text
stringlengths
0
61.5k
ವೃಷಭ: ಈ ರಾಶಿಯ ವ್ಯಕ್ತಿಗಳು ಈ ತಿಂಗಳಲ್ಲಿ ತುಸು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರಮುಖವಾಗಿ ಆರೋಗ್ಯ ಸಂಬಂಧಿ ವಿಚಾರದಲ್ಲಿ ಹೆಚ್ಚಿನ ಜಾಗೃತಿ ಅಗತ್ಯ.
ಮಿಥುನ: ಈ ರಾಈಯ ಜನರ ಜೀವನದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರದಿದ್ದರೂ, ಮನೆಗೆ ಸಂಬಂಧಿಕರ ಭೇಟಿ ಹೆಚ್ಚಾಗಲಿದೆ. ಇದರಿಂದ ತುಸು ಕಿರಿಕಿರಿಯಾಗುವುದು ಖಚಿತ.
ಕರ್ಕ: ಈ ರಾಶಿಯ ಜನರಿಗೆ ಈ ತಿಂಗಳು ತುಂಬ ಸವಾಲಿನಿಂದ ಕೂಡಿರುತ್ತದೆ. ಅಲ್ಲದೇ ಮಹಿಳೆಯ ಕಾರಣದಿಂದ ಸಂಕಷ್ಟಗಳನ್ನು ಎದುರಿಸಬೇಕಾದ ಪ್ರಸಂಗ ಬರಬಹುದು. ಪ್ರಮುಖವಾಗಿ ಪ್ರೇಮ ಪ್ರಕರಣಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ.
ತುಲಾ: ಈ ರಾಶಿಯ ಜನರು ಈ ತಿಂಗಳನ್ನು ಅತ್ಯಂತ ಸಂತೋಷದಿಂದ ಕಳೆಯಲಿದ್ದಾರೆ. ಗೆಳೆಯರೊಂದಿಗೆ ಪ್ರವಾಸ ಕೈಗೊಳ್ಳುವ ಸಂಭವ ಹೆಚ್ಚು. ಇಷ್ಟೇ ಅಲ್ಲದೇ ಆಧ್ಯಾತ್ಮಿಕತೆಯೆಡೆಗೆ ಮನಸ್ಸು ತುಡಿಯಲಿದೆ.
ಧನು: ಶಾರೀರಿಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗಲಿದೆ. ನೀವು ಮಾಡುವ ಕೆಲಸ ಕಾರ್ಯಗಳಿಗೆ ನಿರೀಕ್ಷಿತ ಫಲ ಸಿಗದೇ ಹೋಗಬಹುದು.
ಮಕರ: ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ತುಸು ಕಷ್ಟವಾಗಲಿದೆ. ವ್ಯಾಪಾರಿಗಳಿಗೆ ಆರ್ಥಿಕ ನಷ್ಟದ ಆತಂಕ ಇರಲಿದೆ.
ಮೀನ: ಅಂದುಕೊಂಡ ಕಾರ್ಯ ಕೈಗೂಡಲಿದೆ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಮತ್ತೊಬ್ಬರ ಮೇಲೆ ನಂಬಿಕೆ ಇಡುವುದು ಸಲ್ಲ. ಅಲ್ಲದೇ ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರುವ ಸಾಧ್ಯತೆ ಇದೆ.
ಮಾಧ್ಯಮದ ಮೇಲೆ ಹರ್ಯಾಣ ಪೊಲೀಸ್ ಲಾಠಿ ಪ್ರಹಾರ | Rampal protest: Media persons injured as Haryana Police target - Kannada Oneindia
ಮಾಧ್ಯಮದ ಮೇಲೆ ಹರ್ಯಾಣ ಪೊಲೀಸ್ ಲಾಠಿ ಪ್ರಹಾರ
| Updated: Tuesday, November 18, 2014, 18:17 [IST]
ಹರ್ಯಾಣ, ನ.18: ವಿವಾದಿತ ಸ್ವಾಮೀಜಿ ರಾಮ್ ಪಾಲ್ ಬಂಧನ ಸಂಬಂಧ ಸ್ವಾಮೀಜಿ ಬೆಂಬಲಿಗರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಗಾಯಗೊಂಡಿದ್ದಾರೆ. ಮಂಗಳವಾರ ಸುದ್ದಿ ಸಂಗ್ರಹಿಸಲು ತೆರಳಿದ ಮಾಧ್ಯಮದವರ ಮೇಲೂ ಪೊಲೀಸರು ದಾಳಿ ಮಾಡಿದ್ದಾರೆ.
ಮಾಧ್ಯಮದವರು ಗಲಾಟೆ ನಡೆಯುತ್ತಿದ್ದ ಸ್ವಾಮೀಜಿ ಆಶ್ರಮವನ್ನು ಸುತ್ತುವರಿದಿದ್ದರು. ಸ್ವಾಮೀಜಿ ಬೆಂಬಲಿಗರು ಮತ್ತು ಪೊಲೀಸರ ನಡುವಿನ ಘರ್ಷಣೆ ಸೆರೆಹಿಡಿಯುತ್ತಿದ್ದರು. ಈ ವೇಳೆ ಪೊಲೀಸರು ಪತ್ರಕರ್ತರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.[ಎರಡು ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳಿಗೆ ಜಾಮೀನು]
ಬಾಯಿ ಮಾತಿಗೂ ಬೆಲೆ ನೀಡದ ಮಾಧ್ಯಮ ಪ್ರತಿನಿಧಿಗಳು ಆಶ್ರಮವನ್ನು ಸುತ್ತುವರಿಯಲು ಪ್ರಯತ್ನಿಸಿದರು. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅನಿವಾರ್ಯವಾಗಿ ಬೆದರಿಸಬೇಕಾಯಿತು ಎಂದು ಹರ್ಯಾಣ ಡಿಜಿಪಿ ಎಸ್.ಎಸ್.ವಸಿಷ್ಠ ಹೇಳಿದ್ದಾರೆ.
ನಾವು ಚಿತ್ರೀಕರಣ ಮಾಡುತ್ತಿದ್ದೇವು, ಏಕಾಏಕಿ ದಾಳಿ ನಡೆಸಿದ ಪೊಲೀಸರು ನಮ್ಮ ಮೇಲೆ ಲಾಠಿ ಬೀಸಿದರು. ಈ ವೇಳೆ ಅನೇಕ ಪತ್ರಕರ್ತರು ತೀವ್ರವಾಗಿ ಗಾಯಗೊಂಡರು. ಅಲ್ಲದೇ ಕ್ಯಾಮರಾಗಳು ಪುಡಿ ಪುಡಿಯಾದವು ಎಂದು ವಾಹಿನಿಯ ವರದಿಗಾರರೊಬ್ಬ ಹೇಳಿದ್ದಾರೆ.
ಅಲ್ಲದೇ ಗಾಯಗೊಂಡ ಪತ್ರಕರ್ತರಿಗೆ ವೈದ್ಯಕೀಯ ನೆರವು ನೀಡುವ ಪ್ರಯತ್ನವನ್ನು ಮಾಡಲಾಗಿಲ್ಲ. ನಿಜವಾಗಿಯೂ ಪೊಲೀಸರ ವರ್ತನೆ ಪ್ರಜಾಪ್ರಭುತ್ವ ವಿರೋಧಿಯಾಗಿತ್ತು ಎಂದು ಮತ್ತೊಬ್ಬ ವರದಿಗಾರ ತಿಳಿಸಿದ್ದಾರೆ. ಒಟ್ಟಿನಲ್ಲಿ ಸ್ವಯಂ ಘೋಷಿತ ದೇವಮಾನವನ ಪ್ರಕರಣ ಪತ್ರಕರ್ತರು ಮತ್ತು ಪೊಲೀಸರ ನಡುವಿನ ಘರ್ಷಣೆಗೆ ಕಾರಣವಾಗಿದ್ದು ಮಾತ್ರ ವಿಚಿತ್ರ.
ಐವತ್ತರಲ್ಲಿ ತುಂಡು ಚಡ್ಡಿ ತೊಟ್ಟ ಅಭಿನೇತ್ರಿ ಶ್ರೀದೇವಿ | Sridevi on The cover of Vogue India Magazine - Kannada Filmibeat
ಐವತ್ತರಲ್ಲಿ ತುಂಡು ಚಡ್ಡಿ ತೊಟ್ಟ ಅಭಿನೇತ್ರಿ ಶ್ರೀದೇವಿ
| Updated: Monday, August 5, 2013, 13:32 [IST]
ಈ ಸಿನಿಮಾ ತಾರೆಗಳಿಗೆ ಐವತ್ತಾದರೂ ಇನ್ನೂ ಇಪ್ಪರ ಹರೆಯದಂತೆ ಕಂಗೊಳಿಸುತ್ತಾರೆ. ಅದಕ್ಕೇ ಅಲ್ಲವೇ ಹೇಳೋದು ಸಿನಿಮಾ ತಾರೆಗಳಿಗೆ ವಯಸ್ಸೇ ಆಗುವುದಿಲ್ಲ ಎಂದು. ಬಾಲಿವುಡ್ ಚಿತ್ರರಂಗದ ಅಭಿನೇತ್ರಿ ಶ್ರೀದೇವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇನ್ನೇನು ಅವರು ಬೆಳ್ಳಿಪರದೆಗೆ ಪರಿಚಯವಾಗುವುದರಲ್ಲಿದ್ದಾರೆ.
ಆದರೆ ಶ್ರೀದೇವಿ ಅವರು ಈ ಪ್ರಾಯದಲ್ಲೂ ತುಂಡುಡುಗೆ ತೊಟ್ಟು ಚಿತ್ರರಸಿಕರನ್ನು ತಮ್ಮ ಹಾವಭಾವಗಳಲ್ಲಿ ಮತ್ತೊಮ್ಮೆ ಕೆಣಕಿದ್ದಾರೆ. ವೋಗ್ ಇಂಡಿಯಾ ನಿಯತಕಾಲಿಕೆಯಲ್ಲಿ ಅವರು ವಿವಿಧ ಭಾವಭಂಗಿಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ. 'Sridevi in Modern dresses'; The Age(Less) Issue ಎಂಬುದು ಈ ಬಾರಿಯ ಸಂಚಿಕೆ ವಿಶೇಷ.
ಇತ್ತೀಚೆಗೆ ಮಕಾವುನಲ್ಲಿ ನಡೆದ 14ನೇ IIFA 2013ರಲ್ಲೂ ಶ್ರೀದೇವಿ ಮಿಂಚಿದ್ದರು. ಈಗ 'ವೋಗ್' ನಿಯತಕಾಲಿಕೆಯಲ್ಲಿ ಶಾರ್ಟ್ಸ್ ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಅವರ ಭಾವಭಂಗಿಗಳಿಗೆ ಇಂದಿನ ಕಾಲದ ನಟಿಯರು ನಾಚಿ ನೀರಾಗುತ್ತಾರೆ.
ಒಂದಾನೊಂದು ಕಾಲದಲ್ಲಿ ಅಭಿಮಾನಿಗಳನ್ನು ತಮ್ಮ ಮೋಹಕ ಚೆಲುವಿನಿಂದ ಮಂತ್ರಮುಗ್ಧರಾಗಿಸಿದ್ದ ತಾರೆ ಶ್ರೀದೇವಿ. ಈಗಲೂ ಅವರು ಬಣ್ಣ ಹಚ್ಚಿದರೆ ಎಂಬತ್ತು ಎಂಬತ್ತರ ದಶಕದ ಕಲಾರಸಿಕರು ಮತ್ತೊಮ್ಮೆ ಮುಗಿಬಿದ್ದು ನೋಡುತ್ತಾರೆ. ವೋಗ್ ಸಂಚಿಕೆಯಲ್ಲಿನ ಶ್ರೀದೇವಿ ಚಿತ್ರಗಳು ಸ್ಲೈಡ್ ಗಳಲ್ಲಿ...
ಶಾರ್ಟ್ಸ್ ಮತ್ತು ಹೈ ಹೀಲ್ ನಲ್ಲಿ ಶ್ರೀದೇವಿ
ಶ್ರೀದೇವಿ ಶಾರ್ಟ್ಸ್ ತೊಟ್ಟು ಹೈ ಹೀಲ್ ಪಾದರಕ್ಷೆ ಧರಿಸಿದರೆ ಇಂದಿನ ಕಾಲದ ನಟಿಯರೂ ನಾಚುತ್ತಾರೆ.
ಶ್ರೀದೇವಿ ಅವರೇನಾದರೂ ಗಣಿತದ ಟೀಚರಾ?
ಈ ಫೋಟೋ ನೋಡಿದರೆ ಶ್ರೀದೇವಿ ಅವರೇನಾದರೂ ಗಣಿತದ ಟೀಚರ್ ಇರಹುದೇ? ಎಂಬ ಪ್ರಶ್ನೆ ಮೂಡುತ್ತದೆ.
ಈ ಹಿಂದೊಮ್ಮೆ ಶ್ರೀದೇವಿ ಪುತ್ರಿ ಶಾರ್ಟ್ಸ್ ನಲ್ಲಿ ದರ್ಶನ
ಈ ಹಿಂದೊಮ್ಮೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಅವರು ತುಂಡುಡುಗೆಯಲ್ಲಿ ದರ್ಶನ ಭಾಗ್ಯ ನೀಡಿದ್ದರು. ಬಹುಶಃ ತಮ್ಮ ಮಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಶ್ರೀದೇವಿ ಹೀಗೆ ಮಾಡಿದ್ದಾರೆ ಎಂಬ ಮಾತುಗಳು ಆಗ ಧಾರಾವಾಳಿ ಕೇಳಿಬಂದಿದ್ದವು.
ಬೆಳದಿಂಗಳ ತಾರೆ ಶ್ರೀದೇವಿ
ಚಾಂದನಿ, ಮಿ.ಇಂಡಿಯಾ ಮತ್ತು ಛಾಲ್ ಬಾಜ್ ಚಿತ್ರಗಳು ಇಂದಿಗೂ ಶ್ರೀದೇವಿಯನ್ನು ಆರಾಧಿಸುವ ಅಭಿಮಾನಿಗಳನ್ನು ಕಾಡುತ್ತಲೇ ಇವೆ.
ವರ್ಮಾ ಕೂಡ ಶ್ರೀದೇವಿ ಅವರ ಮಹಾನ್ ಫ್ಯಾನ್
ಶ್ರೀದೇವಿ ಅವರನ್ನು ಆರಾಧಿಸುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, ನಾನು ಶ್ರೀದೇವಿ ಮಹಾ ಫ್ಯಾನ್. ಅವರ ಚಿತ್ರವನ್ನು ಎಲ್ಲರಂತೆ ಕ್ಯೂನಲ್ಲಿ ನಿಂತು ಟಿಕೆಟ್ ತೆಗೆದುಕೊಂಡೇ ನೋಡಲಿದ್ದೇನೆ" ಎಂದಿದ್ದರು.
ಶ್ರೀದೇವಿ ಕೋಹಿನೂರ್ ಡೈಮಂಡ್ ಇದ್ದಂತೆ
ಇಂಗ್ಲಿಷ್ ವಿಂಗ್ಲಿಷ್ ಅಗಬಹುದು, ಅಮೆರಿಕಾ ಗಿಮೆರಿಕಾ ಆಗಬಹುದು. ಇಂಡಿಯಾ ವಿಂಡಿಯಾ ಆಗಬಹುದು... ಆದ್ರೆ ಶ್ರೀದೇವಿ ವ್ರೀದೇವಿ ಆಗೋಕೆ ಸಾಧ್ಯವಿಲ್ಲ. ಜಗತ್ತಿನಲ್ಲಿ ಬೇಕಾದಷ್ಟು ಕೊಹಿನೂರ್ ವಜ್ರಗಳಿರಬಹುದು, ಆದ್ರೆ ನಮಗಿರೋದು ಒನ್ ಅಂಡ್ ಓನ್ಲಿ ಶ್ರೀದೇವಿ!" ಎಂದಿದ್ದರು. ವರ್ಮಾ.
Bollywood actress Sridevi on the cover of Vogue India Magazine August 2013. Sridevi has been roped in by the Vogue India to appear on the cover page of its latest edition, August 2013. The theme of this month's cover issue is 'Sridevi in Modern dresses'; The Age(Less) Issue.
ಅಂತರ್ಜಲ ವೃದ್ಧಿಗೆ ಜಾಗೃತಿ ಮೂಡಿಸಿ; ಮಹ್ಮದ್‌ ಇಸ್ಮಾಯಿಲ್ | Udayavani – ಉದಯವಾಣಿ
Thursday, 25 Feb 2021 | UPDATED: 02:36 AM IST
ಅಂತರ್ಜಲ ಚೇತನ ಕಾರ್ಯಕ್ರಮ ನಿರ್ವಹಿಸಲು ರಾಜ್ಯ ಸರ್ಕಾರದ ನಿರ್ದೇಶನ ಬಂದಿದೆ ಎಂದು ವಿವರಿಸಿದರು.
Team Udayavani, Jan 22, 2021, 6:01 PM IST
ರಾಯಚೂರು: ಅಂತರ್ಜಲ ವೃದ್ಧಿಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಪಂ ಉಪಕಾರ್ಯದರ್ಶಿ ಮಹ್ಮದ್‌ ಇಸ್ಮಾಯಿಲ್‌ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಫೌಂಡೇಶನ್‌ ಫಾರ್‌ ಇಕಲಾಜಿಕಲ್‌ ಸೆಕ್ಯೂರಿಟಿ ಸಹಯೋಗದಲ್ಲಿ ಮಹಾತ್ಮಗಾಂ ಧಿ ನರೇಗಾ ಯೋಜನೆಯಡಿ ಅಂತರ್ಜಲ ಚೇತನ ಯೋಜನೆ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಂತರ್ಜಲ ವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯಾಗಾರ ಆಯೋಜಿಸಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಪೂರಕವಾಗಿ ಕೆಲಸ ಮಾಡಬೇಕು. 2006ರಿಂದ ಈವರೆಗೂ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರಿಗೆ ಬದು ನಿರ್ಮಾಣ, ಗೋಕಟ್ಟೆ ಹಗೂ ಕೆರೆಗಳ ಹೊಳುತ್ತೆವ ಕೆಲಸ ನೀಡುವುದರ ಜೊತೆಗೆ ಇದೀಗ ಅಂತರ್ಜಲ ಚೇತನ ಕಾರ್ಯಕ್ರಮ ನಿರ್ವಹಿಸಲು ರಾಜ್ಯ ಸರ್ಕಾರದ ನಿರ್ದೇಶನ
ಬಂದಿದೆ ಎಂದು ವಿವರಿಸಿದರು.
ನೀರನ್ನು ಮಿತವಾಗಿ ಬಳಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಯ ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ನೂರಾರು ಅಡಿ ಕೊಳವೆಬಾವಿ ಕೊರೆದರು ಅಂತರ್ಜಲ ಸಿಗುತ್ತಿಲ್ಲ. ಇದರಿಂದ ಅಂತರ್ಜಲ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರೆ ನೀಡಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಡಾ| ಟಿ.ರೋಣಿ ಮಾತನಾಡಿದರು. ಕಾರ್ಯಪಾಲಕ ಅಭಿಯಂತರ ಗಣಪತಿ ಸಾಕ್ರೆ, ಫೌಂಡೇಶನ್‌ ಫಾರ್‌ ಇಕಲಾಜಿಕಲ್‌ ಸೆಕ್ಯೂರಿಟಿ ವ್ಯವಸ್ಥಾಪಕ ರಾಘವೇಂದ್ರ ಎಚ್‌.ಜಿ., ಲೋಕೇಶ ಸೇರಿ ಇತರರಿದ್ದರು.
ಚಿಕ್ಕಬಾಣಾವರದ ಮನೆಯಲ್ಲಿ ಊಟದ ಡಬ್ಬಿಗಳಲ್ಲೂ ಬಾಂಬ್ ಇಟ್ಟಿದ್ದ ಉಗ್ರರು | 10 bomb found in Bengaluru Chikkabanavar house by NIA officers - Kannada Oneindia
2 hrs ago ವರ್ಗಾವಣೆ ಪ್ರಶ್ನಿಸಿದ್ದ ಅರ್ಜಿಯನ್ನು ಹಿಂಪಡೆದ ಅಲೋಕ್ ಕುಮಾರ್
2 hrs ago ಮತದಾರರ ಗುರುತಿನ ಚೀಟಿ, ಆಧಾರ್ ಲಿಂಕ್ ಕುರಿತು ಚುನಾವಣಾ ಆಯೋಗ ಪತ್ರ
9 hrs ago ಅಕ್ಟೋಬರ್ ತಿಂಗಳಿಂದ 12 ಹೊಸ ಮಾರ್ಗದಲ್ಲಿ ಸ್ಪೈಸ್ ಜೆಟ್ ಹಾರಾಟ
9 hrs ago ಟ್ವೀಟ್ ಮಾಡಿದ ಪ್ರಿಯಾಂಕಾ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ
| Published: Monday, July 8, 2019, 6:44 [IST]
ಬೆಂಗಳೂರು, ಜುಲೈ 8: ಬೆಂಗಳೂರಿನ ಜನರು ಬೆಚ್ಚಿ ಬೀಳುವಂಥ ಸಂಗತಿಯೊಂದು ಎನ್ ಐಎ ಕಾರ್ಯಾಚರಣೆಯಿಂದ ಬಯಲಾಗಿದೆ. ಚಿಕ್ಕಬಾಣಾವರದ ಹಳೆ ರೈಲು ನಿಲ್ದಾಣ ರಸ್ತೆಯಲ್ಲಿನ ಮನೆಯೊಂದರ ಮೇಲೆ ಭಾನುವಾರ ಸಂಜೆ ಎನ್ ಐಎನಿಂದ ದಾಳಿ ನಡೆಸಿದರು. ಆ ವೇಳೆ ಹತ್ತು ಜೀವಂತ ಬಾಂಬ್ ಹಾಗೂ ದೊಡ್ಡ್ ಪ್ರಮಾಣದಲ್ಲಿ ಸ್ಫೋಟಕ ಸಾಮಗ್ರಿ ಪತ್ತೆ ಆಗಿದೆ.
ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ್ಕೆ ಸಂಚು ನಡೆಸಿದ್ದುದು ಬಹಿರಂಗವಾಗಿದೆ. ಈ ಮನೆಯು ಸ್ಥಳೀಯ ಮುಸ್ತಾನ್ ಎಂಬುವವರಿಗೆ ಸೇರಿದ್ದಾಗಿದೆ. ರಾತ್ರಿ ಪೂರ್ತಿ ಶೋಧ ನಡೆಸಿರುವ ಎನ್ ಐಎ ಅಧಿಕಾರಿಗಳು ಬಾಂಬ್, ಏರ್ ಗನ್ ಮತ್ತು ಸ್ಫೋಟಕ ಸಾಮಗ್ರಿಗಳನ್ನು ಮನೆಯಲ್ಲಿ ಪತ್ತೆ ಮಾಡಿದ್ದಾರೆ.
ಈಚೆಗೆ ದೊಡ್ಡಬಳ್ಳಾಪುರದ ಬಂಧಿಸಿದ್ದ ಶಂಕಿತ ಉಗ್ರಗಾಮಿ ಹಬೀಬುರ್ ರೆಹಮಾನ್ ತನ್ನ ಸ್ನೇಹಿತರ ಜತೆಗೆ ಇದೇ ಮನೆಯಲ್ಲಿ ವಾಸವಿದ್ದ. ವಿಚಾರಣೆ ವೇಳೆಯಲ್ಲಿ ಆತ ಬಾಯ್ಬಿಟ್ಟ ಸಂಗತಿಗಳ ಆಧಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಚಿಕ್ಕ ಬಾಣಾವರದಲ್ಲಿ ಮನೆ ಮಾಡಿದ್ದ ಹಬೀಬುರ್ ಮತ್ತು ಸ್ನೇಹಿತರು ಈ ಮನೆಯಲ್ಲೇ ಬಾಂಬ್ ತಯಾರಿಸುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಮನೆ ಖಾಲಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಆಕ್ಕಪಕ್ಕದ ಮನೆಯವರಿಗೆ ತಾವು ವ್ಯಾಪಾರಿಗಳು ಅಂತಲೇ ಪರಿಚಯಿಸಿಕೊಂಡಿದ್ದ ಈ ಮೂವರು, ಸಂಜೆ ಹೊತ್ತು ಮಾತ್ರ ಮನೆಯಿಂದ ಆಚೆ ಬರುತ್ತಿದ್ದರು. ಈ ಬಾಡಿಗೆ ಮನೆ ತುಂಬಾ ಬಾಂಬ್ ಗಳೇ ತುಂಬಿದ್ದವು. ಕೊನೆಗೆ ಊಟದ ಡಬ್ಬಿಗಳಲ್ಲೂ ಸ್ಫೋಟಾಕ ಸಾಮಗ್ರಿಗಳು ಪತ್ತೆ ಆಗಿವೆ.
bengaluru nia bomb terrorism ಬೆಂಗಳೂರು ಎನ್ ಐಎ ಭಯೋತ್ಪಾದನೆ
10 bomb found in Bengaluru Chikkabanavar house by NIA officers on Sunday. Here is the explosive details of the story.
ಕ್ಯಾಂಪಸ್ ಎಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್‌ನಿಂದ ಸನ್ಮಾನ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Aug 31, 2020, 9:13 PM IST
ಉಪ್ಪಿನಂಗಡಿ, ಆ. 31: ಕ್ಯಾಂಪಸ್ ಎಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ವತಿಯಿಂದ ಇಲ್ಲಿನ ಖಾಸಗಿ ಹೊಟೇಲಿನ ಸಭಾಂಗಣದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಎಜುಕೇಶನಲ್ ಕೇರಿಯರ್ ಗೈಡೆನ್ಸ್ ಶಿಬಿರ ನಡೆಯಿತು.
ಲತೀಫ್ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ತರೇಬೇತುದಾರರಾಗಿ ಭಾಗವಹಿಸಿದ್ದ ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಆತೂರು ಮಾತನಾಡಿ ವಿದ್ಯಾರ್ಥಿಗಳು ಕೋರ್ಸ್‌ಗಳನ್ನು ಆಯ್ಕೆ ಮಾಡುವಲ್ಲಿ ಎಡವುತ್ತಾರೆ. ಆದ್ದರಿಂದ ಅವರಿಷ್ಟದ ಕೋರ್ಸ್‌ಗಳನ್ನು ಆಯ್ಕೆ ಮಾಡಲು ಪೋಷಕರು ಸಹಕರಿಸಬೇಕು. ಸಾಧಿಸಲು ಕುಟುಂಬದ ಹಿನ್ನಲೆ ಕಾರಣವೇ ಅಲ್ಲ ಎಂದರಲ್ಲದೆ, ವಿವಿಧ ವೃತ್ತಿಪರ ಕೋರ್ಸ್‌ಗಳ ಬಗ್ಗೆ ಮಾತನಡಿದರು.
ಅತಿಥಿಯಾಗಿ ಉಪ್ಪಿನಂಗಡಿ ಠಾಣೆಯ ಎಸ್ಸೈ ಡಿ.ಎನ್. ಹೀರಯ್ಯ, ಶೀ ಕ್ಯಾಂಪಸ್ ಪ್ರಾಧ್ಯಾಪಕ ಎಕೆ ನಂದಾವರ ಭಾಗವಹಿಸಿದ್ದರು. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯನಾಗಿ ಮೂಡಿಬಂದ ಕೌಶಿಕ್ ರಾವ್ ಸಹಿತ ಪಿಯುಸಿ ಹಾಗೂ ಎಸೆಸೆಲ್ಸಿ ಸುಮಾರು ನೂರು ಮಂದಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಎಸೆಸ್ಸೆಫ್ ಕೋಶಾಧಿಕಾರಿ ಅಲಿ ತುರ್ಕಳಿಕ್ಕೆ, ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಯು.ಪಿ ಮುಸ್ತಫಾ, ಬದ್ರಿಯಾ ಸ್ಕೂಲ್ ಆತೂರು ಅಧ್ಯಕ್ಷ ಪುತ್ತುಂಞಿ, ಹಕೀಂ ಕಳಂಜಿಬೈಲು ಪಾಲ್ಗೊಂಡಿದ್ದರು.
ದಿನಾಂಕ 13/06/2021ರಂದು ವಿರಾಜಪೇಟೆ ಬಳಿಯ ಮಾಪಿಳ್ಳೆತೋಡು ನಿವಾಸಿ ರಾಬಿಯಾ ಎಂಬವರ ಮನೆಗೆ ಅವರ ತಮ್ಮ ಶಮೀರ್‌ ಹೋಗಿದ್ದು ಶಮೀರ್‌ನ ಅಕ್ಕ ರಾಬಿಯಾಳಿಗೆ ಆಕೆಯ ಪತಿ ರಶೀದ್‌ ತೊಂದರೆ ನೀಡುತ್ತಿರುವ ವಿಚಾರಕ್ಕೆ ಶಮೀರ್‌ ರಶೀದ್‌ನ ಅಣ್ಣ ಹಸೈನಾರ್‌ರವರ ಬಳಿ ಮಾತನಾಡುತ್ತಿರುವಾಗ ಹಸೈನಾರ್‌ ಮತ್ತು ಆತನ ಅಕ್ಕ ಸುಲೈಕಾ ಎಂಬವರು ಸೇರಿಕೊಂಡು ರಾಬಿಯಾ ಮತ್ತು ಶಮೀರ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಸುಲೈಕಾರವರ ಮೇಲೆ ಶಮೀರ್‌, ರಸಿಯಾ ಮತ್ತು ಅಲೀಮಾರವರು ಹಲ್ಲೆ ಮಾಡಿರುವುದಾಗಿ ಪ್ರತಿ ದೂರು ನೀಡಿದ್ದು ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಗಾಂಜಾ ವಶ; ಓರ್ವನ ಬಂಧನ
ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಹಳೇ ತಾಲ್ಲೂಕಿನ ಶಾಲೆಯ ಬಳಿ ವ್ಯಕ್ತಿಯೋರ್ವ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಮಾಲನ್ನು ವಶಕ್ಕೆ ಪಡೆಯುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಆದಾರದ ಮೇರೆಗೆ ನಾಪೋಕ್ಲು ಠಾಣಾ ಸರಹದ್ದಿನ ಹಳೇ ತಾಲ್ಲೂಕಿನ ಶಾಲಾ ಮೈದಾನದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದ ಉಸ್ಮಾನ್ ಹಾಜಿಯವರ ಮಗ ಕೆ.ಯು. ಅಶ್ರಫ್ ಎಂಬ ವ್ಯಕ್ತಿಯನ್ನು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪನವರ ನೇತೃತ್ವದಲ್ಲಿ ನಾಪೋಕ್ಲು ಠಾಣಾಧಿಕಾರಿಯವರ ತಂಡ ಬಂಧಿಸಿ ಆರೋಪಿತನಿಂದ 1 ಲಕ್ಷ ರೂ. ಮೌಲ್ಯದ 1 ಕೆ.ಜಿ. 100 ಗ್ರಾಂ. ತೂಕದ ಗಾಂಜಾವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮತ್ತು ಮಡಿಕೇರಿ ಉಪಾಧೀಕ್ಷಕ ಬಿ.ಪಿ.ದಿನೇಶ್‌ಕುಮಾರ್‌ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾ ಪಿ.ಎಸ್.ಐ ಕಿರಣ್, ಎಎಸ್ಐ ಕುಶಾಲಪ್ಪ, ಸಿಬ್ಬಂದಿಗಳಾದ ಜ್ಯೋತಿ ಕುಮಾರ್, ಸಾಜನ್, ನವೀನ್, ಮಹೇಶ್, ಹರ್ಷ, ಮಹದೇವ ನಾಯಕ್, ರಾಜೇಶ್, ಗಿರೀಶ್, ಶಿವಪ್ರಸಾದ್, ಶರತ್, ಸಮೀಲ್ ಹಾಗು ಶರೀಫ್ ರವರು ಭಾಗಿಯಾಗಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಶ್ಲಾಘಿಸಲಾಗಿದೆ.
ನೋಡುಗರ ಮನ ಕಲಕುವಂತಿತ್ತು ಆಹಾರಕ್ಕಾಗಿ ಈ ಕೋತಿ ಪರಿತಪಿಸುತ್ತಿದ್ದ ದೃಶ್ಯ ..! – EESANJE / ಈ ಸಂಜೆ
ನೋಡುಗರ ಮನ ಕಲಕುವಂತಿತ್ತು ಆಹಾರಕ್ಕಾಗಿ ಈ ಕೋತಿ ಪರಿತಪಿಸುತ್ತಿದ್ದ ದೃಶ್ಯ ..!
December 15, 2017 Sri Raghav monkey, Tumakuru, ಕೋತಿ
ತುಮಕೂರು, ಡಿ.15-ಪ್ರಾಣಿಗಳಿಗೆ ಮಾತು ಬರಲ್ಲ ನಿಜ. ಆದರೆ, ಅವುಗಳ ಹಾವ-ಭಾವ ಎಂಥವರಿಗೂ ಅರ್ಥವಾಗಲಿದೆ. ತೀವ್ರ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ ಕೋತಿಯೊಂದು ನಂದಿನಿ ಮಳಿಗೆಗೆ ಬಂದು ಆಹಾರ ನೀಡಿ ಎಂದು ಪರಿತಪಿಸುತ್ತಿದ್ದ ದೃಶ್ಯ ನೋಡುಗರ ಮನ ಕಲಕುವಂತಿತ್ತು. ನಗರದ ಜಗದೀಶ್ ಎಂಬುವರ ನಂದಿನಿ ಕ್ಷೀರ ಮಳಿಗೆಗೆ ಬಂದ ವಾನರವೊಂದು ಯಾವುದೇ ಪದಾರ್ಥಗಳನ್ನು ಸ್ವತಃ ತೆಗೆದುಕೊಳ್ಳದೆ ನನಗೆ ಹೊಟ್ಟೆ ಹಸಿಯುತ್ತಿದೆ. ತಿನ್ನಲು ಏನಾದರೂ ಕೊಡಿ ಎಂದು ಮಾಲೀಕನನ್ನು ಅಂಗಲಾಚುತ್ತಿತ್ತು.
ಮೊದಲೇ ಈ ವಾನರಕ್ಕೆ ಆರೋಗ್ಯ ಬೇರೆ ಸರಿಯಿರಲಿಲ್ಲ. ಆದರೂ ಹೊಟ್ಟೆ ಕೇಳಬೇಕಲ್ಲ. ಏನಾದರೂ ತಿನ್ನಲು ಕೊಡಿ ಎಂದು ಕೈ ಸನ್ನೆ ಮಾಡುತ್ತಿತ್ತು. ಇದನ್ನು ಗಮನಿಸಿದ ನಿವೃತ್ತ ಶಿಕ್ಷಕರೊಬ್ಬರು ಅಂಗಡಿ ಮಾಲೀಕನಿಗೆ ಅದು ತಿನ್ನಲು ಆಹಾರ ಕೇಳುತ್ತಿದೆ ಕೊಡಿ ಎಂದು ವಿವರಿಸಿದರು.
ಸ್ವೀಕರ್ ರಮೇಶ್ ಕುಮಾರ್ ರಾಜೀನಾಮೆ - ವರದಿಗಾರ
ಸ್ವೀಕರ್ ರಮೇಶ್ ಕುಮಾರ್ ರಾಜೀನಾಮೆ
'ಸಭಾಧ್ಯಕ್ಷರ ಸ್ಥಾನದ ಘನತೆ, ಗೌರವಕ್ಕೆ ಧಕ್ಕೆಯಾಗದಂತೆ ಜವಾಬ್ದಾರಿ ನಿರ್ವಹಿಸಿದ್ದೇನೆ'
'ಸಣ್ಣಪುಟ್ಟ ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ'
ವರದಿಗಾರ (ಜು.29): ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಅವರು ಇಂದು ಸದನದಲ್ಲೇ ತಮ್ಮ ಸ್ಥಾನದ ರಾಜೀನಾಮೆ ಪತ್ರವನ್ನು ನೀಡಿದರು. ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಸಭಾಧ್ಯಕ್ಷ ಸ್ಥಾನದ ರಾಜೀನಾಮೆ ಪತ್ರ ನೀಡಿ ನಿರ್ಗಮಿಸಿದ್ದಾರೆ. ಒಬ್ಬ ಪ್ರಬುದ್ಧ ಸಭಾಕ್ಷರಾಗಿ ಇದುವರೆಗೆ ಸದನವನ್ನು ಮುನ್ನಡೆಸಿದ ರಮೇಶ್ ಕುಮಾರ್ ರವರ ರಾಜೀನಾಮೆ ರಾಜ್ಯಕ್ಕೆ ಬಹುದೊಡ್ಡ ನಷ್ಟವೆಂದು ವ್ಯಾಖ್ಯಾನಿಸಲಾಗಿದೆ. ಅವರ ರಾಜೀನಾಮೆಯಿಂದ ಹಲವರು ಕಣ್ಣೀರು ಹಾಕಿರುವುದೂ ಕಂಡು ಬಂದಿದೆ.
ಸಾಂವಿಧಾನಿಕ ನಿಷ್ಠವಾಗಿ, ಆತ್ಮಸಾಕ್ಷಿಗನುಗುಣವಾಗಿ ಶಕ್ತಿ ಮೀರಿ ಸಭಾಧ್ಯಕ್ಷರ ಕರ್ತವ್ಯವನ್ನು ನಿರ್ವಹಿಸಿರುವುದಾಗಿ ಅವರು ಈ ಸಂದರ್ಭ ಹೇಳಿದ್ದಾರೆ. ಸಭಾಧ್ಯಕ್ಷರ ಸ್ಥಾನ ದೊಡ್ಡದು. ನಾವು ಸಣ್ಣವರು. ಜಾಗೃತಿಯಿಂದ ಸಭಾಧ್ಯಕ್ಷರ ಸ್ಥಾನಕ್ಕೆ ಅಪಚಾರವಾಗದಂತೆ ಕೆಲಸ ಮಾಡಬೇಕಾಗಿದೆ. ಸಭಾಧ್ಯಕ್ಷರ ಸ್ಥಾನದ ಘನತೆ, ಗೌರವಕ್ಕೆ ಧಕ್ಕೆಯಾಗದಂತೆ ಜವಾಬ್ದಾರಿ ನಿರ್ವಹಿಸಿರುವುದಾಗಿ ತಿಳಿಸಿದರು.
ಸಣ್ಣಪುಟ್ಟ ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಸಭಾಧ್ಯಕ್ಷರ ಜವಾಬ್ದಾರಿಯಿಂದ ಬಿಡುಗಡೆ ಹೊಂದಬೇಕೆಂದು ನಿರ್ಧರಿಸಿದ್ದೇನೆ. ನಮ್ಮ ಕುಟುಂಬ ನಿರೀಕ್ಷಿಸಿದ್ದೇ ಬೇರೆ, ಆದರೆ ಆಗಿದ್ದೇ ಬೇರೆ.
ತಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ದೇವರಾಜ ಅರಸುರವರಿಂದ ಪ್ರೇರಣೆಯಾಗಿ ರಾಜಕೀಯ ಪ್ರವೇಶ ಮಾಡಿದ್ದಾಗಿ ಹೇಳಿದ ಅವರು, ಈ ಕ್ಷಣವೇ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೂಲಕ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.
14 ತಿಂಗಳು, 4 ದಿನ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಮುಖ್ಯಮಂತ್ರಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು, ಸಚಿವಾಲಯದ ಸಿಬ್ಬಂದಿ, ಮಾಧ್ಯಮಗಳಿಗೆ ಅವರು ಕೃತಜ್ಞತೆಯನ್ನು ಅರ್ಪಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದಿಸಿ ಸಭಾಧ್ಯಕ್ಷರಾಗಲು ಒಪ್ಪಿದೆ. ಸಭಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಸುರೇಶ್‍ಕುಮಾರ್ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನಿಸಲಾಗಿತ್ತು. ಆದರೆ ನಿಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ಸಹಕರಿಸುತ್ತೇವೆ ಎಂದಿದ್ದರು. ಅವರ ಸೌಜನ್ಯಕ್ಕೂ ಋಣಿಯಾಗಿರುವುದಾಗಿ ಹೇಳಿದರು.
ಸಾರ್ವಜನಿಕ ಜೀವನದ ವೈಯಕ್ತಿಕ ವಿಚಾರವನ್ನು ರೋಚಕ ಮಾಡಿ ಅವರ ಕುಟುಂಬ ಮತ್ತು ಸಂಬಂಧಿಕರಿಗೆ ನೋವುಂಟು ಮಾಡಬೇಡಿ ಎಂದು ಮಾಧ್ಯಮಗಳಿಗೆ ಕಿವಿ ಮಾತಿನ ಮೂಲಕ ಸಲಹೆ ನೀಡಿದ್ದಾರೆ.
ಕೆಸಿಎಫ್ ಒಮಾನ್ ಮಹಾಸಭೆ | ವಿಶ್ವ ಕನ್ನಡಿಗ ನ್ಯೂಸ್
Home Editor Post ಕೆಸಿಎಫ್ ಒಮಾನ್ ಮಹಾಸಭೆ
ಕೆಸಿಎಫ್ ಒಮಾನ್ ಮಹಾಸಭೆ
Posted By: ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್)on: May 04, 2019 In: Editor Post, ಗಲ್ಫ್ ಸುದ್ದಿಗಳು
ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆಯು ದಿನಾಂಕ 03/05/2019 ಶುಕ್ರವಾರದಂದು ಅಲ್ ಫವಾನ್ ಆಡಿಟೋರಿಯಂ ಬರ್ಕದಲ್ಲಿ ನಡೆಯಿತು.
ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್ (ಎರುಮಾಡ್ ತಂಙಳ್) ದುಆ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು.
RO ಆಗಿ ಆಗಮಿಸಿದ ಕೆಸಿಎಫ್ ಖತರ್ ಅಧ್ಯಕ್ಷರಾದ ರಹೀಮ್ ಸಅದಿ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಆಡಳಿತ ವಿಭಾಗದ ಅಧ್ಯಕ್ಷ ಉಮರ್ ಸಖಾಪಿ ಮಿತ್ತೂರು, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬರ್ಕ ಒಮಾನ್ ಹಾಗೂ ರಾಷ್ಟ್ರೀಯ ಸಮಿತಿ ನಾಯಕರು ಮತ್ತು ಕೌನ್ಸಿಲರ್ ಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಹನೀಫ್ ಸಅದಿ ವರದಿ ಹಾಗೂ ಕಾಸಿಂ ಹಾಜಿ ಲೆಕ್ಕಪತ್ರ ಮಂಡನೆ ಮಾಡಿದರು.
ಸಭೆಯಲ್ಲಿ 2019-2021ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಯ್ಯೂಬ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಖ್ ಸುಳ್ಯ, ಕೋಶಾಧಿಕಾರಿಯಾಗಿ ಆರಿಫ್ ಕೋಡಿ, ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಎಮ್ಮೆಮ್ಮಾಡು, ಕಾರ್ಯದರ್ಶಿಯಾಗಿ ಶಂಸುದ್ದೀನ್ ಪಾಲತಡ್ಕ, ಶಿಕ್ಷಣ ಇಲಾಖೆಯ ಅಧ್ಯಕ್ಷರಾಗಿ ಉಬೈದ್ ಸಖಾಫಿ ಮಿತ್ತೂರು
ಕಾರ್ಯದರ್ಶಿಯಾಗಿ ಖಾಸಿಂ ಪೊಯ್ಯತ್ತಬೈಲ್, ಸಾಂತ್ವನ ಇಲಾಖೆಯ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಅತ್ರಾಡಿ, ಕಾರ್ಯದರ್ಶಿಯಾಗಿ ಇಕ್ಬಾಲ್ ಎರ್ಮಾಳ್, ಕಾಶನ ಇಲಾಖೆಯ ಅಧ್ಯಕ್ಷರಾಗಿ ಸಮೀರ್ ಉಸ್ತಾದ್ ಹೂಡೆ
ಕಾರ್ಯದರ್ಶಿಯಾಗಿ ಅಶ್ರಫ್ ಭಾರತ್ ಸುಳ್ಯ, ಆಡಳಿತ ಇಲಾಖೆಯ ಅಧ್ಯಕ್ಷರಾಗಿ ಖಾಸಿಂಹಾಜಿ ಅಳಕೆಮಜಲು, ಕಾರ್ಯದರ್ಶಿಯಾಗಿ ಸಿದ್ದೀಕ್ ಮಾಂಬ್ಳಿ ಸುಳ್ಯ,ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಹಂಝ ಹಾಜಿ ಕನ್ನಂಗಾರ್ , ಕಾರ್ಯದರ್ಶಿಯಾಗಿ ಇರ್ಫಾನ್ ಕೂರ್ನಡ್ಕ ಹಾಗೂ
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮರ್ ಸಖಾಫಿ ಮಿತ್ತೂರು, ಇಕ್ಬಾಲ್ ಬರ್ಕ, ಹನೀಫ್ ಸಅದಿ ಕುಡ್ತಮುಗೇರು, ಅಬ್ಬಾಸ್ ಮರಕಡ, ನವಾಝ್ ಮಣಿಪುರ, ಹನೀಫ್ ಮನ್ನಾಪು, ಜಸೀಮ್ ಕೊಪ್ಪ, ಸ್ವಾದಿಕ್ ಕಾಟಿಪಳ್ಳ, ಖಲಂದರ್ ಬಾಷಾ ತೀರ್ಥ ಹಳ್ಳಿ, ಮಜೀದ್ ಅಮಾನಿ,ಅಬ್ದುಲ್ ಲತೀಫ್ ಸುಳ್ಯ, ಕಾದರ್ ಹೆಚ್ ಕಲ್ಲು ಇವರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹನೀಫ್ ಸಅದಿ ಸ್ವಾಗತಿಸಿ, ಸ್ವಾದಿಕ್ ಸುಳ್ಯ ಧನ್ಯವಾದಗಳನ್ನು ಅರ್ಪಿಸಿ ೩ ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.
ಶಿರಸಿಯ ಎಸ್ಡಿಪಿಐ ಕಾರ್ಯಕರ್ತ ಅಸ್ಲಂ ಹತ್ಯೆಯಲ್ಲಿ ಸ್ನೇಹಿತರನ್ನೇ ಆರೋಪಿಯನ್ನಾಗಿಸಿದ ಪೋಲಿಸರ ನಡೆ ಕಾನೂನು ವ್ಯವಸ್ಥೆಗೆ ಮಾಡಿದ ಅಪಚಾರ: ರಿಯಾಝ್ ಫರಂಗಿಪೇಟೆ
ಬೋಫೋರ್ಸ್ ಆರೋಪಿ ರಾಜೀವ್ ಗಾಂಧಿ ಹೆಸರಲ್ಲಿ ಚುನಾವಣೆಗೆ ಸ್ಪರ್ಧಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ May 06, 2019, 11:09 PM IST
ಹೊಸದಿಲ್ಲಿ, ಮೇ.6: ಸದ್ಯ ಬಾಕಿಯುಳಿದಿರುವ ಲೋಕಸಭಾ ಚುನಾವಣೆಯ ಎರಡು ಹಂತಗಳನ್ನು ರಾಜೀವ್ ಗಾಂಧಿಯ ಹೆಸರಲ್ಲಿ ಎದುರಿಸುವಂತೆ ಪ್ರಧಾನಿ ಮೋದಿ ಸೋಮವಾರ ಕಾಂಗ್ರೆಸ್‌ಗೆ ಸವಾಲೆಸೆದಿದ್ದಾರೆ. ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂ.1 ಎಂಬ ಮೋದಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.
"ನಾನು ನಾಮಧಾರಿ ಕುಟುಂಬಕ್ಕೆ ಸವಾಲು ಹಾಕುತ್ತೇನೆ. ಸೋಮವಾರದ ಮತದಾನ ಮುಗಿದಿದೆ. ಆದರೆ ಇನ್ನೂ ಎರಡು ಹಂತಗಳು ಬಾಕಿಯಿವೆ. ನಿಮಗೆ ಸಾಧ್ಯವಿದ್ದರೆ ಅವುಗಳನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಪರಿಪೂರ್ಣತೆಯ ವಿಷಯದ ಆಧಾರದಲ್ಲಿ ಎದುರಿಸಿ" ಎಂದು ಮೋದಿ ಜಾರ್ಖಂಡ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಸವಾಲೆಸೆದಿದ್ದಾರೆ.
ಇದಕ್ಕೂ ಮೊದಲು ತನ್ನ ಹೇಳಿಕೆಯಲ್ಲಿ ಮೋದಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ನಂ.1 ಎಂದು ಕುಟುಕಿದ್ದರು. ನಿಮ್ಮ ತಂದೆಯನ್ನು ಅವರ ಹಿಂಬಾಲಕರು ಮಿ. ಕ್ಲೀನ್ ಎಂದು ವ್ಯಾಖ್ಯಾನಿಸುತ್ತಾರೆ. ಆದರೆ ಅವರ ಜೀವನ ಭ್ರಷ್ಟಾಚಾರಿ ನಂ.1 ಆಗಿಯೇ ಕೊನೆಯಾಯಿತು ಎಂದು ಮೋದಿ ರಾಹುಲ್ ಗಾಂಧಿಗೆ ಕುಟುಕಿದ್ದರು.