text
stringlengths 0
61.5k
|
---|
ಬೆಂಗಳೂರಲ್ಲಿ 'ಕೃಷ್ಣ ಲೀಲೆ'…
|
Submitted by jnanamurthy on July 15, 2010 - 3:33pm
|
ವೈಧಿಕ ಇತಿಹಾಸದ ಬಗ್ಗೆ ಜನರಲ್ಲಿ ಅರಿವುಂಟುಮಾಡುವ ಪ್ರಯತ್ನದಲ್ಲಿ 'ಇಸ್ಕಾನ್' ಮಹತ್ವದ ಹೆಜ್ಜೆಯಿಟ್ಟಿದ್ದು ಬೆಂಗ್ಳೂರಲ್ಲಿ 'ಕೃಷ್ಣ ಲೀಲೆ' ಎಂಬ ಮನರಂಜನಾ ಉದ್ಯಾನವನ್ನು ನಿರ್ಮಿಸಲಿದೆ. ಈ ಉದ್ದೇಶಿತ ಯೋಜನೆಗೆ 'ಡಿಸ್ನಿ ವರ್ಲ್ಡ್' ಪ್ರೇರಣೆಯಾಗಿದೆ. ಮೋಜು ಮಸ್ತಿಯ ಹಬ್ಬದೂಟ ಉಣಬಡಿಸಲಿರುವ, ಇತ್ತೀಚೆಗೆ ತುಂಬಾ ಸುದ್ದಿಯಲ್ಲಿರುವ, 'ಕೃಷ್ಣ ಲೀಲೆ'ಗೆ ಜೂನ್ 20ರಂದು ಭೂಮಿ ಪೂಜೆಯೂ ಮುಗಿದಿದೆ. ಕನಕಪುರ ರಸ್ತೆಯಲ್ಲಿರುವ ವೈಕುಂಟ ಬೆಟ್ಟದ 28ಎಕರೆ ಜಾಗದಲ್ಲಿ ನಿರ್ಮಾಣವಾಗಲಿದ್ದು, ಒಟ್ಟು ರೂ.350 ಕೋಟಿಯ ಯೋಜನೆ ಇದಾಗಿದೆ. ಇಲ್ಲಿ ಪಾರಂಪರಿಕ ಗೋಪುರವು ಸೇರಿದಂತೆ ಒಟ್ಟು ಒಂಬತ್ತು ವಿವಿಧ ಆಕರ್ಷಣೆಗಳಿರಲಿವೆ. ಎರಡು ದೇವಸ್ಥನಗಳು, ಒಂದು 4-Dಥಿಯೇಟರ್, ಪ್ರದರ್ಶನಗಳು, ಗೊಂಬೆ ತಯಾರಿಸುವ ಕಾರ್ಯಾಗಾರಗಳು, ಮಕ್ಕಳಿಗೆ ಕಥೆ ಹೇಳುವುದು ಮತ್ತು ವಿವಿಧ ಉಡುಗೆಗಳ ಪ್ರದರ್ಶನವಿರುತ್ತದೆ.
|
ಅಂಚೆಯಣ್ಣನಿಗೆ ಸೋಲೆಕ್ಷಾ
|
Submitted by ASHOKKUMAR on July 15, 2010 - 5:33am
|
ಸೌರಶಕ್ತಿಚಾಲಿತ ಮತ್ತು ಪೆಡಲ್ ಹೀಗೆ ಎರಡೂ ವಿಧದ ಬಳಕೆಯನ್ನು ಸಾಧ್ಯವಾಗಿಸಿರುವ,ಸೋಲೆಕ್ಷಾ ಎಂಬ ವಾಹನವನ್ನು ಇಂಡಿಯಾಪೋಸ್ಟ್ ಪರೀಕ್ಷಾರ್ಥ ಬಳಕೆಗೆ ಆರಂಭಿಸಿದೆ.ಮೊದಲಿಗೆ ರಾಜಾಸ್ತಾನದಲ್ಲಿ ಬಳಸಿ,ಮುಂದೆ ಇತರೆಡೆಯೂ ಬಳಸುವ ಬಗ್ಗೆ ನಿರ್ಧರಿಸಲಾಗುವುದಂತೆ.ಪಾರ್ಸೆಲ್,ಕಾಗದಪತ್ರಗಳನ್ನು ಹೇರಿಕೊಂಡು ಹೋಗಲು ಅನುಕೂಲಕರವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.ಸೌರಶಕ್ತಿಯನ್ನು ಬಳಸುವುದರಿಂದ ವಾಹನ ಪರಿಸರ ಮಾಲಿನ್ಯ ಉಂಟು ಮಾಡದು.ಪೆಡಲ್ ಮಾಡುವಾಗ,ಯಾಂತ್ರಿಕ ಶಕ್ತಿಯೂ ಜತೆಗೂಡುವುದರಿಂದ,ಕಡಿಮೆ ಪ್ರಯತ್ನ ಸಾಕಾಗುತ್ತದೆ.ಕೈನೆಟಿಕ್ ಮೋಟಾರ್ಸ್ ಮತ್ತು ಕೇಂದ್ರೀಯ ಯಾಂತ್ರಿಕ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗಳು ಜತೆ ಸೇರಿ ಸೋಲೆಕ್ಷಾವನ್ನು ವಿನ್ಯಾಸಗೊಳಿಸಿವೆ.
|
" ವಿಶ್ವಕಾಲ್ಚೆಂಡ್ಕ್ರೀಡಾಧೀಶ"ನಾರೆಂಬೆ-ಡಚ್ಜರೇ, ಜರ್ಮನರೇ, ಮೇಣ್ ಉರುಗ್ಚೆಯೇ, ಇನ್ನಾರಿಹರು ? "ಸ್ಪೇನ್ ಕಣಾ", "ಸ್ಪೇನ್ ಕಣಾ". ಅಹುದಹುದು, ಇರುಳು ಕರಗಿ, ಬೆಳಗಾಗಿಹುದು; "ಯೂರೋಪಿನ್ಫುಟ್‌ಬಾಲ್ಕ್ರೀಡಾ-ಮುಕುಟಮಣಿ" ಸ್ಪೇನ್ ಅಲ್ತೆ !
|
Submitted by venkatesh on July 13, 2010 - 3:01pm
|
ಸ್ಪೇನ್ ನೆದರ್ಲ್ಯಾಂಡ್ ವಿರುದ್ಧ ವಿಜಯಗಳಿಸಿದಾಗ, ಸ್ಪಾನಿಷ್ ಬೆಂಬಲಿಗರು.
|
- ಪ್ರಜಾವಾಣಿ ಫೊಟೊ ಗ್ಯಾಲರಿಯ ಕೃಪೆಯಿಂದ.
|
ವಿಶ್ವಕಪ್ ಫುಟ್ಬಾಲ್ ಪಂದ್ಯ
|
ಕಿರುತೆರೆಗಿಲ್ಲ ಕಡಿವಾಣ
|
Submitted by h.a.shastry on July 13, 2010 - 12:09pm
|
ಎರಡೂವರೆ ಗಂಟೆಯ ಸಿನಿಮಾಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಸೆನ್ಸರ್ ಮಂಡಳಿಯ ಕತ್ತರಿ ಕಾದಿರುತ್ತದೆ, ಆದರೆ, ದಿನದ ಇಪ್ಪತ್ನಾಲ್ಕು ಗಂಟೆಯೂ ನಮ್ಮ ಮನೆಯೊಳಗೇ ಮೆರೆದಾಡುವ ಕಿರುತೆರೆಗೆ ಯಾವುದೇ ಕಡಿವಾಣವಿಲ್ಲ!
|
ಸಿನಿಮಾದಲ್ಲಾದರೆ ಆ ಪದ ಬಳಸಬಾರದು, ಈ ದೃಶ್ಯ ತೋರಿಸಬಾರದು ಎಂದು ಏನೇನೆಲ್ಲ ಕಟ್ಟುಪಾಡು, ಅದೇ, ಕಿರುತೆರೆಯಲ್ಲಾದರೆ ಏನು ಬೇಕಾದರೂ ಒದರಬಹುದು, ಏನು ಬೇಕಾದರೂ ತೋರಿಸಬಹುದು!
|
ಕಿರುತೆರೆಯ ಕ್ರೈಮ್ ರಿಪೋರ್ಟ್‌ಗಳಲ್ಲಿ ಮಾತ್ರವಲ್ಲ, ವಾರ್ತೆಗಳಲ್ಲೂ ಹಿಂಸೆ, ಕ್ರೌರ್ಯ, ಅನೀತಿ ಮತ್ತು ಅಪಘಾತಗಳ ಅಕರಾಳವಿಕರಾಳ ಮುಖಗಳನ್ನು ಎಳೆಯ ಮಕ್ಕಳಿಗೂ ತೋರಿಸಿ ವಿವರಿಸಲಡ್ಡಿಯಿಲ್ಲ!
|
'ತಿರುಳಿಲ್ಲದ ಮಾತು'ಗಾರರಿವರು
|
Submitted by h.a.shastry on July 13, 2010 - 12:06pm
|
ಬೆರಳೆಣಿಕೆಯಷ್ಟು ಮಂದಿಯನ್ನು ಹೊರತುಪಡಿಸಿದರೆ ಕನ್ನಡದ ಕಿರುತೆರೆ ವಾಹಿನಿಗಳಲ್ಲಿ ವಿವಿಧ ಸಂದರ್ಶನಗಳನ್ನು ತೆಗೆದುಕೊಳ್ಳುವವರು ಹಾಗೂ ಚರ್ಚೆಗಳನ್ನು ನಡೆಸಿಕೊಡುವವರು ತಿರುಳಿಲ್ಲದ ಮಾತುಗಾರರಂತೆ ಕಂಡುಬರುತ್ತಾರೆ. ಸಾಮಾಜಿಕ, ಸಾಹಿತ್ಯಿಕ, ಆಧ್ಯಾತ್ಮಿಕ, ಆರೋಗ್ಯಸಂಬಂಧಿ, ಸಂಗೀತಸಂಬಂಧಿ ವಿಷಯಗಳ ಬಗ್ಗೆ ವಿದ್ವಾಂಸರ ಸಂದರ್ಶನ ತೆಗೆದುಕೊಳ್ಳುವಾಗ ಈ ಮಾತುಗಾರರು ಕಂಠಪಾಠದ ವಾಕ್ಯಗಳನ್ನು ಒಪ್ಪಿಸುವಲ್ಲೇ ಸುಸ್ತಾಗುತ್ತಾರೆ. 'ಹೊಸ ರುಚಿ', 'ಹಳೆ ತಿಂಡಿ'ಯಂಥ ಕಾರ್ಯಕ್ರಮಗಳಲ್ಲಿವರು ನಿರರ್ಥಕ ಉದ್ಗಾರಗಳಲ್ಲೇ ಕಾಲ ಕಳೆಯುತ್ತಾರೆ.
|
ಸಂತ್ರಸ್ತರಿಗೆ ಹಣ ನೀಡಿ ಪುಣ್ಯ ಪಡೆದುಕೊಳ್ಳಿ
|
Submitted by komal kumar1231 on July 12, 2010 - 6:20pm
|
ಸಾವಿರಾರು ಸಂಖ್ಯೆಯಲ್ಲಿ ಸಂತ್ರಸ್ತರು ಬೀದಿಗೆ ಬಂದಿದ್ದಾರೆ. ಇವರಿಗೆ ಸರ್ಕಾರ ಮನೆ ಕಟ್ಟಿಕೊಡುವ ಕಾರ್ಯಕ್ಕೆ ಮುಂದಾಗಿದೆ ಅಂತ ಸುಬ್ಬ ಪೇಪರ್ನಾಗೆ ಓದುತ್ತಿದ್ದಂಗೆನೇ, ನಮ್ಮೂರ ಹಳಸೋದ ಫಲಾವು ವಾಸನೆ ಗೌಡರು ನಾವು ಏನಾದರೂ ಸಹಾಯ ಮಾಡಲೇಬೇಕು. ಆದರೆ ಸರ್ಕಾರದೋರು ತರಾ ಭಿಕ್ಸೆ ಎತ್ತೋದು ಬೇಡ. ಜನರಿಗೆ ಮನರಂಜನೆ ನೀಡಿ ಹಣ ಪಡೆಯುವಾ ಅಂದ. ಗೌಡ್ರೆ ಆರ್ಕೆಸ್ಟ್ರಾ,ಯಕ್ಸಗಾವ ಯಾವುದೂ ಬೇಡ ಕನ್ರಲಾ "ದೊಂಬರಾಟ" ಆಡವಾ ಅಂದ. ಗೌಡ್ರೆ ಅದಕ್ಕೆಲ್ಲಾ ಪಲ್ಟಿ ಹೊಡಿಬೇಕು, ಮಂಗ,ಹಾವು ತರಬೇಕು, ಹಲಗೆ ಬಾರಿಸ್ಬೇಕು ಅಂದೆ. ಅದಕ್ಕೆಲ್ಲಾ ಟ್ರೈನಿಂಗ್ ತೊಗಳವಾ ಅಂದ.
|
ಪ್ಲಾಸ್ಟಿಕ್ ದ್ವೀಪ
|
Submitted by ASHOKKUMAR on July 12, 2010 - 10:34am
|
4338 ಹಿಟ್ಸ್
|
ಇವತ್ತಿನ ' ವಿಶ್ವಕಪ್ ಫುಟ್ಬಾಲ್ ಫೈನಲ್ " ನಲ್ಲಿ, "ಹಾಲೆಂಡ್ "ಗೆಲ್ಲುತ್ತೆ. ಇಲ್ಲ.. ಇಲ್ಲ. "ಸ್ಪೇನ್" ಗೆಲ್ಲು... ಇಲ್ಲ,. ಹಾಲೆಂಡ್, ಇಲ್ಲ ಸ್ಪೇ" ..!
|
Submitted by venkatesh on July 11, 2010 - 12:31pm
|
"ಆಕ್ಟೊಪಸ್ಸಮ್ಮ" ಸ್ಪೇನೇ ಗೆಲ್ಲೊದು, ಅಂದ್ರೆ, "ಗಿಣಿಯಮ್ಮ" ನ್ ವರ್ಸೆನೇ ಬ್ಯಾರೆ ಐತಲ್ಲಾ. ಅಂಗಾರೆ, ಗೆಲ್ಲೊರ್ಯಾರು ?
|
Submitted by venkatesh on July 10, 2010 - 6:18am
|
೧೯ ನೇ, ವಿಶ್ವಕಪ್ ನ, ೩ ನೇ ಸ್ಥಾನಕ್ಕೆ ಹೋರಾಟ-ಜರ್ಮನಿ ವಿರುದ್ಧ ಉರುಗ್ವೆ !
|
Submitted by venkatesh on July 9, 2010 - 1:18pm
|
ಜರ್ಮನಿ'ಯ 'ಮಿರೋಸ್ಲೆವ್ ಕ್ಲೋಸ್'
|
712 ಹಿಟ್ಸ್
|
ಒಳಮನಸ್ಸಿನ ದ೦ಗೆ!
|
Submitted by gnanadev on July 7, 2010 - 7:47pm
|
ತನಗಿ೦ತ ಕಿರಿಯ ವಯಸ್ಸಿನ ತರುಣ ಚೇತನನನ್ನು ಪ್ರೀತಿಸಿ ಸನ್ಯಾಸತ್ವವನ್ನು ಮಠದ ಪೀಠವನ್ನು ತ್ಯಜಿಸಿ ವಿವಾಹದ ಬ೦ಧನಕ್ಕೆ ಸಿಲುಕಿರುವ ನಿವೇದಿತಾ ಮತ್ತೊಮ್ಮೆ ಆಳವಾಗಿ ಮಾನವನ ಭಾವನೆಯನ್ನು, ನಮ್ಮ ಮಾನವನಿರ್ಮಿತ ಸಾಮಾಜಿಕ ಕಟ್ಟಳೆ ಸ೦ಪ್ರದಾಯವನ್ನು ಒರೆಗೆ ಹಚ್ಚುವ ಪ್ರಕ್ರಿಯೆಗೆ ಸಾಕ್ಷಿಯಾಗಿದ್ದಾಳೆ. ಇಲ್ಲಿ ಇದು ಸರಿಯೋ ತಪ್ಪೋ ಅಥವಾ ಅದು ಸ೦ಪೂರ್ಣ ವ್ಯಕ್ತಿಗತವಾದ ವಿಚಾರವೋ ಒ೦ದು ವಿಸ್ತೃತವಾದ ಚರ್ಚೆಯ ಅಗತ್ಯವಿದೆ ಎ೦ದು ನನಗನ್ನಿಸುತ್ತದೆ.
|
ಅಭಿನಯ: ಭಾರತೀಯ ರಂಗಭೂಮಿಗೊಂದು ಉತ್ತಮ ಕೊಡುಗೆ - ಸಾಕ್ಷ್ಯಚಿತ್ರ, 'ಬಿ.ವಿ ಕಾರಂತ (ಬಾಬಾ)
|
ಭಾರತೀಯ ರಂಗಭೂಮಿಗೊಂದು ಉತ್ತಮ ಕೊಡುಗೆ - ಸಾಕ್ಷ್ಯಚಿತ್ರ, 'ಬಿ.ವಿ ಕಾರಂತ (ಬಾಬಾ)
|
ಬಿ.ವಿ.ಕಾರಂತ
|
ಅಂದು ಸೆಪ್ಟಂಬರ್ 1, 2002, ಮುಂಬೈನ ಕರ್ನಾಟಕ ಸಂಘದಲ್ಲಿ 'ಮಹಾಮಾಯಿ ನಾಟಕದ ರಿಹರ್ಸಲ್‌ನಲ್ಲಿದ್ದೆ. ನಾಟಕದ ನಿರ್ದೇಶಕರು, ಬಿ.ವಿ. ಕಾರಂತರು ಇನ್ನಿಲ್ಲ ಎಂಬ ಸಿಡಿಲಿನ ಸುದ್ದಿ ತಿಳಿಸಿದರು. ಒಮ್ಮೆಯಾದರೂ ಕಾರಂತರನ್ನು ನೋಡಬೇಕು, "ನಿಮ್ಮ ನಾಟಕದಲ್ಲಿ ಪುಟ್ಟದಾದರೂ ಪರವಾಗಿಲ್ಲ ನನಗೊಂದು ಪಾತ್ರ ಕೊಡಿ" ಎಂದು ಅವರಲ್ಲಿ ಕೇಳಿಕೊಂಡು ಅವರ ನಾಟಕದಲ್ಲಿ ಅಭಿನಯಿಸಬೇಕು ಎಂದು ಕಂಡ ಕನಸು, ನನಸು ಮಾಡಿಕೊಳ್ಳುವ ಮುನ್ನವೇ ಕರಗಿ ಹೋಗಿತ್ತು... ಮುಂದೆ ಬೆಂಗಳೂರಿಗೆ ಬಂದ ಮೇಲೆ ಕಾರಂತರು ನಿರ್ದೇಶಿಸಿದ್ದ ಮೂರು ನಾಟಕಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಎರಡು ದಿನಗಳ ಕಾಲ ಕಾರಂತರ ಮನೆಯಲ್ಲಿ ನಾಟಕವೊಂದರ ರಿಹರ್ಸಲ್ ಮಾಡಿ, ಪ್ರೇಮಾ ಕಾರಂತರೊಂದಿಗೆ, ಕಾರಂತರ ನಾಯಿ 'ನಿಂಜ'ನೊಂದಿಗೆ ಒಡನಾಡಿ ಅಷ್ಟರ ಮಟ್ಟಿಗೆ ಧನ್ಯತೆ ಅನುಭವಿಸಿದೆ. ವೈದೇಹಿಯವರ ಬರಹದಲ್ಲಿ ಮೂಡಿ ಬಂದ ಕಾರಂತರ ಆತ್ಮಕಥನ 'ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ' ಓದಿ ಕಾರಂತರನ್ನು ಇನ್ನಷ್ಟು ತಿಳಿದುಕೊಂಡೆ ಎಂದು ಸಮಾಧಾನ ಪಟ್ಟುಕೊಂಡೆ.
|
ನಿರ್ದೇಶಕ ರಾಮಚಂದ್ರ ಪಿ.ಎನ್
|
ಈಗ, ತಮ್ಮ ತುಳು ಚಿತ್ರ 'ಸುದ್ದಕ್ಕೆ ೨೦೦೬ರ 'ಓಶಿಯನ್ ಸಿನಿಫ್ಯಾನ್ ಫೆಸ್ಟಿವಲ್ ಆಫ್ ಏಶಿಯನ್ ಫಿಲ್ಮ್ಸ್ನಲ್ಲಿ 'ಬೆಸ್ಟ್ ಇಂಡಿಯನ್ ಫಿಲ್ಮ್' ಪ್ರಶಸ್ತಿ ಹಾಗೂ ೨೦೦೯ರಲ್ಲಿ 'ಪುಟಾಣಿ ಪಾರ್ಟಿ' ಎಂಬ ಕನ್ನಡ ಮಕ್ಕಳಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಪಡೆದ ನಿರ್ದೇಶಕ ರಾಮಚಂದ್ರ ಪಿ.ಎನ್ ಅವರು ನಿರ್ದೇಶಿಸಿದ ' ಬಿ ವಿ ಕಾರಂತ (ಬಾಬಾ' ಚಿತ್ರ ನೋಡಿದ ಮೇಲೆ ನನಗೆ ಗೊತ್ತಿದೆ ಅಂದುಕೊಂಡಿದ್ದು ತುಂಬಾ ಕಡಿಮೆ ಇತ್ತು ಎಂದರಿವಾಯಿತು, ನನಗಷ್ಟೇ ಅಲ್ಲ, ಕಾರಂತರನ್ನು ಬಲ್ಲೆ ಎನ್ನುವವರಿಗೂ ಈ ಸಾಕ್ಷ್ಯಚಿತ್ರವನ್ನು ನೋಡಿದ ಮೇಲೆ ಇದೇ ಅನುಭವವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
|
ಈ ಚಿತ್ರದ ಹೆಗ್ಗಳಿಕೆ ಎಂದರೆ ಥೇಟ್ ಕಾರಂತರ ಧಾಟಿಯಲ್ಲೇ ಅಂದರೆ ಕಾರಂತರು ಹೇಗೆ ಪ್ರಕೃತಿದತ್ತವಾದ, ಸಹಜವಾದ ಧ್ವನಿಗಳನ್ನು ಸಂಗೀತವಾಗಿಸಿಕೊಂಡು, ದಿನನಿತ್ಯದ ಬಳಕೆಯ ವಸ್ತುಗಳನ್ನು ವಾದ್ಯವಾಗಿಸಿಕೊಂಡು, ವಾದ್ಯಪರಿಕರಗಳೊಡನೆ ಮೇಳೈಸಿ ರಂಗಗೀತೆಗಳಿಗೆ ಹೊಸ ಆಯಾಮ ಕೊಟ್ಟರೋ, ದೇಸಿ ಸೊಗಡನ್ನು ಶೆಕ್ಸ್‌ಪಿಯರ್‌ನ ನಾಟಕಗಳಿಗೆ ಅಳವಡಿಸಿ ಅನ್ಯ ಸಂಸ್ಕೃತಿಯನ್ನು ಆಪ್ತವಾಗಿಸಿದರೋ, ಅದಕ್ಕೆ ತಕ್ಕುದಾಗಿ ನಿರ್ದೇಶಕ ರಾಮಚಂದ್ರ ಪಿ.ಎನ್ ಅವರು ಈ ಚಿತ್ರಕ್ಕೆ ತೀರ ಅನಿವಾರ್ಯವಾದಷ್ಟೇ ಕೃತ್ರಿಮ ಬೆಳಕಿನೊಡನೆ ಆದಷ್ಟು ಸಹಜ ಬೆಳಕನ್ನು ಬಳಸಿಕೊಂಡು ಚಿತ್ರೀಕರಿಸಿ, ರೂಪಕದ ರೀತಿಯಲ್ಲಿಯ ದೃಶ್ಯ ಸಂಯೋಜಿಸಿ, ಅಲ್ಲಲ್ಲಿ ಕಾರಂತರ ಸಂಗೀತ ಸಂಯೋಜನೆಯ ಹಾಡುಗಳನ್ನು ಬಳಸಿ ಪಕ್ಕಾ ಕಾರಂತ ಚಿತ್ರವಾಗಿಸಿದ್ದಾರೆ. ರಾಮಚಂದ್ರ ಪಿ.ಎನ್ ಅವರ ಈ ಚಿತ್ರಕ್ಕೂ ಸಮೀರ್ ಮಹಜನ್ ಅವರ ಛಾಯಾಗ್ರಹಣವಿದೆ.
|
ರಂಗಮಂಚದ ಬೆಳಕಿನ ಸಂಯೋಜನೆಯ ದೃಶ್ಯದೊಂದಿಗೆ ತೆರೆದುಕೊಳ್ಳುವ ಈ ಸಿನಿಮಾ, ವೈದೇಹಿಯವರು ರಚಿಸಿದ ಕಾರಂತರ ಬದುಕಿನ ಬರಹ 'ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ'ಯನ್ನು ಆಧರಿಸಿದ್ದರೂ ಸಹ ಕಾರಂತರ ಅನೇಕ ಒಡನಾಡಿಗಳ, ಆಪ್ತರ, ಮನೆಯ ಜನರ, ಶಿಷ್ಯರ ಮಾತಿನ ಮುಖಾಂತರ, ಕಾರಂತರ ಬದುಕನ್ನು ಅನಾವರಣಗೊಳಿಸುತ್ತಾ, ಕಾರಂತರು ಸಂಚರಿಸಿ ಸಂಚಲನವನ್ನುಂಟು ಮಾಡಿದ ಪ್ರದೇಶಗಳಿಗೆಲ್ಲ ಭೇಟಿ ನೀಡುತ್ತಾ ಅಲ್ಲಿ ಉಳಿದು ಬೆಳೆಯುತ್ತಿರುವ ಕಾರಂತರ ಛಾಪನ್ನು ನಮ್ಮ ಮನದಲ್ಲೂ ಅಳಿಯದಂತೆ ಅಚ್ಚು ಹಾಕುವಲ್ಲಿ ಸಿನಿಮಾ ಸಂಪೂರ್ಣ ಯಶಸ್ವಿಯಾಗುತ್ತದೆ.
|
ಹಿಂದಿಯ ಖ್ಯಾತ ನಾಟಕಕಾರ ಜಯಶಂಕರ್ ಪ್ರಸಾದ್ ಅವರ ನಾಟಕಗಳನ್ನು ಅವುಗಳ ಗಾತ್ರ ಹಾಗೂ ಅವುಗಳಲ್ಲಿನ ವಿವರಣಾಕ್ರಮದಿಂದಾಗಿ ಹಿಂದಿ ಭಾಷೆಯ ಜನರೇ ರಂಗಕ್ಕೆ ತರಲು ಹೆದರುತ್ತಿದ್ದಂಥ ವೇಳೆಯಲ್ಲಿ ಕಾರಂತರು ಅವುಗಳನ್ನು ಪ್ರಯೋಗಿಸಿದ್ದನ್ನು ನೆನಪಿಸಿಕೊಳ್ಳುವ ಕಾಶಿನಾಥ್ ಸಿಂಗ್,
|
'ಚಾಣಕ್ಯ ನಾಟಕದಲ್ಲಿ ಚಾಣಕ್ಯನ ಪಾತ್ರವಹಿಸಲು ಘಟಾನುಘಟಿ ನಟರೆಲ್ಲ ಸಾಲಾಗಿ ಮುಂದಾದಾಗ ನಟನೇ ಅಲ್ಲ ಎನ್ನಿಸಿದ್ದ ನಟನೊಬ್ಬನಿಂದ ಆ ಪಾತ್ರ ಮಾಡಿಸಿ, ಇವನ ಹೊರತು ಅನ್ಯರು ಚಾಣಕ್ಯನ ಪಾತ್ರಕ್ಕೆ ನ್ಯಾಯ ಕೊಡಲು ಸಾಧ್ಯವೇ ಇಲ್ಲ ಎಂದು ಜನ ಮಾತಾಡಿಕೊಳ್ಳುವಂತೆ ಆ ನಟನನ್ನು ಕಾರಂತರು ತಯಾರು ಮಾಡಿದನ್ನು ಮೆಲುಕು ಹಾಕುವ ಕುವರ್ಜಿ ಅಗರ್ವಾಲ್,
|
ಇರುವ ವಾದ್ಯಗಳನ್ನೇ ಬೇರೆ ರೀತಿಂiiಲ್ಲಿ ಪ್ರಯೋಗಿಸಲು ಆ ಮುಖಾಂತರ ಸಂಗೀತಕ್ಕೆ ಹೊಸತನವನ್ನು ನೀಡಿ ಅಚ್ಚರಿಮೂಡಿಸುತ್ತಿದ್ದ ಕಾರಂತರ ಕುರಿತು ಮಾತಾಡುವ ನೀಲಮ್ ಮಾನ್ ಸಿಂಗ್,
|
ಎನ್ ಎಸ್ ಡಿಯ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತಿದ್ದ ರೀತಿಯ ಕುರಿತು ಮಾತಾಡಿರುವ ಕೀರ್ತಿ ಜೈನ್, ಅನುರಾಧಾ ಕಪೂರ್,
|
ಇದ್ದ ಸ್ಥಳವನ್ನೇ ಕಾರಂತರು ನಾಟಕಕ್ಕೆ ಹೇಗೆ ಅನುಕೂಲ ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ನೆನಪಿಸಿಕೊಳ್ಳುವ ಶ್ರೀನಿವಾಸ್ ಜಿ ಕಪ್ಪಣ್ಣ,
|
ಕಾರಂತರ ಸಿನಿಮಾ ನಂಟಿನ ಕುರಿತು ಮಾತಾಡಿದ ಗಿರೀಶ್ ಕಾರ್ನಾಡರು, ಕಾಸರವಳ್ಳಿಯವರು,
|
ತಮ್ಮ ಮೃದುದನಿಯಲ್ಲಿ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆಯ ಕೆಲವು ಪುಟಗಳನ್ನು ಓದುವ ವೈದೇಹಿ ಮತ್ತು ಅನೇಕ ಹಿರಿಕಿರಿಯ ರಂಗಕರ್ಮಿಗಳು...
|
ಹೀಗೆ ದೇಶದ ಉದ್ದಗಲಕ್ಕೂ ಸಂಚರಿಸಿ ಕಾರಂತರ ಒಡನಾಡಿಗಳನ್ನು ಮಾತಾಡಿಸಿ, ಆ ಮೂಲಕ ಕಾರಂತರನ್ನು ಪರಿಚಿಯಿಸುವುದು ಮತ್ತು ಚಿತ್ರೀಕರಿಸಿದ್ದನ್ನು ಕ್ರಮಬದ್ಧವಾಗಿ, ಅಚ್ಚುಕಟ್ಟಾಗಿ ಹೊಂದಿಸಿ ಪ್ರಸ್ತುತಪಡಿಸಿವುದರ ಹಿಂದಿನ ಪರಿಶ್ರಮದ ಸಾರ್ಥಕತೆ ಈ ಚಿತ್ರ ನೀಡುವ ಗಾಢ ಅನುಭವದಲ್ಲಿ ಕಂಡುಬರುತ್ತದೆ.
|
ಚಿತ್ರೀಕರಣದ ವೇಳೆಯಲ್ಲಿ ನಿರ್ದೇಶಕ ರಾಮಚಂದ್ರ ಪಿ.ಎನ್, ಛಾಯಾಗ್ರಾಹಕ ಸಮೀರ್ ಮಹಜನ್ ಮತ್ತು ರಂಗಕರ್ಮಿ ಇಕ್ಬಾಲ್ ಅಹೆಮದ್.
|
ಕಣ್ಣೆದುರೇ ಹಳ್ಳಿಯ ಸಾಮಾನ್ಯ ಹುಡುಗನೊಬ್ಬ ತನ್ನ ಆಸೆ, ಕನಸು, ದುಗುಡಗಳೊಡನೆ ಏರು ದಾರಿಯಲ್ಲಿ ನಡೆಯುತ್ತಾ ನಡೆಯುತ್ತಾ ಮೇರುಪರ್ವತವಾದ ಬೆರಗು, ಇನ್ನೊಬ್ಬ ಕಾರಂತ ಬೇಕು ಎಂಬ ತುರ್ತಿನ ಹಂಬಲ ಮನಸನ್ನು ಆವರಿಸಿಕೊಳ್ಳುತ್ತವೆ. 'ಫಿಲ್ಮ್ ಡಿವಿಜನ್ನ ನಿರ್ಮಾಣದ, ೯೩ ನಿಮಿಷದ ಬಿ ವಿ ಕಾರಂತರ ಕುರಿತ ಈ ಸಾಕ್ಷ್ಯಚಿತ್ರ 'ಬಿವಿ ಕಾರಂತ (ಬಾಬಾ), ಕೇವಲ ಕನ್ನಡಿಗರಿಗೆ ಕನ್ನಡ ರಂಗಭೂಮಿಗೆ ಮಾತ್ರವಲ್ಲ, ಇಡೀ ಭಾರತೀಯ ರಂಗಭೂಮಿಗೊಂದು ಉತ್ತಮ ಕೊಡುಗೆ.
|
ಮಗಳ ಮೊದಲ ಫೋಟೊ ಶೇರ್ ಮಾಡಿದ ನೀನಾಸಂ ಸತೀಶ್: ಹೇಗಿದ್ದಾಳೆ ಪುತ್ರಿ ಮನಸ್ವಿತಾ? | Kannada Actor Ninasam Sathish Shared His Daughter Manasvitha's First Photo - Kannada Filmibeat
|
| Updated: Saturday, January 15, 2022, 9:52 [IST]
|
ಕನ್ನಡದ ಚಿತ್ರರಂಗದಲ್ಲಿ ಕಷ್ಟ ಪಟ್ಟು ಮೇಲೆ ಬಂದ ನಟರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರು. ಡ್ರಾಮ, ಲೂಸಿಯಾ, ಕ್ವಾಟ್ಲೆ ಅಂತ ಸಿನಿಮಾಗಳಲ್ಲಿ ನಟಿಸಿ, ತನ್ನದೇ ಒಂದು ವರ್ಗವನ್ನು ಸೃಷ್ಟಿಸಿಕೊಂಡ ನಟ. ಸುಮಾರು 14 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ನೀನಾಸಂ ಸತೀಶ್ ತನ್ನದೇ ಅಭಿಮಾನಿಗಳ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಕೈ ತುಂಬಾ ಸಿನಿಮಾಗಳಿವೆ. ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.
|
ನೀನಾಸಂ ಸತೀಶ್ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತ ಫೇಸ್. ಆದರೆ, ಸತೀಶ್ ಕುಟುಂಬ ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ. ಪತ್ನಿ, ಮಗಳು ಸೋಶಿಯಲ್ ಮೀಡಿಯಾಗಳಲ್ಲೂ ಕಂಡಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಮಗಳು ಮನಸ್ವಿತ ಅವರ ಮೊದಲ ಫೋಟೊವನ್ನು ಶೇರ್ ಮಾಡಿದ್ದಾರೆ. ಜೊತೆ ಈಗ ಫೋಟೊ ಶೇರ್ ಮಾಡಿದ್ದಕ್ಕೆ ಕಾರಣ, ಯಾಕೆ ಕುಟುಂಬ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿಲ್ಲ ಎಂಬುವುದನ್ನು ಫಿಲ್ಮಿ ಬೀಟ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.
|
ಮಗಳ ಮೊದಲ ಫೋಟೊ ಬಿಟ್ಟ ನೀನಾಸಂ ಸತೀಶ್
|
ನೀನಾಸಂ ಸತೀಶ್ ಇದೂವರೆಗೂ ತಮ್ಮ ಪುತ್ರಿಯ ಫೋಟೊವನ್ನು ಎಲ್ಲೂ ಶೇರ್ ಮಾಡಿರಲಿಲ್ಲ. ಆದರೆ, ಅಭಿಮಾನಿಗಳು ಹಾಗೂ ಸ್ನೇಹಿತರ ಒತ್ತಾಯಕ್ಕೆ ಪುತ್ರಿ ಮನಸ್ವಿತ ಅವರ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಈಗ ಪುತ್ರಿಗೆ ಆರು ವರ್ಷ. ಆದರೆ, ಮಗಳ ಖಾಸಗಿ ಬದುಕಿಗೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಒಂದು ವರ್ಷವಿದ್ದಾಗ ತೆಗೆದ ಫೋಟೊವನ್ನು ಶೇರ್ ಮಾಡಿದ್ದಾರೆ. "ಸೋಶಿಯಲ್ ಮೀಡಿಯಾಗೆ ಸಂಪೂರ್ಣವಾಗಿ ಎಂಟ್ರಿ ಕೊಟ್ಟಿಲ್ಲ. ಅವಳನ್ನು ಸಂಪೂರ್ಣವಾಗಿ ಸೋಶಿಯಲ್ ಮೀಡಿಯಾಗೆ ಕರೆ ತರುವುದು ಇಷ್ಟವಿಲ್ಲ. ಅವರ ಖಾಸಗಿ ಜೀವನದ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಕಾರಣ ಏನು ಅಂದರೆ, ಅವಳು ಶಾಲೆಗೆ ಹೋಗುತ್ತಾಳೆ. ಅಂಗಡಿಗೆ ಹೋಗುತ್ತಾಳೆ. ಆರಾಮಾಗಿ ಇದ್ದಾಳೆ. ಅವಳಿಗೆ ಒಬ್ಬ ಹೀರೋ ಮಗಳು ಅನ್ನುವುದು ಗೊತ್ತಿಲ್ಲ. ಮುಂದೊಂದು ದಿನ ಅವಳೇ ಸೋಶಿಯಲ್ ಮೀಡಿಯಾಗೆ ಬಂದರೆ ನಂದೇನು ಅಭ್ಯಂತರವಿಲ್ಲ." ಎಂದು ಸತೀಶ್ ಫಿಲ್ಮಿ ಬೀಟ್‌ಗೆ ಹೇಳಿದ್ದಾರೆ.
|
ಪ್ರಚಾರದಿಂದ ಮಗಳ ದೂರವಿಡಲು ಚಿಂತನೆ
|
"ಮಗಳ ವಿಚಾರವನ್ನು ಪಬ್ಲಿಸಿಟಿಗೆ ತಂದಿಡುವುದು ನನಗೆ ಇಷ್ಟವಿಲ್ಲ. ಅದಕ್ಕೆ ನಾನು ಮೊದಲಿನಿಂದಲೂ ಅವಳನ್ನು ಪ್ರಚಾರದಿಂದ ದೂರನೇ ಉಳಿಸಿದ್ದೇನೆ. ನನ್ನ ಕುಟುಂಬಕ್ಕೂ ಇಷ್ಟ ಆಗಲ್ಲ. ನನ್ನ ತಾಯಿಗೂ ಇಷ್ಟವಿರಲಿಲ್ಲ. ನನ್ನ ಪತ್ನಿಗೂ ಇಷ್ಟವಿಲ್ಲ. ನಾವೇ ಸಾರ್ವಜನಿಕ ಜೀವನದಲ್ಲಿ ಪ್ರೈವಸಿಯನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಅವಲ ಪ್ರೈವಸಿಯನ್ನು ಕಸಿದುಕೊಳ್ಳಲು ನಮಗೆ ಇಷ್ಟವಿಲ್ಲ. ಹಾಗಾಗಿ ಒಂದು ವರ್ಷವಿದ್ದಾಗ ತೆಗೆದ ಫೋಟೊವನ್ನು ಶೇರ್ ಮಾಡಿದ್ದೇನೆ." ಎಂದು ನೀನಾಸಂ ಸತೀಶ್ ಹೇಳಿದ್ದಾರೆ.
|
ಮಕ್ಕಳ ಪ್ರೈವಸಿ ಕಿತ್ತುಕೊಳ್ಳಬಾರದು
|
"ಮಕ್ಕಳ ಪ್ರೈವಸಿಯನ್ನು ನಾವು ಕಿತ್ತುಕೊಳ್ಳಬಾರದು. ಶಾಲೆಗೆ ನಾನೇ ಕರೆದುಕೊಂಡು ಹೋಗುತ್ತೇನೆ. ಕರೆದುಕೊಂಡು ಬರುತ್ತೇನೆ. ಆದರೆ ಯಾರಿಗೂ ನೀನಾಸಂ ಸತೀಶ್ ಮಗಳು ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಅದು ಗೊತ್ತಾದರೆ, ಅವಳ ವರ್ತನೆಯೇ ಬದಲಾಗಬಹುದು. ಸಣ್ಣ ವಯಸ್ಸಿನಲ್ಲೇ ಅವಳ ಮೇಲೆ ಒತ್ತಡ ಹೇರಬಾರದು ಅನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ." ಎಂಬ ಅಭಿಪ್ರಾಯ ತಿಳಿಸಿದ್ದಾರೆ.
|
ಅಮ್ಮನ ವಿಡಿಯೋ ರಿಲೀಸ್
|
ಇತ್ತೀಚೆಗೆ ನೀನಾಸಂ ಸತೀಶ್ ಅವರ ತಾಯಿ ನಿಧನರಾಗಿದ್ದರು. ಹೀಗಾಗಿ ಅವರ ಅಮ್ಮನ ಬಗ್ಗೆ ವಿಡಿಯೋವನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನೊಂದು 15 ದಿನಗಳಲ್ಲಿ ಅಮ್ಮನ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಿದ್ದಾರೆ. "ನನ್ನ ಅಭಿಮಾನಿಗಳು ಹಾಗೂ ಮಾಧ್ಯಮದವರು ತುಂಬಾ ಮಂದಿ ಕೇಳುತ್ತಲೇ ಇದ್ದರು. ಪ್ರೆಸ್ ಮೀಟ್‌ಗಳಿಗೆ ಹೋದಾಗಲೆಲ್ಲಾ ಮಗಳ ಬಗ್ಗೆ ಕೇಳುತ್ತಲೇ ಇದ್ದರು. ಅದಕ್ಕಾಗಿ ಒಂದು ವರ್ಷವಿದ್ದಾಗ ತೆಗೆದ ಪೋಟೊ ಶೇರ್ ಮಾಡಿದ್ದೇನೆ. ನನ್ನ ತಾಯಿಯ ಒಂದು ವಿಡಿಯೋ ಸಾಂಗ್ ಬರುತ್ತೆ. ಅದರಲ್ಲಿ ಮಗಳು ಒಂದೇ ಶಾಟ್‌ನಲ್ಲಿ ಬರುತ್ತಾಳೆ. ಅದನ್ನೂ ನಾನು ಪ್ರಮೋಟ್ ಮಾಡಲು ಹೋಗುವುದಿಲ್ಲ." ಎಂದು ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.
|
Read more about: sandalwood kannada cinema filmibeat original ನೀನಾಸಂ ಸತೀಶ್ ಸ್ಯಾಂಡಲ್‌ವುಡ್
|
Kannada Actor Ninasam Sathish posted his daughter Manasvitha first Photo. He doesnt want to show his daughter photo in social media. For fans he is sharing old photo of her daughter.
|
ನ್ಯಾಯಾಲಯದ ಕಲಾಪಗಳಲ್ಲಿ ಬದಲಾವಣೆ: ಹೈಕೋರ್ಟ್ ಹೊರಡಿಸಿದ ಹೊಸ ಮಾರ್ಗಸೂಚಿಯ ವಿವರ - ಗಲ್ಪ್ ಕನ್ನಡಿಗ -->
|
Home › STATE › ನ್ಯಾಯಾಲಯದ ಕಲಾಪಗಳಲ್ಲಿ ಬದಲಾವಣೆ: ಹೈಕೋರ್ಟ್ ಹೊರಡಿಸಿದ ಹೊಸ ಮಾರ್ಗಸೂಚಿಯ ವಿವರ
|
ನ್ಯಾಯಾಲಯದ ಕಲಾಪಗಳಲ್ಲಿ ಬದಲಾವಣೆ: ಹೈಕೋರ್ಟ್ ಹೊರಡಿಸಿದ ಹೊಸ ಮಾರ್ಗಸೂಚಿಯ ವಿವರ
|
ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 12.11.2020 ರಂದು ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಸ೦ಬ೦ಧಪಟ್ಟ೦ತೆ ದಿನಾಂಕ 17.11.2020 ರಿಂದ ಅನ್ವಯವಾಗುವ೦ತೆ ಹೊರಡಿಸಿದ ಮಾಪ೯ಡಿಸಲಾದ (Modified) ಕಾರ್ಯವಿಧಾನ ಮಾನದಂಡಗಳ (SOP) ಮುಖ್ಯಾಂಶಗಳು
|
A) ಕಳೆದ ಹತ್ತು ದಿನಗಳಿಂದ 200 ಕ್ಕಿ೦ತಲೂ ಕಡಿಮೆ ಕೋವಿಡ ಪ್ರಕರಣಗಳು ವರದಿಯಾಗಿರುವ ರಾಜ್ಯದ ಈ ಕೆಳಗಿನ ಜಿಲ್ಲೆಗಳಲ್ಲಿ ಈ ಹಿಂದೆ ಹೊರಡಿಸಿದ ಕಾಯ೯ವಿಧಾನಗಳ ಮಾನದಂಡಗಳನ್ನು ಭಾಗಶಃ ಮಾಪ೯ಡಿಸಲಾಗಿದೆ.
|
1.ಬಾಗಲಕೋಟೆ 2.ಬೀದರ್ 3.ಚಾಮರಾಜನಗರ 4.ಚಿಕ್ಕಬಳ್ಳಾಪುರ 5.ಗದಗ 6.ಹಾವೇರಿ 7.ಕೊಡಗು 8.ಕೊಪ್ಪಳ 9.ರಾಯಚೂರು 10.ಯಾದಗಿರಿ
|
ಮೇಲ್ಕಾಣಿಸಿದ ಸ್ಥಳಗಳಲ್ಲಿ ವಕೀಲರು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕರಣಗಳು ಹಾಗೂ ದಾಖಲೆಗಳಿಗೆ ಸಂಬಂಧಪಟ್ಟಂತೆ ಮುಂಚಿತವಾಗಿ ದಿನಾಂಕವನ್ನು ನಿಗದಿಪಡಿಸಿ ಬೇಕಾಗಿಲ್ಲ. ಆದರೆ ದಾಖಲಾತಿಗಳನ್ನು ಹಾಜರು ಪಡಿಸಲು ನ್ಯಾಯಾಲಯ ಸಂಕೀರ್ಣದ ಹೊರಗಡೆ ಈಗ ಮಾಡಲಾಗಿರುವ ಕೌಂಟರ್ ನ ವ್ಯವಸ್ಥೆ ಮುಂದುವರಿಯುವುದು.
|
ದಾಖಲೆಗಳನ್ನು ಹಾಜರು ಪಡಿಸಲು ಈ ಹಿಂದೆ ಮಾರ್ಚ್ 2020 ರಲ್ಲಿ ನಿಗದಿಪಡಿಸಲಾದ ಸಮಯ ಮುಂದುವರಿಯಲಿದೆ.
|
ವಕೀಲರುಗಳು ಮತ್ತು ನ್ಯಾಯಾಲಯ ಸಿಬ್ಬಂದಿಗಳ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ವಕೀಲರುಗಳು ನ್ಯಾಯಾಲಯದ ಕಚೇರಿಗೆ ಹಾಜರಾಗಲು ಅನುಮತಿ ಇರುವುದಿಲ್ಲ.
|
ಪ್ರಸ್ತುತ ಕಾರ್ಯವಿಧಾನಗಳ ಮಾನದಂಡಗಳ ಅನುಸಾರ ನೀಡುವ ಅನುಮತಿಯ ವಿನಹ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಪಟ್ಟ ಯಾವುದೇ ಪಕ್ಷಕಾರರು ನ್ಯಾಯಾಲಯ ಸಂಕೀರ್ಣದ ಒಳಗಡೆ ಪ್ರವೇಶಿಸುವಂತಿಲ್ಲ.
|
B) *ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಮಾಡಲಾದ ಭಾಗಶಃ ಮಾರ್ಪಾಡು*
|
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ವಕೀಲರ ಸಂಘದ ಕಚೇರಿಗಳನ್ನು ತೆರೆಯಲು ಈಗಾಗಲೇ ನೀಡಿದ ಅನುಮತಿಯೊಂದಿಗೆ ವಕೀಲರ ಸಂಘದ ಗ್ರಂಥಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.ಪ್ರತಿದಿನ ವಕೀಲರ ಸಂಘವು ತೆರೆಯುವ ಸಮಯಕ್ಕೆ ಸರಿಯಾಗಿ ಗ್ರಂಥಾಲಯವು ತೆರೆಯಲ್ಪಡುವುದು ಹಾಗೂ ವಕೀಲರ ಸಂಘವು ಮುಚ್ಚುವ ಅವಧಿಗೆ ಗ್ರಂಥಾಲಯವನ್ನು ಮುಚ್ಚತಕ್ಕದ್ದು.
|
ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರತಿದಿನ ಹತ್ತು ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲು ಅನುಮತಿಸಲಾಗಿದೆ. ಸಾಕ್ಷಿದಾರರನ್ನು ಬೆಳಗಿನ ಮತ್ತು ಮಧ್ಯಾಹ್ನದ ಕಲಾಪದ ಅವಧಿಯಲ್ಲಿ ವಿಚಾರಣೆಗೆ ಒಳಪಡಿಸಬಹುದು. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಪಡಿಸುವ ಸಾಕ್ಷಿದಾರರ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ. ದಂಡ ಪ್ರಕ್ರಿಯಾ ಸಂಹಿತೆ ಕಲಂ 164 ರಡಿ ದಾಖಲಿಸಬಹುದಾದ ಸಾಕ್ಷಿದಾರರ ಹೇಳಿಕೆಗಳ ಸಂಖ್ಯೆಗಳ ಬಗ್ಗೆ ಯಾವುದೇ ಮಿತಿ ಇರುವುದಿಲ್ಲ
|
ದಿನಾಂಕ 20.3.2020 ರ ಅಧಿಸೂಚನೆ ಪ್ರಕಾರ ಸಂಚಾರಿ ನ್ಯಾಯಾಲಯಗಳ ನಿಲಂಬನೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಹಿಂದಿನಂತೆ ಸದ್ರಿ ಸಂಚಾರಿ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ. ಆದರೆ ಪ್ರತಿದಿನ ಕರೆಯಲ್ಪಡುವ ಪ್ರಕರಣಗಳ ಸಂಖ್ಯೆ ನಲವತ್ತು (40) ಮೀರಬಾರದು.
|
ಮೇಲೆ ಹೇಳಲಾದ ಮಾರ್ಪಾಡುಗಳನ್ನು ಹೊರತುಪಡಿಸಿ ಉಳಿದಂತೆ ಹಾಲಿ ಕಾರ್ಯನಿರ್ವಹಣಾ ಮಾನದಂಡಗಳು ಮುಂದುವರಿಯಲಿವೆ. ಮೇಲ್ಕಾಣಿಸಿದ ಮಾರ್ಪಾಡುಗಳನ್ನು ಪ್ರಯೋಗಾತ್ಮಕ ನೆಲೆಯಲ್ಲಿ ಮಾಡಲಾಗಿದೆ. ಸನ್ನಿವೇಶಗಳನ್ನು ಮತ್ತು ವಿದ್ಯಮಾನಗಳನ್ನು ಪರಾಂಬರಿಸಿ ಸದರಿ ಮಾಪಾ೯ಡುಗಳು ಕಾಲಕಾಲಕ್ಕೆ ಬದಲಾವಣೆಗೆ ಒಳಪಡಲಿವೆ.
|
ಚಾಮರಾಜ ನಗರ – Laxmi News
|
Home / ಜಿಲ್ಲೆ / ಚಾಮರಾಜ ನಗರ
|
ಸೆಪ್ಟೆಂಬರ್ 1, 2021 Uncategorized, ಅಂತರಾಷ್ಟ್ರೀಯ, ಚಾಮರಾಜ ನಗರ, ಜಿಲ್ಲೆ, ರಾಜ್ಯ, ರಾಷ್ಟ್ರೀಯ 0
|
ಚಾಮರಾಜನಗರ : ಜಿಲ್ಲೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಆರಂಭಿಸಿದ್ದು, ವ್ಯಾಕ್ಸಿನೇಷನ್ ಪ್ರಮಾಣಪತ್ರ ತಂದ್ರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್. ರವಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ ಎಂಆರ್ ರವಿ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದು, ಸೆಪ್ಟೆಂಬರ್ 1 ರಿಂದ ಲಸಿಕೆ ಪಡೆಯದಿದ್ದರೆ ಪಡಿತರ, ಪಿಂಚಣಿ ತಡೆ ಹಿಡಿಯುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ …
|
ಜೂನ್ 2, 2021 ಚಾಮರಾಜ ನಗರ 0
|
ಚಾಮರಾಜನಗರ: ಟೊಮ್ಯಾಟೋ ಟ್ರೇಯಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ನಗರದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು, ಕೇರಳ ಮೂಲದ ಗಫೂರ್(37) ಬಂಧಿತ ಆರೋಪಿ. ತಮಿಳುನಾಡಿನಲ್ಲಿ ಕಠಿಣ ಲಾಕ್‍ಡೌನ್ ಜಾರಿಯಲ್ಲಿದ್ದು, ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಅಕ್ರಮವಾಗಿ ತಮಿಳುನಾಡಿಗೆ ಮದ್ಯ ಸಾಗಣೆ ಮಾಡುತ್ತಿದ್ದ. ಅಲ್ಲದೆ ಯಾರಿಗೂ ತಿಳಿಯದಂತೆ ಟೊಮ್ಯಾಟೋ ಟ್ರೇಗಳ ಜೊತೆ ಮದ್ಯದ ಬಾಟಲಿ ಇಟ್ಟು ಸಾಗಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ …
|
ಮೇ 25, 2021 ಚಾಮರಾಜ ನಗರ 0
|
ಚಾಮರಾಜನಗರ: ಗುಂಡಿನ ಕಾಳಗದಲ್ಲಿ ಕಾಡುಗಳ್ಳ ವೀರಪ್ಪನ ಬೆವರಿಳಿಸಿದ ಪಿಎಸ್‌ಐ ಸಿದ್ದರಾಜನಾಯಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜನಾಯಕ್ ಮಂಗಳವಾರ ವಿಧಿವಶರಾಗಿದ್ದಾರೆ. ಕಾಡುಗಳ್ಳ ವೀರಪ್ಪನ ಜತೆ ಮೀಣ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಸಿದ್ದರಾಜ ನಾಯಕ್ ಅವರು ಬದುಕುಳಿದಿದ್ದರು. 1992ರಲ್ಲಿ ಎಸ್ಪಿ ಹರಿಕೃಷ್ಣ ಹಾಗೂ ಎಸ್‌ಐ ಶಕೀಲ್ ಅಹಮದ್ ಜೊತೆ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು.
|
ನವೆಂಬರ್ 13, 2020 ಚಾಮರಾಜ ನಗರ 0
|
ಚಾಮರಾಜನಗರ: ನಮ್ಮ ಚಾಮರಾಜನಗರದ ರಾಯಭಾರಿಯಾಗಲು ನಾನು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹೇಳಿದ್ದಾರೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲಾಡಳಿತ ಸಿದ್ಧಪಡಿಸಿರುವ ನಾಲ್ಕು ನಿಮಿಷದ ವಿಡಿಯೋವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಈ ವೇಳೆ ವಚ್ರ್ಯುವಲ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್, ಚಾಮರಾಜನಗರದ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ. ನನ್ನ ತಂದೆಯ ಊರಾದ ಚಾಮರಾಜನಗರದ ಅಭಿವೃದ್ಧಿಗೆ ಸದಾ ಸಿದ್ಧ. ನಮ್ಮ …
|
ಅಕ್ಟೋಬರ್ 8, 2020 new delhi, Uncategorized, ಅಂತರಾಷ್ಟ್ರೀಯ, ಚಾಮರಾಜ ನಗರ, ಜಿಲ್ಲೆ, ರಾಜ್ಯ, ರಾಷ್ಟ್ರೀಯ 0
|
ಚಾಮರಾಜನಗರ: ಪ್ರೀತಿ ಅನ್ನೋದು ಮಾಯೆ. ಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರೇಮಿಗಳು ಯಾವ ಮಟ್ಟಕ್ಕಾದ್ರು ಇಳಿತಾರೆ ಅನ್ನುವುದಕ್ಕೇ ಈ ಘಟನೆಯೇ ಸಾಕ್ಷಿ. ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆಗೈದ ಭೀಕರ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದಲ್ಲಿ ನಡೆದಿದೆ. ನಾಗರಾಜು ನಾಯಕ್ ಹತ್ಯೆಯಾದ ವ್ಯಕ್ತಿ. ರಾಘವಪುರ ಗ್ರಾಮದ ನಿವಾಸಿ ನಾಗರಾಜು ನಾಯಕ್ ತೊಂಡವಾಡಿ ಗ್ರಾಮದ ನಿವಾಸಿ ಪದ್ಮ ಎಂಬ ಯುವತಿಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಪದ್ಮಳಿಗೆ ಮಣಿಕಂಠ ಎಂಬುವವನ …
|
ಅಕ್ಟೋಬರ್ 8, 2020 ಚಾಮರಾಜ ನಗರ, ರಾಜ್ಯ 0
|
ಚಾಮರಾಜನಗರ: ಶೋಕಿಗಾಗಿ ವೃದ್ಧೆಯ ಮನೆಗೆ ಕನ್ನ ಹಾಕಿ ಮೋಜು-ಮಸ್ತಿ ಮಾಡುತ್ತಿದ್ದ ಯುವಕರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಮನು (21), ಕಿರಣ್ (20) ಬಂಧಿತ ಆರೋಪಿಗಳು. ಗುಂಡ್ಲುಪೇಟೆಯ ನಾಯಕರ ಬೀದಿಯಲ್ಲಿ ವಾಸವಿದ್ದ ಬಸಮ್ಮ (70) ವೃದ್ಧೆಯ ಮನೆಗೆ ಕನ್ನ ಹಾಕಿ ಬೀರುವಿನ್ನಲ್ಲಿದ್ದ ಓಲೆ, ಕಾಸು, ಚಿನ್ನದ ಉಂಗುರ ಸೇರಿದಂತೆ 60 ಗ್ರಾಂ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದರು. ಅಕ್ಟೋಬರ್ 6ರಂದು ವೃದ್ಧೆ ಪೊಲೀಸ್ ಠಾಣೆಗೆ …
|
ಸೆಪ್ಟೆಂಬರ್ 28, 2020 ಚಾಮರಾಜ ನಗರ, ಜಿಲ್ಲೆ 0
|
ಚಾಮರಾಜನಗರ: ಬಂದ್ ಗೆ ಕರೆ ನೀಡಿದ್ದರೂ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಅಂಗಡಿ ಮುಂದೆ ಕನ್ನಡ ಪರ ಹೋರಾಟಗಾರ ನಿಜಧ್ವನಿ ಗೋವಿಂದ ರಾಜು ಸಾಷ್ಟಾಂಗ ನಮಸ್ಕಾರ ಹಾಕಿ ಬಾಗಿಲು ಮುಚ್ಚಲು ಮನವಿ ಮಾಡಿದರು. ಪ್ರತಿಭಟನಾಕಾರರ ಕೋರಿಕೆ ಮೇರೆಗೆ ಅಂಗಡಿ ಬಾಗಿಲು ಹಾಕಲಾಯಿತು. ನಗರದಲ್ಲಿ ಬೈಕ್ ರ್ಯಾಲಿ ನಡೆಸುತ್ತಿರುವ ರೈತರು ತೆರೆದಿದ್ದ ಅಂಗಡಿಗಳ ಮುಚ್ಚಿಸುತ್ತಿದ್ದಾರೆ. ನಗರದ ಸಂತೇಮರಳ್ಳಿ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಅನ್ನು ಮುಚ್ಚಲು ಕೈ ಮುಗಿದು …
|
ಸಫಾರಿಗೆ ಹೋಗಿ ಪ್ರಾಣಿಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್
|
Subsets and Splits
No community queries yet
The top public SQL queries from the community will appear here once available.