text
stringlengths
0
61.5k
Technology22, Nov 2019, 10:30 AM
ಎಚ್ಚರ! ವಾಟ್ಸಪ್‌ನಲ್ಲಿ ಬರೋ ಈ ವಿಡಿಯೋ ಓಪನ್ ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ!
ಡಿಜಿಟಲ್ ಕ್ರಾಂತಿ ಬಹಳಷ್ಟು ಸೌಲಭ್ಯಗಳನ್ನು ಕೊಟ್ಟಿದೆ ಸರಿ. ಆದರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಅದು ದುರ್ಬಳಕೆಯಾಗೋದು ಕೂಡಾ ಅಷ್ಟೇ ಸಾಮಾನ್ಯ. ಮುಂಚೆ ಹಣ ಮನೆ ಲಾಕರ್ ನಲ್ಲಿಟ್ಟರೆ ಕಳ್ಳಕಾಕರ ಹಾವಳಿ ಇತ್ತು, ಬ್ಯಾಂಕ್ ನಲ್ಲಿಟ್ಟರೆ ಸೇಫ್ ಎಂಬ ಭಾವನೆ ಇತ್ತು. ಆದರೆ ಈಗ ಎಲ್ಲವೂ ಡಿಜಿಟಲ್, ಬ್ಯಾಂಕ್ ನಲ್ಲಿಟ್ಟ ಹಣವನ್ನು ಎಗರಿಸಲು ಕಳ್ಳರು ಕೂಡಾ ಡಿಜಿಟಲ್ ಮಾರ್ಗವನ್ನು ನೆಚ್ಚಿಕೊಂಡಿದ್ದಾರೆ.
News8, Nov 2019, 6:16 PM
ವೃದ್ಧ ಭಿಕ್ಷುಕಿಯೋರ್ವವಳ ಬಳಿ 12 ಸಾವಿರ ರೂ. ನಗದು ಹಾಗೂ ಬ್ಯಾಂಕ್ ಅಕೌಂಟ್'ನಲ್ಲಿ 2 ಲಕ್ಷ ರೂ. ಇರುವದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದ ಘಟನೆ ಪುದುಚೇರಿಯಲ್ಲಿ ನಡೆದಿದೆ.
Bengaluru-Urban30, Oct 2019, 1:24 PM
Politics18, Oct 2019, 8:22 AM
state11, Oct 2019, 5:25 PM
ಮಾಜಿ ಡಿಸಿಎಂ ಜಿ ಪರಮೇಶ್ವರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್ ಬ್ಯಾಂಕ್ ಖಾತೆಗಳನ್ನು ಐಟಿ ಬ್ಲಾಕ್ ಮಾಡಿಸಿದೆ. ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎನ್ನಲಾಗುತ್ತಿದೆ. ಐಟಿ ಅಧಿಕಾರಿಗಳು ದಾಖಲೆಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
News8, Oct 2019, 3:53 PM
ಲಕ್ಷಾಧಿಪತಿ ಭಿಕ್ಷುಕ ಆಯ್ತು, ಈಗ ಕೋಟ್ಯಾಧಿಪತಿ ಭಿಕ್ಷುಕಿ ಸರದಿ!
ಲಕ್ಷಾಧಿಪತಿ ಭಿಕ್ಷುಕನ ಬೆನ್ನಲ್ಲೇ, ಕೋಟ್ಯಾಧಿಪತಿ ಭಿಕ್ಷುಕಿ ಪತ್ತೆ| ತನ್ನ ಕಔಂಟ್‌ನಲ್ಲಿರುವ ಬ್ಯಾಲೆನ್ಸ್ ಎಷ್ಟು ಇದೆ ಎಂದೂ ಈಕೆಗೆ ಮಾಹಿತಿ ಇರಲಿಲ್ವಂತೆ| ಬ್ಯಾಂಕ್ ಬ್ಯಾಲೆನ್ಸ್ ನೋಡಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್!
BUSINESS7, Oct 2019, 8:37 PM
Karnataka Districts12, Jul 2019, 12:07 PM
ಪ್ರಧಾನಿ 2 ಲಕ್ಷ ಕೊಡ್ತಾರಂತ ನವದೆಹಲಿಗೆ ಲಕೋಟೆಗಳ ರವಾನೆ
ಓದುವ ಹೆಣ್ಣುಮಕ್ಕಳ ಬ್ಯಾಂಕ್ ಖಾತೆಗೆ ಪ್ರಧಾನಿ ಮೋದಿ 2 ಲಕ್ಷ ರೂಪಾಯಿ ಹಾಕುತ್ತಾರೆಂಬ ವದಂತಿ ಚಿಕ್ಕಮಗಳೂರಿನ ತರೀಕೆರೆ ಭಾಗದಲ್ಲಿ ಹಬ್ಬಿದೆ. 2ಲಕ್ಷ ನೀಡುತ್ತಾರೆಂಬ ಆಸೆಗೆ ಪೋಷಕರು ದಂಡು ದಂಡಾಗಿ ಅಂಚೆ ಕಚೇರಿಗೆ ಬಂದು ನವದೆಹಲಿ ವಿಳಾಸಕ್ಕೆ ಅಂಚೆ ಕಳುಹಿಸುತ್ತಿದ್ದಾರೆ.
ಕಥೆ ಬರೆದ್ರು KGF ನಿರ್ದೇಶಕ: ಮತ್ತೊಂದು ಮಾಸ್ ಮೂವಿ ರೆಡಿ | Makers of KGF announce new film Bagheera with Sriimurali see poster dpl
ಕಥೆ ಬರೆದ್ರು KGF ನಿರ್ದೇಶಕ: ಮತ್ತೊಂದು ಮಾಸ್ ಮೂವಿ ರೆಡಿ
Bangalore, First Published Dec 19, 2020, 12:13 PM IST
KGF ನಿರ್ದೇಶಕ ಮಾಸ್ ಸಿನಿಮಾ ಕಥೆ ಬರೆದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸ್ತಿರೋ ಈ ಸಿನಿಮಾ ಪೋಸ್ಟರ್ ವೈರಲ್ ಆಗಿದೆ. ನಟಿಸ್ತಿರೋದ್ಯಾರು ಗೊತ್ತಾ..?
ಕೆಜಿಎಫ್ ನಂತರ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್ ಇನ್ನೊಂದು ಮಾಸ್ ಸಿನಿಮಾ ನಿರ್ಮಿಸಲು ನಿದ್ಧವಾಗಿದೆ. ಭಗೀರಾ ಎಂಬ ಟೈಟಲ್‌ನೊಂದಿಗೆ ಸಿನಿಮಾ ಘೋಷಣೆಯಾಗಿದ್ದು, ನಟ ಶ್ರೀಮುರಳಿ ಪ್ರಮುಖ ಪಾತ್ರದಲ್ಲಿದ್ದಾರೆ. ಸ್ಟಾರ್ ನಟನ ಜನ್ಮದಿನದ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಣೆ ಮಾಡಲಾಗಿದೆ.
ಈ ಯೋಜನೆಗೆ ಕಥೆ ಬರೆದಿದ್ದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. ತಮ್ಮ ಟ್ವಿಟ್ಟರ್‌ನಲ್ಲಿ ಪ್ರಶಾಂತ್ ಹೀಗೆ ಬರೆದಿದ್ದಾರೆ: ಭಗೀರಾ ನನ್ನ ಮೊದಲ ಮಾಸ್ ಹೀರೊಗಾಗಿ ಶೌರ್ಯ ಕಥೆ. # ಶ್ರೀಮುರಳಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದಿದ್ದಾರೆ.
ಶ್ರೀಮುರಳಿ ಅವರು ಉಗ್ರಮ್ ಮತ್ತು ಮಫ್ತಿ ಸಿನಿಮಾ ಮೂಲಕ ಕನ್ನಡಿಗೆ ಮನ ಗೆದ್ದಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಪ್ರಶಾಂತ್ ನೀಲ್ ಅವರ ನಿರ್ದೇಶನದ ಉಗ್ರಾಮ್ ನಂತರ ಭಗೀರಾದಲ್ಲಿ ಶ್ರೀಮುರಳಿ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ ಕೆಜಿಎಫ್ ಡೈರೆಕ್ಟರ್.
ಭಗೀರಾ ಚಿತ್ರವನ್ನು ಸೂರಿ ನಿರ್ದೇಶಿಸಲಿದ್ದಾರೆ. ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಶ್ರೀಮುರಳಿ ಪಾತ್ರದ ಪೋಸ್ಟರ್‌ ನೋಡಿ ಅವರು ಸಿನಿಮಾದಲ್ಲಿ ಒಬ್ಬ ಪೋಲೀಸ್ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಭಾವಿಸಿದ್ದಾರೆ ಫ್ಯಾನ್ಸ್
'ಟ್ವಿಟ್ಟರ್' ನಲ್ಲಿ ಪಂತ್ ಕಾಲೆಳೆದ ರೋಹಿತ್ | Kannada Dunia | Kannada News | Karnataka News | India News
HomeLatest News'ಟ್ವಿಟ್ಟರ್' ನಲ್ಲಿ ಪಂತ್ ಕಾಲೆಳೆದ ರೋಹಿತ್
'ಟ್ವಿಟ್ಟರ್' ನಲ್ಲಿ ಪಂತ್ ಕಾಲೆಳೆದ ರೋಹಿತ್
10-01-2019 10:38AM IST / No Comments / Posted In: Latest News, Sports
ಭಾರತ – ಆಸ್ಟ್ರೇಲಿಯಾ ಟೆಸ್ಟ್ ಸರಣಿ ನಡುವೆ ಭಾರತ ವಿಕೆಟ್ ಕೀಪರ್ ರಿಷಬ್ ಪಂತ್ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ನಡುವಿನ ಸ್ಲೆಡ್ಜಿಂಗ್ ಎಲ್ಲರಿಗೂ ತಿಳಿದಿರುವ ವಿಚಾರ. ಆದರೀಗ ಇದರ ಮುಂದುವರಿದ ಭಾಗವಾಗಿ ಭಾರತ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಪಂತ್ ಕಾಲೆಳೆದಿದ್ದಾರೆ.
ಪಂದ್ಯದ ವೇಳೆ ರಿಷಬ್ ಪಂತ್ ರನ್ನು ತನ್ನ ಮಕ್ಕಳನ್ನು ನೋಡಿಕೊಳ್ಳಲು ಬರುವಂತೆ ಪೇನ್ ಹೇಳಿದ್ದಕ್ಕೆ, ಪ್ರತಿಯಾಗಿ ಪೇನ್, ಪತ್ನಿ ಹಾಗೂ ಮಕ್ಕಳನ್ನು ಭೇಟಿಯಾಗುವ ಮೂಲಕ ಕ್ರೀಡಾ ಸ್ಪೂರ್ತಿಯನ್ನು ಮೆರೆದಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿಯೂ ಭಾರಿ ಸದ್ದಾಗಿತ್ತು. ಆದರೀಗ, ರೋಹಿತ್ ಅವರು ಆಸ್ಟ್ರೇಲಿಯಾ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದು, ಪಂತ್ ಭಾರತಕ್ಕೆ ವಾಪಾಸಾಗಿದ್ದಾರೆ. ಆದ್ದರಿಂದ ರೋಹಿತ್, ತನ್ನ ಮಗುವನ್ನು ನೋಡಿಕೊಳ್ಳುವಂತೆ ಕಾಲೆಳೆದಿದ್ದಾರೆ.
ರಿಷಬ್ ಪಂತ್ ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಹಾಕಿ ಶುಭೋದಯ ಎಂದಿದ್ದರು. ಇದಕ್ಕೆ ಕಾಮೆಂಟ್ ಮಾಡಿರುವ ರೋಹಿತ್ ಶರ್ಮಾ, ಮಾರ್ನಿಂಗ್ ಬಡ್ಡಿ, ನೀವು ಅತ್ಯುತ್ತಮ ಬೇಬಿ ಸಿಟ್ಟರ್ ಎಂದು ಗೊತ್ತಿದೆ. ಆದ್ದರಿಂದ ರಿತಿಕಾ ಜತೆ ತಮ್ಮ ಮಗುವನ್ನು ಹಾರೈಕೆ ಮಾಡುವಂತೆ ಕಾಲೆದಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೆ ರೋಹಿತ್ ಪತ್ನಿ ರಿತಿಕಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿರುವುದರಿಂದ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದೇ, ತಂಡದೊಂದಿಗೆ ಕೂಡಿಕೊಂಡಿದ್ದಾರೆ.
ಅಂಧೇರಿ: ಕ್ರೇನ್‌ ಕುಸಿದು ಮಹಿಳೆ ಸಾವು, ಇಬ್ಬರಿಗೆ ಗಾಯ | Udayavani – ಉದಯವಾಣಿ
Saturday, 05 Dec 2020 | UPDATED: 05:08 AM IST
Team Udayavani, Oct 31, 2020, 4:55 PM IST
ಮುಂಬಯಿ: ಉಪನಗರ ಅಂಧೇರಿಯಲ್ಲಿ ಕ್ರೇನ್‌ವೊಂದು ಮೆಟ್ರೋ ರೈಲು ಕಂಬಕ್ಕೆ ಆಕಸ್ಮಿಕವಾಗಿ ಢಿಕ್ಕಿ ಹೊಡೆದು ಅದರ ಒಂದು ಭಾಗವು ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.
ವೆಸ್ಟರ್ನ್ ಎಕ್ಸ್‌ಪ್ರೆಸ್‌ ಹೆದ್ದಾರಿಯ ಗುಂಡವಲಿ ಬಸ್‌ ನಿಲ್ದಾಣದ ಬಳಿ ಶನಿವಾರ ಮುಂಜಾನೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ರೇನ್‌ ಜೋಗೇಶ್ವರಿಯಿಂದ ಬಾಂದ್ರಾ ಕಡೆಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನವು ಮೆಟ್ರೋ ರೈಲು ಕಂಬಕ್ಕೆ ಢಿಕ್ಕಿ ಹೊಡೆದಿದೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ:ಬಿಹಾರ:ಕೋವಿಡ್ ಲಸಿಕೆ ಉಚಿತ ಭರವಸೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಆಯೋಗ
ಕ್ರೇನ್‌ನ ಕೆಲ ಭಾಗವು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ಅವರ ಸಾವು ಸಂಭವಿಸಿದೆ. ಇತರ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ಅನಂತರ ಕ್ರೇನ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಕುಳ ವಂಚಕ ಸಂಜಯ್ ಚಂದ್ರ ಬಂಧನ – EESANJE / ಈ ಸಂಜೆ
ರಿಯಲ್ ಎಸ್ಟೇಟ್ ಕುಳ ವಂಚಕ ಸಂಜಯ್ ಚಂದ್ರ ಬಂಧನ
April 1, 2017 Sri Raghav Arrested, Delhi Police, Sanjay Chandra, Unitech
ನವದೆಹಲಿ, ಏ.1-ಫ್ಲಾಟ್‍ಗಳನ್ನು ನೀಡುವುದಾಗಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಪಡೆದ ವಂಚಸಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಸಂಸ್ಥೆ ಯೂನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ ಮತ್ತು ಆತನ ಸಹೋದರ ಅಜಯ್ ಚಂದ್ರನನ್ನು ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕದ ಅಧಿಕಾರಿಗಳು ಬಂಧಿಸಿದರು.
ಗ್ರೇಟರ್ ನೊಯ್ಡಾ ಯೋಜನೆಯಲ್ಲಿ ಗ್ರಾಹಕರಿಗೆ ಪ್ಲಾಟ್‍ಗಳನ್ನು ನೀಡುವುದಾಗಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಸಂಜಯ್, ಒಪ್ಪಂದ ಉಲ್ಲಂಘಿಸಿ ಮನೆಗಳನ್ನು ನೀಡದೇ ವಂಚಿಸಿದ್ದರು ಈ ಸಂಬಂಧ ಅನೇಕ ಮಂದಿ ನೀಡಿದ ದೂರಿನ ಮೇರೆಗೆ ಸಂಜಯ್ ಮತ್ತು ಅಜಯ್ ಅವರನ್ನು ಬಂಧಿಸಲಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜನವರಿಯಲ್ಲಿ ಸಂಜಯ್, ಅಜಯ್, ಯೂನಿಟೆಕ್ ಲಿಮಿಟೆಡ್‍ನ ಅಧ್ಯಕ್ಷ ರಮೇಶ್ ಚಂದ್ರ ಮತ್ತು ನಿರ್ದೇಶಕ ಮಿನೋಟಿ ಬಾಹ್ರಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು.
ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ? | Top 5 Most Famous Tourist Places In India Timings, Entry fee - Kannada Nativeplanet
»ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?
Published: Saturday, August 18, 2018, 11:30 [IST]
ನಮ್ಮ ಭಾರತ ದೇಶವೆಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಅದರಲ್ಲೂ ವಿದೇಶಿಗರಿಗಂತೂ ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳೆಂದರೆ ಇನ್ನು ಇಷ್ಟ. ಕೇವಲ ಇಲ್ಲಿನ ಪದ್ಧತಿಗಳೇ ಅಲ್ಲದೇ ವಿದೇಶದ ಸೊಬಗಿಗೆ ಸೆಡ್ಡು ಹೊಡೆಯುವಂತಹ ಅನೇಕ ಸುಂದರವಾದ ತಾಣಗಳು ಹಾಗು ಅದ್ಭುತಗಳು ನಮ್ಮ ದೇಶದಲ್ಲಿದೆ. ಅದ್ದರಿಂದಲೇ ವಿದೇಶಿಗರು ತಮ್ಮ ಜೀವನದಲ್ಲಿ ಒಮ್ಮೆಯಾದರು ಭಾರತದ ಅದ್ಭುತಗಳನ್ನು ಕಾಣಬೇಕು ಎಂದು ಬಯಸುತ್ತಾರೆ. ಬೃಹತ್ ಕಟ್ಟಡಗಳು, ನಿಗೂಢತೆಯನ್ನು ಹೊಂದಿರುವ ದೇವಾಲಯಗಳು, ಕಣ್ಮನ ಸೆಳೆಯುವ ಗಿರಿಶಿಖರಗಳು, ಮನೋಹರವಾದ ಜಲಪಾತಗಳು ಆಹಾ..ಒಂದಾ ಎರಡಾ..?
ನಮ್ಮ ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವ ತಾಣದ ಬಗ್ಗೆ ನಿಮಗೇನಾದರು ಊಹೆ ಇದೆಯೇ? ಹಾಗಾದರೆ ಬನ್ನಿ ಆ ತಾಣಗಳ ಬಗ್ಗೆ ಸಂಕ್ಷೀಪ್ತವಾದ ಮಾಹಿತಿಯನ್ನು ಲೇಖನದ ಮೂಲಕ ತಿಳಿದುಕೊಳ್ಳೊಣ.
ತಾಜ್ ಮಹಲ್ ಪ್ರೀತಿಯ ಪ್ರತೀಕವೆಂಬುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಮೊಘಲ್ ವಾಸ್ತುಶೈಲಿಯ ಈ ಅದ್ಭುತವಾದ ಕಟ್ಟಡವು ಸಂಪೂರ್ಣವಾಗಿ ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಇದು ಭಾರತದ ಅತ್ಯಂತ ಪ್ರಸಿದ್ಧವಾದ ತಾಣ ಎಂದು ಗುರುತಿಸಲ್ಪಟ್ಟಿದೆ. ಇದರ ಭವ್ಯತೆ ಮತ್ತು ಸೌಂದರ್ಯವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.
ಷಹ ಜಹಾನ್ ತನ್ನ ಪತ್ನಿ ನೂರ್ ಜಹಾನ್ ಅವರ ಮೇಲಿನ ಪ್ರೀತಿಗೆ ಪ್ರತೀಕವಾಗಿ ಈ ಭವ್ಯವಾದ ಕಟ್ಟಡವನ್ನು ನಿರ್ಮಾಣ ಮಾಡಿದನು.
"ಗೋಲ್ಡನ್ ಟ್ರಯಾಂಗಲ್" ನಗರಗಳಲ್ಲಿ ಒಂದಾಗಿದ್ದು, ಆಗ್ರಾದ ಬೀದಿಗಳನ್ನು ಅನ್ವೇಷಿಸಲು ನಿಮಗೆ ಅವಕಾಶವಿದೆ. ಈ ಅದ್ಭುತವನ್ನು ಕಾಣಲು ದಿನಕ್ಕೆ ಸಾವಿರಾರು ಮಂದಿ ಜನರು ಭೇಟಿ ನೀಡುತ್ತಿರುತ್ತಾರೆ. ಭಾರತ‌‌ ದೇಶದಲ್ಲಿ ‌ಹೆಚ್ಚಾಗಿ ಭೇಟಿ ನೀಡುವ ತಾಣಗಳಲ್ಲಿ‌ ಇದು ಕೂಡ ಒಂದು.
ಪ್ರವೇಶ ಶುಲ್ಕ: ಭಾರತೀಯ - ರೂ 40, ವಿದೇಶಿ - ರೂ 1000
ಸಮಯ: 6:30 ರಿಂದ 9:30 ರದವರೆಗೆ ಶುಕ್ರವಾರದಂದು ಮುಚ್ಚಲಾಗಿರುತ್ತದೆ.
2.ಕುತುಬ್ ಮಿನಾರ್
ಭಾರತೀಯ ಇತಿಹಾಸದಲ್ಲಿ ಅತ್ಯಂತ ಎತ್ತರವಾದ ಕಟ್ಟಡಗಳಲ್ಲಿ ಒಂದಾದ ಕುತುಬ್ ಮಿನಾರ್. ಅದರ ಕೆಂಪು ಮರಳುಗಲ್ಲು ಮತ್ತು ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇರಾನ್ ವಾಸ್ತುಶೈಲಿಯೊಂದಿಗೆ‌ ಕಂಗೊಳಿಸುವ ಈ ಕಟ್ಟಡವು ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.
ಹತ್ತೊಂಬತ್ತನೆಯ ಶತಮಾನದಲ್ಲಿ ಕುತುಬ್ ಉದ್-ದಿನ್-ಐಬಾಕ್ ನಿರ್ಮಿಸಿದ ಈ ಗೋಪುರವು ದೆಹಲಿಯಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಭಾರತದಲ್ಲಿ ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳಲ್ಲಿ ಇದು ಕೂಡ ಒಂದು.
ಪ್ರವೇಶ ಶುಲ್ಕ: ಭಾರತೀಯರಿಗೆ - ರೂ 10 ಮತ್ತು ವಿದೇಶಿಯರು- ರೂ 250
ಸಮಯ: 7 ರಿಂದ 5 ಗಂಟೆಗೆ
3.ಅಮೀರ್ ಕೋಟೆ
PC: TheLastCur8r
ಚೆಲ್ ಕಾ ಟೀಲಾ ಎಂಬ ಬೆಟ್ಟದ ಮೇಲೆ ಅದ್ಭುತವಾದ ಅಮೀರ್ ಕೋಟೆ ಇದೆ. ಅಮೀರ್ ಕೋಟೆಯು ಅದರ ಆಕರ್ಷಣೀಯ ವಾಸ್ತುಶೈಲಿಗೆ, ದಟ್ಟವಾದ ಕೆಂಪು ಮರಳುಗಲ್ಲು ಮತ್ತು ಮಾರ್ಬಲ್ನಲ್ಲಿ ನಿರ್ಮಾಣ ಮಾಡಲಾಗಿದೆ.
ದೈತ್ಯಾಕಾರದ ಕೋಟೆಯು ದಿವಾನ್-ಇ-ಖಯಾಸ್, ದಿವಾನ್-ಇ-ಆಮ್ ಮತ್ತು ಕೋಟಿಯಲ್ಲಿ ಸುರಂಗವು ಕೂಡ ಇದೆ. ಈ ಸುಂದರವಾದ ತಾಣಕ್ಕೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸೂರಜ್ ಪೋಲ್ (ಸೂರ್ಯ ಗೇಟ್) ಹಾಗು ಆನೆಯ ಸವಾರಿ ಕೂಡ ಆನಂದಿಸಬಹುದು.
.ಪ್ರವೇಶ ಶುಲ್ಕ: ಭಾರತೀಯರು- INR 25 ಮತ್ತು ವಿದೇಶಿಯರು- INR 200
ಸಮಯ: 9:30 ರಿಂದ 4:30 ಕ್ಕೆ
4.ಅಜಂತಾ ಮತ್ತು ಎಲ್ಲೋರಾ
ಮಹಾರಾಷ್ಟ್ರದ ಅಜಂತಾ ಮತ್ತು ಎಲ್ಲೋರಾ ಆಕರ್ಷಣೀಯ ಗುಹೆಗಳು. ತನ್ನ ಸೌಂದರ್ಯದ ಮೂರ್ತಿಗಳು ಹಾಗು ಅವರ ಅಧಿಕೃತ ಕಲ್ಲು-ಕಲ್ಲಿನ ಶಿಲ್ಪಗಳು ಎಂಥವರನ್ನು ಮಂತ್ರಮುಗ್ದರನ್ನಾಗಿಸದೇ ಬಿಡದು. ಪುರಾತನ ಭಾರತೀಯ ಕಲೆಯಿಂದಾಗಿ ಈ ಸುಂದರ ಗುಹೆಗಳು UNESCO ವಿಶ್ವ ಪರಂಪರೆ ತಾಣವಾಗಿ ಮಾರ್ಪಟ್ಟಿವೆ.
ಈ ಗುಹೆಯಲ್ಲಿರುವ ಹಸ್ತಕೃತಿಗಳು ಬುದ್ಧನ ಹಿಂದಿನ ಜೀವನ ಮತ್ತು ಮರುಹುಟ್ಟನ್ನು ಚಿತ್ರಿಸುತ್ತವೆ. 1819 ರಲ್ಲಿ ಕಂಡುಹಿಡಿದ ಈ ಗುಹೆಗಳು ಪ್ರವಾಸಿಗರಿಗೆ ಭೇಟಿ ನೀಡುವ ಸ್ಥಳಗಳಾಗಿವೆ. ಭಾರತದಲ್ಲಿ ಪ್ರವಾಸಿಗರು ಅತಿ ಹೆಚ್ಚಾಗಿ ಭೇಟಿ ನೀಡುವ ತಾಣಗಳಲ್ಲಿ ಇದು ಕೂಡ ಒಂದು.
ಪ್ರವೇಶ ಶುಲ್ಕ: ಇಂಡಿಯನ್ಸ್- ರೂ 30 ಮತ್ತು ವಿದೇಶಿಯರು- ರೂ 500
ಸಮಯ: 8 ರಿಂದ 5 ಗಂಟೆಗೆ
5.ವಿರೂಪಾಕ್ಷ ದೇವಸ್ಥಾನ
PC: Jayalakshmi Iyangar
ಕರ್ನಾಟಕದಲ್ಲಿ ನೆಲೆಗೊಂಡಿರುವ ಸುಂದರವಾದ ಹಂಪಿ ನಗರವು ಅನೇಕ ಅದ್ಭುತಗಳ‌‌ ನೆಲೆಯಾಗಿದೆ. ಭವ್ಯವಾದ ದೇವಾಲಯಗಳನ್ನು ಹೊಂದಿದೆ.
ಹಂಪಿ ಪ್ರದೇಶದಲ್ಲಿ ನೆಲೆಗೊಂಡಿರುವ ವಿರೂಪಾಕ್ಷ ದೇವಸ್ಥಾನವು ಅತ್ಯಂತ ವಿಸ್ಮಯಕಾರಿ ತಾಣವಾಗಿದೆ. ಕಲ್ಲುಗಳ ಮೇಲೆ ಕೆತ್ತಿರುವ ಶಿಲ್ಪಗಳು ಈ ಅದ್ಭುತ ದೇವಸ್ಥಾನದ ಪ್ರಮುಖ ಲಕ್ಷಣವಾಗಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ಈ ದೇವಾಲಯವನ್ನು ಹಂಪಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ.
ವಿರೂಪಾಕ್ಷ ಅತ್ಯಂತ ಭವ್ಯವಾದ ದೇವಾಲಯಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ಭಾರತದಲ್ಲಿನ ಪ್ರವಾಸಿಗರು ಅತಿ ಹೆಚ್ಚಾಗಿ ಭೇಟಿ ನೀಡುವ ತಾಣಗಳಲ್ಲಿ ಒಂದಾಗಿದೆ.
ಸಮಯ: 6 ರಿಂದ 6 ಗಂಟೆಗೆ
Read more about: ದೇವಾಲಯ ಗುಹೆ ಸ್ಮಾರಕ ಮಹಾರಾಷ್ಟ್ರ ಪ್ರವಾಸ ಭಾರತ temple cave monument maharashtra tour india
ಕಾಂಗರೂ ದಾಳಿಗೆ ಟೀಮ್ ಇಂಡಿಯಾ ತತ್ತರ ಕುಸಿದ ಭಾರತಕ್ಕೆ ಪೂಜಾರ ಆಸರೆ, ಭರ್ಜರಿ ಶತಕ | ಸಂಜೆವಾಣಿಗೆ ಸ್ವಾಗತ
ಕಾಂಗರೂ ದಾಳಿಗೆ ಟೀಮ್ ಇಂಡಿಯಾ ತತ್ತರ ಕುಸಿದ ಭಾರತಕ್ಕೆ ಪೂಜಾರ ಆಸರೆ, ಭರ್ಜರಿ ಶತಕ
ಅಡಿಲೇಡ್, ಡಿ ೬- ಕಾಂಗರೂಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದ ಆಟಗಾರ ಚೇತೇಶ್ವರ್ ಪೂಜಾರ ಆಸರೆಯಾಗಿದ್ದಾರೆ. ಒತ್ತಡ ನಡುವೆಯೂ ಆಸೀಸ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಪೂಜಾರ ಆಕರ್ಷಕ ಶತಕ ಸಿಡಿಸಿದರು.
ಆಡಿಲೇಡ್‌ನ ಓವಲ್ ಮೈದಾನದಲ್ಲಿ ಇಂದಿನಿಂದ ಆರಂಭವಾದ ಗವಸ್ಕರ್ ಬಾರ್ಡರ್ ಟೆಸ್ಟ್ ಸರಣಿ ಮೊದಲ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ ಭಾರತ ೨೫೦ ರನ್‌ಗಳಿಗೆ ೯ ವಿಕೆಟ್ ಕಳೆದಕೊಂಡು ಸಾಧಾರಣ ಮೊತ್ತ ಕಲೆಹಾಕಿತ್ತು.
ಚಹಾ ವಿರಾಮದ ವೇಳೆ ೬ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಆ ವೇಳೆ ಚೇತೇಶ್ವರ್ ಪೂಜಾರ್ ಚೇತರಿಸಿಕೊಂಡು ಬಾರಿಸಿದ ಶತಕದ ನೆರವಿನಿಂದ ೯ ವಿಕೆಟ್ ನಷ್ಟಕ್ಕೆ ಭಾರತ ೨೫೦ ರನ್ ಕಲೆ ಹಾಕುವಂತೆ ಮಾಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂಇಂಡಿಯಾಕ್ಕೆ ಆರಂಭಿಕ ಬ್ಯಾಟ್ಸಾಮ್ಯಾನ್‌ಗಳ ಕಳಪೆ ಆಟ ಪ್ರದರ್ಶನದಿಂದಾಗಿ ಆರಂಭದಲ್ಲಿಯೇ ಚಹಾದ ಹೊತ್ತಿಗೆ ಕೇವಲ ೧೪೩ ಮೊತ್ತಕ್ಕೆ ೬ ವಿಕೆಟ್ ಕಳೆದುಕೊಂಡು ತೀವ್ರ ಒತ್ತಡಕ್ಕೆ ಸಿಲುಕಿತ್ತು. ಈ ಬಳಿಕ ತಂಡಕ್ಕೆ ಆಸರೆಯಾದ ಚೇತೇಶ್ವರ್ ಪೂಜಾರ ನಿಧಾನಗತಿ ಆಟದಿಂದ ತಂಡ ೨೫೦ ರನ್ ಗಳಿಸುವಂತೆ ಮಾಡಿದರು.
ಉತ್ತಮ ಆರಂಭ ಸಿಗದೇ ಮತ್ತದೆ ಕಳಪೆ ಬ್ಯಾಟಿಂಗ್ ಮುಂದುವರಿಸಿದ ಕೆ. ಎಲ್ ರಾಹುಲ್ ಕೇವಲ ೨ ರನ್‌ಗೆ ಔಟ್ ಆದರೆ, ಮುರಳಿ ವಿಜಯ್ ಕೂಡ ೧೧ ರನ್‌ಗೆ ಪೆವಿಲಿಯನ್ ಹಾದಿ ಹಿಡಿದರು. ಟೀಂ ಇಂಡಿಯಾದ ಆಪತ್ಬಾಂಧವ ನಾಯಕ ವಿರಾಟ್ ಕೊಹ್ಲಿ ಕೂಡ ತಂಡಕ್ಕೆ ಆಸರೆಯಾಗದೆ ೩ ರನ್ ಗಳಿಸಿ ಔಟ್ ಆಗಿ ಪೆವಿಲಿಯನ್ ಹೆಜ್ಜೆ ಹಾಕಿದರು. ಇನ್ನಿಂಗ್ಸ್ ಕಟ್ಟಲು ಹೊರಟ ಅಜಿಂಕ್ಯ ರಹಾನೆ ೧೩ ರನ್‌ಗೆ ನಿರ್ಗಮಿಸಿದರು. ಇದರಿಂದಾಗಿ ೮೬ ರನ್‌ಗೆ ತನ್ನೆಲ್ಲಾ ಪ್ರಮುಖ ವಿಕೆಟ್ ಕಳೆದುಕೊಂಡಿತು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಕ್ರೀಸ್ ಕಚ್ಚಿ ಆಡುತ್ತಿದ್ದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ರೋಹಿತ್ ಶರ್ಮಾ ಜೊತೆಗೂಡಿ ರನ್ ಕಲೆಹಾಕಲು ಹೊರಟರು. ಆದರೆ ರೋಹಿತ್ ಅವರು ಲಿನ್ ಅವರ ಬೌಲಿಂಗ್ ದಾಳಿಗೆ ೩೭ ರನ್ ಗಳಿಸಿದಾಗ ವಿಕೆಟ್ ಒಪ್ಪಿಸಿದರು. ಇತ್ತ ರಿಷಭ್ ಪಂತ್ ಕೂಡ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗಿ ೨೫ ರನ್‌ಗೆ ಔಟಾದರು. ಚಹಾ ವಿರಾಮಕ್ಕೂ ಮುಂಚೆ ಚೇತೇಶ್ವರ್ ಪೂಜಾರ ನಿಧಾನಗತಿಯಲ್ಲಿ ಆಡುತ್ತಿದ್ದು, ಆರ್. ಅಶ್ವಿನ್ ಇವರಿಗೆ ಸಾಥ್ ನೀಡುತ್ತಿದ್ದಾರೆ. ಆಸೀಸ್ ಪರ ಜೋಷ್ ಹಾಗೂ ಲಿನ್ ತಲಾ ೨ ವಿಕೆಟ್ ಕಬಳಿಸಿದರು. ಆ ನಂತರ ನಡೆದ ಆಟದಲ್ಲಿ ಆರ್. ಅಶ್ವಿನ್ ೨೫ ರನ್‌ಗೆ ಸುಸ್ತಾದರೆ, ಇಶಾಂತ್ ಶರ್ಮಾ ೪ ರನ್‌ಗೆ ನಿರ್ಗಮಿಸಿದರು. ಇನ್ನು ಪೂಜಾರ ಕೂಡ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ೧೬ನೇ ಶತಕ ಗಳಿಸಿ ಔಟ್ ಆಗಿದ್ದಾರೆ.
ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಖ್ವಾಜಾ
ಒಂದೇ ಕೈನಲ್ಲಿ ಕ್ಯಾಚ್ ಹಿಡಿಯುವ ಮೂಲಕ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ದಾಖಲೆಗೆ ಉಸ್ಮಾನ್ ಖ್ವಾಜಾ ಕಡಿವಾಣ ಹಾಕಿದ್ದಾರೆ.
ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ೧೧ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆತವನ್ನು ಕೆಣಕಲು ಹೋದ ಕೊಹ್ಲಿ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಖ್ವಾಜಾ ಒಂದೇ ಕೈಯಲ್ಲಿ ಪಡೆದ ಅದ್ಭುತ ಕ್ಯಾಚ್‌ಗೆ ಔಟಾದರು. ಆಗ ಭಾರತ ೧೯ ರನ್‌ಗೆ ೩ನೇ ವಿಕೆಟ್ ಕಳೆದುಕೊಂಡಿತು. ೧೬ ಎಸೆತಗಳಲ್ಲಿ ಕೇವಲ ೩ ರನ್ ಗಳಿಸಿ ಔಟಾದ ಕೊಹ್ಲಿ ಒಂದೂವರೆ ವರ್ಷದ ಬಳಿಕ ಕಮಿನ್ಸ್‌ಗೆ ಮತ್ತೊಮ್ಮೆ ಔಟಾದರು. ಈ ಹಿಂದೆ ಆಸ್ಟೇಲಿಯ ತಂಡ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ರಾಂಚಿ ಟೆಸ್ಟ್‌ನಲ್ಲಿ ಕೊಹ್ಲಿ ಅವರು ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದರು.
ಪೋಟೋ ಕ್ಯಾಪ್ಶನ್
ಶತಕ ಬಾರಿಸಿ ಟೀಂ ಇಂಡಿಯಾ ತಂಡಕ್ಕೆ ಆಸರೆಯಾದ ಚೇತೇಶ್ವರ್ ಪೂಜಾರಗೆ ಮಹ್ಮದ್ ಶಮಿ ಅಭಿನಂದಿಸುತ್ತಿರುವುದು.
ಒಂದೇ ಕೈನಲ್ಲಿ ಅದ್ಬುತ ಕ್ಯಾಚ್ ಹಿಡಿದು ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದ ಆಸೀಸ್ ಆಟಗಾರ ಉಸ್ಮಾನ್ ಖ್ವಾಜಾ
ಟಿವಿಎಸ್ ಮೋಟಾರ್ ಕಂಪೆನಿ - ವಿಕಿಪೀಡಿಯ
ಟಿವಿಎಸ್ ಮೋಟಾರ್ ಕಂಪೆನಿ
ಟಿವಿಎಸ್ ಮೋಟಾರ್ ಕಂಪನಿ ನಿಯಮಿತ
ಸಾರ್ವಜನಿಕ ನಿಯಮಿತ ಸಂಸ್ಥೆ
ತಿರುಕ್ಕುರುಂಗುಡಿ ವೆಂಗಾರಮ್ ಸುಂದರಂ ಅಯ್ಯಂಗಾರ್
೪ ದ್ವಿಚಕ್ರ ವಾಹನ ತಯಾರಿಕಾ ಘಟಕ ಮತ್ತು ೧ ತ್ರಿಚಕ್ರ ವಾಹನ ತಯಾರಿಕಾ ಘಟಕ
ವೇಣು ಶ್ರೀನಿವಾಸನ್(ಗೌರವಾಧ್ಯಕ್ಷ)