text
stringlengths 0
61.5k
|
---|
ಕಡಿಮೆ ಮಕ್ಕಳಿರುವ ನೆವದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ಗ್ರಾಮೀಣ ಬಡ ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ಕುರಿತು, ಹಾಗೂ ಅದರ ಹಿಂದೆ ಇರುವ ವಾಸ್ತವ ಕಹಿ ಸತ್ಯಗಳನ್ನು ಕಳೆದ ೧೫ ದಿನಗಳಿಂದ ವಿಜಯ ಕರ್ನಾಟಕ ಪತ್ರಿಕೆ 'ಮುಚ್ಚು-ಮರೆ' ಶೀರ್ಷಿಕೆಯಡಿ ಜನರ ಮುಂದಿರಿಸುವುದರ ಜೊತೆಗೆ ಸರ್ಕಾರದ ಕಣ್ಣು ತೆರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ತನ್ಮೂಲಕ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಮಾತನ್ನು ಸಾಬೀತುಪಡಿಸಿದೆ. ರಾಜ್ಯದ ಒಂದೊಂದು ಜಿಲ್ಲೆಯದೂ ಒಂದೊಂದು ಕಥೆಯಾದರೆ, ಒಂದೊಂದು ಶಾಲೆಯದು ವಿಭಿನ್ನ ಸಮಸ್ಯೆ, ಒಂದೊಂದು ಮಗುವಿನದು ಬೇರೆ ಬೇರೆಯದೇ ಸಂಕಟ. ಈ ವರ್ಷ ಹತ್ತಕ್ಕಿಂಥಾ ಕಡಿಮೆ ಇರುವ ೩೦೦೦ ಶಾಲೆಗಳನ್ನು ಮುಚ್ಚುವುದೆಂದರೆ ಅಂದಾಜು ೨೫೦೦೦ ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡಿದಂತೆ. ಈ ಪ್ರಮಾಣ ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತದೆ ಎಂಬುದೇ ಆತಂಕದ ವಿಷಯ. |
ಒಂದು ಸರ್ಕಾರವೆಂದರೆ ಕಾಳಜಿ-ಅಂತಃಕರಣವಿರುವ ತಾಯಿಯಂತೆ. ಕುಟುಂಬದಲ್ಲಿ ಮಗುವೊಂದು ಬಡಕಲಾಗಿ, ಅನಾರೋಗ್ಯದಿಂದಿದ್ದರೆ, ತಾಯಿ ಆ ಮಗುವಿಗೆ ಹೆಚ್ಚಿನ ಪೌಷ್ಟಿಕ ಆಹಾರದೊಂದಿಗೆ ತನ್ನ ಪ್ರೀತಿಯನ್ನು ನೀಡಿ ಶ್ರದ್ಧೆಯಿಂದ ಮಗುವನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಾಳೆ. ಮುಂದಿನ ಸಮಾಜ ಹೇಗಿರಬೇಕು? ಎಂಬುವುದನ್ನು ನಿರ್ಧರಿಸುವುದು ಆ ನಾಡಿನ ಶಿಕ್ಷಣ ವ್ಯವಸ್ಥೆ. ನಿಜವಾದ ಕಾಳಜಿಯುಳ್ಳ ಸರ್ಕಾರ ಅದಕ್ಕೆ ಪೂರಕವಾಗಿ ಯೋಚಿಸಬೇಕು. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದಾರೆ ಎಂದಾಕ್ಷಣ ಶಾಲೆಯನ್ನೇ ಮುಚ್ಚಿ ಕೈ ತೊಳೆದುಕೊಳ್ಳುವುದಲ್ಲ. ಬದಲಿಗೆ ಸರ್ಕಾರಿ ಶಾಲೆಗಳನ್ನು ಬಲಗೊಳಿಸಲು ಇರುವ ಪರ್ಯಾಯ ಮಾರ್ಗಗಳನ್ನು ಹುಡುಕಿ ಅನುಷ್ಠಾನಗೊಳಿಸಬೇಕು. |
ಬಹು ಮುಖ್ಯ ಅಂಶವೆಂದರೆ ಶಿಕ್ಷಣ ಮಾರಾಟದ ಸರಕಲ್ಲ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ, ಬಣ್ಣ ಬಣ್ಣದ ಆಕಷಕ ಪ್ಯಾಕ್‌ಗಳಲ್ಲಿ, ರೋಚಕ ಜಾಹಿರಾತು ನೀಡಿ ಹರಾಜಿಗಿಡುವಂತದ್ದಲ್ಲ. ಆದರೆ ಇಲ್ಲಿ ಏನಾಗಿದೆ ಎಂದರೆ ಖಾಸಗಿವಲಯವೇ ಸರ್ಕಾರಿ ವ್ಯವಸ್ಥೆಯನ್ನು ನುಂಗಿ ನೀರು ಕುಡಿಯುವಂತಾಗಿದೆ. ಖಾಸಗಿವಲಯದ ಪಾಲುದಾರಿಕೆ ಎಷ್ಟು ಪ್ರಮಾಣದಲ್ಲಿರಬೇಕು? ಯಾವ ಸ್ವರೂಪದಲ್ಲಿರಬೇಕು? ಅದರ ಮೇಲೆ ಸರ್ಕಾರದ ಹಿಡಿತ ಹೇಗಿರಬೇಕು? ಅದಕ್ಕೆ ಒಂದು ಸ್ಪಷ್ಟ ನೀತಿ ನಿಯಮ ಅಂತೇನಾದರೂ ಇದೆಯೇ? ಇಲ್ಲವೇ ಇಲ್ಲ. ಉದಾಹರಣೆಗೆ ಕರ್ನಾಟಕ ಸಾರಿಗೆ ಎಂಬ ಸಾರ್ವಜನಿಕ ವ್ಯವಸ್ಥೆ ಹಾಗೂ ಖಾಸಗಿ ಸಾರಿಗೆ ವ್ಯವಸ್ಥೆ, ಒಂದರ ಮೇಲೆ ಒಂದು ಪೈಪೋಟಿ ಇಲ್ಲದೇ, ಸ್ಪರ್ಧೆಗೆ ಇಳಿಯದೇ ಎರಡೂ ಒಟ್ಟಾಗಿ ಸಾಗ್ತಾ ಇಲ್ಲವೇ? ಹಾಗೇ ಖಾಸಗಿವಲಯ ಮಿತಿ ಮೀರಿ ಹೋಗದಂತೆ ಕಠಿಣ ಹಾಗೂ ಸಮಗ್ರ ಶೈಕ್ಷಣಿಕ ನೀತಿಯೊಂದನ್ನು ರೂಪಿಸಬೇಕು. ಈಗಿನಂತೆ ಬೇಕಾಬಿಟ್ಟಿ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಖಾಸಗಿ ಶಾಲೆಗಳನ್ನು ಪ್ರಾರಂಭಿಸದಂತೆ, ಅವುಗಳಿಗೆ ಪರವಾನಗಿ ನೀಡಲು ಮಾನದಂಡಗಳನ್ನು ರೂಪಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. |
ಒಂದು ಕಡೆ ಖಾಸಗಿವಲಯ ಕೊಬ್ಬಿ ನಿಲ್ಲೋದಕ್ಕೆ ಹಾಸಿಗೆ ಹಾಕಿಕೊಟ್ಟು ಇನ್ನೊಂದು ಕಡೆ ಸರ್ಕಾರಿ ಶಾಲೆಗಳನ್ನು ಸಾವಿರದ ಲೆಕ್ಕದಲ್ಲಿ ಮುಚ್ಚುತ್ತಾ ಹೋಗಿ, ಕೆಲವೇ ವರ್ಷಗಳಲ್ಲಿ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ನಿಲ್ಲಿಸಿ, 'ಬೇಕಿದ್ದರೆ ಖಾಸಗಿ ಶಾಲೆಯಲ್ಲಿ ಕಲಿಯಲಿ, ಇಲ್ಲದಿದ್ದರೆ ಕೂಲಿ ಮಾಡಲು ಹೋಗಲಿ' ಎಂಬ ಸಂದೇಶವನ್ನೇನಾದರೂ ಸರ್ಕಾರ ಕೊಡ್ತಾ ಇದ್ಯಾ ಅನ್ನಿಸ್ತಾ ಇದೆ. ಒಂದು ಹಳ್ಳಿಯ ಸರ್ಕಾರಿ ಶಾಲೆ ಮುಚ್ಚುವ ಮೂಲಕ ಆ ಊರಿನ ಸಾಂಸ್ಕೃತಿಕ ನೆಲೆಗಟ್ಟನ್ನೇ ಕಳಚಿದಂತಾಗುತ್ತದೆ. ಪ್ರಾಥಮಿಕ ಶಾಲೆ ಓದುತ್ತಿರುವ ಪುಟಾಣಿ ಮಕ್ಕಳು ಏಕಾಂಗಿಯಾಗಿ, ದೂರದ ಶಾಲೆಗೆ ನಡೆದು ಅಥವಾ ಬಸ್‌ಗಳಲ್ಲಾದರೂ ಹೇಗೆ ಹೋಗಬಲ್ಲರು? ಬಸ್‌ಗಳೇ ಪ್ರವೇಶಿಸದ, ರಸ್ತೆಗಳೇ ಇಲ್ಲದ ಕುಗ್ರಾಮಗಳು ರಾಜ್ಯದಲ್ಲಿ ಎಷ್ಟಿವೆ ಎನ್ನೋದು ನಗರದಲ್ಲಿ ವಿಲಾಸಿ ಜೀವನ ನಡೆಸುತ್ತಿರುವ, ವಿಮಾನ-ಹೆಲಿಕಾಫ್ಟರ್‌ಗಳಲ್ಲಿ ಹಾರಾಡುವ ನಮ್ಮ ರಾಜಕಾರಣಿಗಳಿಗೆ ತಿಳಿದಿದೆಯೇ? ಅನನುಕೂಲ ಭೌಗೋಳಿಕ ಪ್ರದೇಶದಲ್ಲಿ, ಅದರಲ್ಲೂ ಮನೆಯ ಹತ್ತಿರದ ಶಾಲೆಗೇ ಹೆಣ್ಣು ಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ಕಳಿಸೋದಕ್ಕೆ ಗ್ರಾಮೀಣ ಪೋಷಕರು ಹೆದರ‍್ತಾರೆ. ಇನ್ನು ದೂರದ ಶಾಲೆಗೆ ಮಕ್ಕಳನ್ನು ಹೇಗೆ ಕಳುಹಿಸುತ್ತಾರೆ? ಅಲ್ಲಿಗೆ ಹೆಣ್ಣು ಮಕ್ಕಳ ಶೈಕ್ಷಣಿಕ ಭವಿಷ್ಯವನ್ನ ಮುಚ್ಚಿದಂತೆನೇ ಅಲ್ವೇ? |
೨೦೧೧ರ ಜನಗಣತಿಯಂತೆ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ೧,೧೧,೦೦೦. ಇದು ಹೋಗಲಿ, ಸರ್ಕಾರದ ಸರ್ವಶಿಕ್ಷಣ ಅಭಿಯಾನ ಶೈಕ್ಷಣಿಕ ಮಾಹಿತಿ ೨೦೧೦-೧೧ರ ಪ್ರಕಾರವೇ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ೩೯೮೪೧. ನಿಜಕ್ಕೂ ಸರ್ಕಾರಕ್ಕೆ ಕಣ್ಣಿದೆಯೇ? ಇದ್ದಿದ್ದರೆ ಇಂಥ ದಿವ್ಯ ನಿರ್ಲಕ್ಷ್ಯ ಯಾಕೆ? ಈ ಮಕ್ಕಳನ್ನಾದರೂ ಶಾಲೆಗೆ ಸೇರಿಸುವ ಪ್ರಾಮಾಣಿಕ ಪ್ರಯತ್ನವನ್ನೇನಾದರೂ ಸರ್ಕಾರ ಮಾಡಿದರೆ ಈಗ ಇರುವ ಶಾಲೆಗಳು ಸಾಲದೇ ಮತ್ತಷ್ಟು ಹೊಸ ಶಾಲೆಗಳನ್ನು ತೆರೆಯಬೇಕಾಗುತ್ತದೆ. ರಾಜ್ಯದಲ್ಲಿ ಲಂಗುಲಗಾಮಿಲ್ಲದೇ ಹುಟ್ಟಿಕೊಂಡಿರುವ ೩೦೦೦ ಕ್ಕೂ ಹೆಚ್ಚಿನ ಅನಧಿಕೃತ ಶಾಲೆಗಳನ್ನು ಮುಚ್ಚಿದರೆ ಸರ್ಕಾರಿ ಶಾಲೆಗೆ ಮಕ್ಕಳು ತಾವಾಗಿಯೇ ಬರುತ್ತಾರೆ. ಖಾಸಗಿ ಶಾಲೆಗಳಿಗೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಪರವಾನಗಿ ನೀಡಿ ದಶಕಗಳಿಂದ ಖಾಸಗಿ ಹಿತಕ್ಕೆ ಬಲಿಯಾಗಿರುವ ಸರ್ಕಾರ ಮತ್ತು ಅಧಿಕಾರಶಾಹಿಯ ಸಂಚಿಗೆ ಇವತ್ತು ಬಡ ಮಕ್ಕಳ ಶಿಕ್ಷಣ ಬಲಿಯಾಗಬೇಕಾಗಿದೆ. |
ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರವೇ ರಾಜ್ಯದಲ್ಲಿ ೧೩ ಸಾವಿರ ಶಾಲೆಗಳಲ್ಲಿ ಶೌಚಾಲಯವಿಲ್ಲ. ೮೩೮೯ ಶಾಲೆಗಳಲ್ಲಿ ನೀರಿಲ್ಲ, ೮೦೦೦ ಶಿಕ್ಷಕರ ಹುದ್ದೆಗಳು ಭರ್ತಿಗಾಗಿ ಕಾಯುತ್ತಿವೆ! ೨೧೯೧೦ ಶಾಲೆಗಳಿಗೆ ಆಟದ ಮೈದಾನವಿಲ್ಲ, ೭೬೩ಕ್ಕೂ ಹೆಚ್ಚು ಶಾಲೆಗಳಿಗೆ ಕಟ್ಟಡವೇ ಇಲ್ಲ, ೨೫೭ಕ್ಕೂ ಹೆಚ್ಚು ಶಾಲೆ ಶಿಥಿಲಾವಸ್ಥೆಯಲ್ಲಿವೆ. ೨೮%ರಷ್ಟು ಶಾಲೆಗಳು ಮೂಲಸೌಕರ್ಯದ ಕೊರತೆ ಎದುರಿಸುತ್ತಿವೆ. ಇಂತಹ ಸರ್ಕಾರಿ ಶಾಲೆಗಳಿಗೆ ಒಂದಿಷ್ಟು ಅನುಕೂಲತೆ ಇರುವವರ‍್ಯಾರು ತಮ್ಮ ಮಕ್ಕಳನ್ನು ಸೇರಿಸಲು ಬಯಸುತ್ತಾರೆ? ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಡಿ ದರ್ಜೆ ನೌಕರರಿಲ್ಲ. ಅವರು ಮಾಡುವ ಕೆಲಸವನ್ನೆಲ್ಲಾ ಮಕ್ಕಳೇ ಮಾಡಬೇಕು! ಶೌಚಾಲಯ ಸ್ವಚ್ಛಗೊಳಿಸೋದು, ಶಾಲೆಯ ಒಳ ಹೊರಗೆ ಶುದ್ಧಿ ಮಾಡೋದು, ಬಿಸಿ ಊಟದ ತಯಾರಿಯಲ್ಲಿ ಸಹಾಯ ನೀಡುವ ಕೆಲಸವನ್ನೆಲ್ಲಾ ಮಕ್ಕಳಿಂದ, ಇದೆಲ್ಲಾ ಮಾಮೂಲು ಅನ್ನೋ ರೀತಿಲಿ ಮಾಡಿಸಲಾಗುತ್ತಿದೆ. ಇಲ್ಲೆಲ್ಲಾ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಂiiನ್ನು ಸರ್ಕಾರ ಮತ್ತು ಅಧಿಕಾರಶಾಹಿಯೇ ತಿಳಿದೂ ಮಾಡುತ್ತಿದೆ. ಸರ್ಕಾರಿ ಶಾಲೆ ಮಕ್ಕಳು ಅಂದ್ರೆ ಯಾಕಿಷ್ಟು ತಾತ್ಸಾರ? ಬೇಲಿಯೇ ಎದ್ದು ಹೊಲ ಮೆಯ್ದರೆ ಯಾರಿಗೆ ದೂರು ಕೊಡೋದು? |
ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಸುಧಾರಣೆಗೆ ಆಗ್ರಹಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್ 'ಇದು ಸರ್ಕಾರಿ ಶಾಲೆಗಳ ಅಳಿವು-ಉಳಿವಿನ ಪ್ರಶ್ನೆ. ಮಕ್ಕಳನ್ನು ಮನುಷ್ಯರಂತೆ ನಡೆಸಿಕೊಳ್ಳಿ, ಡಿಸೆಂಬರ್ ೨೦೧೧ರ ಒಳಗೆ ಮೂಲ ಸೌಕರ್ಯ ಒದಗಿಸಿ' ಎಂದು ಆದೇಶಿಸಿತ್ತು. ಕೊರತೆಯಂತೂ ಸರಿಯಾಗಲಿಲ್ಲ. ಈಗ ಶಾಲೆಗಳನ್ನೇ ಮುಚ್ಚಿ ಸಮಸ್ಯೆಗೆ ಶಾಶ್ವತ ಮೋಕ್ಷ ಕಾಣಿಸ್ತಿದೆ ಸರ್ಕಾರ! |
'ಸರ್ಕಾರಿ ಶಾಲೆ ಮುಚ್ಚುವಿಕೆಯಿಂದ ಯಾವುದೇ ಕಾರಣಕ್ಕೂ ಮಕ್ಕಳ ಮೂಲಭೂತ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಆಗಬಾರದು. ನಿಗದಿತ ಅಂತರಕ್ಕಿಂಥಾ ದೂರವಿರುವ ಶಾಲೆಗಳಿಗೆ ಪ್ರಯಾಣಿಸಲು ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು. ಗುಡ್ಡಗಾಡು ಹಾಗೂ ಭೌತಿಕ ಅಸಮತೋಲನಗಳಿರುವ ಪ್ರದೇಶಗಳಲ್ಲಿ ಮಕ್ಕಳ ವಾಸಸ್ಥಳದ ಹತ್ತಿರದಲ್ಲಿಯೇ ಸರ್ಕಾರ ಶಾಲೆಗಳನ್ನು ಪ್ರಾರಂಭಿಸಬೇಕು. ಉಚಿತ ಸಾರಿಗೆ ವ್ಯವಸ್ಥೆ ಮಾಡದೇ ಶಾಲೆಗಳನ್ನು ವಿಲೀನ ಮಾಡುತ್ತಿರುವುದು ಕೋರ್ಟ್‌ನ ಗಮನಕ್ಕೆ ಬಂದರೆ ಅದು ನ್ಯಾಯಂಗ ನಿಂದನೆಯಾಗುತ್ತದೆ' ಎಂದು ಹೈಕೋರ್ಟ್ ಇದೇ ೨೦೧೨, ಜೂನ್ ೨೦ರಂದು ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಉಚಿತ ಸಾರಿಗೆ ವ್ಯವಸ್ಥೆ |
ಅಂತ ಒತ್ತಿ ಹೇಳಿದೆ. ಆದರೆ 'ಸಾರಿಗೆ ವ್ಯವಸ್ಥೆನೇ' ಇಲ್ಲ ಇನ್ನು 'ಉಚಿತ' ಎಲ್ಲಿಂದ ಬಂತು ಅಂತ ಜನ ಕೇಳ್ತಾ ಇದ್ದಾರೆ. |
ಶಿಕ್ಷಣ ಹಕ್ಕು ಕಾಯ್ದೆಯನ್ನೂ ಪರಿಗಣಿಸದೇ ಮನ ಬಂದ ಹಾಗೆ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರಕ್ಕೆ ಹೈಕೋರ್ಟ್‌ನ ಆದೇಶ ಯಾವ ಲೆಕ್ಕ? ಅಧಿಕಾರಿಗಳು ನಮಗೆ ಶಾಲೆ ಮುಚ್ಚುವ ಸ್ಪಷ್ಟ ಆದೇಶ ಬಂದಿಲ್ಲ ಅಂತ ಸಬೂಬು ಹೇಳುತ್ತಾ, ದಾಖಲೆಗಳಲ್ಲಿ ಶಾಲೆಗಳನ್ನು ತೋರಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಶಾಲೆಗಳು 'ವಿ-ಲೀನ'ಗೊಂಡಿವೆ. ಇದೇ ೨೦೧೨ರ ಜುಲೈ ೨೪ರಂದು ಶಿಕ್ಷಣ ಇಲಾಖೆ ಶಾಲೆಗಳನ್ನು ವಿಲೀನಗೊಳಿಸಲು ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ನೀಡಿದೆ. 'ವಿಲೀನಗೊಳಿಸುವಾಗ ಘಟ್ಟ ಪ್ರದೇಶಗಳಲ್ಲಿ, ಆಯಾ ಪ್ರದೇಶದ ಭೌತಿಕ ಲಕ್ಷಣಗಳನ್ನು, ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅನುಕೂಲವಾಗುವುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಸಮಸ್ಯೆಗಳನ್ನು ಪರಿಹರಿಸಿ ಸಂಬಂಧಿಸಿದ ಇವರಿಬ್ಬರೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು, ಉಚಿತವಾಗಿ ಸಾರಿಗೆ ಭತ್ಯೆಯನ್ನು ಭರಿಸಲು ವಿಲೀನಗೊಳಿಸಿದ ಪ್ರತಿ ಶಾಲೆಯ ಅಂತರ ಪ್ರತಿ ಮಗುವಿನ ವಿವರವನ್ನು ನೀಡಬೇಕೆಂದು' ಆದೇಶಿಸಿದೆ. ಆದರೆ ಇದುವರೆಗೂ ಸರ್ಕಾರ ರಾಜ್ಯದ ಯಾವುದೇ ಭಾಗದಲ್ಲೂ, ಯಾವ ಮಗುವಿಗೂ ಉಚಿತ ಸಾರಿಗೆ ವ್ಯವಸ್ಥೆ ಏರ್ಪಡಿಸಿಲ್ಲ, ಸಾರಿಗೆ ಭತ್ಯೆ ನೀಡಿಲ್ಲ. ಇಂತಹದೊಂದು ವ್ಯವಸ್ಥೆಯನ್ನು ಜಾರಿಗೆ ತರಲು ಇನ್ನೂ ಪ್ರತ್ಯೇಕ ಸಮಿತಿಯನ್ನೂ ರಚಿಸಿಲ್ಲವೆಂದರೆ ಸರ್ಕಾರ ಖಾಸಗಿಗೆ ತನ್ನನ್ನ ಮಾರಿಕೊಂಡ ಅನುಮಾನ ಬಲವಾಗ್ತಾ ಇದೆ. |
ಯಾವುದೇ ಮಗುವೂ ಶಿಕ್ಷಣ ಹಕ್ಕಿನಿಂದ ವಂಚಿತವಾಗದಂತೆ ತಕ್ಷಣವೇ ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ನೀಡಬೇಕು. ಇನ್ನೂ ಸಾವಿರ ಸಂಖ್ಯೆಯಲ್ಲಿ ಶಾಲೆಯ ಹೊರಗಿರುವ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲು ಸಶಕ್ತ ಯೋಜನೆ ರೂಪಿಸಬೇಕು. ಇಲ್ಲದೇ ಇದ್ರೆ 'ಉಚಿತ' 'ಕಡ್ಡಾಯ' ಎಲ್ಲಾ ಸಂವಿಧಾನದಲ್ಲಿ, ಕಾಯ್ದೆನಲ್ಲಿ ಮಾತ್ರ. ವಾಸ್ತವದಲ್ಲಿ ಕಾಟಾಚಾರ ಅಷ್ಟೇ ಎನ್ನಿಸಿಬಿಡುತ್ತೆ. ಸೊರಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಮೂಲಸೌಲಭ್ಯಗಳನ್ನು ಒದಗಿಸುವ ಜೊತೆಗೆ ಖಾಲಿ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. |
ಎಲ್ಲಕ್ಕಿಂಥಾ ಮುಖ್ಯವಾಗಿ ಶಿಕ್ಷಣ ಖಾಸಗಿಕರಣ ಸರ್ಕಾರಿ ಶಾಲೆಗಳನ್ನು ನಿರ್ನಾಮ ಮಾಡದಂತೆ ಪ್ರಬಲ ಶೈಕ್ಷಣಿಕ ನೀತಿಯೊಂದನ್ನು ತುರ್ತಾಗಿ ರೂಪಿಸಬೇಕು. ಈಗಲಾದರೂ ಸರ್ಕಾರ ಶಾಲೆಯನ್ನ ಅಂಗಡಿ ಅಂದುಕೊಂಡಿದೆಯಾ, ವಿದ್ಯಾಲಯ ಅಂದ್ಕೊಂಡಿದ್ಯಾ ಅಂತ ಆತ್ಮಾವಲೋಕನ ಮಾಡಿಕೊಂಡು, ಪ್ರಾಮಾಣಿಕತೆ ಇದ್ದರೆ, ಅನಧಿಕೃತ ಖಾಸಗಿ ಶಾಲೆಗಳನ್ನು ತಕ್ಷಣ ಮುಟ್ಟುಗೋಲು ಹಾಕಿಕೊಂಡು ತಾಯಿಯ ಸ್ಥಾನದಲ್ಲಿ ನಿಂತು, ಶಿಕ್ಷಣ ವ್ಯವಸ್ಥೆ ಯಾವುದೇ ಲಾಭ ಮತ್ತು ಲಾಭಿಗಳಿಗೆ ಮಣಿಯದಂತೆ 'ಮಕ್ಕಳ' ಶೈಕ್ಷಣಿಕ ಹಿತದೃಷ್ಟಿಯಿಂದ ಮಾತ್ರ ಪುನರ್‌ರೂಪುಗೊಳಿಸಬೇಕು. ಇಲ್ಲದೇ ಇದ್ದರೆ ಮನು ಸಂಸ್ಕೃತಿಯ ಕಾಲದಲ್ಲಿ ಕೆಲವರಿಗೆ ಶಿಕ್ಷಣವನ್ನ ನಿರಾಕರಿಸಿದ್ದ ಪಿಶಾಚಿ, ಇವತ್ತು ಗವಾಕ್ಷಿಯಲ್ಲಿ ಬಂದು ಕೂತಿದೆ ಅಂತಾಗುತ್ತೆ! |
[ವಿಜಯ ಕರ್ನಾಟಕ ೨೨.೮. ೨೦೧೨] |
ವಿಭಾ ಕವಿತೆ-ರೂಪ ಹಾಸನ ಅವರ ಸ್ಪಂದನೆ |
ನಾವು ಹಲುಬುವುದು ಬೇಡ. |
ಅವರು ನಿದ್ದೆಯೆಂದ |
ಅದಾಲತ್ತಿನಲಿ ನ್ಯಾಯ ಕೇಳೋಣ. |
[ವಿಭಾ ನಮ್ಮ ನಡುವೆ ಇದ್ದು ಆಕಸ್ಮಿಕವಾಗಿ ತೀರಿಕೊಂಡ ಪ್ರತಿಭಾನ್ವಿತ ಕವಯಿತ್ರಿ. ಜೀವ ಮಿಡಿತದ ಸದ್ದು ಅವರ ಕವನ ಸಂಕಲನ. ಪ್ರಸ್ತುತ 'ಕದ್ದರೆಂದು' ಕವಿತೆಯನ್ನು ೨೦೦೬ರಲ್ಲಿ ಬೆಂಗಳೂರಿನ ಸಂಚಯ ಪ್ರಕಾಶನ ಹೊರತಂದಿರುವ 'ಜೀವ ಮಿಡಿತದ ಸದ್ದು' ಸಂಕಲನದಿಂದ ಆರಿಸಿಕೊಳ್ಳಲಾಗಿದೆ.] |
ನಿರ್ಲಿಪ್ತ ಮನಸಿನ ದೃಢತೆಯಲ್ಲಿ............. |
'ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು' ಎಂಬ ಗಾಂಧೀಜಿಯ ಮಾತು ನೆನಪಾಗುತ್ತಿದೆ. ಒಂದು ಕೆನ್ನೆಗೆ ಹೊಡೆಸಿಕೊಂಡ ನೋವನ್ನು ಮರೆಯುವುದೇ ಕಷ್ಟ. ಅದಕ್ಕೆ ಸಿಟ್ಟಾಗದಿರುವುದು, ಪ್ರತೀಕಾರ ತೀರಿಸದಿರುವುದು ಇನ್ನೂ ಕಷ್ಟ. ಅಂಥದ್ದರಲ್ಲಿ ಒಂದು ಕೆನ್ನೆಗೆ ಹೊಡೆದವನಿಗೇ ಇನ್ನೊಂದು ಕೆನ್ನೆಗೂ ಹೊಡೆಯಲು ಹೇಳುವುದೆಂದರೆ ಬಹುಶಃ ನಿರ್ಲಿಪ್ತತೆ ಮತ್ತು ಪ್ರಬುದ್ಧತೆಯನ್ನು ಏಕಕಾಲಕ್ಕೆ ಹೊಂದಿರುವ ವ್ಯಕ್ತಿಗೆ ಮಾತ್ರ ಸಾಧ್ಯವೇನೋ? ಕ್ಷಮೆಯೆನ್ನುವುದೇ ದುಬಾರಿಯಾಗಿರುವ ಪ್ರಸ್ತುತ ಸಂದರ್ಭದಲ್ಲಿ ಈ ಮಾತು ಬಹುಶಃ ಬೆರಳೆಣಿಕೆಯ ಸಂತ ವ್ಯಕ್ತಿತ್ವಗಳಿಗೆ ಮಾತ್ರ ಅನ್ವಯವಾದೀತು. |
ಪ್ರಸ್ತುತ 'ಕದ್ದರೆಂದು' ಕವಿತೆಯಲ್ಲಿ ಪ್ರಸ್ತಾಪವಾಗಿರುವ ಅವರು ಪ್ರಭುತ್ವ ಹಾಗೂ ಸ್ವಾರ್ಥಕ್ಕೆ ಸಂಕೇತವಾದವರು. ಪರರದೆಲ್ಲವನ್ನೂ ಕಸಿಯುವ ಹೃದಯ ಹೀನರೂ ಹೌದು. ಇಲ್ಲಿ ಕವಿ ಅತ್ಯಂತ ನಿರ್ಲಿಪ್ತ ಭಾವದಿಂದ, ನಮ್ಮ ಪಾಲಿನ ರೊಟ್ಟಿ ಕದ್ದವರನ್ನು ನಾವು ದೂರುವುದು ಬೇಡ, ಅವರು ಅದನ್ನು ಪಡೆದು ಸಮಾಧಾನದಿಂದ ಇರಲಿ, ಗುಟುಕು ನೀರೂ ನಮ್ಮನ್ನು ತಣ್ಣಗಿಡಬಲ್ಲುದು ಎನ್ನುತ್ತಾರೆ. ನಮ್ಮ ಪಾಲಿನ ಅನ್ನವನ್ನು ಕದ್ದವರನ್ನೂ ಕ್ಷಮಿಸಿ, ನಾವು ನೀರು ಕುಡಿದು ಹೊಟ್ಟೆ ತುಂಬಿಕೊಳ್ಳಬಹುದೆಂಬ ಉದಾತ್ತ ನಿಲುವು ಕವಿಯದು. |
ಅವರು ನಿರ್ದಾಕ್ಷಿಣ್ಯವಾಗಿ ನಮ್ಮ ರಾತ್ರಿಯ ನಿದ್ದೆಯನ್ನು ಕದ್ದರೆಂದೂ ಸಂಕಟ ಪಡುವುದರ ಬದಲು ಆ ನಿದ್ದೆ ಕದ್ದವರು, ಎಚ್ಚರಾಗದಂತೆ ಸುಖ ನಿದ್ದೆ ಮಾಡಲೆಂದು ಕವಿ ಆಶಿಸುತ್ತಾ ನಿದ್ರೆ ಇಲ್ಲದ ರಾತ್ರಿಗಳಲ್ಲಿ ನಕ್ಷತ್ರಗಳಾದರೂ ನಮ್ಮ ಜೊತೆಗಿರುತ್ತವಲ್ಲಾ ಎಂಬ ಸಮಾಧಾನವನ್ನು ತಾಳುತ್ತಾರೆ. ನಿದ್ದೆ ಮಾಡಿದರೆ ನಕ್ಷತ್ರಗಳ ಸೊಬಗನ್ನು ಕಾಣುವುದರಿಂದ ವಂಚಿತರಾಗುತ್ತೇವೆ. ನಿದ್ದೆ ಇಲ್ಲದಿದ್ದಾಗಲೂ ಆ ಸಮಯವನ್ನು ಗುಣಾತ್ಮಕವಾಗಿ ಹೇಗೆ ಕಳೆಯಬಹುದೆಂಬ ಪರ್ಯಾಯಗಳ ಚಿಂತನೆ ಮನಸಿಗೆ ಮಾಡಿಕೊಳ್ಳುವ ಸಮಾಧಾನವೂ ಹೌದು. |
ಅವರು ಇಷ್ಟನ್ನು ಕದ್ದು ಸುಮ್ಮನಾಗುವವರಲ್ಲ! ಅವರು ನಮ್ಮ ತುಟಿಯ ಮೇಲಿನ ನಗೆಯನ್ನೂ ಕದಿಯುವಂತವರು! ಆದರೆ ಅದಕ್ಕೂ ನಾವು ದುಃಖಿಸುವುದು ಬೇಡವೆಂದೇ ಕವಿ ದೃಢ ನಿರ್ಧಾರ ಮಾಡುತ್ತಾರೆ. ಅವರು ನಮ್ಮ ನಗೆಯನ್ನು ಕದ್ದು ಅದರಿಂದ ತಾವು ಸಂತೋಷಿತರಾಗಿರಲಿ ನಮಗೆ ಇಡೀ ಜಗತ್ತಿನ ನೋವನ್ನು ಸಂತೈಸುವ ಕಾಯಕವಿದ್ದರೆ ಅಷ್ಟೇ ಸಾಕು ಎಂಬ ವಿಶಾಲ ಆಶಯ. ನಿಷ್ಕರುಣಿಗಳಾದ ಅವರು, ನಮ್ಮ ಪಾಲಿನ ರೊಟ್ಟಿ, ನಿದ್ರೆ ಹಾಗೂ ನಗೆಯನ್ನು ಕದ್ದದ್ದಕ್ಕೆ ಮೇಲಿನ ಲೋಕದಲ್ಲಿ ನ್ಯಾಯ ಕೇಳೋಣವೆಂಬ ಸಮಾಧಾನವನ್ನೂ ಹೊಂದುತ್ತಾರೆ. |
ಆದರೆ ವಿಪರ್ಯಾಸವೆಂದರೆ ವಾಸ್ತವದಲ್ಲಿ ಅವರು ಕದಿಯಲು ಉತ್ಸುಕರಾಗಿದ್ದರೂ ಎಲ್ಲ ಕಳೆದುಕೊಂಡ ನಮ್ಮ ಬಳಿ ಈಗ ಏನೂ ಉಳಿದಿಲ್ಲ! ನಾವಾದರೂ ಏನೂ ಇಲ್ಲದೆಯೂ ಬದುಕಲು ಪರ್ಯಾಯಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಮನಸನ್ನು ಹಗುರ ಮಾಡಿಕೊಂಡಿದ್ದೇವೆ. ಆದರೆ ನಮ್ಮಿಂದ ಕಿತ್ತುಕೊಳ್ಳಲು ಏನೂ ಉಳಿಯದೇ ಅವರು ನಮ್ಮಷ್ಟೇ ಅಸಹಾಯಕರಾಗಿರುವ ಬಗ್ಗೆ ಕವಿಗೆ ಖೇದವಿದೆ. ಈ ಕವಿತೆಯಲ್ಲಿ ಬರುವ ನಿರ್ಲಿಪ್ತ, ತಣ್ಣನೆಯ ದನಿ ಆಳವಾಗಿ ನಮ್ಮೆದೆಗಳಲ್ಲಿ ನಾಟಿ ಉಳಿದು ಬಿಡುತ್ತದೆ. ಆಳುವವರ ದೌರ್ಜನ್ಯವನ್ನು ನಿರಾಕರಿಸುತ್ತಲೇ, ಅವರನ್ನು ಕ್ಷಮಿಸುತ್ತಾ ಅವರ ಕ್ರೌರ್ಯವನ್ನು ಉದಾತ್ತತೆಯಿಂದ ನಿರ್ಲಕ್ಷಿಸುವ ಸಂತತನಕ್ಕೆ ಶರಣು. |
ಹಿಂಸೆಯನ್ನೇ ದಂಧೆಯಾಗಿಸಿಕೊಂಡಿರುವವರ ಹುನ್ನಾರಗಳು ಮತ್ತು ಅಸ್ಸಾಂ |
ಸೀಮಾ ಮುಸ್ತಾಫ |
1980 ಮತ್ತು 1990ರ ದಶಕಗಳಲ್ಲಿ ನಡೆದಂತಹ ಕೋಮು ಹಿಂಸಾಚಾರದ ಘಟನೆಗಳನ್ನು ವ್ಯಾಪಕವಾಗಿ ವರದಿ ಮಾಡಿರುವವರಿಗೆ ಇಂಥಾ ಘಟನೆಗಳ ಅಧಿಕೃತ ಆವೃತ್ತಿಗಳ ಬಗ್ಗೆ ಹೆಚ್ಚೆಚ್ಚು ಅನುಮಾನ. ಯಾಕೆಂದರೆ ಬಹುತೇಕ ವೇಳೆ ಇವೆಲ್ಲವೂ ತಿರುಚಲ್ಪಟ್ಟಿರುತ್ತವೆ. ಸ್ಥಾಪಿತ ಹಿತಾಸಕ್ತಿಗಳು ಒಂದು ಸಮುದಾಯವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟುವ ಸಲುವಾಗಿ ತಪ್ಪು ವ್ಯಾಖ್ಯಾನಗಳನ್ನು, ತಿರುಚಿದ ವರದಿಗಳನ್ನು, ಸುಳ್ಳುಗಳನ್ನು ಎಷ್ಟು ವ್ಯಾಪಕವಾಗಿ ಹಬ್ಬಿಸುತ್ತವೆ ಎಂಬುದರ ಅರಿವು ಜನಸಾಮಾನ್ಯರಿಗಿಲ್ಲ.ಸ್ಥಾಪಿತ ಹಿತಾಸಕ್ತಿಗಳು ಹೀಗೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಹೊತ್ತಲ್ಲಿ ಸಮುದಾಯಗಳ ನಾಯಕತ್ವ ಮತ್ತು ಸರಕಾರಗಳು ಏನು ಮಾಡುತ್ತವೆ? ಪರಿಸ್ಥಿತಿಯನ್ನು ಸುಧಾರಿಸುವುದ ಕ್ಕೋಸ್ಕರ ತಮ್ಮಿಂದ ಸಾಧ್ಯ ವಿರುವುದನ್ನೆಲ್ಲ ಮಾಡಿದ್ದೇವೆಂದು ಹೇಳುತ್ತಾ ವೊಸಳೆ ಕಣ್ಣೀರು ಸುರಿಸುತ್ತಿವೆ. ನಿದರ್ಶನಗಳಿಗಾಗಿ ಇತಿಹಾಸದ ಪುಟಗಳನ್ನು ತೀರಾ ಹಿಂದಕ್ಕೆ ತಿರುವಬೇಕಾಗಿಲ್ಲ. 1938ರಲ್ಲಿ ಇದೇ ಅಸ್ಸಾಂ ರಾಜ್ಯದಲ್ಲಿ ನಡೆದ ಹಿಂಸಾಚಾರದ ಘಟನೆಗಳನ್ನೆ ತೆಗೆದುಕೊಳ್ಳೋಣ. |
ಅನಿಯಂತ್ರಿತ ಸರಣಿ ಹಿಂಸಾಚಾರದ ನೇತೃತ್ವವನ್ನು ವಹಿಸಿದ್ದು ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ (ಎಎಎಸ್‌ಯು). ಆದರೆ ಎಲ್ಲಾ ಕಾರ್ಯಾಚರಣೆಗಳ ಮೇಲುಸ್ತುವಾರಿಯನ್ನು ನೋಡಿಕೊಂಡದ್ದು ಆರೆಸ್ಸೆಸ್ ಮತ್ತು ಬಿಜೆಪಿ. ಅಂದು ರಾಜ್ಯಾದ್ಯಂತ ನಡೆದ ಗಲಭೆಗಳಲ್ಲಿ ನೂರಾರು ಜನ ಬಲಿಯಾದರು. ಹಳ್ಳಿಗೆ ಹಳ್ಳಿಗಳೇ ನಾಶವಾದವು. ಅದೇ ಸಂದರ್ಭದಲ್ಲಿ ನೆಲ್ಲೀ ಎಂಬಲ್ಲಿ 3,000ಕ್ಕೂ ಅಧಿಕ ಜನರ ಮಾರಣಹೋಮ ನಡೆದಾಗ ಆ ಘಟನೆ ವಿಶ್ವಾದ್ಯಂತ ಸುದ್ದಿ ಮಾಡಿತು. |
ಇದೇ ತೆರನಾದ ಇನ್ನೂ ಹಲವಾರು ಹತ್ಯಾಕಾಂಡಗಳು ನಡೆದಿವೆಯಾದರೂ ಅವುಗಳನ್ನು ಗುರುತಿಸಲಾಗಿಲ್ಲ. ಆಗ ಹಿಂಸಾಚಾರದ ಘಟನೆಗಳನ್ನು ವರದಿ ಮಾಡಲೆಂದು ಅಲ್ಲಿಗೆ ಹೋಗಿದ್ದ ಪತ್ರಕರ್ತರನ್ನು ಬೆಚ್ಚಿಬೀಳುವಂತೆ ಮಾಡಿದ್ದು ರಾಜ್ಯದ ಉದ್ದಗಲಕ್ಕೂ ಹರಿದಾಡುತ್ತಿದ್ದ ವದಂತಿಗಳು. ಆ ವದಂತಿಗಳಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ತಂತಮ್ಮ ರಕ್ಷಣೆಗಾಗಿ ಪರಸ್ಪರರ ಮೇಲೆ ದಾಳಿ ಮಾಡುತ್ತ ಇದ್ದರು. ಆದರೆ ವಾಸ್ತವದಲ್ಲಿ ಅವರನ್ನೆಲ್ಲ ದಾಳಿ ಮಾಡಲು ಪ್ರೇರೇಪಿಸಲಾಗಿತ್ತು. ಯಾಕೆಂದರೆ ಯಾರನ್ನು ಶತ್ರುಗಳೆಂದು ಪರಿಭಾವಿಸಲಾಗಿತ್ತೊ ಅವರು ನಿಜವಾಗಿ ಯಾವುದೇ ದಾಳಿಯ ಸಿದ್ಧತೆ ನಡೆಸುತ್ತಿರಲಿಲ್ಲ. |
ಅವತ್ತು ಅಸ್ಸಾಂ ರಾಜ್ಯಕ್ಕೆ ಕಿಚ್ಚು ಹಚ್ಚಲು ಉದ್ದೇಶಿಸಿದ್ದ ಯಾವ ಶಕ್ತಿಗಳಿದ್ದವೊ ಆ ಶಕ್ತಿಗಳು ಹಬ್ಬಿಸಿದ್ದ ಸುಳ್ಳು ಮತ್ತು ವದಂತಿಗಳು ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸಫಲವಾಗಿದ್ದವು. ಒಂದು ಹಳ್ಳಿಯ ಜನ ಸ್ವರಕ್ಷಣೆಗಾಗಿ ಪಕ್ಕದ ಹಳ್ಳಿಯವರ ಮೇಲೆ ದಾಳಿ ನಡೆಸಲಾರಂಭಿಸಿದರು. ಜನರು ಬಿಲ್ಲುಬಾಣ, ಭರ್ಚಿ ಇತ್ಯಾದಿಗಳೊಂದಿಗೆ ಮನೆಮನೆಗಳಿಂದ ಹೊರಬೀಳುತ್ತಿದ್ದ ದೃಶ್ಯಗಳು ಮಧ್ಯಕಾಲೀನ ಇತಿಹಾಸವನ್ನು ನೆನಪಿಸುವಂತಿತ್ತು. ರಾಜ್ಯದ ಆಡಳಿತ ಯಂತ್ರ ಮತ್ತು ಸರಕಾರ ಎಲ್ಲೋ ನಾಪತ್ತೆಯಾಗಿದ್ದವು. ಅರೆಸೇನಾ ಪಡೆಗಳು ಸ್ಥಳೀಯ ಅಧಿಕಾರಿಗಳಿಂದ ಸೂಚನೆಗಳಿಗಾಗಿ ಕಾಯುತ್ತ ಅಸಹಾಯಕರಾಗಿ ನಿಂತಿದ್ದ ದೃಶ್ಯಗಳನ್ನು ನಾವು ಕಂಡೆವು. |
ಹಲವು ದಿನಗಳಾದರೂ ಸೂಚನೆಗಳು ಬರಲೂ ಇಲ್ಲ; ಅಸ್ಸಾಂಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಕೆಲಸವೂ ಆಗಲಿಲ್ಲ. ಅಂದು ಹೆಚ್ಚಿನ ಹಿಂಸೆಗೆ ತುತ್ತಾದವರು ಯಾರು? ಬಾಂಗ್ಲಾದೇಶೀಯ ವಲಸೆಗಾರರು ಎಂಬ ಹಣೆಪಟ್ಟಿ ಹಾಕಿಸಿಕೊಂಡ ಮುಸ್ಲಿಮರು. ಹಣೆಪಟ್ಟಿ ಹಾಕಲು ಕಾರಣವಾದ ಶಕ್ತಿಗಳು ಹಿಂಸಾಚಾರದಿಂದ ಖುಷಿ ಪಡುತ್ತಿದ್ದಂತೆ ತೋರುತ್ತಿತ್ತು. ಈಗ 2012ನೆ ಇಸವಿಯಲ್ಲಿ ಅಸ್ಸಾಂನಲ್ಲಿ ನಡೆಯುತ್ತಿರುವುದೆಲ್ಲ ಹಳೆಯದರ ಪುನರಾವರ್ತನೆಯಂತಿದೆ. ಹಿಂಸಾಚಾರ ಆರಂಭವಾಗುವುದಕ್ಕೂ ಹಲವಾರು ವಾರಗಳ ಮೊದಲೆ ಸುಳ್ಳು ವದಂತಿಗಳ ಹರಿದಾಟ ಪ್ರಾರಂಭವಾಗಿತ್ತು. ಅವರು ನಿಮ್ಮ ಭೂಮಿಗಳನ್ನು ಕಬಳಿಸಲಿದ್ದಾರೆ. ಅವರು ನಿಮ್ಮನ್ನು ಕೊಲ್ಲಲಿದ್ದಾರೆ. |
ಇವೇ ಮೊದಲಾದ ಸುಳ್ಳು ಸುದ್ದಿಗಳ ಮೂಲಕ ಬೋಡೋ ಮತ್ತು ಮುಸ್ಲಿಮರ ನಡುವೆ ದ್ವೇಷ ಭಾವನೆಗಳನ್ನು ಉದ್ರೇಕಿಸಲಾಗುತ್ತಿತ್ತು. ರಾಜ್ಯಾದ್ಯಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದ ವರ್ತಮಾನ ಸರಕಾರಕ್ಕೆ ಬಂದಿರಲೆಬೇಕು. ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದಾಗ ಗುಪ್ತಚರ ವರದಿಗಳು ಬರುತ್ತಾ ಇದ್ದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ತೋರಿಬರುತ್ತದೆ. ತತ್ಪರಿಣಾಮವಾಗಿ ಸುಮಾರು 100 ಜನ ಹತ್ಯೆಗೀಡಾದರು, 4 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾದರು. ತುಂಬಾ ಭಯಭೀತರಾಗಿರುವ ಈ ಜನರೆಲ್ಲ ತಮ್ಮ ಮನೆಮಠಗಳಿಗೆ ಮರಳಲು ನಿರಾಕರಿಸುತ್ತಿದ್ದಾರೆ. |
ರಾಜ್ಯದ ಜನತೆ ಇಂಥಾ ಘೋರ ಸಂಕಷ್ಟ ಅನುಭವಿಸುತ್ತಿದ್ದರೆ ಅತ್ತ ಕಾಂಗ್ರೆಸ್ ಆಡಳಿತದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಸ್ಪರರತ್ತ ಬೆಟ್ಟುಮಾಡುವುದರಲ್ಲಿ ನಿರತವಾಗಿವೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಬಗ್ಗೆ ಯಾರಿಗೂ ಚಿಂತೆ ಇರುವಂತಿಲ್ಲ. 1984ರಲ್ಲಿ ಇಂದಿರಾ ಗಾಂಧಿಯ ಹತ್ಯೆ ನಡೆದಾಗಲೂ ದಿಲ್ಲಿಯಾದ್ಯಂತ ವದಂತಿಗಳು ಹಬ್ಬಿದ್ದವು. ಪರಿಣಾಮವಾಗಿ ಸೃಷ್ಟಿಯಾದ ಕೋಮು ಉದ್ವಿಗ್ನತೆ 3,000ಕ್ಕೂ ಅಧಿಕ ಸಿಖ್ಖರ ಹತ್ಯಾಕಾಂಡದಲ್ಲಿ ಪರ್ಯವಸಾನವಾಯಿತು. ಆ ಸಂದರ್ಭದಲ್ಲೂ ಸರಕಾರ ನಿಷ್ಕ್ರಿಯವಾಗಿತ್ತು. ಅದು ವದಂತಿಗಳ ಮಹಾಪೂರವನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. |
ಒಂದು ವದಂತಿ ಹೀಗಿತ್ತು: ಪಂಜಾಬಿನಿಂದ ಬರುತ್ತಿರುವ ರೈಲುಗಳ ತುಂಬಾ ಸಿಖ್ಖರ ಹೆಣಗಳೇ ತುಂಬಿಕೊಂಡಿವೆ. ವಾಸ್ತವದಲ್ಲಿ ದಿಲ್ಲಿಯ ಹಿಂದೂ ದೊಂಬಿಗಳು ನಗರದ ಹೊರವಲಯದಲ್ಲಿ ರೈಲುಗಳನ್ನು ತಡೆದು ಸಿಖ್ಖರನ್ನು ಹೊರಗೆಳೆದು, ಕೊಂದು, ಮರಳಿ ರೈಲುಗಳಲ್ಲಿ ತುಂಬುತ್ತಿದ್ದರು. ಅಂದು ದಿಲ್ಲಿ ರೈಲು ನಿಲ್ದಾಣದಲ್ಲಿ ರೈಲುಗಳಲ್ಲಿ ಇದ್ದ ೨೦೦ ಚಿಲ್ಲರೆ ಸಿಖ್ಖರ ಶವಗಳನ್ನು ನನ್ನ ಕಣ್ಣಾರೆ ಕಂಡಿದ್ದೆ. ಅವರ ಪೈಕಿ ಒಬ್ಬನೇ ಒಬ್ಬ ಹಿಂದೂ ಇರಲಿಲ್ಲ. ಅಂದಿನ ಆ ಸಿಖ್ಖರ ಮೇಲಿನ ದಾಳಿಗಳಲ್ಲಿ ಕಾಂಗ್ರೆಸ್ ನಾಯಕರು ಮತ್ತು ಬಿಜೆಪಿ ಕಾರ್ಯ ಕರ್ತರು ಒಂದಾಗಿದ್ದರೆನ್ನುವುದನ್ನು ನೆನಪಿಸಿಕೊಳ್ಳಬೇಕಾಗಿದೆ.ಈ ಬಾರಿಯ ಅಸ್ಸಾಂ ಹಿಂಸಾಚಾರಕ್ಕೆ ಉದ್ದೇಶಪೂರ್ವಕವಾಗಿ ರಾಷ್ಟ್ರವ್ಯಾಪಿ ಸ್ವರೂಪ ನೀಡಲಾಗಿದೆ. ಪುಣೆ ಮತ್ತು ಮುಂಬೈನಲ್ಲಿ ನಡೆದ ಸಣ್ಣಪುಟ್ಟ ಜಗಳಗಳು ಮುಸಲ್ಮಾನರು ಮತ್ತು ಈಶಾನ್ಯ ರಾಜ್ಯದವರ ನಡುವಿನ ಸಂಘರ್ಷಗಳೆಂಬಂತೆ ವರದಿಯಾದವು. |
ಅಸ್ಸಾಂ ಹಿಂಸಾಚಾರ ಪ್ರತಿಭಟಿಸಲು ಮುಂಬೈಯಲ್ಲಿ ರ‍್ಯಾಲಿಯೊಂದನ್ನು ಆಯೋಜಿಸಿದ ರಾಜಾ ಅಕಾಡಮಿ ಒಂದು ಸಂದೇಹಾಸ್ಪದ ಸಂಘಟನೆ. ಅದರ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹ. ಮೊದಲೇ ಊಹಿಸಿದಂತೆ ರ‍್ಯಾಲಿಯ ವೇಳೆ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಕಾರರು ಮಾಧ್ಯಮ ಪ್ರತಿನಿಧಿಗಳು ಮತ್ತು ಪೊಲೀಸರ ಮೇಲೆ ದಾಳಿ ಮಾಡಲಿದ್ದರು ಎಂಬುದನ್ನೂ ವೊದಲೇ ಊಹಿಸಬಹುದಾಗಿತ್ತು. |
ಮುಸ್ಲಿಂ ಸಮುದಾಯದ ಹೆಚ್ಚು ವಿಶ್ವಾಸಾರ್ಹ ವ್ಯಕ್ತಿಗಳು ಹಾಗೂ ಸಂಘಟನೆಗಳು ಘಟನೆಯ ನ್ಯಾಯಾಂಗ ತನಿಖೆಗಾಗಿ ಒತ್ತಾಯಿಸಿವೆ. ಈ ಘಟನೆಯ ಬಳಿಕ ರಾಷ್ಟ್ರಾದ್ಯಂತ ಒಂದು ಕುಟಿಲ ವದಂತಿಯನ್ನು ಹಬ್ಬಿಸಲಾಯಿತು. ಅದೇನೆಂದರೆ ಮುಸ್ಲಿಮರು ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ; ಹಾಗಾಗಿ ಈಶಾನ್ಯ ರಾಜ್ಯದವರು ಭಾರತದ ಇತರೆಡೆಗಳಲ್ಲಿ ಸುರಕ್ಷಿತರಲ್ಲ. ಅತಿದೊಡ್ಡ ಸಮಸ್ಯೆ ಸೃಷ್ಟಿಯಾದದ್ದು ಬೆಂಗಳೂರಿನಲ್ಲಿ. |
ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡು ವದಂತಿಗಳನ್ನು ನಿಲ್ಲಿಸಬೇಕಾಗಿತ್ತು. ಆದರೆ ವಾಸ್ತವದಲ್ಲಿ ಅವು ಮಾಡಿದ್ದೇನು? ಈಶಾನ್ಯ ರಾಜ್ಯಗಳ ಜನರಲ್ಲಿ ನಂಬಿಕೆ ಮೂಡಿಸುವ ಬದಲು, ಅವರಿಗೆ ಭರವಸೆ ಒದಗಿಸುವ ಬದಲು ಹುಟ್ಟೂರಿಗೆ ಪಲಾಯನ ಮಾಡಲು ರೈಲುಗಳನ್ನು ಒದಗಿಸಿದವು. ಸಾಲದ್ದಕ್ಕೆ ಅಸ್ಸಾಮಿನತ್ತ ತೆರಳುತ್ತಿದ್ದ ರೈಲೊಂದಕ್ಕೆ ದಾಳಿ ಮಾಡಿದ ಅಪರಿಚಿತರು ರೈಲಿನಲ್ಲಿದ್ದ ಮುಸ್ಲಿಮರನ್ನು ಕೊಂದುಹಾಕಿದರು. |
30 ವರ್ಷಗಳ ಪತ್ರಿಕಾ ವೃತ್ತಿಯ ಬಳಿಕ ಒಂದನ್ನಂತೂ ಕಲಿತುಕೊಂಡಿದ್ದೇವೆ. ಅದೇನೆಂದರೆ ಕೋಮು ಹಿಂಸಾಚಾರದ ಘಟನೆಗಳೆಂದೂ ಕಾಕತಾಳಿಯವಾಗಿ ಸಂಭವಿಸುವುದಿಲ್ಲ. ಹಿಂಸೆಯನ್ನೇ ಒಂದು ದಂಧೆಯನ್ನಾಗಿ ಮಾಡಿಕೊಂಡಿರುವವರ ಪ್ರಚೋದನೆ ಇಲ್ಲದೆ ಜನ ಪರಸ್ಪರರ ವಿರುದ್ಧ ಕಾದಾಡಿ ಸಾಯಲು ಹೊರಡುವುದಿಲ್ಲ. ಭಾರತದಲ್ಲಿ ನಡೆದಿರುವಂಥಾ ಎಲ್ಲ ದಂಗೆಗಳ ಹಿಂದೆ ಒಂದು ರಾಜಕೀಯ ಯೋಜನೆ ಇದೆ. |
ಆ ಯೋಜನೆ ಬರೀ ಸುಳ್ಳುಗಳು, ವದಂತಿಗಳು ಮತ್ತು ರಾಜಕೀಯ ಅಜೆಂಡಾಗಳನ್ನು ಗಟ್ಟಿಗೊಳಿಸುವ ಹಾಗೂ ಮತಗಟ್ಟೆಗಳನ್ನು ಬಲಪಡಿಸುವ ರಾಜಕಾರಣದ ಮೇಲೆ ಆಧರಿಸಿದೆ. ಇದೀಗ ಬೆಂಗಳೂರಿನಲ್ಲಿ ಹಬ್ಬಿದ ವದಂತಿಗಳಿಗೆ ಬಜರಂಗ ದಳವೇ ಕಾರಣವೆಂಬ ಸುದ್ದಿಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಲಾರಂಭಿಸಿವೆ. ಇದು ಸ್ಥಳೀಯರಿಗೆ ಗೊತ್ತಿರುವ ವಿಷಯವೂ ಹೌದು. ದುರದೃಷ್ಟದ ಸಂಗತಿ ಏನೆಂದರೆ ರಾಜಕೀಯ ಮುಂದಾಳುಗಳು ಮತ್ತು ಪಕ್ಷಗಳು ತಮ್ಮ ಹೊಣೆಗಾರಿಕೆ ಅರಿತು ಸ್ಪಂದಿಸುವ ಬದಲು ಬೆಂದ ಮನೆಯಲ್ಲಿ ಹಿರಿಯಲು ಹೊರಟಿವೆ. |
ಮತಗಟ್ಟೆಗಳ ಕ್ರೋಢೀಕರಣ ಮತ್ತು ಜನರ ಧ್ರುಕರಣದ ಉದ್ದೇಶ ಇಟ್ಟುಕೊಂಡು ಉಗ್ರ ಭಾಷಣಗಳನ್ನು ಮಾಡಲಾಗುತ್ತಿದೆ; ರ‍್ಯಾಲಿ ನಡೆಸುವ ಬೆದರಿಕೆ ಒಡ್ಡಲಾಗುತ್ತಿದೆ. ಈ ನಿರ್ಲಜ್ಜ ರಾಜಕೀಯ ನಾಯಕರ ದೃಷ್ಟಿಯಲ್ಲ ಕೇವಲ 2014ರ ಚುನಾವಣೆಗಳ ಮೇಲೆ ನೆಟ್ಟಿದೆ. ಯಾರಿಗೂ ಜಾತ್ಯತೀತತೆಯನ್ನು ಉಳಿಸಿ ಬೆಳೆಸುವುದು ಬೇಕಾಗಿಲ್ಲ. ಕಾರಣ ಸರಳ. ಭಾವೋದ್ವೇಗ ಉಂಟುಮಾಡುವಂತಹ ಕರ್ಕಶ ಭಾಷಣಗಳು ಮತ್ತು ಜನರಲ್ಲಿ ಅಭದ್ರತೆ ಮೂಡಿಸುವಂತಹ ಪ್ರಸಕ್ತ ಹಿಂಸಾಚಾರಗಳು ಗಿಟ್ಟಿಸಿಕೊಡುವಷ್ಟು ವೋಟುಗಳನ್ನು ಜಾತ್ಯತೀತತೆ ತಂದುಕೊಡುವುದಿಲ್ಲ. ಆದರೆ ಇದಕ್ಕಾಗಿ ದೇಶ ತೆರುತ್ತಿರುವ ಬೆಲೆ ಮಾತ್ರ ಅಪಾರ. |
ಕೃಪೆ: ದ ಸ್ಟೇಟ್ಸ್‌ಮನ್ |
ಮತ್ತೆ ಮತ್ತೆ ರೂಮಿ |
ನಿನ್ನ ಪ್ರೇಮದಲ್ಲಿ ಆಗಸವಿಲ್ಲದಿದ್ದರೆ ಅದು ಶುಭ್ರವಾಗಿರುವುದಿಲ್ಲ |
ನಿನ್ನ ಪ್ರೇಮದಲ್ಲಿ ಸೂರ್ಯನಿಲ್ಲದಿದ್ದರೆ ಅದು ಯಾವ ಬೆಳಕನ್ನೂ ನೀಡುವುದಿಲ್ಲ |
ನಿನ್ನ ಪ್ರೇಮದಲ್ಲಿ ನದಿಯಿಲ್ಲದಿದ್ದರೆ ಅಲ್ಲಿ ಬರೀ ಮೌನ, ಚಲನೆಯಿರುವುದಿಲ್ಲ |
ನಿನ್ನ ಪ್ರೇಮದಲ್ಲಿ ಬೆಟ್ಟ, ನೆಲವಿಲ್ಲದಿದ್ದರೆ ಅಲ್ಲಿ ಬೆಳೆಯುವುದೇನೂ ಇರುವುದಿಲ್ಲ. |
ಗಂಧರ್ವರಿಗೆ ಮುಕ್ತಿ ನಿಜವಾದ ಜ್ಞಾನದಿಂದ |
ಪ್ರಾಣಿಗಳಿಗೆ ಶುದ್ಧ ಅಜ್ಞಾನದಿಂದ |
ಆದರೆ ಮಾನವ ಇವೆರೆಡರ ನಡುವೆ |
ಒಮ್ಮೆ ಮೇಲಕ್ಕೆ ಮತ್ತೊಮ್ಮೆ ಅದರ ಪಾತಾಳಕ್ಕೆ.. |
- ಜಲಾಲುದ್ದೀನ್ ರೂಮಿ |
ಕರ‍್ನಾಟಕ ಓದು: ಕೆಲವು ಕೇಳ್ವಿಗಳು;'ಕರ್ನಾಟಕ ಓದು' ಕಮ್ಮಟ |
ಕಳೆದ ಎರಡು ವರುಷಗಳಿಂದ ಕನ್ನಡ ಪ್ರಜ್ಞೆಯ ನಿಜ ದಿಕ್ಕನ್ನು ಕಂಡುಕೊಳ್ಳುವ ಸಲುವಾಗಿ ನಾಡಿನ ಹೆಮ್ಮೆಯ ವಿದ್ವಾಂಸರಾದ ಕೆ.ವಿ.ನಾರಾಯಣ್ |
ಮಾರ್ಗದರ್ಶನದಲ್ಲಿ ನಾಡಿನ ವಿವಿದೆಡೆಗಳಲ್ಲಿ ನಡೆಯುತ್ತಿರುವ 'ಕರ್ನಾಟಕ ಓದು' ಕಮ್ಮಟ ಈಗ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದೆ. ದಿನಾಂಕ 01.09.2012 ಮತ್ತು02.09.2012 ಶನಿವಾರ ಬೆಳಿಗ್ಗೆ 10ರಿಂದ ಭಾನುವಾರ ಸಂಜೆ 5ರವರೆಗೆ. ದೊಡ್ಡಬಳ್ಳಾಪುರದ ಕನ್ನಡ ಹೋರಾಟಗಾರ ತ.ನ.ಪ್ರಭುದೇವ್ ಅವರ ತೋಟದಲ್ಲಿ (ಹಳ್ಳಿಮನೆನಿಸರ್ಗಧಾಮ, ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವ ರಸ್ತೆ, ತಿಮ್ಮಸಂದ್ರಕ್ಕಿಂತ ಮೊದಲು ಸಿಗುತ್ತದೆ.) 'ಬಯಲು ಬಳಗ' ಈ ಕಮ್ಮಟದ ಜವಾಬ್ದಾರಿ ಹೊತ್ತಿದೆ. |
ಇದು ನಿಮಗೆ ಅಧಿಕೃತ ಆಹ್ವಾನ. |
ದಯಮಾಡಿ ತಮ್ಮ ಭಾಗವಹಿಸುವಿಕೆಯ ಕುರಿತು ಒಂದು ರೀಪ್ಲೇ ಅಥವಾ ಫೋನ್ ಕಾಲ್ ನಿರೀಕ್ಷಿಸುತ್ತೇವೆ. ಶನಿವಾರ ದೊಡ್ಡಬಳ್ಳಾಪುರದಲ್ಲಿ ಉಳಿಯಲು ವ್ಯವಸ್ಥೆ ಇರುತ್ತದೆ. |
ಕಮ್ಮಟದ ವಿವರಗಳಿಗೆ ಅಟ್ಯಾಚ್ ಮಾಡಿರುವ ನುಡಿ ಡಾಕ್ಯುಮೆಂಟ್ ನೋಡಿ. |
ಕರ‍್ನಾಟಕ ಓದು: ಕೆಲವು ಕೇಳ್ವಿಗಳು |
ಕರ್ನಾಟಕ ಓದು ಎಂಬ ಮಾತನ್ನು ಬಳಕೆಗೆ ತಂದು ಎರಡು ವರುಶಗಳು ಕಳೆದಿವೆ. ಹಲವು ಗೆಳೆಯಲು ಬೆರೆ ಬೇರೆ ಕಡೆಗಳಲ್ಲಿ ಸೇರಿ ಮಾತುಕತೆಯಲ್ಲಿ ಕರ‍್ನಾಟಕ ಓದು ಎಂದರೇನು, ಅದು ಏಕೆ ಬೇಕು, ಅದನ್ನು ಕಟ್ಟುವ ಬಗೆ ಹೇಗೆ ಎಂಬುದನ್ನು ಕಂಡುಕೊಳ್ಳಲು ತೊಡಗಿದ್ದೇವೆ. ಕೆಲವೊಮ್ಮೆ ಮಾತಿನ ಓಟದಲ್ಲಿ ದಿಟವೆನಿಸುವ ಮಾತುಗಳು ಒಂದು ಚೌಕಟ್ಟಿಗೆ ಸಿಲುಕದೆಯೂ ಹೋಗುವುದುಂಟು. ಆಡಿದ ಮಾತುಗಳನ್ನು ಬರಹಕ್ಕೆ ಇಳಿಸಲು ಮುಂದಾಗಿರುವುದೂ ಉಂಟು. ಏನೇ ಇರಲಿ ಹೊಸಬರು ಈ ದಿಕ್ಕಿನಲ್ಲಿ ತೊಡಗಿಕೊಳ್ಳಲು ಅನುವು ದೊರೆಯ ಬೇಕಾದರೆ ಈವರಗೆ ನಡೆದ ಮಾತುಕತೆಯಲ್ಲಿ ತಲೆ ಎತ್ತಿದ ಕೇಳ್ವಿಗಳಲ್ಲಿ ಕೆಲವನ್ನು ಮತ್ತೆ ಮುಂಚೂಣಿಗೆ ತರುವುದು ಸರ ಎನಿಸಿದೆ. ಹೀಗಾಗಿ ಈ ಮುಂದಿನ ಮಾತುಗಳು. |
೧.ಕರ‍್ನಾಟಕ ಓದು ಎಂಬುದು ದಾರಿಯೋ? ಇಲ್ಲವೇ ಗುರಿಯೋ? ಇಲ್ಲವೇ ಎರಡೂ ಆಗಿದೆಯೋ? |
ಒಂದು ವೇಳೆ ಅದು ದಾರಿ ಎಂದು ತಿಳಿದರೆ ಆ ದಾರಿ ಹಿಡಿದು ಯವ ಗುರಿಯನ್ನು ತಲುಪಬೇಕು ಎಂಬುದು ನಮಗೆ ಗೊತ್ತಿರಬೇಕು. ಹಾಗಿಲ್ಲದಿದ್ದರೆ ಅದು ಸೆಳೆದೊಯ್ಯುವ ಕಡೆಗೆ ಸಾಗುತ್ತೇವೆ. ಬದಲಿಗೆ ಅದನ್ನು ಗುರಿ ಎಂದು ತಿಳಿದರೆ ಆ ಗುರಿಯನ್ನು ತಲುಪಲು ಇರುವ ದಾರಿ ಯಾವುದು ಎಂದು ಗೊತ್ತಿರ ಬೇಕು. ಅಂತಹ ದಾರಿ ಒಂದೋ ಇಲ್ಲವೇ ಹಲವು ಇವೆಯೋ ಎಂಬುದನ್ನೂ ಗುರುತಿಸಿಕೊಳ್ಳಬೇಕು. ಆಗ ಐಆವ ದಾರಿಯನ್ನು ಆಯ್ದುಕೊಳ್ಳಬೇಕು ಎಂಬ ಕೇಳ್ವಿಯೂ ಎದುರಾಗುತ್ತದೆ. ದಾರಿ ಗೊತ್ತಿಲ್ಲದಿದ್ದರೆ ಗುರಿಯ ಹಂಬಲ ಮಾತ್ರ ಉಳಿದುಕೊಳ್ಳುತ್ತದೆ. ಒಂದು ವೇಳೆ ದಾರಿ ಗುರಿಗಳೆರಡೂ ಒಂದೇ ಎಂದು ತಿಳಿಯಬಹುದೇ? ಅಂದರೆ ದಾರಿಯಲ್ಲಿ ಸಾಗುವುದೇ ಗುರಿಯೇ ಹೊರತು ಅದಕ್ಕೆ ಬೇರೊಂದು ಗುರಿಯಿಲ್ಲ ಎಂದೂ ತಿಳಿಯಬಹುದು. ದಾರಿಯೇ ಗುರಿಯಾಗಿ ಬಿಟ್ಟಿರುತ್ತದೆ. |
ಒಂದೆರಡು ಎತ್ತುಗೆಗಳ ಮೂಲಕ ಈ ಗೋಜಲನ್ನು ಬಿಡಿಸಲು ಹೊರಡೋಣ. ಕಣ್ಣು ಮತ್ತು ನೋಟದ ನಂಟನ್ನು ನೋಡಿ. ಕಣ್ಣು ಇಲ್ಲವೇ ದಿಟ್ಟಿಯು ನೋಟವನ್ನು ನಮಗೆ ಕಾಣಿಸುವ ಹತ್ಯಾರು; ಹಾಗಾಗಿ ಅದು ದಾರಿ. ನೋಟ ನಮ್ಮ ಗುರಿ;ಅದನ್ನು ಕಣ್ಣೀನ ಮೂಲಕ ನಾವು ನೋಟುತ್ತೇವೆ;ಪಡೆಯುತ್ತೇವೆ. ಆದರೆ ನಮ್ಮ ಕಣ್ಣು ನಮ್ಮ ನೋಟವನ್ನು ಹಿಡಿತದಲ್ಲಿ ಇರಿಸಿಕೊಳ್ಳುತ್ತದೆ. ಏನನ್ನು ನೋಡಬೇಕು ಮತ್ತು ಎಷ್ಟನ್ನು ನೋಡಬೇಕು ಮುಂತಾದವುಗಳನ್ನು ಕಣ್ಣು ನಮಗೆ ತಿಳಿಸಿಕೊಡುತ್ತಿರುತ್ತದೆ. ಅಂದರೆ ಕಣ್ಣು ಕೇವಲ ದಾರಿ ಮಾತ್ರ ಅಲ್ಲ ;ಅದು ನಮ್ಮ ನೋಟದ ಚಹರೆಗಳನ್ನು ಕಟ್ಟುವ ಕೆಲಸವನ್ನೂ ಮಾಡುತ್ತದೆ. ದಾರಿ ಮತ್ತು ಗುರಿಗಳು ಹೀಗೆ ಒಂದರೊಡನೊಂದು ಬೆಸೆದುಕೊಂಡಿರುತ್ತವೆ. |
ಇನ್ನೊಂದು ಕಡೆಯಿಂದ ಇದನ್ನು ನೋಡೋಣ. ದೀಪದ ಬೆಳಕು ನಮಗೆ ಏನನ್ನಾದರೂ ನೋಡಲು ನೆರವಾಗುತ್ತದೆ. ಆ ಬೇಕಿಲ್ಲದಿದ್ದರೆ ಕತ್ತಲು.ಹಾಗಾಗಿ ಏನೂ ಕಾಣದು. ಹೀಗಿರುವಾಗ ದೀಪವು ನಮಗೆ ನಾವು ನೋಡಬೇಕಾದುದನ್ನು ತೋರಿಸುತ್ತದೆ. ನಾವು ನೋಡುತ್ತಿರುವುದು ದೀಪವನ್ನು ಬಿಟ್ಟಿರುವುದನ್ನಲ್ಲ. ಏಕೆಂದರೆ ದೀಪದ ಬೆಳಕಿನಲ್ಲಿ ನಮಗೆ ದೀಪವೂ ಕಾಣಿಸುತ್ತಿರುತ್ತದೆ. ಅಂದರೆ ಇಲ್ಲಿಯೂ ಕೂಡ ದಾರಿ ಮತ್ತು ಗುರಿಗಳು ಒಂದರೊಡನೊಂದು ಹೆಣೆದುಕೊಂಡಿರುವುದು ಗೊತ್ತಾಗುತ್ತದೆ. |
ತಿಳಿವನ್ನು ಪಡೆಯಲು ದಾರಿಗಳನ್ನು ಹುಡುಕುವಾಗ ನಾವು ಆಯ್ದುಕೊಳ್ಳುವ ದಾರಿಯು ನಾವು ಯಾವ ತಿಳಿವನ್ನು ಪಡೆಯಬೇಕು ಎಂಬುದನ್ನೂ ಹಿಡಿತದಲ್ಲಿರಿಸಿಕೊಂಡಿರುತ್ತದೆ. ಆದ್ದರಿಂದ ನಾವು ದಾರಿಯನ್ನು ಆಯ್ದುಕೊಳ್ಳುವಾಗ ಎಚ್ಚರವಹಿಸಬೇಕಾಗುತ್ತದೆ. ಇಲ್ಲದಿದ್ದರೆ ನಾವು ನಮಗೆ ಬೇಕಾದನ್ನು ನೋಡುವ ಬದಲು ನೋಡಿದ್ದನ್ನೇ ನಮಗೆ ಬೇಕಾದದ್ದು ಎಂದು ತಿಳಿಯುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಓದು ಎಂಬುದನ್ನು ಅರಿಯಲು ಮುಂದಾಗಬೇಕಿದೆ. |
೨. ನಾವು ತಿಳಿದದ್ದು ಕೇವಲ ತಿಳಿವಾಗಿರುತ್ತದೋ ಇಲ್ಲವೇ ಅದು ನಮ್ಮ ಬದುಕನ್ನು ಬದಲಿಸಲು ನೆರವಾಗುತ್ತದೋ? |
ಈಗ ನಾವು ಪಡೆಯುತ್ತಿರುವ ಕಲಿಕೆ ನಮ್ಮಲ್ಲಿ ಇದು ಸರಿ ಇದು ತಪ್ಪು ಎಂಬ ತಿಳಿವನ್ನು ಮೂಡಿಸಲು ಹೆಣಗುತ್ತದೆ.ಈ ಮಾತನ್ನೂ ಹೀಗೂ ಹೇಳಬಹುದು. ಯಾವುದೇ ಇರಲಿ ಅದನ್ನು ಬೇಕು/ಬೇಡ.ಸರಿ/ತಪ್ಪು. ದಿಟ/ಸಟೆ, ಬೆಳೆಸಬೇಕಾದ್ದು/ ಹೊಸಕಬೇಕಾದ್ದು ಎಂದು ಒಡೆದು ನೋಡಲು ಬರುತ್ತದೆ ಎಂದು ಕಲಿಸಲಾಗುತ್ತದೆ. ಎತ್ತುಗೆಗಾಗಿ ಒಂದು ಮಾತನ್ನು ನೋಡೋಣ: ಹೆಚ್ಚು ಬೆಳೆದರೆ ಎಲ್ಲರ ಹಸಿವು ಹಿಂಗುತ್ತದೆ ಎಂದು ಹೇಳಿದರೆ ಅದನ್ನು ಸರಿ ಎಂದು ತಿಳಿಯುತ್ತೇವೆ. ಹೆಚ್ಚು ಬೆಳೆಯಲು ಇರುವ ದಾರಿಗಳನ್ನು ಹುಡುಕುತ್ತೇವೆ. ಹೀಗೆ ಹೆಚ್ಚು ಬೆಳೆಯುವಾಗ ಕಳೇದುಕೊಂಡದ್ದೇನು ಮತ್ತು ಹೆಚ್ಚು ಬೆಳೆದರೂ ಅದು ಎಲ್ಲರ ಹಸಿವನ್ನು ಏಕೆ ಹಿಂಗಿಸುವುದಿಲ್ಲ ಎಂಬ ಕೇಳ್ವಿಯನ್ನು ನಾವು ಎದುರಿಸುವುದೇ ಇಲ್ಲ. ಹೀಗೆ ಕೇಳಿಕೊಳ್ಳುವುದನ್ನು ಕಲಿಕೆಯು ನಮ್ಮಲ್ಲಿ ಬೆಳೆಸಿಲ್ಲ. ಅಂದರೇನಾಯ್ತು? ತಿಳಿವನ್ನು ಬದುಕಿನಲ್ಲಿ ನೆಲೆಗೊಳಿಸಿಕೊಳ್ಳುವಾಗಲೂ ಎಚ್ಚರ ಬೇಕಾಗುತ್ತದೆ. ಏಕೆಂದರೆ ಆ ತಿಳಿವು ಒಂದು ತುಂಬಲಾರದ ಕಂದಕವನ್ನೇ ತೋಡುತ್ತಿರಬಹುದು ಎಂಬ ಅರಿವೂ ನಮ್ಮಲ್ಲಿ ಇರುವುದಿಲ್ಲ. ಹಾಗಾಗಿ ತಿಳಿವು ಎಂಬುದು ತನಗೆ ತಾನೇ ಬಿಡಿಯದ ಮಾತಲ್ಲ. ಅದು ಬದುಕಿನೊಡನೆ ಪಡೆದುಕೊಳ್ಳುವ ನಂಟನ್ನು, ಬೆಸುಗೆಯನ್ನು ಅರಿತೇ ಅದನ್ನು ನಾವು ಬೇಕಾದುದೋ ಅಲ್ಲವೋ ಎಂಬುದನ್ನು ಗುರುತಿಸಿಕೊಳ್ಳಬೇಕಾಗುವುದು. ಕರ‍್ನಾಟಕ ಓದು ಎಂಬುದು ತಿಳಿವನ್ನು ಪಡೆದುಕೊಳ್ಳವು ಹತ್ಯರು ಮಾತ್ರವಾಗಿ ಉಳಿಯದೇ ಆ ತಿಳಿವು ನಮ್ಮ ಹಸನಾದ ಬದುಕಿಗೆ ಬೇಕೋ ಬೇಡವೋ ಎಂಬುದನ್ನೂ ಕೂಡ ನಮಗೆ ತಿಳಿಸಿಕೊಡುವಂತೆ ಆಗಬೇಕು. |
ಈಗ ಮೊದಲಿಗೆ ಬರೋಣ. ತಿಳಿವು ನಮ್ಮ ಗುರಿಯಾಗುವುದಾದರೆ ಆಗ ಅದನ್ನು ಪಡೆದುಕೊಳ್ಳುವ ಹತ್ಯಾರುಗಳು ಕೂಡ ನಮ್ಮ ಬಗಲಲ್ಲಿ ಇರಬೇಕಾಗುತ್ತದೆ. ನಮ್ಮ ಬೇಕುಗಳಿಗೆ ತಕ್ಕಂತೆ ಈ ಹತ್ಯಾರುಗಳೂ ಕೂಡ ಬದಲಾಗುತ್ತಲೇ ಇರಬೇಕಾಗುತ್ತದೆ. ಈ ಮಾತು ಗಮನದಲ್ಲಿರಬೇಕು. ಏಕೆಂದರೆ ಬದಲಾಗದ ಹತ್ಯಾರುಗಳಿಲ್ಲ. ಅಂದರೆ ಕರ‍್ನಾಟಕ ಓದು ಎಂಬುದು ಅಚ್ಚುಕಟ್ಟಾದ ಹೇಳಿಕೆಗಳ ಚೌಕಟ್ಟಲ್ಲ. ಅದು ಬಳಕೆಯಿಂದ ಕಟ್ಟುವ ಮತ್ತು ಬೇಕೆಂದಾಗ ಬದಲಾಗುವ ಹತ್ಯಾರು ಎಂಬುದನ್ನು ಮರೆಯಬಾರದು. |
೩. ಲೋಕದಲ್ಲಿ ನಾಡುಗಳ ಗಡಿಗೆರೆಗಳು ತೆಳುವಾಗುತ್ತಿರುವಾಗ ಕರ‍್ನಾಟಕ ಓದು ಎಂಬುದು ನಮ್ಮನ್ನು ಹೆಳವರನ್ನಾಗಿ ಮಾಡುವುದಿಲ್ಲವೇ? |
ಪೈಪೋಟಿ ಮತ್ತು ನಾಳೆಗಾಗಿ ಈಹೊತ್ತನ್ನು ಮುಡಿಪಿಡುವುದು ಇವೆರಡೂ ನಮ್ಮ ಇಂದಿನ ಬದುಕಿನ ನೆಲೆಗಳಾಗಿವೆ. ಪೈಪೋಟಿ ಇಲ್ಲದೆಯೂ ಇಂದಿನ ದಂದುಗವನ್ನು ನಡೆಸುತ್ತಿರುವ ಜನರ ಬದುಕು ಇದರಿಂದ ನಮ್ಮ ಕಣ್ಣೆದುರಿಗೆ ಬರುವುದೇಇಲ್ಲ. ಇಡೀ ಲೋಕದಲ್ಲಿ ಏನು ನಡೆಯುತ್ತಿದೆ ಅದು ನಮಗೂ ತಿಳಿಯಬೇಕು, ನಾವು ಹಾಗೇ ಅಗಬೇಕು ಎಂಬ ಹಂಬಲದ ಕೈಮೇಲಾದರೆ ಆಗ ನಾವು ಈಹೊತ್ತನ್ನು ಬಲಿಕೊಡುತ್ತೇವೆ. 'ನಮ್ಮ ಚಿಂತೆ ನಮಗೆ ಹಾಸಲುಂಟು ಹೊದೆಯಲುಂಟು' ಎಂದ ಬಸವಣ್ಣನ ಮಾತನ್ನು ನಾವು ಜನರ ನೋವಿಗೆ ಬೆನ್ನುಮಾಡಿದ ಮಾತೆಂದು ತಿಳಿಯಬಾರದಲ್ಲವೇ? |
ಈ ಕೇಳ್ವಿಯನ್ನು ಕೆಲವರು ಇನ್ನೂ ಒಂದು ನಿಟ್ಟಿನಲ್ಲಿ ಮುಂದಿಡುತ್ತಾರೆ. ಲೋಕದ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವುದು ಇಲ್ಲಿ ನಮ್ಮ ಮೇಲೆ ಹಿಡಿತ ಪಡೆಯುತ್ತಿರುವುದರಿಂದ ನಾವು ಎಲ್ಲವನ್ನು ಒಂದು ಚೌಕಟ್ಟಿನಲ್ಲಿ ಇರಿಸಿ ನೋಡಬೇಕೇ ಹೊರತು ಬಿಡಿಯಾಗಿ ನೋಡುವುದರಿಂದ ನಮಗೆ ಬರಲಿರುವ ಹೊಡೆತಗಳ ಅರಿವು ನಮಗೆ ಗೊತ್ತಾಗದೇ ಹೋಗುತ್ತದೆಯಲ್ಲವೇ? ಮಾರುಕಟ್ಟೆಯ ತೋಳುಗಳು ಉದ್ದವಾಗುತ್ತಿರುವುದನ್ನು ಕಂಡವರು ಈ ಮಾತನ್ನು ನಮ್ಮ ಮುಂದೆ ಇಡುತ್ತಿದ್ದಾರೆ. ದಿಟ. ರೋಗ ಮತ್ತು ಅದರ ಮದ್ದು ಎರಡೂ ಒಂದೇ ಬೇರಿನಿಂದ ಹುಟ್ಟುತ್ತವೆ ಎಂದು ತಿಳಿದರೆ ಮಾತ್ರ ಈ ಗೊಂದಲ ಮುಂದುವರೆಯುತ್ತದೆ. ರೋಗ ಎಲ್ಲಿಂದಲೇ ಹುಟ್ಟಿರಲಿ ಮದ್ದು ನಮ್ಮಲ್ಲೇ ಇರಬೇಕು ಎಂಬ ತಿಳಿವು ನಮ್ಮಲ್ಲಿ ಮೂಡದಿದ್ದರೆ ಆಗ ಈಗಿರುವ ಲೋಕದ ಚಿಂತೆಯ ಹಂಗಿನಿಂದ ನಾವು ಹೊರಬರಲಾರೆವು. ಪೈಪೋಟಿಯಲ್ಲಿ ಕೈಕಾಲು ಸೋಲುವುದರಿಂದ ತಪ್ಪಿಸಿಕೊಳ್ಳಲಾರೆವು. |
ಸೆಪ್ಟೆಂಬರ್ ೧ ಮತ್ತು ೨ ರಂದು ನಡೆಯುವ ಕಮ್ಮಟದ ವೇಳಾಪಟ್ಟಿ |
೦೧.೦೯.೨೦೧೨ |
೧೦:೩೦-೧೨:೦೦ ಟಿಪ್ಪಣಿಯನ್ನು ಚರ್ಚಿಸುವುದು |
೧೨:೧೫-೧:೪೫ ಟಿಪ್ಪಣಿಯನ್ನು ಚರ್ಚಿಸುವುದು |
೧:೪೫-೨:೩೦ ಊಟ |
೨:೩೦-೪:೦೦ ಒಳಗೊಳ್ಳುವಿಕೆ ಎಂದರೇನು? (ಗುಂಪು ಚರ್ಚೆ) |
೪:೧೫-೫:೪೫ ಒಳಗೊಳ್ಳುವಿಕೆ ಎಲ್ಲರೊಡನೆ ಮಾತು |
೦೨.೦೯.೨೦೧೨ |
೯:೩೦-೧೧:೦೦ ಕಲಿಕೆಯ ಹಕ್ಕು: ಎದುರಾಗಿರುವ ಸವಾಲುಗಳು (ಗುಂಪು ಚರ್ಚೆ) |
೧೧:೧೫-೧೨:೪೫ ಕಲಿಕೆಯ ಹಕ್ಕು: ಎಲ್ಲರೂ ಕೂಡಿ ಮಾತು |
೧೨:೪೫-೧:೩೦ ಊಟ |
೧:೩೦-೩:೦೦ ಬರೆಯುವ ಕೆಲಸ |
೩:೧೫-೪:೪೫ ಬರಹವನ್ನು ತಿದ್ದುವ ಕೆಲಸ |
ಬೆತ್ತಲೆ ವೃಕ್ಷ : ಹಿತ್ತಲ ಗಿಡ ಮುದ್ದಲ್ಲ |
ಅವರು ಈ ಲೇಖನವನ್ನು ಪ್ರತಿ ವಾರ ಪತ್ರಿಕೆಗೆ ಬರೆಯುತ್ತಿದ್ದಾಗ ಆರಂಭದ ದಿನಗಳಲ್ಲಿ ಕೆಲವು ಮಹಿಳಾ ಸಂಘಟನೆಗಳಿಂದ ಈ ಲೇಖನಗಳಿಗೆ ವಿರೋಧ ಎದುರಿಸಿದ್ದರು. ಲೇಖಕರು ಮುಕ್ತ ಲೈಂಗಿಕತೆಯ ಕುರಿತಾಗಿ ಬರೆವಾಗ ಅನೇಕ ಕಡೆ ಲೈಂಗಿಕ ಅಂಗಾಂಗಗಳ ಬಳಕೆಗಳ ಕುರಿತಾಗಿ ವಿವರವಾಗಿ ಬರೆದಿರುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಮಹಿಳೆಗೆ ಲೈಂಗಿಕತೆಯ ಕುರಿತಾಗಿ ನಿಯಂತ್ರಿಸುತ್ತಿರುವುದು ಸಮಾಜವನ್ನು ನಿಯಂತ್ರಿಸುತ್ತಿರುವ ಊಳಿಗಮಾನ್ಯ ಸಂಸ್ಕೃತಿ ಹಾಗೂ ಪುರುಷಾಧಿಪತ್ಯದ ಕುರಿತಾಗಿ ಲೇಖಕರು ಎಲ್ಲಿಯೂ ಬರೆದಿಲ್ಲ ಎಂದು ಮಹಿಳಾ ಸಂಘಟನೆಗಳು ಅರೋಪಿದ್ದವು. ಮಹಿಳಾ ಜಾಗೃತಿ ಸಂಘಟನೆಯ ಸುಷ್ಮಾ ಅವರು ಪ್ರತಿಭಟನೆ ರೂಪವಾಗಿ ಬರೆದ ಪತ್ರವನ್ನು ಸಹ ಇದೇ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. |
ಆದರೆ ಇಲ್ಲಿನ ಮೂರನೇ ಭಾಗವಾದ ರಜನೀಶ್ರವರ ಲೈಂಗಿಕ ಕ್ರಾಂತಿ ಹಾಗೂ ನಾಲ್ಕನೇ ಭಾಗವಾದ ವಿಹಾರಿ ವಿಕೃತಿ ಕುರಿತಾದ ಲೇಖನಗಳು ನಿಜಕ್ಕೂ ಯಶಸ್ವೀ ಲೇಖನಗಳು. ಈ ಭಾಗದಲ್ಲಿ ಡೊಮೆನಿಕ್ ಮುನ್ನುಡಿಯಲ್ಲಿ ಬರೆದಂತೆ ಲೈಂಗಿಕ ವ್ಯಕ್ತಿತ್ವಕ್ಕೊಂದು ಕನ್ನಡಿ ಯನ್ನು ಲಕ್ಷ್ಮೀಪತಿಯವರು ಸಮರ್ಥವಾಗಿ ಹಿಡಿದುಕೊಡುತ್ತಾರೆ. ಇಲ್ಲಿ ತಮ್ಮ ವೈಚಾರಿಕ ಪ್ರತಿಭೆಯನ್ನು ಸರಾಗವಾಗಿ ಬಳಸಿಕೊಂಡು ಬರೆದಿದ್ದಾರೆ.ಇಲ್ಲಿ ಭಾಷೆಯ ಬಳಕೆ ಲೇಖಕರ ಹಿಡಿತಕ್ಕೆ ದಕ್ಕಿದೆ.ಈ ಭಾಗಗಳಲ್ಲಿ ಲೈಂಗಿಕತೆಯ ಕುರಿತಾದ ಅನೇಕ ಪೂರ್ವಗ್ರಹ ಚಿಂತನೆಗಳನ್ನು ಕೆಡವಿಹಾಕುತ್ತಾರೆ.ಇಲ್ಲಿ ಸಮಾಜಶಾಸ್ತ್ರೀಯ ಹಾಗೂ ಮನೋ ವೈಜ್ನಾನಿಕ ಮಾದರಿಗಳನ್ನು ಲೇಖಕ ಲಕ್ಷ್ಮೀಪತಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. |
ಈ ಪುಸ್ತಕ ಪ್ರಕಟವಾಗಿದ್ದು 2007ರಲ್ಲಿ. ಅಂದರೆ ಇದು ಪ್ರಕಟವಾಗಿ 5 ವರ್ಷಗಳ ನಂತರವೂ ಈ ಬೆತ್ತಲೆ ವೃಕ್ಷದ ಕೃತಿಯ ಕುರಿತಾಗಿ ಒಂದು ವಿಮರ್ಶೆಯೂ ಪ್ರಕಟವಾಗಿಲ್ಲ. ಚರ್ಚೆಯಾಗಿಲ್ಲ. 'ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ' ತರಹದ ಕವನಗಳ ಕುರಿತಾಗಿ ಪುಟಗಟ್ಟಲೆ ಬರೆಯುವ ಈ ವಿಮರ್ಶಕರಿಗೆ ಈ ಪ್ರೇಮದ ಪರಿಯ ನಿಗೂಢ ಆಕರ್ಷಣೆಯಾದ ಲೈಂಗಿಕತೆಯನ್ನು ಚರ್ಚಿಸುವ ಈ ಪುಸ್ತಕದ ಕುರಿತು ಅಸಡ್ಡೆ ! |
ನಮ್ಮ ಕನ್ನಡದ ಘೋಷಿತ ವಿಮರ್ಶಕರಿಗೆ ನವ್ಯದ ಸ್ವಚ್ಛಂದವಾದ, ಲಿಬಿಡೂ ಮಾದರಿಯ ಆತ್ಮವಂಚನೆಯನ್ನೇ ಹಾಸಿ ಹೊದ್ದ ಸಾಧಾರಣ ಕೃತಿಗಳ ಕುರಿತಾಗಿ ಇರುವ ಆಸಕ್ತಿ ಈ ಪ್ರಯೋಗಾತ್ಮಕ ಪುಸ್ತಕವಾದ 'ಬೆತ್ತಲೆವೃಕ್ಷ' ಬಗೆಗೆ ಇಲ್ಲವೇ ಇಲ್ಲ !! ಇವರ ಅನಾದರದ ಕಾರಣವೂ ಸಹ ನಿಗೂಢ ! ಕಡೆಗೆ ಕನ್ನಡ ಓದುಗರಿಗಾಗಿ ಇಂತಹದೊಂದು ಪುಸ್ತಕವಿದೆ ಎಂದು ಪರಿಚಯಿಸಲಿಕ್ಕಾಗಿಯೇ ನನ್ನಂತಹ ಸಾಮಾನ್ಯ ಓದುಗ ಇಂದು ಆತ್ಮೀಯ ಗೆಳೆಯ ಲಕ್ಷ್ಮೀಪತಿಯ ಈ ಕೃತಿಯ ಕುರಿತಾಗಿ ಬರೆಯಬೇಕಾಯಿತು !! |
ಬೆತ್ತಲೆ ವೃಕ್ಷ |
ಪ್ರಕಾಶಕರು, ಸಖಿ ಪ್ರಕಾಶನ ಏಕಾಂತ ನಿಲಯ |
ಎಂ.ಪಿ.ಪ್ರಕಾಶ ನಗರ ಹೊಸಪೇಟೆ |
ಪುಟಗಳು : ೧೭೯ಬೆಲೆ :Rs.120 |
ಭಾರತೀಯ ಪ್ರಜಾವರ್ಗಕ್ಕೆ ಪ್ರಧಾನಿಯ ನಡಾವಳಿ ಅನಿವಾರ್ಯವೇ? |
ಸುಧಾಕರ ಹೊಸಳ್ಳಿ, |
ರಾಜ್ಯಶಾಸ್ತ್ರ ವಿಭಾಗ, ಮೈಸೂರು |
ಮಾನ್ಯ ಪ್ರಧಾನ ಮಂತ್ರಿಗಳೇ, ಈ ರಾಷ್ಟ್ರ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಮಂತ್ರಿಗಳಲ್ಲಿ ತಾವು ಕೂಡ ಅಗ್ರಪಂಕ್ತಿಯಲ್ಲಿ ನಿಲ್ಲುತ್ತೀರಿ. ಸ್ವತಃ ಆರ್ಥಿಕ ತಜ್ಞರಾದ ನೀವು ರಾಷ್ಟ್ರದ ಅಭಿವೃದ್ಧಿ ಪಥಕ್ಕೆ ಸಂಚಲನ ನೀಡುವಲ್ಲಿ ಯಶಸ್ವಿಯಾಗಿರುವುದು ವಾಸ್ತವವೇ. ತಮ್ಮ ಸಜ್ಜನಿಕೆಯಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗೆ ಭಾಜನರಾಗಿದ್ದೀರಿ. ವಿಶ್ವದ ಅಗ್ರಗಣ್ಯ ರಾಷ್ಟ್ರದ ನಾಯಕನಾದ ಒಬಾಮರವರು ನಿಮ್ಮನ್ನು ಶ್ಲಾಘಿಸುವುದನ್ನು ಮರೆಯುವುದಿಲ್ಲ. ವಿಶ್ವಸಂಸ್ಥೆಯು ನಿಮ್ಮನ್ನು ಅಭಿನಂದಿಸಿದ್ದು ಆಗಿದೆ. ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪ್ರಶಸ್ತಿಗಳು ನಿಮ್ಮನ್ನು ಅರಸಿ ಅಪ್ಪಿದ್ದಾಯಿತು. ಇಡೀ ವಿಶ್ವಕ್ಕೆ ವಿಶ್ವವೇ ಆರ್ಥಿಕ ಹಿಂಜರಿಕೆಯಿಂದ ಬಳಲುತ್ತಿದ್ದರು, ಅದರ ಛಾಪು ನಮ್ಮೆಡೆ ಸುಳಿಯದಂತೆ ನೋಡಿಕೊಂಡ ಕೀರ್ತಿ ನಿಮಗೆ ಸಲ್ಲಲೇಬೇಕು. ಉನ್ನತ ಶಿಕ್ಷಣಕ್ಕೆ ಆದ್ಯತಾ ನೆಲೆಗಟ್ಟನ್ನು ಸೃಷ್ಟಿಸುವ ಮುಖೇನ, ಭಾರತೀಯ ವಿದ್ಯಾರ್ಥಿಗಳನ್ನು ಅಮೇರಿಕನ್ನರು ಅನುಕರಿಸು ವಂತೆ ಮಾಡಿದಿರಿ. ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತಿತರ ಘನ ಸಂಸ್ಥೆಗಳಲ್ಲಿ ಭಾರತೀಯರು ಸೇರ್ಪಡೆ ಯಾಗುವುದರಲ್ಲಿ ನಿಮ್ಮ ಪಾತ್ರ ಹಿರಿದಾದುದ್ದೇ. |
ಬಾಹ್ಯಾಕಾಶದಲ್ಲಿನ ಹಲವು ಶೋಧನೆಗೆ ನಾಂದಿ ಹಾಡಿದ್ದೀರಿ. (ಉದಾಹರಣೆಗೆ ಮಂಗಳನಲ್ಲಿಗೆ ಪಯಣ) ನಮ್ಮ ಅಸ್ತಿತ್ವವಿಲ್ಲದ ಜಿ-೮, ಜಿ-೧೫ ಒಕ್ಕೂಟಗಳು ನಮ್ಮನ್ನು ವಿಶೇಷ ಆಹ್ವಾನಿತರಾಗಿ ಕರೆಯಿಸಿಕೊಳ್ಳುವ ವಾತಾವರಣ ನಿರ್ಮಿಸಿದ್ದು ಶ್ಲಾಘನೀಯ.೧೨೦ ಕೋಟಿಗೂ ಮಿಗಿಲಾದ ಭಾರತೀಯರೆಲ್ಲರ ಮನದಲ್ಲೂ ನೀವು ಸಜ್ಜನರಾಗಿ ವಿರಮಿಸುತ್ತಿರುವಿರಿ. ನಿಮ್ಮನ್ನು ಟೀಕಿಸುವ ನೈತಿಕ ಹಕ್ಕು ನನಗಿಲ್ಲ ಹಾಗೂ ಇದು ಸಾರ್ವತ್ರಿಕ ಧ್ವನಿಯು ಹೌದು. ಆದರೆ ನಮ್ಮೆಲ್ಲರನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ, ನೀವು ಸ್ವತಂತ್ರರೇ? ಭಾರತದಲ್ಲಿ ಸಾಂವಿಧಾನಿಕವಾಗಿ ರಾಷ್ಟ್ರಪತಿ ಹೆಚ್ಚಿನ ಅಧಿಕಾರ ಮತ್ತು ಕಾರ್ಯಗಳನ್ನು ಹೊಂದಿದ್ದರು. |
ವಾಸ್ತವವಾಗಿ (೭೪(೨)) ಅವುಗಳು ಆಚರಣೆಗೆ ಬರುವುದು ಪ್ರಧಾನಿಯಿಂದಲೇ ಎಂಬುದು ಎಲ್ಲರಿಗೂ ತಿಳಿದ ವಿಷಯವೆ. ಈ ನಿಟ್ಟಿನಲ್ಲಿ ನೀವು ಸರ್ವ ಸ್ವತಂತ್ರರೆ? ಭಾರತೀಯ ಪ್ರಜಾವರ್ಗದ ಸಂಪೂರ್ಣ ಬೆಂಬಲವಿರುವ ನೀವು, ನಿರ್ವಿಘ್ನ ಅಧಿಕಾರ ಅನುಭವಿಸುತ್ತಿದ್ದೀರಾ? ಎಂಬುದೇ ಯಕ್ಷಪ್ರಶ್ನೆ. ಈ ಒಂದು ಮಹತ್ವಪೂರ್ಣ ಪ್ರಶ್ನೆಗೆ ಉತ್ತರ ಹುಡುಕಾಟದಲ್ಲಿ ಸರ್ವರು ಮಗ್ನವಾಗಿ ರುವುದು ಔಚಿತ್ಯವೇ ಸರಿ. ನಿಮ್ಮ ಮುಂದೆ ಇಂತಹದೊಂದು ಪ್ರಶ್ನೆಯನ್ನು ತರುವಾಗ ನಮ್ಮ ಮನವು ಕೂಡ ಮುದುಡುತ್ತಿರುವುದು ನಿಮ್ಮ ಅರಿವಿಗಿರಲಿ. ಆದರೆ ಪ್ರಶ್ನೆಯನ್ನು ನಿಮ್ಮೆಡೆ ತರುವುದು ಈ ಕಾಲ ಘಟ್ಟದಲ್ಲಿ ಅನಿವಾರ್ಯವೆ ಆಗಿದೆ. ನಮ್ಮಲ್ಲಿ ಒಂದು ಗಾದೆ ಮಾತಿದೆ. ಕತ್ತಿ ಚಿನ್ನದ್ದಾದರೆ ಕುತ್ತಿಗೆ ಕುಯ್ದುಕೊಳ್ಳಲು ಸಾಧ್ಯವೆ? |
ಈ ಗಾದೆ ಎಳೆದು ತರುವ ಮುಖಾಂತರ ನಾವು ನಿಮ್ಮನ್ನು ನಿಂದಿಸಲು ಹೊರಟಿಲ್ಲ. ಬದಲಿಗೆ ಅವಶ್ಯವಿರುವ ಒಂದು ಮೂಲ ಪ್ರಶ್ನೆಯ ರಚನೆಗೆ ಮುನ್ನುಡಿ ಇಡುತ್ತಿದ್ದೇವೆ. ಬಹುಶಃ ಈ ಸ್ಥಿತಿಗೆ ಕಾರಣ ವಾಗಿರುವುದು ಮತ್ತು ನಮ್ಮನ್ನು ಈ ರೀತಿ ತಂದು ನಿಲ್ಲಿಸಿರುವುದರ ಹಿಂದೆ ಒಂದು ತಳಮಟ್ಟದ ಕಾರಣವಿದೆ. ಅದು ನಮ್ಮನ್ನು ಆಳಲು ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ನಿಮ್ಮನ್ನು ಆಳಲು ಮತ್ತೊಬ್ಬರಿಗೆ ಅವಕಾಶ ಕಲ್ಪಿಸಿದ್ದೀರ? ಎಂಬುದು. ಈ ಭಾವನೆ ಪ್ರಾರಂಭದಲ್ಲಿ ವೈಯಕ್ತಿಕ ಅಭಿಪ್ರಾಯವಾಗಿತ್ತಷ್ಟೆ. ಆದರೆ ಇಂದು ಅದು ಸಾರ್ವತ್ರಿಕತೆಯಡಿಯಲ್ಲಿ ಬಂದು ನಿಂತಿದೆ. |
ಈ ಕಲ್ಪನೆ, ಊಹೆ, ಪ್ರಶ್ನೆ ಅಥವಾ ಚಿಂತನೆ, ಅಂದು ರಾಷ್ಟ್ರ ಕಂಡ ಭೀಕರ ದುರಂತವಾದ ಕುಂಬಕೋಣಂನಲ್ಲಿ ಶಾಲೆಯೊಂದು ಬೆಂಕಿ ಹೊತ್ತಿ ಉರಿದಾಗ, (೨೦೦೬) ಆ ದುರ್ಘಟನೆಗೆ ಪರಿಹಾರವಾಗಿ ಸೋನಿಯಾ 1ಕೋಟಿ ರೂ.ಗಳನ್ನು ಸರಕಾರದ ಅಧಿಕೃತ ಪ್ರಕಟಣೆಯಡಿಯಲ್ಲಿ ಘೋಷಿಸಿದರು. ಬಹುಶಃ ಅಂದೇ ಬುದ್ಧಿಜೀವಿಗಳ ವರ್ಗದಲ್ಲಿ ಸಂಶಯವೊಂದು ಪ್ರಶ್ನೆಯ ರೂಪದಲ್ಲಿ ಉಗಮಿಸಿತು ಎಂದರೆ ತಪ್ಪಾಗಲಾರದು. |
Subsets and Splits
No community queries yet
The top public SQL queries from the community will appear here once available.