text
stringlengths
0
61.5k
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ನೆನಪಿನ ಇಂತಹ ಅಭ್ಯಾಸ ಮಾಡಬೇಕು – ಕೆಟ್ಟ ವಿಚಾರದವರು ಮುಂದೆ ಬರುತ್ತಿದ್ದಂತೆಯೇ ಅವರೂ ಪರಿವರ್ತನೆಯಾಗಿ ಬಿಡಲಿ. ನನ್ನವರು ಒಬ್ಬ ಶಿವ ತಂದೆಯ ವಿನಃ ಯಾರೂ ಇಲ್ಲ... ಈ ಪುರುಷಾರ್ಥದಲ್ಲಿರಬೇಕಾಗಿದೆ.
2. ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಶರೀರ ಸಹಿತ ಏನೆಲ್ಲವೂ ಇದೆಯೋ ಅದೆಲ್ಲವನ್ನೂ ಬಲಿಹಾರಿ ಮಾಡಬೇಕಾಗಿದೆ. ಯಾವಾಗ ಈ ರುದ್ರ ಯಜ್ಞದಲ್ಲಿ ಎಲ್ಲವನ್ನೂ ಸ್ವಾಹಾ ಮಾಡುವಿರೋ ಆಗ ರಾಜ್ಯ ಪದವಿಯು ಸಿಗುವುದು.
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳು ಯಾರು? ಈ ಬ್ರಾಹ್ಮಣರು. ಇದನ್ನು ಎಂದೂ ಮರೆಯಬೇಡಿ - ನಾವು ಬ್ರಾಹ್ಮಣರಾಗಿದ್ದೇವೆ, ದೇವತೆಗಳಾಗುವವರಿದ್ದೇವೆ. ವರ್ಣಗಳನ್ನೂ ಸಹ ನೆನಪು ಮಾಡಿಕೊಳ್ಳಬೇಕಾಗುತ್ತದೆ. ನೀವಿಲ್ಲಿ ಪರಸ್ಪರ ಕೇವಲ ಬ್ರಾಹ್ಮಣರೇ ಬ್ರಾಹ್ಮಣರಿದ್ದೀರಿ. ಬ್ರಾಹ್ಮಣರಿಗೆ ಬೇಹದ್ದಿನ ತಂದೆಯು ಓದಿಸುತ್ತಾರೆ. ಇಲ್ಲಿ ಬ್ರಹ್ಮಾರವರು ಓದಿಸುವುದಿಲ್ಲ, ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣರಿಗೆ ಓದಿಸುತ್ತಾರೆ. ಶೂದ್ರರಿಂದ ಬ್ರಾಹ್ಮಣರಾಗದ ಹೊರತು ದೇವಿ-ದೇವತೆಗಳಾಗಲು ಸಾಧ್ಯವಿಲ್ಲ, ಆಸ್ತಿಯು ಶಿವ ತಂದೆಯಿಂದಲೇ ಸಿಗುತ್ತದೆ. ಆ ಶಿವ ತಂದೆಯು ಎಲ್ಲರ ತಂದೆಯಾಗಿದ್ದಾರೆ. ಈ ಬ್ರಹ್ಮಾರವರಿಗೆ ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಎಂದು ಹೇಳುತ್ತಾರೆ. ಎಲ್ಲರಿಗೂ ಲೌಕಿಕ ತಂದೆ ಇರುತ್ತಾರೆ, ಪಾರಲೌಕಿಕ ತಂದೆಯನ್ನು ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಇವರು ಅಲೌಕಿಕ ತಂದೆಯಾಗಿದ್ದಾರೆ, ಇವರನ್ನು ಯಾರೂ ತಿಳಿದುಕೊಂಡಿಲ್ಲ. ಭಲೆ ಬ್ರಹ್ಮನ ಮಂದಿರವಿದೆ, ಇಲ್ಲಿಯೂ ಪ್ರಜಾಪಿತ ಆದಿ ದೇವನ ಮಂದಿರವಿದೆ, ಅವರನ್ನು ಕೆಲವರು ಮಹಾವೀರನೆಂದು ಹೇಳುತ್ತಾರೆ. ಹೃದಯವನ್ನು ತೆಗೆದುಕೊಳ್ಳುವವರೆಂದು ಹೇಳುತ್ತಾರೆ ಆದರೆ ಹೃದಯವನ್ನು ಗೆಲ್ಲುವವರು ಶಿವ ತಂದೆಯಾಗಿದ್ದಾರೆಯೇ ಹೊರತು ಪ್ರಜಾಪಿತ, ಆದಿದೇವ ಬ್ರಹ್ಮನಲ್ಲ. ಎಲ್ಲಾ ಆತ್ಮರನ್ನು ಸದಾ ಸುಖಿಯನ್ನಾಗಿ ಮಾಡುವವರು, ಖುಷಿ ಪಡಿಸುವವರು ಒಬ್ಬರೇ ತಂದೆಯಾಗಿದ್ದಾರೆ, ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಂತೂ ಮನುಷ್ಯರು ಏನೂ ತಿಳಿದುಕೊಂಡಿಲ್ಲ. ತುಚ್ಛ ಬುದ್ಧಿಯವರಾಗಿದ್ದಾರೆ, ನಾವು ಬ್ರಾಹ್ಮಣರೇ ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನೀವೂ ಸಹ ಇದನ್ನು ಪದೇ-ಪದೇ ಮರೆತು ಹೋಗುತ್ತೀರಿ. ನೆನಪು ಅತಿ ಸಹಜವಾಗಿದೆ. ಯೋಗ ಶಬ್ಧವನ್ನು ಸನ್ಯಾಸಿಗಳು ಇಟ್ಟಿದ್ದಾರೆ. ನೀವಂತೂ ತಂದೆಯನ್ನು ನೆನಪು ಮಾಡುತ್ತೀರಿ, ಯೋಗ ಎಂಬುದು ಸಾಮಾನ್ಯ ಶಬ್ಧವಾಗಿದೆ, ಇದಕ್ಕೆ ಯೋಗಾಶ್ರಮವೆಂದೂ ಹೇಳುವುದಿಲ್ಲ ಏಕೆಂದರೆ ಇಲ್ಲಿ ತಂದೆ ಮತ್ತು ಮಕ್ಕಳು ಕುಳಿತಿದ್ದೀರಿ. ಬೇಹದ್ದಿನ ತಂದೆಯನ್ನು ನೆನಪು ಮಾಡುವುದು ಮಕ್ಕಳ ಕರ್ತವ್ಯವಾಗಿದೆ. ನಾವು ಬ್ರಾಹ್ಮಣರಾಗಿದ್ದೇವೆ, ಬ್ರಹ್ಮಾರವರ ಮೂಲಕ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ ಆದ್ದರಿಂದ ಶಿವ ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ನೆನಪು ಮಾಡುತ್ತಾ ಇರಿ. ಭಲೆ ಚಿತ್ರವನ್ನೂ ಇಟ್ಟುಕೊಳ್ಳಿ ಆಗ ನೆನಪಿರುವುದು - ನಾವು ಬ್ರಾಹ್ಮಣರಾಗಿದ್ದೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಬ್ರಾಹ್ಮಣರು ಎಂದಾದರೂ ತಮ್ಮ ಜಾತಿಯನ್ನು ಮರೆಯುತ್ತಾರೆಯೇ? ನೀವು ಶೂದ್ರರ ಸಂಗದಲ್ಲಿ ಬರುವುದರಿಂದ ಬ್ರಾಹ್ಮಣತನವನ್ನು ಮರೆತು ಹೋಗುತ್ತೀರಿ. ಬ್ರಾಹ್ಮಣರಂತೂ ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ ಏಕೆಂದರೆ ನೀವು ಬ್ರಾಹ್ಮಣರೇ ಜ್ಞಾನ ಪೂರ್ಣರಾಗಿದ್ದೀರಿ. ಭಗವಂತನಿಗೆ ಸರ್ವಜ್ಞನೆಂದು ಹೇಳುತ್ತಾರೆ, ಅದರ ಅರ್ಥವನ್ನೂ ತಿಳಿದುಕೊಂಡಿಲ್ಲ. ಅವರು ಎಲ್ಲರ ಹೃದಯಗಳಲ್ಲಿ ಏನಿದೆ ಎಂಬುದನ್ನು ಕುಳಿತು ನೋಡುತ್ತಾರೆಂದಲ್ಲ. ಸರ್ವಜ್ಞನೆಂದರೆ ಅವರಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ಅವರು ಬೀಜರೂಪನಾಗಿದ್ದಾರೆ. ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ ಅಂದಮೇಲೆ ಇಂತಹ ತಂದೆಯನ್ನು ಬಹಳ ನೆನಪು ಮಾಡಬೇಕಾಗಿದೆ. ಈ ಬ್ರಹ್ಮಾರವರ ಆತ್ಮವೂ ಸಹ ಆ ತಂದೆಯನ್ನು ನೆನಪು ಮಾಡುತ್ತದೆ. ತಂದೆಯು ತಿಳಿಸುತ್ತಾರೆ - ಈ ಬ್ರಹ್ಮನೂ ನನ್ನನ್ನು ನೆನಪು ಮಾಡುತ್ತಾರೆ ಆದ್ದರಿಂದಲೇ ಈ ಪದವಿಯನ್ನು ಪಡೆಯುತ್ತಾರೆ. ನೀವೂ ನೆನಪು ಮಾಡುತ್ತೀರಿ ಆಗಲೇ ಪದವಿ ಪಡೆಯುತ್ತೀರಿ. ಮೊಟ್ಟ ಮೊದಲು ನೀವು ಅಶರೀರಿಯಾಗಿ ಬಂದಿದ್ದೀರಿ ಮತ್ತೆ ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ ಮತ್ತೆಲ್ಲರೂ ನಿಮಗೆ ದುಃಖ ಕೊಡುವವರಾಗಿದ್ದಾರೆ. ಅವರನ್ನು ಏಕೆ ನೆನಪು ಮಾಡುತ್ತೀರಿ? ಯಾವಾಗ ನಾನು ನಿಮಗೆ ಸಿಕ್ಕಿದ್ದೇನೋ, ನಾನು ನಿಮ್ಮನ್ನು ಹೊಸ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಅಲ್ಲಿ ಯಾವುದೇ ದುಃಖವಿರುವುದಿಲ್ಲ, ದೈವೀ ಸಂಬಂಧವಿರುತ್ತದೆ. ಇಲ್ಲಿ ಮೊಟ್ಟ ಮೊದಲು ಸ್ತ್ರೀ-ಪುರುಷನ ಸಂಬಂಧದಲ್ಲಿ ದುಃಖವಾಗುತ್ತದೆ ಏಕೆಂದರೆ ವಿಕಾರಿಗಳಾಗುತ್ತಾರೆ. ಈಗ ನಿಮ್ಮನ್ನು ಇಂತಹ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತೇನೆ ಎಲ್ಲಿ ವಿಕಾರದ ಮಾತೇ ಇರುವುದಿಲ್ಲ. ಕಾಮ ಮಹಾಶತ್ರುವೆಂದು ಗಾಯನವಿದೆ, ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಕ್ರೋಧವು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ ಎಂದು ಹೇಳುವುದಿಲ್ಲ ಅಂದಮೇಲೆ ಮೊದಲು ಕಾಮ ವಿಕಾರವನ್ನು ಗೆಲ್ಲಬೇಕು. ಅದೇ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ, ಪತಿತರನ್ನಾಗಿ ಮಾಡುತ್ತದೆ. ಪತಿತ ಶಬ್ಧವು ವಿಕಾರಕ್ಕೆ ಸಲ್ಲುತ್ತದೆ. ಈ ಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ. ನಿಮಗೆ ತಿಳಿದಿದೆ - ನಾವು ಸ್ವರ್ಗದ ದೇವಿ-ದೇವತೆಗಳಾಗುತ್ತಿದ್ದೇವೆ, ಎಲ್ಲಿಯವರೆಗೆ ಈ ನಿಶ್ಚಯವಿಲ್ಲವೋ ಅಲ್ಲಿಯವರೆಗೆ ಏನನ್ನೂ ಪಡೆಯಲು ಸಾಧ್ಯವಿಲ್ಲ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನಸ್ಸಾ-ವಾಚಾ-ಕರ್ಮಣಾ ಆಕ್ಯೂರೇಟ್ ಆಗಬೇಕಾಗಿದೆ, ಪರಿಶ್ರಮವಿದೆ. ಪ್ರಪಂಚದಲ್ಲಿ ಇದು ಯಾರಿಗೂ ಗೊತ್ತಿಲ್ಲ - ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ಮುಂದೆ ಹೋದಂತೆ ತಿಳಿದುಕೊಳ್ಳುವರು. ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ರಾಜ್ಯವು ಬೇಕೆಂದು ಬಯಸುತ್ತಾರೆ ಅಂದಾಗ ನೀವಿದನ್ನು ತಿಳಿಸಬಹುದು - ಸತ್ಯಯುಗದಲ್ಲಿ ಇಂದಿಗೆ 5000 ವರ್ಷಗಳ ಮೊದಲೂ ಒಂದು ರಾಜ್ಯ, ಒಂದು ಧರ್ಮವಿತ್ತು ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ರಾಮ ರಾಜ್ಯ ಮತ್ತು ರಾವಣ ರಾಜ್ಯವನ್ನು ಯಾರೂ ತಿಳಿದುಕೊಂಡಿಲ್ಲ. 100% ತುಚ್ಛ ಬುದ್ಧಿಯವರಿಂದ ನೀವೀಗ ಸ್ವಚ್ಛ ಬುದ್ಧಿಯವರಾಗುತ್ತೀರಿ ನಂಬರ್ವಾರ್ ಪುರುಷಾರ್ಥದನುಸಾರ. ತಂದೆಯು ಕುಳಿತು ಓದಿಸುತ್ತಾರೆ ಕೇವಲ ನೀವು ತಂದೆಯ ಮತದಂತೆ ನಡೆಯಿರಿ. ತಂದೆಯು ತಿಳಿಸುತ್ತಾರೆ - ಹಳೆಯ ಪ್ರಪಂಚದಲ್ಲಿರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ, ನನ್ನನ್ನು ನೆನಪು ಮಾಡುತ್ತಾ ಇರಿ. ತಂದೆಯು ಆತ್ಮಗಳಿಗೇ ತಿಳಿಸುತ್ತಾರೆ - ನಾನು ಈ ಕರ್ಮೇಂದ್ರಿಯಗಳ ಮೂಲಕ ಆತ್ಮರಿಗೆ ಓದಿಸಲು ಬಂದಿದ್ದೇನೆ. ನೀವಾತ್ಮರೂ ಸಹ ಕರ್ಮೇಂದ್ರಿಯಗಳ ಮೂಲಕ ಕೇಳಿಸಿಕೊಳ್ಳುತ್ತೀರಿ. ನೀವು ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ, ಇದಂತೂ ಹಳೆಯ ಛೀ ಛೀ ಶರೀರವಾಗಿದೆ. ನೀವು ಬ್ರಾಹ್ಮಣರು ಪೂಜೆಗೆ ಯೋಗ್ಯರಲ್ಲ, ನೀವು ಗಾಯನಕ್ಕೆ ಯೋಗ್ಯರಾಗಿದ್ದೀರಿ. ದೇವತೆಗಳು ಪೂಜೆಗೆ ಯೋಗ್ಯರಾಗಿದ್ದಾರೆ. ನೀವು ಶ್ರೀಮತದಂತೆ ವಿಶ್ವವನ್ನು ಪವಿತ್ರ, ಸ್ವರ್ಗವನ್ನಾಗಿ ಮಾಡುತ್ತೀರಿ ಆದ್ದರಿಂದ ನಿಮ್ಮದು ಗಾಯನವಿದೆ. ನಿಮಗೆ ಪೂಜೆಯಾಗುವುದಿಲ್ಲ, ಗಾಯನವು ಕೇವಲ ನೀವು ಬ್ರಾಹ್ಮಣರದಾಗಿದೆ, ದೇವತೆಗಳದಲ್ಲ. ತಂದೆಯು ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಜಗದಂಬಾ ಮತ್ತು ಬ್ರಹ್ಮಾ ಮೊದಲಾದವರ ಮಂದಿರಗಳನ್ನು ಕಟ್ಟಿಸುತ್ತಾರೆ ಆದರೆ ಇವರು ಯಾರೆಂಬುದು ತಿಳಿದಿಲ್ಲ. ಜಗತ್ಪಿತನು ಬ್ರಹ್ಮನಾದರಲ್ಲವೆ, ಅವರಿಗೆ ದೇವತೆಯೆಂದು ಹೇಳುವುದಿಲ್ಲ. ದೇವತೆಗಳ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿದೆ. ಈಗ ನಿಮ್ಮ ಆತ್ಮವು ಪವಿತ್ರವಾಗಿ ಬಿಡುತ್ತದೆ, ಪವಿತ್ರ ಶರೀರವಿಲ್ಲ. ನೀವೀಗ ಈಶ್ವರನ ಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ನೀವೂ ಸ್ವರ್ಗಕ್ಕೆ ಯೋಗ್ಯರಾಗುತ್ತಿದ್ದೀರಿ. ಖಂಡಿತವಾಗಿ ಸತೋಪ್ರಧಾನರಾಗಬೇಕಾಗಿದೆ. ಕೇವಲ ನೀವು ಬ್ರಾಹ್ಮಣರಿಗೇ ತಂದೆಯು ಓದಿಸುತ್ತಾರೆ. ಬ್ರಾಹ್ಮಣರ ವೃಕ್ಷವು ವೃದ್ಧಿಯಾಗುತ್ತಾ ಇರುವುದು. ಬ್ರಾಹ್ಮಣರು ಯಾರು ಪಕ್ಕಾ ಆಗಿ ಬಿಡುವರೋ ಅವರೇ ಹೋಗಿ ಮತ್ತೆ ದೇವತೆಗಳಾಗುವರು. ಇದು ಹೊಸ ವೃಕ್ಷವಾಗಿದೆ. ಮಾಯೆಯ ಬಿರುಗಾಳಿಗಳೂ ಬರುತ್ತವೆ, ಸತ್ಯಯುಗದಲ್ಲಿ ಯಾವುದೇ ಬಿರುಗಾಳಿ ಬರುವುದಿಲ್ಲ. ಇಲ್ಲಿ ಮಾಯೆಯು ತಂದೆಯ ನೆನಪಿನಲ್ಲಿರಲು ಬಿಡುವುದಿಲ್ಲ. ನಾವು ತಂದೆಯ ನೆನಪಿನಲ್ಲಿರಬೇಕು. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕೆಂದು ಬಯಸುತ್ತೀರಿ, ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ಪ್ರಾಚೀನ ಯೋಗವನ್ನು ಯಾರಾದರೂ ಬಂದು ಕಲಿಸಲಿ ಎಂದು ವಿದೇಶದವರೂ ಬಯಸುತ್ತಾರೆ. ಈಗ ಯೋಗವು ಎರಡು ಪ್ರಕಾರದ್ದಾಗಿದೆ. ಒಬ್ಬರು ಹಠಯೋಗಿಗಳು, ಇನ್ನೊಬ್ಬರು ರಾಜಯೋಗಿಗಳು. ನೀವು ರಾಜಯೋಗಿಗಳಾಗಿದ್ದೀರಿ. ಇದು ಭಾರತದ ಪ್ರಾಚೀನ ರಾಜಯೋಗವಾಗಿದೆ ಅದನ್ನು ತಂದೆಯೇ ಕಲಿಸುತ್ತಾರೆ. ಕೇವಲ ಗೀತೆಯಲ್ಲಿ ನನ್ನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಎಷ್ಟೊಂದು ಅಂತರವಾಗಿ ಬಿಟ್ಟಿದೆ! ಶಿವ ಜಯಂತಿಯಾದ ಮೇಲೆ ನಿಮ್ಮ ವೈಕುಂಠದ ಜಯಂತಿಯೂ ಆಗುತ್ತದೆ, ಅದರಲ್ಲಿ ಶ್ರೀಕೃಷ್ಣನ ರಾಜ್ಯವಿರುವುದು. ನಿಮಗೆ ತಿಳಿದಿದೆ - ಶಿವ ಜಯಂತಿಯಾದರೆ ಗೀತಾ ಜಯಂತಿಯೂ ಆಗುವುದು. ವೈಕುಂಠದ ಜಯಂತಿಯೂ ಆಗುವುದು. ಅದರಲ್ಲಿ ನೀವು ಪವಿತ್ರರಾಗಿ ಬಿಡುತ್ತೀರಿ. ಕಲ್ಪದ ಮೊದಲಿನ ತರಹ ಸ್ಥಾಪನೆ ಮಾಡುತ್ತೀರಿ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ. ನೆನಪು ಮಾಡದಿದ್ದರೆ ಮಾಯೆಯು ಯಾವುದಾದರೊಂದು ವಿಕರ್ಮ ಮಾಡಿಸಿ ಬಿಡುತ್ತದೆ. ನೆನಪು ಮಾಡದಿದ್ದರೆ ಪೆಟ್ಟು ಬೀಳುತ್ತದೆ. ನೆನಪಿನಲ್ಲಿದ್ದರೆ ಪೆಟ್ಟು ಬೀಳುವುದಿಲ್ಲ. ಇದು ಮಲ್ಲ ಯುದ್ಧವಾಗಿದೆ. ನಿಮಗೆ ತಿಳಿದಿದೆ - ನಮ್ಮ ಶತ್ರು ಯಾವುದೇ ಮನುಷ್ಯನಲ್ಲ. ರಾವಣ ಶತ್ರುವಾಗಿದ್ದಾನೆ. ತಂದೆಯು ತಿಳಿಸುತ್ತಾರೆ - ಈ ಸಮಯದ ವಿವಾಹವು ನಷ್ಟವಾಗಿದೆ. ಒಬ್ಬರು ಇನ್ನೊಬ್ಬರನ್ನು ಪತಿತರನ್ನಾಗಿ ಮಾಡುತ್ತಾರೆ. ಈಗ ಪಾರಲೌಕಿಕ ತಂದೆಯು ಆದೇಶ ನೀಡಿದ್ದಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ. ಇದರ ಮೇಲೆ ಜಯ ಗಳಿಸಿ ಮತ್ತು ಪವಿತ್ರತೆಯ ಪ್ರತಿಜ್ಞೆ ಮಾಡಿ, ಯಾರೂ ಪತಿತರಾಗಬೇಡಿ. ಜನ್ಮ-ಜನ್ಮಾಂತರ ಈ ವಿಕಾರದಿಂದಲೇ ನೀವು ಪತಿತರಾಗಿದ್ದೀರಿ. ಆದ್ದರಿಂದ ಕಾಮ ಮಹಾಶತ್ರುವೆಂದು ಹೇಳಲಾಗುತ್ತದೆ. ಪತಿತ-ಪಾವನನೇ ಬನ್ನಿ ಎಂದು ಸಾಧು-ಸಂತರೆಲ್ಲರೂ ಹೇಳುತ್ತಾರೆ. ಸತ್ಯಯುಗದಲ್ಲಿ ಯಾರೂ ಪತಿತರಿರುವುದಿಲ್ಲ. ತಂದೆಯು ಬಂದು ಜ್ಞಾನದಿಂದ ಸರ್ವರ ಸದ್ಗತಿ ಮಾಡುತ್ತಾರೆ, ಈಗ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಜ್ಞಾನ ಕೊಡುವವರು ಯಾರೂ ಇಲ್ಲ. ಜ್ಞಾನ ಕೊಡುವವರು ಒಬ್ಬರೇ ಜ್ಞಾನ ಸಾಗರನಾಗಿದ್ದಾರೆ. ಜ್ಞಾನದಿಂದ ದಿನವಾಗುತ್ತದೆ. ದಿನವು ರಾಮನದಾಗಿದೆ, ರಾತ್ರಿಯು ರಾವಣನದಾಗಿದೆ. ಈ ಶಬ್ಧಗಳ ಯಥಾರ್ಥ ಅರ್ಥವನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಕೇವಲ ಪುರುಷಾರ್ಥದಲ್ಲಿ ಬಲಹೀನತೆಯಿದೆ. ತಂದೆಯಂತು ಬಹಳ ಚೆನ್ನಾಗಿ ತಿಳಿಸುತ್ತಾರೆ. ನೀವೇ 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ, ಈಗ ಪವಿತ್ರರಾಗಿ ಹಿಂತಿರುಗಿ ಹೋಗಬೇಕಾಗಿದೆ. ನಿಮಗಂತೂ ಶುದ್ಧ ಅಹಂಕಾರವಿರಬೇಕು. ನಾವಾತ್ಮರು ತಂದೆಯ ಮತದಂತೆ ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ, ಯಾವ ಸ್ವರ್ಗದಲ್ಲಿ ಮತ್ತೆ ರಾಜ್ಯಭಾರ ಮಾಡುತ್ತೇವೆ. ಎಷ್ಟು ಪರಿಶ್ರಮ ಪಡುವಿರೋ ಅಷ್ಟು ಪದವಿಯನ್ನು ಪಡೆಯುತ್ತೀರಿ. ರಾಜಾ-ರಾಣಿಯಾದರೂ ಆಗಿ, ಪ್ರಜೆಯಾದರೂ ಆಗಿ. ರಾಜಾ-ರಾಣಿ ಹೇಗಾಗುತ್ತಾರೆ ಎಂಬುದನ್ನು ನೋಡುತ್ತಿದ್ದೀರಿ. ಫಾಲೋ ಫಾದರ್ ಎಂಬ ಗಾಯನವಿದೆ, ಅದು ಈಗಿನ ಮಾತಾಗಿದೆ. ಲೌಕಿಕ ಸಂಬಂಧಕ್ಕಾಗಿ ಈ ರೀತಿ ಹೇಳಲಾಗುವುದಿಲ್ಲ. ಈ ತಂದೆಯು ಮತ ಕೊಡುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. ನೀವು ತಿಳಿದುಕೊಂಡಿದ್ದೀರಿ - ನಾವೀಗ ಶ್ರೀಮತದಂತೆ ನಡೆಯುತ್ತೇವೆ, ಅನೇಕರ ಸೇವೆ ಮಾಡುತ್ತೇವೆ. ಮಕ್ಕಳು ತಂದೆಯ ಬಳಿ ಬಂದಾಗ ಶಿವ ತಂದೆಯು ಜ್ಞಾನದಿಂದ ಖುಷಿ ಪಡಿಸುತ್ತಾರೆ. ಅದನ್ನು ಇವರೂ (ಬ್ರಹ್ಮಾ) ಕಲಿಯುತ್ತಾರಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ನಾನು ಮುಂಜಾನೆ ಬರುತ್ತೇನೆ ನಂತರ ಯಾರೇ ಮಿಲನ ಮಾಡಲು ಬಂದರೂ ಸಹ ಇವರು ತಿಳಿಸಿ ಕೊಡುವುದಿಲ್ಲವೆ! ಬಾಬಾ, ತಾವು ಬಂದು ತಿಳಿಸಿ, ನಾನು ತಿಳಿಸುವುದಿಲ್ಲವೆಂದು ಹೇಳುತ್ತಾರೆಯೇ! ಇವು ಬಹಳ ಗುಪ್ತ, ಗುಹ್ಯ ಮಾತುಗಳಾಗಿವೆ. ನಾನಂತೂ (ಬ್ರಹ್ಮಾ) ಎಲ್ಲರಿಗಿಂತ ಚೆನ್ನಾಗಿ ತಿಳಿಸಿಕೊಡುತ್ತೇನೆ ಅಂದಮೇಲೆ ಶಿವ ತಂದೆಯೇ ತಿಳಿಸುತ್ತಾರೆ - ಇವರು ತಿಳಿಸುವುದಿಲ್ಲವೆಂದು ನೀವು ಏಕೆ ತಿಳಿದುಕೊಳ್ಳುತ್ತೀರಿ! ಇದೂ ಸಹ ನಿಮಗೆ ತಿಳಿದಿದೆ - ಕಲ್ಪದ ಮೊದಲೂ ಸಹ ಇವರು ತಿಳಿಸಿದ್ದಾರೆ. ಆದ್ದರಿಂದಲೇ ಈ ಪದವಿಯನ್ನು ಪಡೆದಿದ್ದಾರೆ ಮಮ್ಮಾರವರೂ ಸಹ ತಿಳಿಸುತ್ತಿದ್ದರಲ್ಲವೆ. ಅವರೂ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಮಮ್ಮಾ-ಬಾಬಾರವರನ್ನು ಸೂಕ್ಷ್ಮವತನದಲ್ಲಿ ತೋರಿಸುತ್ತಾರೆ ಅಂದಾಗ ಮಕ್ಕಳು ಫಾಲೋ ಫಾದರ್ ಮಾಡಬೇಕಾಗಿದೆ. ಬಡವರೇ ಸಮರ್ಪಣೆಯಾಗುತ್ತಾರೆ, ಸಾಹುಕಾರರು ಆಗಲು ಸಾಧ್ಯವಿಲ್ಲ. ಬಾಬಾ, ಇದೆಲ್ಲವೂ ತಮ್ಮದೆಂದು ಬಡವರೇ ಹೇಳುತ್ತಾರೆ. ಶಿವ ತಂದೆಯಂತೂ ದಾತನಾಗಿದ್ದಾರೆ, ಅವರೆಂದೂ ತಿಳಿದುಕೊಳ್ಳುವುದಿಲ್ಲ. ಮಕ್ಕಳಿಗೆ ಹೇಳುತ್ತಾರೆ - ಇದೆಲ್ಲವೂ ನಿಮ್ಮದಾಗಿದೆ, ನಾನು ನನಗಾಗಿ ಮಹಲುಗಳನ್ನು ಇಲ್ಲಿಯಾಗಲಿ, ಸತ್ಯಯುಗದಲ್ಲಾಗಲಿ ಮಾಡಿಕೊಳ್ಳುವುದಿಲ್ಲ. ನಿಮ್ಮನ್ನೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಈಗ ಈ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ಮಂದಿರದಲ್ಲಿ ಹೋಗಿ ನನ್ನ ಜೋಳಿಗೆಯನ್ನು ತುಂಬಿಸಿ ಎಂದು ಕೇಳುತ್ತಾರೆ ಆದರೆ ಯಾವ ಪ್ರಕಾರದ ಜೋಳಿಗೆ? ಅಥವಾ ಯಾವುದರಿಂದ ಜೋಳಿಗೆಯನ್ನು ತುಂಬಿಸಬೇಕು.... ಜೋಳಿಗೆ ತುಂಬುವವರಂತೂ ಲಕ್ಷ್ಮಿಯಾಗಿದ್ದಾಳೆ, ಹಣ ಕೊಡುತ್ತಾರೆ. ಶಿವನ ಬಳಿ ಹೋಗುವುದಿಲ್ಲ, ಶಂಕರನ ಬಳಿ ಹೋಗಿ ಹೇಳುತ್ತಾರೆ. ಶಿವ-ಶಂಕರ ಒಂದೇ ಎಂದು ತಿಳಿದುಕೊಳ್ಳುತ್ತಾರೆ ಆದರೆ ಆ ರೀತಿಯಿಲ್ಲ. ತಂದೆಯು ಬಂದು ಸತ್ಯವನ್ನು ತಿಳಿಸುತ್ತಾರೆ – ತಂದೆಯೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ನೀವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಉದ್ಯೋಗವನ್ನೂ ಮಾಡಬೇಕಾಗಿದೆ. ಪ್ರತಿಯೊಬ್ಬರೂ ತಮಗಾಗಿ ಸಲಹೆ ಕೇಳುತ್ತಾರೆ - ಬಾಬಾ, ನಾವು ಈ ಮಾತಿನಲ್ಲಿ ಸುಳ್ಳು ಹೇಳಬೇಕಾಗುತ್ತದೆ ಎಂದು. ತಂದೆಯು ಪ್ರತಿಯೊಬ್ಬರ ನಾಡಿ ನೋಡಿ ಸಲಹೆ ಕೊಡುತ್ತಾರೆ ಏಕೆಂದರೆ ತಂದೆಯು ತಿಳಿದುಕೊಳ್ಳುತ್ತಾರೆ - ಒಂದುವೇಳೆ ನಾನು ಹೇಳಿ ಅದನ್ನು ಮಕ್ಕಳು ಮಾಡಲು ಆಗದಿದ್ದರೆ ಅಂತಹ ಸಲಹೆಯನ್ನಾದರೂ ಏಕೆ ಕೊಡಬೇಕು. ಆದ್ದರಿಂದ ಅವರು ಮಾಡಲು ಸಾಧ್ಯವಾಗುವಂತೆ ನಾಡಿಯನ್ನು ನೋಡಿ ಸಲಹೆ ಕೊಡಲಾಗುತ್ತದೆ. ನಾನು ಹೇಳಿ ಮಕ್ಕಳು ಮಾಡದಿದ್ದರೆ ಉಲ್ಲಂಘನೆ ಮಾಡುವವರ ಸಾಲಿನಲ್ಲಿ ಬಂದು ಬಿಡುವರು. ಪ್ರತಿಯೊಬ್ಬರದೂ ತಮ್ಮತಮ್ಮದೇ ಆದ ಲೆಕ್ಕಾಚಾರವಿದೆ, ಸರ್ಜನ್ ಒಬ್ಬರೇ ಆಗಿದ್ದಾರೆ. ಅವರ ಬಳಿ ಬರಬೇಕಾಗಿದೆ. ಅವರು ಪೂರ್ಣ ಸಲಹೆ ನೀಡುತ್ತಾರೆ. ಎಲ್ಲರನ್ನು ಕೇಳಬೇಕು - ಬಾಬಾ, ನಾವು ಈ ಪರಿಸ್ಥಿತಿಯಲ್ಲಿ ನಾವು ಹೇಗೆ ನಡೆಯಬೇಕು? ಈಗ ಏನು ಮಾಡುವುದು? ತಂದೆಯು ಸ್ವರ್ಗದಲ್ಲಂತೂ ಕರೆದುಕೊಂಡು ಹೋಗುತ್ತಾರೆ. ನಿಮಗೆ ತಿಳಿದಿದೆ - ನಾವು ಸ್ವರ್ಗವಾಸಿಗಳಾಗುವವರಿದ್ದೇವೆ, ಈಗ ಸಂಗಮವಾಸಿಗಳಾಗಿದ್ದೇವೆ. ನೀವೀಗ ನರಕದಲ್ಲಿಯೂ ಇಲ್ಲ, ಸ್ವರ್ಗದಲ್ಲಿಯೂ ಇಲ್ಲ. ಯಾರ್ಯಾರು ಬ್ರಾಹ್ಮಣರಾಗುವರೋ ಅವರ ಬುದ್ಧಿಯ ಹಗ್ಗವು ಈ ಛೀ ಛೀ ಪ್ರಪಂಚದಿಂದ ಬಿಚ್ಚಲ್ಪಟ್ಟಿದೆ. ನೀವು ಕಲಿಯುಗೀ ಪ್ರಪಂಚದ ತೀರವನ್ನು ಬಿಟ್ಟು ಬಿಟ್ಟಿದ್ದೀರಿ. ಕೆಲವು ಬ್ರಾಹ್ಮಣರು ನೆನಪಿನ ಯಾತ್ರೆಯಲ್ಲಿ ತೀಕ್ಷ್ಣವಾಗಿ ಹೋಗುತ್ತಿದ್ದಾರೆ, ಕೆಲವರು ಕಡಿಮೆ. ಕೆಲವರಂತು ಕೈಯನ್ನು ಬಿಟ್ಟು ಬಿಡುತ್ತಾರೆ ಮತ್ತೆ ಕಲಿಯುಗದಲ್ಲಿ ಹೊರಟು ಹೋಗುತ್ತಾರೆ. ನಿಮಗೆ ತಿಳಿದಿದೆ - ಅಂಬಿಗನು ಈಗ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ, ಆ ಯಾತ್ರೆಯಂತೂ ಅನೇಕ ಪ್ರಕಾರವಾಗಿದೆ, ನಿಮ್ಮದು ಒಂದೇ ಯಾತ್ರೆಯಾಗಿದೆ. ಇದು ಬಹಳ ಭಿನ್ನವಾದ ಯಾತ್ರೆಯಾಗಿದೆ. ಹಾ! ಬಿರುಗಾಳಿಗಳು ಬರುತ್ತವೆ, ನೆನಪನ್ನು ತುಂಡರಿಸುತ್ತವೆ. ಈ ನೆನಪಿನ ಯಾತ್ರೆಯನ್ನು ಚೆನ್ನಾಗಿ ಪಕ್ಕಾ ಮಾಡಿಕೊಳ್ಳಿ, ಪರಿಶ್ರಮ ಪಡಿ. ನೀವು ಕರ್ಮಯೋಗಿಯಾಗಿದ್ದೀರಿ, ಎಷ್ಟು ಸಾಧ್ಯವೋ ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ನೆನಪು ಮಾಡಲಿ.... ಅರ್ಧಕಲ್ಪ ನೀವು ಪ್ರಿಯತಮೆಯರು ಪ್ರಿಯತಮನನ್ನು ನೆನಪು ಮಾಡುತ್ತಾ ಬಂದಿದ್ದೀರಿ - ಬಾಬಾ, ಬಹಳ ದುಃಖವಿದೆ, ಈಗ ನಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡಿ. ನೆನಪಿನ ಯಾತ್ರೆಯಲ್ಲಿದ್ದಾಗ ನಿಮ್ಮ ಪಾಪಗಳು ಸಮಾಪ್ತಿಯಾಗುತ್ತವೆ. ನೀವೇ ಸ್ವರ್ಗದ ಆಸ್ತಿಯನ್ನು ಪಡೆದಿದ್ದಿರಿ, ಈಗ ಕಳೆದುಕೊಂಡಿದ್ದೀರಿ. ಭಾರತವು ಸ್ವರ್ಗವಾಗಿತ್ತು ಆದ್ದರಿಂದಲೇ ಪ್ರಾಚೀನ ಭಾರತವೆಂದು ಹೇಳುತ್ತಾರೆ, ಭಾರತಕ್ಕೇ ಬಹಳ ಮಾನ್ಯತೆಯನ್ನು ಕೊಡುತ್ತಾರೆ. ಎಲ್ಲದಕ್ಕಿಂತ ದೊಡ್ಡದೂ ಆಗಿದೆ, ಎಲ್ಲದಕ್ಕಿಂತ ಹಳೆಯದೂ ಆಗಿದೆ. ಈಗಂತೂ ಭಾರತವು ಎಷ್ಟೊಂದು ಬಡದೇಶವಾಗಿದೆ. ಆದ್ದರಿಂದ ಎಲ್ಲರೂ ಇದಕ್ಕೆ ಸಹಯೋಗ ನೀಡುತ್ತಾರೆ. ಅವರಂತೂ ತಿಳಿದುಕೊಳ್ಳುತ್ತಾರೆ, ನಮ್ಮ ಬಳಿ ಬಹಳ ಧವಸ ಧಾನ್ಯಗಳಾಗಿ ಬಿಡುವುದು, ಎಲ್ಲಿಂದಲೂ ತರಿಸಬೇಕಾಗುವುದಿಲ್ಲ. ಆದರೆ ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ - ವಿನಾಶವಂತೂ ಸಮ್ಮುಖದಲ್ಲಿ ನಿಂತಿದೆ, ಯಾರು ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆಯೋ ಅವರಿಗೆ ಒಳಗೆ ಬಹಳ ಖುಷಿಯಿರುತ್ತದೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ. ನೀವು ಸತ್ಯವನ್ನು ಹೇಳುತ್ತೀರೆಂದು ಹೇಳುತ್ತಾರೆ ಆದರೆ ಇದನ್ನು ತಿಳಿದುಕೊಳ್ಳಬೇಕು - ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಇದು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ, ಇಲ್ಲಿಂದ ಹೊರಗೆ ಹೋದ ಕೂಡಲೇ ಸಮಾಪ್ತಿ. ನಿಮಗೆ ತಿಳಿದಿದೆ - ತಂದೆಯು ನಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಗರ್ಭ ಜೈಲಿನಲ್ಲಾಗಲಿ, ಸ್ಥೂಲವಾದ ಜೈಲಿನಲ್ಲಾಗಲಿ ಹೋಗುವುದಿಲ್ಲ. ಈಗ ಜೈಲಿನ ಯಾತ್ರೆಯೂ ಸಹ ಎಷ್ಟೊಂದು ಸಹಜವಾಗಿ ಬಿಟ್ಟಿದೆ. ಸತ್ಯಯುಗದಲ್ಲಿ ಎಂದೂ ಜೈಲಿನ ಮುಖವನ್ನು ನೋಡುವುದಕ್ಕೂ ಸಿಗುವುದಿಲ್ಲ. ಎರಡೂ ಜೈಲುಗಳಿರುವುದಿಲ್ಲ. ಇಲ್ಲಿ ಇದೆಲ್ಲವೂ ಮಾಯೆಯ ಆಡಂಬರವಾಗಿದೆ. ದೊಡ್ಡ-ದೊಡ್ಡವರನ್ನು ಹೇಗೆ ಸಮಾಪ್ತಿ ಮಾಡಿ ಬಿಡುತ್ತಾರೆ. ಇಂದು ಬಹಳ ಮರ್ಯಾದೆ ಕೊಡುತ್ತಿದ್ದಾರೆ. ನಾಳೆ ಮರ್ಯಾದೆಯೇ ಸಮಾಪ್ತಿ. ಇಂದು ಪ್ರತಿಯೊಂದು ಮಾತು ಬಹಳ ಶೀಘ್ರವಾಗಿ ಆಗುತ್ತದೆ, ಮೃತ್ಯುವು ಆಕಸ್ಮಿಕವಾಗಿ ಆಗುತ್ತಿರುತ್ತದೆ. ಸತ್ಯಯುಗದಲ್ಲಿ ಇಂತಹ ಯಾವುದೇ ಉಪದ್ರವಗಳಾಗುವುದಿಲ್ಲ, ಮುಂದೆ ಹೋದಂತೆ ನೋಡುವಿರಿ - ಏನಾಗುತ್ತದೆ ಎಂದು. ಬಹಳ ಭಯಂಕರವಾದ ದೃಶ್ಯಗಳಿರುವುದು, ನೀವು ಮಕ್ಕಳು ಸಾಕ್ಷಾತ್ಕಾರವನ್ನೂ ಮಾಡಿದ್ದೀರಿ, ಮಕ್ಕಳಿಗಾಗಿ ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮನಸ್ಸಾ-ವಾಚಾ-ಕರ್ಮಣಾ ಬಹಳ-ಬಹಳ ಆಕ್ಯೂರೇಟ್ ಆಗಬೇಕಾಗಿದೆ. ಬ್ರಾಹ್ಮಣರಾಗಿ ಯಾವುದೇ ಶೂದ್ರರ ಕರ್ಮವನ್ನು ಮಾಡಬಾರದು.
2. ತಂದೆಯಿಂದ ಯಾವ ಸಲಹೆ ಸಿಗುತ್ತದೆಯೋ ಅದರಂತೆಯೇ ಸಂಪೂರ್ಣ ನಡೆದು ಆಜ್ಞಾಕಾರಿಗಳಾಗಬೇಕಾಗಿದೆ. ಕರ್ಮ ಯೋಗಿಯಾಗಿ ಪ್ರತೀ ಕಾರ್ಯ ಮಾಡಬೇಕಾಗಿದೆ. ಜ್ಞಾನ ರತ್ನಗಳಿಂದ ಸರ್ವರ ಜೋಳಿಗೆಯನ್ನು ಜ್ಞಾನ ರತ್ನಗಳಿಂದ ತುಂಬಬೇಕಾಗಿದೆ.
ಓಂ ಶಾಂತಿ. ತಂದೆಯು ಮಕ್ಕಳನ್ನು ಪಾವನ ಮಾಡುತ್ತಿದ್ದಾರೆ ಆದ್ದರಿಂದ ಅಗತ್ಯವಾಗಿ ತಂದೆಯೊಂದಿಗೆ ಪ್ರೀತಿಯಿರಬೇಕಾಗಿದೆ. ಪರಸ್ಪರ ಸಹೋದರ-ಸಹೋದರರಲ್ಲಿಯೂ ಪ್ರೀತಿಯು ಸರಿಯಾಗಿದೆ. ಒಬ್ಬ ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ ಆದರೆ ಪಾವನ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಆದುದರಿಂದ ಎಲ್ಲಾ ಮಕ್ಕಳಿಗೂ ಒಬ್ಬ ತಂದೆಯ ಮೇಲೆ ಪ್ರೀತಿಯು ಹೊರಟುಹೋಗುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೆ ನೆನಪು ಮಾಡಿ. ಇದಂತೂ ಸರಿಯಿದೆ- ನೀವಂತೂ ಸಹೋದರ-ಸಹೋದರರೆಂದಾಗ ಅವಶ್ಯವಾಗಿ ಕ್ಷೀರಖಂಡವಾಗಿರುತ್ತೀರಿ. ಒಬ್ಬ ತಂದೆಯ ಮಕ್ಕಳಾಗಿದ್ದೀರಿ, ಆತ್ಮನಲ್ಲಿಯೇ ಎಷ್ಟೊಂದು ಪ್ರೀತಿಯಿರುತ್ತದೆ. ನೀವು ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರೆಂದರೆ ಬಹಳ ಪ್ರೀತಿಯಿರಬೇಕಾಗಿದೆ. ನಾವು ಆತ್ಮ ಸಹೋದರ-ಸಹೋದರರಾಗುತ್ತೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ತಂದೆಯೇ ಬಂದು ಕಲಿಸಿಕೊಡುತ್ತಾರೆ. ಯಾರು ತಿಳಿದುಕೊಳ್ಳುವವರಾಗಿದ್ದಾರೆಯೋ ಅವರು ಇದು ಪಾಠಶಾಲೆ ಅಥವಾ ಅತಿದೊಡ್ಡ ವಿಶ್ವವಿದ್ಯಾಲಯವಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ತಂದೆಯು ಎಲರಿಗೂ ದೃಷ್ಠಿ ಕೊಡುತ್ತಾರೆ ಅಥವಾ ನೆನಪು ಮಾಡುತ್ತಾರೆ. ಬೇಹದ್ದಿನ ತಂದೆಯನ್ನು ಇಡೀ ಪ್ರಪಂಚದ ಮನುಷ್ಯ ಮಾತ್ರರೆಲ್ಲಾ ಆತ್ಮರು ನೆನಪು ಮಾಡುತ್ತಾರೆ. ಹಳೆಯ ಅಥವಾ ಹೊಸ ಪ್ರಪಂಚವೆಲ್ಲವೂ ತಂದೆಯದೇ ಆಗಿದೆ. ಹೊಸಪ್ರಪಂಚ ತಂದೆಯದಾದರೆ ಹಳೆಯ ಪ್ರಪಂಚ ತಂದೆಯದಲ್ಲವೇ? ತಂದೆಯೇ ಎಲ್ಲರನ್ನೂ ಪಾವನ ಮಾಡುತ್ತಾರೆ. ಈ ಹಳೆಯ ಪ್ರಪಂಚವೂ ನನ್ನದೇ ಆಗಿದೆ. ಇಡೀ ಪ್ರಪಂಚದ ಮಾಲೀಕ ನಾನೇ ಆಗಿದ್ದೇನೆ. ಭಲೆ ನಾನು ಹೊಸಪ್ರಪಂಚದಲ್ಲಿ ರಾಜ್ಯಭಾರ ಮಾಡುವುದಿಲ್ಲ ಆದರೂ ಅದು ನನ್ನದಾಗಿದೆ. ನನ್ನ ಮಕ್ಕಳು ನನ್ನ ಈ ವಿಶಾಲಮನೆಯಲ್ಲಿ ಬಹಳ ಸುಖವಾಗಿದ್ದಾರೆ ಹಾಗೂ ನಂತರ ದುಃಖವನ್ನೂ ಪಡೆಯುತ್ತಾರೆ. ಇದು ಆಟವಾಗಿದೆ. ಈ ಇಡೀ ಬೇಹದ್ದಿನ ಪ್ರಪಂಚವು ನಮ್ಮ ಮನೆಯಾಗಿದೆ, ಇದು ಅತಿದೊಡ್ಡ ನಾಟಕದ ಮಂಟಪವಾಗಿದೆ. ಈ ಪೂರ್ಣಮನೆಯಲ್ಲಿ ನನ್ನ ಮಕ್ಕಳಿದ್ದಾರೆಂದು ತಿಳಿದುಕೊಂಡಿದ್ದಾರೆ. ಇಡೀ ಪ್ರಪಂಚವನ್ನು ನೋಡುತ್ತಾರೆ, ಎಲ್ಲವೂ ಚೈತನ್ಯವಾಗಿದೆ. ಎಲ್ಲಾ ಮಕ್ಕಳು ಈ ಸಮಯದಲ್ಲಿ ದುಃಖಿಗಳಾಗಿದ್ದಾರೆ ಆದ್ದರಿಂದ ಬಾಬಾ ನಮ್ಮನ್ನು ಈ ಕೊಳಕು ದುಃಖಿಪ್ರಪಂಚದಿಂದ ಶಾಂತಿಯ ಪ್ರಪಂಚಕ್ಕೆ ಕರೆದುಕೊಂಡು ಹೋಗಿ ಶಾಂತಿದೇವ ಎಂದು ಬೇಡುತ್ತಾರೆ. ತಂದೆಯನ್ನೇ ಬೇಡುತ್ತಾರೆ. ಹೀಗೆ ದೇವತೆಗಳಿಗೆ ಹೇಳಲು ಸಾಧ್ಯವಿಲ್ಲ. ಎಲ್ಲರಿಗೂ ಆ ತಂದೆಯು ಒಬ್ಬರೇ ಆಗಿದ್ದಾರೆ. ಅವರಿಗೆ ಇಡೀ ಪ್ರಪಂಚದ ಚಿಂತೆಯಿದೆ. ಇದು ಬೇಹದ್ದಿನ ಮನೆಯಾಗಿದೆ. ತಂದೆಯು ತಿಳಿದುಕೊಂಡಿದ್ದಾರೆ- ಈ ಬೇಹದ್ದಿನ ಮನೆಯಲ್ಲಿ ಈ ಸಮಯದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ ಆದ್ದರಿಂದ ಹೇ ಶಾಂತಿದೇವ, ಸುಖದೇವ ಎಂದು ಕರೆಯುತ್ತಾರೆ. ಈ ಎರಡೂ ವಸ್ತುಗಳನ್ನು ಬೇಡುತ್ತಾರಲ್ಲವೆ. ಈಗಂತೂ ನಿಮಗೆ ತಿಳಿದಿದೆ- ನಾವು ಬೇಹದ್ದಿನ ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯು ಬಂದು ನಮಗೆ ಸುಖವನ್ನು ಕೊಡುತ್ತಾರೆ, ಶಾಂತಿಯನ್ನು ಕೊಡುತ್ತಾರೆ ಬೇರೆ ಯಾರೂ ಸುಖ-ಶಾಂತಿಯನ್ನು ಕೊಡುವವರಿಲ್ಲ. ತಂದೆಗೆ ಮಾತ್ರ ದಯೆ ಬರುತ್ತದೆ, ಅವರು ಬೇಹದ್ದಿನ ತಂದೆಯಾಗಿದ್ದಾರೆ. ನೀವು ಅಪವಿತ್ರರಾಗುವುದರಿಂದ ದುಃಖಿಗಳಾಗಿಬಿಡುತ್ತೀರಿ. ಕಾಮಚಿತೆಯ ಮೇಲೆ ಕುಳಿತು ಪತಿತರಾಗಿಬಿಡುತ್ತೇವೆ. ಯಾವ ತಂದೆಯಿಂದ ನಾವು ಇದನ್ನು ಪಡೆದುಕೊಂಡಿದ್ದೆವು, ಆ ತಂದೆಯನ್ನೇ ಮರೆತುಬಿಡುತ್ತೇವೆ. ನೀವೇ ತಾಯಿ-ತಂದೆ, ನಿಮ್ಮಿಂದ ಅಪಾರವಾದ ಸುಖಪ್ರಾಪ್ತಿಯಾಗುತ್ತದೆ ಎಂದು ಹಾಡನ್ನು ಹಾಡುತ್ತಾರೆ. ಅದನ್ನೇ ಈಗ ನೀವು ಪಡೆದುಕೊಳ್ಳುತ್ತಿದ್ದೀರಿ ಏಕೆಂದರೆ ಈಗ ಅಪಾರ ದುಃಖವಿದೆ. ಇದು ತಮೋಪ್ರಧಾನ ಪ್ರಪಂಚವಾಗಿದೆ, ವಿಷಯ ಸಾಗರದಲ್ಲಿ ಮುಳುಗುತ್ತಿರುತ್ತಾರೆ ಏನನ್ನೂ ತಿಳಿದುಕೊಂಡಿಲ್ಲ. ಈಗ ನಿಮಗೆ ತಿಳುವಳಿಕೆ ಬಂದಿದೆ, ಇದು ರೌರವ ನರಕವಾಗಿದೆ.
ತಂದೆಯು ಮಕ್ಕಳನ್ನು ಕೇಳುತ್ತಾರೆ- ಈಗ ನೀವು ನರಕವಾಸಿಗಳೋ ಅಥವಾ ಸ್ವರ್ಗವಾಸಿಗಳೋ? ಯಾರಾದರೂ ದೇಹಬಿಟ್ಟರೆ ತಕ್ಷಣ ಸ್ವರ್ಗಸ್ಥರಾದರೆಂದು ಹೇಳಿಬಿಡುತ್ತಾರೆ ಅರ್ಥಾತ್ ಎಲ್ಲಾ ದುಃಖಗಳಿಂದ ದೂರವಾದರೆ ನಂತರ ಅವರಿಗೆ ನರಕದ ವಸ್ತುವನ್ನು ಏಕೆ ತಿನ್ನಿಸುತ್ತೀರಿ? ಇದನ್ನು ತಿಳಿದುಕೊಂಡಿಲ್ಲ. ತಂದೆಯು ಬಂದು ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ, ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಾರೆ. ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ನಾನು ನಿಮಗೆ ಈ ಜ್ಞಾನವನ್ನು ಹೇಳುತ್ತೇನೆ ನನ್ನಲ್ಲಿಯೇ ಈ ಜ್ಞಾನವಿದೆ, ನಾನು ಜ್ಞಾನಸಾಗರನಾಗಿದ್ದೇನೆ. ಶಾಸ್ತ್ರಗಳ ಅಥಾರಿಟಿಯೆಂದು ಹೇಳುತ್ತಾರೆ ಆದರೆ ಆ ಶಾಸ್ತ್ರಗಳನ್ನು ಬರೆದಿರುವವರೂ ಆತ್ಮಗಳೇ ಆಗಿದ್ದಾರೆಂದು ತಿಳಿದುಕೊಂಡಿಲ್ಲ. ತಂದೆಯನ್ನೇ ತಿಳಿದುಕೊಂಡಿಲ್ಲ. ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅವರನ್ನೇ ಕಲ್ಲು-ಮುಳ್ಳು ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿಬಿಟ್ಟಿದ್ದಾರೆ. ವ್ಯಾಸಭಗವಂತನು ಏನೆಲ್ಲಾ ಮಾತುಗಳನ್ನು ಬರೆದುಬಿಟ್ಟಿದ್ದಾರೆ. ಮನುಷ್ಯರಿಗಂತೂ ಸ್ವಲ್ಪವೂ ಗೊತ್ತಿಲ್ಲ ಸಂಪೂರ್ಣ ಬಿಕಾರಿಗಳಾಗಿ ಪರಸ್ಪರ ಜಗಳ ಮಾಡುತ್ತಿರುತ್ತಾರೆ. ತಂದೆ ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯವನ್ನೂ ಯಾರೂ ತಿಳಿದುಕೊಂಡಿಲ್ಲ. ತಂದೆ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿಸುತ್ತಾರೆ, ಬೇರೆ ಯಾರೂ ತಿಳಿಸಲು ಆಗುವುದಿಲ್ಲ. ನೀವು ಯಾರನ್ನಾದರೂ ಕೇಳಿ- ಯಾರನ್ನು ನೀವು ಈಶ್ವರ, ಭಗವಾನ್, ರಚಯಿತ ಎಂದು ಹೇಳುತ್ತೀರಿ ಅವರನ್ನು ನೀವು ತಿಳಿದುಕೊಂಡಿದ್ದೀರಾ? ಈಶ್ವರನನ್ನು ಕಲ್ಲಿನಲ್ಲಿ, ಮುಳ್ಳಿನಲ್ಲಿಯೂ ಇದ್ದಾರೆಂದು ಹೇಳುವುದು ತಿಳಿದುಕೊಳ್ಳುವುದೇನು? ಮೊದಲಿಗೆ ನಿಮ್ಮನ್ನು ನೀವು ತಿಳಿದುಕೊಳ್ಳಿ. ಮನುಷ್ಯರು ತಮೋಪ್ರಧಾನ ಆಗಿರುವುದರಿಂದ ಪ್ರಾಣಿ ಮೊದಲಾದವುಗಳೆಲ್ಲವೂ ತಮೋಪ್ರಧಾನವಾಗಿದೆ. ಮನುಷ್ಯರು ಸತೋಪ್ರಧಾನವಾಗಿದ್ದಾಗ ಎಲ್ಲರೂ ಸುಖಿಯಾಗಿದ್ದರು. ಹೇಗೆ ಮನುಷ್ಯರೋ ಅದರಂತೆಯೇ ವಸ್ತುಗಳಿರುತ್ತವೆ. ಶ್ರೀಮಂತರು ಉಪಯೋಗಿಸುವ ವಸ್ತುಗಳೂ ಸಹ ಬಹಳ ಚೆನ್ನಾಗಿರುತ್ತವೆ. ಆಹಾ! ನೀವಂತೂ ಸಂಪೂರ್ಣ ಸುಖಿ ಮತ್ತು ವಿಶ್ವದ ಮಾಲೀಕರಾಗುತ್ತೀರಿ ಆಗ ನಿಮ್ಮ ಬಳಿಯಿರುವ ಪ್ರತಿಯೊಂದು ವಸ್ತುವು ಸುಖದಾಯಿಯಾಗಿರುತ್ತದೆ, ಅಲ್ಲಿ ದುಃಖದಾಯಿ ವಸ್ತುಗಳು ಯಾವುದೂ ಇಲ್ಲ. ಈ ನರಕವು ಕೊಳಕು ಪ್ರಪಂಚವಾಗಿದೆ.
ತಂದೆಯು ಬಂದು ತಿಳಿಸುತ್ತಾರೆ- ಭಗವಂತ ಒಬ್ಬರೇ ಆಗಿದ್ದಾರೆ, ಅವರೇ ಪತಿತ-ಪಾವನನೂ ಆಗಿದ್ದಾರೆ. ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಸರ್ವಗುಣ ಸಂಪನ್ನ...... ಎಂದು ದೇವತೆಗಳ ಮಹಿಮೆಯನ್ನು ಹಾಡುತ್ತಾರೆ. ಮಂದಿರಗಳಿಗೆ ಹೋಗಿ ದೇವತೆಗಳೊಂದಿಗೆ ಹೋಲಿಕೆ ಮಾಡುತ್ತಾ ತಮ್ಮನ್ನು ನಿಂದನೆ ಮಾಡುತ್ತಾರೆ ಏಕೆಂದರೆ ಎಲ್ಲರೂ ಭ್ರಷ್ಟಾಚಾರಿಗಳಾಗಿದ್ದಾರೆ. ಶ್ರೇಷ್ಠಾಚಾರಿ, ಸ್ವರ್ಗವಾಸಿಗಳಂತೂ ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ ಆದರಿಂದ ಅವರಿಗೆ ಎಲ್ಲರೂ ಪೂಜೆ ಮಾಡುತ್ತಾರೆ, ಸನ್ಯಾಸಿಗಳೂ ಸಹ ಮಾಡುತ್ತಾರೆ. ಸತ್ಯಯುಗದಲ್ಲಿ ಈ ರೀತಿಯಾಗುವುದಿಲ್ಲ. ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ, ಬೇಹದ್ದಿನ ತಂದೆಯು ಬಂದು ಬೇಹದ್ದಿನ ಸನ್ಯಾಸವನ್ನು ಮಾಡಿಸುತ್ತಾರೆ. ಅದು ಹಠಯೋಗ, ಹದ್ದಿನ ಸನ್ಯಾಸವಾಗಿದೆ. ಅದು ಬೇರೆ ಧರ್ಮವಾಗಿದೆ. ತಂದೆಯು ತಿಳಿಸುತ್ತಾರೆ- ನೀವು ನಿಮ್ಮ ಧರ್ಮವನ್ನು ಮರೆತು ಎಷ್ಟೊಂದು ಧರ್ಮಗಳಲ್ಲಿ ಸೇರಿಕೊಂಡಿದ್ದೀರಿ, ತಮ್ಮ ಭಾರತವನ್ನೇ ಹಿಂದೂಸ್ಥಾನವೆಂದು ಹೆಸರಿಟ್ಟಿದ್ದೀರಿ, ಹಿಂದೂಧರ್ಮವೆಂದು ಹೇಳಿಬಿಟ್ಟಿದ್ದೀರಿ. ವಾಸ್ತವದಲ್ಲಿ ಹಿಂದೂ ಧರ್ಮವನ್ನು ಯಾರೂ ಸ್ಥಾಪನೆ ಮಾಡಿಲ್ಲ. ಮುಖ್ಯ ನಾಲ್ಕುಧರ್ಮಗಳಿವೆ- ದೇವಿ-ದೇವತಾ, ಇಸ್ಲಾಮಿ, ಬೌದ್ಧಿ ಹಾಗೂ ಕ್ರಿಶ್ಚಿಯನ್. ನಿಮಗೆ ಗೊತ್ತಿದೆ- ಈಗ ಇಡೀ ಪ್ರಪಂಚ ದ್ವೀಪವಾಗಿದೆ, ಇದರಲ್ಲಿ ರಾವಣನ ರಾಜ್ಯವಿದೆ. ರಾವಣನನ್ನು ನೋಡಿದ್ದೀರಾ? ಆ ರಾವಣನನ್ನು ಪದೇ-ಪದೇ ಸುಡುತ್ತಾರೆ. ಈ ರಾವಣ ಎಲ್ಲರಿಗಿಂತ ಹಳೆಯ ಶತ್ರುವಾಗಿದ್ದಾನೆ. ನಾವು ರಾವಣನನ್ನು ಏಕೆ ಸುಡುತ್ತೇವೆಂದೂ ಸಹ ತಿಳಿದುಕೊಂಡಿಲ್ಲ. ಇವನು ಯಾರು ಎಂಬ ತಿಳುವಳಿಕೆ ಬೇಕಲ್ಲವೆ. ಇವನನ್ನು ಎಂದಿನಿಂದ ಸುಡುತ್ತಾ ಬಂದಿದ್ದೇವೆ? ಪರಂಪರೆಯಿಂದ ಎಂದು ತಿಳಿದುಕೊಂಡಿದ್ದಾರೆ. ಅರೆ! ಆ ಪರಂಪರೆಗೂ ಲೆಕ್ಕಾಚಾರ ಬೇಕಲ್ಲವೆ. ನಿಮ್ಮನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಬ್ರಹ್ಮನ ಮಕ್ಕಳಾಗಿದ್ದೀರಿ. ನಿಮನ್ನು ನೀವು ಯಾರ ಮಕ್ಕಳು? ಎಂದು ಯಾರಾದರೂ ಕೇಳಿದರೆ ಅರೆ! ನಾವು ಬ್ರಹ್ಮಾಕುಮಾರ-ಕುಮಾರಿಯರು, ಬ್ರಹ್ಮನ ಮಕ್ಕಳಾಗಿದ್ದೇವೆ. ಬ್ರಹ್ಮಾ ಯಾರ ಮಗುವಾಗಿದ್ದಾನೆ? ಶಿವತಂದೆಯ ಮಗು. ನಾವು ಅವರ ಮೊಮ್ಮಕ್ಕಳಾಗಿದ್ದೇವೆ. ಎಲ್ಲಾ ಆತ್ಮಗಳು ಅವರಿಗೆ ಮಕ್ಕಳಾಗಿದ್ದಾರೆ. ಮತ್ತೆ ಶರೀರದಲ್ಲಿ ಮೊದಲು ಬ್ರಾಹ್ಮಣರಾಗುತ್ತೇವೆ, ಪ್ರಜಾಪಿತ ಇದ್ದಾರಲ್ಲವೆ. ಇಷ್ಟೊಂದು ಪ್ರಜೆಗಳನ್ನು ಹೇಗೆ ರಚಿಸಲಾಯಿತು, ಇದನ್ನು ನೀವು ತಿಳಿದುಕೊಂಡಿದ್ದೀರಿ. ಇದು ದತ್ತು ತೆಗೆದುಕೊಳ್ಳುವುದಾಗಿದೆ, ಶಿವತಂದೆಯು ಬ್ರಹ್ಮನ ಮೂಲಕ ದತ್ತು ತೆಗೆದುಕೊಳ್ಳುತ್ತಾರೆ. ಮೇಳ ನಡೆಯುತ್ತದೆ, ವಾಸ್ತವದಲ್ಲಿ ಈ ಮೇಳ ಎಲ್ಲಿ ಬ್ರಹ್ಮಾಪುತ್ರ ದೊಡ್ಡನದಿಯು ಸಾಗರದಲ್ಲಿ ಹೋಗಿ ಸೇರುತ್ತದೆಯೋ ಅಲ್ಲಿ ನಡೆಯಬೇಕಾಗಿದೆ. ಆ ಸಂಗಮದಲ್ಲಿ ಮೇಳ ನಡೆಯಬೇಕಾಗಿದೆ. ಈ ಮೇಳವು ಇಲ್ಲಿದೆ, ಬ್ರಹ್ಮಾರವರೂ ಸಹ ಕುಳಿತಿದ್ದಾರೆ. ಅವರೂ ನಮ್ಮ ತಂದೆಯಾಗಿದ್ದಾರೆ ಹಾಗೂ ಹಿರಿಯ ತಾಯಿ ಇವರೇ (ಬ್ರಹ್ಮಾ) ಆಗಿದ್ದಾರೆಂದು ನಿಮಗೆ ತಿಳಿದಿದೆ. ಆದರೆ ಪುರುಷನಾಗಿರುವುದರಿಂದ ಮಮ್ಮಾರವರನ್ನು, ಮಾತೆಯರ ಪಾಲನೆಗಾಗಿ ನಿಮಿತ್ತ ಮಾಡಲಾಯಿತು. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಸದ್ಗತಿ ಕೊಡುತ್ತೇನೆ, ಈ ದೇವತೆಗಳು ಡಬಲ್ ಅಹಿಂಸಕರಾಗಿರುತ್ತಾರೆ ಏಕೆಂದರೆ ಅಲ್ಲಿ ರಾವಣನಿರುವುದಿಲ್ಲವೆಂದು ನಿಮಗೆ ತಿಳಿದಿದೆ. ಭಕ್ತಿಯು ರಾತ್ರಿಯಾಗಿದೆ, ಜ್ಞಾನ ಹಗಲಾಗಿದೆ. ಜ್ಞಾನಸಾಗರ ತಂದೆಯು ಒಬ್ಬರೇ ಆಗಿದ್ದಾರೆ. ಅವರಿಗಾಗಿ ಸರ್ವವ್ಯಾಪಿ ಎಂದು ಹೇಳಿಬಿಟ್ಟಿದ್ದಾರೆ. ತಂದೆಯೇ ಬಂದು ಮಕ್ಕಳಿಗೇ ತಿಳಿಸುತ್ತಾರೆ. ಶಿವಭಗವಾನುವಾಚ ಇದೆಯಲ್ಲವೆ. ಶಿವಜಯಂತಿಯನ್ನೂ ಆಚರಿಸುತ್ತಾರೆ, ಅವಶ್ಯವಾಗಿ ಅವರು ಯಾರಲ್ಲಿಯಾದರೂ ಬರುತ್ತಾರೆ. ನಾನು ಪ್ರಕೃತಿಯ ಆಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ನಾನು ಯಾವುದೇ ಚಿಕ್ಕಮಗುವಿನ ಆಧಾರವನ್ನು ತೆಗೆದುಕೊಳ್ಳುವುದಿಲ್ಲ. ಕೃಷ್ಣ ಮಗುವಾಗಿದ್ದಾನೆ ಅಲ್ಲವೆ. ನಾನಂತೂ ಕೃಷ್ಣನ ಅನೇಕ ಜನ್ಮಗಳ ಅಂತ್ಯದಲ್ಲಿ, ಅದರಲ್ಲಿ ಅವರ ವಾನಪ್ರಸ್ಥ ಸ್ಥಿತಿಯಲ್ಲಿ ಪ್ರವೇಶ ಮಾಡುತ್ತೇನೆ. ವಾನಪ್ರಸ್ಥ ಸ್ಥಿತಿಯ ನಂತರ ಮನುಷ್ಯರು ಭಗವಂತನನ್ನು ಸ್ಮರಿಸುತ್ತಾರೆ ಆದರೆ ಭಗವಂತನನ್ನೇ ಯಥಾರ್ಥವಾಗಿ ಯಾರೂ ತಿಳಿದುಕೊಂಡಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ಯಧಾಯಧಾಹಿ ....... ನಾನು ಭಾರತದಲ್ಲಿಯೇ ಬರುತ್ತೇನೆ. ಭಾರತದ ಮಹಿಮೆಯು ಅಪರಮಪಾರವಾಗಿದೆ.
ಮನುಷ್ಯರನ್ನು ನೋಡಿ, ಎಷ್ಟೊಂದು ದೇಹದ ಅಹಂಕಾರವಿದೆ. ನಾನು ಇಂತಹವನಾಗಿದ್ದೇನೆ! ನಾನು ಇದಾಗಿದ್ದೇನೆ! ತಂದೆಯು ಬಂದು ನಿಮ್ಮನ್ನು ದೇಹೀ-ಅಭಿಮಾನಿಯನ್ನಾಗಿ ಮಾಡುತ್ತಾರೆ. ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಕುಳಿತು ಎಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ. ಇದು ಹಳೆಯ ಪ್ರಪಂಚವಾಗಿದೆ, ಸತ್ಯಯುಗ ಹೊಸಪ್ರಪಂಚವಾಗಿದೆ. ಸತ್ಯಯುಗದಲ್ಲಿ ಆದಿಸನಾತನ ದೇವಿ-ದೇವತಾ ಧರ್ಮವಿತ್ತು, ಇದು 5000 ವರ್ಷಗಳ ಮಾತಾಗಿದೆ ಆದರೆ ಶಾಸ್ತ್ರಗಳಲ್ಲಿ ವ್ಯಾಸನ ಹೆಸರನ್ನು ಬರೆದು ಕಲ್ಪದ ಆಯಸ್ಸನ್ನು ಲಕ್ಷಾಂತರ ಸಾವಿರಾರು ವರ್ಷಗಳೆಂದು ಹೇಳಿಬಿಟ್ಟಿದ್ದಾರೆ. ವಾಸ್ತವದಲ್ಲಿ ಕಲ್ಪದ ಆಯಸ್ಸು 5000 ವರ್ಷಗಳಾಗಿವೆ. ಮನುಷ್ಯರು ಸಂಪೂರ್ಣ ಅಜ್ಞಾನದ ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ. ಈಗ ಈ ನಿಮ್ಮ ಮಾತುಗಳನ್ನು ಯಾರಾದರೂ ಕೇಳಿದರೆ ತಿಳಿದುಕೊಳ್ಳಲು ಆಗುವುದಿಲ್ಲ ಆದುದರಿಂದ ತಂದೆಯು ತಿಳಿಸುತ್ತಾರೆ- ನಾನು ನನ್ನ ಮಕ್ಕಳೊಂದಿಗೇ ಮಾತನಾಡುತ್ತೇನೆ. ಭಕ್ತಿಯನ್ನೂ ಸಹ ನೀವೇ ಆರಂಭಿಸುತ್ತೀರಿ. ತಮಗೆ ತಾವೇ ನಷ್ಟ ಮಾಡಿಕೊಂಡಿದ್ದೀರಿ. ತಂದೆಯು ನಿಮ್ಮನ್ನು ಪೂಜ್ಯರನ್ನಾಗಿ ಮಾಡಿದ್ದರು ನಂತರ ನೀವು ಪೂಜಾರಿಯಾಗಿಬಿಡುತ್ತೀರಿ. ಇದೂ ಸಹ ಆಟವಾಗಿದೆ. ಕೆಲವು ಮನುಷ್ಯರ ಮನಸ್ಸು ಮೃದುವಾಗಿರುವುದರಿಂದ ಆಟವನ್ನು ನೋಡುತ್ತಾ ಅಳುವುದಕ್ಕೆ ಪ್ರಾರಂಭಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಯಾರು ಅಳುತ್ತಾರೆಯೋ ಅವರು ಕಳೆದುಕೊಳ್ಳುತ್ತಾರೆ. ಸತ್ಯಯುಗದಲ್ಲಿ ಅಳುವ ಮಾತು ಇರುವುದಿಲ್ಲ. ಅಳಬಾರದೆಂದು ತಂದೆಯು ಇಲ್ಲಿ ತಿಳಿಸುತ್ತಾರೆ. ದ್ವಾಪರ ಕಲಿಯುಗದಲ್ಲಿ ಅಳುತ್ತಾರೆ ಸತ್ಯಯುಗದಲ್ಲಿ ಎಂದಿಗೂ ಅಳುವುದಿಲ್ಲ, ಅಂತ್ಯದಲ್ಲಿ ಯಾರಿಗೂ ಅಳಲು ಸಮಯಾವಕಾಶ ಇರುವುದಿಲ್ಲ. ಅಕಸ್ಮಿಕವಾಗಿ ಸಾಯುತ್ತಿರುತ್ತಾರೆ. ಅಯ್ಯೊ ರಾಮ ಎಂದೂ ಸಹ ಹೇಳಲು ಆಗುವುದಿಲ್ಲ. ವಿನಾಶ ಈ ರೀತಿಯಾಗುತ್ತದೆ- ಸ್ವಲ್ಪವೂ ದುಃಖವಾಗುವುದಿಲ್ಲ ಏಕೆಂದರೆ ಆಸ್ಪತ್ರೆ ಮೊದಲಾದವುಗಳಿರುವುದಿಲ್ಲ. ಆದುದರಿಂದ ಅಂತಹ ವಸ್ತುಗಳನ್ನೇ ಮಾಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ- ರಾವಣನ ಮೇಲೆ ಜಯಗಳಿಸಲು ನಿಮ್ಮ ಮಂಗಗಳ ಸೈನ್ಯವನ್ನು ನಾನು ತೆಗೆದುಕೊಳ್ಳುತ್ತೇನೆ. ಈಗ ನಿಮಗೆ ತಂದೆಯು ರಾವಣನ ಮೇಲೆ ಹೇಗೆ ವಿಜಯಿಗಳಾಗಬೇಕೆಂದು ಉಪಾಯ ತಿಳಿಸುತ್ತಾರೆ. ಎಲ್ಲಾ ಸೀತೆಯರನ್ನು ರಾವಣನ ಬಂಧನದಿಂದ ಬಿಡಿಸಬೇಕು. ಇದೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಭಗವಾನುವಾಚ- ತಂದೆಯು ಮಕ್ಕಳಿಗೇ ಹೇಳುತ್ತಾರೆ- ಹಿಯರ್ ನೋ ಈವಿಲ್...... ಯಾವ ಮಾತುಗಳಿಂದ ನಿಮಗೆ ಲಾಭವಿಲ್ಲವೋ ಅಂತಹ ಮಾತುಗಳಿಂದ ನಿಮ್ಮ ಕಿವಿಗಳನ್ನು ಮುಚ್ಚಿಕೊಳ್ಳಿ. ಈಗ ನಿಮಗೆ ಶ್ರೀಮತ ಸಿಗುತ್ತದೆ, ನೀವೇ ಶ್ರೇಷ್ಠರಾಗುತ್ತೀರಿ. ಇಲ್ಲಂತೂ ಶ್ರೀ ಶ್ರೀ ಎಂಬ ಬಿರುದನ್ನು ಎಲ್ಲರಿಗೂ ನೀಡಿದ್ದಾರೆ. ಒಳ್ಳೆಯದು- ಮತ್ತೆ ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದು ಎಷ್ಟೊಂದು ಅದ್ಭುತವಾದ ಸೋಲು-ಗೆಲುವಿನ ಬೇಹದ್ದಿನ ನಾಟಕವಾಗಿದೆ, ಅದನ್ನು ತಂದೆಯೇ ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯ ಸಮಾನ ದಯಾಹೃದಯಿ ಆಗಬೇಕು. ಎಲ್ಲರನ್ನೂ ದುಃಖದಿಂದ ಬಿಡಿಸಿ ಪಾವನ ಮಾಡುವ ಸೇವೆ ಮಾಡಬೇಕು. ಪಾವನರಾಗಲು ಒಬ್ಬ ತಂದೆಯೊಂದಿಗೆ ಬಹಳ-ಬಹಳ ಪ್ರೀತಿಯನ್ನಿಡಬೇಕು.
2. ತಂದೆಯು ತಿಳಿಸುತ್ತಾರೆ- ಯಾರು ಅಳುತ್ತಾರೆ ಅವರು ಕಳೆದುಕೊಳ್ಳುತ್ತಾರೆ ಆದ್ದರಿಂದ ಎಂಥಹ ಪರಿಸ್ಥಿತಿಯಲ್ಲಿಯೂ ಅಳಬಾರದು.
ಓಂ ಶಾಂತಿ. ನೋಡಿ ಗೀತೆಯಲ್ಲಿ ಹೇಳುತ್ತಾರೆ – ಜೀವನ ಬಂಧನವನ್ನು ನಿಮ್ಮೊಂದಿಗೇ ಬಂಧಿಸಿರುವೆನು ಎಂದು. ಹೇಗೆ ಯಾವುದೇ ಕನ್ಯೆಯು ತನ್ನ ಜೀವನದ ದಾರವನ್ನು ಪತಿಯ ಜೊತೆ ಬಂಧಿಸುತ್ತಾಳೆ. ಜೀವನ ಪರ್ಯಂತ ಅವರ ಜೊತೆಗಾರನಾಗಿಯೇ ಇರಬೇಕು, ಅವರೇ ಪಾಲನೆ ಮಾಡಬೇಕೆಂದು ತಿಳಿಯುತ್ತಾಳೆ. ಕನ್ಯೆಯು ಅವರ ಪಾಲನೆ ಮಾಡಬೇಕೆಂದಲ್ಲ. ಜೀವನ ಪರ್ಯಂತ ಅವರೇ ಪಾಲನೆ ಮಾಡಬೇಕಾಗಿದೆ. ನೀವು ಮಕ್ಕಳೂ ಸಹ ಜೀವನ ಬಂಧನವನ್ನು ಬಂಧಿಸಿದ್ದೀರಿ. ಬೇಹದ್ದಿನ ತಂದೆಯೆಂದಾದರೂ ಹೇಳಿ, ಶಿಕ್ಷಕ ಅಥವಾ ಗುರುವೆಂದಾದರೂ ಹೇಳಿ... ಈ ಆತ್ಮಗಳ ಜೀವನದ ಹಗ್ಗವು ಪರಮಾತ್ಮನ ಜೊತೆ ಬಂಧಿಸಬೇಕಾಗಿದೆ. ಅದು ಹದ್ದಿನ ಸ್ಥೂಲ ಮಾತು, ಇದು ಸೂಕ್ಷ್ಮ ಮಾತಾಗಿದೆ. ಕನ್ಯೆಯ ಜೀವನದ ಬಂಧನವನ್ನು ಪತಿಯ ಜೊತೆ ಬಂಧಿಸಲಾಗುತ್ತದೆ. ಕನ್ಯೆಯು ಅವರ ಮನೆಗೆ ಹೋಗುತ್ತಾಳೆ. ನೋಡಿ, ಪ್ರತಿಯೊಂದು ಮಾತನ್ನೂ ತಿಳಿದುಕೊಳ್ಳುವ ಬುದ್ಧಿ ಇರಬೇಕು. ಕಲಿಯುಗದಲ್ಲಿ ಎಲ್ಲರೂ ಆಸುರೀ ಮತದವರಿದ್ದಾರೆ. ನಿಮಗೆ ತಿಳಿದಿದೆ - ನಾವು ಜೀವನದ ಬಂಧನವನ್ನು ಒಬ್ಬರೊಂದಿಗೆ ಬಂಧಿಸಿದ್ದೇವೆ, ಎಲ್ಲಾ ಸಂಬಂಧವು ಒಬ್ಬರೊಂದಿಗೆ ಇದೆ. ಒಬ್ಬರೊಂದಿಗೇ ಸಂಬಂಧವನ್ನು ನಿಭಾಯಿಸಬೇಕಾಗಿದೆ ಏಕೆಂದರೆ ಅವರಿಂದ ನಮಗೆ ಬಹಳ ಒಳ್ಳೆಯ ಸುಖ ಸಿಗುತ್ತದೆ. ಅವರು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಅಂತಹ ತಂದೆಯ ಮತದಂತೆ ನಡೆಯಬೇಕು, ಇದು ಆತ್ಮಿಕ ಬಂಧನವಾಗಿದೆ. ಆತ್ಮವೇ ಶ್ರೀಮತವನ್ನು ತೆಗೆದುಕೊಳ್ಳುತ್ತದೆ, ಆಸುರೀ ಮತವನ್ನು ತೆಗೆದುಕೊಂಡಿದ್ದರಿಂದ ಕೆಳಗಿಳಿದಿದ್ದೀರಿ. ಈಗ ಆತ್ಮಿಕ ತಂದೆಯ ಶ್ರೀಮತದಂತೆ ನಡೆಯಬೇಕು.
ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ನಮ್ಮ ಆತ್ಮದ ಬಂಧನವನ್ನು ಪರಮಾತ್ಮನೊಂದಿಗೆ ಬಂಧಿಸುತ್ತೇವೆ. ಆದ್ದರಿಂದ ನಮಗೆ ಅವರಿಂದ 21 ಜನ್ಮಗಳು ಸುಖದ ಆಸ್ತಿಯು ಸಿಗುತ್ತದೆ. ಆ ಅಲ್ಪಕಾಲದ ಜೀವನ ಬಂಧನದಿಂದ ಕೆಳಗಿಳಿಯುತ್ತಾ ಬಂದಿದ್ದೀರಿ. ಇದು 21 ಜನ್ಮಗಳಿಗಾಗಿ ಗ್ಯಾರಂಟಿಯಿದೆ. ನಿಮ್ಮ ಸಂಪಾದನೆ ಎಷ್ಟು ಬಲಶಾಲಿಯಾಗಿದೆ, ಇದರಲ್ಲಿ ಹುಡುಗಾಟಿಕೆ ಮಾಡಬಾರದು. ಮಾಯೆಯು ಬಹಳ ತಪ್ಪುಗಳನ್ನು ಮಾಡಿಸುತ್ತದೆ. ಈ ಲಕ್ಷ್ಮೀ-ನಾರಾಯಣರು ಖಂಡಿತವಾಗಿಯೂ ಯಾರೊಂದಿಗೋ ಜೀವನ ಬಂಧನವನ್ನು ಜೋಡಿಸಿದರು, ಅದರಿಂದ 21 ಜನ್ಮಗಳ ಆಸ್ತಿಯು ಸಿಕ್ಕಿತು. ಪರಮಾತ್ಮನೊಂದಿಗೆ ನೀವಾತ್ಮರ ಜೀವನದ ಬಂಧನವನ್ನು ಕಲ್ಪ-ಕಲ್ಪವೂ ಬಂಧಿಸಲಾಗುತ್ತದೆ. ಇದಕ್ಕೆ ಲೆಕ್ಕವೇ ಇಲ್ಲ. ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ - ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಅವರೊಂದಿಗೆ ಜೀವನ ಬಂಧನವು ಬಂಧಿಸಲ್ಪಟ್ಟಿದೆ. ಪ್ರತಿಯೊಂದು ಮಾತನ್ನೂ ತಂದೆಯು ತಿಳಿಸುತ್ತಾರೆ. ನೀವೂ ತಿಳಿದುಕೊಂಡಿದ್ದೀರಿ - ಕಲ್ಪ-ಕಲ್ಪವೂ ನಮ್ಮ ಸಂಬಂಧವು ತಂದೆಯೊಂದಿಗಿತ್ತು, ಈಗ ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಯಾರದನ್ನು ಆಚರಿಸುತ್ತೇವೆ ಎಂಬುದು ಗೊತ್ತಿಲ್ಲ. ಶಿವ ತಂದೆ ಯಾರು ಪತಿತ-ಪಾವನನಾಗಿದ್ದಾರೆ, ಅವರು ಖಂಡಿತ ಸಂಗಮಯುಗದಲ್ಲಿಯೇ ಬರುವರು. ಇದನ್ನು ನೀವು ತಿಳಿದುಕೊಂಡಿದ್ದೀರಿ, ಪ್ರಪಂಚದವರಿಗೆ ಗೊತ್ತಿಲ್ಲ ಆದ್ದರಿಂದ ಕೋಟಿಯಲ್ಲಿ ಕೆಲವರು ಎಂದು ಗಾಯನವಿದೆ. ಆದಿ ಸನಾತನ ದೇವಿ-ದೇವತಾ ಧರ್ಮವು ಪ್ರಾಯಃಲೋಪವಾಗಿ ಬಿಟ್ಟಿದೆ. ಮತ್ತೆಲ್ಲಾ ಶಾಸ್ತ್ರ, ಕಥೆ ಮೊದಲಾದುವುಗಳಿವೆ. ಈ ಮೂಲ ಧರ್ಮವೇ ಇಲ್ಲ ಅಂದಮೇಲೆ ಹೇಗೆ ತಿಳಿದುಕೊಳ್ಳುವುದು! ಈಗ ನೀವು ಜೀವನ ಬಂಧನವನ್ನು ಬಂಧಿಸುತ್ತಿದ್ದೀರಿ. ಪರಮಾತ್ಮನ ಜೊತೆ ಆತ್ಮಗಳ ಅನುಬಂಧವೇರ್ಪಟ್ಟಿದೆ, ಇದರಲ್ಲಿ ಶರೀರದ ಯಾವುದೇ ಮಾತಿಲ್ಲ. ಭಲೆ ಮನೆಯಲ್ಲಿಯೇ ಕುಳಿತಿರಿ, ಕೇವಲ ಬುದ್ಧಿಯಿಂದ ನೆನಪು ಮಾಡಬೇಕಾಗಿದೆ. ನೀವಾತ್ಮರ ಜೀವನ ಬಂಧನವು ಬಂಧಿಸಲ್ಪಟ್ಟಿದೆ. ಹೇಗೆ ಸೆರಗನ್ನು ಬಂಧಿಸುತ್ತಾರಲ್ಲವೆ. ಅದು ಸ್ಥೂಲ ಮಾತಾಗಿದೆ, ಇದು ಪರಮಾತ್ಮನ ಜೊತೆ ಆತ್ಮಗಳ ಬುದ್ಧಿಯೋಗವಾಗಿದೆ. ಭಾರತದಲ್ಲಿ ಶಿವ ಜಯಂತಿಯನ್ನಾಚರಿಸುತ್ತಾರೆ ಆದರೆ ಅವರು ಯಾವಾಗ ಬಂದಿದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ಕೃಷ್ಣ ಜಯಂತಿ ಯಾವಾಗ, ರಾಮನ ಜಯಂತಿಯು ಯಾವಾಗ ಆಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ತ್ರಿಮೂರ್ತಿ ಶಿವ ಜಯಂತಿ ಶಬ್ಧವನ್ನು ಬರೆಯುತ್ತೀರಿ ಆದರೆ ಈ ಸಮಯದಲ್ಲಿ ಮೂವರು ಮೂರ್ತಿಗಳಂತೂ ಇಲ್ಲ. ಶಿವ ತಂದೆಯು ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆಂದು ನೀವು ಹೇಳುತ್ತೀರಿ ಅಂದಮೇಲೆ ಬ್ರಹ್ಮನು ಖಂಡಿತವಾಗಿಯೂ ಸಾಕಾರದಲ್ಲಿ ಬೇಕಲ್ಲವೆ. ಬಾಕಿ ವಿಷ್ಣು ಮತ್ತು ಶಂಕರನು ಈ ಸಮಯದಲ್ಲಿ ಎಲ್ಲಿದ್ದಾರೆ, ಯಾರನ್ನು ನೀವು ತ್ರಿಮೂರ್ತಿ ಎಂದು ಹೇಳುತ್ತೀರಿ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ತ್ರಿಮೂರ್ತಿಯ ಅರ್ಥವೇ ಆಗಿದೆ - ಬ್ರಹ್ಮಾ-ವಿಷ್ಣು-ಶಂಕರ. ಬ್ರಹ್ಮನ ಮೂಲಕ ಸ್ಥಾಪನೆಯಂತೂ ಈ ಸಮಯದಲ್ಲಿ ಆಗುತ್ತದೆ. ವಿಷ್ಣುವಿನ ಮೂಲಕ ಸತ್ಯಯುಗದಲ್ಲಿ ಪಾಲನೆಯಾಗುವುದು. ವಿನಾಶದ ಕಾರ್ಯವಂತೂ ಅಂತಿಮದಲ್ಲಿ ಆಗುವುದು. ಭಾರತದ ಈ ಆದಿ ಸನಾತನ ದೇವಿ-ದೇವತಾ ಧರ್ಮವು ಒಂದೇ ಆಗಿದೆ. ಆ ಧರ್ಮಪಿತರೆಲ್ಲರೂ ಅವರವರ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಇವರು ಧರ್ಮ ಸ್ಥಾಪನೆ ಮಾಡಿದರು ಮತ್ತು ಅವರ ಸಂವತ್ಸರವು ಇದಾಗಿದೆ. ಇಂತಹ ಸಮಯದಲ್ಲಿ ಇಂತಹ ಧರ್ಮವನ್ನು ಸ್ಥಾಪನೆ ಮಾಡಿದರೆಂದು ಪ್ರತಿಯೊಬ್ಬರೂ ತಿಳಿದುಕೊಂಡಿದ್ದಾರೆ ಆದರೆ ಭಾರತದ ಬಗ್ಗೆ ಯಾರೂ ತಿಳಿದುಕೊಂಡಿಲ್ಲ. ಗೀತಾ ಜಯಂತಿ, ಶಿವ ಜಯಂತಿಯು ಯಾವಾಗ ಆಯಿತೆಂದು ಯಾರಿಗೂ ಗೊತ್ತಿಲ್ಲ. ಕೃಷ್ಣ ಮತ್ತು ರಾಧೆಯ ಆಯಸ್ಸಿನಲ್ಲಿ 2-3 ವರ್ಷಗಳ ಅಂತರವಿರಬಹುದು. ಮೊದಲು ಕೃಷ್ಣನು ಜನ್ಮ ಪಡೆದುಕೊಂಡಿರುವನು, ಸತ್ಯಯುಗದಲ್ಲಿ ಯಾವುದೋ ಜನ್ಮದಲ್ಲಿ ಕೃಷ್ಣನ ಜನ್ಮವಾಗಿರಬೇಕು ಆದರೆ ಸತ್ಯಯುಗವು ಯಾವಾಗ ಇತ್ತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ನಿಮಗೂ ಸಹ ತಿಳಿದುಕೊಳ್ಳುವುದರಲ್ಲಿ ಬಹಳ ವರ್ಷಗಳು ಹಿಡಿಸಿವೆ. ಎರಡು ದಿನಗಳಲ್ಲಿ ಎಷ್ಟೆಂದು ತಿಳಿದುಕೊಳ್ಳುತ್ತಾರೆ. ತಂದೆಯಂತೂ ಬಹಳ ಸಹಜವಾಗಿ ತಿಳಿಸುತ್ತಾರೆ. ಅವರು ಬೇಹದ್ದಿನ ತಂದೆಯಾಗಿದ್ದಾರೆ, ಅವಶ್ಯವಾಗಿ ಅವರಿಂದ ಎಲ್ಲರಿಗೆ ಆಸ್ತಿ ಸಿಗಬೇಕಲ್ಲವೆ. ಓ ಗಾಡ್ಫಾದರ್ ಎಂದು ಹೇಳಿ ನೆನಪು ಮಾಡುತ್ತಾರೆ. ಲಕ್ಷ್ಮೀ-ನಾರಾಯಣರ ಮಂದಿರವಿದೆ. ಇವರು ಸ್ವರ್ಗದಲ್ಲಿ ರಾಜ್ಯ ಮಾಡುತ್ತಿದ್ದರು ಆದರೆ ಅವರಿಗೆ ಈ ಆಸ್ತಿಯನ್ನು ಯಾರು ಕೊಟ್ಟರು? ಅವಶ್ಯವಾಗಿ ಸ್ವರ್ಗದ ರಚಯಿತನೇ ಕೊಟ್ಟಿರುವರು ಆದರೆ ಯಾವಾಗ ಹೇಗೆ ಕೊಟ್ಟರು ಎಂಬುದನ್ನು ಯಾರೂ ಅರಿತುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಸತ್ಯಯುಗವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಸತ್ಯಯುಗದಲ್ಲಿ ನಾವು ಪವಿತ್ರರಾಗಿದ್ದೆವು, ಕಲಿಯುಗದಲ್ಲಿ ಪತಿತರಾಗಿದ್ದೇವೆ ಅಂದಮೇಲೆ ಸಂಗಮದಲ್ಲಿ ಜ್ಞಾನವನ್ನು ಕೊಟ್ಟಿರಬೇಕು, ಸತ್ಯಯುಗದಲ್ಲಲ್ಲ. ಅಲ್ಲಂತೂ ಪ್ರಾಲಬ್ಧವಿರುತ್ತದೆ, ಅವಶ್ಯವಾಗಿ ಮೊದಲ ಜನ್ಮದಲ್ಲಿ ಜ್ಞಾನ ತೆಗೆದುಕೊಂಡಿರಬೇಕು, ನೀವೂ ಸಹ ಈಗ ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ, ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ತಂದೆಯೇ ಮಾಡುವರು, ಕೃಷ್ಣನಂತೂ ಸತ್ಯಯುಗದಲ್ಲಿದ್ದನು, ಅವನಿಗೆ ಈ ಪ್ರಾಲಬ್ಧವು ಎಲ್ಲಿಂದ ಸಿಕ್ಕಿತು? ಲಕ್ಷ್ಮೀ-ನಾರಾಯಣರೇ ರಾಧೆ-ಕೃಷ್ಣರಾಗಿದ್ದರು, ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದರೋ ಅವರೇ ತಿಳಿದುಕೊಳ್ಳುತ್ತಾರೆ. ಈಗ ಸಸಿಯ ನಾಟಿಯಾಗುತ್ತದೆ. ಬಹಳ ಮಧುರ ವೃಕ್ಷದ ನಾಟಿಯಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಇಂದಿಗೆ 5000 ವರ್ಷಗಳ ಮೊದಲೂ ಸಹ ತಂದೆಯು ಬಂದು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದ್ದರು, ನೀವೀಗ ವರ್ಗಾವಣೆಯಾಗುತ್ತಿದ್ದೀರಿ. ಮೊದಲು ಬ್ರಾಹ್ಮಣರಾಗಬೇಕಾಗಿದೆ. ಬಾಜೋಲಿಯನ್ನು ಆಡುವಾಗ ಶಿಖೆಯು ಅವಶ್ಯವಾಗಿ ಮೇಲೆ ಬರುತ್ತದೆ. ಅವಶ್ಯವಾಗಿ ನಾವೀಗ ಬ್ರಾಹ್ಮಣರಾಗಿದ್ದೇವೆ, ಯಜ್ಞದಲ್ಲಂತೂ ಬ್ರಾಹ್ಮಣರು ಖಂಡಿತ ಬೇಕು. ಇದು ಶಿವ ಅಥವಾ ರುದ್ರನ ಯಜ್ಞವಾಗಿದೆ. ರುದ್ರ ಜ್ಞಾನ ಯಜ್ಞವೆಂದೇ ಹೇಳಲಾಗುತ್ತದೆ. ಕೃಷ್ಣನು ಯಜ್ಞವನ್ನು ರಚಿಸಲಿಲ್ಲ, ಈ ರುದ್ರ ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆ ಪ್ರಜ್ವಲಿತವಾಗುತ್ತದೆ. ಶಿವ ತಂದೆಯ ಯಜ್ಞವು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಇದೆ. ರುದ್ರ ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರು ಯಜ್ಞವನ್ನು ಹೇಗೆ ರಚಿಸುವರು? ಎಲ್ಲಿಯವರೆಗೆ ಮನುಷ್ಯ ತನುವಿನಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಹೇಗೆ ರಚಿಸುವರು? ಮನುಷ್ಯರೇ ಯಜ್ಞವನ್ನು ರಚಿಸುತ್ತಾರೆ. ಸೂಕ್ಷ್ಮ ಅಥವಾ ಮೂಲವತನದಲ್ಲಿ ಈ ಮಾತುಗಳಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ಇದು ಸಂಗಮಯುಗವಾಗಿದೆ. ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಸತ್ಯಯುಗವಿತ್ತು, ಈಗ ಪುನಃ ನೀವು ಈ ರೀತಿಯಾಗುತ್ತಿದ್ದೀರಿ. ಆತ್ಮಗಳ ಈ ಜೀವನದ ಬಂಧನವು ಪರಮಾತ್ಮನ ಜೊತೆ ಇದೆ. ಈ ಬಂಧನವನ್ನು ಏಕೆ ಬಂಧಿಸಿದ್ದೀರಿ? ಸದಾ ಸುಖದ ಆಸ್ತಿಯನ್ನು ಪಡೆಯುವುದಕ್ಕಾಗಿ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯ ಮೂಲಕ ನಾವು ಈ ಲಕ್ಷ್ಮೀ-ನಾರಾಯಣರಾಗುತ್ತೇವೆ. ತಂದೆಯು ತಿಳಿಸಿದ್ದಾರೆ - ನೀವೇ ದೇವಿ-ದೇವತಾ ಧರ್ಮದವರಾಗಿದ್ದಿರಿ, ನಿಮ್ಮ ರಾಜ್ಯವಿತ್ತು ನಂತರ ನೀವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕ್ಷತ್ರಿಯ ಧರ್ಮದಲ್ಲಿ ಬಂದಿರಿ, ಸೂರ್ಯವಂಶಿ ರಾಜ್ಯವು ಹೊರಟು ಹೋಯಿತು, ಚಂದ್ರವಂಶಿಯರು ಬಂದರು. ನಿಮಗೆ ತಿಳಿದಿದೆ - ನಾವು ಹೇಗೆ ಈ ಚಕ್ರವನ್ನು ಸುತ್ತುತ್ತೇವೆ, ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಂಡೆವು. ಭಗವಾನುವಾಚ - ಹೇ ಮಕ್ಕಳೇ, ನಿಮ್ಮ ಈ ಜನ್ಮಗಳನ್ನು ಅರಿತಿಲ್ಲ, ನಾನು ಅರಿತಿದ್ದೇನೆ. ಈಗ ಈ ಸಮಯದಲ್ಲಿ ಈ ತನುವಿನಲ್ಲಿ (ಬ್ರಹ್ಮಾ) ಎರಡು ಮೂರ್ತಿಗಳಿವೆ. ಬ್ರಹ್ಮನ ಆತ್ಮ ಮತ್ತು ಶಿವ ಪರಮಾತ್ಮ. ಈ ಸಮಯದಲ್ಲಿ ಇಬ್ಬರು ಮೂರ್ತಿಗಳು ಒಟ್ಟಿಗೆ ಇದ್ದಾರೆ, ಬ್ರಹ್ಮಾ ಮತ್ತು ಶಿವ. ಶಂಕರನಂತೂ ಎಂದೂ ಪಾತ್ರದಲ್ಲಿ ಬರುವುದಿಲ್ಲ ಬಾಕಿ ವಿಷ್ಣು ಸತ್ಯಯುಗದಲ್ಲಿರುತ್ತಾರೆ. ಈಗ ನೀವು ಬ್ರಾಹ್ಮಣರೇ ದೇವತೆಗಳಾಗುತ್ತೀರಿ. ವಾಸ್ತವದಲ್ಲಿ ಹಮ್ ಸೋ, ಸೋ ಹಮ್ನ ಅರ್ಥವು ಇದಾಗಿದೆ ಆದರೆ ಇದನ್ನು ಅವರು ಆತ್ಮ ಸೋ ಪರಮಾತ್ಮ, ಪರಮಾತ್ಮ ಸೋ ಆತ್ಮನೆಂದು ಹೇಳಿ ಬಿಟ್ಟಿದ್ದಾರೆ. ಎಷ್ಟೊಂದು ಅಂತರವಿದೆ! ರಾವಣನು ಬರುತ್ತಿದ್ದಂತೆಯೇ ರಾವಣ ಮತವು ಆರಂಭವಾಯಿತು. ಸತ್ಯಯುಗದಲ್ಲಿ ಈ ಜ್ಞಾನವೇ ಪ್ರಾಯಲೋಪವಾಗಿ ಬಿಡುವುದು. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆಯಲ್ಲವೆ ಆಗಲೇ ತಂದೆಯು ಬಂದು ಸ್ಥಾಪನೆ ಮಾಡುವರು. ಈಗ ಸಂಗಮವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ, ಕಲ್ಪದ ಸಂಗಮಯುಗದಲ್ಲಿ ಬಂದು ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ, ಜ್ಞಾನ ಯಜ್ಞವನ್ನು ರಚಿಸುತ್ತೇನೆ. ಉಳಿದಂತೆ ಏನೆಲ್ಲವೂ ಇದೆಯೋ ಈ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುವುದು. ಈ ವಿನಾಶ ಜ್ವಾಲೆಯು ಈ ಯಜ್ಞದಿಂದಲೇ ಪ್ರಜ್ವಲಿತವಾಗುವುದು. ಪತಿತ ಪ್ರಪಂಚದ ವಿನಾಶವಾಗುವುದು. ಇಲ್ಲದಿದ್ದರೆ ಪಾವನ ಪ್ರಪಂಚವು ಹೇಗಾಗುತ್ತದೆ? ಪತಿತ-ಪಾವನ ಬನ್ನಿ ಎಂದು ನೀವು ಹೇಳುತ್ತೀರಿ ಅಂದಮೇಲೆ ಪತಿತ ಪ್ರಪಂಚ, ಪಾವನ ಪ್ರಪಂಚ ಒಟ್ಟಿಗೆ ಇರುವುದೇ? ಪತಿತ ಪ್ರಪಂಚದ ವಿನಾಶವಾಗುವುದು, ಇದರಲ್ಲಿ ಖುಷಿಯಾಗಬೇಕು. ಕಲ್ಪದ ಹಿಂದೆಯೂ ಮಹಾಭಾರತ ಯುದ್ಧವಾಗಿತ್ತು, ಇದರಿಂದ ಸ್ವರ್ಗದ ಬಾಗಿಲು ತೆರೆಯಿತು. ಹೇಳುತ್ತಾರೆ - ಇದು ಅದೇ ಮಹಾಭಾರತ ಯುದ್ಧವಾಗಿದೆ ಎಂದು. ಇದು ಒಳ್ಳೆಯದೇ ಆಗಿದೆ. ಪತಿತ ಪ್ರಪಂಚವು ಸಮಾಪ್ತಿಯಾಗುವುದು. ಶಾಂತಿಗಾಗಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇನಿದೆ? ಈಗ ನಿಮಗೆ ಯಾವ ಮೂರನೇ ನೇತ್ರವು ಸಿಕ್ಕಿದೆ, ಅದು ಯಾರಿಗೂ ಇಲ್ಲ. ನಾವು ಬೇಹದ್ದಿನ ತಂದೆಯಿಂದ ಪುನಃ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನೀವು ಮಕ್ಕಳಿಗೆ ಖುಷಿಯಾಗಬೇಕು - ಬಾಬಾ, ನಾವು ಅನೇಕ ಬಾರಿ ತಮ್ಮಿಂದ ಆಸ್ತಿಯನ್ನು ತೆಗೆದುಕೊಂಡಿದ್ದೇವೆ, ರಾವಣನು ಶಾಪ ಕೊಟ್ಟನು, ಈ ಮಾತುಗಳನ್ನು ನೆನಪು ಮಾಡಿಕೊಳ್ಳುವುದು ಸಹಜವಾಗಿದೆ. ಉಳಿದೆಲ್ಲವೂ ದಂತ ಕಥೆಗಳಾಗಿವೆ. ನಿಮ್ಮನ್ನು ಇಷ್ಟು ಸಾಹುಕಾರರನ್ನಾಗಿ ಮಾಡಿದೆನು ಮತ್ತೆ ಏಕೆ ಬಡವರಾದಿರಿ? ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಜ್ಞಾನ, ಭಕ್ತಿ, ವೈರಾಗ್ಯವೆಂದು ಗಾಯನವಿದೆ. ಯಾವಾಗ ಜ್ಞಾನವು ಸಿಗುವುದೋ ಆಗ ಭಕ್ತಿಯೊಂದಿಗೆ ವೈರಾಗ್ಯ ಬರುತ್ತದೆ. ನಿಮಗೆ ಜ್ಞಾನ ಸಿಕ್ಕಿತು, ಆಗ ಭಕ್ತಿಯೊಂದಿಗೆ ವೈರಾಗ್ಯ ಉಂಟಾಯಿತು. ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯ. ಇದಂತೂ ಸ್ಮಶಾನವಾಗಿದೆ. 84 ಜನ್ಮಗಳ ಚಕ್ರವನ್ನು ಸುತ್ತಿದ್ದೀರಿ. ಈಗ ಮನೆಗೆ ಹೋಗಬೇಕಾಗಿದೆ. ನನ್ನನ್ನು ನೆನಪು ಮಾಡಿದರೆ ನನ್ನ ಬಳಿ ಬಂದು ಬಿಡುತ್ತೀರಿ. ವಿಕರ್ಮಗಳು ವಿನಾಶವಾಗುತ್ತವೆ, ಮತ್ತ್ಯಾವುದೇ ಉಪಾಯವಿಲ್ಲ. ಯೋಗಾಗ್ನಿಯಿಂದಲೇ ಪಾಪವು ಭಸ್ಮವಾಗುತ್ತದೆ. ಗಂಗಾ ಸ್ನಾನದಿಂದ ಆಗುವುದಿಲ್ಲ.
ತಂದೆಯು ತಿಳಿಸುತ್ತಾರೆ – ಮಾಯೆಯು ನಿಮ್ಮನ್ನು ಫೂಲ್ (ಮೂರ್ಖ) ಮಾಡಿ ಬಿಟ್ಟಿದೆ. ಏಪ್ರಿಲ್ ಫೂಲ್ ಎಂದು ಹೇಳುತ್ತಾರಲ್ಲವೆ. ಈಗ ನಾನು ನಿಮ್ಮನ್ನು ಲಕ್ಷ್ಮೀ-ನಾರಾಯಣರ ತರಹ ಮಾಡಲು ಬಂದಿದ್ದೇನೆ. ಚಿತ್ರಗಳಂತೂ ಬಹಳ ಚೆನ್ನಾಗಿದೆ - ಇಂದು ನಾವು ಹೇಗಿದ್ದೇವೆ, ನಾಳೆ ಏನಾಗುತ್ತೇವೆ? ಆದರೆ ಮಾಯೆಯೂ ಕಡಿಮೆಯಿಲ್ಲ. ಮಾಯೆಯು ತಂದೆಯೊಂದಿಗೆ ಅನುಬಂಧವಿರುವುದಕ್ಕೆ ಬಿಡುವುದಿಲ್ಲ, ಎಳೆದಾಟವಾಗುತ್ತದೆ. ನಾವು ತಂದೆಯನ್ನು ನೆನಪು ಮಾಡುತ್ತೇವೆ ಮತ್ತೇನಾಗುತ್ತದೆಯೋ ಗೊತ್ತಿಲ್ಲ, ಮರೆತು ಹೋಗುತ್ತೇವೆ. ಇದರಲ್ಲಿ ಪರಿಶ್ರಮವಿದೆ ಆದ್ದರಿಂದ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಅವರಿಗೆ ಆಸ್ತಿಯನ್ನು ಯಾರು ಕೊಟ್ಟರೆಂಬುದು ಯಾರಿಗೂ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮಗೆ ಪುನಃ ಆಸ್ತಿಯನ್ನು ಕೊಡಲು ಬಂದಿದ್ದೇನೆ, ಇದಂತೂ ತಂದೆಯ ಕರ್ತವ್ಯವಾಗಿದೆ. ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ನೀವು ಖುಷಿಯಾಗುತ್ತಿದ್ದೀರಿ, ಇಲ್ಲಿ ಯಾರಾದರೂ ಬಂದು ತಿಳಿದುಕೊಳ್ಳುತ್ತಾರೆಂದರೆ ಖುಷಿಯಾಗುತ್ತದೆ, ಇದು ಖಂಡಿತ ಸತ್ಯವಾಗಿದೆ, 84 ಜನ್ಮಗಳ ಲೆಕ್ಕವಿದೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದು ತಿಳಿಯುತ್ತಾರೆ. ತಂದೆಗೆ ಗೊತ್ತಿದೆ, ನೀವು ಅರ್ಧಕಲ್ಪ ಭಕ್ತಿ ಮಾಡಿ ದಣಿದಿದ್ದೀರಿ. ಮಧುರ ಮಕ್ಕಳೇ, ತಂದೆಯು ನಿಮ್ಮ ದಣಿವೆಲ್ಲವನ್ನೂ ದೂರ ಮಾಡುತ್ತಾರೆ. ಈಗ ಭಕ್ತಿಯ ಅಂಧಕಾರ ಮಾರ್ಗವು ಮುಕ್ತಾಯವಾಗುತ್ತದೆ. ಈ ದುಃಖಧಾಮವೆಲ್ಲಿ, ಆ ಸುಖಧಾಮವೆಲ್ಲಿ! ನಾನು ದುಃಖಧಾಮವನ್ನು ಸುಖಧಾಮವನ್ನಾಗಿ ಮಾಡಲು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುವವರಾಗಿದ್ದಾರೆ. ಒಬ್ಬ ತಂದೆಯದೇ ಮಹಿಮೆಯಿದೆ. ಶಿವ ತಂದೆಯಿಲ್ಲದಿದ್ದರೆ ನಿಮ್ಮನ್ನು ಯಾರು ಪಾವನ ಮಾಡುವರು? ಡ್ರಾಮಾದಲ್ಲಿ ಎಲ್ಲವೂ ನಿಗಧಿಯಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಕಲ್ಪ-ಕಲ್ಪವೂ ನೀವು ನನ್ನನ್ನು ಕರೆಯುತ್ತೀರಿ. ಶಿವ ಜಯಂತಿಯಿದೆ, ಬ್ರಹ್ಮನು ಸ್ವರ್ಗದ ಸ್ಥಾಪನೆ ಮಾಡಿದರೆಂದು ಹೇಳುತ್ತಾರೆ ಅಂದಮೇಲೆ ಶಿವನು ಏನು ಮಾಡಿದರು? ಯಾವ ಕಾರಣ ಶಿವ ಜಯಂತಿಯನ್ನಾಚರಿಸುತ್ತಾರೆ? ಏನನ್ನೂ ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿ ಒಮ್ಮೆಲೆ ಜ್ಞಾನವು ಕುಳಿತುಕೊಂಡು ಬಿಡಬೇಕು. ಜೀವನ ಬಂಧನವನ್ನು ಒಬ್ಬ ತಂದೆಯೊಂದಿಗೇ ಬಂಧಿಸಿದ್ದೀರಿ ಅಂದಮೇಲೆ ಮತ್ತ್ಯಾರ ಜೊತೆಯಲ್ಲಿಯೂ ಬಂಧಿಸಬೇಡಿ, ಇಲ್ಲವಾದರೆ ಕೆಳಗೆ ಬೀಳುತ್ತೀರಿ. ಪಾರಲೌಕಿಕ ತಂದೆಯು ಬಹಳ ಸಾಧಾರಣವಾಗಿದ್ದಾರೆ, ಯಾವುದೇ ಆಡಂಬರವಿಲ್ಲ. ಆ ತಂದೆಯರಂತೂ ಮೋಟಾರುಗಳಲ್ಲಿ, ವಿಮಾನಗಳಲ್ಲಿ ಸುತ್ತಾಡುತ್ತಾರೆ. ಈ ಬೇಹದ್ದಿನ ತಂದೆಯು ತಿಳಿಸುತ್ತಾರೆ - ನಾನು ಪತಿತ ಪ್ರಪಂಚ, ಪತಿತ ಶರೀರದಲ್ಲಿ ಮಕ್ಕಳ ಸೇವೆ ಮಾಡಲು ಬಂದಿದ್ದೇನೆ. ಹೇ ಅವಿನಾಶಿ ಸರ್ಜನ್ ಬನ್ನಿ, ಬಂದು ನಮಗೆ ಇಂಜೆಕ್ಷನ್ ಕೊಡಿ ಎಂದು ಕರೆದಿದ್ದೀರಿ, ಈಗ ಇಂಜೆಕ್ಷನ್ ಕೊಡುತ್ತಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನೊಂದಿಗೆ ಬುದ್ಧಿಯೋಗವನ್ನಿಡಿ ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ತಂದೆಯು 63 ಜನ್ಮಗಳ ದುಃಖಹರ್ತ, 21 ಜನ್ಮಗಳ ಸುಖಕರ್ತನಾಗಿದ್ದಾರೆ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಬುದ್ಧಿಯ ಆತ್ಮಿಕ ಸೂತ್ರದ ದಾರವನ್ನು ಒಬ್ಬ ತಂದೆಯೊಂದಿಗೆ ಬಂಧಿಸಬೇಕಾಗಿದೆ. ಒಬ್ಬರ ಶ್ರೀಮತದನುಸಾರವೇ ನಡೆಯಬೇಕಾಗಿದೆ.
2. ನಾವು ಬಹಳ ಮಧುರ ವೃಕ್ಷದ ನಾಟಿ ಮಾಡುತ್ತಿದ್ದೇವೆ, ಆದ್ದರಿಂದ ಸ್ವಯಂನ್ನು ಬಹಳ-ಬಹಳ ಮಧುರ ಮಾಡಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆಯಲ್ಲಿ ತತ್ಪರರಾಗಿದ್ದು ವಿಕರ್ಮ ವಿನಾಶ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಈ ಅಮರ ಕಥೆಯನ್ನು ಯಾರು ತಿಳಿಸುತ್ತಿದ್ದಾರೆ? ಅಮರ ಕಥೆಯೆಂದಾದರೂ ಹೇಳಿ, ಸತ್ಯ ನಾರಾಯಣನ ಕಥೆಯೆಂದಾದರೂ ಹೇಳಿ ಅಥವಾ ಮೂರನೇ ನೇತ್ರದ ಕಥೆಯೆಂದಾದರೂ ಹೇಳಿ - ಮೂರೂ ಮುಖ್ಯವಾಗಿದೆ. ಈಗ ನೀವು ಯಾರ ಸಮ್ಮುಖದಲ್ಲಿ ಕುಳಿತಿದ್ದೀರಿ, ಮತ್ತು ಯಾರು ನಿಮಗೆ ತಿಳಿಸುತ್ತಿದ್ದಾರೆ? ಸತ್ಸಂಗಗಳನ್ನಂತೂ ಇವರೂ ಸಹ (ಬ್ರಹ್ಮಾ) ಬಹಳ ಮಾಡಿದ್ದಾರೆ. ಅಲ್ಲಂತೂ ಎಲ್ಲಾ ಮನುಷ್ಯರು ನೋಡಲು ಹೋಗುತ್ತಾರೆ, ಇಂತಹ ಸನ್ಯಾಸಿಯು ಕಥೆಯನ್ನು ತಿಳಿಸುತ್ತಾರೆ, ಶಿವಾನಂದರು ತಿಳಿಸುತ್ತಾರೆಂದು ಹೇಳುತ್ತಾರೆ. ಭಾರತದಲ್ಲಿ ಅನೇಕ ಸತ್ಸಂಗಗಳಿವೆ, ಗಲ್ಲಿ-ಗಲ್ಲಿಯಲ್ಲಿಯೂ ಸತ್ಸಂಗಗಳಿವೆ, ಮಾತೆಯರೂ ಸಹ ಪುಸ್ತಕವನ್ನು ಹಿಡಿದು ಸತ್ಸಂಗ ಮಾಡುತ್ತಾರೆ. ಆದ್ದರಿಂದ ಅಲ್ಲಿ ಮನುಷ್ಯರು ಹೋಗಿ ನೋಡುತ್ತಾರೆ ಆದರೆ ಇಲ್ಲಂತೂ ಇದು ಅದ್ಭುತವಾದ ಮಾತಾಗಿದೆ. ನಿಮ್ಮ ಬುದ್ಧಿಯಲ್ಲಿ ಯಾರಿದ್ದಾರೆ? ಪರಮಾತ್ಮ. ನೀವು ಹೇಳುತ್ತೀರಿ - ಈಗ ತಂದೆಯು ಸಮ್ಮುಖದಲ್ಲಿ ಬಂದಿದ್ದಾರೆ, ನಿರಾಕಾರ ತಂದೆಯು ನಮಗೆ ಓದಿಸುತ್ತಾರೆ. ವಾಹ್! ಈಶ್ವರನಂತೂ ನಾಮ-ರೂಪದಿಂದ ಭಿನ್ನನಾಗಿದ್ದಾರೆಂದು ಮನುಷ್ಯರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇಲ್ಲಿ ಯಾವುದೇ ಸಾಕಾರ ಮನುಷ್ಯರು ಓದಿಸುವುದಿಲ್ಲ. ಮತ್ತೆಲ್ಲಿಯಾದರೂ ಹೋಗಿ ಇಡೀ ವಿಶ್ವದಲ್ಲಿ ಸಾಕಾರಿ ಮನುಷ್ಯರೇ ಓದಿಸುತ್ತಾರೆ. ಇಲ್ಲಂತೂ ಪರಮಾತ್ಮ ತಂದೆಯಾಗಿದ್ದಾರೆ, ಯಾರಿಗೆ ನಿರಾಕಾರ ಪರಮಪಿತನೆಂದು ಹೇಳಲಾಗುತ್ತದೆ. ಆ ನಿರಾಕಾರನೇ ಸಾಕಾರದಲ್ಲಿ ಕುಳಿತು ಓದಿಸುತ್ತಾರೆ. ಇದು ಸಂಪೂರ್ಣ ಹೊಸ ಮಾತಾಯಿತು. ಪ್ರತಿ ಜನ್ಮದಲ್ಲಿ ನೀವು ಕೇಳುತ್ತಲೇ ಬಂದಿದ್ದೀರಿ, ಇವರು ಇಂತಹ ಪಂಡಿತನಾಗಿದ್ದಾರೆ, ಗುರುವಾಗಿದ್ದಾರೆ ಎಂದು. ಅನೇಕಾನೇಕ ಹೆಸರುಗಳಿವೆ, ಭಾರತವಂತೂ ಬಹಳ ದೊಡ್ಡದಾಗಿದೆ, ಯಾರೆಲ್ಲಾ ಏನೆಲ್ಲಾ ಕಲಿಸುವರೋ, ತಿಳಿಸುವರೋ ಎಲ್ಲರೂ ಮನುಷ್ಯರೇ ಆಗಿದ್ದಾರೆ. ಮನುಷ್ಯರೇ ಶಿಷ್ಯರಾಗಿದ್ದಾರೆ. ಅನೇಕ ಪ್ರಕಾರದ ಮನುಷ್ಯರಿದ್ದಾರೆ, ಇಂತಹವರು ತಿಳಿಸಿ ಕೊಡುತ್ತಾರೆಂದು ಯಾವಾಗಲೂ ಶರೀರದ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ. ಭಕ್ತಿಮಾರ್ಗದಲ್ಲಿ ಹೇ ಪತಿತ-ಪಾವನ ಬನ್ನಿ ಎಂದು ನಿರಾಕಾರನನ್ನು ಕರೆಯುತ್ತಾರೆ. ಅವರೇ ಬಂದು ಮಕ್ಕಳಿಗೆ ತಿಳಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಕಲ್ಪ-ಕಲ್ಪವೂ ಇಡೀ ಪ್ರಪಂಚವು ಪತಿತವಾಗಿ ಬಿಡುತ್ತದೆ, ಅದನ್ನು ಪಾವನ ಮಾಡುವವರು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ. ನೀವು ಇಲ್ಲಿ ಯಾರೆಲ್ಲಾ ಕುಳಿತಿದ್ದೀರಿ, ನಿಮ್ಮಲ್ಲಿಯೂ ಕೆಲವರು ಕಚ್ಚಾ ಇದ್ದಾರೆ, ಕೆಲವರು ಪಕ್ಕಾ ಇದ್ದಾರೆ ಏಕೆಂದರೆ ಅರ್ಧಕಲ್ಪ ನೀವು ದೇಹಾಭಿಮಾನಿಯಾಗಿದ್ದೀರಿ. ಈಗ ಈ ಜನ್ಮದಲ್ಲಿ ದೇಹೀ-ಅಭಿಮಾನಿಯಾಗಬೇಕಾಗಿದೆ. ನಮ್ಮ ದೇಹದಲ್ಲಿರುವ ಆತ್ಮಕ್ಕೆ ಪರಮಾತ್ಮನು ಕುಳಿತು ತಿಳಿಸಿ ಕೊಡುತ್ತಾರೆ. ಆತ್ಮವೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಆತ್ಮವೇ ಕರ್ಮೇಂದ್ರಿಯಗಳ ಮೂಲಕ ನಾನು ಇಂತಹವನಾಗಿದ್ದೇನೆ ಎಂದು ಹೇಳುತ್ತದೆ ಆದರೆ ಆತ್ಮಾಭಿಮಾನಿಗಳಂತೂ ಯಾರೂ ಆಗಿಲ್ಲ. ತಂದೆಯು ತಿಳಿಸುತ್ತಾರೆ - ಯಾರು ಈ ಭಾರತದಲ್ಲಿ ಸೂರ್ಯವಂಶಿ, ಚಂದ್ರವಂಶಿಯರಾಗಿದ್ದರೋ ಅವರೇ ಈ ಸಮಯದಲ್ಲಿ ಬಂದು ಬ್ರಾಹ್ಮಣರಾಗುತ್ತಾರೆ ನಂತರ ದೇವತೆಗಳಾಗುತ್ತಾರೆ. ಮನುಷ್ಯರು ದೇಹಾಭಿಮಾನಿಗಳಾಗಿರುವ ಅಭ್ಯಾಸಿಗಳಾಗಿದ್ದಾರೆ ಆದ್ದರಿಂದ ದೇಹೀ-ಅಭಿಮಾನಿಯಾಗಿರುವುದನ್ನು ಮರೆತು ಹೋಗುತ್ತಾರೆ. ಆದ್ದರಿಂದ ತಂದೆಯು ಪದೇ-ಪದೇ ತಿಳಿಸುತ್ತಾರೆ - ದೇಹೀ-ಅಭಿಮಾನಿಯಾಗಿರಿ, ಆತ್ಮವೇ ಭಿನ್ನ-ಭಿನ್ನ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ. ಇವು ಅದರ ಕರ್ಮೇಂದ್ರಿಯಗಳಾಗಿವೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ಕೇವಲ ಗೀತೆಯನ್ನು ಓದುವುದರಿಂದ ಯಾವುದೇ ರಾಜ್ಯಭಾಗ್ಯವು ಸಿಗಲು ಸಾಧ್ಯವಿಲ್ಲ. ನಮ್ಮನ್ನು ಈ ಸಮಯದಲ್ಲಿ ತ್ರಿಕಾಲದರ್ಶಿಗಳನ್ನಾಗಿ ಮಾಡಲಾಗುತ್ತದೆ. ರಾತ್ರಿ-ಹಗಲಿನ ಅಂತರವಾಗಿ ಬಿಟ್ಟಿದೆ. ತಂದೆಯು ತಿಳಿಸುತ್ತಾರೆ - ನಾನು ನಮಗೆ ರಾಜಯೋಗವನ್ನು ಕಲಿಸುತ್ತೇನೆ, ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದಾನೆ. ಯಾರು ಸೂರ್ಯವಂಶಿ ದೇವತೆಗಳಾಗಿದ್ದರೋ ಅವರಲ್ಲಿಯೂ ಜ್ಞಾನವಿರಲಿಲ್ಲ, ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ, ಜ್ಞಾನವು ಸದ್ಗತಿಗಾಗಿಯೇ ಇದೆ. ಸತ್ಯಯುಗದಲ್ಲಿ ಯಾರೂ ದುರ್ಗತಿಯಲ್ಲಿರುವುದಿಲ್ಲ. ಅದು ಸತ್ಯಯುಗವಾಗಿದೆ, ಈಗ ಕಲಿಯುಗವಾಗಿದೆ. ಭಾರತದಲ್ಲಿ ಮೊದಲು ಸೂರ್ಯವಂಶಿಯರು 8 ಜನ್ಮ, ನಂತರ ಚಂದ್ರವಂಶಿಯರು 12 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಇದೊಂದು ಜನ್ಮ ನಮ್ಮದು ಎಲ್ಲರಿಗಿಂತ ಒಳ್ಳೆಯ ಜನ್ಮವಾಗಿದೆ. ನೀವು ಪ್ರಜಾಪಿತ ಬ್ರಹ್ಮನ ಮುಖ ವಂಶಾವಳಿಯಾಗಿದ್ದೀರಿ, ಇದು ಸರ್ವೋತ್ತಮ ಧರ್ಮವಾಗಿದೆ. ದೇವತಾ ಧರ್ಮಕ್ಕೂ ಸಹ ಸರ್ವೋತ್ತಮ ಧರ್ಮವೆಂದು ಹೇಳುವುದಿಲ್ಲ. ಬ್ರಾಹ್ಮಣ ಧರ್ಮವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ದೇವತೆಗಳಂತೂ ಇಲ್ಲಿನ ಪ್ರಾಲಬ್ಧವನ್ನು ಭೋಗಿಸುತ್ತಾರೆ.
ಇತ್ತೀಚೆಗೆ ಬಹಳ ಮಂದಿ ಸಮಾಜ ಸೇವಕರಿದ್ದಾರೆ. ನಮ್ಮದು ಆತ್ಮಿಕ ಸೇವೆಯಾಗಿದೆ. ಅವರದು ಶಾರೀರಿಕ ಸೇವೆ ಮಾಡುವುದಾಗಿದೆ. ಆತ್ಮಿಕ ಸೇವೆಯು ಒಂದೇ ಬಾರಿ ನಡೆಯುತ್ತದೆ. ಮೊದಲು ಈ ಸಮಾಜ ಸೇವಕರು ಮೊದಲಾದವರು ಇರಲಿಲ್ಲ, ರಾಜ-ರಾಣಿಯರು ರಾಜ್ಯ ಮಾಡುತ್ತಿದ್ದರು. ಸತ್ಯಯುಗದಲ್ಲಿ ದೇವಿ-ದೇವತೆಗಳಿದ್ದರು. ನೀವೇ ಪೂಜ್ಯರಾಗಿದ್ದಿರಿ ನಂತರ ಪೂಜಾರಿಗಳಾದಿರಿ. ಲಕ್ಷ್ಮೀ-ನಾರಾಯಣರು ದ್ವಾಪರದಲ್ಲಿ ವಾಮಮಾರ್ಗದಲ್ಲಿ ಇಳಿಯುತ್ತಾರೆ. ಆಗ ಮಂದಿರಗಳನ್ನು ಕಟ್ಟಿಸುತ್ತಾರೆ. ಮೊಟ್ಟ ಮೊದಲು ಶಿವನ ಮಂದಿರವನ್ನು ಕಟ್ಟಿಸುತ್ತಾರೆ. ಶಿವನು ಸರ್ವರ ಸದ್ಗತಿದಾತನಾಗಿದ್ದಾರೆ ಅಂದಮೇಲೆ ಅವರಿಗೆ ಖಂಡಿತವಾಗಿ ಪೂಜೆ ನಡೆಯಬೇಕು. ಶಿವ ತಂದೆಯೇ ಆತ್ಮರನ್ನು ನಿರ್ವಿಕಾರಿಯನ್ನಾಗಿ ಮಾಡಿದ್ದರು. ಅವರ ನಂತರ ದೇವತೆಗಳ ಪೂಜೆ ನಡೆಯುತ್ತದೆ. ನೀವೇ ಪೂಜ್ಯರಾಗಿದ್ದಿರಿ ನಂತರ ಪೂಜಾರಿಗಳಾದಿರಿ. ತಂದೆಯು ತಿಳಿಸಿದ್ದಾರೆ - ಚಕ್ರವನ್ನು ನೆನಪು ಮಾಡುತ್ತಾ ಇರಿ, ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಒಮ್ಮೆಲೆ ಬಂದು ನೆಲವನ್ನು ತಲುಪಿದ್ದೀರಿ. ಈಗ ನಮ್ಮದು ಏರುವ ಕಲೆಯಾಗಿದೆ. ಏರುವ ಕಲೆಯಿಂದ ಸರ್ವರ ಉನ್ನತಿಯೆಂದು ಹೇಳುತ್ತಾರೆ. ನಾನೀಗ ಇಡೀ ಪ್ರಪಂಚದ ಮನುಷ್ಯ ಮಾತ್ರರ ಉನ್ನತಿ ಮಾಡುತ್ತೇನೆ. ಪತಿತ ಪಾವನನು ಬಂದು ಎಲ್ಲರನ್ನೂ ಪಾವನ ಮಾಡುತ್ತಾರೆ. ಸತ್ಯಯುಗವಿದ್ದಾಗ ಏರುವ ಕಲೆಯಾಗಿತ್ತು, ಉಳಿದೆಲ್ಲಾ ಆತ್ಮರು ಮುಕ್ತಿಧಾಮದಲ್ಲಿದ್ದರು.
ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನನ್ನ ಜನ್ಮವು ಭಾರತದಲ್ಲಿಯೇ ಆಗುತ್ತದೆ. ಶಿವ ತಂದೆಯು ಬಂದಿದ್ದರು ಎಂಬ ಗಾಯನವಿದೆ, ಈಗ ಪುನಃ ಬಂದಿದ್ದಾರೆ. ಇದಕ್ಕೆ ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ. ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಈ ಯಜ್ಞವನ್ನು ರಚಿಸಲಾಗಿದೆ. ವಿಘ್ನಗಳೂ ಬಂದಿತ್ತು, ಈಗಲೂ ಬರುತ್ತಿದೆ. ಮಾತೆಯರ ಮೇಲೆ ಅತ್ಯಾಚಾರವಾಗುತ್ತದೆ. ಬಾಬಾ, ನಮ್ಮನ್ನು ಇವರು ಅಪವಿತ್ರರನ್ನಾಗಿ ಮಾಡುತ್ತಾರೆ, ನಮ್ಮನ್ನು ಇವರು ಬಿಡುವುದಿಲ್ಲ, ಬಾಬಾ ನಮ್ಮ ರಕ್ಷಣೆ ಮಾಡಿ ಎಂದು ಹೇಳುತ್ತಾರೆ. ದ್ರೌಪದಿಯ ರಕ್ಷಣೆಯಾಯಿತು ಎಂಬುದನ್ನು ತೋರಿಸುತ್ತಾರೆ. ನೀವೀಗ 21 ಜನ್ಮಗಳಿಗಾಗಿ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ, ನೆನಪಿನ ಯಾತ್ರೆಯಲ್ಲಿದ್ದು ತಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳುತ್ತೀರಿ ಮತ್ತೆ ಒಂದುವೇಳೆ ವಿಕಾರದಲ್ಲಿ ಹೋದರೆ ಸಮಾಪ್ತಿ, ಒಮ್ಮೆಲೆ ಕೆಳಗೆ ಬೀಳುತ್ತೀರಿ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಖಂಡಿತವಾಗಿಯೂ ಪವಿತ್ರರಾಗಿರಬೇಕು. ಯಾರು ಕಲ್ಪದ ಮೊದಲು ಆಗಿದ್ದರೋ ಅವರೇ ಪವಿತ್ರತೆಯ ಪ್ರತಿಜ್ಞೆ ಮಾಡುತ್ತಾರೆ ನಂತರ ಕೆಲವರು ಪವಿತ್ರರಾಗಿರುತ್ತಾರೆ, ಕೆಲವರು ಇರಲು ಆಗುವುದಿಲ್ಲ. ಮುಖ್ಯವಾದ ಮಾತು ನೆನಪಿನದಾಗಿದೆ. ನೆನಪು ಮಾಡುತ್ತೀರಿ, ಪವಿತ್ರರಾಗಿರುತ್ತೀರಿ ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಇದ್ದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ವಿಷ್ಣುವಿನ ಎರಡು ರೂಪಗಳು (ಲಕ್ಷ್ಮೀ-ನಾರಾಯಣ) ರಾಜ್ಯಭಾರ ಮಾಡುತ್ತಾರಲ್ಲವೆ ಆದರೆ ವಿಷ್ಣುವಿಗೆ ಯಾವ ಶಂಖ-ಚಕ್ರವನ್ನು ತೋರಿಸಿದ್ದಾರೆಯೋ ಅವು ದೇವತೆಗಳಿಗೆ ಇರಲಿಲ್ಲ. ಲಕ್ಷ್ಮೀ-ನಾರಾಯಣರಿಗೂ ಇರಲಿಲ್ಲ. ವಿಷ್ಣುವಂತೂ ಸೂಕ್ಷ್ಮವತನದಲ್ಲಿರುತ್ತಾರೆ. ಅವರಿಗೆ ಚಕ್ರದ ಜ್ಞಾನದ ಅವಶ್ಯಕತೆಯಿಲ್ಲ. ಅಲ್ಲಿ ಮೂವ್ಹಿ (ಸನ್ನೆಯ ಭಾಷೆ) ನಡೆಯುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಅದು ನಿರಾಕಾರಿ ಪ್ರಪಂಚವಾಗಿದೆ, ಆತ್ಮವೆಂದರೇನು ಎಂಬುದನ್ನೂ ಸಹ ಮನುಷ್ಯ ಮಾತ್ರರು ತಿಳಿದುಕೊಂಡಿಲ್ಲ. ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ, ಆತ್ಮವು ಹೊಳೆಯುತ್ತಿರುವ ನಕ್ಷತ್ರವಾಗಿದೆ, ಅದು ಭೃಕುಟಿಯ ಮಧ್ಯದಲ್ಲಿರುತ್ತದೆ ಎಂದು ಹೇಳುತ್ತಾರೆ, ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಭಲೆ ಯಾರು ಎಷ್ಟಾದರೂ ಪ್ರಯತ್ನ ಪಡಲಿ, ಗಾಜು ಇತ್ಯಾದಿಗಳಲ್ಲಿ ಬಂಧಿಸಿ ಆತ್ಮವು ಹೇಗೆ ಹೊರ ಹೋಗುತ್ತದೆ ಎಂಬುದನ್ನು ನೋಡೋಣವೆಂದು ಪ್ರಯತ್ನ ಪಡುತ್ತಾರೆ ಆದರೆ ಆತ್ಮವೆಂದರೇನು, ಹೇಗೆ ಹೊರ ಹೋಗುತ್ತದೆ? ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಬಾಕಿ ಇಷ್ಟಂತೂ ಹೇಳುತ್ತಾರೆ - ಆತ್ಮವು ನಕ್ಷತ್ರ ಮಾದರಿಯಾಗಿದೆ, ದಿವ್ಯ ದೃಷ್ಟಿಯ ವಿನಃ ಅದನ್ನು ನೋಡಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ. ಅರ್ಜುನನಿಗೆ ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾಯಿತು, ನಾನು ಸಹನೆ ಮಾಡಲು ಆಗುವುದಿಲ್ಲ ಎಂದು ಅರ್ಜುನನು ಹೇಳಿದನೆಂದು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಇಷ್ಟೊಂದು ತೇಜೋಮಯನಾಗಿಲ್ಲ, ಹೇಗೆ ಆತ್ಮವು ಬಂದು ಶರೀರದಲ್ಲಿ ಪ್ರವೇಶ ಮಾಡುತ್ತದೆ, ಇದು ತಿಳಿಯುತ್ತದೆಯೇ? ಈಗ ನೀವೂ ಸಹ ತಿಳಿದುಕೊಂಡಿದ್ದೀರಿ - ತಂದೆಯು ಹೇಗೆ ಪ್ರವೇಶ ಮಾಡಿ ಮಾತನಾಡುತ್ತಾರೆ, ಆತ್ಮವು ಬಂದು ಮಾತನಾಡುತ್ತದೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಇದರಲ್ಲಿ ಯಾರದೇ ತಾಕತ್ತಿನ ಮಾತಿಲ್ಲ. ಆತ್ಮವು ಶರೀರವನ್ನು ಬಿಟ್ಟು ಹೋಗುವುದಿಲ್ಲ. ಇದು ಕೇವಲ ಸಾಕ್ಷಾತ್ಕಾರದ ಮಾತಾಗಿದೆ. ಆಶ್ಚರ್ಯದ ಮಾತಲ್ಲವೆ. ತಂದೆಯು ತಿಳಿಸುತ್ತಾರೆ - ನಾನೂ ಸಹ ಸಾಧಾರಣ ತನುವಿನಲ್ಲಿ ಬರುತ್ತೇನೆ, ಆತ್ಮವನ್ನು ಕರೆಸುತ್ತಾರಲ್ಲವೆ. ಮೊದಲು ಆತ್ಮರನ್ನು ಕರೆಸಿ ಅವರೊಂದಿಗೆ ಕೇಳುತ್ತಿದ್ದರು. ಈಗಂತೂ ತಮೋಪ್ರಧಾನರಾಗಿ ಬಿಟ್ಟಿದ್ದಾರಲ್ಲವೆ. ನಾನು ಪತಿತರನ್ನು ಹೋಗಿ ಪಾವನ ಮಾಡೋಣವೆಂದೇ ತಂದೆಯು ಬರುತ್ತಾರೆ. 84 ಜನ್ಮಗಳೆಂದು ಹೇಳುತ್ತಾರೆ ಅಂದಮೇಲೆ ತಿಳಿದುಕೊಳ್ಳಬೇಕು - ಯಾರು ಮೊದಲು ಬಂದಿದ್ದಾರೆಯೋ ಅವರೇ ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡಿರುತ್ತಾರೆ. ಇದಕ್ಕೆ ಅವರು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ನಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದ್ದೆನು, ನೀವು ಹೋಗಿ ರಾಜ್ಯ ಮಾಡಿದ್ದಿರಿ, ನೀವು ಭಾರತವಾಸಿಗಳನ್ನು ಸ್ವರ್ಗದಲ್ಲಿ ಕಳುಹಿಸಿದ್ದೆನು, ಸಂಗಮದಲ್ಲಿ ರಾಜಯೋಗವನ್ನು ಕಲಿಸಿದ್ದೆನು, ನಾನು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಆದರೆ ಗೀತೆಯಲ್ಲಿ ಯುಗ-ಯುಗದಲ್ಲಿ ಬರುತ್ತೇನೆಂದು ಬರೆದು ಬಿಟ್ಟಿದ್ದಾರೆ.
ನೀವೀಗ ತಿಳಿದುಕೊಂಡಿದ್ದೀರಿ - ನಾವು ಏಣಿಯನ್ನು ಹೇಗೆ ಇಳಿಯುತ್ತೇವೆ ಮತ್ತೆ ಹತ್ತುತ್ತೇವೆ. ಏರುವ ಕಲೆ ನಂತರ ಇಳಿಯುವ ಕಲೆ, ಈಗ ಈ ಸಂಗಮಯುಗವು ಸರ್ವರ ಏರುವ ಕಲೆಯ ಯುಗವಾಗಿದೆ, ಎಲ್ಲರೂ ಏರುತ್ತಾರೆ. ಎಲ್ಲರೂ ಮೇಲೆ ಹೋಗುತ್ತಾರೆ, ನಂತರ ನೀವು ಸ್ವರ್ಗದಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ. ಸತ್ಯಯುಗದಲ್ಲಿ ಬೇರೆ ಯಾವುದೇ ಧರ್ಮವಿರಲಿಲ್ಲ. ಅದಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ನಂತರ ದೇವಿ-ದೇವತೆಗಳು ವಾಮಮಾರ್ಗದಲ್ಲಿ ಹೋಗಿ ವಿಕಾರಿಯಾಗ ತೊಡಗುತ್ತಾರೆ. ಯಥಾ ರಾಜ-ರಾಣಿ ತಥಾ ಪ್ರಜಾ. ತಂದೆಯು ತಿಳಿಸುತ್ತಾರೆ- ಹೇ ಭಾರತವಾಸಿಗಳೇ, ನೀವು ನಿರ್ವಿಕಾರಿ ಪ್ರಪಂಚದಲ್ಲಿದ್ದಿರಿ, ಈಗ ವಿಕಾರಿ ಪ್ರಪಂಚವಾಗಿದೆ, ಅನೇಕ ಧರ್ಮಗಳಿವೆ ಬಾಕಿ ಒಂದು ದೇವಿ-ದೇವತಾ ಧರ್ಮವಿಲ್ಲ. ಅವಶ್ಯವಾಗಿ ಯಾವಾಗ ಅದು ಇರುವುದಿಲ್ಲವೋ ಆಗಲೇ ಪುನಃ ಸ್ಥಾಪನೆಯಾಗುವುದು. ತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾರವರ ಮೂಲಕ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ, ಇಲ್ಲಿಯೇ ಮಾಡುವರಲ್ಲವೆ! ಸೂಕ್ಷ್ಮವತನದಲ್ಲಂತೂ ಮಾಡುವುದಿಲ್ಲ. ಬ್ರಹ್ಮನ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮದ ರಚನೆ ಮಾಡುತ್ತಾರೆಂದು ಬರೆಯಲ್ಪಟ್ಟಿದೆ. ನಿಮಗೆ ಈ ಸಮಯದಲ್ಲಿ ಪಾವನರೆಂದು ಹೇಳುವುದಿಲ್ಲ, ಪಾವನರಾಗುತ್ತಿದ್ದೀರಿ. ಸಮಯವಂತೂ ಹಿಡಿಸುತ್ತದೆಯಲ್ಲವೆ. ಪತಿತರಿಂದ ಹೇಗೆ ಪಾವನರಾಗುವುದು, ಇದು ಯಾವುದೇ ಶಾಸ್ತ್ರಗಳಲ್ಲಿಲ್ಲ. ವಾಸ್ತವದಲ್ಲಿ ಮಹಿಮೆಯು ಒಬ್ಬ ತಂದೆಯದಾಗಿದೆ, ಆ ತಂದೆಯನ್ನು ಮರೆತಿರುವ ಕಾರಣವೇ ಅನಾಥರಾಗಿ ಬಿಟ್ಟಿದ್ದಾರೆ, ಹೊಡೆದಾಡುತ್ತಿರುತ್ತಾರೆ. ಮತ್ತೆ ಎಲ್ಲರೂ ಸೇರಿ ಹೇಗೆ ಒಂದಾಗುವುದು ಎಂದು ಹೇಳುತ್ತಾರೆ. ಸಹೋದರ-ಸಹೋದರರಲ್ಲವೆ, ಈ ತಂದೆಯಂತೂ ಅನುಭವಿಯಾಗಿದ್ದಾರೆ, ಭಕ್ತಿಯನ್ನೂ ಇವರು ಪೂರ್ಣ ಮಾಡಿದ್ದಾರೆ. ಎಲ್ಲರಿಗಿಂತ ಅಧಿಕ ಗುರುಗಳನ್ನು ಮಾಡಿಕೊಂಡಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಇದೆಲ್ಲವನ್ನೂ ಬಿಡಿ, ಈಗ ನಾನು ನಿಮಗೆ ಸಿಕ್ಕಿದ್ದೇನೆ, ಸರ್ವರ ಸದ್ಗತಿದಾತ ಒಬ್ಬರೇ ಸತ್ಶ್ರೀ ಅಕಾಲ್ ಎಂದು ಹೇಳುತ್ತಾರಲ್ಲವೆ, ಅರ್ಥವನ್ನು ತಿಳಿದುಕೊಂಡಿಲ್ಲ. ಬಹಳಷ್ಟು ಓದುತ್ತಿರುತ್ತಾರೆ. ಈಗ ಎಲ್ಲರೂ ಪತಿತರಾಗಿದ್ದಾರೆ, ಮತ್ತೆ ಪಾವನ ಪ್ರಪಂಚವಾಗುವುದು. ಭಾರತವೇ ಅವಿನಾಶಿಯಾಗಿದೆ, ಇದು ಯಾರಿಗೂ ತಿಳಿದಿಲ್ಲ. ಭಾರತವೆಂದೂ ವಿನಾಶವಾಗುವುದಿಲ್ಲ, ಮತ್ತೆ ಪ್ರಳಯವೂ ಆಗುವುದಿಲ್ಲ. ಸಾಗರದಲ್ಲಿ ಆಲದ ಎಲೆಯ ಮೇಲೆ ಕೃಷ್ಣನು ತೇಲಿ ಬಂದನೆಂದು ಯಾವುದನ್ನು ತೋರಿಸುತ್ತಾರೆಯೋ ಈ ರೀತಿಯಾಗಿ ಯಾವುದೇ ಮಗುವು ಬರಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಸತ್ಯಯುಗದಲ್ಲಿ ಗರ್ಭದಿಂದ ಜನ್ಮ ಪಡೆಯುತ್ತೀರಿ ಆದರೆ ಆರಾಮದಿಂದ. ಅಲ್ಲಿ ಗರ್ಭ ಮಹಲು ಎಂದು ಹೇಳಲಾಗುತ್ತದೆ, ಇಲ್ಲಿ ಗರ್ಭವು ಜೈಲಿನಂತಾಗಿದೆ. ಸತ್ಯಯುಗದಲ್ಲಿ ಗರ್ಭವು ಮಹಲಾಗಿರುತ್ತದೆ, ಆತ್ಮಕ್ಕೆ ಮೊದಲೇ ಸಾಕ್ಷಾತ್ಕಾರವಾಗುತ್ತದೆ - ನಾನು ಈ ತನುವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕು ಎಂದು. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ, ಮನುಷ್ಯರಂತೂ ರಚಯಿತನನ್ನಾಗಲಿ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ಅರಿತುಕೊಂಡಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಜ್ಞಾನ ಸಾಗರನಾಗಿದ್ದಾರೆ, ನೀವು ಮಾ|| ಸಾಗರರಾಗಿದ್ದೀರಿ. ನೀವು (ಮಾತೆಯರು) ನದಿಗಳಾಗಿದ್ದೀರಿ ಮತ್ತು ಈ ಗೋಪರು (ಪಾಂಡವರು) ಜ್ಞಾನ ಮಾನಸ ಸರೋವರವಾಗಿದ್ದಾರೆ. ಇವರು (ಮಾತೆಯರು) ಜ್ಞಾನ ನದಿಗಳಾಗಿದ್ದಾರೆ, ನೀವು ಸರೋವರವಾಗಿದ್ದೀರಿ. ಪ್ರವೃತ್ತಿ ಮಾರ್ಗವು ಬೇಕಲ್ಲವೆ. ನಿಮ್ಮದು ಪವಿತ್ರ ಗೃಹಸ್ಥ ಆಶ್ರಮವಾಗಿತ್ತು ಈಗ ಪತಿತರಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ಇದನ್ನು ಸದಾ ನೆನಪಿಟ್ಟುಕೊಳ್ಳಿ, ನಾವು ಆತ್ಮರಾಗಿದ್ದೇವೆ, ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಆದೇಶ ನೀಡಿದ್ದಾರೆ - ಮಕ್ಕಳೇ, ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವೂ ಸಮಾಪ್ತಿಯಾಗುವುದು. ಆದ್ದರಿಂದ ಮನ್ಮನಾಭವ, ಮಧ್ಯಾಜೀಭವ. ಈ ಸ್ಮಶಾನವನ್ನು ಮರೆಯುತ್ತಾ ಹೋಗಿ. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಇದಕ್ಕೆ ಹೆದರಬೇಡಿ. ಬಹಳಷ್ಟು ಬಿರುಗಾಳಿಗಳು ಬರುತ್ತವೆ ಆದರೆ ಕರ್ಮೇಂದ್ರಿಯಗಳಿಂದ ವಿಕರ್ಮ ಮಾಡಬಾರದು. ಯಾವಾಗ ನೀವು ತಂದೆಯನ್ನು ಮರೆತು ಹೋಗುತ್ತೀರೋ ಆಗಲೇ ಬಿರುಗಾಳಿಗಳು ಬರುತ್ತವೆ. ಈ ನೆನಪಿನ ಯಾತ್ರೆಯು ಒಂದೇ ಬಾರಿ ಆಗುತ್ತದೆ, ಅವೆಲ್ಲವೂ ಮೃತ್ಯುಲೋಕದ ಯಾತ್ರೆಗಳಾಗಿವೆ, ಇದು ಅಮರ ಲೋಕದ ಯಾತ್ರೆಯಾಗಿದೆ. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ.
ಮಕ್ಕಳು ಶಿವ ಜಯಂತಿಯಂದು ಎಷ್ಟೊಂದು ಪತ್ರಗಳನ್ನು ಕಳುಹಿಸುತ್ತಾರೆ. ತಂದೆಯು ಹೇಳುತ್ತಾರೆ - ತತ್ತ್ವಂ. ನೀವು ಮಕ್ಕಳಿಗೂ ಸಹ ತಂದೆಯು ಶುಭಾಷಯಗಳನ್ನು ನೀಡುತ್ತೇವೆ. ವಾಸ್ತವದಲ್ಲಿ ನಿಮಗೆ ಶುಭಾಷಯಗಳು ಏಕೆಂದರೆ ನೀವೇ ಮನುಷ್ಯರಿಂದ ದೇವತೆಗಳಾಗುತ್ತೀರಿ ನಂತರ ಯಾರು ಪಾಸ್-ವಿತ್-ಆನರ್ ಆಗುವರೋ ಅವರಿಗೆ ಹೆಚ್ಚು ಅಂಕಗಳು ಮತ್ತು ಒಳ್ಳೆಯ ನಂಬರ್ ಸಿಗುವುದು. ತಂದೆಯು ನಿಮಗೆ ಶುಭಾಷಯಗಳನ್ನು ಕೊಡುತ್ತಾರೆ - ಮಕ್ಕಳೇ, ನೀವೀಗ ರಾವಣನ ಬಂಧನದಿಂದ ಮುಕ್ತರಾಗುತ್ತೀರಿ, ಎಲ್ಲಾ ಆತ್ಮಗಳು ಪತಂಗಗಳಾಗಿದ್ದಾರೆ. ಎಲ್ಲರ ದಾರವು ತಂದೆಯ ಕೈಯಲ್ಲಿದೆ, ಅವರು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ, ಸರ್ವರ ಸದ್ಗತಿದಾತನಾಗಿದ್ದಾರೆ ಆದರೆ ನೀವು ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಲು ಪುರುಷಾರ್ಥ ಮಾಡುತ್ತಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪಾಸ್-ವಿತ್-ಆನರ್ ಆಗಲು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ, ಯಾವುದೇ ದೇಹಧಾರಿಯನ್ನಲ್ಲ. ಈ ಕಣ್ಣುಗಳಿಂದ ಏನೆಲ್ಲವೂ ಕಾಣುತ್ತಿದೆಯೋ ಅದನ್ನು ನೋಡಿಯೂ ನೋಡದಂತಿರಬೇಕಾಗಿದೆ.
2. ನಾವು ಅಮರ ಲೋಕದ ಯಾತ್ರೆಯಲ್ಲಿ ಹೋಗುತ್ತಿದ್ದೇವೆ ಆದ್ದರಿಂದ ಮೃತ್ಯುಲೋಕದ್ದೇನೂ ನೆನಪಿರಬಾರದು, ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವಾಗಬಾರದು - ಈ ಗಮನವನ್ನಿಡಬೇಕಾಗಿದೆ.
ಸ್ವ-ಪರಿವರ್ತನೆಗೆ ಆಧಾರ – ‘ಸತ್ಯ ಹೃದಯದ ಅನುಭೂತಿ'
ಇಂದು ವಿಶ್ವ-ಪರಿವರ್ತಕ, ವಿಶ್ವ-ಕಲ್ಯಾಣಕಾರಿ ಬಾಪ್ದಾದಾರವರು ತನ್ನ ಸ್ನೇಹಿ, ಸಹಯೋಗಿ, ವಿಶ್ವ ಪರಿವರ್ತಕ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬರೂ ಸ್ವ-ಪರಿವರ್ತನೆಯ ಮೂಲಕ ವಿಶ್ವ ಪರಿವರ್ತನೆ ಮಾಡುವ ಸೇವೆಯಲ್ಲಿ ತೊಡಗಿದ್ದಾರೆ. ಎಲ್ಲರ ಮನಸ್ಸಿನಲ್ಲಿಯೂ ಒಂದೇ ಒಲವು-ಉತ್ಸಾಹವಿದೆ - ಈ ವಿಶ್ವವನ್ನು ಪರಿವರ್ತನೆ ಮಾಡಲೇಬೇಕು ಮತ್ತು ಅವಶ್ಯವಾಗಿ ಪರಿವರ್ತನೆ ಆಗುತ್ತದೆ ಎಂಬ ನಿಶ್ಚಯವೂ ಇದೆ. ಅಥವಾ ಪರಿವರ್ತನೆ ಆಗಿಬಿಟ್ಟಿದೆ ಎಂದು ಹೇಳುವುದೇ! ಕೇವಲ ಬಾಪ್ದಾದಾರವರ ನಿಮಿತ್ತ ಸಹಯೋಗಿ, ಸಹಜಯೋಗಿ ಆಗಿರುತ್ತಾ ಪರಿವರ್ತನೆ ಹಾಗೂ ಭವಿಷ್ಯ ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.
ಇಂದು ಬಾಪ್ದಾದಾರವರು ನಾಲ್ಕೂ ಕಡೆಯಲ್ಲಿ ನಿಮಿತ್ತವಾದ ವಿಶ್ವ-ಪರಿವರ್ತಕ ಮಕ್ಕಳಲ್ಲಿ ಒಂದು ವಿಶೇಷ ಮಾತನ್ನು ನೋಡುತ್ತಿದ್ದರು - ಎಲ್ಲರೂ ಒಂದೇ ಕಾರ್ಯಕ್ಕಾಗಿ ನಿಮಿತ್ತರಿದ್ದಾರೆ, ಲಕ್ಷ್ಯವೂ ಸಹ ಎಲ್ಲರಲ್ಲಿ ಸ್ವ-ಪರಿವರ್ತನೆ ಮತ್ತು ವಿಶ್ವ-ಪರಿವರ್ತನೆಯ ಲಕ್ಷ್ಯವೇ ಇದೆ ಆದರೆ ಸ್ವ-ಪರಿವರ್ತನೆ ಅಥವಾ ವಿಶ್ವ-ಪರಿವರ್ತನೆಯಲ್ಲಿ ನಿಮಿತ್ತ ಆಗಿದ್ದರೂ ನಂಬರ್ವಾರ್ ಏಕೆ? ಕೆಲವು ಮಕ್ಕಳು ಬಹಳ ಸಹಜ ಹಾಗೂ ಶೀಘ್ರವಾಗಿಯೇ ಸ್ವ-ಪರಿವರ್ತನೆ ಮಾಡಿಕೊಳ್ಳುತ್ತಾರೆ ಮತ್ತೆ ಕೆಲವರು ಈಗೀಗ ಪರಿವರ್ತನೆ ಆಗುವ ಸಂಕಲ್ಪವನ್ನು ಮಾಡುವರು ಆದರೆ ಸ್ವಯಂನ ಸಂಸ್ಕಾರ ಅಥವಾ ಮಾಯೆಯ ಮತ್ತು ಪ್ರಕೃತಿಯ ಮೂಲಕ ಬರುವ ಪರಿಸ್ಥಿತಿಗಳು ಅಥವಾ ಬ್ರಾಹ್ಮಣ ಪರಿವಾರದ ಮೂಲಕ ಕಡಿತವಾಗುವ ಲೆಕ್ಕಾಚಾರಗಳೇನಿವೆ, ಶ್ರೇಷ್ಠ ಪರಿವರ್ತನೆ ಆಗುವ ಒಲವನ್ನು ಬಲಹೀನ ಮಾಡಿಬಿಡುತ್ತವೆ. ಇನ್ನೂ ಕೆಲವು ಮಕ್ಕಳು ಪರಿವರ್ತನೆ ಮಾಡಿಕೊಳ್ಳುವ ಸಾಹಸದಲ್ಲಿ ಬಲಹೀನರಿದ್ದಾರೆ. ಎಲ್ಲಿ ಸಾಹಸವಿಲ್ಲವೋ ಅಲ್ಲಿ ಒಲವು-ಉತ್ಸಾಹವೂ ಇರುವುದಿಲ್ಲ. ಮತ್ತು ಸ್ವ-ಪರಿವರ್ತನೆ ಆಗದೇ ವಿಶ್ವ-ಪರಿವರ್ತನೆಯ ಕಾರ್ಯದಲ್ಲಿ ಮನಃ ಪ್ರಿಯವಾದ ಸಫಲತೆಯು ಆಗುವುದಿಲ್ಲ ಏಕೆಂದರೆ ಈ ಅಲೌಕಿಕ ಈಶ್ವರೀಯ ಸೇವೆಯು ಒಂದೇ ಸಮಯದಲ್ಲಿ ಮೂರು ಪ್ರಕಾರದ ಸೇವೆಯ ಸಿದ್ಧಿಯಿದೆ, ಮೂರು ಪ್ರಕಾರದ ಸೇವೆಯ ಜೊತೆ-ಜೊತೆಗೆ ಏನಿದೆ? 1. ವೃತ್ತಿ 2. ವೈಬ್ರೇಷನ್ 3. ವಾಣಿ. ತಾವು ನಿಮಿತ್ತ, ನಿರ್ಮಾಣ ಮತ್ತು ನಿಸ್ವಾರ್ಥವಾಗುವ ಆಧಾರದ ಮೇಲೆ ಮೇಲಿನ ಮೂರೂ ಸೇವೆಗಳು ಶಕ್ತಿಶಾಲಿಯಾಗುತ್ತವೆ, ಇದರಿಂದ ಮನಃ ಪ್ರಿಯವಾದ ಸಫಲತೆಯೂ ಸಿಗುತ್ತದೆ. ಇಲ್ಲದಿದ್ದರೆ ಸೇವೆಯಾಗುತ್ತದೆ, ಸ್ವಲ್ಪ ಸಮಯಕ್ಕಷ್ಟೇ ತಮ್ಮನ್ನು ಅಥವಾ ಅನ್ಯರನ್ನು ಸೇವೆಯ ಸಫಲತೆಯ ಖುಷಿಯಂತು ಮಾಡಿ ಬಿಡಬಹುದು ಆದರೆ ಮನಃ ಪ್ರಿಯ ಸಫಲತೆ, ಯಾವುದನ್ನು ಬಾಪ್ದಾದಾರವರು ಹೇಳುತ್ತಿದ್ದಾರೆ, ಆ ಸಫಲತೆ ಆಗುವುದಿಲ್ಲ. ಬಾಪ್ದಾದಾರವರೂ ಸಹ ಮಕ್ಕಳ ಖುಷಿಯಲ್ಲಿ ಸ್ವಯಂ ಖುಷಿಯಾಗುತ್ತಾರೆ ಆದರೆ ಹೃದಯ ರಾಮನ ಹೃದಯದಲ್ಲಿ ಅವಶ್ಯವಾಗಿ ಯಥಾ ಶಕ್ತಿಯ ಫಲಿತಾಂಶವು ನೋಟ್ ಆಗುತ್ತಿರುತ್ತದೆ. ‘ಶಭಾಷ್, ಶಭಾಷ್’ ಎಂದು ಅವಶ್ಯವಾಗಿ ಹೇಳುತ್ತಾರೆ ಏಕೆಂದರೆ ಬಾಬಾರವರಿಗೆ ಸದಾ ಪ್ರತಿಯೊಂದು ಮಕ್ಕಳ ಮೇಲೆ ವರದಾನದ ದೃಷ್ಟಿ ಹಾಗೂ ವೃತ್ತಿಯಿರುತ್ತದೆ - ಈ ನನ್ನ ಮಕ್ಕಳು ಅವಶ್ಯವಾಗಿ ಇಂದಿಲ್ಲದಿದ್ದರೆ ನಾಳೆ ಸಿದ್ಧಿ-ಸ್ವರೂಪರು ಆಗುತ್ತಾರೆ. ಆದರೆ ವರದಾತನದ ಜೊತೆ-ಜೊತೆಗೆ ಶಿಕ್ಷಕನೂ ಆಗಿದ್ದಾರೆ ಆದ್ದರಿಂದ ಉನ್ನತಿಯಾಗುವ ಗಮನವನ್ನೂ ಕೊಡುತ್ತಾರೆ.
ಇಂದು ಬಾಪ್ದಾದಾರವರು ವಿಶ್ವ-ಪರಿವರ್ತನೆಯ ಕಾರ್ಯದ ಹಾಗೂ ವಿಶ್ವ-ಪರಿವರ್ತಕ ಮಕ್ಕಳ ಫಲಿತಾಂಶವನ್ನು ನೋಡುತ್ತಿದ್ದರು. ಇದರಲ್ಲಿ ವೃದ್ಧಿಯಾಗುತ್ತಿದೆ, ನಾಲ್ಕೂ ಕಡೆಯಲ್ಲಿ ಧ್ವನಿ ಹರಡುತ್ತಿದೆ, ಪ್ರತ್ಯಕ್ಷತೆಯ ಪರದೆಯನ್ನು ತೆರೆಯುವುದಕ್ಕೂ ಆರಂಭವಾಗಿ ಬಿಟ್ಟಿದೆ. ನಾಲ್ಕೂ ಕಡೆಯಲ್ಲಿನ ಆತ್ಮರಲ್ಲೀಗ ಈ ಇಚ್ಛೆಯು ಉತ್ಪನ್ನವಾಗುತ್ತಿದೆ - ಏನೆಂದರೆ, ಸಮೀಪದಲ್ಲಿ ಹೋಗಿ ನೋಡೋಣ. ಈಗ ಹೇಳಿಕೆ-ಕೇಳಿಕೆ ಮಾತುಗಳನ್ನು ನೋಡುವ ಪರಿವರ್ತನೆಯಲ್ಲಿ ಬದಲಾಗುತ್ತಿದೆ. ಒಳ್ಳೆಯದು - ಇವೆಲ್ಲಾ ಪರಿವರ್ತನೆಗಳು ಆಗುತ್ತಿವೆ, ಆದರೂ ಡ್ರಾಮಾ ಅನುಸಾರ ಈಗಿನವರೆಗೆ ತಂದೆ ಹಾಗೂ ನಿಮಿತ್ತರಾಗಿರುವ ಕೆಲವು ಶ್ರೇಷ್ಠ ಆತ್ಮರ ಶಕ್ತಿಶಾಲಿ ಪ್ರಭಾವದ ಪರಿಣಾಮವು ಕಾಣಿಸುತ್ತಿದೆ. ಒಂದುವೇಳೆ ಮೆಜಾರಿಟಿ ಈ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರೆ, ಬಹಳ ಬೇಗನೆ ಸರ್ವ ಬ್ರಾಹ್ಮಣರು ಸಿದ್ಧಿ-ಸ್ವರೂಪದಲ್ಲಿ ಪ್ರತ್ಯಕ್ಷ ಆಗುವರು. ಬಾಪ್ದಾದಾರವರು ನೋಡುತ್ತಿದ್ದರು - ಮನಃ ಪ್ರಿಯ, ಲೋಕ ಪ್ರಿಯ, ಪ್ರಭು ಪ್ರಿಯ ಸಫಲತೆಯ ಆಧಾರವು `ಸ್ವ-ಪರಿವರ್ತನೆ' ಆಗುವುದರಲ್ಲಿ ಈಗ ಕೊರತೆಯಿದೆ, ಮತ್ತು ಸ್ವ-ಪರಿವರ್ತನೆಯಲ್ಲಿ ಕೊರತೆ ಏಕೆ? ಅದರ ಮೂಲ-ಆಧಾರವಾಗಿ ಒಂದು ವಿಶೇಷ ಶಕ್ತಿಯ ಕೊರತೆಯಿದೆ. ಅದು ಯಾವುದೆಂದರೆ - ಅನುಭೂತಿಯ ಶಕ್ತಿ.
ಯಾವುದೇ ಪರಿವರ್ತನೆಯ ಸಹಜ ಆಧಾರವು ಅನುಭೂತಿಯ ಶಕ್ತಿಯಾಗಿದೆ. ಎಲ್ಲಿಯವರೆಗೆ ಅನುಭೂತಿಯ ಶಕ್ತಿಯು ಆಗುವುದಿಲ್ಲವೊ, ಅಲ್ಲಿಯವರೆಗೆ ಅನುಭೂತಿ ಆಗುವುದಿಲ್ಲ ಮತ್ತು ಎಲ್ಲಿಯವರೆಗೆ ಅನುಭೂತಿ ಆಗುವುದಿಲ್ಲವೋ ಅಲ್ಲಿಯವರೆಗೆ ಬ್ರಾಹ್ಮಣ ಜೀವನದ ವಿಶೇಷತೆಯ ಬುನಾದಿಯು ಶಕ್ತಿಶಾಲಿಯಾಗಿ ಇರುವುದಿಲ್ಲ. ಆದಿಯಿಂದ ತ್ಮಮ ಬ್ರಾಹ್ಮಣ ಜೀವನವನ್ನು ಸನ್ಮುಖದಲ್ಲಿ ತಂದುಕೊಳ್ಳಿರಿ.
ಮೊದಲ ಪರಿವರ್ತನೆ - ನಾನು ಆತ್ಮ ಆಗಿದ್ದೇನೆ, ತಂದೆಯು ನನ್ನವರಾಗಿದ್ದಾರೆ - ಈ ಪರಿವರ್ತನೆಯು ಯಾವುದರ ಆಧಾರದಿಂದ ಆಯಿತು? ಎಲ್ಲಿಯವರೆಗೆ `ಹೌದು, ನಾನು ಆತ್ಮನು, ಇವರೇ ನನ್ನ ತಂದೆಯಾಗಿದ್ದಾರೆ' ಎಂಬ ಅನುಭೂತಿ ಮಾಡುತ್ತೀರಿ, ಅಲ್ಲಿಯವರೆಗೆ ಪರಿವರ್ತನೆ ಆಗುತ್ತದೆ. ಎಲ್ಲಿಯವರೆಗೆ ಅನುಭೂತಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಸಾಧಾರಣ ಗತಿಯಿಂದ ನಡೆಯುತ್ತೀರಿ ಮತ್ತು ಯಾವ ಕ್ಷಣದಲ್ಲಿ ಅನುಭೂತಿಯ ಶಕ್ತಿಯ ಅನುಭವಿ ಆಗುವಿರೋ, ಆಗ ತೀವ್ರ ಪುರುಷಾರ್ಥಿ ಆಗಿ ಬಿಡುತ್ತೀರಿ. ಅದೇ ಪ್ರಕಾರವಾಗಿ ಪರಿವರ್ತನೆಯ ವಿಶೇಷವಾದ ಯಾವುದೇ ಮಾತುಗಳಿರಬಹುದು - ಅದು ಭಲೆ ರಚೈತನ ಬಗ್ಗೆ, ರಚನೆಯ ಬಗ್ಗೆ ಇರಬಹುದು. ಇದು ಅದೇ ಸಮಯವಾಗಿದೆ, ಯೋಗವೆಂದರೆ ಅದೇ ಆಗಿದೆ, ನಾನೂ ಸಹ ಅದೇ ಶ್ರೇಷ್ಠ ಆತ್ಮನಾಗಿದ್ದೇನೆಂದು ಎಲ್ಲಿಯವರೆಗೆ ಪ್ರತಿಯೊಂದು ಮಾತಿನಲ್ಲಿಯೂ ಅನುಭೂತಿ ಮಾಡುವುದಿಲ್ಲವೋ, ಅಲ್ಲಿಯವರೆಗೆ ಒಲವು-ಉತ್ಸಾಹದ ಚಲನೆಯಿರುವುದಿಲ್ಲ. ಭಲೆ ಸ್ವಲ್ಪ ಸಮಯಕ್ಕಾಗಿ ಯಾರದೇ ವಾಯುಮಂಡಲದ ಪ್ರಭಾವದಿಂದ ಪರಿವರ್ತನೆ ಆಗಬಹುದು ಆದರೆ ಸದಾ ಕಾಲದ್ದಾಗಿರುವುದಿಲ್ಲ. ಅನುಭೂತಿಯ ಶಕ್ತಿಯು ಸದಾಕಾಲದ ಸಹಜ ಪರಿವರ್ತನೆ ಮಾಡಿ ಬಿಡುತ್ತದೆ.
ಇದೇ ರೀತಿ ಸ್ವ-ಪರಿವರ್ತನೆಯಲ್ಲಿಯೂ - ಎಲ್ಲಿಯವರೆಗೆ ಅನುಭೂತಿಯ ಶಕ್ತಿಯಿಲ್ಲವೋ ಅಲ್ಲಿಯವರೆಗೆ ಸದಾ ಕಾಲದ ಶ್ರೇಷ್ಠ ಪರಿವರ್ತನೆ ಉತ್ಪನ್ನವಾಗಲು ಸಾಧ್ಯವಿಲ್ಲ. ಇದಕ್ಕಾಗಿ ವಿಶೇಷವಾಗಿ ಎರಡು ಮಾತುಗಳ ಅನುಭೂತಿ ಇರಬೇಕಾಗಿದೆ. 1. ತನ್ನ ಬಲಹೀನತೆಯ ಅನುಭೂತಿ. 2. ಯಾವುದೇ ಪರಿಸ್ಥಿತಿ ಅಥವಾ ವ್ಯಕ್ತಿಯು ನಿಮಿತ್ತನಾಗುವನು, ಅವರ ಇಚ್ಛೆ ಮತ್ತು ಅವರ ಮನಸ್ಸಿನ ಭಾವನೆ ಅಥವಾ ವ್ಯಕ್ತಿಯ ಬಲಹೀನತೆ ಅಥವಾ ಪರವಶ ಸ್ಥಿತಿಯ ಅನುಭೂತಿ. ಪರಿಸ್ಥಿತಿಯ ಪರೀಕ್ಷೆಯ ಕಾರಣವನ್ನು ತಿಳಿದುಕೊಂಡು, ಸ್ವಯಂನ್ನು ಉತ್ತೀರ್ಣನಾಗುವ ಶ್ರೇಷ್ಠ ಸ್ವರೂಪದ ಅನುಭೂತಿಯಲ್ಲಿ ಇರಬೇಕು - ನಾನು ಶ್ರೇಷ್ಠನಾಗಿದ್ದೇನೆ, ಸ್ವ-ಸ್ಥಿತಿಯು ಶ್ರೇಷ್ಠವಾಗಿದೆ, ಪರಿಸ್ಥಿತಿಯು ಪರೀಕ್ಷೆಯಾಗಿದೆ ಎಂಬ ಅನುಭೂತಿಯು ಸಹಜವಾಗಿ ಪರಿವರ್ತನೆ ಮಾಡಿ ಬಿಡುತ್ತದೆ ಮತ್ತು ಪಾಸ್ ಮಾಡಿ ಬಿಡುತ್ತದೆ. ಅನ್ಯರ ಇಚ್ಛೆ ಅಥವಾ ಅನ್ಯರ ಸ್ವ-ಉನ್ನತಿಯೂ ಸಹ ಅನುಭೂತಿಗೂ ಸಹ ತಮ್ಮ ಸ್ವ-ಉನ್ನತಿಯ ಆಧಾರವಾಗಿದೆ. ಅಂದಮೇಲೆ ಸ್ವ-ಪರಿವರ್ತನೆಯು ಅನುಭೂತಿಯ ಶಕ್ತಿಯಿಲ್ಲದೆ ಆಗಲು ಸಾಧ್ಯವಿಲ್ಲ. ಇದರಲ್ಲಿಯೂ ಮೊದಲನೆಯದಾಗಿ - ಸತ್ಯ ಹೃದಯದ ಅನುಭೂತಿ, ಇನ್ನೊಂದು - ಚತುರತೆಯ ಅನುಭೂತಿಯೂ ಇದೆ ಏಕೆಂದರೆ ಬಹಳಷ್ಟು ಜ್ಞಾನಪೂರ್ಣರು ಆಗಿ ಬಿಟ್ಟಿದ್ದೀರಿ. ಅಂದಮೇಲೆ ಸಮಯವನ್ನು ನೋಡಿ ತನ್ನ ಕಾರ್ಯವನು ಸಿದ್ಧ ಮಾಡಲು, ತನ್ನ ಹೆಸರನ್ನು ಪ್ರಸಿದ್ಧ ಮಾಡುವುದಕ್ಕಾಗಿ, ಆ ಸಮಯದಲ್ಲಿ ಅನುಭೂತಿಯನ್ನು ಮಾಡಿ ಬಿಡಬಹುದು ಆದರೆ ಆ ಅನುಭೂತಿಯಲ್ಲಿ ಪರಿವರ್ತನೆಯಾಗುವ ಶಕ್ತಿಯಿರುವುದಿಲ್ಲ. ಹೃದಯದ ಅನುಭೂತಿಯು ಹೃದಯ ರಾಮನ ಆಶೀರ್ವಾದವನ್ನು ಪ್ರಾಪ್ತಿ ಮಾಡಿಸುತ್ತದೆ ಮತ್ತು ಚತುರತೆಯಿರುವ ಅನುಭೂತಿಯು ಸ್ವಲ್ಪ ಸಮಯಕ್ಕಾಗಿ ಅನ್ಯರನ್ನು ಖುಷಿ ಪಡಿಸುತ್ತದೆ, ತನ್ನನ್ನೂ ಖುಷಿ ಪಡಿಸಿಕೊಳ್ಳುತ್ತಾರೆ.
ಮೂರನೇ ಪ್ರಕಾರದ ಅನುಭೂತಿ - ಇವರು ಸರಿಯಿಲ್ಲ ಎಂದು ಮನಸ್ಸು ಒಪ್ಪಿಕೊಳ್ಳುತ್ತದೆ, ವಿವೇಕವು ಪ್ರತಿಧ್ವನಿ ಕೊಡುತ್ತದೆ - ಇದು ಯಥಾರ್ಥವಲ್ಲ ಆದರೆ ಬಾಹ್ಯ ರೂಪದಿಂದ ತನ್ನನ್ನು ಮಹಾರಥಿ ಎಂದು ಸಿದ್ಧ ಮಾಡುವುದಕ್ಕಾಗಿ, ಯಾವುದಾದರೊಂದು ರೀತಿಯಿಂದ ತನ್ನ ಹೆಸರನ್ನು ಪರಿವಾರದ ಮಧ್ಯೆ ಬಲಹೀನ ಅಥವಾ ಕಡಿಮೆ ಮಾಡುವ ಕಾರಣದಿಂದ, ವಿವೇಕವನ್ನು ಕೊಲೆ ಮಾಡುತ್ತಿರುತ್ತಾರೆ. ಹೀಗೆ ವಿವೇಕವನ್ನು ಸಾಯಿಸುವುದೂ ಸಹ ಪಾಪವಾಗಿದೆ. ಹೇಗೆ ಅಪಘಾತವು ಮಹಾಪಾಪ ಆಗಿದೆ, ಹಾಗೆಯೇ ಇದೂ ಸಹ ಪಾಪದ ಖಾತೆಯಲ್ಲಿ ಜಮಾ ಆಗುತ್ತದೆ. ಆದ್ದರಿಂದ ಬಾಪ್ದಾದಾರವರು ಮುಗುಳ್ನಗುತ್ತಾ ಇರುತ್ತಾರೆ ಮತ್ತು ಅವರ ಮನಸ್ಸಿನ ಸಂಭಾಷಣೆಯನ್ನು ತಿಳಿಸುತ್ತಾ ಇರುತ್ತಾರೆ. ಬಹಳ ಸುಂದರವಾದ ಸಂಭಾಷಣೆ ಆಗುತ್ತದೆ. ಮೂಲ ಮಾತು - ಇಂತಹ ಅನುಭೂತಿಯಲ್ಲಿ ಇರುವವರು ತಿಳಿಯುತ್ತಾರೆ - ಯಾರಿಗೇನು ಗೊತ್ತಾಗುತ್ತದೆ. ಇದರಿಂದ ಮನಸ್ಸಿಗೆ ಬಂದಂತೆ ನಡೆಯುತ್ತಾರೆ.... ಆದರೆ ತಂದೆಯವರಿಗೆ ಪ್ರತಿಯೊಂದು ಎಲೆಯ(ಮಕ್ಕಳ) ಬಗ್ಗೆ ಗೊತ್ತಿದೆ. ಕೇವಲ ಬಾಯಿಂದ ಹೇಳುವುದರಿಂದಷ್ಟೇ ಗೊತ್ತಾಗಬೇಕಿಲ್ಲ ಆದರೆ ಅದು ತಿಳಿದಿದ್ದರೂ ಸಹ ತಂದೆಯು ಗೊತ್ತಿಲ್ಲದಿರುವಂತೆ ಮುಗ್ಧತೆಯಲ್ಲಿದ್ದು, ಮಕ್ಕಳನ್ನು ಭೋಲಾನಾಥನ ರೂಪದಿಂದ ನಡೆಸುತ್ತಾರೆ. ಯಾವಾಗ ತಂದೆಗೆ ಗೊತ್ತಿದೆ, ಆದರೂ ಏಕೆ ಭೋಲಾ ಆಗುತ್ತಾರೆ? ಏಕೆಂದರೆ ದಯಾ ಸಾಗರ ತಂದೆ ಆಗಿದ್ದಾರೆ ಮತ್ತು ಪಾಪದಲ್ಲಿ, ಪಾಪವು ಹೆಚ್ಚಾಗಬಾರದು ಎಂಬ ದಯೆ ತೋರಿಸುತ್ತಾರೆ. ತಿಳಿಯಿತೆ? ಇಂತಹ ಮಕ್ಕಳು ಚತುರ ತಂದೆಯ ಬಳಿಯೂ ಅಥವಾ ನಿಮಿತ್ತ ಆತ್ಮರ ಸನ್ಮುಖದಲ್ಲಿ ಬಹಳ ಚತುರರಾಗಿ ಬರುತ್ತಾರೆ ಆದ್ದರಿಂದ ತಂದೆಯು ದಯಾ ಸಾಗರ, ಭೋಲಾನಾಥ ಆಗಿ ಬಿಡುತ್ತಾರೆ.
ಬಾಪ್ದಾದಾರವರ ಬಳಿ ಪ್ರತೀ ಸಮಯದಲ್ಲಿ ಪ್ರತಿಯೊಂದು ಮಕ್ಕಳ ಕರ್ಮದ, ಮನಸ್ಸಿನ ಸಂಕಲ್ಪಗಳ ಖಾತೆಯು ಸ್ಪಷ್ಟವಾಗುತ್ತಾ ಇರುತ್ತದೆ. ಹೃದಯಗಳನ್ನು ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ ಆದರೆ ಪ್ರತಿಯೊಂದು ಮಕ್ಕಳ ಹೃದಯದ ಬಡಿತದ ಚಿತ್ರವೂ ಸಹ ಸ್ಪಷ್ಟವಾಗಿಯೇ ಇದೆ. ಆದ್ದರಿಂದ ಹೇಳುತ್ತಾರೆ - ನಾನು ಪ್ರತಿಯೊಬ್ಬರ ಹೃದಯವನ್ನು ತಿಳಿದುಕೊಂಡಿಲ್ಲ ಏಕೆಂದರೆ ತಿಳಿಯುವ ಅವಶ್ಯಕತೆಯೇ ಇಲ್ಲ, ತಿಳಿಯುವ ಮೊದಲೇ ಸ್ಪಷ್ಟವಾದ ಚಿತ್ರಣವಿದೆ. ಬಾಪ್ದಾದಾರವರ ಸನ್ಮುಖದಲ್ಲಿ ಮಕ್ಕಳ ಪ್ರತಿ ಕ್ಷಣದ ಹೃದಯ ಬಡಿತ ಅಥವಾ ಮನಸ್ಸಿನ ಸಂಕಲ್ಪಗಳ ಚಾರ್ಟ್ ಇದೆ. ಅದನ್ನು ತಮಗೆ ತಿಳಿಸಬಹುದು, ತಿಳಿಸಬಾರದೆಂದಲ್ಲ. ಅದರ ದಿನಾಂಕ, ಸ್ಥಾನ, ಸಮಯ ಮತ್ತು ಏನೇನು ಮಾಡಿದಿರಿ ಎಲ್ಲವನ್ನೂ ತಿಳಿಸಬಹುದು ಆದರೆ ಎಲ್ಲವನ್ನೂ ತಿಳಿದಿದ್ದರೂ ಸಹ ಮುಗ್ಧನಾಗಿರುತ್ತಾರೆ. ಅಂದಾಗ ಇಂದು ಇಡೀ ದಿನದಲ್ಲಿ ಚಾರ್ಟನ್ನು ನೋಡಿದೆವು.
ಸ್ವ-ಪರಿವರ್ತನೆಯು ತೀವ್ರ ಗತಿಯಿಂದ ಆಗದೇ ಇರುವ ಕಾರಣದಿಂದ `ಸತ್ಯ ಹೃದಯದ ಅನುಭೂತಿ'ಯ ಕೊರತೆಯಿದೆ. ಅನುಭೂತಿಯ ಶಕ್ತಿಯಿಂದ ಬಹಳ ಮಧುರ ಅನುಭವವನ್ನು ಮಾಡಿಸಬಹುದು - ಇದನ್ನಂತು ತಿಳಿದಿದ್ದೀರಲ್ಲವೆ. ಕೆಲವೊಮ್ಮೆ ತಮ್ಮನ್ನು ತಂದೆಯ ಕಣ್ಮಣಿ ಆತ್ಮ ಅರ್ಥಾತ್ ನಯನಗಳಲ್ಲಿ ಸಮಾವೇಶ ಆಗಿರುವ ಶ್ರೇಷ್ಠ ಬಿಂದುವೆಂದು ಅನುಭೂತಿ ಮಾಡಿರಿ. ನಯನಗಳಲ್ಲಂತು ಬಿಂದುವೇ ಸಮಾವೇಶವಾಗಲು ಸಾಧ್ಯ, ಶರೀರವಂತು ಸಮಾವೇಶವಾಗಲು ಆಗುವುದಿಲ್ಲ. ಕೆಲವೊಮ್ಮೆ ತಮ್ಮನ್ನು ಮಸ್ತಕದಲ್ಲಿ ಹೊಳೆಯುತ್ತಿರುವ ಮಸ್ತಕ-ಮಣಿ, ಹೊಳೆಯುತ್ತಿರುವ ನಕ್ಷತ್ರದ ಅನುಭೂತಿ ಮಾಡಿರಿ, ಕೆಲವೊಮ್ಮೆ ತಮ್ಮನ್ನು ಬ್ರಹ್ಮಾ ತಂದೆಯ ಸಹಯೋಗಿ, ಸಾಕಾರ ಬ್ರಾಹ್ಮಣ ರೂಪದಲ್ಲಿ ಬ್ರಹ್ಮಾನ ಭುಜವೆಂಬ ಅನುಭವ ಮಾಡಿರಿ, ಅನುಭೂತಿ ಮಾಡಿರಿ. ಕೆಲವೊಮ್ಮೆ ಅವ್ಯಕ್ತ ಫರಿಶ್ತಾ ಸ್ವರೂಪದ ಅನುಭೂತಿ ಮಾಡಿರಿ - ಇಂತಹ ಅನುಭೂತಿಯ ಶಕ್ತಿಯಿಂದ ಬಹಳ ಅಮೂಲ್ಯವಾದ, ಅಲೌಕಿಕವಾದ ಅನುಭವ ಮಾಡಿರಿ. ಕೇವಲ ಜ್ಞಾನದ ರೀತಿಯಲ್ಲಿ ವರ್ಣನೆ ಮಾಡುವುದಲ್ಲ, ಅನುಭೂತಿ ಮಾಡಿರಿ ಮತ್ತು ಒಂದು ಕಡೆ ಇದನ್ನು ವೃದ್ಧಿ ಮಾಡಿಕೊಳ್ಳುತ್ತಾ ಇರುತ್ತೀರೆಂದರೆ, ಇನ್ನೊಂದು ಕಡೆ ಸ್ವತಹವಾಗಿಯೇ ಬಲಹೀನತೆಯ ಅನುಭೂತಿಯು ಸ್ಪಷ್ಟವಾಗುತ್ತದೆ. ಶಕ್ತಿಶಾಲಿ ದರ್ಪಣದಲ್ಲಿ ಪುಟ್ಟ ಮಚ್ಚೆಯೂ ಸಹ ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ಪರಿವರ್ತನೆ ಮಾಡಿಕೊಳ್ಳುತ್ತೀರಿ. ಹಾಗಾಯೇ ಸ್ವ-ಪರಿವರ್ತನೆ ಆಧಾರವು ಅನುಭೂತಿಯ ಶಕ್ತಿಯೆಂದು ತಿಳಿಯಿತೆ! ಈ ಶಕ್ತಿಯನ್ನು ಕಾರ್ಯದಲ್ಲಿ ಉಪಯೋಗಿಸಿರಿ, ಅದನ್ನು ಕೇವಲ ಲೆಕ್ಕ ಮಾಡುತ್ತಾ ಈ ಶಕ್ತಿಯೂ ಇದೆ, ಈ ಶಕ್ತಿಯೂ ಇದೆ ಎಂದು ಖುಷಿಯಾಗುವುದಲ್ಲ. ಆದರೆ ಸದಾ ಸ್ವಯಂ ಪ್ರತಿ, ಸರ್ವರ ಪ್ರತಿ, ಸೇವಾ ಪ್ರತಿ, ಪ್ರತಿಯೊಂದು ಕಾರ್ಯದಲ್ಲಿಯೂ ಉಪಯೋಗಿಸಿರಿ. ತಿಳಿಯಿತೆ? ಕೆಲವು ಮಕ್ಕಳು ಹೇಳುತ್ತಾರೆ - ಬಾಬಾ ಇದೇ ಕಾರ್ಯವನ್ನು ಮಾಡುತ್ತಾ ಇರುತ್ತಾರೇನು? ಆದರೆ ಬಾಬಾರವರು ಏನು ಮಾಡುವುದು, ತಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲೇಬೇಕು. ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದರೆ ಜೊತೆಗಾರರೂ ಹಾಗೆಯೇ ಇರಬೇಕಲ್ಲವೆ. ಆದ್ದರಿಂದ ನೋಡುತ್ತಾ ಇರುತ್ತಾರೆ ಮತ್ತು ಜೊತೆಗಾರರು ಸಮಾನರು ಆಗಿ ಬಿಡಲೆಂದು ಸಮಾಚಾರವನ್ನು ತಿಳಿಸುತ್ತಾ ಇರುತ್ತಾರೆ. ಇವೆಲ್ಲವೂ ಹಿಂದಿಂದೆ ಬರುವವರ ಮಾತುಗಳಲ್ಲ, ಹಿಂದೆ ಬರುವವರು ಬಹಳಷ್ಟು ಆಗುತ್ತಾರೆ. ಆದರೆ ಜೊತೆಗಾರರಂತು ಸಮಾನರಾಗಬೇಕು ಅಲ್ಲವೆ. ತಾವು ಜೊತೆಗಾರ(ಸಂಗಾತಿ)ರೇ ಅಥವಾ ದಿಬ್ಬಣದಲ್ಲಿ ಇರುವವರೇ? ದಿಬ್ಬಣವಂತು ಬಹಳ ದೊಡ್ಡದಾಗಿರುತ್ತದೆ ಆದ್ದರಿಂದ ಶಿವನ ದಿಬ್ಬಣವು ಪ್ರಸಿದ್ಧವಿದೆ. ದಿಬ್ಬಣವು ವಿಧ-ವಿಧವಾಗಿ ಇರುತ್ತದೆ ಆದರೆ ಸಂಗಾತಿಯಂತು(ಸಮಾನ) ಹಾಗೆಯೇ ಇರಬೇಕಲ್ಲವೆ. ಒಳ್ಳೆಯದು.
ಈಸ್ಟರ್ನ್ ಜೋನಿನವರು ಏನು ಮಾಡುತ್ತಿದ್ದಾರೆ? ಪ್ರತ್ಯಕ್ಷತೆಯ ಸೂರ್ಯನನ್ನು ಎಲ್ಲಿಂದ ಉದಯಗೊಳಿಸುತ್ತೀರಿ? ತಂದೆಯಲ್ಲಿ ಪ್ರತ್ಯಕ್ಷತೆ ಆಯಿತು, ಈಗ ಆ ಮಾತಂತು ಹಳೆಯದಾಯಿತು. ಆದರೆ ಈಗ ಏನು ಮಾಡುವಿರಿ? ಪ್ರಾಚೀನ ಸಿಂಹಾಸನವಿದೆ - ಈ ನಶೆಯಂತು ಒಳ್ಳೆಯದು ಆದರೆ ಈಗ ಏನು ಮಾಡುವಿರಿ? ಈಗ ನವೀನತೆಯ ಸೂರ್ಯೋದಯವನ್ನು ಮಾಡಿರಿ, ಅದರಿಂದ ಎಲ್ಲರ ಮುಖದಿಂದ ಬರಲಿ- ಈಸ್ಟರ್ನ್ ಜೋನ್ನಿಂದ ನವೀನತೆಯ ಸೂರ್ಯನ ಪ್ರಕಟವಾಯಿತು. ಈಗಿನವರೆಗೆ ಯಾವ ಕಾರ್ಯವನ್ನು ಯಾರೂ ಮಾಡಿಲ್ಲವೋ, ಅದನ್ನೀಗ ತಾವು ಮಾಡಿ ತೋರಿಸಿ. ಕಾರ್ಯಕ್ರಮಗಳು, ಸಮ್ಮೇಳನಗಳನ್ನು ಮಾಡಿದಿರಿ, ವಿಶಿಷ್ಟ ವ್ಯಕ್ತಿಗಳ ಸೇವೆಯನ್ನೂ ಮಾಡಿದಿರಿ, ವಾರ್ತಾ ಪತ್ರಿಕೆಯಲ್ಲಿಯೂ ಬಂದಿದೆ- ಇದನ್ನಂತು ಎಲ್ಲರೂ ಮಾಡುವರು ಆದರೆ ನವೀನತೆಯ ಹೊಸ ಜಲಕ್ ತೋರಿಸಿರಿ. ತಿಳಿಯಿತೆ!
ತಂದೆಯ ಮನೆಯು ತಮ್ಮ ಮನೆ ಆಗಿದೆ. ಎಲ್ಲರೂ ಆರಾಮದಿಂದ ತಲುಪಿದ್ದೀರಿ. ಹೃದಯದ ಆರಾಮವು ಸ್ಥೂಲ ಆರಾಮವನ್ನೂ ಕೊಡಿಸುತ್ತದೆ. ಹೃದಯದ ಆರಾಮವು ಇಲ್ಲದಿದ್ದರೆ, ಆರಾಮವಾಗಿರುವ ಸಾಧನಗಳಿದ್ದರೂ ಆರಾಮದಿಂದ ಇರುವುದಿಲ್ಲ. ಹೃದಯದ ಆರಾಮ(ವಿಶ್ರಾಂತಿ/ಸಮಾಧಾನ)ವಿದೆ ಅಂದರೆ ಹೃದಯದಲ್ಲಿ ಸದಾ ರಾಮನ ಸಂಗದಲ್ಲಿರುವುದು. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಆರಾಮದ ಅನುಭವ ಮಾಡುತ್ತಿರಿ. ಆರಾಮದಿಂದ ಇದ್ದೀರಲ್ಲವೆ ಅಥವಾ ಬಂದು-ಹೋಗುವುದು ಕಷ್ಟವೆನಿಸುತ್ತದೆಯೇ? ಆದರೂ ಮಧುರ ಡ್ರಾಮಾದ ಪೂರ್ವ ನಿಶ್ಚಿತವೆಂದು ತಿಳಿದುಕೊಳ್ಳಿರಿ. ಮಿಲನದ ಮೇಳವನ್ನಂತು ಆಚರಿಸುತ್ತಿದ್ದೀರಲ್ಲವೆ. ತಂದೆಯೊಂದಿಗೆ ಮಿಲನ, ಪರಿವಾರದೊಂದಿಗೆ ಮಿಲನವಾಗುವ ಮೇಳವನ್ನು ಆಚರಿಸುವುದೂ ಸಹ ಮಧುರ ಪೂರ್ವ ನಿಶ್ಚಿತವಾಗಿದೆ. ಒಳ್ಳೆಯದು.
ಸರ್ವ ಶಕ್ತಿಶಾಲಿ ಶ್ರೇಷ್ಠ ಆತ್ಮರಿಗೆ, ಪ್ರತಿಯೊಂದು ಶಕ್ತಿಗಳನ್ನು ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸುವ ಸರ್ವ ತೀವ್ರ ಪುರುಷಾರ್ಥಿ ಮಕ್ಕಳಿಗೆ, ಸದಾ ಸ್ವ-ಪರಿವರ್ತನೆಯಿಂದ ಸೇವೆಯಲ್ಲಿ ಮನಃಪ್ರಿಯ ಸಫಲತೆಯನ್ನು ಪಡೆಯುವಂತಹ ದಿಲ್ಖುಷ್ ಮಕ್ಕಳಿಗೆ, ಸದಾ ಹೃದಯರಾಮ ತಂದೆಯ ಮುಂದೆ ಸತ್ಯ ಹೃದಯದಿಂದ ಸ್ಪಷ್ಟವಾಗಿರುವ ಸಫಲತಾ-ಸ್ವರೂಪ ಶ್ರೇಷ್ಠ ಆತ್ಮರಿಗೆ, ಹೃದಯರಾಮ ಬಾಪ್ದಾದಾರವರ ಹೃದಯದಿಂದ ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ -
ತಮ್ಮನ್ನು ಸದಾ ತಂದೆಯ ಛತ್ರಛಾಯೆಯಲ್ಲಿ ಇರುವಂತಹ ವಿಶೇಷ ಆತ್ಮರೆಂದು ಅನುಭವ ಮಾಡುತ್ತೀರಾ? ಎಲ್ಲಿ ತಂದೆಯ ಛತ್ರಛಾಯೆಯು ಇರುತ್ತದೆಯೋ ಅಲ್ಲಿ ಸದಾ ಮಾಯೆಯಿಂದ ಸುರಕ್ಷಿತರು ಆಗಿರುತ್ತೀರಿ. ಛತ್ರಛಾಯೆಯಲ್ಲಿ ಮಾಯೆಯು ಬರಲು ಸಾಧ್ಯವಿಲ್ಲ. ಸ್ವತಹವಾಗಿಯೇ ಪರಿಶ್ರಮ ಪಡುವುದರಿಂದ ದೂರವಾಗಿ ಬಿಡುತ್ತೀರಿ. ಸದಾ ಮೋಜಿನಲ್ಲಿ ಇರುತ್ತೀರಿ ಏಕೆಂದರೆ ಯಾವಾಗ ಪರಿಶ್ರಮ ಆಗುತ್ತದೆಯೋ ಆಗ ಮೋಜಿನ ಅನುಭವ ಮಾಡಿಸುವುದಿಲ್ಲ. ಉದಾ:- ಮಕ್ಕಳ ವಿದ್ಯಾಭ್ಯಾಸದ ಸಮಯದಲ್ಲಿ ಪರಿಶ್ರಮ ಆಗುತ್ತದೆಯಲ್ಲವೆ, ಯಾವಾಗ ಪರೀಕ್ಷೆಯ ದಿನಗಳು ಬರುತ್ತವೆಯೋ, ಆಗ ಬಹಳ ಪರಿಶ್ರಮ ಪಡುತ್ತೀರಿ, ಮೋಜಿನಿಂದ ಆಟವಾಡುವುದಿಲ್ಲ. ಮತ್ತು ಯಾವಾಗ ಪರಿಶ್ರಮವು ಸಮಾಪ್ತಿಯಾಯಿತು, ಪರೀಕ್ಷೆಯು ಸಮಾಪ್ತಿ ಆಯಿತೆಂದರೆ ಮೋಜು ಮಾಡುವಿರಿ. ಅಂದಾಗ ಎಲ್ಲಿ ಪರಿಶ್ರಮ ಇದೆಯೋ ಅಲ್ಲಿ ಮೋಜಿರುವುದಿಲ್ಲ, ಎಲ್ಲಿ ಮೋಜಿರುತ್ತದೆಯೋ ಅಲ್ಲಿ ಪರಿಶ್ರಮವಿಲ್ಲ. ಛತ್ರಛಾಯೆಯಲ್ಲಿ ಇರುವವರು ಅರ್ಥಾತ್ ಸದಾ ಮೋಜಿನಲ್ಲಿ ಇರುವವರು. ಏಕೆಂದರೆ ಇಲ್ಲಿ ಶ್ರೇಷ್ಠ ವಿದ್ಯೆಯ ವಿದ್ಯಾಭ್ಯಾಸವನ್ನು ಮಾಡುತ್ತೀರಿ ಆದರೆ ಶ್ರೇಷ್ಠ ವಿದ್ಯೆ ಆಗಿದ್ದರೂ ನಿಶ್ಚಯವಿದೆ - ಅವಶ್ಯವಾಗಿ ನಾವು ವಿಜಯಿಗಳು ಆಗುತ್ತೇವೆ, ಉತ್ತೀರ್ಣರಾಗುತ್ತೇವೆ. ಹೀಗಿರುವ ಕಾರಣದಿಂದ ಮೋಜಿನಲ್ಲಿರುತ್ತೀರಿ. ಇದು ಕಲ್ಪ-ಕಲ್ಪದ ವಿದ್ಯೆಯಾಗಿದೆ, ಹೊಸ ಮಾತೇನಲ್ಲ. ಅಂದಾಗ ಸದಾ ಮೋಜಿನಲ್ಲಿರಿ ಮತ್ತು ಅನ್ಯರನ್ನೂ ಮೋಜಿನಲ್ಲಿರುವ ಸಂದೇಶವನ್ನು ಕೊಡುತ್ತಿರಿ, ಇದೇ ಸೇವೆಯನ್ನು ಮಾಡುತ್ತಿರಿ ಏಕೆಂದರೆ ಸೇವೆಯ ಫಲವನ್ನು ವರ್ತಮಾನ ಸಮಯದಲ್ಲಿಯೂ ಹಾಗೂ ಭವಿಷ್ಯದಲ್ಲಿಯೂ ಅನುಭವಿಸುತ್ತಾ ಇರುತ್ತೀರಿ. ಸೇವೆಯನ್ನು ಮಾಡಿದಾಗಲೇ ಫಲವು ಸಿಗುತ್ತದೆ.
ಬೀಳ್ಕೊಡುಗೆಯ ಸಮಯದಲ್ಲಿ - ಮುಖ್ಯ ಸಹೋದರ-ಸಹೋದರಿಯರ ಜೊತೆ :
ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ಸಮಾನರಾಗುವ ಶುಭ ಭಾವನೆಯಿಂದ ಹಾರಿಸಲು ಬಯಸುತ್ತಾರೆ. ನಿಮಿತ್ತರಾಗಿರುವ ಸೇವಾಧಾರಿಗಳು ತಂದೆಯ ಸಮಾನರಂತು ಆಗಲೇಬೇಕು, ಬಾಬಾರವರು ಹೇಗಾದರೂ ಮಾಡಲೇ ಬೇಕಾಗಿದೆ ಏಕೆಂದರೆ ಅಂತಿಂತಹವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದಿಲ್ಲ. ತಂದೆಗೂ ಸಹ ಗೌರವವಿದೆಯಲ್ಲವೆ. ತಂದೆಯು ಸಂಪನ್ನವಾಗಿದ್ದು, ಸಂಗಾತಿಯು ಕುಂಟ ಅಥವಾ ಕುರುಡನಾಗಿದ್ದರೆ ಶೋಭಿಸುವುದಿಲ್ಲ. ಕುರುಡ-ಕುಂಟರಂತು ದಿಬ್ಬಣದಲ್ಲಿರುತ್ತಾರೆ, ಸಂಗಾತಿಯಾಗಿ ಇರುವುದಿಲ್ಲ. ಆದ್ದರಿಂದ ಶಿವನ ದಿಬ್ಬಣದಲ್ಲಿ ಸದಾ ಕುರುಡ-ಕುಂಟ-ಕುರೂಪಿಯನ್ನು ತೋರಿಸಿದ್ದಾರೆ ಏಕೆಂದರೆ ಕೆಲವು ಬಲಹೀನ ಆತ್ಮರು ಧರ್ಮರಾಜ ಪುರಿಯ ಮಾರ್ಗದಲ್ಲಿ ನಡೆಯುತ್ತಾ ಯೋಗ್ಯರಾಗುವರು. ಒಳ್ಳೆಯದು.
ಓಂ ಶಾಂತಿ. ಗೀತೆಯ ಸಾಲನ್ನು ಕೇಳಿ ಮಧುರಾತಿ ಮಧುರ ಮಕ್ಕಳಿಗೆ ರೋಮಾಂಚನವಾಗಿ ಬಿಡಬೇಕು. ಭಲೆ ಇದು ಸಾಮಾನ್ಯ ಗೀತೆಯಾಗಿದೆ ಆದರೆ ಇದರ ಸಾರವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ಗೀತೆ, ಶಾಸ್ತ್ರ ಇತ್ಯಾದಿಗಳ ಅರ್ಥವನ್ನು ತಿಳಿಸುತ್ತಾರೆ. ಮಧುರಾತಿ ಮಧುರ ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ - ಕಲಿಯುಗದಲ್ಲಿ ಎಲ್ಲರ ಅದೃಷ್ಟವು ಮಲಗಿಕೊಂಡು ಬಿಟ್ಟಿದೆ. ಸತ್ಯಯುಗದಲ್ಲಿ ಎಲ್ಲರ ಅದೃಷ್ಟವು ಜಾಗೃತವಾಗಿರುತ್ತದೆ. ಮಲಗಿರುವ ಅದೃಷ್ಟವನ್ನು ಜಾಗೃತ ಮಾಡುವವರು ಮತ್ತು ಶ್ರೀಮತ ಕೊಡುವವರು ಅಥವಾ ಪುರುಷಾರ್ಥ ಮಾಡಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಅವರೇ ಕುಳಿತು ಮಕ್ಕಳ ಅದೃಷ್ಟವನ್ನು ಬೆಳಗಿಸುತ್ತಾರೆ. ಹೇಗೆ ಮಕ್ಕಳು ಜನ್ಮ ಪಡೆಯುತ್ತಿದ್ದಂತೆಯೇ ಅದೃಷ್ಟವು ಜಾಗೃತವಾಗುತ್ತದೆ. ಮಗುವಿನ ಜನ್ಮವಾಗುತ್ತಿದ್ದಂತೆಯೇ ಅವರಿಗೆ ನಮ್ಮ ವಾರಸುಧಾರನು ಜನ್ಮ ಪಡೆದನೆಂದು ಅರ್ಥವಾಗಿ ಬಿಡುತ್ತದೆ. ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ಮಕ್ಕಳಿಗೆ ತಿಳಿದಿದೆ - ಕಲ್ಪ-ಕಲ್ಪವೂ ನಮ್ಮ ಅದೃಷ್ಟವು ಬೆಳಗುತ್ತದೆ ಮತ್ತೆ ಮಲಗಿ ಬಿಡುತ್ತದೆ. ಪಾವನರಾದಾಗ ಅದೃಷ್ಟವು ಬೆಳಗುತ್ತದೆ. ಪಾವನ ಗೃಹಸ್ಥಾಶ್ರಮವೆಂದು ಹೇಳಲಾಗುತ್ತದೆ, ಆಶ್ರಮ ಶಬ್ಧವು ಪವಿತ್ರವಾಗಿರುತ್ತದೆ. ಪವಿತ್ರ ಗೃಹಸ್ಥಾಶ್ರಮ ಅದಕ್ಕೆ ವಿರುದ್ಧವಾಗಿದೆ - ಅಪವಿತ್ರ ಪತಿತ ಗೃಹಸ್ಥ ಧರ್ಮ. ಅದಕ್ಕೆ ಆಶ್ರಮವೆಂದು ಹೇಳುವುದಿಲ್ಲ. ಎಲ್ಲರದೂ ಗೃಹಸ್ಥ ಧರ್ಮವಾಗಿದೆ. ಪ್ರಾಣಿಗಳಲ್ಲಿಯೂ ಇದೆ ಏಕೆಂದರೆ ಎಲ್ಲವೂ ಮಕ್ಕಳಿಗೆ ಜನ್ಮ ಕೊಡುತ್ತದೆ. ಪ್ರಾಣಿಗಳೂ ಸಹ ಗೃಹಸ್ಥ ಧರ್ಮದಲ್ಲಿವೆ ಎಂದು ಹೇಳಲಾಗುತ್ತದೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಸ್ವರ್ಗದಲ್ಲಿ ಪವಿತ್ರ ಗೃಹಸ್ಥ ಆಶ್ರಮದಲ್ಲಿದ್ದೆವು, ದೇವಿ-ದೇವತೆಗಳಾಗಿದ್ದೆವು. ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರು.... ಎಂದು ಅವರ ಮಹಿಮೆಯನ್ನೂ ಹಾಡುತ್ತಾರೆ. ನೀವೂ ಸಹ ಹಾಡುತ್ತಿದ್ದಿರಿ. ಈಗ ನಿಮಗೆ ತಿಳಿದಿದೆ - ನಾವು ಪುನಃ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು..... ಎಂದು ಗಾಯನವಿದೆ. ಬ್ರಹ್ಮಾ-ವಿಷ್ಣು-ಶಂಕರನಿಗೂ ದೇವತೆಯೆಂದು ಹೇಳುತ್ತಾರೆ. ಬ್ರಹ್ಮ ದೇವತಾಯ ನಮಃ ಎಂದು ಹೇಳುತ್ತಾರೆ ಮತ್ತೆ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ಅದರ ಅರ್ಥವನ್ನೂ ನೀವು ತಿಳಿದುಕೊಂಡಿದ್ದೀರಿ, ಅವರಂತೂ ಕೇವಲ ಅಂಧಶ್ರದ್ಧೆಯಿಂದ ಹೇಳಿ ಬಿಡುತ್ತಾರೆ. ಶಂಕರ ದೇವತಾಯ ನಮಃ ಎಂದು ಹೇಳುತ್ತಾರೆ, ಶಿವನಿಗೆ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಶಿವ-ಶಂಕರನಲ್ಲಿ ವ್ಯತ್ಯಾಸವಾಯಿತಲ್ಲವೆ. ಶಂಕರನೂ ದೇವತೆಯಾದರು, ಶಿವನು ಪರಮಾತ್ಮನಾದರು ಅಂದಮೇಲೆ ಶಿವ ಮತ್ತು ಶಂಕರನನ್ನು ಒಂದೇ ಎಂದು ಹೇಳಲು ಸಾಧ್ಯವಿಲ್ಲ. ನಿಮಗೆ ತಿಳಿದಿದೆ - ನಾವು ಅವಶ್ಯವಾಗಿ ಕಲ್ಲು ಬುದ್ಧಿಯವರಾಗಿದ್ದೆವು, ಈಗ ಪಾರಸ ಬುದ್ಧಿಯವರಾಗುತ್ತಿದ್ದೇವೆ. ದೇವತೆಗಳಿಗಂತೂ ಕಲ್ಲು ಬುದ್ಧಿಯವರೆಂದು ಹೇಳುವುದಿಲ್ಲ ಮತ್ತೆ ಡ್ರಾಮಾನುಸಾರ ರಾವಣ ರಾಜ್ಯದಲ್ಲಿ ಏಣಿಯನ್ನು ಕೆಳಗಿಳಿಯಬೇಕಾಗಿದೆ. ಪಾರಸ ಬುದ್ಧಿಯವರಿಂದ ಕಲ್ಲು ಬುದ್ಧಿಯವರಾಗಬೇಕಾಗಿದೆ. ಎಲ್ಲರಿಗಿಂತ ಬುದ್ಧಿವಂತರಂತೂ ಒಬ್ಬರೇ ತಂದೆಯಾಗಿದ್ದಾರೆ. ಈಗ ನಿಮ್ಮ ಬುದ್ಧಿಯಲ್ಲಿ ಆ ತಾಕತ್ತು ಉಳಿದಿಲ್ಲ. ತಂದೆಯು ನಿಮ್ಮನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವು ಪಾರಸ ಬುದ್ಧಿಯವರಾಗುವುದಕ್ಕಾಗಿಯೇ ಬರುತ್ತೀರಿ. ಪಾರಸನಾಥನ ಮಂದಿರವೂ ಇದೆ, ಅಲ್ಲಿ ಮೇಳವಾಗುತ್ತದೆ ಆದರೆ ಪಾರಸನಾಥನು ಯಾರು? ಎಂಬುದು ಅವರಿಗೆ ತಿಳಿದಿಲ್ಲ. ವಾಸ್ತವದಲ್ಲಿ ಪಾರಸವನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಅವರು ಬುದ್ಧಿವಂತರಿಗೂ ಬುದ್ಧಿವಂತನಾಗಿದ್ದಾರೆ. ಈ ಜ್ಞಾನವು ನೀವು ಮಕ್ಕಳಿಗಾಗಿ ಔಷಧಿಯಾಗಿದೆ, ಇದರಿಂದ ಬುದ್ಧಿಯು ಎಷ್ಟೊಂದು ಪರಿವರ್ತನೆಯಾಗುತ್ತದೆ. ಈ ಪ್ರಪಂಚವು ಮುಳ್ಳುಗಳ ಅರಣ್ಯವಾಗಿದೆ. ಒಬ್ಬರು ಇನ್ನೊಬ್ಬರಿಗೆ ಎಷ್ಟೊಂದು ದುಃಖ ಕೊಡುತ್ತಾರೆ. ಈಗ ಇರುವುದೇ ತಮೋಪ್ರಧಾನ, ರೌರವ ನರಕ. ಗರುಡ ಪುರಾಣದಲ್ಲಂತೂ ಬಹಳ ರೋಚಕ ಮಾತುಗಳನ್ನು ಬರೆದಿದ್ದಾರೆ.
ಈಗ ನೀವು ಮಕ್ಕಳ ಬುದ್ಧಿಗೆ ಔಷಧಿ ಸಿಗುತ್ತಿದೆ. ಬೇಹದ್ದಿನ ತಂದೆಯು ಔಷಧಿಯನ್ನು ಕೊಡುತ್ತಿದ್ದಾರೆ. ಇದು ವಿದ್ಯೆಯಾಗಿದೆ, ಇದಕ್ಕೆ ಜ್ಞಾನಾಮೃತವೆಂದೂ ಹೇಳಿ ಬಿಡುತ್ತಾರೆ. ಯಾವುದೇ ಜಲ ಇತ್ಯಾದಿಗಳಿಲ್ಲ. ಇತ್ತೀಚೆಗೆ ಎಲ್ಲಾ ಪದಾರ್ಥಗಳಿಗೆ ಅಮೃತವೆಂದು ಹೇಳಿ ಬಿಡುತ್ತಾರೆ. ಗಂಗಾ ಜಲಕ್ಕೂ ಅಮೃತವೆಂದು ಹೇಳಿ ಬಿಡುತ್ತಾರೆ. ದೇವತೆಗಳ ಪಾದಗಳನ್ನು ತೊಳೆದು ನೀರನ್ನಿಡುತ್ತಾರೆ, ಅದಕ್ಕೆ ಅಮೃತವೆಂದು ಹೇಳುತ್ತಾರೆ. ಇದೂ ಸಹ ಬುದ್ಧಿಯಿಂದ ತಿಳಿದುಕೊಳ್ಳುವ ಮಾತಲ್ಲವೆ. ಈ ಅಂಚಲಿಯು ಅಮೃತವೇ ಅಥವಾ ಪತಿತ-ಪಾವನ ಗಂಗಾಜಲವು ಅಮೃತವೇ? ಯಾರು ಅಂಚಲಿಯನ್ನು ಕೊಡುವರೋ ಅವರು ಇದು ಪತಿತರನ್ನು ಪಾವನ ಮಾಡುವಂತದ್ದಾಗಿದೆ ಎಂದು ಹೇಳುವುದಿಲ್ಲ. ಗಂಗಾಜಲಕ್ಕೆ ಪತಿತ-ಪಾವನ ಎಂದು ಹೇಳುತ್ತಾರೆ. ಮನುಷ್ಯರು ಸಾಯುವಾಗ ಗಂಗಾಜಲವು ಬಾಯಲ್ಲಿರಲಿ ಎಂದು ಹೇಳುತ್ತಾರೆ. ಅರ್ಜುನನು ಬಾಣ ಹೊಡೆದನು, ಮತ್ತೆ ಅಮೃತ ಜಲವನ್ನು ಕುಡಿಸಿದನೆಂದು ಹೇಳುತ್ತಾರೆ. ನೀವು ಮಕ್ಕಳು ಯಾವುದೇ ಬಾಣ ಇತ್ಯಾದಿಯನ್ನು ಹೊಡೆಯುವುದಿಲ್ಲ. ಒಂದು ಹಳ್ಳಿಯಿದೆ, ಅಲ್ಲಿ ಬಾಣಗಳಿಂದಲೇ ಹೊಡೆದಾಡುತ್ತಾರೆ. ಅಲ್ಲಿನ ರಾಜನಿಗೆ ಈಶ್ವರನ ಅವತಾರವೆಂದು ಹೇಳುತ್ತಾರೆ ಆದರೆ ಯಾರೂ ಈಶ್ವರನ ಅವತಾರನಾಗಲು ಸಾಧ್ಯವಿಲ್ಲ. ವಾಸ್ತವದಲ್ಲಿ ಸತ್ಯ-ಸತ್ಯವಾದ ಸದ್ಗುರುವು ಒಬ್ಬರೇ ಆಗಿದ್ದಾರೆ, ಅವರು ಸರ್ವರ ಸದ್ಗತಿದಾತನಾಗಿದ್ದಾರೆ. ಎಲ್ಲಾ ಆತ್ಮರನ್ನು ಜೊತೆ ಕರೆದುಕೊಂಡು ಹೋಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಬ್ರಹ್ಮ್ದಲ್ಲಿ ಲೀನವಾಗುವ ಮಾತೂ ಇಲ್ಲ. ಈ ನಾಟಕವು ಮಾಡಲ್ಪಟ್ಟಿದೆ. ಸೃಷ್ಟಿಚಕ್ರವು ಅನಾದಿಯಾಗಿ ಸುತ್ತುತ್ತಲೇ ಇರುತ್ತದೆ. ವಿಶ್ವದ ಇತಿಹಾಸ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಮನುಷ್ಯರು ಅರ್ಥಾತ್ ಆತ್ಮರು ತನ್ನ ರಚಯಿತ ತಂದೆಯನ್ನೇ ಅರಿತುಕೊಂಡಿಲ್ಲ, ಅವರನ್ನು ಓ ಗಾಡ್ಫಾದರ್ ಎಂದು ನೆನಪು ಮಾಡುತ್ತಾರೆ. ಹದ್ದಿನ ತಂದೆಗೆ ಎಂದೂ ಗಾಡ್ಫಾದರ್ ಎಂದು ಹೇಳುವುದಿಲ್ಲ. ಗಾಡ್ಫಾದರ್ ಎಂಬ ಶಬ್ಧವನ್ನು ಬಹಳ ಗೌರವದಿಂದ ಹೇಳುತ್ತಾರೆ, ಅವರಿಗೇ ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಹಾಡುತ್ತಾರೆ. ಒಂದು ಕಡೆ ಅವರು ದುಃಖಹರ್ತ-ಸುಖಕರ್ತನೆಂದು ಹೇಳುತ್ತಾರೆ ಮತ್ತು ಯಾವಾಗ ದುಃಖವಾಗುವುದೋ ಅಥವಾ ಮಗು ಮೊದಲಾದವರು ಶರೀರ ಬಿಡುತ್ತಾರೆಂದರೆ ಈಶ್ವರನೇ ದುಃಖ-ಸುಖವನ್ನು ಕೊಡುತ್ತಾನೆ, ಈಶ್ವರನು ನಮ್ಮ ಮಗುವನ್ನು ತೆಗೆದುಕೊಂಡು ಬಿಟ್ಟರು ಎಂದು, ಇದು ಏನು ಮಾಡಿದಂತಾಯಿತು? ಒಂದು ಕಡೆ ಮಹಿಮೆ ಮಾಡುತ್ತಾರೆ, ಮತ್ತೆ ಸ್ವಲ್ಪ ಏನಾದರೂ ಆಯಿತೆಂದರೆ ಈಶ್ವರನಿಗೆ ನಿಂದನೆ ಮಾಡಿದಂತಾಯಿತು. ಈಶ್ವರನೇ ಮಕ್ಕಳನ್ನು ಕೊಟ್ಟರು ಎಂದು ಹೇಳುತ್ತೀರಿ, ಒಂದುವೇಳೆ ಅವರನ್ನು ಮರಳಿ ತೆಗೆದುಕೊಂಡರೆ ಮತ್ತೇಕೆ ಅಳುತ್ತೀರಿ? ಈಶ್ವರನ ಬಳಿ ಹೋದರಲ್ಲವೆ. ಸತ್ಯಯುಗದಲ್ಲಿ ಎಂದೂ ಯಾರೂ ಅಳುವುದಿಲ್ಲ. ತಂದೆಯು ತಿಳಿಸುತ್ತಾರೆ, ಅಳುವ ಮಾತೇ ಇಲ್ಲ. ಆತ್ಮವು ತನ್ನ ಲೆಕ್ಕಾಚಾರದನುಸಾರ ಹೋಗಿ ಇನ್ನೊಂದು ಪಾತ್ರವನ್ನಭಿನಯಿಸಬೇಕಾಗಿದೆ. ಜ್ಞಾನವಿಲ್ಲದಿರುವ ಕಾರಣ ಮನುಷ್ಯರು ಎಷ್ಟೊಂದು ಅಳುತ್ತಾರೆ, ಹೇಗೆ ಹುಚ್ಛರಾಗಿ ಬಿಡುತ್ತಾರೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ – ಅಮ್ಮ ಸತ್ತರೂ ಹಲ್ವ ತಿನ್ನಿ..... ಅಂದರೆ ನಷ್ಟಮೋಹಿಯಾಗಿರಬೇಕು. ನಮ್ಮವರು ಒಬ್ಬರೇ ಬೇಹದ್ದಿನ ತಂದೆಯಾಗಿದ್ದಾರೆ, ಅನ್ಯ ಯಾರೂ ಇಲ್ಲ. ಮಕ್ಕಳ ಸ್ಥಿತಿಯು ಈ ರೀತಿ ಇರಬೇಕು – ಮೋಹಜೀತ ರಾಜನ ಕಥೆಯನ್ನೂ ಕೇಳಿದ್ದೀರಲ್ಲವೆ. ಇವೆಲ್ಲವೂ ದಂತ ಕಥೆಗಳಾಗಿವೆ. ಸತ್ಯಯುಗದಲ್ಲಿ ಎಂದೂ ದುಃಖದ ಮಾತಿರುವುದಿಲ್ಲ, ಎಂದೂ ಅಕಾಲ ಮೃತ್ಯುವೂ ಆಗುವುದಿಲ್ಲ. ಮಕ್ಕಳಿಗೆ ತಿಳಿದಿದೆ - ನಾವು ಕಾಲದ ಮೇಲೆ ಜಯ ಗಳಿಸುತ್ತೇವೆ, ತಂದೆಗೆ ಮಹಾಕಾಲನೆಂದು ಹೇಳುತ್ತಾರೆ. ಕಾಲರ ಕಾಲನು ನಿಮಗೆ ಕಾಲದ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ, ಕಾಲವೆಂದೂ ಕಬಳಿಸುವುದಿಲ್ಲ. ಕಾಲವು ಆತ್ಮನನ್ನಂತೂ ಕಬಳಿಸಲು ಸಾಧ್ಯವಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಅದಕ್ಕೆ ಕಾಲವು ತಿಂದು ಬಿಟ್ಟಿತೆಂದು ಹೇಳುತ್ತಾರೆ. ಬಾಕಿ ಕಾಲವೆಂದರೆ ಯಾವುದೇ ಒಂದು ವಸ್ತುವಲ್ಲ. ಮನುಷ್ಯರು ಮಹಿಮೆ ಹಾಡುತ್ತಿರುತ್ತಾರೆ, ಏನನ್ನೂ ತಿಳಿದುಕೊಂಡಿಲ್ಲ. ಅಚ್ಯುತಂ, ಕೇಶವಂ....... ಎಂದು ಹಾಡುತ್ತಾರೆ, ಅರ್ಥವೇನೂ ಗೊತ್ತಿಲ್ಲ. ಮನುಷ್ಯರು ತಿಳುವಳಿಕೆಯಿಂದ ಸಂಪೂರ್ಣ ಹೊರಗಿದ್ದಾರೆ. ತಂದೆಯು ತಿಳಿಸುತ್ತಾರೆ - ಈ ಪಂಚ ವಿಕಾರಗಳು ನಮ್ಮ ಬುದ್ಧಿಯನ್ನು ಎಷ್ಟು ಕೆಡಿಸಿ ಬಿಡುತ್ತದೆ. ಎಷ್ಟೊಂದು ಮನುಷ್ಯರು ಬದರೀನಾಥ ಮೊದಲಾದ ಕಡೆ ಹೋಗುತ್ತಾರೆ. ಇಂದು 2 ಲಕ್ಷ ಮಂದಿ ಹೋದರು, 4 ಲಕ್ಷ ಮಂದಿ ಹೋದರು...... ದೊಡ್ದ-ದೊಡ್ಡ ಅಧಿಕಾರಿಗಳೂ ಸಹ ತೀರ್ಥ ಯಾತ್ರೆ ಮಾಡಲು ಹೋಗುತ್ತಾರೆ. ನೀವಂತೂ ಎಲ್ಲಿಗೂ ಹೋಗುವುದಿಲ್ಲ. ಆದ್ದರಿಂದ ಈ ಬಿ.ಕೆ.ಗಳು ನಾಸ್ತಿಕರಾಗಿದ್ದಾರೆ ಏಕೆಂದರೆ ಭಕ್ತಿ ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ನೀವು ಹೇಳುತ್ತೀರಿ - ಯಾರು ಭಗವಂತನನ್ನು ಅರಿತುಕೊಂಡಿಲ್ಲವೋ ಅವರು ನಾಸ್ತಿಕರಾಗಿದ್ದಾರೆ. ತಂದೆಯನ್ನು ಯಾರೂ ಅರಿತುಕೊಂಡಿಲ್ಲ, ಇದಕ್ಕೆ ಅನಾಥರ ಪ್ರಪಂಚವೆಂದು ಹೇಳಲಾಗುತ್ತದೆ. ಪರಸ್ಪರ ಹೊಡೆದಾಡುತ್ತಾ-ಜಗಳವಾಡುತ್ತಿರುತ್ತಾರೆ. ಇಡೀ ಪ್ರಪಂಚವೇ ತಂದೆಯ ಮನೆಯಲ್ಲವೆ. ತಂದೆಯು ಇಡೀ ಪ್ರಪಂಚದ ಮಕ್ಕಳನ್ನು ಪತಿತರಿಂದ ಪಾವನ ಮಾಡಲು ಬರುತ್ತಾರೆ. ಅವಶ್ಯವಾಗಿ ಅರ್ಧಕಲ್ಪ ಪಾವನ ಪ್ರಪಂಚವಿತ್ತಲ್ಲವೆ. ರಾಮ ರಾಜ, ರಾಮ ಪ್ರಜೆ, ರಾಮ ಸಾಹುಕಾರ..... ಎಂದು ಹಾಡುತ್ತಾರೆ. ಒಂದನೆಯದು ಅಲ್ಲಿ ಅಧರ್ಮದ ಮಾತಿರಲು ಹೇಗೆ ಸಾಧ್ಯ! ಅಲ್ಲಿ ಹಸು-ಹುಲಿ ಒಟ್ಟಿಗೆ ನೀರು ಕುಡಿಯುತ್ತದೆ ಎಂದು ಹೇಳುತ್ತಾರೆ ಅಂದಾಗ ಅಲ್ಲಿ ರಾವಣ ಮೊದಲಾದವರು ಎಲ್ಲಿಂದ ಬರುವರು? ತಿಳಿದುಕೊಂಡಿಲ್ಲ. ಹೊರಗಿನವರಂತೂ ಈ ಮಾತುಗಳನ್ನು ಕೇಳಿ ನಗುತ್ತಾರೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಜ್ಞಾನ ಸಾಗರ ತಂದೆಯು ಬಂದು ಜ್ಞಾನವನ್ನು ಕೊಡುತ್ತಾರೆ. ಇದು ಪತಿತ ಪ್ರಪಂಚವಲ್ಲವೆ. ಈಗ ಪ್ರೇರಣೆಯಿಂದ ಪತಿತರನ್ನು ಪಾವನ ಮಾಡುವರೇ? ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಭಾರತದಲ್ಲಿಯೇ ಬಂದಿದ್ದರು, ಈಗಲೂ ಸಹ ಹೇಳುತ್ತಾರೆ – ಜ್ಞಾನ ಸಾಗರನಾದ ನಾನು ಬಂದಿದ್ದೇನೆ. ನೀವು ಮಕ್ಕಳಿಗೂ ತಿಳಿದಿದೆ, ಶಿವ ತಂದೆಯಲ್ಲಿಯೇ ಸಂಪೂರ್ಣ ಜ್ಞಾನವಿದೆ, ಆ ತಂದೆಯೇ ಕುಳಿತು ಮಕ್ಕಳಿಗೆ ಇವೆಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಶಾಸ್ತ್ರಗಳಲ್ಲಿ ಎಲ್ಲವೂ ದಂತ ಕಥೆಗಳಿವೆ. ವ್ಯಾಸ ಭಗವಂತನು ಶಾಸ್ತ್ರಗಳನ್ನು ರಚಿಸಿದನೆಂದು ಹೆಸರನ್ನಿಟ್ಟು ಬಿಟ್ಟಿದ್ದಾರೆ. ಅವರಂತೂ ಭಕ್ತಿಮಾರ್ಗದ ವ್ಯಾಸನಾಗಿದ್ದರು, ಇವರು ವ್ಯಾಸ ದೇವನಾಗಿದ್ದಾರೆ. ಅವರ ಮಕ್ಕಳು ನೀವೂ ಸುಖ ದೇವರಾಗಿದ್ದೀರಿ. ನೀವೀಗ ಸುಖದ ದೇವತೆಗಳಾಗುತ್ತೀರಿ. ವ್ಯಾಸ ಅರ್ಥಾತ್ ಶಿವಾಚಾರ್ಯರಿಂದ ಸುಖದ ಆಸ್ತಿಯನ್ನು ಪಡೆಯುತ್ತಿದ್ದೀರಿ, ನೀವು ವ್ಯಾಸನ ಮಕ್ಕಳಾಗಿದ್ದೀರಿ ಆದರೆ ಮನುಷ್ಯರು ತಬ್ಬಿಬ್ಬಾಗದಿರಲಿ ಎಂದು ನಿಮಗೆ ಶಿವನ ಮಕ್ಕಳೆಂದು ಹೇಳಲಾಗುತ್ತದೆ. ಅವರ ಮೂಲ ಹೆಸರು ಶಿವ ಎಂದಾಗಿದೆ ಅಂದಾಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವುದೇ ದೇಹಧಾರಿಯನ್ನು ನೋಡಬೇಡಿ ಯಾವಾಗ ಶಿವ ತಂದೆಯು ಸಮ್ಮುಖದಲ್ಲಿ ಕುಳಿತಿದ್ದಾರೆ. ಆತ್ಮವನ್ನು ತಿಳಿದುಕೊಳ್ಳಲಾಗುತ್ತದೆ, ಅದೇರೀತಿ ಪರಮಾತ್ಮನನ್ನೂ ಸಹ ತಿಳಿದುಕೊಳ್ಳಲಾಗುತ್ತದೆ. ಅವರು ಪರಮಪಿತ ಪರಮಾತ್ಮ ಶಿವನಾಗಿದ್ದಾರೆ, ಅವರೇ ಬಂದು ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸುತ್ತಾರೆ. ಹೇಳುತ್ತಾರೆ - ನಾನು ನೀವಾತ್ಮರ ತಂದೆಯಾಗಿದ್ದೇನೆ, ಆತ್ಮವನ್ನು ಕಣ್ಣಿನಿಂದ ನೋಡಲು ಸಾಧ್ಯವಾಗುವುದಿಲ್ಲ, ಅನುಭವ ಮಾಡಲಾಗುತ್ತದೆ. ತಂದೆಯು ಕೇಳುತ್ತಾರೆ - ನೀವೀಗ ತಮ್ಮ ಆತ್ಮಾನುಭೂತಿ ಮಾಡಿಕೊಂಡಿರಾ? ಇಷ್ಟು ಚಿಕ್ಕದಾದ ಆತ್ಮನಲ್ಲಿ ಅವಿನಾಶಿ ಪಾತ್ರವು ಅಡಕವಾಗಿದೆ. ಇದೊಂದು ರೆಕಾರ್ಡ್ ಆಗಿದೆ.
ನಿಮಗೆ ತಿಳಿದಿದೆ - ನಾನಾತ್ಮನೇ ಶರೀರ ಧಾರಣೆ ಮಾಡುತ್ತೇನೆ. ಮೊದಲು ನೀವು ದೇಹಾಭಿಮಾನಿಯಾಗಿದ್ದಿರಿ, ಈಗ ದೇಹೀ-ಅಭಿಮಾನಿಯಾಗಿದ್ದೀರಿ. ನಿಮಗೆ ಗೊತ್ತಿದೆ, ನಾನಾತ್ಮನು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇನೆ. ಅದು ಎಂದೂ ಮುಕ್ತಾಯವಾಗುವುದಿಲ್ಲ. ಕೆಲವರು ಕೇಳುತ್ತಾರೆ - ಈ ನಾಟಕವು ಯಾವಾಗಿನಿಂದ ಆರಂಭವಾಯಿತೆಂದು. ಆದರೆ ಇದು ಅನಾದಿಯಾಗಿದೆ, ಎಂದೂ ವಿನಾಶವಾಗುವುದಿಲ್ಲ. ಇದಕ್ಕೆ ಮಾಡಿ-ಮಾಡಲ್ಪಟ್ಟ ಅವಿನಾಶಿ ವಿಶ್ವ ನಾಟಕವೆಂದು ಹೇಳಲಾಗುತ್ತದೆ. ಅಂದಾಗ ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಹೇಗೆ ಅವಿದ್ಯಾವಂತ ಮಕ್ಕಳಿಗೆ ವಿದ್ಯೆಯನ್ನು ಓದಿಸಲಾಗುತ್ತದೆ, ಆತ್ಮವೇ ಶರೀರದಲ್ಲಿರುತ್ತದೆ. ಇದು ಕಲ್ಲು ಬುದ್ಧಿಯವರಿಗಾಗಿ ಭೋಜನವಾಗಿದೆ. ಬುದ್ಧಿಗೆ ತಿಳುವಳಿಕೆ ಸಿಗುತ್ತದೆ. ನೀವು ಮಕ್ಕಳಿಗಾಗಿ ತಂದೆಯು ಚಿತ್ರಗಳನ್ನು ಮಾಡಿಸಿದ್ದಾರೆ. ಬಹಳ ಸಹಜವಾಗಿದೆ. ಇವರು ತ್ರಿಮೂರ್ತಿ ಬ್ರಹ್ಮಾ, ವಿಷ್ಣು, ಶಂಕರರಾಗಿದ್ದಾರೆ. ಬ್ರಹ್ಮನಿಗೂ ತ್ರಿಮೂರ್ತಿಯೆಂದು ಏಕೆ ಹೇಳುತ್ತಾರೆ? ದೇವ-ದೇವ ಮಹಾದೇವ. ಒಬ್ಬರು ಇನ್ನೊಬ್ಬರ ಮೇಲೆ ಇಡುತ್ತಾರೆ, ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಬ್ರಹ್ಮನು ದೇವತೆಯಾಗಲು ಹೇಗೆ ಸಾಧ್ಯ! ಪ್ರಜಾಪಿತ ಬ್ರಹ್ಮನಂತೂ ಇಲ್ಲಿಯೇ ಇರಬೇಕು, ಈ ಮಾತುಗಳು ಯಾವುದೇ ಶಾಸ್ತ್ರಗಳಲಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಈ (ಬ್ರಹ್ಮಾ) ಶರೀರದಲ್ಲಿ ಪ್ರವೇಶ ಮಾಡಿ ಇವರ ಮೂಲಕ ನಾನು ತಿಳಿಸುತ್ತೇನೆ. ಇವರನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತೇನೆ. ಇವರ ಬಹಳ ಜನ್ಮಗಳ ಅಂತಿಮದಲ್ಲಿ ಬರುತ್ತೇನೆ. ಇವರೂ ಸಹ ಪಂಚ ವಿಕಾರಗಳ ಸನ್ಯಾಸ ಮಾಡುತ್ತಾರೆ. ಸನ್ಯಾಸ ಮಾಡುವವರಿಗೆ ಯೋಗಿ, ಋಷಿಗಳೆಂದು ಹೇಳಲಾಗುತ್ತದೆ. ನೀವೀಗ ರಾಜ ಋಷಿಗಳಾಗಿದ್ದೀರಿ. ಪಂಚ ವಿಕಾರಗಳ ಸನ್ಯಾಸವನ್ನು ಮಾಡಿದ್ದೀರಿ ಆದ್ದರಿಂದ ಹೆಸರು ಬದಲಾಗುತ್ತದೆ. ನೀವಂತೂ ರಾಜಯೋಗಿಗಳಾಗಿದ್ದೀರಿ, ಪ್ರತಿಜ್ಞೆ ಮಾಡುತ್ತೀರಿ. ಆ ಸನ್ಯಾಸಿಗಳಾದರೂ ಮನೆ-ಮಠವನ್ನು ಬಿಟ್ಟು ಹೊರಟು ಹೋಗುತ್ತಾರೆ. ಇಲ್ಲಂತೂ ಸ್ತ್ರೀ-ಪುರುಷರು ಒಟ್ಟಿಗೆ ಇರುತ್ತೀರಿ, ನಾವೆಂದೂ ವಿಕಾರದಲ್ಲಿ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತೀರಿ. ಮೂಲ ಮಾತೇ ವಿಕಾರದ್ದಾಗಿದೆ.
ನೀವು ಮಕ್ಕಳಿಗೆ ತಿಳಿದಿದೆ, ಶಿವ ತಂದೆಯು ರಚಯಿತನಾಗಿದ್ದಾರೆ. ಅವರು ಹೊಸ ರಚನೆಯನ್ನು ರಚಿಸುತ್ತಾರೆ. ಅವರು ಬೀಜರೂಪ, ಸತ್-ಚಿತ್-ಆನಂದ ಸಾಗರ, ಜ್ಞಾನ ಸಾಗರನಾಗಿದ್ದಾರೆ. ಸ್ಥಾಪನೆ, ವಿನಾಶ, ಪಾಲನೆ ಹೇಗೆ ಮಾಡುತ್ತಾರೆ, ಇದು ತಂದೆಗೇ ಗೊತ್ತಿದೆ ಮನುಷ್ಯರಿಗೆ ಗೊತ್ತಿಲ್ಲ. ನೀವು ಬಿ.ಕೆ.ಗಳಂತೂ ಪ್ರಪಂಚದ ವಿನಾಶ ಮಾಡುತ್ತೀರಿ ಎಂದು ತಟ್ಟನೆ ಹೇಳಿ ಬಿಡುತ್ತಾರೆ. ಒಳ್ಳೆಯದು. ನಿಮ್ಮ ಬಾಯಲ್ಲಿ ಗುಲಾಬ್ ಜಾಮೂನ್, ಇವರಂತೂ ವಿನಾಶಕ್ಕಾಗಿ ನಿಮಿತ್ತರಾಗಿದ್ದಾರೆ, ಶಾಸ್ತ್ರಗಳನ್ನಾಗಲಿ, ಭಕ್ತಿಯನ್ನಾಗಲಿ, ಗುರುಗಳನ್ನಾಗಲಿ ಒಪ್ಪುವುದಿಲ್ಲ. ಕೇವಲ ತಮ್ಮ ದಾದಾರವರನ್ನು ಒಪ್ಪುತ್ತಾರೆಂದು ಹೇಳುತ್ತಾರೆ. ಆದರೆ ಸ್ವಯಂ ತಂದೆಯು ತಿಳಿಸುತ್ತಾರೆ - ಇವರದೂ ಪತಿತ ಶರೀರವಾಗಿದೆ, ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ. ಪತಿತ ಪ್ರಪಂಚದಲ್ಲಿ ಯಾರೂ ಪಾವನರಿರುವುದಿಲ್ಲ. ಮನುಷ್ಯರು ಹೇಳಿಕೆ-ಕೇಳಿಕೆ ಮಾತುಗಳನ್ನು ಕೇಳಿಸಿಕೊಂಡು ಅದನ್ನೇ ಹೇಳಿ ಬಿಡುತ್ತಾರೆ. ಇಂತಹ ಹೇಳಿಕೆ-ಕೇಳಿಕೆಯ ಮಾತುಗಳಿಂದಲೇ ಭಾರತವು ದುರ್ಗತಿಯನ್ನು ಹೊಂದಿದೆ. ಆದ್ದರಿಂದ ತಂದೆಯು ಬಂದು ಸತ್ಯವನ್ನು ತಿಳಿಸಿ ಎಲ್ಲರ ಸದ್ಗತಿ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಂಡು ಸುಖದ ದೇವತೆಗಳಾಗಬೇಕಾಗಿದೆ. ಎಲ್ಲರಿಗೆ ಸುಖ ಕೊಡಬೇಕಾಗಿದೆ. ರಾಜ ಋಷಿಗಳಾಗಲು ಸರ್ವ ವಿಕಾರಗಳ ಸನ್ಯಾಸ ಮಾಡಬೇಕಾಗಿದೆ.
2. ವಿದ್ಯೆಯೇ ಸತ್ಯವಾದ ಟಾನಿಕ್ ಆಗಿದೆ, ಸದ್ಗತಿಗಾಗಿ ಹೇಳಿಕೆ-ಕೇಳಿಕೆ ಮಾತುಗಳನ್ನು ಬಿಟ್ಟು ಶ್ರೀಮತದಂತೆ ನಡೆಯಬೇಕಾಗಿದೆ. ಒಬ್ಬ ತಂದೆಯಿಂದಲೇ ಕೇಳಬೇಕಾಗಿದೆ. ಮೋಹಜೀತರಾಗಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಹೊಸಬರೂ ಕೇಳಿದಿರಿ, ಹಳಬರೂ ಕೇಳಿದಿರಿ, ಕುಮಾರರೂ ಕೇಳಿದಿರಿ - ಇದು ಪಾಠಶಾಲೆಯಾಗಿದೆ. ಪಾಠಶಾಲೆಯಲ್ಲಿ ಒಂದಲ್ಲ ಒಂದು ಅದೃಷ್ಟವನ್ನು ರೂಪಿಸಲಾಗುತ್ತದೆ. ಅಲ್ಲಂತೂ ಅನೇಕ ಪ್ರಕಾರದ ಅದೃಷ್ಟಗಳಿರುತ್ತವೆ, ಕೆಲವರು ಸರ್ಜನ್ ಆಗುವ, ಕೆಲವರು ವಕೀಲರಾಗುವ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾರೆ. ಅದೃಷ್ಟಕ್ಕೆ ಗುರಿ-ಧ್ಯೇಯವೆಂದು ಹೇಳಲಾಗುತ್ತದೆ. ಅದೃಷ್ಟ ಮಾಡಿಕೊಳ್ಳದೆ ಏನು ಓದುವರು? ಈಗ ಇಲ್ಲಿ ಮಕ್ಕಳು ತಿಳಿದುಕೊಂಡಿದ್ದೀರಿ, ನಾವೂ ಸಹ ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೇವೆ. ಹೊಸ ಪ್ರಪಂಚಕ್ಕಾಗಿ ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ಬಂದಿದ್ದೇವೆ. ಇದು ಹೊಸ ಪ್ರಪಂಚಕ್ಕಾಗಿ ರಾಜಯೋಗವಾಗಿದೆ, ಅದು ಹಳೆಯ ಪ್ರಪಂಚಕ್ಕಾಗಿ ವಿದ್ಯೆಯಾಗಿದೆ. ಅವರು ಹಳೆಯ ಪ್ರಪಂಚದ ಬ್ಯಾರಿಸ್ಟರ್, ಇಂಜಿಯನಿಯರ್, ಸರ್ಜನ್ ಇತ್ಯಾದಿ ಆಗುತ್ತಾರೆ. ಅವರು ಆಗುತ್ತಾ-ಆಗುತ್ತಾ ಈಗ ಹಳೆಯ ಪ್ರಪಂಚದಲ್ಲಿ ಇನ್ನು ಸ್ವಲ್ಪವೇ ಸಮಯ ಉಳಿದಿದೆ. ಅಂದಾಗ ಅವರು ಸಮಾಪ್ತಿಯಾಗಿ ಬಿಡುತ್ತಾರೆ. ಆ ಅದೃಷ್ಟವು ಈ ಮೃತ್ಯುಲೋಕಕ್ಕಾಗಿ ಅಂದರೆ ಈ ಜನ್ಮಕ್ಕಾಗಿ ಇದೆ. ನಿಮ್ಮದು ಹೊಸ ಪ್ರಪಂಚಕ್ಕಾಗಿ ಈ ವಿದ್ಯೆಯಾಗಿದೆ. ಹೊಸ ಪ್ರಪಂಚಕ್ಕಾಗಿ ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೀರಿ. ಹೊಸ ಪ್ರಪಂಚದಲ್ಲಿ ನಿಮಗೆ ರಾಜ್ಯಭಾಗ್ಯವು ಸಿಗುವುದು. ಯಾರು ಓದಿಸುತ್ತಾರೆ? ಬೇಹದ್ದಿನ ತಂದೆ, ಅವರಿಂದಲೇ ಆಸ್ತಿಯನ್ನು ಪಡೆಯಬೇಕಾಗಿದೆ. ಹೇಗೆ ವೈದ್ಯರಿಂದ ವೈದ್ಯಕೀಯ ಆಸ್ತಿಯನ್ನು ಪಡೆಯುತ್ತಾರೆ. ಅದಂತೂ ಈ ಜನ್ಮದ ಆಸ್ತಿಯಾಗಿದೆ. ಒಂದು ಆಸ್ತಿಯು ತಂದೆಯಿಂದ ಸಿಗುತ್ತದೆ, ಇನ್ನೊಂದು ಆಸ್ತಿಯು ತನ್ನ ವಿದ್ಯಾಭ್ಯಾಸದಿಂದ ಸಿಗುತ್ತದೆ ನಂತರ ವೃದ್ಧರಾದಾಗ ಗುರುವಿನ ಬಳಿ ಹೋಗುತ್ತಾರೆ. ಏನನ್ನು ಬಯಸುತ್ತಾರೆ? ನಮಗೆ ಶಾಂತಿಧಾಮಕ್ಕೆ ಹೋಗುವ ಶಿಕ್ಷಣ ಕೊಡಿ, ನಮಗೆ ಸದ್ಗತಿ ಕೊಡಿ, ಇಲ್ಲಿಂದ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಈಗ ತಂದೆಯಿಂದ ಆಸ್ತಿಯು ಸಿಗುತ್ತದೆ. ಶಿಕ್ಷಕರಿಂದಲೂ ಈ ಜನ್ಮಕ್ಕಾಗಿ ಆಸ್ತಿಯು ಸಿಗುತ್ತದೆ. ಆದರೆ ಗುರುಗಳಿಂದ ಏನೂ ಸಿಗುವುದಿಲ್ಲ. ಶಿಕ್ಷಕರಿಂದ ಓದಿ ಯಾವುದಾದರೊಂದು ಆಸ್ತಿಯನ್ನು ಪಡೆಯುತ್ತಾರೆ. ಶಿಕ್ಷಕರಾಗಬಹುದು ಅಥವಾ ಹೊಲಿಗೆ ಶಿಕ್ಷಕರಾಗಬಹುದು ಏಕೆಂದರೆ ಜೀವನೋಪಾಯ ಬೇಕಲ್ಲವೆ. ತಂದೆಯ ಆಸ್ತಿಯಿದ್ದರೂ ಸಹ ನಾವು ನಮ್ಮ ಸಂಪಾದನೆ ಮಾಡಬೇಕೆಂದು ಓದುತ್ತಾರೆ. ಗುರುಗಳಿಂದ ಏನೂ ಸಂಪಾದನೆ ಆಗುವುದಿಲ್ಲ. ಹಾ! ಕೆಲಕೆಲವರು ಗೀತೆಯನ್ನು ಚೆನ್ನಾಗಿ ಓದಿ ಮತ್ತೆ ಗೀತೆಯ ಮೇಲೆ ಭಾಷಣ ಮಾಡಿ ಓದುತ್ತಾರೆ. ಇದೆಲ್ಲವೂ ಅಲ್ಪಕಾಲದ ಸುಖಕ್ಕಾಗಿ ಇದೆ. ಈಗಂತೂ ಈ ಮೃತ್ಯುಲೋಕದಲ್ಲಿ ಇನ್ನು ಸ್ವಲ್ಪವೇ ಸಮಯವಿದೆ, ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ನಾವು ಹೊಸ ಪ್ರಪಂಚದ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆಂದು ನಿಮಗೆ ತಿಳಿದಿದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದು. ತಂದೆಯ ಹಾಗೂ ತನ್ನ ಸಂಪತ್ತೆಲ್ಲವೂ ಸಮಾಪ್ತಿಯಾಗಿ ಬಿಡುವುದು, ಕೈಗಳು ಖಾಲಿಯಾಗಿ ಬಿಡುತ್ತದೆ. ಈಗಂತೂ ಹೊಸ ಪ್ರಪಂಚಕ್ಕಾಗಿ ಸಂಪಾದನೆ ಬೇಕಾಗಿದೆ. ಹಳೆಯ ಪ್ರಪಂಚದ ಮನುಷ್ಯರಂತೂ ಈ ಸಂಪಾದನೆ ಮಾಡಿಸಲು ಸಾಧ್ಯವಿಲ್ಲ. ಹೊಸ ಪ್ರಪಂಚಕ್ಕಾಗಿ ಸಂಪಾದನೆ ಮಾಡಿಸುವವರು ಶಿವ ತಂದೆಯಾಗಿದ್ದಾರೆ. ಇಲ್ಲಿ ನೀವು ಹೊಸ ಪ್ರಪಂಚಕ್ಕಾಗಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ, ಆ ತಂದೆಯೇ ನಿಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ ಮತ್ತೆ ಅವರು ಸಂಗಮದಲ್ಲಿಯೇ ಬರುತ್ತಾರೆ. ಭವಿಷ್ಯಕ್ಕಾಗಿ ಸಂಪಾದನೆ ಮಾಡಿಕೊಳ್ಳುವುದನ್ನು ಕಲಿಸುತ್ತಾರೆ. ಈಗ ಈ ಹಳೆಯ ಪ್ರಪಂಚದಲ್ಲಿ ಇನ್ನು ಕೆಲವೇ ದಿನಗಳಿವೆ. ಇದನ್ನು ಪ್ರಪಂಚದ ಮನುಷ್ಯರು ತಿಳಿದುಕೊಂಡಿಲ್ಲ. ಹೊಸ ಪ್ರಪಂಚವು ಮತ್ತೆ ಯಾವಾಗ ಬರುವುದು, ಇವರು ಸುಳ್ಳು ಹೇಳುತ್ತಾರೆಂದು ತಿಳಿಯುತ್ತಾರೆ. ಹೀಗೆ ತಿಳಿದುಕೊಳ್ಳುವವರು ಅನೇಕರಿದ್ದಾರೆ. ಹೊಸ ಪ್ರಪಂಚದ ಸ್ಥಾಪನೆಯಾಗುವುದೆಂದು ತಂದೆಯು ಹೇಳಿದರೆ ಇದು ಸುಳ್ಳು ಎಂದು ಮಗನು ಹೇಳುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಹೊಸ ಪ್ರಪಂಚಕ್ಕಾಗಿ ಇವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ತಂದೆಯು ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ ಬರುತ್ತಾರೆ. ಯಾರು ಅದೃಷ್ಟವನ್ನು ರೂಪಿಸಿಕೊಳ್ಳುವುದಿಲ್ಲವೋ ಅವರು ಏನನ್ನೂ ತಿಳಿದುಕೊಂಡಿಲ್ಲವೆಂದರ್ಥ. ಒಂದೇ ಮನೆಯಲ್ಲಿ ಸ್ತ್ರೀ ಓದುತ್ತಾಳೆ, ಪುರುಷನು ಓದುವುದಿಲ್ಲ. ಮಕ್ಕಳು ಓದುತ್ತಾರೆ, ತಂದೆ-ತಾಯಿ ಓದುವುದಿಲ್ಲ - ಈ ರೀತಿ ಆಗುತ್ತಿರುತ್ತದೆ. ಯಜ್ಞದ ಆದಿಯಲ್ಲಿ ಪರಿವಾರಕ್ಕೆ ಪರಿವಾರವೇ ಬಂದು ಬಿಟ್ಟರು. ಆದರೆ ಮಾಯೆಯ ಬಿರುಗಾಳಿಗಳು ಬಂದಾಗ ಆಶ್ಚರ್ಯವೆನಿಸುವಂತೆ ತಂದೆಯನ್ನು ಬಿಟ್ಟು ಹೊರಟು ಹೋದರು. ಗಾಯನವಿದೆ - ಆಶ್ಚರ್ಯವೆನಿಸುವಂತೆ ಕೇಳುವರು, ತಂದೆಯ ಮಕ್ಕಳಾಗುವರು, ವಿದ್ಯೆಯನ್ನೂ ಓದುವರು ಆದರೂ ಸಹ.... ಇದು ಸೃಷ್ಟಿಯ ಲೀಲೆಯಾಗಿದೆ. ಸ್ವಯಂ ತಂದೆಯೇ ಹೇಳುತ್ತಾರೆ - ಅಯ್ಯೋ ಡ್ರಾಮಾ, ಅಯ್ಯೋ ಮಾಯೆ.... ಇದು ಡ್ರಾಮಾದ ಮಾತಾಗಿದೆಯಲ್ಲವೆ. ಸ್ತ್ರೀ-ಪುರುಷ ಒಬ್ಬರು ಇನ್ನೊಬ್ಬರಿಗೆ ವಿಚ್ಛೇದನ ಕೊಡುತ್ತಾರೆ, ತಂದೆಗೆ ಮಕ್ಕಳು ವಿಚ್ಛೇದನ ಕೊಡುತ್ತಾರೆ. ಇಲ್ಲಂತೂ ಅದು ಇಲ್ಲ. ಇಲ್ಲಿ ವಿಚ್ಛೇದನ ಕೊಡಲು ಸಾಧ್ಯವಿಲ್ಲ. ತಂದೆಯಂತೂ ಮಕ್ಕಳಿಗೆ ಸತ್ಯ ಸಂಪಾದನೆ ಮಾಡಿಸುವುದಕ್ಕಾಗಿಯೇ ಬಂದಿದ್ದಾರೆ ಅಂದಮೇಲೆ ತಂದೆಯು ಮಕ್ಕಳನ್ನು ಗುಣಿಗೆ ತಳ್ಳಿ ಬಿಡುವರೇ? ತಂದೆಯಂತೂ ಪತಿತ-ಪಾವನ, ದಯಾ ಹೃದಯಿಯಾಗಿದ್ದಾರೆ. ತಂದೆಯು ಬಂದು ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ ಮತ್ತು ಮಾರ್ಗದರ್ಶಕನಾಗಿ ಜೊತೆ ಕರೆದುಕೊಂಡು ಹೋಗುತ್ತಾರೆ. ನಾನು ನಿಮ್ಮನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುವಂತಹ ಮತ್ತ್ಯಾವ ಗುರುಗಳೂ ಇಲ್ಲ. ಇಂತಹ ಗುರುಗಳನ್ನು ಎಂದಾದರೂ ನೋಡಿದ್ದೀರಾ? ಎಂದಾದರೂ ಕೇಳಿದ್ದೀರಾ? ನೀವು ಗುರುಗಳೊಂದಿಗೆ ಕೇಳಿರಿ - ನಿಮಗೆ ಇಷ್ಟೊಂದು ಮಂದಿ ಅನುಯಾಯಿಗಳಿದ್ದಾರೆ, ನೀವು ಶರೀರವನ್ನು ಬಿಟ್ಟು ಹೋದಾಗ ತಮ್ಮ ಅನುಯಾಯಿಗಳನ್ನೂ ಸಹ ಜೊತೆ ಕರೆದುಕೊಂಡು ಹೋಗುತ್ತೀರಾ? ನಾನು ಅನುಯಾಯಿಗಳನ್ನು ಜೊತೆ ಕರೆದುಕೊಂಡು ಹೋಗುತ್ತೇನೆಂದು ಎಂದೂ ಯಾರೂ ಹೇಳುವುದೇ ಇಲ್ಲ, ಇದು ಸಾಧ್ಯವೇ ಇಲ್ಲ. ನಾನು ನಿಮ್ಮೆಲ್ಲರನ್ನೂ ನಿರ್ವಾಣಧಾಮ ಅಥವಾ ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬ ಮಾತನ್ನು ಯಾರೂ ಹೇಳಲು ಸಾಧ್ಯವಿಲ್ಲ. ನಮ್ಮನ್ನು ತಾವು ಜೊತೆ ಕರೆದುಕೊಂಡು ಹೋಗುತ್ತೀರಾ ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಕ್ಕೂ ಸಾಧ್ಯವಿಲ್ಲ. ಶಾಸ್ತ್ರಗಳಲ್ಲಿದೆ, ಭಗವಾನುವಾಚ - ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ, ಎಲ್ಲರೂ ಸೊಳ್ಳೆಗಳೋಪಾದಿಯಲ್ಲಿ ಹೋಗುತ್ತಾರೆ. ಸತ್ಯಯುಗದಲ್ಲಿ ಕೆಲವರೇ ಮನುಷ್ಯರಿರುತ್ತಾರೆ. ಕಲಿಯುಗದಲ್ಲಿ ಅನೇಕ ಮನುಷ್ಯರಿದ್ದಾರೆ. ಶರೀರವನ್ನು ಬಿಟ್ಟು ಆತ್ಮಗಳು ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೊರಟು ಹೋಗುವರು. ಇಷ್ಟೊಂದು ಜನಸಂಖ್ಯೆಯಿರಲು ಸಾಧ್ಯವಿಲ್ಲ ಅಂದಮೇಲೆ ಇವರೆಲ್ಲರೂ ಖಂಡಿತ ಹೋಗಬೇಕಾಗಿದೆ. ನೀವು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ - ನಾವೀಗ ಮನೆಗೆ ಹೋಗಬೇಕಾಗಿದೆ, ಈ ಶರೀರವನ್ನು ಬಿಡಬೇಕಾಗಿದೆ. ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ. ಕೇವಲ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ಹಳೆಯ ಶರೀರವನ್ನಂತೂ ಬಿಡಲೇಬೇಕಾಗಿದೆ. ಈ ಪ್ರಪಂಚವೂ ಹಳೆಯದಾಗಿದೆ, ಹೇಗೆ ಹಳೆಯ ಮನೆಯಲ್ಲಿ ಕುಳಿತುಕೊಂಡು ಹೊಸ ಮನೆಯ ಸಮ್ಮುಖದಲ್ಲಿ ತಯಾರಾಗುತ್ತಿದ್ದರೆ ಇದು ನಮಗಾಗಿ ತಯಾರಾಗುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಇದರಲ್ಲಿ ಇದನ್ನು ಮಾಡಿಸಿ, ಇದನ್ನು ಮಾಡಿ ಎಂದು ಬುದ್ಧಿಯು ಹೊಸ ಮನೆಯ ಕಡೆ ಹೋಗುತ್ತದೆ. ಮಮತೆಯೆಲ್ಲವೂ ಈ ಹಳೆಯ ಪ್ರಪಂಚದಿಂದ ಕಳೆದು ಹೊಸದರೊಂದಿಗೆ ಜೋಡಣೆಯಾಗುತ್ತದೆ. ಅದಂತೂ ಹದ್ದಿನ ಮಾತಾಯಿತು, ಇದು ಬೇಹದ್ದಿನ ಪ್ರಪಂಚದ ಮಾತಾಗಿದೆ, ಹಳೆಯ ಪ್ರಪಂಚದಿಂದ ಮಮತ್ವವನ್ನು ಕಳೆಯಬೇಕಾಗಿದೆ ಮತ್ತು ಹೊಸ ಪ್ರಪಂಚದೊಂದಿಗೆ ಜೋಡಿಸಬೇಕಾಗಿದೆ. ಈ ಹಳೆಯ ಪ್ರಪಂಚವಂತೂ ಸಮಾಪ್ತಿಯಾಗಲಿದೆ ಎಂದು ಗೊತ್ತಿದೆ. ಹೊಸ ಪ್ರಪಂಚವು ಸ್ವರ್ಗವಾಗಿದೆ ಅದರಲ್ಲಿ ನಾವು ರಾಜ್ಯ ಪದವಿಯನ್ನು ಪಡೆಯುತ್ತೇವೆ. ಎಷ್ಟು ಯೋಗದಲ್ಲಿರುತ್ತೀರೋ, ಜ್ಞಾನದ ಧಾರಣೆ ಮಾಡುತ್ತೀರೋ, ಅನ್ಯರಿಗೆ ತಿಳಿಸುತ್ತೀರೊ ಅಷ್ಟು ಖುಷಿಯ ನಶೆಯೇರುವುದು. ಬಹಳ ದೊಡ್ಡ ಪರೀಕ್ಷೆಯಾಗಿದೆ. ನಾವು ಸ್ವರ್ಗದ 21 ಜನ್ಮಗಳಿಗಾಗಿ ಆಸ್ತಿಯನ್ನು ಪಡೆಯುತ್ತಿದ್ದೇವೆ. ಸಾಹುಕಾರರಾಗುವುದು ಒಳ್ಳೆಯದಲ್ಲವೆ. ಧೀರ್ಘಾಯಸ್ಸು ಸಿಕ್ಕಿದರೆ ಒಳ್ಳೆಯದೇ ಅಲ್ಲವೆ. ಸೃಷ್ಟಿಚಕ್ರವನ್ನು ನೆನಪು ಮಾಡುತ್ತೀರಿ, ಯಾರೆಷ್ಟು ತಮ್ಮ ಸಮಾನರನ್ನಾಗಿ ಮಾಡುವರೋ ಅಷ್ಟು ಲಾಭವಿದೆ. ರಾಜರಾಗಬೇಕೆಂದರೆ ಪ್ರಜೆಗಳನ್ನೂ ತಯಾರು ಮಾಡಬೇಕಾಗಿದೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ. ಅವರೆಲ್ಲರೂ ಪ್ರಜೆಗಳಾಗುತ್ತಾ ಹೋಗುವರು ಏಕೆಂದರೆ ಈ ಅವಿನಾಶಿ ಜ್ಞಾನದ ವಿನಾಶವಂತು ಆಗುವುದಿಲ್ಲ. ನಾವು ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕೆಂದು ಬುದ್ಧಿಯಲ್ಲಿ ಬಂದು ಬಿಡುವುದು. ಹೆಚ್ಚು ಪುರುಷಾರ್ಥ ಮಾಡಿದರೆ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಇಲ್ಲದಿದ್ದರೆ ಪ್ರಜೆಗಳಲ್ಲಿಯೂ ಕಡಿಮೆ ಪದವಿಯಾಗುವುದು. ನಂಬರ್ವಾರಂತೂ ಇರುತ್ತಾರಲ್ಲವೆ. ರಾಮ ರಾಜ್ಯದ ಸ್ಥಾಪನೆಯಾಗುತ್ತಿದೆ, ರಾವಣ ರಾಜ್ಯದ ವಿನಾಶವಾಗಿ ಬಿಡುವುದು. ಸತ್ಯಯುಗದಲ್ಲಿ ದೇವತೆಗಳೇ ಇರುತ್ತಾರೆ. ತಂದೆಯು ತಿಳಿಸಿದ್ದಾರೆ - ನೆನಪಿನ ಯಾತ್ರೆಯಿಂದ ನೀವು ಸತೋಪ್ರಧಾನ ಪ್ರಪಂಚದ ಮಾಲೀಕರಾಗುತ್ತೀರಿ. ರಾಜಾ, ಪ್ರಜೆಯೆಲ್ಲರೂ ಮಾಲೀಕರಾಗಿರುತ್ತಾರೆ. ನಮ್ಮ ಭಾರತವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ ಎಂದು ಪ್ರಜೆಗಳು ಹೇಳುವರು. ಅವಶ್ಯವಾಗಿ ಭಾರತವು ಶ್ರೇಷ್ಠವಾಗಿತ್ತು, ಈಗ ಆ ರೀತಿಯಿದೆಯೇ? ಮೊದಲು ಅವಶ್ಯವಾಗಿ ಶ್ರೇಷ್ಠವಾಗಿತ್ತು, ಈಗಂತೂ ಬಹಳ ಬಡ ಭಾರತವಾಗಿ ಬಿಟ್ಟಿದೆ. ಪ್ರಾಚೀನ ಭಾರತವು ಎಲ್ಲದಕ್ಕಿಂತ ಸಾಹುಕಾರನಾಗಿತ್ತು, ನಿಮಗೆ ತಿಳಿದಿದೆ - ಅವಶ್ಯವಾಗಿ ಭಾರತವಾಸಿಗಳು ಎಲ್ಲರಿಗಿಂತ ಶ್ರೇಷ್ಠ ದೇವಿ-ದೇವತಾ ಕುಲದವರಾಗಿದ್ದಿರಿ, ಮತ್ತ್ಯಾರಿಗೂ ದೇವತೆಗಳೆಂದು ಹೇಳಲಾಗುವುದಿಲ್ಲ. ಈಗ ನೀವು ಮಕ್ಕಳು ಇದನ್ನು ಓದುತ್ತೀರಿ ಮತ್ತು ಇದನ್ನು ಅನ್ಯರಿಗೂ ತಿಳಿಸಬೇಕಾಗಿದೆ. ಮನುಷ್ಯನಿಗೆ ತಿಳಿಸಬೇಕಲ್ಲವೆ. ನಿಮ್ಮ ಬಳಿ ಚಿತ್ರಗಳೂ ಇವೆ, ನೀವು ಸಿದ್ಧ ಮಾಡಿ ತಿಳಿಸಿ - ಇವರು ಈ ಪದವಿಯನ್ನು ಹೇಗೆ ಪಡೆದರು? ತಿಥಿ, ತಾರೀಖು ಎಲ್ಲದರ ಸಹಿತವಾಗಿ ನೀವು ಸಿದ್ಧ ಮಾಡಬಹುದು. ಈಗ ಶಿವ ತಂದೆಯಿಂದ ಪುನಃ ಈ ಪದವಿಯನ್ನು ಪಡೆಯುತ್ತಿದ್ದೀರಿ. ಅವರ ಚಿತ್ರವೂ ಇದೆ, ಶಿವನು ಪರಮಪಿತ ಪರಮಾತ್ಮನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಬ್ರಹ್ಮಾರವರ ಮೂಲಕ ನಿಮಗೆ ಯೋಗ ಬಲದಿಂದ 21 ಜನ್ಮಗಳ ಆಸ್ತಿಯು ಸಿಗುತ್ತದೆ. ನೀವು ಸೂರ್ಯವಂಶಿ ದೇವಿ-ದೇವತೆಗಳು ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ಶಿವ ತಂದೆಯು ದಾದಾ ಬ್ರಹ್ಮಾರವರ ಮೂಲಕ ಈ ಆಸ್ತಿಯನ್ನು ಕೊಡುತ್ತಿದ್ದಾರೆ. ಮೊದಲು ಇವರ ಆತ್ಮವು ಕೇಳಿಸಿಕೊಳ್ಳುತ್ತದೆ, ಆತ್ಮವೇ ಧಾರಣೆ ಮಾಡುತ್ತದೆ, ಮೂಲ ಮಾತೇ ಇದಾಗಿದೆ. ಶಿವನ ಚಿತ್ರವನ್ನು ತೋರಿಸುತ್ತಾರೆ, ಈ ಚಿತ್ರವು ಪರಮಪಿತ ಪರಮಾತ್ಮ ಶಿವನದಾಗಿದೆ. ಬ್ರಹ್ಮಾ, ವಿಷ್ಣು, ಶಂಕರರು ಸೂಕ್ಷ್ಮವತನದ ದೇವತೆಗಳಾಗಿದ್ದಾರೆ. ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಇಲ್ಲಿಯೇ ಬೇಕಲ್ಲವೆ. ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರು ಅನೇಕರಿದ್ದಾರೆ. ಎಲ್ಲಿಯವರೆಗೆ ಬ್ರಹ್ಮನ ಮಕ್ಕಳಾಗುವುದಿಲ್ಲವೋ ಅಲ್ಲಿಯವರೆಗೆ ಬ್ರಾಹ್ಮಣರಾಗುವುದಿಲ್ಲ. ಅಂದಮೇಲೆ ಶಿವ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವರು? ಕುಖವಂಶಾವಳಿಯಂತೂ ಆಗಲು ಸಾಧ್ಯವಿಲ್ಲ. ಮುಖವಂಶಾವಳಿಯೆಂದು ಗಾಯನವೂ ಇದೆ. ನಾವು ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಆಗಿದ್ದೇವೆಂದು ನೀವು ಹೇಳುತ್ತೀರಿ. ಆ ಗುರುಗಳಿಗೆ ಅನುಯಾಯಿಗಳಿರುತ್ತಾರೆ. ಇಲ್ಲಿ ನೀವು ಒಬ್ಬರಿಗೇ ತಂದೆ, ಶಿಕ್ಷಕ, ಸದ್ಗುರುವೆಂದು ಹೇಳುತ್ತೀರಿ. ನೀವು ಇವರಿಗೂ ಸಹ ಹೇಳುವುದಿಲ್ಲ. ನಿರಾಕಾರ ಶಿವ ತಂದೆಯಾಗಿದ್ದಾರೆ. ಜ್ಞಾನ ಸಾಗರನಾಗಿದ್ದಾರೆ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಶಿಕ್ಷಕನೂ ಸಹ ಆ ನಿರಾಕಾರನಾಗಿದ್ದಾರೆ. ಸಾಕಾರದ ಮೂಲಕ ಜ್ಞಾನವನ್ನು ತಿಳಿಸುತ್ತಾರೆ. ಆತ್ಮವೇ ಮಾತನಾಡುತ್ತದೆ, ನನ್ನ ಶರೀರಕ್ಕೆ ತೊಂದರೆ ಕೊಡಬೇಡಿ ಎಂದು ಆತ್ಮವೇ ಹೇಳುತ್ತದೆ. ಆತ್ಮವು ದುಃಖಿಯಾದಾಗ ತಿಳುವಳಿಕೆ ಕೊಡಲಾಗುತ್ತದೆ ಆಗ ವಿನಾಶವು ಸಮ್ಮುಖದಲ್ಲಿ ನಿಂತಿರುತ್ತದೆ. ಪಾರಲೌಕಿಕ ತಂದೆಯು ಅಂತ್ಯದಲ್ಲಿ ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗಲು ಬರುತ್ತಾರೆ. ಬಾಕಿ ಏನೆಲ್ಲವೂ ಇದೆಯೋ ಅದೆಲ್ಲವೂ ವಿನಾಶವಾಗಲಿದೆ, ಇದಕ್ಕೆ ಮೃತ್ಯುಲೋಕವೆಂದು ಹೇಳಲಾಗುತ್ತದೆ. ಸ್ವರ್ಗವಂತೂ ಈ ಪೃಥ್ವಿಯ ಮೇಲೆಯೇ ಇರುತ್ತದೆ. ದಿಲ್ವಾಡಾ ಮಂದಿರವು ಮಾಡಲ್ಪಟ್ಟಿದೆ, ಅದರಲ್ಲಿ ಕೆಳಗೆ ತಪಸ್ಸು ಮಾಡುತ್ತಿದ್ದಾರೆ, ಮೇಲೆ ಸ್ವರ್ಗವಿದೆ. ಇಲ್ಲವೆಂದರೆ ಇನ್ನೆಲ್ಲಿ ತೋರಿಸುವುದು! ಮೇಲೆ ದೇವತೆಗಳ ಚಿತ್ರವನ್ನು ತೋರಿಸುತ್ತಾರೆ ಅಂದರೆ ಸ್ವರ್ಗವು ಮೇಲೆರುತ್ತದೆ ಎಂದಲ್ಲ. ಅವರು ಇಲ್ಲಿಯೇ ಇರುವರಲ್ಲವೆ. ತಿಳಿಸುವ ಬಹಳ ಯುಕ್ತಿ ಬೇಕು. ಮಂದಿರಗಳಲ್ಲಿ ಹೋಗಿ ತಿಳಿಸಿ - ಇದು ಶಿವ ತಂದೆಯ ನೆನಪಾರ್ಥವಾಗಿದೆ. ಆ ಶಿವ ತಂದೆಯೇ ನಮಗೆ ಓದಿಸುತ್ತಿದ್ದಾರೆ. ಶಿವನು ವಾಸ್ತವದಲ್ಲಿ ಬಿಂದುವಾಗಿದ್ದಾರೆ ಆದರೆ ಬಿಂದುವಿಗೆ ಪೂಜೆ ಮಾಡುವುದು ಹೇಗೆ, ಹೂ-ಹಣ್ಣುಗಳನ್ನು ಅರ್ಪಿಸುವುದು ಹೇಗೆ? ಆದ್ದರಿಂದ ದೊಡ್ಡ ರೂಪವನ್ನಾಗಿ ಮಾಡಿ ಬಿಟ್ಟಿದ್ದಾರೆ. ಆದರೆ ಶಿವನು ಇಷ್ಟು ದೊಡ್ಡ ಗಾತ್ರದಲ್ಲಿಲ್ಲ. ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತಿರುವ ನಕ್ಷತ್ರವೆಂದು ಗಾಯನವಿದೆ. ಅವರು ಇರುವುದೇ ಅತಿ ಸೂಕ್ಷ್ಮ ಬಿಂದುವಾಗಿದ್ದಾರೆ. ಆತ್ಮವು ದೊಡ್ಡ ವಸ್ತುವಾಗಿದ್ದರೆ ವಿಜ್ಞಾನಿ ಮೊದಲಾದವರು ಕೂಡಲೇ ಅದನ್ನು ಹಿಡಿದುಕೊಂಡು ಬಿಡುತ್ತಿದ್ದರು. ತಂದೆಯು ಅಷ್ಟು ಕೋಟಿ ಸೂರ್ಯ ತೇಜೋಮಯನೂ ಆಗಿಲ್ಲ. ಕೆಲವರು ಭಕ್ತರೂ ಸಹ ಇಲ್ಲಿಗೆ ಬರುತ್ತಾರೆ, ನಮಗೆ ಕೇವಲ ಈ ಚಹರೆಯಷ್ಟೆ ಕಾಣುತ್ತಾರೆ, ಆಗ ತಂದೆಯು ತಿಳಿಸುತ್ತಾರೆ - ಇವರಿಗೆ ಪರಮಪಿತ ಪರಮಾತ್ಮನು ಪೂರ್ಣ ಪರಿಚಯ ಸಿಕ್ಕಿಲ್ಲ, ಇನ್ನೂ ಇವರ ಅದೃಷ್ಟವೇ ತೆರೆದಿಲ್ಲ. ಎಲ್ಲಿಯವರೆಗೆ ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವಾತ್ಮರು ಬಿಂದು ಸಮಾನರಾಗಿದ್ದೇವೆ, ಶಿವ ತಂದೆಯೂ ಬಿಂದುವಾಗಿದ್ದಾರೆ, ಅವರನ್ನು ನೆನಪು ಮಾಡಬೇಕೆಂಬುದು ಅರ್ಥವಾಗುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಯಾವಾಗ ನೆನಪು ಮಾಡುವರೋ ಆಗ ವಿಕರ್ಮ ವಿನಾಶವಾಗುವುದು. ಇಲ್ಲವೆಂದರೆ ಇದಷ್ಟೇ ಕಂಡು ಬರುತ್ತದೆ, ಹೀಗೆ ಕಾಣುತ್ತದೆ, ಹಾಗೆ ಕಾಣುತ್ತದೆ...... ಅದಕ್ಕೆ ಮಾಯೆಯ ವಿಘ್ನವೆಂದು ಹೇಳಲಾಗುತ್ತದೆ. ಈಗಂತೂ ತಂದೆಯು ಸಿಕ್ಕಿದ್ದಾರೆ ಎಂಬ ಖುಷಿಯಲ್ಲಿದ್ದೀರಿ. ತಂದೆಯು ತಿಳಿಸುತ್ತಾರೆ - ಕೃಷ್ಣನ ಸಾಕ್ಷಾತ್ಕಾರ ಮಾಡಿ ಬಹಳ ಖುಷಿಯಲ್ಲಿ ನರ್ತನ ಮಾಡುತ್ತಾರೆ ಅದರಿಂದ ಯಾವುದೇ ಸದ್ಗತಿಯಾಗುವುದಿಲ್ಲ. ಈ ಸಾಕ್ಷಾತ್ಕಾರವಂತೂ ಬಹಳ ಸಹಜವಾಗಿ ಆಗಿ ಬಿಡುತ್ತದೆ. ಒಂದುವೇಳೆ ಚೆನ್ನಾಗಿ ಓದಲಿಲ್ಲವೆಂದರೆ ಪ್ರಜೆಗಳಲ್ಲಿ ಹೊರಟು ಹೋಗುವರು. ಸಾಕ್ಷಾತ್ಕಾರದ ಲಾಭವು ಸಿಗಬೇಕಲ್ಲವೆ. ಭಕ್ತಿಮಾರ್ಗದಲ್ಲಿ ಬಹಳ ಪರಿಶ್ರಮ ಪಟ್ಟಾಗ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಸ್ವಲ್ಪ ಪರಿಶ್ರಮ ಪಟ್ಟರೂ ಸಾಕ್ಷಾತ್ಕಾರವಾಗುತ್ತದೆ ಆದರೆ ಸಾಕ್ಷಾತ್ಕಾರದಿಂದ ಲಾಭವೇನೂ ಇಲ್ಲ. ಕೃಷ್ಣ ಪುರಿಯಲ್ಲಿ ಸಾಧಾರಣ ಪ್ರಜೆಯಾಗಿ ಜನ್ಮ ಪಡೆಯುತ್ತಾರೆ. ಈಗ ನೀವು ಮಕ್ಕಳೂ ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮಗೆ ಈ ಜ್ಞಾನವನ್ನು ತಿಳಿಸುತ್ತಿದ್ದಾರೆ. ಖಂಡಿತ ಪವಿತ್ರರಾಗಬೇಕೆಂಬುದು ತಂದೆಯ ಆದೇಶವಾಗಿದೆ. ಆದರೆ ಕೆಲವರು ಪವಿತ್ರರಾಗಿರುವುದಿಲ್ಲ. ಕೆಲವೊಮ್ಮೆ ಪತಿತರೂ ಸಹ ಮುಚ್ಚಿಟ್ಟುಕೊಂಡು ಇಲ್ಲಿಗೆ ಬಂದು ಬಿಡುತ್ತಾರೆ. ಅಂತಹವರು ತಮ್ಮದೇ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ, ತನಗೇ ಮೋಸ ಮಾಡಿಕೊಳ್ಳುತ್ತಾರೆ. ತಂದೆಗೆ ಮೋಸ ಮಾಡುವ ಮಾತಿಲ್ಲ. ತಂದೆಯೊಂದಿಗೆ ಮೋಸ ಮಾಡಿ ಯಾವುದಾದರೂ ಹಣ ತೆಗೆದುಕೊಳ್ಳಬೇಕೆ? ಶಿವ ತಂದೆಯ ಶ್ರೀಮತದಂತೆ ನಿಯಮಾನುಸಾರವಾಗಿ ನಡೆಯಲಿಲ್ಲವೆಂದರೆ ಅವರ ಗತಿಯೇನಾಗುವುದು? ಅಂತಹವರ ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ. ಓದದಿದ್ದರೆ ಇನ್ನೂ ಅನ್ಯರಿಗೆ ದುಃಖ ಕೊಡುತ್ತಿರುತ್ತಾರೆ ಅಂದಾಗ ಮೊದಲನೆಯದಾಗಿ ಬಹಳ ಶಿಕ್ಷೆಗಳನ್ನನುಭವಿಸಬೇಕಾಗುವುದು, ಇನ್ನೊಂದು ಪದವಿಯೂ ಭ್ರಷ್ಟವಾಗುವುದು. ಆದ್ದರಿಂದ ಯಾವುದೇ ಕಾಯಿದೆಗೆ ವಿರುದ್ಧವಾದ ಕೆಲಸವನ್ನು ಮಾಡಬಾರದು. ನಿಮ್ಮ ಚಲನೆ ಸರಿಯಿಲ್ಲವೆಂದು ತಂದೆಯಂತೂ ತಿಳಿಸುತ್ತಾರಲ್ಲವೆ. ತಂದೆಯು ಸಂಪಾದನೆ ಮಾಡುವ ಮಾರ್ಗವನ್ನಂತೂ ತಿಳಿಸುತ್ತಾರೆ ಆದರೆ ಯಾರಾದರೂ ಮಾಡಲಿ, ಮಾಡದೇ ಇರಲಿ ಅದು ಅವರ ಅದೃಷ್ಟ. ಶಿಕ್ಷೆಗಳನ್ನನುಭವಿಸಿ ಶಾಂತಿಧಾಮಕ್ಕೆ ಹೋಗಲೇಬೇಕಾಗಿದೆ. ಪದವಿಯೂ ಭ್ರಷ್ಟವಾಗುವುದು, ಏನೂ ಸಿಗುವುದಿಲ್ಲ. ಅನೇಕರು ಬರುತ್ತಾರೆ ಆದರೆ ಇಲ್ಲಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಮಾತಾಗಿದೆ. ಬಾಬಾ, ನಾವಂತೂ ಸ್ವರ್ಗದ ಸೂರ್ಯವಂಶಿ ರಾಜ್ಯ ಪದವಿಯನ್ನು ಪಡೆಯುತ್ತೇವೆಂದು ಮಕ್ಕಳು ಹೇಳುತ್ತಾರೆ. ಇದು ರಾಜಯೋಗವಲ್ಲವೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರಲ್ಲವೆ. ಉತ್ತೀರ್ಣರಾಗುವವರಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಯಾರು ವಿದ್ಯಾರ್ಥಿ ವೇತನ ಪಡೆದಿದ್ದಾರೆಯೋ ಅವರದೇ ಈ ಮಾಲೆ ಮಾಡಲ್ಪಟ್ಟಿದೆ. ಯಾರು ಎಷ್ಟೆಷ್ಟು ತೇರ್ಗಡೆಯಾಗುವರೋ ಆ ರೀತಿಯಲ್ಲಿ ವಿದ್ಯಾರ್ಥಿ ವೇತನ ಸಿಗುವುದು. ಈ ಮಾಲೆಯು ಮಾಡಲ್ಪಟ್ಟಿದೆ. ವಿದ್ಯಾರ್ಥಿ ವೇತನವನ್ನು ಪಡೆಯುವವರ ವೃದ್ಧಿಯಾಗುತ್ತಾ ಆಗುತ್ತಾ ಸಾವಿರಾರು ಮಂದಿ ಆಗಿ ಬಿಡುತ್ತಾರೆ ರಾಜ್ಯ ಪದವಿಯೇ ವಿದ್ಯಾರ್ಥಿ ವೇತನವಾಗಿದೆ. ಯಾರು ಚೆನ್ನಾಗಿ ವಿದ್ಯೆಯನ್ನು ಓದುವರೋ ಅವರು ಗುಪ್ತವಾಗಿರಲು ಸಾಧ್ಯವಿಲ್ಲ. ಅನೇಕ ಹೊಸ-ಹೊಸ ಮಕ್ಕಳೂ ಸಹ ಹಳಬರಿಗಿಂತಲೂ ಮುಂದೆ ಹೊರಟು ಹೋಗುತ್ತಾರೆ. ಹೇಗೆ ನೋಡಿ, ಕೆಲವರು ಕನ್ಯೆಯರು ಬರುತ್ತಾರೆ, ಹೇಳುತ್ತಾರೆ - ನಮಗೆ ಈ ಜ್ಞಾನವು ಬಹಳ ಇಷ್ಟವಾಗುತ್ತದೆ, ನಾವು ಪ್ರತಿಜ್ಞೆ ಮಾಡುತ್ತೇವೆ, ಈ ಲೌಕಿಕ ವಿದ್ಯೆಯು ಮುಗಿದ ನಂತರ ಮತ್ತೆ ಈ ವಿದ್ಯೆಯಲ್ಲಿ ತೊಡಗುತ್ತೇವೆ. ನಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳುತ್ತೇವೆ. ನಾವು ನಮ್ಮ ಸತ್ಯ ಸಂಪಾದನೆ ಮಾಡಿ 21 ಜನ್ಮಗಳಿಗಾಗಿ ಆಸ್ತಿಯನ್ನು ಪಡೆಯುತ್ತೇವೆ. ಇದನ್ನು ಕೇಳಿ ಆಗ ಎಷ್ಟೊಂದು ಖುಷಿಯಾಗುತ್ತದೆ! ತಿಳಿದುಕೊಂಡಿದ್ದಾರೆ, ಈ ಆಸ್ತಿಯನ್ನು ಈಗ ಪಡೆಯದಿದ್ದರೆ ಮತ್ತೆಂದಿಗೂ ಪಡೆಯಲು ಸಾಧ್ಯವಿಲ್ಲ. ವಿದ್ಯಾಭ್ಯಾಸದ ಆಸಕ್ತಿಯಿರುತ್ತದೆಯಲ್ಲವೆ. ಕೆಲವರಿಗಂತೂ ತಿಳಿದುಕೊಳ್ಳುವ ಆಸಕ್ತಿಯೇ ಇರುವುದಿಲ್ಲ. ಹೊಸಬರಿಗೆ ಎಷ್ಟು ಉತ್ಸಾಹವಿದೆಯೋ ಅಷ್ಟು ಹಳಬರಿಗೂ ಇಲ್ಲ, ಆಶ್ಚರ್ಯವಲ್ಲವೆ. ಅಂತಹವರಿಗೆ ಹೇಳಲಾಗುತ್ತದೆ - ಡ್ರಾಮಾನುಸಾರ ಅವರ ಅದೃಷದಲ್ಲಿಲ್ಲವೆಂದರೆ ಭಗವಂತನಂತು ಏನು ಮಾಡುವರು! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತನ್ನ ಬಲಹೀನತೆಗಳನ್ನು ಮುಚ್ಚಿಡುವುದೂ ಸಹ ಸ್ವಯಂಗೆ ಮೋಸ ಮಾಡಿಕೊಳ್ಳುವುದಾಗಿದೆ ಆದ್ದರಿಂದ ಎಂದೂ ತಮಗೆ ತಾವು ಮೋಸ ಮಾಡಿಕೊಳ್ಳಬಾರದು.
2. ತನ್ನ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಲು ನಿಯಮಕ್ಕೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಬಾರದು. ವಿದ್ಯೆಯ ಮೇಲೆ ಆಸಕ್ತಿಯನ್ನಿಟ್ಟುಕೊಳ್ಳಬೇಕು. ತನ್ನ ಸಮಾನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
ಓಂ ಶಾಂತಿ. ಬೆಳಗ್ಗೆ-ಬೆಳಗ್ಗೆ ಬಂದು ಮುರುಳಿಯನ್ನು ಯಾರು ನುಡಿಸುತ್ತಾರೆ? ಪ್ರಪಂಚವಂತೂ ಸಂಪೂರ್ಣ ಅಂಧಕಾರದಲ್ಲಿದೆ. ಜ್ಞಾನ ಸಾಗರ, ಪತಿತ-ಪಾವನ, ಪ್ರಾಣೇಶ್ವರ ತಂದೆಯಿಂದ ನೀವೀಗ ಮುರುಳಿಯನ್ನು ಕೇಳುತ್ತಿದ್ದೀರಿ. ಅವರು ಪ್ರಾಣವನ್ನು ರಕ್ಷಿಸುವ ಈಶ್ವರನಾಗಿದ್ದಾರೆ. ಹೇ ಈಶ್ವರ, ಈ ದುಃಖದಿಂದ ನಮ್ಮನ್ನು ರಕ್ಷಣೆ ಮಾಡು ಎಂದು ಹೇಳುತ್ತಾರಲ್ಲವೆ. ಅವರು ಅಲ್ಪಕಾಲದ ಸಹಯೋಗವನ್ನು ಬೇಡುತ್ತಾರೆ. ಈಗ ನೀವು ಮಕ್ಕಳಿಗೆ ಬೇಹದ್ದಿನ ಸಹಯೋಗ ಸಿಗುತ್ತದೆ ಏಕೆಂದರೆ ಇವರು ಬೇಹದ್ದಿನ ತಂದೆಯಲ್ಲವೆ. ನೀವು ತಿಳಿದುಕೊಂಡಿದ್ದೀರಿ - ಆತ್ಮವೂ ಗುಪ್ತವಾಗಿದೆ, ಮಕ್ಕಳ ಶರೀರವು ಪ್ರತ್ಯಕ್ಷವಾಗಿದೆ ಅಂದಾಗ ತಂದೆಯ ಶ್ರೀಮತವು ಮಕ್ಕಳ ಪ್ರತಿ ಇದೆ. ಸರ್ವ ಶಾಸ್ತ್ರಮಯೀ ಶಿರೋಮಣಿ ಗೀತೆಯು ಪ್ರಸಿದ್ಧವಾಗಿದೆ. ಕೇವಲ ಅದರಲ್ಲಿ ಶ್ರೀಕೃಷ್ಣನ ಹೆಸರನ್ನು ಹಾಕಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ - ಶ್ರೀಮತ್ಭಗವಾನುವಾಚವಾಗಿದೆ. ಇದೂ ಸಹ ಅರ್ಥವಾಗಿದೆ - ಭ್ರಷ್ಟಾಚಾರಿಗಳನ್ನು ಶ್ರೇಷ್ಠಾಚಾರಿಗಳನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರೇ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಸತ್ಯ ನಾರಾಯಣನ ಕಥೆಯೂ ಇದೆ. ಅಮರ ಕಥೆಯೆಂದು ಗಾಯನವಿದೆ. ಅಮರ ಪುರಿಯ ಮಾಲೀಕರನ್ನಾಗಿ ಮಾಡುವ ಅಥವಾ ನರನಿಂದ ನಾರಾಯಣನನ್ನಾಗಿ ಮಾಡುವ ಕಥೆ - ಎರಡೂ ಒಂದೇ ಆಗಿದೆ. ಇದು ಮೃತ್ಯುಲೋಕವಾಗಿದೆ, ಭಾರತವೇ ಅಮರ ಪುರಿಯಾಗಿತ್ತು. ಇದು ಯಾರಿಗೂ ತಿಳಿದಿಲ್ಲ. ಇಲ್ಲಿಯೇ ಅಮರ ತಂದೆಯು ಪಾರ್ವತಿಯರಿಗೆ ತಿಳಿಸಿದ್ದಾರೆ. ಕೇವಲ ಒಬ್ಬ ಪಾರ್ವತಿ ಅಥವಾ ಒಬ್ಬ ದ್ರೌಪದಿಯಿರಲಿಲ್ಲ. ವಾಸ್ತವದಲ್ಲಿ ಅನೇಕ ಮಕ್ಕಳು ಕೇಳುತ್ತಿದ್ದೀರಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾರವರ ಮೂಲಕ ಮಧುರಾತಿ ಮಧುರ ಮಕ್ಕಳಿಗೆ ತಿಳಿಸುತ್ತೇನೆ.
ತಂದೆಯು ತಿಳಿಸಿದ್ದಾರೆ - ಮಕ್ಕಳೇ, ಅವಶ್ಯವಾಗಿ ಆತ್ಮಾಭಿಮಾನಿಗಳಾಗಬೇಕಾಗಿದೆ. ತಂದೆಯೇ ಈ ರೀತಿ ಮಾಡುತ್ತಾರೆ. ಪ್ರಪಂಚದಲ್ಲಿ ಆತ್ಮದ ಜ್ಞಾನವಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಆತ್ಮದ ಜ್ಞಾನವೇ ಇಲ್ಲವೆಂದಮೇಲೆ ಪರಮಾತ್ಮನ ಜ್ಞಾನವು ಹೇಗಿರುತ್ತದೆ! ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಇಡೀ ಪ್ರಪಂಚವು ಎಷ್ಟು ದೊಡ್ಡ ತಪ್ಪಿನಲ್ಲಿ ಸಿಲುಕಿದೆ! ಸಂಪೂರ್ಣ ಕಲ್ಲು ಬುದ್ಧಿಯವರಾಗುತ್ತಾರೆ. ವಿದೇಶದವರೂ ಸಹ ಕಲ್ಲು ಬುದ್ಧಿಯಲ್ಲಿ ಏನೂ ಕಡಿಮೆಯಿಲ್ಲ, ಏಕೆಂದರೆ ಅವರಿಗೆ ಇಷ್ಟಾದರೂ ಬುದ್ಧಿಯಲ್ಲಿ ಬರುವುದಿಲ್ಲ - ನಾವು ಈ ಅಣು ಬಾಂಬುಗಳನ್ನು ತಯಾರಿಸುತ್ತಿದ್ದೇವೆ. ಇವನ್ನು ನಮ್ಮದೇ ವಿನಾಶ ಅಥವಾ ಇಡೀ ಪ್ರಪಂಚದ ವಿನಾಶ ಮಾಡುವುದಕ್ಕಾಗಿ ತಯಾರಿಸುತ್ತಿದ್ದೇವೆ. ಅಂದಾಗ ಈ ಸಮಯದಲ್ಲಿ ಎಲ್ಲರ ಬುದ್ಧಿಯು ಏನೂ ಕೆಲಸಕ್ಕೆ ಬರುವುದಿಲ್ಲ. ತಮ್ಮದೇ ವಿನಾಶಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡುತ್ತಿದ್ದಾರೆ. ನೀವು ಮಕ್ಕಳಿಗಾಗಿ ಇದೇನೂ ಹೊಸ ಮಾತಲ್ಲ. ನಿಮಗೆ ತಿಳಿದಿದೆ - ಡ್ರಾಮಾನುಸಾರ ಅವರದೂ ಪಾತ್ರವಿದೆ. ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ. ಕಲ್ಲು ಬುದ್ಧಿಯವರು ಆಗದೇ ಇದ್ದಿದ್ದರೆ ಇಂತಹ ಕೆಲಸ ಮಾಡುತ್ತಿದ್ದರೆ? ಇಡೀ ಕುಲದ ವಿನಾಶ ಮಾಡುತ್ತಿದ್ದಾರೆ. ಆಶ್ಚರ್ಯವಲ್ಲವೆ - ಏನು ಮಾಡುತ್ತಿದ್ದಾರೆ? ಕುಳಿತು-ಕುಳಿತಿದ್ದಂತೆಯೇ ಇಂದೇನೋ ಎಲ್ಲವೂ ಸರಿಯಾಗಿ ನಡೆಯುತ್ತಿದೆ. ನಾಳೆ ಮಿಲಿಟರಿಯವರಿಗೆ ಕೋಪ ಬಂದರೆ ರಾಷ್ಟ್ರಪತಿಯನ್ನೂ ಸಹ ಕೊಂದು ಬಿಡುತ್ತಾರೆ. ಇಂತಿಂತಹ ಘಟನೆಗಳು ನಡೆಯುತ್ತಿರುತ್ತವೆ. ಯಾರಿಗೂ ಸಹನೆ ಮಾಡುವುದಿಲ್ಲ, ಶಕ್ತಿಶಾಲಿಗಳಲ್ಲವೆ. ಈಗಿನ ಪ್ರಪಂಚದಲ್ಲಿ ಬಹಳಷ್ಟು ಹೊಡೆದಾಟಗಳಿದೆ. ಬಹಳ ಕಲ್ಲು ಬುದ್ಧಿಯವರೂ ಇದ್ದಾರೆ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ – ವಿನಾಶ ಕಾಲದಲ್ಲಿ ಯಾರು ತಂದೆಯೊಂದಿಗೆ ವಿಪರೀತ ಬುದ್ಧಿಯವರಾಗಿದ್ದಾರೆ ಅವರಿಗಾಗಿ ವಿನಃಶ್ಯಂತಿಯೆಂದು ಗಾಯನವಿದೆ. ಈಗ ಈ ಪ್ರಪಂಚವು ಬದಲಾಗಲಿದೆ. ಇದನ್ನೂ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಮಹಾಭಾರತ ಯುದ್ಧವು ಆಗಿತ್ತು. ತಂದೆಯೇ ರಾಜಯೋಗವನ್ನು ಕಲಿಸಿದ್ದರು. ಶಾಸ್ತ್ರಗಳಲ್ಲಂತು ಮಹಾವಿನಾಶವನ್ನು ತೋರಿಸಿ ಬಿಟ್ಟಿದ್ದಾರೆ ಆದರೆ ಮಹಾವಿನಾಶವಂತು ಆಗುವುದಿಲ್ಲ. ಆ ರೀತಿ ಆಗಿದ್ದೇ ಆದರೆ ಪ್ರಳಯವಾಗಿ ಬಿಡುವುದು. ಮನುಷ್ಯರು ಯಾರೊಬ್ಬರೂ ಇರುವುದಿಲ್ಲ, ಕೇವಲ ಪಂಚತತ್ವಗಳು ಉಳಿಯುವವು ಆದರೆ ಈ ರೀತಿಯಂತೂ ಆಗಲು ಸಾಧ್ಯವಿಲ್ಲ. ಪ್ರಳಯವಾಗಿ ಬಿಟ್ಟರೆ ಮತ್ತೆ ಮನುಷ್ಯರು ಎಲ್ಲಿಂದ ಬರುವರು? ಶ್ರೀಕೃಷ್ಣನು ಬೆರಳನ್ನು ಚೀಪುತ್ತಾ ಸಾಗರದ ಆಲದ ಎಲೆಯ ಮೇಲೆ ತೇಲಿ ಬಂದ ಎಂದು ತೋರಿಸುತ್ತಾರೆ. ಬಾಲಕನು ಈ ರೀತಿ ಹೇಗೆ ಬರಲು ಸಾಧ್ಯ? ಶಾಸ್ತ್ರಗಳಲ್ಲಿಯೂ ಇಂತಿಂತಹ ಮಾತುಗಳನ್ನು ಬರೆದು ಬಿಟ್ಟಿದ್ದಾರೆ, ಅದರ ಮಾತೇ ಕೇಳಬೇಡಿ. ಈಗ ನೀವು ಕುಮಾರಿಯರ ಮೂಲಕ ವಿದ್ವಾಂಸ, ಪಂಡಿತ, ಭೀಷ್ಮ ಪಿತಾಮಹ ಮೊದಲಾದವರಿಗೂ ಜ್ಞಾನ ಬಾಣಗಳು ನಾಟುತ್ತವೆ. ಮುಂದೆ ಒಂದು ದಿನ ಅವರು ಬಂದು ತಿಳಿದುಕೊಳ್ಳುತ್ತಾರೆ. ಎಷ್ಟೆಷ್ಟು ನೀವು ಸರ್ವೀಸಿನಲ್ಲಿ ಹೊಳಪು ತುಂಬುತ್ತೀರೋ, ತಂದೆಯ ಪರಿಚಯವನ್ನು ಎಲ್ಲರಿಗೆ ಕೊಡುತ್ತಾ ಇರುತ್ತೀರೋ ಅಷ್ಟು ನಿಮ್ಮ ಪ್ರಭಾವ ಹೆಚ್ಚುವುದು. ಹಾ! ವಿಘ್ನಗಳೂ ಬರುತ್ತವೆ, ಈ ಜ್ಞಾನ ಯಜ್ಞದಲ್ಲಿ ಆಸುರೀ ಸಂಪ್ರದಾಯದವರ ಬಹಳ ವಿಘ್ನಗಳು ಬರುತ್ತವೆ ಎಂಬುದೂ ಗಾಯನವಿದೆ. ಪಾಪ! ಈ ಕಲ್ಲು ಬುದ್ಧಿಯ ಮನುಷ್ಯರು ಇದೇನಾಗಿದೆ ಎಂಬುದನ್ನು ತಿಳಿದುಕೊಂಡಿಲ್ಲ. ಇವರ ಜ್ಞಾನವೇ ಭಿನ್ನವಾಗಿದೆ ಎಂದು ಹೇಳುತ್ತಾರೆ. ಇದನ್ನೂ ನೀವು ತಿಳಿದುಕೊಂಡಿದ್ದೀರಿ. ಇವು ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಈ ರಾಜಯೋಗವನ್ನು ನಿಮಗೆ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಜ್ಞಾನ ಮತ್ತು ಯೋಗವನ್ನು ತಂದೆಯೇ ಕಲಿಸುತ್ತಿದ್ದಾರೆ. ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಅವರೇ ಪತಿತ-ಪಾವನನಾಗಿದ್ದಾರೆ ಅಂದಾಗ ಅವಶ್ಯವಾಗಿ ಪತಿತರಿಗೇ ಜ್ಞಾನ ಕೊಡುತ್ತಾರಲ್ಲವೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಪಾರಸ ಬುದ್ಧಿಯವರಾಗಿ ಪಾರಸನಾಥರಾಗುತ್ತೇವೆ. ಮನುಷ್ಯರು ಎಷ್ಟೊಂದು ಮಂದಿರಗಳನ್ನು ಕಟ್ಟಿಸಿದ್ದಾರೆ ಆದರೆ ಅವರು ಯಾರು? ಏನು ಮಾಡಿ ಹೋಗಿದ್ದಾರೆ? ಎಂದು ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಪಾರಸನಾಥನ ಮಂದಿರವೂ ಇದೆ ಆದರೆ ಅದು ಯಾರಿಗೂ ತಿಳಿದಿಲ್ಲ. ಭಾರತವು ಪಾರಸ ಪುರಿಯಾಗಿತ್ತು, ವಜ್ರ ವೈಡೂರ್ಯಗಳ ಮಹಲುಗಳಿತ್ತು. ಇದು ನೆನ್ನೆಯ ಮಾತಾಗಿದೆ. ಮನುಷ್ಯರಂತು ಕೇವಲ ಒಂದು ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ ಮತ್ತು ತಂದೆಯು ತಿಳಿಸುತ್ತಾರೆ - ಇಡೀ ನಾಟಕವೇ 5000 ವರ್ಷಗಳದಾಗಿದೆ ಆದ್ದರಿಂದ ಹೇಳಲಾಗುತ್ತದೆ - ಇಂದಿನ ಭಾರತವು ಏನಾಗಿದೆ! ನೆನ್ನೆಯ ಭಾರತವು ಏನಾಗಿತ್ತು! ಲಕ್ಷಾಂತರ ವರ್ಷಗಳ ಮಾತು ಯಾರಿಗೂ ಸ್ಮೃತಿಯಲ್ಲಿರಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ಈಗ ಸ್ಮೃತಿ ಸಿಕ್ಕಿದೆ, ನಿಮಗೆ ಗೊತ್ತಿದೆ- ತಂದೆಯು ಪ್ರತೀ 5000 ವರ್ಷಗಳ ನಂತರ ಬಂದು ನಮಗೆ ಸ್ಮೃತಿ ತರಿಸುತ್ತಾರೆ. ನೀವು ಮಕ್ಕಳು ಸ್ವರ್ಗದ ಮಾಲೀಕರಾಗಿದ್ದಿರಿ, 5000 ವರ್ಷಗಳ ಮಾತಾಗಿದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತು? ಎಷ್ಟು ವರ್ಷಗಳಾಯಿತು ಎಂದು ಯಾರೊಂದಿಗಾದರೂ ಕೇಳಿದರೆ ಅವರು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ನೀವು ತಿಳಿಸಿ, ಇದಂತೂ 5000 ವರ್ಷಗಳ ಮಾತಾಗಿದೆ. ಕ್ರಿಸ್ತನಿಗೆ ಇಷ್ಟು ಸಮಯದ ಮೊದಲು ಸ್ವರ್ಗವಿತ್ತೆಂದು ಹೇಳುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಮಕ್ಕಳಿಗೆ ಇದನ್ನೂ ತಿಳಿಸಲಾಗಿದೆ - ತಂದೆಯ ಜಯಂತಿಯನ್ನಾಚರಿಸುತ್ತಾರೆ ಅಂದಮೇಲೆ ಅವರು ಏನನ್ನೋ ಮಾಡಲು ಬಂದಿರಬೇಕು! ಪತಿತ-ಪಾವನನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಬಂದು ಪಾವನರನ್ನಾಗಿ ಮಾಡಿರಬೇಕು. ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಜ್ಞಾನವನ್ನು ಕೊಡುವರಲ್ಲವೆ. ಯೋಗದಲ್ಲಿ ಕುಳಿತುಕೊಳ್ಳಿ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ - ಇದು ಜ್ಞಾನವಾಯಿತಲ್ಲವೆ. ಅವರಂತೂ ಹಠಯೋಗಿಗಳಾಗಿದ್ದಾರೆ. ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಏನೇನು ಮಾಡುತ್ತಾರೆ! ನೀವು ಮಾತೆಯರಂತೂ ಈ ರೀತಿ ಮಾಡಲು ಸಾಧ್ಯವಿಲ್ಲ. ಹಾಗೆ ಕುಳಿತುಕೊಳ್ಳುವುದಕ್ಕೂ ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವು ಇದೇನನ್ನೂ ಮಾಡುವ ಅವಶ್ಯಕತೆಯಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳು ನಿಯಮಾನುಸಾರವಾಗಿ ಕುಳಿತುಕೊಳ್ಳುತ್ತಾರಲ್ಲವೆ. ತಂದೆಯಂತೂ ಆ ರೀತಿಯೂ ಹೇಳುವುದಿಲ್ಲ. ಹೇಗೆ ಬೇಕೋ ಹಾಗೆ ಕುಳಿತುಕೊಳ್ಳಿ ಎಂದು ಹೇಳುತ್ತಾರೆ. ಕುಳಿತು-ಕುಳಿತು ಸುಸ್ತಾದರೆ ಮಲಗಿ ಬಿಡಿ. ತಂದೆಯು ಯಾವ ಮಾತಿನಲ್ಲಿಯೂ ನಿರಾಕರಿಸುವುದಿಲ್ಲ. ಇದಂತೂ ಸಂಪೂರ್ಣ ಸಹಜವಾಗಿ ತಿಳಿದುಕೊಳ್ಳುವ ಮಾತಾಗಿದೆ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ಭಲೆ ಎಷ್ಟಾದರೂ ರೋಗಿಯಾಗಿರಲಿ ಆದರೆ ಕೇಳುತ್ತಾ-ಕೇಳುತ್ತಾ ಶಿವ ತಂದೆಯ ನೆನಪಿನಲ್ಲಿರುತ್ತಾ-ಇರುತ್ತಾ ಮತ್ತೆ ಪ್ರಾಣವು ತನುವಿನಿಂದ ಹೊರಟು ಹೋಗಲಿ. ಗಂಗಾ ನದಿಯ ತೀರದಲ್ಲಿರಲಿ, ಗಂಗಾ ಜಲವು ಬಾಯಲ್ಲಿರಲಿ ಆಗ ತನುವಿನಿಂದ ಪ್ರಾಣವು ಹೊರಟು ಹೋಗಲಿ ಎಂದೂ ಗಾಯನವಿದೆಯಲ್ಲವೆ. ಅವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ವಾಸ್ತವದಲ್ಲಿ ಇದು ಜ್ಞಾನಾಮೃತದ ಮಾತಾಗಿದೆ. ಸತ್ಯವಾಗಿಯೂ ಇದೇ ರೀತಿ ಪ್ರಾಣವು ಹೋಗುವುದೆಂದು ನೀವು ತಿಳಿದುಕೊಂಡಿದ್ದೀರಿ, ನೀವು ಮಕ್ಕಳು ಪರಮಧಾಮದಿಂದ ಬರುತ್ತೀರಿ. ನನ್ನನ್ನು ಬಿಟ್ಟು ಬಂದು ಬಿಡುತ್ತೀರಿ. ಆದರೆ ನಾನಂತೂ ನೀವು ಮಕ್ಕಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುವೆನು. ನೀವು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿಯೇ ನಾನು ಬಂದಿದ್ದೇನೆ. ನಿಮಗೆ ತಮ್ಮ ಮನೆಯ ಪರಿಚಯವಾಗಲಿ, ಆತ್ಮದ ಪರಿಚಯವಾಗಲಿ ಇಲ್ಲ. ಮಾಯೆಯು ರೆಕ್ಕೆಗಳನ್ನು ಸಂಪೂರ್ಣವಾಗಿ ಕತ್ತರಿಸಿ ಬಿಟ್ಟಿದೆ. ಆದ್ದರಿಂದ ಆತ್ಮವು ಹಾರಲು ಸಾಧ್ಯವಿಲ್ಲ ಏಕೆಂದರೆ ತಮೋಪ್ರಧಾನವಾಗಿದೆ. ಎಲ್ಲಿಯವರೆಗೆ ಸತೋಪ್ರಧಾನವಾಗುವುದಿಲ್ಲವೋ ಅಲ್ಲಿಯವರೆಗೆ ಶಾಂತಿಧಾಮದಲ್ಲಿ ಹೋಗಲು ಹೇಗೆ ಸಾಧ್ಯ! ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಡ್ರಾಮಾ ಪ್ಲಾನನುಸಾರ ಎಲ್ಲರೂ ತಮೋಪ್ರಧಾನರಾಗಲೇಬೇಕಾಗಿದೆ. ಈ ಸಮಯದಲ್ಲಿ ಇಡೀ ವೃಕ್ಷವೇ ಸಂಪೂರ್ಣ ತಮೋಪ್ರಧಾನ, ಜಡಜಡೀಭೂತವಾಗಿ ಬಿಟ್ಟಿದೆ. ಮಕ್ಕಳಿಗೆ ತಿಳಿದಿದೆ - ಎಲ್ಲಾ ಆತ್ಮರು ತಮೋಪ್ರಧಾನರಾಗಿದ್ದಾರೆ. ಹೊಸ ಪ್ರಪಂಚದಲ್ಲಿ ಸತೋಪ್ರಧಾನರಿರುತ್ತಾರೆ. ಇಲ್ಲಿ ಯಾರದೂ ಸತೋಪ್ರಧಾನ ಸ್ಥಿತಿಯಿರಲು ಸಾಧ್ಯವಿಲ್ಲ. ಇಲ್ಲಿ ಆತ್ಮವು ಸಂಪೂರ್ಣ ಪವಿತ್ರವಾಗಿ ಬಿಟ್ಟರೆ ಮತ್ತೆ ಒಂದು ಕ್ಷಣವೂ ಇಲ್ಲಿ ನಿಲ್ಲುವುದಿಲ್ಲ, ಒಮ್ಮೆಲೆ ಓಡಿ ಹೋಗುವುದು. ಎಲ್ಲರೂ ಮುಕ್ತಿಗಾಗಿ ಅಥವಾ ಶಾಂತಿಧಾಮದಲ್ಲಿ ಹೋಗುವುದಕ್ಕಾಗಿ ಭಕ್ತಿ ಮಾಡುತ್ತಾರೆ ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇದು ನಿಯಮವೇ ಇಲ್ಲ. ಧಾರಣೆ ಮಾಡುವುದಕ್ಕಾಗಿ ತಂದೆಯು ಇದೆಲ್ಲಾ ರಹಸ್ಯವನ್ನು ತಿಳಿಸುತ್ತಾರೆ. ಆದರೂ ಸಹ ಮುಖ್ಯ ಮಾತಾಗಿದೆ - ತಂದೆಯನ್ನು ನೆನಪು ಮಾಡಬೇಕು, ಸ್ವದರ್ಶನ ಚಕ್ರಧಾರಿಗಳಾಗಬೇಕು, ಬೀಜವನ್ನು ನೆನಪು ಮಾಡುವುದರಿಂದ ಇಡೀ ವೃಕ್ಷವು ಬುದ್ಧಿಯಲ್ಲಿ ಬಂದು ಬಿಡುವುದು. ವೃಕ್ಷವು ಮೊದಲು ಚಿಕ್ಕದಿರುತ್ತದೆ ನಂತರ ದೊಡ್ಡದಾಗುತ್ತಾ ಹೋಗುತ್ತದೆ. ಅನೇಕ ಧರ್ಮಗಳಿವೆಯಲ್ಲವೆ. ನೀವು ಒಂದು ಸೆಕೆಂಡಿನಲ್ಲಿ ಅರಿತುಕೊಳ್ಳುತ್ತೀರಿ. ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಇಡೀ ಮನುಷ್ಯ ಸೃಷ್ಟಿಯ ಬೀಜರೂಪ ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ಸರ್ವವ್ಯಾಪಿಯಾಗಿರಲು ಸಾಧ್ಯವಿಲ್ಲ. ಸರ್ವವ್ಯಾಪಿಯೆಂಬುದು ಅತಿ ದೊಡ್ಡ ತಪ್ಪಾಗಿದೆ. ನೀವು ಇದನ್ನೂ ತಿಳಿಸುತ್ತೀರಿ - ಮನುಷ್ಯರಿಗೆಂದೂ ಭಗವಂತನೆಂದು ಹೇಳಲಾಗುವುದಿಲ್ಲ. ತಂದೆಯು ಮಕ್ಕಳಿಗೆ ಎಲ್ಲಾ ಮಾತುಗಳನ್ನು ಸಹಜ ಮಾಡಿ ತಿಳಿಸುತ್ತಾರೆ ಮತ್ತು ಯಾರ ಅದೃಷ್ಟದಲ್ಲಿದೆಯೋ, ನಿಶ್ಚಯವಿದೆಯೋ ಅವರು ಅವಶ್ಯವಾಗಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ನಿಶ್ಚಯವಿಲ್ಲವೆಂದರೆ ಅವರೆಂದೂ ತಿಳಿದುಕೊಳ್ಳುವುದಿಲ್ಲ. ಅದೃಷ್ಟವೇ ಇಲ್ಲವೆಂದರೆ ಪುರುಷಾರ್ಥವನ್ನೇನು ಮಾಡುತ್ತಾರೆ! ಅದೃಷ್ಟದಲ್ಲಿಲ್ಲದಿದ್ದರೆ ಅವರು ಈ ರೀತಿ ಕುಳಿತುಕೊಳ್ಳುತ್ತಾರೆ ಹೇಗೆ ಏನನ್ನೂ ತಿಳಿದುಕೊಳ್ಳುತ್ತಿಲ್ಲ ಎಂಬಂತೆ. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ ಎಂಬುದೂ ನಿಶ್ಚಯವಿಲ್ಲ ಹೇಗೆ ಯಾರಾದರೂ ಹೊಸ ವ್ಯಕ್ತಿಯು ಮೆಡಿಕಲ್ ಕಾಲೇಜಿನಲ್ಲಿ ಹೋಗಿ ಕುಳಿತುಕೊಂಡರೆ ಏನು ಅರ್ಥವಾಗುತ್ತದೆ? ಏನೇನೂ ಇಲ್ಲ. ಇಲ್ಲಿಯೂ ಸಹ ಅದೇರೀತಿ ಬಂದು ಕುಳಿತುಕೊಳ್ಳುತ್ತಾರೆ. ಈ ಅವಿನಾಶಿ ಜ್ಞಾನದ ವಿನಾಶವಾಗುವುದಿಲ್ಲ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ – ರಾಜಧಾನಿಯು ಸ್ಥಾಪನೆಯಾಗುತ್ತಿದೆಯಲ್ಲವೆ ಅಂದಮೇಲೆ ನೌಕರರು-ಚಾಕರರು, ಪ್ರಜೆಗಳು, ಪ್ರಜೆಗಳಿಗೂ ನೌಕರ-ಚಾಕರರು ಎಲ್ಲರೂ ಬೇಕಲ್ಲವೆ, ಅಂದಮೇಲೆ ಅಂತಹವರೂ ಬರುತ್ತಾರೆ. ಕೆಲವರಿಗಂತೂ ಬಹಳ ಚೆನ್ನಾಗಿ ಅರ್ಥವಾಗುತ್ತದೆ, ತಮ್ಮ ಅಭಿಪ್ರಾಯವನ್ನು ಬರೆಯುತ್ತಾರಲ್ಲವೆ. ಮುಂದೆ ಹೋದಂತೆ ಮೇಲೇರುವ ಪ್ರಯತ್ನ ಪಡುತ್ತಾರೆ. ಆದರೆ ಸಮಯವು ಹೊರಟು ಹೋಗುವುದು, ಏಕೆಂದರೆ ಆ ಸಮಯವಂತೂ ಬಹಳ ಏರುಪೇರುಗಳು ಆಗುತ್ತಿರುವುದು. ದಿನ-ಪ್ರತಿದಿನ ಬಿರುಗಾಳಿಗಳು ಹೆಚ್ಚುತ್ತಾ ಹೋಗುತ್ತವೆ. ಇಷ್ಟೊಂದು ಸೇವಾಕೇಂದ್ರಗಳಿವೆ, ಚೆನ್ನಾಗಿ ಅರಿತುಕೊಳ್ಳುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ ಎಂಬುದನ್ನೂ ಬರೆಯಲಾಗಿದೆ, ವಿನಾಶವನ್ನು ಸಮ್ಮುಖದಲ್ಲಿ ನೋಡುತ್ತಾರೆ. ವಿನಾಶವಂತೂ ಆಗಲೇಬೇಕಾಗಿದೆ. ಜನಸಂಖ್ಯೆಯು ಕಡಿಮೆಯಾಗಲಿ ಎಂದು ಸರ್ಕಾರವು ಹೇಳುತ್ತದೆ ಆದರೆ ಇದರಲ್ಲಿ ಏನು ಮಾಡಬಲ್ಲರು? ವೃಕ್ಷದ ವೃದ್ಧಿಯಂತೂ ಆಗಿಯೇ ಆಗುವುದು. ಎಲ್ಲಿಯವರೆಗೆ ತಂದೆಯಿರುವರೋ ಅಲ್ಲಿಯವರೆಗೆ ಎಲ್ಲಾ ಧರ್ಮಗಳ ಆತ್ಮಗಳು ಇಲ್ಲಿ ಇರಲೇಬೇಕಾಗಿದೆ. ಯಾವಾಗ ಹಿಂತಿರುಗಿ ಹೋಗುವ ಸಮಯ ಬರುವುದೋ ಆಗ ಆತ್ಮರ ಬರುವಿಕೆಯು ನಿಂತು ಹೋಗುವುದು. ಈಗಂತೂ ಪರಮಧಾಮದಿಂದ ಎಲ್ಲರೂ ಬರಲೇಬೇಕಾಗಿದೆ ಆದರೆ ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಇದು ರಾವಣ ರಾಜ್ಯವಾಗಿದೆ, ನಮಗೆ ರಾಮ ರಾಜ್ಯ ಬೇಕೆಂದು ಬಾಪೂಜಿ(ಗಾಂಧೀಜಿ)ಯೂ ಹೇಳುತ್ತಿದ್ದರು. ಇಂತಹವರು ಸ್ವರ್ಗಸ್ಥರಾದರು ಎಂದು ಹೇಳುತ್ತಾರೆ ಅಂದಮೇಲೆ ಇದು ನರಕವೆಂದಾಯಿತಲ್ಲವೆ. ಮನುಷ್ಯರು ಇಷ್ಟನ್ನೂ ತಿಳಿದುಕೊಳ್ಳುವುದಿಲ್ಲ, ಸ್ವರ್ಗವಾಸಿಗಳಾಗುವುದಂತೂ ಒಳ್ಳೆಯದಲ್ಲವೆ. ಅವಶ್ಯವಾಗಿ ನರಕವಾಸಿಯಾಗಿದ್ದರು. ತಂದೆಯು ತಿಳಿಸುತ್ತಾರೆ - ಮನುಷ್ಯರ ಚಹರೆಯು ಮಾತ್ರ ಮನುಷ್ಯನದಾಗಿದೆ, ಆದರೆ ಗುಣಗಳು ಕೋತಿಯದಾಗಿದೆ. ಪತಿತ-ಪಾವನ ಸೀತಾರಾಂ ಎಂದು ಎಲ್ಲರೂ ಹಾಡುತ್ತಿರುತ್ತಾರೆ. ನಾವು ಪತಿತರಾಗಿದ್ದೇವೆ, ಪಾವನ ಮಾಡುವವರು ತಂದೆಯಾಗಿದ್ದಾರೆ. ಅವರೆಲ್ಲರೂ ಭಕ್ತಿಮಾರ್ಗದ ಸೀತೆಯರಾಗಿದ್ದಾರೆ, ತಂದೆಯು ರಾಮನಾಗಿದ್ದಾರೆ, ಯಾರಿಗಾದರೂ ನೇರವಾಗಿ ಹೇಳಿದರೆ ಅವರು ಇದನ್ನು ಒಪ್ಪುವುದಿಲ್ಲ. ರಾಮನನ್ನು ಕರೆಯುತ್ತಾರೆ, ಈಗ ನೀವು ಮಕ್ಕಳಿಗೆ ತಂದೆಯು ಮೂರನೇ ನೇತ್ರವನ್ನು ಕೊಟ್ಟಿದ್ದಾರೆ. ನೀವು ಹೇಗೆ ಪ್ರಪಂಚದಿಂದ ಬೇರೆಯಾಗಿ ಬಿಟ್ಟಿದ್ದೀರಿ! ಹಳೆಯ ಪ್ರಪಂಚದಲ್ಲಿ ಏನೇನು ಮಾಡುತ್ತಿರುತ್ತಾರೆ! ಈಗ ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳು ಬುದ್ಧಿಹೀನರಿಂದ ಬುದ್ಧಿವಂತರಾಗುತ್ತೀರಿ. ರಾವಣನು ನಿಮ್ಮನ್ನು ಎಷ್ಟು ಬುದ್ಧಿಹೀನರನ್ನಾಗಿ ಮಾಡಿ ಬಿಟ್ಟಿದ್ದಾನೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಎಲ್ಲಾ ಮನುಷ್ಯರು ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಆದ್ದರಿಂದಲೇ ತಂದೆಯೇ ಬಂದು ಸತೋಪ್ರಧಾನರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಭಲೆ ನೀವು ಮಕ್ಕಳು ತಮ್ಮ ಸೇವೆಯನ್ನೂ ಮಾಡುತ್ತಾ ಇರಿ. ಕೇವಲ ಒಂದು ಮಾತನ್ನು ನೆನಪಿಟ್ಟುಕೊಳ್ಳಿ - ತಂದೆಯನ್ನು ನೆನಪು ಮಾಡಿ. ತಮೋಪ್ರಧಾನರಿಂದ ಸತೋಪ್ರಧಾನರಾಗುವ ಮಾರ್ಗವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಸರ್ವರ ಆತ್ಮಿಕ ಸರ್ಜನ್ ಒಬ್ಬರೇ ಆಗಿದ್ದಾರೆ. ಅವರೇ ಬಂದು ಆತ್ಮರಿಗೆ ಇಂಜೆಕ್ಷನ್ ಹಾಕುತ್ತಾರೆ ಏಕೆಂದರೆ ಆತ್ಮವೇ ತಮೋಪ್ರಧಾನವಾಗಿದೆ. ತಂದೆಗೆ ಅವಿನಾಶಿ ಸರ್ಜನ್ ಎಂದು ಹೇಳಲಾಗುತ್ತದೆ. ಈಗ ಆತ್ಮವು ಸತೋಪ್ರಧಾನದಿಂದ ತಮೋಪ್ರಧಾನವಾಗಿದೆ. ಇದಕ್ಕೆ ಇಂಜೆಕ್ಷನ್ ಬೇಕು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು ತಮ್ಮ ತಂದೆಯನ್ನು ನೆನಪು ಮಾಡಿ. ಬುದ್ಧಿಯೋಗವನ್ನು ಮೇಲೆ ಜೋಡಿಸಿ. ಜೀವಿಸಿದ್ದಂತೆಯೇ ನೆನಪು ಎಂಬ ನೇಣು ಹಾಕಿಕೊಳ್ಳಿ ಅರ್ಥಾತ್ ಬುದ್ಧಿಯೋಗವನ್ನು ಮಧುರ ಮನೆಯ ಕಡೆ ಜೋಡಿಸಿ. ನಾವು ಮಧುರ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ನಿರ್ವಾಣಧಾಮಕ್ಕೆ ಮಧುರ ಮನೆಯೆಂದು ಹೇಳಲಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಹಳೆಯ ಪ್ರಪಂಚ ವಿನಾಶ ಆಗಿಯೇ ಬಿಟ್ಟಿದೆ, ಆದ್ದರಿಂದ ತಮ್ಮನ್ನು ತಾವು ಈ ಹಳೆಯ ಪ್ರಪಂಚದಿಂದ ಭಿನ್ನವೆಂದು ತಿಳಿದುಕೊಳ್ಳಬೇಕಾಗಿದೆ. ವೃಕ್ಷದ ವೃದ್ಧಿಯ ಜೊತೆ ಜೊತೆಗೆ ಯಾವ ವಿಘ್ನರೂಪಿ ಬಿರುಗಾಳಿಗಳು ಬರುತ್ತವೆಯೋ ಅವುಗಳಿಗೆ ಹೆದರಬಾರದು, ಪಾರಾಗಬೇಕಾಗಿದೆ.
2. ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಲು ತಮಗೆ ಜ್ಞಾನ, ಯೋಗದ ಇಂಜೆಕ್ಷನ್ ಕೊಟ್ಟುಕೊಳ್ಳಬೇಕಾಗಿದೆ. ತಮ್ಮ ಬುದ್ಧಿಯೋಗವನ್ನು ಮಧುರ ಮನೆಯಲ್ಲಿ ಜೋಡಿಸಬೇಕಾಗಿದೆ.
ಓಂ ಶಾಂತಿ. ಈ ಗೀತೆಯ ಅರ್ಥವು ಎಷ್ಟು ವಿಚಿತ್ರವಾಗಿದೆ. ಪ್ರೀತಿಯು ಏತಕ್ಕಾಗಿ ಏರ್ಪಟ್ಟಿದೆ ಮತ್ತು ಯಾರೊಂದಿಗೆ ಇದೆ? ಭಗವಂತನೊಂದಿಗೆ ಏಕೆಂದರೆ ಈ ಪ್ರಪಂಚದಿಂದ ಸತ್ತು ಅವರ ಬಳಿ ಹೋಗಬೇಕಾಗಿದೆ. ಈ ರೀತಿ ಎಂದಾದರೂ ಯಾರ ಜೊತೆಯಾದರೂ ಪ್ರೀತಿಯೇರ್ಪಡುತ್ತದೆಯೇ? ನಾವು ಸತ್ತು ಹೋಗುತ್ತೇವೆಂಬ ವಿಚಾರ ಬರುತ್ತದೆಯೇ? ಆ ವಿಚಾರ ಬಂದರೆ ಮತ್ತೆ ಯಾರಾದರೂ ಪ್ರೀತಿಯನ್ನು ನೀಡುವರೇ? ಗೀತೆಯ ಅರ್ಥವು ಎಷ್ಟು ವಿಚಿತ್ರವಾಗಿದೆ. ಜ್ಯೋತಿಯೊಂದಿಗೆ ಪತಂಗವು ಪ್ರೀತಿಯನ್ನಿಟ್ಟು ಅದನ್ನು ಸುತ್ತಿ-ಸುತ್ತಿ ಸುಟ್ಟು ಹೋಗುತ್ತದೆ. ನೀವೂ ಸಹ ತಂದೆಯ ಪ್ರೀತಿಯಲ್ಲಿ ಶರೀರವನ್ನು ಬಿಡಬೇಕಾಗಿದೆ ಅರ್ಥಾತ್ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಶರೀರ ಬಿಡಬೇಕಾಗಿದೆ. ಈ ಗಾಯನವು ಕೇವಲ ಒಬ್ಬರಿಗಾಗಿಯೇ ಇದೆ. ಆ ತಂದೆಯು ಬಂದಾಗ ಯಾರು ಅವರೊಂದಿಗೆ ಪ್ರೀತಿಯನ್ನಿಡುವರೋ ಅವರು ಈ ಪ್ರಪಂಚದಿಂದ ಸಾಯಬೇಕಾಗುತ್ತದೆ. ಭಗವಂತನೊಂದಿಗೆ ಪ್ರೀತಿಯನ್ನಿಡುವುದರಿಂದ ಸತ್ತು ಎಲ್ಲಿಗೆ ಹೋಗುತ್ತೀರಿ? ಅವಶ್ಯವಾಗಿ ಭಗವಂತನ ಬಳಿಯೇ ಹೋಗುತ್ತೀರಿ. ಮನುಷ್ಯರು ಭಗವಂತನ ಬಳಿ ಹೋಗುವುದಕ್ಕಾಗಿ ದಾನ-ಪುಣ್ಯ, ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ. ಶರೀರ ಬಿಡುವ ಸಮಯದಲ್ಲಿಯೂ ಮನುಷ್ಯರಿಗೆ ಭಗವಂತನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಭಗವಂತನು ಎಷ್ಟು ಪ್ರಸಿದ್ಧವಾಗಿದ್ದಾರೆ! ಅವರು ಬರುತ್ತಾರೆಂದರೆ ಇಡೀ ಪ್ರಪಂಚವನ್ನು ಸಮಾಪ್ತಿ ಮಾಡಿ ಬಿಡುತ್ತಾರೆ. ನಿಮಗೆ ತಿಳಿದಿದೆ – ಹಳೆಯ ಪ್ರಪಂಚದಿಂದ ಸತ್ತು ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಈ ವಿಶ್ವ ವಿದ್ಯಾಲಯಕ್ಕೆ ಬರುತ್ತೇವೆ. ಹಳೆಯ ಪ್ರಪಂಚಕ್ಕೆ ಪತಿತ ಪ್ರಪಂಚ, ನರಕವೆಂದು ಹೇಳಲಾಗುತ್ತದೆ. ತಂದೆಯು ಹೊಸ ಪ್ರಪಂಚಕ್ಕೆ ಹೋಗುವ ಮಾರ್ಗವನ್ನು ತಿಳಿಸುತ್ತಾರೆ. ಕೇವಲ ನನ್ನನ್ನು ನೆನಪು ಮಾಡಿ, ನಾನು ಸ್ವರ್ಗದ ರಚಯಿತನಾಗಿದ್ದೇನೆ. ಆ ತಂದೆಯಿಂದ ನಿಮಗೆ ಸಂಪತ್ತು, ಹಣ, ಮನೆಯೆಲ್ಲವೂ ಸಿಗುತ್ತದೆ. ವಾಸ್ತವದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ, ಅವರನ್ನು ಇನ್ನೊಂದು ಮನೆಗೆ ಕಳುಹಿಸಿ ಬಿಡುತ್ತಾರೆ ಅಂದರೆ ಅವರು ವಾರಸುಧಾರರಾಗಲಿಲ್ಲ. ಆದರೆ ಭಗವಂತನಂತೂ ಎಲ್ಲಾ ಆತ್ಮರ ತಂದೆಯಾಗಿದ್ದಾರೆ, ಇವರ ಬಳಿ ಎಲ್ಲರೂ ಬರಬೇಕಾಗಿದೆ. ಯಾವುದಾದರೊಂದು ಸಮಯದಲ್ಲಿ ತಂದೆಯು ಖಂಡಿತ ಬರುತ್ತಾರೆ, ಎಲ್ಲರನ್ನೂ ಖಂಡಿತ ಮನೆಗೆ ಕರೆದುಕೊಂಡು ಹೋಗುತ್ತಾರೆ ಏಕೆಂದರೆ ಹೊಸ ಪ್ರಪಂಚದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ, ಹಳೆಯ ಪ್ರಪಂಚದಲ್ಲಿ ಅನೇಕರಿದ್ದಾರೆ. ಹೊಸ ಪ್ರಪಂಚದಲ್ಲಿ ಮನುಷ್ಯರೂ ಕಡಿಮೆ ಮತ್ತು ಸುಖವು ಬಹಳಷ್ಟಿರುತ್ತದೆ. ಹಳೆಯ ಪ್ರಪಂಚದಲ್ಲಿ ಬಹಳ ಮನುಷ್ಯರಿರುವುದರಿಂದ ದುಃಖವೂ ಬಹಳ ಇದೆ ಆದ್ದರಿಂದ ಕೂಗುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ಬಾಪೂಜಿಯೂ ಹೇಳುತ್ತಿದ್ದರು. ಕೇವಲ ಅವರನ್ನು ತಿಳಿದುಕೊಂಡಿರಲಿಲ್ಲ. ಪತಿತ-ಪಾವನ ಪರಮಪಿತ ಪರಮಾತ್ಮನಾಗಿದ್ದಾರೆ, ಅವರೇ ವಿಶ್ವದ ಮುಕ್ತಿದಾತನಾಗಿದ್ದಾರೆ ಎಂಬುದನ್ನೂ ತಿಳಿದುಕೊಂಡಿದ್ದಾರೆ. ರಾಮ-ಸೀತೆಯನ್ನು ಇಡೀ ಪ್ರಪಂಚದವರು ನಂಬುವುದಿಲ್ಲ. ಇಡೀ ಪ್ರಪಂಚವು ಪರಮಪಿತ ಪರಮಾತ್ಮನನ್ನು ಮುಕ್ತಿದಾತ, ಮಾರ್ಗದರ್ಶಕನೆಂದು ನಂಬುತ್ತದೆ. ತಂದೆಯು ದುಃಖದಿಂದ ಮುಕ್ತಗೊಳಿಸುತ್ತಾರೆ. ಒಳ್ಳೆಯದು - ದುಃಖ ಕೊಡುವವರು ಯಾರು? ತಂದೆಯಂತೂ ದುಃಖವನ್ನು ಕೊಡಲು ಸಾಧ್ಯವಿಲ್ಲ ಏಕೆಂದರೆ ಅವರು ಪತಿತ-ಪಾವನನಾಗಿದ್ದಾರೆ. ಪಾವನ ಪ್ರಪಂಚ, ಸುಖಧಾಮದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ನೀವು ಆತ್ಮಿಕ ತಂದೆಯ ಆತ್ಮಿಕ ಮಕ್ಕಳಾಗಿದ್ದೀರಿ. ಎಂತಹ ತಂದೆಯೋ ಅಂತಹ ಮಕ್ಕಳು. ಲೌಕಿಕ ತಂದೆಗೆ ಲೌಕಿಕ ಅರ್ಥಾತ್ ದೈಹಿಕ ಮಕ್ಕಳಿರುತ್ತಾರೆ. ಈಗ ನೀವು ಮಕ್ಕಳು ಇದನ್ನು ತಿಳಿದುಕೊಳ್ಳಬೇಕಾಗಿದೆ - ನಾವಾತ್ಮರಾಗಿದ್ದೇವೆ, ಪರಮಪಿತ ಪರಮಾತ್ಮನು ನಮಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನಾವು ಅವರ ಮಕ್ಕಳು ಆಗುತ್ತೇವೆಂದ ಮೇಲೆ ಸ್ವರ್ಗದ ಆಸ್ತಿಯು ಖಂಡಿತ ಸಿಗುವುದು. ಅವರು ಸ್ವರ್ಗ ಸ್ಥಾಪನೆ ಮಾಡುವವರಾಗಿದ್ದಾರೆ. ನಾವು ವಿದ್ಯಾರ್ಥಿಗಳಾಗಿದ್ದೇವೆ ಎಂಬುದನ್ನು ಮರೆಯಬಾರದು. ಶಿವ ತಂದೆಯು ಮಧುಬನದಲ್ಲಿ ಮುರುಳಿಯನ್ನು ನುಡಿಸುತ್ತಾರೆಂದು ಮಕ್ಕಳ ಬುದ್ಧಿಯಲ್ಲಿರುತ್ತದೆ. ಆ ಕಟ್ಟಿಗೆಯ ಮುರುಳಿಯಂತೂ ಇಲ್ಲಿ ಇಲ್ಲ. ಕೃಷ್ಣನು ನೃತ್ಯ ಮಾಡುವುದು, ಮುರುಳಿಯನ್ನು ನುಡಿಸುವುದು ಅದೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಬಾಕಿ ಜ್ಞಾನಮಾರ್ಗದ ಮುರುಳಿಯನ್ನು ಶಿವ ತಂದೆಯೇ ನುಡಿಸುತ್ತಾರೆ. ನಿಮ್ಮ ಬಳಿ ಒಳ್ಳೊಳ್ಳೆಯ ಗೀತೆಗಳನ್ನು ರಚಿಸುವವರು ಬರುತ್ತಾರೆ. ಗೀತೆಗಳನ್ನು ಬಹುತೇಕವಾಗಿ ಪುರುಷರೇ ರಚಿಸುತ್ತಾರೆ. ನೀವು ಜ್ಞಾನದ ಗೀತೆಗಳನ್ನೇ ಹಾಡಬೇಕು ಅದರಿಂದ ಶಿವ ತಂದೆಯ ನೆನಪು ಬರಬೇಕು.
ತಂದೆಯು ತಿಳಿಸುತ್ತಾರೆ - ತಂದೆಯಾದ ನನ್ನನ್ನು ನೆನಪು ಮಾಡಿ. ಶಿವನಿಗೆ ಬಿಂದುವೆಂದು ಹೇಳುತ್ತಾರೆ. ವ್ಯಾಪಾರಿಗಳು ಬಿಂದುವನ್ನು ಬರೆಯುತ್ತಾರೆ ಅದಕ್ಕೆ ಶಿವನೆಂದು ಹೇಳುತ್ತಾರೆ. ಒಂದರ ಮುಂದೆ ಬಿಂದುವನ್ನಿಟ್ಟರೆ(0) 10 ಆಗುವುದು, ಇನ್ನೊಂದು ಬಿಂದುವನ್ನಿಟ್ಟರೆ 100 ಆಗುವುದು, ಮತ್ತೊಂದು ಬಿಂದುವನ್ನಿಟ್ಟರೆ 1000 ಆಗಿ ಬಿಡುವುದು. ಅಂದಾಗ ನೀವೂ ಸಹ ಶಿವನನ್ನು ನೆನಪು ಮಾಡಬೇಕಾಗಿದೆ. ಶಿವನನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಬಿಂದುವಿನ ಮುಂದೆ ಬಿಂದು ಸೇರುತ್ತಾ ಹೋಗುವುದು. ನೀವು ಅರ್ಧಕಲ್ಪಕ್ಕಾಗಿ ಸಾಹುಕಾರರಾಗಿ ಬಿಡುತ್ತೀರಿ. ಅಲ್ಲಿ ಬಡವರಿರುವುದೇ ಇಲ್ಲ, ಎಲ್ಲರೂ ಸುಖಿಯಾಗಿರುತ್ತಾರೆ. ದುಃಖದ ಹೆಸರಿರುವುದಿಲ್ಲ. ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತಾ ಹೋಗುತ್ತವೆ. ನೀವು ಬಹಳ ಧನವಂತರಾಗುತ್ತೀರಿ. ಇದಕ್ಕೆ ಸತ್ಯ ತಂದೆಯ ಮೂಲಕ ಸತ್ಯ ಸಂಪಾದನೆಯೆಂದು ಹೇಳಲಾಗುತ್ತದೆ. ಈ ಸಂಪಾದನೆಯೇ ಜೊತೆ ಬರುತ್ತದೆ. ಮನುಷ್ಯರೆಲ್ಲರೂ ಖಾಲಿ ಕೈಯಲ್ಲಿ ಹೋಗುತ್ತಾರೆ, ನೀವು ಕೈ ತುಂಬಿಕೊಂಡು ಹೋಗಬೇಕಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸಿದ್ದಾರೆ, ಪವಿತ್ರತೆಯಿದ್ದಾಗ ಸುಖ-ಶಾಂತಿಯೂ ಸಿಗುವುದು. ನೀವಾತ್ಮರು ಮೊದಲು ಪವಿತ್ರರಾಗಿದ್ದಿರಿ ನಂತರ ಅಪವಿತ್ರರಾದಿರಿ. ಸನ್ಯಾಸಿಗಳಿಗೂ ಸಹ ಅರ್ಧ ಪವಿತ್ರರೆಂದು ಹೇಳುತ್ತಾರೆ. ನಿಮ್ಮದು ಪೂರ್ಣ ಸನ್ಯಾಸವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಅವರು ಎಷ್ಟು ಸುಖವನ್ನು ತೆಗೆದುಕೊಳ್ಳುತ್ತಾರೆ, ಸ್ವಲ್ಪ ಸುಖವಿದ್ದರೆ ಇನ್ನುಳಿದದ್ದು ದುಃಖವೇ ಇರುತ್ತದೆ. ಮೊದಲು ಅವರು ತಂದೆಯನ್ನು ಸರ್ವವ್ಯಾಪಿ ಎಂದು ಹೇಳುತ್ತಿರಲಿಲ್ಲ. ಸರ್ವವ್ಯಾಪಿ ಎಂದು ಹೇಳುವುದರಿಂದ ಇನ್ನೂ ಬೀಳುತ್ತಲೇ ಹೋಗುತ್ತಾರೆ. ಪ್ರಪಂಚದಲ್ಲಿ ಅನೇಕ ಪ್ರಕಾರದ ಮೇಳಗಳಾಗುತ್ತವೆ ಏಕೆಂದರೆ ಸಂಪಾದನೆಯಾಗುತ್ತದೆಯಲ್ಲವೆ. ಇದೂ ಸಹ ಅವರ ವ್ಯಾಪಾರವಾಗಿದೆ. ಹೇಳಲಾಗುತ್ತದೆ - ನರನಿಂದ ನಾರಾಯಣನಾಗುವ ವ್ಯಾಪಾರ ಬಿಟ್ಟರೆ ಮತ್ತೆಲ್ಲಾ ವ್ಯಾಪಾರಗಳಲ್ಲಿ ಧೂಳೇ ಇದೆ. ಈ ವ್ಯಾಪಾರವನ್ನು ಮಾಡುವವರು ಕೆಲವರೇ ವಿರಳ. ತಂದೆಯ ಮಕ್ಕಳಾಗಿ ಎಲ್ಲವನ್ನೂ ದೇಹ ಸಹಿತ ತಂದೆಗೆ ಕೊಡಬೇಕಾಗಿದೆ ಏಕೆಂದರೆ ಹೊಸ ಶರೀರ ಬೇಕೆಂದು ಬಯಸುತ್ತೀರಿ. ತಂದೆಯು ತಿಳಿಸುತ್ತಾರೆ - ನೀವು ಕೃಷ್ಣ ಪುರಿಯಲ್ಲಿ ಹೋಗಬಲ್ಲಿರಿ ಆದರೆ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾದಾಗ. ಕೃಷ್ಣ ಪುರಿಯಲ್ಲಿ ನಮ್ಮನ್ನು ಪಾವನ ಮಾಡಿ ಎಂದು ಹೇಳುವುದಿಲ್ಲ, ಇಲ್ಲಿ ಎಲ್ಲಾ ಮನುಷ್ಯ ಮಾತ್ರರೂ ಕರೆಯುತ್ತಾರೆ - ಹೇ ಮುಕ್ತಿದಾತ ಬನ್ನಿ, ಈ ಪಾಪಾತ್ಮರ ಪ್ರಪಂಚದಿಂದ ನಮ್ಮನ್ನು ಮುಕ್ತ ಮಾಡಿ.
ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ನಿಮ್ಮನ್ನು ತನ್ನ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ, ಅಲ್ಲಿ ಹೋಗುವುದಂತೂ ಒಳ್ಳೆಯದಲ್ಲವೆ. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ ಅಂದಾಗ ಶಾಂತಿಯೆಂದು ಯಾವುದಕ್ಕೆ ಹೇಳುತ್ತಾರೆ? ಕರ್ಮ ಮಾಡದೆ ಯಾರೂ ಇರಲು ಸಾಧ್ಯವಿಲ್ಲ. ಶಾಂತಿಯು ಶಾಂತಿಧಾಮದಲ್ಲಿಯೇ ಇರುತ್ತದೆ ಆದರೂ ಮತ್ತೆ ಶರೀರವನ್ನು ತೆಗೆದುಕೊಂಡು ಕರ್ಮವನ್ನು ಮಾಡಲೇಬೇಕಾಗಿದೆ. ಸತ್ಯಯುಗದಲ್ಲಿ ಕರ್ಮ ಮಾಡುತ್ತಿದ್ದರೂ ಶಾಂತಿಯಿರುತ್ತದೆ. ಅಶಾಂತಿಯಲ್ಲಿ ಮನುಷ್ಯರಿಗೆ ದುಃಖವಾಗುತ್ತದೆ, ಆದ್ದರಿಂದ ಶಾಂತಿಯು ಹೇಗೆ ಸಿಗುವುದೆಂದು ಹೇಳುತ್ತಾರೆ. ಈಗಂತೂ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಶಾಂತಿಧಾಮವಂತೂ ನಮ್ಮ ಮನೆಯಾಗಿದೆ, ಸತ್ಯಯುಗದಲ್ಲಿ ಶಾಂತಿಯೂ ಇರುತ್ತದೆ, ಸುಖವೂ ಇರುತ್ತದೆ, ಎಲ್ಲವೂ ಇರುತ್ತದೆ. ಈಗ ಅದು ಬೇಕೋ, ಕೇವಲ ಶಾಂತಿ ಬೇಕೋ? ಇಲ್ಲಂತೂ ದುಃಖವಿದೆ. ಆದ್ದರಿಂದ ಪತಿತ ಪಾವನ ತಂದೆಯನ್ನೂ ಸಹ ಇಲ್ಲಿಗೇ ಕರೆಯುತ್ತಾರೆ. ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿಯೇ ಭಕ್ತಿ ಮಾಡುತ್ತಾರೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವ್ಯಭಿಚಾರಿಯಾಗುತ್ತದೆ. ವ್ಯಭಿಚಾರಿ ಭಕ್ತಿಯಲ್ಲಿ ನೋಡಿ ಏನೇನು ಮಾಡುತ್ತಾರೆ! ಏಣಿ ಚಿತ್ರದಲ್ಲಿ ಎಷ್ಟು ಚೆನ್ನಾಗಿ ತೋರಿಸಿದ್ದಾರೆ. ಆದರೆ ಮೊಟ್ಟ ಮೊದಲು ಸಿದ್ಧ ಮಾಡಬೇಕು - ಭಗವಂತ ಯಾರು? ಶ್ರೀಕೃಷ್ಣನನ್ನು ಈ ರೀತಿ ಮಾಡಿದವರು ಯಾರು? ಮೊದಲ ಜನ್ಮದಲ್ಲಿ ಇವರು ಯಾರಾಗಿದ್ದರು? ತಿಳಿಸಲು ಬಹಳ ಯುಕ್ತಿಬೇಕು. ಯಾರು ಚೆನ್ನಾಗಿ ಸರ್ವೀಸ್ ಮಾಡುವರೋ ಅವರ ಹೃದಯವೂ ಸಹ ಸಾಕ್ಷಿ ಕೊಡುತ್ತದೆ. ವಿಶ್ವ ವಿದ್ಯಾಲಯದಲ್ಲಿ ಯಾರು ಚೆನ್ನಾಗಿ ಓದುವರೋ ಅವರು ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಕೆಲವರು ಮಂಧ ಬುದ್ಧಿಯವರೂ ಇರುತ್ತಾರೆ. ಶಿವ ತಂದೆಗೆ ಆತ್ಮವು ಹೇಳುತ್ತದೆ - ನನ್ನ ಬುದ್ಧಿ ಬೀಗವನ್ನು ತೆರೆಯಿರಿ. ಅದಕ್ಕೆ ತಂದೆಯು ಹೇಳುತ್ತಾರೆ – ಬುದ್ಧಿ ಬೀಗವನ್ನು ತೆರೆಯುವುದಕ್ಕಾಗಿಯೇ ಬಂದಿದ್ದೇನೆ ಆದರೆ ನಿಮ್ಮ ಕರ್ಮವು ಹೀಗಿದೆ ಬುದ್ಧಿ ಬೀಗವು ತೆರೆಯುವುದೇ ಇಲ್ಲ. ಮತ್ತೆ ತಂದೆಯು ಏನು ಮಾಡುವರು? ಬಹಳ ಪಾಪಗಳನ್ನು ಮಾಡಿದ್ದೀರಿ, ಈಗ ತಂದೆಯು ಅವರನ್ನು ಏನು ಮಾಡುವರು? ನಾವು ಕಡಿಮೆ ಓದುತ್ತೇವೆಂದು ಶಿಕ್ಷಕರಿಗೆ ಹೇಳುತ್ತಾರೆ ಅಂದಾಗ ಶಿಕ್ಷಕರು ಏನು ಮಾಡುವರು? ಶಿಕ್ಷಕರು ಕೃಪೆಯನ್ನಂತೂ ಮಾಡುವುದಿಲ್ಲ. ಭಲೆ ಅಧಿಕ ಸಮಯವನ್ನು ಕೊಡುತ್ತಾರೆ. ಅದನ್ನಂತೂ ನಿಮಗೆ ನಿರಾಕರಿಸುವುದಿಲ್ಲ. ಪ್ರದರ್ಶನಿಯು ತೆರೆದಿರುತ್ತದೆ, ಕುಳಿತು ಅಭ್ಯಾಸ ಮಾಡಿ. ಭಕ್ತಿಮಾರ್ಗದಲ್ಲಿ ಮಾಲೆಯನ್ನು ಜಪಿಸಿ ಎಂದು ಕೆಲವರು ಹೇಳುತ್ತಾರೆ. ಈ ಮಂತ್ರವನ್ನು ನೆನಪು ಮಾಡಿಕೊಳ್ಳಿ ಎಂದು ಕೆಲವರು ಹೇಳುತ್ತಾರೆ. ಇಲ್ಲಂತೂ ತಂದೆಯು ತಮ್ಮ ಪರಿಚಯವನ್ನು ಕೊಡುತ್ತಾರೆ. ತಂದೆಯನ್ನು ನೆನಪು ಮಾಡಬೇಕಾಗಿದೆ, ಅವರಿಂದ ಆಸ್ತಿಯು ಸಿಗುತ್ತದೆ ಅಂದಮೇಲೆ ಚೆನ್ನಾಗಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಲ್ಲವೆ. ಇದರಲ್ಲಿಯೂ ತಂದೆಯು ತಿಳಿಸುತ್ತಾರೆ - ವಿಕಾರದಲ್ಲೆಂದೂ ಹೋಗಬಾರದು. ವಿಕಾರದ ರುಚಿಯು ಸ್ವಲ್ಪ ಕುಳಿತುಕೊಂಡರೂ ಸಹ ಮತ್ತೆ ವೃದ್ಧಿಯಾಗಿ ಬಿಡುವುದು. ಹೇಗೆ ಸಿಗರೇಟ್ ಇತ್ಯಾದಿಗಳ ರುಚಿ ಒಂದು ಸಲ ನೋಡಿದರೂ ಸಹ ಸಂಗದ ರಂಗು ಕೂಡಲೇ ಅಂಟಿ ಬಿಡುತ್ತದೆ. ಮತ್ತೆ ಆ ಚಟವನ್ನು ಬಿಡುವುದೇ ಕಷ್ಟವಾಗಿ ಬಿಡುತ್ತದೆ. ಎಷ್ಟೊಂದು ನೆಪ ಹೇಳುತ್ತಾರೆ ಆದ್ದರಿಂದ ಯಾವುದೇ ಹವ್ಯಾಸವಾಗಬಾರದು. ಛೀ ಛೀ ಹವ್ಯಾಸಗಳನ್ನು ಕಳೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಜೀವಿಸಿದ್ದಂತೆಯೇ ಶರೀರದ ಪರಿವೆಯನ್ನು ಬಿಟ್ಟು ನನ್ನನ್ನು ನೆನಪು ಮಾಡಿ. ದೇವತೆಗಳಿಗೆ ಯಾವಾಗಲೂ ಪವಿತ್ರ ಭೋಜನವನ್ನೇ ನೈವೇದ್ಯವನ್ನಿಡಲಾಗುತ್ತದೆ ಅಂದಾಗ ನೀವೂ ಸಹ ಪವಿತ್ರ ಭೋಜನವನ್ನು ಸ್ವೀಕರಿಸಿ. ಇತ್ತೀಚೆಗಂತೂ ಅಪ್ಪಟವಾದ ತುಪ್ಪವೂ ಸಿಗುವುದಿಲ್ಲ. ಎಣ್ಣೆಯನ್ನು ತಿನ್ನುತ್ತಾರೆ. ಸತ್ಯಯುಗದಲ್ಲಿ ಎಣ್ಣೆ ಇತ್ಯಾದಿಗಳಿರುವುದಿಲ್ಲ, ಇಲ್ಲಂತೂ ಡೈರಿಯಲ್ಲಿ ನೋಡಿ, ಎಷ್ಟು ಶುದ್ಧವಾದ ತುಪ್ಪವನ್ನಿಟ್ಟಿದ್ದಾರೆ, ಕಲಬೆರಕೆ ತುಪ್ಪವನ್ನೂ ಇಟ್ಟಿದ್ದಾರೆ. ಎರಡರ ಮೇಲೂ ಶುದ್ಧ ತುಪ್ಪವೆಂದು ಬರೆದಿದ್ದಾರೆ. ಬೆಲೆಯಲ್ಲಿ ಅಂತರವಾಗಿ ಬಿಡುತ್ತದೆ. ಈಗ ನೀವು ಮಕ್ಕಳು ಅರಳಿರುವ ಹೂವಿನ ತರಹ ಹರ್ಷಿತರಾಗಿರಬೇಕು. ಸ್ವರ್ಗದಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ, ಅಲ್ಲಿ ಪ್ರಕೃತಿಯೂ ಸತೋಪ್ರಧಾನವಾಗಿರುತ್ತದೆ. ಲಕ್ಷ್ಮೀ-ನಾರಾಯಣರಂತಹ ಸ್ವಾಭಾವಿಕ ಸೌಂದರ್ಯವಂತರನ್ನಾಗಿ ಇಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ. ಅವರನ್ನು ಈ ಕಣ್ಣುಗಳಿಂದ ಯಾರಾದರೂ ನೋಡಲು ಸಾಧ್ಯವೇ? ಹಾ! ಸಾಕ್ಷಾತ್ಕಾರವಾಗುತ್ತದೆ. ಆದರೆ ಸಾಕ್ಷಾತ್ಕಾರವಾದ ಮಾತ್ರಕ್ಕೆ ಯಾರು ಅದೇ ಮಾದರಿಯಲ್ಲಿ ರಚಿಸಲು ಸಾಧ್ಯವಿಲ್ಲ. ಹಾ! ಯಾರಾದರೂ ಕಲಾಕಾರನಿಗೆ ಸಾಕ್ಷಾತ್ಕಾರವಾಗುತ್ತಾ ಹೋದರೆ ಆ ಸಮಯದಲ್ಲಿ ಕುಳಿತು ಬರೆಯಬಹುದು.... ಆದರೆ ಪರಿಶ್ರಮವಿದೆ. ಈಗ ನೀವು ಮಕ್ಕಳಿಗೆ ಬಹಳ ನಶೆಯಿರಬೇಕು. ಈಗ ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಸಿಗಬೇಕಾಗಿದೆ. ಈಗ ನಮ್ಮ 84 ಜನ್ಮಗಳು ಪೂರ್ಣವಾಯಿತು, ಇಂತಿಂತಹ ವಿಚಾರಗಳು ಬುದ್ಧಿಯಲ್ಲಿದ್ದಾಗ ಖುಷಿಯಿರುವುದು. ಸ್ವಲ್ಪವೂ ವಿಕಾರದ ವಿಚಾರವೇ ಬರಬಾರದು. ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ, ದ್ರೌಪದಿಯೂ ಸಹ ಇದಕ್ಕಾಗಿಯೇ ಕರೆದಳಲ್ಲವೆ. ಅವಳಿಗೆ ಯಾವುದೇ 5 ಮಂದಿ ಪತಿಯರಿರಲಿಲ್ಲ. ದ್ರೌಪದಿಯಂತೂ ಕರೆಯುತ್ತಿದ್ದಳು, ನನ್ನನ್ನು ಈ ದುಶ್ಯಾಸನನು ವಿವಸ್ತ್ರ ಮಾಡುತ್ತಾನೆ, ಇದರಿಂದ ರಕ್ಷಿಸು ಎಂದು. ಅಂದಮೇಲೆ ಮತ್ತೆ 5 ಮಂದಿ ಪತಿಯರಿರಲು ಹೇಗೆ ಸಾಧ್ಯ. ಇಂತಹ ಮಾತಿರಲು ಸಾಧ್ಯವಿಲ್ಲ. ಮತ್ತೆ-ಮತ್ತೆ ನೀವು ಮಕ್ಕಳಿಗೆ ಹೊಸ-ಹೊಸ ವಿಚಾರಗಳು ಸಿಗುತ್ತಿರುತ್ತವೆ ಅಂದಮೇಲೆ ತಿದ್ದು ಪಡಿ ಮಾಡುತ್ತಿರಬೇಕು. ಯಾವುದಾದರೊಂದು ಬದಲಾವಣೆ ಮಾಡಿ ಶಬ್ಧಗಳನ್ನು ಹಾಕಬೇಕು.
ಇನ್ನು ಸ್ವಲ್ಪ ಸಮಯದಲ್ಲಿಯೇ ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ನೀವು ಬರೆಯುತ್ತೀರಿ, ಚಾಲೆಂಜ್ ಮಾಡುತ್ತೀರಿ. ತಂದೆಯು ಮಕ್ಕಳೊಂದಿಗೆ ಹೇಳುತ್ತಾರೆ - ಸನ್ ಶೋಜ್ ಫಾದರ್, ಫಾದರ್ ಶೋಜ್ ಸನ್ ಅರ್ಥಾತ್ ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುವರು, ತಂದೆಯು ಮಕ್ಕಳನ್ನು ಪ್ರತ್ಯಕ್ಷ ಮಾಡುವರು ಅಂದಾಗ ಯಾವ ತಂದೆ? ಶಿವ ಮತ್ತು ಸಾಲಿಗ್ರಾಮಗಳು. ಶಿವ ತಂದೆಯು ಏನನ್ನು ತಿಳಿಸುತ್ತಾರೆಯೋ ಅದರಂತೆಯೇ ಫಾಲೋ ಮಾಡಿ. ಫಾಲೋಫಾದರ್ ಅವರದೇ ಗಾಯನವಿದೆ. ಲೌಕಿಕ ತಂದೆಯನ್ನು ಫಾಲೋ ಮಾಡುವುದರಿಂದ ನೀವು ಪತಿತರಾಗಿ ಬಿಡುತ್ತೀರಿ. ಈ ತಂದೆಯಂತೂ ಪಾವನರನ್ನಾಗಿ ಮಾಡಲು ಫಾಲೋ ಮಾಡಿಸುತ್ತಾರೆ, ಅಂತರವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಫಾಲೋ ಮಾಡಿ ಪವಿತ್ರರಾಗಿ. ಫಾಲೋ ಮಾಡುವುದರಿಂದಲೇ ಸ್ವರ್ಗದ ಮಾಲೀಕರಾಗುವಿರಿ. ಲೌಕಿಕ ತಂದೆಯನ್ನು ಫಾಲೋ ಮಾಡುವುದರಿಂದ 63 ಜನ್ಮಗಳು ನೀವು ಏಣಿಯನ್ನು ಕೆಳಗಿಳಿದಿದ್ದೀರಿ. ಈಗ ತಂದೆಯನ್ನು ಫಾಲೋ ಮಾಡಿ ಮೇಲೇರಬೇಕಾಗಿದೆ. ತಂದೆಯ ಜೊತೆ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಈ ಒಂದೊಂದು ರತ್ನವು ಲಕ್ಷಾಂತರ ರೂಪಾಯಿಗಳಷ್ಟು ಬೆಲೆ ಬಾಳುವಂತದ್ದಾಗಿದೆ. ನೀವು ತಂದೆಯನ್ನರಿತು ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ. ಬ್ರಹ್ಮ್ನಲ್ಲಿ ಲೀನವಾಗಿ ಬಿಡುತ್ತೇವೆಂದು ಸನ್ಯಾಸಿಗಳು ಹೇಳುತ್ತಾರೆ ಆದರೆ ಲೀನವಾಗುವುದಿಲ್ಲ, ಪುನಃ ಬರುತ್ತಾರೆ. ತಂದೆಯು ನಿತ್ಯವೂ ತಿಳಿಸುತ್ತಿರುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಮೊಟ್ಟ ಮೊದಲು ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಪಾರಲೌಕಿಕ ತಂದೆಯು ಪಾವನರನ್ನಾಗಿ ಮಾಡುವ ಆಸ್ತಿಯನ್ನು ಕೊಡುತ್ತಾರೆ ಆದ್ದರಿಂದ ಪಾವನರನ್ನಾಗಿ ಮಾಡಿ ಎಂದು ಬೇಹದ್ದಿನ ತಂದೆಗೆ ಹೇಳುತ್ತಾರೆ. ಅವರು ಪತಿತ-ಪಾವನನಾಗಿದ್ದಾರೆ. ಲೌಕಿಕ ತಂದೆಗೆ ಪತಿತ-ಪಾವನನೆಂದು ಹೇಳುವುದಿಲ್ಲ. ಅವರೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಿರುತ್ತಾರೆ ಅಂದಾಗ ಎಲ್ಲರಿಗೆ ಇಬ್ಬರು ತಂದೆಯರ ಪರಿಚಯ ಕೊಡಬೇಕಾಗಿದೆ. ವಿವಾಹ ಮಾಡಿಕೊಂಡು ಪತಿತನಾಗು ಎಂದು ಲೌಕಿಕ ತಂದೆಯು ಹೇಳುತ್ತಾರೆ. ಪಾವನರಾಗಿ ಎಂದು ಪಾರಲೌಕಿಕ ತಂದೆಯು ಹೇಳುತ್ತಾರೆ. ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗುತ್ತೀರಿ. ಒಬ್ಬ ತಂದೆಯೇ ಎಲ್ಲರನ್ನೂ ಪಾವನ ಮಾಡುವವರಾಗಿದ್ದಾರೆ. ಇವು ತಿಳಿಸಿ ಕೊಡುವ ಬಹಳ ಒಳ್ಳೆಯ ಮಾತುಗಳಾಗಿವೆ. ಭಿನ್ನ-ಭಿನ್ನ ಪ್ರಕಾರದ ಮಾತುಗಳನ್ನು ವಿಚಾರ ಸಾಗರ ಮಂಥನ ಮಾಡಿ ತಿಳಿಸುತ್ತಾರೆ. ಇದೇ ನಿಮ್ಮ ವ್ಯಾಪಾರವಾಯಿತು. ನೀವು ಪತಿತರನ್ನು ಪಾವನ ಮಾಡುವವರಾಗಿದ್ದೀರಿ. ಪಾರಲೌಕಿಕ ತಂದೆಯು ಈಗ ಹೇಳುತ್ತಾರೆ - ಪಾವನರಾಗಿ, ಈಗ ವಿನಾಶವು ಸಮ್ಮುಖದಲ್ಲಿ ನಿಂತಿದೆ ಅಂದಮೇಲೆ ಈಗ ಏನು ಮಾಡಬೇಕು? ಖಂಡಿತವಾಗಿಯೂ ಪಾರಲೌಕಿಕ ತಂದೆಯ ಮತದಂತೆ ನಡೆಯಬೇಕಲ್ಲವೆ. ಪ್ರದರ್ಶನಿಯಲ್ಲಿ ಈ ಪ್ರತಿಜ್ಞೆಯನ್ನೂ ಬರೆಯಬೇಕು - ಪಾರಲೌಕಿಕ ತಂದೆಯನ್ನು ಫಾಲೋ ಮಾಡುತ್ತೇವೆ, ಪತಿತರಾಗುವುದನ್ನು ಬಿಡುತ್ತೇವೆ. ಬರೆಯಿರಿ - ತಂದೆಯಿಂದ ಗ್ಯಾರಂಟಿ ತೆಗೆದುಕೊಳ್ಳುತ್ತೇವೆ, ಎಲ್ಲವೂ ಪವಿತ್ರತೆಯ ಮಾತಾಗಿದೆ. ನೀವು ಮಕ್ಕಳಿಗೆ ದಿನ-ರಾತ್ರಿ ಖುಷಿಯಿರಬೇಕು - ತಂದೆಯು ನಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ. ತಂದೆ ಮತ್ತು ಆಸ್ತಿ. ನೀವೀಗ ತಿಳಿದುಕೊಂಡಿದ್ದೀರಿ – ಶಿವ ಜಯಂತಿಯೆಂದರೆ ಭಾರತದ ಸ್ವರ್ಗ ಜಯಂತಿಯಾಗಿದೆ. ಗೀತೆಯೇ ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ, ಗೀತಾ ಮಾತೆಯಾಗಿದೆ. ಆಸ್ತಿಯಂತೂ ತಂದೆಯಿಂದಲೇ ಸಿಗುವುದು. ಗೀತೆಯ ರಚಯಿತನು ಶಿವ ತಂದೆಯೇ ಆಗಿದ್ದಾರೆ. ಪಾರಲೌಕಿಕ ತಂದೆಯಿಂದ ಪಾವನರಾಗುವ ಆಸ್ತಿಯು ಸಿಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ - ಇದನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಬೇಕಾಗಿದೆ. ಯಾವುದೇ ಛೀ ಛೀ ಹವ್ಯಾಸಗಳನ್ನು ಮಾಡಿಕೊಳ್ಳಬಾರದು, ಅವುಗಳನ್ನು ಕಳೆಯಬೇಕಾಗಿದೆ. ವಿಕಾರದ ವಿಚಾರವು ಅಂಶ ಮಾತ್ರವೂ ಬರಬಾರದು.
2. ಜೀವಿಸಿದ್ದಂತೆಯೇ ಶರೀರದ ಭಾನವನ್ನು ಮರೆತು ತಂದೆಯನ್ನು ನೆನಪು ಮಾಡಬೇಕಾಗಿದೆ. ಭಿನ್ನ-ಭಿನ್ನ ಅಂಶಗಳನ್ನು ವಿಚಾರ ಸಾಗರ ಮಂಥನ ಮಾಡಿ ಪತಿತರನ್ನು ಪಾವನ ಮಾಡುವ ವ್ಯಾಪಾರ ಮಾಡಬೇಕಾಗಿದೆ.
ಓಂ ಶಾಂತಿ. ಇದು ಮನೆಯೂ ಆಗಿದೆ, ವಿಶ್ವ ವಿದ್ಯಾಲಯವೂ ಆಗಿದೆ, ಸಂಸ್ಥೆಯೂ ಆಗಿದೆ. ನೀವು ಮಕ್ಕಳಿಗೆ ತಿಳಿದಿದೆ - ಇವರು ಶಿವ ತಂದೆಯಾಗಿದ್ದಾರೆ, ಆತ್ಮಗಳು ಸಾಲಿಗ್ರಾಮಗಳಾಗಿದ್ದೀರಿ, ಯಾರಿಗೆ ಈ ಶರೀರವಿದೆ, ನನ್ನ ಆತ್ಮವೆಂದು ಶರೀರವು ಹೇಳುವುದಿಲ್ಲ. ನನ್ನ ಶರೀರವೆಂದು ಆತ್ಮವು ಹೇಳುತ್ತದೆ, ಆತ್ಮ ಅವಿನಾಶಿ, ಶರೀರ ವಿನಾಶಿಯಾಗಿದೆ. ನೀವೀಗ ಆತ್ಮವನ್ನು ತಿಳಿದುಕೊಂಡಿದ್ದೀರಿ. ನಮ್ಮ ತಂದೆಯು ಶಿವನಾಗಿದ್ದಾರೆ, ಅವರು ಪರಮಪಿತನಾಗಿದ್ದಾರೆ. ಆತ್ಮಕ್ಕೆ ಗೊತ್ತಿದೆ, ಅವರು ನಮ್ಮ ಪಾರಲೌಕಿಕ ತಂದೆಯಾಗಿದ್ದಾರೆ, ಪರಮ ಶಿಕ್ಷಕ, ಪರಮ ಸದ್ಗುರುವೂ ಆಗಿದ್ದಾರೆ. ಭಕ್ತಿಮಾರ್ಗದಲ್ಲಿಯೂ ಓ ಗಾಡ್ಫಾದರ್ ಎಂದು ಕರೆಯುತ್ತಾರೆ, ಶರೀರ ಬಿಡುವ ಸಮಯದಲ್ಲಿಯೂ ಹೇ ಭಗವಂತ, ಹೇ ಈಶ್ವರ ಎಂದು ಹೇಳುತ್ತಾರೆ, ಕರೆಯುತ್ತಾರಲ್ಲವೆ. ಆದರೆ ಯಾರ ಬುದ್ಧಿಯಲ್ಲಿಯೂ ಯಥಾರ್ಥ ರೀತಿಯಿಂದ ಕುಳಿತುಕೊಳ್ಳುವುದಿಲ್ಲ. ತಂದೆಯಂತೂ ಎಲ್ಲಾ ಆತ್ಮರಿಗೂ ಒಬ್ಬರೇ ಆದರು. ಮತ್ತೆ ಹೇ ಪತಿತಪಾವನ ಎಂದು ಹೇಳಲಾಗುತ್ತದೆ ಅಂದಮೇಲೆ ಅವರು ಗುರುವೂ ಆದರು. ದುಃಖದಿಂದ ನಮ್ಮನ್ನು ಮುಕ್ತ ಮಾಡಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ ಅಂದಮೇಲೆ ತಂದೆಯೂ ಆದರು ಮತ್ತು ಪತಿತ ಪಾವನ ಸದ್ಗುರುವೂ ಆದರು. ಸೃಷ್ಟಿಯು ಹೇಗೆ ಸುತ್ತುತ್ತದೆ? ಮನುಷ್ಯರು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಬೇಹದ್ದಿನ ಚರಿತ್ರೆ-ಭೂಗೋಳವನ್ನು ತಿಳಿಸುತ್ತಾರೆ ಆದ್ದರಿಂದ ಪರಮ ಶಿಕ್ಷಕನೂ ಆದರು. ಅಜ್ಞಾನ ಕಾಲದಲ್ಲಿ ತಂದೆಯೇ ಬೇರೆ, ಶಿಕ್ಷಕನೇ ಬೇರೆ, ಗುರುವೇ ಬೇರೆಯಿರುತ್ತಾರೆ. ಈ ಬೇಹದ್ದಿನ ತಂದೆ, ಶಿಕ್ಷಕ, ಗುರು ಒಬ್ಬರೇ ಆಗಿದ್ದಾರೆ, ಎಷ್ಟೊಂದು ಅಂತರವಾಯಿತಲ್ಲವೆ. ಬೇಹದ್ದಿನ ತಂದೆಯು ಮಕ್ಕಳಿಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಲೌಕಿಕ ತಂದೆಯೂ ಸಹ ಹದ್ದಿನ ಆಸ್ತಿಯನ್ನು ಕೊಡುತ್ತಾರೆ, ಆ ವಿದ್ಯೆಯೂ ಹದ್ದಿನದಾಗಿದೆ. ವಿಶ್ವದ ಚರಿತ್ರೆ-ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರು ರಾಜ್ಯವನ್ನು ಹೇಗೆ ಪಡೆದರು? ಅವರ ರಾಜ್ಯವು ಎಷ್ಟು ಸಮಯ ಹಿಡಿಸಿತು? ಮತ್ತೆ ತ್ರೇತಾದ ರಾಮ-ಸೀತೆಯು ಎಷ್ಟು ಸಮಯ ರಾಜ್ಯ ಮಾಡಿದರು? ಏನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಬೇಹದ್ದಿನ ತಂದೆಯು ನಮಗೆ ಓದಿಸಲು ಬಂದಿದ್ದಾರೆ, ತಂದೆಯು ಸದ್ಗತಿಯ ಮಾರ್ಗವನ್ನು ತಿಳಿಸುತ್ತಾರೆ. ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗುತ್ತೀರಿ, ಈಗ ಪಾವನರಾಗಬೇಕಾಗಿದೆ. ಇದು ತಮೋಪ್ರಧಾನ ಪ್ರಪಂಚವಾಗಿದೆ, ಸತೋ-ರಜೋ-ತಮೋದಲ್ಲಿ ಪ್ರತಿಯೊಂದು ವಸ್ತು ಬರುತ್ತದೆ. ಈ ಸೃಷ್ಟಿಗೂ ಆಯಸ್ಸು ಇದೆ, ಅದು ಹೊಸದರಿಂದ ಹಳೆಯದು, ಮತ್ತೆ ಹಳೆಯದರಿಂದ ಹೊಸದಾಗುತ್ತದೆ. ಇದನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ. ಸತ್ಯಯುಗದಲ್ಲಿ ಭಾರತವೇ ಇತ್ತು, ಅಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು. ಒಳ್ಳೆಯದು - ಮತ್ತೇನಾಯಿತು? ಅವರು ಪುನರ್ಜನ್ಮವನ್ನು ತೆಗೆದುಕೊಂಡರು. ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ ಬಂದರು. ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಂಡರು. ಭಾರತದಲ್ಲಿ 5000 ವರ್ಷಗಳ ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಅಲ್ಲಿ ಮನುಷ್ಯರ ಆಯಸ್ಸು ಅಂದಾಜು 125-150 ವರ್ಷಗಳಿರುತ್ತದೆ, ಅದಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ. ಅಕಾಲಮೃತ್ಯು ಎಂದೂ ಆಗುವುದಿಲ್ಲ. ಇದು ಮೃತ್ಯುಲೋಕವಾಗಿದೆ, ಅಮರ ಲೋಕದಲ್ಲಿ ಮನುಷ್ಯರು ಅಮರರಾಗಿರುತ್ತಾರೆ, ಧೀರ್ಘಾಯಸ್ಸು ಇರುತ್ತದೆ. ಸತ್ಯಯುಗದಲ್ಲಿ ಪವಿತ್ರ ಗೃಹಸ್ಥಾಶ್ರಮವಾಗಿತ್ತು, ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಈಗ ವಿಕಾರಿ ಪ್ರಪಂಚವಾಗಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಶಿವ ತಂದೆಯ ಸಂತಾನರಾಗಿದ್ದೇವೆ, ಆಸ್ತಿಯು ಶಿವ ತಂದೆಯಿಂದ ಸಿಗುತ್ತದೆ. ಇವರು ತಾತ, ಅವರು ತಂದೆ, ತಾತನ ಆಸ್ತಿಯು ಸಿಗುತ್ತದೆ. ತಾತನ ಆಸ್ತಿಯ ಮೇಲೆ ಎಲ್ಲರಿಗೆ ಅಧಿಕಾರವಿರುತ್ತದೆ. ಬ್ರಹ್ಮಾರವರಿಗೆ ಪ್ರಜಾಪಿತನೆಂದು ಹೇಳಲಾಗುತ್ತದೆ. ಆಡಂ ಈವ್, ಆದಂ ಬೀಬಿ. ತಂದೆಯು ನಿರಾಕಾರ, ಪರಮಪಿತನಾಗಿದ್ದಾರೆ. ಈ ಪ್ರಜಾಪಿತನು ಸಾಕಾರ ತಂದೆಯಾದರೂ ಇವರಿಗೆ ತಮ್ಮ ಶರೀರವಿದೆ. ಶಿವ ತಂದೆಗೆ ತಮ್ಮ ಶರೀರವಿಲ್ಲ ಅಂದಾಗ ನಿಮಗೆ ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ಆಸ್ತಿಯು ಸಿಗುತ್ತದೆ. ತಾತನ ಆಸ್ತಿಯು ತಂದೆಯ ಮೂಲಕ ಸಿಗುತ್ತದೆಯಲ್ಲವೆ. ಶಿವ ತಂದೆಯಿಂದಲೂ ಬ್ರಹ್ಮಾರವರ ಮೂಲಕ ನೀವು ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು..... ಯಾರು ಮಾಡಿದರು? ಭಗವಂತ. ಗ್ರಂಥದಲ್ಲಿ ಮಹಿಮೆ ಮಾಡುತ್ತಾರಲ್ಲವೆ. ಬಹಳಷ್ಟು ಮಹಿಮೆಯಿದೆ. ಹೇಗೆ ಅಲೀಫನನ್ನು ನೆನಪು ಮಾಡಿದರೆ ಬಾದಶಾಹಿ ನಿಮ್ಮದಾಗುವುದೆಂದು ತಂದೆಯು ಹೇಳುತ್ತಾರೆ. ಅದೇ ರೀತಿ ಗುರುನಾನಕರೂ ಹೇಳುತ್ತಾರೆ - ಸಾಹೇಬನನ್ನು ಜಪಿಸಿದರೆ ಸುಖ ಸಿಗುವುದು. ಆ ನಿರಾಕಾರ ಅಕಾಲಮೂರ್ತಿ ತಂದೆಯದೇ ಮಹಿಮೆ ಹಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಸುಖ ಸಿಗುವುದು. ಈಗ ತಂದೆಯನ್ನೇ ನೆನಪು ಮಾಡುತ್ತೀರಿ. ಯುದ್ಧವು ಮುಕ್ತಾಯವಾದ ಮೇಲೆ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಒಂದೇ ಧರ್ಮವಿರುವುದು. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಭಗವಾನುವಾಚ – ಪತಿತ ಪಾವನ, ಜ್ಞಾನ ಸಾಗರ ಎಂದು ಭಗವಂತನಿಗೆ ಹೇಳಲಾಗುತ್ತದೆ. ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ಯಾವಾಗ ನಾವು ತಂದೆಯ ಮಕ್ಕಳಾಗುತ್ತೇವೆ ಅಂದಮೇಲೆ ನಾವೂ ಸುಖದಲ್ಲಿರಬೇಕು. ಭಾರತವಾಸಿಗಳು ಸತ್ಯಯುಗದಲ್ಲಿದ್ದಿರಿ, ಉಳಿದೆಲ್ಲಾ ಆತ್ಮರು ಶಾಂತಿಧಾಮದಲ್ಲಿದ್ದರು. ಈಗ ಎಲ್ಲಾ ಆತ್ಮರು ಮೇಲಿನಿಂದ ಇಲ್ಲಿ ಬರುತ್ತಿದ್ದಾರೆ. ಮತ್ತೆ ನಾವು ಹೋಗಿ ದೇವಿ-ದೇವತೆಗಳಾಗುತ್ತೇವೆ. ಸ್ವರ್ಗದಲ್ಲಿ ಪಾತ್ರವನ್ನಭಿನಯಿಸುತ್ತೇವೆ. ಈ ಹಳೆಯ ಪ್ರಪಂಚವು ದುಃಖಧಾಮವಾಗಿದೆ. ಹೊಸ ಪ್ರಪಂಚವು ಸುಖಧಾಮವಾಗಿದೆ. ಮನೆಯು ಹಳೆಯದಾದರೆ ಅದರಲ್ಲಿ ಇಲಿ, ಹಾವು ಇತ್ಯಾದಿಗಳು ಬರುತ್ತವೆ. ಈ ಪ್ರಪಂಚವೂ ಅದೇ ರೀತಿಯಿದೆ. ಈ ಕಲ್ಪದ ಆಯಸ್ಸು 5000 ವರ್ಷಗಳಾಗಿವೆ, ಈಗ ಅಂತ್ಯವಾಗಿದೆ, ಗಾಂಧೀಜಿಯೂ ಸಹ ಹೊಸ ಪ್ರಪಂಚ, ಹೊಸ ದೆಹಲಿಯಾಗಲಿ. ರಾಮ ರಾಜ್ಯವಾಗಲಿ ಎಂದು ಬಯಸುತ್ತಿದ್ದರು ಆದರೆ ಇದಂತೂ ತಂದೆಯದೇ ಕರ್ತವ್ಯವಾಗಿದೆ. ದೇವತೆಗಳ ರಾಜ್ಯಕ್ಕೇ ರಾಮ ರಾಜ್ಯವೆಂದು ಹೇಳುತ್ತಾರೆ. ಹೊಸ ಪ್ರಪಂಚದಲ್ಲಿ ಖಂಡಿತವಾಗಿ ಲಕ್ಷ್ಮೀ-ನಾರಾಯಣರ ರಾಜ್ಯವಿರುವುದು. ಮೊದಲು ರಾಧೆ-ಕೃಷ್ಣರಿಬ್ಬರೂ ಬೇರೆ-ಬೇರೆ ರಾಜಧಾನಿಯವರಾಗಿರುತ್ತಾರೆ ಮತ್ತೆ ಅವರ ವಿವಾಹವಾದ ಮೇಲೆ ಲಕ್ಷ್ಮೀ-ನಾರಾಯಣರಾಗುತ್ತಾರೆ ಅಂದಾಗ ಅವಶ್ಯವಾಗಿ ಈ ಸಮಯದಲ್ಲಿಯೇ ಅಂತಹ ಕರ್ಮವನ್ನು ಮಾಡುತ್ತಾರೆ. ತಂದೆಯು ನಿಮಗೆ ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ರಾವಣ ರಾಜ್ಯದಲ್ಲಿ ಮನುಷ್ಯರು ಯಾವುದೇ ಕರ್ಮ ಮಾಡಿದರೂ ಆ ಕರ್ಮವು ವಿಕರ್ಮವಾಗಿ ಬಿಡುತ್ತದೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ, ಗೀತೆಯಲ್ಲಿಯೂ ಇದೆ ಆದರೆ ಹೆಸರನ್ನು ಬದಲಾಯಿಸಿದ್ದಾರೆ. ಇದು ತಪ್ಪಾಗಿದೆ. ಸತ್ಯಯುಗದಲ್ಲಿ ಕೃಷ್ಣ ಜಯಂತಿಯಾಗುತ್ತದೆ. ಶಿವನು ನಿರಾಕಾರ ಪರಮಪಿತನಾಗಿದ್ದಾರೆ. ಕೃಷ್ಣನು ಸಾಕಾರ ಮನುಷ್ಯನಾಗಿದ್ದಾರೆ. ಮೊದಲು ಶಿವ ಜಯಂತಿಯಾಗುತ್ತದೆ ನಂತರ ಕೃಷ್ಣ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ. ಶಿವ ರಾತ್ರಿಯೆಂದು ಹೇಳುತ್ತಾರೆ, ತಂದೆಯು ಬಂದು ಭಾರತಕ್ಕೆ ಸ್ವರ್ಗದ ರಾಜ್ಯವನ್ನು ಕೊಡುತ್ತಾರೆ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುವುದು, ಅದರ ಮಧ್ಯದಲ್ಲಿ ರಕ್ಷಾ ಬಂಧನವಾಗುತ್ತದೆ ಏಕೆಂದರೆ ಪವಿತ್ರತೆಯು ಬೇಕಾಗಿದೆ. ಹಳೆಯ ಪ್ರಪಂಚದ ವಿನಾಶವೂ ಆಗಬೇಕು, ನಂತರ ಯುದ್ಧವಾದಾಗ ಎಲ್ಲರೂ ಸಮಾಪ್ತಿಯಾಗುತ್ತಾರೆ. ನೀವು ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ನೀವು ಈ ಹಳೆಯ ಪ್ರಪಂಚ, ಮೃತ್ಯುಲೋಕಕ್ಕಾಗಿ ಓದುವುದಿಲ್ಲ. ನಿಮ್ಮ ವಿದ್ಯೆಯು ಹೊಸ ಪ್ರಪಂಚ, ಅಮರಲೋಕಕ್ಕಾಗಿ ಇದೆ. ಇಂತಹ ಯಾವುದೇ ಕಾಲೇಜು ಇರುವುದಿಲ್ಲ, ಈಗ ತಂದೆಯು ತಿಳಿಸುತ್ತಾರೆ - ಮೃತ್ಯುಲೋಕದ ಅಂತ್ಯವಾಗಿದೆ ಆದ್ದರಿಂದ ಬೇಗನೆ ಓದಿ ಬುದ್ಧಿವಂತರಾಗಬೇಕಾಗಿದೆ. ಇವರು ತಂದೆಯೂ ಆಗಿದ್ದಾರೆ, ಪತಿತ ಪಾವನನೂ ಆಗಿದ್ದಾರೆ, ಓದಿಸುತ್ತಾರೆ ಆದ್ದರಿಂದ ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಭಗವಾನುವಾಚ ಆಗಿದೆಯಲ್ಲವೆ. ಶ್ರೀಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ, ಕೃಷ್ಣನೂ ಸಹ ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಎಲ್ಲರೂ ಭವಿಷ್ಯಕ್ಕಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಮತ್ತೆ ಯಾರೆಷ್ಟು ಓದುವರೋ ಅಷ್ಟು ಆಸ್ತಿಯು ಸಿಗುವುದು. ಓದದಿದ್ದರೆ ಪದವಿಯು ಕಡಿಮೆಯಾಗಿ ಬಿಡುತ್ತದೆ. ಭಲೆ ಎಲ್ಲಿಯಾದರೂ ಇರಿ, ಓದುತ್ತಾ ಇರಿ. ಮುರುಳಿಯಂತೂ ವಿದೇಶಕ್ಕೂ ಹೋಗುತ್ತದೆ, ತಂದೆಯು ನಿತ್ಯವೂ ಸಾವಧಾನವನ್ನು ಕೊಡುತ್ತಿರುತ್ತಾರೆ - ಮಕ್ಕಳೇ, ತಂದೆಯನ್ನು ನೆನಪು ಮಾಡಿ, ಇದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದು ಬಿಟ್ಟು ಹೋಗುವುದು. ಆತ್ಮವು 100% ಪವಿತ್ರವಾಗಬೇಕಾಗಿದೆ. ಈಗಂತೂ ಅಪವಿತ್ರವಾಗಿದೆ. ಭಕ್ತಿಯನ್ನಂತೂ ಮನುಷ್ಯರು ಬಹಳ ಮಾಡುತ್ತಾರೆ. ತೀರ್ಥ ಯಾತ್ರೆಗಳಿಗೆ, ಮೇಳಗಳಿಗೆ ಲಕ್ಷಾಂತರ ಮನುಷ್ಯರು ಹೋಗುತ್ತಾರೆ. ಇದಂತೂ ಜನ್ಮ-ಜನ್ಮಾಂತರದಿಂದ ನಡೆದು ಬರುತ್ತಿದೆ. ಎಷ್ಟೊಂದು ಮಂದಿರಗಳನ್ನು ಕಟ್ಟಿಸುತ್ತಾರೆ, ಪರಿಶ್ರಮ ಪಡುತ್ತಾರೆ ಆದರೂ ಸಹ ಏಣಿಯನ್ನು ಕೆಳಗಿಳಿಯುತ್ತಾ ಬರುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಏರುವ ಕಲೆಯಿಂದ ಸುಖಧಾಮದಲ್ಲಿ ಹೋಗುತ್ತೇವೆ, ಮತ್ತೆ ನಾವು ಇಳಿಯಬೇಕಾಗಿದೆ. ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೊಸ ಮನೆಯನ್ನು ಕಟ್ಟಿ 10 ವರ್ಷಗಳ ನಂತರ ಅದರ ಸೌಂದರ್ಯವು ಖಂಡಿತ ಕಡಿಮೆಯಾಗಿ ಬಿಡುವುದು. ನೀವು ಹೊಸ ಪ್ರಪಂಚ ಸತ್ಯಯುಗದಲ್ಲಿದ್ದಿರಿ, 1250 ವರ್ಷಗಳ ನಂತರ ರಾಮ ರಾಜ್ಯವು ಆರಂಭವಾಯಿತು. ಈಗಂತೂ ಸಂಪೂರ್ಣ ತಮೋಪ್ರಧಾನರಾಗಿದ್ದೀರಿ. ಎಷ್ಟೊಂದು ಜನಸಂಖ್ಯೆಯಾಗಿ ಬಿಟ್ಟಿದೆ, ಪ್ರಪಂಚವೂ ಹಳೆಯದಾಗಿದೆ, ಅವರಂತೂ ಫ್ಯಾಮಿಲಿ ಪ್ಲಾನಿಂಗ್ನ ಯೋಜನೆ ಮಾಡುತ್ತಿರುತ್ತಾರೆ, ಎಷ್ಟೊಂದು ತಬ್ಬಿಬ್ಬಾಗುತ್ತಿರುತ್ತಾರೆ. ನಾವು ಬರೆಯುತ್ತೇವೆ - ಇದು ಪರಮಾತ್ಮನ ಕರ್ತವ್ಯವೇ ಆಗಿದೆ, ಸತ್ಯಯುಗದಲ್ಲಿ ಕೇವಲ 9-10 ಲಕ್ಷ ಮಂದಿಯೇ ಇರುತ್ತಾರೆ. ಉಳಿದೆಲ್ಲರೂ ತಮ್ಮ ಮಧುರ ಮನೆಗೆ ಹೊರಟು ಹೋಗುತ್ತಾರೆ. ಇದು ಈಶ್ವರನ ಫ್ಯಾಮಿಲಿ ಪ್ಲಾನಿಂಗ್ ಆಗಿದೆ. ಒಂದು ಧರ್ಮದ ಸ್ಥಾಪನೆ ಉಳಿದೆಲ್ಲಾ ಧರ್ಮಗಳ ವಿನಾಶ, ತಂದೆಯು ತಮ್ಮ ಈ ಕರ್ತವ್ಯವನ್ನು ಮಾಡುತ್ತಿದ್ದಾರೆ. ಆ ಮನುಷ್ಯರು ಹೇಳುತ್ತಾರೆ - ಭಲೆ ವಿಕಾರದಲ್ಲಿ ಹೋಗಿ ಆದರೆ ಮಕ್ಕಳಾಗಬಾರದು. ಹೀಗೆ ಮಾಡುತ್ತಾ-ಮಾಡುತ್ತಾ ಏನೂ ಆಗುವುದಿಲ್ಲ. ಈ ಯೋಜನೆಯು ಬೇಹದ್ದಿನ ತಂದೆಯ ಕೈಯಲ್ಲಿದೆ. ತಂದೆಯು ತಿಳಿಸುತ್ತಾರೆ- ನಾನೇ ದುಃಖಧಾಮದಿಂದ ಸುಖಧಾಮವನ್ನಾಗಿ ಮಾಡಲು ಬಂದಿದ್ದೇನೆ. ಪ್ರತೀ 5000 ವರ್ಷಗಳ ನಂತರ ನಾನು ಬರುತ್ತೇನೆ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯಲ್ಲಿ. ಈಗ ಇದು ಸಂಗಮವಾಗಿದೆ ಈಗ ಪತಿತ ಪ್ರಪಂಚದಿಂದ ಪಾವನ ಪ್ರಪಂಚವಾಗುತ್ತದೆ. ಹಳೆಯ ಪ್ರಪಂಚದ ವಿನಾಶ ಮತ್ತು ಹೊಸ ಪ್ರಪಂಚದ ಸ್ಥಾಪನೆ, ಇದು ತಂದೆಯದೇ ಕರ್ತವ್ಯವಾಗಿದೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರು, ಮಹಾರಾಜ-ಮಹಾರಾಣಿಯಾಗಿದ್ದರು. ಇದನ್ನೂ ನೀವು ತಿಳಿದುಕೊಂಡಿದ್ದೀರಿ. ಈ ಮಾಲೆಯು ಯಾರಿಂದ ಮಾಡಲ್ಪಟ್ಟಿದೆ. ಮಾಲೆಯಲ್ಲಿ ಹೂ ಶಿವ ತಂದೆಯಾಗಿದ್ದಾರೆ ನಂತರ ಜೋಡಿ ಮಣಿಗಳು ಬ್ರಹ್ಮಾ ಸರಸ್ವತಿಯಾಗಿದ್ದಾರೆ. ಅವರದೇ ಈ ಮಾಲೆಯಾಗಿದೆ. ಅವರು ವಿಶ್ವವನ್ನು ನರಕದಿಂದ ಸ್ವರ್ಗ, ಪತಿತರಿಂದ ಪಾವನ ಮಾಡುತ್ತಾರೆ. ಯಾರು ಸರ್ವೀಸ್ ಮಾಡಿ ಹೋಗುತ್ತಾರೆಯೋ ಅವರದೇ ನೆನಪಿರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಇವರು ಸತ್ಯಯುಗದಲ್ಲಿ ಪವಿತ್ರರಾಗಿದ್ದರಲ್ಲವೆ. ಪ್ರವೃತ್ತಿ ಮಾರ್ಗವು ಪವಿತ್ರವಾಗಿತ್ತು, ಈಗಂತೂ ಪತಿತರಾಗಿದ್ದಾರೆ. ಪತಿತ ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಸತ್ಯಯುಗದಲ್ಲಿ ಈ ರೀತಿ ಕರೆಯುವುದಿಲ್ಲ. ಸುಖದಲ್ಲಿ ಯಾರೂ ತಂದೆಯ ಸ್ಮರಣೆ ಮಾಡುವುದಿಲ್ಲ, ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ. ತಂದೆಯು ಮುಕ್ತಿದಾತ, ದಯಾಹೃದಯಿ, ಆನಂದ ಸಾಗರನಾಗಿದ್ದಾರೆ. ಬಂದು ಎಲ್ಲರಿಗೂ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ಬಂದು ನಮ್ಮನ್ನು ಮಧುರ ಮನೆಗೆ ಕರೆದುಕೊಂಡು ಹೋಗಿ ಎಂದು ಅವರನ್ನೇ ಕರೆಯುತ್ತಾರೆ. ಈಗ ಸುಖವಿಲ್ಲ, ಇದು ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ. ಸತ್ಯಯುಗದಲ್ಲಂತೂ ರಾಜ-ರಾಣಿ, ಪ್ರಜೆಗಳಿರುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಹೇಗೆ ವಿಶ್ವದ ಮಾಲೀಕರಾಗುತ್ತೀರಿ, ಅಲ್ಲಿ ನಿಮ್ಮ ಬಳಿ ಅಪಾರ ಲೆಕ್ಕವಿಲ್ಲದಷ್ಟು ಹಣವಿರುತ್ತದೆ, ಚಿನ್ನದ ಇಟ್ಟಿಗೆಗಳಿಂದ ಮನೆ ಕಟ್ಟುತ್ತಾರೆ. ಯಂತ್ರದಿಂದ ಚಿನ್ನದ ಇಟ್ಟಿಗೆಗಳು ತಯಾರಾಗುತ್ತವೆ. ಮತ್ತೆ ಅವುಗಳಲ್ಲಿಯೂ ವಜ್ರ ರತ್ನಗಳನ್ನು ಜೋಡಿಸುತ್ತಾರೆ. ದ್ವಾಪರದಲ್ಲಿಯೂ ಎಷ್ಟೊಂದು ವಜ್ರಗಳಿತ್ತು, ಲೂಟಿ ಮಾಡಿಕೊಂಡು ಹೋದರು. ಈಗಂತೂ ಚಿನ್ನವೇ ಕಾಣಿಸುತ್ತಿಲ್ಲ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ಬರುತ್ತೇನೆ. ಹಳೆಯ ಪ್ರಪಂಚದ ವಿನಾಶಕ್ಕಾಗಿ ಈ ಅಣು ಬಾಂಬುಗಳು ತಯಾರಾಗಿವೆ, ಇದು ವಿಜ್ಞಾನವಾಗಿದೆ. ಬುದ್ಧಿ ಶಕ್ತಿಯಿಂದ ಇಂತಿಂತಹ ವಸ್ತುಗಳನ್ನು ತಯಾರು ಮಾಡಿದ್ದಾರೆ. ಯಾವುದರಿಂದ ತಮ್ಮದೇ ಕುಲದ ವಿನಾಶ ಮಾಡಿಕೊಳ್ಳುತ್ತಾರೆ. ಇವನ್ನು ಕೇವಲ ಇಟ್ಟುಕೊಳ್ಳುವುದಕ್ಕಾಗಿ ತಯಾರಿಸುವುದಿಲ್ಲ. ಇದು ರಿಹರ್ಸಲ್ ಆಗುತ್ತಿರುತ್ತದೆ. ಎಲ್ಲಿಯವರೆಗೆ ರಾಜಧಾನಿಯು ಸ್ಥಾಪನೆಯಾಗುವುದಿಲ್ಲವೋ ಅಲ್ಲಿಯವರೆಗೆ ಯುದ್ಧಗಳಾಗುವುದಿಲ್ಲ. ತಯಾರಿಗಳಂತೂ ನಡೆಯುತ್ತಿವೆ, ಅದರ ಜೊತೆಗೆ ಪ್ರಾಕೃತಿಕ ವಿಕೋಪಗಳೂ ಆಗುವವು. ಇಷ್ಟೆಲ್ಲಾ ಜನಸಂಖ್ಯೆಯಿರುವುದಿಲ್ಲ.
ಈಗ ಮಕ್ಕಳು ಈ ಹಳೆಯ ಪ್ರಪಂಚವನ್ನು ಮರೆತು ಬಿಡಬೇಕಾಗಿದೆ. ಮಧುರ ಮನೆ, ಸ್ವರ್ಗದ ರಾಜ್ಯ ಭಾಗ್ಯವನ್ನು ನೆನಪು ಮಾಡಬೇಕಾಗಿದೆ. ಹೇಗೆ ಹೊಸ ಮನೆಯನ್ನು ಕಟ್ಟಿಸಿದಾಗ ಬುದ್ಧಿಯಲ್ಲಿ ಹೊಸ ಮನೆಯೇ ನೆನಪಿರುತ್ತದೆಯಲ್ಲವೆ. ಈಗಲೂ ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ. ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ. ಆತ್ಮರೆಲ್ಲರೂ ಹೊರಟು ಹೋಗುವರು. ಬಾಕಿ ಶರೀರಗಳು ಇಲ್ಲಿ ಸಮಾಪ್ತಿಯಾಗುತ್ತವೆ. ಆತ್ಮವು ತಂದೆಯ ನೆನಪಿನಿಂದ ಪವಿತ್ರವಾಗುತ್ತದೆ. ಪವಿತ್ರರು ಖಂಡಿತವಾಗಿಯೂ ಆಗಬೇಕಾಗಿದೆ. ದೇವತೆಗಳು ಪವಿತ್ರರಲ್ಲವೆ, ಅವರ ಮುಂದೆ ಎಂದೂ ಬೀಡಿ, ತಂಬಾಕು ಇತ್ಯಾದಿಗಳನ್ನು ಇಡುವುದಿಲ್ಲ, ಅವರು ವೈಷ್ಣವರಾಗಿದ್ದಾರೆ. ವಿಷ್ಣು ಪುರಿ ಎಂದು ಹೇಳಲಾಗುತ್ತದೆ ಅದು ನಿರ್ವಿಕಾರಿ ಪ್ರಪಂಚವಾಗಿದೆ, ಇದು ವಿಕಾರಿ ಪ್ರಪಂಚವಾಗಿದೆ. ಈಗ ನಿರ್ವಿಕಾರಿ ಪ್ರಪಂಚದಲ್ಲಿ ಹೋಗಬೇಕಾಗಿದೆ, ಇನ್ನು ಸ್ವಲ್ಪವೇ ಸಮಯವಿದೆ. ಇದನ್ನಂತೂ ಅವರೂ ಸ್ವಯಂ ತಿಳಿದುಕೊಳ್ಳುತ್ತಾರೆ, ಅಣು ಬಾಂಬುಗಳಿಂದ ಎಲ್ಲರೂ ಸಮಾಪ್ತಿಯಾಗುತ್ತಾರೆ ಎಂದು. ಯುದ್ಧವಂತೂ ನಡೆಯಲೇಬೇಕಾಗಿದೆ. ನಮಗೆ ಯಾರೋ ಪ್ರೇರಣೆ ಕೊಡುವವರಿದ್ದಾರೆ ಅದರಿಂದ ನಾವು ತಯಾರಿಸುತ್ತಿದ್ದೇವೆಂದು ಹೇಳುತ್ತಾರೆ. ನಮ್ಮದೇ ಕುಲದ ವಿನಾಶವಾಗುತ್ತಿದೆ ಎಂಬುದೂ ಸಹ ತಿಳಿದಿದೆ ಆದರೆ ಅವನ್ನು ತಯಾರಿಸದೇ ಇರಲು ಸಾಧ್ಯವಿಲ್ಲ. ಶಂಕರನ ಮೂಲಕ ವಿನಾಶ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ವಿನಾಶವು ಸಮ್ಮುಖದಲ್ಲಿ ನಿಂತಿದೆ. ಜ್ಞಾನ ಯಜ್ಞದಿಂದ ಈ ವಿನಾಶದ ಜ್ವಾಲೆಯು ಪ್ರಜ್ವಲಿತವಾಗಿದೆ. ನೀವೀಗ ಸ್ವರ್ಗದ ಮಾಲೀಕರಾಗುವುದಕ್ಕಾಗಿ ಓದುತ್ತಿದ್ದೀರಿ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಹೊಸದಾಗಿ ಬಿಡುವುದು. ಈ ಚಕ್ರವು ಸುತ್ತುತ್ತಿರುತ್ತದೆ. ಚರಿತ್ರೆಯ ಪುನರಾವರ್ತನೆ. ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ನಂತರ ಚಂದ್ರವಂಶಿ ಕ್ಷತ್ರಿಯ ಧರ್ಮ, ಅವರ ನಂತರ ಇಸ್ಲಾಮಿ ಬೌದ್ಧಿ ಮೊದಲಾದವರು ಬಂದರು ಮತ್ತೆ ಅವಶ್ಯವಾಗಿ ಮೊದಲ ನಂಬರಿನವರು ಬರುವರು ಮತ್ತೆಲ್ಲರೂ ವಿನಾಶವಾಗುವರು. ನೀವು ಮಕ್ಕಳಿಗೆ ಯಾರು ಓದಿಸುತ್ತಿದ್ದಾರೆ? ಆ ನಿರಾಕಾರ ಶಿವ ತಂದೆ. ಅವರೇ ಶಿಕ್ಷಕ ಸದ್ಗುರುವಾಗಿದ್ದಾರೆ. ಬರುತ್ತಿದ್ದಂತೆಯೇ ವಿದ್ಯೆಯನ್ನಾರಂಭಿಸುತ್ತಾರೆ ಆದ್ದರಿಂದ ಶಿವ ಜಯಂತಿಯೇ ಗೀತಾ ಜಯಂತಿಯೆಂದು ಬರೆಯಲ್ಪಟ್ಟಿದೆ. ಗೀತಾ ಜಯಂತಿಯೇ ಶ್ರೀಕೃಷ್ಣ ಜಯಂತಿಯಾಗಿದೆ. ಶಿವ ತಂದೆಯು ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಸತ್ಯಯುಗಕ್ಕೆ ಕೃಷ್ಣ ಪುರಿಯೆಂದು ಹೇಳಲಾಗುತ್ತದೆ, ಈಗ ನಿಮಗೆ ಓದಿಸುವವರು ಯಾವುದೇ ಸಾಧು-ಸಂತ ಮನುಷ್ಯರಲ್ಲ, ಇವರು ದುಃಖಹರ್ತ-ಸುಖಕರ್ತ ಬೇಹದ್ದಿನ ತಂದೆಯಾಗಿದ್ದಾರೆ. 21 ಜನ್ಮಗಳಿಗಾಗಿ ನಿಮಗೆ ಆಸ್ತಿಯನ್ನು ಕೊಡುತ್ತಾರೆ. ವಿನಾಶವಂತೂ ಆಗಿಯೇ ಆಗುವುದು. ಈ ಸಮಯಕ್ಕಾಗಿಯೇ ಹೇಳಲಾಗುತ್ತದೆ - ಕೆಲವರದು ಮಣ್ಣು ಪಾಲಾಯಿತು, ಕೆಲವರದು ರಾಜನು ತಿಂದನು.... ಕಳ್ಳತನವು ಬಹಳ ಆಗುವುದು, ಬೆಂಕಿಯೂ ಬೀಳುವುದು. ಈ ಯಜ್ಞದಲ್ಲಿ ಎಲ್ಲವೂ ಸ್ವಾಹಾ ಆಗುವುದು. ಈಗಿನ್ನೂ ಸ್ವಲ್ಪ-ಸ್ವಲ್ಪ ಬೆಂಕಿ ಬೀಳುತ್ತದೆ ಮತ್ತೆ ತಣ್ಣಗಾಗುತ್ತದೆ. ಇನ್ನೂ ಸ್ವಲ್ಪ ಸಮಯವಿದೆ. ಎಲ್ಲರೂ ಪರಸ್ಪರ ಹೊಡೆದಾಡುತ್ತಾರೆ, ಆಗ ಬಿಡಿಸುವವರು ಯಾರೂ ಇರುವುದಿಲ್ಲ. ರಕ್ತದ ನದಿಗಳು ಹರಿದ ನಂತರ ಹಾಲಿನ ನದಿಗಳು ಹರಿಯುವವು. ಇದಕ್ಕೆ ನಿರಪರಾಧಿಗಳ ಕೊಲೆ ಅರ್ಥಾತ್ ರಕ್ತ ಕ್ರಾಂತಿ ಎಂದು ಹೇಳಲಾಗುತ್ತದೆ. ಮಕ್ಕಳು ಸಾಕ್ಷಾತ್ಕಾರ ಮಾಡಿದ್ದೀರಿ ಮತ್ತೆ ಈ ಕಣ್ಣುಗಳಿಂದಲೂ ನೋಡುತ್ತೀರಿ. ವಿನಾಶಕ್ಕೆ ಮೊದಲು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದರಿಂದ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗಿ ಬಿಡಲಿ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ನಿಮ್ಮನ್ನು ತಯಾರು ಮಾಡುತ್ತಿದ್ದಾರೆ. ರಾಜಧಾನಿಯು ಪೂರ್ಣ ಸ್ಥಾಪನೆಯಾಗಿ ಬಿಡುವುದು ನಂತರ ವಿನಾಶವಾಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಿಷ್ಣು ಪುರಿಯಲ್ಲಿ ಹೋಗಲು ಸ್ವಯಂನ್ನು ಅರ್ಹನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಸಂಪೂರ್ಣ ಪಾವನರಾಗಬೇಕಾಗಿದೆ. ಅಶುದ್ಧ ಆಹಾರ-ಪಾನೀಯಗಳನ್ನು ತ್ಯಾಗ ಮಾಡಬೇಕಾಗಿದೆ. ವಿನಾಶಕ್ಕೆ ಮೊದಲು ತಮ್ಮ ಸರ್ವಸ್ವವನ್ನೂ ಸಫಲ ಮಾಡಿಕೊಳ್ಳಬೇಕಾಗಿದೆ.
2. ಬೇಗ ಬೇಗನೆ ಓದಿ ಬುದ್ಧಿವಂತರಾಗಬೇಕಾಗಿದೆ, ಯಾವುದೇ ವಿಕರ್ಮವಾಗದಿರಲಿ – ಇದರ ಮೇಲೆ ಗಮನವನ್ನೀಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಮ್ಮ ಆತ್ಮಿಕ ತಂದೆಯ ಮಹಿಮೆಯನ್ನು ಕೇಳಿದಿರಿ, ಅವರು ಕೇವಲ ಹಾಡುತ್ತಾ ಇರುತ್ತಾರೆ, ನೀವಿಲ್ಲಿ ಸಮ್ಮುಖದಲ್ಲಿ ಆ ತಂದೆಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ- ತಂದೆಯು ನಮ್ಮ ಮುಖಾಂತರವೇ ಭಾರತವನ್ನು ಸುಖಧಾಮವನ್ನಾಗಿ ಮಾಡುತ್ತಿದ್ದಾರೆ. ಯಾರ ಮುಖಾಂತರ ಮಾಡುತ್ತಿದ್ದಾರೆಯೋ ಅವಶ್ಯವಾಗಿ ಅವರೇ ಸುಖಧಾಮದ ಮಾಲೀಕರಾಗುತ್ತಾರೆ. ಮಕ್ಕಳಿಗಂತೂ ಬಹಳ ಖುಷಿಯಿರಬೇಕು, ತಂದೆಯ ಮಹಿಮೆಯು ಅಪರಮಪಾರವಾಗಿದೆ. ಅವರಿಂದ ನಾವು ಆಸ್ತಿಯನ್ನು ಪಡೆಯುತ್ತಿದ್ದೇವೆ. ಈಗ ನೀವು ಮಕ್ಕಳ ಮೇಲೆ ಮತ್ತು ಇಡೀ ಪ್ರಪಂಚದ ಮೇಲೆ ಈಗ ಬೃಹಸ್ಪತಿಯ ಅವಿನಾಶಿ ದೆಶೆಯಿದೆ. ಈಗ ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಎಲ್ಲರ ಮೇಲೆ ಈಗ ಬೃಹಸ್ಪತಿ ದೆಶೆಯು ಕುಳಿತುಕೊಳ್ಳಲಿದೆ. ಏಕೆಂದರೆ ನೀವೀಗ 16 ಕಲಾ ಸಂಪೂರ್ಣರಾಗುತ್ತೀರಿ. ಈ ಸಮಯದಲ್ಲಂತೂ ಯಾವುದೇ ಕಲೆಯಿಲ್ಲ. ಮಕ್ಕಳಿಗೆ ಬಹಳ ಖುಷಿಯಿರಬೇಕು. ಇಲ್ಲಿ ಖುಷಿಯಿದ್ದು ಹೊರಗಡೆ ಹೋಗುತ್ತಿದ್ದಂತೆಯೇ ಅದು ಮಾಯವಾಗಿ ಬಿಡಬಾರದು. ಯಾರ ಮಹಿಮೆಯನ್ನು ಹಾಡುತ್ತಾರೆಯೋ ಅವರು ಈಗ ನಿಮ್ಮ ಬಳಿ ಪ್ರತ್ಯಕ್ಷವಾಗಿದ್ದಾರೆ. ತಂದೆಯು ತಿಳಿಸುತ್ತಾರೆ - 5000 ವರ್ಷಗಳ ಮೊದಲೂ ಸಹ ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟು ಹೋಗಿದ್ದೆನು, ನೀವೀಗ ನೋಡುತ್ತೀರಿ - ಕ್ರಮೇಣವಾಗಿ ಎಲ್ಲರೂ ಕೂಗುತ್ತಿರುತ್ತಾರೆ. ನಿಮ್ಮ ಘೋಷಣಾ ವಾಕ್ಯಗಳು ಪ್ರಸಿದ್ಧವಾಗುತ್ತವೆ. ಹೇಗೆ ಇಂಧಿರಾ ಗಾಂಧಿಯು ಹೇಳುತ್ತಿದ್ದರು – ಒಂದು ಧರ್ಮ, ಒಂದು ಭಾಷೆ, ಒಂದು ರಾಜ್ಯವಿರಲಿ ಎಂದು, ಅವರಲ್ಲಿಯೂ ಆತ್ಮವೇ ಹೇಳುತ್ತದೆಯಲ್ಲವೆ. ಆತ್ಮಕ್ಕೆ ಗೊತಿದೆ - ಅವಶ್ಯವಾಗಿ ಭಾರತದಲ್ಲಿ ಒಂದು ರಾಜಧಾನಿಯಿತ್ತು, ಅದು ಈಗ ಸಮ್ಮುಖದಲ್ಲಿ ನಿಂತಿದೆ. ಇದು ಎಂದಾದರೂ ಸಮಾಪ್ತಿಯಾಗಬಹುದೆಂದು ತಿಳಿಯುತ್ತಾರೆ. ಇದೇನೂ ಹೊಸ ಮಾತಲ್ಲ. ಭಾರತವು ಪುನಃ 16 ಕಲಾ ಸಂಪೂರ್ಣ ಆಗಬೇಕಾಗಿದೆ. ನಿಮಗೆ ಗೊತ್ತಿದೆ, ನಾವು ಈ ಯೋಗ ಬಲದಿಂದ 16 ಕಲಾ ಸಂಪೂರ್ಣರಾಗುತ್ತಿದ್ದೇವೆ. ದಾನ ಕೊಟ್ಟರೆ ಗ್ರಹಣವು ಬಿಡುವುದೆಂದು ಹೇಳುತ್ತಾರಲ್ಲವೆ. ತಂದೆಯೂ ಹೇಳುತ್ತಾರೆ - ವಿಕಾರೀ ಅವಗುಣಗಳ ದಾನ ಕೊಡಿ, ಇದು ರಾವಣ ರಾಜ್ಯವಾಗಿದೆ. ತಂದೆಯು ಬಂದು ಇದರಿಂದ ಬಿಡಿಸುತ್ತಾರೆ. ಇದರಲ್ಲಿಯೂ ಕಾಮ ವಿಕಾರವು ಬಹಳ ದೊಡ್ಡ ಅವಗುಣವಾಗಿದೆ. ನೀವು ದೇಹಾಭಿಮಾನಿಯಾಗಿ ಬಿಟ್ಟಿದ್ದೀರಿ, ಈಗ ದೇಹೀ-ಅಭಿಮಾನಿಯಾಗಬೇಕಾಗಿದೆ, ಶರೀರದ ಭಾನವನ್ನೂ ಬಿಡಬೇಕಾಗುತ್ತದೆ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಳ್ಳುತ್ತೀರಿ, ಪ್ರಪಂಚದವರಿಗೆ ಗೊತ್ತಿಲ್ಲ. ಯಾವ ಭಾರತವು 16 ಕಲಾ ಸಂಪೂರ್ಣನಾಗಿತ್ತೋ, ಸಂಪೂರ್ಣ ದೇವತೆಗಳ ರಾಜ್ಯವಿತ್ತೋ ಅದಕ್ಕೆ ಈಗ ಗ್ರಹಣವು ಹಿಡಿದಿದೆ. ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಿತ್ತಲ್ಲವೆ. ಭಾರತವು ಸ್ವರ್ಗವಾಗಿತ್ತು, ಈಗ ವಿಕಾರಗಳ ಗ್ರಹಣ ಹಿಡಿದಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ದಾನವನ್ನು ಕೊಟ್ಟು ಬಿಡಿ ಆಗ ಗ್ರಹಣವು ಬಿಟ್ಟು ಹೋಗುತ್ತದೆ. ಈ ಕಾಮ ವಿಕಾರವೇ ಬೀಳಿಸುವಂತದ್ದಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ದಾನವನ್ನು ಕೊಟ್ಟಿದ್ದೇ ಆದರೆ ನೀವು 16 ಕಲಾ ಸಂಪೂರ್ಣರಾಗಿ ಬಿಡುತ್ತೀರಿ ಇಲ್ಲದಿದ್ದರೆ ಆಗುವುದಿಲ್ಲ. ಆತ್ಮಗಳಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆಯಲ್ಲವೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ. ನಿಮ್ಮ ಆತ್ಮದಲ್ಲಿ ಎಷ್ಟೊಂದು ಪಾತ್ರವಿದೆ! ನೀವು ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಇದು ಬೇಹದ್ದಿನ ನಾಟಕವಾಗಿದೆ. ಲೆಕ್ಕವಿಲ್ಲದಷ್ಟು ಪಾತ್ರಧಾರಿಗಳಿದ್ದಾರೆ, ಇದರಲ್ಲಿ ಫಸ್ಟ್ಕ್ಲಾಸ್ ಪಾತ್ರಧಾರಿಗಳು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಇವರದು ನಂಬರ್ವನ್ ಪಾತ್ರವಾಗಿದೆ. ವಿಷ್ಣುವಿನಿಂದ ಬ್ರಹ್ಮಾ-ಸರಸ್ವತಿ ಮತ್ತೆ ಬ್ರಹ್ಮಾ-ಸರಸ್ವತಿಯಿಂದ ವಿಷ್ಣುವಾಗುತ್ತಾರೆ. ಇವರು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಇಡೀ ಚಕ್ರವು ಬುದ್ಧಿಯಲ್ಲಿ ಬಂದು ಬಿಡುತ್ತದೆ. ಶಾಸ್ತ್ರಗಳನ್ನು ಓದುವುದರಿಂದ ಯಾರೂ ತಿಳಿದುಕೊಳ್ಳುವುದೇ ಇಲ್ಲ. ಅವರಂತೂ ಕಲ್ಪದ ಆಯಸ್ಸನ್ನೇ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ ಆಗ ಸ್ವಸ್ತಿಕ ಚಿತ್ರವು ಆಗಲು ಸಾಧ್ಯವಿಲ್ಲ. ವ್ಯಾಪಾರಿಗಳು ಲೆಕ್ಕವನ್ನು ಬರೆಯುವಾಗ ಅದರ ಮೇಲೆ ಸ್ವಸ್ತಿಕ ಚಿತ್ರವನ್ನು ಬಿಡಿಸುತ್ತಾರೆ, ಗಣೇಶನ ಪೂಜೆ ಮಾಡುತ್ತಾರೆ. ಇದಂತೂ ಬೇಹದ್ದಿನ ಲೆಕ್ಕವಾಗಿದೆ. ಸ್ವಸ್ತಿಕದಲ್ಲಿ ನಾಲ್ಕು ಭಾಗಗಳಿರುತ್ತವೆ. ಹೇಗೆ ಜಗನ್ನಾಥ ಪುರಿಯಲ್ಲಿ ಅನ್ನವನ್ನು ತಯಾರಿಸುತ್ತಾರೆ ಅದು ಬೆಂದ ನಂತರ ನಾಲ್ಕು ಭಾಗಗಳಾಗುತ್ತವೆ. ಅಲ್ಲಿ ಅನ್ನದ ನೈವೇದ್ಯವನ್ನೇ ಇಡುತ್ತಾರೆ ಏಕೆಂದರೆ ಅಲ್ಲಿ ಹೆಚ್ಚಿನದಾಗಿ ಅನ್ನವನ್ನೇ ತಿನ್ನುತ್ತಾರೆ. ಶ್ರೀನಾಥ ದ್ವಾರದಲ್ಲಿ ಅನ್ನವನ್ನು ತಯಾರಿಸುವುದಿಲ್ಲ, ಅಲ್ಲಂತೂ ಎಲ್ಲವೂ ಶುದ್ಧ ತುಪ್ಪದಿಂದ ಪಧಾರ್ಥಗಳನ್ನು ತಯಾರಿಸಲಾಗುತ್ತದೆ. ಭೋಜನವನ್ನು ತಯಾರಿಸುವಾಗಲೂ ಬಹಳ ಶುದ್ಧತೆಯಿಂದ ಬಾಯಿಗೆ ಬಟ್ಟೆ ಕಟ್ಟಿಕೊಂಡು ತಯಾರಿಸುತ್ತಾರೆ. ಪ್ರಸಾದವನ್ನು ಬಹಳ ನಿಷ್ಠೆಯಿಂದ ತೆಗೆದುಕೊಂಡು ಹೋಗುತ್ತಾರೆ. ಭೋಗವನ್ನಿಟ್ಟ ನಂತರ ಅದೆಲ್ಲವೂ ಅಲ್ಲಿನ ಮಾರ್ಗದರ್ಶಕರಿಗೆ ಸಿಗುತ್ತದೆ. ಅದನ್ನು ಅಂಗಡಿಯಲ್ಲಿ ಮಾರಾಟಕ್ಕಾಗಿ ಇಡುತ್ತಾರೆ. ಅಲ್ಲಿ ಬಹಳ ಬೇಡಿಕೆಯಿರುತ್ತದೆ. ಇದನ್ನು ಬ್ರಹ್ಮಾ ತಂದೆಯು ನೋಡಿದ್ದಾರೆ. ಈಗ ನೀವು ಮಕ್ಕಳಿಗೆ ಯಾರು ಓದಿಸುತ್ತಿದ್ದಾರೆ? ಅತೀ ಪ್ರಿಯ ತಂದೆಯು ಬಂದು ನಿಮ್ಮ ಸೇವಕನಾಗಿದ್ದಾರೆ, ನಿಮ್ಮ ಸೇವೆ ಮಾಡುತ್ತಿದ್ದಾರೆ. ಇಷ್ಟು ನಶೆಯೇರುತ್ತದೆಯೇ? ನಾವಾತ್ಮರಿಗೆ ತಂದೆಯು ಓದಿಸುತ್ತಾರೆ, ಆತ್ಮವೇ ಎಲ್ಲವನ್ನೂ ಮಾಡುತ್ತದೆಯಲ್ಲವೆ. ಮನುಷ್ಯರು ಆತ್ಮವು ನಿರ್ಲೇಪವೆಂದು ಹೇಳಿ ಬಿಡುತ್ತಾರೆ ಆದರೆ ನಿಮಗೆ ತಿಳಿದಿದೆ - ಆತ್ಮದಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ, ಅದಕ್ಕೆ ನಿರ್ಲೇಪವೆಂದು ಹೇಳುವುದು ರಾತ್ರಿ-ಹಗಲಿನಷ್ಟು ಅಂತರವಾಗಿ ಬಿಡುತ್ತದೆ. ಯಾರಾದರೂ ಚೆನ್ನಾಗಿ ಒಂದು-ಒಂದುವರೆ ತಿಂಗಳು ಇದನ್ನು ತಿಳಿದುಕೊಂಡಾಗ ಈ ಮಾತುಗಳು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತವೆ. ದಿನ-ಪ್ರತಿದಿನ ಬಹಳಷ್ಟು ಅಂಶಗಳನ್ನು ತಿಳಿಸಲಾಗುತ್ತದೆ. ಇದು ಕಸ್ತೂರಿ ತರಹವಿದೆ. ಮಕ್ಕಳಿಗೆ ಯಾವಾಗ ಪೂರ್ಣ ನಿಶ್ಚಯ ಕುಳಿತುಕೊಳ್ಳುವುದೋ ಆಗ ತಿಳಿದುಕೊಳ್ಳುತ್ತಾರೆ - ಅವಶ್ಯವಾಗಿ ಪರಮಪಿತ ಪರಮಾತ್ಮನೇ ಬಂದು ದುರ್ಗತಿಯಿಂದ ಸದ್ಗತಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದೆನು, ಈಗ ಮತ್ತೆ ರಾವಣನು ರಾಹುವಿನ ದೆಶೆಯನ್ನು ಕೂರಿಸಿದ್ದಾನೆ. ಈಗ ಮತ್ತೆ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ ಅಂದಮೇಲೆ ತಮಗೆ ನಷ್ಟ ಮಾಡಿಕೊಳ್ಳಬಾರದು. ವ್ಯಾಪಾರಿಗಳು ತಮ್ಮ ಖಾತೆಯನ್ನು ಸದಾ ಸರಿಯಾಗಿಟ್ಟುಕೊಳ್ಳುತ್ತಾರೆ, ನಷ್ಟ ಮಾಡಿಕೊಳ್ಳುವವರಿಗೆ ಅನಾಡಿಗಳೆಂದು ಹೇಳಲಾಗುತ್ತದೆ. ಇದಂತೂ ಎಲ್ಲದಕ್ಕಿಂತ ದೊಡ್ಡ ವ್ಯಾಪಾರವಾಗಿದೆ. ಕೆಲವರೇ ವಿರಳ ವ್ಯಾಪಾರಿಗಳು ಈ ವ್ಯಾಪಾರ ಮಾಡುವರು. ಇದೇ ಅವಿನಾಶಿ ವ್ಯಾಪಾರವಾಗಿದೆ. ಮತ್ತೆಲ್ಲಾ ವ್ಯಾಪಾರಗಳು ಮಣ್ಣು ಪಾಲಾಗುತ್ತವೆ. ಈಗ ನಿಮ್ಮದು ಸತ್ಯ ವ್ಯಾಪಾರವಾಗುತ್ತಿದೆ. ತಂದೆಯು ಜ್ಞಾನ ಸಾಗರ, ಸೌಧಾಗರ, ರತ್ನಾಗರನಾಗಿದ್ದಾರೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ! ಸೇವಾಕೇಂದ್ರಕ್ಕೆ ಕೆಲವರೇ ಬರುತ್ತಾರೆ. ಭಾರತವಂತೂ ಬಹಳ ವಿಸ್ತಾರವಾಗಿದೆಯಲ್ಲವೆ. ಎಲ್ಲಾ ಸ್ಥಾನಗಳಿಗೆ ನೀವು ಹೋಗಬೇಕಾಗಿದೆ. ನೀರಿನ ಗಂಗೆಯು ಇಡೀ ಭಾರತದಲ್ಲಿದೆಯಲ್ಲವೆ. ಇದನ್ನೂ ನೀವು ತಿಳಿಸಬೇಕಾಗಿದೆ. ಪತಿತ-ಪಾವನನು ಯಾವುದೇ ನೀರಿನ ಗಂಗೆಯಲ್ಲ, ನೀವು ಜ್ಞಾನ ಗಂಗೆಯರೇ ಹೋಗಬೇಕಾಗಿದೆ. ನಾಲ್ಕಾರು ಕಡೆ ಮೇಳ, ಪ್ರದರ್ಶನಿಗಳು ಆಗುತ್ತಿರುತ್ತವೆ. ದಿನ-ಪ್ರತಿದಿನ ಚಿತ್ರಗಳೂ ತಯಾರಾಗುತ್ತಿರುತ್ತವೆ. ನೋಡುತ್ತಿದ್ದಂತೆಯೇ ಅವರಿಗೆ ಆನಂದವಾಗುವಷ್ಟು ಶೋಭಾಯಮಾನವಾದ ಚಿತ್ರಗಳಿರಬೇಕು. ಇವರು ಸರಿಯಾಗಿ ತಿಳಿಸುತ್ತಾರೆ, ಈಗ ಲಕ್ಷ್ಮೀ-ನಾರಾಯಣರ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದು ಅವರಿಗೆ ಅರ್ಥವಾಗಬೇಕು. ಏಣಿ ಚಿತ್ರವು ಬಹಳ ಸುಂದರವಾಗಿದೆ. ಈಗ ಬ್ರಾಹ್ಮಣ ಧರ್ಮದ ಸ್ಥಾಪನೆಯಾಗುತ್ತಿದೆ, ಈ ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತಾರೆ. ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ ಅಂದಾಗ ಹೃದಯದಲ್ಲಿ ತಮ್ಮೊಂದಿಗೆ ಕೇಳಿಕೊಳ್ಳುತ್ತಾ ಇರಿ - ನನ್ನಲ್ಲಿ ಯಾವುದೇ ಚಿಕ್ಕ ಪುಟ್ಟ ಮುಳ್ಳಂತೂ ಇಲ್ಲವೆ? ಕಾಮದ ಮುಳ್ಳಂತೂ ಇಲ್ಲವೇ? ಕ್ರೋಧದ ಚಿಕ್ಕ ಮುಳ್ಳು ಸಹ ಬಹಳ ಕೆಟ್ಟದ್ದಾಗಿದೆ? ದೇವತೆಗಳು ಎಂದೂ ಕ್ರೋಧಿಗಳಾಗುವುದಿಲ್ಲ. ಶಂಕರನು ಕಣ್ಣು ತೆರೆದ ಕೂಡಲೇ ವಿನಾಶವಾಗುತ್ತದೆಯೆಂದು ತೋರಿಸುತ್ತಾರೆ. ಇದು ಶಂಕರನ ಮೇಲೆ ಒಂದು ಕಳಂಕವನ್ನು ಹೊರಿಸಿದ್ದಾರೆ. ವಿನಾಶವಂತೂ ಆಗಲೇಬೇಕಾಗಿದೆ. ಸೂಕ್ಷ್ಮವತನದಲ್ಲಿ ಶಂಕರನಿಗೆ ಯಾವುದೇ ಸರ್ಪ ಇತ್ಯಾದಿಗಳು ಇರುವುದಿಲ್ಲ. ಸೂಕ್ಷ್ಮವತನ ಹಾಗೂ ಮೂಲವತನದಲ್ಲಿ ಯಾವುದೇ ತೋಟ, ಉದ್ಯಾನವನ, ಸರ್ಪ ಇತ್ಯಾದಿಗಳೇನೂ ಇರುವುದಿಲ್ಲ. ಇವೆಲ್ಲವೂ ಇಲ್ಲಿರುತ್ತವೆ. ಸ್ವರ್ಗವು ಇಲ್ಲಿಯೇ ಆಗುತ್ತದೆ. ಈ ಸಮಯದಲ್ಲಿ ಮನುಷ್ಯರು ಮುಳ್ಳುಗಳಂತಿದ್ದಾರೆ ಆದ್ದರಿಂದ ಇದಕ್ಕೆ ಮುಳ್ಳಿನ ಕಾಡೆಂದು ಹೇಳಲಾಗುತ್ತದೆ. ಸತ್ಯಯುಗವು ಹೂದೋಟವಾಗಿದೆ. ನೀವು ನೋಡುತ್ತೀರಿ, ತಂದೆಯು ಎಂತಹ ಹೂದೋಟವನ್ನಾಗಿ ಮಾಡುತ್ತಾರೆ. ಬಹಳ ಸುಂದರವಾಗಿ ತಯಾರು ಮಾಡುತ್ತಾರೆ. ಎಲ್ಲರನ್ನೂ ಸುಂದರ (ಪಾವನ) ರನ್ನಾಗಿ ಮಾಡುತ್ತಾರೆ. ತಾವಂತು ಸದಾ ಪಾವನನಾಗಿದ್ದಾರೆ. ಎಲ್ಲಾ ಪ್ರಿಯತಮೆಯರನ್ನು ಅಥವಾ ಮಕ್ಕಳನ್ನು ಸುಂದರ ಅರ್ಥಾತ್ ಪಾವನರನ್ನಾಗಿ ಮಾಡುತ್ತಾರೆ. ರಾವಣನು ಕಪ್ಪಾಗಿ ಮಾಡಿ ಬಿಟ್ಟಿದ್ದಾನೆ. ಈಗ ನೀವು ಮಕ್ಕಳಿಗೆ ಖುಷಿಯಾಗಬೇಕು - ನಮ್ಮ ಮೇಲೆ ಬೃಹಸ್ಪತಿ ದೆಶೆ ಕುಳಿತಿದೆ. ಅರ್ಧ ಸಮಯ ಸುಖ, ಅರ್ಧ ಸಮಯ ದುಃಖವಿದ್ದರೆ ಅದರಿಂದ ಲಾಭವಾದರೂ ಏನು? ಆದ್ದರಿಂದ ನಿಮಗೆ 3/4 ಭಾಗ ಸುಖ, 1/4 ದುಃಖವಿದೆ, ಇದು ನಾಟಕದಲ್ಲಿ ಮಾಡಲ್ಪಟ್ಟಿದೆ. ನಾಟಕವನ್ನು ಹೀಗೇಕೆ ಮಾಡಿದ್ದಾರೆಂದು ಅನೇಕರು ಕೇಳುತ್ತಾರೆ. ಅರೆ! ಇದು ಅನಾದಿಯಲ್ಲವೆ, ಏಕಾಯಿತು ಎಂಬ ಪ್ರಶ್ನೆ ಬರುವಂತಿಲ್ಲ. ಈ ಅನಾದಿ-ಅವಿನಾಶಿ ನಾಟಕವು ಮಾಡಲ್ಪಟ್ಟಿದೆ. ಏನು ಮಾಡಲ್ಪಟ್ಟಿದೆಯೋ ಅದೇ ನಡೆಯುತ್ತಿದೆ. ಯಾರಿಗೂ ಮೋಕ್ಷ ಸಿಗಲು ಸಾಧ್ಯವಿಲ್ಲ. ಈ ಅನಾದಿ ಸೃಷ್ಟಿಯು ನಡೆದುಬರುತ್ತಿದೆ, ನಡೆಯುತ್ತಲೇ ಇರುತ್ತದೆ. ಪ್ರಳಯವಾಗುವುದಿಲ್ಲ.
ತಂದೆಯು ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ ಆದರೆ ಇದರಲ್ಲಿ ಎಷ್ಟೊಂದು ಪರಿಶ್ರಮವಿದೆ! ಯಾವಾಗ ಮನುಷ್ಯರು ಪತಿತ, ದುಃಖಿಯಾಗುವರೋ ಆಗ ಕರೆಯುತ್ತಾರೆ. ತಂದೆಯು ಬಂದು ಎಲ್ಲರ ಕಾಯವನ್ನು ಕಲ್ಪತರುವನ್ನಾಗಿ ಮಾಡುತ್ತಾರೆ ಅದರಿಂದ ಅರ್ಧಕಲ್ಪ ನಿಮಗೆಂದೂ ಅಕಾಲ ಮೃತ್ಯುವಾಗುವುದಿಲ್ಲ. ನೀವು ಕಾಲದ ಮೇಲೆ ಜಯ ಗಳಿಸುತ್ತೀರಿ ಅಂದಾಗ ಮಕ್ಕಳು ಬಹಳ ಪುರುಷಾರ್ಥ ಮಾಡಬೇಕು. ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುವಿರೋ ಅಷ್ಟು ಒಳ್ಳೆಯದು. ಪುರುಷಾರ್ಥವನ್ನಂತೂ ಪ್ರತಿಯೊಬ್ಬರೂ ಸಂಪಾದನೆಗಾಗಿ ಮಾಡುತ್ತಾರೆ. ಸೌಧೆ ಮಾರುವವರೂ ಸಹ ನಾವು ಹೆಚ್ಚು ಸಂಪಾದನೆ ಮಾಡಬೇಕೆಂದು ಹೇಳುತ್ತಾರೆ, ಕೆಲವರು ಮೋಸದಿಂದಲೂ ಸಂಪಾದಿಸುತ್ತಾರೆ. ಹಣದ ಮೇಲೇ ಆಪತ್ತಿದೆ. ಸತ್ಯಯುಗದಲ್ಲಂತೂ ನಿಮ್ಮ ಹಣವನ್ನು ಯಾರೂ ಲೂಟಿ ಮಾಡಲು ಸಾಧ್ಯವಿಲ್ಲ. ನೋಡಿ, ಈ ಪ್ರಪಂಚದಲ್ಲಿ ಏನೇನಾಗುತ್ತಿದೆ, ಅಲ್ಲಿ ಇಂತಹ ಯಾವುದೇ ದುಃಖದ ಮಾತಿರುವುದಿಲ್ಲ. ಈಗ ನೀವು ತಂದೆಯಿಂದ ಇಷ್ಟೊಂದು ಆಸ್ತಿಯನ್ನು ಪಡೆಯುತ್ತೀರಿ ಅಂದಮೇಲೆ ತಮ್ಮ ಪರಿಶೀಲನೆ ಮಾಡಿಕೊಳ್ಳಿ - ನಾವು ಸ್ವರ್ಗದಲ್ಲಿ ಹೋಗಲು ಯೋಗ್ಯರಿದ್ದೇವೆಯೇ? (ನಾರದನ ಉದಾಹರಣೆಯಂತೆ) ಮನುಷ್ಯರು ಅನೇಕ ತೀರ್ಥ ಯಾತ್ರೆಯನ್ನು ಮಾಡುತ್ತಿರುತ್ತಾರೆ, ಸಿಗುವುದೇನೂ ಇಲ್ಲ. ನಾಲ್ಕು ಧಾಮಗಳನ್ನು ಸುತ್ತಿದೆವು ಆದರೂ ಭಗವಂತನಿಂದ ದೂರವೇ ಉಳಿದೆವು ಎಂದು ಗೀತೆಯೂ ಇದೆಯಲ್ಲವೆ. ಈಗ ತಂದೆಯು ನಿಮಗೆ ಇಷ್ಟು ಒಳ್ಳೆಯ ಯಾತ್ರೆಯನ್ನು ಕಲಿಸುತ್ತಾರೆ. ಇದರಲ್ಲಿ ಯಾವುದೇ ಕಷ್ಟವಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸುತ್ತೇನೆ, ಮಕ್ಕಳು ಕೇಳಿಸಿಕೊಳ್ಳುತ್ತೀರಿ. ಇದು ನಾನು ಲೋನ್ ಆಗಿ ತೆಗೆದುಕೊಂಡಿರುವ ಶರೀರವಾಗಿದೆ. ಈ ತಂದೆಗೆ ಎಷ್ಟೊಂದು ಖುಷಿಯಿದೆ – ನನ್ನ ಶರೀರವನ್ನು ತಂದೆಗೆ ಲೋನ್ ಆಗಿ ಕೊಟ್ಟಿದ್ದೇನೆ, ತಂದೆಯು ನನ್ನನ್ನು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆ. ಭಾಗ್ಯಶಾಲಿ ರಥವೆಂದು ಹೆಸರೂ ಇದೆ. ಈಗ ನೀವು ಮಕ್ಕಳು ರಾಮಪುರಿಯಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ ಅಂದಮೇಲೆ ಪೂರ್ಣ ಪುರುಷಾರ್ಥದಲ್ಲಿ ತೊಡಗಬೇಕು. ಮುಳ್ಳಾಗುವುದೇಕೆ? ನೀವು ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೀರಿ, ಎಲ್ಲರ ಆಧಾರವು ಮುರುಳಿಯ ಮೇಲಿದೆ. ನಿಮಗೆ ಮುರುಳಿ ಸಿಗಲಿಲ್ಲವೆಂದರೆ ನೀವು ಶ್ರೀಮತವನ್ನು ಎಲ್ಲಿಂದ ತರುತ್ತೀರಿ! ಕೇವಲ ಬ್ರಾಹ್ಮಿಣಿಯೇ ಮುರುಳಿಯನ್ನು ತಿಳಿಸಬೇಕೆಂದಲ್ಲ, ಯಾರು ಬೇಕಾದರೂ ಮುರುಳಿಯನ್ನು ತಿಳಿಸಬಹುದು ಆದ್ದರಿಂದ ಇಂದು ನೀವು ತಿಳಿಸಿ ಎಂದು ಹೇಳಬೇಕು. ಈಗ ತಿಳಿಸುವುದಕ್ಕಾಗಿಯೂ ಪ್ರದರ್ಶನಿಯ ಚಿತ್ರಗಳೂ ಬಹಳ ಚೆನ್ನಾಗಿವೆ. ಈ ಮುಖ್ಯ ಚಿತ್ರಗಳನ್ನು ತಮ್ಮ ಅಂಗಡಿಯಲ್ಲಿಡಿ, ಇದರಿಂದ ಅನೇಕರ ಕಲ್ಯಾಣವಾಗುವುದು. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವು ಬಂದರೆ ನಾವು ತಿಳಿಸುತ್ತೇವೆಂದು ಹೇಳಿರಿ. ಯಾರದೇ ಕಲ್ಯಾಣ ಮಾಡುವುದರಲ್ಲಿ ಸ್ವಲ್ಪ ಸಮಯ ಕಳೆದರೂ ಪರವಾಗಿಲ್ಲ, ಆ ವ್ಯಾಪಾರದ ಜೊತೆ ಈ ವ್ಯಾಪಾರವನ್ನು ಮಾಡಿಸಿ. ಇದು ತಂದೆಯ ಅವಿನಾಶಿ ಜ್ಞಾನ ರತ್ನಗಳ ಅಂಗಡಿಯಾಗಿದೆ. ಏಣಿ ಚಿತ್ರ ಮತ್ತು ಗೀತೆಯ ಭಗವಂತ ಶಿವನ ಚಿತ್ರವು ನಂಬರ್ವನ್ ಆಗಿದೆ. ಭಾರತದಲ್ಲಿ ಶಿವ ಭಗವಂತನು ಬಂದಿದ್ದರು, ಅವರದೇ ಜಯಂತಿಯನ್ನಾಚರಿಸುತ್ತಾರೆ. ಈಗ ಪುನಃ ಆ ತಂದೆಯು ಬಂದಿದ್ದಾರೆ, ಯಜ್ಞವನ್ನೂ ರಚಿಸಿದ್ದಾರೆ. ನೀವು ಮಕ್ಕಳಿಗೆ ರಾಜಯೋಗದ ಜ್ಞಾನವನ್ನು ತಿಳಿಸುತ್ತಿದ್ದಾರೆ. ತಂದೆಯೇ ಬಂದು ರಾಜರಿಗೂ ರಾಜರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಸೂರ್ಯವಂಶಿ ರಾಜ-ರಾಣಿಯನ್ನಾಗಿ ಮಾಡುತ್ತೇನೆ, ಅವರಿಗೆ ವಿಕಾರಿ ರಾಜರೂ ಸಹ ನಮಸ್ಕಾರ ಮಾಡುತ್ತಾರೆ. ಆದ್ದರಿಂದ ಸ್ವರ್ಗದ ಮಹಾರಾಜ-ಮಹಾರಾಣಿಯಾಗುವ ಪೂರ್ಣ ಪುರುಷಾರ್ಥ ಮಾಡಬೇಕು. ತಂದೆಯು ಯಾವುದೇ ಮನೆ ಇತ್ಯಾದಿ ಕಟ್ಟುವುದನ್ನು ನಿರಾಕರಿಸುವುದಿಲ್ಲ. ಭಲೆ ಕಟ್ಟಿಸಿ, ಹಣವಂತೂ ಮಣ್ಣು ಪಾಲಾಗುತ್ತದೆ ಅಂದಮೇಲೆ ಇದರಿಂದ ಮನೆಯನ್ನು ಕಟ್ಟಿಸಿ ಆರಾಮವಾಗಿರಿ. ಹಣವನ್ನು ಕೆಲಸದಲ್ಲಿ ತೊಡಗಿಸಬೇಕು, ಮನೆಗಳನ್ನೂ ಕಟ್ಟಿಸಿ, ತಿನ್ನುವುದಕ್ಕಾಗಿಯೂ ಇಟ್ಟುಕೊಳ್ಳಿ. ಮನುಷ್ಯರು ದಾನ-ಪುಣ್ಯವನ್ನು ಮಾಡುತ್ತಾರೆ. ಹೇಗೆ ಕಾಶ್ಮೀರದ ರಾಜನು ತನ್ನ ಸಂಪತ್ತನ್ನೆಲ್ಲಾ ಆರ್ಯ ಸಮಾಜಿಗಳಿಗೆ ದಾನ ಕೊಟ್ಟು ಬಿಟ್ಟರು. ಎಲ್ಲರೂ ತಮ್ಮ ಧರ್ಮ, ಜಾತಿಗಾಗಿ ಮಾಡುತ್ತಾರಲ್ಲವೆ. ಇಲ್ಲಂತೂ ಆ ಮಾತಿಲ್ಲ. ಎಲ್ಲರೂ ಮಕ್ಕಳಾಗಿದ್ದೀರಿ, ಜಾತಿ ಮೊದಲಾದುವುಗಳ ಮಾತಿಲ್ಲ. ಅದೆಲ್ಲವೂ ದೇಹದ ಜಾತಿಗಳಾಗಿವೆ. ನಾನಂತೂ ನೀವಾತ್ಮರಿಗೆ ಪವಿತ್ರರನ್ನಾಗಿ ಮಾಡಿ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಡ್ರಾಮಾನುಸಾರ ಭಾರತವಾಸಿಗಳೇ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಈಗ ನೀವು ಮಕ್ಕಳಿಗೆ ತಿಳಿದಿದೆ – ನಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ. ಶ್ರೀಮತವು ಹೇಳುತ್ತದೆ - ನನ್ನೊಬ್ಬನನ್ನೇ ನೆನಪು ಮಾಡಿ. ಮತ್ತ್ಯಾವುದೇ ಮಾತಿಲ್ಲ. ಭಕ್ತಿಮಾರ್ಗದಲ್ಲಿ ವ್ಯಾಪಾರಿಗಳು ಅಲ್ಪಸ್ವಲ್ಪ ದಾನ ಧರ್ಮಕ್ಕಾಗಿ ತೆಗೆಯುತ್ತಾರೆ. ಅದರ ಫಲವು ಮುಂದಿನ ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ. ಈಗಂತೂ ನಾನು ಡೈರೆಕ್ಟ್ ಬಂದಿದ್ದೇನೆ ಅಂದಮೇಲೆ ನೀವು ಈ ಕಾರ್ಯದಲ್ಲಿ ತೊಡಗಿಸಿ, ನನಗಂತೂ ಏನೂ ಬೇಕಿಲ್ಲ. ಶಿವ ತಂದೆಯು ತಮಗಾಗಿ ಯಾವುದೇ ಮನೆ ಇತ್ಯಾದಿಗಳನ್ನು ಕಟ್ಟಿಸಬೇಕಾಗಿಲ್ಲ, ಇದೆಲ್ಲವೂ ನೀವು ಬ್ರಾಹ್ಮಣರದಾಗಿದೆ. ಬಡವರು ಸಾಹುಕಾರರು ಎಲ್ಲರೂ ಒಟ್ಟಿಗೆ ಇರುತ್ತೀರಿ. ಭಗವಂತನ ಬಳಿಯೂ ಸಮ ದೃಷ್ಟಿಯಿಲ್ಲ. ಕೆಲವರನ್ನು ಮಹಲಿನಲ್ಲಿ, ಕೆಲವರನ್ನು ಗುಡಿಸಿಲಿನಲ್ಲಿ ಇಡುತ್ತಾರೆಂದು ಕೆಲವರು ಮುನಿಸಿಕೊಳ್ಳುತ್ತಾರೆ. ಶಿವ ತಂದೆಯನ್ನೇ ಮರೆತು ಹೋಗುತ್ತಾರೆ. ಶಿವ ತಂದೆಯ ನೆನಪಿನಲ್ಲಿದ್ದಾಗ ಈ ರೀತಿ ಎಂದೂ ಮಾತನಾಡುವುದಿಲ್ಲ. ಕೇಳಬೇಕು - ಇವರ ಮನೆಯಲ್ಲಿ ಬಹಳ ಆರಾಮದಿಂದ ಇರುವ ಅಭ್ಯಾಸವಿದೆಯೆಂದರೆ ಅಂತಹವರನ್ನು ನೋಡಿ ಪ್ರಬಂಧ ಮಾಡಬೇಕಾಗಿದೆ. ಆದ್ದರಿಂದ ಹೇಳಲಾಗುತ್ತದೆ, ಎಲ್ಲರಿಗೆ ಉಪಚಾರ ಮಾಡಿ. ಯಾವುದೇ ವಸ್ತುವಿಲ್ಲವೆಂದರೆ ಇಲ್ಲಿ ಸಿಗುತ್ತದೆ, ತಂದೆಗಂತೂ ಮಕ್ಕಳಮೇಲೆ ಪ್ರೀತಿಯಿರುತ್ತದೆ. ಇಷ್ಟು ಪ್ರೀತಿಯು ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ. ಪುರುಷಾರ್ಥ ಮಾಡಿ ಅನ್ಯರಿಗಾಗಿಯೂ ಯುಕ್ತಿ ರಚಿಸಿ ಎಂದು ಮಕ್ಕಳಿಗೆ ಎಷ್ಟೊಂದು ತಿಳಿಸುತ್ತಾರೆ. ಇದರಲ್ಲಿ ಮೂರು ಹೆಜ್ಜೆಗಳಷ್ಟು ಭೂಮಿಯು ಬೇಕು. ಅದರಲ್ಲಿ ಕನ್ಯೆಯರು ಜ್ಞಾನವನ್ನು ತಿಳಿಸುತ್ತಿರಲಿ. ಯಾವುದೇ ದೊಡ್ಡ ವ್ಯಕ್ತಿಯ ಹಾಲ್ ಇದ್ದರೆ ನಾವು ಕೇವಲ ಚಿತ್ರಗಳನ್ನಿಟ್ಟುಕೊಳ್ಳುತ್ತೇವೆ. ಬೆಳಗ್ಗೆ-ಸಂಜೆ ಒಂದೆರಡು ಗಂಟೆಗಳ ಕಾಲ ತರಗತಿಯನ್ನು ನಡೆಸಿ ಹೊರಟು ಹೋಗುತ್ತೇವೆ. ಖರ್ಚೆಲ್ಲವೂ ನಮ್ಮದು, ಹೆಸರು ನಿಮ್ಮದಾಗುವುದು. ಅನೇಕರು ಬಂದು ಕವಡೆಯಿಂದ ವಜ್ರ ಸಮಾನರಾಗುತ್ತಾರೆ ಎಂದು ತಿಳಿಸಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಒಳಗೆ ಏನೆಲ್ಲವೂ ಮುಳ್ಳುಗಳಿವೆಯೋ ಅದನ್ನು ಪರಿಶೀಲನೆ ಮಾಡಿ ತೆಗೆಯಬೇಕಾಗಿದೆ. ರಾಮ ಪುರಿಯಲ್ಲಿ ಹೋಗುವ ಪುರುಷಾರ್ಥ ಮಾಡಬೇಕಾಗಿದೆ.
2. ಅವಿನಾಶಿ ಜ್ಞಾನ ರತ್ನಗಳ ವ್ಯಾಪಾರ ಮಾಡಿ ಅನ್ಯರ ಕಲ್ಯಾಣ ಮಾಡುವುದರಲ್ಲಿ ಸಮಯ ಕೊಡಬೇಕಾಗಿದೆ. ಪಾವನರಾಗಬೇಕು ಮತ್ತು ಮಾಡಬೇಕಾಗಿದೆ.
ತನು, ಮನ, ಧನ ಮತ್ತು ಸಂಬಂಧದ ಶಕ್ತಿ
ಇಂದು ಸರ್ವಶಕ್ತಿವಂತ ತಂದೆಯು ತನ್ನ ಶಕ್ತಿಶಾಲಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ಶಕ್ತಿಶಾಲಿ ಆಗಿದ್ದಾರೆ ಆದರೆ ನಂಬರ್ವಾರ್ ಇದ್ದಾರೆ. ತಂದೆಯವರ ಸರ್ವ ಶಕ್ತಿಗಳ ಆಸ್ತಿ ಮತ್ತು ವರದಾತನ ವರದಾನವಿದೆ. ತಂದೆ ಮತ್ತು ವರದಾತಾ - ಪ್ರತಿಯೊಬ್ಬ ಮಗುವಿನ ಜನ್ಮವಾಗುತ್ತಿದ್ದಂತೆಯೇ ಈ ಡಬಲ್ ಸಂಬಂಧದ ಶ್ರೇಷ್ಠ ಪ್ರಾಪ್ತಿಯಾಗಿದೆ. ಜನ್ಮವಾಗುತ್ತಿದ್ದಂತೆಯೇ ತಂದೆಯು ಸರ್ವ ಶಕ್ತಿಗಳ ಅರ್ಥಾತ್ ಜನ್ಮ-ಸಿದ್ಧ ಅಧಿಕಾರದ ಅಧಿಕಾರಿಯನ್ನಾಗಿ ಮಾಡಿ ಬಿಡುತ್ತಾರೆ, ಜೊತೆ-ಜೊತೆಗೆ ವರದಾತನ ಸಂಬಂಧದಿಂದ ಮಾಸ್ಟರ್ ಸರ್ವ ಶಕ್ತಿವಂತರನ್ನಾಗಿ ಮಾಡುತ್ತಾ `ಸರ್ವ ಶಕ್ತಿ ಭವ'ದ ವರದಾನವನ್ನು ಕೊಡುತ್ತಾರೆ. ಒಬ್ಬರ ಮೂಲಕ ಎಲಾ ಮಕ್ಕಳಿಗೆ ಒಂದೇ ರೀತಿಯ ಡಬಲ್ ಅಧಿಕಾರವು ಸಿಗುತ್ತದೆ ಆದರೆ ಧಾರಣೆ ಮಾಡಿಕೊಳ್ಳುವ ಶಕ್ತಿಯು ನಂಬರ್ವಾರ್ ಮಾಡಿ ಬಿಡುತ್ತಾರೆ. ತಂದೆಯು ಎಲ್ಲರಿಗೂ ಸದಾ ಹಾಗೂ ಸರ್ವ ಶಕ್ತಿಶಾಲಿಯನ್ನಾಗಿ ಮಾಡುತ್ತಾರೆ, ಆದರೆ ಮಕ್ಕಳು ಯಥಾ-ಶಕ್ತಿ ಆಗಿ ಬಿಡುತ್ತಾರೆ. ಅದೇ ರೀತಿ ಲೌಕಿಕ ಜೀವನದಲ್ಲಿ ಅಥವಾ ಅಲೌಕಿಕ ಜೀವನದಲ್ಲಿಯೂ ಸಫಲತೆಯ ಆಧಾರವು ಶಕ್ತಿಗಳೇ ಆಗಿರುತ್ತದೆ. ತಮ್ಮಲ್ಲಿ ಎಷ್ಟು ಶಕ್ತಿಗಳಿರುತ್ತವೆಯೋ ಅಷ್ಟು ಸಫಲತೆಯು ಸಿಗುತ್ತದೆ. ಮುಖ್ಯವಾದ ಶಕ್ತಿಗಳೆಂದರೆ- ತನುವಿನ, ಮನಸ್ಸಿನ, ಧನದ ಮತ್ತು ಸಂಬಂಧದ ಶಕ್ತಿಗಳಾಗಿವೆ, ಈ ನಾಲ್ಕೂ ಶಕ್ತಿಗಳು ಅವಶ್ಯಕವಿದೆ. ಈ ನಾಲ್ಕರಲ್ಲಿ ಯಾವುದಾದರೊಂದು ಶಕ್ತಿಯ ಕೊರತೆ ಆಗುತ್ತದೆ ಎಂದರೆ, ಜೀವನದಲ್ಲಿ ಸದಾ ಅಥವಾ ಸರ್ವ ಸಫಲತೆಯಾಗಲು ಆಗುವುದಿಲ್ಲ. ಅಲೌಕಿಕ ಜೀವನದಲ್ಲಿಯೂ ಸಹ ನಾಲ್ಕೂ ಶಕ್ತಿಗಳ ಅವಶ್ಯಕವಿದೆ.
ಈ ಅಲೌಕಿಕ ಜೀವನದಲ್ಲಿ ಆತ್ಮ ಮತ್ತು ಪ್ರಕೃತಿ - ಎರಡೂ ಆರೋಗ್ಯವಾಗಿರುವುದು ಅವಶ್ಯಕವಿದೆ. ಆತ್ಮವು ಆರೋಗ್ಯವಂತ ಆಗಿದ್ದರೆ ತನುವಿನ ಲೆಕ್ಕಾಚಾರ ಅಥವಾ ತನುವಿನ ರೋಗವು ಶೂಲದಿಂದ ಮುಳ್ಳಿನ ಸಮಾನ ಆಗುವ ಕಾರಣದಿಂದ, ಸ್ವ-ಸ್ಥಿತಿಯ ಕಾರಣದಿಂದ ಆರೋಗ್ಯವು ಚೆನ್ನಾಗಿದೆ ಎಂಬ ಅನುಭವ ಮಾಡುತ್ತದೆ. ಅಂತಹವರ ಮುಖದಲ್ಲಿ, ಚಹರೆಯಲ್ಲಿ ರೋಗದ ಕಷ್ಟದ ಚಹ್ನೆಯಿರುವುದಿಲ್ಲ. ಬಾಯಿಂದ ಎಂದಿಗೂ ಸಹ ರೋಗದ ವರ್ಣನೆ ಆಗುವುದಿಲ್ಲ, ಕರ್ಮ ಭೋಗದ ವರ್ಣನೆಗೆ ಬದಲು ಕರ್ಮ ಯೋಗದ ಸ್ಥಿತಿಯ ವರ್ಣನೆಯನ್ನು ಮಾಡುವರು. ಏಕೆಂದರೆ ರೋಗದ ವರ್ಣನೆಯೂ ಸಹ ರೋಗವನ್ನು ವೃದ್ಧಿ ಮಾಡಲು ಕಾರಣವಾಗುತ್ತದೆ. ಅವರೆಂದಿಗೂ ರೋಗದ ಕಷ್ಟದ ಅನುಭವ ಮಾಡುವುದಿಲ್ಲ, ಅನ್ಯರಿಗೂ ಆ ಕಷ್ಟವನ್ನು ತಿಳಿಸುವುದರ ಮೂಲಕ ಹರಡಿಸುವುದಿಲ್ಲ. ಅದನ್ನಿನ್ನೂ ಪರಿವರ್ತನೆಯ ಶಕ್ತಿಯಿಂದ ಕಷ್ಟವನ್ನು ಸಂತುಷ್ಟತೆಯಲ್ಲಿ ಪರಿವರ್ತನೆ ಮಾಡುತ್ತಾ ಸಂತುಷ್ಟವಾಗಿದ್ದು, ಅನ್ಯರಲ್ಲಿಯೂ ಸಂತುಷ್ಟತೆಯ ಪ್ರಕಂಪನಗಳನ್ನು ಹರಡಿಸುತ್ತಾರೆ ಅರ್ಥಾತ್ ಮಾಸ್ಟರ್ ಸರ್ವ ಶಕ್ತಿವಂತನಾಗಿದ್ದು, ಶಕ್ತಿಗಳ ಸರ್ವ ವರದಾನಗಳಿಂದ ಸಮಯದ ಅನುಸಾರವಾಗಿ ಸಹನಾ ಶಕ್ತಿ, ಸಮಾವೇಶದ ಶಕ್ತಿಯನ್ನು ಪ್ರಯೋಗದಲ್ಲಿ ತರುತ್ತಾರೆ ಮತ್ತು ಸಮಯದಲ್ಲಿ ಶಕ್ತಿಗಳ ವರದಾನ ಅಥವಾ ಆಸ್ತಿಯನ್ನು ಕಾರ್ಯದಲ್ಲಿ ಉಪಯೋಗಿಸುವುದು - ಅವರಿಗಾಗಿ ಇದೇ ವರದಾನವಾಗಿದೆ ಅರ್ಥಾತ್ ಆಶೀರ್ವಾದವು ಔಷಧಿಯ ಕಾರ್ಯವನ್ನು ಮಾಡುತ್ತದೆ ಏಕೆಂದರೆ ಸರ್ವ ಶಕ್ತಿವಂತ ತಂದೆಯ ಮೂಲಕ ಯಾವ ಸರ್ವಶಕ್ತಿಗಳು ಪ್ರಾಪ್ತಿ ಆಗಿದೆಯೋ, ಅದನ್ನು ಪರಿಸ್ಥಿತಿಯ ಅನುಸಾರ, ಸಮಯದ ಅನುಸಾರ ಮತ್ತು ಅದನ್ನು ಯಾವ ವಿಧಿಯಿಂದ ಕಾರ್ಯದಲ್ಲಿ ಉಪಯೋಗಿಸಲು ಬಯಸುತ್ತೀರಿ, ಈ ಶಕ್ತಿಗಳು ಅದೇ ರೀತಿಯಲ್ಲಿ ತಮಗೆ ಸಹಯೋಗಿ ಆಗಲು ಸಾಧ್ಯವಿದೆ. ಈ ಶಕ್ತಿಗಳನ್ನು ಅಥವಾ ಪ್ರಭುವಿನ ವರದಾನವನ್ನು ಯಾವ ರೂಪದಲ್ಲಿ ಬೇಕೋ, ಆ ರೂಪದಲ್ಲಿ ಧಾರಣೆ ಮಾಡಿಕೊಳ್ಳಲು ಸಾಧ್ಯವಾಗುವುದು. ಈಗೀಗ ಶೀತಲತೆಯ ರೂಪದಲ್ಲಿ, ಈಗೀಗ ಜ್ವಾಲಾ ರೂಪದಲ್ಲಿ, ನೀರಿನ ಶೀತಲತೆಯನ್ನೂ ಅನುಭವ ಮಾಡಿಸಬಹುದು, ಬೆಂಕಿಯ ಜ್ವಾಲಾ ರೂಪವನ್ನೂ ಅನುಭವ ಮಾಡಿಸಬಹುದು. ಔಷಧಿಯ ಕಾರ್ಯವನ್ನು ಮಾಡಿಸಬಹುದು ಮತ್ತು ಶಕ್ತಿಶಾಲಿಯನ್ನಾಗಿ ಮಾಡುವ ಲೇಹ್ಯದ ಕಾರ್ಯವನ್ನೂ ಮಾಡಿಸಬಹುದು. ಅದನ್ನು ಕೇವಲ ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸುವ ಅಧಿಕಾರಿಯಾಗಬೇಕು ಅಷ್ಟೇ. ಈ ಸರ್ವಶಕ್ತಿಗಳು ತಾವು ಮಾಸ್ಟರ್ ಸರ್ವ ಶಕ್ತಿವಂತನ ಸೇವಾಧಾರಿ ಆಗಿದೆ. ಯಾವುದಕ್ಕೆ ಯಾವಾಗ ಆದೇಶ ಮಾಡುತ್ತೀರಿ, ಅದು `ಅಪ್ಪಣೆ ಪ್ರಭು' ಎನ್ನುತ್ತಾ ಸಹಯೋಗಿ ಆಗುತ್ತದೆ ಆದರೆ ಸೇವೆಯನ್ನು ತೆಗೆದುಕೊಳ್ಳುವವರೂ ಸಹ ಅಷ್ಟೇ ಚತುರರು ಆಗಿರಬೇಕು. ಅಂದಮೇಲೆ ತನುವಿನ ಶಕ್ತಿಯು ಸದಾ ಆತ್ಮಿಕ ಶಕ್ತಿಯ ಆಧಾರದಿಂದ ಅನುಭವ ಮಾಡಬಹುದು ಅರ್ಥಾತ್ ಸದಾ ಆರೋಗ್ಯವಂತ ಆಗಿರುವ ಅನುಭವ ಮಾಡಬಹುದು.
ಈ ಅಲೌಕಿಕ ಬ್ರಾಹ್ಮಣ ಜೀವನವಂತು ಸದಾ ಆರೋಗ್ಯವಂತ ಜೀವನ ಆಗಿದೆ. ವರದಾತನಿಂದ `ಸದಾ ಆರೋಗ್ಯವಂತ ಭವ'ದ ವರದಾನವು ಸಿಕ್ಕಿರುತ್ತದೆ. ಬಾಪ್ದಾದಾರವರು ನೋಡುತ್ತಾರೆ - ಕೆಲವು ಮಕ್ಕಳು ಸಮಯದಲ್ಲಿ ಪ್ರಾಪ್ತಿಯಾಗಿರುವ ಈ ವರದಾನಗಳನ್ನು ಕಾರ್ಯದಲ್ಲಿ ಉಪಯೋಗಿಸುತ್ತಾ ಲಾಭವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಅಥವಾ ಇದನ್ನಾದರೂ ಹೇಳಬಹುದು - ಶಕ್ತಿಗಳು ಅಂದರೆ ಸೇವಾಧಾರಿಗಳಿಂದ ತನ್ನ ವಿಶಾಲತೆ ಮತ್ತು ವಿಶಾಲ ಬುದ್ಧಿಯ ಮೂಲಕ ಸೇವೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. `ಮಾಸ್ಟರ್ ಸರ್ವಶಕ್ತಿವಂತ' - ಈ ಸ್ಥಿತಿಯೇನೂ ಕಡಿಮೆಯಲ್ಲ. ಇದು ಶ್ರೇಷ್ಠ ಸ್ಥಿತಿಯೂ ಆಗಿದೆ, ಜೊತೆ-ಜೊತೆಗೆ ಡೈರೆಕ್ಟ್ ಪರಮಾತ್ಮನ ಮೂಲಕ `ಪರಮ ಟೈಟಲ್' ಸಹ ಆಗಿದೆ. ಬಿರುದಿನ ನಶೆಯು ಎಷ್ಟೊಂದು ಇಡುತ್ತಾರೆ! ಆ ಬಿರುದುಗಳು ಎಷ್ಟೊಂದು ಕಾರ್ಯವನ್ನು ಸಫಲಗೊಳಿಸುತ್ತದೆ! ಅಂದಮೇಲೆ ಇದು ಪರಮಾತ್ಮನ ಬಿರುದಾಗಿದೆ, ಇದರಲ್ಲಿ ಎಷ್ಟೊಂದು ಖುಷಿ ಮತ್ತು ಶಕ್ತಿ ಅಡಗಿದೆ! ಒಂದುವೇಳೆ ಇದೇ ಒಂದು ಬಿರುದಿನ ಸ್ಥಿತಿಯೆಂಬ ಸಿಂಹಾಸನದ ಮೇಲೆ ಕುಳಿತಿರುತ್ತೀರಿ ಎಂದರೆ, ಈ ಸರ್ವ ಶಕ್ತಿಗಳು ಸದಾ ಸೇವೆ ಮಾಡುವುದಕ್ಕಾಗಿ ಹಾಜಿರ್ ಆಗಿದೆಯೆಂಬ ಅನುಭವ ಆಗುತ್ತದೆ, ಆದರೆ ತಮ್ಮ ಆದೇಶದ ನಿರೀಕ್ಷಣೆಯಲ್ಲಿ ಇರುತ್ತದೆ. ಹಾಗಾದರೆ ವರದಾನವನ್ನು ಅಥವಾ ಆಸ್ತಿಯನ್ನು ಕಾರ್ಯದಲ್ಲಿ ಉಪಯೋಗಿಸಿರಿ. ತಾವೇನಾದರೂ ಮಾಸ್ಟರ್ ಸರ್ವ ಶಕ್ತಿವಂತನ ಸ್ವಮಾನದಲ್ಲಿ ಸ್ಥಿತರಾಗುವುದಿಲ್ಲ ಎಂದರೆ, ಶಕ್ತಿಗಳನ್ನು ಆದೇಶದಂತೆ ನಡೆಸುವುದಕ್ಕೆ ಬದಲಾಗಿ ಪದೇ-ಪದೆ ತಂದೆಯವರಿಗೆ ಅರ್ಜಿಯನ್ನು ಹಾಕುತ್ತಾ ಇರುತ್ತೀರಿ - ಬಾಬಾ, ಈ ಶಕ್ತಿಯನ್ನು ಕೊಡಿ, ಬಾಬಾ ನಮ್ಮ ಈ ಕಾರ್ಯವನ್ನು ಮಾಡಿಸಿರಿ, ಇದಾಗಿ ಬಿಡಲಿ, ಹೀಗಾಗಲಿ... ಈ ರೀತಿ ಅರ್ಜಿಯನ್ನು ಹಾಕುವವರು ಎಂದಿಗೂ ಸಹ ಖುಷಿಯಾಗಿ ಇರಲು ಸಾಧ್ಯವಿಲ್ಲ. ಏಕೆಂದರೆ ಒಂದು ಮಾತು ಪೂರ್ಣವಾಯಿತೆಂದರೆ ಇನ್ನೊಂದು ಆರಂಭವಾಗುತ್ತದೆ. ಆದ್ದರಿಂದ ತಾವು ಮಾಲೀಕರಾಗಿ, ಯೋಗಯುಕ್ತರಾಗಿದ್ದು ಸೇವಾಧಾರಿಗಳಿಂದ ಯುಕ್ತಿ ಯುಕ್ತವಾಗಿ ಸೇವೆಯನ್ನು ತೆಗೆದುಕೊಳ್ಳಿರಿ, ಇದರಿಂದ ಸದಾ ಹಾಗೂ ಸ್ವತಹವಾಗಿಯೇ ಆರೋಗ್ಯವಾಗಿ ಇದ್ದೇನೆಂಬ ಅನುಭವ ಮಾಡುವಿರಿ - ಇದಕ್ಕೆ ತನುವಿನ ಶಕ್ತಿಯ ಪ್ರಾಪ್ತಿ ಎಂದು ಹೇಳಲಾಗುತ್ತದೆ.
ಅದೇ ರೀತಿಯಲ್ಲಿ ಮನಸ್ಸಿನ ಶಕ್ತಿ ಅರ್ಥಾತ್ ಶ್ರೇಷ್ಠ ಸಂಕಲ್ಪದ ಶಕ್ತಿ. ಮಾಸ್ಟರ್ ಸರ್ವ ಶಕ್ತಿವಂತನ ಪ್ರತೀ ಸಂಕಲ್ಪದಲ್ಲಿಯೂ ಶಕ್ತಿಯಿಷ್ಟಿದೆ, ಯಾವುದನ್ನು ಯಾವ ಸಮಯದಲ್ಲಿ, ಹೇಗೆ ಬೇಕಾದರೂ ಉಪಯೋಗಿಸಬಹುದು ಮತ್ತು ಅನ್ಯರಿಗೂ ಅನುಭವ ಮಾಡಿಸಬಹುದು. ಏಕೆಂದರೆ ಅವರ ಸಂಕಲ್ಪವು ಸದಾ ಶುಭ, ಶ್ರೇಷ್ಠ ಹಾಗೂ ಕಲ್ಯಾಣಕಾರಿ ಆಗಿರುತ್ತದೆ. ಅಂದಮೇಲೆ ಎಲ್ಲಿ ಶ್ರೇಷ್ಠ ಕಲ್ಯಾಣದ ಸಂಕಲ್ಪವು ಇರುತ್ತದೆಯೋ, ಅಲ್ಲಿ ಅವಶ್ಯವಾಗಿ ಸಿದ್ಧಿಯಾಗುತ್ತದೆ ಮತ್ತು ಮಾಸ್ಟರ್ ಸರ್ವಶಕ್ತಿವಂತನು ಆಗಿರುವ ಕಾರಣದಿಂದ ಮನಸ್ಸೆಂದಿಗೂ ಸಹ ಮಾಲೀಕನನ್ನು ಮೋಸ ಮಾಡಲು ಸಾಧ್ಯವಿಲ್ಲ ಹಾಗೂ ದುಃಖದ ಅನುಭವ ಮಾಡಿಸಲು ಸಾಧ್ಯವಿಲ್ಲ. ಮನಸ್ಸು ಏಕಾಗ್ರ ಅರ್ಥಾತ್ ಒಂದು ಸ್ಥಿತಿಯಲ್ಲಿ ಸ್ಥಿತವಾಗಿರುತ್ತದೆ, ಅಲೆದಾಡುವುದಿಲ್ಲ. ಮನಸ್ಸನ್ನು ಎಲ್ಲಿ ಬೇಕೋ, ಯಾವಾಗ ಬೇಕು ಆಗ ಅಲ್ಲಿಯೇ ಸ್ಥಿತಗೊಳಿಸಲು ಸಾಧ್ಯವಾಗುವುದು. ಮನಸ್ಸು ಎಂದಿಗೂ ಸಹ ಉದಾಸನಾಗಲು ಸಾಧ್ಯವಿಲ್ಲ ಏಕೆಂದರೆ ಅವರ ಸೇವಾಧಾರಿಗಳು ದಾಸನಾಗುತ್ತದೆ - ಅಲೌಕಿಕ ಜೀವನದಲ್ಲಿನ ಆಸ್ತಿ ಅಥವಾ ವರದಾನದಲ್ಲಿ ಈ ಮನಸ್ಸಿನ ಶಕ್ತಿಯ ಪ್ರಾಪ್ತಿಯಾಗುತ್ತದೆ.
ಇದೇ ರೀತಿಯಾಗಿ ಮೂರನೆಯದು - ಧನದ ಶಕ್ತಿಯಾಗಿದೆ ಅರ್ಥಾತ್ ಜ್ಞಾನದ ಧನದ ಶಕ್ತಿ. ಜ್ಞಾನ ಧನವು ಸ್ವತಹವಾಗಿಯೇ ಸ್ಥೂಲ ಧನದ ಪ್ರಾಪ್ತಿ ಮಾಡಿಸುತ್ತದೆ. ಜ್ಞಾನ ಧನವು ಎಲ್ಲಿರುತ್ತದೆಯೋ ಅಲ್ಲಿ ಪ್ರಕೃತಿಯೂ ಸಹ ಸ್ವತಹವಾಗಿಯೇ ದಾಸಿ ಆಗಿ ಬಿಡುತ್ತದೆ. ಈ ಸ್ಥೂಲ ಧನವು ಪ್ರಕೃತಿಯ ಸಾಧನಗಳಿಗಾಗಿ ಇದೆ, ಜ್ಞಾನ ಧನದಿಂದ ಪ್ರಕೃತಿಯ ಸರ್ವ ಸಾಧನಗಳು ಸ್ವತಹವಾಗಿಯೇ ಪ್ರಾಪ್ತಿಯಾಗುತ್ತವೆ. ಆದ್ದರಿಂದ ಜ್ಞಾನ-ಧನವು ಎಲ್ಲಾ ಧನಗಳ ರಾಜನಾಗಿದೆ. ಎಲ್ಲಿ ರಾಜನು ಇರುತ್ತಾನೆಯೋ ಅಲ್ಲಿ ಸರ್ವ ಪದಾರ್ಥಗಳು ಸ್ವತವಾಗಿಯೇ ಪ್ರಾಪ್ತಿಯಾಗುತ್ತವೆ, ಅದಕ್ಕಾಗಿ ಪರಿಶ್ರಮ ಪಡಬೇಕಾಗಿಲ್ಲ. ಒಂದು ವೇಳೆ ಯಾವುದಾದರೂ ಲೌಕಿಕ ಪದಾರ್ಥಗಳ ಪ್ರಾಪ್ತಿಯಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಅದಕ್ಕೆ ಕಾರಣ - ಜ್ಞಾನ ಧನದ ಕೊರತೆ ಇರುವುದು. ವಾಸ್ತವದಲ್ಲಿ, ಜ್ಞಾನ ಧನವು ಪದಮಾ ಪದಮ ಪತಿಯನ್ನಾಗಿ ಮಾಡುವಂತದ್ದಾಗಿದೆ. ಪರಮಾರ್ಥವು ವ್ಯವಹಾರವನ್ನು ಸ್ವತಹವಾಗಿ ಸಿದ್ಧ ಮಾಡುತ್ತದೆ. ಅಂದಮೇಲೆ ಪರಮಾತ್ಮ-ಧನ ಇರುವವರು ಪರಮಾರ್ಥಿ ಆಗಿ ಬಿಡುತ್ತಾರೆ. ಅವರು ಸಂಕಲ್ಪ ಮಾಡುವ ಅವಶ್ಯಕತೆಯೂ ಇಲ್ಲ, ಸ್ವತಹವಾಗಿಯೇ ಸರ್ವ ಅವಶ್ಯಕತೆಗಳೂ ಪೂರ್ಣವಾಗುತ್ತಾ ಇರುತ್ತವೆ. ಜ್ಞಾನ ಧನ ಶಕ್ತಿಯಿಷ್ಟಿದೆ, ಅದು ಅನೇಕ ಜನ್ಮಗಳಲ್ಲಿ ರಾಜರುಗಳಿಗೂ ರಾಜರನ್ನಾಗಿ ಮಾಡಿ ಬಿಡುತ್ತದೆ. ಅಂದಮೇಲೆ ಸಹಜವಾಗಿಯೇ ಧನದ ಶಕ್ತಿಯ ಪ್ರಾಪ್ತಿಯಾಗುತ್ತದೆ.
ಇದೇ ರೀತಿಯಲ್ಲಿ - ಸಂಬಂಧದ ಶಕ್ತಿ. ಸಂಬಂಧದ ಶಕ್ತಿಯ ಪ್ರಾಪ್ತಿಯ ಶುಭ ಇಚ್ಛೆಗೆ ಕಾರಣವು ಏನೆಂದರೆ- ಸಂಬಂಧದಲ್ಲಿ ಸ್ನೇಹ ಮತ್ತು ಸಹಯೋಗದ ಪ್ರಾಪ್ತಿ ಆಗುತ್ತದೆ. ಈ ಅಲೌಕಿಕ ಜೀವನದಲ್ಲಿ ಸಂಬಂಧದ ಶಕ್ತಿಯು ಡಬಲ್ ರೂಪದಲ್ಲಿ ಪ್ರಾಪ್ತಿಯಾಗುತ್ತದೆ. ಡಬಲ್ ಸಂಬಂಧದ ಶಕ್ತಿಯು ಹೇಗೆ ಪ್ರಾಪ್ತಿಯಾಗುತ್ತದೆ ಎಂದು ಗೊತ್ತಿದೆಯೇ? ಒಂದು - ತಂದೆಯ ಮೂಲಕ ಸರ್ವ ಸಂಬಂಧ, ಇನ್ನೊಂದು - ದೈವೀ ಪರಿವಾರದ ಮೂಲಕ ಸಂಬಂಧ. ಅಂದಮೇಲೆ ತಂದೆಯಿಂದ ಹಾಗೂ ಪರಸ್ಪರದಲ್ಲಿಯೂ ಡಬಲ್ ಸಂಬಂಧ ಆಯಿತಲ್ಲವೆ! ಹಾಗಾದರೆ ಸಂಬಂಧದ ಮೂಲಕ ಸದಾ ನಿಸ್ವಾರ್ಥ ಸ್ನೇಹ, ಅವಿನಾಶಿ ಸ್ನೇಹ ಮತ್ತು ಅವಿನಾಶಿ ಸಹಯೋಗದ ಪ್ರಾಪ್ತಿ ಆಗುತ್ತಿರುತ್ತದೆ. ಅಂದಾಗ ಸಂಬಂಧವೂ ಸಹ ಶಕ್ತಿಯಾಗಿದೆ ಅಲ್ಲವೆ. ಹಾಗೆ ನೋಡಿದಾಗ ತಂದೆಯು, ಮಕ್ಕಳನ್ನೇಕೆ ಬಯಸುತ್ತಾರೆ ಅಥವಾ ಮಕ್ಕಳು ತಂದೆಯನ್ನು ಏಕೆ ಬಯಸುತ್ತಾರೆ? ಸಹಯೋಗಕ್ಕಾಗಿ, ಸಮಯದಲ್ಲಿ ಸಹಯೋಗ ಸಿಗಲಿ ಎಂದು. ಅಂದಮೇಲೆ ಈ ಅಲೌಕಿಕ ಜೀವನದಲ್ಲಿಯೂ ಸಹ ನಾಲ್ಕೂ ಶಕ್ತಿಗಳ ಪ್ರಾಪ್ತಿಗಳು ವರದಾನದ ರೂಪದಲ್ಲಿ, ಆಸ್ತಿಯ ರೂಪದಲ್ಲಿ ಪ್ರಾಪ್ತಿಯಾಗಿದೆ. ಯಾರಿಗೆ ಈ ನಾಲ್ಕೂ ಪ್ರಕಾರದ ಶಕ್ತಿಗಳೆಲ್ಲಿ ಪ್ರಾಪ್ತಿ ಆಗಿರುತ್ತದೆಯೋ, ಅವರ ಪ್ರತೀ ಸಮಯದ ಸ್ಥಿತಿಯು ಹೇಗಿರುತ್ತದೆ? ಸದಾ ಮಾಸ್ಟರ್ ಸರ್ವ ಶಕ್ತಿವಂತ. ಸದಾ ಈ ಸ್ಥಿತಿಯ ಸಿಂಹಾಸನದಲ್ಲಿಯೇ ಸ್ಥಿತರಾಗಿರುತ್ತೀರಾ? ಇದನ್ನೇ ಇನ್ನೊಂದು ಶಬ್ಧಗಳಲ್ಲಿ ಸ್ವಯಂನ ರಾಜಾ ಅಥವಾ ರಾಜಯೋಗಿ ಎಂದು ಹೇಳಲಾಗುತ್ತದೆ. ರಾಜರುಗಳ ಭಂಡಾರವು ಸದಾ ತುಂಬಿರುತ್ತದೆ. ಅಂದಮೇಲೆ ರಾಜಯೋಗಿ ಅರ್ಥಾತ್ ಸದಾ ಶಕ್ತಿಗಳ ಭಂಡಾರವು ತುಂಬಿರುತ್ತದೆ, ತಿಳಿಯಿತೆ? ಇದಕ್ಕೆ ಶ್ರೇಷ್ಠ ಬ್ರಾಹ್ಮಣ ಅಲೌಕಿಕ ಜೀವನ ಎಂದು ಹೇಳಲಾಗುತ್ತದೆ. ತಾವು ಸದಾ ಮಾಲೀಕನಾಗಿದ್ದು ಸರ್ವ ಶಕ್ತಿಗಳನ್ನು ಕಾರ್ಯದಲ್ಲಿ ಉಪಯೋಗಿಸಿರಿ. ಯಥಾ ಶಕ್ತಿಗೆ ಬದಲಾಗಿ ಸದಾ ಶಕ್ತಿಶಾಲಿ ಆಗಿರಿ. ತಂದೆಗೆ ಅರ್ಜಿ ಹಾಕುವವರಲ್ಲ, ಸದಾ ಖುಷಿಯಾಗಿರುವವರು ಆಗಿರಿ. ಒಳ್ಳೆಯದು.
ಎಲ್ಲರಿಗೂ ಮಧುಬನಕ್ಕೆ ಬರುವ ಅವಕಾಶವಂತು ಸಿಗುತ್ತದೆ ಅಲ್ಲವೆ. ಪ್ರಾಪ್ತಿಯಾಗಿರುವ ಈ ಭಾಗ್ಯವನ್ನು ಸದಾ ಜೊತೆ ಇಟ್ಟುಕೊಳ್ಳಿರಿ. ಭಾಗ್ಯವಿದಾತನನ್ನು ಜೊತೆ ಇಟ್ಟುಕೊಳ್ಳುವುದು ಅಂದರೆ ಭಾಗ್ಯವನ್ನೇ ಜೊತೆ ಇಟ್ಟುಕೊಳ್ಳುವುದು ಆಗಿದೆ. ಮೂರು ಜೋನಿನವರು ಬಂದಿದ್ದಾರೆ. ವಿಭಿನ್ನ ಸ್ಥಾನಗಳ ಮೂರು ನದಿಗಳು ಬಂದು ಒಟ್ಟಿಗೆ ಸೇರಿದೆ - ಇದಕ್ಕೆ ತ್ರಿವೇಣಿ ಸಂಗಮ ಎಂದು ಹೇಳುತ್ತೇವೆ. ಬಾಪ್ದಾದಾರವರು ಎಲ್ಲರಿಗೂ ವರದಾತನಾಗಿ ವರದಾನವನ್ನು ಕೊಡುತ್ತಾರೆ. ವರದಾನಗಳನ್ನು ಕಾರ್ಯದಲ್ಲಿ ಉಪಯೋಗಿಸುವುದಂತು ಪ್ರತಿಯೊಬ್ಬರ ಮೇಲೆ ಆಧಾರಿತವಾಗಿದೆ. ಒಳ್ಳೆಯದು.
ನಾಲ್ಕೂ ಕಡೆಯಲ್ಲಿರುವ ಸರ್ವ ಆಸ್ತಿ ಮತ್ತು ವರದಾನಗಳ ಅಧಿಕಾರಿ ಶ್ರೇಷ್ಠ ಆತ್ಮರಿಗೆ, ಸರ್ವ ಮಾಸ್ಟರ್ ಶಕ್ತಿವಂತರು ಶ್ರೇಷ್ಠ ಆತ್ಮರಿಗೆ, ಸದಾ ಸಂತುಷ್ಟತೆಯ ಪ್ರಕಂಪನಗಳನ್ನು ಹರಡಿಸುವಂತಹ ಸಂತುಷ್ಟ ಆತ್ಮರಿಗೆ, ಸದಾ ಪರಮಾರ್ಥದ ಮೂಲಕ ವ್ಯವಹಾರದಲ್ಲಿ ಸಿದ್ಧಿಯ ಪ್ರಾಪ್ತಿ ಮಾಡಿಕೊಳ್ಳುವಂತಹ ಮಹಾನ್ ಆತ್ಮರಿಗೆ ಬಾಪ್ದಾದಾರವರ ಸ್ನೇಹ ಮತ್ತು ಶಕ್ತಿಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.
ಸರ್ವರ ಸಹಯೋಗದಿಂದ ಸುಖಮಯ ಜಗತ್ತು ಕಾರ್ಯಕ್ರಮದ ಬಗ್ಗೆ ಅವ್ಯಕ್ತ-ಬಾಪ್ದಾದಾರವರ ಪ್ರೇರಣೆಗಳು