text
stringlengths
0
61.5k
ಡಿಟಿಎಸ್ ನಲ್ಲಿ ಕಿಟ್ಟಿ, ಶರ್ಮಿಳಾ 'ಸ್ವಯಂವರ' | Film Swayamvara | Sharmila Mandre | Diganth | Srinagara Kitty | Bangkok | ಡಿಟಿಎಸ್ ನಲ್ಲಿ ಕಿಟ್ಟಿ, ಶರ್ಮಿಳಾ 'ಸ್ವಯಂವರ' - Kannada Filmibeat
ಡಿಟಿಎಸ್ ನಲ್ಲಿ ಕಿಟ್ಟಿ, ಶರ್ಮಿಳಾ 'ಸ್ವಯಂವರ'
| Published: Wednesday, February 10, 2010, 17:29 [IST]
ಶ್ರೀ ಸಾಯಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸ್ವಯಂವರ' ಚಿತಕ್ಕೆ ರಾಜನ್ ಸ್ಟುಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದೆ ಎಂದು ನಿರ್ಮಾಪಕ ಎಂ.ಚಂದ್ರು ತಿಳಿಸಿದ್ದಾರೆ.
ಇತ್ತೀಚೆಗೆ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಗೊಂಡ ಚಿತ್ರದ ಧ್ವನಿಸುರುಳಿಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದ ರಮಣೀಯ ಸ್ಥಳಗಳು ಹಾಗೂ ದೂರದ ಬ್ಯಾಂಕಾಕ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಅನಂತರಾಜು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಜನರ ಪ್ರಶಂಸೆಗೆ ಪಾತ್ರವಾಗಲಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.
ನಿರ್ದೆಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ನಾಯಕರಾಗಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿರುವ 'ಸ್ವಯಂವರ'ದ ಉಳಿದ ತಾರಾಬಳಗದಲ್ಲಿ ತಾರಾ, ಓಂಪ್ರಕಾಶ್‌ರಾವ್, ಅರುಣ್‌ಸಾಗರ್ ಮುಂತಾದವರಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ತುಷಾರ ರಂಗನಾಥ್ ಸಂಭಾಷಣೆ, ಹರ್ಷ ನೃತ್ಯ ಹಾಗೂ ಪಳನಿರಾಜ್ ಅವರ ಸಾಹಸ ಈ ಚಿತ್ರಕ್ಕಿದೆ.
Read more about: ದಿಗಂತ್ bangkok diganth ಶರ್ಮಿಳಾ ಮಾಂಡ್ರೆ sharmila mandre ಓಂ ಪ್ರಕಾಶ್ ರಾವ್ ಶ್ರೀನಗರ ಕಿಟ್ಟಿ srinagara kitty ಅನಂತರಾಜು ಸ್ವಯಂವರ swayamvara ananta raju
ಸಾಫ್ಟ್‌ವೇರ್ ಮೂಲಕ ಐಮ್ಯಾಕ್ ಅಭಿಮಾನಿಗಳನ್ನು ನಿಯಂತ್ರಿಸುವುದು ಹೇಗೆ | ನಾನು ಮ್ಯಾಕ್‌ನಿಂದ ಬಂದವನು
ಅನೇಕ ಬಳಕೆದಾರರು ಧುಮುಕುವುದು ಮತ್ತು ಅವರ ಐಮ್ಯಾಕ್‌ನ ಆಂತರಿಕ ಹಾರ್ಡ್ ಡ್ರೈವ್ ಅನ್ನು ಬದಲಾಯಿಸಲು ನಿರ್ಧರಿಸುತ್ತಾರೆ, ಅದು ಹೊಸ ತೆಳ್ಳನೆಯ ಮಾದರಿಗಳು ಅಥವಾ ನಮ್ಮ ಪ್ರೀತಿಯ ದಪ್ಪ-ಅಂಚಿನ ಅಲ್ಯೂಮಿನಿಯಂ ಐಮ್ಯಾಕ್ ಮತ್ತು ಡಿವಿಡಿ ಬರ್ನರ್ ಆಗಿರಲಿ. ಆದಾಗ್ಯೂ, ಅನುಸರಿಸಬೇಕಾದ ಎಲ್ಲಾ ಹಂತಗಳು ಸ್ಪಷ್ಟವಾಗಿಲ್ಲ ಮತ್ತು ಪ್ರೊಸೆಸರ್‌ಗೆ ಡೇಟಾವನ್ನು ಕಳುಹಿಸುವ ಸಂವೇದಕಗಳನ್ನು ಹೊಂದಿರುವ ಐಮ್ಯಾಕ್‌ನ ಮಾದರಿಗಳಿವೆ, ಇದರಿಂದಾಗಿ ಯಂತ್ರವು ಸೂಕ್ತವಾದ ತಾಪಮಾನವನ್ನು ಕಾಪಾಡಿಕೊಳ್ಳಬೇಕು ಎಂದು ಅಭಿಮಾನಿಗಳನ್ನು ಸರಿಯಾಗಿ ನಿರ್ವಹಿಸುತ್ತದೆ.
ಆಪಲ್, ಅದರ ಆರಂಭದಲ್ಲಿ, ಐಮ್ಯಾಕ್‌ನಲ್ಲಿ ಸೇರಿಸಲಾದ ಹಾರ್ಡ್ ಡ್ರೈವ್‌ಗಳ ಮೇಲೆ ಅಳವಡಿಸಲಾಗಿರುವ ತಾಪಮಾನ ಸಂವೇದಕಗಳನ್ನು ಆ ಐಮ್ಯಾಕ್‌ಗೆ ಒದಗಿಸಿದೆ, ನೀವು ಹಾರ್ಡ್ ಡ್ರೈವ್ ಅನ್ನು ಬದಲಾಯಿಸಿದರೆ ಆಪಲ್ ಸ್ವತಃ ಜೋಡಿಸಿದ ಮಾದರಿಗಳಿಗಿಂತ ವಿಭಿನ್ನ ಮಾದರಿಗಾಗಿ ಕಂಪ್ಯೂಟರ್ ಸ್ವಯಂಚಾಲಿತವಾಗಿ ಅಭಿಮಾನಿಗಳನ್ನು ನಿರಂತರವಾಗಿ ಆನ್ ಮಾಡುತ್ತದೆ.
ನಂತರ, ಹೊಸ ಆಗಮನದೊಂದಿಗೆ ಐಮ್ಯಾಕ್ ರೆಟಿನಾ ಪರದೆಯೊಂದಿಗೆ ಮಾದರಿಗಳನ್ನು ತಲುಪುವವರೆಗೆ ಈಗಾಗಲೇ ಹಲವಾರು ಬಾರಿ ನವೀಕರಿಸಲಾದ ತೆಳುವಾದ ಅಂಚಿನೊಂದಿಗೆ, ತಾಪಮಾನ ಸಂವೇದಕವನ್ನು ಸೇರಿಸುವುದನ್ನು ಪಕ್ಕಕ್ಕೆ ಬಿಡಲಾಗಿದೆ ಇದರಿಂದ ಈ ಕಂಪ್ಯೂಟರ್‌ಗಳಲ್ಲಿ ನಾವು ಈಗಾಗಲೇ ಬದಲಾವಣೆಯನ್ನು ಮಾಡಬಹುದು ಆಂತರಿಕ ಹಾರ್ಡ್ ಡಿಸ್ಕ್ ಅನ್ನು ಅಭಿಮಾನಿಗಳೊಂದಿಗೆ ಸಮಸ್ಯೆಗಳಿಲ್ಲದೆ HHD ಅಥವಾ SSD ಯಿಂದ.
ಈಗ, ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಲು ನೀವು ಎಸ್‌ಎಸ್‌ಡಿಯೊಂದಿಗೆ ನವೀಕರಿಸಲು ಬಯಸುವ ಐಮ್ಯಾಕ್, ನೀವು ಅದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ನೀವು ಸಾಫ್ಟ್‌ವೇರ್ ಮೂಲಕ ಅಭಿಮಾನಿಗಳನ್ನು ನಿಯಂತ್ರಿಸಬೇಕು ನಾವು ನಿಮಗೆ ಹೇಳಿರುವ ತಾಪಮಾನ ಸಂವೇದಕಗಳೊಂದಿಗೆ ಡಿಸ್ಕ್ಗಳನ್ನು ಇನ್ನು ಮುಂದೆ ಪೂರೈಸಲಾಗುವುದಿಲ್ಲ ಅಥವಾ ಅವುಗಳನ್ನು ಕಂಡುಹಿಡಿಯುವುದು ಕಷ್ಟ.
ಒಮ್ಮೆ ನೀವು ಹಾರ್ಡ್ ಡಿಸ್ಕ್ ಅನ್ನು ಬದಲಾಯಿಸಿದಾಗ, ನೀವು ಮತ್ತೆ ಐಮ್ಯಾಕ್ ಅನ್ನು ಪ್ರಾರಂಭಿಸುವಾಗ ನೀವು ಮಾಡಬೇಕಾಗಿರುವುದು ಅದನ್ನು ಸ್ಥಾಪಿಸಲು ಅಗತ್ಯವಾದ ಅಪ್ಲಿಕೇಶನ್‌ಗಾಗಿ ಇಂಟರ್ನೆಟ್ ಅನ್ನು ಹುಡುಕುವುದು ಮತ್ತು ಅದು ಭೌತಿಕ ತಾಪಮಾನ ಸಂವೇದಕದಂತೆ ಹಾರ್ಡ್ ಡಿಸ್ಕ್ ಮ್ಯಾನೇಜರ್ ಅನ್ನು ಹೊಂದಿರುತ್ತದೆ. ಅಪ್ಲಿಕೇಶನ್ ಅನ್ನು ಎಸ್‌ಎಸ್‌ಡಿ ಫ್ಯಾನ್ ಕಂಟ್ರೋಲ್ ಎಂದು ಕರೆಯಲಾಗುತ್ತದೆ ಮತ್ತು ನೀವು ಮಾಡಬಹುದು ಕೆಳಗಿನ ವೆಬ್‌ಸೈಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿ.
ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ನೀವು ಅದನ್ನು ಮಾಡಬೇಕಾಗಿರುವುದು ಅದನ್ನು ಸ್ಥಾಪಿಸಿ ಮತ್ತು ನೀವು ಅದನ್ನು ಮೊದಲ ಬಾರಿಗೆ ಚಲಾಯಿಸಿದಾಗ ಆಯ್ಕೆಮಾಡಿ ಸ್ಮಾರ್ಟ್ ವರ್ಕ್ ಮೋಡ್ ಆದ್ದರಿಂದ ಅದು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೀವು ಐಮ್ಯಾಕ್ ಅನ್ನು ಆನ್ ಮಾಡಿದ ಕ್ಷಣದಿಂದ ಅಭಿಮಾನಿಗಳನ್ನು ನಿಯಂತ್ರಿಸಲು ಸ್ವತಃ ಪ್ರಾರಂಭವಾಗುತ್ತದೆ. ಹೀಗಾಗಿ, ನಿಮ್ಮ ಮ್ಯಾಕ್‌ನ ಅಭಿಮಾನಿಗಳ ಕಾರ್ಯಾಚರಣೆಯ ಸಾಫ್ಟ್‌ವೇರ್ ನಿಯಂತ್ರಣವನ್ನು ನೀವು ಹೊಂದಿರುತ್ತೀರಿ ಮತ್ತು ಆದ್ದರಿಂದ ಯಾವುದೇ ರೀತಿಯ ಮೂರನೇ ವ್ಯಕ್ತಿಯ ಹಾರ್ಡ್ ಡ್ರೈವ್ ಅನ್ನು ಬಳಸಲು ಸಾಧ್ಯವಾಗುತ್ತದೆ.
ಲೇಖನಕ್ಕೆ ಪೂರ್ಣ ಮಾರ್ಗ: ನಾನು ಮ್ಯಾಕ್‌ನಿಂದ ಬಂದವನು » ಮ್ಯಾಕ್ ಕಂಪ್ಯೂಟರ್ಗಳು » ಸಾಫ್ಟ್‌ವೇರ್ ಮೂಲಕ ಐಮ್ಯಾಕ್ ಅಭಿಮಾನಿಗಳನ್ನು ಹೇಗೆ ನಿಯಂತ್ರಿಸುವುದು
ಮಾಟಿಯಾಸ್ ಟಾರ್ಚಿಯಾ ಡಿಜೊ
ನಿಸ್ಸಂದೇಹವಾಗಿ ನಾನು ನನ್ನ ಐಮ್ಯಾಕ್ 2011 ರಲ್ಲಿ ಎಸ್‌ಎಸ್‌ಡಿ ಯೊಂದಿಗೆ ಬಳಸುತ್ತಿದ್ದೇನೆ ಮತ್ತು ಅದು ಐಷಾರಾಮಿ !! ಆಶಾದಾಯಕವಾಗಿ ಇದು ಮ್ಯಾಕೋಸ್ ಸಿಯೆರಾಕ್ಕೆ ಬೆಂಬಲವನ್ನು ಹೊಂದಿದೆ !!!
ಮಾಟಿಯಾಸ್ ಟಾರ್ಚಿಯಾಗೆ ಪ್ರತ್ಯುತ್ತರಿಸಿ
ನಿಸ್ಸಂದೇಹವಾಗಿ, ನಾನು ಇದನ್ನು ನನ್ನ ಐಮ್ಯಾಕ್ 2011 ರಲ್ಲಿ ಎಸ್‌ಎಸ್‌ಡಿಯೊಂದಿಗೆ ಉತ್ತಮವಾಗಿ ಬಳಸುತ್ತೇನೆ !! ಆಶಾದಾಯಕವಾಗಿ ಅವರು ಮ್ಯಾಕೋಸ್ ಸಿಯೆರಾವನ್ನು ಬೆಂಬಲಿಸುತ್ತಾರೆ !!
ಶುಭ ಮಧ್ಯಾಹ್ನ ಪೆಡ್ರೊ. ನೀವು ನನಗೆ ಸಹಾಯ ಮಾಡಬಹುದೇ ಎಂದು ನಾನು ತಿಳಿಯಲು ಬಯಸುತ್ತೇನೆ. ನಾನು ಎಸ್‌ಎಸ್‌ಡಿ ಫ್ಯಾನ್ ಕಂಟ್ರೋಲ್ ಅನ್ನು ಸ್ಥಾಪಿಸಿದ್ದೇನೆ, ಏಕೆಂದರೆ 2009 ರ ಐಮ್ಯಾಕ್‌ನಲ್ಲಿ ನಾನು ಹಾರ್ಡ್ ಡ್ರೈವ್ ಅನ್ನು ಎಸ್‌ಎಸ್‌ಡಿ ಬದಲಾಯಿಸಿದಾಗ ಅಭಿಮಾನಿಗಳು ನಿಲ್ಲುವುದಿಲ್ಲ.
ಆಪರೇಟಿಂಗ್ ಸಿಸ್ಟಮ್ SIERRA ಆಗಿದೆ
ನನ್ನಲ್ಲಿರುವ ಸಮಸ್ಯೆ ಏನೆಂದರೆ, ನೀವು ಕಾಮೆಂಟ್ ಮಾಡುವ ಸ್ಮಾರ್ಟ್ ಆಯ್ಕೆಯು ಗೋಚರಿಸುವುದಿಲ್ಲ ಮತ್ತು ಅದು ಕಾರ್ಯಕ್ರಮದ ಫೋಟೋದಲ್ಲಿಯೂ ಕಾಣಿಸಿಕೊಳ್ಳುತ್ತದೆ.
ಅದು ಏಕೆ ಎಂದು ನಿಮಗೆ ತಿಳಿದಿದೆಯೇ?
ಹಲೋ ಫರ್ನಾಂಡೊ, ಅದು ಹೇಗೆ ಹೊರಬರುತ್ತದೆ, ನೀವು ಅದನ್ನು ಅಧಿಕೃತ ಪುಟದಿಂದ ಡೌನ್‌ಲೋಡ್ ಮಾಡಿದ್ದೀರಾ?
ಹಲೋ ಪೆಡ್ರೊ, ನಾನು ಎಸ್‌ಎಸ್‌ಡಿಗಾಗಿ ಎಚ್‌ಡಿಡಿಯನ್ನು ಬದಲಾಯಿಸಿದ್ದೇನೆ, ಮತ್ತು ಅಭಿಮಾನಿಗಳ ಧ್ವನಿ ಗಟ್ಟಿಯಾಗಿ, ನಾನು ಎಸ್‌ಎಸ್‌ಡಿ ಫ್ಯಾನ್ ಕಂಟ್ರೋಲ್ ಅನ್ನು ಸ್ಥಾಪಿಸಿದ್ದೇನೆ, ಆದರೆ ಇದು ಯಾವುದನ್ನೂ ಮಾಡುತ್ತದೆ ಎಂದು ನಾನು ಗಮನಿಸಿಲ್ಲ, ಅಭಿಮಾನಿಗಳು ಎಲ್ಲಾ ಪ್ಯಾಡ್‌ಗಳನ್ನು ಅನುಸರಿಸುತ್ತಾರೆ. ಬದಲಾವಣೆ ನಿಲ್ಲಿಸಿ). ನಾನು 2011 ರ ಬಿಎಂಐ ಹೊಂದಿದ್ದೇನೆ ಮತ್ತು ಓಎಸ್ ಹೈ ಸಿಯೆರಾ, ನಾನು ಏನು ಮಾಡಬಹುದು?, ಧನ್ಯವಾದಗಳು.
ಲೂಯಿಸ್ ಆಲ್ಬರ್ಟೊ ಲೀವಾ ಡಿಜೊ
ಹಾರ್ಡ್ ಡ್ರೈವ್ ಅನ್ನು ನವೀಕರಿಸುವ ಅಗತ್ಯವಿರುವ ನಮ್ಮಲ್ಲಿರುವ ಅತ್ಯುತ್ತಮ ಅಪ್ಲಿಕೇಶನ್. ಇದು ಐಮ್ಯಾಕ್ 27 ″ 2010 ರ ಮಧ್ಯ ಮತ್ತು ಹೈ ಸಿಯೆರಾದಲ್ಲಿ ಪರಿಪೂರ್ಣ (ಸ್ಮಾರ್ಟ್ ಮೋಡ್) ಕಾರ್ಯನಿರ್ವಹಿಸುತ್ತದೆ.
ಪೆಡ್ರೊ ಧನ್ಯವಾದಗಳು
ಲೂಯಿಸ್ ಆಲ್ಬರ್ಟೊ ಲೀವಾ ಅವರಿಗೆ ಪ್ರತ್ಯುತ್ತರಿಸಿ
ಪೆಡ್ರೊ ರೋಡಾಸ್ ತುಂಬಾ ಧನ್ಯವಾದಗಳು, ನಾನು ಎಸ್‌ಎಸ್‌ಡಿ ಫ್ಯಾನ್ ಕಂಟ್ರೋಲ್ ಅನ್ನು ನೇರವಾಗಿ ಲಿಂಕ್‌ನಿಂದ ಡೌನ್‌ಲೋಡ್ ಮಾಡಿದ್ದೇನೆ ಮತ್ತು ಅದು ಯಶಸ್ವಿಯಾಗಿದೆ. ನೀವು ನನ್ನಿಂದ ತೆಗೆದುಕೊಂಡ ತಲೆನೋವು ನಿಮಗೆ ತಿಳಿದಿಲ್ಲ!
`ಗೆಲ್ಲುವ ಸಾಮರ್ಥ್ಯದ ಅಲ್ಪಸಂಖ್ಯಾತರಿಗೆ ಟಿಕೆಟ್' | Prajavani
`ಗೆಲ್ಲುವ ಸಾಮರ್ಥ್ಯದ ಅಲ್ಪಸಂಖ್ಯಾತರಿಗೆ ಟಿಕೆಟ್'
Published: 03 ಡಿಸೆಂಬರ್ 2012, 12:14 IST
Updated: 03 ಡಿಸೆಂಬರ್ 2012, 12:14 IST
ಹುಬ್ಬಳ್ಳಿ: "ಅಲ್ಪಸಂಖ್ಯಾತರು ಗೆಲ್ಲುವ ಅವಕಾಶ ಇರುವ ಕಡೆ ಕೆಜೆಪಿ ವತಿಯಿಂದ ಟಿಕೆಟ್ ನೀಡಲಾಗುವುದು. ಪ್ರಭಾವಿ ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹಳೇಹುಬ್ಬಳ್ಳಿ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ಅಲ್ಪಸಂಖ್ಯಾತರ `ಜನಸ್ಪಂದನ' ಸಮಾವೇಶದಲ್ಲಿ ಮಾತನಾಡಿದ ಅವರು, ಗೆಲ್ಲುವ ಅವಕಾಶ ಇಲ್ಲದ ಕಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಅವರನ್ನು ಬಲಿ ಹಾಕುವುದಿಲ್ಲ. ಬದಲಿಗೆ ಚುನಾವಣೆಯಲ್ಲಿ ಪೈಪೋಟಿ ನೀಡುವ ಸಾಮರ್ಥ್ಯ ಇರುವವರನ್ನು ಗುರ್ತಿಸಿ ಗೆಲ್ಲಿಸಲಾಗುವುದು ಎಂದು ಹೇಳಿದರು.
ಕೆಜೆಪಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯವನ್ನು ಗುಡಿಸಲು ರಹಿತ ಮಾಡಲಾಗುವುದು. ಅಲ್ಪಸಂಖ್ಯಾತ ಧರ್ಮಗುರುಗಳಿಗೆ ಸರ್ಕಾರದಿಂದ ಮಾಸಿಕ ಗೌರವಧನ ನೀಡಲಾಗುವುದು. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು. ಪ್ರತಿ ಕುಟುಂಬಕ್ಕೆ ಮನೆ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದರು.
`ಭಾಗ್ಯಲಕ್ಷ್ಮಿ ಯೋಜನೆ ಆರಂಭಿಸುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳಿಗೆ ನೆರವು ನೀಡಿದ್ದೇನೆ. ತಮ್ಮ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿರುವ ಒಂದು ನಿದರ್ಶನ ತೋರಿಸಿದರೂ ರಾಜಕೀಯ ನಿವೃತ್ತಿ ಪಡೆಯುವೆ' ಎಂದರು.
ಮಾಜಿ ಸಚಿವ ಜಬ್ಬಾರ್‌ಖಾನ್ ಹೊನ್ನಳ್ಳಿ ಮಾತನಾಡಿ, ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯಕ್ಕೆ ಪ್ರಬಲ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ ಅದನ್ನು ಯಡಿಯೂರಪ್ಪ ಪೂರೈಸಲಿದ್ದಾರೆ ಎಂದರು.
`ಮುಸ್ಲಿಂ ಸಮುದಾಯಕ್ಕೆ ಭವಿಷ್ಯದ ನಾಯಕನಾಗಿ ಯಡಿಯೂರಪ್ಪ ಆಶಾಕಿರಣವಾಗಿ ಗೋಚರಿಸಿದ್ದಾರೆ. ಹಿಡಿದ ಕೆಲಸ ಬಿಡದೆ ಮಾಡುವ ಅವರ ಛಲ ಹಾಗೂ ಹಟಮಾರಿ ಧೋರಣೆಯೇ ಮುಸ್ಲಿಮರಿಗೆ ಶ್ರೀರಕ್ಷೆಯಾಗಲಿದೆ. ರಾಜ್ಯದ ನೆಲ-ಜಲ ಹಾಗೂ ಸಂಸ್ಕೃತಿಯನ್ನು ಕಾಯುವ ಜೊತೆಗೆ ಹಿಂದಿನ ಕೋಮುವಾದಿ ಧೋರಣೆ ಕೈಬಿಟ್ಟು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ದುಡಿಯುವ ಷರತ್ತು ಹಾಕಿ ಕೆಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಹೊನ್ನಳ್ಳಿ ಹೇಳಿದರು.
ಕಾಂಗ್ರೆಸ್ ಮತಬ್ಯಾಂಕ್ ಆದ ಕಾರಣಕ್ಕೆ ದೇಶದಲ್ಲಿ ಇಂದು ಶೇ 94ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ. ಸಾಚಾರ್ ಸಮಿತಿಯ ವರದಿಯಂತೆ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಶೇ 10ರಷ್ಟು ಮೀಸಲಾತಿ ಸೇರಿದಂತೆ ಸ್ವ-ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಸಾಲ ಮತ್ತು ಶಿಕ್ಷಣಕ್ಕೆ ಸಹಾಯ ಕಲ್ಪಿಸುವಂತೆ ಮನವಿ ಮಾಡಿದರು.
ಕ್ರೆಡಲ್ ಅಧ್ಯಕ್ಷ ಸಿ.ಎಂ.ನಿಂಬಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶಕ್ಕೆ ಮುನ್ನ ಸಿದ್ಧಾರೂಢ ಮಠ ಹಾಗೂ ಹಳೇಹುಬ್ಬಳ್ಳಿಯ ಫತೇಶಾ ವಲಿ ದರ್ಗಾಗೆ ಯಡಿಯೂರಪ್ಪ ಭೇಟಿ ನೀಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ವೆಂಕಟೇಶ ಮೇಸ್ತ್ರಿ, ಲಕ್ಷ್ಮಣ ಬೀಳಗಿ, ಯಮನೂರ ಜಾಧವ ನೇತೃತ್ವದಲ್ಲಿ ಕೆಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಎಪಿಎಂಸಿ ಸದಸ್ಯ ಶಂಕರಣ್ಣ ಬಿಜವಾಡ ಸಾವಿರಾರು ಬೆಂಬಲಿಗರ ನೇತೃತ್ವದಲ್ಲಿ ಸಮಾವೇಶಕ್ಕೆ ಮೆರವಣಿಗೆಯ ಮೂಲಕ ಆಗಮಿಸಿ ಗಮನ ಸೆಳೆದರು.
ಬಿಎಸ್‌ವೈಗೆ ಹುಲಿ-ಸಿಂಹ ಹೋಲಿಕೆ...
`ಯಡಿಯೂರಪ್ಪ ಅವರಿಗೆ ಒಬ್ಬ ಜನಾನುರಾಗಿ ನಾಯಕನಿಗೆ ಇರಬೇಕಾದ ಎಲ್ಲಾ ಗುಣಗಳು ಇದೆ' ಎಂದು ಹೊಗಳಿದ ಜಬ್ಬಾರ್‌ಖಾನ್ ಹೊನ್ನಳ್ಳಿ, ಮಾಜಿ ಮುಖ್ಯಮಂತ್ರಿಯನ್ನು ಹುಲಿಗೆ ಹೋಲಿಸಿದರು. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಖುಸ್ರೋ ಖುರೇಶಿ ಮಾತನಾಡಿ ಯಡಿಯೂರಪ್ಪ ಅವರನ್ನು `ಸಿಂಹ' ಎಂದು ಬಣ್ಣಿಸಿದರು.
ಈ ಬಾರಿ ಚುನಾವಣೆಯಲ್ಲಿ ಕೆಜೆಪಿ ಅಧಿಕಾರಕ್ಕೆ ಬರಲಿದ್ದು, ಜಬ್ಬಾರ್‌ಖಾನ್ ಹೊನ್ನಳ್ಳಿ ಅವರೊಂದಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕಾರ ನಡೆಸುವುದಾಗಿ ಯಡಿಯೂರಪ್ಪ ಘೋಷಿಸಿದರು. ಹಾವೇರಿ ಹತ್ತಿರದಲ್ಲಿಯೇ ಇದ್ದು, ಡಿಸೆಂಬರ್ 9ರ ಸಮಾವೇಶಕ್ಕೆ ಆಗಮಿಸುವಂತೆ ನೆರೆದವರನ್ನು ಸ್ವಾಗತಿಸಿದರು.
10 ಸಾವಿರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಿಗದಿತ ವೇಳೆಗಿಂತ ಎರಡು ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತು. ಕೆಜೆಪಿ ಸೇರ್ಪಡೆಯಾದ ಮುಖಂಡರನ್ನು ಯಡಿಯೂರಪ್ಪ ಹಾರ ಹಾಕಿ ಸ್ವಾಗತಿಸಿದರು.
ಸಮಾವೇಶದಲ್ಲಿ ಎಂದಿನಂತೆ ಯಡಿಯೂರಪ್ಪ ಬಿಜೆಪಿ ಮುಖಂಡರ ಬಗ್ಗೆ ಹರಿಹಾಯಲಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು. ಪಕ್ಷದವರೇ ತಮ್ಮನ್ನು ಷಡ್ಯಂತ್ರ ಮಾಡಿ ಕೆಳಗಿಳಿಸಿದರು ಎಂದು ಹೇಳುತ್ತಾ ಒಂದು ಹಂತದಲ್ಲಿ ಭಾವೊದ್ವೇಗಕ್ಕೆ ಒಳಗಾದರು.
ಬೈಕ್ ರ‌್ಯಾಲಿ, ಶಂಕರಣ್ಣ ಬಿಜವಾಡ ಬೆಂಬಲಿಗರ ಮೆರವಣಿಗೆ ಹಾಗೂ ಯಡಿಯೂರಪ್ಪ ಆಗಮಿಸಿದ ವೇಳೆ ಇಂಡಿ ಪಂಪ್ ರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಯಿತು. ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಯಡಿಯೂರಪ್ಪ ಸೇರಿದಂತೆ ಕೆಜೆಪಿ ನಾಯಕರನ್ನು ಪಟಾಕಿ ಸಿಡಿಸಿ ವೇದಿಕೆಗೆ ಸ್ವಾಗತಿಸಲಾಯಿತು.
ಹುಬ್ಬಳ್ಳಿಯಲ್ಲಿ ಕೆಜೆಪಿ ಸೇರಿದ ಪ್ರಮುಖರು...
ಬಿಜೆಪಿ ಮಹಾನಗರ ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ ಲಕ್ಷ್ಮಣ ಬೀಳಗಿ, ಪಾಲಿಕೆ ಸದಸ್ಯರಾದ ವೆಂಕಟೇಶ ಮೇಸ್ತ್ರಿ, ರಾಜಶ್ರೀ ಜಡಿ, ಪುಷ್ಪಾ ಶಿವನಗೌಡ ಹೊಸಮನಿ, ಯಮನೂರ ಜಾಧವ, ಬಿಜೆಪಿ ಮುಖಂಡರಾದ ಶಂಕರಣ್ಣ ಬಿಜವಾಡ, ಚಂದ್ರಶೇಖರ ಗೋಕಾಕ, ಉದ್ಯಮಿ ರಮೇಶ್ ಬಾಫ್ನಾ, ಆರೀಫ್ ಮುಜಾವರ್, ಶಿವಾನಂದ, ಶಿವನಗೌಡ ಹೊಸಮನಿ.
'ನಿವೃತ್ತಿ' ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ 'ಮಾಹಿ' | Age Is Just A Number, Fitness Matters More, Says MS Dhoni After Clinching IPL Title | Kannadaprabha.com
Thursday, January 17, 2019 2:40 PM IST
'ನಿವೃತ್ತಿ' ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ 'ಮಾಹಿ'
ಫಿಟ್ನೆಸ್ ಪಾಠ ಮಾಡಿದ 'ಅಂಕಲ್ಸ್ ಟೀಂ' ನಾಯಕ, ನಿವೃತ್ತಿ ಟೀಕೆಗೆ ಪರೋಕ್ಷ ತಿರುಗೇಟು ನೀಡಿದ ಕೂಲ್ ಕ್ಯಾಪ್ಟನ್
Published: 29 May 2018 12:30 AM IST | Updated: 29 May 2018 12:31 AM IST
ಚೆನ್ನೈ ತಂಡದ ನಾಯಕ ಧೋನಿ
ಮುಂಬೈ: ವಯಸ್ಸು ಕೇವಲ ಸಂಖ್ಯೆಯಷ್ಟೇ, ಉತ್ತಮ ಕ್ರಿಕೆಟ್ ಆಡಲು ವಯಸ್ಸಲ್ಲ, ಫಿಟ್ನೆಸ್ ಮತ್ತು ತರಬೇತಿ ಮುಖ್ಯ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.
ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2018ರ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು. ಆ ಮೂಲಕ ಚೆನ್ನೈ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿತು. ಅಂತೆಯೇ ಚೆನ್ನೈ ತಂಡಕ್ಕೆ ಇದು ಏಳನೇ ಐಪಿಎಲ್ ಫೈನಲ್ ಪಂದ್ಯವಾಗಿತ್ತು.
ಇನ್ನು ಪ್ರಶಸ್ತಿ ಜಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಧೋನಿ, ತಮ್ಮ ನಿವೃತ್ತಿ ವಿಚಾರದ ಕುರಿತು ಮಾತನಾಡುತ್ತಿರುವವರಿಗೆ ಭರ್ಜರಿ ತಿರುಗೇಟು ನೀಡಿದ್ದಾರೆ. ಐಪಿಎಲ್ ಟ್ರೋಫಿ ವಿಜಯದ ಬೆನ್ನಲ್ಲೇ ಮಾತನಾಡಿದ ಧೋನಿ, ನಾವು ವಯಸ್ಸಿನ ಕುರಿತು ಮಾತನಾಡುತ್ತೇವೆ. ಆದರೆ ಕ್ರಿಕೆಟ್ ನಲ್ಲಿ ವಯಸ್ಸಿಗಿಂತ ಫಿಟ್ನೆಸ್ ಮುಖ್ಯ. ಅಂಬಾಟಿ ರಾಯುಡು ತಮ್ಮ 33ನೇ ವಯಸ್ಸಿನಲ್ಲೂ ಎಳೆ ಹುಡುಗನಂತೆ ಬ್ಯಾಟ್ ಬೀಸುತ್ತಾರೆ. ಹೀಗಾಗಿ ವಯಸ್ಸು ಕೇವಲ ಸಂಖ್ಯೆಯಷ್ಟೇ. ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಬೇಡ ಎಂದು ಹೇಳಿದ್ದಾರೆ.
ಅಂತೆಯೇ ಕ್ರಿಕೆಟ್ ನಲ್ಲಿ ನೀವು 19-20 ವರ್ಷದವರೇ, ಅಥವಾ 30 ವರ್ಷ ದಾಟಿದವರೇ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ನೀವು ಎಷ್ಟು ಫಿಟ್ ಆಗಿದ್ದೀರಾ, ಉತ್ತಮ ಫಾರ್ಮ್ ನಲ್ಲಿದ್ದೀರಾ ಅಥವಾ ಇಲ್ಲವೇ ಎಂಬುದೇ ಮುಖ್ಯವಾಗುತ್ತದೆ. ಆನ್ ಫೀಲ್ಡ್ ನಲ್ಲಿ ಆಟಗಾರನ ಉತ್ತಮ ಪ್ರದರ್ಶನ ಗಣನೆಗೆ ಬರುತ್ತದೆಯೇ ಹೊರತು ಆತನ ವಯಸ್ಸಲ್ಲ. ವಾಟ್ಸನ್ ಜಿಗಿದು ಚೆಂಡು ಹಿಡಿಯಲೆತ್ನಿಸಿದಾಗ ಆತನಿಗೆ ಗಾಯವಾಗುತ್ತದೆ ಎಂದಾದರೆ ಜಿಗಿಯುವುದು ಬೇಡ ಎಂದು ನಾವು ಹೇಳಲೇಬೇಕು ಎಂದು ಧೋನಿ ಹೇಳಿದ್ದಾರೆ.
ಇನ್ನು ಫೈನಲ್ ಪಂದ್ಯದ ವಿಜಯದ ಕುರಿತು ಮಾತನಾಡಿ ಧೋನಿ, ಫೈನಲ್ ಪಂದ್ಯದ ಗೆಲುವು ನಮಗೆ ಅಷ್ಟು ಸುಲಭವಾಗಿರಲಿಲ್ಲ. ರಷೀದ್ ಖಾನ್ ರಷ್ಟೇ ಭುವನೇಶ್ವರ್ ಕುಮಾರ್ ಕೂಡ ಅಪಾಯಕಾರಿ ಬೌಲರ್. ಹೀಗಾಗಿ ಇಬರನ್ನೂ ಸಂಭಾಳಿಸಿಕೊಂಡು ರನ್ ವೇಗ ನಿಯಂತ್ರಿಸಿಕೊಂಡು ಆಡುವುದು ಸವಾಲಿನ ಕೆಲಸವಾಗಿತ್ತು. ನಿಜಕ್ಕೂ ಈ ಪಂದ್ಯದ ಗೆಲುವಿನ ಶ್ರೇಯ ಬ್ಯಾಟಿಂಗ್ ವಿಭಾಗಕ್ಕೆ ಪ್ರಮುಖವಾಗಿ ಶೇನ್ ವಾಟ್ಸನ್ ಗೆ ಸಲ್ಲಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಹೇಳಿದ್ದಾರೆ.
ಯಾವುದೇ ಆಟಗಾರನಿಗೂ ತನ್ನ ಪ್ರತಿಯೊಂದು ಗೆಲುವೂ ವಿಶೇಷವಾಗಿರುತ್ತದೆ. ಸಾಕಷ್ಟು ಜನ ನಂಬರ್, ಅಂಕಿ ಅಂಶಗಳ ಕುರಿತು ಮಾತನಾಡುತ್ತಿದ್ದಾರೆ. ಇಂದು 27 ಗೆಲುವಾಗಿದ್ದು, ನನ್ನ ಜೆರ್ಸಿ ನಂಬರ್ 7 ಮತ್ತು ಇದು ನಮ್ಮ ಏಳನೇ ಫೈನಲ್ ಪಂದ್ಯ ಎಂದು ಧೋನಿ ಮಾರ್ಮಿಕವಾಗಿ ಹೇಳಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ತಂಡಗಳ ಪೈಕಿ ಚೆನ್ನೈ ತಂಡವನ್ನು ಅಂಕಲ್ಸ್ ತಂಡವೆಂದು ಟೀಕಿಸಲಾಗುತ್ತಿತ್ತು. ಕಾರಣ ಚೆನ್ನೈ ತಂಡದಲ್ಲಿದ್ದ ಬಹುತೇಕ ಆಟಗಾರರು 30 ದಾಟಿದವರಾಗಿದ್ದು, ಈ ಪೈಕಿ ಬಹುತೇಕರಿಗೆ ಮದುವೆ ಕೂಡ ಆಗಿದೆ. ಇದೇ ಕಾರಣಕ್ಕೆ ಚೆನ್ನೈ ತಂಡವನ್ನು ಆಂಕಲ್ಸ್ ಟೀಂ ಎಂದು ಹೇಳಲಾಗುತ್ತಿತ್ತು.
Topics : Mumbai, Cricket Offbeat, IPL 2018, MS Dhoni, Record, ಮುಂಬೈ, ಕ್ರಿಕೆಟ್ ಸ್ವಾರಸ್ಯ, ಐಪಿಎಲ್ 2018, ಎಂಎಸ್ ಧೋನಿ, ದಾಖಲೆ
ಅತ್ತೆ- ಸೊಸೆ ಹೊಡೆತಕ್ಕೆ ತತ್ತರಿಸಿದ ದರೋಡೆಕೋರರು | Kannada Dunia | Kannada News | Karnataka News | India News
HomeLive NewsIndiaಅತ್ತೆ- ಸೊಸೆ ಹೊಡೆತಕ್ಕೆ ತತ್ತರಿಸಿದ ದರೋಡೆಕೋರರು
ಅತ್ತೆ- ಸೊಸೆ ಹೊಡೆತಕ್ಕೆ ತತ್ತರಿಸಿದ ದರೋಡೆಕೋರರು
21-02-2016 1:43PM IST / No Comments / Posted In: Latest News, India
ಕೋಲ್ಕತ್ತಾ: ಕೆಲ ದಿನಗಳ ಹಿಂದೆ ಸೊಸೆಯೊಬ್ಬಳು ತನ್ನ ಅಸಹಾಯಕ ಅತ್ತೆಗೆ ಕ್ರೂರವಾಗಿ ಹಿಂಸೆ ನೀಡುತ್ತಿರುವ ವಿಡಿಯೋವನ್ನು 'ಕನ್ನಡ ದುನಿಯಾ' ದಲ್ಲಿ ನೋಡಿದ್ದೀರಿ. ಆದರೆ ಈ ಪ್ರಕರಣದಲ್ಲಿ ದರೋಡೆಕೋರರು ತನ್ನ ಅತ್ತೆಯನ್ನು ಹತ್ಯೆ ಮಾಡಲು ಮುಂದಾದ ವೇಳೆ ಸೊಸೆಯೊಬ್ಬಳು ವೀರಾವೇಶದಿಂದ ಕಾದಾಡಿ ಅವರನ್ನು ಬಚಾವ್ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೋಲ್ಕತ್ತಾದ ಉದ್ಯಮಿ ಸಜ್ಜನ್ ಅಗರ್ವಾಲ್ ಎಂಬವರ ಮನೆಗೆ ಶುಕ್ರವಾರ ಬೆಳಿಗ್ಗೆ ಶಸ್ತ್ರಸಜ್ಜಿತ ದರೋಡೆಕೋರರು ಬಂದಿದ್ದಾರೆ. ಬೆಲಿಯಾಘಾಟ್ ಬಳಿಯ ಈ ಫ್ಲಾಟ್ ನಲ್ಲಿ ಆಗ ಸಜ್ಜನ್ ಅಗರ್ವಾಲ್ ಅವರ ತಾಯಿ 69 ವರ್ಷದ ಸಂಧ್ಯಾ ಅಗರ್ವಾಲ್ ಹಾಗೂ ಸಜ್ಜನ್ ಅವರ ಪತ್ನಿ 34 ವರ್ಷದ ಶಾಂತಿ ಅಗರ್ವಾಲ್ ಮಾತ್ರ ಇದ್ದರು.
ದರೋಡೆಕೋರರು ಮೊದಲಿಗೆ ಬೆಲ್ ಮಾಡಿದ್ದು, ಕೆಲಸದವರು ಬಂದಿದ್ದಾರೆಂದು ಭಾವಿಸಿದ ಸಂಧ್ಯಾ ಅಗರ್ವಾಲ್ ಬಾಗಿಲು ತೆರೆದಿದ್ದಾರೆ. ಏಕಾಏಕಿ ಒಳ ನುಗ್ಗಿದ ನಾಲ್ವರ ತಂಡ ಸಂಧ್ಯಾ ಅಗರ್ವಾಲ್ ಅವರನ್ನು ತಳ್ಳಿ ಬೀಳಿಸಿದ್ದಲ್ಲದೇ ಕತ್ತು ಹಿಸುಕಲು ಮುಂದಾಗಿದೆ. ಅತ್ತೆ ಮೇಲೆ ದರೋಡೆಕೋರರ ತಂಡ ದಾಳಿ ಮಾಡಿದ್ದನ್ನು ನೋಡುತ್ತಲೇ ಶಾಂತಿ ಅಗರ್ವಾಲ್ ಅವರುಗಳ ಮೇಲೆ ಮುಗಿ ಬಿದ್ದಿದ್ದಾರೆ.
ಇದನ್ನು ಕಂಡ ಸಂಧ್ಯಾ ಅಗರ್ವಾಲ್ ಕೂಡಾ ಪ್ರತಿರೋಧ ಒಡ್ಡಿದ್ದಾರೆ. ಜೊತೆಗೆ ಸಹಾಯಕ್ಕಾಗಿ ಇಬ್ಬರೂ ಜೋರಾಗಿ ಕೂಗಲಾರಂಭಿಸಿದ್ದಾರೆ. ಈ ಮನೆಯಲ್ಲಿ ಹಗಲು ಹೊತ್ತು ಇಬ್ಬರೇ ಇರುತ್ತಾರೆಂಬುದನ್ನು ಅರಿತೇ ದರೋಡೆಗೆ ಬಂದಿದ್ದ ತಂಡ, ಮಹಿಳೆಯರ ಹೊಡೆತಕ್ಕೆ ತತ್ತರಿಸಿದೆ. ಜೊತೆಗೆ ಮಹಿಳೆಯರ ಕಿರುಚಾಟ ಕೇಳಿ ಅಪಾರ್ಟ್ಮೆಂಟಿನ ಇತರೆ ನಿವಾಸಿಗಳು ಆಗಮಿಸುತ್ತಿರುವುದನ್ನು ಕಂಡು ತಪ್ಪಿಸಿಕೊಂಡು ಹೋಗಲು ಮುಂದಾಗಿದೆ. ಈ ಪ್ರಯತ್ನದಲ್ಲಿ ಇಬ್ಬರು ಸಫಲರಾಗಿದ್ದರೆ ಮತ್ತಿಬ್ಬರು ಸಿಕ್ಕಿ ಬಿದ್ದು ಇದೀಗ ಕಂಬಿ ಎಣಿಸುತ್ತಿದ್ದಾರೆ. ಮಹಿಳೆಯರ ಸಮಯೋಚಿತ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕಾಡಾನೆ ದಾಳಿಗೆ ಮನೆ ನಾಶ
Today : February 28, 2021
CI ¦ Jan 14, 2021 10:58:54 AM (IST)
ಮೈಸೂರು: ಇಲ್ಲಿಗೆ ಸಮೀಪದ ಗುಂಡ್ಲು ಪೇಟೆ ತಾಲ್ಲೂಕಿನ ಬೇಗೂರು ಹೊಸಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಹೊಸಪುರ ಗ್ರಾಮದ ಮಹದೇವಚಾರಿ ಎಂಬವರ ಜಮೀನಿನಲ್ಲಿದ್ದ ಮನೆಯನ್ನು ತಿವಿದು ನಾಶ ಪಡಿಸಿದ ಘಟನೆ ನಡೆದಿದೆ.
ಸಮೀಪದ ಓಂಕಾರ ಅರಣ್ಯ ವಲಯದಿಂದ ಆಹಾರ ಅರಸಿ ಬಂದಿರುವ ಆನೆಗಳು 4 ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ಕಟಾವು ಮಾಡಿ ಜಮೀನಿನ ಮನೆಯಲ್ಲೇ ಸಂಗ್ರಹಿಸಿದ್ದರು. ಕಾಡಾನೆಗಳು ಸಾಮಾನ್ಯವಾಗಿ ಮನೆಯನ್ನು ನಾಶ ಪಡಿಸುವುದಿಲ್ಲವಾದರೂ ಮನೆಯಲ್ಲಿದ್ದ ರಾಗಿ ಬೆಳೆಯನ್ನು ತಿನ್ನಲು ನಾಶ ಪಡಿಸಿವೆ ಎನ್ನಲಾಗಿದೆ.
ಸೋಮವಾರ ರಾತ್ರಿ ಏಕಾಏಕಿ ಜಮೀನಿಗೆ ಲಗ್ಗೆ ಇಟ್ಟ ಆನೆಗಳು ರಾಗಿ ತಿಂದು ನಾಶಪಡಿಸಿದ್ದಲ್ಲದೆ, ಮನೆಯನ್ನೂ ತಿವಿದು ಧ್ವಂಸಗೊಳಿಸಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಆನೆ ಕಂದಕದಲ್ಲಿ ತುಂಬಿರುವ ಹೂಳನ್ನು ತೆಗೆಸಿದರೆ ಆನೆಗಳು ನಾಡಿನತ್ತ ಬರುವುದಿಲ್ಲ. ಇದೇ ರೀತಿ ಮುಂದಿನ ದಿನಗಳಲ್ಲಿ ಆನೆಗಳ ಹಾವಳಿ ಹೆಚ್ಚಾದರೆ ಅರಣ್ಯ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು.
ಈ ಕುರಿತು ಮಾತನಾಡಿದ ಓಂಕಾರ್‌ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್‌ ʻರಾಗಿ ಹುಲ್ಲಿನ ವಾಸನೆಗೆ ಆನೆಗಳು ಜಮೀನಿನ ಕಡೆಗೆ ಲಗ್ಗೆ ಇಡುತ್ತಿವೆ. ಈಗಾಗಲೇ ಘಟನೆ ಸ್ಥಳಕ್ಕೆ ಸಿಬ್ಬಂದಿ ಜೊತೆಗೂಡಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅನೆ ದಾಳಿಯಿಂದ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಹುರುಳಿ ಕೂಯ್ಲಿನ ಸಮಯದಲ್ಲಿ ಆನೆಗಳ ಹಿಂಡು ಹೆಚ್ಚಾಗಿ ಬರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ನ.14ರಂದು ಶಾರದಾ ವಿಲಾಸನಲ್ಲಿ 'ಭವಿಷ್ಯದ ಕೌಶಲ್ಯ ವೇದಿಕೆ' ಗೆ ಚಾಲನೆ – ಮೈಸೂರು ಟುಡೆ
Home/ ಪ್ರಮುಖ ಸುದ್ದಿ/ನ.14ರಂದು ಶಾರದಾ ವಿಲಾಸನಲ್ಲಿ 'ಭವಿಷ್ಯದ ಕೌಶಲ್ಯ ವೇದಿಕೆ' ಗೆ ಚಾಲನೆ
ಮೈಸೂರು,ನ.12 : ನಗರದ ಶಾರದಾ ವಿಲಾಸ ವಿದ್ಯಾಸಂಸ್ಥೆ ವತಿಯಿಂದ ಉದ್ಯೋಗಾವಕಾಶಾಧಾರಿತ ವಿವಿಧ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸುವ ಉದ್ದೇಶದ ಭವಿಷ್ಯದ ಕೌಶಲ್ಯಗಳ ವೇದಿಕೆ ಸ್ಥಾಪಿಸಿದ್ದು, ಅದರ ಉದ್ಘಾಟನೆ ನ. 14 ರಂದು ವಿದ್ಯಾಸಂಸ್ಥೆಯ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10ಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್ ಉದ್ಘಾಟಿಸುವರು, ಮಲಹರ ರಾಜು ಪಿನ್ನೆಳ್ಳಿ ಪ್ರಾಸ್ತಾವಿಕ ಭಾಷಣ ಮಾಡುವರು, ತಾವು ಅಧ್ಯಕ್ಷತೆ ವಹಿಸಲಿದ್ದು, ಎಚ್.ಕೆ. ಶ್ರೀನಾಥ್, ಹರ್ಷ ಕಿಕ್ಕೇರಿ, ಅರ್ಜು ಖನ್ನ, ಶ್ರೀದೇವಿ ಸಿರಾ, ದಿನೇಶ್‌ಕುಮಾರ್ ಪಾಣಿಗ್ರಾಹಿ ಅತಿಥಿಗಳಾಗಿರುವರು.
ಈ ವೇದಿಕೆ ಭವಿಷ್ಯ ಉದ್ಯೋಗಾಧಾರಿತ ವಿಷಯಗಳಾದ ಸೈಬರ್ ಭದ್ರತೆ, 3.-ಡಿ ಪ್ರಿಂಟಿಂಗ್, ಬ್ಲಾಕ್ ಚೈನ್, ವರ್ಚುಯಲ್ ರಿಯಾಲಿಟಿ, ಮೊಬೈಲ್ ಟೆಕ್ನಾಲಜಿ, ಬಿಗ್ ಡಾಟಾ ಅನಾಲಿಟಿಕ್ಸ್ ಮೊದಲಾದವನ್ನು ಗಮನದಲ್ಲಿರಿಸಿಕೊಂಡು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಲಿದೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು, ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಅನುಕೂಲಕರ ವೇಳೆಗಳಲ್ಲಿ, ಅತಿ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡಿ ಪ್ರಮಾಣಪತ್ರ ನೀಡಲಾಗುವುದು. ಈ ರೀತಿಯ ತರಬೇತಿ ಪಡೆದವರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಹೆಚ್ಚಾಗಿರಲಿದ್ದು, ಈ ರೀತಿಯ ವೇದಿಕೆ ರಾಜ್ಯದಲ್ಲಿಯೇ ಮೊದಲನೆಯದಾಗಿದೆ ಎಂದು ಮಾಹಿತಿ ನೀಡಿದರು.
ಪ್ರೊ. ಜಗದೀಶ್‌ಕೃಷ್ಣ, ರಾಜೇಂದ್ರಪ್ರಸಾದ್, ಎಚ್.ಕೆ. ಶ್ರೀನಾಥ್, ಶ್ರೀನಿವಾಸ ರಾಘವನ್, ಡಾ. ಸತ್ಯನಾರಾಯಣ ಹಾಜರಿದ್ದರು. (ವರದಿ : ಕೆ.ಎಂ.ಆರ್)
20 ಲಕ್ಷ ಮೌಲ್ಯದ ನಗ ಲೂಟಿ | Prajavani
20 ಲಕ್ಷ ಮೌಲ್ಯದ ನಗ ಲೂಟಿ
ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗೌಡಗೆರೆ ಗ್ರಾಮದ ತೋಟದ ಮನೆಯ ಬಾಗಿಲನ್ನು ಕಬ್ಬಿಣದ ಸಲಾಕೆಯಿದ ಮೀಟಿ ಒಳ ನುಗ್ಗಿದ 8 ಮಂದಿ ತಂಡ ಮನೆಯ ಮಾಲೀಕರನ್ನು ಥಳಿಸಿ 20 ಲಕ್ಷ ರೂಪಾಯಿ ಮೌಲ್ಯದ ನಗ ಹಾಗೂ ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಗ್ರಾಮದ ಕೇಶವ, ಲತಾ ದಂಪತಿ ಮನೆಯಲ್ಲಿ ಈ ಡಕಾಯಿತಿ ನಡೆದಿದೆ. ಮುಂಜಾನೆ 2.30ರಲ್ಲಿ ಮೇಲಂತಸ್ತಿನ ಮನೆಯ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳನುಗ್ಗಿರುವ ಕಳ್ಳರು ಮಹಡಿಯಿಂದ ನೆಲ ಅಂತಸ್ತಿನ ಮನೆಗೆ ಬಂದರು. ಭಾನುವಾರ ಕೊಬ್ಬರಿ ಸುಲಿಯಲು ಬಂದು ಅಲ್ಲೆ ಮಲಗಿದ್ದ ರವಿ ಎಂಬಾತನನ್ನು ಥಳಿಸಿ ಶೌಚಾಲಯದ ಕೊಠಡಿಯಲ್ಲಿ ಕೂಡಿ ಹಾಕಿದರು.
ನಂತರ ಮನೆಯ ಕೆಲಸದ ಹುಡುಗಿ ರುಚಿತಳ ಬಾಯಿ ಮುಚ್ಚಲು ಯತ್ನಿಸಿದರು. ಅಷ್ಟರಲ್ಲಿ ಆಕೆ ಜೋರಾಗಿ ಕೂಗಿಕೊಂಡಳು. ಪಕ್ಕದ ಕೊಠಡಿಯಲ್ಲಿ ಮಲಗಿದ್ದ ದಂಪತಿ, ಕೆಲಸದಾಕೆಯ ಚೀರಾಟ ಕೇಳಿ ಬಾಗಿಲು ತೆರೆದು ನೋಡುವಷ್ಟರಲ್ಲಿ ಡಕಾಯಿತರು ಲತಾ ಅವರನ್ನು ಕೊಠಡಿಗೆ ಎಳೆದೊಯ್ದರು.
ಪತಿ ಕೇಶವ, ರಕ್ಷಣೆಗಾಗಿ ಗೋಡೆಯಲ್ಲಿದ್ದ ಬಂದೂಕನ್ನು ಎತ್ತಿಕೊಳ್ಳಲು ಮುಂದಾದಾಗ ಅವರ ಮೇಲೆ ಕಳ್ಳರು ಹಲ್ಲೆ ಮಾಡಿದರು. ಅವರ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು ಶೌಚಾಲಯಕ್ಕೆ ಎಸೆದರು. ಲತಾ ಅವರನ್ನು ಕೊಲ್ಲುವುದಾಗಿ ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿ, ಮಾಂಗಲ್ಯ ಸರ ಕಿತ್ತುಕೊಂಡರು. ಪ್ರತಿರೋಧ ವ್ಯಕ್ತಪಡಿಸುವಾಗ ಎಡಗೈಗೆ ಚಾಕುವಿನಿಂದ ತಿವಿದು ಗಾಯಗೊಳಿಸಿದ್ದಾರೆ.
ಚಾಕು ತೋರಿಸಿ ಚಿನ್ನ ಮತ್ತು ಹಣವನ್ನು ಪಡೆದುಕೊಂಡರು. ಎಂಟು ಮಂದಿಯಲ್ಲಿ ಇಬ್ಬರು ಹೊರಗೆ ಇದ್ದರೆ, ಆರು ಮಂದಿ ಮನೆ ಒಳಗಿದ್ದರು. ಒಂದಿಬ್ಬರು ಕನ್ನಡ ಮಾತನಾಡುತ್ತಿದ್ದುದು ಬಿಟ್ಟರೆ ಉಳಿದವರು ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದರು. ಎಲ್ಲರೂ ಮುಸುಕು ಧರಿಸಿದ್ದರು. ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಿದ್ದರು.
ಮೂವರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ನಂತರ ಹಣ ಮತ್ತು ಒಡವೆಗಾಗಿ ನಾಲ್ಕು ಕೊಠಡಿಯಲ್ಲಿ ತಡಕಾಡಿದ ಯುವಕರು ಬೀರುಗಳನ್ನು ಸಲಾಕೆಯಿಂದ ಒಡೆದು ಅದರಲ್ಲಿದ್ದ 10 ಲಕ್ಷ ರೂಪಾಯಿ ನಗದು, ಮತ್ತೊಂದು ಬೀರುವಿನಲ್ಲಿದ್ದ 352 ಗ್ರಾಂ ಚಿನ್ನದ ಒಡವೆ, ಒಂದೂಕಾಲು ಕೆ.ಜಿ. ಬೆಳ್ಳಿಯ ಆಭರಣ ದೋಚಿಕೊಂಡು ಹೋಗಿದ್ದಾರೆ. ಮನೆಯವರನ್ನು ಮತ್ತೊಂದು ಕೊಠಡಿಯಲ್ಲಿ ಕೂಡಿ ಬೀಗ ಹಾಕಿ, ಬಂದೂಕನ್ನು ಮನೆಯ ಹೊರಗೆ ಇಟ್ಟು ಪರಾರಿಯಾಗಿದ್ದಾರೆ.
ಬೆಳಿಗ್ಗೆ ಮನೆ ಬಳಿ ಬಂದ ಹಾಲು ಕರೆಯುವ ಯುವಕನನ್ನು ಕಿಟಿಕಿಯಿಂದ ಕೂಗಿ ಕರೆದಾಗ ಆತ ಬಂದು ಬೀಗ ತೆರೆದಿದ್ದಾನೆ. ಸ್ಥಳಕ್ಕೆ ಎಎಸ್ಪಿ ವಿ.ಬಿ. ಕಿತ್ತಲಿ, ಡಿವೈಎಸ್‌ಪಿ ಕೆ. ಪರಶುರಾಮ ಭೇಟಿ ನೀಡಿದ್ದರು. ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಕೊರೋನಾ ಶಂಕೆ: ಪ್ರಸವಕ್ಕೆ ಬಂದಿದ್ದ ತುಂಬು ಗರ್ಭಿಣಿ ಮಹಿಳೆಯನ್ನು ಹೊರಗೆ ತಳ್ಳಿದ ನರ್ಸಿಂಗ್ ಹೋಂ!- Kannada Prabha
Published: 07th July 2020 12:13 PM | Last Updated: 07th July 2020 12:13 PM | A+A A-
ಬೆಂಗಳೂರು: ಕೊರೋನಾ ವೈರಸ್ ಇದೆ ಎಂದು ಶಂಕಿಸಿ ಪ್ರಸವಕ್ಕೆ ಬಂದಿದ್ದ ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಸರ್ಸಿಂಗ್ ಹೋಂನಿಂದ ಹೊರಗೆ ಹಾಕಿರುವ ಘಟನೆಯಂದೂ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಗರ್ಭಿಣಿಯಾದ ಆರಂಭದಿಂದಲೂ ಸಿಕ್ಕಿಂ ಮೂಲದ 34 ವರ್ಷದ ಮಹಿಳೆ ನಗರದ ವಿವೇಕನಗರದ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಮಹಿಳೆ ಕೊರೋನಾ ಪರೀಕ್ಷೆಗೊಳಗಾಗಿದ್ದು, ಪರೀಕ್ಷೆಯ ವರದಿ ಇನ್ನು ಬಂದಿಲ್ಲ.