text
stringlengths
0
61.5k
ಇಕೆಯುವಿ100 ಮಾದರಿಯು ಒಂದು ಬಾರಿ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದರೆ ಗರಿಷ್ಠ 125 ಕಿಲೋಮೀಟರ್ ಚಲಿಸಬಹುದು. ಮಹೀಂದ್ರಾ ಇಕೆಯುವಿ 100 ಅನ್ನು ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ಆಯ್ಕೆಗಳೊಂದಿಗೆ ನೀಡಲಿದೆ. ಇಕೆಯುವಿ ಸಮಯವನ್ನು ಕಂಪನಿಯು ಇನ್ನು ಬಹಿರಂಗಪಡಿಸಿಲ್ಲ.
ಆದರೆ ಡಿಸಿ ಫಾಸ್ಟ್ ಚಾರ್ಜರ್ ಬಳಸುವುದರಿಂದ ಈ ಮೈಕ್ರೊ ಎಸ್‍ಯುವಿಯು ಒಂದು ಗಂಟೆಯೊಳಗೆ ಶೇ.80 ರಷ್ಟು ಚಾರ್ಜ್ ಆಗಬಹುದು. ಇನ್ನು ಬಹಿರಂಗವಾದ ಚಿತ್ರದಲ್ಲಿ, 110 ಕಿಲೋಮೀಟರ್‌ ರೇಂಜ್ ಅನ್ನು ಪ್ರದರ್ಶಿಸಿದ್ದು, 85% ಬ್ಯಾಟರಿ ಚಾರ್ಜ್ ಉಳಿದಿದೆ. ಇದರಿಂದ ಇಕೆಯುವಿ100 100% ಬ್ಯಾಟರಿ ಚಾರ್ಜ್‌ನಲ್ಲಿ ಸುಮಾರು 125 ಕಿಮೀ ರೇಂಜ್ ಅನ್ನು ಹೊಂದಿರುತ್ತದೆ.
ಚಿತ್ರಗಳಿಂದ ಸೋರಿಕೆಯಾದ ಇಕೆಯುವಿ100 ಮಾದರಿಯು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಪೂರ್ವ-ನಿರ್ಮಾಣ ಮಾದರಿಯನ್ನು ಹೋಲುತ್ತದೆ. ಈ ಎಲೆಕ್ಟಿಕ್ ಕಾರಿನ ಮುಂಭಾಗದಲ್ಲಿಕ್ಲೋಸ್ಡ್ ಗ್ರಿಲ್ ಮತ್ತು ಕೆಳಭಾಗದಲ್ಲಿ ಗ್ರಿಲ್ ಅನ್ನು ಹೊಂದಿದೆ, ಇನ್ನು ನವೀಕರಿಸಿದ ಹೆಡ್‌ಲ್ಯಾಂಪ್‌ಗಳು, ಟೈಲ್‌ಲೈಟ್‌ಗಳು ಮತ್ತು ಅಲಾಯ್ ವ್ಹೀಲ್ ಹೊಸ ವಿನ್ಯಾಸವನ್ನು ಒಳಗೊಂಡಿವೆ. ಬಾನೆಟ್ ಅಡಿಯಲ್ಲಿ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಸೂಚಿಸಲು ಎಸ್ಯುವಿ ಹಲವಾರು ನೀಲಿ ಅಸ್ಸೆಂಟ್ ಗಳನ್ನು ಹೊಂದಿವೆ.
ಈ ಇಕೆಯುವಿ100 ಒಟ್ಟಾರೆ ಸಿಲೂಯೆಟ್ ಅದರ ಪೆಟ್ರೋಲ್-ಚಾಲಿತ ಪ್ರತಿರೂಪವನ್ನು ಹೋಲುತ್ತದೆ. ಸೋರಿಕೆಯಾದ ಚಿತ್ರಗಳ ಮಾದರಿಯು ಕಡು ನೀಲಿ ಬಣ್ಣವನ್ನು ಹೊಂದಿದೆ. ಇನ್ನು ಆಕರ್ಷಕ ಲುಕ್‌ಗಾಗಿ ಆಲ್-ರೌಂಡ್ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. ಇದು ಫ್ಲ್ಯಾಪ್‌ಗಳಿಂದ ಮುಚ್ಚಿದ ಮುಂಭಾಗದ ಫೆಂಡರ್‌ನ ಎರಡೂ ಬದಿಗಳಲ್ಲಿ ಚಾರ್ಜಿಂಗ್ ಸ್ಲಾಟ್ ಅನ್ನು ಸಹ ಒಳಗೊಂಡಿದೆ.
ಇನ್ನು ಈ ಎಸ್‍ಯುವಿಯ ಒಳಭಾಗದಲ್ಲಿ ಗ್ಯಾಸೋಲಿನ್ ಚಾಲಿತ ಮಾದರಿಗಳಲ್ಲಿ ಕಾಣುವ ಇದೇ ರೀತಿಯ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ. ಇದು ಒಂದೇ ಡ್ಯಾಶ್‌ಬೋರ್ಡ್-ಮೌಂಟೆಡ್ ಗೇರ್ ಸೆಲೆಕ್ಟರ್, ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ಕ್ಲೈಮೇಟ್ ಕಂಟ್ರೋಲ್‌ಗಳನ್ನು ಒಳಗೊಂಡಿದೆ.
ಇದರೊಂದಿಗೆ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟ್ ಆಗಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಈ ಎಲೆಕ್ಟ್ರಿಕ್ ವಾಹನ ಬಳಕೆಗೆ ಸಂಬಂಧಿಸಿದ ಹೆಚ್ಚು ಸೂಕ್ತವಾದ ಡೇಟಾವನ್ನು ಒದಗಿಸಲು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ನವೀಕರಿಸಲಾಗುತ್ತದೆ. ಇದು ರೇಂಜ್, ಬ್ಯಾಟರಿ ತಾಪಮಾನ, ಸ್ಪೀಡ್ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಇನ್ನು ಈ ಬಹುನಿರೀಕ್ಷಿತ ಇಕೆಯುವಿ100 ಕಾರು ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಬಗೆದಷ್ಟು ಬಯಲಾಯ್ತು ಐಎಂಎ ಜ್ಯುವೆಲರಿ ಮನ್ಸೂರ್ ವಂಚನೆ..! | Nairutyanews
Home Latest News ಬಗೆದಷ್ಟು ಬಯಲಾಯ್ತು ಐಎಂಎ ಜ್ಯುವೆಲರಿ ಮನ್ಸೂರ್ ವಂಚನೆ..!
ಬಗೆದಷ್ಟು ಬಯಲಾಯ್ತು ಐಎಂಎ ಜ್ಯುವೆಲರಿ ಮನ್ಸೂರ್ ವಂಚನೆ..!
ಬೆಂಗಳೂರು(ಜೂನ್.11) ಬೆಂಗಳೂರಿನ ಐಎಂಎ ಜ್ಯುವೆಲರಿ ಮಾಲಿಕ ಮನ್ಸೂರ್ ಅಲಿಖಾನ್ ವಂಚಸಿ ನಾಪತ್ತೆಯಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ರಾಜ್ಯದ ಹಲವೆಡೆ ಸಾವಿರಕ್ಕೂ ಹೆಚ್ಚು ಎಕರೆ ಜಾಗವನ್ನು ಬಡವರ ದುಡ್ಡಲ್ಲಿ ಖರೀದಿಸಿದ್ದಾರೆ ಮನ್ಸೂರ್. ಚಿಕ್ಕಬಳ್ಳಾಪುರದಲ್ಲಿ 2017ರಲ್ಲೇ 150 ಎಕರೆ ಜಾಗ ಖರೀದಿಸಿದ್ದಾರೆ. ರಾಮನಗರ ಬಳಿ 150 ಎಕರೆ ಖರೀದಿಸಿ ವಂಚಿಸಿದ್ದಾರೆ. ಕೊಡಗಿನಲ್ಲಿ 50 ಎಕರೆ ಜಾಗದಲ್ಲಿ ವಿಲ್ಲಾ ನಿರ್ಮಾಣಕ್ಕೂ ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ.
ಮನ್ಸೂರ್ ರ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಅವರ ಸೋದರನ ಮಕ್ಕಳಾದ ನದೀಂ,ವಸೀಂ ಎನ್ನುವವರು ನೋಡಿಕೊಳ್ಳುತ್ತಿದ್ದರು. ಶಿವಾಜಿನಗರ ಒಂದರಲ್ಲೇ 90 ಕಟ್ಟಡವನ್ನು ಮನ್ಸೂರ್ ಹೊಂದಿದ್ದಾರೆ. ಬಡಜನರ ಹಣದಿಂದ ಶೋಕಿ ಮಾಡುತ್ತಿದ್ದ ಮನ್ಸೂರ್.
ರಾಜ್ಯದಲ್ಲಿ 13 ಪ್ರಮುಖ ಕಂಪನಿಗಳಲ್ಲಿ ವ್ಯವಹಾರವನ್ನು ನಡೆಸುತ್ತಿದ್ದ ಮನ್ಸೂರ್. ಐಎಂಎ ಜ್ಯುವೆಲ್ಸ್ ಮತ್ತು ಐಎಂಎ ಗೋಲ್ಡ್ 2 ಕಂಪನಿಗಳ ಹೆಸರಿನಲ್ಲಿ ಗೋಲ್ಡ್ ಬ್ಯುಸಿನೆಸ್. ಐಎಂಎಐಪಿ ಬಿಲಿಯನ್ ಮತ್ತು ಟ್ರೇಡಿಂಗ್ ಎಲ್‍ಎಲ್ ಪಿ, ಐಎಂ ಅಡ್ವೈಸರಿ ಪ್ರೈ.ಲಿಮಿಟೆಡ್, ಐಎಂಎ ಬಿಲ್ಡರ್ಸ್, ಐಎಂಎ ಇನ್ ಫ್ರಾಸ್ಟ್ರಕ್ಚರ್ ಆಂಡ್ ಡೆವಲಪರ್ಸ್, ಐಎಂಎ ಪಬ್ಲಿಷರ್ಸ್ ಪ್ರೈ.ಲಿಮಿಟೆಡ್, ಐಎಂಎ ಅಕಾಡೆಮಿ, ಮಲ್ಬೆರಿ ಗ್ರೀನ್ಸ್, ಫ್ರಂಟ್ ಲೈನ್ ಆಸ್ಪತ್ರೆ, ಫ್ರಂಟ್ ಲೈನ್ ಫಾರ್ಮ್ ಹೀಗೆ ಹಲವಾರು ಕಂಪನಿಗಳನ್ನು ನಡೆಸಿ ವಂಚನೆಯನ್ನು ಮಾಡಿದ್ದಾರೆ ಮನ್ಸೂರ್ ಅಲಿಖಾನ್.
ಮೈಷುಗರ್: ಇಂದಿನಿಂದ ಬಾಕಿ ಪಾವತಿಗೆ ಕ್ರಮ | Prajavani
ಮೈಷುಗರ್: ಇಂದಿನಿಂದ ಬಾಕಿ ಪಾವತಿಗೆ ಕ್ರಮ
ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿದ್ದ ಬೆಳೆಗಾರರಿಗೆ ಬಾಕಿ ಪಾವತಿಯನ್ನು ಬುಧವಾರದಿಂದ ಆರಂಭಿಸಲಿದೆ.
ಕಳೆದ ನವೆಂಬರ್ ತಿಂಗಳಿಂದ ಬಾಕಿ ಇದ್ದು, ಒಟ್ಟಾರೆ 20-25 ಕೋಟಿ ಬಾಕಿ ಪಾವತಿಸಬೇಕಾಗಿದೆ. ಹಂತ-ಹಂತವಾಗಿ ಇದನ್ನು ಇತ್ಯರ್ಥ ಪಡಿಸಲಾಗುವುದು ಎಂದು ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪ ಮಂಗಳವಾರ ತಿಳಿಸಿದರು.
ಕಬ್ಬು ಬಾಕಿ ಪಾವತಿಗೆ ಆಗ್ರಹಪಡಿಸಿ ಕಾರ್ಖಾನೆಯ ಎದುರು ಪ್ರತಿಭಟನೆ ನಡೆಸಿದ ರೈತರನ್ನು ಉದ್ದೇಶಿಸಿ ಈ ಭರವಸೆ ನೀಡಿದ ಅವರು, ಕೇಂದ್ರ ಸರ್ಕಾರ ಸಕ್ಕರೆ ಮಾರಾಟಕ್ಕೆ ಅನುಮತಿ ನೀಡದಿರುವುದು ಈ ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ ಇಲ್ಲಿಯವರೆಗೂ ಒಟ್ಟಾರೆ 3.62 ಲಕ್ಷ ಟನ್ ಕಬ್ಬು ಅರೆದಿದ್ದು, ಒಟ್ಟಾರೆ 3.28 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. ಮಾರಾಟಕ್ಕೆ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಇನ್ನೂ 2.70 ಲಕ್ಷ ಕ್ವಿಂಟಲ್ ಸಕ್ಕರೆ ದಾಸ್ತಾನು ಉಳಿದಿದೆ ಎಂದು ವಿವರಿಸಿದರು.
ಆದರೆ, ಕಾರ್ಖಾನೆಯು ರೈತರಿಗೆ ಬಾಕಿ ಪಾವತಿಸಲು ಕ್ರಮ ಕೈಗೊಳ್ಳುತ್ತಿದು, ನಾಳೆಯಿಂದಲೇ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತರ ಧರಣಿ: ಇದಕ್ಕೂ ಮುನ್ನ ಕಬ್ಬು ಸರಬರಾಜು ಮಾಡಿದ್ದ ಬೆಳೆಗಾರರಿಗೆ ದರ ಪಾವತಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ರೈತರು, ಕಬ್ಬು ಬೆಳೆಗಾರರು ಕಾರ್ಖಾನೆಯ ಆವರಣದಲ್ಲಿ ಧರಣಿ ನಡೆಸಿದರು.
ಪ್ರಸಕ್ತ ಸಾಲಿಗೆ ಇನ್ನೂ ಅಂತಿಮ ಬೆಲೆ ನಿಗದಿಪಡಿಸಿಲ್ಲ. ತಾತ್ಕಾಲಿಕ ಬೆಲೆ ಟನ್‌ಗೆ ರೂ. 2,000 ನಿಗದಿಪಡಿಸಲಾಗಿತ್ತು. ಇದರ ಜೊತೆಗೆ ಕಳೆದ ಸಾಲಿನಲ್ಲಿ ಪೂರೈಸಿದ್ದ ಕಬ್ಬಿಗೆ ಹಳೆಯ ಬಾಕಿ ಟನ್‌ಗೆ ರೂ. 100 ಅನ್ನೂ ಪಾವತಿಸಿಲ್ಲ ಎಂದು ರೈತರು ದೂರಿದರು.
ರೈತ ಸಂಘದ ಜಿಲ್ಲಾ ಘಟಕ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜನವರಿ 15ರ ಒಳಗೆ ಎಲ್ಲ ಬಾಕಿ ಪಾವತಿಸುವ ಭರವಸೆ ನೀಡಲಾಗಿತ್ತು ಎಂಬುದನ್ನುನೆನಪಿಸಿದರು.
ಪಾವತಿ ವಿಳಂಬವಾಗಿರುವುದರಿಂದ ಕೃಷಿಕರು, ಬೆಳೆಗಾರರು ಸಮಸ್ಯೆಗೆ ಈಡಾಗಿದ್ದಾರೆ. ತೆಗೆ, ಮುಂಗಾರು ಹಂಗಾಮು ಕೃಷಿ ಚಟುವಟಿಕೆಗೂ ತೊಂದರೆ ಆಗಿದೆ ಎಂದು ಸಮಸ್ಯೆ ತೋಡಿಕೊಂಡರು.
ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು, ಮುಖಂಡರಾದ ವಿ.ಅಶೋಕ್, ತಾಲ್ಲೂಕು ಘಟಕದ ಅಧ್ಯಕ್ಷ ಜವರೇಗೌಡ, ಮಾದಪ್ಪ, ಬೊಮ್ಮೇಗೌಡ ಮತ್ತು ಇತರರು ಹಾಜರಿದ್ದರು.
ಯುವಜನತೆ ಒಳ್ಳೆಯ ಆಲೋಚನೆ ಅಳವಡಿಸಿಕೊಳ್ಳಿ | ಸಂಜೆವಾಣಿಗೆ ಸ್ವಾಗತ
ಯುವಜನತೆ ಒಳ್ಳೆಯ ಆಲೋಚನೆ ಅಳವಡಿಸಿಕೊಳ್ಳಿ
ರಾಯಚೂರು.ಅ.12- ಇಂದಿನ ಒತ್ತಡದ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಮಾನಸಿಕವಾಗಿ ಒತ್ತಡ ಅನುಭವಿಸುವ ಸಾಧ್ಯತೆಯಿದೆ. ಆದ್ದರಿಂದ ಯುವ ಜನತೆ ಒಳ್ಳೆಯ ಆಲೋಚನೆ ಅಳವಡಿಸಿಕೊಳ್ಳಬೇಕೆಂದು ಸಿಜೆಎಂ ಶ್ರೀನಿವಾಸ ಸುವರ್ಣ ಹೇಳಿದರು.
ಅವರಿಂದು ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನಸೀಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದಿನನಿತ್ಯ ಸಮಾಜದಲ್ಲಿ ಅನೇಕ ಬದಲಾವಣೆಗಳಾಗುತ್ತವೆ.
ಯಾವುದೇ ಒಂದು ಕೆಲಸ ನಿರ್ವಹಿಸುವುದು ಮುಖ್ಯವಲ್ಲ. ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಂಡಿರಬೇಕು. ಯುವ ಜನತೆ ಒಳ್ಳೆಯ ವಿಚಾರಗಳೆಡೆ ಗಮನ ನೀಡಬೇಕು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಹಕ್ಕು ಕಲ್ಪಿಸಲಾಗಿದೆ. ಅದನ್ನು ಸರಿಯಾಗಿ ಬಳೆಸಿಕೊಳ್ಳಬೇಕು. ಜನರು ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡು ಜೀವನ ನಡೆಸಬಾರದು. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಲು ಸೀಮಿತವಾಗಿರಬೇಕೆಂದರು.
ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಎಂ.ಸಿ. ನಾಡಗೌಡ ಮಾತನಾಡಿ, ಮಾನಸೀಕ ಅಸ್ವಸ್ಥತೆ ಎಲ್ಲರಲ್ಲಿಯೂ ಸಾಮಾನ್ಯವಾದುದು. ಆದರೆ, ಹೆಚ್ಚಿನ ಮಾನಸೀಕ ಅಸ್ವಸ್ಥತೆಯಲ್ಲಿರುವ ವ್ಯಕ್ತಿಯನ್ನು ಹುಚ್ಚ ಎಂದು ಕರೆಯುವ ಸಂಭವವಿದೆ. ಕಾರಾಗೃಹದಲ್ಲಿ ಆರೋಪಿ ಸ್ಥಾನದಲ್ಲಿದ್ದು, ನ್ಯಾಯಾಲಯವು ತೀರ್ಪು ಪ್ರಕಟಿಸುವ ಮುಂಚೆಯೇ ತಾವು ಅಪರಾಧಿಯೆಂದು ಭಾವಿಸುವುದು ಮಾನಸೀಕವಾಗಿ ಕುಗ್ಗುವುದಕ್ಕೆ ಕಾರಣವಾಗಿದೆ.
ನ್ಯಾಯಾಲಯವು ತೀರ್ಪು ಪ್ರಕಟವಾಗುವವರೆಗೂ ತಾವು ಅಪರಾಧಿಯಲ್ಲ. ಎನ್ನುವ ಅಂಶ ತಿಳಿದುಕೊಂಡಿರಬೇಕು. ನ್ಯಾಯಾಲಯವು ಅಪರಾಧಿಯೆಂದು ತೀರ್ಪು ಪ್ರಕಟಿಸಿದಾಗ ಉಚ್ಛ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನು ಅವಕಾಶ ಕಲ್ಪಸಿದೆ. ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದಾಗ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಂ. ಶಹಬುದ್ದೀನ್ ಕಾಲೇಖಾನ್, ಜಿಲ್ಲಾ ನ್ಯಾಯಾಧೀಶ ಸಂಘದ ಕಾರ್ಯದರ್ಶಿ ಶ್ರೀಧರ್, ಜಿಲ್ಲಾ ಮಾನಸೀಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ನಂದಿತಾ ಎಂ.ಎನ್. ಮನೋ ವೈದ್ಯ ಡಾ. ಮನೋಹರ್ ವೈ.ಪತ್ತಾರ ಅವರು ವಿಷಯ ಮಂಡಿಸಿದರು. ನಾಗರಾಜ ನಿರೂಪಿಸಿದರು. ಜಿಲ್ಲಾ ಕಾರಾಗೃಹ ಸಿಬ್ಬಂದಿಗಳು ಹಾಗೂ ಖೈದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನನಗೆ ಸರ್, ಜೀ ಎನ್ನಬೇಡಿ ರಾಹುಲ್ ಎಂದು ಕರೆಯಿರಿ : ಸರಳತೆಯಿಂದ ಮನಗೆದ್ದ ರಾಗಾ – EESANJE / ಈ ಸಂಜೆ
ನನಗೆ ಸರ್, ಜೀ ಎನ್ನಬೇಡಿ ರಾಹುಲ್ ಎಂದು ಕರೆಯಿರಿ : ಸರಳತೆಯಿಂದ ಮನಗೆದ್ದ ರಾಗಾ
May 8, 2018 Sri Raghav Congress, Rahul Gandhi, Sir
ಬೆಂಗಳೂರು,ಮೇ8-ಸರ್ ಎಂಬ ಸಂಬೋಧನೆ ಬೇಡ. ಜೀ ಎಂಬ ಗೌರವ ಸೂಚಕ ಉಪಮೇಯಗಳು ಬೇಡ. ರಾಹುಲ್ ಎಂದು ಆತ್ಮೀಯವಾಗಿ ಕರೆಯಿರಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಪ್ರೇಕ್ಷಕರ ಮನಗೆದ್ದ ಪ್ರಸಂಗ ನಡೆಯಿತು. ನಗರದ ಖಾಸಗಿ ಹೋಟೆಲ್‍ನಲ್ಲಿ ಸಮೃದ್ಧ ಭಾರತ ಫೌಂಡೇಷನ್ ಉದ್ಘಾಟನ ಸಮಾರಂಭದ ನಂತರ ಸಂವಾದದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, ಅತ್ಯಂತ ಸರಳ ನಡೆಯನ್ನು ಪ್ರದರ್ಶಿಸಿ ಆತ್ಮೀಯರಾದರು.
ವಕೀಲ ಶ್ಯಾಮ್ ಸುಂದರ್ ಅವರು ಸರ್ ರಾಹುಲ್ ಗಾಂಧಿ ಎಂದು ಪ್ರಶ್ನೆ ಕೇಳಲು ಆರಂಭಿಸಿದಾಗ, ನನ್ನ ಸರ್ ಎಂದು ಕರೆಯಬೇಡಿ. ರಾಹುಲ್ ಎನ್ನಿ ಸಾಕು ಎಂದರು. ಆದರೂ ವಕೀಲ ಶ್ಯಾಮ್ ಸುಂದರ್ ಅವರು ರಾಹುಲ್ ಜೀ ಎಂದು ಕರೆದು ಪ್ರಶ್ನೆ ಮುಂದುವರೆಸಿದಾಗ, ಜೀ ಎಂಬುದು ಗೌರವವೂ ಅನಗತ್ಯ. ಪ್ರೀತಿಯಿಂದ ರಾಹುಲ್ ಎನ್ನಿ ಸಾಕು ಎಂದು ಮನವಿ ಮಾಡಿಕೊಂಡರು. ಸಂವಾದದ ಅಂತಿಮ ಹಂತದಲ್ಲಿ ರಾಹುಲ್ ಅವರು ವೇದಿಕೆಯಿಂದ ಇಳಿದು ಜನರ ನಡುವೆಯೇ ಬಂದು ಮಾತನಾಡಿದ್ದು ಇನ್ನಷ್ಟು ಆಶ್ಚರ್ಯ ಮೂಡಿಸಿತು. ಸಂವಾದದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ ಫಿರೋಜ್ ಅಹಮ್ಮದ್, ಶ್ಯಾಮ್ ಸುಂದರ್, ಉದ್ಯಮಿಗಳಾದ ಶಿವಕುಮಾರ್, ಸಂಪತ್‍ಕುಮಾರ್, ಶಿಕ್ಷಣ ಕ್ಷೇತ್ರದ ತ್ರಿಸ್ಥ ರಾಮಮೂರ್ತಿ, ಕೆ.ಸಿ.ರಘು, ಜನರಲ್ ಪುರಾಣಿಕ್, ವಿಶ್ರಾಂತ ಕುಲಪತಿ ಓ.ಅನಂತರಾಮಯ್ಯ ಮತ್ತಿತರರು ಪ್ರಶ್ನೆ ಕೇಳಿದರು.
ಸಾಹಿತಿ ಕಮಲಾ ಹಂಪನಾ ಅವರು ಕನ್ನಡದಲ್ಲೇ ಪ್ರಶ್ನೆ ಕೇಳಿ ಗಮನ ಸೆಳೆದರು. ರಾಹುಲ್ ಅವರು ಶಿಕ್ಷಣ ಎಲ್ಲರ ಕೈಗೆ ಸಿಗುವಂತಾಗಬೇಕು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಪ್ರಮುಖ ಸಂಸ್ಥೆಗಳನ್ನು ಆರ್‍ಎಸ್‍ಎಸ್‍ನ ಹಿಡಿತಕ್ಕೆ ಒಪ್ಪಿಸಿವೆ. ಅದರಿಂದ ಮುಕ್ತಗೊಳಿಸಿ ಜನರ ಭಾವನೆಗಳಿಗೆ ಸ್ಪಂದಿಸುವಂತೆ ಮಾಡಬೇಕು. ನಾನು ನನ್ನ ಫ್ಯಾನ್ಸಿ ಕನಸುಗಳನ್ನು ನಿಮ್ಮ ಮೇಲೆ ಹೇರುವುದಲ್ಲ. ನಿಮ್ಮ ಕನಸುಗಳನ್ನು ಈಡೇರಿಸುವವನಾಗಬೇಕು ಎಂದು ಪ್ರಶ್ನೆಗಳಿಗೆ ಉತ್ತರಿಸುವ ಮಧ್ಯೆ ಹೇಳಿದರು. ಬಿಜೆಪಿ ಮತ್ತು ಆರ್‍ಎಸ್‍ಎಸ್ ಮಹಾತ್ಮಾಗಾಂಧಿ, ಅಂಬೇಡ್ಕರ್, ಬಸವಣ್ಣ, ಸುಭಾಷ್ ಚಂದ್ರಬೋಸ್, ಸರದಾರ್ ವಲ್ಲಭ ಭಾಯ್ ಪಟೇಲ್, ಭಗತ್‍ಸಿಂಗ್ ಮತ್ತಿತರರನ್ನು ಪೂಜಿಸುವ ನಾಟಕವಾಡುತ್ತದೆ. ಆದರೆ ಅವರ ವಿಚಾರಧಾರೆಗಳನ್ನು ಕೊಲ್ಲುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಆರ್‍ಎಸ್‍ಎಸ್ ಮತ್ತು ಅದರ ಬೆಂಬಲದ ಸಂಘಟನೆಗಳ ಮೂಲ ಉದ್ದೇಶ ಅಧಿಕಾರ ಕಬಳಿಸುವುದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಣ್ಣ ಕೈಗಾರಿಕೆಗಳು ಆಡಳಿತ ನಡೆಸುವವರ ಬಳಿಗೆ ತಲುಪುವಂತಾದರೆ ಅಭಿವೃದ್ದಿ ಸಾಧ್ಯವಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಕೇವಲ 10ರಿಂದ 15 ಉದ್ಯಮಿಗಳು ಮಾತ್ರ ಸರ್ಕಾರದ ಬಳಿ ಸಂಪರ್ಕ ಹೊಂದಲು ಸಾಧ್ಯವಾಗಿದೆ. ನೋಟು ಅಮಾನೀಕರಣ ಮತ್ತು ಜಿಎಸ್‍ಟಿ ಸಣ್ಣ ಉದ್ಯಮಗಳನ್ನು ನಾಶ ಮಾಡಿದೆ ಎಂದು ಹೇಳಿದರು.
ಸೌದಿಯ ಅರೇಬಿಯಾದ ಸಂಪತ್ತು ಸ್ಪಷ್ಟತೆ ಇಲ್ಲ. ಅದನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ನಮ್ಮ ದೇಶದ ಸಂಪತ್ತು ಯುವಕರು. ನಾವು ಅವರನ್ನು ಯಾವ ದೇಶಕ್ಕಾದರೂ ಬಿಟ್ಟುಕೊಡುತ್ತಿದ್ದೇವೆ. ಅವರಿಗೆ ಸೂಕ್ತ ಅವಕಾಶ ನೀಡುತ್ತಿಲ್ಲ ಎಂದರು. ಎಷ್ಟೇ ವಿವಿಗಳನ್ನು ಸ್ಥಾಪಿಸಿದ್ದೇನೆ ಎನ್ನುವುದಕ್ಕಿಂತ ಬಡವ ವರ್ಗದ ಎಷ್ಟು ಜನರಿಗೆ ನಾವು ಶಿಕ್ಷಣ ತಲುಪಿಸಿದ್ದೇವೆ ಎಂಬುದು ಬಹಳ ಮುಖ್ಯ ಎಂದು ರಾಹುಲ್ ಗಾಂಧಿ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ರಾಜೀವ್ ಗೌಡ, ಚಿತ್ರರಂಗದ ಪ್ರಮುಖರಾದ ಭಾರತೀ ವಿಷ್ಣುವರ್ಧನ್, ರಾಘವೇಂದ್ರ ರಾಜಕುಮಾರ್, ಅಭಿನಯ, ರಾಜೇಂದ್ರ ಸಿಂಗ್ ಬಾಬು, ಸಾಹಿತಿಗಳಾದ ಕಮಲ ಹಂಪನಾ, ಹಂಪ ನಾಗರಾಜಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭೂ ಹಗರಣ: ಪ್ರಾದೇಶಿಕ ಆಯುಕ್ತರಿಂದಲೇ ಕಳಂಕಿತರಿಗೆ ಕ್ಲೀನ್ ಚಿಟ್ - Sanjevani
Home ಜಿಲ್ಲೆ ಮೈಸೂರು ಭೂ ಹಗರಣ: ಪ್ರಾದೇಶಿಕ ಆಯುಕ್ತರಿಂದಲೇ ಕಳಂಕಿತರಿಗೆ ಕ್ಲೀನ್ ಚಿಟ್
ಭೂ ಹಗರಣ: ಪ್ರಾದೇಶಿಕ ಆಯುಕ್ತರಿಂದಲೇ ಕಳಂಕಿತರಿಗೆ ಕ್ಲೀನ್ ಚಿಟ್
ಮೈಸೂರು. ಜೂ.11: ಮೈಸೂರಿನಲ್ಲಿ ನಡೆದಿರುವ ಭೂ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆದಿದೆ. ಆದ್ದರಿಂದ ಭೂ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಒತ್ತಾಯಿಸಿದರು.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಭೂ ಕಳಂಕಿತರು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ ನಡೆದಿದ್ದು, ಎಲ್ಲವನ್ನೂ ಸಾರಾ ಸಗಟಾಗಿ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ನಾನು ನಿನ್ನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಹಿಂದಿನ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದನ್ನು ಜಾರಿಗೆ ಮಾಡಿ ಎಂದು ಹೆಚ್.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ಪ್ರಾದೇಶಿಕ ಆಯುಕ್ತರು ಕಳಂಕಿತರ ನಡುವೆ ಒಂದು ರೀತಿಯ ಒಪ್ಪಂದ ಆಗಿರುವಂತೆ ಕಾಣಿಸುತ್ತದೆ. ಈಗಾಗಲೇ ಮಾತನಾಡಿ ಒಂದು ಒಪ್ಪಂದಕ್ಕೆ ಬಂದಂತೆ ಕಾಣಿಸುತ್ತಿದ್ದು, ಅವರ ವರ್ತನೆ ನೋಡಿದರೆ ಏನು ವರದಿ ಬರಬಹುದೆನ್ನುವುದು ಈಗಾಗಲೇ ತಿಳಿದು ಬರುವಂತಿದೆ. ಒಳ ಒಪ್ಪಂದ ನಡೆದು ವರದಿ ರೆಡಿ ಆಗಿದೆ. ವರದಿ ಸೋಮವಾರ ಕೊಡುತ್ತಾರೆ ಎಂಬ ಶಂಕೆ ವ್ಯಕ್ತಪಡಿಸಿದರು.
ನೀವು ನಿಮ್ಮ ಭವನವನ್ನು ಎಷ್ಟು ಎಕರೆಯಲ್ಲಿ ಕಟ್ಟಿದ್ದೀರಿ, ನಿಮಗೆ ಸೆಂಕ್ಷನ್ ಆಗಿರೋದು ಎಷ್ಟು, ಮುಡಾ ಭೂಮಿ ಎಷ್ಟು ಒತ್ತುವರಿಯಾಗಿದೆ? ಸ್ವಂತ ಆಸ್ತಿ ಎಷ್ಟಿದೆ, ಇದೆಲ್ಲವನ್ನು ಬಿಟ್ಟಿದ್ದೀರಿ, ನಾಲ್ಕು ಆದೇಶಗಳಲ್ಲೂ ಕೂಡ ರಾಜಕಾಲುವೆ ಪ್ರಸ್ತಾಪ ಆಗಿಲ್ಲ, ಪ್ರಸ್ತಾಪ ಆಗಿಲ್ಲದಿರುವುದನ್ನು ಹಿಡಿದು ಓಡಾಡುವುದೇಕೆ ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ಎಲ್ಲರೂ ಸಿದ್ದಹಸ್ತರಿದ್ದೇವೆ. ಯಾರನ್ನು ಬೇಕಾದರೂ ನಮ್ಮೆಡೆಗೆ ಕೆಡಿಕೋತಿವಿ, ರಾಜಕಾರಣಿಗಳು ನಾವೇ ಭೂಮಾಫಿಯಾ. ಬೇರೆ ಯಾರು ಬಂದಾರು ಇಲ್ಲಿ? ಅದಕ್ಕಾಗಿ ಪ್ರಾದೇಶಿಕ ಆಯುಕ್ತರು ಕೊಡತಕ್ಕ ವರದಿಗೆ ಯಾವ ಬೆಲೆಯೂ ಇಲ್ಲ, ಪ್ರಾದೇಶಿಕ ಆಯುಕ್ತರು ಸೋಮವಾರ ಕೊಡತಕ್ಕ ವರದಿಗೆ ಯಾವ ಬೆಲೆಯೂ ಇಲ್ಲ, ವರದಿ ಈಗಾಗಲೇ ಸಿದ್ಧಪಡಿಸಿದ್ದು, ಇಂದು ಸರ್ವೆಗೆ ಹೋಗಿದ್ದಾರೆ. ಸರಪಳಿ ಅಲ್ಲಿಂದ, ಇಲ್ಲಿಂದು ಎಳೆದು ಇಲ್ಲಿ ಏನು ಇಲ್ಲ ಸರ್ ಅಂದು ಬಿಡುತ್ತಾರೆ. ಅದಕ್ಕೆ ನಾನು ಈ ಹಿಂದೆ ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಅವರಿಗೆ ಹೊಡಿತಾರೆ ಅಂತ ಒಂದು ತಿಂಗಳ ಹಿಂದೆಯೇ ಹೇಳಿದ್ದೆ, ಹಾಗೆಯೇ ಆಗಿದೆ. ಈಗಲೂ ಅದಿಕ್ಕೆ ಮೊದಲೇ ಮಾಧ್ಯಮದವರನ್ನು ಕರೆದಿದ್ದೇನೆ. ನಿಮಗೆ ವಿಷಯ ತಿಳಿಸಿದ್ದೇನೆ. ಸೋಮವಾರ ಪ್ರಾದೇಶಿಕ ಆಯುಕ್ತರು ಭೂಕಳಂಕಿತರ ಬಗ್ಗೆ ನೀಡುವ ವರದಿ ಯಾರೂ ನಂಬಂತಕ್ಕಂತದ್ದಲ್ಲ ಎಂದರು.
ಆರ್ ಸಿ ಆಫೀಸ್ ಹತ್ತಿರ ಚಳವಳಿಗೆ ಬಂದು ಕುಳಿತಾಗಲೇ ಗೊತ್ತು, ಏನು ಸ್ವಾಮಿ, ಏನಾದರೂ ಬೆಲೆ ಇದೆಯಾ ಎಂದು ಪ್ರಶ್ನಿಸಿದರು.
ರೋಹಿಣಿ ಸಿಂಧೂರಿಯವರು ನೀಡಿದ ನಾಲ್ಕು ಆದೇಶದ ಬಗ್ಗೆಯೂ ಸೂಕ್ತ ,ಸಮಗ್ರ ಪರಿಶೀಲನೆ ಆಗಬೇಕು, ಅದು ಬಿಟ್ಟು ಸ್ಮಾಲ್ ಪಾಲ್ಟ್ ಹಿಡಿದುಕೊಂಡು ಹೋಗುತ್ತಿರುವುದು ಯಾಕೆ? 98ಸರ್ವೆ ನಂಬರ್ ಮುಡಾದ್ದು ಮುಡಾ ಆಯುಕ್ತರು, ಅಧ್ಯಕ್ಷರು ಏನು ಮಾಡುತ್ತಿದ್ದೀರಿ, ಅಮೂಲಾಗ್ರ ವಿಚಾರಣೆ ಆಗಬೇಕು. ಇಷ್ಟೆ ಅಲ್ಲ, ಮೈಸೂರು ನಗರದಲ್ಲಿ ಬೇಕಾದಷ್ಟು ಆಗಿದೆ. ಮಾಡಿಸಿ, ಎಲ್ಲವೂ ಸಂಪೂರ್ಣ ತನಿಖೆ ಆಗಲಿ, ನಗರಾಭಿವೃದ್ಧಿ ಮಂತ್ರಿಗಳು, ರೆವೆನ್ಯೂ ಮಂತ್ರಿಗಳು ಕೂಡ ಮಾತಾಡುತ್ತಿಲ್ಲ, ಮಾತಾಡಬೇಕು. ಇದು ಸರ್ಕಾರ. ಕಳಂಕಿತರು ಕೂಡ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಪ್ರಾದೇಶಿಕ ಆಯುಕ್ತರ ಕಛೇರಿ ಎದುರು ಬಂದು ಒಳ ಒಪ್ಪಂದ ಮಾಡಿಕೊಂಡರು ಎಂದು ಆರೋಪಿಸಿದರು.
ಕಳಂಕಿತರು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ ನಡೆದಿದ್ದು ಎಲ್ಲವನ್ನೂ ಸಾರಾಸಗಟಾಗಿ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಪ್ರಾದೇಶಿಕ ಆಯುಕ್ತರ ಮೇಲೆ ನಮಗೆ ನಂಬಿಕೆ ಇಲ್ಲ. ಕಳಂಕಿತರೇ ಪ್ರತಿಭಟನೆಗೆ ಕುಳಿತು ನನ್ನ ಸಾರಾ ಕನ್ವೆನ್ಶನ್ ರಾಜಕಾಲುವೆ ಮೇಲೆ ಹೋಗಿದ್ಯಾ ಅಷ್ಟು ಹೇಳಿ ಅಂತಾರೆ ಬೇರೆ ಯಾವುದಾರ ಬಗ್ಗೆ ಮಾತಾಡಲ್ಲ, ರೋಹಿಣಿಯವರ ಆದೇಶದಲ್ಲಿ ಇರದ್ದನ್ನು ತನಿಖೆ ಮಾಡಿಸಲು ಹೇಳುತ್ತಿದ್ದಾರೆ. ಅದನ್ನು ತನಿಖೆ ಮಾಡಿಸಿ ಆದೇಶದಲ್ಲಿರುವುದನ್ನು ಮುಚ್ಚಿಸಿಹಾಕುವ ಪ್ರಯತ್ನ ನಡೆಯುತ್ತಿದೆ. ನನಗೆ ಅವರ ಮೇಲೆ ಯಾವ ದ್ವೇಷವೂ ಇಲ್ಲ. ಭೂಗಳ್ಳ ಅನ್ನೋ ಕಳಂಕದಿಂದ ಹೊರಬರಲಿ ಅನ್ನೋ ಉದ್ದೇಶವೇ ಹೊರತು ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮಾಧ್ಯಮ ಕರೆದಿದ್ದು ಅದಿಕ್ಕೆ ನಾಳೆ ನಮ್ಮನ್ನೇ ಕಳಂಕಿತರು ಅಂದುಬಿಡುತ್ತಾರೆ. ರೋಹಿಣಿಯವರನ್ನು ಕಳಂಕಿತರು ಅಂತಾರೆ ಅದಿಕ್ಕೆ ಕರೆದಿದ್ದೇನೆ ಎಂದರು.
ಭಾವ-ದರ್ಪಣ: September 2012
ಕ್ಷಮಿಸಿ. ಬಾಡಿಗೆಗೆ/ಭೋಗ್ಯಕ್ಕೆ ಅಲ್ಲವೇ ಅಲ್ಲ!
ನೀನಿನ್ನು ಮರಳೋದಿಲ್ಲ ಅಂತ ತಿಳಿದ ಕೂಡಲೇ, ಹಿಂದೆ-ಮುಂದೆ ಯೋಚಿಸದೇ ನನ್ನ ಮನಸಿಗೊಂದು ದೊಡ್ಡ ಬೀಗ ಜಡಿದುಬಿಟ್ಟೆ. ಅದರ ಕೀಲಿ ಕೈ ನಿನಗೇ ಒಪ್ಪಿಸಿಬಿಡಬೇಕು ಅನ್ನೋ ಭಾವ ಬಹಳ ಕಾಡಿಬಿಟ್ಟಿತು ಆ ಕ್ಷಣದಲ್ಲಿ! ಬಡ್ಡೀ ಮಗಂದು ಕಣ್ಣೀರು ಬೀಗ ಜಡಿದ ಮನಸನ್ನೂ ಬಿಡಲ್ಲ... ತಿರುಗಿ ನೋಡಿದೆ, ನೀನಿರಲಿಲ್ಲ, ಬೀಗ ಬಧ್ರವಾಗಿತ್ತು,ಕಣ್ಣೀರೊರೆಸಿಕೊಂಡೆ!
ಬೇರೆ ಅವರಿಗೆ ಪ್ರೌಢ ಸಲಹೆಗಳನ್ನು ನೀಡುತ್ತಾ ತಿರುಗೋ ನನಗೆ ನಿನ್ನ ವಿಚಾರದಲ್ಲಿ ಅದೇನು ಬಾಲಿಶತನವೋ ಕೊನೆವರೆಗೂ ಅರ್ಥ ಆಗಲೇ ಇಲ್ಲ! 'ನಾನು ಮಾರು ಹೋಗಿದ್ದು ನಿನ್ನ ಬಾಹ್ಯ ಸೌಂದರ್ಯಕ್ಕೆ ಅಲ್ಲವೇ ಅಲ್ಲ ಕಣೆ!' ಅಂತ ನಾನಂದಾಗ, ನನಗೆ ಮುಂದೆ ಮಾತಾಡೋಕೆ ಅವಕಾಶವೇ ಕೊಡದಂತೆ ನೀನು ಕಿಲ-ಕಿಲನೆ ನಕ್ಕಿದ್ದೆ... ಆ ನಗುವಿನಲ್ಲಿದ್ದದ್ದು ನಿಷ್ಕಲ್ಮಶತೆ ಅಂತ ಈಗಲೂ ಮನಸು ನಂಬಿಕೊಂಡಿದೆ! ನಿನ್ನ ನಗೆ ನಿಂತಾಗ, ನನ್ನ ಪ್ರಶ್ನಾರ್ಥಕ ಮುಖ ನೋಡಿ, ನನ್ನನ್ನು ನೀ ಮೃದುವಾಗಿ ತಬ್ಬಿಕೊಂಡಾಗ, ಅಲ್ಲಿ ನುಸುಳಿದ್ದೂ ಇದೇ.. ಇದೇ ಬಡ್ಡೀ ಮಗ ಕಣ್ಣೀರು...! ಆ ಪುಟ್ಟ ಹನಿ ನೋಡಿ, ನೀ ಮತ್ತೆ ನಗುವಾಗಿದ್ದೆ.. ನನ್ನ ಪೌರುಷತ್ವ ಆಗ ಜಾಗೃತವಾಗಿಬಿಟ್ಟಿತ್ತು ... ಕಣ್ಣೀರು ಆವಿಯಾಗಿಬಿಟ್ಟಿತ್ತು.
ಈಗ..? ಈಗ ಎನೂ ಮೊದಲಿನಂತಿಲ್ಲ.. ನೀನೆಷ್ಟು ನನ್ನ ಲವಲವಿಕೆಯ ಹಿಂದಿನ ಸಾಮರ್ಥ್ಯವಾಗಿದ್ದೆಯೋ ಅಷ್ಟೇ ನನ್ನ ಅತಿ ದೊಡ್ಡ ದೌರ್ಬಲ್ಯವೂ ಆಗಿದ್ದೆ… ಈ ವಿಚಾರ ಇಬ್ಬರಿಗೂ ತಿಳಿದಿತ್ತು. ನೀನಿರುವಾಗ ಆ ದೌಬರ್ಲ್ಯಕ್ಕೂ ಒಂದು ಮುಗ್ಧತೆಯಿತ್ತು, ಸೆಳೆತವಿತ್ತು... ಅಂತಹ ದೌರ್ಬಲ್ಯ ಮತ್ತೆ-ಮತ್ತೆ ಬೇಕು ಎಂದೆನಿಸುತ್ತಿತ್ತು. ಆದರೆ ನೀನಿಲ್ಲದಾಗ ಅದೇ ದೌರ್ಬಲ್ಯ ನನ್ನನ್ನ ನಿರ್ಬಲನನ್ನಾಗಿಸಿದೆ...ಭಾವಗಳಿಗೆ ಜೀವವಿಲ್ಲ.. ನೋವುಗಳಿಗೆ...? ಬೇಡ ಬಿಡು...!
ನೀ ಬಂದಾದ ಮೇಲೆ ಹಲವಾರು ಹುಡುಗಿಯರು ನನ್ನ ಮನದ ಕದವನ್ನು ತಟ್ಟಿದಾರೆ. ಇಲ್ಲ ಅನ್ನೋದಿಲ್ಲ. ಆದರೆ ಅವರಿಗ್ಯಾರಿಗೂ ಅಲ್ಲಿ ಜಡಿದಿರೋ ಬೀಗ ಕಂಡಿದ್ದೇ ಇಲ್ಲ! ಸುಂದರ ಕಂಗಳ ಕುರುಡಿಯರು ಅವರು...! ಕಾಲನ ಆಟವೂ ಎಷ್ಟು ವಿಚಿತ್ರ ಅಲ್ವ? ನೀನು ಮೊದಲು ಸಿಕ್ಕೆ ಅನ್ನೋ ಒಂದೇ ಒಂದು ಕಾರಣಕ್ಕೆ ನಿನಗಿಂತ ಒಳ್ಳೆಯ (?) ಹುಡುಗಿಯರನ್ನೂ ನಾನೀಗ ನಿರ್ಲಕ್ಷಿಸುವಂತೆ ಆಗಿಬಿಟ್ಟಿದೆ. ಆದರೇನಂತೆ? ನಾನೊಬ್ಬ ಹಠವಾದಿ-ಆಶಾವಾದಿ…! ಬೀಗ ಜಡಿದ ಮನಸನ್ನು ಕಂಡೂ, ಅದು ಬಾಡಿಗೆಗೋ-ಭೋಗ್ಯಕ್ಕೋ ಅಷ್ಟೇ ಇರುವ ಸೊತ್ತಲ್ಲ ಅಂತ ತಿಳಿದೂ, ಯಾರಾದ್ರೂ ಚೆಲುವೆ(?) ನನ್ನ ಹಟಮಾರಿ ಮನಸಿನ ಬಾಗಿಲಿಗೆ ಎಡೆ ಬಿಡದೇ ಗುದ್ದಿದಳೋ… ಕೀಲಿ ಕೈ ಅವಳಿಗೆ ಒಪ್ಪಿಸಿ, ನಿರಮ್ಮಳವಾಗಿಬಿಡ್ತೀನಿ.. ಆದರೆ ಈ ಸಲ ಷರತ್ತುಗಳು ಅನ್ವಯ..! (ಮರೆಯಲಾರದ ಪಾಠಗಳನ್ನು ಕಲಿಸಿದ ಚೆಲುವೆಯೇ ನಿನಗೊಂದು ನಮಸ್ಕಾರ! ಈ ಷರತ್ತುಗಳು ಕೆಲಸಕ್ಕೆ ಬರಲ್ಲ ಅಂತ ಗೊತ್ತಮ್ಮ ತಾಯಿ.. ಆದರೆ ಈಗ ಮನಸು ರಕ್ಷಣಾತ್ಮಕವಾಗಿಬಿಟ್ಟಿದೆ.. ಅದು ಹೀಗಂತ ಕೂಗಿಸ್ತಿದೆ, ಅಷ್ಟೇ…) ಅಂದ ಹಾಗೆ ಆ ಮೊಂಡು ಚೆಲುವೆ ನೀನೂ ಆಗಿರಬಹುದು..! ಯಾಕಾಗಬಾರದು..??
Posted by Manjula at 11:37 AM 5 comments:
ಬಿಸಿಲ ಬೇಗೆಯಿಂದ
ಬಹು ಬಳಲಿಹಳು ಇಳೆ
ಕಳೆದುಕೊಂಡಿಹಳು ಲವಲವಿಕೆಯ ಸೆಲೆ
ಬಯಸಿಹಳು ಪ್ರಫುಲ್ಲತೆಯ ಹೊಸದೊಂದು ಕಳೆ
ತನ್ನಲಿ ಹೊಸ ಜೀವ ತುಂಬುವ
ಆ ನಲ್ಲನ ಸವಿ ಸ್ಪರ್ಶಕೆ...
ಬಲು ಕಾತರದಿ ಕಾದಿದ್ದಾಳೆ...
ಆದರೆ ಆ ನಲ್ಲನೋ ಬಲು ತುಂಟ
ಇಳೆಯ ಒಡಲಿಂದಲೇ ಪನ್ನೀರ ಕದಿಯುವ ಬಂಟ
ಕಾರ್ಮೋಡಗಳ ಜೊತೆಗೂಡಿ ಆಡುವ
ಇಳೆಯೊಂದಿಗೆ ಕಣ್ಣಾ ಮುಚ್ಚಾಲೆಯಾಟ...
ಹೆಚ್ಚಿಸುವ ಅವಳ ಮನದ
ವಿರಹ ಸಂಕಟ...
ಅಮೃತ ಘಳಿಗೆಯಲಿ
ಧರೆ- ಗಗನಗಳ ಮಿಲನ...
ಆತ್ಮೀಯ ಆಲಿಂಗನ
ನೀಡುತ್ತ ದಣಿದ ಧರಣಿಗೆ ಸಾಂತ್ವನ
ಗಗನರಾಯ ನೀಡುವನು ನಲ್ಲೆಗೆ...
ಸವಿ-ಸ್ಪರ್ಶದ ಸಿಂಚನ...
ಧರಣಿಯಲ್ಲಿ ರೋಮಾಂಚನ..
ಸಾಂಕೇತಿಕವಾಗಿ,
ಭುವಿಯಿಂದ ಹೊರ ಹೊಮ್ಮುವುದು ಸುವಾಸನ...
ಎಲ್ಲೆಲ್ಲೂ ಎದ್ದು ಕಾಣುವುದು ಹೊಸದೊಂದು ಚೈತನ್ಯ..
ಹಸಿರಿನಿಂದ ನಳ-ನಳಿಸುವವು ಗಿರಿ- ಕಾನನ!
ಆರಂಭವಿನ್ನು ನವ-ಜೀವನ..
ಮೊದಲ ಮಳೆಯು
ಒಂದು ಸವಿ ಪ್ರೇಮ ಕಥನ!!...
Posted by Manjula at 9:13 PM 8 comments:
ಮೂಕರು
"ಅಪ್ಪಾ ಭಗವಂತ.. ಇಷ್ಟು ನೋಡಿದ್ದೇ ಸಾಕು.. ಇನ್ನೂ ಯಾಕಪ್ಪ ನನ್ನ ಕಣ್ಣು ಮುಚ್ಚಲಿಲ್ಲ ನೀನು..?" ಯಮುನಕ್ಕಜ್ಜಿ ಗೊಣಗ್ತಾ ತನ್ನ ಕೋಣೆ ಸೇರಿಕೊಂಡ್ತು.. ದೀಪ್ತಿ ಎಲ್ಲಾ ತಿಳಿದೂ ಏನೂ ಅರಿಯದ ಮುಗ್ಧೆಯಂತೆ ಅಜ್ಜಿ ಹೋಗೋದನ್ನೇ ನೋಡ್ತಾ ನಿಂತಳು.. ಏನೋ ಯೋಚನೆ ಮನಸಲ್ಲಿ ಮೂಡ್ತಾ ಇತ್ತು.. ಅಷ್ಟರಲ್ಲೇ ಅಮ್ಮನ ಕೂಗು..ದೀಪ್ತಿ.. ಎಲ್ಲೀದಿಯೇ ಬಾ ಇಲ್ಲಿ ಒಂದಿಷ್ಟು ತರಕಾರಿ ಹೆಚ್ಚೋದಿದೆ... ನಿಟ್ಟುಸಿರಿನ ಗೆಳತಿಯೊಡನೆ ಅಡುಗೆ ಮನೆ ಸೇರಿದಳು ದೀಪ್ತಿ.
"ತರಕಾರಿ ಹೆಚ್ಚೋವಾಗ ಸಿಗೋ ಅಷ್ಟು ಯೋಚನಾ ಸ್ವಾತಂತ್ರ್ಯ.. ಬೇರೆ ಹೊತ್ತಲ್ಲಿ ಯಾಕಿಲ್ಲ ನಂಗೆ..? ಇಷ್ಟು ಸ್ವಾತಂತ್ರ್ಯ ಸಿಗೋದಾದ್ರೇ ಜೀವನ ಪರ್ಯಂತ ತರಕಾರಿ ಹೆಚ್ಕೊಂಡೇ ಇದ್ದು ಬಿಡೋಣ.." ಹೀಗೆ ಎನೇನೋ ಹುಚ್ಚು ಆಲೋಚನೆಗಳು.. ಮತ್ತೆ ಅಮ್ಮ.. "ಲೇ ದೀಪ್ತಿ ಬೇಗ ಬೇಗ ಮುಗಿಸೆ, ಒಗ್ಗರಣೆ ಹೊತ್ತೋಗತ್ತೆ." "ಒಗ್ಗರಣೆ.. ಎಷ್ಟು ಚಿಕ್ಕ ಪಾತ್ರ ಅದರದ್ದು, ಪಲ್ಯದಲ್ಲಿ.. ಆದರೂ ಅದು ಹೊತ್ತಿ ಹೋದರೆ ಪಲ್ಯದ ರುಚಿನೇ ಕೆಟ್ಟು ಹೋಗತ್ತೆ.." ತನ್ನ ಯೋಚನೆಗೆ ತಾನೇ ನಕ್ಕಳು ದೀಪ್ತಿ.. ಹೆಚ್ಚಿದ ತರಕಾರಿನ ಅಮ್ಮನಿಗೆ ಕೊಟ್ಟು.. ಅಮ್ಮ ಸ್ವಲ್ಪ ತಲೆ ನೋಯ್ತಾ ಇದೆ.. ಅರ್ಧ ಗಂಟೆ ರೂಮ್ ಅಲ್ಲಿ ಮಲ್ಕೋತೀನಮ್ಮ.. ಸುಳ್ಳು ನೆಪ ಹೇಳಿ ಅಡುಗೆ ಮನೆಯಿಂದ ಜಾಗ ಖಾಲಿ ಮಾಡಿದಳು..
ಆವತ್ತು ದೀಪ್ತಿಗೆ ಬದುಕು ಇಷ್ಟೇನಾ? ನಮ್ಮವರ ಪ್ರೀತಿ ಅಂದ್ರೇ ಇಷ್ಟೇನಾ? ಏನೇನೋ ಪ್ರಶ್ನೆಗಳು.. ಗೊಂದಲಗಳು.. ತಲೆ ನೋವತ್ತೆ ಅಂದ್ರೆ ಕೇರ್ ಮಾಡೋ ಅಮ್ಮ.. ಮನಸಿಗೆ ನೋವಾಗೋದನ್ನ ಲೆಕ್ಕಕ್ಕೇ ಇಲ್ಲ ಅನ್ನೋದು ಯಾಕೆ..? ರಘುನಾ ನಾನು ಪ್ರೀತಿಸಿದ್ದೇ ತಪ್ಪಾ? ಪ್ರೀತಿಲಿ ಅವನನ್ನ ನಂಬಿದ್ದು ತಪ್ಪಾ..? ಎಲ್ಲಿ ತಪ್ಪಾಗಿದ್ದು..?? ಪ್ರೀತಿ ವಿಷಯದಲ್ಲಿ ತಪ್ಪು-ಸರಿ ಅಂತ ಯೋಚನೆ ಮಾಡೋದೇ ತಪ್ಪು ಅಲ್ವಾ? ನಮ್ಮ ಮನೆನಲ್ಲಿ ನಿಜವಾಗಲೂ ಯಾರಾದ್ರೂ ಒಬ್ಬರನ್ನೊಬ್ಬರು ಪ್ರೀತ್ಸಿದಾರಾ..?? ಪ್ರೀತಿ ಇದ್ರೆ ಒಂಟಿತನ ಕಾಡಬಾರದು ಅಲ್ವಾ..? ಮಾತಿದ್ದೂ ಮೂಕಳಾಗಿದ್ದಳು ದೀಪ್ತಿ.. ಛೇ ಬೇಡ ಪ್ರೀತಿ ವಿಚಾರ.. ಪ್ರೀತಿ ಎಷ್ಟು ನೋವು ಕೊಟ್ರೂ..ಭಂಡ ಮನಸ್ಸು ಮತ್ತೆ ಪ್ರೀತಿ ಬಗ್ಗೇನೆ ಯೋಚಿಸತ್ತೆ..ಹಾಗೇ ಕಣ್ಮುಚ್ಚಿದವು..
ಕಣ್ಣು ಬಿಟ್ಟಾಗ..ಟಪ-ಟಪ ಮಳೆ ಸದ್ದು.. ರೂಮ್ ತುಂಬ ಸ್ನಿಗ್ಧ ಬೆಳಕು.. ಹಿತವೆನಿಸುವಷ್ಟು ಚಳಿ.. ಮತ್ತೆ ರಘು ನೆನಪಾದ.. ಒಂದು ಮುದ್ದಾದ ಕಿರುನಗೆ ಮೂಡಿ, ಬಂದಷ್ಟೇ ವೇಗದಲ್ಲಿ ಮಾಯವಾಯ್ತು.. ಮತ್ತೆ ಮುತ್ತಿಕೊಳ್ಳೋ ಆಲೋಚನೆಗಳನ್ನ ಕೊಡವೋ ಪ್ರಯತ್ನದಲ್ಲೇ ಕಣ್ಣು ಗಡಿಯಾರ ನೋಡಿತು.. ಗಂಟೆ 5.. ಅರೆ.. ಹೊಟ್ಟೆನೂ ಹಸೀತಾ ಇದೆ.. ಮನೇಲಿ ಎಲ್ರೂ ಇದಾರಾ..? ಕೋಣೆ ಬಾಗಿಲು ತೆರೆದು ಆಚೆ ಬಂದಳು ದೀಪ್ತಿ.
ಅಜ್ಜಿ ತನ್ನ ಫೇವರಿಟ್ ಸೀರಿಯಲ್ ನೋಡ್ತಾ ಇತ್ತು.. ಮತ್ತೆ ಮನಸು ಅಂತು.. "ಆ ಸೀರಿಯಲ್ ಪಾತ್ರಗಳಿಗೆ ಇರೋ ಅಷ್ಟು ಸಹಾನೂಭೂತಿ..ನನ್ನ ಮೇಲೆ ಯಾಕಿಲ್ಲ ಅಜ್ಜಿಗೆ..?" ಅಮ್ಮ ಕಾಫಿ ಮಾಡ್ತಾ ಇದ್ರು.. ದೀಪ್ತಿ ನ ಕಂಡವರೇ.. "ಊಟಾನೂ ಮಾಡದೇ ಮಲಗಿದಿಯ.. ಕಾಫಿ ಕೊಡ್ಲಾ?" ಅಂದರು.. ಆ ಹನಿ ಪ್ರೀತಿಗೇ ದೀಪ್ತಿ ಕಣ್ಣು ಮಂಜಾದವು.. "ಕುಡಿತೀನಮ್ಮ.. ಬಂದೆ ಇರು" ಬೆರಳಂಚಿನಿಂದ ಕಣ್ಣೀರೊರಿಸಿ ಮುಖ ತೊಳೆಯೋಕೆ ಅಂತ ಸರಸರ ನಡೆದಳು..
ಮತ್ತೆ ಸಂಜೆ ಆಗಿತ್ತು.. ಮತ್ತೆ ಮಳೆ ಬಂದಿತ್ತು.. ಮತ್ತೆ ನೋವು ಕಾಡಿತ್ತು.. ದೀಪ್ತಿ ಕಾಫಿ ಹೀರುತ್ತಾ "ಅಮ್ಮ ಕಾಫಿ ಚೆನ್ನಾಗಿದೆ..ಥ್ಯಾಂಕ್ಸ್ "ಅಂದಳು.. ಅಮ್ಮ ಪ್ರೀತಿ ಇಂದ ಕಿರು ನಗೆ ನಕ್ಕಳು.. "ಬೆಂಕಿ ಮುಟ್ಟಿದ್ರೆ ಕೈ ಸುಡುತ್ತೆ ಅಂತ ಬುದ್ಧಿ ಹೇಳಿದ್ರೆ ರಂಪ ಮಾಡ್ತಿದ್ದ ಎರಡು ವರ್ಷದ ದೀಪ್ತಿ.. ಇವತ್ತು ನನಗೆ ಥ್ಯಾಂಕ್ಸ್ ಹೇಳೋ ಅಷ್ಟು ಬೆಳೆದು ಬಿಟ್ಟಳಲ್ಲಾ..? ಇಷ್ಟು ಮುದ್ದಾದ ಹಟಮಾರಿ ದೀಪ್ತಿ ಗೆ ಈ ನೋವು..ಪಾಪ ಹೇಗೆ ಸುಮ್ನಿದೆಯೋ ಕೂಸು.. ಯಾರೇನು ಮಾಡೋಕಾಗುತ್ತೆ.. ತಾನೇ ಮಾಡ್ಕೊಂಡಿದ್ದು.. ನನ್ನ ಕೈಲೇನಿದೆ.. ದೇವರೇ ನೀನೇ ದಾರಿ ತೋರಿಸಬೇಕಪ್ಪ.. ಈ ಮಗು ನೋವು ನೋಡೋಕಾಗಲ್ಲ.. ಎಲ್ರಿಗೂ ಎನಾದ್ರೂ ನೋವು ಕೊಡದೇ ಇದ್ರೆ ನಿಂಗೆ ಸಮಾಧಾನಾನೇ ಇಲ್ವ..?"
"ಅಯ್ಯೋ.. ಪಾಪ.. ಆ ರಾಧಂದು ಏನೂ ತಪ್ಪಿಲ್ಲ.. ಛೇ ಪಾಪ ನೋಡ ಶೈಲು.." ಯಮುನಕ್ಕಜ್ಜಿ ಮಾತು ಶೈಲನ್ನ ಮತ್ತೆ ವಾಸ್ತವಿಕತೆಗೆ ಎಳೆದಿತ್ತು.. ಟಿವಿ ಅವ್ರಿಗೂ ಕೆಲಸಿಲ್ಲ.. ನಿನಗೂ ಇಲ್ಲ.. ಸರಿ ರಾಧನ್ನ ನೀ ನೋಡು.. ಊಟಕ್ಕೆ ಗಂಜಿನಾ, ರೊಟ್ಟಿನಾ ಹೇಳು.. ಸ್ವಲ್ಪ ಖಾರವಾಗೇ ಕೇಳಿದಳು ಶೈಲ.. ಗಂಜಿ ಸಾಕು.. ಹಸಿವಿಲ್ಲ ನಂಗೆ..ಟಿವಿಲಿ ಮುಳುಗಿದ ಅಜ್ಜಿ ಹೇಳ್ತು.. ಆದರೂ ಮಗಳ ಅಸಡ್ಡೆ ಅಜ್ಜಿಗೆ ತಟ್ಟದೇ ಇರಲಿಲ್ಲ.. ಭಗವಂತ..ಕಣ್ಮುಚ್ಚೋ.. ಮತ್ತೆ ಹೇಳಿಕೊಂಡಿತು ಅಜ್ಜಿ.. ಸೀರಿಯಲ್ ಮುಗಿದು ಮತ್ತೆ ಹಾಡು ಬಂತು ಟಿವೀಲಿ.. ಅಜ್ಜಿಯ ಮಬ್ಬುಗಣ್ಣು ದೀಪ್ತಿ ಕಡೆ ಹರಿಯಿತು.. ನಾನು ಎತ್ತಾಡಿದ ನನ್ನ ಮುದ್ದು ಮೊಮ್ಮಗು ಅಂತ ಒಂದರೆ ಕ್ಷಣ ಅನಿಸಿದ್ರೂ ಮರು ಕ್ಷಣ ರಘು ನೆನಪಾಗಿ.. ಮುಂಡೇದ್ದು ದೊಡ್ಡವರು, ಹಿರಿಯರು-ಕಿರಿಯರು ಅನ್ನೋದ್ನ ಕಡೆಗಣಿಸಿ ಏನೋ ಮಾಡೋಕೆ ಹೋಯ್ತು.. ಮಾಡಿದ್ದುಣ್ಣೋ ಮಹಾರಾಯ.. ಅನುಭವಿಸಲಿ ಬುಧ್ಧಿ ಬರಲಿ ಒಂಚೂರು.. ಯೋಚಿಸ್ತಾ ದೀಪದ ಬತ್ತಿ ಮಾಡೊದು ನೆನಪಾಗಿ ಒಳ ನಡೆಯಿತು..
ಮಳೆ ನಿಂತಿತ್ತು.. ದೀಪ್ತಿ ಏನೋ ಸಮಾಧಾನ ಮಾಡ್ಕೊಂಡು, ಏನೋ ನಿರ್ಧಾರ ಮಾಡ್ಕೊಂಡು.. ಅಮ್ಮಾ ರಾತ್ರಿ ಅಡಿಗೆ ನಾ ಮಾಡ್ತೀನಿ.. ಅಪ್ಪನ ಹುಟ್ಟಿದಬ್ಬ ಅಲ್ವ..? ಅವರಿಗೆ ನನ್ನಡಿಗೆ ಇಷ್ಟ.. ಅಂತ ಅಡಿಗೆ ಮನೆಗೆ ಹೊರಟಳು..
ಮರು ದಿನ ಎದ್ದವಳೇ ಗಾಡ್ಸ್ ಹೋಮ್ ಗೆ ಹೊರಟಳು ದೀಪ್ತಿ.. ಮನೇಲಿ ಯಾರಿಗೂ ಏನು ಹೇಳಲಿಲ್ಲ.. ಫ಼ರ್ಲಾಂಗ್ ದೂರ ಕಾರ್ ಓಡಿಸೋವಾಗ.. ಮತ್ತೆ ಇಣುಕಿದ ರಘು.. ಯಾಕೋ ನೋವಾಗಲಿಲ್ಲ ದೀಪ್ತಿಗೆ.. ಅವಳಿಗೇ ಆಶ್ಚರ್ಯ..!! ರಘುನ ಹುಚ್ಚಿ ಥರ ಪ್ರೀತಿಸ್ತಿದ್ದೆ.. ನಮ್ಮ ಋಣ ಇಷ್ಟೇ ದಿನಕ್ಕೇ ಇತ್ತೇನೋ.. ಪ್ರೀತಿ ಮಾಡೋಕೂ ಮಾಡಿಸಿಕೊಳ್ಳೋಕೂ ಅದೃಷ್ಟ ಬೇಕು.. ದೇವರ ದಯ ಕೈ ತುಂಬ ದುಡಿಯೋ ಅಷ್ಟು ಅಪ್ಪ-ಅಮ್ಮ ಓದ್ಸಿದಾರೆ.. ರಘು.. ನಿನ್ನ ನೆನಪಿಗಾಗೋ, ನನ್ನ ಸ್ತ್ರೀತ್ವವನ್ನ ಪೂರ್ಣಗೊಳಿಸೋಕೋ ಒಂದು ಮಗು ನಂಗೆ ಬೇಕು ಅಂತ ನಿಂಗನಿಸಿಲಿಲ್ವ..?? ನಂಗೇನು ಬೇಕು ಅಂತ ನೀನು ಯೋಚಿಸಿದ್ದು ಕಮ್ಮೀನೇ ಅನ್ಸುತ್ತೆ.. ಆದರೆ ನಿನಗೇನು ಬೇಕು ಅಂತ ಸರಿಯಾಗಿ ಗೊತ್ತಿತ್ತು ನಿಂಗೆ.. ನಾನೂ ನಿನ್ನ ಬೇಕುಗಳಲ್ಲಿ ಒಂದಾಗಿದ್ದೆ, ಆಮೇಲೆ ನಿನ್ನ ಬೇಕುಗಳು ಬದಲಾದವು.. ನಿನ್ನ ದೂರಕ್ಕಾಗಲ್ಲ ರಘು.. ಟ್ರಾಫಿಕ್ ಸಿಗ್ನಲ್ ದೀಪ್ತಿ ಆಲೋಚನೆಗಳಿಗೂ ಬ್ರೇಕ್ ಹಾಕಿತ್ತು..
ಗಾಡ್ಸ್ ಹೋಮ್ ಅಲ್ಲಿ ಸೂರಜ್ ಕಾದಿದ್ದ.. ಸೂರಜ್ ಎರಡು ತಿಂಗಳ ಹಸುಳೆ.. ತುಂಬಾ ಮುದ್ದಾದ ಮಗು.. ಆಗಿನ್ನೂ ನಗು ಕಲೀತ ಇರೋ ಕಂದ..ಗಾಡ್ಸ್ ಹೋಮ್ ಅಲ್ಲಿ ಫಾರ್ಮ್ಯಾಲಿಟಿ ಗೆ ಎಲ್ಲ ಡಾಕ್ಯುಮೆಂಟ್ಸ್ ರೆಡಿ ಇತ್ತು.. ಫಾರ್ಮ್ಯಾಲಿಟಿ ಎಲ್ಲಾ ಮುಗಿಸಿ.. ಕಕ್ಕುಲತೆಯಿಂದ ಸೂರಜ್ ನ ಮುತ್ತಿಟ್ಟಳು ದೀಪ್ತಿ..
ಮಗು ಜೊತೆ ಮನೆಗೆ ಬಂದಾಗ ಮಧ್ಯಾನ್ಹ 3.00. ಎಲ್ಲರ ದೃಷ್ಟಿ ಎದುರಿಸಲು ಸಿದ್ಧಳಾಗೇ ಮನೆಯಿಂದ ಹೊರಟಿದ್ದು ದೀಪ್ತಿ.. ಮನೆ ಸೇರಿದಾಗ.. ಮನೆ ಮಂದಿಯೆಲ್ಲ ದಂಗು.. ಯಾರೂ ಮಾತಾಡಲಿಲ್ಲ.. ಒಳ್ಳೆಯದೇ ಆಯ್ತು ಅಂತ ಒಳ ನಡೆದಳು ದೀಪ್ತಿ..