CoolCoder44 commited on
Commit
fa0a1ee
·
verified ·
1 Parent(s): 41e212d

e7b90e0b7ad7710f216db4f4e01a1b16a0bfc6aeed57d17bfe788a3883b00540

Browse files
Files changed (50) hide show
  1. eesanje/url_46_184_1.txt +8 -0
  2. eesanje/url_46_184_10.txt +9 -0
  3. eesanje/url_46_184_11.txt +4 -0
  4. eesanje/url_46_184_12.txt +10 -0
  5. eesanje/url_46_184_2.txt +5 -0
  6. eesanje/url_46_184_3.txt +6 -0
  7. eesanje/url_46_184_4.txt +5 -0
  8. eesanje/url_46_184_5.txt +4 -0
  9. eesanje/url_46_184_6.txt +6 -0
  10. eesanje/url_46_184_7.txt +9 -0
  11. eesanje/url_46_184_8.txt +4 -0
  12. eesanje/url_46_184_9.txt +7 -0
  13. eesanje/url_46_185_1.txt +13 -0
  14. eesanje/url_46_185_10.txt +13 -0
  15. eesanje/url_46_185_11.txt +7 -0
  16. eesanje/url_46_185_12.txt +8 -0
  17. eesanje/url_46_185_2.txt +10 -0
  18. eesanje/url_46_185_3.txt +9 -0
  19. eesanje/url_46_185_4.txt +4 -0
  20. eesanje/url_46_185_5.txt +6 -0
  21. eesanje/url_46_185_6.txt +19 -0
  22. eesanje/url_46_185_7.txt +7 -0
  23. eesanje/url_46_185_8.txt +8 -0
  24. eesanje/url_46_185_9.txt +8 -0
  25. eesanje/url_46_186_1.txt +6 -0
  26. eesanje/url_46_186_10.txt +13 -0
  27. eesanje/url_46_186_11.txt +5 -0
  28. eesanje/url_46_186_12.txt +7 -0
  29. eesanje/url_46_186_2.txt +16 -0
  30. eesanje/url_46_186_3.txt +10 -0
  31. eesanje/url_46_186_4.txt +5 -0
  32. eesanje/url_46_186_5.txt +15 -0
  33. eesanje/url_46_186_6.txt +8 -0
  34. eesanje/url_46_186_7.txt +7 -0
  35. eesanje/url_46_186_8.txt +6 -0
  36. eesanje/url_46_186_9.txt +9 -0
  37. eesanje/url_46_187_1.txt +8 -0
  38. eesanje/url_46_187_10.txt +7 -0
  39. eesanje/url_46_187_11.txt +10 -0
  40. eesanje/url_46_187_12.txt +16 -0
  41. eesanje/url_46_187_2.txt +6 -0
  42. eesanje/url_46_187_3.txt +7 -0
  43. eesanje/url_46_187_4.txt +6 -0
  44. eesanje/url_46_187_5.txt +4 -0
  45. eesanje/url_46_187_6.txt +4 -0
  46. eesanje/url_46_187_7.txt +7 -0
  47. eesanje/url_46_187_8.txt +4 -0
  48. eesanje/url_46_187_9.txt +8 -0
  49. eesanje/url_46_188_1.txt +7 -0
  50. eesanje/url_46_188_10.txt +6 -0
eesanje/url_46_184_1.txt ADDED
@@ -0,0 +1,8 @@
 
 
 
 
 
 
 
 
 
1
+ ರಣ ರಣ ಬಿಸಿನಲ್ಲೂ ಪ್ರಚಾರಕ್ಕೆ ರಂಗು
2
+ ಬೆಂಗಳೂರು,ಏ.7- ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರತೊಡಗಿದೆ. ರಣ ರಣ ಬಿಸಿಲಿನ ಝಳದ ನಡುವೆ ಚುನಾವಣಾ ಪ್ರಚಾರವೂ ಕಾವೇರುತ್ತಿದೆ. ತಮ್ಮ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ನಡೆಸಲು ರಾಜಕೀಯ ಪಕ್ಷಗಳ ಮುಖಂಡರು, ಹೈಕಮಾಂಡ್ ನಾಯಕರು ರಾಜ್ಯಕ್ಕೆ ದಾಂಗುಡಿ ಇಟ್ಟಿದ್ದಾರೆ.
3
+ ನಿನ್ನೆ ಮುಳಬಾಗಿಲಿನ ಕುರುಡುಮಲೆ ದೇವಸ್ಥಾನ ದಿಂದ ವಿಧ್ಯುಕ್ತವಾಗಿ ಪ್ರಚಾರ ಆರಂಭಿಸುವ ಮೂಲಕ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಪ್ರಧಾನಿ ಮೋದಿ ಅವರು ಇದೇ 14ರಂದು ರಾಜ್ಯಕ್ಕೆ ಆಗಮಿಸಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಅಭಿಮಾನಿಗಳು ಬೆಂಬಲಿಗರು ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ, ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.ಬೆಳ್ಳಂಬೆಳಗ್ಗೆ ಅಭ್ಯರ್ಥಿಗಳು, ಹಾಗೂ ಅವರ ಬೆಂಬಲಿಗರು ಪಾರ್ಕ್, ಹೋಟೆಲ್, ಬಸ್ ನಿಲ್ದಾಣ ವಿವಿಧ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿರುವುದು ಕಂಡುಬಂತು. ಮೊದಲ ಹಂತದ 14 ಕ್ಷೇತ್ರಗಳಲ್ಲಿ ಮತಪ್ರಚಾರ ಬಿರುಸುಗೊಂಡಿದೆ.
4
+ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಮತ್ತು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ದಾಸರಹಳ್ಳಿ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಕ್ಷೇತ್ರದ ಅಭ್ಯರ್ಥಿ ರಾಜೀವ್‍ಗೌಡ ಅವರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
5
+ ಮಲ್ಲೇಶ್ವರಂನಲ್ಲಿ ರೋಡ್ ಶೋ ನಡೆಸುವ ಮೂಲಕ ಪ್ರಚಾರ ನಡೆಸಿದರು. ಮಹಾಲಕ್ಷ್ಮೀ ಲೇಔಟ್‍ನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಪಕ್ಷದ ವಿರುದ್ಧ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯಾರೆಡ್ಡಿ ಅವರ ಪರವಾಗಿ ಪದ್ಮನಾಭ ನಗರದಲ್ಲಿ ಹಾಗೂ ಬೊಮ್ಮನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದರು.
6
+ ಬಿಜೆಪಿ ಹಾಗೂ ಜೆಡಿಎಸ್ ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದರು. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದ್ದು, ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ-ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ.
7
+ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲೂ ಗ್ರಾಮದ ಮುಖಂಡರೊಂದಿಗೆ ಸಮಾಲೋಚನೆ, ಸಮುದಾಯದ ಮುಖಂಡರೊಂದಿಗೆ ಚರ್ಚೆ, ಗ್ರಾಮದ ದೇವಾಲಯಗಳಿಗೆ ಅನುದಾನದ ಭರವಸೆಗಳನ್ನು ಅಭ್ಯರ್ಥಿಗಳು ಹಾಗೂ ಅವರ ಪರ ಬೆಂಬಲಿಗರು ಬೆಂಬಲ ನೀಡುತ್ತಾ ಮತಯಾಚನೆ ಮಾಡುತ್ತಿದ್ದಾರೆ. ಬೆಳಿಗ್ಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದು, ಸಂಜೆ ರೋಡ್ ಶೋ ರ್ಯಾಲಿ, ಮೆರವಣಿಗೆ, ಕಾರ್ಯಕರ್ತರ ಸಭೆ ಮೂಲಕ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ.
8
+ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳು ಭವಿಷ್ಯದ ಯೋಜನೆಗಳ ಭಿತ್ತಿಪತ್ರಗಳನ್ನು ಹಂಚುವ ಮೂಲಕ ಮತಯಾಚನೆ ಮಾಡಲಾಗುತ್ತಿದೆ. ಹೊಸ ಅಭ್ಯರ್ಥಿಗಳು ಮತದಾರರಿಗೆ ಹೊಸ ಭರವಸೆಗಳನ್ನು ಬಿತ್ತುತ್ತಿದ್ದಾರೆ.
eesanje/url_46_184_10.txt ADDED
@@ -0,0 +1,9 @@
 
 
 
 
 
 
 
 
 
 
1
+ ಸಾವು ಗೆದ್ದ ಕೂಸು ಸಾತ್ವಿಕನ ಮನದಾಳದಿಂದ..!!
2
+ ಅಮ್ಮ ಮೆಣಸಿನಕಾಯಿ ಬಜ್ಜಿ ಕೊಟ್ಟಿದ್ರು, ಅದನ್ನ ತಿನ್ಕೊಂಡು ಅಲ್ಲಿ ಒಂದು ಕೋಳಿ ಮರಿ ಹೋಗ್ತಾ ಇತ್ತು. ಅದನ್ನು ನೋಡಿ ಆ ಕಡೆ ಹೋಗ್ತಾ ಇದ್ದೆ. ಏನಾಯ್ತೋ ಏನೋ ಬೋರ್ವೆಲ್ ಪೈಪ್ ಒಳಗೆ ಬಿದೋಗ್ಬಿಟ್ಟೆ….ಕೆಳಗಡೆಗೆ ಹೋಗಿಬಿಟ್ಟೆ. ಕಾಲು ಮೇಲೆ ತಲೆ ಕೆಳಗೆ. ನಂಗೆ ಭಯ ಆಗ್ಬಿಡ್ತು. ಏನಪ್ಪ ಮಾಡೋದು. ಯಾರೂ ನೋಡಿಲ್ವೇ ನಾನು ಬಿದ್ದಿರೋದು. ಅಮ್ಮ ಯಾಕೆ ಇನ್ನೂ ಬರಲಿಲ್ಲ, ಚಿಕ್ಕಪ್ಪ ಯಾಕೆ ಬರಲಿಲ್ಲ, ಅಕ್ಕ ಯಾಕೆ ಬರಲಿಲ್ಲ, ಅಪ್ಪ ಬಂದ್ರೆ ಹೊಡಿಬಹುದು, ಏನ್ ಮಾಡೋದು ಈಗ….
3
+ ತುಂಬಾ ಭಯ ಆಗ್ತಾ ಇತ್ತು. ಯಾರು ಯಾಕೆ ಬರ್ತಾ ಇಲ್ಲ ಅಂತ ಯೋಚನೆ ಮಾಡ್ತಾ ಇದ್ದೆ. ಅಳು ಬಂತು. ಜೋರಾಗಿ ಅತ್ತುಬಿಟ್ಟೆ. ಆಮೇಲೆ ತಲೆ ಕೆಳಗಡೇ ಇದ್ರು ಸ್ವಲ್ಪ ಹೊತ್ತಿಗೆ ನಿದ್ದೆ ಮಾಡಿದೆ. ಎಚ್ಚರ ಆದಾಗ ಹಾಂಗೇ ಇದ್ದೇ. ಈಗ ಭಯ ಇನ್ನೂ ಜಾಸ್ತಿ ಆಯ್ತು. ಗುಮ್ಮ ಬಂದ್ರೆ ಏನ್ಮಾಡೋದು, ಒಬ್ಬನೇ ಇದ್ದೀನಿ, ಅಮ್ಮನೂ ಇಲ್ಲ ಅಂತ…ಏನೂ ಮಾಡೋಕೆ ಆಗ್ತಾ ಇಲ್ಲ, ಯಾಕೆ ಯಾರು ನೋಡಿಲ್ವಾ, ಸ್ವಲ್ಪ ಹೊತ್ತು ನಿದ್ದೆ ಮಾಡೋದು, ಸ್ವಲ್ಪ ಹೊತ್ತು ಅಳೋದು, ಹಾಗೆ ಮಲಗೋದು, ಹೊಟ್ಟೆ ಬೇರೆ ಹಸಿವಾಯ್ತು. ಮೊಮ್ಮು ಕೊಡೋರು ಯಾರು ಇರಲಿಲ್ಲ. ಮತ್ತೆ ಜೋರಾಗಿ ಅತ್ತುಬಿಟ್ಟೆ. ಅಮ್ಮ ಅಪ್ಪ ಅಂತ ಕೂಗಿದೆ….
4
+ ಸ್ವಲ್ಪ ಹೊತ್ತಿನ ನಂತರ ಯಾರೋ ಕಾಲ್ಗೆ ಏನು ಕಟ್ಟಿದಂಗೆ ಆಯ್ತು, ಯಾರು ಇರಬಹುದು, ಯಾಕೆ ನನ್ನ ತಗೋತಾ ಇಲ್ಲ ಅಂತ ಯೋಚನೆ ಮಾಡ್ತಾ ಇದ್ದೆ. ಸ್ವಲ್ಪ ಹೊತ್ತಾದ್ಮೇಲೆ ಅದೇನು ತಣ್ಣಗೆ ಗಾಳಿ ಬಿಟ್ರು, ಹೋ ಯಾರೋ ಬಂದಿದ್ದಾರೆ ಅನ್ಕೊಂಡೆ. ಈಗ ನನ್ನ ಎಳ್ಕೋತಾರೆ ಅಂದ್ಕೊಂಡೆ ಇಲ್ಲ ಯಾರು ಎಳಕೊಂಡೇ ಇಲ್ಲ ಮತ್ತೆ ಭಯ ಆಯಿತು..ಏನೋ ಆಚೆಕಡೆ ಸೌಂಡ್ ಆಗ್ತಾ ಇತ್ತು, ಯಾವುದೋ ಗಾಡಿ ಹೋಗ್ತಾ ಇದ್ದಂಗೆ, ಯಾರೋ ಮಾತಾಡ್ದಂಗೆ, ಓ ಎಲ್ಲಾ ಬಂದಿದ್ದಾರೆ ಅಂತ ಅನ್ಕೊಂಡೆ, ಎಷ್ಟೊತ್ತಾದ್ರೂ ಏನೂ ಆಗಲಿಲ್ಲ, ಎಷ್ಟೊತ್ ನಿದ್ದೆ ಮಾಡಿದ್ನೋ ಏನೋ ಗೊತ್ತಿಲ್ಲ ಕತ್ತಲು ಹಂಗೇ ಇತ್ತು, ಅಮ್ಮನ ಮೇಲೆ ಅಪ್ಪನ ಮೇಲೆ ಕೋಪ ಬಂತು. ಅಜ್ಜೀನೂ ಬರ್ಲಿಲ್ಲ. ಎಲ್ಲರೂ ನನ್ನ ಬಿಟ್ಟುಬಿಟ್ಟವ್ರೆ ಅಂತ ಅನ್ನಿಸ್ತು.
5
+ ಅಮ್ಮ ಇಷ್ಟೊತ್ತಾದ್ರೂ ಮಮ್ಮು ತಗೊಂಡು ಬರಲೇ ಇಲ್ಲ ಅಂತ ಕೋಪ ಬರ್ತಾ ಇತ್ತು. ಅಪ್ಪ ನಾನು ಎಲ್ಲಿದ್ದರೂ ಸಾತ್ವಿಕ್ ಅಂತ ಕೂಗಿಕೊಂಡು ಬರಲೇ ಇಲ್ಲ. ಯಾಕೋ ನನಗೂ ಗೊತ್ತಾಗ್ತಿಲ್ಲ. ನಾನೇನಾದ್ರೂ ಜಾಸ್ತಿ ತೀಟೆ ಗಲಾಟೆ ಹಠ ಮಾಡಿ ಅವರು ಕೋಪ ಮಾಡ್ಕೊಂಡವ್ರೋ ಏನೋ ಅಂದ್ಕೊಂಡೆ.
6
+ ಏನೋ ಎಷ್ಟೊತ್ತೋ ಹಾಗೆ ಇದ್ದೆ. ಆವಾಗ ಇದ್ದಕ್ಕಿದ್ದಂಗೆ ಅದು ಯಾರೋ ಅಂಕಲ್ ನನ್ನನ್ನ ಎಳ್ಕೊಂಡು ಕೈಯಲ್ಲಿ ಇಟ್ಕೊಂಡು ಅದೇನೋ ಹಗ್ಗದ ಮೇಲೆ ಹಾಕಿ ಕಟ್ಟಿ ಎಳುದ್ರು. ನೋಡುದ್ರೆ ಕತ್ತಲೆಲ್ಲ ಮಾಯ, ಬೆಳಕು ಬಂದ್ಬಿಡ್ತು, ಜನ ಎಲ್ಲಾ ಸುತ್ತ ಇದ್ರೂ ನನಗೆ ಭಯ ಆಗೋಯ್ತು, ಅಳೋಕ್ಕೆ ಶುರು ಮಾಡ್ಬಿಟ್ಟೆ. ಏನಪ್ಪಾ ಏನಾಯ್ತು ನನಗೆ ಇಷ್ಟು ಜನ ಯಾಕ್ ಸೇರಿದ್ದಾರೆ ಅಂತ ಗೊತ್ತಾಗಿಲ���ಲ, ಆಮೇಲೆ ಅಮ್ಮನ್ನ ನೋಡ್ದೇ. ಅಮ್ಮ ಅಲ್ಲೇ ಇದ್ರು. ಬಾಚಿ ತಬ್ಬಿಕೊಂಡ್ರು. ನನಗೆ ಖುಷಿಯಾಗೋಯ್ತು. ಅಪ್ಪ ಓಡಿ ಬಂದು ಎತ್ಕೊಂಡ್ ಬಿಡ್ತು. ಅಪ್ಪ ಅಮ್ಮ ಎಲ್ಲರೂ ಸೇರಿ ಗಾಡಿಯಲ್ಲಿ ಎತ್ಕೊಂಡು ಕರ್ಕೊಂಡು ಹೋದರು.
7
+ ಆಸ್ಪತ್ರೆಯಲ್ಲಿ ಎಷ್ಟೊಂದು ಡಾಕ್ಟರ್ ಬಂದು ಏನೇನೋ ಚೆಕ್ ಮಾಡುದ್ರು. ನಂಗೇನೂ ಆಗೇ ಇಲ್ಲ. ನಾನು ಸುಮ್ಮನೆ ಆಟ ಆಡ್ಕೊಂಡು ಇದ್ದೀನಿ. ಎಲ್ಲರೂ ಬಂದು ತಿಂಡಿ ಬೇಕಾ ಮಗನೇ, ಚಾಕಲೇಟ್ ಬೇಕಾ ಮಗು, ಆರಾಮ್ ಇದ್ಯಾ ಕಂದ, ಅಂತ ಜಾಸ್ತಿ ಪ್ರೀತಿ ಮಾಡ್ತಾ ಇದ್ದಾರೆ. ನನಗೂ ಖುಷಿಯೋ ಖುಷಿ..
8
+ ಅದು ಎರಡು ವರ್ಷದ ಪುಟ್ಟ ಮಗುವಾಗಿದ್ದರಿಂದಾಗಿ ಅದಕ್ಕೆ ಸಾವಿನ ಭಯ ಕಾಡಲಿಲ್ಲ. ಭವಿಷ್ಯದ ಭಯ ನೆನಪಾಗಲಿಲ್ಲ. ಸಂಬಂಧಗಳು, ಆಸ್ತಿ ಅಂತಸ್ತುಗಳು, ಅಕಾರಗಳ ಮೋಹವಿರಲಿಲ್ಲ. ಒಂದು ವೇಳೆ ನಮ್ಮಂತ ದೊಡ್ಡವರಾಗಿದ್ದರೆ ಅವರ ಈ ಪರಿಸ್ಥಿತಿಗೆ ಬಿಪಿ ಶುಗರ್ ಎಲ್ಲವೂ ಒಮ್ಮೆಲೇ ಹೆಚ್ಚಾಗಿ ಏನೇನೋ ಇಲ್ಲಸಲ್ಲದ ಊಹೆಗಳು ಬಂದು ಅಲ್ಲಿಯೇ ಸಾಯುವ ಸಾಧ್ಯತೆಗಳಿದ್ದವು.
9
+ ಆದರೆ ಮುಗ್ಧ ಮಗುವಿಗೆ ಆ ಯಾವ ಭಾವನೆಗಳೂ ಇರುವುದಿಲ್ಲ. ಆದ್ದರಿಂದಲೇ ಸುಮಾರು 20 ಗಂಟೆಗಳ ದೀರ್ಘಕಾಲ ತಲೆಕೆಳಗಾಗಿ ಇದ್ದರೂ ಮಗು ಆರೋಗ್ಯವಾಗಿ ಹೊರಬಂದಿದೆ ಮತ್ತು ಯಾವುದೇ ಶಾಕ್ ಇಲ್ಲದೆ ಸಹಜವಾಗಿಯೇ ವರ್ತಿಸುತ್ತಿದೆ. ನಾವಾಗಿದ್ದರೆ ಇದೊಂದು ಪುನರ್ಜನ್ಮ ಎಂದು ಅತಿಯಾದ ಭಾವನೆಗಳಿಗೆ ಒಳಗಾಗಿ ಸಿಲುಕುತ್ತಿದ್ದೆವಲ್ಲದೆ ಚೇತರಿಸಿಕೊಳ್ಳುವುದೇ ಕಷ್ಟವಾಗುತ್ತಿತ್ತು.
eesanje/url_46_184_11.txt ADDED
@@ -0,0 +1,4 @@
 
 
 
 
 
1
+ ಏ.15 ರಿಂದ ಉತ್ತರಪತ್ರಿಕೆಗಳ ಮೌಲ್ಯಮಾಪನ
2
+ ಬೆಂಗಳೂರು,ಏ.6-ಎಸ್ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇಂದು ಮುಗಿದಿದ್ದು, ಏ.15 ರಿಂದ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಲಿದೆ. 2023-24 ನೇ ಸಾಲಿನ ಎಸ್ಎಸ್ಎಲ್ಸಿ ಮೊದಲ ವಾರ್ಷಿಕ ಪರೀಕ್ಷೆ ಮಾ.25 ರಿಂದ ಇಂದಿನವರೆಗೆ ರಾಜ್ಯದಲ್ಲಿ ನಡೆದಿದೆ. ಮಾ.25 ರಂದು ಪ್ರಥಮ ಭಾಷಾ ಪರೀಕ್ಷೆಗಳು ನಡೆದಿದ್ದು, ಇಂದು ದ್ವಿತೀಯ ಭಾಷಾ ಪರೀಕ್ಷೆಗಳು ನಡೆದವು.
3
+ ರಾಜ್ಯಾದ್ಯಂತ 4,41,910 ಬಾಲಕರು, 4,28,058 ಬಾಲಕಿಯರು ಸೇರಿದಂತೆ ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. 2,750 ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು.
4
+ ಎಸ್ಎಸ್‌ಎಲ್‌ಸಿ ಪರೀಕ್ಷೆ ಮುಗಿದಿರುವುದರಿಂದ ಉತ್ತರ ಪತ್ರಿಕೆಗಳ ಮಾಲ್ಯಮಾಪನ ಪ್ರಕ್ರಿಯೆ ರಾಜ್ಯದ 15 ಶೈಕ್ಷಣಿಕ ಜಿಲ್ಲೆಗಳಲ್ಲಿ ಏ.15 ರಿಂದ ಪ್ರಾರಂಭವಾಗಲಿದೆ. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮಂಡಳಿಯು ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಮುಖ್ಯ ಶಿಕ್ಷಕರಿಗೆ ಮೌಲ್ಯಮಾಪನಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲು ಸೂಚಿಸಿದೆ.
eesanje/url_46_184_12.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಬರ ನಿರ್ವಹಣೆಯಲ್ಲಿ ಸಿಎಂ ವಿಫಲ : ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ
2
+ ಬೆಂಗಳೂರು,ಏ.6- ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಮಳೆ ಇಲ್ಲದೆ ಎಲ್ಲ ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿದೆ.
3
+ ಕುಡಿಯಲು ನೀರು, ಜಾನುವಾರುಗಳಿಗೆ ಮೇವಿಲ್ಲದೆ ಜನರು ಗುಳೇ ಹೋಗುತ್ತಿದ್ದಾರೆ. ಈ ಸರ್ಕಾರ ಜನರ ಪಾಲಿಗೆ ಇದ್ದು ಸತ್ತಂತೆ. ಹೀಗಾಗಿ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಬ್ರಾಂಡ್ ಬೆಂಗಳೂರು ಈಗ ಬಾಡ್ ಬೆಂಗಳೂರು ಆಗಿದೆ. ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾದ ನಂತರ ರಾಜ್ಯದ ಎಲ್ಲಾ ಅಣೆಕಟ್ಟುಗಳು ಖಾಲಿಯಾಗಿವೆ.
4
+ ಲೋಕೋಪಯೋಗಿ ಸಚಿವರು ಯಾರು ಎಂಬುದೇ ಜನರಿಗೆ ಗೊತ್ತಿಲ್ಲ. ಒಂದು ಕಿ.ಮೀ ರಸ್ತೆಗೆ ಡಾಂಬರ್ ಹಾಕಿಲ್ಲ. ತಮ್ಮ ಜವಾಬ್ದಾರಿ ಮರೆತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ 11 ತಿಂಗಳ ನಂತರ ಬರಪರಿಹಾರದ ಹಣ ಬಿಡುಗಡೆ ಮಾಡಿದ್ದರು. ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ದುಪ್ಪಟ್ಟು ಅನುದಾನ ನೀಡಿದೆ. ಕೇಂದ್ರದಿಂದ ಅನುದಾನ ನೀಡುವ ವಿಷಯದಲ್ಲಿ ಯಾವುದೇ ತಾರತಮ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
5
+ ಜುಲೈ ತಿಂಗಳಲ್ಲೇ ವಾಡಿಕೆಗಿಂತ ಶೇ. 67% ಮಳೆ ಕಡಿಮೆಯಾಗಿದೆ. ಇದಾದ ಬಳಿಕ ಮೂರುವರೆ ತಿಂಗಳು ಕಳೆದ ಮೇಲೆ ಬರ ಬಂದಿದೆ. ಕೆರಗಳು ಬತ್ತಿ ಹೋಗಿದೆ. ಜಲಾಶಯಗಳು ಖಾಲಿ ಖಾಲಿ ಆಗಿದೆ. ಮಳೆಯ ಕೊರತೆಯ ಹಿನ್ನೆಲೆಯಲ್ಲಿ, ಜಲಾಶಯಗಳು ಖಾಲಿ ಖಾಲಿಯಾಗಿದೆ. 508 ಕೆರೆಯಲ್ಲಿ ಮಳೆ ಕಡಿಮೆಯಾದ ಪರಿಣಾಮ ಒಂದು ಹನಿ ನೀರಿಲ್ಲ ಎಂದು ಆಗ್ರಹಿಸಿದರು.
6
+ ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಾರೆ, ಸವಾಲು ಚರ್ಚೆಗೆ ಬನ್ನಿ ಅಂತಾರೆ.ನಾನು ಈ ಮಾತನ್ನು ಹೇಳಬೇಕೋ, ಹೇಳಬಾರದೋ ಗೊತ್ತಿಲ್ಲ.ಕಾಂಗ್ರೆಸ್ ಪಾರ್ಲಿಮೆಂಟ್ನಲ್ಲಿ ಸತ್ತು ಹೋಗಿತ್ತಾ? ರಾಷ್ಟ್ರೀಯ ಕಾಂಗ್ರೆಸ್ ಸತ್ತು ಹೋಗಿದ್ಯಾ?ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
7
+ ಬರ ಪರಿಹಾರಕ್ಕೆ ಒಬ್ಬೊಬ್ಬ ರೈತರಿಗೆ 25ರಿಂದ 50 ಸಾವಿರ ರೂಪಾಯಿ ನೀಡಬೇಕಿತ್ತು. ಆದರೆ ಕೊಟ್ಟಿರುವುದು ಮಾತ್ರ ಕೇವಲ 2 ಸಾವಿರ ರೂಪಾಯಿ.ಮುಂಗಾರು ಬೆಳೆ ಬೇರೆ, ಹಿಂಗಾರು ಬೆಳೆಯೇ ಬೇರೆ. ಹಿಂಗಾರು ಕೂಡ ಕೈ ಕೊಟ್ಟಿದೆ. ಮಿ.ಸಿದ್ಧರಾಮಯ್ಯಜೀ ಏಕೆ ಹಿಂಗಾರು ಬರವನ್ನು ಮುಚ್ಚಿಟ್ಟಿದ್ದೀರಿ? ಈಗ ಘೋಷಣೆ ಮಾಡಿರುವುದು ಮುಂಗಾರು ಬರ ಮಾತ್ರ. ಈವರೆಗೂ 900 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ಗ್ಯಾರೆಂಟಿಗಳನ್ನು ಎಷ್ಟು ಬೇ���ಾದರೀ ಕೊಡಿ. 5 ಏಕೆ 50 ಗ್ಯಾರೆಂಟಿಗಳನ್ನು ಕೊಡಿ.
8
+ 5 ಗ್ಯಾರಂಟಿ ಅಲ್ಲ, 50 ಗ್ಯಾರಂಟಿ ಬೇಕಾದರೆ ಕೊಡಿ. ಆದರೆ ರೈತರಿಗೆ ಪರಿಹಾರ ಕೊಡಿ. ರೈತರ ಆತ್ಮಹತ್ಯೆ ಆಗುತ್ತಿದೆ, ನಿಮಗೆ ಕಿಂಚಿತ್ತೂ ನೋವು ಇಲ್ವಾ. ಹತ್ತು ತಿಂಗಳಲ್ಲಿ ಯಾವ ಅಭಿವೃದ್ಧಿ ಕೆಲಸ ಆಗಿದೆ ಎಂದು ಪ್ರಶ್ನಿಸಿದರು.
9
+ ಜಲಾಶಯ ಕಟ್ಟಿದ್ದೀರಾ? ಶಿಕ್ಷಣ ಸಂಸ್ಥೆ ಮಾಡಿದ್ದೀರಾ? ಅಧಿಕಾರಕ್ಕೆ ಬಂದು ಬಂದು ವರ್ಷವಾಯ್ತು. ಆಸ್ಪತ್ರೆ, ಶಾಲೆ, ಡ್ಯಾಂ ಕಟ್ಟುವುದು ನಮ್ಮ ಕರ್ತವ್ಯ. ಏನನ್ನೂ ಕಟ್ಟಿಲ್ಲ. ಯಾವ ಕೆಲಸವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
10
+ ಮುಂಗಾರು ಪರಿಹಾರ ಬೇಕು ಎಂದು ಬಿಡುಗಡೆ ಮಾಡಿದ್ದೀರಲ್ಲಾ, ಅದೇ ರೀತಿ ಹಿಂಗಾರು ಪರಿಹಾರದ್ದು ಬಿಡುಗಡೆ ಮಾಡಬೇಕು ಅಲ್ಲವೇ? 6651.15 ಕೋಟಿ ನಾವು ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷಗಳ ಅಧಿಕಾರದಲ್ಲಿದ್ದಾಗ ಪರಿಹಾರ ಬಿಡುಗಡೆ ಮಾಡಿದ್ದೇವೆ. ಬೆಳೆ ಪರಿಹಾರ ಬಿಡುಗಡೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
eesanje/url_46_184_2.txt ADDED
@@ -0,0 +1,5 @@
 
 
 
 
 
 
1
+ ಶಾಸಕರಿಗೆ ಸಾಂಸ್ಕøತಿಕ-ಕ್ರೀಡಾ ಕಾರ್ಯಕ್ರಮ
2
+ ಬೆಂಗಳೂರು,ಏ.7- ಪ್ರಸಕ್ತ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಶಾಸಕರಿಗೆ ಸಾಂಸ್ಕøತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮುಂದಾಗಿದ್ದಾರೆ.16ನೇ ವಿಧಾನಸಭೆಯ ಶಾಸಕರುಗಳಲ್ಲಿನ ವಿವಿಧ ಸಾಂಸ್ಕøತಿಕ ಕ್ರೀಡಾ ಚಟುವಟಿಕೆಗಳ ಆಸಕ್ತಿಯನ್ನು ಪ್ರೋತ್ಸಾಹಿಸಲು ಕಾರ್ಯಕ್ರಮವೊಂದನ್ನು ಆಯೋಜಿಸಲು ಸಭಾಧ್ಯಕ್ಷರು ನಿರ್ಧರಿಸಿದ್ದಾರೆ.
3
+ ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳು ಹಾಗೂ ಕ್ರೀಡೆಯಲ್ಲಿ ಹೊಂದಿರುವ ಆಸಕ್ತಿಯ ಬಗ್ಗೆ ಶಾಸಕರು ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಏ.30ರ ಒಳಗಾಗಿ ಶಾಸಕರು ಕಲೆ, ಸಾಹಿತ್ಯ, ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಹೊಂದಿರುವ ಆಸಕ್ತಿಯ ಬಗೆಗಿನ ಮಾಹಿತಿಯನ್ನು ಶಾಸನ ರಚನಾ ಶಾಖೆಗೆ ಸಲ್ಲಿಸಲು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.
4
+ ನಾಟಕ, ಯಕ್ಷಗಾನ, ಆಶುಭಾಷಣ, ಮಿಮಿಕ್ರಿ, ಏಕಪಾತ್ರ ಅಭಿನಯ, ಚಟುವಟಿಕೆಗಳು ಕಲಾ ವಿಭಾಗದಲ್ಲಿ ಸೇರಿವೆ. ಶಾಸ್ತ್ರೀಯ, ಹಿಂದೂಸ್ಥಾನಿ, ಕರ್ನಾಟಕ ಸಂಗೀತ, ಜಾನಪದ ಗೀತೆ, ಭಾವಗೀತೆ, ಚಿತ್ರಗೀತೆ, ನೃತ್ಯ, ಸಾಂಸ್ಕøತಿಕ ಚಟುವಟಿಕೆಗಳ ವಿಭಾಗದಲ್ಲಿವೆ.
5
+ ಇನ್ನು ಕ್ರೀಡಾ ವಿಭಾಗದಲ್ಲಿ ಕಬಡ್ಡಿ, ಈಜು, ಕುಸ್ತಿ, ಫುಟ್ಬಾಲ್, ಕ್ರಿಕೆಟ್, ಕೇರಂ, ಚೆಸ್, ಬಾಸ್ಕೆಟ್ ಬಾಲ್, ಥ್ರೋಬಾಲ್, ಟೇಬಲ್ ಟೆನ್ನಿಸ್, ವಾಲಿಬಾಲ್, ಅಥ್ಲೆಟಿಕ್ಸ್, ಜಿಗಿತ, ಗುಂಡು ಎಸೆತ ಚಟುವಟಿಕೆಗಳಿವೆ. ವಿಶೇಷ ಆಸಕ್ತಿ ಇದ್ದವರು ಮಾಹಿತಿ ನೀಡಲು ಕೋರಿದ್ದಾರೆ.
eesanje/url_46_184_3.txt ADDED
@@ -0,0 +1,6 @@
 
 
 
 
 
 
 
1
+ ದೆಹಲಿಯವರು ಬಂದು ಕೆಲಸ ಮಾಡಿಕೊಡುವುದಿಲ್ಲ: ಡಿ.ಕೆ.ಶಿವಕುಮಾರ್
2
+ ಬೆಂಗಳೂರು,ಏ.7- ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸರ್ಕಾರ ಅಧಿಕಾರದಲ್ಲಿದೆ. ನಿಮ್ಮ ಸಮಸ್ಯೆಗಳಿಗೆ ನಾವು ಪರಿಹಾರ ಹುಡುಕಿಕೊಡಬಹುದೇ ಹೊರತು, ದೆಹಲಿಯವರು ಬಂದು ಕೆಲಸ ಮಾಡಿಕೊಡುವುದಿಲ್ಲ. ಮತ ಹಾಕಿ, ಕೆಲಸ ಕೇಳಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತದಾರರನ್ನು ಒತ್ತಾಯಿಸಿದ್ದಾರೆ.
3
+ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಕೆ.ಸುರೇಶ್ ಪರವಾಗಿ ರಾಜರಾಜೇಶ್ವರಿ ನಗರದ ಹಲವು ಅಪಾರ್ಟ್‍ಮೆಂಟ್‍ಗಳಲ್ಲಿ ನಿವಾಸಿಗಳ ಸಭೆ ನಡೆಸಿ ಮತಯಾಚನೆ ಮಾಡಿದರು.ಆರ್.ಎನ್.ಎಸ್ ಶಾಂತಿನಿವಾಸ್ ಅಪಾರ್ಟ್‍ಮೆಂಟ್ ಮತ್ತು ಯಶವಂತಪುರದ ಗೋಲ್ಡನ್ ಗ್ರಾಂಡ್ ಅಪಾರ್ಟ್‍ಮೆಂಟ್‍ಗಳಲ್ಲಿ ಪ್ರಚಾರ ನಡೆಸಿದ ಡಿ.ಕೆ.ಶಿವಕುಮಾರ್, ಕೆಲವು ಅಪಾರ್ಟ್‍ಮೆಂಟ್‍ಗಳನ್ನು ಬಿಲ್ಡರ್‍ಗಳು ಮಾಲೀಕರಿಗೆ ಹಸ್ತಾಂತರಿಸಿಲ್ಲ ಮತ್ತು ನಿರ್ವಹಣಾ ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ. ಇದು ತಮ್ಮ ಗಮನಕ್ಕೆ ಬಂದಿದೆ.
4
+ ಗೋಲ್ಡನ್ ಅಪಾರ್ಟ್‍ಮೆಂಟ್‍ನಲ್ಲಿ ಒಂದೂವರೆ ಸಾವಿರ ಮತಗಳಿವೆ. ಅಷ್ಟೂ ಜನ ಡಿ.ಕೆ.ಶಿವಕುಮಾರ್‍ರನ್ನು ಬೆಂಬಲಿಸಿ ಗೆಲ್ಲಿಸಿ. ಬಳಿಕ ನಮ್ಮ ಬಳಿ ಬನ್ನಿ. ನಿಮ್ಮ ಕೆಲಸ ಮಾಡಿಕೊಡುವುದು ನಮ್ಮ ಕರ್ತವ್ಯ. ಅದನ್ನು ಬಿಟ್ಟು ನಾವು ಬಿಜೆಪಿಗೆ, ಮೋದಿಗೆ ಮತ ಹಾಕುತ್ತೇವೆ ಎಂದರೆ ದೆಹಲಿಯವರಿಂದಲೇ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದರು.
5
+ ಬೆಂಗಳೂರಿನಲ್ಲಿ ಬರಪರಿಸ್ಥಿತಿಯಿಂದಾಗಿ 7 ಸಾವಿರ ಬೋರ್‍ವೆಲ್‍ಗಳು ಬತ್ತಿ ಹೋಗಿವೆ. ಆನೇಕಲ್ ದಕ್ಷಿಣ ಭಾಗದ ಕ್ಷೇತ್ರಗಳಿಗೆ ನೀರು ಪಂಪ್ ಮಾಡಲು ಎದುರಾಗುತ್ತಿರುವ ಸಮಸ್ಯೆ ನನಗೆ ಮಾತ್ರ ಗೊತ್ತಿದೆ. ಆದರೂ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಕಾರಣಕ್ಕೆ ನಿರಂತರವಾಗಿ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದರು.ಸಂಸದ ಡಿ.ಕೆ.ಸುರೇಶ್ ಜನಸಾಮಾನ್ಯರ ನಡುವೆ ಇದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗೆಲ್ಲಿಸಿ. ನಾವು ಕೊಟ್ಟ ಮಾತನ್ನು ತಪ್ಪುವುದಿಲ್ಲ. ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
6
+ ಅಪಾರ್ಟ್‍ಮೆಂಟ್‍ಗಳ ಸಮಸ್ಯೆಗಳನ್ನು ನಿವಾರಿಸುವುದು ಸ್ಥಳೀಯ ಶಾಸಕರ ಕರ್ತವ್ಯ. ಆದರೆ ಅವರು ಅದನ್ನು ಸರಿಯಾಗಿ ನಿರ್ವಹಿಸಿಲ್ಲ. ನೀವು ನಮ್ಮ ಪಕ್ಷಕ್ಕೆ ಮತ ಹಾಕಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಾವು ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.
eesanje/url_46_184_4.txt ADDED
@@ -0,0 +1,5 @@
 
 
 
 
 
 
1
+ ರಾಜ್ಯದಲ್ಲಿ 10 ಮಂದಿಗೆ ಕಾಲರಾ ದೃಢ
2
+ ಬೆಂಗಳೂರು,ಏ.7- ರಾಜ್ಯದಲ್ಲಿ ಕಾಲರಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದೆ. ಬೆಂಗಳೂರು, ನಗರ ಜಿಲ್ಲೆ ಹಾಗೂ ರಾಮನಗರದಲ್ಲಿ ಸಾಂಕ್ರಾಮಿಕ ರೋಗದ ಪ್ರಮಾಣ ಏರಿಕೆಯಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಮಂದಿಗೆ ಕಾಲರಾ ಇರುವುದು ಪತ್ತೆಯಾಗುತ್ತಿದ್ದಂತೆ ನಗರ ಜಿಲ್ಲೆಯಲ್ಲಿ ಆರು ಹಾಗೂ ರಾಮನಗರದಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
3
+ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 49 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಲರಾ ಇರುವ ಶಂಕೆ ವ್ಯಕ್ತವಾಗಿದ್ದು ಮೂವರಿಗೆ ಕಾಲರಾ ಇರುವುದು ದೃಢಪಟ್ಟಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಲರಾ ಇರುವುದು ದೃಢಪಡುತ್ತಿದ್ದಂತೆ ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಿಚನ್ ಬಂದ್ ಮಾಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಕ್ಟೋರಿಯಾ ಆಸ್ಪತ್ರೆ ಕಿಚನ್ ನಿಂದ ತಿಂಡಿ, ಊಟ ಸಪ್ಲೈ ಮಾಡಲಾಗುತ್ತಿದೆ.ಇಂದು ಬೆಳಗ್ಗೆ ವಿದ್ಯಾರ್ಥಿಗಳಿಗೆ ಬ್ರೆಡ್ ಹಾಗೂ ಬಾಳೆಹಣ್ಣು ಹಂಚಿಕೆ ಮಾಡಲಾಗಿದೆ.
4
+ ಹಾಸ್ಟೆಲ್ ವಾರ್ಡನ್ ಸಸ್ಪೆಂಡ್;ಮೆಡಿಕಲ್ ಕಾಲೇಜಿನ ಹಾಸ್ಟೆಲ್‍ನಲ್ಲಿ ಕಾಲರಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ವಾರ್ಡನ್ ಅಖಿಲಾಂಡೇಶ್ವರಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
5
+ ಹಾಸ್ಟೆಲ್ ತೊರೆದ ವಿದ್ಯಾರ್ಥಿಗಳು:ಕಾಲರಾ ಇರುವುದು ತಿಳಿಯುತ್ತಿದ್ದಂತೆ ಕೆಲ ಮೆಡಿಕಲ್ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿರುವ ಕೆಲ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಖಾಲಿ ಮಾಡಿ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಅಲ್ಲೇ ಉಳಿದುಕೊಂಡಿರುವ ವಿದ್ಯಾರ್ಥಿಗಳು ಅಲ್ಲಿನ ನೀರು ಕುಡಿಯದೆ ಬಾಟಲ್ ವಾಟರ್‍ಗೆ ಮೊರೆ ಹೋಗಿದ್ದಾರೆ.
eesanje/url_46_184_5.txt ADDED
@@ -0,0 +1,4 @@
 
 
 
 
 
1
+ ಡಿಸಿಎಂ ಡಿಕೆಶಿ ಉಪಹಾರ ಕೂಟದಲ್ಲಿ ಬಿಜೆಪಿ ಶಾಸಕ ಕೆ.ಪಿ.ನಂಜುಂಡಿ
2
+ ಬೆಂಗಳೂರು,ಏ.7- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರೊಂದಿಗೆ ಉಪಹಾರ ಕೂಟದಲ್ಲಿ ಭಾಗವಹಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.ಲೋಕಸಭಾ ಚುನಾವಣಾ ನಿಟ್ಟಿನಲ್ಲಿ ನಾನಾರೀತಿಯ ರಾಜಕೀಯ ತಂತ್ರಗಾರಿಕೆಯನ್ನು ಅನುಸರಿಸುತ್ತಿರುವ ಡಿ.ಕೆ.ಶಿವಕುಮಾರ್‍ರವರು ಪಕ್ಷದ ಸಂಘಟನಾತ್ಮಕ ಬಲವನ್ನು ಸದೃಢಗೊಳಿಸಲು ಯತ್ನಿಸುತ್ತಿದ್ದಾರೆ. ವಿಶ್ವಕರ್ಮ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಕೆ.ಪಿ.ನಂಜುಂಡಿ, ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ್ದರು.
3
+ ವಿಧಾನಪರಿಷತ್ ಸದಸ್ಯ ಸ್ಥಾನ, ವಿಧಾನಸಭೆಯಲ್ಲಿ ಸ್ರ್ಪಧಿಸುವ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರಾದರೂ ಕಾಂಗ್ರೆಸ್‍ನಲ್ಲಿ ಮನ್ನಣೆ ಸಿಗಲಿಲ್ಲ. ಹೀಗಾಗಿ ಬಿಜೆಪಿಗೆ ವಲಸೆ ಹೋಗಿದ್ದರು. ಅಲ್ಲಿ ಯಡಿಯೂರಪ್ಪ ಅವರು ಕೆ.ಪಿ.ನಂಜುಂಡಿ ಅವರನ್ನು ವಿಧಾನಪರಿಷತ್‍ನ ಸದಸ್ಯರನ್ನಾಗಿ ಮಾಡಿತ್ತು. ಮುಂದಿನ ಜೂನ್ ವೇಳೆಗೆ ಅವರ ಅಧಿಕಾರವಾಧಿ ಪೂರ್ಣಗೊಳ್ಳಲಿದೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷರ ಜೊತೆ ನಂಜುಂಡಿ ಅವರು ಉಪಹಾರ ಕೂಟ ನಡೆಸಿರುವುದು ಕುತೂಹಲ ಕೆರಳಿಸಿದೆ.
4
+ ಇದೊಂದು ಸೌಜನ್ಯದ ಭೇಟಿ ಎಂದು ಹೇಳಲಾಗಿದೆಯಾದರೂ ನಾನಾ ರೀತಿಯ ರಾಜಕೀಯ ತಂತ್ರಗಾರಿಕೆಗಳು ಭೇಟಿಯ ಹಿಂದೆ ನಡೆದಿವೆ. ನಂಜುಂಡಿ ಅವರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ತರಲು ಗಾಳ ಹಾಕಲಾಗಿದೆ. ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷರೂ ಆಗಿರುವ ಕೆ.ಪಿ.ನಂಜುಂಡಿ ಅವರು ಕಾಂಗ್ರೆಸ್‍ಗೆ ಮರಳಿದ್ದೇ ಆದರೆ ಹಲವು ಕ್ಷೇತ್ರಗಳಲ್ಲಿ ರಾಜಕೀಯವಾಗಿ ಲಾಭವಾಗಲಿದೆ ಎಂಬ ವಿಶ್ಲೇಷಣೆಗಳಿವೆ.
eesanje/url_46_184_6.txt ADDED
@@ -0,0 +1,6 @@
 
 
 
 
 
 
 
1
+ ಮೋದಿ ಅವರ ಅಪ್ಪನ ಮನೆಯ ಆಸ್ತಿಯೇ : ಈಶ್ವರಪ್ಪ
2
+ ಶಿವಮೊಗ್ಗ,ಏ.7- ಪ್ರಧಾನಿ ನರೇಂದ್ರಮೋದಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ಅಪ್ಪನ ಮನೆಯ ಆಸ್ತಿ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಚಾರಕ್ಕೆ ಮೋದಿಯವರ ಫೋಟೋ ಬಳಸಬಾರದು ಎನ್ನಲು ನರೇಂದ್ರಮೋದಿ ಅಶೋಕ್ ಅವರ ಅಪ್ಪನ ಮನೆಯ ಆಸ್ತಿಯೇ ಎಂದು ಪ್ರಶ್ನೆ ಮಾಡಿದರು.
3
+ ಮೋದಿಯವರು ಈ ದೇಶದ ಪ್ರಧಾನಿ. ನನಗೆ ನನ್ನ ಫೋಟೋ ಬಳಸಬಾರದೆಂದು ಮೋದಿ ಹೇಳಿದರೆ ಅದನ್ನು ಕೇಳುತ್ತೇನೆ. ಅದನ್ನು ಬಿಟ್ಟು ಅಶೋಕ್ ಸೇರಿದಂತೆ ಬೇರೆ ಯಾರೇ ಹೇಳಿದರೂ ನಾನು ತಲೆ ಕೆಡಸಿಕೊಳ್ಳುವುದಿಲ್ಲ. ಅಷ್ಟಕ್ಕೂ ಮೋದಿ ಬಿಜೆಪಿ ಆಸ್ತಿಯೇ ಹೊರತು ಅಶೋಕ್ ಅಥವಾ ಇನ್ಯಾರದೋ ಮನೆಯ ಆಸ್ತಿಯಲ್ಲ ಎಂದು ತಿರುಗೇಟು ನೀಡಿದರು.
4
+ ನನಗೆ ನಾಮಪತ್ರ ಹಿಂಪಡೆಯಲು ಅನೇಕರಿಂದ ಒತ್ತಡ ಬರುತ್ತಿದೆ. ಆದರೆ ನನ್ನ ಸಾವಿರಾರು ಹಿತೈಷಿಗಳು ನಾಮಪತ್ರ ಹಿಂಪಡೆಯಬಾರದೆಂದು ನನಗೆ ಒತ್ತಡ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ನಾನು ಸಾಕಷ್ಟು ದೂರ ಸಾಗಿದ್ದೇನೆ. ನನ್ನನ್ನು ಮನವೊಲಿಸುವ ಪ್ರಯತ್ನಗಳು ಈಡೇರುವುದಿಲ್ಲ. ನನ್ನ ನಿರ್ಧಾರ ಈಗಲೂ ಅಚಲ ಎಂದು ಹೇಳಿದರು.
5
+ ದೆಹಲಿಗೆ ಬರುವಂತೆ ಗೃಹಸಚಿವ ಅಮಿತ್ ಷಾ ಅವರು ನನಗೆ ಸೂಚಿಸಿದರು. ಅವರ ಮಾತಿಗೆ ಬೆಲೆ ಕೊಟ್ಟು ನಾನು ಹೋಗಿದ್ದೆ. ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮಗಳ ಒತ್ತಡದಿಂದಾಗಿ ನನ್ನನ್ನು ಭೇಟಿಯಾಗಲು ಸಾಧ್ಯವಿಲ್ಲ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದೂ ಇಲ್ಲ. ನನ್ನ ಸ್ಪರ್ಧೆಗೆ ಹಿರಿಯರ ಸಮ್ಮತಿ ಇದೆ ಎಂದು ಭಾವಿಸುತ್ತೇನೆ ಎಂದರು.
6
+ ಶಿವಮೊಗ್ಗದಲ್ಲಿ ಈ ಬಾರಿ ಅಚ್ಚರಿ ಫಲಿತಾಂಶ ಬರಲಿದೆ. ನಾನು ಗೆದ್ದು ಪ್ರಧಾನಿ ನರೇಂದ್ರಮೋದಿಯವರ ಕೈ ಬಲಪಡಿಸುತ್ತೇನೆ. ಯಾರು ಏನೇ ಮಾತನಾಡಿಕೊಳ್ಳಲಿ ಅದಕ್ಕೆ ಸೊಪ್ಪು ಹಾಕುವುದಿಲ್ಲ. ಈಶ್ವರಪ್ಪ ಎಂದಿಗೂ ಯಾರಿಗೂ ಜಗ್ಗುವ ಮನುಷ್ಯನಲ್ಲ. ನನ್ನ ತೀರ್ಮಾನ ಪಕ್ಷದ ಉಳಿವಿಗಾಗಿ ಎಂದು ಈಶ್ವರಪ್ಪ ಹೇಳಿದರು.
eesanje/url_46_184_7.txt ADDED
@@ -0,0 +1,9 @@
 
 
 
 
 
 
 
 
 
 
1
+ ಏ. 14ರಂದು ಕರ್ನಾಟಕದಲ್ಲಿ ಮೋದಿ ಪ್ರಚಾರದ ಕಹಳೆ, ರೋಡ್ ಶೋಗೆ ಸಿದ್ಧತೆ
2
+ ಬೆಂಗಳೂರು,ಏ.7- ಶತಾಯಗತಾಯ ರಾಜ್ಯದಲ್ಲಿ ಈ ಬಾರಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ದಾಖಲೆ ಬರೆಯುವ ಹೆಗ್ಗುರಿಯೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರು ಇದೇ 14ರಂದು ರಾಜ್ಯದಲ್ಲಿ ವಿಧ್ಯುಕ್ತವಾಗಿ ಪ್ರಚಾರದ ರಣಕಹಳೆ ಮೊಳಗಿಸಲಿದ್ದಾರೆ. ಇದೇ ತಿಂಗಳ 26ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ವಿಶೇಷವಾಗಿ ಒಕ್ಕಲಿಗರ ಬಾಹುಳ್ಯ ವಿರುವ ಕ್ಷೇತ್ರದಲ್ಲಿ ಮೋದಿಯವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಕೆಲವು ಕಡೆ ರೋಡ್ ಶೋಗಳನ್ನು ನಡೆಸಲಿದ್ದಾರೆ.
3
+ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ದಿನದಂದು ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ್ದ ಮೋದಿಯವರು ಇದೇ ಮೊದಲ ಬಾರಿಗೆ ವಿದ್ಯುಕ್ತವಾಗಿ ಪ್ರಚಾರಕ್ಕೆ ಧುಮುಕಲಿದ್ದು, ಚುನಾವಣಾ ಕಾವು ರಂಗೇರಿಸಲಿದ್ದಾರೆ. 14ರಂದು ಭಾನುವಾರ ಕರ್ನಾಟಕಕ್ಕೆ ಆಗಮಿಸಲಿರುವ ಮೋದಿಯವರು ಮೂರು ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಪ್ರಚಾರ ನಡೆಸಲಿದ್ದಾರೆ. ಮೊದಲು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಸುವ ಮೋದಿಯವರು ಎನ್‍ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ಮತಯಾಚನೆ ಮಾಡಲಿದ್ದಾರೆ.
4
+ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಮೋದಿಯವರು ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಚಿಕ್ಕಬಳ್ಳಾಪುರ ನಂತರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲೂ ಮತ್ತೊಂದು ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿದ್ದಾರೆ.
5
+ ದೇವನಹಳ್ಳಿಯಲ್ಲಿ ಪ್ರಚಾರ ನಡೆಸಿದರೆ ಅದು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರವಿದೆ. ಇನ್ನೊಂದು ಮೂಲದ ಪ್ರಕಾರ ದೇವನಹಳ್ಳಿಯಲ್ಲಿ ಸಾಧ್ಯವಾಗದಿದ್ದರೆ ರಾಮನಗರ, ಚನ್ನಪಟ್ಟಣ ಮಧ್ಯಭಾಗದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಲು ಬಿಜೆಪಿ ಉದ್ದೇಶಿಸಿದೆ ಎಂದು ತಿಳಿದುಬಂದಿದೆ.
6
+ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರವಾಗಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹೆಸರಾಂತ ಹೃದಯತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕಣದಲ್ಲಿರುವುದರಿಂದ ಅವರಿಗೆ ಪ್ರಬಲ ಸರ್ಧೆ ಒಡ್ಡಲು ಡಾ.ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.ಈಗಾಗಲೇ ಚನ್ನಪಟ್ಟಣದಲ್ಲಿ ಒಂದು ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರೋಡ್ ಶೋ ನಡೆಸಿ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದರು. ಇದೀಗ ರಾಮನಗರ ಚನ್ನಪಟ್ಟಣ ಮಧ್ಯಭಾಗದಲ್ಲಿ ಬೃಹತ್ ಸಮಾವೇಶ ನಡೆಸಬೇಕೆಂಬ ಚಿಂತನೆ ಬಿಜೆಪಿ ಪಾಳೆಯದಲ್ಲಿದೆ.
7
+ 14ರಂದು ಸಂಜೆ ನರೇಂದ್ರಮೋದಿ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬ್ಯಾಟರಾಯನಪುರ ಮತ್ತು ಹೆಬ್ಬಾಳದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ಮಾಡಲಿರುವ ಮೋದಿಯವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಮತದಾರರಿಗೆ ಮನವರಿಕೆ ಮಾಡುವರು.
8
+ ಭಾನುವಾರ ರಜಾದಿನವಾಗಿದ್ದರಿಂದ ಬೆಂಗಳೂರಿನಲ್ಲಿ ಅಷ್ಟೊಂದು ಜನ ದಟ್ಟಣೆ ಇಲ್ಲವೇ ವಾಹನ ಸಂಚಾರ ದಟ್ಟಣೆ ಇರುವುದಿಲ್ಲ ಎಂಬ ಕಾರಣಕ್ಕಾಗಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 10 ಕಿ.ಮೀ ರೋಡ್ ಶೋ ನಡೆಸಲು ಬಿಜೆಪಿ ಮುಂದಾಗಿದೆ. ಈಗಾಗಲೇ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ನೀಲನಕ್ಷೆಯನ್ನು ಸಿದ್ದಪಡಿಸಲಾಗಿದೆ.
9
+ ಏ.14ರ ನಂತರ ನರೇಂದ್ರ ಮೋದಿಯವರು ಮೈಸೂರು ಮತ್ತು ಚಾಮರಾಜನಗರ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಮತ್ತೊಂದು ಬೃಹತ್ ಸಮಾವೇಶ ನಡೆಸುವ ಸಾಧ್ಯತೆ ಇದೆ. ಮೊದಲ ಹಂತದ ಚುನಾವಣೆಯಲ್ಲಿ ನರೇಂದ್ರಮೋದಿ ಅವರು ಸುಮಾರು 4ರಿಂದ 6 ಬೃಹತ್ ಸಮಾವೇಶಗಳನ್ನು ನಡೆಸುವ ಸಂಭವವಿದೆ. ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.ಯುಗಾದಿ ಹಬ್ಬದ ನಂತರ ಪ್ರಚಾರ ಕಾವೇರಿಲಿದ್ದು, ಮೋದಿ ರಣತಂತ್ರವನ್ನು ಹೆಣೆದಿದ್ದಾರೆ.
eesanje/url_46_184_8.txt ADDED
@@ -0,0 +1,4 @@
 
 
 
 
 
1
+ ಚಿತ್ರದುರ್ಗ; ಖಾಸಗಿ ಬಸ್ ಪಲ್ಟಿ, ಮೂವರ ಸಾವು..
2
+ ಚಿತ್ರದುರ್ಗ, ಏ.7- ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಹೊಳಲ್ಕೆರೆ ಸಮೀಪದ ಹನುಮಂತ ಕಣಿವೇ ತಿರುವಿನ ಬಳಿ ಉರುಳಿಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿ 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
3
+ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಟ್ರಾವಲ್ಸ್‍ನ ಬಸ್‍ನಲ್ಲಿ ಸುಮಾರು 50 ಜನರು ಪ್ರಯಾಣಿಸುತ್ತಿದ್ದರು ಹೊಳಲ್ಕೆರೆ ಪಟ್ಟಣ ಹೊರವಲಯದ ಅರಣ್ಯ ಕಚ್ಚೇರಿ ಸಮೀಪ ಮುಂಜಾನೆ 4.30ರ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಸಾಗರದ ಜಗದೀಶ್ ,ಹೊನಾವರ ಮೂಲದ ಗಣೇಶ್ ಎಂದು ಗುರುತಿಸ ಲಾಗಿದೆ ಹಾಗೂ ಮತ್ತೊಬ್ಬ ಪುರುಷನ ಗುರುತು ಪತ್ತೆ ಹಚ್ಚಲಾಗುತ್ತಿದೆ ಗಾಯಾಳುಗಳಲ್ಲಿ 10 ಮಂದಿ ಮಹಿಳೆಯರು 6 ಮಕ್ಕಳಿದ್ದು ಎಲ್ಲರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ,
4
+ ಚಾಲಕ ತಿರುವಿನಲ್ಲಿ ಎಚ್ಚರ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ .ಬಸ್ ಉರಿಳಿದಾಗ ಕೆಲವರು ನಿದ್ರಿಸುತ್ತಿದ್ದರು ಇದರಿಂದ ಸಾವು ನೋವು ಹೆಚ್ಚಾಗಿದೆ,ಪ್ರಯಾಣಿರ ವಸ್ತುಗಳು ಚಲಾಪಿಲ್ಲಿಯಾಗಿ ಬಿದ್ದಿದ್ದು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ ಐ ಸುರೇಶ್ ಮತ್ತವರ ತಂಡ,ಅಗ್ನಿಶಮಕ ಸಿಬ್ಭಂದಿ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ, ಆಂಬುಲೆನ್ಸ್‍ಗಳನ್ನು ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಅಪಘಾತದ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದೆ .ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
eesanje/url_46_184_9.txt ADDED
@@ -0,0 +1,7 @@
 
 
 
 
 
 
 
 
1
+ ದಿನೇಶ್ ಗುಂಡೂರಾವ್ ಮಾನಸಿಕ ಅಸ್ವಸ್ಥರಾಗಿದ್ದಾರೆ : ಬಿಜೆಪಿ
2
+ ಬೆಂಗಳೂರು,ಏ.6-ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದ ಸುದ್ದಿ ಉಲ್ಲೇಖಿಸಿ ಎಕ್ಸ್ನಲ್ಲಿ ಪೊಸ್ಟ್ ಮಾಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ಸಚಿವ ದಿನೇಶ್ ಗುಂಡೂರಾವ್ ಅನಾರೋಗ್ಯಕ್ಕೆ ಒಳಗಾಗಿ ಮಾನಸಿಕ ಅಸ್ವಸ್ಥ ರಾಗಿದ್ದಾರೆ ಎಂದು ಟೀಕಿಸಿದೆ.
3
+ ಕಾಂಗ್ರೆಸ್ ಐಟಿ ಸೆಲ್ ಹರಡುವ ಸುಳ್ಳು ಸುದ್ದಿಯನ್ನೇ ಸತ್ಯ ಎಂದು ಬಿಂಬಿಸಲು ಹೊರಟಿದ್ದಾರೆ. ನೀವು ಆರೋಗ್ಯ ಸಚಿವರೋ ಅಥವಾ ಸುಳ್ಳು ಹೇಳುವ ಸಚಿವರೋ? ಎಂದು ಬಿಜೆಪಿ ಪ್ರಶ್ನಿಸಿದೆ. ಸಾಕ್ಷಿ ವಿಚಾರಣೆ, ಆರೋಪಿ ವಿಚಾರಣೆ ತಿಳಿಯದಷ್ಟು ಮೂರ್ಖರು ಸಚಿವ ಸ್ಥಾನದಲ್ಲಿ ಕೂತಿರುವುದು ದುರಂತ. ಕೂಡಲೇ ರಾಜ್ಯದ ಜನರ ಮುಂದೆ ಕ್ಷಮೆ ಕೇಳಿ ಮಾನ ಉಳಿಸಿಕೊಳ್ಳಿ ಎಂದು ಆಗ್ರಹಿಸಿದೆ.
4
+ ಟ್ವೀಟ್ನಲ್ಲಿ ಏನಿತ್ತು:ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ. ಸ್ಪೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು ಎನ್ಐಎ ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಪೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ಧರ್ಮ ರಕ್ಷಣೆ ಹೆಸರಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತೀರೋ ಕೇಸರಿ ಭಯೋತ್ಪಾದನೆ ಎಷ್ಟು ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ? ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿಯು ಇದಕ್ಕೇನು ಹೇಳುತ್ತದೆ? ಎಂದು ಪ್ರಶ್ನಿಸಿದ್ದರು.
5
+ ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಬಾಂಬ್ ಸ್ಪೋಟ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರಿಸಿದ ರಾಜ್ಯ ಬಿಜೆಪಿ ನಾಯಕರು ಈಗ ಉತ್ತರ ನೀಡಲೇ ಬೇಕು ಎಂದಿದ್ದರು.
6
+ ಸಚಿವ@dineshgraoನಿಜಕ್ಕೂ ಅನಾರೋಗ್ಯಕ್ಕೆ ಒಳಗಾಗಿ ಮಾನಸಿಕ ಅಸ್ವಸ್ಥರಾಗಿದ್ದಾರೆ. ಕಾಂಗ್ರೆಸ್‌ ಐಟಿ ಸೆಲ್‌ ಹರಡುವ ಸುಳ್ಳು ಸುದ್ದಿಯನ್ನೇ ಸತ್ಯವೆಂದು ಬಿಂಬಿಸಲು ಹೊರಟಿದ್ದಾರೆ.ನೀವು ಆರೋಗ್ಯ ಸಚಿವರೋ ಅಥವಾ ಸುಳ್ಳು ಹೇಳುವ ಸಚಿವರೋ?ಸಾಕ್ಷಿ ವಿಚಾರಣೆ, ಆರೋಪಿ ವಿಚಾರಣೆ ತಿಳಿಯದಷ್ಟು ಮೂರ್ಖರು ಸಚಿವ ಸ್ಥಾನದಲ್ಲಿ ಕೂತಿರುವುದು ದುರಂತ.…://./KQtw9UjTYV
7
+ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ.ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯ��� ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು ವಶಕ್ಕೆ ಪಡೆದಿದೆ ಎಂದ ಮೇಲೆ…../
eesanje/url_46_185_1.txt ADDED
@@ -0,0 +1,13 @@
 
 
 
 
 
 
 
 
 
 
 
 
 
 
1
+ ಚುನಾವಣಾ ಅಕ್ರಮಗಳ ತಡೆಗೆ ಖುದ್ದು ಫೀಲ್ಡಿಗಿಳಿದ ಡಿಸಿ, ಎಸ್ಪಿ ಗಳು
2
+ ಬೆಂಗಳೂರು,ಏ.6-ಚುನಾವಣಾ ಅಕ್ರಮಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಹಲವೆಡೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಕಾಧಿರಿಗಳೇ ಅಖಾಡಕ್ಕಿಳಿದು ಖುದ್ದು ಪರಿಶೀಲನೆ ನಡೆಸಲಾರಂಭಿಸಿದ್ದಾರೆ.
3
+ ಕೇಂದ್ರ ಚುನಾವಣಾ ಆಯೋಗ ಗುರುವಾರ ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ನಿಷ್ಪಕ್ಷಪಾತ , ನಿರ್ಭೀತ, ನ್ಯಾಯಸಮ್ಮತ ಹಾಗೂ ಕಳಂಕರಹಿತ ಚುನಾವಣೆಯ ಪರಿಸ್ಥಿತಿಯನ್ನು ಖಾತ್ರಿಪಡಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತು.
4
+ ಜೊತೆಗೆ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಭಾಗಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿತ್ತು. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಡಳಿತಗಳಿಗೆ ಮಾರ್ಗಸೂಚಿಯನ್ನು ರವಾನಿಸಿದ್ದು, ಅದರ ಆಧಾರದ ಮೇಲೆ ಇಂದು ಹಲವು ಕಡೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಕಾಧಿರಿಗಳು ಕ್ಷೇತ್ರ ಮಟ್ಟದ ಪರಿಶೀಲನೆ ನಡೆಸಿದ್ದಾರೆ.
5
+ ತುಮಕೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಖುದ್ದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಶೋಕ್ರವರು ಹಾಜರಿದ್ದು, ಪರಿಶೀಲನೆ ನಡೆಸಿದರು. ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಖುದ್ದು ಪರಿಶೀಲಿಸಿದ್ದಲ್ಲದೆ, ಅಂತರ ಜಿಲ್ಲೆಗಳಿಗೆ ಸಂಚರಿಸುವ ಸಾರಿಗೆ ಬಸ್ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
6
+ ಪ್ರಯಾಣಿಕರ ಸೋಗಿನಲ್ಲಿ ಸಾಗಿಸಲಾಗುವ ಲಗೇಜ್ಗಳಲ್ಲಿ ಅನುಮಾನಾಸ್ಪದ ವಸ್ತುಗಳಿದ್ದರೆ ಅದನ್ನು ಪರಿಶೀಲಿಸುವಂತೆಯೂ ಸೂಚನೆ ನೀಡಲಾಗಿದೆ.ಮತ್ತೊಂದೆಡೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಪಟೇಲ್ ಚೆಕ್ ಪೊಸ್ಟ್ಗಳಲ್ಲಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಬೆಳಗಾವಿ, ಮಹಾರಾಷ್ಟ್ರ ದೊಂದಿಗೆ ಗಡಿ ಹಂಚಿಕೊಂಡಿದ್ದು, 24 ಗಡಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಒಟ್ಟು 66 ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿಗಳು ಹಗಲು-ರಾತ್ರಿ ಮೂರು ಪಾಳಿಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
7
+ ಈವರೆಗೂ 40 ಲಕ್ಷ ರೂ.ಗಳ ಮೌಲ್ಯದ ನಗದು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 2ನೇ ಹಂತದ ಚುನಾವಣಾ ಅಭ್ಯರ್ಥಿಗೆ ಏ.12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆ ಬಳಿಕ ಮತ್ತಷ್ಟು ವಸ್ತುಗಳು ಜಪ್ತಿಯಾಗಬಹುದು ಎಂದು ಜಿಲ್ಲಾಧಿಕಾರಿ ನಿತೀಶ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
8
+ ಈ ಮೊದಲು ವಿಧಾನಸಭಾ ಚುನಾವಣೆ ವೇಳೆ ಇದೇ ಚೆಕ್ ಪೋಸ್ಟ್ ನಲ್ಲಿ ಭಾರಿ ಪ್ರಮಾಣದ ನಗದು ಹಾಗೂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಪ್ರಸ್ತುತ ಸಾರ್ವತ್ರಿಕ ಚುನಾವಣೆ ದೇಶದೆಲ್ಲೆಡೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿರುವುದರಿಂದಾಗಿ ಅಕ್ರಮಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
9
+ 200 ಕೋಟಿ ರೂ. ಮೌಲ್ಯದ ಗಡಿ ದಾಟುತ್ತಿರುವ ಅಕ್ರಮ :ಕಳೆದ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ನಡೆದ ಒಟ್ಟು ಕಾರ್ಯಾಚರಣೆಯಲ್ಲಿ ಸರಿಸುಮಾರು 100 ಕೋಟಿ ರೂ.ಗಳಷ್ಟು ವಸ್ತುಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭೆಯ ಚುನಾವಣೆಯನ್ನೂ ಮೀರಿದ ಚುನಾವಣಾ ಅಕ್ರಮಗಳ ಸನ್ನದು ಕಂಡುಬರುತ್ತಿದೆ.
10
+ ಮಾ.16 ರಂದು ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಅಂದಿನಿಂದಲೂ ನೀತಿ ಸಂಹಿತೆ ಜಾರಿಯಲ್ಲಿದೆ. 21 ದಿನಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 195 ಕೋಟಿ ರೂ. ಮೌಲ್ಯದ ಚುನಾವಣಾ ಅಕ್ರಮಕ್ಕೆ ಸಂಬಂಧಪಟ್ಟಂತಹ ನಗದು ಹಾಗೂ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
11
+ ನಿನ್ನೆ ಒಂದೇ ದಿನ ಆದಾಯ ತೆರಿಗೆ ಇಲಾಖೆ 4 ಕೋಟಿ ರೂ.ಗೂ ಅಕ ಮೊತ್ತವನ್ನು ಜಪ್ತಿ ಮಾಡಿತ್ತು. ಈವರೆಗೂ 34.59 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. 1.79 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳನ್ನು, 11.10 ಕೋಟಿ ರೂ. ಮೌಲ್ಯದ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
12
+ ಈವರೆಗೂ 133 ಕೋಟಿ ರೂ. ಮೊತ್ತದ 133 ಲೀಟರ್ ಮದ್ಯವನ್ನು ಚುನಾವಣಾ ಕರ್ತವ್ಯದಲ್ಲಿರುವ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.5.35 ಕೋಟಿ ರೂ. ಮೌಲ್ಯದ 333 ಕೆ.ಜಿ. ಮಾದಕ ದ್ರವ್ಯ ಸಿಕ್ಕಿಬಿದ್ದಿದ್ದರೆ, 9.43 ಕೋಟಿ ರೂ. ಮೌಲ್ಯದ 16 ಕೆ.ಜಿ. ಗೂ ಅಕ ಪ್ರಮಾಣದ ಚಿನ್ನ, 27 ಲಕ್ಷ ರೂ. ಮೌಲ್ಯದ 59 ಕೆ.ಜಿ. ಬೆಳ್ಳಿ, 9 ಲಕ್ಷ ರೂ. ಮೌಲ್ಯದ 21 ಕ್ಯಾರೆಟ್ ವಜ್ರವನ್ನು ವಶಪಡಿಸಿಕೊಳ್ಳಲಾಗಿದೆ.
13
+ ಹಿರಿಯ ಅಧಿಕಾರಿಗಳು ಖುದ್ದು ಅಖಾಡಕ್ಕೆ ಇಳಿದಿರುವುದರಿಂದಾಗಿ ತಪಾಸಣೆ ಮತ್ತಷ್ಟು ಬಿಗಿಯಾಗಲಿದ್ದು, ಮುಂದಿನ ದಿನಗಳಲ್ಲಿ ಚುನಾವಣಾ ಅಕ್ರಮ ನಡೆಸುವವರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
eesanje/url_46_185_10.txt ADDED
@@ -0,0 +1,13 @@
 
 
 
 
 
 
 
 
 
 
 
 
 
 
1
+ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಜೈಲಲ್ಲಿರುವ ಮಾಝ್ ಮುನೀರ್ A1
2
+ ನವದೆಹಲಿ,ಏ.6-ಕರ್ನಾಟಕದ ರಾಜಧಾನಿ ಬೆಂಗಳೂರಿನ ಕುಂದಲಹಳ್ಳಿಯಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಕಳೆದ ಮಾರ್ಚ್ 1ರಂದು ನಡೆದ ಸ್ಪೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಮಹತ್ವದ ಮಾಹಿತಿ ಬಹಿರಂಗಪಡಿಸಿದೆ.ಈ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸಹ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಎಂದು ತನಿಖಾ ಸಂಸ್ಥೆ ಗುರುತಿಸಿದೆ.
3
+ ಶಿವಮೊಗ್ಗದಲ್ಲಿ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದ ಮಾಝ್ ಮುನೀರ್‍ನನ್ನೇ ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಮೊದಲ ಆರೋಪಿಯನ್ನಾಗಿ ಮಾಡಿದೆ. ಜೈಲು ಸೇರುವ ಮೊದಲೇ ಕೆಲವೊಂದು ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಆತನನ್ನೇ ಎ1 ಆರೋಪಿಯನ್ನಾಗಿ ಮಾಡಿದೆ.
4
+ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಝ್ ಮುನೀರ್‍ನನ್ನು ಎನ್‍ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ದಾಳಿ ನಡೆಸಿದ ಬಳಿಕ ಮಾಝ್ ಬ್ಯಾರಕ್‍ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
5
+ ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದ್ದು, ಈಗ ಬಂಧನ ಆಗಿರೋ ಮುಜಾಮಿಲ್ ಷರೀಫ್ ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
6
+ ಇಬ್ಬರೂ ತೀರ್ಥಹಳ್ಳಿಯವರು:ಬೆಂಗಳೂರಿನ ಬ್ರೂಕ್‍ಫೀಲ್ಡ್‍ನ ಐಟಿಪಿಎಲ್ ರಸ್ತೆಯಲ್ಲಿರುವ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದರು. ಈ ಪ್ರಕರಣದ ಆರೋಪಿಗಳಾದ ಮುಸ್ಸಾವಿರ್, ಅಬ್ದುಲ್ ಇಬ್ಬರೂ ಕೂಡ ಶಿವಮೊಗ್ಗದ ತೀರ್ಥಹಳ್ಳಿಯವರಾಗಿದ್ದಾರೆ.
7
+ ತಲೆಮರೆಸಿಕೊಂಡಿರುವ ಇವರ ಪತ್ತೆ ಹಚ್ಚುವ ಮತ್ತು ಬಂಸುವ ನಿಟ್ಟಿನಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಎನ್‍ಐಎ ಮೂಲಗಳು ಮಾಹಿತಿ ನೀಡಿವೆ.ಇದಲ್ಲದೆ, ಪ್ರಮುಖ ಆರೋಪಿಗಳಿಗೆ ಸೋಟಕ ಸಾಮಗ್ರಿ ಪೂರೈಸಿದ ಚಿಕ್ಕಮಗಳೂರಿನ ಕಳಸಾ ನಿವಾಸಿ ಮುಝಮ್ಮಿಲ್ ಶರೀಫ್ ಎಂಬಾತನನ್ನು ಮಾರ್ಚ್ 26ರಂದು ಬಂಸಲಾಗಿದೆ.
8
+ ಪೊಲೀಸ್ ಕಸ್ಟಡಿಯಲ್ಲಿರುವ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಸಾಕ್ಷ್ಯಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಲು ಎನ್‍ಐಎ ತಲೆಮರೆಸಿಕೊಂಡಿರುವ ಮತ್ತು ಬಂಧಿತ ಆರೋಪಿಗಳ ಕಾಲೇಜು ಮತ್ತು ಶಾಲಾ ಸ್ನೇಹಿತರು ಸೇರಿದಂತೆ ಎಲ್ಲ ಪರಿಚಯಸ್ಥರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ.
9
+ ಇದು ಭಯೋತ್ಪಾದಕ ಘಟನೆಯಾಗಿರುವುದರಿಂದ ಸಾಕ್ಷಿಗಳ ಗುರುತಿನ ಯಾವುದೇ ಮಾಹಿತಿಯು ತನಿಖೆಗ��� ಅಡ್ಡಿಯಾಗುವುದರ ಜತೆಗೆ ಅವರನ್ನು ಅಪಾಯಕ್ಕೆ ತಳ್ಳಬಹುದು. ಅಲ್ಲದೇ, ಪರಿಶೀಲಿಸದ ಸುದ್ದಿಗಳು ಪ್ರಕರಣದ ಪರಿಣಾಮಕಾರಿ ತನಿಖೆಗೂ ಅಡ್ಡಿಯಾಗಿವೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಎಲ್ಲರ ಸಹಕಾರವನ್ನು ಎನ್‍ಐಎ ಕೋರಿದೆ.
10
+ 2022ರ ಆಗಸ್ಟ್ 15ರಂದು ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಶಿವಮೊಗ್ಗದಲ್ಲಿರುವ ಅಮೀರ್ ಅಹಮದ್ ವೃತ್ತದಲ್ಲಿ ಘರ್ಷಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬಟ್ಟೆ ಅಂಗಡಿ ನೌಕರ ಪ್ರೇಮ್‍ಸಿಂಗ್‍ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಸಿದಂತೆ ಜಬೀಯುಲ್ಲಾ ಎಂಬಾತನ ಬಂಧನವಾಗುತ್ತದೆ. ಆತನ ವಿಚಾರಣೆ ಮತ್ತು ಮೊಬೈಲ್ ದಾಖಲೆ ಪರಿಶೀಲನೆಯ ವೇಳೆ ಆತ ಹಲವರ ಜೊತೆ ಸಂವಹನ ನಡೆಸಿದ ವಿಚಾರ ತಿಳಿದು ಬರುತ್ತದೆ. ಈ ಆಧಾರದಲ್ಲಿ ತನಿಖೆ ನಡೆಸಿದಾಗ ಟ್ರಯಲ್ ಬಾಂಬ್ ಸ್ಫೋಟದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
11
+ ಈ ಪ್ರಕರಣದ ಆರೋಪಿಯಾಗಿದ್ದ ಶಾರೀಕ್ ನಾಪತ್ತೆಯಾಗಿದ್ದ. ಆದರೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸಿಡಿಸಲು ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಂಬ್ ಸೋಟಗೊಂಡ ಪರಿಣಾಮ ಶಾರೀಕ್ ಸಿಕ್ಕಿಬಿದ್ದಿದ್ದ.ಬಂಧನಕ್ಕೆ ಒಳಗಾಗಿರುವ ಸೈಯದ್ ಯಾಸಿನ್, ಮಾಜ್ ಮುನೀರ್, ಶಾರೀಕ್ ಅಹ್ಮದ್ ಶಿಮೊಗ್ಗದ ಅಕ್ಷರ ಕಾಲೇಜಿನಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು.
12
+ ಬಳಿಕ ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದಿದ್ದರೆ ಮುನೀರ್ ಮಂಗಳೂರಿನ ಮುಡಿಪು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದ. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ.
13
+ ಸೈಯದ್ ಯಾಸಿನ್ ನಿವಾಸದಿಂದ 3-4 ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರದ್ದಲ್ಲಿ ಇವರೆಲ್ಲ ಟ್ರಯಲ್ ಬಾಂಬ್ ಸ್ಫೋಟ ಮಾಡುತ್ತಿದ್ದರು. ಈ ಮೂವರು ಶಿವಮೊಗ್ಗವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಮಂಗಳೂರು ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು. ಮೂವರೂ ಬಾಂಬ್ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು.
eesanje/url_46_185_11.txt ADDED
@@ -0,0 +1,7 @@
 
 
 
 
 
 
 
 
1
+ ಬೆಂಗಳೂರು : ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಕಾಲರಾ ದೃಢ
2
+ ಬೆಂಗಳೂರು,ಏ.6-ಏಕಾಏಕಿ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರ ಪೈಕಿ ಒಬ್ಬ ವಿದ್ಯಾರ್ಥಿನಿಗೆ ಕಾಲರಾ ಇರುವುದು ಪತ್ತೆಯಾಗಿದೆ. 47 ವಿದ್ಯಾರ್ಥಿನಿಯರಲ್ಲಿ 26 ವರ್ಷದ ಪ್ರಫುಲ್ಲ ಎಂಬ ವಿದ್ಯಾರ್ಥಿನಿಯ ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಬಂದಿರುವುದರಿಂದ ಅವರಿಗೆ ಕಾಲರಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದ 46 ವಿದ್ಯಾರ್ಥಿನಿಯ ರಕ್ತ ಪರೀಕ್ಷೆ ವರದಿ ಇಂದು ಬರಲಿದೆ.
3
+ ಕಳೆದ ರಾತ್ರಿ ಕಾಲೇಜಿನ ಹಾಸ್ಟಲ್‍ನಲ್ಲಿ ಏಕಾ ಏಕಿ ವಿದ್ಯಾರ್ಥಿನೀಯರು ವಾಂತಿ ಮಾಡಿಕೊಡು ತೀವ್ರ ಅಸ್ವಸ್ಥಗೊಂಡಿದ್ದರಿಂದ ಅವರನ್ನು ಕೂಡಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಅದರಲ್ಲಿ 28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಐವರಿಗೆ ಹೆಚ್ ಬ್ಲಾಕ್ ಹಾಗೂ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಉತ್ತಮವಾಗಿದೆ ಎಂದು ಬಿಎಂಸಿಆರ್‍ಐ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದಾರೆ.
4
+ ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಾಗುತ್ತಿದೆ. ಹೆಚ್ಚು ತಾಪಮಾನ ನಡುವೆ ಬೆಂಗಳೂರಿನಲ್ಲಿ ಕಾಲರಾ ಭೀತಿ ಶುರುವಾಗಿದೆ. ಇದರಿಂದ ಆರೋಗ್ಯ ಇಲಾಖೆಗೆ ಚಿಂತೆ ಶುರುವಾಗಿದೆ.
5
+ ಹೀಗಾಗಿ ಎಲ್ಲಾ ವಿದ್ಯಾರ್ಥಿನಿಯರ ಮಾದರಿಯನ್ನು ಕಲ್ಚರ್ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹಾಸ್ಟೆಲ್ ನ ನೀರನ್ನ ಪರಿಶೀಲಿಸಲು ಸೂಚನೆ ನೀಡಿದೆ ಇದರ ಜತೆಗೆ ನೀರಿನ ಪರೀಕ್ಷೆ ಮಾಡಿಸಲು ತೀರ್ಮಾನಿಸಿದೆ. ವಿಕ್ಟೋರಿಯಾ ಆಸ್ಪತ್ರೆಯ ಐಸಿಯು ದಾಖಲಾಗಿರುವ ವಿದ್ಯಾರ್ಥಿನಿಯರು ಬಿಟ್ಟು ಉಳಿದವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ವಿದ್ಯಾರ್ಥಿನಿಯರ ಹಾಸ್ಟೆಲಲ್ಲಿ ಕಾಲರಾ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್ ಒಳಗೆ ಯಾರೊಬ್ಬರನ್ನೂ ಬಿಡಲಾಗುತ್ತಿಲ್ಲ;
6
+ ಇರಲಿ ಎಚ್ಚರ:ನಗರದಲ್ಲಿ ಈಗಾಗಲೇ ಕೆಲವು ಕಡೆ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಣಿಸಿಕೊಂಡಿರುವುದರಿಂದ ಜನ ಎಚ್ಚೆತ್ತುಕೊಂದು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಇಂತಹ ಸಮಯದಲಿ ಕೈ ಶುದ್ದವಾಗಿರಬೇಕು, ಕೈ ಸ್ವಚ್ಚಗೊಳಿಸಿದ ನಂತರವೇ ಆಹಾರ ಸೇವಿಸಬೇಕು, ಶುದ್ದ ಕುಡಿಯುವ ನೀರು ಬಳಸಬೇಕು, ಚರಂಡಿ ನೀರು ಅಥವಾ ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು, ಹೊರಗಿನ ಬೀದಿ ಬದಿ ಆಹಾರ ಸೇವಿಸುವುದರಿಂದ ದೂರವುಳಿಯಿರಿ ಎಂದು ವೈದ್ಯರು ಮನವಿ ಮಾಡಿಕೊಂಡಿದ್ದಾರೆ.
7
+ ಈಗಾಗಲೇ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹೋಟೆಲ್‍ಗಳಲ್ಲಿ ಗ್ರಾಹಕರುಗಳಿಗೆ ಕುದಿಸಿ ಆರಿಸಿದ ನೀರು ಪೂರೈಕೆ ಮಾಡುವಂತೆ ಸೂಚನೆ ನೀಡಿದೆ ಇದರ ಜತೆಗೆ ಜನರು ಎಚ್ಚೆತ್ತುಕೊಳ್ಳುವುದರಿಂದ ಕಾಲರಾದಿಂದ ಬಚಾವ್ ಆಗಬಹುದಾಗಿದೆ.
eesanje/url_46_185_12.txt ADDED
@@ -0,0 +1,8 @@
 
 
 
 
 
 
 
 
 
1
+ ರಾಜ್ಯದಲ್ಲಿ ಭಯಾನಕ ಬಿಸಿಲು, 12 ಕಡೆಗಳಲ್ಲಿ ಗರಿಷ್ಠ ತಾಪಮಾನ ದಾಖಲು
2
+ ಬೆಂಗಳೂರು,ಏ.5-ಬೇಸಿಗೆಯ ಸುಡು ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈಗಾಗಲೇ ದಾಖಲೆ ಪ್ರಮಾಣದ ತಾಪಮಾನ ಕಂಡುಬರುತ್ತಿದೆ. ರಾಜ್ಯದ 12 ಕಡೆಗಳಲ್ಲಿ ನಿನ್ನೆ ಗರಿಷ್ಠ ತಾಪಮಾನ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಹೆಚ್ಚೂ ಕಡಿಮೆ ಜೂನ್ವರೆಗೂ ಇದೇ ತಾಪಮಾನ ಮುಂದುವರೆಯುವ ನಿರೀಕ್ಷೆಯಿದೆ. ಚದುರಿದಂತೆ ಅಲ್ಲಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬಂದರೂ ವಾಡಿಕೆ ಪ್ರಮಾಣದ ಮುಂಗಾರು ಪೂರ್ವ ಮಳೆಯಾಗು ತ್ತಿಲ್ಲ. ಮಳೆಯಾಗುವ ಮುನ್ಸೂಚನೆ ಗಳೂ ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
3
+ ಕಳೆದ ಮೂರು ತಿಂಗಳಿನಿಂದಲೂ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆ ಪ್ರಮಾಣದಲ್ಲಾಗಿಲ್ಲ. ಏಪ್ರಿಲ್ ತಿಂಗಳಿನಲ್ಲೂ ವಾಡಿಕೆ ಮಳೆಯಾಗುವ ಸೂಚನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಹವಾಮಾನ ಇಲಾಖೆ ಮಾಹಿತಿ ಪ್ರಕಾರ ರಾಜ್ಯದ ಹಲವು ಭಾಗಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಗಣನೀಯವಾಗಿ ಏರಿಕೆಯಾಗಿದೆ.
4
+ ಒಂದೂವರೆಯಿಂದ ಮೂರು ಡಿಗ್ರಿ ಸೆಂಟಿಗ್ರೇಡ್ನಷ್ಟು ಸರಾಸರಿಗಿಂತ ಹೆಚ್ಚಾಗಿ ಕಂಡುಬರುತ್ತಿದೆ.ನಿನ್ನೆ ಕೊಪ್ಪಳದಲ್ಲಿ 41.8, ಬಾಗಲ ಕೋಟೆ 41.1, ಬೀದರ್ 39.2, ಕಲಬುರಗಿಯಲ್ಲಿ 42.8, ಗದಗ 40.6, ವಿಜಯಪುರ 40, ಧಾರವಾಡ 39.8, ದಾವಣಗೆರೆ 40.5, ಹಾಸನ 37.4, ಮಂಡ್ಯ 38.2, ಮೈಸೂರು 37, ಬೆಂಗಳೂರು 37 ಡಿಗ್ರಿ ಸೆಂಟಿಗ್ರೇಡ್ನಷ್ಟು ಗರಿಷ್ಠ ತಾಪಮಾನ ದಾಖಲಾಗುತ್ತಿದೆ.
5
+ ಈಗಾಗಲೇ ಸರಾಸರಿ 35 ಡಿ.ಸೆ. ನಷ್ಟು ತಾಪಮಾನ ಎಲ್ಲೆಡೆ ಕಂಡುಬರುತ್ತಿದೆ. 36 ರಿಂದ 41 ಡಿ.ಸೆ. ನಷ್ಟು ಸಾಮಾನ್ಯವಾಗಿ ಕಂಡುಬರುತ್ತಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ 40 ಡಿ.ಸೆ. ನಷ್ಟು ಗಡಿಯನ್ನು ದಾಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.
6
+ ನಿರಂತರ ತಾಪಮಾನ ಏರಿಕೆಯಿಂದ ಬಿಸಿಗಾಳಿ ಕಂಡುಬರುತ್ತಿದ್ದು, ತೇವಾಂಶದಲ್ಲೂ ಭಾರೀ ಕುಸಿತವಾಗಿದೆ. ಯುಗಾದಿ ಹಬ್ಬಕ್ಕೂ ಮುನ್ನ ರಾಜ್ಯದ ದಕ್ಷಿಣ ಒಳನಾಡಿನ ಒಳಭಾಗಗಳಲ್ಲಿ ಚದುರಿದಂತೆ ಮಳೆಯಾಗುವ ಮುನ್ಸೂಚನೆಗಳಿವೆ.
7
+ ಏಪ್ರಿಲ್ 12 ರಿಂದ ಮೂರ್ನಾಲ್ಕು ದಿನಗಳ ಕಾಲ ಮೈಸೂರು, ಮಂಡ್ಯ, ಕೊಡಗು, ರಾಮನಗರ, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಗ್ರಾಮದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
8
+ ಯುಗಾದಿ ಹಬ್ಬದ ನಂತರ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯಾದರೂ, ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಏಪ್ರಿಲ್, ಮೇ ತಿಂಗಳಿನಲ್ಲಿ ಗುಡುಗು, ಮಿಂಚು, ಗಾಳಿಯಿಂದ ಕೂಡಿದ ಮಳೆಯಾಗುವುದುಸಹ�� ಪ್ರಕ್ರಿಯೆ ಎಂದು ಅವರು ಹೇಳಿದರು.
eesanje/url_46_185_2.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಸುಲಭವಾಗಿ ಎಲ್ಲಾ 28 ಸ್ಥಾನಗಳನ್ನು ಗೆದ್ದೇ ಗೆಲ್ತೀವಿ : ವಿಜಯೇಂದ್ರ
2
+ ಬೆಂಗಳೂರು,ಏ.6-ರಾಜ್ಯದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಪರವಾದ ಅಲೆ ಎಲ್ಲೆಡೆ ಬೀಸುತ್ತಿದ್ದು, ಇದನ್ನು ಮತವಾಗಿ ಪರಿವರ್ತಿಸಿದರೆ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ನಾವು ಸುಲಭವಾಗಿ ಗೆಲ್ಲಲಿ ದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
3
+ ಭಾರತೀಯ ಜನತಾ ಪಕ್ಷದ 44ನೇ ಸ್ಥಾಪನಾ ದಿನಾಚರಣೆ ನಿಮಿತ್ತ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ಸ್ವಲ್ಪ ಪರಿಶ್ರಮ ಹಾಕಿದರೆ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ದಾಖಲೆ ಬರೆಯಬಹುದು. ಇದಕ್ಕಾಗಿ ಕಾರ್ಯಕರ್ತರು ಸಜ್ಜಾಗಬೇಕೆಂದು ಕರೆ ಕೊಟ್ಟರು.
4
+ ಮೋದಿಯವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತನೆ ಮಾಡಬೇಕು. ನರೇಂದ್ರಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ. ದೇಶಾದ್ಯಂತ ಕಿರುದೇಣಿಗೆ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ನಮೋ ಆಪ್ ಮೂಲಕ ಭಾಗವಹಿಸಬೇಕು. ಎಷ್ಟಾದರೂ ಸರಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು.
5
+ ಪ್ರಧಾನಿ ನರೇಂದ್ರಮೋದಿ ಅವರು ಬರೀ ಭಾರತಕ್ಕೆ ನಾಯಕತ್ವ ಕೊಟ್ಟವರಲ್ಲ, ವಿಶ್ವಕ್ಕೆ ನಾಯಕತ್ವ ಕೊಟ್ಟವರು. ಪ್ರಧಾನಿಯಾಗಿ ಹತ್ತು ವರ್ಷ ವಿಶ್ರಾಂತಿ ತೆಗೆದುಕೊಳ್ಳದೇ ಕೆಲಸ ಮಾಡುತ್ತಿರುವವರು ಇದ್ದಾರೆ ಅಂದರೆ ಅದು ನರೇಂದ್ರಮೋದಿ ಮಾತ್ರ ಎಂದರು.
6
+ ಬಿಜೆಪಿ ಅಂದರೆ ಅಲ್ಪಸಂಖ್ಯಾತರ ವಿರೋಧಿಗಳು ಎನ್ನುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವುದಕ್ಕೂ ಮುನ್ನ ಹಿಂದೂ ಮಹಿಳೆಯರಿಗೆ ಯಾವ ರೀತಿ ಗೌರವ ಸಿಗುತ್ತದೋ ಅದೇ ರೀತಿ ಅಲ್ಪಸಂಖ್ಯಾತರ ಮಹಿಳೆಯರಿಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ತ್ರಿವಳಿ ತಲಾಕ್ ರದ್ದು ಮಾಡಿದವರು ಪ್ರಧಾನಿ ನರೇಂದ್ರಮೋದಿ ಎಂದು ನೆನಪು ಮಾಡಿಕೊಟ್ಟರು.
7
+ ಈ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ನರೇಂದ್ರ ಮೋದಿಯವರು ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗೆ ತಿಳಿಸಬೇಕು. ಯೋಧರ ರೀತಿಯಲ್ಲಿ ನಾವು ಸಂಘಟಿತರಾಗಿ ಕೆಲಸ ಮಾಡಬೇಕು. ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಆಗುವುದನ್ನು ನೋಡುವುದಕ್ಕೆ ಬಹಳ ದಿನಗಳು ದೂರವಿಲ್ಲ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
8
+ 18 ಕೋಟಿ ಕಾರ್ಯಕರ್ತರು;ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ 18 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವುದರ ಜೊತೆಗೆ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಪಕ್ಷ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ನಮ್ಮ ಪಕ್ಷದ ಸಿದ್ದಾಂತದಲ್ಲಿ ಎಲ್ಲಿಯೂ ಕೂಡ ಕಂಪ್ರಾಮೈಸ್ ಇಲ್ಲದೇ, ತತ್ವ ಸಿದ್ದಾಂತಗಳನ್ನು ಉಳಿಸಿಕೊಂಡು ಹೋಗುತ್ತಿದ್ದೇವೆ ಎಂದರು .
9
+ ರಾಜ್ಯದಲ್ಲಿ ಅನಂತಕುಮಾರ್, ವಿ.ಎಸ್.ಆಚಾರ್ಯ, ಶಂಕರಮೂರ್ತಿಗಳು ಸೇರಿ ಹಿರಿಯರ ಮಾರ್ಗದರ್ಶನ, ಬಿ.ಎಸ್. ಯಡಿಯೂರಪ್ಪ ಹೋರಾಟದಿಂದ ಬಿಜೆಪಿ ಹಳ್ಳಿ ಹಳ್ಳಿಗಳಲ್ಲಿ ತಲೆ ಎತ್ತಿ ನಿಂತಿದೆ. ಯಡಿಯೂರಪ್ಪ ಪಾದಯಾತ್ರೆ, ಹೋರಾಟ, ಸೈಕಲ್ ಯಾತ್ರೆಗಳ ಮೂಲಕ ಪಕ್ಷ ಸಂಘಟನೆ ಮಾಡಿದ್ದು, ಕೇಂದ್ರದಲ್ಲಿ ಎಲ್ .ಕೆ. ಅಡ್ವಾಣಿ ಅವರನ್ನು ಮರೆಯಲು ಸಾಧ್ಯವಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರು ದೇಶವನ್ನು ಮುನ್ನಡಿಸಿದ್ದು, ನರೇಂದ್ರ ಮೋದಿಯಂತ ಪುಣ್ಯಾತ್ಮ ಪ್ರಧಾನಿ ಆದಮೇಲೆ ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿಲ್ಲ ಎಂದರು.
10
+ ಈ ಸಂದರ್ಭದಲ್ಲಿ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮತ್ತು ಪ್ರಮುಖರು ಉಪಸ್ಥಿತರಿದ್ದರು. ತದನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆ ನಿಮಿತ್ತ ಮಾಡಿದ ಭಾಷಣವನ್ನು ನಾಯಕರು ವೀಕ್ಷಿಸಿದರು.
eesanje/url_46_185_3.txt ADDED
@@ -0,0 +1,9 @@
 
 
 
 
 
 
 
 
 
 
1
+ ಲೋಕಸಭಾ ಚುನಾವಣೆ : ರಾಜ್ಯದಲ್ಲಿ 276 ಅಭ್ಯರ್ಥಿಗಳ 384 ನಾಮಪತ್ರಗಳು ಪುರಸ್ಕೃತ
2
+ ಬೆಂಗಳೂರು,ಏ.6-ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಹೊರತುಪಡಿಸಿ ರಾಜ್ಯದ ಮೊದಲ ಹಂತದ 13 ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ. 276 ಅಭ್ಯರ್ಥಿಗಳ 384 ನಾಮಪತ್ರಗಳು ಪುರಸ್ಕೃತಗೊಂಡಿವೆ.
3
+ ಮಾ.28ರಿಂದ ಏ.4ರವರೆಗೆ 358 ಅಭ್ಯರ್ಥಿಗಳು 492 ನಾಮಪತ್ರಗಳನ್ನು ಸಲ್ಲಿಸಿದ್ದರು. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರಗಳು ಪುರಸ್ಕೃತಗೊಂಡಿವೆ. ತಿರಸ್ಕೃತಗೊಂಡಿರುವ ನಾಮಪತ್ರಗಳಲ್ಲಿ ಪಕ್ಷೇತರರೇ ಹೆಚ್ಚಾಗಿದ್ದಾರೆ.
4
+ ನಾಮಪತ್ರ ವಾಪಸ್ ಪಡೆಯಲು ಏ.8ರವರೆಗೆ ಕಾಲಾವಕಾಶವಿದ್ದು, ಆನಂತರ ಚುನಾವಣಾ ಕಣದಲ್ಲಿ ಉಳಿಯುವ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಅಭ್ಯರ್ಥಿಗಳ 15 ನಾಮಪತ್ರಗಳು ಪುರಸ್ಕೃತಗೊಂಡಿದ್ದರೆ 4 ನಾಮಪತ್ರಗಳು ತಿರಸ್ಕೃತವಾಗಿವೆ.
5
+ ಹಾಸನ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳ 26 ನಾಮಪತ್ರಗಳು ಪುರಸ್ಕೃತವಾಗಿದ್ದು, 3 ನಾಮಪತ್ರಗಳು ತಿರಸ್ಕೃತಗೊಂಡಿವೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳ 20 ನಾಮಪತ್ರಗಳು ಪುರಸ್ಕೃತವಾಗಿದ್ದರೆ 2 ನಾಮಪತ್ರಗಳು ತಿರಸ್ಕೃತವಾಗಿವೆ.
6
+ ಚಿತ್ರದುರ್ಗ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳ 32 ನಾಮಪತ್ರಗಳು ಪುರಸ್ಕೃತವಾಗಿದ್ದು, 4 ನಾಮಪತ್ರಗಳು ತಿರಸ್ಕೃತಗೊಂಡಿವೆ. ತುಮಕೂರು ಕ್ಷೇತ್ರದ 22 ಅಭ್ಯರ್ಥಿಗಳ 31 ನಾಮಪತ್ರಗಳು ಕ್ರಮಬದ್ಧವಾಗಿವೆ. ಮಂಡ್ಯ ಕ್ಷೇತ್ರದ 19 ಅಭ್ಯರ್ಥಿಗಳ 27 ನಾಮಪತ್ರಗಳು ಸಿಂಧುವಾಗಿದ್ದರೆ, 10 ನಾಮಪತ್ರಗಳು ತಿರಸ್ಕೃತಗೊಂಡಿವೆ. ಮೈಸೂರು ಕ್ಷೇತ್ರದ 24 ಅಭ್ಯರ್ಥಿಗಳ 32 ನಾಮಪತ್ರಗಳು ಪುರಸ್ಕೃತವಾಗಿದ್ದು, 5 ನಾಮಪತ್ರಗಳು ತಿರಸ್ಕಾರಗೊಂಡಿವೆ.
7
+ ಚಾಮರಾಜನಗರ ಕ್ಷೇತ್ರದ 22 ಅಭ್ಯರ್ಥಿಗಳ 31 ನಾಮಪತ್ರಗಳು ಪುರಸ್ಕೃತಗೊಂಡಿದ್ದು 5 ನಾಮಪತ್ರಗಳು ತಿರಸ್ಕಾರವಾಗಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ 27 ಅಭ್ಯರ್ಥಿಗಳ 38 ನಾಮಪತ್ರಗಳು ಕ್ರಮವಾಗಿದ್ದು, ಏಳು ನಾಮಪತ್ರಗಳು ತಿರಸ್ಕಾರವಾಗಿವೆ.
8
+ ಬೆಂಗಳೂರು ಕೇಂದ್ರ ಕ್ಷೇತ್ರದ 28 ಅಭ್ಯರ್ಥಿಗಳು 36 ನಾಮಪತ್ರಗಳು ಪುರಸ್ಕೃತವಾಗಿದ್ದು, 4 ನಾಮಪತ್ರಗಳು ತಿರಸ್ಕಾರವಾಗಿವೆ. ಬೆಂಗಳೂರು ಉತ್ತರ ಕ್ಷೇತ್ರದ 21 ಅಭ್ಯರ್ಥಿಗಳ 30 ನಾಮಪತ್ರಗಳು ಸಿಂಧುವಾಗಿದ್ದು, 6 ಅಭ್ಯರ್ಥಿಗಳ ನಾಮಪತ್ರಗಳು ಅಸಿಂಧುವಾಗಿವೆ.
9
+ ಚಿಕ್ಕಬಳ್ಳಾಪುರ ಕ್ಷೇತ್ರದ 32 ಅಭ್ಯರ್ಥಿಗಳ 39 ನಾಮಪತ್ರಗಳು ಪುರಸ್ಕೃತವಾಗಿದ್ದು ನಾಲ್ಕು ನಾಮಪತ್ರ ತಿರಸ್ಕಾರಗೊಂಡಿದ್ದರೆ ಕೋಲಾರ ಕ್ಷೇತ್ರದ 19 ಅಭ್ಯರ್ಥಿಗಳ 27 ನಾಮಪತ್ರಗಳು ಕ್ರಮಬದ್ಧವಾಗಿದ್ದು, 6 ನಾಮಪತ್ರಗಳು ತಿರಸ್ಕೃತಗೊಂಡಿವೆ. ಏ.26ರಂದು 14 ಕ್ಷೇತ್ರಗಳಲ್ಲೂ ಮತದಾನ ನಡೆಯಲಿದ್ದು, ಜೂ.4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
eesanje/url_46_185_4.txt ADDED
@@ -0,0 +1,4 @@
 
 
 
 
 
1
+ ಲೋಕಸಭಾ ಚುನಾವಣೆಗೆ ಇಬ್ಬರು ಪೊಲೀಸ್ ವೀಕ್ಷಕರ ನೇಮಕ
2
+ ಬೆಂಗಳೂರು,ಏ.6-ಪ್ರಸಕ್ತ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಐಪಿಎಸ್ ಅಧಿಕಾರಿ ಡಾ.ಸಿ.ಎಂ.ತ್ರಿವಿಕ್ರಮ್ ವರ್ಮ ಅವರನ್ನು ಪೊಲೀಸ್ ವೀಕ್ಷಕರನ್ನಾಗಿ ನೇಮಿಸಲಾಗಿದೆ.
3
+ ಬೆಂಗಳೂರು ಉತ್ತರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹೇಮಂತ್ ಕುಟಿಯಾಲ್ ಅವರನ್ನು ನೇಮಕ ಮಾಡಲಾಗಿದೆ.ಪೊಲೀಸ್ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು ಪೊಲೀಸ್ ವೀಕ್ಷಕರಿಗೆ ಸಲ್ಲಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
4
+ ಡಾ.ಸಿ.ಎನ್.ತ್ರಿವಿಕ್ರಮ್ ವರ್ಮ ಅವರ ಮೊಬೈಲ್ ಸಂಖ್ಯೆ 8904612192 ಮತ್ತು ಹೇಮಂತ್ ಕುಟಿಯಾಲ್ ಅವರ ಮೊಬೈಲ್ ಸಂಖೆ 8296579912 ಆಗಿದ್ದು, ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
eesanje/url_46_185_5.txt ADDED
@@ -0,0 +1,6 @@
 
 
 
 
 
 
 
1
+ ರಾಜ್ಯದಲ್ಲಿ ಯಾವಾಗ ಬರುತ್ತೆ ಮಳೆ..? ಹವಾಮಾನ ಇಲಾಖೆ ಹೇಳೋದೇನು..?
2
+ ಬೆಂಗಳೂರು,ಏ.6-ರಾಜ್ಯದಲ್ಲಿ ಸುಡು ಬಿಸಿಲಿನ ಬೇಗೆಯಿಂದ ಬಸವಳಿದಿರುವ ಜನರಿಗೆ ತುಸು ನಿರಾಳವಾಗುವ ಸುದ್ದಿಯೊಂದನ್ನು ಹವಾಮಾನ ಇಲಾಖೆ ನೀಡಿದೆ. ಆದರೆ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯಿಲ್ಲ. ಗಣನೀಯವಾಗಿ ಏರಿಕೆಯಾಗಿರುವ ತಾಪಮಾನ ತಗ್ಗಿಸುವಂತಹ ಮಳೆ ಬರುವ ಸಾಧ್ಯತೆಯೂ ಇಲ್ಲ.
3
+ ಈಗಾಗಲೇ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳು ವಾಡಿಕೆಗಿಂತ ಒಂದೂವರೆಯಿಂದ 3 ಡಿ.ಸೆ.ನಷ್ಟು ಹೆಚ್ಚಾಗಿದ್ದು, ಜನರು ಬಿಸಿಲ ಬೇಗೆಗೆ ಹೈರಾಣರಾಗಿದ್ದಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಏ.9ರಿಂದ 12ರವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
4
+ ಈ ಸಂದರ್ಭದಲ್ಲಿ ಕೆಲವೆಡೆ ಗುಡುಗು, ಮಿಂಚು ಬಿರುಗಾಳಿ ಸಮೇತ ಮಳೆಯಾಗುವ ಸಂಭವವಿದೆ. ಆದರೆ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳು ಇಲ್ಲ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದ್ದು, ಮಳೆಯಾಗುವ ಸಾಧ್ಯತೆ ತೀವ್ರ ವಿರಳ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಇನ್ನು ಎರಡುಮೂರು ದಿನ ಒಣಹವೆ ಇರಲಿದ್ದು, ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ.
5
+ ಕಲಬುರಗಿಯಲ್ಲಿ 43.3 ಡಿ.ಸೆ. ಉಷ್ಣಾಂಶ ದಾಖಲು:ಬಿಸಿಲ ನಾಡು ಎಂದೇ ಪರಿಗಣಿತವಾಗಿರುವ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 43.3 ಡಿ.ಸೆ.ನಷ್ಟು ದಾಖಲಾಗಿದ್ದು, ರಾಜ್ಯದಲ್ಲೇ ಅತಿಹೆಚ್ಚು ಗರಿಷ್ಠ ತಾಪಮಾನ ಇದಾಗಿದೆ.
6
+ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಗರಿಷ್ಠ ತಾಪಮಾನ 36 ಡಿ.ಸೆ. ಗಡಿ ದಾಟಿದೆ. ರಾಜಧಾನಿ ಬೆಂಗಳೂರಿನಲ್ಲಿ 37 ಡಿ.ಸೆ. ದಾಖಲಾಗಿದೆ. ವಿಜಯಪುರ 41, ಬಾಗಲಕೋಟೆ 42.1, ಧಾರವಾಡ 39.8, ಗದಗ 40.6, ಹಾವೇರಿ 39.8, ಕೊಪ್ಪಳ 41.1 ರಾಯಚೂರು 41.4, ಬೆಳಗಾವಿ 37.5, ಚಿತ್ರದುರ್ಗ, ಚಾಮರಾಜನಗರ 38.6, ದಾವಣಗೆರೆ 39, ಮಂಡ್ಯ 38.6, ಶಿವಮೊಗ್ಗ 38.4, ಮೈಸೂರು 37.5 ಡಿ.ಸೆ.ನಷ್ಟು ಉಷ್ಣಾಂಶ ದಾಖಲಾಗಿದೆ. ರಾಜ್ಯದಲ್ಲಿ ತೀವ್ರ ಬರದ ಛಾಯೆ ಆವರಿಸಿದ ಪರಿಣಾಮ ಈ ಬಾರಿಯ ಬೇಸಿಗೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಒಂದರ್ಥದಲ್ಲಿ ಬಿಸಿಲ ನಾಡಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.
eesanje/url_46_185_6.txt ADDED
@@ -0,0 +1,19 @@
 
 
 
 
 
 
 
 
 
 
 
 
 
 
 
 
 
 
 
 
1
+ ರಾಜ್ಯದಲ್ಲಿ ಸ್ಟಾರ್ ಚಂದ್ರು ಶ್ರೀಮಂತ ಅಭ್ಯರ್ಥಿ, ಬ್ರಿಜೇಶ್ ಚೌಟ ಬಡ ಅಭ್ಯರ್ಥಿ
2
+ ಬೆಂಗಳೂರು,ಏ.6-ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಅತಿ ಶ್ರೀಮಂತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
3
+ ಅದೇ ರೀತಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿವೃತ್ತ ಸೇನಾಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅತಿ ಬಡ ಅಭ್ಯರ್ಥಿಯಾಗಿದ್ದಾರೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಘೋಷಣೆ ಮಾಡಿಕೊಂಡಿರುವ ತಮ್ಮ ಚರಾಚಿರ ಆಸ್ತಿ ವಿವರಗಳಲ್ಲಿ ಇದು ಬಹಿರಂಗಗೊಂಡಿದೆ.
4
+ ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಬರೋಬ್ಬರಿ 622 ಕೋಟಿ ಆಸ್ತಿಯನ್ನು ಹೊಂದಿರುವ ಅತಿ ದೊಡ್ಡ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. 2ನೇ ಸ್ಥಾನದಲ್ಲಿ ಪ್ರತಿಷ್ಠಿತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಪಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಬರೋಬ್ಬರಿ 593 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.
5
+ ಮಂಡ್ಯ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಎನ್‍ಡಿಎ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 217.2 ಕೋಟಿ ರೂ. ಚರಚಿರಾಸ್ತಿ ಹೊಂದಿದ್ದು, 3ನೇ ಅತಿ ಶ್ರೀಮಂತ ಅಭ್ಯರ್ಥಿ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರೋ.ರಾಜೀವ್ ಗೌಡ ಅವರ ಒಟ್ಟು ಆಸ್ತಿ ಮೌಲ್ಯ 134 ಕೋಟಿ ರೂ. ಇವರು ಸ್ಪರ್ಧಾ ಕಣದಲ್ಲಿರುವ 4ನೇ ಅತಿ ಶ್ರೀಮಂತ ಅಭ್ಯರ್ಥಿ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ 99.8 ಕೋಟಿ ಆಸ್ತಿ ಹೊಂದಿದ್ದು, 5ನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
6
+ ಇನ್ನು ರಾಷ್ಟ್ರದ ಗಮನ ಸೆಳೆದಿರುವ ಪ್ರತಿಷ್ಠಿತ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರಾಂತ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು 98.3 ಕೋಟಿ ಆಸ್ತಿ ಹೊಂದಿದ್ದು, 6ನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
7
+ ಸ್ಪರ್ಧಾ ಕಣದಲ್ಲಿರುವ ಅತಿ ಬಡ ಅಭ್ಯರ್ಥಿಗಳಲ್ಲಿ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 70.8 ಲಕ್ಷ ರೂ. ಆಸ್ತಿ ಹೊಂದುವ ಮೂಲಕ ಅತಿ ಕಡಿಮೆ ಆದಾಯ ಹೊಂದಿದ ಅಭ್ಯರ್ಥಿಗಳ ಪೈಕಿ ಮೊದಲ ಅಭ್ಯರ್ಥಿಯಾಗಿದ್ದಾರೆ.
8
+ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪದ್ಮರಾಜ್ ಅವರು 1.8 ಕೋಟಿ ಆಸ್ತಿ ಹೊಂದಿದ್ದು, 2ನೇ ಸ್ಥಾನದಲ್ಲಿದ್ದರೆ ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ���ರೀನಿವಾಸ್ ಪೂಜಾರಿ 1.1 ಕೋಟಿ ಆಸ್ತಿ ಹೊಂದಿದ್ದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ 2.3 ಕೋಟಿ, ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 4.1 ಕೋಟಿ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 4.3 ಕೋಟಿ ಆಸ್ತಿ ಹೊಂದಿದ್ದಾರೆ.
9
+ ಟಾಪ್ 6 ಶ್ರೀಮಂತ ಅಭ್ಯರ್ಥಿಗಳು1.ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರುಕ್ಷೇತ್ರ : ಮಂಡ್ಯ, ಪಕ್ಷ : ಕಾಂಗ್ರೆಸ್ಆಸ್ತಿ : 622 ಕೋಟಿ ರೂ.
10
+ 2.ಡಿ.ಕೆ.ಸುರೇಶ್ಕ್ಷೇತ್ರ : ಬೆಂಗಳೂರು ಗ್ರಾಮಾಂತರ, ಪಕ್ಷ : ಕಾಂಗ್ರೆಸ್ಆಸ್ತಿ : 593 ಕೋಟಿ ರೂ.
11
+ 3.ಎಚ್.ಡಿ. ಕುಮಾರಸ್ವಾಮಿಕ್ಷೇತ್ರ : ಮಂಡ್ಯ, ಪಕ್ಷ : ಜೆಡಿಎಸ್ಆಸ್ತಿ : 217.2 ಕೋಟಿ ರೂ.4.ಪ್ರೊ. ಎಂವಿ ರಾಜೀವ್‍ಗೌಡ
12
+ ಕ್ಷೇತ್ರ : ಬೆಂಗಳೂರು ಉತ್ತರ, ಪಕ್ಷ : ಕಾಂಗ್ರೆಸ್ಆಸ್ತಿ : 134 ಕೋಟಿ ರೂ.
13
+ 5.ರಕ್ಷಾ ರಾಮಯ್ಯಕ್ಷೇತ್ರ : ಚಿಕ್ಕಬಳ್ಳಾಪುರ, ಪಕ್ಷ : ಕಾಂಗ್ರೆಸ್ಆಸ್ತಿ : 99.8 ಕೋಟಿ ರೂ.
14
+ 6.ಡಾ ಸಿಎನ್ ಮಂಜುನಾಥ್ಕ್ಷೇತ್ರ : ಬೆಂಗಳೂರು ಗ್ರಾಮಾಂತರ, ಪಕ್ಷ : ಬಿಜೆಪಿಆಸ್ತಿ : 98.3 ಕೋಟಿ ರೂ.
15
+ ಟಾಪ್ 6 ಬಡ ಅಭ್ಯರ್ಥಿಗಳು1.ಕ್ಯಾಪ್ಟನ್ ಬ್ರಿಜೇಶ್ ಚೌಟಕ್ಷೇತ್ರ : ದಕ್ಷಿಣ ಕನ್ನಡ, ಪಕ್ಷ : ಬಿಜೆಪಿಆಸ್ತಿ : 70.8 ಲಕ್ಷ ರೂ.
16
+ 2.ಆರ್ ಪದ್ಮರಾಜ್ಕ್ಷೇತ್ರ : ದಕ್ಷಿಣ ಕನ್ನಡ, ಪಕ್ಷ : ಕಾಂಗ್ರೆಸ್ಆಸ್ತಿ : 1.8 ಕೋಟಿ ರೂ.
17
+ 3.ಕೋಟ ಶ್ರೀನಿವಾಸ ಪೂಜÁರಿಕ್ಷೇತ್ರ : ಉಡುಪಿ – ಚಿಕ್ಕಮಗಳೂರು, ಪಕ್ಷ : ಬಿಜೆಪಿಆಸ್ತಿ : 1.1 ಕೋಟಿ ರೂ.
18
+ 4.ಸೌಮ್ಯ ರೆಡ್ಡಿಕ್ಷೇತ್ರ : ಬೆಂಗಳೂರು ದಕ್ಷಿಣ, ಪಕ್ಷ : ಕಾಂಗ್ರೆಸ್ಆಸ್ತಿ : 2.3 ಕೋಟಿ ರೂ.
19
+ 6.ಗೋವಿಂದ ಕಾರಜೋಳಕ್ಷೇತ್ರ : ಚಿತ್ರದುರ್ಗ, ಪಕ್ಷ : ಬಿಜೆಪಿಆಸ್ತಿ : 4.3 ಕೋಟಿ ರೂ.
eesanje/url_46_185_7.txt ADDED
@@ -0,0 +1,7 @@
 
 
 
 
 
 
 
 
1
+ ಶಿವಮೊಗ್ಗದಲ್ಲಿ ಮೋದಿ ಫೋಟೋ ಫೈಟ್, ಕೆವಿಯಟ್ ಅರ್ಜಿ ಸಲ್ಲಿಸಿದ ರೆಬೆಲ್ ಈಶ್ವರಪ್ಪ
2
+ ಶಿವಮೊಗ್ಗ, ಏ.6-ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ರಾಜ್ಯದ ಗಮನ ಸೆಳೆದಿದೆ. ಈ ಮಧ್ಯೆ, ಇದೀಗ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸುವ ವಿಚಾರವಾಗಿ ವಾಕ್ಸಮರ ಆರಂಭಗೊಂಡಿದ್ದು, ಇದೀಗ ಕೋರ್ಟ್ ಮೆಟ್ಟಿಲೇರಿದೆ. ಮೋದಿ ಫೋಟೋ ಬಳಕೆ ವಿಚಾರವಾಗಿ ಶಿವಮೊಗ್ಗ ಕೋರ್ಟ್‍ನಲ್ಲಿ ಈಶ್ವರಪ್ಪ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ.
3
+ ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವ್ಯಂಗ್ಯವಾಡಿದ್ದರು. ರಾಘವೇಂದ್ರಗೆ ತಿರುಗೇಟು ನೀಡಿದ್ದ ಈಶ್ವರಪ್ಪ, ಮೋದಿ ಅವರಪ್ಪನ ಆಸ್ತಿಯಾ ಎಂದು ಕೌಂಟರ್ ಕೊಟ್ಟಿದ್ದರು. ಇದೀಗ ಮೋದಿ ಫೋಟೋಗಾಗಿ ಕೋರ್ಟ್ ಮೊರೆಹೋಗಿದ್ದಾರೆ.
4
+ ಲೋಕಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಈಶ್ವರಪ್ಪ ಅವರನ್ನು ಮನವೊಲಿಸುವುದಕ್ಕಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ದೆಹಲಿಗೆ ಬರುವಂತೆ ತಿಳಿಸಿದ್ದರು. ಅದರಂತೆ ದೆಹಲಿಗೆ ತೆರಳಿದ್ದ ಈಶ್ವರಪ್ಪ, ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗಿದ್ದರು.
5
+ ನಂತರ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಕ್ಕೆ ಹೈಕಮಾಂಡ್ ನಾಯಕರ ಸಮ್ಮತಿ ಇರಬಹುದು. ಬಹಿರಂಗವಾಗಿ ಅಲ್ಲವಾದರೂ ಒಳಗಿಂದೊಳಗೆ ಅವರಿಗೆ ಮನಸಿರಬಹುದು. ರಾಜ್ಯದಲ್ಲಿ ಅಪ್ಪ ಮಕ್ಕಳ ಹಿಡಿತದಿಂದ ಪಕ್ಷವನ್ನು ಹೊರ ತರುವುದಕ್ಕಾಗಿ ಅವರು ನನ್ನ ಸ್ಪರ್ಧೆ ಬಗ್ಗೆ ಒಲವು ಹೊಂದಿರಬಹುದು ಎಂದು ಹೇಳಿದ್ದರು.
6
+ ಇನ್ನು ಚುನಾವಣಾ ಪ್ರಚಾರದ ವೇಳೆ ಮೋದಿ ಫೋಟೋ ಬಳಕೆ ವಿಚಾರವಾಗಿ ನೋಡುವುದಾದರೆ, ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೂಡ ಇಂಥದ್ದೇ ಒಂದು ಪ್ರಕರಣ ವರದಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರುಣ್ ಕುಮಾರ್ ಪುತ್ತಿಲ ಮೋದಿ ಭಾವಚಿತ್ರ ಬಳಸಿದ್ದಲ್ಲದೆ, ಮೋದಿ ಹೆಸರು ಹೇಳಿಕೊಂಡೇ ಚುನಾವಣೆ ಪ್ರಚಾರ ನಡೆಸಿದ್ದರು.
7
+ ಸ್ಥಳೀಯ ಬಿಜೆಪಿ ನಾಯಕರ ವಿರೋಧದ ಮಧ್ಯೆಯೂ ಅವರು ಪ್ರಚಾರದಲ್ಲಿ ಮೋದಿ ಹೆಸರು ಬೆಳೆಸಿಕೊಂಡಿದ್ದಲ್ಲದೆ ಚುನಾವಣೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಹೈಕಮಾಂಡ್ ವರೆಗೆ ಗಮನ ಸೆಳೆದಿದ್ದರು. ಇತ್ತೀಚಿಗೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
eesanje/url_46_185_8.txt ADDED
@@ -0,0 +1,8 @@
 
 
 
 
 
 
 
 
 
1
+ ಹೊಂದಾಣಿಕೆ ರಾಜಕಾರಣ ಮಾಡುವವರ ಮೇಲೆ ಬಿಜೆಪಿ ಹೈಕಮಾಂಡ್ ಹದ್ದಿನ ಕಣ್ಣು
2
+ ಬೆಂಗಳೂರು,ಏ.6-ಇದೇ ತಿಂಗಳ 26ರಂದು ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಪ್ರತಿಯೊಂದು ಚಲನವಲನಗಳ ಬಗ್ಗೆ ದೆಹಲಿ ಬಿಜೆಪಿ ನಾಯಕರು ಹದ್ದಿನ ಕಣ್ಣಿಟ್ಟಿದ್ದು, ಹೊಂದಾಣಿಕೆ ರಾಜಕಾರಣ ಮಾಡುವವರ ಮೇಲೆ ವಿಶೇಷ ನಿಗಾ ಇರಿಸಿದೆ. ಬಿಜೆಪಿಯ ನಿರೀಕ್ಷಿತ 400 ಸ್ಥಾನಗಳನ್ನು ಗೆಲ್ಲಲ್ಲು ಒಂದೊಂದು ಕ್ಷೇತ್ರವೂ ಬಹುಮುಖ್ಯ ಎಂಬುದನ್ನು ಅರಿತಿರುವ ಬಿಜೆಪಿ, ರಾಜ್ಯದ ಮೊದಲ 14 ಕ್ಷೇತ್ರಗಳಿಗೆ ನಡೆಯುವ ಪ್ರಚಾರದ ವೇಳೆ ಪ್ರತಿಯೊಬ್ಬ ನಾಯಕರ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದೆ.
3
+ ಈ ಹಿಂದೆ ಅಂದರೆ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕಡೆ ನಾಯಕರ ಒಳ ಒಪ್ಪಂದದಿಂದಲೇ ಬಿಜೆಪಿಗೆ ಹೊಡೆತ ಬಿದ್ದಿತು ಎಂಬುದು ಫಲಿತಾಂಶದಿಂದ ಗೊತ್ತಾಗಿತ್ತು. ಇದು ಪುನರಾವರ್ತನೆ ಆಗಬಾರದೆಂಬ ಹಿನ್ನಲೆಯಲ್ಲಿ ಒಂದೊಂದು ಕ್ಷೇತ್ರದ ಮೇಲೂ ದೆಹಲಿ ನಾಯಕರು ತೀವ್ರ ನಿಗಾ ಇರಿಸಿದೆ. ರಾಜ್ಯದಲ್ಲಿ ಬಿಜೆಪಿ 25 ಸಂಸದರು, ಒಬ್ಬರು ಸ್ವತಂತ್ರ, ಒಬ್ಬರು ಜೆಡಿಎಸ್ ಮತ್ತು ಒಬ್ಬರು ಕಾಂಗ್ರೆಸ್ ಸಂಸದರಿದ್ದಾರೆ.
4
+ ಬಿಜೆಪಿ ಈ ಬಾರಿ 25 ಸ್ಥಾನಗಳಲ್ಲಿ ಸ್ರ್ಪಧಿಸುತ್ತಿದ್ದು, ಮೂರು ಸ್ಥಾನಗಳನ್ನು ಮೈತ್ರಿಕೂಟ ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಹಾಲಿ ಸಂಸದರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿಯನ್ನು ಬದಲಿಸಲಾಗಿದ್ದು, ಟಿಕೆಟ್ ಸಿಗದ ನಾಯಕರು ಹಾಗೂ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಅವರಲ್ಲಿ ಕೆಲವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿಲ್ಲ, ಹೀಗಾಗಿ ಪಕ್ಷದ ಅಭ್ಯರ್ಥಿಗಳು ಮುಜುಗರಕ್ಕೀಡಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
5
+ ಈ ಕೆಲವು ಅತೃಪ್ತ ನಾಯಕರನ್ನು ಬಿಜೆಪಿಯ ಹಿರಿಯ ನಾಯಕರಾದ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಮತ್ತು ಇತರ ನಾಯಕರು ಮನವೊಲಿಸಿದ್ದಾರೆ, ಸದ್ಯ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲವು ಭಿನ್ನಮತೀಯ ನಾಯಕರಿಗೆ ಎಚ್ಚರಿಕೆ ನೀಡಿದ್ದರು. ಪಕ್ಷದ ಕೆಲವು ನಾಯಕರೊಂದಿಗೆ ಅಮಿತ್ ಸಂಧಾನ ನಡೆಸಿದ್ದಾರೆ. ರಾಜ್ಯ ನಾಯಕರಿಗಿಂತ ಪ್ರತಿ ಕ್ಷೇತ್ರದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಅಮಿತ್ ಶಾ ಅವರಿಗೆ ಹೆಚ್ಚಿನ ಮಾಹಿತಿಯಿದೆ.
6
+ ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡುವ, ಕೆಲವು ನಾಯಕರ ಪ್ರತಿ ನಡೆ ಮತ್ತು ಹೇಳಿಕೆಗಳನ್ನು ಗಮನಿಸಲು ಅಮಿತ್ ಶಾ ಅವರ ಪರವಾದ ಒಂದು ತಂಡವಿದೆ. ಈ ತಂಡ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರಿಗೆ ವರದಿ ಮಾಡುತ್ತದೆ, ನಂತರ ಅವರು ದೆಹಲಿಗೆ ಮಾಹಿತಿ ರವಾನಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
7
+ ಮೈಸೂರು, ಚಿಕ್ಕಬಳ್ಳಾಪುರ, ಹಾಸನ, ಕೊಪ್ಪಳ, ಬೆಳಗಾವಿ, ಮಂಡ್ಯ, ಬೆಂಗಳೂರು ಉತ್ತರ ಮತ್ತು ಇತರ ಕೆಲವು ಕ್ಷೇತ್ರಗಳ ಮೇಲೆ ಕಣ್ಗಾವಲು ಇಡಲಾಗಿದೆ. ಕಳ��ದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ, ನಾವು ಗೆಲ್ಲುವ ಉತ್ತಮ ಅವಕಾಶವಿದ್ದ 20 ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಪಕ್ಷದ ನಾಯಕರ ನಡುವಿನ ಕಿತ್ತಾಟದಿಂದಾಗಿ ನಕಾರಾತ್ಮಕ ಫಲಿತಾಂಶ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಅದು ಪುನರಾವರ್ತನೆಯಾಗದಂತೆ ದೆಹಲಿಯ ಬಿಜೆಪಿ ತಂಡವು ನಿಗಾ ಇರಿಸಿದೆ. ಏಕೆಂದರೆ ಅದು ಪಕ್ಷದ ಭವಿಷ್ಯವನ್ನು ಹಾಳುಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
8
+ ಹಾಸನದಂತೆ ಕೆಲವೆಡೆ ಬಿಜೆಪಿ ನಾಯಕರು ಜೆಡಿಎಸ್ ಅಭ್ಯರ್ಥಿಗಳಿಗೆ ಸಹಕಾರ ನೀಡುತ್ತಿಲ್ಲ. ಇದು ಕೂಡ ದಿಲ್ಲಿ ನಾಯಕರ ಗಮನಕ್ಕೆ ಬಂದಿದೆ. ಬಿಜೆಪಿ ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದ್ದು, ಚುನಾವಣೆ ಮುಗಿದ ಮೇಲೆ ಅತೃಪ್ತ ನಾಯಕರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಜೆಪಿಯ ಮೂಲಗಳು ಹೇಳಿವೆ.
eesanje/url_46_185_9.txt ADDED
@@ -0,0 +1,8 @@
 
 
 
 
 
 
 
 
 
1
+ ಲೋಕಕಣದಲ್ಲಿ ಮೂವರು ಹಾಲಿ ಶಾಸಕರು, ಓರ್ವ ಪರಿಷತ್ ಸದಸ್ಯ : ರಾಜ್ಯದಲ್ಲಿ ಉಪಚುನಾವಣೆ ಅನಿವಾರ್ಯ..?
2
+ ಬೆಂಗಳೂರು,ಏ.6-2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮೂವರು ಹಾಲಿ ಶಾಸಕರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯ ಕಣಕ್ಕಿಳಿದಿದ್ದಾರೆ. ಇವರು ಗೆಲುವು ಸಾಧಿಸಿದರೆ ಈ ಕ್ಷೇತ್ರಗಳಿಗೆ ಮತ್ತೊಮ್ಮೆ ಉಪಚುನಾವಣೆ ನಡೆಯುವ ಅನಿವಾರ್ಯತೆ ಎದುರಾಗಲಿದೆ. ಈ ಹಿಂದೆಯೂ ಸಹ ವಿಧಾನಸಭೆ ಸದಸ್ಯರು ಲೋಕಸಭೆಗೆ ಸ್ರ್ಪಧಿಸಿರುವ ಉದಾಹರಣೆಗಳಿವೆ. ಅದೇ ರೀತಿ ವಿಧಾನಸಭೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದು, ಒಂದು ಕ್ಷೇತ್ರಕ್ಕೆ ಮತ್ತೆ ಉಪ ಚುನಾವಣೆ ನಡೆಸಿರುವ ನಿದರ್ಶನಗಳಿವೆ.
3
+ ಚನ್ನಪಟ್ಟಣ ಕ್ಷೇತ್ರದ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರೆ, ಹಾವೇರಿ ಲೋಕಸಭಾ ಕ್ಷೇತ್ರದಿಂದ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಕಣದಲ್ಲಿದ್ದಾರೆ. ಇನ್ನು ಸಂಡೂರು ಕ್ಷೇತ್ರದ ಶಾಸಕ ಈ.ತುಕರಾಂ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.
4
+ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಹಾಗೂ ಪರಿಷತ್‍ನ ಪ್ರತಿಪಕ್ಷದ ನಾಯಕರೂ ಆಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಕಣದಲ್ಲಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಒಬ್ಬರು ಸಚಿವರಾಗಿದ್ದವರು, ಮತ್ತೊಬ್ಬರು ಶಾಸಕರು. ಪ್ರಬಲ ಅಭ್ಯರ್ಥಿಗಳಾಗಿರುವ ಈ ನಾಲ್ವರು ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಅವರಿಗೆ ಕ್ರಾಂಗೆಸ್‍ನಿಂದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪ್ರತಿಸ್ರ್ಪಧಿಯಾಗಿದ್ದರೆ, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‍ನ ಕಾರ್ಯಕರ್ತ ಆನಂದಸ್ವಾಮಿ ಗಡ್ಡದೇವರ ಮಠ ಪೈಪೋಟಿ ನೀಡುತ್ತಿದ್ದಾರೆ.
5
+ ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಇವರಿಗೆ ಶಾಸಕ ತುಕರಾಂ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಮಾಜಿ ಸಂಸದ ಹಾಗೂ ಇತ್ತೀಚೆಗಷ್ಟೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಕಣದಲ್ಲಿದ್ದು, ಇಲ್ಲಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಎದುರಾಳಿಯಾಗಿದ್ದಾರೆ. ಇಬ್ಬರಲ್ಲೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಲಿ ಶಾಸಕರು ಗೆಲುವು ಕಂಡರೆ ವಿಧಾನಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಾಗುತ್ತದೆ. ನಂತರ ಉಪಚುನಾವಣೆ ಅನಿವಾರ್ಯವಾಗಲಿದೆ.
6
+ ಹಾಲಿ ಸಂಸದರ ಅಗ್ನಿಪರೀಕ್ಷೆ:ಹಾಲಿ ಸಂಸದರಾಗಿರುವವರ ಪೈಕಿ ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ, ಬಾಗಲಕೋಟೆಯಿಂದ ಪಿ.ಸಿ. ಗದ್ದಿಗೌಡರ್, ವಿಜಾಪುರದಿಂದ ರಮೇಶ್ ಜಿಗಜಿಣಗಿ, ಕಲಬುರಗಿಯಿಂದ ಉಮೇಶ್ ಜಾಧವ್, ರಾಯಚೂರಿನಿಂದ ರಾಜಾ ಅಮರೇಶ್ವರ್ ನಾಯಕ್, ಬೀದರ್‍ನಿಂದ ಭಗವಂತ ಖೂಬಾ, ಧಾರವಾಡದಿಂದ ಪ್ರಹ್ಲಾದ್ ಜೋಷಿ, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಕಾಂಗ್ರೆಸ್‍ನಿಂದ, ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಹಾಸನದಿಂದ ಸಂಸತ್ ಮರುಪ್ರವೇಶಿಸುವ ವಿಶ್ವಾಸದಲ್ಲಿದ್ದಾರೆ.
7
+ ಹಾಲಿ ಸಂಸದರ ಪೈಕಿ ಬೆಳಗಾವಿಯಲ್ಲಿ ಮಂಗಳಾ ಅಂಗಡಿ, ಕೊಪ್ಪಳದಲ್ಲಿ ಕರಡಿ ಸಂಗಣ್ಣ, ಬಳ್ಳಾರಿಯಲ್ಲಿ ವೈ.ದೇವೇಂದ್ರಪ್ಪ, ಹಾವೇರಿಯಲ್ಲಿ ಶಿವಕುಮಾರ್ ಉದಾಸಿ, ಉತ್ತರಕನ್ನಡದಲ್ಲಿ ಅನಂತ ಕುಮಾರ್ ಹೆಗಡೆ, ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ್, ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್, ಚಿತ್ರದುರ್ಗದಲ್ಲಿ ಎ.ನಾರಾಯಣಸ್ವಾಮಿ, ತುಮಕೂರಿನಲ್ಲಿ ಜಿ.ಎಸ್.ಬಸವರಾಜ್, ಮೈಸೂರಿನಲ್ಲಿ ಪ್ರತಾಪ್ ಸಿಂಹ, ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್, ಬೆಂಗಳೂರು ಉತ್ತರದಲ್ಲಿ ಡಿ.ವಿ.ಸದಾನಂದ ಗೌಡ, ಚಿಕ್ಕಬಳ್ಳಾಪುರದಲ್ಲಿ ಬಿ.ಎನ್.ಬಚ್ಚೇಗೌಡ, ಕೋಲಾರದಲ್ಲಿ ಎಸ್.ಮುನಿಸ್ವಾಮಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಇದರಲ್ಲಿ ಕೆಲವು ಸಂಸದರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
8
+ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಪಡೆದರೆ ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾವಣೆಯಾಗಿದೆ. ಇನ್ನು ಕಾಂಗ್ರೆಸ್‍ನಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಮರು ಸ್ರ್ಪಸಿದ್ದರೆ, ಚಿಕ್ಕೋಡಿಯಲ್ಲಿ ಪ್ರಿಯಾಂಕ ಜಾರಕಿಹೊಳಿ, ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್, ಬಾಗಲಕೋಟೆಯಲ್ಲಿ ಸಂಯುಕ್ತ ಎಸ್.ಪಾಟೀಲ್, ಬೀದರ್‍ನಲ್ಲಿ ಸಾಗರ್ ಖಂಡ್ರೆ, ಚಾಮರಾಜನಗರದಲ್ಲಿ ಸುನೀಲ್ ಬೋಸ್, ಬೆಂಗಳೂರು ದಕ್ಷಿಣದಲ್ಲಿ ಸೌಮ್ಯಾ ರೆಡ್ಡಿ, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್, ಶಿವಮೊಗ್ಗದಿಂದ ಗೀತಾ ಶಿವರಾಜ್‍ಕುಮಾರ್ ಸ್ರ್ಪಸುತ್ತಿದ್ದಾರೆ. ಅದರಲ್ಲೂ ಸಚಿವರ ಕುಟುಂಬದ ಸದಸ್ಯರು ಕಣದಲ್ಲಿರುವುದು ಮತ್ತೊಂದು ವಿಶೇಷ.
eesanje/url_46_186_1.txt ADDED
@@ -0,0 +1,6 @@
 
 
 
 
 
 
 
1
+ ನಾಮಪತ್ರ ವಾಪಸ್ಸಿಗೆ ಏ.8 ಕಡೆಯ ದಿನ
2
+ ಬೆಂಗಳೂರು,ಏ.5-ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಇಂದು ನಾಮಪತ್ರಗಳ ಪರಿಶೀಲನೆ ನಡೆದಿದೆ. ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಸಂಜೆ ವೇಳೆಗೆ ತಿರಸ್ಕೃತಗೊಂಡ ಹಾಗೂ ಕ್ರಮಬದ್ಧವಾದ ನಾಮಪತ್ರಗಳ ಪ್ರಕಟಣೆ ಹೊರಬೀಳಲಿದೆ.
3
+ ನಾಮಪತ್ರ ವಾಪಸ್ಸು ಪಡೆಯಲು ಏ.8 ರವರೆಗೂ ಕಾಲಾವಕಾಶವಿದೆ. ಏ.26 ರಂದು ಮತದಾನ ನಡೆಯಲಿದ್ದು, ಜೂ.4 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಮಾ.28 ರಿಂದ ನಿನ್ನೆಯವರೆಗೆ 14 ಕ್ಷೇತ್ರಗಳಲ್ಲಿ 333 ಪುರುಷ, 25 ಮಹಿಳೆಯರೂ ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು, 453 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
4
+ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು 35 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರೆ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅತೀ ಕಡಿಮೆ 10 ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು.
5
+ ಉಡುಪಿ-ಚಿಕ್ಕಮಗಳೂರು-12, ಹಾಸನ-21, ಚಿತ್ರದುರ್ಗ-25, ತುಮಕೂರು-25, ಮಂಡ್ಯ, ಮೈಸೂರು ತಲಾ -26, ಚಾಮರಾಜನಗರ- 24, ಬೆಂಗಳೂರು ಗ್ರಾಮಾಂತರ -30, ಬೆಂಗಳೂರು ಉತ್ತರ-19, ಬೆಂಗಳೂರು ಕೇಂದ್ರ – 29, ಬೆಂಗಳೂರು ದಕ್ಷಿಣ- 31, ಕೋಲಾರ-24, ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
6
+ ಬಿಜೆಪಿಯಿಂದ 12 ಅಭ್ಯರ್ಥಿಗಳಿಂದ 17 ನಾಮಪತ್ರ, ಜೆಡಿಎಸ್ನಿಂದ 3 ಅಭ್ಯರ್ಥಿಗಳಿಂದ 8 ನಾಮಪತ್ರ, ಕಾಂಗ್ರೆಸ್ನಿಂದ 14 ಅಭ್ಯರ್ಥಿಗಳಿಂದ 21 ನಾಮಪತ್ರ, ಬಿಎಸ್ಪಿಯಿಂದ 18, ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ 161, ಪಕ್ಷೇತರರಿಂದ 211 ನಾಮಪತ್ರಗಳು ಸಲ್ಲಿಕೆಯಾಗಿವೆ.
eesanje/url_46_186_10.txt ADDED
@@ -0,0 +1,13 @@
 
 
 
 
 
 
 
 
 
 
 
 
 
 
1
+ ರಾಜ್ಯದಲ್ಲಿ ಮೊದಲ ಹಂತದ ನಾಮಪತ್ರ ಸಲ್ಲಿಕೆ ಅಂತ್ಯ : ಪ್ರಚಾರ ಅಬ್ಬರ ಶುರು
2
+ ಬೆಂಗಳೂರು,ಏ.4-ಪ್ರಸಕ್ತ ಲೋಕಸಭಾ ಸಾರ್ವತ್ರಿಕ ಚುನಾವಣೆಯ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಪ್ರಾರಂಭವಾಗಿದೆ.ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಇಂದು ಬಹುತೇಕ ಎಲ್ಲಾ ಅಭ್ಯರ್ಥಿಗಳು ತನ್ನ ಉಮೇದುವಾರಿಕೆಯನ್ನು ಸಲ್ಲಿಸಿದರು. ರೋಡ್ ಶೋ, ಬಹಿರಂಗ ಸಮಾವೇಶಗಳ ಮೂಲಕ ಚುನಾವಣೆಯ ಕಣ ರಂಗೇರಿತ್ತು. ಕೊನೆ ದಿನವಾದ್ದರಿಂದ ನಾಮಪತ್ರಗಳ ಸಲ್ಲಿಕೆಗಳ ಭರಾಟೆಯೂ ಜೋರಾಗಿತ್ತು.
3
+ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಾಳೆ ನಡೆಯಲಿದ್ದು, ಸಂಜೆ ವೇಳೆಗೆ ಕ್ರಮಬದ್ಧವಾದ ಹಾಗೂ ತಿರಸ್ಕøತಗೊಂಡ ನಾಮಪತ್ರಗಳ ಪ್ರಕಟಣೆ ಮಾಡಲಾಗುತ್ತದೆ.
4
+ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಸಂಸದರಾದ ಪ್ರಜ್ವಲ್ ರೇವಣ್ಣ , ತೇಜಸ್ವಿ ಸೂರ್ಯ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಡಾ.ಕೆ.ಸುಧಾಕರ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ಎಂ.ಮಲ್ಲೇಶ್ ಬಾಬು ಸೇರಿದಂತೆ ಹಲವರು ಇಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
5
+ ನಾಮಪತ್ರ ಸಲ್ಲಿಕೆಗೂ ಮುನ್ನ ಕೆಲವು ಅಭ್ಯರ್ಥಿಗಳು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮತ್ತೆ ಕೆಲವರು ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಆಯಾ ಪಕ್ಷಗಳ ನಾಯಕರು ಮತ್ತು ಮುಖಂಡರು ಉಪಸ್ಥಿತರಿದ್ದರು.
6
+ ನಾಮಪತ್ರ ಸಲ್ಲಿಸಿದ ಬಳಿಕ ಕೆಲವರು ಕ್ಷೇತ್ರಗಳಲ್ಲಿ ಸಾರ್ವಜನಿಕ ಸಮಾವೇಶಗಳನ್ನು ನಡೆಸಿ ಅಭ್ಯರ್ಥಿಗಳ ಪರ ಪ್ರಚಾರ ಹಾಗೂ ಮತ ಯಾಚನೆ ಮಾಡಲಾಯಿತು. ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಕೆಲವು ಅಭ್ಯರ್ಥಿಗಳು ಅಬ್ಬರದ ರೋಡ್ ಶೋ ನಡೆಸಿ, ಶಕ್ತಿ ಪ್ರದರ್ಶನ ಮಾಡಿ ಮತ್ತೆ ನಾಮಪತ್ರ ಸಲ್ಲಿಸಿದರೆ, ಮತ್ತೆ ಕೆಲವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
7
+ ಮಂಡ್ಯ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ರಾಜದತ್ತ ಒಡೆಯರ್ ಸೇರಿದಂತೆ ಬಿಜೆಪಿ-ಜೆಡಿಎಸ್ನ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್, ರಾಮನಗರ ಜಿಲ್ಲಾಕಾರಿ ಅವಿನಾಶ್ ಮೆನನ್ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
8
+ ಈ ಸಂದರ್ಭದಲ್ಲಿ ಮಂಜುನಾಥ್ರವರ ಪತ್ನಿ ಅನಸೂಯ, ಶಾಸಕರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮುನಿರತ್ನ, ಎಂ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.ಈಗಾಗಲೇ ಉಮೇದುವಾರಿಕೆಯನ್ನು ಸಲ್ಲಿಸಿದ್ದ ಡಿ.ಕೆ.ಸುರೇಶ್ರವರೂ ಸಹ ಇಂದು ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದರು.
9
+ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್, ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.ಸಂಸದ ತೇಜಸ್ವಿ ಸೂರ್ಯ ಅವರು ಮಾಜಿ ಸಚಿವರಾದ ವಿ.ಸುನೀಲ್ಕುಮಾರ್, ಎಸ್.ಸುರೇಶ್ ಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ರೊಂದಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
10
+ ಇದೇ ಕ್ಷೇತ್ರದಿಂದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರೂ ಸಹ ತಮ್ಮ ಉಮೇದುವಾರಿಕೆಯನ್ನು ಇಂದು ಸಲ್ಲಿಸಿದರು. ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎನ್.ಚಂದ್ರಪ್ಪ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿ.ಶ್ರೀರಾಮುಲು, ಜೆ.ಸಿ.ಮಾಧುಸ್ವಾಮಿ ಉಪಸ್ಥಿತರಿದ್ದರು. ಈಗಾಗಲೇ ತಮ್ಮ ಉಮೇದುವಾರಿಕೆ ಸಲ್ಲಿಸಿರುವ ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.
11
+ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಹಾಜರಿದ್ದರು.
12
+ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಮಾ.28 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ನಿನ್ನೆಯವರೆಗೆ ಒಟ್ಟು 199 ಅಭ್ಯರ್ಥಿಗಳು 268 ನಾಮಪತ್ರ ಸಲ್ಲಿಸಿದ್ದಾರೆ.184 ಪುರುಷ ಹಾಗೂ 15 ಮಹಿಳಾ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
13
+ ಬಿಜೆಪಿ 24, ಕಾಂಗ್ರೆಸ್ 29, ಬಿಎಸ್ಪಿ 13, ಸಿಪಿಐಎಂ 1, ಜೆಡಿಎಸ್ 2, ಪಕ್ಷೇತರ 109 , ನೋಂದಾಯಿತ ಮತ್ತು ನೋಂದಾವಣೆಯಾಗದ ಪಕ್ಷಗಳ ಅಭ್ಯರ್ಥಿಗಳಿಂದ 90 ಸೇರಿದಂತೆ ಒಟ್ಟು 268 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
eesanje/url_46_186_11.txt ADDED
@@ -0,0 +1,5 @@
 
 
 
 
 
 
1
+ ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೊಂದು ಮಿನಿ ಸಮರ
2
+ ಬೆಂಗಳೂರು, ಏ.4-ಪ್ರಸಕ್ತ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೊಂದು ಮಿನಿ ಮಹಾಸಮರ ನಡೆಯಲಿದೆ. ಜೂನ್ನಲ್ಲಿ 18 ವಿಧಾನಪರಿಷತ್ ಸದಸ್ಯ ಸ್ಥಾನಗಳು ತೆರವಾಗಲಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನಪರಿಷತ್ನ 12 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
3
+ ವಿಧಾನಪರಿಷತ್ ಸದಸ್ಯರಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ತೇಜಸ್ವಿನಿಗೌಡ ಅವರ ರಾಜೀನಾಮೆಯಿಂದ ಈಗಾಗಲೇ ಮೇಲ್ಮನೆ ಎರಡು ಸದಸ್ಯ ಸ್ಥಾನಗಳು ಖಾಲಿಯಿವೆ. ಮೇಲ್ಮನೆ ಸದಸ್ಯರಾದ ರಘುನಾಥ್ ರಾವ್ ಮಲ್ಕಾಪೂರೆ, ಡಾ.ಕೆ. ಗೋವಿಂದರಾಜ್, ಅರವಿಂದ ಕುಮಾರ್ ಅರಳಿ, ಕೆ.ಪಿ. ನಂಜುಂಡಿ ವಿಶ್ವಕರ್ಮ, ಬಿ.ಎಂ. ಫಾರೂಖ್, ಎನ್. ರವಿಕುಮಾರ್, ಎಸ್ ರುದ್ರೇಗೌಡ, ಕೆ. ಹರೀಶ್ಕುಮಾರ್, ಮುನಿರಾಜು ಗೌಡ ಪಿ.ಎಂ. ಹಾಗೂ ಸಚಿವ ಎನ್.ಎಸ್. ಬೋಸರಾಜು ಅವರು ಜೂ.17ರಂದು ನಿವೃತ್ತಿಯಾಗಲಿದ್ದಾರೆ. ಪದವಿ ಧರ ಕ್ಷೇತ್ರದಿಂದ ಆರ್. ದೇವೇಗೌಡ, ಡಾ. ಚಂದ್ರಶೇಖರ್ ಬಿ. ಪಾಟೀಲ್ ಜೂ.21 ರಂದು ನಿವೃತ್ತಿಯಾಗಲಿದ್ದಾರೆ. ಈಗಾಗಲೇ ಒಂದು ಸ್ಥಾನ ಖಾಲಿ ಉಳಿದಿದೆ.
4
+ ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿದ್ದ ಮರಿತಿಬ್ಬೇಗೌಡ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಡಾ. ವೈ.ಎ. ನಾರಾಯಣಸ್ವಾಮಿ ಅವರು ಜೂ.21ರಂದು ನಿವೃತ್ತಿಯಾಗಲಿದ್ದಾರೆ. ಖಾಲಿ ಇರುವ ಹಾಗೂ ನಿವೃತ್ತಿಯಿಂದ ತೆರವಾಗುವ ಮೇಲ್ಮನೆಯ ಸದಸ್ಯ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣೆ ಘೋಷಿಸಬೇಕಿದೆ.
5
+ ಪ್ರಸಕ್ತ ಲೋಕಸಭೆ ಚುನಾವಣೆ ಪ್ರಕ್ರಿಯೆ ಜೂ.6ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಅಷ್ಟರ ವೇಳೆಗೆ ಮೇಲ್ಮನೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾದರೆ ಅಚ್ಚರಿ ಪಡಬೇಕಿಲ್ಲ. ಏ.26 ಹಾಗೂ ಮೇ.7 ರಂದು ಎರಡು ಹಂತದಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಆನಂತರ ವಿಧಾನಪರಿಷತ್ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿವೆ.
eesanje/url_46_186_12.txt ADDED
@@ -0,0 +1,7 @@
 
 
 
 
 
 
 
 
1
+ ಮೈತ್ರಿ ಅಭ್ಯರ್ಥಿಗಳಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ : ಬಿ.ವೈ.ವಿಜಯೇಂದ್ರ
2
+ ಹಾಸನ,ಏ.4-ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಅಭೂತಪೂರ್ವವಾದಂತಹ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು.
3
+ ಪ್ರಧಾನಿ ನರೇಂದ್ರಮೋದಿ ಅವರ ಕನಸಿನಂತೆ 2047ರ ವೇಳೆಗೆ ವಿಕಸಿತ ಭಾರತ ಆಗಿ ಪರಿವರ್ತನೆ ಆಗಬೇಕು. ಅದಕ್ಕಾಗಿ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಮಂತ್ರಿ ಆಗಬೇಕು, ಅದು ನನಸಾಗುವ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ನರೇಂದ್ರಮೋದಿ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿರುವುದು ನಮಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದೆ.ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿಯುತ್ತೇವೆ ಎಂದು ಹೇಳಿದರು.
4
+ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಶಾಸಕ ಪ್ರೀತಂಗೌಡ ಗೈರು ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ನಾಯಕರು ಕುಳಿತು ಪದಾಧಿಕಾರಿಗಳ ಸಭೆ ಮಾಡಿದ್ದಾರೆ. ಒಂದೆರಡು ದಿನದಲ್ಲಿ ವಾತಾವರಣ ತಿಳಿಯಾಗಲಿದೆ. ನಮ್ಮ ಕರ್ತವ್ಯ ಕೂಡ ಇರುತ್ತದೆ.
5
+ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇ ಗೌಡರು ಕೂಡ ಆಶೀರ್ವಾದ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿಯವರ ಬಗ್ಗೆ ಗೌಡರು ಅಚಲ ವಿಶ್ವಾಸವನ್ನು ಹೊಂದಿದ್ದಾರೆ ಎಂದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ದೆಹಲಿ ವರಿಷ್ಠರು ಸಮಾಧಾನ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ವಿಚಾರದ ವಿಚಾರದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದ ಮೇಲೆ ಹೇಳುತ್ತೇನೆ ಎಂದು ಹೇಳಿದರು.
6
+ ಪ್ರಜ್ವಲ್ ನಾಮಪತ್ರ ಸಲ್ಲಿಕೆ :ಹಾಸನ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರುಗಳಾದ ಸಿಮೆಂಟ್ ಮಂಜು, ಎಚ್.ಕೆ.ಸುರೇಶ್, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಉಪಾಸಭಾಪತಿ ಪ್ರಾಣೇಶ್, ಎಚ್.ಕೆ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮ ಅವರಿಗೆ ಪ್ರಜ್ವಲ್ ನಾಮಪತ್ರ ಸಲ್ಲಿಸಿದರು.
7
+ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸೂಚಕರಾಗಿ ಪ್ರಜ್ವಲ್ರವರ ನಾಮಪತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹಿ ಹಾಕಿ ತೆರಳಿದರು. ಹಾಸನದಲ್ಲಿ ನಡೆದ ರೋಡ್ ಶೋನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಎಂಎಲ್ಸಿ ಸೂರಜ್ ರೇವಣ್ಣ, ಭವಾನಿ ರೇವಣ್ಣ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರು ಉಪಸ್ಥಿತರಿದ್ದರು.
eesanje/url_46_186_2.txt ADDED
@@ -0,0 +1,16 @@
 
 
 
 
 
 
 
 
 
 
 
 
 
 
 
 
 
1
+ ಸಾಲುಸಾಲು ರಜೆ : ಹಗಲು ದರೋಡೆಗಿಳಿದ ಖಾಸಗಿ ಬಸ್ ಮಾಲೀಕರು, ಇಲ್ಲಿದೆ ಶಾಕಿಂಗ್ ದರಪಟ್ಟಿ
2
+ ಬೆಂಗಳೂರು,ಏ.5-ಸಿಗುವ ಸಾಲು ರಜೆಗಳಿಂದಾಗಿ ಊರಿಗೆ ತೆರಳಿ ಯುಗಾದಿ ಹಬ್ಬ ಆಚರಿಸಲು ತೀರ್ಮಾನಿಸಿರುವ ಸಾಮಾನ್ಯ ಜನರಿಗೆ ಖಾಸಗಿ ಬಸ್ ಮಾಲೀಕರು ಟಿಕೆಟ್ ಬೆಲೆ ಏರಿಕೆ ಶಾಕ್ ನೀಡಿದ್ದಾರೆ.
3
+ ಭಾನುವಾರ ಮಾಮೂಲು ರಜೆ ಸೋಮವಾರ ಒಂದು ದಿನ ಕೆಲಸ ಮಾಡಿದರೆ ಮಂಗಳವಾರ ಯುಗಾದಿ ರಜೆ ಬುಧವಾರ ಕಳೆದರೆ ರಂಜಾನ್ ಹಬ್ಬ ಹೀಗಾಗಿ ಸಾಲು ಸಾಲು ರಜೆ ಸಿಗುವುದರಿಂದ ಜನ ಊರಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಇದರ ಜತೆಗೆ ಮಕ್ಕಳ ಎಕ್ಸಾಂ ಮುಗಿದು ಅವರಿಗೂ ರಜೆ ಇರುವುದರಿಂದ ನಾಳೆ ರಾತ್ರಿಯೇ ಕೆಲವರು ಊರಿಗೆ ಹೋಗಲು ತಯಾರಾಗಿದ್ದಾರೆ. ಇನ್ನು ಕೆಲವರು ಸೋಮವಾರ ಮತ್ತು ಬುಧವಾರ ರಜೆ ಹಾಕಿ ಒಂದು ವಾರ ಊರಿನಲ್ಲೇ ಹಬ್ಬ ಮಾಡುತ್ತ ಕಾಲ ಕಳೆಯಲು ನಿರ್ಧರಿಸಿದ್ದಾರೆ.
4
+ ಇಂತಹ ಸಮಯವನ್ನೇ ಕಾಯುತ್ತಿದ್ದ ಖಾಸಗಿ ಬಸ್ಗಳ ಮಾಲೀಕರು ಟಿಕೆಟ್ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದ್ದಾರೆ. ಮಾಮೂಲಿ ಬಸ್ ದರದ ದುಪ್ಪಟ್ಟು ಬೆಲೆ ಏರಿಕೆ ಮಾಡಿರುವ ಖಾಸಗಿ ಬಸ್ ಮಾಲಿಕರು ಎಸಿ ಬಸ್ಗಳಿಗೆ ವಿಮಾನಯಾನಕ್ಕಿಂತಲೂ ದುಬಾರಿ ಬೆಲೆ ನಿಗದಿಪಡಿಸಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
5
+ ಬೆಂಗಳೂರು-ಶಿವಮೊಗ್ಗ:ಸಾಮಾನ್ಯ ದಿನದದರರೂ.450-ರೂ.600ಇವತ್ತಿನ ಟಿಕೆಟ್ ದರರೂ.950- ರೂ.1250
6
+ ಬೆಂಗಳೂರು- ಹುಬ್ಬಳ್ಳಿ:ಸಾಮಾನ್ಯ ದರರೂ.600- ರೂ.1000ಇಂದಿನ ಟಿಕೆಟ್ರೂ.1200-ರೂ.1600
7
+ ಬೆಂಗಳೂರು-ಮಂಗಳೂರು:ಸಾಮಾನ್ಯ ದಿನದ ದರರೂ.500- ರೂ.1000ಇಂದಿನ ದರರೂ.1000- ರೂ.1400
8
+ ಬೆಂಗಳೂರು-ಕಲಬುರುಗಿ:ಸಾಮಾನ್ಯ ದಿನದ ದರರೂ.900- ರೂ.1300ಇಂದಿನ ದರರೂ.1400-ರೂ.1900
9
+ ಬೆಂಗಳೂರು-ಮಡಿಕೇರಿ:ಸಾಮಾನ್ಯ ದಿನದ ದರರೂ.500- ರೂ.600ಇಂದಿನ ದರರೂ.950- ರೂ.1200
10
+ ಬೆಂಗಳೂರು – ಉಡುಪಿ:ಸಾಮಾನ್ಯ ದಿನದ ದರರೂ.600- ರೂ.950ಇಂದಿನ ದರರೂ.1700-ರೂ.2200
11
+ ಬೆಂಗಳೂರು-ಧಾರವಾಡ:ಸಾಮಾನ್ಯ ದಿನದ ದರರೂ.650- ರೂ.800ಇಂದಿನ ದರರೂ.1350-ರೂ.1750
12
+ ಬೆಂಗಳೂರು-ಬೆಳಗಾವಿ:ಸಾಮಾನ್ಯ ದಿನದ ದರರೂ.500 ರೂ.800ಇಂದಿನ ದರರೂ.1300-ರೂ.1800
13
+ ಬೆಂಗಳೂರು – ದಾವಣಗೆರೆ:ಸಾಮಾನ್ಯ ದಿನದ ದರರೂ.450 ರೂ.600ಇಂದಿನ ದರರೂ.900-ರೂ.1300
14
+ ಬೆಂಗಳೂರು – ಚಿಕ್ಕಮಗಳೂರು:ಸಾಮಾನ್ಯ ದರ ರೂ.550 -600ಇಂದಿನದರರೂ.1100-ರೂ.1300
15
+ ಬೆಂಗಳೂರು – ಬೀದರ್:ಸಾಮಾನ್ಯ ದರ ರೂ.850 -1200ಇಂದಿನದರ ರೂ.1600- 1800
16
+ ಬೆಂಗಳೂರು – ರಾಯಚೂರುಸಾಮಾನ್ಯ ದರ ರೂ.600 -900ಇಂದಿನ ದರರೂ.1250-ರೂ.1600
eesanje/url_46_186_3.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಅಧಿಕೃತವಾಗಿ ಬಿಜೆಪಿ ಸೇರಿದ ಸುಮಲತಾ ಅಂಬರೀಶ್
2
+ ಬೆಂಗಳೂರು,ಏ.5-ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನಿ ಅಸ್ತ್ರದ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಇತಿಹಾಸ ಸೃಷ್ಟಿಸಿದ್ದ ಸುಮಲತ ಅಂಬರೀಶ್ ಇಂದು ವಿಧ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಸುಮಲತ ಅಂಬರೀಶ್ ಜೊತೆಗೆ ಮಾಜಿ ಲೋಕಸಭಾ ಸದಸ್ಯ ಎಲ್.ಆರ್.ಶಿವರಾಮೇಗೌಡ ಹಾಗೂ ಸುಮಲತ ಅಂಬರೀಶ್ ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾದರು.
3
+ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರ ಸಮ್ಮುಖದಲ್ಲಿ ಕೇಸರಿ ಶಾಲು ಹೊದ್ದ ಸುಮಲತ ಅಂಬರೀಶ್ ಹಾಗೂ ಬೆಂಬಲಿಗರು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು.
4
+ ಅವರ ಸೇರ್ಪಡೆಯಿಂದಾಗಿ ಹಳೇ ಮೈಸೂರು ಭಾಗದಲ್ಲಿ(ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ) ಬಿಜೆಪಿಗೆ ಹೆಚ್ಚಿನ ಶಕ್ತಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಪಕ್ಷ ಸೇರ್ಪಡೆಗೂ ಮುನ್ನ ಸುಮಲತ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
5
+ ನಂತರ ನೇರವಾಗಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು.ಈ ವೇಳೆ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಕಚೇರಿಗೆ ಆಗಮಿಸುತ್ತಿದ್ದಂತೆ ಜೈಕಾರದ ಘೋಷಣೆಗಳು ಮೊಳಗಿದವು. ಬಿಜೆಪಿ ಸೇರುವ ಮುನ್ನ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಸುಮಲತ ಅಂಬರೀಶ್ ಭಾವನಾತ್ಮಕವಾದ ಸಂದೇಶವನ್ನು ಪೋಸ್ಟ್ ಮಾಡಿದ್ದರು.
6
+ ಮಂಡ್ಯದ ಅಭಿವೃದ್ಧಿಯನ್ನೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ. ಅದರಂತೆಯೇ, ಬಿಜೆಪಿ ನಾಯಕರ ಸಮ್ಮುಖದಲ್ಲಿ ಏಪ್ರಿಲ್ 5ರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಆಗುತ್ತಿರುವೆ.
7
+ ನಮ್ಮ ಕರುನಾಡಿನ ಸಕ್ಕರೆಯ ನಾಡು ಮಂಡ್ಯದ ನನ್ನ ಸ್ವಾಭಿಮಾನಿ ಬಂಧುಗಳು, ಡಾ.ಅಂಬರೀಶ್ ಅಭಿಮಾನಿಗಳು ಹಾಗೂ ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದ ಎಂದಿನಂತೆ ಇರಲಿ ಎಂದು ನನ್ನ ಸವಿನಯ ಕೋರಿಕೆ ಎಂದು ಬರೆದುಕೊಂಡಿದ್ದಾರೆ.
8
+ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್‍ಗಾಗಿ ಸುಮಲತ ಸಾಕಷ್ಟು ಹೋರಾಟ ನಡೆಸಿದ್ದರು. ಬಿಜೆಪಿ ಹೈಕಮಾಂಡ್ ಮಂಡ್ಯ ಕ್ಷೇತ್ರವನ್ನು ಮೈತ್ರಿ ಪಕ್ಷ ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಲ್ಲದೇ, ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಸುಮಲತಾಗೆ ಆಫರ್ ನೀಡಲಾಗಿತ್ತು. ಆದರೆ ಸುಮಲತ ಮಂಡ್ಯ ಹೊರತುಪಡಿಸಿ ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂಬ ಅಚಲ ನಿರ್ಧಾರ ತೆಗೆದುಕೊಂಡಿದ್ದರು. ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲಿದ್ದಾರೆ ಎಂಬಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು.
9
+ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಸಂಸದೆ ಸುಮಲತ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಜೆಪಿನಗರದ ಮನೆಯಲ್ಲಿ ಭೇಟಿ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಬೆಂಬಲ ಮತ್ತು ಸಹಕಾರ ಕೋರಿದ್ದರು. ಬಳಿಕ ಮಂಡ್ಯ ಕ್ಷೇತ್ರದ ಅಭಿಮಾನಿಗಳು ಮತ್ತು ಬೆಂಬಲಿಗರ ಅಭಿಪ್ರಾಯ ಪಡೆದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು.
10
+ ಮೊನ್ನೆ ಮಂಡ್ಯದಲ್ಲಿ ಸಭೆ ನಡೆಸಿ ಬಿಜೆಪಿ ಸೇರುವುದಾಗಿ ಪ್ರಕಟಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ, ಹಾಗೆಯೇ ಮಂಡ್ಯ ಬಿಟ್ಟು ಬೇರೆ ಎಲ್ಲಿಯೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ನಿರ್ಧಾರ ಘೋಷಣೆ ಮಾಡಿದ್ದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಗೆದ್ದು ದೇಶದ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಬಿಜೆಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಮಲತ ಅವರಿಗೆ ಬೆಂಬಲ ನೀಡಿತ್ತು.
eesanje/url_46_186_4.txt ADDED
@@ -0,0 +1,5 @@
 
 
 
 
 
 
1
+ ಚುನಾವಣಾ ಅಕ್ರಮ : ರಾಜ್ಯದಲ್ಲಿ ಈವರೆಗೆ 30.19 ಕೋಟಿ ನಗದು ಜಪ್ತಿ
2
+ ಬೆಂಗಳೂರು,ಏ.5-ಚುನಾವಣಾ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮವನ್ನು ಭಾರತದ ಚುನಾವಣಾ ಆಯೋಗ ಜರುಗಿಸುತ್ತಿರುವ ಪರಿಣಾಮ 30.19 ಕೋಟಿ ನಗದು ಜಪ್ತಿ ಮಾಡಲಾಗಿದೆ. ಪ್ರಸಕ್ತ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.16ರಿಂದ ನಿನ್ನೆಯವರೆಗೆ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಆದಾಯ ತೆರಿಗೆ, ಅಬಕಾರಿ ಅಧಿಕಾರಿಗಳು ರಾಜ್ಯದಲ್ಲಿ ಒಟ್ಟು 30,19,88,517 ರೂ. ನಗದನ್ನು ಜಪ್ತಿ ಮಾಡಿದ್ದಾರೆ.
3
+ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2.20 ಕೋಟಿ ರೂ ಸ್ಥಿರ ಕಣ್ಗಾವಲು ತಂಡದವರು, ಗುಲ್ಬರ್ಗಾ ಲೋಕಸಭಾ ವ್ಯಾಪ್ತಿಯ ಮೇದಕ್ ಚೆಕ್ ಪೋಸ್ಟ್ ನಲ್ಲಿ ನಲ್ಲಿ 35 ಲಕ್ಷ ರೂ. ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮಾಚಗೊಂಡನಹಳ್ಳಿ ಚೆಕ್ ಪೋಸ್ಟ್ ನಲ್ಲಿ 45 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
4
+ 1,75,43,093 ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿದ್ದು, 1,31,92,49,175 ರೂ. ಮೌಲ್ಯದ 1,32, 59,894.85 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ.3,13,55,960 ರೂ. ಮೌಲ್ಯದ 287.18 ಕೆಜಿ ತೂಕದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 9,93,80,132 ರೂ. ಮೌಲ್ಯದ 16.02 ಕೆಜಿ ಚಿನ್ನ, 27,23,150 ರೂ. ಮೌಲ್ಯದ 59.04 ಕೆಜಿ ಬೆಳ್ಳಿ ಹಾಗೂ 9 ಲಕ್ಷ ಮೌಲ್ಯದ 21.17 ಕ್ಯಾರೆಟ್ ಮೌಲ್ಯದ ವಜ್ರಾಭರಣಗಳನ್ನು ಜಪ್ತಿ ಮಾಡಿದ್ದಾರೆ.
5
+ ನಗದು, ಮದ್ಯ, ಡ್ರಗ್ಸ್, ಬೆಲೆ ಬಾಳುವ ಲೋಹ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿರುವ ಪ್ರಕರಣಗಳಿಗೆ ಸಂಬಂಸಿದಂತೆ 1245 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ. 790 ವಿವಿಧ ರೀತಿಯ ವಾಹನಗಳನ್ನುವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರ ಕುಂದುಕೊರತೆ ಪರಿಹಾರಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಮೂಲಕ ಸ್ವೀಕರಿಸಿದ 12,076 ಕರೆಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
eesanje/url_46_186_5.txt ADDED
@@ -0,0 +1,15 @@
 
 
 
 
 
 
 
 
 
 
 
 
 
 
 
 
1
+ ಈಶ್ವರಪ್ಪ ಈಗ ಒಂಟಿ, ಕಟ್ಟರ್ ಹಿಂದುತ್ವವಾದಿಯ ರೋಚಕ ಪೊಲಿಟಿಕಲ್ ಜರ್ನಿ
2
+ ಬೆಂಗಳೂರು,ಏ.5-ಕೆ.ಎಸ್.ಈಶ್ವರಪ್ಪ ! ಕಟ್ಟರ್ ಹಿಂದುತ್ವವಾದಿ. ಸಂಘ ಪರಿವಾರದಿಂದ ಎದ್ದು ಬಂದ ನಾಯಕ. ಬಿಜೆಪಿಯ ನಿಷ್ಠಾವಂತ. ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಜೊತೆ ಗುರುತಿಸಿಕೊಂಡು ಬೆಳೆದುಬಂದವರು.ಇಂತಹ ಈಶ್ವರಪ್ಪ ಈಗ ಸ್ವಪಕ್ಷದವರ ವಿರುದ್ಧವೇ ಸಿಡಿದೆದ್ದು ತಮಗೆ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಎಲ್ಲವನ್ನೂ ನೀಡಿದ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ವಿರುದ್ಧವೇ ಶಿವಮೊಗ್ಗ ಕಣದಲ್ಲಿ ಅಖಾಡಕ್ಕಿಳಿದಿದ್ದಾರೆ.
3
+ ಶಿವಮೊಗ್ಗದಲ್ಲಿ ಗೆಲ್ಲಲು ಯಡಿಯೂರಪ್ಪನವರ ಶಕ್ತಿ ಬೆಳೆಸಿಕೊಂಡಿದ್ದ ಈಶ್ವರಪ್ಪ, ಬಹುತೇಕ ಅನಂತಕುಮಾರ್‍ಗೆ ನಿಷ್ಠೆಯಾಗಿದ್ದರು. ಅವರ ನಿಧನದ ನಂತರ ಬಿ.ಎಲ್.ಸಂತೋಷ್ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಸದ್ಯ ಅವರು ಕೂಡ ಕೈ ಹಿಡಿಯುವ ಸ್ಥಿತಿಯಲ್ಲಿಲ್ಲ.
4
+ ಪಕ್ಷ ನಿಷ್ಠೆ, ಸಂಘ ಪರಿವಾರದ ಹಿನ್ನೆಲೆ, ಹಿಂದುತ್ವ ಹೇಳಿಕೊಂಡೇ ಆರ್‍ಎಸ್‍ಎಸ್‍ನ ಕಟ್ಟಾಳುವಾಗಿದ್ದ ಈಶ್ವರಪ್ಪ ಇಂದು ಅಕ್ಷರಶಃ ಏಕಾಂಗಿ. ಅವರ ಬೆನ್ನಿಗೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಪ್ರಬಲ ನಾಯಕರು ಇಲ್ಲ. ಒಂದಿಷ್ಟು ಅಭಿಮಾನಿಗಳು ಸದ್ಯ ಜೈ ಜೈ ಎನ್ನುತ್ತಿದ್ದರಾದರೂ ಅವರ ನಿಷ್ಠೆ ಯಾವುದೇ ಸಂದರ್ಭದಲ್ಲಿ ಬದಲಾದರೂ ಅಚ್ಚರಿ ಇಲ್ಲ.
5
+ ಒಂದು ಕಾಲದಲ್ಲಿ 28 ಲೋಕಸಭಾ ಕ್ಷೇತ್ರಗಳು, 224 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಹಂತಕ್ಕೆ ಬೆಳೆದಿದ್ದ ಈಶ್ವರಪ್ಪ ಇಂದು ತಮ್ಮ ಸ್ವಂತ ಮಗನಿಗೆ ಟಿಕೆಟ್ ಕೊಡಿಸಲಾಗದಷ್ಟು ಅಸಹಾಯಕತೆಗೆ ಬಂದಿದ್ದಾರೆ. ಹಾವೇರಿಯಿಂದ ಪುತ್ರ ಕಾಂತೇಶನಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಸಿಡಿದೆದ್ದು ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸದ್ಯ ಅವರ ಮನವೊಲಿಸುವ ದಾರಿಗಳು ಬಂದ್ ಅಗಿವೆ.
6
+ ದೆಹಲಿಗೆ ಬನ್ನಿ ಎಂದು ಹೇಳಿದ್ದ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಭೇಟಿಯಾಗದೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಅವರು ಶಸ್ತ್ರಗಳಿಲ್ಲದೆ, ರಣರಂಗದಲ್ಲಿ ಸೈನಿಕರು ಇಲ್ಲದೆ ಅಭಿಮನ್ಯುವಿನ ರೀತಿ ಚಕ್ರವ್ಯೂಹ ಭೇದಿಸುತ್ತೇನೆ ಎಂದು ರಣರಂಗಕ್ಕೆ ನುಗ್ಗಿದ್ದಾರೆ.ಶಿವಮೊಗ್ಗ ಜಿಲ್ಲೆ ರಾಜಕಾರಣದಲ್ಲಿ ಯಡಿಯೂರಪ್ಪ ಜೊತೆಗೆ ಗುರುತಿಸಿಕೊಂಡು ಬಂದ ಅವರು, ಎರಡು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಸಂಪುಟದ ಸದಸ್ಯರಾಗಿದ್ದರೂ ಸ್ವ ಇಚ್ಛೆಯಿಂದ ಪದತ್ಯಾಗ ಮಾಡಿ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನ ವಹಿಸಿಕೊಂಡಿದ್ದರು.
7
+ ಪಕ್ಷ ಸೇವೆ, ಸಂಘ ಪರಿವಾರದ ಮೇಲಿನ ನಿಷ್ಠೆ, ನಾಯಕತ್ವ ಗುಣ, ಹೋರಾಟ ಮನೋಭಾವ, ಬಿರುಸು ನುಡಿ, ವಿವಾದ ಸೃಷ್ಟಿ ಹೀಗೆ ಹಲವಾರು ಕಾರಣಗಳಿದ ಕೆ.ಎಸ್. ಈಶ್ವರಪ್ಪ ರಾಜ್ಯ ರಾಜಕಾರಣದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಲೇ ಬಂದವರು.ಜತೆಗಾರರಾಗಿದ್ದ ಯಡಿಯೂರಪ್ಪ ಬಿಜೆಪಿಯಿಂದ ಸಿಡಿದು ಹೊರ ಹೋದಾಗಲೂ ಇವರು ಕಮಲ ಕೈ ಬಿಡಲಿಲ್ಲ. ಬಿಜೆಪಿ ಕಷ್ಟದಲ್ಲಿದ್ದಾಗಲೆಲ್ಲ ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದ್ದರು.
8
+ ಮಾತಿನಿಂದಲೇ ಸದಾ ಸುದ್ದಿ:ಯಡಿಯೂರಪ್ಪ ತಮ್ಮ ರಾಜಕೀಯ ನಡೆಗಳಿಂದಾಗಿ ರಾಜ್ಯದಲ್ಲಿ ಹೆಸರು ಮಾಡುತ್ತಿದ್ದರೆ, ಈಶ್ವರಪ್ಪ ತಮ್ಮ ಹರಿತವಾದ ನಾಲಿಗೆಯನ್ನು ಅಡ್ಡಾದಿಡ್ಡಿಯಾಗಿ ಹರಿಯಬಿಟ್ಟು ಸದಾ ಸುದ್ದಿಯಲ್ಲಿರುತ್ತಿದ್ದರು.ಸಚಿವರಾದಾಗಲೂ ಕೂಡ ತಮ್ಮ ಸ್ಥಾನದ ಘನತೆಯನ್ನು ಮರೆತು ಮಾತನಾಡಿದ್ದು ಹಲವಾರು ಬಾರಿ ವಿವಾದಕ್ಕೆ, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
9
+ ಕಡಿ, ಬಡಿ, ಹೊಡಿ ಮಾತುಗಳಲ್ಲದೆ, ದ್ವೇಷ ಕಾರುವ ಮಾತುಗಳನ್ನು ಆಡುತ್ತಿದ್ದರಿಂದ ಪಕ್ಷದ ನಾಯಕತ್ವಕ್ಕೂ ಹಲವಾರು ಬಾರಿ ಮುಜುಗರ ಉಂಟುಮಾಡಿದ್ದರು. ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂಬಂತಹ ಮಾತುಗಳನ್ನು ಆಡಿಯೂ ಈಶ್ವರಪ್ಪ ಅರಗಿಸಿ ಕೊಳ್ಳಬಲ್ಲವರಾಗಿದ್ದರು.
10
+ ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪ ಮೊದಲ ಸಾಲಿನ ಲೀಡರ್ ಎನಿಸಿಕೊಂಡವರು. ಚುನಾವಣಾ ರಾಜಕಾರಣದಲ್ಲಿ ಗೆಲ್ಲಲಿ ಅಥವಾ ಸೋಲಲಿ, ಎಲ್ಲ ಸಂದರ್ಭದಲ್ಲೂ ಈಶ್ವರಪ್ಪ ಅವರಿಗೆ ಪಕ್ಷ ಪ್ರಮುಖ ಸ್ಥಾನಮಾನಗಳನ್ನು ನೀಡಿದೆ. 2013ರಲ್ಲಿ ಸೋತಿದ್ದ ಅವರನ್ನು ಪರಿಷತ್‍ಗೆ ಆಯ್ಕೆ ಮಾಡಲಾಯಿತು.
11
+ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ:ಮಂಡ್ಯ ಮೂಲದ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿ ಮೂಲದ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ನೇಹಿತರಾಗಿ, ಬಿಜೆಪಿಯಲ್ಲಿ ನಾಯಕರಾಗಿ ಬೆಳೆದಿದ್ದೇ ರೋಚಕ ಕತೆ. ಹೆಚ್ಚು ಕಡಿಮೆ ಇಬ್ಬರ ಕುಟುಂಬದ ಆರ್ಥಿಕ ಸ್ಥಿತಿಯೂ ಒಂದೇ ರೀತಿಯಾಗಿತ್ತು. ಸಂಘ ಪರಿವಾರದ ನಂಟಿನಿಂದಾಗಿ ಇಬ್ಬರಿಗೂ ದಾರಿ ಸ್ಪಷ್ಟವಾಗಿತ್ತು. ಇವರಿಬ್ಬರೂ ಒಂದೇ ಸ್ಕೂಟರ್‍ನಲ್ಲಿ ಸುತ್ತಾಡಿ ಪಕ್ಷ ಸಂಘಟಿಸುತ್ತಿದ್ದರು. ಶಿಕಾರಿಪುರದಲ್ಲಿ ಯಡಿಯೂರಪ್ಪ ರೈತರ ಸಮಸ್ಯೆ, ಶ್ರೀಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಬೆಳೆದರೆ, ಇತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಹಿಂದುತ್ವವನ್ನು ಅಸ್ತ್ರವನ್ನಾಗಿ ಬಳಸಿ ರಾಜಕೀಯವಾಗಿ ಬೇರೂರಿದರು.
12
+ ಒಂದು ಕಾಲದಲ್ಲಿ ಇಬ್ಬರೂ ಜೊತೆಗೂಡಿ ಶಿವಮೊಗ್ಗದಲ್ಲಿ ವ್ಯಾಪಾರ ನಡೆಸಿದ್ದರು. ರಾಜಕೀಯವಾಗಿ ಮೇಲೇರುತ್ತಿದ್ದಂತೆಯೇ ಇವರಿಬ್ಬರ ನಡುವಿನ ಬಿರುಕು ಅಗಲವಾಗುತ್ತಾ ಬಂದಿತ್ತು. 2008ರ ಲೋಕಸಭಾ ಚುನಾವಣೆಯಲ್ಲಿ ಮಗ ಬಿ.ಎಸ್.ರಾಘವೇಂದ್ರ ಅವರನ್ನು ಕಣಕ್ಕಿಳಿಸಲು ಯಡಿಯೂರಪ್ಪ ಮುಂದಾದಾಗ ಈಶ್ವರಪ್ಪ ಬಹಿರಂಗವಾಗಿಯೇ ವಿರೋಸಿದ್ದರು. ಇವರಿಬ್ಬರ ಸ್ನೇಹ ಹಳಸಿದ್ದು, ಆಗಲೇ ಎಲ್ಲರಿಗೂ ಗೊತ್ತಾಗಿದ್ದು.
13
+ ಮುಂದೆ ಹಲವಾರು ಬಾರಿ ಇವರಿಬ್ಬರೂ ಕಚ್ಚಾಡಿಕೊಂಡಿದ್ದಾರೆ. ಮಾತಿನ ಮೂಲಕ ತಿವಿದುಕೊಂಡಿದ್ದಾರೆ. ಯಡಿಯೂರಪ್ಪ ಲಿಂಗಾಯಿತರ ನಾಯಕರಾಗಿ ಗುರುತಿಸಿಕೊಂಡ ಹಾಗೇ ಈಶ್ವರಪ್ಪ ಕುರುಬರ ನಾಯಕರಾಗಿ ಬೆಳೆಯಬೇಕೆಂದು ರಾಯಣ್ಣ ಬ್��ಿಗೇಡ್ ಕಟ್ಟಿದ್ದರು. ಆದರೆ ಪಕ್ಷದ ವಿಷಯಕ್ಕೆ ಬಂದಾಗ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದೂ ಉಂಟು!
14
+ ಖಾತೆಗಳ ಸಮರ್ಥ ನಿರ್ವಹಣೆ:ವಿವಾದಗಳ ಹೊರತಾಗಿಯೂ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದವರು ಕೆ.ಎಸ್.ಈಶ್ವರಪ್ಪ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದರು. ಜಲಸಂಪನ್ಮೂಲ ಸಚಿವರಾಗಿದ್ದರು. ನೀರಾವರಿ ಸಚಿವರಾಗಿ ಕಳಸಾ-ಬಂಡೂರಿ ಯೋಜನೆ ಸಂಬಂಧ ಈಶ್ವರಪ್ಪ ದಿಟ್ಟ ನಿಲುವು ಕೈಗೊಂಡಿದ್ದರು. ಆನಂತರ 2008-2013ರ ಅವಧಿಯ ಬಿಜೆಪಿ ಸರಕಾರದಲ್ಲಿಇಂಧನ, ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆಗಳನ್ನು ನಿರ್ವಹಿಸಿದ್ದರು. ಶೆಟ್ಟರ್ ಸಂಪುಟದಲ್ಲಿ ಈಶ್ವರಪ್ಪ ಡಿಸಿಎಂ ಆಗಿದ್ದರು.
15
+ ಶಿವಮೊಗ್ಗದಲ್ಲಿ ನಾನು ಗೆದ್ದೇ ತೀರುತ್ತೇನೆ ಎಂದು ಈಶ್ವರಪ್ಪ ಧುಮುಕಿದ್ದಾರೆ. ಅವರ ಎದುರಿರುವುದು ಸಾಮಾನ್ಯ ಆಸಾಮಿಯಲ್ಲ. ಎಲ್ಲ ರಾಜಕೀಯ ಪಟ್ಟುಗಳನ್ನು ಬಲ್ಲ ಮುತ್ಸದ್ದಿ ಬಿಎಸ್‍ವೈ. ಅಂತಿಮ ನಗು ಯಾರದು ಎಂಬುದನ್ನು ಜು.4ರ ಫಲಿತಾಂಶವೇ ನಿರ್ಧರಿಸಲಿದೆ.
eesanje/url_46_186_6.txt ADDED
@@ -0,0 +1,8 @@
 
 
 
 
 
 
 
 
 
1
+ ಒಂದೇ ಹೆಸರು, ಹಲವು ಅಭ್ಯರ್ಥಿಗಳು : ಮತದಾರರಿಗೆ ಗೊಂದಲ ಸೃಷ್ಟಿಸಲು ‘ಪೋಲಿ’ಟ್ರಿಕ್ಸ್
2
+ ಬೆಂಗಳೂರು,ಏ.5-ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದೇ ಹೆಸರಿನ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಐವರು ಮಂಜುನಾಥ್ ಹೆಸರಿನ ಹಾಗೂ ಮೂವರು ಸುರೇಶ್ ಹೆಸರಿನವರ ನಡುವೆ ಹಣಾಹಣಿ ನಡೆಯಲಿದೆ.
3
+ ಕಾಂಗ್ರೆಸ್‍ನ ಡಿ.ಕೆ.ಸುರೇಶ್ ಮತ್ತು ಬಿಜೆಪಿಯ ಡಾ.ಸಿ.ಎನ್.ಮಂಜುನಾಥ್ ನಡುವಿನ ಪ್ರತಿಷ್ಠೆಯ ಕದನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇದರ ಜೊತೆಗೆ ಸಿ.ಮಂಜುನಾಥ್, ಎನ್.ಮಂಜುನಾಥ್, ಮಂಜುನಾಥ್.ಕೆ ಮತ್ತು ಸಿ.ಎನ್.ಮಂಜುನಾಥ್, ಎಸ್.ಸುರೇಶ್ ಮತ್ತು ಎಂ.ಎನ್.ಸುರೇಶ್ ಕಣಕ್ಕಿಳಿದು ಕ್ಷೇತ್ರದ ಮತದಾರರ ಗಮನ ಸೆಳೆಯಲು ಪೈಪೋಟಿ ನಡೆಸುತ್ತಿದ್ದಾರೆ.
4
+ ಆದರೆ ಇದು ಕೇವಲ ಒಂದು ಕ್ಷೇತ್ರದ ಕಥೆಯಲ್ಲ ಮತ್ತು ಇದೇ ಮೊದಲ ಬಾರಿಗೆ ನಡೆಯುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‍ನ ರಕ್ಷಾ ರಾಮಯ್ಯ ವಿರುದ್ಧ ಮಾಜಿ ಸಚಿವ, ಬಿಜೆಪಿ ಮುಖಂಡ ಡಾ.ಕೆ.ಸುಧಾಕರ್ ಸ್ಪರ್ಧಿಸಿದ್ದು, ಇನ್ನಿಬ್ಬರು ಸುಧಾಕರ್ ಕಣಕ್ಕಿಳಿದಿದ್ದಾರೆ.
5
+ ಡಿ.ಸುಧಾಕರ್ ಮತ್ತು ಕೆ.ಸುಧಾಕರ್ ಎಂಬ ಇಬ್ಬರು ಅಭ್ಯರ್ಥಿಗಳು ಪಕ್ಷೇತರರಾಗಿ ಸ್ರ್ಪಧಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ವಿರುದ್ಧ ಸುರೇಶ್ ಪೂಜಾರಿ ಮತ್ತು ಸುಪ್ರೀತ್ ಪೂಜಾರಿ ಇದ್ದಾರೆ. ಅದೇ ರೀತಿ ಕಾಂಗ್ರೆಸ್ ಮುದ್ದಹನುಮೇಗೌಡ ವಿರುದ್ಧ ಹನುಮಯ್ಯ ಎಂಬುವರು ಕಣಕ್ಕಿಳಿದಿದ್ದಾರೆ.
6
+ ಬೆಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಣಕ್ಕಿಳಿದಿದ್ದು, ಶೋಭಾ ಎಂಬ ಸ್ವತಂತ್ರ ಅಭ್ಯರ್ಥಿ ಹಾಗೂ ಶೋಭನ್ ಬಾಬು ವಿ. ಪುರುಷ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಮುಕ್ತಾರ್ ಅಲಿ ಖಾನ್ ಅವರೊಂದಿಗೆ ಹಣಾಹಣಿ ನಡೆಸಲಿದ್ದಾರೆ.
7
+ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ, ಅವರ ವಿರುದ್ಧ ಯಡೂರಪ್ಪ ಎಂಬ ಸ್ವತಂತ್ರ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ.
8
+ ಇನ್ನೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ರ್ಪಸುತ್ತಿರುವ ಮಂಡ್ಯ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಸ್ರ್ಪಧಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದಿಂದ ಎಚ್.ಡಿ .ರೇವಣ್ಣ ಎಂಬ ವ್ಯಕ್ತಿ ಸ್ರ್ಪಧಿಸುತ್ತಿದ್ದಾರೆ. ಅವರಲ್ಲಿ ಹಲವರು ಹಣ ನೀಡಿದಾಗ ಕಣದಿಂದ ಹಿಂದೆ ಸರಿಯುತ್ತಾರೆ ಎಂದು ಹಿರಿಯ ರಾಜಕಾರಣಿಯೊಬ್ಬರು ಹೇಳಿದ್ದಾರೆ. ಅವರಿಂದ ಗೆಲ್ಲುವ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಿಲ್ಲ, ಆದರೆ ಅವರು ಗೊಂದಲ ಸೃಷ್ಟಿಸುತ್ತಾರೆ ಎಂದಿದ್ದಾರೆ.
eesanje/url_46_186_7.txt ADDED
@@ -0,0 +1,7 @@
 
 
 
 
 
 
 
 
1
+ ಯುಗಾದಿ, ರಂಜಾನ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್‍ಗಳ ವ್ಯವಸ್ಥೆ
2
+ ಬೆಂಗಳೂರು,ಏ.5-ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಿದೆ. ಯುಗಾದಿ, ರಂಜಾನ್ ಹಬ್ಬದ ಸಾಲುಸಾಲು ರಜೆಗಳಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು, ಒಟ್ಟು 2275 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಲು ನಾಲ್ಕು ನಿಗಮಗಳು ನಿರ್ಧರಿಸಿದ್ದು, ರಜೆ ಹಿನ್ನೆಲೆ ಊರಿಗೆ ಹಾಗೂ ಪ್ರವಾಸಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ.
3
+ ಕೆಎಸ್‍ಆರ್‍ಟಿಸಿಯಿಂದ 1,750ಬಸ್, ಎನ್‍ಡಬ್ಲ್ಯೂಕೆಎಸ್‍ಆರ್‍ಟಿಸಿಯ 145 ಬಸ್, ಕೆಕೆಆರ್‍ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು ನಾಲ್ಕು ನಿಗಮಗಳಿಂದ 2,275 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.
4
+ ಸಾಲು ಸಾಲು ರಜೆಏ.7 ಭಾನುವಾರ, 9 ಮಂಗಳವಾರ ಯುಗಾದಿ ಹಬ್ಬ, ಗುರುವಾರ ರಂಜಾನ್ ಇದೆ. ಏ.13 ಎರಡನೇ ಶನಿವಾರ ರಜೆ ಹಾಗೂ 14ರಂದು ಭಾನುವಾರದ ರಜೆ ಇದೆ. ಕೆಲವರು ರಜೆ ಹಾಕಿ ಊರಿಗೆ ತೆರಳಲು ತಯಾರಿ ನಡೆಸಿದ್ದಾರೆ. ಒಟ್ಟು 5 ರಜೆಗಳು ಸಿಗಲಿದೆ.
5
+ ವಿದ್ಯಾರ್ಥಿಗಳಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳಲು ತಯಾರಿ ನಡೆಸಿರುವ ಪೋಷಕರಿಗೆ ಇದು ಅನುಕೂಲವಾಗಲಿದೆ. ಈ ಎಲ್ಲ ಕಾರಣಗಳನ್ನು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ.
6
+ ಹಬ್ಬಗಳು ಹಾಗೂ ವಾರಾಂತ್ಯದ ಕಾರಣ ಏಪ್ರಿಲ್ 7 ರಿಂದ ಏಪ್ರಿಲ್ 14ರ ವರೆಗೆ ಬರೋಬ್ಬರಿ 5 ರಜೆಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಬೇಸಗೆ ರಜೆಯೂ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳು ಪೋಷಕರು ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್ ಸೇವೆ ಒದಗಿಸಲಾಗುತ್ತಿದೆ.
7
+ ಎಲ್ಲೆಲ್ಲಿ ವಿಶೇಷ ಬಸ್ ವ್ಯವಸ್ಥೆ:ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ವಿಶೇಷ ಬಸ್ ಸೇವೆ ದೊರೆಯಲಿದೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ. ನೆರೆರಾಜ್ಯಗಳ ನಗರಗಳಾದ ಹೈದರಾಬಾದ್, ಚೆನ್ನೈ, ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ.
eesanje/url_46_186_8.txt ADDED
@@ -0,0 +1,6 @@
 
 
 
 
 
 
 
1
+ ವಿವಾದಕ್ಕೆ ಎಡೆ ಮಾಡಿಕೊಟ್ಟ ಜೈನ್ ಕಾಲೇಜು ನಡೆ
2
+ ಬೆಂಗಳೂರು,ಏ.4-ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಿರುವ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ವೇಳೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಜೈನ್ ಕಾಲೇಜು ವಿದ್ಯಾರ್ಥಿಗಳಿಗೆ ಸೂಚಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ವಿವಿಪುರಂ ನಲ್ಲಿರುವ ಜೈನ್ ಕಾಲೇಜು ವಾಟ್ಸಫ್ ಗ್ರೂಫ್ನಲ್ಲಿ ಈ ರೀತಿಯ ಸಂದೇಶ ಹರಿದಾಡುತ್ತಿರುವುದು ಕಂಡು ಬಂದಿದೆ.
3
+ ಸಂದೇಶದಲ್ಲಿ ಇಂದು ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಲಾಗಿದೆ ಎಂದು ಕೆಲ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಜಯನಗರದ ಮೈಯ್ಯಾಸ್ ಹೋಟೆಲ್ ಬಳಿ ಸೇರಬೇಕು. ಅಲ್ಲಿ ನಿಮಗೆ ಟಿ-ಶರ್ಟ್ ನೀಡಲಾಗುವುದು. ಆದ್ದರಿಂದ ತಡ ಮಾಡಬಾರದು ಎಂದು ಸಂದೇಶದಲ್ಲಿ ಹೇಳಲಾಗಿದೆ.
4
+ ನಾಮಪತ್ರ ಸಲ್ಲಿಕೆ ವೇಳೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಇದರಿಂದ ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ.ಇದಕ್ಕಾಗಿ ನೀವು ಹಾಜರಾತಿ ಪಡೆಯುತ್ತೀರಿ ಎಂದು ಕಾಲೇಜಿನ ಪ್ರತಿಯೊಂದು ತರಗತಿಯ ವಾಟ್ಸಪ್ ಗ್ರೂಪ್ನಲ್ಲೂ ಈ ಸಂದೇಶ ರವಾನೆಯಾಗಿದೆ.
5
+ ಅಲ್ಲದೇ, ಕಾಲೇಜಿನ ಆಡಳಿತ ಮಂಡಳಿಯ ಸೂಚನೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಭಾಗದ ತರಗತಿಗಳಿಗೆ ತೆರಳಿ ಮೌಖಿಕವಾಗಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿರುವುದಕ್ಕೆ ಹಲವು ವಿದ್ಯಾರ್ಥಿಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
6
+ ಇದು ಕೇವಲ ಜೈನ್ ಕಾಲೇಜಿಗೆ ಮಾತ್ರವಲ್ಲದೆ ಆ ಕ್ಷೇತ್ರಕ್ಕೆ ಒಳಪಡುವ ಹಲವಾರು ಕಾಲೇಜುಗಳಿಗೂ ಈ ರೀತಿಯ ಸಂದೇಶಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಈ ಆರೋಪ ಕುರಿತಂತೆ ಜೈನ್ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯಿಸಲು ನಿರಾಕರಿಸಿದೆ.
eesanje/url_46_186_9.txt ADDED
@@ -0,0 +1,9 @@
 
 
 
 
 
 
 
 
 
 
1
+ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಐಟಿ ಕ್ಷೇತ್ರ ಚಿಂತಾಜನಕ
2
+ ಬೆಂಗಳೂರು,ಏ.4-ಕರ್ನಾಟಕ ಸರಕಾರವು ಐಟಿ ಕ್ಷೇತ್ರಕ್ಕೆ ವಿರುದ್ಧವಾದ ನೀತಿ ಅನುಸರಿಸುತ್ತಿದೆ. ಇವತ್ತು ಎಲ್ಲ ಐಟಿ ಬಾಂಧವರ ಸ್ಥಿತಿ ಚಿಂತಾಜನಕವಾಗಿದೆ. ಇದು ಅತ್ಯಂತ ಖೇದಕರ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ ಟೀಕಿಸಿದರು.
3
+ ಸುದ್ದಿಗೋಷ್ಠಿ ಮಾತನಾಡಿದ ಅವರು, ಬೆಂಗಳೂರಿಗೆ ಭಯೋತ್ಪಾದಕರು ಅತಿ ಸುಲಭವಾಗಿ ಬರುತ್ತಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸೋಟದಿಂದ ಆತಂಕ ಹೆಚ್ಚಿದೆ. ಬೆಂಗಳೂರು ಭಯೋತ್ಪಾದಕರ ಸ್ಥಳವಾಗುತ್ತಿದೆ ಜೊತೆಗೆ ಕಳೆದ 6 ತಿಂಗಳಿಂದ ನಗರದಲ್ಲಿ ನೀರಿನ ಬರ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
4
+ ನೀರಿನ ಟ್ಯಾಂಕರ್ಗಳಿಗೂ ಸರಿಯಾದ ನೀತಿ ರೂಪಿಸಿಲ್ಲ; ಐಟಿ ಉದ್ಯೋಗಿಗಳಿರುವ ಫ್ಲ್ಯಾಟ್ಗಳಲ್ಲಿ ಇವತ್ತು ನೀರು ಸಿಗುತ್ತಿಲ್ಲ. ಕೊಳವೆಬಾವಿ ಕೊರೆಸುವ ದರವೂ ಬಹುತೇಕ ದುಪ್ಪಟ್ಟಾಗಿದೆ. ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲದೆ, ಐಟಿ ಉದ್ಯೋಗಿಗಳು ರಸ್ತೆಯಲ್ಲಿ ಕಾಯುವ ದುಃಸ್ಥಿತಿ ಬಂದಿದೆ ಎಂದು ದೂರಿದರು.
5
+ ಬೆಂಗಳೂರು ಅಭಿವೃದ್ಧಿ ಸಚಿವರು ಎಂದು ಡಿ.ಕೆಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರು ಗುತ್ತಿಗೆ ನೀಡಿದ್ದಾರೆ. ಆದರೆ ಅವರು ಒಂದು ದಿನವೂ ರಸ್ತೆಗಿಳಿದಿಲ್ಲ. ಇದರಿಂದ ಸಾಫ್ಟ್ವೇರ್ ಉದ್ಯಮಗಳು ಬೇರೆಡೆಗೆ ತೆರಳುವ ಸಾಧ್ಯತೆ ಇದೆಯೇ ಎಂಬ ಯೋಚನೆ ಕಾಡುತ್ತಿದೆ ಎಂದರು.
6
+ ಗರಿಷ್ಠ ಆದಾಯ ನೀಡುವ ಸಾಫ್ಟ್ವೇರ್ ರಂಗದ ಕುರಿತು ರಾಜ್ಯ ಸರಕಾರ ಅತ್ಯಂತ ನಿರ್ಲಕ್ಷ್ಯ ವಹಿಸಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಸಾಫ್ಟ್ವೇರ್ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿಲ್ಲ. ಈ ಕ್ಷೇತ್ರದ ಕುರಿತು ಸಚಿವರು ಒಂದು ಪೈಸೆಯಷ್ಟೂ ತಲೆಕೆಡಿಸಿಕೊಂಡಿಲ್ಲ ಎಂದು ದೂರಿದರು.
7
+ ಬೆಂಗಳೂರು ಇಡೀ ವಿಶ್ವದ ಅತಿ ದೊಡ್ಡ ಐ.ಟಿ. ಹಬ್ ಎಂದು ಗುರುತಿಸಿಕೊಂಡಿದೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ 54 ಲಕ್ಷ ಉದ್ಯೋಗಿಗಳಿದ್ದಾರೆ. ಆ ಪೈಕಿ 18 ಲಕ್ಷ ಜನ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ.
8
+ ಒಟ್ಟು ಭಾರತದ ರಫ್ತಿನಲ್ಲಿ ಶೇ.12ರಷ್ಟು ಪಾಲು ಕರ್ನಾಟಕದ ಐಟಿ ಹಬ್ನದು. ವಿಶ್ವಾದ್ಯಂತ ಪ್ರಸಿದ್ಧಿ ಪಡೆದ ಟಿಸಿಎಸ್, ವಿಪೊ್ರೀ, ಇನ್ಫೋಸಿಸ್ , ಮೈಂಡ್ಟ್ರೀ ಮತ್ತಿತರ 10-12 ಕಂಪೆನಿಗಳು ಸೇರಿ 67 ಸಾವಿರ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಸಿವೆ. ಇವು 18 ಲಕ್ಷ ಉದ್ಯೋಗಿಗಳಿಗೆ ಉದ್ಯೋಗ ಕೊಟ್ಟಿವೆ. ಇದು ಹೆಮ್ಮೆಯ ವಿಚಾರ ಎಂದು ಹೇಳಿದರು.
9
+ ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿರಣ್ ಕುಮಾರ್ ಅಣ್ಣಿಗೇರಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯ್ ಕುಮಾರ್, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್.ಜಿ.ಎಸ್ ಹಾಜರಿದ್ದರು.
eesanje/url_46_187_1.txt ADDED
@@ -0,0 +1,8 @@
 
 
 
 
 
 
 
 
 
1
+ ಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಟ, ಸ್ಟಾರ್ ಹೋಟೆಲ್ ವಾಸ್ತವ್ಯ : ಶೋಕಿಲಾಲ ವಂಚಕ ಅರೆಸ್ಟ್
2
+ ಬೆಂಗಳೂರು, ಏ.4-ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡು ಬಿಎಂಡಬ್ಲ್ಯೂ ಕಾರಿನಲ್ಲೇ ಓಡಾಡಿಕೊಂಡು ಶೋಕಿ ಮಾಡುತ್ತಾ ಹೋಟೆಲ್ ಬಿಲ್ ಕೊಡದೇ ನಕಲಿ ಪೇಮೆಂಟ್ ಸ್ಕ್ರೀನ್ ಶಾಟ್ ತೋರಿಸಿ ವಂಚಿಸಿದ್ದ ಆಂಧ್ರ ಮೂಲದ ವ್ಯಕ್ತಿಯನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದ ನಿವಾಸಿ ಬೋರಡ ಸುಧೀರ್ ಬಂಧಿತ ಆರೋಪಿ.
3
+ ಮಾ.31 ರಂದು ಆರೋಪಿ ಸುೀಧಿರ್ ಆನ್ಲೈನ್ ಮೂಲಕ ನಗರದ ಪಂಚತಾರಾ ಹೋಟೆಲ್ನಲ್ಲಿ ರೂಂ ಬುಕ್ ಮಾಡಿದ್ದಾನೆ. ಅಲ್ಲದೇ ಏರ್ ಪೋರ್ಟ್ ನಿಂದ ಕರೆತರಲು ಬಿಎಂಡಬ್ಲ್ಯೂ ಕಾರನ್ನೇ ಕಳುಹಿಸುವಂತೆ ಸೂಚಿಸಿದ್ದ. ಅದರಂತೆ ಹೋಟೆಲ್ನವರು ಏರ್ ಪೋರ್ಟ್ ನಿಂದ ಸುಧೀರ್ ನನ್ನ ಅದೇ ಕಾರಿನ ಕರೆಸಿಕೊಂಡಿದ್ದಾರೆ. ನಂತರ ರೂಂನಲ್ಲಿ ಉಳಿದುಕೊಂಡಿದ್ದ ಈತ 17,346 ರೂ. ಪಾವತಿಸಿರುವುದಾಗಿ ಹೋಟೆಲ್ ಸಿಬ್ಬಂದಿಗೆ ಪೇಮೆಂಟ್ ಮಾಡಿದ ನಕಲಿ ಸ್ಕ್ರೀನ್ಶಾಟ್ ತೋರಿಸಿದ್ದಾನೆ.
4
+ ಹಣ ಸಂದಾಯ ಆಗಿಲ್ಲವೆಂದು ಸಿಬ್ಬಂದಿ ಪ್ರಶ್ನಿಸಿದಾಗ ನಿಮ್ಮದೇ ಟೆಕ್ನಿಕಲ್ ಸಮಸ್ಯೆ ಇರಬಹುದು ಎಂದು ಹೇಳಿದಾಗ ಆತನ ಮಾತನ್ನು ನಂಬಿ ರೂಂನಲ್ಲಿ ಉಳಿದುಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.ಮಾರನೇ ದಿನ (ಏ.1) ತನಗೆ ಓಡಾಡಲು ಬಿಎಂಡಬ್ಲ್ಯೂ ಕಾರ್ ಬೇಕೆಂದು ಕೇಳಿದಾಗ ಹೋಟೆಲ್ನವರು ಅದರಂತೆ ವ್ಯವಸ್ಥೆ ಮಾಡಿದ್ದಾರೆ.
5
+ ಅಂದು ಸಂಜೆವರೆಗೂ ಕಾರಿನಲ್ಲಿ ಓಡಾಡಿದ್ದಾನೆ. ಸಂಜೆ ಕಾರು ಚಾಲಕನಿಗೆ ನಾನು ಮತ್ತೆ ಹೋಟೆಲ್ಗೆ ಹೋಗುವುದಿಲ್ಲ. ತನ್ನನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡುವಂತೆ ತಿಳಿಸಿದ್ದಾನೆ. ಆದರೆ ಕಾರು ಚಾಲಕ ತನಗೆ ಹೋಟೆಲ್ನವರು ಡ್ರಾಪ್ ಮಾಡಲು ಹೇಳಿಲ್ಲವೆಂದು ವಾಪಸು ಸುಧೀರ್ ನನ್ನ ಹೋಟೆಲ್ ಬಳಿ ಕರೆದುಕೊಂಡು ಬಂದಿದ್ದಾರೆ.
6
+ ಕಾರು ಬಾಡಿಗೆ ಹಾಗೂ ರೂಮಿನ ಬಾಡಿಗೆ ಸೇರಿ 80 ಸಾವಿರ ಪಾವತಿಸುವಂತೆ ಹೋಟೆಲ್ ಸಿಬ್ಬಂದಿ ಸೂಚಿಸಿದಾಗ ಆರೋಪಿಯು ತನ್ನ ಕ್ರೆಡಿಟ್ ಕಾರ್ಡ್ ನೀಡಿದ್ದಾನೆ. ಆದರೆ ಹಣ ಸಂದಾಯವಾಗಿಲ್ಲ. ಈ ವಿಚಾರವಾಗಿ ಹೋಟೆಲ್ ಸಿಬ್ಬಂದಿ ಹಾಗೂ ಈತನ ನಡುವೆ ವಾಗ್ವಾದ ವಾಗಿದೆ. ನಂತರ ಆರೋಪಿಯು ತನ್ನ ಬಳಿ 10,750 ರೂ. ಮಾತ್ರವಿದೆ. ಉಳಿದ ಹಣವನ್ನು ನಂತರ ಕೊಡುವುದಾಗಿ ಹೇಳಿದ್ದಾನೆ.
7
+ ರಾತ್ರಿಯಾದರೂ ಬಿಲ್ ಪಾವತಿಸದಿದ್ದಾಗ ಹೋಟೆಲ್ ಸಿಬ್ಬಂದಿ ಬಳಿಕ ಆತನಿಗೆ ಬಿಲ್ ಪಾವತಿಸುವಂತೆ ಕೇಳಿದಾಗ ನಾನು ಪೂರ್ತಿ ಹಣ ಪಾವತಿಸಿರುವುದಾಗಿ ವಾದ ಮಾಡಿದ್ದಾನೆ. ಈತನ ನಡುವಳಿಕೆಯಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ತಕ್ಷಣ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
8
+ ಸ್ಥಳಕ್ಕೆ ಆಗಮಿಸಿ ಪೊಲೀಸರು ಆರೋಪಿ ಸುೀಧಿರ್ನ ಮೊಬೈಲ್ ಪಡೆದು ಕರೆಗಳ ಬಗ್ಗೆ ಪರಿಶೀಲಿಸಿದಾಗ, ಸ್ಟಾರ್ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ನಕಲಿ ಐಡಿ ಕ್ರಿಯೇಟ್ ಮಾಡಿ ಹಣ ಕಟ್ಟದೇ ವಂಚಿಸಿರುವುದು ಗೊತ್ತಾಗಿದೆ. ಆರೋಪಿಯು ಸೇನಾ ಅಧಿಕಾರಿ ಹೆಸರಿನಲ್ಲಿ ವಂಚಿಸಿರುವ ಬಗ್ಗೆ ಕೊಲ್ಕತಾದಾ ಪ್ರಗತಿ ಮೈದಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
eesanje/url_46_187_10.txt ADDED
@@ -0,0 +1,7 @@
 
 
 
 
 
 
 
 
1
+ ಬಿಜೆಪಿ ಅಜೆಂಡಾ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು : ಜಿ.ಪರಮೇಶ್ವರ್
2
+ ಕೊರಟಗೆರೆ, ಏ.3-`ಕರ್ನಾಟಕ ಸೇರಿದಂತೆ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿರುವ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ ಇದು ಪ್ರಜಾ ಪ್ರಭುತ್ವಕ್ಕೆ ವಿರುದ್ಧವಾದ ಅಜೆಂಡಾವಾಗಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು.
3
+ ಪಟ್ಟಣದ ರಾಜೀವ ಭವನದಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರ ಜೊತೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , `ರಾಜ್ಯಕ್ಕೆ ಬರ ಪರಿಹಾರ ಅನುದಾನ ಹಂಚಿಕೆವಿಚಾರ ಹಾಗೂ ಯೋಜನೆ ನೀಡುವುದರಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ‘ ಎಂದು ಹೇಳಿದರು.
4
+ `ದೇಶದಲ್ಲಿ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಜನರ ಸಂಕಷ್ಟಕ್ಕೆ ಈವರೆಗೂ ಸ್ಪಂದಿಸಿಲ್ಲ, ಅನುದಾನ ನಿಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದು ಒಳ್ಳೆಯ ಬೆಳವಣೆಗೆಯಲ್ಲ.
5
+ ಜನರು ಬಿಜೆಪಿ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆಡುವ ಮಾತುಗಳು ಗಮನಿಸಿದರೆ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎನಿಸುತ್ತದೆ, ಒಂದು ದೇಶ ಒಂದು ಚುನಾವಣೆ ಮುಂದಾಗಿದ್ದು ಸಂವಿಧಾನ ಬದಲಾಯಿಸಲು ಪ್ರಾರಂಭಿಸಿದ್ದಾರೆ’ ಎಂದು ಆರೋಪಿಸಿದರು.
6
+ `ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಸಜ್ಜನ ರಾಜಕಾರಣಿ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್ತಲ್ಲಿ ಧ್ವನಿ ಎತ್ತಿದವರು, ಬಿಜೆಪಿಯ ಅಭ್ಯರ್ಥಿ ಸೋಮಣ್ಣ ತುಮಕೂರಿನವರಲ್ಲ ಪಕ್ಷದ ಮುಖಂಡರು ಹೊರಗಿನವರನ್ನು ಆಭ್ಯರ್ಥಿಯನ್ನಾಗಿ ಮಾಡಿದ್ದಾರೆ, ಸಂಸದ ಬಸವರಾಜು ಅವರು ಸಂಸತ್ತನಲ್ಲಿ ಒಮ್ಮೆಯು ರಾಜ್ಯದ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಹೊರಗಿನವರನ್ನು ಗೆಲ್ಲಿಸಿದರೆ ಯಾವ ಕೆಲಸ ಮಾಡಲು ಸಾಧ್ಯವಿಲ್ಲ ಸದಾ ಜನಜರ ಪರವಾಗಿ ನಿಲ್ಲುವ ಮುದ್ದಹನುಮೇಗೌಡರನ್ನು ಜನ ಗೆಲ್ಲಿಸಲಿದ್ದಾರೆ ‘ಎಂದು ಭರವಸೆ ವ್ಯಕ್ತಪಡಿಸಿದರು.
7
+ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಸ್.ಪಿ.ಮುದ್ದಹನುಮೇಗೌಡರು ಏಪ್ರಿಲ್ 4 ರಂದು ಬೆಳಗ್ಗೆ 10.30 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜನರು ಭಾಗವಹಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿಸಬೇಕು ಎಂದು ಕಾರ್ಯಕರ್ತರಿಗೆ ಪರಮೇಶ್ವರ್ ಕರೆ ನೀಡಿದರು.
eesanje/url_46_187_11.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಸುಮಲತಾ ಅವರ ನಿರ್ಧಾರಕ್ಕೆ ಬೆಂಬಲವಾಗಿ ನಿಂತ ನಟ ದರ್ಶನ್
2
+ ಮಂಡ್ಯ, ಏ.3-ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ರಾಜಕಾರಣದಲ್ಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸುಮಲತಾರ ಪುತ್ರ ಅಭಿಷೇಕ್ ಅಂಬರೀಶ್ ಬೆನ್ನಿಗೆ ನಿಂತು ಬೆಂಬಲ ವ್ಯಕ್ತ ಪಡಿಸಿದರು.
3
+ ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್, ಐದು ವರ್ಷದ ಹಿಂದೆ ಪ್ರಚಾರಕ್ಕೆ ಬಂದ ಕಡೆಯಲೆಲ್ಲಾ ಬಿಸಿಲಿನಲ್ಲಿ ಎಳೆನೀರು ಕೊಟ್ಟು ತಂಪೆರೆದಿದ್ದ ರೈತರು ಹಾಗೂ ಪ್ರತಿ ಹಳ್ಳಿಯಲ್ಲೂ ಆರತಿ ಎತ್ತಿ ಆಶೀರ್ವದಿಸಿದ ಮಹಿಳೆಯರಿಗೆ ಕೃತಜ್ಞತೆಗಳು.ಆ ಬಂದು ಯಮ ಕರೆದರೂ ಇರಪ್ಪ ನಮ್ಮ ಅಮ್ಮನ ಒಂದು ಕೆಲಸ ಇದೆ ಮುಗಿಸಿ ಕೊಂಡು ಬರುತ್ತೇನೆ ಎಂದೇ ಹೇಳುತ್ತೇನೆ. ಏಕೆಂದರೆ ನನಗೂ ಆ ಮನೆಗೂ ಅಂತಹ ಬಾಂಧವ್ಯ ಇದೆ ಎಂದರು.
4
+ ಕಳೆದ ಬಾರಿ ಬಲಗೈ ಮುರಿದಿತ್ತು. ಈ ಬಾರಿ ಎಡಗೈಗೆ ಹಾನಿಯಾಗಿದೆ. ನಿನ್ನೆ ಆಪರೇಷನ್ ಇತ್ತು. ಆದರೆ ಇಂದು ಅಮ್ಮನ ಜೊತೆ ಇರಬೇಕಾಗಿದ್ದರಿಂದ ಅದನ್ನು ಮುಂದೂಡಿದ್ದೇನೆ. ಸಂಜೆ ಹೋಗಿ ಆಸ್ಪತ್ರೆಗೆ ದಾಖಲಾಗುತ್ತೇನೆ. ನಾಳೆ ಬೆಳಗ್ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆ ಎಂದರು.
5
+ ನಾನು ಇಲ್ಲಿಂದ ಹೋಗುವಾಗ ದಯವಿಟ್ಟು ಜಾಗ ಮಾಡಿಕೊಡಿ, ಯಾರು ಕೈ ಎಳೆಯಬೇಡಿ ಎಂದು ಮನವಿ ಮಾಡಿಕೊಂಡ ದರ್ಶನ್, ಐದು ಸುಮಲತಾ ಅವರು ಪಕ್ಷೇತರರಾಗಿ ಮಾಡಿರುವ ಸಾಧನೆ ದೊಡ್ಡದು. ನಾನು ರಾಜಕೀಯ ಮಾತನಾಡಲ್ಲ, ಆದರೆ ಅಮ್ಮ ಏನೇ ನಿರ್ಧಾರ ತೆಗೆದುಕೊಂಡರು ನಾವು ಜೊತೆಯಲ್ಲಿರುತ್ತೇವೆ. ಅದು ಯಾವುದೇ ರೀತಿಯ ನಿರ್ಧಾರವಾಗಿದ್ದರೂ ಜೊತೆಯಲ್ಲಿರುತ್ತೇವೆ. ಮನೆಯ ಮಕ್ಕಳು ಎಂದ ಮೇಲೆ ಮನೆ ಮಕ್ಕಳ ರೀತಿಯಲ್ಲೇ ಇರಬೇಕು.
6
+ ಇವತ್ತು ತಾಯಿ ಎಂದು ನಾಳೆ ಇಲ್ಲಪ್ಪ ಅವರಿಗೂ ನನಗೂ ಏನು ಸಂಬಂಧ ಇಲ್ಲ ಎನ್ನಲ್ಲ. ಸಾಯುವವರೆಗೂ ತಾಯಿ ತಾಯಿನೇ. ಅವರು ಏನೇ ಹೇಳಿದರೂ ಅದನ್ನು ನಾನು ನನ್ನ ತಮ್ಮ ಪಾಲಿಸುತ್ತೇವೆ. ಕಣ್ಣು ಮುಚ್ಚಿಕೊಂಡು ಆಳು ಬಾವಿಗೆ ಬೀಳಲು ಎಂದರೆ ಅದಕ್ಕೂ ರೆಡಿ ನಾವು. ಆ ಮನೆಗೂ ನಮಗೂ ಅಷ್ಟು ಭಾಂದವ್ಯ ಇದೆ ಎಂದರು.
7
+ ಅಭಿಷೇಕ್ ಅಂಬರೀಶ್ ಮಾತನಾಡಿ, ಕಳೆದ ಐದು ವರ್ಷಗಳ ಹಿಂದೆ ಇಲ್ಲಿಂದಲೇ ಸ್ವಾಭಿಮಾನಿ ಹೋರಾಟ ಆರಂಭಿಸಲಾಯಿತು. ಏನೇ ಆಗಲಿ, ಸರ್ಕಾರ ಬರುತ್ತೆ ಹೋಗುತ್ತೆ, ಚುನಾವಣೆ ಬರುತ್ತೆ ಹೋಗುತ್ತೆ, ನಮ್ಮ ನಿಮ್ಮ ನಡುವಿನ ಸಂಬಂಧವನ್ನು ಯಾರು ಮರೆಯಲಾಗುವುದಿಲ್ಲ. ಪರಿಸ್ಥಿತಿ ಹೇಗೆ ಹೋಗಲಿ ಯಾರು ಬದಲಾಯಿಸಲಾಗಲ್ಲ. ದೇವರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ. ಮಂಡ್ಯ ಬಿಟ್ಟು ನಾವು ಹೋಗಲ್ಲ. ನಿಮ್ಮ ಋಣ ತೀರಿಸಲು ಜೀವನ ಪೂರ್ತಿ ಶ್ರಮಿಸುತ್ತೇವೆ. ನಾವು ಎಲ್ಲಿಯೂ ಹೋಗಲ್ಲ. ನಿಮ್ಮ ನಡುವೆಯೇ ಇರುತ್ತೇವೆ ಎಂದರು.
8
+ ಐದು ವರ್ಷ ಹಲವಾರು ಕಷ್ಟಗಳಿತ್ತು. ನಮ್ಮ ತಾಯಿ ಮಂಡ್ಯ ಜನರಿಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಏನೇ ಆಗಲಿ, ಮಂಡ್ಯ ಎಂದರೆ ಅಂಬರೀಶ್ ಅಣ್ಣ, ಅ���ಬರೀಶ್ ಅಣ್ಣ ಎಂದರೆ ಮಂಡ್ಯ ಎಂಬಂತಾಗಿದೆ ಎಂದರು.
9
+ ಸದಾ ಗತ್ತಿನಲ್ಲಿ ಮಾತನಾಡುತ್ತಿದ್ದ ಅಭಿಷೇಕ್, ಇಂದು ವಿನಯದಿಂದ ವರ್ತಿಸಿದ್ದು ಕಂಡು ಬಂತು. ಮುಂದೆ ಇರುವವರು ಪಕ್ಕಕ್ಕೆ ಸರಿದು ಹಿಂದೆ ಇರುವವರಿಗೆ ಜಾಗ ಮಾಡಿಕೊಡಿ ಅಣ್ಣಾ, ಕೊನೆಯವರೆಗೂ ನನ್ನ ಧ್ವನಿ ಕೇಳಿಸುತ್ತಿದೆಯೇ ಎಂದು ಸೌಜನ್ಯಪೂರ್ವಕವಾಗಿ ಕೇಳಿ ಗಮನ ಸೆಳೆದರು.
10
+ ಇದೇ ವೇಳೆ ಸುಮಲತಾ ಅವರ ಸಾಧನೆಯ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಮಂಡ್ಯದ ಜನರಿಗಾಗಿ ಮಿಡಿಯುತ್ತಿದೆ ಸ್ವಾಭಿಮಾನಿಯ ಉಸಿರು ಎಂಬ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಆರಂಭದಲ್ಲಿ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
eesanje/url_46_187_12.txt ADDED
@@ -0,0 +1,16 @@
 
 
 
 
 
 
 
 
 
 
 
 
 
 
 
 
 
1
+ ಬಿಜೆಪಿಗೆ ಬೆಂಬಲ ಘೋಷಿಸಿ ಸ್ಪರ್ಧೆಯಿಂದ ಹಿಂದೆ ಸರಿದ ಸುಮಲತಾ
2
+ ಮಂಡ್ಯ, ಏ.3-ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಯಿಂದ ಹಿಂದೆ ಸರಿದ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಸೇರುವುದಾಗಿ ಪ್ರಕಟಿಸಿದ್ದಾರೆ. ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ಬೆಂಬಲಿಗರ ಸಭೆ ನಡೆಸಿ ಮಾತ ನಾಡಿದ ಸುಮಲತಾ, ಕಳೆದ ಐದು ವರ್ಷಗಳ ಸಂಸದೆಯಾಗಿ ತಾವು ಮಾಡಿದ ಸಾಧನೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
3
+ ಸುಮಲತಾ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಟೀ ಅಂಗಡಿ, ಹಳ್ಳಿ ಕಟ್ಟೆಯ ಮೇಲೆ ಅಥವಾ ಮಾಧ್ಯಮಗಳ ಮುಂದೆ ಪ್ರಶ್ನಿಸುವವರಿಗೆ ನನ್ನ ಬೆಂಬಲಿಗರು ಉತ್ತರ ನೀಡಬೇಕು. ನಾನು ಮಂಡ್ಯದ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ ಎಂದರು. ಈಗ ಮತ್ತೊಂದು ಚುನಾವಣೆ, 2019ಕ್ಕಿಂತ ಹೆಚ್ಚಿನ ಸವಾಲು ನಮ್ಮ ಮುಂದೆ ಈಗ ಇದೆ. ಪಕ್ಷೇತರಳಾಗಿ ಸ್ಪರ್ಧಿಸಿದ್ದಾಗ ಬಿಜೆಪಿ ನನಗೆ ಬಾಹ್ಯ ಬೆಂಬಲ ಕೊಟ್ಟಿತ್ತು.
4
+ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಪ್ರಚಾರ ಸಭೆಯಲ್ಲಿ ಅಂಬರೀಶ್ ಹೆಸರನ್ನು ಪ್ರಸ್ತಾಪಿಸಿ ಸುಮಲತಾರಿಗೆ ಮತ ಹಾಕಿ ಎಂದು ಕರೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ನಾನು ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದೆ ಎಂದರು. ಇಂದು ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಾಗಿದೆ.
5
+ ಬದಲಾದ ಪರಿಸ್ಥಿತಿಯಲ್ಲಿ ಯಾರು ಸಂಸದ ರಾಗುತ್ತಾರೋ ಗೋತ್ತಿಲ್ಲ. ನಾನು ಕೊನೆಯ ಕ್ಷಣದವರೆಗು ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಲಿ ಎಂದು ಪ್ರಯತ್ನ ಪಟ್ಟೆ. ನಾನಾ ರೀತಿಯ ಚರ್ಚೆಗಳು ನಡೆದವು. ಮಂಡ್ಯದ ಬದಲಿಗೆ ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಸೇರಿ ಬೇರೆ ಯಾವುದೇ ಕ್ಷೇತ್ರಗಳನ್ನಾದರೂ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ನನಗೆ ಸಲಹೆ ನೀಡಿದರು. ನಾನು ಎಲ್ಲೂ ಹೋಗಲ್ಲ. ಇದ್ದರೂ, ಗೆದ್ದರೂ, ಸೋತರು ಮಂಡ್ಯದಲ್ಲೇ ಎಂದು ನಿರ್ಧರಿಸಿದ್ದೇನೆ ಎಂದರು.
6
+ ಅಂಬರೀಶ್ ಎಂದಿಗೂ ಸ್ವಾರ್ಥ ರಾಜಕಾರಣ ಮಾಡಿಲ್ಲ. ಅಂಬರೀಶ್ ನಮಗೆ ಸದಾ ಕಾಲ ಮಾರ್ಗದರ್ಶಕರು ಎಂದಾಗ, ಕಾರ್ಯಕರ್ತರಿಂದ ಪಕ್ಷೇತರರಾಗಿ ಸ್ರ್ಪಸುವಂತೆ ಒತ್ತಾಯ ಕೇಳಿ ಬಂತು. ಅದಕ್ಕೆ ಕಣ್ಣೀರು ಹಾಕುತ್ತಾ ಪ್ರತಿಕ್ರಿಯಿಸಿದ ಸುಮಲತಾ, ತಮ್ಮ ವಿರುದ್ಧ ಟೀಕೆಗಳು, ಹೊಗಳಿಕೆಗಳು ಸರ್ವೇ ಸಾಮಾನ್ಯ ಬಿಡಿ, ಎಲ್ಲವನ್ನೂ ದಾಟಿಕೊಂಡೆ ಬಂದಿದ್ದೇನೆ.
7
+ ಮೊನ್ನೆ ಆಪ್ತ ವಲಯದ ಬೆಂಬಲಿಗರು ಬೆಂಗಳೂರಿಗೆ ಬಂದು ಚರ್ಚೆ ಮಾಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆ ಮಾಡಿ ಎಂದು ಒತ್ತಡ ಹಾಕಿದರು. ಕೆಲವರು ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿ, ಬೆಂಬಲ ಕೊಡಿ ಎಂದಿದ್ದರು. ಇನ್ನೂ ಕೆಲವು ನೀವು ಯಾವ ನಿರ್ಧಾರ ತೆಗೆದುಕೊಂಡರು ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದಿದ್ದರು. ನಾನು ಆಪ್ತರು, ವರಿಷ್ಠರ ಜೊತೆ ಚರ್ಚೆ ಮಾಡಿದ್ದೇನೆ.
8
+ ದೆಹಲಿಯಿಂದ ಹಿಡಿದ ನಮ್ಮ ಮನೆಯವರೆಗೂ ಎಲ್ಲರ ಜೊತೆಯಲ್ಲೂ ಚರ್ಚಿಸಿದ್ದೇನೆ. ಎಂಪಿ ಚುನಾವಣೆ ಹುಡುಗಾಟ ಅಲ್ಲ. ನಾವ��� ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪಕ್ಷೇತರರಾಗಿ ಸ್ರ್ಪಧಿಸುವುದಾದರೆ ಯಾವುದೋ ದ್ವೇಷ ಮತ್ತು ಹಠಕ್ಕೆ ಬಿದ್ದು ಸ್ಪರ್ಧೆ ಮಾಡಿದ್ದೇನೆ ಎಂದು ಭಾವಿಸಲಾಗುತ್ತದೆ. ಅದರಿಂದ ಯಾರಿಗೆ ಲಾಭ ಎಂಬ ಪ್ರಶ್ನೆಯೂ ಇದೆ ಎಂದರು.
9
+ ನಾನು ನನ್ನ ಸ್ವಾರ್ಥ ನೋಡಿಕೊಳ್ಳುವುದಾದರೆ ಬೇರೆ ಕ್ಷೇತ್ರಗಳಿದ್ದವು. ಕಿಪಿಕಲ್ ರಾಜಕಾರಣಿಯಾಗಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಮಂಡ್ಯ ಬಿಟ್ಟರೆ ನನಗೆ ರಾಜಕೀಯವೇ ಬೇಡ. ನನ್ನನ್ನು ನಂಬಿದವರು, ಬೆಂಬಲಿಸಿದವರು, ಅಂಬರೀಶ್‍ರನ್ನು ಪ್ರೀತಿಸುವವರನ್ನು ಬಿಟ್ಟು ಹೋದರೆ ಮಂಡ್ಯದ ಸೊಸೆ ಎನಿಸಿಕೊಳ್ಳಲು ಅರ್ಹಳಲಾಗುವುದಿಲ್ಲ ಎಂದರು.
10
+ ಕಾಂಗ್ರೆಸ್ ಸೇರುವಂತೆ ಕೆಲವರು ಹೇಳಿದ್ದಾರೆ. ಅಲ್ಲಿ ನಡೆಯುತ್ತಿರುವ ಒಳ ಮಾತುಗಳು ಜನ ಸಾಮಾನ್ಯರಿಗೆ ಅರ್ಥವಾಗಲ್ಲ. ಕಾಂಗ್ರೆಸ್‍ನ ಹಿರಿಯ ನಾಯಕರೊಬ್ಬರು ಸುಮಲತಾರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ನನಗೆ ಗೌರವ ಇಲ್ಲದ ಕಡೆ ನಾನು ಹೋಗಲು ಸಾಧ್ಯವಾಗುತ್ತಾ. ಅಂಬರೀಶ್ ಸ್ವಾಭಿಮಾನದ ಗಂಡು, ನಾನು ಅವರಿಂದ ಸ್ವಾಭಿಮಾನ ಕಲಿತಿದ್ದೇನೆ. ಗೌರವ ಇಲ್ಲದ ಕಡೆ ಹೋಗಿ ಎಂದು ನನ್ನನ್ನು ಒತ್ತಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
11
+ ಸಂಸದ ಸ್ಥಾನ ಬದಲಾಗಬಹುದು, ಈ ಮಣ್ಣಿನ ಸೊಸೆ ಎಂಬುದನ್ನು ಯಾರು ಕಿತ್ತುಕೊಳ್ಳಲಾಗುವುದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಆಸರೆ ತೆಗೆದುಕೊಂಡು ನನ್ನ ಕಾರ್ಯಕರ್ತರಿಗೆ ಶಕ್ತಿ ತುಂಬುವುದಾದರೆ ಆ ನಿರ್ಧಾರವನ್ನೇ ನಾನು ತೆಗೆದುಕೊಳ್ಳಬೇಕಾಗುತ್ತದೆ, ನೀವು ಬೇಡ ಎನ್ನುವವರ ಪಕ್ಷಕ್ಕೆ ನಾನು ಹೋಗುವುದಿಲ್ಲ ಎಂದರು.
12
+ ಪಕ್ಷೇತರರಾಗಿದ್ದರೂ ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದ ಬಿಜೆಪಿ ಸರ್ಕಾರ 4 ಸಾವಿರ ಕೋಟಿ ಅನುದಾನ ನೀಡಿದೆ. ಪ್ರತಿ ವಿಷಯದಲ್ಲೂ ನನ್ನೊಂದಿಗೆ ಚರ್ಚೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಖುದ್ದು ಪ್ರಧಾನಿಯೇ ನನ್ನೊಂದಿಗೆ ಚರ್ಚೆ ಮಾಡಿ ನಿಮ್ಮಂತಹ ನಾಯಕರು ನಮಗೆ ಬೇಕು, ಬೇರೆ ಪಕ್ಷಕ್ಕೆ ಹೋಗಬೇಡಿ ಎಂದಿದ್ದಾರೆ. ಅದು ನಾಯಕತ್ವ ಬೆಳೆಸುವ ಗುಣ ಎಂದರು.
13
+ ಭ್ರಷ್ಟಚಾರ ರಹಿತ ನಾಯಕತ್ವವನ್ನು ನಾನು ಒಪ್ಪಿಕೊಳ್ಳುತ್ತೇನೆ. ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ ಮಂಡ್ಯವನ್ನು ಬಿಟ್ಟು ಹೋಗುತ್ತಿಲ್ಲ. ಒಂದು ಪಕ್ಷದ ಶಕ್ತಿ ಬಳಸಿಕೊಂಡು ಕೆಲಸ ಮಾಡುತ್ತೇನೆ. ಸಂಸದಳಾಗಿ ಇಲ್ಲದೆ ಇರಬಹುದು, ಮುಂದೆ ಬೇರೆನೋ ಆಗಬಹುದು.ಲೋಕಸಭೆ ಟಿಕೆಟ್ ಬಿಟ್ಟುಕೊಟ್ಟು , ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ.
14
+ ಸೋತವರು ಕೂಡ ಕ್ಷೇತ್ರ ಬಿಟ್ಟುಕೊಡುವುದಿಲ್ಲ. ನಾನು ಗೆದ್ದ ಕ್ಷೇತ್ರವನ್ನು ಬಿಟ್ಟು ಕೊಡುತ್ತಿದ್ದೇನೆ. 50 ವರ್ಷಗಳ ಬಳಿಕ ರಾಜ್ಯದಲ್ಲಿ ಪಕ್ಷೇತರರಾಗಿ ಗೆದ್ದಿದ್ದು ಮಂಡ್ಯದಲ್ಲಿ ಮಾತ್ರ. ಸರ್ಕಾರವನ್ನು ಎದುರಿಸಿ ಗೆದ್ದಿರುವ ಬಗ್ಗೆ ಎಲ್ಲೆಡೆ ಅಭಿಮಾನದಿಂದ ಮಾತನಾಡುತ್ತಾರೆ. ನಾನು ನಿಮಗೆ ಪ್ರಮಾಣ ಮಾಡುತ್ತೇನೆ, ಮಂಡ್ಯದ ಋಣವನ್ನು ಎಂದೆಂದಿಗೂ ಬಿಡುವುದಿಲ್ಲ. ನಿಮ್ಮ ಪ್ರೀತಿ ಸದಾ ಇರಲಿ ಎಂದರು.
15
+ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸ್ಪರ್ಧೆ ಮಾಡಿರುವ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ಬಗ್ಗೆ ನೇರವಾಗಿ ಉತ್ತರ ನೀಡಲಿಲ್ಲ. ನಾನಿನ್ನೂ ಪಕ್ಷೇತರಳಾಗಿದ್ದೇನೆ. ಮೊದಲು ಬಿಜೆಪಿಯನ್ನು ಅಕೃತವಾಗಿ ಸೇರುತ್ತೇನೆ. ನಂತರ ಪಕ್ಷ ಹೇಳಿದ ಸೂಚನೆಯನ್ನು ಪಾಲಿಸುತ್ತೇನೆ ಎಂದರು.ನಟ ದರ್ಶನ್ ಅವರು ಮಂಡ್ಯದಲ್ಲಿ ಪ್ರಚಾರಕ್ಕೆ ಬರುವ ಬಗ್ಗೆ ಅವರೇ ನಿರ್ಧಾರ ತಿಳಿಸಬೇಕು. ನಾನು ಸ್ಪರ್ಧೆ ಮಾಡಿದ್ದರೆ ಅವರು ಬರುವುದಾಗಿ ಹೇಳಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೋತ್ತಿಲ್ಲಎಂದರು.
16
+ ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ.ಪಕ್ಷದ ನಿಲುವೇ ನನ್ನ ನಿಲುವಾಗಿರುತ್ತೆ. ಇನ್ನೂ ಕೆಲವೇ ದಿನಗಳಲ್ಲಿ ಬಿಜೆಪಿ ಸೇರುತ್ತೇನೆ. ನನ್ನ ನಿರ್ಧಾರಕ್ಕೆ ಕೆಲವರು ಬೆಂಬಲ ನೀಡುತ್ತಾರೆ, ಇನ್ನೂ ಕೆಲವರು ಮುನಿಸಿಕೊಳ್ಳುತ್ತಾರೆ. ಆದರೂ ನನ್ನ ಜೊತೆ ಇರುತ್ತಾರೆ. ಶೇಕಡ ನೂರಕ್ಕೆ ನೂರರಷ್ಟು ಎಲ್ಲರನ್ನೂ ಮೆಚ್ಚಿಸಲಾಗುವುದಿಲ್ಲ ಎಂದು ಸುಮಲತಾ ಹೇಳಿದರು.
eesanje/url_46_187_2.txt ADDED
@@ -0,0 +1,6 @@
 
 
 
 
 
 
 
1
+ ಯುಗಾದಿಗೂ ಮುನ್ನ ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ
2
+ ಬೆಂಗಳೂರು,ಏ.4-ಬೇಸಿಗೆ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಾಡಿಕೆಗಿಂತ ಒಂದೂವರೆಯಿಂದ 3 ಡಿ.ಸೆ.ನಷ್ಟು ಹೆಚ್ಚಾಗಿದೆ. ಇದರಿಂದ ಬಿಸಿ ಗಾಳಿಯು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಗಳಿವೆ.ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಏ.6ರಿಂದ ಮೂರು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
3
+ ಹಿಂಗಾರು ಪೂರ್ವ ಮಳೆ ದಕ್ಷಿಣ ಒಳನಾಡಿನಲ್ಲಿ ಕಳೆದ ಮೂರು ತಿಂಗಳಿನಿಂದ ಬಿದ್ದಿಲ್ಲ. ಏಪ್ರಿಲ್‍ನಲ್ಲಿ ಮಿಂಚು ಗುಡುಗಿನಿಂದ ಕೂಡಿದ ಮಳೆಯಾಗುವುದು ವಾಡಿಕೆ. ಆದರೆ ಏ.6ರಿಂದ ಮೂರು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
4
+ ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಉಂಟಾಗಿದ್ದರ ಪರಿಣಾಮ ತಾಪಮಾನದಲ್ಲಿ ಸರಾಸರಿಗಿಂತ ಹೆಚ್ಚಾಗಿದೆ. ಇದರಿಂದ ಬಿಸಿ ಗಾಳಿ ಉಂಟಾಗಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.
5
+ ಹವಾಮಾನ ಮುನ್ಸೂಚನೆ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗುವ ಸಾಧ್ಯತೆ ಇಲ್ಲ. ಈ ತಿಂಗಳ ವಾಡಿಕೆ ಮಳೆ ಪ್ರಮಾಣ 36 ಮಿ.ಮೀನಷ್ಟಿದೆ. ರಾಜ್ಯದ ಕೆಲವೆಡೆ ಚದುರಿದಂತೆ ಮಳೆಯಾಗುತ್ತಿದ್ದರೂ ವಾಡಿಕೆ ಪ್ರಮಾಣದಲ್ಲಿಲ್ಲ. ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ವಾಡಿಕೆ ಪ್ರಮಾಣದ ಮುಂಗಾರು ಪೂರ್ವ ಮಳೆಯಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
6
+ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲಿನ ಬೇಗೆ ಹಾಗೂ ಬಿಸಿ ಗಾಳಿ ಹೆಚ್ಚಾಗಲಿದೆ. ವಾತಾವರಣದಲ್ಲಿ ತೇವಾಂಶ ಕುಸಿತವಾಗಲಿದೆ. ರಾಜ್ಯದಲ್ಲಿ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲೂ ಗಣನೀಯ ಏರಿಕೆ ಉಂಟಾಗಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಗಡಿ ದಾಟಿದೆ. ಕಲಬುರಗಿಯಲ್ಲಿ 42.4 ಡಿ.ಸೆ, ನಷ್ಟು ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ 37.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
eesanje/url_46_187_3.txt ADDED
@@ -0,0 +1,7 @@
 
 
 
 
 
 
 
 
1
+ ದೆಹಲಿಗೆ ಕರೆಸಿ ಭೇಟಿಯಾಗದೆ ವಾಪಸ್ ಕಳಿಸಿದ ಅಮಿತ್ ಶಾ : ಈಶ್ವರಪ್ಪ ಮತ್ತಷ್ಟು ಧಗ ಧಗ
2
+ ಬೆಂಗಳೂರು,ಏ.4-ಮೊದಲೇ ಯಡಿಯೂರಪ್ಪನವರ ಕುಟುಂಬದ ವಿರುದ್ಧ ಕೊತಕೊತ ಕುದಿಯುತ್ತಿರುವ ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಈಗ ಮತ್ತಷ್ಟು ಗರಂ ಆಗಿದ್ದಾರೆ. ದೆಹಲಿಗೆ ಬರುವಂತೆ ಸೂಚಿಸಿದ್ದ ಅಮಿತ್ ಶಾ, ಅವರನ್ನು ಭೇಟಿ ಮಾಡದೇ ವಾಪಸ್ ಕಳುಹಿಸಿದ್ದಾರೆ.
3
+ ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಜೊತೆಗೆ ಸಭೆ, ಚನ್ನಪಟ್ಟಣದಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತ್ ಶಾ, ಬೆಂಗಳೂರಿಗೆ ಆಗಮಿಸಿದ್ದರು. ಆ ವೇಳೆ, ಈಶ್ವರಪ್ಪನವರ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈಶ್ವರಪ್ಪನವರ ಸಿಟ್ಟು ತಣ್ಣಗಾಗದ ಹಿನ್ನೆಲೆಯಲ್ಲಿ ಅವರನ್ನು ದೆಹಲಿಗೆ ಬರುವಂತೆ ಸೂಚಿಸಿದ್ದರು.
4
+ ಸೂಚನೆಯ ಮೇರೆ ಈಶ್ವರಪ್ಪ ನಿನ್ನೆ ಬೆಳಗ್ಗೆ ದೆಹಲಿಗೆ ಪ್ರಯಾಣಿಸಿದ್ದರು. ಆದರೆ, ಇಡೀ ದಿನ ಕಾದರೂ ಅಮಿತ್ ಶಾ ದರ್ಶನ ಸಿಗದೇ ರಾಜ್ಯಕ್ಕೆ ಈಶ್ವರಪ್ಪ ವಾಪಸ್ಸಾಗಿದ್ದಾರೆ. ಈ ಮೂಲಕ, ಈಶ್ವರಪ್ಪ ಮತ್ತೊಂದು ಹಿನ್ನಡೆಯನ್ನು ಎದುರಿಸುವಂತಾಗಿದೆ. ಕೆಲವೊಂದು ಮೂಲಗಳ ಪ್ರಕಾರ, ಈಶ್ವರಪ್ಪನವರ ಸ್ವಯಂಕೃತ ಅಪರಾಧದಿಂದಲೇ ಅಮಿತ್ ಶಾ ಅವರನ್ನು ಭೇಟಿಯಾಗಲು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ. ಗೌಪ್ಯವಾಗಿ ಇರಬೇಕಾದ ವಿಚಾರವನ್ನು ಸಾರ್ವಜನಿಕವಾಗಿ ಈಶ್ವರಪ್ಪ ಹೇಳಿದ್ದರು.
5
+ ಬೆಂಗಳೂರಿನಲ್ಲಿ ಅಮಿತ್ ಶಾ ಇರುವ ವೇಳೆ ತಮ್ಮ ಜೊತೆಗೆ ಮಾತನಾಡಿದ್ದನ್ನು ಈಶ್ವರಪ್ಪ ಮಾಧ್ಯಮದವರ ಮುಂದೆ ಹೇಳಿದ್ದರು. ಯಡಿಯೂರಪ್ಪನವರ ಕುಟುಂಬದ ಜೊತೆಗಿನ ಭಿನ್ನಾಭಿಪ್ರಾಯವನ್ನು ಶಾ ಅವರಿಗೆ ವಿವರಿಸಿದ್ದೆ, ಕಾಂತೇಶನ ಭವಿಷ್ಯದ ಬಗ್ಗೆ ಅಮಿತ್ ಶಾ ಕೇಳಿದರು ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು.
6
+ ಇದಾದ ನಂತರ, ದೆಹಲಿಗೆ ಬರುವ ವಿಚಾರವನ್ನು ಗೌಪ್ಯವಾಗಿ ಇಡದೇ ಅದನ್ನೂ ಮಾಧ್ಯಮದವರ ಮುಂದೆ ಬಹಿರಂಗ ಪಡಿಸಿದ್ದು ಅಮಿತ್ ಶಾ ಸಿಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಅಮಿತ್ ಶಾ ಭೇಟಿಗೆ ಅವಕಾಶ ಸಿಗದ ನಂತರ ರಾಜ್ಯಕ್ಕೆ ವಾಪಸ್ ಬರುವ ವೇಳೆ ಮತ್ತೆ ಬಿಜೆಪಿ ವರಿಷ್ಠರ ಬಗ್ಗೆ ಈಶ್ವರಪ್ಪ ಮಾತನಾಡಿದ್ದಾರೆ. ಅವರೇ ದೆಹಲಿಗೆ ಕರೆಸಿ, ಈಗ ಭೇಟಿಗೆ ಅವಕಾಶ ನೀಡುತ್ತಿಲ್ಲ, ಇದರ ಅರ್ಥ ನನ್ನ ಸ್ಪರ್ಧೆಗೆ ಅವರ ಅನುಮತಿಯಿದೆ ಎಂದು ನಾನು ಭಾವಿಸುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
7
+ ಚುನಾವಣೆಗೆ ಈಶ್ವರಪ್ಪ ಸ್ರ್ಪಧಿಸಲಿ, ರಾಘವೇಂದ್ರ ಸೋಲಲಿ ಎನ್ನುವ ಅಭಿಪ್ರಾಯದಲ್ಲಿ ಅಮಿತ್ ಶಾ ಇದ್ದಾರೆ. ಈ ಕಾರಣಕ್ಕೆ ಅವರು ನನ್ನನ್ನು ಭೇಟಿಯಾಗಿಲ್ಲ, ನಾನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಶಯದಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಈಶ್ವರಪ್ಪ ದೆಹಲಿಯಲ್ಲಿ ಹೇಳಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
eesanje/url_46_187_4.txt ADDED
@@ -0,0 +1,6 @@
 
 
 
 
 
 
 
1
+ 20 ಗಂಟೆ ಕಾರ್ಯಾಚರಣೆ ಯಶಸ್ವಿ, ಕೊಳವೆ ಬಾವಿಯಿಂದ ಬದುಕಿ ಬಂದ ಸಾತ್ವಿಕ್
2
+ ಬೆಂಗಳೂರು, ಏ.4-ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕ ಸಾತ್ವಿಕನ ರಕ್ಷಣೆಗಾಗಿ ಅಹೋರಾತ್ರಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಾಲಕನನ್ನು ರಕ್ಷಿಸಿ ಹೊರತೆಗೆಯುವಲ್ಲಿ ಪೊಲೀಸರು ಅಗ್ನಿ ಶಾಮಕ ದಳ, , ಪಡೆ ನಡೆಸಿದ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿಯಾಗಿದೆ.
3
+ ಕೊಳವೆ ಬಾವಿಯಿಂದ ಹೊರತೆಗೆದ ಬಾಲಕ ಸಾತ್ವಿಕನನ್ನು ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.20 ಅಡಿಗಳ ಆಳಕ್ಕೆ ಬಿದ್ದಿದ್ದ ತಲೆ ಕೆಳಗಾಗಿ ಬಿದ್ದಿದ್ದ ಬಾಲಕನನ್ನು ಹೊರತೆಗೆಯುವಲ್ಲಿ ರಕ್ಷಣಾ ತಂಡ ನಡೆಸಿದ್ದ ಕಾರ್ಯಾಚರಣೆ ರೋಚಕವಾಗಿತ್ತು.ಲಚ್ಯಾಣ ಗ್ರಾಮದ ಸತೀಶ್ ಮುಜುಗೊಂಡ ಎಂಬುವವರ ಪುತ್ರ ಸಾತ್ವಿಕ್ (2) ನಿನ್ನೆ ಸಂಜೆ 4.45ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದು, 5.30ರಿಂದ ಬಾಲಕನ ರಕ್ಷಣೆಗಾಗಿ ಕಾರ್ಯಾಚರಣೆ ಆರಂಭವಾಗಿತ್ತು.
4
+ ಹೈದರಾಬಾದ್‍ನಿಂದ ನಿನ್ನೆ ರಾತ್ರಿ ಆಗಮಿಸಿದ್ದ ಎನ್‍ಡಿಆರ್‍ಎಫ್ ತಂಡ ಸ್ಥಳದಲ್ಲಿ ಬೀಡು ಬಿಟ್ಟು ಬಾಲಕನ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಸ್ಥಳೀಯ ಅಗ್ನಿಶಾಮಕ ದಳ ಹಾಗೂ ಪೊಲೀಸರು ಜೊತೆಗೂಡಿ ರಕ್ಷಣಾ ಕಾರ್ಯಾಚರಣೆಯನ್ನು ವೇಗವಾಗಿ ನಡೆಸಿದರು. ಕೊಳವೆ ಬಾವಿ ಪಕ್ಕದಲ್ಲಿ ಎರಡು ಜೆಸಿಬಿಗಳನ್ನು ಬಳಿಸಿ ಎರಡು ಗುಂಡಿಯನ್ನು ತೆಗೆದು ಮಗು ಇರುವ ಸ್ಥಳದ ಸಮೀಪಕ್ಕೆ ತಲುಪಲಾಯಿತು.
5
+ ಪೈಪ್ ಮೂಲಕ ಮಗುವಿಗೆ ಆಮ್ಲಜನಕ ಒದಿಗಿಸಲಾಗುತ್ತಿತ್ತು. ಕ್ಯಾಮೆರಾದಲ್ಲಿ ಬಾಲಕ ಸಾತ್ವಿಕ್‍ನ ಕಾಲು ಅಲುಗಾಡುತ್ತಿರುವ ದೃಶ್ಯ ಕಂಡುಬಂದ ಹಿನ್ನೆಲೆಯಲ್ಲಿ ಪೋಷಕರು, ನೆರೆದಿದ್ದ ಸಾವಿರಾರು ಜನ ಮಗು ಬದುಕಿದೆ, ಇನ್ನೇನು ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗುತ್ತದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ರಕ್ಷಣಾ ಕಾರ್ಯಾಚರಣೆಗೆ ಗಟ್ಟಿ ಕಲ್ಲು ಅಡ್ಡಿಯಾಗಿತ್ತು.
6
+ ಸ್ಟೋನ್ ಬ್ರೇಕರ್ ಬಳಸಿ ಬಂಡೆ ಒಡೆದು ಮಗುವಿನ ಬಳಿ ತಲುಪಿದ ರಕ್ಷಣಾ ಪಡೆ ಪೈಪ್‍ನಲ್ಲಿ ಸಿಲುಕಿದ್ದ ಮಗುವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾಕಾರಿ ಟಿ. ಬುಬಾಲನ್, ಎಸ್ಪಿ ಋಷಿಕೇಶ್ ಸೋನಾವಣೆ, ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದರು.
eesanje/url_46_187_5.txt ADDED
@@ -0,0 +1,4 @@
 
 
 
 
 
1
+ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಸುರೇಶ್-ಡಾ.ಸಿ.ಎನ್.ಮಂಜುನಾಥ್ ಮುಖಾಮುಖಿ
2
+ ರಾಮನಗರ,ಏ.4-ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್‍ನ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರಸ್ಪರ ಮುಖಾಮುಖಿಯಾಗಿದ್ದಾರೆ. ಡಿ.ಕೆ.ಸುರೇಶ್ ಅವರು ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ತಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರೊಂದಿಗೆ ತೆರಳಿ 2 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದರು. ಇಂದು ಮತ್ತೊಮ್ಮೆ 2 ಪ್ರತಿಗಳ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
3
+ ರಾಮನಗರದ ಶಾಸಕ ಇಕ್ಬಾಲ್ ಹುಸೇನ್, ವಿಧಾನಸಭಾ ಸದಸ್ಯ ರವಿ ಈ ಸಂದರ್ಭದಲ್ಲಿ ಡಿ.ಕೆ.ಸುರೇಶ್‍ರವರ ಜೊತೆಯಲ್ಲಿದ್ದರು. ಡಾ.ಸಿ.ಎನ್.ಮಂಜುನಾಥ್‍ರವರು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಶಾಸಕ ಮುನಿರತ್ನ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
4
+ ಹೊರಬರುವಾಗ ಎರಡೂ ಪಕ್ಷಗಳ ನಾಯಕರು ಮುಖಾಮುಖಿಯಾದರು. ಡಿ.ಕೆ.ಸುರೇಶ್ ಮತ್ತು ಮುನಿರತ್ನ ಪರಸ್ಪರ ಹಸ್ತಲಾಘವ ಮಾಡಿದ್ದು ಗಮನ ಸೆಳೆಯಿತು.
eesanje/url_46_187_6.txt ADDED
@@ -0,0 +1,4 @@
 
 
 
 
 
1
+ ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ
2
+ ಬೆಂಗಳೂರು,ಏ.4-ರಾಜ್ಯಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಲೋಕೇಶ್ ಭರಮಪ್ಪ ಜಗಲಸಾರ್ ಅವರನ್ನು ಬೆಂಗಳೂರು ನಗರ ದಕ್ಷಿಣ ವಲಯದ ಉಪಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
3
+ ಮೈಸೂರಿನಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಎಸ್‍ಪಿಯಾಗಿರುವ ಗೀತಾ ಎನ್.ಎಸ್. ಅವರನ್ನು ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಹುದ್ದೆಯ ಸಮವರ್ತಿತ ಜವಾಬ್ದಾರಿಯನ್ನು ವಹಿಸಲಾಗಿದೆ.
4
+ ಡಾ.ಕೋನ ವಂಶಿ ಕೃಷ್ಣ ಅವರನ್ನು ಬೆಂಗಳೂರು ನಗರ ಪೂರ್ವ ವಲಯದ ಉಪಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಕರ್ನಾಟಕ ಲೋಕಾಯುಕ್ತ ಎಸ್‍ಪಿ ಹುದ್ದೆಯ ಸಮವರ್ತಿತ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ವರ್ಗಾವಣೆಯನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಡಲಾಗಿದೆ.
eesanje/url_46_187_7.txt ADDED
@@ -0,0 +1,7 @@
 
 
 
 
 
 
 
 
1
+ ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ 26.11 ಕೋಟಿ ನಗದು ಜಪ್ತಿ
2
+ ಬೆಂಗಳೂರು,ಏ.3-ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದಾಗಿನಿಂದ ಅಕ್ರಮವನ್ನು ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದುವರೆಗೂ 26.11 ಕೋಟಿ ಹಣವನ್ನು ಜಪ್ತಿ ಮಾಡಿದೆ.ಅದೇ ರೀತಿ 29.42 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, 3.13 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ.
3
+ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇದುವರೆಗೂ ರಾಜ್ಯದಲ್ಲಿ ಈ ಪ್ರಮಾಣದ ಡ್ರಗ್ಸ್ ಅನ್ನು ಜಪ್ತಿ ಮಾಡಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್, ಆದಾಯ ತೆರಿಗೆ, ಅಬಕಾರಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ 26,11,61,464 ರೂ. ನಗದು ಜಪ್ತಿ ಮಾಡಲಾಗಿದೆ. ಇದುವರೆಗೂ 16.02 ಕೆಜಿ ಚಿನ್ನ ವಶಪಡಿಸಿಕೊಂಡಿದ್ದು9.43 ಕೋಟಿ ರೂ. ಮೌಲ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
4
+ 27,23,150 ರೂ. ಮೌಲ್ಯದ 59.04 ಕೆಜಿ ಬೆಳ್ಳಿ ಹಾಗೂ 9 ಲಕ್ಷ ಮೌಲ್ಯದ 21.17 ಕ್ಯಾರೆಟ್ ವಜ್ರದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಮದ್ಯ, ಡ್ರಗ್ಸ್, ನಗದು, ಬೆಲೆ ಬಾಳುವ ಲೋಹ, ಉಚಿತ ಉಡುಗೊರೆಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.
5
+ ರಾಮಮೂರ್ತಿನಗರ ಠಾಣೆಯ ಪೊಲೀಸ್ ತಂಡ 22 ಲಕ್ಷ ಮೌಲ್ಯದ 215ಗ್ರಾಂ ಡ್ರಗ್ಸ್, ದೇವನಹಳ್ಳಿ ಪೊಲೀಸ್ ತಂಡ 85 ಲಕ್ಷ ಮೌಲ್ಯದ 850 ಗ್ರಾಂ ಡ್ರಗ್ಸ್ ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2.2 ಕೋಟಿ ಹಣ, 25.29 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
6
+ ಕುಗನೊಳಿ ಚೆಕ್ ಪೋಸ್ಟ್ ನಲ್ಲಿ 3ಲಕ್ಷ ಹಣ ಜಪ್ತಿರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದೇ ತೆಗೆದುಕೊಂಡು ಹೋಗುತ್ತಿದ್ದ 3 ಲಕ್ಷ ಹಣವನ್ನು ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಕುಗನೊಳಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.
7
+ ಈ ಮಾರ್ಗದಲ್ಲಿ ಬರುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಇಲ್ಲದ ಹಣವನ್ನು ಪೊಲೀಸ್ ಸಿಬ್ಬಂದಿ ಸೀಜ್ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಜಿಲ್ಲೆಯ ಕುಡಚಿ ಚೆಕ್ ಪೋಸ್ಟ್ ನಲ್ಲಿ ಲಾರಿಯನ್ನು ತಪಾಸಣೆ ಮಾಡಿದಾಗ 9.86 ಲಕ್ಷ ಮೌಲ್ಯದ ಟಿವಿಗಳು ಸೇರಿದಂತೆ ವಿವಿಧ ಸರಕುಗಳನ್ನು ವಶಕ್ಕೆ ಪಡೆಯಲಾಗಿದೆ.
eesanje/url_46_187_8.txt ADDED
@@ -0,0 +1,4 @@
 
 
 
 
 
1
+ ರಾಜ್ಯಸಭೆ ಸದಸ್ಯತ್ವದಿಂದ ಹನುಮಂತಯ್ಯ, ರಾಜೀವ್ ಚಂದ್ರಶೇಖರ್ ನಿವೃತ್ತಿ
2
+ ಬೆಂಗಳೂರು, ಏ.3-ರಾಜ್ಯಸಭೆ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್, ಡಾ. ಎಲ್. ಹನುಮಂತಯ್ಯ, ಡಾ. ಸೈಯದ್ ನಾಸೀರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ನಿನ್ನೆ ನಿವೃತ್ತರಾಗಿದ್ದಾರೆ.
3
+ ಈ ನಾಲ್ವರು ಸದಸ್ಯರ ನಿವೃತ್ತಿಯಿಂದ ತೆರವಾಗುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಭಾರತದ ಚುನಾವಣಾ ಆಯೋಗ ಚುನಾವಣೆ ನಡೆಸಿತ್ತು. ಎಲ್. ಹನುಮಂತಯ್ಯ ಹಾಗೂ ರಾಜೀವ್ ಚಂದ್ರಶೇಖರ್ ಅವರು ಮರು ಸ್ಪರ್ಧೆಯಿಂದ ದೂರ ಉಳಿದಿದ್ದರು. ಆದರೆ ನಾಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಮರು ಸ್ಪರ್ಧೆ ಮಾಡಿ ಆಯ್ಕೆ ಯಾಗಿದ್ದಾರೆ.
4
+ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಇತ್ತೀಚೆಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಕಾನ್, ಡಾ. ಸೈಯದ್ ನಾಸೀರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್, ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಚುನಾಯಿತರಾಗಿದ್ದಾರೆ.
eesanje/url_46_187_9.txt ADDED
@@ -0,0 +1,8 @@
 
 
 
 
 
 
 
 
 
1
+ ಯುಪಿಐ ಮೂಲಕ ರೈಲ್ವೆ ಟಿಕೆಟ್ ಖರೀದಿಗೆ ಅವಕಾಶ
2
+ ಬೆಂಗಳೂರು,ಏ.3-ಇದೇ ಮೊದಲ ಬಾರಿಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಯುಪಿಐ ಮೂಲಕ ಕಾಯ್ದಿರಿಸದ ರೈಲ್ವೆ ಟಿಕೆಟ್ಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.
3
+ ಪ್ರಾಯೋಗಿಕವಾಗಿ ರಾಜಧಾನಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಯುಪಿಐ ಮೂಲಕ ಟಿಕೆಟ್ ಖರೀದಿಗೆ ಆವಕಾಶ ನೀಡಲಾಗಿದೆ. ಟಿಕೆಟ್ ಕೌಂಟರ್ಗಳಲ್ಲಿ ಇ ಪಾವತಿಗೆ ಅನುವು ಮಾಡಿಕೊಡಲಾಗಿದೆ. ಇದಕ್ಕೆ ಈಗಾಗಲೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.
4
+ ಪ್ರಯಾಣಿಕರು ಟಿಕೆಟ್ ಕೌಂಟರ್ನಲ್ಲಿ ಹೋಗಬೇಕಾದ ಸ್ಥಳಗಳ ಮಾಹಿತಿಯನ್ನು ನೀಡಿದರೆ ಟಿಕೆಟ್ ಇಶ್ಯೂ ಮಾಡಲಾಗುತ್ತಿದೆ. ಸ್ಕ್ರೀನ್ನಲ್ಲಿ ಕ್ಯೂ ಆರ್ ಕೋಡ್ ಕಾಣಿಸಿಕೊಂಡಾಗ ಹಣ ಪಾವತಿಸುವ ಮೂಲಕ ಟಿಕೆಟ್ ಪಡೆಯಬಹುದಾಗಿದೆ.
5
+ ಕೆಎಸ್ಆರ್ ಮಾದರಿಯಲ್ಲೇ ನಗರದ ಯಶವಂಪುರ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಹಿಂದೆ ಕಾಯ್ದಿರಿಸದ ಟಿಕೆಟ್ ಗಳನ್ನು ನಗದು ರೂಪದಲ್ಲಿ ಮಾತ್ರ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಡಿಜಿಟಲ್ ಪಾವತಿಗೂ ಅವಕಾಶ ನೀಡಿರುವುದರಿಂದ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
6
+ ಕಾಯ್ದಿರಿಸದ ಟಿಕೆಟ್ ಖರೀದಿಸುವಾಗ ಉಂಟಾಗುವ ಚಿಲ್ಲರೆ ಸಮಸ್ಯೆ , ನಗದು ಸಮಸ್ಯೆಗೆ ಯುಪಿಐ ಪೇಮೆಂಟ್ ವ್ಯವಸ್ಥೆಯು ಪರಿಹಾರವನ್ನು ಒದಗಿಸ ಲಿದೆ. ಈ ಮೊದಲು ಟಿಕೆಟ್ ಖರೀದಿಗೆ ನಗದು, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮೂಲಕ ಪಾವತಿಗೆ ಅವಕಾಶ ನೀಡಲಾಗಿತ್ತು.
7
+ ಇವುಗಳಿಂದ ಪಾವತಿ ಸ್ವೀಕಾರಕ್ಕೆ ಇರುವ ಪ್ರಕ್ರಿಯೆಗಳು ವಿಳಂಬವಾಗುತ್ತಿತ್ತು. ಹೊಸ ವ್ಯವಸ್ಥೆ ಪ್ರಯಾಣಿಕರಿಗೆ ಕಾಲ ವಿಳಂಬವಿಲ್ಲದೆ ಟಿಕೆಟ್ ಪಡೆಯಲು ಸಹಕಾರಿಯಾಗುತ್ತಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತ್ರಿನೇತ್ರ ಹೇಳಿದ್ದಾರೆ.
8
+ ರೈಲ್ವೆ ಸಚಿವಾಲಯದ ಪ್ರಾಯೋಗಿಕ ಯೋಜನೆ ಇದಾಗಿದ್ದು, ಟಿಕೆಟ್ ಕೌಂಟರ್ ನಲ್ಲಿ ಈ ಮೊದಲು ಯುಪಿಐ ಪೆಮೆಂಟ್ ವ್ಯವಸ್ಥೆ ಇರಲಿಲ್ಲ. ದೇಶಾದ್ಯಂತ ಈ ವ್ಯವಸ್ಥೆಯನ್ನು ಆರಂಭಿಸುವ ಮೊದಲು ಕೆಲವೇ ಕೆಲವು ರೈಲ್ವೆ ನಿಲ್ಧಾಣಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಯುಪಿಐ ಮೂಲಕ ಈಗಾಗಲೇ ಸಾವಿರಾರು ಜನ ಟಿಕೆಟ್ಗಳನ್ನು ಖರೀದಿಸಿ ದ್ದಾರೆ. ಸಂಪೂರ್ಣ ಬೆಂಗಳೂರಿನಲ್ಲಿ ಈ ವ್ಯವಸ್ಥೆಯನ್ನು ಶೀಘ್ರವೇ ಆರಂಭಿಸ ಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
eesanje/url_46_188_1.txt ADDED
@@ -0,0 +1,7 @@
 
 
 
 
 
 
 
 
1
+ ರಾಜಕೀಯ ನಾಯಕರ ‘ಹಾರಾಟ’ ಜೋರು : ಹೆಲಿಕಾಪ್ಟರ್, ವಿಮಾನಗಳ ಬಾಡಿಗೆ ದರ ಶೇ15ರಷ್ಟು ಹೆಚ್ಚಳ
2
+ ಬೆಂಗಳೂರು, ಏ.3-ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮೂರು ಪಕ್ಷಗಳಿಂದ ರಾಜಕೀಯ ನಾಯಕರ ಪ್ರಚಾರ ಕೂಡ ಜೋರಾಗಿ ನಡೆಯುತ್ತಿದೆ. ಹೆಚ್ಚಿನ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಹೆಲಿಕಾಪ್ಟರ್‍ಗಳು, ಸಣ್ಣ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಇದರಿಂದಾಗಿ ಬಾಡಿಗೆ ದರ ಕೂಡ ಶೇ.15ರಷ್ಟು ಹೆಚ್ಚಾಗಿದೆ.
3
+ ರಾಜ್ಯದಲ್ಲಿ ಚುನಾವಣೆ ಪ್ರಚಾರ ಹಾಗೂ ಸ್ಟಾರ್ ಪ್ರಚಾರಕರಿಗಾಗಿ ಹೆಲಿಕಾಪ್ಟರ್‍ಗಳಿಗೆ ಬೇಡಿಕೆ ಬಂದಿದೆ. ಈಗಾಗಲೇ ಸುಮಾರು 150 ಹೆಲಿಕಾಪ್ಟರ್‍ಗಳು ಹಾಗೂ ಮಿನಿ ವಿಮಾನಗಳು ಬುಕ್ ಆಗಿವೆ. ಹೆಚ್ಚಿನ ಬೇಡಿಕೆ ಹಿನ್ನೆಲೆ ಹೊರ ರಾಜ್ಯದಿಂದ ಹೆಲಿಕಾಪ್ಟರ್‍ಗಳನ್ನು ತರಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧೆಡೆ ಹೆಲಿಕಾಪ್ಟರ್‍ಗಳನ್ನು ಬುಕ್ ಮಾಡಿ ಕಾಯ್ದಿರಿಸಲಾಗುತ್ತಿದೆ.
4
+ ಇನ್ನು, ಪ್ರಮುಖವಾಗಿ ಸ್ಟಾರ್ ಪ್ರಚಾರಕರ ಸುರಕ್ಷತೆಗಾಗಿ ಉತ್ತಮ ನಿರ್ವಹಣೆಯ ಡಬಲ್ ಎಂಜಿನ್ ಕಾಪ್ಟರ್ ಮತ್ತು ವಿಐಪಿ ಪೈಲಟ್‍ಗಳನ್ನು ಬೇರೆ ಕಡೆಗಳಿಂದ ಕರೆಸಲಾಗುತ್ತಿದೆ ಎಂದು ಸೇವಾ ಆಪರೇಟರ್‍ಗಳು ತಿಳಿಸಿದ್ದಾರೆ.ಜಕ್ಕೂರು ಏರೊಡ್ರೊಮ್, ಎಚ್‍ಎಎಲ್ ಹಾಗೂ ವೈಟ್‍ಫೀಲ್ಡ್‍ನಲ್ಲಿ ಹೆಲಿಕಾಪ್ಟರ್‍ಗಳು ಸೇವೆಗಾಗಿ ಕಾದು ನಿಲ್ಲಲಿವೆ.
5
+ ಚುನಾವಣೆ ಹಿನ್ನೆಲೆ ವಿಶ್ರಾಂತಿಗೆ ಬಿಡುವಿಲ್ಲದಂತೆ ಸಂಚರಿಸಬೇಕಿರುವ ನಾಯಕರಿಗೆ ಒಂದೊಂದು ಕ್ಷಣವೂ ಅಮೂಲ್ಯ. ಸಮಯ ವ್ಯರ್ಥವಾದರೆ ಚುನಾವಣಾ ಅಖಾಡದಲ್ಲಿ ಹಿನ್ನಡೆಯ ಆತಂಕ ಕೂಡ ನಾಯಕರಿಗಿದೆ. ಹಾಗಾಗಿ ಸಮಯದ ಸಮರ್ಥ ನಿರ್ವಹಣೆಗಾಗಿ ಬಹುತೇಕ ನಾಯಕರು ಹೆಲಿಕಾಪ್ಟರ್‍ಗಳ ಮೊರೆ ಹೋಗುತ್ತಿದ್ದಾರೆ. ರಾಜ್ಯದ ಹಲವು ನಾಯಕರು ಸ್ವಂತ ಹೆಲಿಕಾಪ್ಟರ್ ಹಾಗೂ ಚಾರ್ಟೆಡ್ ವಿಮಾನಗಳನ್ನು ಹೊಂದಿದ್ದು, ಅವುಗಳನ್ನು ಕೂಡ ಚುನಾವಣೆಗೆ ಬಳಕೆಯಾಗಲಿವೆ.
6
+ ಬಾಡಿಗೆ ಎಷ್ಟಿದೆ?ಎರಡು ಆಸನದ ಹೆಲಿಕಾಪ್ಟರ್‍ಗೆ ಒಂದು ಗಂಟೆಗೆ 2.10 ಲಕ್ಷ ರೂ. ಬಾಡಿಗೆ ಇದ್ದರೆ, 4 ಆಸನದ ಹೆಲಿಕಾಪ್ಟರ್‍ಗಳಿಗೆ ಗಂಟೆಗೆ 2.30 ಲಕ್ಷ ರೂ., 6 ಆಸನದ ಮಿನಿ ವಿಮಾನಕ್ಕೆ ಗಂಟೆಗೆ 2.60 ಲಕ್ಷ ರೂ., 8 ಆಸನದ ಮಿನಿ ವಿಮಾನಕ್ಕೆ ಗಂಟೆಗೆ 3.50 ಲಕ್ಷ ರೂ., 13 ಆಸನದ ಮಿನಿ ವಿಮಾನಕ್ಕೆ ಗಂಟೆಗೆ 4 ಲಕ್ಷ ರೂ. ಬಾಡಿಗೆ ಇದ್ದು, ಎಲ್ಲ ದರಗಳಲ್ಲೂ ಜಿಎಸ್‍ಟಿ ಸೇರಿರಲಿದೆ. ಇದು ಸಿಂಗಲ್ ಇಂಜಿನ್ ಹೆಲಿಕಾಪ್ಟರ್‍ಗಳಾಗಿದ್ದು, ಡಬಲ್ ಇಂಜಿನ್ ಕಾಪ್ಟರ್, ವಿಮಾನಗಳ ಬೆಲೆ ಮತ್ತಷ್ಟು ಹೆಚ್ಚಿರಲಿದೆ ಎಂದು ಏರ್ ಆಂಬುಲೆನ್ಸ್ ನಿರ್ದೇಶಕಿ ಡಾ ಶಮಿತಾ ತಿಳಿಸಿದ್ದಾರೆ.
7
+ ಹೆಲಿಕಾಪ್ಟರ್‍ಗಳ ಬಾಡಿಗೆ ದರ!ಕಾಪ್ಟರ್ ವಿಧ (ಸಿಂಗಲ್ ಇಂಜಿನ್)ಗಂಟೆಗೆ ಬಾಡಿಗೆ ದರ (ಜಿಎಸ್‍ಟಿ ಸೇರಿ)2 ಆಸನದ ಹೆಲಿಕಾಪ್ಟರ್2.10 ಲಕ್ಷ ರೂ.4 ಆಸನದ ಹೆಲಿಕಾಪ್ಟರ್2.30 ಲಕ್ಷ ರೂ.6 ಆಸನದ ಮಿನಿ ವಿಮಾನ2.60 ಲಕ್ಷ ರೂ.8 ಆಸನದ ಮಿನಿ ವಿಮಾನ3.50 ಲಕ್ಷ ರೂ.13 ಆಸನದ ಮಿನಿ ವಿಮಾನ4 ಲಕ್ಷ ರೂ.
eesanje/url_46_188_10.txt ADDED
@@ -0,0 +1,6 @@
 
 
 
 
 
 
 
1
+ ಲೋಕಸಮರಕ್ಕೆ ರಾಜ್ಯಾದ್ಯಂತ ಬಿಗಿ ಭದ್ರತೆ : ಅಲೋಕ್ ಮೋಹನ್
2
+ ಬೆಂಗಳೂರು, ಏ.2-ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ತಿಳಿಸಿದ್ದಾರೆ.
3
+ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಾಗೂ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ದಿನದ 24 ಗಂಟೆಯೂ ಈ ಚೆಕ್ ಪೋಸ್ಟ್ ಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
4
+ ಚೆಕ್ ಪೋಸ್ಟ್ ಳಲ್ಲಿ ಪೊಲೀಸರ ಜೊತೆಗೆ ಆರ್ಟಿಒ ಅಬಕಾರಿ, ಕಂದಾಯ ಹಾಗೂ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರುತ್ತಾರೆ ಎಂದು ಅವರು ಹೇಳಿದರು.ಈಗಾಗಲೇ ಚುನಾವಣಾ ಬಂದೋಬಸ್ತ್ಗಾಗಿ 15 ಕಂಪನಿ ಕೇಂದ್ರ ಪಡೆಗಳು ಬಂದಿವೆ. ಅವುಗಳನ್ನು ಸ್ಥಳೀಯ ಪೊಲೀಸರ ಜೊತಗೆ ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಇನ್ನಷ್ಟು ಕೇಂದ್ರ ಪಡೆಯ ಕಂಪನಿಗಳು ರಾಜ್ಯಕ್ಕೆ ಆಗಮಿಸಲಿವೆ ಎಂದು ಅವರು ತಿಳಿಸಿದರು.
5
+ ಎಲ್ಲಾ ರೌಡಿಗಳ ಮನೆಗಳ ಮೇಲೆ ಈಗಾಗಲೇ ನಮ್ಮ ಪೊಲೀಸರು ದಾಳಿ ಮಾಡಿ, ಅವರಿಗೆ ಎಚ್ಚರಿಕೆ ನೀಡಿ ಬಾಲ ಬಿಚ್ಚದಂತೆ ತಾಕೀತು ಮಾಡಿದ್ದಾರೆ. ರೌಡಿಗಳು ರಾಜಕಾರಣಿಗಳ ಜೊತೆಯಿರಲಿ ಅಥವಾ ಎಲ್ಲೇ ಇರಲಿ, ಶಾಂತಿ ಮತ್ತು ಸುವ್ಯವಸ್ಥೆಗೆ ದಕ್ಕೆ ತಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
6
+ ರೌಡಿಗಳು ಅಥವಾ ಬೇರೆ ಯಾರೇಯಾಗಲಿ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದರೆ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.