text
stringlengths
0
61.5k
Read more about: hollywood actor college ott web series ಹಾಲಿವುಡ್ ನಟ ಕಾಲೇಜು ಒಟಿಟಿ ವೆಬ್ ಸರಣಿ
A Andhra Pradesh college mistaken Breaking Bad web series Heisenberg as Germen scientist Werner Heisenberg.
ಜಮ್ಮು ಬಸ್ಸು ನಿಲ್ದಾಣದಲ್ಲಿ ಬಾಂಬ್ ಪತ್ತೆ!! ತಪ್ಪಿದ ಭಾರೀ ಅನಾಹುತ. | Viral Suddi
ಜಮ್ಮು: ಇತ್ತೀಚೆಗಷ್ಟೇ ಲೋಕಾರ್ಪಣೆಯಾದ ಜಮ್ಮು ಬಸ್ ನಿಲ್ದಾಣದಲ್ಲಿ ಭಾನುವಾರ ಬರೊಬ್ಬರಿ ಏಳು ಕೆಜಿ ತೂಕದ ಐಇಡಿ ಸ್ಫೋಟಕ ಪತ್ತೆಯಾಗಿದೆ.
ಜಮ್ಮು ನಗರದ ಅತ್ಯಂತ ಜನಸಂದಣೆ ಇರುವ ಬಸ್‌ ನಿಲ್ದಾಣ ಪ್ರದೇಶದಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆಯಾಗಿದ್ದು, ಈ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮುಐಜಿ ಮುಖೇಶ್ ಸಿಂಗ್ ಅವರು, 'ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದಂದು ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪುಗಳು ದಾಳಿ ನಡೆಸಲು ಯೋಜನೆ ರೂಪಿಸುತ್ತಿವೆ. ಈ ಬಗ್ಗೆ ನಮಗೆ ಮೊದಲೇ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿದ್ದವು. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದೆವು.
ಇದೇ ನಿಟ್ಟಿನಲ್ಲಿ ಕಳೆದ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ನಾವು ಸೊಹೈಲ್ ಎಂಬ ವ್ಯಕ್ತಿಯನ್ನು ಬಂಧಿಸಿ ಸುಮಾರು 6ರಿಂದ 6.5 ಕೆಜಿ ಐಇಡಿ ವಶಪಡಿಸಿಕೊಂಡಿದ್ದೇವೆ. ಅಲ್ಲದೆ ಕಳೆದ ರಾತ್ರಿ ನಾವು ಸಾಂಬಾದಿಂದ 15 ಸಣ್ಣ ಐಇಡಿ ಸ್ಪೋಟಕಗಳು ಮತ್ತು 6 ಪಿಸ್ತೂಲ್‌ಗಳನ್ನು ಸಹ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಅಂತೆಯೇ ಚಂಡೀಗಢ ದ ಖಾಜಿ ವಸೀಮ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತನೊಂದಿಗೆ ಅಬಿದ್ ನಬಿ ಎಂಬ ವ್ಯಕ್ತಿಯನ್ನೂ ನಾವು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆ ಪ್ರಯುಕ್ತದ ದಾಳಿ ಸಂಚು ವಿಫಲ
2019ರ ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆಯ ಪ್ರಯುಕ್ತ ಮತ್ತೊಂದು ಸ್ಫೋಟ ನಡೆಸುವ ಉಗ್ರರ ಯೋಜನೆಯು ವಿಫಲಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನ ಕುಂಜ್ವಾನಿ ಮತ್ತು ಸಾಂಬಾ ಜಿಲ್ಲೆಯ ಬಡೀ ಬ್ರಾಹ್ಮಣ ಪ್ರದೇಶದಿಂದ ಇಬ್ಬರು ಪ್ರಮುಖ ಉಗ್ರರನ್ನು ಬಂಧಿಸಿರುವ ಬೆನ್ನಲ್ಲೇ ಐಇಡಿ ಪತ್ತೆ ಮಾಡಲಾಗಿದೆ. ನಿರ್ಧಿಷ್ಟ ಮಾಹಿತಿಯನ್ನು ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಫೋಟಕ ಸಾಧನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಹಾಗೂ ಒಬ್ಬ ಪೊಲೀಸ್ ಹತ್ಯೆಗೆ ಸಂಬಂಧಿಸಿದಂತೆ ಉಗ್ರ ಝಹೂರ್‌ ಅಹ್ಮದ್‌ ರಾಥರ್‌ಗಾಗಿ ಹುಡುಕಾಟ ನಡೆದಿತ್ತು. ಶನಿವಾರ ಸಾಂಬಾದ ಬಡೀ ಬ್ರಾಹ್ಮಣ ಪ್ರದೇಶದಲ್ಲಿ ದಿ ರೆಸಿಸ್ಟೆನ್ಸ್‌ ಫ್ರಂಟ್‌ನೊಂದಿಗೆ (ಟಿಆರ್‌ಎಫ್‌) ಗುರುತಿಸಿಕೊಂಡಿರುವ ಉಗ್ರ ಝಹೂರ್‌ನನ್ನು ಬಂಧಿಸಲಾಯಿತು.
ಲಷ್ಕರ್–ಎ–ಮುಸ್ತಫಾ (ಎಲ್ಇಎಂ) ಸಂಘಟನೆಯ ಕಮಾಂಡರ್‌ ಎಂದು ಕರೆದುಕೊಂಡಿರುವ ಹಿಂದಾಯತುಲ್ಲಾಹ್‌ ಮಲ್ಲಿಕ್‌ ಅಲಿಯಾಸ್‌ ಹಸ್ನೈನ್‌ನನ್ನು ಫೆಬ್ರುವರಿ 6ರಂದು ಜಮ್ಮುವಿನ ಕುಂಜ್ವಾನಿ ಪ್ರದೇಶದಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.
ಚೆನ್ನೈನ ತಿರುವಲ್ಲೂರಿನಲ್ಲಿ 2bhk + 2t (850 ಚದರ ಅಡಿ) ಅಪಾರ್ಟ್ಮೆಂಟ್
Real Estate Listings: » Residential homes » Apartments » IN » Tamil Nadu » Chennai » Tiruvallur » ಚೆನ್ನೈನ ತಿರುವಲ್ಲೂರಿನಲ್ಲಿ 2bhk + 2t (850 ಚದರ ಅಡಿ) ಅಪಾರ್ಟ್ಮೆಂಟ್1
ID #13772674
ಚೆನ್ನೈನ ತಿರುವಲ್ಲೂರಿನಲ್ಲಿ 2 ಬಿಎಚ್‌ಕೆ ಆಸ್ತಿ ಬಾಡಿಗೆಗೆ ಲಭ್ಯವಿದೆ ಇದು 850 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಮಾಸಿಕ 15,000 ರೂ ಬಾಡಿಗೆಗೆ ಆಸ್ತಿ ಲಭ್ಯವಿದೆ ಇದು ಅರೆ-ಸುಸಜ್ಜಿತ ಆಸ್ತಿಯಾಗಿದೆ ಇದರ ಮುಖ್ಯ ಬಾಗಿಲು ಪೂರ್ವ ದಿಕ್ಕನ್ನು ಎದುರಿಸುತ್ತಿದೆ ಇದು ಸಿದ್ಧವಾಗಿದೆ -ಮೌವ್-ಇನ್ ಆಸ್ತಿ ನೀವು ಇಲ್ಲಿ ಕಳೆಯುವ ಸಮಯವು ನಿಮ್ಮ ಜೀವನದ ಅತ್ಯುತ್ತಮ ಕ್ಷಣವಾಗಿ ಪರಿಣಮಿಸುತ್ತದೆ, ಇದು ನಿಮಗೆ ಹೆಚ್ಚಿನ ಸಂತೋಷವನ್ನು ನಿವಾರಿಸಲು, ವಿಶ್ರಾಂತಿ ಪಡೆಯಲು ಮತ್ತು ಪ್ರಚೋದಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವಿವರಗಳಿಗಾಗಿ ನಮ್ಮನ್ನು ಸಂಪರ್ಕಿಸಿ
ಮಂಗಳೂರು: ದಿನಾಂಕ: 10-09-2015 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯಲ್ಲಿ ಯತೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಲಾನ್ಸಿ ಡಿ ಸೋಜಾ ಎಂಬಾತನಿಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪ್ರಮುಖ 3 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಪೋಲಿಸ್ ಕಮೀಷನರ್ ಎಸ್ ಮುರುಗನ್ ಹೇಳಿದರು.
ಚುನಾವಣೆ ಬಂದಾಗ ಮಾತ್ರ ಬಿಜೆಪಿ, ಕಾಂಗ್ರೆಸ್‌ಗೆ ಬಡವರ ನೆನಪು : ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ಮಹಮ್ಮದ್ ತುಂಬೆ | V4News
in: Fresh News, ಕರಾವಳಿ, ರಾಜಕೀಯ, ರಾಜ್ಯ, ಸುಳ್ಯ
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನೀತಿಗಳಲ್ಲಿ ವ್ಯತ್ಯಾಸಗಳಿಲ್ಲ. ಚುನಾವಣೆ ಬಂದಾಗ ಮಾತ್ರ ಬಡವರ ಮತ್ತು ಗ್ರಾಮಗಳ ನೆನಪಾಗುತ್ತದೆ. ಇಂತವರಿಂದ ಅಭಿವೃದ್ದಿ ಹೇಗೆ ಸಾಧ್ಯ. ಶೋಷಿತ ಸಮಾಜದ ಒಳಿತಿಗಾಗಿ ಎಸ್‌ಡಿಪಿಐ ಪಕ್ಷವನ್ನು ಬೆಂಬಲಿಸಿ ಎಂದು ಎಸ್‌ಡಿಪಿಐ ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದರು.
ಅವರು ಸುಳ್ಯದಲ್ಲಿ ಎಸ್‌ಡಿಪಿಐ ಪಕ್ಷದ ಬೃಹತ್ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಬ್ರಿಟಿಷರ ಕಾಲದಲ್ಲಿ ಇಲ್ಲಿನ ಆಡಳಿತ ಯಾವ ರೀತಿ ಇತ್ತು ಅದೇ ರೀತಿಯ ಆಡಳಿತವನ್ನು ಬಿಜೆಪಿ ಮಾಡುತ್ತಿದೆ. ಜನರ ಮಧ್ಯೆ ಐಕ್ಯತೆ ತರುವುದರಲ್ಲಿ ವಿಫಲವಾಗಿದೆ. ವಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಂತರ ಸೃಷ್ಟಿಯಾಗಲಿದೆ ಎಂದ ಅವರು ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಅವರು ದೇಶದ ಚೌಕಿದಾರ್ ಅಲ್ಲ. ಅವರೊಬ್ಬ ದೇಶದ ಕೊಳ್ಳೆ ಹೊಡೆದ ಡಕಾಯಿತ. ಅವರಿಗೆ ಪುಲ್ವಾಮದಲ್ಲಿ ಉಗ್ರಗಾಮಿಗಳು ಧಾಳಿ ಮಾಡಿ ಸೈನಿಕರನ್ನು ಕೊಂದಾಗ ದೇಶದ ಚೌಕಿದಾರ ಎಲ್ಲಿದ್ದರು. ನೀರವ್ ಮೋದಿ ಕೋಟಿಗಟ್ಟಲೆ ಹಣ ತಿಂದು ವಿದೇಶಕ್ಕೆ ಪಲಾಯಾನ ಮಾಡುವಾಗ ಚೌಕಿದಾರ್‌ಗೆ ಗೊತ್ತೆ ಇಲ್ಲ ಎಂದು ಹೇಳಿದರು.
ಎಸ್‌ಡಿಪಿಐ ರಾಜ್ಯ ಮುಖಂಡ ಶಾಫಿ ಬೆಳ್ಳಾರೆ ಮಾತನಾಡಿ ದೇಶದಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ರಾಮಮಂದಿರದ ನೆನಪು ಆಗಿದೆ. ಬದಲಾಗಿ ಬೆಂಕಿ ಕೊಡುವ ಕೈಗಳನ್ನು ತಡೆಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಮಾರಂಭದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಜಾಬೀರ್ ಹಿರಿಯಡ್ಕ, ಜಿಲ್ಲಾ ಅಧ್ಯಕ್ಷ ಆನಂದ ಮಿತ್ತಬೈಲು, ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಫೀಕ್ ಸವಣೂರು, ಮುಖಂಡರಾದ ಅಬ್ದುಲ್ ಕಲಾಂ, ಅಬ್ದುಲ್ ಲತೀಫ್ ಪುತ್ತೂರು, ಮಜೀದ್ ಖಾನ್, ಇಕ್ಬಾಲ್ ಬೆಳ್ಳರೆ, ಮಮ್ಮಾಲಿ ಬೆಳ್ಳಾರೆ, ಮೊದಲಾದವರು ಉಪಸ್ಥಿತರಿದ್ದರು.
ಪಾಕಿಸ್ತಾನ: ಇಮ್ರಾನ್ ಖಾನ್ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಸೋಮವಾರಕ್ಕೆ ಮುಂದೂಡಿಕೆ - ಕನ್ನಡಿ ನ್ಯೂಸ್ - Kannadi News
ಪಾಕಿಸ್ತಾನ: ಇಮ್ರಾನ್ ಖಾನ್ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಸೋಮವಾರಕ್ಕೆ ಮುಂದೂಡಿಕೆ
ಇಸ್ಲಾಮಾಬಾದ್‌: ಕೆಲವು ಸದಸ್ಯರ ಸಾವಿಗೆ ಸಂತಾಪ ಸೂಚಿಸಿದ ನಂತರ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಅವರು ಸೋಮವಾರಕ್ಕೆ ಕಲಾಪವನ್ನು ಮುಂದೂಡಿದ್ದರಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ಮತಕ್ಕೆ ಇನ್ನೂ ಎರಡು ದಿನಗಳ ಸಣ್ಣ ವಿರಾಮ ಸಿಕ್ಕಿದೆ. ಸೋಮವಾರ ಸಂಜೆ 4 ಗಂಟೆಗೆ ಅಧಿವೇಶನ ಪುನರಾರಂಭವಾಗಲಿದೆ.
ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಗೆ ಮಿತ್ರ ಪಕ್ಷಗಳ 23 ಸದಸ್ಯರು ಸರ್ಕಾರಕ್ಕೆ ಬೆಂಬಲ ಹಿಂಪಡೆದ ನಂತರ ಶುಕ್ರವಾರ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ನಿರ್ಧರಿಸಲಾಯಿತು. 342-ಸದಸ್ಯ ರಾಷ್ಟ್ರೀಯ ಅಸೆಂಬ್ಲಿಯಲ್ಲಿ, ಇಮ್ರಾನ್ ಖಾನ್ ಸರ್ಕಾರಕ್ಕೆ ಅವಿಶ್ವಾಸ ನಿರ್ಣಯದ ವಿರುದ್ಧ ಗೆಲ್ಲಲು ಕನಿಷ್ಠ 172 ಸದಸ್ಯರ ಬೆಂಬಲ ಅಗತ್ಯವಿದೆ.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಶುಕ್ರವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಕೇವಲ 159 ವಿರೋಧ ಪಕ್ಷದ ಸಂಸದರು ಹಾಜರಿದ್ದರು. ಇದು ಇಮ್ರಾನ್ ಖಾನ್‌ಗೆ ಉತ್ತೇಜನ ನೀಡಬಹುದು ಎಂದು ತಜ್ಞರು ಹೇಳುತ್ತಾರೆ.
ಆದಾಗ್ಯೂ, ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಹಲವಾರು ಭಿನ್ನಮತೀಯ ಸದಸ್ಯರು ಬಹಿರಂಗವಾಗಿ ಹೊರಬಂದಿದ್ದಾರೆ ಮತ್ತು ಸರ್ಕಾರದ ಮಿತ್ರಪಕ್ಷಗಳು ಸಹ ಪ್ರತಿಪಕ್ಷದ ಪರವಾಗಿ ನಿಂತಿವೆ ಎಂದು ವರದಿಯಾಗಿದೆ, ಇದು ಇಮ್ರಾನ್ ಖಾನ್ ಅವರಿಗೆ ಕಷ್ಟಕರವಾಗಿ ಪರಿಣಮಿಸಿದೆ.
ಖಾನ್ ಅವರು ಈ ಹಿಂದೆ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರ ಬೆಂಬಲಕ್ಕಾಗಿ ಸಮಾವೇಶ ಮಾಡುತ್ತಿದ್ದಾರೆ. ಅವರು ಮಾರ್ಚ್ 27 ರಂದು "ಲಾಂಗ್ ಮಾರ್ಚ್" ಗೆ ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ. ಅವರ ವಿರೋಧಿಗಳು ಅದೇ ರೀತಿ ಮಾಡಿದ್ದಾರೆ.
ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್ ಭುಟ್ಟೊ ಸೇರಿದಂತೆ ವಿರೋಧ ಪಕ್ಷದ ನಾಯಕರು ಕಳೆದ ಮೂರು ವರ್ಷಗಳಿಂದ ಇಮ್ರಾನ್ ಸರ್ಕಾರವನ್ನು ಬೀಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಇಮ್ರಾನ್‌ ಆರೋಪಿಸಿದ್ದಾರೆ.
ಸಿನಿಮಾ ಸುದ್ದಿ | News13 - Part 2
News13 > ಇನ್ನಿತರೆ > ಸಿನಿಮಾ ಸುದ್ದಿ
ಮಂಗಳೂರು : ಶ್ರೀ ಮಂಗಳಾದೇವಿ ಕ್ರಿಯೇಷನ್ಸ್, ಕುಡ್ಲ ಇವರ ಚೊಚ್ಚಲ ತುಳು ಚಿತ್ರ "ಬೊಳ್ಳಿಲು" ಮಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎ. 29 ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶರತ್‌ಚಂದ್ರ ಕುಮಾರ್, ಕದ್ರಿ ತಿಳಿಸಿದ್ದಾರೆ. ಚಿತ್ರದ ಬಿಡುಗಡೆ ಸಮಾರಂಭದ ಕುರಿತು...
ಕಾಪಿಕಾಡ್‌ರ 'ಬರ್ಸ' ಸಿನಿಮಾಕ್ಕೆ ಮುಹೂರ್ತ
ಮಂಗಳೂರು : ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್ ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾಗುತ್ತಿರುವ `ಬರ್ಸ' ತುಳು ಚಲನ ಚಿತ್ರದ ಮೂಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ ಜರಗಿತು. ಶರವು...
ದೋಸ್ತಿಲು ತುಳು ಚಿತ್ರದ ಧ್ವನಿಸುರುಳಿ ಬಿಡುಗಡೆ
Date : Tuesday, 19-04-2016
ಮಂಗಳೂರು : ನಗರದ ಕಾವೂರು ಮುಲ್ಲಕಾಡುವಿನಲ್ಲಿ ಮುಲ್ಲಕಾಡ ಫ್ರೆಂಡ್ಸ್ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಎಂಟರ್ ಪ್ರೈಸಸ್ ಅರ್ಪಿಸುವ ದೋಸ್ತಿಲು ಕತ್ತಲೆ ಲೋಕದ ವಿಚಿತ್ರೊಲು ಎಂಬ ತುಳು ಚಿತ್ರದ ಧ್ವನಿಸುರುಳಿ ಬಿಡುಗಡೆಗೊಂಡಿತು. ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವು ಮಂದಾರಬೈಲು ಬ್ರಹ್ಮಶ್ರೀ...
ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳು ಸಿನೆಮಾಗಳು ನಡೆಯುತ್ತಿಲ್ಲ : 'ನಮ್ಮ ಕುಡ್ಲ' ಸಿನೆಮಾ ತಂಡ
Date : Sunday, 17-04-2016
ಮಂಗಳೂರು : ತುಳು ಸಿನೆಮಾಗಳು ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳುನಾಡಲ್ಲೇ ಒಂದು ವಾರದ ಪ್ರದರ್ಶನ ಕಂಡು ಕಿತ್ತೊಗೆಯುವ ಕಾಲ ಬಂದಿದೆ. 'ನಮ್ಮ ಕುಡ್ಲ' ಸಿನೆಮಾ ಕಳೆದ ವಾರ ಬಿಡುಗಡೆಗೊಂಡು ಒಂದೇವಾರದಲ್ಲಿ ತಮಿಳುಭಾಷೆಯ ಚಿತ್ರಕ್ಕಾಗಿ ತೆರವುಮಾಡಬೇಕಾಯಿತು, ತುಳುನಾಡಿನ ಸಿನೆಮಾ ಮಂದಿರಗಳ ಮಾಲಿಕರು ಪರಭಾಷೆಯ...
ಎ.12 : ಪುರಭವನದಲ್ಲಿ ಚಾಲಿಪೋಲಿಲು 511ರ ಸಂಭ್ರಮ
Date : Monday, 11-04-2016
ಮಂಗಳೂರು : ತುಳು ಸಿನಿಮಾರಂಗದಲ್ಲಿ 511 ದಿನ ಪ್ರದರ್ಶನ ಕಾಣುವ ಮೂಲಕ ಮಹತ್ತರ ದಾಖಲೆ ಬರೆದಿರುವ ಜಯಕಿರಣ ಫಿಲಂಸ್‌ನ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ, ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ ಚಾಲಿಪೊಲೀಲು ಸಿನಿಮಾ 5ನೇ ಶತಕದ ಸಂಭ್ರಮಾಚರಣೆ ಎಪ್ರಿಲ್ 12 ರಂದು ಮಂಗಳವಾರ ಸಂಜೆ 5 ಗಂಟೆಗೆ...
Date : Friday, 08-04-2016
ಮಂಗಳೂರು :`ನಮ್ಮ ಕುಡ್ಲ' ತುಳು ಚಲನಚಿತ್ರ ಕರಾವಳಿಯಾದ್ಯಂತ ಚಾಂದ್ರಮಾನ ಯುಗಾದಿಯ ಶುಭದಿನ ಎಪ್ರಿಲ್ 8 ಶುಕ್ರವಾರ ಮಂಗಳೂರು, ಉಡುಪಿ ಸೇರಿದಂತೆ ಒಟ್ಟು 13 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರದ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಅದಕ್ಕೂ ಮೊದಲು ಶರವು ಶ್ರೀ ಮಹಾಗಣಪತಿ...
'ನಮ್ಮ ಕುಡ್ಲ' ಕರಾವಳಿಯಾದ್ಯಂತ ಎಪ್ರಿಲ್ 8 ರ ಚಾಂದ್ರಮಾನ ಯುಗಾದಿಯಂದು ಬಿಡುಗಡೆ
Date : Tuesday, 05-04-2016
ಮಂಗಳೂರು : ತುಳು ಚಲನಚಿತ್ರ 'ನಮ್ಮ ಕುಡ್ಲ ಕರಾವಳಿಯಾದ್ಯಂತ ಎಪ್ರಿಲ್ 8ರ ಚಾಂದ್ರಮಾನ ಯುಗಾದಿಯ ಶುಭದಿನದಂದು ಬಿಡುಗಡೆಗೊಳ್ಳಲಿದೆ. ಚಿತ್ರದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ನಾಯಕ ನಟ ಹಾಗೂ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಪ್ರಕಾಶ್ ಶೆಟ್ಟಿ ಧರ್ಮನಗರ ಮಾತನಾಡಿ ಈ ಚಿತ್ರವು "ವಾರ್...
ಹೊಸತನಗಳ `ರಂಬಾರೂಟಿ' ತುಳು ಚಿತ್ರ 13 ಥಿಯೇಟರ್‌ಗಳಲ್ಲಿ ಬಿಡುಗಡೆ
Date : Friday, 01-04-2016
ಮಂಗಳೂರು : ಯುವ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಅವರು ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನದೊಂದಿಗೆ ಹೊಸ ಯುವ ನಟರನ್ನು ಹಾಕಿ ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ನಿರ್ದೇಶಿಸಿದ ರಂಬಾರೂಟಿ ಚಿತ್ರ ಏಪ್ರಿಲ್ 1 ರಂದು ನಗರದ ಪ್ರಭಾತ್ ಥಿಯೇಟರ್ ಜೊತೆಗೆ ದಕ್ಷಿಣ...
Date : Wednesday, 30-03-2016
ಮಂಗಳೂರು : ಯುವ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಅವರು ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನದೊಂದಿಗೆ ಹೊಸ ಯುವ ನಟರನ್ನು ಹಾಕಿ ನಿರ್ದೇಶಿಸಿದ ರಂಬಾರೂಟಿ ಚಿತ್ರ ಚಿತ್ರಪ್ರೇಮಿಗಳಿಗೆ ಮನರಂಜನೆ ನೀಡಲು ಸಿದ್ದಗೊಂಡಿದೆ. ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ಪ್ರಕಾಶ್ ಕಾಬೆಟ್ಟು, ಶ್ರೀನಿವಾಸ್...
Date : Monday, 28-03-2016
ನವದೆಹಲಿ: 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟಗೊಂಡಿದೆ. ಹಿಂದಿ ಮತ್ತು ಪ್ರಾದೇಶಿಕ ಭಾಷಾ ವಿಜೇತರ ಹೆಸರು ಪ್ರಟಿಸಲಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿ ಅಮಿತಾಬ್ ಬಚ್ಚನ್ ಪಾಲಾಗಿದೆ. ಕಂಗನಾ ರಾಣಾವತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೂಜಿತ್ ಸರ್ಕಾರ ಅವರ 'ಪೀಕೂ' ಚಿತ್ರದಲ್ಲಿ...
ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ..! – EESANJE / ಈ ಸಂಜೆ
ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ..!
July 16, 2017 Sri Raghav Netaji didn't die in air crash, Netaji Subhash chandra bose, says secret French report
ಪ್ಯಾರಿಸ್, ಜು.16-ಸ್ವಾತಂತ್ರ ಸೇನಾನಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಸಾವಿನ ಸುತ್ತ ಈಗಲೂ ಆನುಮಾನದ ಹುತ್ತ ಬೆಳೆಯುತ್ತಿರುವಾಗಲೇ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂದು ಫ್ರೆಂಚ್ ಇತಿಹಾಸಕಾರ ಜೆ.ಬಿ.ಪಿ. ಮೋರ್ ನೀಡಿರುವ ಹೇಳಿಕೆ ಕುತೂಹಲ ಕೆರಳಿಸಿದೆ.
ಎಲ್ಲರೂ ಊಹಿಸಿರುವಂತೆ ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿರಲಿಲ್ಲ. ಅವರು 1947ರಲ್ಲೂ ಜೀವಂತವಾಗಿದ್ದರು. ಈ ವಿಷಯವು 1947ರ ಡಿಸೆಂಬರ್ 11ರ ಫ್ರೆಂಚ್ ಗುಪ್ತ ಸೇವೆ ವರದಿಯಲ್ಲಿದೆ ಎಂದು ಪ್ಯಾರಿಸ್ ಮೂಲದ ಮೋರ್ ತಿಳಿಸಿದ್ದಾರೆ.
ರಹಸ್ಯ ದಾಖಲೆಗಳು ವರದಿ ಮಾಡಿರುವಂತೆ ನೇತಾಜಿ ಇಂಡೋ-ಚೀನಾ ಗಡಿಯಿಂದ ಪರಾರಿಯಾಗಿದ್ದರು. 1945ರ ಆಗಸ್ಟ್ 18ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಬೋಸ್ ಮೃತಪಟ್ಟಿರಲಿಲ್ಲ. ಬದಲಾಗಿ ಅವರು ಯಾವುದೋ ಅಜ್ಞಾತ ಸ್ಥಳದಲ್ಲಿ ಜೀವಂತವಾಗಿದ್ದರು ಎಂದು ಮೋರ್ ಹೇಳಿಕೊಂಡಿದ್ದಾರೆ.
ನೇತಾಜಿ ಸಾವಿನ ರಹಸ್ಯಕ್ಕೆ ಸೂಕ್ತ ಉತ್ತರ ಪತ್ತೆ ಮಾಡಲು ಭಾರತ ಸರ್ಕಾರವು ಮೂರು ಆಯೋಗಗಳನ್ನು ರಚಿಸಿತ್ತು.
ಇದರಲ್ಲಿ ಶಾ ನವಾಜ್ ಆಯೋಗ ಮತ್ತು ಖೋಸ್ಲಾ ಸಮಿತಿ ವಿಮಾನ ಅಪಘಾತದಲ್ಲಿ ಸುಭಾಷ್ ಬೋಸರು ಮೃತರಾಗಿದ್ದಾರೆ ಎಂದು ತಿಳಿಸಿತ್ತು. ಆದರೆ 1999ರ ಮುಖರ್ಜಿ ಆಯೋಗವು ನೇತಾಜಿ ವಿಮಾನ ದುರಂತದಲ್ಲಿ ಮೃತಪಟ್ಟಿಲ್ಲ ಎಂದು ಹೇಳಿತ್ತು. ಈಗ ಮೋರ್ ಸಹ ಅದೇ ಹೇಳಿಕೆ ನೀಡಿರುವುದರಿಂದ ವೀರ ಸೇನಾನಿಯ ಸಾವಿನ ರಹಸ್ಯ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಅಂಡರ್ ಟೇಕರ್ ಪತ್ನಿ ಮಿಷಲ್ ಗೆ ಕ್ಯಾನ್ಸರ್ | WWE: Undertaker's wife and former Divas champion diagnosed with skin cancer - Kannada Oneindia
Updated: Friday, August 26, 2016, 18:45 [IST]
WWE ದಿವಾಸ್ ಹಾಗೂ ಮಹಿಳಾ ಚಾಂಪಿಯನ್ ಮಿಚೆಲ್ ಅವರು ಸೂರ್ಯ ಶಾಖಕ್ಕೆ ತುತ್ತಾಗಿ ಟ್ಯಾನ್ ಸಮಸ್ಯೆಯಿಂದ ಬಳಲಬೇಡಿ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ ಎಂದು ಇನ್ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಚರ್ಮದ ಕ್ಯಾನ್ಸರ್ ಇದೆ ಎಂದು ಬೇಗನೆ ಬಂದಿರುವುದರಿಂದ ರೋಗ ನಿವಾರಣೆ ಸಾಧ್ಯವಿದೆ.[ದಿ ಅಂಡರ್ ಟೇಕರ್ ರೀ ಎಂಟ್ರಿ, ಡೆಡ್ ಮ್ಯಾನ್ ವಾಪಸ್]
A photo posted by Michelle McCool-Calaway (@mimicalacool) on Aug 24, 2016 at 1:13pm PDT
wwe, undertaker, wrestling, cancer, sports, ಕುಸ್ತಿ, ಕ್ಯಾನ್ಸರ್, ಅಮೆರಿಕ, ಕ್ರೀಡೆ
The Undertaker's wife, Michelle McCool has been diagnosed with a disease which is seemingly terrifying. As noted in an Instagram picture, Michelle is suffering from skin cancer.
ವಾರ್ಡ್‌ಗೊಂದು ಮಾರುಕಟ್ಟೆಗೆ ಸಕಾಲ | Udayavani – ಉದಯವಾಣಿ
Tuesday, 05 Jul 2022 | UPDATED: 03:22 PM IST
ಜನಸಂದಣಿ ತಪ್ಪಿಸಲು ಅನುಕೂಲ! ­ಉದ್ಯೋಗ-ಆದಾಯ ಸೃಷ್ಟಿ ಮೂಲ! ­ಪಾಲಿಕೆಯಿಂದ ನಡೆಯಲಿ ಗಂಭೀರ ಚಿಂತನೆ
ಹುಬ್ಬಳ್ಳಿ: ಕೋವಿಡ್ ದಂತಹ ಸಂಕಷ್ಟ ಸ್ಥಿತಿಯಲ್ಲಿ ಕೆಲವೇ ಮಾರುಕಟ್ಟೆಗಳ ಮೇಲಿನ ಒತ್ತಡ ತಗ್ಗಿಸಲು, ಅವಳಿನಗರದಲ್ಲಿ ವಿಕೇಂದ್ರೀಕೃತ ಮಾರುಕಟ್ಟೆ ವ್ಯವಸ್ಥೆ ತರಲು ವಾರ್ಡ್‌ಗೊಂದು ಮಾರುಕಟ್ಟೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಗಂಭೀರ ಚಿಂತನೆ ನಡೆಸಬೇಕಾಗಿದೆ.
ಭವಿಷ್ಯದ ದೃಷ್ಟಿಯಿಂದಲೂ ಇದು ಸಹಕಾರಿಯಾಗಲಿದೆ. ಜನರಿಗೆ ಹತ್ತಿರದಲ್ಲೇ ತರಕಾರಿ, ಹಣ್ಣು, ಧಾನ್ಯಗಳು ದೊರೆತಂತಾಗಲಿದೆ. ಹುಬ್ಬಳ್ಳಿಯಲ್ಲಿ ಸಂತೆಗಳನ್ನು ಹೊರತು ಪಡಿಸಿದರೆ ಮಾರುಕಟ್ಟೆ ಎಂದರೆ ಜನತಾ ಬಜಾರ, ದುರ್ಗದ ಬಯಲು ವೃತ್ತದ ಎಂ.ಜಿ. ಮಾರುಕಟ್ಟೆ ಎನ್ನುವಂತಿದೆ. ಧಾರವಾಡದಲ್ಲಿ ಸೂಪರ್‌ ಮಾರ್ಕೆಟ್‌ ಎಂಬಂತಾಗಿದೆ. ಇದರ ಬದಲಾಗಿ ವಾರ್ಡ್‌ಗೆ ಒಂದರಂತೆ ಸಣ್ಣ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಿದರೆ ಜನರಿಗೆ ಕಾಲ್ನಡಿಗೆ ಅಂತರದಲ್ಲೇ ತರಕಾರಿ, ಹಣ್ಣುಗಳನ್ನು ದೊರೆತಂತಾಗಲಿದೆ.
ಕೇಂದ್ರೀಕೃತ ಮಾರುಕಟ್ಟೆಯಲ್ಲಿ ಜನಸಂದಣಿ ತಪ್ಪಿದಂತಾಗಲಿದೆ. ಜನರ ಪೆಟ್ರೋಲ್‌ ಖರ್ಚು, ಸಮಯ ಎರಡೂ ಉಳಿಯಲಿದೆ. ಜತೆಗೆ ಹಲವರಿಗೆ ಉದ್ಯೋಗ ಸೃಷ್ಟಿಸಿದಂತಾಗಲಿದ್ದು, ಪಾಲಿಕೆ ಆದಾಯಕ್ಕೂ ಅನುಕೂಲವಾಗಲಿದೆ. ಕಷ್ಟದ ಕೆಲಸವೇನಲ್ಲ: ಅವಳಿನಗರದಲ್ಲಿ 82 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ನಲ್ಲಿ ಮಾರುಕಟ್ಟೆ ನಿರ್ಮಾಣ ಪಾಲಿಕೆಗೆ ಕಷ್ಟದ ಕೆಲಸವೇಲಲ್ಲ.
ಹೊಸ ಬಡಾವಣೆಗಳಲ್ಲಿ ಬಯಲು ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿದ್ದ ತರಕಾರಿ ವ್ಯಾಪಾರವೇ ಇಂದು ಸಂತೆ ರೂಪ ತಾಳಿವೆ. ಈ ಜಾಗಗಳಲ್ಲಿ ಸಂತೆ ಆರಂಭಿಸಬೇಕೆಂದು ಪಾಲಿಕೆ ಯೋಜಿಸಿರಲಿಲ್ಲ. ಆದರೆ, ಜನರ ಅಗತ್ಯಕ್ಕೆ ತಕ್ಕಂತೆ ಸಂತೆಗಳು ರೂಪುಗೊಂಡಿವೆ.ಇದೇ ರೀತಿ ವಾರ್ಡ್‌ಗೊಂದು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾದಲ್ಲಿ ಜನ ಖಂಡಿತವಾಗಿಯೂ ಅದನ್ನು ಸ್ವೀಕರಿಸುವ ಸಾಧ್ಯತೆ ಇಲ್ಲದಿಲ್ಲ. ಒಂದು ವಾರ್ಡ್‌ನಲ್ಲಿ ಸುಮಾರು 12-13 ಸಾವಿರ ನಿವಾಸಿಗಳಿದ್ದು, ವಾರ್ಡ್‌ ವಿಸ್ತಾರ ಸುಮಾರು 2-3 ಕಿಮೀ ವ್ಯಾಪ್ತಿ ಹೊಂದಿದೆ. ವಾರ್ಡ್‌ನಲ್ಲಿ ಬಯಲು ಜಾಗವನ್ನೇ ಬಳಸಿಕೊಂಡು ಮಾರುಕಟ್ಟೆ ನಿರ್ಮಾಣ ಮಾಡಬಹುದಾಗಿದೆ.
ಬಿಸಿಯೂಟಕ್ಕೆ ಹುಳು ಬಿದ್ದ ಬೇಳೆ ಬಳಕೆ! | VIJAYAVANI - ವಿಜಯವಾಣಿ
ಬಿಸಿಯೂಟಕ್ಕೆ ಹುಳು ಬಿದ್ದ ಬೇಳೆ ಬಳಕೆ!
ಹೊಳೆನರಸೀಪುರ: ತಾಲೂಕಿನ ಶ್ರವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಮುದ್ದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಳು ಬಿದ್ದ ತೊಗರಿಬೇಳೆಯನ್ನು ಬಿಸಿಯೂಟದ ಅಡುಗೆಗೆ ಬಳಸಲು ಮುಂದಾಗಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ಯಮತ ಹಳೆಯ ದಾಸ್ತಾನಿನ ತೊಗರಿಬೇಳೆಯನ್ನು ಶಾಲೆ ಆವರಣದಲ್ಲಿ ಬಿಸಿಲಿಗೆ ಒಣಹಾಕಿ, ನಂತರ ಅದನ್ನೇ ಅಡುಗೆಗೆ ಬಳಕೆ ಮಾಡಲು ಮುಖ್ಯ ಶಿಕ್ಷಕ ಕುಮಾರ್ ಮುಂದಾಗಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಾಲಕ ಡಿ.ಆರ್.ಶಿವಣ್ಣ, ಹುಳು ಬಿದ್ದ ಪದಾರ್ಥಗಳಿಂದ ತಯಾರಿಸಿದ ಆಹಾರವನ್ನು ಮಕ್ಕಳಿಗೆ ನೀಡುವ ಬದಲು ಶಾಲೆಯಲ್ಲಿ ಬಿಸಿಯೂಟ ನೀಡುವುದನ್ನು ಸ್ಥಗಿತಗೊಳಿಸುವುದೇ ಉತ್ತಮ ಎಂದು ಅಭಿಪ್ರಾಯಪಟ್ಟರು.
ಇಂತಹ ಆಹಾರ ಸೇವನೆಯಿಂದ ಮಕ್ಕಳ ಆರೋಗ್ಯದಲ್ಲಿ ಏನಾದರೂ ಹೆಚ್ಚುಕಡಿಮೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಬಡ ಮಕ್ಕಳು ತಮ್ಮ ಮನೆಯಲ್ಲಿ ಗಂಜಿ ಕುಡಿದು ಬದುಕಿದರೂ ಈ ಹುಳು ಬಿದ್ದ ಅಡುಗೆ ಬೇಡವೆಂದರು.
ಅಲ್ಲದೆ, ಮುಖ್ಯ ಶಿಕ್ಷಕರು ಶಾಲಾ ಬಿಸಿಯೂಟದ ಅಡುಗೆ ಪದಾರ್ಥಗಳನ್ನು ತಮ್ಮ ಮನೆಗೆ ಸಾಗಿಸುವುದಾಗಿ ಆರೋಪಿಸಿದ ಅವರು, ಈ ಬಗ್ಗೆ ಬಿಇಒಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಪಾಲಕರಾದ ರಾಮ, ಜಯರಾಮ ಮತ್ತು ಸೋಮಶೇಖರ ಮುಖ್ಯ ಶಿಕ್ಷಕರ ಆಡಳಿತ ವೈಖರಿಗೆ ಬೇಸರ ವ್ಯಕ್ತಪಡಿಸಿದರು.
ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ದೇವರಮುದ್ದನಹಳ್ಳಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮುಖ್ಯಶಿಕ್ಷಕರು ಹೆಚ್ಚುವರಿ ದಾಸ್ತಾನು ಇಟ್ಟಿದ್ದರಿಂದ ಈರೀತಿಯಾಗಿದೆ. ಆದ್ದರಿಂದ ಹುಳು ಬಿದ್ದ ತೊಗರಿಬೇಳೆಯನ್ನು ಹಿಂಪಡೆದು ಬಳಕೆ ಯೋಗ್ಯ ತೊಗರಿಬೇಳೆ ನೀಡಲಾಗಿದೆ.
ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ - Public TV
ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ
ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಗರ್ಭಗುಡಿಯನ್ನು ಚಿನ್ನದ ಗೋಪುರ ಮಾಡುವ ಮೂಲಕ ಕರಾವಳಿಯ ಮೂರನೇ ಚಿನ್ನದ ದೇಗುಲ ಎಂಬ ಕೀರ್ತಿಗೆ ಪಾತ್ರವಾಗಿದೆ.
40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಚಿನ್ನದ ಗೋಪುರದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಶಿಖರ ಪ್ರತಿಷ್ಠೆ ಮಾಡಿ ಅಭಿಷೇಕ ಮಾಡಲಾಯಿತು. ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಪರ್ಯಾಯ ಮಹೋತ್ಸವದ ಕೀರ್ತಿ ಶಾಶ್ವತಗೊಳಿಸಲು ಈ ಮಹತ್ವದ ಯೋಜನೆ ಪೂರೈಸಿದ್ದಾರೆ. ಈ ಮೂಲಕ ಪಲಿಮಾರು ಶ್ರೀಗಳ ಆ ಮಹತ್ವಾಕಾಂಕ್ಷಿ ಯೋಜನೆ ಈಡೇರಿದೆ. ಶ್ರೀ ಕೃಷ್ಣನಿಗೆ ಚಿನ್ನದ ಗೋಪುರ ಸಮರ್ಪಣೆಯಾಗಿದೆ.
ಕಳೆದ 10 ದಿನಗಳಿಂದ ಸುವರ್ಣ ಗೋಪುರ ಸಮರ್ಪಣೆ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಾ ಬಂದಿದ್ದವು. ಚಿನ್ನದ ಶಿಖರ ಪ್ರತಿಷ್ಠೆ ಮಾಡಲಾಯಿತು. ಒಂದು ಸಾವಿರ ಬೆಳ್ಳಿ ಕಲಶಗಳಿಂದ ಗಂಗಾಧಿತೀರ್ಥದ ಅಭಿಷೇಕ ಸಲ್ಲಿಸಲಾಯಿತು. ಪುತ್ತಿಗೆ ಶ್ರೀಗಳು ಹೊರತು ಪಡಿಸಿದಂತೆ ಪೇಜಾವರ ಶ್ರೀಗಳ ಸಹಿತ ಅಷ್ಠಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಚಿನ್ನದ ಕಲಶದಿಂದ ಶಿಖರಕ್ಕೆ ಅಭಿಷೇಕ ಮಾಡಿದರು. ಪಲಿಮಾರು ಶ್ರೀಗಳು ಕೃಷ್ಣನ ಗೋಪುರ ಸುವರ್ಣಮಯವಾಗಿ ಇರಬೇಕೆಂದು ಈ ಯೋಜನೆ ಮಾಡಿದರು. 2500 ಚದರಡಿ ಸುವರ್ಣ ಗೋಪುರಕ್ಕೆ 200 ಕೆ.ಜಿ ತಾಮ್ರ, 800 ಕೆ.ಜಿ ಬೆಳ್ಳಿ, 100 ಕೆ.ಜಿ ಚಿನ್ನವನ್ನು ಬಳಕೆ ಮಾಡಲಾಗಿದೆ. ಸುಮಾರು 40 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಶ್ರೀ ಕೃಷ್ಣನಿಗೆ ಸುವರ್ಣ ತೊಟ್ಟಿಲು, ವಜ್ರ ಕಿರೀಟ, ಸುವರ್ಣ ರಥ ಸಮರ್ಪಿಸಿದರು. ಈಗಿನ ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಮೊದಲ ಪರ್ಯಾಯದಲ್ಲಿ ವಜ್ರ ಕವಚ ಅರ್ಪಿಸಿದ್ದರು.
'2ಎ' ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದಿಂದ ಬೃಹತ್ ಸಮಾವೇಶ: ವಿಧಾನಸೌಧಕ್ಕೆ ಮುತ್ತಿಗೆ ಯತ್ನ | Vartha Bharati- ವಾರ್ತಾ ಭಾರತಿ
ಬೇಡಿಕೆ ಈಡೇರದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ: ಸ್ವಾಮೀಜಿಗಳ ಎಚ್ಚರಿಕೆ
ವಾರ್ತಾ ಭಾರತಿ Feb 21, 2021, 6:18 PM IST
ಬೆಂಗಳೂರು, ಫೆ. 21: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ '2ಎ' ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಸಮುದಾಯ ಇಲ್ಲಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿತು. 'ಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಭರವಸೆ ದೊರೆಯುವವರೆಗೆ ಹಿಂದಿರುಗುವುದಿಲ್ಲ' ಎಂದು ಪಟ್ಟು ಮುಂದುವರಿಸಿರುವ ಸಮುದಾಯದ ಸ್ವಾಮೀಜಿಗಳು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. 'ಧರಣಿ ಸತ್ಯಾಗ್ರಹವನ್ನು ಕೈಬಿಡಿ, 2ಎ ಪ್ರವರ್ಗದಡಿ ಮೀಸಲಾತಿ ನೀಡುವ ಪ್ರಸ್ತಾವ ರಾಜ್ಯ ಸರಕಾರದ ಪರಿಶೀಲನೆಯಲ್ಲಿದೆ. ಶೀಘ್ರದಲ್ಲೆ ಈ ಕುರಿತು ಸರಕಾರ ತನ್ನ ನಿರ್ಧಾರ ಪ್ರಕಟಿಸಲಿದೆ' ಎಂದು ಸಚಿವರಾದ ಸಿ.ಸಿ. ಪಾಟೀಲ್ ಮತ್ತು ಮುರುಗೇಶ್ ಆರ್.ನಿರಾಣಿ ಮನವಿ ಮಾಡಿದರು.
ಆದರೆ, ಇದಕ್ಕೆ ಒಪ್ಪದ ಸ್ವಾಮೀಜಿ ಮತ್ತು ಸಮುದಾಯದ ಪದಾಧಿಕಾರಿಗಳು ಅರಮನೆ ಮೈದಾನದಿಂದ ಬಂದು ವಿಧಾನಸೌಧಕ್ಕೆ ಮುತ್ತಿಗೆ ಯತ್ನ ನಡೆಸಿದರು. ಆದರೆ, ಮಾರ್ಗಮಧ್ಯೆ ಕಾವೇರಿ ಜಂಕ್ಷನ್ ಬಳಿ ಪೊಲೀಸರು ಹೋರಾಟ ನಿರತರನ್ನು ತಡೆದರು. ಇದರಿಂದ ಆಕ್ರೋಶಿತರಾದ ಕೆಲ ಯುವಕರು ಬ್ಯಾರಿಕೇಟ್ ತಳ್ಳಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಕೂಡಲೇ ಮಧ್ಯಪ್ರವೇಶಿಸಿದ ಜಯಮೃತ್ಯುಂಜಯ ಸ್ವಾಮಿ ಉದ್ರಿಕ್ತರನ್ನು ಸಮಾಧಾನಪಡಿಸಿ, ಶಾಂತಿಯುತ ಪ್ರತಿಭಟನೆ ಮೂಲಕ ಮೀಸಲಾತಿ ಪಡೆದುಕೊಳ್ಳಲು ಬಂದಿದ್ದೇವೆ. 'ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿಕ ಮಾ.4ರ ವರೆಗೆ ಬೆಳಗ್ಗೆ 9ಗಂಟೆಯಿಂದ ಸಂಜೆ 6ಗಂಟೆ ವರೆಗೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದು, ಸಿಎಂ ಬಿಎಸ್‍ವೈ ಮೀಸಲಾತಿ ಕುರಿತು ವಿಧಾನಸಭೆ ಅಧಿವೇಶನದಲ್ಲೇ ಸ್ಪಷ್ಟ ಭರವಸೆ ನೀಡುವವರೆಗೂ ಹಿಂದಿರುಗುವ ಪ್ರಶ್ನೆಯೆ ಇಲ್ಲ' ಎಂದು ಎಚ್ಚರಿಕೆ ನೀಡಿದರು.
ಮೊಳಗಿದ ರಣಕಹಳೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ 38 ದಿನಗಳ ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಸಾವಿರಾರು ಮಂದಿ ಲಿಂಗಾಯತ ಪಂಚಮಸಾಲಿಗಳು ಬೆಂಗಳೂರಿನ ಅರಮನೆ ಮೈದಾನಕ್ಕೆ ಹರಿದು ಬಂದಿದ್ದು, ಮೀಸಲಾತಿಗಾಗಿ ರಣಕಹಳೆ ಮೊಳಗಿಸಿ ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯವನ್ನು ಮಂಡಿಸಿದರು.