text
stringlengths 0
61.5k
|
---|
ಭಟ್ಕಳ ಉಗ್ರ ರಿಯಾಜ್‌ಗೆ ಪಾಕ್‌ನಿಂದ ವಿಐಪಿ ಭದ್ರತೆ! | Ahead of crucial FATF meet Pakistan continues to treat 21 dreaded terrorists as VIPs pod |
ಭಟ್ಕಳ ಉಗ್ರ ರಿಯಾಜ್‌ಗೆ ಪಾಕ್‌ನಿಂದ ವಿಐಪಿ ಭದ್ರತೆ! |
Bangalore, First Published 21, Sep 2020, 7:36 AM |
ಭಟ್ಕಳ ಉಗ್ರ ರಿಯಾಜ್‌ಗೆ ಪಾಕ್‌ನಿಂದ ವಿಐಪಿ ಭದ್ರತೆ!| 21 ಉಗ್ರರಿಗೆ ರಾಜಾತಿಥ್ಯ ನೀಡುತ್ತಿರುವ ಪಾಕ್ |
ಇಸ್ಲಾಮಾಬಾದ್(ಸೆ.21): ಉಗ್ರ ನಿಗ್ರಹ ವಿಷಯದಲ್ಲಿ ಪದೇ ಪದೇ ಗೋಸುಂಬೆತನ ಪ್ರದರ್ಶಿಸುತ್ತಿರುವ ಪಾಕಿಸ್ತಾನ 1993ರ ಮುಂಬೈ ಸ್ಫೋಟ ಸಂಚುಕೋರ ದಾವೂದ್ ಇಬ್ರಾಹಿಂ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಮುಖ್ಯಸ್ಥನಾಗಿರುವ ಕರ್ನಾಟಕದ ಭಟ್ಕಳ ಮೂಲದ ರಿಯಾಜ್ ಭಟ್ಕಳ್ ಸೇರಿದಂತೆ 21 ಕುಖ್ಯಾತ ಉಗ್ರರಿಗೆ ರಾಜಾತಿಥ್ಯ ಮುಂದುವರೆಸಿರುವ ವಿಷಯ ಬೆಳಕಿಗೆ ಬಂದಿದೆ. |
ಪಾಕ್ ಗಡೀಲಿ 300 ಕೋಟಿ ರೂ. ಡ್ರಗ್ಸ್ ಎಸೆದು ಪರಾರಿ! |
ಈ ಉಗ್ರರಿಗೆ ವಿಐಪಿಗಳಿಗೆ ನೀಡುವ ಭದ್ರತೆ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಪಾಕಿಸ್ತಾನದಿಂದ ಈ ರೀತಿ ರಾಜಾತಿಥ್ಯ ಪಡೆಯುತ್ತಿರುವವರ ಪಟ್ಟಿಯನ್ನು ಅದು ಪ್ರಕಟಿಸಿದೆ. |
ಪ್ಯಾರಿಸ್ ಮೂಲದ 'ಹಣಕಾಸು ಕಾರ್ಯಪಡೆ'ಯ ವಾರ್ಷಿಕ ಸಭೆ ಸದ್ಯದಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ಈ ವರದಿ ಪಾಕಿಸ್ತಾನದ ಸಂಕಷ್ಟವನ್ನು ಇನ್ನಷ್ಟುಹೆಚ್ಚಿಸುವ ಸಾಧ್ಯತೆ ಇದೆ. ಹಣಕಾಸು ಕಾರ್ಯಪಡೆಯು 2018ರಲ್ಲೇ ಪಾಕಿಸ್ತಾನವನ್ನು ಬೂದುಪಟ್ಟಿ(ಉಗ್ರರಿಗೆ ನೆಲೆ, ಹಣಕಾಸು ನೆರವು ನೀಡುವ ದೇಶಗಳು)ಗೆ ಸೇರಿಸಿದೆ. ಇದರಿಂದ ಹೊರಬರಲು 2020ರ ಫೆಬ್ರುವರಿ ಒಳಗೆ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿತ್ತು. ನಂತರ ಅದನ್ನು ಜೂನ್‌ಗೆ ಬಳಿಕ ಕೋವಿಡ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ಗೆ ವಿಸ್ತರಿಸಲಾಗಿತ್ತು. |
ಈ ವಿಷಯವನ್ನು ಹಣಕಾಸು ಕಾರ್ಯಪಡೆ ಗಂಭೀರವಾಗಿ ಪರಿಗಣಿಸಿ, ಅದನ್ನು ಬೂದುಪಟ್ಟಿಯಿಂದ ಕಪ್ಪುಪಟ್ಟಿ(ಉಗ್ರ ನಿಗ್ರಹದಲ್ಲಿ ಅಸಹಕಾರ)ಗೆ ಸೇರಿಸಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಭಾರೀ ಮುಖಭಂಗಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೆ ಐಎಂಎಫ್, ಎಡಿಬಿ, ವಿಶ್ವಬ್ಯಾಂಕ್‌ನಿಂದ ನಿಷೇಧಕ್ಕೆ ಒಳಗಾಗುವ, ಸಾಲ ಸೌಲಭ್ಯ ನಿರಾಕರಣೆಗೆ ಒಳಗಾಗುವ, ಅಂತಾರಾಷ್ಟ್ರೀಯ ನಿಷೇಧಕ್ಕೆ ಮತ್ತು ವಹಿವಾಟು ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. |
ಕರ್ನಾಟಕದ ಭಟ್ಕಳ ಮೂಲದ ರಿಯಾಜ್ ಎಂಜಿನಿಯರಿಂಗ್ ಪದವೀಧರ. ಸಿಮಿ ಸಂಘಟನೆಯಲ್ಲಿ ಈತ ಗುರುತಿಸಿಕೊಂಡಿದ್ದ. ಬಳಿಕ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಟಾಪ್ ಕಮಾಂಡರ್ ಆಗಿ ಗುರುತಿಸಿಕೊಂಡಿದ್ದ. 2006ರ ಜುಲೈ 11ರಂದು 11 ನಿಮಿಷಗಳ ಅಂತರದಲ್ಲಿ ಮುಂಬೈನ ಲೋಕಲ್ ರೈಲುಗಳಲ್ಲಿ 7 ಸರಣಿ ಬಾಂಬ್‌ಗಳು ಸ್ಫೋಟಗಳು 209 ಮಂದಿ ಸಾವಿಗೀಡಾಗಿದ್ದರು. ಆ ಪ್ರಕರಣದ ಮುಖ್ಯ ರೂವಾರಿ ಈತ. ಹೈದರಾಬಾದ್, ಜೈಪುರ, ಅಹಮದಾಬಾದ್, ದೆಹಲಿ ಸರಣಿ ಸ್ಫೋಟಗಳಲ್ಲೂ ಈತ ಮಾಸ್ಟರ್ ಮೈಂಡ್ ಆಗಿದ್ದು, ದೇಶದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಯೂರಿದ್ದಾನೆ. |
ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಜಮಾತ್ ಉಗ್ರ ಹಫೀಜ್ ಸಯೀದ್, ಜೈಷ್ ಉಗ್ರ ಮಸೂದ್ ಅಜರ್ ಸೇರಿದಂತೆ 88 ಉಗ್ರರ ವಿರುದ್ಧ ಹಲವು ನಿರ್ಬಂಧ ಹೇರಿತ್ತು. ಅವರ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿ, ವಿದೇಶ ಪ್ರಯಾಣಕ್ಕೆ ನಿಷೇಧ ಹೇರಿತ್ತು. ಆದರೆ ಅದೇ ಪಟ್ಟಿಯಲ್ಲಿ ಹಲವು ಉಗ್ರರಿಗೆ ಸ್ವತಃ ತಾನೇ ರಾಜಾತಿಥ್ಯ ನೀಡುತ್ತಿರುವ ವಿಷಯ, ಉಗ್ರ ನಿಗ್ರಹ ವಿಷಯದಲ್ಲಿ ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡಿದೆ. |
ಹಿರಿಯ ಪತ್ರಕರ್ತ ಕುಲ್ದಿಪ್ ನಯ್ಯರ್ ಇನ್ನಿಲ್ಲ.. - Big Tv News |
Home / ಸುದ್ದಿ / ದೇಶ-ವಿದೇಶ / ಹಿರಿಯ ಪತ್ರಕರ್ತ ಕುಲ್ದಿಪ್ ನಯ್ಯರ್ ಇನ್ನಿಲ್ಲ.. |
ಹಿರಿಯ ಪತ್ರಕರ್ತ ಕುಲ್ದಿಪ್ ನಯ್ಯರ್ ಇನ್ನಿಲ್ಲ.. |
Shaikh BIG TV NEWS, Hubballi August 23, 2018 ದೇಶ-ವಿದೇಶ, ಸುದ್ದಿ Leave a comment 116554 Views |
ಕುಲ್ದೀಪ್ ನಯ್ಯರ್ ಉರ್ದು ಪತ್ರಿಕಾ ವರದಿಗಾರನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ದಿ ಸ್ಟೇಟ್ಸ್ಮನ್ ಪತ್ರಿಕೆಯ ಸಂಪಾದಕರಾಗಿದ್ದರು. |
ನವದೆಹಲಿ: ಹಿರಿಯ ಪತ್ರಕರ್ತ ಕುಲ್ದೀಪ್ ನಯ್ಯರ್ ಬುಧವಾರ (ಆಗಸ್ಟ್ 22) ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. 95 ವರ್ಷ ವಯಸ್ಸಿನ ನಯ್ಯರ್ ದೆಹಲಿಯ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಲೋಧಿ ರಸ್ತೆಯ ಸ್ಮಶಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. |
ಉರ್ದು ಪತ್ರಿಕಾ ವರದಿಗಾರನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕುಲದೀಪ್ ನಯ್ಯರ್ ಹಲವು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅವರು ಭಾರತದ ಒಬ್ಬ ಹಿರಿಯ ಪತ್ರಕರ್ತರು, ಪತ್ರಿಕಾ ಅಂಕಣಕಾರರು, ಮಾನವಹಕ್ಕು ಕಾರ್ಯಕರ್ತರು ಮತ್ತು ಲೇಖಕರು. ಅವರು ದಿ ಸ್ಟೇಟ್ಸ್ಮನ್ ಪತ್ರಿಕೆಯ ಸಂಪಾದಕರಾಗಿದ್ದರು. ಪತ್ರಿಕೋದ್ಯಮದ ಹೊರತಾಗಿ ಅವರು ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ನಯ್ಯರ್ ಅವರು ಉರ್ದು ಪತ್ರಿಕಾ ವರದಿಗಾರರಾಗಿ ಭಾರತದ ತುರ್ತು ಪರಿಸ್ಥಿತಿಯ (1975-77) ಸಮಯದಲ್ಲಿ ಬಂಧನಕ್ಕೊಳಗಾಗಿದ್ದರು. |
ಕುಲದೀಪ್ ನಯ್ಯರ್ 1924 ರ ಆಗಸ್ಟ್ 14 ರಂದು ಸಯಾಲ್ಕೋಟ್ನಲ್ಲಿ ಜನಿಸಿದರು. ಕುಲ್ದೀಪ್ ನಯ್ಯರ್ ಲಾಹೋರ್ನಲ್ಲಿ ಕಾನೂನು ಪದವಿಯನ್ನು ಪಡೆದರು. ಅವರು ಯುಎಸ್ಎ ಪತ್ರಿಕೋದ್ಯಮ ಪದವಿ ಪಡೆದರು. ಅಲ್ಲದೆ ತತ್ವಶಾಸ್ತ್ರದಲ್ಲಿ ಪಿಹೆಚ್ಡಿಯನ್ನು ಪಡೆದರು. |
ಅವರು ಹಲವು ವರ್ಷಗಳ ಕಾಲ ಭಾರತದ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು. ಇದರ ನಂತರ, ಅವರು ಯುಎನ್ಐ, ಪಿಐಬಿ, ದಿ ಸ್ಟೇಟ್ಸ್ಮನ್ ಮತ್ತು ಇಂಡಿಯನ್ ಎಕ್ಸ್ಪ್ರೆಸ್ಗಳೊಂದಿಗೆ ಅವರು ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. ಅವರು 25 ವರ್ಷಗಳ ಕಾಲ 'ದಿ ಟೈಮ್ಸ್ ಲಂಡನ್' ನ ವರದಿಗಾರರಾಗಿದ್ದರು. ಅವರು ಶಾಂತಿ ಮತ್ತು ಮಾನವ ಹಕ್ಕುಗಳ ಮೇಲಿನ ಅವರ ನಿಲುವುಗೆ ಹೆಸರುವಾಸಿಯಾಗಿದ್ದಾರೆ. ಅವರ ಅಂಕಣ 'ಬಿಟ್ವೀನ್ ದಿ ಲೈನ್ಸ್' ಪ್ರಸಿದ್ಧವಾಗಿದೆ. ಇದನ್ನು 14 ಭಾಷೆಗಳಲ್ಲಿ ಸುಮಾರು 80 ಕ್ಕೂ ಹೆಚ್ಚು ಪತ್ರಿಕೆಗಳು ಪ್ರಕಟಿಸಿವೆ. |
ಕುಲದೀಪ್ ನಯ್ಯರ್ 1996 ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ನಿಯೋಗದಲ್ಲಿ ಸದಸ್ಯರಾಗಿದ್ದರು. 1997 ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ನಾಮಾಂಕಿತಗೊಂಡಿದ್ದರು. ಕುಲದೀಪ್ ನಯ್ಯರ್ ಅವರ ಅಂಕಣಗಳು 14 ಭಾಷೆಗಳ ಸುಮಾರು 80 ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಅವುಗಳಲ್ಲಿ ಡೆಕ್ಕನ್ ಹೆರಾಲ್ಡ್ ಬೆಂಗಳೂರು), ಯುನೈಟೆಡ್ ಕಿಂಗ್‍ಡಂನ ಡೈಲಿ ಸ್ಟಾರ್, ಸಂಡೇ ಗಾರ್ಡಿಯನ್, ಭಾರತದ ದ ಸ್ಟೇಟ್ಸ್ ಮನ್, ಪಾಕಿಸ್ತಾನದ ದ ನ್ಯೂಸ್, ಎಕ್ಸ್ ಪ್ರೆಸ್ ಟ್ರಿಬ್ಯೂನ್, ಡಾನ್ ಪತ್ರಿಕೆಗಳು ಸೇರಿವೆ. |
81ನೇ ಹುಟ್ಟುಹಬ್ಬ ಆಚರಿಸಿಕೊಂಡ ಪುಟ್ಟಪರ್ತಿ ಸಾಯಿಬಾಬಾ | Sathya Sai Baba celebrated 81st birthday - Kannada Oneindia |
81ನೇ ಹುಟ್ಟುಹಬ್ಬ ಆಚರಿಸಿಕೊಂಡ ಪುಟ್ಟಪರ್ತಿ ಸಾಯಿಬಾಬಾ |
ಪುಟ್ಟಪರ್ತಿ : ಸಾಯಿಬಾಬಾ ಗುರುವಾರ ತಮ್ಮ 81ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಕುರಿತ ಸಮಾರಂಭ ಅದ್ಧೂರಿಯಿಂದ ನೆರವೇರಿತು. |
ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಯಿಬಾಬಾ ಕುರಿತು ತಾವೇ ಬರೆದ ತಮಿಳು ಪದ್ಯವೊಂದನ್ನು ವಾಚಿಸಿದರು. ಅಲ್ಲದೆ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಕರ್ನಾಟಕ ರಾಜ್ಯಪಾಲ ಟಿ.ಎನ್.ಚತುರ್ವೇದಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು. |
ಈ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಬಾಬಾ, ತಾವು ಆಚರಿಸುತ್ತಿರುವ ಧಾರ್ಮಿಕ ಚಟುವಟಿಕೆಗಳನ್ನು ಬೂಟಾಟಿಕೆ ಎಂದು ಕರೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. |
ಬೆಂಗಳೂರಿನಿಂದ ವಿಶೇಷ ರೈಲು : ಸಾಯಿಬಾಬಾ ಹುಟ್ಟುಹಬ್ಬದ ನಿಮಿತ್ತ ಬೆಂಗಳೂರು ನಗರ ಹಾಗೂ ಶ್ರೀಸತ್ಯಸಾಯಿ ಪ್ರಶಾಂತಿ ನಿಲಯದ ಮಧ್ಯೆ ವಿಶೇಷ ರೈಲುಗಳು ಸಂಚರಿಸಲಿವೆ. |
ಈ ಸಂದರ್ಭದಲ್ಲಿ ಉಂಟಾಗಬಹುದಾಗ ಜನಸಂದಣಿ ತಡೆಯುವ ನಿಟ್ಟಿನಲ್ಲಿ, ಗುರುವಾರದಿಂದ ಮೂರು ದಿನಗಳ ಕಾಲ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ನೈಋತ್ಯ ರೈಲ್ವೇ ಪ್ರಕಟಣೆಯಾಂದರಲ್ಲಿ ತಿಳಿಸಿದೆ. |
ಬೆಂಗಳೂರಿನಿಂದ ಬೆಳಗ್ಗೆ 07.15ಕ್ಕೆ ಹೊರಡುವ ರೈಲು 11.15ಕ್ಕೆ ಪ್ರಶಾಂತಿ ನಿಲಯ ತಲುಪಲಿದೆ. ಪ್ರಶಾಂತಿ ನಿಲಯದಿಂದ ಸಂಜೆ 04.00ಕ್ಕೆ ಮರಳುವ ರೈಲು ರಾತ್ರಿ 08.00ಕ್ಕೆ ಬೆಂಗಳೂರು ತಲುಪಲಿದೆ. |
ಆರೋಗ್ಯ ಸುರಕ್ಷತೆಗಾಗಿ ಪ್ರತಿ ಭಾರತೀಯನಿಗೂ ಈ ಯೋಜನೆಯಡಿಯಲ್ಲಿ ಡಿಜಿಟಲ್ ಹೆಲ್ತ್ ಐಡಿ - All Indian News Online - AIN |
ಆರೋಗ್ಯ ಸುರಕ್ಷತೆಗಾಗಿ ಪ್ರತಿ ಭಾರತೀಯನಿಗೂ ಈ ಯೋಜನೆಯಡಿಯಲ್ಲಿ ಡಿಜಿಟಲ್ ಹೆಲ್ತ್ ಐಡಿ |
ದೇಶ ಹಾಗೂ ರಾಜ್ಯದ ಜನರ ಅನುಕೂಲತೆಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತದೆ, ಅಷ್ಟೇ ಅಲ್ಲದೆ ಈ ಯೋಜನೆಯಡಿಯಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಅರೋಗ್ಯ ಸೌಲಭ್ಯ ಸಿಗಲಿ ಅನ್ನೋ ಕಾರಣಕ್ಕೆ ಈ ಹಿಂದೆ ಮೋದಿ ಸರ್ಕಾರ 'ಆಯುಷ್ಮಾನ್ ಭಾರತ ಯೋಜನೆಯನ್ನು ರೂಪಿಸಿತ್ತು ಈಗಾಗಲೇ ಈ ಯೋಜನೆಯ ಸದುಪಯೋಗವನ್ನು ಕೆಲವರು ಪಡೆದುಕೊಳ್ಳುತ್ತಿದ್ದಾರೆ. ಇದೆ ನಿಟ್ಟಿನಲ್ಲಿ ಆಗಸ್ಟ್ ೧೫ ರಂದು ಮೋದಿಜಿಯವರು ತಮ್ಮ ಭಾಷಣದ ಮೂಲಕ ಅರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ ಈ ಯೋಜನೆಯ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ. |
ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಈ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಹೆಲ್ತ್ ಐಡಿ ನೀಡಲಾಗುತ್ತದೆ, ಇದರಿಂದ ಬಡವರಿಗೆ ಉಪಯೋಗವಾಗಲಿದೆ ಅನ್ನೋದನ್ನ ಮೋದಿಜಿಯವರು ತಿಳಿಸಿದ್ದಾರೆ. ಹೌದು ವೈದ್ಯರು ಯಾವ ಔಷಧ ತೆಗದುಕೊಳ್ಳಲು ಸೂಚಿಸಿದ್ದಾರೆ, ಯಾವಾಗ ಅದನ್ನು ಸೂಚಿಸಲಾಗಿದೆ ಎಂಬ ಮಾಹಿತಿ ಜತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ವ್ಯಕ್ತಿಯ ಹೆಲ್ತ್ ಐಡಿಗೆ ಲಿಂಕ್ ಆಗಿರಲಿವೆ. |
ಇನ್ನು ಈ ಯೋಜನೆಯ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ, ತಂತ್ರಜ್ಞಾನ ಆಧಾರಿತ ಯೋಜನೆಯಾಗಿದ್ದು, ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುತ್ತದೆ. ಇದು ಅನೇಕ ಡಿಜಿಟಲ್ ಆರೋಗ್ಯ ಸೇವೆಗಳನ್ನು ಒಟ್ಟುಗೂಡಿಸಿ ಅಸ್ತಿತ್ವದಲ್ಲಿರುವ ಆರೋಗ್ಯ ಮಾಹಿತಿಗಳನ್ನು ಸಂಯೋಜಿಸಲು ನೆರವಾಗಲಿದೆ. |
ಮತ್ತೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಅಂದರೆ ಈ ಕಾರ್ಡ್ ನಿಂದ ಯಾವುದೇ ವಯಕ್ತಿಕ ಮಾಹಿತಿಯ ಸೋರಿಕೆ ಆಗೋದಿಲ್ಲ ಸುರಕ್ಷತೆ ಮತ್ತು ಗೋಪ್ಯತೆಯನ್ನು ಖಾತರಿಪಡಿಸಲಾಗುತ್ತದೆ ಎಂದು ಸರ್ಕಾರವೇ ತಿಳಿಸಿದೆ. |
ಏನಿದು ಹೆಲ್ತ್ ಐಡಿ ಅನ್ನೋದನ್ನ ಮತ್ತೊಮ್ಮೆ ಹೇಳುವುದಾದರೆ ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಡಿಜಿಟಲ್ ಹೆಲ್ತ್ ಐಡಿ ಕೊಡಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯ ದಾಖಲೆಗಳು ಡಿಜಿಟಲ್ ಸ್ವರೂಪದಲ್ಲಿ ಇರಲಿದ್ದು, ದೇಶದಾದ್ಯಂತ ಇರುವ ವೈದ್ಯರು ಮತ್ತು ಸರ್ಕಾರದ ಆರೋಗ್ಯ ಸೌಲಭ್ಯಗಳೊಂದಿಗೆ ಲಿಂಕ್ ಆಗಿರಲಿದೆ. ಮುಖ್ಯವಾಗಿ ಈ ಯೋಜನೆಯನ್ನು ತರಲು ಮುಖ್ಯ ಉದ್ದೇಶವೇನು ಅನ್ನೋ ಮಾಹಿತಿಯನ್ನು ತಿಳಿಯುವುದಾದರೆ, ಆರೋಗ್ಯ ಸೇವೆಗಳ ದಕ್ಷತೆ, ಪರಿಣಾಮ ಮತ್ತು ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೆಲ್ತ್ ಐಡಿಯು ಮೊಬೈಲ್ ಆ್ಯಪ್ ರೂಪದಲ್ಲಿ ಇರಲಿದೆ ಅನ್ನೋದನ್ನ ಮೂಲಗಳು ತಿಳಿಸಿವೆ. |
ತೆಳ್ಳಗೆ ಬಳುಕೋ ಬಳ್ಳಿಯಂತೆ ಮಿಂಚುತ್ತಿರೋ ಮಾನ್ವಿತಾ..! ಮಾನ್ವಿತಾ ಕಾಮತ್ ಸ್ಲಿಮ್ ಆಗಿದ್ಹೇಗೆ ಗೊತ್ತಾ..? – Btv News Live |
ಟಗರು ಪುಟ್ಟಿ ಮಾನ್ವಿತಾ, ಕನ್ನಡ, ಮರಾಠಿ ಆಯ್ತು ಈಗ ಟಾಲಿವುಡ್ ಅಂಗಳದಲ್ಲಿ ಮೋಡಿ ಮಾಡೋಕ್ಕೆ ರೆಡಿಯಾಗಿದ್ದಾರೆ. ಇದ್ರ ಬೆನ್ನಲೇ ಮಾನ್ವಿತಾ ಕೊಂಚ ದಪ್ಪಗಾಗಿದ್ದಕ್ಕೆ, ಕಳೆದ 8 ತಿಂಗಳಿನಿಂದ ಕಸರತ್ತು ಮಾಡಿ ಸ್ಲಿಮ್ ಆಗಿದ್ದಾರಂತೆ. ಹಾಗಾದ್ರೆ ಮಾನ್ವಿತಾ ತೂಕ ಇಳಿಸಿಕೊಂಡಿದ್ದು ಎಷ್ಟು ಕೆ.ಜಿ..? ಇದಕ್ಕಾಗಿ ಏನೆಲ್ಲಾ ಕಸರತ್ತು ಮಾಡಿದ್ದಾರೆ..? ಗೊತ್ತಾ ಇಲ್ಲಿದೆ ಓದಿ.. |
ಮಾನ್ವಿತಾ ಕಾಮತ್ 'ಟಗರು ಪುಟ್ಟಿ' ಅಂತಲೇ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಫೇಮಸ್. ಸಖತ್ ಬೋಲ್ಡ್ ಆಗಿ ನಟಿಸೋ ಗ್ಲಾಮರ್ ಗೊಂಬೆ ಮಾನ್ವಿತಾ, ಟಗರು ಸಿನಿಮಾ ನಂತ್ರ ಕನ್ನಡ ಸೇರಿದಂತೆ ಮರಾಠಿ ಸಿನಿಮಾಗಳಲ್ಲಿ ಡಿಫರೆಂಟ್ ಪಾತ್ರದ ಮೂಲಕ ಮೋಡಿ ಮಾಡಿದ್ರು. ಆದ್ರೆ ಅದ್ಯಾಕೋ ಗೊತ್ತಿಲ್ಲ ಇತ್ತಿಚೆಗೆ ಮಾನ್ವಿತಾ ಹೆಸ್ರು ಗಾಂಧಿನಗರದಲ್ಲಿ ಸದ್ದು ಮಾಡ್ತಿಲ್ಲ. ಎಲ್ಲ ಸಿನಿರಸಿಕರ ಮನದಲ್ಲಿ ಮಾನ್ವಿತಾ ಎಲ್ಲಿ ಹೋಗಿದ್ದಾರೆ…? ಅನ್ನೋ ಪ್ರಶ್ನೆ ಕಾಡ್ತಿದೆ. |
ಮಾನ್ವಿತಾ ಎಲ್ಲಿಯೂ ಹೋಗಿಲ್ಲ, ಇಲ್ಲೇ ಇದ್ದಾರೆ. ಆದ್ರೆ ಏನ್ ಮಾಡ್ತಿದ್ದಾರೆ ಗೊತ್ತಾ..? ಯೆಸ್ ಮಾನ್ವಿತಾ ಲಾಕ್‌ಡೌನ್ ವೇಳೆ ಕೊಂಚ ದಪ್ಪಗಾಗಿದ್ರಂತೆ. ಇದಕ್ಕಾಗಿ ಕಳೆದ 8 ತಿಂಗಳುಗಳಿಂದ ಡಯೆಟ್ ವರ್ಕೌಟ್ ಅಂತ ಸ್ಲಿಮ್ ಆಗಲು ಸಿಕ್ಕಾಪಟ್ಟೆ ಕಸರತ್ತು ನಡೆಸುತ್ತಿದ್ರಂತೆ. ಫೈನಲಿ ಮಾನ್ವಿತಾ ಡೆಡಿಕೇಷನ್ ಒಳ್ಳೆಯ ರಿಸಲ್ಟ್ ಸಿಕ್ಕಿದೆ. ಸುಮಾರು 8 ತಿಂಗಳುಗಳಿಂದ ಮಾಡಿರುವಂತಹ ಕಸರತ್ತಿನಿಂದ ಈಗ ತೆಳ್ಳಗೆ ಬಳುಕೋ ಬಳಿಯಂತೆ ಆಗಿದ್ದಾರಂತೆ. |
ಕಳೆದ 8 ತಿಂಗಳಿನಿಂದ ಸುಮಾರು ಕೆ.ಜಿ ತೂಕ ಇಳಿಸಿಕೊಂಡಿರೋ ಮಾನ್ವಿತಾ, ಇದೇ ಖುಷಿಯಲ್ಲಿ ಹೊಸ ಪೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಲ್ಲಿ ಶೇರ್ ಮಾಡುವ ಮೂಲಕ, ಸ್ಲಿಮ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಮಾನ್ವಿತಾ ಕನ್ನಡ, ಮರಾಠಿ ಮಾತ್ರವಲ್ಲದೇ ಇದೀಗ ಟಾಲಿವುಡ್ ಅಂಗಳಕ್ಕೂ ಕಾಲಿಟ್ಟು, ಮೋಡಿ ಮಾಡಲು ರೆಡಿಯಾಗಿದ್ದಾರೆ. |
ಮೀನುಗಾರರ ಜೊತೆ ಸಮುದ್ರಕ್ಕೆ ತೆರಳಿ ಸಮಸ್ಯೆ ಆಲಿಸಿದ ಸಂಸದ ಡಿ.ಕೆ. ಸುರೇಶ್ | themangaloremirror.in |
ಮಂಗಳೂರು, ಎಪ್ರಿಲ್ 13: ಸಂಸದ ಡಿ.ಕೆ. ಸುರೇಶ್ ಅವರು ಇತ್ತೀಚೆಗೆ ನಗರದ ಬಂದರು ಪ್ರದೇಶದಿಂದ ಸಮುದ್ರಲ್ಲಿ ಮೀನುಗಾರಿಕೆ ನಡೆಸೋದನ್ನು ಬೋಟ್ ಮೂಲಕ ತೆರಳಿ ವೀಕ್ಷಿಸಿದ್ದು, ಈ ವೇಳೆ ಮೀನುಗಾರರ ಜೊತೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. |
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೀನುಗಾರರ ದುಸ್ತರವಾದ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿ, ಸರ್ಕಾರ ಆದಷ್ಟು ಬೇಗ ಮೀನುಗಾರರ ಸಮಸ್ಯೆಗಳನ್ನು ಆಲಿಸಿ ಶಾಶ್ವತ ಪರಿಹಾರ ಒದಗಿಸಲಿ ಎಂದು ಒತ್ತಾಯಿಸಿದ್ದಾರೆ. |
ಮೀನುಗಾರಿಕೆ ಸಾಹಸಮಯ ಕೆಲಸ. ಇದೀಗ ಮೀನುಗಾರರು ಬಹಳ ಕಷ್ಟದಲ್ಲಿದ್ದು, ತಂತ್ರಜ್ಞಾನ ಅಳವಡಿಸಲು ಬೇಕಾದಷ್ಟು ಬಂಡವಾಳ ಇಲ್ಲ. ಮೀನುಗಾರಿಕೆಯನ್ನೇ ನಂಬಿಕೊಂಡು ಒಂದೂವರೆ ಲಕ್ಷಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿವೆ. ಡೀಸೆಲ್, ಪೆಟ್ರೋಲ್ ದರ ಏರಿಕೆಯಾಗಿರೋದರಿಂದ 6.30 – 7 ರೂ. ಸಬ್ಸಿಡಿ ದೊರೆಯುತ್ತಿದೆ. ಮೀನುಗಾರಿಕೆಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಬಗ್ಗೆ ಸಂಬಂಧಪಟ್ಟ ನಾಯಕರು ಹಾಗೂ ಲೋಕಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು. |
ಕೊರೋನಾ ಸಂದರ್ಭದಲ್ಲಿ ಮೀನುಗಾರರ ಜೀವನ ನಿರ್ವಹಣೆ ಮತ್ತು ಅವರ ಸಮಸ್ಯೆಗಳ ಬಗ್ಗೆ ಆಲಿಸಲು ಕೆಲವು ಗಂಟೆಗಳ ಕಾಲ ಅವರ ಜೊತೆ ಕಾಲ ಕಳೆದೆನು. ಸ್ವತಃ ಮೀನುಗಾರರೇ ಹಂಚಿಕೊಂಡ ಮಾಹಿತಿಯಂತೆ, ದುಸ್ತರವಾದ ಜೀವನ ಶೈಲಿ ಮತ್ತು ದೊಡ್ಡ ಮೀನುಗಳ ಅಭಾವ ಇತ್ತೀಚಿನ ದಿನಗಳಲ್ಲಿ ಮೀನುಗಾರರಿಗೆ ಹೆಚ್ಚು ಸಮಸ್ಯೆ ಉಂಟುಮಾಡುತ್ತಿದೆ. pic.twitter.com/DiFcNTZZnw |
— DK Suresh (@DKSureshINC) April 11, 2021 |
ಕೋವಿಡ್ ಸಂದರ್ಭದಲ್ಲಿ ಅನೇಕ ನಿರ್ಬಂಧಗಳನ್ನು ಹೇರಲಾಗಿದ್ದು, ಯಾವುದೇ ಆರ್ಥಿಕ ನೆರವು ದೊರಕಿಲ್ಲ. ಆದ್ದರಿಂದ ಈ ಒಂದು ವರ್ಷದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಆದ್ದರಿಂದ ಸರ್ಕಾರ ಇವರ ಸಮಸ್ಯೆಗಳತ್ತ ಗಮನ ಹರಿಸಬೇಕು. ಕರಾವಳಿಯ ನಾಯಕರು ಮೀನುಗಾರರ ಪರವಾಗಿ ದನಿ ಎತ್ತುತ್ತಾರೆಂದು ಭಾವಿಸುತ್ತೇನೆ ಎಂದು ಹೇಳಿದರು. |
Related Topics:CongressCongress Leadercostal leadersCovidDK SureshfishingFishing BoatPoliticsPORTSeaSolutionvisitingಕರಾವಳಿಕಾಂಗ್ರೆಸ್ಕಾಂಗ್ರೆಸ್ ಪಾಲಿಟಿಕ್ಸ್ಕೋವಿಡ್ಡಿ.ಕೆ. ಸುರೇಶ್ನಾಯಕಪರಿಹಾರಬಂದರುಭೇಟಿಮೀನುಗಾರಿಕೆಸಮಸ್ಯೆಸಮುದ್ರ |
ಮಂಡ್ಯದಲ್ಲಿ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆ | Rare Lithium Metal Critical For EV Batteries Found In Mandya - Kannada Oneindia |
10 min ago ಲಾಕ್‌ಡೌನ್ ನಡುವೆಯೂ ಮದ್ಯ ಮಾರಾಟ; ಪ್ರಕರಣ ದಾಖಲು |
18 min ago ಏಪ್ರಿಲ್ 30ರವಗೆ ಲಾಕ್‌ಡೌನ್ ಮುಂದುವರೆಸಿದ ಭಾರತದ ಮೊದಲ ರಾಜ್ಯ |
22 min ago ವೈದ್ಯರಿಗೆ ಹಾಗೂ ನರ್ಸ್ ಗಳಿಗೆ ಸರ್ಕಾರ ರಕ್ಷಣೆ ನೀಡಲು ಎಎಪಿ ಆಗ್ರಹ |
| Published: Wednesday, February 19, 2020, 19:28 [IST] |
ಬೆಂಗಳೂರು, ಫೆಬ್ರವರಿ 19: ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿರುವ ಸಂದರ್ಭದಲ್ಲಿಯೇ ಉದ್ಯಮಕ್ಕೆ ಚೈತನ್ಯ ನೀಡುವ ಸುದ್ದಿ ದೊರೆತಿದೆ. ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳನ್ನು ನಿರ್ಮಿಸಲು ಅತ್ಯಗತ್ಯವಾದ ಅಪರೂಪದ ಲೋಹ ನಿಕ್ಷೇಪ ಲೀಥಿಯಂ ಮಂಡ್ಯದ ಸಮೀಪ ಪತ್ತೆಯಾಗಿದೆ. |
ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳ ಸ್ಥಳೀಯ ಮಟ್ಟದ ತಯಾರಿಕೆಗೆ ಈ ನಿಕ್ಷೇಪಗಳ ಪತ್ತೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಲೀಥಿಯಂ ಅತ್ಯಂತ ಮಹತ್ವದ ಲೋಹವಾಗಿದೆ. ಭಾರತದಲ್ಲಿ ಲೀಥಿಯಂ ಲಭ್ಯತೆಯ ಕುರಿತು ಇದುವರೆಗೂ ಯಾವುದೇ ಮಾಹಿತಿ ದೊರಕಿರಲಿಲ್ಲ. ಈಗ ಮಂಡ್ಯದಲ್ಲಿ ದೊರಕಿರುವುದೇ ಮೊದಲನೆಯದು. |
ಭಾರತದ ಆಟೋಮಿಕ್ ಎನರ್ಜಿ ಕಮಿಷನ್‌ನ ಘಟಕವಾದ ಪರಮಾಣು ಖನಿಜಗಳ ನಿರ್ದೇಶನಾಲಯದ ಸಂಶೋಧಕರು ಬೆಂಗಳೂರಿನಿಂದ 100 ಕಿ.ಮೀ. ದೂರವಿರುವ ಪ್ರದೇಶದಲ್ಲಿ ಸಣ್ಣ ಭೂ ಪ್ರದೇಶದಲ್ಲಿ ಅಂದಾಜು 14,100 ಟನ್ ಲೀಥಿಯಂ ನಿಕ್ಷೇಪವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕರೆಂಟ್ ಸೈನ್ಸ್ ನಿಯತಕಾಲಿಕೆಯ ಸಂಚಿಕೆಯಲ್ಲಿ ಈ ಕುರಿತಾದ ಲೇಖನವೊಂದು ತಿಳಿಸಿದೆ. |
'ಪ್ರಸ್ತುತ ಲಭ್ಯವಿರುವ ಅಧ್ಯಯನ ದಾಖಲೆಗಳ ಪ್ರಕಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ಹಿಂಭಾಗದ ಗೋಮಾಳದ ಪ್ರದೇಶದಲ್ಲಿ ಅಲ್ಲಾಪಟ್ಟಣ-ಮರಳಗಾಲ ಗ್ರಾಮದ 0.5 ಕಿ.ಮೀ * 5 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 30,300 ಟನ್ Li20 ಲಭ್ಯವಿದ್ದು, ಇದನ್ನು ಹೊರತೆಗೆದರೆ ಅಂದಾಜು 14,100 ಟನ್ ಲೀಥಿಯಂ ಲೋಹ ಸಿಗಬಹುದು' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಮತ್ತು ಬ್ಯಾಟರಿ ತಂತ್ರಜ್ಞಾನದ ಪರಿಣತ ಎನ್. ಮುನಿಚಂದ್ರಯ್ಯ ತಿಳಿಸಿದ್ದಾರೆ. |
ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ |
ಆದರೆ, ಇತರೆ ಅನೇಕ ಪ್ರಮುಖ ಲೀಥಿಯಂ ಉತ್ಪಾದಕರಿಗೆ ಹೋಲಿಸಿದರೆ ಮಂಡ್ಯದಲ್ಲಿ ಸಿಕ್ಕಿರುವ ಲೀಥಿಯಂ ಲೋಹದ ಪ್ರಮಾಣ ತೀರಾ ಕಡಿಮೆ. ಚಿಲಿಯಲ್ಲಿ 8.6 ಮಿಲಿಯನ್ ಟನ್, ಆಸ್ಟ್ರೇಲಿಯಾದಲ್ಲಿ 2.8 ಮಿಲಿಯನ್ ಟನ್, ಅರ್ಜೆಂಟೀನಾದಲ್ಲಿ 1.7 ಮಿಲಿಯನ್ ಟನ್, ಪೋರ್ಚುಗಲ್‌ನಲ್ಲಿ 60,000 ಟನ್ ಗಳಷ್ಟು ನಿಕ್ಷೇಪ ಪತ್ತೆಯಾಗಿವೆ. ಇವುಗಳೊಂದಿಗೆ ತುಲನೆ ಮಾಡಿದರೆ 14,100 ಟನ್ ಅತ್ಯಲ್ಪವಾಗಿದೆ ಎಂದು ಅವರು ಹೇಳಿದ್ದಾರೆ. |
ಆಮದು ಮೂರು ಪಟ್ಟು ಹೆಚ್ಚಳ |
ಲೀಥಿಯಂ ಬ್ಯಾಟರಿಗಳಿಗೆ ಭಾರತದಲ್ಲಿ ಅಪಾರ ಬೇಡಿಕೆಯಿದೆ. 2017ನೇ ಹಣಕಾಸು ವರ್ಷದಲ್ಲಿ ಭಾರತವು 384 ಮಿಲಿಯನ್ ಡಾಲರ್ ಮೌಲ್ಯದ ಲೀಥಿಯಂ ಬ್ಯಾಟರಿಗಳನ್ನು ಆಮದು ಮಾಡಿಕೊಂಡಿದ್ದರೆ, 2019ರ ಹಣಕಾಸು ವರ್ಷದಲ್ಲಿ ಅದು ಮೂರುಪಟ್ಟು ಹೆಚ್ಚಳವಾಗಿ, 1.2 ಬಿಲಿಯನ್ ಡಾಲರ್ ಮೌಲ್ಯದ ಲೀಥಿಯಂ ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳಲಾಗಿದೆ. |
ವಿದೇಶದಲ್ಲಿ ಭಾರತದ ಕಂಪೆನಿ |
Researchers has found reserves of a rare metal lithium in Mandya district. Lithium is very critical to produce batteries for electric vehicles. |
ಪ್ರಸ್ತುತ ಹಿಂದಿ ಬಾರದವರು ಹೊರನಡೆಯಿರಿ | ತರಬೇತಿಯಲ್ಲಿ ಆಯುಷ್ ಸಚಿವಾಲಯದ ಕಾರ್ಯದರ್ಶಿಯ ವಿವಾದಾತ್ಮಕ ಹೇಳಿಕೆ | ಎಲ್ಲೆಡೆ ಆಕ್ರೋಶ – Prasthutha |
ಹಿಂದಿ ಬಾರದವರು ಹೊರನಡೆಯಿರಿ | ತರಬೇತಿಯಲ್ಲಿ ಆಯುಷ್ ಸಚಿವಾಲಯದ ಕಾರ್ಯದರ್ಶಿಯ ವಿವಾದಾತ್ಮಕ ಹೇಳಿಕೆ | ಎಲ್ಲೆಡೆ ಆಕ್ರೋಶ |
Prasthutha: August 22, 2020 |
ನವದೆಹಲಿ : "ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೇನೆ, ಹಿಂದಿ ಅರ್ಥ ಆಗದವರು ಹೊರ ನಡೆಯಿರಿ'' ಎಂದು ವರ್ಚುವಲ್ ತರಬೇತಿಯೊಂದರಲ್ಲಿ ಹೇಳಿರುವ ಕೇಂದ್ರ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚ ಅವರು ಈಗ ವಿವಾದಕ್ಕೆ ಸಿಲುಕಿದ್ದಾರೆ. ಆಯುಷ್ ಸಚಿವಾಲಯದ ತರಬೇತಿಯೊಂದರ ವೇಳೆ ರಾಜೇಶ್ ಈ ಮಾತುಗಳನ್ನಾಡಿದ್ದಾರೆ. ಇದು ಈಗ ದೇಶಾದ್ಯಂತ ಭಾಷಾ ಕುರಿತ ವಾದ-ವಿವಾದವನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ರಾಜೇಶ್ ಅವರು ಮಾತನಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. |
"ಕಳೆದ ಎರಡು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರನ್ನು ನಾನು ಅಭಿನಂದಿಸುತ್ತಿದ್ದೇನೆ. ಕಳೆದ ಎರಡು ದಿನಗಳಿಂದ ನನಗೊಂದು ಮಾಹಿತಿ ಸಿಕ್ಕಿದೆ, ಆ ವಿಷಯಕ್ಕೆ ಸಂಬಂಧಿಸಿದ ಜನರಿದ್ದರೆ ಹೊರ ನಡೆಯಬಹುದು. ನಾನು ಚೆನ್ನಾಗಿ ಇಂಗ್ಲಿಷ್ ಮಾತನಾಡಲಾರೆ, ಹೀಗಾಗಿ ನಾನು ಹಿಂದಿ ಮಾತನಾಡುತ್ತಿದ್ದೇನೆ'' ಎಂದು ರಾಜೇಶ್ ಹೇಳಿರುವ ವೀಡಿಯೊ ವೈರಲ್ ಆಗುತ್ತಿದೆ. ಆದರೆ, ತಾನು ಮಾತನಾಡಿರುವ ಅಂಶಗಳನ್ನು ತಿರುಚಲಾಗಿದೆ ಎಂದು ರಾಜೇಶ್ ಸ್ಪಷ್ಟಪಡಿಸಿದ್ದಾರೆ. |
ಆದರೆ, ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತಮಿಳುನಾಡಿನಲ್ಲಿ ಮತ್ತೊಮ್ಮೆ ಭಾಷಾ ಜಾಗೃತಿಯ ಅಭಿಯಾನ ಆರಂಭವಾಗಿದೆ. ತನ್ನ ಹೇಳಿಕೆಗಾಗಿ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅವರನ್ನು ಅಮಾನತು ಮಾಡಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಒತ್ತಾಯಿಸಿದ್ದಾರೆ. ರಾಜೇಶ್ ಅವರ ವರ್ತನೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. |
ಮಹಿಳಾ ಆರೋಗ್ಯ Archives - Vydyaloka |
Vydyaloka > Articles > ಮಹಿಳಾ ಆರೋಗ್ಯ |
ಗರ್ಭಿಣಿಯರು ಯೋಗ ಮಾಡಬಹುದೇ? |
ಗರ್ಭಿಣಿಯರು ಯೋಗ ಮಾಡಬಹುದೇ?- ಇದು ಪ್ರತಿಯೊಬ್ಬರಿಗೂ ಇರುವ ಅನುಮಾನಗಳಲ್ಲಿ ಒಂದು. ಸುಲಭ ಹೆರಿಗೆಗಾಗಿ ಯೋಗ ಅತ್ಯಂತ ಪರಿಣಾಮಕಾರಿ ವಿಧಾನ ಎಂಬುದನ್ನು ವೈದ್ಯರು ಮತ್ತು ಪ್ರಸೂತಿ ತಜ್ಞರು ಗುರುತಿಸಿದ್ದಾರೆ. ಆದರೆ, ಮೊದಲ ಮೂರು ತಿಂಗಳ ಅವಧಿಯಲ್ಲಿ ಯೋಗಾಸನ ಮಾಡುವಾಗ ಎಚ್ಚರ ವಹಿಸಬೇಕು. ಗರ್ಭಧಾರಣೆಯು ಮಹಿಳೆಯ ಬದುಕಿನಲ್ಲಿ ಅತ್ಯಂತ ಅದ್ಭುತ ಅನುಭವಗಳಲ್ಲಿ ಒಂದು.ವಿಶ್ರಾಂತಿ, ಧ್ಯಾನ ಮತ್ತು ಸರಳ ಉಸಿರಾಟದ ವ್ಯಾಯಾಮಗಳು ಗರ್ಭಿಣಿಯರಲ್ಲಿ ನಿರಂತರ ಶಕ್ತಿ ಸಂಚಯವನ್ನು ಪೂರೈಸುತ್ತದೆ. ಇದು ಬೆಳೆಯುತ್ತಿರುವ ಮಗುವಿನೊಂದಿಗೆ ಉತ್ತಮ ಬಾಂಧವ್ಯ ವರ್ಧನೆಗೂ ಸಹಕಾರಿ. ಸುಲಭ ಹೆರಿಗೆಗಾಗಿ ಯೋಗ […] |
ರಕ್ತಹೀನತೆ ಮಹಿಳೆಯರಲ್ಲಿ ಹೆಚ್ಚು: ಇದು ನಾನಾ ವ್ಯಾಧಿಗಳಿಗೆ ಕಾರಣ |
ರಕ್ತಹೀನತೆ ನಾನಾ ವ್ಯಾಧಿಗಳಿಗೆ ಕಾರಣ. ಕಬ್ಬಿಣಾಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳ ಸೇವನೆಯಿಂದ ರಕ್ತಹೀನತೆ ದೂರಮಾಡಬಹುದು. ಕಬ್ಬಿಣಾಂಶ ಅಧಿಕವಾಗಿರುವ ಹಸಿರು ತರಕಾರಿ, ಸೊಪ್ಪು, ನುಗ್ಗೆ ಸೊಪ್ಪು, ಬಾಳೆಹಣ್ಣು, ಸೇಬು, ಹಾಲು, ಒ ಣಹಣ್ಣು, ನೆಲಗಡಲೆ, ಕರಿಎಳ್ಳು, ಜೇನು, ದ್ವಿದಳ ಧಾನ್ಯ ಸೇವನೆ ಸೂಕ್ತ. ಮಾಂಸ, ಮೀನು, ಮೊಟ್ಟೆ ಸೇವನೆಯೂ ಇರಲಿ. ರಾಗಿಗಂಜಿ ಅತ್ಯುತ್ತಮ. ಕಾಫಿ, ಟೀ ಸೇವಿಸಿದರೆ ಕಬ್ಬಿಣದ ಹೀರುವಿಕೆಗೆ ತೊಂದರೆಯಾಗಬಲ್ಲದು. ರಕ್ತ ಹೀನತೆ ಎಂದರೆ ದೇಹದಲ್ಲಿ ಹರಿಯುವ ರಕ್ತದ ಕೊರತೆ. ಇದು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಬಾರದು. ಹಾಗೆಯೇ […] |
ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? |
ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಅನೇಕ ಮಹಿಳೆಯರನ್ನು ಈ ಸಮಸ್ಯೆ ಕಾಡುತ್ತಿದೆ. ಋತುಚಕ್ರ ಮತ್ತು ಗರ್ಭಧಾರಣೆ ವನಿತೆಯರ ವಿಶಿಷ್ಟ ಗುಣಲಕ್ಷಣ. ಈ ಬದಲಾವಣೆಯೊಂದಿಗೆ, ಕುಟುಂಬ ನಿರ್ವಹಣೆ ಮತ್ತು ಕೆಲಸ-ಕಾರ್ಯಗಳ ಒತ್ತಡದಿಂದಾಗಿ ಮಹಿಳೆಯರ ಆರೋಗ್ಯ ಮತ್ತು ನಿದ್ರೆಯ ಮೇಲೆ ಪರಿಣಾಮ ಉಂಟಾಗಬಹುದು. ನಿದ್ರಾಹೀನತೆಗೆ ಅನೇಕ ಕಾರಣಗಳಿವೆ. ಹಾರ್ಮೋನುಗಳ ಬದಲಾವಣೆಯಿಂದ ಆಲೋಚನೆಗಳ ಪರಿವರ್ತನೆ, ನಿದ್ರಾನಾಶ, ನಿದ್ರಾಭಂಗ ಹಾಗೂ ಇತರ ಸಮಸ್ಯೆಗಳು ಉಂಟಾಗುತ್ತವೆ. ವನಿತೆಯು ತಾಯಿ, ಪತ್ನಿ, ಗೃಹಿಣಿ, ಉದ್ಯೋಗಸ್ಥೆ ಮತ್ತು ಮನೆ ಉಸ್ತುವಾರಿ ನೋಡಿಕೊಳ್ಳುವ ಪಾತ್ರಗಳನ್ನು ನಿರ್ವಹಿಸುವುದರಿಂದ ಆಕೆ ನಿದ್ರೆ ಮಾಡುವುದು […] |
ಬಂಜೆತನ ನಿವಾರಣೆಗೆ ಆಯುರ್ವೇದ ಚಿಕಿತ್ಸೆಗಳು |
ಬಂಜೆತನ ನಿವಾರಣೆಗೆ ಆಯುರ್ವೇದ ಚಿಕಿತ್ಸೆಗಳು ಬಹಳ ಸಹಾಯಕವಾಗಿದೆ. ಮುಚ್ಚಿಕೊಂಡ ನಾಳಗಳಿಂದಾಗಿ ಗರ್ಭ ಧರಿಸಲು ಸಾಧ್ಯವಾಗದ ಮಹಿಳೆಯರಲ್ಲಿ ನಾಳಗಳನ್ನು ಹೊರಹಾಕುವ ಪರಿಣಿತ ಚಿಕಿತ್ಸೆಯೊಂದಿಗೆ ತಾಯ್ತನದ ಆನಂದದ ಅನುಭವ ಹೊಂದುವ ಉತ್ತಮ ಅವಕಾಶವಿದೆ. ಬಂಜೆತನಕ್ಕೆ ಅನೇಕ ಕಾರಣಗಳಲ್ಲಿ ಟ್ಯೂಬಲ್ ಫ್ಯಾಕ್ಟರ್ ಅಥವಾ ನಾಳದ ಸಂಗತಿ ಸಹ ಒಂದು. ಆರೋಗ್ಯಕರ ಸಂತಾನೋತ್ಪತ್ತಿ ಅಂಗಗಳನ್ನು ಮಹಿಳೆಯರು ಹೊಂದಿದ್ದರೂ, ಮುಚ್ಚಲ್ಪಟ್ಟ ಅಥವಾ ಹಾನಿಗೀಡಾದ ನಾಳಗಳಿಂದ (ಟ್ಯೂಬ್‍ಗಳು) ಎಲ್ಲ ಮಹಿಳಾ ಬಂಜೆತನ ಅಂಶದ ಶೇ.25ರಿಂದ ಶೇ.35ರಷ್ಟು ಕಾರಣವಾಗುತ್ತದೆ. ಫಾಲೋಪಿಯನ್ ಟ್ಯೂಬ್‍ಗಳೆಂದರೇನು ? ಫಾಲೋಪಿಯನ್ ಟ್ಯೂಬ್‍ಗಳೆಂದರೆ ಗರ್ಭಕೋಶದ […] |
ಮಹಿಳಾ ಆರೋಗ್ಯ ಸಮಸ್ಯೆಗಳು- ಮುನ್ನೆಚ್ಚರಿಕೆ ಕ್ರಮಗಳು |
ಮಹಿಳಾ ಆರೋಗ್ಯ ಸಮಸ್ಯೆಗಳು ಅಭಿವೃದ್ದಿ ಹೊಂದುತ್ತಿರುವ ಮತ್ತು ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಆತಂಕವಾಗಿದೆ. ಹೀಗಾಗಿ ಇಂತಹ ರೋಗ ಸ್ಥಿತಿಗಳ ಬಗ್ಗೆ ಹಾಗೂ ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸ್ತ್ರೀರೋಗ ಶಾಸ್ತ್ರವು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದ್ದು, ಸಂತಾನೋತ್ಪತ್ತಿ ಸ್ಥಳದ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ಮಹಿಳಾ ಆರೋಗ್ಯ ಸಮಸ್ಯೆಗಳು ಅಭಿವೃದ್ದಿ ಹೊಂದುತ್ತಿರುವ ಮತ್ತು ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಆತಂಕವಾಗಿದೆ. ಹೀಗಾಗಿ ಇಂತ ರೋಗ […] |
ಕೇರ್‌ಲೆಸ್ ಆದ್ರೆ ಹೇರ್‌ಲೆಸ್ |
ಕೇರ್‌ಲೆಸ್ ಆದ್ರೆ ಹೇರ್‌ಲೆಸ್. ತಲೆ ಕೂದಲಿನ ಉತ್ತಮ ಬೆಳವಣಿಗೆ ಮತ್ತು ಸೌಂದರ್ಯ ವರ್ಧನೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ವಚ್ಚವಾಗಿ ತೊಳೆಯುವುದು ಎಷ್ಟು ಮುಖ್ಯವೋ , ಉತ್ತಮ ಆಹಾರ ಸೇವನೆ ಮತ್ತು ಮಾನಸಿಕ ಆರೋಗ್ಯವೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಕೇರ್‍ಲೆಸ್ ಆದರೆ ಹೇರ್‍ಲೆಸ್ ಅನ್ನೋದು ಆಧುನಿಕ ಗಾದೆಯ ಮಾತು ವಾಸ್ತವವೂ ಹೌದು. ಸೌಂದರ್ಯ ವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ತಲೆಕೂದಲು. ಸ್ವಚ್ಚವಾಗಿ, ಹೊಳಪಾಗಿ ಮತ್ತು ನುಣುಪಾಗಿ ಆಕರ್ಷಕವಾಗಿರಬೇಕೆಂದು ಎಲ್ಲರೂ ಬಯಸುವುದು ಸಹಜ. ತಲೆ ಕೂದಲಿನ ಉತ್ತಮ […] |
ಮೆನೊಪಾಸ್ ಅಥವಾ ಮುಟ್ಟು ಕೊನೆಗೊಳ್ಳುವಿಕೆ |
ಮೆನೊಪಾಸ್ ಅಥವಾ ಮುಟ್ಟು ಕೊನೆಗೊಳ್ಳುವಿಕೆ ಮಹಿಳೆಯರ ಜೀವನದ ನೈಸರ್ಗಿಕ ಕ್ರಿಯೆ. ಇದು ಕಾಯಿಲೆಯಲ್ಲ. ಹೆಂಗಸರಿಗೆ ವಯಸ್ಸಾದಂತೆಲ್ಲ ನಿರೀಕ್ಷೆಯಂತೆ ನಿಧಾನವಾಗುತ್ತಾ ಅಂತಿಮವಾಗಿ ಮುಟ್ಟು ಕೊನೆಗೊಳ್ಳುತ್ತದೆ. ಇದು ಸಾಮಾನ್ಯ ಸಂಗತಿ. ಅನಾರೋಗ್ಯದ ಲಕ್ಷಣವಲ್ಲ. ಹಾರ್ಮೋನುಗಳ ಅಸಮತೋಲನ ಅಥವಾ ದೋಷಪೂರಿತ ಆಹಾರ ಸೇವನೆ ಅಭ್ಯಾಸಗಳು, ಒತ್ತಡ, ಸ್ಥೂಲಕಾಯ ಮತ್ತು ಇತರ ಅಂಶಗಳಿಂದ ದೇಹಕ್ಕೆ ಹಾನಿಯಾಗುವಿಕೆಯ ಸೂಚನೆಗಳು ಮೆನೊಪಾಸ್‍ನ ಲಕ್ಷಣಗಳಾಗಿವೆ. ಮೆನೊಪಾಸ್‍ನನ್ನು ರಜೋ ನಿವೃತ್ತಿ ಎಂದು ಕರೆಯುತ್ತಾರೆ. ಮುಟ್ಟು ತೀರುವಿಕೆ ಅಥವಾ ಮಹಿಳೆಯರ ಮುಟ್ಟು ಯಾ ರಜಸ್ಸು ಕಡೆಯದಾಗಿ ನಿಂತುಹೋಗುತ್ತದೆ ಎಂಬುದು ಇದರ […] |
ಮಧ್ಯಮ ವಯಸ್ಸಿನ ಮಹಿಳೆಗೆ ಬೊಜ್ಜು ಬರುವುದೇಕೆ? |
ಮಧ್ಯಮ ವಯಸ್ಸಿನ ಮಹಿಳೆಗೆ ಬೊಜ್ಜು ಬರುವುದೇಕೆ? ತಮ್ಮ ಚಟುವಟಿಕೆಗಳಿಗೆ ತಕ್ಕಂತೆ ಆಹಾರ ಸೇವನೆಯಲ್ಲಿ ಮಾರ್ಪಾಡನ್ನು ಮಹಿಳೆಯರು ಸಾಮಾನ್ಯವಾಗಿ ಮಾಡುವದಿಲ್ಲವಾದ್ದರಿಂದ ತಮಗೆ ಅರಿವಿಲ್ಲದಂತೆ ಬೊಜ್ಜಿನ ಬೆಳೆವಣಿಗೆಯತ್ತ ಹೆಜ್ಜೆ ಹಾಕುತ್ತಾರೆ. ಮಹಿಳೆ ಮಧ್ಯಮ ವಯಸ್ಸಿಗೆ ಹೆಜ್ಜೆ ಇಟ್ಟಾಗ ಬೊಜ್ಜು ಬರಲು ಪ್ರಾರಂಭವಾಗುತ್ತದೆ. ಮಹಿಳೆಯ 40-50 ನೇ ವಯೋಮಾನವನ್ನು 'ಬೊಜ್ಜು ಬೆಳೆಯುವ ಕಾಲ' ಎಂದು ಕರೆಯುತ್ತಾರೆ. ವಯಸ್ಸು ಆದಂತೆಲ್ಲ ಶರೀರದಲ್ಲಿಯ ಹಾರ್ಮೋನಗಳ ಅಸಮತೋಲನೆ ತಲೆದೋರುತ್ತದೆ.ಸಂತೋಷ, ಮೃಷ್ಟಾನ್ನ ಉಂಡ ಐಷಾರಾಮಿನ ಜೀವನ, ಚಟುವಟಿಕೆ ರಹಿತ ಚದುರಂಗದಾಟಕ್ಕೆ ಅನುವು ಮಾಡುತ್ತದೆ. ಬೊಜ್ಜಿನ ಬೆಳವಣಿಗೆಗೆ ನಾಂದಿಹಾಡುತ್ತದೆ. […] |
ವಿಜ್ಞಾನ, ಕನ್ನಡ ಶಿಕ್ಷಕರ ನೇಮಕಕ್ಕೆ ಮಕ್ಕಳ ಆಗ್ರಹ | Prajavani |
ವಿಜ್ಞಾನ, ಕನ್ನಡ ಶಿಕ್ಷಕರ ನೇಮಕಕ್ಕೆ ಮಕ್ಕಳ ಆಗ್ರಹ |
Published: 27 ಡಿಸೆಂಬರ್ 2012, 13:20 IST |
Updated: 27 ಡಿಸೆಂಬರ್ 2012, 13:20 IST |
ಸೋಮವಾರಪೇಟೆ: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮವಾರ ಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಚೌಡ್ಲು, ಕಿಬ್ಬೆಟ್ಟ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಅಲ್ಲಿಯ ವಿದ್ಯಾರ್ಥಿಗಳು ಆಗ್ರಹಿಸಿದರು. |
ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಗಂಗಾಧರ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಈ ಚರ್ಚೆ ಮಾಡಲಾಯಿತು. |
ವಿದ್ಯುತ್ ಕಡಿತದಿಂದ ವಿದ್ಯಾಭ್ಯಾಸ ಹಾಳಾಗುತ್ತಿದೆ. ಓದುವ ಸಮಯದ ್ಲಲಾದರೂ, ವಿದ್ಯುತ್ ಕಡಿತ ಮಾಡದಂತೆ ಸೆಸ್ಕ್‌ಗೆ ಸೂಚಿಸಲು ಭರತ್ ಆಗ್ರಹಿಸಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ, ಕನ್ನಡ ಪಾಠ ಮಾಡಲು ಶಿಕ್ಷಕರಿಲ್ಲ. ಕೂಡಲೇ ಶಿಕ್ಷಕರನ್ನು ನೇಮಿಸಬೇಕು ಎಂದು ರಕ್ಷಿತಾ ಒತ್ತಾಯಿಸಿದರು. |
ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಶಿಕ್ಷಕರು ಶಾಲೆಗೆ ಬರುತ್ತಿಲ್ಲವೆಂದರೆ ಏನು ಮಾಡುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದನ್ನು ಗಮನಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಹೇಳಿದರು. |
ಚೌಡ್ಲು ಶಾಲೆಗೆ ಕಾಂಪೌಂಡ್ ಇಲ್ಲದಿರುವುದರಿಂದ ರಜಾ ದಿನಗಳಲ್ಲಿ ಬಿಡಾಡಿ ದನಗಳು ಶಾಲೆಯ ಅವರಣದಲ್ಲಿ ಮಲಗುತ್ತವೆ. ಕೆಲವು ಸಾರ್ವಜನಿಕರು ಶೌಚಾಲಯವನ್ನು ಗಲೀಜು ಮಾಡುತ್ತಾರೆ. ಬೆಳಿಗ್ಗೆ ನಾವೇ ಶೌಚಾಲಯವನ್ನು ಸ್ವಚ್ಛಗೊಳಿಸಬೇಕು ಎಂದು ರಂಜಿತಾ ಆರೋಪಿಸಿದರು. |
ಚೌಡ್ಲು ಶಾಲೆಯ ಕೆಲವು ಅಭಿವೃದ್ಧಿ ಕೆಲಸಗಳನ್ನು ಪಂಚಾಯಿತಿ ವತಿಯಿಂದ ಮಾಡಲಾಗಿದೆ. ಮುಂದೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಸದಸ್ಯ ಮನುಕುಮಾರ್ ರೈ ತಿಳಿಸಿದರು. |
ಕಿಬ್ಬೆಟ್ಟ ಶಾಲೆಗೆ ಆಸ್ತಿ ದಾಖಲಾತಿಗಳೇ ಇಲ್ಲ. ಇದರ ಬಗ್ಗೆ ಗ್ರಾಮ ಪಂಚಾಯಿತಿ ಗಮನಹರಿಸಬೇಕು ಎಂದು ಅಲ್ಲಿನ ಶಿಕ್ಷಕರು ಹೇಳಿದರು. ಶಾಲಾಭಿವೃದ್ಧಿ ಮಂಡಳಿಯವರು, ದಾನಪತ್ರವನ್ನು ಪಡೆದು, ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ, ತಹಶೀಲ್ದಾರರಿಂದ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಸಭೆ ಸೂಚಿಸಿತು. |
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಗಿರೀಶ್, ಶಶಿಕಲಾ ದೇವರಾಜ್, ಎಸ್.ಎನ್. ಸತೀಶ್, ಕೊರಗಪ್ಪ, ಎಚ್.ಜಿ. ಚಿಂತು, ಪಿಡಿಒ ಗಣಪತಿ ಉಪಸ್ಥಿತರಿದ್ದರು. ಚೌಡ್ಲು, ಸೋಮವಾರಪೇಟೆ, ಕಿಬ್ಬೆಟ್ಟ ಸರ್ಕಾರಿ ಶಾಲೆಗಳ ಮಕ್ಕಳು ಹಾಗೂ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು. |
Subsets and Splits
No community queries yet
The top public SQL queries from the community will appear here once available.