CoolCoder44 commited on
Commit
da7a41c
·
verified ·
1 Parent(s): c50b566

52ad9aa8bac66d70e239267b783a8dc751c8bd841e11612f2928e176fc86e832

Browse files
Files changed (50) hide show
  1. eesanje/url_47_209_2.txt +7 -0
  2. eesanje/url_47_209_3.txt +6 -0
  3. eesanje/url_47_209_4.txt +13 -0
  4. eesanje/url_47_209_5.txt +4 -0
  5. eesanje/url_47_209_6.txt +5 -0
  6. eesanje/url_47_209_7.txt +6 -0
  7. eesanje/url_47_209_8.txt +8 -0
  8. eesanje/url_47_209_9.txt +8 -0
  9. eesanje/url_47_20_1.txt +7 -0
  10. eesanje/url_47_20_10.txt +7 -0
  11. eesanje/url_47_20_11.txt +8 -0
  12. eesanje/url_47_20_12.txt +8 -0
  13. eesanje/url_47_20_2.txt +6 -0
  14. eesanje/url_47_20_3.txt +11 -0
  15. eesanje/url_47_20_4.txt +5 -0
  16. eesanje/url_47_20_5.txt +8 -0
  17. eesanje/url_47_20_6.txt +6 -0
  18. eesanje/url_47_20_7.txt +6 -0
  19. eesanje/url_47_20_8.txt +8 -0
  20. eesanje/url_47_20_9.txt +8 -0
  21. eesanje/url_47_210_1.txt +5 -0
  22. eesanje/url_47_210_10.txt +6 -0
  23. eesanje/url_47_210_11.txt +8 -0
  24. eesanje/url_47_210_12.txt +8 -0
  25. eesanje/url_47_210_2.txt +5 -0
  26. eesanje/url_47_210_3.txt +11 -0
  27. eesanje/url_47_210_4.txt +7 -0
  28. eesanje/url_47_210_5.txt +10 -0
  29. eesanje/url_47_210_6.txt +7 -0
  30. eesanje/url_47_210_7.txt +6 -0
  31. eesanje/url_47_210_8.txt +6 -0
  32. eesanje/url_47_210_9.txt +6 -0
  33. eesanje/url_47_211_1.txt +8 -0
  34. eesanje/url_47_211_10.txt +5 -0
  35. eesanje/url_47_211_11.txt +6 -0
  36. eesanje/url_47_211_12.txt +7 -0
  37. eesanje/url_47_211_2.txt +5 -0
  38. eesanje/url_47_211_3.txt +7 -0
  39. eesanje/url_47_211_4.txt +8 -0
  40. eesanje/url_47_211_5.txt +6 -0
  41. eesanje/url_47_211_6.txt +4 -0
  42. eesanje/url_47_211_7.txt +6 -0
  43. eesanje/url_47_211_8.txt +6 -0
  44. eesanje/url_47_211_9.txt +7 -0
  45. eesanje/url_47_212_1.txt +7 -0
  46. eesanje/url_47_212_10.txt +7 -0
  47. eesanje/url_47_212_11.txt +7 -0
  48. eesanje/url_47_212_12.txt +9 -0
  49. eesanje/url_47_212_2.txt +6 -0
  50. eesanje/url_47_212_3.txt +8 -0
eesanje/url_47_209_2.txt ADDED
@@ -0,0 +1,7 @@
 
 
 
 
 
 
 
 
1
+ ಗುಂಡು ಹಾರಿಸಿ ಎಐಎಂಐಎಂ ನಾಯಕನ ಹತ್ಯೆ
2
+ ಪಾಟ್ನಾ, ಡಿ.24- ಎಐಎಂಐಎಂ ನಾಯಕ ಆರಿಫ್ ಜಮಾಲ್ನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಹುಸೈಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುತುಬ್ ಛಾಪ್ರಾ ತಿರುವಿನಲ್ಲಿ ಈ ಘಟನೆ ನಡೆದಿದೆ. ಆರಿಫ್ ಜಮಾಲ್ ತನ್ನ ಅಂಗಡಿಯಲ್ಲಿ ಕುಳಿತಿದ್ದ ಸಮಯದಲ್ಲಿ ಬೈಕ್ನಲ್ಲಿ ಬಂದ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ.
3
+ ಆರಿಫ್ ಜಮಾಲ್ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದಾರೆ, ರಾತ್ರಿ 8.30ರಿಂದ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಗುಂಡಿನ ದಾಳಿ ನಡೆಸಿದ ಬಳಿಕ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಆರಿಫ್ ಜಮಾಲ್ ನನ್ನು ಜನರು ತರಾತುರಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ತಪಾಸಣೆ ನಡೆಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
4
+ ಹುಸೈಂಗಂಜ್ ಪೊಲೀಸ್ ಠಾಣೆಯ ಪ್ರಭಾರಿ ವಿಜಯ್ ಯಾದವ್ ಅವರು ಆರಿಫ್ ಜಮಾಲ್ ಅವರನ್ನು ಕ್ರಿಮಿನಲ್ಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಿದ್ದಾರೆ. ಗುಂಡು ಅವರ ಹೊಟ್ಟೆಗೆ ತಗುಲಿತ್ತು. ಸ್ಥಳೀಯರು ಮತ್ತು ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
5
+ ಗುಂಡಿಕ್ಕಿ ನಿವೃತ್ತ ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ ಉಗ್ರರು
6
+ ದುಷ್ಕರ್ಮಿಗಳು ಆರಿಫ್ ಜಮಾಲ್ ಹೊಟ್ಟೆಗೆ ಒಂದೇ ಒಂದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ, ಜನರು ಮೊದಲು ಅವರನ್ನು ಸದರ್ ಆಸ್ಪತ್ರೆಗೆ ಕರೆದೊಯ್ದರು. ಇದಾದ ಬಳಿಕ ಇಲ್ಲಿಂದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.
7
+ ಆರಿಫ್ ಜಮಾಲ್ ಕೂಡ ಚುನಾವಣೆಗೆ ಸ್ರ್ಪಧಿಸಿದ್ದಾರೆ ಎನ್ನಲಾಗಿದೆ. 2015 ರಲ್ಲಿ ಅವರು ರಘುನಾಥಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ರ್ಪಧಿಸಿ ಸೋತಿದ್ದರು. ಇದಾದ ಬಳಿಕ 2022ರ ಜಿಲ್ಲಾ ಪರಿಷತ್ ಚುನಾವಣೆಗೂ ಸ್ರ್ಪಧಿಸಿದ್ದರು. ಘಟನೆ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
eesanje/url_47_209_3.txt ADDED
@@ -0,0 +1,6 @@
 
 
 
 
 
 
 
1
+ ಉಪನ್ಯಾಸದ ವೇಳೆಯಲ್ಲೇ ಹೃದಯಾಘಾತ ಹಿರಿಯ ಉಪನ್ಯಾಸಕ ನಿಧನ
2
+ ಕಾನ್ಪುರ, ಡಿ.24- ವೇದಿಕೆ ಮೇಲೆ ಉಪನ್ಯಾಸ ನೀಡುತ್ತಿರುವ ವೇಳೆ ಹೃದಯಾಘಾತಗೊಂಡು ಐಐಟಿ ಕಾನ್ಪುರದ ಹಿರಿಯ ಉಪನ್ಯಾಸಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಐಐಟಿ ಕಾನ್ಪುರದ ಹಿರಿಯ ಪ್ರಾಧ್ಯಾಪಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಸಮೀರ್ ಖಂಡೇಕ ಮೃತ ಪ್ರಾಧ್ಯಾಪಕರು. ರೊಬ್ಬರು ವಿಶ್ವವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಸಮೀರ್ ಖಂಡೇಕರ್ ಐಐಟಿ ಕಾನ್ಪುರ ಸಭಾಂಗಣದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದರು.
3
+ ಖಂಡೇಕರ್ ಅವರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಾರ್ಗಗಳ ಬಗ್ಗೆ ಮಾತನಾಡುತ್ತಿದ್ದರು. ಖಂಡೇಕರ್ ಇದ್ದಕ್ಕಿದ್ದಂತೆ ಅಸ್ವಸ್ಥರಾದರು, ಎದೆಯಲ್ಲಿ ಸ್ಬಲ್ಪ ನೋವು ಕಾಣಿಸಿಕೊಂಡಿತ್ತು. ಅವರು ಭಾವುಕರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಭಾವಿಸಿದ್ದರು. ಸ್ವಲ್ಪ ಸಮಯದ ನಂತರ ಬೆವರು ಬರಲು ಶುರುವಾಗಿತ್ತು. ವೇದಿಕೆ ಮೇಲೆಯೇ ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯ ನೀರಜ್ ಕುಮಾರ್ ಪ್ರಕಾರ, ಆಸ್ಪತ್ರೆಗೆ ಕರೆತರುವ ಮೊದಲೇ ಖಂಡೇಕರ್ ಮೃತಪಟ್ಟಿದ್ದರು.
4
+ ಗುಂಡಿಕ್ಕಿ ನಿವೃತ್ತ ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ ಉಗ್ರರು
5
+ ಸುಮಾರು ಐದು ವರ್ಷಗಳ ಹಿಂದೆ ಖಾಂಡೇಕರ್ ಅವರಿಗೆ ಅರೋಗ್ಯ ಸಮಸ್ಯೆ ಎದುರಾದಾಗ ಪರೀಕ್ಷೆ ನಡೆಸಿದ ವೈದ್ಯರು ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವುದಾಗಿ ಹೇಳಿದ್ದರು ಎಂದು ಅವರ ಆಪ್ತ ಪ್ರಾಧ್ಯಾಪಕರೊಬ್ಬರು ಹೇಳಿದ್ದರು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಪ್ರೊಫೆಸರ್ ಅವರ ಮಗ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನಡೆಸಲಿದ್ದಾರೆ. ಖಂಡೇಕರ್ ಅವರು 2019 ರಿಂದ ಕೊಲೆಸ್ಟ್ರಾಲ್ನಿಂದ ಬಳಲುತ್ತಿದ್ದರು ಮತ್ತು ನಿರಂತರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ತಂದೆ-ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
6
+ ಮಧ್ಯಪ್ರದೇಶದ ಜಬಲ್ಪುರದಲ್ಲಿ ಜನಿಸಿದ ಖಾಂಡೇಕರ್ ಐಐಟಿ ಕಾನ್ಪುರದಲ್ಲಿ ಬಿ.ಟೆಕ್ ಓದಿದ್ದು, ಪಿಎಚ್ಡಿಗಾಗಿ ಜರ್ಮನಿಗೆ ತೆರಳಿದ್ದರು. 2004 ರಲ್ಲಿ, ಅವರು ಐಐಟಿ ಕಾನ್ಪುರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದರು, ನಂತರ ಅವರು ಸಹ ಪ್ರಾಧ್ಯಾಪಕರಾದರು.
eesanje/url_47_209_4.txt ADDED
@@ -0,0 +1,13 @@
 
 
 
 
 
 
 
 
 
 
 
 
 
 
1
+ ಮತ್ತೊಂದು ವಿವಾದದಲ್ಲಿ ದಯಾನಿಧಿ ಮಾರನ್
2
+ ಚೆನ್ನೈ, ಡಿ.24- ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ಇನ್ನು ಹಸಿಯಾಗಿರುವಾಗಲೇ ಇದೀಗ ಡಿಎಂಕೆ ಸಂಸದ ದಯಾನಿಧಿ ಮಾರನ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
3
+ ಇಂಗ್ಲಿಷ್ ಕಲಿತವರು ಐಟಿಗಳಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಉತ್ತಮ ಸಂಬಳವೂ ಇರುತ್ತದೆ. ಹಿಂದಿ ಮಾತ್ರ ತಿಳಿದಿದೆ ಎಂದು ಹೇಳುವವರು, ಇಂದು ನಮ್ಮಲ್ಲಿ(ತಮಿಳುನಾಡಿಗೆ) ಬಂದು ತಮಿಳು ಕಲಿತು ನಿರ್ಮಾಣ ಕೆಲಸ ಅಥವಾ ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜದ್ ಪೂನವಾಲಾ ಹಂಚಿಕೊಂಡಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ.
4
+ ಡಎಂಕೆ ಸಂಸದ ದಯಾನಿಧಿ ಮಾರನ್ ಕಾರ್ಯಕ್ರಮವೊಂದರಲ್ಲಿ ಇಂಗ್ಲಿಷ್ ಹಿಂದಿ ಕಲಿಕೆಯ ಬಗ್ಗೆ ಮಾತನಾಡಿರುವುದು ವೈರಲ್ ಆಗಿದ್ದು,ಬಿಜೆಪಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಉತ್ತರ ಭಾರತದ ಜನರನ್ನು ಜಾತಿ, ಭಾಷೆ ಮತ್ತು ಧರ್ಮದ ಮೂಲಕ ವಿಭಜಿಸಲು ಪ್ರಯತ್ನಿಸುತ್ತಿರುವ ಇಂಡಿಯಾ ಒಕ್ಕೂಟ ಮತ್ತು ಡಿಎಂಕೆ ಸಂಸದರ ವಿರುದ್ಧ ಮೈತ್ರಿಕೂಟ ನಿಷ್ಕ್ರಿಯತೆಯನ್ನು ವಹಿಸಿರುವುದು ಕಟುವಾಗಿದೆ. ಇದು ಮತ್ತೊಮ್ಮೆ ಒಡೆದಾಳುವ ಪ್ರಯತ್ನ ಎಂದು ಪೂನವಾಲಾ ಟ್ವಿಟರ್‍ನಲ್ಲಿ ಬರೆದುಕೊಂಡದ್ದಾರೆ.
5
+ ನಿತೀಶ್ ಕುಮಾರ್, ತೇಜಸ್ವಿ ಯಾದವ್, ಲಾಲು ಯಾದವ್, ಕಾಂಗ್ರೆಸ್, ಎಸ್ಪಿ ಅಖಿಲೇಶ್ ಯಾದವ್ ಈ ಬಗ್ಗೆ ಯಾಕೆ ಮೌನವಾಗಿದ್ದಾರೆ. ನೀವು ಯಾವಾಗ ನಿಲುವು ತೆಗೆದುಕೊಳ್ಳುತ್ತೀರಿ? ಎಂದು ದಯಾನಿಧಿ ಮಾರನ್ ಅವರ ಹೇಳಿಕೆಗೆ ಉತ್ತರ ಪ್ರದೇಶ ಮತ್ತು ಬಿಹಾರದ ಇಂಡಿಯಾ ಬಣದ ನಾಯಕರಲ್ಲಿ ಪೂನವಾಲಾ ಪ್ರಶ್ನೆ ಮಾಡಿದ್ದಾರೆ. ನಿತೀಶ್ ಕುಮಾರ್, ತೇಜಸ್ವಿ ಯಾದವ್, ಲಾಲು ಯಾದವ್, ಕಾಂಗ್ರೆಸ್, ಎಸ್‍ಪಿ ಅಖಿಲೇಶ್ ಯಾದವ್ ಎಲ್ಲರೂ ಇದು ಆಗುತ್ತಿಲ್ಲ ಎಂದು ನಟಿಸುತ್ತಾರೆಯೇ? ಅವರು ಯಾವಾಗ ನಿಲುವು ತೆಗೆದುಕೊಳ್ಳುತ್ತಾರೆ? ಎಂದು ಪೂನಾವಾಲಾ ಪ್ರಶ್ನಿಸಿದ್ದಾರೆ.
6
+ ಗುಂಡಿಕ್ಕಿ ನಿವೃತ್ತ ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ ಉಗ್ರರು
7
+ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹಿಂದಿ ಹೃದಯ ರಾಜ್ಯಗಳ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಡಿಎಂಕೆ ಮತ್ತೊಬ್ಬ ಸಂಸದ ಡಿಎನ್‍ವಿ ಸೆಂಥಿಲ್‍ಕುಮಾರ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶೆಹಜಾದ್ ಪೂನವಾಲಾ ಹೇಳಿದ್ದಾರೆ.
8
+ ಇತ್ತೀಚೆಗೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‍ಗಢದಲ್ಲಿ ಬಿಜೆಪಿ ಗೆಲುವು ಸಾಸಿದ ನಂತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ಸೆಂಥಿಲ್‍ಕುಮಾರ್ ಹೇಳಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂ��ಿ ವಾದ್ರಾ ವಿರುದ್ಧವೂ ಪೂನಾವಾಲಾ ಅವರು ಹಳೆಯ ಘಟನೆಗಳ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
9
+ 2021 ರಲ್ಲಿ, ಆ ವರ್ಷದ ಕೇರಳ ವಿಧಾನಸಭೆ ಚುನಾವಣೆಗೆ ಮುನ್ನ, ವಯನಾಡ್ ಲೋಕಸಭಾ ಸಂಸದ ರಾಹುಲ್ ಗಾಂಧಿ ಅವರು ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಉತ್ತರ ಪ್ರದೇಶದ ಅಮೇಥಿಯನ್ನು ಪ್ರತಿನಿಧಿಸುವಾಗ ಅವರು ವಿಭಿನ್ನ ರೀತಿಯ ರಾಜಕೀಯ ಕ್ಕೆ ಒಗ್ಗಿಕೊಂಡಿದ್ದರು ಎಂದು ಹೇಳಿದರು.
10
+ 2022 ರಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ಪಂಜಾಬಿನ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸಮರ್ಥಿಸಿಕೊಂಡರು, ಅವರು ಪಂಜಾಬಿಗಳು ಒಂದಾಗಬೇಕು ಮತ್ತು ಯುಪಿ, ಬಿಹಾರ ಮತ್ತು ದೆಹಲಿಯಿಂದ ಭಾಯಿ ರಾಜ್ಯವನ್ನು ಆಳಲು ಬಿಡಬಾರದು ಎಂದು ಹೇಳಿದರು.
11
+ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಟೀಕೆಗಳನ್ನೂ ಪೂನಾವಾಲಾ ಪ್ರಸ್ತಾಪಿಸಿದರು. ಕೆಲ ದಿನಗಳ ಹಿಂದೆ ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾ ಕ್ಕೆ ಹೋಲಿಸಿದ ನಂತರ ಕಿಡಿ ಕಾರಿದರು ಮತ್ತು ಅದನ್ನು ವಿರೋಧಿಸಬಾರದು, ಆದರೆ ನಿರ್ಮೂಲನೆ ಎಂದು ಹೇಳಿದ್ದರು.
12
+ ಉದ್ಯಮಿಗಳೊಂದಿಗೆ ಸಿಎಂ ಸಭೆ
13
+ ಇದಲ್ಲದೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ ನಂತರ, ಅವರ ಹಳೆಯ ವೀಡಿಯೊ ಪುನರಾವರ್ತನೆಯಾಯಿತು, ಅದರಲ್ಲಿ ಅವರು ತಮ್ಮ ಎದುರಾಳಿ ಮತ್ತು ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಅವರ ಡಿಎನ್‍ಎ ಬಿಹಾರದಿಂದ ಬಂದಿದೆ ಎಂದು ಆರೋಪಿಸಿದ್ದರು. ಇವೆಲ್ಲವನ್ನೂ ಪಟ್ಟಿ ಮಾಡಿರುವ ಶೆಹಜಾದ್ ಪೂನವಾಲಾ,ಇಂಡಿಯಾ ಮೈತ್ರಿಕೂಟ ಬಣದ ಅಜೆಂಡಾ ಸನಾತನ ಧರ್ಮವನ್ನು ಒಡೆದು ಆಳುವುದು ಮತ್ತು ಅವಮಾನಿಸುವುದು ಮತ್ತು ದೇಶದ ಜನರನ್ನು ವಿಭಜಿಸುವುದು ಎಂದು ವಾಗ್ದಳಿ ನಡೆಸಿದ್ದಾರೆ.
eesanje/url_47_209_5.txt ADDED
@@ -0,0 +1,4 @@
 
 
 
 
 
1
+ ಗುಂಡಿಕ್ಕಿ ನಿವೃತ್ತ ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ ಉಗ್ರರು
2
+ ಶ್ರೀನಗರ, ಡಿ.24 – ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇಂದು ಮುಂಜಾನೆ ಗಂಟ್ಮುಲ್ಲಾ, ಶೀರಿ ಬಾರಾಮುಲ್ಲಾದ ಮಸೀದಿಯೊಳಗೆ ಮೊಹಮ್ಮದ್ ಶಾಫಿ ಪ್ರಾರ್ಥನೆ ಮಾಡುವಾಗ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3
+ ಅತಿಯಾದ ತುಷ್ಟೀಕರಣಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಚ್ಚರ : ಜೋಶಿ
4
+ ಅವರನ್ನು ಆಸ್ಪತ್ರೆಗೆ ಸೇರಿಸಲು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಭದ್ರತಾ ಪಡೆ ಸ್ಥಳವನ್ನು ಸುತ್ತುವರಿದಿದ್ದು ,ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
eesanje/url_47_209_6.txt ADDED
@@ -0,0 +1,5 @@
 
 
 
 
 
 
1
+ ಮುಂಬೈ ವಿವಿಯಲ್ಲಿ ದೇವಸ್ಥಾನ ನಿರ್ವಹಣೆ ಕೋರ್ಸ್ ಆರಂಭ
2
+ ಮುಂಬೈ, ಡಿ 23 (ಪಿಟಿಐ) ದೇವಸ್ಥಾನದ ನಿರ್ವಹಣೆಯ ಕುರಿತು ಕೋರ್ಸ್ ನೀಡಲು ಆಕ್ಸ್‍ಫರ್ಡ್ ಸೆಂಟರ್ ಫಾರ್ ಹಿಂದೂ ಸ್ಟಡೀಸ್‍ನೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿರುವುದಾಗಿ ಮುಂಬೈ ವಿಶ್ವವಿದ್ಯಾಲಯ ತಿಳಿಸಿದೆ. ಈ ಸಹಯೋಗದ ಅಡಿಯಲ್ಲಿ ಆಫ್‍ಲೈನ್ ಮತ್ತು ಆನ್‍ಲೈನ್ ಮೋಡ್‍ನಲ್ಲಿ ನೀಡಲಾಗುವ ವಿವಿಧ ಡಿಫ್ಲೋಮಾ ಮತ್ತು ಪ್ರಮಾಣಪತ್ರ ಮಟ್ಟದ ಕೋರ್ಸ್‍ಗಳಲ್ಲಿ ಇದು ಒಂದಾಗಿರುತ್ತದೆ.
3
+ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಹಿಂದೂ ಸ್ಟಡೀಸ್ ಮತ್ತು ಅದರ ಸಂಸ್ಕøತ ವಿಭಾಗವು ಆಕ್ಸ್‍ಫರ್ಡ್ ಸೆಂಟರ್ ಫಾರ್ ಹಿಂದೂ ಸ್ಟಡೀಸ್‍ನೊಂದಿಗೆ ಎಂಒಯುಗೆ ಸಹಿ ಹಾಕಿದೆ ಎಂದು ವಿಶ್ವವಿದ್ಯಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
4
+ ಮೋದಿ ವಿರುದ್ಧ ಸ್ಪರ್ಧಿಸುವಂತೆ ದೀದಿಗೆ ಬಿಜೆಪಿ ಮುಖಂಡ ಚಾಲೆಂಜ್
5
+ ಪದವಿ ಮತ್ತು ಸರ್ಟಿಫಿಕೇಟ್ ಕೋರ್ಸ್‍ಗಳೊಂದಿಗೆ ಹಿಂದೂ ತತ್ವಶಾಸ್ತ್ರದ ಸಮಗ್ರ ಅಧ್ಯಯನದ ಮೇಲೆ ಕೋರ್ಸ್ ಕೇಂದ್ರೀಕರಿಸುತ್ತದೆ.
eesanje/url_47_209_7.txt ADDED
@@ -0,0 +1,6 @@
 
 
 
 
 
 
 
1
+ 60 ಸಿಮ್‍ಕಾರ್ಡ್‍ಗಳೊಂದಿಗೆ ಸಿಕ್ಕಿಬಿದ್ದ ತೈವಾನ್ ಪ್ರಜೆ ವಿಚಾರಣೆ
2
+ ನವದೆಹಲಿ,ಡಿ.23- ಅರವತ್ತಕ್ಕೂ ಹೆಚ್ಚು ಮೊಬೈಲ್ ಸಿಮ್ ಕಾರ್ಡ್‍ಗಳೊಂದಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಎಸ್‍ಎಫ್ ಸಿಬ್ಬಂದಿಯಿಂದ ಸೆರೆ ಸಿಕ್ಕ ತೈವಾನ್ ಪ್ರಜೆಯ ಪಾತ್ರದ ಕುರಿತು ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಲೈ ಜಿನ್ ಪಿಂಗ್ ಅವರು ಡಿ.18 ರಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ಬ್ಯಾಂಕಾಕ್‍ಗೆ ಥಾಯ್ ಏರ್‍ವೇಸ್ ವಿಮಾನವನ್ನು ಹತ್ತುವ ಮೊದಲು ಕೇಂದ್ರ ಭದ್ರತಾ ಪಡೆಗಳಿಂದ ಬಂಧಿಸಲಾಯಿತು.
3
+ ಭೌತಿಕ ತಪಾಸಣೆಯ ಸಮಯದಲ್ಲಿ, ಸಕ್ರಿಯ ಸ್ಥಿತಿಯಲ್ಲಿದ್ದ ವ್ಯಕ್ತಿಯ ಲಗೇಜ್‍ನಲ್ಲಿ 67 ಭಾರತೀಯ ಸಿಮ್ ಕಾರ್ಡ್‍ಗಳು ಪತ್ತೆಯಾಗಿವೆ ಮತ್ತು ವಿವಿಧ ಭಾರತೀಯ ವ್ಯಕ್ತಿಗಳ ಹೆಸರಿನಲ್ಲಿವೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ವಕ್ತಾರರು ತಿಳಿಸಿದ್ದಾರೆ.
4
+ ಹಮಾಸ್-ಇಸ್ರೇಲ್ ಯುದ್ಧದಲ್ಲಿ ಈವರೆಗೆ 20 ಸಾವಿರ ಪ್ಯಾಲೆಸ್ಟೀನಿಯರು ಬಲಿ
5
+ ಅವರು ಈ ಸಿಮ್ (ಚಂದಾದಾರರ ಗುರುತಿನ ಮಾಡ್ಯೂಲ) ಕಾರ್ಡ್‍ಗಳನ್ನು ಏಕೆ ಸಾಗಿಸುತ್ತಿದ್ದಾರೆ ಎಂಬುದಕ್ಕೆ ತೃಪ್ತಿಕರವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಫೋರ್ಸ್ ನಂತರ ಗುಪ್ತಚರ ಬ್ಯೂರೋ ಮತ್ತು ವಲಸೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ವಿದೇಶಿಯನನ್ನು ಪ್ರಶ್ನಿಸಿದ್ದಾರೆ ಎಂದು ಅವರು ಹೇಳಿದರು.
6
+ ದೆಹಲಿ ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
eesanje/url_47_209_8.txt ADDED
@@ -0,0 +1,8 @@
 
 
 
 
 
 
 
 
 
1
+ ನಾರಿಶಕ್ತಿ, ಯುವಶಕ್ತಿ, ಕಿಸಾನ್ ಔರ್ ಗರೀಬ್ ಎಂಬ ಜಾತಿ ಪರ ಕೆಲಸ ಮಾಡಿ : ಮೋದಿ
2
+ ನವದೆಹಲಿ,ಡಿ.23- ದೇಶದ ಯುವಕರು, ಬಡವರು , ರೈತರು ಹಾಗೂ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚಿಂತನ ಮಂಥಕ್ಕಾಗಿ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವಕರು, ಬಡವರು, ಮಹಿಳೆಯರು ಮತ್ತು ರೈತರು ಎಂಬ ನಾಲ್ಕು ಜಾತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
3
+ ಡಿ.3 ರಂದು ಮಧ್ಯಪ್ರದೇಶ, ಛತ್ತೀಸ್‍ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಪ್ರಧಾನಿ ಮೋದಿ ಅವರು, ಈ ಚುನಾವಣೆಯಲ್ಲಿ ದೇಶವನ್ನು ಜಾತಿಗಳ ಆಧಾರದ ಮೇಲೆ ವಿಭಜಿಸುವ ಪ್ರಯತ್ನಗಳು ನಡೆದಿವೆ, ನನಗೆ ನಾಲ್ಕು ಜಾತಿಗಳು ಮಾತ್ರ ಗೊತ್ತು ಅವುಗಳೆಂದರೆ ನಾರಿ ಶಕ್ತಿ, ಯುವ ಶಕ್ತಿ, ಕಿಸಾನ್ ಔರ್ ಗರೀಬ್ ಪರಿವಾರ ಎಂದಿದ್ದಾರೆ.
4
+ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಎಲ್ಲಾ ಅಧಿಕಾರಿಗಳಿಗೆ ಮಿಷನ್ ಮೋಡ್‍ನಲ್ಲಿ ಕೆಲಸ ಮಾಡಲು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಕೇಂದ್ರ ಸರ್ಕಾರದ ಬಡವರ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಹೆಚ್ಚಿನ ಡೇಟಾವನ್ನು ಹಂಚಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಯಿತು. ವಿರೋಧ ಪಕ್ಷಗಳ ಋಣಾತ್ಮಕ ಪ್ರಚಾರದ ಸತ್ಯಗಳ ಪ್ರಕಾರ ಸಕಾರಾತ್ಮಕ ಉತ್ತರಗಳನ್ನು ನೀಡಿ ಎಂದು ಅವರು ಸೂಚಿಸಿದರು.
5
+ ಹಮಾಸ್-ಇಸ್ರೇಲ್ ಯುದ್ಧದಲ್ಲಿ ಈವರೆಗೆ 20 ಸಾವಿರ ಪ್ಯಾಲೆಸ್ಟೀನಿಯರು ಬಲಿ
6
+ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸಭೆಯಲ್ಲಿ ಮೊದಲ ವಿಷಯ ಮಂಡಿಸಿದರು: ಲೋಕಸಭೆ ಚುನಾವಣೆಯಲ್ಲಿ ಶೇ.10ರಷ್ಟು ಮತಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಈ ಕುರಿತು ಮಾತನಾಡಿದ ಪ್ರಧಾನಿ, ನಮ್ಮ ಯೋಜನೆಗಳು ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಸರಿಯಾದ ರೀತಿಯಲ್ಲಿ ತಲುಪಿದರೆ ಅದು ನಮಗೆ ಸಹಾಯವಾಗುತ್ತದೆ ಎಂದರು.
7
+ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯನ್ನು ಆಯೋಜಿಸುತ್ತಿರುವ ರಾಜ್ಯಗಳತ್ತ ಗಮನ ಹರಿಸಬೇಕು. ಯುಪಿಎ ಸರ್ಕಾರ ಮತ್ತು ಎನ್‍ಡಿಎ ಸರ್ಕಾರದ ನಡುವಿನ ವ್ಯತ್ಯಾಸವನ್ನು ಜನರಿಗೆ ಅರ್ಥಮಾಡಿಕೊಳ್ಳಲು ವಿಶೇಷ ಅಭಿಯಾನವನ್ನು ನಡೆಸಬೇಕು.ಬಿಜೆಪಿ ಪರ ಮತಗಳನ್ನು ಹೆಚ್ಚಿಸಲು ಬೂತ್ ನಿರ್ವಹಣೆಯತ್ತ ಗಮನ ಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
8
+ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಬೂತ್ ನಿರ್ವಹಣೆಯ ಉದಾಹರಣೆಯನ್ನು ಪ್ರಧಾನಿ ನೀಡಿದರು. ಪಕ್ಷದ ಪದಾಕಾರಿಗಳು ಬೂತ್ ನಿರ್ವಹಣೆಯನ್ನು ಸವಾಲಾಗಿ ತೆಗೆದುಕೊಳ್ಳಬೇಕು. ಸಂಘಟನಾ ಶಕ್ತಿಯಿಂದ ಮಾತ್ರ ಗೆಲುವು ಸಾಸಲಾಗುತ್ತದೆ; ಆದ್ದರಿಂದ, ಸಂಪೂರ್ಣವಾಗಿ ಸಿದ್ಧಪಡಿಸಿದ ನಂತರ ಜನರ ಬಳಿಗೆ ಹೋಗಿ ಎಂದು ಅವರು ತಿಳಿ ಹೇಳಿದರು.
eesanje/url_47_209_9.txt ADDED
@@ -0,0 +1,8 @@
 
 
 
 
 
 
 
 
 
1
+ ಗಲ್ಫ್ ರಾಷ್ಟ್ರಗಳಿಂದ ಸಾವಿರಾರು ಕೋಟಿ ರೂ. ಸಂಗ್ರಹಿಸಿದೆಯಂತೆ ಪಿಎಫ್‍ಐ
2
+ ನವದೆಹಲಿ,ಡಿ.23- ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ತನ್ನ ಸಾವಿರಾರು ಸಕ್ರಿಯ ಸದಸ್ಯರ ಮೂಲಕ ಗಲ್ಫ್ ರಾಷ್ಟ್ರಗಳು ಮತ್ತು ಇತರೆಡೆ ಸುಸಂಘಟಿತ ಮತ್ತು ರಚನಾತ್ಮಕ ರೀತಿಯಲ್ಲಿ ಸಾಕಷ್ಟು ಹಣವನ್ನು ಸಂಗ್ರಹಿಸಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. ಭಯೋತ್ಪಾದಕ ಚಟುವಟಿಕೆಗಳು ಮತ್ತು ಐಸಿಸ್‍ನಂತಹ ಗುಂಪುಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿ ಪಿಎಫ್‍ಐ ಅನ್ನು ಕೇಂದ್ರವು ನಿಷೇಧಿಸಿದೆ.
3
+ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲಿನಿಂದ ಐವರು ಪಿಎಫ್‍ಐ ಸದಸ್ಯರನ್ನು ಇಡಿ ಬಂಧಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ನಡೆಸುತ್ತಿರುವ ಮತ್ತೊಂದು ಭಯೋತ್ಪಾದನೆ ಪ್ರಕರಣದಲ್ಲಿ ಐವರು ಜೈಲು ಸೇರಿದ್ದಾರೆ.
4
+ ಐವರು ಆರೋಪಿಗಳಾದ ಎಎಸ್ ಇಸ್ಮಾಯಿಲ, ಮೊಹಮ್ಮದ್ ಶಕೀಫ್, ಅನಿಸ್ ಅಹ್ಮದ್, ಅಫ್ಸರ್ ಪಾಶಾ ಮತ್ತು ಇಎಂ ಅಬ್ದುಲ್ ರಹಿಮಾನ್ ಅವರುಗಳು ದಾನಿಗಳಿಂದ ಹಣವನ್ನು ಸಂಗ್ರಹಿಸಿದ್ದಾರೆ, ಹವಾಲಾ ಮತ್ತು ಬ್ಯಾಂಕಿಂಗ್ ಚಾನೆಲ್‍ಗಳಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಡಿ ಹೇಳಿದೆ. ಇಡಿ ಬಹಿರಂಗಪಡಿಸುವಿಕೆಯಲ್ಲಿ ಪಿಎಫ್‍ಐನಲ್ಲಿ ಐದು ಆರೋಪಿಗಳ ಪಾತ್ರಗಳ ವಿವರವಾದ ಖಾತೆಯನ್ನು ನೀಡಿದೆ.
5
+ ಇಎಮ್ ಅಬ್ದುಲ್ ರಹಿಮಾನ್:ಈತ ಮೊದಲಿನಿಂದಲೂ ಪಿಎಫ್‍ಐನಲ್ಲಿದ್ದಾರೆ ಮತ್ತು ಕಳೆದ ಹಲವಾರು ವರ್ಷಗಳಿಂದ ಪಿಎಫ್‍ಐನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಪಿಎಫ್‍ಐ ತೆಗೆದುಕೊಳ್ಳುವ ಪ್ರತಿಯೊಂದು ಪ್ರಮುಖ ಕ್ರಮ ಮತ್ತು ನಿರ್ಧಾರಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಬ್ದುಲ್ ರಹಿಮಾನ್ 1979 ರಿಂದ 1984 ರವರೆಗೆ ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾದೊಂದಿಗೆ ಸಹ ಸಂಬಂಧ ಹೊಂದಿದ್ದರು. ಸಿಮಿಯನ್ನು ನಿಷೇಸಿದ ನಂತರ, ಅವರು ಪಿಎಫ್‍ಐ ಸೇರಿದರು.
6
+ ಹಮಾಸ್-ಇಸ್ರೇಲ್ ಯುದ್ಧದಲ್ಲಿ ಈವರೆಗೆ 20 ಸಾವಿರ ಪ್ಯಾಲೆಸ್ಟೀನಿಯರು ಬಲಿ
7
+ ಅನಿಸ್ ಅಹ್ಮದ್:ಪಿಎಫ್‍ಐನ ಹಣಕಾಸು ನಿರ್ವಹಣೆಯಲ್ಲಿ ಅನೀಸ್ ಅಹ್ಮದ್ ಪ್ರಮುಖ ಪಾತ್ರ ವಹಿಸಿದ್ದು, ಗುಂಪಿನ ಹಣ ಸಂಗ್ರಹಿಸುವುದು ಅವರ ಮುಖ್ಯ ಕಾರ್ಯವಾಗಿತ್ತು. ಪಿಎಫ್‍ಐ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದರು. ಪಿಎಫ್‍ಐ ಪ್ರತಿ ಜಿಲ್ಲೆಯಿಂದ ಸಂಗ್ರಹಿಸಿದ ಹಣವನ್ನು ಅದರ ರಾಷ್ಟ್ರೀಯ ಸಮಿತಿಯ ಖಾತೆಗೆ ಜಮಾ ಮಾಡುತ್ತದೆ. ಹಣವನ್ನು ಹೆಚ್ಚಾಗಿ ದೆಹಲಿ ಮತ್ತು ಉತ್ತರ ಪ್ರದೇಶದಿಂದ ಸಂಗ್ರಹಿಸಲಾಗಿದೆ.
8
+ ಅಫ್ಸರ್ ಪಾಶಾ:ಅವರು ಪಿಎಫ್‍ಐನಲ್ಲಿ ರಾಷ್ಟ್ರಮಟ್ಟದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪಿಎಫ್‍ಐನ ವಲಯ ಮುಖ್ಯಸ್ಥರಾಗಿದ್ದರು. ಪಿಎಫ್‍ಐನ ಪ್ರತಿಯೊಂದು ಹಣಕಾಸಿನ ವಿಷಯದಲ್ಲಿ ಅವ��� ಅಭಿಪ್ರಾಯವು ಮುಖ್ಯವಾಗಿತ್ತು. 2009ರಿಂದ 2010ರವರೆಗೆ ಪಿಎಫ್‍ಐ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು 2009 ರಲ್ಲಿ ಮೈಸೂರು ಕೋಮುಗಲಭೆಯಲ್ಲಿ ಪಾತ್ರ ವಹಿಸಿದ್ದಾರೆಂದು ಆರೋಪಿಸಲಾಗಿದೆ. ಅವರು ಬೆಂಗಳೂರಿನ ಫ್ರೇಜರ್ ಟೌನ್‍ನಲ್ಲಿರುವ ಕಾಪೆರ್ರೇಷನ್ ಬ್ಯಾಂಕ್‍ನಲ್ಲಿ ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪಿಎಫ್‍ಐ ಖಾತೆಯಲ್ಲಿ ಸಹಿ ಹಾಕುವ ಅಧಿಕಾರಿಯಾಗಿದ್ದರು.
eesanje/url_47_20_1.txt ADDED
@@ -0,0 +1,7 @@
 
 
 
 
 
 
 
 
1
+ ಲೈಂಗಿಕ ಕಿರುಕುಳ ಆರೋಪ ನಿರಾಕರಿಸಿದ ಮಲಯಾಳಂ ನಟ ಜಯಸೂರ್ಯ
2
+
3
+ ನವದೆಹಲಿ,ಸೆ.1-ತಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ನಿರಾಕರಿಸಿರುವ ಮಲಯಾಳಂ ನಟ ಜಯಸೂರ್ಯ ಅವರು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
4
+ ಹಿರಿಯ ನಟ ಸಿದ್ದಿಕ್‌ ಮತ್ತು ಚಿತ್ರನಿರ್ಮಾಪಕ ರಂಜಿತ್‌ ಬಾಲಕಷ್ಣನ್‌ ಸೇರಿದಂತೆ ಮಾಲಿವುಡ್‌ನ ಕೆಲವು ದೊಡ್ಡ ಹೆಸರುಗಳ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.ಇಬ್ಬರು ನಟಿಯರು ಜಯಸೂರ್ಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ, ಇವೆರಡೂ ಸುಳ್ಳು ಎಂದು ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
5
+ ನಾನು ಈ ಆರೋಪದ ವಿರುದ್ಧ ಕಾನೂನುಬದ್ಧವಾಗಿ ಹೋರಾಟ ನಡೆಸಲು ನಿರ್ಧರಿಸಿದ್ದೇನೆ. ಈ ಪ್ರಕರಣದ ಉಳಿದ ಪ್ರಕ್ರಿಯೆಗಳನ್ನು ನನ್ನ ಕಾನೂನು ತಂಡವು ನೋಡಿಕೊಳ್ಳುತ್ತದೆ. ಆತಸಾಕ್ಷಿಯ ಕೊರತೆಯಿರುವ ಯಾರಿಗಾದರೂ ಸುಳ್ಳು ಆರೋಪಗಳನ್ನು ಮಾಡುವುದು ಸುಲಭ. ಸುಳ್ಳು ಆರೋಪವನ್ನು ಎದುರಿಸುತ್ತಿರುವವರು ಅರಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
6
+ ಕಿರುಕುಳವು ಕಿರುಕುಳದಂತೆಯೇ ನೋವಿನಿಂದ ಕೂಡಿದೆ ಎಂದು ಜಯಸೂರ್ಯ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ಸುಳ್ಳು ಯಾವಾಗಲೂ ಸತ್ಯಕ್ಕಿಂತ ವೇಗವಾಗಿ ಚಲಿಸುತ್ತದೆ ಆದರೆ ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬುತ್ತೇನೆ.
7
+ ನಾನು ನಿರಪರಾಧಿ ಎಂದು ಸಾಬೀತುಪಡಿಸುವ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಂದುವರಿಯುತ್ತದೆ. ನಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಜನದಿನವನ್ನು ಅತ್ಯಂತ ನೋವಿನಿಂದ ಮಾಡಲು ಸಹಕರಿಸಿದವರಿಗೆ ಧನ್ಯವಾದಗಳು ಎಂದು ಅವರು ಹೇಳಿಕೊಂಡಿದ್ದಾರೆ.
eesanje/url_47_20_10.txt ADDED
@@ -0,0 +1,7 @@
 
 
 
 
 
 
 
 
1
+ 1962ರ ಇಂಡೋ-ಚೀನಾ ಯುದ್ಧ ಕಾಲದ ಸ್ಮೋಕ್ ಬಾಂಬ್‌ ಪತ್ತೆ
2
+ 1962 - , :
3
+ ತೇಜ್‌ಪುರ,ಸೆ.1-ಕಳೆದ 1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ಸೋಕ್‌ ಬಾಂಬ್‌ ಅನ್ನು ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನದಿ ಪಾತ್ರದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4
+ ಧೆಕಿಯಾಜುಲಿ ಪ್ರದೇಶದಲ್ಲಿ ಪತ್ತೆಯಾದ ಬಾಂಬ್‌ ಅನ್ನು ಸೇನಾ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ ಎಂದು ಅವರು ಹೇಳಿದರು.ಸೇಸಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಜೌಗಾಪುರ ಗ್ರಾಮದ ವ್ಯಕ್ತಿಯೊಬ್ಬರು ಎರಡು ಇಂಚು ಉದ್ದದ ಸ್ಫೋಟಕವನ್ನು ಪತ್ತೆ ಮಾಡಿದ್ದಾರೆ ಎಂದು ಸೋನಿತ್‌ಪುರ ಪೊಲೀಸ್‌‍ ವರಿಷ್ಠಾಧಿಕಾರಿ ಬರುನ್‌ ಪುರ್ಕಾಯಸ್ಥ ತಿಳಿಸಿದ್ದಾರೆ.
5
+ ಈ ಪ್ರದೇಶವು ಮಿಸ್ಸಮಾರಿ ಪೊಲೀಸ್‌‍ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಬಾಂಬ್‌ ಹೆಚ್ಚಾಗಿ ಚೀನಾ ನಿರ್ಮಿತವಾಗಿದೆ ಮತ್ತು 1962 ರ ಯುದ್ಧದಿಂದ ಬಂದಿದೆ ಎಂದು ಅವರು ಹೇಳಿದರು.
6
+ ಮಾರ್ಟರ್‌ ಸೋಕ್‌ ಬಾಂಬ್‌ ಎನ್ನುವುದು ಶತ್ರುಗಳ ಬೆಂಕಿಯಿಂದ ತಪ್ಪಿಸಿಕೊಳ್ಳಲು ಅಥವಾ ಶತ್ರುಗಳ ವಿಚಕ್ಷಣ ಮತ್ತು ಕಣ್ಗಾವಲು ತಡೆಯಲು ಹೊಗೆ ಪರದೆಯನ್ನು ರಚಿಸುವಂತಹ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುವ ಒಂದು ರೀತಿಯ ಮದ್ದುಗುಂಡು.
7
+ ಲೆಫ್ಟಿನೆಂಟ್‌ ಕರ್ನಲ್‌ ಅಭಿಜಿತ್‌ ಮಿಶ್ರಾ ನೇತತ್ವದ ಮಿಸ್ಸಮರಿ ಶಿಬಿರದ ಸೇನಾ ತಂಡದ ಸಹಾಯದಿಂದ ಇದನ್ನು ಸುರಕ್ಷಿತವಾಗಿ ಸ್ಫೋಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
eesanje/url_47_20_11.txt ADDED
@@ -0,0 +1,8 @@
 
 
 
 
 
 
 
 
 
1
+ ವಿಶ್ವದ ಪ್ರಮುಖ ಡಿಜಿಟಲ್‌ ಪಾವತಿಗಳನ್ನು ಹಿಂದಿಕ್ಕಿದ ಯುಪಿಐ
2
+ ,
3
+ ನವದೆಹಲಿ,ಆ.31-ವಿಶ್ವದ ಪ್ರಮುಖ ಡಿಜಿಟಲ್‌ ಪಾವತಿ ಪ್ಲಾಟ್‌ಫಾರ್ಮ್‌ಗಳನ್ನು ಭಾರತದ ಏಕೀಕತ ಪಾವತಿಗಳ ಇಂಟರ್ಫೇಸ್‌‍ (ಯುಪಿಐ) ಹಿಂದಿಕ್ಕಿದೆ. ಈ ವರ್ಷದ ಏಪ್ರಿಲ್‌‍-ಜುಲೈ ಅವಧಿಯಲ್ಲಿ ಸುಮಾರು 81 ಲಕ್ಷ ಕೋಟಿ ವಹಿವಾಟುಗಳನ್ನು ಯುಪಿಐ ಪ್ರಕ್ರಿಯೆಗೊಳಿಸಿದೆ, ಇದು ದಿಗ್ಭಮೆಗೊಳಿಸುವ ಏರಿಕೆಯಾಗಿದೆ.
4
+ ಜಾಗತಿಕ ಪಾವತಿ ಕೇಂದ್ರವಾದ ಪೇ ಸೆಕ್ಯೂರ್‌ನ ಇತ್ತೀಚಿನ ಮಾಹಿತಿಯ ಪ್ರಕಾರ, ಯುಪಿಐ ಪ್ರತಿ ಸೆಕೆಂಡಿಗೆ 3,729.1 ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ. 2022 ರಲ್ಲಿ ನೋಂದಾಯಿಸಲಾದ ಪ್ರತಿ ಸೆಕೆಂಡಿಗೆ 2,348 ವಹಿವಾಟುಗಳ ಮೇಲೆ 58 ಪ್ರತಿಶತ ಏರಿಕೆಯಾಗಿದೆ. ವಹಿವಾಟುಗಳ ಸಂಖ್ಯೆಯಲ್ಲಿ ಚೀನಾದ ಅಲಿಪೇ, ಪೇಪಾಲ್‌ ಮತ್ತು ಬ್ರೆಜಿಲ್‌ನ ಪಿಕ್‌್ಸ ಅನ್ನು ಮೀರಿಸಿದೆ.
5
+ ಜುಲೈನಲ್ಲಿ, ಯುಪಿಐ ವಹಿವಾಟುಗಳು 20.6 ಲಕ್ಷ ಕೋಟಿಯನ್ನು ದಾಟಿದೆ – ಇದು ಒಂದು ತಿಂಗಳ ಅವಧಿಯಲ್ಲಿ ಇದುವರೆಗಿನ ಅತಿ ಹೆಚ್ಚು. ಯುಪಿಐ ವಹಿವಾಟಿನ ಮೌಲ್ಯವು ಸತತ ಮೂರು ತಿಂಗಳವರೆಗೆ 20 ಲಕ್ಷ ಕೋಟಿಗಿಂತ ಹೆಚ್ಚಿತ್ತು.
6
+ ಈ ಡೇಟಾವನ್ನು ಬಹಿರಂಗಪಡಿಸಲು ಪ್ರಪಂಚದಾದ್ಯಂತದ 40 ಉನ್ನತ ಪರ್ಯಾಯ ಪಾವತಿ ವಿಧಾನಗಳನ್ನು ಪೇ ಸೆಕ್ಯೂರ್‌ ಪರಿಶೀಲಿಸಿದೆ.ಆವಿಷ್ಕಾರಗಳು ಭಾರತವು ಡಿಜಿಟಲ್‌ ವಹಿವಾಟುಗಳಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿದೆ ಎಂದು ತೋರಿಸಿದೆ, ಶೇಕಡಾ 40 ರಷ್ಟು ಪಾವತಿಗಳನ್ನು ಡಿಜಿಟಲ್‌ ಮೂಲಕ ಮಾಡಲಾಗುತ್ತದೆ ಮತ್ತು ಅವುಗಳಲ್ಲಿ ಹೆಚ್ಚಿನವುಗಳಿಗೆ ಯುಪಿಐ ಅನ್ನು ಬಳಸಲಾಗುತ್ತಿದೆ.
7
+ ನ್ಯಾಷನಲ್‌ ಪೇಮೆಂಟ್ಸ್ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಸಿಇಒ ದಿಲೀಪ್‌ ಅಸ್ಬೆ ಪ್ರಕಾರ, ಯುಪಿಐ ಮುಂದಿನ 10-15 ವರ್ಷಗಳಲ್ಲಿ ಕ್ರೆಡಿಟ್‌ ಬೆಳವಣಿಗೆಯ ಬೆಂಬಲದೊಂದಿಗೆ 100 ಶತಕೋಟಿ ವಹಿವಾಟುಗಳನ್ನು ಮುಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಯುಪಿಐನಲ್ಲಿ ಈಗಾಗಲೇ ಕ್ರೆಡಿಟ್‌ ಅನ್ನು ಪ್ರಾರಂಭಿಸಲಾಗಿದೆ ಮತ್ತು ಜಾಹೀರಾತುಗಳನ್ನು ಒಂದೆರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
8
+ ಅಧಿಕತ ಅಂಕಿಅಂಶಗಳ ಪ್ರಕಾರ ಜೂನ್‌ನಲ್ಲಿ ಯುಪಿಐನಲ್ಲಿ 13.89 ಶತಕೋಟಿ ವಹಿವಾಟುಗಳು ದಾಖಲಾಗಿವೆ, ಮೇ ತಿಂಗಳಲ್ಲಿ 14.04 ಶತಕೋಟಿಯಷ್ಟು ಹೆಚ್ಚಾಗಿದೆ. ಸಲಹಾ ಸಂಸ್ಥೆ ವರದಿಯ ಪ್ರಕಾರ, ಯುಪಿಐ ಮೇಲಿನ ವಹಿವಾಟುಗಳ ಸಂಖ್ಯೆಯು 2023-24 ರಲ್ಲಿ ಸುಮಾರು 131 ಶತಕೋಟಿಯಿಂದ 2028-29 ರ ವೇಳೆಗೆ 439 ಶತಕೋಟಿಗೆ 3 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಇದು ಒಟ್ಟು ಚಿಲ್ಲರೆ ಡಿಜಿಟಲ್‌ ವಹಿವಾಟಿನ 91 ಪ್ರತಿಶತವನ್ನು ಹೊಂದಿದೆ.
eesanje/url_47_20_12.txt ADDED
@@ -0,0 +1,8 @@
 
 
 
 
 
 
 
 
 
1
+ ತಮಿಳುನಾಡಿನಲ್ಲಿ ರಾಮನ ಬದಲಿಗೆ ಭಗವಾನ್‌ ಮುರುಗನ್‌ ಉತ್ಸವ
2
+
3
+ ಚೆನ್ನೈ, ಆ.31– ರಾಮನ ಉತ್ಸವ, ರ್ಯಾಲಿಗಳ ಬದಲಿಗೆ ತಮಿಳು ಸಂಸ್ಕೃತಿ, ಸಾಹಿತ್ಯ, ಆಧ್ಯಾತಿಕತೆಯನ್ನು ಎತ್ತಿ ಹಿಡಿಯಲು ತಮಿಳುನಾಡು ಸರ್ಕಾರ ಭಗವಾನ್‌ ಮುರುಗನ್‌ ಸಮೇಳನ ಹಮಿಕೊಂಡಿತ್ತು.
4
+ ಪಳನಿ ನಗರದಲ್ಲಿ ಆಯೋಜಿಸಿದ್ದ ಬೃಹತ್ ಸಮಾರಂಭವನ್ನು ಚೆನ್ನೈನಲ್ಲಿ ಇದ್ದುಕೊಂಡೆ ವಿಡಿಯೋ ಕಾನ್ಫೆರೆನ್‌್ಸ ಮೂಲಕ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಉದ್ಘಾಟಿಸಿ, ಮುರುಗನ್‌ ದೇವಾಲಯಗಳಲ್ಲಿ 789 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಗಳು ನಡೆಸಲಾಗುತ್ತದೆ ಎಂದು ಹೇಳಿದರು.
5
+ ಪಳನಿಯ ಮುರುಗನ್‌ ದೇವಾಲಯದಲ್ಲಿ ಆಯೋಜಿಸಿದ್ದ ಸಮೇಳನದಲ್ಲಿ ಆಧ್ಯಾತಿಕ ಗಣ್ಯರು, ವಿವಿಧ ದೇಶಗಳ ಧಾರ್ಮಿಕ ವಿದ್ವಾಂಸರು, ಸಚಿವ ಪಿ.ಕೆ ಸೇಕರಬಾಬು, ಗ್ರಾಮೀಣಾಭಿವೃದ್ಧಿ ಸಚಿವ ಐ.ಪೆರಿಯಸಾಮಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆರ್‌.ಸ್ಟಾಲಿನ್‌ ಇದ್ದರು.
6
+ ಸಂಶೋಧಕರು ತಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಪುರಾವೆಗಳನ್ನು ಪ್ರಸ್ತುತಪಡಿಸಿದರು. 2 ದಿನಗಳ ಜಾಗತಿಕ ಮುತಮಿಜ್‌ ಮುರುಗನ್‌ ಸಮೇಳನದಲ್ಲಿ ಸಾಕಷ್ಟು ಜನ ಪಾಲ್ಗೊಂಡಿದ್ದರು. ಸಮೇಳನದಲ್ಲಿ ತಮಿಳು ಸಂಸ್ಕೃತಿ, ಆಧ್ಯಾತ ಹಾಗೂ ಸಾಹಿತ್ಯದ ಕುರಿತು 1,300 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.
7
+ ಪಳನಿ ನಗರದ ದೇವಾಲಯದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾದ ಸಮೇಳನದ ಜಾಗವು 8 ಭವ್ಯ ಕಮಾನುಗಳನ್ನು ಒಳಗೊಂಡಿತ್ತು. ಭದ್ರತಾ ಸುರಕ್ಷತೆಗಾಗಿ 2,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಲ್ಲದೇ ಎಲ್ಲರಿಗೂ ಉಚಿತ ಪ್ರವೇಶವಿತ್ತು.
8
+ ಮಧುರೈ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸರ್ಕಾರ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿತ್ತು ಎಂದು ಹೇಳಲಾಗಿದೆ.ಎರಡು ದಿನಗಳ ಈ ಅದ್ಧೂರಿ ಸಮಾರಂಭದಲ್ಲಿ ಸಾವಿರಾರು ಜನರು ಪಾಲ್ಗೊಂಡು ಯಶಸ್ವಿಗೊಳಿಸಿದರು.
eesanje/url_47_20_2.txt ADDED
@@ -0,0 +1,6 @@
 
 
 
 
 
 
 
1
+ ತಮಿಳುನಾಡು : ಪಟಾಕಿ ಕಾರ್ಖಾನೆ ಸ್ಫೋಟಕ್ಕೆ ಇಬ್ಬರು ಬಲಿ
2
+ 2, 4
3
+ ಚೆನ್ನೈ,ಸೆ.1-ತಮಿಳುನಾಡಿನ ತೂತುಕುಡಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಇಬ್ಬರು ಬಲಿಯಾಗಿದ್ದಾರೆ.ಘಟನೆಯಲ್ಲಿ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4
+ ತೂತುಕುಡಿಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮುತ್ತುಕಣ್ಣನ್‌ (21) ಮತ್ತು ವಿಜಯ್‌ (25) ಎಂಬ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5
+ ಸೆಲ್ವಂ (21), ಪ್ರಶಾಂತ್‌ (20), ಸೆಂಧುರ್ಕನಿ (45), ಮುತ್ತುಮರಿ (41) ಗಂಭೀರವಾಗಿ ಗಾಯಗೊಂಡಿದ್ದು, ಸಾತಾಂಕುಳಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
6
+ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರು ತೂತುಕುಡಿಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಮುಖ್ಯಮಂತ್ರಿಗಳು ತಲಾ 1 ಲಕ್ಷ ರೂ. ಘೋಷಿಸಿದ್ದಾರೆ.
eesanje/url_47_20_3.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಬಿಜೆಪಿಗೆ ಉರುಳಾಯಿತೇ ಉರುಳಿಬಿದ್ದ ಛತ್ರಪತಿ ಶಿವಾಜಿ ಪ್ರತಿಮೆ..?
2
+ ,
3
+ ಮುಂಬೈ,ಸೆ.1-ಶಿವಾಜಿ ಪ್ರತಿಮೆ ಉರುಳಿಬಿದ್ದ ಪ್ರಕರಣ ಮಹಾರಾಷ್ಟ ಸರ್ಕಾರಕ್ಕೆ ಹುರುಳಾಗಿ ಪರಿಣಮಿಸತೊಡಗಿದೆ. ಸಿಂಧುದುರ್ಗದ ಮಾಲ್ವಾನ್‌ನಲ್ಲಿ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಉರುಳಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾ ವಿಕಾಸ್‌‍ ಅಘಾಡಿ ಘೋಷಿಸಿರುವ ಬಹತ್‌ ಮುಂಬೈ ಪ್ರತಿಭಟನೆಗೆ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.ಆಡಳಿತಾರೂಢ ಬಿಜೆಪಿ ಪ್ರತಿಭಟನೆಯ ಔಚಿತ್ಯವನ್ನು ಪ್ರಶ್ನಿಸಿದೆ ಮತ್ತು ಪ್ರತಿಪಕ್ಷಗಳ ಆಂದೋಲನವನ್ನು ಎದುರಿಸಲು ತನ್ನದೇ ಆದ ಮೆರವಣಿಗೆಯನ್ನು ಯೋಜಿಸಿದೆ.
4
+ ಗೇಟ್‌ವೇ ಆಫ್‌ ಇಂಡಿಯಾದಲ್ಲಿ ಭದ್ರತಾ ಪಡೆಗಳ ಭಾರೀ ಪೊಲೀಸ್‌‍ ಸಿಬ್ಬಂದಿ ಜಮಾಯಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
5
+ ಮಹಾರಾಷ್ಟ್ರದ ಇಂಡಿಯಾ ಬಣದ ಉನ್ನತ ನಾಯಕ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಎನ್‌ಸಿಪಿ (ಎಸ್‌‍ಪಿ) ಮುಖ್ಯಸ್ಥ ಶರದ್‌ ಪವಾರ್‌ ಮತ್ತು ರಾಜ್ಯ ಕಾಂಗ್ರೆಸ್‌‍ ಅಧ್ಯಕ್ಷ ನಾನಾ ಪಟೋಲೆ ಅವರು ಫೋರ್ಟ್‌ ಪ್ರದೇಶದ ಹುತಾತ ಚೌಕ್‌ನಿಂದ ಗೇಟ್‌ವೇ ಆಫ್‌ ಇಂಡಿಯಾದವರೆಗೆ ರ್ಯಾಲಿ ನಡೆಸಲಿದ್ದಾರೆ.
6
+ ಆಪ್‌ ಬಣವು ತನ್ನ ಆಂದೋಲನವನ್ನು ಜೋಡೆ ಮಾರೋ ಪ್ರತಿಭಟನೆ ಎಂದು ಕರೆದಿದೆ, ಇದರರ್ಥ ಪಾದರಕ್ಷೆಗಳಿಂದ ಹೊಡೆಯಿರಿ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದ ಶಿವಸೇನೆ (ಯುಬಿಟಿ) ಮಹಾರಾಷ್ಟ್ರದ ಹೆಮೆಯನ್ನು ಜಾಗತಗೊಳಿಸಲು ಶಿವಾಜಿಯ ಪಾದಗಳಿಗೆ ನಮಸ್ಕರಿಸಲು ಬರುತ್ತಿದೆ ಎಂದು ಟ್ವೀಟ್‌ ಮಾಡಿದೆ.
7
+ ಭ್ರಷ್ಟ ಶಿವದ್ರೋಹಿಗಳಿಗೆ ಕ್ಷಮೆ ಇಲ್ಲ ಎಂದು ಎನ್‌ಸಿಪಿಯ ಶರದ್‌ ಪವಾರ್‌ ಬಣ ಹೇಳಿದೆ. ಕಳಪೆ ಕೆಲಸ ಮಾಡಿದ, ಭ್ರಷ್ಟಾಚಾರ ಎಸಗಿದ, ಶಿವಾಜಿಯನ್ನು ಅವಮಾನಿಸಿದ ಶಿವದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಪಾದಯಾತ್ರೆ ಹಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌‍ ರಾಜ್ಯ ಘಟಕ ಹೇಳಿದೆ.
8
+ ಕಳೆದ 8 ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದ ಘಟನೆ ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ಸಂಚಲನ ಮೂಡಿಸಿದೆ. ಈ ಯೋಜನೆಯನ್ನು ನೌಕಾಪಡೆಯು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ನಿರ್ವಹಿಸಿದೆ.
9
+ ಪೊಲೀಸರು ಯೋಜನೆಯ ರಚನಾತಕ ಸಲಹೆಗಾರ ಮತ್ತು ಅದರ ಗುತ್ತಿಗೆದಾರನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಯತ್ನ, ತಪ್ಪಿತಸ್ಥ ನರಹತ್ಯೆ ಮತ್ತು ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾರ್ಯಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
10
+ ರಾಜಕೀಯ ಹಿನ್ನಡೆಯ ನಡುವೆಯೇ ಪ್ರಧಾನಿ ಮೋದಿ ಪ್ರತಿಮೆ ಕುಸಿತಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಹೆ���ರು ಅಥವಾ ರಾಜನಲ್ಲ. ನಮಗೆ ಅವರು ನಮ ಆರಾಧ್ಯದೈವ. ಇಂದು ನಾನು ಅವರ ಪಾದಗಳಿಗೆ ತಲೆಬಾಗಿ ನನ್ನ ದೇವರಲ್ಲಿ ಕ್ಷಮೆಯಾಚಿಸುತ್ತೇನೆ. ಕುಸಿದು ಬಿದ್ದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.
11
+ ಪ್ರತಿಪಕ್ಷಗಳ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಲಾಗಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ.ಪ್ರಧಾನಿಯವರ ಕ್ಷಮೆ ಸಾಕಾಗುವುದಿಲ್ಲವೇ? ರಫೇಲ್‌ ಎಪಿಸೋಡ್‌ನಲ್ಲಿ ತಮ ಕಾಮೆಂಟ್‌ಗಳಿಗೆ ರಾಹುಲ್‌ ಗಾಂಧಿ ಕೂಡ ಕ್ಷಮೆಯಾಚಿಸಿದ್ದಾರೆ. ಈ ಕ್ಷಮೆಗಾಗಿ ಅವರು (ಎಂವಿಎ) ಇದೇ ರೀತಿಯ ಪ್ರತಿಭಟನೆಯನ್ನು ನಡೆಸುತ್ತಾರೆಯೇ? ಎಂದು ರಾಜ್ಯ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ ಪ್ರಶ್ನಿಸಿದ್ದಾರೆ.
eesanje/url_47_20_4.txt ADDED
@@ -0,0 +1,5 @@
 
 
 
 
 
 
1
+ ವಡೋರದ : ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷವಾದ 24 ಮೊಸಳೆಗಳ ರಕ್ಷಣೆ
2
+ : 24 2
3
+ ವಡೋದರ, ಸೆ.1– ಗುಜರಾತ್‌ನ ವಡೋದರಾದ ಜನವಸತಿ ಪ್ರದೇಶಗಳಲ್ಲಿ ಹರಿದು ಬಂದ ವಿಶ್ವಮೈತ್ರಿ ನದಿಯ ಪ್ರವಾಹದ ನೀರಿನಿಂದ ಆಗಸ್ಟ್‌ 27ರಿಂದ 29ರ ನಡುವೆ ಒಟ್ಟು 24 ಮೊಸಳೆಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
4
+ ಈ ನದಿಯಲ್ಲಿ 440 ಮೊಸಳೆಗಳಿದ್ದು ಭಾರಿ ಮಳೆಯ ಕಾರಣ ಅಜ್ವಾ ಅಣೆಕಟ್ಟಿನಿಂದ ಹೊರಗೆ ಹರಿಯಬಿಟ್ಟ ನೀರಿನಲ್ಲಿ ಇವು ಜನವಸತಿ ಪ್ರದೇಶಗಳಿಗೆ ಬಂದಿದ್ದವು ಎಂದು ವಡೋದರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕರಣ್‌ಸಿನ್ಹ ರಜಪೂತ್‌ ಹೇಳಿದ್ದಾರೆ.
5
+ 24 ಮೊಸಳೆಗಳ ಜೊತೆಗೆ ನಾವು ಹಾವುಗಳು, ನಾಗರಹಾವುಗಳು, ಸುಮಾರು 40 ಕೆಜಿ ತೂಕವಿದ್ದ ಎರಡು ದೊಡ್ಡ ಆಮೆಗಳು ಮತ್ತು ಮುಳ್ಳುಹಂದಿ ಸೇರಿದಂತೆ ಇತರ 75 ಪ್ರಾಣಿಗಳನ್ನು ಈ ಮೂರು ದಿನಗಳಲ್ಲಿ ರಕ್ಷಿಸಿದ್ದೇವೆ. ವಿಶ್ವಮೈತ್ರಿ ನದಿಗೆ ಸಮೀಪದಲ್ಲಿ ಅನೇಕ ಜನವಸತಿ ಪ್ರದೇಶಗಳಿವೆ ಎಂದು ಅವರು ವಿವರಿಸಿದ್ದಾರೆ.
eesanje/url_47_20_5.txt ADDED
@@ -0,0 +1,8 @@
 
 
 
 
 
 
 
 
 
1
+ ಅಕ್ರಮ ಸಂಬಂದಕ್ಕಾಗಿ ಪತಿಯನ್ನು ಕೊಂದು ಶೌಚಾಲಯದಲ್ಲಿ ಶವ ಹೂತಿಟ್ಟ ಪತ್ನಿ
2
+ , :
3
+ ಜೈಪುರ,ಸೆ.1-ಪತ್ನಿಯೊಬ್ಬಳು ಅಕ್ರಮ ಸಂಬಂದಕ್ಕಾಗಿ ಕೈ ಹಿಡಿದ ಪತಿಯನ್ನೇ ಕೊಲೆ ಮಾಡಿ ಶವವನ್ನು ಮನೆಯ ಶೌಚಾಲಯದಲ್ಲೇ ಹೂತಿಟ್ಟಿದ್ದ ಪ್ರಕರಣ ರಾಜಸ್ಥಾನವನ್ನು ಬೆಚ್ಚಿ ಬೀಳಿಸಿದೆ.
4
+ ರಾಜಸ್ಥಾನದ ಹನುಮಾನ್‌ಗಢದಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದಿದ್ದಾಳೆ. ಬಳಿಕ, ಪತಿಯ ಶವವನ್ನು ಮನೆಯ ಶೌಚಾಲಯದಲ್ಲಿ ಹೂತಿಟ್ಟಿದ್ದಾಳೆ.
5
+ ಈ ವಿಷಯ ಬೆಳಕಿಗೆ ಬಂದಾಗ ಇಡೀ ಪ್ರದೇಶವೇ ಬೆಚ್ಚಿ ಬಿದ್ದಿದೆ. ಆ ಗ್ರಾಮದ ರೂಪರಾಮ್‌ 16 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಆತ ಬೇರೆ ಊರಿಗೆ ಹೋಗಿರಬಹುದು ಅಕ್ಕಪಕ್ಕದವರು ಅಂದುಕೊಂಡಿದ್ದರು.
6
+ ಆದರೆ, ರೂಪರಾಮ್‌ ನಾಪತ್ತೆಯ ಹಿಂದೆ ಆತನ ಹೆಂಡತಿಯ ಕೈವಾಡವಿರಬಹುದು ಎಂದು ಆತನ ಪೋಷಕರಿಗೆ ಅನುಮಾನ ಬಂದಿತ್ತು. ಹೀಗಾಗಿ, ಈ ಬಗ್ಗೆ ಮತ ರೂಪಾರಾಮ್‌ ಕುಟುಂಬಸ್ಥರು ಠಾಣೆಗೆ ದೂರು ಸಲ್ಲಿಸಿದ್ದರು.
7
+ ಇಷ್ಟೆಲ್ಲಾ ಆದರೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಕೋಪಗೊಂಡ ಕುಟುಂಬಸ್ಥರು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದು, ಬಳಿಕ ಪೊಲೀಸರು ಕಾರ್ಯಪ್ರವತ್ತರಾಗಿದ್ದಾರೆ. ಕೊನೆಗೆ ಈ ಬಗ್ಗೆ ತನಿಖೆ ಪ್ರಾರಂಭವಾಯಿತು.ಪೊಲೀಸರು ರೂಪರಾಮ್‌ ಅವರ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಅವಳು ತನ್ನ ಅಪರಾಧವನ್ನು ಒಪ್ಪಿಕೊಂಡಳು.
8
+ ಪರಾಮ್‌‍ನನ್ನು ಕೊಲೆ ಮಾಡಿ ಆತನ ಶವವನ್ನು ಬಾತ್‌ ರೂಂನಲ್ಲಿ ಹೂತು ಹಾಕಿದ್ದೇವೆ. ನನ್ನ ಪ್ರಿಯಕರನ ಜೊತೆ ಸೇರಿ ಈ ಕತ್ಯ ಎಸಗಿದ್ದೇನೆ ಎಂದು ಹೇಳಿದಳು. ಇದು ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಮನೆಯಲ್ಲಿದ್ದ ಶೌಚಾಲಯವನ್ನು ಅಗೆದು ರೂಪರಾಮ್‌ ಶವವನ್ನು ಹೊರತೆಗೆದಿದ್ದಾರೆ.
eesanje/url_47_20_6.txt ADDED
@@ -0,0 +1,6 @@
 
 
 
 
 
 
 
1
+ ಅತ್ಯಾಚಾರವೆಸಗಿ ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ಸ್ಕೂಲ್‌ ಪ್ಯೂನ್‌
2
+ , 13,
3
+ ಫರೂಕಾಬಾದ್‌, ಸೆ.1 (ಪಿಟಿಐ) ಇಲ್ಲಿನ 13 ವರ್ಷದ ಬಾಲಕಿಯೊಬ್ಬಳು ಸರ್ಕಾರಿ ಶಾಲೆಯ ಪ್ಯೂನ್‌ನಿಂದ ಅತ್ಯಾಚಾರಕ್ಕೊಳಗಾದ ನಂತರ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ನಡೆದ ಘಟನೆಯ ಸಂದರ್ಭದಲ್ಲಿ ಸಹಾಯ ಮಾಡಿದ ಕೌನ್ಸಿಲ್‌ ಶಾಲೆಯ ಪ್ಯೂನ್‌ ಮತ್ತು ಆತನ ಸಹಚರನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4
+ 13 ವರ್ಷದ ಬಾಲಕಿಯ ಕುಟುಂಬದವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಲಕಿ ರಾತ್ರಿ ಮಲ ವಿಸರ್ಜನೆಗೆ ಹೋಗಿದ್ದ ವೇಳೆ ಗ್ರಾಮದ ಪಂಕಜ್‌ ಮತ್ತು ಅಮಿತ್‌ ಎಂಬವರು ಆಕೆಯನ್ನು ಹಿಡಿದು ಖಾಲಿ ಮನೆಗೆ ಕರೆದೊಯ್ದು ಪಂಕಜ್‌ ಅತ್ಯಾಚಾರವೆಸಗಿದ್ದರೆ. ಅಮಿತ್‌ ಹೊರಗೆ ನಿಂತು ಕಾವಲು ಕಾಯುತ್ತಿದ್ದ ಎನ್ನಲಾಗಿದೆ.
5
+ ಆರೋಪಿಗಳು ಆಕೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾರೆ, ನಂತರ ದೂರು ನೀಡಿದರೆ ಕೊಲ್ಲುತ್ತೇವೆ ಎಂದು ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಆದರೆ ಬಾಲಕಿ ಐದು ತಿಂಗಳ ಗರ್ಭಿಣಿಯಾದಾಗ ಆಕೆಯ ತಾಯಿಗೆ ವಿಷಯ ತಿಳಿದಿದೆ. ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
6
+ ಆರೋಪಿಗಳ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
eesanje/url_47_20_7.txt ADDED
@@ -0,0 +1,6 @@
 
 
 
 
 
 
 
1
+ ಜೆಡಿಯು ವಕ್ತಾರ ಸ್ಥಾನಕ್ಕೆ ಕೆ.ಸಿ.ತ್ಯಾಗಿ ರಾಜೀನಾಮೆ
2
+ ()
3
+ ನವದೆಹಲಿ, ಸೆ.1 (ಪಿಟಿಐ)ಜೆಡಿಯು ಪಕ್ಷದ ವಕ್ತಾರ ಸ್ಥಾನಕ್ಕೆ ಕೆ.ಸಿ.ತ್ಯಾಗಿ ರಾಜೀನಾಮೆ ನೀಡಿದ್ದಾರೆ.ಮಿತ್ರಪಕ್ಷ ಬಿಜೆಪಿಯೊಂದಿಗಿನ ತಮ ಪಕ್ಷದ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತಿದ್ದ ಜನತಾ ದಳ (ಯುನೈಟೆಡ್‌) ವಕ್ತಾರ ಕೆ ಸಿ ತ್ಯಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
4
+ ಜೆಡಿಯು ತನ್ನ ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ರಾಜೀವ್‌ ರಂಜನ್‌ ಪ್ರಸಾದ್‌ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ತ್ಯಾಗಿ ಅವರ ರಾಜೀನಾಮೆಗೆ ವೈಯಕ್ತಿಕ ಕಾರಣಗಳು ಕಾರಣ ಎಂದು ಅದು ಹೇಳಿದೆ.
5
+ ಏಕರೂಪ ನಾಗರಿಕ ಸಂಹಿತೆ, ವಕ್ಫ್ (ತಿದ್ದುಪಡಿ) ಮಸೂದೆ ಅಥವಾ ಇತರ ವಿಷಯಗಳ ಜೊತೆಗೆ ಪ್ಯಾಲೆಸ್ತೀನ್‌ ವಿಷಯದ ಬಗ್ಗೆ ಸರ್ಕಾರದ ನಿಲುವುಗಳನ್ನು ಟೀಕಿಸುತ್ತಿದ್ದ ಸಮಾಜವಾದಿ ನಾಯಕನ ಸ್ಪಷ್ಟ ನಿಲುವು ಪಕ್ಷದೊಳಗಿನ ಹಲವರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ ಮತ್ತು ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
6
+ ಬಣದಲ್ಲಿನ ಭಿನ್ನಾಭಿಪ್ರಾಯಗಳ ವರದಿಗಳನ್ನು ತಗ್ಗಿಸಲು ಬಿಜೆಪಿಯು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತಕ ಒಕ್ಕೂಟದಲ್ಲಿ ಸಮನ್ವಯ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮಿತ್ರಪಕ್ಷಗಳನ್ನು ತಲುಪುತ್ತಿದೆ ಎಂದು ಮೂಲಗಳು ತಿಳಿಸಿವೆ.
eesanje/url_47_20_8.txt ADDED
@@ -0,0 +1,8 @@
 
 
 
 
 
 
 
 
 
1
+ ಕಾನ್ಸ್‌ಟೇಬಲ್‌ ನೇಮಕಾತಿ ಪ್ರಕ್ರಿಯೆ ವೇಳೆ ಮೂವರು ಅಭ್ಯರ್ಥಿಗಳ ದುರ್ಮರಣ
2
+ 3
3
+ ರಾಯ್‌ಪುರ, ಸೆ.1-ಅಬಕಾರಿ ಇಲಾಖೆಯ ಕಾನ್ಸ್‌ಟೇಬಲ್‌ ನೇಮಕಾತಿ ಪ್ರಕ್ರಿಯೆ ವೇಳೆ ಮೂವರು ಅಭ್ಯರ್ಥಿಗಳು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ ನಡೆದಿದೆ.
4
+ ಕಾನ್‌‍ಸ್ಟೆಬಲ್‌ ನೇಮಕಾತಿ ಪ್ರಕ್ರಿಯೆಯ ದೈಹಿಕ ಪರೀಕ್ಷೆಯ ವೇಳೆ ಮೂರ್ಛೆ ಹೋದ 25 ಅಭ್ಯರ್ಥಿಗಳ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಅವರನ್ನು ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
5
+ ಇಬ್ಬರು ಅಭ್ಯರ್ಥಿಗಳು ಪಲಾಮು ಜಿಲ್ಲೆಯ ಮೇದಿನಿನಗರದಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರೆ, ಒಬ್ಬರು ರಾಂಚಿಯ ರಿಮ್ಸ್‌‍ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್‌‍ ಅಧಿಕಾರಿ ಮಣಿಭೂಷಣ್‌ ಪ್ರಸಾದ್‌ ತಿಳಿಸಿದ್ದಾರೆ.
6
+ ಪ್ರಾಥಮಿಕ ತನಿಖೆಯ ಪ್ರಕಾರ ಉಸಿರಾಟದ ತೊಂದರೆಯಿಂದ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ಆರ್‌.ಕೆ.ರಂಜನ್‌ ತಿಳಿಸಿದ್ದಾರೆ. ಮೃತಪಟ್ಟವರನ್ನು ಅಮರೇಶ್‌ ಕುಮಾರ್‌ (20), ಅರುಣ್‌ ಕುಮಾರ್‌ (25) ಮತ್ತು ಪ್ರದೀಪ್‌ ಕುಮಾರ್‌ (25) ಎಂದು ಗುರುತಿಸಲಾಗಿದೆ.
7
+ ಪಲಾಮು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ಕಾನ್‌‍ಸ್ಟೆಬಲ್‌ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸುವುದು ಸೇರಿದಂತೆ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಸುಮಾರು 100 ಅಭ್ಯರ್ಥಿಗಳು ಇಲ್ಲಿಯವರೆಗೆ ಪ್ರಜ್ಞಾಹೀನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.9ರವರೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನಧ್ಯೆ, ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಈ ವಿಷಯದ ಬಗ್ಗೆ ತಕ್ಷಣ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
8
+ ಬಿಸಿಲಿನ ಝಳದಲ್ಲಿ ಓಡಿದ್ದರಿಂದ ಹಲವು ಅಭ್ಯರ್ಥಿಗಳು ಮೂರ್ಛೆ ಹೋಗುತ್ತಿದ್ದಾರೆ. ಒಂದು ವಾರದ ಹಿಂದೆ, ಪೂರ್ವ ಸಿಂಗ್‌ಭೂಮ್‌ ಜಿಲ್ಲೆಯ ಜದುಗೋರಾದಲ್ಲಿ ಗಿರಿದಿಹ್‌ನ ಕೇಶ್ವರಿ ನಿವಾಸಿ ಅಭ್ಯರ್ಥಿಯೊಬ್ಬರು ರೇಸ್‌‍ನಲ್ಲಿ ಸಾವನ್ನಪ್ಪಿದ್ದರು. ಇನ್ನು ಹಲವು ಜಿಲ್ಲೆಗಳಿಂದ ಅಭ್ಯರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿರುವ ಬಗ್ಗೆ ವರದಿಯಾಗಿದೆ.
eesanje/url_47_20_9.txt ADDED
@@ -0,0 +1,8 @@
 
 
 
 
 
 
 
 
 
1
+ ಕಾಶ್ಮೀರ ಚುನಾವಣೆಗೆ 40 ಕಾಂಗ್ರೆಸ್‌‍ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ
2
+ , , ’ 40 1st &
3
+ ಶ್ರೀನಗರ,ಸೆ.1– ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌‍ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ 40 ಜನರ ಹೆಸರುಗಳಿವೆ.
4
+ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರ ಹೆಸರುಗಳೂ ಕಾಂಗ್ರೆಸ್‌‍ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸೇರಿವೆ.
5
+ ಇದಲ್ಲದೆ ಕೆಸಿ ವೇಣುಗೋಪಾಲ್‌‍, ಅಜಯ್‌ ಮಾಕನ್‌, ಅಂಬಿಕಾ ಸೋನಿ, ಭರತ್‌ ಸಿಂಗ್‌ ಸೋಲಂಕಿ, ತಾರಿಕ್‌ ಹಮೀದ್‌ ಕರಾರ್‌, ಜೈರಾಮ್‌ ರಮೇಶ್‌, ಗುಲಾಮ್‌ ಅಹಮದ್‌ ಮಿರ್‌, ಮುಖೇಶ್‌ ಅಗ್ನಿಹೋತ್ರಿ, ಚರಂಜಿತ್‌ ಸಿಂಗ್‌ ಚನ್ನಿ, ಸಲಾನ್‌ ಖುರ್ಷಿದ್‌‍, ಸುಖಿಂದರ್‌ ಸಿಂಗ್‌ ರಾಂಧವಾ, ಅಮರಿಂದರ್‌ ಸಿಂಗ್‌, ರಾಜಾದ್‌ ವಾಡಿಂಗ್‌, ನಾಸೀರ್‌ ಹುಸೇನ್‌, ವಿಕಾರ್‌ ರಸೂಲ್‌ ವಾನಿ ಹೆಸರಗಳನ್ನೂ ಘೋಷಿಸಲಾಗಿದೆ.
6
+ ರಜನಿ ಪಾಟೀಲ್‌‍, ರಾಜೀವ್‌ ಶುಕ್ಲಾ, ಮನೀಶ್‌ ತಿವಾರಿ, ಇವ್ರಾನ್‌ ಪ್ರತಾಪ್‌ಗರ್ಹಿ, ಕಿಶೋರಿ ಲಾಲ್‌ ಶರ್ಮಾ, ರಂಜಿತ್‌ ರಂಜನ್‌, ರಮಣ್‌ ಭಲ್ಲಾ, ತಾರಾಚಂದ್‌, ಚೌಧರಿ ಲಾಲ್‌ ಸಿಂಗ್‌, ಪೀರ್ಜಾದಾ ಮೊಹಮದ್‌ ಸಯೀದ್‌, ಪವನ್‌ ಮಾಸ್‌‍ , ಸುಪ್ರಿಯಾ ಶ್ರೀನೆಟ್‌ , ಕನ್ಹ್ಯಾ ಕುಮಾರ್‌, ಮನೋಜ್‌ ಯಾದವ್‌, ಶಾನವಾಜ್‌ ಚೌಧರಿ, ರಾಜೇಶ್‌ ಲಿಲೋಥಿಯಾ, ಅಲ್ಕಾ ಲಂಬಾ, ಶ್ರೀನಿವಾಸ್‌‍ ಬೀವಿ ಮತ್ತು ನೀರಜ್‌ ಕುಂದನ್‌ ಕೂಡ ಕಾಂಗ್ರೆಸ್‌‍ನ ಸ್ಟಾರ್‌ ಪ್ರಚಾರಕರಾಗಿದ್ದಾರೆ.
7
+ ಜಮು ಮತ್ತು ಕಾಶೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕಗಳಲ್ಲಿ ಚುನಾವಣಾ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿದೆ. ಈಗ ಚುನಾವಣಾ ಫಲಿತಾಂಶವನ್ನು ಅಕ್ಟೋಬರ್‌ 4 ರ ಬದಲು ಅಕ್ಟೋಬರ್‌ 8 ರಂದು ಪ್ರಕಟಿಸಲಾಗುವುದು.
8
+ ಜಮು ಮತ್ತು ಕಾಶೀರದ 90 ವಿಧಾನಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಮೊದಲ ಹಂತದಲ್ಲಿ ಸೆಪ್ಟೆಂಬರ್‌ 18 ರಂದು ರಾಜ್ಯದ 24 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ, ಸೆಪ್ಟೆಂಬರ್‌ 25 ರಂದು ಜಮು ಮತ್ತು ಕಾಶೀರದ 26 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮೂರನೇ ಮತ್ತು ಕೊನೆಯ ಹಂತದಲ್ಲಿ, ಅಕ್ಟೋಬರ್‌ 1 ರಂದು ಜಮು ಮತ್ತು ಕಾಶೀರದ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
eesanje/url_47_210_1.txt ADDED
@@ -0,0 +1,5 @@
 
 
 
 
 
 
1
+ ಗಡಿ ನುಸುಳುತ್ತಿದ್ದ ಉಗ್ರ ಖತಂ
2
+ ಜಮ್ಮು, ಡಿ 23 (ಪಿಟಿಐ) ಇಂದು ಮುಂಜಾನೆ ಅಂತಾರಾಷ್ಟ್ರೀಯ ಗಡಿಯಲ್ಲಿ (ಐಬಿ) ಕಾವಲು ಕಾಯುತ್ತಿರುವ ಭದ್ರತಾ ಪಡೆಗಳು ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
3
+ ನಾಲ್ವರು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಅಖ್ನೂರ್‍ನ ಖೌರ್ ಸೆಕ್ಟರ್‍ನಲ್ಲಿರುವ ಐಬಿಯಿಂದ ಈ ಕಡೆಗೆ ನುಸುಳಲು ಪ್ರಯತ್ನಿಸುತ್ತಿದ್ದರು. ಈ ನುಸುಳುವಿಕೆಯನ್ನು ಗಮನಿಸಿ ತಕ್ಷಣ ದಾಳಿ ನಡೆಸಿದ ಯೋಧರು ಓರ್ವ ಉಗ್ರನನ್ನು ಗುಂಡಿಕ್ಕಿ ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
4
+ ಜ.6ಕ್ಕೆ ಗಮ್ಯ ಸ್ಥಾನ ಸೇರಲಿದೆ ಆದಿತ್ಯ್-ಎಲ್1
5
+ ಒಳನುಸುಳುತ್ತಿದ್ದ ಭಯೋತ್ಪಾದಕರ ಮೇಲೆ ಪಡೆಗಳು ಪರಿಣಾಮಕಾರಿ ಗುಂಡಿನ ದಾಳಿ ನಡೆಸಿತು ಮತ್ತು ಅವರಲ್ಲಿ ಒಬ್ಬರು ಹೊಡೆದು ಕೆಳಗೆ ಬಿದ್ದರು ಎಂದು ಅವರು ಹೇಳಿದರು. ಆದರೆ, ಮೃತನ ಶವವನ್ನು ಆತನ ಸಹಚರರು ಐಬಿಯಾದ್ಯಂತ ಎಳೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
eesanje/url_47_210_10.txt ADDED
@@ -0,0 +1,6 @@
 
 
 
 
 
 
 
1
+ ರಾಹುಲ್‍ಗಾಂಧಿ ಸಂಸದರಾಗಲು ನಾಲಾಯಕ್ ; ವಿಜಯ್ ವರ್ಗಿಯಾ
2
+ ಇಂದೋರ್,ಡಿ.22- ಸಂಸದರೊಬ್ಬರು ಮಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಮಿಮಿಕ್ರಿಯನ್ನು ಚಿತ್ರೀಕರಿಸಿದ ರಾಹುಲ್ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರು ವಾಗ್ದಾಳಿ ನಡೆಸಿದ್ದಾರೆ.ಇಂತಹ ಕೆಟ್ಟ ನಡವಳಿಕೆ ಹೊಂದಿರುವ ರಾಹುಲ್‍ಗಾಂಧಿ ಅವರು ಸಂಸತ್ತಿನ ಸದಸ್ಯರಾಗಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.
3
+ ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು, ಧನಕರ್ ಅವರ ವರ್ತನೆಯನ್ನು ಅನುಕರಿಸುವ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ನಂತರ ದೊಡ್ಡ ಗಲಾಟೆ ಭುಗಿಲೆದ್ದಿತು ಮತ್ತು ಟಿವಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.
4
+ ಮನಬಂದಂತೆ ಗುಂಡು ಹಾರಿಸಿದ ವಿದ್ಯಾರ್ಥಿ, 14 ಮಂದಿ ಬಲಿ
5
+ ಸಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಅನುಕರಿಸುತ್ತಿದ್ದರು ಮತ್ತು ಗಾಂಧಿಯವರು ಕಾಯ್ದೆಯನ್ನು ನಿಲ್ಲಿಸುವ ಬದಲು ಅದನ್ನು ವೀಡಿಯೊ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ವಿಜಯವರ್ಗಿಯ ಇಂದೋರ್‍ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸ್ರ್ಪಧಿ ಎಂದು ಹೇಗೆ ಹೇಳಲಾಗುತ್ತದೆ. ಅವರು ಸಂಸದ ಸ್ಥಾನಕ್ಕೂ ಯೋಗ್ಯರಲ್ಲ ಎಂದು ನಾನು ಭಾವಿಸುತ್ತೇನೆ. ಅವರಿಗೆ ಪ್ರಧಾನಿ ಹುದ್ದೆ ತುಂಬಾ ದೊಡ್ಡದಾಗಿದೆ ಎಂದು ಅವರು ಹೇಳಿದರು.
6
+ ಅಬಕಾರಿ ನೀತಿಗೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯದ ಹೊಸ ಸಮನ್ಸ್‍ನ ಕುರಿತು ಬಿಜೆಪಿ ನಾಯಕ, ಭ್ರಷ್ಟಾಚಾರದಲ್ಲಿ ತೊಡಗಿರುವ ಯಾರನ್ನಾದರೂ ತನಿಖಾ ಸಂಸ್ಥೆಗಳು ಹುಡುಕುತ್ತವೆ ಎಂದು ಹೇಳಿದರು. ಈ ಸಮನ್ಸ್ ಅನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ಅವರು ಸಮರ್ಥಿಸಿಕೊಂಡರು.
eesanje/url_47_210_11.txt ADDED
@@ -0,0 +1,8 @@
 
 
 
 
 
 
 
 
 
1
+ ಋತುಚಕ್ರ ನೈರ್ಮಲ್ಯ ನೀತಿಗೆ ನನ್ನ ವಿರೋಧವಿದೆ ; ಸ್ಮತಿ ಇರಾನಿ
2
+ ನವದೆಹಲಿ,ಡಿ.22- ಕೆಲಸದ ಸ್ಥಳದಲ್ಲಿ ಮಹಿಳೆಯರು ತಾರತಮ್ಯ ಮತ್ತು ಕಿರುಕುಳವನ್ನು ಎದುರಿಸುವುದು ನನಗೆ ಇಷ್ಟವಿಲ್ಲದ ಕಾರಣ ಋತುಚಕ್ರದ ನೈರ್ಮಲ್ಯ ನೀತಿಯನ್ನು ನಾನು ವಿರೋಧಿಸಿದ್ದೇನೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ.
3
+ ಮುಟ್ಟು ಒಂದು ಅಂಗವಿಕಲತೆ ಅಲ್ಲ ಮತ್ತು ಇದು ಸಂದಾಯ ರಜೆ ಗಾಗಿ ನಿರ್ದಿಷ್ಟ ನೀತಿಯನ್ನು ಖಾತರಿಪಡಿಸಬಾರದು ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
4
+ ನಾನು ಸಂಸತ್ತಿನಲ್ಲಿ ಮಾತನಾಡುವಾಗ, ನನ್ನ ವೈಯಕ್ತಿಕ ಅನುಭವದಿಂದ ಮಾತನಾಡಿದ್ದೇನೆ ಏಕೆಂದರೆ ಹೆಚ್ಚು ಹೆಚ್ಚು ಮಹಿಳೆಯರು ಕಿರುಕುಳಕ್ಕೆ ಒಳಗಾಗುವುದನ್ನು ನಾನು ಬಯಸುವುದಿಲ್ಲ. ಈ ಹೇಳಿಕೆಯನ್ನು ಪ್ರೇರೇಪಿಸಿದ ಪ್ರಶ್ನೆಯು ಆಘಾತಕಾರಿ, ಪ್ರಚೋದಿಸುವ ಅಥವಾ ಗಮನ ಸೆಳೆಯುವ ಉದ್ದೇಶವನ್ನು ಹೊಂದಿದೆ ಎಂದು ಸಚಿವರು ಹೇಳಿದರು.
5
+ ಕಾಶ್ಮೀರದ ಪೂಂಚ್ ಅರಣ್ಯದಲ್ಲಿ ಉಗ್ರರಿಗಾಗಿ ಸೇನೆಯಿಂದ ಶೋಧ ಕಾರ್ಯಾಚರಣೆ
6
+ ನಾನು ಈ ವಿಷಯದ ಬಗ್ಗೆ ಹೆಚ್ಚು ಹೇಳಬಹುದಿತ್ತು ಆದರೆ ನಾನು ಮಾಡಲಿಲ್ಲ ಏಕೆಂದರೆ ಪ್ರಶ್ನೆಯನ್ನು ಕೇಳಿದ ಸಂಭಾವಿತ ವ್ಯಕ್ತಿ ಎಂದಿಗೂ ಮಹಿಳೆಯರಿಗೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಎಂದಿದ್ದಾರೆ.
7
+ ಡಿ. 13 ರಂದು ರಾಜ್ಯಸಭೆಯ ಅಧಿವೇಶನದಲ್ಲಿ ಕೇಳಲಾಗುವ ಮೌಖಿಕ ಉತ್ತರಗಳ ಪ್ರಶ್ನೆಗಳ ಪಟ್ಟಿಯ ಭಾಗವಾಗಿ ಸಚಿವ ಮನೋಜ್ ಕುಮಾರ್ ಝಾ ಅವರು ಈ ಪ್ರಶ್ನೆಯನ್ನು ಕೇಳಿದ್ದರು. ಮುಟ್ಟಿನ ನೈರ್ಮಲ್ಯ ನೀತಿಯನ್ನು ಶೀಘ್ರದಲ್ಲೇ ಹೊರತರಲು ಸರ್ಕಾರ ಯೋಜಿಸುತ್ತಿದೆಯೇ ಹಾಗಿದ್ದಲ್ಲಿ, ಅದರ ವಿವರಗಳನ್ನು ನೀಡುವಂತೆ ಝಾ ಕೇಳಿದ್ದರು.
8
+ ಸಲಿಂಗಕಾಮಿ ಪುರುಷರಿಗಾಗಿ ಮುಟ್ಟಿನ ನೈರ್ಮಲ್ಯ ಯೋಜನೆಯನ್ನು ಉತ್ತೇಜಿಸುವ ಅಥವಾ ಒದಗಿಸುವ ಪ್ರಶ್ನೆಯು ಆಘಾತಕಾರಿ, ಪ್ರಚೋದಿಸುವ ಅಥವಾ ಗಮನ ಸೆಳೆಯುವ ಉದ್ದೇಶವನ್ನು ಹೊಂದಿದೆ ಎಂದು ಇರಾನಿ ಹೇಳಿದರು.
eesanje/url_47_210_12.txt ADDED
@@ -0,0 +1,8 @@
 
 
 
 
 
 
 
 
 
1
+ ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿಗಳಿಗೆ ಮನೋವಿಶ್ಲೇಷಣಾ ಪರೀಕ್ಷೆ
2
+ ನವದೆಹಲಿ,ಡಿ.22- ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಆರು ಆರೋಪಿಗಳು ಮನೋವಿಶ್ಲೇಷಣೆ() ಪರೀಕ್ಷೆಗೆ ಒಳಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಅವರ ನಡವಳಿಕೆಯ ಪ್ರಮುಖ ಮೌಲ್ಯಮಾಪನವು ಹೊಗೆ ಭಯದ ಘಟನೆಯ ಹಿಂದಿನ ಉದ್ದೇಶ ಮತ್ತು ಉದ್ದೇಶಗಳನ್ನು ತನಿಖಾಕಾರಿಗಳಿಗೆ ಕಂಡುಹಿಡಿಯಲು ಈ ವಿಶ್ಲೇಷಣೆ ಸಹಕಾರಿಯಾಗಲಿದೆ ಎನ್ನಲಾಗಿದೆ.
3
+ ಆರು ಆರೋಪಿಗಳ ಪೈಕಿ ಒಬ್ಬನನ್ನು ಪರೀಕ್ಷೆಗಾಗಿ ನಿನ್ನೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ಯಲಾಗಿತ್ತು. ಉಳಿದವರನ್ನು ಒಬ್ಬೊಬ್ಬರನ್ನಾಗಿ ಪರೀಕ್ಷೆಗೆ ಒಳಪಡಿಸಲಾಗುವುದು. ಮನೋವಿಶ್ಲೇಷಣೆ ಎಂದರೆ ಮಾನಸಿಕ ಮೌಲ್ಯಮಾಪನ, ಇದು ಅಂಡರ್ ಟ್ರಯಲ್‍ನಲ್ಲಿ ಅವರ ಅಭ್ಯಾಸಗಳು, ದಿನಚರಿ ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಮಾಡಲಾಗುತ್ತದೆ.
4
+ ಪರೀಕ್ಷೆಗಳು ಪ್ರಶ್ನೆ-ಉತ್ತರ ಸ್ವರೂಪವನ್ನು ಹೊಂದಿವೆ ಮತ್ತು ಮನೋವೈದ್ಯರು ನಡೆಸುತ್ತಾರೆ. ಆರೋಪಿಗಳು ನೀಡಿದ ಉತ್ತರಗಳ ಆಧಾರದ ಮೇಲೆ, ಮನೋವೈದ್ಯರು ಮತ್ತು ತನಿಖಾಕಾರಿಗಳು ಅಪರಾಧದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ.
5
+ ಕಾಶ್ಮೀರದ ಪೂಂಚ್ ಅರಣ್ಯದಲ್ಲಿ ಉಗ್ರರಿಗಾಗಿ ಸೇನೆಯಿಂದ ಶೋಧ ಕಾರ್ಯಾಚರಣೆ
6
+ ಈ ಪರೀಕ್ಷೆಯು ಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‍ನ ಫೋರೆನ್ಸಿಕ್ ಲ್ಯಾಬ್ ಮತ್ತು ಎಫ್‍ಎಸ್‍ಎಲ್ ರೋಹಿಣಿಯಲ್ಲಿ ನಡೆಸಲಾಗುತ್ತದೆ. ದೆಹಲಿ ಪೊಲೀಸರು ಆರೋಪಿಗಳ ಮೇಲೆ ಇತ್ತೀಚೆಗೆ ಮನೋವಿಶ್ಲೇಷಣೆ ನಡೆಸಿದ ಪ್ರಕರಣಗಳೆಂದರೆ ಶ್ರದ್ಧಾ ವಾಕರ್ ಹತ್ಯೆ ಮತ್ತು ಶಹಬಾದ್ ಡೈರಿ ಕೊಲೆ ಪ್ರಕರಣ. ಕಳೆದ ವಾರ ಸಂಸತ್ತಿನಲ್ಲಿ ನಡೆದ ಹೊಗೆ ಭೀತಿ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
7
+ ಮಣಿಪುರದ ಅಶಾಂತಿ, ನಿರುದ್ಯೋಗ ಮತ್ತು ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ತಮ್ಮ ಉದ್ದೇಶವಾಗಿತ್ತು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
8
+ ಡಿಸೆಂಬರ್ 13 ರಂದು ಸಂಸತ್ತಿನ ಸಂಕೀರ್ಣದಿಂದ ಬಂಸಲಾದ ಪ್ರಮುಖ ನಾಲ್ವರು ಆರೋಪಿಗಳನ್ನು ನಿನ್ನೆ ಮತ್ತೆ 15 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಆಪಾದಿತ ಮಾಸ್ಟರ್ ಮೈಂಡ್ ಒಂದು ದಿನದ ನಂತರ ಶರಣಾಗಿದ್ದ.
eesanje/url_47_210_2.txt ADDED
@@ -0,0 +1,5 @@
 
 
 
 
 
 
1
+ 24 ಗಂಟೆಯಲ್ಲಿ 752 ಹೊಸ ಕೋವಿಡ್ ಪ್ರಕರಣಗಳು, 4 ಸಾವು
2
+ ನವದೆಹಲಿ,ಡಿ. 23 (ಪಿಟಿಐ) ದೇಶದಲ್ಲಿ 752 ಕೊರೊನಾ ಸೋಂಕುಗಳ ಒಂದು ದಿನದ ಏರಿಕೆಯನ್ನು ಕಂಡಿದೆ, ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,420 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
3
+ ನಾಲ್ಕು ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,33,332 ಕ್ಕೆ ದಾಖಲಾಗಿದೆ – ಕೇರಳದಿಂದ ಇಬ್ಬರು, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ದೇಶದ ಕೋವಿಡ್ ಪ್ರಕರಣಗಳ ಸಂಖ್ಯೆ 4.50 ಕೋಟಿ (4,50,07,964)ಗೆ ಏರಿಕೆಯಾಗಿದೆ.
4
+ ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಮತ್ತೊಂದು ಪ್ರಕರಣ ಬೆಳಕಿಗೆ
5
+ ಆರೋಗ್ಯ ಸಚಿವಾಲಯದ ವೆಬ್‍ಸೈಟ್ ಪ್ರಕಾರ, ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,44,71,212 ಕ್ಕೆ ಏರಿದೆ ಮತ್ತು ರಾಷ್ಟ್ರೀಯ ಚೇತರಿಕೆ ಪ್ರಮಾಣವು 98.81 ಪ್ರತಿಶತದಷ್ಟಿದೆ. ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ದೇಶದಲ್ಲಿ ಇದುವರೆಗೆ 220.67 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯದ ವೆಬ್‍ಸೈಟ್ ತಿಳಿಸಿದೆ.
eesanje/url_47_210_3.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಕಾಶ್ಮೀರದ ಪೂಂಚ್, ರಜೌರಿ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಟ್
2
+ ಪೂಂಚ್, ಡಿ.23 (ಪಿಟಿಐ) ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಇಂದು ಮುಂಜಾನೆ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ, ಭದ್ರತಾ ಪಡೆಗಳು ಇತ್ತೀಚೆಗೆ ಐದು ಸೇನಾ ವಾಹನಗಳ ಮೇಲೆ ಹೊಂಚುದಾಳಿ ನಡೆಸಿದ ಉಗ್ರರನ್ನು ಪತ್ತೆಹಚ್ಚಲು ಭಾರಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿವೆ.
3
+ ಅವಳಿ ಗಡಿ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಮೂರು ವ್ಯಕ್ತಿಗಳು ನಿಗೂಢವಾಗಿ ಸಾವನ್ನಪ್ಪಿದ ನಂತರ ಸೇನೆಯು ವಿಚಾರಣೆಗೆ ಕರೆದೊಯ್ದಿದೆ ಮತ್ತು ಶಂಕಿತರಿಗೆ ಚಿತ್ರಹಿಂಸೆ ನೀಡುವ ವೀಡಿಯೊಗಳನ್ನು ಪ್ರಸಾರ ಮಾಡಿದ ನಂತರ ಜನರಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
4
+ ನೆಲದ ಪರಿಸ್ಥಿತಿಯ ಬಗ್ಗೆ ಸೇನೆ ಮತ್ತು ಸಿವಿಲ್ ಅಧಿಕಾರಿಗಳು ಬಿಗಿಯಾಗಿ ಬಾಯಿ ಬಿಟ್ಟಿದ್ದರೂ, ವದಂತಿಗಳನ್ನು ಹರಡುವುದನ್ನು ತಡೆಯಲು ಮತ್ತು ಕಿಡಿಗೇಡಿಗಳು ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
5
+ ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಮತ್ತೊಂದು ಪ್ರಕರಣ ಬೆಳಕಿಗೆ
6
+ ಹಿರಿಯ ಸೇನೆ, ಪೊಲೀಸ್ ಮತ್ತು ಸಿವಿಲ್ ಅಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ, ಶಾಂತಿ ಕಾಪಾಡಲು ಜಿಲ್ಲೆಗಳ ಸೂಕ್ಷ್ಮ ಜೇಬಿನಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
7
+ ಮೂರರಿಂದ ನಾಲ್ಕು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಗುರುವಾರ ಮಧ್ಯಾಹ್ನ ಪೂಂಚ್‍ನ ಸುರನ್‍ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‍ನಲ್ಲಿ ಆರ್ಮಿ ಜಿಪ್ಸಿ ಮತ್ತು ಟ್ರಕ್ ಅನ್ನು ಗುರಿಯಾಗಿಸಿಕೊಂಡು ಐವರು ಸೈನಿಕರನ್ನು ಹತ್ಯೆ ಮಾಡಿದ್ದರು.
8
+ ದಾಳಿಯ ನಂತರ, ಭಯೋತ್ಪಾದಕರು ಕನಿಷ್ಠ ಇಬ್ಬರು ಸೈನಿಕರ ದೇಹಗಳನ್ನು ವಿರೂಪಗೊಳಿಸಿದರು ಮತ್ತು ಅವರಲ್ಲಿ ಕೆಲವರ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡರು ಎಂದು ವರದಿಯಾಗಿದೆ. ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ದಾಳಿಯ ನಂತರ ತಕ್ಷಣವೇ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ರಾಜೌರಿಯ ಹತ್ತಿರದ ಥಾನಮಂಡಿಯನ್ನು ಸಹ ಆವರಿಸಿದೆ ಆದರೆ ಇದುವರೆಗೆ ಪರಾರಿಯಾದ ಭಯೋತ್ಪಾದಕರ ಸುಳಿವು ಸಿಕ್ಕಿಲ್ಲ್ಲ ಎಂದು ಅಕಾರಿಗಳು ತಿಳಿಸಿದ್ದಾರೆ.
9
+ ಸದಾಶಿವ ಆಯೋಗ ವರದಿ ಜಾರಿಗೆ ಮಾದಿಗ ದಂಡೋರ ಆಗ್ರಹ
10
+ ಗುರುವಾರದ ದಾಳಿಗೆ ಸಂಬಂಧಿಸಿದಂತೆ ಸೇನೆಯಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಮೂವರು ವ್ಯಕ್ತಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಕುರಿತು ತನಿಖೆ ಮುಂದುವರೆದಿದ್ದು, ಅವರ ಮೃತದೇಹಗಳನ್ನು ಅಂತಿಮ ವಿಧಿಗಳಿಗಾಗಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
11
+ ಮೃತರನ್ನು ಬುಫ್ಲಿಯಾಜ್‍ನ ಟೋಪಾ ಪೀರ್ ಗ್ರಾಮದ ಸಫೀರ್ ಹುಸೇನ್ (43), ಮೊಹಮ್ಮದ್ ಶೋಕೆಟ್ (27) ಮತ್ತು ಶಬೀರ್ ಅಹ್ಮದ್ (32) ಎಂದು ಗುರುತಿಸಲಾಗಿದೆ ಆದರೆ ಅವರ ಸಾವಿಗೆ ಕಾರಣ ತಕ್ಷಣವೇ ತಿಳಿದುಬಂದಿಲ್ಲ.
eesanje/url_47_210_4.txt ADDED
@@ -0,0 +1,7 @@
 
 
 
 
 
 
 
 
1
+ ಜ.6ಕ್ಕೆ ಗಮ್ಯ ಸ್ಥಾನ ಸೇರಲಿದೆ ಆದಿತ್ಯ್-ಎಲ್1
2
+ ಅಹಮದಾಬಾದ್, ಡಿ 23 (ಪಿಟಿಐ) ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಅನ್ನು ಜನವರಿ 6 ರಂದು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
3
+ ಹಾಲೋ ಆರ್ಬಿಟ್ ಎಲ್1 ನಿಂದ ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಭಾರತೀಯ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾದ ಮಿಷನ್ ಅನ್ನು ಇಸ್ರೋ ಕಳೆದ ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪ್ರಾರಂಭಿಸಿತು.
4
+ ಆದಿತ್ಯ-ಎಲ್ 1 ಜನವರಿ 6 ರಂದು ಎಲ್ 1 ಪಾಯಿಂಟ್‍ಗೆ ಪ್ರವೇಶಿಸಲಿದೆ. ಅದನ್ನೇ ನಿರೀಕ್ಷಿಸಲಾಗಿದೆ. ಸರಿಯಾದ ಸಮಯದಲ್ಲಿ ನಿಖರವಾದ ಸಮಯವನ್ನು ಪ್ರಕಟಿಸಲಾಗುವುದು ಎಂದು ಸೋಮನಾಥ್ ಇಲ್ಲಿ ಮಾಧ್ಯಮ ಪ್ರತಿನಿಗಳಿಗೆ ವಿಜ್ಞಾನ ಭಾರತಿ, ಎನ್‍ಜಿಒ ಆಯೋಜಿಸಿದ್ದ ಭಾರತೀಯ ವಿಜ್ಞಾನ ಸಮ್ಮೇಳನದ ಸಂದರ್ಭದಲ್ಲಿ ತಿಳಿಸಿದರು.
5
+ ಎಲ್ 1 ಪಾಯಿಂಟ್ ತಲುಪಿದಾಗ, ಅದು ಮುಂದೆ ಹೋಗದಂತೆ ನಾವು ಮತ್ತೊಮ್ಮೆ ಎಂಜಿನ್ ಅನ್ನು ಬೆಂಕಿಯಿಡಬೇಕು. ಅದು ಆ ಹಂತಕ್ಕೆ ಹೋಗುತ್ತದೆ, ಮತ್ತು ಅದು ತಲುಪಿದ ನಂತರ, ಅದು ಅದರ ಸುತ್ತಲೂ ತಿರುಗುತ್ತದೆ ಮತ್ತು ಎಲ್ 1 ನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ, ಅವರು ಹೇಳಿದರು.
6
+ ಹೊಸ ವರ್ಷಾಚರಣೆಗೆ ಕಟ್ಟೆಚ್ಚರ, ಗೃಹಸಚಿವ ಪರಮೇಶ್ವರ್ ಸಭೆ
7
+ ಆದಿತ್ಯ-ಎಲï1 ತನ್ನ ಗಮ್ಯಸ್ಥಾನವನ್ನು ತಲುಪಿದ ನಂತರ, ಮುಂದಿನ ಐದು ವರ್ಷಗಳವರೆಗೆ ಸೂರ್ಯನ ಮೇಲೆ ನಡೆಯುವ ವಿವಿಧ ಘಟನೆಗಳನ್ನು ಅಳೆಯಲು ಇದು ಸಹಾಯ ಮಾಡುತ್ತದೆ. ಒಮ್ಮೆ ಇದನ್ನು ಯಶಸ್ವಿಯಾಗಿ ಎಲ್1 ಪಾಯಿಂಟ್‍ನಲ್ಲಿ ಇರಿಸಿದರೆ, ಅದು ಮುಂದಿನ ಐದು ವರ್ಷಗಳವರೆಗೆ ಇರುತ್ತದೆ, ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬಹಳ ಮುಖ್ಯವಾದ ಎಲ್ಲಾ ಡೇಟಾವನ್ನು ಸಂಗ್ರಹಿಸುತ್ತದೆ. ಡೇಟಾವು ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಸೂರ್ಯ ಮತ್ತು ಅದು ನಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಪತ್ತೆ ಹಚ್ಚಬಹುದು ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.
eesanje/url_47_210_5.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಭಾವನೆ ಇಲ್ಲ : ಮೋದಿ
2
+ ನವದೆಹಲಿ, ಡಿ.22- ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯದ ಯಾವುದೇ ಭಾವನೆ ಇಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಫೈನಾನ್ಷಿಯಲ್ ಟೈಮ್ಸ್‍ಗೆ ನೀಡಿದ ಸಂದರ್ಶನದಲ್ಲಿ ಭಾರತದಲ್ಲಿ ಯಾವುದೇ ತಾರತಮ್ಯ, ಜಾತಿ, ಧರ್ಮ, ಧರ್ಮ ಅಥವಾ ಲಿಂಗಕ್ಕೆ ಅವಕಾಶವಿಲ್ಲ ಎಂದರು.
3
+ ಭಾರತದಲ್ಲಿ ಮುಸಲ್ಮಾನರ ಭವಿಷ್ಯದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ದೇಶದ ಸ್ಥಿತಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಯನ್ನು ಸೂಚಿಸುತ್ತದೆ. 2014 ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಇಸ್ಲಾಮಿಕ್ ವಿರೋಧಿ ಭಾವನೆಗಳು ಮತ್ತು ದ್ವೇಷದ ಮಾತುಗಳು ಪ್ರವರ್ಧಮಾನಕ್ಕೆ ಬಂದಿವೆ ಎಂದು ಹೇಳುವ ವಿದೇಶಿ ಮತ್ತು ದೇಶೀಯ ವಿಮರ್ಶಕರ ಆರೋಪವನ್ನು ನಿರಾಕರಿಸಿದ್ದಾರೆ.
4
+ ಭಾರತೀಯ ಸಮಾಜವು ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಭಾವನೆ ಹೊಂದಿಲ್ಲವೆ ಎಂದು ಮುಸ್ಲಿಂ ಅಲ್ಪಸಂಖ್ಯಾತರ ಬಗ್ಗೆ ಕೇಳಿದಾಗ ದೇಶದ ಪಾರ್ಸಿ ಸಮುದಾಯದ ಆರ್ಥಿಕ ಯಶಸ್ಸನ್ನು ಶ್ಲಾಘಿಸಿದರಲ್ಲದೆ, ಅವರು ಭಾರತದಲ್ಲಿ ವಾಸಿಸುವ ಧಾರ್ಮಿಕ ಸೂಕ್ಷ್ಮ-ಅಲ್ಪಸಂಖ್ಯಾತರು ಎಂದು ಬಣ್ಣಿಸಿದರು.
5
+ ಜಗತ್ತಿನ ಬೇರೆಡೆ ಕಿರುಕುಳವನ್ನು ಎದುರಿಸುತ್ತಿದ್ದರೂ, ಅವರು (ಪಾರ್ಸಿಗಳು) ಭಾರತದಲ್ಲಿ ಸುರಕ್ಷಿತ ಧಾಮವನ್ನು ಕಂಡುಕೊಂಡಿದ್ದಾರೆ, ಸಂತೋಷದಿಂದ ಮತ್ತು ಸಮೃದ್ಧವಾಗಿ ಬದುಕುತ್ತಿದ್ದಾರೆ. ದೇಶದ ಸರಿಸುಮಾರು 200 ಮಿಲಿಯನ್ ಮುಸ್ಲಿಮರ ಬಗ್ಗೆ ಯಾವುದೇ ನೇರ ಉಲ್ಲೇಖವನ್ನು ಪ್ರಧಾನಿ ಮೋದಿ ಮಾಡಿಲ್ಲ.ಸರ್ಕಾರದ ಟೀಕಾಕಾರರ ಮೇಲೆ ಆಪಾದಿತ ಶಿಸ್ತುಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ, ಪ್ರಧಾನಿ ಜೋರಾಗಿ ನಕ್ಕರು ಎಂದು ಎಫ್‍ಟಿ ಹೇಳಿದೆ.
6
+ ನಮ್ಮ ದೇಶದಲ್ಲಿ ಲಭ್ಯವಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಇಡೀ ಪರಿಸರ ವ್ಯವಸ್ಥೆಯು ಪ್ರತಿದಿನ ಸಂಪಾದಕೀಯಗಳು, ಟಿವಿ ಚಾನೆಲ್‍ಗಳು, ಸಾಮಾಜಿಕ ಮಾಧ್ಯಮಗಳು, ವೀಡಿಯೊಗಳು, ಟ್ವೀಟ್‍ಗಳು ಇತ್ಯಾದಿಗಳ ಮೂಲಕ ಈ ಆರೋಪಗಳನ್ನು ನಮ್ಮ ಮೇಲೆ ಎಸೆಯಲು ಬಳಸುತ್ತಿದೆ ಎಂದು ಮೋದಿ ಸ್ಪಷ್ಟವಾದ ಮಾತಿನಲ್ಲಿ ಹೇಳಿದ್ದಾರೆ.
7
+ ಟೂಲ್‍ಕಿಟ ಮತ್ತು ತುಕ್ಡೆ ತುಕ್ಡೆ ಗ್ಯಾಂಗ್ ಕುರಿತು ಅವರಿಗೆ ಹಾಗೆ ಮಾಡುವ ಹಕ್ಕಿದೆ. ಆದರೆ ಸತ್ಯಗಳೊಂದಿಗೆ ಪ್ರತಿಕ್ರಿಯಿಸಲು ಇತರರಿಗೆ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. ಇತ್ತೀಚಿಗೆ ನಡೆದ ರಾಜಸ್ಥಾನ, ಛತ್ತೀಸ್‍ಗಢ ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಬಿಜೆಪಿಯ ಪ್ರಾಬಲ್ಯ ಪ್ರದರ್ಶನದ ಹಿನ್ನೆಲೆಯಲ್ಲಿ, ತಮ್ಮ ಸರ್ಕಾರವು ದೀರ್ಘಕಾಲದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಕಿತ್ತುಹಾಕುತ್ತಿದೆ ಎಂಬ ಟೀಕೆಗಳನ್ನು ತಳ್ಳಿಹಾಕಿದ್ದಾರೆ.
8
+ ಮುನಿಸಿಕೊಂಡಿರುವ ನಿತೀಶ್ ಜತೆ ರಾಹುಲ್ ಮಾತುಕತೆ
9
+ ನೀವು ಪ್ರಸ್ತುತ ಮಾಡ���ದ ಸಮಸ್ಯೆಗಳು ಸೂಚಿಸಿದಂತೆ ವ್ಯಾಪಕವಾಗಿದ್ದರೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಸ್ಥಾನಮಾನವನ್ನು ಸಾಸುವುದಿಲ್ಲ ಎಂದು ಗುರುತಿಸುವುದು ಮುಖ್ಯವಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.
10
+ ನಮ್ಮ ವಿಮರ್ಶಕರು ತಮ್ಮ ಅಭಿಪ್ರಾಯಗಳಿಗೆ ಮತ್ತು ಅವುಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಅರ್ಹರಾಗಿದ್ದಾರೆ. ಆದಾಗ್ಯೂ, ಇಂತಹ ಆರೋಪಗಳಲ್ಲಿ ಮೂಲಭೂತ ಸಮಸ್ಯೆ ಇದೆ, ಅದು ಸಾಮಾನ್ಯವಾಗಿ ಟೀಕೆಗಳಾಗಿ ಕಂಡುಬರುತ್ತದೆ. ಈ ಹಕ್ಕುಗಳು ಭಾರತೀಯ ಜನರ ಬುದ್ಧಿವಂತಿಕೆಯನ್ನು ಅವಮಾನಿಸುವುದಲ್ಲದೆ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವದಂತಹ ಮೌಲ್ಯಗಳಿಗೆ ಅವರ ಆಳವಾದ ಬದ್ಧತೆಯನ್ನು ಕಡಿಮೆ ಅಂದಾಜು ಮಾಡುತ್ತವೆ ಎಂದು ಮೋದಿ ಹೇಳಿದ್ದಾರೆ.
eesanje/url_47_210_6.txt ADDED
@@ -0,0 +1,7 @@
 
 
 
 
 
 
 
 
1
+ ಜಾತಿ ಗಣತಿಗೆ ವಿರೋಧ ಇಲ್ಲ : ಆರ್‌ಎಸ್‌ಎಸ್‌
2
+ ನವದೆಹಲಿ,ಡಿ.22- ಜಾತಿ ಗಣತಿಯನ್ನು ವಿರೋಧಿಸುವುದಿಲ್ಲ ಎಂದು ಹೇಳಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್), ಜನಗಣತಿಯನ್ನು ಸಮಾಜದ ಪ್ರಗತಿಗೆ ಬಳಸಬೇಕೆಂದು ಸ್ಪಷ್ಟಪಡಿಸಿದ್ದು, ಇದರಲ್ಲಿ ರಾಜಕೀಯ ಬೇಡ ಎಂದು ಸಲಹೆ ಮಾಡಿದೆ. ಆರ್‍ಎಸ್‍ಎಸ್‍ನ ಪದಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಧರ್ ಗಾಡ್ಗೆ ಅವರು ಡಿಸೆಂಬರ್ 19 ರಂದು ಜನಗಣತಿಯನ್ನು ವಿರೋಧಿಸಿದ್ದರು. ಮತ್ತು ಜಾತಿ ಗಣತಿಯು ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ಬಗ್ಗೆ ಡೇಟಾವನ್ನು ಒದಗಿಸುವುದರಿಂದ ಕೆಲವು ಜನರಿಗೆ ರಾಜಕೀಯವಾಗಿ ಲಾಭವಾಗಬಹುದು ಎಂದು ಹೇಳಿದ್ದರು.
3
+ ಆದರೆ ಇದು ಸಾಮಾಜಿಕವಾಗಿ ಅಪೇಕ್ಷಣೀಯವಲ್ಲ. ಜೊತೆಗೆ ರಾಷ್ಟ್ರೀಯ ಏಕತೆಯ ವಿಷಯದಲ್ಲಿ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ, ಆರ್‍ಎಸ್‍ಎಸ್‍ನ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಜಾತಿ ಗಣತಿಯನ್ನು ನಡೆಸುವಾಗ, ಅದು ಬಿರುಕು ಸೃಷ್ಟಿಸದಂತೆ ನೋಡಿಕೊಳ್ಳಬೇಕು. ಯಾವುದೇ ತಾರತಮ್ಯ ಮತ್ತು ತಾರತಮ್ಯವಿಲ್ಲದೆ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹಿಂದೂ ಸಮಾಜವನ್ನು ನಿರ್ಮಿಸಲು ಸಂಘಟನೆಯು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಂಘಟನೆ ಹೇಳಿದೆ.
4
+ ಜಾತಿವಾರು ಜನಗಣತಿ ಕುರಿತು ಮತ್ತೆ ಚರ್ಚೆ ಆರಂಭಗೊಂಡಿದ್ದು, ಇದನ್ನು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದು, ಇದನ್ನು ಮಾಡುವಾಗ ಎಲ್ಲ ಪಕ್ಷಗಳು ಸಾಮಾಜಿಕ ಸಾಮರಸ್ಯ ಮತ್ತು ಐಕ್ಯತೆ ಕಾಪಾಡಬೇಕು.ವಿವಿಧ ಐತಿಹಾಸಿಕ ಕಾರಣಗಳಿಂದಾಗಿ ಸಮಾಜದ ಹಲವು ವರ್ಗಗಳು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದು ನಿಜ ಎಂದು ಅಂಬೇಕರ್ ಹೇಳಿದ್ದಾರೆ.
5
+ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ್ದಕ್ಕೆ ಧನ್ಯವಾದ ; ಕಾಂಗ್ರೆಸ್
6
+ ಕಾಲಕಾಲಕ್ಕೆ ಅಂತಹ ವಿಭಾಗಗಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ವಿವಿಧ ಸರ್ಕಾರಗಳು ಯೋಜನೆಗಳು ಮತ್ತು ವಿಶೇಷ ನಿಬಂಧನೆಗಳನ್ನು ಪರಿಚಯಿಸಿವೆ ಮತ್ತು ಅಂತಹ ಕ್ರಮಗಳನ್ನು ಆರ್‍ಎಸ್‍ಎಸ್ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ವಿಶೇಷವೆಂದರೆ, ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಜಾತಿ ಗಣತಿಗೆ ಒತ್ತಾಯಿಸುತ್ತಿವೆ ಮತ್ತು ಕಳೆದ ತಿಂಗಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಈ ಬೇಡಿಕೆಯು ಚುನಾವಣಾ ವಿಷಯವಾಗಿತ್ತು.
7
+ ವಿಶೇಷವಾಗಿ ಬಿಹಾರ ಸರ್ಕಾರವು ಈ ವರ್ಷದ ಆರಂಭದಲ್ಲಿ ನಡೆಸಿದ ಜಾತಿ ಸಮೀಕ್ಷೆಯಿಂದ ಡೇಟಾವನ್ನು ಬಿಡುಗಡೆ ಮಾಡಿದ ನಂತರ ಹಲವು ರಾಜ್ಯಗಳಲ್ಲಿ ಈ ಬೇಡಿಕೆ ಹೆಚ್ಚಾಗಿತ್ತು. ಕಳೆದ ತಿಂಗಳು, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಎಂದಿಗೂ ಜಾತಿ ಗಣತಿಯನ್ನು ವಿರೋಸಿಲ್ಲ ಎಂದು ಹೇಳಿದ್���ರು.
eesanje/url_47_210_7.txt ADDED
@@ -0,0 +1,6 @@
 
 
 
 
 
 
 
1
+ ಸಂಸದರ ಅಮಾನತು ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ
2
+ ಬೆಂಗಳೂರು,ಡಿ.22- ವಿರೋಧಪಕ್ಷಗಳ 143 ಕ್ಕೂ ಹೆಚ್ಚು ಸಂಸದರನ್ನು ಅಮಾನತು ಮಾಡಿ ಸಂಸತ್ ಕಲಾಪ ನಡೆಸಿದ್ದನ್ನು ಖಂಡಿಸಿ ಇಂದು ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
3
+ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಪ್ರಮುಖ ನಾಯಕರು ಭಾಗವಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಂಸತ್ ಕಲಾಪದಲ್ಲಿ ಪ್ರಜಾಸತ್ತಾತ್ಮಕ ಚರ್ಚೆಗೆ ಅವಕಾಶ ನೀಡದೇ ವಿರೋಧಪಕ್ಷಗಳ ಸದಸ್ಯರನ್ನು ಅಮಾನತುಗೊಳಿಸಿದ್ದಲ್ಲದೆ ಅವರ ಅನುಪಸ್ಥಿತಿಯಲ್ಲಿ ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ ಹಾಗೂ ದೂರಸಂಪರ್ಕ ದಂತಹ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಗಿದೆ.
4
+ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ್ದಕ್ಕೆ ಧನ್ಯವಾದ ; ಕಾಂಗ್ರೆಸ್
5
+ ಐಪಿಸಿ, ಸಿಆರ್‍ಪಿಸಿ ಮತ್ತು ಸಾಕ್ಷ್ಯ ಕಾಯಿದೆಗಳಿಗೆ ಪರ್ಯಾಯವಾಗಿ ರೂಪಿಸಲಾಗಿರುವ ಮೂರು ಭಾರತೀಯ ಮಸೂದೆಗಳನ್ನು ವಿಪಕ್ಷಗಳ ರಚನಾತ್ಮಕ ಅಭಿಪ್ರಾಯಗಳಿಲ್ಲದೆ ಅಂಗೀಕರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
6
+ ಕಾಂಗ್ರೆಸ್‍ನ ಬಹುತೇಕ ಸಂಸದರನ್ನು ಸದನದಿಂದ ಹೊರಗಿಟ್ಟು, ಕಾಯಿದೆ ರೂಪಿಸಿರುವುದು ಇದೇ ಸಂದರ್ಭದಲ್ಲಿ ಇತರ ಪಕ್ಷಗಳ ನಾಯಕರುಗಳನ್ನೂ ಕೂಡ ಅಮಾನತುಗೊಳಿಸಿರುವುದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.
eesanje/url_47_210_8.txt ADDED
@@ -0,0 +1,6 @@
 
 
 
 
 
 
 
1
+ ಮುನಿಸಿಕೊಂಡಿರುವ ನಿತೀಶ್ ಜತೆ ರಾಹುಲ್ ಮಾತುಕತೆ
2
+ ನವದೆಹಲಿ,ಡಿ.22- ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನವೇ ಇಂಡಿಯಾ ಒಕ್ಕೂಟದಲ್ಲಿ ಇನ್ನಷ್ಟು ಬಿರುಕು ಮೂಡಲಿದೆ ಎಂಬ ಮಾತುಗಳ ಕೇಳಿ ಬರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂಭಾಷಣೆಯ ವಿವರಗಳು ಪ್ರಸ್ತುತ ಲಭ್ಯವಿಲ್ಲ ಆದರೆ ಬುಧವಾರದ ಸಭೆಯ ಪತನದ ಕುರಿತು ಇಬ್ಬರೂ ಮಾತನಾಡಿದ್ದಾರೆ ಎಂಬ ಊಹಾಪೋಹವಿದೆ.
3
+ ನಿತೀಶ್ ಕುಮಾರ್ ಅವರು ಒಕ್ಕೂಟವನ್ನು ಇಂಡಿಯಾ ಎಂದು ನಾಮಕರಣ ಮಾಡುವುದು ಸೇರಿದಂತೆ ಹಲವಾರು ವಿಷಯಗಳಲ್ಲಿ ಒಕ್ಕೂಟದ ನಾಯಕರೊಂದಿಗೆ ಘರ್ಷಣೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಆ ಪ್ರಸ್ತಾವನೆಯನ್ನು ಕಾಂಗ್ರೆಸ್‍ನ ಸೋನಿಯಾ ಗಾಂಧಿ ಅವರು ಶೀಘ್ರವಾಗಿ ಅವರ ಬೇಡಿಕೆಯನ್ನು ನಿರಾಕರಿಸಿದ್ದರು. ನವೆಂಬರ್‍ನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‍ನ ಹೀನಾಯ ಪ್ರದರ್ಶನದ ನಂತರ ನಿತೀಶ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು ಇದನ್ನು ಮತದಾರರಲ್ಲಿ ಇಂಡಿಯ ಒಕ್ಕೂಟದ ಒಣ ಓಟ ಎಂದು ಟೀಕಿಸಲಾಗಿತ್ತು.
4
+ ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿಗಳಿಗೆ ಮನೋವಿಶ್ಲೇಷಣಾ ಪರೀಕ್ಷೆ
5
+ 2024 ರ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸಲು ಕಾಂಗ್ರೆಸ್ ಕಳೆದ ತಿಂಗಳ ಚುನಾವಣೆಗೆ ಆದ್ಯತೆ ನೀಡಿದ ನಂತರ ದೆಹಲಿ ಸಭೆಯಲ್ಲಿ – ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ದೆಹಲಿ ಕೌಂಟರ್ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪಿಸಿರುವುದು ನಿತೀಶ್ ಕೋಪಕ್ಕೆ ಕಾರಣ ಎನ್ನಲಾಗಿದೆ.
6
+ ನಿತೀಶ್ ಕುಮಾರ್ ಅವರು ತಮ್ಮ ಪ್ರಧಾನ ಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯ ಬಗ್ಗೆ ಸಾರ್ವಜನಿಕವಾಗಿ ನಿರಾಕರಿಸಿದ್ದಾರೆ ಆದರೆ ಖಾಸಗಿಯಾಗಿ, ಆಕಾಂಕ್ಷಿ ಎಂದು ನಂಬಲಾಗಿದೆ.
eesanje/url_47_210_9.txt ADDED
@@ -0,0 +1,6 @@
 
 
 
 
 
 
 
1
+ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ್ದಕ್ಕೆ ಧನ್ಯವಾದ ; ಕಾಂಗ್ರೆಸ್
2
+ ರಾಮಮಂದಿರ ನವದೆಹಲಿ,ಡಿ.22- ಮುಂಬರುವ ಜನವರಿ 22 ರಂದು ಅಯೋಧ್ಯೆಯಲ್ಲಿ ನೆರವೇರಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಉನ್ನತ ನಾಯಕರು ಪಾಲ್ಗೊಳ್ಳುತ್ತಾರೆಯೇ ಎಂಬುದರ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಇನ್ನು ಬಹಿರಂಗಪಡಿಸಿಲ್ಲ, ಆದರೆ ಆಹ್ವಾನಗಳಿಗೆ ಧನ್ಯವಾದ ಎಂದು ಹೇಳಿದೆ.
3
+ ಜ. 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಅೀಧಿರ್ ರಂಜನ್ ಚೌಧರಿ ಅವರಿಗೆ ಆಹ್ವಾನ ಬಂದಿದೆ.ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನ ನೀಡಿತ್ತು.
4
+ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣ ಎನ್‍ಐಎಗೆ ವರ್ಗಾವಣೆ
5
+ ಪಕ್ಷದ ಮುಖಂಡರು ಸಮಾರಂಭಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಪಕ್ಷದ ನಿಲುವು ನಿಮಗೆ ತಿಳಿಯುತ್ತದೆ, ಭಾಗವಹಿಸುವ ಬಗ್ಗೆ ಜನವರಿ 22 ರಂದು ತಿಳಿಯಲಿದೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ. ಅವರು ನಮ್ಮನ್ನು ಆಹ್ವಾನಿಸಿದ್ದಾರೆ, ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ನಾವು ಅವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಅವರು ಹೇಳಿದರು.
6
+ ಆಮಂತ್ರಣಗಳನ್ನು ಖರ್ಗೆ, ಸೋನಿಯಾ ಗಾಂಧಿ, ಆೀಧಿರ್ ರಂಜನ್ ಚೌಧರಿ ಅವರಿಗೆ ಪ್ರತ್ಯೇಕವಾಗಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಹೆಚ್ ಡಿ ದೇವೇಗೌಡರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ಪ್ರತಿಪಕ್ಷ ನಾಯಕರಿಗೂ ಹೆಚ್ಚಿನ ಆಹ್ವಾನ ಕಳುಹಿಸುವ ಸಾಧ್ಯತೆ ಇದೆ. ದೇಶದ ಗೌರವಕ್ಕೆ ಕೊಡುಗೆ ನೀಡುವ ಎಲ್ಲಾ ಪ್ರಮುಖ ವ್ಯಕ್ತಿಗಳ ಜೊತೆಗೆ ವಿವಿಧ ಸಂಪ್ರದಾಯಗಳ ಪೂಜ್ಯ ದಾರ್ಶನಿಕರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಟ್ರಸ್ಟ ಹೇಳಿದೆ.
eesanje/url_47_211_1.txt ADDED
@@ -0,0 +1,8 @@
 
 
 
 
 
 
 
 
 
1
+ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣ ಎನ್‍ಐಎಗೆ ವರ್ಗಾವಣೆ
2
+ ಗುವಾಹಟಿ,ಡಿ.22-ಅರುಣಾಚಲ ಪ್ರದೇಶದ ಮಾಜಿ ಕಾಂಗ್ರೆಸ್ ಶಾಸಕ ಯುಮ್ಸೇನ್ ಮೇಟಿ ಹತ್ಯೆ ಪ್ರಕರಣವನ್ನು ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿದೆ. ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆಗೆ ವರ್ಗಾಯಿಸುವಂತೆ ರಾಜ್ಯ ಪೊಲೀಸರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು.
3
+ ಸೂಕ್ಷ್ಮ ಮತ್ತು ಸಂಪೂರ್ಣ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಪ್ರಕರಣವನ್ನು ಎನ್‍ಐಎಗೆ ವರ್ಗಾಯಿಸುವ ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಂಡಿದೆ. ಅರುಣಾಚಲ ಪ್ರದೇಶ ಸರ್ಕಾರವು ಈಗಾಗಲೇ ಗೃಹ ಸಚಿವಾಲಯಕ್ಕೆ ಪ್ರಕರಣವನ್ನು ರವಾನಿಸಿದ್ದು, ಕೇಂದ್ರ ಸರ್ಕಾರ ಎನ್‍ಐಎ ಮಧ್ಯಪ್ರವೇಶಕ್ಕೆ ಅಗತ್ಯ ನಿರ್ದೇಶನಗಳನ್ನು ಕೋರಿದೆ ಎಂದು ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
4
+ ಕಳೆದ ವಾರ ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮಾಜಿ ಕಾಂಗ್ರೆಸ್ ಶಾಸಕನನ್ನು ಹತ್ಯೆ ಮಾಡಲಾಗಿತ್ತು. ಅವರು ಮ್ಯಾನ್ಮಾರ್ ಗಡಿಯ ಸಮೀಪವಿರುವ ರಾಹೋ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
5
+ ಮಾಜಿ ಶಾಸಕ ತನ್ನ ಮೂವರು ಸಹಚರರೊಂದಿಗೆ ಗ್ರಾಮದಲ್ಲಿದ್ದಾಗ ಯಾರೋ ಅವರನ್ನು ಸಮೀಪಿಸಿ ಹತ್ತಿರದ ಕಾಡಿಗೆ ಕರೆದೊಯ್ದರು ಎಂದು ಹಿರಿಯ ತಿರಪ್ ಪೊಲೀಸ್ ಅಧಿಕಾರಿ ರಾಹುಲ್ ಗುಪ್ತಾ ತಿಳಿಸಿದ್ದಾರೆ. ಕಾಡಿನಲ್ಲಿ ಯಾರೋ ಮೇಟಿಗೆ ಗುಂಡು ಹಾರಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ನಂತರ ದಾಳಿಕೋರ ಮ್ಯಾನ್ಮಾರ್ ಕಡೆಗೆ ಪರಾರಿಯಾಗಿದ್ದಾನೆ.
6
+ ಆರ್​ಸಿಬಿಗೆ ಕಾಡಲಿದೆ ಸ್ಪಿನ್ನರ್ ಕೊರತೆ
7
+ ದಾಳಿಕೋರರನ್ನು ಗುರುತಿಸಲು ಪೊಲೀಸರು ನಿರಾಕರಿಸಿದ್ದರೂ, ಅವರು ಎನ್‍ಎಸ್‍ಸಿಎನ್-ಕೆವೈಎ ಎಂಬ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಶಂಕಿಸಲಾಗಿದೆ. ದಾಳಿಕೋರರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 2009 ರಲ್ಲಿ ಮೇಟಿ ಅವರು 56 ನೇ ಖೋನ್ಸಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು.
8
+ ಅವರ ಅಧಿಕಾರಾವಧಿಯಲ್ಲಿ ಅವರು ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ಹೊಂದಿದ್ದರು, ಮಹಿಳಾ ಮತ್ತು ಸಮಾಜ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ವ್ಯವಹಾರಗಳ ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದರು. ಅವರು 2015 ರಲ್ಲಿ ಬಿಜೆಪಿ ಸೇರಿದರು ಮತ್ತು ಈ ವರ್ಷದ ಆರಂಭದಲ್ಲಿ 2024 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಧಿಸುವ ಇಚ್ಛೆಯನ್ನು ಘೋಷಿಸಿದ್ದರು.
eesanje/url_47_211_10.txt ADDED
@@ -0,0 +1,5 @@
 
 
 
 
 
 
1
+ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
2
+ ಲಕ್ನೋ, ಡಿ 21 (ಪಿಟಿಐ) ಉತ್ತರ ಪ್ರದೇಶ ಮೌ ಜಿಲ್ಲೆಯ ಗ್ರಾಮವೊಂದರಲ್ಲಿ 14 ವರ್ಷದ ಬಾಲಕಿಯ ಮೇಲೆ ಐವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕೃತಿಯ ಕರೆಗೆ ಹಾಜರಾಗಲು ಹುಡುಗಿ ತನ್ನ ಮನೆಯಿಂದ ಹೊರಬಂದಾಗ ಐವರು ಪುರುಷರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಸಿಂಗ್ ಅತ್ರಿ ತಿಳಿಸಿದ್ದಾರೆ.
3
+ ಆರೋಪಿಗಳು ಘಟನೆಯ ವೀಡಿಯೊವನ್ನು ಮಾಡಿದ್ದಾರೆ ಮತ್ತು ಹುಡುಗಿ ಅಪರಾಧದ ಬಗ್ಗೆ ಯಾರಿಗಾದರೂ ಹೇಳಿದರೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅತ್ರಿ ಹೇಳಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐದು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂತ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.
4
+ 4 ವರ್ಷದೊಳಗಿನ ಮಕ್ಕಳಿಗೆ ಈ ಕೆಮ್ಮಿನ ಸಿರಪ್ ನೀಡುವಂತಿಲ್ಲ
5
+ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಮತ್ತು ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನೆಯ ನಂತರ ಇಷ್ಟು ದಿನಗಳ ನಂತರ ಪೊಲೀಸ್ ದೂರು ಏಕೆ ದಾಖಲಿಸಲಾಗಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.
eesanje/url_47_211_11.txt ADDED
@@ -0,0 +1,6 @@
 
 
 
 
 
 
 
1
+ 1614 ಕೋಟಿ ರೂ.ವೆಚ್ಚದಲ್ಲಿ 6 ಗಸ್ತು ಹಡಗು ಖರೀದಿಗೆ ಒಪ್ಪಂದ
2
+ ನವದೆಹಲಿ,ಡಿ.21- ಭಾರತೀಯ ಕೋಸ್ಟ್ ಗಾರ್ಡ್‍ಗಾಗಿ ಮುಂದಿನ ಪೀಳಿಗೆಯ ಆರು ಆಫ್‍ಶೋರ್ ಗಸ್ತು ಹಡಗುಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು ಮಜಗಾನ್ ಡಾಕ್‍ಯಾರ್ಡ್ ಶಿಪ್‍ಬಿಲ್ಡರ್ಸ್ ಲಿಮಿಟೆಡ್‍ನೊಂದಿಗೆ 1,614 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ಲಾಟ್‍ಫಾರ್ಮ್‍ಗಳ ಸ್ವಾೀಧಿನವು ಕಡಲ ಭದ್ರತೆಯ ಕಡೆಗೆ ಕೋಸ್ಟ್ ಗಾರ್ಡ್‍ನ ಸಾಮಥ್ರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
3
+ ಒಟ್ಟು 1,614.89 ಕೋಟಿ ವೆಚ್ಚದಲ್ಲಿ ಖರೀದಿ (ಭಾರತೀಯ-ಐಡಿಡಿಎಂ) ವಿಭಾಗದ ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಆರು ನೌಕೆಗಳನ್ನು ಖರೀದಿಸಲಾಗುತ್ತಿದೆ ನಾಲ್ಕು ಅಸ್ತಿತ್ವದಲ್ಲಿರುವ ಹಳೆಯ ಕಡಲಾಚೆಯ ಗಸ್ತು ಹಡಗುಗಳನ್ನು ಬದಲಾಯಿಸಲಾಗುತ್ತದೆ ಮತ್ತು ಇತರ ಎರಡು ಹಡಗುಗಳನ್ನು ಹೆಚ್ಚುವರಿಯಾಗಿ ಖರೀದಿಸಲಾಗುತ್ತಿದೆ.
4
+ ಪೊಲೀಸರ ಸೋಗಿನಲ್ಲಿ ನುಗ್ಗಿ ಉದ್ಯಮಿ ಮನೆ ದೋಚಿದ್ದ 8 ಡಕಾಯಿತರ ಬಂಧನ
5
+ ಈ ಆಧುನಿಕ ಮತ್ತು ಹೈಟೆಕ್ ಹಡಗುಗಳು ಕಣ್ಗಾವಲು, ಕಾನೂನು ಜಾರಿ, ಹುಡುಕಾಟ ಮತ್ತು ಪಾರುಗಾಣಿಕಾ, ಸಮುದ್ರ ಮಾಲಿನ್ಯ ಪ್ರತಿಕ್ರಿಯೆ ಮತ್ತು ಮಾನವೀಯ ನೆರವು ಸೇರಿದಂತೆ ಇತರ ಪ್ರಮುಖ ಸಾಮಥ್ರ್ಯಗಳನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಅದು ಹೇಳಿದೆ.
6
+ ಹಲವಾರು ಹೈಟೆಕ್ ಸುಧಾರಿತ ವೈಶಿಷ್ಟ್ಯಗಳು ಮತ್ತು ಸಲಕರಣೆಗಳ ಜೊತೆಗೆ, ಈ ಕಡಲಾಚೆಯ ಗಸ್ತು ನೌಕೆಗಳು ವಿವಿಧೋದ್ದೇಶ ಡ್ರೋನ್‍ಗಳು, ಎಐ(ಕೃತಕ ಬುದ್ಧಿಮತ್ತೆ) ಸಾಮಥ್ರ್ಯಗಳು ಮತ್ತು ವೈರ್‍ಲೆಸ್‍ನಿಂದ ನಿಯಂತ್ರಿತ ರಿಮೋಟ್ ವಾಟರ್ ರೆಸ್ಕ್ಯೂ ಕ್ರಾಫ್ಟ್ ಲೈಫ್‍ಬಾಯ್‍ಗಳನ್ನು ಹೊಂದಿದ್ದು, ಹೆಚ್ಚಿನ ನಮ್ಯತೆ ಮತ್ತು ಕಾರ್ಯಾಚರಣೆಯ ಅಂಚನ್ನು ಸಕ್ರಿಯಗೊಳಿಸುತ್ತದೆ.
eesanje/url_47_211_12.txt ADDED
@@ -0,0 +1,7 @@
 
 
 
 
 
 
 
 
1
+ ಕಾಂಗ್ರೆಸ್‍ನಲ್ಲಿ ಸಕ್ರಿಯರಾಗಿರಲು ನವಜೋತ್ ಸಿಂಗ್ ಸಿಧುಗೆ ಕರೆ
2
+ ಚಂಡೀಗಢ,ಡಿ.21- ಸ್ವಂತ ಪಕ್ಷ ಸ್ಥಾಪಿಸುವುದನ್ನು ಬಿಟ್ಟು ಮತ್ತೆ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಳ್ಳುವಂತೆ ಪಂಜಾಬ್‍ನ ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಆಹ್ವಾನಕ್ಕೆ ಸಿಧು ಪ್ರತಿಕ್ರಿಯಿಸದಿದ್ದರೂ ಅವರ ಜತೆ ಇರುವ ಐವರು ಮಾಜಿ ಶಾಸಕರು ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥರಾಗಲೀ ಅಥವಾ ತಮ್ಮನ್ನು ರಾಜ್ಯ ಘಟಕದ ಕಾರ್ಯಕ್ರಮಗಳಿಗೆ ಆಹ್ವಾನಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
3
+ ಸಿಧು ಅವರು ಬಟಿಂಡಾದಲ್ಲಿ ರ್ಯಾಲಿ ನಡೆಸಿದ ಕೆಲವು ದಿನಗಳ ನಂತರ ಪಂಜಾಬ್ ಕಾಂಗ್ರೆಸ್‍ನಲ್ಲಿನ ಗುಂಪುಗಾರಿಕೆಗೆ ಸಾಕ್ಷಿಯಾಗಿದೆ. 2022 ರ ಚುನಾವಣೆಯ ಮೊದಲು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆಪಾದಿಸಲಾದ ಎಎಪಿ ಸರ್ಕಾರವನ್ನು ಸಿಧು ಗುರಿಯಾಗಿಸಿರುವ ಡಿ 17 ರ ರ್ಯಾಲಿಯಲ್ಲಿ ರಾಜ್ಯ ಘಟಕದ ಯಾವುದೇ ಗಮನಾರ್ಹ ಹಿರಿಯ ನಾಯಕರು ಭಾಗವಹಿಸಿರಲಿಲ್ಲ.
4
+ ಸಿಧು ಅವರ ರ್ಯಾಲಿಗೆ ಪ್ರತಿಕ್ರಿಯಿಸಿದ ಬಜ್ವಾ, ಸಿದ್ದು ಸಾಬ್ ಅವರು ಸ್ವಲ್ಪ ಪ್ರಬುದ್ಧತೆಯಿಂದ ವರ್ತಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಹೇಳಿದರು. ಈ ಜಮಾತ್ (ಕಾಂಗ್ರೆಸ್ ಪಕ್ಷ) ನಿಮಗೆ ಗೌರವ ನೀಡಿದ್ದರೆ ಅದನ್ನು ಅರಗಿಸಿಕೊಳ್ಳಿ, ಅಂತಹ ಕೃತ್ಯವನ್ನು ಮಾಡಬೇಡಿ, ನೀವು ಪಿಪಿಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷದ ಪರಿಸ್ಥಿತಿ ಹೇಗಿತ್ತು ಎಂದು ನೀವೇ ಊಹಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
5
+ ಪೊಲೀಸರ ಸೋಗಿನಲ್ಲಿ ನುಗ್ಗಿ ಉದ್ಯಮಿ ಮನೆ ದೋಚಿದ್ದ 8 ಡಕಾಯಿತರ ಬಂಧನ
6
+ ಪಂಜಾಬ್ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಜ್ವಾ ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಸಿಧು ಅವರನ್ನು ಕೇಳಿಕೊಂಡರು. ಪಕ್ಷದ ಕಾರ್ಯಕರ್ತರೊಂದಿಗೆ ಹೋಗುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ, ಪಕ್ಷದ ಎಲ್ಲ ಹಂತಗಳಿಗೆ ಬನ್ನಿ. ಎರಡು ದಿನಗಳ ನಂತರ ನಾವು ಜಾಗರಾನ್ ಮತ್ತು ಫಗ್ವಾರದಲ್ಲಿ ಪ್ರತಿಭಟನೆಗಳನ್ನು ಯೋಜಿಸಿದ್ದೇವೆ.
7
+ ಆ ವೇದಿಕೆಗೆ ಬಂದು ನೀವು ಏನು ಮಾತನಾಡಲು ಬಯಸುತ್ತೀರೋ ಅದನ್ನು ಮಾತನಾಡಿ. ಅಪ್ನಾ ನವನ ಅಖಾರಾ ಸ್ಥಾಪಿಸಲಾಗುತ್ತಿದೆ (ಸ್ವಂತ ವೇದಿಕೆ) ಎಂಬುದು ಒಳ್ಳೆಯದಲ್ಲ, ಯಾವುದೇ ಪಂಜಾಬ್ ಕಾಂಗ್ರೆಸ್ಸಿಗರೂ ಅದನ್ನು ಒಳ್ಳೆಯದೆಂದು ಪರಿಗಣಿಸುವುದಿಲ್ಲ ಎಂದು ಬಾಜ್ವಾ ಹೇಳಿದರು.
eesanje/url_47_211_2.txt ADDED
@@ -0,0 +1,5 @@
 
 
 
 
 
 
1
+ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮುಖ್ಯ ಅತಿಥಿ..?
2
+ ನವದೆಹಲಿ, ಡಿ 22 (ಪಿಟಿಐ) ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಗಮಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
3
+ ಮೊದಲು ಅಮೆರಿಕ ಅಧ್ಯಕ್ಷ ಜೋ ಬಿಡೇನ್ ಅವರನ್ನು ಗಣ ರಾಜ್ಯೋತ್ಸವದ ಮುಖ್ಯ ಅತಿಥಿಯಾಗುವಂತೆ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಜನವರಿಯಲ್ಲಿ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ನಂತರ ಫ್ರಾನ್ಸ್ ಅಧ್ಯಕ್ಷರಿಗೆ ಮನವಿ ಮಾಡಿಕೊಳ್ಳಲಾಗಿತ್ತು.
4
+ ಜಾರ್ಖಂಡ್‍ : ರೈಲ್ವೆ ಹಳಿ ಸ್ಪೋಟಿಸಿದ ನಕ್ಸಲರು
5
+ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದು, ಅವರೇ ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
eesanje/url_47_211_3.txt ADDED
@@ -0,0 +1,7 @@
 
 
 
 
 
 
 
 
1
+ ಕಾಶ್ಮೀರದ ಪೂಂಚ್ ಅರಣ್ಯದಲ್ಲಿ ಉಗ್ರರಿಗಾಗಿ ಸೇನೆಯಿಂದ ಶೋಧ ಕಾರ್ಯಾಚರಣೆ
2
+ ಪೂಂಚ್, ಡಿ 22 (ಪಿಟಿಐ) ಭಯೋತ್ಪಾದಕರ ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿ ಇಬ್ಬರು ಗಾಯಗೊಂಡ ಒಂದು ದಿನದ ನಂತರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಇಂದು ಬೃಹತ್ ಸರ್ಪಗಾವಲು ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
3
+ ನಿನ್ನೆ ಮಧ್ಯಾಹ್ನ ಈ ಪ್ರದೇಶದಲ್ಲಿ ಎರಡು ಸೇನಾ ವಾಹನಗಳ ಮೇಲೆ ಹೊಂಚುದಾಳಿ ನಡೆಸಿದ ಭಯೋತ್ಪಾದಕರನ್ನು ಪತ್ತೆಹಚ್ಚಲು ವೈಮಾನಿಕ ಮೇಲ್ವಿಚಾರಣೆಯನ್ನು ಸಹ ನಡೆಸಲಾಗುತ್ತಿದೆ ಮತ್ತು ಸ್ನಿಫರ್ ಡಾಗ್‍ಗಳನ್ನು ಸೇವೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4
+ ಈ ಪ್ರದೇಶದಲ್ಲಿ ರಾತ್ರಿಯ ಕಾರ್ಡನ್ ನಂತರ ಇಂದು ಬೆಳಿಗ್ಗೆ ಬೃಹತ್ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು. ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಹೆಚ್ಚುವರಿ ಪಡೆಗಳನ್ನು ಪ್ರದೇಶಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
5
+ ನಿನ್ನೆ ಮಧ್ಯಾಹ್ನ 3.45 ರ ಸುಮಾರಿಗೆ, ಸುರನ್‍ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಾಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‍ನಲ್ಲಿರುವ ಕುರುಡು ಕರ್ವ್‍ನಲ್ಲಿ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯ ಸ್ಥಳಕ್ಕೆ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಎರಡು ಸೇನಾ ವಾಹನಗಳು ದಾಳಿಗೆ ಒಳಗಾಗಿದ್ದವು. ಧೇರಾ ಕಿ ಗಲಿ (ಡಿಕೆಜಿ) ರಸ್ತೆಯನ್ನು ಸಂಚಾರಕ್ಕೆ ಮುಚ್ಚಲಾಗಿದೆ ಎಂದು ಮೇಲೆ ಉಲ್ಲೇಖಿಸಿದ ಅಧಿಕಾರಿ ತಿಳಿಸಿದ್ದಾರೆ. ಸೇನೆ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳು ಮೈದಾನದಲ್ಲಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.
6
+ ಜಾರ್ಖಂಡ್‍ : ರೈಲ್ವೆ ಹಳಿ ಸ್ಪೋಟಿಸಿದ ನಕ್ಸಲರು
7
+ ಮೂರರಿಂದ ನಾಲ್ಕು ಮಂದಿ ಎಂದು ನಂಬಲಾದ ಭಯೋತ್ಪಾದಕರು ಆರಂಭದಲ್ಲಿ ಬೆಟ್ಟದ ತುದಿಗಳಲ್ಲಿ ಸ್ಥಾನ ಪಡೆದಿರಬಹುದು ಎಂದು ಶಂಕಿಸಲಾಗಿದೆ. ದಾಳಿಯ ನಂತರ, ಅವರು ಕನಿಷ್ಠ ಇಬ್ಬರು ಸೈನಿಕರ ದೇಹಗಳನ್ನು ವಿರೂಪಗೊಳಿಸಿದ್ದಾರೆ ಮತ್ತು ಅವರಲ್ಲಿ ಕೆಲವರ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೊಂಚುದಾಳಿಯಲ್ಲಿ ಸ್ಟೀಲ್ ಕೋರ್ ಬುಲೆಟ್‍ಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಮಾದರಿ ಮತ್ತು ಬಳಕೆಯ ಬಗ್ಗೆ ತಿಳಿಯಲು ಸೈಟ್‍ನ ತನಿಖೆ ನಡೆಸಲಾಗುತ್ತಿದೆ ಎಂದು ಭದ್ರತಾ ಅಧಿಕಾರಿಗಳು ಹೇಳುತ್ತಾರೆ.
eesanje/url_47_211_4.txt ADDED
@@ -0,0 +1,8 @@
 
 
 
 
 
 
 
 
 
1
+ ನದಿ ನೀರಿನ ಹರಿವು ಆಳೆಯುವ ಸಾಧನ ಅಭಿವೃದ್ಧಿ
2
+ ಗುವಾಹಟಿ, ಡಿ 22 (ಪಿಟಿಐ) ಕೇಂದ್ರ ಜಲ ಶಕ್ತಿ ಸಚಿವಾಲಯದ ಬ್ರಹ್ಮಪುತ್ರ ಮಂಡಳಿಯ ಸಹಯೋಗದೊಂದಿಗೆ ಗುವಾಹಟಿಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿಜಿ) ಸಂಶೋಧಕರು ದೊಡ್ಡ ದೊಡ್ಡ ನದಿಗಳಲ್ಲಿನ ನೀರಿನ ಹರಿವನ್ನು ಅರ್ಥಮಾಡಿಕೊಳ್ಳುವಂತಹ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.
3
+ ನದಿ ದಂಡೆಯ ಸಂರಕ್ಷಣಾ ಕ್ರಮಗಳಿಗಾಗಿ ಸುಸ್ಥಿರ ರಚನೆಗಳನ್ನು ವಿನ್ಯಾಸಗೊಳಿಸಲು ಎಂಜಿನಿಯರ್‍ಗಳಿಗೆ ಅಮೂಲ್ಯವಾದ ಒಳನೋಟಗಳನ್ನು ನೀಡುವ ಉದ್ದೇಶವನ್ನು ಈ ಉಪಕ್ರಮವು ಹೊಂದಿದೆ ಎಂದು ಸಂಶೋಧಕರು ಶುಕ್ರವಾರ ಹೇಳಿದ್ದಾರೆ.
4
+ ಮಾದರಿ ಬ್ರೇಡೆಡ್ ರಿವರ್ ಏಡ್. ಹೈಡ್ರೋ-ಮಾರ್ಫಲಾಜಿಕಲ್ ವಿಶ್ಲೇಷಕ ಎನ್ನುವ ಈ ಮಾದರಿ ವಿಶ್ವದ ಎರಡನೇ ಅತಿದೊಡ್ಡ ಸಿಹಿನೀರಿನ ನದಿ ದ್ವೀಪ ಮತ್ತು ನದಿ ತೀರದ ಸವೆತಕ್ಕೆ ಗುರಿಯಾಗುವ ಮಜುಲಿ ದ್ವೀಪದ ಬಳಿಯ ಬ್ರಹ್ಮಪುತ್ರ ನದಿಯಲ್ಲಿ ಯಶಸ್ವಿಯಾಗಿ ಮೌಲ್ಯೀಕರಿಸಲಾಗಿದೆ. ನದಿಯ ವಿವಿಧ ಆಳಗಳಲ್ಲಿ ನೀರು ಎಷ್ಟು ವೇಗವಾಗಿ ಚಲಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
5
+ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಅರೂಪ್ ಕುಮಾರ್ ಶರ್ಮಾ ನೇತೃತ್ವದ ಸಂಶೋಧನೆಯು ಆಳದಲ್ಲಿನ ನದಿ ಹರಿವಿನ ವ್ಯತ್ಯಾಸಗಳನ್ನು ಊಹಿಸಲು ಸಹಾಯ ಮಾಡಲು ಸಮಗ್ರ ಗಣಿತದ ಮಾದರಿಯನ್ನು ಅಭಿವೃದ್ಧಿಪಡಿಸಿದೆ, ಇದು ಪ್ರವಾಹ ಮತ್ತು ಸವೆತ ನಿಯಂತ್ರಣ, ಕೃಷಿ, ನೀರು ಸರಬರಾಜು ಸೇವನೆ ವಿನ್ಯಾಸ ಮತ್ತು ಶಕ್ತಿ ಉತ್ಪಾದನೆಗೆ ನಿರ್ಣಾಯಕವಾಗಿದೆ.
6
+ ವಿಷ್ಣು ಸ್ಮಾರಕ ಅವರ ಕುಟುಂಬದವರ ನಿರ್ಧಾರದ ಮೇಲೆ ಅವಲಂಬಿಸಿದೆ : ಶಿವಣ್ಣ
7
+ ನಮ್ಮ ಮಾದರಿಯು ಹೆಚ್ಚು ಸಂಕೀರ್ಣವಾದ ಗಣಿತದ ಮಾಡೆಲಿಂಗ್ ಅನ್ನು ದೊಡ್ಡ ಹೆಣೆಯಲ್ಪಟ್ಟ ನದಿಗಳ ಕ್ಷೇತ್ರ ಆಧಾರಿತ ಸಂಶೋಧನೆಯೊಂದಿಗೆ ಸಂಯೋಜಿಸುತ್ತದೆ. ಈ ನದಿಯ ಹರಿವಿನ ಮಾದರಿಯೊಂದಿಗೆ, ನದಿಯಲ್ಲಿನ ವಿವಿಧ ಆಳಗಳಲ್ಲಿ ನೀರು ಎಷ್ಟು ವೇಗವಾಗಿ ಚಲಿಸುತ್ತದೆ ಮತ್ತು ನದಿ ದಡದ ಸವೆತವನ್ನು ತಡೆಯಲು ಸ್ಥಾಪಿಸಲಾದ ಸ್ಪರ್‍ನಂತಹ ರಚನೆಯ ಸುತ್ತಲೂ ಅದರ ಪರಿಚಲನೆಯನ್ನು ನಾವು ಅರ್ಥಮಾಡಿಕೊಳ್ಳಬಹುದು ಎಂದು ಶರ್ಮಾ ಹೇಳಿದರು.
8
+ ನದಿ ದಡಗಳು, ಸ್ಪರ್ಸ್ ಮತ್ತು ಸ್ಯಾಂಡ್‍ಬಾರ್‍ಗಳು ನೀರಿನ ಚಲನೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧನೆಯು ಪರಿಶೀಲಿಸುತ್ತದೆ, ನದಿ ದಂಡೆ ಸವೆತವನ್ನು ನಿಯಂತ್ರಿಸಲು ಜೈವಿಕ ಎಂಜಿನಿಯರಿಂಗ್ ವಿಧಾನಗಳನ್ನು ವಿನ್ಯಾಸಗೊಳಿಸಲು ಈ ಮಾದರಿಯು ಸಹಾಯ ಮಾಡಿದೆ ಎಂದು ಅವರು ಹೇಳಿದರು.
eesanje/url_47_211_5.txt ADDED
@@ -0,0 +1,6 @@
 
 
 
 
 
 
 
1
+ ಜಾರ್ಖಂಡ್‍ : ರೈಲ್ವೆ ಹಳಿ ಸ್ಪೋಟಿಸಿದ ನಕ್ಸಲರು
2
+ ಚೈಬಾಸಾ, ಡಿ 22 (ಪಿಟಿಐ) ನಿಷೇಧಿತ ಸಿಪಿಐ (ಮಾವೋವಾದಿ) ನಕ್ಸಲರು ಜಾರ್ಖಂಡ್‍ನ ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯಲ್ಲಿ ರೈಲ್ವೆ ಹಳಿಗಳ ಒಂದು ಭಾಗವನ್ನು ಸ್ಪೋಟಿಸಿದ್ದಾರೆ ಇದರಿಂದ ಹೌರಾ-ಮುಂಬೈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3
+ ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 150 ಕಿಮೀ ದೂರದಲ್ಲಿರುವ ಗೋಯಿಲ್ಕೆರಾ ಮತ್ತು ಪೊಸೊಯಿಟಾ ರೈಲು ನಿಲ್ದಾಣಗಳ ನಡುವೆ ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪಶ್ಚಿಮ ಸಿಂಗ್‍ಭೂಮ್ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ತಿಳಿಸಿದ್ದಾರೆ.
4
+ ಆರ್​ಸಿಬಿಗೆ ಕಾಡಲಿದೆ ಸ್ಪಿನ್ನರ್ ಕೊರತೆ
5
+ ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮುಂಜಾನೆಯಿಂದಲೇ ರೈಲು ಹಳಿಗಳ ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಗಿದೆ ಮತ್ತು ಶೀಘ್ರದಲ್ಲೇ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಅವರು ಹೇಳಿದರು, ಮಾವೋವಾದಿಗಳು ಆ ಪ್ರದೇಶದಲ್ಲಿ ಬ್ಯಾನರ್ ಮತ್ತು ಪೋಸ್ಟರ್‍ಗಳನ್ನು ಸಹ ಹಾಕಿದ್ದಾರೆ.
6
+ ಗಮನಾರ್ಹವಾಗಿ, ನಿಷೇತ ಸಂಘಟನೆಯು ಡಿಸೆಂಬರ್ 16 ರಿಂದ ಪ್ರತಿಭಟನಾ ಸಪ್ತಾಹವನ್ನು ಆಚರಿಸುತ್ತಿದೆ ಮತ್ತು ಇಂದು ಭಾರತ್ ಬಂದ್‍ಗೆ ಕರೆ ನೀಡಿತ್ತು.
eesanje/url_47_211_6.txt ADDED
@@ -0,0 +1,4 @@
 
 
 
 
 
1
+ ತಮಿಳುನಾಡು ಸಚಿವನಿಗೆ 3 ವರ್ಷ ಜೈಲು ಶಿಕ್ಷೆ
2
+ ಚೆನ್ನೈ,ಡಿ.21-ಭ್ರಷ್ಟಾಚಾರ ಪ್ರಕರಣದಲ್ಲಿ ತಮಿಳುನಾಡು ಸಚಿವ ಕೆ ಪೊನ್‍ಮುಡಿ ಅವರಿಗೆ ಮದ್ರಾಸ್ ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ ಆತನ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿರುವುದರಿಂದ ಅವರು ಇನ್ನೂ ಶರಣಾಗುವ ಅಗತ್ಯವಿಲ್ಲ.
3
+ 4 ವರ್ಷದೊಳಗಿನ ಮಕ್ಕಳಿಗೆ ಈ ಕೆಮ್ಮಿನ ಸಿರಪ್ ನೀಡುವಂತಿಲ್ಲ
4
+ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಎಂಕೆ ಹಿರಿಯ ನಾಯಕ ಮತ್ತು ಅವರ ಪತ್ನಿಯನ್ನು ದೋಷಿ ಎಂದು ತೀರ್ಪು ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
eesanje/url_47_211_7.txt ADDED
@@ -0,0 +1,6 @@
 
 
 
 
 
 
 
1
+ ರೋಗಿ ಸಾವಿಗೆ ಕಾರಣರಾಗುವ ವೈದ್ಯರ ಶಿಕ್ಷಾವಧಿ ಕಡಿತ
2
+ ನವದೆಹಲಿ,ಡಿ.21- ವೈದ್ಯಾಧಿಕಾರಿಯೊಬ್ಬರ ನಿರ್ಲಕ್ಷದಿಂದ ರೋಗಿ ಸಾವಿಗೀಡಾದರೆ ನೀಡುವ ಶಿಕ್ಷೆಯ ಅವಧಿಯನ್ನು ಎರಡು ವರ್ಷಕ್ಕೆ ಇಳಿಸುವ ಭಾರತೀಯ ನ್ಯಾಯ (ಎರಡನೇ) ಸಂಹಿತಾ ಮಸೂದೆಗೆ ತಿದ್ದುಪಡಿಯನ್ನು ಲೋಕಸಭೆ ಅಂಗೀಕರಿಸಿದೆ.
3
+ ಪ್ರಸ್ತುತ, ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದರೆ, ಅದನ್ನು ಅಪರಾಧಿ ನರಹತ್ಯೆ ಎಂದು ಪರಿಗಣಿಸಲಾಗಿದೆ. ಶಿಕ್ಷೆಯನ್ನು ಸಹ ಹೆಚ್ಚಿಸಲಾಗಿದೆ. ಇದರಿಂದ ವೈದ್ಯರನ್ನು ಮುಕ್ತಗೊಳಿಸಲು ನಾನು ಈಗ ಅಧಿಕೃತ ತಿದ್ದುಪಡಿಯನ್ನು ತರುತ್ತೇನೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
4
+ ಪೊಲೀಸರ ಸೋಗಿನಲ್ಲಿ ನುಗ್ಗಿ ಉದ್ಯಮಿ ಮನೆ ದೋಚಿದ್ದ 8 ಡಕಾಯಿತರ ಬಂಧನ
5
+ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಮಂಡಿಸಿದ ಭಾರತೀಯ ನ್ಯಾಯ (ಎರಡನೇ) ಸಂಹಿತಾ ಮಸೂದೆಯ ತಿದ್ದುಪಡಿಯು ಪದಗಳನ್ನು ಸೇರಿಸುತ್ತದೆ ಮತ್ತು ವೈದ್ಯಕೀಯ ಕಾರ್ಯವಿಧಾನವನ್ನು ನಿರ್ವಹಿಸುವಾಗ ನೋಂದಾಯಿತ ವೈದ್ಯಕೀಯ ವೈದ್ಯರು ಅಂತಹ ಕೃತ್ಯವನ್ನು ಮಾಡಿದರೆ, ಅವರು ಒಂದು ಅವಧಿಗೆ ವಿವರಣೆಯ ಜೈಲು ಶಿಕ್ಷೆಯೊಂದಿಗೆ ಶಿಕ್ಷೆಗೆ ಗುರಿಯಾಗುತ್ತಾರೆ.
6
+ ಇದು ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ದಂಡಕ್ಕೆ ಸಹ ಹೊಣೆಗಾರನಾಗಬಹುದು ಎಂದು ಶಾ ಹೇಳಿದರು. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘದ ನಿಯೋಗವು ಅವರಿಗೆ ಪತ್ರ ಬರೆದಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
eesanje/url_47_211_8.txt ADDED
@@ -0,0 +1,6 @@
 
 
 
 
 
 
 
1
+ ಸಂಸತ್ ಭದ್ರತಾ ಲೋಪ : ಬಾಗಲಕೋಟೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ವಶಕ್ಕೆ
2
+ ಬಾಗಲಕೋಟೆ, ಡಿ 21 (ಪಿಟಿಐ) ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕರ್ನಾಟಕದ ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜಿಲ್ಲಾ ಕೇಂದ್ರವಾದ ಬಾಗಲಕೋಟೆ ಪಟ್ಟಣದ ವಿದ್ಯಾಗಿರಿಯಲ್ಲಿರುವ ಅವರ ಮನೆಯಿಂದ ತಡರಾತ್ರಿ ಟೆಕ್ಕಿ ಹಾಗೂ ನಿವೃತ್ತ ಪೊಲೀಸ್ ಉಪಾೀಧಿಕ್ಷಕರ ಪುತ್ರ ಸಾಯಿಕೃಷ್ಣ ಜಗಲಿ ಅವರನ್ನು ಕರೆದುಕೊಂಡು ಹೋಗಲಾಗಿತ್ತು.
3
+ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜಗಲಿ, ಕಳೆದ ವಾರ ಲೋಕಸಭೆಯ ಸಭಾಂಗಣಕ್ಕೆ ಅತಿಕ್ರಮವಾಗಿ ನುಗ್ಗಿದ ಇಬ್ಬರು ಒಳನುಗ್ಗುವವರಲ್ಲಿ ಒಬ್ಬರಾದ ಮೈಸೂರಿನ ನಿವಾಸಿ ಮನೋರಂಜನ್ ಡಿ ಅವರ ಸ್ನೇಹಿತ ಎಂದು ಹೇಳಲಾಗಿದೆ.
4
+ 4 ವರ್ಷದೊಳಗಿನ ಮಕ್ಕಳಿಗೆ ಈ ಕೆಮ್ಮಿನ ಸಿರಪ್ ನೀಡುವಂತಿಲ್ಲ
5
+ ಜಗಲಿ ಅವರು ಕಾಲೇಜು ದಿನಗಳಲ್ಲಿ ಮನೋರಂಜನ್ ಅವರ ರೂಮ್‍ಮೇಟ್ ಕೂಡ ಆಗಿದ್ದರು ಎಂದು ಮೂಲಗಳು ತಿಳಿಸಿವೆ. ದೆಹಲಿ ಪೊಲೀಸ್ ತಂಡ ಬಂದು ತನ್ನ ಸಹೋದರನನ್ನು ಕರೆದುಕೊಂಡು ಹೋಗಿದೆ ಎಂದು ಜಗಲಿಯ ಸಹೋದರಿ ಸ್ಪಂದ ಹೇಳಿದ್ದಾರೆ.
6
+ ದೆಹಲಿ ಪೊಲೀಸರು ಬಂದಿದ್ದು ನಿಜ. ನನ್ನ ಸಹೋದರನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾವು ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಿದ್ದೇವೆ ಎಂದು ಅವರು ಹೇಳಿದರು.ಸ್ಪಂದ ತನ್ನ ಸಹೋದರ ಏನೂ ತಪ್ಪು ಮಾಡಿಲ್ಲ ಎಂದು ಹೇಳಿದರು. ಮನೋರಂಜನ್ ಮತ್ತು ಸಾಯಿಕೃಷ್ಣ ಜಗಲಿ ಇಬ್ಬರೂ ರೂಮ್‍ಮೇಟ್‍ಗಳಾಗಿದ್ದರು. ಈಗ ನನ್ನ ಸಹೋದರ ಮನೆಯಿಂದಲೇ ಕೆಲಸ ಮಾಡುತ್ತಿದ್ದಾನೆ ಎಂದು ಅವರು ವಿವರಿಸಿದರು.
eesanje/url_47_211_9.txt ADDED
@@ -0,0 +1,7 @@
 
 
 
 
 
 
 
 
1
+ ಸಾಮಾನ್ಯ ಜನರ ಕನಸು ನನಸು ಮಾಡಲು ವಿಕಸಿತ್ ಸಂಕಲ್ಪ ಯಾತ್ರೆ : ಸಿನ್ಹಾ
2
+ ಜಮ್ಮು, ಡಿ 21 (ಪಿಟಿಐ) ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯು ಸಾಮಾನ್ಯ ಜನರ ಕನಸುಗಳನ್ನು ನನಸಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಸೂಚಿಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
3
+ ಉಧಮ್‍ಪುರ ಜಿಲ್ಲೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಪ್ರಚಾರ ಮಾಡುವ ಉದ್ದೇಶದ ಯಾತ್ರೆಯಲ್ಲಿ ಪಾಲ್ಗೊಂಡ ಅವರು ಮೋದಿ ಅವರ ಕಾರ್ಯಕ್ರಮದಲ್ಲಿ ಅಗಾಧ ಭಾಗವಹಿಸುವಿಕೆಗಾಗಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಅಭಿನಂದಿಸಿದರು.
4
+ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯು ಸಾಮಾನ್ಯ ಜನರ ಕನಸುಗಳನ್ನು ನನಸಾಗಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪ ಮತ್ತು ಭರವಸೆಯಾಗಿದೆ. ಎಲ್ಲಾ ಪ್ರಯೋಜನಗಳು ನಾಗರಿಕರನ್ನು ತಲುಪುವಂತೆ ಮತ್ತು ಸಮಗ್ರ, ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಜನರ ಜೀವನದಲ್ಲಿ ಪರಿವರ್ತನೆ ತರುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.
5
+ ಅಭಿವೃದ್ಧಿ ಹೊಂದಿದ ಭಾರತ ಮತ್ತು ಅಭಿವೃದ್ಧಿ ಹೊಂದಿದ ಜಮ್ಮು ಕಾಶ್ಮೀರಕ್ಕೆ ಬಡವರು, ಮಹಿಳೆಯರು, ರೈತರು ಮತ್ತು ಸಮಾಜದ ಅಂಚಿನಲ್ಲಿರುವ ವರ್ಗಗಳ ಸಬಲೀಕರಣ ಅತ್ಯಗತ್ಯ ಎಂದು ಅವರು ಹೇಳಿದರು. ಚುನಾಯಿತ ಪ್ರತಿನಿಗಳು ಮತ್ತು ರಾಜಕೀಯ ಮುಖಂಡರು ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಲೆಫ್ಟಿನೆಂಟ್ ಗವರ್ನರ್ ಕರೆ ನೀಡಿದರು. ವಿಕಸಿತ್ ಭಾರತ್ ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಕಣಿವೆ ರಾಜ್ಯದಲ್ಲಿ ಉನ್ನತ ಸಾಧನೆ ಮಾಡಲು ಜಿಲ್ಲೆಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
6
+ 4 ವರ್ಷದೊಳಗಿನ ಮಕ್ಕಳಿಗೆ ಈ ಕೆಮ್ಮಿನ ಸಿರಪ್ ನೀಡುವಂತಿಲ್ಲ
7
+ ಲೆಫ್ಟಿನೆಂಟ್ ಗವರ್ನರ್ ಅವರು ಮಹಿಳಾ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವ ಮತ್ತು ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಖಾತ್ರಿಪಡಿಸುವ ಬಗ್ಗೆ ಒತ್ತಿ ಹೇಳಿದರು. ಪ್ರತಿ ಹೆಣ್ಣು ಮಗುವೂ ಉತ್ತಮ ಶಿಕ್ಷಣಕ್ಕೆ ಅರ್ಹರಾಗಿದ್ದು, ಇದು ಪಂಚಾಯಿತಿಗಳ ಪರಮೋಚ್ಚ ಗುರಿಯಾಗಬೇಕು. ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರತಿ ಪಂಚಾಯಿತಿಯಲ್ಲಿ ಪ್ರಾಥಮಿಕ ಶಾಲೆಯನ್ನು ತೆರೆಯುವುದು ಆಡಳಿತದ ಧ್ಯೇಯವಾಗಿದೆ ಎಂದು ಅವರು ಹೇಳಿದರು.
eesanje/url_47_212_1.txt ADDED
@@ -0,0 +1,7 @@
 
 
 
 
 
 
 
 
1
+ 4 ವರ್ಷದೊಳಗಿನ ಮಕ್ಕಳಿಗೆ ಈ ಕೆಮ್ಮಿನ ಸಿರಪ್ ನೀಡುವಂತಿಲ್ಲ
2
+ ಮುಂಬೈ,ಡಿ.21- ಕೆಮ್ಮು ಸಿರಪ್‍ನಿಂದ ಜಾಗತಿಕವಾಗಿ ಕನಿಷ್ಠ 141 ಮಕ್ಕಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ರೆಗ್ಯುಲೇಟರ್ ಸಂಸ್ಥೆ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಆಂಟಿ-ಕೋಲ್ಡ ಡ್ರಗ್ ಸಂಯೋಜನೆಯ ಬಳಕೆಯನ್ನು ನಿಷೇಧಿಸಿದೆ ಮತ್ತು ಅದಕ್ಕೆ ಅನುಗುಣವಾಗಿ ಔಷಧಿಗಳನ್ನು ಲೇಬಲ್ ಮಾಡಬೇಕು ಎಂದು ಆದೇಶಿಸಿದೆ.
3
+ ಶಿಶುಗಳಲ್ಲಿ ಅನುಮೋದಿತವಲ್ಲದ ಶೀತ-ವಿರೋಧಿ ಔಷಧ ಸೂತ್ರೀಕರಣದ ಉತ್ತೇಜನದ ಬಗ್ಗೆ ಕಾಳಜಿ ಮತ್ತು ಆ ವಯಸ್ಸಿನವರಿಗೆ ಸಂಯೋಜನೆಯನ್ನು ಬಳಸದಂತೆ ಶಿಫಾರಸು ಮಾಡಿದೆ ಎಂದು ನಿಯಂತ್ರಕರು ಹೇಳಿದ್ದಾರೆ. ಕಳೆದ ವರ್ಷದ ಮಧ್ಯದಿಂದ ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಮತ್ತು ಕ್ಯಾಮರೂನ್‍ನಲ್ಲಿ ಕನಿಷ್ಠ 141 ಸಾವುಗಳು ಸೇರಿದಂತೆ ದೇಶದಲ್ಲಿ ತಯಾರಿಸಿದ ವಿಷಕಾರಿ ಕೆಮ್ಮು ಸಿರಪ್‍ಗಳಿಗೆ ಅಧಿಕಾರಿಗಳು ಸಂಬಂಧಿಸಿ 2019 ರಿಂದ ಮಕ್ಕಳ ಸಾವಿನ ಸರಣಿಯ ನಂತರ ಈ ಆದೇಶ ಬಂದಿದೆ.
4
+ ಭಾರತದಲ್ಲಿ 2019 ರಲ್ಲಿ ದೇಶೀಯವಾಗಿ ತಯಾರಿಸಿದ ಕೆಮ್ಮಿನ ಸಿರಪ್‍ಗಳನ್ನು ಸೇವಿಸಿದ ನಂತರ ಕನಿಷ್ಠ 12 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಡಿಮೆ ಬೆಲೆಯಲ್ಲಿ ಜೀವರಕ್ಷಕ ಔಷಧಿಗಳ ಪೂರೈಕೆಯಿಂದಾಗಿ ಭಾರತವನ್ನು ಸಾಮಾನ್ಯವಾಗಿ ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತದೆ.
5
+ ಪೊಲೀಸರ ಸೋಗಿನಲ್ಲಿ ನುಗ್ಗಿ ಉದ್ಯಮಿ ಮನೆ ದೋಚಿದ್ದ 8 ಡಕಾಯಿತರ ಬಂಧನ
6
+ ಸ್ಥಿರ-ಔಷಧ ಸಂಯೋಜನೆ ಮೇಲೆ ನಿಯಂತ್ರಕರು ಸಾರ್ವಜನಿಕಗೊಳಿಸಿದ ಆದೇಶದ ಪ್ರಕಾರ, ಔಷಧ ತಯಾರಕರು ತಮ್ಮ ಉತ್ಪನ್ನಗಳನ್ನು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬಳಸಬಾರದು ಎಂಬ ಎಚ್ಚರಿಕೆಯೊಂದಿಗೆ ಲೇಬಲ್ ಮಾಡಬೇಕಾಗುತ್ತದೆ ಎಂದು ಸೂಚಿಸಿದೆ.
7
+ ಸ್ಥಿರ ಔಷಧ ಸಂಯೋಜನೆಯು ಕ್ಲೋರ್ಫೆನಿರಮೈನ್ ಮೆಲೇಟ್ ಮತ್ತು ಫಿನೈಲ್ರಿನ್ ಅನ್ನು ಒಳಗೊಂಡಿರುತ್ತದೆ – ಇದನ್ನು ಸಾಮಾನ್ಯವಾಗಿ ಶೀತದ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಿರಪ್ ಅಥವಾ ಮಾತ್ರೆಗಳಲ್ಲಿ ಬಳಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೆಮ್ಮು ಮತ್ತು ಶೀತ ರೋಗಲಕ್ಷಣಗಳ ಚಿಕಿತ್ಸೆಗಾಗಿ ಪ್ರತ್ಯಕ್ಷವಾದ ಕೆಮ್ಮಿನ ಸಿರಪ್‍ಗಳು ಅಥವಾ ಔಷಧಗಳ ಬಳಕೆಯನ್ನು ಶಿಫಾರಸು ಮಾಡುವುದಿಲ್ಲ.
eesanje/url_47_212_10.txt ADDED
@@ -0,0 +1,7 @@
 
 
 
 
 
 
 
 
1
+ ಪ್ರತಾಪ್‍ಸಿಂಹರನ್ನು ಏಕೆ ವಿಚಾರಣೆ ಮಾಡಿಲ್ಲ..? : ಕಾಂಗ್ರೆಸ್
2
+ ನವದೆಹಲಿ, ಡಿ 20 (ಪಿಟಿಐ) ಸಂಸತ್ತಿನ ಭದ್ರತಾ ಉಲ್ಲಂಘನೆ ವಿಚಾರವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಮುಖಂಡರು ಅನಾಮಧೇಯರನ್ನು ಲೋಕಸಭೆಗೆ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ವಾರ ಕಳೆದರೂ ಏಕೆ ವಿಚಾರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
3
+ ಅಶಿಸ್ತಿನ ವರ್ತನೆಗಾಗಿ 49 ಪ್ರತಿಪಕ್ಷ ಶಾಸಕರನ್ನು ಲೋಕಸಭೆಯಿಂದ ಅಮಾನತುಗೊಳಿಸಿದ ಒಂದು ದಿನದ ನಂತರ ವಿರೋಧ ಪಕ್ಷದ ಈ ದಾಳಿ ನಡೆದಿದೆ, ಸಂಸತ್ತಿನ ಉಭಯ ಸದನಗಳಲ್ಲಿ ಕ್ರಮ ಎದುರಿಸುತ್ತಿರುವ ಒಟ್ಟು ಸಂಸದರ ಸಂಖ್ಯೆ 141 ಕ್ಕೆ ತಲುಪಿದೆ. ಭಾರತ ಒಕ್ಕೂಟವು ಶುಕ್ರವಾರ ರಾಷ್ಟ್ರವ್ಯಾಪಿ ಸರ್ಕಾರದ ವಿರೋಧಿ ಪ್ರತಿಭಟನೆಗಳನ್ನು ಘೋಷಿಸಿದೆ.
4
+ ಲಾಭದಾಸೆಗೆ ಕಂಡಕಂಡಲ್ಲಿ ಹಣ ಹೂಡಿಕೆ ಮಾಡೋ ಮುನ್ನ ಹುಷಾರ್..!
5
+ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಲೋಕಸಭೆಯಲ್ಲಿ ನಡೆದ ಅತ್ಯಂತ ಗಂಭೀರವಾದ ಭದ್ರತಾ ಲೋಪವು ರಾಷ್ಟ್ರವನ್ನು ಬೆಚ್ಚಿಬೀಳಿಸುವ ಪ್ರಕರಣವಾಗಿದೆ. ತನಿಖೆ ನಡೆಸಲಾಗಿದೆ ಎಂದು ಪ್ರಧಾನಿ, ಗೃಹ ಸಚಿವರು ಮತ್ತು ಲೋಕಸಭಾ ಸ್ಪೀಕರ್ ಹೇಳಿದ್ದಾರೆ. ಆದರೆ ಇಬ್ಬರು ಅತಿಕ್ರಮಣದಾರರಿಗೆ ಲೋಕಸಭೆ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದ ಪ್ರತಾಪ್ ಸಿಂಹ ಏಳು ದಿನ ಕಳೆದರೂ ಇನ್ನೂ ಏಕೆ ಪ್ರಶ್ನಿಸಿಲ್ಲ? ಅವರು ಕೇಳಿದ್ದಾರೆ.
6
+ ಒಳನುಗ್ಗಿದವರ ಮೇಲೆಯೇ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿರುವುದರಿಂದ ಇದೊಂದು ವಿಚಿತ್ರ ಸನ್ನಿವೇಶವಾಗಿದೆ ಎಂದು ರಮೇಶ್ ಹೇಳಿದ್ದಾರೆ.ಈ ಮಧ್ಯೆ, ಡಿಸೆಂಬರ್ 13 ರ ಘಟನೆಗಳ ಕುರಿತು ಸಂಸತ್ತಿನಲ್ಲಿ ಗೃಹ ಸಚಿವರು ನೀಡಿದ ಹೇಳಿಕೆಯ ಮೂಲಭೂತ, ನೇರ ಮತ್ತು ಸಂಪೂರ್ಣ ನ್ಯಾಯಸಮ್ಮತವಾದ ಬೇಡಿಕೆಗಾಗಿ 142 ಭಾರತದ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.
7
+ ಈ ಅಧಿವೇಶನದಲ್ಲಿ 141 ಸಂಸದರನ್ನು ಅಮಾನತುಗೊಳಿಸಿದ್ದಾರೆ, ಎಎಪಿ ಸದಸ್ಯ ಸಂಜಯ್ ಸಿಂಗ್ ಅವರನ್ನು ಜುಲೈ 24 ರಿಂದ ರಾಜ್ಯಸಭಾ ಸದಸ್ಯರಾಗಿ ಅಮಾನತುಗೊಳಿಸಲಾಗಿದೆ.
eesanje/url_47_212_11.txt ADDED
@@ -0,0 +1,7 @@
 
 
 
 
 
 
 
 
1
+ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಸಚಿವ ಕೆ.ಪೊನ್ಮುಡಿ ದೋಷಿ
2
+ ಚೆನ್ನೈ,ಡಿ.19- ಅಕ್ರಮ ಆಸ್ತಿ ಹಾಗೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ.ಪೊನ್ಮುಡಿ ಅವರನ್ನು ದೋಷಿ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಶೇಷವೆಂದರೆ ಕಳೆದ ಜೂ.18ರಂದು ವೆಲ್ಲೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯವು ಸಚಿವ ಪೊನ್ಮುಡಿ ಮತ್ತು ಅವರ ಪತ್ನಿಯ ಅಕ್ರಮ ಆಸ್ತಿ ಪ್ರಕರಣ ವನ್ನು ಖುಲಾಸೆಗೊಳಿಸಿತ್ತು.
3
+ ಇದೀಗ ಮದ್ರಾಸ್ ಹೈಕೋರ್ಟ್‍ನ ವಿಚಾರಣಾ ನ್ಯಾಯಾಲಯ ವೆಲ್ಲೂರು ನ್ಯಾಯಾಲಯ ನೀಡಿದ್ದ ತೀರ್ಪು ಮತ್ತು ಖುಲಾಸೆಯನ್ನು ರದ್ದುಗೊಳಿಸಿ ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಒಂದು ವಾರದ ನಂತರ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದ್ದು, ಪೊನ್ನುಡಿಗೆ ಎರಡು ವರ್ಷಕ್ಕೂ ಹೆಚ್ಚು ಕಾಲ ಶಿಕ್ಷೆಯಾದರೆ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.
4
+ ವೆಲ್ಲೂರಿನ ಪ್ರಧಾನ ಜಿಲ್ಲಾ ನ್ಯಾಯಾೀಧಿಶೆ ಎನ್.ವಸಂತಲೀಲಾ ಅವರು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಮತ್ತು ಹಿರಿಯ ಡಿಎಂಕೆ ನಾಯಕ ಕೆ.ಪೊನ್ಮುಡಿ ಮತ್ತು ಅವರ ಪತ್ನಿಯನ್ನು ಜಾಗೃತದಳ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ದಾಖಲಿಸಿದ ಅಕ್ರಮ ಆಸ್ತಿ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದರು.
5
+ ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಮುಸ್ಲಿಮರು 5 ಅರ್ಜಿಗಳು ವಜಾ
6
+ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೂನ್‍ನಲ್ಲಿ ವೆಲ್ಲೂರಿನ ನ್ಯಾಯಾಲಯವು ಖುಲಾಸೆಗೊಳಿಸಿದ ನಂತರ ಅವರ ಖುಲಾಸೆಯ ಪರಿಷ್ಕರಣೆಯನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಳ್ಳಲು ಮದ್ರಾಸ್ ಹೈಕೋರ್ಟ್ ಆಗಸ್ಟ್‍ನಲ್ಲಿ ನಿರ್ಧರಿಸಿತ್ತು.1996-2001ರ ಅವಯಲ್ಲಿ ಆಗಿನ ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ 2002ರಲ್ಲಿ ಪೊನ್ಮುಡಿ ಮತ್ತು ಅವರ ಪತ್ನಿ ವಿರುದ್ಧ ಜಾಗೃತದಳ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಪ್ರಕರಣ ದಾಖಲಿಸಲಾಗಿತ್ತು.
7
+ ಇದರಲ್ಲಿ ಇಬ್ಬರ ಆದಾಯ 1.4 ಕೋಟಿ ರೂ. ಆ ಸಮಯದಲ್ಲಿ ಅವರ ಆದಾಯಕ್ಕಿಂತ ಹೆಚ್ಚಿನ ಗಳಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಪೊನ್ಮುಡಿ ಅವರು 1996-2001ರ ಅವಧಿಯಲ್ಲಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಅಕ್ರಮ ಸಂಪತ್ತು ಸಂಗ್ರಹಿಸಿದ್ದಾರೆ ಎಂದು ಡಿವಿಎಸಿ ಪ್ರತಿಪಾದಿಸಿದೆ.
eesanje/url_47_212_12.txt ADDED
@@ -0,0 +1,9 @@
 
 
 
 
 
 
 
 
 
 
1
+ ಸಂಸತ್‍ನ ಕಲಾಪಕ್ಕೆ ಅಡ್ಡಿ : ಇಂದು 50 ಮಂದಿ ಸಂಸದರ ಅಮಾನತು
2
+ ನವದೆಹಲಿ,ಡಿ.19- ಸಂಸತ್‍ನ ಭದ್ರತಾ ಲೋಪ ಉಲ್ಲಂಘನೆ ಪ್ರಕರಣದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನಲೆ ಪುನಃ 50 ಮಂದಿ ಸಂಸದರನ್ನು ಸದನದಿಂದ ಅಮಾನತುಪಡಿಸಲಾಗಿದೆ. ಈವರೆಗೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಮಾನತುಗೊಂಡ ಸಂಸದರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ. ಸಂಸತ್‍ನ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಉಭಯ ಸದನಗಳ ಸದಸ್ಯರನ್ನು ಅಮಾನತುಪಡಿಸಿರುವ ಪ್ರಕರಣ ಇದಾಗಿದೆ.
3
+ ಲೋಕಸಭೆ ಸದಸ್ಯರಾದ ಡ್ಯಾನಿಶ್ ಆಲಿ, ಸುಪ್ರಿಯ ಸುಳೆ, ಫಾರೂಖ್ ಅಬ್ದುಲ್, ಶಶಿ ತರೂರ್, ಕಾರ್ತಿಕ್ ಚಿದಂಬರಂ, ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ 50 ಲೋಕಸಭಾ ಸದಸ್ಯರನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಪಡಿಸಿದ್ದಾರೆ.
4
+ ಉಭಯ ಸದನಗಳಲ್ಲಿ ಭಾರೀ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಇದಕ್ಕೂ ಮುನ್ನ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಲೋಕಸಭಾ ಸದಸ್ಯರು ಭದ್ರತಾ ಲೋಪ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದರು. ಪ್ರಕರಣದ ತನಿಖೆ ನಡೆಯುತ್ತಿರುವಾಗ ಹೇಳಿಕೆ ಅಗತ್ಯವಿಲ್ಲ. ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದು ಓಂ ಬಿರ್ಲಾ ಮನವಿ ಮಾಡಿಕೊಂಡರು. ಇದಕ್ಕೆ ಜಗ್ಗದೆ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಕ್ಕಾರದ ಘೋಷಣೆಗಳನ್ನು ಕೂಗಿದರು.
5
+ ಸಂಸದನಿಗೆ ತರಾಟೆ:ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸಂಸತ್ ಮುಂಭಾಗ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಟಿಎಂಸಿಯ ರಾಜ್ಯಸಭಾ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಜಗದೀಪ್ ಧನ್‍ಕರ್ ಅವರನ್ನು ಗೇಲಿ ಮಾಡಿದರು. ಈ ವಿಡಿಯೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ವರ್ತನೆಯನ್ನು ಸಭಾಧ್ಯಕ್ಷರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮ ನಡವಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದು ನನಗೆ ಮಾತ್ರ ಮಾಡಿದ ಅವಮಾನವಲ್ಲ. ನೀವು ಪೀಠಕ್ಕೆ ಮಾಡಿದ ಅಪಮಾನ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಕುಹಕ ಮಾಡುತ್ತಿದ್ದೀರಿ. ನಿಮ್ಮ ವರ್ತನೆಯನ್ನು ಸಹಿಸಲು ಅಸಾಧ್ಯ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
6
+ ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ : ಪ್ರಿಯಾಂಕ್ ಖರ್ಗೆ
7
+ ಪ್ರತಿಭಟನೆ:ಸಂಸತ್ತಿನ ಉಭಯ ಸದನಗಳ ಒಟ್ಟು 92 ವಿಪಕ್ಷ ಸಂಸದರನ್ನು ಪ್ರಸಕ್ತ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿರುವುದರ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಇಂದು ಸಂಸತ್ತಿನ ಒಳಗಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ಸಮಾಜವಾದಿ ಪಕ್ಷದ ರಾಮ್‍ಗೋಪಾಲ್ ಯಾದವ್ ಮತ್ತಿತರರು ಪಾಲ್ಗೊಂಡಿದ್ದರು.
8
+ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ನಾವು ಪಂಜರದಲಿಲ್ಲ ಎಂಬ ಭಿತ್ತಿಪತ್ರ ಹಿಡಿದ ಪ್ರತಿಭಟನಾಕಾರರು, ಸಂಸತ್ ಭದ್ರತಾ ಲೋಪ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಅಲ್ಲ. ಸಂಸತ್ತಿನಲ್ಲಿ ಅನೇಕ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಬಯಸುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
9
+ ಸಂಸತ್ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ ಲೋಕಸಭೆಯ 33 ಮತ್ತು ರಾಜ್ಯಸಭೆಯ 45 ಸದಸ್ಯರು ಸೇರಿದಂತೆ ಒಟ್ಟು 78 ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿತ್ತು. ಇದಕ್ಕೂ ಮುನ್ನಾ 13 ಸದಸ್ಯರನ್ನು ಅಮಾನತು ಮಾಡಲಾಗಿತ್ತು.
eesanje/url_47_212_2.txt ADDED
@@ -0,0 +1,6 @@
 
 
 
 
 
 
 
1
+ ಪ್ರತಿಪಕ್ಷಗಳ ಸಂಸದರ ಅಮಾನತು ಸಮರ್ಥಿಸಿಕೊಂಡ ಹೇಮಮಾಲಿನಿ
2
+ ನವದೆಹಲಿ,ಡಿ.20- ನೂರಕ್ಕೂ ಹೆಚ್ಚು ಸಂಸದರನ್ನು ಅಮಾನತು ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಸಂಸದೆ ಹಾಗೂ ಖ್ಯಾತ ಬಾಲಿವುಡ್ ನಟಿ ಹೇಮಾ ಮಾಲಿನಿ ಅವರು ಅಮಾನತುಗೊಂಡವರು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ವಿಚಿತ್ರವಾಗಿ ವರ್ತಿಸುತ್ತಾರೆ ಎಂದಿದ್ದಾರೆ.
3
+ ಲೋಕಸಭೆಯಲ್ಲಿ ಮಥುರಾವನ್ನು ಪ್ರತಿನಿಧಿಸುವ ನಟಿ-ರಾಜಕಾರಣಿಯಾಗಿರುವ ಅವರು, ಸಂಸತ್ತನ್ನು ಅಡ್ಡಿಪಡಿಸುವುದು ಮತ್ತು ಮೋದಿ ಸರ್ಕಾರವನ್ನು ಬೇರುಸಹಿತ ಕಿತ್ತೊಗೆಯುವುದು ಪ್ರತಿಪಕ್ಷಗಳ ಏಕೈಕ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
4
+ ಅವರನ್ನು ಅಮಾನತು ಮಾಡಿದ್ದರೆ ಅವರು ತಪ್ಪು ಮಾಡಿದ್ದಾರೆ ಎಂದರ್ಥ. ಸಂಸತ್ತಿನ ನಿಯಮಗಳ ಪ್ರಕಾರ ಕೆಲಸ ಮಾಡಬೇಕು. ಅವರು ಅದನ್ನು ಮಾಡಲಿಲ್ಲ ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ, ಇದು ಸರಿ ಎಂದು ಅವರು ಹೇಳಿದರು. ಕಾಂಗ್ರೆಸ್ ಮತ್ತು ಉನ್ನತ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡಿರುವ ಪ್ರಮುಖ ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟದ ನಿನ್ನೆಯ ಸಭೆಯನ್ನು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
5
+ ಉತ್ತರ ಅಮೆರಿಕದಲ್ಲಿ ರಾಮಮಂದಿರ ಉದ್ಘಾಟನಾ ಸಂಭ್ರಮ
6
+ ಅದು ಅವರ ಗುರಿಯಾಗಿದೆ, ಹೇಗಾದರೂ ಸಂಸತ್ತು ಕಾರ್ಯನಿರ್ವಹಿಸಲು ಮತ್ತು ಮೋದಿ ಸರ್ಕಾರವನ್ನು ಬೇರುಸಹಿತ ಕಿತ್ತುಹಾಕಲು ತುಂಬಾ ಶ್ರಮಿಸುತ್ತಿದ್ದಾರೆ, ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದರು. ಲೋಕಸಭೆ ಮತ್ತು ರಾಜ್ಯಸಭೆಯ 141 ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
eesanje/url_47_212_3.txt ADDED
@@ -0,0 +1,8 @@
 
 
 
 
 
 
 
 
 
1
+ ವಿವಿಪ್ಯಾಟ್ ಸ್ಲಿಪ್‍ಗಳನ್ನು ಮತದಾರರಿಗೆ ನೀಡಲು ಇಂಡಿಯಾ ಒಕ್ಕೂಟ ಆಗ್ರಹ
2
+ ನವದೆಹಲಿ,ಡಿ.20- ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಎಂದು ಪ್ರತಿಪಕ್ಷವಾದ ಇಂಡಿಯಾ ಒಕ್ಕೂಟ ಪ್ರತಿಪಾದಿಸಿದ್ದು, ವಿವಿಪ್ಯಾಟ್ ಸ್ಲಿಪ್‍ಗಳನ್ನು ಮತದಾರರಿಗೆ ಹಸ್ತಾಂತರಿಸುವಂತೆ ಮತ್ತು ಅದರ 100 ಪ್ರತಿಶತ ಎಣಿಕೆಯನ್ನು ನಂತರ ಮಾಡುವಂತೆ ಸೂಚಿಸಿದೆ.
3
+ ಇಲ್ಲಿ ನಡೆದ ನಾಲ್ಕನೇ ಸಭೆಯಲ್ಲಿ ಮೈತ್ರಿಕೂಟವು ಅಂಗೀಕರಿಸಿದ ನಿರ್ಣಯದಲ್ಲಿ, 28 ವಿರೋಧ ಪಕ್ಷಗಳ ನಾಯಕರು ಗುಂಪುಗಳ ನಿಯೋಗವು ಚುನಾವಣಾ ಆಯೋಗಕ್ಕೆ ಜ್ಞಾಪಕ ಪತ್ರವನ್ನು ನೀಡಿದ್ದರೂ ಚುನಾವಣಾ ಆಯೋಗವು ಕಾಳಜಿಗೆ ಇನ್ನೂ ಸ್ಪಂದಿಸಿಲ್ಲ ಎಂದು ಒಕ್ಕೂಟ ಆರೋಪಿಸಿದೆ.
4
+ ನಾವು ಇವಿಎಂಗಳ ವಿನ್ಯಾಸ ಮತ್ತು ಕಾರ್ಯಾಚರಣೆಯ ಕುರಿತು ಹಲವಾರು ನಿರ್ದಿಷ್ಟ ಪ್ರಶ್ನೆಗಳೊಂದಿಗೆ ವಿವರವಾದ ಜ್ಞಾಪಕ ಪತ್ರವನ್ನು ಇಸಿಐಗೆ ಸಲ್ಲಿಸಿದ್ದೇವೆ ದುರದೃಷ್ಟವಶಾತ್ ಈ ಜ್ಞಾಪಕ ಪತ್ರದ ಮೇಲೆ ಭಾರತದ ನಿಯೋಗವನ್ನು ಭೇಟಿ ಮಾಡಲು ಇಸಿಐ ಹಿಂಜರಿಯುತ್ತಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
5
+ ಪ್ರತಾಪ್‍ಸಿಂಹರನ್ನು ಏಕೆ ವಿಚಾರಣೆ ಮಾಡಿಲ್ಲ..? : ಕಾಂಗ್ರೆಸ್
6
+ ಇವಿಎಂಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಎಂದು ನಾವು ಪುನರುಚ್ಚರಿಸುತ್ತವೆ. ಇವುಗಳನ್ನು ಅನೇಕ ತಜ್ಞರು ಮತ್ತು ವೃತ್ತಿಪರರು ಸಹ ಎತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ನಮ್ಮ ಸಲಹೆ ಸರಳವಾಗಿದೆ. ಮತದಾರರ-ಪರಿಶೀಲಿಸಿದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್ ಬಾಕ್ಸ್‍ನಲ್ಲಿ ಬೀಳುವ ಬದಲು, ಅದನ್ನು ಮತದಾರರಿಗೆ ಹಸ್ತಾಂತರಿಸಬೇಕು, ಅವರು ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಇರಿಸಬೇಕು.
7
+ ವಿವಿಪ್ಯಾಟ್ ಸ್ಲಿಪ್‍ಗಳ ಶೇ.100 ಎಣಿಕೆ ನಂತರ ಮಾಡಬೇಕು, ಎಂದು ವಿರೋಧ ಪಕ್ಷದ ಮೈತ್ರಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿ ಜನರ ಸಂಪೂರ್ಣ ವಿಶ್ವಾಸವನ್ನು ಪುನಃಸ್ಥಾಪಿಸುತ್ತದೆ ಎಂದು ಅದು ಹೇಳಿದೆ.
8
+ ಇವಿಎಂಗಳ ವಿಷಯದ ಬಗ್ಗೆ ಹಲವಾರು ವಿರೋಧ ಪಕ್ಷಗಳ ನಾಯಕರು ಚರ್ಚಿಸಿದರು, ವಿಶೇಷವಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಇತ್ತೀಚಿನ ವಿಜಯಗಳ ನಂತರ, ಮತ್ತು ಇಡೀ ವಿರೋಧ ಪಕ್ಷಗಳ ಒಕ್ಕೂಟವು ಜನರ ಮುಂದೆ ಈ ವಿಷಯವನ್ನು ಒಗ್ಗಟ್ಟಾಗಿ ಎತ್ತಬೇಕೆಂದು ತೀರ್ಮಾನಿಸಲಾಗಿದೆ.