text
stringlengths 0
61.5k
|
---|
"ಮನವ ಗೆದ್ದೆಹೆನೆಂದು, ತನುವ ಕರಗಿಸಿ ಕಾಯವ ಮರುಗಿಸಿ, ನಿದ್ರೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬ ಬುದ್ಧಿಹೀನರಿರಾ ನೀವು ಕೇಳಿರೋ, ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆ ಕಾಮ ಕ್ರೋಧವ ನೀಗಿ, ಲೋಭ ಮೋಹ ಮದ ಮತ್ಸರವ ಛೇದಿಸಿ, ಆಸೆ ರೋಷವಳಿದು, ಜಗದ ಪಾಶವ ಬಿಟ್ಟು, ಆ ಮರುಗಿಸುವ ಕಾಯವನೆ ಪ್ರಸಾದಕಾಯವ ಮಾಡಿ ಸಲಹಿದರು. ಕೆಡಿಸುವ ನಿದ್ರೆಯನೆ ಯೋಗಸಮಾಧಿಯ ಮಾಡಿ, ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತಬಲ್ಲರೊ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?" |
ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರಲು ಜ್ಞಾನಶಕ್ತಿ ಬಂದು ಎಬ್ಬಿಸಲು, ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ಧ್ವಕ್ಕೇರಲು, ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು; ಕರಣಂಗಳೆಲ್ಲ ಉರಿದುಹೋದವು. ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆ ನೋಡಿ, ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. |
ಸ್ವಸ್ಥ ಮನದಿಂದ – ಸ್ವಸ್ಥ ಕಾಯ, ಸ್ವಸ್ಥ ಕಾಯದಿಂದ – ಸುವಿಚಾರ, ಸುವಿಚಾರದಿಂದ – ಸದಾಚಾರ, ಸದಾಚಾರದಿಂದ – ಸದ್ಭಾವ, ಸದ್ಭಾವ ನಿರ್ಭಾವವಾಗುವುದೇ ಅಂಗ -ಲಿಂಗ ಸಮರಸ. |
December 3, 2018 ಡಿ.ಪಿ. ಪ್ರಕಾಶ್ |
ಬೋಧನೆ ಮತ್ತು ಅದನ್ನು ಜಾರಿಗೆ ತರುವ ಕ್ರಿಯೆ ಇವೆರಡನ್ನೂ ನಡೆ- ನುಡಿಗಳ ಸಂಬಂಧದಲ್ಲಿ ಬೆಸೆದು ತಮ್ಮ ಜೀವನವನ್ನೇ ಮನುಕುಲೋದ್ಧಾರದ ಸಿದ್ಧಾಂತಗಳನ್ನಾಗಿ ಬದುಕಿ ತೋರಿಸಿದ ಭಾರತದ... |
ಮನದ ಗಮನವನ್ನು ಗಮ್ಯದೆಡೆಗೆ ತಿರುಗಿಸುವುದು ಹೇಗೆ ಎಂಬ ಅಂಶ ಲೇಖನದಲ್ಲಿ ನಾಪತ್ತೆಯಾಗಿದೆ. ಇಡೀ ಲೇಖನದಲ್ಲಿ ನಾನು ಅದನ್ನೇ ಹುಡುಕುತ್ತಿದ್ದೆ…… ಮುಂದಿನ ಲೇಖನದಲ್ಲಿ ತಿಳಿಸಿಕೊಡಿ ಸರ್. |
ತನ್ಮೂಲಕ ಅಧೋಮುಖಿಯಾದ ಮನವು ಊರ್ಧ್ವಮುಖಿಯಾಗಿ ಅಂತರಂಗದ ಸುವಿಚಾರಗಳು ಬಹಿರಂಗದ ಸದಾಚಾರಗಳಾಗಿ ವ್ಯಕ್ತವಾಗಿ ಆ ಸದಾಚಾರವೇ ಲಿಂಗವಾದಾತನ ಅನುಭಾವದೊಡಗೂಡಿ ಎಲ್ಲಾ ಚಟುವಟಿಕೆಗಳೂ ಸ್ವಯಂನಿಯಂತ್ರಣಕ್ಕೆ ಬರುವವು ಎಂದು ಅತ್ಯಂತ ಸರಳವಾಗಿ ತಿಳಿಸಿದ್ದಾರೆ… |
ಸರಳವಾಗಿ ತಿಳಿಸಿರುವುದನ್ನು ಸರಳವಾಗಿ ಪಾಲಿಸುವುದು ಹೇಗೆ? |
ದಯವಿಟ್ಟು ತಿಳಿಸಿಕೊಡಿ ಸರ್. |
ಲಿಂಗಮ್ಮ ತಾಯಿಯವರ ಅನುಭಾವ ಚೆನ್ನಾಗಿ ವಿವರಿಸಿದ್ದೀರಿ, ಅಣ್ಣಾ. ಧನ್ಯವಾದಗಳು. |
Giridhar Tonde |
ಲಿಂಗಮ್ಮನವರ ವಚನಗಳಲ್ಲಿ ಇಷ್ಟು ಜ್ಞಾನಭಂಡಾರವಿದೆ ಎನ್ನುವುದು ನಿಮ್ಮ ಲೇಖನದಿಂದ ನನಗೆ ತಿಳಿಯಿತು. ವಚನಗಳ ಅರ್ಥವನ್ನು ನಮಗೆ ತಿಳಿಯುವಂತೆ ಸರಳವಾಗಿ ಹೇಳಿರುವಿರಿ. |
ಶರಣೆ ಲಿಂಗಮ್ಮನವರ ವಚನಗಳ ಮೇಲೆ ಯಾರಾದರೂ ವ್ಯಾಖ್ಯಾನ ಬರೆದಿದ್ದರೆ ತಿಳಿಸುವಿರಾ? ನಿಮ್ಮ ಲೇಖನ ಓದಿ ಲಿಂಗಮ್ಮನವರ ಕುರಿತು ಆಸಕ್ತಿ ಮೂಡಿತು. |
Shreeshail Tungalad |
ನೀಲಾಂಬಿಕೆ ತಾಯಿಯವರೂ ಮನಸ್ಸು ಮತ್ತು ಯೋಗದ ಮೇಲೆ ಅನೇಕ ವಚನಗಳನ್ನು ಬರೆದಿ್ದಾರೆ, ಲಿಂಗಮ್ಮನವರ ಅನುಭಾವದ ಎತ್ತರ ಮೂಕರನ್ನಾಗಿಸುತ್ತದೆ. |
ದೇಹದಲ್ಲಿ ಮನಸ್ಸಿನ ಉತ್ಪತ್ತಿ ಸ್ಥಾನ ಸಹಸ್ರಾರಚಕ್ರ ಎಂದು ಹೇಳಿದ್ದೀರಿ, ಅದು ಹೇಗೆ ತಿಳಿಯಲಿಲ್ಲ. ಲಿಂಗಮ್ಮನವರ ವಚನದಲ್ಲಿ ಹಾಗೆ ಇಲ್ಲವೆಂದು ನನಗೆ ತೋರುತ್ತದೆ. "ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ…." ವಚನದಲ್ಲಿ ಅವರು ಸಾಸಿರಕಮಲದಳವಾದ ಸಹಸ್ರಾರಕ್ಕೆ ಮನಸ್ಸು ಎಂದು ಕರೆದಿರುತ್ತಾರೆ. ಸರ್, ಮತ್ತೊಮ್ಮೆ ಈ ವಚನ ಪರಿಶೀಲಿಸಿ. ಉಳಿದಂತೆ ಲೇಖನವು ಆಧ್ಯಾತ್ಮದ ಭಾರದಲ್ಲಿ ತೂಗಿದೆ. ಶರಣು. |
ಗಮ್ಯದ ಕಡೆ ನಮ್ಮ ಗಮನವನ್ನು ತಿರುಗಿಸಿದ ಲೇಖನ, ಅರ್ಥಮಾಡಿಕೊಳ್ಳಲು ತುಸು ಕಷ್ಟವೆನಿಸುತ್ತದೆ….. |
Dileep H. N |
'ಮನಸ್ಸನ್ನು ಅಧೋಮುಖವಾಗಿ ಹರಿಯಗೊಡದೆ ಊರ್ಧ್ವಮುಖವಾಗಿ ಚಲಿಸುವಂತೆ ಮಾಡಲು ಶಿವಜ್ಞಾನ, ಶಿವಚಿಂತನೆಗಳಿಂದ ಮಾತ್ರ ಸಾಧ್ಯ' ಸಾಧನೆಗೆ ಮನವೇ ಅಡಿಗಲ್ಲು, ಅದನ್ನು ಮೇಲೆತ್ತಲು ಶರಣರು ಹೇಗೆ ಶ್ರಮಿಸಿದರು ಎಂಬುದರ ಮೇಲೆ ಬೆಳಕು ತೋರಿದ್ದೀರಿ. ಶರಣುಗಳು ಸರ್. |
ಮನಸ್ಸು ಅಂಥರ್ಮುಖವಾದಾಗ ಜ್ಞಾನವು ಅನುಭಾವವಾಗಿ ಪರಿವರ್ತನೆಯಾಗುವುದು- ನಿಜವಾದ ಮಾತು. ಶರಣರ ನಡೆಗಳು ಸರಳ, ಸುಂದರ, ಅದ್ಭುತ. |
ವಿಕಾರ ಮನಸ್ಸು ಶರಣನಾಗುವುದು ಹೇಗೆ? ಲಿಂಗಮ್ಮ ತಾಯಿಯವರ ವಚನಗಳಲ್ಲಿ ಅದಕ್ಕೇನಾದರೂ ಪರಿಹಾರವಿದೆಯೇ? |
ಮನಸ್ಸನ್ನು ಶಾಂತಗೊಳಿಸಲು ಮಾಡಿದುದೇನೆಂದರೆ, ಮನಸ್ಸು ಅತ್ತಲಿತ್ತ ಹರಿಯದಂತೆ ಇಂದ್ರಿಯಗಳ ಬಾಗಿಲಲ್ಲಿ ಲಿಂಗಗಳನ್ನು ನೆಲೆಗೊಳಿಸಿದರು. ಆ ಲಿಂಗದ ಮೂಲಕವೇ ಪ್ರತಿಯೊಂದು ಪದಾರ್ಥವೂ ದೇಹವನ್ನು ಪ್ರವೇಶಿಸುವುದರಿಂದ ಅದು ಲಿಂಗಾರ್ಪಿತವಾಗಿ ಪದಾರ್ಥ ರೂಪದಿಂದ ಪಲ್ಲಟಗೊಂಡು ಪ್ರಸಾದವಾಗುವುದು. ಅಂಥಾ ಪ್ರಸಾದವನ್ನು ಸವಿದಾತನ ಮನ ಸದಾ ನಿಶ್ಚಲವಾಗಿರುವುದು. |
ಕೊಡಗಿನ ಸಂತ್ರಸ್ತರಿಗೆ ಡಿಸೆಂಬರ್‌ನಲ್ಲಿ ಮನೆ ಹಸ್ತಾಂತರ; ಸೋಮಣ್ಣ ಭರವಸೆ | Handover Of Home For Victims In December Said Somanna - Kannada Oneindia |
ಕೊಡಗಿನ ಸಂತ್ರಸ್ತರಿಗೆ ಡಿಸೆಂಬರ್‌ನಲ್ಲಿ ಮನೆ ಹಸ್ತಾಂತರ; ಸೋಮಣ್ಣ ಭರವಸೆ |
| Updated: Tuesday, September 24, 2019, 10:43 [IST] |
ಮಡಿಕೇರಿ, ಸೆಪ್ಟೆಂಬರ್ 24: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ವರ್ಷ ಕಳೆದರೂ ಮನೆ ನೀಡುವ ಕಾರ್ಯ ನಡೆದಿಲ್ಲ. ಸದ್ಯ ಒಟ್ಟು 633 ಮನೆಗಳನ್ನು ನಿರ್ಮಿಸಲಾಗಿದ್ದರೂ ಯಾರಿಗೂ ಇದುವರೆಗೆ ವಿತರಣೆ ಮಾಡಿಲ್ಲ. ಈ ಬಾರಿಯೂ ಪ್ರವಾಹ ಸಂಭವಿಸಿ ಹಲವು ಅನಾಹುತವಾಗಿದೆ. ಆದರೆ ಕಳೆದ ವರ್ಷದಿಂದ ಸರ್ಕಾರದ ಮನೆಗಾಗಿ ಕಾಯುತ್ತಲೇ ಬರುತ್ತಿರುವುದು ಬೇಸರದ ಸಂಗತಿಯಾಗಿದೆ. |
ಇದೀಗ ಮಡಿಕೇರಿಗೆ ಭೇಟಿ ನೀಡಿ ಸಭೆ ನಡೆಸಿರುವ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು, ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಮದೆನಾಡು, ಕರ್ಣಂಗೇರಿ ಮತ್ತು ಜಂಬೂರು ಗ್ರಾಮಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಹಸ್ತಾಂತರಿಸಲಾಗುವುದಾಗಿ ಹೇಳಿದ್ದಾರೆ. |
ಕಳೆದ ವರ್ಷ ನಡೆದ ಭೂಕುಸಿತದಿಂದ ಹಲವರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಮನೆ ಕಳೆದುಕೊಂಡವರ ಪೈಕಿ ಕೆಲವರು ಬಾಡಿಗೆ ಮನೆ, ಸಂಬಂಧಿಕರ ಮನೆಯಲ್ಲಿ ನೆಲೆಯೂರಿದ್ದು ಸರ್ಕಾರ ನೀಡಲಿರುವ ಮನೆಗಾಗಿ ಕಾಯುತ್ತಿದ್ದಾರೆ. ಇದೀಗ ಜಂಬೂರು, ಕರ್ಣಂಗೇರಿ ಮತ್ತು ಮದೆನಾಡು ಮೊದಲಾದ ಕಡೆ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಮನೆಗಳನ್ನು ಡಿಸೆಂಬರ್ ನಲ್ಲಿ ಸಂತ್ರಸ್ತರಿಗೆ ವಿತರಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿರುವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. |
ಸದ್ಯ ಸರ್ಕಾರ ಈಗಾಗಲೇ ಪ್ರಕೃತಿ ವಿಕೋಪದ ಕಾಮಗಾರಿಗಳನ್ನು ಕೈಗೊಳ್ಳಲು 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಲೋಕೋಪಯೋಗಿ, ಪಂಚಾಯತ್ ರಾಜ್, ನಗರಾಭಿವೃದ್ಧಿ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳ ಮೂಲಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪ್ರಕೃತಿ ವಿಕೋಪ ಸಂತ್ರಸ್ತರಿಗೆ 10 ಸಾವಿರ ರೂ. ಬಾಡಿಗೆ ಭತ್ಯೆ ಭರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. |
deluge home madikeri ಪ್ರವಾಹ ಮನೆ ಮಡಿಕೇರಿ |
District incharge minister VS Somanna, who visit Madikeri yesterday said that the houses being built in Madenadu, Karnangeri and Jamburu villages will be handed over by the end of December to those affected by the natural disaster. |
ಕಾಶ್ಮೀರ ಅಭಿವೃದ್ಧಿಪಡಿಸುವ ಆಸಕ್ತಿ ಚೀನಾಕ್ಕಿದೆ: ಗ್ಲೋಬಲ್ ಟೈಮ್ಸ್ | Prajavani |
ಕಾಶ್ಮೀರ ಅಭಿವೃದ್ಧಿಪಡಿಸುವ ಆಸಕ್ತಿ ಚೀನಾಕ್ಕಿದೆ: ಗ್ಲೋಬಲ್ ಟೈಮ್ಸ್ |
Published: 11 ಮಾರ್ಚ್ 2019, 17:54 IST |
Updated: 11 ಮಾರ್ಚ್ 2019, 17:54 IST |
ಬೀಜಿಂಗ್: 'ಅಭಿವೃದ್ಧಿಯಿಂದ ಕುಂಠಿತವಾಗಿರುವ ಕಾಶ್ಮೀರವನ್ನು ಪ್ರಗತಿಯತ್ತ ಕೊಂಡೊಯ್ಯಲು ಚೀನಾ ಆಸಕ್ತಿ ಹೊಂದಿದೆ' ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ. |
ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ದಾಳಿಯ ಸಂಚುಕೋರ ಜೈಷ್ ಎ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೆಸರನ್ನು ವಿಶ್ವಸಂಸ್ಥೆಯ ನಿರ್ಬಂಧ ಪಟ್ಟಿಯಲ್ಲಿ ಸೇರಿಸಲು ಚೀನಾ ತಡೆ ನೀಡಿದೆ. ಹೀಗಾಗಿ ಪಾಕ್ ಮೂಲದ ಉಗ್ರ ಸಂಘಟನೆಗೆ ಚೀನಾ ಬೆಂಬಲಿಸುತ್ತಿದೆ ಎನ್ನವ ಬಗ್ಗೆ ಭಾರತ ವ್ಯಕ್ತಪಡಿಸಿರುವ ಕಳವಳವನ್ನು ಪತ್ರಿಕೆ ತಳ್ಳಿಹಾಕಿದೆ. |
ವಿವಾದಿತ ಕಾಶ್ಮೀರ ಹಿಂದುಳಿದ ಪ್ರದೇಶವಾಗಿಯೇ ಇರಬೇಕು ಎನ್ನವ ವಿಧಿಲಿಖಿತವಿಲ್ಲ. ಇದನ್ನು ಅಭಿವೃದ್ಧಿ ಪಡಿಸುವುದು ಚೀನಾದ ಗುರಿಯಾಗಿದೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನದ ಗುರಿಯೂ ಇದೇ ಆಗಿರಬೇಕು. ಈ ವಿಚಾರದಲ್ಲಿ ಭಾರತ–ಪಾಕ್ ಒಂದೊಂದು ಹೆಜ್ಜೆ ಮುಂದಿಟ್ಟರೆ, ಎರಡೂ ದೇಶಗಳ ನಡುವಿನ ನಂಬಿಕೆ ವೃದ್ಧಿಗೆ ನಾಂದಿಯಾಗುತ್ತದೆ. ಚೀನಾದೊಂದಿಗೆ ಸೇರಿ ಭಯೋತ್ಪಾದನೆಯನ್ನು ನಾಶಗೊಳಿಸುವಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಬಲಗೊಳ್ಳುತ್ತದೆ' ಎಂದು ಹೇಳಿದೆ. |
'ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದದಲ್ಲಿ ನಾವು ಯಾರ ಪರವೂ ವಹಿಸುವುದಿಲ್ಲ. ಬದಲಿಗೆ ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಕಡಿಮೆಗೊಳಿಸುವ ಹಾಗೂ ಭಯೋತ್ಪಾದನ ವಿರೋಧಿ ಪರಿಸ್ಥಿತಿಯನ್ನು ಹೆಚ್ಚಿಸುವ ಉದ್ದೇಶ ನಮ್ಮದಾಗಿದೆ. ಈಗಿರುವ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವಲ್ಲಿ ಚೀನಾ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ' ಎಂದಿದೆ. |
ಭಾರತ ಮತ್ತು ಪಾಕಿಸ್ತಾನದ ನಡುವೆ ವಿಷಮ ಪರಿಸ್ಥಿತಿಯನ್ನು ಸೃಷ್ಟಿಸಿದ ಅತ್ಯಂತ ಕೆಟ್ಟ ದಾಳಿ ಪುಲ್ವಾಮಾದಲ್ಲಿ ನಡೆದಿದೆ. ಇದರ ಹೊಣೆ ಹೊತ್ತಿರುವ ಇಸ್ಲಾಮಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಜೈಷೆ–ಎ–ಮೊಹಮ್ಮದ್ ಉಗ್ರ ಸಂಘಟನೆ ಸೇರಿ ವಿವಿಧ ಉಗ್ರ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕಾದ ಒತ್ತಡ ಇಸ್ಲಾಮಾಬಾದ್‌ಗೆ ಸೃಷ್ಟಿಯಾಗಿದೆ. ಈ ಉದ್ವಿಗ್ನತೆಯ ಬಗ್ಗೆ ಚರ್ಚಿಸುವುದಕ್ಕಾಗಿಯೇ ಚೀನಾ ಕಳೆದ ವಾರ ತನ್ನ ಸಹಾಯಕ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ಪಾಕಿಸ್ತಾನಕ್ಕೆ ಕಳುಹಿಸಿತ್ತು ಎಂದು ಬರೆದುಕೊಂಡಿದೆ. |
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರನ್ನು ಭೇಟಿ ಮಾಡಿದ್ದ ಕಾಂಗ್, ಇಸ್ಲಾಮಾಬಾದ್‌ನಲ್ಲಿ ಶಾಂತಿ ಮತ್ತು ಸುಸ್ಥಿರತೆ ನೆಲಸಲು ಚೀನಾ ನೆರವು ನೀಡುತ್ತದೆ ಎಂದು ಭರವಸೆ ನೀಡಿದ್ದರು. ಹೀಗಾಗಿ ಭಯೋತ್ಪಾದನೆಯನ್ನು ರಕ್ಷಿಸುತ್ತಿದೆ ಎಂದು ಚೀನಾದ ಮೇಲೆ ಆಪಾದನೆ ಮಾಡುವುದು ಬೇಜವಾಬ್ದಾರಿತನದ ಹೇಳಿಕೆ ಎಂದಿದೆ. |
'ಆದಾಗ್ಯೂ, ಭಾರತ ಕೆಲವು ತಜ್ಞರು ಚೀನಾದ ಈ ಪ್ರಯತ್ನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಭಯೋತ್ಪಾದನೆಗೆ ಚೀನಾ ತನ್ನ ಬೆಂಬಲವನ್ನು ಮುಂದುವರಿಸಿದೆ ಎಂದು ಆರೋಪಸಿದ್ದಾರೆ. ಅಲ್ಲದೆ, ಭಾರತದ ಸಾಕಷ್ಟು ವಿಶ್ಲೇಷಕರು ಚೀನಾದ 'ಒಂದು ವಲಯ, ಒಂದು ರಸ್ತೆ (ಬಿಆರ್‌ಐ) ಯೋಜನೆ ಭೂರಾಜಕೀಯ ಬೆದರಿಕೆ ಎಂದಿದ್ದಾರೆ' ಎಂದು ತಿಳಿಸಿದೆ. |
ಅಲ್ಲೋಲ- ಕಲ್ಲೋಲ ಸೃಷ್ಟಿಸಿರುವ ಅಡಿಯೋ ಬಾಂಬ್ - The Hindustan Gazette Kannada |
ಅಲ್ಲೋಲ- ಕಲ್ಲೋಲ ಸೃಷ್ಟಿಸಿರುವ ಅಡಿಯೋ ಬಾಂಬ್ |
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬಲದಾವಣೆ ಕುರಿತ ಅಡಿಯೋ ಬಾಂಬ್ ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ- ಕಲ್ಲೋಲ ಉಂಟು ಮಾಡಿದೆ. |
ರಾಜ್ಯದ ನಾಯಕತ್ವ ಬದಲಾವಣೆ ಕುರಿತು ಭಾನುವಾರ ಸಂಜೆ ವೈರಲ್ ಆಗಿರುವ ಅಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಸೇರಿದ್ದು ಎಂದೇ ಬಿಂಬಿತವಾಗಿದೆ. ಈ ಅಡಿಯೋ ನನ್ನದಲ್ಲ, ಇದನ್ನು ಯಾರು ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ. ನನ್ನ ಅಡಿಯೋ ಫೇಕ್ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟು ತನಿಖೆಗೆ ಕೋರುತ್ತೇನೆ ಎಂದು ಮಾಧ್ಯಮಗಳಿಗೆ ನಳಿನ್ ಕುಮಾರ್ ಕಟೀಲು ಸ್ಪಷ್ಟನೆ ನೀಡಿದ್ದಾರೆ. |
ಆದರೆ, ಮುಖ್ಯಮಂತ್ರಿಗೆ ದೂರು ಕೊಟ್ಟು ತನಿಖೆಗೆ ಕೋರುತ್ತೇನೆ ಎಂಬುದೇ ದೊಡ್ಡ ನಾಟಕ ಎಂಬ ಅನುಮಾನ ವ್ಯಕ್ತವಾಗಿದೆ. |
ಬಿ.ಎಸ್. ಯಡಿಯೂರಪ್ಪ ಚುನಾಯಿತ ಜನ ಪ್ರತಿನಿಧಿ, ಮಿಗಿಲಾಗಿ ರಾಜ್ಯದ ಮುಖ್ಯಮಂತ್ರಿ. ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರು. ನಾಯಕತ್ವ ಬದಲಾವಣೆ ಬಗ್ಗೆ ಅವರದ್ದೇ ಎನ್ನಲಾದ ಅಡಿಯೋ ಬಿಡುಗಡೆಯಾಗಿದೆ. ಕಟೀಲು ಅವರಿಗೆ ಈ ಅಡಿಯೋ ಸೇರಿದ್ದು ಅಲ್ಲ ಎನ್ನುತ್ತಿದ್ದರೆ ಮೊದಲು ಅವರು ಮುಖ್ಯಮಂತ್ರಿಗೆ ದೂರು ನೀಡುವುದಲ್ಲ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. |
ನನ್ನ ಹೆಸರಿನಲ್ಲಿ ಯಾರೋ ಮಾತನಾಡಿದ್ದಾರೆ. ಈ ಅಡಿಯೋದಿಂದ ಮುಖ್ಯಮಂತ್ರಿಗಳ ಘನತೆಗೆ ಕುತ್ತು ಬಂದಿದೆ. ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ದೂರು ಕೊಡಬೇಕಿತ್ತು. ಮಾತ್ರವಲ್ಲ ತನ್ನ ಧ್ವನಿ ಮಾದರಿಯನ್ನು ಪೊಲೀಸರ ಮೂಲಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಒಳಪಡಿಸಿಕೊಳ್ಳಬೇಕಿತ್ತು. ಇದು ಕಾನೂನಾತ್ಮಕವಾಗಿ ತಾನು ತಪ್ಪೇ ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸಿಕೊಳ್ಳಲು ಇರುವ ಏಕೈಕ ದಾರಿ ಎನ್ನುತ್ತಾರೆ, ತಜ್ಞರು. |
ಆದರೆ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ನಳೀನಕುಮಾರ ಕಟೀಲ್ ಅವರು ಮುಖ್ಯಮಂತ್ರಿಯವರಿಗೆ ದೂರು ಕೊಡುವ ಮಾತು ಆಡುತ್ತಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. |
ನಳಿನ್ ಕುಮಾರ್ ಕಟೀಲ್ ಅವರು ಅಡಿಯೋ ಬಾಂಬ್ ಬಗ್ಗೆ ಎಲ್ಲೂ ದೂರು ನೀಡಿಲ್ಲ. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದಷ್ಟೇ ಹೇಳಿದ್ದಾರೆ. ವಾಸ್ತವದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ, ಅವರು ಕೂಡ ಇದನ್ನು ತನಿಖೆ ಮಾಡಿ ಎಂದು ಪೊಲೀಸರಿಗೆ ದೂರು ನೀಡಬೇಕು. ಇಲ್ಲವೇ ಆ ಅಡಿಯೋ ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಮೊದಲ ಹಂತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿ ಅಡಿಯೋದಲ್ಲಿರುವ ಧ್ವನಿಗೆ ಹೋಲಿಕೆ ಮಾಡಿ ಪ್ರಯೋಗಾಲಯಕ್ಕೆ ಒಳಪಡಿಸಬೇಕು. ಅಲ್ಲಿ ನಿಜವಾಗಿಯೂ ಎರಡೂ ಧ್ವನಿಗೂ ಹೋಲಿಕೆಯಾಗುತ್ತಿಲ್ಲ ಎಂಬುದು ಸಾಬೀತಾದರೆ ಮಾತ್ರ ಬೇರೆ ಯಾರೋ ಕಟೀಲು ಅವರ ಧ್ವನಿ ಅನುಕರಣೆ ಮಾಡಿ ಮಾತನಾಡಿರುವ ಅಡಿಯೋ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಈ ವಾಸ್ತವ ಗೊತ್ತಿದ್ದರೂ ನಳಿನ್ ಕುಮಾರ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕಾರಣದಿಂದಲೋ ಏನೋ ಸಿಎಂ ಅವರಿಗೆ ಪತ್ರ ಬರೆದು ತನಿಖೆಗೆ ಕೋರುತ್ತೇನೆ ಎಂದು ಹೇಳುತ್ತಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. |
ಕಟೀಲ್ ಅಡಿಯೋ ಬಾಂಬ್ ವಿವರ |
ಸಿಎಂ ಬದಲಾಗುತ್ತಾರೆ, ಇಲ್ಲಿಯವರು ಯಾರೂ ಸಿಎಂ ಆಗಲ್ಲ. ಸಚಿವ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ಟೀಮನ್ನೇ ತೆಗೆಯುತ್ತೇವೆ. ಎಲ್ಲವೂ ದೆಹಲಿಯಿಂದಲೇ ಆಗಲಿದೆ. ಹೆದರಬೇಡಿ, ಎಲ್ಲವೂ ನಮ್ಮ ಕೈಯಲ್ಲಿದೆ' ಎಂದು ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತುಳು ಭಾಷೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಅಡಿಯೋ ಬಿಜೆಪಿ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಡಿಯೋ ಬಿಡುಗಡೆ ಬೆನ್ನಲ್ಲೇಈ ಅಡಿಯೋ ನನ್ನದಲ್ಲ, ಇದರ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿ ತನಿಖೆಗೆ ಕೋರುತ್ತೇನೆ. ನಾಯಕತ್ವ ಬದಲಾವಣೆ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆ ನಡೆದಿಲ್ಲ. ಯಾರು ಮಾತನಾಡಿದ್ದಾರೆ ಎಂಬುದರ ಬಗ್ಗೆ ನನಗೆ ಯಾರ ಮೇಲೂ ಅನುಮಾನ ಇಲ್ಲ' ಎಂದು ನಳೀನ್ ಕುಮಾರ್ ಕಟೀಲ್ ಅಡಿಯೋ ಬಿಡುಗಡೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದಾರೆ. |
ವಿಧಿ ವಿಜ್ಞಾನ ತಜ್ಞರು ಹೇಳಿದ್ದೇನು ? |
ಸಾಮಾನ್ಯವಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಿತ ಅಧಿಕಾರಿಯ ಧ್ವನಿಯನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಧ್ವನಿ ಪರೀಕ್ಷೆಯನ್ನು ಕೊಲಾಬ್ರೆಟಲ್ ಸಾಕ್ಷಿಯನ್ನಾಗಿ ಪರಿಗಣಿಸಬಹುದು. ಅದರ ಪ್ರಕಾರ ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ಓಡಾಡುತ್ತಿರುವ ಅಡಿಯೋ ಹಾಗೂ ಕಟೀಲ್ ಅವರ ಅಸಲಿ ಧ್ವನಿ ಎರಡು ಮಾದರಿ ಸಂಗ್ರಹಿಸಲಾಗುತ್ತದೆ. ಅದನ್ನು ಸ್ಪೆಕ್ಟ್ರೋಗ್ರಾಫ್ ಮೂಲಕ ಪರೀಕ್ಷೆಗೆ ಒಳಡಿಸಿದಾಗ ಧ್ವನಿಯ ಸಿಗ್ನಲ್, ಪಿಚ್, ಸೌಂಡ್ ವೇವ್ , ಫ್ರೀಕ್ವೆನ್ಸಿಯಲ್ಲಿ ಧ್ವನಿಯ ಮಾದರಿ ಗೊತ್ತಾಗುತ್ತದೆ. ಸಾಮಾನ್ಯವಾಗಿ ಒಬ್ಬರ ಧ್ವನಿ ಇದ್ದಂಗೆ ಇನ್ನೊಬ್ಬರ ಧ್ವನಿ ಇರಲ್ಲ. ನೂರಕ್ಕೆ ನೂರರಷ್ಟು ಧ್ವನಿ ಇವರದ್ದೇ ಎಂದು ವರದಿ ಕೊಡಲಾಗದಿದ್ದರೂ ಶೇ. 80 ರಷ್ಟು ಹೋಲಿಕೆಯಾಗುವುದನ್ನು ಪರಿಗಣಿಸಿ ವರದಿಯನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನೀಡಲಾಗುತ್ತದೆ ಎಂದು ನಿವೃತ್ತ ಸರ್ಕಾರದ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರೊಬ್ಬರು ಹೇಳುತ್ತಾರೆ. |
ನಳೀನ್ ಕುಮಾರ್ ಕಟೀಲ್ ಅವರ ಹೆಸರಿನಲ್ಲಿ ವೈರಲ್ ಆಗಿರುವ ಅಡಿಯೋ ಹಾಗೂ ಅವರ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ನೀಡಿ ಪರೀಕ್ಷೆಗೆ ಒಳಪಡಿಸಬೇಕು. ಇದೀಗ ಕೆಲವು ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸುವ ಕಾರಣ ಸ್ವಯಂ ಪ್ರೇರಿತವಾಗಿ ಅವರೇ ಸ್ವತಃ ಧ್ವನಿ ಪರೀಕ್ಷೆಗೆ ಒಳಪಡಿಸಿಕೊಂಡು ಅಲ್ಲಿನ ವರದಿ ಸಮೇತ ಇದು ನಮ್ಮದಲ್ಲ ಎಂದು ಸಾಬೀತು ಮಾಡಲು ಅವಕಾಶವಿದೆ. ಆದರೆ, ವಾಸ್ತವ ಮಾರ್ಗಗಳನ್ನು ಬಿಟ್ಟು ಸಿಎಂಗೆ ದೂರು ನೀಡಿ ತನಿಖೆಗೆ ಒಳಪಡಿಸುತ್ತೇನೆ ಎಂದು ಹೇಳಿಕೆ ನೀಡುತ್ತಿರುವುದೇ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. |
ಮೂಲ ಅಡಿಯೋ ಎಲ್ಲಿದೆ ? |
ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಮೂಲ ಅಡಿಯೋ ಪತ್ತೆ ಮಾಡಬೇಕು. ವೈರಲ್ ಅಗಿರುವ ಅಡಿಯೋದಲ್ಲಿ ಕಟೀಲ್ ಅವರ ಮಾತು ಮಾತ್ರ ಇದ್ದು, ಎದುರು ಮಾತನಾಡುವರ ಧ್ವನಿ ಇಲ್ಲ. ಮೂಲ ಅಡಿಯೋ ಸಿಕ್ಕಿದ್ದೇ ಆದಲ್ಲಿ ಬಹುತೇಕರು ಸ್ಮಾರ್ಟ್ ಪೋನ್ ಬಳಸುವ ಕಾರಣದಿಂದ ಕರೆ ಮಾಡಿ ಮಾತನಾಡಿರುವ ಅಡಿಯೋ ತರ ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ಮೂಲ ಅಡಿಯೋ ಸಿಕ್ಕಿದರೆ ಅದರ ಜಾಡು ಹಿಡಿದು ಕೊಂಡು ಯಾವ ನಂಬರ್‌ನಿAದ ಯಾವ ನಂಬರ್‌ಗೆ ಕರೆ ಮಾಡಿ ಮಾತನಾಡಲಾಗಿದೆ ಎಂಬ ವಿವರಗಳನ್ನು ಸಹ ತಾಂತ್ರಿಕವಾಗಿ ಕಲೆ ಹಾಕಲು ಸಾಧ್ಯವಿದೆ. ವೈರಲ್ ಆಗಿರುವ ಅಡಿಯೋ ಎಡಿಟಿಂಗ್ ಆಗಿದ್ದೇ ಆದಲ್ಲಿ ಸಾಕ್ಷ್ಯ ಸಂಗ್ರಹಿಸಲು ಕಷ್ಟವಾಗಬಹುದು. ಆಗ ಕೇವಲ ಇರುವ ಆಯ್ಕೆ ಧ್ವನಿ ಪರೀಕ್ಷೆ ಮಾತ್ರ. ಆದರೆ ಕಾನೂನು ದೃಷ್ಟಿಯಿಂದ ನೋಡಿದರೆ ಧ್ವನಿ ಪರೀಕ್ಷೆ ವರದಿಯನ್ನು ಕೇವಲ ಪೂರಕ ಸಾಕ್ಷಿಯನ್ನಾಗಿ ಪರಿಗಣಿಸಬಹುದಷ್ಟೇ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. |
ಶಿವಾಜಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ : ಎಂ.ಜೆ.ರವಿಕುಮಾರ್ ಬಣ್ಣನೆ – ಮೈಸೂರು ಟುಡೆ |
Home/ ನಮ್ಮೂರು/ ಮೈಸೂರು/ಶಿವಾಜಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ : ಎಂ.ಜೆ.ರವಿಕುಮಾರ್ ಬಣ್ಣನೆ |
ಶಿವಾಜಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ : ಎಂ.ಜೆ.ರವಿಕುಮಾರ್ ಬಣ್ಣನೆ |
CT BUREAU February 19, 2017 |
ಶೌರ್ಯ, ಸಾಹಸ, ಹೋರಾಟ, ಆದರ್ಶ ಆಡಳಿತದ ಪ್ರತೀಕ ಛತ್ರಪತಿ ಶಿವಾಜಿ ಮಹಾರಾಜರು ಎಂದು ಮೇಯರ್ ಎಂ.ಜೆ.ರವಿಕುಮಾರ್ ಅಭಿಪ್ರಾಯಪಟ್ಟರು. |
ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ 390ನೇ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿವಾಜಿ ದೇಶಕಂಡ ಮಹಾನ್ ನಾಯಕರಲ್ಲಿ, ಹೋರಾಟಗಾರರಲ್ಲಿ ಅಗ್ರಗಣ್ಯ. ತನ್ನ ಆಡಳಿತ ಅವಧಿಯಲ್ಲಿ ಅನೇಕ ಜನಪರ ಹೋರಾಟ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿ ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಅಂತಹ ಹುಟ್ಟು ಹೋರಾಟಗಾರರ ಜಯಂತಿ ಆಚರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು. |
ಶಿವಾಜಿ ನೆಪೋಲಿಯನ್‍ಗಿಂತಲೂ ಅತ್ಯಂತ ಯಶಸ್ವಿ ಆಡಳಿತ ನಡೆಸಿದ ಸೇನಾ ನಾಯಕ. ಸುಸೂತ್ರವಾಗಿ ಆಡಳಿತ ನಡೆಸುವ ಸಲುವಾಗಿ ಅಷ್ಟ ಮಂತ್ರಿಗಳನ್ನು ನೇಮಿಸಿದ ದೇಶದ ಮೊದಲ ರಾಜ. ಸಮಾಜದಲ್ಲಿನ ಪ್ರತಿಯೊಬ್ಬರ ಏಳಿಗೆಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಹಿಂದೂಧರ್ಮದ ರಕ್ಷಣೆಗಾಗಿ ನಿರಂತರ ಹೋರಾಟಗಳನ್ನು ಮಾಡಿದ ದಂಡನಾಯಕ. ಕನ್ನಡಕ್ಕೂ ಶಿವಾಜಿಗೂ ಅವಿನಾಭಾವ ಸಂಬಂಧವಿದ್ದು, ಅನೇಕ ಕೊಡುಗೆಗಳನ್ನು ಕನ್ನಡಕ್ಕೆ ನೀಡಿದ್ದಾರೆ. ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಸಂಬಂಧ ಮನವಿ ಬಂದಿದ್ದು, ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೆ ಮರಾಠ ಜನಾಂಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದರೆ ಅಂತಹವರಿಗೆ ಪ್ರೋತ್ಸಾಹಧನ ಹಾಗೂ ಲ್ಯಾಪ್‍ಟಾಪ್ ಸಹ ನೀಡಲಾಗುವುದು ಎಂದು ಹೇಳಿದರು. |
ಕಾರ್ಯಕ್ರಮದಲ್ಲಿ ಉಪಮೇಯರ್ ರತ್ನ ಲಕ್ಷ್ಮಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಉಪವಿಭಾಗಾಧಿಕಾರಿ ಆನಂದ್, ತಹಸೀಲ್ದಾರ್ ರಮೇಶ್ ಬಾಬು, ಛತ್ರಪತಿ ಶಿವಾಜಿ ಮಾಹಾರಾಜರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಕೆ.ನಾಗೇಂದ್ರ ರಾವ್ ಅವತಾಡೆ, ಪಾಲಿಕೆ ಸದಸ್ಯರಾದ ಸುನೀಲ್, ಅನಂತರಾಜು, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. |
ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಹೆಚ್ಚುವರಿಯಾಗಿ 30ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ |
ಉತ್ತಮ ಗುಣಮಟ್ಟದೊಂದಿಗೆ ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಿಸಿ : ಮಾರ್ಕೆಟಿಂಗ್ ಹೆಚ್ಚಿಸಲು ಕಪಲ್ ಪ್ಯಾಕೇಜ್ ಕೊಡಲು ಸಚಿವ ಡಾ.ಕೆ.ಸಿ ನಾರಾಯಣ ಗೌಡ ಸೂಚನೆ |
ಪ್ರೊ.ಪಿ.ಎಸ್. ಯಡಪಡಿತ್ತಾಯ: ಮಂಗಳೂರು ವಿವಿ ನೂತನ ಕುಲಪತಿಯಾಗಿ ಪ್ರೊ.ಪಿ.ಎಸ್. ಯಡಪಡಿತ್ತಾಯ ನೇಮಕ - pro.. pn. yedapadittaya appointed as mangalore vv chancellor | Vijaya Karnataka |
pro.. pn. yedapadittaya appointed as mangalore vv chancellor |
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಸೋಮವಾರ ಅಧಿಕಾರ ಸ್ವೀಕರಿಸಿದರು. ಮಂಗಳೂರು ವಿವಿಯಲ್ಲಿ ಹಣಕಾಸು ಅಧಿಕಾರಿಯಾಗಿ, ಪರೀಕ್ಷಾಂಗ ಕುಲಸಚಿವ ಮತ್ತು ಕುಲಸಚಿವರಾಗಿ ಸೇವೆ ಸಲ್ಲಿರುವ ಇವರು, ಅಧ್ಯಾಪನ ಮತ್ತು ಆಡಳಿತದಲ್ಲಿ ಸಾಕಷ್ಟು ಅನುಭವಿಯಾಗಿದ್ದಾರೆ. |
ಇವರ ಸುಮಾರು ಐವತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಲ್ಪಟ್ಟಿವೆ. 80ಕ್ಕೂ ಅಧಿಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಮ್ಮಟ, ಗೋಷ್ಠಿ , ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಶಾಲಾ ಮಕ್ಕಳಿಂದ ಮೊದಲ್ಗೊಂಡು ವಯೋವೃದ್ಧರ ತನಕ ಸಹಸ್ರಾರು ಮಂದಿಗೆ ಮಾನಸಿಕ ಖಿನ್ನತೆ, ವೈಯಕ್ತಿಕ ಕೌಟುಂಬಿಕ, ಉದ್ಯೋಗದಲ್ಲಿ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ಉಚಿತ ಆಪ್ತ ಸಮಾಲೋಚನೆ ಮೂಲಕ ಪರಿಹಾರ ನೀಡುತ್ತಾ ಬರುತ್ತಿದ್ದಾರೆ. |
ಪುತ್ತೂರಿನ ಪ್ರತಿಭೆ : ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮ ಕೊಕ್ಕಡದ ಪಾಲಾಲೆ ಎಂಬಲ್ಲಿ ಕೃಷಿಕ ಅರ್ಚಕ ಕುಟುಂಬದ ನಾರಾಯಣ್ ಯಡಪಡಿತ್ತಾಯ ಮತ್ತು ಭವಾನಿ ದಂಪತಿಯ ಪುತ್ರರಾಗಿರುವ ಇವರು, |
ಕೊಕ್ಕಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷ ಣ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷ ಣ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಪ್ರಪ್ರಥಮ ಬ್ಯಾಚ್‌ನಲ್ಲಿ ಪ್ರಥಮ ರಾಂಕ್ ಮತ್ತು ಮಂಗಳೂರು ಪಯನೀರ್ಸ್ ಚಿನ್ನದ ಪದಕದೊಂದಿಗೆ ಎಂಕಾಂ ಪದವಿ ಪಡೆದಿದ್ದಾರೆ. 1992ರಲ್ಲಿ ಮಂಗಳೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಬಳಿಕ ಸುಮಾರು ನಾಲ್ಕು ತಿಂಗಳುಗಳ ಕಾಲ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ತಾತ್ಕಾಲಿಕ ವಾಣಿಜ್ಯಶಾಸ್ತ್ರ ಶಿಕ್ಷಕರಾಗಿ ಬೋಧನೆ ಮಾಡಿದ್ದರು. 1982ರಿಂದ 1986ಜನವರಿವರೆಗೆ ಮಂಗಳಗಂಗೋತ್ರಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಭಾಗದಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿ ಕಾಯಂ ನೆಲೆಯಲ್ಲಿ ಉಪನ್ಯಾಸಕ, ರೀಡರ್ ಮತ್ತು ಪ್ರಾಧ್ಯಾಪಕರಾಗಿ ಸುಮಾರು 36ವರ್ಷಗಳ ಕಾಲ ಬೋಧನೆ, ಸಂಶೋಧನೆ, ಆಡಳಿತ ಕ್ಷೇತ್ರಗಳಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದಾರೆ. |
ಮುಂಬಯಿಯ ಪ್ರತಿಷ್ಟಿತ ಎನ್‌ಐಟಿಐಇ ಸಂಸ್ಥೆಯಲ್ಲಿ 1994-95ರಲ್ಲಿ ಒಂದು ವರ್ಷಗಳ ಕಾಲ ಮಾನವ ಸಂಪನ್ಮೂಲ ನಿರ್ವಹಣೆ ಶಾಸ್ತ್ರದಲ್ಲಿ ಸಹ ಪ್ರಾಧ್ಯಾಪಕ ತರಬೇತುದಾರ ಮತ್ತು ವ್ಯವಹಾರ ಆಡಳಿತ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಇದುವರೆಗೆ 22ಸಂಶೋಧನಾ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ನಿರ್ವಹಣೆ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿರ್ವಹಣೆ ಕ್ಷೇತ್ರಗಳಲ್ಲಿ ಯಶಸ್ವಿ ಮಾರ್ಗದರ್ಶನ ನೀಡಿದ್ದಾರೆ. |
ಮುಂದಿನ ಗುರಿ : *ರಾಜ್ಯದಲ್ಲಿ ಡಿ. ವಿ. ಸದಾನಂದ ಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ 'ಸಕಾಲ'ವನ್ನು ಮಂಗಳೂರು ವಿವಿಯಲ್ಲಿ ಅನುಷ್ಠಾನ. |
*Ü್ನ ಅಧಿಕಾರ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೂ ಭೇಟಿ ನೀಡಿ, ಮಾಹಿತಿ ಪಡೆಯುವ ಪ್ರಯತ್ನ. |
* ಹಿಂದಿನ ಕುಲಪತಿಗಳು ಮಂಗಳೂರು ವಿವಿಯಲ್ಲಿ ಕೈಗೊಂಡಿದ್ದ ಒಳ್ಳೆಯ ಯೋಜನೆಗಳನ್ನು ಮುಂದುವರಿಸುವುದು, ಅಗತ್ಯ ಸೌಲಭ್ಯಗಳನ್ನು ಒದಗಿಸಲು ಗಮನ ಹರಿಸುತ್ತೇನೆ. |
ಭಾರತದ ಮೊದಲ ಮೊಬೈಲ್ ಕರೆಗೆ 25 ವರ್ಷ ತುಂಬಿತು! | 25 Years ago First Mobile Phone Call Was Made in India between Sukh Ram and Jyoti Basu |
New Delhi, First Published 1, Aug 2020, 9:16 AM |
ದೇಶದ ಮೊದಲ ಮೊಬೈಲ್ ಫೋನ್ ಕರೆಗೆ ಜುಲೈ 31ರಂದು 25 ವರ್ಷ ತುಂಬಿವೆ. ಇಂದು ಬಹುತೇಕ ಎಲ್ಲರ ಕೈಯಲ್ಲೂ ಒಂದೊಂದು ಮೊಬೈಲ್ ಫೋನ್‌ಗಳಿವೆ. 1995ರ ಜುಲೈ 31ರಂದು ಮೊಬೈಲ್ ಪರಿಸ್ಥಿತಿ ಹೇಗಿತ್ತು. ಒಂದು ನಿಮಿಷದ ಕರೆಗೆ ದರ ಎಷ್ಟಿತ್ತು. ಮೊದಲು ಫೋನ್ ಕರೆ ಮಾಡಿದ್ದು ಯಾರು? ಯಾರಿಗೆ? ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ. |
ನವದೆಹಲಿ(ಆ.01): ಈಗ ಬಹುತೇಕ ಎಲ್ಲರ ಕೈಯಲ್ಲಿ ರಿಂಗಣಿಸಿ, ಸಂವಹನ ಕ್ರಾಂತಿಯನ್ನೇ ಸೃಷ್ಟಿಸಿರುವ ಮೊಬೈಲ್ ಫೋನ್ ಭಾರತದ ಜನರ ಕೈಗೆ ಬಂದು ಶುಕ್ರವಾರಕ್ಕೆ ಸರಿಯಾಗಿ 25 ವರ್ಷ. |
ದೇಶದಲ್ಲಿ ಮೊದಲ ಬಾರಿ ಮೊಬೈಲ್‌ನಲ್ಲಿ ಸಂವಹನ ನಡೆಸಿದ್ದು ಅಂದಿನ ಕೇಂದ್ರ ಟೆಲಿಕಾಂ ಸಚಿವ ಸುಖರಾಂ ಹಾಗೂ ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರ ನಡುವೆ. 1995ರ ಜುಲೈ 31ರಂದು ಇಬ್ಬರೂ ಮೊಬೈಲ್‌ನಲ್ಲಿ ಸಂವಹನ ನಡೆಸಿದರು. ನೋಕಿಯಾ ಕಂಪನಿಯ ಮೊಬೈಲನ್ನು ಅಂದು ಇಬ್ಬರೂ ಬಳಸಿದ್ದರು. |
ವಿಶೇಷವೆಂದರೆ ಅಂದು ಒಂದು ನಿಮಿಷದ ಕರೆಗೆ 8.4 ರು. ದರ ವಿಧಿಸಲಾಗುತ್ತಿತ್ತು. 'ಪೀಕ್ ಅವರ್'ನ ದರ ಇನ್ನೂ ಹೆಚ್ಚಿದ್ದು, ಒಂದು ನಿಮಿಷಕ್ಕೆ 16.8 ರು. ಕರೆ ದರ ವಿಧಿಸಲಾಗುತ್ತಿತ್ತು. ಅಂದು ಹೊರಹೋಗುವ ಹಾಗೂ ಒಳ ಬರುವ ಕರೆಗಳೆರಡಕ್ಕೂ ದರ ಅನ್ವಯವಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಒಳ ಬರುವ ಕರೆಗಳಷ್ಟೇ ಅಲ್ಲ, ಹೊರ ಹೋಗುವ ಕರೆಗಳೂ ಉಚಿತವಾಗಿವೆ. |
ಅಂದು ಕೇವಲ ಉಳ್ಳವರ ಸಾಧನಗಳಾಗಿದ್ದ ಮೊಬೈಲ್ ಇಂದು ಕಾಲ ಬದಲಾದಂತೆ ಜನಸಾಮಾನ್ಯರ ಸಾಧನಗಳೂ ಆಗಿವೆ. ಹಳೆಯ ಕೀಪ್ಯಾಡ್ ಮೊಬೈಲ್‌ಗಳು ಹೋಗಿ ಸ್ಮಾರ್ಟ್‌ಫೋನ್ ಬಂದಿವೆ. ತೀರಾ ವೆಚ್ಚದಾಯಕ ಮೊಬೈಲ್‌ಗಳು ಹಾಗೂ ಕೇವಲ 1,000 ರು. ಬೆಲೆಗೆ ಸಿಗುವ ಮೊಬೈಲ್‌ಗಳೂ ಇವೆ. ಇಂದು ಕರೆಯಷ್ಟೇ ಅಲ್ಲ, ಇಂಟರ್ನೆಟ್ ಬಳಕೆಗಾಗಿ ಕೂಡ ಜನರು ಮೊಬೈಲನ್ನೇ ಆಶ್ರಯಿಸಿದ್ದು, ಇಂಟರ್ನೆಟ್ ಡಾಟಾ ಪ್ಯಾಕ್‌ಗಳ ಬಳಕೆಯು ಕರೆಗಿಂತ ಅಧಿಕವಾಗಿದೆ. ದೇಶದ ಜನರ ಸಂವಹನ ವಿಧಾನವನ್ನೇ ಮೊಬೈಲ್‌ಗಳು ಬದಲಿಸಿವೆ. |
17ರ ಹುಡುಗನನ್ನ ಮದ್ವೆಯಾದ 20ರ ಯುವತಿ – ಸವಿ ಕನ್ನಡ ನ್ಯೂಸ್ |
17ರ ಹುಡುಗನನ್ನ ಮದ್ವೆಯಾದ 20ರ ಯುವತಿ |
ಚಿಕ್ಕಮಗಳೂರು: ಯುವತಿ ಅಪ್ರಾಪ್ತನನ್ನು ಮದುವೆಯಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಸಿಲೇಹಳ್ಳಿ ಗ್ರಾಮದ್ಲಲಿ ನಡೆದಿದೆ. |
ಮೂಲತಃ ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಆಗ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಹುಡುಗನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಇಬ್ಬರ ಸ್ನೇಹ ಪ್ರೀತಿಗೆ ವೇದಿಕೆಯಾಗಿತ್ತು. ಹುಡುಗ ಕೂಡ ನನಗೆ 21 ವರ್ಷ ಎಂದು ಹೇಳಿಕೊಂಡಿದ್ದನು. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಇದನ್ನೂ ಓದಿ: ವರನಿಗೆ 2ರ ಮಗ್ಗಿ ಬರದಿದ್ದಕ್ಕೆ ಮದುವೆ ಕ್ಯಾನ್ಸಲ್ |
ಹುಡುಗಿ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಪೋಷಕರು ಮನೆಗೆ ಬರಬೇಡ ಎಂದಿದ್ದಾರೆ. ಆದರೆ ಹುಡುಗನಿಗೆ ಅಪ್ಪ ಇಲ್ಲ. ಅಮ್ಮ ಮಾತ್ರ ಇದ್ದಾರೆ. ಆಗ ಹುಡುಗನ ತಾಯಿ ಸಂಬಂಧಿಕರ ಜೊತೆ ಸೇರಿ ಬ್ರಹ್ಮಸಮುದ್ರ ಗ್ರಾಮದ ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಜೂನ್ 16ರಂದು ಮದುವೆ ಮಾಡಿದ್ದರು. ಇದನ್ನೂ ಓದಿ: ಪತ್ರಿಕೆ ಓದಲು ತಡವರಿಸಿದ ವರ – ಮದುವೆ ಮುರಿದುಕೊಂಡ ವಧು |
ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಜೂನ್ 23 ರಂದು ಮಾಹಿತಿ ದೊರೆತಿದೆ. ಸಖರಾಯಪಟ್ಟಣ ಪೊಲೀಸರೊಡನೆ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಮತ್ತು ಬಿಸಿಲೇಹಳ್ಳಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ಇಂದ್ರಮ್ಮ ಸ್ಥಳಕ್ಕೆ ಭೇಟಿ ನೀಡಿ ಯುವತಿಯನ್ನ ವಶಕ್ಕೆ ಪಡೆದಿದ್ದಾರೆ. ಯುವತಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೊರೊನಾ ನಿಯಮ ಉಲ್ಲಂಘನೆ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ. ಸದ್ಯ ಯುವತಿಯನ್ನ ಜಿಲ್ಲೆಯ ಸಾಧ್ವಾರ ಕೇಂದ್ರದಲ್ಲಿ ಬಿಡಲಾಗಿದೆ. ಸಖರಾಯಪಟ್ಟಣ ಪೊಲೀಸರು ವಿಷಯವನ್ನ ಯುವತಿಯ ಪೋಷಕರ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ: ಔತಣ ಕೂಟದಲ್ಲಿ ಮಟನ್ ಊಟ ಇರಲಿಲ್ಲವೆಂದು ವಧು ಬದಲು ಬೇರೊಬ್ಬಳಿಗೆ ತಾಳಿ ಕಟ್ಟಿದ! |
ವಾಟ್ಸಪ್ ಗುಂಪಿನಲ್ಲಿ ಧರ್ಮ ನಿಂದನೆ, ಮಹಿಳೆ ಅವಹೇಳನ : ಇಬ್ಬರ ಬಂಧನ | Karavali Ale / ಕರಾವಳಿ ಅಲೆ | ಕರಾವಳಿಯ ಪರ್ಯಾಯ ಮಾಧ್ಯಮ |
Home ಟಾಪ್ 5 ವಾಟ್ಸಪ್ ಗುಂಪಿನಲ್ಲಿ ಧರ್ಮ ನಿಂದನೆ, ಮಹಿಳೆ ಅವಹೇಳನ : ಇಬ್ಬರ ಬಂಧನ |
ವಾಟ್ಸಪ್ ಗುಂಪಿನಲ್ಲಿ ಧರ್ಮ ನಿಂದನೆ, ಮಹಿಳೆ ಅವಹೇಳನ : ಇಬ್ಬರ ಬಂಧನ |
ಬಂಟ್ವಾಳ : ಸಾಮಾಜಿಕ ಜಾಲತಾಣವಾಗಿರುವ ವಾಟ್ಸಪ್ ಗುಂಪಿನಲ್ಲಿ ಧರ್ಮ ನಿಂದನೆ, ಮಹಿಳೆಯ ಅವಹೇಳನ ಹಾಗೂ ಕೋಮುದ್ವೇಷ ಕೆರಳಿಸುವ ಸಂದೇಶ ರವಾನಿಸಿದ ಆರೋಪದಲ್ಲಿ ಉಪ್ಪಿನಂಗಡಿಯ ಅನ್ನು ಪೂಜಾರಿ ಎಂಬವರ ಪುತ್ರ ಬಾಲಕೃಷ್ಣ ಪೂಜಾರಿ ಹಾಗೂ ಬಂಟ್ವಾಳದ ಇರಾ ಗ್ರಾಮದ ಜಗತ್ ಶೆಟ್ಟಿ ಎಂಬವರ ಪುತ್ರ ಸತೀಶ್ ಎಂಬವರನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. |
ಬಾಲಕೃಷ್ಣ ಪೂಜಾರಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿದ್ದು, ಮೌರಿ ಹಾಗೂ ಪಣೋಲಿಬೈಲು ಎಂಬ ವಾಟ್ಸಪ್ ಗುಂಪಿನಲ್ಲಿ ಕೋಮುದ್ವೇಷ ಕೆರಳಿಸುವ ಹಾಗೂ ಮಹಿಳೆಯನ್ನು ಕೀಳು ಮಟ್ಟದಲ್ಲಿ ನಿಂದಿಸುವ ಮತ್ತು ಆಕ್ರಮಣಕಾರಿಯಾದ ಸಂದೇಶವನ್ನು ರವಾನಿಸಿದ್ದನು. ಸತೀಶ್ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದು, ಇಬ್ಬರನ್ನೂ ಬಂಧಿಸಿರುವ ಪೊಲೀಸರು ಕ್ರಮ ಜರುಗಿಸಿದ್ದಾರೆ. |
ಈ ಸಂದೇಶ ಇತರ ಗ್ರೂಪ್ಪುಗಳಲ್ಲಿ ವೇಗವಾಗಿ ಹರಿದಿದ್ದು, ಅಂತಹ ಸಂದೇಶಗಳಿಗಾಗಿ ಇತರ ಗುಂಪುಗಳನ್ನು ಅಡ್ಮಿನ್ ಹಾಗೂ ಸಂದೇಶ ರವಾನೆ ಮಾಡಿರುವವರನ್ನು ಸಹ ವಿಚಾರಣೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. |
ಜಾಲತಾಣ ಸಂದೇಶಗಳ |
ಮೇಲೆ ಕಠಿಣ ಕ್ರಮ |
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಪ್ರಭಾವಿ ಜಾಲತಾಣಗಳಾಗಿರುವ ವಾಟ್ಸಪ್, ಫೇಸ್ಬುಕ್ ಸಹಿತ ಇತರ ಸಾಮಾಜಿಕ ತಾಣಗಳಲ್ಲಿ ಕೋಮು ಆಧರಿತ ಪ್ರಚೋದನಾತ್ಮಕ ಹಾಗೂ ಸುಳ್ಳು ಸುದ್ದಿ ಅತ್ಯಂತ ಪರಿಣಾಮಕಾರಿಯಾಗಿ ಹರಿದಾಡುತ್ತಿದ್ದು, ಇದು ನಾಗರಿಕ ಸಮಾಜದ ಸೌಹಾರ್ದತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಸಂದೇಶ ರವಾನಿಸುವವರ ಹಾಗೂ ಗ್ರೂಪ್ ಅಡ್ಮಿನುಗಳ ಮೇಲೆ ಅತ್ಯಂತ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. |
Subsets and Splits
No community queries yet
The top public SQL queries from the community will appear here once available.