text
stringlengths 0
61.5k
|
---|
ಮುಂಗಡ ತೆರಿಗೆ ಮತ್ತು ಟಿಡಿಎಸ್ |
ತೆರಿಗೆ ಪಾವತಿದಾರರಿಗೆ ಸಂಬಂಧಪಟ್ಟಂತೆ, ವಾರ್ಷಿಕ ಆದಾಯದ ಮೇಲೂ ಮುಂಗಡ ತೆರಿಗೆ ಪಾವತಿ ಅನಿವಾರ್ಯ. ಆರ್ಥಿಕ ವರ್ಷದ ಅವಧಿಯಲ್ಲಿ ನಿಮ್ಮ ಕಂಪನಿ ವೇತನ ಪಾವತಿಸುವಾಗ ಸರಿಯಾದ ಲೆಕ್ಕಹಾಕಿ ತೆರಿಗೆಯನ್ನೇನೊ ಕಡಿತಗೊಳಿಸಿರಬಹುದು. ಆದರೆ ನಿಮಗೆ ಅನ್ಯ ಮೂಲಗಳಿಂದ ಬರುವ ಎಲ್ಲಾ ಆದಾಯಗಳಿಗೆ ಸಮರ್ಪಕ ತೆರಿಗೆ ಕಡಿತವಾಗಿರುವ ಸಾಧ್ಯತೆ ಇರುವುದಿಲ್ಲ. ವಿವಿಧ ಆದಾಯ ವರ್ಗದ ತೆರಿಗೆ ಪಾವತಿದಾರರಿಗೆ, ಶೇಕಡಾ 5 ರಿಂದ 30 ರೊಳಗಿನ ಯಾವುದೇ ತೆರಿಗೆ ದರ ಅನ್ವಯವಾಗಬಹುದು. ಅಷ್ಟೇ ಅಲ್ಲದೆ, ಇದರ ಮೇಲೆ ಶೇಕಡಾ 4 ರ ಸೆಸ್ ಕೂಡಾ ಅನ್ವಯವಾಗುತ್ತದೆ. ಇದನ್ನು ತೆರಿಗೆ ಕಡಿತಗೊಳಿಸುವ ಸಂದರ್ಭದಲ್ಲಿ ಪರಿಗಣಿಸುವ ಅಗತ್ಯವಿರುವುದಿಲ್ಲ. |
ಹೀಗಾಗಿ ಆಯಾ ವರ್ಷಕ್ಕೆ ಸಂಬಂಧಿಸಿದಂತೆ ಪಾವತಿಸಬೇಕಾದ ಒಟ್ಟು ತೆರಿಗೆ ಹಾಗೂ ಟಿಡಿಎಸ್ ಇತ್ಯಾದಿಗಳನ್ನು ಹೊಂದಿಸಿ ಇನ್ನೂ ಹೆಚ್ಚುವರಿ ತೆರಿಗೆ ಪಾವತಿಸಬೇಕಾದ ಸಂದರ್ಭವೂ ಇರಬಹುದು. ಇಂತಹ ಬಾಕಿ ಮೊತ್ತ ₹ 10,000 ಕ್ಕೂ ಅಧಿಕವಿದ್ದರೆ, ಆದಾಯ ತೆರಿಗೆ ನಿಯಮ '234ಬಿ' ಹಾಗೂ '234ಸಿ'ಯಡಿ ತಿಂಗಳಿಗೆ ಶೇಕಡಾ 1 ರ ದರದಲ್ಲಿ ಬಡ್ಡಿಯನ್ನೂ ಭರಿಸಬೇಕಾಗುತ್ತದೆ. ಎಲ್ಲದಕ್ಕಿಂತ ಪ್ರಮುಖವಾಗಿ ವೈದ್ಯಕೀಯ ವೃತ್ತಿಯಲ್ಲಿದ್ದವರಿಗೆ, ಯಾವುದೇ ವ್ಯಾಪಾರದಲ್ಲಿ ತೊಡಗಿರುವವರಿಗೆ , ಸ್ವಂತ ವೃತ್ತಿಯವರಿಗೆ ಆಯಾ ಅವಧಿಗೆ ಸಂಬಂಧಿಸಿದಂತೆ ಮುಂಗಡ ತೆರಿಗೆ ಪಾವತಿಯ ಬಗ್ಗೆ ಹೆಚ್ಚು ಗಮನವಿರಬೇಕು. ಆದರೆ 60 ವರ್ಷಕ್ಕೂ ಮೇಲ್ಪಟ್ಟ ತೆರಿಗೆದಾರರು ವ್ಯವಹಾರ ಮತ್ತು ಸ್ವಂತ ವೃತ್ತಿಯನ್ನು ಹೊಂದಿರದಿದ್ದರೆ, ಅವರಿಗೆ ಮುಂಗಡ ತೆರಿಗೆ ಪಾವತಿಸುವುದರಿಂದ ವಿನಾಯ್ತಿ ಇದೆ. |
ಆರ್ಥಿಕ ವರ್ಷ 2018-19 ಕ್ಕೆ ಸಂಬಂಧಪಟ್ಟಂತೆ ಈಗ ಮುಂಗಡ ತೆರಿಗೆ ಪಾವತಿಯ ಎಲ್ಲ ನಿಗದಿತ ದಿನಾಂಕಗಳು ಮೀರಿದ್ದರೂ, ಪ್ರಸ್ತುತ ವರ್ಷಕ್ಕೆ ತೆರಿಗೆ ಪಾವತಿದಾರರು ಸೂಕ್ತ ನಿರ್ಧಾರ ಕೈಗೊಳ್ಳಲು ಇದು ನೆರವಾಗಬಹುದು. ಇದರಿಂದ ಮುಂದೆ ಪಾವತಿಸಬೇಕಾಗುವ ಬಡ್ಡಿ ಹೊರೆ ತಗ್ಗಿಸಬಹುದು. |
ಮೊದಲ ಬಾರಿ ರಿಟರ್ನ್ಸ್ ಸಲ್ಲಿಸುವವರು ಕೆಲವು ಅಗತ್ಯ ಮಾಹಿತಿಗಳನ್ನು ತಮ್ಮಲ್ಲಿ ಸಂಗ್ರಹಿಸಿಡಬೇಕು. ಮೊದಲಾಗಿ ತಮ್ಮ ಪ್ಯಾನ್ ಕಾರ್ಡ್ ಮಾಹಿತಿ, ನಿಮ್ಮೆಲ್ಲಾ ಬ್ಯಾಂಕ್ ಅಕೌಂಟ್ ಮಾಹಿತಿ, ದಾಖಲಿಸಬೇಕಾದ ನಿಮ್ಮ ಈ ಮೈಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ವಿವರಗಳು ಅಗತ್ಯ. ತದನಂತರ, ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದಲ್ಲಿ ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಅಗತ್ಯ ವಿವರಗಳೊಂದಿಗೆ ಮೊದಲ ಬಾರಿ ದಾಖಲಿಸಬೇಕು. |
ನೀವು ದಾಖಲಿಸಿದ ಪಾಸ್‍ವರ್ಡ ಮಾಹಿತಿಯನ್ನು ಗೌಪ್ಯವಾಗಿಡಿ. ಇದು ಸ್ವತಃ ನೀವೇ ರಿಟರ್ನ್ಸ್ ಸಲ್ಲಿಸುವುದಿದ್ದರೆ ಅಥವಾ ಅನ್ಯರ ನೆರವು ಪಡೆದು ಸಲ್ಲಿಸುವುದಿದ್ದರೂ ಅಗತ್ಯ. ಮುಂದಿನ ಯಾವುದೇ ರೀತಿಯ ತೆರಿಗೆ ಸಂಬಂಧಿತ ವಿವರಗಳನ್ನು ನೋಡಲು ಅಥವಾ ತೆರಿಗೆ ಇಲಾಖೆಯಿಂದ ಬರುವ ನೋಟಿಸ್‍ಗಳಿಗೆ ಸಂಬಂಧಿಸಿದಂತೆ ಉತ್ತರಿಸಲು ನಿಮ್ಮ ಪ್ಯಾನ್ ಲಾಗಿನ್ ಮತ್ತು ಪಾಸ್‍ವರ್ಡ್ ಬಳಸಿ ಆನ್‍ಲೈನ್ ಮೂಲಕವೇ ಇತ್ಯರ್ಥಗೊಳಿಸಲು ಸಾಧ್ಯ. |
ಗಮನದಲ್ಲಿ ಇಡಬೇಕಾದ ಸಂಗತಿಗಳು |
ತೆರಿಗೆ ರಿಟರ್ನ್ಸ ಸಲ್ಲಿಸುವ ಮೊದಲು ನಿಮ್ಮ ಆದಾಯಕ್ಕೆ ಅನುಗುಣವಾಗಿ ಫಾರಂಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಐಟಿಆರ್ 1,2,3,4 ಇವುಗಳಲ್ಲಿ ವಿವಿಧ ಮೂಲದ ಆದಾಯಗಳಿಗೆ ಅನುಗುಣವಾಗಿ ಆನ್‍ಲೈನ್ ಮೂಲಕ ಫಾರಂ ಭರ್ತಿ ಮಾಡಬೇಕು. ತೆರಿಗೆ ಫಾರಂ ಭರ್ತಿ ಮಾಡುವ ಮೊದಲು ನಿಮ್ಮ ಪ್ಯಾನ್ ಖಾತೆಯಲ್ಲಿ ನಿಮ್ಮ ಆದಾಯದ ಮೇಲೆ ಕಡಿತಗೊಂಡಿರುವ ಮೊತ್ತ ಸರಿಯಾಗಿ ಕಂಡುಬಂದಿದೆಯೇ ಎಂಬುದನ್ನು '26ಎಎಸ್' ನೋಡಿ ಖಚಿತಪಡಿಸಿಕೊಳ್ಳಿ. ಇದು ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದಲ್ಲೇ ಲಭ್ಯವಿರುತ್ತದೆ. ಇಲ್ಲಿರುವ ಆದಾಯ ಸರಿಯಾಗಿದೆ ಎಂಬುದನ್ನು ಖಾತರಿ ಮಾಡಿದ ಅನಂತರ, ಇನ್ನೂ ಸೇರ್ಪಡೆಯಾಗದ ಅಥವಾ ಟಿಡಿಎಸ್‍ಗೆ ಒಳಪಡದ ಹೆಚ್ಚುವರಿ ಆದಾಯವಿದ್ದರೆ ಅದನ್ನೂ ಸೇರಿಸಿ ರಿಟರ್ನ್ಸ್‍ನಲ್ಲಿ ಘೋಷಿಸಬೇಕಾಗುತ್ತದೆ. |
ಫಾರಂ ತುಂಬಿ ರಿಟರ್ನ್ಸ್ ಸಲ್ಲಿಕೆ ಮಾಡಲು ಮೊಬೈಲ್ ಒಟಿಪಿ ಅಥವಾ ನಿಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗುವ ಅಗತ್ಯವಿರುತ್ತದೆ. ಇದಕ್ಕೆಲ್ಲ ನಿಮ್ಮ ಆಧಾರ್ ಕೂಡಾ ಜೋಡಣೆಯಾಗಿರಬೇಕು. ರಿಟರ್ನ್ಸ್ ಸಲ್ಲಿಕೆಗೆ ಪ್ರತಿಯಾಗಿ 'ಐಟಿಆರ್ 5' ಆನ್‍ಲೈನ್‍ನಲ್ಲಿ ದಾಖಲೆಯ ರೂಪದಲ್ಲಿ ನಿಮಗೆ ಲಭ್ಯವಿರುತ್ತದೆ. ಯಾವುದೇ ಸಂದರ್ಭದಲ್ಲೂ ಇದನ್ನು ದಾಖಲೆಯಾಗಿ ಬಳಸಬಹುದು. ಒಂದು ವೇಳೆ ಒಟಿಪಿ ಆಧಾರಿತ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ , 'ಐಟಿಆರ್ 5' ನ್ನು ಸಹಿ ಮಾಡಿ ಮುದ್ರಿತ ಪ್ರತಿಯನ್ನು ಆದಾಯ ತೆರಿಗೆ ಇಲಾಖೆಗೆ 120 ದಿನದೊಳಗೆ ಸಲ್ಲಿಸುವ ಅವಕಾಶ ಇರುತ್ತದೆ. |
ನಿಮಗೆ ಅನ್ವಯವಾಗುವ ಫಾರಂ ಆಯ್ಕೆ ಮಾಡುವ ಅಥವಾ ಅದರಲ್ಲಿ ಕೇಳುವ ಮಾಹಿತಿ ತುಂಬುವಷ್ಟು ತೆರಿಗೆ ಬಗ್ಗೆ ಅರಿವಿದ್ದರೆ ನೀವೇ ಭರ್ತಿ ಮಾಡಬಹುದು. ಇದು ತುಸು ಕಷ್ಟವೆಂದು ಕಂಡುಬಂದರೆ, ತೆರಿಗೆ ಸಲಹೆದಾರರನ್ನು ಅಥವಾ ನಿಮ್ಮ ಲೆಕ್ಕಪತ್ರ ಪರಿಶೋಧಕರ ಮಾರ್ಗದರ್ಶನವನ್ನೂ ಪಡೆಯಬಹುದು. |
ಯಾರೆಲ್ಲ ವಾರ್ಷಿಕವಾಗಿ ₹ 1 ಕೋಟಿಗೂ ಅಧಿಕ ವ್ಯಾಪಾರ-ವ್ಯವಹಾರದಿಂದ ಆದಾಯ ಗಳಿಸುತ್ತಾರೋ, ವೃತ್ತಿ ಮೂಲಗಳಿಂದ ₹ 50 ಲಕ್ಷಗಳಿಗೂ ಅಧಿಕ ಆದಾಯಗಳಿಸುತ್ತಾರೋ ಅವರು ಲೆಕ್ಕ ತಪಾಸಣೆ ಮಾಡಿಸಬೇಕು. ಅದಕ್ಕೆ ಸೆಪ್ಟೆಂಬರ್ 30ರ ತನಕ ಕಾಲಾವಕಾಶವಿದೆ. ಹಾಗಾಗಿ ಲೆಕ್ಕಪತ್ರ ತಪಾಸಣಾ ವ್ಯಾಪ್ತಿಗೊಳಪಡದವರು ಜುಲೈ 31ರೊಳಗೆ ರಿರ್ಟರ್ನ್ಸ್ ಸಲ್ಲಿಸುವುದು ಅಗತ್ಯ. |
ರಿಟರ್ನ್ಸ್ ಸಲ್ಲಿಕೆಗೆ ಯಾರು ಅರ್ಹರು? |
ಯಾರೆಲ್ಲ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು ಎನ್ನುವ ಪ್ರಶ್ನೆ ಹಲವರನ್ನು ಕಾಡಬಹುದು. ನಮ್ಮ ಆದಾಯ ₹ 2.5 ಲಕ್ಷಕ್ಕಿಂತ ಕಡಿಮೆ ಇದೆ. ತೆರಿಗೆಯೂ ಕಡಿತಗೊಂಡಿದೆ. ನಿಯಮ '80ಸಿ'ಯಡಿ ನಮ್ಮ ಹೂಡಿಕೆ ಇತ್ಯಾದಿ ಕಳೆದ ಮೇಲೆ ಗರಿಷ್ಠ ವಿನಾಯ್ತಿ ಮೊತ್ತಕ್ಕಿಂತ ಆದಾಯ ಕಡಿಮೆ ಇದೆ, ಆದರೂ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅನಿವಾರ್ಯತೆ ಇದೆಯೇ– ಎನ್ನುವುದು ಬಹುತೇಕ ಮಂದಿಯ ಸಂದೇಹ. |
ನೀವು 60 ವರ್ಷದೊಳಗಿನವರಾಗಿದ್ದು, ನಿಯಮ '80ಸಿ' ಯಿಂದ '80ಯು' ತನಕ ಲಭ್ಯವಿರುವ ವಿನಾಯ್ತಿಗಳನ್ನು ಪಡೆಯುವ ಮುನ್ನ ನಿಮ್ಮ 'ಒಟ್ಟು ಆದಾಯ' ವಾರ್ಷಿಕವಾಗಿ ₹ 2.5 ಲಕ್ಷಗಳಿಗೂ ಮೀರಿದ್ದರೆ, ಯಾವುದೇ ವ್ಯಕ್ತಿ ನಿಯಮ 139 ರ ಅನ್ವಯ ಯಾವುದೇ ವ್ಯಕ್ತಿ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯ. ವಯಸ್ಸು 60 ದಾಟಿದ್ದು, ಆದಾಯ ₹ 3 ಲಕ್ಷಕ್ಕೂ ಮೀರಿದ್ದರೆ ಹಾಗೂ ವಯಸ್ಸು 80 ದಾಟಿದ್ದವರಿಗೆ ಇದೇ ಆದಾಯ ಮಿತಿ ₹ 5 ಲಕ್ಷ ಆಗಿರುತ್ತದೆ. ಈ ಹಂತದ ಆದಾಯಕ್ಕೂ ಮೇಲ್ಪಟ್ಟು ಒಟ್ಟು ಆದಾಯಗಳಿಸುವವರು, ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. |
ತೆರಿಗೆ ರಿಟರ್ನ್ಸ್ ಕಾನೂನಿನನ್ವಯ ಸಲ್ಲಿಸುವುದು ಒಂದು ದೃಷ್ಟಿಯಲ್ಲಿ ಅನಿವಾರ್ಯವಾದರೂ, ಇನ್ನು ಕೆಲವು ಸಂದರ್ಭಗಳಲ್ಲಿ ಈ ಮಿತಿಗಿಂತ ಕೆಳಗೆ ಆದಾಯವಿದ್ದಾಗಲೂ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ಕೆಲವು ಪ್ರಯೋಜನಗಳಿವೆ. ನೀವು ಯಾವುದೇ ಬ್ಯಾಂಕ್ ಸಾಲಕ್ಕೆ ಮೊರೆ ಹೋಗಬೇಕಾದಾಗ, ನಿಮ್ಮ ವಿದೇಶಿ ವಿಸಾ ಪಡೆಯುವ ಸಂದರ್ಭದಲ್ಲಿ ಇದು ನೆರವಾಗಲಿದೆ. |
ಒಂದೇ ಬ್ಯಾಂಕ್‌ನಿಂದ ಆದಾಯ ಪಡೆಯುವ ಹಿರಿಯ ನಾಗರಿಕರಿಗೆ ಮಾತ್ರ ಐಟಿಆರ್ ವಿನಾಯಿತಿ |
'); $('#div-gpt-ad-651502-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-651502'); }); googletag.cmd.push(function() { googletag.display('gpt-text-700x20-ad2-651502'); }); },300); var x1 = $('#node-651502 .field-name-body .field-items div.field-item > p'); if(x1 != null && x1.length != 0) { $('#node-651502 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-651502').addClass('inartprocessed'); } else $('#in-article-651502').hide(); } else { _taboola.push({article:'auto', url:'https://www.prajavani.net/business/commerce-news/income-tax-returns-31-last-651502.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-651502', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-651502'); }); googletag.cmd.push(function() { googletag.display('gpt-text-300x20-ad2-651502'); }); // Remove current Outbrain //$('#dk-art-outbrain-651502').remove(); //ad before trending $('#mob_rhs1_651502').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-651502 .field-name-body .field-items div.field-item > p'); if(x1 != null && x1.length != 0) { $('#node-651502 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-651502 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-651502'); }); } else { $('#in-article-mob-651502').hide(); $('#in-article-mob-3rd-651502').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-651502','#in-article-823177','#in-article-823126','#in-article-823089','#in-article-823071']; var twids = ['#twblock_651502','#twblock_823177','#twblock_823126','#twblock_823089','#twblock_823071']; var twdataids = ['#twdatablk_651502','#twdatablk_823177','#twdatablk_823126','#twdatablk_823089','#twdatablk_823071']; var obURLs = ['https://www.prajavani.net/business/commerce-news/income-tax-returns-31-last-651502.html','https://www.prajavani.net/business/commerce-news/trading-in-coffee-day-shares-to-resume-from-apr-26-823177.html','https://www.prajavani.net/business/commerce-news/mumbai-share-market-stocks-trading-benchmarks-close-lower-for-the-week-823126.html','https://www.prajavani.net/business/commerce-news/glenmark-pharma-arm-files-papers-for-ipo-with-sebi-823089.html','https://www.prajavani.net/business/commerce-news/indian-pharma-exports-grow-at-18-percent-to-2444-bn-in-fy-21-823071.html']; var vuukleIds = ['#vuukle-comments-651502','#vuukle-comments-823177','#vuukle-comments-823126','#vuukle-comments-823089','#vuukle-comments-823071']; // var nids = [651502,823177,823126,823089,823071]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); |
ಮೊಲ ಹಿಡಿದು ಪೂಜಿಸಿ ಹಬ್ಬ ಆಚರಣೆ | Prajavani |
ಮೊಲ ಹಿಡಿದು ಪೂಜಿಸಿ ಹಬ್ಬ ಆಚರಣೆ |
Published: 17 ಜನವರಿ 2018, 12:02 IST |
Updated: 17 ಜನವರಿ 2018, 12:02 IST |
ಹುಳಿಯಾರು: ಕಾಡಿನಿಂದ ಮೊಲವನ್ನು ಹಿಡಿದು ತಂದು ಪೂಜಿಸಿ ಮತ್ತೆ ಕಾಡಿಗೆ ಬಿಡುವ ಮೂಲಕ ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಮಂಗಳವಾರ ಸಂಕ್ರಾಂತಿ ಆಚರಿಸಲಾಯಿತು. |
ಸುಗ್ಗಿ ಹಬ್ಬವಾದ ಸಂಕ್ರಾತಿಯನ್ನು ಬೇರೆ ಬೇರೆ ಭಾಗಗಳಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಆದರೆ ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಮೊಲವೇ ಹಬ್ಬದ ಕೇಂದ್ರ ಬಿಂದು. ಎರಡು ದಿನಗಳ ವಿಜೃಂಭಣೆಯಿಂದ ಆಚರಣೆ ನಡೆಸಲಾಗುತ್ತದೆ. |
350 ಮನೆಗಳಿರುವ ಗ್ರಾಮದಲ್ಲಿ ಸಂಕ್ರಾಂತಿಯನ್ನು ಗ್ರಾಮದ ಹಬ್ಬವಾಗಿ ಆಚರಿಸಲಾಗುತ್ತದೆ.ಹಬ್ಬಕ್ಕೆ ಇನ್ನೂ 3 ದಿನ ಇರುವಾಗಲೇ ಗ್ರಾಮಸ್ಥರು ಜೀವಂತ ಮೊಲವನ್ನು ಹಿಡಿಯಲು ಕಾಡಿಗೆ ತರಳುವರು. ಹಿಡಿದ ಮೊಲವನ್ನು ದೇಗುಲದಲ್ಲಿ ಇಡುವರು. ನಂತರ ಸಂಕ್ರಾಂತಿ ಹಬ್ಬದಂದು ಪೂಜೆ ಸಲ್ಲಿಸುವರು. ಮರು ದಿನ ಗ್ರಾಮದ ವರದರಾಜಸ್ವಾಮಿ, ಆಂಜನೇಯಸ್ವಾಮಿ ಸೇರಿದಂತೆ ವಿವಿಧ ದೇವರುಗಳ ಸಮ್ಮುಖದಲ್ಲಿ ಗ್ರಾಮದ ಊರ ಬಾಗಿಲಿಗೆ ಮೆರವಣಿಗೆ ಮೂಲಕ ಕರೆತಂದು ಬಿಡಲಾಗುತ್ತದೆ. |
ಬಿಟ್ಟ ಮೊಲ ಯಾವ ದಿಕ್ಕಿಗೆ ಓಡುತ್ತದೆಯೋ ಆ ದಿಕ್ಕಿಗೆ ಉತ್ತಮ ಮಳೆ ಬೆಳೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಒಂದು ವರ್ಷ ಬಿಟ್ಟ ಮೊಲ ಮತ್ತೆ ಸಿಕ್ಕಿದರೆ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಗ್ರಾಮಸ್ಥರಲ್ಲಿದೆ. ಕಾಂತರಾಜು, ಶಂಕರ್, ನಟರಾಜು, ವರದಯ್ಯ, ಮಧು, ತಮ್ಮಯ್ಯ, ಕೃಷ್ಣಯ್ಯ ಹಾಗೂ ಗ್ರಾಮಸ್ಥರು ಇದ್ದರು. |
ರವೀಶ್ ಕುಮಾರ್ : ಆಪ್ತವಾಗುವ ಆಪ್ತರಕ್ಷಕ |
ಆಪ್ತರಕ್ಷಕ ದಲ್ಲಿ ಮತ್ತೊಮ್ಮೆ ನಾಗವಲ್ಲಿ ಪ್ರೇಕ್ಷಕರ ಮು೦ದೆ ಬ೦ದು ನಿಲ್ಲುತ್ತಾಳೆ. ಡಾ| ವಿಜಯ್(ವಿಷ್ಣುವರ್ಧನ್) ತಮ್ಮ ಮನೋವಿಜ್ಞಾನದಿ೦ದ ನಾಗವಲ್ಲಿಯಿ೦ದ ತೊ೦ದರೆಗೀಡಾದವಳನ್ನು ಸರಿಯಾಗಿ ಪತ್ತೆ ಹಚ್ಚುತ್ತಾರೆ. ರಾಮಚ೦ದ್ರ ಆಚಾರ್ಯರು(ಅವಿನಾಶ್) ತಮ್ಮ ಪಾರ೦ಪರಿಕ ಜ್ಞಾನದಿ೦ದ ನಾಗವಲ್ಲಿಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ 'ಆಪ್ತರಕ್ಷಕ' ಖ೦ಡಿತವಾಗಿಯೂ 'ಆಪ್ತಮಿತ್ರ' ಚಿತ್ರದ ಉತ್ತಮ ಮು೦ದುವರೆದ ಭಾಗ. |
ಆಪ್ತರಕ್ಷಕದಲ್ಲಿ ಕತೆಯು ವೇಗದಿ೦ದ ಸಾಗುತ್ತದೆ. ಎಲ್ಲೂ ಏಕತಾನತೆ ಕಾಡದೆ ನೋಡುಗರ ಕುತೂಹಲವನ್ನು ಹಿಡಿದಿಟ್ಟು ಮು೦ದಕ್ಕೆ ಸಾಗುತ್ತದೆ. ಆಪ್ತಮಿತ್ರದ೦ತೆಯೇ ಆಪ್ತರಕ್ಷಕದಲ್ಲಿ ಒ೦ದು ಮನೆಯವರಿಗೆ ನಾಗವಲ್ಲಿಯ ಸಮಸ್ಯೆ ಎದುರಾಗಿರುತ್ತದೆ. ಸಮಸ್ಯೆ ಬಗೆಹರಿಸಲು ಮೊದಲು ರಾಮಚ೦ದ್ರ ಆಚಾರ್ಯರ ಪ್ರವೇಶವಾಗುತ್ತದೆ. ನ೦ತರ ಆಚಾರ್ಯರೇ ಕ್ಯಾಪ್ಟನ್ ಅಥವಾ ಡಾ ವಿಜಯ್ ರನ್ನು ಕರೆಸುತ್ತಾರೆ. |
ಚಿತ್ರ ಕೃಪೆ : ಬೆಳ್ಳಿತೆರೆ.ಕಾಮ್ |
ನಾಗವಲ್ಲಿಯ ಸಮಸ್ಯೆ ಆಪ್ತಮಿತ್ರದಲ್ಲಿ ಗೆಳೆಯ ರಮೇಶ್ ರ ಮನೆಯಲ್ಲಿ ಕೊನೆಗೊ೦ಡಿದೆ ಎ೦ದುಕೊ೦ಡಿದ್ದ ವಿಜಯ್ ಗೆ ಇದು ಆಶ್ಚರ್ಯದ ವಿಷಯ. ತದನ೦ತರ ಆಚಾರ್ಯರು ಮತ್ತು ವಿಜಯ್ ರವರು ಅನೇಕ ಬಾರಿ ಈ ಸಮಸ್ಯೆಯ ಬಗ್ಗೆ ಚರ್ಚಿಸುತ್ತಾರೆ, ಆದರೆ ಯಾವುದೇ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಲು ಆಗುವುದಿಲ್ಲ. ಕೊನೆಗೆ ಕತೆಗೊ೦ದು ಕುತೂಹಲಕಾರಿ ತಿರುವು ದೊರೆಯುತ್ತದೆ. ಬಹುಶ: ಆಪ್ತಮಿತ್ರ ಚಿತ್ರ ನೋಡಿದವರಿಗೂ ಕೂಡಾ ಕತೆಯ ಕೊನೆಯ ತಿರುವು ಊಹಿಸಲು ಕಷ್ಟವಾಗಬಹುದು. ಹಾಗಾಗಿ ಚಿತ್ರ ಇಷ್ಟವಾಗುತ್ತದೆ. |
ಚಿತ್ರದಲ್ಲಿ ನನಗೆ ಇಷ್ಟವಾದ ಅ೦ಶಗಳು - ಹಿ೦ದಿನ ಆಪ್ತಮಿತ್ರದ ಕತೆಗೆ ಹೊ೦ದಿಕೆಯಾಗುವ೦ತೆ ಆಪ್ತರಕ್ಷಕದ ಕತೆಯನ್ನು ಹೆಣೆದಿರುವುದು, ಕತೆಯ ಸೂಕ್ಷ್ಮ ವಿಷಯಗಳಿಗೆ ಗಮನ ನೀಡಿರುವುದು, ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ಎದುರಾಗಿ ಚರ್ಚೆಗೊಳಪಡುವುದು, ಚಿತ್ರದಲ್ಲಿ ಬರುವ ಹಲವು ಆಶ್ಚರ್ಯಕಾರಿ ಸ೦ಗತಿಗಳಿಗೆ ಸೂಕ್ತ ಪುರಾವೆ ಒದಗಿಸಿರುವುದು. ಹಾಗೆಯೇ ಚಿತ್ರದಲ್ಲಿ ಬರುವ ನಾಗವಲ್ಲಿಯ ಪೂರ್ವದ ಕತೆಯನ್ನು ಚೆನ್ನಾಗಿ ನಿರೂಪಿಸಲಾಗಿದೆ. ಗ್ರಾಫಿಕ್ಸ್ ತ೦ತ್ರಜ್ಞಾನ ಕೆಲವೆಡೆ ಬಳಸದೆ ಇದ್ದರೆ ಚಿತ್ರದ ದೃಶ್ಯಗಳು ನೈಜ ಎನಿಸುತ್ತಿದ್ದವು. ಚಿತ್ರದ ಕೊನೆಯ ಭಾಗವನ್ನು ಇನ್ನಷ್ಟು ಚೆನ್ನಾಗಿ ಚಿತ್ರಸಬಹುದಿತ್ತು ಎ೦ಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆಯೇ ಚಿತ್ರದಲ್ಲಿ ತೆಲುಗು ಸ೦ಭಾಷಣೆಗಳು ಸಾಕಷ್ಟು ಇರುವುದರಿಂದ ಕನ್ನಡದಲ್ಲಿ ಉಪಶೀರ್ಷಿಕೆಗಳನ್ನು (subtitles) ನೀಡಿದ್ದರೆ ತೆಲುಗು ಬಾರದವರಿಗೆ ಸ೦ಭಾಷಣೆ ಸ್ಪಷ್ಟವಾಗುತ್ತಿತ್ತು. ಇವುಗಳನ್ನು ಹೊರತು ಪಡಿಸಿದರೆ, ಒಟ್ಟಾರೆಯಾಗಿ ಒ೦ದು ಉತ್ತಮ ಕನ್ನಡ ಚಿತ್ರವೊ೦ದು ಕನ್ನಡಿಗರೆದುರು ಬ೦ದು ನಿ೦ತಿದೆ. ಆಪ್ತರಕ್ಷಕದ ಕತೆಯ ಗುಟ್ಟು ಎಲ್ಲರಿ೦ದಲೂ ಕೇಳಿ ಚಿತ್ರ ನೋಡುವ ಕುತೂಹಲ ಕಳೆದುಕೊಳ್ಳುವ ಮೊದಲು ಚಿತ್ರವನ್ನು ನೋಡಿಕೊ೦ಡು ಬನ್ನಿ. |
Labels: ಆಪ್ತರಕ್ಷಕ, ಚಿತ್ರ ವಿಮರ್ಶೆ, ಡಾ.ವಿಷ್ಣುವರ್ಧನ್, ಸಿನಿಮಾ |
ESSKAY Wednesday, March 03, 2010 1:13:00 PM |
ಶ್ರೀ ರವೀಶ್ ಅವರೇ, |
ಮೊದಲನೇಯದಾಗಿ , ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ. |
ಹಾವು ಹಿಡಿಯುವವ [ಮನ್ ದೀಪ್ ರಾಯ್] , ಸರಸ್ವತಿ[ಲಕ್ಷ್ಮೀ ಗೋಪಾಲಸ್ವಾಮಿ] ಯ ಗಂಡನ ಪಾತ್ರದ ಸಾವಿನ ಬಗ್ಗೆ ವಿವರ ಇದೆ, ಆದರೆ ಚಿತ್ರಾಕಾರ ಹೇಗೆ ಸತ್ತ , ಆತ ಆತ್ಮಹತ್ಯೆ ಮಾಡಿಕೊಂಡನೆ , ಗೊತ್ತಾಗಲಿಲ್ಲ. |
ಹುಡುಗಿ ತಂಟೆಗೆ ಹೋಗಬೇಡ ಎಂದರೂ ಕೇಳಲಿಲ್ಲ ನಾಗೇಶ್ – ಪೊಲೀಸರ ಬಳಿ ಆರೋಪಿಯ ಅಣ್ಣ ಹೇಳಿಕೆ – Public TV |
Home/Districts/Bengaluru City/ಹುಡುಗಿ ತಂಟೆಗೆ ಹೋಗಬೇಡ ಎಂದರೂ ಕೇಳಲಿಲ್ಲ ನಾಗೇಶ್ – ಪೊಲೀಸರ ಬಳಿ ಆರೋಪಿಯ ಅಣ್ಣ ಹೇಳಿಕೆ |
ಹುಡುಗಿ ತಂಟೆಗೆ ಹೋಗಬೇಡ ಎಂದರೂ ಕೇಳಲಿಲ್ಲ ನಾಗೇಶ್ – ಪೊಲೀಸರ ಬಳಿ ಆರೋಪಿಯ ಅಣ್ಣ ಹೇಳಿಕೆ |
ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಆರೋಪಿ ಪಾಗಲ್ ಪ್ರೇಮಿ ನಾಗೇಶ್‍ನ ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. |
ನಿನ್ನೆ ರಾತ್ರಿ ಮಾಗಡಿ ರಸ್ತೆ ಬಳಿ ನಾಗೇಶ್ ಅಣ್ಣ ರಮೇಶ್ ಬಾಬು ಅಡಗಿ ಕುಳಿತಿದ್ದ. ಈ ವೇಳೆ ಪೊಲೀಸರು ನಾಗೇಶ್ ಅಣ್ಣನ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಯುವತಿಯ ಮೇಲೆ ಆ್ಯಸಿಡ್ ಸುರಿದ ಬಳಿಕ ಆರೋಪಿ ನಾಗೇಶ್ ತನ್ನ ಅಣ್ಣನಿಗೆ ಫೋನ್ ಮಾಡಿದ್ದ. ಫೋನ್ ಮಾಡಿ ಆ್ಯಸಿಡ್ ಹಾಕಿದ್ದೀನಿ, ಪೊಲೀಸರು ಬರ್ತಾರೆ ಎಸ್ಕೇಪ್ ಆಗು ಎಂದಿದ್ದ. ಬಳಿಕ ಆರೋಪಿ ಅಣ್ಣ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ |
ಪೊಲೀಸರು ನಿನ್ನೆ ಸಂಜೆ ಆರೋಪಿ ಅತ್ತಿಗೆಯನ್ನು ಕರೆತಂದು ವಿಚಾರಣೆ ಮಾಡಿದ್ದರು. ನಂತರದಲ್ಲಿ ರಾತ್ರಿ ನಾಗೇಶ್ ಅಣ್ಣನ ಕರೆತಂದು ವಿಚಾರಣೆ ಮಾಡಿದ್ದಾರೆ. ಆ್ಯಸಿಡ್ ದಾಳಿಕೋರ ನಾಗೇಶ್‍ನ ಅಣ್ಣ, ಅತ್ತಿಗೆ ಹಾಗೂ ಪೋಷಕರನ್ನು ಸಹ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. |
ನಮಗೆ ಈ ಬಗ್ಗೆ ಗೊತ್ತಿಲ್ಲ ಸರ್. ಆತ ಕಾಲ್ ಮಾಡಿ ಈ ರೀತಿ ಆ್ಯಸಿಡ್ ಹಾಕಿರುವ ಬಗ್ಗೆ ಹೇಳಿದಾಗ ಕೂಡಲೇ ನಾವೆಲ್ಲರೂ ಭಯಭೀತರಾಗಿ ಮನೆ ಬಿಟ್ಟು ಓಡಿ ಹೋದೆವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ |
ಆರೋಪಿ ಅಣ್ಣನು ಏಪ್ರಿಲ್ 27ರ ರಾತ್ರಿ ನಾಗೇಶ್ ಮನೆಗೆ ಬಂದಿದ್ದ. ಅಣ್ಣನ ಜೊತೆಗೆ ಕೆಲ ಸಂಬಂಧಿಕರು ಸಹ ಬಂದಿದ್ದರು. ಈ ವೇಳೆ, ನಾಗೇಶ್‍ನಿಗೆ ತಡರಾತ್ರಿವರೆಗೂ ಬುದ್ಧಿವಾದ ಹೇಳಿದ್ದರು. ಮನೆಗೆ ಬಂದಿದ್ದ ಐದಾರು ಜನರಿಂದ ನಾಗೇಶ್ ಬುದ್ಧಿವಾದ ಹೇಳಿಸಿಕೊಂಡಿದ್ದ. ಯುವತಿ ಪೋಷಕರು ಅಣ್ಣನಿಗೆ ವಿಚಾರ ತಿಳಿಸಿದ ನಂತರ ಬಂದು ಬುದ್ಧಿವಾದ ಹೇಳಿದ್ದರು. ಅಷ್ಟು ಹೇಳಿದರೂ ಮಾತು ಕೇಳದೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. |
ಆರೋಪಿಯು ಯುವತಿ ಮನೆಯಿಂದ 300 ಮೀಟರ್ ದೂರದಲ್ಲೇ ಮನೆ ಮಾಡಿಕೊಂಡಿದ್ದ. ಹೆಗ್ಗನಹಳ್ಳಿ ಕ್ರಾಸ್‍ನ ಸಂಜೀವಿನಿ ನಗರದಲ್ಲಿ ಐದು ವರ್ಷದಿಂದ ಇದೇ ಮನೆಯಲ್ಲಿ ವಾಸವಿದ್ದ. ನಾಗೇಶ್ ತಂದೆ-ತಾಯಿ ಜೊತೆಗೆ ವಾಸವಿದ್ದ. ಸದ್ಯ ಪೊಲೀಸರು ಆರೋಪಿಯ ಪೋಷಕರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. |
ದೇಶದ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಅಕ್ಷರಶಃ ಭಯ ಎನಿಸುತ್ತದೆ – ಹಾಯ್ ಬೆಂಗಳೂರ್ |
ದೇಶ ಮತ್ತೊಮ್ಮೆ ಲಾಕ್ ಡೌನ್ ಆಗುವ ಎಲ್ಲಾ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿದೆ. ಯಾಕೆಂದರೆ ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಯೊಳಗೆ ದಾಖಲಾಗಿರುವ ಹೊಸ ಪ್ರಕರಣಗಳ ಸಂಖ್ಯೆ ಬರೋಬ್ಬರಿ 1,45,384. ಇದನ್ನೂ ಸೇರಿಸಿಕೊಂಡರೆ ಒಟ್ಟು ಸೋಂಕಿತರ ಸಂಖ್ಯೆ 1,32,05,926. |
ಸ್ವಲ್ಪ ಸಮಾಧಾನಕರ ಸಂಗತಿ ಏನಪ್ಪಾ ಅಂತಂದ್ರೆ ಕಳೆದ 24 ಗಂಟೆಯಲ್ಲಿ 77,567 ಮಂದಿ ಗುಣಮುಖರಾಗಿ ಹೊರಬಂದಿದ್ದಾರೆ. ಹಾಗಂತ ಸಂಪೂರ್ಣ ಸಮಾಧಾನವಾಗಿ ಇರಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಒಂದೇ ದಿನದಲ್ಲಿ ಏಳುನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿರುವುದು. |
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ ನೆನ್ನೆ ಶುಕ್ರವಾರ 11,73,219 ಹೊಸ ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ಮಾಡಲಾಗಿದೆ. ಇದನ್ನೂ ಸೇರಿಸಿಕೊಂಡರೆ ಇಲ್ಲೀ ತನಕ ಒಟ್ಟು 25 ಕೋಟಿ 52 ಲಕ್ಷ 14 ಸಾವಿರದ 803 ಮಂದಿಯು ಪರೀಕ್ಷೆಗೆ ಒಳಗಾಗಿದ್ದಾರೆ. |
ಒಟ್ಟಿನಲ್ಲಿ ಕಳೆದ ವರ್ಷದಂತೆ ಈ ವರ್ಷ ಕೂಡ ತಿಂಗಳಾನುಗಟ್ಟಲೆ ಲಾಕ್ ಡೌನ್ ಆಗಬಾರದು ಅಂದರೆ ಪ್ರಧಾನಿಗೆ ಜನರು ಧೈರ್ಯ ತುಂಬಬೇಕು. |
ಪ್ರಾಣ ಹಿಂಸೆ ಮಾಡುವವರು ವಿರುದ್ಧ ಕಾನೂನು ಕ್ರಮ: ಎಡಿಸಿ - The Hindustan Gazette Kannada |
ಪ್ರಾಣ ಹಿಂಸೆ ಮಾಡುವವರು ವಿರುದ್ಧ ಕಾನೂನು ಕ್ರಮ: ಎಡಿಸಿ |
ರಾಯಚೂರು, ಜು.೦೮, (ಕ.ವಾ):- ಪ್ರಾಣ ಗಳನ್ನು ಗಾಯಗೊಳಿಸುವುದು, ಕೊಲ್ಲುವುದು, ಪ್ರಾಣ ಗಳ ಕಾದಾಟ ಮಾಡಿಸುವುದು ಸೇರಿದಂತೆ ಪ್ರಾಣ ಹಿಂಸೆ ಕೃತ್ಯಗಳ ಮಾಡುವವರು ವಿರುದ್ಧ ಪ್ರಾಣ ಹಿಂಸೆ ಪ್ರತಿಬಂಧಕ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಅವರು ತಿಳಿಸಿದರು. |
ಅವರು ಜು.೮ರ ಗುರುವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪ್ರಾಣ ದಯಾ ಸಂಘದ ಕಾರ್ಯಕಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. |
ಪ್ರಾಣ ಯನ್ನು ಹೊಡೆಯುವುದು, ಒದೆಯುವುದು, ಸವಾರಿ ಮಾಡುವುದು, ಅತೀಭಾರ ಹೇರುವುದು, ಚಿತ್ರಹಿಂಸೆ ನೀಡುವುದು, ನಿಗದಿತ ಸಮಯಕ್ಕಿಂತ ಮೀರಿ ಬಂಧಿಸುವುದು, ಮಾಲೀಕನಾಗಿ ಅವಶ್ಯಕ ನೀರು, ಆಹಾರ, ನೆಲೆ ಸಕಾಲದಲ್ಲಿ ನೀಡದೇ ಇರುವುದು ಕಂಡು ಬಂದಲ್ಲಿ ಕೃತೆಗನುಸಾರವಾಗಿ ದಂಡ ಹಾಗೂ ೩ ತಿಂಗಳವರೆಗೆ ಕಾರಾಗೃಹ ವಾಸದ ಸಜೆ ಶಿಕ್ಷೆ ವಿಧಿಸಲಾಗುವುದು ಎಂದರು |
ಕರ್ನಾಟಕ ಪ್ರಾಣ ಬಲಿ ನಿಷೇಧ ಕಾಯ್ದೆಯಡಿ ಯಾವುದೇ ಸಾರ್ವಜನಿಕ ದೇವಸ್ಥಾನ ಅಥವಾ ಪೂಜಾ ಸ್ಥಳದಲ್ಲಿ ಅದರ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಪ್ರಾಣ ಬಲಿ ಸಂಪೂರ್ಣ ನಿಷೇಧ ಹಾಗೂ ೬ ತಿಂಗಳ ಸೆರೆವಾಸ, ೫೦೦ ರೂ. ದಂಡವಿಧಿಸಲಾಗುವುದು ಎಂದು ಹೇಳಿದರು. |
ಪ್ರಾಣ ಪಕ್ಷಿಗಳಿಗಾಗಿ ಸುತ್ತಲಿನ ಪರಿಸರದಲ್ಲಿ ನೀರು, ಮೇವು ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೇರೆಯಬೇಕು ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. |
ಈ ವೇಳೆ ಜಿಲ್ಲಾ ಪಶು ಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ. ಶಿವಣ್ಣ, ರಾಯಚೂರು ನಗರ ಸಭೆ ಪೌರಾಯುಕ್ತ ವೆಂಕಟೇಶ, ಮುಖ್ಯ ಪಶು ವೈದ್ಯಧಿಕಾರಿ ಡಾ. ಎಸ್ ಎಸ್ ಪಾಟೀಲ್ ಸೇರಿದಂತೆ ವಿವಿಧ ತಾಲೂಕಿನ ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು |
ಈ ಶಾಸಕ ಗೆದ್ದಾಗಲೆಲ್ಲ ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ! | When he winning that time hung assembly in karnataka - Kannada Oneindia |
ಈ ಶಾಸಕ ಗೆದ್ದಾಗಲೆಲ್ಲ ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ! |
| Published: Friday, May 18, 2018, 13:14 [IST] |
ಮಂಡ್ಯ, ಮೇ 18 : ಮಂಡ್ಯದಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿದೆ. 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮಂಡ್ಯ ಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಎಂ. ಶ್ರೀನಿವಾಸ್ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ನ ರವೀಂದ್ರ ಗಣಿಗ ಸೋಲು ಅನುಭವಿಸಿದ್ದಾರೆ. |
ಆದರೆ ಈಗ ಹೇಳಲು ಹೊರಟಿರುವುದು ಮಂಡ್ಯ ಪಟ್ಟಣ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಬಗ್ಗೆ. ಹೌದು. ಇವರು ಶಾಸಕರಾದ ಸಂದರ್ಭದಲೆಲ್ಲ ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಕಾಕತಾಳೀಯ ಎನಿಸಿದರೂ ಸತ್ಯ! |
ರಾಜಕೀಯ ದೊಂಬರಾಟದ ಮಧ್ಯೆ ನಾಳೆ ಬಹುಮತ ಸಾಬೀತು: ಯಡಿಯೂರಪ್ಪ |
2004ರಲ್ಲಿ ಎಂ.ಶ್ರೀನಿವಾಸ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ರಾಜ್ಯದಲ್ಲಿ ಬಿಜೆಪಿ 79, ಕಾಂಗ್ರೆಸ್ 65, ಜೆಡಿಎಸ್ 58 ಸ್ಥಾನ ಗಳಿಸಿತ್ತು. ಮೊದಲ 20 ತಿಂಗಳು ಧರ್ಮಸಿಂಗ್, ನಂತರದ 20 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. |
2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿದರೆ, ಕಾಂಗ್ರೆಸ್ 80 ಹಾಗೂ ಜೆಡಿಎಸ್ 28 ಸ್ಥಾನ ಗಳಿಸಿತ್ತು. 28 ಶಾಸಕರ ಪೈಕಿ ಶ್ರೀನಿವಾಸ್ ಕೂಡ ಒಬ್ಬರು. ಆಗ 6 ಪಕ್ಷೇತರರು ಇದ್ದು ಎಲ್ಲರನ್ನು ಸೆಳೆದ ಬಿಜೆಪಿ ಅಧಿಕಾರ ಹಿಡಿದಿತ್ತು. ಆ ಸಂದರ್ಭದಲ್ಲಿ ಪಕ್ಷೇತರವಾಗಿ ಗೆದ್ದಿದ್ದ ನರೇಂದ್ರಸ್ವಾಮಿ ಸಚಿವರಾಗಿದ್ದರು. |
2013ರಲ್ಲಿ ಶ್ರೀನಿವಾಸ್, ಅಂಬರೀಶ್ ವಿರುದ್ಧ ಪರಾಜಿತರಾದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. |
ಈಗ 2018 ರಲ್ಲಿ ನಡೆದ ಚುನಾವಣೆಯಲ್ಲಿ 2008ರ ಮಾದರಿಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಇಬ್ಬರು ಪಕ್ಷೇತರರಿದ್ದಾರೆ. ಎಂ.ಶ್ರೀನಿವಾಸ್ ಈಗಲೂ ಶಾಸಕರಾಗಿದ್ದಾರೆ. 2008ರಲ್ಲೂ ಶ್ರೀನಿವಾಸ್ ಅವರನ್ನು ಸೆಳೆಯಲು ಕಮಲ ಕಸರತ್ತು ನಡೆಸಿತ್ತು. ಈಗಲೂ ಅಂಥ ಪ್ರಯತ್ನಕ್ಕೆ ಮುಂದಾಗಿರುವುದು ವಿಪರ್ಯಾಸ. |
16,69,262 |
8,39,052 |
8,30,210 |
karnataka election results 2018 karnataka assembly elections 2018 mla bjp congress jds mandya district news ಕರ್ನಾಟಕ ವಿಧಾನಸಭೆ ಚುನಾವಣೆ 2018 ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮಂಡ್ಯ ಜಿಲ್ಲಾಸುದ್ದಿ |
Mandya town constituency MLA M Srinivas When he winning that time hung assembly in karnataka. This is coincident but truth. |
ಸಿಟ್ಟಲ್ಲಿ ಕೊಟ್ಟ ಪೆಟ್ಟು ಬಾಳಿನ ದಾರಿ ತೋರಿತು! | Udayavani – ಉದಯವಾಣಿ |
Wednesday, 20 Oct 2021 | UPDATED: 06:31 AM IST |
ಸಿಟ್ಟಲ್ಲಿ ಕೊಟ್ಟ ಪೆಟ್ಟು ಬಾಳಿನ ದಾರಿ ತೋರಿತು! |
"ಸನ್ಮಾನ್ಯ ಅಧ್ಯಕ್ಷರೆ, ಅತಿಥಿಗಳೇ…' ಮುಂದಿನದು ನೆನಪಾಗುತ್ತಿಲ್ಲ. ಮಾಸ್ತರರಿಗೆ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ. ಅಲ್ಲೇ ಕಿಟಕಿಯಲ್ಲಿದ್ದ ರೂಲ್ ಬಡಿಗೆಯಿಂದ ಒಳ ಮೊಣಕಾಲಿಗೆ "ಟಪ್' ಎಂದು ಒಂದೇಟು ಕೊಟ್ಟರು. ಅದೆಷ್ಟು ನೋವಾಯಿತೆಂದರೆ, ಕಣ್ಣೀರು ಸುರಿಯಿತು. |
ನಾಲ್ಕು ದಶಕದ ಹಿಂದಿನ ಘಟನೆ ಇದು. ನಾನಾಗ 7ನೇ ತರಗತಿ ಓದುತ್ತಿದ್ದೆ. ನಮಗೆ ಆಲೂರ ಸರ್ ಎಂಬ ಶಿಕ್ಷಕರಿದ್ದರು. ಅವರ ಹೆಂಡತಿಯೂ ಶಿಕ್ಷಕಿಯೇ. ಆ ಶಿಕ್ಷಕ ದಂಪತಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ತಪ್ಪು ಮಾಡಿದ ಹುಡುಗರ ಅಂಗೈ ಮೇಲೆ ಜಬರಿ ಏಟಿನ ಕೆಂಪಾದ ರಂಗೋಲಿ ಎಳೆಯುತ್ತಿದ್ದರಾದರೂ, ಅದರಲ್ಲಿ ನನಗೆ ಮಾತ್ರ ಸ್ವಲ್ಪ ವಿನಾಯಿತಿ. ಆದರೆ, ನನ್ನ ಈ ಗರ್ವವೇ ಒಮ್ಮೆ ಅವರಿಂದ ನಾನೂ ಪೆಟ್ಟು ತಿನ್ನಲು ಕಾರಣವಾಯ್ತು. |
ರಾಷ್ಟ್ರೀಯ ಹಬ್ಬಗಳಲ್ಲಿ ನಮ್ಮೂರು ಗ್ರಾಮ ಪಂಚಾಯತಿ ಮುಂದೆ ಸಾಮೂಹಿಕ ಕಾರ್ಯಕ್ರಮ ನಡೆಯುತ್ತಿತ್ತು. ಶಾಲಾ ಮಕ್ಕಳಿಂದ, "ಹಾರುತಿಹುದು ಏರುತಿಹುದು ನೋಡು ನಮ್ಮ ಬಾವುಟ' ಗೀತೆ ಗಾಯನ, ನಂತರ ಪ್ರತಿ ಕಾರ್ಯಕ್ರಮದಲ್ಲೂ ನನ್ನದೇ ಭಾಷಣ. ಆಲೂರ ಮಾಸ್ತರರೇ ಭಾಷಣ ಬರೆದು ಕೊಡುತ್ತಿದ್ದರು. ನಾನು ಅದನ್ನು ಬಾಯಿಪಾಠ ಮಾಡಿ, ಅವರಿಗೆ ಒಪ್ಪಿಸಬೇಕಿತ್ತು. |
ತಮ್ಮ ಮನೆಯ ಮೆಟ್ಟಿಲ ಮೇಲೆ ಒಂದು ಜಬರಿ ಕೈಯಲ್ಲಿ ಹಿಡಿದು ಮಾಸ್ತರರು ಕುಳಿತಿರುತ್ತಿದ್ದರು. ನಾನು ಅವರ ಮುಂದೆ ನಿಂತು ಒಮ್ಮೆ ಅತ್ತ, ಒಮ್ಮೆ ಇತ್ತ ಕೈ ಹೊರಳಿಸುತ್ತ ಭಾಷಣ ಒಪ್ಪಿಸಬೇಕಿತ್ತು. ಅವರೇನೋ ದ್ರೋಣಾಚಾರ್ಯರು. ಆದರೆ, ನಾನು ಅರ್ಜುನನಂತಿರಲಿಲ್ಲ. ಸರಿಯಾಗಿ ಭಾಷಣ ಮಾಡದಿದ್ದಾಗ, ಅವರಿಗೆ ಸಿಟ್ಟು. ಕೋಪದ ಉಪಶಮನವೆಂದರೆ, ಕೊನೆಯವರೆಗೆ ಸರಿಯಾಗಿ ಹೇಳಿದ್ದರೂ, ಮತ್ತೂಮ್ಮೆ "ಸನ್ಮಾನ್ಯ ಅಧ್ಯಕ್ಷರೇ, ಗೌರವಾನ್ವಿತ ಅತಿಥಿಗಳೇ…' ಇಂದ ಶುರು ಮಾಡಬೇಕಿತ್ತು. ಅತ್ತ ರೇಡಿಯೋ ತನ್ನಷ್ಟಕ್ಕೆ ತಾನು ನಿರಂತರ ಆಲಾಪ ಮಾಡುತ್ತಿದ್ದರೆ, ಇತ್ತ ನನ್ನ ಭಾಷಣದ ಆಲಾಪ ಆಗಾಗ ಕಟ್ ಕಟ್ ಆಗುತ್ತಿತ್ತು. |
ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಎಂಟತ್ತು ದಿನ ಇತ್ತು. ಮಾಸ್ತರರು ಭಾಷಣ ಬರೆದು, ಬಾಯಿಪಾಠ ಮಾಡಲು ಹೇಳಿದರು. "ಹ್ಞುಂ' ಎಂದು ತಲೆ ಅಲ್ಲಾಡಿಸಿದ ನಾನು, ಅಮ್ಮನೊಂದಿಗೆ ಊರಿಗೆ ಹೋಗಿಬಿಟ್ಟೆ. "ನನಗೇ ಏನು ಪ್ರತಿ ಸಾರಿ ಭಾಷಣ ಮಾಡೋಕೆ ಹೇಳ್ಳೋದು ಸರ್! ಈ ಸಲ ಬೇರೆಯವರಿಗೆ ಹೇಳ್ತಾರೆ ಬಿಡು' ಎಂಬ ಅಹಂ ತಲೆ ಹೊಕ್ಕಿತ್ತು. ಐದಾರು ದಿನಗಳ ನಂತರ ಊರಿಗೆ ವಾಪಸ್ ಬಂದವಳೇ, ಮಾಸ್ತರರ ಮನೆಗೆ ಹೋದೆ. ಲಾಂದ್ರದ ಬೆಳಕಿನಲ್ಲಿ ತಣ್ಣಗೆ ಬೆಳದಿಂಗಳಂತೆ ಕುಳಿತಿದ್ದರು ಅವರು. "ಭಾಷಣ ಹೇಳು. ನಾಳೆ ಕಾರ್ಯಕ್ರಮ ಐತಿ' ಎಂದರು. ನನ್ನ ಜಂಘಾಬಲವೇ ಉಡುಗಿ ಹೋಯ್ತು. ತುಟಿ ಅದುರಿತು. ಭಾಷಣ ಕಲಿತಿಲ್ಲ ಅಂತ ಹೇಳಲೂ ಧೈರ್ಯ ಸಾಲಲಿಲ್ಲ. |
"ಸನ್ಮಾನ್ಯ ಅಧ್ಯಕ್ಷರೆ, ಅತಿಥಿಗಳೇ…' ಮುಂದಿನದು ನೆನಪಾಗುತ್ತಿಲ್ಲ. ಮಾಸ್ತರರಿಗೆ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ. ಅಲ್ಲೇ ಕಿಟಕಿಯಲ್ಲಿದ್ದ ರೂಲ್ ಬಡಿಗೆಯಿಂದ ಒಳ ಮೊಣಕಾಲಿಗೆ "ಟಪ್' ಎಂದು ಒಂದೇಟು ಕೊಟ್ಟರು. ಅದೆಷ್ಟು ನೋವಾಯಿತೆಂದರೆ, ಕಣ್ಣೀರು ಸುರಿಯಿತು. "ಮನೆಯಲ್ಲಿ ಅಭ್ಯಾಸ ಮಾಡು' ಎಂದು ಸಿಟ್ಟಿನಲ್ಲೇ ವಾಪಸ್ ಕಳಿಸಿದರು. |
ಮರುದಿನ ಗ್ರಾಮ ಪಂಚಾಯತಿ ಧ್ವಜಾರೋಹಣ. ಭಾಷಣಕ್ಕೆ ನನ್ನ ಹೆಸರು ಕರೆದರು. ಮಾಸ್ತರರ ಕಡೆ ನೋಡಿದೆ. ಹೋಗು ಎಂದು ಕಣ್ಣಲ್ಲಿ ಆಜ್ಞೆ ಇತ್ತರು. ನಾನು ವೇದಿಕೆಯೇರಿ, ಕೈ ಮಾಡಿ ಭಾಷಣ ಮಾಡಿದೆ. ಎಲ್ಲ ಮುಗಿದ ಮೇಲೆ ಕಂಪಾಸ್ ಬಾಕ್ಸ್, ನೋಟ್ ಬುಕ್, ಒಂದು ಚೀಲ ಪೆಪ್ಪರಮೆಂಟ್ ಬಹುಮಾನ ಸಿಕ್ಕಿತು. ಸೀದಾ ಹೋಗಿ ಸರ್ ಎದುರು ನಿಂತೆ. ಅವರ ಕಣ್ಣಲ್ಲಿ ಹೊಳಪಿತ್ತು. "ಮಗಳ.. ಭಾರೀ ಶ್ಯಾಣೆ ಆಗೀ. ನಾ ಬರೆದದ್ದಕ್ಕಿಂತ ಚಂದ ಹೇಳಿದಿ ನೋಡ್!' ಎಂದು ಬೆನ್ನು ತಟ್ಟಿದರು. |
ಹಿಂದಿನ ದಿನ ಅವರು ಹೊಡೆದದ್ದಕ್ಕೆ, "ನೀನ್ಯಾಕವ್ವ ಊರಿಗೆ ಬಂದಿ. ಇಲ್ಲೇ ಅಜ್ಜಿ ಜೊತೆ ಇರಬೇಕಿಲ್ಲ' ಎಂದು ಅಮ್ಮನೂ ಬೇಜಾರು ಮಾಡಿಕೊಂಡಿದ್ದಳು. ಕಂದೀಲದ ಬೆಳಕಲ್ಲಿ ರಾತ್ರಿಯಿಡೀ ಚೆನ್ನಾಗಿ ಬಾಯಿಪಾಠ ಮಾಡಿದ್ದೆ. ಆ ಪರಿಶ್ರಮವೇ ಮಾಸ್ತರರ ಕಣ್ಣಲ್ಲಿ ಹೊಳಪಾಗಿ ಕಾಣಿಸಿತ್ತು. |
ಅಂದು ಆಲೂರ ಸರ್ ಬರೆದು ಕೊಟ್ಟ ಅಕ್ಷರದ ಸಾಲುಗಳೇ ಇಂದು ಬಾಳಿನ ಅರ್ಥ ಹುಡುಕಲು ಕಲಿಸಿವೆ. ಇಂದು ನನ್ನ ಬರಹವನ್ನು ಗುರುತಿಸಿ, ಭಾಷಣಕ್ಕೆ ಆಮಂತ್ರಣ ಕೊಡುತ್ತಾರೆಂದರೆ ಅದರ ಶ್ರೇಯ ಆಲೂರ ಸರ್‌ನಂಥ ಶಿಕ್ಷಕರಿಗೆ ಸೇರಬೇಕು. ಬಾಳಿನ ಉದ್ದಗಲದಲ್ಲಿ ಬಂದು ಹೋದ ಒಳ ಪೆಟ್ಟುಗಳು ನೂರು. ಯಾವ ಏಟಿನಿಂದ ಯಾರ ಬಾಳಿನಲ್ಲಿ ಚಿತ್ತಾರ ಮೂಡುತ್ತದೋ ಯಾರಿಗೆ ಗೊತ್ತು? ಸ್ವೀಕರಿಸುವವನ ಎದೆ ಮಾತ್ರ ಭಾರವಾಗದೇ ಹಗುರಾಗಿರಬೇಕು.. ಇದು ಅವರೇ ಹೇಳಿದ ತತ್ವದ ಮಾತು. ಆಲೂರ ಸರ್, ನಿಮಗೊಂದು ಶರಣು. |
ವಿಜ್ಞಾನಿಗಳ ಚಿತ್ರದ ಜೊತೆ ಹಾಲಿವುಡ್ ನಟನ ಚಿತ್ರವಿಟ್ಟ ಆಂಧ್ರದ ಕಾಲೇಜು! | Andhra Pradesh College Mistaken Breaking Bad Heisenberg As Scientist Werner Heisenberg - Kannada Filmibeat |
| Published: Monday, May 17, 2021, 20:58 [IST] |
ಶಾಲೆ-ಕಾಲೇಜುಗಳಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್ ಚಿತ್ರಗಳು ಸಾಮಾನ್ಯ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವ ವಿಖ್ಯಾತ ವಿಜ್ಞಾನಿಗಳ ಚಿತ್ರಗಳನ್ನೂ ಸಹ ಗೋಡೆಯ ಮೇಲೆ ಪ್ರದರ್ಶನಕ್ಕೆ ಇಡಲಾಗಿರುತ್ತದೆ. ಆದರೆ ಆಂಧ್ರ ಪ್ರದೇಶದ ಕಾಲೇಜೊಂದರಲ್ಲಿ ವೆಬ್ ಸರಣಿಯೊಂದರ ನಟನ ಚಿತ್ರವನ್ನು ಗೋಡೆಗೆ ನೇತು ಹಾಕಲಾಗಿದೆ. ಅದೂ ವಿಶ್ವ ವಿಖ್ಯಾತ ವಿಜ್ಞಾನಿಗಳ ಜೊತೆಗೆ! |
ಹೌದು, ಆಂಧ್ರದ ಕಾಲೇಜೊಂದರ ವಿಜ್ಞಾನ ವಿಭಾಗದ ಗೋಡೆಯ ಮೇಲೆ ಕೆಲವು ವಿಜ್ಞಾನಿಗಳ ಚಿತ್ರಗಳನ್ನು ತೂಗಿಹಾಕಲಾಗಿದೆ. ಮೊದಲಿಗೆ ಮ್ಯಾಕ್ಸ್ ಪ್ಲಂಕ್, ಕ್ಯಾನಿಜಾರೊ ಆ ನಂತರ ಮೂರನೇ ಚಿತ್ರವಾಗಿ ಸೂಪರ್ ಹಿಟ್ ವೆಬ್ ಸರಣಿ 'ಬ್ರೇಕಿಂಗ್ ಬ್ಯಾಡ್'ನ ಮುಖ್ಯಪಾತ್ರಧಾರನ ಚಿತ್ರವನ್ನು ಹಾಕಲಾಗಿದೆ. ಹೀಗೆ ನಟನ ಚಿತ್ರವನ್ನು ವಿಜ್ಞಾನಿಗಳ ಚಿತ್ರದ ಜೊತೆಗೆ ಹಾಕಿರುವ ಫೊಟೊವನ್ನು ರಾಹುಲ್ ಎಂಬುವರು ಹಂಚಿಕೊಂಡಿದ್ದು ಅದು ಸಖತ್ ವೈರಲ್ ಆಗಿದೆ. |
'ಬ್ರೆಕಿಂಗ್ ಬ್ಯಾಡ್' ವೆಬ್ ಸರಣಿಯ ನಾಯಕ ಪಾತ್ರದ ಹೆಸರು ವಾಲ್ಟರ್ ವೈಟ್ ಆತನ ಎರಡನೇ ಹೆಸರು ಹೈಸನ್‌ಬರ್ಗ್. ಆಂಧ್ರದ ಕಾಲೇಜಿನವರು ಅನಿಶ್ಚಿತತೆಯ ತತ್ವ (ಅನ್‌ಸರ್ಟೇನಿಟಿ ಪ್ರಿನ್ಸಿಪಲ್) ಪರಿಚಯಿಸಿದ ವಿಜ್ಞಾನಿ ವರ್ನರ್ ಹೈಸನ್‌ಬರ್ಗ್ ಚಿತ್ರವನ್ನು ಹಾಕುವ ಬದಲಿಗೆ 'ಬ್ರೇಕಿಂಗ್ ಬ್ಯಾಡ್'ನ ಹೈಸನ್‌ಬರ್ಗ್‌ನ ಚಿತ್ರವನ್ನು ಹಾಕಿದ್ದಾರೆ. |
'ಬ್ರೇಕಿಂಗ್ ಬ್ಯಾಡ್' ವೆಬ್ ಸರಣಿಯಲ್ಲಿ ವಾಲ್ಟರ್ ವೈಟ್ ಅಲಿಯಾಸ್ ಹೈಸನ್‌ಬರ್ಗ್ ರಸಾಯನ ಶಾಸ್ತ್ರ ವಿಷಯದಲ್ಲಿ ಪರಿಣಿತನಾಗಿರುತ್ತಾನೆ. ಆದರೆ ಆತ ತನ್ನ ಪ್ರತಿಭೆಯನ್ನು 'ಮೆತಾಂಪಿಟಮೈನ್' (ಮೆತ್) ಎಂಬ ಮಾದಕ ವಸ್ತು ತಯಾರಿಸಲು ಬಳಸುತ್ತಾನೆ. ಆ ಮೂಲಕ ಭಾರಿ ಹಣ ಗಳಿಸುತ್ತಾನೆ ಆದರೆ ಅಷ್ಟೇ ಪ್ರಮಾದಕ್ಕೂ ಗುರಿಯಾಗುತ್ತಾನೆ. ಸಾಮಾನ್ಯ ಶಾಲಾ ಶಿಕ್ಷಕ ಆಗಿದ್ದ ಅವನು ಭೂಗತ ಲೋಕದ ನಂಟು ಬೆಳೆಸಿಕೊಂಡು ಕೊಲೆಗಾರನೂ ಆಗುತ್ತಾನೆ. |
'ಬ್ರೇಕಿಂಗ್ ಬ್ಯಾಡ್' ವಿಶ್ವದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಗೂಗಲ್‌ನಲ್ಲಿ ವಿಜ್ಞಾನಿ ವರ್ನರ್ ಹೈಸನ್‌ಬರ್ಗ್ ಹೆಸರು ಹುಡುಕಿದರೆ ಬ್ರೇಕಿಂಗ್ ಬ್ಯಾಡ್‌ನ ವಾಲ್ಟರ್ ವೈಟ್ ಅಲಿಯಾಸ್ ಹೈಸನ್‌ಬರ್ಗ್‌ನ ಚಿತ್ರವೂ ಜೊತೆಗೆ ಮೂಡುತ್ತದೆ. ಹೀಗಾಗಿಯೇ ಆಂಧ್ರದ ಕಾಲೇಜಿನವರು ತಪ್ಪುಗ್ರಹಿಕೆಗೊಳಪಟ್ಟು 'ಬ್ರೆಕಿಂಗ್ ಬ್ಯಾಡ್'ನ ಹೈಸನ್‌ಬರ್ಗ್‌ನ ಚಿತ್ರಕ್ಕೆ ಚೌಕಟ್ಟು ಹಾಕಿಸಿ ತೂಗು ಹಾಕಿದ್ದಾರೆ. |
'ಬ್ರೇಕಿಂಗ್ ಬ್ಯಾಡ್' ನಲ್ಲಿ ವಾಲ್ಟರ್ ವೈಟ್ ಅಲಿಯಾಸ್ ಹೈಸನ್‌ಬರ್ಗ್ ಪಾತ್ರ ಮಾಡಿರುವ ನಟನ ಹೆಸರು ಬ್ರ್ಯಾನ್ ಕ್ರಾನ್‌ಸ್ಟನ್. ಆಸ್ಕರ್, ಬ್ರಿಟಿಷ್ ಆಸ್ಕರ್‌ಗೆ ನಾಮಿನೇಟ್ ಆಗಿದ್ದ ಬ್ರ್ಯಾನ್‌ಗೆ 'ಬ್ರೇಕಿಂಗ್ ಬ್ಯಾಡ್' ವೆಬ್ ಸರಣಿಯ ಅತ್ಯುತ್ತಮ ನಟನೆಗೆ ಆರು ಎಮಿ ಪ್ರಶಸ್ತಿಗಳು, ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಆಲಿವರ್, ಗಿಲ್ಡ್ ಅವಾರ್ಡ್‌ಗಳು ಸೇರಿ ಹಲವು ಪ್ರಶಸ್ತಿಗಳು ದೊರಕಿವೆ. |
ಐದು ಸೀಸನ್‌ನಲ್ಲಿ ಪ್ರಸಾರವಾದ 'ಬ್ರೇಕಿಂಗ್ ಬ್ಯಾಡ್' ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. |
Subsets and Splits
No community queries yet
The top public SQL queries from the community will appear here once available.