text
stringlengths 0
61.5k
|
---|
ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಜನರು ಡಿಎಂಕೆ ಪಕ್ಷವನ್ನು ಸಾರಾಸಗ ಟಾಗಿ ತಿರಸ್ಕರಿಸಿದ್ದಾರೆ. 'ದ್ರಾವಿಡ ಆದರ್ಶವಾದ'ವನ್ನು ಯುವಪೀಳಿಗೆ ಒಪು್ಪತ್ತಿಲ್ಲ. ಕರುಣಾ ರೂಪಿಸಿದ 'ಸೋಷಿಯಲ್ ಇಂಜಿನಿಯರಿಂಗ್' ಈಗ ಕೆಲಸ ಮಾಡುತ್ತಿಲ್ಲ. ಆದ್ದರಿಂದ, ದ್ರಾವಿಡ ಆಂದೋಲನ ಅಸ್ತಿತ್ವ ಕಳೆದುಕೊಳ್ಳಲಿದೆಯೇ? ಸ್ಟಾಲಿನ್ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರೆ? ಎಂಬೆಲ್ಲ ಅನುಮಾನಗಳಿಗೆ ಪ್ರಾಯಶಃ 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ದೊರೆಯಲಿದೆ. |
ಕರುಣಾಗಿಂತ ಸ್ಟಾಲಿನ್ ಸ್ವಲ್ಪ ಭಿನ್ನ ನಿಲುವು, ರಾಜಕೀಯ ದೃಷ್ಟಿಕೋನ ಹೊಂದಿದ್ದಾರೇನೋ ನಿಜ. ಆದರೆ ಪಕ್ಷದ ಹಲವು ನಾಯಕರೇ ಅವರನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂಬುದು ಸತ್ಯ. ಹೀಗಿರುವಾಗ ಡಿಎಂಕೆ ಮತ್ತೆ ಜನಮನ ಗೆಲ್ಲಬೇಕಾದರೆ ಸಾಕಷ್ಟು ಕಸರತ್ತಿನ ಜತೆಗೆ ತಾಜಾ ಚಿಂತನೆಗಳನ್ನು ಮಂಡಿಸಬೇಕಾದ, ಅಭಿವೃದ್ಧಿಯನ್ನೇ ಪ್ರಮುಖ ಕಾರ್ಯಸೂಚಿಯಾಗಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. |
ಕಾಂಗ್ರೆಸ್ನ ಸಂಘಟನೆ ಕೂಡ ಈ ರಾಜ್ಯದಲ್ಲಿ ನೆಲಕಚ್ಚಿದ್ದು, ಹೊಸ ಪದಾಧಿಕಾರಿಗಳನ್ನು ನೇಮಿಸಿ ಮರುಸಂಘಟನೆ ಮಾಡುವ ಒಲವನ್ನು ಪಕ್ಷದ ಹೈಕಮಾಂಡ್ ಜೂನ್ ತಿಂಗಳಲ್ಲೇ ತೋರಿತು. ಆ ಬಳಿಕ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ. ಜಿ.ಕೆ. ವಾಸನ್ 2016ರಲ್ಲಿ ಕಾಂಗ್ರೆಸ್ ತೊರೆದು ತಮಿಳು ಮನಿಲಾ ಕಾಂಗ್ರೆಸ್ ಸ್ಥಾಪಿಸಿದ ಮೇಲೆ ಕಾಂಗ್ರೆಸ್ನ ಕೆಲ ಪ್ರಮುಖ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಉಳಿದಿರುವ ಕೆಲ ನಾಯಕರಲ್ಲೇ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಸಂಘಟನೆ ಆರಕ್ಕೇರದೆ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಪ್ರಾಬಲ್ಯವಿದ್ದ ರಾಜ್ಯಗಳನ್ನೇ ಕಳೆದುಕೊಂಡ ಬಳಿಕ ಕಾಂಗ್ರೆಸ್ ತ.ನಾಡಿನ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಆದರೂ, ಚಿತ್ರನಟ ಕಮಲ್ ಹಾಸನ್ 'ಕೈ'ಯತ್ತ ವಾಲುವರೇ ಎಂಬ ನಿರೀಕ್ಷೆಯನ್ನು ಪಕ್ಷದ ಹಲವು ನಾಯಕರು ಇರಿಸಿಕೊಂಡಿದ್ದಾರೆ. |
ರಜನಿ ಸಸ್ಪೆನ್ಸ್ |
ರಾಜಕೀಯ ರಂಗಕ್ಕೆ ಪ್ರವೇಶಿಸುವುದಾಗಿ ಹೇಳಿ ಭಾರಿ ಸಂಚಲನ ಮೂಡಿಸಿದ ಚಿತ್ರನಟ ರಜನಿಕಾಂತ್ ಆ ಬಳಿಕ ಮಹತ್ವದ ಹೆಜ್ಜೆಗಳನ್ನು ಇರಿಸಿಲ್ಲ. ರಜನಿ ಅಭಿಮಾನಿಗಳು ಹಲವಾರು ವರ್ಷಗಳಿಂದಲೂ ಅವರು ರಾಜಕೀಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸುತ್ತಲೇ ಬಂದಿದ್ದರು. ಈ ಬಗ್ಗೆ ಹೆಚ್ಚೇನೂ ಒಲವು ತೋರದ ರಜನಿ ಈಗ ನಿಲುವು ಬದಲಿಸಿ ರಾಜಕೀಯದೆಡೆಗೆ ಮುಖಮಾಡಿದ್ದಾರೆ ನಿಜ. ಆದರೆ, ಅವರ ಪಕ್ಷ ಯಾವಾಗ ಸ್ಥಾಪನೆಗೊಳ್ಳಲಿದೆ? ಅಥವಾ ಯಾವುದಾದರೂ ರಾಜಕೀಯ ಪಕ್ಷ ಸೇರುವರೋ? ಯಾವುದೂ ಸ್ಪಷ್ಟಗೊಂಡಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಜನಿ ಸ್ಪಷ್ಟ ನಿರ್ಧಾರ ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದ್ದು, ಸಿನಿಮಾದಲ್ಲಿ ಸ್ಟಾರ್ ಪಟ್ಟ ಏರಿದಂತೆ ರಾಜಕೀಯದಲ್ಲೂ ಕಮಾಲ್ ಮಾಡಬಲ್ಲರೆ? ಕಾದುನೋಡಬೇಕು. |
ಹುಮ್ಮಸ್ಸಿನಲ್ಲಿ ಕಮಲ ಪಾಳಯ |
2014ರ ಲೋಕಸಭಾ ಚುನಾವಣೆ ಬಳಿಕ ಹಲವು ರಾಜ್ಯಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡಿರುವ ಬಿಜೆಪಿ ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸಾಕಷ್ಟು ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ. 20 ತಿಂಗಳ ಅವಧಿಯಲ್ಲೇ ಇಬ್ಬರು ದಿಗ್ಗಜ ನಾಯಕರನ್ನು (ಜಯಲಲಿತಾ, ಕರುಣಾನಿಧಿ) ಕಳೆದುಕೊಂಡಿರುವ ತಮಿಳುನಾಡಿಗೆ ಈಗ 'ರಾಜಕೀಯ ಖಾಲಿತನ' ಕಾಡುತ್ತಿದ್ದು, ಬಿಜೆಪಿ ಅದನ್ನು ತುಂಬಲಿದೆಯೇ ಎಂಬ ವಿಶ್ಲೇಷಣೆ ರಾಜಕೀಯ ಅಂಗಳದಲ್ಲಿ ಆರಂಭವಾಗಿದೆ. ಪಕ್ಷದ ಬಲವೇನೂ ಇಲ್ಲದ ಪಶ್ಚಿಮ ಬಂಗಾಳದಲ್ಲಿ ಕೂಡ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರ‍್ಯಾಲಿ ನಡೆಸಲಿದ್ದು, ಅಲ್ಲಿ ಬಿಜೆಪಿಪರ ವಾತಾವರಣ ರೂಪುಗೊಳ್ಳಲು ಯತ್ನಿಸಲಿದ್ದಾರೆ. ಆದರೆ, ತ.ನಾಡಿನ ಪರಿಸ್ಥಿತಿಯೇ ಭಿನ್ನ. ಕಮಲ ಪಾಳಯದ ಪಾಲಿಗೆ ಉಳಿದ ರಾಜ್ಯಗಳಲ್ಲಿ ಇದ್ದ ಅನುಕೂಲಗಳು ಇಲ್ಲಿಲ್ಲ. ಮುಖ್ಯವಾಗಿ, ಪ್ರಭಾವಿ ನಾಯಕರ ಕೊರತೆ. ಸುಬ್ರಮಣಿಯನ್ ಸ್ವಾಮಿ ರಾಷ್ಟ್ರ ರಾಜಕಾರಣದಲ್ಲಿ ಬಿಜಿಯಾಗಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತ.ನಾಡಿನವರೇ ಆಗಿದ್ದು, ಅವರನ್ನು ರಾಜ್ಯ ರಾಜಕೀಯಕ್ಕೆ ತರಬಹುದಾದರೂ ಅದಕ್ಕೆ ನಿರ್ಮಲಾ ಅವರು ಸಮ್ಮತಿಸುವುದು ಕಷ್ಟಕರ. ಕನ್ಯಾಕುಮಾರಿಯಿಂದ ಸಂಸದರಾಗಿರುವ ಪೊನ್ನ ರಾಧಾಕೃಷ್ಣನ್ಗೆ ಹೇಳಿಕೊಳ್ಳುವಂಥ ವರ್ಚಸ್ಸಿಲ್ಲ. ಪ್ರಸಕ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆಯಾಗಿರುವ ತಮಿಳಸಾಯಿ ಸೌಂದರ್ಯರಾಜನ್ ತಮ್ಮ ವಿಚಿತ್ರ ಹೇಳಿಕೆಗಳಿಂದ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿರುವುದೇ ಹೆಚ್ಚು. |
2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡ 6.8 ಮತ ಪಡೆದರೆ ಬಿಜೆಪಿ ಶೇ.2.8 ಮತಗಳನ್ನಷ್ಟೇ ಗಿಟ್ಟಿಸಿದೆ. ಸಂಘಟನೆ ತುಂಬ ದುರ್ಬಲವಾಗಿದ್ದು, ರಣೋತ್ಸಾಹದಿಂದಲೇ ಪ್ರವೇಶ ಮಾಡಬೇಕಿದೆ.ರಜನಿಯನ್ನು ಬಿಜೆಪಿಗೆ ಕರೆತಂದು, ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿಸಿದರೆ… ಈ ಸಾಧ್ಯತೆ ಬಗ್ಗೆ ಈಗ ಷಾ-ಮೋದಿ ಜೋಡಿ ತಲೆ ಕೆಡಿಸಿಕೊಂಡಿದೆ. ರಜನಿಗೆ 'ಸ್ಟಾರ್ಗಿರಿ' ಇದ್ದು, ಅವರನ್ನು ಪಕ್ಷಕ್ಕೆ ಕರೆತಂದರೆ ತ.ನಾಡಿನಲ್ಲಿ ನೆಲೆ ಕಂಡುಕೊಳ್ಳಬಹುದೆಂಬ ಚಿಂತನೆ ಪಕ್ಷವಲಯದಲ್ಲಿದೆ. ಇದಕ್ಕೆ ರಜನಿ ಹೇಗೆ ಸ್ಪಂದಿಸಲಿದ್ದಾರೆ ಎಂಬುದು ರಹಸ್ಯವಾದರೂ ಕ್ಷಿಪ್ರ ಬೆಳವಣಿಗೆಯಲ್ಲಿ ಕಮಲದ ಕೈ ಹಿಡಿದರೂ ಅಚ್ಚರಿಯೇನಿಲ್ಲ. ಹಾಗೇನಾದರೂ ಆದಲ್ಲಿ, ರಾಜಕೀಯ ಸಮೀಕರಣ ತಿರುವುಮುರುವು ಆಗುವುದಂತೂ ಖಚಿತ. ತಮಿಳುನಾಡಿನ ರಾಜಕೀಯ ಸಿದ್ಧಾಂತಗಳು ಬಿಜೆಪಿ ಪಾಲಿಗೆ ಅಡ್ಡಿಯಾಗಿವೆ. ದ್ರಾವಿಡ ಆಂದೋಲನದ ಭೂಮಿಯಲ್ಲಿ 'ಹಿಂದುತ್ವ'ದ ಬೀಜ ಮೊಳಕೆಯೊಡೆಯುವುದು ಕಷ್ಟಕರ. ಅದೇನಿದ್ದರೂ, ಬಿಜೆಪಿ ಪಾಲಿಗೆ ತಮಿಳುನಾಡು ಎಂಟ್ರಿ ಮಾಡಲು ಈಗ ಸೂಕ್ತ ಕಾಲ. |
ಅಮ್ಮನಿಲ್ಲದ ಮನೆ |
ಜಯಲಲಿತಾ ನಿಧನದ ಆಘಾತದಿಂದ ಎಐಎಡಿಎಂಕೆ ಇನ್ನೂ ಹೊರಬಂದಿಲ್ಲ. ಜಯಲಲಿತಾ ನಿಧನದ ಬೆನ್ನಲ್ಲೇ, ಶಶಿಕಲಾ ಮುಖ್ಯಮಂತ್ರಿ ಆಗಲು ಯತ್ನಿಸಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಪ್ರತ್ಯೇಕಗೊಂಡಿದ್ದ ಜಯಲಲಿತಾ ಬಣ, ಶಶಿಕಲಾ ಬಣ ಒಗ್ಗೂಡಿವೆ. ಇ.ಕೆ. ಪಳನಿಸ್ವಾಮಿ ಸಿಎಂ ಆಗಿದ್ದು, ಮುಖ್ಯಮಂತ್ರಿಯಾಗಿದ್ದ ಪನ್ನೀರಸೆಲ್ವಂ ಮತ್ತೊಮ್ಮೆ ಉಪ ಮುಖ್ಯಮಂತ್ರಿ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಬಹುಮತ ಬಂದಿರುವುದರಿಂದ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. 2019ರ ಲೋಕಸಭಾ ಚುನಾವಣೆ ಹೊತ್ತಿಗೆ ಎಐಎಡಿಎಂಕೆ ನಾಯಕತ್ವಕ್ಕೆ ನಿಜವಾದ ಪರೀಕ್ಷೆ ಕಾದಿದೆ. ಪಳನಿ, ಪನ್ನೀರ್ 'ಮಾಸ್ ಲೀಡರ್'ಗಳಾಗಿ ಹೊರಹೊಮ್ಮಿಲ್ಲ. ಹೀಗಾಗಿ ಪಕ್ಷದ ಭವಿಷ್ಯದ ಬಗ್ಗೆ ಹಲವು ನೆಲೆಗಳಲ್ಲಿ ವಿಶ್ಲೇಷಣೆ ಕೇಳಿಬರುತ್ತಿದ್ದು, ಮುಂದಿನ ದಿನಗಳು ಎಐಎಡಿಎಂಕೆ ಪಾಲಿಗೆ ಸವಾಲಿನಿಂದ ಕೂಡಿರಲಿವೆ ಎಂಬುದಂತೂ ನಿಜ. |
ಮೋಡಿ ಮಾಡದ ಕಮಲ್ |
ನಟ ಕಮಲ್ ಹಾಸನ್ 'ಮಕ್ಕಳ್ ನೀತಿ ಮೈಯಮ್ ಪಕ್ಷ ಸ್ಥಾಪಿಸಿದ್ದು, ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಪಿಣರಾಯಿ ವಿಜಯನ್ ಸೇರಿ ಹಲವು ಮುಖಂಡರನ್ನು ಭೇಟಿಯಾಗಿದ್ದಾರೆ. ಅವರ ಪಕ್ಷ ತ.ನಾಡಿನಲ್ಲಿ ಹೇಳಿಕೊಳ್ಳುವಂಥ ಸಂಚಲನವನ್ನೇನೂ ಸೃಷ್ಟಿಸಿಲ್ಲ. ಪ್ರಮುಖ ನಾಯಕರಾರೂ ಇವರ ಪಕ್ಷದತ್ತ ಹೊರಳಿಲ್ಲ. ರಾಜಕೀಯ ಇನ್ನಿಂಗ್ಸ್ನ ಆರಂಭದಲ್ಲೇ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾದ ಕಮಲ್ ಈಗ ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದ್ದು, ಮುಂದಿನ ನಡೆಯನ್ನು ಇನ್ನೂ ಸ್ಪಷ್ಟಪಡಿಸಿಲ್ಲ. |
ಎಂ ಕೆ ಸ್ಟಾಲಿನ್ |
ಜೆ ಜಯಲಲಿತಾ |
ರಜನೀಕಾಂತ್ |
ಪೌರತ್ವ ತಿದ್ದುಪಡಿ ಮಸೂದೆ ವಿವಾದ ಸುಪ್ರೀಂ ಕೋರ್ಟ್... |
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳೂ ಅಂಗೀಕರಿಸಿದ ನಂತರದಲ್ಲಿ ಈ ಸಂಬಂಧಿತ ವಿವಾದ ಗುರುವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಸೋಮವಾರ, ರಾಜ್ಯಸಭೆ ಬುಧವಾರ... |
ಪೌರತ್ವ ಮಸೂದೆ ಬಗ್ಗೆ ಕಳವಳ ಪಡಬೇಕಾಗಿಲ್ಲ, ಅದರಿಂದ... |
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಕಾರಣ, ಪ್ರಧಾನಿ ನರೇಂದ್ರ ಮೋಧಿ ಗುರುವಾರ ಅಲ್ಲಿನ ಜನತೆಗೆ ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಮನವಿ... |
ಕ್ಯಾತ್ಸಂದ್ರದಲ್ಲಿ ಭೀಕರ ರಸ್ತೆ ಅಪಘಾತ : 9 ಮಂದಿ ದುರ್ಮರಣ | ThatsKannada.com - 9 killed in road mishap - Kannada Oneindia |
ಕ್ಯಾತ್ಸಂದ್ರದಲ್ಲಿ ಭೀಕರ ರಸ್ತೆ ಅಪಘಾತ : 9 ಮಂದಿ ದುರ್ಮರಣ |
ಬೆಂಗಳೂರು : ತುಮಕೂರು ಹೊಲ ವಲಯದಲ್ಲಿರುವ ಕ್ಯಾತ್ಸಂದ್ರದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿದ್ದಾರೆ. |
ಲಾರಿ ಹಾಗೂ ವ್ಯಾನ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ 9 ಮಂದಿ ಮೃತರಾಗಿದ್ದು , ಇತರ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. |
ಗಾಯಗೊಂಡವರ ಹೆಸರು ಇನ್ನಿತರ ವಿವರ ತಿಳಿದುಬಂದಿಲ್ಲ . ಲಾರಿ ಹಾಗೂ ವ್ಯಾನ್ ಡಿಕ್ಕಿಯಿಂದಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು . |
ವರ್ಷಾಂತ್ಯದ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ! | Year end Benefits of up to 70000 on the Renault Duster, Triber and Kwid |
Bengaluru, First Published Dec 8, 2020, 2:29 PM IST |
ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕ್ವಿಡ್ ಹ್ಯಾಚ್‌ಬ್ಯಾಕ್, ಎಂಪಿವಿ ಸಬ್‌ಕಾಂಪಾಕ್ಟ್ ಟ್ರೈಬರ್ ಮತ್ತು ಕಾಂಪಾಕ್ಟ್ ಎಸ್‌ಯುವಿ ಡಸ್ಟರ್ ಕಾರುಗಳ ಮೇಲೆ ರೆನೋ ಕಂಪನಿ ವರ್ಷಾಂತ್ಯದ ವಿಶೇಷ ಆಫರ್‌ಗಳನ್ನು ಘೋಷಿಸಿದ್ದು, ನೀವು 70,000 ರೂ.ಗಳವರೆಗೂ ಉಳಿತಾಯ ಮಾಡಬಹುದು. |
ಈ ಮೂರು ಮಾಡೆಲ್‌ಗಳ ಹೆಚ್ಚುವರಿ ಕಾರ್ಪೋರೆಟ್ ರಿಯಾಯ್ತಿ, ಗ್ರಾಮೀಣ ಗ್ರಾಹಕರಿಗೆ ವಿಶೇಷ ಆಫರ್ ಸೇರಿದಂತೆ ವಿಶೇಷ ಆಫರ್‌ಗಳನ್ನು ರೆನೋ ನೀಡಲು ಮುಂದಾಗಿದೆ. ಈ ವರ್ಷಾಂತ್ಯದ ಆಫರ್ ಡಿಸೆಂಬರ್ 1ರಿಂದ 31ರವರೆಗೆ ಮಾತ್ರ ಇರಲಿದೆ. |
ಬರುತ್ತಿದೆ ಸೋಲಾರ್ ಎಲೆಕ್ಟ್ರಿಕ್ ಕಾರು , ಚಾರ್ಜಿಂಗ್ ಇಲ್ಲದೆ ಪ್ರತಿ ದಿನ 1,600 ಕಿ.ಮಿ ಮೈಲೇಜ್... |
ರೆನೋ ಕ್ವಿಡ್ ಖರೀದಿಸಿದರೆ ನಿಮಗೆ 45 ಸಾವಿರ ರೂಪಾಯಿವರೆಗೂ ಉಳಿತಾಯವಾಗಲಿದೆ. ಇದರಲ್ಲಿ 29 ಸಾವಿರ ನಗದು ರಿಯಾಯ್ತಿ, ಎಕ್ಸೆಂಜ್ ಬೆನೆಫಿಟ್ 15000 ರೂ., ಲಾಯಲ್ಟಿ ಬೋನಸ್ 1000 ರೂ. ಆಫರ್ ಸಿಗಲಿದೆ. ಈ ಆಫರ್‌ಗಳು ಕ್ವಿಡ್‌ನ ಆಯ್ದ ಕೆಲವು ಮಾಡೆಲ್‌ಗಳ ಮೇಲೆ ದೊರೆಯಲಿವೆ. ಜೊತೆಗೆ 9 ಸಾವಿರ ಕಾರ್ಪೊರೇಟ್ ರಿಯಾಯ್ತಿ ಕೂಡ ದೊರೆಯಲಿದೆ. ರೈತರು, ಸರಪಂಚರು, ಗ್ರಾಪಂ ಸದಸ್ಯರಿಗೆ ವಿಶೇಷ 5000 ರೂ. ರಿಯಾಯ್ತಿ ಸಿಗಲಿದೆ. ಇಷ್ಟು ಮಾತ್ರವಲ್ಲದೇ, 12 ತಿಂಗಳವರೆಗೆ 1.3 ಲಕ್ಷ ಸಾಲವನ್ನು ಶೂನ್ಯ ಬಡ್ಡಿಗೆ ಪಡೆದುಕೊಳ್ಳಬಹುದು. |
ಟ್ರಬೈರ್ ಖರೀದಿಸುವಿರಿ ಎಂದಾದರೆ ನೀವು 500000 ರೂ.ವರೆಗೂ ಉಳಿತಾಯ ಮಾಡಬಹುದು. 20000 ರೂ. ನಗದು ರಿಯಾಯ್ತಿ, ಎಕ್ಸೆಂಜ್ ಬೆನೆಫಿಟ್ 20,000 ಮತ್ತು ಲಾಯಲ್ಟಿ ಬೆನೆಫಿಟ್ ಕೂಡ 10000 ರೂ.ವರೆಗೆ ದೊರೆತರೆ, 9,000 ರೂ.ವರೆಗೆ ಕಾರ್ಪೊರೇಟ್ ರಿಯಾಯ್ತಿ ಕೂಡ ಲಭ್ಯವಾಗಲಿದೆ. ಕ್ವಿಡ್ ರೀತಿಯಲ್ಲೇ ಟ್ರೈಬರ್ ಖರೀದಿಗೆ ರೈತರು, ಸರಪಂಚರು, ಗ್ರಾಮ ಪಂಚಾಯ್ತಿ ಸದಸ್ಯರು ಮುಂದಾದರೆ ಅವರಿಗೆ ಹೆಚ್ಚುವರಿಯಾಗಿ 5000 ರಿಯಾಯ್ತಿ ದೊರೆಯಲಿದೆ. ಜೊತೆಗೆ 12 ತಿಂಗಳವರೆಗೆ 2.31 ಲಕ್ಷ ರೂ.ಶೂನ್ಯ ಬಡ್ಡಿ ಲಾಭವನ್ನು ಪಡೆದುಕೊಳ್ಳಬಹುದು. |
ರೆನೋ ಡಸ್ಟರ್ ಖರೀದಿ ಮೇಲೆ ವರ್ಷಾಂತ್ಯದ ಆಫರ್‌ಗಳನ್ನು ಘೋಷಿಸಲಾಗಿದೆ. 1.5 ಲೀ.(ಪೆಟ್ರೋಲ್) ಎಂಜಿನ್ ಡಸ್ಟರ್ ಖರೀದಿಸಿದರೆ 50 ಸಾವಿರ ರೂಪಾಯಿವರೆಗೆ ಲಾಭವಾಗಲಿದೆ. ಹೇಗೆ ಎಂದರೆ, ಎಕ್ಸೆಂಜ್ ಬೋನಸ್ 30 ಸಾವಿರ, 20 ಸಾವಿರ ರೂ.ವರೆಗೆ ಲಾಯಲ್ಟಿ ಬೆನೆಫಿಟ್ ದೊರೆಯಲಿದೆ. ಆರ್‌ಎಕ್ಸ್‌ಇ ಮಾಡೆಲ್ ಮೇಲೆ ಈ ಲಾಯಲ್ಟಿ ಬೋನಸ್ ದೊರೆಯಲಿದೆ. ಇನ್ನು 1.3 ಲೀ ಟರ್ಬೋ ಎಂಜಿನ್(ಪೆಟ್ರೋಲ್) ಖರೀದಿಸುವಿರಾದರೆ ಒಟ್ಟಾರೆ ನಿಮಗೆ 70 ಸಾವಿರ ರೂ.ವರೆಗೂ ಲಾಭವಾಗಬಹುದು. ಈ 70 ಸಾವಿರದಲ್ಲಿ 30 ಸಾವಿರವರೆಗೆ ಎಕ್ಸೆಂಜ್ ಬೆನೆಫಿಟ್, 20 ಸಾವಿರ ರೂ.ವರೆಗೆ ಲಾಯಲ್ಟಿ ಬೆನೆಫಿಟ್ ಮತ್ತು 20 ಸಾವಿರ ರೂ.ವರೆಗೆ ನಗದು ಬೆನೆಫಿಟ್ ಕೂಡ ದೊರೆಯಲಿದೆ. ಆದರೆ, ಎಲ್ಲ ಲಾಭಗಳು ಕೆಲವು ಆಯ್ದ ವೆರಿಯೆಂಟ್‌ಗಳ ಮೇಲೆ ಮಾತ್ರ ದೊರೆಯಲಿವೆ ಎಂಬುದನ್ನು ಮಾತ್ರ ಮರೆಯಬೇಡಿ. |
ಇಷ್ಟು ಮಾತ್ರವಲ್ಲದೇ ರೆನೋ ಕಂಪನಿ, ಡಸ್ಟರ್ 1.3 ಮೇಲೆ ಮೂರು ವರ್ಷಗಳ(50 ಸಾವಿರ ಕಿ.ಮೀ. ಅಥವಾ ಈ ಎರಡರಲ್ಲಿ ಯಾವುದು ಮೊದಲಾಗುತ್ತದೆ ಅದು) ಈಸೀ ಕೇರ್ ಪ್ಯಾಕೇಜ್ ಅನ್ನು ಘೋಷಿಸಿದೆ. ರೈತರು, ಸರಪಂಚರು, ಗ್ರಾಮ ಪಂಚಾಯ್ತಿ ಸದಸ್ಯರು ಡಸ್ಟರ್ 1.3 ಖರೀದಿಸಿದರೆ ಅವರಿಗೆ ಹೆಚ್ಚುವರಿಯಾಗಿ 15 ಸಾವಿರ ರೂಪಾಯಿವರೆಗೂ ಲಾಭವಾಗಲಿದೆ. |
ಇನ್ನೊಮ್ಮೆ ಮರು ಎಣಿಕೆ, ರಿಪಬ್ಲಿಕನ್ನರು ಕೋರ್ಟಿಗೆ,ಫಲಿತಾಂಶ ಎಂದು? | Republicans to move court against third recount in Florida - Kannada Oneindia |
ಇನ್ನೊಮ್ಮೆ ಮರು ಎಣಿಕೆ, ರಿಪಬ್ಲಿಕನ್ನರು ಕೋರ್ಟಿಗೆ,ಫಲಿತಾಂಶ ಎಂದು? |
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಗಳನ್ನು 3ನೇ ಬಾರಿ ಮರುಎಣಿಕೆ ಮಾಡುವುದನ್ನು ರಿಪಬ್ಲಿಕನ್ ಪಕ್ಷದ ವಕೀಲರು ಪ್ರಶ್ನಿಸಿದ್ದು, ಅಮೆರಿಕ ಫೆಡರಲ್ ಕೋರ್ಟಿನಲ್ಲಿ ಸೋಮವಾರ ಈ ಕುರಿತು ವಿಚಾರಣೆ ನಡೆಯಲಿದೆ. ಈ ಎಲ್ಲಾ ಮಹತ್ತರ ಐತಿಹಾಸಿಕ ಬೆವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ಅಮೆರಿಕ ಅಧ್ಯಕ್ಷರಾರು ಎಂಬುದನ್ನು ತಿಳಿಯಲು ಇನ್ನಷ್ಟು ದಿನ ಕಾಯ ಬೇಕಾಗಿದೆ. |
ಫ್ಲೋರಿಡಾ ಕ್ಷೇತ್ರದಲ್ಲಿ ಮರು ಎಣಿಕೆಯಿಂದ ಸೋಲಿನ ಅಂತರವನ್ನು ಅತಿ ಕಡಿಮೆ ಮಾಡಿಕೊಂಡ ಡೆಮಾಕ್ರಟಿಕ್ ಪಕ್ಷದ ಲ್ ಗೋರ್, ಅಲ್ಲಿನ 4 ಕೌಂಟಿಗಳಲ್ಲಿ ಪುನಃ ಮರು ಎಣಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಲ್ಮ್ ಬೀಚ್ ಕೌಂಟಿಯಲ್ಲಿ ಮತದಾರರು ಮತಗಳನ್ನು ಸರಿಯಾಗಿ ಪಂಚ್ ಮಾಡಿಲ್ಲ. ಇದರಿಂದ ನಮ್ಮ ಪಕ್ಷದ ಅಭ್ಯರ್ಥಿಗೆ ಅನ್ಯಾಯವಾಗಿದೆ ಎಂದು ಡೆಮಾಕ್ರಟರು ದೂರಿದ್ದಾರೆ. ಈ ಕಾರಣ 4 ಲಕ್ಷದ 25 ಸಾವಿರ ಮತದಾರರನ್ನು ಹೊಂದಿರುವ ಈ ಕೌಂಟಿಯಲ್ಲೂ ಮರು ಎಣಿಕೆ ನಡೆಯುತ್ತಿದೆ. ಮರು ಎಣಿಕೆ ಮಾನವೀಕೃತವಾಗಿ ನಡೆಯುತ್ತಿದ್ದು, ಯಂತ್ರಗಳ ಸಹಾಯ ಪಡೆದಿಲ್ಲ. |
ಪಾಲ್ಮ್ ಬೀಚ್ ಕೌಂಟಿಯಲ್ಲಿ ಮಾಡಲಾದ ಶೇ.1 ಮತಗಳ ಸ್ಯಾಂಪಲ್ ಮರುಎಣಿಕೆಯಲ್ಲಿ ಗೋರ್ ಅವರಿಗೆ 19 ಹೆಚ್ಚುವರಿ ಮತಗಳು ಸಂದಿವೆ. ಈ ಅಂಕಿಅಂಶದ ಪ್ರಕಾರ ಈ ಕ್ಷೇತ್ರದಲ್ಲಿ ಗೋರ್ ಒಟ್ಟು 2000 ಹೆಚ್ಚುವರಿ ಮತ ಪಡೆಯುವ ಸಾಧ್ಯತೆಯಿದೆ. ಈ ಕೌಂಟಿಯಲ್ಲಿ ಮರು ಎಣಿಕೆ ನಡೆಸುವಂತೆ 8 ನಾಗರಿಕರು ಕೋರ್ಟಿಗೆ ಅಹವಾಲು ಸಲ್ಲಿಸಿದ್ದಾರೆ. |
ಫ್ಲೋರಿಡಾ ಮತ್ತು ಪಾಲ್ಮ್ ಬೀಚ್ ಕೌಂಟಿಗಳಲ್ಲಿ ಗೋರ್ ಪಕ್ಷದವರ ಒತ್ತಾಯದ ಮೇರೆಗೆ ಮರು ಎಣಿಕೆ ನಡೆಯುತ್ತಿದ್ದರೆ, ಲೋವಾ ಮತ್ತು ವಿಸ್ಕೋಸಿನ್ ಕ್ಷೇತ್ರಗಳಲ್ಲಿ ಅತಿ ಕಡಿಮೆ ಅಂತರದಲ್ಲಿ ಸೋತಿರುವ ಬುಷ್ ಈ ಕ್ಷೇತ್ರಗಳಲ್ಲೂ ಮರು ಎಣಿಕೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಗೆಗೆ ಜನ, ವಕೀಲರು ಇನ್ನೂ ಕೆಲ ವಾರಗಳ ಕಾಲ ಕೋರ್ಟಿಗೆ ಎಡತಾಕುತ್ತಲೇ ಇರುವ ಸೂಚನೆಗಳು ಕಂಡು ಬರುತ್ತಿದ್ದು, ಫಲಿತಾಂಶ ಪ್ರಕಟಣೆ ಸಾಕಷ್ಟು ವಿಳಂಬವಾಗುವ ನಿರೀಕ್ಷೆಯಿದೆ. |
ತಾತ್ಕಾಲಿಕವಾಗಿ ಅಮೆಜಾನ್,ಫ್ಲಿಪ್ ಕಾರ್ಟ್ ನಲ್ಲಿ ಸೇವೆ ರದ್ದು – janadhvani |
ತಾತ್ಕಾಲಿಕವಾಗಿ ಅಮೆಜಾನ್,ಫ್ಲಿಪ್ ಕಾರ್ಟ್ ನಲ್ಲಿ ಸೇವೆ ರದ್ದು |
ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಭೀತಿ ಹಬ್ಬುತ್ತಿದೆ. ಭಾರತದಲ್ಲಿ ಈ ವರೆಗೆ 500 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 11 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. |
ಬಹುತೇಕ ಸೇವೆಗಳನ್ನು ಬಂದ್ ಮಾಡಲಾಗಿದೆ. ಮೋದಿ ಕೂಡ ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಫ್ಲಿಪ್ ಕಾರ್ಟ್ ಕೂಡ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ. ಫ್ಲಿಪ್ಕಾರ್ಟ್ ಸೈಟ್ಗೆ ತೆರಳಿದರೆ ತಾವು ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿರುವುದಾಗಿ ತಿಳಿಸಿದ ಪೋಸ್ಟರ್ ಕಾಣುತ್ತದೆ. |
ನೀವೆ ನಮ್ಮ ಮೊದಲ ಆದ್ಯತೆ. ನಿಮ್ಮ ಸೇವೆಗೆ ನಾವು ಸದಾ ಸಿದ್ಧ. ಆದರೆ, ಇಂತಹ ಕಷ್ಟದ ಸಂದರ್ಭದಲ್ಲಿ ಸೇವೆ ನಿಲ್ಲಿಸುವುದು ಅನಿವಾರ್ಯ. ಮನೆಯಲ್ಲೇ ಇರಬೇಕೆಂದು ನಾವು ಕೋರುತ್ತೇವೆ ಎಂದು ಫ್ಲಿಪ್ಕಾರ್ಟ್ ಹೇಳಿದೆ. ಕೊರೋನಾ ವೈರಸ್ ಹರಡುವುದರಿಂದ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಇಂತ ಸಂದರ್ಭದಲ್ಲಿ ಸೇವೆ ನಿಲ್ಲಿಸುವುದು ಅನಿವಾರ್ಯ ಎನ್ನುವ ಕಾರಣಕ್ಕೆ ಫ್ಲಿಪ್ಕಾರ್ಟ್ ಈ ನಿರ್ಧಾರಕ್ಕೆ ಬಂದಿದೆ. |
ಭಾರತದಲ್ಲಿ "ಕಡಿಮೆ-ಆದ್ಯತೆಯ" ಉತ್ಪನ್ನಗಳಿಗೆ ಆರ್ಡರ್ ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ ಮತ್ತು ಇ-ಕಾಮರ್ಸ್ ಪ್ಲೇಯರ್ ಆಗಿ ಮನೆಯ ಸ್ಟೇಪಲ್ಸ್, ಆರೋಗ್ಯ ರಕ್ಷಣೆ ಮತ್ತು ವೈಯಕ್ತಿಕ ಸುರಕ್ಷತಾ ಉತ್ಪನ್ನಗಳಂತಹ ತುರ್ತು ವಸ್ತುಗಳನ್ನು ಸೇವೆ ಮಾಡಲು ಆದ್ಯತೆ ನೀಡುತ್ತಿದೆ ಎಂದು ಅಮೆಜಾನ್ ಮಂಗಳವಾರ ಹೇಳಿದೆ. "ನಾವು ತಾತ್ಕಾಲಿಕವಾಗಿ ಕಡಿಮೆ-ಆದ್ಯತೆಯ ಉತ್ಪನ್ನಗಳಿಗೆ ಆರ್ಡರ್ ಸ್ವೀಕರಿಸುವುದನ್ನು ನಿಲ್ಲಿಸಿದ್ದೇವೆ, ಅದರ ಸಾಗಣೆಯು ವಿಳಂಬವಾಗಲಿದೆ, ಈ ಪ್ರಕ್ರಿಯೆ ಎಷ್ಟು ದಿನಗಳಿಗೆ ಎಂದು ಹೇಳಲಾಗದು, ಯು.ಎಸ್ ಮತ್ತು ಇಟಲಿಯಲ್ಲಿ ಅಮೆಜಾನ್ ಇದೇ ರೀತಿಯ ಮಾರ್ಗವನ್ನು ತೆಗೆದುಕೊಂಡಿದೆ. |
COVID-19 ಹರಡುವುದನ್ನು ತಡೆಗಟ್ಟಲು ಪ್ರತಿಯೊಂದು ರಾಜ್ಯವೂ ಲಾಕ್‌ಡೌನ್ ವಿಧಿಸಿರುವುದರಿಂದ ಫ್ಲಿಪ್‌ಕಾರ್ಟ್, ಮತ್ತು ದಿನಸಿ ಗ್ರೋಫರ್ಸ್ ಮತ್ತು ಬಿಗ್‌ಬಾಸ್ಕೆಟ್ ಸೇರಿದಂತೆ ಹಲವಾರು ಆನ್ಲೈನ್ ಮಾರಾಟಗಾರರು ತಮ್ಮ ಸೇವೆಗಳಲ್ಲಿ ತೀವ್ರ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ, ಆರ್ಡರ್ ಸ್ವೀಕರಿಸಿದ ವಸ್ತುಗಳನ್ನು ಸಂಗ್ರಹಿಸಲು ಮತ್ತು ಅದನ್ನು ಗ್ರಾಹಕರಿಗೆ ತಲುಪಿಸಲು ಹೆಣಗಾಡುವ ಪರಿಸ್ಥಿತಿ ಉಂಟಾಗಿದೆ. |
ತ್ರಿಪುರಾದಲ್ಲಿ 81.8% ಅತ್ಯಧಿಕ ಮತದಾನ, ಬಿಹಾರದಲ್ಲಿ 50% ಅತೀ ಕಡಿಮೆ |
ನವದೆಹಲಿ: 20 ರಾಜ್ಯಗಳಲ್ಲಿ ಹರಡಿರುವ 91 ಲೋಕಸಭೆ ಕ್ಷೇತ್ರಗಳಲ್ಲಿ ಗುರುವಾರ ನಡೆದ ಮತದಾನವು ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ಸಂಭವಿಸಿದ್ದು ಬಿಟ್ಟರೆ ಉಳಿದಂತೆ ಶಾಂತಿಯುತವಾಗಿತ್ತು ಎಂದು ಚುನಾವಣೆ ಆಯೋಗ ತಿಳಿಸಿದೆ. |
ಚುನಾವಣೆ ಆಯೋಗದ ಅಧಿಕಾರಿಗಳ ಪ್ರಕಾರ, ತ್ರಿಪುರಾದಲ್ಲಿ ಮತದಾನದ ಅತ್ಯಧಿಕ ಶೇಕಡಾವಾರು ಪ್ರಮಾಣ(81.8%) ದಾಖಲಾಗಿದ್ದು ಪಶ್ಚಿಮಬಂಗಾಳದಲ್ಲಿ 81% ದಾಖಲಾಗಿದೆ. |
ಬಿಹಾರದಲ್ಲಿ ಅತೀ ಕಡಿಮೆ ಮತದಾನವಾಗಿದ್ದು, ಶೇಕಡಾವಾರು ಪ್ರಮಾಣ ಶೇ. 50ರಷ್ಟಿದೆ. ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ಶೇ. 56ರಷ್ಟು ಮತದಾನವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೇಕಡ 70.67 ಮತದಾನ ದಾಖಲಾಗಿದೆ. ಆಂಧ್ರಪ್ರದೇಶದಲ್ಲಿ ಶೇ. 66 , ತೆಲಂಗಾಣ ಶೇ. 60, ಉತ್ತರಾಖಂಡ ಶೇ. 57. 85, |
ಜಮ್ಮು ಕಾಶ್ಮೀರದಲ್ಲಿ ಶೇ. 58, ಸಿಕ್ಕಿಂನಲ್ಲಿ ಶೇ. 69, ಮಿಜೋರಾಂನಲ್ಲಿ ಶೇ. 60 , ನಾಗಾಲ್ಯಾಂಡ್‌ನಲ್ಲಿ ಶೇ. 78, ಮಣಿಪುರದಲ್ಲಿ ಶೇ. 78.2 ಮತ್ತು ಅಸ್ಸಾಂನಲ್ಲಿ ಶೇ. 68ರಷ್ಟು ಮತದಾನವಾಗಿದೆ. |
ಉತ್ತರಪ್ರದೇಶದಲ್ಲಿ ಶೇ. 63. 69 ಮತದಾರರು ಹಕ್ಕು ಚಲಾಯಿಸಿದರೆ, ಲಕ್ಷದ್ವೀಪದಲ್ಲಿ ಶೇ. 66, ಮೇಘಾಲಯದಲ್ಲಿ ಶೇ. 67. 16ರಷ್ಟು ಜನರು ಮತದಾನ ಮಾಡಿದ್ದಾರೆ. |
ಲೋಕಸಭೆ ಕ್ಷೇತ್ರಗಳಲ್ಲಿ ಮತದಾನವಾದ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಂಧ್ರ ಪ್ರದೇಶ (25), ತೆಲಂಗಾಣ (17), ಅರುಣಾಚಲ ಪ್ರದೇಶ (2), ಮೇಘಾಲಯ (2) ಉತ್ತರಾಖಂಡ್ (5), ಮಿಜೋರಾಮ್ (1), ನಾಗಾಲ್ಯಾಂಡ್ (1), ಸಿಕ್ಕಿಂ (1), ಲಕ್ಷದ್ವೀಪ (1) ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1). |
ಕುದ್ಕಾಡಿ ತುಳುನಾಡಿನ ಸಾಂಸ್ಕೃತಿಕ ರಾಯಭಾರಿ : ಎ.ಸದಾನಂದ ಶೆಟ್ಟಿ - BUNTS NEWS WORLD |
Home ನಿಧನ ವಾರ್ತೆ KUDLA bunts Main NEWS tulunad news ಕುದ್ಕಾಡಿ ತುಳುನಾಡಿನ ಸಾಂಸ್ಕೃತಿಕ ರಾಯಭಾರಿ : ಎ.ಸದಾನಂದ ಶೆಟ್ಟಿ |
ಕುದ್ಕಾಡಿ ತುಳುನಾಡಿನ ಸಾಂಸ್ಕೃತಿಕ ರಾಯಭಾರಿ : ಎ.ಸದಾನಂದ ಶೆಟ್ಟಿ |
ಬುಧವಾರ, ಡಿಸೆಂಬರ್ 19, 2018 ನಿಧನ ವಾರ್ತೆ, KUDLA bunts, Main, NEWS, tulunad news, |
ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‍ನಿಂದ ನುಡಿನಮನ |
BUNTS NEWS, ಮಂಗಳೂರು: ಕುದ್ಕಾಡಿ ವಿಶ್ವನಾಥ ರೈಯವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನೃತ್ಯಗುರುಗಳು ಹೆಸರಾಂತ ಸಾಹಿತಿಗಳು. ಅವರು ತುಳುನಾಡಿನ ಸಾಂಸ್ಕøತಿಕ ರಾಯಭಾರಿ ಅವರನ್ನು ಕಳೆದುಕೊಂಡ ಸಾಂಸ್ಕøತಿಕ ಲೋಕ ಬಡವಾಗಿದೆ ಎಂದು ಇಂಟರ್ ನ್ಯಾಶನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದರು. |
ಅವರು ಇತ್ತೀಚೆಗೆ ನಿಧನರಾದ ಹಿರಿಯ ನೃತ್ಯ ಶಿಕ್ಷಕ ಹಾಗೂ ವಿದ್ವಾಂಸ ಕುದ್ಕಾಡಿ ವಿಶ್ವನಾಥ ರೈ ಅವರಿಗೆ ಬಲ್ಮಠದ ಕುಡ್ಲ ಪೆವಿಲಿನ್‍ನಲ್ಲಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 'ನುಡಿನಮನ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 'ಸದಾಶಯ' ತ್ರೈಮಾಸಿಕದ ಪ್ರಧಾನ ಸಂಪಾದಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಸ್ಮರಿಸಿಕೊಂಡರು. ಕುದ್ಕಾಡಿಯವರು ತುಳುನಾಡು ಕಂಡ ಓರ್ವ ಬಹುಶ್ರುತ ವಿದ್ವಾಂಸರು ಇಂಡಿಯನ್ ಮತ್ತು ಕ್ಯಾಂಡಿಯನ್ ನೃತ್ಯದಲ್ಲಿ ಅಪಾರ ಜ್ಞಾನ ಹೊಂದಿ ನೂರಾರು ಶಿಷ್ಯಯರನ್ನು ಸಿದ್ದಗೊಳಿಸಿದ್ದಲ್ಲದೆ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದವರು. |
ಅವರ ನರ್ತನ ಜಗತ್ತು ಕೃತಿ ನೃತ್ಯಾಭ್ಯಾಸಿಗಳಿಗೆ ಕೈಪಿಡಿಯಿದ್ದಂತೆ, ಕನ್ನಡ ಮತ್ತು ತುಳು ಭಾಷೆಗಳಲ್ಲಿ 36 ಕೃತಿಗಳನ್ನು ಬರೆದಿರುವ ಅವರು ಉಡುಪಿಯ ತುಳು ಲಿಪಿ ಸಂಶೋಧನಾ ಕೇಂದ್ರದ ತಜ್ಞರಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಸದಸ್ಯರಾಗಿ, ಪುತ್ತೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿರಂತರ ಕ್ರೀಯಶೀಲರಾಗಿದ್ದ ಇವರು ತುಳು ಅಕಾಡೆಮಿ ಸೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾಶ್ರೀಯ ಹಾಗೂ ಇತರ 200ಕ್ಕಿಂತಲೂ ಅಧಿಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾದ ವಿಶ್ವನಾಥ ರೈ ಯವರು ತಮ್ಮ ಬದುಕಿನ ಕೊನೆಯವರೆಗೂ ತುಳು ರಾಜ್ಯದ ಕನಸು ಕಂಡವರು ಎಂದು ಭಾಸ್ಕರ ರೈ ಕುಕ್ಕುವಳ್ಳಿ ನುಡಿದರು. |
ಸಂಘಟ ನಾ ಕಾರ್ಯದರ್ಶಿ ರಾಜಗೋಪಾಲ ರೈ, ಎಂ. ಸುಂದರ ಶೆಟ್ಟಿ ಬೆಟಂಪಾಡಿ ಮತ್ತು ಕದ್ರಿನವನೀತ ಶೆಟ್ಟಿ ಗತಿಸಿದವರ ಗುಣಗಾನ ಮಾಡಿದರು. ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಸ್ವಾಗತಿಸಿದರು. ಮಹಿಳಾ ವಿಭಾಗದ ವಿಜಯಲಕ್ಷ್ಮೀ ಬಿ. ಶೆಟ್ಟಿ ವಂದಿಸಿದರು. |
'ದ್ವಾತ್ರಿಂಶತ್ ಪುತ್ಥಲಿಕಾ ಸಿಂಹಾಸನಮ್' ಕಥೆಗಳು | Utthana |
Utthana > ಉತ್ಥಾನ ಮಾರ್ಚ್ 2020 > 'ದ್ವಾತ್ರಿಂಶತ್ ಪುತ್ಥಲಿಕಾ ಸಿಂಹಾಸನಮ್' ಕಥೆಗಳು |
'ದಾನಶಕ್ತಿವರ್ಣನೆ' ಎಂಬ ಮೊದಲನೆಯ ಕಥೆ |
ಅದನ್ನು ಕೇಳಿದ ಭೋಜರಾಜನು "ಎಲೈ ಗೊಂಬೆಯೆ! ನೀನು ಹೇಳಿದ ಎಲ್ಲ ಗುಣಗಳೂ ನನ್ನಲ್ಲಿ ಇವೆ. ಯಾವುದು ತಾನೇ ಕಡಮೆ ಇದೆ? ನಾನೂ ಕೂಡ ಬೇಡಿದವರಿಗೆಲ್ಲ ಕಾಲಕಾಲಕ್ಕೆ ತಕ್ಕಂತೆ ದಾನ ಕೊಟ್ಟಿದ್ದೇನೆ" ಎಂದನು. |
ಅದನ್ನು ಕೇಳಿ ಗೊಂಬೆ ನಸುನಕ್ಕು – "ಎಲೈ ರಾಜನೇ, ಇದೇ ಉಚಿತವಾದದ್ದಲ್ಲ. ಏನೆಂದರೆ ನೀನು ತಾನಾಗಿಯೇ ಆತ್ಮಸ್ತುತಿ ಮಾಡಿಕೊಳ್ಳುತ್ತಿದ್ದೀಯೆ. ಯಾರು ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳುತ್ತಾನೋ ಅವನು ಎಂದೂ ಮಹಾತ್ಮನಾಗಲಾರ" ಎಂದು ಹೇಳಿತು. |
ಗೊಂಬೆಯ ಮಾತನ್ನು ಕೇಳಿ ಆಶ್ಚರ್ಯಚಕಿತನಾದ ಭೋಜರಾಜನು ಆ ಗೊಂಬೆಗೆ – "ನೀನು ಸತ್ಯವನ್ನೇ ಹೇಳಿದೆ. ಯಾರು ತನ್ನ ಗುಣವನ್ನು ತಾನೇ ಹೊಗಳಿಕೊಳ್ಳುತ್ತಾನೋ ಅವನು ಮೂರ್ಖನೇ ಸರಿ. ನಾನು ಆತ್ಮಸ್ತುತಿ ಮಾಡಿಕೊಂಡೆ. ಅದು ಅನುಚಿತವೇ. ಅದಿರಲಿ, ಈ ಸಿಂಹಾಸನವು ಯಾರದ್ದೋ ಅವನ ಔದಾರ್ಯವನ್ನು ತಿಳಿಸು" ಎಂದನು. |
ಗೊಂಬೆಯು ಹೇಳಿತು – "ರಾಜನ್, ಇದು ವಿಕ್ರಮಾರ್ಕನ ಸಿಂಹಾಸನ. ಅವನು ಸಂತೋ?ಗೊಂಡರೆ ಯಾಚಕರಿಗೆ ಎ? ದಾನ ಕೊಡಬಲ್ಲವನಾಗಿದ್ದನು, ಗೊತ್ತಿದೆಯೆ? ಅಂಥವರಿಗೆ ಅವನು ಒಂದು ಕೋಟಿ ಬಂಗಾರದ ನಾಣ್ಯಗಳನ್ನು ಕೊಡುತ್ತಿದ್ದನು. ನಿನ್ನಲ್ಲಿ ಈ ರೀತಿಯ ಔದಾರ್ಯಗುಣವು ಇದೆಯೆ? ಇದೆ ಎಂದಾದರೆ ಈ ಸಿಂಹಾಸನದಲ್ಲಿ ಕುಳಿತುಕೋ" ಎಂದಿತು. |
ರಾಜನು ಯಾವ ಉತ್ತರವನ್ನೂ ಹೇಳದೆ ಸುಮ್ಮನಾದನು |
'ವಿಪ್ರಮನೋರಥಪೂರಣ' ಎಂಬ ಎರಡನೆಯ ಕಥೆ |
ಬಳಿಕ ಭೋಜರಾಜನು ಎರಡನೆಯ ಮೆಟ್ಟಿಲಿನ ಮೇಲೆ ಹೆಜ್ಜೆಯನ್ನಿಡಲು ತೊಡಗಿದಾಗ ಅಲ್ಲಿದ್ದ ಗೊಂಬೆಯು ಮನು?ವಾಣಿಯಿಂದ – "ಎಲೈ ಮಹಾರಾಜ, ವಿಕ್ರಮನ ಶೌರ್ಯ, ಔದಾರ್ಯ, ಸತ್ತ್ವಾದಿ ಗುಣಗಳು ನಿನ್ನಲ್ಲಿ ಇವೆಯಾದರೆ ಮಾತ್ರ ನೀನು ಈ ಸಿಂಹಾಸನದಲ್ಲಿ ಕುಳಿತುಕೋ" ಎಂದಿತು. |
ರಾಜನು "ಎಲೈ ಗೊಂಬೆಯೇ, ಹಾಗಿದ್ದರೆ ವಿಕ್ರಮನ ಶೌರ್ಯ-ಔದಾರ್ಯಗಳು ಹೇಗಿದ್ದವು ಎಂದು ಹೇಳು" ಎಂದನು. |
ಗೊಂಬೆ ಅದನ್ನು ಹೇಳಲು ಆರಂಭ ಮಾಡಿತು. "ಎಲೈ ರಾಜನೇ, ಕೇಳು. ವಿಕ್ರಮಾದಿತ್ಯನು ರಾಜ್ಯವನ್ನು ಪಾಲಿಸುತ್ತ ಇರುವಾಗ ಒಮ್ಮೆ ಗೂಢಚಾರರನ್ನು ಕರೆದು – "ಎಲೈ ದೂತರೆ, ನೀವೆಲ್ಲರೂ ಭೂಮಿಯಲ್ಲಿ ಎಲ್ಲ ಕಡೆ ಸಂಚಾರ ಮಾಡಿ. ನಿಮ್ಮ ಸಂಚಾರದ ಕಾಲದಲ್ಲಿ ಏನಾದರೂ ಕುತೂಹಲಕರವಾದ ಸಂಗತಿಯನ್ನು ಕಂಡರೆ ಅದನ್ನು ನನಗೆ ಹೇಳಿ. ನಾನು ಅಲ್ಲಿಗೆ ಹೋಗಿ ಅದನ್ನು ಪ್ರತ್ಯಕ್ಷ ನೋಡಲು ಬಯಸುತ್ತೇನೆ" ಎಂದು ಹೇಳಿದನು. |
ಗೂಢಚಾರರು ರಾಜನ ಅಪ್ಪಣೆಯಂತೆ ತಿರುಗಾಟ ಮಾಡಲು ಅರಂಭಿಸಿದರು. ಹೀಗಿರಲು ಒಂದು ದೇಶವನ್ನೆಲ್ಲ ಸಂಚರಿಸಿ ಬಂದ ಒಬ್ಬ ಗೂಢಚಾರನು ಹೀಗೆ ನಿವೇದಿಸಿಕೊಂಡ – "ಮಹಾರಾಜ, ಚಿತ್ರಕೂಟ ಪರ್ವತದ ಹತ್ತಿರ ತಪೋವನದ ಮಧ್ಯದಲ್ಲಿ ಅತ್ಯಂತ ಸುಂದರವಾದ ಒಂದು ದೇವಾಲಯ ಇದೆ. ಅಲ್ಲಿ ಪರ್ವತದ ಎತ್ತರದ ಸ್ಥಾನದಿಂದ ನಿರ್ಮಲವಾದ ಜಲಧಾರೆ ಬೀಳುತ್ತದೆ. ಆ ಜಲದಲ್ಲಿ ಸ್ನಾನ ಮಾಡಿದರೆ ಎಲ್ಲ ಮಹಾಪಾಪಗಳ ನಿವಾರಣೆ ಆಗುತ್ತದೆ. ಮಹಾಪಾಪ ಮಾಡಿದವರು ಆ ನೀರಿನಲ್ಲಿ ಸ್ನಾನ ಮಾಡಿದಾಗ ಅವರ ಶರೀರದಿಂದ ಕಪ್ಪಾದ ನೀರು ಹೊರಬರುತ್ತದೆ. ಅದರಿಂದ ಅವರು ಪಾಪವನ್ನು ಕಳೆದುಕೊಂಡು ಪುಣ್ಯಪುರು?ರಾಗುತ್ತಾರೆ. ನಾನು ಅಲ್ಲಿ ಒಬ್ಬ ಬ್ರಾಹ್ಮಣನನ್ನು ಕಂಡೆ. ಅವನು ಪ್ರತಿದಿನ ಅಲ್ಲಿರುವ ಹೋಮಕುಂಡದಲ್ಲಿ ಹವನ ಮಾಡುತ್ತಾನೆ. ಅವನಿಗೆ ಎ? ವ?ಗಳು ಕಳೆದವು ಎಂಬುದು ಯಾರಿಗೂ ಗೊತ್ತಿಲ್ಲ. ಅವನು ಆ ಕುಂಡದಿಂದ ಹೊರಹಾಕಿದ ಭಸ್ಮದ ರಾಶಿ ಪರ್ವತಾಕಾರವಾಗಿದೆ. ಆ ಬ್ರಾಹ್ಮಣನು ಯಾರ ಜೊತೆಗೂ ಮಾತನಾಡುವುದಿಲ್ಲ. ಇಂತಹ ಒಂದು ವಿಚಿತ್ರವನ್ನು ನಾನು ಕಂಡೆ." |
ಗೂಢಚಾರನ ಮಾತನ್ನು ಕೇಳಿ ಮಹಾರಾಜನಿಗೆ ಅತ್ಯಂತ ಕುತೂಹಲವಾಯಿತು. ಅದನ್ನು ನೋಡಲೇಬೇಕೆಂದು ಅವನು ತೀರ್ಮಾನಿಸಿದನು. ಕೂಡಲೇ ಅವನು ಅದೇ ಗೂಢಚಾರನೊಂದಿಗೆ ಹೊರಟು ಆ ಸ್ಥಾನಕ್ಕೆ ತಲಪಿದನು. |
ಅಲ್ಲಿನ ಸೌಂದರ್ಯವನ್ನು ಕಂಡು ಅವನು ಪರಮಾನಂದಭರಿತನಾಗಿ ಹೀಗೆ ಹೇಳಿದನು – "ಅಹೋ! ಈ ಸ್ಥಳ ಅತ್ಯಂತ ಪವಿತ್ರವಾಗಿದೆ. ಇಲ್ಲಿ ಸಾಕ್ಷಾತ್ ಜಗದಂಬಿಕೆ ನಿವಾಸವಾಗಿದ್ದಾಳೆ. ಈ ಸ್ಥಳವನ್ನು ನೋಡಿ ನಾನು ಧನ್ಯನಾದೆ." ಹೀಗೆಂದು ಹೇಳಿ ಅವನು ಆ ಜಲಧಾರೆಯಲ್ಲಿ ಸ್ನಾನ ಮಾಡಿ, ದೇವತೆಯನ್ನು ನಮಸ್ಕರಿಸಿ, ಬ್ರಾಹ್ಮಣನು ಹೋಮ ಮಾಡುತ್ತಿದ್ದಲ್ಲಿಗೆ ಹೋಗಿ ಅವನನ್ನು ಕುರಿತು "ಎಲೈ ಬ್ರಾಹ್ಮಣಶ್ರೇ?, ಎ? ವ?ಗಳಿಂದ ನೀನು ಹೀಗೆ ಹವನ ಮಾಡುತ್ತಿರುವೆ?" ಎಂದು ಕೇಳಿದನು. |
ಬ್ರಾಹ್ಮಣನು ಹೇಳಿದನು – "ಮಹಾಶಯ, ನಾನು ಹವನವನ್ನು ಆರಂಭಿಸಿದಾಗ ಸಪ್ತರ್ಷಿಮಂಡಲವು ರೇವತೀ ನಕ್ಷತ್ರದ ಪ್ರಥಮಪಾದದಲ್ಲಿತ್ತು. ಅದು ಈಗ ಅಶ್ವಿನೀ ನಕ್ಷತ್ರದಲ್ಲಿ ಇದೆ. ಅಂದರೆ ನಾನು ಹವನವನ್ನು ಆರಂಭಿಸಿ ನೂರು ವ?ಗಳೇ ಕಳೆದು ಹೋದವು. ಆದರೂ ದೇವತೆ ಪ್ರಸನ್ನಳಾಗಿಲ್ಲ" ಎಂದು. |
ಅದನ್ನು ಕೇಳಿದ ಮಹಾರಾಜನಿಗೆ ಆಶ್ಚರ್ಯವಾಯಿತು. ದೇವತೆ ಏಕೆ ಪ್ರಸನ್ನಳಾಗಲಿಲ್ಲ ಎಂದು ಸಂಶಯವೂ ಆಯಿತು. ಕೊನೆಗೆ ಅವನು ತಾನೂ ಆ ದೇವತೆಯನ್ನು ಸ್ಮರಿಸಿ ಹೋಮಕುಂಡಕ್ಕೆ ಆಹುತಿಯನ್ನು ಅರ್ಪಿಸಿದನು. ಆಗಲೂ ದೇವತೆ ಪ್ರಸನ್ನಳಾಗಲಿಲ್ಲ. ಆಗ ಅವನು 'ನನ್ನ ತಲೆಯನ್ನೇ ಕತ್ತರಿಸಿ ದೇವತೆಗೆ ನೈವೇದ್ಯದ ರೂಪದಲ್ಲಿ ಅರ್ಪಿಸುತ್ತೇನೆ' ಎಂದು ಮನಸ್ಸಿನಲ್ಲಿ ನಿಶ್ಚಯ ಮಾಡಿ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕುತ್ತಿಗೆಯತ್ತ ಬೀಸಲು ಸಿದ್ಧನಾದನು. ಆ ಕ್ಷಣದಲ್ಲೇ ದೇವತೆಯು ಪ್ರತ್ಯಕ್ಷಳಾಗಿ ಖಡ್ಗವನ್ನು ತಡೆದು, "ರಾಜನೇ, ನಿನಗೆ ಪ್ರಸನ್ನಳಾಗಿದ್ದೇನೆ. ವರವನ್ನು ಬೇಡಿಕೋ" ಎಂದಳು. |
ಮಹಾರಾಜನು, "ದೇವಿ, ನನ್ನಂಥವನ ಎದುರು ನೀನು ಪ್ರತ್ಯಕ್ಷಳಾಗಿ ಬಂದು ಸ್ನೇಹಮಯಿಯಾಗಿ ಮಾತನಾಡಿದೆಯಲ್ಲ, ಇದಕ್ಕಿಂತ ಪರಮಾನಂದ ಮತ್ತೇನಿದೆ? ಆದರೂ ಕುತೂಹಲದಿಂದ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ಈ ಬ್ರಾಹ್ಮಣನು ನೂರು ವ?ಗಳಿಂದಲೂ ಹವನ ಮಾಡುತ್ತಲೇ ಇದ್ದಾನೆ. ಇವನು ಯಾವುದೂ ಅಪರಾಧ ಮಾಡಿಲ್ಲ. ವಿಧಿನಿಯಮಗಳಲ್ಲಿ ಸ್ವಲ್ಪವೂ ಲೋಪ ಮಾಡಿಲ್ಲ. ಆದರೂ ಅವನಿಗೆ ಯಾಕೆ ನೀನು ಈವರೆಗೆ ಪ್ರಸನ್ನಳಾಗಿಲ್ಲ? ನನ್ನ ಯಾವ ಆ ರೀತಿಯ ಪೂಜೆಯ ಕಾರಣದಿಂದಾಗಿ ಇ? ಬೇಗ ನನಗೆ ಪ್ರಸನ್ನಳಾಗಿರುವೆ?" ಎಂದು ಕೇಳಿದನು. |
ಅವಳು, "ಎಲೈ ರಾಜನೆ, ಇವನು ತಾನು ಅನುಸರಿಸಬೇಕಾದ ಸಾಧನಾಪದ್ಧತಿಯನ್ನು ಬಿಟ್ಟು ಹವನ ಮಾಡುತ್ತಿದ್ದಾನೆ. ಅದೂ ಅಲ್ಲದೆ ಅವನ ಮನಸ್ಸಿನಲ್ಲಿ ಭಾವನೆಯೆ ಇಲ್ಲ. |
ಮಂತ್ರೇ ತೀರ್ಥೇ ದ್ವಿಜೇ ದೇವೇ ದೈವಜ್ಞೇ |
ಭೇ?ಜೇ ಗುರೌ | |
ಯಾದೃಶೀ ಭಾವನಾ ಯತ್ರ ಸಿದ್ಧಿರ್ಭವತಿ |
ತಾದೃಶೀ || |
(ಮಂತ್ರ, ತೀರ್ಥ, ಬ್ರಾಹ್ಮಣ, ದೇವರು, ಜ್ಯೌತಿಷಿಕ, ಔ?ಧಿ ಮತ್ತು ಗುರು – ಈ ವಿ?ಯಗಳಲ್ಲಿ ನಮಗೆ ಯಾವ ರೀತಿಯ ಭಾವನೆ ಇರುತ್ತದೆಯೋ ಅದೇ ರೀತಿಯ ಫಲವು ಸಿದ್ಧಿಸುತ್ತದೆ) ಎಂಬ ಮಾತೇ ಇದೆ. ಈ ಬ್ರಾಹ್ಮಣನ ಭಾವನೆ ಶುದ್ಧವಾಗಿಲ್ಲದ ಕಾರಣ ನಾನು ಪ್ರಸನ್ನಳಾಗಿಲ್ಲ" ಎಂದು ಹೇಳಿದಳು. |
ಮಹಾರಾಜನಿಗೆ ಸಮಾಧಾನವಾಯಿತು. ಅವನು "ದೇವಿ, ನನಗಾಗಿ ಏನನ್ನೂ ನಾನು ಬೇಡುವುದಿಲ್ಲ. ಆದರೂ ನೀನು ನನ್ನಲ್ಲಿ ಪ್ರಸನ್ನಳಾಗಿರುವುದು ನಿಜವಾಗಿದ್ದರೆ ಈ ಬ್ರಾಹ್ಮಣನ ಕೋರಿಕೆಯನ್ನು ಪೂರೈಸು" ಎಂದು ಕೇಳಿಕೊಂಡನು. |
ಅವಳು, "ರಾಜನ್, ತಥಾಸ್ತು, ಹಾಗೇ ಆಗಲಿ" ಎಂದು ಹೇಳಿ ಆ ಬ್ರಾಹ್ಮಣನ ಮನೋರಥವನ್ನೂ ಪೂರ್ಣಗೊಳಿಸಿದಳು. ರಾಜನೂ ಸಂತೋ?ಗೊಂಡು ತನ್ನ ರಾಜಧಾನಿಗೆ ಹಿಂದಿರುಗಿದನು." |
ಈ ಕಥೆಯನ್ನು ಹೇಳಿ ಗೊಂಬೆಯು ಭೋಜರಾಜನಿಗೆ "ಎಲೈ ರಾಜನೇ, ಈ ರೀತಿಯ ಧೈರ್ಯ-ಔದಾರ್ಯಗಳು ನಿನ್ನಲ್ಲಿ ಇರುವುದಾದರೆ ಈ ಸಿಂಹಾಸನದಲ್ಲಿ ಕುಳಿತುಕೋ" ಎಂದು ಹೇಳಿತು. |
ತ್ಯಾಜ್ಯದ ನೀರಿನಿಂದ ತನ್ನ ಅಂದಗೆಡಿಸಿಕೊಂಡ ಬಿಳಾಲಖಂಡ |
ಬಿಳಾಲಖಂಡ ಭಟ್ಕಳ ಪಟ್ಟಣದಿಂದ ೬ಕಿ.ಮೀ ದೂರದಲ್ಲಿರುವ ಒಂದು ಪುಟ್ಟ ಹಳ್ಳಿ. ಸುತ್ತಲೂ ಹಬ್ಬಿಕೊಂಡಿರುವ ವನ ರಾಶಿಯ ಮಧ್ಯದಲ್ಲಿ ಹಸುರಿನಿಂದ ಕಂಗೊಳಿಸುವ ಅಡಿಕೆ, ತೆಂಗು ತೋಟಗಳು, ಭತ್ತದ ಗದ್ದೆಗಳ ನಡುವೆ ಈ ಹಳ್ಳಿ ನೋಡುಗರ ಕಣ್ಣಿಗೆ ಹಾಯೆನಿಸುತ್ತದೆ. ಎತ್ತರೆತ್ತರವಾಗಿ ಬೆಳೆದುನಿಂತ ಮರಗಳ ಎಲೆಗಳ ಮಧ್ಯದಿಂದ ಇಣುಕಿ ನೋಡುವ ಸೂರ‍್ಯ ರಶ್ಮಿ, ಗುಡ್ಡದಿಂದ ಹರಿದುಬರುವ ಸ್ಪಟಿಕ ಶುಭ್ರವಾದ ಝರಿ ನೀರು. ಆ ನೀರಿ ನ ವೈಭೋಗವೇ ವರ್ಣಿಸಲಸಾಧ್ಯ. ಗುಡ್ಡದಿಂದ ಹರಿದುಬರುವ ಆ ಝರಿ ನೀರು 'ನಾರ‍್ಕೋಣಿ' ಕೆರೆಯಲ್ಲಿ ಶೇಖರಣೆಗೊಂಡು ಅಲ್ಲಿಂದ ಸುಮಾರು ಹತ್ತು ಅಡಿ ಅಗಲದ ಕಾಲುವೆಯ ಮೂಲಕ ಸಾಗಿ ಅಕ್ಕ ಪಕ್ಕದ ಹಳ್ಳಿಗರ ತೋಟಗಳಿಗೆ, ಜಾನುವಾರಗಳಿಗೆ, ಬಟ್ಟೆ ಒಗೆಯಲು ನೀರನ್ನು ನೀಡಿ ಸುಮಾರು ೧೨ ಕಿ.ಮೀ ದೂರ ಹರಿದು ಮುಂಡಳ್ಳಿ ಹೊಳೆಗೆ ಸೇರಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಈ ಸೊಬಗನ್ನೊಮ್ಮೆ ನೋಡಿದರೆ ಈ ಹಳ್ಳಿಗರೇ ನಿಜಕ್ಕೂ ಅದೃಷ್ಟವಂತರೆಂಬುದು ಭಾಸವಾಗುತ್ತದೆ. ಆದರೆ ಆ ಹಳ್ಳಿಗರು ಅನುಭವಿಸುತ್ತಿರುವ ಸ್ಥಿತಿಯನ್ನು ತಿಳಿದಾಗ ದಂಗಾಗುವುದು ಖಚಿತ. |
ಭಟ್ಕಳ ಪುರಸಭೆಯವರು ಈ ಬಿಳಾಲಖಂಡ ಊರಿನ ಗುಡ್ಡದಲ್ಲಿ ನೆಲಭರ್ತಿ ಜಾಗವನ್ನು ನಿರ್ಮಿಸಿದ್ದು ನಗರದಲ್ಲಿ ಸಂಗ್ರಹವಾದ ತ್ಯಾಜ್ಯವನ್ನೆಲ್ಲ ತಂದು ಇಲ್ಲಿಯೇ ಸುರಿಯುತ್ತಾರೆ. ಅವರ ಪ್ರಕಾರ ನಗರ ಶುಚಿಯಾದರೆ ಸಾಕು ನಗರದಿಂದ ಹೊರಹೋದ ತ್ಯಾಜ್ಯಗಳೇನಾದವು ಎಂದು ನೋಡುವ ಗೋಜಿಗೆ ಹೋಗುವುದಿಲ್ಲ. ಪುರಸಭೆಯವರು ತ್ಯಾಜ್ಯ ಸಂಗ್ರಹಣೆಯಿಂದ ಹಿಡಿದು ನೆಲಭರ್ತಿ ಮಾಡುವವರೆಗೂ ಯಾವ ರೀತಿ ಮಾಡಬೇಕೆಂಬ ಬಗ್ಗೆ ಪೌರ ಘನ ತ್ಯಾಜ್ಯ ನಿರ್ವಹಣಾ ಮಾರ್ಗಸೂಚಿ ೨೦೦೦ ತಿಳಿಸುತ್ತದೆ. ಈ ಕಾನೂನಿನ ಶೆಡ್ಯೂಲ್ ೩ರಲ್ಲಿ ನೆಲಭರ್ತಿ ಜಾಗದ ವಿಶೇಷಣಗಳ ಬಗ್ಗೆ ಉಲ್ಲೇಖವಿದ್ದು ನೆಲಭರ್ತಿ ಜಾಗದ ಆಯ್ಕೆಯಿಂದ ಹಿಡಿದು, ಜಾಗದ ಸೌಲಭ್ಯ, ವಿಶೇಷತೆ, ಮಾಲಿನ್ಯ ತಡೆಗಟ್ಟುವಿಕೆ, ನೀರಿನ ಗುಣಮಟ್ಟ ನಿರ್ಧರಿಸುವುದರ ಕುರಿತು ಒಟ್ಟೂ ೨೩ ಅಂಶಗಳಿದ್ದು ಇದರ ಅನುಸಾರ ನಿರ್ವಹಣೆ ಮಾಡಿದ್ದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗಲು ಸಾಧ್ಯವಿಲ್ಲ. ಆದರೆ ಪುರಸಭೆಯವರು ಎಲ್ಲಾ ತ್ಯಾಜ್ಯವನ್ನು ನೆಲಭರ್ತಿ ಜಾಗಕ್ಕೆ ತಂದು ಸುರಿಯುತ್ತಾರೆ. ಅದು ಹಸಿ ಕಸ, ಒಣಕಸ, ಸತ್ತಪ್ರಾಣಿಗಳ ತ್ಯಾಜ್ಯ ಎಲ್ಲವನ್ನೂ ಸೂಕ್ತವಾಗಿ ನಿರ್ವಹಣೆ ಮಾಡದೇ ಒಟ್ಟಿಗೇ ರಾಶಿ ಹಾಕುತ್ತಾರೆ. ಆ ತ್ಯಾಜ್ಯವೆಲ್ಲವೂ ಸೇರಿದಾಗ ಅದರಿಂದ ಒಂದು ರೀತಿಯ ದ್ರವ ಉತ್ಪತ್ತಿಯಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು 'ಲಿ ಚೆಟ್' ಎಂದು ಕರೆಯುತ್ತಾರೆ. ಇದು ತುಂಬಾ ವಿಷಕಾರಿ ದ್ರವವಾದ್ದರಿಂದ ಅದು ನೆಲಭರ್ತಿ ಜಾಗದಿಂದ ಹೊರಗಡೆ ಚಲಿಸದಂತೆ ನಿರ್ವಹಣೆ ಮಾಡಬೇಕು. ಆದರೆ ಪುರಸಭೆಯವರ ನಿರ್ಲಕ್ಷ್ಯದಿಂದಾಗಿ ಈ 'ಲಿಚೆಟ್' ದ್ರವ ಎತ್ತರ ಪ್ರದೇಶದಲ್ಲಿರುವ ನೆಲಭರ್ತಿ ಜಾಗದಿಂದ ಇಳಿದು ಗುಡ್ಡದಲ್ಲಿ ಹರಿದು ಬಂದು ಝರಿ ನೀರಿನೊಂದಿಗೆ ಸೇರಿ ಗುಡ್ಡದ ತಳಭಾಗದಲ್ಲಿರುವ ಬಿಳಾಲಖಂಡ ಗ್ರಾಮಕ್ಕೆ ಬರುತ್ತದೆ. ಶುಭ್ರ ಸ್ಪಟಿಕದಂತಿದ್ದ ಆ ಝರಿ ನೀರು ಈಗ ತ್ಯಾಜ್ಯದ ನೀರಿನೊಂದಿಗೆ ಸೇರಿ ಮಲಿನವಾಗಿದೆ. ಇನ್ನೊಂದು ಆಘಾತಕಾರಿ ಸಂಗತಿಯೇನೆಂದರೆ ಗುಡ್ಡದಿಂದ ಹರಿದು ಬರುವ ಝರಿ ನೀರು 'ನಾರ‍್ಕೋಣಿ' ಎಂಬ ಕೆರೆಯಲ್ಲಿ ಸೇರ್ಪಡೆಯಾಗುತಿತ್ತು. ಈ ಕೆರೆ ಸುಮಾರು ೭೦ ವರ್ಷಕ್ಕಿಂತಲೂ ಹಳೆಯ ಕೆರೆಯಾಗಿದ್ದು ಈ ಕೆರೆಯಲ್ಲಿ ಶೇಖರಣೆಯಾದ ಝರಿ ನೀರನ್ನು ಆ ಹಳ್ಳಿಯ ಜನರು ತಮ್ಮ ದಿನಬಳಕೆಗೆ ಬಳಸುತ್ತಿದ್ದರು. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಅಷ್ಟೊಂದು ಹಳೆಯದಾದ ಕೆರೆಯನ್ನು ಆ ಹಳ್ಳಿಗರೇ ಸರ್ಕಾರದ ಯಾವುದೇ ಅನುದಾನ ಬಳಸದೆ ತಮ್ಮ ಸ್ವಂತ ಖರ್ಚಿನಲ್ಲಿ ಹೂಳೆತ್ತುವುದು, ಕಟ್ಟೆ ನಿರ್ಮಿಸುವ ಮೂಲಕ ನಿರ್ವಹಣೆ ಮಾಡಿದ್ದರು ಆದರೆ ಈಗ ಕೆಲವು ವರ್ಷಗಳಿಂದ ತ್ಯಾಜ್ಯದ ನೀರು ಬಂದು ಸೇರುವುದರಿಂದ ಆ ಕೆರೆ ಇದ್ದೂ ಇಲ್ಲದಂತಾಗಿದೆ. ಮಳೆಗಾಲದಲ್ಲಿ ರಾಶಿ ರಾಶಿ ಕಸಗಳು ಗುಡ್ಡದಿಂದ ಇಳಿದು ಬಂದು 'ನಾರ‍್ಕೋಣಿ' ಕೆರೆಯಲ್ಲಿ ತುಂಬಿಕೊಳ್ಳುತ್ತೆ ಅಲ್ಲಿಂದ ನೇರವಾಗಿ ಕೃಷಿ ಗದ್ದೆಗಳಿಗೆ ಸೇರುತ್ತದೆ. ಹಾಗೆಯೇ ಆ ತ್ಯಾಜ್ಯವೆಲ್ಲವೂ ಕಾಲುವೆಯ ಮೂಲಕ ಮುಂಡಳ್ಳಿ ಹೊಳೆಗೆ ಪ್ರವೇಶಿಸಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಅಷ್ಟೇ ಅಲ್ಲದೇ ಹಳ್ಳಿಯ ಅಂರ್ತಜಲವೂ ಸಹ ತ್ಯಾಜ್ಯದ ನೀರಿನಿಂದ ಕಲುಷಿತವಾಗಿರಬಹುದೆಂಬ ಶಂಖೆಯಿಂದ ಹಳ್ಳಿಯವರು ಭಯದಿಂದಲೇ ನೀರನ್ನು ಉಪಯೊಗಿಸುತ್ತಾರೆ. |
ಹಳ್ಳಿಗರು ಒಂದೆರಡು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾರೂಬ್ಬರೂ ಈ ಕುರಿತು ಸೂಕ್ತ ಕ್ರಮ ಕೈಗೊಂಡಿಲ್ಲ. ಪುರಸಭೆಯವರು ನೆಲಭರ್ತಿ ಜಾಗವನ್ನು ಕಾನೂನಿನ ಪ್ರಕಾರ ನಿರ್ವಹಣೆ ಮಾಡಿದ್ದಲ್ಲಿ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಆ ದಿಸೆಯಲ್ಲಿ ಸಂಬಂಧಪಟ್ಟ ಸಂಘ ಸಂಸ್ಥೆಗಳು ಈ ಹಳ್ಳಿಗರ ಸ್ಥಿತಿಯನ್ನು ಅರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದೇ ಈ ಲೇಖನದ ಆಶಯ. |
ವೇಗಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದ ಬಿಸಿಸಿಐ - Kannada myKhel |
» ವೇಗಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದ ಬಿಸಿಸಿಐ |
Updated: Thursday, March 22, 2018, 18:45 [IST] |
ಬೆಂಗಳೂರು, ಮಾರ್ಚ್ 22: ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿದ್ದ ವೇಗಿ ಮೊಹಮ್ಮದ್ ಶಮಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕ್ಲೀನ್ ಚಿಟ್ ನೀಡಿದೆ. ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಶಮಿ ಭಾಗಿಯಾಗಿದ್ದಾರೆ, ಪಾಕಿಸ್ತಾನಿ ಯುವತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದರು. |
ಈ ಬಗ್ಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖೆ ನಡೆಸಿದ್ದು, ತನ್ನ ವರದಿಯನ್ನು ನೀಡಿದ್ದು, ಶಮಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಹೀಗಾಗಿ, ವಾರ್ಷಿಕ ಬಿ ಶ್ರೇಣಿ ಗುತ್ತಿಗೆಗೆ ಶಮಿ ಅರ್ಹರಾಗಿದ್ದು, 3 ಕೋಟಿ ರು ಪಡೆಯಬಹುದಾಗಿದೆ. ಕಳೆದ ತಿಂಗಳು ಪ್ರಕಟಗೊಂಡ ಗುತ್ತಿಗೆ ಪಟ್ಟಿಯಲ್ಲಿ ಶಮಿ ಹೆಸರು ಸೇರಿಸಿರಲಿಲ್ಲ. |
ಆರೋಪ ಮುಕ್ತರಾಗಿರುವ ಶಮಿ ಅವರು ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಬಹುದಾಗಿದೆ. |
ಪದವಿ ಪರೀಕ್ಷೆ: ಉತ್ತರ ಪತ್ರಿಕೆ ಗೊಂದಲ | Prajavani |
Subsets and Splits
No community queries yet
The top public SQL queries from the community will appear here once available.