text
stringlengths
0
61.5k
ಪಿ.ಸುಶೀಲ ಅವರು ೧೯೫೧ ರಲ್ಲಿ ಮದ್ರಾಸಿನಲ್ಲಿ ಮಾತ್ರವಿದ್ದ ಸಂಗೀತ ವಿದ್ವಾನ್ ಪರೀಕ್ಷೆಗೆ ಅಧ್ಯಯನದಲ್ಲಿರುವಾಗಲೇ ಆಗಾಗ ಆಕಾಶವಾಣಿಗೆ ಕಾರ್ಯಕ್ರಮ ನೀಡುತ್ತಿದ್ದರು. ೧೯೫೧ರ ವರ್ಷದಲ್ಲಿ ಚಲನಚಿತ್ರರಂಗದಲ್ಲಿ ಪ್ರಸಿದ್ಧರಾದ ಪೆಂಡ್ಯಾಲ ನಾಗೇಶ್ವರರಾಯರು ಹೊಸ ಗಾಯಕಿಯರ ತಲಾಷೆಯಲ್ಲಿದ್ದು ಪಿ.ಸುಶೀಲ ಅವರನ್ನು ಅಂದಿನ ಪ್ರಖ್ಯಾತ ಗಾಯಕ ಎ. ರಾಜಾ ಅವರೊಡನೆ 'ಪೆತ್ರ ತಾಯ್' ಚಿತ್ರಕ್ಕೆ ಯುಗಳ ಗೀತೆ ಹಾಡಲು ಆಯ್ಕೆ ಮಾಡಿದರು. ಅಂದಿನಿಂದ ಇತ್ತೀಚಿನ ವರ್ಷಗಳವರೆಗೆ ಸುಶೀಲ ಅವರು ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದ ಸಾಧನೆ ಅಮೋಘವಾದದ್ದು. ಪಿ. ಸುಶೀಲ ಅವರು ಚಿತ್ರರಂಗದ ಗಾಯಕಿಯಾಗಿ ಬಂದಾಗ ಪಿ. ಲೀಲಾ, ಜಿಕ್ಕಿ, ಎಂ. ಎಸ್. ರಾಜೇಶ್ವರಿ, ಜಮುನಾ ರಾಣಿ, ಎಂ. ಎಲ್. ವಸಂತಕುಮಾರಿ, ಡಿ. ಕೆ. ಪಟ್ಟಮ್ಮಾಳ್, ಟಿ. ವಿ. ರತ್ನಂ, ರಾಧಾ ಜಯಲಕ್ಷ್ಮಿ, ಸೋಲಮಂಗಲಂ ರಾಜಲಕ್ಷ್ಮಿ, ಬಾಲಸರಸ್ವತಿ ದೇವಿ, ಎ. ಪಿ. ಕೋಮಲ, ಕೆ. ರಾಣಿ ಅಂತಹ ಬಹಳಷ್ಟು ಗಾಯಕಿಯರು ಚಿತ್ರರಂಗದಲ್ಲಿದ್ದರು. ಇಂತಹ ಮಹಾನ್ ಗಾಯಕಿಯರ ಮಧ್ಯೆ ಸಹಾ ತಮ್ಮ ಗಾಯನದ ಮೂಲಕ ವಿಶೇಷ ಛಾಪನ್ನು ಮೂಡಿಸಿ ಆರು ದಶಕಗಳ ಕಾಲ ದಕ್ಷಿಣ ಭಾರತದ ಚಲನಚಿತ್ರ ಸಂಗೀತ ಲೋಕದಲ್ಲಿ ಸಾಮ್ರಾಜ್ಞಿಯಾಗಿ ಕಂಗೊಳಿಸಿದರು.
ಪಿ. ಸುಶೀಲ ಅವರು ಕನ್ನಡದಲ್ಲಿ ಮೊದಲು ಹಾಡಿದ ಚಿತ್ರ ೧೯೫೨ರಲ್ಲಿ ತೆರೆ ಕಂಡ "ಮಾಡಿದ್ದುಣ್ಣೋ ಮಾರಾಯ", ಈ ಚಿತ್ರದ ಹಾಡುಗಳು ಪ್ರಸಿದ್ಧವಾಗಲಿಲ್ಲವಾದರೂ ನಂತರದಲ್ಲಿ ಬಂದ "ರತ್ನಗಿರಿ ರಹಸ್ಯ"ದ "ಅಮರಾ ಮಧುರಾ ಪ್ರೇಮ" ಗೀತೆ ಸಾಕಷ್ಟು ಜನಪ್ರಿಯಗೊಂಡಿತು,
ಎಂ.ಎಸ್.ವಿಶ್ವನಾಥ್ ಅವರಿಂದ ಮೊದಲ್ಗೊಂಡು ಎ.ಆರ್.ರೆಹಮಾನ್ ರವರೆಗೆ ಎಲ್ಲಾ ತಲೆಮಾರಿನ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡಿದ ಅನುಭವ ಈ ಮೇರು ಗಾಯಕಿಯದಾಗಿದೆ
ಪ್ರಸಿದ್ಧ ಗೀತೆಗಳುಸಂಪಾದಿಸಿ
ಅಷ್ಟೊಂದು ಭಾಷೆಗಳಲ್ಲಿ ಹಾಡಿದರೂ ಅವರು ಆಯಾ ಭಾಷೆಗಳಿಗೆ ಬೇಕಾದ ಭಾವ, ಸುಸ್ಪಷ್ಟ ಉಚ್ಛಾರ ಮತ್ತು ಜೇನಿನಂತ ಸವಿ ಇಂಪು, ಅನನ್ಯ. ಇದಕ್ಕೆ ಉದಾಹರಣೆಯಾಗಿ 'ನಿನ್ನ ಕಣ್ಣ ಕನ್ನಡಿಯಲ್ಲಿ ಏನೋ ಏನೋ ಭಾವ', 'ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ', 'ಹೂವೂ ಚೆಲುವೆಲ್ಲಾ ನಂದೆಂದಿತು', 'ದಯವಿಲ್ಲದ ಧರ್ಮವು ಯಾವುದಯ್ಯ', 'ವಿರಹಾ ನೋವು ನೂರು ತರಹ', 'ಬಂದೇ ಬರತಾವ ಕಾಲ' ಅಂತಹ ಅನೇಕ ಉತ್ಕೃಷ್ಟ ಗೀತೆಗಳು ಉದಾಹರಣೆಗಳಾಗಿವೆ.
ಈ ಹಾಡುಗಳಷ್ಟೇ ಅಲ್ಲದೆ ಸುಶೀಲ ಅವರು ಕನ್ನಡದಲ್ಲಿ ಹಾಡಿರುವ ಹಾಡುಗಳನ್ನು ನೆನೆಯುತ್ತಾ ಹೋದಂತೆ ಒಂದಕ್ಕಿಂತ ಒಂದು ಸೊಗಸಾದ ಹಾಡುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 'ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ', 'ಮೆಲ್ಲುಸಿರೇ ಸವಿ ಗಾನ', 'ಜಲಲ ಜಲಲ ಜಲ ಧಾರೆ', 'ನುಡಿಮನ ಶಿವಗುಣ ಸಂಕೀರ್ತನ', 'ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು', 'ಸುರಸುಂದರಾಂಗ ಕೃಷ್ಣ ನೀ ಬಾರೋ', 'ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ', 'ಇದೇನ ಸಭ್ಯತೆ ಇದೇನ ಸಂಸ್ಕೃತಿ', 'ಅಂದದೂರು ಬೆಂಗಳೂರು ಆನಂದದ ತವರೂರು', 'ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ', 'ನೀರಿನಲ್ಲಿ ಅಲೆಯ ಉಂಗುರ', 'ನನ್ನವಳು ನನ್ನೆದೆಯ ಹೊನ್ನಾಡನಾಳುವಳು', 'ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ', 'ಹಕ್ಕಿ ಹಾಡು ಚಿಲಿಪಿಲಿ ರಾಗ', 'ದೋಣಿಯೊಳಗೆ ನೀನು ಕರೆಯ ಮೇಲೆ ನಾನು', 'ಉಂಡಾಡಬಹುದು ಓಡಿ ಬಾ ಎನ್ನಪ್ಪ', 'ಫಲಿಸಿತು ಒಲವಿನ ಪೂಜಾ ಫಲ', 'ಒಲವೆ ಜೀವನ ಸಾಕ್ಷಾತ್ಕಾರ', 'ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ', 'ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ', 'ವೆಂಕಟಾಚಲವಾಸ ಹೇ ಶ್ರೀನಿವಾಸ', 'ತಿರುಪತಿ ಗಿರಿವಾಸ ಶ್ರೀವೆಂಕಟೇಶ', 'ನನ್ನ ಪುಟ್ಟ ಸಂಸಾರ ಲೋಕದಿಂದ ಬಹು ದೂರ', 'ಕರ್ಪೂರದ ಬೊಂಬೆ ನಾನು', 'ಕಥೆ ಹೇಳುವೆ ನನ್ನ ಕಥೆ ಹೇಳುವೆ', 'ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು', 'ಸಂತೋಷ ಆಹಾ ಓಹೋ', 'ಅರೆರೆರೆ ಗಿಣಿ ರಾಮ', 'ಓ ನಲ್ಲನೆ ಸವಿ ಮಾತೊಂದ ನುಡಿವೆಯಾ' ಹೀಗೆ ನೂರಾರು ಸಂಖ್ಯೆಯ ಹಾಡುಗಳು ರಸಿಕರ ನೆನಪಿನಲ್ಲಿ ಹಸುರಾಗಿವೆ.
ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳುಸಂಪಾದಿಸಿ
ಒಟ್ಟಾರೆ 40,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಪಿ. ಸುಶೀಲ ಅವರು ಲತಾ ಮಂಗೇಶ್ಕರ್ ಅವರ ಅಭಿಮಾನಿ ಮತ್ತು ಗೆಳತಿ. ಪ್ರಾರಂಭದಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ಹಾಡಿದರೂ ನಂತರದಲ್ಲಿ ಲತಾ ಅವರು ಇರುವಾಗ ಹಿಂದಿ ಚಿತ್ರರಂಗಕ್ಕೆ ನನ್ನ ಅವಶ್ಯಕತೆ ಇಲ್ಲ ಎಂಬ ಕಾರಣದಿಂದ ಅಲ್ಲಿನ ಅವಕಾಶಗಳ ಹಿಂದೆ ಹೋಗಲಿಲ್ಲ ಎನ್ನುತ್ತಾರೆ. ಇಂದಿನ ದಿನಗಳ ಬಿರುಸಿನ ಗತಿಯ ಹಾಡುಗಳ ಬಗ್ಗೆ ಕೂಡ, ಕಾಲದ ಬದಲಾವಣೆ ಜೊತೆ ಸಂಗೀತ ಬದಲಾಗುವುದರಲ್ಲಿ ತಪ್ಪೇನಿದೆ ಎಂಬ ವಿಶಾಲ ಮನೋಭಾವನೆ ಅವರಲ್ಲಿದೆ. ಅವರ ಸೊಸೆ ಸಂಧ್ಯಾ ಅವರು ಚಲನಚಿತ್ರರಂಗದ ಪ್ರಮುಖ ಗಾಯಕಿಯಾಗಿದ್ದಾರೆ.
ಪಿ. ಸುಶೀಲ ಅವರ ಒಬ್ಬನೇ ಮಗನ ಹೆಸರು ಜಯಕೃಷ್ಣ, ಸೊಸೆ ಸಂಧ್ಯಾ ಸಂಗೀತ ಪ್ರೇಮಿ ಮತ್ತು ಸ್ವತಃ ಹಿನ್ನೆಲೆ ಗಾಯಕಿ.
ಮಾಧುರ್ಯಕ್ಕೆ ಸುಶೀಲಾ-ಸಂಪಾದಿಸಿ
ಭಾರತೀಯ ಚಿತ್ರರಂಗ ಹಲವು ಅಪ್ರತಿಮ ಗಾಯಕಿಯರನ್ನು ಕಂಡಿದೆ. ಆದರೆ, ಮಾಧುರ್ಯದ ವಿಷಯಕ್ಕೆ ಬಂದರೆ ಹೆಚ್ಚು ಆಪ್ತವಾಗುವ ಹೆಸರು ಸುಶೀಲಾ. ಅವರು ಹಾಡಲು ಶುರು ಮಾಡಿದ ಸಂದರ್ಭದಲ್ಲಿ ಚಿತ್ರರಂಗದಲ್ಲಿದ್ದ ಪೈಪೋಟಿ ಅಷ್ಟಿಷ್ಟಲ್ಲ. ಸೂಲಮಂಗಲಂ ರಾಜಲಕ್ಷ್ಮಿ, ಪಿ. ಲೀಲಾ, ಎಂ.ಎಲ್.ವಸಂತಕುಮಾರಿ, ಎ.ಪಿ.ಕೋಮಲ, ಆರ್.ಬಾಲಸರಸ್ವತಿ, ಜಿಕ್ಕಿ ಅವರಂಥ ಘಟಾನುಘಟಿಗಳ ನಡುವೆ ರಂಗಪ್ರವೇಶಿಸಿದ ಸುಶೀಲಾ, ಕೆಲವು ವರ್ಷಗಳಲ್ಲೇ ಎಲ್ಲರನ್ನೂ ಮೀರಿ ಬೆಳೆದರು.ವಿವಿಧ ಭಾಷೆಗಳಲ್ಲಿ ಹಾಡುವ ಮೂಲಕ 'ದಕ್ಷಿಣ ಭಾರತದ ಕೋಗಿಲೆ' ಎನ್ನಿಸಿಕೊಂಡ ಅಗ್ಗಳಿಕೆ ಅವರದು.
ಪ್ರಸ್ತುತ, ಹನ್ನೆರಡು ಭಾಷೆಗಳಲ್ಲಿ ಪಿ.ಸುಶೀಲಾ ಅವರು ಹಾಡಿರುವ 17,695 ಗೀತೆಗಳ ಸಾಧನೆಯನ್ನು ಗಿನ್ನೆಸ್‌ ದಾಖಲೆ ಪುಸ್ತಕ ಗೌರವಿಸಿದೆ.ಗಿನ್ನೆಸ್‌ ದಾಖಲೆಯಲ್ಲಿ ಸುಶೀಲಾ ಅವರ 1960ರ ನಂತರದ ಹಾಡುಗಳನ್ನಷ್ಟೇ ಪರಿಗಣಿಸಲಾಗಿದೆ. ಕನ್ನಡದಲ್ಲಿ ಸುಮಾರು 5 ಸಾವಿರ ಗೀತೆಗಳನ್ನು ಸುಶೀಲಾ ಹಾಡಿದ್ದಾರೆ. ಚಲನಚಿತ್ರ ಸಂಗೀತದಲ್ಲಿ ಏನೆಲ್ಲ ಪ್ರಯೋಗಗಳು ನಡೆದೂ ಕೊನೆಗೆ ಮಾಧುರ್ಯವೇ ಮುನ್ನೆಲೆಗೆ ಸಲ್ಲುವುದು ಮತ್ತೆ ಮತ್ತೆ ಸಾಬೀತಾಗಿದೆ. ಈ ಸಂದರ್ಭದಲ್ಲಿ, ಸುಶೀಲಾ ಅವರ ಗೀತೆಗಳು 'ಮಾಧುರ್ಯದ ಮಾದರಿ'ಗಳಂತೆ ಕೇಳುಗರ ಮನಸ್ಸುಗಳನ್ನು ಪ್ರಸನ್ನಗೊಳಿಸುತ್ತ ಚಿರಸ್ಥಾಯಿಯಾಗಿದೆ.[೧]
ಪಿ. ಸುಶೀಲ ಅವರಿಗೆ ಐದು ರಾಷ್ಟ್ರ ಪ್ರಶಸ್ತಿಗಳೂ ಸೇರಿದಂತೆ ಭಾರತ ಸರಕಾರದ ಉನ್ನತ ನಾಗರೀಕ ಗೌರವ "ಪದ್ಮಭೂಷಣ" ಗೌರವ ಸಂದಿದೆ.. ಪಿ.ಸುಶೀಲ ಅವರಿಗೆ ದೊರೆತ ಗೌರವಗಳು ಇಂತಿವೆ:
ಪದ್ಮಭೂಷಣ ೨೦೦೮
ರಾಷ್ಟ್ರ ಪ್ರಶಸ್ತಿಗಳು ಒಟ್ಟು ೫
೧೯೬೯ರಲ್ಲಿ ತಮಿಳು ಭಾಷೆಯ "ಉಯಿರೆಂತ ಮಾನಿದನ್" ಚಿತ್ರದ "ಪಾಲ್ ಪಾಲುವೆ ವಾನ್ ಮೀ೦ದಿಲೇ" ಹಾಡಿಗಾಗಿ
೧೯೭೧ರಲ್ಲಿ ತಮಿಳು ಭಾಷೆಯ "ಸವಾಲೆ ಸಮಾಲಿ"ಚಿತ್ರದ "ಚತುಕ್ ಕುರುವೇ ಕಿನ್ನ ಕುತ್ತುಪ್ಪಾಡು" ಹಾಡಿಗಾಗಿ
೧೯೭೮ರಲ್ಲಿ ತೆಲುಗು ಭಾಷೆಯ "ಸಿರಿಸಿರಿ ಮುವ್ವ"ಚಿತ್ರದ "ಜಮಾಂದಿ ನಾದಂ ಸಾಯಂದಿ ಪಾದಂ"ಹಾಡಿಗಾಗಿ
೧೯೮೨ರಲ್ಲಿ ತೆಲುಗು ಭಾಷೆಯ "ಮೇಘ ಸಂದೇಶಂ" ಚಿತ್ರದ "ಪ್ರಿಯೆ ಚಾರು ಸೀಲೆ ಎಂಥ ಪ್ರೀತೊಂವದೆ" ಹಾಡಿಗಾಗಿ
೧೯೮೩ರಲ್ಲಿ ತೆಲುಗು ಭಾಷೆಯ "ಎಂ.ಎಲ್.ಎ. ಏಡುಕೊಂಡಲು"ಚಿತ್ರದ "ಗೋಪಾಲುಡು ವೇಣುಗೋಪಾಲುಡು"ಹಾಡಿಗಾಗಿ
ತಮಿಳುನಾಡು --೧೯೬೯.೧೯೭೫.೧೯೭೯.೧೯೮೯.
ಆಂದ್ರಪ್ರದೇಶ-- ೧೯೭೭.೧೯೭೮.೧೯೮೨.೧೯೮೪.೧೯೮೭.೧೯೮೯.
ಕೇರಳ ---೧೯೭೧.೧೯೭೫.೧೯೭೯.೧೯೮೫.
ಮಹಾರಾಷ್ಟ್ರ—೧೯೮೪.೧೯೮೮.
ಜೀವಮಾನದ ಸಾಧನೆಗಾಗಿ
ತಮಿಳುನಾಡು ಸರಕಾರ -ಭಾರತಿ ದರ್ಶನ ಪ್ರಶಸ್ತಿ.(1988) ಕಲೈಮಾಣಿ(1991)
ಆಂದ್ರಪ್ರದೇಶ ಸರಕಾರ -ರಘುಪತಿ ವಾಂಗಯ್ಯಪ್ರಶಸ್ತಿ.(೨೦೦೪)
ಕೇರಳ ಸರಕಾರ --ಕಮುಕರ ಪ್ರಶಸ್ತಿ(೨೦೦೩)
ಮಹಾರಾಷ್ಟ್ರ ಸರಕಾರ --ಶಿವಾಜಿ ಪ್ರಶಸ್ತಿ (೨೦೦೩)
ಕರ್ನಾಟಕ ಜನತೆ - 'ಗಾನ ಸರಸ್ವತಿ' ಬಿರುದು (೨೦೦೪)
ಇತರ ಗೌರವಗಳು ಫಿಲಂಫೇರ್ ಲೈಫ್ ಟೈಮ್ ಅವಾರ್ಡ್ ೨೦೦೬,ಸಂಗೀತ ಕಲಾ ಭಾರತಿ ಲೈಫ್ ಟೈಮ್ ಅವಾರ್ಡ್ ೧೯೭೯,ಅಂತರರಾಷ್ಟ್ರೀಯ ಚಿತ್ರೋತ್ಸವ(JAAFA) ಲೈಫ್ ಟೈಮ್ ಅವಾರ್ಡ್ ೧೯೯೩,ಎ.ವಿ.ಎಂ. ಅವಾರ್ಡ್ ೧೯೯೭, ಭಾರತ್ ಕಲಾಚಾರ್ ೨೦೦೧.ಇನೂರ ಐವತ್ತಕ್ಕೂ ಮಿಕ್ಕಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.
http://psusheela.com/
ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು
ತ್ರಿಪುರಾಂಬ | ಕಮಲಾ ಬಾಯಿ | ಎಸ್.ಡಿ.ಸುಬ್ಬುಲಕ್ಷ್ಮಿ | ಲಕ್ಷ್ಮಿ ಬಾಯಿ | ಎಂ.ವಿ.ರಾಜಮ್ಮ | ಅಮೀರ್‍ಬಾಯಿ ಕರ್ನಾಟಕಿ | ಬಿ.ಜಯಮ್ಮ | ಪಿ. ಲೀಲಾ | ಪಿ.ಸುಶೀಲ | ಎಸ್.ಜಾನಕಿ | ಪ್ರಿಯದರ್ಶಿನಿ | ಎಲ್.ಆರ್. ಈಶ್ವರಿ | ಬಿ.ಕೆ.ಸುಮಿತ್ರಾ | ವಾಣಿ ಜಯರಾಂ | ಕಸ್ತೂರಿ ಶಂಕರ್ | ಬೆಂಗಳೂರು ಲತಾ | ಸುಲೋಚನ | ಎಸ್.ಪಿ.ಶೈಲಜಾ | ಬಿ.ಆರ್. ಛಾಯಾ | ರತ್ನಮಾಲ ಪ್ರಕಾಶ್ | ಮಂಜುಳಾ ಗುರುರಾಜ್ | ಸುಜಾತ ದತ್ | ಕವಿತಾ ಕೃಷ್ಣಮೂರ್ತಿ | ಚಿತ್ರಾ | ಚಂದ್ರಿಕಾ ಗುರುರಾಜ್ | ಲತಾ ಹಂಸಲೇಖ | ಸೌಮ್ಯ ರಾವ್ | ಅನುರಾಧ ಶ್ರೀರಾಮ್ | ನಂದಿತಾ | ಪಲ್ಲವಿ ಎಂ.ಡಿ | ಶಮಿತಾ ಮಲ್ನಾಡ್ | ಚೈತ್ರ | ಸುಮಾ ಶಾಸ್ತ್ರಿ | ಸುಪ್ರಿಯ ಆಚಾರ್ಯ | ಭವತಾರಿಣಿ
5-4-2019- ಶುಕ್ರವಾರದ ದಿನ ಭವಿಷ್ಯ | your daily horoscope 5 April 2019 - Kannada BoldSky
5-4-2019- ಶುಕ್ರವಾರದ ದಿನ ಭವಿಷ್ಯ
| Published: Friday, April 5, 2019, 4:00 [IST]
ಮೇಷ (5 ಏಪ್ರಿಲ್ 2019)
ಬಂಧುಗಳ ಒಳ ಜಗಳಗಳು ನಿಮ್ಮನ್ನು ಹೈರಾಣ ಮಾಡುವವು. ಯಾರೊಬ್ಬರ ಪರವಾಗಿ ನಿಂತರೂ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಬಹು ವಿವೇಚನೆಯಿಂದ ಪರಿಸ್ಥಿತಿ ನಿಭಾಯಿಸುವಿರಿ. ಇದಕ್ಕೆ ಗುರುವಿನ ಬೆಂಬಲ ಪಡೆಯಿರಿ.ವೃಥಾ ಮನೋವ್ಯಾಕುಲ, ಅಂಜಿಕೆ, ಅಭದ್ರತೆಗಳು ಬೇಡ. ದುರ್ಗಾದೇವಿಯನ್ನು ಪ್ರಾರ್ಥಿಸಿ. ಗುರುವಿನ ಶುಭ ಆಶೀರ್ವಾದದಿಂದ ಒಳಿತಾಗುವುದು. ಆಹಾರ ದಾನ ಮಾಡಿ. ಅಗತ್ಯಕ್ಕೆ ತಕ್ಕಷ್ಟು ಹಣ ವಿನಿಯೋಗಿಸಿ. 9845743807 ಅದೃಷ್ಟ ಸಂಖ್ಯೆ:5
ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಶಾಲಾ ಕಾಲೇಜುಗಳಿಂದ ಬರಬೇಕಾಗಿದ್ದ ಗೌರವ ಧನ ಸದ್ಯದಲ್ಲಿಯೇ ನಿಮ್ಮ ಕೈ ಸೇರುವುದು. ವಿವಾಹಕ್ಕೆ ಇನ್ನೂ ಕೆಲಕಾಲ ಕಾಯಬೇಕಾಗುವುದು.ನೀವು ಆದರಿಸುವ ಜನರಿಂದಲೇ ವಿಶ್ವಾಸದ್ರೋಹ ಆಗುವ ಸಾಧ್ಯತೆ ಇದೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದನ್ನು ತಿಳಿಯಿರಿ. ಗುರು ಹಿರಿಯರ ಮಾರ್ಗದರ್ಶನದಂತೆ ಮುನ್ನಡೆಯಿರಿ. ಇದರಿಂದ ನಿಮ್ಮ ಕಾರ್ಯಗಳು ಕೈಗೂಡುವವು. 9845743807 ಅದೃಷ್ಟ ಸಂಖ್ಯೆ:1
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp
ಕುಸ್ತಿ ನಾಡಲ್ಲಿ ಕಬಡ್ಡಿ... ಕಬಡ್ಡಿ.... | Prajavani
ಕುಸ್ತಿ ನಾಡಲ್ಲಿ ಕಬಡ್ಡಿ... ಕಬಡ್ಡಿ....
ಮೈಸೂರು: ನಾಡಕುಸ್ತಿಗೆ ಹೆಸರು ಪಡೆದಿರುವ ಸಾಂಸ್ಕೃತಿಕ ನಗರಿಯಲ್ಲಿ ಈಗ ಕಬಡ್ಡಿ ಕಲರವ. ರಾತ್ರಿಯಾಗುತ್ತಿದ್ದಂತೆಯೇ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ... ಕಬಡ್ಡಿ... ಎಂಬ ಸದ್ದು ಮಾರ್ದನಿಸುತ್ತದೆ.
ನ್ಯೂ ಕಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾ ವತಿಯಿಂದ ಆಯೋಜನೆಯಾಗಿರುವ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನ (ಐಐಪಿಕೆಎಲ್‌) ಪಂದ್ಯಗಳು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಕಬಡ್ಡಿ ಪ್ರೇಮಿಗಳ ಮನಗೆದ್ದಿದೆ.
ಪ್ರೊ ಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ನಡೆಯುತ್ತಿರುವ ಈ ಲೀಗ್‌ನಲ್ಲಿ ಎಂಟು ತಂಡಗಳು ಪೈಪೋಟಿ ನಡೆಸುತ್ತಿವೆ. ಲೀಗ್‌ನ ಮೊದಲ ಹಂತದ ಪಂದ್ಯಗಳು ಪುಣೆಯಲ್ಲಿ ನಡೆದಿದ್ದವು. ಇದೀಗ ಎರಡನೇ ಲೆಗ್‌ನ ಪಂದ್ಯಗಳು ಮೈಸೂರಿನಲ್ಲಿ ನಡೆಯುತ್ತಿವೆ. ಮೇ 24ರಿಂದ ಆರಂಭವಾಗಿರುವ ಟೂರ್ನಿ 29ರ ವರೆಗೆ ಮುಂದುವರಿಯಲಿದೆ.
ಮೈಸೂರಿನಲ್ಲಿ ದೊಡ್ಡ ಮಟ್ಟಿನ ಕಬಡ್ಡಿ ಟೂರ್ನಿಯೊಂದು ನಡೆಯುತ್ತಿರುವುದು ಇದೇ ಮೊದಲು. ಪುಣೆ ಫ್ರೈಡ್‌, ಪಾಂಡಿಚೇರಿ ಪ್ರಿಡೇಟರ್ಸ್, ಬೆಂಗಳೂರು ರಿನೋಸ್‌, ಹರಿಯಾಣ ಹೀರೋಸ್, ದಿಲೇರ್‌ ದಿಲ್ಲಿ. ಚೆನ್ನೈ ಚಾಲೆಂಜರ್ಸ್, ಮುಂಬೈ ಚೆ ರಾಜೆ, ತೆಲುಗು ಬುಲ್ಸ್ ತಂಡಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸುತ್ತಿವೆ.
ಐಐಪಿಕೆಎಲ್‌ಗೆ ಕಡಿಮೆ ಅವಧಿಯಲ್ಲೇ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ. ಮೈಸೂರಿನಲ್ಲಿ ಕಬಡ್ಡಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮುಂದಿನ ದಿನಗಳಲ್ಲಿ ಈ ಲೀಗ್‌ ಇನ್ನಷ್ಟು ಎತ್ತರಕ್ಕೇರಲಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ವಿ.ಪ್ರಸಾದ್‌ ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಪ್ರೊ.ಕಬಡ್ಡಿ ಟೂರ್ನಿಯ ಪಂದ್ಯಗಳನ್ನು ಟಿ.ವಿಯಲ್ಲಿ ವೀಕ್ಷಿಸಿದ್ದೇನೆ. ಐಐಪಿಕೆಎಲ್‌ ಪಂದ್ಯಗಳು ಮೈಸೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಇಲ್ಲಿನ ಆಟದ ಗುಣಮಟ್ಟ ಪ್ರೊ.ಕಬಡ್ಡಿ ಲೀಗ್‌ಗೆ ಸರಿಸಾಟಿಯಾಗದು. ಆದರೂ ಅಂತರರಾಷ್ಟ್ರೀಯ ಗುಣಮಟ್ಟದ ಟೂರ್ನಿಯ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗಿರುವುದು ರೋಚಕ ಅನುಭವ ನೀಡಿದೆ' ಎಂಬುದು ಕಬಡ್ಡಿ ಅಭಿಮಾನಿ ಸಂತೋಷ್‌ ಅವರ ಹೇಳಿಕೆ.
ಸಂತೋಷ್‌ ಅವರು ಗೆಳೆಯರ ಜತೆ ಟೂರ್ನಿಯ ಎಲ್ಲ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಪ್ರತಿದಿನ ಪಂದ್ಯಗಳಿಗೆ ಮುನ್ನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೋಡುಗರ ಮನಸೂರೆಗೊಂಡಿದೆ.
ಪ್ರವಾಸಿ ತಾಣಗಳಿಗೆ ಭೇಟಿ: ಎಂಟು ತಂಡಗಳ 120ಕ್ಕೂ ಅಧಿಕ ಆಟಗಾರರು ಅಲ್ಲದೆ ಸಹಾಯಕ ಸಿಬ್ಬಂದಿ ಮತ್ತು ಅಧಿಕಾರಿಗಳು ಒಳಗೊಂಡಂತೆ 200ಕ್ಕೂ ಅಧಿಕ ಮಂದಿ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.
ಈ ಬಾರಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ವಿವಿಧ ತಂಡಗಳಲ್ಲಿ ಉತ್ತರ ಭಾರತದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಟಗಾರರಲ್ಲಿ ಬಹುತೇಕ ಮಂದಿ ಇದೇ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದಾರೆ. ಈ ಆಟಗಾರರು ಬಿಡುವಿನ ಅವಧಿಯಲ್ಲಿ ನಗರದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ.
'ಮೈಸೂರು ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ್ದೇವೆ. ಬಿಡುವು ಸಿಕ್ಕರೆ ಚಾಮುಂಡಿಬೆಟ್ಟಕ್ಕೆ ಹೋಗಬೇಕು. ಮೈಸೂರು ಸುಂದರ ಹಾಗೂ ಸ್ವಚ್ಛ ನಗರಿ. ಇಲ್ಲಿಂದ ಮಧುರ ನೆನಪುಗಳನ್ನು ಕಟ್ಟಿಕೊಂಡು ತೆರಳುತ್ತೇವೆ' ಎಂಬುದು ಹರಿಯಾಣ ಹೀರೋಸ್ ತಂಡದ ಆಟಗಾರ ಸಾಗರ್‌ ಸಿಂಗ್‌ ಅವರ ಮಾತು.
ಸತೀಶ್ ನೀನ್ ಆಸಮ್! ಲೂಸಿಯಾ ನೀನ್ *****! – ಹೊನಲು
Home › ನಡೆ-ನುಡಿ › ಸತೀಶ್ ನೀನ್ ಆಸಮ್! ಲೂಸಿಯಾ ನೀನ್ *****!
ಸತೀಶ್ ನೀನ್ ಆಸಮ್! ಲೂಸಿಯಾ ನೀನ್ *****! By ಹೊನಲು on 13-09-2013 • ( 3 )
ಸುಮಾರು ಒಂದೂವರೆ ವರ್‍ಶದಿಂದ ಕುತೂಹಲ ಹುಟ್ಟಿಸಿದ್ದ ಲೂಸಿಯಾ ಚಿತ್ರ ತೆರೆ ಕಂಡಿದೆ. ನೋಡುಗರೇ ಹಣ ಕೂಡಿಸಿ ಈ ಚಿತ್ರವನ್ನು ನಿರ್‍ಮಿಸಿದ್ದು ಎಲ್ಲರಿಗೂ ತಿಳಿದಿದೆ. ಸಾವಿರಾರು ಮಂದಿ ನಂಬಿ ಒಂದು ಕನ್ನಡ ಚಿತ್ರವನ್ನು ನೋಡದೆಯೇ ಮಿಂಬಲೆಯ ಮೂಲಕ ಹಂಚಿಕೆ ಮಾಡಲು ಒಪ್ಪಿದ್ದು ಈ ಚಿತ್ರದ ನಿರ್‍ದೇಶಕರಾದ ಪವನ್ ಕುಮಾರ್‍ ಅವರ ಬಗ್ಗೆ ಕನ್ನಡಿಗರು ಇಟ್ಟಿರುವ ನಂಬಿಕೆಯನ್ನು ಸಾರುತ್ತದೆ. ಆ ನಂಬಿಕೆಯನ್ನು ಪವನ್ ಹುಸಿ ಮಾಡಿಲ್ಲ. ಬದಲಾಗಿ ಈ ಹಮ್ಮಿಕೊಳ್ಳುವಿಕೆಗಾಗಿ ಒಂದಾದ ಎಲ್ಲಾ ಕನ್ನಡಿಗರೂ ಹೆಮ್ಮೆ ಪಡುವಂತ ಕುಶಲತೆಯಿಂದ ಚಿತ್ರವನ್ನು ಕಟ್ಟಿದ್ದಾರೆ.
ಚಿತ್ರದ ಕತೆ ಅಶ್ಟು ಸುಲಬವಾಗಿ ಹೇಳುವಂತದ್ದಲ್ಲ. ನಿದ್ದೆ ಬಾರದ ಬೇನೆ (Insomnia) ಇಂದ ಬಳಲುವ ಒಬ್ಬನ ಪಾಡನ್ನು ಹೇಳುತ್ತಾ ಹೋಗುವ ನಿರ್‍ದೇಶಕರು ಮೂರು ಕಾಲಿನ ಜಡೆ ಹೆಣೆದಂತೆ ಮೂರು ಕತೆಗಳನ್ನು ಹೆಣೆಯುತ್ತಾರೆ. ನಿದ್ದೆ ಬಾರದ ತುಳಿಲಾಳು (hero) ನಿಕಿಲ್ , ತನ್ನ ಪಾಡಿಂದ ಬೇಸತ್ತು ನಿದ್ದೆಗೆ ಜಾರಲು ಮದ್ದೊಂದಕ್ಕೆ ಸೋಲುತ್ತಾನೆ. ಆ ಮದ್ದಿನ ಪರಿಣಾಮ ಚೆಂದದ ಕನಸುಗಳ ಕಾಣುತ್ತಾನೆ, ಅದನ್ನೇ ದಿಟವೆಂದು ನಂಬುತ್ತಾನೆ. ಕನಸು ಕಾಣುತ್ತಾ ಅದನ್ನೇ ದಿಟವೆಂದುಕೊಳ್ಳುವ ನೆನೆಕೆಗೆ Lucid dreaming ಅನ್ನುತ್ತಾರೆ. ಅದರಂತೆ ನಂತರದ ನಡಾವಳಿಗಳಲ್ಲಿ ಯಾವುದು ದಿಟ, ಯಾವುದು ಕನಸು, ಇದರ ನಡುವೆ ಈಗ ತುಳಿಲಾಳ ಕತೆ ಏನಾಗಿದೆ ಅನ್ನುವುದೇ ಪವನ್ ಹೆಣೆದಿರುವ ಜಡೆಯ ಮೂರು ಕಾಲುಗಳು. ಈ ಕತೆಯ ತಿರುಳೇನು, ಕೊನೆಯಲ್ಲಿ ಏನಾಗುತ್ತದೆ ಅನ್ನುವುದನ್ನು ನೀವೇ ದೊಡ್ಡ ತೆರೆಯ ಮೇಲೆ ನೋಡಬೇಕು. ಆಗಲೇ ಚಿತ್ರ ತಂಡದ ಎತ್ತುಗಡೆಗೆ ಬೆಲೆ ಸಿಗುವುದು.
ಚಿತ್ರದಲ್ಲಿ ಮಂದಿಗನ ಹುಚ್ಚುತನಗಳು, ನೆನೆಕೆಗಳು, ಕನಸುಗಳನ್ನು ಅಚ್ಚುಕಟ್ಟಾಗಿ ಬಿಡಿಸಲಾಗಿದೆ. ಸರಿಸಾಟಿಯಿಲ್ಲದ ಅರಿವಿನರಿಮೆಯ ಮಾತುಗಳಿಗೆ ಎಲ್ಲರೂ ತಲೆ ಬಾಗುವಂತಿದೆ. ಎಲ್ಲರಿಗೂ ತಿಳಿದೂ ತಿಳಿಯದ ಎಶ್ಟೋ ಹುರುಳುಗಳನ್ನು ನವಿರಾಗಿ ಹೇಳಿದ್ದಾರೆ ಪವನ್. ಸಾದಾರಣ ಮಂದಿ ದೊಡ್ಡ ಕನಸು ಕಾಣುತ್ತಾರೆ. ಆದರೆ ಬಾಳಲ್ಲಿ ಹಣ ಉಳ್ಳವನು, ಎಲ್ಲರಿಗೂ ತಿಳಿದವನು (famous personality) ಎಂತ ಕನಸು ಕಾಣಬಲ್ಲ? ಇಂತ ಸಣ್ಣ ಸಣ್ಣ ವಿಶಯಗಳಿಗೆ ಸೇರ್‍-ಕನ್ನಡಿ (lens) ಹಿಡಿದ ಹಾಗಿದೆ ಈ ಚಿತ್ರದ ಹುರುಳು.
ಹಾಗಂತ ಏನೇನೋ ತೋರಿಸಿ ತಲೆ ಕೆಡಿಸಿಲ್ಲ ರೀ… ಚಿತ್ರದಲ್ಲಿ ನಗುವಿಗೇನೂ ಕಮ್ಮಿ ಇಲ್ಲ. "ನಿನಗೆ ನಿದ್ದೆ ಬರುವ ಗುಳಿಗೆ ಕೊಡುತ್ತೇನೆ" ಅಂತ ಹೇಳಿದವನಿಗೆ ನಿದ್ದೆ ಬಾರದೆ ಬೇಸತ್ತ ತುಳಿಲಾಳು ನಲಿವಿಂದ "ಅಯ್ಯೋ ನಿಂಗೆ ಪಸ್ಟ್ ನಯ್ಟಲ್ಲೂ ನಿದ್ದೆ ಬರಲಣ್ಣ" ಅಂತ ಹರಸಿದಾಗ ಇಡೀ ಚಿತ್ರ ಮಂದಿರದ ಮಂದಿ ಒಮ್ಮೆಲೇ ಗೊಳ್ಳನೆ ನಕ್ಕುಬಿಡುತ್ತಾರೆ. ಯಾವೊಂದು ಹಾಡೂ ಕತೆಗೆ ಪೂರಕವಲ್ಲದೆಯೇ ತುರುಕಲಾಗಿಲ್ಲ. ಹಾಗಾಗಿ ಎಲ್ಲಾ ಹಾಡುಗಳೂ ಮುದ ನೀಡುತ್ತವೆ. ಹಾಡುಗಳಲ್ಲಿ ಮಯ್ಮರೆಸುವ ಪೂರ್‍ಣಚಂದ್ರ ತೇಜಸ್ವಿ ಬಗ್ಗೆ ಹೆಚ್ಚು ಹೇಳುವುದೇ ಬೇಡ. ಚಿತ್ರ ಬಿಡುಗಡೆ ಆಗುವ ಮುನ್ನವೇ 3 ಲಕ್ಶಕ್ಕೂ ಹೆಚ್ಚು ಮಂದಿ ಯುಟ್ಯೂಬ್ ನಲ್ಲಿ "ತಿನ್ಬೇಡ ಕಮ್ಮಿ" ಹಾಡು ನೋಡಿದ್ದಾರೆ…!
ಬಿಟ್ಟೂ ಬಿಡದೆ ಎಲ್ಲ ನೋಟಗಳಲ್ಲೂ ಅಚ್ಚುಕಟ್ಟಾಗಿ ನಟಿಸಿರುವ ಸತೀಶ್ ನೀನಾಸಮ್, ಅಚ್ಯುತ ಕುಮಾರ್‍, ಶ್ರುತಿ ಹರಿಹರನ್ ಮತ್ತು ಇತರರನ್ನೊಳಗೊಂಡ ನಟನೆಯ ತಂಡ, ಕಣ್ಣಿಗೆ ತಂಪೆನಿಸುವ ನೋಟಗಳನ್ನು ಕಟ್ಟಿರುವ ಸಿದ್ದಾರ್‍ತ್ ನುನಿ, ಚಿತ್ರವನ್ನು ಬರೆದಿರುವ ಪವನ್ ಒಂದಾಗಿರುವುದು ಕನ್ನಡದಲ್ಲಿ ಇಂತ ಒಂದು ಕಂಡು ಕೇಳರಿಯದ ಚಿತ್ರ ಕಟ್ಟಲೆಂದೇ ಇರಬೇಕು. ಇಡೀ ಚಿತ್ರವನ್ನು ಒಂದೇಒಂದು ನೂಲಿನಶ್ಟೂ ಬೇಸರಗೊಳಿಸದಂತೆ ಕೊಂಡೊಯ್ಯಲಾಗಿದೆ. ಹಲವಾರು ನೋಟಗಳನ್ನು ಅಚ್ಚಿಗೆ ಅಳವಡಿಸಿರುವ ಪರಿ (editing) ಕಣ್ಣು ಮಿಟುಕಿಸದೇ ಚಿತ್ರ ನೋಡುವಂತೆ ಮಾಡುತ್ತದೆ. ಹೊಲಸು ಮಾತುಗಳಿಲ್ಲ, ಹದನಲ್ಲದ (vulgar) ನೋಟಗಳಿಲ್ಲ – ಮನೆಮಂದಿಯೆಲ್ಲ ಕೂತು ಮುಜುಗರವಿಲ್ಲದೆ ನೋಡಬಹುದಾದ ಚಿತ್ರ ಇದಾಗಿದೆ.
ಇನ್ನು, ಕನ್ನಡಿಗರು ಇಂತ ಹದವಾದ ಇಂಪಣದ ಚಿತ್ರಗಳನ್ನು ನೋಡಿ ಬೆನ್ನು ತಟ್ಟಬೇಕಿದೆ. ಕರ್‍ನಾಟಕದ ಹೊರಗೆ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಕಟ್ಟುವ ನಿಟ್ಟಿನಲ್ಲಿ ಇಂತಹ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕಿದೆ. ನೋಡುಗರನ್ನು ಬೆರಗಾಗಿಸಿದ ಶಟರ್‍ ಅಯ್ಲಾನ್ಡ್, ಎ ರೆಕ್ವಿಂ ಪಾರ್‍ ಅ ಡ್ರೀಮ್, ಬ್ಲಾಕ್ ಸ್ವಾನ್ ನಂತಹ ಚಿತ್ರಗಳು ಕನ್ನಡದಲ್ಲೂ ಬಂದರೆ ನಮಗೇ ಹೆಮ್ಮೆ – ಅಲ್ಲವೆ?
ಈ ಚಿತ್ರಕ್ಕೆ ನಾನು ಕೊಡುವ ಎಣಿಕೆ 5/5.
(ಚಿತ್ರ: ಹೋಮ್ ಟಾಕೀಸ್)
ಹೆಚ್ಚಿನ ಓದಿಗೆ: ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ ನೀ 'ಅಲ್ಲಗಳೆ'ಯ…!
ಹಂಚಿಕೊಳ್ಳಿ:FacebookTwitterWhatsAppGoogleEmail‹ ತಿಳಿಯಾಗಬೇಕಿರುವುದು ಮನಸ್ಸು, ಮಯ್ ಬಣ್ಣವಲ್ಲ!ನಿದ್ದೆಯ ನೆನಪಿನಾಟ ›Categories: ನಡೆ-ನುಡಿTags: :: ವಲ್ಲೀಶ್ ಕುಮಾರ್ ::, ಓಡುತಿಟ್ಟ, ಚಿತ್ರ ವಿಮರ‍್ಶೆ, ಪವನ್ ಕುಮಾರ್, ಲೂಸಿಯಾ, ಸತೀಶ್ ನೀನಾಸಂ, ಸಿನೆಮಾ, Insomnia, Lucid Dreaming Related Articles
ಮೇರು ಚಿತ್ರಗಳ ಸಾಲಿನಲ್ಲಿ ನಿಲ್ಲುವ 'ಅರೈವಲ್' ಚಲನಚಿತ್ರ 'ಮಣ್ಣೆತ್ತಿನ ಅಮವಾಸೆ'ಯ ಸೊಗಡು ಮಲೆನಾಡು ಶೈಲಿ ಸೀಗಡಿ ಹುರಕಲು ಮಾಡಿನೋಡಿ ಹುರುಳಿಕಾಳು ಸಾರು 3 replies ವಿನಾಯಕ ಕವಾಸಿ 13-09-2013 • 9:38 am ಇದನ್ನ ಆಸ್ಕರ ಗೆ ಹೆಸರು ನೊಂದಾಯಿಸಬೇಕು… ಕನ್ನಡಕ್ಕೆ ಮೊದಲ ಆಸ್ಕರ ಸಿಗುವಂತಾದರೆ ಎಶ್ಟು ನಲಿವಾಗುತ್ತದೆ.
Reply ↓ ಜಗದೀಶ್ ಗೌಡ 13-09-2013 • 1:38 pm ಹೌದು, ಅಸ್ಕರ್ಗೆ ಅಯ್ಕೆಯಾಗುವ ಎಲ್ಲ ಗುಣಗಳು ಈ ಚಿತ್ರದಲ್ಲಿವೆ.
ಚಿತ್ರರಂಗ ನಿರ್ದೇಶಕನ ಮಾದ್ಯಮ ಎಂದು ಪವನ್ ರವರು ಮತ್ತೊಮ್ಮೆ ಸಾರಿಹೇಳಿದ್ದಾರೆ, ಇಂದಿನ ಸ್ಟಾರ್ ನಟರು ರಿಮೇಕ್ ಚಿತ್ರಗಳ ಹಿಂದೆ ಬಿದ್ದು ಕನ್ನಡ ಚಿತ್ರರಂಗವನ್ನು ಪಾತಳಕ್ಕೆ ತಳ್ಳುತಿದ್ದಾರೆ ಆದರೆ ಪವನ್ ರವರಂತ ನಡೆಸಾಳುಗಳು ನಮ್ಮ ಚಿತ್ರರಂಗವನ್ನು International ಎತ್ತರಕ್ಕೆ ಕೊಂಡೊಯ್ದಿದ್ದಾರೆ ಅವರಿಗೆ ನಮ್ಮ ನಲ್ಮೆಯ ಹಾರೈಕೆಗಳು, ಅವರಿಂದ ಇಂತಹ ಚಿತ್ರಗಳನ್ನು ಮತಶ್ಟು ಬಯಸುತ್ತೇವೆ….
ಶುಭ ಸುದ್ಧಿ: ಯುಎಇಯ ಚಾಲಣಾ ಪರವಾನಗಿ ಪರಿಶೀಲನೆಗೆ ಭಾರತದಲ್ಲೇ ಅವಕಾಶ – janadhvani
ಶುಭ ಸುದ್ಧಿ: ಯುಎಇಯ ಚಾಲಣಾ ಪರವಾನಗಿ ಪರಿಶೀಲನೆಗೆ ಭಾರತದಲ್ಲೇ ಅವಕಾಶ
ಅಬುಧಾಬಿ: ಯುಎಇಯ ಅನಿವಾಸಿ ಭಾರತೀಯರಿಗೆ ಚಾಲಣಾ ಪರವಾನಗಿ ಪಡೆಯುವ ಪರಿಶೀಲನೆಯನ್ನು ಇನ್ನು ಮುಂದೆ ತಮ್ಮ ಊರಲ್ಲೇ ಪಡೆಯಬಹುದಾಗಿದೆ.
ಭಾರತದಲ್ಲಿನ ನ್ಯಾಷನಲ್ ಸ್ಕಿನ್ ಡೆವಲಪ್ಮೆಂಟ್ ಕಾರ್ಪೊರೇಷನ್ ಮತ್ತು ಎಮಿರೇಟ್ಸ್ ಡ್ರೈವಿಂಗ್ ಇನ್ಸ್ಟಿಟ್ಯೂಟ್ ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶದ ವಿವಿಧ ಡ್ರೈವಿಂಗ್ ಸ್ಕೂಲ್‌ಗಳು ಇನ್ನು ಮುಂದೆ ಯುಎಇ ಲೈಸೆನ್ಸ್ ಪಡೆಯುವ ತರಗತಿಗಳನ್ನು ನಡೆಸಲಿದೆ. ಯುಎಇ ತಲುಪಿದ ನಂತರ ಟೆಸ್ಟ್‌ನಲ್ಲಿ ಭಾಗವಹಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇ ಚಾಲಣಾ ಟೆಸ್ಟ್‌ ಗೆ ಮುಂಚಿತವಾಗಿ ಪಡೆಯಬೇಕಾದ ಪರಿಶೀಲನೆಯನ್ನು ಭಾರತದಲ್ಲೇ ಪಡೆಯುವ ರೀತಿಯಲ್ಲಿ ಈ ಯೋಜನೆ ರೂಪೀಕರಿಸಲಾಗಿದೆ ಎಂದು ನ್ಯಾಷನಲ್ ಸ್ಕಿನ್ ಡೆವಲಪ್ಮೆಂಟ್ ಕಾರ್ಪೊರೇಷನ್‌ನ ಎಂ.ಡಿ. ಮನೀಶ್ ಕುಮಾರ್ ತಿಳಿಸಿದ್ದಾರೆ. ಪರಿಶೀಲನೆ ಪಡೆದ ನಂತರ ಸರ್ಟಿಫಿಕೇಟ್ ನೀಡಲಾಗುವುದು. ಯುಎಇ ತಲುಪಿದ ಬಳಿಕ ಎಮಿರೇಟ್ಸ್ ಡ್ರೈವಿಂಗ್ ಸ್ಕೂಲ್ ಕ್ಯಾಂಪಸ್ ಗಳಲ್ಲಿ ನಂತರದ ಟೆಸ್ಟ್‌ಗಳನ್ನು ಪೂರ್ತಿಗೊಳಿಸಬಹುದಾಗಿದ್ದು, ಅದಕ್ಕೆ ಬೇಕಾಗುವ ಸಮಯ ಮತ್ತು ಖರ್ಚು ವೆಚ್ಚವನ್ನು ಈ ಮೂಲಕ ಕಡಿಮೆಗೊಳಿಸಬಹುದಾಗಿದೆ ಎಂದು ಮನೀಶ್ ಹೆಳಿದರು.
ಭಾರೀ ಮೊತ್ತ ಖರ್ಚು ತಗುಲುವ ಸಲುವಾಗಿ ಯುಎಇಯಲ್ಲಿ ಡ್ರೈವಿಂಗ್ ಪರಿಶೀಲನೆ ಪೂರ್ಣಗೊಳಿಸಿ ಲೈಸೆನ್ಸ್ ಪಡೆಯುವುದು ಹಲವಾರು ಅನಿವಾಸಿಯರಿಗೆ ಅಸಾಧ್ಯವಾಗಿತ್ತು. ಪ್ರತೀ ಟೆಸ್ಟ್‌ಗಳಿಗೆ 5000 ದಿರ್ಹಂಗಿಂತಲೂ ಮೇಲೆ ಖರ್ಚು ತಗುಲುತ್ತದೆ. ಅನಿವಾಸಿಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಕೇರಳ, ಪಂಜಾಬ್, ಆಂದ್ರಪ್ರದೇಶ, ಒಡೀಶಾ ಮುಂತಾದೆಡೆ ನ್ಯಾಷನಲ್ ಸ್ಕಿನ್ ಡೆವಲಪ್ಮೆಂಟ್ ಕಾರ್ಪೊರೇಷನ್‌ ಡ್ರೈವಿಂಗ್ ಸ್ಕೂಲ್‌ಗಳನ್ನು ಪ್ರಾರಂಭಿಸಲಿದೆ. ಪ್ರಥಮ ಹಂತದಲ್ಲಿ ಚಲಾವಣೆಯಲ್ಲಿರುವ ಡ್ರೈವಿಂಗ್ ಸ್ಕೂಲ್ಗಳಲ್ಲಿ ಲೆಫ್ಟ್ ಹ್ಯಾಂಡ್‌ ಡ್ರೈವಿಂಗ್ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಮುಂದಿನ ಹಂತವಾಗಿ ಜಿಸಿಸಿ ರಾಜ್ಯಗಳ ಡ್ರೈವಿಂಗ್ ಪರಿಶೀಲನೆ ಪಡೆಯುವ ರೀತಿಯಲ್ಲೂ ಯೋಜನೆಯನ್ನು ರೂಪಿಸಲಾಗುವುದು ಎಂದು ನ್ಯಾಷನಲ್ ಸ್ಕಿನ್ ಡೆವಲಪ್ಮೆಂಟ್ ಕಾರ್ಪೊರೇಷನ್‌ ತಿಳಿಸಿದೆ.
ಮಲಾಲ ದೇಹ ಸ್ಥಿತಿ ಇನ್ನೂ ಗಂಭೀರ | Prajavani
ಮಲಾಲ ದೇಹ ಸ್ಥಿತಿ ಇನ್ನೂ ಗಂಭೀರ
ಲಾಹೋರ್/ಇಸ್ಲಾಮಾಬಾದ್ (ಪಿಟಿಐ/ಐಎಎನ್‌ಎಸ್): ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ದನಿಯೆತ್ತಿದ ಕಾರಣಕ್ಕೆ ತಾಲಿಬಾನ್ ಉಗ್ರರಿಂದ ದಾಳಿಗೆ ಒಳಗಾಗಿರುವ ಪಾಕಿಸ್ತಾನದ ಬಾಲಕಿ ಮಲಾಲ ಯುಸೂಫ್‌ಝೈ ದೇಹಾರೋಗ್ಯ ಇನ್ನೂ ಗಂಭೀರವಾಗಿದ್ದು, ಗುರುವಾರ ಸಂಜೆ ಪೇಶಾವರದಿಂದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ಆಕೆಯನ್ನು ಸ್ಥಳಾಂತರಗೊಳಿಸಲಾಗಿದೆ.
ಶಸ್ತ್ರಚಿಕಿತ್ಸೆ ನಂತರದ ಹೆಚ್ಚಿನ ಆರೈಕೆಗಾಗಿ ಆಕೆಯನ್ನು ರಾವಲ್ಪಿಂಡಿಗೆ ವೈಮಾನಿಕ ಮಾರ್ಗವಾಗಿ ಸ್ಥಳಾಂತರಿಸ ಲಾಗಿದೆ. ಬುಧವಾರ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಬೆನ್ನುಹುರಿಗೆ ಹೊಕ್ಕಿದ್ದ ಗುಂಡನ್ನು ಹೊರತೆಗೆಯಲಾಗಿತ್ತು. ಆಕೆ ಚೇತರಿಸಿಕೊಳ್ಳುತ್ತಿದ್ದರೂ ದೇಹಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಲಾಲ ಡೈರಿಯ ತುಣುಕುಗಳು
`ಶಾಲೆಗೆ ಹೋಗಲು ನನಗೆ ಭಯವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳು ಶಾಲೆಗೆ ಹೋಗದಂತೆ ತಾಲಿಬಾನ್ ಫತ್ವಾ ಹೊರಡಿಸಿದೆ.~ `ನಿನ್ನೆ ನನಗೆ ಭಯಾನಕ ಕನಸು ಬಿದ್ದಿತ್ತು. ಅದರಲ್ಲಿ ಸೇನೆಯ ಹೆಲಿಕಾಪ್ಟರ್‌ಗಳು ಹಾಗೂ ತಾಲಿಬಾನ್ ಉಗ್ರರು ಕಾಣಿಸಿಕೊಂಡಿದ್ದರು.
ಸ್ವಾತ್‌ನಲ್ಲಿ ಸೇನಾ ದಾಳಿ ನಡೆಯುತ್ತಿದ್ದಾಗಿನಿಂದ ನನಗೆ ಅಂತಹ ಕನಸುಗಳು ಬೀಳುತ್ತಿವೆ. ತಾಲಿಬಾನ್ ಫತ್ವಾದಿಂದಾಗಿ ಶಾಲೆಗೆ ಹೋಗಲು ಭಯವಾಗುತ್ತಿದೆ. 27 ಜನರಿರುವ ನಮ್ಮ ಕ್ಲಾಸ್‌ನಲ್ಲಿ ಕೇವಲ 11 ಜನ ಮಾತ್ರ ಶಾಲೆಗೆ ಬಂದಿದ್ದರು.~
`ನಾನು ಶಾಲೆಗೆ ಹೋಗಲು ಸಿದ್ಧಳಾಗುತ್ತಿದೆ. ಯುನಿಫಾರಂ ಹಾಕಿಕೊಳ್ಳುತ್ತಿದ್ದಾಗ ಪ್ರಾಂಶುಪಾಲರ ಮಾತು ನೆನಪಾಯಿತು. ಹಾಗಾಗಿ ನನ್ನ ಇಷ್ಟದ ಗುಲಾಬಿ ಬಣ್ಣದ ಉಡುಪು ಧರಿಸಿ ಶಾಲೆಗೆ ಹೋದೆ. ನನ್ನಂತೆ ಎಲ್ಲರೂ ಬಣ್ಣ, ಬಣ್ಣದ ಉಡುಪು ಧರಿಸಿದ್ದರು. ತಾಲಿಬಾನ್ ಆಕ್ಷೇಪಿಸುವುದರಿಂದ ಇನ್ನು ಮುಂದೆ ಬಣ್ಣದ ಉಡುಪು ಧರಿಸದಂತೆ ಸಹ ಶಿಕ್ಷಕರು ಎಚ್ಚರಿಸಿದರು.~
ಇದು ತಾಲಿಬಾನ್ ಉಗ್ರರಿಂದ ಗುಂಡಿನ ದಾಳಿಗೆ ಒಳಗಾದ ಪಾಕ್ ಬಾಲಕಿ ಮಲಾಲಳ ಡೈರಿಯ ತುಣುಕುಗಳು. ತನ್ನ ಕಾವ್ಯನಾಮ ಗುಲ್ ಮಕಾಯ್ ಹೆಸರಿನಲ್ಲಿ ಮಲಾಲ ಬಿಬಿಸಿಗಾಗಿ ಉರ್ದುವಿನಲ್ಲಿ ಈ ಡೈರಿ ಬರೆದಿದ್ದಳು.
ಮೂನ್ ಖಂಡನೆ
ವಿಶ್ವಸಂಸ್ಥೆ/ವಾಷಿಂಗ್ಟನ್ (ಪಿಟಿಐ): ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಮಲಾಲ ಮೇಲೆ ನಡೆದ ದಾಳಿಯನ್ನು ಖಂಡಿಸ್ದ್ದಿದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸಹ ಈ ಘಟನೆಯನ್ನು ಖಂಡಿಸಿದ್ದಾರೆ.
ಇಸ್ಲಾಮಾಬಾದ್ (ಪಿಟಿಐ):ಮಲಾಲ ಆರೋಗ್ಯಕ್ಕಾಗಿ ಪಾಕಿಸ್ತಾನದಾದ್ಯಂತ ಜನ ಗುರುವಾರ ಪ್ರಾರ್ಥನೆ ಸಲ್ಲಿಸಿದ್ದಾರೆ. ಪಾಕ್‌ನ ಹಲವು ಮೌಲ್ವಿಗಳು ಶುಕ್ರವಾರವನ್ನು ಪ್ರಾರ್ಥನೆಯ ದಿನವಾಗಿ (ಯೋಮ್-ಎ-ದುವಾ) ಆಚರಿಸುವಂತೆ ಕರೆ ನೀಡಿದ್ದಾರೆ.
ಸರಕಾರ ಜೀವಂತವಾಗಿದೆಯೇ?: ಸಿದ್ದರಾಮಯ್ಯ ಪ್ರಶ್ನೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ May 16, 2022, 8:01 PM IST
ಬೆಂಗಳೂರು, ಮೇ 16: 'ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ಬಜರಂಗದಳದಿಂದ ನಡೆಸಿದ ಬಂದೂಕು ತರಬೇತಿಯಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕ್ರಮ ಕೈಗೊಳ್ಳಬೇಕು' ಎಂದು ವಿಧಾನಸಭೆ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಶಸ್ತ್ರಾಸ್ತ್ರ ತರಬೇತಿ ಸಂಪೂರ್ಣವಾಗಿ ಕಾನೂನು ವಿರೋಧಿ ಚಟುವಟಿಕೆಯಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಕ್ಷಣವೇ ಭಜರಂಗದಳದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು' ಎಂದು ಇದೇ ಸಂದರ್ಭದಲ್ಲಿ ಒತ್ತಾಯ ಮಾಡಿದ್ದಾರೆ.
'ಭಜರಂಗ ದಳ ನಡೆಸಿದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಾಸಕರಾದ ಎಂ.ಎ.ಅಪ್ಪಚ್ಚು, ಕೆ.ಜಿ.ಬೋಪಯ್ಯ ಮತ್ತು ಸುಜ ಕುಶಾಲಪ್ಪ ಪಾಲ್ಗೊಂಡಿದ್ದಾರೆ. ಇವರ ಬದ್ಧತೆ ಸಂವಿಧಾನಕ್ಕೋ? ಭಜರಂಗ ದಳಕ್ಕೋ? ಮಡಿಕೇರಿಯ ಶಾಲೆಯಲ್ಲಿ ಬಜರಂಗದಳ ಯುವಜನರಿಗೆ ಶಸ್ತ್ರ ತರಬೇತಿ ನೀಡಿ ಕಾನೂನಿಗೆ ಬಹಿರಂಗ ಸವಾಲು ಹಾಕಿದೆ. ರಾಜ್ಯದಲ್ಲಿ ಗೃಹ ಮತ್ತು ಶಿಕ್ಷಣ ಖಾತೆಗೆ ಸಚಿವರಿದ್ದಾರೆಯೇ? ಸರಕಾರ ಜೀವಂತವಾಗಿದೆಯೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಶಾಂತಿ ಕದಡಿಸಲು, ಭೀತಿ ಹುಟ್ಟಿಸಲು, ರಾಜ್ಯದ @BJP4Karnataka ಸರ್ಕಾರ ಭಜರಂಗದಳ,‌ ಶ್ರೀರಾಮಸೇನೆಯಂತಹ ಕೋಮು‌ವಾದಿ ಸಂಘಟನೆಗಳಿಗೆ ವಿಶೇಷ ಅನುಮತಿ ನೀಡಿದೆಯೇ?
ಕ್ಯಾಮರಾ ತಾಂತ್ರಿಕತೆಯ ಪ್ರಾಥಮಿಕ ಕಲಿಕೆ-1 - Varthabharati
ಫೋಟೋಗ್ರಫಿ ಸುತ್ತಮುತ್ತ: ಭಾಗ -21
ನೂರ್ ಅಹಮದ್ ಎ.ಎಸ್ – ಲೋಕೆಶ್ ಮೊಸಳೆ
ಕ್ಯಾಮರಾ ಕೈಗೆ ಬಂದ ತಕ್ಷಣ ಅದಕ್ಕೆ ಸಂಬಂಧಿಸಿದಂತೆ ಅರಿಯಬೇಕಾದ ಅನೇಕ ವಿಚಾರಗಳಿವೆ. ಈಗ ನಿಮ್ಮ ಬಳಿ ಒಂದು DSLR
ಕ್ಯಾಮರಾ ಇದೆ ಎಂದು ಭಾವಿಸಿಕೊಳ್ಳಿ. ಕ್ಯಾಮರಾ ಸ್ವಿಚ್ ಆನ್ ಮಾಡಿದ ತಕ್ಷಣ ಅದರ ತೋರುಪರದೆಯ (display screen) ಮೇಲೆ ಮೂರು ಚಕ್ರಗಳು ಒಂದರ ಪಕ್ಕ ಒಂದರಂತೆ ಗೋಚರಿಸುತ್ತವೆ. ಈಗ ಆ ಚಕ್ರಗಳು ಸೂಚಿಸುವ ಹಲವಾರು ಸಂಗತಿಗಳ ಕುರಿತು ತಿಳಿಯೋಣ. ಅದರ ಕುರಿತು ಪ್ರಾಥಮಿಕ ಜ್ಞಾನ ಫೋಟೊಗ್ರಫಿಗೆ ಅತ್ಯಂತ ಮಹತ್ವಪೂರ್ಣವಾದುದು. ಅಂತಹ ಮೂರೂ ಚಕ್ರಗಳು ಕ್ಯಾಮರಾದಲ್ಲಿ ಚಿತ್ರ ತೆಗೆಯಲು ಬೇಕಾದ ವಿವಿಧ ಮಾಹಿತಿಗಳನ್ನು ನೀಡುತ್ತವೆ. ಆ ಮಾಹಿತಿಯ ಮೇಲೆ ಸರಿಯಾದ ನಿಯಂತ್ರಣ ಸಾಧಿಸಿದರೆ ಉತ್ತಮ ಚಿತ್ರಗಳನ್ನು ತೆಗೆಯವುದು ಸುಲಭ ಸಾಧ್ಯವಾಗಬಹುದು. ಆ ಮೂರು ಚಕ್ರಗಳನ್ನು ಷಟರ್ ಸ್ಪೀಡ್, ಅಪರ್ಚರ್ ಮತ್ತು ಐಎಸ್‌ಓ ಎಂದು ಕರೆಯಲಾಗುತ್ತದೆ. ಈ ಮೂರರಲ್ಲೂ ವಿಧವಿಧ ಬಗೆಯ ಸಂಖ್ಯಾ ಸೂಚನೆಗಳನ್ನು ಕಾಣಬಹುದು. ಆ ಸಂಖ್ಯಾ ಸೂಚಿಗಳು ಚಿತ್ರದ ಮೇಲೆ ಬೀರುವ ಪರಿಣಾಗಳೇನು ಎಂಬುದನ್ನೇ ನಾವು ಕಲಿಯಬೇಕಿರುವ ವಿಚಾರ. ಹಾಗಾಗಿ ಮೊದಲನೆಯದಾಗಿ ಷಟರ್ ಸ್ಪೀಡ್ ಎಂದರೇನು ಎಂಬುದನ್ನು ತಿಳಿಯೋಣ.
1.ಷಟರ್ ಸ್ಪೀಡ್: ಷಟರ್ ಎನ್ನುವುದು ಕ್ಯಾಮರಾದ ಒಳಗಿರುವ ಒಂದು ಅಂಗ ಎಂದು ಭಾವಿಸಿ. ಚಿತ್ರವೊಂದನ್ನು ಕ್ಲಿಕ್ಕಿಸುವ ಮುನ್ನ ಅದರ ವೇಗದ ಬಡಿತವನ್ನು ನಾವು ನಿರ್ಧರಿಸ ಬಹುದು. ಷಟರ್ ವೇಗ ಎನ್ನುವುದು ಕ್ಯಾಮರಾದಲ್ಲಿರುವ ಷಟರ್ ಒಂದು ಸೆಕೆಂಡ್ ಅಥವಾಒಂದು ಸೆಕೆಂಡಿನ ಎಷ್ಟು ಭಾಗದವರೆಗೆ ತೆರೆದುಕೊಂಡಿರುತ್ತದೆ ಎಂಬುದನ್ನು ಸೂಚಿಸಬಹುದು. ಸಂಖ್ಯೆಯ ಮೂಲಕ ಅದನ್ನು ತೋರಿಸುವುದಾದರೆ ಈ ರೀತಿಯಲ್ಲಿ ತೋರಿಸಬಹುದು. 1s (ಒಂದು ಸೆಕೆಂಡ್), 1/2 ( ಅರ್ಧ ಸೆಕೆಂಡ್), 1/4 ಹೀಗೆ ಸೆಕೆಂಡ್ ಒಂದನ್ನು ವಿಭಜಿಸುತ್ತಾ 1/125 (ಒಂದು ಸೆಕೆಂಡಿನ 125ನೇ ಭಾಗ)... 1/125 , 1/500 ಇತ್ಯಾದಿಯಾಗಿ ವಿಭಜಿಸುತ್ತ ಹೋಗಬಹುದು. ಸರಳವಾಗಿ ಹೇಳಬೇಕೆಂದರೆ ವೇಗವನ್ನು ಹೆಚ್ಚಿಸಿದರೆ ಚಿತ್ರವು ಅಸ್ಪಷ್ಟವಾಗದಂತೆ ಮೂಡಿಸಬಹುದು. ಅಂದರೆ ಹಾರುವ ಪಕ್ಷಿ ಅಥವಾ ಚಲನೆಯಲ್ಲಿರುವ ಯಾವುದೇ ವಸ್ತುವನ್ನು ಸ್ಥಿರವಾಗಿ ನಿಂತಿರುವಂತೆ "freeze'' ಮಾಡಬಹುದು. ಚಿತ್ರ ಕ್ಲಿಕ್ಕಿಸುವಾಗ ಕ್ಯಾಮರಾ ಸಣ್ಣ ಪ್ರಮಾಣದಲ್ಲಿ ಅಲುಗಾಡಿರುತ್ತದೆ. ಆಗ ಆ ಅಲುಗಾಟದ ಪರಿಣಾಮವನ್ನು ಷಟರ್ ಸ್ಪೀಡ್‌ನಿಂದ ಕಡಿಮೆ ಮಾಡಬಹುದು. ಷಟರ್ ಸ್ಪೀಡ್‌ಅನ್ನು ಎರಡು ರೀತಿಯಲ್ಲಿ ವಿಭಜಿಸಬಹುದು.
a) ಹೈ ಷಟರ್ ಸ್ಪೀಡ್ (ಷಟರ್ ವೇಗ 1000ಕ್ಕಿಂತ ಮಿಗಿಲು)