text
stringlengths
0
61.5k
ಕರಗದ ಶಕ್ತಿ ಅರಿಯದ ಇಂಗ್ಲೀಷು ದೊರೆ ವ್ಯಂಗ್ಯವಾಡಿದ್ದುರಿಂದ ಅವನಿಗೆ ಬಂದ ದುರ್ಗತಿ ಬಗ್ಗೆ ಹೇಳಿದಾಗ ಸಣ್ಣವೀರಪ್ಪನಿಗೆ ದಿಗಿಲಾಯಿತು. ಅವನು ಎಳವೆಯಿಂದ ಕಂಡ ಹಾಗೆ ಕರಗ ಎಂದೂ ಕೆಳಕ್ಕೆ ಬಿದ್ದಿದ್ದನ್ನು ಕಂಡದ್ದಾಗಲೀ, ಕೇಳಿದ್ದಾಗಲೀ ಇರಲಿಲ್ಲ. ತನ್ನ ಮನೆಯವಳು ಪೂಜೆ ಮಾಡಿ ಸ್ಪರ್ಶ ಮಾಡಿದ್ದರಿಂದಲೇ ಕರಗ ಕಾಲುವೆಯಲ್ಲಿ ಉರುಳಿದ್ದು ಎಂದು ಅವನಿಗೂ ಅನ್ನಿಸತೊಡಗಿತು. ದ್ಯಾಮವ್ವ ಅಂತೂ ಇದು ಸೂರ್ಯನಷ್ಟೇ ಸತ್ಯ ಎಂದು ನಂಬಿ ಕೂತಿದ್ದಳು.
ಕೊನೆಗೆ ತೀರ್ಮಾನ ಹೊರಬಿತ್ತು: `ಎಂದೂ ಕೆಳಕ್ಕೆ ಬೀಳದ ಕರಗವನ್ನು ಸ್ಪರ್ಶ ಮಾಡಿ ಅದನ್ನು ಕೆಳಕ್ಕೆ ಬೀಳುವ ಹಾಗೆ ಮಾಡಿದ ಸಣ್ಣವೀರಪ್ಪನ ತಲೆ ಕಡಿದರೂ ಅಧರ್ಮ ಆಗೋಲ್ಲ, ಆದರೂ ಬಡವ ಅರಿಯದೆ ಮಾಡಿದ ತೆಪ್ಪು ಆದುದರಿಂದ ಮೂರುಸಾವಿರದ ಒಂದು ರೂಪಾಯಿ ತಪ್ಪು ಕಾಣಿಕೆ ಕೊಡಬೇಕು~. ಸಣ್ಣವೀರಪ್ಪನಿಗೆ ಎದೆಯಲ್ಲಿ ಕಂಪನ ಹುಟ್ಟಿತು. ಕಣ್ಣು ತುಂಬಿ ಬಂತು. `ಅಷ್ಟು ಹಣ ಅವ ತಾನೆ ಎಲ್ಲಿಂದ ತಂದಾನು? ಪಾಪ~ ಎಂದು ಕರುಣೆ ತೋರಿದವರು ಮೆಲ್ಲನೆ ಅಲ್ಲಿಂದ ಜಾರಿಕೊಂಡರು. ಸಣ್ಣವೀರಪ್ಪನಿಗೆ ಏಳು ದಿನ ಗಡುವು ನೀಡಲಾಯಿತು.
ಮನೆಗೆ ಬಂದವನು ಸುಮ್ಮನೆ ಮೂಲೆಗೆ ಒತ್ತಿ ಕೂತ.
`ಗೌಡ್ರು ಕೊಟ್ಟ ದುಡ್ಡು ಎಷ್ಟು ಐತೇ?~ ಅವನ ಹೆಂಗಸು ಕೇಳಿತು. ಅದಾಗಲೇ ಐನೂರಕ್ಕೂ ಹೆಚ್ಚು ವ್ಯಯಮಾಡಿ ವಿದ್ಯುತ್ ದೀಪಾಲಂಕಾರ ಮಾಡಿದ್ದರು. ಹಬ್ಬದೂಟ, ಅದೂ ಇದೂ ಅಂತ ಕೆಲವು ನೂರುಗಳನ್ನು ಹೆಚ್ಚುವರಿಯಾಗಿ ವ್ಯಯಿಸಿದ್ದರು.
ಇನ್ನೆಷ್ಟು ಉಳಿದೀತು?
ಮೂಲೆಗೆ ಒತ್ತಿ ಇಟ್ಟಿದ್ದ ಹಳೇ ಪೆಠಾರಿಯ ಮೆಲೆ ಎತ್ತರಕ್ಕೆ ಸೇರಿಸಿದ್ದ ಹಳೇ ಬಟ್ಟೆ, ಹಾಸಿಗೆಗಳನ್ನೆಲ್ಲಾ ಪಕ್ಕಕ್ಕೆ ಎಸೆದು ತೆಗೆದು ನೋಡಿದ. ಎಲ್ಲಿದೆ ಹಣ? ಅವನ ಕುಲಪುತ್ರ ಚಂದ್ರು ಅದ್ಯಾವ ಮಾಯದಲ್ಲಿ ಹಾರಿಸಿಕೊಂಡು ಹೋಗಿದ್ದನೋ ಏನೋ ಇವನಿಗೆ ತಾನೆ ಹೇಗೆ ಗೊತ್ತಾಗಬೇಕು? `ಹಣ ಮುಗಿಯುವ ತನಕ ಚಂದ್ರು ಮನೆಗೆ ಬರಲಾರನು~ ಎಂದು ತಾನೆ ಹೇಗೆ ಗೊತ್ತಾಗಬೇಕು? ಆ ದುಃಖದ ಜತೆ ಇದೂ ಬೆರೆತು ಸಣ್ಣವೀರಪ್ಪನಿಗೆ ಒಮ್ಮೆಲೆ ರೋಷ ಭುಗಿಲ್ಲನೆ ಸಿಡಿಯಿತು. ಆ ಕ್ಷಣದಲ್ಲಿ ಚಂದ್ರು ಸಿಕ್ಕಿದರೆ ಅವನ ಚಮಡಾ ಸುಲಿಯುತ್ತಿದ್ದನೊ ಏನೋ!
ಕೇಳಿದ ತಕ್ಷಣ ರೂಪಾಯಿಗಳನ್ನು ರಪ ರಪ ಎಣಿಸಿ ಕೊಟ್ಟು ಬಿಟ್ಟರೆ ತನ್ನ ಗತ್ತು ಎಲ್ಲಿ ಕೆಳಕ್ಕೆ ಬೀಳುತ್ತೊ ಎಂದು ತಿಮ್ಮೇಗೌಡ ಸ್ವಲ್ಪ ಹೊತ್ತು ತಾರಾಡಿದ ಮೇಲೆ ಆಜ್ಞಾಧ್ವನಿಯಲ್ಲಿ- `ಆಯ್ತು ವೀರಪ್ಪ, ಮೂರು ಸಾವಿರ ತಾನೆ ಕೊಡೋಣ ಬಿಡು. ನೀನೂ, ನಿನ್ಹೇಂಡ್ರು, ಸಾನೆ ವರ್ಷದಿಂದ ನಮ್ಮಲ್ಲಿ ದುಡಿತಿದೀರಿ, ಈಟು ಮಾತ್ರ ನಾನು ಮಾಡಕಿಲ್ಲವಾ... ಆದ್ರೆ ನೋಡುಪಾ, ಪ್ರತೀ ಸಂಜೀ ನಿಂಗೆ ಕೂಲಿ ಗೀಲಿ ಕೊಡಾಕಿಲ್ಲ. ನಿನ್ನ ಸಾಲಕ್ಕೆ ವಜಾ ಮಾಡ್ಕೋತಿನಿ... ಆಗ್‌ಬೋದಾ?~
ಸಣ್ಣವೀರಪ್ಪ ಕಿವಿ ತುರಿಸುತ್ತ ಒಂದು ನಮೂನೆ ನಕ್ಕ.
ಗೌಡರಿಗೆ ಅರ್ಥವಾಗಿ, ಅವರೂ ನಕ್ಕು- `ಆಯ್ತು, ಎಷ್ಟಲಾ ಒಂದು ಬೇಬಿ?~ ಎಂದರು.
`ಹನ್ನೇಲ್ಡು ರೂಪಾ ಸಾಮಿ!~
`ದಿನಾ ಎಷ್ಟು ತಗಾತೀರಾ?~
ಸಣ್ಣವೀರಪ್ಪ ಸ್ವಲ್ಪ ದೇಹ ಬಾಗಿಸಿ ಕಿವಿ ತುರಿಸುತ್ತ, `ಎಲ್ಡು~ ಎಂದ. `ಆತು ಕಣಲಾ... ದಿನಾ ಇಪ್ಪತ್ತೈದು ರೂಪಾಯಿ ಕೊಡ್ತೀನಿ. ಆದ್ರ ಅದೂ ಲೆಕ್ಕಕ್ಕೆ ಜಮೆ ಆಗ್ತದೆ ಗೊತ್ತಾತ!~
ಸಣ್ಣವೀರಪ್ಪ ದೈನ್ಯದಿಂದ ಕೈಮುಗಿದ.
ದುಡ್ಡು ದೊರಕಿ, ತಪ್ಪು ಕಾಣಿಕೆ ಸಲ್ಲಿಸಿದ್ದೂ ಆಯಿತು.
ರಾತ್ರಿ ಧೋ ಮಳೆ ಸುರಿಯುತ್ತಿತ್ತು. ದ್ಯಾಮವ್ವ ಅಲ್ಲಲ್ಲಿ ಸ್ಟೀಲುಗಳಾಸು, ಪಾತ್ರೆಗಳನ್ನು ಸೋರುವ ಮಳೆಗೆ ಇಟ್ಟಿದ್ದಳು. ಮಳೆ ಕಾರಣವಾಗಿ ವಿದ್ಯುತ್ ತೆಗೆಯಲಾಗಿತ್ತು. ಬಡವರಿಗೆ ಕಳೆದ ವರ್ಷವಷ್ಟೇ ಉಚಿತ ವಿದ್ಯುತ್ ಅನ್ನು ಸರ್ಕಾರ ಕೊಡಮಾಡಿತ್ತು. ಇದರ ಫಲವನ್ನು ಚಿಕ್ಕವೀರಪ್ಪನೂ ಪಡೆದಿದ್ದ. ಸೊಡರು ಮಿಣುಕು ಮಿಣುಕು ಎನ್ನುತ್ತಿತ್ತು. ಗಾಳಿ ಅದರ ಆಯಸ್ಸನ್ನು ನಿರ್ಧರಿಸಿದಂತಿತ್ತು. ಗಂಡ ಹೆಂಡ್ತಿ ಇಬ್ಬರೂ ಅರೆಗತ್ತಲಿನಲ್ಲಿ ಕೂತಿದ್ದರು. ಮೌನ ಅಲ್ಲಿ ಅಸಹ್ಯ ಎನ್ನಿಸುವಷ್ಟು ಆವರಿಸಿತ್ತು. ಇಬ್ಬರ ಮುಂದೂ ಎರಡು ಗಿಲಾಸುಗಳಿದ್ದವು. ಇನ್ನೇನು ಗ್ಲಾಸಿಗೆ ತುಟಿ ಹಚ್ಚಬೇಕು, ಯಾರೋ ಬಂದು ಹಣಿಕಿ ಹಾಕಿ ಕೂಗಿ ಹೇಳಿದರು: `ನಿಮ್ಮ ಮಗಂಗ ಪೊಲೀಸರು ಸರಿಯಾಗಿ ಕೊಟ್ಟು ಜೈಲಾಗೇ ಹಾಕ್ಯಾರಂತೆ, ಹೋಗ್ ನೋಡಿ~.
ತಾಯಿ ಕರುಳು ಕೇಳಿತು: `ಯಾಕಂತೆ?~
ಆಗಂತುಕ ದೊಡ್ಡ ದನಿಯಲ್ಲಿ ಹೇಳಿದ- `ಆಫೀಸರೊಬ್ಬರು ಕಾರಲ್ಲಿ ಹೋಗ್ತಾ ಇದ್ದರಂತೆ, ನಿಮ್ಮವನು ಹಿಂದಿನಿಂದ ತನ್ನ ಎಕ್ಕಡ ತೆಗೆದು ಎಸೆದನಂತೆ, ಪೊಲೀಸರು ಹಿಡಕೊಂಡು ಚೆನ್ನಾಗಿ ಹೊಡೆದರಂತೆ, ಜೇಲಲ್ಲಿ ಮಡಗಿದ್ದಾರಂತೆ~.
ದ್ಯಾಮವ್ವ ಗಂಡನನ್ನು ನೋಡಿದಳು. ಅವನು ನಿರ್ವಿಕಾರವಾಗಿ ನಕ್ಕು ಗ್ಲಾಸಿನಲ್ಲಿದ್ದನ್ನು ಗಟಗಟನೆ ಬರಿದು ಮಾಡಿದ. ಅವಳತ್ತ ಕಣ್ಣು ಹಾಕಿ `ಹ್ಞೂಂ!~ ಎಂದ. ಅವಳು `ಒಲ್ಲೆ~ ಎಂಬಂತೆ ಸುಮ್ಮನೆ ಉಳಿದಳು. ಸಲೂಪ ಹೊತ್ತು ಸುಮ್ಮನಿದ್ದು ಇವನು ಅದನ್ನೂ ತಾನೇ ಕುಡಿದು ಪೂರ್ತಿಗೊಳಿಸಿದ. ಎದ್ದು ನಿಂತು ಗಟ್ಟಿಧ್ವನಿಯಲ್ಲಿ `ತಟ್ಟೆ ಹಾಕು~ ಎಂದೇಳಿ ಹಿತ್ತಲಕಡೆ ನಡೆದ; ಒಂದಾ ಮಾಡುವುದಕ್ಕೆ.
'); $('#div-gpt-ad-55746-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ //googletag.cmd.push(function() { googletag.display('gpt-text-700x20-ad-55746'); }); //googletag.cmd.push(function() { googletag.display('gpt-text-700x20-ad2-55746'); }); },300); var x1 = $('#node-55746 .field-name-body .field-items div.field-item > p'); if(x1 != null && x1.length != 0) { $('#node-55746 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-55746').addClass('inartprocessed'); } else $('#in-article-55746').hide(); } else { _taboola.push({article:'auto', url:'https://www.prajavani.net/article/ಕಥೆ-ಬೇಬಿ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-55746', placement: 'Below Article Thumbnails 1', target_type: 'mix' }); _taboola.push({flush: true}); // Text ad //googletag.cmd.push(function() { googletag.display('gpt-text-300x20-ad-55746'); }); //googletag.cmd.push(function() { googletag.display('gpt-text-300x20-ad2-55746'); }); // Remove current Outbrain //$('#dk-art-outbrain-55746').remove(); //ad before trending $('#mob_rhs1_55746').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-55746 .field-name-body .field-items div.field-item > p'); if(x1 != null && x1.length != 0) { $('#node-55746 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-55746 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-55746'); }); } else { $('#in-article-mob-55746').hide(); $('#in-article-mob-3rd-55746').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-55746','#in-article-684576','#in-article-661737','#in-article-661720','#in-article-661656']; var twids = ['#twblock_55746','#twblock_684576','#twblock_661737','#twblock_661720','#twblock_661656']; var twdataids = ['#twdatablk_55746','#twdatablk_684576','#twdatablk_661737','#twdatablk_661720','#twdatablk_661656']; var obURLs = ['https://www.prajavani.net/article/ಕಥೆ-ಬೇಬಿ','https://www.prajavani.net/minugu-minchu-food-684576.html','https://www.prajavani.net/inetrview-661737.html','https://www.prajavani.net/ganesh-chaturthi-661720.html','https://www.prajavani.net/wodeyar-and-reservation-661656.html']; var vuukleIds = ['#vuukle-comments-55746','#vuukle-comments-684576','#vuukle-comments-661737','#vuukle-comments-661720','#vuukle-comments-661656']; // var nids = [55746,684576,661737,661720,661656]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
ಹುಬ್ಬಳ್ಳಿಗೆ ಮಂಕಿ ಕ್ಯಾಪ್ ಹಾಕೊಂಡು ರಾಬರಿಗೆ ಬಂದವ್ ಅಂದರ್!!! ಪಿನ್ ಟು ಪಿನ್ ಡಿಟೈಲ್ ಇಲ್ಲಿದೆ » eNews Land
ಹುಬ್ಬಳ್ಳಿಗೆ ಮಂಕಿ ಕ್ಯಾಪ್ ಹಾಕೊಂಡು ರಾಬರಿಗೆ ಬಂದವ್ ಅಂದರ್!!! ಪಿನ್ ಟು ಪಿನ್ ಡಿಟೈಲ್ ಇಲ್ಲಿದೆ
by eNewsLand Team ಜನವರಿ 19, 2022 ಜನವರಿ 19, 2022 0130
ಇಎನ್‌ಎಲ್ ಹುಬ್ಬಳ್ಳಿ; ಮಂಕಿ ಕ್ಯಾಪ್ ಹಾಕಿಕೊಂಡ ಬಂದ ವ್ಯಕ್ತಿಯೊಬ್ಬ ಹಾಡಹಗಲೇ ಬ್ಯಾಂಕ್ನ ಕ್ಯಾಶಿಯರ್ ಹಾಗೂ ಮ್ಯಾನೇಜರ್ಗೆ ಚಾಕು ತೋರಿಸಿ 6.39ಲಕ್ಷ ದೋಚಿಕೊಂಡು ಹೋಗುವಾಗ ಸಾರ್ವಜನಿಕರ ಸಹಾಯದಿಂದ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ವಿಜಯಪುರ ಮೂಲದ ಹಾಗೂ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣಕುಮಾರ್ ಎಂಬಾತನೇ ಬಂಧಿತ ದರೋಡೆಕೋರ. ಮಂಗಳವಾರ ಮಧ್ಯಾಹ್ನ 2.15ರ ಸುಮಾರಿಗೆ ಇಲ್ಲಿಯ ಕೊಪ್ಪಿಕರ ರಸ್ತೆಯ ಬ್ಯಾಂಕ್ಗೆ ಮಂಕಿ ಕ್ಯಾಪ್ ಹಾಕಿಕೊಂಡು ಒಳ ಬಂದ ಪ್ರವೀಣಕುಮಾರ್ ಏಕಾಏಕಿ ಕೈಯಲ್ಲಿ ಚಾಕು ಹಿಡಿದು ಕ್ಯಾಶಿಯರ್ ಹಾಗೂ ಮ್ಯಾನೇಜರ್ಗೆ ಚಾಕು ತೋರಿಸಿ ಕ್ಯಾಶಕೌಂಟರ್ನಲ್ಲಿದ್ದ ₹ 639125 ಹಣವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಪರಾರಿಯಾಗಲು ಯತ್ನಿಸಿದ್ದನು. ಅಲ್ಲದೇ, ಈ ಸಂದರ್ಭದಲ್ಲಿ ಯಾರಾದರೂ ಕೂಗುವುದು, ಓಡುವುದನ್ನು ಮಾಡಿದರೆ, ಚಾಕುವಿನಿಂದ ಚುಚ್ಚುವುದಾಗಿ ಬೆದರಿಸಿದ್ದಾನೆ.
ಈ ವೇಳೆ ಬ್ಯಾಂಕ್ ಮತ್ತು ಹೊರ ಭಾಗದಲ್ಲಿ ಸಾರ್ವಜನಿಕರು ತಡೆಯಲು ಮುಂದಾದ ವೇಳೆ ಅವರನ್ನು ಬೆದರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಕರ್ತವ್ಯನಿರತ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಉಮೇಶ ಬಂಗಾರಿ ಹಾಗೂ ಉಪನಗರ ಠಾಣೆಯ ಮಂಜುನಾಥ ಹಾಲವರ ಆತನನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಬ್ಯಾಂಕ್ನ ೨೦೦ ಮೀ. ಅಂತರದಲ್ಲಿ ಹಿಡಿದಿದ್ದಾರೆ. ಅಲ್ಲದೇ, ಆತನ ಬಳಿಯಿಂದ ಹಣ ಮತ್ತು ಕೃತ್ಯಕ್ಕೆ ಬಳಕೆ ಮಾಡಿದ ಚಾಕುವನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಲಾಬೂರಾಮ್, ಪೊಲೀಸ್ ಸಿಬ್ಬಂದಿ ಸಮಯ ಪ್ರಜ್ಞೆ ಹಾಗೂ ಸಾರ್ವಜನಿಕರ ಸಹಕಾರದಿಂದ ಹಾಡಹಗಲೇ ಬ್ಯಾಂಕ್ ದರೋಡೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸಾರ್ವಜನಿಕರು ಸಹ ಉತ್ತಮ ಸಹಕಾರ ನೀಡಿದ್ದರಿಂದ ಪರಾರಿಯಾಗುತ್ತಿದ್ದ ಬ್ಯಾಂಕ್ ದರೋಡೆಕೋರರನ್ನು ಪೊಲೀಸರು ಬಂಧಿಸಲು ಸಾಧ್ಯವಾಗಿದೆ. ಈತನ ಹೆಚ್ಚಿನ ತನಿಖೆಗೆ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಾಥಮಿಕವಾಗಿ ಎರಡು ದಿನಗಳ ಹಿಂದೆ ಹುಬ್ಬಳ್ಳಿಗೆ ಬಂದು ಲಾಡ್ಜಿನಲ್ಲಿ ಉಳಿದಿದ್ದ ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಮತ್ತು ಆತನ ಹಿನ್ನೆಲೆಯ ಇನ್ನಷ್ಟು ವಿಚಾರಣೆ ಮಾಡಲಾಗುತ್ತಿದೆ ಎಂದರು.
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಉಮೇಶ ಬಂಗಾರಿ ಹಾಗೂ ಮಂಜುನಾಥ ಹಾಲವರ ಜೀವದ ಹಂಗು ತೊರೆದು ಆರೋಪಿಯನ್ನು ಬಂಧಿಸಿದ್ದಾರೆ. ಇವರ ಕಾರ್ಯ ಶ್ಲಾಘನೀಯವಾಗಿದ್ದು, ಸಿಬ್ಬಂದಿಗೆ ತಲಾ ₹ 25 ಸಾವಿರ. ಬಹುಮಾನ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಟ್ವಿಟ್ ಮಾಡಿ ಇಬ್ಬರು ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಮಹಾನಿರ್ದೇಶಕರು ಶ್ಲಾಘಿಸಿದ್ದಾರೆ.
Two cops intervene risking their lives and catch the bank robber..May your tribe increase!! Well done Team Hubli Dharwad Police @JnanendraAraga @CMofKarnataka https://t.co/kxClgqMQ8b
— DGP KARNATAKA (@DgpKarnataka) January 18, 2022
ದಕ್ಷಿಣ ವಿಭಾಗ ಎಸಿಪಿ ಆರ್.ಕೆ. ಪಾಟೀಲ, ಶಹರ ಠಾಣೆ ಪಿಐ ಆನಂದ ಒನಕುದ್ರೆ, ಉಪನಗರ ಠಾಣೆ ಪಿಐ ಡಿ.ಬಿ. ರವಿಚಂದ್ರ ಸೇರಿದಂತೆ ಇತರರು ಇದ್ದರು.
ಸದ್ಯ ಆರೋಪಿ ಮದುವೆ ನಿಶ್ಚಿಯವಾಗಿತ್ತು ಎಂದು ಹೇಳುತ್ತಿದ್ದಾನೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಅಲ್ಲದೇ, ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಲಾಬೂರಾಮ್ ತಿಳಿಸಿದರು.
ನಿನ್ನ ಈ ಆಕಾರವೇನೋ! | Udayavani – ಉದಯವಾಣಿ
Wednesday, 19 Jan 2022 | UPDATED: 03:22 PM IST
Team Udayavani, Mar 27, 2018, 11:57 AM IST
ಕೋಲಾರ: "ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ' ಎಂದು ಸುಮಾರು ದಶಕಗಳ ಹಿಂದೆ
ವರನಟ ಡಾ. ರಾಜ್‌ಕುಮಾರ್‌ ತಮ್ಮ ಸುವರ್ಣ ಕಂಠದಲ್ಲಿ ಹಾಡಿದ್ದರು. ಅದು ವಾಯುಪುತ್ರ ಆಂಜನೇಯ ವಾಮನ
ಮೂರ್ತಿಯಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತ ಕ್ಷಣವನ್ನು ವಿವರಿಸುವ ಗೀತೆ. ಆ ಅದ್ಭುತ ಗೀತೆಯನ್ನು ನೆನಪಿಸುವಂಥ,
ಆಂಜನೇಯನ ಬೃಹತ್‌ ಏಕಶಿಲಾ ವಿಗ್ರಹವೊಂದು ರಾಜಧಾನಿ ಬೆಂಗಳೂರಿಗೆ ಬರುತ್ತಿದೆ.
ಶ್ರವಣಬೆಳಗೊಳದ ಬಾಹುಬಲಿ (58 ಅಡಿಗಳು) ಮೂರ್ತಿಗಿಂತಲೂ ಎತ್ತರದ ರಾಮ, ಲಕ್ಷ್ಮಣ ಸಮೇತ ಹನುಮಾನ್‌ ವಿಗ್ರಹ ಸ್ಥಾಪನೆಯಾಗಲಿರುವುದು ಬೆಂಗಳೂರಿನ ಕಾಚರಕನ ಹಳ್ಳಿಯ ಶ್ರೀರಾಮ ದೇವಾಲಯದ ಆವರಣದಲ್ಲಿ. ಕೋಲಾರ ಜಿಲ್ಲೆಯ ನರಸಾಪುರದಿಂದ ಈ ಏಕಶಿಲಾ ವಿಗ್ರಹ ವನ್ನು ಸಾಗಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ದೊರೆತಿದೆ. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿಗ್ರಹ, 62 ಅಡಿ ಎತ್ತರ, 12 ಅಡಿ ಅಗಲವಿದ್ದು, ಬರೋಬ್ಬರಿ 750 ಟನ್‌ ತೂಗುತ್ತದೆ. ವಿಗ್ರಹ ಕೆತ್ತನೆ ಕಾರ್ಯ ಶೇ.60ರಷ್ಟು ಪೂರ್ಣಗೊಂಡಿದ್ದು, ಬಾಕಿ ಕೆತ್ತನೆ ಪ್ರತಿಷ್ಠಾಪನೆ ನಂತರ ನಡೆಯಲಿದೆ.
ಕಲ್ಲಿಗಾಗಿ ಮೂರು ತಿಂಗಳು ಹುಡುಕಾಟ: ಕಾಚರಕನಹಳ್ಳಿಯ ಕೆರೆಯಲ್ಲಿ 600 ವರ್ಷ ಹಳೆಯದಾದ ಹನುಮಾನ್‌ ದೇವಾಲಯವಿದ್ದು, ಇದರ ನೆನಪಿಗಾಗಿ ಸುತ್ತಲ 18 ಗ್ರಾಮಗಳ ಸಾರ್ವಜನಿಕರು ಶ್ರೀರಾಮ ದೇವಾಲಯ ನಿರ್ಮಿಸಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ್ದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ, ದೇವಾಲಯದ ಆವರಣದಲ್ಲಿ ಕಲ್ಲಿನ ಹನುಮಾನ್‌ ವಿಗ್ರಹ
ಪ್ರತಿಷ್ಠಾಪಿಸುವ ಸಲಹೆ ನೀಡಿದ್ದರು. ಅದರಂತೆ ಬೃಹತ್‌ ವಿಗ್ರಹವೊಂದನ್ನು ಸ್ಥಾಪಿಸಲು ಶ್ರೀರಾಮಚೈತನ್ಯ ವರ್ಧಿನಿ ಟ್ರಸ್ಟ್‌ ನಿರ್ಧರಿಸಿತ್ತು. ಆದರೆ ಅಷ್ಟು ದೊಡ್ಡ ಕಲ್ಲು ಹುಡುಕಲು 3 ತಿಂಗಳೇ ಬೇಕಾಯಿತು. ನರಸಾಪುರ ಸಮೀಪದ ಬೈರಸಂದ್ರ
ಗ್ರಾಮದ ಮುನಿರಾಜು ಎಂಬುವವರ ಜಮೀನಿನಲ್ಲಿ ಬೃಹತ್‌ ಶಿಲೆ ಇರುವುದನ್ನು ಮಾಲೂರಿನ ಶಿಲ್ಪಿ ರಾಜಶೇಖರಾಚಾರ್ಯ ಪತ್ತೆ ಹಚ್ಚಿದರು.
ಶಾಸ್ತ್ರ ಪ್ರಕಾರ ವಿಗ್ರಹ ಕೆತ್ತನೆ: ಶಿಲ್ಪಿ ರಾಜಶೇಖರಾಚಾರ್ಯ ನೇತೃತ್ವದ 25 ಶಿಲ್ಪಿಗಳು 2015ರ ಸೆಪ್ಟೆಂಬರ್‌ನಲ್ಲಿ ವಿಗ್ರಹ ಕೆತ್ತನೆ ಕಾರ್ಯ ಆರಂಭಿಸಿದ್ದಾರೆ. ವಿಗ್ರಹ ಕೆತ್ತನೆ ವೇಳೆ ಅನುಸರಿಸುವ "ಶಿಲ್ಪ ಶಾಸ್ತ್ರ'ದ ಅನುಸಾರವೇ, ಯಾವುದೇ ದೋಷವಿಲ್ಲದ ಕೃಷ್ಣ ಶಿಲೆಯಲ್ಲಿ ವಿಗ್ರಹ ಕೆತ್ತಲಾಗುತ್ತಿದೆ. ವಿಗ್ರಹ ಕಾಚರಕನಹಳ್ಳಿ ತಲುಪಿದ ನಂತರ ಇನ್ನೂ ಆರೇಳು ತಿಂಗಳ ಕಾಲ ಸೂಕ್ಷ್ಮ ಕೆತ್ತನೆ ಕಾರ್ಯ ನಡೆಯಲಿದೆ.
ಸಾಗಣೆಗೆ 320 ಚಕ್ರಗಳ ವಿಶೇಷ ಟ್ರಕ್‌: ಸುಮಾರು 750 ಟನ್‌ ತೂಕದ ವಿಗ್ರಹವನ್ನು ನರಸಾಪುರದಿಂದ 86 ಕಿ.ಮೀ ದೂರದಲ್ಲಿರುವ ಕಾಚರಕನಹಳ್ಳಿಗೆ ಸಾಗಿಸಲು ಮುಂಬೈ ಮೂಲದ ಸಂಸ್ಥೆಯೊಂದು 100 ಅಡಿ ಉದ್ದದ, 320 ಟಯರ್‌ಗಳನ್ನು ಹೊಂದಿರುವ ವಿಶೇಷ ಟ್ರಕ್‌ ಸಿದ್ಧಪಡಿಸಿದೆ. ವಿಗ್ರಹವನ್ನು ನಾಜೂಕಾಗಿ ಎತ್ತಿಡಲು ಹೈಡ್ರೋಲಿಕ್‌ ಜಾಕ್‌ ತಂತ್ರಜ್ಞಾನ ಹಾಗೂ ಬೃಹತ್‌ ಕಬ್ಬಿಣದ ಫ್ಲಾಟ್‌ಫಾರಂ ಮೇಲಿಟ್ಟು ಸಾಗಿಸಲು ಅಗತ್ಯವಿರುವ ತಾಂತ್ರಿಕ ಸಹಕಾರವನ್ನು ಪುಣೆ ಮೂಲದ ಸಂಸ್ಥೆ ನೀಡುತ್ತಿದೆ.
ವಿಶೇಷ ವಾಹನವು ಪ್ರತಿ ನಿತ್ಯ ಗಂಟೆಗೆ 3 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ವಾಹನದ ಸುಗಮ ಸಂಚಾರಕ್ಕೆಂದೇ ಗೆದ್ದಲಹಳ್ಳಿ ಸಮೀಪದ ರೈಲ್ವೆ ಸೇತುವೆ ವಿಸ್ತರಿಸಲಾಗಿದೆ. ಹಳೆಯ ಸೇತುವೆ ಇರುವ ಮಾರ್ಗದಲ್ಲಿ ಒಂದು ಕಿ.ಮೀ ಪ್ರತ್ಯೇಕ ಹೆದ್ದಾರಿ ನಿರ್ಮಿಸಲಾಗಿದೆ. ಮುಂದಿನ ಭಾನುವಾರದೊಳಗೆ ವಿಗ್ರಹ ಕಾಚರಕನಹಳ್ಳಿ ತಲುಪುವ ನಿರೀಕ್ಷೆಯಿದೆ.
2004ರಲ್ಲಿ ಸೋನಿಯಾ ಮಾಡಿದ ತ್ಯಾಗ ಟೀಕಾಕಾರಿಗೆ ತಿಳಿಯದೇ? ಸಿದ್ದರಾಮಯ್ಯ ಪ್ರಶ್ನೆ | Prajavani
siddaramaiah attacks on g 23 congress leaders sonia gandhi rahul gandhi
2004ರಲ್ಲಿ ಸೋನಿಯಾ ಮಾಡಿದ ತ್ಯಾಗ ಟೀಕಾಕಾರಿಗೆ ತಿಳಿಯದೇ? ಸಿದ್ದರಾಮಯ್ಯ ಪ್ರಶ್ನೆ
ಪ್ರಜಾವಾಣಿ ವೆಬ್‌ಡೆಸ್ಕ್‌ Updated: 17 ಮಾರ್ಚ್ 2022, 14:50 IST
ಬೆಂಗಳೂರು: 2004ರಲ್ಲಿ ಸೋನಿಯಾ ಗಾಂಧಿಯವರು ಹಕ್ಕಿನಿಂದ ಪಡೆಯಬಹುದಾದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿದ್ದನ್ನು ಇಂದಿನ‌ ಟೀಕಾಕಾರರು ಕಂಡಿಲ್ಲವೇ? ಎಂದು ಪ್ರಶ್ನೆ ಮಾಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ದೇಶವನ್ನು ಮುನ್ನಡೆಸುವ ಪ್ರಬಲ ಶಕ್ತಿಯಾಗಿ ಕಾಂಗ್ರೆಸ್‌ ಮತ್ತೆ ಎದ್ದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಜಿ –23 (ಕಾಂಗ್ರೆಸ್‌ನ ಭಿನ್ನಮತೀಯ ನಾಯಕರು) ನಾಯಕರು 'ಗಾಂಧಿ ಕುಟುಂಬದ' ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ಮುಜುಗರ ಸೃಷ್ಟಿ ಮಾಡಿದ್ದು, ಸಿದ್ದರಾಮಯ್ಯ ಅವರು ಸೋನಿಯಾ, ರಾಹುಲ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಅಭಿಪ್ರಾಯ ಹಂಚಿಕೊಂಡಿದ್ದು, ಭಿನ್ನಮತೀಯ ನಾಯಕರಿಗೆ ಚಾಟಿ ಬೀಸಿದ್ದಾರೆ.
'ಕಾಂಗ್ರೆಸ್ ಪಕ್ಷ, ಇತ್ತೀಚಿನ ಕೆಲವು ಚುನಾವಣಾ ಸೋಲುಗಳ ತಾತ್ಕಾಲಿಕ ಹಿನ್ನಡೆಯನ್ನು ಎದುರಿಸಿದ್ದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ದೇಶವನ್ನು ಮತ್ತೆ ಮುನ್ನಡೆಸುವ ಪ್ರಬಲ ರಾಜಕೀಯ ಶಕ್ತಿಯಾಗಿ ಎದ್ದು ಬರಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ಪ್ರತಿಯೊಬ್ಬರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವವನ್ನು ಬೆಂಬಲಿಸುತ್ತಿದ್ದಾರೆ. ಇದೇ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ರಾಜ್ಯದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ ಪಕ್ಷಕ್ಕೆ ಗೆಲುವಿನ ಉಡುಗೊರೆ ನೀಡುತ್ತೇವೆ' ಎಂದು ಅವರು ಹೇಳಿದ್ದಾರೆ.
'ಹೊರಗಿನ ವಿರೋಧ ಪಕ್ಷಗಳ ಅಪಪ್ರಚಾರ ಮತ್ತು ಕೆಲವು ಒಳಗಿನ ಹಿತಶತ್ರುಗಳ ಕುಟಿಲ ಕಾರಸ್ತಾನಗಳಿಂದ ವಿಚಲಿತರಾಗದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಭರವಸೆ ಇಟ್ಟು ಪಕ್ಷಕ್ಕೆ ಶಕ್ತಿ ತುಂಬಲು ಪ್ರತಿಯೊಬ್ಬ ಕಾಂಗ್ರೆಸಿಗನು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
'ಈಗ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸುತ್ತಿರುವವರು, ಅವರದ್ದೇ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಸತತ ಎರಡು ಬಾರಿ ಲೋಕಸಭಾ ಚುನಾವಣೆಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದನ್ನು ಮರೆತಿರುವುದು ಆತ್ಮದ್ರೋಹವಲ್ಲದೆ ಮತ್ತೇನು?' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
'ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿಯೇ ಕೇಂದ್ರದಲ್ಲಿ ಮಾತ್ರವಲ್ಲ, ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು‌ ಎನ್ನುವುದನ್ನು ಇಂದು ಅವರ ನಾಯಕತ್ವವನ್ನು ಪ್ರಶ್ನಿಸುವವರು ನೆನಪು ಮಾಡಿಕೊಳ್ಳಬೇಕಾಗಿದೆ. ದೇಶಕ್ಕೆ ಬಲಿದಾನಗೈದ ಪತಿಯ ಅಗಲಿಕೆಯ ಶೋಕ ಮತ್ತು ಎರಡು ಎಳೆಯ ಮಕ್ಕಳ ಭವಿಷ್ಯದ ಕಾಳಜಿಯಿಂದ ರಾಜಕೀಯದಿಂದ ದೂರ ಇದ್ದ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷವನ್ನು ಉಳಿಸಲಿಕ್ಕಾಗಿ ಒತ್ತಾಯದಿಂದ ಸಕ್ರಿಯ ರಾಜಕೀಯಕ್ಕೆ ಎಳೆದು ತಂದಿದ್ದ ಕೆಲವು ನಾಯಕರೇ ಈಗ ಸೋನಿಯಾ ಸೈದ್ಧಾಂತಿಕ ನಾಯಕತ್ವವನ್ನು ಪ್ರಶ್ನಿಸುತ್ತಿರುವುದು ವಿಷಾದನೀಯ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
'2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದ ಸೋನಿಯಾ ಗಾಂಧಿಯವರು ಹಕ್ಕಿನಿಂದ ಪಡೆಯಬಹುದಾದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ ವಿಶ್ವಕ್ಕೆ ಮಾದರಿಯಾಗಿದ್ದನ್ನು ಇಡೀ ವಿಶ್ವ ಕಂಡಿದೆ. ಇಂದಿನ‌ ಟೀಕಾಕಾರರು ಈ ತ್ಯಾಗವನ್ನು ಕಂಡಿಲ್ಲವೇ' ಎಂದು ಅವರು ಪ್ರಶ್ನೆ ಕೇಳಿದ್ದಾರೆ.
'ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು.‌ ಆದರೆ, ಆಹಾರ, ಶಿಕ್ಷಣ, ಉದ್ಯೋಗ ಮತ್ತು ಮಾಹಿತಿಯ ಶಾಸನಾತ್ಮಕ ಹಕ್ಕನ್ನು ನೀಡಿದ್ದ ಕಾರ್ಯಕ್ರಮಗಳ ರೂವಾರಿಯಾದ ಶ್ರೀಮತಿ ಸೋನಿಯಾ ಗಾಂಧಿಯವರು ದೇಶದ ಜನತೆಯ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಆ ಚಿತ್ರವನ್ನು ಅಳಿಸಲಾಗದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ‌ ಮತ್ತು ಪ್ರಿಯಾಂಕಾ ಗಾಂಧಿಯವರು ಒಂಟಿಯಲ್ಲ, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ, ದೇಶದ ಕೋಟ್ಯಂತರ ಜನ ಅವರ ಬೆನ್ನ ಹಿಂದಿದ್ದಾರೆ. ಇಂದಿನ‌ ಸಂಕಷ್ಟ ಸ್ಥಿತಿಯಿಂದ ದೇಶವನ್ನು ಕಾಂಗ್ರೆಸ್ ಪಕ್ಷ ಮಾತ್ರ ಪಾರುಮಾಡಲು ಸಾಧ್ಯ ಎನ್ನುವುದು ಪ್ರತಿಯೊಬ್ಬರೂ ಅರಿತಿದ್ದಾರೆ. ಕೋಮುವಾದಿ ರಾಜಕಾರಣ, ಸುಳ್ಳುಗಳ ಅಪಪ್ರಚಾರ, ದುಡ್ಡಿನ ಬಲದ ಚುನಾವಣಾ ತಂತ್ರ-ಕುತಂತ್ರಗಳ ಎದುರು ಸೈದ್ಧಾಂತಿಕ ರಾಜಕಾರಣಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಇದು ತಾತ್ಕಾಲಿಕ ಹಿನ್ನಡೆ, ಸತ್ಯವೇ ಗೆಲ್ಲುವುದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'); $('#div-gpt-ad-920173-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ //googletag.cmd.push(function() { googletag.display('gpt-text-700x20-ad-920173'); }); //googletag.cmd.push(function() { googletag.display('gpt-text-700x20-ad2-920173'); }); },300); var x1 = $('#node-920173 .field-name-body .field-items div.field-item > p'); if(x1 != null && x1.length != 0) { $('#node-920173 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-920173').addClass('inartprocessed'); } else $('#in-article-920173').hide(); } else { _taboola.push({article:'auto', url:'https://www.prajavani.net/karnataka-news/siddaramaiah-attacks-on-g-23-congress-leaders-sonia-gandhi-rahul-gandhi-920173.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-920173', placement: 'Below Article Thumbnails 1', target_type: 'mix' }); _taboola.push({flush: true}); // Text ad //googletag.cmd.push(function() { googletag.display('gpt-text-300x20-ad-920173'); }); //googletag.cmd.push(function() { googletag.display('gpt-text-300x20-ad2-920173'); }); // Remove current Outbrain //$('#dk-art-outbrain-920173').remove(); //ad before trending $('#mob_rhs1_920173').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-920173 .field-name-body .field-items div.field-item > p'); if(x1 != null && x1.length != 0) { $('#node-920173 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-920173 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-920173'); }); } else { $('#in-article-mob-920173').hide(); $('#in-article-mob-3rd-920173').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-920173','#in-article-952133','#in-article-952120','#in-article-952119','#in-article-952115']; var twids = ['#twblock_920173','#twblock_952133','#twblock_952120','#twblock_952119','#twblock_952115']; var twdataids = ['#twdatablk_920173','#twdatablk_952133','#twdatablk_952120','#twdatablk_952119','#twdatablk_952115']; var obURLs = ['https://www.prajavani.net/karnataka-news/siddaramaiah-attacks-on-g-23-congress-leaders-sonia-gandhi-rahul-gandhi-920173.html','https://www.prajavani.net/karnataka-news/slaughter-animal-in-bakrid-will-ban-says-karnataka-minister-prabhu-chauhan-952133.html','https://www.prajavani.net/karnataka-news/chandrashekhar-guruji-death-karnataka-police-finds-reason-for-murder-952120.html','https://www.prajavani.net/karnataka-news/psi-recruitment-scam-cid-attack-on-amrit-paul-farmhouse-952119.html','https://www.prajavani.net/karnataka-news/cid-charge-sheet-on-exam-illegality-divya-hagaragi-owned-school-952115.html']; var vuukleIds = ['#vuukle-comments-920173','#vuukle-comments-952133','#vuukle-comments-952120','#vuukle-comments-952119','#vuukle-comments-952115']; // var nids = [920173,952133,952120,952119,952115]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
೧೨:೧೯, ೯ ಆಗಸ್ಟ್ ೨೦೧೬ ನಂತೆ ಪರಿಷ್ಕರಣೆ
೬೬ bytes added , ೫ ವರ್ಷಗಳ ಹಿಂದೆ
೧೨:೧೯, ೯ ಆಗಸ್ಟ್ ೨೦೧೬ ನಂತೆ ಪರಿಷ್ಕರಣೆ (ಮೂಲವನ್ನು ನೋಡು)
ವಸಂತ ಎಸ್.ಎನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ವಾಸವಾಗಿರುವ ತುಳು-ಕನ್ನಡಿಗ. ಕನ್ನಡ ಮಾಧ್ಯಮದಲ್ಲಿ ಕಲಿತ ಇವರು ಹೆಚ್ಚಿನ ಓದಿಗಾಗಿ ಹುಡುಕಾಟ ನಡೆಸಿದಾಗ ಕನ್ನಡ ಭಾಷೆಯಲ್ಲಿರುವ ಸೀಮಿತ ಸಂಪನ್ಮೂಲಗಳ ಬಗ್ಗೆ ಅರಿತುಕೊಂಡರು. ಹೀಗಾಗಿ ಇವರು ೧೧ ಮೇ ೨೦೦೯ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ತಮ್ಮ ಖಾತೆ ತೆರೆದರು. ಅಲ್ಲಿಂದಅಂದಿನಿಂದ ತಮ್ಮ ಸಂಪಾದನೆಯನ್ನು ಪ್ರಾರಂಭಿಸಿದ ಇವರು ಇಂದು ಎಲ್ಲ ವಿಕಿಗಳಲ್ಲಿವಿಕಿಗಳ ಖಾತೆಯಲ್ಲಿ ಸುಮಾರು ೧೯೦೦೦ಕ್ಕೂ ಅಧಿಕ ಸಂಪಾದನೆಗಳನ್ನು ಹೊಂದಿದ್ದಾರೆ. ಅದರಲ್ಲಿಯೂ ವಿಜ್ಞಾನ ವಿಷಯಗಳಲ್ಲಿ ಈ ಕೊರತೆ ಹೆಚ್ಚಿನ ಮಾಹಿತಿ ಕೊರತೆ ಇದೆ ಎಂದು ತಿಳಿದುಕೊಂಡ ಇವರು ವಿಜ್ಞಾನ ಲೇಖನಗಳನ್ನು ಸೇರಿಸಿದ್ದಾರೆ.
ಅದರಲ್ಲಿ ಪ್ರಮುಖವಾದವು [[ಮೂಲಧಾತು]]. ಮುಖ್ಯವಾಗಿ ಕರ್ನಾಟಕದ ವೃಕ್ಷಗಖ ಬಗ್ಗೆ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ವಿಜ್ನಾನದಲ್ಲಿವಿಜ್ಞಾನದಲ್ಲಿ ನಿತ್ಯ ಬಳಕೆಯಾಗುವ ಲೇಖನಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಸೇರಿಸಿದ್ದಾರೆ. ವಿಜ್ಞಾನಿಗಳ ಬಗ್ಗೆ ಪರಿಚಯ, ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಲೇಖನ ರಚಿಸಿದ್ದಾರೆ. ೩೦೦ ಕ್ಕೂ೩೦೦ಕ್ಕೂ ಅಧಿಕ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶಗಳನ್ನು ವಿಕೀಕರಿಸಿ ವಿಸ್ತರಿಸಿದ್ದಾರೆ. [https://www.wikidata.org/wiki/Wikidata:%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F ವಿಕಿಡೇಟಾ] ದಲ್ಲಿಯೂ ಉತ್ತಮ ಕೊಡುಗೆ ನೀಡಿದ್ದಾರೆ. ಇವರು ತಮ್ಮ ನಿರಂತರ ಕೊಡುಗೆಗೆ [[ಬಾರ್ನ್‌ಸ್ಟಾರ್]https://en.wikipedia.org/wiki/Wikipedia:Barnstars ಬಾರ್ನ್‌ಸ್ಟಾರ್‍]‍ಅನ್ನೂಅನ್ನೂ ಗಳಿಸಿದ್ದಾರೆ.
ಕನ್ನಡಿಗರ ಬದುಕು ಹಸನು ಮಾಡಲು ನನ್ನನ್ನು ಬೆಂಬಲಿಸಿ | Prajavani
ಕನ್ನಡಿಗರ ಬದುಕು ಹಸನು ಮಾಡಲು ನನ್ನನ್ನು ಬೆಂಬಲಿಸಿ
Published: 18 ಫೆಬ್ರವರಿ 2012, 15:45 IST
Updated: 18 ಫೆಬ್ರವರಿ 2012, 15:45 IST
ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 29ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಹುದ್ದೆಗೆ ತಾವು ಒಬ್ಬ ಆಕಾಂಕ್ಷಿಯಾಗಿ ಸ್ಪರ್ಧಿಸಿದ್ದು, ಕನ್ನಡ ಕಟ್ಟುವುದಕ್ಕಾಗಿ, ಕನ್ನಡ ಬೆಳೆಸುವುದಕ್ಕಾಗಿ, ಕನ್ನಡಿಗರ ಬದುಕನ್ನು ಹಸನು ಮಾಡುವ ಸಲುವಾಗಿ ಸಾಹಿತಿಗಳು ತಮಗೆ ಮತ ನೀಡಿ ಬೆಂಬಲಿಸಬೇಕು ಎಂದು ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಮನವಿ ಮಾಡಿದ್ದಾರೆ.
ಕಳೆದ 14 ವರ್ಷದಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ತಮಗೆ ದೊರಕಿದೆ. 2 ಬಾರಿ ಕಾರ್ಯದರ್ಶಿಯಾಗಿ, 2 ಬಾರಿ ಕೋಶಾಧ್ಯಕ್ಷನಾಗಿ, ನಾಲ್ವರು ಅಧ್ಯಕ್ಷರೊಡನೆ ತಾವು ಸೇವೆ ಸಲ್ಲಿಸಿದ್ದು, ಡಾ.ಸಾ.ಶಿ.ಮರುಳಯ್ಯ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ, ಪ್ರೊ.ಚಂಪಾ ಹಾಗೂ ನಲ್ಲೂರ ಪ್ರಸಾದ ಅವರ ಅಧ್ಯಕ್ಷ ಅವಧಿಯಲಿ ಗೌರವ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈ ಬಾರಿ ಅಧ್ಯಕ್ಷ ಹುದ್ದೆ ತಾವು ಸ್ಪರ್ಧಿಸಿರುವುದಾಗಿ ಹೇಳಿದ್ದಾರೆ.
ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಬೆಂಗಳೂರು ವಿವಿಯ ಪ್ರಸಾರಾಂಗ ವಿಭಾಗದಲ್ಲಿ ಸಂಯೋಜನಾಧಿಕಾರಿಯಾಗಿ 36 ವರ್ಷ ಸೇವೆ. 2011ರಲ್ಲಿ ನಿವೃತ್ತಿ. 20 ವರ್ಷ ವಿವಿ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ. ಹೊಟೆಲ್ ಉದ್ದಿಮೆದಾರರ ಸಹಕಾರ ಬ್ಯಾಂಕ್‌ನ ಅಧ್ಯಕ್ಷನಾಗಿ 20 ವರ್ಷ ಸೇವೆ. ಈ ಬ್ಯಾಂಕ್ ಈಗ ವರ್ಷಕ್ಕೆ 7 ಕೋಟಿ ಲಾಭ ಗಳಿಸುತ್ತಿದೆ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಒಳ ಹೊರಗುಗಳ ಬಗ್ಗೆ ಸಂಪೂರ್ಣ ಅರಿವಿರುವ ತಾವು ಕಸಾಪ ಸ್ಥಾಪನೆ ಮೂಲ ಆಶಯಕ್ಕೆ ಧಕ್ಕೆ ಆಗದ ರೀತಿ ಕನ್ನಡ ಕೆಲಸ ಮಾಡುವ ಶಕ್ತಿ ತಮಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಎಲ್ಲ ಭಾಗಗಳ ಬಗ್ಗೆ ಅಪಾರ ಗೌರವವಿದೆ. ಹಿರಿಯ ಸಾಹಿತಿಗಳ ಮಾರ್ಗದರ್ಶನ, ಕಿರಿಯ ಸಾಹಿತಿಗಳ ಒಡನಾಟ, ಕನ್ನಡಪರ ಸಂಘಟನೆಗಳೊಂದಿಗೆ ಪ್ರೀತಿಯ ಸಂಬಂಧ, ಸಾಹಿತ್ಯ ಪರಿಚಾರಕರ ಬಗ್ಗೆ ಗೌರವ ಹೊಂದಿದ್ದ, ಪರಿಷತ್ತನ್ನು ಜನಪರ ಸಂಸ್ಥೆಯಾಗಿ ಶ್ರಮಿಸಲು ಬದ್ಧರಾಗಿದ್ದು, ತಮಗೆ ಎಲ್ಲ ರೀತಿಯ ಬೆಂಬಲ, ಪ್ರೋತ್ಸಾಹವನ್ನು ಕನ್ನಡ ಭಾಷೆ ಬೆಳವಣಿಗೆಯಲ್ಲಿ, ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಜನ ಬೆಂಬಲಿಸಬೇಕು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಜನರ ಬಳಿ ಆಡಳಿತ ಯೋಜನೆಗೆ ಸಿದ್ಧತೆ: ಸಿಎಂ ಬೊಮ್ಮಾಯಿ | CM Basavaraj Bommai Talks Over Governance Plan in Karnataka grg
* ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಸಿಎಂ ಬೊಮ್ಮಾಯಿ
* ಸಂಕೇಶ್ವರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ
* ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ
Bengaluru, First Published Sep 26, 2021, 3:29 PM IST
ಸಂಕೇಶ್ವರ(ಸೆ.26): ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಯೋಜನೆ ಮೂಲಕ ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲಾಗಿದೆ. ಜನರ ಬಳಿಗೆ ಆಡಳಿತ ಎಂಬ ಯೋಜನೆಗೆ ಸಿದ್ಧತೆ ಮಾಡಲಾಗುತ್ತಿದೆ. ಜನಪರ, ಬಡಪರವಾಗಿ ಇರುವಂತ ಸರ್ಕಾರ ನಮ್ಮದಾಗಿದೆ. ಇಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.
ಸಂಕೇಶ್ವರ ಪಟ್ಟಣದ ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟನೆ ವಸತಿ ರಹಿತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ 50 ಎಕರೆ ಗಾಯರಾಣಾ ಭೂಮಿಯನ್ನು ಪುರಸಭೆಗೆ ಹಸ್ತಾಂತರ, ಕೆಎಸ್ಸಾರ್ಟಿಸಿ ನೂತನ ಬಸ್‌ ನಿಲ್ದಾಣ, ಅಂಬೇಡ್ಕರ್‌ ಭವನ, ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯ ರೈತ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅರಣ್ಯ, ಆಹಾರ ಇಲಾಖೆ ಸಚಿವ ಉಮೇಶ ಕತ್ತಿ(Umesh Katti) ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಹುಕ್ಕೇರಿ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು ಮುಂಬರುವ ದಿನಗಳಲ್ಲಿ ಇನ್ನು ಬಾಕಿಯಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಮಾತನಾಡಿ, ಸಾರಿಗೆ ಇಲಾಖೆ ಸುಧಾರಣೆಗೆ ಶ್ರಮಿಸುತ್ತಿದ್ದು, ಪ್ರಯಾಣಿಕರ ವಿಶ್ವಾಸ ಗಳಿಸುವ ಕಾರ್ಯವನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಮಾಡಲಾಗುವುದು ಎಂದರು.
ಪ್ರಾಸ್ತಾವಿಕ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಸಹೋದರ ಸಚಿವ ಉಮೇಶ ಕತ್ತಿ ಎಂಟು ಬಾರಿ ಶಾಸಕರಾಗಿ ಹಲವಾರು ಯೋಜನೆಗಳನ್ನು ಕ್ಷೇತ್ರಕ್ಕೆ ನೀಡಿದ್ದು ಇಂದು ಹುಕ್ಕೇರಿ ಕ್ಷೇತ್ರಕ್ಕೆ ಹೈಟೆಕ್‌ ಸ್ಪರ್ಶ ನೀಡಿದ್ದಾರೆ ಎಂದರು. ಸಿಎಂ ಬೊಮ್ಮಾಯಿ ಅವರು ಅನುಭವಿಗಳಾಗಿದ್ದು ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಬೇಕು. ಹುಕ್ಕೇರಿ ತಾಲೂಕಿನ ಶಂಕರಲಿಂಗ ಏತ ನೀರಾವರಿ, ಅಡವಿಸಿದ್ದೇಶ್ವರ ಏತ ನೀರಾವರಿಗೆ ಮಂಜೂರಾತಿ ನೀಡಬೇಕೆಂದು ಸಿಎಂಗೆ ಮನವಿ ಮಾಡಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಪೌರಾಡಳಿತ ಸಚಿವ ಎಂಟಿಬಿ, ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ವಿ.ಪ.ಸದಸ್ಯ ಹನುಮಂತ ನಿರಾಣಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪುರಸಭೆ ಅಧ್ಯಕ್ಷೆ ಸೀಮಾ ಹತನೂರೆ, ಉಪಾಧ್ಯಕ್ಷ ಅಜೀತ ಕರಜಗಿ, ಸ್ಥಾಯಿ ಸಮಿತಿ ಚೇರಮನ್‌ ಸುನೀಲ ಪರ್ವತರಾವ್‌ ,ಮುಖ್ಯಾಧಿಕಾರಿ ಜಗದೀಶ ಈಟಿ, ತಹಸೀಲ್ದಾರ್‌ ಡಾ.ಡಿ.ಹೆಚ್‌. ಹೂಗಾರ, ಹೀರಾ ಶುಗರ್ಸ್‌ ಅಧ್ಯಕ್ಷ ನಿಖಿಲ ಕತ್ತಿ, ಮಾಜಿ ಜಿ.ಪಂ ಸದಸ್ಯ ಪವನ ಕತ್ತಿ, ಪೃಥ್ವಿ ಕತ್ತಿ, ಪುರಸಭೆ ಸದಸ್ಯರು, ಸಾರಿಗೆ ಇಲಾಖೆ ಅಧಿಕಾರಿಗಳು ಇದ್ದರು.
ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ:
ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಹಲವು ಸಂಘಟನೆಗಳಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಗ್ರಂಥಪಾಲಕರು, ಮಾಹಿತಿ ಸಹಾಯಕರ ಸಮಯವನ್ನು ಹೆಚ್ಚಿಸುವಂತೆ ಹಾಗೂ ಕನಿಷ್ಠ ವೇತನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾ ಸರ್ಕಾರಿ ಗ್ರಾಮ ಪಂಚಾಯತಿ ಗ್ರಂಥಾಲಯದ ಮೇಲ್ವಿಚಾರಕ ಸಂಘ ಮುಖಂಡರು ಮನವಿ ಸಲ್ಲಿಸಿದರು .
ಸಂಕೇಶ್ವರ ಪಟ್ಟಣದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸಂಕೇಶ್ವರ ಬ್ಲಾಕ್‌ ವತಿಯಿಂದ ಮನವಿ ಸಲ್ಲಿಸಿದರು. ಸಂಕೇಶ್ವರ ಪಟ್ಟಣದ ರುದ್ರಭೂಮಿ ಒದಗಿಸುವಂತೆ, ಕನ್ನಡ ಗಡಿನಾಡು ಭವನ ನಿರ್ಮಿಸಲು ಅನುದಾನ ಮಂಜೂರಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ಮುಡಶಿ, ಕನ್ನಡ ಚಳುವಳಿಗಾರ ಸಂಘದ ಅಧ್ಯಕ್ಷ ಕಿರಣ ನೇಸರಿ, ಭಾರತೀಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ವಿಕ್ರಮ ಕರನಿಂಗ, ಗ್ರಂಥಾಲಯ ಮೇಲ್ವಿಚಾರಕ ಸಂಘದ ತಾಲೂಕು ಉಪಾಧ್ಯಕ್ಷ ಮಲಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.