text
stringlengths
0
61.5k
ರಾಮ ರಾಜ್ಯ ಮತ್ತು ರಾವಣ ರಾಜ್ಯವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನೂ ನೀವು ಮಕ್ಕಳಿಗೆ ತಿಳಿಸಲಾಗಿದೆ. ಪತಿತರಿಂದ ಪಾವನರು ಮತ್ತೆ ಪಾವನರಿಂದ ಪತಿತರು ಹೇಗಾಗುತ್ತೀರಿ, ಈ ಆಟದ ರಹಸ್ಯವನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ತಂದೆಯು ಜ್ಞಾನಪೂರ್ಣ ಬೀಜ ರೂಪನಾಗಿದ್ದಾರೆ, ಚೈತನ್ಯನಾಗಿದ್ದಾರೆ, ಅವರೇ ಬಂದು ತಿಳಿಸಿಕೊಡುತ್ತಾರೆ. ತಂದೆಯೇ ಹೇಳುತ್ತಾರೆ - ಇಡೀ ಕಲ್ಪವೃಕ್ಷದ ರಹಸ್ಯವನ್ನು ತಿಳಿದುಕೊಂಡಿರಾ? ಇದರಲ್ಲಿ ಏನೇನಾಗುತ್ತದೆ? ನೀವು ಇದರಲ್ಲಿ ಎಷ್ಟು ಪಾತ್ರವನ್ನು ಅಭಿನಯಿಸಿದಿರಿ? ಅರ್ಧಕಲ್ಪ ದೈವೀ ಸ್ವರಾಜ್ಯ, ಅರ್ಧಕಲ್ಪ ಆಸುರೀ ರಾಜ್ಯವಿರುತ್ತದೆ. ಒಳ್ಳೊಳ್ಳೆಯ ಮಕ್ಕಳ ಬುದ್ಧಿಯಲ್ಲಿ ಜ್ಞಾನವಿರುತ್ತದೆ. ತಂದೆಯು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾರಲ್ಲವೆ. ಶಿಕ್ಷಕರಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರು ಶಿಕ್ಷಕರಾಗಿಯೂ ಸಹ ಮತ್ತೆ ಕೆಟ್ಟು ಹೋಗುತ್ತಾರೆ ಅನೇಕರಿಗೆ ಕಲಿಸಿದವರು ಮತ್ತೆ ಸ್ವಯಂ ತಾವೇ ಸಮಾಪ್ತಿಯಾದರು. ಚಿಕ್ಕ-ಚಿಕ್ಕ ಮಕ್ಕಳಲ್ಲಿಯೂ ಭಿನ್ನ-ಭಿನ್ನ ಸಂಸ್ಕಾರದವರಿರುತ್ತಾರೆ. ಕೆಲವರು ನಂಬರ್ವನ್ ಪತಿತರಾಗಿದ್ದಾರೆ, ಇನ್ನು ಕೆಲವರು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಿದ್ದಾರೆ. ಕೆಲವರು ಜ್ಞಾನವನ್ನು ತೆಗೆದುಕೊಳ್ಳುವುದೇ ಇಲ್ಲ. ತಮ್ಮ ಚಲನೆಯನ್ನೂ ಸುಧಾರಣೆ ಮಾಡಿಕೊಳ್ಳುವುದಿಲ್ಲ. ಎಲ್ಲರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ಇದನ್ನೂ ಸಹ ಶಾಸ್ತ್ರಗಳಲ್ಲಿ ತೋರಿಸಿದ್ದಾರೆ - ಅಸುರರು ಬಂದು ಗೊತ್ತಿಲ್ಲದಂತೆ ಕುಳಿತು ಬಿಡುತ್ತಿದ್ದರು ಅಂದರೆ ಅಸುರರಾಗಿ ಎಷ್ಟೊಂದು ತೊಂದರೆ ಕೊಡುತ್ತಾರೆ. ಇದೆಲ್ಲವೂ ನಡೆಯುತ್ತದೆ. ಸ್ವರ್ಗದ ಸ್ಥಾಪನೆ ಮಾಡಲು ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ಬರಬೇಕಾಗುತ್ತದೆ. ಮಾಯೆಯು ಬಹಳ ಪ್ರಬಲವಾಗಿದೆ. ದಾನವನ್ನು ಕೊಡುತ್ತಾರೆ ಆದರೂ ಮಾಯೆಯು ಬುದ್ಧಿಯನ್ನು ತಿರುಗಿಸಿ ಬಿಡುತ್ತದೆ. ಅರ್ಧಂಬರ್ಧ ಇರುವವರನ್ನು ಮಾಯೆಯು ಖಂಡಿತ ತಿಂದು ಹಾಕುತ್ತದೆ. ಆದ್ದರಿಂದಲೇ ಮಾಯೆಯು ಶಕ್ತಿಶಾಲಿಯೆಂದು ಹೇಳುತ್ತಾರೆ. ಅರ್ಧಕಲ್ಪ ಮಾಯೆಯು ರಾಜ್ಯ ಮಾಡುತ್ತದೆ ಅಂದಮೇಲೆ ಅವಶ್ಯವಾಗಿ ಅಷ್ಟು ಶಕ್ತಿಶಾಲಿಯಾಗಿರಬೇಕಲ್ಲವೆ. ಮಾಯೆಯಿಂದ ಸೋಲುವವರ ಗತಿಯೇನಾಗಿ ಬಿಡುತ್ತದೆ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಂದೂ ಸಹ ಮುಟ್ಟಿದರೆ ಮುನಿಯಾಗಬಾರದು. ದೈವೀ ಗುಣಗಳನ್ನು ಧಾರಣೆ ಮಾಡಿ ತಮ್ಮ ಚಲನೆಯನ್ನು ಸುಧಾರಣೆ ಮಾಡಿಕೊಳ್ಳಬೇಕು.
2. ತಂದೆಯ ಪ್ರೀತಿಯನ್ನು ಪಡೆಯಲು ಸೇವೆ ಮಾಡಬೇಕು ಆದರೆ ಏನನ್ನು ಅನ್ಯರಿಗೆ ತಿಳಿಸುತ್ತೀರೋ ಅದನ್ನು ಸ್ವಯಂ ಧಾರಣೆ ಮಾಡಿಕೊಳ್ಳಬೇಕಾಗಿದೆ. ಕರ್ಮಾತೀತ ಸ್ಥಿತಿಯಲ್ಲಿ ಹೋಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ತಂದೆಯು ಈ ಶರೀರದ ಮೂಲಕ ತಿಳಿಸುತ್ತಾರೆ, ಇದಕ್ಕೆ ಜೀವ ಎಂದು ಹೇಳಲಾಗುತ್ತದೆ. ಇದರಲ್ಲಿ ಆತ್ಮವೂ ಇದೆ ಮತ್ತು ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಪರಮಪಿತ ಪರಮಾತ್ಮನೂ ಇವರಲ್ಲಿದ್ದಾರೆ. ಇದು ಮೊಟ್ಟ ಮೊದಲು ಪಕ್ಕಾ ಆಗಬೇಕು. ಆದ್ದರಿಂದ ಇವರಿಗೆ ದಾದಾ ಎಂತಲೂ ಹೇಳುತ್ತಾರೆ. ಇದಂತೂ ಮಕ್ಕಳಿಗೆ ನಿಶ್ಚಯವಿದೆ. ಈ ನಿಶ್ಚಯದಲ್ಲಿಯೇ ಮನನ ಮಾಡಬೇಕಾಗಿದೆ. ಅವಶ್ಯವಾಗಿ ತಂದೆಯು ಯಾರಲ್ಲಿ ಅವತರಿಸಿದ್ದಾರೆಯೋ ಅವರ ಪ್ರತಿ ಸ್ವಯಂ ತಂದೆಯೇ ಹೇಳುತ್ತಾರೆ - ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬರುತ್ತೇನೆ. ಇದು ಸರ್ವಶಾಸ್ತ್ರ ಶಿರೋಮಣಿ ಗೀತಾ ಜ್ಞಾನವಾಗಿದೆ. ಶ್ರೀಮತ ಎಂದರೆ ಶ್ರೇಷ್ಠ ಮತ. ಶ್ರೇಷ್ಠಾತಿ ಶ್ರೇಷ್ಠ ಭಗವಂತನದು ಶ್ರೇಷ್ಠಾತಿ ಶ್ರೇಷ್ಠ ಮತವಾಗಿದೆ. ಯಾರ ಶ್ರೀಮತದಿಂದ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ನೀವು ಭ್ರಷ್ಟ ಮನುಷ್ಯರಿಂದ ಶ್ರೇಷ್ಠ ದೇವತೆಗಳಾಗುತ್ತೀರಿ. ನೀವು ಇದಕ್ಕಾಗಿಯೇ ಬರುತ್ತೀರಿ. ತಂದೆಯೂ ಸಹ ಹೇಳುತ್ತಾರೆ - ನಾನು ನಿಮ್ಮನ್ನು ಶ್ರೇಷ್ಠಾಚಾರಿಗಳು, ನಿರ್ವಿಕಾರಿ ಮತದ ದೇವಿ-ದೇವತೆಗಳನ್ನಾಗಿ ಮಾಡಲು ಬರುತ್ತೇನೆ. ಮನುಷ್ಯರಿಂದ ದೇವತೆಗಳಾಗುವ ಅರ್ಥವನ್ನೂ ತಿಳಿಯಬೇಕಾಗಿದೆ. ವಿಕಾರಿ ಮನುಷ್ಯರಿಂದ ನಿರ್ವಿಕಾರಿ ದೇವತೆಗಳನ್ನಾಗಿ ಮಾಡಲು ಬರುತ್ತೇನೆ. ಸತ್ಯಯುಗದಲ್ಲಿಯೂ ಮನುಷ್ಯರಿರುತ್ತಾರೆ ಆದರೆ ದೈವೀ ಗುಣವುಳ್ಳವರು. ಈಗ ಕಲಿಯುಗದಲ್ಲಿ ಆಸುರೀ ಗುಣಗಳನ್ನು ಹೊಂದಿದ ಮನುಷ್ಯರಿದ್ದಾರೆ. ಎಲ್ಲವೂ ಮನುಷ್ಯ ಸೃಷ್ಟಿಯಾಗಿದೆ ಆದರೆ ಅವರು ಈಶ್ವರೀಯ ಬುದ್ಧಿಯವರು, ಇಲ್ಲಿರುವವರು ಆಸುರೀ ಬುದ್ಧಿಯವರಾಗಿದ್ದಾರೆ. ಅಲ್ಲಿ ಜ್ಞಾನ, ಇಲ್ಲಿ ಭಕ್ತಿಯಿದೆ. ಜ್ಞಾನ ಮತ್ತು ಭಕ್ತಿ ಬೇರೆ-ಬೇರೆಯಲ್ಲವೆ. ಜ್ಞಾನದ ಪುಸ್ತಕಗಳು ಎಷ್ಟೊಂದಿವೆ ಮತ್ತು ಭಕ್ತಿಯದು ಎಷ್ಟೊಂದಿದೆ. ಜ್ಞಾನ ಸಾಗರನು ತಂದೆಯಾಗಿದ್ದಾರೆ ಅಂದಮೇಲೆ ಅವರ ಪುಸ್ತಕವೂ ಒಂದೇ ಇರಬೇಕು. ಯಾರೆಲ್ಲಾ ಧರ್ಮ ಸ್ಥಾಪನೆ ಮಾಡುವರೋ ಅವರ ಪುಸ್ತಕವು ಒಂದೇ ಆಗಿರಬೇಕು. ಅದಕ್ಕೆ ಧರ್ಮ ಗ್ರಂಥವೆಂದು ಹೇಳಲಾಗುತ್ತದೆ. ಮೊದಲ ಧರ್ಮ ಗ್ರಂಥವು ಗೀತೆಯಾಗಿದೆ, ಶ್ರೀಮತ್ಭಗವದ್ಗೀತೆ. ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ – ಮೊಟ್ಟ ಮೊದಲನೆಯದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ, ಹಿಂದೂ ಧರ್ಮವಲ್ಲ. ಗೀತೆಯಿಂದ ಹಿಂದೂ ಧರ್ಮ ಸ್ಥಾಪನೆಯಾಯಿತು ಮತ್ತು ಕೃಷ್ಣನು ಗೀತೆಯನ್ನು ನುಡಿಸಿದನೆಂದು ಮನುಷ್ಯರು ತಿಳಿಯುತ್ತಾರೆ. ಯಾರೊಂದಿಗೇ ಕೇಳಿದರೂ ಸಹ ಪರಂಪರೆಯಿಂದ ಇದನ್ನು ಕೃಷ್ಣನು ಹೇಳಿದ್ದಾರೆಂದು ಹೇಳುತ್ತಾರೆ. ಯಾವುದೇ ಶಾಸ್ತ್ರದಲ್ಲಿ ಶಿವ ಭಗವಾನುವಾಚವಿಲ್ಲ. ಶ್ರೀಮತ್ ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ. ಯಾರು ಗೀತೆಯನ್ನು ಓದಿರುವರೋ ಅವರಿಗೇ ಸಹಜವಾಗಿ ಅರ್ಥವಾಗುವುದು. ನೀವೀಗ ತಿಳಿದುಕೊಳ್ಳುತ್ತೀರಿ - ಇದೇ ಗೀತಾ ಜ್ಞಾನದಿಂದ ಮನುಷ್ಯರಿಂದ ದೇವತೆಗಳಾಗಿದ್ದಾರೆ. ಯಾವ ಜ್ಞಾನವನ್ನು ಈಗಲೂ ಸಹ ತಂದೆಯು ನಮಗೆ ಕೊಡುತ್ತಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ, ಪವಿತ್ರತೆಯನ್ನೂ ಕಲಿಸುತ್ತಿದ್ದಾರೆ, ಕಾಮ ಮಹಾಶತ್ರುವಾಗಿದೆ. ಇದರ ಮೂಲಕವೇ ನೀವು ಸೋಲನ್ನನುಭವಿಸಿದ್ದೀರಿ. ಈಗ ಮತ್ತೆ ಅದರ ಮೇಲೆ ಜಯ ಗಳಿಸಿದರೆ ಜಗತ್ಜೀತರು ಅರ್ಥಾತ್ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಇದು ಬಹಳ ಸಹಜವಾಗಿದೆ. ಬೇಹದ್ದಿನ ತಂದೆಯು ಕುಳಿತು ಇವರ (ಬ್ರಹ್ಮಾ) ಮೂಲಕ ನಿಮಗೆ ಓದಿಸುತ್ತಾರೆ. ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಈ ಬ್ರಹ್ಮಾರವರು ಮನುಷ್ಯರ ಬೇಹದ್ದಿನ ತಂದೆಯಾಗಿದ್ದಾರೆ. ಹೆಸರೇ ಆಗಿದೆ - ಪ್ರಜಾಪಿತ ಬ್ರಹ್ಮಾ. ಬ್ರಹ್ಮನ ತಂದೆಯ ಹೆಸರೇನೆಂದು ನೀವು ಯಾರೊಂದಿಗಾದರೂ ಕೇಳಿದರೆ ಅವರು ತಬ್ಬಿಬ್ಬಾಗುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರು ರಚನೆಯಾಗಿದ್ದಾರೆ. ಈ ಮೂವರಿಗೂ ಯಾರೋ ತಂದೆಯಿರಬೇಕಲ್ಲವೆ! ನೀವು ತೋರಿಸುತ್ತೀರಿ - ಈ ಮೂವರಿಗೆ ತಂದೆಯು ನಿರಾಕಾರ ಶಿವನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನು ಸೂಕ್ಷ್ಮವತನದ ದೇವತೆಗಳೆಂದು ತೋರಿಸುತ್ತಾರೆ, ಅವರ ಮೇಲೆ ಶಿವನಿದ್ದಾರೆ. ಮಕ್ಕಳಿಗೆ ಗೊತ್ತಿದೆ, ಶಿವ ತಂದೆಯ ಮಕ್ಕಳು ಯಾರೆಲ್ಲಾ ಆತ್ಮರಿದ್ದಾರೆಯೋ ಅವರಿಗೆ ತಮ್ಮ ಶರೀರವಂತೂ ಇದ್ದೇ ಇರುವುದು. ತಂದೆಯಂತೂ ಸದಾ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ನಿರಾಕಾರ ಪರಮಪಿತ ಪರಮಾತ್ಮನಿಗೆ ನಾವು ಮಕ್ಕಳಾಗಿದ್ದೇವೆಂದು ನಿಮಗೆ ತಿಳಿದಿದೆ. ಪರಮಪಿತ ಪರಮಾತ್ಮನೆಂದು ಆತ್ಮವೇ ಶರೀರದ ಮೂಲಕ ಹೇಳುತ್ತದೆ. ಎಷ್ಟು ಸಹಜ ಮಾತುಗಳಾಗಿವೆ. ಇದಕ್ಕೆ ತಂದೆ ಮತ್ತು ಆಸ್ತಿ ಎಂದು ಹೇಳಲಾಗುತ್ತದೆ. ಯಾರು ಓದಿಸುತ್ತಾರೆ? ಗೀತೆಯ ಜ್ಞಾನವನ್ನು ಯಾರು ತಿಳಿಸಿದರು? ನಿರಾಕಾರ ತಂದೆ. ಅವರಿಗೆ ಯಾವುದೇ ಕಿರೀಟವಿಲ್ಲ, ಅವರು ಜ್ಞಾನ ಸಾಗರ, ಬೀಜ ರೂಪ, ಚೈತನ್ಯನಾಗಿದ್ದಾರೆ. ನೀವೂ ಸಹ ಚೈತನ್ಯ ಆತ್ಮರಾಗಿದ್ದೀರಲ್ಲವೆ. ಎಲ್ಲಾ ವೃಕ್ಷಗಳ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿದ್ದೀರಿ. ಭಲೆ ನೀವು ಮಾಲಿಗಳಲ್ಲ ಆದರೆ ಹೇಗೆ ಬೀಜವನ್ನು ಹಾಕುತ್ತಾರೆ? ಅದರಿಂದ ಹೇಗೆ ವೃಕ್ಷವು ವೃದ್ಧಿಯಾಗುತ್ತದೆ? ಎಂಬುದನ್ನು ತಿಳಿದುಕೊಳ್ಳಬಲ್ಲಿರಿ. ಅದಂತೂ ಜಡ ವೃಕ್ಷವಾಗಿದೆ, ಇದು ಚೈತನ್ಯವಾಗಿದೆ. ನೀವಾತ್ಮರಲ್ಲಿ ಜ್ಞಾನವಿದೆ. ಇದು ಮತ್ತ್ಯಾರಲ್ಲಿಯೂ ಇರುವುದಿಲ್ಲ. ತಂದೆಯು ಚೈತನ್ಯ ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ ಅಂದಮೇಲೆ ವೃಕ್ಷವೂ ಮನುಷ್ಯರಿಂದಲೇ ಕೂಡಿರಬೇಕಲ್ಲವೆ. ಇದು ಚೈತನ್ಯ ರಚನೆಯಾಗಿದೆ. ರಚಯಿತ ಮತ್ತು ರಚನೆಯಲ್ಲಿ ಅಂತರವಂತೂ ಇದೆಯಲ್ಲವೆ. ಮಾವಿನ ಬೀಜವನ್ನು ಹಾಕಿದರೆ ಮಾವಿನ ಸಸಿಯೇ ಬರುತ್ತದೆ ಮತ್ತು ವೃಕ್ಷವು ಎಷ್ಟು ದೊಡ್ಡದಾಗುತ್ತಾ ಹೋಗುತ್ತದೆ ಹಾಗೆಯೇ ಮನುಷ್ಯ ರಚನೆಯ ಬೀಜದಿಂದ ಎಷ್ಟೊಂದು ಶಾಖೆಗಳು ಹೊರಡುತ್ತವೆ! ಜಡ ಬೀಜದಲ್ಲಿ ಯಾವುದೇ ಜ್ಞಾನವಿರುವುದಿಲ್ಲ. ಇವರಂತೂ ಚೈತನ್ಯ ಬೀಜರೂಪನಾಗಿದ್ದಾರೆ. ಹೇಗೆ ಉತ್ಪತ್ತಿ, ಪಾಲನೆ ಮತ್ತು ವಿನಾಶವಾಗುತ್ತದೆಯೆಂದು ಅವರಲ್ಲಿ ಇಡೀ ಸೃಷ್ಟಿರೂಪಿ ವೃಕ್ಷದ ಜ್ಞಾನವಿದೆ. ಬಹಳ ದೊಡ್ಡ ವೃಕ್ಷವು ಸಮಾಪ್ತಿಯಾಗಿ ಮತ್ತೆ ಇನ್ನೊಂದು ಹೊಸ ವೃಕ್ಷವು ಹೇಗೆ ಎದ್ದು ನಿಲ್ಲುತ್ತದೆ ಎಂಬುದು ಗುಪ್ತ ಮಾತಾಗಿದೆ. ನಿಮಗೆ ಜ್ಞಾನವೂ ಗುಪ್ತವಾಗಿಯೇ ಸಿಗುತ್ತದೆ, ತಂದೆಯೂ ಗುಪ್ತವಾಗಿಯೇ ಬಂದಿದ್ದಾರೆ. ಈಗ ಹೊಸ ವೃಕ್ಷದ ನಾಟಿಯಾಗುತ್ತಿದೆ. ಈಗಂತೂ ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ. ಬೀಜದಿಂದ ಮೊಟ್ಟ ಮೊದಲನೆಯದಾಗಿ ಯಾವ ಎಲೆಗಳು ಬಂದವೋ ಅವರು ಯಾರಾಗಿದ್ದರು? ಸತ್ಯಯುಗದ ಮೊದಲ ಎಲೆಯೆಂದು ಕೃಷ್ಣನಿಗೇ ಹೇಳಲಾಗುವುದು, ಲಕ್ಷ್ಮೀ-ನಾರಾಯಣರಿಗಲ್ಲ. ಹೊಸ ಎಲೆಯು ಚಿಕ್ಕದಾಗಿರುತ್ತದೆ ನಂತರ ಅದು ದೊಡ್ಡದಾಗುತ್ತದೆ ಅಂದಾಗ ಈ ಬೀಜಕ್ಕೆ ಎಷ್ಟೊಂದು ಮಹಿಮೆಯಿದೆ! ಇವರಂತೂ ಚೈತನ್ಯನಲ್ಲವೆ. ಮತ್ತೆ ಎಲೆಗಳೂ ಹೊರಡುತ್ತವೆ, ಅವರಿಗೆ ಬಹಳ ಮಹಿಮೆಯಾಗುತ್ತದೆ. ನೀವೀಗ ದೇವಿ-ದೇವತೆಗಳಾಗುತ್ತಿದ್ದೀರಿ, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುತ್ತಿದ್ದೀರಿ. ಮೂಲ ಮಾತೇ ಇದಾಗಿದೆ – ದೈವೀ ಗುಣಗಳನ್ನು ನಾವು ಧಾರಣೆ ಮಾಡಬೇಕು, ಇವರ ತರಹ ನಾವೂ ಆಗಬೇಕಾಗಿದೆ, ಚಿತ್ರಗಳೂ ಇವೆ. ಚಿತ್ರಗಳು ಇಲ್ಲದೇ ಹೋದರೆ ಬುದ್ಧಿಯಲ್ಲಿ ಜ್ಞಾನವೇ ಬರುವುದಿಲ್ಲ. ಈ ಚಿತ್ರಗಳು ಬಹಳ ಉಪಯೋಗಕ್ಕೆ ಬರುತ್ತವೆ. ಭಕ್ತಿಮಾರ್ಗದಲ್ಲಿ ಈ ಚಿತ್ರಗಳಿಗೂ ಪೂಜೆ ನಡೆಯುತ್ತದೆ ಮತ್ತು ಜ್ಞಾನಮಾರ್ಗದಲ್ಲಿ ನಾವೂ ಈ ರೀತಿಯಾಗಬೇಕೆಂದು ಈ ಚಿತ್ರಗಳಿಂದ ನಿಮಗೆ ಜ್ಞಾನ ಸಿಗುತ್ತದೆ. ಭಕ್ತಿಮಾರ್ಗದಲ್ಲಿ ನಾವೇ ಈ ರೀತಿಯಾಗಬೇಕೆಂಬುದನ್ನು ಅವರು ತಿಳಿದುಕೊಳ್ಳುವುದಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಮಂದಿರಗಳಾಗುತ್ತವೆ! ಎಲ್ಲರಿಗಿಂತ ಹೆಚ್ಚು ಯಾರ ಮಂದಿರಗಳಾಗುತ್ತವೆ? ಯಾರು ಬೀಜ ರೂಪನಾಗಿದ್ದಾರೆ, ಆ ಶಿವ ತಂದೆಯ ಮಂದಿರಗಳೇ ಹೆಚ್ಚು ತಯಾರಾಗುತ್ತವೆ. ಅವರ ನಂತರ ಮೊದಲ ರಚನೆಯ ಮಂದಿರಗಳು ನಿರ್ಮಾಣವಾಗುತ್ತದೆ. ಮೊದಲ ರಚನೆಯು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಶಿವನ ನಂತರ ಎಲ್ಲರಿಗಿಂತ ಹೆಚ್ಚು ಪೂಜೆಯು ಇವರಿಗೇ ನಡೆಯುತ್ತದೆ. ಮಾತೆಯರಂತೂ ಜ್ಞಾನವನ್ನು ತಿಳಿಸುತ್ತೀರಿ, ಅವರ ಪೂಜೆಯಾಗುವುದಿಲ್ಲ, ಓದಿಸುತ್ತೀರಲ್ಲವೆ. ತಂದೆಯು ನಿಮಗೆ ಓದಿಸುತ್ತಾರೆ, ನೀವು ಯಾರದೇ ಪೂಜೆ ಮಾಡುವುದಿಲ್ಲ. ಓದಿಸುವವರಿಗೂ ಈಗ ಪೂಜೆ ಮಾಡುವಂತಿಲ್ಲ. ನೀವು ಯಾವಾಗ ಓದಿ ಮತ್ತೆ ಅವಿದ್ಯಾವಂತರಾಗುವಿರೋ ಆಗ ಪೂಜೆಯಾಗುವುದು. ನೀವೇ ದೇವಿ-ದೇವತೆಗಳಾಗುತ್ತೀರಿ, ನಿಮಗೇ ತಿಳಿದಿದೆ - ಯಾರು ನಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುವರೋ ಅವರ ಪೂಜೆಯೂ ನಡೆಯುವುದು ಮತ್ತು ನಂಬರ್ವಾರ್ ನಮ್ಮ ಪೂಜೆಯೂ ನಡೆಯುತ್ತದೆ. ಕ್ರಮೇಣವಾಗಿ ಪಂಚ ತತ್ವಗಳಿಗೂ ಪೂಜೆ ಮಾಡತೊಡಗುತ್ತಾರೆ. ಶರೀರವು ಪಂಚ ತತ್ವಗಳಿಂದಾಗಿದೆಯಲ್ಲವೆ. ಪಂಚ ತತ್ವಗಳಿಗಾದರೂ ಪೂಜೆ ಮಾಡಿ ಅಥವಾ ಶರೀರದ ಪೂಜೆಯನ್ನಾದರೂ ಮಾಡಿ ಒಂದೇ ಆಗಿ ಬಿಡುತ್ತದೆ. ಈ ಜ್ಞಾನವಂತೂ ಬುದ್ಧಿಯಲ್ಲಿದೆ. ಈ ಲಕ್ಷ್ಮೀ-ನಾರಾಯಣರು ಇಡೀ ವಿಶ್ವದ ಮಾಲೀಕರಾಗಿದ್ದರು, ಹೊಸ ಸೃಷ್ಟಿಯಲ್ಲಿ ಈ ದೇವಿ-ದೇವತೆಗಳ ರಾಜ್ಯವಿತ್ತು ಆದರೆ ಅವರು ಯಾವಾಗ ಇದ್ದರು ಎಂಬುದನ್ನು ತಿಳಿದುಕೊಂಡಿಲ್ಲ. ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಲಕ್ಷಾಂತರ ವರ್ಷಗಳ ಮಾತು ಯಾರ ಬುದ್ಧಿಯಲ್ಲಿಯೂ ನಿಲ್ಲಲು ಸಾಧ್ಯವಿಲ್ಲ. ಈಗ ನಿಮಗೆ ಸ್ಮೃತಿಯಿದೆ - ನಾವು ಇಂದಿಗೆ 5000 ವರ್ಷಗಳ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ದೇವಿ-ದೇವತಾ ಧರ್ಮದವರು ಮತ್ತೆ ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆ. ಹಿಂದೂ ಧರ್ಮವೆಂದು ಹೇಳುವಂತಿಲ್ಲ, ಆದರೂ ಪತಿತರಾಗಿರುವ ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಹೇಳಿಕೊಳ್ಳುವುದು ಶೋಭಿಸುವುದಿಲ್ಲ. ಅಪವಿತ್ರರಿಗೆ ದೇವಿ-ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯರು ಪವಿತ್ರ ದೇವಿಯರ ಪೂಜೆ ಮಾಡುತ್ತಾರೆ ಅಂದಮೇಲೆ ಸ್ವಯಂ ಅಪವಿತ್ರರಾಗಿದ್ದಾರೆ. ಆದ್ದರಿಂದ ಪವಿತ್ರರ ಮುಂದೆ ತಲೆ ಬಾಗಬೇಕಾಗುತ್ತದೆ. ಭಾರತದಲ್ಲಿ ವಿಶೇಷವಾಗಿ ಕನ್ಯೆಯರಿಗೆ ನಮನ ಮಾಡುತ್ತಾರೆ, ಕುಮಾರರಿಗೆ ನಮಿಸುವುದಿಲ್ಲ. ಕನ್ಯೆಯರಿಗೆ ಸ್ತ್ರೀಯರಿಗೆ ನಮಸ್ಕರಿಸುತ್ತಾರೆ. ಪುರುಷರಿಗೆ ಏಕೆ ನಮಿಸುವುದಿಲ್ಲ? ಈ ಸಮಯದಲ್ಲಿ ಜ್ಞಾನವು ಮೊದಲು ಮಾತೆಯರಿಗೆ ಸಿಗುತ್ತದೆ, ತಂದೆಯು ಇವರಲ್ಲಿ ಪ್ರವೇಶ ಮಾಡುತ್ತಾರೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಇವರು ಜ್ಞಾನದ ದೊಡ್ಡ ನದಿಯಾಗಿದ್ದಾರೆ. ಜ್ಞಾನ ನದಿಯೂ ಆಗಿದ್ದಾರೆ ಮತ್ತು ಪುರುಷನೂ ಆಗಿದ್ದಾರೆ. ಇದು ಎಲ್ಲದಕ್ಕಿಂತ ದೊಡ್ಡ ನದಿಯಾಗಿದೆ. ಬ್ರಹ್ಮ ಪುತ್ರ ನದಿಯು ಎಲ್ಲದಕ್ಕಿಂತ ದೊಡ್ಡದಾಗಿದೆ. ಇದು ಕಲ್ಕತ್ತಾದ ಕಡೆ ಸಾಗರದಲ್ಲಿ ಹೋಗಿ ಸೇರುತ್ತದೆ. ಅಲ್ಲಿ ಮೇಳವೂ ಆಗುತ್ತದೆ ಆದರೆ ಇದು ಆತ್ಮರು ಮತ್ತು ಪರಮಾತ್ಮನ ಮೇಳವೆಂದು ಅವರಿಗೆ ಗೊತ್ತಿಲ್ಲ. ಅದಂತೂ ನೀರಿನ ನದಿಯಾಗಿದೆ ಯಾವುದಕ್ಕೆ ಬ್ರಹ್ಮಪುತ್ರಾ ಎಂದು ಹೆಸರನ್ನಿಟ್ಟಿದ್ದಾರೆ. ಅವರಂತೂ ಬ್ರಹ್ಮನೆಂದು ಈಶ್ವರನಿಗೆ ಹೇಳಿದ್ದಾರೆ ಆದ್ದರಿಂದ ಬ್ರಹ್ಮಪುತ್ರಾ ನದಿಯನ್ನು ಬಹಳ ಪಾವನವೆಂದು ತಿಳಿಯುತ್ತಾರೆ. ದೊಡ್ಡ ನದಿಯಾಗಿದ್ದರೆ ಅದು ಪವಿತ್ರವಾಗಿಯೂ ಇರುವುದು, ವಾಸ್ತವದಲ್ಲಿ ಪತಿತ-ಪಾವನಿ ಎಂದು ಗಂಗೆಗೆ ಅಲ್ಲ, ಬ್ರಹ್ಮಪುತ್ರಾ ನದಿಗೆ ಹೇಳಲಾಗುವುದು. ಮೇಳವು ಇಲ್ಲಿಯೇ ಸೇರುತ್ತದೆ ಅಂದರೆ ಇದು ಸಾಗರ ಮತ್ತು ಬ್ರಹ್ಮಾ ನದಿಯ ಮೇಳವಾಗಿದೆ. ಬ್ರಹ್ಮಾರವರ ಮೂಲಕ ಹೇಗೆ ರಚನೆಯಾಗುತ್ತದೆ ಎಂಬುದು ಗುಹ್ಯ ತಿಳಿದುಕೊಳ್ಳುವ ಮಾತುಗಳಾಗಿವೆ, ಇವು ಪ್ರಾಯಃಲೋಪವಾಗಿ ಬಿಡುತ್ತವೆ. ಇದಂತೂ ಬಹಳ ಸಹಜ ಮಾತಲ್ಲವೆ.
ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ ಮತ್ತೆ ಈ ಪ್ರಪಂಚವೇ ಸಮಾಪ್ತಿಯಾಗಿ ಬಿಡುವುದು. ಶಾಸ್ತ್ರ ಇತ್ಯಾದಿಗಳೇನೂ ಉಳಿಯುವುದಿಲ್ಲ. ಮತ್ತೆ ಭಕ್ತಿಮಾರ್ಗದಲ್ಲಿ ಈ ಶಾಸ್ತ್ರಗಳು ರಚಿಸಲ್ಪಡುತ್ತವೆ, ಜ್ಞಾನಮಾರ್ಗದಲ್ಲಿ ಶಾಸ್ತ್ರಗಳಿರುವುದಿಲ್ಲ. ಈ ಶಾಸ್ತ್ರಗಳು ಪರಂಪರೆಯಿಂದ ನಡೆದು ಬರುತ್ತವೆ ಎಂದು ಮನುಷ್ಯರು ತಿಳಿಯುತ್ತಾರೆ, ಸ್ವಲ್ಪವೂ ಜ್ಞಾನವಿಲ್ಲ. ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ. ಆದ್ದರಿಂದ ಪರಂಪರೆಯೆಂದು ಹೇಳಿ ಬಿಡುತ್ತಾರೆ. ಇದಕ್ಕೆ ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳಿಗೆ ಈ ಬೇಹದ್ದಿನ ವಿದ್ಯೆಯು ಸಿಗುತ್ತಿದೆ, ಇದರಿಂದ ನೀವು ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಬಲ್ಲಿರಿ. ನಿಮಗೆ ಈ ದೇವಿ-ದೇವತೆಗಳ ಪೂರ್ಣ ಚರಿತ್ರೆ-ಭೂಗೋಳವು ತಿಳಿದಿದೆ, ಇವರು ಪವಿತ್ರ ಪ್ರವೃತ್ತಿ ಮಾರ್ಗದ ಪೂಜ್ಯರಾಗಿದ್ದಾರೆ, ಈಗ ಪೂಜಾರಿ ಪತಿತರಾಗಿದ್ದಾರೆ. ಸತ್ಯಯುಗದಲ್ಲಿ ಪವಿತ್ರ ಪ್ರವೃತ್ತಿ ಮಾರ್ಗವಿರುತ್ತದೆ. ಇಲ್ಲಿ ಕಲಿಯುಗದಲ್ಲಿ ಅಪವಿತ್ರ ಪ್ರವೃತ್ತಿ ಮಾರ್ಗವಿದೆ ನಂತರ ನಿವೃತ್ತಿ ಮಾರ್ಗವಾಗುತ್ತದೆ. ಅದೂ ಸಹ ಡ್ರಾಮಾದಲ್ಲಿದೆ. ಅದಕ್ಕೆ ಸನ್ಯಾಸ ಧರ್ಮವೆಂದು ಹೇಳಲಾಗುತ್ತದೆ. ಗೃಹಸ್ಥದ ಸನ್ಯಾಸ ಮಾಡಿ ಕಾಡಿಗೆ ಹೊರಟು ಹೋಗುತ್ತಾರೆ, ಅದು ಹದ್ದಿನ ಸನ್ಯಾಸವಾಗಿದೆ. ಇರುವುದಂತೂ ಇದೇ ಹಳೆಯ ಪ್ರಪಂಚದಲ್ಲಿಯೇ ಅಲ್ಲವೆ. ನೀವೀಗ ತಿಳಿದುಕೊಳ್ಳುತ್ತೀರಿ - ನಾವು ಸಂಗಮಯುಗದಲ್ಲಿದ್ದೇವೆ, ಮತ್ತೆ ಹೊಸ ಪ್ರಪಂಚದಲ್ಲಿ ಹೋಗುತ್ತೇವೆ. ನಿಮಗೆ ತಿಥಿ-ತಾರೀಖು, ಘಳಿಗೆಯ ಸಹಿತವಾಗಿ ಎಲ್ಲವೂ ತಿಳಿದಿದೆ. ಅವರಂತೂ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷ ಎಂದು ಹೇಳಿ ಬಿಡುತ್ತಾರೆ. ಇದರ ಪೂರ್ಣ ಲೆಕ್ಕವನ್ನು ತೆಗೆಯಬಹುದಾಗಿದೆ. ಲಕ್ಷಾಂತರ ವರ್ಷಗಳ ಮಾತು ನೆನಪು ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ಯಾರಾಗಿದ್ದಾರೆ, ಹೇಗೆ ಬರುತ್ತಾರೆ, ಯಾವ ಕರ್ತವ್ಯ ಮಾಡುತ್ತಾರೆ? ನೀವು ಎಲ್ಲರ ಕರ್ತವ್ಯವನ್ನು ಜನ್ಮ ಪತ್ರಿಯನ್ನು ಅರಿತುಕೊಂಡಿದ್ದೀರಿ ಬಾಕಿ ವೃಕ್ಷದ ಎಲೆಗಳಂತೂ ಬಹಳಷ್ಟಿರುತ್ತವೆ, ಅದನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಈ ಬೇಹದ್ದಿನ ಸೃಷ್ಟಿರೂಪಿ ವೃಕ್ಷದ ಎಲೆಗಳು ಎಷ್ಟಿವೆ? 5000 ವರ್ಷಗಳಲ್ಲಿ ಇಷ್ಟೊಂದು ಕೋಟ್ಯಾಂತರ ಜನಸಂಖ್ಯೆಯಿದೆ ಅಂದಮೇಲೆ ಇನ್ನು ಲಕ್ಷಾಂತರ ವರ್ಷಗಳಲ್ಲಿ ಇನ್ನೆಷ್ಟು ಜನಸಂಖ್ಯೆಯಾಗಬಹುದು! ಭಕ್ತಿಮಾರ್ಗದಲ್ಲಿ ತೋರಿಸುತ್ತಾರೆ - ಸತ್ಯಯುಗವು ಇಷ್ಟು ವರ್ಷಗಳು, ತ್ರೇತಾ ಇಷ್ಟು ವರ್ಷಗಳು, ದ್ವಾಪರಯುಗವು ಇಷ್ಟು ವರ್ಷಗಳಿವೆಯೆಂದು ಬರೆಯಲ್ಪಟ್ಟಿದೆ. ತಂದೆಯು ಕುಳಿತು ನೀವು ಮಕ್ಕಳಿಗೆ ಇದೆಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ. ಮಾವಿನ ಬೀಜವನ್ನು ನೋಡಿದಾಗ ಮಾವಿನ ವೃಕ್ಷವೇ ಸನ್ಮುಖದಲ್ಲಿ ಬರುತ್ತದೆಯಲ್ಲವೆ. ಈಗ ಮನುಷ್ಯ ಸೃಷ್ಟಿಯ ಬೀಜ ರೂಪನು ನಿಮ್ಮ ಸನ್ಮುಖದಲ್ಲಿದ್ದಾರೆ, ನಿಮಗೆ ಅವರೇ ಕುಳಿತು ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ ಏಕೆಂದರೆ ಚೈತನ್ಯನಾಗಿದ್ದಾರೆ. ತಿಳಿಸುತ್ತಾರೆ - ನಮ್ಮದು ಇದು ತಲೆ ಕೆಳಕಾದ ವೃಕ್ಷವಾಗಿದೆ. ನೀವೂ ಸಹ ಇದನ್ನು ತಿಳಿಸಬಹುದು - ಈ ಪ್ರಪಂಚದಲ್ಲಿ ಏನೆಲ್ಲಾ ಜಡ ಹಾಗೂ ಚೈತನ್ಯವಿದೆಯೋ ಎಲ್ಲವೂ ಚಾಚೂ ತಪ್ಪದೆ ಪುನರಾವರ್ತನೆಯಾಗುವುದು. ಈಗ ಎಷ್ಟೊಂದು ವೃದ್ಧಿ ಹೊಂದುತ್ತಿರುತ್ತಾರೆ! ಸತ್ಯಯುಗದಲ್ಲಿ ಇಷ್ಟೊಂದು ಇರಲು ಸಾಧ್ಯವಿಲ್ಲ. ಇಂತಹ ವಸ್ತು ಆಸ್ಟ್ರೇಲಿಯಾದಿಂದ, ಜಪಾನಿನಿಂದ ಬಂದಿತೆಂದು ಹೇಳುತ್ತಾರೆ. ಸತ್ಯಯುಗದಲ್ಲಿ ಜಪಾನ್, ಆಸ್ಟ್ರೇಲಿಯಾ ಮೊದಲಾದುವುಗಳಿರಲಿಲ್ಲ. ಡ್ರಾಮಾನುಸಾರ ಅಲ್ಲಿನ ವಸ್ತುಗಳು ಇಲ್ಲಿಗೆ ಆಮದು ಮಾಡಿಕೊಳ್ಳುತ್ತಾರೆ. ಅಮೇರಿಕಾದಿಂದ ಗೋಧಿಯು ಬರುತ್ತದೆ. ಸತ್ಯಯುಗದಲ್ಲಿ ಎಲ್ಲಿಂದಲೂ ಬರುವುದಿಲ್ಲ. ಅಲ್ಲಂತೂ ಒಂದೇ ಧರ್ಮವಿರುತ್ತದೆ, ಇಲ್ಲಾದರೆ ಧರ್ಮಗಳು ವೃದ್ಧಿಯಾಗುತ್ತಿರುತ್ತದೆ. ಆದ್ದರಿಂದ ಅವರ ಜೊತೆ ಎಲ್ಲಾ ವಸ್ತುಗಳು ತಯಾರಾಗುತ್ತಾ ಇರುತ್ತವೆ. ಸತ್ಯಯುಗದಲ್ಲಿ ಏನನ್ನೂ ಎಲ್ಲಿಂದಲೂ ತರಿಸುವುದಿಲ್ಲ, ಈಗ ನೋಡಿ ಎಲ್ಲೆಲ್ಲಿಂದ ತರಿಸುತ್ತಾರೆ! ಮನುಷ್ಯರು ಕೊನೆಯಲ್ಲಿ ವೃದ್ಧಿ ಹೊಂದುತ್ತಾ ಹೋಗುತ್ತಿದ್ದಾರೆ. ಸತ್ಯಯುಗದಲ್ಲಿ ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ. ಅಲ್ಲಿನ ಪ್ರತೀ ವಸ್ತು ಸತೋಪ್ರಧಾನ, ಬಹಳ ಚೆನ್ನಾಗಿರುತ್ತದೆ. ಮನುಷ್ಯರೇ ಸತೋಪ್ರಧಾನರಾಗಿರುತ್ತಾರೆ. ಮನುಷ್ಯರು ಚೆನ್ನಾಗಿದ್ದಾಗ ಸಾಮಗ್ರಿಗಳೂ ಚೆನ್ನಾಗಿರುತ್ತವೆ. ಕೆಟ್ಟ ಮನುಷ್ಯರಾದಾಗ ಸಾಮಗ್ರಿಗಳು ನಷ್ಟದಾಯಕವಾಗುತ್ತದೆ.
ವಿಜ್ಞಾನದ ಮುಖ್ಯ ವಸ್ತು ಅಣ್ವಸ್ತ್ರಗಳಾಗಿವೆ, ಇದರಿಂದ ಇಡೀ ಪ್ರಪಂಚವೇ ವಿನಾಶವಾಗುತ್ತದೆ. ಅದನ್ನು ಹೇಗೆ ತಯಾರಿಸಬಹುದು! ಅದನ್ನು ತಯಾರಿಸುವ ಆತ್ಮನಲ್ಲಿ ಡ್ರಾಮಾನುಸಾರ ಮೊದಲೇ ಆ ಜ್ಞಾನವಿರುತ್ತದೆ. ಸಮಯ ಬಂದಾಗ ಆ ಜ್ಞಾನವು ಅವರಲ್ಲಿ ಇಮರ್ಜ್ ಆಗುತ್ತದೆ. ಯಾರಲ್ಲಿ ಆ ಜ್ಞಾನವಿರುವುದೋ ಆಗಲೇ ಕೆಲಸ ಮಾಡುತ್ತಾರೆ ಮತ್ತು ಅನ್ಯರಿಗೆ ಕಲಿಸುತ್ತಾರೆ. ಕಲ್ಪ-ಕಲ್ಪವೂ ಯಾವ ಪಾತ್ರವನ್ನಭಿನಯಿಸಿದ್ದಾರೆಯೋ ಅದೇ ನಡೆಯುತ್ತಿರುತ್ತದೆ. ನೀವೀಗ ಎಷ್ಟೊಂದು ಜ್ಞಾನಪೂರ್ಣರಾಗುತ್ತೀರಿ, ಇದಕ್ಕಿಂತ ಹೆಚ್ಚು ಜ್ಞಾನವು ಮತ್ತ್ಯಾವುದೂ ಇಲ್ಲ. ಈ ಜ್ಞಾನದಿಂದ ನೀವು ದೇವತೆಗಳಾಗಿ ಬಿಡುತ್ತೀರಿ. ಇದಕ್ಕಿಂತ ಶ್ರೇಷ್ಠ ಜ್ಞಾನವು ಮತ್ತ್ಯಾವುದೂ ಇಲ್ಲ. ಅದು ಮಾಯೆಯ ಜ್ಞಾನವಾಗಿದೆ ಅದರಿಂದ ವಿನಾಶವಾಗುತ್ತದೆ. ಆ ವಿಜ್ಞಾನಿಗಳು ಚಂದ್ರ ಗ್ರಹಕ್ಕೆ ಹೋಗಿ ಸಂಶೋಧನೆ ನಡೆಸುತ್ತಾರೆ ಆದರೆ ನಿಮಗಾಗಿ ಯಾವುದೂ ಹೊಸ ಮಾತಲ್ಲ. ಇದೆಲ್ಲವೂ ಮಾಯೆಯ ಆಡಂಬರವಾಗಿದೆ, ಬಹಳ ಶೋ ಮಾಡುತ್ತಾರೆ. ಬಹಳ ಆಳದಲ್ಲಿ ಹೋಗುತ್ತಾರೆ. ಬುದ್ಧಿಯನ್ನು ಬಹಳ ಓಡಿಸುತ್ತಾರೆ. ಏನಾದರೂ ಕಮಾಲ್ ಮಾಡಿ ತೋರಿಸಬೇಕು ಎಂದು. ಬಹಳ ಚಮತ್ಕಾರ ಮಾಡುವುದರಿಂದ ಮತ್ತೆ ಅದು ನಷ್ಟವೇ ಆಗುತ್ತದೆ. ಏನೇನನ್ನೋ ತಯಾರಿಸುತ್ತಾರೆ. ತಯಾರಿಸುವವರಿಗೆ ಗೊತ್ತಿದೆ, ಇದರಿಂದ ಈ ವಿನಾಶವಾಗುವುದು ಎಂದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಗುಪ್ತ ಜ್ಞಾನದ ಸ್ಮರಣೆ ಮಾಡಿ ಹರ್ಷಿತರಾಗಿರಬೇಕಾಗಿದೆ. ದೇವತೆಗಳ ಚಿತ್ರಗಳನ್ನು ಸನ್ಮುಖದಲ್ಲಿ ನೋಡುತ್ತಾ ಅವರಿಗೆ ವಂದನೆ, ನಮಸ್ಕಾರಗಳನ್ನು ಮಾಡುವ ಬದಲು ಅವರಂತೆ ಆಗಲು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು.
2. ನಿಶ್ಚಯದಲ್ಲಿ ರಮಣ (ಮನನ) ಮಾಡಬೇಕಾಗಿದೆ. ಒಬ್ಬ ತಂದೆಯ ಶ್ರೀಮತದಂತೆ ನಡೆದು ಶ್ರೇಷ್ಠರಾಗಬೇಕಾಗಿದೆ.
ಬ್ರಾಹ್ಮಣ ಜೀವನದ ಶೃಂಗಾರ- “ಪವಿತ್ರತೆ”
ಬಾಪ್ದಾದಾರವರು ಇಂದು ನಾಲ್ಕೂ ಕಡೆಯಲ್ಲಿರುವ ತನ್ನ ವಿಶೇಷ ಪೂಜ್ಯಾತ್ಮರಾಗುವ ಮಕ್ಕಳನ್ನು ನೋಡುತ್ತಿದ್ದಾರೆ. ಇಡೀ ಕಲ್ಪದಲ್ಲಿರುವ ಎಲ್ಲಾ ಮಕ್ಕಳಿಂದ ಎಷ್ಟು ಸ್ವಲ್ಪವೇ ಅಮೂಲ್ಯ ರತ್ನಗಳು ಪೂಜ್ಯರಾಗಿದ್ದಾರೆ, ಇಡೀ ವಿಶ್ವಕ್ಕಾಗಿ ಪೂಜ್ಯನೀಯ ಆತ್ಮರೇ ವಿಶೇಷವಾದ ಜಗತ್ತಿನ ಕಣ್ಮಣಿ ಆಗಿ ಬಿಡುತ್ತಾರೆ. ಹೇಗೆ ಈ ಶರೀರದಲ್ಲಿ ಕಣ್ಣಿಲ್ಲದಿದ್ದರೆ ಜಗತ್ತೇ ಇಲ್ಲದಂತೆ, ಅದೇರೀತಿ ವಿಶ್ವದಲ್ಲಿ ಪೂಜ್ಯನೀಯ ಜಗತ್ತಿನ ಕಣ್ಮಣಿಗಳಾದ ತಾವು ಶ್ರೇಷ್ಠಾತ್ಮರಾಗದಿದ್ದರೆ ವಿಶ್ವದ ಮಹತ್ವವೂ ಇರುವುದಿಲ್ಲ. ತಾವು ವಿಶೇಷ ಆತ್ಮರಿಂದಲೇ ಸ್ವರ್ಣೀಮ ಯುಗ ಅಥವಾ ಆದಿ ಯುಗ ಅಥವಾ ಸತೋಪ್ರಧಾನ ಯುಗ, ಹೊಸ ಪ್ರಪಂಚದ ಆರಂಭವಾಗುತ್ತದೆ. ಹೊಸ ವಿಶ್ವದ ಆಧಾರ ಮೂರ್ತಿಗಳು, ಪೂಜ್ಯನೀಯ ಆತ್ಮರೂ ತಾವಾಗಿದ್ದೀರಿ ಅಂದಮೇಲೆ ತಾವಾತ್ಮರ ಮಹತ್ವಿಕೆ ಎಷ್ಟೊಂದಿದೆ! ತಾವು ಪೂಜ್ಯಾತ್ಮರು ಇಡೀ ಪ್ರಪಂಚಕ್ಕಾಗಿ ಹೊಸ ಬೆಳಕಾಗಿದ್ದೀರಿ, ತಮ್ಮ ಏರುವ ಕಲೆಯು ವಿಶ್ವವನ್ನೇ ಶ್ರೇಷ್ಠ ಕಲೆಯಲ್ಲಿ ತರುವುದಕ್ಕಾಗಿ ನಿಮಿತ್ತವಾಗುತ್ತದೆ. ತಾವು ಬೀಳುವ ಕಲೆಯಲ್ಲಿ ಬರುತ್ತೀರೆಂದರೆ ಪ್ರಪಂಚವೂ ಬೀಳುವ ಕಲೆಯಾಗುತ್ತದೆ. ತಾವು ಪರಿವರ್ತನೆಯಾಗುತ್ತೀರೆಂದರೆ ವಿಶ್ವವೂ ಪರಿವರ್ತನೆಯಾಗುತ್ತದೆ - ತಾವು ಇಷ್ಟು ಮಹಾನ್ ಹಾಗೂ ಮಹತ್ವವಿರುವ ಆತ್ಮರಾಗಿದ್ದೀರಿ!
ಇಂದು ಬಾಪ್ದಾದಾರವರು ಸರ್ವ ಮಕ್ಕಳನ್ನು ನೋಡುತ್ತಿದ್ದರು. ಬ್ರಾಹ್ಮಣರಾಗುವುದು ಅರ್ಥಾತ್ ಪೂಜ್ಯಾರಾಗುವುದಾಗಿದೆ ಏಕೆಂದರೆ ಬ್ರಾಹ್ಮಣರಿಂದ ದೇವತೆಯಾಗುತ್ತಾರೆ ಮತ್ತು ದೇವತೆಗಳು ಅರ್ಥಾತ್ ಪೂಜ್ಯನೀಯರು. ಎಲ್ಲಾ ದೇವತೆಗಳು ಅವಶ್ಯವಾಗಿ ಪೂಜ್ಯನೀಯರಾಗುತ್ತಾರೆ, ಆದರೂ ಸಹ ಅವಶ್ಯವಾಗಿ ನಂಬರ್ವಾರ್ ಆಗಿರುತ್ತಾರೆ. ಕೆಲವು ದೇವತೆಗಳ ಪೂಜೆಯು ವಿಧಿಪೂರ್ವಕವಾಗಿ ಮತ್ತು ನಿಯಮಿತ ರೂಪದಲ್ಲಾಗುತ್ತದೆ, ಮತ್ತೆ ಕೆಲವು ದೇವತೆಗಳ ಪೂಜ್ಯೆಯು ವಿಧಿಪೂರ್ವಕ ಹಾಗೂ ನಿಯಮಿತವಾಗಿ ಆಗುವುದಿಲ್ಲ. ಕೆಲವು ದೇವತೆಗಳ ಪೂಜೆಯು ಪ್ರತೀ ಕರ್ಮದಲ್ಲಿಯೂ ಆಗುತ್ತದೆ, ಇನ್ನೂ ಕೆಲವರ ಪ್ರತೀ ಕರ್ಮದ ಪೂಜೆಯಾಗುವುದಿಲ್ಲ. ಕೆಲವರದು ವಿಧಿಪೂರ್ವಕವಾಗಿ ಪ್ರತಿನಿತ್ಯವೂ ಶೃಂಗಾರವಾಗುತ್ತದೆ, ಇನ್ನೂ ಕೆಲವು ದೇವತೆಗಳ ಶೃಂಗಾರವು ನಿತ್ಯವೂ ಆಗುವುದಿಲ್ಲ, ಮೇಲ್ಮೇಲೆ ಅಲ್ಪ ಸ್ವಲ್ಪ ಶೃಂಗರಿಸಿ ಬಿಡುತ್ತಾರೆ ಆದರೆ ವಿಧಿಪೂರ್ವಕವಾಗಿ ಮಾಡುವುದಿಲ್ಲ. ಕೆಲವು ದೇವತೆಗಳ ಮುಂದೆ ಇಡೀ ಸಮಯದಲ್ಲಿಯೂ ಕೀರ್ತನೆಯಾಗುತ್ತದೆ ಮತ್ತೆ ಕೆಲವು ದೇವತೆಗಳ ಮುಂದೆ ಕೆಲಕೆಲವೊಮ್ಮೆ ಕೀರ್ತನೆ ಆಗುತ್ತದೆ. ಈ ರೀತಿಯಾಗಲು ಕಾರಣವೇನು? ಬ್ರಾಹ್ಮಣರೆಂದು ಎಲ್ಲರೂ ಹೇಳಿಕೊಳ್ಳುತ್ತಾರೆ, ಜ್ಞಾನ-ಯೋಗದ ವಿದ್ಯೆಯನ್ನೂ ಸಹ ಎಲ್ಲರೂ ಮಾಡುತ್ತಾರೆ, ಆದರೂ ಇಷ್ಟು ಅಂತರವೇಕೆ ಆಗುತ್ತದೆ? ಧಾರಣೆ ಮಾಡುವುದರಲ್ಲಿ ಅಂತರವಿದೆ. ಇಷ್ಟಾದರೂ ಯಾವ ವಿಶೇಷ ಧಾರಣೆಗಳ ಆಧಾರದಿಂದ ನಂಬರ್ವಾರ್ ಆಗುತ್ತಾರೆ ಎಂಬುದು ಗೊತ್ತಿದೆಯೇ?
ಪೂಜ್ಯನೀಯರಾಗುವ ವಿಶೇಷ ಆಧಾರವು ಪವಿತ್ರತೆಯೇ ಮೇಲೆ ಆಧಾರಿತವಾಗಿದೆ. ಸರ್ವ ಪ್ರಕಾರ ಪವಿತ್ರತೆಯನ್ನೆಷ್ಟು ಧಾರಣೆ ಮಾಡುತ್ತೀರಿ, ಅಷ್ಟು ಸರ್ವ ಪ್ರಕಾರದ ಪೂಜ್ಯನೀಯರೂ ಆಗುತ್ತೀರಿ ಮತ್ತು ಯಾರು ನಿರಂತರ ವಿಧಿಪೂರ್ವಕವಾಗಿ ಆದಿ, ಅನಾದಿ ವಿಶೇಷ ಗುಣದ ರೂಪದಿಂದ, ಪವಿತ್ರತೆಯನ್ನು ಸಹಜವಾಗಿಯೇ ಧಾರಣೆ ಮಾಡಿಕೊಳ್ಳುತ್ತಾರೆಯೋ, ಅವರೇ ವಿಧಿಪೂರ್ವಕ ಪೂಜ್ಯರಾಗುತ್ತಾರೆ. ಸರ್ವ ಪ್ರಕಾರದ ಪವಿತ್ರತೆಯೆಂದರೆ ಏನು? ಯಾವ ಆತ್ಮರು ಸಹಜ, ಸ್ವತಹವಾಗಿಯೇ ಪ್ರತೀ ಸಂಕಲ್ಪದಲ್ಲಿ, ಪ್ರತೀ ಮಾತಿನಲ್ಲಿ, ಕರ್ಮದಲ್ಲಿ ಸರ್ವ ಅಂದರೆ ಜ್ಞಾನಿ ಮತ್ತು ಅಜ್ಞಾನಿ ಆತ್ಮರು, ಸರ್ವರ ಸಂಪರ್ಕದಲ್ಲಿಯೂ ಸದಾ ಪವಿತ್ರ ವೃತ್ತಿ, ದೃಷ್ಟಿ, ವೈಬ್ರೇಷನ್ನಿಂದ ಯಥಾರ್ಥವಾದ ಸಂಬಂಧ-ಸಂಪರ್ಕವನ್ನು ನಿಭಾಯಿಸುತ್ತಾರೆ - ಇದಕ್ಕೇ ಸರ್ವ ಪ್ರಕಾರದ ಪವಿತ್ರತೆಯೆಂದು ಹೇಳಲಾಗುತ್ತದೆ. ಸ್ವಯಂನ ಬಗ್ಗೆ ಅಥವಾ ಅನ್ಯ ಯಾವುದೇ ಆತ್ಮನ ಪ್ರತಿ ಸ್ವಪ್ನದಲ್ಲಿಯೂ ಸಹ, ಸರ್ವ ಪ್ರಕಾರದ ಪವಿತ್ರತೆಯಲ್ಲಿ ಯಾವುದೇ ಕೊರತೆಯೂ ಆಗಬಾರದು. ಸ್ವಪ್ನದಲ್ಲೇನಾದರೂ ಬ್ರಹ್ಮಚರ್ಯದ ಪಾಲನೆಯು ಖಂಡಿತವಾಯಿತು ಅಥವಾ ಯಾವುದಾದರೂ ಆತ್ಮನ ಪ್ರತಿ, ಯಾವುದೇ ಪ್ರಕಾರದ ಈರ್ಷ್ಯೆಯಿರಬಹುದು ಅಥವಾ ಆವೇಶಕ್ಕೆ ವಶರಾಗಿದ್ದು ಕರ್ಮವಾಗುತ್ತದೆ ಅಥವಾ ಮಾತನಾಡಲಾಗುತ್ತದೆ, ಕ್ರೋಧದ ಅಂಶ ರೂಪದಲ್ಲಾದರೂ ವ್ಯವಹಾರ ಮಾಡುತ್ತೀರೆಂದರೂ ಸಹ ಪವಿತ್ರತೆಯ ಖಂಡನೆಯೆಂದು ತಿಳಿದುಕೊಳ್ಳಲಾಗುತ್ತದೆ. ವಿಚಾರ ಮಾಡಿ - ಯಾವಾಗ ಸ್ವಪ್ನದ ಪ್ರಭಾವವೂ ಬೀರುತ್ತದೆಯೆಂದರೆ, ಸಾಕಾರದಲ್ಲಿ ಮಾಡಿರುವಂತಹ ಕರ್ಮದ ಪ್ರಭಾವವಿನ್ನೆಷ್ಟು ಬಿರಬಹುದು! ಆದರಿಂದ ಖಂಡನೆಯಾಗಿರುವ ಮೂರ್ತಿಯನ್ನೆಂದಿಗೂ ಪೂಜ್ಯನೀಯವಾಗುವುದಿಲ್ಲ. ಮಂದಿರಗಳಲ್ಲಿ ಖಂಡಿತ ಮೂರ್ತಿಗಳೆಂದಿಗೂ ಇರುವುದಿಲ್ಲ, ಇತ್ತೀಚೆಗೆ ಇರುವಂತಹ ಮ್ಯೂಜಿಯಂನಲ್ಲಿ ಇರುತ್ತವೆ ಆದರೆ ಅಲ್ಲಿ ಭಕ್ತರು ಬರುವುದಿಲ್ಲ, ಇವು ಬಹಳ ಮೂರ್ತಿಗಳಾಗಿವೆ ಎಂದು ಗಾಯನವಾಗುತ್ತದೆ ಅಷ್ಟೇ. ಅವರುಗಳು ಸ್ಥೂಲ ಅಂಗಗಳ ಖಂಡಿತವಾಗಿರುವುದನ್ನು ಖಂಡಿತ ಮೂರ್ತಿ ಎಂದು ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಯಾವುದೇ ಪ್ರಕಾರದ ಪವಿತ್ರತೆಯು ಖಂಡನೆಯಾಗುತ್ತದೆಯೆಂದರೆ, ಅವರು ಪೂಜ್ಯ ಪದವಿಯಿಂದ ಖಂಡಿತವಾಗಿ ಬಿಡುತ್ತಾರೆ. ಈ ರೀತಿಯಾಗಿ ನಾಲ್ಕೂ ಪ್ರಕಾರದಲ್ಲಿಯ ಪವಿತ್ರತೆಯು ವಿಧಿ ಪೂರ್ವಕವಾಗಿ ಇದೆಯೆಂದರೆ, ಪೂಜೆಯೂ ಸಹ ವಿಧಿ ಪೂರ್ವಕವಾಗಿ ಆಗುತ್ತದೆ.
ಮನ, ವಾಣಿ, ಕರ್ಮ (ಕರ್ಮದಲ್ಲಿ ಸಂಬಂಧ-ಸಂಪರ್ಕವೂ ಬರುತ್ತದೆ) ಮತ್ತು ಸ್ವಪ್ನದಲ್ಲಿಯೂ ಪವಿತ್ರತೆ ಇರುವುದಕ್ಕೆ ಹೇಳಲಾಗುತ್ತದೆ - ಸಂಪೂರ್ಣ ಪವಿತ್ರತೆ. ಕೆಲವು ಮಕ್ಕಳು ಹುಡುಗಾಟಿಕೆಯಲ್ಲಿ ಬರುವ ಕಾರಣದಿಂದ, ಭಲೆ ಕಿರಿಯರಿರಬಹುದು ಅಥವಾ ಹಿರಿಯರಿರಬಹುದು, ಅವರು ನನ್ನ ಸ್ವಭಾವವು ಬಹಳ ಚೆನ್ನಾಗಿದೆ ಎನ್ನುವ ಮಾತಿನಲ್ಲಿ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಮಾತು ಹೊರ ಬಂದಿತು ಅಥವಾ ನನ್ನಲ್ಲಿ ಅಂತಹ ಲಕ್ಷ್ಯವಿರಲಿಲ್ಲ, ಆದರೆ ಆಗಿ ಬಿಟ್ಟಿತು ಅಥವಾ ತಮಾಷೆಯಲ್ಲಿ ಹೇಳಿದಿರಿ ಅಥವಾ ಮಾಡಿ ಬಿಟ್ಟೆವು ಎಂದು ಹೇಳುತ್ತಾರೆ. ಇದೂ ಸಹ ಚಲಾಯಿಸುವುದಾಗಿದೆ ಆದ್ದರಿಂದ ಪೂಜೆಯೂ ಸಹ ಅದೇ ರೀತಿಯಲ್ಲಿ ಆಗುತ್ತದೆ, ಈ ಹುಡುಗಾಟಿಕೆಯು ತಮ್ಮ ಸಂಪೂರ್ಣ ಪೂಜ್ಯ ಸ್ಥಿತಿಯನ್ನು ನಂಬರ್ವಾರ್ನಲ್ಲಿ ತೆಗೆದುಕೊಂಡು ಬರುತ್ತದೆ. ಇದೂ ಸಹ ಅಪವಿತ್ರತೆಯ ಖಾತೆಯಲ್ಲಿ ಜಮಾ ಆಗಿ ಬಿಡುತ್ತದೆ. ಬಾಪ್ದಾದಾರವರು ಮುಂಚೆಯೇ ತಿಳಿಸಿದ್ದಾರಲ್ಲವೆ - ಪೂಜ್ಯ, ಪವಿತ್ರ ಆತ್ಮರ ಚಿಹ್ನೆಯಾಗಿ ಇದೇ ಇರುತ್ತದೆ, ಅವರು ನಾಲ್ಕೂ ಪ್ರಕಾರದ ಪವಿತ್ರತೆಯಲ್ಲಿ ಸ್ವಾಭಾವಿಕ, ಸಹಜ ಮತ್ತು ಸದಾ ಇರುತ್ತಾರೆ. ಅದರ ಬಗ್ಗೆ ಯೋಚಿಸಬೇಕಾಗಿರುವುದಿಲ್ಲ. ಆದರೆ ಪವಿತ್ರತೆಯ ಧಾರಣೆಯು ಸ್ವತಹವಾಗಿಯೇ ಯಥಾರ್ಥ ಸಂಕಲ್ಪ, ಮಾತು, ಕರ್ಮ ಮತ್ತು ಸ್ವಪ್ನವನ್ನು ತರುತ್ತದೆ. ಯಥಾರ್ಥ ಅರ್ಥಾತ್ ಒಂದಂತು ಯುಕ್ತಿ ಯುಕ್ತ, ಇನ್ನೊಂದು ಅರ್ಥ - ಪ್ರತೀ ಸಂಕಲ್ಪದಲ್ಲಿ ಅರ್ಥವಿರುತ್ತದೆ, ಅನರ್ಥವಾಗಿರುವುದಿಲ್ಲ. ಹೇಳುತ್ತಾರಲ್ಲವೆ - ಹಾಗೆಯೇ ಮಾತು ಬಂದಿತು, ಮಾತನಾಡಿ ಬಿಟ್ಟೆನು, ಮಾಡಿ ಬಿಟ್ಟೆನು, ಆಗಿ ಬಿಟ್ಟಿತು. ಪವಿತ್ರ ಆತ್ಮರು ಸದಾ ಪ್ರತೀ ಕರ್ಮದಲ್ಲಿಯೂ ಅರ್ಥಾತ್ ದಿನಚರಿಯಲ್ಲಿ ಯಥಾರ್ಥ ಯುಕ್ತಿಯುಕ್ತವಾಗಿ ಇರುತ್ತಾರೆ ಆದ್ದರಿಂದ ಅವರ ಪ್ರತೀ ಕರ್ಮದ ಪೂಜೆಯಾಗುತ್ತದೆ ಅರ್ಥಾತ್ ಇಡೀ ದಿನಚರಿಯ ಪೂಜೆಯಾಗುತ್ತದೆ. ಏಳುವುದರಿಂದ ಮಲಗುವವರೆಗೂ ಭಿನ-ಭಿನ್ನ ಕರ್ಮಗಳ ದರ್ಶನವಾಗುತ್ತದೆ.
ಒಂದುವೇಳೆ ಯಾವುದೇ ಕರ್ಮವು ಬ್ರಾಹ್ಮಣ ಜೀವನದ ದಿನಚರಿ ಅನುಸಾರ ಯಥಾರ್ಥ ಅಥವಾ ನಿರಂತರವಾಗಿ ಮಾಡುತ್ತಿಲ್ಲವೆಂದರೆ, ಆ ದಿನಚರಿಯ ಅಂತರದ ಕಾರಣದಿಂದ ಪೂಜೆಯಲ್ಲಿಯೂ ಅಂತರವಾಗಿ ಬಿಡುತ್ತದೆ. ಉದಾ: ಯಾರಾದರೂ ಅಮೃತವೇಳೆ ಏಳುವ ದಿನಚರಿಯಲ್ಲಿ ವಿಧಿಪೂರ್ವಕವಾಗಿ ನಡೆಯುವುದಿಲ್ಲವೆಂದರೆ, ಪೂಜೆಯಲ್ಲಿಯೂ ಅವರ ಪೂಜಾರಿಯೂ ಸಹ ಅಂತಹ ವಿಧಿಯಲ್ಲಿಯೇ ಏರುಪೇರು ಮಾಡುತ್ತಾರೆ ಅರ್ಥಾತ್ ಪೂಜಾರಿಯೂ ಸಹ ಸಮಯದಲ್ಲೆದ್ದು ಪೂಜೆ ಮಾಡುವುದಿಲ್ಲ, ಯಾವಾಗ ಬರುತ್ತಾರೆಯೋ ಆಗಲೇ ಪೂಜೆ ಮಾಡಿ ಬಿಡುತ್ತಾರೆ ಅಥವಾ ಅಮೃತವೇಳೆಯಲ್ಲಿ ಜಾಗೃತ ಸ್ಥಿತಿಯಲ್ಲಿದ್ದು ಅನುಭವ ಮಾಡಲಿಲ್ಲ, ವಿವಶತೆಯಿಂದ ಅಥವಾ ಕೆಲವೊಮ್ಮೆ ಸುಸ್ತಿ, ಕೆಲವೊಮ್ಮೆ ಜಾಗೃತ ರೂಪದಿಂದ ಕುಳಿತುಕೊಳ್ಳುತ್ತಾರೆಂದರೆ, ಪೂಜಾರಿಯೂ ಸಹ ವಿವಶತೆಯಿಂದ ಅಥವಾ ಸುಸ್ತಿಯಿಂದ ಪೂಜೆ ಮಾಡುತ್ತಾರೆ ಆದರೆ ವಿಧಿಪೂರ್ವಕ ಪೂಜೆ ಮಾಡುವುದಿಲ್ಲ. ಅದೇರೀತಿ ದಿನಚರಿಯ ಪ್ರತಿಯೊಂದು ಕರ್ಮದ ಪ್ರಭಾವವು ಪೂಜ್ಯನೀಯರಾಗುವುದರಲ್ಲಿ ಪ್ರಭಾವವುಂಟಾಗುತ್ತದೆ ಏಕೆಂದರೆ ಆಲಸ್ಯ ಮತ್ತು ಹುಡುಗಾಟಿಕೆಯೂ ಸಹ ವಿಕಾರವಾಗಿದೆ. ಯಾವುದು ಯಥಾರ್ಥವಾದ ಕರ್ಮವಲ್ಲವೋ ಅದು ವಿಕಾರವಾಗಿದೆ, ಅಂದಮೇಲೆ ಅಪವಿತ್ರತೆಯ ಅಂಶವಾಯಿತಲ್ಲವೆ. ಇದರ ಕಾರಣದಿಂದ ಪೂಜ್ಯ ಪದವಿಯಲ್ಲಿ ನಂಬರ್ವಾರ್ ಆಗಿಬಿಡುತ್ತಾರೆ. ಅಂದಾಗ ಫೌಂಡೇಷನ್ ಏನಾಯಿತು? ಪವಿತ್ರತೆ.
ಪವಿತ್ರತೆಯ ಧಾರಣೆಯು ಬಹಳ ಸೂಕ್ಷ್ಮವಾಗಿದೆ. ಪವಿತ್ರತೆಯ ಆಧಾರದಿಂದಲೇ ಕರ್ಮದ ವಿಧಿ ಮತ್ತು ಗತಿಯ ಆಧಾರವಾಗಿದೆ. ಪವಿತ್ರತೆಯು ಕೇವಲ ಚಿಕ್ಕ ಮಾತಲ್ಲ. ಬ್ರಹ್ಮಚಾರಿಯಾಗಿರುವುದು ಅಥವಾ ನಿರ್ಮೋಹಿಯಾಗುವುದಕ್ಕೇ ಪವಿತ್ರತೆಯೆಂದು ಹೇಳುವುದಿಲ್ಲ. ಪವಿತ್ರತೆಯು ಬ್ರಾಹ್ಮಣ ಜೀವನದ ಶೃಂಗಾರವಾಗಿದೆ. ಅಂದಮೇಲೆ ಅದು ಪ್ರತೀ ಸಮಯದಲ್ಲಿಯೂ ಚಹರೆ ಮತ್ತು ಚಲನೆಯಿಂದ ಅನ್ಯರಿಗೂ ಪವಿತ್ರತೆಯ ಶೃಂಗಾರದ ಅನುಭೂತಿಯಾಗಲಿ. ದೃಷ್ಟಿಯಲ್ಲಿ, ಮುಖದಲ್ಲಿ, ಕೈಗಳಲ್ಲಿ, ಪಾದಗಳಲ್ಲಿಯೂ ಸದಾ ಪವಿತ್ರತೆಯ ಶೃಂಗಾರವು ಪ್ರತ್ಯಕ್ಷವಾಗಲಿ, ಚಹರೆಯ ಕಡೆ ಯಾರೇ ನೋಡಿದರೂ ಸಹ, ಲಕ್ಷಣದಿಂದ ಪವಿತ್ರತೆಯ ಅನುಭವವಾಗಲಿ. ಹೇಗೆ ಅನ್ಯ ಪ್ರಕಾರದ ಲಕ್ಷಣಗಳ ಬಗ್ಗೆ ವರ್ಣನೆ ಮಾಡುತ್ತಾರೆ, ಅದೇ ರೀತಿಯಲ್ಲಿ ಇದರ ವರ್ಣನೆ ಮಾಡಲಿ - ಇವರ ಲಕ್ಷಣಗಳಿಂದ ಪವಿತ್ರತೆಯು ಕಾಣಿಸುತ್ತದೆ, ನಯನಗಳಲ್ಲಿ ಪವಿತ್ರತೆಯ ಹೊಳಪಿದೆ, ಮುಖದಲ್ಲಿ ಪವಿತ್ರತೆಯ ಮುಗುಳ್ನಗು ಇದೆ, ಇದರ ಹೊರತು ಮತ್ತ್ಯಾವುದೇ ದೃಷ್ಟಿಯಾಗಬಾರದು. ಇದಕ್ಕೇ ಹೇಳಲಾಗುತ್ತದೆ - ಪವಿತ್ರತೆಯ ಶೃಂಗಾರದಿಂದ ಶೃಂಗಾರಿತವಾಗಿರುವ ಮೂರ್ತಿ. ತಿಳಿಯಿತೆ? ಪವಿತ್ರತೆಯ ಬಗ್ಗೆ ಇನ್ನೂ ಬಹಳ ಆಳವಾದ ರಹಸ್ಯವಿದೆ, ಅದನ್ನು ನಂತರದಲ್ಲಿ ತಿಳಿಸುತ್ತಿರುತ್ತೇವೆ. ಕರ್ಮಗಳ ಗತಿಯು ಹೇಗೆ ಗುಹ್ಯವಾಗಿದೆಯೋ ಹಾಗೆಯೇ ಪವಿತ್ರತೆಯ ಪರಿಭಾಷೆಯಲ್ಲಿಯೂ ಬಹಳ ಗುಹ್ಯತೆಯಿದೆ ಮತ್ತು ಪವಿತ್ರತೆಯೇ ಆಧಾರವೂ ಆಗಿದೆ. ಒಳ್ಳೆಯದು.
ಇಂದು ಗುಜರಾತಿನವರು ಬಂದಿದ್ದಾರೆ. ಗುಜರಾತಿನವರು ಸದಾ ಹಗುರವಾಗಿದ್ದು ನರ್ತಿಸುತ್ತಾರೆ ಮತ್ತು ಹಾಡುತ್ತಾರೆ. ಭಲೆ ಶರೀರವೆಷ್ಟಾದರೂ ಭಾರಿಯಾಗಿರಲಿ ಆದರೂ ಹಗುರವಾಗಿ ನರ್ತಿಸುತ್ತಾರೆ. ಸದಾ ಹಗುರವಾಗಿರುವ, ಸದಾ ಖುಷಿಯಲ್ಲಿ ನರ್ತಿಸುವ ಮತ್ತು ತಂದೆಯ ಅಥವಾ ತನ್ನ ಪ್ರಾಪ್ತಿಗಳ ಗುಣ ಗಾನ ಮಾಡುತ್ತಿರುವುದು ಗುಜರಾತಿನವರ ವಿಶೇಷತೆಯಾಗಿದೆ. ಬಾಲ್ಯದಿಂದಲೂ ನರ್ತಿಸುತ್ತಾ-ಹಾಡುತ್ತಾ ಇರುತ್ತಾರೆ. ಬ್ರಾಹ್ಮಣ ಜೀವನದಲ್ಲೇನು ಮಾಡುತ್ತೀರಿ? ಬ್ರಾಹ್ಮಣ ಜೀವನವೆಂದರೆ ಮೋಜಿನ ಜೀವನವಾಗಿದೆ. ಗರ್ಬಾರಾಸ್ ಮಾಡುತ್ತೀರೆಂದರೆ ಮೋಜಿನಲ್ಲಿ ಬಂದು ಬಿಡುತ್ತೀರಲ್ಲವೆ. ಒಂದುವೇಳೆ ಮೋಜಿನಲ್ಲಿ ಬರದಿದ್ದರೆ ಹೆಚ್ಚಾಗಿ ಮಾಡಲು ಸಾಧ್ಯವಾಗುವುದಿಲ್ಲ. ಮೋಜು-ಮಸ್ತಿಯಲ್ಲಿ ಸುಸ್ತಾಗುವುದಿಲ್ಲ, ಅವಿಶ್ರಾಂತರಾಗಿ ಬಿಡುತ್ತಾರೆ. ಅಂದಾಗ ಬ್ರಾಹ್ಮಣ ಜೀವನವೆಂದರೆ ಸದಾ ಮೋಜಿನಲ್ಲಿರುವ ಜೀವನ. ಅದು ಸ್ಥೂಲ ಮೋಜಿನ ಜೀವನವಾಗಿದೆ ಮತ್ತು ಬ್ರಾಹ್ಮಣ ಜೀವನವು ಮನಸ್ಸಿನ ಮೋಜಿನ ಜೀವನವಾಗಿದೆ. ಸದಾ ಮನಸ್ಸಿನ ಮೋಜಿನಲ್ಲಿ ನರ್ತಿಸುತ್ತಾ ಮತ್ತು ಹಾಡುತ್ತಿರಿ. ಅವರುಗಳು ಹಗುರವಾಗಿದ್ದು ನರ್ತಿಸುವ ಮತ್ತು ಹಾಡುವ ಅಭ್ಯಾಸಿಯಾಗಿದ್ದಾರೆ, ಅಂದಾಗ ಇವರುಗಳು (ಗುಜರಾತಿನವರು) ಬ್ರಾಹ್ಮಣ ಜೀವನದಲ್ಲಿಯೂ ಡಬಲ್ಲೈಟ್ ಆಗುವುದರಲ್ಲಿ ಕಷ್ಟವೆನಿಸುವುದಿಲ್ಲ. ಗುಜರಾತ್ ಅರ್ಥಾತ್ ಸದಾ ಹಗುರವಾಗಿರುವ ಅಭ್ಯಾಸಿ ಅಥವಾ ವರದಾನಿಯೆಂದು ಹೇಳಬಹುದು. ಇಡೀ ಗುಜರಾತಿಗೇ ಡಬಲ್ಲೈಟ್ ಆಗಿರುವ ವರದಾನವು ಸಿಕ್ಕಿ ಬಿಟ್ಟಿತು. ವರದಾನವಂತು ಮುರುಳಿಯ ಮೂಲಕವೂ ಸಿಗುತ್ತದೆಯಲ್ಲವೆ.
ತಮ್ಮ ಈ ಪ್ರಪಂಚದಲ್ಲಿ ಯಥಾ ಶಕ್ತಿ, ಯಥಾ ಸಮಯವೇ ಇರುತ್ತದೆ ಎಂದು ತಿಳಿಸಿದ್ದೇವಲ್ಲವೆ. ಮತ್ತು ವತನದಲ್ಲಂತು ಯಥಾ-ತಥಾ ಎಂಬ ಭಾಷೆಯೇ ಇರುವುದಿಲ್ಲ. ಇಲ್ಲಂತು ದಿನವನ್ನೂ ನೋಡಬೇಕಾಗುತ್ತದೆ, ರಾತ್ರಿಯನ್ನೂ ನೋಡಬೇಕಾಗುತ್ತದೆ. ವತನದಲ್ಲಿ ದಿನ ಅಥವಾ ರಾತ್ರಿಯೂ ಆಗುವುದಿಲ್ಲ, ಸೂರ್ಯೋದಯವೂ ಇಲ್ಲ, ಚಂದ್ರಮನೂ ಇಲ್ಲ, ಇವೆರಡರಿಂದಲೂ ಆಚೆಯಿದೆ. ತಾವು ಬರಬೇಕಾಗಿರುವುದೂ ಸಹ ಅಲ್ಲಿಗೆ ಬರಬೇಕಲ್ಲವೆ. ಮಕ್ಕಳು ವಾರ್ತಾಲಾಪದಲ್ಲಿ ಹೇಳುತ್ತಿದ್ದಿರಲ್ಲವೆ - ಬಾಬಾ ಇದು ಎಲ್ಲಿಯವರೆಗೆ? ಬಾಪ್ದಾದಾರವರು ಹೇಳುತ್ತಾರೆ - ನಾವು ತಯಾರಾಗಿದ್ದೇವೆ ತಾವೆಲ್ಲರೂ ಹೇಳುತ್ತೀರೆಂದರೆ ‘ಈಗಲೇ’ ಮಾಡಿ ಬಿಡುತ್ತೇವೆ. ನಂತರ ಯಾವಾಗ ಎಂಬ ಪ್ರಶ್ನೆಯೇ ಇರುವುದಿಲ್ಲ. ಎಲ್ಲಿಯವರೆಗೆ ಮಾಲೆಯು ಸಂಪೂರ್ಣವಾಗಿ ತಯಾರಾಗುವುದಿಲ್ಲವೋ ಅಲ್ಲಿಯವರೆಗೆ `ಯಾವಾಗ' ಎನ್ನುವುದಿರುತ್ತದೆ. ಈಗಲೂ ಹೆಸರುಗಳನ್ನು ತೆಗೆಯಲು ಕುಳಿತುಕೊಳ್ಳುತ್ತೀರೆಂದರೆ, 108ರಲ್ಲಿ ಈ ಹೆಸರನ್ನು ಹಾಕುವುದೇ ಅಥವಾ ಬೇಡವೇ? ಎನ್ನುವುದನ್ನೇ ಯೋಚಿಸುತ್ತೀರಿ. ಈಗ ಎಲ್ಲರೂ ಈ 108ರ ಮಾಲೆಯಲ್ಲಿಯೂ ಅದೇ 108 ಹೆಸರುಗಳನ್ನು ಹೇಳಲಿ, ಇದಾಗದೇ ಅಂತರವಾಗಿ ಬಿಡುತ್ತದೆ. ಬಾಪ್ದಾದಾರವರು ಈ ಕ್ಷಣದಲ್ಲಿಯೇ ಚಪ್ಪಾಳೆ ಹಾಕಿದರೆ, ತಕ್ಷಣದಲ್ಲಿಯೇ ಒಂದು ಕಡೆ ಪ್ರಕೃತಿ, ಒಂದು ಕಡೆ ವ್ಯಕ್ತಿಗಳು ಎಲ್ಲವೂ ಪ್ರಾರಂಭಿಸಿ ಬಿಡುತ್ತದೆ, ಇದರಲ್ಲಿ ತಡವೇನಾಗುತ್ತದೆ! ಆದರೆ ಬಾಬಾರವರಿಗೆ ಎಲ್ಲಾ ಮಕ್ಕಳಲ್ಲಿ ಸ್ನೇಹವಿದೆ, ಕೈಯನ್ನು ಹಿಡಿದುಕೊಂಡಾಗಲೇ ಜೊತೆಯಲ್ಲಿ ಹೊರಡುತ್ತೇವೆ. ಕೈಯಲ್ಲಿ ಕೈ ಸೇರಿಸುವುದು ಅರ್ಥಾತ್ ಸಮಾನರಾಗುವುದು. ಅದಕ್ಕೆ ತಾವು ಹೇಳುತ್ತೀರಿ - ಎಲ್ಲರೂ ಸಮಾನರು ಅಥವಾ ಎಲ್ಲರೂ ಸಹ ನಂಬರ್ವನ್ ಆಗುವುದಿಲ್ಲ. ಆದರೆ ನಂಬರ್ವನ್ ಹಿಂದೆ ನಂಬರ್ಟು ಆಗುವರಲ್ಲವೆ, ಅವರು ತಂದೆಯ ಸಮಾನರಾಗಲಿಲ್ಲ ಆದರೆ ಯಾರು ನಂಬರ್ವನ್ ಮಣಿಯಾಗುವರು ಅವರು ಸಮಾನರಾಗುವರು, ಮೂರನೆಯವರು ಎರಡನೇ ಮಣಿಯ ಸಮಾನವಾಗಲಿ. ನಾಲ್ಕನೆಯವರು ಮೂರನೆಯವರ ಸಮಾನರಾಗಲಿ - ಹೀಗಂತು ಸಮಾನರಾದಾಗಲೇ ಒಬ್ಬರಿನ್ನೊಬ್ಬರ ಸಮೀಪವಾಗುತ್ತಾ ಮಾಲೆಯು ತಯಾರಾಗಲಿ. ಇಂತಹ ಸ್ಥಿತಿಯವರೆಗೆ ತಲುಪುವುದು ಅರ್ಥಾತ್ ಸಮಾನರಾಗುವುದಾಗಿದೆ. 108ನೇ ಮಣಿಯು 107ನೇ ಮಣಿಯೊಂದಿಗೆ ಮಿಲನವಾಗುತ್ತದೆಯಲ್ಲವೆ, ಅವರಂತಹ ವಿಶೇಷತೆಯೂ ಬಂದು ಬಿಡುತ್ತದೆಯೆಂದರೆ ಮಾಲೆಯೂ ಸಹ ತಯಾರಾಗಿ ಬಿಡುತ್ತದೆ. ಅವಶ್ಯವಾಗಿ ನಂಬರ್ವಾರ್ ಆಗಲೇಬೇಕು, ತಿಳಿಯಿತೆ? ತಂದೆಯವರು ಹೇಳುತ್ತಾರೆ - ಈಗಲೂ ಸಹ ಆಯಿತು ಮಾಡುತ್ತೇವೆಂದು ಗ್ಯಾರಂಟಿ ಕೊಡುವವರೇನಾದರೂ ಇದ್ದೀರಾ, ಎಲ್ಲರೂ ತಯಾರಿದ್ದೀರಾ? ಬಾಪ್ದಾದಾರವರಿಗಂತು ಸೆಕೆಂಡಿನ ಸಮಯವಷ್ಟೇ ಹಿಡಿಸುತ್ತದೆ. ಚಪ್ಪಾಳೆ ಹಾಕಿದರು ಮತ್ತು ಫರಿಶ್ತೆಗಳು ಬಂದು ಬಿಟ್ಟರು ಎಂಬ ದೃಶ್ಯವನ್ನು ತೋರಿಸುತ್ತಿದ್ದಿರಲ್ಲವೆ. ಒಳ್ಳೆಯದು.
ನಾಲ್ಕೂ ಕಡೆಯಲ್ಲಿನ ಪರಮ ಪೂಜ್ಯ ಶ್ರೇಷ್ಠಾತ್ಮರಿಗೆ, ಸರ್ವ ಸಂಪೂರ್ಣ ಪವಿತ್ರತೆಯ ಲಕ್ಷ್ಯದವರೆಗೆ ತಲುಪುವಂತಹ ತೀವ್ರ ಪುರುಷಾರ್ಥಿ ಆತ್ಮರಿಗೆ, ಪ್ರತೀ ಕರ್ಮದಲ್ಲಿಯೂ ಸದಾ ವಿಧಿಪೂರ್ವಕ ಕರ್ಮವನ್ನು ಮಾಡುವಂತಹ ಸಿದ್ಧಿ ಸ್ವರೂಪ ಆತ್ಮರಿಗೆ, ಸದಾ ಪ್ರತೀ ಸಮಯದಲ್ಲಿಯೂ ಪವಿತ್ರತೆಯ ಶೃಂಗಾರದಿಂದ ಶೃಂಗಾರಿತರಾಗಿರುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ಸ್ನೇಹ ಸಂಪನ್ನ ನೆನಪು-ಪ್ರೀತಿಗಳನ್ನು ಸ್ವೀಕಾರ ಮಾಡಿರಿ.
ಪಾರ್ಟಿಗಳೊಂದಿಗೆ ವಾರ್ತಾಲಾಪ:-
1. ಇಡೀ ವಿಶ್ವದಲ್ಲಿ ತಮ್ಮನ್ನು ಅತಿ ಹೆಚ್ಚು ಶ್ರೇಷ್ಠ ಭಾಗ್ಯಶಾಲಿಗಳೆಂದು ತಿಳಿಯುತ್ತೀರಾ? ಯಾವ ಶ್ರೇಷ್ಠ ಭಾಗ್ಯಕ್ಕಾಗಿ ಇಡೀ ವಿಶ್ವವೇ ಕೂಗುತ್ತಿದೆ - ನಮ್ಮ ಭಾಗ್ಯವು ತೆರೆಯಲಿ.... ತಮ್ಮ ಭಾಗ್ಯವಂತು ತೆರೆದು ಬಿಟ್ಟಿದೆ, ಅಂದಾಗ ಇದಕ್ಕಿಂತ ದೊಡ್ಡ ಖುಷಿಯ ಮಾತು ಮತ್ತೇನಾಗುವುದು! ಭಾಗ್ಯ ವಿಧಾತನೇ ನಮ್ಮ ತಂದೆಯಾದರು ಎನ್ನುವ ನಶೆಯಿದೆಯಲ್ಲವೆ! ಯಾರ ಹೆಸರೇ ಭಾಗ್ಯ ವಿಧಾತಾ ಎನ್ನುವುದಿದೆ, ಅವರ ಭಾಗ್ಯವೇನಾಗಿರುತ್ತದೆ! ಇದಕ್ಕಿಂತ ದೊಡ್ಡ ಭಾಗ್ಯವೇನಾದರೂ ಆಗಲು ಸಾಧ್ಯವಿದೆಯೇ? ಅಂದಾಗ ಸದಾ ಈ ಖುಷಿಯಿರಲಿ - ಭಾಗ್ಯವಂತು ನಮ್ಮ ಜನ್ಮ ಸಿದ್ಧ ಅಧಿಕಾರವಾಯಿತು. ತಂದೆಯ ಬಳಿ ಎಷ್ಟೆಲ್ಲಾ ಆಸ್ತಿಯಿರುತ್ತದೆಯೋ, ಅದಕ್ಕೆ ಮಕ್ಕಳು ಅಧಿಕಾರಿಯಾಗಿರುತ್ತಾರೆ. ಅಂದಮೇಲೆ ಭಾಗ್ಯ ವಿಧಾತನ ಬಳಿ ಏನಿದೇ? ಭಾಗ್ಯದ ಖಜಾನೆ. ಆ ಖಜಾನೆಯ ಮೇಲೆ ತಮ್ಮ ಅಧಿಕಾರವಾಯಿತೆಂದಾಗ ಸದ `ವಾಹ್ ನನ್ನ ಭಾಗ್ಯವೇ ಮತ್ತು ಭಾಗ್ಯವಿದಾತ ತಂದೆ'! - ಇದೇ ಹಾಡನ್ನಾಡುತ್ತಾ ಖುಷಿಯಲ್ಲಿ ಹಾರುತ್ತಿರಿ. ಇಷ್ಟು ಶ್ರೇಷ್ಠ ಭಾಗ್ಯವು ಯಾರದಾಯಿತು, ಅವರಿಗಿನ್ನೇನು ಬೇಕಾಗಿದೆ? ಭಾಗ್ಯದಲ್ಲಿಯೇ ಎಲ್ಲವೂ ಬಂದು ಬಿಟ್ಟಿತು, ಭಾಗ್ಯವಂತನ ಬಳಿ ತನು-ಮನ-ಧನ ಎಲ್ಲವೂ ಇರುತ್ತದೆ, ಶೇಷ್ಠ ಭಾಗ್ಯವೆಂದರೆ ಯಾವುದೇ ಅಪ್ರಾಪ್ತಿಯ ವಸ್ತುವೇ ಇಲ್ಲ. ಏನಾದರೂ ಅಪ್ರಾಪ್ತಿಯಿದೆಯೇ? ಒಳ್ಳೆಯ ಮನೆ ಬೇಕಾಗಿದೆಯೇ, ಕಾರು ಬೇಕಾಗಿದೆಯೇ... ಇಲ್ಲ. ಯಾರಿಗೆ ಮನಸ್ಸಿನ ಖುಷಿ ಸಿಕ್ಕಿತು, ಅವರಿಗೆ ಸರ್ವ ಪ್ರಾಪ್ತಿಗಳೂ ಪ್ರಾಪ್ತವಾದವು! ಕೇವಲ ಕಾರೇನು, ಆದರೆ ಕುಬೇರನ ಖಜಾನೆಯೇ ಸಿಕ್ಕಿ ಬಿಟ್ಟಿತು! ಅದರಲ್ಲಿ ಯಾವುದೇ ಅಪ್ರಾಪ್ತಿಯೆಂಬ ವಸ್ತುವೇ ಇಲ್ಲ, ಇಂತಹ ಭಾಗ್ಯವಂತರಾಗಿದ್ದೀರಿ! ಯಾವುದು ಇಂದು ಇರುತ್ತದೆ, ನಾಳೆಯಿರುವುದೇ ಇಲ್ಲ ಅಂತಹ ಇಚ್ಛೆಯನ್ನೇಕೆ ಇಟ್ಟುಕೊಳ್ಳುವಿರಿ, ಆದ್ದರಿಂದ ಸದಾ ಅವಿನಾಶಿ ಖಜಾನೆಗಳ ಖುಷಿಗಳಲ್ಲಿರಿ. ಆ ಖಜಾನೆಯೂ ಈಗಲೂ ಇದೆ ಮತ್ತು ತಮ್ಮ ಜೊತೆಯಲ್ಲಿಯೇ ನಡೆಯುತ್ತದೆ. ಈ ಮನೆ, ಕಾರು ಅಥವಾ ಹಣ ಇವೆಲ್ಲವೂ ತಮ್ಮ ಜೊತೆ ಬರುವುದಿಲ್ಲ, ಆದರೆ ಈ ಅವಿನಾಶಿ ಖಜಾನೆಯು ತಮ್ಮ ಅನೇಕ ಜನ್ಮಗಳ ಜೊತೆಯಿರುತ್ತದೆ. ಇದನ್ನು ಯಾರೂ ಸಹ ಕಸಿದುಕೊಳ್ಳಲೂ ಸಾಧ್ಯವಿಲ್ಲ, ಲೂಟಿ ಮಾಡಲೂ ಸಾಧ್ಯವಿಲ್ಲ. ಸ್ವಯಂ ತಾವೂ ಸಹ ಅಮರರಾದಿರಿ ಮತ್ತು ಅವಿನಾಶಿ ಖಜಾನೆಯೇ ಸಿಕ್ಕಿ ಬಿಟ್ಟಿತು! ಜನ್ಮ-ಜನ್ಮಾಂತರವೂ ಈ ಶ್ರೇಷ್ಠ ಪ್ರಾಲಬ್ಧವು ಜೊತೆಯಿರುತ್ತದೆ. ಎಲ್ಲಿ ಯಾವುದೇ ಇಚ್ಛೆಯೇ ಇರುವುದಿಲ್ಲ, ಇಚ್ಛಾ ಮಾತ್ರಂ ಅವಿದ್ಯಾ ಸ್ಥಿತಿಯಿರುತ್ತದೆಯೆಂದಾಗ ಎಷ್ಟೊಂದು ಶ್ರೇಷ್ಠವಾದ ಭಾಗ್ಯವಾಯಿತು! ಇಂತಹ ಶ್ರೇಷ್ಠ ಭಾಗ್ಯವು ಭಾಗ್ಯ ವಿಧಾತಾ ತಂದೆಯ ಮೂಲಕವೇ ಪ್ರಾಪ್ತಿಯಾಯಿತು.
2. ತಮ್ಮನ್ನು ತಂದೆಯ ಸಮೀಪವಿರುವ ಶ್ರೇಷ್ಠಾತ್ಮರೆಂದು ಅನುಭವ ಮಾಡುತ್ತೀರಾ? ದುಃಖದ ಪ್ರಪಂಚದಿಂದ ಹೊರಬಂದು ಸುಖದ ಪ್ರಪಂಚದಲ್ಲಿ ಬಂದು ಬಿಟ್ಟೆವು, ತಂದೆಯ ಮಕ್ಕಳಾದೆವು ಎಂಬ ಖುಷಿಯು ಸದಾ ಇರುತ್ತದೆಯೇ? ಪ್ರಪಂಚದವರು ದುಃಖದಲ್ಲಿ ಚೀರಾಡುತ್ತಿದ್ದಾರೆ ಮತ್ತು ತಾವು ಸುಖದ ಪ್ರಪಂಚದಲ್ಲಿ, ಸುಖದ ಉಯ್ಯಾಲೆಯಲ್ಲಿ ಖುಷಿಯಲ್ಲಿರುತ್ತೀರಿ, ಇಬ್ಬರಲ್ಲಿ ಎಷ್ಟೊಂದು ಅಂತರವಾಯಿತು! ಪ್ರಪಂಚದವರು ಹುಡುಕಾಡುತ್ತಿದ್ದಾರೆ ಮತ್ತು ತಾವು ಮಿಲನ ಮಾಡುತ್ತಿದ್ದೀರಿ ಅಂದಾಗ ಸದಾ ತಮ್ಮ ಸರ್ವ ಪ್ರಾಪ್ತಿಗಳನ್ನು ನೋಡುತ್ತಾ ಹರ್ಷಿತವಾಗಿರಿ. ಸರ್ವ ಪ್ರಾಪ್ತಿಗಳಲ್ಲಿ ಏನೇನಿವೆ ಎಂದು ಪಟ್ಟಿಯನ್ನು ಮಾಡುತ್ತೀರೆಂದರೆ, ಬಹಳ ದೊಡ್ಡದಾದ ಪಟ್ಟಿಯಾಗಿ ಬಿಡುತ್ತದೆ. ತಮಗೆ ಏನೇನು ಸಿಕ್ಕಿವೆ? ಮನಸ್ಸಿಗೆ ಖುಷಿಯಿದ್ದಾಗ ತನುವಿನ ಆರೋಗ್ಯವಿದೆ, ಮನಸ್ಸಿನಲ್ಲಿ ಶಾಂತಿ ಸಿಕ್ಕಿತು, ಶಾಂತಿ ಮನಸ್ಸಿನ ವಿಶೇಷತೆಯಾಗಿದೆ ಮತ್ತು ಧನದಲ್ಲಿ ಇಷ್ಟೂ ಶಕ್ತಿ ಬಂದಿದೆ, ಅದರಿಂದ ದಾಲ್ ರೋಟಿ (ಸಾಧಾರಣ ಊಟ), 36 ಪ್ರಕಾರದ ಮೃಷ್ಟಾನ್ನ ಭೋಜನದ ಸಮಾನವೆಂಬ ಅನುಭವವಾಗಲಿ. ಈಶ್ವರನ ನೆನಪಿನಲ್ಲಿ ದಾಲ್-ರೋಟಿಯೂ ಸಹ ಬಹಳ ಶ್ರೇಷ್ಠವೆನಿಸುತ್ತದೆ! ಪ್ರಪಂಚದ 36 ಪ್ರಕಾರ ಭೋಜನವೂ ಇರಲಿ ಮತ್ತು ತಮ್ಮ ದಾಲ್-ರೋಟಿಯೂ ಇರಲಿ, ಯಾವುದು ಶ್ರೇಷ್ಠವೆನಿಸುತ್ತದೆ? ದಾಲ್-ರೋಟಿ ಚೆನ್ನಾಗಿದೆಯಲ್ಲವೆ ಏಕೆಂದರೆ ಪ್ರಸಾದವಲ್ಲವೆ. ಯಾವಾಗ ಭೋಜನವನ್ನು ತಯಾರಿ ಮಾಡುತ್ತೀರಿ, ಆಗ ನೆನಪಿನಲ್ಲಿದ್ದು ಮಾಡುತ್ತೀರಿ ಮತ್ತು ನೆನಪಿನಲ್ಲಿದ್ದು ಸ್ವೀಕರಿಸುತ್ತೀರೆಂದರೆ ಪ್ರಸಾದವಾಯಿತು, ಪ್ರಸಾದದ ಮಹತ್ವಿಕೆಯಿರುತ್ತದೆ. ತಾವೆಲ್ಲರೂ ಪ್ರತಿ ನಿತ್ಯವೂ ಪ್ರಸಾದವನ್ನು ತಿನ್ನುತ್ತೀರಿ, ಪ್ರಸಾದದಲ್ಲಿ ಬಹಳ ಶಕ್ತಿಯಿರುತ್ತದೆ. ಅದರಿಂದ ತನು-ಮನ-ಧನ ಎಲ್ಲದರಲ್ಲಿಯೂ ಶಕ್ತಿ ಬಂದು ಬಿಟ್ಟಿದೆ. ಆದ್ದರಿಂದ ಹೇಳುತ್ತಾರೆ - ಬ್ರಾಹ್ಮಣರ ಖಜಾನೆಯಲ್ಲಿ ಅಪ್ರಾಪ್ತ ವಸ್ತುವೇ ಇಲ್ಲ. ಅಂದಾಗ ಸದಾ ತಮ್ಮ ಮುಂದೆ ಈ ಪ್ರಾಪ್ತಿಗಳನ್ನು ಇಟ್ಟುಕೊಂಡು ಖುಷಿಯಾಗಿರಿ, ಹರ್ಷಿತವಾಗಿರಿ. ಒಳ್ಳೆಯದು.
ಓಂ ಶಾಂತಿ. ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ, ನೀವು ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣರೇ ಆತ್ಮಿಕ ತಂದೆಯನ್ನು ಅರಿತಿದ್ದೇವೆ. ಪ್ರಪಂಚದಲ್ಲಿ ಯಾವುದೇ ಮನುಷ್ಯ ಮಾತ್ರರು ಆತ್ಮಿಕ ತಂದೆ ಯಾರನ್ನು ಗಾಡ್ಫಾದರ್ ಅಥವಾ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆಯೋ ಅವರನ್ನೇ ಅರಿತುಕೊಂಡಿಲ್ಲ. ಯಾವಾಗ ಆ ಆತ್ಮಿಕ ತಂದೆ ಬರುವರೋ ಆಗಲೇ ಆತ್ಮಿಕ ಮಕ್ಕಳಿಗೆ ಪರಿಚಯ ಕೊಡುವರು. ಈ ಜ್ಞಾನವು ಸೃಷ್ಟಿಯ ಆದಿಯಲ್ಲಾಗಲಿ, ಅಂತ್ಯದಲ್ಲಾಗಲಿ ಇರುವುದಿಲ್ಲ. ಈಗಲೇ ನಿಮಗೆ ಈ ಜ್ಞಾನವು ಸಿಗುತ್ತಿದೆ. ಇದು ಸೃಷ್ಟಿಯ ಅಂತ್ಯ ಮತ್ತು ಆದಿಯ ಸಂಗಮಯುಗ ಆಗಿದೆ. ಈ ಸಂಗಮಯುಗವನ್ನೂ ತಿಳಿದುಕೊಂಡಿಲ್ಲ ಅಂದಮೇಲೆ ಈ ತಂದೆಯನ್ನು ಹೇಗೆ ತಿಳಿದುಕೊಳ್ಳುವರು! ಹೇ ಪತಿತ-ಪಾವನ ಬನ್ನಿ, ಬಂದು ಪಾವನ ಮಾಡಿ ಎಂದು ಹೇಳುತ್ತಾರೆ ಆದರೆ ಆ ಪತಿತ-ಪಾವನನು ಯಾರು ಮತ್ತು ಯಾವಾಗ ಬರುತ್ತಾರೆ ಎಂಬುದನ್ನೇ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ, ಹೇಗಿದ್ದೇನೆಯೋ ಅದೇ ರೀತಿ ಯಾರೂ ನನ್ನನ್ನು ಅರಿತುಕೊಂಡಿಲ್ಲ. ಯಾವಾಗ ನಾನೇ ಬಂದು ನನ್ನ ಪರಿಚಯ ಕೊಡುವೆನೋ ಆಗಲೇ ನನ್ನನ್ನು ಅರಿತುಕೊಳ್ಳುವರು. ನಾನು ತನ್ನ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಸಂಗಮಯುಗದಲ್ಲಿ ಒಂದೇ ಬಾರಿ ಬಂದು ಕೊಡುತ್ತೇನೆ. ಕಲ್ಪದ ನಂತರ ಪುನಃ ಬರುತ್ತೇನೆ. ನಿಮಗೆ ಏನನ್ನು ತಿಳಿಸುತ್ತೇನೆಯೋ ಅದು ಮತ್ತೆ ಪ್ರಾಯಃಲೋಪವಾಗಿ ಬಿಡುತ್ತದೆ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ಯಾವುದೇ ಮನುಷ್ಯ ಮಾತ್ರರು ಪರಮಪಿತ ಪರಮಾತ್ಮನಾದ ನನ್ನನ್ನು ಅರಿತುಕೊಂಡಿಲ್ಲ. ಬ್ರಹ್ಮಾ-ವಿಷ್ಣು-ಶಂಕರರನ್ನಾಗಲಿ ತಿಳಿದುಕೊಂಡಿಲ್ಲ. ನನ್ನನ್ನು ಮನುಷ್ಯರೇ ಕರೆಯುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರು ಕರೆಯುವುದಿಲ್ಲ. ಮನುಷ್ಯರು ದುಃಖಿಯಾದಾಗಲೇ ಕರೆಯುತ್ತಾರೆ. ಸೂಕ್ಷ್ಮವತನದ ಮಾತೇ ಇಲ್ಲ. ಆತ್ಮಿಕ ತಂದೆಯು ಬಂದು ತನ್ನ ಆತ್ಮಿಕ ಮಕ್ಕಳು ಅರ್ಥಾತ್ ಆತ್ಮಗಳಿಗೆ ಕುಳಿತು ತಿಳಿಸಿಕೊಡುತ್ತಾರೆ ಅಂದಮೇಲೆ ಆ ಆತ್ಮಿಕ ತಂದೆಯ ಹೆಸರೇನು? ಅವರಿಗೆ ಬಾಬಾ ಎಂದು ಹೇಳಲಾಗುತ್ತದೆ ಅಂದಮೇಲೆ ಅವಶ್ಯವಾಗಿ ಏನಾದರೂ ಹೆಸರಿರಬೇಕಲ್ಲವೆ! ಅವರ ಸತ್ಯವಾದ ಹೆಸರಿನದೇ ಗಾಯನವಿದೆ – ‘ಸದಾಶಿವ’ ಇದು ಪ್ರಸಿದ್ಧವಾಗಿದೆ, ಆದರೆ ಮನುಷ್ಯರು ಅನೇಕ ಹೆಸರುಗಳನ್ನಿಟ್ಟು ಬಿಟ್ಟಿದ್ದಾರೆ. ಭಕ್ತಿಮಾರ್ಗದಲ್ಲಿ ತನ್ನದೇ ಬುದ್ಧಿಯಿಂದ ಈ ಲಿಂಗ ರೂಪವನ್ನು ಮಾಡಿ ಬಿಟ್ಟಿದ್ದಾರೆ. ಆದರೂ ಸಹ ಹೆಸರು ಶಿವನೆಂದೇ ಇದೆ. ತಂದೆಯು ತಿಳಿಸುತ್ತಾರೆ - ನಾನು ಒಂದು ಬಾರಿ ಬರುತ್ತೇನೆ, ಬಂದು ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತೇನೆ. ಮನುಷ್ಯರು ಭಲೆ ಮುಕ್ತಿಧಾಮ, ನಿರ್ವಾಣಧಾಮವೆಂದು ಹೆಸರು ತೆಗೆದುಕೊಳ್ಳುತ್ತಾರೆ ಆದರೆ ಅರಿತುಕೊಂಡಿಲ್ಲ. ತಂದೆಯನ್ನಾಗಲಿ, ದೇವತೆಗಳನ್ನಾಗಲಿ ಅರಿತಿಲ್ಲ. ತಂದೆಯು ಭಾರತದಲ್ಲಿ ಬಂದು ಹೇಗೆ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ. ಪರಮಪಿತ ಪರಮಾತ್ಮನು ಹೇಗೆ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂಬುದು ಶಾಸ್ತ್ರಗಳಲ್ಲಿಯೂ ಇಲ್ಲ. ಸತ್ಯಯುಗದಲ್ಲಿ ದೇವತೆಗಳಿಗೆ ಜ್ಞಾನವಿತ್ತು ಅದು ಪ್ರಾಯಃಲೋಪವಾಯಿತು ಎಂದಲ್ಲ. ಒಂದುವೇಳೆ ದೇವತೆಗಳಲ್ಲಿ ಈ ಜ್ಞಾನವು ಇದ್ದಿದ್ದೇ ಆದರೆ ಅದು ನಡೆದು ಬರುತ್ತಿತ್ತು. ಇಸ್ಲಾಮಿ, ಬೌದ್ಧಿ ಮೊದಲಾದ ಯಾರೆಲ್ಲರೂ ಇದ್ದಾರೆಯೋ ಅವರ ಜ್ಞಾನವು ನಡೆದು ಬರುತ್ತಿದೆ. ಈ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಯಾವಾಗ ಬರುತ್ತೇನೆಯೋ ಆಗ ಆತ್ಮರು ಪತಿತರಾಗಿ ರಾಜ್ಯವನ್ನು ಕಳೆದುಕೊಂಡು ಕುಳಿತಿದ್ದಾರೆ, ಅವರನ್ನೇ ಬಂದು ಮತ್ತೆ ಪಾವನರನ್ನಾಗಿ ಮಾಡುತ್ತೇನೆ. ಭಾರತದಲ್ಲಿ ರಾಜ್ಯವಿತ್ತು ಮತ್ತೆ ಹೇಗೆ ಕಳೆದುಕೊಂಡರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳದು ಎಷ್ಟೊಂದು ತುಚ್ಛ ಬುದ್ಧಿಯಾಗಿದೆ. ನಾನು ಮಕ್ಕಳಿಗೆ ಈ ಜ್ಞಾನವನ್ನು ನೀಡಿ ಪ್ರಾಲಬ್ಧವನ್ನು ಕೊಡುತ್ತೇನೆ ನಂತರ ಎಲ್ಲರೂ ಮರೆತು ಹೋಗುತ್ತಾರೆ. ತಂದೆಯು ಹೇಗೆ ಬಂದರು? ಹೇಗೆ ಮಕ್ಕಳಿಗೆ ಶಿಕ್ಷಣ ಕೊಟ್ಟರು? ಎಲ್ಲವನ್ನೂ ಮರೆತು ಬಿಡುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಮಕ್ಕಳಿಗೆ ವಿಚಾರ ಸಾಗರ ಮಂಥನ ಮಾಡುವ ಬಹಳ ವಿಶಾಲ ಬುದ್ಧಿಯು ಬೇಕು. ತಂದೆಯು ತಿಳಿಸುತ್ತಾರೆ - ಯಾವ ಶಾಸ್ತ್ರ ಇತ್ಯಾದಿಗಳನ್ನು ನೀವು ಓದುತ್ತಾ ಬಂದಿದ್ದೀರೋ ಇವು ಸತ್ಯ-ತ್ರೇತಾಯುಗದಲ್ಲಿ ಓದುತ್ತಿರಲಿಲ್ಲ, ಅಲ್ಲಿ ಇರಲೇ ಇಲ್ಲ. ನೀವು ಈ ಜ್ಞಾನವನ್ನು ಮರೆತು ಹೋಗುತ್ತೀರಿ ಮತ್ತೆ ಗೀತೆ ಇತ್ಯಾದಿ ಶಾಸ್ತ್ರಗಳೆಲ್ಲವೂ ಎಲ್ಲಿಂದ ಬಂದವು? ಯಾರು ಈ ಗೀತೆಯನ್ನು ಕೇಳಿ ಈ ಪದವಿಯನ್ನು ಪಡೆದರೋ ಅವರಿಗೇ ಇದು ಗೊತ್ತಿಲ್ಲ ಅಂದಮೇಲೆ ಮತ್ತ್ಯಾರು ಹೇಗೆ ತಿಳಿದುಕೊಳ್ಳುವರು? ನಾವು ಹೇಗೆ ಮನುಷ್ಯರಿಂದ ದೇವತೆಗಳಾದೆವು ಎಂಬುದನ್ನು ದೇವತೆಗಳೂ ಸಹ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆ ಪುರುಷಾರ್ಥದ ಪಾತ್ರವೇ ನಿಂತು ಹೋಯಿತು. ನಿಮ್ಮ ಪ್ರಾಲಬ್ಧವು ಆರಂಭವಾಯಿತು ಅಂದಮೇಲೆ ಅಲ್ಲಿ ಈ ಜ್ಞಾನವಿರಲು ಹೇಗೆ ಸಾಧ್ಯ? ಈ ಜ್ಞಾನವು ನಿಮಗೆ ಕಲ್ಪದ ಮೊದಲಿನ ತರಹ ಪುನಃ ನಿಮಗೆ ಸಿಗುತ್ತಿದೆ. ನಿಮಗೆ ರಾಜಯೋಗವನ್ನು ಕಲಿಸಿ ಪ್ರಾಲಬ್ಧವನ್ನು ಕೊಡಲಾಗುತ್ತದೆ. ಅಲ್ಲಂತೂ ದುರ್ಗತಿಯಿರುವುದೇ ಇಲ್ಲ, ಆದ್ದರಿಂದ ಅಲ್ಲಿ ಜ್ಞಾನದ ಮಾತೂ ಬರುವುದಿಲ್ಲ. ವಾಸ್ತವದಲ್ಲಿ ಸದ್ಗತಿ ಪಡೆಯುವುದಕ್ಕಾಗಿ ಜ್ಞಾನವು ಬೇಕಾಗಿದೆ, ಅದನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಸದ್ಗತಿ ಮತ್ತು ದುರ್ಗತಿಯ ಶಬ್ಧವು ಇಲ್ಲಿಯೇ ಬರುತ್ತದೆ. ಭಾರತವಾಸಿಗಳೇ ಸದ್ಗತಿಯನ್ನು ಪಡೆಯುತ್ತಾರೆ. ಸ್ವರ್ಗದ ರಚಯಿತನು ಸ್ವರ್ಗವನ್ನು ರಚಿಸಿದ್ದರು ಎಂದು ತಿಳಿಯುತ್ತಾರೆ ಆದರೆ ಯಾವಾಗ ರಚಿಸಿದರು? ಎಂಬುದೇನೂ ಗೊತ್ತಿಲ್ಲ. ಶಾಸ್ತ್ರಗಳಲ್ಲಿ ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಪುನಃ ಜ್ಞಾನವನ್ನು ಕೊಡುತ್ತೇನೆ, ಮತ್ತೆ ಈ ಜ್ಞಾನವು ಸಮಾಪ್ತಿಯಾಗುತ್ತದೆ, ಭಕ್ತಿಯು ಪ್ರಾರಂಭವಾಗುತ್ತದೆ. ಅರ್ಧಕಲ್ಪ ಜ್ಞಾನ, ಅರ್ಧಕಲ್ಪ ಭಕ್ತಿಯಾಗಿದೆ, ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಸತ್ಯಯುಗದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳಿದ್ದಾರೆ, ಅಂದಮೇಲೆ ಹೇಗೆ ಅರ್ಥವಾಗಬೇಕು! 5000 ವರ್ಷಗಳ ಮಾತನ್ನೂ ಸಹ ಮರೆತು ಹೋಗಿದ್ದಾರೆ ಅಂದಮೇಲೆ ಲಕ್ಷಾಂತರ ವರ್ಷಗಳ ಮಾತನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ! ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ಕಲ್ಪದ ಆಯಸ್ಸು 5000 ವರ್ಷಗಳಾಗಿವೆ. ನಾಲ್ಕು ಯುಗಗಳ ಅವಧಿಯು ಸಮನಾಗಿ 1250 ವರ್ಷಗಳಾಗಿದೆ. ಬ್ರಾಹ್ಮಣರದು ಇದು ಅಧಿಕ ಯುಗವಾಗಿದೆ. ಆ ನಾಲ್ಕು ಯುಗಗಳಿಗಿಂತ ಬಹಳ ಚಿಕ್ಕದಾದ ಯುಗವಾಗಿದೆ ಅಂದಾಗ ತಂದೆಯು ಭಿನ್ನ-ಭಿನ್ನ ರೂಪದಿಂದ ಹೊಸ-ಹೊಸ ಮಾತುಗಳನ್ನು ಮಕ್ಕಳಿಗೆ ಸಹಜವಾಗಿ ತಿಳಿಸುತ್ತಿರುತ್ತಾರೆ. ನೀವೇ ಧಾರಣೆ ಮಾಡಿಕೊಳ್ಳಬೇಕಾಗಿದೆ. ನೀವೇ ಪರಿಶ್ರಮ ಪಡಬೇಕಾಗಿದೆ. ಡ್ರಾಮಾನುಸಾರ ಏನನ್ನು ತಿಳಿಸುತ್ತಾ ಬಂದಿದ್ದೇನೆಯೋ ಆ ಪಾತ್ರವು ನಡೆಯುತ್ತಾ ಬರುತ್ತದೆ. ಏನನ್ನು ತಿಳಿಸಬೇಕಿತ್ತೋ ಅದನ್ನೇ ಇಂದು ತಿಳಿಸುತ್ತಿದ್ದೇನೆ. ಸಮಯಕ್ಕನುಸಾರವಾಗಿ ಅದು ಇಮರ್ಜ್ ಆಗುತ್ತಾ ಇರುತ್ತದೆ. ನೀವು ಕೇಳುತ್ತಾ ಹೋಗುತ್ತೀರಿ. ನೀವೇ ಧಾರಣೆ ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ನಾನಂತೂ ಧಾರಣೆ ಮಾಡಬೇಕಾಗಿಲ್ಲ. ನಿಮಗೆ ತಿಳಿಸುತ್ತೇನೆ, ಧಾರಣೆ ಮಾಡಿಸುತ್ತೇನೆ. ನಾನಾತ್ಮನಲ್ಲಿ ಪತಿತರನ್ನು ಪಾವನ ಮಾಡುವ ಪಾತ್ರವಿದೆ. ಕಲ್ಪದ ಹಿಂದೆ ಏನನ್ನು ತಿಳಿಸಿದ್ದೆನೋ ಅದೇ ಹೊರ ಬರುತ್ತಿರುತ್ತದೆ. ಏನನ್ನು ತಿಳಿಸಬೇಕೆಂದು ನಾನು ಮೊದಲೇ ವಿಚಾರ ಮಾಡುವುದಿಲ್ಲ. ಭಲೆ ಈ ಬ್ರಹ್ಮನ ಆತ್ಮವು ವಿಚಾರ ಸಾಗರ ಮಂಥನ ಮಾಡುತ್ತದೆ. ಇವರು ವಿಚಾರ ಸಾಗರ ಮಂಥನ ಮಾಡಿ ತಿಳಿಸುತ್ತಾರೆಯೇ ಅಥವಾ ತಂದೆಯು ತಿಳಿಸುತ್ತಾರೆಯೇ - ಇವು ಬಹಳ ಗುಹ್ಯ ಮಾತುಗಳಾಗಿವೆ. ಇದರಲ್ಲಿ ಬಹಳ ಒಳ್ಳೆಯ ಬುದ್ಧಿ ಬೇಕು. ಯಾರು ಸರ್ವೀಸಿನಲ್ಲಿ ತತ್ಪರರಾಗಿರುವರೋ ಅವರಿಗೇ ವಿಚಾರ ಸಾಗರ ಮಂಥನ ನಡೆಯುತ್ತಿರುವುದು.
ವಾಸ್ತವದಲ್ಲಿ ಕನ್ಯೆಯರು ಬಂಧನ ಮುಕ್ತರಾಗಿರುತ್ತಾರೆ. ಅವರು ಈ ಆತ್ಮಿಕ ವಿದ್ಯೆಯಲ್ಲಿ ತೊಡಗಬೇಕಾಗಿದೆ. ಬಂಧನವಂತೂ ಯಾವುದೂ ಇಲ್ಲ. ಕುಮಾರಿಯರು ಬಹಳ ಚೆನ್ನಾಗಿ ಅನ್ಯರನ್ನು ಮೇಲೆತ್ತಬಹುದು. ಅವರಿಗೆ ಇರುವುದೇ ಓದಿಸುವುದು ಮತ್ತು ಓದುವುದು. ಕುಮಾರಿಯರು ಸಂಪಾದನೆ ಮಾಡಬೇಕೆಂಬ ಅವಶ್ಯಕತೆಯಿಲ್ಲ. ಕುಮಾರಿಯು ಒಂದುವೇಳೆ ಬಹಳ ಚೆನ್ನಾಗಿ ಈ ಜ್ಞಾನವನ್ನು ಅರಿತುಕೊಂಡರೆ ಎಲ್ಲದಕ್ಕಿಂತ ಒಳ್ಳೆಯದು. ಬುದ್ಧಿವಂತರಾಗಿದ್ದರೆ ಈ ಆತ್ಮಿಕ ಸಂಪಾದನೆಯಲ್ಲಿಯೇ ತೊಡಗಿ ಬಿಡುವರು. ಕೆಲವರಂತೂ ಬಹಳ ಆಸಕ್ತಿಯಿಂದ ಲೌಕಿಕ ವಿದ್ಯೆಯನ್ನು ಓದುತ್ತಿರುತ್ತಾರೆ ಆದರೆ ತಿಳಿಸುವುದೇನೆಂದರೆ ಇದರಿಂದೇನೂ ಲಾಭವಿಲ್ಲ, ನೀವು ಈ ಆತ್ಮಿಕ ವಿದ್ಯೆಯನ್ನು ಓದಿ ಸರ್ವೀಸಿನಲ್ಲಿ ತೊಡಗಿರಿ. ಇದರ ಮುಂದೆ ಆ ವಿದ್ಯೆಯೇನೂ ಪ್ರಯೋಜನಕ್ಕಿಲ್ಲ. ಅದನ್ನು ಓದಿ ಮತ್ತೆ ಗೃಹಸ್ಥ ವ್ಯವಹಾರದಲ್ಲಿ ಹೊರಟು ಹೋಗುತ್ತಾರೆ, ಗೃಹಸ್ಥಿ ಮಾತೆಯರಾಗಿ ಬಿಡುತ್ತಾರೆ. ಕನ್ಯೆಯರಂತೂ ಈ ಜ್ಞಾನದಲ್ಲಿ ತೊಡಗಬೇಕು, ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆದು ಧಾರಣೆಯಲ್ಲಿ ತೊಡಗಬೇಕಾಗಿದೆ. ಮಮ್ಮಾರವರು ಆರಂಭದಲ್ಲಿಯೇ ಬಂದರು ಮತ್ತು ಈ ವಿದ್ಯೆಯಲ್ಲಿ ತೊಡಗಿ ಬಿಟ್ಟರು ಉಳಿದಂತೆ ಎಷ್ಟೊಂದು ಮಂದಿ ಕುಮಾರಿಯರು ಮಾಯವಾದರು. ಕುಮಾರಿಯರಿಗೆ ಬಹಳ ಒಳ್ಳೆಯ ಅವಕಾಶವಿದೆ, ಶ್ರೀಮತದಂತೆ ನಡೆದಿದ್ದೇ ಆದರೆ ಬಹಳ ಒಳ್ಳೆಯ ಪದವಿಯಿದೆ. ಇದು ಶ್ರೀಮತವೇ ಅಥವಾ ಬ್ರಹ್ಮಾರವರ ಮತವೇ ಎಂಬುದರಲ್ಲಿಯೇ ತಬ್ಬಿಬ್ಬಾಗುತ್ತಾರೆ. ಆದರೂ ಸಹ ಇದು ತಂದೆಯ ರಥವಲ್ಲವೆ. ಇವರಿಂದ ಏನಾದರೂ ತಪ್ಪಾದರೂ ಸಹ ನೀವು ಶ್ರೀಮತದಂತೆ ನಡೆಯುತ್ತಾ ಇದ್ದಿದ್ದೇ ಆದರೆ ಸ್ವಯಂ ತಂದೆಯೇ ಅದನ್ನು ಸರಿ ಪಡಿಸುತ್ತಾರೆ. ಶ್ರೀಮತವು ಸಿಗುವುದೇ ಇವರ ಮೂಲಕ ಅಂದಾಗ ಸದಾ ತಿಳಿದುಕೊಳ್ಳಿ - ಶ್ರೀಮತವೇ ಸಿಗಲಿ ಅಥವಾ ಮತ್ತೇನೆ ಇರಲಿ ಜವಾಬ್ದಾರನು ತಂದೆಯಾಗಿದ್ದಾರೆ. ಇವರಿಂದ ಏನಾದರೂ ಆದರೂ ಸಹ ಅದಕ್ಕೆ ನಾನು ಜವಾಬ್ದಾರನಾಗಿದ್ದೇನೆ ಎಂದು ಶಿವ ತಂದೆಯು ಹೇಳುತ್ತಾರೆ. ಡ್ರಾಮಾದಲ್ಲಿ ಈ ರಹಸ್ಯವು ನಿಗಧಿಯಾಗಿದೆ, ಇವರನ್ನೂ ಸಹ ಸುಧಾರಣೆ ಮಾಡುತ್ತಾರೆ. ಆದರೂ ತಂದೆಯಲ್ಲವೆ. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದೇವೆ. ಆದ್ದರಿಂದ ಅನೇಕರು ಇದನ್ನು ಶಿವ ತಂದೆಯು ಹೇಳುತ್ತಾರೆಯೇ ಅಥವಾ ಬ್ರಹ್ಮಾರವರು ಹೇಳುತ್ತಾರೆಯೇ ಎಂದು ತಬ್ಬಿಬ್ಬಾಗುತ್ತಾರೆ. ಒಂದುವೇಳೆ ಶಿವ ತಂದೆಯೇ ಮತ ಕೊಡುತ್ತಾರೆಂದು ತಿಳಿದುಕೊಳ್ಳುವುದಾದರೆ ಎಂದೂ ಅಲುಗಾಡುವುದಿಲ್ಲ. ಶಿವ ತಂದೆಯು ಏನು ತಿಳಿಸುವರೋ ಅದು ಸತ್ಯವೇ ಆಗಿದೆ. ಬಾಬಾ ತಾವೇ ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದೀರಿ ಎಂದು ನೀವು ಹೇಳುತ್ತೀರಿ ಅಂದಮೇಲೆ ಶ್ರೀಮತದಂತೆ ನಡೆಯಬೇಕಲ್ಲವೆ. ಏನು ಹೇಳಿದರೆ ಅದರಂತೆ ನಡೆಯಿರಿ. ಯಾವಾಗಲೂ ಶಿವ ತಂದೆಯು ಹೇಳುತ್ತಾರೆಂದೇ ತಿಳಿಯಿರಿ. ಅವರು ಕಲ್ಯಾಣಕಾರಿಯಾಗಿದ್ದಾರೆ, ಈ ಬ್ರಹ್ಮಾ ತಂದೆಯ ಜವಾಬ್ದಾರಿಯೂ ಸಹ ಅವರ ಮೇಲಿದೆ. ಅವರ ರಥವಲ್ಲವೆ. ಇದು ಬ್ರಹ್ಮಾರವರ ಆದೇಶವೋ ಅಥವಾ ಶಿವ ತಂದೆಯದೋ ಗೊತ್ತಿಲ್ಲ ಎಂದು ಏಕೆ ತಬ್ಬಿಬ್ಬಾಗುತ್ತೀರಿ? ಶಿವ ತಂದೆಯೇ ತಿಳಿಸುತ್ತಾರೆಂದು ನೀವು ಏಕೆ ತಿಳಿಯುವುದಿಲ್ಲ? ಶ್ರೀಮತವು ಏನು ಹೇಳಿದರೆ ಅದರಂತೆ ಮಾಡುತ್ತಾ ಇರಿ. ಅನ್ಯರ ಮತದಲ್ಲಿ ನೀವು ಬರುವುದಾದರೂ ಏಕೆ? ಶ್ರೀಮತದಂತೆ ನಡೆದಾಗ ಎಂದೂ ತೂಕಡಿಕೆ ಬರುವುದಿಲ್ಲ. ಆದರೆ ನಡೆಯುವುದಿಲ್ಲ, ಆದ್ದರಿಂದ ತಬ್ಬಿಬ್ಬಾಗುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಶ್ರೀಮತದ ಮೇಲೆ ನಿಶ್ಚಯವನ್ನಿಡಿ, ಆಗ ನಾನು ಜವಾಬ್ದಾರನಾಗಿದ್ದೇನೆ. ನೀವು ನಿಶ್ಚಯವನ್ನೇ ಇಡುವುದಿಲ್ಲವೆಂದರೆ ನಾನೂ ಜವಾಬ್ದಾರನಲ್ಲ. ಯಾವಾಗಲೂ ತಿಳಿದುಕೊಳ್ಳಿ - ಶ್ರೀಮತದಂತೆ ನಡೆಯಲೇಬೇಕಾಗಿದೆ. ಅವರು ಏನಾದರೂ ಹೇಳಲಿ, ಪ್ರೀತಿಯನ್ನಾದರೂ ಮಾಡಿ ಅಥವಾ ತಿರಸ್ಕಾರವನ್ನಾದರೂ ಮಾಡಿ, ನಾವು ನಿಮ್ಮ ಧರೆಯನ್ನು ಬಿಟ್ಟು ಹೋಗುವುದಿಲ್ಲ... ಇದು ತಂದೆಗಾಗಿಯೇ ಗಾಯನವಿದೆ. ಇದರಲ್ಲಿ ತಿರಸ್ಕಾರ ಮಾಡಿ ಒದೆಯುವ ಮಾತಂತೂ ಇಲ್ಲ. ಆದರೆ ಕೆಲವರಿಗೆ ನಿಶ್ಚಯ ಕುಳಿತುಕೊಳ್ಳುವುದೇ ಬಹಳ ಕಷ್ಟವಾಗುತ್ತದೆ. ಪೂರ್ಣನಿಶ್ಚಯವಾಗಿ ಬಿಟ್ಟರೆ ಕರ್ಮಾತೀತ ಸ್ಥಿತಿಯಾಗುವುದು. ಆದರೆ ಆ ಸ್ಥಿತಿಯು ಬರುವುದರಲ್ಲಿಯೂ ಸಮಯ ಬೇಕು. ಅದು ಅಂತ್ಯದಲ್ಲಿಯೇ ಆಗುವುದು. ಇದರಲ್ಲಿ ನಿಶ್ಚಯವು ಬಹಳ ಅಡೋಲವಾಗಿರಬೇಕು. ಶಿವ ತಂದೆಯಿಂದಂತೂ ಎಂದೂ ಯಾವುದೇ ತಪ್ಪಾಗಲು ಸಾಧ್ಯವಿಲ್ಲ. ಇವರಿಂದ ಆಗಬಹುದು, ಇವರಿಬ್ಬರೂ ಒಟ್ಟಿಗೆ ಇದ್ದಾರೆ ಆದರೆ ನೀವು ನಿಶ್ಚಯವನ್ನಿಡಬೇಕು – ಶಿವ ತಂದೆಯು ನಮಗೆ ತಿಳಿಸುತ್ತಾರೆ, ಅದರಂತೆ ನಾವು ನಡೆಯಬೇಕಾಗಿದೆ. ಹೀಗೆ ತಂದೆಯ ಶ್ರೀಮತವೆಂದು ತಿಳಿದು ನಡೆಯುತ್ತಾ ಇರಿ. ಆಗ ಉಲ್ಟಾ ಇರುವುದೂ ಸಹ ಸುಲ್ಟಾ ಆಗಿ ಬಿಡುವುದು. ಕೆಲವೊಮ್ಮೆ ತಪ್ಪು ತಿಳುವಳಿಕೆಯಾಗಿ ಬಿಡುತ್ತದೆ. ಶಿವ ತಂದೆ ಮತ್ತು ಬ್ರಹ್ಮಾ ತಂದೆಯ ಮುರುಳಿಯನ್ನೂ ಸಹ ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಇದನ್ನು ತಂದೆಯು ಹೇಳಿದರೇ? ಅಥವಾ ಈ ಬ್ರಹ್ಮಾ ತಂದೆಯು ಹೇಳಿದರೇ ಎಂದು. ಈ ಬ್ರಹ್ಮಾರವರು ಮುರುಳಿಯ ಮಧ್ಯದಲ್ಲಿ ಮಾತನಾಡುವುದಿಲ್ಲ ಎಂದಲ್ಲ. ಆದರೆ ತಂದೆಯು ತಿಳಿಸಿದ್ದಾರೆ - ಭಲೆ ಈ ಬ್ರಹ್ಮಾರವರಿಗೆ ಏನೂ ಗೊತ್ತಿಲ್ಲವೆಂದೇ ತಿಳಿದುಕೊಳ್ಳಿ, ಶಿವ ತಂದೆಯೇ ಎಲ್ಲವನ್ನೂ ತಿಳಿಸುತ್ತಾರೆ. ಶಿವ ತಂದೆಯ ರಥಕ್ಕೆ ಸ್ನಾನ ಮಾಡಿಸುತ್ತೇನೆ, ಶಿವ ತಂದೆಯ ಭಂಡಾರದ ಸರ್ವೀಸ್ ಮಾಡುತ್ತೇನೆ. ಇಷ್ಟು ನೆನಪಿದ್ದರೂ ಸಹ ಬಹಳ ಒಳ್ಳೆಯದು. ಶಿವ ತಂದೆಯ ನೆನಪಿನಲ್ಲಿದ್ದು ಏನೇ ಮಾಡಿದರೂ ಸಹ ನೀವು ಅನೇಕರಿಗಿಂತ ಬಹಳ ತೀಕ್ಷ್ಣವಾಗಿ ಮುಂದೆ ಹೋಗಬಹುದು. ಮುಖ್ಯ ಮಾತು ಶಿವ ತಂದೆಯ ನೆನಪಾಗಿದೆ. ತಂದೆ ಮತ್ತು ಆಸ್ತಿ. ಉಳಿದೆಲ್ಲವೂ ವಿಸ್ತಾರವಾಗಿದೆ.
ತಂದೆಯು ಏನನ್ನು ತಿಳಿಸುತ್ತಾರೆಯೋ ಅದರಮೇಲೆ ಗಮನ ಕೊಡಬೇಕಾಗಿದೆ. ತಂದೆಯೇ ಪತಿತ-ಪಾವನ, ಜ್ಞಾನ ಸಾಗರನಾಗಿದ್ದಾರಲ್ಲವೆ. ಅವರೇ ಪತಿತ ಶೂದ್ರರನ್ನು ಬ್ರಾಹ್ಮಣರನ್ನಾಗಿ ಮಾಡುತ್ತಾರೆ, ಬ್ರಾಹ್ಮಣರನ್ನೇ ಪಾವನರನ್ನಾಗಿ ಮಾಡುತ್ತಾರೆ. ಶೂದ್ರರನ್ನು ಮಾಡುವುದಿಲ್ಲ. ಇವೆಲ್ಲಾ ಮಾತುಗಳು ಯಾವುದೇ ಭಾಗವತ ಮೊದಲಾದುವುಗಳಲ್ಲಿಲ್ಲ. ಕೆಲಕೆಲವು ಶಬ್ಧಗಳಿವೆ. ಈ ರಾಧೆ-ಕೃಷ್ಣರೇ ಲಕ್ಷ್ಮೀ-ನಾರಾಯಣರಾಗಿದ್ದಾರೆ ಎಂಬುದೂ ಸಹ ಮನುಷ್ಯರಿಗೆ ಗೊತ್ತಿಲ್ಲ, ಇದರಲ್ಲಿಯೇ ತಬ್ಬಿಬ್ಬಾಗುತ್ತಾರೆ. ದೇವತೆಗಳು ಸೂರ್ಯವಂಶಿ, ಚಂದ್ರವಂಶಿಯರಾಗಿದ್ದಾರೆ. ಲಕ್ಷ್ಮೀ-ನಾರಾಯಣರ ರಾಜಧಾನಿ, ರಾಮ-ಸೀತೆಯರ ರಾಜಧಾನಿ. ತಂದೆಯು ತಿಳಿಸುತ್ತಾರೆ - ಭಾರತವಾಸಿ ಮಧುರ ಮಕ್ಕಳೇ, ನೆನಪು ಮಾಡಿಕೊಳ್ಳಿ. ಲಕ್ಷಾಂತರ ವರ್ಷಗಳ ಮಾತಿಲ್ಲ, ಇದು ನೆನ್ನೆಯ ಮಾತಾಗಿದೆ. ನಿಮಗೆ ರಾಜ್ಯವನ್ನೂ ಕೊಟ್ಟಿದ್ದೆನು, ಇಷ್ಟು ಅಪಾರ ಧನ ಸಂಪತ್ತನ್ನು ಕೊಟ್ಟೆನು, ಇಡೀ ವಿಶ್ವದ ಮಾಲೀಕರನ್ನಾಗಿ ಮಾಡಿದೆನು, ಮತ್ತ್ಯಾವುದೇ ಖಂಡವಿರಲಿಲ್ಲ. ನಂತರ ನಿಮಗೆ ಏನಾಯಿತು! ವಿದ್ವಾಂಸ, ಆಚಾರ್ಯ, ಪಂಡಿತರೂ ಸಹ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ತಂದೆಯೇ ತಿಳಿಸುತ್ತಾರೆ - ಅರೆ! ಭಾರತವಾಸಿಗಳೇ, ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು. ಎಷ್ಟೊಂದು ನಿಮಗೆ ಹಣವನ್ನು ಕೊಟ್ಟೆನು, ನೀವು ಎಲ್ಲಿ ಕಳೆದಿರಿ? ಎಂದು ಶಿವ ತಂದೆಯು ಕೇಳುತ್ತಾರೆಂಬುದನ್ನು ನೀವೂ ಸಹ ಹೇಳುತ್ತೀರಿ. ತಂದೆಯ ಆಸ್ತಿಯು ಎಷ್ಟು ಬಲವಾಗಿದೆ! ತಂದೆಯೇ ಕೇಳುತ್ತಾರಲ್ಲವೆ ಅಥವಾ ತಂದೆಯು ಹೊರಟು ಹೋದರೆ ಮಿತ್ರ ಸಂಬಂಧಿಗಳು ಕೇಳುತ್ತಾರೆ. ತಂದೆಯು ನಿಮಗೆ ಇಷ್ಟು ಹಣವನ್ನು ಕೊಟ್ಟರು, ನೀವು ಎಲ್ಲಿ ಕಳೆದಿರಿ ಎಂದು. ಇಲ್ಲಂತೂ ಬೇಹದ್ದಿನ ತಂದೆಯಾಗಿದ್ದಾರೆ, ತಂದೆಯು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡಿದರು, ಇಷ್ಟೊಂದು ರಾಜ್ಯವನ್ನು ಕೊಟ್ಟರು. ಆ ಹಣವೆಲ್ಲವೂ ಎಲ್ಲಿ ಹೋಯಿತು! ನೀವು ಏನು ಉತ್ತರ ನೀಡುವಿರಿ? ಯಾರಿಗೂ ಅರ್ಥವಾಗುವುದಿಲ್ಲ, ನೀವು ಹೇಗೆ ಇಷ್ಟೊಂದು ಕಂಗಾಲರಾದಿರಿ ಎಂದು ತಂದೆಯು ಕೇಳುವುದು ಸರಿಯಾಗಿದೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಮೊದಲು ಎಲ್ಲವೂ ಸತೋಪ್ರಧಾನವಾಗಿತ್ತು, ನಂತರ ಕಲೆಗಳು ಕಡಿಮೆಯಾಗುತ್ತಾ ಹೋಯಿತು ಆದ್ದರಿಂದ ಎಲ್ಲವೂ ಕಡಿಮೆಯಾಗುತ್ತಾ ಹೋಯಿತು. ಸತ್ಯಯುಗದಲ್ಲಂತೂ ಸತೋಪ್ರಧಾನರಿದ್ದರು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ರಾಧೆ-ಕೃಷ್ಣರಿಗಿಂತಲೂ ಲಕ್ಷ್ಮೀ-ನಾರಾಯಣರ ಹೆಸರು ಹೆಚ್ಚು ಪ್ರಸಿದ್ಧವಾಗಿದೆ. ಅವರಿಗೆ ಯಾರೂ ನಿಂದನೆಯ ಮಾತನ್ನು ಬರೆದಿಲ್ಲ, ಮತ್ತೆಲ್ಲರ ಪ್ರತಿಯೂ ನಿಂದನೆಯನ್ನು ಬರೆದಿದ್ದಾರೆ. ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ದೈತ್ಯರಿದ್ದರು ಎಂಬ ಮಾತನ್ನು ಯಾರೂ ಹೇಳುವುದಿಲ್ಲ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ಜ್ಞಾನ ಧನದಿಂದ ಜೋಳಿಗೆಯನ್ನು ತುಂಬಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಮಾಯೆಯಿಂದ ಬಹಳ ಎಚ್ಚರಿಕೆಯಿಂದಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಬುದ್ಧಿವಂತರಾಗಿ ಸತ್ಯ ಸೇವೆಯಲ್ಲಿ ತೊಡಗಬೇಕಾಗಿದೆ. ಜವಾಬ್ದಾರನು ಒಬ್ಬ ತಂದೆಯಾಗಿದ್ದಾರೆ ಆದ್ದರಿಂದ ಶ್ರೀಮತದಲ್ಲಿ ಸಂಶಯ ತರಬಾರದು. ನಿಶ್ಚಯದಲ್ಲಿ ಅಡೋಲರಾಗಿರಬೇಕಾಗಿದೆ.
2. ವಿಚಾರ ಸಾಗರ ಮಂಥನ ಮಾಡಿ ತಂದೆಯ ಪ್ರತೀ ತಿಳುವಳಿಕೆಯ ಮೇಲೆ ಗಮನ ಕೊಡಬೇಕಾಗಿದೆ. ಸ್ವಯಂ ಜ್ಞಾನ ಧಾರಣೆ ಮಾಡಿ ಅನ್ಯರಿಗೂ ತಿಳಿಸಬೇಕಾಗಿದೆ.
ಓಂ ಶಾಂತಿ. ತಂದೆಯು ಕುಳಿತು ತಿಳಿಸುತ್ತಾರೆ, ಈ ದಾದಾರವರೂ ಸಹ ತಿಳಿದುಕೊಳ್ಳುತ್ತಾರೆ, ಏಕೆಂದರೆ ತಂದೆಯು ಕುಳಿತು ದಾದಾರವರ ಮೂಲಕ ತಿಳಿಸಿ ಕೊಡುತ್ತಾರೆ. ಹೇಗೆ ನೀವು ತಿಳಿದುಕೊಳ್ಳುತ್ತೀರೋ ಹಾಗೆಯೇ ದಾದಾರವರೂ ತಿಳಿದುಕೊಳ್ಳುತ್ತಾರೆ. ದಾದಾರವರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಇದು ಭಗವಾನುವಾಚವಾಗಿದೆ. ತಂದೆಯು ಮುಖ್ಯವಾಗಿ ಇದನ್ನೇ ತಿಳಿಸುತ್ತಾರೆ, ದೇಹೀ-ಅಭಿಮಾನಿಯಾಗಿ. ಇದನ್ನು ಏಕೆ ಹೇಳುತ್ತಾರೆ? ಏಕೆಂದರೆ ತಮ್ಮನ್ನು ಆತ್ಮನೆಂದು ತಿಳಿಯುವುದರಿಂದ ನಾವು ಪತಿತ-ಪಾವನ, ಪರಮಪಿತ ಪರಮಾತ್ಮನಿಂದ ಪಾವನರಾಗುತ್ತೀರಿ. ಇದು ಬುದ್ಧಿಯಲ್ಲಿ ಜ್ಞಾನವಿದೆ. ಎಲ್ಲರಿಗೂ ತಿಳಿಸಬೇಕಾಗಿದೆ, ನಾವು ಪತಿತರಾಗಿದ್ದೇವೆ ಎಂದು ಕರೆಯುತ್ತಾರೆ ಅಂದಮೇಲೆ ಹೊಸ ಪ್ರಪಂಚವು ಖಂಡಿತ ಪಾವನವಾಗಿರುವುದು. ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಅವರನ್ನೇ ಪತಿತ-ಪಾವನ ತಂದೆಯೆಂದು ಹೇಳಿ ಕರೆಯುತ್ತಾರೆ. ಪತಿತ-ಪಾವನ, ಜೊತೆಯಲ್ಲಿ ಅವರಿಗೆ ತಂದೆಯೆಂದು ಹೇಳುತ್ತಾರೆ. ತಂದೆಯನ್ನು ಆತ್ಮರು ಕರೆಯುತ್ತೀರಿ, ಶರೀರವು ಕರೆಯುವುದಿಲ್ಲ. ನಾವಾತ್ಮರ ತಂದೆಯು ಪಾರಲೌಕಿಕನಾಗಿದ್ದಾರೆ. ಅವರೇ ಪತಿತ-ಪಾವನನಾಗಿದ್ದಾರೆ. ಇದಂತೂ ಚೆನ್ನಾಗಿ ನೆನಪಿರಬೇಕು. ಇದು ಹೊಸ ಪ್ರಪಂಚವೇ ಅಥವಾ ಹಳೆಯ ಪ್ರಪಂಚವೇ ಎಂಬುದನ್ನಂತೂ ತಿಳಿದುಕೊಳ್ಳಬಹುದಲ್ಲವೆ. ಇಂತಹ ಮಂಧ ಬುದ್ಧಿಯವರೂ ಇದ್ದಾರೆ, ನಮಗೆ ಇಲ್ಲಿಯೇ ಅಪಾರ ಸುಖವಿದೆ. ನಾವು ಸ್ವರ್ಗದಲ್ಲಿ ಕುಳಿತಿದ್ದೇವೆಂದು ತಿಳಿಯುತ್ತಾರೆ ಆದರೆ ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಕಲಿಯುಗಕ್ಕೆ ಸ್ವರ್ಗವೆಂದು ಹೇಳಲು ಸಾಧ್ಯವಿಲ್ಲ. ಹೆಸರೇ ಆಗಿದೆ - ಕಲಿಯುಗ, ಹಳೆಯ ಪತಿತ ಪ್ರಪಂಚ. ಅಂತರವಿದೆಯಲ್ಲವೆ. ಮನುಷ್ಯರ ಬುದ್ಧಿಯಲ್ಲಿ ಇದೂ ಕುಳಿತುಕೊಳ್ಳುವುದಿಲ್ಲ, ಸಂಪೂರ್ಣ ಜಡಜಡೀಭೂತ ಸ್ಥಿತಿಯಾಗಿದೆ. ಮಕ್ಕಳು ಓದದೇ ಇದ್ದರೆ ನೀವು ಕಲ್ಲು ಬುದ್ಧಿಯವರಾಗಿದ್ದೀರಿ ಎಂದು ಹೇಳುತ್ತಾರಲ್ಲವೆ. ತಂದೆಯೂ ಸಹ ಬರೆಯುತ್ತಾರೆ - ನಿಮ್ಮ ಗ್ರಾಮದ ನಿವಾಸಿಗಳು ಬಹಳ ಕಲ್ಲು ಬುದ್ಧಿಯವರಾಗಿದ್ದಾರೆ, ತಿಳಿದುಕೊಳ್ಳುವುದೇ ಇಲ್ಲ ಏಕೆಂದರೆ ಅನ್ಯರಿಗೆ ತಿಳಿಸುವುದಿಲ್ಲ. ಸ್ವಯಂ ಪಾರಸ ಬುದ್ಧಿಯವರಾಗುತ್ತೀರೆಂದರೆ ಅನ್ಯರನ್ನೂ ಮಾಡಬೇಕು, ಪುರುಷಾರ್ಥ ಮಾಡಬೇಕಾಗಿದೆ, ಇದರಲ್ಲಿ ನಾಚಿಕೆ ಮುಂತಾದ ಮಾತಿಲ್ಲ. ಆದರೆ ಮನುಷ್ಯರ ಬುದ್ಧಿಯಲ್ಲಿ ಅರ್ಧ ಕಲ್ಪದಿಂದ ಉಲ್ಟಾ ಶಬ್ಧಗಳು ಬಿದ್ದಿರುವ ಕಾರಣ ಅದನ್ನು ಮರೆಯುತ್ತಿಲ್ಲ. ಹೇಗೆ ಮರೆಸುವುದು? ಅದೆಲ್ಲವನ್ನೂ ಮರೆಸುವ ಶಕ್ತಿಯೂ ಸಹ ಒಬ್ಬ ತಂದೆಯ ಬಳಿಯೇ ಇದೆ. ತಂದೆಯ ವಿನಃ ಮತ್ತ್ಯಾರೂ ಈ ಜ್ಞಾನ ಕೊಡಲು ಸಾಧ್ಯವಿಲ್ಲ ಅಂದಮೇಲೆ ಎಲ್ಲರೂ ಅಜ್ಞಾನಿಗಳಾದರು. ಅಂದಮೇಲೆ ಅವರಿಗೆ ಮತ್ತೆ ಜ್ಞಾನವೆಲ್ಲಿಂದ ಬರುವುದು? ಎಲ್ಲಿಯವರೆಗೆ ಜ್ಞಾನ ಸಾಗರ ತಂದೆಯು ಬಂದು ತಿಳಿಸುವುದಿಲ್ಲವೋ ಅಲ್ಲಿಯವರೆಗೂ ಜ್ಞಾನವು ಸಿಗುವುದಿಲ್ಲ. ತಮೋಪ್ರಧಾನರೆಂದರೆ ಅಜ್ಞಾನಿ ಪ್ರಪಂಚ, ಸತೋಪ್ರಧಾನರೆಂದರೆ ದೈವೀ ಪ್ರಪಂಚ. ಅಂತರವಂತೂ ಇದೆಯಲ್ಲವೆ. ದೇವಿ-ದೇವತೆಗಳೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ, ಕಾಲ ಚಕ್ರವೂ ಸುತ್ತುತ್ತಿರುತ್ತದೆ. ಬುದ್ಧಿಯೂ ಸಹ ನಿರ್ಬಲವಾಗುತ್ತಾ ಹೋಗುತ್ತದೆ. ಬುದ್ಧಿಯೋಗವನ್ನಿಡುವುದರಿಂದ ಯಾವ ಶಕ್ತಿಯು ಸಿಕ್ಕಿತೋ ಅದು ಮತ್ತೆ ಸಮಾಪ್ತಿಯಾಗಿ ಬಿಡುತ್ತದೆ.
ಈಗ ನಿಮಗೆ ತಂದೆಯು ತಿಳಿಸುತ್ತಾರೆ, ಆದ್ದರಿಂದ ನೀವು ಎಷ್ಟೊಂದು ರಿಫ್ರೆಷ್ ಆಗುತ್ತೀರಿ. ನೀವು ರಿಫ್ರೆಷ್ ಆಗಿದ್ದಿರಿ ಮತ್ತು ವಿಶ್ರಾಂತಿಯಲ್ಲಿದ್ದಿರಿ. ತಂದೆಯೂ ಸಹ ಬರೆದು ಕಳುಹಿಸುತ್ತಾರಲ್ಲವೆ - ಮಕ್ಕಳೇ, ಬಂದು ರಿಫ್ರೆಷ್ ಆಗಿ ಮತ್ತು ವಿಶ್ರಾಂತಿಯನ್ನು ಪಡೆಯಿರಿ. ರಿಫ್ರೆಷ್ ಆದ ನಂತರ ನೀವು ಸತ್ಯಯುಗದಲ್ಲಿ ವಿಶ್ರಾಮ ಪುರಿಯಲ್ಲಿ ಹೋಗುತ್ತೀರಿ. ಅಲ್ಲಿ ನಿಮಗೆ ಬಹಳ ವಿಶ್ರಾಂತಿಯು ಸಿಗುತ್ತದೆ. ಅಲ್ಲಿ ಸುಖ, ಶಾಂತಿ, ಸಂಪತ್ತು ಇತ್ಯಾದಿಗಳೆಲ್ಲವೂ ಸಿಗುತ್ತದೆ ಅಂದಾಗ ತಂದೆಯ ಬಳಿ ರಿಫ್ರೆಷ್ ಆಗಲು, ವಿಶ್ರಾಂತಿ ಪಡೆಯಲು ಬರುತ್ತೀರಿ. ಶಿವ ತಂದೆಯು ನಿಮ್ಮನ್ನು ರಿಫ್ರೆಷ್ ಮಾಡುತ್ತಾರೆ. ತಂದೆಯ ಬಳಿ ವಿಶ್ರಾಂತಿಯನ್ನೂ ಪಡೆಯುತ್ತೀರಿ. ವಿಶ್ರಾಂತಿಯೆಂದರೆ ಶಾಂತಿಯೆಂದರ್ಥ. ಸುಸ್ತಾಗಿ ವಿಶ್ರಾಂತಿ ಪಡೆಯುತ್ತಾರಲ್ಲವೆ. ಕೆಲಕೆಲವರು ಕೆಲವೊಂದು ಕಡೆ ವಿಶ್ರಾಂತಿ ಪಡೆಯಲು ಹೋಗುತ್ತಾರೆ ಆದರೆ ಅದರಲ್ಲಿ ವಿಶ್ರಾಂತಿಯ ಮಾತೇ ಇರುವುದಿಲ್ಲ. ಇಲ್ಲಿ ನಿಮಗೆ ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ, ಆದ್ದರಿಂದ ನೀವಿಲ್ಲಿ ಬಂದು ರಿಫ್ರೆಷ್ ಆಗುತ್ತೀರಿ. ನೆನಪು ಮಾಡುವುದರಿಂದ ನೀವು ತಮೋಪ್ರಧಾನರಿಂದ ಸತೋ ಪ್ರಧಾನರಾಗುತ್ತೀರಿ. ಸತೋ ಪ್ರಧಾನರಾಗುವುದಕ್ಕಾಗಿಯೇ ನೀವಿಲ್ಲಿಗೆ ಬರುತ್ತೀರಿ. ಅದಕ್ಕಾಗಿ ಪುರುಷಾರ್ಥವೇನಾಗಿದೆ? ಮಧುರಾತಿ ಮಧುರ ಮಕ್ಕಳೇ, ತಂದೆಯನ್ನು ನೆನಪು ಮಾಡಿ. ತಂದೆಯು ಎಲ್ಲಾ ಶಿಕ್ಷಣವನ್ನು ಕೊಟ್ಟು ಬಿಟ್ಟಿದ್ದಾರೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ನಿಮಗೆ ವಿಶ್ರಾಂತಿಯು ಹೇಗೆ ಸಿಗುತ್ತದೆ. ಮತ್ತ್ಯಾರೂ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಆದ್ದರಿಂದ ಅವರಿಗೂ ತಿಳಿಸಿ ಕೊಡಬೇಕು ಆಗ ಅವರೂ ನಿಮ್ಮ ತರಹ ರಿಫ್ರೆಷ್ ಆಗಲಿ. ಎಲ್ಲರಿಗೆ ಸಂದೇಶ ಕೊಡುವುದೇ ನಿಮ್ಮ ಕರ್ತವ್ಯವಾಗಿದೆ. ಅವಿನಾಶಿ ರಿಫ್ರೆಷ್ ಆಗಬೇಕಾಗಿದೆ. ಅವಿನಾಶಿ ವಿಶ್ರಾಂತಿಯನ್ನು ಪಡೆಯಬೇಕಾಗಿದೆ. ಎಲ್ಲರಿಗೆ ಇದೇ ಸಂದೇಶ ಕೊಡಿ, ಇದೇ ನೆನಪನ್ನು ತರಿಸಿ - ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಇದು ಬಹಳ ಸಹಜ ಮಾತಾಗಿದೆ. ಬೇಹದ್ದಿನ ತಂದೆಯು ಸ್ವರ್ಗವನ್ನು ರಚಿಸುತ್ತಾರೆ. ಸ್ವರ್ಗದ ಆಸ್ತಿಯನ್ನೇ ಕೊಡುತ್ತಾರೆ. ನೀವೀಗ ಸಂಗಮಯುಗದಲ್ಲಿದ್ದೀರಿ. ಮಾಯೆಯ ಶಾಪ ಮತ್ತು ತಂದೆಯ ಆಸ್ತಿಯನ್ನು ನೀವು ತಿಳಿದುಕೊಂಡಿದ್ದೀರಿ. ಯಾವಾಗ ಮಾಯಾ ರಾವಣನ ಶಾಪ ಸಿಗುವುದೋ ಆಗ ಪವಿತ್ರತೆಯೂ ಸಮಾಪ್ತಿ, ಸುಖ-ಶಾಂತಿಯೂ ಸಮಾಪ್ತಿ, ಧನವೂ ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಕ್ರಮೇಣವಾಗಿ ಸಮಾಪ್ತಿಯಾಗುತ್ತದೆ ಎಂಬುದನ್ನೂ ಸಹ ತಂದೆಯು ತಿಳಿಸಿದ್ದಾರೆ. ಎಷ್ಟು ಜನ್ಮಗಳು ಹಿಡಿಸುತ್ತವೆ, ದುಃಖಧಾಮದಲ್ಲಿ ಯಾವುದೇ ವಿಶ್ರಾಂತಿಯಿರುವುದಿಲ್ಲ, ಸುಖಧಾಮದಲ್ಲಿ ವಿಶ್ರಾಂತಿಯೇ ವಿಶ್ರಾಂತಿಯಿರುವುದು. ಮನುಷ್ಯರನ್ನು ಭಕ್ತಿಯು ಎಷ್ಟೊಂದು ಸುಸ್ತು ಮಾಡಿ ಬಿಡುತ್ತದೆ. ಜನ್ಮ-ಜನ್ಮಾಂತರ ಭಕ್ತಿಯು ಸುಸ್ತು ಮಾಡಿ ಬಿಡುತ್ತದೆ, ಕಂಗಾಲರನ್ನಾಗಿ ಮಾಡಿ ಬಿಡುತ್ತದೆ. ಇದನ್ನೂ ಸಹ ಈಗ ನಿಮಗೆ ತಂದೆಯು ತಿಳಿಸುತ್ತಾರೆ – ಹೊಸ ಹೊಸಬರು ಬಂದರೆ ಎಷ್ಟೊಂದು ತಿಳಿಸಬೇಕಾಗಿದೆ! ಪ್ರತಿಯೊಂದು ಮಾತಿನ ಮೇಲೆ ಮನುಷ್ಯರು ಬಹಳ ಆಲೋಚಿಸುತ್ತಾರೆ. ಎಲ್ಲಿಯೂ ಜಾದುವಾಗದಿರಲಿ ಎಂದು ತಿಳಿಯುತ್ತಾರೆ. ಅರೆ! ನೀವು ಭಗವಂತನಿಗೆ ಜಾದೂಗಾರನೆಂದು ಹೇಳುತ್ತೀರಿ ಅಂದಾಗ ನಾನೂ ಸಹ ಹೇಳುತ್ತೇನೆ - ಜಾದೂಗಾರನಾಗಿದ್ದೇನೆ ಆದರೆ ಇದು ಕುರಿ-ಮೇಕೆಯನ್ನಾಗಿ ಮಾಡಿ ಬಿಡುವ ಆ ಜಾದುವಲ್ಲ. ಪ್ರಾಣಿಗಳಂತೂ ಅಲ್ಲ ಅಲ್ಲವೆ. ಸುರಮಂಡಲ ಸಂಗೀತದಿಂದ...... ಎಂದು ಗಾಯನವೂ ಇದೆ. ಈ ಸಮಯದಲ್ಲಿ ಮನುಷ್ಯರು ಕುರಿಗಳಂತಾಗಿದ್ದಾರೆ. ಈ ಮಾತುಗಳು ಈ ಸಮಯಕ್ಕಾಗಿಯೇ ಸಲ್ಲುತ್ತವೆ. ಸತ್ಯಯುಗದಲ್ಲಿ ಹಾಡುವುದಿಲ್ಲ, ಈ ಸಮಯದ್ದೇ ಗಾಯನವಿದೆ. ಚಂಡಿಕಾ ದೇವಿಯ ಎಷ್ಟೊಂದು ಮೇಳವಾಗುತ್ತದೆ. ಅವರು ಯಾರಾಗಿದ್ದರು? ಎಂದು ಕೇಳಿರಿ ಆಗ ದೇವಿ ಎಂದು ಹೇಳುತ್ತಾರೆ. ಆದರೆ ಇಂತಹ ಹೆಸರುಗಳಂತೂ ಸತ್ಯಯುಗದಲ್ಲಿರುವುದಿಲ್ಲ, ಸತ್ಯಯುಗದಲ್ಲಿ ಸದಾ ಶುಭ ಹೆಸರುಗಳಿರುತ್ತವೆ – ಶ್ರೀ ರಾಮ ಚಂದ್ರ, ಶ್ರೀ ಕೃಷ್ಣ.... ಶ್ರೀ ಎಂದು ಶ್ರೇಷ್ಠರಿಗೇ ಹೇಳಲಾಗುವುದು. ಸತ್ಯಯುಗೀ ಸಂಪ್ರದಾಯಕ್ಕೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಕಲಿಯುಗೀ ವಿಕಾರೀ ಸಂಪ್ರದಾಯದವರಿಗೆ ಶ್ರೇಷ್ಠರೆಂದು ಹೇಗೆ ಹೇಳುವರು! ಶ್ರೀ ಎಂದರೆ ಶ್ರೇಷ್ಠ. ಈಗಿನ ಮನುಷ್ಯರಂತೂ ಶ್ರೇಷ್ಠರಲ್ಲ. ಮನುಷ್ಯರಿಂದ ದೇವತೆಯನ್ನಾಗಿ ಮಾಡಿದರು..... ಎಂದು ಗಾಯನವಿದೆ. ಮತ್ತೆ ದೇವತೆಗಳಿಂದ ಮನುಷ್ಯರಾಗುತ್ತಾರೆ ಏಕೆಂದರೆ ಪಂಚ ವಿಕಾರಗಳಲ್ಲಿ ಹೋಗುತ್ತಾರೆ. ರಾವಣ ರಾಜ್ಯದಲ್ಲಿ ಎಲ್ಲರೂ ಮನುಷ್ಯರೇ ಮನುಷ್ಯರಾಗಿದ್ದಾರೆ. ಸತ್ಯಯುಗದಲ್ಲಿ ದೇವತೆಗಳಿರುತ್ತಾರೆ. ಅದಕ್ಕೆ ದೈವೀ ಪ್ರಪಂಚ, ಇದಕ್ಕೆ ಮಾನವ ಜಗತ್ತೆಂದು ಹೇಳಲಾಗುತ್ತದೆ. ದೈವೀ ಜಗತ್ತಿಗೆ ದಿನವೆಂದು, ಮಾನವ ಜಗತ್ತಿಗೆ ರಾತ್ರಿಯೆಂದು ಹೇಳಲಾಗುತ್ತದೆ. ಪ್ರಕಾಶಕ್ಕೆ ದಿನವೆಂದು ಹೇಳಲಾಗುವುದು. ಅಜ್ಞಾನ ಅಂಧಕಾರಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ಈ ಅಂತರವನ್ನು ನೀವು ತಿಳಿದುಕೊಂಡಿದ್ದೀರಿ. ನೀವು ತಿಳಿದುಕೊಳ್ಳುತ್ತೀರಿ - ಮೊದಲು ನಮಗೆ ಏನೂ ತಿಳಿದಿರಲಿಲ್ಲ, ಈಗ ಎಲ್ಲಾ ಮಾತುಗಳು ಬುದ್ಧಿಯಲ್ಲಿದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಾ ಎಂದು ಋಷಿ-ಮುನಿಗಳೊಂದಿಗೆ ಕೇಳಿದಾಗ ನೇತಿ-ನೇತಿ ಅರ್ಥಾತ್ ನಮಗೂ ಗೊತ್ತಿಲ್ಲವೆಂದು ಹೇಳಿ ಹೋದರು. ನೀವೂ ಸಹ ಈಗ ತಿಳಿದುಕೊಳ್ಳುತ್ತೀರಿ - ನಾವು ಮೊದಲು ನಾಸ್ತಿಕರಾಗಿದ್ದೆವು, ಬೇಹದ್ದಿನ ತಂದೆಯನ್ನು ತಿಳಿದುಕೊಂಡಿರಲಿಲ್ಲ. ಅವರು ಮೂಲತಃ ಅವಿನಾಶಿ ತಂದೆ, ಆತ್ಮಗಳ ತಂದೆಯಾಗಿದ್ದಾರೆ. ನಾವು ಆ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಯಾರು ಎಂದೂ ಸುಡುವುದಿಲ್ಲ. ಇಲ್ಲಂತೂ ಎಲ್ಲರೂ ಸುಟ್ಟು ಹೋಗುತ್ತಾರೆ. ರಾವಣನನ್ನೂ ಸುಡುತ್ತಾರೆ. ಶರೀರವಿದೆಯಲ್ಲವೆ. ಆತ್ಮವನ್ನಂತೂ ಎಂದೂ ಯಾರೂ ಸುಡಲು ಸಾಧ್ಯವಿಲ್ಲ ಅಂದಾಗ ತಂದೆಯು ಮಕ್ಕಳಿಗೆ ಈ ಗುಪ್ತ ಜ್ಞಾನವನ್ನು ತಿಳಿಸುತ್ತಾರೆ, ಇದು ತಂದೆಯ ಬಳಿಯೇ ಇದೆ. ಈ ಆತ್ಮನಲ್ಲಿಯೂ ಗುಪ್ತ ಜ್ಞಾನವಿದೆ, ಆತ್ಮವೂ ಗುಪ್ತವಾಗಿದೆ, ಈ ಬಾಯಿಯ ಮೂಲಕ ಮಾತನಾಡುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹಾಭಿಮಾನಿಗಳಾಗಬೇಡಿ, ಆತ್ಮಾಭಿಮಾನಿಯಾಗಿ. ಏಕೆ ತಲೆ ಕೆಳಗಾಗುತ್ತೀರಿ! ತಮ್ಮನ್ನು ಆತ್ಮನೆಂಬುದೇ ಮರೆತು ಹೋಗುತ್ತೀರಿ. ಡ್ರಾಮಾದ ರಹಸ್ಯವನ್ನೂ ಸಹ ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಡ್ರಾಮಾದಲ್ಲಿ ಯಾವುದು ನಿಗಧಿಯಾಗಿದೆಯೋ ಅದು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ, ಇದು ಯಾರಿಗೂ ತಿಳಿದಿಲ್ಲ. ಡ್ರಾಮಾನುಸಾರ ಕ್ಷಣ-ಪ್ರತಿಕ್ಷಣ ಹೇಗೆ ನಡೆಯುತ್ತಿರುತ್ತದೆ ಎಂಬ ಜ್ಞಾನವೂ ಸಹ ನಿಮ್ಮ ಬುದ್ಧಿಯಲ್ಲಿದೆ. ಆಕಾಶದ ಅಂತ್ಯವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಧರಣಿಯ ಅಂತ್ಯವನ್ನು ಪಡೆಯಬಹುದು, ಧರಣಿಯು ಸ್ಥೂಲವಾಗಿದೆ, ಆಕಾಶವು ಸೂಕ್ಷ್ಮವಾಗಿದೆ. ಕೆಲವೊಂದು ವಸ್ತುಗಳ ಅಂತ್ಯವನ್ನು ಪಡೆಯಲು ಸಾಧ್ಯವಿಲ್ಲ. ಆಕಾಶವೇ ಆಕಾಶ, ಪಾತಾಳವೇ ಪಾತಾಳವೆಂಬುದನ್ನು ಶಾಸ್ತ್ರಗಳಲ್ಲಿ ಕೇಳಿರುವ ಕಾರಣ ಮೇಲಕ್ಕೆ ಹೋಗಿಯೂ ನೋಡುತ್ತಾರೆ. ಅಲ್ಲಿಯೂ ಜಗತ್ತನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಾರೆ. ವಿಶ್ವವನ್ನು ಬಹಳ ವಿಸ್ತಾರ ಮಾಡಿದ್ದಾರಲ್ಲವೆ. ಭಾರತದಲ್ಲಿ ಕೇವಲ ಒಂದೇ ದೇವಿ-ದೇವತಾ ಧರ್ಮವಿತ್ತು, ಮತ್ತ್ಯಾವ ಖಂಡಗಳೂ ಇರಲಿಲ್ಲ ನಂತರದಲ್ಲಿ ಎಷ್ಟೊಂದು ವೃದ್ಧಿ ಮಾಡಿದ್ದಾರೆ, ನೀವು ವಿಚಾರ ಮಾಡಿ. ಭಾರತದ ಎಷ್ಟು ಚಿಕ್ಕ ಭಾಗದಲ್ಲಿ ದೇವತೆಗಳಿರುತ್ತಾರೆ. ಜಮುನಾ ನದಿಯ ತೀರವಿರುತ್ತದೆ. ದೆಹಲಿಯು ಪರಿಸ್ತಾನವಾಗಿತ್ತು, ಈಗ ಇದಕ್ಕೆ ಸ್ಮಶಾನವೆಂದು ಹೇಳಲಾಗುತ್ತದೆ ಎಲ್ಲಿ ಅಕಾಲ ಮೃತ್ಯುಗಳಾಗುತ್ತಿರುತ್ತವೆ. ಅಮರ ಲೋಕಕ್ಕೆ ಪರಿಸ್ತಾನವೆಂದು ಕರೆಯಲಾಗುವುದು. ಅಲ್ಲಿ ಬಹಳ ಸ್ವಾಭಾವಿಕ ಸೌಂದರ್ಯವಿರುತ್ತದೆ. ವಾಸ್ತವದಲ್ಲಿ ಭಾರತಕ್ಕೆ ಪರಿಸ್ತಾನವೆಂದು ಹೇಳುತ್ತಿದ್ದರು. ಈ ಲಕ್ಷ್ಮೀ-ನಾರಾಯಣರು ಪರಿಸ್ತಾನದ ಮಾಲೀಕರಲ್ಲವೆ. ಎಷ್ಟೊಂದು ಶೋಭಾಯಮಾನವಾಗಿದ್ದಾರೆ! ಸತೋಪ್ರಧಾನರಲ್ಲವೆ. ಸ್ವಾಭಾವಿಕ ಸೌಂದರ್ಯವಿತ್ತು, ಆತ್ಮವೂ ಸಹ ಹೊಳೆಯುತ್ತಿರುತ್ತದೆ. ಕೃಷ್ಣನ ಜನ್ಮವು ಹೇಗಾಗುತ್ತದೆಯೆಂದು ಮಕ್ಕಳಿಗೆ ತೋರಿಸಲಾಗಿತ್ತು. ಕೃಷ್ಣನ ಜನ್ಮವಾದಾಗ ಇಡೀ ಕೋಣೆಯಲ್ಲಿಯೇ ಚಮತ್ಕಾರವಾಗಿ ಬಿಡುತ್ತದೆ! ಅಂದಾಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವೀಗ ಪರಿಸ್ತಾನದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ನಂಬರ್‍ವಾರಂತೂ ಅವಶ್ಯವಾಗಿ ಬೇಕು. ಎಲ್ಲರೂ ಒಂದೇ ರೀತಿಯಾಗಲು ಸಾಧ್ಯವಿಲ್ಲ. ವಿಚಾರ ಮಾಡಿ, ಇಷ್ಟು ಚಿಕ್ಕ ಆತ್ಮವು ಎಷ್ಟು ದೊಡ್ಡ ಪಾತ್ರವನ್ನಭಿನಯಿಸುತ್ತದೆ. ಆತ್ಮವು ಶರೀರದಿಂದ ಹೊರಗೆ ಹೋದಾಗ ಶರೀರದ ಗತಿಯೇನಾಗುತ್ತದೆ! ಇಡೀ ಪ್ರಪಂಚದ ಪಾತ್ರಧಾರಿಗಳು ಅದೇ ಪಾತ್ರವನ್ನು ಅಭಿನಯಿಸುತ್ತಾರೆ ಯಾವುದು ಅನಾದಿಯಾಗಿ ಮಾಡಲ್ಪಟ್ಟಿದೆ. ಈ ಸೃಷ್ಟಿಯೂ ಅನಾದಿಯಾಗಿದೆ, ಇದರಲ್ಲಿ ಪ್ರತಿಯೊಬ್ಬರ ಪಾತ್ರವೂ ಅನಾದಿಯಾಗಿದೆ. ಯಾವಾಗ ಈ ಸೃಷ್ಟಿಯು ಒಂದು ವೃಕ್ಷವಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರೋ ಆಗ ಅದನ್ನು ನೀವು ಅದ್ಭುತವೆಂದು ಹೇಳುತ್ತೀರಿ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಡ್ರಾಮಾದಲ್ಲಿ ಯಾರಿಗಾಗಿ ಎಷ್ಟು ಸಮಯವಿದೆಯೋ ಅಷ್ಟನ್ನೇ ತಿಳಿದುಕೊಳ್ಳುವುದರಲ್ಲಿ ಸಮಯ ಕೊಡುತ್ತಾರೆ. ಬುದ್ಧಿಯಲ್ಲಿಯೂ ಅಂತರವಿದೆಯಲ್ಲವೆ. ಆತ್ಮವು ಮನ-ಬುದ್ಧಿ ಸಹಿತವಾಗಿದೆ. ಅಂದಾಗ ಎಷ್ಟೊಂದು ಅಂತರವಿರುತ್ತದೆ! ಮಕ್ಕಳಿಗೆ ಅರ್ಥವಾಗುತ್ತದೆ - ನಾವು ಸ್ಕಾಲರ್‍ಶಿಪ್ ತೆಗೆದುಕೊಳ್ಳಬೇಕಾಗಿದೆ. ಅಂದಮೇಲೆ ಹೃದಯದಲ್ಲಿ ಖುಷಿಯಾಗುತ್ತದೆಯಲ್ಲವೆ. ಇಲ್ಲಿಗೆ ಬರುತ್ತಿದ್ದಂತೆಯೇ ಗುರಿ-ಧ್ಯೇಯವು ಸನ್ಮುಖದಲ್ಲಿ ನೋಡಿದಾಗ ಖಂಡಿತ ಖುಷಿಯಾಗುವುದಲ್ಲವೆ. ನಾವು ಈ ರೀತಿಯಾಗುವುದಕ್ಕಾಗಿ ಇಲ್ಲಿಗೆ ಓದಲು ಬಂದಿದ್ದೇವೆಂದು ನೀವೀಗ ತಿಳಿದುಕೊಂಡಿದ್ದೀರಿ. ಇಲ್ಲವೆಂದರೆ ಯಾರೂ ಇಲ್ಲಿಗೆ ಬರಲು ಸಾಧ್ಯವಿಲ್ಲ. ಇದು ಗುರಿ-ಧ್ಯೇಯವಾಗಿದೆ. ಇನ್ನೊಂದು ಜನ್ಮದ ಗುರಿ-ಧ್ಯೇಯವನ್ನು ನೋಡುವಂತಹ ಈ ರೀತಿಯ ಶಾಲೆಯು ಮತ್ತೆಲ್ಲಿಯೂ ಇರುವುದಿಲ್ಲ. ನೀವು ನೋಡುತ್ತಿದ್ದೀರಿ - ಇವರು ಸ್ವರ್ಗದ ಮಾಲೀಕರಾಗಿದ್ದಾರೆ, ನಾವೇ ಈ ರೀತಿಯಾಗಲಿದ್ದೇವೆ. ನಾವೀಗ ಸಂಗಮಯುಗದಲ್ಲಿದ್ದೇವೆ. ಆ ರಾಜಧಾನಿಯವರೂ ಅಲ್ಲ, ಈ ರಾಜಧಾನಿಯವರೂ ಅಲ್ಲ, ನಾವು ಮಧ್ಯದಲ್ಲಿದ್ದೇವೆ ಹೋಗುತ್ತಿದ್ದೇವೆ. ಅಂಬಿಗನು (ತಂದೆ) ನಿರಾಕಾರನಾಗಿದ್ದಾರೆ, ದೋಣಿಯೂ (ಆತ್ಮ) ನಿರಾಕಾರಿಯಾಗಿದೆ. ದೋಣಿಯನ್ನು ಎಳೆದು ಪರಮಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಿರಾಕಾರಿ ತಂದೆಯು ನಿರಾಕಾರಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ತಂದೆಯೇ ಮಕ್ಕಳನ್ನು ಜೊತೆ ಕರೆದುಕೊಂಡು ಹೋಗುವರು. ಈ ಚಕ್ರವು ಪೂರ್ಣವಾಗುತ್ತದೆ ಮತ್ತೆ ಚಾಚೂ ತಪ್ಪದೆ ಪುನರಾವರ್ತನೆ ಮಾಡಬೇಕಾಗಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೀರಿ. ಚಿಕ್ಕವರಾಗಿ ಮತ್ತು ಬೆಳೆದು ದೊಡ್ಡವರಾಗುತ್ತೀರಿ. ಹೇಗೆ ಮಾವಿನ ಬೀಜವನ್ನು ಜಮೀನಿನಲ್ಲಿ ಹಾಕಿದಾಗ ಅದರಿಂದ ಮತ್ತೆ ಮಾವು ಬರುತ್ತದೆ, ಅದು ಹದ್ದಿನ ವೃಕ್ಷವಾಗಿದೆ. ಇದು ಮನುಷ್ಯ ಸೃಷ್ಟಿರೂಪಿ ವೃಕ್ಷವಾಗಿದೆ, ಇದಕ್ಕೆ ವಿಭಿನ್ನ ವೃಕ್ಷವೆಂದು ಹೇಳಲಾಗುತ್ತದೆ. ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೆ ಎಲ್ಲರೂ ಪಾತ್ರವನ್ನಭಿನಯಿಸುತ್ತಿರುತ್ತಾರೆ. ಅವಿನಾಶಿ ಆತ್ಮವು 84 ಜನ್ಮಗಳ ಚಕ್ರದ ಪಾತ್ರವನ್ನಭಿನಯಿಸುತ್ತದೆ. ಲಕ್ಷ್ಮೀ-ನಾರಾಯಣರಿದ್ದರು, ಅವರು ಈಗಿಲ್ಲ. ಚಕ್ರವನ್ನು ಸುತ್ತಿ ಈಗ ಪುನಃ ಆ ರೀತಿಯಾಗುತ್ತೀರಿ. ಮೊದಲು ಈ ಲಕ್ಷ್ಮೀ-ನಾರಾಯಣರಿದ್ದರು ಎಂದು ಹೇಳುತ್ತಾರೆ. ಅವರದು ಇದು ಅಂತಿಮ ಜನ್ಮವಾಗಿದೆ. ಬ್ರಹ್ಮಾ-ಸರಸ್ವತಿ ಎಲ್ಲರೂ ಹಿಂತಿರುಗಿ ಅವಶ್ಯವಾಗಿ ಹೋಗಬೇಕಾಗಿದೆ. ಸ್ವರ್ಗದಲ್ಲಂತೂ ಇಷ್ಟೊಂದು ಮನುಷ್ಯರಿರಲಿಲ್ಲ. ಇಸ್ಲಾಮಿಗಳಾಗಲಿ, ಬೌದ್ಧಿಯರಾಗಲಿ ಇರಲಿಲ್ಲ. ದೇವಿ-ದೇವತೆಗಳ ಹೊರತು ಮತ್ತ್ಯಾವುದೇ ಧರ್ಮದ ಪಾತ್ರಧಾರಿಗಳಿರಲಿಲ್ಲ, ಈ ತಿಳುವಳಿಕೆಯು ಯಾರಲ್ಲಿಯೂ ಇಲ್ಲ. ಬುದ್ಧಿವಂತರಿಗೆ ಬಿರುದು ಸಿಗಬೇಕಲ್ಲವೆ. ಯಾರೆಷ್ಟು ಓದುವರೋ ನಂಬರ್‍ವಾರ್ ಪುರುಷಾರ್ಥದಿಂದ ಪದವಿಯನ್ನು ಪಡೆಯುತ್ತಾರೆ ಅಂದಾಗ ನೀವು ಮಕ್ಕಳಿಗೆ ಇಲ್ಲಿಗೆ ಬರುತ್ತಿದ್ದಂತೆಯೇ ಈ ಗುರಿ-ಧ್ಯೇಯವನ್ನು ನೋಡಿ ಖುಷಿಯಾಗಬೇಕು. ಖುಷಿಗೆ ಪಾರವೇ ಇಲ್ಲ. ಪಾಠಶಾಲೆ ಅಥವಾ ಶಾಲೆಯಿದ್ದರೆ ಈ ರೀತಿಯಿರಬೇಕು. ಎಷ್ಟು ಗುಪ್ತವಾಗಿದೆ ಆದರೆ ಎಷ್ಟು ದೊಡ್ಡ ಪಾಠಶಾಲೆಯಾಗಿದೆ. ಎಷ್ಟು ದೊಡ್ಡ ವಿದ್ಯೆಯೋ ಅಷ್ಟು ದೊಡ್ಡ ಕಾಲೇಜು. ಅಲ್ಲಿ ಎಲ್ಲಾ ಸವಲತ್ತುಗಳಿರುತ್ತವೆ. ಆತ್ಮವಂತೂ ಓದಬೇಕಾಗಿದೆ, ಅದು ಬೇಕೆಂದರೆ ಚಿನ್ನದ ಸಿಂಹಾಸನವನ್ನಾದರೂ ಏರಬಹುದು ಅಥವಾ ಕಟ್ಟಿಗೆಯ ಸಿಂಹಾಸನವನ್ನಾದರೂ ಏರಬಹುದು. ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು ಏಕೆಂದರೆ ಶಿವ ಭಗವಾನುವಾಚ ಇದೆಯಲ್ಲವೆ. ಕೃಷ್ಣನು ಮೊದಲ ನಂಬರಿನ ರಾಜಕುಮಾರನಾಗಿದ್ದಾನೆ, ಮಕ್ಕಳಿಗೆ ಈಗ ಅರ್ಥವಾಗಿದೆ - ಕಲ್ಪ-ಕಲ್ಪವೂ ತಂದೆಯೇ ಬಂದು ತಮ್ಮ ಪರಿಚಯ ಕೊಡುತ್ತಾರೆ. ನಾನು ಇವರಲ್ಲಿ ಪ್ರವೇಶ ಮಾಡಿ ನೀವು ಮಕ್ಕಳಿಗೆ ಓದಿಸುತ್ತಿದ್ದೇನೆ. ದೇವತೆಗಳಲ್ಲಿ ಈ ಜ್ಞಾನವಿರುವುದಿಲ್ಲ. ಜ್ಞಾನದಿಂದ ದೇವತೆಗಳಾದ ಮೇಲೆ ಮತ್ತೆ ವಿದ್ಯೆಯ ಅವಶ್ಯಕತೆಯಿರುವುದಿಲ್ಲ. ಇದರಲ್ಲಿ ತಿಳಿದುಕೊಳ್ಳುವ ಬಹಳ ವಿಶಾಲ ಬುದ್ಧಿಯು ಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಬುದ್ಧಿಯಿಂದ ಈ ಪತಿತ ಪ್ರಪಂಚದ ಸನ್ಯಾಸ ಮಾಡಿ ಹಳೆಯ ದೇಹ ಮತ್ತು ದೇಹದ ಸಂಬಂಧಗಳನ್ನು ಮರೆತು ತಮ್ಮ ಬುದ್ಧಿಯನ್ನು ತಂದೆ ಮತ್ತು ಸ್ವರ್ಗದ ಕಡೆ ಇಡಬೇಕಾಗಿದೆ.
2. ಅವಿನಾಶಿ ವಿಶ್ರಾಂತಿಯ ಅನುಭವ ಮಾಡಲು ತಂದೆ ಮತ್ತು ಆಸ್ತಿಯ ಸ್ಮೃತಿಯಲ್ಲಿರಬೇಕಾಗಿದೆ. ಎಲ್ಲರಿಗೆ ತಂದೆಯ ಸಂದೇಶ ನೀಡಿ ರಿಫ್ರೆಷ್ ಮಾಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ ಸಂಕೋಚ ಪಡಬಾರದು.
ಓಂ ಶಾಂತಿ. ಮಕ್ಕಳು ಮೊಟ್ಟ ಮೊದಲಿಗೆ ಒಂದೇ ಮಾತನ್ನು ತಿಳಿದುಕೊಳ್ಳಬೇಕಾಗಿದೆ - ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಮತ್ತು ಅವರು ಎಲ್ಲರ ತಂದೆಯಾಗಿದ್ದಾರೆ. ಅವರಿಗೆ ಸರ್ವಶಕ್ತಿವಂತನೆಂದು ಹೇಳಲಾಗುತ್ತದೆ. ನಿಮ್ಮಲ್ಲಿಯೂ ಸರ್ವಶಕ್ತಿಗಳಿತ್ತು, ನೀವು ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದಿರಿ. ಭಾರತದಲ್ಲಿಯೇ ಈ ದೇವಿ-ದೇವತೆಗಳ ರಾಜ್ಯವಿತ್ತು ಅಂದರೆ ನೀವು ಮಕ್ಕಳ ರಾಜ್ಯವಿತ್ತು, ನೀವು ಪವಿತ್ರ ದೇವಿ-ದೇವತೆಗಳಾಗಿದ್ದಿರಿ, ನಿಮ್ಮ ಕುಲ ಅಥವಾ ರಾಜಧಾನಿಯಿತ್ತು, ಎಲ್ಲರೂ ನಿರ್ವಿಕಾರಿಗಳಾಗಿದ್ದರು. ಯಾರು ನಿರ್ವಿಕಾರಿಯಾಗಿದ್ದರು? ಆತ್ಮರು. ಈಗ ಪುನಃ ನೀವು ನಿರ್ವಿಕಾರಿಗಳಾಗುತ್ತಿದ್ದೀರಿ. ಸರ್ವಶಕ್ತಿವಂತ ತಂದೆಯನ್ನು ನೆನಪು ಮಾಡಿ ಅವರಿಂದ ಶಕ್ತಿಯನ್ನು ಪಡೆಯುತ್ತಿದ್ದೀರಿ. ತಂದೆಯೇ ತಿಳಿಸಿದ್ದಾರೆ - ಆತ್ಮವೇ 84 ಜನ್ಮಗಳ ಪಾತ್ರವನ್ನಭಿನಯಿಸುತ್ತದೆ, ಅದರಲ್ಲಿ ಯಾವ ಸತೋಪ್ರಧಾನ ಶಕ್ತಿಯಿತ್ತೋ ಅದು ದಿನ-ಪ್ರತಿದಿನ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಸತೋಪ್ರಧಾನರಿಂದ ತಮೋಪ್ರಧಾನರಾಗುವರು. ಹೇಗೆ ಬ್ಯಾಟರಿಯ ಶಕ್ತಿಯು ಕಡಿಮೆಯಾಗುತ್ತಾ ಹೋದಂತೆ ವಾಹನವು ನಿಂತು ಹೋಗುತ್ತದೆ, ಬ್ಯಾಟರಿಯು ಡಿಸ್‍ಚಾರ್ಜ್ ಆಗುತ್ತದೆ. ಆತ್ಮದ ಬ್ಯಾಟರಿಯು ಫುಲ್ ಡಿಸ್‍ಚಾರ್ಜ್ ಆಗುವುದಿಲ್ಲ, ಅಲ್ಪಸ್ವಲ್ಪ ಶಕ್ತಿಯು ಉಳಿದಿರುತ್ತದೆ. ಹೇಗೆ ಯಾರಾದರೂ ಮರಣ ಹೊಂದಿದಾಗ ದೀಪ ಬೆಳಗಿಸುತ್ತಾರೆ, ಜ್ಯೋತಿಯು ನಂದಿ ಹೋಗದಿರಲೆಂದು ಅದರಲ್ಲಿ ಎಣ್ಣೆಯನ್ನು ಹಾಕುತ್ತಾ ಇರುತ್ತಾರೆ. ಬ್ಯಾಟರಿಯ ಶಕ್ತಿಯು ಕಡಿಮೆಯಾದಾಗ ಮತ್ತೆ ಚಾರ್ಜ್ ಮಾಡಲು ಇಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನೀವಾತ್ಮರು ಸರ್ವಶಕ್ತಿವಂತರಾಗಿದ್ದಿರಿ, ಈಗ ಮತ್ತೆ ನೀವು ಸರ್ವಶಕ್ತಿವಂತ ತಂದೆಯೊಂದಿಗೆ ತಮ್ಮ ಬುದ್ಧಿಯೋಗವನ್ನಿಡುತ್ತೀರಿ. ಅದರಿಂದ ತಂದೆಯ ಶಕ್ತಿಯು ನಮ್ಮಲ್ಲಿ ಬಂದು ಬಿಡಲಿ ಎಂದು, ಏಕೆಂದರೆ ಶಕ್ತಿಯು ಕಡಿಮೆಯಾಗಿ ಬಿಟ್ಟಿದೆ. ಅವಶ್ಯವಾಗಿ ಅಲ್ಪಸ್ವಲ್ಪ ಉಳಿದಿರುತ್ತದೆ ಅದು ಸಂಪೂರ್ಣ ಸಮಾಪ್ತಿಯಾಗಿ ಬಿಟ್ಟರೆ ಮತ್ತೆ ಶರೀರವೇ ಇರುವುದಿಲ್ಲ. ಆತ್ಮವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಈಗ ಸಂಪೂರ್ಣ ಪವಿತ್ರವಾಗಿ ಬಿಡುತ್ತದೆ. ಸತ್ಯಯುಗದಲ್ಲಿ ನಿಮ್ಮ ಬ್ಯಾಟರಿಯು ಪೂರ್ಣ ಚಾರ್ಜ್ ಆಗುತ್ತದೆ. ಮತ್ತೆ ಸ್ವಲ್ಪ-ಸ್ವಲ್ಪವಾಗಿಯೇ ಕಡಿಮೆಯಾಗುತ್ತಾ ಹೋಗುತ್ತದೆ. ತ್ರೇತಾಯುಗಕ್ಕೆ ಬರುವಷ್ಟರಲ್ಲಿ ಮೀಟರ್ ಕಡಿಮೆಯಾಗುತ್ತದೆ, ಅದಕ್ಕೆ ಕಲೆಗಳು ಎಂದು ಹೇಳಲಾಗುತ್ತದೆ. ಆತ್ಮ ಯಾವುದು ಸತೋಪ್ರಧಾನವಾಗಿತ್ತು ಅದು ಸತೋ ಆಯಿತು ಎಂದು ಹೇಳುತ್ತಾರೆ. ಅದರಲ್ಲಿನ ಶಕ್ತಿಯು ಕಡಿಮೆಯಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ನಾವು ಮನುಷ್ಯರಿಂದ ದೇವತೆಗಳಾಗಿ ಬಿಡುತ್ತೇವೆ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುವಿರಿ. ನೀವೀಗ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಆದ್ದರಿಂದ ಶಕ್ತಿಯೆಲ್ಲವೂ ಕಳೆದು ಹೋಗಿದೆ ಮತ್ತೆ ತಂದೆಯನ್ನು ನೆನಪು ಮಾಡುವುದರಿಂದ ಪೂರ್ಣ ಶಕ್ತಿಯು ಬರುವುದು ಏಕೆಂದರೆ ನಿಮಗೆ ತಿಳಿದಿದೆ – ದೇಹ ಸಹಿತ ದೇಹದ ಯಾವುದೆಲ್ಲಾ ಸಂಬಂಧಗಳಿವೆಯೋ ಅವೆಲ್ಲವೂ ಸಮಾಪ್ತಿಯಾಗಲಿವೆ ನಂತರ ನಿಮಗೆ ಬೇಹದ್ದಿನ ರಾಜ್ಯವು ಸಿಗುತ್ತದೆ. ಬೇಹದ್ದಿನ ತಂದೆಯಾಗಿದ್ದಾರೆ ಆದ್ದರಿಂದ ಬೇಹದ್ದಿನ ಆಸ್ತಿಯನ್ನೇ ಕೊಡುತ್ತಾರೆ. ನೀವೀಗ ಪತಿತರಾಗಿದ್ದೀರಿ, ನಿಮ್ಮ ಶಕ್ತಿಯು ಸಂಪೂರ್ಣ ಕಡಿಮೆಯಾಗಿ ಬಿಟ್ಟಿದೆ. ಹೇ ಮಕ್ಕಳೇ, ಈಗ ನನ್ನನ್ನು ನೆನಪು ಮಾಡಿ, ನಾನು ಸರ್ವಶಕ್ತಿವಂತನಾಗಿದ್ದೇನೆ. ನನ್ನ ಮೂಲಕ ಸರ್ವಶಕ್ತಿವಂತ ರಾಜ್ಯವು ಸಿಗುತ್ತದೆ. ಸತ್ಯಯುಗದಲ್ಲಿ ದೇವಿ-ದೇವತೆಗಳು ಇಡೀ ವಿಶ್ವದ ಮಾಲೀಕರಾಗಿದ್ದರು, ಪವಿತ್ರರಾಗಿದ್ದರು, ದೈವೀ ಗುಣವಂತರಾಗಿದ್ದರು. ಈಗ ಆ ದೈವೀ ಗುಣಗಳಿಲ್ಲ. ಎಲ್ಲರ ಬ್ಯಾಟರಿಯು ಪೂರ್ಣ ಡಿಸ್‍ಚಾರ್ಜ್ ಆಗತೊಡಗಿದೆ. ಈಗ ಮತ್ತೆ ಬ್ಯಾಟರಿಯನ್ನು ತುಂಬಿಸಲಾಗುತ್ತದೆ. ಪರಮಪಿತ ಪರಮಾತ್ಮನ ಜೊತೆ ಬುದ್ಧಿಯೋಗವನ್ನಿಡದ ಹೊರತು ಬ್ಯಾಟರಿಯು ಚಾರ್ಜ್ ಆಗಲು ಸಾಧ್ಯವಿಲ್ಲ. ಆ ತಂದೆಯೇ ಸದಾ ಪಾವನನಾಗಿದ್ದಾರೆ. ಇಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಯಾವಾಗ ಪವಿತ್ರರಾಗಿರುವರೋ ಆಗ ಬ್ಯಾಟರಿಯು ಚಾರ್ಜ್ ಆಗಿರುತ್ತದೆ. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಒಬ್ಬರನ್ನೇ ನೆನಪು ಮಾಡಬೇಕಾಗಿದೆ. ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ, ಉಳಿದೆಲ್ಲವೂ ರಚನೆಯಾಗಿದೆ. ರಚನೆಯಿಂದ ರಚನೆಗೆ ಎಂದೂ ಆಸ್ತಿಯು ಸಿಗುವುದಿಲ್ಲ. ರಚಯಿತನು ಒಬ್ಬರೇ ಆಗಿದ್ದಾರೆ. ಅವರು ಬೇಹದ್ದಿನ ತಂದೆಯಾಗಿದ್ದಾರೆ. ಉಳಿದೆಲ್ಲರೂ ಅಲ್ಪಕಾಲದ ತಂದೆಯರಾಗಿದ್ದಾರೆ. ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ಬೇಹದ್ದಿನ ರಾಜ್ಯಭಾಗ್ಯವು ಸಿಗುತ್ತದೆ ಅಂದಾಗ ಮಕ್ಕಳು ಆಂತರ್ಯದಲ್ಲಿ ತಿಳಿದುಕೊಳ್ಳಬೇಕು - ನಮಗಾಗಿ ತಂದೆಯು ಹೊಸ ಪ್ರಪಂಚ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಡ್ರಾಮಾ ಪ್ಲಾನನುಸಾರ ಸ್ವರ್ಗದ ಸ್ಥಾಪನೆಯಾಗುತ್ತಿದೆ. ನಿಮಗೆ ತಿಳಿದಿದೆ - ಸತ್ಯಯುಗ ಬರಲಿದೆ, ಸತ್ಯಯುಗದಲ್ಲಿ ಸದಾ ಸುಖವಿರುತ್ತದೆ. ಅದು ಹೇಗೆ ಸಿಗುತ್ತದೆ? ಅದಕ್ಕಾಗಿ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ನಾನು ಸದಾ ಪಾವನನಾಗಿದ್ದೇನೆ. ನಾನೆಂದೂ ಮನುಷ್ಯ ತನುವನ್ನು ತೆಗೆದುಕೊಳ್ಳುವುದಿಲ್ಲ. ದೈವೀ ಶರೀರವನ್ನಾಗಲಿ, ಮಾನವ ಶರೀರವನ್ನಾಗಲಿ ತೆಗೆದುಕೊಳ್ಳುವುದಿಲ್ಲ ಅರ್ಥಾತ್ ನಾನು ಜನನ-ಮರಣದಲ್ಲಿ ಬರುವುದಿಲ್ಲ, ಕೇವಲ ನೀವು ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡಲು ಇವರ 60 ವರ್ಷದ ವಾನಪ್ರಸ್ಥ ಸ್ಥಿತಿಯಲ್ಲಿ ಇವರ ತನುವಿನಲ್ಲಿ ಬರುತ್ತೇನೆ. ಇವರೇ ಪೂರ್ಣ ಸತೋಪ್ರಧಾನರಿಂದ ತಮೋಪ್ರಧಾನನಾಗಿದ್ದಾರೆ. ನಂಬರ್‍ವನ್ ಸರ್ವಶ್ರೇಷ್ಠನು ಭಗವಂತನಾಗಿದ್ದಾರೆ, ಅವರ ನಂತರ ಸೂಕ್ಷ್ಮವತನವಾಸಿ ಬ್ರಹ್ಮಾ, ವಿಷ್ಣು, ಶಂಕರನಿದ್ದಾರೆ. ಇವರ ಸಾಕ್ಷಾತ್ಕಾರವಾಗುತ್ತದೆ. ಸೂಕ್ಷ್ಮವತನವು ಮಧ್ಯದಲ್ಲಿದೆಯಲ್ಲವೆ. ಅಲ್ಲಿ ಶರೀರವಿರಲು ಸಾಧ್ಯವಿಲ್ಲ, ಸೂಕ್ಷ್ಮ ಶರೀರವನ್ನು ಕೇವಲ ದಿವ್ಯ ದೃಷ್ಟಿಯಿಂದ ನೋಡಲಾಗುತ್ತದೆ. ಮನುಷ್ಯ ಸೃಷ್ಟಿಯು ಇಲ್ಲಿದೆ, ಉಳಿದಂತೆ ಅವರು ಕೇವಲ ಸಾಕ್ಷಾತ್ಕಾರಕ್ಕಾಗಿ ಫರಿಶ್ತೆಗಳಿದ್ದಾರೆ. ನೀವು ಮಕ್ಕಳೂ ಸಹ ಅಂತಿಮದಲ್ಲಿ ಸಂಪೂರ್ಣ ಪವಿತ್ರರಾದಾಗ ನಿಮ್ಮದೂ ಸಾಕ್ಷಾತ್ಕಾರವಾಗುತ್ತದೆ. ಇಂತಹ ಫರಿಶ್ತೆಗಳಾಗಿ ನಂತರ ಸತ್ಯಯುಗದಲ್ಲಿ ಇಲ್ಲಿಗೇ ಬಂದು ಸ್ವರ್ಗದ ಮಾಲೀಕರಾಗುತ್ತೀರಿ. ಈ ಬ್ರಹ್ಮಾರವರೂ ಯಾವುದೇ ವಿಷ್ಣುವನ್ನು ನೆನಪು ಮಾಡುವುದಿಲ್ಲ. ಇವರೂ ಸಹ ಶಿವ ತಂದೆಯನ್ನು ನೆನಪು ಮಾಡುತ್ತಾರೆ ಮತ್ತು ನಂತರ ಈ ವಿಷ್ಣುವಾಗುತ್ತಾರೆ. ಇವರು ಹೇಗೆ ರಾಜ್ಯ ಪಡೆದರು ಎಂಬುದನ್ನು ತಿಳಿದುಕೊಳ್ಳಬೇಕಲ್ಲವೆ. ರಾಜ್ಯಕ್ಕಾಗಿ ಯಾವುದೇ ಯುದ್ಧ ಇತ್ಯಾದಿಗಳಂತೂ ಆಗುವುದಿಲ್ಲ. ದೇವತೆಗಳು ಹಿಂಸೆಯನ್ನು ಹೇಗೆ ಮಾಡುವರು!
ಈಗ ನೀವು ಮಕ್ಕಳು ತಂದೆಯನ್ನು ನೆನಪು ಮಾಡಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಯಾರಾದರೂ ನಂಬಲಿ, ನಂಬದಿರಲಿ. ಗೀತೆಯಲ್ಲಿಯೂ ಇದೇ ಇದೆ - ಹೇ ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ. ಮಮತೆಯನ್ನಿಟ್ಟುಕೊಳ್ಳಲು ಅವರಿಗಂತೂ ದೇಹವೇ ಇಲ್ಲ. ಸ್ವಲ್ಪ ಸಮಯಕ್ಕಾಗಿ ನಾನು ಇವರ ಶರೀರದ ಆಧಾರವನ್ನು ತೆಗೆದುಕೊಳ್ಳುತ್ತೇನೆ. ಇಲ್ಲವೆಂದರೆ ಜ್ಞಾನವನ್ನು ಹೇಗೆ ಕೊಡಲಿ! ನಾನು ಬೀಜ ರೂಪನಲ್ಲವೆ, ಇಡೀ ವೃಕ್ಷದ ಜ್ಞಾನವು ನನ್ನ ಬಳಿ ಇದೆ, ಮತ್ತ್ಯಾರಿಗೂ ಗೊತ್ತಿಲ್ಲ. ಸೃಷ್ಟಿಯ ಆಯಸ್ಸು ಎಷ್ಟಾಗಿದೆ? ಹೇಗೆ ಇದರ ಸ್ಥಾಪನೆ, ಪಾಲನೆ, ವಿನಾಶವಾಗುತ್ತದೆ? ಇದು ಮನುಷ್ಯರಿಗೆ ತಿಳಿದಿರಬೇಕಲ್ಲವೆ. ಮನುಷ್ಯರೇ ಓದುತ್ತಾರೆ, ಪ್ರಾಣಿಗಳಂತೂ ಓದುವುದಿಲ್ಲ ಅಲ್ಲವೆ. ಅವರು ಲೌಕಿಕ ವಿದ್ಯೆಯನ್ನು ಓದುತ್ತಾರೆ. ಇಲ್ಲಿ ತಂದೆಯು ನಿಮಗೆ ಪಾರಲೌಕಿಕ ವಿದ್ಯೆಯನ್ನು ಓದಿಸುತ್ತಾರೆ, ಇದರಿಂದ ನಿಮ್ಮನ್ನು ಬೇಹದ್ದಿನ ಮಾಲೀಕರನ್ನಾಗಿ ಮಾಡುತ್ತಾರೆ ಅಂದಾಗ ಇದನ್ನು ತಿಳಿಸಬೇಕು - ಯಾವುದೇ ಮನುಷ್ಯರಿಗೆ ಅಥವಾ ದೇಹಧಾರಿಗಳಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರರಿಗೂ ಸಹ ಸೂಕ್ಷ್ಮ ದೇಹವಿದೆಯಲ್ಲವೆ. ಇವರ ಹೆಸರೇ ಬೇರೆಯಾಗಿದೆ, ಇವರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಈ ಶರೀರವಂತೂ ಈ ದಾದಾರವರ ಆತ್ಮದ ಸಿಂಹಾಸನವಾಗಿತ್ತು, ಅಕಾಲ ಸಿಂಹಾಸನವಲ್ಲವೆ. ಹಿರಿಯ ವ್ಯಕ್ತಿಗಳು ಅಲ್ಲಿ ಅಕಾಲ ಸಿಂಹಾಸನದ ಮೇಲೆ ಹೋಗಿ ಕುಳಿತುಕೊಳ್ಳುತ್ತಾರೆ. ವಾಸ್ತವದಲ್ಲಿ ತಂದೆಯು ತಿಳಿಸುತ್ತಾರೆ - ಇವೆಲ್ಲಾ ಶರೀರಗಳು ಅಕಾಲ ಆತ್ಮರ ಸಿಂಹಾಸನಗಳಾಗಿವೆ. ಅಕಾಲ ಆತ್ಮನನ್ನು ಕಾಲವು ಕಬಳಿಸಲು ಸಾಧ್ಯವಿಲ್ಲ, ಆ ಸಿಂಹಾಸನಗಳಂತೂ ಬದಲಾಗುತ್ತಿರುತ್ತವೆ. ಅಕಾಲ ಮೂರ್ತಿ ಆತ್ಮವು ಈ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತದೆ. ಮೊದಲು ಚಿಕ್ಕ ಸಿಂಹಾಸನವಿರುತ್ತದೆ ನಂತರ ಬೆಳವಣಿಗೆಯಾಗುತ್ತಾ ದೊಡ್ಡದಾಗುತ್ತದೆ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮವು ಅಕಾಲನಾಗಿದೆ, ಬಾಕಿ ಅದರಲ್ಲಿ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ. ಆದ್ದರಿಂದಲೇ ಇದು ಕರ್ಮಗಳ ಫಲವೆಂದು ಹೇಳುತ್ತಾರೆ. ಆತ್ಮವೆಂದೂ ವಿನಾಶವಾಗುವುದಿಲ್ಲ. ಆತ್ಮದ ತಂದೆಯು ಒಬ್ಬರೇ ಆಗಿದ್ದಾರೆ, ಇದನ್ನು ತಿಳಿದುಕೊಳ್ಳಬೇಕಲ್ಲವೆ. ಈ ತಂದೆಯು ಯಾವುದೇ ಶಾಸ್ತ್ರಗಳ ಮಾತನ್ನು ತಿಳಿಸುತ್ತಾರೆಯೇ? ಶಾಸ್ತ್ರ ಇತ್ಯಾದಿಗಳನ್ನು ಓದುವುದರಿಂದ ಹಿಂತಿರುಗಿ ಯಾರೂ ಹೋಗಲು ಸಾಧ್ಯವಿಲ್ಲ. ಅಂತ್ಯದಲ್ಲಿ ಎಲ್ಲರೂ ಹೋಗುವರು. ಹೇಗೆ ಹಕ್ಕಿಗಳ ಅಥವಾ ಜೇನು ನೊಣಗಳ ಹಿಂಡು ಹೋಗುತ್ತದೆಯಲ್ಲವೆ. ಜೇನು ನೊಣಗಳಲ್ಲಿಯೂ ರಾಣಿ ನೊಣವಿರುತ್ತದೆ, ಅದರ ಹಿಂದೆ ಎಲ್ಲವೂ ಹೋಗುತ್ತವೆ. ಅಂತಿಮದಲ್ಲಿ ತಂದೆಯು ಹೋದಾಗಲೂ ಸಹ ಅವರ ಹಿಂದೆ ಎಲ್ಲಾ ಆತ್ಮರು ಹೋಗುವರು. ಅಲ್ಲಿ ಮೂಲವತನದಲ್ಲಿ ಎಲ್ಲಾ ಆತ್ಮರ ಹೇಗೆ ಗೂಡು ತಯಾರಾಗಿ ಬಿಡುತ್ತದೆ. ಇಲ್ಲಿ ಮನುಷ್ಯರ ಸಮೂಹವಾಗಿದೆ ಅಂದಾಗ ಈ ಸಮೂಹವೂ ಸಹ ಒಂದು ದಿನ ತಂದೆಯ ಹಿಂದೆ ಓಡುವುದು. ತಂದೆಯು ಬಂದು ಎಲ್ಲಾ ಆತ್ಮರನ್ನು ಕರೆದುಕೊಂಡು ಹೋಗುತ್ತಾರೆ. ಶಿವನ ದಿಬ್ಬಣ ಎಂದು ಹೇಳಲಾಗುತ್ತದೆ. ಮಕ್ಕಳೆಂದಾದರೂ ಹೇಳಿ, ಅಥವಾ ಪ್ರಿಯತಮೆಯರೆಂದಾದರೂ ಹೇಳಿ. ತಂದೆಯು ಬಂದು ಮಕ್ಕಳಿಗೆ ಓದಿಸಿ ನೆನಪಿನ ಯಾತ್ರೆಯನ್ನು ಕಲಿಸುತ್ತಾರೆ. ಪವಿತ್ರರಾಗದೇ ಆತ್ಮವು ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಯಾವಾಗ ಪವಿತ್ರವಾಗಿ ಬಿಡುವುದೋ ಆಗ ಮೊಟ್ಟ ಮೊದಲು ಶಾಂತಿಧಾಮಕ್ಕೆ ಹೋಗುವುದು, ಅಲ್ಲಿ ಹೋಗಿ ಎಲ್ಲರೂ ನಿವಾಸ ಮಾಡುತ್ತೀರಿ. ಅಲ್ಲಿಂದ ಮತ್ತೆ ದಿನ ಕಳೆದಂತೆ ಬರುತ್ತಾ ಇರುತ್ತಾರೆ, ವೃದ್ಧಿಯಾಗುತ್ತಿರುತ್ತದೆ. ನೀವೇ ಮೊಟ್ಟ ಮೊದಲು ತಂದೆಯ ಹಿಂದೆ ಓಡುವಿರಿ. ನಿಮ್ಮದು ತಂದೆಯ ಜೊತೆ ಅಥವಾ ಪ್ರಿಯತಮೆಯರಿಗೆ ಪ್ರಿಯತಮನ ಜೊತೆ ಯೋಗವಿದೆ, ರಾಜಧಾನಿಯಾಗಬೇಕಾಗಿದೆಯಲ್ಲವೆ. ಎಲ್ಲರೂ ಒಟ್ಟಿಗೆ ಬರುವುದಿಲ್ಲ. ಅಲ್ಲಿ ಎಲ್ಲಾ ಆತ್ಮರ ಪ್ರಪಂಚವಾಗಿದೆ. ಅಲ್ಲಿಂದ ಎಲ್ಲಾ ಆತ್ಮರು ನಂಬರ್‍ವಾರ್ ಆಗಿ ಬರುತ್ತಾರೆ. ವೃಕ್ಷವು ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತದೆ. ಮೊಟ್ಟ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ ಅದನ್ನು ತಂದೆಯು ಸ್ಥಾಪನೆ ಮಾಡುತ್ತಾರೆ. ಮೊಟ್ಟ ಮೊದಲು ನಮ್ಮನ್ನು ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಪ್ರಜಾಪಿತ ಬ್ರಹ್ಮನಲ್ಲವೆ. ಪ್ರಜೆಗಳೆಲ್ಲರೂ ಸಹೋದರ-ಸಹೋದರಿಯರಾಗುತ್ತೀರಿ. ಬ್ರಹ್ಮಾಕುಮಾರ-ಕುಮಾರಿಯರು ಅನೇಕರಿದ್ದಾರೆ ಅಂದಮೇಲೆ ನಿಶ್ಚಯ ಬುದ್ಧಿಯವರಾಗಿರುವ ಕಾರಣವೇ ಇಷ್ಟೊಂದು ಮಂದಿ ಆಗಿದ್ದಾರೆ. ಬ್ರಾಹ್ಮಣರು ಎಷ್ಟು ಮಂದಿ ಇರಬಹುದು? ಪಕ್ಕಾ ಇದ್ದಾರೆಯೇ ಅಥವಾ ಕಚ್ಚಾ ಇದ್ದಾರೆಯೇ? ಕೆಲವರು 99 ಅಂಕಗಳನ್ನು ತೆಗೆದುಕೊಳ್ಳುತ್ತಾರೆ, ಕೆಲವರು 10 ಅಂಕಗಳನ್ನೂ ತೆಗೆದುಕೊಳ್ಳುತ್ತಾರೆ ಅಂದಮೇಲೆ ಇವರು ಕಚ್ಚಾ ಆದರಲ್ಲವೆ. ನಿಮ್ಮಲ್ಲಿಯೂ ಯಾರು ಪಕ್ಕಾ ಇದ್ದಾರೆಯೋ ಅವರು ಅವಶ್ಯವಾಗಿ ಮೊದಲು ಬರುತ್ತಾರೆ. ಕಚ್ಚಾ ಇರುವವರು ಕೊನೆಯಲ್ಲಿ ಬರುತ್ತಾರೆ. ಇದು ಪಾತ್ರಧಾರಿಗಳ ಪ್ರಪಂಚವಾಗಿದೆ, ಸುತ್ತುತ್ತಿರುತ್ತದೆ. ಸತ್ಯಯುಗ, ತ್ರೇತಾ, ದ್ವಾಪರ..... ಇದು ಪುರುಷೋತ್ತಮ ಸಂಗಮಯುಗವಾಗಿದೆ. ಇದನ್ನು ಈಗ ತಂದೆಯು ತಿಳಿಸಿದ್ದಾರೆ - ಮೊದಲು ನಾವೂ ಸಹ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಉಲ್ಟಾ ತಿಳಿದುಕೊಳ್ಳುತ್ತಾ ಬಂದೆವು, ಈಗ ತಂದೆಯು ತಿಳಿಸಿದ್ದಾರೆ - ಇದು ಪೂರ್ಣ 5000 ವರ್ಷಗಳ ಚಕ್ರವಾಗಿದೆ. ಅರ್ಧಕಲ್ಪ ರಾಮ ರಾಜ್ಯ, ಅರ್ಧಕಲ್ಪ ರಾವಣ ರಾಜ್ಯವಾಗಿದೆ. ಲಕ್ಷಾಂತರ ವರ್ಷಗಳ ಕಲ್ಪವಾಗಿದ್ದರೆ ಅರ್ಧ-ಅರ್ಧವಾಗಿ ವಿಂಗಡಿಸಲು ಸಾಧ್ಯವಿಲ್ಲ. ದುಃಖ ಮತ್ತು ಸುಖದ ಈ ಪ್ರಪಂಚವು ಮಾಡಲ್ಪಟ್ಟಿದೆ, ಬೇಹದ್ದಿನ ಈ ಜ್ಞಾನವು ಬೇಹದ್ದಿನ ತಂದೆಯಿಂದ ಸಿಗುತ್ತದೆ. ಶಿವ ತಂದೆಯ ಶರೀರದ ಯಾವುದೇ ಹೆಸರಿಲ್ಲ. ಈ ಶರೀರವು ದಾದಾರವರದಾಗಿದೆ. ತಂದೆಯು ಎಲ್ಲಿದ್ದಾರೆ? ಸ್ವಲ್ಪ ಸಮಯಕ್ಕಾಗಿ ಶರೀರವನ್ನು ಲೋನ್ ಆಗಿ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ನನಗೆ ಮುಖವಂತೂ ಬೇಕಲ್ಲವೆ. ಇಲ್ಲಿಯೂ ಗೋಮುಖವನ್ನು ಮಾಡಿದ್ದಾರೆ. ಪರ್ವತಗಳಿಂದ ಎಲ್ಲೆಲ್ಲಿಯೋ ನೀರು ಬರುತ್ತದೆ. ಇಲ್ಲಿ ಅದನ್ನು ಗೋಮುಖವನ್ನಾಗಿ ಮಾಡಿದ್ದಾರೆ ಅದರಿಂದ ನೀರು ಬರುತ್ತದೆ, ಅದನ್ನು ಗಂಗಾ ಜಲವೆಂದು ತಿಳಿದು ತೆಗೆದುಕೊಳ್ಳುತ್ತಾರೆ ಅಂದಮೇಲೆ ಗಂಗೆಯು ಎಲ್ಲಿಂದ ಬಂದಿತು? ಇದೆಲ್ಲವೂ ಸುಳ್ಳಾಗಿದೆ. ಸುಳ್ಳು ಕಾಯ, ಸುಳ್ಳು ಮಾಯೆ ಎಲ್ಲವೂ ಸುಳ್ಳು ಪ್ರಪಂಚವಾಗಿದೆ. ಭಾರತವು ಸ್ವರ್ಗವಾಗಿದ್ದಾಗ ಸತ್ಯ ಖಂಡವೆಂದು ಹೇಳಲಾಗುತ್ತದೆ ಮತ್ತೆ ಭಾರತವೇ ಹಳೆಯದಾದಾಗ ಸುಳ್ಳು ಖಂಡವೆಂದು ಹೇಳಲಾಗುತ್ತದೆ. ಈ ಸುಳ್ಳು ಖಂಡದಲ್ಲಿ ಯಾವಾಗ ಎಲ್ಲರೂ ಪತಿತರಾಗಿ ಬಿಡುವರೋ ಆಗ ಬಾಬಾ, ನಮ್ಮನ್ನು ಪಾವನ ಮಾಡಿ, ಈ ಹಳೆಯ ಪ್ರಪಂಚದಿಂದ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನ ಮಕ್ಕಳೆಲ್ಲರೂ ಕಾಮ ಚಿತೆಯನ್ನೇರಿ ಕಪ್ಪಾಗಿ ಬಿಟ್ಟಿದ್ದಾರೆ. ತಂದೆಯು ಮಕ್ಕಳಿಗೇ ಕುಳಿತು ಹೇಳುತ್ತಾರೆ - ಮಕ್ಕಳೇ, ನೀವು ಸ್ವರ್ಗದ ಮಾಲೀಕರಾಗಿದ್ದಿರಲ್ಲವೆ, ಸ್ಮೃತಿ ಬಂದಿತಲ್ಲವೆ! ತಂದೆಯು ಇಡೀ ಪ್ರಪಂಚಕ್ಕೆ ತಿಳಿಸುವುದಿಲ್ಲ, ನೀವು ಮಕ್ಕಳಿಗೆ ತಿಳಿಸುತ್ತಾರೆ. ಇದರಿಂದ ನಮ್ಮ ತಂದೆಯು ಯಾರು ಎಂಬುದು ಅರ್ಥವಾಗಲಿ ಎಂದು.
ಈ ಪ್ರಪಂಚಕ್ಕೆ ಮುಳ್ಳಿನ ಕಾಡೆಂದು ಹೇಳಲಾಗುತ್ತದೆ. ಎಲ್ಲದಕ್ಕಿಂತ ದೊಡ್ಡದು ಕಾಮದ ಮುಳ್ಳನ್ನು ಚುಚ್ಚುತ್ತಾರೆ, ಭಲೆ ಇಲ್ಲಿ ಅನೇಕ ಭಕ್ತರೂ ಇದ್ದಾರೆ, ಸಸ್ಯಹಾರಿಗಳಿದ್ದಾರೆ ಆದರೆ ಅವರು ವಿಕಾರದಲ್ಲಿ ಹೋಗುವುದಿಲ್ಲವೆಂದಲ್ಲ. ಹಾಗೆ ಅನೇಕರು ಬಾಲ ಬ್ರಹ್ಮಚಾರಿಗಳೂ ಇರುತ್ತಾರೆ, ಬಾಲ್ಯದಿಂದಲೇ ಎಲ್ಲಾ ಛೀ ಛೀ ಪದಾರ್ಥಗಳನ್ನು ತಿನ್ನುವುದನ್ನು ತ್ಯಜಿಸುತ್ತಾರೆ. ನಿರ್ವಿಕಾರಿಗಳಾಗಿ ಎಂದು ಸನ್ಯಾಸಿಗಳೂ ಹೇಳುತ್ತಾರೆ. ಆ ಅಲ್ಪಕಾಲದ ಸನ್ಯಾಸವನ್ನು ಮನುಷ್ಯರೇ ಮಾಡಿಸುತ್ತಾರೆ ಮತ್ತೆ ಇನ್ನೊಂದು ಜನ್ಮದಲ್ಲಿ ಗೃಹಸ್ಥಿಗಳ ಬಳಿಯೇ ಜನ್ಮ ಪಡೆದು ನಂತರ ಗೃಹಸ್ಥವನ್ನು ಬಿಟ್ಟು ಹೊರಟು ಹೋಗುತ್ತಾರೆ. ಸತ್ಯಯುಗದಲ್ಲಿ ಈ ಕೃಷ್ಣ ಮುಂತಾದ ದೇವತೆಗಳು ಎಂದಾದರೂ ಗೃಹಸ್ಥವನ್ನು ಬಿಡುತ್ತಾರೆಯೇ? ಇಲ್ಲ. ಅಂದಾಗ ಇಲ್ಲಿ ಮನುಷ್ಯರದು ಅಲ್ಪಕಾಲದ ಸನ್ಯಾಸವಾಗಿದೆ, ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ. ಇಡೀ ಪ್ರಪಂಚ, ಸಂಬಂಧ ಮೊದಲಾದುದರ ಸನ್ಯಾಸ ಮಾಡುತ್ತೀರಿ. ನಿಮಗಾಗಿ ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ. ನಿಮ್ಮ ಬುದ್ಧಿಯು ಸ್ವರ್ಗದ ಕಡೆಯೇ ಹೋಗುವುದು, ಆದ್ದರಿಂದ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ, ಮನ್ಮನಾಭವ, ಮಧ್ಯಾಜೀಭವ. ಆಗ ನೀವು ದೇವತೆಗಳಾಗಿ ಬಿಡುತ್ತೀರಿ. ಇದು ಅದೇ ಗೀತಾ ಭಾಗವಾಗಿದೆ. ಸಂಗಮಯುಗವೂ ಆಗಿದೆ. ನಾನು ಸಂಗಮದಲ್ಲಿಯೇ ತಿಳಿಸುತ್ತೇನೆ. ರಾಜಯೋಗವನ್ನು ಅವಶ್ಯವಾಗಿ ಮೊದಲ ಜನ್ಮದಲ್ಲಿ ಅಂದರೆ ಸಂಗಮದಲ್ಲಿಯೇ ಇವರು ಕಲಿತಿರಬೇಕು. ಈ ಸೃಷ್ಟಿಯು ಬದಲಾಗುತ್ತದೆಯಲ್ಲವೆ. ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ. ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ. ಯಾವಾಗ ನಾವು ಇಂತಹ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೇವೆ. ಪ್ರತಿಯೊಂದು ಮಾತನ್ನು ಚೆನ್ನಾಗಿ ತಿಳಿದುಕೊಂಡು ನಿಶ್ಚಯ ಮಾಡಿಕೊಳ್ಳಬೇಕು. ಇದನ್ನು ಯಾವುದೇ ಮನುಷ್ಯರು ಹೇಳುತ್ತಿಲ್ಲ, ಇದು ಶ್ರೀಮತ ಅರ್ಥಾತ್ ಭಗವಂತನ ಶ್ರೇಷ್ಠಾತಿ ಶ್ರೇಷ್ಠ ಮತವಾಗಿದೆ, ಉಳಿದೆಲ್ಲವೂ ಮನುಷ್ಯ ಮತವಾಗಿದೆ. ಮನುಷ್ಯ ಮತದಿಂದ ಇಳಿಯುತ್ತಲೇ ಬರುತ್ತೀರಿ, ಈಗ ಶ್ರೀಮತದಿಂದ ನೀವು ಮೇಲೇರುತ್ತೀರಿ. ಈಗ ತಂದೆಯು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿ ಬಿಡುತ್ತಾರೆ. ದೈವೀ ಮತವು ಸ್ವರ್ಗವಾಸಿಗಳದಾಗಿದೆ ಮತ್ತು ಇದು ನರಕವಾಸಿ ಮನುಷ್ಯರ ಮತವಾಗಿದೆ ಯಾವುದಕ್ಕೆ ರಾವಣನ ಮತವೆಂದು ಹೇಳಲಾಗುತ್ತದೆ. ರಾವಣ ರಾಜ್ಯವೂ ಸಹ ಕಡಿಮೆಯಿಲ್ಲ. ಇಡೀ ಪ್ರಪಂಚದಲ್ಲಿ ರಾವಣನ ರಾಜ್ಯವಿದೆ. ಇದು ಬೇಹದ್ದಿನ ಲಂಕೆಯಾಗಿದೆ, ಯಾವುದರಲ್ಲಿ ರಾವಣನ ರಾಜ್ಯವಿದೆ ನಂತರ ದೇವತೆಗಳ ಪವಿತ್ರ ರಾಜ್ಯವಿರುವುದು. ಅಲ್ಲಿ ಬಹಳ ಸುಖವಿರುತ್ತದೆ. ಸ್ವರ್ಗದ ಎಷ್ಟೊಂದು ಮಹಿಮೆಯಿದೆ! ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ನರಕದಲ್ಲಿದ್ದರಲ್ಲವೆ. ನರಕದಿಂದ ಹೋದರೆಂದರೆ ಅವಶ್ಯವಾಗಿ ನಂತರ ನರಕದಲ್ಲಿಯೇ ಬರುವರಲ್ಲವೆ. ಈಗ ಸ್ವರ್ಗವೆಲ್ಲಿದೆ? ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಈಗ ತಂದೆಯು ನಿಮಗೆ ಸಂಪೂರ್ಣ ಜ್ಞಾನವನ್ನು ಕೊಡುತ್ತಾರೆ, ಬ್ಯಾಟರಿಯು ತುಂಬುತ್ತದೆ. ಮಾಯೆಯು ಮತ್ತೆ ಬುದ್ಧಿಯೋಗವನ್ನು ತುಂಡರಿಸುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮನ-ವಚನ-ಕರ್ಮದಿಂದ ಪವಿತ್ರರಾಗಿ ಆತ್ಮ ರೂಪಿ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಬೇಕಾಗಿದೆ. ಪಕ್ಕಾ ಬ್ರಾಹ್ಮಣರಾಗಬೇಕಾಗಿದೆ.
2. ಮನ ಮತ ಹಾಗೂ ಮನುಷ್ಯ ಮತವನ್ನು ಬಿಟ್ಟು ಒಬ್ಬ ತಂದೆಯ ಶ್ರೀಮತದಂತೆ ನಡೆದು ಸ್ವಯಂನ್ನು ಶ್ರೇಷ್ಠ ಮಾಡಿಕೊಳ್ಳಬೇಕಾಗಿದೆ. ಸತೋಪ್ರಧಾನರಾಗಿ ತಂದೆಯ ಜೊತೆ ಹಾರಿ ಹೋಗಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಎಂದು ಯಾರು ಹೇಳಿದರು? ಅವಶ್ಯವಾಗಿ ಆತ್ಮಿಕ ತಂದೆಯೇ ಹೇಳಬಲ್ಲರು. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈಗ ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ತಂದೆಯು ಬಹಳ ಪ್ರೀತಿಯಿಂದ ತಿಳಿಸುತ್ತಿದ್ದಾರೆ. ಈಗ ನಿಮಗೆ ಗೊತ್ತಿದೆ, ಆತ್ಮಿಕ ತಂದೆಯ ವಿನಃ ಸರ್ವರಿಗೆ ಸುಖ-ಶಾಂತಿ ಕೊಡುವವರು ಹಾಗೂ ಸರ್ವರನ್ನೂ ಈ ದುಃಖದಿಂದ ಮುಕ್ತರನ್ನಾಗಿ ಮಾಡುವವರು ಇಡೀ ಪ್ರಪಂಚದಲ್ಲಿ ಮತ್ತ್ಯಾರೂ ಇರಲು ಸಾಧ್ಯವಿಲ್ಲ. ಆದ್ದರಿಂದ ದುಃಖದಲ್ಲಿ ಎಲ್ಲರೂ ತಂದೆಯನ್ನು ನೆನಪು ಮಾಡುತ್ತಿರುತ್ತಾರೆ. ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ. ತಂದೆಯು ನಮ್ಮನ್ನು ಸುಖಧಾಮಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆಂದು ನಿಮಗೆ ತಿಳಿದಿದೆ. ಸದಾ ಸುಖಧಾಮದ ಮಾಲೀಕರನ್ನಾಗಿ ಮಾಡುವ ತಂದೆಯ ಸನ್ಮುಖದಲ್ಲಿ ಬಂದಿದ್ದೀರಿ. ಈಗ ತಿಳಿದುಕೊಳ್ಳುತ್ತೀರಿ, ಸನ್ಮುಖ ಕೇಳುವುದರಲ್ಲಿ ಮತ್ತು ದೂರವಿದ್ದು ಕೇಳುವುದರಲ್ಲಿ ಬಹಳ ಅಂತರವಿರುತ್ತದೆ. ಮಧುಬನಕ್ಕೆ ಸನ್ಮುಖದಲ್ಲಿ ಬರುತ್ತೀರಿ. ಮಧುಬನವು ಪ್ರಸಿದ್ಧವಾಗಿದೆ. ಅವರು ಮಧುಬನದಲ್ಲಿ ಕೃಷ್ಣನ ಚಿತ್ರವನ್ನು ತೋರಿಸಿ ಬಿಟ್ಟಿದ್ದಾರೆ ಆದರೆ ಕೃಷ್ಣನಂತೂ ಇಲ್ಲ. ನೀವು ಮಕ್ಕಳಿಗೆ ತಿಳಿದಿದೆ - ತಮ್ಮನ್ನು ಪದೇ-ಪದೇ ಆತ್ಮ ನಿಶ್ಚಯ ಮಾಡಿಕೊಳ್ಳಬೇಕಾಗಿದೆ, ಇದರಲ್ಲಿಯೇ ಪರಿಶ್ರಮವಾಗುತ್ತದೆ. ನಾನಾತ್ಮನು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇನೆ. ಇಡೀ ಚಕ್ರದಲ್ಲಿ ತಂದೆಯು ಒಂದೇ ಬಾರಿ ಬರುತ್ತಾರೆ. ಇದು ಕಲ್ಪದ ಬಹಳ ಸೌಭಾಗ್ಯದ ಸಂಗಮಯುಗವಾಗಿದೆ. ಇದಕ್ಕೆ ಪುರುಷೋತ್ತಮ ಎಂಬ ಹೆಸರನ್ನಿಡಲಾಗಿದೆ. ಈ ಸಂಗಮಯುಗದಲ್ಲಿಯೇ ಎಲ್ಲಾ ಮನುಷ್ಯ ಮಾತ್ರರೂ ಉತ್ತಮರಾಗುತ್ತಾರೆ. ಈಗಂತೂ ಎಲ್ಲಾ ಮನುಷ್ಯ ಮಾತ್ರರ ಆತ್ಮಗಳು ತಮೋಪ್ರಧಾನರಾಗಿದ್ದಾರೆ ಮತ್ತೆ ಸತೋಪ್ರಧಾನರಾಗುತ್ತಾರೆ. ಸತೋಪ್ರಧಾನರಾಗಿದ್ದಾಗ ಉತ್ತಮರಾಗಿರುತ್ತಾರೆ. ತಮೋಪ್ರಧಾನದಾಗ ಮನುಷ್ಯರು ಕನಿಷ್ಟರಾಗುತ್ತಾರೆ. ಆದ್ದರಿಂದ ಈಗ ತಂದೆಯು ಆತ್ಮಗಳಿಗೆ ಸನ್ಮುಖದಲ್ಲಿ ಕುಳಿತು ತಿಳಿಸಿಕೊಡುತ್ತಾರೆ. ಎಲ್ಲಾ ಪಾತ್ರವನ್ನು ಆತ್ಮವೇ ಅಭಿನಯಿಸುತ್ತದೆ, ಶರೀರವಲ್ಲ. ನಿಮ್ಮ ಬುದ್ಧಿಯಲ್ಲಿ ಬಂದು ಬಿಟ್ಟಿದೆ - ನಾವಾತ್ಮರು ಮೂಲತಃ ನಿರಾಕಾರಿ ಪ್ರಪಂಚ ಅಥವಾ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಇದು ಯಾರಿಗೂ ತಿಳಿದಿಲ್ಲ ಅಥವಾ ಯಾರಿಗೂ ತಿಳಿಸುವುದೂ ಇಲ್ಲ. ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ. ನೀವು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಆತ್ಮರು ಪರಮಧಾಮದಲ್ಲಿರುತ್ತಾರೆ. ಅದು ನಿರಾಕಾರಿ ಪ್ರಪಂಚ, ಇದು ಸಾಕಾರಿ ಪ್ರಪಂಚವಾಗಿದೆ. ಇಲ್ಲಿ ನಾವೆಲ್ಲಾ ಆತ್ಮರು ಪಾತ್ರಧಾರಿಗಳಾಗಿದ್ದೇವೆ. ಮೊಟ್ಟ ಮೊದಲು ನಾವು ಪಾತ್ರವನ್ನಭಿನಯಿಸಲು ಬರುತ್ತೇವೆ ನಂತರ ನಂಬರ್ವಾರ್ ಬರತೊಡಗುತ್ತಾರೆ. ಎಲ್ಲಾ ಪಾತ್ರಧಾರಿಗಳು ಒಟ್ಟಿಗೆ ಬಂದು ಬಿಡುವುದಿಲ್ಲ. ಭಿನ್ನ-ಭಿನ್ನ ಪಾತ್ರಧಾರಿಗಳು ಬರತೊಡಗುತ್ತಾರೆ. ಯಾವಾಗ ನಾಟಕವು ಮುಕ್ತಾಯವಾಗುವುದೋ ಆಗ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಈಗ ನಿಮಗೆ ಪರಿಚಯ ಸಿಕ್ಕಿದೆ, ನಾವಾತ್ಮರು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಇಲ್ಲಿಗೆ ಪಾತ್ರವನ್ನಭಿನಯಿಸಲೂ ಬರುತ್ತೇವೆ. ತಂದೆಯು ಇಡೀ ಸಮಯ ಪಾತ್ರವನ್ನಭಿನಯಿಸಲು ಬರುವುದಿಲ್ಲ, ನಾವೇ ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಸತೋಪ್ರಧಾನರಿಂದ ತಮೋಪ್ರಧಾನರಾಗಿ ಬಿಡುತ್ತೇವೆ. ಈಗ ನೀವು ಮಕ್ಕಳಿಗೆ ಸನ್ಮುಖದಲ್ಲಿ ಕೇಳುವುದರಿಂದ ಬಹಳ ಆನಂದವಾಗುತ್ತದೆ. ಮುರುಳಿಯನ್ನು ಕೇಳುವುದರಿಂದ ಇಷ್ಟು ಆನಂದವಾಗುವುದಿಲ್ಲ. ಇಲ್ಲಿ ಸನ್ಮುಖದಲ್ಲಿದ್ದೀರಲ್ಲವೆ!
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಾರತವು ದೇವಿ-ದೇವತೆಗಳ ಸ್ಥಾನವಾಗಿತ್ತು, ಈಗ ಇಲ್ಲ. ಚಿತ್ರಗಳನ್ನು ನೋಡುತ್ತೀರಿ - ಅವಶ್ಯವಾಗಿ ಇತ್ತು, ನಾವು ಅಲ್ಲಿನ ನಿವಾಸಿಗಳಾಗಿದ್ದೆವು. ಮೊಟ್ಟ ಮೊದಲು ನಾವೇ ದೇವತೆಗಳಾಗಿದ್ದೆವು, ತಮ್ಮ ಪಾತ್ರವನ್ನಂತೂ ನೆನಪು ಮಾಡಿಕೊಳ್ಳುತ್ತೀರಲ್ಲವೆ ಅಥವಾ ಮರೆತು ಹೋಗುತ್ತೀರಾ? ತಂದೆಯು ತಿಳಿಸುತ್ತಾರೆ - ನೀವಿಲ್ಲಿ ಈ ಪಾತ್ರವನ್ನಭಿನಯಿಸಿದಿರಿ, ಇದು ನಾಟಕವಾಗಿದೆ. ಹೊಸ ಪ್ರಪಂಚದಿಂದ ಮತ್ತೆ ಖಂಡಿತವಾಗಿ ಹಳೆಯ ಪ್ರಪಂಚವಾಗುತ್ತದೆ. ಮೊಟ್ಟ ಮೊದಲು ಮೇಲಿನಿಂದ ಯಾವ ಆತ್ಮರು ಬರುತ್ತಾರೆಯೋ ಅವರು ಸತ್ಯಯುಗದಲ್ಲಿ ಬರುತ್ತಾರೆ. ಇವೆಲ್ಲಾ ಮಾತುಗಳು ಈಗ ನಿಮ್ಮ ಬುದ್ಧಿಯಲ್ಲಿವೆ. ನೀವು ವಿಶ್ವದ ಮಾಲೀಕರು ಮಹಾರಾಜ-ಮಹಾರಾಣಿಯರಾಗಿದ್ದಿರಿ. ನಿಮ್ಮದು ರಾಜಧಾನಿಯಿತ್ತು, ಈಗಂತೂ ರಾಜಧಾನಿಯಿಲ್ಲ. ನಾವು ಹೇಗೆ ರಾಜ್ಯ ನಡೆಸುತ್ತೇವೆ ಎಂದು ನೀವೀಗ ಕಲಿಯುತ್ತಿದ್ದೀರಿ. ಅಲ್ಲಿ ಮಂತ್ರಿಗಳಿರುವುದಿಲ್ಲ, ಸಲಹೆ ಕೊಡುವ ಅವಶ್ಯಕತೆಯೇ ಇರುವುದಿಲ್ಲ. ಅವರಂತೂ ಶ್ರೀಮತದ ಮೂಲಕ ಶ್ರೇಷ್ಠಾತಿ ಶ್ರೇಷ್ಠರಾಗಿ ಬಿಡುತ್ತಾರೆ. ಆದ್ದರಿಂದ ನಂತರ ಅವರಿಗೆ ಬೇರೆ ಯಾರಿಂದಲೂ ಸಲಹೆ ತೆಗೆದುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಒಂದುವೇಳೆ ಯಾರಿಂದಲಾದರೂ ಸಲಹೆ ತೆಗೆದುಕೊಂಡರೆ ಅವರ ಬುದ್ಧಿಯು ಬಲಹೀನವಾಗಿದೆ ಎಂದು ತಿಳಿಯಲಾಗುವುದು. ಈಗ ಯಾವ ಶ್ರೀಮತ ಸಿಗುತ್ತಿದೆಯೋ ಅದು ಸತ್ಯಯುಗದಲ್ಲಿಯೂ ಸ್ಥಿರವಾಗಿರುತ್ತದೆ. ನೀವೀಗ ತಿಳಿದುಕೊಳ್ಳುತ್ತೀರಿ – ಮೊಟ್ಟ ಮೊದಲು ಖಂಡಿತವಾಗಿಯೂ ಈ ದೇವಿ-ದೇವತೆಗಳ ಅರ್ಧಕಲ್ಪ ರಾಜ್ಯವಿತ್ತು, ಈಗ ನೀವಾತ್ಮರು ರಿಫ್ರೆಷ್ ಆಗುತ್ತಿದ್ದೀರಿ. ಈ ಜ್ಞಾನವನ್ನು ಪರಮಾತ್ಮನ ಹೊರತು ಬೇರೆ ಯಾರೂ ಆತ್ಮರಿಗೆ ಕೊಡಲು ಸಾಧ್ಯವಿಲ್ಲ.
ಈಗ ನೀವು ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ. ಶಾಂತಿಧಾಮದಿಂದ ಇಲ್ಲಿ ನೀವು ಶಬ್ಧದಲ್ಲಿ ಬಂದಿದ್ದೀರಿ. ಶಬ್ಧದಲ್ಲಿ ಬರದೆ ಕರ್ಮ ನಡೆಯಲು ಸಾಧ್ಯವಿಲ್ಲ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಹೇಗೆ ತಂದೆಯಲ್ಲಿ ಸಂಪೂರ್ಣ ಜ್ಞಾನವಿದೆಯೋ ಹಾಗೆಯೇ ನೀವಾತ್ಮರಲ್ಲಿಯೂ ಜ್ಞಾನವಿದೆ. ಆತ್ಮವು ಹೇಳುತ್ತದೆ- ನಾನು ಒಂದು ಶರೀರವನ್ನು ಬಿಟ್ಟು ಸಂಸ್ಕಾರದನುಸಾರ ಮತ್ತೆ ನಾನು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆ, ಪುನರ್ಜನ್ಮವು ಅವಶ್ಯವಾಗಿ ಆಗುತ್ತದೆ. ಆತ್ಮಕ್ಕೆ ಯಾವುದೆಲ್ಲಾ ಪಾತ್ರ ಸಿಕ್ಕಿದೆಯೋ ಅದನ್ನು ಅಭಿನಯಿಸುತ್ತಿರುತ್ತದೆ. ಸಂಸ್ಕಾರಗಳನುಸಾರ ಇನ್ನೊಂದು ಜನ್ಮ ತೆಗೆದುಕೊಳ್ಳುತ್ತಿರುತ್ತದೆ. ದಿನ-ಪ್ರತಿದಿನ ಆತ್ಮದ ಪವಿತ್ರತೆಯ ಮಟ್ಟವು ಕಡಿಮೆಯಾಗುತ್ತಾ ಹೋಗುತ್ತದೆ. ಪತಿತ ಶಬ್ಧವನ್ನು ದ್ವಾಪರದಿಂದಲೇ ಉಪಯೋಗಿಸುತ್ತಾರೆ, ಆದರೂ ಸಹ ದ್ವಾಪರದಲ್ಲಾದರೂ ಸ್ವಲ್ಪ ಅಂತರವಾಗುತ್ತದೆ. ನೀವು ಹೊಸ ಮನೆಯನ್ನು ಕಟ್ಟಿರಿ, ಅದು ಒಂದು ತಿಂಗಳಿನ ನಂತರ ಸ್ವಲ್ಪವಾದರೂ ವ್ಯತ್ಯಾಸ ಕಂಡು ಬರುವುದು. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಿದ್ದಾರೆ, ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ, ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪದವಿಯನ್ನು ಪಡೆಯುವರು. ತಂದೆಯ ಬಳಿ ಯಾವುದೇ ಅಂತರವಿಲ್ಲ. ನಾನು ಆತ್ಮರಿಗೇ ಓದಿಸುತ್ತೇನೆಂದು ತಂದೆಗೆ ಗೊತ್ತಿದೆ. ಆತ್ಮಕ್ಕೆ ತಂದೆಯಿಂದ ಆಸ್ತಿಯನ್ನು ಪಡೆಯುವ ಹಕ್ಕು ಇದೆ. ಇದರಲ್ಲಿ ಸ್ತ್ರೀ-ಪುರುಷರ ಭೇದವಿರುವುದಿಲ್ಲ. ನೀವೆಲ್ಲರೂ ಮಕ್ಕಳಾಗಿದ್ದೀರಿ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಎಲ್ಲಾ ಆತ್ಮರು ಸಹೋದರರಾಗಿದ್ದಾರೆ. ಯಾರಿಗೆ ತಂದೆಯು ಓದಿಸುತ್ತಾರೆ, ಆಸ್ತಿಯನ್ನು ಕೊಡುತ್ತಾರೆ. ತಂದೆಯೇ ಆತ್ಮಿಕ ಮಕ್ಕಳೊಂದಿಗೆ ಮಾತನಾಡುತ್ತಾರೆ - ಹೇ ಮುದ್ದಾದ ಮಧುರ ಮಕ್ಕಳೇ, ನೀವು ಬಹಳ ಸಮಯ ಪಾತ್ರವನ್ನಭನಯಿಸುತ್ತಾ-ಅಭಿನಯಿಸುತ್ತಾ ಈಗ ಪುನಃ ತಮ್ಮ ಆಸ್ತಿಯನ್ನು ಪಡೆಯಲು ಬಂದು ಮಿಲನ ಮಾಡಿದ್ದೀರಿ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಆರಂಭದಿಂದ ಹಿಡಿದು ಪಾತ್ರವು ನಿಗಧಿಯಾಗಿದೆ. ನೀವು ಪಾತ್ರಧಾರಿಗಳು ಪಾತ್ರವನ್ನು ಅಭಿನಯಿಸುತ್ತಾ, ಪಾತ್ರ ಮಾಡುತ್ತಿರುತ್ತೀರಿ. ಆತ್ಮವು ಅವಿನಾಶಿಯಾಗಿದೆ ಇದರಲ್ಲಿ ಅವಿನಾಶಿ ಪಾತ್ರವು ನಿಗಧಿಯಾಗಿದೆ. ಶರೀರವಂತೂ ಬದಲಾಗುತ್ತಿರುತ್ತದೆ, ಬಾಕಿ ಆತ್ಮವು ಕೇವಲ ಪವಿತ್ರವಾದುದು ಅಪವಿತ್ರವಾಗುತ್ತದೆ, ಪತಿತನಾಗುತ್ತದೆ, ಸತ್ಯಯುಗದಲ್ಲಿ ಪಾವನವಾಗಿರುತ್ತದೆ. ಇದಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಯಾವಾಗ ದೇವತೆಗಳ ರಾಜ್ಯವಿತ್ತೋ ಆಗ ನಿರ್ವಿಕಾರಿ ಪ್ರಪಂಚವಿತ್ತು, ಈಗ ಇಲ್ಲ. ಇದು ಆಟವಲ್ಲವೆ. ಹೊಸ ಪ್ರಪಂಚದಿಂದ ಹಳೆಯ ಪ್ರಪಂಚ, ಹಳೆಯ ಪ್ರಪಂಚದಿಂದ ಮತ್ತೆ ಹೊಸ ಪ್ರಪಂಚವಾಗುತ್ತದೆ. ಈಗ ಸುಖಧಾಮದ ಸ್ಥಾಪನೆಯಾಗುತ್ತದೆ, ಉಳಿದೆಲ್ಲಾ ಆತ್ಮರು ಮುಕ್ತಿಧಾಮದಲ್ಲಿರುತ್ತಾರೆ. ಈಗ ಈ ಬೇಹದ್ದಿನ ನಾಟಕವು ಈಗ ಪೂರ್ಣವಾಗಿದೆ. ಎಲ್ಲಾ ಆತ್ಮರು ಸೊಳ್ಳೆಗಳೋಪಾದಿಯಲ್ಲಿ ಹಿಂತಿರುಗಿ ಹೋಗುವರು. ಈ ಸಮಯದಲ್ಲಿ ಯಾವುದೇ ಆತ್ಮನು ಪರಮಧಾಮದಿಂದ ಬಂದರೆ ಪತಿತ ಪ್ರಪಂಚದಲ್ಲಿ ಅವರಿಗೇನು ಬೆಲೆಯಿರುತ್ತದೆ? ಯಾರು ಮೊಟ್ಟ ಮೊದಲು ಹೊಸ ಪ್ರಪಂಚದಲ್ಲಿ ಬರುವರೋ ಅವರಿಗೇ ಬೆಲೆಯಿರುತ್ತದೆ. ನಿಮಗೆ ತಿಳಿದಿದೆ - ಯಾವ ಹೊಸ ಪ್ರಪಂಚವಿತ್ತೋ ಅದು ಈಗ ಹಳೆಯದಾಗಿದೆ. ಹೊಸ ಪ್ರಪಂಚದಲ್ಲಿ ನಾವು ದೇವಿ-ದೇವತೆಗಳಾಗಿದ್ದೆವು, ಅಲ್ಲಿ ದುಃಖದ ಹೆಸರಿರಲಿಲ್ಲ. ಇಲ್ಲಂತೂ ಅಪಾರ ದುಃಖವಿದೆ, ತಂದೆಯು ಬಂದು ದುಃಖದ ಪ್ರಪಂಚದಿಂದ ಮುಕ್ತಗೊಳಿಸುತ್ತಾರೆ. ಈ ಹಳೆಯ ಪ್ರಪಂಚವು ಖಂಡಿತ ಬದಲಾಗುವುದು. ನೀವು ತಿಳಿದುಕೊಂಡಿದ್ದೀರಿ - ನಾವೇ ಸತ್ಯಯುಗದ ಮಾಲೀಕರಾಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಂಡು ಈ ರೀತಿಯಾಗಿದ್ದೇವೆ. ಈಗ ಪುನಃ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಸ್ವರ್ಗದ ಮಾಲೀಕರಾಗುತ್ತೇವೆ ಅಂದಮೇಲೆ ನಾವೇಕೆ ನಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಬಾರದು? ಸ್ವಲ್ಪವಾದರೂ ಪರಿಶ್ರಮ ಪಡಬೇಕಾಗುವುದಲ್ಲವೆ. ರಾಜ್ಯ ಪದವಿಯನ್ನು ಪಡೆಯುವುದು ಸಹಜವೇನಲ್ಲ. ತಂದೆಯನ್ನು ನೆನಪು ಮಾಡಬೇಕಾಗಿದೆ. ಇದು ಮಾಯೆಯ ಅದ್ಭುತವಾಗಿದೆ, ಪದೇ-ಪದೇ ಮರೆಸಿ ಬಿಡುತ್ತದೆ. ಅದಕ್ಕಾಗಿ ಉಪಾಯ ರಚಿಸಬೇಕು ನನ್ನ ಮಕ್ಕಳಾದ ಕೂಡಲೆ ನೆನಪು ಸ್ಥಿರವಾಗಿ ಕುಳಿತು ಬಿಡುತ್ತದೆ ಎಂದಲ್ಲ. ಆ ರೀತಿಯಿದ್ದಿದ್ದೇ ಆದರೆ ಇನ್ನೇನು ಪುರುಷಾರ್ಥ ಮಾಡುವಿರಿ! ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಪುರುಷಾರ್ಥ ಮಾಡಬೇಕಾಗಿದೆ. ಜ್ಞಾನಾಮೃತವನ್ನು ಕುಡಿಯುತ್ತಾ ಇರಬೇಕಾಗಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ನಮ್ಮದು ಇದು ಅಂತಿಮ ಜನ್ಮವಾಗಿದೆ. ಈ ಶರೀರದ ಅಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ. ಪುರುಷಾರ್ಥವನ್ನೂ ಅವಶ್ಯವಾಗಿ ಮಾಡಬೇಕು. ಕೇವಲ ತನ್ನನ್ನು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿ. ತ್ವಮೇವ ಮಾತಾಶ್ಚ ಪಿತಾ.... ಇದೆಲ್ಲವೂ ಭಕ್ತಿಮಾರ್ಗದ ಮಾತಾಗಿದೆ. ನೀವು ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರೊಬ್ಬರೇ ಮಧುರ ಸ್ಯಾಕ್ರೀನ್ ಆಗಿದ್ದಾರೆ. ಮತ್ತೆಲ್ಲಾ ಮಾತುಗಳನ್ನು ಬಿಟ್ಟು ಒಬ್ಬ ಸ್ಯಾಕ್ರೀನ್ (ತಂದೆ) ನ್ನು ನೆನಪು ಮಾಡಿ. ಈಗ ನಿಮ್ಮ ಆತ್ಮವು ತಮೋಪ್ರಧಾನವಾಗಿದೆ, ಅದನ್ನು ಸತೋಪ್ರಧಾನ ಮಾಡಿಕೊಳ್ಳಲು ನೆನಪಿನ ಯಾತ್ರೆಯಲ್ಲಿರಿ. ಎಲ್ಲರಿಗೂ ಇದನ್ನೇ ತಿಳಿಸಿ - ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳಿ. ಸತ್ಯಯುಗದಲ್ಲಿಯೇ ಸುಖವಿರುತ್ತದೆ, ಸುಖಧಾಮವನ್ನು ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ತಂದೆಯನ್ನು ಬಹಳ ಸಹಜವಾಗಿ ನೆನಪು ಮಾಡಬೇಕಾಗಿದೆ. ಆದರೆ ಮಾಯೆಯ ವಿರೋಧವು ಬಹಳಷ್ಟಿದೆ. ಆದ್ದರಿಂದ ಪ್ರಯತ್ನ ಪಟ್ಟು ತಂದೆಯಾದ ನನ್ನನ್ನು ನೆನಪು ಮಾಡಿ ಆಗ ತುಕ್ಕು ಬಿಟ್ಟು ಹೋಗುವುದು. ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಗಾಯನವಿದೆ. ನಾವಾತ್ಮರು ಆತ್ಮಿಕ ತಂದೆಯ ಮಕ್ಕಳಾಗಿದ್ದೇವೆ, ಅಲ್ಲಿನ ನಿವಾಸಿಗಳಾಗಿದ್ದೇವೆ. ಮತ್ತೆ ನಾವು ನಮ್ಮ ಪಾತ್ರವನ್ನು ಪುನರಾವರ್ತಿಸಬೇಕಾಗಿದೆ. ಈ ಡ್ರಾಮಾದಲ್ಲಿ ಎಲ್ಲರಿಗಿಂತ ಹೆಚ್ಚು ಪಾತ್ರವು ನಮ್ಮದಾಗಿದೆ. ಸುಖವೂ ಎಲ್ಲರಿಗಿಂತ ಹೆಚ್ಚಿನದಾಗಿ ನಮಗೇ ಸಿಗುವುದು. ತಂದೆಯು ತಿಳಿಸುತ್ತಾರೆ - ನಿಮ್ಮ ದೇವಿ-ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಉಳಿದೆಲ್ಲರೂ ಶಾಂತಿಧಾಮಕ್ಕೆ ತಮ್ಮ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ತಾವಾಗಿಯೇ ಹೊರಟು ಹೋಗುತ್ತಾರೆ. ಹೆಚ್ಚು ವಿಸ್ತಾರದಲ್ಲಿ ನಾವು ಹೋಗುವುದೇಕೆ? ತಂದೆಯು ಬರುವುದೇ ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುವುದಕ್ಕಾಗಿ. ಎಲ್ಲರನ್ನೂ ಸೊಳ್ಳೆಗಳೋಪಾದಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಸತ್ಯಯುಗದಲ್ಲಿ ಬಹಳ ಕೆಲವರೇ ಇರುತ್ತಾರೆ, ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ, ಶರೀರಗಳು ಸಮಾಪ್ತಿಯಾಗುತ್ತವೆ. ಯಾವ ಅವಿನಾಶಿ ಆತ್ಮವಿದೆಯೋ ಅದು ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿ ಹೊರಟು ಹೋಗುವುದು. ಆತ್ಮವು ಬೆಂಕಿಯಲ್ಲಿದ್ದು ಪವಿತ್ರವಾಗುವುದೆಂದಲ್ಲ. ಆತ್ಮವು ನೆನಪು ಎಂಬ ಯೋಗಾಗ್ನಿಯಿಂದಲೇ ಪವಿತ್ರವಾಗಬೇಕಾಗಿದೆ. ಇದು ಯೋಗದ ಅಗ್ನಿಯಾಗಿದೆ. ಇದನ್ನು ಅವರು ನಾಟಕವಾಗಿ ಬರೆದು ಬಿಟ್ಟಿದ್ದಾರೆ - ಸೀತೆಯು ಬೆಂಕಿಯಿಂದ ಪಾರಾದಳು ಎಂದು. ಬೆಂಕಿಯಿಂದ ಯಾರೂ ಪಾವನರಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವೆಲ್ಲಾ ಸೀತೆಯರು ಈ ಸಮಯದಲ್ಲಿ ಪತಿತರಾಗಿದ್ದೀರಿ, ರಾವಣನ ರಾಜ್ಯದಲ್ಲಿದ್ದೀರಿ. ಈಗ ಒಬ್ಬ ತಂದೆಯ ನೆನಪಿನಿಂದ ನೀವು ಪಾವನರಾಗಬೇಕಾಗಿದೆ. ರಾಮನು ಒಬ್ಬರೇ ಆಗಿದ್ದಾರೆ. ಅಗ್ನಿ ಶಬ್ಧವನ್ನು ಕೇಳುವುದರಿಂದ ಬೆಂಕಿಯಿಂದ ಪಾರಾದಳು ಎಂದು ತಿಳಿಯುತ್ತಾರೆ. ಯೋಗಾಗ್ನಿಯಲ್ಲಿ! ಆ ಅಗ್ನಿಯಲ್ಲಿ! ಆತ್ಮವು ಪರಮಪಿತ ಪರಮಾತ್ಮನೊಂದಿಗೆ ಯೋಗವನ್ನಿಡುವುದರಿಂದಲೇ ಪತಿತನಿಂದ ಪಾವನವಾಗುವುದು. ರಾತ್ರಿ-ಹಗಲಿನ ಅಂತರವಿದೆ. ನರಕದಲ್ಲಿ ಎಲ್ಲಾ ಸೀತೆಯರು ರಾವಣನ ಜೈಲಿನಲ್ಲಿ ಶೋಕವಾಟಿಕೆಯಲ್ಲಿದ್ದಾರೆ, ಇಲ್ಲಿನ ಸುಖವಂತೂ ಕಾಗವಿಷ್ಟ ಸಮಾನವಾಗಿದೆ, ಹೋಲಿಕೆ ಮಾಡಲಾಗುತ್ತದೆ. ಸ್ವರ್ಗದ ಸುಖವಂತೂ ಅಪಾರವಾಗಿರುತ್ತದೆ.
ಈಗ ಶಿವ ಪ್ರಿಯತಮನ ಜೊತೆ ನೀವಾತ್ಮರ ನಿಶ್ಚಿತಾರ್ಥವಾಗಿದೆ ಅಂದಾಗ ಆತ್ಮವು ಸ್ತ್ರೀಯಾಯಿತಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿ, ಆಗ ನೀವು ಪಾವನರಾಗಿ ಬಿಡುತ್ತೀರಿ. ಶಾಂತಿಧಾಮಕ್ಕೆ ಹೋಗಿ ಮತ್ತೆ ಸುಖಧಾಮದಲ್ಲಿ ಬರುತ್ತೀರಿ ಅಂದಾಗ ಮಕ್ಕಳು ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕು, ಯಾವುದೇ ಪ್ರಕಾರದ ಸಂಶಯವನ್ನು ತರಬಾರದು. ದೇಹಾಭಿಮಾನದಲ್ಲಿ ಬರುವುದರಿಂದಲೇ ಅನೇಕ ಪ್ರಕಾರದ ಪ್ರಶ್ನೆಗಳು ಏಳುತ್ತವೆ ಆಗ ತಂದೆಯು ಯಾವ ಕರ್ತವ್ಯ ಕೊಡುತ್ತಾರೆಯೋ ಅದನ್ನು ಮಾಡುವುದಿಲ್ಲ. ಮೂಲ ಮಾತೇನೆಂದರೆ ನಾವು ಪತಿತರಿಂದ ಪಾವನರಾಗಬೇಕಾಗಿದೆ, ಅನ್ಯ ಮಾತುಗಳನ್ನು ಬಿಟ್ಟು ಬಿಡಬೇಕು. ಆ ರಾಜಧಾನಿಯಲ್ಲಿ ಎಂತಹ ರೀತಿ ಪದ್ಧತಿಗಳು ಇರುವವೋ ಅವೇ ನಡೆಯುವವು. ಹೇಗೆ ಮಹಲುಗಳನ್ನು ಕಟ್ಟಿದ್ದರೋ ಹಾಗೆಯೇ ಕಟ್ಟುತ್ತಾರೆ. ಮೂಲ ಮಾತು ಪವಿತ್ರರಾಗುವುದಾಗಿದೆ. ಹೇ ಪತಿತ-ಪಾವನ...... ಎಂದು ಕರೆಯುತ್ತಾರೆ. ಪಾವನರಾದಾಗಲೇ ಸುಖಿಯಾಗುತ್ತೀರಿ. ಎಲ್ಲರಿಗಿಂತ ಪಾವನರು ದೇವಿ-ದೇವತೆಗಳಾಗಿದ್ದಾರೆ.
ನೀವೀಗ 21 ಜನ್ಮಗಳಿಗಾಗಿ ಸರ್ವೋತ್ತಮ ಪಾವನರಾಗುತ್ತೀರಿ. ಅವರಿಗೆ ಸಂಪೂರ್ಣ ನಿರ್ವಿಕಾರಿ ಪಾವನರೆಂದು ಹೇಳಲಾಗುತ್ತದೆ. ತಂದೆಯು ಯಾವ ಶ್ರೀಮತವನ್ನು ಕೊಡುತ್ತಾರೆಯೋ ಅದರಂತೆ ನಡೆಯಬೇಕು. ಯಾವುದೇ ಸಂಕಲ್ಪವನ್ನು ತರುವ ಅವಶ್ಯಕತೆಯಿಲ್ಲ. ಮೊದಲು ನಾವು ಪತಿತರಿಂದ ಪಾವನರಾಗಬೇಕು. ಹೇ ಪತಿತ-ಪಾವನ.... ಎಂದು ಕರೆಯುತ್ತಾರೆ ಆದರೆ ತಿಳಿದುಕೊಳ್ಳುವುದೇನೂ ಇಲ್ಲ. ಪತಿತ-ಪಾವನ ಯಾರೆಂಬುದನ್ನೂ ಸಹ ತಿಳಿದುಕೊಂಡಿಲ್ಲ. ಇದು ಪತಿತ ಪ್ರಪಂಚ, ಅದು ಪಾವನ ಪ್ರಪಂಚವಾಗಿದೆ. ಮುಖ್ಯ ಮಾತು ಪಾವನರಾಗುವುದಾಗಿದೆ. ಪಾವನರನ್ನಾಗಿ ಯಾರು ಮಾಡುತ್ತಾರೆ? ಇದೇನನ್ನೂ ತಿಳಿದುಕೊಂಡಿಲ್ಲ. ಪತಿತ-ಪಾವನನೆಂದು ಹೇಳಿ ಕರೆಯುತ್ತಾರೆ ಆದರೆ ನೀವು ಪತಿತರಾಗಿದ್ದೀರಿ ಎಂದು ಹೇಳಿದ್ದೇ ಆದರೆ ಕೋಪಿಸಿಕೊಳ್ಳುತ್ತಾರೆ. ತನ್ನನ್ನು ಯಾರೂ ವಿಕಾರಿಯೆಂದು ತಿಳಿದುಕೊಳ್ಳುವುದಿಲ್ಲ. ಗೃಹಸ್ಥದಲ್ಲಂತೂ ಎಲ್ಲರೂ ಇದ್ದರು, ರಾಧೆ-ಕೃಷ್ಣ, ಲಕ್ಷ್ಮೀ-ನಾರಾಯಣರಿಗೂ ಸಹ ಮಕ್ಕಳಿದ್ದರು ಎಂದು ಹೇಳುತ್ತಾರೆ. ಅಲ್ಲಿ ಯೋಗಬಲದಿಂದ ಮಕ್ಕಳು ಜನ್ಮ ಪಡೆಯುತ್ತಾರೆಂದು ಮರೆತು ಹೋಗಿದ್ದಾರೆ, ಅದಕ್ಕೆ ನಿರ್ವಿಕಾರಿ ಪ್ರಪಂಚ ಸ್ವರ್ಗವೆಂದು ಹೇಳಲಾಗುತ್ತದೆ. ಅದು ಶಿವಾಲಯವಾಗಿದೆ, ತಂದೆಯು ತಿಳಿಸುತ್ತಾರೆ – ಪತಿತ ಪ್ರಪಂಚದಲ್ಲಿ ಯಾರೊಬ್ಬರೂ ಪಾವನರಿರುವುದಿಲ್ಲ. ಈ ತಂದೆಯಂತೂ ತಂದೆ, ಶಿಕ್ಷಕ ಮತ್ತು ಸದ್ಗುರುವಾಗಿದ್ದಾರೆ, ಎಲ್ಲರಿಗೆ ಸದ್ಗತಿ ನೀಡುತ್ತಾರೆ. ಅವರಾದರೆ ಒಬ್ಬ ಗುರು ಹೊರಟು ಹೋದರೆ ಮತ್ತೆ ಮಕ್ಕಳಿಗೆ ಸಿಂಹಾಸನ ಕೊಡುತ್ತಾರೆ ಅಂದಮೇಲೆ ಅವರು ಹೇಗೆ ಸದ್ಗತಿಯಲ್ಲಿ ಕರೆದುಕೊಂಡು ಹೋಗುವರು. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಸತ್ಯಯುಗದಲ್ಲಿ ಕೇವಲ ದೇವಿ-ದೇವತೆಗಳಿರುತ್ತಾರೆ ಬಾಕಿ ಇಷ್ಟೆಲ್ಲಾ ಆತ್ಮಗಳು ಶಾಂತಿಧಾಮಕ್ಕೆ ಹೊರಟು ಹೋಗುವರು. ರಾವಣ ರಾಜ್ಯದಿಂದ ಮುಕ್ತರಾಗುತ್ತಾರೆ. ತಂದೆಯು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ಪಾವನರಿಂದ ಕೂಡಲೇ ಯಾರೂ ಪತಿತರಾಗುವುದಿಲ್ಲ, ಕ್ರಮೇಣವಾಗಿ ಇಳಿಯುತ್ತಾರೆ. ಸತೋಪ್ರಧಾನರಿಂದ ಸತೋ, ರಜೋ, ತಮೋ.... ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರವು ಕುಳಿತಿದೆ. ನೀವೀಗ ಲೈಟ್ಹೌಸ್ ಆಗಿದ್ದೀರಿ. ಜ್ಞಾನದಿಂದ ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ಅರಿತುಕೊಂಡಿದ್ದೀರಿ. ಈಗ ನೀವು ಮಕ್ಕಳು ಮತ್ತೆಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ಎಲ್ಲರೂ ದೋಣಿಗಳಾಗಿದ್ದಾರೆ, ನೀವು ಮಾರ್ಗವನ್ನು ತಿಳಿಸುವ ಅಂಬಿಗನಾಗಿದ್ದೀರಿ. ಎಲ್ಲರಿಗೆ ತಿಳಿಸಿ - ತಾವು ಶಾಂತಿಧಾಮವನ್ನು, ಸುಖಧಾಮವನ್ನು ನೆನಪು ಮಾಡಿ, ಕಲಿಯುಗ-ದುಃಖಧಾಮವನ್ನು ಮರೆತು ಬಿಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಜ್ಞಾನಾಮೃತವನ್ನು ಕುಡಿಯುತ್ತಿರಬೇಕಾಗಿದೆ. ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕು. ಸಂಶಯದಲ್ಲಿ ಬಂದು ಯಾವುದೇ ಪ್ರಶ್ನೆಗಳನ್ನು ತರಬಾರದು.
2. ಯೋಗಾಗ್ನಿಯಿಂದ ಆತ್ಮರೂಪಿ ಸೀತೆಯನ್ನು ಪಾವನ ಮಾಡಿಕೊಳ್ಳಬೇಕಾಗಿದೆ. ಯಾವುದೇ ಮಾತಿನ ಹೆಚ್ಚು ವಿಸ್ತಾರದಲ್ಲಿ ಹೋಗದೇ ದೇಹೀ-ಅಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ. ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಬೇಕಾಗಿದೆ.
ಓಂ ಶಾಂತಿ. ಆತ್ಮಿಕ ಮಕ್ಕಳಿಗೆ ತಿಳಿದಿದೆ - ಇದು ಪುರುಷೋತ್ತಮ ಸಂಗಮಯುಗವಾಗಿದೆ. ತಮ್ಮ ಭವಿಷ್ಯದ ಪುರುಷೋತ್ತಮ ಮುಖವನ್ನು ನೋಡುತ್ತೀರಾ? ಪುರುಷೋತ್ತಮ ಉಡುಪನ್ನು ನೋಡುತ್ತೀರಾ? ನಾವೇ ಮತ್ತೆ ಹೊಸ ಪ್ರಪಂಚ ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರ ವಂಶಾವಳಿಯಲ್ಲಿ ಹೋಗುತ್ತೇವೆ ಅರ್ಥಾತ್ ಸುಖಧಾಮದಲ್ಲಿ ಹೋಗುತ್ತೇವೆ ಅಥವಾ ಪುರುಷೋತ್ತಮರಾಗುತ್ತೇವೆ ಎಂಬುದನ್ನು ಅನುಭವ ಮಾಡುತ್ತೀರಾ! ಕುಳಿತು-ಕುಳಿತಿದ್ದಂತೆಯೇ ಈ ವಿಚಾರಗಳು ಬರುತ್ತವೆಯೇ? ಓದುವ ವಿದ್ಯಾರ್ಥಿಗಳಿಗೆ ಯಾವ ದರ್ಜೆಯನ್ನು ಓದುವರೋ ಅದು ಅವಶ್ಯವಾಗಿ ನಾನು ಬ್ಯಾರಿಸ್ಟರ್ ಅಥವಾ ಇಂತಹ ಉದ್ಯೋಗಿಯಾಗುವೆನು ಎಂದು ಬುದ್ಧಿಯಲ್ಲಿರುತ್ತದೆ. ಹಾಗೆಯೇ ನೀವೂ ಸಹ ಇಲ್ಲಿ ಕುಳಿತುಕೊಂಡಾಗ ನಾವು ವಿಷ್ಣುವಿನ ರಾಜಧಾನಿಯಲ್ಲಿ ಹೋಗುತ್ತೇವೆ ಎಂಬುದನ್ನು ತಿಳಿದುಕೊಳ್ಳುತ್ತೀರಾ? ವಿಷ್ಣುವಿನ ಎರಡು ರೂಪಗಳಾಗಿದೆ - ಲಕ್ಷ್ಮೀ-ನಾರಾಯಣ, ದೇವಿ-ದೇವತಾ. ನಿಮ್ಮ ಬುದ್ಧಿಯು ಈಗ ಅಲೌಕಿಕವಾಗಿದೆ. ಮತ್ತ್ಯಾವ ಮನುಷ್ಯರ ಬುದ್ಧಿಯಲ್ಲಿ ಈ ಮಾತುಗಳ ಚಿಂತನೆ ನಡೆಯುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಇವೆಲ್ಲಾ ಮಾತುಗಳಿವೆ. ಇದೇನು ಸಾಮಾನ್ಯ ಸತ್ಸಂಗವಲ್ಲ. ಇಲ್ಲಿ ಕುಳಿತಿದ್ದೀರೆಂದರೆ ತಿಳಿದುಕೊಳ್ಳುತ್ತೀರಿ - ಸತ್ಯ ತಂದೆ ಯಾರಿಗೆ ಶಿವನೆಂದು ಹೇಳಲಾಗುತ್ತದೆಯೋ ಅವರ ಸಂಗದಲ್ಲಿ ಕುಳಿತಿದ್ದೇವೆ. ಶಿವ ತಂದೆಯು ರಚಯಿತನಾಗಿದ್ದಾರೆ, ಅವರೇ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ ಮತ್ತು ಜ್ಞಾನವನ್ನು ಕೊಡುತ್ತಾರೆ. ಹೇಗೆ ಇದು ನೆನ್ನೆಯ ಮಾತು ಎಂಬಂತೆ ತಿಳಿಸುತ್ತಾರೆ. ಇಲ್ಲಿ ಕುಳಿತಿದ್ದೀರಿ ಅಂದಮೇಲೆ ಇದು ನೆನಪಿರಬೇಕಲ್ಲವೆ - ನಾವು ಪರಿವರ್ತನೆಯಾಗಲು ಅರ್ಥಾತ್ ಈ ಶರೀರವನ್ನು ಬದಲಾಯಿಸಿ ದೇವತಾ ಶರೀರವನ್ನು ಪಡೆಯಲು ಬಂದಿದ್ದೇವೆ. ನನ್ನದು ಇದು ತಮೋಪ್ರಧಾನ, ಹಳೆಯ ಶರೀರವಾಗಿದೆ. ಅದನ್ನು ಬದಲಾಯಿಸಿ ಈ ಲಕ್ಷ್ಮೀ-ನಾರಾಯಣರಂತೆ ಆಗಬೇಕೆಂದು ಆತ್ಮವು ಹೇಳುತ್ತದೆ. ಗುರಿ-ಧ್ಯೇಯವು ಎಷ್ಟು ಶ್ರೇಷ್ಠವಾಗಿದೆ. ಓದಿಸುವ ಶಿಕ್ಷಕರು ಖಂಡಿತವಾಗಿಯೂ ಓದುವ ವಿದ್ಯಾರ್ಥಿಗಳಿಗಿಂತ ಬುದ್ಧಿವಂತರಿರಬೇಕಲ್ಲವೆ. ಓದಿಸುತ್ತಾರೆ, ಒಳ್ಳೆಯ ಕರ್ಮವನ್ನು ಕಲಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶ್ರೇಷ್ಠರಿರಬೇಕಲ್ಲವೆ. ನಮಗೆ ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಓದಿಸುತ್ತಾರೆ. ಭವಿಷ್ಯದಲ್ಲಿ ನಾವು ದೇವತೆಗಳಾಗುತ್ತೇವೆ. ನಾವು ಏನನ್ನು ಓದುತ್ತೇವೆಯೋ ಅದು ಭವಿಷ್ಯ ಹೊಸ ಪ್ರಪಂಚಕ್ಕಾಗಿ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ, ಮತ್ತ್ಯಾರಿಗೂ ಹೊಸ ಪ್ರಪಂಚದ ಬಗ್ಗೆ ತಿಳಿದೇ ಇಲ್ಲ. ನಿಮ್ಮ ಬುದ್ಧಿಯಲ್ಲಿ ಈಗ ಬರುತ್ತಿದೆ, ಈ ಲಕ್ಷ್ಮೀ-ನಾರಾಯಣರು ಹೊಸ ಪ್ರಪಂಚದ ಮಾಲೀಕರಾಗಿದ್ದರು ಅಂದಾಗ ಅವಶ್ಯವಾಗಿ ಮತ್ತೆ ಪುನರಾವರ್ತನೆಯಾಗುವುದು. ಆದ್ದರಿಂದ ನಿಮಗೆ ಓದಿಸಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ದೇವತೆಗಳಲ್ಲಿಯೂ ಅವಶ್ಯವಾಗಿ ನಂಬರ್ವಾರ್ ಇರುತ್ತಾರೆ. ದೈವೀ ರಾಜಧಾನಿಯಿರುತ್ತದೆಯಲ್ಲವೆ. ನಿಮಗೆ ಇಡೀ ದಿನ ಇದೇ ಚಿಂತನೆ ನಡೆಯುತ್ತಿರುವುದು - ನಾವಾತ್ಮರಾಗಿದ್ದೇವೆ, ನಾವಾತ್ಮರು ಯಾರು ಬಹಳ ಪತಿತರಾಗಿದ್ದೆವು, ಈಗ ಪಾವನರಾಗಲು ಪಾವನ ತಂದೆಯನ್ನು ನೆನಪು ಮಾಡುತ್ತೇವೆ. ನೆನಪಿನ ಅರ್ಥವನ್ನೂ ಸಹ ತಿಳಿದುಕೊಳ್ಳಬೇಕಾಗಿದೆ. ಆತ್ಮವು ತನ್ನ ಮಧುರ ತಂದೆಯನ್ನು ನೆನಪು ಮಾಡುತ್ತದೆ. ಸ್ವಯಂ ತಂದೆಯೇ ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡುವುದರಿಂದ ನೀವು ಸತೋಪ್ರಧಾನ ದೇವತೆಗಳಾಗುವಿರಿ. ಎಲ್ಲವೂ ನೆನಪಿನ ಯಾತ್ರೆಯ ಮೇಲೆ ಅವಲಂಭಿಸಿದೆ. ಮಕ್ಕಳೇ, ಎಷ್ಟು ಸಮಯ ನೆನಪು ಮಾಡುತ್ತೀರಿ ಎಂದು ತಂದೆಯು ಅವಶ್ಯವಾಗಿ ಕೇಳುವರಲ್ಲವೆ. ನೆನಪು ಮಾಡುವುದರಲ್ಲಿಯೇ ಮಾಯೆಯ ಯುದ್ಧವಾಗುತ್ತದೆ. ನೀವೂ ಸಹ ತಿಳಿದುಕೊಳ್ಳುತ್ತೀರಿ, ಇದು ಯಾತ್ರೆಯಲ್ಲ ಆದರೆ ಹೇಗೆ ಯುದ್ಧವಾಗಿದೆ, ಇದರಲ್ಲಿ ಬಹಳ ವಿಘ್ನಗಳು ಬರುತ್ತವೆ. ನೆನಪಿನ ಯಾತ್ರೆಯಲ್ಲಿರುವುದರಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ ಅರ್ಥಾತ್ ನೆನಪನ್ನು ಮರೆಸಿ ಬಿಡುತ್ತದೆ. ಬಾಬಾ, ನಮಗೆ ತಮ್ಮ ನೆನಪಿನಲ್ಲಿರುವುದರಲ್ಲಿ ಬಹಳ ಮಾಯೆಯ ಬಿರುಗಾಳಿಗಳು ಬರುತ್ತವೆ ಎಂದು ಹೇಳುತ್ತಾರೆ. ಮೊಟ್ಟ ಮೊದಲನೆಯ ಬಿರುಗಾಳಿಯು ದೇಹಾಭಿಮಾನದ್ದಾಗಿದೆ. ನಂತರ ಕಾಮ, ಕ್ರೋಧ, ಲೋಭ, ಮೋಹ.... ಬಾಬಾ, ನಾವು ನೆನಪಿನಲ್ಲಿರುವುದರಲ್ಲಿಯೂ ಯಾವುದೇ ವಿಘ್ನಗಳು ಬರಬಾರದೆಂದು ಬಹಳ ಪ್ರಯತ್ನ ಪಡುತ್ತೇವೆ. ಆದರೂ ಸಹ ಬಿರುಗಾಳಿಗಳು ಬರುತ್ತವೆ. ಇಂದು ಕ್ರೋಧದ ಬಿರುಗಾಳಿ, ಇಂದು ಲೋಭದ ಬಿರುಗಾಳಿ ಬಂದಿತು. ಇಂದು ನಮ್ಮ ಸ್ಥಿತಿಯು ಚೆನ್ನಾಗಿತ್ತು, ಯಾವುದೇ ಬಿರುಗಾಳಿ ಬರಲಿಲ್ಲ. ಇಡೀ ದಿನ ನೆನಪಿನ ಯಾತ್ರೆಯಲ್ಲಿದ್ದೆವು, ಬಹಳ ಖುಷಿಯಿತ್ತು. ತಂದೆಯನ್ನು ಬಹಳ ನೆನಪು ಮಾಡಿದೆವು ಎಂದು ಮಕ್ಕಳು ಹೇಳುತ್ತಾರೆ. ನೆನಪಿನಲ್ಲಿ ಆನಂದ ಬಾಷ್ಫಗಳು ಬರುತ್ತಿರುತ್ತವೆ. ತಂದೆಯ ನೆನಪಿನಲ್ಲಿರುವುದರಿಂದಲೇ ನೀವು ಮಧುರರಾಗಿ ಬಿಡುತ್ತೀರಿ.
ನೀವು ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ - ನಾವು ಮಾಯೆಯಿಂದ ಸೋಲನ್ನನುಭವಿಸುತ್ತಾ-ಅನುಭವಿಸುತ್ತಾ ಎಲ್ಲಿಗೆ ಬಂದು ತಲುಪಿದ್ದೇವೆ! ಮಕ್ಕಳು ಲೆಕ್ಕ ತೆಗೆಯುತ್ತಾರೆ. ಕಲ್ಪದಲ್ಲಿ ಎಷ್ಟು ತಿಂಗಳು, ಎಷ್ಟು ದಿನಗಳು.... ಇವೆ. ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ಒಂದುವೇಳೆ ಯಾರಾದರೂ ಲಕ್ಷಾಂತರ ವರ್ಷಗಳು ಎಂದು ಹೇಳಿದ್ದೇ ಆದರೆ ಅದನ್ನು ಲೆಕ್ಕ ಮಾಡಲು ಸಾಧ್ಯವಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಈ ಸೃಷ್ಟಿಚಕ್ರವು ಸುತ್ತುತ್ತಿರುತ್ತದೆ. ಇಡೀ ಚಕ್ರದಲ್ಲಿ ನಾವು ಎಷ್ಟು ಜನ್ಮಗಳನ್ನು ಪಡೆಯುತ್ತೇವೆ? ಹೇಗೆ ರಾಜಧಾನಿಯಲ್ಲಿ ಬರುತ್ತೇವೆ ಎಂಬುದನ್ನಂತೂ ತಿಳಿದುಕೊಂಡಿದ್ದೀರಲ್ಲವೆ. ಇವು ಸಂಪೂರ್ಣ ಹೊಸ ಮಾತುಗಳಾಗಿವೆ. ಹೊಸ ಪ್ರಪಂಚಕ್ಕಾಗಿ ಹೊಸ ಜ್ಞಾನವಾಗಿದೆ. ಹೊಸ ಪ್ರಪಂಚವೆಂದು ಸ್ವರ್ಗಕ್ಕೆ ಹೇಳಲಾಗುತ್ತದೆ, ನಾವೀಗ ಮನುಷ್ಯರಾಗಿದ್ದೇವೆ, ದೇವತೆಗಳಾಗುತ್ತಿದ್ದೇವೆಂದು ನೀವು ಹೇಳುತ್ತೀರಿ. ದೇವತಾ ಪದವಿಯು ಶ್ರೇಷ್ಠವಾಗಿದೆ. ನಾವು ಎಲ್ಲದಕ್ಕಿಂತ ಭಿನ್ನ ಜ್ಞಾನವನ್ನು ಪಡೆಯುತ್ತಿದ್ದೇವೆ. ನಮಗೆ ಓದಿಸುವವರೂ ಸಹ ಸಂಪೂರ್ಣ ಭಿನ್ನ, ವಿಚಿತ್ರನಾಗಿದ್ದಾರೆ. ಅವರಿಗೆ ಈ ಸಾಕಾರ ಚಿತ್ರವಿಲ್ಲ. ಅವರು ನಿರಾಕಾರನಾಗಿದ್ದಾರೆ ಅಂದಾಗ ಡ್ರಾಮಾದಲ್ಲಿ ನೋಡಿ, ಎಷ್ಟು ಒಳ್ಳೆಯ ಪಾತ್ರವನ್ನಿಡಲಾಗಿದೆ! ತಂದೆಯು ಓದಿಸುವುದಾದರೂ ಹೇಗೆ? ಆದ್ದರಿಂದ ಸ್ವಯಂ ತಿಳಿಸುತ್ತಾರೆ - ನಾನು ಇಂತಹವರ ತನುವಿನಲ್ಲಿ ಬರುತ್ತೇನೆ. ಯಾವ ತನುವಿನಲ್ಲಿ ಬರುತ್ತೇನೆ ಎಂಬುದನ್ನೂ ಸಹ ತಿಳಿಸುತ್ತಾರೆ. ಏನು ಇದೊಂದೇ ತನುವಿನಲ್ಲಿ ಬರುವರೇ? ಎಂದು ಮನುಷ್ಯರು ತಬ್ಬಿಬ್ಬಾಗುತ್ತಾರೆ. ಆದರೆ ಇದಂತೂ ನಾಟಕವಲ್ಲವೆ. ಇದರಲ್ಲಿ ಸ್ವಲ್ಪವೂ ಬದಲಾಗಲು ಸಾಧ್ಯವಿಲ್ಲ. ಈ ಮಾತುಗಳನ್ನು ನೀವೇ ಕೇಳುತ್ತೀರಿ ಮತ್ತು ಧಾರಣೆ ಮಾಡುತ್ತೀರಿ. ಹೇಗೆ ನಮಗೆ ಶಿವ ತಂದೆಯು ಓದಿಸುತ್ತಾರೆಂದು ಅನ್ಯರಿಗೆ ತಿಳಿಸುತ್ತೀರಿ. ಆತ್ಮವೇ ಓದುತ್ತದೆ. ಆತ್ಮವೇ ಮತ್ತೆ ಅನ್ಯರಿಗೆ ಓದಿಸುತ್ತದೆ. ಆತ್ಮವೇ ಕಲಿಯುತ್ತದೆ, ಕಲಿಸುತ್ತದೆ. ಆತ್ಮವು ಬಹಳ ಅಮೂಲ್ಯವಾಗಿದೆ. ಆತ್ಮ ಅವಿನಾಶಿ ಅಮರನಾಗಿದೆ. ಕೇವಲ ಶರೀರವು ಸಮಾಪ್ತಿಯಾಗುತ್ತದೆ. ನಾವಾತ್ಮರು ಪರಮಪಿತ ಪರಮಾತ್ಮನಿಂದ ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದೇವೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯ, 84 ಜನ್ಮಗಳ ಜ್ಞಾನವನ್ನು ಪಡೆಯುತ್ತಿದ್ದೇವೆ. ಜ್ಞಾನವನ್ನು ತೆಗೆದುಕೊಳ್ಳುವವರು ಯಾರು? ಆತ್ಮ. ಆತ್ಮ ಅವಿನಾಶಿಯಾಗಿದೆ. ಮೋಹವನ್ನೂ ಸಹ ಅವಿನಾಶಿ ವಸ್ತುವಿನಲ್ಲಿಡಬೇಕೇ ಹೊರತು ವಿನಾಶಿ ವಸ್ತುವಿನಲ್ಲಿ ಅಲ್ಲ. ಇಷ್ಟು ಸಮಯದಿಂದ ನೀವು ವಿನಾಶೀ ಶರೀರದಲ್ಲಿಯೇ ಮೋಹವನ್ನಿಡುತ್ತಾ ಬಂದಿದ್ದೀರಿ. ಈಗ ತಿಳಿದುಕೊಳ್ಳುತ್ತೀರಿ - ನಾವಾತ್ಮರಾಗಿದ್ದೇವೆ, ಶರೀರದ ಅಭಿಮಾನವನ್ನು ಬಿಡಬೇಕಾಗಿದೆ. ಕೆಲವು ಮಕ್ಕಳು ಈ ರೀತಿಯೂ ಬರೆಯುತ್ತಾರೆ - ನಾನಾತ್ಮ ಈ ಕಾರ್ಯ ಮಾಡಿದೆನು. ನಾನಾತ್ಮನು ಇಂದು ಈ ಭಾಷಣ ಮಾಡಿದೆನು. ನಾನಾತ್ಮನು ಇಂದು ತಂದೆಯನ್ನು ಬಹಳ ನೆನಪು ಮಾಡಿದೆನು. ತಂದೆಯು ಪರಮ ಆತ್ಮ, ಜ್ಞಾನ ಸಾಗರನಾಗಿದ್ದಾರೆ. ನೀವು ಮಕ್ಕಳಿಗೆ ಎಷ್ಟೊಂದು ಜ್ಞಾನವನ್ನು ಕೊಡುತ್ತಾರೆ! ನೀವು ಮೂಲವತನ, ಸೂಕ್ಷ್ಮವತನವನ್ನು ತಿಳಿದುಕೊಂಡಿದ್ದೀರಿ. ಮನುಷ್ಯರ ಬುದ್ಧಿಯಲ್ಲಂತೂ ಏನೂ ಇಲ್ಲ. ರಚಯಿತ ಯಾರೆಂದು ನಿಮ್ಮ ಬುದ್ಧಿಯಲ್ಲಿದೆ. ಈ ಮನುಷ್ಯ ಸೃಷ್ಟಿಯ ರಚಯಿತನೆಂದು ಗಾಯನವಿದೆ ಅಂದಮೇಲೆ ಅವಶ್ಯವಾಗಿ ಅವರು ಕರ್ತವ್ಯದಲ್ಲಿ ಬರುತ್ತಾರೆ.
ನೀವು ತಿಳಿದುಕೊಂಡಿದ್ದೀರಿ, ಆತ್ಮ ಮತ್ತು ಪರಮಾತ್ಮ ತಂದೆಯ ನೆನಪಿರುವ ಮನುಷ್ಯರು ಮತ್ತ್ಯಾರೂ ಇಲ್ಲ. ತಂದೆಯೇ ಜ್ಞಾನವನ್ನು ಕೊಡುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ನೀವು ತಮ್ಮನ್ನು ಶರೀರವೆಂದು ತಿಳಿದು ತಲೆ ಕೆಳಕಾಗಿ ನಿಂತಿದ್ದೀರಿ. ಆತ್ಮವು ಸತ್ಚಿತ್ ಆನಂದ ಸ್ವರೂಪನಾಗಿದೆ. ಆತ್ಮಕ್ಕೆ ಎಲ್ಲದಕ್ಕಿಂತ ಹೆಚ್ಚು ಮಹಿಮೆಯಿದೆ. ಒಬ್ಬ ತಂದೆಯ ಆತ್ಮಕ್ಕೆ ಎಷ್ಟೊಂದು ಮಹಿಮೆಯಿದೆ! ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ಸೊಳ್ಳೆ ಮೊದಲಾದುವುಗಳಿಗೆ ದುಃಖಹರ್ತ-ಸುಖಕರ್ತ, ಜ್ಞಾನ ಸಾಗರನೆಂದು ಮಹಿಮೆ ಮಾಡುವುದಿಲ್ಲ. ಇದು ತಂದೆಯ ಮಹಿಮೆಯಾಗಿದೆ. ನೀವೂ ಸಹ ಪ್ರತಿಯೊಬ್ಬರೂ ದುಃಖಹರ್ತ-ಸುಖಕರ್ತರಾಗಿದ್ದೀರಿ ಏಕೆಂದರೆ ಆ ತಂದೆಯ ಮಕ್ಕಳಾಗಿದ್ದೀರಲ್ಲವೆ, ಯಾರು ಎಲ್ಲರ ದುಃಖವನ್ನು ಹರಿಸಿ, ಸುಖವನ್ನು ಕೊಡುತ್ತಾರೆ ಅದೂ ಅರ್ಧಕಲ್ಪಕ್ಕಾಗಿ. ಈ ಜ್ಞಾನವು ಮತ್ತ್ಯಾರಲ್ಲಿಯೂ ಇಲ್ಲ. ಜ್ಞಾನಪೂರ್ಣನು ಒಬ್ಬರೇ ತಂದೆಯಾಗಿದ್ದಾರೆ. ನಮ್ಮಲ್ಲಿ ಜ್ಞಾನವಿಲ್ಲ. ಒಬ್ಬ ತಂದೆಯನ್ನೇ ತಿಳಿದುಕೊಂಡಿಲ್ಲ ಅಂದಮೇಲೆ ಇನ್ನ್ಯಾವ ಜ್ಞಾನವಿರುವುದು? ಈಗ ನೀವು ಅನುಭವ ಮಾಡುತ್ತೀರಿ - ನಾವು ಮೊದಲು ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದೆವು, ಆದರೆ ಏನನ್ನೂ ತಿಳಿದುಕೊಂಡಿರಲಿಲ್ಲ. ಹೇಗೆ ಚಿಕ್ಕ ಮಕ್ಕಳಲ್ಲಿ ಜ್ಞಾನವು ಇರುವುದಿಲ್ಲ ಮತ್ತು ಯಾವುದೇ ಅವಗುಣಗಳೂ ಇರುವುದಿಲ್ಲ. ಆದ್ದರಿಂದ ಅವರಿಗೆ ಮಹಾತ್ಮರೆಂದು ಹೇಳಲಾಗುತ್ತದೆ ಏಕೆಂದರೆ ಪವಿತ್ರರಾಗಿದ್ದಾರೆ. ಎಷ್ಟು ಚಿಕ್ಕ ಮಗುವೋ ಅಷ್ಟು ನಂಬರ್ವನ್ ಹೂವಾಗಿದೆ. ಅಂತಹವರದು ಹೇಗೆ ಕರ್ಮಾತೀತ ಸ್ಥಿತಿಯಾಗಿದೆ ಏಕೆಂದರೆ ಕರ್ಮ, ವಿಕರ್ಮ ಏನೂ ಗೊತ್ತಿರುವುದಿಲ್ಲ. ಕೇವಲ ತನ್ನನ್ನೇ ತಿಳಿದುಕೊಂಡಿರುತ್ತಾರೆ. ಅವರು ಹೂವಾಗಿದ್ದಾರೆ ಆದ್ದರಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಹೇಗೆ ಶಿವ ತಂದೆಯು ಆಕರ್ಷಿಸುತ್ತಾರಲ್ಲವೆ. ತಂದೆಯು ಬಂದಿರುವುದೇ ನಿಮ್ಮೆಲ್ಲರನ್ನೂ ಹೂಗಳನ್ನಾಗಿ ಮಾಡಲು. ನಿಮ್ಮಲ್ಲಿ ಕೆಲವರು ಬಹಳ ಕೆಟ್ಟ ಮುಳ್ಳುಗಳೂ ಇದ್ದಾರೆ. ಪಂಚ ವಿಕಾರಗಳೆಂಬ ಮುಳ್ಳುಗಳಿವೆಯಲ್ಲವೆ. ಈ ಸಮಯದಲ್ಲಿ ನಿಮಗೆ ಹೂಗಳು ಮತ್ತು ಮುಳ್ಳುಗಳ ಜ್ಞಾನವಿದೆ. ಮುಳ್ಳುಗಳ ಅಡವಿಯೂ ಇರುತ್ತದೆ. ಬಬುಲ್ನ ಮುಳ್ಳು ಎಲ್ಲದಕ್ಕಿಂತ ದೊಡ್ಡದಾಗಿರುತ್ತದೆ. ಆ ಮುಳ್ಳುಗಳಿಂದಲೂ ಬಹಳ ವಸ್ತುಗಳು ತಯಾರಾಗುತ್ತವೆ. ಮನುಷ್ಯರನ್ನು ಹೀಗೆ ಹೋಲಿಕೆ ಮಾಡಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಬಹಳ ದುಃಖವನ್ನು ಕೊಡುವಂತಹ ಮನುಷ್ಯರು ಮುಳ್ಳುಗಳಾಗಿದ್ದಾರೆ. ಆದ್ದರಿಂದ ಇದಕ್ಕೆ ದುಃಖದ ಪ್ರಪಂಚವೆಂದು ಹೇಳಲಾಗುತ್ತದೆ. ತಂದೆಯು ಸುಖದಾತನೆಂದು ಹೇಳುತ್ತಾರೆ. ಮಾಯಾ ರಾವಣನು ದುಃಖದಾತನಾಗಿದ್ದಾನೆ ಮತ್ತೆ ಸತ್ಯಯುಗದಲ್ಲಿ ಮಾಯೆಯೇ ಇರುವುದಿಲ್ಲ. ಆದ್ದರಿಂದ ಈ ಮಾತುಗಳೂ ಇರುವುದಿಲ್ಲ. ಡ್ರಾಮಾದಲ್ಲಿ ಒಂದು ಪಾತ್ರವು ಎರಡು ಬಾರಿ ನಡೆಯಲು ಸಾಧ್ಯವಿಲ್ಲ. ಬುದ್ಧಿಯಲ್ಲಿದೆ - ಇಡೀ ಪ್ರಪಂಚದಲ್ಲಿ ಯಾವ ಪಾತ್ರವು ಅಭಿನಯಿಸಲ್ಪಡುವುದೋ ಅದೆಲ್ಲವೂ ಹೊಸದಾಗಿದೆ. ನೀವು ವಿಚಾರ ಮಾಡಿ, ಸತ್ಯಯುಗದಿಂದ ಹಿಡಿದು ಇಲ್ಲಿಯವರೆಗೆ ದಿನಗಳೂ ಬದಲಾಗುತ್ತಿದೆ. ಚಟುವಟಿಕೆಗಳೂ ಬದಲಾಗುತ್ತಿದೆ. ಆತ್ಮದಲ್ಲಿ ಪೂರ್ಣ 5000 ವರ್ಷಗಳ ಸಂಸ್ಕಾರವು ಅಡಕವಾಗಿದೆ. ಅದು ಬದಲಾಗಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮನಲ್ಲಿ ತನ್ನ ಪಾತ್ರವು ತುಂಬಲ್ಪಟ್ಟಿದೆ. ಈ ಒಂದು ಮಾತನ್ನೂ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಈಗ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿದ್ದೀರಿ. ಇದು ಶಾಲೆಯಲ್ಲವೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಬೇಕಾಗಿದೆ. ತಂದೆಯನ್ನು ನೆನಪು ಮಾಡಿ ಪವಿತ್ರರಾಗುವ ವಿದ್ಯೆಯಾಗಿದೆ. ಇದಕ್ಕೆ ಮೊದಲೇ ನಾವೇ ಈ ರೀತಿಯಾಗಬೇಕೆಂದು ತಿಳಿದುಕೊಂಡಿರಲಿಲ್ಲ. ತಂದೆಯು ಎಷ್ಟು ಸ್ಪಷ್ಟ ಮಾಡಿ ತಿಳಿಸುತ್ತಾರೆ! ನೀವು ಮೊದಲ ನಂಬರಿನಲ್ಲಿ ಈ ರೀತಿಯಿದ್ದಿರಿ, ನಂತರ ಕೆಳಗಿಳಿಯುತ್ತಾ-ಇಳಿಯುತ್ತಾ ಈಗ ಏನಾಗಿ ಬಿಟ್ಟಿದ್ದೀರಿ! ಪ್ರಪಂಚವನ್ನು ನೋಡಿ, ಏನಾಗಿ ಬಿಟ್ಟಿದೆ! ಎಷ್ಟೊಂದು ಜನಸಂಖ್ಯೆಯಿದೆ, ಈ ಲಕ್ಷ್ಮೀ-ನಾರಾಯಣರ ರಾಜಧಾನಿಯ ವಿಚಾರ ಮಾಡಿ, ಅಲ್ಲಿ ಹೇಗಿರುವುದು? ಇವರು ಎಲ್ಲಿರುವರೋ ಅಲ್ಲಿ ಹೇಗೆ ವಜ್ರ ರತ್ನಗಳ ಮಹಲುಗಳಿರುತ್ತವೆ. ಈಗ ಬುದ್ಧಿಯಲ್ಲಿ ಬರುತ್ತದೆ, ನಾವೀಗ ಸ್ವರ್ಗವಾಸಿಗಳಾಗುತ್ತಿದ್ದೇವೆ, ಅಲ್ಲಿ ನಾವು ನಮ್ಮ ಮನೆ ಇತ್ಯಾದಿಗಳನ್ನು ಕಟ್ಟುತ್ತೇವೆ. ಚಿನ್ನದ ದ್ವಾರಿಕೆ ಸಾಗರದಿಂದ ಹೊರ ಬರುತ್ತದೆಯೆಂದಲ್ಲ. ಇದನ್ನು ಶಾಸ್ತ್ರಗಳಲ್ಲಿ ತೋರಿಸಿದ್ದಾರೆ. ಶಾಸ್ತ್ರ ಎಂಬ ಹೆಸರೇ ನಡೆದು ಬರುತ್ತದೆ. ಮತ್ತ್ಯಾವುದೇ ಹೆಸರನ್ನಿಡುವುದಿಲ್ಲ. ಮತ್ತೆಲ್ಲವೂ ವಿದ್ಯೆಯ ಪುಸ್ತಕಗಳಾಗಿರುತ್ತವೆ, ಇನ್ನು ಕೆಲವು ಕಾದಂಬರಿಗಳಿರುತ್ತವೆ, ಬಾಕಿ ಇದಕ್ಕೆ ಮಾತ್ರ ಪುಸ್ತಕ ಅಥವಾ ಶಾಸ್ತ್ರವೆಂದು ಹೇಳುತ್ತಾರೆ. ಅದು ವಿದ್ಯೆಯ ಪುಸ್ತಕಗಳಾಗಿವೆ, ಶಾಸ್ತ್ರಗಳನ್ನು ಓದುವವರಿಗೆ ಭಕ್ತರೆಂದು ಹೇಳಲಾಗುತ್ತದೆ. ಭಕ್ತಿ ಮತ್ತು ಜ್ಞಾನ ಎರಡು ಮಾತುಗಳಿವೆ. ಈಗ ವೈರಾಗ್ಯ ಯಾವುದರ ಮೇಲೆ? ಭಕ್ತಿಯದೋ ಅಥವಾ ಜ್ಞಾನದ ವೈರಾಗ್ಯವೋ? ಅವಶ್ಯವಾಗಿ ಭಕ್ತಿಯ ವೈರಾಗ್ಯವೆಂದು ಹೇಳುತ್ತಾರೆ. ಈಗ ನಿಮಗೆ ಜ್ಞಾನ ಸಿಗುತ್ತಿದೆ, ಇದರಿಂದ ನೀವು ಎಷ್ಟು ಶ್ರೇಷ್ಠರಾಗುತ್ತೀರಿ! ಈಗ ತಂದೆಯು ನಿಮ್ಮನ್ನು ಸುಖದಾಯಿಯನ್ನಾಗಿ ಮಾಡುತ್ತಾರೆ, ಸುಖಧಾಮಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನೀವು ಸುಖಧಾಮದಲ್ಲಿ ಹೋಗುವವರಿದ್ದೀರಿ ಆದ್ದರಿಂದ ನಿಮಗೇ ಓದಿಸುತ್ತಾರೆ. ಈ ಜ್ಞಾನವನ್ನೂ ಸಹ ನಿಮ್ಮ ಆತ್ಮವೇ ತಿಳಿದುಕೊಳ್ಳುತ್ತದೆ. ಆತ್ಮಕ್ಕೆ ಯಾವುದೇ ಧರ್ಮವಿಲ್ಲ, ಅದಂತೂ ಆತ್ಮವೇ ಆಗಿದೆ. ಮತ್ತೆ ಆ ಆತ್ಮವು ಶರೀರದಲ್ಲಿ ಬಂದಾಗ ಶರೀರದ ಧರ್ಮಗಳು ಬೇರೆ-ಬೇರೆಯಿರುತ್ತವೆ. ಆತ್ಮದ ಧರ್ಮ ಯಾವುದು? ಮೊದಲನೆಯದಾಗಿ ಆತ್ಮವು ಬಿಂದು ರೂಪವಾಗಿದೆ ಮತ್ತು ಶಾಂತ ಸ್ವರೂಪನಾಗಿದೆ. ಶಾಂತಿಧಾಮ, ಮುಕ್ತಿಧಾಮದಲ್ಲಿರುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಎಲ್ಲಾ ಮಕ್ಕಳಿಗೆ ಅಧಿಕಾರವಿದೆ. ಅನೇಕ ಮಕ್ಕಳು ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆ. ಅವರು ಮತ್ತೆ ಬಂದು ತಮ್ಮ ಮೂಲ ಧರ್ಮವನ್ನು ಸೇರುತ್ತಾರೆ. ಯಾರು ದೇವಿ-ದೇವತಾ ಧರ್ಮವನ್ನು ಬಿಟ್ಟು ಅನ್ಯ ಧರ್ಮದಲ್ಲಿ ಹೋಗಿದ್ದಾರೆಯೋ ಆ ಎಲ್ಲಾ ಎಲೆಗಳು ಮತ್ತೆ ತಮ್ಮ ಜಾಗಕ್ಕೆ ಹಿಂತಿರುಗಿ ಬರುತ್ತಾರೆ. ಯಾರು ಹಿಂದೂಗಳಿಂದ ಮುಸಲ್ಮಾನರಾಗುವರೋ ಅವರಿಗೆ ಶೇಕ್ ಎಂದು ಹೇಳುತ್ತಾರೆ. ಹೇಗೆ ಶೇಕ್ ಮಹಮ್ಮದ್ ಇತ್ಯಾದಿ, ಇವೆಲ್ಲಾ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ, ಇದರಲ್ಲಿಯೇ ಎಲ್ಲರೂ ತಬ್ಬಿಬ್ಬಾಗಿದ್ದಾರೆ. ನಮಗೆ ಯಾರು ಓದಿಸುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗೆ ಸ್ವಯಂ ತಂದೆಯೇ ಓದಿಸುತ್ತಾರೆ. ಕೃಷ್ಣನಂತೂ ದೇಹಧಾರಿಯಾಗಿದ್ದಾನೆ. ಈ ಬ್ರಹ್ಮಾರವರಿಗೂ ದಾದಾ (ಸಹೋದರ) ಎಂದು ಹೇಳುತ್ತಾರೆ. ಎಲ್ಲರೂ ಸಹೋದರ-ಸಹೋದರರಲ್ಲವೆ. ಸ್ಥಾನದ ಮೇಲೆ ಆಧಾರಿತವಾಗಿದೆ. ಇದು ಸಹೋದರನ ಶರೀರ, ಇದು ಸಹೋದರಿಯ ಶರೀರವಾಗಿದೆ, ಇದನ್ನೂ ನೀವು ಈಗ ತಿಳಿದುಕೊಂಡಿದ್ದೀರಿ. ಆತ್ಮವಂತೂ ಒಂದು ಚಿಕ್ಕ ನಕ್ಷತ್ರ ಮಾದರಿಯಾಗಿದೆ. ಇಷ್ಟು ಚಿಕ್ಕ ನಕ್ಷತ್ರದಲ್ಲಿ ಎಷ್ಟು ದೊಡ್ಡ ಜ್ಞಾನವಿದೆ! ಈ ಆತ್ಮ ನಕ್ಷತ್ರ ಶರೀರವಿಲ್ಲದೆ ಮಾತನಾಡುವುದಕ್ಕೂ ಸಾಧ್ಯವಿಲ್ಲ. ಈ ನಕ್ಷತ್ರವು ಪಾತ್ರವನ್ನಭಿನಯಿಸಲು ಅಂಗಗಳೂ ಬೇಕು. ನಕ್ಷತ್ರಗಳ ಪ್ರಪಂಚವೇ ಬೇರೆಯಾಗಿದೆ ಮತ್ತೆ ಇಲ್ಲಿ ಬಂದು ಆತ್ಮ ನಕ್ಷತ್ರವು ಶರೀರ ಧಾರಣೆ ಮಾಡುತ್ತದೆ. ಅದು ಆತ್ಮಗಳ ಮನೆಯಾಗಿದೆ. ಆತ್ಮವು ಎಷ್ಟು ಚಿಕ್ಕ ಬಿಂದುವಾಗಿದೆ! ಶರೀರವು ದೊಡ್ಡ ವಸ್ತುವಾಗಿದೆ. ಆದ್ದರಿಂದ ಅದನ್ನು ಎಷ್ಟೊಂದು ನೆನಪು ಮಾಡುತ್ತಾರೆ! ನೀವೀಗ ಒಬ್ಬ ಪರಮಪಿತ ಪರಮಾತ್ಮನನ್ನು ನೆನಪು ಮಾಡಬೇಕಾಗಿದೆ. ಆತ್ಮರು ಮತ್ತು ಪರಮಾತ್ಮನ ಮೇಳವೇ ಸತ್ಯ ಮೇಳವಾಗಿದೆ. ಆತ್ಮರು ಪರಮಾತ್ಮನಿಂದ ಬಹುಕಾಲ ಅಗಲಿದ್ದರೆಂದು ಗಾಯನವಿದೆ. ನಾವು ತಂದೆಯಿಂದ ಅಗಲಿದ್ದೆವಲ್ಲವೆ. ಎಷ್ಟೊಂದು ಸಮಯ ಅಗಲಿ ಹೋಗಿದ್ದೆವು ಎಂದು ನೆನಪು ಬರುತ್ತದೆ. ತಂದೆಯು ಕಲ್ಪ-ಕಲ್ಪವೂ ಏನನ್ನು ತಿಳಿಸುತ್ತಾ ಬಂದಿದ್ದಾರೆ ಅದನ್ನೇ ಬಂದು ತಿಳಿಸುತ್ತಾರೆ. ಇದರಲ್ಲಿ ಸ್ವಲ್ಪವೂ ಅಂತರವಾಗಲು ಸಾಧ್ಯವಿಲ್ಲ. ಕ್ಷಣ-ಪ್ರತಿಕ್ಷಣ ನಡೆಯುತ್ತದೆಯೋ ಅದು ಹೊಸದಾಗಿದೆ. ಒಂದು ಕ್ಷಣವು ಕಳೆಯುತ್ತದೆ, ಒಂದು ನಿಮಿಷ ಕಳೆಯುತ್ತದೆ, ಅದನ್ನು ಹೇಗೆ ಬಿಡುತ್ತಾ ಹೋಗುತ್ತಾರೆ. ಎಲ್ಲವೂ ಕಳೆಯುತ್ತಾ ಹೋಗುತ್ತದೆ. ಆದ್ದರಿಂದಲೇ ಇಷ್ಟು ವರ್ಷಗಳು, ಇಷ್ಟು ದಿನಗಳು, ನಿಮಿಷಗಳು, ಇಷ್ಟು ಸೆಕೆಂಡುಗಳನ್ನು ಪಾರು ಮಾಡಿ ಬಂದಿದ್ದೇವೆಂದು ಹೇಳುತ್ತಾರೆ. ಪೂರ್ಣ 5000 ವರ್ಷಗಳಿದೆ. ಪುನಃ ಅದು ಒಂದರಿಂದ ಆರಂಭವಾಗುವುದು. ನಿಖರವಾದ ಲೆಕ್ಕವಲ್ಲವೆ. ಕ್ಷಣ, ನಿಮಿಷ ಎಲ್ಲವನ್ನೂ ಬರೆಯುತ್ತಾರೆ. ಈಗ ನಿಮ್ಮೊಂದಿಗೆ ಇವರು ಯಾವಾಗ ಜನ್ಮ ಪಡೆದಿದ್ದರೋ ಎಂದು ಯಾರಾದರೂ ಕೇಳಿದರೆ ನೀವು ಲೆಕ್ಕ ಮಾಡಿ ತಿಳಿಸುತ್ತೀರಿ. ಕೃಷ್ಣನು ಮೊದಲನೇ ನಂಬರಿನಲ್ಲಿ ಜನ್ಮ ಪಡೆದಿದ್ದಾನೆ. ಶಿವನ ಅವತರಣೆಯ ನಿಮಿಷ, ಕ್ಷಣ ಏನನ್ನೂ ನೀವು ಲೆಕ್ಕ ಮಾಡಲು ಸಾಧ್ಯವಿಲ್ಲ. ಕೃಷ್ಣನ ತಿಥಿ-ತಾರೀಖು ಎಲ್ಲವೂ ಬರೆಯಲ್ಪಟ್ಟಿದೆ. ಮನುಷ್ಯರ ಗಡಿಯಾರದಲ್ಲಿ ನಿಮಿಷ, ಸೆಕೆಂಡುಗಳ ಅಂತರವಾಗಲೂಬಹುದು. ಆದರೆ ಶಿವ ತಂದೆಯ ಅವತರಣೆಯಲ್ಲಿ ಏನೂ ಅಂತರವಾಗಲು ಸಾಧ್ಯವಿಲ್ಲ. ಯಾವಾಗ ಬಂದರು ಎಂಬುದು ತಿಳಿಯುವುದೂ ಇಲ್ಲ. ಸಾಕ್ಷಾತ್ಕಾರವಾಯಿತು ಆಗ ಬಂದರು ಎಂದಲ್ಲ. ಕೇವಲ ಅಂದಾಜಿನಿಂದ ಹೇಳಿ ಬಿಡುತ್ತಾರೆ ಆದರೆ ಆ ಸಮಯದಲ್ಲಿ ಪ್ರವೇಶವಾದರು ಎಂದಲ್ಲ. ನಾನೇ ಈ ರೀತಿಯಾಗುತ್ತೇನೆ ಎಂದು ಸಾಕ್ಷಾತ್ಕಾರವಾಯಿತು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸುಖಧಾಮದಲ್ಲಿ ಹೋಗಲು ಸುಖದಾಯಿಯಾಗಬೇಕಾಗಿದೆ. ಎಲ್ಲರ ದುಃಖವನ್ನು ದೂರ ಮಾಡಿ ಸುಖ ಕೊಡಬೇಕಾಗಿದೆ. ಎಂದೂ ದುಃಖದಾಯಿ ಮುಳ್ಳು ಆಗಬಾರದು.
2. ಈ ವಿನಾಶೀ ಶರೀರದಲ್ಲಿ ಆತ್ಮವೇ ಅತ್ಯಮೂಲ್ಯವಾಗಿದೆ. ಅದೇ ಅಮರ, ಅವಿನಾಶಿಯಾಗಿದೆ ಆದ್ದರಿಂದ ಅವಿನಾಶಿ ವಸ್ತುವಿನೊಂದಿಗೆ ಪ್ರೀತಿಯನ್ನಿಡಬೇಕಾಗಿದೆ. ದೇಹದ ಅಭಿಮಾನವನ್ನು ಕಳೆಯಬೇಕಾಗಿದೆ.
18 ಜನವರಿ, ಪಿತಾಶ್ರೀ ಜೀಯವರ ಪುಣ್ಯ ಸ್ಮೃತಿ ದಿವಸದಂದು ಬೆಳಗಿನ ಕ್ಲಾಸ್ನಲ್ಲಿ ಓದಲು - ಬಾಪ್ ದಾದಾರವರ ಅಮೂಲ್ಯ ಮಹಾವಾಕ್ಯ
“ಮಧುರ ಮಕ್ಕಳೇ - ಒಬ್ಬ ತಂದೆಯ ನೆನಪಿನಿಂದ ನೀವು ಸುಪ್ರೀಮ್ ಆಗಬೇಕಾದರೆ ಅಪ್ಪಿ-ತಪ್ಪಿಯೂ ಸಹ ಬೇರೆ ಯಾರನ್ನೂ ನೆನಪು ಮಾಡಬಾರದು”
ಓಂ ಶಾಂತಿ. ಬೇಹದ್ದಿನ ತಂದೆ ಕುಳಿತು ಮಕ್ಕಳಿಗೆ ತಿಳುವಳಿಕೆ ನೀಡುತ್ತಿದ್ದಾರೆ - ಮಧುರ ಮಕ್ಕಳೇ ನಿಮ್ಮನ್ನು ಆತ್ಮ ಎಂದು ತಿಳಿದು ನಾನು ತಂದೆಯನ್ನು ನೆನಪು ಮಾಡಿ ಮತ್ತು ನಿಮ್ಮ ಮನೆಯನ್ನು ನೆನಪು ಮಾಡಿ ಅದಕ್ಕೆ ಹೇಳಲಾಗುವುದು ಟವರ್ ಆಫ್ ಸೈಲೆನ್ಸ್ (ಶಾಂತಿ ಸ್ಥಂಭ). ಟವರ್ ಆಫ್ ಸುಖ. ಟವರ್ ಎಂದರೆ ಬಹಳ ಎತ್ತರದಲ್ಲಿರುತ್ತದೆ. ನೀವು ಅಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿರುವಿರಿ. ಎತ್ತರದಲ್ಲಿ ಎತ್ತರ ಟವರ್ ಆಫ್ ಸೈಲೆನ್ಸ್ ಮೇಲೆ ನೀವು ಹೇಗೆ ಹೋಗಲು ಸಾಧ್ಯ, ಇಲ್ಲಿಯೂ ಸಹ ಟವರ್ನಲ್ಲಿ ವಾಸಿಸುವ ತಂದೆ ಕುಳಿತು ಕಲಿಸುತ್ತಿದ್ದಾರೆ. ಮಕ್ಕಳೇ, ನಿಮ್ಮನ್ನು ಆತ್ಮ ಎಂದು ತಿಳಿಯಿರಿ. ನಾವು ಆತ್ಮಗಳು ಶಾಂತಿಧಾಮದ ನಿವಾಸಿಗಳು. ಅದಾಗಿದೆ ತಂದೆಯ ಮನೆ. ಇದಕ್ಕೆ ನಡೆಯುತ್ತಾ ತಿರುಗಾಡುತ್ತಾ ಅಭ್ಯಾಸ ಮಾಡಬೇಕು. ನಿಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ ಮತ್ತು ಶಾಂತಿಧಾಮ, ಸುಖಧಾಮವನ್ನು ಸೆನಪು ಮಾಡಿ. ತಂದೆಗೆ ಗೊತ್ತಿದೆ ಇದರಲ್ಲೇ ಪರಿಶ್ರಮವಿದೆ ಎಂದು. ಯಾರು ಆತ್ಮ ಅಭಿಮಾನಿಯಾಗಿರುತ್ತಾರೆ ಅವರಿಗೆ ಹೇಳಲಾಗುವುದು ಮಹಾವೀರ. ನೆನಪಿನಿಂದಲೇ ನೀವು ಮಹಾವೀರ, ಸುಪ್ರೀಮ್ ಆಗುವಿರಿ. ಸುಪ್ರೀಮ್ ಅರ್ಥಾತ್ ಶಕ್ತಿಶಾಲಿ.
ಮಕ್ಕಳಿಗೆ ಖುಷಿಯಾಗಬೇಕು - ಸ್ವರ್ಗದ ಮಾಲೀಕರನ್ನಾಗಿ ಮಾಡುವಂತಹ ಬಾಬಾ, ವಿಶ್ವದ ಮಾಲೀಕರನ್ನಾಗಿ ಮಾಡುವಂತಹ ಬಾಬಾ ನಮಗೆ ಓದಿಸುತ್ತಿದ್ದಾರೆ. ಆತ್ಮದ ಬುದ್ಧಿ ತಂದೆಯ ಕಡೆ ಹೋಗಿ ಬಿಡುವುದು. ಇದಾಗಿದೆ - ಆತ್ಮನ ಪ್ರೀತಿ ಒಬ್ಬ ತಂದೆಯ ಜೊತೆ. ಬೆಳ್ಳಿಗ್ಗೆ-ಬೆಳ್ಳಿಗ್ಗೆ ಎದ್ದು ಬಾಬಾರವರ ಜೊತೆ ಮಧುರ ವಾರ್ತಾಲಾಪ ಮಾಡಿ. ಬಾಬಾ ನಿಮ್ಮದು ಚಮತ್ಕಾರವಾಗಿದೆ, ನಮ್ಮ ಸ್ವಪ್ನದಲ್ಲೇ ಇರಲಿಲ್ಲ. ನೀವು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುವಿರೆಂದು. ಬಾಬಾ ನಾವು ನಿಮ್ಮ ಶಿಕ್ಷಣದ ಮೇಲೆ ಖಂಡಿತ ನಡೆಯುತ್ತೇವೆ. ಯಾವುದೇ ಪಾಪದ ಕೆಲಸ ಮಾಡುವುದಿಲ್ಲ. ಬಾಬಾನ ತರಹ ಪುರುಷಾರ್ಥ ಮಾಡುತ್ತೇವೆ, ಮಕ್ಕಳಿಗೂ ಸಹ ಹೇಳುತ್ತೇವೆ. ಶಿವಬಾಬಾನಿಗೆ ಎಷೋಂದು ಮಕ್ಕಳಿದ್ದಾರೆ, ಖಾಳಜಿಯಂತೂ ಇರುವುದಲ್ಲವೆ, ಎಷ್ಟು ಮಕ್ಕಳ ಸಂಭಾಲನೆಯಾಗುತ್ತದೆ, ಇಲ್ಲಿ ನೀವು ಈಶ್ವರೀಯ ಪರಿವಾರದಲ್ಲಿ ಕುಳಿತಿರುವಿರಿ. ತಂದೆ ಸಮ್ಮುಖದಲ್ಲಿ ಕುಳಿತಿದ್ದಾರೆ. ನಿಮ್ಮ ಜೊತೆಯಲ್ಲೇ ತಿನ್ನುವೆವು, ನಿಮ್ಮ ಜೊತೆಯಲ್ಲೇ ಕುಳಿತುಕೊಳ್ಳುವೆವು..... ನೀವು ತಿಳಿದಿರುವಿರಿ ಶಿವಬಾಬಾ ಇವರಲ್ಲಿ ಬಂದು ಹೇಳುತ್ತಾರೆ - ಮಧುರ ಮಕ್ಕಳೇ ಮಾಮೇಕಮ್ ಯಾದ್ ಕರೋ (ನನ್ನೊಬ್ಬನನ್ನೇ ನೆನಪು ಮಾಡಿ). ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನೂ ಮರೆತು ಬಿಡಿ. ಇದು ಅಂತಿಮ ಜನ್ಮವಾಗಿದೆ. ಈ ಹಳೆಯ ಜಗತ್ತು, ಹಳೆಯ ದೇಹ ಸಮಾಪ್ತಿಯಾಗುವುದಿದೆ. ಗಾದೆ ಮಾತೂ ಇದೆ ನೀವು ಸತ್ತರೆ ನಿಮ್ಮ ಪಾಲಿಗೆ ಜಗತ್ತೇ ಸತ್ತ ಹಾಗೆ ಎಂದು. ಪುರುಷಾರ್ಥಕ್ಕಾಗಿ ಸಂಗಮಯುಗದ ಸ್ವಲ್ಪವೇ ಸಮಯ ಬಾಕಿಯಿದೆ. ಮಕ್ಕಳು ಕೇಳುತ್ತಾರೆ ಈ ವಿದ್ಯೆ ಎಲ್ಲಿಯವರೆಗೆ ನಡೆಯುತ್ತೆ? ಎಂದು. ಎಲ್ಲಿಯವರೆಗೆ ದೈವಿ ರಾಜಧಾನಿ ಸ್ಥಾಪನೆಯಾಗುವುದು ಅಲ್ಲಿಯವರೆಗೆ ನಿಮಗೆ ಹೇಳುತ್ತಲೇ ಇರುವೆನು. ನಂತರ ಟ್ರಾನ್ಸ್ಫರ್ ಆಗುವುದು ಹೊಸ ಪ್ರಪಂಚಕ್ಕೆ. ಇದು ಹಳೆಯ ಶರೀರವಾಗಿದೆ, ಏನಾದರೂ ಒಂದು ಕರ್ಮ ಭೋಗ ನಡೆಯುತ್ತಾ ಇರುತ್ತದೆ. ಇದರಲ್ಲಿ ಬಾಬಾ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಇಟ್ಟುಕೊಳ್ಳಬೇಡಿ. ದೀವಾಳಿ ಆಯಿತು, ಖಾಯಿಲೆ ಆಯಿತು - ತಂದೆ ಹೇಳುತ್ತಾರೆ ಇದು ನಿಮ್ಮ ಲೆಕ್ಕಾಚಾರವಾಗಿದೆ. ಹಾ! ಆದರೂ ಯೋಗದಿಂದ ಆಯಸ್ಸು ವೃದ್ಧಿಯಾಗುವುದು. ನೀವು ನಿಮ್ಮ ಪರಿಶ್ರಮ ಪಡಿ, ಕೃಪೆ ಬೇಡ ಬೇಡಿ. ತಂದೆಯನ್ನು ಎಷ್ಟು ನೆನಪು ಮಾಡುವಿರಿ ಅದರಲ್ಲೆ ಕಲ್ಯಾಣವಿದೆ. ಎಷ್ಟು ಸಾಧ್ಯವೋ ಅಷ್ಟು ಯೋಗಬಲದಿಂದ ಕೆಲಸ ತೆಗೆದುಕೊಳ್ಳಿ. ಹಾಡುವಿರಲ್ಲವೆ - ನನ್ನನ್ನು ಕಣ್ಣಿನ ರೆಪ್ಪೆಗಳಲ್ಲಿ ಮುಚ್ಚಿಟ್ಟುಕೊಳ್ಳಿ..... ಪ್ರಿಯ ವಸ್ತುವನ್ನು ಕಣ್ಮಣಿ, ಪ್ರಾಣ ಪ್ರೀಯ ಎಂದು ಹೇಳುತ್ತಾರೆ. ಈ ತಂದೆಯಂತೂ ಬಹಳ ಪ್ರಿಯರಾಗಿದ್ದಾರೆ, ಆದರೆ ಗುಪ್ತ. ಅವರ ಮೇಲೆ ಪ್ರೀತಿ ಹೀಗೆ ಇರಬೇಕು ಅದರ ಮಾತೇ ಕೇಳಬೇಡಿ. ಮಕ್ಕಳಿಗಂತೂ ತಂದೆಯನ್ನು ಕಣ್ಣಿನ ರೆಪ್ಪೆಯಲ್ಲಿ ಮುಚ್ಚಿಕೊಳ್ಳಬೇಕು. ರೆಪ್ಪೆಗಳೆಂದರೆ ಈ ಕಣ್ಣುಗಳಲ್ಲ. ಅದಂತೂ ಬುದ್ಧಿಯಲ್ಲಿ ನೆನಪಿಡಬೇಕು. ಅತೀ ಪ್ರೀತಿಯ ನಿರಾಕಾರ ತಂದೆ ನಮಗೆ ಓದಿಸುತ್ತಿದ್ದಾರೆ. ಅವರು ಜ್ಞಾನ ಸಾಗರ, ಸುಖ ಸಾಗರ, ಪ್ರೀತಿಯ ಸಾಗರ ಆಗಿದ್ದಾರೆ. ಈ ರೀತಿಯ ಅತೀ ಪ್ರಿಯ ತಂದೆಯ ಜೊತೆ ಎಷ್ಟು ಪ್ರೀತಿಯಿಂದಿರಬೇಕು. ಮಕ್ಕಳಿಗೆ ಎಷ್ಟೊಂದು ಸ್ವಾರ್ಥ ರಹಿತ ಸೇವೆ ಮಾಡುತ್ತಾರೆ. ಪತಿತ ಶರೀರದಲ್ಲಿ ಬಂದು ಮಕ್ಕಳನ್ನು ವಜ್ರ ಸಮಾನ ಮಾಡುತ್ತಾರೆ. ಎಷ್ಟು ಮಧುರ ಬಾಬಾ ಆಗಿದ್ದಾರೆ. ಆದ್ದರಿಂದ ಮಕ್ಕಳೂ ಸಹ ಅಷ್ಟು ಮಧುರರಾಗಬೇಕು. ಬಾಬಾ ನೀವು ಎಷ್ಟು ನಿರಹಂಕಾರಿಯಾಗಿ ಮಕ್ಕಳ ಸೇವೆ ಮಾಡುವಿರಿ, ಆದ್ದರಿಂದ ನೀವು ಮಕ್ಕಳೂ ಸಹ ಅಷ್ಟು ಸೇವೆ ಮಾಡಬೇಕು. ಶ್ರೀಮತದ ಮೇಲೆ ನಡೆಯಬೇಕು. ಎಲ್ಲಾದರೂ ನಿಮ್ಮ ಮತದಂತೆ ನಡೆದರೆ ನಿಮ್ಮ ಅದೃಷ್ಟಕ್ಕೆ ಬರೆ ಎಳೆದುಕೊಂಡು ಬಿಡುವಿರಿ. ನೀವು ಬ್ರಾಹ್ಮಣರು ಈಶ್ವರೀಯ ಸಂತಾನರಾಗಿರುವಿರಿ. ಬ್ರಹ್ಮಾರವರ ಸಂತಾನ ಸಹೋದರ-ಸಹೋದರಿ ಆಗಿರುವಿರಿ. ಈಶ್ವರೀಯ ಮೊಮ್ಮಗ-ಮೊಮ್ಮಗಳು ಆಗಿರುವಿರಿ. ಅವರಿಂದ ಆಸ್ತಿ ಪಡೆಯುತ್ತಿರುವಿರಿ. ಎಷ್ಟು ಪುರುಷಾರ್ಥ ಮಾಡುವಿರಿ ಅಷ್ಟು ಪದವಿಯನ್ನು ಪಡೆಯುವಿರಿ. ಇದರಲ್ಲಿ ಸಾಕ್ಷಿಯಾಗಿರುವುದಕ್ಕೂ ಸಹ ಬಹಳ ಅಭ್ಯಾಸ ಬೇಕು. ಬಾಬಾ ಹೇಳುತ್ತಾರೆ, ಮಧುರ ಮಕ್ಕಳೇ, ಹೇ ಆತ್ಮರೇ ಮಾಮೇಕಮ್ ಯಾದ್ ಕರೊ (ನನ್ನೊಬ್ಬನನ್ನೇ ನೆನಪು ಮಾಡಿ). ಅಪ್ಪಿ ತಪ್ಪಿಯೂ ಸಹ ತಂದೆಯ ವಿನಹ ಬೇರೆ ಯಾರನ್ನೂ ನೆನಪು ಮಾಡಬೇಡಿ. ನಿಮ್ಮ ಪ್ರತಿಜ್ಞೆಯಾಗಿದೆ ಬಾಬಾ ನನಗಂತೂ ನೀವೊಬ್ಬರೇ ಆಗಿರುವಿರಿ. ನಾವು ಆತ್ಮ ಆಗಿದ್ದೇವೆ, ನೀವು ಪರಮಾತ್ಮ ಆಗಿರುವಿರಿ, ನಿಮ್ಮಿಂದಲೇ ಆಸ್ತಿಯನ್ನು ಪಡೆಯಬೇಕು. ನಿಮ್ಮಿಂದಲೇ ರಾಜಯೋಗವನ್ನು ಕಲಿಯುತ್ತಿದ್ದೇವೆ, ಯಾವುದರಿಂದ ರಾಜ್ಯ-ಭಾಗ್ಯ ಪಡೆಯುತ್ತೇವೆ.
ಮಧುರ ಮಕ್ಕಳೇ, ನೀವು ತಿಳಿದಿರುವಿರಿ ಇದು ಅನಾದಿ ಡ್ರಾಮ ಆಗಿದೆ. ಇದರಲ್ಲಿ ಸೋಲು ಗೆಲುವಿನ ಆಟ ನಡೆಯುತ್ತಿರುತ್ತದೆ. ಏನಾಗುತ್ತಿದೆ ಅದು ಸರಿಯಾಗಿದೆ. ರಚೈತನಿಗೆ ಡ್ರಾಮ ಖಂಡಿತ ಇಷ್ಟವಾಗಿರುವುದಲ್ಲವೇ, ಆದ್ದರಿಂದ ರಚೈತನ ಮಕ್ಕಳಿಗೂ ಸಹ ಇಷ್ಟವಾಗಬೇಕು. ಈ ಡ್ರಾಮದಲ್ಲಿ ತಂದೆ ಒಂದೇ ಬಾರಿ ಮಕ್ಕಳ ಬಳಿ ಮಕ್ಕಳಿಗೆ ಹೃದಯ ಪೂರ್ವಕವಾದ ಪ್ರೀತಿಯಿಂದ ಸೇವೆ ಮಾಡಲು ಬರುತ್ತಾರೆ. ತಂದೆಗಂತೂ ಎಲ್ಲಾ ಮಕ್ಕಳ ಮೇಲೆ ಪ್ರೀತಿಯಿದೆ. ನೀವು ತಿಳಿದಿರುವಿರಿ ಸತ್ಯಯುಗದಲ್ಲಿಯೂ ಸಹ ಎಲ್ಲರೂ ಒಬ್ಬರು ಇನ್ನೊಬ್ಬರನ್ನು ಬಹಳ ಪ್ರೀತಿ ಮಾಡುತ್ತಾರೆ. ಪ್ರಾಣಿಗಳಲ್ಲಿಯೂ ಸಹ ಪ್ರೀತಿಯಿರುತ್ತದೆ. ಈ ರೀತಿ ಯಾವುದೇ ಪ್ರಾಣಿಗಳಿರುವುದಿಲ್ಲ, ಯಾವುದು ಪ್ರೀತಿಯಿಂದ ಇಲ್ಲದೇ ಇರುವುದು. ಆದ್ದರಿಂದ ನೀವು ಮಕ್ಕಳು ಇಲ್ಲಿ ಮಾಸ್ಟರ್ ಪ್ರೀತಿಯ ಸಾಗರರಾಗಬೇಕು. ಇಲ್ಲಿ ಆದಾಗ ಅಲ್ಲಿ ಸಂಸ್ಕಾರ ಅವಿನಾಶಿಯಾಗಿ ಬಿಡುವುದು. ತಂದೆ ಹೇಳುತ್ತಾರೆ ಕಲ್ಪದ ಹಿಂದಿನಂತೆ ಪುನಃ ಪ್ರಿಯರನ್ನಾಗಿ ಮಾಡಲು ಬಂದಿರುವೆನು. ಎಂದಾದರೂ ಯಾವುದೇ ಮಕ್ಕಳು ಕೋಪದಿಂದ ಕೂಗಾಡುವುದನ್ನು ಕೇಳಿದರೆ ತಂದೆ ಶಿಕ್ಷಣ ಕೊಡುತ್ತಾರೆ ಮಗು, ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ, ಇದರಿಂದ ನೀನು ದುಃಖಿಯಾಗುವೆ ಬೇರೆಯವರನ್ನೂ ಸಹ ದುಃಖಿಗಳನ್ನಾಗಿ ಮಾಡುವೆ. ತಂದೆ ಸದಾಕಾಲಕ್ಕೆ ಸುಖವನ್ನು ಕೊಡುವವರಾಗಿದ್ದಾರೆ. ಆದ್ದರಿಂದ ಮಕ್ಕಳಿಗೂ ಸಹ ತಂದೆ ಸಮಾನರಾಗಬೇಕು. ಒಬ್ಬರಿನ್ನೊಬ್ಬರಿಗೆ ಎಂದೂ ದುಃಖವನ್ನು ಕೊಡಬಾರದು.
ನೀವು ಮಕ್ಕಳು ತಿಳಿದುಕೊಂಡಿರುವಿರಿ, ಶಿವಬಾಬಾ ಆಗಿದ್ದಾರೆ ಬೆಳಗಿನ ಸ್ವಾಮಿ (ಸುಬೋ ಕ ಸಾಯಿ)..... ರಾತ್ರಿಯನ್ನು ಹಗಲು ಮಾಡುವಂತಹವರಾಗಿದ್ದಾರೆ. ಸಾಯಿ ಎಂದು ಬೇಹದ್ದಿನ ತಂದೆಗೆ ಹೇಳಲಾಗುವುದು. ಅವರೊಬ್ಬರೇ ಸಾಯಿಬಾಬಾ ಆಗಿದ್ದಾರೆ. ಹೆಸರೇ ಆಗಿದೆ ಭೋಲಾನಾಥ. ಭೋಲಿ-ಭೋಲಿ ಕನ್ಯೆಯರು, ಮಾತೆಯರ ಮೇಲೆ ಜ್ಞಾನದ ಕಳಸ ಇಡುತ್ತಾರೆ. ಅವರನ್ನೇ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಎಷ್ಟು ಸಹಜ ಉಪಾಯ ತಿಳಿಸುತ್ತಾರೆ. ಎಷ್ಟು ಪ್ರೀತಿಯಿಂದ ನಿಮ್ಮನ್ನು ಜ್ಞಾನದಿಂದ ಪಾಲನೆ ಮಾಡುತ್ತಾರೆ. ಆತ್ಮನನ್ನು ಪಾವನ ಮಾಡಲು ನೆನಪಿನ ಯಾತ್ರೆಯಲ್ಲಿರಿ. ಯೋಗದ ಸ್ನಾನ ಮಾಡಬೇಕು. ಜ್ಞಾನ ಆಗಿದೆ ವಿದ್ಯೆ, ಯೋಗ ಸ್ನಾನದಿಂದ ಪಾಪ ಭಸ್ಮ ಆಗುವುದು. ನಿಮ್ಮನ್ನು ಆತ್ಮ ಎಂದು ತಿಳಿಯುವ ಅಭ್ಯಾಸ ಮಾಡುತ್ತಿರಿ, ಆಗ ಈ ದೇಹದ ಅಹಂಕಾರ ಪೂರ್ತಿ ಮುರಿದು ಹೋಗುವುದು. ಯೋಗದಿಂದಲೇ ಪವಿತ್ರ ಸತೋಪ್ರಧಾನರಾಗಿ ಬಾಬಾರವರ ಬಳಿ ಹೋಗಬೇಕಾಗಿದೆ. ಕೆಲವು ಮಕ್ಕಳು ಈ ಮಾತುಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದಿಲ್ಲ. ಸತ್ಯ-ಸತ್ಯ ತಮ್ಮ ಚಾರ್ಟ್ ಹೇಳುವುದಿಲ್ಲ. ಅರ್ಧಕಲ್ಪ ಸುಳ್ಳಿನ ಪ್ರಪಂಚದಲ್ಲಿದ್ದಿರಿ ಆದ್ದರಿಂದ ಸುಳ್ಳು ಒಳಗೆ ಸೇರಿಕೊಂಡು ಬಿಟ್ಟಿದೆ. ಸತ್ಯತೆಯಿಂದ ನಿಮ್ಮ ಚಾರ್ಟ್ ತಂದೆಗೆ ಒಪ್ಪಿಸಬೇಕಾಗಿದೆ. ಚೆಕ್ ಮಾಡಿಕೊಳ್ಳಬೇಕು - ನಾವು ಮುಕ್ಕಾಲು ಘಂಟೆ ಕುಳಿತುಕೊಂಡರೆ ಅದರಲ್ಲಿ ಎಷ್ಟು ಸಮಯ ನಮ್ಮನ್ನು ಆತ್ಮ ಎಂದು ಅರ್ಥ ಮಾಡಿಕೊಂಡು ತಂದೆಯನ್ನು ನೆನಪು ಮಾಡಿದೆ! ಕೆಲವರಿಗೆ ಸತ್ಯ ಹೇಳಲು ನಾಚಿಕೆಯಾಗುತ್ತೆ. ಇದಂತು ತಕ್ಷಣ ಹೇಳುತ್ತಾರೆ ಇಷ್ಟು ಸೇವೆ ಮಾಡಿದೆ, ಇಷ್ಟು ಜನಕ್ಕೆ ಜ್ಞಾನ ತಿಳಿಸಿದೆ ಆದರೆ ನೆನಪಿನ ಚಾರ್ಟ್ ಎಷ್ಟಿತ್ತು, ಇದನ್ನು ಸತ್ಯವಾಗಿ ಹೇಳುವುದಿಲ್ಲ. ನೆನಪಿನಲ್ಲಿರದ ಕಾರಣವೇ ನಿಮ್ಮ ಬಾಣ ಯಾರಿಗೂ ನಾಟುವುದಿಲ್ಲ. ಜ್ಞಾನದ ಖಡ್ಗದಲ್ಲಿ ಹರಿತ ಇರುವುದಿಲ್ಲ. ಕೆಲವರು ಹೇಳುತ್ತಾರೆ ನಾನಂತೂ ನಿರಂತರ ನೆನಪಿನಲ್ಲಿರುತ್ತೇನೆ, ಬಾಬಾ ಹೇಳುತ್ತಾರೆ ಅವರು ಆ ಅವಸ್ಥೆಯಲ್ಲೇ ಇಲ್ಲ. ನಿರಂತರ ನೆನಪಿನಲ್ಲಿದ್ದಿದ್ದೇ ಆದರೆ ಕರ್ಮಾತೀತ ಅವಸ್ಥೆ ಆಗಿ ಬಿಡಬೇಕಿತ್ತು. ಜ್ಞಾನದ ಪರಾಕಾಷ್ಠ ಕಂಡು ಬರಬೇಕು, ಇದರಲ್ಲಿ ದೊಡ್ಡ ಪರಿಶ್ರಮವಿದೆ. ವಿಶ್ವದ ಮಾಲೀಕ ಹಾಗೆಯೇ ಸುಮ್ಮನೆ ಆಗಿ ಬಿಡುವುದಿಲ್ಲ. ಒಬ್ಬ ತಂದೆಯ ವಿನಹ ಬೇರೆ ಯಾರದೂ ನೆನಪಿರಬಾರದು. ಈ ದೇಹವೂ ಸಹ ನೆನಪಿಗೆ ಬರಬಾರದು. ಈ ಅವಸ್ಥೆ ನಿಮಗೆ ಅಂತ್ಯದಲ್ಲಿ ಆಗುವುದು. ನೆನಪಿನ ಯಾತ್ರೆಯಿಂದಲೇ ನಿಮ್ಮ ಸಂಪಾದನೆ ಆಗುತ್ತಿರುವುದು. ಒಂದುವೇಳೆ ಶರೀರ ಬಿಟ್ಟರೆ ಮತ್ತೆ ಸಂಪಾದನೆ ಮಾಡಲಾಗುವುದಿಲ್ಲ. ಭಲೆ ಆತ್ಮ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ ಆದರೆ ಟೀಚರ್ ಅಂತೂ ಬೇಕಲ್ಲವೇ ನಮಗೆ ಪುನಃ ಸ್ಮತಿ ತರಿಸಲು. ತಂದೆ ಘಳಿಗೆ-ಘಳಿಗೆ ಸ್ಮತಿ ತರಿಸುತ್ತಿರುತ್ತಾರೆ. ಈ ರೀತಿ ಬಹಳ ಮಕ್ಕಳಿದ್ದಾರೆ ಯಾರು ಗೃಹಸ್ಥ ವ್ಯವಹಾರದಲ್ಲಿರುತ್ತಾ, ನೌಕರಿ ಇತ್ಯಾದಿಯನ್ನೂ ಮಾಡುತ್ತಾ ಇನ್ನೂ ಉನ್ನತ ಪದವಿಯನ್ನು ಪಡೆಯಲು ಶ್ರೀಮತದಂತೆ ನಡೆದು ತಮ್ಮ ಭವಿಷ್ಯವನ್ನೂ ಸಹ ಜಮಾ ಮಾಡಿಕೊಳ್ಳುತ್ತಿರುತ್ತಾರೆ. ಬಾಬಾರವರಿಂದ ಸಲಹೆಯನ್ನು ಪಡೆಯುತ್ತಿರುತ್ತಾರೆ. ಹಣ ಇದೆ ಅದನ್ನು ಹೇಗೆ ಸಫಲ ಮಾಡಿಕೊಳ್ಳುವುದು., ಬಾಬಾ ಹೇಳುತ್ತಾರೆ ಸೆಂಟರ್ ತೆರೆಯಿರಿ, ಅದರಿಂದ ಬಹಳ ಜನರ ಕಲ್ಯಾಣವಾಗುವುದು. ಮನುಷ್ಯರು ದಾನ ಪುಣ್ಯ ಇತ್ಯಾದಿ ಮಾಡುತ್ತಾರೆ, ಮುಂದಿನ ಜನ್ಮದಲ್ಲಿ ಅದರ ಫಲ ಸಿಗುತ್ತದೆ. ನಿಮಗೂ ಸಹ ಭವಿಷ್ಯ 21 ಜನ್ಮಕ್ಕಾಗಿ ರಾಜ್ಯಭಾಗ್ಯ ಸಿಗುತ್ತದೆ. ಇದು ನಿಮ್ಮ ನಂಬರ್ಒನ್ ಬ್ಯಾಂಕ್ ಆಗಿದೆ, ಇದರಲ್ಲಿ 4 ಆಣೆ ಹಾಕಿದರೆ ಭವಿಷ್ಯದಲ್ಲಿ ಸಾವಿರ ಆಗಿ ಬಿಡುವುದು. ಕಲ್ಲಿನಿಂದ ಪಾರಸ ಆಗಿ ಬಿಡುವುದು. ನಿಮ್ಮ ಪ್ರತಿ ವಸ್ತು ಪಾರಸ ಆಗಿ ಬಿಡುವುದು. ಬಾಬಾ ಹೇಳುತ್ತಾರೆ - ಮಧುರ ಮಕ್ಕಳೇ ಉನ್ನತ ಪದವಿ ಪಡೆಯ ಬೇಕೆಂದರೆ ಮಾತ-ಪಿತಾರವರನ್ನು ಪೂರ್ತಿ ಫಾಲೋ ಮಾಡಿ ಮತ್ತು ನಿಮ್ಮ ಕರ್ಮೇಂದ್ರಿಯಗಳ ಮೇಲೆ ಕಂಟ್ರೋಲ್ ಇಟ್ಟುಕೊಳ್ಳಿ. ಒಂದುವೇಳೆ ಕರ್ಮೇಂದ್ರಿಯಗಳು ವಶದಲ್ಲಿಲ್ಲವೆಂದರೆ, ಚಲನೆ ಸರಿಯಾಗಿರುವುದಿಲ್ಲ. ಉನ್ನತ ಪದವಿಯಿಂದ ವಂಚಿತರಾಗಿ ಬಿಡುವಿರಿ. ನಿಮ್ಮ ಚಲನೆಯನ್ನು ಸುಧಾರಣೆ ಮಾಡಿಕೊಳ್ಳಿ ಜಾಸ್ತಿ ಇಚ್ಛೆಗಳನ್ನು ಇಟ್ಟುಕೊಳ್ಳಬೇಡಿ.
ಬಾಬಾ ನೀವು ಮಕ್ಕಳಿಗೆ ಎಷ್ಟು ಜ್ಞಾನದ ಶೃಂಗಾರ ಮಾಡಿ ಸತ್ಯಯುಗದ ಮಹಾರಾಜ ಮಹಾರಾಣಿಯನ್ನಾಗಿ ಮಾಡುತ್ತಾರೆ. ಇದರಲ್ಲಿ ಸಹನಶೀಲತೆಯ ಗುಣ ಬಹಳ ಚೆನ್ನಾಗಿ ಇರಬೇಕು. ದೇಹದ ಮೇಲೆ ತುಂಬಾ ಹೆಚ್ಚು ಮೋಹ ಇರಬಾರದು. ಯೋಗಬಲದಿಂದಲೇ ಕೆಲಸ ತೆಗೆದುಕೊಳ್ಳಬೇಕು. ಬಾಬಾನಿಗೆ ಎಷ್ಟೇ ಕೆಮ್ಮು ಧಮ್ಮ ಇರುತ್ತಿತ್ತು, ಆದರೂ ಸಹ ಸದಾ ಸೇವೆಯಲ್ಲಿ ತತ್ಪರರಾಗಿರುತ್ತಿದ್ದರು. ಜ್ಞಾನ ಯೋಗದಿಂದ ಶೃಂಗಾರ ಮಾಡಿ ಮಕ್ಕಳನ್ನು ಲಾಯಕ್ಕಾಗಿ ಮಾಡುತ್ತಾರೆ. ನೀವು ಈಗ ಈಶ್ವರೀಯ ಮಡಿಲಿನಲ್ಲಿ, ಮಾತಾಪಿತರ ಮಡಿಲಿನಲ್ಲಿ ಕುಳಿತಿರುವಿರಿ. ತಂದೆ ಬ್ರಹ್ಮಾ ಮುಖದಿಂದ ನೀವು ಮಕ್ಕಳಿಗೆ ಜನ್ಮ ಕೊಡುತ್ತಾರೆ ಅಂದಮೇಲೆ ಇವರು ತಾಯಿಯಾದರು. ಆದರೂ ನಿಮ್ಮ ಬುದ್ಧಿ ಶಿವಬಾಬಾರವರ ಕಡೆ ಹೋಗುತ್ತದೆ. ನೀವು ಮಾತಾಪಿತರು ನಾವು ನಿಮ್ಮ ಬಾಲಕರು.... ನೀವು ಸರ್ವಗುಣ ಸಂಪನ್ನ ಇಲ್ಲಿ ಆಗಬೇಕಿದೆ. ಘಳಿಗೆ-ಘಳಿಗೆ ಮಾಯೆಯಿಂದ ಸೋಲನುಭವಿಸಬೇಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಅವ್ಯಕ್ತ-ಮಹಾವಾಕ್ಯ :
ಎಲ್ಲರೂ ಯೋಗ-ಯುಕ್ತ ಮತ್ತು ಯುಕ್ತಿಯುಕ್ತ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾ ನಿಮ್ಮ ಕಾರ್ಯ ಮಾಡುತ್ತಿರುವಿರಾ? ಏಕೆಂದರೆ ವರ್ತಮಾನ ಸಮಯ-ಪ್ರಮಾಣ ಸಂಕಲ್ಪ, ಮಾತು ಮತ್ತು ಕರ್ಮ ಈ ಮೂರೂ ಸಹ ಯೋಗಯುಕ್ತವಾಗಿರಬೇಕು ಆಗಲೇ ಸಂಪನ್ನ ಹಾಗೂ ಸಂಪೂರ್ಣ ಆಗಲು ಸಾಧ್ಯ. ನಾಲ್ಕಾರು ಕಡೆಯ ವಾತಾವರಣ ಯೋಗ-ಯುಕ್ತ ಮತ್ತು ಯುಕ್ತಿಯುಕ್ತವಾಗಿರಲಿ. ಹೇಗೆ ಯುದ್ಧದ ಮೈದಾನದಲ್ಲಿ ಯಾವಾಗ ಯೋಧ ಯುದ್ಧಕ್ಕಾಗಿ ಶತೃವಿನ ಎದುರು ನಿಂತಿರುತ್ತಾನೆ. ಆಗ ಅವನಿಗೆ ಅವನ ಮೇಲೆ ಹಾಗೂ ಅವನಲ್ಲಿರುವ ಶಸ್ತ್ರಗಳ ಮೇಲೆ ಅರ್ಥಾತ್ ತನ್ನ ಶಕ್ತಿಗಳ ಮೇಲೆ ಎಷ್ಟು ಗಮನ ಇರುತ್ತದೆ. ಈಗಂತೂ ಸಮಯ ಸಮೀಪ ಬರುತ್ತಿದೆ, ಹೀಗೆ ತಿಳಿಯಿರಿ ಯುದ್ಧದ ಮೈದಾನದಲ್ಲಿ ಎದುರಿಗೆ ಬರುವಂತಹ ಸಮಯ. ಇಂತಹ ಸಮಯದಲ್ಲಿ ನಾಲ್ಕಾರು ಕಡೆ ಸರ್ವ-ಶಕ್ತಿಗಳ ಕಡೆ, ಸ್ವಯಂ ಕಡೆ ಗಮನ ಅವಶ್ಯಕವಿದೆ. ಒಂದುವೇಳೆ ಸ್ವಲ್ಪವಾದರೂ ಸಹ ಗಮನ ಕಡಿಮೆಯಾದರೆ ಹೇಗೆ-ಹೇಗೆ ಸಮಯ-ಪ್ರಮಾಣ ನಾಲ್ಕೂ ಕಡೆ ಒತ್ತಡ (ಟೆನ್ಷನ್)ದ ವಾತಾವರಣದ ಪ್ರಭಾವ, ಯುದ್ಧದಲ್ಲಿ ಉಪಸ್ಥಿತರಾಗಿರುವ ಪಾಂಡವ ಸೇನೆಯ ಮೇಲೆಯೂ ಸಹ ಬೀಳುವ ಸಾಧ್ಯತೆಯಿದೆ. ದಿನ-ಪ್ರತಿದಿನ ಹೇಗೆ ಸಂಪೂರ್ಣತೆಯ ಸಮಯ ಹತ್ತಿರ ಬರುತ್ತಾ ಇದೆ, ಪ್ರಪಂಚದಲ್ಲಿ ಒತ್ತಡ (ಟೆನ್ಷನ್) ಇನ್ನೂ ಹೆಚ್ಚಾಗುತ್ತದೆ, ಕಡಿಮೆಯಾಗುವುದಿಲ್ಲ, ಎಳೆದಾಡುವ ಜೀವನದ ಅನುಭವ ನಾಲ್ಕಾರು ಕಡೆ ಆಗುವುದು ಹೇಗೆಂದರೆ ನಾಲ್ಕೂ ಕಡೆ ಎಳೆದಾಡುವ ಹಾಗಿರುತ್ತದೆ. ಒಂದು ಕಡೆ ಪ್ರಕೃತಿಯ ಚಿಕ್ಕ-ಚಿಕ್ಕ ಆಪತ್ತುಗಳಿಂದ ನಷ್ಟದ ಒತ್ತಡ (ಟೆನ್ಷನ್). ಇನ್ನೊಂದು ಕಡೆ ಈ ಪ್ರಪಂಚದ ಸರ್ಕಾರದ ಕಠಿಣ ಕಾನೂನುಗಳ ಟೆನ್ಷನ್, ಮೂರನೆಯದು ವ್ಯವಹಾರದಲ್ಲಿ ಹಿನ್ನಡೆಯ ಟೆನ್ಷನ್, ಮತ್ತು ನಾಲ್ಕನೇ ಕಡೆ ಲೌಕಿಕ ಸಂಬಂಧಿಗಳು ಇತ್ಯಾದಿಗಳಿಂದ ಸ್ನೇಹ ಮತ್ತು ಸ್ವತಂತ್ರವಿರುವ ಕಾರಣ ಖುಷಿಯ ಅನುಭೂತಿ ಅಲ್ಪಕಾಲಕ್ಕಾಗಿ ಇರುವುದು, ಅದೂ ಕೂಡ ಸಮಾಪ್ತಿಯಾಗಿ ಭಯದ ಅನುಭೂತಿಯ ಟೆನ್ಷನ್ನಲ್ಲಿದ್ದಾರೆ. ನಾಲ್ಕೂ ಕಡೆಯ ಟೆನ್ಷನ್ ಜನರಲ್ಲಿ ಹೆಚ್ಚಾಗಲಿದೆ. ನಾಲ್ಕೂ ಕಡೆಯ ಟೆನ್ಷನ್ ನಿಂದ ಆತ್ಮಗಳು ಚಡಪಡಿಸುತ್ತವೆ. ಎಲ್ಲಿ ಹೋದರೆ ಅಲ್ಲಿ ಟೆನ್ಷನ್. ಹೇಗೆ ಶರೀರದಲ್ಲಿಯೂ ಸಹ ಒಂದು ನರ ಎಳೆದರೆ ಆಗ ಎಷ್ಟು ನೋವಾಗುತ್ತದೆ. ಬುದ್ಧಿ ಎಳೆದಂತಿರುತ್ತದೆ. ಹಾಗೆಯೇ ಇಲ್ಲಿ ವಾತಾವರಣ ಹೆಚ್ಚುತ್ತಾ ಹೋಗುತ್ತದೆ. ಹೇಗೆಂದರೆ ಏನೂ ಒಂದು ಜೀವನಾಧಾರ ಕಾಣುತ್ತಿಲ್ಲ ಏನು ಮಾಡುವುದು ? ಒಂದುವೇಳೆ ಹೌದು ಎಂದರೂ ಎಳೆದಾಟ – ಇಲ್ಲ ಎಂದರೂ ಎಳೆದಾಟ-ಸಂಪಾದನೆ ಮಾಡಿದರೂ ಕಷ್ಟ, ಮಾಡದೇ ಇದ್ದರೂ ಕಷ್ಟ, ಕೂಡಿಟ್ಟರೂ ಕಷ್ಟ, ಮಾಡಿಡದೇ ಇದ್ದರೂ ಕಷ್ಟ. ಇಂತಹ ವಾತಾವರಣವಾಗುತ್ತಾ ಹೋಗುವುದು. ಇಂತಹ ಸಮಯದಲ್ಲಿ ನಾಲ್ಕೂ ಕಡೆಯ ಟೆನ್ಷನ್ನ ಪ್ರಭಾವ ಆತ್ಮೀಯ ಪಾಂಡವ ಸೇನೆಯ ಮೇಲೆ ಆಗದೇ ಇರಬೇಕು. ಸ್ವಯಂಗೆ ಟೆನ್ಷನ್ನಲ್ಲಿ ಬರುವಂತಹ ಸಮಸ್ಯೆಗಳು ಇಲ್ಲದೆಯೂ ಇರಬಹುದು, ಆದರೆ ವಾತಾವರಣದ ಪ್ರಭಾವ ಬಲಹೀನ ಆತ್ಮಗಳ ಮೇಲೆ ಸಹಜವಾಗಿ ಆಗಿ ಬಿಡುವುದು. ಭಯದ ಯೋಚನೆಯೂ ಸಹ ಏನಾಗುವುದೊ? ಹೇಗೆ ಆಗುವುದೋ? ಈ ಮಾತುಗಳ ಪ್ರಬಾವ ಇರಬಾರದು - ಅದಕ್ಕಾಗಿ ಮಧ್ಯೆ-ಮಧ್ಯೆ ಯಾವುದಾದರೂ ಒಂದು ಈಶ್ವರೀಯ ನೆನಪಿನ ಯಾತ್ರೆಯ ವಿಶೇಷ ಕಾರ್ಯಕ್ರಮ ಮಧುಬನದ ಮುಖಾಂತರ ಅಧಿಕೃತವಾಗಿ ಹೊರಡುತ್ತಿರಬೇಕು. ಯಾವುದರಿಂದ ಆತ್ಮಗಳ ಕೋಟೆ ಶಕ್ತಿಶಾಲಿಯಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಸೇವೆಯೂ ಸಹ ವೃದ್ಧಿಯಾಗುತ್ತದೆ. ಆದರೆ ವೃದ್ಧಿಯ ಜೊತೆ-ಜೊತೆ ಯುಕ್ತಿ-ಯುಕ್ತ ಸಹ ಬಹಳ ಇರಬೇಕು. ಇತ್ತೀಚೆಗೆ ಸಂಬಂಧ ಸಂಪರ್ಕದಲ್ಲಿರುವಂತಹವರು ಹೆಚ್ಚು ಬರುತ್ತಾರೆ. ಸ್ವರೂಪರಾಗುವಂತಹವರು ಕಡಿಮೆ ಬರುತ್ತಾರೆ. ಎಲ್ಲರೂ ಒಂದೇ ರೀತಿಯವರು ಇರುವುದಿಲ್ಲ. ದಿನ-ಪ್ರತಿದಿನ ಕ್ವಾಲಿಟಿ ಸಹ ಬಲಹೀನ ಆತ್ಮಗಳು ಅರ್ಥಾತ್ ಪ್ರಜೆಗಳ ಸಂಖ್ಯೆ ಹೆಚ್ಚು ಬರುತ್ತಾರೆ, ಅವರಿಗೆ ಜ್ಞಾನದ ಒಂದೇ ಮಾತು ಚೆನ್ನಾಗಿದೆ ಎನ್ನಿಸುತ್ತದೆ. ಎಲ್ಲಾ ಮಾತುಗಳಲ್ಲಿ ನಿಶ್ಚಯ ಇರುವುದಿಲ್ಲ. ಆದ್ದರಿಂದ ಸಂಪರ್ಕದಲ್ಲಿ ಬರುವವರಿಗೂ ಸಹ, ಅವರಿಗೆ ಏನು ಬೇಕು - ಅದೇ ಪ್ರಮಾಣದಲ್ಲಿ ಅವರನ್ನು ಸಂಪರ್ಕದಲ್ಲಿ ಇಡುತ್ತಿರಬೇಕು. ಸಮಯ ಹೇಗೆ ನಾಜೂಕಾಗಿ ಬರುತ್ತಾ ಹೋಗುತ್ತದೆ, ಹಾಗೆಯೇ ಸಮಸ್ಯೆಯ ಪ್ರಮಾಣವೂ ಸಹ ಅವರಿಗೆ ನಿಯಮಿತವಾಗಿ ಬರುವ ವಿಧ್ಯಾರ್ಥಿಯಾಗುವುದು ಕಷ್ಟವಾಗುವುದು. ಆದರೆ ಸಂಪರ್ಕದಲ್ಲಿ ಹೆಚ್ಚು-ಹೆಚ್ಚು ಬರುತ್ತಾರೆ, ಏಕೆಂದರೆ ಅಂತಿಮ ಸಮಯವಾಗಿದೆಯಲ್ಲವೆ. ಆದ್ದರಿಂದ ಕೊನೆಯ ದೃಶ್ಯ ಹೇಗೆ ಇರುತ್ತದೆ? ಹೇಗೆ ಮೊದಲು ಕುಣಿದಾಟ, ಒಲವು, ಉತ್ಸಾಹ ಇರುತ್ತದೆ - ಅದು ವಿರಳವಾಗಿ ಕೆಲವರಲ್ಲಿ ಮಾತ್ರ ಇರುತ್ತದೆ. ಮೆಜಾರಿಟಿ ಸಂಬಂಧ ಸಂಪರ್ಕದಲ್ಲಿರುವವರು ಬರುತ್ತಾರೆ. ಆಗ ಇಲ್ಲಿ ಗಮನ ಇರಬೇಕು. ಹೀಗಲ್ಲ ಸಂಪರ್ಕದ ಆತ್ಮಗಳನ್ನು ಪರಿಶೀಲಿಸದೆ ಸಂಪರ್ಕದಿಂದಲೂ ಅವರನ್ನು ವಂಚಿತರನ್ನಾಗಿ ಮಾಡಬಾರದು. ಯಾರೂ ಖಾಲಿ ಕೈಯಿಂದ ಹೋಗುವ ಹಾಗಿಲ್ಲ. ನಿಯಮಗಳ ಮೇಲೆ ಭಲೆ ನಡೆಯಲು ಆಗುವುದಿಲ್ಲ, ಆದರೆ ಅವರು ಸ್ನೇಹದಲ್ಲಿರಲು ಬಯಸುತ್ತಾರೆ, ಆಗ ಇಂತಹ ಆತ್ಮಗಳದ್ದೂ ಸಹ ಅಟೆನ್ಷನ್ ಖಂಡಿತ ಇಡಬೇಕಾಗುತ್ತದೆ. ಅರ್ಥ ಮಾಡಿಕೊಳ್ಳಬೇಕು ಈ ಗ್ರೂಪ್ ಇದೇ ಪ್ರಮಾಣದಲ್ಲಿ ಮೂರನೇ ಸ್ಟೇಜ್ನಲ್ಲಿ ಬರುವವರು. ಆದ್ದರಿಂದ ಅವರಿಗೂ ಸಹ ಅದೇ ಪ್ರಮಾಣದ ಹ್ಯಾಂಡ್ಲಿಂಗ್(ಮೇಲ್ವಿಚಾರಣೆ) ಸಿಗಬೇಕಾಗಿದೆ. ಒಳ್ಳೆಯದು. ಓಂ ಶಾಂತಿ.
ಓಂ ಶಾಂತಿ. ಯಾವಾಗ ಓಂ ಶಾಂತಿ ಹೇಳುತ್ತೀರಿ, ಆಗ ಬಹಳ ಉಲ್ಲಾಸದಿಂದ ನಾನು ಆತ್ಮ ಶಾಂತ ಸ್ವರೂಪನೆಂದು ಹೇಳುತ್ತಾರೆ. ಅರ್ಥ ಎಷ್ಟೊಂದು ಸಹಜವಾಗಿದೆ. ತಂದೆಯೂ ಸಹ ಓಂ ಶಾಂತಿ ಎಂದು ಹೇಳುತ್ತಾರೆ. ದಾದಾರವರೂ ಓಂ ಶಾಂತಿ ಎಂದು ಹೇಳುತ್ತಾರೆ. ಅವರು (ಶಿವ ತಂದೆ) ನಾನು ಪರಮಾತ್ಮನೆಂದು ಹೇಳುತ್ತಾರೆ, ಇವರು ನಾನಾತ್ಮ ಎಂದು ಹೇಳುತ್ತಾರೆ. ನೀವೆಲ್ಲರೂ ನಕ್ಷತ್ರಗಳಾಗಿದ್ದೀರಿ. ಎಲ್ಲಾ ನಕ್ಷತ್ರಗಳಿಗೆ ತಂದೆಯೂ ಬೇಕಾಗಿದೆ. ಸೂರ್ಯ, ಚಂದ್ರ ಹಾಗೂ ಅದೃಷ್ಟ ನಕ್ಷತ್ರಗಳೆಂದು ಹೇಳಲಾಗುತ್ತದೆ. ನೀವು ಮಕ್ಕಳು ಅತಿ ಪ್ರಿಯ ಅದೃಷ್ಠ ನಕ್ಷತ್ರಗಳಾಗಿದ್ದೀರಿ, ಅದರಲ್ಲಿಯೂ ನಂಬರ್ವಾರ್ ಇದ್ದಾರೆ. ರಾತ್ರಿಯ ವೇಳೆ ಚಂದ್ರನು ಬೆಳಗುವಾಗ ಕೆಲವು ನಕ್ಷತ್ರಗಳು ಬಹಳ ಕಡಿಮೆ ಪ್ರಕಾಶತೆಯಿರುತ್ತದೆ. ಕೆಲವು ನಕ್ಷತ್ರಗಳು ಪ್ರಕಾಶತೆಯಿಂದ ಕೂಡಿರುತ್ತದೆ. ಕೆಲವು ನಕ್ಷತ್ರಗಳು ಚಂದ್ರನ ಸಮೀಪದಲ್ಲಿರುತ್ತದೆ, ನಕ್ಷತ್ರಗಳಾಗಿದೆಯಲ್ಲವೆ. ನೀವೂ ಸಹ ಜ್ಞಾನ ನಕ್ಷತ್ರಗಳಾಗಿದ್ದೀರಿ. ಭೃಕುಟಿಯ ಮಧ್ಯ ಅದ್ಭುತವಾಗಿ ಬೆಳಗುತ್ತದೆ. ತಂದೆಯು ತಿಳಿಸುತ್ತಾರೆ - ಈ ಆತ್ಮಗಳು ಬಹಳ ವಂಡರ್ಫುಲ್ ಆಗಿವೆ. ಒಂದು ಅತಿ ಸೂಕ್ಷ್ಮ ಬಿಂದುವಾಗಿದೆ, ಇದನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಆತ್ಮವೇ ಶರೀರದೊಂದಿಗೆ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಇದು ಬಹಳ ಆಶ್ಚರ್ಯವಾಗಿದೆ. ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ. ಕೆಲವರು ಹಾಗೂ-ಹೀಗೂ ಇರುತ್ತಾರೆ. ಯಾವ ನಕ್ಷತ್ರಗಳು ಪ್ರಕಾಶಮಾನವಾಗಿ ಹೊಳೆಯುತ್ತದೆ, ಬಹಳ ಸೇವೆ ಮಾಡುತ್ತಾರೆಯೋ ಅವರನ್ನೇ ತಂದೆಯೂ ನೆನಪು ಮಾಡುತ್ತಾರೆ, ತಂದೆಯಿಂದ ಅವರಿಗೆ ಶಕ್ತಿ ಸಿಗುತ್ತದೆ. ನಿಮ್ಮ ಬ್ಯಾಟರಿಯು ತುಂಬುತ್ತಾ ಹೋಗುತ್ತದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಲು ನಂಬರ್ವಾರ್ ಪುರುಷಾರ್ಥದನುಸಾರ ಸರ್ಚ್ಲೈಟ್ (ಶಕ್ತಿ) ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಯಾರು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಸೇವೆಯಲ್ಲಿ ತೊಡಗುತ್ತಾರೆ ಅವರು ಬಹಳ ಪ್ರಿಯರಾಗುತ್ತಾರೆ ನನ್ನ ಹೃದಯವನ್ನು ಗೆಲ್ಲುತ್ತಾರೆ. ತಂದೆಯು ಹೃದಯವನ್ನು ಗೆಲ್ಲುವವರಾಗಿದ್ದಾರೆ. ದಿಲ್ವಾಡಾ ಮಂದಿರವೂ ಸಹ ಇದೆಯಲ್ಲವೆ! ಈಗ ಅದು ಹೃದಯರಾಮನ ಹಾಗೂ ಹೃದಯವನ್ನು ಪಡೆಯುವವರ ಮಂದಿರವಾಗಿದೆ. ಯಾರ ಹೃದಯವನ್ನು ತೆಗೆದುಕೊಳ್ಳುತ್ತಾರೆ? ನೀವು ನೋಡಿದ್ದೀರಲ್ಲವೆ. ಪ್ರಜಾಪಿತ ಬ್ರಹ್ಮಾರವರೂ ಸಹ ಕುಳಿತಿದ್ದಾರೆ. ಅವಶ್ಯವಾಗಿ ಅವರಲ್ಲಿ ಶಿವ ತಂದೆಯ ಪ್ರವೇಶವಿರುತ್ತದೆ ಹಾಗೂ ನೀವು ಈ ಮಂದಿರದಲ್ಲಿ ಮೇಲೆ ಸ್ವರ್ಗವನ್ನು, ಕೆಳಗೆ ಮಕ್ಕಳು ತಪಸ್ಸಿನಲ್ಲಿ ಕುಳಿತಿರುವುದನ್ನು ನೋಡುತ್ತೀರಿ. ಇದನ್ನಂತೂ ಅತಿ ಚಿಕ್ಕ ಮಾಡಲ್ ರೂಪದಲ್ಲಿ ಮಾಡಲಾಗಿದೆ. ಇದು ಉತ್ತಮ ಸೇವೆ ಮಾಡುವ ಸಹಯೋಗಿಗಳ ಚಿತ್ರವಾಗಿದೆ. ಮಹಾರಥಿ, ಕುದುರೆ ಸವಾರರು, ಕಾಲಾಳುಗಳು ಇದ್ದಾರಲ್ಲವೆ. ಈ ಮಂದಿರದ ನೆನಪಾರ್ಥವು ಬಹಳ ಚೆನ್ನಾಗಿ ಯಥಾರ್ಥವಾಗಿ ಮಾಡಲ್ಪಟ್ಟಿದೆ. ಇದು ನಮ್ಮದೇ ನೆನಪಾರ್ಥವಾಗಿದೆ ಎಂದು ನೀವು ಹೇಳುತ್ತೀರಿ. ಈಗ ನಿಮಗೆ ಜ್ಞಾನದ ಪ್ರಕಾಶ ಸಿಕ್ಕಿದೆ ಹಾಗೂ ಇದು ಬೇರೆ ಯಾರಿಗೂ ಇಲ್ಲ. ಭಕ್ತಿಮಾರ್ಗದಲ್ಲಿ ಮನುಷ್ಯರಿಗೆ ಏನು ಹೇಳುತ್ತಾರೋ ಸತ್ಯ-ಸತ್ಯ ಎಂದು ಹೇಳುತ್ತಾ ಹೋಗುತ್ತಾರೆ ಆದರೆ ವಾಸ್ತವದಲ್ಲಿ ಅದು ಸುಳ್ಳಾಗಿದೆ. ಅದನ್ನು ಸತ್ಯವೆಂದೇ ತಿಳಿಯುತ್ತಾರೆ. ಈಗ ಯಾವ ತಂದೆಯು ಸತ್ಯವಾಗಿದ್ದಾರೆಯೋ ಅವರೇ ಕುಳಿತು ನಿಮಗೆ ಸತ್ಯವನ್ನು ಹೇಳುತ್ತಾರೆ ಅದರಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ತಂದೆಯು ಯಾವುದೇ ಕಷ್ಟ ಕೊಡುವುದಿಲ್ಲ. ಇಡೀ ವೃಕ್ಷದ ರಹಸ್ಯವು ನಿಮ್ಮ ಬುದ್ಧಿಯಲ್ಲಿ ಕುಳಿತಿದೆ. ಇದನ್ನು ನಿಮಗೆ ಬಹಳ ಸುಲಭವಾಗಿ ತಿಳಿಸಲಾಗಿದೆ ಆದರೆ ಸಮಯವೇಕೆ ಹಿಡಿಸುತ್ತದೆ? ಜ್ಞಾನ ಹಾಗೂ ಆಸ್ತಿಯನ್ನು ಪಡೆಯಲು ಸಮಯ ಹಿಡಿಯುವುದಿಲ್ಲ. ಪವಿತ್ರರಾಗುವುದರಲ್ಲಿ ಸಮಯ ಹಿಡಿಸುತ್ತದೆ. ನೆನಪಿನ ಯಾತ್ರೆಯೇ ಮುಖ್ಯವಾಗಿದೆ. ನೀವು ಇಲ್ಲಿಗೆ (ಮಧುಬನ) ಬಂದಾಗ ನೆನಪಿನ ಯಾತ್ರೆಯ ಕಡೆ ಗಮನವಿರುತ್ತದೆ. ಮನೆಗೆ ಹಿಂತಿರುಗಿದ ನಂತರ ಅಷ್ಟೊಂದು ಗಮನವಿರುವುದಿಲ್ಲ. ಇಲ್ಲಿ ಎಲ್ಲವೂ ನಂಬರ್ವಾರ್ ಇದೆ. ಕೆಲವರು ಇಲ್ಲಿ ಕುಳಿತಿದ್ದೂ ಸಹ ಅವರ ಬುದ್ಧಿಯಲ್ಲಿ ಇದೇ ನಶೆಯಿರುತ್ತದೆ- ನಾವು ಮಕ್ಕಳು ಅವರು ತಂದೆಯಾಗಿದ್ದಾರೆ. ಬೇಹದ್ದಿನ ತಂದೆ ಹಾಗೂ ನಾವು ಮಕ್ಕಳು ಕುಳಿತಿದ್ದೇವೆ. ತಂದೆಯು ಈ ಶರೀರದಲ್ಲಿ ಬಂದಿದ್ದಾರೆಂದು ನೀವು ತಿಳಿದಿದ್ದೀರಿ, ದಿವ್ಯ ದೃಷ್ಟಿಯನ್ನು ಕೊಡುತ್ತಿದ್ದಾರೆ, ಸೇವೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಅವರೊಬ್ಬರನ್ನೇ ನೆನಪು ಮಾಡಬೇಕು, ಬೇರೆ ಯಾವ ಕಡೆಯೂ ಬುದ್ಧಿಯು ಹೋಗಬಾರದು. ಸಂದೇಶಿ ಮಕ್ಕಳು ಪೂರ್ಣ ಸಮಾಚಾರವನ್ನು ಕೊಡಬಲ್ಲರು. ಯಾವ ಬುದ್ಧಿಯು ಹೊರಗಡೆ ಅಲೆದಾಡುತ್ತಿದೆ, ಯಾರಿಗೆ ತೂಕಡಿಕೆ ಬರುತ್ತಿದೆ ಎಲ್ಲವನ್ನೂ ತಿಳಿಸಬಲ್ಲರು.
ಯಾವ ನಕ್ಷತ್ರಗಳು ಬಹಳ ಒಳ್ಳೆಯ ಸೇವಾಧಾರಿಗಳಾಗಿರುತ್ತಾರೆಯೋ ಅವರನ್ನೇ ನೋಡುತ್ತಿರುತ್ತೇನೆ, ತಂದೆಗೆ ಪ್ರೀತಿಯಿದೆಯಲ್ಲವೆ. ಅವರು ಸ್ಥಾಪನೆಯಲ್ಲಿ ಸಹಯೋಗ ಕೊಡುತ್ತಾರೆ. ಅದೇ ಕಲ್ಪದ ಹಿಂದಿನಂತೆಯೇ ರಾಜಧಾನಿಯು ಸ್ಥಾಪನೆಯಾಗುತ್ತದೆ, ಅನೇಕ ಬಾರಿ ಆಗಿತ್ತು. ಈ ನಾಟಕದ ಚಕ್ರವು ತಿರುಗುತ್ತಲೇ ಇರುತ್ತದೆ. ಇಲ್ಲಿ ಯಾವುದೇ ಚಿಂತೆಯ ಮಾತಿಲ್ಲ. ತಂದೆಯು ಜೊತೆಯಿದ್ದಾರಲ್ಲವೆ! ಅವರ ಸಂಗದ ರಂಗು ಬೀರುತ್ತದೆ. ಚಿಂತೆಯು ಕಡಿಮೆಯಾಗುತ್ತಾ ಹೋಗುತ್ತದೆ. ಹೀಗೆ ನಾಟಕವು ಮಾಡಲ್ಪಟ್ಟಿದೆ. ತಂದೆಯು ಮಕ್ಕಳಿಗಾಗಿ ರಾಜಧಾನಿಯನ್ನು ತಂದಿದ್ದಾರೆ, ಕೇವಲ ಇಷ್ಟನ್ನೇ ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಪತಿತರಿಂದ ಪಾವನ ಆಗಲು ತಂದೆಯನ್ನು ನೆನಪು ಮಾಡಿ. ಈಗ ಮಧುರಮನೆಗೆ ಹಿಂತಿರುಗಬೇಕಾಗಿದೆ. ಯಾವುದಕ್ಕಾಗಿ ನೀವು ಅರ್ಧಕಲ್ಪ ಭಕ್ತಿಮಾರ್ಗದಲ್ಲಿ ಕಷ್ಟ ಪಡುತ್ತಾ ಬಂದಿದ್ದೀರಿ ಆದರೆ ಒಬ್ಬರೂ ಸಹ ಹಿಂತಿರುಗಲು ಸಾಧ್ಯವಿಲ್ಲ. ಈಗ ತಂದೆಯನ್ನು ನೆನಪು ಮಾಡುತ್ತಿರಿ ಹಾಗೂ ಸ್ವದರ್ಶನ ಚಕ್ರವನ್ನು ತಿರುಗಿಸುತ್ತಿರಿ. ಅಲ್ಫ್ ಮತ್ತು ಬೆ (ತಂದೆ ಮತ್ತು ಆಸ್ತಿ) ತಂದೆಯನ್ನು ನೆನಪು ಮಾಡಿ, 84 ಜನ್ಮಗಳ ಚಕ್ರವನ್ನು ತಿರುಗಿಸಿ. ಆತ್ಮನಿಗೆ 84 ಜನ್ಮಗಳ ಚಕ್ರದ ಜ್ಞಾನವಿದೆ. ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಬೆಳಗ್ಗೆ ಎದ್ದು ನಿಮ್ಮ ಬುದ್ಧಿಯಲ್ಲಿ ಇದನ್ನೇ ನೆನಪಿಟ್ಟುಕೊಳ್ಳಿ - ಈಗ ನಾವು 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದೆವು, ಈಗ ಮನೆಗೆ ಹಿಂತಿರುಗಬೇಕು ಆದುದರಿಂದ ಈಗ ನೀವು ತಂದೆಯನ್ನು ನೆನಪು ಮಾಡಿದಾಗ ಚಕ್ರವರ್ತಿ ರಾಜರಾಗುತ್ತೀರಿ. ಇದು ಎಷ್ಟು ಸಹಜವಲ್ಲವೆ ಆದರೆ ಮಾಯೆಯು ನಿಮ್ಮನ್ನು ಮರೆಸುತ್ತದೆ. ಮಾಯೆಯ ಬಿರುಗಾಳಿಯಿದೆಯಲ್ಲವೆ ಈ ದೀಪಗಳನ್ನು ಸತಾಯಿಸಿ ಬಿಡುತ್ತದೆ. ಮಾಯೆಯು ಬಹಳ ಭಯಂಕರವಾಗಿದೆ. ಮಾಯೆಯಲ್ಲಿ ಇಷ್ಟೂ ಶಕ್ತಿಯಿರುವುದರಿಂದ ಮಕ್ಕಳಿಗೆ ತಂದೆಯ ನೆನಪನ್ನು ಮರೆಯುವಂತೆ ಮಾಡಿ ಬಿಡುತ್ತದೆ, ಆಗ ನಿರಂತರ ಖುಷಿಯಿರುವುದಿಲ್ಲ. ನೀವು ತಂದೆಯನ್ನು ನೆನಪು ಮಾಡಲು ಕುಳಿತುಕೊಳ್ಳಿರಿ. ಕುಳಿತು-ಕುಳಿತಿದ್ದಂತೆಯೇ ಬುದ್ಧಿಯು ಬೇರೆ-ಬೇರೆ ಕಡೆ ಹೊರಟು ಹೋಗುತ್ತದೆ. ಇದೆಲ್ಲವೂ ಗುಪ್ತ ಮಾತುಗಳಾಗಿವೆ. ಎಷ್ಟೇ ಪ್ರಯತ್ನ ಪಟ್ಟರೂ ಕೆಲವರ ಬುದ್ಧಿಯು ತಕ್ಷಣ ಸ್ಥಿರವಾಗಿ ಬಿಡುತ್ತದೆ. ಕೆಲವರಿಗೆ ಎಷ್ಟೇ ಕಷ್ಟಪಟ್ಟರೂ ಬುದ್ಧಿಯು ಸ್ಥಿರವಾಗುವುದಿಲ್ಲ, ಇದನ್ನು ಮಾಯೆಯ ಯುದ್ಧವೆಂದು ಹೇಳಲಾಗುವುದು. ಕರ್ಮವನ್ನು ಅಕರ್ಮ ಮಾಡಿಕೊಳ್ಳಲು ಎಷ್ಟೊಂದು ಶ್ರಮ ಪಡಬೇಕಾಗುತ್ತದೆ. ಅಲ್ಲಿ ರಾವಣ ರಾಜ್ಯವಿರುವುದಿಲ್ಲ. ಆದ್ದರಿಂದ ಕರ್ಮ ವಿಕರ್ಮವಾಗುವುದಿಲ್ಲ. ಅಲ್ಲಿ ಮಾಯೆಯು ಉಲ್ಟಾ ಕರ್ಮ ಮಾಡಿಸಲು ಇರುವುದೇ ಇಲ್ಲ್ಲ. ಇದು ರಾವಣ ಹಾಗೂ ರಾಮನ ಆಟವಾಗಿದೆ. ಅರ್ಧ ಕಲ್ಪ ರಾಮ ರಾಜ್ಯ, ಅರ್ಧಕಲ್ಪ ರಾವಣ ರಾಜ್ಯ, ಹಗಲು ಮತ್ತು ರಾತ್ರಿ. ಸಂಗಮಯುಗದಲ್ಲಿ ಬ್ರಾಹ್ಮಣರು ಮಾತ್ರವೇ ಇರುತ್ತಾರೆ. ಈಗ ನೀವು ಬ್ರಾಹ್ಮಣರು ತಿಳಿದುಕೊಂಡಿದ್ದೀರಿ, ರಾತ್ರಿಯು ಸಮಾಪ್ತಿಯಾಗಿ ಹಗಲು ಪ್ರಾರಂಭವಾಗುತ್ತದೆ. ಆ ಶೂದ್ರ ವರ್ಣದವರು ಇದನ್ನೆಲ್ಲವನ್ನೂ ತಿಳಿದುಕೊಳ್ಳುತ್ತಾರೇನು?
ಮನುಷ್ಯರು ಬಹಳ ಶಬ್ಧದಲ್ಲಿ ಭಕ್ತಿ ಮುಂತಾದವುಗಳ ಹಾಡನ್ನು ಹಾಡುತ್ತಾರೆ ಆದರೆ ನೀವೀಗ ಶಬ್ಧದಿಂದ ದೂರ ಹೋಗಬೇಕಾಗಿದೆ. ನೀವು ತಂದೆಯ ನೆನಪಿನಲ್ಲಿ ಮಸ್ತರಾಗಿರುತ್ತೀರಿ, ಆತ್ಮನಿಗೆ ಜ್ಞಾನದ ಮೂರನೆಯ ನೇತ್ರ ಸಿಕ್ಕಿದೆ, ಈಗ ಆತ್ಮವು ತಿಳಿದುಕೊಂಡಿದೆ - ತಂದೆಯನ್ನು ನೆನಪು ಮಾಡಬೇಕು. ಭಕ್ತಿಮಾರ್ಗದಲ್ಲಿ ಶಿವ ತಂದೆ, ಶಿವ ತಂದೆ ಎಂದು ಹೇಳುತ್ತಾ ಬಂದಿದ್ದೀರಿ. ಶಿವನ ಮಂದಿರದಲ್ಲಿ ಶಿವ ತಂದೆ ಎಂದು ಅಗತ್ಯವಾಗಿ ಹೇಳುತ್ತಾರೆ. ಅವರಂತೂ ಲಿಂಗವೆಂದೇ ತಿಳಿದಿದ್ದಾರೆ. ಈಗ ನಿಮಗೆ ಆ ಜ್ಞಾನವು ಸಿಕ್ಕಿದೆ, ಅವರು ಲಿಂಗದ ಮೇಲೆ ಅಭಿಷೇಕ ಮಾಡುತ್ತಾರೆ! ಸಾಕಾರವಾಗಿದ್ದಲ್ಲಿ ಸ್ವೀಕಾರ ಮಾಡುತ್ತಿದ್ದರು. ನಿರಾಕಾರನ ಮೇಲೆ ಹಾಲನ್ನೆರೆದರೆ ಅವರು ಏನು ಮಾಡುತ್ತಾರೆ! ತಂದೆಯು ತಿಳಿಸುತ್ತಾರೆ - ಹಾಲು ಮುಂತಾದವುಗಳನ್ನು ನೀವು ಅರ್ಪಿಸುತ್ತೀರಿ ಅದನ್ನೂ ನೀವೇ ಕುಡಿಯುತ್ತೀರಿ, ನೈವೇದ್ಯ ಮುಂತಾದವನ್ನು ನೀವೇ ತಿನ್ನುತ್ತೀರಿ. ಈಗಂತೂ ನಾನು ಸನ್ಮುಖದಲ್ಲಿದ್ದೇನೆ. ಮೊದಲಂತೂ ಅಪರೋಕ್ಷವಾಗಿದ್ದೆನು ಈಗ ಪ್ರತ್ಯಕ್ಷವಾಗಿ ಕೆಳಗಿಳಿದು ಪಾತ್ರವನ್ನಭಿನಯಿಸುತ್ತಿದ್ದೇನೆ, ಶಕ್ತಿಯನ್ನೂ ಕೊಡುತ್ತಿದ್ದೇನೆ ಆದ್ದರಿಂದ ಮಕ್ಕಳೂ ಸಹ ತಂದೆಯ ಬಳಿಗೆ ಹೋಗಬೇಕು ಎಂದು ಮಧುಬನಕ್ಕೆ ಹೋಗುತ್ತಾರೆ. ಅಲ್ಲಿ ನಮ್ಮ ಬ್ಯಾಟರಿಯು ಚೆನ್ನಾಗಿ ಚಾರ್ಜ್ ಆಗುತ್ತದೆ. ಮನೆಯಲ್ಲಂತೂ ನಿರಂತರ ಕೆಲಸ-ಕಾರ್ಯದ ಮಧ್ಯದಲ್ಲಿ ಅಶಾಂತಿಯೇ ಅಶಾಂತಿಯಿರುತ್ತದೆ. ಈ ಸಮಯದಲ್ಲಿ ಇಡೀ ವಿಶ್ವದಲ್ಲಿ ಅಶಾಂತಿಯಿದೆ. ನಾವೀಗ ಯೋಗಬಲದಿಂದ ಶಾಂತಿ ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ತಿಳಿದಿದ್ದೀರಿ. ಬಾಕಿ ವಿದ್ಯೆಯಿಂದ ರಾಜ್ಯ ಸಿಗುತ್ತದೆ. ಕಲ್ಪದ ಹಿಂದೆ ಇದನ್ನು ನೀವೆ ಕೇಳಿದ್ದಿರಿ, ಈಗಲೂ ಕೇಳುತ್ತಿದ್ದೀರಿ. ಈಗ ಯಾವ ಪಾತ್ರವು ನಡೆಯುತ್ತದೆ ಅದು ಪುನಃ ನಡೆಯುತ್ತದೆ. ತಂದೆಯು ತಿಳಿಸುತ್ತಾರೆ - ಎಷ್ಟೊಂದು ಮಕ್ಕಳು ಆಶ್ಚರ್ಯವಾಗಿ ಹೊರಟು ಹೋದರು. ನಾನು ಪ್ರಿಯತಮನನ್ನು ಎಷ್ಟೊಂದು ನೆನಪು ಮಾಡುತ್ತಿದ್ದರು, ಈಗ ನಾನು ಬಂದಿದ್ದೇನೆ ಆದರೂ ನನ್ನನ್ನು ಬಿಟ್ಟು ಹೊರಟು ಹೋಗುತ್ತಾರೆ. ಮಾಯೆಯು ದೊಡ್ಡ ಪೆಟ್ಟನ್ನು ಕೊಟ್ಟು ಬಿಡುತ್ತದೆ. ಬ್ರಹ್ಮಾನುಭವಿಯಾಗಿದ್ದಾರಲ್ಲವೆ. ತಂದೆಗೆ ತಮ್ಮ ಇಡೀ ಚರಿತ್ರೆಯೇ ನೆನಪಿದೆ. ತಲೆಯ ಮೇಲೆ ಒಂದು ಟೋಪಿಯನ್ನು ಇಟ್ಟುಕೊಂಡು ಬರಿಗಾಲಿನಲ್ಲಿ ನಡೆಯುತ್ತಿದ್ದರು.... ಮುಸಲ್ಮಾನರು ಅವರನ್ನು ಬಹಳ ಪ್ರೀತಿ ಮಾಡುತ್ತಿದ್ದರು. ಬಹಳ ವಿಚಾರಿಸಿಕೊಳ್ಳುತ್ತಿದ್ದರು. ಮಾಸ್ಟರ್ಜೀನ ಮಗ ಬಂದಿದ್ದಾರೆ..... ಅಂದರೆ ಗುರುಗಳ ಮಗ ಬಂದಿದ್ದಾರೆಂದು ಅಲ್ಲಿರುವ ತಿಂಡಿ (ನವಣೆಯ ರೊಟ್ಟಿ) ಯನ್ನು ತಿನ್ನಿಸುತ್ತಿದ್ದರು. ಯಜ್ಞದಲ್ಲಿಯೂ ಬಾಬಾ 15 ದಿನಗಳು ನವಣೆ ರೊಟ್ಟಿ ಹಾಗೂ ಮಜ್ಜಿಗೆಯನ್ನು ತಿನ್ನಲು ಕಾರ್ಯಕ್ರಮ ಕೊಟ್ಟರು. ಬೇರೇನೂ ಅಡಿಗೆಯು ತಯಾರಾಗುತ್ತಿರಲಿಲ್ಲ. ಆರೋಗ್ಯವು ಇಲ್ಲದವರಿಗೂ ಇದೇ ತಯಾರಾಗುತ್ತಿತ್ತು ಆದರೆ ಯಾರಿಗೂ ತೊಂದರೆಯಾಗಲಿಲ್ಲ. ಇನ್ನೂ ಆರೋಗ್ಯವಿಲ್ಲದವರು ಇಮ್ಮಡಿಯಷ್ಟು ಆರೋಗ್ಯವಂತರಾದರು. ಆಗ ತಂದೆಯು ಮಕ್ಕಳಲ್ಲಿ ಆಸಕ್ತಿಯು ಮುರಿದಿದೆಯೇ ಎಂದು ಪರೀಕ್ಷೆ ಮಾಡುತ್ತಿದ್ದರು. ಇದು ಬೇಕು ಇದು ಬೇಡ ಎನ್ನುತ್ತಾರೆಯೇ ಎಂದು ನೋಡುತ್ತಿದ್ದರು. ಇಚ್ಛೆಗೆ ಜಮಾದಾರ್ (ಕಾವಲುಗಾರ) ಎಂದು ಹೇಳುತ್ತಾರೆ. ಇಲ್ಲಿ ಬೇಡುವುದಕ್ಕಿಂತ ಸಾಯುವುದು ಲೇಸು ಎಂದು ತಂದೆಯು ಹೇಳುತ್ತಾರೆ. ಮಕ್ಕಳಿಗೆ ಏನು ಕೊಡಬೇಕೆಂದು ತಂದೆಗೆ ಗೊತ್ತಿದೆ. ಅವಶ್ಯಕತೆಯಿರುವುದನ್ನು ತಾನೇ ಕೊಡುತ್ತಾರೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ.
ತಂದೆಯು ಕೇಳಿದ್ದರು - ಯಾರು ತಂದೆಯನ್ನು ತಂದೆ ಹಾಗೂ ಮಗ ಎಂದು ತಿಳಿದುಕೊಳ್ಳುತ್ತೀರಿ ಅವರು ಕೈಯೆತ್ತಿ. ಎಲ್ಲರೂ ಕೈಯೆತ್ತಿದರು. ಕೈಯನ್ನೇನೋ ಎತ್ತುತ್ತೀರಿ ಹಾಗೆಯೇ ಲಕ್ಷ್ಮೀ-ನಾರಾಯಣ ಯಾರಾಗುತ್ತೀರೆಂದು ಕೇಳಿದರೆ ಎಲ್ಲರೂ ಕೈಯೆತ್ತುತ್ತಾರೆ. ಹಾಗೆಯೇ ಪಾರಲೌಕಿಕ ಮಗನನ್ನೂ ಜೊತೆಯಲ್ಲಿ ಸೇರಿಸಿಕೊಳ್ಳುತ್ತೀರಿ! ಅವರಂತೂ ತಾಯಿ-ತಂದೆಗೆ ಬಹಳ ಸೇವೆ ಮಾಡುತ್ತಾರೆ, 21 ಜನ್ಮಗಳಿಗೆ ಆಸ್ತಿಯನ್ನು ಕೊಡುತ್ತಾರೆ. ಯಾವಾಗ ತಂದೆಯು ವಾನಪ್ರಸ್ಥದಲ್ಲಿ ಹೋಗುತ್ತಾರೆಯೋ ಆಗ ತಂದೆಯನ್ನು ಸಂಭಾಲನೆ ಮಾಡುವುದು ಮಕ್ಕಳ ಕರ್ತವ್ಯವಾಗಿರುತ್ತದೆ. ಆಗ ತಂದೆ-ತಾಯಿಯು ಸನ್ಯಾಸಿಯಂತೆ ಆಗಿ ಬಿಡುತ್ತಾರೆ. ಹೇಗೆ ಇವರ (ಬ್ರಹ್ಮಾ) ಲೌಕಿಕ ತಂದೆಯಿದ್ದರು, ವಾನಪ್ರಸ್ಥ ಸ್ಥಿತಿಯಾದಾಗ ನಮ್ಮನ್ನು ಕಾಶಿಗೆ ಕರೆದುಕೊಂಡು ಹೋಗು ಅಲ್ಲಿ ಹೋಗಿ ಸತ್ಸಂಗ ಮಾಡೋಣ ಎಂದು ಕೇಳಿದ್ದರು. (ಯಜ್ಞದ ಚರಿತ್ರೆ ತಿಳಿಸಿ) ನೀವು ಬ್ರಾಹ್ಮಣರು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಪ್ರಜಾಪಿತ ಬ್ರಹ್ಮಾ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಅವರು ಸೃಷ್ಟಿರೂಪಿ ವೃಕ್ಷಕ್ಕೆ ಎಲ್ಲದಕ್ಕಿಂತ ಮೊದಲ ಎಲೆಯಾಗಿದ್ದಾರೆ. ಅವರಿಗೆ ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರರು ಜ್ಞಾನ ಸಾಗರರಲ್ಲ. ಶಿವ ತಂದೆಯು ಬೇಹದ್ದಿನ ತಂದೆಯಾಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಆ ನಿರಾಕಾರ ಪರಮಪಿತ ಪರಮಾತ್ಮ ಹೇಗೆ ಬಂದರು ಅವರ ಜಯಂತಿಯನ್ನು ಆಚರಿಸುತ್ತಾರೆ ಆದರೆ ಇದು ಯಾರಿಗೂ ಗೊತ್ತಿಲ್ಲ. ಅವರು ಗರ್ಭದಲ್ಲಿ ಬರುವುದಿಲ್ಲ, ನಾನು ಇವರ ಅನೇಕ ಜನ್ಮಗಳ ಅಂತ್ಯದಲ್ಲಿ, ವಾನಪ್ರಸ್ಥ ಸ್ಥಿತಿಯಲ್ಲಿ ನಾನು ಪ್ರವೇಶ ಮಾಡುತ್ತೇನೆಂದು ಹೇಳುತ್ತಾರೆ. ಯಾವಾಗ ಮನುಷ್ಯರು ಸನ್ಯಾಸ ಮಾಡುತ್ತಾರೆ, ಆಗ ಅವರಿಗೆ ವಾನಪ್ರಸ್ಥ ಸ್ಥಿತಿಯೆಂದು ಹೇಳಲಾಗುವುದು. ಅದೇ ರೀತಿ ಈಗ ತಂದೆಯು ನಿಮಗೆ ತಿಳಿಸುತ್ತಾರೆ - ಮಕ್ಕಳೇ, ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಇದರ ಲೆಕ್ಕವನ್ನಂತೂ ತೆಗೆದುಕೊಂಡಿದ್ದೀರಲ್ಲವೆ. ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ. ಪ್ರವೇಶ ಮಾಡಿ ಎಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ಇವರ ಆತ್ಮವು ಎಲ್ಲಿ ಕುಳಿತಿದೆಯೋ ಅಲ್ಲಿ ಬಂದು ಪಕ್ಕದಲ್ಲಿ ಕುಳಿತುಕೊಳ್ಳುತ್ತೇನೆ. ಹೇಗೆ ಗುರುಗಳು ತಮ್ಮ ಪಕ್ಕ ಶಿಷ್ಯರನ್ನು ಗದ್ದುಗೆಯಲ್ಲಿ ಕುಳ್ಳರಿಸುತ್ತಾರೆಯೋ ಹಾಗೆಯೇ ಇವರ ಸ್ಥಾನವೂ ಸಹ ಇದಾಗಿದೆ, ನನ್ನದೂ ಸಹ ಇದೇ ಸ್ಥಾನವಾಗಿದೆ. ಹೇಳುತ್ತೇನೆ - ಹೇ ಆತ್ಮಗಳೇ, ನನ್ನೊಬ್ಬನನ್ನೆ ನೆನಪು ಮಾಡಿ ಆಗ ಪಾಪವು ನಾಶವಾಗುತ್ತದೆ. ಮನುಷ್ಯರಿಂದ ದೇವತೆಯಾಗಬೇಕಲ್ಲವೆ. ಇದು ರಾಜಯೋಗವಾಗಿದೆ. ಹೊಸ ಪ್ರಪಂಚಕ್ಕಾಗಿ ರಾಜಯೋಗದ ಅವಶ್ಯಕತೆಯಿದೆ. ತಂದೆಯು ತಿಳಿಸುತ್ತಾರೆ - ನಾನು ಆದಿ ಸನಾತನ ದೇವಿ-ದೇವತಾ ಧರ್ಮದ ತಳಹದಿಯನ್ನು ಹಾಕಲು ಬಂದಿದ್ದೇನೆ. ಗುರುಗಳು ಅನೇಕರಿದ್ದಾರೆ, ಸದ್ಗುರುವು ಒಬ್ಬರೇ ಇದ್ದಾರೆ ಉಳಿದೆಲ್ಲವೂ ಅಸತ್ಯವಾಗಿದೆ.
ನೀವು ತಿಳಿದುಕೊಂಡಿದ್ದೀರಿ - ಒಂದು ರುದ್ರ ಮಾಲೆ, ಮತ್ತೊಂದು ವಿಷ್ಣುವಿನ ವೈಜಯಂತಿ ಮಾಲೆಯಾಗಿದೆ. ಅದಕ್ಕಾಗಿ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯ ನೆನಪು ಮಾಡಿದಾಗ ಮಾಲೆಯ ಮಣಿಯಾಗುತ್ತೀರಿ. ಆ ಮಾಲೆಯನ್ನು ನೀವು ಭಕ್ತಿಮಾರ್ಗದಲ್ಲಿ ಸ್ಮರಣೆ ಮಾಡುತ್ತೀರಿ ಆದರೆ ಈ ಮಾಲೆಯು ಯಾರದಾಗಿದೆ, ಮೇಲಿರುವ ಹೂ ಯಾರು? ಹೂ ಯಾರಾಗಿದ್ದಾರೆ? ಮಣಿಗಳು ಯಾರಾಗಿದ್ದಾರೆ? ಎನ್ನುವುದನ್ನೆಲ್ಲಾ ತಿಳಿದುಕೊಂಡಿಲ್ಲ. ಯಾರ ಮಾಲೆಯನ್ನು ಜಪ ಮಾಡುತ್ತೇವೆಯೋ ಅದರ ಬಗ್ಗೆ ಸ್ವಲ್ಫವೂ ತಿಳಿದಿಲ್ಲ. ಹಾಗೆಯೇ ರಾಮ-ರಾಮ ಎಂದು ಹೇಳುತ್ತಾ ಜಪ ಮಾಡುತ್ತಿರುತ್ತಾರೆ. ರಾಮ-ರಾಮ ಎಂದು ಹೇಳುವುದರಿಂದ ಎಲ್ಲೆಲ್ಲಿಯೂ ರಾಮನೇ ರಾಮನಿದ್ದಾನೆ ಎಂದು ತಿಳಿದುಕೊಳ್ಳುತ್ತಾರೆ. ಸರ್ವವ್ಯಾಪಿಯ ಮಾತಿನ ಅಂಧಕಾರ ಇದರಿಂದ ಬಂದಿದೆ. ಮಾಲೆಯ ಅರ್ಥವನ್ನೂ ತಿಳಿದುಕೊಂಡಿಲ್ಲ. ಯಾರೋ 100 ಬಾರಿ ಜಪ ಮಾಡಿ ಎಂದು ಹೇಳಿದರೆ ಅವರು ಮಾಲೆಯನ್ನು ಜಪಮಾಡಲು ತೊಡಗುತ್ತಾರೆ. ತಂದೆಯಂತೂ ಅನುಭವಿಯಲ್ಲವೆ! ಇವರು 12 ಗುರುಗಳ ಅನುಭವ ಮಾಡಿದ್ದಾರೆ. ಇಂತಹವರೂ ಬಹಳ ಜನರಿದ್ದಾರೆ. ತಮ್ಮ ಗುರುಗಳಿದ್ದರೂ ಸಹ ಇನ್ನೂ ಹೆಚ್ಚಿನದಾಗಿ ಅನುಭವಕ್ಕಾಗಿ ಅನ್ಯರ ಬಳಿ ಹೋಗುತ್ತಾರೆ. ಮಾಲೆ ಮುಂತಾದವುಗಳನ್ನು ಜಪ ಮಾಡುತ್ತಾರೆ. ಇದು ಖಂಡಿತ ಅಂದಶ್ರದ್ಧೆಯಾಗಿದೆ. ಮಾಲೆಯು ಮುಗಿದ ನಂತರ ಹೂವಿಗೆ ನಮಸ್ಕಾರ ಮಾಡುತ್ತಾರೆ. ಇಲ್ಲಂತೂ ತಂದೆಯೇ ಹೂವಾಗಿದ್ದಾರೆ, ಮಾಲೆಯ ಮಣಿ ನೀವು ಅನನ್ಯಮಕ್ಕಳೇ ಆಗುತ್ತಿರಿ ನಂತರ ನಿಮ್ಮ ಸ್ಮರಣೆ ಮಾಡುತ್ತಾರೆ. ಕೆಲವರು ರಾಮನೆಂದು, ಕೆಲವರು ಕೃಷ್ಣನೆಂದು ನೆನಪು ಮಾಡುತ್ತಾರೆ ಆದರೆ ಅರ್ಥವನ್ನಂತೂ ತಿಳಿದುಕೊಂಡೇ ಇಲ್ಲ. ಶ್ರೀ ಕೃಷ್ಣ ಶರಣಂ ಎಂದು ಹೇಳಿ ಬಿಡುತ್ತಾರೆ....... ಅವನು ಸತ್ಯಯುಗದ ರಾಜಕುಮಾರನಾಗಿದ್ದನು. ಅವನ ಶರಣವನ್ನು ಹೇಗೆ ತೆಗೆದುಕೊಳ್ಳುತ್ತಾರೆ. ನೀವೇ ಪೂಜ್ಯರಿಂದ ಪೂಜಾರಿಗಳಾಗುತ್ತೀರಿ. ನೀವೇ 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದೀರಿ ಆದ್ದರಿಂದ ಶಿವ ತಂದೆಗೆ ತಿಳಿಸುತ್ತಾರೆ - ಹೇ ಹೂವೇ, ನಮ್ಮನ್ನು ನಿಮ್ಮ ಸಮಾನ ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾವುದೇ ಪ್ರಕಾರದ ಇಚ್ಛೆಯನ್ನಿಟ್ಟುಕೊಳ್ಳಬಾರದು. ಆಸಕ್ತಿಯನ್ನು ಸಮಾಪ್ತಿ ಮಾಡಿಕೊಳ್ಳಬೇಕು. ತಂದೆಯು ಏನನ್ನು ತಿನ್ನಿಸುತ್ತಾರೆ..... ತಂದೆಯ ಆದೇಶವಾಗಿದೆ - ಬೇಡುವುದಕ್ಕಿಂತ ಸಾಯುವುದು ಲೇಸು.
2. ತಂದೆಯಿಂದ ಸರ್ಚ್ಲೈಟ್ ತೆಗೆದುಕೊಳ್ಳಲು ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿ ಇಡಬೇಕು. ಬುದ್ಧಿಯಲ್ಲಿ ನಶೆಯಿರಲಿ - ನಾವು ಮಕ್ಕಳು, ಅವರು ತಂದೆಯಾಗಿದ್ದಾರೆ. ಅವರ ಸರ್ಚ್ಲೈಟ್ನಿಂದ ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು.
ಬ್ರಾಹ್ಮಣ ಜೀವನ - ತಂದೆಯೊಂದಿಗೆ ಸರ್ವ ಸಂಬಂಧಗಳ ಅನುಭವ ಮಾಡುವ ಜೀವನ
ಇಂದು ಬಾಪ್ದಾದಾರವರು ತನ್ನ ಅನೇಕ ಬಾರಿ ಮಿಲನವಾಗಿರುವ, ಅನೇಕ ಕಲ್ಪಗಳಲ್ಲಿ ಮಿಲನವಾಗಿರುವ ಮಕ್ಕಳೊಂದಿಗೆ, ಪುನಃ ಮಿಲನವಾಗಲು ಬಂದಿದ್ದಾರೆ. ಈ ಅಲೌಕಿಕ, ಅವ್ಯಕ್ತ ಮಿಲನವು ಭವಿಷ್ಯದ ಸ್ವರ್ಣೀಮ ಯುಗದಲ್ಲಿಯೂ ಆಗಲು ಸಾಧ್ಯವಿಲ್ಲ. ತಂದೆ ಮತ್ತು ಮಕ್ಕಳ ಮಿಲನದ ವಿಶೇಷ ವರದಾನವು ಕೇವಲ ಈ ಸಮಯ ಹಾಗೂ ಈ ಯುಗಕ್ಕಷ್ಟೇ ಇದೆ. ಆದ್ದರಿಂದ ಈ ಯುಗದ ಹೆಸರೇ ಸಂಗಮಯುಗ ಅರ್ಥಾತ್ ಮಿಲನವನ್ನಾಚರಿಸುವ ಯುಗವಾಗಿದೆ. ಇಂತಹ ಯುಗದಲ್ಲಿ ಇಂತಹ ಶ್ರೇಷ್ಠ ಮಿಲನವನ್ನಾಚರಿಸುವ ತಾವಾತ್ಮರು ವಿಶೇಷ ಪಾತ್ರಧಾರಿಗಳಾಗಿದ್ದೀರಿ. ಬಾಪ್ದಾದಾರವರೂ ಸಹ ಕೋಟಿಯಲ್ಲಿ ಕೆಲವು ಇಂತಹ ಶ್ರೇಷ್ಠ ಭಾಗ್ಯಶಾಲಿ ಆತ್ಮರನ್ನು ನೋಡುತ್ತಾ ಹರ್ಷಿತವಾಗುತ್ತಾರೆ ಮತ್ತು ಸ್ಮೃತಿ ತರಿಸುತ್ತಾರೆ. ಆದಿಯಿಂದ ಅಂತ್ಯದವರೆಗಿನ ಎಷ್ಟು ಸ್ಮೃತಿಗಳನ್ನು ನೆನಪಿಸಿದ್ದೇವೆ? ನೆನಪು ಮಾಡುತ್ತೀರೆಂದರೆ ಉದ್ದವಾದ ಪಟ್ಟಿಯಾಗಿ ಬಿಡುತ್ತದೆ. ಅಷ್ಟೂ ಸ್ಮೃತಿಗಳನ್ನು ತರಿಸಿದ್ದೇವೆ, ಅದರಿಂದ ತಾವೆಲ್ಲರೂ ಸ್ಮೃತಿ ಸ್ವರೂಪರಾಗಿ ಬಿಟ್ಟಿರಿ. ಭಕ್ತರೂ ಸಹ ಭಕ್ತಿಯಲ್ಲಿ ತಾವು ಸ್ಮೃತಿ ಸ್ವರೂಪ ಆತ್ಮರ ನೆನಪಾರ್ಥ ರೂಪದಲ್ಲಿ ಸ್ಮರಣೆ ಮಾಡುತ್ತಿರುತ್ತಾರೆ. ತಾವು ಸ್ಮೃತಿ ಸ್ವರೂಪವ ಆತ್ಮರ ಪ್ರತೀ ಕರ್ಮದ ವಿಶೇಷತೆಯನ್ನೂ ಸ್ಮರಣೆ ಮಾಡುತ್ತಿರುತ್ತಾರೆ. ಭಕ್ತಿಯ ವಿಶೇಷತೆಯೇ ಸ್ಮರಣೆಯಾಗಿದೆ ಅರ್ಥಾತ್ ಕೀರ್ತನೆ ಮಾಡುವುದಾಗಿದೆ. ಸ್ಮರಣೆ ಮಾಡುತ್ತಾ-ಮಾಡುತ್ತಾ ಎಷ್ಟೊಂದು ಮಸ್ತಿಯಲ್ಲಿ ಮಗ್ನರಾಗಿ ಬಿಡುತ್ತಾರೆ! ಅವರಿಗೆ ಅಲ್ಪಕ್ಕಾಲಕ್ಕಾದರೂ ಏನೂ ನೆನಪಿರುವುದಿಲ್ಲ. ಸ್ಮರಣೆಯನ್ನು ಮಾಡುತ್ತಾ-ಮಾಡುತ್ತಾ ಅದರಲ್ಲಿಯೇ ಮುಳುಗಿ ಬಿಡುತ್ತಾರೆ ಅರ್ಥಾತ್ ಲವಲೀನರಾಗಿ ಬಿಡುತ್ತಾರೆ, ಈ ಅಲ್ಪಕಾಲದ ಅನುಭವವು ಆ ಆತ್ಮರಿಗಾಗಿ ಎಷ್ಟೊಂದು ಭಿನ್ನ ಹಾಗೂ ಪ್ರಿಯವಾಗಿರುತ್ತದೆ! ಹೀಗೇಕೆ ಆಗುತ್ತದೆ? ಏಕೆಂದರೆ ಯಾವ ಆತ್ಮರ ಸ್ಮರಣೆ ಮಾಡುತ್ತಾರೆಯೋ, ಆ ಆತ್ಮರೂ ಸಹ ಸದಾ ತಂದೆಯ ಸ್ನೇಹದಲ್ಲಿ ಲವಲೀನರಾಗಿದ್ದರು, ಸದಾ ತಂದೆಯ ಸರ್ವ ಪ್ರಾಪ್ತಿಗಳಲ್ಲಿ ಮಗ್ನರಾಗಿರುವವರಾಗಿದ್ದರು. ಆದ್ದರಿಂದ ಇಂತಹ ಆತ್ಮರ ಸ್ಮರಣೆಯನ್ನು ಮಾಡುವುದರಿಂದ, ಆ ಭಕ್ತರಿಗೆ ತಾವು ವರದಾನಿ ಆತ್ಮರ ಮೂಲಕ ಅಲ್ಪಕಾಲಕ್ಕಾದರೂ ಅಂಚಲಿಯ ರೂಪದಲ್ಲಿ ಅನುಭೂತಿಯ ಪ್ರಾಪ್ತಿಯಾಗುತ್ತದೆ. ಅಂದಾಗ ಯೋಚಿಸಿರಿ - ಸ್ಮರಣೆ ಮಾಡುವಂತಹ ಭಕ್ತಾತ್ಮರಿಗೂ ಸಹ ಇಷ್ಟು ಅಲೌಕಿಕ ಅನುಭವವಾಗುತ್ತದೆಯೆಂದರೆ, ತಾವು ಸ್ಮೃತಿ ಸ್ವರೂಪರು, ವರದಾತಾ, ವಿದಾತಾ ಆತ್ಮರ ಪ್ರತ್ಯಕ್ಷ ಜೀವನದಲ್ಲೆಷ್ಟು ಅನುಭವದ ಪ್ರಾಪ್ತಿಯಾಗುತ್ತದೆ! ಸದಾ ಇದೇ ಅನುಭೂತಿಗಳಲ್ಲಿ ವೃದ್ಧಿ ಹೊಂದುತ್ತಾ ಸಾಗಿರಿ.
ಪ್ರತೀ ಹೆಜ್ಜೆಯಲ್ಲಿ ಭಿನ್ನ-ಭಿನ್ನ ಸ್ಮೃತಿ ಸ್ವರೂಪದ ಅನುಭವ ಮಾಡುತ್ತಾ ಸಾಗಿರಿ. ಸಮಯದನುಸಾರ ಕರ್ಮವಾಗಲಿ ಮತ್ತು ಅಂತಹ ಸ್ಮೃತಿ ಸ್ವರೂಪದ ಸ್ಮೃತಿಯನ್ನು ಪ್ರತ್ಯಕ್ಷ ರೂಪದಲ್ಲಿ ಅನುಭವ ಮಾಡಿರಿ. ಉದಾ: ಅಮೃತವೇಳೆ ದಿನದ ಆರಂಭವಾಗುತ್ತಿದ್ದಂತೆಯೆ, ತಂದೆಯೊಂದಿಗೆ ಮಿಲನ ಮಾಡುತ್ತಾ - ಮಾಸ್ಟರ್ ವರದಾತರಾಗಿ ವರದಾತನಿಂದ ವರದಾನವನ್ನು ತೆಗೆದುಕೊಳ್ಳುವಂತಹ ಶ್ರೇಷ್ಠ ಆತ್ಮನಾಗಿದ್ದೇನೆ, ಡೈರೆಕ್ಟ್ ವಿದಾತನ ಮೂಲಕ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಪದಮಾಪದಮ ಭಾಗ್ಯಶಾಲಿ ಆತ್ಮನಾಗಿದ್ದೇನೆ ಎಂಬ ಶ್ರೇಷ್ಠ ಸ್ವರೂಪವನ್ನು ಸ್ಮೃತಿಯಲ್ಲಿ ತಂದುಕೊಳ್ಳಿರಿ. ಅಮೃತವೇಳೆಯು ವರದಾನಿ ಸಮಯವಾಗಿದೆ, ವರದಾತಾ ವಿದಾತನು ಜೊತೆಯಲ್ಲಿದ್ದಾರೆ. ಮಾಸ್ಟರ್ ವರದಾನಿಯಾಗಿದ್ದು ಸ್ವಯಂ ಸಹ ಸಂಪನ್ನರಾಗುತ್ತಿದ್ದೇವೆ ಮತ್ತು ಅನ್ಯ ಆತ್ಮರಿಗಾಗಿಯೂ ವರದಾನವನ್ನು ಕೊಡಿಸುವ ವರದಾನಿ ಆತ್ಮರಾಗಿದ್ದೀರೆಂಬ ಸ್ಮೃತಿ ಸ್ವರೂಪವು ಪ್ರತ್ಯಕ್ಷ ಸ್ವರೂಪದಲ್ಲಿರಲಿ. ನಾನಂತು ಈ ರೀತಿಯಾಗಿಯೇ ಇದ್ದೇನೆ ಎನ್ನುವುದಿರಬಾರದು. ಆದರೆ ಸಮಯದನುಸಾರವಾಗಿ ಭಿನ್ನ-ಭಿನ್ನ ಸ್ಮೃತಿ ಸ್ವರೂಪಗಳನ್ನು ಅನುಭವ ಮಾಡುತ್ತೀರೆಂದರೆ, ಬಹಳ ವಿಚಿತ್ರವಾದ ಖುಷಿ, ವಿಚಿತ್ರ ಪ್ರಾಪ್ತಿಗಳ ಭಂಡಾರವಾಗಿ ಬಿಡುತ್ತೀರಿ ಮತ್ತು ಹೃದಯದಿಂದ ಸದಾ ಸ್ವತಹವಾಗಿಯೇ ಪ್ರಾಪ್ತಿಗಳ ಬೇಹದ್ದಿನ ಶಬ್ಧಗಳ ರೂಪದಲ್ಲಿ ಹಾಡು ಬರುತ್ತಿರುತ್ತದೆ- ``ಪಡೆಯಬೇಕಾದುದನ್ನು ಪಡೆದು ಬಿಟ್ಟೆನು.....''. ಇದೇ ಪ್ರಕಾರವಾಗಿ ಭಿನ್ನ-ಭಿನ್ನ ಸಮಯದಲ್ಲಿ ಹಾಗೂ ಭಿನ್ನ-ಭಿನ್ನ ಕರ್ಮದನುಸಾರವಾಗಿ ಸ್ಮೃತಿ ಸ್ವರೂಪದ ಅನುಭವ ಮಾಡುತ್ತಿರಿ. ಮುರುಳಿಯನ್ನು ಕೇಳುವಾಗ ಈ ಸ್ಮೃತಿಯಿರಲಿ - ನಾನು ಈಶ್ವರೀಯ ವಿದ್ಯಾರ್ಥಿ ಜೀವನ ಅರ್ಥಾತ್ ಭಗವಂತನ ವಿದ್ಯಾರ್ಥಿಯಾಗಿದ್ದೇನೆ, ನನಗೆ ಓದಿಸುವುದಕ್ಕಾಗಿ ಸ್ವಯಂ ಭಗವಂತನೇ ಪರಮಧಾಮದಿಂದ ಬಂದಿದ್ದಾರೆ, ಸ್ವಯಂ ಭಗವಂತನೇ ಓದಿಸುವುದಕ್ಕಾಗಿ ಬರುತ್ತಾರೆನ್ನುವುದೇ ವಿಶೇಷ ಪ್ರಾಪ್ತಿಯಾಗಿದೆ. ಯಾವಾಗ ಇದೇ ಸ್ಮೃತಿಯಿಂದ ಮುರುಳಿಯನ್ನು ಕೇಳಿಸಿಕೊಳ್ಳುತ್ತೀರಿ, ಆಗ ಎಷ್ಟೊಂದು ನಶೆಯಿರುತ್ತದೆ! ಒಂದುವೇಳೆ ಸಾಧಾರಣ ರೀತಿಯಿಂದ, ನಿಯಮದನುಸಾರವಾಗಿ ತಿಳಿಸುವವರು ತಿಳಿಸುತ್ತಿದ್ದಾರೆ ಮತ್ತು ಕೇಳಿಸಿಕೊಳ್ಳುವವರು ಕೇಳುತ್ತಿದ್ದಾರೆಂದರೆ, ಅಷ್ಟೊಂದು ನಶೆಯ ಅನುಭವವಾಗುವುದಿಲ್ಲ. ಆದರೆ ನಾವು ಭಗವಂತನ ವಿದ್ಯಾರ್ಥಿಯಾಗಿದ್ದೇವೆ ಎಂಬ ಸ್ಮೃತಿಯನ್ನು ಸ್ವರೂಪದಲ್ಲಿ ತಂದುಕೊಳ್ಳುತ್ತಾ ಕೇಳಿಸಿಕೊಂಡಾಗ, ಅಲೌಕಿಕ ನಶೆಯ ಅನುಭವವಾಗುವುದು. ತಿಳಿಯಿತೆ?
ಭಿನ್ನ-ಭಿನ್ನ ಸಮಯದ ಭಿನ್ನ-ಭಿನ್ನ ಸ್ಮೃತಿ ಸ್ವರೂಪದ ಅನುಭವಗಳಲ್ಲಿ ಎಷ್ಟೊಂದು ನಶೆಯಿರುತ್ತದೆ! ಇದೇ ರೀತಿ ಇಡೀ ದಿನದ ಪ್ರತಿಯೊಂದು ಕರ್ಮದಲ್ಲಿ ತಂದೆಯ ಜೊತೆ ಸ್ಮೃತಿ ಸ್ವರೂಪರಾಗುತ್ತಾ ನಡೆಯಿರಿ - ಹೇಗೆಂದರೆ, ಕೆಲವೊಮ್ಮೆ ಭಗವಂತನ ಸಖನಾಗಿ ಅಥವಾ ಜೊತೆಗಾರನಾಗಿ, ಕೆಲವೊಮ್ಮೆ ಜೀವನದ ಸಂಗಾತಿಯ ರೂಪದಲ್ಲಿ, ಕೆಲವೊಮ್ಮೆ ಭಗವಂತನು ನನ್ನ ಮುದ್ದಾದ ಮಗುವಾಗಿದ್ದಾನೆ ಅರ್ಥಾತ್ ಮೊಟ್ಟ ಮೊದಲ ಹಕ್ಕುದಾರ, ಮೊದಲ ವಾರಸುಧಾರ ಆಗಿದ್ದಾನೆ. ಯಾವುದೇ ಮಗು ಅಷ್ಟು ಸುಂದರ ಮತ್ತು ಬಹಳ ಯೋಗ್ಯವಾದ ಮಗುವಾಗಿರುತ್ತದೆಯೆಂದರೆ, ಮಾತಾಪಿತರಿಗೆ ಎಷ್ಟೊಂದು ನಶೆಯಿರುತ್ತದೆ - ನನ್ನ ಮಗು ಕುಲ ದೀಪಕನಾಗಿದ್ದಾನೆ ಅಥವಾ ಕುಲದ ಹೆಸರನ್ನು ಬೆಳಗಿಸುವವನಾಗಿದ್ದಾನೆ! ಯಾರಿಗೆ ಭಗವಂತನೇ ಮಗುವಾಗಿ ಬಿಡುತ್ತಾರೆ, ಅವರ ಹೆಸರಿನ್ನೆಷ್ಟು ಪ್ರಸಿದ್ಧವಾಗುತ್ತದೆ! ಅವರಿಂದ ಎಷ್ಟು ಕುಲಗಳ ಕಲ್ಯಾಣವಾಗಬಹುದು!! ಅಂದಮೇಲೆ ಯಾವಾಗ ಕೆಲವೊಮ್ಮೆ ಪ್ರಪಂಚದ ವಾತಾವರಣದಿಂದ ಅಥವಾ ಭಿನ್ನ-ಭಿನ್ನ ಸಮಸ್ಯೆಗಳಿಂದಲೂ ಸಹ ಸ್ವಲ್ಪವೇನಾದರೂ ಸ್ವಯಂನ್ನು ಒಂಟಿ ಅಥವಾ ಉದಾಸತೆಯ ಅನುಭವವಾಗುತ್ತದೆಯೆಂದರೆ, ಇಂತಹ ಸುಂದರವಾದ ಮಗುವಿನ ರೂಪದಿಂದ ಆಟವಾಡಿರಿ, ಸಖನ ರೂಪದಲ್ಲಿ ಆಟವಾಡಿರಿ. ಕೆಲವೊಮ್ಮೆ ಸುಸ್ತಾಗಿ ಬಿಡುತ್ತೀರೆಂದರೆ ತಾಯಿಯ ರೂಪದಲ್ಲಿ ಮಡಿಲಿನಲ್ಲಿ ಮಲಗಿ ಬಿಡಿ, ಸಮಾವೇಶವಾಗಿ ಬಿಡಿ. ಕೆಲವೊಮ್ಮೆ ಹೃದಯ ವಿಧೀರ್ಣರಾಗುತ್ತೀರೆಂದರೆ ಸರ್ವಶಕ್ತಿವಂತನ ಸ್ವರೂಪದಿಂದ ಮಾಸ್ಟರ್ ಸರ್ವಶಕ್ತಿವಂತನ ಸ್ಮೃತಿ ಸ್ವರೂಪವನ್ನು ಅನುಭವ ಮಾಡಿರಿ, ಅದರಿಂದ ದಿಲ್ಖುಷ್ ಆಗಿ ಬಿಡುತ್ತೀರಿ. ಭಿನ್ನ-ಭಿನ್ನ ಸಮಯಗಳಲ್ಲಿ ಭಿನ್ನ-ಭಿನ್ನ ಸಂಬಂಧಗಳಿಂದ, ತಮ್ಮ ಭಿನ್ನ-ಭಿನ್ನ ಸ್ವರೂಪದ ಸ್ಮೃತಿಗಳನ್ನು ಪ್ರತ್ಯಕ್ಷ ರೂಪದಲ್ಲಿ ಅನುಭವ ಮಾಡುತ್ತೀರೆಂದರೆ, ಸದಾ ಸ್ವತಹವಾಗಿಯೇ ತಂದೆಯ ಜೊತೆಯ ಅನುಭವ ಮಾಡುವಿರಿ ಮತ್ತು ಸದಾ ಈ ಸಂಗಮಯುಗದ ಬ್ರಾಹ್ಮಣ ಜೀವನವು ಅಮೂಲ್ಯವಾದುದೆಂದು ಅನುಭವ ಆಗುತ್ತಿರುತ್ತದೆ.
ಮತ್ತೊಂದು ಮತು - ಇಷ್ಟೆಲ್ಲಾ ಸರ್ವ ಸಂಬಂಧಗಳನ್ನು ನಿಭಾಯಿಸುವುದರಲ್ಲಿ ಅಷ್ಟು ನಿರತರಾಗುತ್ತೀರೆಂದರೆ, ಮಾಯೆಯು ಬರುವುದಕ್ಕೂ ಸಹ ಸಮಯ ಸಿಗುವುದಿಲ್ಲ. ಹೇಗೆ ಲೌಕಿಕದ ದೊಡ್ಡ ಪ್ರವೃತ್ತಿಯವರು ಸದಾ ಇದನ್ನೇ ಹೇಳುತ್ತಾರೆ - ಪ್ರವೃತ್ತಿಯನ್ನು ಸಂಭಾಲನೆ ಮಾಡುವುದರಲ್ಲಿ ಇಷ್ಟೂ ನಿರತರಾಗಿರುತ್ತೇವೆ, ಅದರಿಂದ ಮತ್ತ್ಯಾವುದೇ ಮಾತುಗಳೂ ನೆನಪಿರುವುದಿಲ್ಲ. ಏಕೆಂದರೆ ಬಹಳ ದೊಡ್ಡ ಪ್ರವೃತ್ತಿಯಿದೆ. ಅಂದಾಗ ತಾವು ಬ್ರಾಹ್ಮಣ ಆತ್ಮರು ಪ್ರಭುವಿನೊಂದಿಗೆ ಪ್ರೀತಿಯನ್ನು ನಿಭಾಯಿಸುವ ಪ್ರಭು-ಪ್ರವೃತ್ತಿಯೆಷ್ಟು ದೊಡ್ಡದಾಗಿದೆ! (ಶ್ರೇಷ್ಠವಾಗಿದೆ) ತಮ್ಮ ಪ್ರಭು ಪ್ರೀತಿಯ ಪ್ರವೃತ್ತಿಯು ಮಲಗುವಾಗಲೂ ನಡೆಯುತ್ತದೆ! ಒಂದುವೇಳೆ ಯೋಗ ನಿದ್ರೆಯಲ್ಲಿರುತ್ತೀರೆಂದರೆ ಅದು ನಿದ್ರೆಯಲ್ಲ ಆದರೆ ಯೋಗ ನಿದ್ರೆಯಾಗಿದೆ. ನಿದ್ರೆ ಮಾಡುವಾಗಲೂ ಸಹ ಪ್ರಭು ಮಿಲನ ಮಾಡಬಹುದು. ಯೋಗದ ಅರ್ಥವೇ ಆಗಿದೆ - ಮಿಲನ ಮಾಡುವುದು. ಯೋಗ ನಿದ್ರೆ ಅರ್ಥಾತ್ ಅಶರೀರಿ ಸ್ಥಿತಿಯ ಅನುಭೂತಿ. ಅಂದಮೇಲೆ ಇದೂ ಸಹ ಪ್ರಭು ಪ್ರೀತಿಯಾಗಿದೆ. ಹಾಗಾದರೆ ತಮ್ಮಂತಹ ದೊಡ್ಡ ಪ್ರವೃತ್ತಿಯವರು ಮತ್ತ್ಯಾರೂ ಇಲ್ಲ! ತಮಗೆ ಒಂದು ಸೆಕೆಂಡಿನ ಬಿಡುವಿನ ಸಮಯವೂ ಇಲ್ಲ. ಏಕೆಂದರೆ ಭಕ್ತಿಯಲ್ಲಿ ಭಕ್ತನ ರೂಪದಲ್ಲಿಯೂ ಹಾಡನ್ನಾಡುತ್ತಿದ್ದಿರಿ - ಪ್ರಭು, ತಾವು ಬಹಳ ದಿನಗಳ ನಂತರ ಸಿಕ್ಕಿದ್ದೀರಿ, ಅಂದಮೇಲೆ ಕ್ಷಣ-ಕ್ಷಣದ ಲೆಕ್ಕವನ್ನು ತೆಗೆದುಕೊಳ್ಳುತ್ತೇವೆ. ಅಂದಾಗ ಒಂದೊಂದು ಸೆಕೆಂಡಿನ ಲೆಕ್ಕ ತೆಗೆದುಕೊಳ್ಳುವವರಾಗಿದ್ದೀರಿ. ಇಡೀ ಕಲ್ಪದ ಮಿಲನದ ಲೆಕ್ಕವು, ಈ ಚಿಕ್ಕದಾದ ಒಂದು ಜನ್ಮದಲ್ಲಿಯೇ ಪೂರ್ಣಗೊಳಿಸುತ್ತೀರಿ. 5000 ವರ್ಷಗಳ ಲೆಕ್ಕದಲ್ಲಿ ಇದು ಚಿಕ್ಕದಾದ ಜನ್ಮವು ಸ್ವಲ್ಪ ದಿನಗಳ ಲೆಕ್ಕವಾಯಿತಲ್ಲವೆ. ಅಂದಾಗ ಸ್ವಲ್ಪದಿನಗಳಲ್ಲಿಯೇ ಇಷ್ಟು ದೊಡ್ಡ ಸಮಯದ ಲೆಕ್ಕವನ್ನು ಪೂರ್ಣಗೊಳಿಸಬೇಕಾಗಿದೆ. ಆದ್ದರಿಂದ ಹೇಳುತ್ತಾರೆ - ಶ್ವಾಸ-ಶ್ವಾಸದಲ್ಲಿಯೂ ಸ್ಮರಣೆ ಮಾಡಿರಿ. ಭಕ್ತರು ಸ್ಮರಣೆ ಮಾಡುತ್ತಾರೆ, ತಾವು ಸ್ಮೃತಿ ಸ್ವರೂಪರಾಗುತ್ತೀರಿ. ಹಾಗಾದರೆ ತಮಗೆ ಸೆಕೆಂಡಿಗಾದರೂ ಬಿಡುವಿನ ಸಮಯವಿದೆಯೇ? ಎಷ್ಟೊಂದು ದೊಡ್ಡ ಪ್ರವೃತ್ತಿಯಾಯಿತು! ಈ ಪ್ರವೃತ್ತಿಯ ಮುಂದೆ ಆ ಚಿಕ್ಕದಾದ ಪ್ರವೃತ್ತಿಯು ಆಕರ್ಷಣೆ ಮಾಡುವುದಿಲ್ಲ ಮತ್ತು ಸಹಜ ಸ್ವತಹವಾಗಿಯೇ ದೇಹ ಸಹಿತ, ದೇಹದ ಸಂಬಂಧ ಮತ್ತು ದೇಹದ ಪದಾರ್ಥ ಅಥವಾ ಪ್ರಾಪ್ತಿಗಳಿಂದ ನಷ್ಟಮೋಹ ಸ್ಮೃತಿ ಸ್ವರೂಪರಾಗಿ ಬಿಡುತ್ತೀರಿ. ಈ ಅಂತಿಮ ಪರೀಕ್ಷೆಯಿಂದಲೇ ಮಾಲೆಯ ನಂಬರ್ವಾರ್ ಮಣಿಯನ್ನಾಗಿ ಮಾಡುತ್ತದೆ.
ಹೇಗೆ ಅಮೃತವೇಳೆಯಿಂದ ಯೋಗ ನಿದ್ರೆಯವರೆಗೂ ಭಿನ್ನ-ಭಿನ್ನ ಸ್ಮೃತಿ ಸ್ವರೂಪದ ಅನುಭವಿ ಆಗಿ ಬಿಡುತ್ತೀರೆಂದರೆ, ಬಹಳ ಕಾಲದ ಸ್ಮೃತಿ ಸ್ವರೂಪದ ಅನುಭವವು, ಅಂತ್ಯದಲ್ಲಿ ಸ್ಮೃತಿ ಸ್ವರೂಪದ ಪ್ರಶ್ನೆಗಳಲ್ಲಿ ಪಾಸ್-ವಿತ್-ಆನರ್ (ಗೌರವಾನ್ವಿತವಾಗಿ ತೇರ್ಗಡೆಯಾಗುವುದು) ಮಾಡಿ ಬಿಡುತ್ತದೆ. ಬಹಳ ರಮಣೀಕ ಜೀವನದ ಅನುಭವ ಮಾಡುತ್ತೀರಿ ಏಕೆಂದರೆ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯಾತ್ಮನ ಇಚ್ಛೆಯು ‘ವಿಭಿನ್ನ'ವಾಗಿರುವುದನ್ನೇ ಬಯಸುತ್ತಾರೆ. ಅಂದಾಗ ಇಡೀ ದಿನದಲ್ಲಿ ಈ ಭಿನ್ನ-ಭಿನ್ನ ಸಂಬಂಧ, ಭಿನ್ನ-ಭಿನ್ನ ಸ್ವರೂಪದ ವಿಭಿನ್ನತೆಯ ಅನುಭವ ಮಾಡಿರಿ. ಪ್ರಪಂಚದವರೂ ಹೇಳುತ್ತಾರಲ್ಲವೆ - ತಂದೆಯಂತು ಅವಶ್ಯವಾಗಿ ಇರಬೇಕು. ಆದರೆ ತಂದೆಯ ಜೊತೆಗೆ ಜೀವನದ ಸಂಗಾತಿಯ ಅನುಭವವಿಲ್ಲದಿದ್ದರೆ, ಜೀವನವು ಅಪೂರ್ಣವೆಂದು ತಿಳಿಯುತ್ತಾರೆ. ಮಗುವಿರದಿದ್ದರೂ ಅಪೂರ್ಣವೆಂದು ತಿಳಿಯುತ್ತಾರೆ. ಪ್ರತಿಯೊಂದು ಸಂಬಂಧವನ್ನೂ ಸಂಪನ್ನ ಜೀವನವೆಂದು ತಿಳಿಯುತ್ತಾರೆ ಅಂದಾಗ ಈ ಬ್ರಾಹ್ಮಣ ಜೀವನವು ಭಗವಂತನೊಂದಿಗೆ ಸರ್ವ ಸಂಬಂಧಗಳ ಅನುಭವ ಮಾಡುವಂತಹ ಸಂಪನ್ನ ಜೀವನವಾಗಿದೆ! ಸರ್ವ ಸಂಬಂಧಗಳಲ್ಲಿ ಒಂದು ಸಂಬಂಧದ ಕೊರತೆಯೂ ಆಗಬಾರದು. ಭಗವಂತನೊಂದಿಗಿನ ಒಂದು ಸಂಬಂಧವು ಕೊರತೆಯಾಯಿತೆಂದರೆ, ಆ ಸಂಬಂಧದಿಂದ ಒಂದಲ್ಲ ಒಂದು ಆತ್ಮವು ತನ್ನ ಕಡೆಗೆ ಸೆಳೆಯುತ್ತದೆ. ಹೇಗೆ ಕೆಲವು ಮಕ್ಕಳು ಕೆಲವೊಮ್ಮೆ ಹೇಳುತ್ತಾರೆ - ತಂದೆಯ ರೂಪದಲ್ಲಂತು ಇರುತ್ತಾರೆ. ಆದರೆ ಸಖ ಅಥವಾ ಸಖಿ ಅಥವಾ ಮಿತ್ರನು ಚಿಕ್ಕ ರೂಪವಾಗಿದೆಯಲ್ಲವೆ, ಅದಕ್ಕಾಗಿ ಆತ್ಮರಂತು ಇರಬೇಕು ಏಕೆಂದರೆ ತಂದೆಯಂತು ದೊಡ್ಡವರಲ್ಲವೆ. ಆದರೆ ಪರಮಾತ್ಮನ ಸಂಬಂಧ ಮಧ್ಯೆ, ಯಾವುದೇ ಚಿಕ್ಕ ಅಥವಾ ಸಾಧಾರಣ ಆತ್ಮನ ಸಂಬಂಧವು ಸೇರ್ಪಡೆಯಾಗುತ್ತದೆಯೆಂದರೆ ‘ಸರ್ವ’ ಶಬ್ಧದ ಸಮಾಪ್ತಿಯಾಗಿ ಬಿಡುತ್ತದೆ. ಮತ್ತು ಯಥಾ ಶಕ್ತಿಯವರ ಲೈನ್ನಲ್ಲಿ ಬಂದು ಬಿಡುತ್ತೀರಿ. ಬ್ರಾಹ್ಮಣ ಭಾಷೆಯಲ್ಲಿ ಸದಾ ಪ್ರತೀ ಮಾತಿನಲ್ಲಿಯೂ ‘ಸರ್ವ’ ಶಬ್ಧವು ಬರುತ್ತದೆ, ಎಲ್ಲಿ ‘ಸರ್ವ’ ಶಬ್ಧವಿದೆಯೋ ಅಲ್ಲಿಯೇ ಸಂಪನ್ನತೆಯೂ ಇರುತ್ತದೆ. ಒಂದುವೇಳೆ ಎರಡು ಕಲೆಯು ಕಡಿಮೆಯಾಯಿತೆಂದರೂ ಎರಡನೇ ಮಾಲೆಯ ಮಣಿಯಾಗಿ ಬಿಡುತ್ತೀರಿ. ಆದ್ದರಿಂದ ಸರ್ವ ಸಂಬಂಧಗಳ ಸರ್ವ ಸ್ಮೃತಿ ಸ್ವರೂಪರಾಗಿರಿ. ತಿಳಿಯಿತೆ? ಯಾವಾಗ ಭಗವಂತನೇ ಸ್ವಯಂ ಸರ್ವ ಸಂಬಂಧಗಳ ಅನುಭವ ಮಾಡಿಸುವ ಅವಕಾಶ ಕೊಡುತ್ತಿದ್ದಾರೆ, ಅಂದಮೇಲೆ ಪ್ರಾಪ್ತಿ ಮಾಡಿಕೊಳ್ಳಬೇಕಲ್ಲವೆ. ಇಂತಹ ಗೋಲ್ಡನ್ ಚಾನ್ಸ್ನ್ನು ಭಗವಂತನಲ್ಲದೇ ಮತ್ತು ಈ ಸಮಯದಲ್ಲ ಮಾಡಿಕೊಳ್ಳದಿದ್ದರೆ ಮತ್ತೆಂದಿಗೂ ಹಾಗೂ ಮತ್ತ್ಯಾರೂ ಸಹ ಅನುಭವ ಮಾಡಿಸಲು ಸಾಧ್ಯವಿಲ್ಲ. ಯಾರೇ ತಂದೆಯಾಗಬಹುದು ಅಥವಾ ಮಗನಾಗಬಹುದು - ಈ ರೀತಿಯಾಗಲು ಸಾಧ್ಯವಿದೆಯೇ? ಇದಂತು ಒಬ್ಬರದೇ ಮಹಿಮೆಯಾಗಿದೆ, ಒಬ್ಬರದೇ ಮಹಾನತೆಯಾಗಿದೆ ಆದ್ದರಿಂದ ಸರ್ವ ಸಂಬಂಧಗಳಿಂದ ಸ್ಮೃತಿ ಸ್ವರೂಪರು ಆಗಬೇಕಾಗಿದೆ. ಇದರಲ್ಲಿ ಮಜಾ ಇದೆಯಲ್ಲವೆ? ಯಾವುದಕ್ಕಾಗಿ ಬ್ರಾಹ್ಮಣ ಜೀವನವಿದೆ? ಮಜಾದಲ್ಲಿ ಅಥವಾ ಮೋಜಿನಲ್ಲಿರುವುದಕ್ಕಾಗಿ ಇದೆ. ಅಂದಮೇಲೆ ಈ ಅಲೌಕಿಕ ಮೋಜನ್ನಾಚರಿಸಿರಿ. ಮಜಾದ (ಅಲೌಕಿಕ ಸುಖ) ಜೀವನದ ಅನುಭವ ಮಾಡಿರಿ. ಒಳ್ಳೆಯದು.
ಇಂದು ದೆಹಲಿಯ ಸಭೆಯವರಿದ್ದಾರೆ. ರಾಜ್ಯ ಸಭೆಯವರು ಆಗಿದ್ದೀರಾ ಅಥವಾ ಸಭೆಯಲ್ಲಿ ಕೇವಲ ನೋಡುವವರಾಗಿದ್ದೀರಾ? ಸಭೆಯಲ್ಲಿ ರಾಜ್ಯಾಡಳಿತ ಮಾಡುವವರು ಮತ್ತು ನೋಡುವವರು - ಇಬ್ಬರೂ ಕುಳಿತಿದ್ದಾರೆ. ತಾವೆಲ್ಲರೂ ಯಾರಾಗಿದ್ದೀರಿ? ದೆಹಲಿಯ ಎರಡು ವಿಶೇಷತೆಗಳಿವೆ, 1. ದೆಹಲಿಯು ಹೃದಯರಾಮನ ಹೃದಯವಾಗಿದೆ. 2. ಸಿಂಹಾಸನದ ಸ್ಥಾನವಾಗಿದೆ. ದೆಹಲಿಯು ಹೃದಯವಾಗಿದೆಯೆಂದರೆ, ಹೃದಯದಲ್ಲಿ ಯಾರಿದ್ದಾರೆ? ಹೃದಯರಾಮ. ಅಂದಮೇಲೆ ದೆಹಲಿ ನಿವಾಸಿಗಳು ಅರ್ಥಾತ್ ಹೃದಯದಲ್ಲಿ ಸದಾ ಹೃದಯರಾಮನನ್ನು ಇಟ್ಟುಕೊಳ್ಳುವವರು. ಇಂತಹ ಅನುಭವಿ ಆತ್ಮರಾಗಿದ್ದೀರಿ ಮತ್ತು ಈಗಿನಿಂದ ಸ್ವರಾಜ್ಯ ಅಧಿಕಾರಿಯಿಂದ ಭವಿಷ್ಯದಲ್ಲಿ ವಿಶ್ವ ರಾಜ್ಯ ಅಧಿಕಾರಿ ಆಗಿದ್ದೀರಿ. ಹೃದಯದಲ್ಲಿ ಹೃದಯರಾಮನು ಇದ್ದಾರೆಂದರೆ ರಾಜ್ಯಾಧಿಕಾರಿಯಾಗಿ ಈಗಲೂ ಇದ್ದೀರಿ ಮತ್ತು ಸದಾ ಇರುತ್ತೀರಿ. ಅಂದಾಗ ಸದಾ ತಮ್ಮ ಜೀವನದಲ್ಲಿ ಇವೆರಡು ವಿಶೇಷತೆಗಳಿವೆಯೇ? ಎಂದು ನೋಡಿಕೊಳ್ಳಿರಿ. ಹೃದಯದಲ್ಲಿ ಹೃದಯರಾಮ ಮತ್ತು ಅಧಿಕಾರಿಯೂ ಆಗಿರಬೇಕು. ಇಂತಹ ಸುವರ್ಣಾವಕಾಶ (ಗೋಲ್ಡನ್ ಚಾನ್ಸ್)! ಗೋಲ್ಡನ್ಗಿಂತಲೂ ಡೈಮಂಡ್ ಚಾನ್ಸ್ನ್ನು ತೆಗೆದುಕೊಳ್ಳುವವರೆಷ್ಟು ಭಾಗ್ಯಶಾಲಿಯಾಗಿದ್ದೀರಿ! ಒಳ್ಳೆಯದು.
ಈಗಂತು ದೇಶದಲ್ಲಾಗಲಿ ಅಥವಾ ವಿದೇಶದಲ್ಲಿಯೂ ಬೇಹದ್ದಿನ ಸೇವೆಗಾಗಿ ಬಹಳ ಒಳ್ಳೆಯ ಸಾಧನಗಳು ಸಿಕ್ಕಿವೆ. "ಸರ್ವರ ಸ್ನೇಹ, ಸಹಯೋಗದಿಂದ ಸುಖಮಯ ಪ್ರಪಂಚ"- ಹೆಸರಿನಂತೆಯೇ ಸುಂದರವಾದ ಕಾರ್ಯವಾಗಿದೆ, ಹೆಸರನ್ನು ಕೇಳುತ್ತಿದ್ದಂತೆಯೇ ಎಲ್ಲರಲ್ಲಿಯೂ ಉಮ್ಮಂಗ ಬರುತ್ತದೆ. ಇದಂತು ಬಹಳ ದೊಡ್ಡ ಕಾರ್ಯವಾಗಿದೆ, ಒಂದು ವರ್ಷಕ್ಕೂ ಹೆಚ್ಚು ಸಮಯದ ಕಾರ್ಯವಾಗಿದೆ. ಅಂದಮೇಲೆ ಹೇಗೆ ಕಾರ್ಯದ ಹೆಸರನ್ನು ಕೇಳುತ್ತಿದ್ದಂತೆಯೇ ಎಲ್ಲರಿಗೂ ಉಮ್ಮಂಗ ಬರುತ್ತದೆಯೋ ಹಾಗೆಯೇ ಕಾರ್ಯವನ್ನೂ ಉಮ್ಮಂಗದಿಂದ ಮಾಡಬೇಕು. ಈ ಕಾರ್ಯದ ಸುಂದರ ಹೆಸರಿನಿಂದಲೇ ಖುಷಿಯಾಗುತ್ತಿದೆ, ಹಾಗೆಯೇ ಕಾರ್ಯವನ್ನು ಮಾಡುತ್ತಿರುವಾಗಲೂ ಸದಾ ಖುಷಿಯಾಗಿ ಬಿಡುತ್ತೀರಿ. ಇದೂ ಸಹ ಪ್ರತ್ಯಕ್ಷತೆಯ ಪರದೆಯನ್ನು ತೆರೆಯಲು ಆಧಾರವಾಗಿದೆ ಮತ್ತು ಇಂತಹ ಕಾರ್ಯಗಳು ಆಗುತ್ತಿರುತ್ತವೆ ಎಂದು ತಿಳಿಸಿದ್ದೇವಲ್ಲವೆ. ಸರ್ವರ ಸಹಯೋಗಿ - ಕಾರ್ಯದ ಹೆಸರು ಹೇಗಿದೆಯೋ ಹಾಗೆಯೇ ತಾವು ಸ್ವರೂಪರಾಗಿದ್ದು ಕಾರ್ಯವನ್ನು ಸಹಜವಾಗಿ ಮಾಡುತ್ತಿದ್ದರೆ, ಪರಿಶ್ರಮವು ನಿಮಿತ್ತವಷ್ಟೆ ಮತ್ತು ಅದರ ಸಫಲತೆಯು ಪದಮದಷ್ಟು ಅನುಭವ ಮಾಡುತ್ತೀರಿ. ಈ ರೀತಿಯಲ್ಲಿ ಅನುಭವ ಮಾಡುತ್ತೀರಿ ಹೇಗೆಂದರೆ, ಮಾಡಿಸುವವರು ನಮ್ಮನ್ನು ನಿಮಿತ್ತ ಮಾಡಿ ಮಾಡಿಸುತ್ತಿದ್ದಾರೆ. ನಾನು ಮಾಡುತ್ತಿದ್ದೇನೆ ಎನ್ನುವುದಿರುವುದಿಲ್ಲ, ಇದರಿಂದ ಸಹಜಯೋಗಿಯೂ ಆಗುವುದಿಲ್ಲ, ಮಾಡಿಸುವವರು ಮಾಡಿಸುತ್ತಿದ್ದಾರೆ ಮತ್ತು ನಡೆಸುವವರು ಕಾರ್ಯವನ್ನು ನಡೆಸುತ್ತಿದ್ದಾರೆ. ತಮ್ಮೆಲ್ಲರ ಜಗದಂಬಾರವರ ಒಂದು ಸ್ಲೋಗನ್ ನೆನಪಿದೆಯೇ - ಆಜ್ಞೆ ಮಾಡುವವರೇ ನಮ್ಮನ್ನು ನಡೆಸುತ್ತಿದ್ದಾರೆ. ಈ ಸ್ಲೋಗನ್ನ್ನು ಸದಾ ಸ್ಮೃತಿ ಸ್ವರೂಪದಲ್ಲಿ ತಂದುಕೊಳ್ಳುತ್ತಾ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರುತ್ತೀರಿ. ಉಳಿದಂತೆ ನಾಲ್ಕೂ ಕಡೆಯಲ್ಲಿನ ಉಮ್ಮಂಗ-ಉತ್ಸಾಹವು ಬಹಳ ಚೆನ್ನಾಗಿದೆ. ಎಲ್ಲಿ ಉಮ್ಮಂಗ-ಉತ್ಸಾಹವಿದೆಯೋ ಅಲ್ಲಿ ಸಫಲತೆಯು ತಾನಾಗಿಯೇ ಸಮೀಪಕ್ಕೆ ಬಂದು, ಕೊರಳಿನ ಮಾಲೆಯಾಗಿ ಬಿಡುತ್ತದೆ. ಈ ವಿಶಾಲ ಕಾರ್ಯದಲ್ಲಿ ಅನೇಕ ಆತ್ಮರನ್ನು ಸಹಯೋಗಿಯನ್ನಾಗಿ ಮಾಡುತ್ತಾ ಸಮೀಪಕ್ಕೆ ಕರೆ ತರುತ್ತದೆ ಏಕೆಂದರೆ ಈ ವಿಶಾಲ ಸ್ಟೇಜಿನ ಮೇಲೆ ಪ್ರತ್ಯಕ್ಷತೆಯ ಪರದೆಯು ತೆರೆದ ನಂತರ, ಪ್ರತಿಯೊಂದು ವರ್ಗದ ಪಾತ್ರಧಾರಿಗಳು ಪ್ರತ್ಯಕ್ಷವಾಗಬೇಕು. ಪ್ರತಿಯೊಂದು ವರ್ಗವೆಂದರೆ - ವಿಶ್ವದ ಸರ್ವ ಆತ್ಮರ ವೆರೈಟಿ ವೃಕ್ಷದ ಸಂಘಟನೆಯ ರೂಪ. ನಮಗಂತು ಸಂದೇಶವೇ ಸಿಗಲಿಲ್ಲ ಎಂಬ ದೂರು ಯಾರೂ ಕೊಡಬಾರದು, ಇಂತಹ ಯಾವುದೇ ವರ್ಗದವರೂ ಉಳಿದುಕೊಳ್ಳಬಾರದು. ಆದ್ದರಿಂದ ನೇತರಿಂದ ಹಿಡಿದು ಗುಡಿಸಿಲಿನಲ್ಲಿರುವವರೆಗೂ ವರ್ಗಗಳಿವೆ. ವಿದ್ಯಾವಂತರಲ್ಲಿ ಎಲ್ಲರಿಗಿಂತಲೂ ಮೇಲಿರುವವರೆಂದರೆ ವಿಜ್ಞಾನಿಗಳು ಮತ್ತು ಯಾರು ಅವಿದ್ಯಾವಂತರಿದ್ದಾರೆಯೋ, ಅವರಿಗೂ ಈ ಜ್ಞಾನದ ತಿಳುವಳಿಕೆಯನ್ನು ಕೊಡಿ, ಇದೂ ಸಹ ಸೇವೆಯಾಗಿದೆ. ಅಂದಮೇಲೆ ಎಲ್ಲಾ ವರ್ಗಗಳು ಅಂದರೆ ವಿಶ್ವದ ಪ್ರತಿಯೊಂದು ಆತ್ಮನಿಗೂ ಸಂದೇಶವನ್ನು ತಲುಪಿಸಬೇಕಾಗಿದೆ, ಇದೆಷ್ಟು ದೊಡ್ಡ ಕಾರ್ಯವಾಗಿದೆ! ಇದರಿಂದ ಯಾರೂ ಸಹ ನಮಗೆ ಸೇವೆಯ ಅವಕಾಶವೇ ಸಿಗಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಭಲೆ ಯಾವುದೇ ಖಾಯಿಲೆಯಿರಬಹುದು, ಅಂದಾಗ ರೋಗಿಯು ರೋಗಿಯ ಸೇವೆ ಮಾಡಿರಿ, ಅವಿದ್ಯಾವಂತರು ಅವಿದ್ಯಾವಂತರ ಸೇವೆ ಮಾಡಿರಿ. ಯಾವ ಸೇವೆಯನ್ನು ಮಾಡಬಲ್ಲಿರಿ, ಅದರ ಅವಕಾಶವಿದೆ. ಒಳ್ಳೆಯದು - ಹೇಳುವುದಕ್ಕೆ ಸಾಧ್ಯವಿಲ್ಲವೆಂದರೆ ಮನಸ್ಸಾ ವಾಯುಮಂಡಲದಿಂದ ಸುಖದ ವೃತ್ತಿ, ಸುಖಮಯ ಸ್ಥಿತಿಯಿಂದ ಸುಖಮಯ ಪ್ರಪಂಚವನ್ನಾಗಿ ಮಾಡಿರಿ. ನಾನು ಮಾಡಲು ಸಾಧ್ಯವಿಲ್ಲ, ನನಗೆ ಸಮಯವಿಲ್ಲ ಎಂಬ ಯಾವುದೇ ನೆಪ ಅಥವಾ ಕಾರಣಗಳನ್ನು ಕೊಡಲು ಸಾಧ್ಯವಿಲ್ಲ. ಏಳುತ್ತಾ-ಕುಳಿತುಕೊಳ್ಳುತ್ತಾ 10-10 ನಿಮಿಷದಲ್ಲಿ ಸೇವೆ ಮಾಡಿರಿ. ಸಹಯೋಗದ ಬೆರಳನ್ನು ಕೊಡುತ್ತೀರಲ್ಲವೆ? ತಪ್ಪಿಸಿಕೊಳಲು ಸಾಧ್ಯವಿಲ್ಲ, ಆರೋಗ್ಯವು ಸರಿಯಿಲ್ಲದಿದ್ದರೆ ಮನೆಯಲ್ಲಿ ಕುಳಿತುಕೊಂಡು ಸೇವೆ ಮಾಡಿರಿ. ಆದರೆ ಅವಶ್ಯವಾಗಿ ಸಹಯೋಗಿಗಳಾಗಬೇಕು. ಇದರಿಂದ ಸರ್ವರ ಸಹಯೋಗವು ಸಿಗುತ್ತದೆ. ಒಳ್ಳೆಯದು.
ಉಮ್ಮಂಗ-ಉತ್ಸಾಹವನ್ನು ನೋಡುತ್ತಾ ಬಾಪ್ದಾದಾರವರೂ ಖುಷಿಯಾಗುತ್ತಾರೆ. ಎಲ್ಲರ ಮನಸ್ಸಿನ ಲಗನ್ ಇದೆ - ಈಗ ಪ್ರತ್ಯಕ್ಷತೆಯ ಪರದೆಯನ್ನು ತೆರೆದು ತೋರಿಸೋಣ ಎಂದು. ಇದರ ಆರಂಭವಂತು ಆಯಿತಲ್ಲವೆ ಅಂದಮೇಲೆ ನಂತರದಲ್ಲಿ ಸಹಜವಾಗುತ್ತದೆ. ವಿದೇಶದಲ್ಲಿರುವ ಮಕ್ಕಳ ಯೋಜನೆಗಳೂ ಸಹ ಬಾಪ್ದಾದಾರವರೆಗೆ ತಲುಪುತ್ತಿರುತ್ತದೆ. ಸ್ವಯಂ ಸಹ ಉಮ್ಮಂಗದಲ್ಲಿದ್ದಾರೆ ಮತ್ತು ಸಹಯೋಗವೂ ಸಹ ಉಮ್ಮಂಗ-ಉತ್ಸಾಹದಿಂದ ಸಿಗುತ್ತಿರುತ್ತದೆ. ಉಮ್ಮಂಗಕ್ಕೆ ಉಮ್ಮಂಗ, ಉತ್ಸಾಹಕ್ಕೆ ಉತ್ಸಾಹವೇ ರಿಟರ್ನ್ ಸಿಗುತ್ತಿರುತ್ತದೆ, ಇದೂ ಸಹ ಮಿಲನವಾಗುತ್ತಿದೆ ಆದ್ದರಿಂದ ಈ ಕಾರ್ಯವು ವಿಜೃಂಭಣೆಯಿಂದ ಮುಂದುವರೆಸಿರಿ. ಉಮ್ಮಂಗ-ಉತ್ಸಾಹದಿಂದ ಏನೆಲ್ಲವನ್ನೂ ಮಾಡಿದ್ದೀರಿ, ಅದಕ್ಕೆ ಇನ್ನಷ್ಟು ತಂದೆಯಿಂದ, ಸರ್ವ ಬ್ರಾಹ್ಮಣ ಸಹಯೋಗದಿಂದ, ಶುಭ ಕಾಮನೆಗಳು – ಶುಭ ಭಾವನೆಗಳಿಂದ ಮುಂದುವರೆಯುತ್ತಾ ಇರುತ್ತೀರಿ. ಒಳ್ಳೆಯದು.
ನಾಲ್ಕೂ ಕಡೆಯಲ್ಲಿನ ಸದಾ ನೆನಪು ಮತ್ತು ಸೇವೆಯ ಉಮ್ಮಂಗ-ಉತ್ಸಾಹವಿರುವ ಶ್ರೇಷ್ಠ ಮಕ್ಕಳಿಗೆ, ಸದಾ ಪ್ರತಿಯೊಂದು ಕರ್ಮದಲ್ಲಿ ಸ್ಮೃತಿ ಸ್ವರೂಪದ ಅನುಭೂತಿ ಮಾಡುವಂತಹ ಅನುಭವೀ ಆತ್ಮರಿಗೆ, ಸದಾ ಪ್ರತಿಯೊಂದು ಕರ್ಮದಲ್ಲಿ ತಂದೆಯ ಸರ್ವ ಸಂಬಂಧಗಳ ಅನುಭವ ಮಾಡುವಂತಹ ಶ್ರೇಷ್ಠಾತ್ಮರಿಗೆ, ಸದಾ ಬ್ರಾಹ್ಮಣ ಜೀವನದ ಮಜಾ ಜೀವನವನ್ನಾಗಿ ಉಪಯೋಗಿಸುವಂತಹ ಮಹಾನ್ ಆತ್ಮರಿಗೆ ಬಾಪ್ದಾದಾರವರ ಅತಿ ಸ್ನೇಹ-ಸಂಪನ್ನ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ.
ಓಂ ಶಾಂತಿ. ಆತ್ಮಿಕ ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ, ಇಲ್ಲಿ ನೀವು ಮಕ್ಕಳು ಈ ವಿಚಾರದಿಂದ ಕುಳಿತುಕೊಳ್ಳಬೇಕಾಗುತ್ತದೆ - ಇವರು ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ ಮತ್ತು ಇದನ್ನೂ ಅನುಭವ ಮಾಡುತ್ತೀರಿ - ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗಿ ಹೋಗಿ ಪವಿತ್ರಧಾಮವನ್ನು ತಲುಪುತ್ತೇವೆ. ತಂದೆಯು ತಿಳಿಸಿದ್ದಾರೆ - ಪವಿತ್ರಧಾಮದಿಂದಲೇ ನೀವು ಕೆಳಗಿಳಿದಿದ್ದೀರಿ. ಮೊದಲು ನೀವು ಸತೋಪ್ರಧಾನರಾಗಿದ್ದಿರಿ ನಂತರ ಸತೋ, ರಜೋ, ತಮೋದಲ್ಲಿ ಬಂದಿರಿ. ನಾವೀಗ ಕೆಳಗಿಳಿದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಲೆ ಸಂಗಮಯುಗದಲ್ಲಿದ್ದೀರಿ ಆದರೆ ಜ್ಞಾನದಿಂದ ತಿಳಿದುಕೊಳ್ಳುತ್ತೀರಿ - ನಾವು ಬಹಳ ದೂರ ಸರಿದಿದ್ದೇವೆ. ಒಂದುವೇಳೆ ನಾವು ಶಿವ ತಂದೆಯ ನೆನಪಿನಲ್ಲಿ ಇದ್ದಿದ್ದೇ ಆದರೆ ಶಿವಾಲಯವು ದೂರವಿಲ್ಲ. ಶಿವ ತಂದೆಯನ್ನು ನೆನಪು ಮಾಡದಿದ್ದರೆ ಶಿವಾಲಯವು ಬಹಳ ದೂರವಿದೆ. ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆಯಲ್ಲವೆ ಆದ್ದರಿಂದ ಬಹಳ ದೂರವಾಗಿ ಬಿಡುತ್ತದೆ. ತಂದೆಯು ಮಕ್ಕಳಿಗೆ ಯಾವುದೇ ಹೆಚ್ಚು ಕಷ್ಟವನ್ನು ಕೊಡುವುದಿಲ್ಲ. ಮೊದಲನೆಯದಾಗಿ - ಪದೇ ಪದೇ ಹೇಳುತ್ತಾರೆ - ಮನಸಾ-ವಾಚಾ-ಕರ್ಮಣಾ ಪವಿತ್ರರಾಗಬೇಕಾಗಿದೆ. ಈ ಕಣ್ಣುಗಳೂ ಸಹ ಬಹಳ ಮೋಸಗೊಳಿಸುತ್ತವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ನಡೆಯಬೇಕಾಗಿದೆ.
ತಂದೆಯು ತಿಳಿಸಿದ್ದಾರೆ - ಧ್ಯಾನ ಮತ್ತು ಯೋಗ ಎರಡೂ ಬೇರೆ-ಬೇರೆಯಾಗಿದೆ. ಯೋಗ ಎಂದರೆ ನೆನಪು, ಕಣ್ಣುಗಳನ್ನು ತೆರೆದು ನೆನಪು ಮಾಡಬಹುದು. ಧ್ಯಾನಕ್ಕೆ ಯೋಗವೆಂದು ಹೇಳಲಾಗುವುದಿಲ್ಲ. ಧ್ಯಾನದಲ್ಲಿ ಹೋಗುತ್ತಾರೆಂದರೆ ಅದಕ್ಕೆ ಜ್ಞಾನವೆಂದಾಗಲೀ, ಯೋಗವೆಂದಾಗಲೀ ಹೇಳಲಾಗುವುದಿಲ್ಲ. ಧ್ಯಾನದಲ್ಲಿ ಹೋಗುವವರ ಮೇಲೆ ಮಾಯೆಯು ಬಹಳ ಯುದ್ಧಮಾಡುತ್ತದೆ. ಆದ್ದರಿಂದ ಇದರಲ್ಲಿ ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ತಂದೆಯ ಕಾಯಿದೆಯನುಸಾರ ನೆನಪಿರಬೇಕು - ಕಾಯಿದೆಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಿದರೆ ಮಾಯೆಯು ಒಮ್ಮೆಲೆ ಬೀಳಿಸಿ ಬಿಡುವುದು. ಧ್ಯಾನದ ಇಚ್ಛೆಯನ್ನು ಎಂದೂ ಇಟ್ಟುಕೊಳ್ಳಬಾರದು. ಇಚ್ಛಾ ಮಾತ್ರಂ ಅವಿದ್ಯಾ. ನಿಮಗೆ ಯಾವುದೇ ಇಚ್ಛೆಗಳಿರಬಾರದು. ತಂದೆಯು ನಿಮ್ಮ ಎಲ್ಲಾ ಕಾಮನೆಗಳನ್ನು ಕೇಳದೆಯೇ ಪೂರ್ಣ ಮಾಡಿ ಬಿಡುತ್ತಾರೆ. ಆದರೆ ತಂದೆಯ ಆಜ್ಞೆಯಂತೆ ನಡೆದಾಗ ಮಾತ್ರ.
ಒಂದುವೇಳೆ ತಂದೆಯ ಆಜ್ಞೆಯ ಉಲ್ಲಂಘನೆ ಮಾಡಿ ಉಲ್ಟಾ ಮಾರ್ಗವನ್ನು ಹಿಡಿದರೆ ಸ್ವರ್ಗಕ್ಕೆ ಹೋಗುವ ಬದಲು ನರಕದಲ್ಲಿಯೇ ಹೋಗುವರು. ಗಜವನ್ನು ಗ್ರಾಹವು ತಿಂದಿತು ಎಂದು ಗಾಯನವೂ ಇದೆ. ಅನೇಕರಿಗೆ ಜ್ಞಾನ ಕೊಡುವವರು ಭೋಗವನ್ನಿಡುವವರು ಇಂದು ಇಲ್ಲ ಏಕೆಂದರೆ ಕಾಯಿದೆಯ ಉಲ್ಲಂಘನೆ ಮಾಡುತ್ತಾರೆಂದರೆ ಪೂರ್ಣ ಮಾಯಾವಿಗಳಾಗಿ ಬಿಡುತ್ತಾರೆ. ದೇವತೆಗಳಾಗುತ್ತಾ-ಆಗುತ್ತಾ ಮತ್ತೆ ಅಸುರರಾಗಿ ಬಿಡುತ್ತಾರೆ. ಆದ್ದರಿಂದ ಈ ಮಾರ್ಗದಲ್ಲಿ ಬಹಳ ಎಚ್ಚರಿಕೆ ಇರಬೇಕು. ತಮ್ಮ ಮೇಲೆ ತಾವು ನಿಯಂತ್ರಣವನ್ನಿಟ್ಟುಕೊಳ್ಳಬೇಕು. ತಂದೆಯು ಮಕ್ಕಳಿಗೆ ಸಾವಧಾನ ನೀಡುತ್ತಾರೆ. ಶ್ರೀಮತದ ಉಲ್ಲಂಘನೆ ಮಾಡಬಾರದು. ಆಸುರೀ ಮತದಂತೆ ನಡೆಯುವುದರಿಂದಲೇ ನಿಮ್ಮದು ಇಳಿಯುವ ಕಲೆಯಾಗಿದೆ. ಎಲ್ಲಿದ್ದವರು ಎಲ್ಲಿಗೆ ಬಂದು ತಲುಪಿದ್ದೀರಿ! ಒಮ್ಮೆಲೆ ಕೆಳಗೆ ಬಂದು ಬಿಟ್ಟಿದ್ದೀರಿ. ಈಗಲೂ ಸಹ ಶ್ರೀಮತದಂತೆ ನಡೆಯದೇ ನಿರ್ಲಕ್ಷ್ಯವಾದರೆ ಪದವಿ ಭ್ರಷ್ಟರಾಗಿ ಬಿಡುತ್ತೀರಿ. ತಂದೆಯು ನೆನ್ನೆಯ ದಿನವೂ ತಿಳಿಸಿದ್ದರು - ಏನೆಲ್ಲವನ್ನು ಶ್ರೀಮತದ ಆಧಾರವಿಲ್ಲದೆ ಮಾಡುವರೋ ಅವರು ಸೇವಾಭಂಗ ಮಾಡುತ್ತಾರೆ. ಶ್ರೀಮತವಿಲ್ಲದೆ ಮಾಡಿದರೆ ಕೆಳಗೆ ಬೀಳುತ್ತಾರೆ. ತಂದೆಯು ಆರಂಭದಿಂದ ಮಾತೆಯರನ್ನು ನಿಮಿತ್ತರನ್ನಾಗಿ ಇಟ್ಟಿದ್ದಾರೆ ಏಕೆಂದರೆ ಕಳಶವೂ ಮಾತೆಯರಿಗೇ ಸಿಗುತ್ತದೆ. ವಂದೇ ಮಾತರಂ ಎಂದು ಗಾಯನವಿದೆ. ತಂದೆಯೂ ಸಹ ಮಾತೆಯರ ಒಂದು ಸಂಗವನ್ನು ಕಟ್ಟಿದರು, ಅವರಿಗೆ ತನ್ನದೆಲ್ಲವನ್ನೂ ಅರ್ಪಣೆ ಮಾಡಿ ಬಿಟ್ಟರು. ಕನ್ಯೆಯರು ವಿಶ್ವಾಸ ಪಾತ್ರರಾಗಿರುತ್ತಾರೆ. ಬಹುತೇಕವಾಗಿ ಪುರುಷರು ದಿವಾಳಿಯಾಗಬಹುದು. ಆದ್ದರಿಂದ ತಂದೆಯೂ ಸಹ ಮಾತೆಯರ ಮೇಲೆ ಕಳಶವನ್ನಿಡುತ್ತಾರೆ. ಈ ಜ್ಞಾನ ಮಾರ್ಗದಲ್ಲಿಯೂ ಮಾತೆಯರು ದಿವಾಳಿಯಾಗಬಹುದು. ಯಾರು ಪದಮಾಪದಮ ಭಾಗ್ಯಶಾಲಿಗಳು ಆಗುವವರಿದ್ದಾರೆಯೋ ಅವರೂ ಸಹ ಮಾಯೆಯಿಂದ ಸೋತು ದಿವಾಳಿಯಾಗಿ ಬಿಡುತ್ತಾರೆ. ಇಲ್ಲಿ ಸ್ತ್ರೀ-ಪುರುಷರಿಬ್ಬರೂ ದಿವಾಳಿಯಾಗುವ ಸಾಧ್ಯತೆಯಿದೆ. ಅಲ್ಲಾದರೆ ಕೇವಲ ಪುರುಷರು ದಿವಾಳಿಯಾಗಿರುತ್ತಾರೆ, ಇಲ್ಲಂತೂ ನೋಡಿ! ಎಷ್ಟೊಂದು ಮಂದಿ ಸೋಲನ್ನನುಭವಿಸಿ ಹೊರಟು ಹೋದರು ಅಂದರೆ ದಿವಾಳಿಯಾದರಲ್ಲವೆ. ತಂದೆಯು ಕುಳಿತು ತಿಳಿಸುತ್ತಾರೆ - ಭಾರತವಾಸಿಗಳು ಪೂರ್ಣ ದಿವಾಳಿಯಾಗಿದ್ದಾರೆ. ಮಾಯೆಯು ಎಷ್ಟು ಪ್ರಬಲವಾಗಿದೆ! ನಾವು ಹೇಗಿದ್ದೆವು ಎಂಬುದು ಅರ್ಥವಾಗುವುದೇ ಇಲ್ಲ. ಮೇಲಿಂದ ಕೆಳಗೆ ಒಮ್ಮೆಲೆ ಬೀಳುತ್ತಾರೆ. ಇಲ್ಲಿಯೂ ಸಹ ಶ್ರೇಷ್ಠ ವಿದ್ಯೆಯನ್ನು ಓದುತ್ತಾ-ಓದುತ್ತಾ ಮತ್ತೆ ಶ್ರೀಮತವನ್ನು ಮರೆತು ತನ್ನ ಮತದಂತೆ ನಡೆದರೆ ದಿವಾಳಿಯಾಗುತ್ತಾರೆ. ಅಂದಾಗ ಅಂತಹವರ ಸ್ಥಿತಿ ಏನಾಗಬಹುದು! ಆ ಮನುಷ್ಯರಂತೂ ದಿವಾಳಿಯಾದರೆ ಮತ್ತೆ 5-7 ವರ್ಷಗಳ ನಂತರ ಎದ್ದು ನಿಲ್ಲುತ್ತಾರೆ. ಆದರೆ ಇಲ್ಲಿ 21 ಜನ್ಮಗಳಿಗಾಗಿ ದಿವಾಳಿಯಾಗುತ್ತಾರೆ ಮತ್ತೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ, ದಿವಾಳಿಯಾಗುತ್ತಲೇ ಇರುತ್ತಾರೆ. ಎಷ್ಟೊಂದು ಮಹಾರಥಿಗಳು ಅನ್ಯರನ್ನು ಮೇಲೆತ್ತುತ್ತಿದ್ದರು ಆದರೆ ಅವರು ಇಂದು ಇಲ್ಲ. ಇಲ್ಲಿ ಶ್ರೇಷ್ಠ ಪದವಿಯಂತೂ ಬಹಳಷ್ಟಿದೆ ಆದರೆ ಎಚ್ಚರಿಕೆಯಿಂದ ಇರಲಿಲ್ಲವೆಂದರೆ ಮೇಲಿನಿಂದ ಕೆಳಗೆ ಬೀಳುತ್ತೀರಿ. ಮಾಯೆಯು ನುಂಗಿ ಬಿಡುತ್ತದೆ. ಮಕ್ಕಳು ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ತನ್ನ ಮತದಂತೆ ಸಂಗಗಳನ್ನು ಕಟ್ಟುವುದರಲ್ಲಿ ಏನೂ ಲಾಭವಿಲ್ಲ. ತಂದೆಯೊಂದಿಗೆ ಬುದ್ಧಿಯೋಗವನ್ನಿಡಿ, ಇದರಿಂದಲೇ ಸತೋಪ್ರಧಾನರಾಗಬೇಕಾಗಿದೆ. ತಂದೆಯವರಾಗಿಯೂ ತಂದೆಯೊಂದಿಗೆ ಯೋಗವನ್ನಿಡುವುದಿಲ್ಲ, ಶ್ರೀಮತದ ಉಲ್ಲಂಘನೆ ಮಾಡುತ್ತಾರೆಂದರೆ ಒಮ್ಮೆಲೆ ಕೆಳಗೆ ಬೀಳುತ್ತಾರೆ. ಸಂಬಂಧವೇ ತುಂಡಾಗುತ್ತದೆ. ಬುದ್ಧಿಯೋಗವು ತುಂಡಾದರೆ ಪರಿಶೀಲನೆ ಮಾಡಿಕೊಳ್ಳಬೇಕು - ನಮಗೆ ಮಾಯೆಯು ಇಷ್ಟೊಂದು ತೊಂದರೆಯನ್ನೇಕೆ ಮಾಡುತ್ತಿದೆ! ಪ್ರಯತ್ನ ಪಟ್ಟು ಮತ್ತೆ ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಬೇಕು ಇಲ್ಲವೆಂದರೆ ಬ್ಯಾಟರಿಯು ಹೇಗೆ ಚಾರ್ಜ್ ಆಗುವುದು! ವಿಕರ್ಮಗಳನ್ನು ಮಾಡುವುದರಿಂದ ಬ್ಯಾಟರಿಯು ಡಿಸ್ಚಾರ್ಜ್ ಆಗಿ ಬಿಡುತ್ತದೆ. ಮೇಲೇರುತ್ತಾ-ಏರುತ್ತಾ ಕೆಳಗೆ ಬೀಳುತ್ತಾರೆ. ನಿಮಗೆ ತಿಳಿದಿದೆ, ಇಂತಹವರೂ ಕೆಲವರಿದ್ದಾರೆ ಆರಂಭದಲ್ಲಿ ಅನೇಕರು ಬಂದು ತಂದೆಯ ಮಕ್ಕಳಾದರು, ಭಟ್ಟಿಯಲ್ಲಿದ್ದರು ಆದರೆ ಇಂದು ಎಲ್ಲಿದ್ದಾರೆ! ಬಿದ್ದು ಹೋದರು. ಏಕೆಂದರೆ ಹಳೆಯ ಪ್ರಪಂಚವು ನೆನಪಿಗೆ ಬಂದಿತು, ಈಗ ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಬೇಹದ್ದಿನ ವೈರಾಗ್ಯವನ್ನು ತರಿಸುತ್ತಿದ್ದೇನೆ. ಈ ಹಳೆಯ ಪತಿತ ಪ್ರಪಂಚದೊಂದಿಗೆ ಮನಸ್ಸನ್ನಿಡಬೇಡಿ. ಸ್ವರ್ಗದೊಂದಿಗೆ ನಿಮ್ಮ ಮನಸ್ಸನ್ನಿಡಿ, ಇದರಲ್ಲಿ ಪರಿಶ್ರಮವಿದೆ. ಒಂದುವೇಳೆ ಈ ಲಕ್ಷ್ಮೀ-ನಾರಾಯಣರಂತೆ ಆಗಲು ಇಚ್ಛಿಸುತ್ತೀರೆಂದರೆ ಪರಿಶ್ರಮ ಪಡಬೇಕಾಗುವುದು. ಬುದ್ಧಿಯೋಗವು ಒಬ್ಬ ತಂದೆಯ ಜೊತೆಯಿರಲಿ. ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿರಲಿ. ಹಳೆಯ ಪ್ರಪಂಚವು ಮರೆತು ಹೋಗುವುದಂತೂ ಸರಿ ಆದರೆ ನಂತರ ಏನನ್ನು ನೆನಪು ಮಾಡುವುದು? ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿ. ಎಷ್ಟು ಸಾಧ್ಯವೋ ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ. ಬೇಹದ್ದಿನ ಸುಖದ ಸ್ವರ್ಗವನ್ನು ನೆನಪು ಮಾಡಿ. ಇದಂತೂ ಬಹಳ ಸಹಜವಾಗಿದೆ. ಒಂದುವೇಳೆ ಇವೆರಡೂ ಆಸೆಗಳಿಗೆ ವಿರುದ್ಧವಾಗಿ ನಡೆಯುತ್ತೀರೆಂದರೆ ಪದವಿ ಭ್ರಷ್ಟರಾಗುವಿರಿ. ನೀವಿಲ್ಲಿಗೆ ಬಂದಿರುವುದೇ ನರನಿಂದ ನಾರಾಯಣರಾಗಲು. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು ಏಕೆಂದರೆ ಈಗ ಹಿಂತಿರುಗಿ ಹೋಗಬೇಕೆಂದು ಎಲ್ಲರಿಗೆ ಹೇಳುತ್ತೀರಿ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯೆಂದರೆ ಅರ್ಥ ನರಕದಿಂದ ಸ್ವರ್ಗ ಮತ್ತೆ ಸ್ವರ್ಗದಿಂದ ನರಕ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ತಂದೆಯು ಹೇಳಿದ್ದಾರೆ - ಇಲ್ಲಿ ಸ್ವದರ್ಶನ ಚಕ್ರಧಾರಿಯಾಗಿ ಕುಳಿತುಕೊಳ್ಳಿ. ಇದೇ ನೆನಪಿನಲ್ಲಿರಿ - ನಾನು ಎಷ್ಟು ಬಾರಿ ಚಕ್ರವನ್ನು ಸುತ್ತಿದ್ದೇನೆ? ನಾನು ಸ್ವದರ್ಶನ ಚಕ್ರಧಾರಿಯಾಗಿದ್ದೇನೆ ಈಗ ಪುನಃ ದೇವತೆಯಾಗುತ್ತೇನೆ. ಪ್ರಪಂಚದಲ್ಲಿ ಯಾರೂ ಈ ರಹಸ್ಯವನ್ನು ಅರಿತುಕೊಂಡಿಲ್ಲ. ಈ ಜ್ಞಾನವನ್ನಂತೂ ದೇವತೆಗಳಿಗೆ ತಿಳಿಸಬೇಕಾಗಿಲ್ಲ. ಅವರು ಮೊದಲೇ ಪವಿತ್ರರಾಗಿದ್ದಾರೆ. ಶಂಖವನ್ನು ಊದಲು ಅವರಲ್ಲಿ ಜ್ಞಾನವೇ ಇಲ್ಲ. ಪವಿತ್ರರೂ ಆಗಿದ್ದಾರೆ ಆದ್ದರಿಂದ ಅವರಿಗೆ ಈ ಶಂಖುವಿನ ಅಲಂಕಾರವನ್ನು ತೋರಿಸುವ ಅವಶ್ಯಕತೆಯೇ ಇಲ್ಲ. ಯಾವಾಗ ಇಬ್ಬರೂ ಒಟ್ಟಿಗೆ ಚತುರ್ಭುಜನಾಗುವರೋ ಆಗ ಈ ಅಲಂಕಾರವಿರುತ್ತದೆ. ನಿಮಗೂ ಸಹ ಇದನ್ನು ತೋರಿಸುವುದಿಲ್ಲ ಏಕೆಂದರೆ ನೀವು ಇಂದು ದೇವತೆಯಂತೆ ಇರುತ್ತೀರಿ ಮತ್ತೆ ನಾಳೆ ಕೆಳಗಿಳಿದು ಬಿಡುತ್ತೀರಿ. ಮಾಯೆಯು ಬೀಳಿಸಿ ಬಿಡುತ್ತದೆಯಲ್ಲವೆ. ತಂದೆಯು ದೇವತೆಗಳನ್ನಾಗಿ ಮಾಡುತ್ತಾರೆ ಮತ್ತೆ ಮಾಯೆಯು ಅಸುರರನ್ನಾಗಿ ಮಾಡಿಬಿಡುತ್ತದೆ. ಅನೇಕ ಪ್ರಕಾರದಿಂದ ಮಾಯೆಯು ಪರೀಕ್ಷೆ ತೆಗೆದುಕೊಳ್ಳುತ್ತದೆ. ಯಾವಾಗ ತಂದೆಯು ಬಂದು ತಿಳಿಸುವರೋ ಆಗ ಅರ್ಥವಾಗುತ್ತದೆ - ನಿಜವಾಗಿಯೂ ನಮ್ಮ ಸ್ಥಿತಿಯು ಕೆಳಗಿಳಿದಿದೆ ಎಂದು. ಪಾಪ! ಎಷ್ಟು ಬಾರಿ ತಮ್ಮದೆಲ್ಲವನ್ನೂ ಶಿವ ತಂದೆಯ ಖಜಾನೆಯಲ್ಲಿ ಜಮಾ ಮಾಡಿಸಿದರೂ ಸಹ ಮತ್ತೆ ಮಾಯೆಯಿಂದ ಸೋಲನ್ನನುಭವಿಸುತ್ತಾರೆ. ಶಿವ ತಂದೆಯ ಮಕ್ಕಳಾಗಿ ಬಿಟ್ಟಿರಿ ಮತ್ತೇಕೆ ಮರೆತು ಬಿಡುತ್ತೀರಿ! ಇದರಲ್ಲಿ ಯೋಗದ ಯಾತ್ರೆಯು ಮುಖ್ಯವಾಗಿದೆ. ಯೋಗದಿಂದಲೇ ಪವಿತ್ರರಾಗಬೇಕಾಗಿದೆ. ಜ್ಞಾನದ ಜೊತೆ ಜೊತೆಗೆ ಪವಿತ್ರತೆಯೂ ಬೇಕು. ಬಾಬಾ, ಬಂದು ನಮ್ಮನ್ನು ಪಾವನ ಮಾಡಿ, ನಾವು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಬೇಕು ಎಂದು ನೀವು ಕರೆಯುತ್ತೀರಿ. ಪಾವನರಾಗಿ ಶ್ರೇಷ್ಠ ಪದವಿಯನ್ನು ಪಡೆಯಲು ನೆನಪಿನ ಯಾತ್ರೆಯು ಮುಖ್ಯವಾಗಿದೆ. ಯಾರು ಬಿಟ್ಟು ಹೋದರೋ ಅವರೂ ಸಹ ಅಲ್ಪ-ಸ್ವಲ್ಪ ಕೇಳಿರುವ ಕಾರಣ ಶಿವಾಲಯದಲ್ಲಿ ಖಂಡಿತ ಬರುತ್ತಾರೆ. ನಂತರ ಭಲೆ ಪದವಿಯನ್ನು ಹೇಗಾದರೂ ಪಡೆಯಲಿ ಆದರೆ ಸತ್ಯಯುಗದಲ್ಲಂತೂ ಬರುತ್ತಾರೆ. ಒಂದು ಬಾರಿ ನೆನಪು ಮಾಡಿದರೂ ಸಹ ಸ್ವರ್ಗದಲ್ಲಿ ಬಂದು ಬಿಡುತ್ತಾರೆ ಆದರೆ ಶ್ರೇಷ್ಠ ಪದವಿಯಿಲ್ಲ. ಸ್ವರ್ಗದ ಹೆಸರನ್ನು ಕೇಳಿ ಖುಷಿಯಾಗಿ ಬಿಡಬಾರದು. ಅನುತ್ತೀರ್ಣರಾಗಿ ನಂತರ ಬಿಡಿಗಾಸಿನ ಪದವಿಯನ್ನು ಪಡೆಯುವುದರಲ್ಲಿ ಖುಷಿಯಾಗಿ ಬಿಡಬಾರದು. ಭಲೆ ಸ್ವರ್ಗವಿದೆ ಆದರೆ ಅದರಲ್ಲಿ ಪದವಿಗಳೂ ಬಹಳಷ್ಟಿವೆಯಲ್ಲವೆ. ನಾನು ನೌಕರನಾಗಿದ್ದೇನೆ, ನಾನು ಕೂಲಿ ಮಾಡುವವನಾಗಿದ್ದೇನೆ ಎಂಬುದಂತೂ ಭಾಸವಾಗುತ್ತದೆಯಲ್ಲವೆ. ಕೊನೆಯಲ್ಲಿ ನಾವು ಏನಾಗುವೆವು, ನಮ್ಮಿಂದ ಯಾವ ವಿಕರ್ಮವಾದ ಕಾರಣ ಈ ಗತಿಯುಂಟಾಗಿದೆ? ನಾನು ಮಹಾರಾಣಿ ಏಕಾಗಲಿಲ್ಲ? ಹೀಗೆ ಎಲ್ಲವೂ ನಿಮಗೆ ಸಾಕ್ಷಾತ್ಕಾರವಾಗುವುದು. ಹೆಜ್ಜೆ-ಹೆಜ್ಜೆಯಲ್ಲಿ ಎಚ್ಚರಿಕೆಯಿಂದ ನಡೆದಾಗ ನೀವು ಪದಮಾ ಪತಿಗಳಾಗಲು ಸಾಧ್ಯ. ಎಚ್ಚರಿಕೆಯಿಲ್ಲವೆಂದರೆ ಪದಮಾ ಪತಿಗಳಾಗಲು ಸಾಧ್ಯವಿಲ್ಲ. ಮಂದಿರಗಳಲ್ಲಿ ದೇವತೆಗಳಿಗೆ ಪದಮಾ ಪತಿಯ ಗುರುತನ್ನು ತೋರಿಸುತ್ತಾರೆ. ಅಂತರವನ್ನಂತೂ ತಿಳಿದುಕೊಳ್ಳಬಹುದಲ್ಲವೆ. ಪದವಿಗಳಲ್ಲಿ ಬಹಳ ಅಂತರವಿರುತ್ತದೆ. ಈಗಲೂ ನೋಡಿ, ಎಷ್ಟೊಂದು ದರ್ಜೆಗಳಿವೆ! ಭಲೆ ಅಲ್ಪಕಾಲದ ಸುಖವಾಗಿದೆ ಆದರೂ ಸಹ ಅವರಿಗೆ ಎಷ್ಟೊಂದು ಅಭಿಮಾನವಿರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ ಎಂದು ಹೇಳಿದಾಗ ಇದಕ್ಕಾಗಿ ಎಲ್ಲರೂ ಕೈಯೆತ್ತುತ್ತಾರೆ. ಅಂದಮೇಲೆ ಅಷ್ಟು ಪುರುಷಾರ್ಥವನ್ನು ಮಾಡಬೇಕಾಗಿದೆ. ಕೈಯನ್ನೆತ್ತುವವರೇ ಸ್ವಯಂ ಕೆಳಗೆ ಬೀಳುತ್ತಾರೆ. ಆಗ ಅನ್ಯರು ಹೇಳುತ್ತಾರೆ - ಇವರು ದೇವತೆಯಾಗುವವರಿದ್ದರು, ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಸಮಾಪ್ತಿಯಾಗಿ ಬಿಟ್ಟರು. ಕೈಯೆತ್ತುವುದಂತೂ ಸಹಜವಾಗಿದೆ, ಅನೇಕರಿಗೆ ತಿಳಿಸುವುದೂ ಸಹಜವಾಗಿದೆ. ಮಹಾರಥಿಗಳು ಅನ್ಯರಿಗೆ ತಿಳಿಸುತ್ತಲೂ ತಾವೇ ಮಾಯವಾಗಿ ಬಿಡುತ್ತಾರೆ. ಅನ್ಯರ ಕಲ್ಯಾಣ ಮಾಡಿ ತಮಗೆ ಅಕಲ್ಯಾಣ ಮಾಡಿಕೊಂಡು ಕುಳಿತುಕೊಳ್ಳುತ್ತಾರೆ ಆದ್ದರಿಂದ ಬಹಳ ಎಚ್ಚರಿಕೆಯಿಂದಿರಿ ಎಂದು ತಂದೆಯು ತಿಳಿಸುತ್ತಾರೆ. ಅಂತರ್ಮುಖಿಯಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವ ಪ್ರಕಾರದಿಂದ? ತಂದೆ ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ನಾವೀಗ ನಮ್ಮ ಮಧುರ ಮನೆಗೆ ಹೋಗುತ್ತಿದ್ದೇವೆ. ಇದೆಲ್ಲವೂ ಆಂತರ್ಯದಲ್ಲಿರಬೇಕಾಗಿದೆ. ತಂದೆಯಲ್ಲಿ ಜ್ಞಾನ ಮತ್ತು ಯೋಗ ಎರಡೂ ಇದೆ ಹಾಗೆಯೇ ನಿಮ್ಮಲ್ಲಿಯೂ ಇರಬೇಕು ಏಕೆಂದರೆ ನಿಮಗೆ ತಿಳಿದಿದೆ – ಶಿವ ತಂದೆಯು ಓದಿಸುತ್ತಾರೆಂದರೆ ಜ್ಞಾನವೂ ಆಯಿತು, ನೆನಪೂ ಆಯಿತು. ಜ್ಞಾನ ಮತ್ತು ಯೋಗ ಎರಡೂ ಒಟ್ಟಿಗೆ ನಡೆಯುತ್ತದೆ. ಯೋಗದಲ್ಲಿ ಕುಳಿತು ಶಿವ ತಂದೆಯನ್ನು ನೆನಪು ಮಾಡುತ್ತಿದ್ದರೆ ಜ್ಞಾನವನ್ನು ಮರೆತು ಹೋಗುವುದಲ್ಲ. ತಂದೆಯು ಯೋಗವನ್ನು ಕಲಿಸುತ್ತಾರೆಂದರೆ ಜ್ಞಾನವು ಮರೆತು ಹೋಗುತ್ತದೆಯೇ? ಇಡೀ ಜ್ಞಾನವು ಅವರಲ್ಲಿರುತ್ತದೆ. ನೀವು ಮಕ್ಕಳಿಗೆ ಈ ಜ್ಞಾನವಿರಬೇಕು, ಓದಬೇಕು. ಎಂತಹ ಕರ್ಮವನ್ನು ನಾನು ಮಾಡುವೆನೋ ನನ್ನನ್ನು ನೋಡಿ ಅನ್ಯರೂ ಮಾಡುತ್ತಾರೆ. ನಾನು ಮುರುಳಿ ಓದದಿದ್ದರೆ ಅನ್ಯರೂ ಓದುವುದಿಲ್ಲ. ನಾನು ದುರ್ಗತಿ ಪಡೆದರೆ ಅನ್ಯರೂ ದುರ್ಗತಿ ಪಡೆಯುವರು. ನಾನೇ ಅನ್ಯರನ್ನು ಬೀಳಿಸಲು ನಿಮಿತ್ತನಾಗುತ್ತೇನೆ. ಕೆಲವು ಮಕ್ಕಳು ಮುರುಳಿಯನ್ನು ಓದುವುದಿಲ್ಲ. ಮಿಥ್ಯ ಅಹಂಕಾರವು ಬಂದು ಬಿಡುತ್ತದೆ. ಮಾಯೆಯು ಕೂಡಲೇ ಹೋರಾಟ ನಡೆಸುತ್ತದೆ. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತ ಬೇಕು ಇಲ್ಲವಾದರೆ ಒಂದಲ್ಲ ಒಂದು ವಿಕರ್ಮಗಳಾಗಿ ಬಿಡುತ್ತವೆ. ಅನೇಕ ಮಕ್ಕಳು ತಪ್ಪುಗಳನ್ನು ಮಾಡುತ್ತಾರೆ, ಇದರಿಂದ ಸತ್ಯನಾಶವಾಗಿ ಬಿಡುತ್ತದೆ. ತಪ್ಪುಗಳಾಗುವುದರಿಂದ ಮಾಯೆಯು ಪೆಟ್ಟು ಕೊಟ್ಟು ಕನಿಷ್ಟರನ್ನಾಗಿ ಮಾಡಿ ಬಿಡುತ್ತದೆ. ಇದರಲ್ಲಿ ಬಹಳ ತಿಳುವಳಿಕೆಯು ಬೇಕು. ಅಹಂಕಾರವು ಬಂದರೆ ಮಾಯೆಯು ಬಹಳ ವಿಕರ್ಮಗಳನ್ನು ಮಾಡಿಸುತ್ತದೆ. ಯಾವುದೇ ಸಂಘ ಮಾಡುತ್ತೀರೆಂದರೆ ಅದರಲ್ಲಿ ಒಬ್ಬರು ಅಥವಾ ಇಬ್ಬರು ಸ್ತ್ರೀಯರು ಖಂಡಿತ ಇರಬೇಕು. ಅವರ ಸಲಹೆಯಂತೆ ಕೆಲಸ ನಡೆಯುವಂತಿರಬೇಕು. ಕಳಶವನ್ನು ಲಕ್ಷ್ಮಿಯ ಮೇಲೆ ಇಡಲಾಗುತ್ತದೆಯಲ್ಲವೆ. ಗಾಯನವೂ ಇದೆ - ಅಮೃತವನ್ನು ಕುಡಿಸುವಾಗ ಅಸುರರೂ ಸಹ ಕುಳಿತು ಕುಡಿಯುತ್ತಿದ್ದರು, ಮತ್ತೆ ಕೆಲವು ಕಡೆ ಯಜ್ಞದಲ್ಲಿ ವಿಘ್ನಗಳನ್ನು ಹಾಕುತ್ತಾರೆ. ಅನೇಕ ಪ್ರಕಾರದ ವಿಘ್ನಗಳನ್ನು ಹಾಕುತ್ತಾರೆ. ಇಡೀ ದಿನ ಬುದ್ಧಿಯಲ್ಲಿ ಪರಚಿಂತನೆಯ ಮಾತುಗಳಿರುತ್ತವೆ. ಇದು ಬಹಳ ಕೆಟ್ಟದ್ದಾಗಿದೆ. ಯಾವುದೇ ಮಾತಿದ್ದರೆ ತಂದೆಗೆ ದೂರು ಕೊಡಿ. ಸುಧಾರಣೆ ಮಾಡುವವರು ತಂದೆಯೊಬ್ಬರೇ ಆಗಿದ್ದಾರೆ. ನೀವು ತಮ್ಮ ಕೈಯಲ್ಲಿ ಕಾನೂನು ತೆಗೆದುಕೊಳ್ಳಬೇಡಿ, ತಂದೆಯ ನೆನಪಿನಲ್ಲಿರಿ. ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡಿ ಆಗ ಈ ರೀತಿಯಾಗುವಿರಿ. ಮಾಯೆಯು ಬಹಳ ಕಠಿಣವಾಗಿದೆ ಯಾರನ್ನೂ ಬಿಡುವುದಿಲ್ಲ. ಸದಾ ತಂದೆಗೆ ಸಮಾಚಾರವನ್ನು ಬರೆಯಬೇಕು. ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಬೇಕು. ಹಾಗೆ ನೋಡಿದರೆ ತಂದೆಯು ಪ್ರತಿಯೊಂದು ಸಲಹೆಯನ್ನು ಕೊಡುತ್ತಲೇ ಇರುತ್ತಾರೆ. ಆದ್ದರಿಂದ ತಂದೆಯು ತಾವೇ ಈ ಮಾತಿನ ಬಗ್ಗೆ ತಿಳಿಸಿ ಬಿಟ್ಟರು ಅಂದಾಗ ಅಂತರ್ಯಾಮಿಯಾಗಿದ್ದಾರೆ ಎಂದು ಮಕ್ಕಳು ತಿಳಿದುಕೊಳ್ಳುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಇಲ್ಲ. ನಾನಂತೂ ಜ್ಞಾನವನ್ನು ಓದಿಸುತ್ತೇನೆ, ಇದರಲ್ಲಿ ಅಂತರ್ಯಾಮಿಯ ಮಾತಿಲ್ಲ. ಹಾ! ಇದನ್ನು ತಿಳಿದುಕೊಂಡಿದ್ದೇನೆ - ಇವರೆಲ್ಲರೂ ನನ್ನ ಮಕ್ಕಳಾಗಿದ್ದಾರೆ. ಪ್ರತಿಯೊಬ್ಬರಲ್ಲಿರುವ ಆತ್ಮವು ನನ್ನ ಮಗುವಾಗಿದೆ ಬಾಕಿ ತಂದೆಯು ಎಲ್ಲರಲ್ಲಿ ವಿರಾಜಮಾನವಾಗಿದ್ದಾರೆ ಎಂದಲ್ಲ. ಮನುಷ್ಯರು ಇದನ್ನು ಉಲ್ಟಾ ತಿಳಿದುಕೊಳ್ಳುತ್ತಾರೆ.
ತಂದೆಯು ತಿಳಿಸುತ್ತಾರೆ - ನನಗೆ ಗೊತ್ತಿದೆ, ಎಲ್ಲರ ಸಿಂಹಾಸನದಲ್ಲಿ ಆತ್ಮವು ವಿರಾಜಮಾನವಾಗಿದೆ, ಇದು ಎಷ್ಟು ಸಹಜ ಮಾತಾಗಿದೆ ಆದರೂ ಸಹ ಮರೆತು ಹೋಗಿ ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಇದು ಮೊಟ್ಟ ಮೊದಲನೆಯ ತಪ್ಪಾಗಿದೆ, ಇದರ ಕಾರಣದಿಂದಲೇ ಇಷ್ಟು ಕೆಳಗಿಳಿದಿದ್ದಾರೆ. ವಿಶ್ವದ ಮಾಲೀಕರನ್ನಾಗಿ ಮಾಡುವವರಿಗೇ ನೀವು ನಿಂದನೆ ಮಾಡುತ್ತೀರಿ. ಆದ್ದರಿಂದ ತಂದೆಯು ಹೇಳುತ್ತಾರೆ – ಯಧಾ ಯಧಾಹೀ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ...... ತಂದೆಯು ಇಲ್ಲಿ ಬರುತ್ತಾರೆ ಅಂದಮೇಲೆ ಮಕ್ಕಳು ಬಹಳ ಚೆನ್ನಾಗಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಜ್ಞಾನವನ್ನು ಬಹಳ ಮಂಥನ ಮಾಡಬೇಕು, ಸಮಯ ಕೊಡಬೇಕು ಆಗಲೇ ನೀವು ತಮ್ಮ ಕಲ್ಯಾಣ ಮಾಡಿಕೊಳ್ಳಲು ಸಾಧ್ಯ. ಇದರಲ್ಲಿ ಹಣ ಮೊದಲಾದುವುಗಳ ಮಾತಿಲ್ಲ. ಯಾರೂ ಹಸಿವಿನಿಂದಂತೂ ಸಾಯುವುದಿಲ್ಲ. ಯಾರೆಷ್ಟು ತಂದೆಯ ಬಳಿ ಜಮಾ ಮಾಡುವರೋ ಅಷ್ಟು ಜಮಾ ಆಗುತ್ತದೆ. ತಂದೆಯು ತಿಳಿಸುತ್ತಾರೆ - ಜ್ಞಾನ ಮತ್ತು ಭಕ್ತಿಯ ನಂತರ ವೈರಾಗ್ಯ ಬರುತ್ತದೆ. ವೈರಾಗ್ಯವೆಂದರೆ ಎಲ್ಲವನ್ನೂ ಮರೆಯಬೇಕಾಗುತ್ತದೆ. ತನ್ನನ್ನು ಭಿನ್ನ ಮಾಡಿಕೊಳ್ಳಬೇಕು. ಶರೀರದಿಂದ ನಾನಾತ್ಮ ಈಗ ಹೋಗುತ್ತಿದ್ದೇನೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತನ್ನ ಮೇಲೆ ಬಹಳ ನಿಯಂತ್ರಣವನ್ನಿಟ್ಟುಕೊಳ್ಳಬೇಕಾಗಿದೆ. ಶ್ರೀಮತದಲ್ಲಿ ಎಂದೂ ನಿರ್ಲಕ್ಷ್ಯ ತೋರಬಾರದು. ಬಹಳ-ಬಹಳ ಎಚ್ಚರಿಕೆಯಿಂದಿರಬೇಕಾಗಿದೆ, ಎಂದೂ ಯಾವುದೇ ಕಾಯಿದೆಯ ಉಲ್ಲಂಘನೆ ಮಾಡಬಾರದು.
2. ಅಂತರ್ಮುಖಿಯಾಗಿ ಒಬ್ಬ ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ಈ ಪತಿತ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗ್ಯವನ್ನಿಡಬೇಕಾಗಿದೆ. ಬುದ್ಧಿಯಲ್ಲಿರಲಿ - ಯಾವ ಕರ್ಮವನ್ನು ನಾನು ಮಾಡುತ್ತೇನೆಯೋ ನನ್ನನ್ನು ನೋಡಿ ಎಲ್ಲರೂ ಮಾಡುತ್ತಾರೆ.
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಕುಳಿತು ತಿಳಿಸುತ್ತಾರೆ. ಆತ್ಮಿಕ ತಂದೆಯ ಮಹಿಮೆಯನ್ನಂತೂ ಮಕ್ಕಳಿಗೆ ತಿಳಿಸಿದ್ದಾರೆ. ಅವರು ಜ್ಞಾನ ಸಾಗರ, ಸತ್-ಚಿತ್-ಆನಂದ ಸ್ವರೂಪನಾಗಿದ್ದಾರೆ, ಶಾಂತಿಯ ಸಾಗರನಾಗಿದ್ದಾರೆ. ಅವರಿಗೆ ಎಲ್ಲಾ ಬೇಹದ್ದಿನ ಬಿರುದುಗಳನ್ನು ಕೊಡಲಾಗುತ್ತದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಮತ್ತು ಈ ಸಮಯದಲ್ಲಿ ಯಾರೆಲ್ಲಾ ಮನುಷ್ಯರಿದ್ದಾರೆಯೋ ಎಲ್ಲರಿಗೂ ಗೊತ್ತಿದೆ - ನಾವು ಭಕ್ತಿಯ ಸಾಗರರಾಗಿದ್ದೇವೆ ಎಂದು. ಭಕ್ತಿಯಲ್ಲಿ ಯಾರು ಎಲ್ಲರಿಗಿಂತ ಮುಂದಿರುವರೋ ಅವರಿಗೆ ಮಾನ್ಯತೆ ಸಿಗುತ್ತದೆ. ಈ ಸಮಯದಲ್ಲಿ ಕಲಿಯುಗದಲ್ಲಿ ಭಕ್ತಿ, ದುಃಖವಿದೆ. ಸತ್ಯಯುಗದಲ್ಲಿ ಜ್ಞಾನದ ಸುಖವಿರುತ್ತದೆ. ಅಲ್ಲಿ ಜ್ಞಾನವಿರುತ್ತದೆಯೆಂದಲ್ಲ. ಈ ಮಹಿಮೆಯು ಕೇವಲ ಒಬ್ಬ ತಂದೆಯದೇ ಆಗಿದೆ ಮತ್ತು ಮಕ್ಕಳಿಗೂ ಮಹಿಮೆಯಿದೆ ಏಕೆಂದರೆ ತಂದೆಯು ಮಕ್ಕಳಿಗೆ ಓದಿಸುತ್ತಾರೆ ಅಥವಾ ಯಾತ್ರೆಯನ್ನು ಕಲಿಸುತ್ತಾರೆ. ತಂದೆಯು ತಿಳಿಸಿದ್ದಾರೆ - ಎರಡು ಯಾತ್ರೆಗಳಿವೆ. ಭಕ್ತರು ತೀರ್ಥ ಯಾತ್ರೆ ಮಾಡುತ್ತಾರೆ, ನಾಲ್ಕಾರು ಕಡೆ ಸುತ್ತಾಡಿ ಬರುತ್ತಾರೆ ಅಂದಾಗ ಎಷ್ಟು ಸಮಯ ನಾಲ್ಕಾರು ಕಡೆ ಸುತ್ತಾಡುವರೋ ಅಷ್ಟು ಸಮಯ ವಿಕಾರದಲ್ಲಿ ಹೋಗುವುದಿಲ್ಲ. ಮಧ್ಯಪಾನ ಇತ್ಯಾದಿ., ಛೀ ಛೀ ಪದಾರ್ಥಗಳನ್ನು ಸೇವಿಸುವುದಿಲ್ಲ. ಕೆಲವೊಮ್ಮೆ ಬದರೀನಾಥ, ಕೆಲವೊಮ್ಮೆ ಕಾಶಿಗೂ ಹೋಗುತ್ತಾರೆ. ಭಗವಂತನಿಗೆ ಭಕ್ತಿ ಮಾಡುತ್ತಾರೆ ಅಂದಮೇಲೆ ಭಗವಂತನು ಒಬ್ಬರೇ ಇರಬೇಕಲ್ಲವೆ. ಎಲ್ಲಾ ಕಡೆ ಸುತ್ತಾಡುವ ಅವಶ್ಯಕತೆಯಿಲ್ಲ ಅಲ್ಲವೆ. ಶಿವ ತಂದೆಯ ತೀರ್ಥ ಸ್ಥಾನವನ್ನು ನೋಡಿಕೊಂಡು ಬರುತ್ತಾರೆ, ಕಾಶಿಯು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವೆಂದು ಗಾಯನವಿದೆ. ಅದಕ್ಕೆ ಶಿವ ಪುರಿಯೆಂತಲೂ ಹೇಳುತ್ತಾರೆ. ನಾಲ್ಕಾರೂ ಕಡೆ ಹೋಗುತ್ತಾರೆ ಆದರೆ ಯಾರ ದರ್ಶನ ಮಾಡಲು ಹೋಗುವರು ಅಥವಾ ಯಾರ ಭಕ್ತಿ ಮಾಡುವರು ಅವರ ಚರಿತ್ರೆ, ಕರ್ತವ್ಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಅದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. ಅವರ ಜೀವನ ಕಥೆಯನ್ನು ತಿಳಿದುಕೊಳ್ಳದೇ ಅವರಿಗೆ ಪೂಜೆ ಮಾಡುವುದು, ತಲೆ ಬಾಗುವುದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುವುದು. ಮನೆಯಲ್ಲಿಯೇ ಆಚರಣೆ ಮಾಡುತ್ತಾರೆ. ದೇವಿಯರಿಗೆ ಎಷ್ಟೊಂದು ಪೂಜೆ ಮಾಡುತ್ತಾರೆ. ಮಣ್ಣಿನ ಅಥವಾ ಕಲ್ಲಿನ ದೇವಿಯರನ್ನು ಮಾಡಿ ಅವರನ್ನು ಬಹಳ ಶೃಂಗರಿಸುತ್ತಾರೆ. ತಿಳಿದುಕೊಳ್ಳಿ, ಲಕ್ಷ್ಮಿಯ ಚಿತ್ರವನ್ನೂ ಮಾಡುತ್ತಾರೆ. ಇವರ ಚರಿತ್ರೆಯನ್ನು ತಿಳಿಸಿ ಎಂದು ಕೇಳಿದರೆ ಸತ್ಯಯುಗದ ಮಹಾರಾಣಿಯಾಗಿದ್ದರು ಎಂದು ಹೇಳುತ್ತಾರೆ. ತ್ರೇತಾಯುಗದ ಮಹಾರಾಣಿಯು ಸೀತೆಯಾಗಿದ್ದಳು. ಬಾಕಿ ಅವರು ಎಷ್ಟು ಸಮಯ ರಾಜ್ಯ ಮಾಡಿದರು, ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗಿನಿಂದ ಎಲ್ಲಿಯವರೆಗೆ ನಡೆಯಿತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಮನುಷ್ಯರು ಭಕ್ತಿಮಾರ್ಗದಲ್ಲಿ ತೀರ್ಥ ಸ್ಥಾನಗಳಿಗೆ ಹೋಗುತ್ತಾರೆ. ಇವೆಲ್ಲವೂ ಭಗವಂತನೊಂದಿಗೆ ಮಿಲನ ಮಾಡುವ ಉಪಾಯವಾಗಿದೆ. ಶಾಸ್ತ್ರಗಳನ್ನು ಓದುವುದೂ ಸಹ ಭಗವಂತನೊಂದಿಗೆ ಮಿಲನ ಮಾಡಲು ಉಪಾಯವಾಗಿದೆ ಆದರೆ ಭಗವಂತ ಎಲ್ಲಿದ್ದಾರೆ? ಅದಕ್ಕೆ ಅವರು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ.