text
stringlengths 0
61.5k
|
---|
ಕಿರುತೆರೆಯಲ್ಲಿ ಹೊಚ್ಚಹೊಸ ಚಲನಚಿತ್ರ 'ಸ್ನೇಹಾಂಜಲಿ' | ಕಿರುತೆರೆಯಲ್ಲಿ ಹೊಚ್ಚಹೊಸ ಚಲನಚಿತ್ರ 'ಸ್ನೇಹಾಂಜಲಿ' - Snehanjali on Zee Kannada this Saturday(Dec.20) - Kannada Filmibeat |
ಕಿರುತೆರೆಯಲ್ಲಿ ಹೊಚ್ಚಹೊಸ ಚಲನಚಿತ್ರ 'ಸ್ನೇಹಾಂಜಲಿ' |
| Published: Thursday, December 20, 2007, 11:49 [IST] |
ಬೆಂಗಳೂರು, ಡಿ.20 : ಸಿನಿಮಾದಲ್ಲಿ ನಟನೆ ಮಾಡುವುದು ಎಲ್ಲರಿಗೂ ಇತ್ತೀಚೆಗೆ ಸುಲಭವಾಗಿದೆ. ಆದರೆ ಮಾತು ಬರದ, ಕಿವಿ ಕೇಳದ ಒಬ್ಬ ಯುವಕ ನಾಯಕನಾಗಿ ನಟಿಸಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದು ನಿಮಗೆ ಗೊತ್ತೇ? ಆಶ್ಚರ್ಯ ಆಗ್ತಿದ್ಯಾ ? ಮಾತು ಬಾರದ, ಕಿವಿ ಕೇಳದ ನಟ ಧ್ರುವ ಈ ದಾಖಲೆ ಮಾಡಿದವರು. |
ನಟ ಧ್ರುವ ನಟಿಸರುವ "ಸ್ನೇಹಾಂಜಲಿ" ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರ. ಜೀ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಶನಿವಾರ(ಡಿ.22) ಸಂಜೆ 5.30ಕ್ಕೆ ಈ ಚಿತ್ರ ಪ್ರಸಾರವಾಗಲಿದೆ. ಅಂಗವೈಕಲ್ಯ ಹೊಂದಿರುವವರೆಲ್ಲರಿಗೂ ಸ್ಫೂರ್ತಿಯಾಗುವಂತಹ ಒಬ್ಬ ಯುವಕನ ಯಶೋಗಾಥೆಗೆ ಉತ್ತಮ ಉದಾಹರಣೆ ಈ ಚಿತ್ರ. |
ಭಾರತೀಯ ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ಮಾತು ಬಾರದ, ಕಿವಿ ಕೇಳದ ಯುವಕನೊಬ್ಬ ಎಲ್ಲರಂತೆಯೇ ನಾಯಕನ ಪಾತ್ರದಲ್ಲಿ ಮಿಂಚಿದ್ದಾನೆ. ಇಡೀ ಚಿತ್ರದಲ್ಲಿ ಎಲ್ಲೂ ಈತ ಮಾತು ಬಾರದವ ಕಿವಿ ಕೇಳದ ಯುವಕ ಎಂದು ಪ್ರೇಕ್ಷಕರು ಗುರುತಿಸಲಾಗುವುದಿಲ್ಲ. ನಿಜ ಜೀವನದಲ್ಲಿ ಈತ ಕಿವುಡ ಮೂಗರ ಭಾರತೀಯ ಕ್ರಿಕೆಟ್ ತಂಡಕ್ಕೆ ನಾಯಕ. ಸ್ಪುರದ್ರೂಪಿಯಾದ ಈತ ನಟನೆಯಲ್ಲಿ ಉತ್ತಮ ಪ್ರತಿಭೆಯನ್ನು ತೋರಿದ್ದಾನೆ. |
ಜೀ ಕನ್ನಡ ವೀಕ್ಷಕರಿಗೆ ಕ್ರಿಸ್‌ಮಸ್ ಹಬ್ಬದ ಅದ್ಭುತ ಕೊಡುಗೆಯಾಗಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿರುವ ಅದ್ಭುತ ಚಿತ್ರ "ಸ್ನೇಹಾಂಜಲಿ" ಪ್ರಸಾರವಾಗಲಿದೆ. |
ಸ್ನೇಹಾಂಜಲಿ ಚಿತ್ರದ ನಿರ್ದೇಶಕ ಗಿರೀಶ್ ಕಂಪ್ಲಾಪುರ್ ಮತ್ತು ಸಿದ್ದರಾಜು , ಸಂಭಾಷಣೆ ಗಿರೀಶ್ ಮತ್ತು ಮಧುಕರ್ ಬೆಳವಾಡಿ. ಅಂಗವೈಕಲ್ಯವನ್ನು ಮೀರಿ ಉತ್ತಮ ನಟನೆ ತೋರಿರುವ ಧ್ರುವ ನಟನೆ ನೋಡುವ ಅವಕಾಶ ಕಳೆದುಕೊಳ್ಳದಿರಿ. |
ಶಾಲೆಯಿಂದ ಹೊರಟವರು ಮನೆ ಸೇರಲಿಲ್ಲ | Prajavani |
ಶಾಲೆಯಿಂದ ಹೊರಟವರು ಮನೆ ಸೇರಲಿಲ್ಲ |
ಮಂಡ್ಯ: 'ಸ್ವಲ್ಪ ಹೊತ್ತು ಇರೇ ಮಾತಾಡೋಣ ಎಂದೆ. ಒಂದು ವೇಳೆ ಇದ್ದಿದ್ದರೆ ಅವಳ ಜೀವ ಉಳಿಯುತ್ತಿತ್ತು' ಎಂದು ಶಾಲಾ ಬಾಲಕಿಯೊಬ್ಬಳು ಬಿಕ್ಕುತ್ತಾ ಹೇಳುತ್ತಿದ್ದರೆ, ಪಕ್ಕದಲ್ಲೇ ಇದ್ದ ಸುನೀತಾ ತನ್ನ ಮಗಳನ್ನು ಕಳೆದುಕೊಂಡು ಗೋಳಿಡುತ್ತಿದ್ದರು. |
ಕನಗನಮರಡಿಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ ವದೇಸಮುದ್ರದ ಪವಿತ್ರಾ ಮೃತದೇಹದ ಮುಂದೆ ತಾಯಿ ರೋದಿಸುತ್ತಿದ್ದ ದೃಶ್ಯ ಕರುಳು ಕಿವುಚುವಂತಿತ್ತು. |
ಇದೇ ಗ್ರಾಮದ ರವಿಕುಮಾರ್ 7ನೇ ತರಗತಿ ಓದುತ್ತಿದ್ದ. ಈತನೂ ಯಮಸ್ವರೂಪಿಯಾದ ಇದೇ ಬಸ್ ಹತ್ತಿದ್ದ. 'ಇವರಪ್ಪ ವರ್ಷದ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಈಗ ಇವನೂ ಹೋದ' ಎಂಬ ಅವರ ಮಾತುಗಳು ಸೇರಿದ್ದ ಜನರ ಕಣ್ಣಾಲಿಗಳಲ್ಲಿ ನೀರು ಉಕ್ಕಿಸಿತು. |
ಸ್ವಲ್ಪ ತಡವಾಗಿದ್ದರೆ: ಒಂದು ವೇಳೆ ಬಸ್, ಪಾಂಡವಪುರದಿಂದ 11.45ಕ್ಕೆ ಹೊರಡುವ ಬದಲು ಸ್ವಲ್ಪ ತಡವಾಗಿ ಹೊರಟಿದ್ದರೆ ಮತ್ತಷ್ಟು ಮಕ್ಕಳ ಮಾರಣಹೋಮವೇ ನಡೆಯುತ್ತಿತ್ತು. ಶಾಲೆಯಿಂದ ಬೇಗ ಹೊರಟವರಷ್ಟೇ ಈ ನತದೃಷ್ಟ ಬಸ್ ಹತ್ತಿದ್ದರು. ಈ ಭಾಗದ ಶಾಲಾ ಮಕ್ಕಳು ಇಂತಹ ಬಸ್‌ಗಳನ್ನೇ ಪ್ರಯಾಣಕ್ಕೆ ಅವಲಂಬಿಸಿದ್ದಾರೆ. ಬಸ್ ಪ್ರಯಾಣದರ ಕಡಿಮೆ ಹಾಗೂ ಗ್ರಾಮದಲ್ಲಿ ಹೇಳಿದ ಕಡೆ ನಿಲ್ಲುತ್ತದೆ ಎಂಬ ಕಾರಣಕ್ಕೆ ಮಕ್ಕಳು ಹೆಚ್ಚಾಗಿ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. |
ಮಗುವಿಗಾಗಿ ತಾಯಿ ಹುಡುಕಾಟ: ತನ್ನ 2 ವರ್ಷದ ಮಗು ಪ್ರೇಕ್ಷಾಳಿಗಾಗಿ ಆಕೆಯ ತಾಯಿ ಹುಡುಕಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಬಸ್‌ನಿಂದ ಶವಗಳನ್ನು ರಕ್ಷಣಾ ಪಡೆಯ ಸಿಬ್ಬಂದಿ ಮೇಲಕ್ಕೆ ಎತ್ತುತ್ತಿದ್ದಂತೆ ತಂದೆ ಓಡಿ ಹೋಗಿ ನೋಡುತ್ತಿದ್ದರು. ಕಣ್ಣೀರಿಡುತ್ತಲೇ ಸಿಕ್ಕಿತಾ ಎಂದು ಪ್ರಶ್ನಿಸುತ್ತಿದ್ದ ತಾಯಿ, ಮತ್ತೆ ನೆಲದ ಮೇಲೆ ಕುಸಿಯುತ್ತಿದ್ದರು. ಕಡೆಗೆ ಮೃತದೇಹ ಸಿಕ್ಕಿದ ಮೇಲಂತೂ ಅವರ ಆಕ್ರಂದನ ಮುಗಿಲು ಮುಟ್ಟಿತು. |
ಅ. 28: ಕೆಯ್ಯೂರಿನಲ್ಲಿ ಅಶೋಕ್ ಪ್ರೊವಿಷನಲ್ ಸ್ಟೋರ್ ಶುಭಾರಂಭ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 |
ಪುತ್ತೂರು: ಅಶೋಕ್ ಬಾಳಿಲ, ಬೆಳ್ಳಾರೆ ಮಾಲಕತ್ವದ ಅಶೋಕ್ ಪ್ರೊವಿಷನಲ್ ಸ್ಟೋರ್ ಅ. 28 ರಂದು ಪುತ್ತೂರು ತಾಲೂಕು ಕೆಯ್ಯೂರಿನ ವಿಶ್ವಚೇತನ ಟವರ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ. ಇಲ್ಲಿ ಉತ್ತಮ ಗುಣಮಟ್ಟದ ದಿನಸಿ ಸಾಮಾಗ್ರಿಗಳು ರಖಂ ಹಾಗೂ ಚಿಲ್ಲರೆ ದರದಲ್ಲಿ ದೊರೆಯಲಿದೆ. ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋಲ್ ಸೇಲ್ ದರದಲ್ಲಿ ಆಹಾರ ಸಾಮಾಗ್ರಿಗಳನ್ನು 5 ಕಿ.ಮೀ. ವ್ಯಾಪ್ತಿಯಲ್ಲಿ ಡೋರ್ ಡೆಲಿವರಿ ನೀಡಲಾಗುವುದೆಂದು ಮಾಲಕರು ತಿಳಿಸಿರುತ್ತಾರೆ. |
Previous : ಸುಲಭ ಕಂತುಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮನೆಗೊಯ್ಯಿರಿ… |
Next : ಕೃಷಿ ಮಸೂದೆ, ಭೂ ಸ್ವಾಧೀನ ಕಾಯ್ದೆಯ ಬಗ್ಗೆ ಮುಕ್ತ ಚರ್ಚೆಗೆ ಆಹ್ವಾನಿಸಿರುವ ನಡೆಯನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಪತ್ರಿಕಾಗೋಷ್ಠಿಯಲ್ಲಿ ಮುರಳೀಧರ ರೈ ಮಠಂತಬೆಟ್ಟು |
ಶಿವರಾತ್ರಿಯ ನೆನಪುಗಳು | ಸಂಪದ - Sampada |
ನಿಜ, ನಮ್ಮ ಮನೆಯಿಂದ ಹೊರಬಂದು ನೋಡಿದರೆ, ಕೊಡಚಾದ್ರಿ ಪರ್ವತವು ಉತ್ತರದಿಕ್ಕಿನ ಕಾಡಿನಿಂದಾಚೆ, ದೂರದಲ್ಲಿ ಕಾಣುತ್ತಿತ್ತು. ಶಿವರಾತ್ರಿಯ ಆಚರಣೆಯ ಸಂದರ್ಭದಲ್ಲಿ, ಆ ಪರ್ವತದಲ್ಲಿ ಬೆಳೆದ ಹುಲ್ಲುಗಿಡಗಳಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಾಣಬಹುದು. ಸಾಮಾನ್ಯವಾಗಿ, ವರ್ಷದಲ್ಲಿ ಮೊದಲ ಬಾರಿ ಆ ಪರ್ವತಶ್ರೇಣಿಯಲ್ಲಿ ಬೆಂಕಿ ಕಾಣುತ್ತಿದ್ದುದು ಶಿವರಾತ್ರಿಯ ದಿನವೇ. ಶಿವರಾತ್ರಿಯಂದು ಕೊಡಚಾದ್ರಿಗೆ ಹೋಗುವ ಭಕ್ತರು, ಅಲ್ಲಿ ಬೆಳೆದು ನಿಂತ ಒಣ ಹುಲ್ಲಿಗೆ ಬೆಂಕಿ ಹಾಕುತ್ತಿದ್ದುದರಿಂದ, ಆ ಪರ್ವತಗಳಲ್ಲಿ ಬೆಂಕಿಯ ಸರಮಾಲೆ ಕಾಣುತ್ತಿತ್ತೇನೊ. ಆಗಿನ ದಿನಗಳಲ್ಲಿ, ಶಿವರಾತ್ರಿ ಬರುವ ತನಕ ಜನಸಾಮಾನ್ಯರು ಕೊಡಚಾದ್ರಿಗೆ ಹೋಗುತ್ತಿರಲಿಲ್ಲವಂತೆ. ನಡುಗೆಯಿಂದಲೇ ಕೊಡಚಾದ್ರಿಯ ತುದಿಯನ್ನು ತಲುಪಬೇಕಾದ ಅಂದಿನ ದಿನಗಳಲ್ಲಿ, ಶಿವರಾತ್ರಿಗಿಂತ ಮುಂಚೆ ಕೊಡಚಾದ್ರಿಯನ್ನು ಏರುವುದು ಕಠಿಣವೂ ಆಗಿತ್ತು. |
"ಕೊಡಚಾದ್ರಿಯಲ್ಲಿ ಬೆಂಕಿ ಕಂಡಿತು. ಇನ್ನು ನಾವು ಫಲಾರ ಸೇವಿಸಬಹುದು" ಎಂದು, ಆ ಬೆಂಕಿ ಸಾಲು ಕಾಣುವುದನ್ನೇ ಕಾಯುತ್ತಿದ್ದರವಂತೆ ಫಲಾರ ಸೇವಿಸಲು ಅನುವಾಗುತ್ತಿದ್ದರು, ನಮ್ಮ ಮನೆಯಲ್ಲಿ. |
ಶಿವರಾತ್ರಿಯ ನೆನಪುಗಳಲ್ಲಿ ಹಲವು ಪ್ರಕ್ರಿಯೆಗಳು ಸೇರಿಕೊಂಡಿದ್ದು, ಆ ದಿನಗಳಲ್ಲಿ ಶಿವರಾತ್ರಿಗೆ ಜನರು ನೀಡಿದ್ದ ಮಹತ್ವವನ್ನು ಗುರುತಿಸುತ್ತವೆ. ಚಳಿ ಹೋಗಿ, ಸೆಕೆ ಆರಂಭವಾಗುವ ಸಂಕ್ರಮಣ ಕಾಲ ಶಿವರಾತ್ರಿ. ಅದು ಹೇಗೋ ಗೊತ್ತಿಲ್ಲ, ಹಲವಾರು ವರ್ಷಗಳಲ್ಲಿ, ಶಿವರಾತ್ರಿಯ ಮರುದಿನವೇ ಸೆಕೆ ಶುರುವಾಗುತ್ತಿತ್ತು. ಹಿಂದಿನ ದಿನದ ತನಕ ಸ್ವಲ್ಪ ಸ್ವಲ್ಪ ಇದ್ದ ಚಳಿಯು, ಆ ದಿನದ ಅಮಾವಾಸ್ಯೆಯನ್ನು ಕಂಡ ತಕ್ಷಣ, ಕ್ವಚಿತ್ತಾಗಿ ಅಂದೇ ಮಾಯವಾಗಿ, ಸೆಕೆಯ ಬೇಗೆಗೆ ಅನುವು ಮಾಡಿಕೊಡುವ ವಾಸ್ತವವು, ಅದೆಷ್ಟೋ ವರ್ಷ ಮರುಕಳಿಸುವುದು ನಮಗೆಲ್ಲಾ ಒಂದು ಸೋಜಿಗವೇ ಆಗಿತ್ತು. |
ಹಳ್ಳಿಯ ಜನರು ಮಾತಿನ ನಡುವೆ, ಶಿವರಾತ್ರಿಯ ದಿನವನ್ನು ಒಂದು ಗಡುವಿನ ರೂಪದಲ್ಲಿ ಗುರುತಿಸುತ್ತಿದ್ದುದು ಸಹಾ ಸಾಮಾನ್ಯ ಸಂಗತಿ. |
"ಶಿವರಾತ್ರಿ ನಂತರ, ನಿಮ್ಮ ಊರಿಗೆ ಬರ್ತೀನಿ" |
"ಶಿವರಾತ್ರಿಯ ನಂತರ, ಬಾವಿ ಕೆಲಸಕ್ಕೆ ಶುರು ಹಚ್ಚಿಕೊಳ್ಳಬೇಕು" |
"ಈ ನೆಗಡಿ ಜ್ವರ ಯಾವಾಗ ಬಿಡ್ತದೆ ಮಾರಾಯ್ರ, ಶಿವರಾತ್ರಿ ಕಳೆದು ಬಿಡಬಹುದಲ್ವಾ?" |
"ನಿಮ್ಮ ಸಾಲವನ್ನು ಶಿವರಾತ್ರಿ ಮರುದಿನ ವಾಪಸು ಕೊಡುವ..." |
ಈ ರೀತಿ, ಆ ದಿನವು ಒಂದು ಹೊಸ ವರ್ಷವನ್ನೇ ಆರಂಭಿಸುವುದೇನೋ ಎಂಬ ಭಾವನೆಯಲ್ಲಿ ಆ ಹಬ್ಬವು ಜನಮಾನಸದಲ್ಲಿ ಗುರುತಿಸಲ್ಪಡುತ್ತಿತ್ತು. |
ಶಿವನನ್ನು ಆರಾಧಿಸುವ ಭಕ್ತಿಪೂರ್ವಕ ಆಚರಣೆಗೆ, ಶಿವರಾತ್ರಿ ಹೆಸರಾಗಿರುವ ವಿಚಾರ ಎಲ್ಲರಿಗೂ ತಿಳಿದದ್ದೇ. ಕೇವಲ ನಮ್ಮ ಊರಿನಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ, ದಕ್ಷಿಣ ಭಾರತದಲ್ಲಿ, ಅಷ್ಟೇಕೆ ಭರತಖಂಡದಾದ್ಯಂತ ಶಿವರಾತ್ರಿಗೆ ತುಂಬಾ ಮಹತ್ವನೀಡಿ ಆಚರಿಸುವ ಪದ್ದತಿ ಚಾಲ್ತಿಯಲ್ಲಿದೆ. ಈಚಿನ ವರ್ಷಗಳಲ್ಲಿ ಈ ಆಚರಣೆಯಲ್ಲಿ ಸ್ವಲ್ಪ ಯಾಂತ್ರಿಕತೆ ಕಂಡು ಬರುತ್ತಿದ್ದು, ಅದಕ್ಕೆ ಜನರು ನೀಡುವ ಪ್ರಾಶಸ್ತ್ಯ ಕಡಿಮಾಗಿದ್ದರೂ, ಹಳ್ಳಿಯ ವಾತಾವರಣ ಇರುವ ಪ್ರದೇಶಗಳಲ್ಲೆಲ್ಲಾ ಇಂದಿಗೂ ಸಾಕಷ್ಟು ಪ್ರಮುಖವಾದ ಹಬ್ಬ ಶಿವರಾತ್ರಿ. |
ನಮ್ಮ ಹಳ್ಳಿಯಲ್ಲಿ ಶಿವರಾತ್ರಿಯ ಆಚರಣೆಗೆ ಹಲವು ಮಗ್ಗುಲುಗಳಿವೆ. ಮಧ್ಯಾಹ್ನದ ಸಮಯದಲ್ಲಿ, ಮನೆ ಮುಂದಿನ ದೇವಸ್ಥಾನದ ಗುಡ್ದದಲ್ಲಿರುವ ಮಹಾಲಿಂಗೇಶ್ವರ ದೇವಾಲಯದಲ್ಲಿ ಈಶ್ವರನಿಗೆ ರುದ್ರಾಭಿಷೇಕ. ಬಿಸಿಲಿದ್ದರೂ, ನಾಲ್ಕಾರು ಕಿ.ಮೀ. ದೂರದಿಂದ ಜನರು ನಡೆದು ಬಂದು ರುದ್ರಾಭಿಷೇಕದಲ್ಲಿ ಪಾಲ್ಗೊಂಡು, ಹಿಂತಿರುಗುತ್ತಿದ್ದರು. ಕೆಲವರದ್ದು ಉಪವಾಸ ವೃತವೂ ಇರುತ್ತದೆ. ಹಗಲಿಡೀ ಶಿವನ ನೆನಪಿನಲ್ಲಿ ಉಪವಾಸ ಮಾಡುವ ಆ ಪದ್ದತಿ, ಈಚೆಗೆ ಕಡಿಮೆಯಾಗಿರುವುದೂ ಒಂದು ವಾಸ್ತವ. |
ಸಂಜೆಯಾದಂತೆ, ಶಿವರಾತ್ರಿಯ ನೆಪದಲ್ಲಿ ನಾನಾ ರೀತಿಯ ಕುಚೇಷ್ಟೆ ನಡೆಸುವ ಯುವ ಪಡೆ, ಮಕ್ಕಳ ಸೈನ್ಯಕ್ಕೆ ಅದೇನೋ ಒಂದು ರೀತಿಯ ಉತ್ಸಾಹ, ಗುಟ್ಟಿನ ಸಂಭ್ರಮ. ಆ ದಿನಗಳಲ್ಲಿ, ಶಿವರಾತ್ರಿಯ ಕತ್ತಲಿನಲ್ಲಿ ನಡೆಸುವ ಸಣ್ಣಪುಟ್ಟ ಕುಚೇಷ್ಟೆಯಂತಹ ಅಪರಾಧಗಳಿಗೆ ವಿನಾಯ್ತಿ ಇತ್ತು. ಈ ವಿನಾಯ್ತಿಯು ಶಿವರಾತ್ರಿಯಂದು ಮಾತ್ರ; ಜೊತೆಗೆ ಜನರೇ ರೂಪಿಸಿಕೊಂಡಿದ್ದ ಅಲಿಖಿತ ಕಾನೂನಿನ ಭಾಗ ಅದು. ಯಾರದ್ದೋ ಮನೆಯ ಬಾಳೆಕೊನೆಯನ್ನು ಶಿವರಾತ್ರಿಯ ಅಮಾವಾಸ್ಯೆಯ ಕತ್ತಲಿನಲ್ಲಿ ಕತ್ತರಿಸಿ ಕೊಂಡೊಯ್ದರೆ, ಆ ರಾತ್ರಿಯ ಮಟ್ಟಿಗೆ ಅದು ಕಳ್ಳತನವಲ್ಲ! ತೆಂಗಿನ ಕಾಯಿ, ಎಳನೀರು ಮೊದಲಾದವುಗಳನ್ನು ಆ ಕಗ್ಗತ್ತಲೆಯ ರಾತ್ರಿಯಲ್ಲಿ ಕದಿಯುವುದಕ್ಕೆಂದೇ ರೈತ ಮಕ್ಕಳು ಒಂದು ವಾರದಿಂದಲೇ ಯೋಜನೆಯನ್ನು ಹಾಕಿಕೊಂಡಿರುತ್ತಿದ್ದರು! ಒಬ್ಬರ ಮನೆಯ ಸ್ನಾನದ ಹಂಡೆಯನ್ನು ಇನ್ನೊಬ್ಬರ ಮನೆಯ ಹತ್ತಿರ ಒಯ್ದು ಇಡುವುದು, ಶೇಂದಿ ಅಂಗಡಿಯ ಬೋರ್ಡನ್ನು ಭಟ್ಟರ ಹೋಟಲಿಗೆ ಸಿಕ್ಕಿಸುವುದು - ಇವೆಲ್ಲಾ ಶಿವರಾತ್ರಿಯ ಕತ್ತಲಿನಲ್ಲಿ ನಡೆಯುವ ಸಾಹಸಮಯ ಚಟುವಟಿಕೆಗಳು. |
ಒಂದು ಬಾರಿ ಶಿವರಾತ್ರಿಯಂದು, ನಮ್ಮ ಮನೆಗೆ ಅನತಿ ದೂರದಲ್ಲಿರುವ ಒಂದು ತೆಂಗಿನ ಮರದ ಎಲ್ಲಾ ಎಳನೀರುಗಳನ್ನು ಯಾರೋ, ತೆಗೆದು, ಕುಡಿದು ಹೋಗಿದ್ದರು. ಎಳನೀರಿನ ಖಾಲಿ ಬುರುಡೆಗಳು, ಅಲ್ಲೇ ಪಕ್ಕದ ತೋಡಿನಲ್ಲಿ ರಾಶಿ ಬಿದ್ದಿದ್ದವು. ಬೆಳಿಗ್ಗೆ ಹೋಗಿ ನೋಡಿದಾಗಲೇ ಈ ಕುಚೇಷ್ಟೆ ನಮ್ಮ ಅರಿವಿಗೆ ಬಂದಿದ್ದು. |
ಶಿವರಾತ್ರಿಯಂದು ರಾತ್ರಿ ನಮ್ಮ ಮನೆಯಲ್ಲಿ ಒಪ್ಪೊತ್ತು - ಅಂದರೆ, ಅರ್ಧದಿನದ ಉಪವಾಸ. ಕಟ್ಟುನಿಟ್ಟಿನ ಉಪವಾಸವು ಮಕ್ಕಳಿಗೆ ಕಷ್ಟವಾಗುತ್ತದೆಂಬ ನೆಪದಿಂದ, ಲಘು ಉಪಹಾರವು ಎಲ್ಲರಿಗೂ ಉಪವಾಸದ ಅನುಭವವನ್ನು ನೀಡುತ್ತಿತ್ತು! ಒಗ್ಗರಣೆ ಹಾಕಿದ ಅವಲಕ್ಕಿ, ಹೆಸರು ಬೇಳೆಯ ಕೀರು ಆ ರಾತ್ರಿಯ ಖಾಯಂ ಮೆನು. ಪ್ರತಿವರ್ಷವೂ ಅದೇ ಮೆನು. ಅವಲಕ್ಕಿ ತಿನ್ನುತ್ತಾ, ಹೆಸರು ಬೇಳೆ ಕೀರು ಕುಡಿಯುವಾಗ, ಮನೆಯ ಮಾಡಿನ ಮೇಲೆ ಮತ್ತು ಅಂಗಳದಲ್ಲಿ "ಸೆಟ್ಟೆ"ಗಳು ಬೀಳಲು ಶುರುವಾಗುವುದು ಒಂದು ಸಾಮಾನ್ಯ ಸಂಗತಿಯಾಗಿತ್ತು. ಶಿವರಾತ್ರಿಯಂದು ಬೇರೆಯವರ ಮನೆಗೆ "ಸೆಟ್ಟೆ ಕುಟ್ಟುವುದು" ಹಬ್ಬದ ಆಚರಣೆಯ ಒಂದು ಅವಿಭಾಜ್ಯ ಅಂಗವಾದ ಕುಚೋದ್ಯಗಳ ಪಟ್ಟಿ ಸೇರಿ ಹೋಗಿತ್ತಲ್ಲವೆ? ಕತ್ತಲಿನ ಆ ರಾತ್ರಿಯಲ್ಲಿ ಯಾರು ನಮ್ಮ ಮನೆಯತ್ತ ಸೆಟ್ಟೆ ಎಸೆಯುತ್ತಿದ್ದರೆಂದು ಗೊತ್ತಾಗುತ್ತಿರಲಿಲ್ಲ. (ಸೆಟ್ಟೆ = ಗದ್ದೆಯಲ್ಲಿರುವ ಮಣ್ಣಿನ ಉಂಡೆ). ಎರಡು ಮುಡಿ ಗದ್ದೆಯನ್ನು ಒಂದು ವಾರದ ಹಿಂದೆ ಉಳುಮೆ ಮಾಡಿದ್ದರಿಂದ, ನಾನಾ ಗಾತ್ರದ ಸೆಟ್ಟೆಗಳು ಅಲ್ಲಿ ಹರಡಿಬಿದ್ದಿದ್ದವು. ಕತ್ತಲಿನ ಮರೆಯಲ್ಲಿ ಆ ಸೆಟ್ಟೆಗಳನ್ನು ನಮ್ಮ ಮನೆಯತ್ತ ಎಸೆಯುತ್ತಿದ್ದರು, ಪೋಕರಿ ಹುಡುಗರು. ಸೆಟ್ಟೆ ಬೀಸಿ ಬರುತ್ತಿದ್ದ ದಿಕ್ಕಿಗೆ ಬ್ಯಾಟರಿ ಬೆಳಕು ಬಿಟ್ಟು ನೋಡಿದರೆ, ಮನೆಯ ಹಿಂದಿನ ತೋಟದ ಕಡೆಯಿಂದ ಸೆಟ್ಟೆಗಳು ತೂರಿ ಬರುತ್ತಿದ್ದವು! ಒಂದೆರಡು ಗಂಟೆಗಳ ಕಾಲ, ಈ ಕುಚೋದ್ಯವನ್ನು ಸಹಿಸಿಕೊಳ್ಳದೇ ಬೇರೆ ದಾರಿ ಇರಲಿಲ್ಲ. ಶಿವರಾತ್ರಿಯ ದಿನ ಪ್ರತಿ ಒಬ್ಬರೂ ಒಂದೆರಡಾದರೂ ಸೆಟ್ಟೆಯನ್ನು ಬೇರೆಯವರ ಮನೆಯತ್ತ ಬೀಸಿ ಹೊಡೆಯಬೇಕೆಂಬ ಅಲಿಖಿತ ನಿಯಮ ಇದ್ದ ಕಾಲ ಅದು. ಮಕ್ಕಳೆಲ್ಲಾ ಶಾಲೆಗೆ ಹೋಗಿ, ಇಂಗ್ಲಿಷ್ ಅಕ್ಷರ ಕಲಿಯಲು ಪ್ರಾರಂಭಿಸಿದಂತೆಲ್ಲಾ, ಸೆಟ್ಟೆ ಕುಟ್ಟುವ ಕುಚೋದ್ಯ ಕಡಿಮೆಯಾಗತೊಡಗಿ, ಈಚಿನ ವರ್ಷಗಳ ಶಿವರಾತ್ರಿಯಂದು ಬಹುಮಟ್ಟಿಗೆ ನಿಂತೇ ಹೋಗಿದೆ. ಶಿವರಾತ್ರಿಯ ಬೆಳಗಿನ ಜಾವ ನಡೆಸುವ ಕಾಮದಹನದ ಪ್ರತಿರೂಪವಾದ "ಹಣಬು" ಎಂಬ ಆಚರಣೆಗೂ ಸಹಾ , ಹಿಂದೆ ಇದ್ದ ಮಹತ್ವ ಈಗ ಕಾಣಬರುತ್ತಿಲ್ಲ. |
ಒಣ ಹುಲ್ಲನ್ನು ದಪ್ಪನೆಯ ಮರದ ಕಾಂಡದ ರೀತಿ ಸುತ್ತಿ ಸುತ್ತಿ ನಾಲ್ಕಾರು ಜನ ಹೊತ್ತುಕೊಂಡು ಹೋಗುವಂತಹ ಹಣಬನ್ನು ಮಾಡಿ, ಅದರ ಒಂದು ತುದಿಗೆ ಬೆಂಕಿ ಹಚ್ಚಿ ಊರಿನ ತುಂಬಾ ಮನೆ ಮನೆಗೆ ಹೋಗುತ್ತಾರೆ. ಒಂದು ತುದಿಯಿಂದ ಹೊಗೆ ಕಾರುವ ಹಣಬಿನ ಸುತ್ತಲೂ ಮಕ್ಕಳ ಸೈನ್ಯ - ಜೊತೆಗೆ ದೊಡ್ಡವರೂ ಸೇರಿಕೊಳ್ಳುವ ಈ ಆಚರಣೆಯು ಅಷ್ಟು ದೂರರಿಂದಲೇ ಬರುತ್ತಿದ್ದುದು ಗೊತ್ತಾಗುತ್ತಿತ್ತು - ಅವರು ಹಾಡುವ ಧಿಂಸಾಲ್ ಹಾಡುಗಳಿಂದ. |
"ಧಿಂಸಾಲ್ ಎನಿರೋ, ಒಂದೇ ದನಿರೋ, ಧಿಂಸಾಲ್!!" ಸ್ವಲ್ಪ ಉಢಾಳ ಎನ್ನಬಹುದಾದ ದೊಡ್ಡವರೊಬ್ಬರು ಹೇಳುವ ಮೊದಲ ಸಾಲಿಗೆ, ಎಲ್ಲರೂ "ಧಿಂಸಾಲ್" ಎಂದು ಕೂಗುತ್ತಾ ಕುಣಿಯುತ್ತಿದ್ದರು. |
"ಆಚಾ. . .. . . . . .ಬಾಚಣಿಗೆ ಕೆಲ್ಲೋ, ಧಿಮ್ಸಾಲ್" |
" ಕೊಂಕ. . . . . . . .ಕೊಂಕ್ ಬಾಳೆ ಹಣ್ಣೊ, ಧಿಂಸಾಲ್" |
ನಂತರ ಮನೆಯವರು ಕೊಡುವ "ಕಾಣಿಕೆ"ಯನ್ನು ಸ್ವೀಕರಿಸುವ ತಂಡ, ಮುಂದಿನ ಮನೆಗೆ ಹೋಗುತ್ತಿತ್ತು. ಅಂದು ಧಿಂಸಾಲ್ ಹಾಡುತ್ತಿದ್ದ ಹುಡುಗರೆಲ್ಲ ಇಂಗ್ಲಿಷ್ ಶಾಲೆಯ ಪ್ರಭಾವಕ್ಕೆ ಸಿಕ್ಕು, ಧಿಂಸಾಲ್ ಹಾಡನ್ನೇ ಮರೆತುಬಿಟ್ಟಿದ್ದಾರೆ ಅನಿಸುತ್ತಿದೆ. ಅಂದು ನಮ್ಮ ಹಳ್ಳಿಯ ಎಲ್ಲಾ ಮಕ್ಕಳ ಬಾಯಿಯಲ್ಲಿ ಗುನುಗುನುತ್ತಿದ್ದ ಈ ಪೋಲಿಹಾಡುಗಳು ಶಿವರಾತ್ರಿಯ ನೆನಪುಗಳಲ್ಲಿ ತನ್ನದೇ ಸ್ಥಾನವನ್ನು ಗುಟ್ಟಾಗಿ ಪಡೆದಿರುವದಂತೂ ದಿಟ. |
ಉ: ಶಿವರಾತ್ರಿಯ ನೆನಪುಗಳು |
Submitted by narayan deshpande on February 20, 2012 - 4:43pm |
kshamisi, nanna pc yalli yestu prayatnisidaru kannada font baruttilla adakke nanu kannadavanne english pada balasi bareyutiddene. "shivaratri" ee padada artha-gambhirya. nanu sahita sannavaniddaga nanna tandejoteyalli devastanakke hoguttidde.aavagina dinagala nenapu eendigusahita acchaliyade ulidide. tamagellarigu "shivaratri" shubhashashaya. |
Submitted by sasi.hebbar on February 21, 2012 - 10:57am |
ದ್ಹನ್ಯವಾದಗಳು. ನಿಮ್ಮ ಊರಿನಲ್ಲಿ ದೇವಸ್ಥಾನಕ್ಕೆ ಹೋಗುವ ಜೊತೆಗೆ, ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ ಉದಾಹರಣೆ ಗಳಿದ್ದವೆ? ಮತ್ತೆ, ಕನ್ನಡ ಅಕ್ಷರಗಳ ವಿಚಾರ. ಈಗ ಕನ್ನಡ ಟೈಪಿಸುವುದು ತುಂಬಾ ಸುಲಭ. ಎಡಭಾಗದಲ್ಲಿ ಟೈಪ್ ಇನ್ ಎಪ್(9) ಎಂಬ ಆಯ್ಕೆಯಲ್ಲಿ ಕನ್ನಡ ಪೋನೆಟಿಕ್ ಆಯ್ಕೆ ಮಾಡಿಕೊಂಡು ಟೈಪ್ ಮಾಡಬಹುದು. ಅಥವಾ, ಬಹುಷ ನಿಮ್ಮ ಪಿಸಿಯಲ್ಲಿ ಯುನಿಕೋಡ್ ಪಾಂಟ್ ಇಲ್ಲವೇನೊ! "ತುಂಗಾ ಯುನಿಕೋಡ್ ಪಾಂಟ್" ಎಂಬುದನ್ನು ಇಂಟರ್ನೆಟ್ ನಲ್ಲಿ ಡವನ್ ಲೋಡ್ ಮಾಡಿಕೊಂಡರೆ ಸುಲಭವಾದೀತೇನೊ. |
Submitted by nidhi on February 22, 2012 - 2:56pm |
ನಿಮ್ಮ ಈ ಲೇಖನ ನಮ್ಮ ಹಳೆಯ ದಿನಗಳನ್ನು ಮತ್ತು ಸಂಸ್ಕ್ರುತಿಯನ್ನು ನೆನಪಿಸುವಂತಿದೆ..... ನಾನು ಚಿಕ್ಕವಳಿದಾಗ ನಮ್ಮ ಊರಿನಲ್ಲು ಇಂತಹ ಆಚರಣೆಗಳು ಇದ್ದವು ಆದರೆ ಕಾಲ ಕಳೆದ ಹಾಗೆ ಇದು ತೆರೆಮರೆಗೆ ಸರಿದಿರುವುದು ವಿಷಾದದ ಸಂಗತಿ............. |
Submitted by makara on February 28, 2012 - 6:56pm |
ಹೆಬ್ಬಾರರೇ, ನಿಮ್ಮ ಊರಿನ ಶಿವರಾತ್ರಿ ಆಚರಣೆ ಸ್ವಲ್ಪ ಭಿನ್ನವೆನಿಸಿತು. ಏಕೆಂದರೆ ಇತರೇ ಪ್ರದೇಶಗಳಲ್ಲಿ ಕಾಮನ ಹಬ್ಬದಲ್ಲಿ ಮಾಡುವ ಚೇಷ್ಟೆಗಳು ನಿಮ್ಮಲ್ಲಿ ಶಿವರಾತ್ರಿಯಲ್ಲಿ ನಡೆಯುವುದು ಸ್ವಲ್ಪ ಸೋಜಿಗವೆನಿಸಿತು. ನೀವು ಹೇಳಿದ ಧಿಂಸಾಲ್ ತರಹದ ಆಚರಣೆಯೂ ಸಹ ಕಾಮನ ಹಬ್ಬದಲ್ಲಿ ಜರಗುವಂತಹುದೇ. |
ಗೋಮಾಂಸ ತಿನ್ನಬೇಕೆಂದರೆ ತಿನ್ನುತ್ತೇನೆ, ಬೇಡ ಎನ್ನಲು ಇವರು ಯಾರು?: ಸಿಎಂ ಸಿದ್ದರಾಮಯ್ಯ | GulfKannadiga | ಗಲ್ಫ್ ಕನ್ನಡಿಗ |
Home Karnataka ಗೋಮಾಂಸ ತಿನ್ನಬೇಕೆಂದರೆ ತಿನ್ನುತ್ತೇನೆ, ಬೇಡ ಎನ್ನಲು ಇವರು ಯಾರು?: ಸಿಎಂ ಸಿದ್ದರಾಮಯ್ಯ |
ಗೋಮಾಂಸ ತಿನ್ನಬೇಕೆಂದರೆ ತಿನ್ನುತ್ತೇನೆ, ಬೇಡ ಎನ್ನಲು ಇವರು ಯಾರು?: ಸಿಎಂ ಸಿದ್ದರಾಮಯ್ಯ |
ಬೆಂಗಳೂರು: ಸಿದ್ದರಾಮಯ್ಯ ಶೇ. 100 ರಷ್ಟು ಹಿಂದುವಾಗಿದ್ದರೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆಗೆ ಯಾಕೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕೆಗೆ ಸಿಎಂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದಾರೆ. |
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಟ್ವೀಟ್‌ಗೆ ಜಾಲ ತಾಣದಲ್ಲಿ ಪ್ರತಿಕಿಯೆ ವ್ಯಕ್ತವಾಗಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದಾರೆ. |
ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುವೆ! |
1) ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸಲು ಇವರು ಯಾರು ? ಹಿಂದುಗಳಲ್ಲಿಯೇ ಬಹಳ ಮಂದಿ ಬೀಫ್ ತಿನ್ನುತ್ತಾರೆ. ನನಗೆ ತಿನ್ನಬೇಕೆನಿಸಿದರೆ ತಿನ್ನುತ್ತೇನೆ. ಬೇಡ ಎನ್ನಲು ಇವರು ಯಾರು ? ನನಗೆ ಬೀಫ್ ಇಷ್ಟ ಇಲ್ಲ ಅದಕ್ಕೆ ತಿನ್ನುವುದಿಲ್ಲ. |
2) ನಾನು ದನ ಸಾಕಿದ್ದೇನೆ. ಮೇಯಿಸಿದ್ದೇನೆ. ಸೆಗಣಿ ಬಾಚಿದ್ದೇನೆ. ಗೋರಕ್ಷಣೆ, ಪಾಲನೆ ಬಗ್ಗೆ ಪಾಠ ಮಾಡುವ ಯೋಗಿ ಆದಿತ್ಯನಾಥ ದನ ಸಾಕಿದ್ದಾರಾ? ಇವರಿಗೆ ಗೋರಕ್ಷಣೆ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ? |
3) ಕೋಮು ಗಲಭೆಯಲ್ಲಿ ಸಾಯುವವರು, ಸಾಯಿಸುವವರು ಹಿಂದುಳಿದ ಹಾಗೂ ದಲಿತ ಸಮುದಾಯದ ಅಮಾಯಕ ಮಕ್ಕಳು. ಅವರ ಕೈಗೆ ಆಯುಧ ಕೊಟ್ಟವರ ಮಕ್ಕಳು ಡಾಕ್ಟರ್, ಎಂಜಿನಯರ್ ಆಗಿದ್ದಾರೆ. ನಮ್ಮ ಮಕ್ಕಳು ಜೈಲಿಗೆ ಹೋಗುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಕೋಮು ಗಲಭೆ ನಿಲ್ಲುತ್ತದೆ – ಸಿದ್ದರಾಮಯ್ಯ, ಸಿಎಂ |
ನೀವು ಏನು ಬೇಕಾದರೂ ತಿನ್ನಿ ಅದು ನಿಮಗೆ ಬಿಟ್ಟಿದ್ದು !! ಆದರೆ ಹಿಂದುಗಳು ಪೂಜಿಸುವ ಗೋವುಗಳನ್ನು ಹತ್ಯೆ ಮಾಡುವುದನ್ನು ನಿಷೇಧಿಸಿ. ಹಿಂದುಗಳು ತುಂಬಾ ಜನ ಬೀಫ್ ತಿನ್ನುತ್ತಾರೆ ಅಂತ ಹೇಳಿ ಯಾರನ್ನು ಓಲೈಸಿಕೊಳ್ಳುವ ಉದ್ದೇಶ? ತುಷ್ಟೀಕರಣದ ಇನ್ನೊಂದು ಮುಖವೇ? ಸ್ವಲ್ಪ ಗಂಭೀರತೆಯಿಂದ ಆಡಳಿತ ಮಾಡಿ – ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ |
ದಿನೇಶ್ ಅಮಿನ್ ಮಟ್ಟು (Dinesh Amin Mattu): 2016-09-04 |
ಕಾವೇರಿ: ರಾಜ್ಯಕ್ಕೆ ಲಾಭ-ನಷ್ಟ ಎಷ್ಟು? (ಫೆಬ್ರುವರಿ 2007) |
ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಅಲ್ಲಿನ ಅಕ್ರಿಡಿಷನ್ ಇಲ್ಲದ ನಾವು ಸಂದರ್ಶಕರ ಪಾಸ್ ನಲ್ಲಿ ಒಳಗೆ ಹೋಗಿ ಗಂಟೆಗಟ್ಟಲೆ ನಿಂತುಕೊಂಡೇ ನ್ಯಾಯಮೂರ್ತಿಗಳ ಕಣ್ಣಿಗೆ ಬೀಳದಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆವು. ಗೊಂದಲ ಮೂಡಿದರೆ ಅದನ್ನು ಬಗೆಹರಿಸಲು ನೀರಾವರಿ ವಿವಾದದ ವಿಷಯದಲ್ಲಿ 'ಸರ್ವಜ್ಞ' ರೆನಿಸಿರುವ ನಮ್ಮೆಲ್ಲರ ಗೆಳೆಯರಾಗಿರುವ ಮೋಹನ್ ಕಾತರಕಿ ಇದ್ದರು. ನಮ್ಮ ನಡುವೆ ಯಾರೂ ಬಹಿರಂಗವಾಗಿ ಒಪ್ಪಿಕೊಳ್ಳದ ಸಣ್ಣ ವೃತ್ತಿಸಂಬಂಧಿ ಪೈಪೋಟಿ ಕೂಡಾ ಇತ್ತು, ಅದನ್ನು ಮೀರಿದ ಸ್ನೇಹವೂ ಇತ್ತು. ಈಗಲೂ ದೆಹಲಿಯಲ್ಲಿರುವ ಕನ್ನಡದ ಪತ್ರಕರ್ತರು ಸೆನ್ಸಿಬಲ್ ಆಗಿ ವರದಿ ಮಾಡುತ್ತಿರುವುದನ್ನು ಕೂಡಾ ಗಮನಿಸಬಹುದು. |
Labels: ಕರ್ನಾಟಕ, ಕಾವೇರಿ, ತಮಿಳುನಾಡು, ನಾರಿಮನ್, ನ್ಯಾಯಾಧಿಕರಣ |
ಶಿಕ್ಷಕರ ದಿನಾಚರಣೆಯ ದಿನ ಗೆಳೆಯರೆಲ್ಲರೂ ಸಾಲುಗಟ್ಟಿ ತಮ್ಮ ಗುರುಗಳನ್ನು ನೆನಪುಮಾಡಿಕೊಳ್ಳುತ್ತಿರುವಾಗ ನನ್ನದೂ ಒಂದು ಇರ್ಲಿ ಅಂತ...ನನ್ನ ಪ್ರೇಮ ಟೀಚರ್ ಬಗ್ಗೆ.... |
ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೆ ಓದಿದ್ದು ಮುಂಬೈನ ಮುನ್ಸಿಪಾಲಿಟಿ ಕನ್ನಡ ಮಾಧ್ಯಮ ಶಾಲೆಯಲ್ಲಿ. ಅಲ್ಲಿನ ಕೋಟೆ ಪ್ರದೇಶದ ಬಜಾರ್ ಸ್ಟ್ರೀಟ್ ನಲ್ಲಿ ನಾನು ಮೂರನೆ ತರಗತಿ ಓದುತ್ತಿದ್ದಾಗ ನಮಗೊಬ್ಬರು ಕ್ಲಾಸ್ ಟೀಚರ್ ಇದ್ದರು. ಅವರ ಹೆಸರು ಪ್ರೇಮ. ಅವರ ಪ್ರೇಮಮಯಿ ವ್ಯಕ್ತಿತ್ವಕ್ಕೆ ಹೆಸರು ಅನ್ವರ್ಥದಂತಿತ್ತು. ಅವರು ಒಂದು ದಿನ ಕರೆದು ಅಂತರ್ ಶಾಲೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಜ್ಞಾಪಿಸಿದರು. ಕ್ಲಾಸಿನಲ್ಲಿ ಅತ್ಯಂತ ಪೋಕರಿ ಹುಡುಗನಾಗಿದ್ದ ನನ್ನ ಬಗ್ಗೆ ಆಗಲೇ ಹಲವಾರು ಬಾರಿ ತಂದೆಗೆ ದೂರು ನೀಡಿದ್ದ ಟೀಚರ್ ಈ ಸ್ಪರ್ಧೆಗೆ ನನ್ನನ್ನೇ ಯಾಕೆ ಆಯ್ಕೆ ಮಾಡಿದರೆಂದು ಆಗಿನ ನನ್ನ ಬಾಲಮನಸ್ಸಿಗೆ ಅರ್ಥವಾಗಿರಲಿಲ್ಲ. ತುಂಟ ಹುಡುಗರ ಬಗ್ಗೆ ಗುರುಗಳಿಗೇಕೆ ಇಷ್ಟೊಂದು ಪ್ರೀತಿ ಎನ್ನುವುದು ಹತ್ತನೆ ತರಗತಿ ವರೆಗೂ ನನಗೆ ಗೊತ್ತಿರಲಿಲ್ಲ. |
ಟೀಚರ್ ಹೇಳಿದಾಗ ನಾನು ಒಪ್ಪಿಕೊಂಡರೂ ದಿನದ ಕ್ಲಾಸ್ ಮುಗಿದ ನಂತರ ಪ್ರಾಕ್ಟೀಸ್ ಗಾಗಿ ಒಂದು ಗಂಟೆ ನಿಲ್ಲಬೇಕಾಗುತ್ತದೆ ಎಂದಾಗ ಕೂಡಲೇ ನಾನು ಒಲ್ಲೆ ಎಂದೆ. ಯಾಕೆ? ಎಂದು ಕೇಳಿದರು. "ಶಾಲೆ ಬಿಡುವಾಗ ಹಸಿವಾಗುತ್ತದೆ, ಮನೆಗೆ ಹೋಗಿ ಊಟ ಮಾಡಬೇಕು" ಎಂದೆ.. ನಮ್ಮ ತರಗತಿ ಬೆಳಿಗ್ಗೆ ಏಳರಿಂದ ಮಧ್ಯಾಹ್ನ ಒಂದುಗಂಟೆ ವರೆಗೆ ನಡೆಯುತ್ತಿತ್ತು. ಅದಕ್ಕೆ ಪರಿಹಾರವನ್ನು ಅವರು ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದರು. |
ಸರಿಯಾಗಿ ಕೇಳಿಸಿಕೊಳ್ಳಿ, ಸುಮಾರು 50 ವರ್ಷಗಳ ಹಿಂದೆ ಮುಂಬೈನಲ್ಲಿ ಸರ್ಕಾರದ 'ಕ್ಷೀರಭಾಗ್ಯ' ಯೋಜನೆ ಇತ್ತು. ಪ್ರತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೆಳಿಗ್ಗೆ ಒಂದು ಬಾಟಲಿ ಹಾಲು ಮತ್ತು ನೆಲಗಡಲೆ ಬೀಜದ ಒಂದು ಪೊಟ್ಟಣ ಕೊಡುತ್ತಿದ್ದರು. ಆ ಹಾಲಿನ ಕೆನೆ ಎಷ್ಟೊಂದು ದಪ್ಪ ಇರುತ್ತಿತ್ತೆಂದರೆ ಮೇಲಿನ ಮುಚ್ಚಳ ತೆಗೆದು ಬಾಟಲಿ ತಲೆಕೆಳಗೆ ಮಾಡಿದರೂ ಹಾಲು ಕೆಳಗೆ ಬೀಳುತ್ತಿರಲಿಲ್ಲ. ಎಲ್ಲ ಮಕ್ಕಳಂತೆ ಹಾಲು ನನಗೆ ಇಷ್ಟ ಇಲ್ಲದಿದ್ದರೂ ನೆಲಗಡಲೆ ಪೊಟ್ಟಣಕ್ಕಾಗಿ ನಿತ್ಯನಾನು ಜಗಳವಾಡುತ್ತಿದ್ದೆ. ಮುಂಬೈನ ಕೆಂಪು ಸಿಪ್ಪೆಯ ವಸಾಯ್ ಬಾಳೆ ಹಣ್ಣು ಬಗ್ಗೆ ಕೂಡಾ ನನಗೆ ಅಷ್ಟೇ ಪ್ರೀತಿ. ಈ ಆಸೆಯಿಂದಾಗಿ ಪ್ರೇಮ ಟೀಚರ್ ತನ್ನ ಚಪಾತಿ ಜತೆ ತರುತ್ತಿದ್ದ ಬಾಳೆಹಣ್ಣನ್ನು ಆಗಾಗ ನಾನು ಕದಿಯುತ್ತಿದ್ದೆ. ಅದನ್ನು ಗಮನಿಸದಂತೆ ಇದ್ದ ಪ್ರೇಮ ಟೀಚರ್ ಒಂದರ ಬದಲಿಗೆ ಎರಡು ಬಾಳೆ ಹಣ್ಣು ತರಲು ಶುರುಮಾಡಿದ್ದರು. ಅದರಲ್ಲಿ ನಾನು ಒಂದು ಕದಿಯುತ್ತಿದ್ದೆ. ಅವರು ಗೊತ್ತಿಲ್ಲದಂತೆ ಇರುತ್ತಿದ್ದರು. |
ಭಾಷಣ ಸ್ಪರ್ಧೆಗೆ ಒಲ್ಲೆ ಎಂದಾಗ ತಕ್ಷಣ ಪ್ರೇಮ ಟೀಚರ್ ಡಬ್ಬಲ್ ಆಮಿಷ ಒಡ್ಡಿದರು. 'ನಿನಗೆ ಒಂದು ನೆಲಗಡಲೆ ಬೀಜದ ಪೊಟ್ಟಣ ಮತ್ತು ವಸಾಯಿ ಬಾಳೆ ಹಣ್ಣು ಕೊಡ್ತೇನೆ, ಬರ್ತಿಯಾ? ಎಂದು ಕೇಳಿದರು. ನಾನು ಒಪ್ಪಿಕೊಂಡೆ. ಅವರೇ ಭಾಷಣ ಬರೆದು ಕೊಟ್ಟರು. ಅದು 'ನಾನು ನೋಡಿದ ಜಾದುಗಾರನ ಆಟ' ಎಂಬ ವಿಷಯ. ಆ ಕಾಲದಲ್ಲಿ ಮುಂಬೈನ ಬೀದಿಬೀದಿಗಳಲ್ಲಿ ಇದು ನಡೆಯುತ್ತಿತ್ತು. ಎರಡು ಗಳಗಳ ನಡುವಿನ ಹಗ್ಗದಲ್ಲಿ ಸಣ್ಣಹುಡುಗಿನಡೆದಾಡಿಕೊಂಡು ಹೋಗುವುದು, ಬುಟ್ಟಿಯೊಳಗಿನ ಹಾವು ಮಾಯ ಮಾಡುವುದು..ಇತ್ಯಾದಿ. ಇದನ್ನೆಲ್ಲ ಸೇರಿಸಿ ಭಾಷಣ ಬರೆದುಕೊಟ್ಟರು. |
ಮೊದಲು ಭಾಷಣವನ್ನು ಬಾಯಿಪಾಠ ಮಾಡಿಸಿ, ನಂತರ ಸ್ಟಾಪ್ ರೂಮಿನ ಆಳೆತ್ತರದ ಕನ್ನಡಿ ಮುಂದೆ ನಿಲ್ಲಿಸಿ ಭಾಷಣ ಮಾಡುವಂತೆ ಹೇಳುತ್ತಿದ್ದರು. ಕನ್ನಡಿ ಎದುರು ಭಾಷಣಮಾಡಿದರೆ ಸಭಾ ಕಂಪನ ಓಡಿಹೋಗುತ್ತದೆ ಎಂದು ನನಗೆ ಆಗಲೇ ಗೊತ್ತಾಗಿದ್ದು. ಕೆಲವು ದಿನಗಳ ಪ್ರಾಕ್ಟೀಸ್ ನಂತರ ಭಾಷಣ ಸ್ಪರ್ಧೆ ನಡೆಯಲಿರುವ ವಡಾಲದಲ್ಲಿನ ಶಾಲೆಗೆ ಪ್ರೇಮ ಟೀಚರ್ ಅವರೇ ಮನೆಬಳಿ ಬಂದು ಕರೆದುಕೊಂಡು ಹೋದರು. ರೈಲಿನಲ್ಲಿ ಪ್ರಯಾಣಿಸುವಾಗಲೂ ಅವರು ನನ್ನನ್ನು ಭಾಷಣ ಉರುಹೊಡೆಸುತ್ತಿದ್ದರು. |
ಆ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಬಂತು. ಅದು ಹತ್ತುರೂಪಾಯಿಗಳ ನಗದು. ಆ ಲಕೋಟೆಯನ್ನು ಕಿಸೆಗೆ ಹಾಕಿ ಮತ್ತೆ ನನ್ನನ್ನು ಮನೆಬಳಿಬಿಟ್ಟುಹೋದರು. ಹೋಗುವಾಗ ಹತ್ತಿರ ಕರೆದು ಬರಸೆಳೆದು ಅಪ್ಪಿ ಹಣೆಗೆ ಮುತ್ತಿಟ್ಟರು. ಕೆಲವು ದಿನಗಳ ಹಿಂದೆ ನನ್ನ ತುಂಟಾಟಕ್ಕಾಗಿ ಮನೆಗೆ ದೂರು ನೀಡಿದ್ದ ಈ ಟೀಚರ್ ಯಾಕೆ ಇಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದು ತಿಳಿಯದೆ ನಾನು ಗಲಿಬಿಲಿಗೊಂಡಿದ್ದೆ. |
ಮುಂಬೈ ತೊರೆದುಬಂದ 25 ವರ್ಷಗಳ ನಂತರ ಮುಂಗಾರು ಪತ್ರಿಕೆಯ ವರದಿಗಾಗಿ ಮತ್ತೆ ಅಲ್ಲಿಗೆ ಹೋಗಿದ್ದಾಗ ಆ ಟೀಚರ್ ಗಾಗಿ ಹುಡುಕಾಡಿ ಬಹಳ ಅಲೆದಾಡಿದ್ದೆ. ಮುನ್ಸಿಪಾಲಿಟಿ ಶಾಲೆ ಮುಚ್ಚಿತ್ತು. ಅವರ ಬಗ್ಗೆ ತಿಳಿಸುವವರು ಯಾರೂ ಇರಲಿಲ್ಲ. ನನಗೆ ಟೀಚರ್ ಆಗಿದ್ದಾಗಲೇ ಐವತ್ತರ ಆಜುಬಾಜಿನಲ್ಲಿದ್ದ ಅವರು ಜೀವಂತವಾಗಿರುವ ಸಾಧ್ಯತೆಯೇ ಇಲ್ಲವಾದರೂ ಈಗಲೂ ಮುಂಬೈನ ಬಜಾರ್ ಸ್ಟ್ರೀಟ್ ನಲ್ಲಿ ಓಡಾಡುವಾಗ ನನ್ನಕಣ್ಣುಗಳು ಪ್ರೇಮ ಟೀಚರ್ ಅವರನ್ನು ಅರಸುತ್ತಿರುತ್ತವೆ. ಯಾರಾದರೂ ಈಗಲೂ 'ದೇವತೆ' ಅಂದಾಕ್ಷಣ ಚಿನ್ನದ ಬಾರ್ಡರ್ ನ ಬಿಳಿ ಸೀರೆ ಉಟ್ಟ, ಕನ್ನಡಕ ಹಾಕಿಕೊಂಡ ಕುಳ್ಳಗಿನ ನನ್ನ ಪ್ರೇಮ ಟೀಚರ್ ನೆನಪಾಗಿ ನನಗರಿವಿಲ್ಲದಂತೆ ತಲೆ ಬಾಗುತ್ತದೆ. ಕಣ್ಣು ತೇವವಾಗುತ್ತದೆ. |
ಜಲಜೀವನ್ ಮಿಷನ್: ರಾಜ್ಯದ 90 ಲಕ್ಷ ಮನೆಗಳಿಗೆ ನೀರು; ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ | Chitradurga: Drinking Water To 90 Lakh Households In The State Under The Jal Jeevan Mission; Minister KS Eshwarappa - Kannada Oneindia |
12 min ago ಪಠ್ಯ ಪುಸ್ತಕಗಳಲ್ಲಿ ರಾಜಕೀಯ ಸೇರಿಸಬೇಡಿ: ಸಲೀಂ ಅಹ್ಮದ್ |
32 min ago ರಾಯಚೂರು; ಕರ್ನಾಟಕ ಪಬ್ಲಿಕ್ ಶಾಲೆಗೆ ಶಂಕು ಸ್ಥಾಪನೆ |
45 min ago ಭಾರತೀಯರೇ ಭಯ ಬಿಡಿ: ನಮ್ಮಲ್ಲಿ ಇಲ್ಲ ಒಂದೇ ಒಂದು ಮಂಕಿಪಾಕ್ಸ್ ಪ್ರಕರಣ |
ಜಲಜೀವನ್ ಮಿಷನ್: ರಾಜ್ಯದ 90 ಲಕ್ಷ ಮನೆಗಳಿಗೆ ನೀರು; ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ |
| Published: Wednesday, November 3, 2021, 16:53 [IST] |
ಚಿತ್ರದುರ್ಗ, ನವೆಂಬರ್ 3: "ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 2024ರೊಳಗೆ ರಾಜ್ಯದ 90 ಲಕ್ಷ ಮನೆಗಳಿಗೆ ನಳ ನೀರು ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು," ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. |
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದ ಟಿ.ಬಿ. ಸರ್ಕಲ್ ತರಳಬಾಳು ನಗರದಲ್ಲಿ ಬುಧವಾರ ಜಲಜೀವನ್ ಮಿಷನ್ ಯೋಜನೆಯಡಿ ನಿರ್ವಹಿಸಿರುವ ಕಾರ್ಯಾತ್ಮಕ ನಳನೀರು ಸಂಪರ್ಕದ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, "ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವುದು ಜಲ ಜೀವನ ಮಿಷನ್ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಈಗಾಗಲೇ ಕಾಮಗಾರಿ ನಡೆಯುತ್ತಿದೆ," ಎಂದರು. |
ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಶೇ.50ರ ಅನುಪಾತದಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದ್ದು, 2024ರೊಳಗೆ ರಾಜ್ಯದ 90 ಲಕ್ಷ ಮನೆಗಳಿಗೆ ನಳನೀರು ಸಂಪರ್ಕಿಸುವ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದರು. |
"ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕು ಸೇರಿದಂತೆ ಒಟ್ಟು ಆರು ತಾಲ್ಲೂಕುಗಳಿಂದ 516 ರೂ. ಕೋಟಿಯಷ್ಟು ಕಾಮಗಾರಿಗಳಿಗೆ ಕ್ರಮಕೈಗೊಳ್ಳಲಾಗಿದ್ದು, ಚಿತ್ರದುರ್ಗ ಜಿಲ್ಲೆಯ 3,46,186 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಕಾಮಗಾರಿ ಶುರುವಾಗಿದೆ," ಎಂದು ಹೇಳಿದರು. |
"ಚಿತ್ರದುರ್ಗ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 6865 ಮನೆಗಳಿಗೆ ನಳ ಸಂಪರ್ಕಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗಿದ್ದು, ಜನವರಿ-2022ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು," ಎಂದು ತಿಳಿಸಿದರು. |
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಮಾತನಾಡಿ, "ಜಲಜೀವನ್ ಮಿಷನ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಚಿತ್ರದುರ್ಗ ತಾಲ್ಲೂಕಿನ 22 ಜನವಸತಿಗಳು ಹೊಳಲ್ಕೆರೆ ತಾಲ್ಲೂಕಿನ 7 ಜನವಸತಿಗಳ ಒಟ್ಟು 6865 ಮನೆಗಳಿಗೆ 11.14 ಕೋಟಿ ರೂ. ವೆಚ್ಚದಲ್ಲಿ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಕಾಮಗಾರಿಗಳನ್ನು ಟೆಂಡರ್ ಪ್ರಕಾರ ಗುತ್ತಿಗೆದಾರರಿಗೆ ವಹಿಸಲಾಗಿದ್ದು, ಈವರಗೆ ಒಟ್ಟು 6 ಜನವಸತಿಗಳಲ್ಲಿನ ನಳ ಸಂಪರ್ಕ ಪೂರ್ಣಗೊಂಡಿರುತ್ತದೆ ಎಂದರು. ಉಳಿದ ಕಾಮಗಾರಿಗಳಲ್ಲಿ 3 ಜನವಸತಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ," ಎಂದರು. |
"2021-22ನೇ ಸಾಲಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯ 682 ಜನವಸತಿಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಚಳ್ಳಕೆರೆ ತಾಲ್ಲೂಕಿನ 341 ಜನವಸತಿಗಳು, ಚಿತ್ರದುರ್ಗ ತಾಲ್ಲೂಕಿನ 72 ಜನವಸತಿಗಳು, ಹಿರಿಯೂರು ತಾಲ್ಲೂಕಿನ 116 ಜನವಸತಿಗಳು, ಹೊಳಲ್ಕೆರೆ ತಾಲ್ಲೂಕಿನ 18 ಜನವಸತಿಗಳು ಹಾಗೂ ಮೊಳಕಾಲ್ಮೂರು ತಾಲ್ಲೂಕಿನ 135 ಜನವಸತಿಗಳನ್ನು ತೆಗೆದುಕೊಳ್ಳಲಾಗಿದೆ. 2021-22ನೇ ಸಾಲಿನ ಕಾಮಗಾರಿಗಳ ಮೊತ್ತ 237 ಕೋಟಿ ರೂ.ಗಳಾಗಿದ್ದು, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ," ಎಂದು ಮಾಹಿತಿ ನೀಡಿದರು. |
2022-23ನೇ ಸಾಲಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 885 ಜನವಸತಿಗಳನ್ನು ತೆಗೆದುಕೊಂಡಿದ್ದು, ಚಿತ್ರದುರ್ಗ ತಾಲ್ಲೂಕಿನ 173 ಜನವಸತಿಗಳು, ಹಿರಿಯೂರು ತಾಲ್ಲೂಕಿನ 168 ಜನವಸತಿಗಳು, ಹೊಳಲ್ಕೆರೆ ತಾಲ್ಲೂಕಿನ 198 ಜನವಸತಿಗಳು, ಹೊಸದುರ್ಗ ತಾಲ್ಲೂಕಿನ 346 ಜನವಸತಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಕಾಮಗಾರಿಗಳ ಅಂದಾಜು ಮೊತ್ತ 266.02 ಕೋಟಿ ರೂ.ಗಳಾಗಿರುತ್ತದೆ. |
ಮುತ್ತಗದೂರು ಗ್ರಾಮ ಪಂಚಾಯಿತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಗ್ರಾಮೀಣಾಭಿವೃದ್ಧಿ ಸಚಿವರು, ಯೋಜನೆಯ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆದರು. |
"ಜಲಜೀವನ್ ಮಿಷನ್ ಯೋಜನೆಯಡಿ ಕಳಪೆ ಕಾಮಗಾರಿ ನಡೆಯುತ್ತಿದೆ. ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕಾಗಿ ಸಾರ್ವಜನಿಕರು ವಂತಿಗೆ ನೀಡಬೇಕಾಗಿದೆ. ಸಾರ್ವಜನಿಕರು ಪಾವತಿಸುವ ವಂತಿಗೆಯನ್ನು ಕಡಿಮೆ ಮಾಡಬೇಕು, ಸಾಸಲು ಗ್ರಾಮಕ್ಕೆ ಕಚ್ಚಾ ನೀರು ಬರುತ್ತಿವೆ. ಸಾಸಲು ಗ್ರಾಮಕ್ಕೆ ಶುದ್ಧ ನೀರು ಪೂರೈಸಬೇಕು," ಎಂದು ಮುತ್ತುಗದೂರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. |
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಜಲಜೀವನ್ ಮಿಷನ್ ಯೋಜನೆಯಡಿ ನಡೆಯುವ ಕಾಮಗಾರಿಯನ್ನು ಪ್ರತಿನಿತ್ಯವೂ ಪರಿಶೀಲಿಸಬೇಕು. ಯಾವುದೇ ಸಮಸ್ಯೆಯಾಗದಂತೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸಾಸಲು ಗ್ರಾಮಕ್ಕೆ ತಾತ್ಕಾಲಿಕವಾಗಿ ಕಚ್ಚಾ ನೀರು ಬರುತ್ತಿವೆ. ಈ ಬಗ್ಗೆ ಕ್ರಮವಹಿಸಿ ಶುದ್ಧ ನೀರು ಪೂರೈಸಲಾಗುವುದು. ಸಾರ್ವಜನಿಕರು ಪಾವತಿಸುವ ವಂತಿಗೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮವಹಿಸಲಾಗುವುದು," ಎಂದು ಸಚಿವರು ಭರವಸೆ ನೀಡಿದರು. |
ಈ ಸಂದರ್ಭದಲ್ಲಿ ಮುತ್ತುಗದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರವೀಣ ಗೋಡೆಮನೆ, ಉಪಾಧ್ಯಕ್ಷೆ ಗಿರಿಜಮ್ಮ ಮಹೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಜ್ಞಾನೇಶ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ಎಸ್.ನಾಡರ್, ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗಂಗಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಟರಾಜ್, ಗುತ್ತಿಗೆದಾರ ನಾಗೇಶ್ವರ್ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. |
chitradurga ks eshwarappa drinking water rural development ಚಿತ್ರದುರ್ಗ ಕೆಎಸ್ ಈಶ್ವರಪ್ಪ ಕುಡಿಯುವ ನೀರು ಗ್ರಾಮೀಣಾಭಿವೃದ್ಧಿ |
Drinking water will be provided to 90 lakh households in the state by the year 2024 under the Jal jeevan Mission, Rural Development and Panchayat Raj Minister KS Eshwarappa said. |
ನಿಮ್ಮ ಕಣ್ಣುಗಳು ಒಣಗಿರುತ್ತವೆಯೇ? ಹಾಗಿದ್ದರೆ ಈ ಮೂರು ಆಹಾರಗಳನ್ನು ಹೆಚ್ಚು ಸೇವಿಸಿ - Varthabharati |
ಆರೋಗ್ಯಯುತ ಕಣ್ಣುಗಳು ವರದಾನವೆಂದೇ ಹೇಳಬಹುದು. ಜಗತ್ತಿನಲ್ಲಿಯೇ ಅತ್ಯಂತ ಮುಂದುವರಿದ ದೇಶವೆಂಬ ಹೆಗ್ಗಳಿಕೆ ಹೊಂದಿರುವ ಅಮೆರಿಕದಲ್ಲಿಯೇ ಸುಮಾರು ಶೇ.48ರಷ್ಟು ವಯಸ್ಕ ವ್ಯಕ್ತಿಗಳು ಶುಷ್ಕ ಕಣ್ಣುಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿಯೂ ಇದು ಸಾಮಾನ್ಯವಾಗಿದೆ. ಕಣ್ಣುಗಳು ಒಣಗಿರುವುದರಿಂದ ಅವುಗಳಲ್ಲಿ ನೋವು,ಉರಿಯ ಜೊತೆಗೆ ಓದುವುದಕ್ಕೆ ಅಥವಾ ಟಿವಿ,ಕಂಪ್ಯೂಟರ್ ಪರದೆಗಳನ್ನು ನೋಡಲು ಕಷ್ಟವಾಗುತ್ತದೆ. |
ಕಂಪ್ಯೂಟರ್ ಸ್ಕ್ರೀನ್‌ನ ಎದುರು ತುಂಬ ಸಮಯವನ್ನು ಕಳೆದ ಬಳಿಕ ಸಂಜೆಯ ವೇಳೆಗಳಲ್ಲಿ ದೂರಕ್ಕೆ ದೃಷ್ಟಿಯನ್ನು ಕೇಂದ್ರೀಕರಿಸಲು ಅಥವಾ ದೂರದ ವಸ್ತುಗಳನ್ನು ನೋಡಲು ಕಷ್ಟವಾಗುತ್ತದೆ. ಕೊರೋನ ವೈರಸ್ ಸಾಂಕ್ರಾಮಿಕದ ಈ ದಿನಗಳಲ್ಲಿ ಹೆಚ್ಚಿನ ಜನರು ಮನೆಗಳಿಂದಲೇ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಇಂತಹ ಸ್ಥಿತಿಯಲ್ಲಿ ಅವರು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮುಂದೆ ಗಂಟೆಗಟ್ಟಲೆ ಸಮಯವನ್ನು ಕಳೆಯುವುದು ಅನಿವಾರ್ಯವಾಗಿದೆ. |
ವಿದ್ಯುನ್ಮಾನ ಸಾಧನಗಳ ನಿಯಮಿತ ಬಳಕೆಯು ತಲೆನೋವುಗಳನ್ನು ಮತ್ತು ಕಣ್ಣುಗಳಿಗೆ ಆಯಾಸವನ್ನುಂಟು ಮಾಡುತ್ತದೆ. ಇದು ನಿಮಗೂ ಆಗುತ್ತಿದ್ದರೆ ನೀವು ಕಂಪ್ಯೂಟರ್ ವಿಜನ್ ಸಿಂಡ್ರೋಮ್‌ನಿಂದ ಬಳಲುತ್ತಿರಬಹುದು. ಇದರಿಂದ ಪಾರಾಗಲು ಕಣ್ಣುಗಳ ಶುಷ್ಕತೆಯನ್ನು ತಗ್ಗಿಸುವುದು ಅಗತ್ಯವಾಗುತ್ತದೆ. ಒಮೆಗಾ-3,ಪೊಟ್ಯಾಷಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಆಹಾರಗಳು ಮತ್ತು ಯಥೇಚ್ಛ ನೀರಿನ ಸೇವನೆಯಿಂದ ಕಣ್ಣುಗಳ ಶುಷ್ಕತೆಯನ್ನು ಹೋಗಲಾಡಿಸಬಹುದು. ಕಣ್ಣುಗಳು ಆರೋಗ್ಯಯುತವಾಗಿರಲು ಅವುಗಳಿಗೆ ವಿಟಾಮಿನ್‌ಗಳು ಮತ್ತು ಖನಿಜಗಳೂ ಅಗತ್ಯವಾಗಿವೆ. ಕಣ್ಣುಗಳನ್ನು ಶುಷ್ಕತೆಯಿಂದ ರಕ್ಷಿಸುವ ಮತ್ತು ಶುಷ್ಕತೆಯನ್ನು ನಿವಾರಿಸುವ ಕೆಲವು ಆಹಾರಗಳ ಕುರಿತು ಮಾಹಿತಿಗಳಿಲ್ಲಿವೆ....... |
* ಒಮೆಗಾ-3 ಫ್ಯಾಟಿ ಆಮ್ಲಗಳು |
ಒಮೆಗಾ-3 ಫ್ಯಾಟಿ ಆಮ್ಲಗಳನ್ನೊಳಗೊಂಡ ಆಹಾರಗಳನ್ನು ಸೇವಿಸುವುದರಿಂದ ಕಣ್ಣೀರಿನಲ್ಲಿಯ ತೈಲ ಭಾಗವನ್ನು ಸೃಷ್ಟಿಸುವ ಮೀಬೊಮಿಯನ್ ಗ್ಲಾಂಡ್ಸ್ ಎಂದು ಕರೆಯಲಾಗುವ ಕಣ್ಣಿನ ಗ್ರಂಥಿಗಳು ಕ್ರಿಯಾಶೀಲಗೊಳ್ಳುತ್ತವೆ. ಬಂಗುಡೆ,ತಾಜಾ ಟುನಾ ಮತ್ತು ಸಾಲ್ಮನ್ ಮೀನುಗಳು,ಅಕ್ರೋಡ್ ಮತ್ತು ಕುಂಬಳ,ಅಗಸೆ ಅಥವಾ ಕಾಮಕಸ್ತೂರಿ ಬೀಜಗಳು,ಸಸ್ಯಜನ್ಯ ತೈಲ,ಸೋಯಾಬೀನ್,ಹಸಿರು ಸೊಪ್ಪುಗಳು ಒಮೆಗಾ-3 ಫ್ಯಾಟಿ ಆಮ್ಲಗಳನ್ನು ಒಳಗೊಂಡ ಕೆಲವು ಆಹಾರಗಳಾಗಿವೆ. |
* ಪೊಟ್ಯಾಷಿಯಂ |
ಶುಷ್ಕ ಕಣ್ಣುಗಳ ನಿವಾರಣೆಗೆ ಪೊಟ್ಯಾಷಿಯಂ ತುಂಬ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಕ್ಷಿಪಟಲವನ್ನು ಆವರಿಸಿರುವ ಕಣ್ಣೀರಿನ ತೆಳುವಾದ ಪದರವಾಗಿರುವ ಟಿಯರ್ ಫಿಲ್ಮ್‌ನ ಸುಸ್ಥಿರತೆಗೆ ಅಗತ್ಯವಾಗಿರುವ ಘಟಕಗಳಲ್ಲಿ ಪೊಟ್ಯಾಷಿಯಂ ಒಂದಾಗಿದೆ. ಪೊಟ್ಯಾಷಿಯಂ ಮಟ್ಟ ಕುಸಿದರೆ ಟಿಯರ್ ಫಿಲ್ಮ್‌ಗೆ ಹಾನಿಯುಂಟಾಗುತ್ತದೆ. ಪೊಟ್ಯಾಷಿಯಂ ಈ ಪದರವನ್ನು ದಪ್ಪವಾಗಿಸುತ್ತದೆ. ಹೀಗಾಗಿ ಪೊಟ್ಯಾಷಿಯಂ ಅಧಿಕವಾಗಿರುವ ಆಹಾರಗಳನ್ನು ಸೇವಿಸಬೇಕು. |
ಬಾಳೆಹಣ್ಣು,ಸಿಹಿಗೆಣಸು,ಬಟಾಟೆ,ಮೊಸರು ಮತ್ತು ಸೋಯಾಬೀನ್ ಸಮೃದ್ಧವಾಗಿ ಪೊಟ್ಯಾಷಿಯಂ ಒಳಗೊಂಡಿರುವ ಕೆಲವು ಆಹಾರಗಳಾಗಿವೆ. |
* ವಿಟಮಿನ್ ಇ |
Subsets and Splits
No community queries yet
The top public SQL queries from the community will appear here once available.