಲಕ್ಷಣಗಳು 16 ವಾರದೊಳಗೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಆದರೆ ಕೆಲವು ಸ್ತ್ರೀಯರಲ್ಲಿ ಮಾತ್ರ ಗರ್ಭಾವಸ್ಥೆಯ ಪರ್ಯಂತ ಈ ಲಕ್ಷಣಗಳು ಮುಂದುವರೆಯುತ್ತವೆ. ಅತಿ ವಾಂತಿ, ಸುಸ್ತು ಸ್ತ್ರೀಯನ್ನು ದೈಹಿಕವಾಗಿ ದುರ್ಬಲಗೊಳಿಸಿ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಮತ್ತು ನಿತ್ಯ ದೈನಂದಿನ ಚಟುವಟಿಕೆಗಳಿಗೆ ತೊಡಕು ಉಂಟು ಮಾಡುತ್ತದೆ.
ಅತಿಯಾದ ವಾಂತಿಯ ಪರಿಣಾಮ: ನೂರರಲ್ಲಿ ಒಬ್ಬ ಗರ್ಭಿಣಿಯಲ್ಲಿ ಅತಿಯಾದ ಸುಸ್ತು, ವಾಂತಿ (ದಿನದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ) ಬಹಳ ದಿನಗಳ ಕಾಲ ಇರುವುದರಿಂದ ದೇಹದಲ್ಲಿನ ನೀರಿನಾಂಶದ ಕೊರತೆ ಉಂಟಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಜೀವಸತ್ವಗಳ ಕೊರತೆಯೂ ಉಂಟಾಗಬಹುದು. ಸರಿಯಾಗಿ ಆಹಾರ ಸೇವಿಸದ ಪರಿಣಾಮ ದೇಹವು ಶೇಖರಿತ ಕೊಬ್ಬಿನಾಂಶವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಇದರಿಂದಾಗಿ ದೇಹವು ಕೀಟೋನ್ ಅಂಶವನ್ನು ಮೂತ್ರದಲ್ಲಿ ಕಳೆದುಕೊಳ್ಳುತ್ತದೆ. ಅತಿಯಾದ ವಾಂತಿಯಿಂದಾಗಿ ಗರ್ಭಿಣಿಯಲ್ಲಿ ಆಗುವ ಈ ಅಪಾಯಕಾರಿ ಅವಸ್ಥೆಯನ್ನು ಹೈಪರ್ ಎಮಿಸಿಸ್ ಗ್ರಾವಿಡೋರಮ್ ಎನ್ನಲಾಗುತ್ತದೆ. ಮೂತ್ರಮಾರ್ಗದ ಸೋಂಕು, ಅಧಿಕ ಥೈರಾಯ್್ಡ ಪ್ರಮಾಣ ಹಾಗೂ ಸ್ಥೂಲಕಾಯದ ಗರ್ಭಿಣಿಯರು ಈ ಅವಸ್ಥೆಗೆ ತುತ್ತಾಗಬಹುದು. ಸಮತೋಲನ ಆಹಾರದ ಜೊತೆಗೆ ಅಧಿಕ ನೀರಿನಾಂಶದಿಂದ ಕೂಡಿದ ಆಹಾರವನ್ನು ಸೇವಿಸಬೇಕು. ಅಲ್ಲದೆ ತ್ವರಿತವಾಗಿ ಜೀವಸತ್ವಗಳ ಪೂರೈಕೆಯ ಅಗತ್ಯವಿದ್ದು, ಇಂಥ ಅವಸ್ಥೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದು ಒಳಿತು.
ನಿರ್ದಿಷ್ಟ ಕಾರಣ ಇಲ್ಲವಾದರೂ ಗರ್ಭಿಣಿಯಲ್ಲಿ ಆಗುವ ಹಲವು ಹಾಮೋನ್​ಗಳ ಬದಲಾವಣೆಯಿಂದಾಗಿ ಆಗಬಹುದು. ಕೆಲವೊಂದು ಅವಸ್ಥೆಯಲ್ಲಿ ಹಲವಾರು ಕಾರಣಗಳಿಂದಾಗಿ ವಾಂತಿಯ ವೇಗ ಹೆಚ್ಚಾಗಬಹುದು. ಚೊಚ್ಚಲ ಗರ್ಭದಲ್ಲಿ, ಅವಳಿ ಗರ್ಭವಾಗಿದ್ದಲ್ಲಿ, ಸ್ತ್ರೀಯು ಮೈಗ್ರೇನ್ ರೋಗದಿಂದ ಬಳಲುತ್ತಿದ್ದಲ್ಲಿ, ಗರ್ಭಾವಸ್ಥೆಯಲ್ಲಿನ ವಾಂತಿ ಹೆಚ್ಚಾಗುತ್ತದೆ. ಅಲ್ಲದೆ ಅತಿಯಾದ ಮಾನಸಿಕ ಒತ್ತಡ, ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸಿದ ಮಹಿಳೆಯರಲ್ಲಿ ವಾಂತಿಯೂ ಹೆಚ್ಚಾಗಿ ಕಾಡುತ್ತದೆ.
ಮಗುವಿನ ಮೇಲೆ ದುಷ್ಪರಿಣಾಮ ಆಗಬಹುದೆ?
ಮಗುವಿನ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಮಗುವಿನ ಪೋಷಕಾಂಶವು ತಾಯಿಯ ಶೇಖರಿತ ಪೋಷಕಾಂಶಗಳಿಂದ ಲಭ್ಯವಾಗುವುದರಿಂದ ವಾಂತಿ ಮಾಡುವ ಪ್ರಕ್ರಿಯೆ ಅಥವಾ ಕಷ್ಟಪಟ್ಟು ಆಗುವ ವಾಂತಿಯ ಪ್ರವೃತ್ತಿಯಿಂದ ಗರ್ಭಕ್ಕೆ ಯಾವುದೇ ಪರಿಣಾಮವಾಗದು. ಹಲವು ಅಧ್ಯಯನಗಳ ಪ್ರಕಾರ ಪ್ರಥಮ ಅವಧಿಯಲ್ಲಾಗುವ ವಾಂತಿಯು ಆರೋಗ್ಯಕರ ಗರ್ಭದ ಸೂಚಕ ಎಂದು ತಿಳಿದುಬಂದಿದೆ. ಆದರೆ ನಿರಂತರವಾಗಿ ವಾಂತಿಯು ಹೆಚ್ಚಾಗಿ ಹೈಪರ್ ಎಮಿಸಿಸ್ ಗ್ರಾವಿಡೋರಮ್ ಎಂಬ ಹಂತ ತಲುಪಿದರೆ, ಅನಾರೋಗ್ಯ ಹಾಗೂ ನೀರಿನಾಂಶದ ಕೊರತೆಯಿಂದಾಗಿ ಗರ್ಭದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಗುವಿನ ತೂಕ ಕಡಿಮೆಯಾಗುತ್ತದೆ.
ವ್ಯವಸ್ಥಿತ ರೀತಿಯಲ್ಲಿ ಗ್ರಾಮಸಭೆ ನಡೆಸಲು ಅನುವುಮಾಡಿಕೊಟ್ಟ ಗ್ರಾಮಸ್ಥರಿಗೆ ಅಭಿನಂದನೆ: ರವೀಂದ್ರ ಪೂಜಾರಿ | ಸುದ್ದಿ ಬೆಳ್ತಂಗಡಿ
in: ಅಧಿಕಾರಿಗಳ ಕಾರ್ಯಕ್ರಮ, ಗ್ರಾಮ ಸಭೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಕಟಣೆ, ಪ್ರಚಲಿತ, ಬಿಸಿ ಬಿಸಿ, ಮಾಹಿತಿ, ವರದಿ, ವಿಶೇಷ ಸುದ್ದಿ, ಸಾಮಾನ್ಯ
ಮನೆಕಟ್ಟಲು ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯಿಂದ ಪರವಾನಿಗೆ.
ಉದ್ಯೋಗಖಾತರಿ ಮೊತ್ತ ಶೀಘ್ರ ಬಿಡುಗಡೆ ನೀರಿನ ಪೈಪ್‌ಲೈನ್ ಅಳವಡಿಕೆ ಮನೆ ರಿಪೇರಿಗೆ ಸಹಾಯಧನ. ಕಾಡುಪ್ರಾಣಿಗಳಿಗೆ (ಕಾಡುಕೋಣ) ತಡೆಬೇಲಿ, ಕೋತಿಗಳ ತೊಂದರೆ ತಪ್ಪಿಸುವುದು.
ಎಲ್ಲಾ ಪಿಂಚಣಿದಾರರು ಕಡ್ಡಾಯ ಆಧಾರ್ ಜೋಡನೆ.
ಅರಣ್ಯ ಇಲಾಖೆಯಿಂದ ಸಸಿಗಳಿಗೆ ಪ್ರೋತ್ಸಾಹ ಧನ.
ಮಿಶ್ರತಳಿ, ಕರುಸಾಕಣೆ, ಆಡು ಸಾಕಣೆ ಸಹಾಯಧನ.
ಕೃಷಿ ಇಲಾಖೆಯಿಂದ ಶೇ.50% ಸುಣ್ಣ, ಹುಲ್ಲು ಕಟಾವು ಯಂತ್ರ (ಸಬ್ಸಿಡಿ ದರದಲ್ಲಿ), 100% ಸಹಾಯಧನದಲ್ಲಿ ದ್ವಿದಳದಾನ್ಯ ಬಿತ್ತನೆ ಬೀಜ.
ಆರ್‌ಟಿಇ ಉಚಿತ ಶಿಕ್ಷಣ ನೊಂದಾವಣೆ.
ನವೋದಯ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ.
ಆರೋಗ್ಯ ಇಲಾಖೆಯಿಂದ ಜನನಿ ಸುರಕ್ಷ ಯೋಜನೆ, ತಾಯಿಭಾಗ್ಯ, ನಗು-ಮಗು ಯೋಜನೆ, ಆರೋಗ್ಯ ಕಾರ್ಡು.
ನಾರಾವಿ: ಯಾವುದೇ ಸಮಸ್ಯೆಗಳು ಇದ್ದಲ್ಲಿ ಗ್ರಾಮಸಭೆಯಲ್ಲಿ ಮನವರಿಕೆ ಮಾಡಿದಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ. ಜನಪ್ರತಿನಿಧಿಗಳಾದ ನಾವು ನಿಮ್ಮ ಯಾವುದೇ ರೀತಿಯ ಬೇಡಿಕೆಗಳು ಇದ್ದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಸದಾ ಸಿದ್ದರಿದ್ದೇವೆ ಎಂದರು ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು ಹೇಳಿದರು.
ಅವರು ಮಾ.13ರಂದು ನಾರಾವಿ ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ ವ್ಯವಸ್ಥಿತ ರೀತಿಯಲ್ಲಿ ಗ್ರಾಮಸಭೆ ನಡೆಸಲು ಸರ್ವರು ಸಹಕರಿಸಿದರೆ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ ಎಂದು ಗ್ರಾಮಸಭೆ ನಡೆಸಲು ಉತ್ತಮ ರೀತಿಯಲ್ಲಿ ಸ್ಪಂದಿಸಿದಕ್ಕೆ ಅಭಿನಂದನೆ ಸಲ್ಲಿಸಿದರು. ಕೇವಲ ಅರ್ಜಿಗಳನ್ನು ಕೊಟ್ಟರೆ ಸಾಲದು ಅದು ಏನು ಆಗಿದೆ ಎಂಬುದು ಆಗಾಗ ಪಂಚಾಯತ್‌ಗೆ ಭೇಟಿ ಕೊಟ್ಟು ಪರಿಷ್ಕರಿಸುವುದು ಗ್ರಾಮಸ್ಥರಾದ ನಿಮ್ಮ ಕರ್ತವ್ಯ ಎಂದರು.
ಜಿ.ಪಂ. ಸದಸ್ಯರಾದ ಧರಣೇಂದ್ರ ಕುಮಾರ್ ಮಾತನಾಡಿ ಇದು ನಮ್ಮ ವಿಧಾನಸಭೆ ಇದ್ದ ಹಾಗೆ, ಗ್ರಾಮ ಸಭೆಯಲ್ಲಿ ನಿಮ್ಮ ದೂರು, ಬೇಡಿಕೆಗಳನ್ನು ನೀಡುವ ಸಭೆಯೇ ಗ್ರಾಮಸಭೆ. ಅಭಿವೃದ್ಧಿ ಬಗ್ಗೆ ಚರ್ಚಿಸಲು ಗ್ರಾಮಸಭೆಯಲ್ಲಿ ಅವಕಾಶವಿದೆ ಎಂದರು. ಜಿಲ್ಲಾ ಪಂಚಾಯತ್ ಅನುದಾನದಿಂದ ಸಿಗುವ ಅನುದಾನವನ್ನು ಒದಗಿಸುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಾರಾವಿ ಮರೋಡಿ ರಸ್ತೆ ಅಭಿವೃದ್ಧಿ, ಕುತ್ಲೂರು-ಅಬ್ಬಿಪಾಲ್ಸ್ ರಸ್ತೆ ಅಭಿವೃದ್ಧಿ, ಸಬ್‌ಸ್ಟೇಷನ್‌ಗೆ ಜಾಗ ಮಂಜೂರಾಗಿದ್ದು ಸದಸ್ಯ ಉದಯ ಹೆಗ್ಡೆ ಪ್ರಸ್ತಾಪಿಸಿದಾಗ ಕೂಡಲೇ ಸ್ಪಂದಿಸುವುದಾಗಿ ಸಭೆಯಲ್ಲಿ ಭರವಸೆ ನೀಡಿದರು. ಕಂದಾಯಧಿಕಾರಿ ಮಾತನಾಡಿ ಕುರಿಯಾಡಿ ಅಂಗನವಾಡಿ ಯ ದಾಖಲೆ ಪತ್ರಗಳು ಇನ್ನು ಸರಿ ಆಗಿಲ್ಲದ ಕಾರಣ ಬಾಬು ಮಲೆಕುಡಿಯ ಇವರು ಜಾಗವನ್ನು ಸರಕಾರಕ್ಕೆ ಹಸ್ತಾಂತರಿಸಿದರಿಂದ ಅವರ ಪಟ್ಟ ಜಾಗದಲ್ಲಿ ಅಂಗನವಾಡಿ ಕಟ್ಟಡ ಇದೇ ಪಂಚಾಯತ್‌ನಿಂದ ನಿರ್ಣಯ ಮಾಡಿ ಕಳಿಸಿದಲ್ಲಿ ಕೂಡಲೆ ದಾಖಲೆಗಳನ್ನು ಪಡೆಯುವಲ್ಲಿ ಸಹಕರಿಸುವುದಾಗಿ ಮತ್ತು ಪಂಚಾಯತ್‌ಗೆ ಸೇರಿದ ಜಾಗ ಇದ್ದಲ್ಲಿ ಸರ್ವೆ ಮಾಡಿಕೊಡಬೇಕಾಗಿ ಬೇಡಿಕೆ ಇಟ್ಟಲ್ಲಿ ಕೂಡಲೇ ಸರ್ವೆ ಮಾಡಿಕೊಡು ವುದಾಗಿ ತಿಳಿಸಿದರು. ಉಪ ಅರಣ್ಯಾಧಿ ಕಾರಿ, ಅರಣ್ಯ ರಕ್ಷಕ – ವನ್ಯಜೀವಿ ವಿಭಾಗ, ಪಶು ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೆಸ್ಕಾಂ, ಆರೋಗ್ಯ ಇಲಾಖೆ, ಮಾಹಿತಿ ನೀಡಿದರು. ನೋಡಲ್ ಅಧಿಕಾರಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ಶುಭಾಶ್ ಜಾದಾವ್ ಮಾತನಾಡಿ, ತಾಲೂಕಿನಲ್ಲಿ 350 ಶಾಲೆಗಳಿದ್ದು 43,072 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಒಟ್ಟು 808 ಶಿಕ್ಷಕರ ಹುದ್ದೆ ಹೊಂದಿದ್ದು 740 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಕೊರತೆ ಇರುವ ಶಿಕ್ಷಕರನ್ನು ಕೂಡಲೇ ನೇಮಕಾತಿಯ ಬಗ್ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ತಾಲೂಕಿನಲ್ಲಿ ಆರ್.ಟಿ.ಇ. ಯೋಜನೆ ಯಡಿ ಉಚಿತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. 17 ಶಾಲೆಗಳಿಂದ 260 ಶೀಟುಗಳು ಲಭ್ಯವಿದೆ. ಮುಗುಳಿಯಲ್ಲಿ ನವೋದಯ ವಸತಿ ಶಾಲೆ ಪ್ರಾರಂಭವಾಗಿದೆ. ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಇಲ್ಲಿ ಅವಕಾಶವಿದೆ ಎಂದು ತಿಳಿಸಿದರು. ಎಕೌಂಟೆಂಟ್ ಮಧು ಹೆಚ್.ಎಂ. ವರದಿ ಮಂಡಿಸಿದರು. ಪಿ.ಡಿ.ಒ. ನಿರ್ಮಲ್ ಕುಮಾರ್ ಸ್ವಾಗತಿಸಿ ನಿರೂಪಿಸಿದರು. ಪಂಚಾಯತ್ ಸದಸ್ಯ ಅನಿಲ್ ರೋಶನ್ ವಂದಿಸಿದರು. ಸಿಬ್ಬಂದಿ ಸತೀಶ್ ವಾರ್ಡ್ ಸಭೆಗಳ ಬೇಡಿಕೆ ಮತ್ತು ದೂರುಗಳ ಪಟ್ಟಿ ಓದಿ ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಯಶೋದಾ, ಸದಸ್ಯರಾದ ಉದಯ ಹೆಗ್ಡೆ, ಶ್ರೀಮತಿ ಸುಜಲತಾ, ಸಂಜೀವ, ಶ್ರೀಮತಿ ಎಲಿಜಾ, ಶ್ರೀಮತಿ ಪ್ರಮೀಳ ಭಟ್, ಶ್ರೀಮತಿ ಭಾರತಿ, ಶ್ರೀಮತಿ ಜಯಂತಿ, ಶ್ರೀಮತಿ ವಸಂತಿ, ಕುಮಾರಿ ಗಿರಿಜಾ ಉಪಸ್ಥಿತರಿದ್ದರು.
ನೆರೆ ಹಾವಳಿಯಿಂದ ಕರ್ನಾಟಕ ನಲುಗಿ ಹೋದರೂ ಸರಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ: ಸಿದ್ದು | Udayavani – ಉದಯವಾಣಿ
Team Udayavani, Oct 17, 2020, 8:27 PM IST
ಬೆಂಗಳೂರು : ನೆರೆ ಹಾವಳಿಯಿಂದಾಗಿ ಕಲ್ಯಾಣ ಕರ್ನಾಟಕ ನಲುಗಿ ಹೋಗಿದ್ದರೂ ಸಂತ್ರಸ್ತರ ಮೊರೆ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಹದಿಂದ ಕಲ್ಯಾಣ ಕರ್ನಾಟಕ ಕೊಚ್ಚಿ ಹೋಗುತ್ತಿದೆ. ಜನ ತಮ್ಮ ಜೀವ ಉಳಿದರೆ ಸಾಕು ಎಂದು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತ್ರರ ಮೊರೆ ಆಲಿಸಬೇಕಾದ, ಅವರಿಗೆ ಸಾಂತ್ವನ ಹೇಳಬೇಕಾದ ಸಚಿವರುಗಳು ನಾಪತ್ತೆಯಾಗಿದ್ದಾರೆ. ಕೆಲ ಸಚಿವರು ಉಪ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿ ಪ್ರವಾಹದ ಬಗ್ಗೆ ಮೈ ಮರೆತಿದೆ ಎಂದು ಅವರು ಟೀಕಿಸಿದ್ದಾರೆ.
ಇಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಇನ್ನಾದರೂ ಸರ್ಕಾರ ಪ್ರವಾಹ ಸಂತ್ರಸ್ತ್ರರನ್ನು ಕಣ್ತೆರೆದು ನೋಡಲಿ. ಕೂಡಲೇ ಅವರ ನೆರವಿಗೆ ಧಾವಿಸಲಿ. ಕೊರೊನಾ ನೆಪ ಹೇಳಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಬೆಂಗಳೂರಿನಲ್ಲಿ ಸಭೆಗಳನ್ನು ನಡೆಸುವುದನ್ನು ಬಿಟ್ಟು ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ನೊಂದವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ:ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ನಿರ್ಮಾಣವಾಗುತ್ತಿದೆ : ಡಿಕೆಶಿ
ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :
ಅತಿವೃಷ್ಟಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 10-15 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ರೀತಿಯ ದಪ್ಪ ಚರ್ಮದ ಸರ್ಕಾರವನ್ನು ಎಂದೂ ನೋಡಿಲ್ಲ. ಪ್ರವಾಹದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಮೊದಲೇ ಹೇಳಿದ್ದರೂ ಸರ್ಕಾರ ಕಿವಿಗೊಡಲಿಲ್ಲ. ನಮ್ಮ ಸಲಹೆಗಳನ್ನು ಗಂಭೀರವಾಗಿಯೂ ಪರಿಗಣಿಸುವುದಿಲ್ಲ. ಎಷ್ಟೇ ಪತ್ರ ಬರೆದರೂ ಉತ್ತರ ನೀಡುವುದಿಲ್ಲ.
ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಹಣ ಮಾಡುವುದರಲ್ಲಿಯೇ ಅವರು ಮಗ್ನರಾಗಿರುವುದರಿಂದ ಮಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನರ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ. ಚುನಾವಣೆ ಬಂದಾಗ ಹಣ ಖರ್ಚು ಮಾಡಿ ಗೆಲ್ಲಬಹುದು ಎಂಬ ಭಾವನೆಯಲ್ಲಿ ಜನರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ನಟಿ ಕಂಗನಾ ಹಾಗೂ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ಧ FIR ದಾಖಲು
ಈಗ ಚುನಾವಣೆ ಅವರಿಗೆ ಮುಖ್ಯ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಗೆದ್ದರೆ ಪ್ರತಿಪಕ್ಷಗಳು ಎಷ್ಟೇ ಆರೋಪ ಮಾಡಿದರೂ ನಾವು ಗೆಲ್ಲಲಿಲ್ಲವೇ ಎಂದು ಹೇಳುತ್ತಾರೆ. ಆದರೆ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ಪ್ರವಾಹದಿಂದ ಕಲ್ಯಾಣ ಕರ್ನಾಟಕದ ಜನ ತೀವ್ರ ತೊಂದರೆಗೆ ಸಿಲುಕಿದ್ದರೂ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿಯ 25 ಸಂಸದರು ನೆರವು ಒದಗಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿಲ್ಲ. ಪ್ರಧಾನಿಯವರನ್ನು ಭೇಟಿಯಾಗಿ ಜನರ ಕಷ್ಟ ಮನವರಿಕೆ ಮಾಡಿಕೊಡುತ್ತಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸು ಅನ್ವಯ ರಾಜ್ಯಕ್ಕೆ ಹಣಕಾಸು ಒದಗಿಸುವಲ್ಲಿಯೂ ಅನ್ಯಾಯವಾಗಿದೆ. ಆ ಬಗ್ಗೆಯೂ ಸಂಸದರು ಚಕಾರ ಎತ್ತುತ್ತಿಲ್ಲ. ಜಿಎಸ್‍ಟಿ ಪರಿಹಾರದ ಬಗ್ಗೆಯೂ ಸಂಸದರು ಮಾತನಾಡುತ್ತಿಲ್ಲ. ಕೋಲೆ ಬಸವನ ರೀತಿ ತಲೆ ಆಡಿಸುತ್ತಿರುವ ಸಂಸದರು ಮುಖ್ಯಮಂತ್ರಿಗಳನ್ನು ಪ್ರಧಾನಿಯವರ ಬಳಿಗೆ ಕೊಂಡೊಯ್ದು ಪರಿಹಾರಕ್ಕೆ ಒತ್ತಾಯಿಸುವ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ:ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆ ಪ್ರಯೋಗಕ್ಕೆ ಕೊನೆಗೂ ಅನುಮತಿ
ಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಪ್ರಧಾನಿಯವರು ಕನ್ನಡಿಗರ ಪರ ಇದ್ದಾರೆ ಎಂದರ್ಥವಲ್ಲ. ನೆರೆ ಪೀಡಿತ ಸ್ಥಳಗಳಿಗೆ ನಾನು ಭೇಟಿ ನೀಡುತ್ತೇನೆ.
ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಘಟನೆ ಕುರಿತು ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ಸಂಪತ್ ರಾಜ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸುತ್ತೇನೆ. ಬಿಜೆಪಿಯವರ ತಪ್ಪಿನಿಂದ, ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ನಾನು ವಿಧಾನಸಭೆಯಲ್ಲಿ ಹೇಳಿದ್ದೇನೆ. ಆ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ.
ದೂರು ಕೊಟ್ಟ ತಕ್ಷಣ ನವೀನ್ ನನ್ನು ಬಂಧಿಸಿದ್ದರೆ ಗಲಭೆ ಸಂಭವಿಸುತ್ತಿರಲಿಲ್ಲ. ನವೀನ್ ಬಂಧನಕ್ಕೆ ಪೊಲೀಸರು ವಿಳಂಬ ಮಾಡಲು ಕಾರಣ ಏನು ? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಪೊಲೀಸರ ವೈಫಲ್ಯ ಸಾಕಷ್ಟಿದೆ. ಘಟನೆ ಹಿಂದೆ ಎಸ್‍ಡಿಪಿಐ ಕೈವಾಡ ಇದೆ ಎಂದು ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಅಶೋಕ್ ಹೇಳಿದ್ದರು. ಈಗ ಅವರು ಏನು ಹೇಳುತ್ತಿದ್ದಾರೆ. ನಾವು ಯಾವುದನ್ನು ನಂಬಬೇಕು ಎಂದು ಹೇಳಿದರು.
ಇದನ್ನೂ ಓದಿ:ಐಪೋನ್-12 ಸರಣಿಯ 5G ಪೋನ್ ಗಳ ಬ್ಯಾಟರಿ ಸಾಮರ್ಥ್ಯ ಎಷ್ಟು ? ಇಲ್ಲಿದೆ ಮಾಹಿತಿ
ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿ ಕುಸುಮಾ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಸುಳ್ಳು ಕೇಸು ದಾಖಲು ಮಾಡಿದ್ದಾರೆ. ಪೊಲೀಸರನ್ನು ತಳ್ಳಿ ನಾನು ಮತ್ತು ಅಭ್ಯರ್ಥಿ ಚುನಾವಣಾಧಿಕಾರಿಗಳ ಕಚೇರಿ ಒಳಗೆ ಹೋಗಿರುವುದಾಗಿ ಎಫ್ ಐ ಆರ್ ನಲ್ಲಿ ತಿಳಿಸಲಾಗಿದೆ. ಈ ಘಟನೆ 11.15 ರಲ್ಲಿ ನಡೆದಿದೆ ಎಂದಿದ್ದಾರೆ. ನಾನು ಚುನಾವಣಾಧಿಕಾರಿಗಳ ಕಚೇರಿ ಬಳಿಗೆ ಹೋದಾಗ 11.45 ಆಗಿತ್ತು. ಸರ್ಕಾರ ಉಪ ಚುನಾವಣೆಯಲ್ಲಿ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನಾವು ಗೇಟು ಅಥವಾ ಪೊಲೀಸರನ್ನು ತಳ್ಳಿಲ್ಲ. ಇದು ಸುಳ್ಳು ಆರೋಪ.
ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ. ಹೀಗಾಗಿ ಸಚಿವರುಗಳು ನನ್ನ ಬಗ್ಗೆ ಏನೇ ಟೀಕೆ ಮಾಡಿದರೂ ಐ ಡೋಂಟ್ ಕೇರ್.
ಬಡವರು ಮತ್ತು ಕೂಲಿ, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಆಹಾರ ಸಿಗಬೇಕು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಬಡವರು, ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಸರ್ಕಾರ ಕ್ಯಾಂಟೀನ್‍ಗಳನ್ನು ನಡೆಸಲಿ. ಕ್ಯಾಂಟೀನ್‍ಗಳನ್ನು ನಡೆಸಲು ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಲಿ. ಕೈಯ್ಯಲ್ಲಿ ಆಗದಿದ್ದರೆ ಸರ್ಕಾರ ಬಿಟ್ಟು ಹೋಗಲಿ. ಅಳವುದು, ಅಸಹಾಯಕತೆ ವ್ಯಕ್ತಪಡಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲ.
ಇಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಿಗೆ ಹೋಗಿ ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಿ. ಕೊರೊನಾ ಇದೆ ಎಂಬ ನೆಪ ಹೇಳಿ ಬೆಂಗಳೂರಿನಲ್ಲೇ ಕುಳಿತು ಸಭೆಗಳನ್ನು ನಡೆಸಿದರೆ ಹೇಗೆ ? ಇಲ್ಲಿ ಮಾಡುವ ಸಭೆಯನ್ನು ಪ್ರವಾಹಪೀಡಿತ ಪ್ರದೇಶಳಿಗೆ ಹೋಗಿಯೇ ಮಾಡಲಿ ಎಂದು ಗುಡುಗಿದ್ದಾರೆ.
ಚಿಲ್ಲರೆದರ ಹಣದುಬ್ಬರ ಶೇಕಡ 3.77ಕ್ಕೆ ಏರಿಕೆ, ಕೈಗಾರಿಕಾ ಉತ್ಪಾದನೆ ಕುಸಿತ
October 12, 2018 7:16 PM
ಶುಕ್ರವಾರ (ಅ.12) ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಚಿಲ್ಲರೆ ದರ ಹಣದುಬ್ಬರ ಶೇ.3.77ಕ್ಕೇರಿದೆ. ಆದರೆ, ರಿಸರ್ವ್ ಬ್ಯಾಂಕಿನ ಹಣದುಬ್ಬರ ಮಿತಿಯಾದ ಶೇ.4ಕ್ಕಿಂತ ಕೆಳಮಟ್ಟದಲ್ಲೇ ಇದೆ. ಇದು ಇತ್ತೀಚೆಗೆ ಆರ್‌ಬಿಐ ಬಡ್ಡಿದರ ಏರಿಕೆ ಮಾಡದಿರುವ ನಿರ್ಧಾರವನ್ನು ಸಮರ್ಥಿಸಿದಂತಾಗಿದೆ
ಸೆಪ್ಟೆಂಬರ್ ತಿಂಗಳ ಗ್ರಾಹಕದರ ಹಣದುಬ್ಬರವು ಶೇ.3.77ಕ್ಕೆ ಏರಿದೆ. ಆಗಸ್ಟ್ ತಿಂಗಳಲ್ಲಿ ಇದು ಶೇ.3.69ರಷ್ಟಿತ್ತು. ಬಹುತೇಕ ಆರ್ಥಿಕ ತಜ್ಞರು ಅಂದಾಜು ಮಾಡಿದ್ದ ಶೇ.4ಕ್ಕಿಂತಲೂ ಕಡಮೆ ಮಟ್ಟದಲ್ಲಿದೆ. ಅಕ್ಟೋಬರ್ 3-9ರ ನಡುವೆ ರಾಯ್ಟರ್ ಸುದ್ದಿಸಂಸ್ಧೆ ನಡೆಸಿದ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 45 ಮಂದಿ ಆರ್ಥಿಕ ತಜ್ಞರು, ಚಿಲ್ಲರೆದರ (ಗ್ರಾಹಕದರ) ಹಣದುಬ್ಬರ ಶೇ.4ರಷ್ಟು ಆಗುತ್ತದೆಂದು ಅಂದಾಜಿಸಿದ್ದರು.
ಶುಕ್ರವಾರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಭಾರತೀಯ ರಿಸರ್ವ್ ಬ್ಯಾಂಕಿನ ಹಣದುಬ್ಬರ ಮಿತಿಯಾದ ಶೇ.4ಕ್ಕಿಂತ ಕೆಳಮಟ್ಟದಲ್ಲೇ ಇದೆ. ಇದು ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡದಿರುವ ನಿರ್ಧಾರವನ್ನು ಸಮರ್ಥಿಸಿದಂತಾಗಿದೆ. ಆರ್ಬಿಐ ಸಾಮಾನ್ಯವಾಗಿ ಬಡ್ಡಿದರ ಏರಿಸುವ ಅಥವಾ ಇಳಿಸುವ ನಿರ್ಧಾರವನ್ನು ಚಿಲ್ಲರೆದರ ಹಣದುಬ್ಬರ ಆಧರಿಸಿ ಮಾಡುತ್ತದೆ.
ಇದನ್ನೂ ಓದಿ : ಶೇಕಡ 5ಕ್ಕೇರಿದ ಚಿಲ್ಲರೆ ದರ ಹಣದುಬ್ಬರ, ತಗ್ಗಿದ ಕೈಗಾರಿಕಾ ಉತ್ಪನ್ನ
ಆಹಾರ ಪದಾರ್ಥಗಳ ಹಣದುಬ್ಬರವು ಆಗಸ್ಟ್‌ನಲ್ಲಿ 0.29ರಷ್ಟುಇದ್ದದ್ದು ಸೆಪ್ಟೆಂಬರ್‌ನಲ್ಲಿ ಶೇ.0.51ಕ್ಕೆ ಏರಿದೆ. ಆಗಸ್ಟ್ ತಿಂಗಳ ಚಿಲ್ಲರೆದರ ಹಣದುಬ್ಬರವು ಹತ್ತು ತಿಂಗಳಲ್ಲೇ ಕಡಿಮೆ ಮಟ್ಟಕ್ಕೆ ಅಂದರೆ, ಶೇ.3.69ಕ್ಕೆ ಇಳಿದಿತ್ತು. ಈ ಕಾರಣದಿಂದಾಗಿಯೇ ಅಕ್ಟೋಬರ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ಬಡ್ಡಿದರ ಏರಿಕೆ ಮಾಡದಿರಲು ಆರ್ಬಿಐ ನಿರ್ಧರಿಸಿತ್ತು. ಆದರೆ, ಆರ್ಬಿಐ ನಿರ್ಧಾರವು ಇಡೀ ಬಂಡವಾಳ ಪೇಟೆಯಲ್ಲಿ ತೀವ್ರ ಅಚ್ಚರಿ ಮೂಡಿಸಿತ್ತು. ಆರ್ಬಿಐ ಮುಂದೆ ಡಿಸೆಂಬರ್‌ನಲ್ಲಿ ಹಣಕಾಸು ನೀತಿ ಪರಾಮರ್ಶೆ ಮಾಡಲಿದೆ.
ಈ ನಡುವೆ, ಸರ್ಕಾರ ಕೈಗಾರಿಕಾ ಉತ್ಪನ್ನ ಸೂಚ್ಯಂಕ (ಐಐಪಿ) ಅಂಕಿ-ಅಂಶ ಬಿಡುಗಡೆ ಮಾಡಿದ್ದು ಆಗಸ್ಟ್ ತಿಂಗಳಲ್ಲಿ ಶೇ.4.3ಕ್ಕೆ ಕುಸಿದಿದೆ. ಜುಲೈ ತಿಂಗಳಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.6.6ರಷ್ಟಿತ್ತು. ಕೈಗಾರಿಕಾ ಉತ್ಪಾದನೆ ಕುಸಿತವು ಆರ್ಥಿಕ ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗಿರುವುದನ್ನು ಸೂಚಿಸುತ್ತದೆ.
ಅನಂತತಾನಂತವಾಗಿ.... ಅಗಲಿದ ನಾಯಕಗೆ ಗಣ್ಯರ ಅಶ್ರುತರ್ಪಣ | National leaders express their condolence to Ananth Kumar - Kannada Oneindia
| Updated: Monday, November 12, 2018, 10:16 [IST]