text
stringlengths
0
61.5k
ಲಿಂಗಾಯತ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನನಾಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವ ಈ ಬೃಹತ್ ಸಮಾವೇಶದ ವೇದಿಕೆ ಲಿಂಗಾಯತ ಪಂಚಮಸಾಲಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಮಂದಿ ಲಿಂಗಾಯತ ಪಂಚಮಸಾಲಿಗಳು 2ಎ ಮೀಸಲಾತಿಯ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು. ಬೇಡಿಕೆ ಈಡೇರುವವರೆಗೂ ಬೆಂಗಳೂರು ಬಿಟ್ಟು ಕದಲುವುದಿಲ್ಲ ಎಂದು ಸಂಕಲ್ಪ ಮಾಡಿದರು.
ಶಕ್ತಿ ಪ್ರದರ್ಶನದ ಮೂಲಕ ಮೀಸಲಾತಿ ಹೋರಾಟಕ್ಕೆ ಬಲತುಂಬಿ ಪಂಚಮಸಾಲಿ ಶ್ರೀಗಳ ಬೆನ್ನಿಗೆ ನಿಂತರು. ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಆಗ್ರಹಿಸಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಜ.14 ರಂದು ಆರಂಭವಾಗಿದ್ದ ಪಂಚಮಸಾಲಿಗಳ ವಿಧಾನಸೌಧದ ಕಡೆಗೆ ಪಾದಯಾತ್ರೆ ಶನಿವಾರ ಬೆಂಗಳೂರಿನಲ್ಲಿ ಸಂಪನ್ನಗೊಂಡಿತ್ತು. ಪಾದಯಾತ್ರೆಯ ಅಂತಿಮ ಹಂತವಾಗಿ ರವಿವಾರ ಅರಮನೆ ಮೈದಾನದಲ್ಲಿ ನಡೆದಿರುವ ಬೃಹತ್ ಸಮಾವೇಶದಲ್ಲಿ ಪಂಚಮಸಾಲಿಗಳ ಬೃಹತ್ ಶಕ್ತಿ ಪ್ರದರ್ಶನವೂ ಅನಾವರಣಗೊಂಡಿತು.
ಸಮಾವೇಶದಲ್ಲಿ ಸಾವಿರಾರು ಜನರು ಪಾಲ್ಗೊಂಡು ತಮ್ಮ ಒಗ್ಗಟ್ಟು ತೋರಿಸಿದರು. ಈ ಸಮಾವೇಶದಲ್ಲಿ ರಾಜ್ಯದ ಹಲವು ಭಾಗಗಳಿಂದ ಬಂದಿರುವ ಲಕ್ಷಾಂತರ ಪಂಚಮಸಾಲಿ ಲಿಂಗಾಯತರು ಪಾಲ್ಗೊಂಡು ಪಂಚಮಸಾಲಿಗಳ 2ಎ ಮೀಸಲಾತಿಗೆ ಬಲ ತುಂಬಿ, ಪಂಚಮಸಾಲಿ ಸ್ವಾಮೀಜಿಗಳ ಬೆನ್ನಿಗೆ ನಿಂತರು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕೇಂಬ ಒಕ್ಕೊರಲಿನ ಬೇಡಿಕೆಯನ್ನು ಕೂಡಲೇ ಈಡೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.
ಸಮಾವೇಶದಲ್ಲಿ ಸಚಿವರುಗಳಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕರುಗಳಾದ ಬಸನಗೌಡ ಪಾಟೀಲ್ ಯತ್ನಾಳ, ಶಂಕರ ಮುನೇನಕೊಪ್ಪ, ಅರವಿಂದ ಬೆಲ್ಲದ್, ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಸಮುದಾಯದ ಹಲವು ಮುಖಂಡರುಗಳು ಪಾಲ್ಗೊಂಡಿದ್ದರು.
'ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆ ಈಡೇರದಿದ್ದರೆ ಮಾ.4ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುತ್ತದೆ.'
-ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಪೀಠ
ಮೀಸಲಾತಿಗೆ ನನ್ನ ಬೆಂಬಲವಿದೆ: 'ಮೀಸಲಾತಿ ನೀಡಬೇಕೆನ್ನುವುದರಲ್ಲಿ ನನ್ನ ಸಂಪೂರ್ಣ ಬೆಂಬಲ ಇದೆ. ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ, ಕಡುಬಡವರಾಗಿರುವ ವೀರಶೈವ, ಲಿಂಗಾಯತ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಲೇಬೇಕು. ಇದಕ್ಕೆ ನಮ್ಮ ಅಭ್ಯಂತರ ಏನು ಇಲ್ಲ.'
-ಮುರುಗೇಶ್ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ
ಕಣ್ಣೀರಿಟ್ಟ ವಿನಯ್ ಕುಲಕರ್ಣಿ ಪತ್ನಿ: '2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮುದಾಯ ಆಯೋಜಿಸಿದ್ದ ಸಮಾವೇಶದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಕಣ್ಣೀರಿಟ್ಟ ಘಟನೆ ನಡೆಯಿತು.'
ನೋಟಿಸ್‍ಗೆ ನಾನು ಅಂಜುವುದಿಲ್ಲ: 'ನನಗೆ ನೋಟಿಸ್ ಕೊಟ್ಟ ತಕ್ಷಣ ನನ್ನ ಬಾಯಿ ಬಂದ್ ಆಗುವುದಿಲ್ಲ. ನೋಟಿಸ್ ಕೊಟ್ಟ ತಕ್ಷಣ ಅಂಜುವುದಿಲ್ಲ. ನೋಟಿಸ್ ಕೊಟ್ಟು ಯತ್ನಾಳ್ ನನ್ನು ಹೆದರಿಸುತ್ತೇವೆ ಎಂದರೆ, ಆದಷ್ಟು ಬೇಗ ಕುರ್ಚಿ ಖಾಲಿ ಮಾಡಬೇಕಾಗಲಿದೆ ಎಂಬುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದರು.
ನಾಳೆ ಸಚಿವರ ಸುದ್ದಿಗೋಷ್ಠಿ: 'ಲಿಂಗಾಯತ ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಸಂಪುಟದ ಹಿರಿಯ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಾರ್ತಾ ಸಚಿವ ಸಿ.ಸಿ.ಪಾಟೀಲ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಪಂಚಮಸಾಲಿ ಸಮುದಾಯದ ಬಿಜೆಪಿ ಶಾಸಕರು ನಾಳೆ (ಫೆ.22)ಮಧ್ಯಾಹ್ನ 1 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಸರಕಾರ ಮತ್ತು ಬಿಎಸ್‍ವೈ ಅವರು ಮೀಸಲಾತಿ ಕಲ್ಪಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಮಾತಿನ ಚಕಮಕಿ | Prajavani
ಸರ್ವಪಕ್ಷ ಸಭೆಯಲ್ಲಿ ಮಾತಿನ ಚಕಮಕಿ
ಬೆಂಗಳೂರು: ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ದಲ್ಲಿ ಶನಿವಾರ, ವಿಧಾನಮಂಡಲದ ಉಭಯ ಸದನಗಳ ಎಲ್ಲ ಪಕ್ಷಗಳ ನಾಯಕರು ಮತ್ತು ಕಾವೇರಿ ಕಣಿವೆಯನ್ನು ಪ್ರತಿನಿಧಿಸುವ ಸಂಸದರ ಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಒತ್ತಡ ತರಬೇಕೆಂಬ ಆಗ್ರಹ ಜೆಡಿಎಸ್‌ನವರಿಂದ ಬಂದಿದೆ. ಇದನ್ನು ವಿರೋಧಿಸಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ನಾಯಕರ ಮೇಲೆ ಹರಿಹಾಯ್ದಿದ್ದಾರೆ. ಇದು ಎರಡೂ ಪಕ್ಷಗಳ ನಾಯಕರ ನಡುವೆ ಕೆಲಕಾಲ ಮಾತಿನ ಸಮರಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.
ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು, ಕಾವೇರಿ ನ್ಯಾಯಮಂಡಳಿ ಐತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಶೀಘ್ರದಲ್ಲಿ ದೆಹಲಿಗೆ ಉನ್ನತಮಟ್ಟದ ನಿಯೋಗ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರಧಾನಿಯವರ ಭೇಟಿಗಾಗಿ ಸಮಯವನ್ನೂ ಕೋರಿದೆ ಎಂದರು.
'ಬಾಯ್ಕಾಟ್‌' ಅಭಿಯಾನ ಯಶಸ್ವಿಯಾದ್ರೆ 5.6 ಲಕ್ಷ ಕೋಟಿ ನಷ್ಟ, ಚೀನಾಕ್ಕೆ ಬಹಿಷ್ಕಾರ ಭೀತಿ! | China To Face 5 6 crore lakh loss if the Boycott Campaign succeeds
'ಬಾಯ್ಕಾಟ್‌' ಅಭಿಯಾನ ಯಶಸ್ವಿಯಾದ್ರೆ 5.6 ಲಕ್ಷ ಕೋಟಿ ನಷ್ಟ, ಚೀನಾಕ್ಕೆ ಬಹಿಷ್ಕಾರ ಭೀತಿ!
Bangalore, First Published Jun 20, 2020, 12:46 PM IST
'ಬಾಯ್ಕಾಟ್‌' ಅಭಿಯಾನ ಯಶಸ್ವಿಯಾದರೆ .5.6 ಲಕ್ಷ ಕೋಟಿ ನಷ್ಟ| ಚೀನಾಕ್ಕೆ ಬಹಿಷ್ಕಾರ ಭೀತಿ| ಸರಕು ಖಾಲಿಯಾದ ಬಳಿಕ ಚೀನಾ ವಸ್ತು ಖರೀದಿಸಬೇಡಿ: ವ್ಯಾಪಾರಿಗಳಿಗೆ ಒಕ್ಕೂಟ ಸೂಚನೆ
ಕೋಲ್ಕತಾ(ಜೂ.18): 20 ಯೋಧರ ಸಾವಿಗೆ ಕಾರಣವಾದ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ದೇಶದಲ್ಲಿ ಜೋರಾಗಿದ್ದು, ಹಲವು ಸಂಘಟನೆಗಳು ಅಭಿಯಾನವನ್ನೇ ಆರಂಭಿಸಿವೆ. ಒಂದು ವೇಳೆ, ಈ ಅಭಿಯಾನ ಯಶಸ್ವಿಯಾದರೆ 'ಡ್ರ್ಯಾಗನ್‌' ದೇಶ ವಾರ್ಷಿಕ ಬರೋಬ್ಬರಿ 6.8 ಲಕ್ಷ ಕೋಟಿ ರು. ನಷ್ಟಅನುಭವಿಸುವ ಅಂದಾಜಿದೆ.
ಆಟಿಕೆ, ಗೃಹ ಬಳಕೆ ವಸ್ತು, ಮೊಬೈಲ್‌, ಎಲೆಕ್ಟ್ರಿಕ್‌ ಹಾಗೂ ಎಲೆಕ್ಟ್ರಾನಿಕ್‌ ಗೂಡ್ಸ್‌ ಮತ್ತು ಸೌಂದರ್ಯವರ್ಧಕ ವಸ್ತುಗಳಂತಹ ಸುಮಾರು 1.2 ಲಕ್ಷ ಕೋಟಿ ರು. ಮೌಲ್ಯದ ಚೀನಿ ವಸ್ತುಗಳನ್ನು ಸಣ್ಣ ವ್ಯಾಪಾರಿಗಳು ಪ್ರತಿ ವರ್ಷ ದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈಗ ಇರುವ ಎಲ್ಲ ಸರಕು ಖಾಲಿಯಾದ ಬಳಿಕ ಚೀನಾದಿಂದ ಹೊಸ ಮಾಲು ಖರೀದಿಸಬೇಡಿ ಎಂದು ನಮ್ಮ ಸದಸ್ಯರಿಗೆ ಸೂಚಿಸಿದ್ದೇವೆ ಎಂದು ಅಖಿಲ ಭಾರತ ವ್ಯಾಪಾರ ಮಂಡಲ ಸೂಚಿಸಿದೆ.
ಇದೇ ವೇಳೆ, ಇ- ಕಾಮರ್ಸ್‌ ಕಂಪನಿಗಳು 5.6 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಅವನ್ನೂ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ವ್ಯಾಪಾರ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿ.ಕೆ. ಬನ್ಸಲ್‌ ತಿಳಿಸಿದ್ದಾರೆ.
ವ್ಯಾಪಾರಿಗಳ ರಾಷ್ಟ್ರೀಯ ಸಂಸ್ಥೆಯಾಗಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಈಗಾಗಲೇ 'ಭಾರತೀಯ ಸಾಮಾನ್‌- ಹಮಾರ ಅಭಿಯಾನ್‌' ಎಂಬ ಅಭಿಯಾನ ಆರಂಭಿಸಿದೆ. 3000 ಚೀನಾ ಉತ್ಪನ್ನಗಳನ್ನು ಒಳಗೊಂಡ 450 ವಿಭಾಗಗಳ ಪಟ್ಟಿಯನ್ನು ಅದು ಮಾಡಿದೆ. ಚೀನಾ ಉತ್ಪನ್ನಗಳ ಪರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಂತೆ ಸೆಲೆಬ್ರಿಟಿಗಳಿಗೂ ಒಕ್ಕೂಟ ಪತ್ರ ಬರೆದಿದೆ.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ – Kundapra.com ಕುಂದಾಪ್ರ ಡಾಟ್ ಕಾಂ
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
14/06/2018 14/06/2018 ನ್ಯೂಸ್ ಬ್ಯೂರೋ
ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಜಿ.ಎಸ್.ವಿ.ಎಸ್ ಅಸೋಷಿಯೇಷನ್ 2017-18ರ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇಕಡ 85ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳು ಮತ್ತು ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಭೋಧಕರನ್ನು ಗೌರವಿಸುವ ಅಭಿನಂದನಾ ಕಾರ‍್ಯಕ್ರಮ ಜರುಗಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಂಬೈನ ದೇವೂ ಟೂಲ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕರಾದ ದೇವರಾಯ ಎಮ್ ಶೇರುಗಾರ್ ಮಾತನಾಡಿ ಈಗಿನ ಜಗತ್ತಿನಲ್ಲಿ ವಿದ್ಯಾರ್ಥಿಗಳ ಉನ್ನತಿಗೆ ಹೇರಳ ಅವಕಾಶಗಳು ಲಭ್ಯವಿದೆ.ಅವುಗಳನ್ನು ವಿಶ್ಲೇಷಿಸಿ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಖಚಿತಪಡಿಸಿಕೊಂಡು ಅದನ್ನು ಸಾಧಿಸುವಲ್ಲಿ ಅಗತ್ಯವಾದ ಪರಿಶ್ರಮವನ್ನು ಧಾರೆಯೆರೆಯಬೇಕು ಆಗ ನಿಖರ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ನಾವು ಬಾಲ್ಯದ ಎಲ್ಲಾ ಅನುಭವಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಸುತ್ತಲಿನ ಪ್ರೇರಣೆಗಳನ್ನು ಬಳಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಹೊಂದುವುದು ಪ್ರತಿಯೊಬ್ಬರ ಮೊದಲ ಆದ್ಯತೆಯಾಗಬೇಕು ಎಂದು ಅವರು ಹೇಳಿದರು
ಚಿನ್ಮಯೀ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ಉಮೇಶ್ ಪುತ್ರನ್ ಶುಭ ಹಾರೈಸಿ ತಮ್ಮ ವತಿಯಿಂದ ಸರಸ್ವತಿ ವಿದ್ಯಾಲಯದ ವಿಜ್ಞಾನದ ಎರಡು ವಿಭಾಗಗಳಲ್ಲಿನ ಪ್ರಥಮ ಸ್ಥಾನಿಗಳಾದ ಚೈತ್ರಾ ಶ್ಯಾನುಭಾಗ್ ಮತ್ತು ಸುಜನ ಇವರಿಗೆ ತಲಾ 25,000 ರೂಪಾಯಿಗಳ ನಗದು ಬಹುಮಾನವನ್ನು ವಿತರಿಸಿದರು.ಇದೇ ಸಂದರ್ಭದದಲ್ಲಿ ನಗರ ಕೃಷ್ಣಾನಂದ ನಾಯಕ್ ಕೊಡಮಾಡಿದ 25,000 ರೂಪಾಯಿಗಳ ನಗದು ಬಹುಮಾನವನ್ನು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸ್ನೇಹಾ ಅವರಿಗೆ ನೀಡಲಾಯಿತು.
ಜಿ.ಎಸ್.ವಿ.ಎಸ್ ಅಸೋಷಿಯೇಷನ್ ಅಧ್ಯಕ್ಷ ಡಾ.ಕಾಶೀನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್ ಅಸೋಷಿಯೇಷನ್ ಕಾರ‍್ಯದರ್ಶಿ ಹೆಚ್. ಗಣೇಶ್ ಕಾಮತ್ ಅತಿಥಿಗಳನ್ನು ಪರಿಚಯಿಸಿದರು. ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಧ್ಯಾಯರಾದ ಕೆ ಸದಾನಂದ ವೈದ್ಯ. ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಧ್ಯಾಯಿನಿ ಸುಜಾತ ದೇವಾಡಿಗ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ದೇವರಾಯ ಎಮ್ ಶೇರುಗಾರ್ ಮತ್ತು ಡಾ. ಉಮೇಶ್ ಪುತ್ರನ್ ಅವರನ್ನು ಸನ್ಮಾನಿಸಲಾಯಿತು.
ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಿ.ಎಸ್.ವಿ.ಎಸ್ ಅಸೋಷಿಯೇಷನ್ ನ ಸದಸ್ಯ ರಾಮನಾಥ ನಾಯಕ್ ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲೆ ಕವಿತಾ ಎಮ್ ಸಿ ಧನ್ಯವಾದಗೈದರು.
"ಒಡೆಯ' ಎಂಟ್ರಿಗೆ ಸಿದ್ಧತೆ ಜೋರು | Udayavani – ಉದಯವಾಣಿ
Thursday, 28 Oct 2021 | UPDATED: 05:07 PM IST
"ಒಡೆಯ' ಎಂಟ್ರಿಗೆ ಸಿದ್ಧತೆ ಜೋರು
ಅರ್ಧಶತಕದತ್ತ ಕುರುಕ್ಷೇತ್ರ
Team Udayavani, Sep 21, 2019, 3:04 AM IST
ದರ್ಶನ್‌ ಅಭಿನಯದ "ಕುರುಕ್ಷೇತ್ರ' ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಚಿತ್ರದ 50ನೇ ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ನಡುವೆಯೇ ದರ್ಶನ್‌ ತಮ್ಮ ಟ್ವೀಟರ್‌ನಲ್ಲಿ ಹಾಕಿಕೊಂಡಿರುವ ಮತ್ತೊಂದು ಫೋಟೋ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಅದು "ಒಡೆಯ'.
ದರ್ಶನ್‌ "ಒಡೆಯ' ಚಿತ್ರವನ್ನು ಒಪ್ಪಿಕೊಂಡಿದ್ದು, ಸದ್ದಿಲ್ಲದೇ ಆ ಚಿತ್ರದ ಚಿತ್ರೀಕರಣ ಮುಗಿಸಿರೋದು ನಿಮಗೆ ಗೊತ್ತೇ ಇದೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ದರ್ಶನ್‌ ಈಗ ಚಿತ್ರದ ಖಡಕ್‌ ಲುಕ್‌ನ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಮಾಸ್‌ ಸಿನಿಮಾ ಮೂಲಕ ಎಂಟ್ರಿಕೊಡುತ್ತಿರುವ ಸುಳಿವು ನೀಡಿದ್ದಾರೆ. ಎಂ.ಡಿ.ಶ್ರೀಧರ್‌ ಈ ಚಿತ್ರದ ನಿರ್ದೇಶಕರು.
ಸಂದೇಶ್‌ ನಾಗರಾಜ್‌ ನಿರ್ಮಾಣದ ಈ ಚಿತ್ರದಲ್ಲಿ ದರ್ಶನ್‌ ಜೊತೆ ಪಂಕಜ್‌, ಯಶಸ್‌ ಸೇರಿದಂತೆ ಇನ್ನೂ ಅನೇಕರು ನಟಿಸಿದ್ದಾರೆ. ದರ್ಶನ್‌ ತಮ್ಮ ಸಿನಿಮಾ ವಿಚಾರದಲ್ಲಿ ತಮ್ಮದೇ ಆದ ನಿಯಮ ಮಾಡಿದ್ದಾರೆ. ಅದು ಒಂದು ಸಿನಿಮಾ ಬಿಡುಗಡೆಯಾಗುವ ಮೊದಲು ಇನ್ನೊಂದು ಸಿನಿಮಾದ ಸುದ್ದಿಯಾಗಲಿ, ಫೋಟೋ ಆಗಲಿ ಬಿಡುವುದಿಲ್ಲವೆಂದು. ಅದೇ ಕಾರಣಕ್ಕೆ ಇಷ್ಟು ದಿನ "ಕುರುಕ್ಷೇತ್ರ' ಬಿಟ್ಟು ಬೇರೆ ಸಿನಿಮಾ ಬಗ್ಗೆ ದರ್ಶನ್‌ ಮಾತನಾಡಿದ್ದು ಕಡಿಮೆ.
#Odeya pic.twitter.com/HMdqu1u8AY
— Darshan Thoogudeepa (@dasadarshan) September 20, 2019
ಈಗ "ಕುರುಕ್ಷೇತ್ರ' ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಮುಂದಿನ ಚಿತ್ರವಾಗಿ "ಒಡೆಯ' ಬಿಡುಗಡೆಯಾಗಲಿದೆ. ಇದು ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಈಗಾಗಲೇ ದರ್ಶನ್‌ ಹಾಗೂ ನಿರ್ದೇಶಕ ಎಂ.ಡಿ.ಶ್ರೀಧರ್‌ ಕಾಂಬಿನೇಶನ್‌ನಲ್ಲಿ "ಪೊರ್ಕಿ', "ಬುಲ್‌ ಬುಲ್‌' ಚಿತ್ರಗಳು ಬಂದಿವೆ. ಈಗ "ಒಡೆಯ' ಮೂರನೇ ಚಿತ್ರ.
2.93 ಕೋಟಿ ರೂ.ಗಳ ಅನುದಾನ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ | Kannadamma
Home ಬೆಳಗಾವಿ ಅಥಣಿ 2.93 ಕೋಟಿ ರೂ.ಗಳ ಅನುದಾನ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
2.93 ಕೋಟಿ ರೂ.ಗಳ ಅನುದಾನ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
ಮೂಡಲಗಿ : ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೆ ಏರಿರುವ ನಾಗನೂರ ಪಟ್ಟಣದ ಸಮಗ್ರ ಏಳ್ಗೆಗೆ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಸಮೀಪದ ನಾಗನೂರ ಗ್ರಾಮದಲ್ಲಿ ಪಟ್ಟಣ ಪಂಚಾಯತಿಯಿಂದ ಸುಮಾರು 2.93 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಕಾರ್ಯಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಶ್ರಮಿಸುವಂತೆ ಪಟ್ಟಣ ಪಂಚಾಯತಿ ಸದಸ್ಯರಿಗೆ ಸಲಹೆ ಮಾಡಿದ ಅವರು, ನಾಗನೂರು ಪಟ್ಟಣದ ಏಳ್ಗೆಗೆ ಈಗಾಗಲೇ ಪ್ರಥಮ ಹಂತದಲ್ಲಿ ಸುಮಾರು 3 ಕೋಟಿ ರೂ. ಅನುದಾನ ಬಂದಿದೆ. ಈ ಅನುದಾನವನ್ನು ಜನ ಕಲ್ಯಾಣ ಹಾಗೂ ವಿವಿಧ ಕಾಮಗಾರಿಗಳಿಗಾಗಿ ಬಳಕೆ ಮಾಡುವಂತೆ ತಿಳಿಸಿದರು. ಸಚಿವ ರಮೇಶ ಜಾರಕಿಹೊಳಿ ಅವರು 2016-17ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿ 1.63 ಕೋಟಿ ರೂ. ಹಾಗೂ 14ನೇ ಹಣಕಾಸು ಯೋಜನೆಯಡಿ 1.30 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ನೆರವೇರಿಸಿದರು. ಅರಭಾವಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಳೆದ 12 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬಾಲಚಂದ್ರ ಅವರು ಜನಮೆಚ್ಚಿದ ಶಾಸಕರಾಗಿದ್ದಾರೆಂದು ಪ್ರಶಂಸಿಸಿದರು. ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಎಂದೆಂದಿಗೂ ಚಿರಋಣಿಯಾಗಿರುವುದಾಗಿ ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೋಭಾ ಪರಸಪ್ಪ ಬಬಲಿ ವಹಿಸಿದ್ದರು. ಉಪಾಧ್ಯಕ್ಷೆ ನಾಗವ್ವ ಪೂಜೇರಿ, ಪ್ರಭಾಶುಗರ ನಿರ್ದೇಶಕ ಕೆಂಚಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಚಂದ್ರು ಬೆಳಗಲಿ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಸುಭಾಷ ಬೆಳಗಲಿ, ಗಜಾನನ ಯರಗಣ್ವಿ, ಎ.ಆರ್‌. ಪಾಟೀಲ, ಸಿದ್ದಪ್ಪ ಯಾದಗೂಡ, ಸತ್ತೆಪ್ಪ ಕರವಾಡಿ, ಯಮನಪ್ಪ ಕರಬನ್ನವರ, ಮುಖ್ಯಾಧಿಕಾರಿ ಎಂ.ಎಚ್‌. ಅತ್ತಾರ ಮುಂತಾದವರು ಉಪಸ್ಥಿತರಿದ್ದರು.
ಘನೀಕೃತ ಆಹಾರಗಳು ಆರೋಗ್ಯಕ್ಕೆ ಹಾನಿಕರವೇ? | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Oct 22, 2020, 7:02 PM IST
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಫ್ರೋಝನ್ ಫುಡ್ ಅಥವಾ ಘನೀಕೃತ ಆಹಾರ ಸೇವನೆಯ ಗೀಳು ಹೆಚ್ಚಾಗುತ್ತಿದೆ. ಮಕ್ಕಳು ಮಾತ್ರವಲ್ಲ,ವಯಸ್ಕರೂ ಸಹ ಇದು ಸುಲಭದ್ದಾಗಿರುವುದರಿಂದ ಇಷ್ಟಪಡುತ್ತಾರೆ. ವಿಶೇಷವಾಗಿ ಸಲಾಮಿ,ಸಾಸೇಜ್ ಮತ್ತು ಕಬಾಬ್‌ನಂತಹ ಘನೀಕೃತ ಆಹಾರಗಳನ್ನು ಮಾರುಕಟ್ಟೆಯಿಂದ ತಂದು ಸ್ವಲ್ಪ ಬಿಸಿ ಮಾಡಿ ಸೇವಿಸಲಾಗುತ್ತದೆ. ಜನರು ತಮ್ಮ ಅನುಕೂಲವನ್ನು ನೋಡುತ್ತಾರೆ ಮತ್ತು ಘನೀಕೃತ ಆಹಾರಗಳ ಖರೀದಿಯೇ ಸುಲಭ ಎಂದು ಅವರಿಗೆ ಅನ್ನಿಸುತ್ತದೆ.
ಘನೀಕೃತ ಆಹಾರಗಳು ಸಮಯ, ಹಣ ಮತ್ತು ಮನೆಯಲ್ಲಿ ತಯಾರಿಸುವ ಶ್ರಮವನ್ನು ಉಳಿಸುತ್ತವೆ ನಿಜ,ಆದರೆ ಅವು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯನ್ನೂ ಉಂಟು ಮಾಡಬಲ್ಲವು. ಇಂತಹ ಆಹಾರಗಳು ಇಡೀ ಜೀರ್ಣಾಂಗ ವ್ಯವಸ್ಥೆ ಮತ್ತು ಚಯಾಪಚಯವನ್ನು ವ್ಯತ್ಯಯಗೊಳಿಸುತ್ತವೆ. ರೋಗಗಳಿಂದ ರಕ್ಷಿಸಿಕೊಳ್ಳಲು ನೀವು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಪೌಷ್ಟಿಕ ಆಹಾರಗಳ ಸೇವನೆ ಮತ್ತು ವ್ಯಾಯಾಮ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಘನೀಕೃತ ಆಹಾರಗಳು ನಮ್ಮ ಶರೀರವು ತನಗೆ ಅಗತ್ಯವಾದ ಹಲವಾರು ಪ್ರಮುಖ ಪೋಷಕಾಂಶಗಳನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ಒಮ್ಮೆ ಈ ಘನೀಕೃತ ಆಹಾರಗಳನ್ನು ಸೇವಿಸುವ ಗೀಳಿಗೆ ಅಂಟಿಕೊಂಡರೆ ಅದರಿಂದ ಕಳಚಿಕೊಳ್ಳುವುದು ತುಂಬ ಕಷ್ಟವಾಗುತ್ತದೆ. ವಾಸ್ತವದಲ್ಲಿ ಘನೀಕೃತ ಆಹಾರಗಳ ತಯಾರಿಕೆಯಲ್ಲಿ ಬಳಸಲಾಗುವ ಘಟಕಗಳಿಗೂ ತಾಜಾ ಆಹಾರದಲ್ಲಿಯ ಘಟಕಗಳಿಗೂ ವ್ಯತ್ಯಾಸಗಳಿವೆ. ಘನೀಕೃತ ಆಹಾರಗಳಿಗೆ ಹಲವಾರು ಪ್ರಿಸರ್ವೇಟಿವ್ ಅಥವಾ ಸಂರಕ್ಷಕಗಳನ್ನು ಬಳಸಲಾಗುತ್ತದೆ ಮತ್ತು ಇವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ಘನೀಕೃತ ಆಹಾರ ಸೇವನೆಯಿಂದ ಕೆಲವು ಲಾಭಗಳು ಇರಬಹುದಾದರೂ ಕೆಡುಕುಗಳೂ ಇವೆ. ಅದು ನಾವು ಊಹಿಸಿಯೂ ಇರದ ರೀತಿಯಲ್ಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಹೃದ್ರೋಗಗಳಿಂದ ಹಿಡಿದು ಕ್ಯಾನ್ಸರ್‌ವರೆಗೂ ಹಲವಾರು ಅಪಾಯಗಳನ್ನು ಘನೀಕೃತ ಆಹಾರಗಳು ಒಡ್ಡುತ್ತವೆ. ಅದು ಸಲಾಡ್ ಅಥವಾ ಬರ್ಗರ್ ಆಗಿರಲಿ,ಘನೀಕೃತ ಆಹಾರಗಳ ಸೇವನೆ ಒಂದು ಗೀಳು ಆಗಿ ಪರಿಣಮಿಸಬಾರದು.
ಘನೀಕೃತ ಆಹಾರಗಳು ಅಧಿಕ ಪ್ರಮಾಣದಲ್ಲಿ ಪಿಷ್ಟವನ್ನು ಒಳಗೊಂಡಿರುತ್ತವೆ. ಪಿಷ್ಟವು ಆಹಾರಕ್ಕೆ ರುಚಿಯನ್ನು ನೀಡುವ ಜೊತೆಗೆ ಅದನ್ನು ತಾಜಾ ಆಗಿರಿಸುತ್ತದೆ. ಆದರೆ ಅದು ಪಾಲಿಮರ್‌ನ ಗ್ಲುಕೋಸ್ ಸರಣಿಯಾಗಿರುತ್ತದೆ ಮತ್ತು ಆಹಾರವು ಜೀರ್ಣಗೊಳ್ಳುವ ಮುನ್ನವೇ ಶರೀರವು ಈ ಗ್ಲುಕೋಸ್‌ನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಹೀಗೆ ಹೆಚ್ಚಾದ ಸಕ್ಕರೆಯ ಪ್ರಮಾಣವು ಮಧುಮೇಹದ ಅಪಾಯವನ್ನು ತಂದೊಡ್ಡಬಹುದು. ಕುಟುಂಬದಲ್ಲಿ ಮಧುಮೇಹದ ಇತಿಹಾಸವನ್ನು ಹೊಂದಿರುವವರು ಘನೀಕೃತ ಆಹಾರಗಳಿಂದ ದೂರವುಳಿಯುವುದು ಒಳ್ಳೆಯದು.
ಘನೀಕೃತ ಆಹಾರ ಸೇವನೆಯ ಗೀಳು ಹೃದಯದ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಹೃದಯವು ನಮ್ಮ ಶರೀರದಲ್ಲಿಯ ಅತ್ಯಂತ ಮುಖ್ಯವಾದ ಭಾಗವಾಗಿದೆ ಮತ್ತು ಘನೀಕೃತ ಆಹಾರಗಳು ಅದಕ್ಕೆ ಅಪಾಯವನ್ನು ಒಡ್ಡುತ್ತವೆ. ಘನೀಕೃತ ಆಹಾರಗಳಲ್ಲಿ ಸಮೃದ್ಧವಾಗಿರುವ ಟ್ರಾನ್ಸ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ತಡೆಗಳನ್ನು ನಿರ್ಮಾಣ ಮಾಡುತ್ತವೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿ ಘನೀಕೃತ ಆಹಾರಗಳು ಹೃದ್ರೋಗಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ.
ಘನೀಕೃತ ಆಹಾರಗಳ ಅತಿಯಾದ ಸೇವನೆಯು ಕ್ಯಾನ್ಸರ್‌ಗೆ ಆಹ್ವಾನ ನೀಡಬಲ್ಲದು. ಘನೀಕೃತ ಆಹಾರ ಸೇವನೆಯ ಗೀಳು ಹೊಂದಿರುವವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಸುಲಭದ ಗುರಿಯಾಗುತ್ತಾರೆ ಎನ್ನುವುದನ್ನು ಕೆಲವು ಅಧ್ಯಯನಗಳು ಬೆಟ್ಟು ಮಾಡಿವೆ. ವಾಸ್ತವದಲ್ಲಿ ಎಲ್ಲ ಮಾಂಸಾಹಾರಿಗಳ ಪಾಲಿಗೆ ಘನೀಕೃತ ಮಾಂಸ ಖಾದ್ಯಗಳು ಕ್ಯಾನ್ಸರ್ ಅಪಾಯವನ್ನು ಶೇ.65ರಷ್ಟು ಹೆಚ್ಚಿಸುತ್ತವೆ. ಗ್ಲುಕೋಸ್‌ನಿಂದ ತಯಾರಾಗುವ ಕಾರ್ನ್ ಸಿರಪ್‌ನಂತಹ ಪ್ಯಾಕೇಜ್ಡ್ ಆಹಾರಗಳು ಕ್ಯಾನ್ಸರ್‌ಕಾರಕಗಳನ್ನು ಒಳಗೊಂಡಿರುತ್ತವೆ.
ಘನೀಕೃತ ಆಹಾರಗಳನ್ನು ತಾಜಾ ಆಗಿರಿಸಲು ಅವುಗಳಲ್ಲಿ ಸಂರಕ್ಷಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗಿರುತ್ತದೆ ಮತ್ತು ಅತಿಯಾದ ಸಂರಕ್ಷಕಗಳು ಆರೋಗ್ಯಕ್ಕೆ ಅತಿಯಾದ ಹಾನಿಯನ್ನುಂಟು ಮಾಡುತ್ತವೆ. ಈ ಸಂರಕ್ಷಕಗಳು ನಮ್ಮ ರಕ್ತದೊತ್ತಡ ಮಟ್ಟಗಳಿಗೂ ಅಪಾಯಕಾರಿಯಾಗಿವೆ. ಅವುಗಳಲ್ಲಿ ಸಕ್ಕರೆ ಮತ್ತು ಉಪ್ಪು ಹೆಚ್ಚಿನ ಪ್ರಮಾಣದಲ್ಲಿರುತ್ತವೆ,ಇವು ರಕ್ತದೊತ್ತಡ ಮಟ್ಟಗಳನ್ನು ಹೆಚ್ಚಿಸುತ್ತವೆ. ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಘನೀಕೃತ ಆಹಾರಗಳಿಂದ ದೂರವಿರಬೇಕು.
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ | ಸುದ್ದಿ ಸುಳ್ಯ
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ
ಸುಳ್ಯ ಭಾಗದ ಗೌಡ ಸಮುದಾಯದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಿ
ಸ್ವಾಮೀಜಿ, ಸಮುದಾಯದ ಮುಖಂಡರ ಮಧ್ಯ ಪ್ರವೇಶಕ್ಕೆ ಗೌಡ ಸಮಾಜ ಹಿತರಕ್ಷಣಾ ವೇದಿಕೆ ಆಗ್ರಹ
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಚುನಾವಣೆಯ ವಿಷಯದಲ್ಲಿ ಸುಳ್ಯ ಭಾಗದ ಗೌಡ ಸಮುದಾಯದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಸ್ವಾಮೀಜಿಯವರು, ಸಮುದಾಯದ ಮುಖಂಡರು ಮುಂದಾಗಬೇಕು ಎಂದು ಗೌಡ ಸಮಾಜ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೌಡ ಸಮಾಜದ ಹಿತರಕ್ಷಣಾ ವೇದಿಕೆಯ ಸಂಚಾಲಕ ಯತೀಶ್ ಆರ್ವಾರ್ ರವರು ಮಾತನಾಡಿ "ಸುಳ್ಯಕ್ಕೆ ಸಂಬಂಧಿಸಿದಂತೆ ಕುರುಂಜಿ ವೆಂಕಟ್ರಮಣ ಗೌಡರ ಸಾಧನೆ ಕೇವಲ ಒಬ್ಬ ವ್ಯಕ್ತಿ, ಕುಟುಂಬ, ಜಾತಿಗೆ ಸೀಮಿತವಾಗದೆ ಇಡೀ ಸಮಾಜದ ಸಾಧನೆಯಾಗಿದೆ.
ಈ ಕಾರಣದಿಂದ ಕುರುಂಜಿಯವರು ಕಟ್ಟಿರುವ ಸಂಸ್ಥೆಯು ಸುಳ್ಯದ ಗುರುತಾಗಿದೆ. ಆದರೆ ಇದರ ನಾಯಕತ್ವ ವಹಿಸಿರುವ ಕುರುಂಜಿಯವರ ಎರಡು ಕಣ್ಣುಗಳಂತಿರುವ ಅವರ ಇಬ್ಬರು ಪುತ್ರರು, ಒಕ್ಕಲಿಗ ಸಂಘದ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿರುವುದು ಸಮಾಜದಲ್ಲಿ ಗೊಂದಲ, ಬೇಸರ, ನೋವಿಗೆ ಕಾರಣವಾಗಿದೆ. ವಿಶೇಷವಾಗಿ ಗೌಡ ಸಮುದಾಯ ಈ ಬೆಳವಣಿಗೆಯನ್ನು ಅಸ್ವೀಕಾರ ಮಾಡಿದೆ.
ಕೆವಿಜಿಯವರ ಮಕ್ಕಳ ಸ್ಪರ್ಧೆ ಸಮಂಜಸವಲ್ಲದ ಈ ಬೆಳವಣಿಗೆ ನಡೆಯಲು ಕೇವಲ ವೈಯಕ್ತಿಕ ಅಥವಾ ಕೌಟುಂಬಿಕ ಭಿನ್ನಮತ ಮಾತ್ರ ಕಾರಣವಲ್ಲದೆ, ಬಾಹ್ಯ ಶಕ್ತಿಗಳ ಕುಮ್ಮಕ್ಕು ಸಹ ಇರಬಹುದೆಂದು ಗೌಡ ಸಮುದಾಯವು ಬಲವಾದ ಸಂಶಯವನ್ನು ವ್ಯಕ್ತ ಪಡಿಸುತ್ತಿದ್ದು, ಇದು ಹೌದಾದರೆ ನಮ್ಮ ವೇದಿಕೆಯು ಅಂತಹ ಸಮಾಜಘಾತುಕ ಶಕ್ತಿಗಳನ್ನು ತೀವ್ರವಾಗಿ ಖಂಡಿಸುತ್ತದೆ. ಹಾಗೂ ಇದಕ್ಕೆ ಅವಕಾಶ ನೀಡಬಾರದೆಂದು ಸಂಬಂಧಿಸಿದವರಲ್ಲಿ ಆಗ್ರಹಿಸುತ್ತದೆ.
ಸುಳ್ಯ ಭಾಗದ ಗೌಡ ಸಮುದಾಯವು ಜೇನು ಗೂಡಿನ ರೀತಿಯಲ್ಲಿ ಒಗ್ಗಟ್ಟಾಗಿದ್ದು ಇದು ಸಮುದಾಯಕ್ಕೆ ಮತ್ತು ಸಮಾಜಕ್ಕೆ ಹೆಮ್ಮೆಯಾಗಿದೆ. ಆದರೆ ಇಂದು ನಡೆಯುತ್ತಿರುವ ಬೆಳವಣಿಗೆಯ ಕಾರಣದಿಂದ ಗೌಡ ಸಮುದಾಯ ಒಡೆದರೆ ಅದು ಇಡೀ ಸಮಾಜಕ್ಕೆ ಋಣಾತ್ಮಕ ಪರಿಣಾಮ ಬೀರಬಹುದಾಗಿದ್ದು ಮಾತ್ರವಲ್ಲದೆ ವಿಶೇಷವಾಗಿ ಗೌಡ ಸಮುದಾಯ ದ್ವಂದ್ವಪೂರಿತ ವಿಘಟನೆಯ ಹಾದಿಗೆ ಸಾಗಬಹುದಾದ ಸಾಧ್ಯತೆಯನ್ನು ವೇದಿಕೆಯು ಬಲವಾಗಿ ಎಚ್ಚರಿಸುತ್ತದೆ.
ಪ್ರಸ್ತುತ ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯ ಸ್ಪರ್ಧೆಗೆ ಮುಂದಾಗಿರುವ ಗೌಡ ಸಮುದಾಯದ 3ಮಂದಿ ಕೂಡಾ ತಾವೇ ಪರಸ್ಪರ ಮಾತುಕತೆಯ ಮೂಲಕ ಸರ್ವ ಸಮ್ಮತಿಯ ಒಬ್ಬರು ಮಾತ್ರ ಸ್ಪರ್ಧೆ ಮಾಡಿ ಸಮಾಜದಲ್ಲಿ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟು ಗೌಡ ಸಮುದಾಯದ ಹೆಮ್ಮೆಗೆ ಭಾಜನರಾಗಬೇಕೆಂದು ವೇದಿಕೆಯು ಆಗ್ರಹಿಸುತ್ತದೆ.
ವಿಶೇಷವಾಗಿ ಗೌಡ ಸಮುದಾಯದಲ್ಲಿ ಉಂಟಾಗಿರುವ ಈ ಗೊಂದಲವನ್ನು ಸರಿಪಡಿಸಿ ಸಮುದಾಯದ ಒಗ್ಗಟ್ಟನ್ನು ಇನ್ನಷ್ಟು ಗಟ್ಟಿಗೊಳ್ಳಲು ಸೌಹಾರ್ದಯುವತಾದ ನಿರ್ಧಾರವನ್ನು ಮಾತುಕತೆಯ ಮೂಲಕ ಕಂಡುಕೊಳ್ಳಬೇಕೆಂದು ಸ್ವಾಮೀಜಿಯವರಲ್ಲಿ, ಸಮುದಾಯದ ಮುಖಂಡರಲ್ಲಿ ಹಾಗೂ ಈ ಮತ ಕ್ಷೇತ್ರದಲ್ಲಿನ 3 ಜಿಲ್ಲೆಗಳಲ್ಲಿನ ಗೌಡ ಜಾತಿಯ ವಿವಿಧ ಸಂಘಟನೆಗಳಲ್ಲಿ ವೇದಿಕೆಯು ಪ್ರಬಲವಾಗಿ ಆಗ್ರಹಿಸುತ್ತದೆ ಎಂದು ಅವರು ಹೇಳಿದರು.
ನಾವು ಈಗಾಗಲೇ ಸಮಾಜದಲ್ಲಿ ಸಕ್ರಿಯವಾಗಿರುವ ಗೌಡ ಸಮುದಾಯದ ಸಂಘಟನೆಯವಲ್ಲಿ ಈ ವಿಚಾರ ಪ್ರಸ್ತಾಪಿಸಿzವೆ.
ಅವರು ಪ್ರಯತ್ನ ಪಟ್ಟಿದ್ದಾರೆಂಬ ಅರಿವೂ ನಮ್ಮಲ್ಲಿದೆ. ಆದರೆ ಅದು ಫಲ ಕಂಡಿಲ್ಲ. ಫಲ ಕಾಣದಿದ್ದರೆ ಪರಿಣಾಮ ಸಮಾಜದ ಮೇಲಾಗುತ್ತದೆ ಎಂದ ಯತೀಶ್ ರವರು, ಅವರಿಬ್ಬರು ಚುನಾವಣೆಗೆ ನಿಂತರೇ ಚುನಾವಣೆಗೆ ಹೋಗುವುದಿಲ್ಲ ಎಂಬ ಮಾತನ್ನೂ ಕೆಲವರು ಹೇಳುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಚುನಾವನೆಗೆ ಹೋಗಬೇಡಿ ಎಂದು ನಾವು ಹೇಳಲು ಬರುವುದಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಗೊಂದಲ ನಿವಾರಣೆಯಾಗಿ ಒಗ್ಗಟ್ಟು ಮೂಡಬೇಕೆನ್ನುವುದು ನಮ್ಮ ಒತ್ತಾಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌಡ ಸಮಾಜ ಹಿತರಕ್ಷಣಾ ವೇದಿಕೆ ಸದಸ್ಯರುಗಳಾದ ಕುಸುಮಾಧರ ಎ.ಟಿ., ಮನುದೇವ್ ಪರಮಲೆ, ಅನೂಪ್ ಬೀಲಿಮಲೆ, ಮಹೇಶ್ ಮೂಲೆಮಜಲು ಉಪಸ್ಥಿತರಿದ್ದರು.
ಕಥೆ : ಬೇಬಿ | Prajavani
ಕಥೆ : ಬೇಬಿ
ಪ್ರತಿ ವರ್ಷದಂತೆ ಈ ಏಪ್ರಿಲ್ ಮಾಹೆಯಲ್ಲಿ ಕೋಡಿಹಳ್ಳಿಯಲ್ಲಿ ಕರಗ ಮಹೋತ್ಸವ ಗ್ರಾಂಡಾಗಿ ನಡೆಸಬೇಕೆಂದು ಕುಲಸ್ಥರು ನಿಶ್ಚಯಿಸಿದರು. ಉತ್ಸವದ ಸಮಿತಿ ಎಲ್ಲಾ ತೆರನಾದ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಕೆಲಸ ಮಾಡಲು ಉತ್ಸಾಹ - ಹುಮ್ಮಸ್ಸು ತೋರಿಸುವ ಯುವಪಡೆಗೆ ಅಗತ್ಯ ಮಾಹಿತಿ ನೀಡುತ್ತಿತ್ತು.
ಊರಿನ ಎಲ್ಲಾ ಬೀದಿ, ಮನೆಗಳನ್ನೂ ತಿರುತಿರುಗಿ ಚಂದಾ ಕಲೆ ಹಾಕಲಾಯಿತು. ತೋಟಿಗರ ರಾಮಕೃಷ್ಣನಿಗೆ ಹೇಳಿ, ಊರ ಮೂಲಮೂಲೆಗೂ ತಲುಪುವ ಹಾಗೆ `ಸಾಟು~ ಹೊಡೆಸಲಾಯಿತು. ಅವನ ಶರಾಬುನೆಂದ ನಾಲಿಗೆಗೆ ಬಿಂಕ ಇರಲಿಲ್ಲ. ತೆಲುಗಿನಲ್ಲೊಮ್ಮೆ, ಕನ್ನಡದಲ್ಲೊಮ್ಮೆ ಕರಗದ ವಿಷಯ ಅರುಹಿ, ಊರಿನ ಮುತ್ತೈದೆಯರು ಹೇಗೆ, ಯಾವಾಗ, ಯಾವ ರೀತಿ ಕರಗಕ್ಕೆ ಪೂಜೆ ಸಲ್ಲಿಸಬೇಕು ಎಂಬುದರ ವಿವರಣೆ ನೀಡಿದ.
`ಹೂವಿನ ಕರಗ~ಕ್ಕೆ ಎರಡು ಮೂರು ದಿನಗಳ ಮುಂಚೆ `ಹಸಿ ಕರಗ~ ಮಾಡುತ್ತಾರೆ. ನಡುರಾತ್ರಿ ಹೊರಳಿದ ಮೇಲೆ ಮೂರು ಜನ ಅರಿಶಿನ ಬಣ್ಣದ ಬಟ್ಟೆ ತೊಟ್ಟು, ಬೆತ್ತಲು ಭುಜಗಳಿಗೆ ಕೆಂಪು ಚೌಕ ನಾಜೂಕಾಗಿ ಹೊದ್ದು ಹಸಿಕರಗವನ್ನು ಮೂವರೂ ತೋಲನ ತಪ್ಪದಂತೆ ಕುಣಿಸುತ್ತ ಊರಿನ ಬೀದಿಬೀದಿಯಲ್ಲೂ ಓಡಿದಂತೆ ನಡೆಯುತ್ತಾರೆ. ಅವರುಗಳ ಕೊರಳಲ್ಲಿ ನೀಳವಾಗಿ ಇಳಿಬಿದ್ದಿರುವ ಕೆಂಪು, ಅರಿಶಿನ ಚೆಂಡು ಹೂ ಅವರ ಓಡುನಡಿಗೆಗೆ ತಕ್ಕಂತೆ ಲಯಬದ್ಧವಾಗಿ ಎಗರಿ ಎಗರಿ ಬೀಳುತ್ತಿರುತ್ತದೆ.
ಬೀದಿಯ ಎಲ್ಲಾ ಮನೆಗಳ ಮುಂದೂ `ಹಸಿ ಕರಗ~ ಬರುತ್ತದೆ. ಸಲೂಪ ಹೊತ್ತು ನಿಂತು ಕುಣಿಯುತ್ತದೆ. ಮನೆಯ ಗೃಹಲಕ್ಷ್ಮಿಯೊ ಅಥವಾ ಗೃಹಲಕ್ಷಿ ಆಗಲಿರುವವಳೊ ಕಾದಿದ್ದು, ಕರಗ ಆಡಿಸುವ `ಪುಣ್ಯ ಪುರುಷ~ರ ಕಾಲುಗಳಿಗೆ ನೀರು ಚಿಮುಕಿಸಿ, ಕುಂಕುಮ ಹಚ್ಚಿ, ಕ್ಷಣಾರ್ಧದಲ್ಲಿ ಕಡ್ಡಿ ಅಂಟಿಸಿ, ಕರ್ಪೂರ ಬೆಳಗಿ ಕೈಮುಗಿಯುತ್ತಾಳೆ. ಕರಗದೇವತೆ ಮುಂದುವರಿಯುತ್ತದೆ; ಮುಂದಿನ ಮನೆಗೆ, ಪಾದಪೂಜೆಗೆ, ಕರ್ಪೂರದ ಬೆಳಗಿಗೆ...
ಕರಗ ಹೆಚ್ಚು ಹೊತ್ತು ಕುಣಿಯದೆ ಯಾರಾದರೂ ಮನೆಯ ಮುಂದಿನಿಂದ `ಪಾಸು~ ಆಗಿಬಿಟ್ಟರೆ ಆ ಮನೆಯಲ್ಲಿ ಏನೋ ಅಂಟು-ಮುಂಟು ಸಂಭವಿಸಿರಬೇಕೆಂದು ಜನ ತಿಳಿಯುತ್ತಿದ್ದರು. ಗೌಡರ ಮನೆಗಳು, ರೆಡ್ಡಿಗಳ ಮನೆಗಳ ಮುಂದೆ ಸಾಮಾನ್ಯವಾಗಿ ಕರಗ ಹೆಚ್ಚು ಹೊತ್ತು ಕುಣಿಯುತ್ತಿತ್ತು. ಊರಿನ ಕಲಿತ ಹೈಕಳು- `ನೋಡ್ರೋ, ಚಂದಾ ಹೆಚ್ಚು ಕೊಟ್ಟೋರ ಮನೆ ಮುಂದೆ ಕರಗ ಹೆಂಗೆ ಕುಣಿಯುತ್ತೇ~ ಎಂದರೆ, ಹಿರಿ ತಲೆಗಳು ಅವರತ್ತ ಕತ್ತು ಹಾಕಿ `ಸಾಕು ನಿಲ್ಲಿಸ್ರೋ, ತಲೆಹರಟೆಗಳಾ... ಕರಗ ಹೊರೋರು ಮನ್ಸ್ರು ಅಂತಾ ತಿಳ್ಕಂಡ್ರಾ... ಆ ಕರಗಮ್ಮ ತಾಯಿನೇ ಮುಂದೆ ಮುಂದೆ ಕುಣೀತಾ ಓಡ್ತಾಳೆ... ಇವರು ಸುಮ್ಮನೆ ಆ ತಾಯಿ ಹಿಂದೆ ನಡೀತಾರೆ ಆಟೆ~ ಎಂದು ಗದ್ದರಿಸುತ್ತಿದ್ದರು. ಅಲ್ಲಿಗೆ ಆ ಹೈಕಳ ಮಾತು ಅಡಗುತ್ತಿತ್ತು.
ಆಚಾರಿ ಬಾಲಪ್ಪನ ಮನೆಗುಂಟ ಹೋಗುವ ಕರಗ ನಂತರ ರಿವರ್ಸ್ ತಗಂಡು ಬೇರೆ ಬೀದಿಗೆ ಹೊರಳುತ್ತಿತ್ತು. ಮುಂದೆ ಮಾದಿಗರ ಕೇರಿ- `ಮಾಲ್ಗೇರಿ~- ಇದ್ದುದರಿಂದ ಕರಗಮ್ಮ ಈ ರೀತಿ ಮಾಡುತ್ತಿತ್ತು. ಬಾಲಪ್ಪನ ಮನೆ ಮುಂದೆ ಜಮಾಯಿಸುವ ಆ ಕೇರಿಯ ಜನ ಕರಗಕ್ಕೆ ದೂರದಿಂದಲೇ ಅಡ್ಡ ಬೀಳುತ್ತಿದ್ದರು. ಕೈ ಮುಗಿದು `ಓ~ ಎಂದು ಕೂಗಿ ಹರ್ಷ ಪಡುತ್ತಿದ್ದರು. ಹಾಗೆ ಹೊರಳಿದ ಕರಗಮ್ಮ ಮುಂದೆ ಬದಿಯ ಬೀದಿಗಳಲ್ಲೂ ಸಾದ್ಯಂತ ಸಂಚಾರ ಮಾಡಿ ಮುಂಜಾವು ಕಾಣಿಸುವ ಹೊತ್ತಿಗೆ ತನ ಸ್ವಸ್ಥಾನವನ್ನು ಸೇರಿಕೊಳ್ಳುತ್ತಿದ್ದಳು.
ಕರಗ ಆಡಿಸುವ ಆ ಮೂವರು `ಪುಣ್ಯ ಪುರುಷ~ರು ನಂತರ ತಣ್ಣೀರಿನಲ್ಲಿ ಮಿಂದು, ಲಘು ಆಹಾರ ಸ್ವೀಕರಿಸಿ ವಿಶ್ರಮಿಸುತ್ತಿದ್ದರು. ಮಾರನೇ ದಿನ `ಪೋತುಲರಾಜನ ಗಾವು~ ಇರುತ್ತಿತ್ತು. ದಪ್ಪ ಗಾತ್ರದ ಚಾಟಿಯಿಂದ ತನ್ನ ಮೈಗೆ ತಾನೇ ಬಡಿದುಕೊಂಡು ಏನೂ ಆಗದ ತನ್ನ ಸಧೃಡ ದೇಹವನ್ನು ಭಕ್ತಾದಿಗಳಿಗೆ ಪ್ರದರ್ಶಿಸುವ ಧಾರ್ಮಿಕ ವಿಧಿ ಅದು. ಈ ವಿಧಿಯ ಉದ್ದಕ್ಕೂ ಪಂಜು ಹಿಡಿದು `ಹೊಲತಿ~ಯೊಬ್ಬಳು ಆಗಾಗ ಅದಕ್ಕೆ ಎಣ್ಣೆ ಸುರಕೊಂಡು ಬೆಂಕಿಯನ್ನು ಉದ್ದೀಪಿಸುತ್ತಿದ್ದಳು.
ಆ ಸಂಜೆ ಸತ್ತ ಮೇಲೆ, ನಸುಕು ಹುಟ್ಟುವ ಮುನ್ನ `ಹೂವಿನ ಕರಗ~ ವಿಜೃಂಭಣೆಯಿಂದ ನಡೆಯುತ್ತಿತ್ತು. ಇದನ್ನು ಹಸಿಕರಗದಂತೆ ಮೂವರು ಹೊರದೆ ಒಬ್ಬ ಮಾತ್ರ ತಲೆ ಮೇಲೆ ಹೊರುತ್ತಿದ್ದ. ಮಧ್ಯರಾತ್ರಿ ಕಳೆದ ಮೇಲೆ ಆರಂಭವಾಗಿ ಊರಿನ ಎಲ್ಲಾ ಬೀದಿಗಳಲ್ಲೂ ಕುಣಿಯುತ್ತಾ ಸಂಚರಿಸುತ್ತಾ ಓಡುವ ನಡುಗೆಯಲ್ಲಿ ಕರಗ ಸಾಗುತ್ತಿದ್ದರೆ, ಅದರ ಹಿಂದೆ ಅರಿಶಿನ ಬಣ್ಣದ ಅಂಗಿ, ಅದೇ ಕಲರಿನ ತೆಳು ಪ್ಯಾಂಟು ಧರಿಸಿ, ಭುಜಕ್ಕೆ ಕೆಂಪು ಚೌಕ ಹಾಸಿಕೊಂಡು, ಕೊರಳಿಗೆ ದಪ್ಪ ಹೂಮಾಲೆ ಹಾಕಿಕೊಂಡು, ಉದ್ದನೆಯ ಚೂಪು ಅಲಗೊಂದನ್ನು ಆಕಾಶದತ್ತ ಹಿಡಿದು `ವೀರ ಕುಮಾರ~ರು ಕರಗದ ವೇಗಕ್ಕೆ ತಕ್ಕಂತೆ ತಮ್ಮ ನಡಿಗೆಯನ್ನು ಕಾಯ್ದುಕೊಳ್ಳುತ್ತಿದ್ದರು. ಆಚಾರಿ ಬಾಲಪ್ಪನ ಮನೆಗುಂಟ ಸಾಗಿ ಮಾಮೂಲಿ ರಿವರ್ಸ್ ತಗಂಡು, ಪಕ್ಕಕ್ಕೆ ಹೊರಳಿ ಬೇರೆ ಬೀದಿ ಹೊಕ್ಕು, ಓಡುನಡಿಗೆಯಲ್ಲಿ ಸಾಗಿ ಧರ್ಮರಾಯನ ದೇವಾಲಯ ಸೇರುವ ಹೊತ್ತಿಗೆ ಸೂರ್ಯ ಅಂದಿನ ತನ್ನ ಡ್ಯೂಟಿ ಆರಂಭಿಸಿ ಮೂರ‌್ನಾಲ್ಕು ಗಂಟೆಗಳಾಗಿರುತ್ತದೆ.
ತೋಟಿಗರ ರಾಮಕೃಷ್ಣನ `ಸಾಟು~ ಕೇಳಿದ ಕೂಡಲೆ ಮಾಲ್ಗೇರಿಯ ಸಣ್ಣವೀರಪ್ಪನಿಗೆ ಒಳಗೊಳಗೆ ಒಂದು ತೆರೆನ ಮುದ ಉಕ್ಕಿತು. ಮೀಸೆಯಲ್ಲೇ ನಕ್ಕು ಅತ್ತಕಡೆ ಇನ್ನೂ ಕಿವಿ ಅರಳಿಸಿ ಕೇಳಿದ. ಮೊದಲಿನಿಂದಲೂ ಸಣ್ಣವೀರಪ್ಪನಿಗೆ ಒಂದು ಹಂಬಲ ಇತ್ತು. ಅದು ಮನಸ್ಸಿನಲ್ಲೇ ಗೂಡು ಕಟ್ಟಿಕೊಂಡು ಉಳಿದುಬಿಟ್ಟಿತ್ತು. ಒಮ್ಮೆ ಆದರೂ ಕರಗಮ್ಮ ತಾಯಿಗೆ ಪೂಜೆ ಸಲ್ಲಿಸಿ ಕೃತಾರ್ಥನಾಗಬೇಕೆಂಬ ಅದಮ್ಯ ಬಯಕೆ ಅದು. ಆದರೆ ಪಾಪ, ಕರಗಮ್ಮ ತಾಯಿ ಅವನ ಕೇರಿಗೆ ಹೋಗುವುದಿಲ್ಲವಲ್ಲ. ಬಾಲಪ್ಪನ ಮನೆತನಕ ಬಂದು ರಿವರ್ಸ್ ತಗೋತದೆ ಎಂಬ ಖೇದ ಅವನಿಗಿತ್ತು. ಅವನ ಹೆಂಡ್ತಿ ದ್ಯಾಮವ್ವಳಿಗೂ ಈ ಆಕಾಂಕ್ಷೆ ಇಲ್ಲದಿಲ್ಲ. ಕರಗದ ಕಾಲಿಗೆ ಎಲ್ಲರಂತೆ ತಾನೂ ಪಾದಪೂಜೆ ಸಲ್ಲಿಸಿ `ಮುತ್ತೈದೆ~ ಎನ್ನಿಸಿಕೊಳ್ಳುವ ಗುಪ್ತಬಯಕೆ ಅವಳಿಗೂ ಇತ್ತು. ಇನ್ನು, ಸಣ್ಣವೀರಪ್ಪನ ಕುಲಪುತ್ರ ಚಂದ್ರೂಗೆ ಇದರಲ್ಲಿ ಆಸ್ಥೆ ಇರಲಿಲ್ಲ. ಕ್ರಮವಾಗಿ ಎರಡೆರಡು ಬಾರಿ ಎಸ್ಸೆಸೆಲ್ಸಿ, ಪಿ.ಯು.ಸಿ.ಗಳಲ್ಲಿ ಫಲ್ಟಿ ಹೊಡೆದಿದ್ದ ಇವನು ಪ್ರಗತಿಪರ ಧೋರಣೆ ಇರಿಸಿಕೊಂಡಿದ್ದವ. ಅವರ ಕೇರಿಯಲ್ಲಿ ಇಷ್ಟರ ತನಕ ಓದಿದ ಮೊದಲಿಗ ಮತ್ತು ಏಕೈಕ ವ್ಯಕ್ತಿ ಎಂಬ ಕೀರ್ತಿಗೆ ಚಂದ್ರು ಪಾತ್ರನಾಗಿದ್ದ. ಹಾಗಾಗಿ ಅವನಲ್ಲಿ ಆತ್ಮವಿಶ್ವಾಸದ ಜತೆಗೆ ಅದರ ಅತಿಯಿಂದಲೇ ಹುಟ್ಟುವ `ಅಹಂ~ ಕೂಡ ಜಮೆಯಾಗಿತ್ತು. `ಅಪ್ಪನದು ಬರೀ ಬೂಟಾಟಿಕೆ, ಈ ಯಮ್ಮನಿಗೂ ಬೇರೆ ಕೆಲಸ ಇಲ್ಲ~ ಎಂದು ಉರಿಯುತ್ತಿದ್ದ.
ಚಂದ್ರು ಉನ್ನತ ಓದು ಓದಲಿಲ್ಲ. ಅವನಪ್ಪ ಸಣ್ಣವೀರಪ್ಪ, ತಾಯಿ ದ್ಯಾವವ್ವರು ಹೊತ್ತಾರೆಯಿಂದ ಸಂಜೀತನಕ ಗೌಡರ ಜಮೀನಿನಲ್ಲಿ ದುಡಿದು ಹಣ್ಣಾಗುತ್ತಿದ್ದರು. ಸಂಜೆ ಗೌಡ ಕೊಡುವ ಕೂಲಿ ಹಣದಲ್ಲಿ ಅರ್ಧ ಶರಾಬು ಅಂಗಡಿಗೆ ಹೋದರೆ, ಉಳಿದರ್ಧದಲ್ಲಿ ಸಂಸಾರ ನೌಕೆ ತೇಲಿಸಬೇಕಾಗಿತ್ತು.
ಪ್ರಾರಂಭದಲ್ಲಿ ದ್ಯಾಮವ್ವ ಒಲ್ಲೆ ಎಂದರೂ `ರುಚಿ~ ಹತ್ತಿದ ಮೇಲೆ ಗಂಡನ ಜತೆ ಕೂತು ತಾನೂ ಕುಡಿದು ಅಂದಿನ ದಿನದ ಕತ್ತೆ ದುಡಿತಕ್ಕೆ ಶಾಂತಿ ತಂದುಕೊಳ್ಳುತ್ತಿದ್ದಳು. ಮಾರನೇ ದಿನ ಸೂರ್ಯ ಕಣ್ಣು ಬಿಡುವ ಹೊತ್ತಿಗೆಲ್ಲಾ ಇವರು ಮಾಮೂಲಿ ಕತ್ತೆಚಾಕರಿಗೆ ರೆಡಿಯಾಗಿರಬೇಕಿತ್ತು. ರಾತ್ರಿಯಲ್ಲಿ ಸಿಕ್ಕುವ ಈ `ಅಮೃತ~ದಿಂದಷ್ಟೇ ಈ ದಂಪತಿ ಆನಂದವನ್ನು ಕಂಡುಕೊಂಡಿದ್ದರು.
ದಾಯಾದಿ ಕಲಹಕ್ಕೆ ಸಿಕ್ಕಿ ಕೋರ್ಟು ಸೇರಿದ್ದ ಜಮೀನು ಕೇಸೊಂದರಲ್ಲಿ ತಿಮ್ಮೇಗೌಡನಿಗೆ ಜಯ ಲಭಿಸಿತು. ಗಟ್ಟಿಕುಳವಾಗಿದ್ದ ಗೌಡನಿಗೆ ಯಾವ ಎವಿಡೆನ್ಸ್ ಬೇಕಿದ್ದರೂ ದುಡ್ಡು ಚೆಲ್ಲಿ ಕೊಳ್ಳುವ ತಾಕತ್ತಿತ್ತು. ಗೆದ್ದ ಪ್ರಯುಕ್ತ ಮನೆಯಲ್ಲಿ ಹಬ್ಬ ಮಾಡಿಸಿದ. ಚಿಕ್ಕಂದಿನಿಂದಲೂ ತನ್ನ ಮನೆ - ತೋಟದಲ್ಲಿ ಗೇಯುತ್ತಿರುವ ಸಣ್ಣವೀರಪ್ಪನನ್ನು ಕರೆದು- `ಲೇ ಇವನೇ ತಗಾ~ ಎಂದು ಸಾವಿರ ರೂಪಾಯಿಗಳ ಚಿಕ್ಕ ಕಂತೆಯೊಂದನ್ನು ಕೊಟ್ಟ. ಅಷ್ಟು ದುಡ್ಡನ್ನು ನೋಡಿ ದಿಗಿಲುಬಿದ್ದ ಇವನು ಹಿಂದೆ ಸರಿದ. ಗೌಡ ಪಿನ್‌ಟು ಪಿನ್ ವಿವರಿಸಿದ ಮೇಲೆ ಹಣವನ್ನು ಇಸಿದುಕೊಂಡು ತನ್ನೆರಡು ಕಣ್ಣಿಗೂ ಸೋಕಿಸಿ ಜೇಬಿಗಿಳಿಸಿದ.
ತನ್ನ ಹೆಂಡ್ತಿಗೆ ಖುಷಿಯಿಂದ ಎಲ್ಲವನ್ನೂ ಅರುಹಿದ. ಅದಕ್ಕವಳು `ದ್ಯಾವ್ರ ಮಹಿಮೆ~ ಎಂದಳು. ಅಷ್ಟಕ್ಕೇ ನಿಲ್ಲದೆ `ಈ ಸಾರಿ ಊರ ಹಬ್ಬಕ್ಕೆ ಎಮ್ಮೆ ಕಡೀತಿವಿ ಎಂದು ಕೋರಿಕೆ ಕಟ್ಟಳಾ~ ಎಂದು ಗಂಡನನ್ನು ಕೇಳಿದಳು. ಕೆಂಡ ತುಳಿದವನ ಹಾಗೆ ಸಿರ‌್ರನೆ ರೇಗಿ ಅವಳ ಮೇಲೆ ಇವನು ಮುರ‌್ಕಂಡು ಬಿದ್ದ.
`ಮಂದಿ ನಮ್ಮನ್ನ ಯಾಕೆ ದೂರ ಇಟ್ಟಾರೆ ಹೇಳು? ಕರಗಮ್ಮ ಕೂಡ ನಮ್ ಕೇರಿತಾಕ ಬರಾಕಿಲ್ಲ ಅಂತಾಳೆ, ಯಾಕೇಳು?~. ದ್ಯಾಮವ್ವ ಸುಮ್ಮನೆ ಅವನ ಉತ್ತರಕ್ಕೆ ಕಾದಳು. `ದನಾ ತಿಂತೀವಿ, ಎಮ್ಮೀ ಕಡೀತಿವಿ ಅಂತ! ಅದೆಲ್ಲಾ ಏನೂ ಬೇಡ, ನಂದು ಬ್ಯಾರೆನೆ ಲೆಕ್ಕಾ ಐತೆ ಬಿಡು~ ಎಂದ. ದ್ಯಾಮವ್ವ ಆ ಅರೆಗತ್ತಲಲ್ಲೂ ಕಣ್ಣು ಅರಳಿಸಿದ್ದು ಅವನಿಗೆ ಕಾಣಿಸಿತು. ಅವನು ತನ್ನ ಖಾಕಿ ನಿಕ್ಕರಿನಿಂದ ಎರಡು `ಬೇಬಿ~ಗಳನ್ನು ಹೊರತೆಗೆದು ಚಾಪೆ ಮೇಲೆ ಇಟ್ಟ.
ಅವಳು ಅರ್ಥವಾದವಳಂತೆ ಒಳಗೋಗಿ ಎರಡು ಸ್ಟೀಲು ಗಿಲಾಸು ತಂದಳು. ಅರ್ಧ ಚೊಂಬು ನೀರು ತರುವುದನ್ನು ಮರೆಯಲಿಲ್ಲ. `ಬೇಬಿ~ಯ ಮೂಲೆಗೆ ಕಚ್ಚಿ, ರಂಧ್ರಮಾಡಿ ಲೋಟಕ್ಕೆ ಸುರಿದ. ಅವಳು ಅಳತೆ ಬಲ್ಲವಳಂತೆ ಸರಿಯಾಗಿ ಎಷ್ಟು ಬೇಕೋ ಅಷ್ಟು ನೀರು ಮಿಶ್ರ ಮಾಡಿದಳು. ಇಬ್ಬರೂ ಕುಡಿದರು. ಕಹಿಗೆ ಅವಳು ಮೊಕ ಸೊಟ್ಟಗೆ ಮಾಡಿದಳು.
ಅವಳ ಮೂತಿ ನೋಡಿ ಇವನು ನಕ್ಕು ಮಾತಾಡಿದ: `ಈ ಸಾರಿ ಕರಗಕ್ಕೆ ಊರಿನವರೆಲ್ಲಾ ತಮ್ಮ ತಮ್ಮ ಮನೆಗಳ ಮೇಲೆಲ್ಲಾ ಕಲರ್ ಕಲರ್ ಲೈಟು ಬಿಟ್ಕೋತಾರಲ್ಲ ಹಂಗೇಯಾ ನಾವು ಬಿಡುವಾ ಅಂತಾ!~. ಈ ಮಾತು ಕೇಳಿ ಅವಳಿಗೆ ಆಗಷ್ಟೇ ಒಳಗಿಳಿದಿದ್ದ ಪರಮಾತ್ಮ ಹೊರಬಂದಂತೆ ಮುಖ ಕಿವುಚಿದಳು. ಅವನು ಮಾತು ಮುಗಿಯಿತೆಂಬಂತೆ ಎದ್ದು ನಿಂತು, `ತಟ್ಟೆ ಹಾಕು~ ಎಂದೇಳಿ ಹಿತ್ತಲ ಕಡೆಗೆ ಹೋದ; ಒಂದಾ ಮಾಡುವುದಕ್ಕೇ!
ಐದುನೂರು ರೂಪಾಯಿ ವ್ಯಯ ಮಾಡಿ ತನ್ನ ಗುಡಿಸಲಿನಂತಹ ಮನೆಗೆಲ್ಲಾ, ಆ ಬೀದಿಗುಂಟ ಝಗಮಗಿಸುವ ನಮೂನೆಯ ವಿದ್ಯುತ್ ದೀಪಗಳನ್ನು ಸಣ್ಣವೀರಪ್ಪ ಹಾಕಿಸಿದ. ಊರು ಈಗ ನಿಧಾನವಾಗಿ ಬೆಳೆಯತೊಡಗಿತ್ತು. ಹೊಸ ಮನೆಗಳೂ ನಿರ್ಮಾಣ ಆಗಿದ್ದವು. ಆಚಾರಿ ಬಾಲಪ್ಪನ ಮನೆ ಈಗ ಮಾಲ್ಗೇರಿಗೆ `ಗಡಿ~ ಆಗಿರಲಿಲ್ಲ. ಇನ್ನೂ ಮುಂದಕ್ಕೆ ಮನೆಗಳು ನಿರ್ಮಾಣ ಆಗಿದ್ದವು. ಗುಡಿ ಮುಂದಕ್ಕೆ ವಿಸ್ತರಿಸಿತ್ತು.
ವಿಧಿಗಳನ್ನೆಲ್ಲಾ ಪುರೈಸಿಕೊಂಡು ನಡುರಾತ್ರಿ ಹೊರಟ ಕರಗ ಬೀದಿ ಬೀದಿಗಳಲ್ಲಿ ಕುಣಿಯುತ್ತಾ ಬರುತ್ತಿತ್ತು. ಎಂದಿನಂತೆ ರೆಡ್ಡಿ, ಗೌಡರ ಮನೆಗಳ ಮುಂದೆ ಹೆಚ್ಚು ಸಮಯ ಕುಣಿದು ಉಳಿಕೆ ಮನೆಗಳ ಮುಂದೆ ಶಾಸ್ತ್ರಕ್ಕೆ ನಿಂತಂತೆ ಮಾಡಿ ಮುಂದೆ ಓಡಿಬಿಡುತ್ತಿತ್ತು. ಕರಗದ ಹಿಂದೆ ಉದ್ದನೆಯ ಚೂಪು ಅಲುಗು ಹಿಡಿದು ವೀರಕುಮಾರರು ಬರುತ್ತಿದ್ದರು.
ಆಚಾರಿ ಬಾಲಪ್ಪನ ಮನೆಯ ಮುತ್ತೈದೆಯಿಂದ ಪಾದ ಪೂಜೆ ಮಾಡಿಸಿಕೊಂಡ ಮೇಲೆ ಕರಗಮ್ಮ ಮಿಸುಕಾಡಿದಳು. ಯಾರೋ ಕರಗಮ್ಮನ ಕಿವಿಯಲ್ಲಿ ಉಸುರಿದರು: `ಇನ್ನೂ ನಮ್ಮವರ ಮನೆಗಳಿವೆ, ಮುಂದೆ~.
ವಿದ್ಯುತ್ ದೀಪ ಅಲಂಕಾರಗಳಿಂದ ಮುಚ್ಚಿ ಹೋಗಿದ್ದ ಸಣ್ಣವೀರಪ್ಪನ ಮನೆ ಮುಂದೆ ಕರಗಮ್ಮ ಬಂದು ನಿಂತುಬಿಟ್ಟಳು. ವಿದ್ಯುತ್ ಪ್ರಭೆಯಿಂದ ಕನ್‌ಪ್ಯೂಸ್ ಆದ ಕರಗಮ್ಮ ಗಡಿ ದಾಟಿ ಮಾಲ್ಗೇರಿ ಒಳಕ್ಕೆ ಬಂದುಬಿಟ್ಟಿದ್ದಳು. ತನ್ನ ಜೀವದ ಆಸೆ ಹೀಗೆ, ಅಚಾನಕ್ಕಾಗಿ `ಅಕಾಲ~ ಮಳೆಯಂತೆ ಕೂಡಿ ಬರುತ್ತದೆ ಎಂದು ಸಣ್ಣವೀರಪ್ಪನಾದರೂ ಹೇಗೆ ಎಣಿಸಿಯಾನು?
ಕನಸೊಂದು ನಿರೀಕ್ಷಿಸದ ರೀತಿ ನನಸಾಗಿ ಕಣ್ಣಮುಂದೆ ನಿಂತಿರುವಾಗ ಸಣ್ಣವೀರಪ್ಪ ಕ್ಷಣ ಗೊಂದಲಕ್ಕೆ ಬಿದ್ದ. ಕೈ ಮುಗಿದು ನಿಂತ. ಅವನ ಹೆಂಗಸು ಕರಗಮ್ಮ ಕಾಲಿಗೆ ನೀರು ಚಿಮುಕಿಸಿ, ಕುಂಕುಮ ಹಚ್ಚಿ, ಕಡ್ಡಿ ಅಂಟಿಸಿ, ಕರ್ಪೂರದ ಬೆಳಗು ಕಾಣಿಸಿದಳು. ಇವೆಲ್ಲಾ ಸೆಕೆಂಡುಗಳಲ್ಲಿ ಜರುಗಿಹೋಯಿತು. ಕರಗಮ್ಮನ `ಗಡಿ ಲಂಘನ~ವನ್ನು ನಿರೀಕ್ಷಿಸದ ಜನರಲ್ಲಿ ಸಣ್ಣ ಗೌಜು ಉಂಟಾಯಿತು. `ಕರಗಕ್ಕೆ ಮೈಲಿಗೆಯಾಯಿತು~ ಎಂದು ಯಾರೋ ಕಿಡಿ ಹಬ್ಬಿಸಿದರು. ಕುಲಸ್ಥರೆಲ್ಲ ದಡಬಡಿಸಿ ಓಡಿ ಬಂದರು. ಸಣ್ಣವೀರಪ್ಪನಿಗೆ ಇದು ಜರುಗಿದ್ದು `ಆಕಸ್ಮಿಕ~ ಎಂದು ತಿಳಿದು ಭಯಗೊಂಡ. ಅವನ ಹೆಂಗಸು `ಗೂಡು~ ಸೇರಿಕೊಂಡಳು.
ಮಧ್ಯರಾತ್ರಿಯಿಂದ ಕುಣಿದು ಕುಣಿದು ಸುಸ್ತಾದ ಕರಗ ಹೊತ್ತವನಿಗೆ ಇದು ಸ್ವಲ್ಪ ಸುಧಾರಿಸಿಕೊಳ್ಳುವ ಸಮಯ ಎನ್ನಿಸಿ ಕುಣಿಯದೆ ಹಾಗೇ ನಿಂತ. `ಆದದ್ದು ಆಯ್ತು, ಬೆಳಿಗ್ಗೆ ವಿಚಾರಿಸುವ, ಈಗ ತಾಯಿಗೆ ದಾರಿ ಬಿಡಿ~ ಎಂದು ಯಾರೊ ಸಮಜಾಯಿಷಿ ಕೊಟ್ಟರು. ಕರಗ ಹೊತ್ತವನಿಗೆ ಮತ್ತೆ ಕುಣಿಯುವಂತೆ ಹೇಳಲಾಯಿತು. ಅವನ ಕಾಲುಗಳು ಸೋಲಲಿಕ್ಕೇ ಶುರುವಾಗಿತ್ತು. ಅವನಿಗೆ ಸುಸ್ತು ಎಷ್ಟು ಆವರಿಸಿತ್ತೇಂದರೆ ಅವನಿಗೆ ಬವಳಿ ಬರುವುದು ಬಾಕಿಯಿತ್ತಷ್ಟೇ.
ಸಣ್ಣವೀರಪ್ಪನ ಮನೆಯಿಂದ ರಿವರ್ಸ್ ತಗಂಡು ಬೇರೆ ಬೀದಿಗೆ ಕರಗಮ್ಮ ಹೊರಳಿದಳು. ಒಂದು `ರಾಜ ಕಾಲುವೆ~ ಅಡ್ಡ ಬಂತು. ಅಲ್ಲಿನ ಸೇತುವೆ ಮುರಿದು ಬಿದ್ದಿದ್ದು ಎಲ್ಲರೂ ಕಾಲುವೆಯಲ್ಲಿ ಇಳಿದು ಮೇಲೆ ಏರುತ್ತಿದ್ದರು. `ಅಮ್ಮ~ನೂ ಕೂಡ ಇಳಿದು, ಏರಲಾರದೆ ದೊಪ್ಪನೆ ಕುಸಿದಳು. ವೀರಕುಮಾರರು ಸುತ್ತುವರಿದರು. ಈ ರೀತಿ ಕರಗ ಬಿದ್ದರೆ ಅಪಶಕುನವಂತೆ. ಆಗ ವೀರಕುಮಾರರು ಕರಗ ಹೊತ್ತವನ ತಲೆ ಕತ್ತರಿಸಬೇಕು ಎಂದು ಪುರಾಣ ಪ್ರಸಿದ್ಧ, ಪ್ರತೀತಿ ಇದೆ. ಹಾಗಾಗಿ ವೀರಕುಮಾರರು ಚೂಪು ಅಲಗುಗಳನ್ನು ಝಲಪಿಸಿದರು. ಸುದ್ದಿ ಕಿವಿಗೆ ಬಿದ್ದ್ದ್ದದೇ ಕುಲಸ್ಥರು ಹಾಜರಾಗಿ ಕುಮಾರರಿಗೆ ಹೇಳಿದರು- `ಅದು ಸಹಜವಾಗಿ ಬಿದ್ದಿದ್ದರೆ ಅವನ ತಲೆ ಕತ್ತರಿಸಬಹುದಿತ್ತು, ಆದರೆ ಸಣ್ಣವೀರಪ್ಪನ ಮನೆಯಿಂದ ಪೂಜೆ ಸ್ವೀಕಾರ ಆದುದರಿಂದಲೇ ಮೈಲಿಗೆಯಾಗಿ ಕರಗಮ್ಮ ಮುನಿಸಿಕೊಂಡು ಕೆಳಕ್ಕೆ ಬಿದ್ದಿದ್ದಾಳೆ. ಹಾಗಾಗಿ ಇವನ ತಲೆ ತೆಗೆಯುವುದು ಧರ್ಮವಲ್ಲ~ ಎಂದು ಅಪದ್ಧರ್ಮ ಹೇಳಿ ಅವನ ಪ್ರಾಣ ಉಳಿಸಿದರು. ಅದಾಗಿಯೂ ಒಂದಿಬ್ಬರು ವೀರಕುಮಾರರ ಮೈಮೇಲೆ ತಾಯಿ ಆವಾಹನೆಯಾಗಿ ಕುಣಿಯತೊಡಗಿದರು. ಕೂಡಲೇ ಕುಂಕುಮ ಹಚ್ಚಲಾಯಿತು. ದೇವಿ ಶಾಂತಳಾದಳು. ಕರಗ ಹೊತ್ತವನಿಗೆ ಯಾರೋ ನೀರು ಕುಡಿಸಿ, ಎದೆ ನೀವಿದರು. ಅವನ ಹೋದ ಜೀವ ಮತ್ತೆ ಕೂಡಿಕೊಂಡಿತು.
ತೋಟಿಗರ ರಾಮಕೃಷ್ಣನಿಂದ `ಸಾಟು~ ಹೊಡೆಸಲಾಯಿತು. ಊರಿನ ಜನರೆಲ್ಲಾ ಧರ್ಮರಾಯನ ದೇವಾಲಯದ ಅಂಗಳದಲ್ಲಿ ಸೇರಿದರು. ಒಂದು ಮೂಲೆಗೆ ಸಣ್ಣವೀರಪ್ಪ, ಅವನ ಹೆಂಗಸು ದ್ಯಾಮವ್ವ ಕೂಡ ಇದ್ದಳು. ಮಗ ಚಂದ್ರು ಕಳೆದವಾರದಿಂದ ಊರಿನಲ್ಲಿರಲಿಲ್ಲ. ಈಗ ಅವನು ತಾಲ್ಲೂಕಿನ ತನ್ನ ಜನಾಂಗದ ಹಾಸ್ಟೆಲ್ ಹುಡುಗರಿಗೆ ಸರಿಯಾದ ಮೂಲಭೂತ ಸೌಕರ್ಯ ಸಿಗಲಿಲ್ಲ ಎಂದು, ಸಿಗಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿದ್ಯಾರ್ಥಿಗಳ ಜತೆ ಧರಣಿಗೆ ಕೂರುತ್ತಿದ್ದ. ಅಧಿಕಾರಿಗಳ ಕಾರಿಗೆ ಘೇರಾವ್ ಹಾಕಿ ಗಟ್ಟಿ ಧ್ವನಿಯಲ್ಲಿ ತನ್ನವರ ಅಹವಾಲು ಹೇಳುತ್ತಿದ್ದ. ಹಾಗಾಗಿ ಊರ ಘಟನೆಗಳು ಅವನಿಗೆ ತಿಳಿಯುತ್ತಿರಲಿಲ್ಲ ಅಥವಾ ಅವನಿಗವು ಮುಖ್ಯವಲ್ಲ ಎನ್ನಿಸಿರಬೇಕು.
ಕುಲಸ್ಥರು, ನ್ಯಾಯನಿರ್ಣಯಕರು ಎಲ್ಲಾ ಸೇರಿದ ಮೇಲೆ ಮಾತುಕತೆ ಆರಂಭವಾಯಿತು. ಕರಗದ ಐತಿಹಾಸಿಕತೆ, ಪುರಾಣ ಕತೆಗಳು ಮಧ್ಯೆ ಮಧ್ಯೆ ಬಂದು ಹೋದವು.