ಪ್ರಶ್ನೆಗಳು: ೧. ನ್ಯಾಷನಲ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟರಿ ಎಲ್ಲಿದೆ? ೨. ಅಯೋಧ್ಯ ಯಾವ ನದಿಯ ದಡದ ಮೇಲಿದೆ? ೩. ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು? ೪. ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು? ೫. ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ? ೬. ಶಕುಂತಲೆಯ ಮಗ ಭರತನ ಮೊದಲ ಹೆಸರೇನು? ೭. ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು? ೮. ಭಾರತದ ರಾಷ್ಟ್ರೀಯ ಕಾಂಗ್ರೆಸ್‌ಗೆ ಆಯ್ಕೆಯಾದ ಮೊಟ್ಟ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು? ೯. ಶಂಭುಲಿಂಗ ಇದು ಯಾರ ಅಂಕಿತನಾಮವಾಗಿದೆ? ೧೦. ಏಕಕಾಲಕ್ಕೆ ದೃಷ್ಟಿಯನ್ನು ಎರಡು ಕಡೆ ಕೇಂದ್ರಿಕರಿಸುವ ಪ್ರಾಣಿ ಯಾವುದು? ೧೧. ಜಪಾನ್ ರಾಷ್ಟ್ರದ ನಾಣ್ಯದ ಹೆಸರೇನು? ೧೨. ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ ಎಲ್ಲಿದೆ? ೧೩. ವಂಶಿ ಇದು ಯಾರ ಕಾವ್ಯ ನಾಮ? ೧೪. ನಾಸ್‌ಡಾಕ್‌ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪೆನಿ ಯಾವುದು? ೧೫. ಸರ್ಕಾರವು ಹೂಡಿಕೆ ಹಿಂತೆಗೆತ ಆಯೋಗವನ್ನು ರಚಿಸಿದ ವರ್ಷ ಯಾವುದು? ೧೬. ದಾರೋಜಿ ಕರಡಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ೧೭. ಜಲದುರ್ಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ೧೮. ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ ಘೋಷಿಸಲ್ಪಟ್ಟ ವರ್ಷ ಯಾವುದು? ೧೯. ೨೦೦೯ರಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? ೨೦. ತ್ರಿಪುರಾ ರಾಜ್ಯದ ರಾಜಧಾನಿ ಯಾವುದು? ೨೧. ನೇತಾಜಿ ಸುಭಾಷಚಂದ್ರಬೋಸ ಕ್ರೀಡಾ ಆಕಾಡೆಮಿ ಮಹಾರಾಷ್ಟ್ರದಲ್ಲಿ ಎಲ್ಲಿದೆ? ೨೨. ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? ೨೩. ಕಾರ್ಗಿಲ್ ಕದನ ನಡೆದ ವರ್ಷ ಯಾವುದು? ೨೪. ವಿಶ್ವದಲ್ಲಿ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯ ಯಾವುದು? ೨೫. ದೆಹಲಿಯಲ್ಲಿನ ರಾಷ್ಟ್ರಪತಿ ಭವನವನ್ನು ವಿನ್ಯಾಸ ಮಾಡಿದವರು ಯಾರು? ೨೬. ದಿನೇಶ ಖನ್ನ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು? ೨೭. ಸತ್ರಿಯ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ? ೨೮. ಆಸ್ಕರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? ೨೯. ಬೆಳಕಿನ ಸಾಂದ್ರತೆ ಅಳೆಯುವ ಸಾಧನ ಯಾವುದು? ೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ. ಈ ವಾರದ ಪ್ರಸಿದ್ಧ ದಿನಾಚರಣೆಗಳು ಅಕ್ಟೋಬರ್ – ೦೧ ವಿಶ್ವ ಹಿರಿಯದಿನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನ ಅಕ್ಟೋಬರ್ – ೦೨ ಗಾಂಧೀ ಜಯಂತಿ ಹಾಗೂ ವಿಶ್ವ ಸಸ್ಯಹಾರಿಗಳ ದಿನ ಅಕ್ಟೋಬರ್ – ೦೪ ವಿಶ್ವ ಪ್ರಾಣಿ ಕಲ್ಯಾಣ ದಿನ ಹಾಗೂ ವಿಶ್ವ ವಸತಿ ದಿನ ಉತ್ತರಗಳು: ೧. ದೆಹಲಿ ೨. ಸರಯೂ (ಉತ್ತರ ಪ್ರದೇಶ) ೩. ವಿಜ್ಞಾನೇಶ್ವರ ೪. ಡಿಸೆಂಬರ್ ೨೫ – ೨೦೦೧ ೫. ಅರವಿಂದ ಮಾಲಗತ್ತಿ ೬. ಸರ್ವಧರ್ಮ ೭. ನಾದಿರ್ ಷಾ ೮. ಬದ್ರುದ್ದೀನ್ ತ್ಯಾಬ್ಜೀ ೯. ನಿಜಗುಣ ಶಿವಯೋಗಿ ೧೦. ನೀರುಗುದರೆ ೧೧. ಯೆನ್ ೧೨. ವಾರಣಾಸಿ (ಉತ್ತರ ಪ್ರದೇಶ) ೧೩. ಎ.ಜಿ.ಭೀಮರಾವ್ ೧೪. ಇನ್ಪೋಸಿಸ್ ೧೫. ಆಗಸ್ಟ್ ೧೯೯೬ ೧೬. ಬಳ್ಳಾರಿ ೧೭. ರಾಯಚೂರು ೧೮. ೬ ಏಫ್ರಿಲ್ – ೧೯೪೮ ೧೯. ಎಲ್.ಬಸವರಾಜು ೨೦. ಅಗರತಲಾ ೨೧. ಪುಣೆ ೨೨. ರಾಜಸ್ಥಾನ ೨೩. ೧೯೯೯ ೨೪. ಅಮೆರಿಕನ್ ಮ್ಯೂಸಿಯಂ ಆಫ್ ನಾಚುರಲ್ ಹಿಸೈರಿ ೨೫. ಸರ್.ಎಡ್ಜಿನ್‌ಲುಂಟೆಯೆನ್ಸ್ ೨೬. ಬ್ಯಾಡ್ಮಿಂಟನ್ ೨೭. ಅಸ್ಸಾಂ ೨೮. ಸಿನಿಮಾ ೨೯. ಪೋಟೊ ಮೀಟರ್ ೩೦. ಕೆ.ಕೆ.ಹೆಬ್ಬಾರ್ (ಕರ್ನಾಟಕದ ಪ್ರಸಿದ್ಧ ಚಿತ್ರ ಕಲಾವಿದರು) *****