ಕನ್ನಡ ಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ ಹಿಡಿದೆಳೆದು ಒಂಟೆಗಳ ಸಾಲಿಗೆ ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” ಅವನು ರಕ್ತ ತೆಗೆದು ವೀರ್ಯವಾಗಿಸುತ್ತಾನೆ, ವೀರ್ಯದಿಂದ ಜೀವ ಸೃಷ್ಟಿಸುತ್ತಾನೆ, ಜೀವದ ಬಂಧ ಹಿಡಿದು ಕತ್ತರಿಸಿ ತರ್ಕ ಹುಟ್ಟಿಸುತ್ತಾನೆ ಪುನರುತ್ಥಾನದ ಹಿರಿಮೆ ಮೊಳಗಿಸುತ್ತಾನೆ ಕೋಲು ಹಿಡಿದು ಪಾರಿವಾಳ ಅಟ್ಟಿದಂತೆ ಅಟ್ಟುತ್ತಾನೆ ನನ್ನ, ಲಕ್ಷ ರೀತಿಗಳಿಂದ ಒಲಿಸಿ, ಪರಿಪರಿಯಾಗಿ ಹಂಬಲಿಸಿ ತನ್ನ ಸನ್ನಿಧಿಗೆ ಹಾಜರಾಗಿಸಿ ಸಮುದ್ರಯಾನಕ್ಕೆ ನನ್ನ ನಾವೆಯಾಗಿಸುತ್ತಾನೆ ಹಿಡಿದು ಹಡಗಿನ ಕಂಭಕ್ಕೆ ಕಟ್ಟುತ್ತಾನೆ ನಿರ್ಮಲತೆ ಶೋಧಕರಿಗೆ ನಾನು ಶುದ್ಧಜಲ ಅದೃಷ್ಟಹೀನರ ದಾರಿಗೂ ಬರಿ ಗೊಬ್ಬಳಿ ಮುಳ್ಳು ಅಷ್ಟ ಸ್ವರ್ಗಗಳ ಸೇರುವುದು ದೊರೆಯ ಗುರಿಯಲ್ಲ ನಾನೆ ದೊರೆಯ ಗುರಿ, ಎಂಥಾ ಸೌಭಾಗ್ಯಶಾಲಿ! ದೊರೆಯ ದಳಕ್ಕೆ ಸೇರಿದವರು ಸಾವಿನಿಂದ ಪಾರು ದೊರೆಯ ಕೈಯ ಖಡ್ಗ ನೋಡಿ, ಮಾಡಿದ ಗುರಾಣಿ ಚೂರು ಅಸಂಖ್ಯ ಹಗಲು ರಾತ್ರಿಗಳ ಆತ್ಮದ ಮುತ್ತಿಗೆಗೆ ನಾನು ಪಹರೆ ಮುತ್ತುಗಳ ಮೊರೆವ ಕಡಲಲ್ಲೀಗ ಅದು ನನ್ನಿಂದ ಮರೆ ಅವನ ಸೊಬಗನ್ನು ಎಷ್ಟೆಂದು ಬಣ್ಣಿಸುತ್ತಿ ಅವನು ಉಪಮಾತೀತ, ಇಲ್ಲಿಗೆ ಸಾಕು. ಪ್ರಳಯದ ಅಲೆಯು ಮೇಲೆ ನಾನು ಹೊರಟೆ ***** ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […] ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] ಬಿಟ್ಟ್ಯಾ ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… ಟಿಪ್ಸ್ ಸುತ್ತ ಮುತ್ತ "ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… ಮನ್ನಿ ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… ಬುಗುರಿ ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…