text
stringlengths
0
61.5k
ಭಾನುವಾರ ಬೆಳಿಗ್ಗೆ 11.30ರ ಸುಮಾರಿಗೆ ಪ್ರಸವದ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಕೆಯನ್ನು ನರ್ಸಿಂಗ್ ಹೋಂಗೆ ಕರೆದುಕೊಂಡು ಬರಲಾಗಿತ್ತು. ಪ್ರಸವದ ವೇದನೆಯಿಂದ ಮಹಿಳೆ ಬಳುತ್ತಿರುವ ಸಂದರ್ಭದಲ್ಲಿಯೇ ಆಸ್ಪತ್ರೆಯ ಸಿಬ್ಬಂದಿಗಳು ಕೊರೋನಾ ಸೋಂಕಿತ ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದರು. ನರ್ಸಿಂಗ್ ಹೋಂನ ಹೊರಾಂಗಣದಲ್ಲಿ ಗರ್ಭಿಣಿ ಮಹಿಳೆಯನ್ನು ಕೂರಿಸಲಾಗಿತ್ತು. ಸುಮಾರು 6 ಗಂಟೆಗಳ ಕಾಲ ಅಲ್ಲಿಯೇ ಇರಲಾಗಿತ್ತು. ಯಾವುದೇ ವೈದ್ಯರಾಗಲೀ, ನರ್ಸಗಳಾಗಲೀ ಚಿಕಿತ್ಸೆ ನೀಡಲು ಮುಂದಕ್ಕೆ ಬರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ನರ್ಸಿಂಗ್ ಹೋಮ್ ಗಳು ಇಷ್ಟೊಂದು ನಿರ್ಲಕ್ಷ್ಯದಿಂದ ಇದ್ದರೆ ಹೇಗೆ? ಪ್ರಸವದ ವೇದನೆಯಿಂದ ಬಳಲುತ್ತಿರುವ ಮಹಿಳೆಯನ್ನು ಹೊರಗೆ ಹಾಕಲು ಹೇಗೆ ಸಾಧ್ಯ? ಒಂದು ವೇಳೆ ಚಿಕಿತ್ಸೆ ನೀಡಲು ಸಾಧ್ಯವಾಗದೇ ಹೋದರೆ ಬೇರೊಂದು ಆಸ್ಪತ್ರೆಗೆ ಹೋಗುವಂತೆ ನಮಗೆ ಮಾರ್ಗದರ್ಶನ ನೀಡಬಹುದಿತ್ತು. ಆದರೆ, ಅಂತಹ ಯಾವುದೇ ಕೆಲಸವನ್ನು ಯಾವುದೇ ಸಿಬ್ಬಂದಿಯೂ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ಚಿಕಿತ್ಸೆ ನೀಡುವುದು ಆಸ್ಪತ್ರೆಯ ಜವಾಬ್ದಾರಿಯಾಗಿರುತ್ತದೆ. ನಾವು ಸಾಕಷ್ಟು ಆತಂಕಕ್ಕೊಳಗಾಗಿದ್ದೆವು. ಚಿಕಿತ್ಸೆ ಕೊಡಿಸಲು ಸಾಕಷ್ಟು ಆಸ್ಪತ್ರೆಗಳಿಗೆ ಅಲೆದೆವು. ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶ್ವರಂ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸೋಮವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದಳು ಎಂದಿದ್ದಾರೆ.
ಇನ್ನು ಮಹಿಳೆಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯು ನರ್ಸಿಂಗ್ ಹೋಮ್ನ್ನು ಸಂಪರ್ಕಿಸಿದಾಗ ಅಲ್ಲಿನ ಸಿಬ್ಬಂದಿಗಳು ಮಹಿಳೆಗೆ ಕೊರೋನಾ ಇರುವುದು ದೃಢಪಡಿಸಿದ್ದಾರೆ. ಈ ನಡುವೆ ಕುಟುಂಬಸ್ಥರಿಗೆ ಬಿಬಿಎಂಪಿ ಅಧಿಕಾರಿಗಳೂ ಕೂಡ ಕರೆ ಮಾಡಿದ್ದು, ಮಾಹಿತಿ ನೀಡಿದ್ದಾರೆ. ಇನ್ನು ಮಲ್ಲೇಶ್ವರಂ ಆಸ್ಪತ್ರೆಯಲ್ಲಿ ಖರ್ಚು ಭರಿಸಲು ಸಾಧ್ಯವಿಲ್ಲ ಎಂದು ಹೇಳಿದ ಕುಟುಂಬ ಇದೀಗ ಮಹಿಳೆಯನ್ನು ವಾಣಿವಿಲಾಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು, ನಗರರದಲ್ಲಿ ಸಾಕಷ್ಟು ಹೆರಿಗೆ ಆಸ್ಪತ್ರೆಗಳಿವೆ. ಆಸ್ಪತ್ರೆಗಳೊಂದಿಗೆ ನಿರಂತರ ಸಂಪರ್ಕ ಹೊಂದಲಾಗುತ್ತದೆ. ಶೇ.50ರಷ್ಟು ಕೋರಿಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸಲಾಗುತ್ತದೆ. ಪ್ರಕರಣ ಸಂಬಂಧ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
Coronavirus Bengaluru Pregnant Coronavirus Nursing home ಕೊರೋನಾ ವೈರಸ್ ಬೆಂಗಳೂರು ಗರ್ಭಿಣಿ ಕೊರೋನಾ ನರ್ಸಿಂಗ್ ಹೋಮ್
ಬ್ರೇಕಿಂಗ್ : ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ..?! – EESANJE / ಈ ಸಂಜೆ
ಬ್ರೇಕಿಂಗ್ : ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ..?!
January 25, 2021 Sunil Kumar BJP Govt, cm yeddyurappa, minister anand singh, minister portfolio, resigns
ಬೆಂಗಳೂರು,ಜ.25-ಏಕಾಏಕಿ ತಮ್ಮ ಖಾತೆಯನ್ನು ಬದಲಾವಣೆ ಮಾಡಲು ತೀರ್ಮಾನಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರದ ವಿರುದ್ಧ ಸೆಡ್ಡು ಹೊಡೆದಿರುವ ಆನಂದ್ ಸಿಂಗ್ ನಾಳೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ನಾಳೆ ಮಧ್ಯಾಹ್ನ ರಾಜಭವನಕ್ಕೆ ತೆರಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಆನಂದ್ ಸಿಂಗ್ ರಾಜೀನಾಮೆ ಕೊಟ್ಟರೆ ಆಡಳಿತಾರೂಢ ಬಿಜೆಪಿಯಲ್ಲಿ ದೊಡ್ಡ ಅಲ್ಲೋಲ್ಲಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಇದೆ.
ಈ ಬೆಳವಣಿಗೆಗಳ ನಡುವೆಯೇ ಸಂಪುಟದಲ್ಲಿ ಸ್ಥಾನಮಾನ ಸಿಗದೆ ಕುದಿಯುತ್ತಿರುವ ಅಸಮಾಧಾನಿತ ಶಾಸಕರು ಗುರುವಾರ ಅಥವಾ ಶುಕ್ರವಾರ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಕಳೆದ ವಾರ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಅರಣ್ಯ ಮತ್ತು ಪರಿಸರ ಖಾತೆಯನ್ನು ಹಿಂಪಡೆದು ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿತ್ತು.
ಇದೀಗ ಬದಲಾದ ಪರಿಸ್ಥಿತಿಯಲ್ಲಿ ಆನಂದ್ ಸಿಂಗ್ ಅವರ ಖಾತೆಯನ್ನು ಮತ್ತೆ ಬದಲಾವಣೆ ಮಾಡಲು ತೀರ್ಮಾನಿಸಲಾಗಿದ್ದು, ಅವರಿಗೆ ಮೂಲಭೂತ ಸೌಕರ್ಯ, ಪರಿಸರ ಹಾಗೂ ಜೈವಿಕ ಪರಿಸರ ಖಾತೆಯನ್ನು ನೀಡಲು ಸಿಎಂ ತೀರ್ಮಾನಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಆನಂದ್ ಸಿಂಗ್ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಆಪ್ತರ ಬಳಿ ಈಗಾಗಲೇ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಶಾಸಕರ ಸಭೆ: ಇನ್ನು ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಕೆಲ ಶಾಸಕರು ಮತ್ತೆ ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಗುರುವಾರ ಅಥವಾ ಶುಕ್ರವಾರ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕರಾದ ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಶಿವರಾಜ್ ಪಾಟೀಲ್, ಪ್ರೊ.ಲಿಂಗಣ್ಣ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ಶಂಕರ್ ಪಾಟೀಲ್ ಮುನ್ನೇನಕೊಪ್ಪ, ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಶಾಸಕರು ಸಭೆ ಸೇರುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿಂದೆಯೂ ಇವರು ಸಭೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಲವು ತೀರ್ಮಾನಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರ ಒತ್ತಡಕ್ಕೆ ಮಣಿದು ಪುನಃ ಅವರಿಗೆ ವೈದ್ಯಕೀಯ ಖಾತೆಯನ್ನು ನೀಡಿರುವುದಕ್ಕೆ ಬಿಜೆಪಿಯ ಶಾಸಕರು ಅಸಮಾಧಾನಗೊಂಡಿದ್ದಾರೆ.
ಸಿಎಂ ಅವರು ಸುಧಾಕರ್ ಅವರ ಬ್ಲಾಕ್‍ಮೇಲ್ ಒತ್ತಡಕ್ಕೆ ಮಣಿದು ಪುನಃ ಅದೇ ಖಾತೆಯನ್ನು ನೀಡಿದ್ದಾರೆ. ನಾವು ಮೂರ್ನಾಲ್ಕು ಬಾರಿ ಗೆದ್ದು ಬಂದಿದ್ದರೂ ಸುಮ್ಮನಿದ್ದೇವೆ. ಅನ್ಯ ಪಕ್ಷಗಳಿಂದ ವಲಸೆ ಬಂದವರ ವರ್ತನೆ ಅತಿಯಾಗಿದೆ. ಸಭೆಯಲ್ಲಿ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಪ್ರಮುಖರೊಬ್ಬರು ತಿಳಿಸಿದ್ದಾರೆ.
'ಮಾನವೀಯತೆ ಜಾಗೃತಗೊಳ್ಳುವ ಸುದಿನ' | Prajavani
ಜಿಲ್ಲೆಯ ಎಲ್ಲೆಡೆ ಸಡಗರ ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಣೆ
'ಮಾನವೀಯತೆ ಜಾಗೃತಗೊಳ್ಳುವ ಸುದಿನ'
Published: 17 ಜೂನ್ 2018, 14:57 IST
Updated: 17 ಜೂನ್ 2018, 14:57 IST
ಯಾದಗಿರಿ: ಪವಿತ್ರ ರಂಜಾನ ಮಾಸದಲ್ಲಿರೋಜಾ (ಉಪವಾಸ) ಆಚರಣೆಯಿಂದ ಮನುಷ್ಯನ ಅಂತರಂಗ, ಬಹಿರಂಗ ಶುದ್ಧಿಯಾಗುತ್ತದೆ. ಸರ್ವ ಧರ್ಮೀಯರ ಜೊತೆ ಶಾಂತಿ, ಸಹಬಾಳ್ವೆ ಹಾಗೂ ಸೌಹಾರ್ದಯುತವಾಗಿ ಜೀವನ ನಡೆಸಿದಾಗ ಮಾತ್ರ ರಂಜಾನ್ ಆಚರಣೆ ಸಾರ್ಥಕವಾಗುತ್ತದೆ ಎಂದು ಮುಸ್ಲಿಂ ಸಮುದಾಯದ ಧರ್ಮಗುರು ಖಾಜಾ ಹಸನ್ ಸಿದ್ದಿಕಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರಿನ ಈದ್ಗಾ ಮೈದಾನದಲ್ಲಿ ಈದ್–-ಉಲ್‌–ಫಿತರ್ ನಿಮಿತ್ತ ಶನಿವಾರ ನಡೆದ
ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗ್ರಂಥ ಕುರಾನ್ ಪಟಿಸಿ ಅವರು ಮಾತನಾಡಿದರು.
ಮುಸ್ಲಿಂ ಸಮಯದಾಯದವರು ಪ್ರಾರ್ಥನೆ ಸಲ್ಲಿಸುವುದರ ಜತೆಗೆ ಪುಣ್ಯದ ಕಾರ್ಯ, ನೆರವಿನ ಅಭಯ ನೀಡುವ ಧಾರ್ಮಿಕ ಕಾರ್ಯದಲ್ಲಿ ತೊಡಗಿ ಮಾನವೀಯತೆ ಮೆರೆಯಬೇಕು. ಪವಿತ್ರ ಕುರಾನ್ ಗ್ರಂಥದಲ್ಲಿ ರಂಜಾನ್ ಉಪವಾಸದಿಂದ ವ್ಯಕ್ತಿಯ ಮಾನವೀಯತೆ ಜಾಗೃತಗೊಳ್ಳುವ ಸುದಿನವಾಗಿದೆ ಎಂದರು.
ರಂಜಾನ್ ತಿಂಗಳಲ್ಲಿ ಪವಿತ್ರ ಧರ್ಮಗ್ರಂಥ ಕುರಾನ್ ಪಠಣ ಮಾಡುವುದರಿಂದ ಮನಸ್ಸಿನಲ್ಲಿನ ಕಲ್ಮಶಗಳನ್ನು ದೂರವಾಗುತ್ತವೆ. ಅಲ್ಲಾನನ್ನು ಮನದಲ್ಲಿ ನೆನದು ಸಮಾಜದಲ್ಲಿ ಶಾಂತಿ, ನೆಮ್ಮಯಿಂದ ನಾವೆಲ್ಲರು ಒಂದೇ ಎನ್ನುವ ತತ್ವದ ಅಡಿಯಲ್ಲಿ ಜೀವನ ಸಾಗಿಸುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ ಎಂದರು.
ಯಾಕುಬ್ ಬುಕಾರಿ ದರ್ಗಾ ಕಮಿಟಿ ಅಧ್ಯಕ್ಷ ಗೌಸ್ ಮೂಸಾ ಮಾತನಾಡಿ, ಮಾನವಿಯತೆಗೆ ಎಲ್ಲವನ್ನು ಸಮರ್ಪಿಸಿದ ದೈವಶಕ್ತಿಗೆ ಕೃತಜ್ಞತೆ ಅರ್ಪಿಸುವ ಸುವರ್ಣ ಅವಕಾಶವಿದು. ಕ್ಷಮೆ, ಸಹಬಾಳ್ವೆ, ಕೃತಜ್ಞತೆಯ ಸಮರ್ಪಣೆ ಹಾಗೂ ನೈತಿಕ ದಿಗ್ವಿಜಯದ ಸಂಕೇತವಾಗಿದೆ ಎಂದರು.
ಬೆಳಿಗ್ಗೆ 10.30ಕ್ಕೆ ಆರಂಭಗೊಂಡ ಪ್ರಾರ್ಥನೆ 11 ರವರೆಗೆ ನಡೆಯಿತು. ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಳೆ ಈದ್ಗಾ ಕಮಿಟಿ ಅಧ್ಯಕ್ಷ ಮನಸೂರ್ ಆಫಖಾನ್, ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷ ಜಿಲಾನಿ ಆಫ್ ಖಾನ್, ಸಮಧಾನಿ ಮುಸಾ, ಅಬೀದ್ ಮೈನೋದ್ದೀನ್, ಖಾಕಿ ಇಮ್ತಿಯಾಜ್‌, ಶೇಖ್ ಜಕಿಯೋದಿನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.
ನಗರದ ಹಳೆ ಈದ್ಗಾ ಮೈದಾನ, ಹೊಸ ಈದ್ಗಾ, ಮಸೀದಿ ಸದರ್ ದರವಾಜಾ, ಮಸೀದಿ ಚೌಕ್, ಆಸರ್ ಮಜೀದ, ಮಸೀದಿ ಲತಿಫಿಯಾ ಮುಸ್ಲಿಂಪೂರಾ, ಜಾಮಾ ಮಸೀದಿ, ಮದಿನಾ ಮಸೀದಿ ಸೇರಿದಂತೆ 30ಕ್ಕೂ ಮಸೀದಿಗಳಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಗುರುಮಠಕಲ್: ಇಲ್ಲಿನ ಕಾಕಲವಾರ, ಪುಟಪಾಕ್, ಕೇಶ್ವಾರ, ಚಪೆಟ್ಲಾ, ಇಮ್ಲಾಪೂರ, ಯದ್ಲಾಪೂರ, ಗಾಜರಕೋಟ, ಕೋಟಗೇರಾ, ಕಂದಕೂರ ಪಟ್ಟಣಗಳಲ್ಲಿ ಶನಿವಾರ ಮುಸ್ಲಿಮರು ಈದ್‌ ಉಲ್‌ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಮುಸ್ಲಿಂ ಸಮುದಾಯದವರು ಶುಭಾಶಯ ವಿನಿಮಯ ಮಾಡಿ ಕೊಳ್ಳುತ್ತಿದ್ದು ಅಲ್ಲಲ್ಲಿ ಕಂಡು ಬಂದಿತು.
ಸುರಪುರ: ನಗರ ಮತ್ತು ರಂಗಂಪೇಟ ತಿಮ್ಮಾಪುರದ ಮುಸ್ಲಿಮರು ಶನಿವಾರ ಈದ್‌ ಉಲ್‌ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಅವಳಿ ಪಟ್ಟಣಗಳ ಜಾಮೀಯಾ, ಮೆಕ್ಕಾ, ಏಕಮಿನಾರ ಸೇರಿದಂತೆ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇಲ್ಲಿನ ಹಸನಾಪುರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳು ಧರ್ಮೋಪದೇಶ ನೀಡಿದರು.
ಶಹಾಪುರ: ಹಿಂದೂ– ಮುಸ್ಲಿಂರ ಭಾವೈಕ್ಯತೆಯ ತಾಣ ಹಾಗೂ ಸಗರನಾಡಿನ ಹೆಬ್ಬಾಗಿಲು ಆಗಿರುವ ಶಹಾಪುರ ನಗರದಲ್ಲಿ ಶನಿವಾರ ಮುಸ್ಲಿಂ ಸಮುದಾಯವದರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹೊಸ ಬಟ್ಟೆಗಳನ್ನು ಧರಿಸಿ ಹಬ್ಬದ ವಿಶಿಷ್ಟ ಆಹಾರವನ್ನು ತಯಾರಿಸಿ ಇತರೆ ಸಮುದಾಯಗಳ ಮಿತ್ರರನ್ನು ಕರೆದು ವಿಶೇಷ ಭೋಜನವನ್ನು ಉಣಬಡಿಸುವ ಮೂಲಕ ಭಾವೈಕೆತೆ ಮೆರೆದರು.
ನಾಯ್ಕಲ್: ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಶನಿವಾರ ಮುಸ್ಲಿಂ ಸಮುದಾಯದವರು ಗ್ರಾಮದ ಹೊರವಲಯದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಮೌಲಾನ್ ಹುಸೇನಸಾಬ್, ಮಹ್ಮದ ಅಫೀಜ್ ಸಾಬ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಜಾ ಮೈನೂದ್ದೀನ್ ಜಮಶೇರಿ, ಬಾಷುಮೀಯಾ, ಇಸ್ಮಾಯಿಲ್ ಸಾಬ್, ಫಾರುಕ್ ಹೊಸಳ್ಳಿ, ಚಾಂದಪಾಶ ಸೌದಾಗರ, ಜಲಾಲ್‌ಸಾಬ್, ಖಾಜಾಸಾಬ್ ಇದ್ದರು.
ಹೋಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಅದ್ದೂರಿ ಉದ್ಘಾಟನೆ: ಜಿಲ್ಲಾ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು - e-ಉತ್ತರಕನ್ನಡ
Home › ಜಿಲ್ಲಾ ಸುದ್ದಿ › ಹೋಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಅದ್ದೂರಿ ಉದ್ಘಾಟನೆ: ಜಿಲ್ಲಾ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು
ಶಿರಸಿ: ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಪ್ರವಾಸಿ ಕೇಂದ್ರಗಳನ್ನು ಹೆಚ್ಚೆಚ್ಚು ಅಭಿವೃದ್ಧಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಉದ್ಯಮಿ ಭೀಮಣ್ಣ ನಾಯ್ಕ ಮಾಲೀಕತ್ವದ ಸುಪ್ರಿಯಾ ಇಂಟರ್ ನ್ಯಾಷನಲ್ ಹೊಟೇಲ್ ಉದ್ಘಾಟಿಸಿ ಅವರು ಮಾತನಾಡಿದರು. ಪ್ರವಾಸೋದ್ಯಮ ಬೆಳೆಯಲು ಉತ್ತಮ ವಸತಿ ವ್ಯವಸ್ಥೆ ಬೇಕು. ಇದು ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಪ್ರವಾಸೋದ್ಯಮ ಬೆಳೆಸುವುದಕ್ಕೆ ಅನುದಾನ ಒದಗಿಸಿರುವುದಾಗಿ ತಿಳಿಸಿದರು. ಪ್ರವಾಸೋದ್ಯಮದಿಂದಲೇ ಸಾಕಷ್ಟು ದೇಶಗಳು ಅಭಿವೃದ್ಧಿ ಸಾಧಿಸಿವೆ. ಅದೇ ರೀತಿ ರಾಜ್ಯದಲ್ಲೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಬೇಕು ಎಂದರು.
ಉದ್ಯಮ ಬೆಳೆದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗ ಸೃಷ್ಟಿಯಾದರೆ ರಾಜ್ಯದ ಹಾಗೂ ದೇಶದ ಆರ್ಥಿಕತೆ ಸುಧಾರಿಸುತ್ತದೆ. ಆದರೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಇರಬೇಕು. ಬಂಡವಾಳ ಹೂಡುವ ವಾತಾವರಣವಿರಬೇಕು. ಆ ವಾತಾವರಣ ಇಲ್ಲದಿದ್ದರೆ ಬಂಡವಾಳ ಹೂಡಲು ಯಾರೂ ಮುಂದೇ ಬರುವುದಿಲ್ಲ ಎಂದು ಎಚ್ಚರಿಸಿದರು.
ಮಾಜಿ ಸಚಿವ ಆರ್ ವಿ ದೇಶಪಾಂಡೆ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದೆವು. ರಾಜ್ಯದ ಇತಿಹಾಸದಲ್ಲೇ ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ಸರ್ಕಾರ ಅತಿ ಹೆಚ್ಚಿನ ಮಹತ್ವ ನೀಡಿತ್ತು. ಇದೇ ವೇಳೆ ಜಿಲ್ಲೆಯ ಪ್ರವಾಸೋದ್ಯಮವನ್ನೂ ಪ್ರಗತಿಗೊಳಿಸಲು ಯತ್ನಿಸಿದ್ದೇವೆ. ಶಿರಸಿ ಸುತ್ತಮುತ್ತಲಿನ ಸ್ಥಳದಲ್ಲೇ ಬನವಾಸಿ, ಮಾರಿಗುಡಿ, ಜಲಪಾತಗಳೇ ಜಾಸ್ತಿ ಇವೆ. ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದುದರಿಂದ ಇಲ್ಲಿಯ ಯುವಕರು ಎಲ್ಲರೂ ನೌಕರಿಗಾಗೇ ಯತ್ನಿಸಬಾರದು. ಸ್ವ ಉದ್ಯೋಗದತ್ತ ಯತ್ನಿಸಬೇಕು ಎಂದರು.
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, ಪ್ರವಾಸೋದ್ಯಮ ದೃಷ್ಟಿಕೋನದಿಂದ ಈ ಹೊಟೆಲ್ ನಿರ್ಮಾಣ ಆಗಿದೆ. ಕೃಷಿಕರು ಉದ್ಯಮದಲ್ಲಿ ತೊಡಗಿಕೊಳ್ಳಬೇಕು. ಭೀಮಣ್ಣ ನಾಯ್ಕ ಒಂದು ಮಾದರಿ ಉದ್ಯಮಿ ಆಗಿದ್ದಾರೆ ಎಂದರು.
ಹೆಸರಾಂತ ಚಿತ್ರನಟ ಶಿವರಾಜ್ ಕುಮಾರ್, ನಮ್ಮೂರು ಮಂದಾರ ಹೂವೆ ಸೇರಿದಂತೆ ಜಿಲ್ಲೆಯಲ್ಲಿ ತಮ್ಮ ಚಿತ್ರಗಳ ಚಿತ್ರೀಕರಣ ನೆನಪು ಮಾಡಿಕೊಂಡರಲ್ಲದೇ, ಸುಪ್ರಿಯ ಹೊಟೆಲ್ ಒಂದು ಬ್ರಾಂಡ್ ಹೋಟೆಲ್ ಆಗಲಿ ಎಂದು ಆಶಿಸಿದರು. ಛಲ, ಶ್ರದ್ಧೆಯಿದ್ದರೆ ಯಾವುದೇ ಕೆಲಸದಲ್ಲೂ ಯಶಸ್ಸು ದೊರೆಯುತ್ತದೆ ಎಂದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೆಕಾದರೆ ಸರಕಾರ ಕೈಗೊಳ್ಳುವ ಕೆಲಸದ ಜತೆಗೆ ಖಾಸಗಿ ಸಹಭಾಗಿತ್ವವೂ ಬೇಕಾಗುತ್ತದೆ ಎಂದರು.
ಪ್ರಮುಖರಾದ ಅಶೋಕ ಪಟ್ಟಣ, ಕೆ.ಎನ್.ತಿಲಕಕುಮಾರ, ಸುಜಾತಾ ತಿಲಕುಮಾರ, ಮಾಜಿ ಶಾಸಕ ಮಧು ಬಂಗಾರಪ್ಪ, ಅನಿತಾ ಮಧು ಬಂಗಾರಪ್ಪ, ಶಿವರಾಜ ಕುಮಾರ ಪತ್ನಿ ಗೀತಾ ಶಿವರಾಜಕುಮಾರ, ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ, ಟಿಎಸ್‌ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಅಶ್ವಿನ್ ಭೀಮಣ್ಣ ನಾಯ್ಕ, ಗೀತಾ ಭೀಮಣ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಉದ್ಯಮಿ ಭೀಮಣ್ಣ ನಾಯ್ಕ ಸ್ವಾಗತಿಸಿದರು. ಪ್ರೊ.ಕೆ.ಎನ್.ಹೊಸ್ಮನಿ ನಿರೂಪಿಸಿದರು.
ಕೈಗೆಟುಕದ ಅದೃಷ್ಟ: ಭೀಮಣ್ಣ ನಾಯ್ಕ ಅವರಿಗೆ ರಾಜಕೀಯದಲ್ಲಿ ಅದೃಷ್ಟ ದೊರೆತಿಲ್ಲ. ವಿಧಾನಸಭೆ ಹಾಗು ವಿಧಾನಪರಿಷತ್ ಚುನಾವಣೆಯಲ್ಲಿ ಹಲವು ಭಾರಿ ಸ್ಪರ್ಧಿಸಿದರೂ ಅದೃಷ್ಟ ಒಲಿದು ಬಂದಿಲ್ಲ. ಉದ್ಯಮದಲ್ಲಿ ಅವರು ಬೆಳೆದಿರುವುದು ಸಂತೋಷ. ಈ ಮೂಲಕ ಪ್ರವಾಸೋದ್ಯಮಕ್ಕೆ ಬಲ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು.
ಆಪಲ್ ಮ್ಯಾಕ್ ಒಎಸ್ ಎಕ್ಸ್ | ಗಾಗಿ ಭದ್ರತಾ ನವೀಕರಣವನ್ನು ಬಿಡುಗಡೆ ಮಾಡುತ್ತದೆ ನಾನು ಮ್ಯಾಕ್‌ನಿಂದ ಬಂದವನು
ಆಪಲ್ ಮ್ಯಾಕ್ ಒಎಸ್ ಎಕ್ಸ್ ಗಾಗಿ ಭದ್ರತಾ ನವೀಕರಣವನ್ನು ಬಿಡುಗಡೆ ಮಾಡುತ್ತದೆ
ಜೇವಿಯರ್ ಪೋರ್ಕಾರ್ | | MacOS ಸಿಯೆರಾ, ಸುದ್ದಿ, OS X ಎಲ್ ಕ್ಯಾಪಿಟನ್
ನಿನ್ನೆ, ಆಪಲ್ ಬಿಡುಗಡೆ ಮಾಡಿದೆ ಭದ್ರತಾ ನವೀಕರಣ ಓಎಸ್ ಎಕ್ಸ್ ಎಲ್ ಕ್ಯಾಪಿಟನ್ಗಾಗಿ 2016-001 10.11.6 ಮತ್ತು ಓಎಸ್ ಎಕ್ಸ್ ಯೊಸೆಮೈಟ್ಗಾಗಿ ಸೆಕ್ಯುರಿಟಿ ಅಪ್ಡೇಟ್ 2016-005 10.11.5. ಓಎಸ್ ಎಕ್ಸ್ 10.9 ಮೇವರಿಕ್ಸ್ ಬಳಕೆದಾರರು ಸಫಾರಿಗಾಗಿ ನಿರ್ದಿಷ್ಟ ನವೀಕರಣವನ್ನು ಹೊಂದಿದ್ದು ಅದು ಈ ಸಮಸ್ಯೆಯನ್ನು ಪರಿಹರಿಸುತ್ತದೆ. ಎಲ್ಲಾ ಮ್ಯಾಕ್ ಬಳಕೆದಾರರಿಗೆ ಭದ್ರತಾ ನವೀಕರಣಗಳನ್ನು ಶಿಫಾರಸು ಮಾಡಲಾಗಿದೆ ಮತ್ತು ಸುರಕ್ಷತಾ ಅಪಾಯಗಳಿಂದ ಅಥವಾ ಸಂಬಂಧಿತ ಹಾನಿಯಿಂದ ಸಾಧನಗಳನ್ನು ರಕ್ಷಿಸಲು ಉದ್ದೇಶಿಸಲಾಗಿದೆ.
ಅಧಿಸೂಚನೆ ಕೇಂದ್ರದಲ್ಲಿ ನವೀಕರಣ ಅಧಿಸೂಚನೆಯನ್ನು ಸಕ್ರಿಯಗೊಳಿಸಿದ ಮ್ಯಾಕ್ ಬಳಕೆದಾರರಿಗೆ ಈ ಭದ್ರತಾ ಪ್ಯಾಚ್ ಅನ್ನು ತೋರಿಸಲಾಗಿದೆ, ಇದು ನಾನು ಶಿಫಾರಸು ಮಾಡುವ ಆಯ್ಕೆಯಾಗಿದೆ.
ಈ ಸಂದರ್ಭದಲ್ಲಿ ದುರ್ಬಲತೆಯನ್ನು "ಪೆಗಾಸಸ್" ಎಂದು ಕರೆಯಲಾಗುತ್ತದೆ. ಮಾಲ್‌ವೇರ್ ಸರಣಿಯನ್ನು ಸ್ಥಾಪಿಸಲು ದುರ್ಬಲತೆಯು ವೆಬ್‌ಕಿಟ್‌ನ ಲಾಭವನ್ನು ಪಡೆದುಕೊಂಡಿತು. ಕೆಲವು ದಿನಗಳ ಹಿಂದೆ ಇದೇ ಸಮಸ್ಯೆಗೆ ಸಂಬಂಧಿಸಿದಂತೆ ಐಒಎಸ್ ನವೀಕರಣವನ್ನು ಬಿಡುಗಡೆ ಮಾಡಲಾಯಿತು, ಇದನ್ನು ನಿರ್ದಿಷ್ಟವಾಗಿ ಆವೃತ್ತಿ 9.3.5 ರಲ್ಲಿ ನಿವಾರಿಸಲಾಗಿದೆ.
ದುರುದ್ದೇಶಪೂರಿತ ಅಪ್ಲಿಕೇಶನ್ ನಮ್ಮ ಸಾಧನದ ಬಾಹ್ಯ ನಿಯಂತ್ರಣವನ್ನು ಬಳಕೆದಾರರು ಗಮನಿಸದೆ ಅಥವಾ ಅದರ ಜ್ಞಾನವಿಲ್ಲದೆ ಅನುಮತಿಸುತ್ತದೆ, ಮತ್ತು Gmail, Facebook, Skype ನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಂತೆ ನಟಿಸುತ್ತದೆ. ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ನಮ್ಮ ಮ್ಯಾಕ್‌ನ ನಿಯಂತ್ರಣವನ್ನು ಬಾಹ್ಯವಾಗಿ ಪ್ರಾರಂಭಿಸಬಹುದು, ಇದು ಗಂಭೀರ ಭದ್ರತಾ ಸಮಸ್ಯೆಯಾಗಿದ್ದು, ಅದನ್ನು ಪರಿಹರಿಸಲು ಆಪಲ್ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಈ ಕೆಳಗಿನ ಸಂದೇಶದೊಂದಿಗೆ ಆಪಲ್ ಸಮಸ್ಯೆಯನ್ನು ವರದಿ ಮಾಡಿದೆ:
ಇದಕ್ಕಾಗಿ ಲಭ್ಯವಿದೆ: ಓಎಸ್ ಎಕ್ಸ್ ಮೇವರಿಕ್ಸ್ ವಿ 10.9.5, ಓಎಸ್ ಎಕ್ಸ್ ಯೊಸೆಮೈಟ್ ವಿ 10.10.5, ಮತ್ತು ಓಎಸ್ ಎಕ್ಸ್ ಎಲ್ ಕ್ಯಾಪಿಟನ್ ವಿ 10.11.6
ವಿವರಣೆ: ಸುಧಾರಿತ ಮೆಮೊರಿ ನಿರ್ವಹಣೆಯ ಮೂಲಕ ಮೆಮೊರಿ ಭ್ರಷ್ಟಾಚಾರದ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಸಿವಿಇ -2016-4656: ಸಿಟಿಜನ್ ಲ್ಯಾಬ್ ಮತ್ತು ಲುಕ್‌ out ಟ್
ಈ ನ್ಯೂನತೆಯನ್ನು ಲಘುವಾಗಿ ಪರಿಗಣಿಸಬಾರದು ಮತ್ತು ಎಲ್ಲಾ ಓಎಸ್ ಎಕ್ಸ್ ಬಳಕೆದಾರರು ತಕ್ಷಣ ನವೀಕರಿಸಬೇಕು ಎಂದು ಹೇಳಬೇಕಾಗಿಲ್ಲ.
ನಿಮಗೆ ನವೀಕರಣ ತಿಳಿದಿಲ್ಲದಿದ್ದರೆ, ನಿಮ್ಮ ಸಾಧನಗಳನ್ನು ರಕ್ಷಿಸಲು ಸಲಹೆ ನೀಡಲಾಗುತ್ತದೆ. ನೀವು ಆಪ್ ಸ್ಟೋರ್‌ಗೆ ಹೋಗಬಹುದು, ಅಲ್ಲಿ ನವೀಕರಣಗಳ ವಿಭಾಗದಲ್ಲಿ ಅನುಗುಣವಾದ ನವೀಕರಣವನ್ನು ನೀವು ಕಾಣಬಹುದು. ನವೀಕರಣಗಳಿಗಾಗಿ ಪರಿಶೀಲಿಸಿದ ನಂತರ, ಈ ರೀತಿಯ ಸಂದೇಶವು ಕಾಣಿಸುತ್ತದೆ:
ಇದಕ್ಕೆ ಧನ್ಯವಾದಗಳು, ದಿ ಆಪಲ್ ಸಾಫ್ಟ್‌ವೇರ್ ಅನ್ನು ವಿಶ್ವದ ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗಿದೆ.
ಲೇಖನಕ್ಕೆ ಪೂರ್ಣ ಮಾರ್ಗ: ನಾನು ಮ್ಯಾಕ್‌ನಿಂದ ಬಂದವನು » ಆಪಲ್ » ಸುದ್ದಿ » ಆಪಲ್ ಮ್ಯಾಕ್ ಒಎಸ್ ಎಕ್ಸ್ ಗಾಗಿ ಭದ್ರತಾ ನವೀಕರಣವನ್ನು ಬಿಡುಗಡೆ ಮಾಡುತ್ತದೆ
ಶೋಭಾ ಸಂವಿಧಾನ ತಿಳಿದುಕೊಳ್ಳಲಿ - ಯುಟಿ ಖಾದರ್ ವಾಗ್ದಾಳಿ | Shobha Karandlaje must know the meaning of constitution - U T Khader - Kannada Oneindia
» ಶೋಭಾ ಸಂವಿಧಾನ ತಿಳಿದುಕೊಳ್ಳಲಿ - ಯುಟಿ ಖಾದರ್ ವಾಗ್ದಾಳಿ
ಶೋಭಾ ಸಂವಿಧಾನ ತಿಳಿದುಕೊಳ್ಳಲಿ - ಯುಟಿ ಖಾದರ್ ವಾಗ್ದಾಳಿ
Published: Friday, July 21, 2017, 14:20 [IST]
ಮಂಗಳೂರು, ಜುಲೈ 21: "ಇತ್ತೀಚೆಗೆ ಕೇಂದ್ರ ಗೃಹ ಸಚಿವರಿಗೆ ನೀಡಿದ ಕೊಲೆಗಳ ಪಟ್ಟಿಯ ಬಗ್ಗೆ ಶೋಭಾ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಸಂವಿಧಾನ ತಿಳಿದುಕೊಳ್ಳಲಿ," ಎಂದು ಸಚಿವ ಯುಟಿ ಖಾದರ್ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯನ್ನು ಟೀಕಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶರತ್ ಪ್ರಕರಣವಲ್ಲದೆ ಅಶ್ರಫ್ ಕಲಾಯಿ, ಹರೀಶ್ ಪೂಜಾರಿ, ವಿನಾಯಕ ಬಾಳಿಗಾ, ಪ್ರವೀಣ್ ಪೂಜಾರಿ ಹತ್ಯೆಯ ಬಗ್ಗೆ ಶೋಭಾ ಯಾಕೆ ಮಾತನಾಡುತ್ತಿಲ್ಲ?" ಎಂದು ಪ್ರಶ್ನಿಸಿದ್ದಾರೆ.
"ಸಂಸದೆ ಶೋಭಾ ಕರಂದ್ಲಾಜೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಕೊಲೆಯಲ್ಲಿ ಭಯೋತ್ಪಾದಕರ ಪಾತ್ರ ಇದೆ ಎಂಬ ಮಾಹಿತಿ ಬಂದ ತಕ್ಷಣ ರಾಜ್ಯ ಸರಕಾರ ಯಾರದೇ ಬೇಡಿಕೆಗೆ ಕಾಯದೆ ಸ್ವಯಂ ಆಗಿ ಎನ್‌ಐಎ ತನಿಖೆಗೆ ಒಪ್ಪಿಸಿದೆ," ಎಂಬುದನ್ನು ಶೋಭಾ ಕರಂದ್ಲಾಜೆ ತಿಳಿದುಕೊಳ್ಳಬೇಕು ಎಂದು ಖಾದರ್ ಖಾರವಾಗಿ ಹೇಳಿದರು.
"ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯ ಅಸಹಜ ಸಾವಿನ ಸಂದರ್ಭವೂ ಶೋಭಾ ಸಹಿತ ಬಿಜೆಪಿಗರು ಬೇಕಾಬಿಟ್ಟಿ ಆರೋಪ ಸುರಿಸಿದರು. ಆದರೆ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರೇ ಇದರ ಬಗ್ಗೆ ಸೊಲ್ಲೆತ್ತಲಿಲ್ಲ. ಹೀಗೆ ಅಸ್ತಿತ್ವ ಕಳಕೊಂಡಿರುವ ಶೋಭಾ ಶರತ್ ಹತ್ಯೆಯನ್ನು ಎನ್‌ಐಎಗೆ ಕೊಡಿ ಎನ್ನುತ್ತಾರೆ. ಎನ್‌ಐಎಗೆ ಯಾವುದನ್ನು ಕೊಡಬೇಕು ಮತ್ತು ಕೊಡಬಾರದು ಎಂಬ ಕನಿಷ್ಠ ಜ್ಞಾನ ಸಂಸದೆಯಾದ ಶೋಭಾರಿಗೆ ಇಲ್ಲವೇ?
Shobha Karandlaje Called Rahul Gandhi Baccha | Oneindia Kannada
ಅವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ," ಎಂದು ಸಚಿವ ಯು.ಟಿ.ಖಾದರ್ ಆರೋಪಿಸಿದರು.
shobha karandlaje, ut khader, congress, mangaluru, ಯುಟಿ ಖಾದರ್, ಮಂಗಳೂರು, ಶೋಭಾ ಕರಂದ್ಲಾಜೆ
"Shobha Karandlaje does not know the meaning of constitution. She must first know the meaning of it and then should have prepared the list of dead Hindu leaders," said Minister U T khader at the press meet held at Congress Bhavana here in Mangaluru on July 20.
ಮಂಡ್ಯ: ಶಾಂತಿಯುತ ಚುನಾವಣೆಗೆ 16 ರೌಡಿ ಶೀಟರ್‌ಗಳ ಗಡಿಪಾರು | Prajavani
ಮಂಡ್ಯ: ಶಾಂತಿಯುತ ಚುನಾವಣೆಗೆ 16 ರೌಡಿ ಶೀಟರ್‌ಗಳ ಗಡಿಪಾರು
Published: 08 ಏಪ್ರಿಲ್ 2019, 19:19 IST
Updated: 08 ಏಪ್ರಿಲ್ 2019, 19:19 IST
ಮಂಡ್ಯ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಯ ವ್ಯಾಪ್ತಿಯ 16 ಮಂದಿ ರೌಡಿಶೀಟರ್‌ಗಳನ್ನು ಜಿಲ್ಲಾ ವ್ಯಾಪ್ತಿಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಸೋಮವಾರ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಸೆಂಟ್ರಲ್‌ ಠಾಣೆ ವ್ಯಾಪ್ತಿಯ ಸೂರ್ಯ ಅಲಿಯಾಸ್‌ ಚಾಕು ಸೂರಿ (23), ಪ್ರಮೋದ ಅಲಿಯಾಸ್‌ ಪಲ್ಲಿ (20), ಕೆ.ಆರ್‌.ಪೇಟೆ ಪಟ್ಟಣ ಠಾಣೆ ವ್ಯಾಪ್ತಿಯ ಕೆ.ಕೆ.ಪಣೀಶ (30), ಸೈಯದ್ ಅಲಿಯಾಸ್‌ ಸೈಯದ್‌ ಖಲೀಲ್‌ (35), ಕಿರಣ ಅಲಿಯಾಸ್‌ ಅಗಸ್ತ್ಯ (22), ವೆಂಕಟೇಶ್‌ (24), ವಿಜಯ ಅಲಿಯಾಸ್‌ ಬಾಡು (26), ಗಣೇಶ ಅಲಿಯಾಸ್‌ ಬ್ಯಾಡಗಿ (22), ಕಾರ್ತಿಕ್‌ ಅಲಿಯಾಸ್‌ ಜಂಗಲ್‌ (21), ಮಂಡ್ಯ ಪೂರ್ವ ಠಾಣೆ ವ್ಯಾಪ್ತಿಯ ಕುಮಾರ ಅಲಿಯಾಸ್‌ ಮಜ್ಜಿಗೆ (28), ಮಂಡ್ಯ ಪಶ್ಚಿಮ ಠಾಣೆ ವ್ಯಾಪ್ತಿಯ ಕುಮಾರ ಅಲಿಯಾಸ್‌ ಡಾನ್‌ (27), ಮದ್ದೂರು ಠಾಣೆ ವ್ಯಾಪ್ತಿಯ ವೀರೇಶ್‌ (22), ವರುಣ್‌ (22), ಸೂರಜ್‌ಗೌಡ ಅಲಿಯಾಸ್‌ ಪುಟಾಣಿ (22), ಎಂ.ಬಿ.ಪ್ರಶಾಂತ್‌ ಅಲಿಯಾಸ್‌ ಕುಳ್ಳಿ (24), ಮಳವಳ್ಳಿ ಠಾಣೆ ವ್ಯಾಪ್ತಿಯ ಮರಿಲಿಂಗೇಗೌಡ (62) ಗಡಿಪಾರಾದ ರೌಡಿ ಶೀಟರ್‌ಗಳು.
'ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದರು.
ಪವರ್ ಸ್ಟಾರ್ ಬರ್ತ್ ಡೇ ಸಂಭ್ರಮಕ್ಕೆ ಬ್ರೆಕ್ ಹಾಕಿದ ಕೊರೋನಾ - Hosadigantha
Home CINEMA NEWS ಪವರ್ ಸ್ಟಾರ್ ಬರ್ತ್ ಡೇ ಸಂಭ್ರಮಕ್ಕೆ ಬ್ರೆಕ್ ಹಾಕಿದ ಕೊರೋನಾ
ಬೆಂಗಳೂರು: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಟ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಮಾ.17ರಂದು 44ನೇ ವಸಂತಕ್ಕೆ ಕಾಲಿಡುವ ನಟ ಪುನೀತ್, ಈ ವರ್ಷ ನಾನು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಯಾರೂ 17ರಂದು ತಮ್ಮ ಊರುಗಳಿಂದ ನಮ್ಮ ಮನೆಯ ಬಳಿ ಬಾರದಿರಿ. ನಾನು ಮನೆಯಲ್ಲಿ ಇರುವುದಿಲ್ಲ ಎಂದು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು. ಹೀಗಾಗಿ ಬೇರೆ ಬೇರೆ ಊರುಗಳಿಂದ ಬಂದು ನೀವು ಪ್ರೀತಿ, ವಿಶ್ವಾಸ ತೋರಿಸುತ್ತಿದ್ದಿರಿ. ಖಂಡಿತವಾಗಿ ನಿಮ್ಮ ಪ್ರೀತಿ ಮತ್ತು ವಿಶ್ವಾಸ ನನ್ನ ಮೇಲೆ ಇರುತ್ತದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.
Previous articleಯೆಸ್ ಪುನಶ್ಚೇತನಕ್ಕೆ ಅಸ್ತು: ಎಸ್‌.ಬಿ.ಐ ಶೇ. 49ರಷ್ಟು ಹೂಡಿಕೆ
Next articleಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯೇ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿದ್ದರೂ ಪ್ರಾಧ್ಯಾಪಕನಾದ!
ನಾಳೆಯಿಂದ ಪೇಟಿಎಂ ಮಾಲ್‌ನಲ್ಲಿ ಫೇಸ್ಟಿವ್‌ ಸೀಸನ್‌ ಸೇಲ್‌..! ಭರ್ಜರಿ ಆಫರ್‌ಗಳು..! \ Paytm Mall Festive Season Sale to begin from September 20; Offers on Samsung Galaxy Note 9, Oppo F7 and more - Kannada Gizbot
ಒಂದಾದ ಮೇಲೆ ಒಂದರಂತೆ ಹಬ್ಬಗಳ ದಿನಗಳು ಆರಂಭವಾಗಿದೆ. ಹಬ್ಬಕ್ಕೆ ರಂಗು ತುಂಬಲು ಆನ್ ಲೈನ್ ಶಾಪಿಂಗ್ ಮಾಲ್ ಗಳೂ ಕೂಡ ತಯಾರಾಗಿ ನಿಂತಿವೆ. ಹೌದು ಹಲವಾರು ಹೊಸ ಪ್ರೊಡಕ್ಟ್ ಗಳ ಬಿಡುಗಡೆ, ರಿಯಾಯಿತಿ ಮಾರಾಟಗಳು, ಭಿನ್ನವಿಭಿನ್ನ ಆಫರ್ ಗಳು ಗ್ರಾಹಕರಿಗಾಗಿ ಆನ್ ಲೈನ್ ಮಾರಾಟ ಮಳಿಗೆಗಳಲ್ಲಿ ಕಾಯುತ್ತಿದೆ. ಹೆಚ್ಚಿನ ಎಲ್ಲಾ ಇ-ಕಾಮರ್ಸ್ ಸೈಟ್ ಗಳಲ್ಲೂ ಕೂಡ ಹಬ್ಬದ ಸೀಸನ್ ಗೆ ವಿಶೇಷ ಸೇಲ್ ನ್ನು ಆಯೋಜಿಸಲಾಗಿದೆ.
ಇದೀಗ ಪೇಟಿಎಂ ಮಾಲ್ ತನ್ನ ಫೆಸ್ಟೀವ್ ಸೀಸನ್ ಸೇಲ್ ನ ದಿನಾಂಕವನ್ನು ಪ್ರಕಟಿಸಿದ್ದು, ಮೂರು ದಿನಗಳ ಕಾಲ ರಿಯಾಯಿತಿ ಮಾರಾಟವನ್ನು ಆಯೋಜಿಸಿದೆ. ಸೆಪ್ಟೆಂಬರ್ 20 ರಿಂದ ಈ ಹಬ್ಬದ ಸೀಸನ್ ಸೇಲ್ ಪೇಟಿಎಂ ಮಾಲ್ ನಲ್ಲಿ ಆರಂಭವಾಗಲಿದ್ದು ಸೆಪ್ಟೆಂಬರ್ 23ವರೆಗೆ ನಡೆಯಲಿದೆ.
ಮಾರುತಿ ಬೈಕ್ ಗೆಲ್ಲುವ ಅವಕಾಶ
ಈ ಸೇಲ್ ನಲ್ಲಿ ಪೇಟಿಎಂ ಮಾಲ್ ನಲ್ಲಿ ಹಲವು ರೀತಿಯ ರಿಯಾಯಿತಿ ಮಾರಾಟಗಳು ನಡೆಯಲಿದ್ದು ಮೊಬೈಲ್ ಗಳು, ಟಿವಿ ಮತ್ತು ಅಪ್ಲಯನ್ಸ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಮತ್ತು ಇತರೆ ವಸ್ತುಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ಈ ಸೇಲ್ ನಲ್ಲಿ ಖರೀದಿಸಿದ ಗ್ರಾಹಕರಿಗೆ ಮಾರುತಿ ಸುಝುಕಿ ಗಿಕ್ಸ್ಸರ್ ಬೈಕ್ ನ್ನು ಗೆಲ್ಲುವ ಅವಕಾಶವೂ ಇದೆ.
ಭರ್ಜರಿ ಕ್ಯಾಷ್ ಬ್ಯಾಕ್ ಸೌಲಭ್ಯ
ಸ್ಮಾರ್ಟ್ ಫೋನ್ ಗಳಾದ ಹಾನರ್ 7ಸಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6 ಪ್ಲಸ್, ಓಪ್ಪೋ ಎಫ್7 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9, ಪಿಕ್ಸಲ್ 2ಎಕ್ಸ್ಎಲ್ ಫೋನ್ ಗಳ ಎಂಆರ್ ಪಿಗಿಂತ ಶೇಕಡಾ 50 ರಷ್ಟು ಉಳಿತಾಯ ಮಾಡಲು ಗ್ರಾಹಕರಿಗೆ ಈ ಸೇಲ್ ನಲ್ಲಿ ಅವಕಾಶವಿರುತ್ತದೆ. ಅಷ್ಟೇ ಅಲ್ಲದೆ ಈ ಫೋನ್ ಗಳ ಖರೀದಿಯಲ್ಲಿ 4000 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವೂ ಇದೆ. ಹಾನರ್ 9 ಲೈಟ್ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ 8 ಫೋನ್ ಗಳ ಮೇಲೆ 2000 ರುಪಾಯಿ ಕ್ಯಾಷ್ ಬ್ಯಾಕ್ ಇದೆ.
ಕಡಿಮೆ ಬೆಲೆಗೆ ಟಿವಿ
ಸ್ಮಾರ್ಟ್ ಫೋನ್ ಗಳಲ್ಲದೆ ಟಿವಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿಯನ್ನು ಈ ಸೇಲ್ ನಲ್ಲಿ ನೀಡಲಾಗುತ್ತಿದೆ. ಇದರಲ್ಲಿ ಎಸಿಗಳು, ಸೋನ್, ಸ್ಯಾಮ್ ಸಂಗ್, ಎಲ್.ಜಿ, ಮೈಕ್ರೋಮ್ಯಾಕ್ಸ್, ಪ್ಯಾನಸಾನಿಕ್ ನ ರೆಫ್ರಿಜರೇಟರ್ ಗಳು ಕೂಡ ಇದರಲ್ಲಿ ಸೇರಿವೆ.
ಇತರೆ ಎಲೆಕ್ಟ್ರಾನಿಕ್ ವಸ್ತುಗಳು
ಹೊಸದಾಗಿ ಬಿಡುಗಡೆಗೊಂಡಿರುವ ವಸ್ತುಗಳ ಕೆಟಗರಿಯಲ್ಲಿ ಡೆಲ್ ಇನ್ಸ್ಪಿರಾನ್ 300, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಮತ್ತು ಪ್ರೀಮಿಯಂ ಆಡಿಯೋಫೈಲ್ ಕಲೆಕ್ಷನ್ ಗಳು ಸೇರಿವೆ. ಡೆಲ್ ಇನ್ಸ್ಪಿರಾನ್ 300 ಮೇಲೆ ಗ್ರಾಹಕರಿಗೆ ಶೇಕಡಾ 12 ರಷ್ಟು ಫ್ಲ್ಯಾಟ್ ಕ್ಯಾಷ್ ಬ್ಯಾಕ್ ಅವಕಾಶವಿದೆ. ಅಷ್ಟೇ ಅಲ್ಲದೆ ಲ್ಯಾಪ್ ಟಾಪ್ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಲಭ್ಯವಿದೆ.