text
stringlengths 0
61.5k
|
---|
ಸಂಕೇಶ್ವರ ಪಟ್ಟಣಕ್ಕೆ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಯೋಜನೆಗೆ ವಷಾಂರ್‍ತ್ಯದಲ್ಲಿ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ವಿಶ್ವನಾಥ್ ಕತ್ತಿ ಹಾಗೂ ತಮ್ಮ ತಂದೆಯವರಾದ ದಿ.ಎಸ್.ಆರ್.ಬೊಮ್ಮಾಯಿ ಅವರ ಆತ್ಮೀಯ ಒಡನಾಟವನ್ನು ಸ್ಮರಿಸಿದರು. ಅಧಿಕಾರ ಶಾಶ್ವತವಲ್ಲ, ಪ್ರತಿದಿನ ಇದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಪ್ರೀತಿ-ವಿಶ್ವಾಸ ಇರುವವರೆಗೆ ನಾವು ಅಧಿಕಾರದಲ್ಲಿರುತ್ತೇವೆ ಎಂದರು. |
ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ನಿಖಿಲ್ | Udayavani – ಉದಯವಾಣಿ |
ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿರುವ ನಿಖಿಲ್ ಕುಮಾರಸ್ವಾಮಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. |
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ನಿಖಿಲ್, ರಾಜಕೀಯ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆಯವರ ಆಶೀರ್ವಾದ ಪಡೆದುಕೊಂಡೆ. ಈ ಎಲ್ಲ ಹಿರಿಯರು, ದೊಡ್ಡ ದೊಡ್ಡ ನಾಯಕರ ಭೇಟಿ ನನ್ನಲ್ಲಿ ಹೊಸ ಹುರುಪು, ಚೈತನ್ಯ ಮೂಡಿಸುತ್ತಿದೆ. |
ರಾಜಕಾರಣದಲ್ಲಿ ಐದು ದಶಕಗಳನ್ನು ಕಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಅವಕಾಶ ಸೋಮವಾರ ಸಿಕ್ಕಿತು. ಆ ಸಮಯದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ಭೇಟಿ ಮಾಡಿದೆ. |
ಬಹಳ ಖುಷಿಯಿಂದ ಮಲ್ಲಿಕಾರ್ಜುನ ಖರ್ಗೆ ನನ್ನನ್ನು ಆಶೀರ್ವದಿಸಿ ಮುನ್ನಡೆಸುವ ದಾರಿ ತೋರಿಸಿದರು. ಅವರ ಅನುಭವದ ಮಾತುಗಳು ರಾಜಕೀಯ ಕ್ಷೇತ್ರದ ಅನೇಕ ಮುಖಗಳನ್ನು ಪರಿಚಯಿಸಿತು ಎಂದರೆ ತಪ್ಪಾಗಲಾರದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಣಯಕ್ಕೆ ಪೂರಕವಾಗಿ ಜನರು ಒಪ್ಪುವಂತೆ ನಮ್ಮ ನಡೆ, ನುಡಿ, ಬದ್ಧತೆಗಳು ಇರಬೇಕೆಂದು ಕಿವಿಮಾತು ಹೇಳಿದರು. |
ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕೂಡ ಧೈರ್ಯದಿಂದ ಮುಂದುವರಿಯುವಂತೆ ಹುರಿದುಂಬಿಸಿದರು. ಈ ಭೇಟಿಯು ಚುನಾವಣೆಯ ಸೋಲು-ಗೆಲುವುಗಳಿಂದ ಭಿನ್ನವಾಗಿ ಜನಸೇವೆಯ ಮೂಲ ಉದ್ದೇಶಗಳನ್ನು ಕಾರ್ಯಕರ್ತರ ಜತೆಗೆ ಒಟ್ಟಾಗಿ ದುಡಿದು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ನನಗೆ ಪ್ರೇರಣೆ ನೀಡಿದೆ ಎಂದು ನಿಖಿಲ್ ತಿಳಿಸಿದ್ದಾರೆ. |
ಈ ಊರಿನ ರೈತ ಗದ್ದೆ ಕೆಲಸ ಮಾಡುತ್ತಿರುವಾಗ ಅವನಿಗೆ ಸಿಕ್ಕಿದ್ದು ಏನು ಗೊತ್ತ .ಅದಕ್ಕೆ ಊರಿನ ಜನ ಮಾಡಿದ್ದಾದ್ರೂ ಏನು ಗೊತ್ತ ..!!!! – Nan Magand |
October 7, 2021 ನನ್ ಮಗಂದ್Leave a Comment on ಈ ಊರಿನ ರೈತ ಗದ್ದೆ ಕೆಲಸ ಮಾಡುತ್ತಿರುವಾಗ ಅವನಿಗೆ ಸಿಕ್ಕಿದ್ದು ಏನು ಗೊತ್ತ .ಅದಕ್ಕೆ ಊರಿನ ಜನ ಮಾಡಿದ್ದಾದ್ರೂ ಏನು ಗೊತ್ತ ..!!!! |
ನಮ್ಮ ಈ ಭಾರತ ದೇಶವನ್ನು ಪುಣ್ಯಭೂಮಿ ಅಂತ ಕರೆಯಲಾಗುತ್ತದೆ ಈ ಭೂಮಿಯಲ್ಲಿ ಸಾಕಷ್ಟು ರಾಜ ಮನೆತನಗಳು ಆಳ್ವಿಕೆ ಮಾಡಿ ಹೋಗಿದ್ದಾರೆ ಅದರಲ್ಲಿಯೂ ಈ ಭಾರತ ಭೂಮಿಯಲ್ಲಿ ಇಂದಿಗೂ ಕೂಡ ಅದೆಷ್ಟೋ ರಾಜಮಾನೆ ತೆನೆಗಳ ಆಳ್ವಿಕೆಯ ಪುರಾವೆಗಳು ದೊರೆಯುತ್ತಲೇ ಇವೆ .ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ನೀವು ಈಗಾಗಲೇ ಸಾಕಷ್ಟು ವಿಚಾರಗಳನ್ನು ಕೇಳಿರುತ್ತೀರಿ ಹಾಗೆಯೇ ನಮ್ಮ ಆ ರಾಜಮನೆತನಗಳ ಬಗ್ಗೆ ಒಂದೊಂದು ವಿಚಾರವನ್ನು ಕೇಳುತ್ತಿದ್ದರೆ ಈ ಭೂಮಿಯಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದು ಅನಿಸುತ್ತದೆ ಹೆಮ್ಮೆ ಕೂಡ ಆಗುತ್ತದೆ .ವಿಜಯನಗರ ಸಾಮ್ರಾಜ್ಯ ಅಂದ ಕೂಡಲೇ ನಮಗೆ ನೆನಪಿಗೆ ಬರುವುದು ಚಿನ್ನ ಹೌದು ಸ್ನೇಹಿತರೆ ಈ ವಿಜಯನಗರ ಸಾಮ್ರಾಜ್ಯವು ಆಳ್ವಿಕೆ ಮಾಡುವ ಸಂದರ್ಭದಲ್ಲಿ ಚಿನ್ನವನ್ನು ಸೇರಿನಲ್ಲಿ ಅಳೆದು ಜನರಿಗೆ ಕೊಡುತ್ತಿದ್ದರಂತೆ ಅಷ್ಟು ಶ್ರೀಮಂತಿಕೆಯಿಂದ ಇತ್ತು ಅಂದಿನ ವಿಜಯನಗರ ಸಾಮ್ರಾಜ್ಯವು . |
ಹಾಗೆಯೇ ನಮ್ಮ ಭರತ ಭೂಮಿಯನ್ನು ಆಳಿರುವ ಪ್ರತಿ ರಾಜಮನೆತನಗಳು ಅದೆಷ್ಟೇ ತಲೆಮಾರುಗಳು ಕಳೆದರೂ ಕೂಡ ಅವರ ನೆನಪುಗಳು ಅವರ ಆ ಇತಿಹಾಸ ಎಂದಿಗೂ ಕೂಡ ಅಳಿಸಿ ಹೋಗುವುದಿಲ್ಲ ಹಾಗೆಯೇ ನಾವು ಕೂಡ ನಮ್ಮ ಇತಿಹಾಸವನ್ನು ನಮ್ಮ ಪೀಳಿಗೆಗೆ ತಿಳಿಸಿಕೊಡುವ ಆದಷ್ಟು ಪ್ರಯತ್ನವನ್ನು ಮಾಡಿದರೆ ತುಂಬಾನೇ ಒಳ್ಳೆಯದು .ನೀವೆಲ್ಲರೂ ವಾರ್ತೆಗಳಲ್ಲಿ ನ್ಯೂಸ್ ಪೇಪರ್ ಗಳಲ್ಲಿ ಓದಿರಬಹುದು ಭೂಮಿಯನ್ನು ಅಗೆಯುವಾಗ ಚಿನ್ನದ ಖಜಾನೆಗಳು ಇನ್ನು ಹಲವಾರು ರಾಜಮನೆತನಗಳ ಬಗ್ಗೆ ಇರುವಂತಹ ಪುರಾವೆಗಳು ದೊರೆತಿವೆ ಎಂಬ ವಿಚಾರಗಳನ್ನು ಹಾಗೆಯೇ ಉತ್ತರ ಪ್ರದೇಶದಲ್ಲಿ ಒಂದು ಘಟನೆ ನಡೆದಿದೆ ಹೌದು ಸ್ನೇಹಿತರೆ ಆ ಕಥೆ ಏನು ಎಂಬುದನ್ನು ತಿಳಿಯೋಣ ತಪ್ಪದೇ ನೈಜ ಘಟನೆಯನ್ನು ತಿಳಿದು ಬೇರೆಯವರೊಂದಿಗೂ ಮಾಹಿತಿಯನ್ನು ಶೇರ್ ಮಾಡಿ . |
ಉತ್ತರ ಪ್ರದೇಶಕ್ಕೆ ಸೇರಿದ ಒಬ್ಬ ರೈತ ಹಿಮಾನ್ದಾಸ್ ಸಿಂಗ್ ಇವರ ಹೆಸರು ಇವರು ಒಮ್ಮೆ ತಮ್ಮ ಜಮೀನಿನಲ್ಲಿ ಇದ್ದಂತಹ ಸಾಕಷ್ಟು ಬಂಡೆಗಳನ್ನು ತೆಗೆಸಿ ಹಾಕಬೇಕೆಂಬ ನಿರ್ಧಾರವನ್ನು ತೆಗೆದುಕೊಂಡು ಜೆಸಿಬಿಯನ್ನು ಕರೆಸಿ ಅವುಗಳನ್ನು ತೆಗೆಸಿ ಹಾಕುವ ಕೆಲಸವನ್ನು ಮಾಡಿಸುತ್ತಿದ್ದರು ಅದರೆ ಈ ಕೆಲಸ ಮಾಡುವಾಗ ಅಲ್ಲಿ ಒಂದು ಅಚ್ಚರಿ ಕಾದಿತ್ತು .ಅದೇನೆಂದರೆ ರೈತ ಜಮೀನಿನಲ್ಲಿ ಕೆಲಸ ಮಾಡಿಸುವಾಗ ಜೆಸಿಬಿಯಿಂದ ಬಂಡೆಗಳನ್ನು ಯತ್ನಿಸುವ ಸಂದರ್ಭದಲ್ಲಿ ಏನು ಒಂದು ಗಟ್ಟಿಯಾದ ಪದಾರ್ಥವು ಶಬ್ದ ಮಾಡುತ್ತದೆ ಆಗ ಅದೇನೆಂದು ಮಣ್ಣನ್ನು ಬಗೆದು ನೋಡಿದಾಗ ಒಂದು ಮಡಕೆಯಲ್ಲಿ ನಾಣ್ಯಗಳು ಆ ಜಮೀನಿನಲ್ಲಿ ದೊರೆಯುತ್ತದೆ . |
ಆಗ ರೈತ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸಿ ತನ್ನ ಜಮೀನಿಗೆ ಬರಲು ಕರೆ ನೀಡುತ್ತಾನೆ ನಂತರ ಅಧಿಕಾರಿಗಳು ಬಂದು ರೈತನಿಗೆ ದೊರೆತಂತೆ ನಾಣ್ಯಗಳನ್ನು ಪರಿಶೀಲಿಸುತ್ತಾರೆ . ಆ ನಾಣ್ಯಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳು ಈ ನಾಣ್ಯಗಳು ಹರಪ್ಪನ ಸಿವಿಲೈಸೇಶನ್ ಗೆ ಸೇರಿದ ದಾನಿಗಳಾಗಿ ಇದು ಸುಮಾರು ಒಂದೂವರೆ ಕೋಟಿ ಬೆಲೆ ಬಾಳುವಂತಹ ನಾಣ್ಯಗಳಾಗಿವೆ ಎಂದು ತಿಳಿಸುತ್ತಾರೆ .ಆಗ ರೈತನು ಆ ನಾಣ್ಯಗಳನ್ನು ಸರಕಾರಕ್ಕೆ ಒಪ್ಪಿಸಲು ಮುಂದಾಗುತ್ತಾರೆ ಸರಕಾರವು ರೈತನಿಗೆ ಐದು ಲಕ್ಷ ರೂಪಾಯಿಗಳ ಬಹುಮಾನವನ್ನು ಕೂಡ ನೀಡುತ್ತದೆ .ಇವೆಲ್ಲವೂ ನಮ್ಮ ಭಾರತ ಭೂಮಿಯಲ್ಲಿ ರಾಜವಂಶಸ್ಥರು ಆಳ್ವಿಕೆ ಮಾಡಿದ್ದರು ಎಂಬ ಪುರಾವೆಗಳನ್ನು ನೀಡುತ್ತಾ ಇವೆ ಹಾಗೇ ರೈತರು ತನಗೆ ಸಿಕ್ಕಂತಹ ಅಷ್ಟು ಬೆಲೆ ಬಾಳುವ ನಾಣ್ಯಗಳನ್ನು ಸರಕಾರಕ್ಕೆ ನೀಡಿ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ ಆ ರೈತ . |
ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಪ್ರಧಾನಿ ಚರ್ಚೆ |
Posted On: 08 APR 2020 3:33PM by PIB Bengaluru |
ಪ್ರತಿಯೊಂದು ಜೀವವನ್ನೂ ಉಳಿಸುವುದು ಸರ್ಕಾರದ ಆದ್ಯತೆಯಾಗಿದೆ: ಪ್ರಧಾನಿ |
ಇಂದಿನ ಚರ್ಚೆಯು ರಚನಾತ್ಮಕ ಮತ್ತು ಸಕಾರಾತ್ಮಕ ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ, ಭಾರತದ ಶಕ್ತಿಯುತ ಪ್ರಜಾಪ್ರಭುತ್ವದ ಅಡಿಪಾಯ ಮತ್ತು ಸಹಕಾರಿ ಒಕ್ಕೂಟದ ಮನೋಭಾವವನ್ನು ಪುನರುಚ್ಚರಿಸುತ್ತದೆ: ಪ್ರಧಾನಿ |
ದೇಶದ ಪರಿಸ್ಥಿತಿ 'ಸಾಮಾಜಿಕ ತುರ್ತುಸ್ಥಿತಿ'ಯಂತಿದೆ; ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಮತ್ತು ನಾವು ಜಾಗರೂಕರಾಗಿ ಮುಂದುವರಿಯಬೇಕಿದೆ: ಪ್ರಧಾನಿ |
ರಾಜ್ಯಗಳು, ಜಿಲ್ಲಾಡಳಿತಗಳು ಮತ್ತು ತಜ್ಞರು ವೈರಸ್ ಹರಡುವಿಕೆಯನ್ನು ತಡೆಯಲು ಲಾಕ್‌ಡೌನ್ ವಿಸ್ತರಣೆಗೆ ಸೂಚಿಸಿದ್ದಾರೆ: ಪ್ರಧಾನಿ |
ನಾಯಕಕರಿಂದ ಫೀಡ್ ಬ್ಯಾಕ್, ನೀತಿ ಕ್ರಮಗಳ ಸಲಹೆ, ಲಾಕ್‌ಡೌನ್ ಮತ್ತು ಮುಂದಿನ ಹಾದಿಯ ಬಗ್ಗೆ ಚರ್ಚೆ |
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳ ಸದನ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. |
ಇಡೀ ವಿಶ್ವವೇ ಇಂದು COVID-19 ರ ಗಂಭೀರ ಸವಾಲನ್ನು ಎದುರಿಸುತ್ತಿದೆ ಎಂದು ಹೇಳಿದ ಪ್ರಧಾನಿ, ಪ್ರಸ್ತುತ ಪರಿಸ್ಥಿತಿ ಮಾನವಕುಲದ ಇತಿಹಾಸದಲ್ಲಿ ಒಂದು ಯುಗ ಬದಲಾವಣೆಯ ಘಟನೆಯಾಗಿದ್ದು, ಇದರ ಪರಿಣಾಮವನ್ನು ಎದುರಿಸಲು ನಾವು ಸಿದ್ಧರಿಬೇಕು ಎಂದರು. ಸಾಂಕ್ರಾಮಿಕ ರೋಗದ ವಿರುದ್ಧದ ಈ ಹೋರಾಟದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಜೊತೆಯಾಗಿ ಕೆಲಸ ಮಾಡುತ್ತಿರುವುದನ್ನು ಅವರು ಶ್ಲಾಘಿಸಿದರು. ಈ ಹೋರಾಟದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ರಾಜಕೀಯದ ಎಲ್ಲಾ ವರ್ಗಗಳನ್ನು ಒಗ್ಗೂಡಿಸುವ ಮೂಲಕ ದೇಶವು ರಚನಾತ್ಮಕ ಮತ್ತು ಸಕಾರಾತ್ಮಕ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಈ ಪ್ರಯತ್ನದಲ್ಲಿ ಪ್ರತಿಯೊಬ್ಬ ನಾಗರಿಕನು ಸಾಮಾಜಿಕ ಅಂತರ, ಜನತಾ ಕರ್ಫ್ಯೂ ಅಥವಾ ಲಾಕ್‌ಡೌನ್ ಹೀಗೆ ಯಾವುದೇ ಇರಲಿ ಅದರ ಅನುಸರಣೆಯಲ್ಲಿ ಶಿಸ್ತು, ಸಮರ್ಪಣೆ ಮತ್ತು ಬದ್ಧತೆಯ ಮೂಲಕ ನೀಡುತ್ತಿರುವ ಕೊಡುಗೆಯನ್ನು ಅವರು ಶ್ಲಾಘಿಸಿದರು. |
ಸಂಪನ್ಮೂಲಗಳ ಮಿತಿಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ಪರಿಣಾಮದ ಬಗ್ಗೆ ಪ್ರಧಾನಿ ಒತ್ತಿಹೇಳಿದರು. ಆದರೂ, ವೈರಸ್ ಹರಡುವ ವೇಗವನ್ನು ನಿಯಂತ್ರಿಸಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ ಮತ್ತು ನಾವು ಯಾವಾಗಲೂ ಜಾಗರೂಕತೆಯಿಂದ ಇರಬೇಕು ಎಂದು ಅವರು ಎಚ್ಚರಿಸಿದರು. |
ದೇಶದ ಪರಿಸ್ಥಿತಿ 'ಸಾಮಾಜಿಕ ತುರ್ತುಸ್ಥಿತಿಗೆ'ಸಮಾನವಾಗಿದೆ ಎಂದು ಪ್ರಧಾನಿ ಹೇಳಿದರು. ಪರಿಸ್ಥಿತಿಯು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮತ್ತು ಜಾಗರೂಕರಾಗಿ ಮುಂದುವರಿಯುವಂತೆ ಮಾಡಿದೆ ಎಂದರು. ಲಾಕ್‌ಡೌನ್ ವಿಸ್ತರಿಸುವಂತೆ ಹಲವಾರು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಮತ್ತು ತಜ್ಞರು ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು. |
ಬದಲಾಗುತ್ತಿರುವ ಸನ್ನಿವೇಶಗಳಲ್ಲಿ, ದೇಶವು ತನ್ನ ಕೆಲಸದ ಸಂಸ್ಕೃತಿ ಮತ್ತು ಕಾರ್ಯ ಶೈಲಿಯಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು ಎಂದು ಪ್ರಧಾನಿ ಹೇಳಿದರು. ಸರ್ಕಾರದ ಆದ್ಯತೆಯು ಪ್ರತಿಯೊಂದು ಜೀವವನ್ನೂ ಉಳಿಸುವುದೇ ಆಗಿದೆ ಎಂದು ಹೇಳಿದರು. COVID-19 ರ ಪರಿಣಾಮವಾಗಿ ದೇಶವು ಗಂಭೀರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅವುಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. |
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಸೌಲಭ್ಯಗಳ ವಿತರಣೆಯ ಪರಿಸ್ಥಿತಿ ಸೇರಿದಂತೆ ಹೊಸ ಸವಾಲುಗಳನ್ನು ಎದುರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ವಿವರವಾದ ಪ್ರಸ್ತುತಿಗಳನ್ನು ನೀಡಿದರು. |
ಸಭೆ ನಡೆಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ನಾಯಕರು, ಕೈಗೊಂಡ ಸಮಯೋಚಿತ ಕ್ರಮಗಳನ್ನು ಶ್ಲಾಘಿಸಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ದೇಶವು ಅವರ ಬೆಂಬಲಕ್ಕೆಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದರು. ಆರೋಗ್ಯ ಕಾರ್ಯಕರ್ತರ ಆರೋಗ್ಯ ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸುವುದು, ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವುದು, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುವ ಅಗತ್ಯತೆ ಮತ್ತು ಹಸಿವು ಮತ್ತು ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸುವ ಬಗ್ಗೆ ಪಕ್ಷಗಳ ನಾಯಕರು ಮಾತನಾಡಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಈ ಯುದ್ಧದಲ್ಲಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವ ಆರ್ಥಿಕ ಮತ್ತು ಇತರ ನೀತಿ ಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು. ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ಮತ್ತು ಲಾಕ್‌ಡೌನ್ ನ್ನು ಹಂತಹಂತವಾಗಿ ತೆಗೆಯುವ ಬಗ್ಗೆ ನಾಯಕರು ಸಲಹೆಗಳನ್ನು ನೀಡಿದರು. |
ನಾಯಕರ ರಚನಾತ್ಮಕ ಸಲಹೆಗಳು ಮತ್ತು ಪ್ರತಿಕ್ರಿಯೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನಿಯವರು, ಈ ಹೋರಾಟದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವ ಅವರ ಬದ್ಧತೆಯು ದೇಶದ ಪ್ರಜಾಪ್ರಭುತ್ವದ ಅಡಿಪಾಯ ಮತ್ತು ಸಹಕಾರಿ ಒಕ್ಕೂಟದ ಮನೋಭಾವವನ್ನು ಪುನರುಚ್ಚರಿಸುತ್ತದೆ ಎಂದರು. |
ಕೇಂದ್ರ ಸಂಸದೀಯ ಸಚಿವರು, ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಸಂವಾದದಲ್ಲಿ ಭಾಗವಹಿಸಿದ್ದರು. |
ಅವರಿಗೇನು ವೀಳ್ಯ ಕೊಟ್ಟು ಕರೆಬೇಕಾಗಿತ್ತಾ : ಸಿಎಂ | Yeddyurappa | Mysore Dasara | Dasara Festival | HR Bhardwaj | Law and Order| ಅವರಿಗೇನು ವೀಳ್ಯ ಕೊಟ್ಟು ಕರೆಬೇಕಾಗಿತ್ತಾ : ಸಿಎಂ - Kannada Oneindia |
ಅವರಿಗೇನು ವೀಳ್ಯ ಕೊಟ್ಟು ಕರೆಬೇಕಾಗಿತ್ತಾ : ಸಿಎಂ |
| Published: Tuesday, September 29, 2009, 10:45 [IST] |
ಮೈಸೂರು, ಸೆ. 29 : ನಾಡಹಬ್ಬ ದಸರಾ ನಮ್ಮ ಹೆಮ್ಮೆಯ ಹಬ್ಬ. ಇದರಲ್ಲಿ ಭಾಗವಹಿಸಲು ಯಾರನ್ನೂ ಪ್ರತ್ಯೇಕವಾಗಿ ಕರೆಯಬೇಕಾಗಿಲ್ಲ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಈ ನಾಡಹಬ್ಬದಲ್ಲಿ ಭಾಗವಹಿಸಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಬೇಕು. ಎಲ್ಲರನ್ನೂ ವೀಳ್ಯ ಕೊಟ್ಟು ಕರಿಯಲು ಇದೇನು ನನ್ನ ಮನೆಯ ಮದುವೆಯಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ದಸರಾ ಕಾರ್ಯಕ್ರಮದಲ್ಲಿ ವಿರೋಧ ಪಕ್ಷಗಳ ಗೈರುಹಾಜರಿ ಬಗ್ಗೆ ಕಿಡಿಕಾರಿದರು. |
ಸುತ್ತೂರು ಮಠದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಸಿಎಂ, ವಿಧಾನಸೌಧದ ಮುತ್ತಿಗೆಗೆ ಸ೦ಬ೦ಧಪಟ್ಟ೦ತೆ ಕಾಂಗ್ರೆಸ್ ಪಕ್ಷದವರು ಸಂವಿಧಾನ ವಿರೋಧಿ ನೀತಿ ಅನುಸರಿಸಿದ್ದಾರೆ. ಇದು ನಿಜವಾದ ಹೋರಾಟವಲ್ಲ, ಬರೀ ಪ್ರಚಾರಕ್ಕಾಗಿ ನಡೆಸಿದ ಗಿಮಿಕ್ ಎ೦ದು ವ್ಯ೦ಗ್ಯವಾಡಿದ್ದಾರೆ. ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂದೆ ರಾಜ್ಯಪಾಲರು ಅನಗತ್ಯವಾಗಿ ಹೇಳಿಕೆ ನೀಡಬಾರದು. ಸರಕಾರದ ಬಗ್ಗೆ ಟೀಕೆ ಮಾಡುವ ಮುನ್ನ ಒಮ್ಮೆ ಯೋಚಿಸಲಿ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ. |
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಸ್ಕಲ್ ಸರಕಾರ ಎಂದು ಪದ ಬಳಸಿದ್ದಾರೆ. ಇದು ಅವರ ಘನತೆಗೆ ಶೋಭೆ ತರುವ೦ತಹದಲ್ಲ. ಗಲಾಟೆಯನ್ನು ಅವರೇ ಆರ೦ಭಿಸಿ ಈಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ವಿಧಾನಸೌಧದ ರಕ್ಷಣೆಗಾಗಿ ನಾವು ದೂರು ಕೊಡಬೇಕಾಗಿತ್ತು. ಆದರೆ ಅವರು ದೂರು ಕೊಟ್ಟಿದ್ದಾರೆ. ನಾವು ಸಹ ದೂರು ಕೊಡ್ತೀವಿ ಎ೦ದು ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. |
ಯಡಿಯೂರಪ್ಪ mysuru dasara ಮೈಸೂರು ದಸರಾ ಎಚ್ ಆರ್ ಭಾರದ್ವಾಜ್ ದಸರಾ ಹಬ್ಬ hr bhardwaj law and order ಕಾನೂನು ಸುವ್ಯವಸ್ಥೆ |
ಪಾಪ್ಕಾರ್ನ್ ಮಂಕಿ ಟೈಗರ್ ಯಾಕೆ ಹೊಸ ಅಲೆ ಸೃಷ್ಠಿಸಲಿದೆ ಅಂದ್ರಾ ..? |
ಸೂರಿ ಯವರ ಭಾರಿ ನಿರೀಕ್ಷೆ ಹುಟ್ಟಿಸಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ. ಈ ಚಿತ್ರ ಹಲವಾರು ವಿಶೇಷತೆಗಳಿಂದ ಕೂಡಿದೆ. ಟ್ರೈಲರ್ ಇತ್ರೀಚೆಗಷ್ಟೆ ಬಿಡುಗಡೆ ಹೊಂದಿದ್ದು ಪಿಎಮ್ ಟಿಯ ರಾ ಲುಕ್ ಗಾಂಧಿನಗರದಲ್ಲಿ ಗುಲ್ಲೆಬಿಸಿದೆ. ವಿಲನ್ ಕ್ಯಾರೆಕ್ಟರ್ ನಿಂದಲೆ ದಿನೇ ದಿನೆ ಲೈಕ್ಸ್ ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ ಒಬ್ಬ ಕಮರ್ಷಿಯಲ್ ಹೀರೋ ಗೂ ಮೀರಿದ ಪಾಪ್ಯುಲಾರಿಟಿ ಪಡೆದುಕೊಂಡ ಡಾಲಿ ಧನಂಜಯ್ ಯೂ ಟ್ಯೂಬ್ ನಲ್ಲಿ ಪ್ರಸಿದ್ದಿ ಪಡೆಯುತ್ತಾ ಇಡೀ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಇದಕ್ಕೆ ಸೂರಿ ಕಾರಣಕರ್ತ ಎಂದು ಗಾಂಧಿನಗರದ… |
ಪುಕ್ಸಟ್ಟೆ ಲೈಫು ಟೀಂನಿಂದ ಸ್ವಾಮಿ ಶರಣಂ ಸಾಂಗ್ ರಿಲೀಸ್. |
ಪುಕ್ಸಟ್ಟೆ ಲೈಫು ಸಿನಿಮಾವನ್ನ ಜನರ ಮುಂದಿಡುವ ಮುನ್ನ ನಿರ್ದೇಶಕ ಅರವಿಂದ್ ಕುಪ್ಲೀಕರ್ ಸಾಂಗ್ ರಿಲೀಸ್ ಮಾಡ್ತಿದ್ದಾರೆ. ಅದು ಯಾವುದೋ ಸಾಂಗ್ ಅಲ್ಲ ಬದಲಾಗಿ ಸ್ವಾಮಿ ಶರಣಂ ಎನ್ನುವ ಭಕ್ತಿ ಗೀತೆಯನ್ನ ಅಯ್ಯಪ್ಪ ಭಕ್ತರಿಗೆಂದೇ ಮೀಸಲಿಟ್ಟಿದ್ದಾರೆ. ಈ ಸಾಂಗ್ ಶುಕ್ರವಾರ ಜನವರಿ 10 ರಂದು ಬೆಳಗ್ಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತಿಯ ಸುಧೆ ಹರಿಸಲಿದೆ. ರಾಷ್ಟ್ರ ಪಶಸ್ತಿ ವಿಜೇತ ಸಂಚಾರಿ ವಿಜಯ್ ಮುಖ್ಯ ಭೂಮಿಕೆಯ ಪುಕ್ಸಟ್ಟೆ ಲೈಫು ಎಮ್.ಎಸ್. ರಮೇಶ್ ಬರೆದ ಕಥೆಯನ್ನಾಧರಿಸಿ ಸೃಷ್ಟಿಸಿದರೂ ಅರವಿಂದ್ ಸ್ವತಃ ಸಿನಿಮಾ… |
ಟ್ರೆಂಡ್ ಸೃಷ್ಟಿಸ್ತಿದೆ ಪಾಪ್ ಕಾರ್ನ್ ಮಂಕಿ ಟೈಗರ್ ಫಸ್ಟ್ ಟೀಸರ್. |
ಪಿಆರ್ಕೆ ಯೂಟ್ಯೂಬ್ ಚ್ಯಾನಲ್ ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಫಸ್ಟ್ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲಡೆ ಪ್ರಶಂಸೆಗಳಿಸಿಸುತ್ತಿದೆ. ಬಹಳಷ್ಟು ನಿರೀಕ್ಷೆ ಹಾಗು ತೀವ್ರ ಕುತೂಹಲ ಹುಟ್ಟಿಸಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಈ ಟ್ರೈಲರ್ ಈಗಾಗಲೆ ಲಕ್ಷಕ್ಕೂ ಅಧಿಕ ವೀವ್ಸ್ ದಾಟಿದೆ. ಸೈಲೆಂಟ್ ಆಗಿ ಚಿತ್ರ ಮಾಡಿ, ಇದೀಗ ಟೀಸರ್ ರಿಲೀಸ್ ಮಾಡಿ, ಸುದ್ದಿಯಾಗುವುದಕ್ಕೆ ಇಷ್ಟಪಡುವ ನಿರ್ದೇಶಕ ಸೂರಿ ಸ್ಟೈಲ್ ಚಿತ್ರದ ಸನ್ನಿವೇಶಗಳಲ್ಲಿ ಕಂಡುಬಂದರೂ ಅದಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ. ಟ್ರೈಲರ್ನ… |
ನಾನು ಮತ್ತು ಗುಂಡ ಪಾಸ್, ಜಾಕ್ ಮಂಜು ನೋಡಿ ಮೆಚ್ಚಿ ವಿತರಣೆಗೆ ಸೈ !!! |
ಮಾತುಬಾರದ ಮೂಕು ಪ್ರಾಣಿಗಳಿಗೆ ಸ್ವಲ್ಪ ಪ್ರೀತಿ ತೋರಿದರೆ ಅದು ಇಡೀ ಜೀವನ ಅದನ್ನ ನೆನಪು ಮಾಡಿಕೊಳ್ಳುತ್ತವೆ. ಅದರಲ್ಲೂ ಶ್ವಾನಗಳು ಇದರಲ್ಲಿ ಎತ್ತಿದ ಕೈ. ಚಂದನವನದಲ್ಲಿ ಮನುಷ್ಯ ಹಾಗು ಸಾಕು ಪ್ರಾಣಿ ಸಂಬಂಧ ಬಹಳಷ್ಟು ಬಾರಿ ಅನಾವರಣಗೊಂಡಿದೆ. ಅದರಲ್ಲಿ ಮತ್ತೊಂದು ಸೇರ್ಪಡೆ ನಾನು ಮತ್ತು ಗುಂಡ ಚಿತ್ರ, ಇದು ಈಗ ತೆರೆಗೆ ಬರಲು ಸಿದ್ಧವಾಗಿದೆ. ಇಡೀ ಸಿನಿಮಾ, ಫಸ್ಟ್ ಲುಕ್, ಟೀಸರ್ ಗಳಿಂದ ವಿಶೇಷವಾಗಿ ಸದ್ದು ಮಾಡುತ್ತಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತ ಹೊರನಾಡು… |
ದುನಿಯಾ ವಿಜಿ-ಡಾಲಿ ಚಿತ್ರದ ಮೇಕಿಂಗ್ ಗೆ ಪ್ರಶಂಸೆಯ ಸುರಿಮಳೆ..!!! |
ನಿರೀಕ್ಷೆಯಂತೆ ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸೂರಿಯಣ್ಣ ಸಾಂಗ್ ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ. ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡನ್ನ ಗ್ರ್ಯಾಂಡ್ ಆಗಿ ರಿಲೀಸ್ ಮಾಡಿದ್ದಾರೆ. ಎ2 ಆಡಿಯೋ ಮೂಲಕ ಲೋಕಾರ್ಪಣೆಗೊಂಡಿರೋ ಸಲಗ ಚಿತ್ರದ ಸೂರಿಯಣ್ಣ ಸಾಂಗ್ ರಿಲೀಸ್ ಆಗ್ತಿದ್ದಂತೆ. ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಟಗರು ಚರಣ್ ರಾಜ್ ಸಂಗೀತ ಸಂಯೋಜನೆ ದುನಿಯಾ ವಿಜಯ್ ಕರಣ್… |
ನಾಳೆ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ರಿಲೀಸ್..!!! |
ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಟೀಸರ್ ನಾಳೆ ಅಂದ್ರೆ 7ನೇ ತಾರೀಖು ರಿಲೀಸ್ ಆಗ್ತಿದೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಈ ಟೀಸರ್ ನ ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಮಾಡಲಾಗ್ತಿದೆ. ಸೈಲೆಂಟಾಗಿ ಸಿನಿಮಾ ಮಾಡಿ, ಇದೀಗ ಸೈಲೆಂಟಾಗಿ ಟೀಸರ್ ರಿಲೀಸ್ ಮಾಡಿ, ವೈಲೆಂಟಾಗಿ ಸದ್ದು ಸುದ್ದಿ ಮಾಡೋದಕ್ಕೆ ನಿರ್ದೇಶಕ ಸೂರಿ ಸಜ್ಜಾಗಿದ್ದಾರೆ.… |
ಕಲಿಯುಗದ ಪ್ರತ್ಯಕ್ಷ ದೈವ ನೆಲೆಸಿರೋ ಕ್ಷೇತ್ರವಿದು. |
ನಮ್ಮ ಪುರಾಣಗಳ ಪ್ರಕಾರ ಭೂವಿಯ ಮೇಲೆ 108 ತಿರುಪತಿಗಳಿವೆಯಂತೆ. ಅಂದರೆ ಸೃಷ್ಟಿಕರ್ತ ವಿಷ್ಣು ವೆಂಕಟೇಶ್ವರಸ್ವಾಮಿಯ ರೂಪದಲ್ಲಿ ನೆಲೆನಿಂತ ದಿವ್ಯ ಕ್ಷೇತ್ರಗಳಿವು. ಅಂತಹ ಮಹಿಮಾನ್ವಿತ ತಾಣಗಳ್ಲಿ ಬಂಗಾರು ತಿರುಪತಿ ಕೂಡಾ ಒಂದು. ಇದು ಅಂತಿಂಥ ತಾಣವಲ್ಲವೇ ಅಲ್ಲ. ಪುರಾಣ ಕಾಲದಿಂದಲೂ ಈ ಕ್ಷೇತ್ರಕ್ಕೆ ದಿವ್ಯ ಪರಂಪರೆಯಿದೆ. ಸಾಕಷ್ಟು ಮಹಿಮಾಪೂರ್ಣ ಹಿನ್ನೆಲೆಯಿದೆ. ಅಂಥಹ ದೈವೀ ಪ್ರಭಾವವುಳ್ಳ ಸ್ಥಳ ಈ ಆಲಯ. ಇದು ಭಗವಂತ ಮಹಿಮೆ ಮೆರೆದ ವಿಶಿಷ್ಟ ಕತೆಗೆ ಸಾಕ್ಷಿಯಾಗಿದೆ. ಇದುವೇ ಕೋಲಾರ ಜಿಲ್ಲೆಯ ಬಂಗಾರಪೇಟೆಯಿಂದ 45 ಕಿ.ಮೀ ಕ್ರಮಿಸಿದರೆ… |
ವಿಶ್ವದಾಖಲೆಗೆ ಸಿದ್ದರಾಗ್ತಿರೋ ಪೊಲೀಸ್ ಇನ್ಸ್‌ಪೆಕ್ಟರ್ ಗಣೇಶ್. |
ಮೌಂಟ್ ಎವೆರೆಸ್ಟ್ ಮೇಲೆ ಕರ್ನಾಟಕ ಪೊಲೀಸ್ ಬಾವುಟವನ್ನು ಹಾರಿಸಿದ ಕೀರ್ತಿ ಹೊಂದಿರುವ ಇನ್ಸ್‌ಪೆಕ್ಟರ್ ಗಣೇಶ್ ಇದೀಗ ವಿಶ್ವ ದಾಖಲೆಗೆ ಮುಂದಾಗಿದ್ದಾರೆ. ಮೌಂಟ್ ಎವರೆಸ್ಟ್ ಮತ್ತು ಚುಲು ರೇಂಜ್ ಗಳನ್ನ ಒಂದೇ ಪ್ರಯಾಣದಲ್ಲಿ ಹತ್ತುವ ಮೂಲಕ ವಿಶ್ವದಾಖಲೆ ಮಾಡಲು ಹೊರಟಿರೋ ಇವರು ಅದರ ಪೂರ್ವಭಾವಿಯಾಗಿ ಬೆಂಗಳೂರಿನಿಂದ ದೆಹಲಿಗೆ ಸುಮಾರು 2 ಸಾವಿರ ಕಿಲೋಮೀಟರ್ ಸೈಕಲ್ ಯಾತ್ರೆ ಕೈಗೊಳ್ಳಲಿದ್ದಾರೆ. ಸದ್ಯ ಲೋಕಾಯುಕ್ತ ವಿಶೇಷ ದಳದಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಪಿ.ಎನ್. ಗಣೇಶ್ ಪೊಲೀಸ್ ಇಲಾಖೆಯಲ್ಲಿ ಕಳೆದ 29 ವರ್ಷಗಳಿಂದ ಸೇವೆ… |
ಸಿಕ್ಕಿದ್ದೇ ಚಾನ್ಸ್..! ಬಿಗ್ ಬಾಸ್ ಮನೇಲಿ ಮುತ್ತಿನ ಸುರಿಮಳೆ..! |
ಬಿಗ್ ಬಾಸ್ ಮನೆಯಲ್ಲಿ ಅವಕಾಶ ಸಿಕ್ಕಿದರೆ ಸಾಕು ಅದನ್ನು ಕೆಲವರು ಬಳಕೆ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ. ಟಾಸ್ಕ್ ವೇಳೆ ಮನೆಯ ಸದಸ್ಯರು ರಿಯಾಕ್ಟ್ ಮಾಡೋದಿಲ್ಲ ಅಂತ ಗೊತ್ತಾಗಿದ್ದೇ ತಡ ಕಿಶನ್, ಮನೆಯ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೇ ಕೊಟ್ಟಿದ್ದು. ಈ ವಿಚಾರದಲ್ಲಿ ಶೈನ್ ಶೆಟ್ರು ಸಹ ಕಿಶನ್ ರನ್ನೇ ಫಾಲೋ ಮಾಡಿದ್ರು. ಬಿಗ್‌ಬಾಸ್ ಮನೆಯ 12 ನೇ ವಾರದ ಲಗ್ಜುರಿ ಬಜೆಟ್ ಟಾಸ್ಕ್ "ನನ್ನ ನೀನು ಗೆಲ್ಲಲಾರೆ". ಇದರಲ್ಲಿ 82 ನೇ ದಿನ ಮನೆಯ ಸದಸ್ಯರಿಗೆ ಪಾಯಿಂಟ್ಸ್… |
ಕ್ರೇಜಿಯಾಗಿದೆ ಒಡೆಯರ್- ಇಶಾನ್ ರೇಮೊ ಮೋಷನ್ ಪೋಸ್ಟರ್..!! |
ಸ್ಟೈಲಿಶ್ ಲುಕ್… ಮಾಸ್ ಕಿಕ್… ರಾಕಿಂಗ್ ಬೀಟ್ಸ್.. ಎಲ್ಲಾ ಸೇರಿ ಟ್ರೆಂಡಿಯಾಗಿ ಕಂಗೊಳಿಸ್ತಿರೋ ಮೋಷನ್ ಪೋಸ್ಟರ್.. ಎಲ್ಲಾ ಆಂಗಲ್ ನಿಂದ್ಲೂ ನಿರೀಕ್ಷೆ ಹುಟ್ಟಿಸ್ತಿರೋ ಮ್ಯಾಸೀವ್ ಪೋಸ್ಟರ್ ರೇಮೊ ಚಿತ್ರದ ಮೋಷನ್ ಪೋಸ್ಟರ್. ವಿಲನ್ ಅಂತಹ ಅತಿದೊಡ್ಡ ಬಜೆಟ್ ಸಿನಿಮಾ ಮಾಡಿದ್ದ ನಿರ್ಮಾಪಕರು, ಪವರ್ ಫುಲ್, ಸ್ಟೈಲಿಶ್ ಅಂಡ್ ಟ್ರೆಂಡಿ ಸಿನಿಮಾಗಳನ್ನ ಮಾಡಿರೋ ಡೈರೆಕ್ಟರ್, ಜೊತೆಗೆ ಮ್ಯಾಜಿಕಲ್ ಕಂಪೋಸರ್ ಜೊತೆಯಾಗಿ, ಇಶಾನ್ ಅಂತಹ ಆರಡಿ ಹ್ಯಾಡ್ಸಂ ಹುಡ್ಗ, ಅಶಿಕಾ ರಂಗನಾಥ್ ಅಂತಹ ಬ್ಯೂಟಿಫುಲ್ ಹೀರೋಯಿನ್ ಕಾಂಬಿನೇಷನ್ ಇರೋ ಸಿನಿಮಾ… |
ಕೊರೋನಾಗೆ ಬಗ್ಗೆ ಭಯ ಪಡದ ಜನ: ವಾಹನಗಳ ಓಡಾಟಕ್ಕಿಲ್ಲ ಬ್ರೇಕ್ | People Did not Follow Government Rules during India LockDown in Haveri |
Bengaluru, First Published 22, Apr 2020, 8:33 AM |
ರಸ್ತೆಗಳಲ್ಲಿ ವಾಹನಗಳ ದಾಂಗುಡಿ| ಸೀಜ್, ದಂಡ ಹಾಕಲು ಮುಂದಾದರೆ ಪ್ರಭಾವಿಗಳ ಹೆಸರು ಹೇಳುವ ಸವಾರರು| ಯಾವ ವಾಹನ ತಡೆಯಬೇಡಿ ಎಂಬ ಆದೇಶ ಹೊರಡಿಸಿ ಎಂದ ಪೊಲೀಸರು| ಒಂದೊಂದು ಕಾರಣ ಹೇಳುತ್ತ ಪೊಲೀಸರಿಗೆ ತಲೆನೋವು ತರಿಸುತ್ತಿರುವ ವಾಹನ ಸವಾರರು| |
ಹಾವೇರಿ(ಏ.22): ಲಾಕ್‌ಡೌನ್ ಅವಧಿ ವಿಸ್ತರಣೆಯಾದ ಬಳಿಕ ಜಿಲ್ಲೆಯಲ್ಲಿ ಜನ ಹಾಗೂ ವಾಹನ ಸಂಚಾರ ಪ್ರಮಾಣ ಹೆಚ್ಚಿದೆ. ಪ್ರಭಾವಿಗಳ ಹೆಸರು ಹೇಳಿ ಪೊಲೀಸರೊಂದಿಗೆ ವಾಹನ ಸವಾರರು ವಾಗ್ವಾದಕ್ಕೂ ಇಳಿಯುತ್ತಿದ್ದಾರೆ. |
ಲಾಕ್‌ಡೌನ್ ಆದೇಶ ಪಾಲಿಸುವಂತೆ ಹಲವು ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದರೂ ಮನೆ ಬಿಟ್ಟು ಹೊರಬೀಳುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲರೂ ಒಂದೊಂದು ಕಾರಣ ಹೇಳುತ್ತ ಪೊಲೀಸರಿಗೆ ತಲೆನೋವು ತರಿಸುತ್ತಿದ್ದಾರೆ. ಒಂದು ಕಡೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂಬ ಸೂಚನೆ ನೀಡುತ್ತಿದ್ದರೆ, ಸ್ಥಳೀಯ ಜನಪ್ರತಿನಿಧಿಗಳು ಪೊಲೀಸರ ಕರ್ತವ್ಯದಲ್ಲಿ ಮಧ್ಯ ಪ್ರವೇಶಿಸುತ್ತಿದ್ದಾರೆ. ಯಾರ ಮಾತನ್ನು ಕೇಳಬೇಕು ಎಂಬುದು ಪೊಲೀಸರಿಗೆ ತಿಳಿಯದಂತಾಗಿದೆ. ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಆರಂಭದಲ್ಲಿ ಲಾಠಿ ಬೀಸಿದ್ದ ಪೊಲೀಸರು ಬಳಿಕ ದಂಡ, ವಾಹನ ಸೀಜ್ ಅಸ್ತ್ರ ಪ್ರಯೋಗಿಸಿದ್ದರು. ಈಗ ಅದೂ ಕೂಡ ನಿಂತಿದೆ. ಇದರಿಂದ ರಸ್ತೆ ಮೇಲೆ ಮಾಮೂಲಿ ದಿನಗಳಂತೆ ವಾಹನ ಓಡಾಟ ಶುರುವಾಗಿದೆ. |
ಮಾಮೂಲಿ ದಿನಗಳಂತೆ ಓಡಾಟ: |
ಜಿಲ್ಲಾ ಕೇಂದ್ರ ಹಾವೇರಿ ನಗರದ ಮುಖ್ಯ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಲಾಕ್‌ಡೌನ್ ಆರಂಭದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಅಂಜಿದ್ದ ಸವಾರರು, ಈಗ ವಿವಿಧ ಕಾರಣ ಹೇಳಿ ಪೊಲೀಸರಿಗೇ ದಾರಿತಪ್ಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹಣ್ಣು, ತರಕಾರಿ, ದಿನಸಿ, ಬಿತ್ತನೆ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣ ಹಾಗೂ ಸಲಕರಣೆಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಅದೇ ರೀತಿ ಕೃಷಿ ಕಾರ್ಯಕ್ಕೂ ಅಡ್ಡಿಯಿಲ್ಲ ಎಂಬ ಸೂಚನೆ ನೀಡಲಾಗಿದೆ. ಇನ್ನು ಔಷಧಿ, ಆಸ್ಪತ್ರೆ ಇತ್ಯಾದಿ ತುರ್ತು ಅಗತ್ಯಗಳಿಗೆ ಮೊದಲಿನಿಂದಲೂ ರಿಯಾಯಿತಿಯಿದೆ. ಇದೆಲ್ಲ ಕಾರಣಗಳನ್ನು ಕೆಲವು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. |
ನಮಗೂ ಸಾಕಾಗಿದೆ: |
ಒಂದು ಕಡೆ ಕೊರೋನಾ ಆತಂಕ ಪೊಲೀಸರಿಗೂ ಇದೆ. ಮತ್ತೊಂದು ಕಡೆ ಬಿರುಬಿಸಿಲಲ್ಲಿ ರಸ್ತೆ ಮೇಲೆ ವಾಹನ ಸಂಚಾರ ನಿಯಂತ್ರಣಕ್ಕೆ ನಿಲ್ಲುವುದೆಂದರೆ ಸುಲಭದ ಕೆಲಸವಲ್ಲ. ಆದರೂ ಸರ್ಕಾರದ ಆದೇಶದಂತೆ ಬೆಳಗ್ಗೆಯಿಂದಲೇ ಪ್ರಮುಖ ಸರ್ಕಲ್‌ಗಳಲ್ಲಿ ನಿಂತು ಅನಗತ್ಯವಾಗಿ ರಸ್ತೆಗಿಳಿಯುತ್ತಿರುವವರ ಮೇಲೆ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಆದರೆ, ಬಹುತೇಕರು ಪ್ರಭಾವಿಗಳ ಹೆಸರು ಹೇಳಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ಇನ್ನು ಕೆಲವರು ಹೊಲಕ್ಕೆ ಹೋಗುತ್ತಿದ್ದೇವೆ, ಆಸ್ಪತ್ರೆ, ಹಾಲು, ಔಷಧಿ ಇತ್ಯಾದಿ ಕಾರಣ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಜನರಿಗೆ ತಿಳಿಹೇಳಿ, ವಾಗ್ವಾದ ಮಾಡಿ ಪೊಲೀಸರಿಗೂ ಬೇಸರವಾಗಿದೆ. |
ನಮಗೂ ಸಾಕಾಗಿ ಹೋಗಿದೆ. ಈ ಜನರು ಎಷ್ಟುಹೇಳಿದರೂ ಕೇಳುತ್ತಿಲ್ಲ. ಒಮ್ಮೆ ಕೊರೋನಾ ಕಾಲಿಟ್ಟರೆ ಏನಾಗಬಹುದು ಎಂಬ ಆತಂಕವಾದರೂ ಸಾರ್ವಜನಿಕರಲ್ಲಿ ಇರಬೇಕಿತ್ತು. ವಾಹನ ಸೀಜ್ ಮಾಡಿದರೆ ಪ್ರಭಾವಿಗಳಿಂದ ಕರೆ ಮಾಡಿಸುತ್ತಾರೆ. ಅಷ್ಟಿದ್ದರೆ ಯಾವ ವಾಹನವನ್ನೂ ತಡೆಯಬೇಡಿ ಎಂದು ಆದೇಶ ಮಾಡಿಸಿಬಿಡಿ ಎಂದು ಹೇಳುತ್ತೇವೆ. ಪ್ರಭಾವಕ್ಕೆ ಬಗ್ಗದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರತಿ ವಾಹನ ಸವಾರರೊಂದಿಗೂ ವಾಗ್ವಾದ ನಡೆಸುತ್ತ ನಮ್ಮ ತಲೆಯೇ ಹಾಳಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಅಸಹಾಕತೆ ವ್ಯಕ್ತಪಡಿಸಿದರು. |
ಭಯವೇ ಇಲ್ಲ |
ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ವೈರಸ್ ಪಾಸಿಟಿವ್ ಇರುವ ಪ್ರಕರಣ ಇನ್ನೂ ಪತ್ತೆಯಾಗಿಲ್ಲ. ಇದು ಕೆಲವರಿಗೆ ರಸ್ತೆಗಿಳಿಯಲು ಧೈರ್ಯ ತಂದುಕೊಟ್ಟಿದೆ. ನಮ್ಮ ಜಿಲ್ಲೆಯಲ್ಲಿ ಕೊರೋನಾ ಇಲ್ಲ, ಎಲ್ಲಿಗೋ ಹೋದರೂ ತೊಂದರೆಯಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜತೆಗೆ, ಮಾಸ್ಕ್ ಕೂಡ ಹಾಕಿಕೊಳ್ಳದೇ ಓಡಾಡುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ರಸ್ತೆ ಮೇಲೆ ಜನ ಹಾಗೂ ವಾಹನ ಸಂಚಾರ ಹೆಚ್ಚುತ್ತಿದೆ. ಮೇ 3ರ ತನಕ ಲಾಕ್‌ಡೌನ್ ಇದ್ದರೂ ಇಗಲೇ ಈ ರೀತಿ ವರ್ತಿಸುತ್ತಿರುವ ಜನರಿಂದ ಇತರರಿಗೆ ಆತಂಕ ಎದುರಾಗಿದೆ. |
ಕ್ಯಾಂಟೀನ್ ಎಂಬ ಅನುಭವ ಮಂಟಪ | Prajavani |
ಕ್ಯಾಂಟೀನ್ ಎಂಬ ಅನುಭವ ಮಂಟಪ |
Published: 03 ಏಪ್ರಿಲ್ 2019, 01:01 IST |
Updated: 03 ಏಪ್ರಿಲ್ 2019, 01:01 IST |
ಕಾಲೇಜು ಜೀವನದಲ್ಲಿ ಅತಿಮುಖ್ಯ ಪಾತ್ರ ವಹಿಸುವುದು ಕಾಲೇಜಿನಲ್ಲಿರುವ ಕ್ಯಾಂಟೀನ್ ಅಲ್ವಾ. ಹಾಗೆಯೆ ನಮ್ಮ ವಿವಿ ಕ್ಯಾಂಪಸ್ಸಿನಲ್ಲಿ ಜಗ್ಗಣ್ಣನ ಕ್ಯಾಂಟೀನ್ ತುಂಬಾ ಫೇಮಸ್. ಸದಾ ನಗುತ್ತಾ ಆತ್ಮೀಯವಾಗಿ ಸ್ವಾಗತಿಸುವ ಜಗ್ಗಣ್ಣನ ಕ್ಯಾಂಟೀನ್‌ನಲ್ಲಿ ತಯಾರಾಗುವ ಟೀ, ಗೋಬಿ ಮಂಚೂರಿ, ಪಾನಿಪುರಿ, ದೋಸೆ ಇತ್ಯಾದಿಗಳು ನಮಗೆ ಇಷ್ಟವಾಗುತ್ತಿದ್ದವು. |
ಹಾಸ್ಟೆಲ್‌ನಲ್ಲಿ ಉಪ್ಪು ಖಾರವಿಲ್ಲದ ಊಟ ತಿನ್ನುವ ನಮಗೆ ಜಗ್ಗಣ್ಣನ ಕ್ಯಾಂಟೀನ್‌ನಲ್ಲಿರುವ ತಿಂಡಿಗಳೇ ಅಮೃತ. ಅದರಲ್ಲೂ ಸ್ನೇಹಿತರ ಹುಟ್ಟುಹಬ್ಬದಂತಹ ಮತ್ತೆ ಏನೇ ವಿಶೇಷವಿದ್ದರೂ ಚಿಕ್ಕದಾಗಿ ಟೀ ಪಾರ್ಟಿ ಮಾಡೋಣ ಅಂತ ಹೇಳಿ ನಮಗೆ ಬೇಕಾಗಿದ್ದನ್ನೆಲ್ಲಾ ತಿಂದು ಸ್ನೇಹಿತರ ಜೇಬಿಗೆ ಕತ್ತರಿ ಹಾಕುವ ನಮ್ಮ ನಾಟಕಕ್ಕೆ ಯಾವ ಬಹುಮಾನ ಕೊಟ್ಟರೂ ಸಾಲುತ್ತಿರಲಿಲ್ಲ. ಆದರಿಂದ ಕೆಲವು ಸ್ನೇಹಿತರು ಪಾರ್ಟಿ ಕೊಡಿಸುವುದರಿಲಿ, ನಮ್ಮ ಜೊತೆ ಕ್ಯಾಂಟೀನ್‌ಗೆ ಬರಲೂ ಹೆದರಿ, ಇಲ್ಲಸಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಕ್ಯಾಂಟೀನ್ ಅನ್ನು ನಮ್ಮ ವಿವಿಯ ಪ್ರಣಯ ಪಕ್ಷಿಗಳ ಆಶ್ರಯಧಾಮ ಎಂದು ಕರೆದರೂ ತಪ್ಪಾಗಲಾರದು. |
ನಮಗೆ ಕಣ್ಣಿಗೆ ಕಾಣದ, ಕಿವಿಗೆ ಕೇಳಿಸದ ಕಾಲೇಜಿನ ಎಷ್ಟೋ ವಿಷಯಗಳು ತಿಳಿಯುವುದು ಇಲ್ಲಿಯೇ. ಹಾಗೇಯೇ ಯಾವುದೇ ರೀತಿಯ ಸೀನಿಯರ್ಸ್ ಮತ್ತು ಜ್ಯೂನಿಯರ್ ಎಂಬ ಯಾವ ಭೇದ ಭಾವವಿಲ್ಲದೇ, ಒಂದೇ ತಾಯಿಯ ಮಕ್ಕಳಂತೆ ಸ್ನೇಹಿತರ ತಟ್ಟೆಯಲ್ಲಿನ ತಿಂಡಿಯನ್ನು ಅವರಿಗೆ ತಿನ್ನಲು ಬಿಡದಂತೆ ಬಕಾಸುರರಂತೆ ತಿನ್ನುವ ನಮ್ಮನ್ನು ನೋಡಿ ಜಗ್ಗಣ್ಣನ ತುಟಿ ಅಂಚಿನಲ್ಲಿ ನಗು ಬರುತ್ತಿತ್ತು. ಎಷ್ಟೋ ಬಾರಿ ತರಗತಿಯ ಮಧ್ಯದಲ್ಲಿ ಹುಷಾರಿಲ್ಲವೆಂದು ಕಾರಣ ಹೇಳಿ ಕ್ಯಾಂಟೀನ್‌ಗೆ ಹೋದ ನಿದರ್ಶನಗಳೇ ಹೆಚ್ಚು. |
ಪ್ರತಿ ದಿನ ಸಂಜೆ ಕ್ಯಾಂಟೀನ್ ಟೀ ಕುಡಿಯದೇ ಹಾಸ್ಟೆಲ್‌ಗೆ ಹೋದ ದಿನವಿರಲಿಲ್ಲ. ಅದರಲ್ಲೂ ನಮ್ಮ ವಿಭಾಗದ ಸ್ನೇಹಿತರ ಜೊತೆ ಕ್ಯಾಂಟೀನ್‌ಗೆ ಲಗ್ಗೆ ಇಟ್ಟರೆ ವಾಪಸ್ ಹಿಂತಿರುಗಿ ಬರುವವರೆಗೂ ನಮ್ಮದೇ ಪ್ರಪಂಚದಲ್ಲಿ ಅಕ್ಕಪಕ್ಕ ಕೂತವರನ್ನು ರೇಗಿಸಿಕೊಂಡು ಬರುತ್ತಿದ್ದೆವು. ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವವರಿಂದ ಹಿಡಿದು ಅಡುಗೆ ಮಾಡುವ ಭಟ್ಟರಿಗೂ ತಲೆಗೆ ಹುಳ ಬಿಡುತ್ತಿದ್ದೆವು. ನಮ್ಮ ಗಲಾಟೆಯಿಂದಲೇ ಕ್ಯಾಂಟೀನ್‌ಗೆ ಒಂದು ಕಳೆ ಬರುತ್ತಿತ್ತು. ನಮ್ಮ ವಿವಿ ಕ್ಯಾಂಪಸ್ಸಿನಲ್ಲಿ ಕ್ಯಾಂಟೀನ್‌ನಲ್ಲಿ ಸಿಗುವ ಸ್ವಾಂತಂತ್ರ್ಯ ಮತ್ತೆಲ್ಲೂ ಸಿಗುವುದಿಲ್ಲ.ಗೆಳೆಯನ್ನೊಬ್ಬನ ಗಮನವನ್ನು ಬೇರೆಡೆ ಸೆಳೆದು ಅವನ ಪಾನಿಪುರಿಯ ಪಾನಿಯನ್ನು ನಾವು ಅರ್ಧ ಹೀರಿ ಆತ ಈ ಕಡೆ ನೋಡುವುದರ ಒಳಗೆ ಅದಕ್ಕೆ ನೀರನ್ನು ಸೇರಿಸುತ್ತಿದ್ದೆವು. ನಂತರ ಸುಮ್ಮನೆ ಏನೂ ಗೊತ್ತಿಲ್ಲದಂತೆ ಕೂತು ಅವನು ಕುಡಿದಾಗ ಅವನ ಪೇಚಾಟ ನೋಡಿ ನೋಡುತ್ತಿದ್ದೆವು. ಹೀಗೆ ನಮ್ಮ ತರ್ಲೆ ತುಂಟಾಟಗಳಿಗೆ ಮಿತಿಯೇ ಇರುತ್ತಿರಲಿಲ್ಲ. |
ಇದು ನಮ್ಮ ಹಾಗೇ ಅದೆಷ್ಟೋ ಜನ ವಿದ್ಯಾರ್ಥಿಗಳಿಗೆ ನೆನಪುಗಳ ತಂಗುದಾಣವಾಗಿದೆ. ಅವರು ನಮ್ಮ ಹಾಗೇ ಸಮಯ ಕಳೆದು ಹೋಗಿದ್ದಾರೆ.ಈಗ ನಮ್ಮ ಸರದಿ ಅಷ್ಟೇ. ಕ್ಯಾಂಟೀನ್ ಕೇವಲ ಮೋಜು ಮಸ್ತಿ ಅಷ್ಟೇ ಅಲ್ಲದೆ ಹಸಿದವರಿಗೆ ಅಮೃತ ನೀಡುವ ಪುಣ್ಯ ಸ್ಥಳವಾಗಿದೆ. ವಿವಿ ಕ್ಯಾಂಪಸ್‌ನಲ್ಲಿ ಈ ಒಂದು ಅನುಭವ ಮಂಟಪದಲ್ಲಿ ನನ್ನ ಹಾಗೂ ನನ್ನ ಸ್ನೇಹಿತರ ನೆನಪಿನ ಗಂಟು ಸಾಕಷ್ಟಿವೆ. ಹೀಗೆ ವಿದ್ಯಾರ್ಥಿ ಜೀವನದಲ್ಲಿ ಅದ್ಭುತ ಅನುಭವ ನೀಡುವ ಈ ಒಂದು ಅನುಭವ ಮಂಟಪವನ್ನು ನೆನಪಿಸಿಕೊಂಡಾಗ ಕಣ್ಣಿಂಚಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಕೆಲವೊಂದು ಘಟನೆಗಳನ್ನು ನೆನೆದು ನಗು ಬರುತ್ತದೆ. |
10ರಂದು ಜಯಚಾಮರಾಜ ಒಡೆಯರ್ ಜನ್ಮಶತಾನೋತ್ಸವ: ರಾಷ್ಟ್ರಪತಿ ಕೋವಿಂದ್ ಭಾಗಿ | Prajavani |
Published: 05 ಅಕ್ಟೋಬರ್ 2019, 16:27 IST |
Updated: 05 ಅಕ್ಟೋಬರ್ 2019, 16:27 IST |
ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವ ಅಂಗವಾಗಿ ಅರಮನೆಯಲ್ಲಿ ಅ.10 ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪಾಲ್ಗೊಳ್ಳಲಿದ್ದಾರೆ. |
ಅರಮನೆಯ ದರ್ಬಾರ್ ಹಾಲ್‌ನಲ್ಲಿ ಸಂಜೆ 7.30 ರಿಂದ ಕಾರ್ಯಕ್ರಮ ನಡೆಯಲಿದೆ. ಜಯಚಾಮರಾಜ ಒಡೆಯರ್ ರಚಿಸಿರುವ 94 ಸಂಗೀತ ಕೃತಿಗಳನ್ನು ಒಳಗೊಂಡ ಸಮಗ್ರ ಗ್ರಂಥ 'ಶ್ರೀವಿದ್ಯಾ ಸಂಕೀರ್ತನ ಸುಧಾಲಹರಿ'ಯನ್ನು ರಾಷ್ಟ್ರಪತಿ ಬಿಡುಗಡೆ ಮಾಡಲಿದ್ದಾರೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. |
ಜಯಚಾಮರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನೀಡಿದ್ದ ಜಾಗದಲ್ಲಿ ಮೈಸೂರು ವಿಶ್ವವಿದ್ಯಾಲಯ ವತಿಯಿಂದ ನಿರ್ಮಿಸಲಾಗುವ ನೂತನ ಕ್ಯಾಂಪಸ್‌ಗೆ 'ಜಯಚಾಮರಾಜ ಒಡೆಯರ್ ಉನ್ನತ ಅಧ್ಯಯನ ಶಿಕ್ಷಣ ಕೇಂದ್ರ' ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ನೂತನ ಕೇಂದ್ರದ ನಾಮಫಲಕವನ್ನು ರಾಷ್ಟ್ರಪತಿ ಅನಾವರಣಗೊಳಿಸಲಿದ್ದಾರೆ ಎಂದರು. |
ಕಾರ್ಯಕ್ರಮದ ಅಂಗವಾಗಿ ಅರಮನೆ ಆವರಣದಲ್ಲಿ ಬೆಂಗಳೂರಿನ ಎಂಇಜಿ ಮತ್ತು ಸೆಂಟರ್, ತಮಿಳುನಾಡಿನ ವೆಲಿಂಗ್ಟನ್‌ನ ಮದ್ರಾಸ್ ರೆಜಿಮೆಂಟಲ್ ಸೆಂಟರ್, ಬೆಳಗಾವಿಯ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಒಳಗೊಂಡಂತೆ ಎಂಟು ವಾದ್ಯ ತಂಡಗಳಿಂದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. |
ಜನ್ಮಶತಮಾನೋತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಅ.13 ರಂದು ಸಂಜೆ 6.30 ರಿಂದ ರಘು ದೀಕ್ಷಿತ್ ಅವರಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. |
ಶ್ರೀಲಂಕಾ ಸರಣಿ ಗೆಲುವು: ಭಾವನಾತ್ಮಕ ಟ್ವೀಟ್ ಮಾಡಿದ ರೋಹಿತ್ | ಸಂಜೆವಾಣಿಗೆ ಸ್ವಾಗತ |
ಹೈದರಾಬಾದ್, ಡಿ. ೧೯- ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ರೋಹಿತ್ ಶರ್ಮಾ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. |
ನನ್ನ ಜೀವನದ ಕೊನೆ ಕ್ಷಣದವರೆಗೂ ಈ ದಿನವನ್ನು ನೆನಪಿಸಿಕೊಳ್ಳುತ್ತೇನೆ. ಇದೇ ಮೊದಲ ಬಾರಿಗೆ ಇಂತಹದೊಂದು ಭಾವನೆ ವ್ಯಕ್ತವಾಗಿದೆ. ಈ ಭಾವನೆಯನ್ನು ಅಳೆಯುವುದಕ್ಕೂ ಮತ್ತು ಹೋಲಿಕೆ ಮಾಡುವುದಕ್ಕೂ ಆಗುವುದಿಲ್ಲ. ನನ್ನ ತಂಡದ ಸಹ ಆಟಗಾರರೊಂದಿಗೆ ಇಂತಹ ಅತ್ಯುತ್ತಮ ಸಾಧನೆ ಮಾಡಿದ್ದು ನಿಜಕ್ಕೂ ಗೌರವ ತಂದಿದೆ. ಇದಕ್ಕಿಂತ ಸಂತೋಷ ಬೇರೆ ಇಲ್ಲವೆಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ. |
ಭಾನುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು. ಸರಣಿ ಜಯದ ಕುರಿತು ಸೋಮವಾರದಂದು ರೋಹಿತ್ ಶರ್ಮಾ ತಮ್ಮ ಭಾವನೆಗಳನ್ನು ಟ್ವೀಟರ್ ಮೂಲಕ ಹಂಚಿಕೊಂಡಿದ್ದರು. |
ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು - Kannada DriveSpark |
22 min ago ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು |
36 min ago ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Honda N7X ಎಸ್‍ಯುವಿ |
ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು |
Updated: Wednesday, August 11, 2021, 21:09 [IST] |
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. |
ಭಾರತದಲ್ಲಿ ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದರ ನಡುವೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹೊಸ ಇಕೆಯುವಿ100 ಎಂಬ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಕಾರನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು. ಇನ್ನು ಇಕೆಯುವಿ100 ಮಾದರಿಯು ಬ್ರ್ಯಾಂಡ್‌ನ ಇ-ಮೊಬೈಲಿಟಿ NEMO ಮಾರ್ಕೆಟಿಂಗ್ ನಿರ್ವಹಣಾ ಫ್ಲಾಟ್ ಫಾರ್ಮ,ನ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ. |
ಮಹೀಂದ್ರಾ ಇಕೆಯುವಿ100 ಮಾದರಿಯು 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಈ ಮಹೀಂದ್ರಾ ಇಕೆಯುವಿ100 ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,8.75 ಲಕ್ಷವಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಕರೋನಾ ಆರ್ಭಟದ ಆಂತಕದಿಂದ ಎಲೆಕ್ಟ್ರಿಕ್ ಮೈಕ್ರೋ-ಎಸ್‌ಯುವಿಯ ಬಿಡುಗಡೆಯು ವಿಳಂಬವಾಗಿದೆ. |
2021ರ ಮೇ ತಿಂಗಳಿನಲ್ಲಿ ಭಾರತದಲ್ಲಿ ಮುಂದಿನ 6 ವರ್ಷಗಳಲ್ಲಿ ಒಟ್ಟು 9 ಎಸ್‍ಯುವಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಮುಂದಿನ ವರ್ಷದ ಆರಂಭದಲ್ಲಿ ಇಕೆಯುವಿ100 ಬಿಡುಗಡೆಯಾಗಾಬಹುದು. ಆಟೋ ಎಕ್ಸ್‌ಪೋ ಸಮಯದಲ್ಲಿ ಘೋಷಿಸಲಾದ ಬೆಲೆ ಟ್ಯಾಗ್ ಮುಂದಿನ ವರ್ಷ ಬಿಡುಗಡೆಯಾದ ಸಮಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿದೆ. |
ಆದರೂ ಬಿಡುಗಡೆಯಾದ ಬಳಿಕ ಇಕೆಯುವಿ100 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಎಲೆಕ್ಟ್ರಿಕ್ ಮಾದರಿಗಳಲ್ಲಿ ಒಂದಾಗಿರುತ್ತದೆ, ಪ್ರಸ್ತುತ ಟಾಟಾ ನೆಕ್ಸಾನ್ ಎಲೆಕ್ರಿಕ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಇಕೆಯುವಿ100 ಮಾದರಿಗಾಗಿ ಫ್ಲೀಟ್ ಆಪರೇಟರ್‌ಗಳ ಮೇಲೆ ಮಾರಾಟವನ್ನು ಕೇಂದ್ರೀಕರಿಸುವುದಾಗಿ ಕಂಪನಿಯು ಘೋಷಿಸಿತು. ಇನ್ನು ಖಾಸಗಿ ಖರೀದಿದಾರರಿಗೆ ಎಸ್‍ಯುವಿಯನ್ನು ಮಾರಾಟ ಮಾಡಲಾಗುತ್ತದೆ. |
ಈ ಮಹೀಂದ್ರಾ ಇಕೆಯುವಿ100 ಮೈಕ್ರೋ-ಎಸ್‌ಯುವಿಯಲ್ಲಿ 15.9 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೊಂದಿಗೆ 40 ಕಿ,ವ್ಯಾಟ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಎಕ್ಲೆಕ್ಟಿಕ್ ಪವರ್ ಟ್ರೈನ್ 53 ಬಿಹೆಚ್‍ಪಿ ಪವರ್ ಮತ್ತು 120 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. |
Subsets and Splits
No community queries yet
The top public SQL queries from the community will appear here once available.