diff --git a/Kenda Sampige/article_1.txt b/Kenda Sampige/article_1.txt new file mode 100644 index 0000000000000000000000000000000000000000..5a305a2ec01cf158792745e880f6020c2b55294d --- /dev/null +++ b/Kenda Sampige/article_1.txt @@ -0,0 +1,43 @@ +ಮಾರ್ಕ್ಸ್‌ವಾದಿ ಚಿಂತಕ ಮತ್ತು ಹೋರಾಟಗಾರ ಕುವಲಯಶ್ಯಾಮ ಶರ್ಮಾ (ಡಾ. ಕೆ.ಎಸ್. ಶರ್ಮಾ) ಅವರು ೧೯೩೪ನೇ ಸೆಪ್ಟೆಂಬರ್‌ ೩೦ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರೂ ಬದುಕಿನ ಬಹುಭಾಗವನ್ನು ಹುಬ್ಬಳ್ಳಿ- ಧಾರವಾಡದಲ್ಲೇ ಕಳೆದಿದ್ದಾರೆ. ವೇದ ವಿದ್ವಾಂಸರಾಗಿದ್ದ ತಂದೆ ಎಂಬಾರ್‌ ಭಾಸ್ಕರಾಚಾರ್ಯರು ಸ್ವಾತಂತ್ರ್ಯ ಹೋರಾಟಗಾರರೂ ಗ್ರಂಥಕರ್ತರೂ ಮುದ್ರಕರೂ ಆಗಿದ್ದರು. ತಾಯಿ ಸಂಪತ್ತಮ್ಮ. ತೆಲುಗು ಮಾತೃಭಾಷೆಯ ಅವರ ಬದುಕು ಕನ್ನಡಮಯವಾಗಿದ್ದು ದುಡಿಯವ ವರ್ಗಕ್ಕೆ ಮೀಸಲಾಗಿದೆ. + +ಶಿಕ್ಷಣ ಬೆಂಗಳೂರಿನಲ್ಲಾದರೂ ಕಾಯಕ ಕ್ಷೇತ್ರ ಹುಬ್ಬಳ್ಳಿ-ಧಾರವಾಡವಾಗಿದೆ. ಶರ್ಮಾ ಅವರ ೭೫ನೇ ಜನ್ಮದಿನ ಆಚರಿಸಿ ೧೫ ವರ್ಷಗಳು ಕಳೆದವು. ಅವರು ಇಂದಿಗೂ ದುಡಿಯುವ ವರ್ಗದ ಏಳ್ಗೆಗಾಗಿ ಸದಾ ಚಿಂತನೆ ಮಾಡುತ್ತಾರೆ. + +ಕಾನೂನು ಪ್ರಾಧ್ಯಾಪಕ, ಪತ್ರಕರ್ತ, ಮಾರ್ಕ್ಸ್‌ವಾದಿ ವಿದ್ವಾಂಸ, ಸಾಹಿತಿ, ಸಂಘಟನಾ ಚತುರ, ಸದಾ ದುಡಿಯುವ ವರ್ಗದ ಹೋರಾಟದಲ್ಲಿ ತೊಡಗಿದ ಕಾಯ್ದೆತಜ್ಞ, ಪ್ರಕಾಶಕ ಹೀಗೆ ಅನೇಕ ಕೆಲಸ ಕಾರ್ಯಗಳಲ್ಲಿ ಶರ್ಮಾ ಅವರು ತೊಡಗುತ್ತಲೇ ಕಾನೂನಿನ ಹೋರಾಟ ಮಾಡುತ್ತ ದಿನಗೂಲಿಗಳಿಗೆ ಖಾಯಂ ನೌಕರಿಯ ಐತಿಹಾಸಿಕ ವಿಜಯ ದೊರಕಿಸಿ “ದಿನಗೂಲಿಗಳ ಮಹಾತ್ಮ” ಎನಿಸಿದ್ದಾರೆ. “ದುಡಿಯುವ ಕೈಗಳೇ ಆಳುವ ಕೈಗಳಾಗಬೇಕು” ಎಂಬುದು ಅವರ ಘೋಷವಾಕ್ಯವಾಗಿದೆ. + +“ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ” ಮತ್ತು “ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟ” ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕಕರ ಹೋರಾಟದ ನಾಯಕತ್ವವನ್ನು ವಹಿಸಿ ಅವರಿಗೆ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ. ಇತರ ೨೪ ಕಾರ್ಮಿಕ ಸಂಘಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. + +ಧಾರವಾಡದ ಟೈವಾಕ್‌ ಗಡಿಯಾರ ಕಂಪನಿಯ ಕಾರ್ಮಿಕರಿಗೆ ನ್ಯಾಯ ಒದಗಿಸಲು ಅವರು ಮೊದಲ ಬಾರಿಗೆ ೧೯೫೮ರಲ್ಲಿ ಹೋರಾಟ ಪ್ರಾರಂಭಿಸಿದರು. ದಿನಗೂಲಿ ನೌಕರರ ಹೋರಾಟಕ್ಕೆ ನ್ಯಾಯ ಸಿಗುವವರೆಗೆ ಮೊದಲ ಹಂತದ ೩೨ ವರ್ಷಗಳ ಇತಿಹಾಸವಿದೆ. ಶರ್ಮಾ ಅವರ ನಾಯಕತ್ವದಲ್ಲಿ ಕರ್ನಾಟಕದ ದಿನಗೂಲಿ ನೌಕರರು ಪಟ್ಟು ಬಿಡದೆ ಹೋರಾಡಿದ ಫಲವಾಗಿ ಸರ್ವೋಚ್ಚ ನ್ಯಾಯಾಲಯ ೧೯೯೦ನೇ ಫೆಬ್ರುವರಿ ೨೩ರಂದು ಇಡೀ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ “೧೦ ವರ್ಷ ಕೆಲಸ ಮಾಡಿದ ದಿನಗೂಲಿ ನೌಕರರನ್ನು ಖಾಯಂ ಮಾಡಬೇಕು” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಈ ಐತಿಹಾಸಿಕ ತೀರ್ಪು ನೀಡಿದವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಗನಾಥ ಮಿಶ್ರಾ. ಅವರು ಬಸವತತ್ತ್ವವನ್ನು ಮೆಚ್ಚಿಕೊಂಡವರಾಗಿದ್ದರು. (೧೯೮೬ರಲ್ಲಿ ಮಹಾದೇವ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದ “ಬಸವ ಶಾಂತಿ ಯಾತ್ರೆ” ಮೂಲಕ ಏರ್ಪಡಿಸಿದ್ದ ಬಸವ ಕಲ್ಯಾಣ ಮತ್ತು ಉಳವಿ ಕ್ಷೇತ್ರಗಳ ಸಮಾರಂಭಗಳಲ್ಲಿ ಕೂಡ ರಂಗನಾಥ ಮಿಶ್ರಾ ಅವರು ಭಾಗವಹಿಸಿ ಬಸವಣ್ಣನವರ ಕುರಿತು ಮಾತನಾಡಿದ್ದರು.) + +ಈ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ೬೬ ಸಾವಿರ ದಿನಗೂಲಿ ನೌಕರರನ್ನು ಖಾಯಂ ಮಾಡಿತು. ರಾಜ್ಯದ ದಿನಗೂಲಿ ನೌಕರರ ಪರವಾಗಿ ಬಂದ ಈ ತೀರ್ಪಿನಿಂದ ದೇಶದ ೨೦ ಲಕ್ಷ ದಿನಗೂಲಿ ನೌಕರರಿಗೆ ಲಾಭವಾಯಿತು!ದಿನಗೂಲಿ ನೌಕರರು ಸನ್ಮಾನಿಸಿ ಅರ್ಪಿಸಿದ ಹಮ್ಮಿಣಿಯಿಂದ ಶರ್ಮಾ ಅವರು ಹುಬ್ಬಳ್ಳಿಯ ಗೋಕುಲರಸ್ತೆ ಬಳಿ ೧೦ ಎಕರೆ ಜಮೀನು ಖರೀದಿಸಿ “ವಿಶ್ವ ಶ್ರಮ ಚೇತನ” ಕ್ಯಾಂಪಸ್‌ ನಿರ್ಮಿಸಿದರು. ಅದು ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಸಾಹಿತ್ಯ ಕೇಂದ್ರವಾಗಿ ಬೆಳೆದು ನಿಂತಿದೆ. + +ಕಾಲೇಜ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್ಸ್, ಪುರೋಗಾಮಿ ಸಾಹಿತ್ಯ ಪ್ರಕಾಶನ, ಆಫ್‌ಸೆಟ್‌ ಮುದ್ರಣ ಹಾಗೂ ಪ್ರಕಾಶನ ಸಂಸ್ಥೆ, ಔದ್ಯೋಗಿಕ ತರಬೇತಿ ಕೇಂದ್ರ, ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ನಿಸರ್ಗ ಚಿಕಿತ್ಸಾಲಯ ಹಾಗೂ ಯೋಗ ವಿಜ್ಞಾನ ಕೇಂದ್ರ, ಕಲ್ಯಾಣ ಸಭಾಭವನ, ಬೇಂದ್ರೆ ಸ್ಮಾರಕ, ದ.ರಾ. ಬೇಂದ್ರೆ ಸಂಶೋಧನಾ ಸಮುಚ್ಚಯ, ದ.ರಾ. ಬೇಂದ್ರೆ ಸಂಗೀತ ಅಕಾಡೆಮಿ ಮುಂತಾದ ಸಾಮಾಜಿಕ ಅಭಿವೃದ್ಧಿ ಸಂಸ್ಥೆಗಳಿಂದ “ವಿಶ್ವ ಶ್ರಮ ಚೇತನ” ಕ್ಯಾಂಪಸ್‌ ಕಂಗೊಳಿಸುತ್ತಿದೆ. + +ಶರ್ಮಾ ಅವರು ಮಾಲಿಕರ ಆ ಸ್ಥಳವನ್ನು ಕಾರ್ಮಿಕರ ಹಣದಿಂದ ಪಡೆದದ್ದು ಹೆಮ್ಮೆಯ ಸಂಗತಿಯಾಗಿದೆ. ಹಾಗೆ ಪಡೆದ ಸ್ಥಳವನ್ನು ಕಾರ್ಮಿಕರ ಮತ್ತು ಒಟ್ಟಾರೆ ಜನಸಾಮಾನ್ಯರ ಉತ್ತಮ ಭವಿಷ್ಯಕ್ಕಾಗಿ ಶ್ರದ್ಧೆಯಿಂದ ಬಳಸುತ್ತ ಮಹತ್ತರವಾದುದನ್ನು ಸಾಧಿಸಿ ತೋರಿಸಿದ್ದಾರೆ. + + + +ಎಂ.ಎ. (ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ), ಎಂ.ಎ. (ಇಂಗ್ಲಿಷ್), ಡಿ.ಪಿ.ಎ, ಎಲ್.ಎಲ್‌.ಎಂ, ಮತ್ತು ರಾಜ್ಯಶಾಸ್ತ್ರದಲ್ಲಿ ಪಿಎಚ್‌.ಡಿ. ಪಡೆದ ಡಾ. ಕೆ.ಎಸ್. ಶರ್ಮಾ ಅವರನ್ನು ೧೯೭೫ರಿಂದ ಬಲ್ಲೆ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದದ್ದು ಹುಬ್ಬಳ್ಳಿಯ ಜೆ.ಎಸ್.ಎಸ್. ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಎಂಬ ನೆನಪು. ಅಲ್ಲಿ ಅವರು ಲಾ ಪ್ರೊಫೆಸರ್‌ ಆಗಿದ್ದರು. ಆಗ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದೆ. ವಿದ್ಯಾರ್ಥಿ ಸಂಘಟನೆಯಾದ ಎ.ಐ.ಎಸ್‌.ಎಫ್. ಅನ್ನು ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಸಂಘಟಿಸಿದ್ದೆ. ಆದರೆ ಎಸ್.ಎಫ್.ಐ. ಸಂಘಟನೆಯ ನಾಯಕರಾದ ಕಾಮ್ರೇಡ್‌ ವಿ.ಎನ್. ಹಳಕಟ್ಟಿ ಮತ್ತು ಇತರ ಸಂಗಾತಿಗಳ ಜೊತೆ ಹಾರ್ದಿಕ ಸಂಬಂಧವಿಟ್ಟುಕೊಂಡು ಒಂದಾಗಿ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೆವು. + +ಅಪ್ಪಾಸಾಹೇಬ ಯರನಾಳ, ಮೋಹನ ಹಿಪ್ಪರಗಿ, ರುದ್ರಪ್ಪ ಕಾಯಿ, ಮುಂತಾದ ಎ.ಐ.ಎಸ್.ಎಫ್. ಗೆಳೆಯರು ಮತ್ತು ಹಳಕಟ್ಟಿ, ಹದ್ಲಿ, ಹಾಗೂ ಇತರ ಎಸ್.ಎಫ್.ಐ. ಗೆಳೆಯರಿಗೆ ಡಾ. ಕೆ.ಎಸ್. ಶರ್ಮಾ ಮತ್ತು ಆಗ ಧಾರವಾಡ ಕೃಷಿ ಕಾಲೇಜಿನಲ್ಲಿ ಸೈಕಾಲಾಜಿ ಪ್ರೊಫೆಸರ್‌ ಆಗಿದ್ದ ಡಾ. ಬಿ.ಕೃಷ್ಣಮೂರ್ತಿ ಅವರು ಮಾರ್ಗದರ್ಶಿಗಳಂತೆ ಇದ್ದರು. ನಾನು ಅವಕಾಶ ಸಿಕ್ಕಾಗಲೆಲ್ಲ ಇವರ ಜೊತೆ ಕಮ್ಯುನಿಜಂ ಬಗ್ಗೆ ಚರ್ಚಿಸುತ್ತಿದ್ದೆ. + +ಕೃಷ್ಣಮೂರ್ತಿ ಅವರ ಸಾಮಾಜಿಕ ಮನೋವಿಜ್ಞಾನದ ವಿಚಾರಗಳು ಮತ್ತು ಶರ್ಮಾ ಅವರ ಹೋರಾಟದ ಚಿಂತನಾ ಕ್ರಮ ನನಗೆ ಬಹಳ ಹಿಡಿಸುತ್ತಿದ್ದವು. ಶರ್ಮಾ ಅವರು ಪ್ರಖರ ಭಾಷಣಕಾರರು. ಅವರು ತಮ್ಮ ಸೈದ್ಧಾಂತಿಕ ಚಿಂತನೆಗಳನ್ನು ಮನಂಬುಗುವಂತೆ ತಿಳಿಸುವ ಸಾಮರ್ಥ್ಯವುಳ್ಳವರು. ಅವರ ಮಾತಿನಲ್ಲಿ ಅಂಕಿ‌ ಅಂಶಗಳ ಜೊತೆ ಖಚಿತತೆ ಇದೆ. + +‘ನ್ಯಾಯನಿಷ್ಠುರಿ, ಲೋಕವಿರೋಧಿ, ಶರಣನಾರಿಗೂ ಅಂಜುವವನಲ್ಲʼ ಎಂಬಂಥ ವ್ಯಕ್ತಿತ್ವ ಅವರದು. ಹೀಗೆ ಮಾತನಾಡಿದರೆ ಆಡಳಿತ ವರ್ಗಕ್ಕಾಗಲೀ ರಾಜ್ಯಶಕ್ತಿಗಾಗಲೀ ತಮ್ಮ ಬಗ್ಗೆ ಯಾವ ಭಾವನೆ ಮೂಡಬಹುದು; ಅದರಿಂದ ತಮಗೆ ಯಾವ ತೊಂದರೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಎಂದೂ ಹಾಕಿದವರಲ್ಲ. ಮನುಷ್ಯರ ಬಗ್ಗೆ ಇರುವ ಅವರ ಕಾಳಜಿಯೆ ಅಂಥದ್ದು. ಆ ಕಾಲದಲ್ಲಿ ಅವರು ಒಂದು ರೀತಿಯ ಏಕಾಂಗವೀರರಾಗಿದ್ದರು. ಸದಾ ಕ್ರಿಯಾಶೀಲವಾಗಿರುವ ಅವರ ವ್ಯಕ್ತಿತ್ವ ನನ್ನಂಥವರ ಮೇಲೆ ಆಳವಾದ ಪರಿಣಾಮ ಬೀರಿತು. ಎಷ್ಟೇ ಕಷ್ಟಕಾರ್ಪಣ್ಯಗಳು ಬಂದರೂ ಎದೆಗುಂದದೆ ಮುನ್ನಡೆಯುವ ಛಲವನ್ನು ಸಾಧಿಸಲು ಸಹಕಾರಿಯಾಯಿತು. + +ವ್ಯಕ್ತಿಗತವಾಗಿ ಶರ್ಮಾಜಿ ಬಹಳ ಸೌಮ್ಯ ಸ್ವಭಾವದವರು. ಎಲ್ಲರನ್ನೂ ಸಮಾನವಾಗಿ ಗೌರವದಿಂದ ಕಾಣುವ ಗುಣವುಳ್ಳವರು. ಗುಣಗ್ರಾಹಿಗಳು. ವ್ಯಕ್ತಿ ಸಣ್ಣವನಿರಲಿ ದೊಡ್ಡವನಿರಲಿ ಸಲಹೆ ಬಯಸಿ ಬಂದಾಗ, ಅವರ ಕಣ್ಣಲ್ಲಿ ಇಬ್ಬರೂ ಸಮಾನರು. ಎಂಥ ಪ್ರಸಂಗದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದಂಥ ವ್ಯಕ್ತಿತ್ವ. ಯಾರ ಮನಸ್ಸಿಗೂ ನೋವಾಗದಂತೆ ಸತ್ಯದ ಪ್ರತಿಪಾದನೆ ಮಾಡುವ ಅಗಾಧ ಶಕ್ತಿ ಅವರಲ್ಲಿದೆ. ಅವರು ಸಿಡಿಮಿಡಿಗೊಳ್ಳುವುದನ್ನು ನಾನು ನೋಡಲೇ ಇಲ್ಲ. ಅವರಿಗೆ ವಿಶ್ರಾಂತಿ ಎಂಬುದೇ ಗೊತ್ತಿಲ್ಲ. ಒಂದು ಕಾರ್ಯದಿಂದ ಇನ್ನೊಂದು ಕಾರ್ಯದಲ್ಲಿ ತೊಡಗಿಕೊಳ್ಳುವುದೇ ಅವರಿಗೆ ವಿಶ್ರಾಂತಿ. + + + +ಅವರ ಕಾ‍ರ್ಯಕ್ಷೇತ್ರಗಳು ಅನೇಕ. ಅಧ್ಯಯನ, ಅಧ್ಯಾಪನ, ಉಪನ್ಯಾಸ, ಕಾನೂನು ಸಲಹೆ, ಸಂಘಟನೆ, ಹೋರಾಟ, ಯುವಕರಿಗೆ ಮತ್ತು ದುಡಿಯುವ ಜನರಿಗೆ ಮಾರ್ಗದರ್ಶನ, ವಿವಿಧ ವಿಷಯಗಳಿಗೆ ಸಂಬಂಧಿಸಿದ ಚಿಂತನಕಮ್ಮಟ, ವಿಚಾರ ಸಂಕಿರಣ, ಸಾಹಿತ್ಯ ರಚನೆ, ಪತ್ರಿಕೋದ್ಯಮ ಹೀಗೆ ಅವರು ಹಲವು ಹದಿನೆಂಟು ರೀತಿಯ ಕಾರ್ಯಗಳಲ್ಲಿ ತಲ್ಲೀನರಾಗಿರುವವರು. ಈ ಇಳಿ ವಯಸ್ಸಿನಲ್ಲೂ ಅವರ ಚಿಂತನೆಯ ಕೇಂದ್ರ ಶ್ರಮಿಕರೇ ಆಗಿದ್ದಾರೆ. + +ಡಾ. ಕೆ.ಎಸ್. ಶರ್ಮಾ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ೩೨ ಕೃತಿಗಳನ್ನು ರಚಿಸಿದ್ದಾರೆ. ಅವರ ಬರವಣಿಗೆ ಕೂಡ ವೈವಿಧ್ಯಮಯವಾಗಿದೆ. ‘ಮಾರ್ಕ್ಸ್‌ ಮತ್ತು ಮಾರ್ಕ್ಸವಾದʼ, ‘ಲೆನಿನ್‌ – ಗಾಂಧಿʼ, ‘ಲೆನಿನ್‌ವಾದ – ಗಾಂಧಿವಾದʼ, ‘ಕ್ರಾಂತಿ ಪ್ರತಿಕ್ರಾಂತಿʼ ಮತ್ತು ‘ಹೋಚಿಮಿನ್‌ʼ ಕೃತಿಗಳು ಮಾರ್ಕ್ಸವಾದದ ಬೆಳವಣಿಗೆ ಮತ್ತು ದೇಶೀ ಗಾಂಧೀವಾದದ ಮುಖಾಮುಖಿಯ ಪರಿಚಯ ಮಾಡಿಕೊಡುತ್ತವೆ. ‘ಸಮಾಜವಾದಿ ಮಹಿಳೆʼ ಮತ್ತು ‘ಮಹಿಳಾ ವಿಮೋಚನೆʼಯಂಥ ಕೃತಿಗಳು ಐದು ದಶಕಗಳಷ್ಟು ಹಿಂದೆಯೆ ಮಹಿಳೆಯ ಸ್ಥಿತಿಗತಿಗಳ ಕುರಿತು ನಮ್ಮನ್ನು ಎಚ್ಚರಿಸಿವೆ. ಅವರು ನಾಟಕ ಮತ್ತು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಡಾ. ಕೆ. ರಾಘವೇಂದ್ರರಾವ್‌ ಮತ್ತು ಡಾ. ವಾಮನ್‌ ಬೇಂದ್ರೆ ಅವರ ಜೊತೆ ಸೇರಿ ಬೇಂದ್ರೆ ಕವನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಸೋವಿಯತ್‌ ಲ್ಯಾಂಡ್‌ ನೆಹರೂ ಅವಾರ್ಡ್‌ ಸೇರಿದಂತೆ ಎಂಟು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ‘ಶ್ರಮಚೇತನʼ, ‘ದಿನಗೂಲಿ ದಿನಕರʼ ಮುಂತಾದ ಅಭಿನಂದನಾ ಗ್ರಂಥಗಳು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. + +ಬೇಂದ್ರೆ ಅವರನ್ನು ಶರ್ಮಾ ಅವರು ದಾ‍ರ್ಶನಿಕವಾಗಿ ಅರ್ಥೈಸಿದ ರೀತಿ ಅನನ್ಯವಾಗಿದೆ. ಬೇಂದ್ರೆ ಕಾವ್ಯದ ಒಳಜಗತ್ತಿನಲ್ಲಿರುವ ಸಮಾನತೆ, ಮಾನವ ಘನತೆ, ವೈಜ್ಞಾನಿಕ ಮನೋಭಾವ, ಜಾತಿ, ಮತಧರ್ಮಗಳನ್ನು ಮೀರಿದ ವಿಶ್ವಮಾನವತ್ವವನ್ನು ಅವರು ಕಾಣುವ ಪರಿ ಕಂಡು ಬೆರಗಾಗಿದ್ದೇನೆ. ನೆಲದ ಸಂಸ್ಕೃತಿಯನ್ನು ವಿಶ್ವಸಂಸ್ಕೃತಿಯ ಜೊತೆಗೆ ಬೆಸೆಯಬಲ್ಲವರಿಗೆ ಮಾತ್ರ ಇದು ಸಾಧ್ಯ. + +ದೇಶೀ ನೆಲೆಯಲ್ಲಿ ನಿಂತು ಗತಿತಾರ್ಕಿಕ ಭೌತಿಕವಾದದ ಪ್ರಜ್ಞೆಯೊಂದಿಗೆ ಬೇಂದ್ರೆ ಪ್ರತಿಭೆಯನ್ನು ಅರ್ಥೈಸುವ ಅವರ ವಿಧಾನ; ಬೇಂದ್ರೆ ಸಾಹಿತ್ಯದ ಮರುಮೌಲ್ಯಮಾಪನಕ್ಕೆ ಒತ್ತಾಯಿಸುತ್ತದೆ. ಶತಮಾನದ ಹಿಂದೆ ಬೇಂದ್ರೆಯವರು ಬರೆದ ‘ಹುಬ್ಬಳ್ಳಿಯಾಂವʼ ಕವನ ಬಂಡವಾಳಶಾಹಿ ವ್ಯವಸ್ಥೆಯ ಆಗಮನವನ್ನು ತಿಳಿಸುತ್ತದೆ. ‘ಕುರುಡು ಕಾಂಚಾಣʼ ಕವನ ಬಂಡವಾಳದ ಅಂತ್ಯವನ್ನು ಸೂಚಿಸುತ್ತದೆ. ‘ಪುಟ್ಟ ವಿಧವೆʼ, ‘ಅನ್ನಾವತಾರʼ, ‘ಅನ್ನ ಬೇಕುʼ, ‘ಸೀಮೋಲ್ಲಂಘನʼ ಮುಂತಾದ ಕವನಗಳು ಧರ್ಮದ ಕರ್ಮಠತನ, ಜನಸಮುದಾಯದ ಸಂಕಷ್ಟ ಮತ್ತು ಆಶಾವಾದಕ್ಕೆ ಸಾಕ್ಷಿಯಾಗಿವೆ. ದ.ರಾ. ಬೇಂದ್ರೆಯವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಶರ್ಮಾ ಅವರು ಪ್ರಕಟಿಸಿದ್ದಾರೆ. ಹೀಗೆ ನನಗೆ ಬೇಂದ್ರೆ ಕುರಿತು ಚಿಂತಿಸಲು ಪ್ರೇರಣೆ ನೀಡಿದವರು ಡಾ. ಕೆ.ಎಸ್. ಶರ್ಮಾ ಅವರು. + + + +‘ಡಾ. ಕೆ.ಎಸ್. ಶರ್ಮಾ ಇನ್‌ಸ್ಟಿಟ್ಯೂಟ್‌ ಆಫ್‌ ನೇಚರೋಪತಿ ಅಂಡ್‌ ಯೋಗಿಕ್‌ ಸೈನ್ಸಿಸ್‌ʼ ಸಂಸ್ಥೆಯ ಉದ್ಘಾಟನೆಗೆ ಶರ್ಮಾ ಅವರು ನನ್ನನ್ನೂ ಕರೆದಿದ್ದರು. ಆಗ ಅಲ್ಲಿ ಸಹಸ್ರಾರು ಜನ ಖಾಯಂಗೊಂಡ ಸರ್ಕಾರಿ ದಿನಗೂಲಿ ನೌಕರರು ‘ಮಹಾತ್ಮಾ ಶರ್ಮಾ ಅವರಿಗೆ ಜಯವಾಗಲಿʼ ಎಂದು ಘೋಷಣೆ ಕೂಗುತ್ತಿದ್ದರು. ಅದು ನಿಜವಾಗಿಯೂ ಕಾರ್ಮಿಕ ವಿಜಯವೇ ಆಗಿತ್ತು. ಹೊಸ ಬದುಕನ್ನು ಪಡೆದ ಕಾರ್ಮಿಕರ ಪಾಲಿಗೆ ಶರ್ಮಾ ಅವರು ಮಹಾತ್ಮರೇ ಆಗಿದ್ದರು. ಇದೇ ಸಪ್ಟೆಂಬರ್‌ ೩೦ಕ್ಕೆ ಅವರು ೯೧ನೇ ವರ್ಷಕ್ಕೆ ಕಾಲಿಡುತ್ತಾರೆ. ಡಾ. ಕೆ.ಎಸ್. ಶರ್ಮಾ ಅವರು ನೂರ್ಕಾಲ ಬಾಳುತ್ತ ನಮಗೆಲ್ಲ ಸ್ಫೂರ್ತಿಯ ಚಿಲುಮೆಯಾಗಿ ಇರಲಿ. + +ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ. \ No newline at end of file diff --git a/Kenda Sampige/article_10.txt b/Kenda Sampige/article_10.txt new file mode 100644 index 0000000000000000000000000000000000000000..6628ffb08b9a97909b5e5dd6e796a20efdcc0eef --- /dev/null +++ b/Kenda Sampige/article_10.txt @@ -0,0 +1,5 @@ +ಹಿಂದಿನ ಶತಮಾನದ ಎಪ್ಪತ್ತರ ದಶಕದವರೆಗೆ ಮಲೆನಾಡಿನ ನಮ್ಮ ಊರುಗಳಿಗೆ  ಬಸ್ಸಿನ ಸವಲತ್ತು ತೀರ ಅಪರೂಪವಾಗಿತ್ತು. ನೆಂಟರ ಮನೆಗೆ ಹೋಗುತ್ತಿದ್ದುದು ಕಾಲ್ನಡಿಗೆಯಲ್ಲಿ ಅಥವಾ ಎತ್ತಿನ ಗಾಡಿಯಲ್ಲಿ. ದ್ವಿಚಕ್ರ ವಾಹನಗಳೂ ಇರದ ಕಾಲವದು. ಸೈಕಲ್‌ಗಳು ಮಾತ್ರ ಇದ್ದವು. ಹಾಗಾಗಿ ಬಂದವರು ಎರೆಡೋ ಮೂರೋ ದಿನಗಳಿದ್ದು ಹೊರಡುತ್ತಿದ್ದರು. ಮನೆಯಲ್ಲಿ ಎತ್ತಿನಗಾಡಿ ಇದ್ದವರು ಅವರನ್ನು ಗಾಡಿಯಲ್ಲಿ ಕಳಿಸುತ್ತಿದ್ದರು. ಆಗೆಲ್ಲ ಮನೆಯಿಂದ ಹೊರಡುವ ಸಂಭ್ರಮವೇ ಸಂಭ್ರಮ. ʻನಿನ್ನ ಹಲ್ತಿಕ್ಕ ಬ್ರಶ್‌ ತಂಗಂಡ್ಯಾ?, ಒಣಗಿಸಿದ್ದ ಬಟ್ಟೆ ಚೀಲಕ್ಕೆ ಹಾಕಿಯಾತಾ?ʼ ಅಂತ ವಿಚಾರಿಸುತ್ತಿದ್ದರು. ಇನ್ನೇನು ಹೊರಡಬೇಕು ಎನ್ನುವಾಗ ಅವರ ಮನೆ ಅಂಗಳದಲ್ಲೋ ಹಿತ್ತಿಲಿನಲ್ಲೋ ಇದ್ದ ಗುಲಾಬಿ ಕಡ್ಡಿಯೋ, ಮಲ್ಲಿಗೆಯ ಹಂಬೋ, ಡೇರೆಯ ಗಡ್ಡೆಯೋ ನೆನಪಾಗಿ, ʻಅಕ್ಕಯ್ಯ ಆ ಗಿಡ ಬೇಕು ಕೊಡು ಅಂತ ಹೇಳಿದ್ದು ಮರ್ತೇ ಹೋಗಿತ್ತುʼ ಎನ್ನುತ್ತಿದ್ದಂತೆ ಮನೆಯ ಯಜಮಾನಿ ʻಹೌದು ಯಂಗೂ ಮರ್ತೇಹೋತು. ತಡಿ ತಗಂಡು ಬರ್ತಿʼ ಅಂತ ಅದನ್ನು ಕತ್ತರಿಸಿಯೋ ಕಿತ್ತೋ ತರುತ್ತಿದ್ದರು. ಹೀಗೆ ತಂದುದನ್ನು ಪಡೆದು ಅದಕ್ಕೊಂದು ದಾರವನ್ನೋ ಬಳ್ಳಿಯನ್ನೋ ಕಟ್ಟಿ ಅದು ಮನೆಯವರೆಗೆ ತಲುಪುವಂತೆ ಜೋಪಾನವಾಗಿ ಒಯ್ಯುವುದಿತ್ತು.  ದೊಡ್ಡವರೊಂದಿಗೆ ನಾವೂ ಗಾಡಿ ಮರೆಯಾಗುವವರೆಗೆ ಅಂಗಳದಲ್ಲಿ ನಿಂತು  ಕೈಬೀಸುತ್ತಿದ್ದೆವು. ನಡೆದು ಹೋಗುವುದಾದಲ್ಲಿ ಕೆಲವೊಮ್ಮೆ ಊರಬಾಗಿಲವರೆಗೆ ಅಥವಾ ಕೆರೆಯೋ ಗದ್ದೆಯೋ ತೋಟವೋ ಇದ್ದರೆ ಅಲ್ಲಿವರೆಗೂ ಹೋಗುವುದಿತ್ತು. ಬಸ್ಸಿನ ಸೌಕರ್ಯ ಬಂದ ಮೇಲೆ ಮನೆಯ ಮಕ್ಕಳಿಗೆ ಅವರನ್ನು ಬಸ್ಸಿಗೆ ಹತ್ತಿಸಿ ಬರುವ ಖಯಾಲಿ. ಒಂದೋ ಎರಡೋ ಕಿ.ಮೀ ದೂರವಿರುವ ಬಸ್‌ ನಿಲ್ದಾಣದತನಕ ಹೋಗಿ ಅವರಿಗೆ ಟಾಟಾ ಮಾಡುವುದು ಮಜಾ ಅನಿಸುತ್ತಿತ್ತು. ಅಲ್ಲೇನಾದರೂ ಅಂಗಡಿ ಇದ್ದರೆ ಅವರ ಕೈಗೆ ಚಾಕ್ಲೇಟೋ, ಪೆಪ್ಪರಮೆಂಟೋ ಬಿಸ್ಕತ್ತೋ ಕಡಲೆಕಾಯಿ ಪೊಟ್ಟಣವೋ ಸಿಗುವುದೂ ಇತ್ತು. ಹಾಗೆ ಪಡೆದು ಮನೆಗೆ ಬಂದ ಮೇಲೆ ಆ ಮಕ್ಕಳು ಮಾಡುವ ಡೌಲು ನೋಡುವಂತಿರುತ್ತಿತ್ತು. ನೆಂಟರ ಜೊತೆಗೆ ಹೋಗದೆ ಇರುವ ಮಕ್ಕಳ ಮುಖ ಬಾಡುತ್ತಿತ್ತು. ಮನೆಗೆ ಮತ್ಯಾರಾದರೂ ಬಂದರೆ ಸಾಕು, ಅವರನ್ನು ಕಳಿಸಿ ಬರಲಿಕ್ಕೆ ಮಕ್ಕಳಲ್ಲಿ ʻನಾ ಮುಂದು ತಾ ಮುಂದು ʼ ಎನ್ನುವ ಸ್ಪರ್ಧೆ ಏರ್ಪಡುತ್ತಿತ್ತು. + +ಈಗಲೂ ಹಳ್ಳಿಯನ್ನು ಬಿಟ್ಟಬಂದು ನಗರ ಪ್ರದೇಶದಲ್ಲಿ ಉದ್ಯೋಗದಲ್ಲಿರುವವರು ಊರಿಗೆ ಹೋಗಿ ಮರಳಿ ಬರುವಾಗಿನ ಸಂಭ್ರಮವನ್ನು ನೋಡಬೇಕು. ಅದರಲ್ಲಿಯೂ ನಾಲ್ಕು ಚಕ್ರದ ವಾಹನ ಇರುವವರ ವಾಹನದಲ್ಲಿ ಹಿಡಿಸದಷ್ಟು ವಸ್ತುಗಳು ಅಲ್ಲಿ ಆಶ್ರಯ ಪಡೆದಿರುತ್ತವೆ. ಮನೆಯಲ್ಲಿ ಬೆಳೆದ ಸೊಪ್ಪು, ತರಕಾರಿ, ಬಾಳೆಹಣ್ಣು, ಮಾವು, ಹಲಸು, ನಿಂಬೆ ಹೀಗೆ ಆಯಾ ಪ್ರದೇಶದ ಬೆಳೆಗಳನ್ನು ಆಧರಿಸಿ ಮಕ್ಕಳ ಮನೆಗೆ ಕಳುಹಿಸಲು ಹೆತ್ತವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ʻಇದು ಈ ಬಾರಿ ಬಂದ ಹೊಸ ಫಸಲು, ನೀವೂ ತಿನ್ನಿʼ ಎನ್ನುತ್ತ ಇನ್ನಷ್ಟು ತುಂಬುತ್ತಾರೆ. ಹೈನು ಇರುವ ಮನೆಯ ಮಕ್ಕಳಿಗೆ ಕಳುಹಿಸುವ ವಸ್ತುಗಳ ಪಟ್ಟಿಯಲ್ಲಿ ತುಪ್ಪವೂ ಜಾಗವನ್ನು ಪಡೆದುರುತ್ತದೆ. ಹೀಗೆ ಮಾಡುವುದರಲ್ಲಿ ವಸ್ತುಗಳ ಪ್ರಾಧಾನ್ಯಕ್ಕಿಂತ ಮಕ್ಕಳು, ಮೊಮ್ಮಕ್ಕಳ ಮೇಲಿನ ಪ್ರೀತಿ ಮತ್ತು ಮಮಕಾರ ಮುಖ್ಯವಾಗುತ್ತವೆ. ಹಸುವೋ ಎಮ್ಮೆಯೋ ಕರು ಹಾಕಿದಾಗ ಸದ್ಯದಲ್ಲಿಯೇ ಮಕ್ಕಳು ಬರುವವರಿದ್ದಾರೆ ಎಂದಾದರೆ ಗಟ್ಟಿ ಗಿಣ್ಣು ಮಾಡಿ ಫ್ರಿಜ್‌ನಲ್ಲಿಟ್ಟು ಕಾಪಿಡುವ ಅವರ ನಿಷ್ಕಲ್ಮಷ ಪ್ರೀತಿಗೆ ಯಾರಾದರೂ ಸೋಲಲೇಬೇಕು. ಕೆಲವೊಮ್ಮೆ ಮನೆಗೆ ಬಂದರಿವವರ ಮನೆಯ ಯಾರಿಗೂ ಯಾವುದೋ ಪ್ರೀತಿಯೆಂದು ತಮ್ಮಲ್ಲಿರುವುದನ್ನು ಕೊಟ್ಟು ಕಳುಹಿಸುವುದೂ ಇದೆ.  ಹೀಗೆ ಕೊಟ್ಟಿರುವುದು ಬೇಡವೆನಿಸಿದರೂ ತೆಗೆದುಕೊಂಡು ಹೋಗಲು ನಿರಾಕರಿಸುವುದು ಕಷ್ಟವಾಗುತ್ತದೆ. + +ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ. \ No newline at end of file diff --git a/Kenda Sampige/article_100.txt b/Kenda Sampige/article_100.txt new file mode 100644 index 0000000000000000000000000000000000000000..2fe927c067b7b4a40ce2257e5d33913e428d367f --- /dev/null +++ b/Kenda Sampige/article_100.txt @@ -0,0 +1,31 @@ +“ಬೊಗಸೆ ತುಂಬಾ ಮಲ್ಲಿಗೆಯನ್ನಲ್ಲಮದ್ದುಗುಂಡುಗಳನ್ನೇಗರ್ಭಧರಿಸಿ ತಿರುಗುತಿದೆ”ಅಂತಹ ಪ್ರತಿಮೆಗಳನ್ನಿರಿಸುತ್ತ ಇಲ್ಲಿನ ಕಾವ್ಯ ತನ್ನೊಳಗಿನಿಂದ ತೆರೆದುಕೊಳ್ಳುವುದನ್ನೇ ವಿಶೇಷವಾಗುಳ್ಳದು, ಸುತ್ತಲಿನ ಪರಿಸರಕ್ಕಾಗಿ ಚಾಚಿಕೊಳ್ಳುವುದು ನಿಧಾನ ಜೊತೆಗೂಡಿದಂತಿದೆ. + +‘ಈಗಪ್ರತಿ ದಿನವೂಉರಿಸಬೇಕು ಕಾರಿರುಳು’ಅನ್ನುವಂಥ ತಹತಹಿಕೆಯ ಮಾತು ಇಲ್ಲಿನ ಒಂದು ಬಗೆಯ ಕುದಿತಕ್ಕೆ ಸಾಕ್ಷಿಯೂ ಆಗಿದೆ ಅನಿಸುತ್ತದೆ. + +“ಹಾಡಿನೊಳಗಣ ಅಗ್ನಿತಂಪುಹಿಮದ ಕಿಡಿಗಳನು ಕರಗಿಸುವಂತೆಇನ್ನೊಂದು ಮತ್ತೊಂದು ಹಾಡಿಗೆಅನುದಿನದ ಹೊಸ ಬೆಳಕು ಕತ್ತಲೆಯನೆ ಕೊಲ್ಲುವುದು”ಎನ್ನುತ್ತ ಒಂದು ತಣ್ಣನೆಯ ಭರವಸೆಯನ್ನು ಇಟ್ಟುಕೊಂಡು ಇಲ್ಲಿನ ರಚನೆ ಹಾಡಾಗ ಬಯಸುತ್ತದೆ. + +(ಸುಮಿತ್‌ ಮೇತ್ರಿ) + +‘ಮತ್ತೆ ಮತ್ತೆ ನಿರೀಕ್ಷೆ ಹುಟ್ಟಿಸುವ ಮಳೆಯ ಸದ್ದಿನಂತೆ ದೂರದಲ್ಲೆಲ್ಲೋ ಕರಗಿ ಕಪ್ಪುಮೋಡದ ಆಲಾಪದಂತೆ’ ಸೋಲು ಪ್ರತಿ ಸಲವಿರುವಾಗಲೂ ಕಾಯುವ, ಭರವಸೆಗೊಳ್ಳುವ ದನಿ ಕೇಳುತ್ತದೆ. + +‘ಮುಖ ಕೊಂದುಮುಖ ಹುಡುಕುವ ಹಾದಿಯಲ್ಲಿಇಲ್ಲ… ಇಲ್ಲ… ಇಲ್ಲ…ನನ್ನದೆ ಮುಖದ ಹೊರತು ನನಗೇನು ಬೇಕಿಲ್ಲ’ಎನ್ನುವ ಹಟವೂ ಬೆರೆಯುತ್ತದೆ. ಒಂದಿಗೇ‘ಇಲ್ಲಿಈ ಕಿರುತರುಣನೊಬ್ಬತನ್ನದೇ ಮುಖದ ಹುಡುಕಾಟದಲ್ಲಿಅಲೆಯುತ್ತಿದ್ದಾನೆ ಮುಖ ಕೊಂದು; ಮುಖ ಹುಡುಕುವ ಹಾದಿಬೀದಿಯಲ್ಲಿ’ಎನ್ನುವ ದಿಗಿಲಾಗಿರುವ ವಾಸ್ತು ಸಂಗತಿಯೂ ಕಾಣುತ್ತದೆ. + +‘ಆತ್ಮಭಾವದ ಆಚೆ ಜೀವಭಾವದ ಈಚೆ’ ಎನ್ನುವ ರಚನೆ ಕೆಲವೆಲ್ಲ ಚರ್ವಿತ ಚರ್ವಣಗಳನ್ನ ಮುಂದಿರುಸತ್ತಲೇ ಸಾಗುತ್ತದಾದರೂ“ನನ್ನಂಥ ಹಾದಿಹೋಕರ ಭರವಸೆಗೆಹೃದ್ಗತವನು ಬೈಲಿಗಿಟ್ಟೆಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿಪ್ರತಿಯೊಬ್ಬರೂ ಒಂಟಿ!’ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ. + +“ಆದರೆ,ಒಂದು ತಿಳಿದುಕೊ ಪ್ರಿಯ ಪಾರ್ಟನರ್ಎದೆಗೆ ಒದೆಯುವ ಕೂಸಿಗೆತಾಯಿ ಎಂದೂ ಹಾಲುಣಿಸುವುದನು ನಿಲ್ಲಿಸುವುದಿಲ್ಲ”ಎನ್ನುವ ಗಟ್ಟಿ ಅನಿಸುವ ಅನುಭವದ ಮಾತುಗಳೇ ಇಲ್ಲಿ ಹೆಚ್ಚು ಹೆಚ್ಚೆ ಸೆಳೆದದ್ದು ನನ್ನನ್ನು. (ಇಲ್ಲೆ ಕೆಲವೆಲ್ಲ ಗಜಲ್ ಮಾದರಿಗಳನ್ನ ಇರಿಸಿಕೊಂಡಂತೆಯೇ ಕಂಡುವು ನನಗೆ ಅದಲೆಲ ಕ್ಲೀಷೆಯಾಗಿ ಕಂಡು ಸುಮ್ಮನಾಗಿರುವೆ) + +“ಧ್ಯಾನಕ್ಕೆ ಗುಹೆಬೇಕಿಲ್ಲ” ಮತ್ತೆ ಕವಿಯ ಖಾಸಾ ದನಿಯಾಗಿ ಕಾಣುತ್ತಲೂ ಇಡಿಕಿರದ ಇಮೇಜುಗಳಿಂದ ಮೂರ್ತ ಅಮೂರ್ತಗೊಳಿಸಿ ಚೆಂದಗೊಳಿಸುವ ಕೆಲಸವೇ ಆಗಿಬಿಟ್ಟಿದೆಯಾ ಅನ್ನಿಸಿತು. ಕವಿತೆ ಅಂದರೆ ಇಮೇಜ್ ಕಟ್ಟುವುದೇ ಕೆಲಸವೇ?“ಗಾಯಗಳಿಗೆ ಸಾಕ್ಷಿ ಹೇಳುವಪಾದದ ಪಡಿಯಚ್ಚಿನ ಹೆಜ್ಜೆ ಗುರುತುಗಳುಧ್ಯಾನಕ್ಕೆ ಗುಹೆ ಬೇಕಿಲ್ಲಕಟ್ಟಕಡೆಯ ಪ್ರಜೆಗೆ ತಲುಪದ ಜನತೆಯ ಕಣ್ಮಣಿಯೇಆಕ್ರಂದನದ ಮೊರೆ ಕೇಳು…ಹಸಿವಾಗದಿರಲೆಂದು ದಯಾಮಯಿ ಭಗವಂತನಲ್ಲಿ ಮೊರೆಯಿಟ್ಟೆಒಲೆಯ ಧ್ಯಾನಸ್ತ ಕೆಂಡದ ಕಿಡಿಬದುಕಿನ ಬಿದಾಯಿ ಕೊಡುವ ಘಳಿಗೆಸುಳ್ಳು ಸತ್ಯವಾಗುವ ಸತ್ಯ ಸುಳ್ಳಾಗುವಪ್ರತ್ಯಕ್ಷ ಕಂಡರೂ ತನ್ನನ್ನೇ ತಾನು ನೋಡುವಖತಾಯತಿ ಕೇಳುವ ಕಾಲ”ಈ ಬಗೆಯ ಮಾತುಗಳು ಬಲು ದೊಡ್ಡವೇ ಅನ್ನಿಸಿತು, ಗೊತ್ತಿಲ್ಲ + +“ಈ ಲೋಕದ ಕಣ್ಣೀಗಹೊಸ ಕುದುರೆಗಳ ಮೇಲೆಸಾರಿ, ಗೆಲುವ ಕುದುರೆ ಮೆಲೆ*ನೆನಪಿರಲಿಈಗ ಎಲ್ಲಾ ದಾರಿಗಳೂಪುನಃ ಅಲ್ಲೇ ಬಂದು ಸೇರುತ್ತವೆಮನುಷ್ಯ ಮುಕ್ತತೆ ಏನೋ ಬಯಸುತ್ತಾನೆಆದರೆ ಯಾವತ್ತೂ ಹಾಗೆ ಬದುಕುವುದಿಲ್ಲ ಮತ್ತು ಬದುಕಲು ಬಿಡುವುದಿಲ್ಲ” + +ಇಲ್ಲಿ ಪ್ರತಿ ಸಲವೂ ವ್ಯಕ್ತಿಯ ಒಳದನಿಯ ಕಡೆಗೆ ಕಿವಿಯಾಗುವ, ಮನುಷ್ಯನ ಒಳಗನ್ನ ಕೆದಕುವ ನುಡಿಗಳೇ ಕೇಳುತ್ತವೆ. ಅನೇಕ ಸಲ ಫಿಲಾಸಫಿಯಾಗಿ ಬಿಡುವ ಧಾವಂತವೂ ಕಂಡುಬಿಡುತ್ತದೆ. + +“ಕವಿತೆಗಾಗಿಕರುಳಕುಡಿ ಒಂದಾಗಿ ಜಿಬುಕುವತಾಯ ಮೊಲೆಯಂತೆ”ಕಾಯುವುದು ಇಲ್ಲಿನ ಒಟ್ಟು ಹಂಬಲ. ಅವರವರಿಗೆ ಒಂದೊಂದು ಹಂಬಲ ಅನಿಸಿತು. ಬೇಂದ್ರೆ ಎಷ್ಟೇ ದೊಡ್ಡ ಕವಿ ಎನಿಸಿದರೂ ನನಗೆ ಎಷ್ಟೋ ಸಲ ಶಬ್ಧ ವ್ಯಾಮೋಹಿ, ಕವಿತಾ ವ್ಯಸನಿಯೂ ಆಗಿ ಕಂಡುದಿದ್ದೇ ಇದೆ. ಏನೂ ಮಾಡಲಾಗದು. + +“ಆಖಾಡಕ್ಕೆ ಇಳಿದ ಮೇಲೆಒಂದು ಕೈ ನೋಡಿದ ಮೇಲೆಆಟದ ನಶೆ ತಲೆ ಏರಿದ ಮೇಲೆಆಟವೇ ಆ ಡಿ ಸು ತ್ತ ದೆ. . .”ಎನ್ನುವಂಥ ಬಹು ವಿಸ್ತಾರದ ಮಾತುಗಳು ಇಲ್ಲಿ ಇದ್ದಕಿದ್ದಂತೆ ಕಂಡು ಬಿಡುತ್ತವೆ. + + + +“ಉಗುಳು ನುಂಗುತ್ತಿದ್ದೇನೆಅಂತ್ಯ ಇರುವುದು ದೇವರ ಹೆಸರಿನಲ್ಲೋಇಲ್ಲ,ಸಾವಿನ ಹೆಸರಿನಲ್ಲೋ*ಈ ಲೋಕದಲ್ಲಿಎಲ್ಲ ಭಾವನೆಗಳು ಸಾಪೇಕ್ಷ*ಬಾ . . .ಸೈರಣೆಯಿಂದಲೇನಮ್ಮನಮ್ಮ ಪಾಲಿನಏಕಾಂತದ ನೋವುಗಳನು ಹಂಚಿಕೊಳ್ಳೋಣ”ಎನ್ನುವ ಮಾತುಗಳು ಗುಚ್ಛವಾಗಿ ಸಂಕಲನದ ತುಂಬ ಅನುರಣಿಸಿವೆ ಅನಿಸಿತು. ಇಲ್ಲಿನ ರಚನೆಗಳು ಅನೇಕ ಸಲ ಬಹುದೊಡ್ಡದನ್ನು ತೆಕ್ಕೆಗೆ ಎಳೆದುಕೊಳ್ಳಲು ಹಂಬಲಿಸತೊಡಗುತ್ತವೆ. ಅದು ಭೃಮಾತ್ಮಕವೆ ಅಂತ ಅನಿಸಿಯೂ ಬಿಡುತ್ತದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_101.txt b/Kenda Sampige/article_101.txt new file mode 100644 index 0000000000000000000000000000000000000000..c2d2dfb0c1298a44d9d5b65cedf395b5babb548e --- /dev/null +++ b/Kenda Sampige/article_101.txt @@ -0,0 +1,179 @@ +ಯಾವುದೇ ಸಮಾಜ, ಯಾವುದೇ ಸಂಸ್ಕೃತಿ, ಯಾವುದೇ ಭಾಶೆ, ಪ್ರೇಮಕವನಗಳಿಲ್ಲದಿದ್ದರೆ ಅಪೂರ್ಣವೇ ಅನ್ನಬಹುದು. ಸಾಹಿತ್ಯದಲ್ಲಿ ಬಗೆಬಗೆಯ ರುಚಿಯುಳ್ಳ ಶೈಲಿಗಳು ಬರಬಹುದು, ಹೋಗಬಹುದು; ಆದರೆ, ಪ್ರೇಮಕವನ ಒಂದು ಶಾಶ್ವತ ಪ್ರಕಾರ – ಒಂದು ಅರ್ಥದಲ್ಲಿ ಕಾವ್ಯದ ಜೀವಾಳ. ಸಾಹಿತ್ಯ ಚರಿತ್ರೆ, ವಿಮರ್ಶೆ ಈ ಮೂಲಭೂತ ಕಾವ್ಯಪ್ರಕಾರವನ್ನು ಕಡೆಗಣಿಸಿದ್ದರೂ, ಇತಿಹಾಸದುದ್ದಕ್ಕೂ ಜನಜೀವನದ ಅವಿಭಾಜ್ಯ ಭಾಗವಾಗಿರುವ ಸಾಹಿತ್ಯಪ್ರಕಾರಗಳಲ್ಲಿ ಪ್ರೇಮಕವನ ಪ್ರಮುಖವಾದದ್ದು. ಊಟಕ್ಕೆ ಬೇಕಾಗುವ ಉಪ್ಪಿನಕಾಯಿಯಂತೆ ದಿನನಿತ್ಯದ ಬಾಳಿಗೆ ಅವಶ್ಯಕ ಕೊಡುಗೆ ಪ್ರೇಮಕವನದ್ದು. + +(ಜಬೀವುಲ್ಲಾ ಅಸದ್) + +ಅತ್ಯುತ್ತಮ ಕವನಗಳೂ ಕೂಡ ಅತ್ಯಂತ ಸಂಕೀರ್ಣವಾಗಿರುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತ”, ಅಥವಾ ಕನಕದಾಸರ ಮುಂಡಿಗೆಗಳು, ಬೇಂದ್ರೆಯವರ “ಜೋಗಿ” ಇಂತಹ ಕವನಗಳನ್ನು ನೋಡಬಹುದು. ಆದರೆ, ಪ್ರೇಮಕವನ ಪ್ರಕಾರದಲ್ಲಿ ಮಾತ್ರ ಇದು ಅಪರೂಪ. ಈ ಮಾತಿಗೆ ಹೊರತು ಎಂದರೆ ನವ್ಯಕಾವ್ಯ ಎನ್ನಬಹುದು, ಯಾಕೆಂದರೆ ನವ್ಯಕವಿಗಳು ವ್ಯಂಗ್ಯಕ್ಕೆ ಎಷ್ಟು ಒತ್ತು ಕೊಡುತ್ತಾರೆ ಅಂದರೆ ಸರಳ ಅಭಿವ್ಯಕ್ತಿಯ ಕುರಿತಾಗಿ ನವ್ಯಕಾವ್ಯದಲ್ಲಿ ಒಂದು ಬಗೆಯ ಅಪನಂಬಿಕೆಯೇ ಇರುವುದನ್ನು ಕಾಣಬಹುದು. ಈ ಅಪನಂಬಿಕೆಯಿಂದಾಗಿಯೇ ನವ್ಯಕವಿಗಳು ಪ್ರೇಮಕವನ ಬರೆದಿದ್ದು ಕಡಿಮೆ ಅಥವಾ ನವ್ಯ ಪದ್ಧತಿಯ ಪ್ರೇಮಕವನದ ರೀತಿಯೇ ಭಿನ್ನ. ಹೀಗೆ, ಪ್ರೇಮಕಾವ್ಯದ ದಾರಿ ಬಿಟ್ಟು ಬರೆಯುವ ವಿಧಾನಕ್ಕೆ ಮೂಲಮಾದರಿ ಒದಗಿಸಿದ ಮಹಾಶಯನೆಂದರೆ ಇಂಗ್ಲೀಷ್ ಕವಿ ಟಿ ಎಸ್ ಎಲಿಯೆಟ್. + +ಸರಿಸುಮಾರು ನೂರಾ ಹತ್ತು ವರುಷಗಳ ಹಿಂದೆ 1910-11ರಲ್ಲಿ ಟಿ ಎಸ್ ಎಲಿಯೆಟ್ ತನ್ನ ಮೊಟ್ಟ ಮೊದಲ ಕವನ “ದ ಲವ್ ಸಾಂಗ್ ಆಫ್ ಜೆ ಆಫ್ರೆಡ್ ಪ್ರುಫ್ರಾಕ್” ಬರೆದರು. ಕೊಂಚ ಪರಿಷ್ಕರಣೆಗಳಿಗೆ ಒಳಗಾಗಿ ಈ ಕವನ ಮೊದಲು 1915ರಲ್ಲಿ ಪ್ರಕಟವಾಯಿತು. ಮುಂದೆ, 1917ರಲ್ಲಿ ಪ್ರಕಟವಾದ ಅವರ ಮೊದಲ ಕವನ ಸಂಕಲನದ ಮೊದಲ ಕವನವೂ ಇದಾಗಿತ್ತು. ಆಧುನಿಕನೊಬ್ಬನ ಹತಾಶೆ, ಭ್ರಮನಿರಸನ, ಏಕಾಕಿತನ, ಕ್ರಿಯಾಶೂನ್ಯತೆಗಳನ್ನು ವಿಷಯವಾಗಿಸಿಕೊಂಡ ಈ ಕವನ ಪ್ರೇಮಕವನಗಳ ಇಡೀ ಇತಿಹಾಸಕ್ಕೆ ವ್ಯತಿರಿಕ್ತ ರೀತಿಯ ಪ್ರೇಮಕವನವಾಗಿತ್ತು. ಪ್ರೇಮದ ವಿಷಯದಲ್ಲಿ ವ್ಯಂಗ್ಯದ ಬಳಕೆಯ ಮೂಲಕ ಮನುಷ್ಯ ಸಾಧ್ಯತೆಗಳನ್ನೇ ಸಂದೇಹಾತ್ಮಕವಾಗಿ ನೋಡುವ ಈ ಕವನ ಪ್ರತಿನಿಧಿಸುವ ಅಪನಂಬಿಕೆಯ ವಿಧಾನ ಮಾಡರ್ನಿಸ್ಟ್ (ಕನ್ನಡದಲ್ಲಿ ನವ್ಯ) ಎಂಬ ಸಾಹಿತ್ಯ ವಿದ್ಯಮಾನದ ಗುರುತಾಗಿ ಬೆಳೆದಿದ್ದು ನಮಗೆಲ್ಲ ತಿಳಿದೇ ಇದೆ. ನವೋದಯ ಕವಿಗಳ ಪ್ರೇಮಕವನಗಳಲ್ಲಿ ಕಂಡುಬರುವ ಸಹಜ ಧ್ವನಿ, ಭಾಶಿಕ ಸೊಗಸು, ತಿಳಿ ಅಭಿವ್ಯಕ್ತಿ, ಆದರೂ ಗಹನ ವಿಚಾರಕ್ಕೆ ನಮ್ಮನ್ನು ಎತ್ತರಿಸುವ ಅವುಗಳ ಗುಣ ಇವೆಲ್ಲವೂ ಎಲಿಯೆಟ್ ಕಾವ್ಯವಿಧಾನಕ್ಕೆ ವಿಪರೀತವಾದದ್ದು. ಎಲಿಯೆಟ್ ಕಾವ್ಯಮಾದರಿ ಚಾಲ್ತಿಗೆ ತಂದ ಆತ್ಮ-ನಿರೀಕ್ಷಣೆಯ (self-conscious), ಸ್ವ-ನಿರಾಕರಣೆಯ (self-deprecating) ಮತ್ತು ಪರೋಕ್ಷ ಅಭಿವ್ಯಕ್ತಿ ಶೈಲಿ ಪ್ರೇಮಕವನಕ್ಕೆ ಹೊಂದುವಂತದ್ದಲ್ಲ. ಎಲಿಯೆಟ್ ಮಾದರಿಯನ್ನು ಅನುಸರಿಸಿದ ಕಡೆಯೆಲ್ಲ ಸಹಜ ಮತ್ತು ನೇರ ಅಭಿವ್ಯಕ್ತಿಯನ್ನು ಬೇಡುವ ಪ್ರೇಮಕವನ ಬಾಡಿ ಹೋಗಿದ್ದನ್ನು ಕಾಣಬಹುದು. ಕನ್ನಡದ ಅನೇಕ ಮೇರು ಕವಿಗಳು ನವ್ಯೋತ್ತರ ಕಾಲದಲ್ಲಿ ನವ್ಯಕಾವ್ಯದ ಅಭಿವ್ಯಕ್ತಿಯ ಬಿಗಿತನ, ವಿಷಯ ಪ್ರಸ್ತುತಿಯ ಹೃಸ್ವತೆ, ಪ್ರತಿಮೆಗಳ ನಿಖರತೆಗಳನ್ನು ಮುಂದುವರಿಸಿದರೂ ಸಹ, ವ್ಯಂಗ್ಯ ಮತ್ತು ಅಪನಂಬಿಕೆಯ ಬಳಕೆಯನ್ನು ಗೌಣವಾಗಿಸಿದರು. ಆದರೂ, ನವ್ಯಕಾವ್ಯ ಕೊಟ್ಟ ಪೆಟ್ಟಿನಿಂದ ಪ್ರೇಮಕವನ ಸುಧಾರಿಸಿಕೊಂಡಿಲ್ಲ – ಬದಲಿಗೆ ಕನ್ನಡದಲ್ಲಿ ಮುನ್ನೆಲೆಗೆ ಬಂದ ಶ್ರಾವ್ಯಕಾವ್ಯ ಮತ್ತು ಸಿನೆಮಾಗೀತೆಗಳಲ್ಲಿ ತನ್ನ ಜೀವಂತಿಕೆ, ಸೃಜನಶೀಲತೆಯನ್ನು ದರ್ಶಿಸಿದೆ. + +ಈ ಹಿನ್ನೆಲೆಯಲ್ಲಿ, ವ್ಯಂಗ್ಯ ಮತ್ತು ಸ್ವ-ನಿರಾಕರಣೆಯ ಶೈಲಿಗಳಿಂದ ಬಿಡಿಸಿಕೊಂಡ, ಆತ್ಮ-ನಿರೀಕ್ಷಣೆಯ ಚಪಲಕ್ಕೆ ಬೀಳದೇ ನೇರ ಅಭಿವ್ಯಕ್ತಿಗೆ ಪ್ರಯತ್ನಿಸುವ, ಆಗೀಗ ವಾಚಾಳಿಯಾಗಲು ಹಿಂಜರಿಯದ, ಪ್ರೇಮಕವನಗಳನ್ನು ಓದಿದಾಗ ನನಗೆ ಹೊಸದೇನನ್ನೋ ಓದುತ್ತಿರುವೆ ಅನಿಸುತ್ತದೆ. ಇದು, ಒಂಥರಾ ಯೌವನದ ಅಮಾಯಕತೆಗೆ ಹೊರಳಿದಂತೆ. ಸಾಹಿತ್ಯಜ್ನಾನದಿಂದ ಮುಕ್ಕಾಗಿ ಹೋದ ಸರಳ ಸ್ಪಂದನಶೀಲತೆಯನ್ನು ಮರಳಿ ಕಂಡುಕೊಂಡಂತೆ. ಅದೇನೋ ಭಾರವಾದದ್ದನ್ನು ಹೊತ್ತಿಯೇ ಇರಬೇಕು ಎನ್ನುವ ದಾಕ್ಷಿಣ್ಯಕ್ಕೆ ಬೀಳದೇ, ಹೆಗಲ ಮೇಲಿಂದ ಹೊರೆ ಇಳಿಸಿಕೊಂಡು ಹಗುರವಾದಂತೆ. ಭಾಶೆ, ಭಾವ ಮತ್ತು ಸ್ವರೂಪದ ನೆಲೆಯಲ್ಲಿಯೇ ಕವನದ ಒಟ್ಟೂ ಅನುಭವವನ್ನು ಪಡೆದುಕೊಂಡಂತೆ. ಉರ್ದು ಭಾಶೆಯ ಮುಶೈರಾಗಳು ಸಾವಿರಾರು ಕೇಳುಗರಿಂದ ತುಂಬಿ ತುಳುಕಲು ಕಾರಣ ಪ್ರೇಮಕವನಗಳ ಇದೇ ಸ್ಪಂದನಶೀಲ ಗುಣ ಎನಿಸುತ್ತದೆ. + +ಹೀಗೆ ನನ್ನನ್ನು ಯೋಚಿಸಲು ಹಚ್ಚಿದ್ದು ಜಬಿವುಲ್ಲಾ ಅಸದ್ ಅವರ “ಪ್ರೇಮಯಾತನ” ಸಂಕಲನದ ಕವನಗಳು. ಈ ಸಂಕಲನದ ಶೀರ್ಷಿಕೆಯಿಂದಲೇ ಮೊದಲಾಗುವ ಕಾವ್ಯಲಕ್ಷಣ ಎಂದರೆ ವ್ಯಂಗ್ಯಾತ್ಮಕತೆ ಇಲ್ಲದ ನೇರ ಶೈಲಿ. ಸವಕಲು, ಜಾಳು, ಅಮೂರ್ತ ಎಂದೆಲ್ಲ ನವ್ಯಪ್ರಣೀತ ವಿಮರ್ಶಾ ಸೂತ್ರಗಳು ಸೂಚಿಸಬಹುದಾದ ಆದರೆ ಪ್ರೇಮಕವನವೆಂಬ ಕಾವ್ಯಮಾದರಿಯಲ್ಲಿ ಅಪೇಕ್ಷಣೀಯ ಆಗಿರುವ ಶೈಲಿ. ಈ ಬಗೆಯ ಅಭಿವ್ಯಕ್ತಿಯ ನೇರತನ, ಸಹಜತೆ, ಮತ್ತು ಸ್ಪಷ್ಟತೆ ಪ್ರೇಮದ ಅನುಭವಕ್ಕೆ ಅತ್ಯಂತ ಸೂಕ್ತ. ಜಬಿವುಲ್ಲಾ ಅವರ ಅನೇಕ ಕವನಗಳು ಈ ಸಹಜ ಲಕ್ಷಣಗಳನ್ನು ಹೊಂದಿದ್ದು, ಪ್ರೇಮ ಎಂಬ ವಿಷಯವನ್ನು ಯಾವುದೇ ಸಂಕೀರ್ಣತೆಗಳಿಗೆ, ಪರೋಕ್ಷ ನುಡಿಗಳಿಗೆ ಒಪ್ಪಿಸದೇ ನೇರಾನೇರವಾಗಿ ಹೇಳುತ್ತವೆ. ಪ್ರೇಮಕ್ಕೆ ಸಂಬಂಧಿಸಿದ ಕವನಗಳನ್ನೇ ಬರೆಯಲು ಹೊರಟಿರುವ ಕವಿ ಪ್ರತಿಯೊಂದು ಕವನದಲ್ಲಿಯೂ ಅದೇ ವಿಷಯವನ್ನು ಬೇರೆ ಬೇರೆ ಬಗೆಯಲ್ಲಿ ನಿರೂಪಿಸ ಬೇಕಾಗುತ್ತದೆ – ಜಬಿವುಲ್ಲಾ ಹಾಗೆಯೇ ಮಾಡುತ್ತಾರೆ. ಅವರು ಇದಕ್ಕಾಗಿ ಬಳಸುವ ಪ್ರತಿಮೆಗಳು, ರೂಪಕಗಳು, ಅವರ ಭಾಶೆ, ಅವರ ಸಾಲುಗಳ ಲಯ, ಇವೆಲ್ಲ ಯಾವುದೇ ಓದುಗನನ್ನೂ ದಣಿಸದೇ ತಣಿಸುವ ರೀತಿಯದಾಗಿವೆ. + +ಜಬಿವುಲ್ಲಾ ಅವರು ಪ್ರೇಮಕವನಗಳ ವ್ಯಾಕರಣವನ್ನು ಚೆನ್ನಾಗಿ ಅರಿತು ಬರೆದಿರುವ ಕವಿತೆಗಳು ಇವು. ಪ್ರೇಮಪಾಶಕ್ಕೆ ಸಿಲುಕಿದ ಮನಸೊಂದರ ನಿರೂಪಣೆಗಳಾಗಿ ಪ್ರಸ್ತುತವಾಗುವ ಈ ಕವನಗಳು, ಪ್ರೇಮಕ್ಕೆ ಹೊರತಾದ ಅನುಭವ, ಮೌಲ್ಯ, ಭಾವನೆಗಳ ಕಡೆ ಸುಳಿಯುವುದಿಲ್ಲ. ಪ್ರೇಮದ ಭಾವತೀವ್ರತೆ ಜಬಿವುಲ್ಲಾ ಅವರ ಕವನಗಳಲ್ಲಿ ಕಡಿಮೆ. ಹಾಗಾಗಿ ಅವರು ಅತಿಶಯೋಕ್ತಿ ಬಳಸುವುದು ಕಡಿಮೆ. ಇದು ಈ ಸಂಕಲನದ ಕವನಗಳಿಗೆ ವಾಸ್ತವದ ನೆಲೆಯನ್ನು ಒದಗಿಸುತ್ತದೆ. ಇಲ್ಲಿಯ ಅನೇಕ ಸಾಲುಗಳನ್ನು, ನುಡಿಗಟ್ಟುಗಳನ್ನು ನಾವು ಯಾರೇ ಆದರೂ ಯಾವಗಲೇ ಆದರೂ ಬಳಸಬಹುದು:ಸಂತೆಯ ನಡುವೆ ನಿಂತು, ಲೋಕದ ಚಿಂತೆ ಮರೆತುಕೇಳುವ ಕೊಳಲಿನ ನಾದ ಪ್ರೇಮವೆಂದರೆ + +ಪ್ರೇಮಕವನಗಳನ್ನು ಬರೆಯುವ ಕವಿ ಎದುರಿಸುವ ಮುಖ್ಯ ಸವಾಲು ಅಂದರೆ ಅಭಿವ್ಯಕ್ತಿಯ ಸವಕಲು ಗುಣ. ಅತಿಬಳಕೆಯಿಂದಾಗಿ ಪ್ರೇಮದ ಕುರಿತಾಗಿ ಹೇಳಬಹುದಾದ ಅನೇಕ ಮಾತುಗಳು ತೀರಾ ಸವಕಲಾಗಿ, ಈಗ ಕೃತ್ರಿಮ ಅನಿಸಿಬಿಡುವುದು ಸಹಜ. ಈ ನಿಟ್ಟಿನಲ್ಲಿ ನನಗೆ ಜಬಿವುಲ್ಲಾ ಅವರ ಸೃಜನಶೀಲ ಮರುರೂಪಿಸುವಿಕೆ ಇಷ್ಟವಾಯಿತು. ವ್ಯಾಪಕವಾಗಿ ಬಳಕೆಯಾದ ಭಾವನೆಯೊಂದನ್ನು ಬಳಸುವಾಗ ಅವರು ಅದಕ್ಕೊಂದು ಟ್ವಿಸ್ಟ್ ಕೊಡುತ್ತಾರೆ. ಅವರು ಕೊಡುವ ಈ ತಿರುವು ಆ ಭಾವನೆ ಮತ್ತು ಅಭಿವ್ಯಕ್ತಿಗೆ ಹೊಸ ಚಾಲ್ತಿ ಸಾಧ್ಯವಾಗಿಸುತ್ತದೆ:ಕಂಬನಿಗಳೆಲ್ಲ ನಿನ್ನ ನೆನಪಲ್ಲೆ ಇಂಗಿನೋವು ಹೆಪ್ಪುಗಟ್ಟಿ ಹೃದಯವೇ ಶಿಲೆಯಾಗಿದೆ“ಸಂಗ್-ಎ-ದಿಲ್” ಎಂಬ ಉರ್ದು ಕಾವ್ಯದ, “ಪಥರ್‌ಸಾ ದಿಲ್” ಎಂಬ ಹಿಂದಿ ಕಾವ್ಯದ, “ಕಲ್ಲುಹೃದಯ” ಎಂಬ ಕನ್ನಡದ ನುಡಿಗಟ್ಟನ್ನು ಅವರು ಇಲ್ಲಿ ಮಾರ್ಪಡಿಸಿ ಕೊಂಡಿರುವುದು ವಿಶೇಷವಾಗಿದೆ. “ಮತ್ತೆ ಎಲ್ಲಿ ಸಿಗುವೆ ಸಖಿ” ಎನ್ನುವ ಕವನದಲ್ಲಿ ಜಬಿವುಲ್ಲಾ ಅವರ ನಿರೂಪಕ ತನ್ನ ಸಖಿಗೆ ಹೇಳುವ ಮಾತನ್ನು ಬಳಸಿಯೂ ಈ ಕವಿ ಬಳಲಿದ ನುಡಿಗಟ್ಟುಗಳಿಗೆ ಮರುಜೀವ ಕೊಡುವುದನ್ನು ವರ್ಣಿಸಬಹುದು:ಮತ್ತೆ ಎಂದಾದರೂ ನೀಅವುಗಳ ಬಿಡಿಸಿ ಅಕ್ಷರಗಳನ್ನು ತಾಕಲುಭಾವಸುಮಗಳಿಗೆ ಮತ್ತೆ ಜೀವ ಬಂದುಅರಳಿ ನಕ್ಕು ಘಮ್ ಎನ್ನು(ತ್ತಾವೆ) + + + +ಜಬಿವುಲ್ಲಾ ಅವರ ನಿರೂಪಕ ಪ್ರೇಮಿ – ಆದರೆ ಆತ ಇಂದಿನ ಸಾರ್ವಜನಿಕ ಸಂಸ್ಕೃತಿ ಎದುರು ಮಾಡಿರುವ ಅತಿಗಂಡಸುತನದ ಗರ್ವಿ, ಹಠಮಾರಿ, ಹಿಂಸಾಚಾರಿಯಾದ “ಸಿಕ್ಸ್ ಪ್ಯಾಕ್” ಪ್ರೇಮಿಯಲ್ಲ. ಬದಲಿಗೆ, ಭಾವನೆಗಳನ್ನು ಅಕ್ಷರಗಳಿಗೆ ಹೋಲಿಸುವಷ್ಟು ಸೂಕ್ಷ್ಮಜೀವಿ; ತನ್ನಂತೆಯೇ ಪ್ರೇಮದ ಅನುಭವ ಎಲ್ಲರಿಗೂ ದಕ್ಕಲಿ ಎನ್ನುವಷ್ಟು ಹೃದಯವಂತಿಕೆಯ ಭಾವಜೀವಿ.ಚೆಂದದ ನೋವಿಗೆಒಲವೆಂದು ಹೆಸರಿಟ್ಟು ಹರಸಿಬದುಕುವ ವರ ಎಲ್ಲರಿಗೂದಕ್ಕುವಂತಾಗಲಿ…ಮನಸಿನ ವೇದನೆಗೆಕೆದಿಗೆಯ ಹೂ ಮುಡಿಸಿದುಃಖವನು ಸಂಭ್ರಮಿಸುವ ಬಯಕೆತಲೆದೂಗುವಂತಾಗಲಿ.. + +“ಪ್ರೀತಿಯ ನವಿಲು ಎದೆಯ ಹಸಿ ನೆಲದ ಮೇಲೆ ರೆಕ್ಕೆ ಬಿಚ್ಚಿ ಕುಣಿದ ಹೆಜ್ಜೆ ಗುರುತುಗಳು” ಈ ಕವನಗಳು ಎಂದು ತಮ್ಮ ಮಾತಿನಲ್ಲಿ ಹೇಳಿಕೊಂಡಿರುವ ಜಬಿವುಲ್ಲಾ ಅವರ ಸಂವೇದನೆ ವೈವಿಧ್ಯಮಯ ಓದಿನಿಂದ ರೂಪುಗೊಂಡಿದೆ ಅಂತ ನನಗೆ ಅನಿಸಿದೆ ಮತ್ತು ಈ ಓದು ಕೇವಲ ಕನ್ನಡ ಪ್ರೇಮಕವನಗಳಿಗೆ ಸೀಮಿತವಾಗಿರದೇ, ಹಿಂದಿ ಮತ್ತು ಉರ್ದು ಭಾಶೆಯ ಪ್ರೇಮಕವನಗಳನ್ನೂ ಒಳಗೊಂಡಿದೆ ಅನಿಸುತ್ತದೆ. ಇನ್ನೊಂದು ವಿಶೇಷ ಲಕ್ಷಣವೆಂದರೆ ಜಬಿವುಲ್ಲಾ ಅವರ ನಿರಾಭರಣ ಅಭಿವ್ಯಕ್ತಿ ವಿಧಾನ. ಅನೇಕ ಕವಿತೆಗಳಲ್ಲಿ ಅನಗತ್ಯ ಅಲಂಕಾರದ ಬಟ್ಟೆ ತೊಡಿಸದೇ ಹೇಳಬೇಕಿರುವುದನ್ನು ಮಗುವಿನಂತೆ ಸಹಜವಾಗಿ ಹೇಳಿಬಿಡುತ್ತಾರೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ “ಅವನು ಬರಬಹುದು” ಎಂಬ ಕವನ. ಅದರ ಕೆಲವು ಚರಣಗಳು ಹೀಗಿವೆ:ತೆರೆದ ಬಾಗಿಲು ತೆರೆದೆ ಇರಲಿಮುಚ್ಚುವುದು ಬೇಡಅವನು ಬರಬಹುದು + +ಹೂ ಬಾಡುವ ಸಮಯಕ್ಕೆ ಮುಡಿಯಲ್ಲಿಮೊಲ್ಲೆಯೊಂದು ಬಿರಿಯುತ್ತಿದೆಅವನು ಬರಬಹುದು + +ಮುರಿದ ಕನಸುಗಳಲ್ಲಿಹಕ್ಕಿ ಗೂಡು ಹೆಣೆಯುತ್ತಿದೆಅವನು ಬರಬಹುದು… + +ಎಲ್ಲಿಂದಲೋ ಬಂದ ಚಿಟ್ಟೆಗಲ್ಲಕೆ ಅರಿಶಿಣ ಹಚ್ಚಿ ಹೋಗಿದೆಅವನು ಬರಬಹುದು + +ಸುಮ್ಮನೆ ಕೂತಿದ್ದರುಕಾಲ್ಗೆಜ್ಜೆ ಘಲ್ ಎಂದು ಸದ್ದು ಮಾಡುತ್ತಿದೆಅವನು ಬರಬಹುದು + +ಸುಡುವ ಬಿಸಿಲಲ್ಲಿ ಮಳೆ ಸುರಿದುಭೂಮಿ ಘಮ್ ಎನ್ನುತ್ತಿದೆಅವನು ಬರಬಹುದು + +(ಕಮಲಾಕರ ಕಡವೆ) + +ಜಬಿವುಲ್ಲಾ ಅಸದ್ ಅವರ ಕವನಗಳನ್ನು ಫೇಸ್ಬುಕ್‌ನಲ್ಲಿ ಓದಿ ಮೆಚ್ಚಿಕೊಂಡಿದ್ದ ನನಗೆ ಅವರ ಕವನಗಳನ್ನು ಈ ಸಂಕಲನದಲ್ಲಿ ಒಟ್ಟಿಗೇ ಓದುತ್ತ ಖುಶಿಯಾಗಿದ್ದು ನಿಜ. ಭಾಶೆಯ ಬಳಕೆಯಲ್ಲಿ, ಲಯದ ನಿರ್ವಹಣೆಯಲ್ಲಿ, ಪದನಾದ ಹುಡುಕುವುದರಲ್ಲಿ, ಭಾವನೆಗಳಿಗೆ ಸೂಕ್ತ ಪ್ರತಿಮೆ ಬಳಸುವಲ್ಲಿ ಜಬಿವುಲ್ಲಾ ಕಲಾವಂತಿಕೆ ತೋರಿಸುತ್ತಾರೆ. ಕವಿತೆಗಳಿಗೆ ಹೊಂದುವಕಾಲ್ ಕಾಲ್ ಕ್ಚ್ಚ್ ccçರೇಖಾಚಿತ್ರಗಳನ್ನೂ ಸ್ವತಃ ಬಿಡಿಸಿರುವ ಜಬಿವುಲ್ಲಾ ಈಗಾಗಲೇ ಕಲಾವಿದರಾಗಿಯೂ ಹೆಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಕವನಗಳು ನಮ್ಮನ್ನು ಮತ್ತಷ್ಟು ಆವರಿಸುತ್ತಾವೆ, ಕನ್ನಡ ಕಾವ್ಯ ಪರಂಪರೆಯ ಶ್ರೀಮಂತಿಕೆಗೆ ಕೊಡುವ ಕೊಡುಗೆಗಳಾಗುತ್ತಾವೆ ಎಂದು ನಾನು ನಂಬಿದ್ದೇನೆ. ಜಬಿವುಲ್ಲಾ ಅವರ “ಪ್ರೇಮಯಾತನ” ಸಂಕಲನದ ಕವನಗಳು ಕನ್ನಡ ಓದುಗರನ್ನು ತಲುಪಿ ಮುದಗೊಳಿಸಲಿ ಎಂದು ಹಾರೈಸುತ್ತೇನೆ. + +ಒಂದು ಕವಿತೆ + +ಮಾತಿಲ್ಲದ ಘಳಿಗೆಹುಟ್ಟುತ್ತದೆ ಒಂದು ಕವಿತೆಕರುಣಾಳ ಬೆಳಕ ಸಂಹಿತೆಸಂಭವಿಸುತ್ತದೆ ಅಂತರಂಗದಬಯಲೊಳಗೆ + +ಏಕಾಂತದ ಪ್ರಮೆಯಕೆಕಣ್ತೆರೆಯುತ್ತದೆ ಒಂದು ಕವಿತೆಜಗದ ಸಂತೆಯ ನಡುವೆನೋವ ಎಸೆದು ಹಾರುತ್ತದೆಅನಂತತೆಯೆಡೆಗೆ + +ಸಂಘರ್ಷದ ಸಂಜೆಗೆಜೀವ ಪಡೆಯುತ್ತದೆ ಒಂದು ಕವಿತೆಕೆಂಪು ಆಗಸ ತಂಪಾಗುವ ಮೊದಲೇಕಡಲಾಗಿ ಭೋರ್ಗರೆಯುತ್ತದೆಎಲ್ಲೆಯೊಳಗೆ + +ಮೊದಲ ಮಳೆಗೆಘಮ್ ಎನ್ನುತ್ತದೆ ಒಂದು ಕವಿತೆಹುಡಿ ಮಣ್ಣಿನ ತಾಜಾ ಅನುಭೂತಿಗೆಸಾಕ್ಷಿಯಾಗಿ ನಿಲ್ಲುತ್ತದೆಅನುಭವದೊಳಗೆ + +***** + +ಭಾವ ತರಂಗ + +ಮನಸ್ಸಿಗೆ ರೆಕ್ಕೆ ಕಟ್ಟಿ ಹಾರಲು ಬಿಡಿಮುಗಿಲನ್ನು ಸೇರಿಕೊಳ್ಳಲಿ… + +ಮನಸ್ಸನ್ನು ನದಿಯಾಗಿ ಹರಿಯಲು ಬಿಡಿಕಡಲನ್ನು ಹುಡುಕಿಕೊಳ್ಳಲಿ… + +ಮನಸ್ಸನ್ನು ಅಲೆಮಾರಿ ಆಗಲು ಬಿಡಿಗುರಿಯನ್ನು ಆಯ್ದುಕೊಳ್ಳಲಿ… + +ಮನಸ್ಸಿಗೆ ಕಣ್ಣುಗಳನ್ನು ಕೊಟ್ಟು ಬಿಡಿಕಾಣದಿರುವುದನ್ನು ಕಂಡುಕೊಳ್ಳಲಿ… + +ಮನಸ್ಸನ್ನು ಪರವಶಗೊಳ್ಳಲು ಬಿಡಿಅನುಭವ ದಕ್ಕಿಸಿಕೊಳ್ಳಲಿ… + +ಮನಸ್ಸನ್ನು ಕತ್ತಲಲ್ಲಿ ಕಳೆಯಲು ಬಿಡಿತನ್ನನ್ನು ತಾ ಹುಡುಕಿಕೊಳ್ಳಲಿ… + +ಮನಸ್ಸನ್ನು ಏಕಾಂತಕ್ಕೆ ಮಾರಿ ಬಿಡಿಲಾಭ ತಂದುಕೊಡಲಿ… + +ಮನಸ್ಸಿನ ಜೊತೆಕೂತು ಮಾತನಾಡಿ ಬಿಡಿನೋವು ಹಂಚಿಕೊಂಡು ಹಗುರಾಗಲಿ… + +ಮನಸ್ಸನ್ನು ಧ್ಯಾನಶೂನ್ಯದಲಿ ಕರಗಲು ಬಿಡಿಜ್ಞಾನೋದಯವನ್ನು ಪಡೆದುಕೊಳ್ಳಲಿ… + +***** + +ಅಪಸ್ವರ + +ಬೆಳಕಿಲ್ಲದ ಶೂನ್ಯ ತುಂಬಿದ ಹಾದಿಯಲಿಕತ್ತಲೇ ಎದುರಾಗುವುದುರೆಪ್ಪೆ ಮುಚ್ಚಿದ ಕನಸು ಹುಟ್ಟುವ ಕಣ್ಣಲಿಲೋಕವೇ ಕುರುಡಾಗುವುದು! + +ಹೃದಯವಿದು ದುಃಖ ತುಂಬಿದ ಖಜಾನೆಕೀಲಿ ಕೈ ಕಳೆದಿಹುದುಕಾಣದ ದೇವರ ಮೇಲಿನ ನಂಬಿಕೆಯನೆಕೈ ಬಿಡದೆ ಕಾಯುತಿಹುದು + +ಕಲ್ಪನೆಗಳನ್ನು ಕೆತ್ತಿ ಭಾವಗಳಿಗೆರೂಪ ಕೊಡಬಹುದುಬದುಕಿನ ಖಾಲಿ ಬಟ್ಟಲಲ್ಲಿ ಹೇಗೆಅರ್ಥವನ್ನು ತುಂಬಬಹುದು? + +ನಿತ್ಯವೂ ಬಂದು ರಮಿಸಿಸದ್ದಿಲ್ಲದೆ ಕಾಲ ನಿರ್ಗಮಿಸುತಿಹುದುಆಯುಷ್ಯದ ಕ್ಷಣಗಳನ್ನು ನೋಂದಾಯಿಸಿಎಣಿಸಿ, ಕಳಚಿ, ಕಳೆಯುತಿಹುದು + +ಅವ್ಯಕ್ತ ಭಾವಗಳ ಅಭೂತ ಪ್ರೇಮಮುಜುಗರವಿಲ್ಲದೆ ಬೆನ್ನಹತ್ತಿಹುದುಬಿಡಿಸಿಕೊಳ್ಳಲೆತ್ನಿಸಿದಷ್ಟು ಸಡಿಸಲಾಗದ ನಿಯಮಬ್ರಹ್ಮಗಂಟಾಗಿ ಪರಿಣಮಿಸುತಿಹುದು + +ಅಲೆಅಲೆಯಾಗಿ ಅಲೆವ ಕಡಲ ಮೇಲೆಚಂದಿರನ ಬೆಳಕ ನೆರಳ ಹೆಣ ತೇಲುತಿಹುದುವಿಧಿವಶದ ಬಂಡೆಗೆ ಅಪ್ಪಳಿಸುತಲೆಚೂರು ಚೂರಾಗಿ ಮರಳ ಕಣಗಳಲಿ ಕರಗುತಿಹುದು + +***** + +ನೀನೆಂಬ ಕಲ್ಪನೆ ನಾನೆಂಬ ವಾಸ್ತವ + +ನಸುಕಿನ ಮಳೆಯಲ್ಲಿ ತೊಯ್ದು ಗುಬ್ಬಚ್ಚಿಯಾದಕಡಲಿನ ಹೃದಯದ ನೀಲಿ ನಕ್ಷತ್ರ ನೀನು!ಕಾರಿರುಳ ದಟ್ಟ ಕಾಡಿನ ಕಾಡುವ ನಿರವ ಮೌನದಬಿಸಿ ನಿಟ್ಟುಸಿರ ಮೋಹ ನಾನು! + +ಚಳಿಯ ಘಳಿಗೆ ರಾಗವಾಗುವ ಅಮಲು ಹತ್ತಿದಯೋಗ ನಿದಿರೆಯ ಅರಸಿ ನೀನು!ಹೊಸ್ತಿಲ ಬಾಗಿಲಿಗೆ ಅಂಟಿದ ಹಳದಿ ಬಣ್ಣದಹಳೆಯ ನೊಂದ ನೆನಪಿನ ಕುರುಹು ನಾನು! + +ಕರಗುವ ಕನಸ ಬಳ್ಳಿಯ ಕನವರಿಕೆಯಆರದ ಸುಗಂಧದ ಅತೀತ ನೀನು!ಕಣ್ಣರೆಪ್ಪೆ ನಿರ್ದಯವಾಗಿ ಕೆಡವಿದ ಅನಾಥಕಂಬನಿಯ ಮುಗುಳ್ನಗೆ ನಾನು! + +ಹಕ್ಕಿಯ ರೆಕ್ಕೆಯ ಸ್ಪರ್ಶದ ಅನುಭೂತಿಯನೆಮ್ಮದಿಯ ಅನಂತ ಆಗಸ ನೀನು!ಗಾಳಿಗೆ ಪಟಪಟಿಸಿ ಹರಿದು ಚಿಂದಿಯಾಗಿ ದಿಕ್ಕಿಲ್ಲದೆಹಾರಿದ ಧ್ವಜದ ನಿರ್ಗತಿಕ ತುಣುಕು ನಾನು! + +ಕಡಲ ತೀರದಿ ಕಾಲುಚಾಚಿ ಅಂಗಾತವಾಗಿಮುಗಿಲ ಚುಕ್ಕಿಗಳ ಮಿಡಿಯುವ ಮಾಯೆ ನೀನು!ಹೆಸರಿಲ್ಲದ ಬೀದಿಗಳ ನಡುವೆ ಅಲೆಮಾರಿಯಾಗಿಅಲೆವ ನಿರ್ಗತಿಕ ಒಂಟಿ ನೆರಳು ನಾನು! + +ಅರಳದ ಮೊಗ್ಗಿನ ದುಂಬಿಯ ದಾಹದಮಧುವಿನ ಶತಮಾನದ ದಾಹ ನೀನು!ಗೀತೆಯ ನಡುವೆ ಅರ್ಥವೆ ಇಲ್ಲದ ಸುಪ್ತವಾದವ್ಯರ್ಥ ಶ್ಲೋಕದ ಸ್ಮೃತಿ ನಾನು! + +ಮೇಘದ ಹೃದಯಕೆ ಮುತ್ತಾಗುವ ಸಂಭ್ರಮದ ಅಮೃತ ಘಳಿಗೆಯ ಡವ ಡವ ನಿನಾದ ನೀನು!ಒಣಮರದ ತಾಜಾ ಬೇರಿನ ನಿರ್ಲಿಪ್ತ ಭಾವದಹಸಿರು ಧ್ಯಾನದ ಕೊನರೊಡೆದ ಅಂಕುರ ನಾನು! + +ಬಾಣದ ವೇಗದ ಮೇಲೊಡುವ ಬಿಳಿ ಅಶ್ವದಹೆಜ್ಜೆ ಗುರುತುಗಳ ಮಾರ್ದನಿ ನೀನು!ಬಯಲಲ್ಲಿ ಹಚ್ಚಿದ ಬೆಂಕಿಯ ಮೇಲಿನಸುಟ್ಟ ಕಾವಲಿಯ ಕಳೆಬರ ನಾನು! + +ಮನದ ಅಲಮಾರಿಯಲ್ಲಿನ ಹೊತ್ತಿಗೆಯಪುಟಗಳ ನಡುವಲ್ಲಿ ಅರಳಿದ ಕುಸುಮ ನೀನು!ಮಸಣದ ಕಣಗಿಲೆ ಗಿಡದ ಬಳಿ ಕೂತುಬಾಳಿನ ಹಾಡು ಹೆಣೆದು ಗುನುಗುವ ಫಕೀರ ನಾನು! + +ನಗೆಯ ಒಲುಮೆಯ ನಾಚಿಕೆಯ ಉನ್ಮಾದದಸಂಚಲನದ ಉದ್ರೇಕ ಪಿಸುಮಾತು ನೀನು!ಕಾಲದ ಕ್ಷಣಗಳೊಂದಿಗೆ ಕೂಡಿ ಘಟಿಸುವಮೇಣದ ಪ್ರತಿರೂಪದ ಪ್ರತಿಬಿಂಬ ನಾನು! + +ಮಿಂಚಿನ ಓಟದ ಜಿಂಕೆಯ ಕಣ್ಣಿನ ಹೊಳಪಿನಆಹ್ವಾನದ ರಂಗಿನ ಸಂಚಿಕೆ ನೀನು!ಮರದ ಕೊಂಬೆಯ ಸಂಗ ಕಳಚಿ ಉದುರಿ ಬೀಳುವಹಣ್ಣೆಲೆಯ ನಿಶಾಂತ ಏಕಾಂತ ನಾನು! + +ಎಂದಿಗೂ ಕಾಣದ, ಸಿಗದ ಗಮ್ಯದ ಗಹನತೆಯಮಹೋನ್ನತ ಅನೂಹ್ಯ ನೀನು!ಕೈಜಾರಿ ಒಡೆದು ಚುರುಚೂರಾದ ಮಡಿಕೆಯಮತ್ತೆ ಅಂಟಿಸಿದ ಅಸ್ಮಿತೆ ನಾನು! + +***** + +ಪ್ರೇಮವೆಂದರೆ…. + +ಪರ್ವತದಿಂದ ಜಾರಿ ಪ್ರಪಾತಕ್ಕೆ ಬೀಳುವಾಗಅಚಾನಕ್ಕಾಗಿ ಅಂಗೈಗೆ ಸಿಲುಕಿದ ಹುಲ್ಲುಗರಿಕೆ – ಪ್ರೇಮವೆಂದರೆ…! + +ಸೂರ್ಯನ ಕಿರಣಕೆ ಶರಣಾಗಿ ಕರಗಿಕಳೆದು ಹೋಗುವ ಮಂಜಿನ ಕನಸು –ಪ್ರೇಮವೆಂದರೆ…! + +ಸಂತೆಯ ನಡುವೆ ನಿಂತು, ಲೋಕದ ಚಿಂತೆ ಮರೆತುಕೇಳುವ ಕೊಳಲಿನ ನಾದ –ಪ್ರೇಮವೆಂದರೆ…! + +ಸಾವಿನ ಸೂತಕದ ಶೋಕದ ನಡುವೆಭರವಸೆಯ ವಚನ ನೀಡುವ ಹಣತೆಯ ಬೆಳಕು –ಪ್ರೇಮವೆಂದರೆ…! + +ಕಾಡುವ ಕತ್ತಲಲಿ, ಅಮ್ಮನ ಮಡಲಲ್ಲಿ ಕೂತಮಗುವಿನ ಕಣ್ಣಲಿ ತೇಲುವ ಚಂದಿರನ ಚೂರು –ಪ್ರೇಮವೆಂದರೆ…! + +ಶಿಲೆಯ ಕಡೆಯುವ ಕರಕಮಲದ ಹೃದಯದಲ್ಲಿಹೆಪ್ಪುಗಟ್ಟಿದ ಬಿಸಿ ನೆತ್ತರು –ಪ್ರೇಮವೆಂದರೆ…! + +ಕಡಲ ಮರಳ ಕಿನಾರೆಯಲಿ, ಎಂದಿಗೂ ಮರಳಿ ಬಾರದ ಹಡಗಿಗೆ ಕಾದು ಕುಳಿತ ಲಂಗರು –ಪ್ರೇಮವೆಂದರೆ…! + +ಹಸಿದ ಕರುಳಿನ ಕಂಬನಿಗಳ ಅರ್ತನಾದಕೆ ಮಿಡಿವರೊಟ್ಟಿಯ ಚೂರಿನ ಸಾಂತ್ವಾನ –ಪ್ರೇಮವೆಂದರೆ…! + +ಭೂಮಿಯ ಎದೆಗೆ ಬಿದ್ದ ಮಳೆಗೆ ಪುಟಿದೆದ್ದಅನಾಮಿಕ ಹಸಿರು ಮೊಳಕೆಯ ನಗು –ಪ್ರೇಮವೆಂದರೆ…! + +ಕಾಣದೆ, ತಾಕದೆ, ಮಾತಾಗದೆ, ಅನುಭವಿಸದೆಹೃದಯದ ಹಾದಿಯಲ್ಲಿ ಕೈಪಿಡಿದು ಸಾಗುವ ಸಂಭ್ರಮ – ಪ್ರೇಮವೆಂದರೆ…! + +***** + +ಅವನು ಬರಬಹುದು + +ತೆರೆದ ಬಾಗಿಲು ತೆರೆದೆ ಇರಲಿಮುಚ್ಚುವುದು ಬೇಡಅವನು ಬರಬಹುದು + +ಹೂ ಬಾಡುವ ಸಮಯಕ್ಕೆ ಮುಡಿಯಲ್ಲಿಮೊಲ್ಲೆಯೊಂದು ಬಿರಿಯುತ್ತಿದೆಅವನು ಬರಬಹುದು + +ಮುರಿದ ಕನಸುಗಳಲ್ಲಿಹಕ್ಕಿ ಗೂಡು ಹೆಣೆಯುತ್ತಿದೆಅವನು ಬರಬಹುದು… + +ಎಲ್ಲಿಂದಲೋ ಬಂದ ಚಿಟ್ಟೆಗಲ್ಲಕೆ ಅರಿಶಿಣ ಹಚ್ಚಿ ಹೋಗಿದೆಅವನು ಬರಬಹುದು + +ಸುಮ್ಮನೆ ಕೂತಿದ್ದರುಕಾಲ್ಗೆಜ್ಜೆ ಘಲ್ ಎಂದು ಸದ್ದು ಮಾಡುತ್ತಿದೆಅವನು ಬರಬಹುದು + +ಸುಡುವ ಬಿಸಿಲಲ್ಲಿ ಮಳೆ ಸುರಿದುಭೂಮಿ ಘಮ್ ಎನ್ನುತ್ತಿದೆಅವನು ಬರಬಹುದು + +ವಸಂತವಲ್ಲದಿದ್ದರು ಮಾಮರವೇರಿಕೋಗಿಲೆ ಕೂಹೂ ಕೂಗುತ್ತಿದೆಅವನು ಬರಬಹುದು + +ಕಡಲ ಅಲೆಗಳೆಲ್ಲ ಸೇರಿ ಒಟ್ಟಾಗಿನಾವೆಯನ್ನು ತೀರ ಮುಟ್ಟಿಸುತ್ತಿವೆಅವನು ಬರಬಹುದು + +ಇಳೆಯ ಎದೆಗೆ ಬಿದ್ದ ಇಬ್ಬನಿ ಹನಿಗಳಿಗೆಬಯಲಲ್ಲಿ ಗರಿಕೆ ಮೊಳೆಯುತ್ತಿವೆಅವನು ಬರಬಹುದು + +ಇರುಳು ಸುಳಿವ ಮುನ್ನವೇಚಂದ್ರ ಚುಕ್ಕಿಗಳೆಲ್ಲ ಮಿನುಗುತ್ತಿವೆಅವನು ಬರಬಹುದು + +ಬೀಸಿದ ಗಾಳಿಗೆ ಉನ್ಮಾದಗೊಂಡುತರುಲತೆಗಳೆಲ್ಲ ತೂಗುತ್ತಿವೆಅವನು ಬರಬಹುದು + +ಮುಗಿಲ ಮಹಡಿಯ ಮೇಲೆಮೇಘಗಳು ಸೇರಿ ಪಿಸುಗುಟ್ಟುತ್ತಿವೆಅವನು ಬರಬಹುದು + +ಕಣ್ಣಿಂದ ಮಿಡಿದ ಕಂಬನಿಗಳುಕರಗಿ ಕಾಣೆಯಾಗುತ್ತಿವೆಅವನು ಬರಬಹುದು + +ನಗೆಯ ದುಂಬಿ ಝೇಂಕರಿಸಿಕುಣಿದು ಹಾಡುತ್ತಿದೆಅವನು ಬರಬಹುದು + +ಕೊಳಲಿಂದ ಹರಿದ ನಾದ ಸುಧೆವನವನ್ನು ರಮಿಸುತ್ತಿದೆಅವನು ಬರಬಹುದು + +ಎಂದೂ ಇಲ್ಲದ ಮನವಿಂದುದಾರಿ ಕಾಯುತ್ತಿದೆಅವನು ಬರಬಹುದು + +ಒಲವಿಗೆ ರೆಕ್ಕೆಗಳ ವರ ದಕ್ಕಿಮತ್ತೆ ಹಾರಲು ಹಾತೊರೆಯುತ್ತಿದೆಅವನು ಬರಬಹುದು + +ನೆನಪಿರಲಿ,ಅವನು ಬಂದ ಮೇಲೆಮತ್ತೆ ಕದವ ಮುಚ್ಚುವುದನ್ನು ಮರೆಯದಿರುಮರಳಿ ಹೋಗಲು ಬಿಡದಿರು + +ಈಗಾಗಲೇ,ಅವನು ಹೊರಟಿರಬಹುದುಬರುತ್ತಿರಬಹುದು + +ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ \ No newline at end of file diff --git a/Kenda Sampige/article_102.txt b/Kenda Sampige/article_102.txt new file mode 100644 index 0000000000000000000000000000000000000000..993e903cb6a6b963b13b5de0fdddd08ca2ea72e2 --- /dev/null +++ b/Kenda Sampige/article_102.txt @@ -0,0 +1,35 @@ +ಒಂದು ನಡು ಮಧ್ಯಾಹ್ನದ ಬಿಸಿಲು, ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ಎದುರಿಗಿನ ತೋಟವನ್ನೇ ನೋಡುತ್ತಿದ್ದೇನೆ. ಬಿರುಬಿಸಿಲು ಇನ್ನೂ ಕಣ್ಣಿಗೆ ರಾಚುತ್ತಿತ್ತು. ಮನೆಯ ಪಕ್ಕದ ಗಿಡವೊಂದರಲ್ಲಿ ಜೋಡಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಸೂರ್ಯ ನೆತ್ತಿಯಿಂದಾಚೆಗೆ ನಿಧಾನಕ್ಕೆ ಸರಿದು ಹೋಗುತ್ತಿದ್ದ. ಮನೆಯ ಮುಂದಿನ ಹೂವಿನ ಗಿಡಗಳು, ನಾನೇ ನೆಟ್ಟ ತೆಂಗಿನ ಮರಗಳು, ಅದರಾಚೆಗಿನ ಅಡಿಕೆ ಮರಗಳೆಲ್ಲ ಈ ಬಿರುಬೇಸಿಗೆಯಲ್ಲೂ ತಂಪನ್ನೆರೆಯುತ್ತಿದ್ದವು. ಎಡಕ್ಕೆ ಹೊರಳಿದರೆ ನಾನೇ ಸಾಕಿದ ದನಗಳು, ಆಗಾಗ ಅಂಬಾ ಎಂದು ಕರೆಯುತ್ತಿರುತ್ತವೆ. ಎದುರಿಗೆ ಈಗ ಫಸಲು ನೀಡುತ್ತಿರುವ ಅಡಿಕೆ, ತೆಂಗು ಮರಗಳು. ಬೆನ್ನ ಹಿಂದೆ ಬಂಗ್ಲೆಯಂತಹ ಮನೆ, ಅದಕ್ಕೆ ತೆರೆದ ಪುಸ್ತಕದಂತಿರುವ ಹೆಬ್ಬಾಗಿಲು…ಎಲ್ಲ ಸೇರಿ ಇಡೀ ಪಂಚಮವೇದ ಫಾರ್ಮ್ ಹೌಸ್ ಇಂದು ನಳನಳಿಸುತ್ತಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಇವೆಲ್ಲ ನಾನು ಮಾಡಿದ್ದಾ? ನಾವು ಮಾಡಿದ್ದಾ…? ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಊರಿಂದೂರಿಗೆ ಅಲೆದಾಡುತ್ತ, ಬಿಸಿಲನಾಡಿನಲ್ಲಿ ಬಸವಳಿದು ಸಾಕಾಗಿ ಕುಳಿತಾಗಲೂ ಪಂಚಮವೇದದ ಕನಸಿರಲಿಲ್ಲ. ಆದರೆ ಏನನ್ನಾದರೂ ಸಾಧಿಸಲೇಬೇಕೆಂಬ ಹಠ ಇತ್ತು. ಆ ಹಠ ನನ್ನಲ್ಲಿ, ನಮ್ಮಿಬ್ಬರಲ್ಲಿ ಮೊಳೆತದ್ದಾದರೂ ಹೇಗೆ…? + +ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡುಕಾಣದೊಂದು ಕನಸ ಕಂಡು ಮಾತಿಗೊಲಿಯದಮೃತವುಂಡುದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ…? + + + +ನರಸಿಂಹಸ್ವಾಮಿಯವರ ಬಾರೆ ನನ್ನ ಶಾರದೆ ಪದ್ಯ ಸದಾ ನನ್ನೊಳಗೆ ಮೊರೆಯುತ್ತಲೇ ಇರುತ್ತದೆ. ನಾವು ಕೂಡ ಹೀಗೆಯೇ… ಬದುಕಿನ ಒಂದು ತಿರುವಿನಲ್ಲಿ ಸಿಕ್ಕೆವು, ಒಪ್ಪಿದೆವು, ಹೊಸ ಹೊಸ ಕನಸುಗಳನ್ನು ಕಟ್ಟಿದೆವು. ಅದನ್ನು ನನಸಾಗಿಸುವತ್ತ ಹೋರಾಡಿದೆವು. ಹೇಳಿಕೇಳಿ ಪ್ರೇಮಿಸಿ ಮದುವೆಯಾದವರು ನಾವು. ಅದೂ ಜಾತಿಯ ಸಂಕೋಲೆಗಳನ್ನು ಕಿತ್ತು ಹಾಕಿ ಮದುವೆಯಾದವರು. ನಾನು ತಂಪು ಪ್ರದೇಶವಾದ ಕೊಡಗಿನಿಂದ ಬಂದಿದ್ದರೆ ಅವರು ಬಿಸಿಲನಾಡಿನವರು. ಪ್ರೇಮಕ್ಕೆ ಪ್ರಾಂತ್ಯದ ಹಂಗಿರಲಿಲ್ಲ. ಜಾತಿಯೂ ಬೇಕಿರಲಿಲ್ಲ. ಜಾತಿಯ ಅಡ್ಡಗೋಡೆ ನಮ್ಮನ್ನು ಕಾಡಿರಲಿಲ್ಲ. ಆದರೆ ಸಮಾಜಕ್ಕೆ ಅದು ಕಾಡಿತ್ತು. ಈಗ 35 ವರ್ಷಗಳ ಹಿಂದೆ ಅದೂ ಮಸ್ಕಿಯಂತಹ ಗ್ರಾಮದ ಅಪ್ಪಟ ಸಾಂಪ್ರದಾಯಿಕ ಮನಸ್ಥಿತಿಯುಳ್ಳಂತಹ ಮನೆತನವೊಂದಕ್ಕೆ ಅನ್ಯ ಸಮುದಾಯದ ಹುಡುಗಿಯೊಬ್ಬಳು ಮದುವೆಯಾಗಿ ಹೋಗುವುದೆಂದರೆ ಸಾಮಾನ್ಯದ ವಿಷಯವಾಗಿರಲಿಲ್ಲ. ಹಾಗೆಯೇ ಅತ್ಯಂತ ಕಟ್ಟುನಿಟ್ಟಿನ ಸಂಪ್ರದಾಯವಿರುವ ಕೊಡವ ಜನಾಂಗದಲ್ಲೂ ಇದು ಸಾಮಾನ್ಯದ ಮಾತಾಗಿರಲಿಲ್ಲ. ಹಾಗಾಗಿ ವಿರೋಧದ ನಡುವೆಯೇ ನಾವು ಸೇರಿದೆವು. + +ನಾವಿಬ್ಬರೂ ಪ್ರೇಮಿಸುತ್ತೇವೆಂದು ಅರಿವಾದ ತಕ್ಷಣವೇ ನಮ್ಮೊಳಗೊಂದು ಹಠ ಮೊಳೆತಿತ್ತು. ಯಾವತ್ತೂ, ಯಾವ ಕಾರಣಕ್ಕೂ ನಾವು ಸೋಲಬಾರದೆಂದು. ನಮ್ಮನ್ನು ನೋಡಿ ಜನ ಹಾಸ್ಯ ಮಾಡಬಾರದೆಂದು. ಅದಕ್ಕಾಗಿಯೇ ಒಬ್ಬರಿಗೊಬ್ಬರು ಭರವಸೆ ಕೊಟ್ಟುಕೊಂಡು ಮುನ್ನಡೆದೆವು. ಜೊತೆಜೊತೆಯಾಗಿ ಹೆಜ್ಜೆ ಇರಿಸಿದೆವು. ಅಲ್ಲಿ ಹೋರಾಟವಿತ್ತು, ಸಂಘರ್ಷವಿತ್ತು, ಏನೆಲ್ಲ ಇತ್ತು… ಬಡತನದ ಬೇಗೆಯಲ್ಲಿ ನರಳಿದ್ದಿದೆ. ಬಿಸಿಲಿನ ಝಳಕ್ಕೆ ಬಾಡಿದ್ದಿದೆ. ಉದ್ಯೋಗವಿಲ್ಲದೆ ಮುಂದೇನು ಎಂಬ ಭೀತಿಯಲ್ಲಿ ತೊಳಲಾಡಿದ್ದೂ ಇದೆ. ಹೀಗಿದ್ದೂ ಸೋಲಲಿಲ್ಲ. ಅಂತರ್ಜಾತಿ ವಿವಾಹವಾದವರು ನೀವು ಎಂಬ ಮಾತು ಸೋಲಕೂಡದು ಎಂದು ನಮ್ಮೊಳಗೆ ಸದಾ ಎಚ್ಚರಿಸುತ್ತಲೇ ಇರುತ್ತಿತ್ತು. ನಾವು ವಿವಾಹವಾಗುತ್ತೇವೆಂದು ಹೇಳಿದಾಗ, ‘ಮುಳ್ಳಿನ ಮೇಲೆ ಬಿದ್ದ ಹೂವಿದು. ಹೂವು ನೋಡಲು ಚೆಂದ ಕಾಣಿಸುತ್ತದೆ. ಆದರೆ ಆಯ್ದುಕೊಳ್ಳಲು ಹೋದರೆ ಚುಚ್ಚುತ್ತದೆ. ಎತ್ತಿಕೊಂಡರೂ, ಅಲ್ಲೇ ಬಿಟ್ಟರೂ ಹೂವು ಹರಿದೇ ಹೋಗುತ್ತದೆ’ ಎಂದು ಹೇಳಿದ ಅಪ್ಪನ ಮಾರ್ಮಿಕ ಮಾತುಗಳು ಯಾವಾಗಲೂ ಚುಚ್ಚುತ್ತಲೇ ಇರುತ್ತಿತ್ತು. ಏನೂ ಹೇಳದೆ ಮೌನವಾಗಿಯೇ ರೋದಿಸಿದ ಅಮ್ಮ, ಬೇರೆ ಜಾತಿ ಎಂದು ಮನೆಗೇ ಕರೆಯದ ಸರೀಕರ ನಡುವೆ ತಲೆ ಎತ್ತಿ ನಿಲ್ಲಲೇಬೇಕೆಂಬ ಹಠವಿತ್ತು. ಆರ್ಥಿಕ ಸಂಕಷ್ಟವೂ ನಮ್ಮನ್ನು ಕಾಡಿತ್ತು. ಆಗೆಲ್ಲ ಮತ್ತೆ ಮತ್ತೆ ನಮ್ಮ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಳ್ಳುತ್ತಿದ್ದೆವು. ಅದಕ್ಕೆ ಬೆನ್ನ ಹಿಂದೆ ನಿಂತವರು ಪತಿ ಮನೋಹರ್. ಸ್ನೇಹಿತರೊಬ್ಬರು ಹೇಳಿದ್ದರು, ಅವರು ತಳಪಾಯ ಹಾಕುತ್ತಾರೆ, ನಾನು ಗೋಪುರ ಕಟ್ಟುತ್ತೇನೆಂದು. ಇದ್ದರೂ ಇರಬಹುದು. ಬೆನ್ನ ಹಿಂದೆ ನಿಂತು ಅವರು ಮುಂದೆ ಕೈ ತೋರಿಸಿದರು, ಆ ಹಾದಿಯಲ್ಲಿ ನಾನೂ ಮುನ್ನಡೆದೆ. ಒಬ್ಬರಿಗೊಬ್ಬರು ಆತುಕೊಂಡೆವು. ನಾನು ಸೋತಾಗ ಅವರು ಕೈ ಹಿಡಿದರು, ಅವರು ಸೋತಾಗ ನಾನು ನಿಂತು ಮುನ್ನಡೆದೆ. ಹೀಗೆ ಮುನ್ನಡೆಯುತ್ತಾ ಇಂದು ಈ ಪಂಚಮವೇದದಲ್ಲಿ ಬಂದು ನಿಂತಿದ್ದೇವೆ. + + + +ಜೊತೆಯಾಗಿ ನಡೆದು ೩೫ ವರ್ಷಗಳಾದವು. ಈ ಇಷ್ಟೂ ವರ್ಷವೂ ಪರಸ್ಪರ ಜಗಳ ಆಡಿದ್ದೇವೆ, ಕಿತ್ತಾಡಿದ್ದೇವೆ, ಮತ್ತೆ ಒಂದಾಗಿದ್ದೇವೆ. ಮಳೆ ನಿಂತು ಹೋದ ಮೇಲಿನ ಒದ್ದೆ ನೆಲದಂತೆ… ಈ ಬದುಕು ಆರ್ದ್ರವಾಗಿಸುವ ಅದೆಷ್ಟೋ ಸಂಗತಿಗಳಿಗೆ ಸಾಕ್ಷಿಯೆಂಬಂತೆ ಇಲ್ಲಿ ಪಂಚಮವೇದ ನಿಂತಿದೆ. + +ಈಗ ಗಿಡದಲ್ಲಿ ಕುಳಿತ ಹಕ್ಕಿ ಹಾರಿ ಹೋಯಿತು. ಬಹುಶಃ ಅದು ಗಂಡು ಹಕ್ಕಿಯೇ ಇರಬೇಕು. ಇನ್ನೊಂದು ಹಕ್ಕಿ ಗೂಡೊಳಗಿನ ಮರಿಗಳಿಗೆ ಆಹಾರ ಹಾಕುತ್ತಿರುವುದನ್ನು ನೋಡುತ್ತಿದ್ದೇನೆ. ಇಡೀ ಜೀವಸಂಕುಲಕ್ಕೇ ತಮ್ಮದೇ ಆದ ಸ್ವಂತ ಗೂಡೊಂದರ ಕಲ್ಪನೆ ಅದೆಷ್ಟು ಅದ್ಭುತವಾಗಿದೆ. ಇಂಥದ್ದೇ ಗೂಡಿಗಾಗಿಯಲ್ಲವೇ ನಮ್ಮೆಲ್ಲರ ಹೋರಾಟ…? ಇಂಥದ್ದೇ ಆಹಾರಕ್ಕಾಗಿಯಲ್ಲವೇ ನಮ್ಮ ಸಂಘರ್ಷ…? ಹೊರಳಿ ನೋಡುತ್ತೇನೆ. ಬದುಕಿನ ಅದೆಷ್ಟು ಸಂಘರ್ಷಗಳ ಹೆಜ್ಜೆಗಳು ಅಲ್ಲಿದ್ದವು…! + +ಮಲೆನಾಡಿನ ತಪ್ಪಲಲ್ಲಿ ಹುಟ್ಟಿ, ಜಗತ್ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗಿಗೆ ಹೋಗಿ, ಅಲ್ಲಿ ಬಾಲ್ಯ ಕಳೆದು, ಉಕ್ಕಿನ ಕಾರ್ಖಾನೆಗೆ ಹೆಸರಾದ ಭದ್ರಾವತಿಯ ಸಮೀಪದ ಬಯಲನಾಡು ತಿಮ್ಮಾಪುರಕ್ಕೆ ಬಂದು, ನನ್ನ ಯೌವನದ ದಿನಗಳನ್ನು ಸವೆಸಿದ್ದು, ಇಲ್ಲಿಯೇ ಮನೋಹರ್ ಅವರನ್ನು ಪ್ರೇಮಿಸಿದ್ದು, ನಂತರ ಬಿಸಿಲನಾಡು ಸಿಂಧನೂರಿಗೆ ಹೋಗಿದ್ದು, ಮಗ ಹುಟ್ಟಿದ ಮೇಲೆ ಮಾಯಾನಗರಿ ಬೆಂಗಳೂರಿಗೆ ಪಯಣಿಸಿದ್ದು, ಈಗ ಎಲ್ಲವನ್ನೂ ಬಿಟ್ಟು, ಮತ್ತದೇ ಭದ್ರಾವತಿಯ ಸಮೀಪದ ಗುಡ್ಡದ ಹಟ್ಟಿಗೆ ಬಂದು ಪಂಚಮವೇದ ತೋಟದಮನೆ ತಲೆ ಎತ್ತುವಂತೆ ಮಾಡಿದ್ದು…ಎಲ್ಲವೂ ನನ್ನ ಕಣ್ಣಮುಂದೆ ನಿಚ್ಚಳವಾಗಿ ಕಾಣಿಸುತ್ತಿದೆ. ಬದುಕಿನಲ್ಲಿ ಬಂದು ಹೋದ ಪಾತ್ರಗಳೆಲ್ಲವೂ ನನ್ನ ಕಣ್ಣೆದುರು ಹಾದು ಬರುತ್ತಿವೆ. ಈ ಪಂಚಮವೇದದ ಒಟ್ಟು 27 ಎಕರೆ ಜಾಗದಲ್ಲಿ ನಿಂತು ಬದುಕಿನ ಒಂದೊಂದೇ ಪುಟಗಳನ್ನು ಮಗುಚಿ ಹಾಕುತ್ತಿದ್ದೇನೆ. ಇದರಲ್ಲಿ ಒಳ್ಳೆಯದಿತ್ತು, ಕೆಟ್ಟದಿತ್ತು, ನೋವಿತ್ತು, ನಲಿವಿತ್ತು, ಸೋಲಿತ್ತು, ಯಶಸ್ಸಿತ್ತು… + +(ಭಾರತಿ ಹೆಗಡೆ) + +ಯಾವುದೇ ಸಂಘರ್ಷವಿಲ್ಲದ ಬದುಕು ಅದೊಂದು ಬದುಕೇ ಅಲ್ಲ ಎಂದು ಬಗೆದವಳು ನಾನು. ನಷ್ಟವಿಲ್ಲದ ವ್ಯಾಪಾರವಿಲ್ಲ, ಕಷ್ಟವಿಲ್ಲದ ಬೇಸಾಯವಿಲ್ಲ, ನೋವಿಲ್ಲದ ಸಂಸಾರವಿಲ್ಲ, ಕಷ್ಟವಿಲ್ಲದ ಮನುಷ್ಯನೂ ಇಲ್ಲ. ಆದರೆ ಇದೆಲ್ಲವನ್ನೂ ಜಯಿಸಿ ಅಲ್ಲಿ ಖುಷಿ ಕಾಣುವುದೇ ಜೀವನ ಎಂಬ ಪಾಠವನ್ನೂ ಕಲಿತವಳು…! + +ಅಪ್ಪ ಹೇಳಿದಂತೆ ನಿಜಕ್ಕೂ ಇದು ಮುಳ್ಳಿನ ಮೇಲಿನ ಹೂವೇ… ಯಾವತ್ತೂ ನಾವು ಹೂವಿನ ಹಾಸಿಗೆಯ ಮೇಲೆ ನಡೆದವರಲ್ಲ. ಅಷ್ಟು ಸುಲಭಕ್ಕೆ ಯಾವುದೂ ನಮಗೆ ದಕ್ಕಲೂ ಇಲ್ಲ. ಆದರೆ ಮುಳ್ಳುಗಳನ್ನು ನಿವಾರಿಸಿಕೊಂಡು ಮುನ್ನಡೆದಿದ್ದೇವೆ. ಈಗ ಅರಳಿದ ಹೂವಂತೆ ಈ ಪಂಚಮವೇದ ಇಂದು ತಲೆ ಎತ್ತಿ ನಿಂತಿದೆ. + +ಈ ಹೋರಾಟಗಳಲ್ಲೆಲ್ಲಿಯೂ ನನಗೆ ಪಶ್ಚಾತ್ತಾಪವಿರಲಿಲ್ಲ. ಹಾಗೆ ನೋಡಿದರೆ ಇದು ನಾನೇ ಆಯ್ದುಕೊಂಡ ಬದುಕು. ನನ್ನ ಬದುಕನ್ನು ಅಪ್ಪ ಅಮ್ಮನ ಮಡಿಲಿಗೆ ಹಾಕಲಿಲ್ಲ. ಪ್ರೇಮಿಸಿ ಮದುವೆಯಾಗಿ ನನ್ನ ಹಾದಿಯನ್ನು ನಾನೇ ಕಂಡುಕೊಂಡೆ. ಮನೋಹರ್ ಅವರನ್ನು ಮದುವೆಯಾದ ಮೇಲೂ ಸಂಪೂರ್ಣವಾಗಿ ಅವರನ್ನು ಅವಲಂಬಿಸಕೂಡದು ಎಂಬ ತತ್ವ ನನ್ನದಿತ್ತು. ಅದಕ್ಕೆ ನೀರೆರೆದವರು ಮನೋಹರ್. ಅದೀಗ ಫಲ ಕೊಟ್ಟಿದೆ. ಯಾಕೆಂದರೆ ನಮ್ಮನ್ನು ನಾವು ನಂಬಿ ಮುನ್ನಡೆದಾಗ ಮಾತ್ರ ನಮಗೆ ಯಶಸ್ಸು ಸಿದ್ಧ ಎಂಬ ತತ್ವದಡಿ ಬದುಕಿದವಳು ನಾನು. ಆ ತತ್ವವೇ ಇಂದಿಗೂ ಮುಂದೆಯೂ ಮುನ್ನಡೆಸುತ್ತದೆ ಎಂದು ನಂಬಿದ್ದೇನೆ… + +ಮತ್ತೆ ನೆನಪಾಗುತ್ತಿದೆ, ಪ್ರೇಮವೆನಲು ಹಾಸ್ಯವೇ ಎಂಬ ಸಾಲುಗಳು. ಪ್ರೇಮಕ್ಕೊಂದು ಜವಾಬ್ದಾರಿ ಇದೆ. ಅದು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಮರ ಸುತ್ತುವ ಸಿನಿಮೀಯವಾದ ಪ್ರೇಮವಾಗಿರಲಿಲ್ಲ. ಬದುಕಿನ ಛಲ ಹುಟ್ಟಿಸುವ ಪ್ರೇಮವದು… ಬದುಕಲು ಸಾಧ್ಯವೇ ಇಲ್ಲ ಎಂಬಂತಹ ದಿನಗಳು ನಮಗೂ ಬಂದಿದ್ದವು. ಆದರೂ ಸೋಲಲಿಲ್ಲ… ಸೋಲುವುದಕ್ಕೆ ಈ ಪ್ರೇಮ ಬಿಡಲೂ ಇಲ್ಲ…! + + + +ಇದು ಇಳಿಸಂಜೆಯ ತೃಪ್ತ ಜೀವನದ ಕಥೆಯಲ್ಲ, ಮುಸ್ಸಂಜೆಯ ಪ್ರಸಂಗವೂ ಅಲ್ಲ, ಬೆಳ್ಳಂಬೆಳಗಿನ ಚೇತೋಹಾರಿಯಾದ ವಾತಾವರಣವೂ ಅಲ್ಲಿರಲಿಲ್ಲ. ಇದು ನಟ್ಟ ನಡು ಮಧ್ಯಾಹ್ನದ ಇಂಚಿಂಚೇ ಆಗಿ ಸರಿದು ಹೋಗುವ ಸೂರ್ಯನ ಪ್ರಖರ ಬೆಳಕಿನ ಕೋಲ್ಮಿಂಚಿನ ಥರಹದ ಬದುಕಿನ ಪುಟಗಳು… ಒಂದೊಂದೇಯಾಗಿ ಮಗುಚಿಕೊಳ್ಳುತ್ತಿವೆ ನನ್ನೆದುರು…! + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_103.txt b/Kenda Sampige/article_103.txt new file mode 100644 index 0000000000000000000000000000000000000000..264ce8d6c8ac2970a0680a84ad81e7685d64e5b3 --- /dev/null +++ b/Kenda Sampige/article_103.txt @@ -0,0 +1,83 @@ +ಒಂದು ದಿನ ರಾತ್ರಿ ಮುದುಕನ ಮೈಯಾಗ ದೇವರು ಬಂತು. ಅಂವಾ ಕಾನ್ಹೂ ಸತಿಮಾತೆಯ ಮಾಲೀದಾ ಪ್ರಸಾದ ಮಾಡಾಕ ಹೇಳಿದ. ಕಾನ್ಹೂ ಸತಿಮಾತೆ ಬೇಲದಾರರ ಕುಲದೇವತೆ. ಬೇಲದಾರರು ಈ ದೇವತೆಗೆ ಶ್ರದ್ಧೆಯಿಂದ ನಡಕೊಳ್ತಾರೆ. ಸಂಕಟ ಬಂದಾಗಲೆಲ್ಲ ಈ ಮಂದಿ ಸತೀ ಮಾತೆಗೇ ಮಾಲೀದಾದಿಂದ ಮಾಡಿದ ನೇವೇದ್ಯ ತೋರಿಸ್ತಾರು. ಆವಾಗ ಆ ದೇವಿ ದುಃಖ ನಿವಾರಣೆ ಮಾಡ್ತಾಳು. ಬೇಲದಾರರಿಗೆ ಕೆಲಸ ಸಿಗದಿದ್ದರ, ಆಕಿಗೆ ನೇವೇದ್ಯ ತೋರಿಸಿದರ, ಆಕಿ ಆಶೀರ್ವಾದದಿಂದ ಕೆಲಸ ಸಿಗತಿತ್ತು. ಮುದುಕ ಶೆರಿ ಕುಡಿದ ದಿನಾ ಸತೀಮಾತೆಯ ಕಥಿ ಹೇಳತಿದ್ದ. ಆ ಕಥಿ ಹಿಂಗದ – ‘ಇದು ನಾನೂರು ವರುಷದ ಹಿಂದಿನ ಕಥಿ. ಬುಲ್ಡಾಣಾ ಜಿಲ್ಲೆಯ ಪಾನ್ಹೋರಾ ಎಂಬ ಹಳ್ಳಿಯೊಳಗ 20-25 ಬೇಲದಾರರ ಬಿಡಾರ ಇಳಿದಿತ್ತು. ಒಂದು ದಿನ ಬೇಲದಾರ ಜನರ ಜಾತಿ ಪಂಚಾಯತಿ ಸೇರಿತು. ಆವತ್ತು ಮದವಿ ಮಾಡೋದು, ಮದವಿ ಮುರಿಯೋದು ಎಲ್ಲ ನಡೀತದ. ಪಂಚರು ಗ್ಲಾಸ ಮ್ಯಾಲೆ ಗ್ಲಾಸ ಶೆರಿ ಕುಡಿತಿದ್ದರು. ಒಬ್ಬ ಬೇಲದಾರರ ಪೋರಿ ನೋಡಾಕ ಭಾಳ ಚೆಂದ ಇದ್ಲು. ಆಕಿ ಹೆಸರು ಕಾನ್ಹೂ. ಪೇನೆಖಾನೆ ಎಂಬ ಬೇಲದಾರ ಯುವಕನ ಜೋಡಿ ಕಾನ್ಹೂಳ ಲಗ್ನ ನಿಕ್ಕಿಯಾತು. ಆ ಯುವಕನಿಗೆ ರಗುತ ವಾಂತಿ ಮಾಡಿಕೊಳ್ಳೊ ರೋಗಯಿತ್ತು. ಈ ವಿಷಯ ಕಾನ್ಹೂಳ ತಾಯಿ ತಂದಿಗೆ ಗೊತ್ತಾತ. ಅವರು ಈ ಲಗ್ನಕ್ಕೆ ಒಪ್ಪಿಗೆ ಕೊಡಲಿಲ್ಲ. ಆಗ ಆ ಯುವಕನ ಅಪ್ಪ ಜಾತಿ ಪಂಚಾಯತಿ ಕರೆದ. ನಮ್ಮ ಮಂದ್ಯಾಗ ಪಂಚರ ಮುಂದ ಒಮ್ಮಿ ಮಾತು ಕೊಟ್ಟಿರಿ ಅಂದರ ಬದಲಾಯಿಸಾಂಗಿಲ್ಲ. ಜಾತಿ ಪಂಚಾಯತಿಯೇ ಈ ಲಗ್ನ ನಿಕ್ಕಿ ಮಾಡಿತ್ತು. ಹಿಂಗಾಗಿ ಅವರು ಮದವಿ ಮಾಡಿದರು. + +(ಅಶೋಕ ಪವಾರ) + +ಕಾನ್ಹೂ ಗಂಡನ ಮನಿಗೆ ಹೋದ್ಲು. ಒಂದೆರಡು ತಿಂಗಳು ಕಳೆಯಿತು. ಕಾನ್ಹೂಳ ಸಂಸಾರ ನಡೀತು. ಆದರ ಆಕಿ ಗಂಡನ ರೋಗ ಹೆಚ್ಚಾಯಿತು. ಅಂವಾ ಹಾಸಿಗಿನೇ ಹಿಡಿದ. ಅನ್ನ ನೀರು ಬಿಟ್ಟ. ಮೈ ಸೊರಗಿ ಕಡ್ಡಿ ಹಾಂಗಾತು. ಜೀವಾ ಒದ್ದಾಡಾಕ ಹತ್ತಿತು. ಆಗ ಕಾನ್ಹೂ ಸ್ವತಃ ದುಡಿದು ಗಂಡನನ್ನು ಸಾಕಿದ್ಲು. ಗಂಡನ ಸೇವೆ ಮಾಡಿದ್ಲು. ಮತ್ತ ಒಂದೆರಡು ತಿಂಗಳು ಕಳೀತು. ಹಾಸಿಗ್ಯಾಗ ಮಲಗಿ-ಮಲಗಿ ಅವನ ದೇಹ ಕೊಳೀತು. ಹುಳಾ ಹತ್ತಿತು. ಹಾಸಿಗಿ ಮ್ಯಾಲೇ ಉಚ್ಚಿ-ಹೇಲು. ಆಕಿನೇ ಗಂಡನ ಉಚ್ಚಿ ಹೇಲು ಬಳಿತಿದ್ಲು. ಎಷ್ಟೋ ದ್ಯಾವರು – ದೇವರ್ಸಿಗಳಾದರು. ಬೂದಿ-ವಿಭೂತಿ, ಭಸ್ಮ ಎಲ್ಲ ಹಚ್ಚಿ ನೋಡಿದರು. ಆದರೆ ಕಾನ್ಹೂನ ಗಂಡ ಮಾತ್ರ ನೆಟ್ಟಿಗಾಗಲಿಲ್ಲ. ಅಂತೂ ಕೊನೆಗೊಂದು ದಿನಾ ಅಂವಾ ಸತ್ತ. ಅವನ ಹೆಣದ ಸುತ್ತಲೂ ಕುಂತು ಎಲ್ಲರೂ ಬೊಬ್ಬೆ ಹೊಡೆದು ಅತ್ತರು. ಅತ್ತಿ-ಮಾವ ಕಾನ್ಹೂಳಿಗೇ ಬಯ್ಯಾಕ ಹತ್ತಿದರು. ಈ ಪೋರಿ ಕೆಟ್ಟ ಕಾಲ್ಗುಣದಾಕಿ. ಆಕಿಯಿಂದಾನೇ ನನ್ನ ಮಗ ಸತ್ತ. ಆಕಿ ಈಗ ಗಂಡನ್ನ ನುಂಗಿ ಕುಂತಾಳು. ಕಾನ್ಹೂ ಹರೇದಾಗ ರಂಡಿಯಾದ್ಲು. ಸುತ್ತಮುತ್ತ ಹಳ್ಳಿಯೊಳಗ ಬಿಡಾರ ಮಾಡಿಕೊಂಡಿದ್ದ ಎಲ್ಲ ಬೇಲದಾರ ಮಂದಿ ಮಣ್ಣಿಗೆ ಬಂದರು. ಕಟ್ಟಿಗಿ ತಂದರು. ಊರ ಹೊರಗ ಆಗಸಿ ಹತ್ತರ ತಂದರು. ಅಲ್ಲಿ ಚಿತೆ ತಯಾರ ಮಾಡಿದರು. + +ಕಾನ್ಹೂಳ ಗಂಡನಿಗೆ ಜಳಕ ಹಾಕಿದರು. ಹೊಸ ಅರವಿ ತೊಡಿಸಿದರು. ಕಾನ್ಹೂಳ ಕೊಳ್ಳಾಗಿದ್ದ ಕರೀಮಣಿ ಸರ ತುಂಡ ಮಾಡಿದರು, ಹಣಿ ಮ್ಯಾಲಿನ ಕುಂಕುಮ ಅಳಿಸಿದರು. ಕಾನ್ಹೂಳ ಕಣ್ಣು ಅತ್ತು-ಅತ್ತು ಕೆಂಪಾಗಿತ್ತು. ಹಣಿ-ಹಣಿ ಬಡಕೊಂಡ್ಲು. ಎಚ್ಚರ ತಪ್ಪಿ ಬಿದ್ಲು. ಎಲ್ಲಾರೂ ಹೆದರಿದರು. ಆಕಿ ಮಾರಿಗೆ ನೀರ ಹೊಡೆದ ಮ್ಯಾಗ ಆಕಿ ಎಚ್ಚರ ಆತು. ಆಕಿ ಎದ್ದು ಕುಂತಳು. ನಾನ ಸತಿ ಹೋಗತೇನಿ ಅಂದ್ಲು. ಎಲ್ಲ ಬೇಲದಾರರು ಅಂಜಿದರು. ಜಾತಿ ಪಂಚಾಯತಿ ಸಭೆ ಕರೆದರು, ಅವರು ಕಾನ್ಹೂಳಿಗೆ ಸತಿ ಹೋಗಾಕ ವಿರೋಧ ಮಾಡಿದರು. ಆದರೆ ಕಾನ್ಹೂಳ ತಾಯಿ-ತಂದಿ, ಅತ್ತಿ-ಮಾವ ಆಕಿಗೆ ಸತಿ ಹೋಗಾಕ ಅನುಮತಿ ಕೊಡರಿ ಅಂತ ಜಾತಿ ಪಂಚಾಯತಿಗೆ ಹೇಳಿದರು. ಆದರೂ ಪಂಚರು ಅನುಮತಿ ಕೊಡಲಿಲ್ಲ. ಆದರ ಕಾನ್ಹೂ ಮಾತ್ರ ಹಠ ಬಿಡಲಿಲ್ಲ. ಈ ಪ್ರಕರಣ ಊರ ಗೌಡರ ಮುಂದ ಒಯ್ದರು. ಗೌಡರೂ ವಿರೋಧ ಮಾಡಿದರು. ಆದರೂ ಕಾನ್ಹೂ ಹಠ ಬಿಡಲಿಲ್ಲ. ಆಗ ಗೌಡ ಸಿಟ್ಟಿಗೆದ್ದು ‘ಏ ಪೋರಿ, ನೀನು ಸತಿ ಹೋಗಬೇಕಂತಿ ಯಲ್ಲ, ನಿನ್ನ ಹಂತ್ಯಾಕ ಅಂಥ ಯಾವ ಶಕ್ತಿಯದ ತೋರಿಸು’ ಎಂದರು. ಗೌಡರ ಆ ಮಾತಿಗೆ ಆಕಿ ನಡೆಯಾಕ ಶುರು ಮಾಡಿದ್ಲು. ಆಕಿ ಪ್ರತಿ ಹೆಜ್ಜಿ ಕೆಳಗ ಕುಂಕುಮದ ಹೆಜ್ಜಿ ಮೂಡಿದ್ದು ಕಾಣಿಸಿತು. ಗೌಡ ಬೆರಗಾದ. ಆಕಿಗೆ ಸತಿ ಹೋಗಾಕ ಅನುಮತಿ ನೀಡಿದ. ಜಾತಿ ಪಂಚಾಯತಿನೂ ಒಪ್ಪಿಗೆ ನೀಡಿತು. ಇಡೀ ಊರಾಗ ಈ ಸುದ್ದಿ ಹಬ್ಬಿತು. ಊರಿಗೆ ಊರೇ ಬೇಲದಾರರ ಬಿಡಾರಕ್ಕ ಬಂತು. ಹೆಂಗಸರು ಕಾನ್ಹೂಳಿಗೆ ಜಳಕ ಹಾಕಿದರು. ‘ಸತೀ ಮಾತಾ ಕಾನ್ಹೂಳಿಗೆ ಜೈ’ ಎಂದರು. ಸೀರಿ ಉಡಸಿದರು. ಅಡ್ಡ ಕುಂಕುಮ ಹಚ್ಚಿದರು. ಕೊರಳಿಗೆ ಕರೀಮಣಿ ಸರ ಹಾಕಿದರು. ಕಾಲ ಬೆರಳಿಗೆ ಕಾಲುಂಗುರ ಹಾಕಿದರು. ಹಿಂಗ ಎಲ್ಲ ತಯಾರಿ ಮಾಡಿದರು. ಬೇಲದಾರರೂ ಶೆರಿ ಕುಡಿದು ಟೈಟ್ ಆಗಿದ್ದರು. ಒಬ್ಬಾಂವ ಕಾನ್ಹೂಳನ್ನು ಹೆಗಲ ಮ್ಯಾಲೆ ಹೊತಕೊಂಡ. ಮುಂದೆ ಆಕಿ ಗಂಡನ ಹೆಣಕ್ಕ ನಾಲ್ಕಮಂದಿ ಹೆಗಲು ಕೊಟ್ಟಿದ್ದರು. ಅದಕ್ಕಿಂತ ಮುಂದೆ `ಡಂಗ್ ಚಿಕ್ ಡಡಂಗ ಡಂಗ’ ಅಂತ ಹಲಗಿ ಬಾರಿಸಾಕ ಹತ್ತಿದ್ದ. ಎಲ್ಲಾರೂ ಹಾದಿ ಹಿಡಿದು ಹೊಂಟರು. ಇಡೀ ಊರಿಗೆ ಊರೇ ಬೆನ್ನ ಹಿಂದೆ ಬರಾಕ ಹತ್ತಿತ್ತು. ಬೇಲದಾರರು ಕುಣಿತಿದ್ದರು. ಕಾನ್ಹೂಳಿಗೆ ನಿವಾಳಿಸಿ ಚಿಲ್ಲರೆ ದುಡ್ಡು ಬೀಸಿ ಒಗಿತಿದ್ದರು. ನಡೀತಾ ನಡೀತಾ ಚಿತೆ ಹತ್ತರ ಬಂದರು. ಕಾನ್ಹೂಳನ್ನು ಹೆಗಲ ಮ್ಯಾಲಿಂದ ಕೆಳಗ ಇಳಿಸಿದರು. + +ಆಕಿ ಚಿತೆ ಮ್ಯಾಲೆ ಏರಿದಳು. ಗಂಡನ ಹೆಣ ತೊಡಿ ಮ್ಯಾಲೆ ಇಟಕೊಂಡ್ಲು. ಆಮ್ಯಾಲೆ ಆಕಿ ಬೇಲದಾರರಿಗೆ ಹೇಳಿದ್ಲು, ‘‘ಬೇಲದಾರರೆ, ನಾನೀಗ ಹೊಂಟೆ. ನೀವು ಚಿತೆಗೆ ಉರಿ ಹಚ್ಚಿದ ಮ್ಯಾಲೆ ಇಲ್ಲೇ ನಿಂದರ್ರಿ. ನಾನು ಸುಟ್ಟ ಹ್ವಾದ ಮ್ಯಾಲೆ ಬೆಂಕಿಯಿಂದ ಹೊರ ಬರ್ತೇನಿ. ನಿಮಗೊಂದು ವಸ್ತು ಕೊಡ್ತೀನಿ. ಅದನ್ನ ತಗೊಂಡು ಮನಿಗೆ ಹೋಗರಿ. ಆ ವಸ್ತು ಒಂದು ಪೆಟ್ಟಿಗ್ಯಾಗ ಇಡರಿ. ಮುಂದ ನಿಮ್ಗ ಹತ್ತು ಊರು ತಿರುಗಾಡೋ ಪಾಳಿ ಬರಾಂಗಿಲ್ಲ. ನೀವು ಲಕ್ಷಾಧಿಪತಿ ಆಗತೀರಿ. ಆದರ ನಿದ್ದಿ ಮಾಡಬ್ಯಾಡರಿ. ಜಾಗರಣೆ ಮಾಡರಿ. ಹಚ್ಚರಿ ಬೆಂಕಿ ಚಿತೆಗೆ’’. ಊರ ಮಂದಿ ಮತ್ತು ಬೇಲದಾರರು ಕಾನ್ಹೂಳ ಮೈಮ್ಯಾಗ ತುಪ್ಪದ ಡಬ್ಬಿ ಸುರವಿದರು. ಕಾನ್ಹೂಳ ಮಾವ ಮುಂದ ಬಂದ. ಚಿತೆಗೆ ಬೆಂಕಿ ಹಚ್ಚಿದ. ಬೆಂಕಿ ಭಗಭಗ ಅಂತ ಉರಿಯಾಕ ಹತ್ತಿತು. ಕಾನ್ಹೂಳ ಆಕ್ರಂದನ ಪ್ರತಿಧ್ವನಿಯಾಗಿ ಕೇಳಬರಾಕ ಹತ್ತಿತು. ಎಲ್ಲಾರೂ ಶೆರಿ ಕುಡಿದಿದ್ದರು. ಸತೀ ಮಾತೆಗೆ ಜೈ ಅಂತ ಕುಣಿಯಾಕ ಹತ್ತಿದ್ದರು. ಕೂಗುತಿದ್ದರು. ಜರಾ ಹೊತ್ತ ಆದ ಮ್ಯಾಗ ಎಲ್ಲಾನೂ ಶಾಂತವಾಯಿತು. ಕಾನ್ಹೂ ಗಂಡನ ಜೋಡಿ ಸುಡಾಕ ಹತ್ತಿದ್ಲು. ಮುಂದ ಬೆಂಕಿ ನಡುವಿಂದ ಫಟ್ ಅಂತ ಸದ್ದಾಯಿತು. ತಲೀ ಒಡೀತು. ಎಲ್ಲ ಊರ ಮಂದಿ ಮತ್ತು ಬೇಲದಾರ ಹೆಂಗಸರು ತಿರುಗಿ ಹೋದರು. ಅಲ್ಲಿ ಬರೇ ಬೇಲದಾರರು ಮತ್ತು ದಾಡಿ ಜಾತಿ ಮಾತ್ರ ಉಳಿದರು. ಸಾಕಷ್ಟು ಹೊತ್ತಾತು. ಕಾನ್ಹೂ ಬೆಂಕಿಯಿಂದ ಹೊರಗ ಬರೋ ಹಾದಿ ಬೇಲದಾರರು ಕಾಯಾಕ ಹತ್ತಿದರು. ಆಕಿ ಎಷ್ಟ ಹೊತ್ತಾದರೂ ಬಂದಿಲ್ಲ. ಬೇಲದಾರರು ಬ್ಯಾಸತ್ತ ಹ್ವಾದರು. ಅವರು ದಾಡಿ ಜಾತಿಗೆ ಜಾಗರಣೆ ಮಾಡಾಕ ಹೇಳಿದರು, ಕಾನ್ಹೂ ಬಂದ ಮ್ಯಾಲೆ ನಮಗ ಎಬ್ಬಿಸು ಅಂತ ಹೇಳಿ ಎಲ್ಲಾ ಬೇಲದಾರರು ಮಲಗಿಬಿಟ್ಟರು. ದಾಡಿ ಜಾತಿ ಮಾತ್ರ ಜಾಗರಣೆ ಮಾಡಿದರು. + +ಮುಂದ ಕಾನ್ಹೂ ಬೆಂಕಿಯಿಂದ ಹೊರಗ ಬಂದ್ಲು. ನೋಡಿದರ ಎಲ್ಲಾ ಬೇಲದಾರರು ಮಲಕ್ಕೊಂಡಾರು. ದಾಡಿ ಜಾತಿಯವರು ಮಾತ್ರ ಎಚ್ಚರವಾಗಿದ್ದರು. ಆಕಿಗೆ ಕೆಟ್ಟ ಅನಿಸ್ತು. ಆಕಿ ದಾಡಿ ಜಾತಿ – ಅವರಿಗೆ ಸೀರಿ ಧಡಿ ಕೊಟ್ಲು. ಅದನ್ನ ಪೆಟ್ಟಿಗ್ಯಾಗ ಇಡಾಕ ಹೇಳಿದ್ಲು. ಮತ್ತು ಎಲ್ಲ ಬೇಲದಾರ ಮಂದಿ ಭಿಕ್ಷುಕರಾಗೇ ಇರ್ತಾರು ಅಂತ ಶಾಪ ಕೊಟ್ಲು. ಆಕಿ ಅದೃಶ್ಯ ಆದ್ಲು. ದಾಡಿ ಜಾತಿಯವರು ಬೇಲದಾರರನ್ನು ಎಬ್ಬಿಸಿದರು. ಅವರು ಯಾವ ವಿಷಯಾನೂ ಹೇಳಲಿಲ್ಲ. ಎಲ್ಲಾರೂ ತಮ್ಮ ತಮ್ಮ ಬಿಡಾರಕ್ಕ ಹ್ವಾದರು. ದಾಡಿಜಾತಿ ಪೆಟ್ಟಿಗ್ಯಾಗ ಇಟ್ಟ ಸೀರಿ ಥಡಿ ಬಂಗಾರ ಆಯಿತು. ಆವತ್ತಿನಿಂದ ದಾಡಿಜಾತಿ ಲಕ್ಷಾಧಿಪತಿ ಆದರು, ಬೇಲದಾರರು ಭಿಕ್ಷಾಧಿಪತಿಯಾಗೇ ಉಳಿದರು. + +ಆಮ್ಯಾಲೆ ಆಕಿ ಬೇಲದಾರರ ದೇವಿ ಆದ್ಲು. ಆಕಿಗೆ ಹರಕೆ ಹೊತ್ತರ ಫಲ ಸಿಗಾಕ ಹತ್ತಿತು. ಬೇಲದಾರರು ಆಕಿ ಪೂಜಿ ಮಾಡಾಕ ಸುರು ಮಾಡಿದರು. ಸಂಕಟ ಬಂತಂದರ ಮಾಲೀದಾ ನೇವೇದ್ಯ ತೋರಿಸ್ತಾರು. ಆಕಿನೇ ಮುಂದ ಬೇಲದಾರರ ಕಾನ್ಹೂ ಸತೀ ಮಾತೆಯಾದ್ಲು. + +ಅಪ್ಪನಿಗೆ ಕೆಲಸ ಸಿಗಲಿ ಅಂತ ಸತಿ ಮಾತೆಗೆ ಮಾಲೀದದ ನೈವೇದ್ಯ, ತೋರಿಸೋದು ನಿಕ್ಕಿಯಾಯಿತು. ಅಪ್ಪ ಒಂದೂವರಿ ಶೇರ ಗೋದಿ ತಂದ. ಊರಾಗ ಹಿಟ್ಟಿನ ಗಿರಣಿಯಿಲ್ಲ, ನಮ್ಮ ಮನ್ಯಾಗ ಬೀಸೋ ಕಲ್ಲಿಲ್ಲ. ಬೀಸೊಧ್ಯಾಂಗ ಅನ್ನೋ ಪ್ರಶ್ನೆ ಬಂತು. ಆವಾಗ ನಾನೂ, ಅವ್ವ ಊರಾಗ ಬೀಸಿ ತರಾಕ ಹೋದವಿ. ಬೀಸಾಕ ಜರಾ ಬೀಸೋಕಲ್ಲ ಕೊಡರಿ ಅಂದಿವಿ, ಆದರ ಯಾರೂ ಕೊಡಲಿಲ್ಲ. ಬೀಸೋಕಲ್ಲ ಸಲುವಾಗ ಇಡೀ ಊರ ತುಂಬ ತಿರುಗಾಡಿದಿವಿ. ಜನ ನಮ್ಮನ್ನು ಕ್ಷುದ್ರ ಅಂತ ತಿಳಕೊಳ್ಳತಿದ್ದರು. ನಮ್ಮ ಹುಚ್ಚು ಅವತಾರ ನೋಡಿ ನಾಯಿಗಳು ಬೊಗಳಾಕ ಹತ್ತಿದ್ವು. ಹೆಂಗಸರು ಮನೀ ಬಾಗಿಲಾದಾಗ ನಿಂತು ನಗಾಕ ಹತ್ತಿದರು. ಕೆಲವರು ಚ್ಯಾಷ್ಟಿ ಮಾಡತ್ತಿದ್ದರು. ‘ನೋಡರಿ ಪಾವಣ್ಯಾರ ಬಂದರು’ ಅಂತ ಹಂಗಿಸುತ್ತಿದ್ದರು. ನಾವು ಮಾತ್ರ ಬೀಸೋಕಲ್ಲಿಗಾಗಿ ಯಾಚನೆ ಮಾಡತಿದ್ವಿ. + +ಕೊನೆಗೆ ಒಬ್ಬ ಮುದುಕಪ್ಪನಿಗೆ ನಮ್ಮ ಮ್ಯಾಲೆ ದಯೆ ಬಂತು. ಅವನ ಹೆಂಡತಿ ಬೀಸೊಕಲ್ಲ ಕೊಡಾಕ ತಯಾರಿರಲಿಲ್ಲ, ಮುದುಕಪ್ಪ ಆಕಿ ಮನಸು ಬದಲಾಯಿಸಿದ. ಆಕಿ ಪಡಸಾಲ್ಯಾಗ ಬೀಸೊಕಲ್ಲು ತಂದಿಟ್ಟಳು. ಅವ್ವ ಗೋದಿ ಗಂಟು ಬಿಚ್ಚಿ ಬೀಸಾಕ ಕುಂತ್ಲು. ಒಂದು ಮುಟಗಿ ಗೋದಿ ಹಾಕಿ ಒಂದು ಸಾಲು ಹಾಡತಿದ್ಲು. ಬೀಸೊಕಲ್ಲು ಘರಾಘರಾ ತಿರಗತಿತ್ತು. + +ಅವ್ವ ಬೀಸಾಕ ಕುಂತಾಗ ನನಗ ನೀರಡಿಕೆ ಆಯಿತು. ಅವ್ವನಿಗೆ ನನ್ನ ಕಡಿ ಲಕ್ಷಯಿರಲಿಲ್ಲ. ಸಾವಕಾಶ ಎದ್ದು ಮನಿಯೊಳಗೆ ನುಗ್ಗಿದೆ. ತಂಬಿಗಿ ತಗೊಂಡು ನೀರಾಗ ಮುಳುಗಿಸಿದೆ. ತಂಬಿಗಿಗೆ ಬಾಯಿ ಹಚ್ಚಿ ಕುಡಿಯಾಕ ಶುರು ಮಾಡಿದೆ. ಯಜಮಾನಿ ಬಯ್ಯುತ್ತ ಓಡಿ ಬಂದ್ಲು. ತಂಬಿಗಿ ನನ್ನ ಕೈಯಿಂದ ಜಾರಿ ಕೆಳಗ ಬಿತ್ತು. + +ಬೆಂಕಿ ಹಚ್ಚಲಿ ಈ ಬೇಲದಾರ ಜಾತಿಗೆ. ಮಟನ-ಮೀನು ತಿನ್ನೋ ಹಲ್ಕಟ ಮಂದಿ. ಮೈಲಗಿ ಮಾಡಿಬಿಟ್ಟ. ಅಂತ ಬೊಬ್ಬೆ ಹೊಡೆದ್ಲು. ನೀರೆಲ್ಲ ಹೊರಗ ಸುರಿದ್ಲು. ಅಷ್ಟರಾಗ ಅವ್ವ ಬಂದು ನನಗ ಬಡಿದ್ಲು. ‘‘ನಾವು ಬೇಲದಾರ ಮಂದಿ. ಕೆಳಗಿನ ಜಾತಿಯವರು. ಯಾಕ ಮೈಲಗಿ ಮಾಡಿದಿಯೋ ಭಾಡ್ಯಾ’’ ಅಂತೆಲ್ಲ ಬಾಯಿಗೆ ಬಂದಾಗ ಬಯ್ದಳು. ನಾನು ಹೆದರಿ ಕಂಗಾಲು. ಆ ಯಜಮಾನಿ ಅವ್ವನಿಗೆ ಬೈದಳು ‘‘ಏನೇ ಉಂಡಗಿ ರಂಡೆ, ನಿನಗೂ ಬುದ್ಧಿ ಬ್ಯಾಡೇನು. ಕಣ್ಣ ಮುಚಕೊಂಡು ಕುಂತಿಯೇನು? ಸಾಕ ಮಾಡು ಬೀಸೋದು. ಇಲಾಂದರ ಖಾರ ತುರುಕಿ ಬಿಡಿಸಾಕ ಹಚ್ಚತೇನ ನೋಡು. ಮೊದ್ಲು ಇಲ್ಲಿಂದ ಹೊರಗ ಹೋಗರಿ’’ ಪುಣ್ಯಕ್ಕ ಗೋದಿ ಬೀಸಿ ಮುಗಿದಿತ್ತು. ಅವ್ವ ನಡಗಾಕ ಹತ್ತಿದ್ಲು. ಹಿಟ್ಟು ಗಂಟಿನಾಗ ಕಟ್ಟಿಕೊಂಡ್ಲು. ತಾಯಿ-ಮಗ ಇಬ್ಬರೂ ಬಿಡಾರದ ಕಡಿಗೆ ಹೊಂಟವಿ. ಅವ್ವ ಅಪ್ಪನಿಗೆ ಇದನ್ನೆಲ್ಲ ಹೇಳ್ತೇನಿ ಅಂದ್ಲು. ನನಗ ಹೆದರಿಕೆ ಶುರುವಾಯಿತು. ಆದರ ಆಕಿ ಅಪ್ಪನಿಗೆ ಏನೂ ಹೇಳಲಿಲ್ಲ. + +ಸಂಜಿಗೆ ಅವ್ವ ಮತ್ತ ಮುದುಕಿ ಕೂಡಿ ಗೋದಿ ಹಿಟ್ಟು ಕಲಸಿ ದಪ್ಪ ರೋಟಿ ಮಾಡಿದರು. ಅದನ್ನ ಚೂರು ಚೂರು ಮಾಡಿದರು. ಅದರಾಗ ಬೆಲ್ಲ ಹಾಕಿದರು. ಆವಾಗ ಮಾಲೀದಾ ತಯಾರಾತು. ಮುದುಕ ದೇವರ ಪೆಟ್ಟಗಿ ತೆರೆದ. ದೇವರನ್ನು ತೊಳೆದ. ದೇವರ ಮುಂದ ಊದುಬತ್ತಿ ಹಚ್ಚಿದ. ಮಾಲೀದಾದ ರಾಶಿ ದೇವರ ಮುಂದಿಟ್ಟ. ಅದರ ಮ್ಯಾಗ ಎಣ್ಣಿದೀಪ ಹಚ್ಚಿದ. ಎಲ್ಲಾದರ ಮ್ಯಾಲೂ ಗೋಮೂತ್ರ ಸಿಂಪಡಿಸಿದ. ನಾವು ಕೈಮುಗಿದು ದೇವರಿಗೆ ನಮಸ್ಕಾರ ಮಾಡಿದ್ವಿ. ಮುದುಕ ದೇವರ ಮುಂದ ಶಿರಯಿಟ್ಟು ಬೇಡಿಕೊಂಡ. ‘‘ತಪ್ಪಾತು-ತಪ್ಪಾತು. ಕಾನ್ಹೂಸತಿ, ನಿನ್ನ ಹೇಲು- ಉಚ್ಚಿ ಕುಡಿತೇವಿ. ತಪ್ಪಾಗಿದ್ದರ ಕ್ಷಮಿಸು. ಮಕ್ಕಳ ಮರಿಗೆ ಸುಖಾ ಕೊಡು. ಬೇಗ ಕೆಲಸ ಸಿಗೋ ಹಾಂಗ ಮಾಡವ್ವ ತಾಯೀ..”. ಮುಂದ ಉಂಡು ಮಲಗಿದ್ವಿ. + +ನಸುಕಿಗೇ ಎದ್ದು ಕತ್ತಿ ಮ್ಯಾಲೆ ಬಿಡಾರ ಹೇರಿದ್ವಿ. ಹರದಾರಿ-ಹರದಾರಿ ನಡೀತ-ನಡೀತ ಕಾಟಿಖೇಡಾ ಅನ್ನೋ ಊರಿಗೆ ಬಂದು ಮುಟ್ಟಿದಿವಿ- ಅಲ್ಲೇ ಬಿಡಾರ ನಿಲ್ಲಿಸಿದಿವಿ. ನೀರು ಕುಡಿದಿವಿ. ಅಲ್ಲಿ ಧೋಂಡು ಮಾಮಾ ಭೇಟಿಯಾದ. ಅಪ್ಪ-ಅಂವಾ ನಮಸ್ಕಾರ ಮಾಡಿದರು. ಅವನಿಗೆ ಅಲ್ಲಿ ಕೆಲಸ ಸಿಕ್ಕಿತ್ತು. ಅಂವಾ ಅಂದ- ಸಾಮಾಯಿಕ ಕೆಲಸ ಮಾಡೋಣು. ಅಪ್ಪ-ಅಂವಾ ಕೂಡಿ-ಕೂಡಿ ಕೆಲಸ ಮಾಡೋದು ನಿಕ್ಕಿ ಆತು. ಅಂತೂ ಅಪ್ಪನಿಗೂ ಕೆಲಸ ಸಿಕ್ಕಿತು. ಅಪ್ಪ-ಅವ್ವ ಇದೆಲ್ಲ ಸತಿ ಮಾತೆಯ ಪುಣ್ಯ ಅಂದರು. ಆಕಿಗೆ ಮಾಲೀದಾದ ನೇವೇದ್ಯ ಮಾಡಿದ್ದರಿಂದಾನೇ ಕೆಲಸ ಸಿಗ್ತು ಅಂದರು. + +ಮುಂದ ಬಿಡಾರ ಹೊತಕೊಂಡು ಧೋಂಡು ಮಾಮಾನ ಬೆನ್ನ ಹತ್ತಿದ್ವಿ. ಮಾಮಾ ನಮ್ಮನ್ನ ಊರ ಹೊರಗ ಕರ್ಕೊಂಡ ಬಂದ. ಅಲ್ಲೊಂದು ಬಾವಿಯಿತ್ತು. ಅವನ ಬಿಡಾರಾನೂ ಅಲ್ಲೇ ಇತ್ತು. ಅವನ ಬಿಡಾರದ ಹತ್ತಿರಾನೇ ನಮ್ಮ ಬಿಡಾರಾನೂ ಇಳಿಸಿದಿವಿ. ಅಪ್ಪ ಮತ್ತು ಮಾಮಾ ಸಾಮಾಯಿಕ ಕೆಲಸ ಶುರು ಮಾಡಿದರು. + +ಧೋಂಡೋ ಮಾಮಾನಿಗೆ ಪಾಂಡೂ ಮತ್ತು ಸೋಮು ಅಂತ ಇಬ್ಬರು ಮಕ್ಕಳು. ನಂದೇ ವಯಸ್ಸು. ಈಗ ನಮ್ಮ ಬುದ್ದಿ ಬಲೀತಿತ್ತು. ಮೊದಮೊದಲು ನಾನು ಬಿಡಾರದಾಗ ಅಡಗಿ ಕುಂಡರತಿದ್ದೆ. ಮುಂದ ನಂದೂ ಅವರದೂ ದೋಸ್ತಿ ಆಯಿತು. ದಿನಾಲೂ ನಾನೂ, ಪಾಂಡೂ, ಸೋಮು ಕತ್ತಿ ಮೇಯಿಸಾಕ ಕರ್ಕೊಂಡು ಹೋಗತಿದ್ದಿವಿ. ನಡು-ನಡುವೆ ಚಿನ್ನಿದಾಂಡೂ, ಕಣ್ಮುಚ್ಚಾಲೆ ಆಟ ಆಡತಿದ್ವಿ. ಈಗ ನಾನೂ-ಪಾಂಡೂ ಜೀವದ ಗೆಳೆಯರಾದ್ವಿ. ಒಬ್ಬರನ್ನ ಬಿಟ್ಟು ಮತ್ತೊಬ್ಬರು ಒಂದು ತುತ್ತೂ ತಿಂತಿರಲಿಲ್ಲ. ಅಪ್ಪ-ಮಾಮಾ ಕಲ್ಲು ಒಡಿತಿದ್ದರು. ಅವ್ವ ಮತ್ತು ಸರಿಮಾಮಿ ಕಲ್ಲ-ಚೂರಿನ ಸಾರಿಗೆ ಮಾಡತ್ತಿದ್ದರು. ಕತ್ತಿಗಳಿಗೆ ಕೆಲಸ ಇರದಿದ್ದರ ನಾವು ಮೇಯಿಸಿಕೊಂಡು ಬರತಿದ್ವಿ. + +ನಮ್ಮಪ್ಪನಿಗೆ ಚಿಗರಿ ಸಾಕೋ ಹುಚ್ಚ ಭಾಳ. ಕಾಡಿಗೆ ಹೋಗಿ ಚಿಗರಿ ಮರಿ ಹಿಡಕೊಂಡು ಬಂದು ಸಾಕತಿದ್ವಿ. ಸ್ವಲ್ಪ ದೊಡ್ಡ ಆದ ಮ್ಯಾಲ ಹಗ್ಗದ ಕುಣಿಕೆ ಮತ್ತು ಪಂಜರಾ ತಗೊಂಡು ಅಪ್ಪ-ಮಗ ಇಬ್ಬರೂ ಕಾಡಿಗೆ ಹೋಗತಿದ್ವಿ. ಸರಿಯಾದ ಜಾಗ ನೋಡಿ ಪಂಜರಾ ಇಡತಿದ್ವಿ. ಪಂಜರದ ಸುತ್ತಲೂ ನೇಣಿನ ಹಗ್ಗ ಹಾಸತಿದ್ವಿ. ನಾವು ಪೆÇದೆ ಹಿಂದೆ ಅಡಗಿ ಕುಂಡರತಿದ್ವಿ. ಪಂಜರದಾಗಿರೋ ಚಿಗರಿ ಮರಿ ಕೂಗತಿತ್ತು. ಅದರ ಕೂಗು ಕೇಳಿ ಕಾಡಿನಾಗಿರೋ ಉಳಿದ ಚಿಗರೆಗಳು ಬರುತಿದ್ದವು. ಆವಾಗ ನೇಣು ಹಗ್ಗದಾಗ ಕಾಲು ಅಥವಾ ತಲೀ ಸಿಕ್ಕಿ ಹಾಕ್ಕೋತಿತ್ತು. ಚಿಗರಿ ಬಿಡಿಸಿಕೊಳ್ಳಾಕ ಒದ್ದಾಡುತ್ತಿತ್ತು. ನಮ್ಮ ಧ್ಯಾನ ಎಲ್ಲ ಅಲ್ಲೇ. ನಾವು ಓಡಿ ಬರತಿದ್ವಿ. ಗಪ್ಪಂತ ಚಿಗರಿ ಹಿಡಿತಿದ್ವಿ. ಅದರ ನೇಣ ಹಗ್ಗ ಬಿಡಿಸಿ, ಅದರ ಕಾಲು ಕಟ್ಟಿ ಹಾಕತಿದ್ವಿ. ಒಮ್ಮೊಮ್ಮೆ ಏನೂ ಸಿಗತಿರಲಿಲ್ಲ. ಒಮ್ಮೊಮ್ಮೆ ಐದಾರ ಚಿಗರಿ ಸಿಗತಿದ್ದವು. ಅದನ್ನ ಹೊತಕೊಂಡು ಬಿಡಾರಕ್ಕ ಬರತಿದ್ವಿ. ರಾತ್ರಿ ಚಿಗರಿ ಮಟನ ಊಟ ಮಾಡತಿದ್ವಿ. ಅಪ್ಪ ಶೆರಿ ಕುಡಿದು ಬರ್ತಿದ್ದ. ರಾತ್ರಿ ಉಂಡ ಮುಗಿದ ಮ್ಯಾಲೆ ಅವ್ವನಿಗೆ ಬರೀ ಬಯ್ಯತಾನೇ ಇರ್ತಿದ್ದ. ಧೋಂಡು ಮಾಮಾ ಅಪ್ಪನ ಮ್ಯಾಲೆ ಗುರುಗುಡತ್ತಿದ್ದ. ಹಾಂಗೆಲ್ಲ ಬಯ್ಯಬ್ಯಾಡರಿ. ಬಾಯಿ ಬಿಗಿ ಹಿಡೀರಿ. ಇಲ್ಲದಿದ್ದರ ಹಲ್ಲು ಉದುರಿಸೇ ಬಿಡತೇನಿ. ಅಪ್ಪ ಕ್ಯಾರೆ ಮಾಡತಿರಲಿಲ್ಲ. ಸರಿಮಾಮಿ ಧೋಂಡು ಮಾಮಾನಿಗೆ ಸಮಾಧಾನ ಮಾಡತಿದ್ಲು, ಆವಾಗ ಜಗಳ ತಣ್ಣಗಾಗತಿತ್ತು. + +ಕಾಟಖೇಡ ಊರಾಗಿನ ಕೆಲಸ ಮುಗೀತು. ಕೆಲಸ ಹುಡುಕ್ತ-ಹುಡುಕ್ತ ನಮ್ಮ ಬಿಡಾರ ಧುಂದಿ ಗಾಟೋಡಿ ಅನ್ನೋ ಊರಿಗೆ ಬಂತು. ಭಾಳ ಊರು ಸುತ್ತಾಡಿದಿವಿ. ಆದರ ಎಲ್ಲೂ ಕೆಲಸ ಸಿಗಲಿಲ್ಲ. ಉಪವಾಸ ಸಾಯೋ ಪಾಳಿ ಬಂತು. ಪ್ರತಿದಿವಸ ಅಪ್ಪ ಮತ್ತು ಮಾಮಾ ಎದ್ದವರೇ, ಮಾರಿಸೈತ ತೊಳಿದೇನೆ ಕೆಲಸ ಹುಡಕಾಕ ಹೊರ ಬೀಳತಿದ್ದರು. ಸುತ್ತಮುತ್ತಲಿನ ಹಳ್ಳಿ-ಹಳ್ಳಿ ಸುತ್ತಾಡಿ, ರಾತ್ರಿ-ಅಪರಾತ್ರಿಗೆ ಬಿಡಾರಕ್ಕ ಬರತಿದ್ದರು. ಅದೂ ಖಾಲಿ ಕೈಯಿಂದಾನೇ. ಅವ್ವ, ಮುದುಕಿ, ಸರಿಮಾಮಿ, ನಾನು ಪಾಂಡೂ ದಿನಾಲೂ ಊರಾಗ ಭಿಕ್ಕಿ ಬೇಡಾಕ ಹೋಗತಿದ್ವಿ. ಮುಂದ ಮುಂದ ಮಂದಿ ಭಿಕ್ಷಾ ಹಾಕೋದೂ ಬಿಟ್ಟರು. ಹಾಂಗ ಅರ್ಧ ಹೊಟ್ಟಿ ಉಪಾಸ ಇದ್ದ ದಿನಾ ಕಳೀಬೇಕಾಗತಿತ್ತು. ಏನ ಮಾಡಬೇಕು ಅನ್ನೋದ ಗೊತ್ತಾಗತ್ತಿರಲಿಲ್ಲ. ಬೇಕಾದ್ದ ಕೆಲಸ ಮಾಡಾಕೂ ನಾವು ತಯಾರಿದ್ದಿವಿ. ಆದರ ಕೆಲಸ ಮಾತ್ರ ಸಿಗತಿರಲಿಲ್ಲ. ‘ಬೇಲದಾರರೂ ಕಳ್ಳರಿದ್ದಾಂಗ, ಯಾರೂ ಅವರಿಗೆ ಕೆಲ್ಸ ಕೊಡಬ್ಯಾಡರಿ’ ಅಂತ ಮಂದಿ ಮಾತಾಡಿ ಕೊಳ್ಳತಿದ್ದರು. + +ನಮ್ಮ ಬಿಡಾರದ ಆಚೆಗೆ ಕಬ್ಬಿನ ಹೊಲದ ಹತ್ತರ ಹತ್ತು-ಹನ್ನೆರಡು ಲಮಾಣಿಗರ ಗುಡಿಸಲು ಇತ್ತು. ಅವರು ತಮ್ಮ ತಾಂಡೆ ಬಿಟ್ಟು ಇಲ್ಲಿ ಕಬ್ಬು ಕಡಿಯಾಕ ಬಂದಿದ್ದರು. ಲಮಾಣಿಗರಿಗೂ-ಧೋಂಡಿ ಮಾಮಾನಿಗೂ ಗುರುತು-ಪರಿಚಯ ಆಯಿತು. ಅವರ ನಂಬಿಗೆ ಮ್ಯಾಲಿಂದ ಅಪ್ಪ ಮತ್ತು ಮಾಮಾನಿಗೆ ಕಬ್ಬು ಕಟಾವು ಮಾಡೋ ಕೆಲಸ ಸಿಗ್ತು. ನಮ್ಮ ಬಿಡಾರಾನೂ ಅವರ ಗುಡಿಸಲು ಹತ್ತಿರಾನೇ ಹಾಕಿದ್ವಿ. ಲಮಾಣಿಗಳ ಸಂಗಡ ಅಪ್ಪ-ಧೋಂಡಿ ಮಾಮಾ, ಅವ್ವ-ಸರಿಮಾಮಿ ನಸುಕಿನ್ಯಾಗ ಎದ್ದು ಕೆಲಸ ಶುರು ಮಾಡತಿದ್ದರು. ಗಂಡಸರು ಕಬ್ಬು ಕಡಿತಿದ್ದರು, ಹೆಂಗಸರು ಕಬ್ಬು ಸವರುತ್ತಿದ್ದರು. ಟ್ರಕ್ ಬಂದ ನಿಂತ ಮ್ಯಾಲೆ, ಗಂಡಸರು ಕಬ್ಬಿನ ಹೊರೆ ಕಟ್ಟಿ ಅದರ ಮ್ಯಾಲೆ ಹೇರತಿದ್ದರು. ಟ್ರಕ್ ಹ್ವಾದ ಮ್ಯಾಲೆ ಮತ್ತ ಕಬ್ಬು ಕಡಿಯೋದು ಶುರು. ಬಿಸಿಲು ನೆತ್ತಿಗೆ ಬಂದ ಮ್ಯಾಲೆ ಹೆಂಗಸರು ಬಿಡಾರಕ್ಕ ಬಂದು, ಮೂರು ಕಲ್ಲಿನ ಒಲಿ ಮ್ಯಾಲೆ ರೊಟ್ಟಿ ಮಾಡತ್ತಿದ್ದರು. ಮುಂದೆ ಗಂಡಸರು ಊಟಕ್ಕ ಬರ್ತಿದ್ದರು. ಎಲ್ಲಾರೂ ಬಕ್‍ಬಕಾ ತಿಂತಿದ್ದರು. ಕೈ ತೊಳಕೊಂಡಿದ್ದೇ ತಡ, ಮತ್ತ ಕೆಲಸ ಶುರು. ಸಣ್ಣ-ಸಣ್ಣ ಹುಡುಗರು ಅಳುತ್ತಿದ್ದರು. ನಾವು ಆ ಹುಡುಗರನ್ನ ಆಡಸ್ತಿದ್ವಿ. ಆಟ ಆಡ್ತ-ಆಡ್ತ ಬಿಡಾರ ಮತ್ತ ಕತ್ತಿಗಳನ್ನ ಕಾಯತಿದ್ವಿ. ಎಲ್ಲಾರೂ ಸಾಯೋಮಟ ಕೆಲಸ ಮಾಡತಿದ್ದರು. ಬಿಸಿಲ ಕಡೆಗೂ ಖಬರೆ ಯಿರತಿರಲಿಲ್ಲ. ನೀರಡಿಕೆಯಾದರೂ ಖಬರಯಿರತಿರಲಿಲ್ಲ. ಹಗಲು ರಾತ್ರಿ ಬರೇ ಕೆಲಸ ಕೆಲಸ ಮತ್ತ ಕೆಲಸ. ಪ್ರತಿದಿನ ಸಂಜಿಗೆ ಅಪ್ಪ, ಧೋಂಡಿ ಮಾಮಾ, ಮತ್ತು ಲಮಾಣಿ ಮಂದಿ ಶೆರಿ ಕುಡಿದು-ಕುಡಿದು ಟೈಟ್ ಆಗತ್ತಿದ್ದರು. ರಾತ್ರಿಯಿಡೀ ಗಲಾಟೆಯೋ- ಗಲಾಟೆ. ಉಣಬೇಕು ಅನ್ನೋ ಖಬರೂ ಇರಲಿಲ್ಲ. + + + +ಹೋಳಿ ಹುಣ್ಣವಿ ಸನೇಕ ಬಂತು. ಎರಡು ವಾರ ಮೊದಲೇ ಲಮಾಣಿಗರ ಹಾಡು, ಕುಣಿತ, ಶೆರೆ ಕುಡಿಯೋದು, ಗದ್ದಲ ಹಾಕೋದು ನಡೆದಿತ್ತು. ಜೇಮಲ್ಯಾ ಲಮಾಣಿ ಹೋಳಿ ಹುಣ್ಣವಿ ದಿನ ಔತಣ ಹಾಕಾಂವ ಇದ್ದ. ಅಂವಾ ಹರಕಿ ಹೊತ್ತಿದ್ದ. ಏಳು ಪೋರಿಯರ ನಂತರ ಅವನಿಗೆ ಗಂಡಮಗಾ ಹುಟ್ಟಿದ್ದ. ಇದಕ್ಕ ನಮ್ಮ ಮಂದಿಯೊಳಗ ಧುಂಡ ಅಂತಾರೆ. ಎಲ್ಲಾರಿಗೂ ಮಟನ ಊಟ, ಮತ್ತು ದಾರೂ ಕುಡಿಸಬೇಕಾಗತದ. + +ಹೋಳಿ ಹುಣ್ಣವಿ ದಿನ ಬೆಳಕ ಹರೀತು. ಕಪ್ಪು ಎರಿ ಭೂಮ್ಯಾಗ ಖೀರ ತುಂಬಿದ ಒಂದು ದೊಡ್ಡ ಪಾತ್ರೆಯಿಟ್ಟರು. ನಾಲ್ಕೂ ಕಡೆ ಗೂಟ ಹುಗಿದರು. ಪಾತ್ರೆಯನ್ನು ಹಗ್ಗದಿಂದ ಗೂಟಕ್ಕ ಬಿಗಿದು ಕಟ್ಟಿದರು. ಕುಮಾರಿ ಪೋರಿಯರು ಕೈಯಾಗ ಬಡಿಗಿ ಹಿಡಕೊಂಡು, ಆ ಭಾಂಡೆದ ಸುತ್ತಲೂ ನಿಂತರು. ಅವರಿಗೆ ಗೆಹಳನಿ ಅಂತ ಕರೀತಾರೆ. ಹುಡುಗರು ಆ ಭಾಂಡೆ ಎತಕೊಂಡ ಹೋಗಬೇಕು. ಅವರಿಗೆ ಗೆರ್ಯಾ ಅಂತಾರೆ. ಗೆರ್ಯಾ ಮತ್ತು ಗೆಹಳನಿ ಶೆರಿ ಕುಡಿದು ಟೈಟ್ ಆಗಿರ್ತಾರೆ. ಗೆರ್ಯಾ ಹುಡುಗರು ಭಾಂಡೆ ಒಯ್ಯಾಕ ಮುಂದ ಬಂದರ ಸಾಕು ಗೆಹಳನಿ ಪೋರಿಯರು ಬಡಿಗಿ ತಗೊಂಡ ಬಡಿತ್ತಿದ್ದರು. ಗೆರ್ಯಾಗಳು ಗೆಹಳನಿಯವರಿಂದ ಹೊಡೆತ ತಿಂದು ಭಾಂಡೆ ಎತಕೊಂಡ ಹೋಗಬೇಕಾಗತದ. ಆದರ ಗೂಟಕ್ಕ ಬಿಗಿದ ಕಟ್ಟಿದ ಹಗ್ಗ ಮಾತ್ರ ಹರೀಬಾರದು. ಗೂಟ ಕಿತ್ತ ಹಾಕಿ ಭಾಂಡೆ ತಗೊಂಡ ಹೋಗಬೇಕು. ಒಂದು ವ್ಯಾಳೆ ಹರೀತು ಅಂದರ ಕೂಸುಗಳು ಸಾಯತಾವೆ – ಅಂತ ಅವರ ನಂಬಿಕಿ. ಸುತ್ತಲೂ ಮುದುಕರು ಮುದುಕಿಯರು ಹೆಂಗಸರು ನಿಂತು ತಮಾಷೆ ನೋಡತ್ತಿದ್ದರು. ಗೆರ್ಯಾ ಹಾಗೂ ಗೆಹಳನಿಯವರ ಹಾಡೂ ಶುರು ಇರತದ. ಅದಕ್ಕ ಲೇಂಗಿ ಅಂತಾರೆ. ಅವರ ಈ ರಿವಾಜು ನೋಡಾಕ ನಾವೂ ಹೋದವಿ. ಬಿಸಲ ಏರಿದ ಮ್ಯಾಲ ಗಂಡಸರು ಹೆಂಗಸರು, ಪೋರ ಪೋರಿಯರು ಮತ್ತ ದಾರೂ ಕುಡಿತಾರು. ಎಲ್ಲಾರೂ ದಾರೂ ಕುಡದು ಲೋಡ್ ಆಗ್ತಾರು. ಹಿಂಗ ಅವರ ಗದ್ದಲ ನಡೆದಿತ್ತು. ಅಷ್ಟರಾಗ ಝಾಮವ್ವ ಅನ್ನೋ ಒಬ್ಬಾಕಿಗೆ ದಾರೂ ತಲಿಗೇರಿತು. ಜೋಲಿ ಹೊಡಿಯಾಕ ಹತ್ತಿದ್ಲು. ಈ ಗದ್ದಲದಾಗ, ನೂಕಾಟ-ತಳ್ಳಾಟದಾಗ ಆಕಿ ಲಂಗದ ದಾರ ಹರೀತು. ಲಂಗ ಬಿಚ್ಚಿತು. ಆಕಿ ಬತ್ತಲೆಯಾಗಿಯೇ ಕೆಳಗ ಬಿದ್ಲು. ಆವಾಗ ಗೆರ್ಯಾಗಳು ಓಡಿ ಬಂದರು. ಆಕಿ ಮುಕಳಿ ಮ್ಯಾಲೆ ದಾರೂ ಸುರಿವಿದರು. ಇದನು ಗೆಹಳನಿಯರು ನೋಡಿದರು. ಅವರೆಲ್ಲ ಓಡಿ ಬಂದರು ಮತ್ತು ಝಾಮವ್ವ ಎತ್ತಕೊಂಡು ಜೋಪಡಿಗೆ ಒಯ್ದರು. ಅಷ್ಟರಾಗ ಗೆರ್ಯಾ ಹುಡುಗರು ಹಗ್ಗ ಹರಿದಾಂಗ ಖೀರ ಭಾಂಡೆ ಹೊತಕೊಂಡ ಹ್ವಾದರು… + +ಹೋಳಿ ಹುಣ್ಣವಿ ಮಾರನೇ ದಿನ ಧೂಳವಾಡಿ. ಆವತ್ತು ಒಬ್ಬರು ಮತ್ತೊಬ್ಬರ ಮ್ಯಾಲೆ ಕೆಸರು ಎರಚೋದು, ರಾಡ್ಯಾಗ ಮುಳುಗಿಸೋದು, ಮಾರಿಗೆ ಕಾಡಿಗೆ ಹಚ್ಚೋದು, ದಾರೂ ಕುಡಿಯೋದು. ಇದು ಮಧ್ಯಾಹ್ನದವರೆಗೆ ನಡೀತು. ಆಮ್ಯಾಲೆ ಎಲ್ಲಾರೂ ಜಳಕ ಮಾಡಿದರು. + +ಸಂಜೆಯಾದ ಮ್ಯಾಲೆ ನಾನೂ, ಪಾಂಡೂ, ಅಪ್ಪ ಮತ್ತು ಧೋಂಡು ಮಾಮಾ ಊರಾಗ ಹೋದಿವಿ. ನಾವು ನಾಲ್ಕೂ ಮಂದಿ ಕೂಡಿ ಒಂದು ಬಾಗಿಲ ಎದುರು ನಿಲ್ಲೋದು, ಅಪ್ಪ ಹಾಡು ಹೇಳತಿದ್ದ. ಮಾಮಾ ಮತ್ತು ನಾವು ಕುಣಿತಿದ್ವಿ. ಆವಾಗ ಆ ಮನಿಯವರು ನಮ್ಗ ಒಂದೆರಡು ರುಪಾಯಿ ಕೊಡುತ್ತಿದ್ದರು. ಹಿಂಗ ಹಾಡತ-ಕುಣೀತ ಎಲ್ಲರ ಕಡೆ ದುಡ್ಡು ಬೇಡತಿದ್ದಿವಿ. ಇದಕ್ಕ ನಮ್ಮ ಮಂದಿ ಪೋಸ್ ಬೇಡೋದು ಅಂತಾರೆ. ಕತ್ತಲೆಯಾಗೋ ಮಟಾ ನಮ್ಮ ಮಂದಿ ಪೋಸ್ ಬೇಡಿದರು. ಸುಮಾರು ಎರಡುನೂರು ರುಪಾಯಿ ಜಮಾ ಆಗಿರಬೇಕು. ರಾತ್ರಿಯಾದ ಮ್ಯಾಲೆ ಬಿಡಾರಕ್ಕ ಬಂದಿವಿ. ಆ ದುಡ್ಡಿಂದ ಅಪ್ಪ ಮತ್ತು ಮಾಮಾ ಶೆರಿ ಕುಡಿದರು ಮತ್ತು ಮಟನ್ ತಗೊಂಡ ಬಂದರು. ರಾತ್ರಿಯೆಲ್ಲ ದಾರೂ ಕುಡಿದು ಗದ್ದಲ ಹಾಕಿದರು. ಹಿಂಗ ಹೋಳಿ ಹುಣ್ಣವಿ ಮಾಡಿದ್ವಿ. + +ಬೆಳಕು ಹರೀದ ಬಳಿಕ ಎಲ್ಲರೂ ಕೆಲಸದಾಗ ಮುಳುಗಿದರು. + +***** + +ಲಮಾಣ್ಯಾರಾಗ ಒಬ್ಬ ಗಟ್ಟಿಮುಟ್ಟ ಹುಡುಗಯಿದ್ದ. ಅವ್ನ ಹೆಸರು ಧಾರ್ಯಾ. ಅಂವಾ ಏನೂ ಕೆಲಸ ಮಾಡತಿರಲಿಲ್ಲ. ರಾತ್ರಿ ಹೊತ್ತಿನಾಗ ಸಣ್ಣಪುಟ್ಟ ಕಳ್ಳತನ ಮಾಡಿ, ತಂದ ಮಾಲು ಕಟುಕನಿಗೆ ಮಾರುತ್ತಿದ್ದ. ಕಟುಕ ಅರ್ಧ ದುಡ್ಡು ಕೊಡತಿದ್ದ. ಅವನ ಸಹವಾಸ ಮಾಡಿ ನಾನೂ ಮತ್ತು ಪಾಂಡೂ ಕಳ್ಳತನ ಮಾಡಾಕ ಹೋಗತಿದ್ವಿ. ಹತ್ತಿ, ಭಾಂಡೆ, ಕೋಳಿ, ಆಡು-ಕದ್ದಕೊಂಡು ಬರತಿದ್ವಿ. ಭಾಂಡೆ ಮತ್ತು ಹತ್ತಿ ಕಟುಕನ ಮೂಲಕ ಮಾರುತ್ತಿದ್ವಿ. ಆಡು, ಕೋಳಿ ಬಿಡಾರದಾಗ ಕೊಯ್ದು ತಿಂತಿದ್ವಿ. ಕೆಲವರು ಇದಕ್ಕ ವಿರೋಧ ಮಾಡಿದರು. ಅಪ್ಪ, ಧೋಂಡು ಮಾಮಾ, ಧಾರ್ಯಾನ ಅಪ್ಪ ಯಾವ ತಕರಾರೂ ಮಾಡಲಿಲ್ಲ. ಯಾಕಂದರ ಪುಗಸಟ್ಟೆ ತಿನ್ನಾಕ ಸಿಗತಿತ್ತು. + +ಒಮ್ಮೆ ಬೆಳ್ದಿಂಗಳು ಬಿದ್ದಾಗ ನಾನು, ಪಾಂಡೂ, ಧಾರ್ಯಾ ಹೊಂಟವಿ. ನಡೀತ-ನಡೀತ ಒಂದು ಹೊಲಕ ಬಂದಿವಿ. ಹೊಲದಾದ ಹತ್ತಿ ಬೊಂಡೆ ಒಡೆದು ಹತ್ತಿ ಹೊರ ಬಿದ್ದಿತ್ತು. ಅರಿವಿ ಹಾಸಿದಿವಿ, ಮತ್ತು ಹತ್ತಿ ಕೀಳಾಕ ಶುರು ಮಾಡಿದ್ವಿ. ಕೀಳಾತ ಕೀಳಾತ ಮೂರು ಮಂದಿ ಮೂರು ಗಂಟ ತಯಾರಾತು. ಇನ್ನೇನ ಗಂಟು ಹೊತಕೋಬೇಕು ಅನ್ನೋದರಾಗ, ತೊಗರಿ ಹೊಲದಾಗಿಂದ ಯಾರೊ ಬಂದು ಗಪ್ಪಂತ ಧಾರ್ಯಾನ್ನ ಅಪ್ಪಿಕೊಂಡ. ನಾನು, ಪಾಂಡೂ ಭೂತ ಬಂತಂತ ಅನಕೊಂಡ್ವಿ. ನಾನು ಮತ್ತು ಪಾಂಡೂ ಠಣ್ಣಂತ ಜಿಗಿದು, ಭರ್ರಂತ ಓಡಿದ್ವಿ. ಹೊಲದಿಂದ ದೂರ ಬಂದು ನಿಂತಕೊಂಡಿವಿ. ನಾನು ತಿರುಗಿ ಬಂದೆ. ಪಾಂಡೂ ಓಡಿ ಹ್ವಾದ. ಬಂದ ನೋಡಿದರ ಆ ಮನಶ್ಯಾ ಮತ್ತು ಧಾರ್ಯಾನ ನಡುವೆ ಝಟಾಪಟಿ ನಡೆದಿತ್ತು. ಇಬ್ಬರೂ ಒಬ್ಬರಿಗಿಂತ ಒಬ್ಬರು ಬಹಾದ್ದೂರರೇ. ಅಂವಾ ನಾನು ಗೌಡ ಅದೇನಿ, ನಿಮ್ಮನ್ನ ಬಿಡಾಂಗಿಲ್ಲ ಅಂತ ಅಂತಿದ್ದ. ಆಗ ನನಗ ಅಂವಾ ಗೌಡ ಅದಾನು, ಭೂತ ಅಲ್ಲ ಅಂತ ಗೊತ್ತಾತು. ಧಾರ್ಯಾ ಬಿಡಿಸಿಕೊಂಡು ಓಡಿ ಹೋಗಾಕ ನೋಡತಿದ್ದ. ಆವಾಗ ಗೌಡ, ಅವನನ್ನು ಕೆಳಗ ಕೆಡವಿ, ಅವನ ಎದೀ ಮ್ಯಾಲೆ ಕುಂತ. ಮುಖಾ-ಮಾರಿ ನೋಡದೆ ಗುದ್ದಿದ. ನಾನು ಗೌಡಗೆ ಒದ್ದೆ. ಅವನೂ ತಿರುಗಿ ನನ್ನ ಮುಕುಳಿ ಮ್ಯಾಲೆ ಒದ್ದ. ನಾನು ಗಪ್ಪಂತ ಬಿದ್ದೆ. ಚಲೋ ಹೊಡೆತ ಬಿದ್ದಿತ್ತು. ನನಗ ಗೌಡ ಮ್ಯಾಲೆ ಭಾಳ ಸಿಟ್ಟು ಬಂತು. ತಲೀ ಮ್ಯಾಲೆ ಕಲ್ಲು ಹಾಕಬೇಕಂತ ಕಲ್ಲು ಹುಡುಕಿದೆ. ನೋಡಿದರ ಎಲ್ಲ ಕಪ್ಪು ಎರಿನೆಲಾ, ಕಲ್ಲು ಎಲ್ಲಿ ಸಿಗಬೇಕು. ಅಷ್ಟರಾಗ ಸಿಂಧೂರ ಹಚ್ಚಿದ ಕಲ್ಲು ಕಾಣಿಸಿತು. ಅದು ದೇವರ ಕಲ್ಲು ಇರಬೇಕು. ನಾನು ಹಿಂದ ಮುಂದ ವಿಚಾರ ಮಾಡಲಿಲ್ಲ. ಆ ದೇವರ ಕಲ್ಲು ಎತ್ತಿ ಗೌಡನ ತಲೀ ಮ್ಯಾಲೆ ಹಾಕಿದೆ. ಆಗ ಅಂವಾ ಜೋರಾಗಿ ಕಿರುಚಿದ. ಮೈಯೆಲ್ಲ ರಗುತದಿಂದ ತೊಯ್ದಿತ್ತು. ಎಚ್ಚರ ತಪ್ಪಿ ಕೆಳಗ ಬಿದ್ದ. ಆವಾಗ ಧಾರ್ಯಾ ಪಾರಾದ. ನಾವಿಬ್ಬರೂ ಓಡಿ-ಓಡಿ ಬಿಡಾರಕ್ಕ ಬಂದಿವಿ. ಕೌಂದಿಯೊಳಗೆ ಹೊಕ್ಕಿದ್ವಿ. ಗುಜಾ, ಗೋಬರ್ಯಾ, ಜೇಮಲ್ಯಾ, ಧೇನೂ, ಪೋಗೂ, ಗೇಮು – ಹಿಂಗ ಲಮಾಣಿಗಳು ಡೋಲು ಬಾರಿಸ್ತ ಭಜನೀ ಮಾಡಾಕ ಹತ್ತಿದ್ದರು. ಸ್ವಲ್ಪ ಹೊತ್ತ ಆದಮ್ಯಾಲೆ ಭಜನೀ ಮುಗೀತು. ಇನ್ನ ಬೆಳಕು ಹರೀತಂದರ ಏನ ಗತಿ ಅಂಬೋ ಚಿಂತೆಯಿಂದ ನಮಗ ನಿದ್ದಿನೇ ಹತ್ತಲಿಲ್ಲ. ಹೊಲದಾಗ ನಡೆದ ಈ ಹಗರಣ ನಾವು ಯಾರಿಗೂ ಹೇಳಲಿಲ್ಲ. + +ನಸುಕಿನ ಹೊತ್ತಿಗೆ ಪೋಲೀಸರ ಗಾಡಿ ನಮ್ಮ ಬಿಡಾರಗಳ ಎದುರಿಗೆ ಬಂತು. ಪೋಲೀಸರ ಜೊತೆಗೆ ಇಡೀ ಊರೇ ಬಂದಿತ್ತು. ಎಲ್ಲ ಕಡೆ ಗದ್ದಲವೋ ಗದ್ದಲ. ಹೆದರಿಕೆಯಿಂದ ನಮ್ಮ ಎದಿ ಪಕ ಪಕ ಅಂತ ಹಾರುತ್ತಿತ್ತು. ಏನು ಮಾಡಬೇಕು ಅನ್ನೋದೆ ಗೊತ್ತಾಗಲಿಲ್ಲ. ಪೋಲೀಸರು ಬಿಡಾರದೊಳಗೆ ಹೋಗಿ ಎಲ್ಲರನ್ನು ಕೌಂದಿಯಿಂದ ಹೊರಗೆ ಎಳೆದು ತಂದರು. ಕೇಳಿದರು, ‘‘ಖರೆ ಖರೆ ಹೇಳರಿ, ರಾತ್ರಿ ಗೌಡರ ಹೊಲಕ್ಕ ಯಾರ-ಯಾರ ಕಳ್ಳತನ ಮಾಡಾಕ ಹೋಗಿದ್ದಿರಿ, ಗೌಡರ ತಲೀ ಮ್ಯಾಲೆ ಕಲ್ಲು ಹಾಕಿದವರು ಯಾರು? ನಮ್ಗ ಪುರಾವೆ ಸಹಿತ ಖರೇ ಮಾಹಿತಿ ಸಿಕ್ಕೇದ. ಅವರೊಳಗ ನಿಮ್ಮ ಪೈಕಿ ಜನರೇ ಅದಾರು. ಯಾರ-ಯಾರ ಇದ್ದರು, ಅವರ ಹೆಸರು ಹೇಳರಿ. ನೀವು ಹೇಳದಿದ್ದರೂ ಗೌಡರು ದವಾಖಾನೆದಾಗ ಅದಾರು, ಅವರನ್ನ ಕರ್ಕೊಂಡ ಬರತೇವಿ. ಅವರು ಗುರತಾ ಹಿಡಿತಾರು, ಇಲ್ಲಂದರ ನಿಮ್ಮ ಎಲ್ಲರನ್ನೂ ಬಡಿದು ಜೇಲಿನ್ಯಾಗ ಹಾಕತೇವಿ. ಹೆಸರ ಹೇಳರಿ. ಅಂಜಬ್ಯಾಡರಿ ಖರೆ ಹೆಸರ ಹೇಳಿದಿರಿ ಅಂದರ ನಾವು ನಿಮಗ ಏನೂ ಮಾಡಾಂಗಿಲ್ಲ. ಬರೇ ಕಾಗದದ ಮ್ಯಾಲೆ ಸಹಿ ಮಾಡಿಸಕೊಂಡು ಬಿಟ್ಟ ಬಿಡ್ತೇವಿ.’’ + +ಅಪ್ಪ, ಧೋಂಡಿ ಮಾಮಾ ಮತ್ತು ಲಮಾಣಿಗಳು ಪೋಲೀಸರ ಕಾಲಿಗೆ ಬಿದ್ದರು. ‘‘ಸರಕಾರ„„ ಧಣ್ಯಾರ, ನಾವು ಕಳ್ಳತನ ಮಾಡಿಲ್ಲರಿ. ಬೇಕಾದರ ಯಾವ ದ್ಯಾವರ ಮುಂದೂ ಕರ್ಕೊಂಡ ಹೋಗರಿ. ನಮ್ಗ ಏನೂ ಗೊತ್ತಿಲ್ಲರಿ.’’ ಸಾಯೇಬ ಸೊಂಟದ ಬೆಲ್ಟ ಬಿಚ್ಚಿದ. ಧೋಂಡು ಮಾಮಾನ ಮುಕಳಿಗೆ ಎರಡು ಜಡಿದ. ಲಮಾಣ್ಯಾರ ಮುಕುಳಿ ಮ್ಯಾಲೂ ಒದ್ದರು. ಅವರು ಜೋರ-ಜೋರಾಗಿ ಬೊಬ್ಬಿ ಹೊಡೀತ ಕಾಲಿಗೆ ಬಿದ್ದರು. ಮುಂದ ಅಪ್ಪನ ಬೆನ್ನಿಗೂ ಜೋರಾಗಿ ಗುದ್ದಿದರು. ಅಪ್ಪ ತಲಿಗೆ ಚಕ್ಕರ ಬಂದ ಬಿದ್ದ. ಮತ್ತ ಹೊಯ್ಕೊಳ್ಯಾಕ ಹತ್ತಿದ. ‘‘ಅವ್ವಾ ಸತ್ತೆ, ನಂಗ ಹೊಡಿಬ್ಯಾಡರಿ. ಸಾಯೇಬರ ಬ್ಯಾಡರಿಯಪ್ಪ. ಎಲ್ಲ ಖರೆ-ಖರೆ ಹೇಳತೇನಿ. ಜರಾ ನಿಂದರ್ರಿ. ನಂಗೆಲ್ಲ ಗೊತೈತಿ’’ ಅಪ್ಪ ಬೆನ್ನು ತಿಕ್ಕುತ್ತ ಎದ್ದು ನಿಂತ. ಧಾರ್ಯಾ ಲಮಾಣಿಯ ಹೆಸರು ಹೇಳಿದ. ಆವಾಗ ಪೋಲೀಸರು ಧಾರ್ಯಾನನ್ನು ಹಿಡಿದರು. ದಬಾದಬಾ ಅಂತ ಬಡಿದರು. ಅಂವಾ ಒಪ್ಪಿಕೊಂಡ. ನನ್ನ ಮತ್ತ ಪಾಂಡೂನ ಹೆಸರೂ ಹೇಳಿದ. ಪಾಂಡೂ ಸಣ್ಣಂವ ಇದ್ದ. ಪೋಲೀಸರು ಅವನನ್ನು ಬಿಟ್ಟರು. ನನಗ ಹತ್ತು-ಹನ್ನೊಂದು ವರ್ಷ ಆಗಿರಬೇಕು. ನನಗ ಹಾಗೂ ಧಾರ್ಯಾನಿಗ ಪೋಲೀಸರು ಬೇಡಿ ಹಾಕಿದರು. ಮತ್ತು ಗಾಡ್ಯಾಗ ಕುಂಡರಿಸಿದರು. ನಾನು ಬೊಬ್ಬೆ ಹೊಡಿಯಾಕ ಶುರು ಮಾಡಿದೆ. ಪೋಲೀಸ ರಪ್ಪಂತ ಹೊಡೆದ. ನಾನು ಗಪ್ಪಗಾರ್ ಆದೆ. ಹೊರಗ ನೋಡಿದೆ. ಅವ್ವ ನನಗಾಗಿ ತಲೀ-ತಲೀ ಬಡಕೋತಿದ್ಲು. ಕೂದಲಾ ಕಿತ್ತಕೋತಿದ್ಲು. ಅಪ್ಪ ಪೋಲೀಸರಿಗೆ ಹೇಳಿದ, ‘‘ಸಾಯೇಬರ„„, ನನ್ನ ಕೂಸು ಸಣ್ಣದೈತರಿ. ಎಳೆ ಕೂಸು ಅಂಜೀ ಸತ್ತ ಹೋಗಬೌದು. ಅವನನ್ನ ಬಿಡರಿಯಪ್ಪ. ಬೇಕಾದರ ನನ್ನ ಎಳಕೊಂಡ ಹೋಗರಿ, ಆದರ ಅವನ್ನ ಬಿಡರಿ’’ ಪೋಲೀಸರ ಯಾಕ ಅವ್ನ ಮಾತಿಗೆ ಕಿಮ್ಮತ್ತ ಕೊಡ್ತಾರು, ಮತ್ತ ಯಾಕ ಬಿಡ್ತಾರು. ಪೋಲೀಸರು ತಮ್ಮ ಮಾತು ಕೇಳಾಂಗಿಲ್ಲ ಅನ್ನೋದು ಅಪ್ಪ ಮತ್ತು ಮಾಮಾನ ಧ್ಯಾನದಾಗ ಬಂತು. ಹಿಂಗಾಗಿ ಅಪ್ಪ ಊರ ಮಂದಿ ಕಾಲಿಗೆ ಬಿದ್ದ. ನನ್ನ ಕೂಸಿನ್ನ ಬಿಡಸರಿ ತಾಯಿ-ತಂದೆ ಅಂದ. + +ಅಪ್ಪ-ಅವ್ವನ ಆಕ್ರಂದನ ಕೇಳಿ ಒಬ್ಬ ಮನಶ್ಯಾ ಮುಂದೆ ಬಂದ. ಅವ್ನಿಗೆ ನಮ್ಮ ಮ್ಯಾಲೆ ದಯೆ ಬಂದಿರಬೇಕು. ಅಂವಾ ಪೋಲೀಸರಿಗೆ ಅಂದ ‘‘ಬಚ್ಚಾ ಬಹುತ್ ಹೀ ಛೋಟಾ ಹೈ, ಹುಡುಗ ಅಂಜಿ ಸಾಯಬೌದು. ಅವ್ನಿಗೆ ಬಿಡರಿ. ನಾನು ಬೇಕಾದರ ನಾಳೆ ಅವನನ್ನ ಟೇಶನಕ್ಕ ಕರ್ಕೊಂಡ ಬರ್ತೇನಿ’’ ಈ ಮಾತು ಕೇಳಿ ಊರ ಮಂದಿಯೆಲ್ಲ ಅವನ ಮ್ಯಾಲೆ ಏರಿ ಬಂದರು. ಕೆಲವರು ಅವ್ನಿಗೆ ಹೇಳಿದರು, ‘‘ಈ ಹಲ್ಕಟ್ ಜಾತಿ ಜವಾಬ್ದಾರಿ ನೀ ಯಾಕ ತಗೋತಿ? ಈ ಬೇಲದಾರ ಅಲೆಮಾರಿ ಜನರನ್ನ ನಂಬೋ ಹಾಂಗಿಲ್ಲ. ಇವತ್ತ ಇಲ್ಲಿ ಇದ್ದರ, ನಾಳೆ ಮತ್ತೆಲ್ಲೋ ಇರ್ತಾರೆ. ಅವರು ಓಡಿ ಹೋದರಂತೂ ನೀನ ಟೇಶನಕ್ಕ ಎಡತಾಕಾಕ ಬೇಕು. ಈ ಅಲೆಮಾರಿ ಮಂದಿ ಹನ್ನೆರಡು ಊರೆಲ್ಲ ತಿರುಗಾಡಿ ಕಳ್ಳತನ ಮಾಡತಾರು. ಅವರ ಮ್ಯಾಲೆ ದಯಾ ತೋರಿಸಬಾರ್ದು. ದಯೆ ತೋರಿಸಿದವರ ಜೀವಾನ್ನೇ ತಗೋತಾರು. ಇವರೇನು ಮನಶ್ಯಾರ ಅಂದಕೊಂಡಿಯೇನು, ಪಕ್ಕಾ ಪ್ರಾಣಿಗಳು ಅವರು. ಮಾರಾಯಾ, ಅವರ ಜವಾಬ್ದಾರಿ ತಗೋಬ್ಯಾಡ. ಗೌಡರ ವಿರುದ್ಧ ಹೋಗಬ್ಯಾಡ. ನೀನು ಊರಾಗ ಇರಬೇಕಂತ ಮಾಡಿಯೋ ಇಲ್ಲೋ?’’ ಆ ಮನಶ್ಯಾನ ಹೆಂಡತಿನೂ ಬೈದ್ಲು. ಆವಾಗ ಅಂವಾ ಪೋಲೀಸರಿಗೆ ಅಂದ, ‘‘ಸಾಯೇಬರ, ನಮ್ಮೂರ ಮಂದಿ ಹೇಳಿದ್ದೂ ಖರೆ ಅದ. ನೀವೀಗ ಇವರನ್ನು ಹಿಡಕೊಂಡ ಹೋಗರಿ. ಇಲ್ಲಾ ಬಿಡರಿ. ನನಗೇನ ಸಂಬಂಧಯಿಲ್ಲ. ನಿಮ್ಮ ಮನಸಿಗೆ ಬಂದಾಂಗ ಮಾಡರಿ. ನಾನು ಇವರ ನಡುವೆ ಬೀಳೊದಿಲ್ಲ’’. ಆ ಮನಶ್ಯಾ ತಲೀ ಕೆಳಗ ಹಾಕಿ ಊರ ಕಡೆ ಸರಸರ ಹೊಂಟ. ಅಪ್ಪ ಅವ್ನ ಕಾಲಿಗೆ ಬಿದ್ದ, ಕೈ ಮುಗಿದ, ಅವನ ಕೈ ಹಿಡಕೊಂಡ. ನನ್ನ ಮಗನನ್ನ ಪಾರ ಮಾಡರಿಯಪ್ಪ ಅಂತ ಗೋಗರೆದ. ಆದರ ಆ ಮನಶ್ಯಾ ಬಾಯಿ ತೆರೀಲಿಲ್ಲ. ಅಪ್ಪನ ಕೈ ಝಾಡಿಸಿ, ಬಿಡಿಸಿಕೊಂಡು ಊರ ಹಾದಿ ಹಿಡಿದ. + +ಆಮ್ಯಾಲೆ ಪೋಲೀಸರು ಬೇಲದಾರರಿಗೆ ಬೆದರಿಕೆ ಹಾಕಿದರು, ‘‘ನೀವು ಇವತ್ತೇ ತಾಲೂಕಿನ ಸೀಮೆ ಬಿಟ್ಟು ಹೋಗಬೇಕು. ಇಲ್ಲದಿದ್ದರ ಉಲ್ಟಾ ತೂಗುಹಾಕಿ ಮೆಣಸಿನ ಖಾರ ಮುಕಳ್ಯಾಗ ತುರಕತೇವಿ’’. ಮುಂದ ಪೋಲೀಸರು ಗಾಡಿಯೊಳಗ ಹೋಗಿ ಕುಂತರು. ನಾನು ಮತ್ತು ಧಾರ್ಯಾ ಇಬ್ಬರೂ ಮೋಟಾರ ಏರಿದ್ವಿ. ಗಾಡಿ ಶುರು ಆದಾಗ ಅಪ್ಪನ ಬೊಬ್ಬೆ ಮತ್ತ ಜೋರಾಯಿತು. ಅವ್ವ ಕೂದಲಾ ಕಿತ್ತಕೋತಿದ್ಲು, ಧೋಂಡು ಮಾಮಾ, ಲಮಣ್ಯಾರು ಅಳಾಕ ಹತ್ತಿದ್ದರು. + +ಗಾಡಿ ಓಡತ್ತಿತ್ತು. ಸ್ವಲ್ಪ ಹೊತ್ತಾದ ಮ್ಯಾಲೆ ಎಲ್ಲರೂ ಕಣ್ಮರೆಯಾದರು. ನಡು ಮಧ್ಯಾಹ್ನದ ಹೊತ್ತಾಗಿತ್ತು. ದಾರಿಯಲ್ಲಿ ಒಬ್ಬ ನರಮನಶ್ಯಾನೂ ಕಾಣಲಿಲ್ಲ. ನನ್ನ ಎದಿ ದಡ ದಡ ಅಂತ ಹಾರತಿತ್ತು. ಧಾರ್ಯಾ ಪೋಲೀಸರ ಹತ್ತರ ಒಂದು ಬೀಡಿ ಇಸಕೊಂಡು ಸೇದಾಕ ಹತ್ತಿದ. ಗಾಡಿ ಈಗ ಒಂದು ಕಚ್ಚಾ ರಸ್ತೆಗೆ ಹೋಗಿ ನಿಂತಿತು. ಹೊರಗ ಇಣುಕಿ ನೋಡಿದರ ಒಂದು ಚಕ್ಕಡಿ ನಿಂತಿತ್ತು. ಅದರಾಗ ಗೌಡ ಮತ್ತು ಅವನ ಮಂದಿಯಿತ್ತು. ಗೌಡ ಗಟ್ಟಿಮುಟ್ಟಾದ ಆಸಾಮಿ, ಹುರಿಮೀಸಿ ತಲೆಗೆ ಬ್ಯಾಂಡೇಜ ಕಟ್ಟಿತ್ತು. ಗೌಡ ಮತ್ತು ನಾಲ್ಕು ಮಂದಿ ಗಾಡಿಯಿಂದ ಕೆಳಗ ಇಳಿದರು. ಪೋಲೀಸರು ಕೆಳಗೆ ಇಳಿದು ಬಂದರು. ಎಲ್ಲಾರೂ ಸೇರಿ ದೂರ ಹೋಗಿ ನಿಂತರು. ಎಷ್ಟೋ ಹೊತ್ತು ಗುಸುಗುಸು ಮಾತಾಡಿದರು. ಪೋಲೀಸರು ಅಲ್ಲೇ ಗಿಡದ ಕೆಳಗೆ ಕುಂತರು. ಗೌಡರ ಜೋಡಿ ಮೂರ್ನಾಕ ಮಂದಿ ಗಾಡಿ ಹಂತ್ಯಾಕ ಬಂದರು. ನನ್ನ ಮತ್ತು ಧಾರ್ಯಾನಿಗೆ ಕೆಳಗಿಳಿ ಅಂದರು. ಆ ಮಂದಿ ಎಲ್ಲಾರೂ ಸೇರಿ ನಮ್ಮನ್ನ ಹಿಡಿದು ಒದಿಲಿಕ್ಕ ಶುರು ಮಾಡಿದರು. ಧಾರ್ಯಾ ಬೊಬ್ಬೆ ಹೊಡೆಯಾಕ ಹತ್ತಿದ. ಬಿಡಿಸಬರ್ರಿ„„ ಅಂತ ಪೋಲೀಸರಿಗೆ ಗೋಗರೆದು ಬೇಡಿಕೊಂಡ. ನನ್ನ ಕೆನ್ನೆಗೂ ನಾಲ್ಕಾರು ಹೊಡೆತ ಹಾಕಿದರು. ನಾನು ಉಚ್ಚೆ ಹೊಯ್ದಬಿಟ್ಟೆ. ಅದನ್ನು ನೋಡಿ ನನ್ನ ಬಿಟ್ಟರು. ಮತ್ತ ಧಾರ್ಯಾನ್ನ ಹಿಡಿದು ಬಡಿಯಾಕ ಹತ್ತಿದರು. ಒಬ್ಬಾಂವ ಧಾರ್ಯಾನ ತರಡ ಮ್ಯಾಲೆ ಜೋರಾಗಿ ಒದ್ದ. ಧಾರ್ಯಾ ಕುಸಿದು ಗಕ್ಕಂತ ಕೆಳಗ ಬಿದ್ದ. ಧಾರ್ಯಾ ಕಣ್ಣ ಬೆಳ್ಳಗ ಮಾಡಿದ. ಕೈಕಾಲು ಝಾಡಿಸಾಕ ಹತ್ತಿದ. ಅವನ ಬಾಯಿಂದ ನೊರಿ ಬಂತು. ಬಾಯಿಂದ ಒಂದ ಶಬುದ ಹೊರಗ ಬರಲಿಲ್ಲ. ಮಂದಿ ಬಡಿಯೋದು ನಿಲ್ಲಿಸಿದರು. ಇದು ಪೋಲೀಸರ ಗಮನಕ್ಕ ಬಂತು. ಅವರು ಓಡಿ ಬಂದರು. ಒಬ್ಬ ಪೋಲೀಸ ಜೀಪಿನ್ಯಾಗ ಇದ್ದ ನೀರ ತಗೊಂಡ ಬಂದ. ಧಾರ್ಯಾನ ಬಾಯಾಗ ನೀರು ಸುರಿದ. ಮಾರಿಗೆ ನೀರು ಸಿಂಪಡಿಸಿದ. ಆವಾಗ ಧಾರ್ಯಾ ಉಸಿರಾಡಾಕ ಹತ್ತಿದ. ಸ್ವಲ್ಪ ಹೊತ್ತಾದ ಮ್ಯಾಲೆ ಕಣ್ಣಬಿಟ್ಟ. ಎದ್ದು ಕುಂತ. ಪೋಲೀಸರಿಗೂ ಸಿಟ್ಟು ಬಂದು, ಆ ಮಂದಿಗೆ ಹೇಳಿದರು, ‘‘ವ್ಹಾರೆವ್ಹಾ! ಹಿಂಗ ತರಡ ಬೀಜದ ಮ್ಯಾಲೆ ಹೊಡಿ ಅಂತ ಹೇಳಿದ್ವಿ ಏನು? ನಾವು ನೌಕರಿ ಕಳಕೊಳ್ಳೊ ಪಾಳಿನೇ ಬರ್ತಿತ್ತು.’’ ಆಮ್ಯಾಲೆ ಪೋಲೀಸರು ನನ್ನ ಮತ್ತು ಧಾರ್ಯಾನನ್ನ ಕರ್ಕೊಂಡು ಮೋಟಾರು ಏರಿದರು. ಮೋಟಾರು ಹೊಂಟಿತು. ಒಬ್ಬ ಪೋಲೀಸ ಧಾರ್ಯಾನಿಗೆ ಬೀಡಿ ಕೊಟ್ಟ. ಧಾರ್ಯಾ ಬೀಡಿ ಸೇದಾಕ ಹತ್ತಿದ. ನಾನು ಈ ಹಿಂದ ಒಂದೆರಡು ಸಲ ಅಪ್ಪನ ಜೋಡಿ ಪೋಲೀಸ ಠಾಣಿಕ್ಕ ಬಂದಿದ್ದೆ. ಆದರ ಹಿಂಗ ಮಾತ್ರ ಎಂದೂ ಆಗಿರಲಿಲ್ಲ. ಮೋಟಾರು ಪೋಲೀಸ ಠಾಣೆ ಮುಂದೆ ಬಂದು ನಿಂತಿತು. ನಮ್ಮಿಬ್ಬರನ್ನು ಕೆಳಗ ಇಳಿಸಿ, ಒಂದು ಖೋಲಿಯೊಳಗೆ ಕೂಡಿ ಹಾಕಿದರು. + +ಸ್ವಲ್ಪ ಹೊತ್ತಾದ ಮ್ಯಾಲೆ ನನ್ನನ್ನು ಒಬ್ಬ ಸಾಹೇಬರ ಮುಂದೊಯ್ದು ನಿಲ್ಲಿಸಿದರು. ಸಾಹೇಬ ಪ್ರಶ್ನೆ ಕೇಳುತ್ತಿದ್ದ, ನಾನು ಖರೆ ಖರೆ ಹೇಳುತ್ತಿದ್ದೆ. ಮತ್ತೊಬ್ಬ ಸಾಹೇಬ ಬರಕೋತಿದ್ದ. ಅಷ್ಟರಾಗ ಒಬ್ಬ ಪೋಲೀಸ ನನ್ನ ಹಂತ್ಯಾಕ ಬಂದ. ‘‘ಚೋರಿ ಕರತಾ ಹೈ ಕ್ಯಾ ಭೋಸಡಿಕೆ’’ ಎಂದವನು ನನ್ನ ಗಲ್ಲಕ್ಕ ಹೊಡಿಲಿಕ್ಕ ಬಂದ. ನಾನು ತಪ್ಪಿಸಿಕೊಂಡೆ. ಆ ಹೊಡೆತ ಒದೆಯಾಕ ಹತ್ತಿದ ಸಾಹೇಬನ ಗಲ್ಲಕ್ಕ ಬಡಿತು. ಅಂವಾ ಬರೆಯೋದನ್ನ ನಿಲ್ಲಿಸಿದ. ಹೊಡೆದ ಪೋಲೀಸ ಗಾಬರಿಯಾದ. ಅಂವಾ ತಪ್ಪಾಯ್ತರಿ – ತಪ್ಪಾಯ್ತರಿ ಸಾಹೇಬರಿಗೆ ಬೇಡಿಕೊಂಡ. ಸಾಹೇಬರು ಸಿಟ್ಟಿನಿಂದ ಬೈದರು. ನೌಕರಿಯಿಂದ ಕಿತ್ತ ಹಾಕ್ತೇನಿ ಅಂತ ಧಮಕಿ ಹಾಕಿದರು. ಮತ್ತೊಬ್ಬ ಪೋಲೀಸ ಬಂದು ಅವನನ್ನು ಹೊರಗೆ ಕಳಿಸಿದ. ಮುಂದ ಮತ್ತೆ ಸಾಹೇಬ ಪ್ರಶ್ನೆ ಕೇಳಿದ. ನಾನು ಹೇಳಿದ್ದು ಬರಕೊಂಡ. ಬರೆದು ಮುಗಿಸಿದ ಮ್ಯಾಲೆ ಅಂವಾ ಗಂಟೆ ಬಾರಿಸಿದ. ಆಗ ನನಗೆ ಹೊಡೆಯಾಕ ಬಂದ ಪೋಲೀಸ ಓಡಿ ಬಂದ. ‘ಇವನ್ನ ಕರ್ಕೊಂಡು ಹೋಗಿ ಖೋಲಿದಾಗ ಹಾಕರಿ’ ಅಂತ ಅವನಿಗೆ ಹೇಳಿದ. ಪೋಲೀಸರು ಹೊರಗೆ ಹೋದರು. ಆ ಪೋಲೀಸ ನನ್ನನ್ನ ಜೇಲಿಗೆ ಕರ್ಕೊಂಡು ಹೋದ. ಕತ್ತಲೆ ಖೋಲಿ ಲೈಟ್ ಹಚ್ಚಿದ. ಬಾಗಿಲಾ ತೆರೆದ. ಒಳಗ ಧಾರ್ಯಾ ಇದ್ದ. ಇಬ್ಬರು-ಮೂವರು ಸೇರಿ ಅವನನ್ನು ಕೆಳಗ ಕೆಡವಿದರು. + +ಹೊಡೆಯಾಕ ಶುರು ಮಾಡಿದರು. ಧಾರ್ಯಾ ಜೋರಾಗಿ ಬೊಬ್ಬೆ ಹೊಡೆದ. ಅವನ ಪಾಯಜಾಮಾ ಬಿಚ್ಚಿದರು. ಕುಂಡ್ಯಾಗ ಖಾರದ ಪುಡಿ ತುರುಕಿದರು. ಧಾರ್ಯಾಗ ಬೆಂಕಿ ಬಿದ್ಧಾಂಗ ಆಗಿರಬೇಕು. ಅಂವಾ ಲಬೋ-ಲಬೋ ಅಂತ ಭಾಳ ಹೊಯ್ಕೊಂಡ. ನನ್ನ ಮುಂದ ಇದೆಲ್ಲ ನಡೆದದ್ದ ನೋಡಿ ನನಗ ಭಾಳ ಅಂಜಿಕಿಯಾತು. ನಾನೂ ಬೊಬ್ಬೆ ಹೊಡೆಯಾಕ ಹತ್ತಿದೆ. ಒಬ್ಬ ಪೋಲೀಸ ನನ್ನ ಬೆನ್ನಿಗೆ ಗುದ್ದಿದ. ನನ್ನ ಕಾಲು ಲಟಲಟ ನಡಗಾಕ ಹತ್ತಿತು. ನಾನು ಪಾಯಜಾಮಾದಾಗ ಸಳಸಳ ಉಚ್ಚೆ ಹೊಯ್ಕೊಂಡೆ. ಆಗ ಹೊಡೆಯೋದು ನಿಲ್ಲಿಸಿದರು. + +(ಚಂದ್ರಕಾಂತ ಪೋಕಳೆ) + +ಅಷ್ಟರಾಗ ಮತ್ತೊಬ್ಬ ಪೋಲೀಸ ಬಂದು ಹೇಳಿದ, ‘‘ಅದೇನ ಮಾಡಾಕ ಹತ್ತಿದಿರೋ, ಅಂಥ ಸಣ್ಣ ಹುಡುಗನಿಗೆ ಹಾಂಗೆಲ್ಲ ಹೊಡಿಬ್ಯಾಡರಿ. ಸತ್ತಗಿತ್ತ ಹೋದಾನು. ಸಾಕು ಮಾಡರಿ’’ ಪೋಲೀಸರು ಹೊಡೆಯೋದು ನಿಲ್ಲಿಸಿದರು. ನಾವು ಅಳಾಕ ಹತ್ತಿದ್ವಿ. ಆ ಪೋಲೀಸ ನಮ್ಗ ಸುಮ್ನಿರಾಕ ಹೇಳಿದ. ಹೊಡಿಬ್ಯಾಡ ಅಂತ ಹೇಳಿದ ಪೋಲೀಸ ನನ್ನ ಹಂತ್ಯಾಕ ಬಂದ. ನನ್ನ ತಲೀಮ್ಯಾಲೆ ಕೈಯಾಡಿಸಿದ. ಕುಡಿಯಾಕ ನೀರು ಕೊಟ್ಟ. ಮಾರಿ ತೊಳಕೊಳ್ಳಾಕ ಹೇಳಿದ. ಆವಾಗ ನನಗ ನಮ್ಮಪ್ಪನ ನೆನಪಾಯಿತು. ಆ ಪೋಲೀಸ ಅಂದ, ‘‘ಹೆದರಬ್ಯಾಡ, ನಾನೀಗ ಅವರಿಗೆ ಹೊಡಿಯಾಕ ಬಿಡಾಂಗಿಲ್ಲ.’’ ಮುಂದ ನನ್ನ ಮತ್ತ ಧಾರ್ಯಾನ ಒಯ್ದು ಬ್ಯಾರೆ ಖೋಲಿಯೊಳಗ ಕೂಡಿ ಹಾಕಿದರು. ಅಲ್ಲಿ ಮತ್ತ ಮೂರ್ನಾಕ ಮಂದಿ ಬ್ಯಾರೆದವರು ಇದ್ದರು. ಸಣ್ಣ ಖೋಲಿ. ಎದುರಿಗೆ ಬಾಗಿಲಾ. ಅದಕ್ಕ ದೊಡ್ಡ ಕೀಲಿ. ಖೋಲಿಯೊಳಗೇ ಉಚ್ಚಿ ಹೊಯ್ಯೋದು. ದೊಡ್ಡ-ದೊಡ್ಡ ಚಿಕ್ಕಾಡು. ಕಚಾ ಕಚಾ ಕಚ್ಚುತ್ತಿದ್ವು. ಕಚ್ಚಿದಾಗ ಪಟ್ಟಂತ ಹೊಡೀತಿದ್ದೆ. ಹುಚ್ಚು ಹಿಡಿದವರಾಂಗಾತು. ಅಲ್ಲಿ ರಾತ್ರಿ ಮಲಗಬೇಕಾರ ಹಾಸಗಿನೂ ಇಲ್ಲ. ಹೊದಿಕಿನೂ ಇಲ್ಲ. ರಾತ್ರಿಯಿಡೀ ಹಾಂಗ ಕೂತೆ. ಚಿಕ್ಕಾಡಂತೂ ಸಾರ್ಕೆ ಕಚ್ಚತಾನೆ ಇತ್ತು. ನಿದ್ದಿನೂ ಬರಲಿಲ್ಲ. ಪ್ರತಿದಿನ ಒಂದು ಹಸಿಬಿಸಿ ರೊಟ್ಟಿ ಕೊಡತಿದ್ದರು. + +ಹೊಟ್ಟಿ ತುಂಬತಿರಲಿಲ್ಲ. ಬಾಟಲಿ ನೀರು ಕುಡಿಬೇಕಾಗತಿತ್ತು. ಆಲ್ಯುಮನಿಯಂ ಬಾಲ್ಡಿ ಜಂಗ ಹಿಡಿದಿತ್ತು. ಧಾರ್ಯಾ ಪೋಲೀಸರಿಗೆ ಸಲಾಂ ಹೊಡಿತಿದ್ದ. ಗುರುತು ಮಾಡಿಕೊಳ್ಳುತ್ತಿದ್ದ. ನೂರು – ಎರಡು ನೂರು ಕೊಡತೇನಿ ಅಂತಿದ್ದ. ಸಾಯೇಬರ ನೋಡತಾರ ಮಾರಾಯಾ ಅಂತ ಪೋಲೀಸರ ಉತ್ತರ. ಧಾರ್ಯಾ ಪೋಲೀಸರ ಹತ್ತರ ಬೀಡಿ ಬೇಡಿ ಸೇದತ್ತಿದ್ದ. ಪೋಲೀಸರು ಅವ್ನಿಗೆ ಹೆಚ್ಚು ರೊಟ್ಟಿ ಕೊಡತ್ತಿದ್ದರು. ಅಲ್ಲಿ ಮತ್ತ ಮೂರ್ನಾಕ ಮಂದಿ ಇದ್ದರು. ಅವರೂ ರೊಟ್ಟಿ ಕೊಡರಿ ಅಂತ ಬಡಕೋತ್ತಿದ್ದರು. ಅವರು ಕೊಟ್ಟ ಒಂದ ರೊಟ್ಟಿಯಿಂದ ಹೊಟ್ಟಿ ತುಂಬತಿರಲಿಲ್ಲ. ಅವರು ಹಸಿವಿನಿಂದ ಹೈರಾಣಾಗತ್ತಿದ್ದರು. ಆಗಾಗ ಜೋರಾಗಿ ಕೂಗಿ ಹೇಳತಿದ್ದರು, ‘‘ನಮ್ಗ ರೊಟ್ಟಿ ತಂದ ಕೊಡರಿ, ಇಲ್ಲಾ ಅಂದರ, ನಾಯಿ ಹೇಲಾದರೂ ತಂದ ಕೊಡರಿ. ಅದನ್ನೂ ಬೇಕಾರ ನಾವು ತಿಂತೇವಿ. ಹೊಟ್ಟಾ ್ಯಗ ಭಾಳ ಬೆಂಕಿ ಬಿದ್ದೆ ೈತರೋ. ರೊಟ್ಟಿಯಾರ ಕೊಡರಿ, ಇಲ್ಲಾ ಗುಂಡ ಹಾಕಿ ಕೊಲ್ಲರಿ’’ ಹಿಂಗ ಏನೇನೋ ಬಡಬಡಸ್ತಿದ್ದರು. ಮೂರ್ನಾಕ ದಿನಾ ಆದಮ್ಯಾಲೆ ಧಾರ್ಯಾ ಜಾಮೀನ ಮ್ಯಾಲೆ ಹೊರಗ ಬಂದ. ನಾನ ಮಾತ್ರ ಹಾಂಗ ಉಳಕೊಂಡೆ. ನನ್ನ ಬಿಡಿಸಿ ಕರಕೊಂಡ ಹೋಗಾಕ ನಮ್ಮ ಮಂದಿ ಯಾರೂ ಬರಲಿಲ್ಲ. ಅಂಥವರು ಯಾರದಾರು? ಎಲ್ಲಾರೂ ಪೋಲೀಸರಿಗೆ ಅಂಜತಿದ್ದರು. ಜೈಲಿನಾಗ ನನ್ನ ಜೋಡಿಯಿದ್ದ ಮೂರ್ನಾಕ ಮಂದಿ, ನನಗ ಕಾಲೊತ್ತಾಕ ಹೇಳತಿದ್ದರು. ಅವರು ಅಲ್ಲೇ ಉಚ್ಚಿ ಹೊಯ್ಯುತ್ತಿದ್ದರು. ನನಗ ಸ್ವಚ್ಚ ಮಾಡಾಕ ಹೇಳತಿದ್ದರು. ನಾನು ಅದನ್ನ ಮಾಡದಿದ್ದರ, ಅವರು ಹೇಳಿದ ಮಾತು ಕೇಳದಿದ್ದರ, ಹಿಡಿದು ಬಡೀತ್ತಿದ್ದರು. ರಾತ್ರಿ ಅವರು ಮಲಗಿದಾಗ ಚಿಕ್ಕಾಡ ಕಚ್ಚತಾವ ಅಂತ, ನನಗ ಅಂಗಿ ಕಳದ ಗಾಳಿ ಹಾಕಾಕ ಹೇಳತ್ತಿದ್ದರು. ಗಾಳಿ ಹಾಕಿ ಹಾಕಿ ಕೈ ಸೋತಬಂದು ನೋಯಿಸತಿತ್ತು. ಒಮ್ಮೊಮ್ಮಿ ತೂಕಡಿಕೆ ಬರತಿತ್ತು. ಗಾಳಿ ಹಾಕೋದು ನಿಲ್ಲಿಸಿದರ ಮುಕುಳಿ ಮ್ಯಾಲೆ ಒದೀತಿದ್ದರು. ಏನ್ ಮಾಡಬೇಕೋ ಗೊತ್ತಾಗತಿರಲಿಲ್ಲ. ಪೋಲೀಸರಿಗೆ ಹೇಳೋಣ ಅಂದರ, ಅವರೂ ಹಿಡಿದ ಬಡಿದರ ಅಂತ ಅಂಜಿಕಿ… + +ಒಂದು ದಿನ ನನ್ನ ಕೈ ಕಾಲು ನೋವು ಹೆಚ್ಚಾಗಿ ಜ್ವರ ಬಂತು. ಬಾಯಿಂದ ಬಿಸಿ-ಬಿಸಿ ಉಸಿರು ಹೊರ ಬರಾಕ ಹತ್ತಿತು. ಪೋಲೀಸ ಸಾಯೇಬರ ಕಿವಿಗೆ ಈ ಸುದ್ದಿ ಹಾಕಿ ನನಗೆ ಆಸ್ಪತ್ರೆಗೆ ಒಯ್ದ ತೋರಿಸಿಕೊಂಡು ಆ ಪೋಲೀಸ ಸಾಯೇಬರಿಗೆ ಏನೋ ಹೇಳಿದ. ನನ್ನನ್ನ ಅವರ ಹತ್ತರ ಕರಕೊಂಡ ಹೋದ. ಸಾಯೇಬನಿಗೆ ಹುರಿ ಮೀಸೆಯಿತ್ತು. ಟೇಬಲ ಮ್ಯಾಲೆ ಟೊಪ್ಪಿಗೆಯಿಟ್ಟು ಕೂತಿದ್ದ. ಎಲ್ಲ ಪೋಲೀಸರು ಅವನಿಗೆ ಸಲಾಮ ಹೊಡಿತಿದ್ದರು. ಸಾಯೇಬ ಎತ್ತರವಾಗಿದ್ದ. ಸಣ್ಣ ಕೂದಲು. ದೊಡ್ಡ ಕಣ್ಣು. ಅವರು ಮೆಲ್ಲಗೆ ಕೇಳಿದರು ‘‘ಹುಡುಗಾ, ನೀನ ಯಾರ ಪೈಕಿ?’’‘‘ಬೇಲದಾರ ಪೈಕಿರಿ.’’‘‘ಯಾಕ ಹಿಡಕೊಂಡ ಬಂದರು?’’‘‘ಗೌಡರ ತಲೀ ಒಡೆದೆ, ಕಳ್ಳತನ ಮಾಡಿದೆ ಅಂತ.’’ + +ನಾನಂತೂ ನಡಗಾಕ ಹತ್ತಿದ್ದೆ. ಸಾಯೇಬ ‘‘ಕತ್ತೆ, ಮತ್ತ ಕಳ್ಳತನ ಮಾಡಬೇಡ. ಅರೆ ಹವಾಲ್ದಾರ ಬಚ್ಚಾ ಛೋಟಾ ಹೈ, ಐಸೇ ಬಚ್ಚೆಕೋ ಕಾಯಕು ಲಾತೆ ಹೋ? ಇಸಕೋ ಛೋಡದೋ. ಔರ ರಸ್ತಾ ಬತಾದೇನಾ.’’ ಯಾವ ಪೋಲೀಸನಿಗೆ ನನ್ನ ಮ್ಯಾಲೆ ದಯೆ ಬಂದಿತ್ತೋ ಅಂವಾ ನನ್ನನ್ನು ಠಾಣೆಯಿಂದ ಹೊರಗ ಕರ್ಕೊಂಡ ಬಂದ. ಹೋಟೆಲಿಗೊಯ್ದು ಭಜಿ ತಿನ್ನಿಸಿದ. ತಲೀ ನೇವರಿಸಿದ. ಅಂಜಬ್ಯಾಡ ಅಂತ ಹೇಳಿ ಬಿಟ್ಟುಬಿಟ್ಟ.ನಾನು ರಸ್ತೆ ಹಿಡಿದು ಹೊಂಟೆ. ಎಲ್ಲಿ ನೋಡಿದರೂ ಬರೇ ಮಂದಿನೇ ತುಂಬಿ ಕೊಂಡಿದ್ದರು. ಮೋಟಾರಗಳೂ ಓಡತಿದ್ದವು. ನನಗ ನಡೆಯಾಕ ಬರತಿರಲಿಲ್ಲ. ಊರು ನೆನಪಿದ್ದರೂ, ದಾರಿ ನೆನಪಿರಲಿಲ್ಲ. ಒಂದಿಬ್ಬರಿಗೆ ಕೇಳಿದೆ. ಅವರು ಏನೂ ಹೇಳಲಿಲ್ಲ. ನಾನು ಮಂದಿ ನಡುವೆ ನಡಕೋತ ಹೊಂಟೆ. ಕಾಲು ಎಳಕೊಂಡ ಹೋದ ಕಡೆ ಹೊಂಟಿದ್ದೆ. ಕೊನೆಗೆ ಒಬ್ಬ ಪೇಟಾದವನಿಗೆ ಕೇಳಿದೆ. ಅಂವಾ ಏನೇನೋ ಪ್ರಶ್ನೆ ಕೇಳಿದ. ಪೆಪ್ಪರಮಿಂಟ ತಿನ್ನಲು ಹತ್ತು ಪೈಸೆ ಕೊಟ್ಟ. ‘‘ಹುಡುಗಾ, ಹಿಂಗ„„ ಹೋಗಿ ಬಲಕ್ಕ ತಿರುಗು. ಸೀದಾ ಹೋಗು, ಅಂದರ ಅದೇ ಊರಿಗೆ ಹೋಗತಿ’’ ಎಂದ.ಅಂವಾ ಹೇಳಿದ ಹಾದಿ ಹಿಡಿದು ನಾನು ಹೊಂಟೆ. ನಡೀತ-ನಡೀತ ಊರ ಹೊರಗ ಬಂದೆ. ಈಗ ಮೈಕೈ ನೋವು ಕಡಿಮೆ ಆಗಿತ್ತು. ಜ್ವರಾನೂ ಹೋಗಿತ್ತು. ಧುಂದಿ-ಘಾಟುಡಿ ಹಾದಿ ಹಿಡಿದು ಹೊಂಟೆ. ಹೊಟ್ಟಾ ್ಯಗ ಅನ್ನದ ಅಗಳೂ ಇರಲಿಲ್ಲ. ಹಸಿವೆಯಾಗಿತ್ತು. ಜೀವಾ ಚಡಪಡಿಸಾಕ ಹತ್ತಿತ್ತು. ಒಂದು ಹೆಜ್ಜಿನೂ ಮುಂದಿಡಾಕ ಆಗತಿರಲಿಲ್ಲ. ಆದರೆ ನಡೀದೆ ಬಿಡುವಾಂಗ ಇರಲಿಲ್ಲ. ಅವ್ವ-ಅಪ್ಪನ್ನು ಭೇಟಿ ಆಗಬೇಕೆಂಬ ಇಚ್ಚಾ ಕಾಡಾಕ ಹತ್ತಿತ್ತಲ್ಲ. ಅಂತೂ ನಡೀತ ನಡೀತ ಧುಂದಿ-ಘಾಟೋಡಿ ಊರಿಗೆ ಬಂದೆ. ಹಳ್ಳದ ಆಚೆಗಿರುವ ಹೊಲಕ್ಕ ಬಂದೆ. ನೋಡಿದರ ಅಲ್ಲಿ ನಮ್ಮ ಬಿಡಾರವಾಗಲಿ, ಲಮಾಣಿಗಳ ಜೋಪಡಿಯಾಗಲಿ ಇರಲಿಲ್ಲ. ಬಿಡಾರ ಯಾವಾಗೋ ಹೋಗಿತ್ತು. ಗೂಟ ಕಿತ್ತ ಜಾಗ. ಮೂರು ಕಲ್ಲಿನ ಒಲಿ ಹೆಂಗಿತ್ತೋ ಹಾಂಗ ಇತ್ತು. ಸ್ವಲ್ಪ ತೊಗರಿ ಕಟ್ಟಗಿ ಮತ್ತು ಕತ್ತಿಗಳ ಲದ್ದಿ. ಈಗ ಅಲ್ಲಿ ಮಂದಿ ಹೇಲಾಕ ಕುಂಡರತಿದ್ದರು. ಕಾಲಿಟ್ಟಲ್ಲೆಲ್ಲ ಹೇಲ„„ ಹೇಲು, ಅದನ್ನೆಲ್ಲ ನೋಡಿ ಕಣ್ಣಾಗ ನೀರು ಬಂತು. + + + +ಈ ಜಾಗದಾಗ ನಮ್ಮ ಬಿಡಾರಗಳಿದ್ದವು. ಲಮಾಣಿಗಳ ಜೋಪಡಿಗಳಿದ್ದವು. ಜನರ ಓಡಾಟವಿತ್ತು. ಅವ್ವ-ಅಪ್ಪ ಈಗ ಎಲ್ಲಿಗೆ ಹೋಗಿರಬಹುದು? ಅವ್ವನ ಗತಿ ಏನಾಗೈತೋ? ಅವರನ್ನು ಎಲ್ಲಿ ಭೇಟಿಯಾಗಲಿ? ಏನ ಮಾಡಲಿ? ನಾನು ಒಬ್ಬನೇ ವಿಚಾರ ಮಾಡತಾ ನಿಂತಿದ್ದೆ. ಅಳು ಬಂತು. ಕಣ್ಣ ಒರೆಸಿಕೊಂಡೆ. ಅವ್ವ-ಅಪ್ಪ ಭೇಟಿಯಾಗಲಿ ಸತೀಮಾಯಿ ಅಂತ ಕೈಮುಗಿದೆ. ಹಾಂಗ ಮುಂದ ಹೆಜ್ಜೆಯಿಟ್ಟೆ. ವಾಡಿ ಊರಾಗ ತಾತ್ಯಾನ ಬಿಡಾರ ಇರೋದು ನನಗ ಗೊತ್ತಿತ್ತು. ವಾಡಿಗೆ ಬಂದೆ. ಅಲ್ಲಿ ಬೇಲದಾರರ ಬಿಡಾರ ಎಲ್ಲಿಯದ ಅಂತ ಮಂದಿನ್ನ ಕೇಳಿದೆ. ಅವರು ಹೇಳಿದರು. ಅವರನ್ನು ಹುಡುಕ್ತ-ಹುಡುಕ್ತ ಒಂದು ಕರಿ-ಎರಿ ಹೊಲಕ್ಕ ಬಂದೆ. ಅಲ್ಲಿ ಒಂದು ಬಿಡಾರ ಕಾಣಿಸ್ತು. ತಾತ್ಯಾನಿಗೆ ಐದಾರು ಸಣ್ಣ ಸಣ್ಣ ಹುಡುಗರು ಇದ್ದರು. ತಾತ್ಯಾ, ಕಾಕೂ ಮಾತಾಡಕೋತ ಕುಂತಿದ್ದರು. ಸಂಜಿಯಾಗಾಕ ಹತ್ತಿತ್ತು. ನನಗೂ ನಡೆದು-ನಡೆದು ಸಾಕಾಗಿತ್ತು. ಹಸಿವೆಯಿಂದ ಕಸಿವಿಸಿಯಾಗಾಕ ಹತ್ತಿತ್ತು. ನಾನು ತಾತ್ಯಾನನ್ನು ‘‘ತಾತ್ಯಾ-ಓ-ತಾತ್ಯಾ’’ ಅಂತ ಕೂಗಿ ಕರೆದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_104.txt b/Kenda Sampige/article_104.txt new file mode 100644 index 0000000000000000000000000000000000000000..38587493f164f4083e8cd339decda44c90227c20 --- /dev/null +++ b/Kenda Sampige/article_104.txt @@ -0,0 +1,27 @@ +ಪ್ರಿಯ ಕಂಟಲಗೆರೆ, + +ನೀನು ಕಳುಹಿಸಿದ ‘ಟ್ರಂಕುತಟ್ಟೆ’ ಓದಿದೆ. + +ಈ ಟ್ರಂಕು ಮತ್ತು ತಟ್ಟೆ ನನ್ನ ಮತ್ತು ನಿನ್ನ ತಲಮಾರಿನ ಬಹುದೊಡ್ಡ ರೂಪಕ ಹಾಗು ಪ್ರತಿಮೆ. ಹಾಸ್ಟೆಲ್ ಜೀವನದ ನಿನ್ನ ಬದುಕಿನ ಹೆಜ್ಜೆಗಳನ್ನು ದಾಖಲಿಸಿರುವ ಈ ಬರಹಗಳ ಗುಚ್ಚಕ್ಕೆ ಅಕಳಂಕ ಸೂಕ್ತವಾದ ಹೆಸರಿಟ್ಟಿರುವೆ. ಪ್ರಬಂಧದ ಗುಣಲಕ್ಷಣಗಳಿರುವ ನಿನ್ನ ಬರಹಗಳು ಬಹುತೇಕ ಗಾಯಗೊಂಡಿರುವ ಕಾರಣ ಇವು ಲಹರಿಗಳಲ್ಲ. ಆದರೆ ನಿನ್ನ ಈ ಬರಹಗಳಲ್ಲಿ ನೀನು ಎಲ್ಲಿಯೂ ಕುಂಟುತ್ತಿಲ್ಲ, ನೋವಿನಿಂದ ನರಳುತ್ತಿಲ್ಲ. ನಗುವಿನ ಅಲೆಯ ಮೇಲೆ ನಿನ್ನ ಯಾನ ಸಾಗಿರುವುದು ವಿಶೇಷ. + +(ಗುರುಪ್ರಸಾದ್‌ ಕಂಟಲಗೆರೆ) + +ನಿನ್ನ ಈ ಬರಹಗಳಲ್ಲಿ ಅವಮಾನದ ದಾಖಲೆಗಳಿವೆ. ಪ್ರತಿರೋಧದ ನೆಲೆಗಳಿವೆ, ಆದರೆ ದ್ವೇಷದ ಪ್ರತೀಕಾರದ ಛಾಯೆಗಳಿಲ್ಲ. ಇದು ನಿನ್ನ ಬರವಣಿಗೆಯನ್ನು ಭಿನ್ನ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಒತ್ತಾಯಿಸುತ್ತದೆ. + +ನಿನ್ನ ಈ ಬರಹಗಳಲ್ಲಿ ಬಾಲ್ಯಕಾಲದ ಜೀವನ ಚರಿತ್ರೆ ಅಡಗಿದೆ. ಅವು ಸ್ವವಿಮರ್ಶೆ ಮತ್ತು ಆಪ್ತತೆಯಿಂದ ಓದುಗರನ್ನು ಒಳಗೊಂಡು ಬೆಳೆಯತೊಡಗುತ್ತವೆ. ಚಿಕ್ಕ ಚಿಕ್ಕ ವಿವರಗಳಲ್ಲಿ ದೊಡ್ಡ ನೋವಿನ ಸ್ತರಗಳಿವೆ. ಓದುಗರು ಇವುಗಳನ್ನೆಲ್ಲ ಅನುಭವಿಸುತ್ತಲೇ ಮುಂದೆ ಸಾಗಬೇಕು.ನನ್ನ ಅವ್ವನ ತವರೂರಾದ ಕಂಗಸನಹಳ್ಳಿಯಿಂದ ನಾಲ್ಕು ಹೊಲಗಳನ್ನು ದಾಟಿದರೆ ನಿಮ್ಮೂರು ಕಂಟಲಗೆರೆ ಸಿಗುತ್ತದೆ. ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ ಬಚಾವಾಗಿ ಪ್ರೈಮರಿ ಕೊಂಡವನ್ನು ಹಾದು, ಮಿಡ್ಲಿಸ್ಕೂಲ್ ಎಂಬ ಉನ್ನತ ಶಿಕ್ಷಣಕ್ಕೆ ತಿಪಟೂರಿಗೆ ಹೋದದ್ದು, ಊರಿನ ಪುರಾತನ ಬೇರುಗಳನ್ನು ಕಿತ್ತುಕೊಂಡು ಹಾಸ್ಟೆಲ್‌ನಲ್ಲಿ ನೆಲೆಗೊಂಡದ್ದು, ಚಿಕ್ಕಪ್ಪನ ಮತ್ತು ಕುಂದೂರು ತಿಮ್ಮಯ್ಯನವರ ಒತ್ತಾಸೆ ನಿನಗೆ ಸಿಕ್ಕಿದ್ದು ನಿನ್ನಂತ ದಲಿತ ಹುಡುಗರ ಜೀವನದಲ್ಲಿಯ ಬಹುದೊಡ್ಡ ತಿರುವು ಎಂದು ನನಗೆ ಅನಿಸುತ್ತದೆ. + +ನೀನು ಮತ್ತು ನಿನ್ನ ತಮ್ಮ ಜೇಪಿ ನಿಮ್ಮಪ್ಪನ ಜೊತೆ ತಿಪಟೂರಿನ ಬಸ್ ಸ್ಟಾಂಡ್‍ನಿಂದ ಹಾಸ್ಟೆಲ್‌ವರೆಗೆ ಸಾಗುವ ನಿಮ್ಮ ನಡಿಗೆ ಇದೆಯಲ್ಲ ಅದು ಕಳುವಾಗಿದ್ದ ಅಕ್ಷರಗಳನ್ನು ಹುಡುಕಿಹೊರಟ ದಾಳಿಯಾಗಿತ್ತೆಂದು ನಾನು ತಿಳಿಯುತ್ತೇನೆ. + + + +ನಿನ್ನ ಈ ಪುಸ್ತಕದಲ್ಲಿ ಒಟ್ಟು ಹಾಸ್ಟೆಲ್‍ಗಳ ಚಿತ್ರಗಳನ್ನು ಕೆತ್ತಿದ್ದೀಯ. ವಕ್ರವಾಗಿ ನೇತಾಡುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಬೋರ್ಡು, ಗವ್‌ಗತ್ತಲು, ಮಾಜಿ ದನದ ಕೊಟ್ಟಿಗೆಯಂತ ಕಟ್ಟಡ, ಹೊಗೆ ಸುತ್ತಿಕೊಂಡ ಆಫೀಸು, ಮಾಸಿ ಚುಮ್ಟವಾಗಿದ್ದ ಕಾರ್ಪೆಟ್ಟು, ಸಾಕಾದವರಂತೆ ಬಿದ್ದಿದ್ದ ಟ್ರಂಕುಗಳು ಎಂಬ ಈ ನಿನ್ನ ವಿವರಗಳು ಅಂದಿನ ಸಾರ್ವಜನಿಕ ಹಾಸ್ಟೆಲ್‌ಗಳ ಸ್ಥಿತಿಗತಿಗಳನ್ನು ಅಧಿಕಾರಿಗಳ ಮತ್ತು ವಾರ್ಡನ್‌ಗಳ ಬೇಜವಾಬ್ದಾರಿತನ ಮತ್ತು ಭ್ರಷ್ಟತೆಯನ್ನು ದಾಖಲಿಸುತ್ತವೆ. + +ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ಬಡವರ ಮಕ್ಕಳಿಗಾಗಿ ಇರುವ ಹಾಸ್ಟೆಲ್‌ಗಳು ಎಂದು ಕರೆಯಲು ನನಗೆ ಇಷ್ಟವಿಲ್ಲ. ಅದ್ಯಾಕೊ ಬಡವರು ಎಂಬ ಪದವನ್ನು ದುಡಿಯುವ ವರ್ಗಗಳಿಗೆ ಅಂಟಿಸುವುದು ನನ್ನನ್ನು ರೊಚ್ಚಿಗೆಬ್ಬಿಸುತ್ತದೆ. ಇರಲಿ ಇಂಥ ಹಾಸ್ಟೆಲ್‌ಗಳ ಪೂರ್ಣ ಚರಿತ್ರೆಯನ್ನೆ ನೀನು ಅನಾವರಣಗೊಳಿಸಿದ್ದೀಯ. ಅದೂ ಅಲ್ಲಿನ ಎಲ್ಲ ಒಳ್ಳೆ ತನಗಳನ್ನು ಬೆರೆಸಿ. ಇದು ಅಷ್ಟು ಸುಲಭವೆಂದು ನನಗೆ ಅನಿಸುವುದಿಲ್ಲ. + +(ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ) + +ನಿನ್ನ ಈ ಎಲ್ಲಾ ಬರಹಗಳ ಗುಣಗಳೆಂದರೆ ತಮಾಷೆ, ವಿಷಾದ, ಖುಷಿ, ಸಿಟ್ಟುಗಳನ್ನು ಮಿಶ್ರಣಮಾಡಿ ರೂಪಿಸುವ ವಾಕ್ಯಗಳು ನನಗೆ ಇಷ್ಟವಾದವು. ಅಂದು ಹಾಸ್ಟೆಲ್‍ನಲ್ಲಿ ಕೊಟ್ಟ ಹೊಸ ಸ್ಟೀಲ್ ತಟ್ಟೆಯಲ್ಲಿ ಕಂಡ ನಿನ್ನಮುಖವೂ ಹೊಸದಾಗಿಯೇ ಕಂಡದ್ದು, ನಿಂತ ರೈಲಿನಲ್ಲಿ ಕಕ್ಕಸ್‍ಗೆ ಹೋಗಿ ನೆಗೆಯುವ ಪರಿ, ಮೊಟ್ಟೆಯನ್ನು ಗೆಳೆಯರೊಟ್ಟಿಗೆ ಸೇರಿ ಕಬಳಿಸುವ ವಿವರ, ನಿನ್ನ ಗೆಳೆಯನಂದ ‘ನಾನು ಬಾಳೆಹಣ್ಣಿನ ಸಿಪ್ಪೆಯನ್ನೂ ಬಿಡದೆ ಪೂರ್ತಿ ತಿಂದೆ’ ಎಂಬ ನುಡಿಯನ್ನು ಹಿಡಿದಿರುವ ರೀತಿ, ಇಡ್ಲಿ ಉಪ್ಪಿಟ್ಟಿನ ಶ್ರೀಮಂತಿಕೆ, ಕರೆಂಟು ಹೋದಾಗ ಟ್ರಂಕು ತಟ್ಟೆ ಎಂಬ ವಾದ್ಯಗಳೊಂದಿಗಿನ ಹಾಡುಗಾರಿಕೆ, ಹಾಸ್ಟೆಲ್ ಹುಡುಗರ ಸೆಕೆಂಡ್ ಶೋ ಪಿಚ್ಚರ್, ದುಡ್ಡಿನ ಆಟ ಇತ್ಯಾದಿಗಳು ಮೂಲ ಕೆಡುವ ಸಾದ್ಯತೆಗಳು, ಚಿತ್ರಾನ್ನದಲ್ಲಿ ಕಡ್ಳೆಬೀಜ ಅನ್ವೇಷಣೆ, ಈ ಮಧ್ಯೆ ಊರಿನಲ್ಲಿನ ಕಷ್ಟಗಳು, ಸಣ್ಣಹೊನ್ನಯ್ಯನವರು ಪಾರ್ಟ್ ಟೈಮ್ ಕೆಲಸ ಹುಡುಕಿದ್ದು, ಟಿಸಿಹೆಚ್ ಕಾಲದಲ್ಲಿ ರಂಗಸ್ವಾಮಿಯ ಬೆಂಬಲ, ತುಮಕೂರಿನ ಅಖಿಲ ಬಾರತ ಸಮ್ಮೇಳನದಲ್ಲಿ ಊಟಕ್ಕಾಗಿ ಕಾಂಪೌಂಡ್ ಹಾರಿ ವಿ.ಐ.ಪಿ ಆದದ್ದು, ಹನುಮಂತಪುರದ ಡಿಗ್ರಿ ಕಾಲೇಜಿನ ವೈಭವದ ಜೊತೆಗೆ ಆ ದಾರಿಯಲ್ಲೆ ಇದ್ದ ಸ್ಲಂನ ದಾರುಣ ಪ್ರಸಂಗಗಳು, ಗೆಸ್ಟ್ ಗಂಗಾಧರನ ಕಥೆಗಳು, ಬೆಲ್ಲದ ಮಡು ರಂಗಸ್ವಾಮಿಯವರ ದಲಿತ ವಿದ್ಯಾರ್ಥಿ ಒಕ್ಕೂಟ, ಡಿಎಸ್‍ಎಸ್ ಹಾಸ್ಟೆಲ್‍ಗಳಲ್ಲಿ ಉಂಟು ಮಾಡಿದ ಪರಿಣಾಮಗಳು, ಹಾಡು, ಪಾಂಪ್ಲೆಟ್ ಪ್ರಭಾವಗಳು, ಇತ್ಯಾದಿಯಿಂದ ತುಂಬಿ ತುಳುಕುವ ಟ್ರಂಕು ತಟ್ಟೆ ಅನುಭವಗಳು ಗದ್ಯ ಪದ್ಯಗಳ ಲಯದಿಂದ ಓದುಗರ ಮನೋರಂಗದಲ್ಲಿ ಕುಣಿಯಬಲ್ಲದು, ಕುಣಿಸಬಲ್ಲದು. + +(ಕೃತಿ: ಟ್ರಂಕು ತಟ್ಟೆ (ಹಾಸ್ಟೆಲ್‌ ಅನುಭವ ಕಥನ), ಲೇಖಕರು: ಗುರುಪ್ರಸಾದ್‌ ಕಂಟಲಗೆರೆ, ಪ್ರಕಾಶಕರು: ಚೈತನ್ಯ ಪ್ರಕಾಶನ, ಬೆಲೆ: 180/-) + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_105.txt b/Kenda Sampige/article_105.txt new file mode 100644 index 0000000000000000000000000000000000000000..58029fab6c4a1991af5acd0c441b08b84ded410f --- /dev/null +++ b/Kenda Sampige/article_105.txt @@ -0,0 +1,23 @@ +‘ನೆಲದ ಮೇಲಣ ನಕ್ಷತ್ರಗಳು’ ಶಿಕ್ಷಕ ಸಾಹಿತಿ ವೀರೇಶ ಬ. ಕುರಿ ಸೋಂಪೂರ ಅವರ ಸಾಹಿತ್ಯ ಕೊಡುಗೆಯಾಗಿದ್ದು ‘ಧರೆಗೆ ಮೆರುಗು ತಂದವರು’ ಎಂಬ ಉಪಶೀರ್ಷಿಕೆಯೇ ಈ ಸಂಕಲನದ ಮಹತ್ವವನ್ನು ಪೂರ್ತಿಯಾಗಿ ಅರಿವಾಗಿಸುತ್ತದೆ. ಈ ನೆಲದ ಮೇಲೆ ಸವೆದು ಹೋದ ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರಿಂದ ಪ್ರಾರಂಭಿಸಿ ತನ್ನನ್ನು ತಿದ್ದಿದ ಗುರುಗಳು, ಮಠಾಧೀಶರು ಮತ್ತು ಹೆತ್ತ ತಂದೆತಾಯಿಗಳವರೆಗೂ ಅವರು ಕಂಡುಂಡ ವ್ಯಕ್ತಿಚಿತ್ರಣವನ್ನು ಕವನರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ವೀರೇಶರದ್ದು. + +(ವೀರೇಶ ಬ. ಕುರಿ ಸೋಂಪೂರ) + +ಶಾರ್ಟ್‌ ಹ್ಯಾಂಡ್ ಬರಹದಲ್ಲಿ ವಿಸ್ತಾರ ಸ್ವರೂಪವನ್ನು ಹೇಗೆ ಸಂಕೇತರೂಪದಲ್ಲಿ ಚಿಕ್ಕದಾಗಿ ದಾಖಲಿಸಿಕೊಳ್ಳುತ್ತಾರೋ ಹಾಗೆಯೇ ಇಲ್ಲಿ ವೀರೇಶರು ನಿಜ ಸಾಧಕರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಓದುಗರಿಗೆ ಬೇಸರವಾಗದಿರಲೆಂದು ಪ್ರಾಸ ಬಳಕೆಗೆ ಒತ್ತು ನೀಡಿರುವ ವೀರೇಶರು ತಮ್ಮ ಕವನಗಳನ್ನು ಶಾಲಾ ಮಕ್ಕಳೂ ಸಂತಸದಿಂದ ಕಲಿತು ಹಾಡಲು ಅನುಕೂಲವಾಗುವಂತಾಗಿಸಿರುವುದು ಅವರ ಹೆಗ್ಗಳಿಕೆ. ಅದಕ್ಕೆ ಕೆಲವು ಉದಾಹರಣೆಗಳನ್ನು ಹೇಳುವುದಾದರೆ ಪುನೀತ್ ರಾಜಕುಮಾರರ ಬಗ್ಗೆ ಬರೆದ ಕವನದಲ್ಲಿ + +ಮುತ್ತಂತೆ ನೀನು ಬದುಕಿದೆ ಅಪ್ಪುಹೊತ್ತೊಯ್ದು ‘ವಿಧಿ’ ಮಾಡಿತು ತಪ್ಪು. + +ಎಂಬುವ ಸಾಲುಗಳಾಗಲೀ, ವಿಜಯಪುರದ ಜ್ಞಾನ ಯೋಗಾಶ್ರಮದ ಸಂತ ಶ್ರೀ ಸಿದ್ದೇಶ್ವರರ ಕುರಿತಾದ ಪದ್ಯದಲ್ಲಿನ + +‘ಕಿಸೆಯಿರದ ಅಂಗಿಯ ನಸುನಗುವ ಸಂತಇತಿಹಾಸದ ಪುಟಗಳಲಿ ಶಾಶ್ವತ ನೆಲೆ ನಿಂತ’ + +ಸಾಲುಗಳೂ ಹಾಗೂ ಸಾಲುಮರದ ತಿಮ್ಮಕ್ಕಳ ಕುರಿತಾದ + +‘ಶರಣು ಶರಣು ತಿಮ್ಮಕ್ಕಮರಣವಿರದ ನಮ್ಮಕ್ಕ’ + + + +ಎಂಬ ಪ್ರಾಸಬದ್ಧ ಸಾಲುಗಳು ಮಕ್ಕಳಿಂದಿಡಿದು ವೃದ್ಧರವರೆಗೂ ರಂಜನೀಯವೆನಿಸಿವೆ ಮತ್ತು ಸಾಧಕರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರ ಕುರಿತಾದ ‘ದೀನರ ಬಾಳಿನ ದಿನಕರ’ ಹಾಗೂ ನಟ ಶಂಕರ್‌ನಾಗರ ಕುರಿತಾದ ‘ಸಾಗರ ವಿದ್ಯೆಯ ಸಿನಿಸರದಾರ’ ಎಂಬ ಉಪಮೆಗಳು ವೀರೇಶರು ತಾವು ಆಯ್ದುಕೊಂಡ ಸಾಧಕರ ಬಗ್ಗೆ ಆಳ ಅಧ್ಯಯನವನ್ನು ನಡೆಸಿರುವುದರ ಕುರುಹುಗಳಾಗಿವೆ. + +ಸಂಕಲನಕ್ಕೆ ಮುನ್ನುಡಿಯನ್ನು ಬರೆದಿರುವ ಖ್ಯಾತ ವಿಮರ್ಷಕ ಡಾ. ಹೆಚ್ ಎಸ್ ಸತ್ಯನಾರಾಯಣರವರು ತಿಳಿಸಿದಂತೆ ವೀರೇಶರು ಇಲ್ಲಿ ಕಾವ್ಯವನ್ನು ವ್ಯಕ್ತಿ ಚಿತ್ರಣದ ಹೂಮಾಲಿಕೆಯಾಗಿಸಿಕೊಂಡು ಆದರಣೀಯ ವ್ಯಕ್ತಿತ್ವಗಳ ಬಿಡಿ ಬಿಡಿ ಹೂಗಳನ್ನು ಪೋಣಿಸಿ ಅಂದದ ಹೂಮಾಲಿಕೆಯನ್ನು ಹೆಣೆದಿದ್ದಾರೆ. ಪ್ರತೀ ಕವನಕ್ಕೂ ಅಂದದ ರೇಖಾಚಿತ್ರಗಳನ್ನು ರಚಿಸಿರುವ ಸಂತೋಷ ಸಸಿಹಿತ್ಲುರವರ ಬದ್ಧತೆ ಶ್ಲಾಘನೀಯ. ಇಂತಹ ಹತ್ತಾರು ಕೊಡುಗೆಗಳು ವೀರೇಶರ ಲೇಖನಿಯಿಂದ ಒಡಮೂಡಲಿ ಎಂಬ ಆಶಯ ನಮ್ಮದು. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_106.txt b/Kenda Sampige/article_106.txt new file mode 100644 index 0000000000000000000000000000000000000000..963595d1972522e5b4704c63280b9b4bca337c60 --- /dev/null +++ b/Kenda Sampige/article_106.txt @@ -0,0 +1,71 @@ +ಚಿಕ್ಕಂದಿನ ಆತ್ಮೀಯ ಸ್ನೇಹಿತರು + +ಶಂಕರ ಮೂರ್ತಿ + +ಪ್ರೈಮರಿ ಸ್ಕೂಲು, ಮಿಡ್ಡ್ಲ್ ಸ್ಕೂಲು ಮತ್ತು ಹೈಸ್ಕೂಲುಗಳಲ್ಲಿ ನನ್ನ ಜತೆಯಲ್ಲಿ ಓದಿದ ಸ್ನೇಹಿತರುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ನಂತರ ಬೇರೆಬೇರೆ ಕಾಲೇಜುಗಳಲ್ಲಿ ಓದಿ, ಬೇರೆಬೇರೆ ಊರುಗಳಲ್ಲಿ ನೆಲೆಸಿದ್ದರಿಂದ, ನಾನು ದೊಡ್ಡವನಾದ ಮೇಲೂ ಸಂಪರ್ಕದಲ್ಲಿದ್ದವರು ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ. ಅವರಲ್ಲಿ ಒಬ್ಬ ಶಂಕರಮೂರ್ತಿ, ನಮ್ಮ ಮನೆಯ ಹಿಂದೆ ಇದ್ದ ಅವರ ಚಿಕ್ಕಪ್ಪ-ಚಿಕ್ಕಮ್ಮನ ಮನೆಯಲ್ಲೇ ಇದ್ದುಕೊಂಡು ಪ್ರೈಮರಿ ಸ್ಕೂಲಿನಿಂದ ಹೈಸ್ಕೂಲಿನ ಕೊನೆಯವರೆಗೂ (1945 ರವರೆಗೆ) ನನ್ನ ಜತೆ ಸಹಪಾಠಿಯಾಗಿದ್ದ. ನಂತರ 22 ವರ್ಷಗಳು ಅವನ ಸಂಪರ್ಕ ತಪ್ಪಿಹೋಗಿತ್ತು. ನಾನು ಫಿಲಿಪ್ಪೈನ್ಸ್‍ನಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯಲ್ಲಿ ಕೆಲಸ ಮಾಡಿ, 1967ರಲ್ಲಿ ಆ ಕೆಲಸ ಬಿಟ್ಟು ಭಾರತಕ್ಕೆ ಚೆನ್ನೈ ಮೂಲಕ ಸಂಸಾರ ಸಮೇತ ವಾಪಸ್ಸು ಬಂದೆ. ಆಕಸ್ಮಿಕವಾಗಿ ಚೆನ್ನೈನಲ್ಲಿ ಶಂಕರಮೂರ್ತಿ ಸಿಕ್ಕಿದ. ಆಮೇಲೆ ನಮ್ಮ ಚಿಕ್ಕಂದಿನ ಆತ್ಮೀಯ ಗೆಳೆತನವನ್ನು ಮುಂದುವರೆಸುವುದು ಸಾಧ್ಯವಾಯಿತು. ಅವನು ಒಬ್ಬ ಉತ್ತಮ ಎಲೆಕ್ಟ್ರಿಕಲ್ ಕಂಟ್ರಾಕ್ಟರಾಗಿ ಚೆನ್ನೈನಲ್ಲಿ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದ. ಆರ್ಥಿಕ ವಾಗಿ ಅನುಕೂಲವಾಗಿದ್ದ. ಅವನ ಹೆಂಡತಿ-ಮಕ್ಕಳನ್ನು ಭೇಟಿ ಮಾಡಿ, ನಾನು ನನ್ನ ಹೆಂಡತಿ ಮತ್ತು ಮಕ್ಕಳು ಹಲವಾರು ಬಾರಿ ಚೆನ್ನೈಗೆ ಹೋದಾಗ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದೆವು. 7-8 ವರ್ಷಗಳ ಹಿಂದೆ ಅವನು ತೀರಿಕೊಳ್ಳುವವರೆಗೂ ಆಗಾಗ್ಗೆ ಭೇಟಿ ಮಾಡುತ್ತಿದ್ದೆವು. ತೀರ್ಥಹಳ್ಳಿಯ ಹತ್ತಿರ ಹುಂಚದಕಟ್ಟೆಯಲ್ಲಿರುವ ಅವನ ತಂದೆ ತಾಯಿಯರ ಮನೆಗೆ ಆಗಾಗ್ಗೆ ಅವನು ಬರುತ್ತಿದ್ದ. ಹಾಗೆ ಬಂದಾಗ, ಎರಡು ಬಾರಿ ಹೆಂಡತಿ ಸಮೇತ ನಮ್ಮ ಭೀಮನಕಟ್ಟೆಯ ಮನೆಗೂ ಬಂದಿದ್ದ. + +ವೆಂಕಟೇಶರಾವ್ + +ಶಿವಮೊಗ್ಗದಲ್ಲಿ ನನ್ನ ಜತೆ 1939-1942 ರಲ್ಲಿ ಓದುತ್ತಿದ್ದ ಮತ್ತು ಆಟವಾಡುತ್ತಿದ್ದ, ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದ ಆತ್ಮೀಯ ಸ್ನೇಹಿತ ವೆಂಟೇಶರಾವ್ 1942 ರಿಂದ 1969 ರತನಕ ಬೇರೆಬೇರೆ ಊರುಗಳಲ್ಲಿ ಓದಿ ನಂತರ ಕೆಲಸ ಮಾಡುತ್ತಿದ್ದುದರಿಂದ ನನ್ನ ಜೀವನದಿಂದ ಮಾಯವಾಗಿದ್ದ. ನಾನು ಹೊರದೇಶಗಳಲ್ಲಿ 11 ವರ್ಷಗಳಿದ್ದು, ಅಲ್ಲಿಂದ ವಾಪಸ್ಸು ಬಂದ ಮೇಲೆ ಮೈಸೂರಿನ ಹತ್ತಿರದ ಕಳಲವಾಡಿಯಲ್ಲಿ 1969 ರಿಂದ 1979 ರವರೆಗೆ ನೆಲೆಸಿದ್ದಾಗ ಅವನೂ ಮೈಸೂರಿನಲ್ಲಿ ಎನ್.ಐ.ಇ. ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿದ್ದು ನಂತರ ಪ್ರಿನ್ಸಿಪಾಲನಾಗಿದ್ದ. ಆದ್ದರಿಂದ ನಮ್ಮ ಸ್ನೇಹವನ್ನು ಮುಂದುವರೆಸುವುದು ಸಾಧ್ಯವಾಯಿತು. ಮೈಸೂರಿನ ಹತ್ತಿರ ಕಳಲವಾಡಿ ಎಂಬ ಹಳ್ಳಿಯಲ್ಲಿ ನಾನು ಜಮೀನು ಕೊಂಡುಕೊಂಡು ಅದರಲ್ಲಿ ನನ್ನ ಮನೆ ಕಟ್ಟುವುದಕ್ಕೆ, ತನ್ನ ಮನೆಯನ್ನು ಕಟ್ಟುವಾಗ ಕೊಟ್ಟಷ್ಟೇ ಗಮನಕೊಟ್ಟು, ಪ್ರೀತಿ-ವಿಶ್ವಾಸಗಳಿಂದ ಮಾಡಿದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಅವನ ಹೆಂಡತಿ-ಮಕ್ಕಳೂ ನನ್ನ ಹೆಂಡತಿ-ಮಕ್ಕಳಿಗೆ ಆತ್ಮೀಯ ಸ್ನೇಹಿತರಾಗಿದ್ದರು. ನಾವು ತೀರ್ಥಹಳ್ಳಿಗೆ 1980ರಲ್ಲಿ ಹೋದ ಮೇಲೂ ನಾನು ಮೈಸೂರಿಗೆ ಹೋದಾಗ ವೆಂಕಟೇಶ ನನ್ನು ನೋಡುವುದು ಒಂದು ಮುಖ್ಯ ಕೆಲಸವಾಗಿತ್ತು. ನಂತರ ಅವನ ಅರವತ್ತರ ದಶಕದ ವಯಸ್ಸಿನಲ್ಲೇ ಹೃದಯಾಘಾತದಿಂದ ತೀರಿಕೊಂಡ ವರ್ತಮಾನ ಬಂತು. ಅವನ ಹಸನ್ಮುಖಿಯಾದ ಮೃದುವಾದ ವ್ಯಕ್ತಿತ್ವ, ನನ್ನ ಅವಶ್ಯಕತೆಗಳಿಗೆ ಸ್ಪಂದಿಸಿ ಪ್ರೀತಿಯಿಂದ ಮಾಡುತ್ತಿದ್ದ ಸಹಾಯ ಯಾವಾಗಲೂ ನನಗೆ ಸವಿಯಾದ ನೆನಪುಗಳು. ಒಮ್ಮೆ ಮೈಸೂರಿನಲ್ಲಿ ನನ್ನ ಪರ್ಸನ್ನು ಯಾರೋ ಪಿಕ್‍ಪಾಕೆಟ್ ಮಾಡಿ ಕದ್ದುಕೊಂಡಿದ್ದರು. ಅದರಲ್ಲಿ 700 ರುಪಾಯಿಗಳಿದ್ದವು. ಆ ವಿಷಯವನ್ನು ನ್ಯಾನ್ಸಿಗೆ ನಗುನಗುತ್ತ ಹೇಳಿದೆ. ನ್ಯಾನ್ಸಿಗೆ ಅಷ್ಟೊಂದು ದುಡ್ಡು ಕಳೆದುಕೊಂಡಿದ್ದ ವಿಷಯ ಕೇಳಿ ಅಳುವೇ ಬಂದುಬಿಟ್ಟಿತ್ತು. ಏನು ಮಾಡಿದರೂ ಅವಳ ದುಃಖ ಕಡಿಮೆಯಾಗಲಿಲ್ಲ. ಆಗ ನಾನು ‘ಓ, ನಾನು ಮರೆತೇ ಬಿಟ್ಟಿದ್ದೆ, ಬಸ್ನಲ್ಲಿ ಓಡಾಡುವುದಕ್ಕೆ ಮುಂಚೆ ನನ್ನ ಪರ್ಸನ್ನು ವೆಂಕಟೇಶನ ಕೈಲಿ ಕೊಟ್ಟು ಕೆಲವೇ ರುಪಾಯಿಗಳನ್ನು ಜೇಬಿನಲ್ಲಿಟ್ಟುಕೊಂಡಿದ್ದನ್ನು ಮರೆತೇಬಿಟ್ಟಿದ್ದೆ’ ಎಂದು ನಗುನಗುತ್ತಾ ಸುಳ್ಳು ಹೇಳಿದೆ. ಅದನ್ನು ಕೇಳಿ ‘ಅದು ನಿಜವಾ, ನಿಜವಾಗಿ ಅವನಿಗೆ ಕೊಟ್ಟಿದ್ದೀಯಾ’ ಎಂದು ನ್ಯಾನ್ಸಿ ನನ್ನ ಸುಳ್ಳನ್ನು ನಂಬಿ ಸಮಾಧಾನ ಮಾಡಿಕೊಂಡಳು. ನಾನು ವೆಂಕಟೇಶನಿಗೆ ಕಾಗದ ಬರೆದು ನ್ಯಾನ್ಸಿ ಕೇಳಿದರೆ ನನ್ನಂತೆ ಅವನೂ ಸುಳ್ಳು ಹೇಳಬೇಕೆಂದು ವಿನಂತಿಸಿಕೊಂಡೆ. ಅದೃಷ್ಟವಶಾತ್ ಆಗ ನಮ್ಮ ಮನೆಯಲ್ಲಿ ಟೆಲಿಫೋನಿರಲಿಲ್ಲ. + +ಸ್ವಾತಂತ್ರ್ಯ ಹೋರಾಟಗಾರನಾಗಿ + +1939 ರಲ್ಲಿ ನಾನು ಮಿಡ್ಲ್‍ಸ್ಕೂಲಿನಲ್ಲಿ ಓದುತ್ತಿದ್ದಾಗ ಅಣ್ಣನಿಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ವರ್ಗವಾಯಿತು. ಅಲ್ಲಿ ನಾನು ಸರ್ಕಾರಿ ಮೈನ್ ಮಿಡ್ಲ್‍ಸ್ಕೂಲಿನಲ್ಲಿ ಎರಡು ವರ್ಷ ಓದಿ, 1942 ರಲ್ಲಿ ಸರ್ಕಾರಿ ಹೈಸ್ಕೂಲಿನ ಮೊದಲನೆಯ ತರಗತಿಗೆ ಜೂನ್ ತಿಂಗಳಲ್ಲಿ ಸೇರಿಕೊಂಡೆ. ನಾಆಗಸ್ಟ್ ತಿಂಗಳಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಗೆ ಕರೆಕೊಟ್ಟರು. ಭಾರತದಲ್ಲಿ ಎಲ್ಲೆಲ್ಲೂ ವಿದ್ಯಾರ್ಥಿಗಳೂ ಸೇರಿ, ಎಲ್ಲ ವರ್ಗದ ಜನರಲ್ಲೂ ವಿದ್ಯುತ್ ಸಂಚಾರವಾದ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಳುವಳಿಯಲ್ಲಿ ಭಾಗವಹಿಸುವುದಕ್ಕೆ ಸ್ಫೂರ್ತಿ ಬಂತು. ನನ್ನಂತಹ ಚಿಕ್ಕವಯಸ್ಸಿನ ಹುಡುಗರ ಮೇಲೂ ಕೂಡ ಗಾಂಧೀಜಿಯವರ ಪ್ರಭಾವ ಜೋರಾಗಿದ್ದು ನಾವೆಲ್ಲ ಚಳುವಳಿಯಲ್ಲಿ ಸ್ಫೂರ್ತಿಯಿಂದ ಭಾಗವಹಿಸಿದೆವು. ಸ್ಕೂಲಿಗೆ ಸ್ಟ್ರೈಕ್‌ ಮಾಡಿ, ತ್ರಿವರ್ಣದ ಕಾಂಗ್ರೆಸ್ ಬಾವುಟ ಹಿಡಿದುಕೊಂಡು, ದೇಶಭಕ್ತಿ ಗೀತೆಗಳನ್ನು ಹಾಡುತ್ತ ಶಿವಮೊಗ್ಗದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿದ್ದೆವು. ನಾನು ಇತರರಿಗಿಂತ ಸಣ್ಣಕ್ಕಿದ್ದುದರಿಂದ, ನನ್ನ ಕೈಯಲ್ಲಿ ಬಾವುಟ ಕೊಟ್ಟು ಮೆರವಣಿಗೆಯ ಮುಂಭಾಗದಲ್ಲಿ ನಿಲ್ಲಿಸುತ್ತಿದ್ದರು. ಸರಕಾರಕ್ಕೆ ಈ ವಿಷಯ ಗೊತ್ತಾದ ಮೇಲೆ ನನ್ನ ತಂದೆಯವರಿಗೆ ನನ್ನನ್ನು ಚಳುವಳಿಯಲ್ಲಿ ಭಾಗವಹಿಸ ದಂತೆ ತಡೆಯಬೇಕೆಂಬ ಹುಕುಂ ಬಂತು. ಚಳುವಳಿಯಲ್ಲಿ ನಾನು ಭಾಗವಹಿಸಿದರೆ, ಅಣ್ಣ ತನ್ನ ಸರ್ಕಾರಿ ಕೆಲಸಕ್ಕೇ ಕುತ್ತು ಬರುವ ಸಾಧ್ಯತೆ ಇದ್ದುದನ್ನು ನನಗೆ ವಿವರಿಸಿ ಹೇಳಿ, ತಾವೂ ಸ್ವಾತಂತ್ರ್ಯ ಚಳುವಳಿಯ ಬೆಂಬಲಿಗರೆಂದೂ, ಆದರೆ ತಮ್ಮ ಸರ್ಕಾರಿ ನೌಕರಿಯಿಂದ ಬರುವ ಸಂಬಳದ ಅವಶ್ಯಕತೆ ನಮ್ಮೆಲ್ಲರ ಬದುಕಿಗೂ ಅತ್ಯವಶ್ಯಕವಾದುದ ರಿಂದ ನಾನು ಚಳುವಳಿಯಲ್ಲಿ ನೇರವಾಗಿ ಭಾಗವಹಿಸಬಾರದೆಂದು ತಿಳುವಳಿಕೆ ಕೊಟ್ಟರು. ಆಮೇಲೆ ನಾನು ಮೆರವಣಿಗೆಗಳಲ್ಲಿ ನೇರವಾದ ಪಾತ್ರ ವಹಿಸುವುದನ್ನು ನಿಲ್ಲಿಸಿದೆ. ಆದರೆ ಕ್ಲಾಸಿಗೆ ಹೋಗುತ್ತಿರುವ ಹುಡುಗರನ್ನು ತಡೆಯುವುದಕ್ಕೆ ಮಾಡುತ್ತಿದ್ದ ಪಿಕೆಟಿಂಗ್‍ನಲ್ಲಿ ಭಾಗವಹಿಸುವ ಮೂಲಕ ಚಳುವಳಿಯಲ್ಲಿ ಭಾಗವಹಿಸುವುದನ್ನು ಮುಂದುವರೆಸಿದೆ. ಒಂದು ದಿವಸ ನಾನು ಸ್ಕೂಲಿಗೆ ಹೋಗಿ ಹೆಡ್ಮೇಷ್ಟ್ರರನ್ನು “ಇವತ್ತು ಸ್ಕೂಲಿಗೆ ರಜೆ ಇದೆಯೇ?” ಎಂದು ಕೇಳಿದೆ. ಅದಕ್ಕೆ ಅವರು “ನೀವು ಸ್ಟ್ರೈಕ್ ಮಾಡೋ ಹುಡುಗರು. ನಿಮಗೆ ರಜವಾದರೇನು ಬಿಟ್ಟರೇನು” ಎಂದು ನನ್ನನ್ನು ಕೇಳಿದ್ದಕ್ಕೆ, ನಾನು “ನಾಳೆ ನಾವು ಪಿಕೆಟ್ ಮಾಡೋಕೆ ಬರಬೇಕೆ ಬೇಡವೇ ಎನ್ನುವ ಕಾರಣಕ್ಕೆ ಕೇಳಿದೆ” ಎಂದು ಹೇಳಿದೆ. ಅವರಿಗೆ ತುಂಬಾ ಕೋಪ ಬಂದು, ನನ್ನ ತಂದೆಯವರಿಗೆ ದೂರುಕೊಟ್ಟು ನನ್ನ ವರ್ತನೆಯ ವಿವರಗಳನ್ನು ಕೊಟ್ಟರಂತೆ. ತಂದೆಯವರಿಗೆ ಅದನ್ನು ಕೇಳಿ ನಗು ಬಂದು, ಅದನ್ನು ಕಷ್ಟಪಟ್ಟು ತಡೆದುಕೊಂಡರಂತೆ. ನಂತರ ಸರ್ಕಾರಿ ನೌಕರರ ಮಕ್ಕಳಾದ ನಾವೆಲ್ಲ ಕ್ಲಾಸಿಗೆ ಹೋಗಿ ಅಧ್ಯಾಪಕರ ಕಡೆಗೆ ಬೆನ್ನುಮಾಡಿ ಕುಳಿತೋ ಅಥವಾ ಬಾಯಿ ಮುಚ್ಚಿಕೊಂಡು ಶಬ್ದ ಮಾಡುತ್ತಲೋ ಅಥವಾ ಬೇರೆಬೇರೆ ರೀತಿಯಲ್ಲಿ ಗಲಾಟೆ ಮಾಡಿಯೋ ನಮ್ಮ ಪ್ರತಿಭಟನೆಯನ್ನು ತೋರಿಸುತ್ತಿದ್ದೆವು. ಒಟ್ಟಿನಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಿದ್ದ “ನಾವೆಲ್ಲ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀಜಿಯ ಅನುಯಾಯಿಗಳು” ಎನ್ನುವ ಭಾವನೆಯನ್ನು ನೆನೆಸಿಕೊಂಡರೆ ಈಗಲೂ ಸಂತೋಷ ವಾಗುತ್ತದೆ. + +ಮಹಾಜನ ಹೈಸ್ಕೂಲಿನಲ್ಲಿ + +ಮುಂದಿನ ವರ್ಷ (1943 ರಲ್ಲಿ) ಅಣ್ಣನಿಗೆ ಮೈಸೂರಿಗೆ ಆಕಾಶವಾಣಿಯ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವರ್ಗವಾಗಿದ್ದರಿಂದ ನನ್ನ ಹೈಸ್ಕೂಲು ವಿದ್ಯಾಭ್ಯಾಸದ ಕೊನೆಯ ಎರಡು ವರ್ಷ ಮೈಸೂರಿನ ಒಂಟಿಕೊಪ್ಪಲಿನಲ್ಲಿ ನಮ್ಮ ಮನೆಯ ಹತ್ತಿರವೇ ಇದ್ದ ಮಹಾಜನ ಹೈಸ್ಕೂಲಿನಲ್ಲಿ ಓದಿದ್ದೆ. ಆ ಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಅಧ್ಯಾಪಕರು ಖಾದೀಧಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟದ ಪರವಾಗಿದ್ದವರು. ಯಾರಾದರೂ ಒಬ್ಬ ಅಧ್ಯಾಪಕರು ರಜ ತೆಗೆದುಕೊಂಡಿದ್ದರೆ, ಅವರ ಬದಲಿಗೆ ಮತ್ತೊಬ್ಬರು ಬಂದಾಗ, ಅವರಲ್ಲಿ ಒಬ್ಬ ಅಧ್ಯಾಪಕರು ಷೇಕ್ಸ್‍ಪಿಯರನ ಯಾವುದಾದರೂ ನಾಟಕವನ್ನು ಓದಿ, ನಮಗೆ ಅದರ ಅರ್ಥವನ್ನು ವಿವರಿಸಿ ಹೇಳುತ್ತಿದ್ದರು. ಮತ್ತೆ ಕೆಲವರು ಗಾಂಧೀಜಿ ಯವರ ಬಗ್ಗೆಯೋ, ಸ್ವಾತಂತ್ರ್ಯ ಚಳುವಳಿಯ ಬಗ್ಗೆಯೋ, ರಾಮಕೃಷ್ಣ ಪರಮ ಹಂಸರ ಅಥವಾ ವಿವೇಕಾನಂದರ ಬಗ್ಗೆಯೋ ಪಾಠ ಮಾಡುತ್ತಿದ್ದರು. ಒಟ್ಟಿನಲ್ಲಿ ನಮ್ಮ ಶಾಲೆಯು ಸ್ವಾತಂತ್ರ್ಯ ಹೋರಾಟದ ಮತ್ತು ಅಧ್ಯಾತ್ಮದ ಪರವಾದ ವಾತಾವರಣವನ್ನು ಸೃಷ್ಟಿಸಿತ್ತು. + +ತಿಲಕ್ ಸಂಘದಲ್ಲಿ + +ನಾವು ವಾಸಮಾಡುತ್ತಿದ್ದ ಒಂಟಿಕೊಪ್ಪಲ್ ಬಡಾವಣೆಯಲ್ಲಿ ನಾವು ಕೆಲವು ಹುಡುಗರು ಸೇರಿ ತಿಲಕ್ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಪ್ರತಿ ಭಾನುವಾರ ಅಥವಾ ರಜಾದಿನಗಳಲ್ಲಿ ದೇಶಭಕ್ತಿಗೀತೆಗಳನ್ನು ಹಾಡಿಕೊಂಡು ಪ್ರಭಾತ್ ಫೇರಿ (ಬೆಳಿಗ್ಗೆಯ ಮೆರವಣಿಗೆ) ಯನ್ನು ನಡೆಸುತ್ತಿದ್ದೆವು. ಈ ಸಂಸ್ಥೆಯಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಎಚ್ ಸಿ ದಾಸಪ್ಪ ಮತ್ತು ಶ್ರೀಮತಿ ಯಶೋಧರಮ್ಮ ದಾಸಪ್ಪ ಅವರ ಮಗ ತುಳಸೀದಾಸ್ ಕೂಡ ನಮ್ಮ ಜೊತೆಗಾರನಾಗಿದ್ದ. ಅವನೂ ನಾನು ಮೆರವಣಿಗೆಯಲ್ಲಿ ಹಾಡುಗಾರರಾಗಿ ದ್ದೆವು. ಯಶೋಧರಮ್ಮ ಮತ್ತು ದಾಸಪ್ಪ ಗಾಂಧೀಜಿಯ ಆದರ್ಶಗಳನ್ನು ಪಾಲಿಸುತ್ತಿದ್ದ ಅವರ ಶಿಷ್ಯರಾಗಿದ್ದರು. + +ತುಳಸಿದಾಸನನ್ನು ಕರೆಯುವುದಕ್ಕೆ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದಾಗ ಯಶೋಧರಮ್ಮನವರು ನನ್ನನ್ನು ಅವರ ಮಗನ ಹಾಗೇ ನೋಡಿ ಕೊಳ್ಳುತ್ತಿದ್ದರು. ಅವರು ಮಂತ್ರಿಯಾಗಿದ್ದಾಗ ಕರ್ನಾಟಕ ಸರ್ಕಾರ ಪಾನನಿಷೇಧದ ವಿಷಯದಲ್ಲಿ ಗಾಂಧೀಜಿಯ ಆದರ್ಶಗಳನ್ನು ಪಾಲಿಸಲಿಲ್ಲ ಎಂಬ ಕಾರಣಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗಾಂಧೀಜಿಯ ನಿಜವಾದ ಅನುಯಾಯಿ ಎಂದು ನಮ್ಮೆಲ್ಲರಿಗೂ ಅವರ ಮೇಲಿದ್ದ ಗೌರವ, ಪ್ರೀತಿ ವಿಶ್ವಾಸಗಳು ಇಮ್ಮಡಿಯಾದವು. ಹಲವಾರು ವರ್ಷಗಳ ನಂತರ ನಾನು ಅಮೆರಿಕಾಕ್ಕೆ ಹೋಗಿ ವಾಪಸ್ಸು ಬಂದು ಮೈಸೂರಿನಲ್ಲಿ ನೆಲಸಿದಾಗ ತುಳಸಿ ‘ತುಳಸಿ ದಾಸಪ್ಪ’ ಎಂಬ ಹೆಸರಿನಲ್ಲಿ ಪಾರ್ಲಿಮೆಂಟಿನ ಮೆಂಬರ್(ಎಮ್.ಪಿ) ಆಗಿ ಚುನಾಯಿತನಾಗಿದ್ದ. ಪಾರ್ಲಿಮೆಂಟಿನ ಕೆಲಸಕ್ಕೆ ದೆಹಲಿಗೆ ಹೋಗುತ್ತಿದ್ದರೂ, ವರ್ಷದಲ್ಲಿ ಬಹುಕಾಲ ಮೈಸೂರಿನಲ್ಲೇ ಇರುತ್ತಿದ್ದುದರಿಂದ ಅವನೂ ನಾನು ಆಗಾಗ್ಗೆ ಭೇಟಿ ಮಾಡಿ ಮೊದಲಿನಂತೆಯೇ ಆಪ್ತಮಿತ್ರರಾಗಿದ್ದೆವು. 1970ರಲ್ಲಿ ನಾನು ಮೈಸೂರಿನ ಹತ್ತಿರ ನನ್ನ ತೋಟದಲ್ಲಿ ನೆಲೆಸಿದ ಮೇಲೆ, ಅವನು ಹಳ್ಳಿಹಳ್ಳಿಗಳಿಗೆ ಹೋಗಿ ತನ್ನನ್ನು ಚುನಾಯಿಸಿದ ಜನಗಳನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳು ಮತ್ತು ಅವಶ್ಯಕತೆಗಳ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾಗ ನಾನೂ ಅವನ ಜೊತೆ ಹೋಗುತ್ತಿದ್ದೆ. ದಾರಿಯಲ್ಲಿ ಅವನು ಕಲಿತಿದ್ದ ಹಿಂದೂಸ್ತಾನಿ ಶೈಲಿಯ ಹಾಡುಗಳನ್ನು ಹೇಳುತ್ತಿದ್ದ. ನನಗೂ ಹೇಳಿಕೊಡುತ್ತಿದ್ದ. ದುರ್ಗಾ ರಾಗದ ‘ಸಖಿ ಮೋರಿ ರುಮ ಝೂಮ’ ನಾನು ಅವನಿಂದ ಕಲಿತ ಒಂದು ಹಾಡು. ಈಗಲೂ ದುರ್ಗಾ ರಾಗ ನನಗೆ ತುಂಬಾ ಪ್ರಿಯವಾದ ರಾಗ. + +ನಾನು ಮೈಸೂರು ಬಿಟ್ಟು ತೀರ್ಥಹಳ್ಳಿಗೆ ಹೋದಮೇಲೆ, ಅವನು ಮತ್ತೊಮ್ಮೆ ಎಂಪಿ ಆಗದೆ ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ಅಲ್ಲಿಯೇ ನೆಲೆಸಿದ. ನಾನು ನನ್ನ ತೋಟ ಮಾರಿ ತೀರ್ಥಹಳ್ಳಿಯ ಹತ್ತಿರ ಭೀಮನಕಟ್ಟೆಯಲ್ಲಿ ನೆಲೆಸಿದ ಮೇಲೆ ನಾವಿಬ್ಬರೂ ಭೇಟಿಯಾಗಲೇ ಇಲ್ಲ. ಅವನು ಬೆಂಗಳೂರಿಗೆ ಹೋದ ಕೆಲವೇ ವರ್ಷಗಳಲ್ಲಿ ಹೃದಯಾ ಘಾತದಿಂದ ತೀರಿಕೊಂಡನೆಂಬ ವರ್ತಮಾನ ಕೇಳಿ ಮನಸ್ಸಿಗೆ ಬೇಸರವಾಯಿತು. + +ಮತ್ತೊಬ್ಬ ಆಗಿನ ಕಾಲದ ಆಪ್ತಮಿತ್ರ ತವನಪ್ಪ ಭೋಪಾಲ್ ತಿಲಕ್ ಸಂಘದ ಕಾರ್ಯದರ್ಶಿಯಾಗಿ ಅದರ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದ. ಅವರ ತಂದೆ ಒಬ್ಬ ಅನುಕೂಲಸ್ಥ ವ್ಯಾಪಾರಿಯಾಗಿ ಮಗನ ಚಟುವಟಿಕೆಗಳಿಗೆ ಧಾರಾಳವಾಗಿ ಹಣ ಒದಗಿಸುತ್ತಿದ್ದರು. ಅದನ್ನು ಬಳಸಿಕೊಂಡು ಸಂಘದ ಚಟುವಟಿಕೆಗಳಿಗೆ ಅವನೇ ಬಹುಮಟ್ಟಿಗೆ ಹಣ ಒದಗಿಸುತ್ತಿದ್ದ. ಸಿಗರೇಟು ಸೇದುವುದು ಅವನಿಗೊಂದು ಚಟವಾಗಿತ್ತು. ನಾನು ಹೈಸ್ಕೂಲು ಮುಗಿಸುವುದಕ್ಕೆ ಮುಂಚೆಯೇ, ಅವನು ಮತ್ತು ಮತ್ತೊಬ್ಬ ಸ್ನೇಹಿತ, ಯಾರು ಹೆಚ್ಚು ಸಿಗರೇಟ್ಗಳನ್ನು ಅತಿಕಡಿಮೆ ಸಮಯದಲ್ಲಿ ಸೇದುತ್ತಾರೆ ಎನ್ನುವ ಒಂದು ‘ಆಟ’ ಆಡಿ, ಅದರಲ್ಲಿ ಭೋಪಾಲ್ ಗೆದ್ದನಂತೆ. ಆದರೆ ಆ ಆಟದಿಂದ ಅವನಿಗೆ ಉಸಿರಾಟದ ತೊಂದರೆಯಾಗಿ ಕೆಲವೇ ನಿಮಿಷಗಳಲ್ಲಿ ಸತ್ತುಹೋದ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ನನ್ನ ಒಬ್ಬ ಆತ್ಮೀಯ ಸ್ನೇಹಿತನ ಜೀವನವು ಒಂದು ಕ್ಷುಲ್ಲಕ ಆಟದಲ್ಲಿ ಕೊನೆಗೊಂಡಿತು. + +ಗಾಂಧೀಜಿಯ ಆಶ್ರಮದ ಪ್ರಾರ್ಥನೆಯಲ್ಲಿ + +ನನ್ನ ಹೈಸ್ಕೂಲು ಮತ್ತು ಕಾಲೇಜಿನ ಮೊದಲ ಎರಡು ವರ್ಷಗಳಲ್ಲಿ, ನಮ್ಮ ಮನೆಯ ಹತ್ತಿರದಲ್ಲಿ ಗಾಂಧೀಜಿಯ ಮೊಮ್ಮಗ ಕಾಂತಿಲಾಲ್ ಗಾಂಧಿ ಮತ್ತು ಅವರ ಹೆಂಡತಿ ಸರಸ್ವತಿ ವಾಸವಾಗಿದ್ದರು. ಕಾಂತಿಲಾಲ್ ಅವರನ್ನು ನಾವೆಲ್ಲ ಕಾಂತಿಭಾಯ್ ಎಂದು ಕರೆಯುತ್ತಿದ್ದೆವು. ಅವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ದ್ದರು. ಅವರ ಮನೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ, ಗಾಂಧೀಜಿಯ ಆಶ್ರಮದ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಆ ಪ್ರಾರ್ಥನೆಗಳಲ್ಲಿ ನಾನು ಮತ್ತು 10-15 ಜನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದೆವು. “ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಹ ಸ್ತುನ್ವಂತಿ ದಿವ್ಯೈ ಸ್ತವೈಹಿ” ಎಂಬ ಒಂದು ಶ್ಲೋಕ, “ಯಂ ಶೈವಾಸ್ಸಮುಪಾಸತೇ ಶಿವೈತಿ ಬ್ರಹ್ಮೇತಿ ವೇದಾಂತಿನಹ, ಬೌದ್ಧಾ ಬುದ್ಧಯಿತಿ ಪ್ರಮಾಣ ಪಟವಹ ಕರ್ತೇತಿ ನೈಯಾಯಿಕಾಹ” ಎಂಬ ಮತ್ತೊಂದು ಶ್ಲೋಕ ಇತ್ಯಾದಿ ದೇವರನ್ನು ಬೇರೆ ಗುಂಪುಗಳ ಜನಗಳು ಹೇಗೆ ಬೇರೆಬೇರೆ ಹೆಸರುಗಳಿಂದ ಆರಾಧಿಸುತ್ತಾರೆ ಎಂದು ಅರ್ಥ ಕೊಡುವ ಶ್ಲೋಕಗಳನ್ನು ಮತ್ತು ಕಬೀರ್, ಮೀರಾ ಇತ್ಯಾದಿ ಭಕ್ತರ ಗೀತೆಗಳನ್ನು ನಮ್ಮ ಪ್ರಾರ್ಥನೆ ಯಲ್ಲಿ ಹಾಡುತ್ತಿದ್ದೆವು. ಎಲ್ಲ ಮತಗಳ ಬಗ್ಗೆ ಬೇರೆಬೇರೆ ನಂಬಿಕೆಗಳ ಬಗ್ಗೆ ಗಾಂಧೀಜಿ ಯವರಿಗಿದ್ದ ಗೌರವಪೂರ್ವಕ ಭಾವನೆಗಳನ್ನು ನಾವೂ ಬೆಳೆಸಿಕೊಂಡೆವು. ಸ್ಥಿತಪ್ರಜ್ಞನ ಲಕ್ಷಣಗಳ ಬಗ್ಗೆ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಹಾಡುತ್ತಿದ್ದೆವು. “ರಘುಪತಿ ರಾಘವ ರಾಜಾ ರಾಮ್, ಪತಿತ ಪಾವನ ಸೀತಾರಾಮ್, ಈಶ್ವರ-ಅಲ್ಲಾ ತೇರೆ ನಾಮ್” ಎಂದು ಸಾರುವ ಹಾಡುಗಳನ್ನು ಹೇಳಿಕೊಂಡು ಭಜನೆ ಮಾಡುತ್ತಿದ್ದೆವು. ಕಾಂತಿಭಾಯ್ ಅವರ ಮೂಲಕ ನಾವು ಗಾಂಧೀಜಿಯವರ ಶಿಷ್ಯರಾಗಿ ಬಿಟ್ಟಿದ್ದೆವು. ಖಾದಿ ಬಟ್ಟೆಗಳನ್ನೆ ಹಾಕುತ್ತಿದ್ದೆವು. ಈ ಪ್ರಾರ್ಥನೆಗಳು ನನ್ನ ಮನಸ್ಸಿಗೆ ತುಂಬಾ ಶಾಂತಿ ಕೊಡುತ್ತಿದ್ದವು. ನಾನೂ ಒಬ್ಬ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ, ಗಾಂಧೀಜಿಯ ಶಿಷ್ಯ ಎಂಬ ಉಲ್ಲಾಸಕರ ಭಾವನೆ ನನ್ನಲ್ಲಿತ್ತು. ದೇವರು ಒಬ್ಬನೆ, ಬೇರೆಬೇರೆ ಮತೀಯರು ಅವನನ್ನು ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ ಎಂಬ ಗಾಂಧೀಜಿಯ ನಂಬಿಕೆಗಳು ನನ್ನಲ್ಲಿ ಆಗ ಬೆಳೆದು ಇಂದಿಗೂ ಜೀವಂತವಾಗಿವೆ. + +ಗಾಂಧೀಜಿಯವರು ದೂರದಲ್ಲಿದ್ದುಕೊಂಡು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು, ಅವರಲ್ಲಿ ಪ್ರೀತಿಯನ್ನು ಉಕ್ಕಿಸಿಬಿಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ತಾಯಿಯ ಮೇಲೆ ಅವರು ಪ್ರಭಾವ ಬೀರಿದ್ದು ಹೀಗೆ. ಗಾಂಧೀಜಿ ಮೈಸೂರಿಗೆ ನಾನು 2 ಅಥವಾ 3 ವರ್ಷದವನಾಗಿದ್ದಾಗ ಬಂದಿದ್ದರಂತೆ. ನಾವೆಲ್ಲ ಅವರನ್ನು ನೋಡುವುದಕ್ಕೆ ಹೋಗಿದ್ದೆವಂತೆ. ಗಾಂಧೀಜಿಯವರು ಎಲ್ಲರಿಂದಲೂ ಹಣ ಸಹಾಯ ಕೋರಿದರಂತೆ. ಏನೂ ಓದಿಲ್ಲದ ಮುಗ್ಧ ಜಯಮ್ಮ ಅವರಿಗೆ ತಕ್ಷಣ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ತೆಗೆದು ಕೊಟ್ಟಳಂತೆ. ಯಾರೂ ಅದರ ಬಗ್ಗೆ ಚಕಾರ ಎತ್ತದೇ ಇದ್ದುದು ಗಾಂಧೀಜಿಯವರ ಬಗ್ಗೆ ಬಹುತೇಕ ಜನಗಳಿಗೆ ಆಗ ಇದ್ದ ಗೌರವ, ನಂಬಿಕೆ ಮತ್ತು ಭಕ್ತಿಗಳನ್ನು ತೋರಿಸುತ್ತಿತ್ತು. + +ಹೈಸ್ಕೂಲು ಮುಗಿಸಿದ ಮೇಲೆ ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ನಾನು ಆಯ್ದುಕೊಂಡಿದ್ದ ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ ಪಾಠಗಳು ಅಷ್ಟೊಂದು ಸ್ಫೂರ್ತಿಯನ್ನಾಗಲೀ, ಆನಂದವನ್ನಾಗಲೀ ಕೊಡಲಿಲ್ಲ. ಮುಖ್ಯವಾಗಿ ನಮ್ಮ ತಿಲಕ್ ಸಂಘದ ಚಟುವಟಿಕೆಗಳು, ಮತ್ತು ಕಾಂತಿಲಾಲ್ ಗಾಂಧಿಯವರ ಮನೆಯಲ್ಲಿ ನಡೆಯುತ್ತಿದ್ದ ಪ್ರಾರ್ಥನೆಗಳು ಕಾಲೇಜಿನ ವಿದ್ಯಾಭ್ಯಾಸಕ್ಕಿಂತ ಮುಖ್ಯವಾಗಿದ್ದವು. + + + +ಯುವರಾಜಾ ಕಾಲೇಜಿನಲ್ಲಿ ಎರಡನೆಯ ವರ್ಷ ಕೊನೆಯ ಎರಡು-ಮೂರು ತಿಂಗಳು ಮೈಬಗ್ಗಿಸಿ ಚೆನ್ನಾಗಿ ಓದಿಕೊಂಡಿದ್ದರಿಂದ, ಆಯ್ದುಕೊಂಡಿದ್ದ ಮೂರೂ ವಿಷಯಗಳಲ್ಲಿ (ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರ ಮೊದಲನೆಯ ದರ್ಜೆಯಲ್ಲಿ ಪಾಸು ಮಾಡುವುದು ಸಾಧ್ಯವಾಯಿತು. ರಸಾಯನಶಾಸ್ತ್ರದ ಪಾಠ ಮಾಡುತ್ತಿದ್ದ ಸಂತಾನಂ, ಪ್ರಾಣಿಶಾಸ್ತ್ರದಲ್ಲಿ ಎಲ್.ಎಸ್.ರಾಮಸ್ವಾಮಿ, ಕನ್ನಡದಲ್ಲಿ ವೆಂಕಟರಾಮಪ್ಪ, ಇಂಗ್ಲಿಷ್‍ನಲ್ಲಿ ಮೈಲಾರಿರಾವ್ ಮತ್ತು ಎಮ್.ವಿ. ಕೃಷ್ಣಸ್ವಾಮಿ ಮಾತ್ರ ಚೆನ್ನಾಗಿ ಪಾಠ ಹೇಳುತ್ತಿದ್ದರು ಎಂದು ನೆನಪು. ಮಿಕ್ಕ ಉಪಾಧ್ಯಾಯರುಗಳ ಬಗ್ಗೆ ಹೆಚ್ಚು ನೆನಪಿಲ್ಲ. + +ಯುವರಾಜಾ ಕಾಲೇಜು ನಮ್ಮ ಒಂಟಿಕೊಪ್ಪಲಿನ ಮನೆಯಿಂದ ಎರಡೂವರೆ ಮೈಲಿ ದೂರವಿತ್ತು. ಅಲ್ಲಿಗೆ ಮೊದಲ ವರ್ಷ ಪ್ರತಿನಿತ್ಯ ಸ್ನೇಹಿತರುಗಳ ಜತೆ ಹರಟೆ ಹೊಡೆದುಕೊಂಡು ಬರಿಗಾಲಿನಲ್ಲಿ ನಡೆದೇ ಹೋಗುತ್ತಿದ್ದೆವು. ಬಸ್ಸುಗಳಿಲ್ಲದ್ದರಿಂದ ಮನೆಯಿಂದ ಅಷ್ಟೇ ದೂರವಿದ್ದ ದೇವರಾಜ ಮಾರ್ಕೆಟ್ಟಿಗೂ ನಡೆದೇ ಹೋಗುತ್ತಿದ್ದೆವು. ಎರಡನೆಯ ವರ್ಷದಲ್ಲಿ ಓದುತ್ತಿದ್ದಾಗ ಸುಬ್ರಾಮು ಬೆಂಗಳೂರಿಗೆ ಬಿಎಸ್‍ಸಿ ಓದುವುದಕ್ಕೆ ಹೋಗಿ ಹಾಸ್ಟೆಲ್ ಸೇರಿಕೊಂಡಿದ್ದರಿಂದ ಅವನ ಸೈಕಲ್ ನನಗೆ ಸಿಕ್ಕಿತು. ಅಣ್ಣ ನನಗೆ ಒಂದು ಜೊತೆ ಚಪ್ಪಲಿಯನ್ನೂ ತೆಗೆಸಿಕೊಟ್ಟರು. ಆರಾಮವಾಗಿ ಬರಿಗಾಲಿನಲ್ಲಿ ನಡೆಯು ತ್ತಿದ್ದಾಗ ಕಾಲಿಗೆ ಕಲ್ಲು ಒತ್ತಿ ತೊಂದರೆಯಾದ ನೆನಪಿಲ್ಲ. ಈಗ ಬರಿಗಾಲಿನಲ್ಲಿ ಸ್ವಲ್ಪ ದೂರ ಕೂಡ ನಡೆಯುವುದೂ ತುಂಬಾ ಕಷ್ಟ. + +ಕಾಲೇಜಿಗೆ ಹೋಗುತ್ತಿದ್ದಾಗ ಜಯಮ್ಮ ನನಗೆ ಮಧ್ಯಾನ್ಹದ ತಿಂಡಿಗಾಗಿ ದಿವಸಕ್ಕೆ ನಾಲ್ಕಾಣೆ ಕೊಡುತ್ತಿದ್ದಳು. ಅದರಲ್ಲಿ ಮೂರು ಕಾಸಿಗೆ ಒಂದು ಮಸಾಲೆ ದೋಸೆ ತಿಂದು, ಮೂರು ಕಾಸಿಗೆ ಕಾಫಿ ಕುಡಿದು, ಇನ್ನೂ ಮೂರೂವರೆ ಆಣೆ ಉಳಿಯುತ್ತಿತ್ತು ಎಂದು ನನ್ನ ಅಸ್ಪಷ್ಟವಾದ ನೆನಪು. + +ಇಂಟರ್‍ಮೀಡೀಯಟ್ ಪರೀಕ್ಷೆ ಪಾಸಾದ ಮೇಲೆ 1947 ರಲ್ಲಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿ ವೈದ್ಯನಾಗಬೇಕೆಂಬ ಆಸೆಯಿತ್ತು. ಆದರೆ ಅಲ್ಲಿ ಸೀಟು ಸಿಕ್ಕದಿದ್ದುದರಿಂದ ಬೆಂಗಳೂರಿನ ಹತ್ತಿರ ಹೆಬ್ಬಾಳದಲ್ಲಿದ್ದ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ಸೇರಿಕೊಂಡು, ಅಲ್ಲ್ಲಿ ಮೂರು ವರ್ಷ ಹಾಸ್ಟೆಲಿನಲ್ಲಿದ್ದುಕೊಂಡು ಬಿ.ಎಸ್ಸಿ.(ಅಗ್ರಿ) ಡಿಗ್ರಿಗೆ ಓದಿದೆ. + +ಅಗ್ರಿಕಲ್ಚರಲ್ ಕಾಲೇಜಿನ ಹಾಸ್ಟೆಲ್ ಜೀವನ + +ಅಲ್ಲಿಯ ಹಾಸ್ಟೆಲ್ ಜೀವನ ಒಂದು ಹೊಸ ಅನುಭವವನ್ನು ಕೊಟ್ಟಿತು. ನಮ್ಮ ಸಹಪಾಠಿಗಳ ಜೊತೆ ಆತ್ಮೀಯ ಒಡನಾಟವಿತ್ತು, ಅಧಿಕಾರ ಚಲಾಯಿಸಲು ಯಾರೂ ಯಜಮಾನರಿರಲಿಲ್ಲ. ಜಗಳಗಳಿಲ್ಲ, ಪ್ರೀತಿ ವಿಶ್ವಾಸ ತುಂಬಿದ ಸ್ನೇಹಿತರುಗಳು ಅನೇಕರಿ ದ್ದರು. ಎಲ್ಲಾ ಸೇರಿದ ನಮ್ಮ ಗುಂಪು ಒಂದು ದೊಡ್ಡ ಆತ್ಮೀಯ ಅವಿಭಕ್ತ ಕುಟುಂಬ ದಲ್ಲಿದ್ದಂತಿತ್ತು. ಪ್ರತಿ ಶುಕ್ರವಾರ ರಾತ್ರಿ ಸ್ಪೆಷಲ್ ಹಬ್ಬದ ಊಟವಿರುತ್ತಿತ್ತು. ಆ ಊಟಕ್ಕೆ ನಮ್ಮ ಸಂಬಂಧಿಗಳು ಮತ್ತು ಸ್ನೇಹಿತರುಗಳನ್ನು ಅತಿಥಿಗಳಾಗಿ ಕರೆಯುವ ಅವಕಾಶ ವಿರುತ್ತಿತ್ತು. ಅಡುಗೆ ಭಟ್ಟರು ರಾಮು ಮತ್ತು ಲಕ್ಷ್ಮಣ ಎಂಬ ಉಡುಪಿಯ ಅವಳಿ-ಜವಳಿ ಹುಡುಗರು ನಮ್ಮ ಅಣ್ಣ-ತಮ್ಮಂದಿರ ಹಾಗೇ ನಮ್ಮ ಜತೆ ಅನ್ಯೋನ್ಯವಾಗಿದ್ದರು. ಮತ್ತೊಬ್ಬ ಹಿರಿಯ ಅಡುಗೆಯವರು ರಾಮಚಂದ್ರಪ್ಪ ಒಳ್ಳೆಯ ಅಡುಗೆ ಮಾಡುತ್ತಿದ್ದರೂ ನಮ್ಮೊಂದಿಗೆ ಆತ್ಮೀಯರಾಗಿರಲಿಲ್ಲ. + +ಗಾಂಧೀಜಿಯ ಆದರ್ಶಗಳನ್ನು ಮರೆತಿದ್ದು + +ಅಗ್ರಿಕಲ್ಚರಲ್ ಕಾಲೇಜಿನಲ್ಲಿದ್ದ ಎರಡನೆಯ ವರ್ಷ, ಮೈಸೂರು ಸಂಸ್ಥಾನದಲ್ಲಿ ಇನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸಬೇಕೆಂದು ಒತ್ತಾಯಿಸಲು ಮೈಸೂರು ಕಾಂಗ್ರೆಸ್ ಸಂಸ್ಥೆಯು ಹೋರಾಟ ಮಾಡುವುದಕ್ಕೆ ಕರೆ ಕೊಟ್ಟಿತು. ಹಲವಾರು ಕಡೆಗಳಲ್ಲಿ ಸತ್ಯಾಗ್ರಹಗಳು ನಡೆದ ಮೇಲೆ ಶಾಲಾ ಕಾಲೇಜುಗಳಿಗೆ ರಜಾ ಕೊಟ್ಟರು. ಹೋರಾಟದಲ್ಲಿ ಭಾಗವಹಿಸುವ ಮೊದಲ ಹೆಜ್ಜೆಯಾಗಿ, ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ತೆಗೆದುಕೊಳ್ಳದೆ ಕಾನೂನು ಉಲ್ಲಂಘಿಸಿ ನೂರಾರು ವಿದ್ಯಾರ್ಥಿಗಳು ರಾತ್ರಿಯ ರೈಲಿನಲ್ಲಿ ಪ್ರಯಾಣ ಮಾಡಿದೆವು. ಶ್ರೀರಂಗಪಟ್ಟಣದಲ್ಲಿ ನಮ್ಮನ್ನೆಲ್ಲಾ ಇಳಿಸಿ, ಅಲ್ಲಿಯ ಕೋರ್ಟಿನಲ್ಲಿ ನಮ್ಮೆಲ್ಲರಿಗೂ ಒಂದು ವಾರದ ಜೈಲು ಶಿಕ್ಷೆ ಕೊಟ್ಟರು. ಆ ಸಣ್ಣ ಊರಿನಲ್ಲಿದ್ದ ಜೈಲಿನಲ್ಲಿ ನಮ್ಮೆಲ್ಲರಿಗೂ ಸಾಕಷ್ಟು ಜಾಗವಿಲ್ಲದೆ, 2 ದಿವಸಗಳ ನಂತರ ಎಲ್ಲರನ್ನೂ ಬಿಡುಗಡೆ ಮಾಡಿದರು. ಮೈಸೂರಿನಲ್ಲಿ ನಡೆಯುತ್ತಿದ್ದ ಸತ್ಯಾಗ್ರಹದಲ್ಲಿ ಪೋಲೀಸರು ಭಾಗವಹಿಸಿದ ಹುಡುಗರನ್ನು ತುಂಬಾ ಕ್ರೂರವಾಗಿ ಹೊಡೆದು ಜೈಲಿಗೆ ಹಾಕುತ್ತಿದ್ದರು. ಲಾಕಪ್ಪಿನಲ್ಲಿ ಪೋಲೀಸರು ಸಾಲಾಗಿ ನಿಂತು ಎಲ್ಲರೂ ಹುಡುಗರಿಗೆ ಬೂಟ್ಸ್ ಕಾಲಿನಲ್ಲಿ ಒದೆಯುತ್ತಿದ್ದರಂತೆ. ನನ್ನ ಕಸಿನ್ ಪಾಪಣ್ಣಿ ಅಂತಹ ಒಂದು ಸತ್ಯಾಗ್ರಹದಲ್ಲಿ ಭಾಗವಹಿಸಲು ಒಂದು ಹಸಿರು ಶರ್ಟು ಹಾಕಿಕೊಂಡು ಹೋಗಿದ್ದ. ಕೆಲವು ಹುಡುಗರು ಪೋಲಿಸರ ಮೇಲೆ ಕಲ್ಲು ಎಸೆದರಂತೆ. ಕೆಲವರನ್ನು ಬಂಧಿಸಿ, ಲಾಟಿಯಿಂದ ಹೊಡೆದು ಪೋಲೀಸ್ ವ್ಯಾನಿನಲ್ಲಿ ತುಂಬಿದರಂತೆ. ಮಿಕ್ಕ ಹುಡುಗರನ್ನು ಅಟ್ಟಿಸಿಕೊಂಡು ಬಂದು ಹೊಡೆಯುತ್ತಿದ್ದರು. ಪಾಪಣ್ಣಿ ಅವರಿಂದ ತಪ್ಪಿಸಿಕೊಂಡು, ಮೇನ್ ರೋಡಿನಿಂದ ಅಡ್ಡರಸ್ತೆಯಲ್ಲಿದ್ದ ನಮ್ಮ ಮನೆಯ ಕಡೆ ತಿರುಗಿದ್ದನ್ನು ಮಾತ್ರ ನೋಡಿ ಮನೆಯೊಳಗೆ ನುಗ್ಗಿದ್ದನ್ನು ಪೋಲೀಸರು ನೋಡಲಿಲ್ಲ. ಪಾಪಣ್ಣಿ ಮನೆಯೊಳಗೆ ಬಂದು ತಕ್ಷಣ ಹಸಿರು ಶರ್ಟು ಬದಲಿಸಿ, ಅಟ್ಟದ ಮೇಲೆ ಕುಳಿತಿದ್ದ. ಸುಬ್ರಾಮು ಮನೆಯ ಎದುರಿಗೆ ನಿಂತಿದ್ದ. ಪೋಲೀಸರು ಸುಬ್ರಾಮುವನ್ನು ಹಸಿರು ಶರ್ಟು ಹಾಕಿಕೊಂಡಿದ್ದ ಹುಡುಗ ನಿಮ್ಮ ಮನೆಗೆ ಬಂದನೇ ಎಂದು ಕೇಳಿದ್ದಕ್ಕೆ ಸುಬ್ರಾಮು ‘ಈಗ ತಾನೇ ಹಲವರು ನಮ್ಮ ಅಡ್ಡ ರಸ್ತೆಯಿಂದ ಇನ್ನೊಂದು ಮೇನ್ ರೋಡಿನ ಕಡೆಗೆ ಓಡಿಹೋದರು. ಅದರಲ್ಲಿ ಒಬ್ಬ ಹಸಿರು ಶರ್ಟಿನವನೂ ಇದ್ದನೋ ಏನೊ’ ಎಂದು ಬಹಳ ನಂಬಿಕೆ ಬರುವ ರೀತಿಯಲ್ಲಿ ಹೇಳಿದ. ಪೋಲೀಸರು ನನ್ನ ಒಬ್ಬ ಸ್ನೇಹಿತನಿಗೆ ಲಾಠಿಯಿಂದ ಹೊಡೆದು ತಲೆ ಒಡೆದಿದ್ದರು. ಇದನ್ನೆಲ್ಲಾ ನೋಡಿ, ನನಗೆ ಏನಾದರೂ ಮಾಡಿ ಪೋಲೀಸ್ ವ್ಯಾನನ್ನು ಬೀಳಿಸಿ ನಮ್ಮ ಕೋಪ ತೋರಿಸಬೇಕೆಂಬ ಉತ್ಕಟವಾದ ಭಾವನೆಗಳು ಬಂದವು. ಆ ಭಾವನೆಗಳ ಅಮಲಿನಲ್ಲಿ ಗಾಂಧೀಜಿಯ ಅಹಿಂಸಾತ್ಮಕ ಹೋರಾಟದ ಆದರ್ಶಗಳು ತಾತ್ಕಾಲಿಕವಾಗಿ ಹಾರಿಹೋದವು. ನನ್ನ ಸಲಹೆಯಂತೆ ನಾವು 8-10 ಹುಡುಗರು ಸೇರಿ, ರಾತ್ರಿ ಹೊತ್ತಿನಲ್ಲಿ ಪೋಲೀಸ್ ವ್ಯಾನು ಬರುವ ರಸ್ತೆಯಲ್ಲಿ ಒಂದು ಅಥವಾ ಒಂದೂವರೆ ಅಡಿ ಅಗಲದ ಹೊಂಡ ಹೊಡೆದು, ಪೇಪರುಗಳನ್ನು ಹಾಸಿ, ಮೇಲೆ ಮಣ್ಣನ್ನು ಹೊಂಡ ಕಾಣದಂತೆ ಮುಚ್ಚಿ, ಎಲ್ಲರೂ ಮನೆ ಸೇರಿಕೊಂಡ ಮೇಲೆ, ಸ್ವಲ್ಪ ಗಲಾಟೆ ಮಾಡಿ ಪೋಲೀಸ್ ವ್ಯಾನು ಬರಲು ಪ್ರೇರೇಪಿಸುವುದಕ್ಕೆ, ಬೋಲೋ ಭಾರತ್ ಮಾತಾಕಿ ಜೈ ಅಂತ ಕೂಗುವ ಯೋಜನೆ ಹಾಕಿಕೊಂಡೆವು. ಆ ಯೋಜನೆಯ ಬಗ್ಗೆ ಮಾತಾಡಲು ಬೆಳಿಗ್ಗೆ ಒಂದು ಸೀಕ್ರೆಟ್ ಮೀಟಿಂಗ್ ಕರೆದಿದ್ದೆವು. ಆ ಮೀಟಿಂಗ್ ಬಗ್ಗೆ ಒಬ್ಬ ಹುಡುಗ ರಸ್ತೆಯ ಒಂದು ಕೊನೆಯಲ್ಲಿ ನಿಂತುಕೊಂಡು ರಸ್ತೆಯ ಮತ್ತೊಂದು ಕೊನೆಯಲ್ಲಿದ್ದ ಹುಡುಗನಿಗೆ ‘ಗೋಪಾಲಾ ಸಾಯಂಕಾಲ ಆರು ಗಂಟೆಗೆ ಸೀಕ್ರೆಟ್ ಮೀಟಿಂಗ್, ನಿಮ್ಮಣ್ಣನನ್ನೂ ಕರೆದುಕೊಂಡು ಬಾ’ ಅಂತ ಕೂಗಿ ಹೇಳಿದ್ದ. ರಾತ್ರಿ ಹನ್ನೊಂದು ಗಂಟೆಗೆ ಸುಮಾರು 10 ಹುಡುಗರು, ಪಿಕಾಸಿ, ಹಾರೆ ಇತ್ಯಾದಿ ಆಯುಧಗಳನ್ನು ತೆಗೆದುಕೊಂಡು ಬರಬೇಕೆಂದು ನಿರ್ಧರಿಸಿದ್ದೆವು. ಹತ್ತೂ ಮುಕ್ಕಾಲಿಗೆ ನಿದ್ದೆ ಮಾಡುತ್ತಿದ್ದ ಪಾಪಣ್ಣಿಯನ್ನು ಬಹಳ ಕಷ್ಟ ಪಟ್ಟು ಎಬ್ಬಿಸಿದೆ. ನಾವಿಬ್ಬರೂ ಪಿಕಾಸಿ ಹಾರೆ ಇತ್ಯಾದಿಗಳನ್ನು ತೆಗೆದುಕೊಂಡು ಹೊಂಡ ತೋಡಬೇಕೆಂದಿದ್ದ ಜಾಗಕ್ಕೆ ಹೋದೆವು. ಬೇರೆ ಒಬ್ಬನೂ ಬಂದಿರಲಿಲ್ಲ. ಗಾಂಧೀಜಿಯ ಬೋಧನೆಗೆ ವಿರುದ್ಧ ಹೋಗುವ ಆಸೆ ಅಲ್ಲಿಗೇ ಮುಕ್ತಾಯ ವಾಯಿತು. ಮುಗ್ಧ ಹುಡುಗರ ಸೀಕ್ರೆಟ್ ಮೀಟಿಂಗಿನ ಬಗ್ಗೆ ಪೋಲೀಸರಿಗೆ ಎಲ್ಲಾ ಗೊತ್ತಿತ್ತಂತೆ. ಏನಾದರೂ ಹೊಂಡ ಹೊಡೆದಿದ್ದರೆ, ಎಲ್ಲರಿಗೂ ಹೊಡೆದು ಬುದ್ಧಿ ಕಲಿಸುತ್ತಿದ್ದರು ಎಂಬುದು ಕಾಲಕ್ರಮೇಣ ನಮಗೆ ಗೊತ್ತಾಯಿತು. ಅಹಿಂಸಾತ್ಮಕ ಹೋರಾಟ ದಲ್ಲೇ ಸುಮಾರು ಜನ ಸತ್ತಿದ್ದರು. ಆದರೆ ಪೋಲೀಸರು ಮತ್ತು ಆಡಳಿತ ವರ್ಗದವರು, ನಮ್ಮ ಹೋರಾಟ ಹಿಂಸಾತ್ಮಕವಾಗಿದ್ದರೆ ನಮ್ಮ ಹಿಂಸೆಯ ಪ್ರಚೋದನೆಯಿಂದಲೇ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜನಗಳನ್ನು ಸಾಯಿಸುತ್ತಿದ್ದರು ಎಂಬ ವಿಷಯ ಕಾಲಕ್ರಮೇಣ ನನಗೆ ಅರ್ಥವಾಯಿತು. + +ಆತ್ಮೀಯ ಸ್ನೇಹಿತರು + +ನಮ್ಮ ಡಿಗ್ರಿ ಕಾಲೇಜು ನಾನು ಸೇರುವುದಕ್ಕೆ ಒಂದು ವರ್ಷ ಮುಂಚೆ ಶುರುವಾಗಿತ್ತು. ನಮ್ಮದು ಎರಡನೆಯ ಬ್ಯಾಚು. ಈ ಎರಡು ಬ್ಯಾಚಿನ ವಿದ್ಯಾರ್ಥಿಗಳು ನಾವೆಲ್ಲ ಎರಡು ಮೂರು ವರ್ಷಗಳು ಒಟ್ಟಿಗೇ ಇದ್ದುದರಿಂದ ಹಲವಾರು ವಿದ್ಯಾರ್ಥಿಗಳು ನನಗೆ ತುಂಬಾ ಆತ್ಮೀಯ ಸ್ನೇಹಿತರುಗಳಾಗಿಬಿಟ್ಟರು. ಅವರಲ್ಲಿ ಕೃಷ್ಣಸ್ವಾಮಿರಾವ್ ಎಂಬಾತ ಒಳ್ಳೆಯ ಕರ್ನಾಟಿಕ್ ಕ್ಲಾಸಿಕಲ್ ಹಾಡುಗಾರ ಮತ್ತು ನಟ. ಯಾವಾಗಲೂ ಹಾಡನ್ನು ಗುನುಗುತ್ತ ತಮ್ಮದೇ ಲೋಕದಲ್ಲಿ ಇರುತ್ತಿದ್ದರು. ನಾನು ಡಿಗ್ರಿ ಮುಗಿಸಿ ಕಾಲೇಜು ಬಿಟ್ಟು, ದೆಹಲಿಗೆ ಎಮ್.ಎಸ್ಸಿ ಮಾಡಲು ಹೋದನಂತರ ಅವರ ಸಂಪರ್ಕ ತಪ್ಪಿ ಹೋಯಿತು. ಹಲವಾರು ವರ್ಷಗಳ ನಂತರ ಅವರು ಆತ್ಮಹತ್ಯೆ ಮಾಡಿಕೊಂಡರೆಂದು ಕೇಳಿ ಮನಸ್ಸಿಗೆ ಬೇಜಾರಾಯಿತು. ಜಡೆ ಶ್ರೀನಿವಾಸಮೂರ್ತಿ ಎಂಬ ಸ್ನೇಹಿತರು ಹೆಬ್ಬಾಳದ ಅಗ್ರಿಕಲ್ಚರಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಇತ್ತೀಚೆಗೆ ತೀರಿ ಕೊಳ್ಳುವವರೆಗೂ ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಡಾ. ಆರ್. ದ್ವಾರಕಿನಾಥ್‍ರವರು ಅದೇ ಯೂನಿವರ್ಸಿಟಿಯ ವೈಸ್‍ಛಾನ್ಸೆಲರ್ ಆಗಿದ್ದು ಇತ್ತೀಚೆಗೆ ತೀರಿಕೊಂಡರು. ಡಾ. ರಾಮಕೃಷ್ಣ ಮಧ್ಯಪ್ರದೇಶದಲ್ಲಿ ವ್ಯವಸಾಯದ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಂತರ ವಲ್ರ್ಡ್ ಬ್ಯಾಂಕಿನಲ್ಲಿ ಕೆಲಸ ಮಾಡಿ ಅಮೇರಿಕದಲ್ಲಿ ನೆಲೆಸಿ ಅವರು ಕೂಡ ಇತ್ತೀಚೆಗೆ ತೀರಿಕೊಂಡರು. ಹಾಸ್ಟೆಲಿನಲ್ಲಿ ನನ್ನ ರೂಂಮೇಟುಗಳಾಗಿದ್ದ ನನ್ನ ಚಿಕ್ಕಮ್ಮನ ಮಗ ಶ್ರೀಕಂಠು ಮತ್ತು ಮತ್ತೊಬ್ಬ ಅದೇ ಹೆಸರಿನ ಕೆ.ಆರ್. ಶ್ರೀಕಂಠಯ್ಯ ಎಂಬಿಬ್ಬರು ತುಂಬಾ ಹತ್ತಿರದ ಅಣ್ಣ ತಮ್ಮಂದಿರ ಹಾಗೇ ಇದ್ದು ಆತ್ಮೀಯ ಮಿತ್ರರಾಗಿದ್ದರು. ಶ್ರೀಕಂಠಯ್ಯ ಕ್ಲಾಸಿನಲ್ಲಿ ಯಾವಾಗಲೂ ನೋಟ್ಸ್‍ಗಳನ್ನು ಚೆನ್ನಾಗಿ ಬರೆದುಕೊಳ್ಳುತ್ತಿದ್ದನು. ಅವನ ನೋಟ್ಸ್‍ಗಳನ್ನು ಓದಿಕೊಂಡೇ ನಾನು ಕೊನೆಯ ವರ್ಷದಲ್ಲಿ ಕಾಲೇಜಿಗೆ ಮೂರನೆಯ ಸ್ಥಾನದಲ್ಲಿ ಉತ್ತೀರ್ಣನಾಗುವುದು ಸಾಧ್ಯವಾಯಿತು.ನಮ್ಮ ಕಾಲೇಜಿನ ಆಗಿನ ಪಾಠಪ್ರವಚನಗಳು ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಕೆಲಸ ಮಾಡುವುದಕ್ಕೆ ತಯಾರು ಮಾಡಿತ್ತೇ ಹೊರತು ಒಬ್ಬ ವ್ಯವಸಾಯಗಾರನಾಗಿ ಕೆಲಸ ಮಾಡುವುದಕ್ಕೆ ತಯಾರು ಮಾಡುವಂತಿರಲಿಲ್ಲ ಎಂಬುದು ಮುಂದೆ ನಾನು ವ್ಯವಸಾಯಗಾರನಾಗಿ ಕೆಲಸ ಮಾಡಲು ಶುರು ಮಾಡಿದ ಮೇಲೆ ಮನದಟ್ಟಾಯಿತು. + +ಅಧ್ಯಾತ್ಮದ ಬಗ್ಗೆ ಆಸಕ್ತಿ + +ಅಗ್ರಿಕಲ್ಚರಲ್ ಕಾಲೇಜಿನ ಪಾಠಗಳಿಗಿಂತ ಹೆಚ್ಚು ಆಸಕ್ತಿ, ದೇವರ ಬಗ್ಗೆ ತೀವ್ರ ಆಸಕ್ತಿ ನನ್ನಲ್ಲಿ ಹುಟ್ಟಿತ್ತು. ಸ್ವಾಮಿ ವಿವೇಕಾನಂದರವರ, ಏಳು ಸಂಪುಟಗಳಲ್ಲಿದ್ದ, ಎಲ್ಲ ಬರವಣಿಗೆಗಳನ್ನೂ ತುಂಬಾ ಆಸ್ತೆಯಿಂದ ಓದಿ ಮುಗಿಸಿದೆ. ಜತೆಗೆ ಸರ್ ಎಸ್ ರಾಧಾಕೃಷ್ಣನ್ ಬರೆದ ‘ದಿ ಹಿಂದೂ ವ್ಯೂ ಆಫ್ ಲೈಫ್’, ‘ಎನ್ ಐಡಿಯಲಿಸ್ಟ್ಸ್ ವ್ಯೂ ಆಫ್ ಲೈಫ್’, ರೊಮೆಯ್ನ್ ರೋಲನ್ಡ್ ಬರೆದ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಮತ್ತು ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನೂ ಓದಿ ಉಪನಿಷತ್ತುಗಳಲ್ಲಿ ವಿವರಿಸಿರುವ ಆಧ್ಯಾತ್ಮಿಕ ಅನುಭಾವವನ್ನು ಪಡೆದುಕೊಳ್ಳುವುದಕ್ಕೆ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಬಗ್ಗೆ ಯೋಚನೆಗಳು ಕೂಡ ಬಂದಿದ್ದವು. ಜ್ಞಾನಯೋಗ ಮತ್ತು ರಾಜಯೋಗಗಳನ್ನು ಅಭ್ಯಾಸ ಮಾಡಿದವರಲ್ಲಿ ದೈವಸಾಕ್ಷಾತ್ಕಾರ ದೊರಕುವುದು ಕೆಲವೇ ಜನರಿಗೆ ಮಾತ್ರ ಎಂಬುದನ್ನು ವಿವೇಕಾನಂದರ ಪುಸ್ತಕಗಳನ್ನು ಓದಿದ ಮೇಲೆ, ಹಾಗೆ ದೊರಕದಿದ್ದವರು ಈ ಜೀವನದಲ್ಲಿ ಸರಳವಾಗಿ ಮತ್ತು ಸುಲಭವಾಗಿ ಉತ್ತಮ ಮಾನವೀಯ ಸಂಬಂಧಗಳಲ್ಲಿ ದೊರಕುವ ಆನಂದಗಳಿಂದಲೂ ವಂಚಿತರಾಗುತ್ತಾರೆ ಎಂದು ನನಗನ್ನಿಸಿತು. ಹಿಮಾಲಯಕ್ಕೆ ಹೋಗುವುದರ ಬದಲು ಈ ಸಂಸಾರದಲ್ಲಿದ್ದುಕೊಂಡೆ ಪ್ರೀತಿ ಮತ್ತು ಸ್ನೇಹಗಳ ಮೂಲಕ ದೈವಸಾಕ್ಷಾತ್ಕಾರ ಪಡೆದುಕೊಳ್ಳಬೇಕೆಂದು ಆಗ ನಿರ್ಧರಿಸಿಕೊಂಡೆನು. ಸ್ವಾರ್ಥರಹಿತ ಪ್ರೀತಿ- ಸ್ನೇಹಗಳು, ಕ್ಷಮಾಗುಣ, ಇತರರ ಕಷ್ಟಗಳಿಗೆ ಸ್ಪಂದಿಸುವುದು, ಕೋಪ, ದ್ವೇಷ, ಅಸೂಯೆ ಇತ್ಯಾದಿ ನಕಾರಾತ್ಮಕ ಗುಣಗಳನ್ನು ವರ್ಜಿಸುವುದು ಇತ್ಯಾದಿಗಳೇ ದೈವೀಗುಣಗಳು ಮತ್ತು ಅವುಗಳನ್ನು ಬೆಳೆಸಿಕೊಂಡರೆ ದೊರಕುವ ಆನಂದವೇ ದೈವಾನುಭವಕ್ಕೆ ಅತಿಹತ್ತಿರ ಎನ್ನುವ ನಂಬಿಕೆ ನನ್ನಲ್ಲಿ ಆಗ ಬೆಳೆದು ಇಂದಿಗೂ ಜೀವಂತವಾಗಿದೆ. + +ಕಾಶಿಯಲ್ಲಿ + +ನನ್ನ 21ನೆಯ ವರ್ಷದಲ್ಲಿ (1950 ನೇ ಇಸವಿಯಲ್ಲಿ) ನನ್ನ ಬಿ.ಎಸ್ಸಿ(ಅಗ್ರಿ) ಡಿಗ್ರಿ ಮುಗಿದ ಮೇಲೆ, ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ನನಗಿಷ್ಟವಾದ ಸಸ್ಯಗಳ ವೈರಸ್ ಕಾಯಿಲೆಗಳ ಬಗ್ಗೆ ಎಮ್.ಎಸ್ಸಿ(ಅಗ್ರಿ) ಡಿಗ್ರಿಗೆ ಓದುವುದಕ್ಕೆ ಹೋದೆನು. ಕಾಶಿ ಪಟ್ಟಣದಲ್ಲಿ ವಿಶ್ವನಾಥನ ದೇವಾಲಯಕ್ಕೆ ಎಲ್ಲಕ್ಕಿಂತ ಮೊದಲು ಭೇಟಿ ಕೊಟ್ಟೆನು. ಅಲ್ಲಿಯ ಪಂಡರು ದೇವರ ಹೆಸರಿನಲ್ಲಿ ಎಲ್ಲರನ್ನೂ ಸುಲಿಗೆ ಮಾಡುತ್ತಿದ್ದುದನ್ನು ಕಂಡು ಬೇಸರವಾಯಿತು. ಜನಗಳು ನದಿಯಲ್ಲಿ ಸ್ನಾನಮಾಡಿ ಒದ್ದೆ ಬಟ್ಟೆಯಲ್ಲೇ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ಅಭ್ಯಾಸದಿಂದ ದೇವಸ್ಥಾನದ ಒಳಗೆಲ್ಲ ಕೆಸರು ತುಂಬಿಕೊಂಡಿತ್ತು. ಇವೆರಡು ವಿಷಯಗಳು ದೇವಸ್ಥಾನದಲ್ಲಿರಬೇಕಾದ ಪವಿತ್ರವಾದ ವಾತಾವರಣವನ್ನು ಕಲುಷಿತ ಗೊಳಿಸಿದ್ದವು. + + + +ಕಾಶಿಯಲ್ಲಿ ಒಮ್ಮೆ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದೆ. ಗಾಡಿಯ ಚಾಲಕನು ಸುಶ್ರಾವ್ಯವಾಗಿ ಹಿಂದೂಸ್ತಾನಿ ಕ್ಲಾಸಿಕಲ್ ಶೈಲಿಯಲ್ಲಿ ಕೊಳಲು ಊದುತ್ತ ನನ್ನನ್ನು ಕರೆದುಕೊಂಡು ಹೋಗಿದ್ದು ಒಂದು ವಿಶಿಷ್ಟವಾದ ಅನುಭವವಾಗಿತ್ತು. ಕರ್ನಾಟಕ ದಲ್ಲಿ ಕ್ಲಾಸಿಕಲ್ ಸಂಗೀತವು ಕೆಲವು ಮೇಲ್ವರ್ಗದವರಿಗೆ ಸೀಮಿತವಾಗಿದೆ. ಕುದುರೆ ಗಾಡಿ ಹೊಡೆಯುವವರು, ಗಾರೆ ಕೆಲಸದವರು ಇತ್ಯಾದಿ ಸಾಧಾರಣ ಜನಗಳು ಕ್ಲಾಸಿಕಲ್ ಸಂಗೀತ ಹಾಡುವುದನ್ನು ನಾನೆಲ್ಲೂ ಕೇಳಿರಲಿಲ್ಲ. ಕಾಶಿಯಲ್ಲಿ ಅನೇಕ ಸಾಧಾರಣ ಜನಗಳು ಕೂಡ ಕ್ಲಾಸಿಕಲ್ ಸಂಗೀತವನ್ನು ಹಾಡುತ್ತಿದ್ದದ್ದು ನನಗೊಂದು ಅಪರೂಪದ ಸಂತೋಷಕರ ಅನುಭವವಾಗಿತ್ತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_107.txt b/Kenda Sampige/article_107.txt new file mode 100644 index 0000000000000000000000000000000000000000..b3b8d0cef64e87566d5150b3d62668836d02df75 --- /dev/null +++ b/Kenda Sampige/article_107.txt @@ -0,0 +1,21 @@ +ಬಾಲ್ಯವೆಂಬುದು ಅನುಭವಗಳ ಖಜಾನೆ. ಕತೆಗಳ ಕಣಜ. ಬಹುಷಃ ನಮ್ಮಗಳ ಯಾರ ಬಾಲ್ಯವೂ ಇದಕ್ಕೆ ಹೊರತಾಗಿಲ್ಲ ಅಂತನ್ನಿಸುತ್ತದೆ. ಆ ಕಾಲಕ್ಕೆ ಬಾಲ್ಯ ನಮಗೆ ಕೊಟ್ಟ ಖುಷಿ, ಸಿಕ್ಕ ನೋವು, ಇನ್ನು ಹೇಳಿಕೊಳ್ಳಲಾಗದ ಅನೇಕ ಅಚ್ಚರಿಗಳು ಮುಪ್ಪರಿಗೊಂಡು ನಮ್ಮ ವ್ಯಕ್ತಿತ್ವವನ್ನು ರೂಪುಗೊಳಿಸುತ್ತಲೇ ಇರುತ್ತದೆ. ಟಿ.ವಿ., ಮೊಬೈಲ್, ಹೀಗೆ ಅಂತರ್ಜಾಲದ ಕಿಟಕಿಯೊಳಗೆ ಕಣ್ಣು ಕೀಲಿಸಿ ಕಳೆದುಹೋಗುತ್ತಿರುವ ನಮ್ಮ ಇಂದಿನ ಮಕ್ಕಳನ್ನು ನೋಡುವಾಗ ಯಾಕೋ ಅವರ ಕುರಿತು ಕನಿಕರ ಉಕ್ಕಿ, ನಮ್ಮ ಬಾಲ್ಯ ನೆಚ್ಚಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ ನಮ್ಮ ಮಕ್ಕಳಿಗೆ ನಮ್ಮ ಬಾಲ್ಯದ ಕತೆಗಳು ಕಟ್ಟುಕತೆಗಳಂತೆ ಗೋಚರಿಸುವ ಸಂಭವನೀಯತೆ ಹೆಚ್ಚಿರುವ ಕಾರಣ, ಜೊತೆಗೆ ಅವರಿಗೆ ಅವುಗಳ ಕುರಿತಾಗಿ ಅಷ್ಟೊಂದು ಆಸಕ್ತಿಯಿರದ ಕಾರಣ ಬಹುಷಃ ನಮ್ಮ ಬಾಲ್ಯ ನಮಗೆ ಇಷ್ಟ ಆದ ಹಾಗೆ ಪ್ರಸ್ತುತ ವಾತಾವರಣದಲ್ಲಿ ಅವರ ಬಾಲ್ಯ ಅವರಿಗೆ ಆಪ್ಯಾಯಮಾನವಾಗಿ ತೋರುತ್ತಿದೆಯೋ ಏನೋ? ಅದೇನೇ ಇರಲಿ, ನಾಗರೇಖಾರವರ ಇಡೀ ಬಾಲ್ಯದ ಕಥಾಬುತ್ತಿಯನ್ನು ಬಿಚ್ಚಿದಾಗ ನಮ್ಮ ಇಂದಿನ ಮಕ್ಕಳ ಬಾಲ್ಯ ಕಣ್ಣೆದುರಿಗೆ ಬಂತು ಅಷ್ಟೆ. ಪ್ರತಿದಿನವೂ ಒಂದೊಂದು ಕತೆಯಾಗುತ್ತಿದ್ದ ಬದುಕು ಮತ್ತು ಯಾವುದೋ ಕತೆಗಳಿಗೆ ಅಂತರ್ಜಾಲದಲ್ಲಿ ನಿರ್ಭಾವುಕರಾಗಿ ತಡಕುವ ನಮ್ಮ ಮಕ್ಕಳ ಬಾಲ್ಯವೂ… + +(ನಾಗರೇಖಾ ಗಾಂವಕರ) + +ನಾಗರೇಖಾರ ಪ್ರತಿಯೊಂದು ಪ್ರಬಂಧಗಳನ್ನು ಓದುವಾಗಲೂ ಕೂಡಾ ನಾನು ನನ್ನ ಬಾಲ್ಯಕ್ಕೆ ಹೊರಳಿಕೊಳ್ಳುತ್ತಿದ್ದೆ. ಅವೇ ನದಿ, ಮಳೆಗಾಲ, ಬಾಲ್ಯದ ಕೆಲಸ, ಅದೇ ತುಂಟಾಟದ ಅನೇಕ ಕತೆಗಳು.ಆದರೆ ಅದು ನಮ್ಮನ್ನು ಕಾಡಿದ ಪರಿ, ನಮ್ಮ ಅನುಭವಕ್ಕೆ ದಕ್ಕಿದ ರೀತಿ ಬೇರೆಯದೇ ಬಗೆಯಲಿ. ಅಬ್ಬಾ! ಬಾಲ್ಯ ಎಷ್ಟೊಂದು ದಟ್ಟವಾಗಿ ನಮ್ಮೆದುರು ತೆರೆದುಕೊಂಡಿತ್ತಲ್ಲ? ಬಾಲ್ಯಕ್ಕಿಂತ ದೊಡ್ಡ ವಿಶ್ವವಿದ್ಯಾನಿಲಯ ಬೇರೆ ಯಾವುದೂ ಇಲ್ಲ ಅನ್ನುವುದು ಎಷ್ಟು ಸತ್ಯದ ಮಾತು. ಅಲ್ಲಿ ದಕ್ಕಿದ ಅನುಭವಗಳ ಗರಡಿಯಲ್ಲಿ ಪಳಗಿ ಬಂದವರು ನಾವೆಲ್ಲ. ಆದರೆ ಆ ಹೊತ್ತಿನಲ್ಲಿ ಅದರ ಕುರಿತು ಕಿಂಚಿತ್ತು ಅರಿವೂ ಇರಲಿಲ್ಲವಲ್ಲ ಅಂತ ಈಗ ಅಚ್ಚರಿ ಹುಟ್ಟಿ ಮೆಲುಕು ಹಾಕುವಂತೆ ಮಾಡುತ್ತದೆ. + +ಲೇಖಕಿಯ ಇಲ್ಲಿಯ ಎಲ್ಲ ಪ್ರಬಂಧಗಳೂ ಕೂಡ ಬಾಲ್ಯದ ಅನಾವರಣವೇ. ಪ್ರತಿಯೊಂದು ಪ್ರಬಂಧದೊಳಗೂ ರೋಚಕವೂ, ಕುತೂಹಲಕರವಾದ ಘಟನೆಗಳ ಚಿತ್ರಣವಿದೆ. ಎಷ್ಟೆ ಬರೆದುಕೊಂಡರೂ ಇನ್ನೂ ಹೇಳಲು ಅದೆಷ್ಟೋ ಬಾಕಿ ಇದೆ ಅನ್ನುವಷ್ಟರ ಮಟ್ಟಿಗೆ ಇಲ್ಲಿಯ ಬಾಲ್ಯದ ಕತೆಗಳು ಪಿಸುಗುಟ್ಟಿದಂತಾಗುತ್ತದೆ. ಇದು ಲಲಿತ ಪ್ರಬಂಧವೂ, ಅನುಭವ ಕಥನವೂ ಯಾವುದೂ ಆಗಬಲ್ಲದು ಅಂತನ್ನಿಸುತ್ತದೆ. ಬರಹದ ತುಂಬಾ ಬಾಲ್ಯದ ಗಳಿಗೆಗಳ ಮೊಗೆಮೊಗೆದು ಕೊಟ್ಟರೂ ವಸ್ತು ವಿಷಯಗಳು ಇಲ್ಲಿ ಪುನರಾವರ್ತನೆಯಾಗದಿರುವುದೇ ವಿಶೇಷ. ಸ್ವತಃ ಆಕೆ ಕತೆಗಾರ್ತಿಯಾಗಿರುವ ಕಾರಣ ಹೆಚ್ಚಿನ ಸಂಗತಿಗಳು ಕಥನ ಮಾದರಿಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ. + +ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು. ಹಾಗೆಯೇ ಬಾಲ್ಯ ಕೊಟ್ಟ ಕೆಲವೊಂದು ಕಷ್ಟದ ಕ್ಷಣಗಳಿಗೆ ಇಲ್ಲಿ ಲೇಖಕಿ ಯಾರ ಮೇಲೂ ಗೂಬೆ ಕೂರಿಸುವುದಿಲ್ಲ, ಆತ್ಮಾನುಕಂಪನವನ್ನು ಕೂಡ ಬಯಸುವುದಿಲ್ಲ. ಆಗಿನ ಬದುಕಿನ ವಾತಾವರಣವೇ ಹಾಗಿತ್ತು ಎಂಬುದನ್ನು ಅಷ್ಟೇ ಸಹಜ ತಣ್ಣಗೆ ಹೇಳಿ ಮುಗಿಸುತ್ತಾರೆ. ಕೆಲವರು ನಮ್ಮ ಬಾಲ್ಯದಲ್ಲಿ ನಾವು ಎಷ್ಟೆಲ್ಲಾ ಅನುಭವಿಸಿದ್ದೇವೆ ಅಂತ ಪದೇ ಪದೇ ಸಂದರ್ಭ ಸಿಕ್ಕಾಗಲೆಲ್ಲಾ ಗೋಳಾಡುವುದನ್ನು ಗಮನಿಸಿದ್ದೇವೆ. ಆ ನಿಟ್ಟಿನಲ್ಲಿ ಹೇಳುವುದಾದರೆ ನಾಗರೇಖಾರ ಪ್ರಬಂಧಗಳು ಸಮಚಿತ್ತತೆಯಿಂದ ಮಾತನಾಡತೊಡಗುತ್ತವೆ. ಅವರಿಗೆ ಬಾಲ್ಯದ ಮೇಲೆ ಯಾವುದೇ ದೋಷಾರೋಪಗಳು ಇಲ್ಲ. ಸುಂದರ ಬಾಲ್ಯವೊಂದು ಹಿಡಿದಿಟ್ಟುಕೊಳ್ಳಲಾಗದೆ ಬೆರಳ ಸಂದಿಯಿಂದ ಹಾಗೇ ಜಾರಿ ಹೋಯಿತಲ್ಲ ಅಂತ ಕಳವಳಿಸಿದಂತೆ ತೋರುತ್ತದೆ. + +ಬಾಲ್ಯದಲ್ಲಿ ಬದುಕು ಎಲ್ಲ ರೀತಿಯ ಮಗ್ಗಲುಗಳಿಗೆ ಒಡ್ಡಿಕೊಂಡ ಕಾರಣ ಬದುಕು ಹೇಗೆ ಪರಿಪಾಕಗೊಂಡು ನಮ್ಮನ್ನು ಹೇಗೆ ಪಕ್ವವಾಗಿ ಬೆಳೆಸಬಲ್ಲುದು ಎಂಬುದಕ್ಕೆ ಅವರ ಒಂದು ಪ್ರಬಂಧದ ಸಾಲು ನನ್ನ ಗಾಢವಾಗಿ ತಟ್ಟಿತು. ‘ಹಾಲುಮಾರಿ ಶಾಲೆಗೆ ಪಾದ ಬೆಳೆಸಬೇಕಾದ ಅನಿವಾರ್ಯತೆಯಿದ್ದ ಸಂದರ್ಭದಲ್ಲಿ ಒಮ್ಮೆ ನೀರು ಹಾಕಿ ತಂದಿಯೇನೇ?’ ಅಂತ ಶಾಂತಕ್ಕ ಗುರಾಯಿಸಿದ್ದಕ್ಕೆ ಮುಖ ದುಮ್ಮಿಸಿಕೊಂಡು ಹೋದ ಹುಡುಗಿ ಇವತ್ತು ಸರಕಾರಿ ಕಾಲೇಜಿನಲ್ಲಿ ಇಂಗ್ಲೀಷ್‌ ಉಪನ್ಯಾಸಕಿಯಾಗಿದ್ದಾಳೆಂಬುದ್ದಕ್ಕೆ ಇನ್ಯಾವ ನಿದರ್ಶನ ಬೇಕಿಲ್ಲ ಅನಿಸುತ್ತದೆ. ಆದರೆ ತಾನು ಈ ಮಟ್ಟಕ್ಕೆ ಬರಲು ಇವೆಲ್ಲ ಕಾರಣಗಳು ಅಂತ ಆಕೆ ಎಲ್ಲೂ ಬಡಬಡಿಸಿಕೊಳ್ಳುವುದಿಲ್ಲ. ಆದರೆ ಓದುಗರಾದ ನಮ್ಮೊಳಗೆ ಇಳಿದು ಒಂದು ಸಂಚಲನ ಉಂಟುಮಾಡಬಲ್ಲದು. + +ಬಾಲ್ಯದಲ್ಲಿ ಹುಟ್ಟಿಕೊಂಡ ಇಂಗ್ಲೀಷ್‌ ಆಕರ್ಷಣೆ, ಮೇಷ್ಟ್ರ ಮೇಲಿನ ಸಿಟ್ಟಿನಲ್ಲಿ ಹರಕೆ ಹೊರುವುದು, ಹರಕೆ ಹೊತ್ತರೂ ಮೇಷ್ಟ್ರಿಗೆ ಏನೂ ಆಗದೇ ಇರುವುದು. ನಂತರ ಅದೇ ವಿಷಯ ಗೋಟಾಳಿ ಆಗುವುದು, ಇವೆಲ್ಲಾ ಬಾಲ್ಯದಲ್ಲಿ ಮಾತ್ರ ಘಟಿಸಬಹುದಾದ ಸಂಗತಿಗಳು. ಹಾಗೇ ಅಲ್ಲಿ ನಗಲು, ನಗಿಸಲು ಎಷ್ಟೊಂದು ಕಾರಣಗಳು? ಆ ನಗುವನ್ನು ಹಂಚಿಕೊಳ್ಳುವ ಭರದಲ್ಲಿ ನಮ್ಮೊಳಗಿನ ನಗುವಿನ ಸೆಲೆಯನ್ನು ಒಕ್ಕುತ್ತಾರೆ. ಇನ್ನು ಭೂತ ದೆವ್ವದ ಜೊತೆಗೆ ಅಂಟಿಕೊಂಡ ಅದೆಷ್ಟು ಭಯಾನಕ ರಸವತ್ತಾದ ಕತೆಗಳು? ಅವರಿಗೆ ನೆನಪುಗಳು ಜೀರುಂಡೆ ಸಾಲಿನಂತೆ. ಎಳವೆಯಲ್ಲಿ ಹಕ್ಕಿ ಕಾವಲು ಕೂತದ್ದು, ತೆರೆದ ಕೊಡೆಯ ಕಡ್ಡಿಯಿಂದ ಮಳೆಯ ಹನಿಯೊಂದಿಗೆ ನೆನಪುಗಳು ತೊಟ್ಟಿಕ್ಕುತ್ತಾ ಕತೆಯಾಗಿ ಜೊತೆಗೆ ಪಾದ ಸವೆಸಿದ್ದು, ಒಂದೇ ಎರಡೇ? + +ನಾಗರೇಖಾರ ನೆನಪಿನ ಶಕ್ತಿ ನಮ್ಮನ್ನು ಬೆರಗುಗೊಳಿಸುತ್ತದೆ. ಅವರ ನೆನಪಿನ ಕೋಶದಲ್ಲಿ ಇನ್ನು ಅದೆಷ್ಟೋ ಕತೆಗಳು ಹಸಿಹಸಿಯಾಗಿಯೇ ಇವೆ. ಸಮಯ ಸಂದರ್ಭ ಬಂದಾಗಲೆಲ್ಲಾ ಅವು ತಲೆ ಹೊರಗೆ ಹಾಕಿ ಇಣುಕುತ್ತವೆ. ಹಳ್ಳಿಯ ಮನಸ್ಸುಗಳ ನಿಷ್ಕಲ್ಮಷ ಪ್ರೇಮ, ಪೇಟೆಯ ನಾಟಕೀಯತೆ ಜೊತೆಗೆ ಮನಸ್ಸು ತುಲನೆ ಮಾಡಿಕೊಳ್ಳುತ್ತದೆ. ಹಳ್ಳಿಯ ತೃಪ್ತ ಬದುಕಿನ ಸಮಾಧಾನಗಳನ್ನು ಅರಸುತ್ತಾ ಬಂದರೆ, ಮಮತೆಯ ಒರತೆಗಳಾದ ಹಿರಿಜೀವಗಳು ಕಳಚಿ ಹೋದುದರ ಕುರಿತು ವಿಷಾದ ವ್ಯಕ್ತಪಡಿಸುತ್ತಾ ಬದುಕು ಅಂದರೆ ಇಷ್ಟೇ ಅನ್ನುವ ವೇದಾಂತವನ್ನು ಇಲ್ಲಿಯ ಬರಹಗಳು ಕಟ್ಟಿಕೊಡುತ್ತವೆ. ತಂದೆ, ತಾಯಿ, ಒಡಹುಟ್ಟಿದವರ ಒಡನಾಟದಲ್ಲಿ ಬದುಕು ಹಸನಾದುದರ ಕುರಿತು ಅವರಿಗೆ ಅಪಾರ ಪ್ರೀತಿಯಿದೆ. ಅಲ್ಲಿ ಸಿಕ್ಕ ಪ್ರತಿಯೊಂದು ಘಟನೆಗಳ ಹಿಂದೆ ಸರಿ ತಪ್ಪುಗಳ ತರ್ಕವಿದೆ. ಬಹುಷಃ ಈ ಅನುಭವವೇ ಅವರ ಸಾಹಿತ್ಯಕ್ಕೆ ಪ್ರೇರಣೆ. ಸಣ್ಣ ಸಣ್ಣ ಜಗಳಗಳನ್ನು, ತಾನು ಮಾಡಿದ ತಪ್ಪುಗಳನ್ನು ಕೂಡ ಇಲ್ಲಿ ಲೇಖಕಿ ಯಾವುದೇ ಮುಲಾಜಿಲ್ಲದೆ ಬರೆಯುತ್ತಾರೆ. ಬಾಲ್ಯದಲ್ಲಿ ಮಾಡಿದ ತಂಟೆ ತಕರಾರುಗಳು ಯಾವುದೂ ಉದ್ದೇಶಪೂರ್ವಕವಾದುದ್ದಲ್ಲ ಅನ್ನುವುದನ್ನು ಇದು ಸಾಬೀತುಪಡಿಸುತ್ತದೆ. + + + +ನಾಗರೇಖಾರ ಪ್ರಬಂಧವನ್ನು ಓದಿ ಮುಗಿಸಿದಾಗ ಸರಿದ ಬಾಲ್ಯವೊಂದು ಕಣ್ಣ ಮುಂದೆ ಚಲಿಸಿದಂತೆ ಭಾಸವಾಗುತ್ತದೆ. ಮುದಕೊಡುವ ಭಾಷೆಯೊಂದಿಗೆ ಸರಳ ಸಹಜ ನಿರೂಪಣೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸ್ವಲ್ಪ ತಿಳುವಳಿಕೆ ಇದ್ದರೆ ಬಾಲ್ಯದ ಗಳಿಗೆಗಳನ್ನ ಮೊಗೆಮೊಗೆದು ಅನುಭವಿಸಬಹುದ್ದಿತ್ತಲ್ಲ ಅಂತ ಅನ್ನಿಸಿದ್ದು ಸುಳ್ಳಲ್ಲ. ಇಲ್ಲಿಯ ಬರಹಗಳನ್ನು ಓದಿದ ಮೇಲೆ ನನ್ನ ಬಾಲ್ಯ ಮತ್ತು ನಾಗರೇಖರ ಬಾಲ್ಯಕ್ಕಿಂತ ಬೇರೆಯಲ್ಲ ಅಂತ ಅನ್ನಿಸಿದ್ದು, ಮತ್ತು ಅಂದಿನ ನೆನಕೆಗಳು ಇವತ್ತು ನೆನಪಾಗಿ ನೇವರಿಸಿ ಕೈ ಹಿಡಿದು ಬರೆಯಿಸುತ್ತಾ ಬದುಕನ್ನ ಸಹ್ಯಗೊಳಿಸುತ್ತಿರುವುದು, ಇದು ಬಾಲ್ಯ ಕೊಟ್ಟ ಬಹುದೊಡ್ಡ ಉಡುಗೊರೆ. ನೆನಪುಗಳಿಗೆ ಜೀವ ತುಂಬಿದ ನಾಗರೇಖಾರಿಗೆ ಅಭಿನಂದನೆಗಳು. + +ಸ್ಮಿತಾ ಅಮೃತರಾಜ್ ಕೊಡಗಿನ ಸಂಪಾಜೆ ಬಳಿಯ ಚೆಂಬುವಿನ ನಿವಾಸಿ.  ಗೃಹಿಣಿ, ಕೃಷಿಕ ಮಹಿಳೆ. ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’ ಸೇರಿದಂತೆ ಮೂರು ಕವನ ಸಂಕಲನ ಹಾಗೂ ಮೂರು ಲಲಿತ ಪ್ರಬಂಧಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_108.txt b/Kenda Sampige/article_108.txt new file mode 100644 index 0000000000000000000000000000000000000000..20706886ade889ffc6b3db628937caf452b990d0 --- /dev/null +++ b/Kenda Sampige/article_108.txt @@ -0,0 +1,21 @@ +ಕಾವ್ಯ ಸುಲಭವಾಗಿ ಕೈಗೆ ಸಿಕ್ಕುವ ಸಾಲುಗಳಂತೆ ಕಾಣಿಸುತ್ತದೆ. ಈ ಗ್ರಹಿಕೆಯನ್ನೇ ಹಿಡಿದು ಹೊರಡುವವರಿಗೆ ಕಾವ್ಯ ನಿತ್ಯವೂ ಎದುರಾದಂತೆ ಕಂಡರೂ ಅದು ಕೈಗೆ ಸಿಕ್ಕುವುದೇ ಇಲ್ಲ. ಸುಮ್ಮನೇ ತಿರುತಿರುಗಿ ದಣಿಯುವುದೇ ಅಂಥವರ ಕಾಯಕವಾಗುತ್ತದೆ. + +ಸುಮಿತ್‌ ಮೇತ್ರಿ ಕಾವ್ಯವನ್ನು ಹೀಗೆ ಭಾವಿಸಿದವರಲ್ಲ ಎನ್ನುವುದನ್ನು ಅವರ ಸಂಕಲನ – ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ತೋರಿಸಿಕೊಡುತ್ತದೆ. ಭಾಷೆಯೊಂದಿಗೆ, ಲಯಗಳ ಜೊತೆ, ರೂಪಕಗಳ ಸಾಮೀಪ್ಯದಲ್ಲಿ ಮೇತ್ರಿ ಸದಾ ನಡೆಸುವ ಸೆಣಸಾಟ ಅವರ ಕಾವ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಓದುಗರನ್ನು ಒತ್ತಾಯಿಸುತ್ತದೆ. ಹಾಗೆ ಓದದಿದ್ದರೆ ಮೇತ್ರಿಯವರ ಕಾವ್ಯ ಹತ್ತಿರವೂ ಬರುವುದಿಲ್ಲ. ಇದೆ ನಿಜ ಕಾವ್ಯದ ಸಹಜ ಗುಣ. + +(ಸುಮಿತ್‌ ಮೇತ್ರಿ) + +ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕಾವ್ಯ ಎನ್ನುವುದು‘ಎದೆಗೆ ಚುಚ್ಚಿದ ಬಾಣಅದನ್ನು ಕೀಳ ಹೋದರೆಅದು ಎದೆಯಲ್ಲಿಯೇ ಮುರಿದುಕೊಳ್ಳುತ್ತ,ನೆತ್ತರು ಒಸರುತ್ತ,ಹಿತಯಾತನೆಯನ್ನು ನೀಡುತ್ತಲೇ ಇರುತ್ತದೆ.ಈ ಯಾತನೆಯಲ್ಲಿಯೇ‘ಪ್ರತಿದಿನವೂ ಉರಿಸಬೇಕು ಕಾರಿರುಳು’ + +ಇಲ್ಲಿನ ಕೆಲವು ಕವಿತೆಗಳಲ್ಲಿ ಸ್ಥಾಪಿತ ಗ್ರಹಿಕೆಗಳನ್ನು ಭಂಜಿಸುವ, ಹೊಸ ನೋಟದ ಕಡೆಗೆ ಬೆರಳು ತೋರಿಸುವ ಯತ್ನವಿದೆ. ಭಾಷೆಯೂ ಕೆಲವೆಡೆ ಇಂಥ ಕೆಲಸವನ್ನು ಮಾಡುತ್ತದೆ: + +‘ಗಾಳಿ ತಳಿರೊಡೆಯುವುದು’‘ದೇಹದೊಳಗೆ ಆತ್ಮ ಕಾಲಿಳಿಬಿಟ್ಟು ಕೂರುವುದು’‘ಇರುವೆ ಸಾಲಿನ ಗೆಜ್ಜೆ ಕಿರುಗುಡುವುದು’‘ಮೌನ ಕತ್ತಲೆಯ ಬೆನ್ನೇರಿ ಬೆತ್ತಲಾಗುವುದು’ ‘ಬಿರುಕುಬಿಟ್ಟ ಸೂರ್ಯನೆದೆಗೆ ಬೆರಳು ತುರುಕಿ’ಇತ್ಯಾದಿ ಈ ಸಂಕಲನದಲ್ಲಿ ಫ್ರೆಷ್‌ ಎನಿಸುವ ಸಾಲುಗಳು ಧಂಡಿಯಾಗಿ ಸಿಗುತ್ತವೆ. + +(ಜಿ.ಪಿ. ಬಸವರಾಜು) + +ಇಲ್ಲಿಯೂ ಅವನ ಮತ್ತು ಅವಳ ನಡುವಿನ ಪ್ರೀತಿ, ಪ್ರೇಮ, ವಿರಹ ಇವೆ. ಪ್ರೀತಿಯ ಆಳ-ಅಗಲ, ವಿರಹದ ಸುಡುವ ಯಾತನೆ ಮತ್ತೆ ಮತ್ತೆ ಚಿತ್ರಿತವಾಗಿದೆ. ಹಾಗೆಯೇ ಇವರಿಬ್ಬರ ಸುತ್ತ ಇರುವ ಲೋಕವೂ ಇದೆ; ಭೂತ, ವರ್ತಮಾನಗಳೂ ಇವೆ. ಸುಮಿತ್‌ ಇವುಗಳನ್ನು ಈಗಾಗಲೇ ಬಳಕೆಯಾಗಿರುವ ಮಾತುಗಳಲ್ಲಿ, ಪ್ರತಿಮೆ ರೂಪಕಗಳಲ್ಲಿ ಚಿತ್ರಿಸುತ್ತ ಕಾವ್ಯವನ್ನು ಸವೆದ ದಾರಿಯಲ್ಲಿ ನಡೆಸುವುದಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಾಗಲೂ ಹೊಸ ರೀತಿಯಲ್ಲಿ, ಹೊಸ ದಾರಿಯಲ್ಲಿ ನಡೆಯಲು ಸಾಧ್ಯವೇ ಎಂದು ನೋಡುತ್ತಾರೆ. ಇದು ಕಾವ್ಯದ ಬಗ್ಗೆ ಅವರಿಗಿರುವ ಅಪಾರ ಪ್ರೀತಿಯನ್ನು ಮತ್ತು ಗಾಢ ಶ್ರದ್ಧೆಯನ್ನು ತೋರಿಸುತ್ತದೆ. ಹಾಗೆಯೇ ಅವರ ತಾಳ್ಮೆಯನ್ನೂ. + + + +‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಎನ್ನುವ ಹೆಸರೇ ವಿಭಿನ್ನ ನಡೆಯನ್ನು ತೋರಿಸುವುದರ ಜೊತೆಗೆ ಬೇರೆ ರೀತಿಯ ಓದಿಗೇ ಸಹೃದಯರನ್ನು ಬರಮಾಡಿಕೊಳ್ಳುತ್ತದೆ. ಹಾಗೆಯೇ ಅರ್ಥ ವ್ಯಾಪ್ತಿಯನ್ನೂ ಸೂಚಿಸುತ್ತದೆ. ಈ ಸಂಕಲನದ ‘ಧ್ಯಾನಕ್ಕೆ ಗುಹೆ ಬೇಕಿಲ್ಲ’ ಮತ್ತು ‘ಕಣ್ಣೂರು ಅಮೀನ್‌ ಸಾಬ್‌ ಹೇಳಿದ ಕತಿ’ ಕವಿತೆಗಳು ಸುಮಿತ್‌ ಅವರ ಕಾವ್ಯದ ಬಗ್ಗೆ ಮತ್ತು ಮುಂದಿನ ಅವರ ನಡೆಯ ಬಗ್ಗೆ ಆಸೆಯನ್ನು ಚಿಗುರಿಸುತ್ತವೆ. ಅವರು ಬಹುದೂರ ನಡೆಯಬಹುದಾದ ಸಾಧ್ಯತೆಯನ್ನೂ ಹೇಳುತ್ತವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_109.txt b/Kenda Sampige/article_109.txt new file mode 100644 index 0000000000000000000000000000000000000000..f41495dda886fa93a7a3a6750a2d72501bc774f9 --- /dev/null +++ b/Kenda Sampige/article_109.txt @@ -0,0 +1,37 @@ +ಸಾವಿನ ದಶಾವತಾರ (ಅಭಿನವ ಪ್ರಕಾಶನ, 2017), ಕೆ. ಸತ್ಯನಾರಾಯಣ ಅವರ ಎಂಟನೇ ಕಾದಂಬರಿ. ಕಾದಂಬರಿಯ ಹೆಸರೇ ಸೂಚಿಸುವಂತೆ ಹತ್ತು ಹಲವು ಬಗೆಯ ಮೃತ್ಯು ದರ್ಶನ ಇಲ್ಲಿ ನಮಗಾಗುತ್ತದೆ. ಮೃತರ ಅಂತಿಮ ಪಯಣಕ್ಕಾಗಿ ಬೇಕಾದ ಎಲ್ಲ ಸೌಲಭ್ಯಗಳನ್ನು (ಅಪರ ಕ್ರಿಯಾ ಕರ್ಮಾದಿಗಳಿಂದ ಹಿಡಿದು, ಶವಾಗಾರದ ವ್ಯವಸ್ಥೆ, ಬಂಧು-ಬಳಗ/ಆಪ್ತರ ವಾಸ್ತವ್ಯ ಇತ್ಯಾದಿ) ಒದಗಿಸಿ ಕೊಡುವ Death services consultant (Event manager for death services) ಕಾದಂಬರಿಯ ಪ್ರಮುಖ ಪಾತ್ರವಾಗಿರುವುದರ ಜೊತೆಗೇ ಅದರ ನಿರೂಪಕ ಕೂಡಾ. ಸಾಂಪ್ರದಾಯಿಕವೆನ್ನಬಹುದಾದ ಕಥೆ ಇಲ್ಲಿಲ್ಲವಾದರೂ ಪ್ರತೀ ಸಾವಿನ ಸುತ್ತಲ ಘಟನಾವಳಿಗಳು, ಮೃತರ ಆಪ್ತರಷ್ಟೇ ಅಲ್ಲದೆ ಅಂತಿಮ ಕ್ರಿಯೆಯ ವಿವಿಧ ಹಂತಗಳಲ್ಲಿ ಭಾಗಿಯಾದವರನ್ನು ಒಳಗೊಂಡ ಕಥಾನಕಗಳು, ಮೇಲ್ನೋಟಕ್ಕೆ ಸ್ವತಂತ್ರವೆನಿಸಿದರೂ ದೊಡ್ಡ ಹಂದರವೊಂದರ ಅವಿಭಾಜ್ಯ ಅಂಗಗಳಾಗಿ ಬಂದಿರುವುದು ಕಾದಂಬರಿಯ ವಿಶೇಷ. ಹೊಸ ಬಗೆಯ ಪ್ರಯೋಗ ಕೂಡಾ. + +(ಕೆ. ಸತ್ಯನಾರಾಯಣ) + +ತಾವು ಕೆಲಸ ಮಾಡುವ ಸಂಸ್ಥೆಗೆ ಅಗತ್ಯವಾದ ವೃತ್ತಿ ಸಂಬಂಧಿತ ಸಮೀಕ್ಷೆಯೊಂದರ ಸಲುವಾಗಿ ಪುರುಷೋತ್ತಮ ಮತ್ತು ಅನುಪಲ್ಲವಿ (ಪಿ & ಎ,ಪಿ) ನಿರೂಪಕನನ್ನು (ಎಲ್ಲಿಯೂ ಆತನ ಹೆಸರು ಪ್ರಸ್ತಾಪವಾಗಿಲ್ಲ) ಸಂಪರ್ಕಿಸುವುದು ಕಥೆಯ ಆರಂಭ. ಆ ಸಮೀಕ್ಷೆಯಲ್ಲಿ ಅಷ್ಟೇನೂ ಆಸಕ್ತಿ ಇಲ್ಲದಿದ್ದರೂ ಆಕರ್ಷಕ ವ್ಯಕ್ತಿತ್ವದ ಯುವತಿ ಅನುಪಲ್ಲವಿಯ ಸಂಪರ್ಕ/ಒಡನಾಟವನ್ನು ಉಳಿಸಿಕೊಳ್ಳುವ ಹಂಬಲದಿಂದ ಅವರು ತಯಾರಿಸಿದ ಪ್ರಶ್ನಾವಳಿಗಳಿಗೆ ಲಿಖಿತ ಉತ್ತರಗಳನ್ನು ನೀಡಲು ಆತ ಒಪ್ಪಿಕೊಳ್ಳುತ್ತಾನೆ. ಮಧ್ಯವಯಸ್ಸನ್ನು ಮೀರಿದ ಸಭ್ಯ ಗ್ರಹಸ್ಥ ಆತ: ಹೆಚ್ಚಿನೆಲ್ಲ ಗೃಹಿಣಿಯರಂತೆ ತನ್ನ ಮನೆ-ಗಂಡ-ಮಕ್ಕಳು, ಸಮಾಜದಲ್ಲಿನ ಸ್ಥಾನಮಾನ ಇತ್ಯಾದಿಗಳತ್ತ ಮಾತ್ರ ಆಸಕ್ತಿ ಇರುವ ಪತ್ನಿ, ತಮ್ಮ ಸಂಸಾರದಲ್ಲೇ ವ್ಯಸ್ತರಾದ ವಿವಾಹಿತ ಹೆಣ್ಣುಮಕ್ಕಳು, ಅವರ ಮಕ್ಕಳು; ಇವರೊಂದಿಗಿನ ಗಟ್ಟಿ ಭಾವನಾತ್ಮಕ ಸಂಬಂಧದ ಸುಳಿವು ಇಲ್ಲಿಲ್ಲ. ಸಾವಿಗೆ ಸಂಬಂಧಿಸಿದ ಆತನ ವೃತ್ತಿಯ ಕುರಿತು ಪತ್ನಿ ತೋರಿಸುವ ಅಸಮಾಧಾನ ದಂಪತಿಗಳ ನಡುವಿನ ಬಿರುಕನ್ನು ಸೂಚಿಸುತ್ತದೆ. ಯುವತಿ ಅನುಪಲ್ಲವಿಯೆಡೆಗೆ ಆತನಿಗೆ ಉಂಟಾಗುವ ಆಕರ್ಷಣೆ ಪ್ರಾಯಶಃ ಸಹಜವಾದದ್ದು. ಆದರೆ ಯಾವುದೇ ಅನುಚಿತ ಉದ್ದೇಶಗಳಿಲ್ಲದ್ದು. ಆಕೆಯಡೆಗೆ ಕೇಂದ್ರೀಕೃತವಾಗುವ ಮನಸ್ಸು, ಒಡನಾಟದಿಂದ ಅನುಭವಿಸುವ ಆಹ್ಲಾದ, ಇವೆಲ್ಲ ಆತ ತನ್ನೊಳಗನ್ನು ಕೂಲಂಕಷವಾಗಿ ಗಮನಿಸುವ ಬಗೆಯಲ್ಲಿ ಮೂಡಿಬಂದಿದೆಯೇ ಹೊರತು ಭಾವೋತ್ಕಟತೆಯಿಂದಲ್ಲ. ಒಂದು ಮಟ್ಟದ ಪ್ರಬುದ್ಧತೆಯ ಸಂಕೇತ ಕೂಡಾ ಎಂದು ಕಾದಂಬರಿ ಮುಂದುವರೆದಂತೆಲ್ಲ ಅನಿಸತೊಡಗುತ್ತದೆ. + +ಅನುಪಲ್ಲವಿಯ ಸಲುವಾಗಿ ಒಪ್ಪಿಕೊಂಡಿದ್ದರೂ, ತನ್ನ ವೃತ್ತಿಯ ಬಗ್ಗೆ ಬರೆಯಲೇ ಬೇಕೆಂದು ಆತ ನಿರ್ಧರಿಸುವುದು ತನ್ನದೇ ವಯಸ್ಸಿನ, ತನ್ನದೇ ಹೆಸರು, ಪೂರ್ವನಾಮ ಹೊಂದಿ ತನ್ನದೇ ಜಾತಿಗೆ ಸೇರಿದ ಇನ್ನೊಬ್ಬ ವ್ಯಕ್ತಿಯ ಸಾವು ತನ್ನ ಆಸುಪಾಸಿನಲ್ಲೇ ಸಂಭವಿಸಿದಾಗ. ಹಲವಾರು ಅಂತ್ಯಕ್ರಿಯೆಗಳ ಮೇಲುಸ್ತುವಾರಿ ವಹಿಸಿ ನಡೆಸಿಕೊಟ್ಟ ಆತ ಈ ಸಾವಿಗೆ ಪ್ರತಿಕ್ರಿಯಿಸುವ ರೀತಿ ಸ್ವಲ್ಪ ವಿಚಿತ್ರವೇ. ತನ್ನ ಪತ್ನಿಗೆ ಈ ಸಾವಿನ ಬಗ್ಗೆ ತಿಳಿಯದಂತೆ ಆ ಸುದ್ದಿ ಇರುವ ದಿನಪತ್ರಿಕೆಯನ್ನು ಎಸೆದುಬಿಡುವುದು, ತನಗೆ ಆತನ ಅಂತಿಮ ಪಯಣದ ವ್ಯವಸ್ಥೆ ಮಾಡಲು ಕರೆ ಬಾರದಂತೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡುವುದು, ಆತನ ಅಂತಿಮ ಕ್ರಿಯೆಗಳನ್ನು ದೂರದಿಂದ, ಮರೆಯಲ್ಲಿ ನಿಂತು ನೋಡುವುದು ಇತ್ಯಾದಿ. ತಲ್ಲಣಗೊಂಡ ಸುಪ್ತ ಮನಸ್ಸಿನ ಪ್ರತಿಕ್ರಿಯೆ ಬಾಹ್ಯರೂಪದಲ್ಲಿ ಪ್ರಕಟವಾದ ಬಗೆ ಅದು. ಈ ಚಿತ್ರಣ ಲೇಖಕರ ಮನಶ್ಯಾಸ್ತ್ರೀಯ ಒಲವನ್ನು ಸೂಚಿಸುತ್ತಿರಬಹುದೇನೋ! + +ಸಮೀಕ್ಷೆಯ ಮೊದಲ ಪ್ರಶ್ನೆಯೇ `ಈ ವೃತ್ತಿಯನ್ನು ಆರಿಸಿಕೊಳ್ಳಲು ಕಾರಣಗಳೇನು?’. ತೀರ ಹೆಚ್ಚಿನ ವಿವರಣೆಯ ಅಗತ್ಯವಿಲ್ಲದಿದ್ದರೂ, ಅದುವರೆಗಿನ ತನ್ನ ಜೀವನವನ್ನು ವಸ್ತುನಿಷ್ಠವಾಗಿ ಗಮನಿಸುವ ಮನಸ್ಥಿತಿಯಲ್ಲಿದ್ದ ನಿರೂಪಕ ಬ್ಯಾಂಕ್ ಆಫೀಸರ್ ಆಗಿ ಪ್ರಾರಂಭಗೊಂಡ ತನ್ನ ವೃತ್ತಿ ಜೀವನ, ವಿವಾಹ, ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡುವ ಆಸಕ್ತಿ ಬೆಳೆದ ಬಗೆ, ಗಳಿಸಿದ ಲಾಭದಿಂದ ಬದಲಾದ ಜೀವನ ಶೈಲಿ, ಹೆಸರಾಂತ investment consultant ಆದ ತನ್ನ ಹಿತೈಷಿಯೊಬ್ಬರೊಂದಿಗೆ ಪಾರ್ಟನರ್ ಆಗಿ ಸೇರಿ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಇತ್ಯಾದಿ ತನ್ನ ಈ ವೃತ್ತಿಯವರೆಗಿನ ಘಟ್ಟಗಳನ್ನು ವಿವರಿಸುತ್ತಾ ಹೋಗುತ್ತಾನೆ. ಹೊರ ದೇಶದಲ್ಲಿ ನೆಲೆಸಿದ್ದು ತನ್ನನ್ನು ಬಹಳಷ್ಟು ನೆಚ್ಚಿಕೊಂಡಿದ್ದ ಪ್ರಭಾವಿ ಶ್ರೀಮಂತ ವ್ಯಕ್ತಿಯೊಬ್ಬನ ನಿಧನ, ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡುವಂತೆ ಆತನ ಸಂಬಂಧಿಕರು ತನ್ನನ್ನು ಕೇಳಿಕೊಂಡದ್ದು, ತುಂಬ ವ್ಯವಸ್ಥಿತವಾಗಿ ಎಲ್ಲವೂ ನಡೆದದ್ದರಿಂದ ಅವರ ಪರಿಚಿತರು ಮುಂದೆ ತಮ್ಮ ಹತ್ತಿರದವರ ನಿಧನದ ಸಂಧರ್ಭಗಳಲ್ಲಿ ತನ್ನನ್ನೇ ಮತ್ತೆ ಮತ್ತೆ ಸಂಪರ್ಕಿಸಿದ್ದು.. ಹೀಗೆ ತಾನು ಈ ವೃತ್ತಿಯನ್ನು ಆಯ್ಕೆ ಮಾಡದೆಯೂ ಅದು ತನ್ನದಾದದ್ದನ್ನು ನಿರೂಪಕ ಹೇಳುತ್ತಾನೆ. + +ಶೇರು ಪೇಟೆಯ ಏರುಗಾಲದಲ್ಲಿ, ಊಹಿಸಿದ್ದಕ್ಕಿಂತ ಹೆಚ್ಚು ಲಾಭ ಬರುತ್ತಿದ್ದ ದಿನಗಳಲ್ಲಿ, ತಮ್ಮ ಆಡಂಬರದ ಜೀವನ, ತಾನು ಹಾಗೂ ತನ್ನ ಪತ್ನಿ ತಮ್ಮ ಇಬ್ಬರು ಹೆಣ್ಣು ಮಕ್ಕಳಿಗಾಗಿ ಕೊಳ್ಳಬೇಕಾದ ಆಸ್ತಿ ಪಾಸ್ತಿಯ ಕುರಿತು ನಡೆಸುತ್ತಿದ್ದ ಮಾತುಕತೆ, ಸಂಬಂಧಿಕರಿಂದ ತಮ್ಮ ಶ್ರೀಮಂತಿಕೆಯನ್ನು ಮರೆ ಮಾಚುವ ತಂತ್ರಗಳು, ಜೊತೆಯಾಗಿ ಕಾಣುತ್ತಿದ್ದ ಭವಿಷ್ಯದ ಕನಸುಗಳು.. ಇವೆಲ್ಲದರಿಂದ ತಮ್ಮಿಬ್ಬರಲ್ಲಿ ಹುಟ್ಟಿದ ಆಪ್ತ ಭಾಂಧವ್ಯ ನಂತರದ ದಿನಗಳಲ್ಲಿ, ಅದರಲ್ಲೂ ತಾನು death services ಪ್ರಾರಂಭ ಮಾಡಿದ ನಂತರ, ಸಡಿಲವಾದ ರೀತಿಯನ್ನು ಗಮನಿಸಿದ್ದ ನಿರೂಪಕ ಅದನ್ನು ನಿರ್ವಿಕಾರವಾಗಿ ಒಪ್ಪಿಕೊಂಡಿದ್ದಾನೆ. + +ವ್ಯಾವಹಾರಿಕವಾಗುತ್ತಿರುವ ಸಂಬಂಧಗಳು, ಮಧ್ಯಮ, ಮೇಲು ಮಧ್ಯಮ ವರ್ಗದ ಸಂಸಾರಗಳಲ್ಲಿನ ಒಳ ಸುಳಿಗಳನ್ನು ನಿರೂಪಕನ ಸಂಸಾರ ಹಾಗೂ ಮೃತರ ಸಂಬಂಧಿಕರ ವರ್ತನೆಗಳ ಮೂಲಕ ಪರಿಶೋಧಿಸುವ ಲೇಖಕರ ಉದ್ದೇಶ ಇಲ್ಲಿ ಸ್ಪಷ್ಟ: ಯಶಸ್ವಿ ಪ್ರಯತ್ನ ಕೂಡಾ. ಈ ಮನೋವ್ಯಾಪಾರಗಳ ಜೊತೆಗೇ death services ನಲ್ಲಿ ಒದಗಿಸಬೇಕಾದ ಸೇವೆಯ ವಿವರಗಳು; ಶವಾಗಾರ, ಚಿತಾಗಾರ, ಅಂತಿಮ ವಿಧಿಗಳಿಗಾಗಿ ಪುರೋಹಿತರ ನಿಯೋಜನೆ, ಅಗತ್ಯ ಸಾಮಗ್ರಗಳನ್ನು ಒದಗಿಸುವುದು, ವಿದೇಶದಿಂದ/ಪರ ಊರಿನಿಂದ ಈ ಕಾರ್ಯಕ್ಕಾಗಿ ಬರುವ ಆಪ್ತರು/ಸಂಬಂಧಿಕರು ಇದ್ದಲ್ಲಿ ಅವರನ್ನು ಕರೆತರಲು ವಾಹನ ವ್ಯವಸ್ಥೆ, ಅವರ ವಾಸ್ತವ್ಯ, ಊಟೋಪಚಾರ; ಅಂತಿಮ ಸಂಸ್ಕಾರದ ನಂತರ ಆಸ್ತಿ ಮಾರಾಟ/ಪರಭಾರೆ ಇದ್ದಲ್ಲಿ ಅದಕ್ಕೆ ಬೇಕಾದ ಅಗತ್ಯ ಸಹಾಯ ಹೀಗೆ,, ತಾನು ಕೈಗೆತ್ತಿಕೊಳ್ಳಬೇಕಾದ ಒಂದೆರಡು ಕೇಸ್‌ಗಳ ಮೂಲಕ ವಿಶದ ವಿವರಣೆ ನೀಡುತ್ತಾನೆ ನಿರೂಪಕ. ಈ ವೃತ್ತಿಯನ್ನು ಪ್ರಾರಂಭಿಸಲು ಬೇಕಾದ ಅಗತ್ಯ ವಿವರಗಳೆಲ್ಲ ಇಲ್ಲಿ handy ಆಗಿ ಸಿಗುತ್ತವೆ. ಈ ಕಾದಂಬರಿಯನ್ನು ಓದಿದ ನಂತರ ಯಾರಾದರೂ ಈ ವೃತ್ತಿಯನ್ನು ಕೈಗೆತ್ತಿಕೊಂಡಲ್ಲಿ ಖಂಡಿತ ಆಶ್ಚರ್ಯ ಪಡಬೇಕಾದ್ದಿಲ್ಲ. ಲೇಖಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಅಂತಹವರ ಧರ್ಮ. ಪ್ರಾಯಶಃ ತಪ್ಪಿಸಲಾರರು. + +ತೀರ ಅಪರೂಪದ ಸಂದರ್ಭಗಳನ್ನು ಬಿಟ್ಟರೆ, ಶ್ರೀಮಂತ ಕುಟುಂಬಗಳಿಗೆ ಮಾತ್ರ ಈ ಬಗೆಯ ಸೇವೆಗಳ ಅಗತ್ಯವಿರುವುದರಿಂದ ಸಾಕಷ್ಟು ಆದಾಯ ಇರುವ ವೃತ್ತಿ ಇದು ಎಂದು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಹಲವು ಸುಶಿಕ್ಷಿತ ಯುವಕರು ಈ ವೃತ್ತಿಯೆಡೆಗೆ ಸೆಳೆಯಲ್ಪಡಬಹುದು ಎಂದು ನಿರೂಪಕ ಅಭಿಪ್ರಾಯ ಪಡುತ್ತಾನೆ. ಅಪರಕರ್ಮ, ಶ್ರಾದ್ಧ ಇತ್ಯಾದಿ ವಿಧಿ ವಿಧಾನಗಳನ್ನು ನಡೆಸಿಕೊಡುವ ವ್ಯಕ್ತಿಗಳ ಜೊತೆಗೇ ಇನ್ನಿತರ ಅಗತ್ಯ ಸೇವೆಗಳಿಗೆ ಸೂಕ್ತರಾದವರನ್ನು ನಿಯೋಜಿಸುವ ಏಜೆನ್ಸಿಗಳು ಆಗಲೇ ತಲೆ ಎತ್ತಿರುವುದರ ಪ್ರಸ್ತಾಪವೂ ಇಲ್ಲಿದೆ ಪ್ರತಿಷ್ಠಿತ ವಿದೇಶೀ ವಿದ್ಯಾಸಂಸ್ಥೆಯಲ್ಲಿ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದ ತನ್ನ ಸಂಬಂಧಿ ಯುವಕನೊಬ್ಬ ತುಂಬ ಆಧುನಿಕ ರೀತಿಯಲ್ಲಿ funeral service ಗಳನ್ನು hospital franchise ಒಂದರಲ್ಲಿ ಪ್ರಾರಂಭ ಮಾಡಿದ್ದು, ಶವಗಳು ಹಾಳಾಗದಂತೆ ಇರಿಸಲು ಬೇಕಾದ ದೊಡ್ಡ ದೊಡ್ದ ತಂಪು ಪೆಟ್ಟಿಗೆಗಳನ್ನು ಒದಗಿಸುವ ಕೆಲಸದಲ್ಲಿ ತನ್ನ ಇನ್ನೊಬ್ಬ ಸಂಬಂಧಿ ತೊಡಗಿಕೊಂಡದ್ದು ಹೀಗೆ ಉದಾಹರಣೆಗಳ ಮೂಲಕ ಈ ವೃತ್ತಿಯ ಇಂದಿನ ಮತ್ತು ಭವಿಷ್ಯದ ಆಯಾಮಗಳ ಕುರಿತು ನಿರೂಪಕ ಚರ್ಚಿಸುತ್ತಾನೆ. ತಮ್ಮ ಮುಂದಿನ ತಲೆಮಾರಿನವರು ಈ ವೃತ್ತಿಯನ್ನು ಆಯ್ದುಕೊಳ್ಳಲಿ ಎಂದು ಬಯಸುತ್ತೀರಾ? ಎಂಬ ಪ್ರಶ್ನೆಯ ಉತ್ತರ ರೂಪದ ಚಿತ್ರಣ ಇದು. ಅಂತಿಮ ವಿಧಿಗಳ ಶಾಸ್ತ್ರೋಕ್ತ ತರಬೇತಿ ಪಡೆದ ಬ್ರಾಹ್ಮಣೇತರ (ದಲಿತರನ್ನೂ ಒಳಗೊಂಡ) ವರ್ಗದವರನ್ನು ಈ ಸೇವೆಗಾಗಿ ನೇಮಿಸಿದಾಗ ಬಂದ/ಬರಬಹುದಾದ ವಿರೋಧ, ಇಂತಹ ವಿಧಿಗಳಲ್ಲಿ ನಂಬಿಕೆ, ಶ್ರದ್ಧೆ ಇದನ್ನು ನಡೆಸಿಕೊಡುವ ಬ್ರಾಹ್ಮಣ ಪುರೋಹಿತರಲ್ಲಿ ನಿಜಕ್ಕೂ ಇದೆಯೇ, ಅಂತಹ ಶ್ರದ್ಧೆ ಮತ್ತು ವಿಧಿಗಳನ್ನು ನೆರವೇರಿಸುವ ಕ್ಷಮತೆ ಮಾತ್ರ ಮುಖ್ಯವಾಗಬೇಕೇ ಹೊರತು ಜಾತಿ ಅಲ್ಲ ಎನ್ನುವ ಚಿಂತನೆಗಳು ಮಹತ್ವದ್ದು; ಇವು ಕೂಡ ಅಂತಹ ಸಂದರ್ಭಗಳ ಹಿನ್ನೆಲೆಯಲ್ಲಿ ಬಂದಿದ್ದು preachy ಆಗಿಲ್ಲದಿರುವುದು ಮೆಚ್ಚುಗೆಯ ಅಂಶ. + +ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಯೊಂದರ ವಿವಾಹ ಸಮಾರಂಭಕ್ಕೆ ತಯಾರಾದ ಛತ್ರಗಳಲ್ಲಿ ಬ್ಲಾಕ್ ಆದ ಟಾಯ್ಲೆಟ್‌ಗಳು, ಸಂಬಂಧ ಪಟ್ಟ ಮ್ಯಾನ್ ಹೋಲ್‌ನಲ್ಲಿ ಇಳಿದು ಕೊಳೆ ನೀರಿನ ಹರಿದಾಟವನ್ನು ನಿಯಂತ್ರಿಸುತ್ತಿದ್ದ ಜಾಡಮಾಲಿಯ ಸಾವು, ರಾತ್ರೋ ರಾತ್ರಿ ಆತನ ಅಂತ್ಯ ಕ್ರಿಯೆಗಳನ್ನು ಮಾಡಲು ಕಮಿಷನರರಿಂದ ಆದೇಶ, ತನ್ನನ್ನು ಹುಡುಕಿಕೊಂಡು ಮನೆಗೆ ಬಂದ ನಗರ ಕಾರ್ಪೊರೇಶನ್‌ನ ಅಧಿಕಾರಿಗಳು, ತೀರ ಅಸಹಜ ಪರಿಸ್ಥಿತಿಯಲ್ಲಿ ನಡೆದ ವಿಧಿ ವಿಧಾನಗಳು; ಇವನ್ನೆಲ್ಲ ವಿಶದವಾಗಿ ವಿವರಿಸುತ್ತಾ, ತನ್ನ ವೃತ್ತಿಯಲ್ಲಿ ಎದುರಾದ ಸವಾಲಿನ ಸಂದರ್ಭ ಇದು ಎಂದು ನಿರೂಪಕ ಹೇಳಿಕೊಳ್ಳುತ್ತಾನೆ. ನಮ್ಮೆದುರಿಗೇ ಇದೆಲ್ಲ ನಡೆಯುತ್ತಿದೆಯೇನೋ ಎಂದು ಭ್ರಮೆಯಾಗುವಷ್ಟು ಚೆನ್ನಾಗಿ ಚಿತ್ರಿಸಿದ ಪ್ರಕರಣ ಕೂಡಾ. ಈ ಪ್ರಕರಣದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂದೆಂದೂ ತನಿಖೆಗೆ ಒಳಗಾಗಬಾರದೆಂಬ ಉದ್ದೇಶದಿಂದ ನಡೆಸಲಾದ ಈ ಅಂತ್ಯ ಸಂಸ್ಕಾರದ ನಾಟಕದಲ್ಲಿ ತಾನು ಸಹಭಾಗಿಯಾಗಬೇಕಾಗಿ ಬಂದಂಥ ಪರಿಸ್ಥಿತಿ ಹಲವು ದಿನಗಳ ಕಾಲ ತನ್ನನ್ನು ಕಾಡಿತ್ತು ಎಂದು `ನಿಮ್ಮ ವೃತ್ತಿಯಲ್ಲಿ ಸವಾಲುಗಳು ಎದುರಾಗಿವೆಯೇ’ ಎಂಬ ಪ್ರಶ್ನೆಯ ಪ್ರತಿಕ್ರಿಯೆಯಲ್ಲಿ ಆತ ದಾಖಲಿಸುತ್ತಾನೆ. ವಿಮಾನ ಅಪಘಾತದಲ್ಲಿ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಶವಗಳ ರಾಶಿಯಲ್ಲಿ ತಮ್ಮದಲ್ಲದ ವ್ಯಕ್ತಿಯ ಶವವೊಂದನ್ನು ತಮ್ಮದೆಂದು ತಪ್ಪಾಗಿ ಗುರುತಿಸಿದ್ದು, ತಿಳಿದಿದ್ದರೂ ಅದನ್ನು ಹೇಳಲಾರದ ಪರಿಸ್ಥಿತಿಯಲ್ಲಿ ಆ ಅಪರಿಚಿತ ಶವಕ್ಕೆ ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ಮಾಡಬೇಕಾದ ವಿಚಿತ್ರ ಸನ್ನಿವೇಶ ಕೂಡಾ ತನ್ನನ್ನು ಕಂಗೆಡಿಸಿತ್ತು ಎಂದು ನಿರೂಪಕ ಉಲ್ಲೇಖಿಸುತ್ತಾನೆ. ಕಾದಂಬರಿಯಲ್ಲಿ ಬಂದ ಎಲ್ಲ ಸಾವುಗಳೂ ಬೇರೆ ಬೇರೆ ಬಗೆಯವು ಮತ್ತು ಪ್ರತಿಯೊಂದು ಕೂಡಾ ಸ್ವತಂತ್ರ ಕಥಾನಕಗಳಂತೆ ಓದಿಸಿಕೊಂಡು ಹೋಗುತ್ತದೆ. ಸ್ವಗತ ರೂಪದ ನಿರೂಪಕನ ಚಿಂತನೆಗಳು ಇವುಗಳನ್ನು ಹೊಂದಿಸುವ ಕೊಂಡಿಯಂತೆ ಕೆಲಸ ಮಾಡಿವೆ. + + + +ಈ ವೃತ್ತಿಯಿಂದ ನಿಮ್ಮ ಸ್ವಭಾವದ ಮಿತಿಗಳನ್ನು ಮೀರಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆಗೆ ನಿರೂಪಕನ ಪ್ರತಿಕ್ರಿಯೆ ಮನುಷ್ಯ ಸ್ವಭಾವದ ಕುರಿತಾದ ಲೇಖಕರ ಚಿಂತನೆಗಳನ್ನು ನಮ್ಮ ಮುಂದಿಡುತ್ತದೆ. ಇನ್ನೊಂದು ಅಸಹಜ ಸಾವಿನ ವಿಸ್ತೃತ ವಿವರ ಕೂಡಾ ಇಲ್ಲಿ ಸಿಗುತ್ತದೆ. + +ಒಂದೇ ಜಾತಿಗೆ ಸೇರಿದ ಇಬ್ಬರು ಪ್ರಭಾವೀ ವ್ಯಕ್ತಿಗಳು; ಶ್ರೀಮಂತಿಕೆಯಲ್ಲೂ ಸರಿಸಾಟಿಯಾದವರು; ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಿ ಉತ್ತಮ ಪದವಿ ಪಡೆದ ಇವರಲ್ಲೊಬ್ಬರ ಮಗ, ಅದೇ ಮಟ್ಟದ ವಿದ್ಯಾವಂತೆಯಾದ ಇನ್ನೊಬ್ಬರ ಮಗಳ ವಿವಾಹದ ನಿರ್ಧಾರ: ಹಿಂದೆಂದೂ ಕಂಡು ಕೇಳಿ ಅರಿಯದಷ್ಟು ಅದ್ಧೂರಿಯಾಗಿ ನಡೆದ ವಿವಾಹ ಒಂದೆರಡು ತಿಂಗಳಲ್ಲಿ ಮುರಿದು ಬಿದ್ದು ತನ್ನ ತಂದೆಯ ಮನೆಗೆ ಹಿಂದಿರುಗಿದ ಯುವತಿ; ಈ ವಿಷಯದ ಗುಲ್ಲು ಇನ್ನೂ ಹಸಿಯಾಗಿರುವಾಗಲೇ ನೇಣಿಗೆ ಶರಣಾಗಿ ಆಕೆಯ ಆತ್ಮಹತ್ಯೆ; ಅಂತ್ಯ ಸಂಸ್ಕಾರದ ಎಲ್ಲ ವ್ಯವಸ್ಥೆ ಮಾಡಲು ನಿಯೋಜಿತನಾದ ನಿರೂಪಕ ಸುತ್ತಲಿನ ವಿದ್ಯಮಾನಗಳನ್ನು ಕಂಡ ರೀತಿ; ಈ ಪ್ರಮುಖರ ನಡುವೆ ಉಂಟಾದ ತೀವ್ರತರ ವೈಷಮ್ಯವನ್ನು ತಣಿಸಲು ಅಂತ್ಯಕ್ರಿಯೆಗಳ ನಡುವೆಯೇ ನಡೆಯುತ್ತಿದ್ದ ಸಂಧಾನ ಯತ್ನಗಳು; ಈ ಜಾತಿಯ ಮಠಾಧೀಶರು ಈ ಸಂಧಾನದಲ್ಲಿ ಮುಖ್ಯ ಪಾತ್ರ ವಹಿಸಿದ್ದು, ಮುಂಬರುವ ಚುನಾವಣೆಯಲ್ಲಿ ಇವರಿಬ್ಬರ ನಡುವಿನ ಬಿರುಕು ಬೀರಬಹುದಾದ ಪರಿಣಾಮದ ಕುರಿತು ಮಠಾಧೀಶರ ಚಿಂತೆ ಇತ್ಯಾದಿ ಇಡೀ ಪ್ರಕರಣವನ್ನು ದಾಖಲಿಸಿದ ರೀತಿ ಅನನ್ಯ. ಸ್ವಭಾವ ಎನ್ನುವುದು ಶನಿಮಹಾತ್ಮನ ಹಾಗೆ, ಎಷ್ಟೇ ಪ್ರಯತ್ನ ಪಟ್ಟರೂ ಅದರ ಮಿತಿಗಳನ್ನು ಮೀರುವುದು ಕಷ್ಟಸಾಧ್ಯ ಎನ್ನುವ ನಿರೂಪಕ, ಈ ದುರಂತ ಸಾವಿನ ಪ್ರಕರಣದಲ್ಲಿ ಕೂಡ ಪ್ರತಿಯೊಬ್ಬ ವ್ಯಕ್ತಿಯೂ (ತನ್ನನ್ನೂ ಸೇರಿ) ತಮ್ಮ ಸ್ವಭಾವಕ್ಕೆ ಬದ್ಧರಾಗಿಯೇ ನಡೆದುಕೊಂಡಿದ್ದೇವೆ ಎಂದು ವಾದಿಸುತ್ತಾನೆ. ಇದೊಂದು ವ್ಯಕ್ತಿಗತ ಅಭಿಪ್ರಾಯ ಎಂದಷ್ಠೇ ಪರಿಗಣಿಸಲು ಸಾಧ್ಯ. ಈ ಪ್ರಕರಣದ ಮೂಲಕ ಆ ವಾದಕ್ಕೆ ನೀಡಿರುವ ಪುಷ್ಟೀಕರಣವೂ ಶಕ್ತವಾಗಿಲ್ಲ ಎನಿಸಿದರೂ ಅದು ಈ ಕಥಾನಕವನ್ನು, ಅದರ ನಿರೂಪಣೆಯ ರೀತಿಯನ್ನು ಮೆಚ್ಚುವಲ್ಲಿ ಯಾವ ಅಡ್ಡಿಯನ್ನೂ ಉಂಟು ಮಾಡುವುದಿಲ್ಲ. + +ಸಿರಿವಂತ ಕುಟುಂಬಗಳು ಮಾತ್ರವೇ ವಾಸಿಸುತ್ತಿದ್ದ, ಎಲ್ಲ ಆಧುನಿಕ ಸೌಕರ್ಯಗಳನ್ನು ಹೊಂದಿದ್ದ ಹೆಸರುವಾಸಿ ವಸತಿ ಸಂಕೀರ್ಣ; ಹಿರಿಯರು ಕಿರಿಯರನ್ನು ಸೇರಿ ಎಲ್ಲ ವಯಸ್ಸಿನವರ ಸುರಕ್ಷತೆಗೆ ಆದ್ಯತೆ ಕೊಡುತ್ತಿದ್ದ ವ್ಯವಸ್ಥಾಪಕ ವರ್ಗ… ಇಂಥ ಕಡೆ, ಆಟದ ಭರದಲ್ಲಿದ್ದ ಏಳೆಂಟು ವರ್ಷದ ಬಾಲಕ ಆಕಸ್ಮಿಕವಾಗಿ ಟೆರೇಸ್‌ನಿಂದ ಬಿದ್ದು ಸ್ಥಳದಲ್ಲೇ ಮೃತನಾದದ್ದು ನಂಬಲಸಾಧ್ಯವಾದ ಸಂಗತಿಯೇ. ನಡೆದದ್ದಂತೂ ನಿಜ. ಜಗತ್ತನ್ನು ಕಣ್ತೆರೆದು ನೋಡುವ ಮುನ್ನವೇ ಆ ಎಳೆಯ ಜೀವದ ಅಂತಿಮ ಪಯಣ; ಈ ದಾರುಣ ಸಂದರ್ಭದಲ್ಲಿ, ಆ ನತದೃಷ್ಟ ತಂದೆ ತಾಯಿಯ ಇನ್ನಿಲ್ಲದ ದುಃಖದ ನಡುವೆ ಆ ಮಗುವಿನ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಬೇಕಾಗಿರುವುದು ಈ ವೃತ್ತಿಯಿಂದಷ್ಟೇ ಅಲ್ಲ, ಜೀವನದಿಂದಲೇ ವಿಮುಖನಾಗಿಸುತ್ತದೆ ಎಂದು ನಿರೂಪಕ ಹೇಳಿಕೊಳ್ಳುತ್ತಾನೆ. ಎಲ್ಲಿಂದಲೋ ಬಂದ ಅಪರಿಚಿತನೊಬ್ಬ ಲಾಡ್ಜ್‌ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು.. ತಾವು ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಕುಟುಂಬದವರಿಂದ ವಿವಾಹಕ್ಕೆ ಬಂದ ತೀವ್ರ ಪ್ರತಿರೋಧಕ್ಕೆ ನೊಂದು ಜೀವನಕ್ಕೇ ಅಂತ್ಯ ಹಾಡಿದ ಪ್ರೇಮಿಗಳು-ಇನ್ನೇನು ವಿವಾಹಕ್ಕೆ ತಯಾರಾದವರಂತೆ ಸಾಲಂಕೃತರಾಗಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡ ಭಂಗಿಯಲ್ಲಿದ್ದ ಅವರ ಮೃತ ದೇಹಗಳು-ದೂರದಲ್ಲಿದ್ದು ವೀಕ್ಷಕರಂತೆ ನೋಡಲೂ ಕಷ್ಟವಾದ ಈ ಸಾವುಗಳಿಗೆ ಅಂತ್ಯ ಸಂಸ್ಕಾರದ ಸಿದ್ಧತೆ ಮಾಡುವುದು ಹತಾಶೆಯ ಪರಮಾವಧಿಯಲ್ಲದೆ ಇನ್ನೇನು ಎಂದು ಅಲವತ್ತುಕೊಳ್ಳುತ್ತಾನೆ ನಮ್ಮ ನಿರೂಪಕ. ದೇವರ ಮೇಲಿನ ನಂಬಿಕೆ, ಕ್ಷಣಭಂಗುರ ಜೀವನದಲ್ಲಿ ಸ್ಥಿತಪ್ರಜ್ಞೆಯನ್ನು ಭೋದಿಸುವ ಬುದ್ಧ ಮತ್ತಿತರ ದಾರ್ಶನಿಕರ ತತ್ವಗಳು ಇವೆಲ್ಲವೂ ಎಷ್ಟು ನಿರರ್ಥಕ ಎಂಬೆಲ್ಲ ಚಿಂತನೆಯಲ್ಲಿ ತನ್ನನ್ನು ಮುಳುಗಿಸಿದ್ದ ಈ ಸಂದರ್ಭಗಳನ್ನು ದಾಖಲಿಸುತ್ತಾ ಆತ ಕೊನೆಗೂ ಈ ವಿಮುಖತೆಗೇ ವಿಮುಖರಾಗಿ ತಂತಮ್ಮ ಜೀವನಕ್ಕೆ ಮರಳುವುದೇ ಜೀವನಧರ್ಮವೇನೋ ಎನ್ನುವ ತೀರ್ಮಾನಕ್ಕೆ ಬರುತ್ತಾನೆ. ಸಮೀಕ್ಷೆಯ ಮಗದೊಂದು ಪ್ರಶ್ನೆಗೆ ವಿಸ್ತೃತ ಪ್ರತಿಕ್ರಿಯೆ ಇದು. + +ಮೃತ್ಯುವನ್ನು ಯಾವ ಬಗೆಯಲ್ಲಿ ಸ್ವೀಕರಿಸುವುದು ಸೂಕ್ತ ಎಂಬ ಲೇಖಕರ ಚಿಂತನೆಗಳು ನಿರೂಪಕನ ಮೂಲಕ ಹೊರಬಂದದ್ದು ಈ ವೃತ್ತಿಯಲ್ಲಿದ್ದವರ, ಇವರಿಂದ ಸೇವೆ ಪಡೆದವರ ಮನೋಧರ್ಮವನ್ನು ಹೇಗೆ ಹೆಚ್ಚು ಮಾನವೀಯಗೊಳಿಸಬಹುದು ಎಂದು ಸಮೀಕ್ಷಕರು ಒಡ್ಡಿದ ಪ್ರಶ್ನೆಯಿಂದ. ಓದುಗರನ್ನೂ ಸೇರಿ ಪ್ರತಿಯೊಬ್ಬರೂ ತಮ್ಮನ್ನು ತಯಾರು ಮಾಡಿಕೊಳ್ಳ ಬೇಕಾದ ಅನಿವಾರ್ಯ ಸಂದರ್ಭ ಈ ಮೃತ್ಯು. ಇಲ್ಲಿಯ ಚಿಂತನಾ ಲಹರಿ ಹಲವರನ್ನು ತಟ್ಟುವುದಂತೂ ಸತ್ಯ. ಈ ಕಾದಂಬರಿಯ ಉದ್ದೇಶವೂ ಅದೇ ಇದ್ದೀತು. + +ತನ್ನನ್ನು ಅತ್ಯಂತ ಪ್ರಭಾವಿಸಿದ ವ್ಯಕ್ತಿಯೆಂದೆನ್ನಲಾಗದಿದ್ದರೂ ತಾರುಣ್ಯದಲ್ಲಿ ಹಲವು ದುಷ್ಕೃತ್ಯಗಳನ್ನು ಎಸಗಿ ಪ್ರಸ್ತುತ ಯೋಗಿಯಂತಹ ಜೀವನ ನಡೆಸುತ್ತಿರುವ ತನ್ನ `ಚಿಕ್ಕಪ್ಪ’ ನ ಪ್ರಸ್ತಾಪ ಮಾಡುತ್ತಾನೆ ನಿರೂಪಕ. ಇಲ್ಲಿ ಈ ವ್ಯಕ್ತಿಯ ಕುರಿತಾದ ವಿಶ್ಲೇಷಣೆಯಲ್ಲಿ ಕಾಣ ಸಿಗುವ ಲೇಖಕರ ಚಿಂತನೆಗಳು-ಪರಿಸ್ಥಿತಿಗೆ ತಕ್ಕುದಾಗಿ ಬದಲಾಗುವ ಮನುಷ್ಯನ ವರ್ತನೆ, ಅಂತೆಯೇ ಪಡೆಯಬಹುದಾದ ಪ್ರಬುದ್ಧತೆ ಇತ್ಯಾದಿ-ಓದುಗರನ್ನೂ ಆ ಎಡೆಗೆ ಸೆಳೆದೀತು. ತಮ್ಮನ್ನು ಪ್ರಭಾವಿಸಿದ ವ್ಯಕ್ತಿ/ವ್ಯಕ್ತಿಗಳ ವಿಶ್ಲೇಷಣೆಯಲ್ಲಿ ತೊಡಗುವಂತೆಯೂ ಮಾಡಬಹುದು. ಜೀವನವೆಂಬ ಮಾಯೆಯಾಟದ ಕುರಿತು ತಾವೇ ಚಿಂತನೆಗೆ ತೊಡಗಿರುವ ಓದುಗ ವರ್ಗಕ್ಕೆ ಈ ಭಾಗವೂ ಪ್ರಿಯವಾಗುವುದು ಖಂಡಿತಾ. ಯಾವ ಸಾಲು, ಯಾವ ಸನ್ನಿವೇಶ ಯಾರಲ್ಲಿ ಯಾವ ಬಗೆಯ ಹೊಳಹನ್ನು ನೀಡಬಹುದೆಂದು ಖಚಿತವಾಗಿ ಯಾರೂ ಹೇಳಲಾರರು. ಅಂತೆಯೇ ಇಲ್ಲಿಯೂ. + +ಕಾದಂಬರಿಯ ಕೊನೆಯ ಭಾಗದಲ್ಲಿ ಅನುಪಲ್ಲವಿಯ ಪಾತ್ರ ಮತ್ತೆ ಹಾಜರಾಗುತ್ತದೆ. ಸಮೀಕ್ಷೆಯ ಸಂಕ್ಷಿಪ್ತ ವರದಿ ತಯಾರಿಸಿ ಆಕೆಯನ್ನು ಭೇಟಿಯಾಗಲೆಂದು ಹೊರಡುವ ನಿರೂಪಕನಿಗೆ ಆಕೆಯನ್ನು ಮತ್ತೆ ಕಾಣುವ ಸಂಭ್ರಮ; ಆಕೆಯ ಪ್ರತಿಕ್ರಿಯೆಯ ಕುರಿತು ಆತಂಕ.. ಆ ಭೇಟಿಯ ವಿವರ, ನಂತರದ ವಿದ್ಯಮಾನಗಳು ಒಂದಷ್ಟು ನಾಟಕೀಯವೆನಿಸುತ್ತವೆ. ಆಕೆಯ ಪಾತ್ರ ಚಿತ್ರಣವೂ ಗಟ್ಟಿ ನೆಲೆಯಲ್ಲಿ ಮೂಡಿಲ್ಲ ಎನಿಸುತ್ತದೆ. ಹಾಗಿದ್ದೂ ನಿರೂಪಕನ ಒಳತೋಟಿಗಳು, ಚಿಂತನೆಗಳು ಈ ಅಂತಿಮ ಭಾಗದಲ್ಲೂ ಸಮರ್ಥವಾಗಿ ಮೂಡಿಬಂದಿವೆ. + + + +ಮನುಷ್ಯ ಸಂಬಂಧಗಳ, ವರ್ತನೆಗಳ ಕುರಿತು ವಿಶ್ಲೇಷಣೆ, ಸಾವಿನ ವಿಷಣ್ಣತೆಯಿಂದ ಹೊರಬರುವ ಪ್ರಯತ್ನದಲ್ಲಿ ಮೂಡಿದ ಅನಿಸಿಕೆಗಳು, ಜೀವನ್ಮರಣದ ಹಲವು ತಲ್ಲಣಗಳ ಕುರಿತಾದ ಚಿಂತನಾ ಲಹರಿ `ಸಾವಿನ ದಶಾವತಾರ’ ಪ್ರಮುಖ take-home ಅಂಶಗಳು. ಇವುಗಳು ತುಂಬ ಪ್ರಾಮಾಣಿಕವಾಗಿ ಮೂಡಿಬಂದಿರುವುದು ಕಾದಂಬರಿಯ authenticity ಯನ್ನು ಹೆಚ್ಚಿಸುತ್ತದೆ. ಸಾಮಾನ್ಯ, ವ್ಯಾವಹಾರಿಕ ವ್ಯಕ್ತಿ ಎಂದೇ ಕಾಣುವ ನಿರೂಪಕ ತನ್ನ ಸುತ್ತ ಮುತ್ತಲಿನ ವಿದ್ಯಮಾನಗಳನ್ನು ಸಹಜ ಆಸ್ಥೆಯಿಂದ ಗಮನಿಸುವಂತೆ ತನ್ನ ಒಳಗನ್ನೂ ಅಷ್ಟೇ non judgemental ಆಗಿ ಗಮನಿಸಬಲ್ಲ ಸೂಕ್ಷ್ಮಜ್ಞ Introverted extrovert ಎನ್ನಬಹುದೇನೋ! ಸೊಗಸಾದ ಭಾಷೆ, ನಿರೂಪಣೆಯ ಶೈಲಿ, ಒಳಗೊಂಡ ವಿಚಾರಗಳು, ವಿವರಣೆಗೆ ನಿಲುಕದ ಆದರೆ ಆಪ್ತವೆನಿಸುವ ಹಲವಾರು ಆಂಶಗಳನ್ನು ಒಳಗೊಂಡ ಕಾದಂಬರಿ ಇದು. ಕಥಾವಸ್ತುವಂತೂ ನಿಜಕ್ಕೂ ಅಪರೂಪದ್ದು. ಒಂದು ಒಳ್ಳೆಯ ಕಲಾತ್ಮಕ ಸಿನೆಮಾವನ್ನು ನೋಡಿದ ಅನುಭವ ಕೊಡುವ ಈ ಕಾದಂಬರಿ, ಕನ್ನಡ ಕಾದಂಬರಿ ಲೋಕದಲ್ಲಿ ಮಹತ್ವದ ಮೈಲಿಗಲ್ಲಾಗಿ ನಿಲ್ಲ ಬಲ್ಲ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು. + +ಡಾ. ಸುಧಾ ಅವರು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕನ್ನಡಕ್ಕೆ ಅನುವಾದಿಸಿದ ಸಾಮರ್ ಸೆಟ್ ಮಾಮ್, ಮೊಪಾಸಾ ಮತ್ತಿತರ ಹೆಸರಾಂತ ಲೇಖಕರ ಕಥೆಗಳು ಕನ್ನಡದ ಹಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. \ No newline at end of file diff --git a/Kenda Sampige/article_11.txt b/Kenda Sampige/article_11.txt new file mode 100644 index 0000000000000000000000000000000000000000..186b317f1ed5664f3536b3f63230fc9e717fee10 --- /dev/null +++ b/Kenda Sampige/article_11.txt @@ -0,0 +1,23 @@ +ಹೈಸ್ಕೂಲ್ ಶಿಕ್ಷಕರಾಗಿರುವ ನನ್ನ ಸ್ನೇಹಿತರೊಬ್ಬರು ಅಲ್ಲಿ ಶುರುವಾಗುವ ಮಕ್ಕಳ ಪ್ರೇಮ ಪ್ರಸಂಗಗಳ ಬಗ್ಗೆ ಹೇಳ್ತಾ ಇರ್ತಾರೆ. ಮಕ್ಕಳನ್ನು ಕುರಿತು ‘ಓದೋಕೆ ಅಂತಾ ಶಾಲೆಗೆ ಕಳಿಸಿದ್ರೆ, ಲವ್ವು ಗಿವ್ವು ಅಂತಾ ಲೈಫನ್ನು ಹಾಳು ಮಾಡಿಕೊಳ್ತಾರೆ. ಈ ರೀತೀನ ಸರ್ ಮಾಡೋದು?’ ಅಂತಾ ಬಯ್ತಾ ಇರ್ತಾರೆ. ಆಫ್ ಕೋರ್ಸ್, ಅವರು ಬಯ್ಯೋದ್ರಲ್ಲಿ ಅರ್ಥ ಇದೆ. ಲೈಫಲ್ಲಿ ಸೆಟ್ಲೇ ಆಗಿರೋಲ್ಲ. ಜೀವನ ಅಂದ್ರೆ ಏನು ಅಂತಾನೇ ಗೊತ್ತಿರೊಲ್ಲ… ಇಂಥವ್ರು ಈ ರೀತಿ ಮಾಡಿದ್ರೆ ಸಿಟ್ಟು ಬರಬೇಕಾದ್ದೆ. ‘ಹುಚ್ಚು ಖೋಡಿ ಮನಸ್ಸು, ಅದು ಹದಿನಾರರ ವಯಸು’ ಎನ್ನುವಂತೆ ಇದು ಅವರ ತಪ್ಪಲ್ಲ. ಅವರ ವಯಸ್ಸಿನ ತಪ್ಪು ಅಂತಾ ಆ ಸ್ನೇಹಿತನಿಗೂ ಗೊತ್ತು. ಸರಿಯಾಗಿ ಮಾರ್ಗದರ್ಶನ ಮಾಡಿದರೆ ಅವರನ್ನು ಸರಿದಾರಿಗೆ ತರಬಹುದು. ತಮಾಷೆ ಏನಪ್ಪಾ ಅಂದ್ರೆ ಈ ರೀತಿ ಮಕ್ಕಳನ್ನು ಬಯ್ಯೋ ಆ ನನ್ನ ಗೆಳೆಯ ಅವನೂ ಸಹ ಆ ವಯಸ್ಸಿನಲ್ಲಿ ಇದೇ ರೀತಿ ಮಾಡಿದ್ದ!!! + +ಆಗ ಹೈಸ್ಕೂಲಿನಲ್ಲಿ ಓದುವಾಗ ನನ್ನ ಕೆಲ ಗೆಳೆಯರು ತಾವು ಇಷ್ಟಪಡುವ ಹುಡುಗಿಯರ ಹೆಸರಿನ ಮೊದಲ ಇಂಗ್ಲೀಷ್ ಅಕ್ಷರ ಹಾಗೂ ತಮ್ಮ ಹೆಸರಿನ ಮೊದಲಕ್ಷರ ಸೇರಿಸಿ ನೋಟ್ ಬುಕ್ಕಿನ ಮೇಲೆ ಬರೆದುಕೊಳ್ಳೋದು ಅಥವಾ ಲವ್ ಸಿಂಬಲ್ ಹಾಕಿ ಶಾಲಾ ಗೋಡೆಯ ಮೇಲೆ ಮಾವಿನ ಕಾಯ ಹೀಚಿನ ವಾಟೆಯಲ್ಲಿ ಬರೆಯುತ್ತಿದ್ದರು. ಬಹುತೇಕರು ಡೆಸ್ಕಿನ ಮೇಲೆ ಬರೆಯೋದು ಅಥವಾ ಬಸ್ಸಿನ ಸೀಟಿನ ಮೇಲೆ ಬರಿಯೋದನ್ನು ಮಾಡ್ತಾರೆ. ನನ್ನ ಜೊತೆಯಲ್ಲಿ ಹಾಸ್ಟೆಲ್ಲಿನಲ್ಲಿ ನನ್ನ ಪಕ್ಕದಲ್ಲೇ ಇದ್ದ ಶಂಕರ್ ಮಾತ್ರ ಯಾವಾಗ್ಲೂ ನಮ್ಮ ಕ್ಲಾಸ್ ಮೇಟ್ ಹುಡುಗಿಯ ನೆನಪಿನಲ್ಲಿಯೇ ಕಾಲ ಕಳೀತಿದ್ದ. ಹೀಗೆ ಮಾಡ್ತಾ ಮಾಡ್ತಾ 9 ನೇ ಕ್ಲಾಸಲ್ಲೇ ಫೇಲ್ ಆಗಿ ಶಾಲೆ ಬಿಟ್ಟು ಹೋಗಿದ್ದ. ಈ ಸಮಯದಲ್ಲಿ ನಾವು ವಾರ್ಡನ್ ಗಮನಕ್ಕೆ ತಂದಿದ್ದರೆ ಅವನನ್ನು ಸರಿದಾರಿಗೆ ತರಬಹುದಿತ್ತೇನೋ? ಆದರೆ ವಾರ್ಡನ್ ಹತ್ತಿರ ಹೇಳಿದರೆ ಚಾಡಿ ಹೇಳ್ದಂತೆ ಆಗುತ್ತೋ? ಎಲ್ಲಿ ಅವನಿಗೆ ಹೊಡೆತ ಕೊಡುತ್ತಾರೋ? ಎಂದುಕೊಂಡು ಸುಮ್ಮನಾಗಿದ್ದನ್ನು ಈಗ ನೆನಪಿಸಿಕೊಂಡರೆ ನಾನು ಹೇಳಿದ್ದರೆ ಚೆಂದವಿತ್ತೇನೋ ಅಂತಾ ಅನಿಸುತ್ತೆ. + +ಈ ವಯಸ್ಸಿನಲ್ಲಿ ಮಕ್ಕಳಿಗೆ ಈ ಭಾವನೆ ಬರೋದಿಕ್ಕೆ ಕ್ರಶ್ ಅನ್ತಾರೆ. ‘ವಯಸ್ಸಿಗೆ ಬಂದಾಗ ಕತ್ತೆಯೂ ಸಹ ಸುಂದರವಾಗಿ ಕಾಣುತ್ತೆ’ ಅಂತಾರಲ್ಲಾ ಹಾಗೆ!! ಈ ವಯಸ್ಸಲ್ಲಿ ಮಕ್ಕಳಿಗೆ ವಿರುದ್ಧ ಲಿಂಗಿಗಳ ಕಡೆ ಆಕರ್ಷಣೆಯಾಗೋದು ಸಹಜ. ಆದರೂ ಸೂಕ್ತ ರೀತಿಯ ಸಲಹೆ ಸೂಚನೆ ನೀಡಿ ಅವರನ್ನು ಸರಿ ದಾರಿಗೆ ತರಬಹುದು. ‘ಖಾಲಿ ಮನಸ್ಸು ದೆವ್ವಗಳ ಕಾರ್ಯಾಗಾರ’ ಎಂಬಂತೆ ಮಕ್ಕಳು ಬ್ಯೂಸಿಯಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಸ್ನೇಹಿತರಂತೆ ಕಂಡು ಅವರ ಭಾವನೆಗಳಿಗೆ ಸ್ಪಂದಿಸಿ, ಅವರನ್ನು ಪ್ರೀತಿಸಿದರೆ ಹಾಗೂ ಅವರಿಗೆ ಸಮಯ ಕೊಟ್ಟರೆ ಮಕ್ಕಳು ಪ್ರೀತಿಯನ್ನು ಹುಡುಕಿಕೊಂಡು ಬೇರೆಯವರ ಬಳಿ ಹೋಗುವುದು ತಪ್ಪುತ್ತದೆ. ನನಗೂ ಸಹ ಈ ಭಾವನೆಗಳು ಬರುತ್ತಿದ್ದವಾದರೂ ಮನೆಯ ಕಂಡೀಷನ್ ನೆನಪು ಬಂದು ಓದಿನತ್ತ ಮನಸ್ಸನ್ನು ಹೊರಳಿಸುತ್ತಿದ್ದೆ. + +ನಮ್ಮ ಕ್ಲಾಸಲ್ಲಿ ನಮ್ಮ ಇಂಗ್ಲೀಷ್ ಮೇಷ್ಟ್ರು ಆಗಿದ್ದ ಕೆಆರ್ ಎಸ್ ಆಗಾಗ್ಗೆ ಕ್ಲಾಸಿನಲ್ಲಿ ಹಾಡನ್ನು ಹೇಳಿಸುತ್ತಿದ್ದರು. ಅದರಲ್ಲೂ ನರಸಿಂಹ ಹೇಳುತ್ತಿದ್ದ ‘ಹರಿ ಭಜನೆ ಮಾಡೋ ನಿರಂತರ….. “ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು….’ ಎಂಬ ಹಾಡುಗಳನ್ನು ಕೇಳಿ ಕೇಳಿ ನಮಗೆ ಕಂಠಪಾಠವಾಗಿ ಹೋಗಿದ್ದವು. ನರಸಿಂಹ ನಮ್ಮದೇ ಶಾಲೆಯ ಕ್ಲರ್ಕ್‌ರವರ ಮಗ. ಅವನು ನನ್ನ ಪಕ್ಕ ಕೂರುತ್ತಿದ್ದ. ನೋಡೋಕೆ ಸಣ್ಣ ಹುಡುಗನಂಗೆ ಇದ್ದ. ಆದರೆ ಅವನು ಮಾಡುತ್ತಿದ್ದ ತರಲೆ ಮಾತ್ರ ನಮಗೆ ಮಾತ್ರ ಗೊತ್ತಾಗ್ತಿತ್ತು. ನಾವು ಎದ್ದಾಗ ನಮ್ಮ ಯೂನಿಫಾರಂ ಚಡ್ಡಿಯನ್ನು ಮೆಲ್ಲಗೆ ಮೇಲೆತ್ತುವ ತರಲೆ ಮಾಡುತ್ತಿದ್ದ, ಓದಲು ಕುಳಿತರೆ ಹುಳದ ರೀತಿ ಕಿವಿ ಹತ್ತಿರಕ್ಕೆ ಬಂದು ‘ಗುಂಯ್’ ಗುಟ್ಟುವ ಶಬ್ದ ಮಾಡುತ್ತಿದ್ದ. ಬೇರೆ ಹುಡುಗರ ಮಿಮಿಕ್ರಿ ಮಾಡುವುದು, ಆ ಊರಲ್ಲಿದ್ದ ಡಾಕ್ಟರ್ ಅವರ ಮಿಮಿಕ್ರಿ ಮಾಡುವುದು.. ಹೀಗೆಲ್ಲ ಏನೇನೋ ಮಾಡುತ್ತಿದ್ದ. ರಂಗನಾಥನಿಗೆ ಕಾಮಿಡಿ ಮಾಡುತ್ತಾ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದ್ದ. ಈಗ ಇದೇ ನರಸಿಂಹ ಬೆಂಗಳೂರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾನೆ. + + + +ನನ್ನ ಪಕ್ಕ ಸಂದೇಶ(ಹೆಸರು ಬೇರೆ ಇದೆ) ಕೂರುತ್ತಾ ಇದ್ದ. ಅವನು ಬಾಯಲ್ಲಿ ಬೆಲ್ಲದಚ್ಚನ್ನು ಇಟ್ಟುಕೊಂಡು ಕೂರುತ್ತಿದ್ದ. ದಪ್ಪನೆಯ ಕನ್ನಡಕ ಹಾಕುತ್ತಿದ್ದ ಇವನು ಕಣ್ಮುಚ್ಚಿಕೊಂಡು ನಿದ್ರಿಸಿದರೂ ಯಾರಿಗೂ ತಿಳಿಯುತ್ತಿರಲಿಲ್ಲ. ಪಾಠವನ್ನು ಕೇಳುತ್ತಲೇ ಇರಲಿಲ್ಲ. ಇವನ ನೋಟ್ಸ್ ನೋಡಿದರೆ ತುಂಬಾ ಕಚಡಾ ಥರ ಇರುತ್ತಿತ್ತು. ಇವನು 10 ನೇತರಗತಿಯಲ್ಲಿ ತೆಗೆದ ಅಂಕಗಳನ್ನು ನೋಡಿದರೆ ಇವನು ಯಾಕಾದ್ರೂ ಓದುತ್ತಿದ್ದಾನೆ ಎಂದು ಅನಿಸುತ್ತಿತ್ತು. ಆದರೆ ಇಂದು ಇದೇ ವ್ಯಕ್ತಿ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ!! ಇದೇ ರೀತಿ ಇನ್ನೂ ಅನೇಕರು ಆಗ ಕಮ್ಮಿ ಅಂಕ ಪಡೆಯುತ್ತಿದ್ದವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೇ ರೀತಿ ನಮ್ಮ ಶಾಲೆಯಲ್ಲಿ ‘ಕನ್ನಡ ಪಂಡಿತ’ ಎಂದು ಹೆಸರಾಗಿದ್ದ ಇಂದ್ರಜಿತ್ ಎಂಬ ನನ್ನ ಸ್ನೇಹಿತನಿದ್ದ. ಇವನು ಮೊದಲ ವರ್ಷ ತನ್ನೂರಿನಿಂದ ಶಾಲೆಗೆ ಬರುತ್ತಿದ್ದ. ಆದರೆ ಬಹುಷಃ 9 ನೇತರಗತಿಗೆ ಹಾಸ್ಟೆಲ್‌ಗೆ ಸೇರಿದ ಅನಿಸುತ್ತೆ. ಕನ್ನಡ ಮೇಷ್ಟ್ರ ಹತ್ತಿರ ಭಾಷೆಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದ. ಕನ್ನಡದಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದ ಎಂಬ ಕಾರಣಕ್ಕೆ ಇರಬೇಕು ಇವನಿಗೆ ಪಂಡಿತ ಎಂಬ ಹೆಸರು ಸೂಕ್ತವಾಗಿತ್ತು. ಇವನು ಸಾಮಾನ್ಯವಾಗಿ ಓದುತ್ತಿದ್ದ. ಹಾಸ್ಟೆಲ್ಲಿನಲ್ಲಿ ಊಟ ಬಡಿಸೋಕೆ ಹೋಗುತ್ತಿದ್ದ. ಇದೇ ವ್ಯಕ್ತಿ ಇಂದು ಶೇರ್ ಮಾರ್ಕೆಟ್ಟಿನ ಬಗ್ಗೆ ಇಂಗ್ಲೀಷಿನಲ್ಲಿ ಮೂರ್ನಾಲ್ಕು ಪುಸ್ತಕಗಳನ್ನು ಬರೆದಿದ್ದಾನೆ! ಯಶಸ್ವೀ ಇಂಟ್ರಾಡೇ ಟ್ರೇಡರ್ ಆಗಿದ್ದಾನೆ. ಆದ್ದರಿಂದ ನಾವು ಯಾವತ್ತೂ ಮಕ್ಕಳನ್ನು ಮೊದಲೇ ಇವರು ಹೀಗೇ ಎಂದು ಜಡ್ಜ್ ಮಾಡಬಾರದು. ಮುಂದೆ ಅವರು ಬದಲಾಗಬಹುದು. ನಾವು ಅವಕಾಶಗಳನ್ನು ಒದಗಿಸಬೇಕಷ್ಟೇ. + +ನನ್ನ ಡೆಸ್ಕಿನ ಮುಂದೆ ವೆಂಕಟೇಶ ಎಂಬುವವನು ಕೂರುತ್ತಿದ್ದ. ಇವನು ಹೊಳಲ್ಕೆರೆಯಿಂದ ಬರುತ್ತಿದ್ದ. ಮಿತ ಭಾಷಿ. ಆದರೆ ಇವನದೊಂದು ವಿಶೇಷ ಏನಪ್ಪಾ ಅಂದ್ರೆ ಇವನಿಗೆ ಯಾರಾದ್ರೂ ಒಂದು ಹೊಡೆತ ಹೊಡೆದರೆ ಇವನು ಆ ಹೊಡೆತಕ್ಕೊಂದು ಹೊಡೆತ ಕೊಟ್ಟು, ಹೊಡೆದವನಿಗೆ ವಾಪಸ್ಸು ಹೊಡೆಯೋತನಕ ಮನೆಗೆ ಹೋಗ್ತಾ ಇರಲಿಲ್ಲ. ಮೊದಲೇ ಬಸ್ಸಿನಲ್ಲಿ ಓಡಾಡುತ್ತಿದ್ದವ. ಬಸ್ಸನ್ನು ಮಿಸ್ ಮಾಡಿಕೊಂಡರೂ ಇವನು ಮಾತ್ರ ಹೊಡೆತ ಕೊಟ್ಟೇ ಹೋಗುತ್ತಿದ್ದ. ಶಾಲೆಗೆ ಬೆಲ್ ಹೊಡೆದಾಗ ನಾನು ಇವನಿಗೆ ಸುಖಾಸುಮ್ಮನೆ ಹೊಡೆದು ಜೋರಾಗಿ ಹೋಗುತ್ತಿದ್ದೆ. ಇವನು ನನ್ನನ್ನು ಅಷ್ಟೇ ವೇಗವಾಗಿ ಬೆನ್ನತ್ತಿ ಹೊಡೆದು ಬರುತ್ತಿದ್ದ. ಎಷ್ಟೋ ಬಾರಿ ಇವನಿಗೆ ಸಿಗದೇ ಎಲ್ಲೆಲ್ಲೋ ಓಡಿದಾಗ ಇವನೂ ಸಹ ಹಾಗೇ ಹೋದ ಜಾಯಮಾನದವನಲ್ಲ. ಅಪ್ಪಿತಪ್ಪಿ ಮಿಸ್ಸಾಗಿ ಸಿಗದೇ ಹೋದಾಗ ಮಾರನೇ ದಿನವಾದರೂ ನೆನಪಿಸಿಕೊಂಡು ಹೊಡೆಯುತ್ತಿದ್ದ. ಇವನೇ 10 ನೇತರಗತಿಯಲ್ಲಿ ಶಾಲೆಗೆ ಟಾಪರ್ ಆದ. + +ನಾನು ಎನ್.ಸಿ.ಸಿ. ಗೆ 9 ನೇ ತರಗತಿಯಲ್ಲಿ ಸೇರಿದ್ದಕ್ಕೆ 10 ನೇತರಗತಿಗೆ ಎನ್.ಸಿ.ಸಿ ಯ ಎರಡನೇ ವರ್ಷಕ್ಕೆ ಬಂದೆ. ಎಸ್ಸೆಸ್ಸೆಲ್ಸಿ ಅಂತಾ ಬಹುತೇಕರು ಎಸ್ಸೆಸ್ಸೆಲ್ಸಿಗೆ ‘ಎನ್ ಸಿ ಸಿ’ ಸೇರೋದನ್ನು ಇಷ್ಟಪಡುತ್ತಿರಲಿಲ್ಲ. ನಾನು ಎರಡನೇ ವರ್ಷ ಮುಗಿಸೋಣ ಎಂದು ಎನ್ ಸಿ ಸಿ ಬಿಡಲಿಲ್ಲ. ಈ ವರ್ಷ ನಮಗೆ ಕ್ಯಾಂಪ್ ಕಳಿಸ್ತಾ ಇದ್ರು. ನನಗೂ ಅದೇ ರೀತಿ ಸಿ.ಎ.ಟಿ.ಸಿ ಕ್ಯಾಂಪ್ ಎಂದು ಕೊಂಡಜ್ಜಿಗೆ ಕಳಿಸಿದ್ರು. ಈ ಊರು ದಾವಣಗೆರೆಯ ಬಳಿ ಇತ್ತು. ಇಲ್ಲೊಂದು ಗುಡ್ಡವಿತ್ತು. ಇದು ಕೊರಕಲು ಕೆಂಪು ಮಣ್ಣಿನಿಂದ ತುಂಬಿತ್ತು. ವಿಶಾಲವಾದ ಜಾಗವಾದ್ದರಿಂದ ಇಲ್ಲೇ ನಾವು ಇರಬೇಕಾಗಿತ್ತು. ನಮಗೆ ಹತ್ತು ಜನರಿಗೊಂದರಂತೆ ಟೆಂಟ್ ಕೊಟ್ಟಿದ್ದರು. ಇದರಲ್ಲೇ ನಾವು ವಾಸ ಮಾಡಬೇಕಾಗಿತ್ತು. ಚೇಳುಗಳಿದ್ದ ಕಾರಣಕ್ಕೆ ನಾವು ಶೂಗಳನ್ನು ಬಿಚ್ಚುವಂತೆ ಇರಲಿಲ್ಲ. ಕಡೇ ಪಕ್ಷ ಸಾಕ್ಸ್‌ಗಳನ್ನಾದರೂ ಹಾಕಿಕೊಂಡು ಇರಬೇಕಾಗಿತ್ತು. ಬೆಳಗ್ಗೆ 5 ಘಂಟೆಗೆ ನಮ್ಮ ದಿನಚರಿ ಆರಂಭವಾಗುತ್ತಿತ್ತು. ಅಷ್ಟೊತ್ತಿಗೆ ಒಂದು ಬಕೇಟ್ಟಿನಲ್ಲಿ ಟೀ ಬರುತ್ತಿತ್ತು. ಹಾಸ್ಟೆಲ್ಲಿನಲ್ಲಿ ನಮಗೆ ಟೀ ಸೌಲಭ್ಯವಿಲ್ಲದ ಕಾರಣಕ್ಕೋ ಏನೋ ನಾವು ಟೀಯನ್ನು ತುಸು ಜಾಸ್ತಿಯೇ ಕುಡಿಯುತ್ತಿದ್ದೆವು. ಆನಂತರ ನಮ್ಮನ್ನು ಮಾರ್ಚ್ ಫಾಸ್ಟ್‌ಗೆಂದು ಕರೆದುಕೊಂಡು ಹೋಗುತ್ತಿದ್ದರು. 8 ಘಂಟೆಯವರೆಗೂ ಮಾಡಿಸಿ ನಂತರ ಸ್ನಾನಕ್ಕೆ ಬಿಡುತ್ತಿದ್ದರು. ತದನಂತರ ಟಿಫನ್ ವ್ಯವಸ್ಥೆ. ಆಮೇಲೆ ಮಾರ್ಚ್ ಫಾಸ್ಟ್ ತರಬೇತಿ, ರೈಫಲ್ ಟ್ರೈನಿಂಗ್ ಕೊಡುತ್ತ ಇದ್ದರು. ಮಧ್ಯಾಹ್ನದವರೆಗೂ ಬಿಡುವಿಲ್ಲದ ತರಬೇತಿ ಮಧ್ಯಾಹ್ನದ ಊಟ. ಆಮೇಲೆ ಒಂದು ಘಂಟೆ ರೆಸ್ಟ್‌ಗೆ ಅವಕಾಶ ಕೊಡುತ್ತಿದ್ದರು. ಸಂಜೆ ಕಲ್ಚರಲ್ ಪ್ರೋಗ್ರಾಂ ಇರುತ್ತಿತ್ತು. ನಂತರ ರಾತ್ರಿ ಊಟ ಕೊಡುತ್ತಿದ್ದರು. ಆನಂತರ ನಾವು ಮಲಗಬೇಕಾಗಿತ್ತು. ಟೆಂಟಿನೊಳಗೆ ನೆಲದ ಮೇಲೆಯೇ ಚಾಪೆಯನ್ನಾಸಿಕೊಂಡು ಮಲಗುತ್ತಿದ್ದೆವು. ಸುಸ್ತಾಗುತ್ತಿದ್ದ ಕಾರಣ ನಮ್ಮ ನಿದ್ದೆಗೆ ಇದ್ಯಾವುದೂ ಭಂಗ ತರುತ್ತಿರಲಿಲ್ಲ. ಇದೇ ರೀತಿ ಒಂದು ವಾರ ಕಳೆದು ಊರಿಗೆ ವಾಪಸ್ಸಾಗುವಾಗ ಏನೋ ಒಂಥರಾ ಬೇಸರವಾಗ್ತಾ ಇತ್ತು. ಬೇರೆ ಬೇರೆ ಕಡೆಯಿಂದ ಬಂದು ಗೆಳೆಯರಾಗಿದ್ದವರನ್ನು ಬಿಟ್ಟು ಹೋಗೋ ಮನಸ್ಥಿತಿಯ ಜೊತೆಗೆ, ಕೊಡುತ್ತಿದ್ದ ಉತ್ತಮ ತಿಂಡಿ, ಊಟ ಬಿಟ್ಟು ಮತ್ತೆ ಹಾಸ್ಟೆಲ್ಲಿಗೆ ಹೋಗಬೇಕಲ್ಲಪ್ಪ ಎಂಬ ನೋವು ನಮಗೆ ತುಂಬಾ ಬೇಸರ ತರಿಸುತ್ತಿತ್ತು. + +ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ. ಈ ಕಾರಣದಿಂದ ನನ್ನ ಓದಿನ ಆಸಕ್ತಿ ಕುಂಠಿತವಾಗುತ್ತಾ ಹೋಯ್ತು. ಇದರ ಜೊತೆಗೆ ಇದೇ ವರ್ಷ ನಮ್ಮ ಸ್ವಾಮೀಜಿಯವರು ಸ್ವರ್ಗಸ್ತರಾದ ಕಾರಣ ನಮಗೆ ಪಾಠಗಳು ಪ್ರತೀ ವರ್ಷದಂತೆ ನಡೆಯಲಿಲ್ಲ. ಶತಕದ ಗಡಿ ದಾಟಿ ‘ಸೇವೆ ಸೇವೆ ಸೇವೆ’ ಎಂದು ತಮ್ಮ ಜೀವನವನ್ನೇ ಸಮಾಜಕ್ಕೆ ಮೀಸಲಾಗಿರಿಸಿ ಬದುಕಿ, ಹಲವರ ಬಾಳು ಬೆಳಗಿದ ಮಹಾನ್ ಚೇತನ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಆರಾಧನೆ ಕಾರ್ಯಕ್ರಮಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದರು. ಅಂದು ಇವರ ಪಾರ್ಥಿವ ಶರೀರ ಬರುವ ದಿನ ನಾನು ಎನ್ ಸಿ ಸಿ ಕ್ಯಾಡೆಟ್ ಆಗಿದ್ದರಿಂದ ನನ್ನನ್ನೂ ಕಾಯಲು ರಸ್ತೆಯಂಚಿನ ಬದಿಯಲ್ಲಿ ಹಾಕಿದ್ದು ಅದನ್ನು ತೀರ ಹತ್ತಿರದಿಂದ ನೋಡಲು ಅದೃಷ್ಟ ನನಗೆ ಸಿಕ್ಕಿತು ಎಂದು ಭಾವಿಸುತ್ತೇನೆ. + + + +“ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರುಮದುವೆಗೋ ಮಸಣಕೋ ಹೋಗೆಂದ ಕಡೆಗೋಡುಪದ ಕುಸಿಯೇ ನೆಲವಿಹುದು ಮಂಕುತಿಮ್ಮ||”ಎಂಬ ಡಿವಿಜಿಯವರ ಮಾತಿನಂತೆ ನಾವು ಬಾಳಬೇಕು. ಬಾಳಲ್ಲಿ ನಾವು ಯಾವತ್ತೂ ಇನ್ನೊಬ್ಬರನ್ನು ಲಘುವಾಗಿ ಪರಿಗಣಿಸಬಾರದು. ಅವರಿಂದ ನಮಗೇನು ಎಂಬ ಅಹಂಕಾರವನ್ನು ಪಡುವುದು ಬೇಡ. ಎಲ್ಲರೊಳೊಂದಾಗಿ ಬಾಳಬೇಕು. + +ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ. \ No newline at end of file diff --git a/Kenda Sampige/article_110.txt b/Kenda Sampige/article_110.txt new file mode 100644 index 0000000000000000000000000000000000000000..bd26634c8c934b7ea524410ca4e1bff30ab9a270 --- /dev/null +++ b/Kenda Sampige/article_110.txt @@ -0,0 +1,11 @@ +ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ. ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು… ವಿಭಿನ್ನ ವಿಚಾರಗಳು, ವೈಚಾರಿಕತೆಯ ನೋಟ, ಕಂಡುಂಡದ್ದನ್ನು ಬರಹದಲ್ಲಿ ಕಟ್ಟಿಕೊಟ್ಟಿರುವ ಧಾಟಿ. ಅದರಿಂದಾಚೆಗೂ ಗುಬ್ಬಿಯ ಒಳಗಿನ ಭಾವ ಓದುಗರನ್ನು ಪ್ರತಿ ಕ್ಷಣ ಮಂತ್ರಮುಗ್ಧರನ್ನಾಗಿ ಮಾಡುವುದಂತೂ ನಿಜ. ಪ್ರತಿ ಪದಗಳು ಜೀವ ತುಂಬಿ ಬಂದಂತೆ ಓದುಗ ಸಹೃದಯರ ಉಸಿರಲ್ಲಿ ಬೆರೆತು ಹೋಗಿವೆ. + +(ವಿಕ್ರಮ್‌ ಬಿ.ಕೆ.) + +ಸಾರ್ಥಕತೆಯ ಸಂತೃಪ್ತಿಯನ್ನು ಮೂಡಿಸುವ ಕವಿತೆಗಳು ಸಫಲತೆಯ ಸಂದೇಶವನ್ನು ಸಹಜವಾಗೇ ಚಿತ್ರಿಸಿವೆ. ಹೇಳಬೇಕಾದದ್ದು ದೀರ್ಘವಿದ್ದರೂ ಸುಲಲಿತವಾಗಿ ನಾಲ್ಕಾರೂ ಸಾಲುಗಳಲ್ಲಿ ಕಟ್ಟಿಕೊಟ್ಟಿರುವುದೇ ಸೋಜಿಗ. ಹೃದಯದ ಭಾವ ತಣಿಯುವಂತೆ, ಮೊದಲ ತೊದಲ ಮಾತು ತುಡಿಯುವಂತೆ, ಎಲ್ಲ ಪದ್ಯಗಳು ಬರೆಯಲ್ಪಟ್ಟಿವೆ. + +ಪದ್ಯಗಳ ಅನಂತತೆ ಎಂಬುದು ಜ್ಞಾನವನ್ನು ಧ್ಯಾನಿಸುವತ್ತ ಸಾಗಿದಂತೆ ಓದುಗರಿಗೆ ಇದು ಮೊದಲ ಕವನಸಂಕಲನವೆಂದು ಎಲ್ಲಿಯೂ ಅನಿಸಲಿಕ್ಕಿಲ್ಲ. + +ಅಕ್ಕ, ಜೋಗತಿ ಮಂಜಮ್ಮ, ಪದವಿ, ಅವ್ವ, ಮಗು, ಸಮಾನಳು ಮುಂತಾದ ಕವಿತೆಗಳು ಜೀವ-ಭಾವ ತುಂಬಿ ಮಹಿಳೆಯರ ಜೀವನದ ಬಗ್ಗೆ ಚಿತ್ರಿಸಿವೆ. ಮುಂತಾಗಿ ನನಗಾರು ಸಾಟಿ, ತಮಟೆ, ಕಣ್ಣಾಮುಚ್ಚೆ ಕಾಡೆ ‘ಗೋಡೆ’ ಬೆಂಗಳೂರಿನ ಮಗ ಸಂಭಾಷಣೆಯೇ ಇಲ್ಲದಂತೆ ಕಾಡುವುದಂತೂ ಸಹಜ. ಪುಸ್ತಕ ಓದಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಅವು ನಮ್ಮಲ್ಲಿ ಹುಟ್ಟುಹಾಕಿದ ಪ್ರಶ್ನೆಗಳನ್ನು, ಭಾವಗಳನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕಾಯಿತು… ಇಡೀ ಕವನ ಸಂಕಲನವೇ ಸಶಕ್ತವಾಗಿರುವುದರಿಂದ ಆ ಈ ಕವನವಷ್ಟೇ ಚೆನ್ನಾಗಿದೆಯೆಂದು ಎನ್ನಲಾಗುವುದಿಲ್ಲ. ಹಾಗಾಗಿ ವಿಕ್ರಮ ಅವರ ಮುಂದಿನ ಪುಸ್ತಕದ ನಿರೀಕ್ಷೆಯಲ್ಲಿದ್ದೇನೆ. + +ತೇಜ ಎಸ್. ಬಿ. ಚನ್ನಪಟ್ಟಣದವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ. ಎ ಐಚ್ಚಿಕ ಕನ್ನಡ ವ್ಯಾಸಂಗ ಮಾಡುತ್ತಿದ್ದಾರೆ. ಓದು-ಬರಹದಲ್ಲಿ ಆಸಕ್ತಿ ಹೊಂದಿದ್ದಾರೆ. \ No newline at end of file diff --git a/Kenda Sampige/article_111.txt b/Kenda Sampige/article_111.txt new file mode 100644 index 0000000000000000000000000000000000000000..6dba708556f8f6623544065148088245378175ad --- /dev/null +++ b/Kenda Sampige/article_111.txt @@ -0,0 +1,51 @@ +ತಾಳೆಗರಿ ಇದು ತಮಿಳು ಕಥನ ಕರುಕ್ಕುವಿನ ಕನ್ನಡ ಅನುವಾದ. ಭಾಮಾ ಅವರು ತಮಿಳಿನಲ್ಲಿ ಬರೆದ ಜೀವನ ಗಾಥೆ. ಇದು ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್‌ನವರು ಪ್ರಕಟಿಸಿರುವ ಕರುಕ್ಕುವಿನ ಇಂಗ್ಲೀಷ್‌ ಅನುವಾದದ ಮೂಲಕ ಕನ್ನಡಕ್ಕೆ ಬಂದಿದೆ. ಇಂಗ್ಲಿಷಿಗೆ ಅನುವಾದಿಸಿದವರು ಹೆಸರಾಂತ ತಮಿಳು ಬರಹಗಾರ್ತಿ ಲಕ್ಷ್ಮಿ ಹೋಲ್ ಸ್ಟ್ರಾಮ್. ಕನ್ನಡಕ್ಕೆ ಡಾಕ್ಟರ್ ಎಚ್.ಎಸ್. ಅನುಪಮಾ ಅವರು ಅನುವಾದಿಸಿದ್ದಾರೆ. ಡಾ. ಅನುಪಮಾ ಅವರು ತಮ್ಮ ಕಥನ ಭಾಷೆಯನ್ನು ಬಿಟ್ಟು ಈ ಕೃತಿಗಾಗಿಯೇ ಬೇರೆಯ ನಿರೂಪಣಾ ಭಾಷೆಯನ್ನು ಕಟ್ಟಿಕೊಟ್ಟಿದ್ದನ್ನು ಇದರಲ್ಲಿ ನೋಡುತ್ತೇವೆ. + +ಭಾಮಾರ ಪೂರ್ಣ ಹೆಸರು ಫಾಸ್ಟಿನಾ ಸೊಸೈರಾಜ್ ಅಥವಾ ಫಾಸ್ಟಿನಾ ಮೇರಿ ಫಾತಿಮಾ ರಾಣಿ. ತಮಿಳಿನಲ್ಲಿ ಫಾತಿಮಾ ಪದ ಭಾತಿಮ ಎಂದು ಉಚ್ಚರಿಸಲ್ಪಡುತ್ತದೆ. 1958 ರಲ್ಲಿ ತಮಿಳುನಾಡಿನಲ್ಲಿ ವಿರುದು ನಗರ ಜಿಲ್ಲೆಯ ಪುತುಪಾಟ್ಟಿ ಎಂಬ ಹಳ್ಳಿಯ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಹುಟ್ಟಿದ ಭಾಮಾ, ಪದವಿ ಪಡೆದು, ಗಣಿತ ಶಿಕ್ಷಕಿಯಾದವರು. ದಲಿತ ಪರಯಾ ಸಮುದಾಯಕ್ಕೆ ಸೇರಿದ ಇವರು ತಮ್ಮ ಅಜ್ಜಿ ಅಜ್ಜನ ತಲೆಮಾರಿನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಗಣಿತ ಶಿಕ್ಷಕಿಯಾಗಿ ವೃತ್ತಿಯನ್ನು ಪ್ರಾರಂಭಿಸಿದ ಇವರು ಮುಂದೆ ಸಮುದಾಯದ ಸೇವೆಯತ್ತ ಸೆಳೆಯಲ್ಪಟ್ಟು ಕ್ರೈಸ್ತ ಸನ್ಯಾಸಿನಿಯಾದರು. ಏಳು ವರ್ಷ ಬೇರೆ ಬೇರೆ ಶಾಲೆಯಲ್ಲಿ ಬೋಧಿಸಿ, ಅಲ್ಲಿಯ ವಾತಾವರಣಕ್ಕೆ ವ್ಯವಸ್ಥೆಗೆ ಬೆಸತ್ತು, ಆ ಪಂಥದಿಂದ ಹಾಗೂ ಸನ್ಯಾಸದಿಂದ ಹೊರಬಂದರು. ದಲಿತ ಮಕ್ಕಳಿಗೆ ಶಾಲೆಯನ್ನು ತೆರೆದು, ತಮ್ಮ ಬಾಲ್ಯ ಮತ್ತು ನನ್ನ್ ಆಗಿದ್ದಾಗಿನ ಅನುಭವವನ್ನು ಆತ್ಮಕಥೆಯಾಗಿ ‘ಕರುಕ್ಕು’ ಎಂಬ ಹೆಸರಿನಲ್ಲಿ ಬರೆದಿದ್ದಾರೆ. + +(ಡಾ. ಎಚ್.ಎಸ್. ಅನುಪಮಾ) + +ಈ ಕೃತಿಯನ್ನು ಒಟ್ಟು ಒಂಬತ್ತು ಭಾಗದಲ್ಲಿ ಬರೆಯಲಾಗಿದೆ. ದಲಿತ ಹಾಗೂ ದಲಿತತ್ವದ ಕೃಷಿಯನ್ನು, ಮಹಿಳೆಯಾಗಿ ಅನುಭವಿಸಿದ ಸಂಘರ್ಷದ ಬದುಕಿನ ಅನಾವರಣದ ಕಥೆ ಇದು. ಒಂದನೇ ಭಾಗದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಊರು ಅಂದರೆ ಏನೊ ವಿಶೇಷ ಸೆಳೆತ. ಆ ಊರಲ್ಲಿ ಬೇರೆಯವರಿಗೆ ಏನೂ ವಿಶೇಷ ಇಲ್ಲ ಅಂತ ಅನಿಸಿದರೂ ಕೂಡ ತಮಗೆ ಮಾತ್ರ ಅದರ ಪ್ರತಿಯೊಂದು ಓಣಿ, ಗಲ್ಲಿ, ಹಾದಿ, ನೀರು, ಗಿಡ-ಮರ-ಬಳ್ಳಿ ಬೆಟ್ಟ, ಗುಡ್ಡ ಎಲ್ಲದರಲ್ಲೂ ಒಂದೊಂದು ವಿಶೇಷತೆ ಕಾಣಿಸುತ್ತಿರುತ್ತದೆ. ಅದೇ ರೀತಿಯಾಗಿ ಇಲ್ಲಿ ಭಾಮಾ ಅವರಿಗೂ ತಮ್ಮ ಹಳ್ಳಿಯ ಪ್ರತಿಯೊಂದರಲ್ಲಿಯೂ ವಿಶೇಷ ಸೆಳೆತ ಇದೆ. + +ಮೊದಲ ಭಾಗದಲ್ಲಿಯೇ ಅವರು ಪ್ರತಿಯೊಂದು ಓಣಿಯ ಹೆಸರು, ಅಲ್ಲಿ ವಾಸವಿರುವ ಜಾತಿಯ ಹೆಸರಿನ ಜನ ಮತ್ತು ಅವರ ಕಸುಬಿನ ಬಗ್ಗೆ ಪರಿಚಯಿಸುತ್ತಾರೆ. “ಬಲಕ್ಕೆ ಕೊರವರ ಮನೆ. ಅವರು ಬೀದಿ ಕಸ ತೆಗೆಯುವರು. ಆಮೇಲೆ ಚರ್ಮದ ಕೆಲಸ ಮಾಡೋ ಚಕ್ಕಿಲಿಯಾರರ ಮನೆ, ಸ್ವಲ್ಪ ದೂರದಲ್ಲಿ ಕೂಸವರ ಮನೆ. ಅವರು ಮಣ್ಣಿನ ಮಡಕೆ ಮಾಡೋರು, ಅದರ ಪಕ್ಕದಲ್ಲಿ ಇರೋದು ನಾವಿರೋ ಜಾಗ ಪರಯ್ಯಾಕೇರಿ. ಊರಿನ ಪೂರ್ವ ದಿಕ್ಕಿಗೆ ಸ್ಮಶಾನದ ಜಾಗ. ನಾವು ಅದ್ರ ಪಕ್ಕನೇ ಇರೋರು” + +ಹೀಗೆ ತಮ್ಮ ಊರಿನ ಪ್ರತಿಯೊಂದು ಬೀದಿ, ಅಲ್ಲಿನ ಜನರ ಜಾತಿ, ವೃತ್ತಿಗಳ ಬಗ್ಗೆ ಹೇಳಿದ್ದಾರೆ. ಏನಾದರೂ ಕೆಲಸ ಇದ್ದರೆ ಮಾತ್ರವೇ ಇವರು ಮೇಲು ಜಾತಿಯವರ ಕೇರಿಯ ಕಡೆಗೆ ಹೋಗುತ್ತಿದ್ದರು. ಆದರೆ ಅಪ್ಪಿ ತಪ್ಪಿಯು ಮೇಲ್ಜಾತಿಯ ಜನ ಇವರ ಕೇರಿಗೆ ಬರುತ್ತಿರಲಿಲ್ಲ, ಎನ್ನುವುದನ್ನು ಹೇಳುತ್ತಲೇ ಅದಕ್ಕೆ ಕಾರಣ ಹೇಳುತ್ತಾರೆ. ಪಂಚಾಯಿತಿ ಬೋರ್ಡ್, ಹಾಲಿನ ಡೈರಿ, ಅಂಗಡಿ, ಚರ್ಚ್‌, ಸ್ಕೂಲು, ಪೋಸ್ಟಾಫಿಸು ಎಲ್ಲಾನೂ ಮೇಲ್‌ ಜಾತಿಯವರ ಬೀದಿಲೆ ಇದ್ದದ್ದು. ಈ ತರಹದ ವ್ಯವಸ್ಥೆ ಈಗಲೂ ಸಹ ಪ್ರತಿಯೊಂದು ಹಳ್ಳಿಯಲ್ಲಿ ನಾವು ನೋಡುತ್ತೇವೆ. ವ್ಯವಹಾರಕ್ಕೆ ಸಂಬಂಧಿಸಿದ, ಸರಕಾರಿ ಆಫೀಸುಗಳು ಬಹುತೇಕ ಗ್ರಾಮದಲ್ಲಿ ಇದೇ ರೀತಿಯಾಗಿರುವುದನ್ನು ಕಾಣಬಹುದು. + +ಮೇಲ್ಜಾತಿ ಅವರು ಕೆಳಗೇರಿ ಕಡೆಗೆ ಬರಲು ಯಾವುದೇ ಕಾರಣಗಳು ಇಲ್ಲದ ಹಾಗೆ ಅವರು ವ್ಯವಸ್ಥೆಯನ್ನು ಮಾಡಿಕೊಂಡಿರುವುದನ್ನು ಕಾಣುತ್ತೇವೆ. “ನೀವು ಚಪ್ಪಲಿ ಹೊಲಿಯಕ್ಕೆ ಲಾಯಕ್ ನನ್ಮಕ್ಳಾ” ಎಂದು ಯಾರೇ ಏನೇ ತಪ್ಪು ಮಾಡಿದರೂ ಅವರ ಕಸುಬು ಜಾತಿ ಹಿಡಿದೆ ಅವರನ್ನ ಬೈಯೋದು. ಇತಹ ಪ್ರಸಂಗಗಳು ಈಗಲೂ ಹಳ್ಳಿಗಳಲ್ಲಿ ಪ್ರಸ್ತುತವಾಗಿರುವುದನ್ನು ಕಾಣುತ್ತೇವೆ. ಒಂದನೇ ಭಾಗದಲ್ಲಿ ಭಾಮಾ ಅವರು ವ್ಯಕ್ತಿಯ ಹೆಸರಿನ ಪರ್ಯಾಯ ಅಥವಾ ಅಡ್ಡ ಹೆಸರಿನ ಬಗ್ಗೆಯೂ ಉಲ್ಲೇಖಿಸುತ್ತಾರೆ, ಉದಾಹರಣೆಗೆ ಅಂತ ಹೆಸರಿದ್ರೆ ಮುಂಗೋಪಿ ಅಂತ, ಮತ್ತೆ ಮಿಂಡೇ ಮಸಾಲ, ಮುರುಗನಹಳ್ಳಿ ಹೀಗೆ ಅನೇಕ ಹೆಸರುಗಳಿಗೆ ಅಡ್ಡ ಹೆಸರಿನಿಂದ ಕರೆಯುತ್ತಿರುವುದನ್ನು ಉಲ್ಲೇಖಿಸಿದ್ದಾರೆ. + +ಊರಿಗೊಂದು ಕಥೆ ಇದ್ದಮೇಲೆ ಆ ಊರಿನ ದೇವರಿಗೊಂದು ಕಥೆಯು ಇರುವ ಹಾಗೆ ತಮ್ಮ ಗ್ರಾಮದೇವರ ಕಥೆಯನ್ನ ಈ ಮೊದಲ ಭಾಗದಲ್ಲಿ ಹೇಳಿದ್ದಾರೆ. ಇದರಲ್ಲಿ ಅವರು ವ್ಯವಸ್ಥೆಯ ಕುರಿತು ರೂಪಕವನ್ನು ಕೊಟ್ಟು ಹೇಳಿರುವುದನ್ನು ಕಾಣುತ್ತೇವೆ. ಜೊತೆಗೆ ಅಲ್ಲಿ ನರಿಗಳು ಗದ್ದೆ ತುಂಬಾ ಓಡಾಡುತ್ತಾ ಬೆಳೆಯನೆಲ್ಲ ಹೇಗೆ ನಾಶಪಡಿಸುತ್ತಿದ್ದವು ಎಂಬುದನ್ನು ವಿವರಿಸುತ್ತಾರೆ. ಈ ನರಿಗಳು ಹಳ್ಳಿಯ ಜಾತಿ ವ್ಯವಸ್ಥೆ ಮತ್ತು ಅದರಿಂದಾಗುವ ತೊಡಕುಗಳ ಕುರಿತು ವಿವರಿಸಿರುವುದನ್ನು ಕಾಣುತ್ತೇವೆ. ಒಂದು ಸುಂದರ ಪ್ರಕೃತಿಯ ಗ್ರಾಮ, ಅದರಲ್ಲಿ ಇರುವ ಮಡಿ, ಮೈಲಿಗೆ ಪುಟ್ಟ ಮನಸ್ಸಿನ ಆಳದಲ್ಲಿ ಹೇಗೆ ಉಳಿದಿದೆ ಎನ್ನುವುದನ್ನು ಇಲ್ಲಿ ಚಿತ್ರಿಸಿದ್ದಾರೆ. + +ಭಾಗ ಎರಡರಲ್ಲಿ ಅವರಿಗೆ ಎದುರಾದ ಜಾತಿಯ ಕ್ರೂರ ಮುಖ ದರ್ಶನ. ಅದರ ಬಗ್ಗೆ ತಿಳಿದಾಗ ಮೊದಲ ಬಾರಿಗೆ ಮನಸ್ಸಿನಲ್ಲಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ. ನಾಯ್ಕಾರ್ಗಳು ಎಂದರೆ ಮೇಲ್ಜಾತಿಯವರು. ಪರಿಹಾರಗಳು ಎಂದರೆ ಕೆಳಜಾತಿಯ ಒಬ್ಬ ಹಿರಿಯ ವ್ಯಕ್ತಿಯ ಕೈಯಿಂದ ತನಗೆ ತಿನ್ನಲು ವಡೆಯನ್ನು ತರಿಸಿದ. ಆ ಹಿರಿಯ ವಡೆ ಕಟ್ಟಿದ ಪೊಟ್ಟಣಕ್ಕೆ ಕಟ್ಟಿದ ದಾರ ಹಿಡಿದುಕೊಂಡು ಬರುತ್ತಿರುವುದನ್ನು, ಭಾಮಾ ಅವರು ಚಿಕ್ಕವರಿದ್ದಾಗ ನೋಡಿ ನಕ್ಕಿದ್ದರು. ಅದನ್ನು ಮನೆಯಲ್ಲಿ ಇದ್ದ ಅಣ್ಣನಿಗೆ ತಿಳಿಸುತ್ತಾರೆ. ಆಗ ಅವರ ಅಣ್ಣ ಆ ಹಿರಿಯ ವ್ಯಕ್ತಿ ಹಾಗೆ ಮಾಡಲು ಕಾರಣ ತಿಳಿಸಿದ ಮೇಲೆ ಅವರಿಗೆ ಪ್ರತಿಯೊಂದು ವಡೆಯನ್ನು ತನ್ನ ಕೈಯಿಂದ ಮುಟ್ಟಿ ಮುಟ್ಟಿ ಬರಬೇಕು ಅಂತ ಅನಿಸಿತ್ತು. ಕೆಳಜಾತಿಯ ಹಿರಿಯರನ್ನ ಗೌರವ ಕೊಡದೆ ಅವರ ಹೆಸರಿನಿಂದ ಕರೆಯುವುದು, ಇವರು ಅವರನ್ನು ಸ್ವಾಮಿ, ಒಡೆಯ ಎಂದು ಸಂಭೊದಿಸುವುದನ್ನು ಕೇಳಿದ ಭಾಮಾ ಅವರಿಗೆ ಚಿಕ್ಕಂದಿನಲ್ಲಿಯೇ ಅದರ ಕುರಿತು ಅಸಮಾಧಾನವಾಗುತ್ತಿದ್ದ ಕುರಿತು ಮುಕ್ತವಾಗಿ ಹೇಳಿದ್ದಾರೆ. + +ತಮ್ಮ ಅಣ್ಣ ಎಂ.ಎ. ಓದಿದ್ದು, ನಾಯಕರ ಒಂದು ದಿನ ಇವರ ಅಣ್ಣ ಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೋಗುವಾಗ ಇವರ ಅಣ್ಣನಿಗೆ ನಾಯ್ಕರ್ ಕೇರಿಯವನು ‘ನೀನು ಯಾವ ಕೇರಿಯವನು?’ ಎಂದು ನಾಯಕರ ವಿಚಾರಿಸಿದ. ಇವರು ತಾನು “ನಾನ್ ಪರಯ್ಯಾಕೇರಿಯ್ಞಾಂವ, ಏನೀಗ” ಎಂದು ಹೇಳಿ ಅಲ್ಲಿಂದ ಬೇಗ ಬೇಗ ನಡೆದು ಆ ನಾಯ್ಕರ ವ್ಯಕ್ತಿಯನ್ನು ಹಿಂದೆ ಹಾಕಿದ್ದ. ಈ ವಿಷಯವಾಗಿ ಮಾರನೇ ದಿನ ಅವರ ಅಜ್ಜಿಗೆ ಆ ನಾಯ್ಕರ ವ್ಯಕ್ತಿ ಬೈದಿದ್ದು, ಇವರ ಅಜ್ಜಿ ಅವರಿಗೆ ಸಮಾಧಾನ ಮಾಡಿದ್ದನ್ನು ಹೇಳುತ್ತಾರೆ. ಬೀದಿಯಲ್ಲಿ ಅವರಿಗಿಂತಲೂ ಮೊದಲು ನಡೆಯುವ ಸ್ವತಂತ್ರ ದಲಿತರಿಗೆ ಇಲ್ಲಿಯವರೆಗೂ ಇಲ್ಲದೆ ಇರುವುದನ್ನು ಸಹ ಅನೇಕ ಘಟನೆಗಳ ಮೂಲಕ ನಾವು ಪ್ರಸ್ತುತವಾಗಿ ಕಾಣುತ್ತೇವೆ. + +ಇನ್ನೊಂದು ಘಟನೆ; ಭಾಮಾ ಅವರು 8ನೇ ತರಗತಿಯವರೆಗೆ ತಮ್ಮ ಹಳ್ಳಿಯಲ್ಲಿಯೇ ಕಲಿತರು. ನಂತರದ ಶಿಕ್ಷಣಕ್ಕಾಗಿ ಪಕ್ಕದ ಊರಿಗೆ ಹೋಗಿದ್ದರು. ಅಲ್ಲಿಯೆ ಹಾಸ್ಟೆಲಿನಲ್ಲಿ ಇದ್ದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಅಲ್ಲಿಯೂ ಅವರು ಅನೇಕ ರೀತಿಯ ಜಾತಿ ನಿಂದನೆಗೆ ಒಳಗಾಗುತ್ತಾರೆ. ಒಂದು ಬಾರಿ ಭಾಮಾ ತಮ್ಮ ಊರಿಗೆ ಹೋಗುವಾಗ ಬಸ್ಸಿನಲ್ಲಿ ಕುಳಿತಿದ್ದರು, ಆಗ ನಾಯಕರ ಹೆಂಗಸು ಇವರ ಪಕ್ಕದಲ್ಲಿ ಕುಳಿತು, ಇವರ ಬಗ್ಗೆ ವಿಚಾರಿಸುತ್ತಾರೆ. ಇವರ ಜಾತಿಯ ಬಗ್ಗೆ ತಿಳಿದ ತಕ್ಷಣವೇ ಅಲ್ಲಿಂದ ಸೀಟು ಬದಲಾಯಿಸುತ್ತಿದ್ದರು. ಇಲ್ಲವೇ ಇವರನ್ನೇ ಬದಲಾಯಿಸಲು ಹೇಳುತ್ತಿದ್ದರು. ಇವರು ಒಪ್ಪದೇ ಇದ್ದಾಗ ಬೇರೆ ಎಲ್ಲೂ ಕೂಡಲು ಸ್ಥಳವಿಲ್ಲದೆ ಇದ್ದರೆ ತಮ್ಮ ಊರು ಬರುವವರೆಗೆ ನಿಂತೆ ಬರುತ್ತಿದ್ದರಾದರೂ ಇವರ ಪಕ್ಕದಲ್ಲಿ ಕೂಡುತ್ತಿರಲಿಲ್ಲ. ಭಾಮಾ ಅವರಿಗೆ ಸೀಟು ಬಿಡದೆ ಇರೋದನ್ನು ಮನೆಯಲ್ಲಿ ಬಂದು ಅಮ್ಮನ ಹತ್ತಿರ ಹೇಳಿದಾಗ, ಅವರು “ಅವು ಕೇಂಡ್ರೆ ನೀನು ಬೇರೆ ಇನ್ಯಾವ್ದೋ ಜಾತಿಯೋಳ್ ಅಂತ ಹೇಳ್, ನಂ ಜಾತಿ ಹೆಸರ್ಯಾಕೆ ಹೇಳುದು?” ಎಂದು ಅವರ ತಾಯಿ ಹೇಳಿದಾಗ ಭಾಮಾ ಇದನ್ನ ವಿರೋಧಿಸುತ್ತಾರೆ. ತಮ್ಮ ಅಸ್ಮಿತೆಯನ್ನ ಅವರು ಬಿಟ್ಟು ಕೊಡುವುದಿಲ್ಲ. ತಮ್ಮ ಜಾತಿ ಬಗ್ಗೆ ಅವರಿಗೆ ಸುಳ್ಳು ಯಾಕೆ ಹೇಳಬೇಕು. ತಾನು ಹಾಗೆ ಮಾಡುವುದಿಲ್ಲ ಎಂದು ಯೋಚಿಸುತ್ತಾರೆ. ಅವರಿಗೆ ಆಗ ಆದ ಅವಮಾನ ಸಣ್ಣದಲ್ಲ ಎನ್ನುವುದು ಅವರ ಅರಿವಿಗೆ ಬಂದಿದ್ದನ್ನು ಕಾಣುತ್ತೇವೆ. + +ನಂತರದ ದಿನಗಳಲ್ಲಿ ಇವರು ಪರೀಕ್ಷೆಯಲ್ಲಿ ದಲಿತ ಹುಡುಗರಲ್ಲಿಯೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಆಗ ಊರಲ್ಲಿ ಅವರಿಗೆ ಸನ್ಮಾನಿಸಿ, ಅಭಿನಂದಿಸಿದಾಗ ತಾವು ದಲಿತ ಎಂದು ಕರೆಸಿಕೊಳ್ಳಲು ಹೆಮ್ಮೆಪಟ್ಟಿಕೊಂಡಿದ್ದರು ಭಾಮಾ. ಓದಿ ಮುಂದೆ ಬಂದರೆ ಈ ಜಾತಿ ಅನ್ನೋದು ನಮ್ಮ ಹಿಂದೆ ಬರುವುದಿಲ್ಲ ಅಂತ ಆ ಕ್ಷಣ ಅವರಿಗೆ ಅನ್ನಿಸಿತ್ತು. ಶಿಕ್ಷಣವೇ ನಮ್ಮ ಬಿಡುಗಡೆಗೆ ಮಾರ್ಗ ಎಂದು ಮುಂದೆ ಕಾಲೇಜು ಶಿಕ್ಷಣ ಮುಂದುವರಿಸಿಕೊಂಡರು. ಇನ್ನು ಮುಂದೆ ಈ ಜಾತಿ ಅನ್ನೋದು ಅವರಿಗೆ ಕಾಡುವುದಿಲ್ಲ ಎನ್ನುವ ಅವರ ಕಲ್ಪನೆ ಹುಸಿಯಾಯಿತು. ಒಂದು ದಿನ ಕ್ಲಾಸಿನಲ್ಲಿ ಒಬ್ಬ ಶಿಕ್ಷಕರು ಬಂದು ಹರಿಜನ ವಿದ್ಯಾರ್ಥಿಗಳು ಯಾರ್ಯಾರು ಎದ್ದು ನಿಲ್ಲಿ ಎಂದು ಹೇಳಿದಾಗ ಭಾಮಾ ಮತ್ತೆ ಇನ್ನೊಬ್ಬರು ಮಾತ್ರ ನಿಂತಿದ್ದರು. ಅವರಿಗೆ ವಿಶೇಷ ಕೋಚಿಂಗ್ ಕೊಡುವುದಾಗಿ ಸರ್ಕಾರ ತಮಗೆ ಹೇಳಿದ್ದಾಗಿ ಶಿಕ್ಷಕರು ಹೇಳಿದ್ದರು. ಭಾಮಾ ಆಗ ತಮಗೆ ಅದರ ಅಗತ್ಯವಿಲ್ಲ ಅಂತ ಅಲ್ಲೇ ಪ್ರತಿರೋಧಿಸಿದ್ದನ್ನು ಕೃತಿಯಲ್ಲಿ ಹೇಳುತ್ತಾರೆ. + +ಅವರು ವಿರೋಧಿಸಿದ್ದಕ್ಕೆ ಕಾರಣ ಅಲ್ಲಿದ್ದ ಇತರ ವಿದ್ಯಾರ್ಥಿಗಳ ಮಧ್ಯೆ ಗೊಣಗೊಣ ಮಾತುಕತೆ ಶುರುವಾಗಿದ್ದು. ಈ ಜಾತಿ ಅನ್ನೋದು ಎಲ್ಲಿ ಹೋದರೂ ತಮ್ಮನ್ನು ಬಿಡುವುದಿಲ್ಲ ಅಂತ ಅವರಿಗೆ ಆ ಕ್ಷಣ ಅನ್ನಿಸಿತ್ತು. ಮತ್ತೊಮ್ಮೆ ಊರಿಗೆ ಹೋಗಬೇಕಾಗಿ ಬಂದಾಗ “ನನ್ನ ತಮ್ಮ ಮತ್ತು ತಂಗಿಯ ಮೊದಲನೇ ಶಾಸ್ತ್ರ, ಫಸ್ಟ್ ಕಮೀನಿಯನ್” ಇತ್ತು ಅದು ರಜೆ ದಿನವಾದ ಶನಿವಾರ ಮತ್ತು ಭಾನುವಾರ ಇದ್ದದ್ದು. ಆದರೆ ವಾರ್ಡನ್ ಮತ್ತು ಪ್ರಿನ್ಸಿಪಾಲರು ಇದಕ್ಕೆ ಒಪ್ಪಿಗೆ ಕೊಡಲು ನಿರಾಕರಿಸಿದರು. ಅವರು ನಿರಾಕರಿಸಲು ಕಾರಣ ಇದೇನು, ಅಷ್ಟು ದೊಡ್ಡ ಹಬ್ಬ ಅಲ್ಲ. ನಿಮ್ಮ ಜಾತಿಯಲ್ಲಿ ಏನು ಅಷ್ಟು ವಿಜೃಂಭಣೆ ಇರುವುದಿಲ್ಲ ಅಂತ ನಿರಾಕರಿಸಿದ್ದರು. ಆದರೆ ಇತರ ಮೇಲ್ಜಾತಿಯ ಹುಡುಗರಿಗೆ ರಜೆಯನ್ನು ಕೊಟ್ಟಿದ್ದರು. ಇದನ್ನು ಕಂಡು ಭಾಮಾ ಪ್ರಶ್ನೆಗಳನ್ನ ಕೇಳುವುದರ ಮುಖಾಂತರ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಇದನ್ನು ದಲಿತತ್ವದ ನೆಲೆಯಾಗಿ ನಾವು ನೋಡುತ್ತೇವೆ. ಎಲ್ಲರೂ ಸಮಾನರು ಎಲ್ಲರಿಗೂ ಒಂದೇ ನಿಯಮ ಇರುತ್ತದೆ. ಅವರಿಗೊಂದು ನಿಯಮ ನಮಗೊಂದು ನಿಯಮ ಅಂತ ಇರುವುದಿಲ್ಲ. ಎಂದು ಹೇಳಿ ವಾದ ಮಾಡಿ ಕೊನೆಗೆ ರಜೆ ತೆಗೆದುಕೊಂಡು ಮನೆಗೆ ಹೋಗುತ್ತಾರೆ. + + + +ಹೀಗೆ ಭಾಮಾ ಅವರು ತಮ್ಮ ಶಿಕ್ಷಣದ ಬಲದಿಂದ ಜಾತಿ ತಾರತಮ್ಯವನ್ನು ಮುರಿದು, ಅದರ ಬಗ್ಗೆ ಮಾತನಾಡುವ ಜನರ ಮಧ್ಯೆ ತಾವು ಹೊಸ ಬದುಕನ್ನು ಕಟ್ಟಿಕೊಂಡರು. ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಮುಂದೆ ಸನ್ಯಾಸಿನಿ ಆಗಬೇಕು ಅದರಿಂದ ತಮ್ಮ ಜನರಿಗೆ ಹೆಚ್ಚು ಸೇವೆ ಮಾಡಲು ಅವಕಾಶ ದೊರೆಯುತ್ತದೆ ಎಂದು ತಿಳಿದು ಮನೆಯವರ ವಿರೋಧದ ಮಧ್ಯೆ ನನ್ ತರಬೇತಿ ಮುಗಿಸುತ್ತಾರೆ. ಆದರೆ ತಮ್ಮ ಜಾತಿಯ ಕಪ್ಪು ನೆರಳು ಅವರ ಬೆನ್ನು ಬಿಡದೆ ಅಲ್ಲಿಯೂ ಈ ಪಂತದಲ್ಲಿ ಹರಿಜನ ನನ್ ಗಳಿಗೆ ಅಂತ ಒಳ್ಳೆ ಭವಿಷ್ಯ ಇಲ್ಲ ಅಂತೋರಿಗಂತಾನೆ ಬೇರೆ ಒಂದು ಪಂಥ ಇದೆ… ಎಂದು ಹೇಳಿದ್ದನ್ನು ಕೇಳಿದವರಿಗೆ ನಿರಾಸೆ ಆಗುತ್ತದೆ. + +ಯಾವ ಆಸೆಯಿಂದ ಅವರು ನನ್ ಆಗಿದ್ದರೋ ಅದು ಈಡೇರುವ ಯಾವ ಸೂಚನೆಯೂ ಅವರಿಗೆ ಕಾಣುವುದಿಲ್ಲ. ಒಂದು ಸಾರಿ ದಲಿತರಾಗಿ  ಹುಟ್ಟಿದ್ರೆ ಅವರು ಸಾಯೋವರೆಗೂ ಅಲ್ಲೇ ಇರಬೇಕು. ಅದರ ನೋವು ಅವಮಾನ ಅನುಭವಿಸಲೇಬೇಕು. ನಮ್ಮವರು ನಿದ್ದೆಯಿಂದ ಎದ್ದು ಬರಬೇಕಾಗಿದೆ. ಈ ಗುಲಾಮಗಿರಿಯನ್ನು ಸಹಿಸಿಕೊಳ್ಳಬಾರದು, ಬದಲಾವಣೆಗಾಗಿ ನಾವೇ ಎದ್ದು ನಿಲ್ಲಬೇಕಾಗಿದೆ, ಜಾತಿ ಹೆಸರಿನಿಂದ ತಲೆಮಾರಿನಿಂದ ನಮ್ಮನ್ನು ತುಳಿಯುತ್ತಲೇ ಬಂದವರ ವಿರುದ್ಧ ಧ್ವನಿ ಎತ್ತುವ ಕೆಲಸ ಭಾಮಾ ಅವರು ಮಾಡುತ್ತಾರೆ. ತಮ್ಮಒಳಗೆ ನಡೆಯುವ ಜಾತಿ ನಿಂದನೆಗಳ ಕುರಿತು ತಮ್ಮ ಆತ್ಮಕಥೆಯಲ್ಲಿ ಒಂದೊಂದಾಗಿ ಬಿಚ್ಚಿಡುತ್ತಾರೆ. ಇವರ ಆತ್ಮಕಥೆಯು ಒಂದೇ ಕ್ರಮದಲ್ಲಿ ಸಾಗುವುದಿಲ್ಲ. ಮೊದಲ ಭಾಗದಲ್ಲಿ ಹಳ್ಳಿಯ ಚಿತ್ರಣವನ್ನು, ಜಾತಿಯ ಕ್ರೌರ್ಯದ ಬಗ್ಗೆ ಹೇಳುತ್ತಾರೆ. ಅದರ ಮುಂದುವರಿದು ಎರಡನೇ ಭಾಗದಲ್ಲಿ ಅವರ ಬಾಲ್ಯ, ಶಿಕ್ಷಣ ಕುರಿತು ಮಾತನಾಡುತ್ತಾರೆ. ನಂತರ ಸಂಪೂರ್ಣ ಶಿಕ್ಷಣದ ಬಗ್ಗೆ ಹೇಳಿ ಅವರ ಶಿಕ್ಷಕಿ ವೃತ್ತಿಯ ಬಗ್ಗೆ ಮಾತನಾಡುತ್ತಾರೆ. ಆಗ ಅವರ ಮನಸ್ಸಿನಲ್ಲಿ ಆದ ತಲ್ಲಣದ ಕುರಿತು ಹೇಳುತ್ತಾ ಮುಂದೆ ನನ್ ಆಗಿ ಬದಲಾದ ಅವರ ಜೀವನದ ಕುರಿತು ಹೇಳುತ್ತಾರೆ. + +ಜಾತಿ ತಾರತಮದಲ್ಲಿ ಯಾವ ಬದಲಾವಣೆಯು ಕಾಣದೆ ಜಾತಿ ಪದ್ಧತಿಯ ವಿರುದ್ಧ ಮಾತನಾಡುತ್ತಾರೆ. ಸಮ ಸಮಾಜ ಕಟ್ಟುವ ಹೊಸ ಕನಸನ್ನು ಕಾಣುತ್ತಾರೆ. ಆದರೆ ಮೂರನೇ ಭಾಗದಲ್ಲಿ ಮತ್ತೆ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳ ಕುರಿತು ಮಾತನಾಡುತ್ತಾರೆ. ನಾಲ್ಕನೇ ಭಾಗದಲ್ಲಿ ಅವರ ಬಾಲ್ಯದಲ್ಲಿ ನಡೆದ ಶೇಂಗಾ ಒಡೆಯುವ ಪ್ರಸಂಗದ ಕುರಿತು ಹೇಳುತ್ತಾರೆ. ಇದೇ ತರಹದ ಪ್ರಸಂಗವು ಸಮತಾ ದೇಶಮಾನೆ ಅವರ ಆತ್ಮಕಥೆ ‘ಮಾತಂಗಿ ದಿವಟಿಗೆ’ ಯಲ್ಲಿಯೂ ದಾಖಲಾಗಿದೆ. ಇದು ಕನ್ನಡದಲ್ಲಿ ಬಂದ ಪ್ರಥಮ ಮಹಿಳಾ ದಲಿತ ಆತ್ಮಕಥೆ. ಈ ಎರಡೂ ಕೃತಿಗಳಲ್ಲಿ ದಲಿತರ ಬದುಕು, ಪ್ರದೇಶ, ದೇಶ ಎಲ್ಲದರಲ್ಲಿಯೂ ಅವರ ಶೋಷಣೆ ಅಥವಾ ಬದುಕು ಹೆಚ್ಚು ಕಡಿಮೆ ಒಂದೇ ರೀತಿಯಾಗಿರುವುದನ್ನು ಕಾಣುತ್ತೇವೆ. + +ದಲಿತರು ಬೇರೆ ಧರ್ಮಕ್ಕೆ ಮತಾಂತರ ಹೊಂದಿದರು ಕೂಡ ಅವರಿಗೆ ಅಲ್ಲಿಯೂ ಜಾತಿಯ ಹೆಸರಿನಲ್ಲಿ ಅನ್ಯಾಯ ಆಗುತ್ತದೆ, ಎನ್ನುವುದನ್ನು ಭಾಮಾ ಅವರು ಹೇಳಿದ್ದಾರೆ. ಕ್ರಿಶ್ಚಿಯನರಲ್ಲಿಯೂ ಮೇಲು-ಕೀಳು ಇದೆ. ಮತಾಂತರ ಹೊಂದಿದವರ ಪರಿಸ್ಥಿತಿ ಏನು ಎಂಬುದನ್ನು ತಮ್ಮ ಆತ್ಮಕಥೆಯಲ್ಲಿ ಎಳೆ ಎಳೆಯಾಗಿ ಒಂದೊಂದೇ ಪ್ರಸಂಗವನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಮೇಲ್ಜಾತಿಯ ಕ್ರಿಶ್ಚಿಯನ್ನರಷ್ಟೇ ಚರ್ಚಿನ ಎಲ್ಲಾ ಸವಲತ್ತು, ಸೌಭಾಗ್ಯ ಪಡೆದುಕೊಳ್ಳುತ್ತಿರುವುದರ ಕುರಿತು ಹೇಳುತ್ತಾರೆ. ಪಾದ್ರಿ ನನ್‌ಗಳ ವಿಷಯದಲ್ಲಿ ಮೇಲ ಜಾತಿಯವರೇ ಆಯಕಟ್ಟಿನ ಸ್ಥಾನದಲ್ಲಿ ಕೊಡುತ್ತಿದ್ದರು. ದಲಿತರು ಪಾದ್ರಿ ಅಥವಾ ನನ್‌ ಆಗಿದ್ದರೆ ಅವರನ್ನು ಬೇರೆಯವರು ಮೂಲೆಗುಂಪು ಮಾಡಿ ಬಿಡುತ್ತಿದ್ದರು. + +ಪ್ರತಿಯೊಬ್ಬರೂ ಚಿಕ್ಕವರಿದ್ದಾಗ ಕುತೂಹಲಕ್ಕೆ ದೇವರನ್ನ ಪರೀಕ್ಷೆ ಮಾಡಿ ಇರುತ್ತೇವೆ. ಹಾಗೆಯೇ ಭಾಮಾರು ಚರ್ಚಿನಲ್ಲಿ ಕೊಡುವ ಪ್ರಸಾದವನ್ನು ಕೈಯಿಂದ ಮುಟ್ಟಬಾರದು ಎಂದು ನನ್‌ಗಳು ಹೇಳಿದ್ದನ್ನು ಮೀರಿ ಅದನ್ನು ಮುಟ್ಟಿದ್ದು, ನಂತರ ಅವರು ಹೇಳಿದ ಹಾಗೆ ತನಗೆ ಏನೂ ಹಾನಿ ಆಗದೆ ಇರುವುದನ್ನು ಕಂಡು ನನ್‌ಗಳು ಹೇಳಿದು ಸುಳ್ಳು ಎಂದು ಅರಿತಿರುವುದನ್ನು ಇಲ್ಲಿ ಹೇಳಿದ್ದಾರೆ. ತಾವು ನನ್ ಆದಾಗ ಅಲ್ಲಿರುವ ಎರಡು ದೇವರನ್ನ ಅವರು ಕಂಡುಕೊಳ್ಳುತ್ತಾರೆ. ಒಂದು ಶ್ರೀಮಂತರ ದೇವರು. ಮತ್ತೊಂದು ಬಡವರ ದೇವರು. ಶ್ರಿಮಂತರು ತಮ್ಮ ದೇವರನ್ನು ಶ್ರೀಮಂತವಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿಯಾಗಲಿ ಪ್ರೀತಿ ಆಗಲಿ ಇಲ್ಲ ಎನ್ನುವುದನ್ನು ಅರಿತ ಭಾಮಾರಿಗೆ ಚಿಕ್ಕ ವಯಸ್ಸಿನಲ್ಲಿ ಇದ್ದ ಭಕ್ತಿ ಕ್ರಮೇಣ ಕಡಿಮೆಯಾಗಿ ಎಲ್ಲವನ್ನ ಪ್ರಶ್ನಿಸುತ್ತಾ ಬರುತ್ತಾರೆ. + +(ಲಕ್ಷ್ಮಿ ಹೋಲ್‌ಸ್ಟ್ರಾಮ್‌) + +ಅವರು ಪಂಥದಿಂದ ಹೊರಬಂದ ಮೇಲೆ ಇತರ ನನ್‌ಗಳ ನಡೆ-ನುಡಿ ನಡವಳಿಕೆಯನ್ನು ಕಂಡು ಭಾಮಾರಿಗೆ ಸಿಟ್ಟು ಬರುತ್ತದೆ. ಶ್ರೀಮಂತ ನನ್‌ಗಳ ಭಕ್ತಿಯಲ್ಲಿ ಮಾನವೀಯತೆ ಅನ್ನೋದು ಇಲ್ಲ. ಅವರ ಮಾತುಗಳು ಕೇವಲ ಕಪಟತನದಿಂದ ಕೂಡಿದವು ಎನ್ನುವುದು ಅವರ ಅರಿವಿಗೆ ಬರುತ್ತದೆ. ಬಡವರ ಬಗ್ಗೆ ಅವರ ಕಷ್ಟದ ಬಗ್ಗೆ ಅವರು ಯಾವತ್ತೂ ಯೋಚಿಸದೆ ಇರುವ ಶ್ರೀಮಂತ ನನ್‌ಗಳ ಬಗ್ಗೆ ಭಾಮಾ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ. ಕಾನ್ವೆಂಟ್‌ಗಳ ಏಳಿಗೆಗೆ ಬಡವರ ಮಕ್ಕಳೆ ಮೆಟ್ಟಿಲಾಗಿದ್ದನ್ನು, ಹೇಳುತ್ತಾ ತಮ್ಮ ಅಸಹಾಯಕತೆಯ ಕುರಿತು ನಿರಾಶರಾಗಿ ಅಲ್ಲಿಂದ ಹೊರ ಬರುತ್ತಾರೆ. ಪ್ರೀತಿ, ಶಾಂತಿ, ಕರುಣೆ ಸೌಮ್ಯತೆಯ ಮುಖವಾಡದ ಹಿಂದೆ ಇರುವ ಕ್ರೂರವಾದ ಮುಖವಾಡವನ್ನು ಭಾಮಾ ಅವರು ಇಲ್ಲಿ ತೆಗೆದು ತೋರಿಸಿದ್ದಾರೆ. + +ಜನರಲ್ಲಿ ತಾವು ಮುಗ್ಧರು, ಪ್ರೀತಿಯ ಸಾಗರ ಅವರಲ್ಲಿದೆ. ಅನ್ಯಾಯಕ್ಕೆ ಒಳಗಾದ ಜನರಿಗೆ ತಮ್ಮಲ್ಲಿ ನ್ಯಾಯ ಮತ್ತು ಸಮಾನವಾದ ಬದುಕು ಕೊಡುತ್ತೇವೆ ಎಂದು ಸುಳ್ಳು ಭರವಸೆಯನ್ನು ಕೊಟ್ಟು. ಸಮಾಜ ಸೇವೆಯ ಹೆಸರಿನಲ್ಲಿ ಆಡಂಬರದ ಬದುಕು ತಮ್ಮದಾಗಿಸಿಕೊಳ್ಳುವ ನನ್‍ಗಳ ಮುಖವಾಡ ಬಿಚ್ಚಿಡುತಾರೆ. ಮುಗ್ಧ ಜನರನ್ನು ಆಮಿಷಕ್ಕೆ ಬಲಿ ಮಾಡಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಬದುಕಲು, ಮುಗ್ಧ ಮಹಿಳೆಯರಿಗೆ ಪ್ರೇರೇಪಿಸುತ್ತಿದ್ದುದನ್ನು ಈ ಆತ್ಮ ಕಥೆಯಲ್ಲಿ ಬಿಚ್ಚಿಡುತ್ತಾ ಹೋಗುತ್ತಾರೆ. + +ಆ ಕಾಲದಲ್ಲಿ ದಲಿತ ಮಹಿಳೆ ನನ್ ಆಗಿ ಮತ್ತೆ ಅದರಿಂದ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವುದು ನಿಜಕ್ಕೂ ದೊಡ್ಡ ಸಾಧನೆ ಸರಿ. ಒಂದು ವ್ಯವಸ್ಥೆಯ ಒಳಗಿನ ಎಲ್ಲಾ ನ್ಯೂನ್ಯತೆ, ಅನ್ಯಾಯ, ಅವರ ಕ್ರೌರ್ಯವನ್ನು ಬಿಚ್ಚಿಡುವುದು ನಿಜಕ್ಕೂ ಸಣ್ಣ ಮಾತಲ್ಲ. ಅಂತಹ ಸಾಹಸದ ಕೆಲಸವನ್ನು ಮಾಡಿದ ಭಾಮಾ ಅವರು ಪ್ರತಿಯೊಬ್ಬ ದಲಿತ ಮಹಿಳೆಯರಿಗೆ ಸ್ಪೂರ್ತಿ ಈ ಆತ್ಮಕಥೆ. ಆತ್ಮಕಥೆಯು ಮೊದಲ ಒಂದೆರಡು ಭಾಗಗಳು ಓದುವಾಗ ಬರಿ ದಿನಚರಿಯ ಹಾಗೆ ಓದುಗರು ಆಸಕ್ತಿಯನ್ನು ಕಳೆದುಕೊಂಡರು, ಸಹ ಅದನ್ನು ಓದುತ್ತಾ ಹೋದ ಹಾಗೆ ಕುತೂಹಲ ಕೆರಳಿಸುತ್ತದೆ. + + + +ಓದುವ ಪ್ರಾರಂಭದಲ್ಲಿದ್ದ ಅಭಿಪ್ರಾಯ ಓದಿದ ಮೇಲೆ ಸಂಪೂರ್ಣವಾಗಿ ಬದಲಾಗುತ್ತದೆ. ಈ ಆತ್ಮಕಥೆಯು ಪ್ರಾರಂಭವಾಗುವುದು ಅಸ್ಪೃಶ್ಯತೆಯಿಂದ. ಮಧ್ಯದಲ್ಲಿ ವರ್ಗವೇ ಮುಖ್ಯ ಅಂತ ಅನಿಸಿದರೂ ಕೊನೆಗೆ ಬಂದು ನಿಲ್ಲೋದು ದಲಿತತ್ವದಲ್ಲಿ. ಇಡೀ ಆತ್ಮಕಥೆಯ ಪ್ರಾರಂಭದಿಂದ ಕೊನೆಯವರೆಗೂ ದಲಿತತ್ವದ ನೆಲೆಗಳು ಕಾಣಿಸಿಕೊಳ್ಳುತ್ತವೆ. ನಿಜಕ್ಕೂ ದಲಿತರ ಬದುಕು ತಾಳೆಗರಿಗಳ ಹಾಗೆ ಎರಡು ಕಡೆಯಿಂದ ಗರಗಸದ ಹಾಗೆ ಕೊಯ್ಯುತ್ತಲೇ ಇರುತ್ತದೆ. ಹಾಗಾಗಿ ಭಾಮಾ ಅವರು ಈ ಕೃತಿಗೆ “ತಾಳೆಗರಿ” ಅಂತ ಹೆಸರು ಕೊಟ್ಟಿದ್ದು ತುಂಬಾ ಸಂಮಜಸವಾಗಿದೆ. + +ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ ಕಲ್ಬುರ್ಗಿಯವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿಯಲ್ಲಿ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. \ No newline at end of file diff --git a/Kenda Sampige/article_112.txt b/Kenda Sampige/article_112.txt new file mode 100644 index 0000000000000000000000000000000000000000..b7f73cbf33740cf1d39f870a92ca5f86e699d2b2 --- /dev/null +++ b/Kenda Sampige/article_112.txt @@ -0,0 +1,35 @@ +byಸಂಜೋತಾ ಪುರೋಹಿತ|Apr 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ.ರಾಜಲಕ್ಷ್ಮಿ ಎನ್.‌ ರಾವ್‌ ಅವರ “ಸಂಗಮ” ಕಥಾಸಂಕಲನದ ಕುರಿತು ಸಂಜೋತಾ ಪುರೋಹಿತ್‌ ಬರಹ + +byಕೆಂಡಸಂಪಿಗೆ|Apr 18, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ.ಕೆ. ಸತ್ಯನಾರಾಯಣ ಪ್ರವಾಸ ಕಥನ “ಅಮೆರಿಕದಲ್ಲಿ ಬಸವನಗುಡಿ”ಯ ಒಂದು ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Apr 17, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಚಾಂದಿನಿಯವರ ಈ ಕವಿತೆಗಳ ಮುಖ್ಯ ಧಾಟಿ ಬಿಗುಮಾನವಿಲ್ಲದ ನಿವೇದನೆಯದು, ಅವರ ಅನುಭವಜನ್ಯ ಕವಿತೆಗಳಾದ “ಕ್ಲಾಸ್ ರೂಂ”, “ಅವನಾರು”, “ನನ್ನ ಬಾಲ್ಯ”, “ಅಣ್ಣ ಬರಲಿಲ್ಲ”-ಗಳ ಜೀವಂತಿಕೆ ಅನುಭವ ಮೂಲದಿಂದಲೇ ಬರುತ್ತದೆ. ಮುಂದಿನ ಸಾಲಿನ ಮತ್ತು ಹಿಂದಿನ ಸಾಲಿನ ಖಾಲಿ ಬೆಂಚುಗಳ ಲಕ್ಷಣಗಳು “ಕ್ಲಾಸ್ ರೂಂ” ಕವಿತೆಯನ್ನು ರೂಪಿಸಿದ ರೀತಿ, ಬಾಲ್ಯದ ಅನುಭವಗಳು ಹೊಳೆಯಲ್ಲಿ ಹಿಡಿದು ಅಲ್ಲೇ ಸುಟ್ಟು ತಿಂದ ಏಡಿಯಷ್ಟೆ ತಾಜಾ ಆಗಿ ಬರುವ ರೀತಿ ಆಪ್ತವಾಗಿದೆ. “ಅಣ್ಣ ಬರಲಿಲ್ಲ” ಕವಿತೆಗೆ ತಂತಾನೆ ಬಂದಂತಿರುವ ಜನಪದೀಯ ಗುಣ ಅದರ ವಿಷಾದಕ್ಕೆ, ಆತ್ಮಮರುಕವನ್ನು ಮೀರುವ ಸ್ಪರ್ಶವನ್ನು ಕೊಟ್ಟಿದೆ.ಚಾಂದಿನಿ ಖಲೀದ್‌ ಕವನ ಸಂಕಲನ “ಸೂಜಿಮೊಗದ ಸುಂದರಿ”ಕ್ಕೆ ಜಯಂತ ಕಾಯ್ಕಿಣಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Apr 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ವಿಹಾರ’ಕ್ಕಿಂತ ‘ಹದ್ದು ಹಾರುವ ಹೊತ್ತು’ ಇನ್ನೂ ವಿಸ್ತಾರವಾದ ಕ್ಯಾನ್ವಾಸ್ ಹೊಂದಿರುವ ಕತೆ. ಊರಿಗೆ ಹೊಸತಾಗಿ ಬಂದು ಹೊರವಲಯದಲ್ಲಿ ಬಾಡಿಗೆ ಮನೆ ಮಾಡಿರುವ ಈ ಕತೆಯ ನಿರೂಪಕನು ಬಡಾವಣೆಯ ಪರಿಸರವನ್ನು ತಿಳಿದುಕೊಳ್ಳುವ ಹವಣಿಕೆಯಲ್ಲಿ ಕೇಳಿಸಿಕೊಂಡಿದ್ದೆಲ್ಲ ಕತೆಯ ಪ್ರಥಮಾರ್ಧವಾದರೆ ಉತ್ತರಾರ್ಧದ ಘಟನೆಗಳಿಗೆ ಆತ ಸಾಕ್ಷಿಯಾಗುತ್ತಾನೆ. ಹೀಗೆ ಹೊರಗಿನವನಾದ, ಆದರೆ ಒಂದು ಮಟ್ಟದಲ್ಲಿ ಭಾಗಿಯೂ ಆಗಿರುವ ನಿರೂಪಕನಿಗೆ ಎಲ್ಲಾ ಪಾತ್ರ ಮತ್ತು ಘಟನೆಗಳನ್ನು ಸನಿಹದಿಂದ, ಆದರೆ ವಸ್ತುನಿಷ್ಠವಾಗಿ, ನಿರೀಕ್ಷಿಸುವ ಅನುಕೂಲತೆ ಇದೆ.ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ”ಕ್ಕೆ ಎಂ. ಜಿ. ಹೆಗಡೆ ಬರೆದ ಮುನ್ನುಡಿ + +byಕೆ. ಎನ್. ಲಾವಣ್ಯ ಪ್ರಭಾ|Apr 12, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ.ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಕೆ.ಎನ್. ಲಾವಣ್ಯ ಪ್ರಭಾ ಬರಹ + +byಸಂಗೀತ ರವಿರಾಜ್‌ ಚೆಂಬು|Apr 11, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಸ್ತ್ರೀ ಬದುಕಿನ ಅಗಾಧತೆ ಮತ್ತು ಸ್ತ್ರೀಯ ಇತಿಮಿತಿಯೊಳಗಿನ ಬದುಕು ಅನಾವರಣಗೊಳ್ಳುವ ಕವಿತೆಗಳಾದ ಹೂವಿಡುವಷ್ಟೆ ನಿಧಾನವಾಗಿ, ನಾವು ಸ್ವಲ್ಪ ಹೀಗೆ, ಆಸೀಫಾ, ಅವಳು, ಅಡುಗೆಯಾಟದ ಹುಡುಗಿ ಮುಂತಾದ ಕವಿತೆಗಳು ಮಹಿಳೆಯ ಅಂತರಂಗವನ್ನು ಬಿಂಬಿಸುತ್ತವೆ. ಕವಯತ್ರಿ ಆಶಾ ಅಭಿಮಾನದಿಂದ ಅಭಿವ್ಯಕ್ತಿ ಪಡಿಸಿದ ಸ್ತ್ರೀಯ ಬಗೆಗಿನ ಈ ಸಾಲು ಪ್ರತಿ ಹೆಂಗಳೆಯರ ಹೆಮ್ಮೆ. “ಹೋಗಲಿ ಬಿಡಿ ನೀವವಳನ್ನು ಆಪಾದ ಮಸ್ತಕವೇ/ ನೋಡಿದುದು ಸರಿಯೇ ಏಕೆಂದರೆ/ ದೇವತೆಯನ್ನು ಹಾಗೆಯೇ ನೋಡಬೇಕಂತೆ”ಆಶಾ ಜಗದೀಶ್‌ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ + +byಮಮತಾ ಆರ್.|Apr 7, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಇವರೆಲ್ಲರೂ ಹಳೆಕಾಲದ ಟ್ರಂಕಿನೊಳಗೆ ಘಾತುಕ ರಹಸ್ಯವನ್ನು ತಣ್ಣಗೆ ಮಡಚಿಡಬಲ್ಲರು. ಹಾಗೆಯೇ ಮಡಿಲಿನಲ್ಲಿ ಮಲಗಿರುವ ಬೆಕ್ಕಿನ ಮರಿಯನ್ನು ಅತಿ ಅನೌಪಚಾರಿಕವಾಗಿ ಕೆಳಗಿಳಿಸುವಂತೆ ಗುಟ್ಟು ಬಿಟ್ಟುಕೊಡಬಲ್ಲವರು. ರಾಜಕಿಶೋರ, ಸರಳ, ಸುಗುಣೇಶ, ಮಾಧವ ಎಂಬ ಚುಕ್ಕಿಪಾತ್ರಗಳೆಲ್ಲ ಇವನನ್ನು ಸುಳಿಯ ಇನ್ನಷ್ಟು ಒಳಗೆ ಸೆಳೆಯಬಲ್ಲವರು. ಇವರೆಲ್ಲರಿಂದ ಸುತ್ತುವರೆದಿರುವ ಕಥಾನಾಯಕನಿಗೆ ಸಾವಯವ ಸಂಬಂಧದ ತಾದ್ಯಾತ್ಮ ಸಾಧ್ಯವಾಗುವುದು ‘ಒಂದು ಸುತ್ತು ಕಡಿಮೆ’ ಇರುವ ವಿಮಲಾಳೊಂದಿಗೆ. ನಾಣ್ಯ ಅವರ ನಡುವಿನ ಸಂವಾದದ ಭಾಷೆ.ಇಂದ್ರಕುಮಾರ್ ಎಚ್.ಬಿ. ಯವರ “ಎತ್ತರ” ಕಾದಂಬರಿಯ ಕುರಿತು ಮಮತಾ ಆರ್. ಬರಹ + +byಪ.ನಾ.ಹಳ್ಳಿ ಹರೀಶ್ ಕುಮಾರ್|Apr 5, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಬಾಲಕಿಯಾಗಿ ಏನೊಂದನ್ನೂ ಅರಿಯುವ ಮುನ್ನವೇ ಚಿಕ್ಕಾವಲ್ಲಪ್ಪನನ್ನು ಮದುವೆಯಾಗಿ ಸ್ವಂತ ಅತ್ತೆಯ ಮನೆಗೆ ಬರುವ ಪುಟ್ಟಮ್ಮ ಮನೆ ಹಾಗೂ ಹೊಲದ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುಂದೆ ಕನ್ಯೆಯಾಗಿಯೂ ಗಂಡನೊಂದಿಗೆ ಸೇರಲು ಅವಕಾಶವಿರದೆ ವಯೋಸಹಜ ಕಾಮನೆಗಳನ್ನು ಹತ್ತಿಕ್ಕಿಕೊಂಡು ಸುಮಾರು ಎರೆಡು ದಶಕಗಳ ಕಾಲ ಬಂಜೆ ಎಂಬ ಹಣೆಪಟ್ಟಿ ಹೊತ್ತು ಮುಂದೊಮ್ಮೆ ತಾಯಿಯಾಗುವುದು, ಕೆಳಜಾತಿಯ ಕೆಲಸಗಾರರೊಂದಿಗೆ ಸಲುಗೆಯಿಂದ ಬೆರೆತು ಅಂದಿನ ಆಚರಣೆಯಾದ ವರ್ಣಸಂಘರ್ಷವನ್ನು ನೈತಿಕವಾಗಿ ವಿರೋಧಿಸುವುದು. ಜವಾಬ್ದಾರಿಯುತ ಸೋದರಿಯಾಗಿ ತಮ್ಮನನ್ನು ವಿದ್ಯಾವಂತನನ್ನಾಗಿ ಮಾಡುವುದು.ಪ್ರೊ. ಕಟಾವೀರನಹಳ್ಳಿ ನಾಗರಾಜು ಬರೆದ ಕಾದಂಬರಿ “ಪುಟ್ಟಮ್ಮಯ್ಯ” ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ + +byಸದಾನಂದ ನಾರಾವಿ|Mar 29, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದೆ. ಇಂತಹ ದಿನಮಾನದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಪುಟ್ಟ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು ತನ್ನ ಶಾಲೆ ಮತ್ತು ಮಕ್ಕಳ ಕತೆಯನ್ನು ಹೇಳುವುದರ ಜೊತೆಗೆ ಆ ಪ್ರದೇಶದ ಪ್ರಕೃತಿಯ ಮನೋಹರ ನೋಟವನ್ನೂ, ಅಲ್ಲಿನ ಜನಜೀವನವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ತಮ್ಮ ‘ಇಸ್ಕೂಲು’ ಕೃತಿಯಲ್ಲಿ ಸೊಗಸಾಗಿ ಓದುಗರ ಮುಂದಿಟ್ಟಿದ್ದಾರೆ.ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಕೃತಿಯ ಕುರಿತು ಸದಾನಂದ ನಾರಾವಿ ಬರಹ \ No newline at end of file diff --git a/Kenda Sampige/article_113.txt b/Kenda Sampige/article_113.txt new file mode 100644 index 0000000000000000000000000000000000000000..b46e71bd1f01d9938818538699bfd175452d75e1 --- /dev/null +++ b/Kenda Sampige/article_113.txt @@ -0,0 +1,35 @@ +byಸಂಗೀತ ರವಿರಾಜ್‌ ಚೆಂಬು|Mar 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 3 Comments + +ಇಲ್ಲಿನ ಮುಖ್ಯ ಕವಿತೆಗಳೆಲ್ಲವೂ ಪ್ರಕೃತಿಯ ವರ್ಣ ರಂಜಿತ ನಿಲುವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನೆದೆಗೆ ಮೊದಲು ತಾಕುವುದೆ ಪ್ರಕೃತಿ ಪ್ರೇಮ ಎಂಬುದು ನಮಗಿಲ್ಲಿ ನಿರೂಪಿತವಾಗುತ್ತದೆ. ಪ್ರಕೃತಿಯೆಂದರೆ ಕೋಗಿಲೆ ಬೇಕು, ಚಂದಿರನಿರಬೇಕು, ನೀಲಿಯಾಕಾಶ, ಕರಿ ಮುಗಿಲು, ಆಷಾಡದ ಮೋಡ, ಸುಖದ ಮಳೆ, ನಿತ್ಯ ಪುಷ್ಪ, ಪಾರಿಜಾತ, ಕಲ್ಪವೃಕ್ಷ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ಇಲ್ಲಿನ ಕವಿತೆಗಳಲ್ಲಿದೆ. ಏನೋ ಒಂದು ತಿಳಿಯಲು ಆಗದಂತಹ ಆಧ್ಯಾತ್ಮಕತೆಯ ದಿವ್ಯ ಸಾನಿಧ್ಯದ ಸೆಳವು ಇಲ್ಲಿನ ಕವಿತೆಗಳು ಎದ್ದು ತೋರಿಸುತ್ತವೆ.ಕೆ. ಎನ್. ಲಾವಣ್ಯಪ್ರಭ ಕವನ ಸಂಕಲನ “ಸ್ಪರ್ಶ ಶಿಲೆ”ಯ ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ + +byದಯಾನಂದ ಸಾಲ್ಯಾನ್|Mar 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ.ಡಾ. ಕೆ. ರಘುನಾಥ್‌ ಬರೆದ ‘ಮುಂಬಯಿ ಕನ್ನಡ ಲೋಕʼ ಕೃತಿಯ ಕುರಿತು ದಯಾನಂದ ಸಾಲ್ಯಾನ್‌ ಬರಹ + +byಕೆಂಡಸಂಪಿಗೆ|Mar 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ..ಆಶಾ ರಘು ಹೊಸ ಕಾದಂಬರಿ “ಚಿತ್ತರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Mar 23, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ‌ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ ಕೇಳುತ್ತಿತ್ತು. ಸಾವಿ ನಿದ್ದೆ ಬಾರದೆ ಗಂಡನನ್ನು ಹೇಗಾದರು ಮಾಡಿ ಸೂಳೆ ಸಹವಾಸ ಬಿಡಿಸಿ ನನ್ನ ಕಡೆ ಸೆಳೆಯಬೇಕೆಂದು ಯೋಚಿಸುತ್ತಿದ್ದಳು. ಪಕ್ಕದ ಮನೆಯಲ್ಲಿ ಮಾವ ಅಕ್ಕಂದಿರು ತನ್ನ ಗಂಡನ ಬಗ್ಗೆ ಪಿಸುಗುಡುವುದು ಗೊತ್ತಾಗುತಿತ್ತು. ಸಾವಿತ್ರಿ ತನಗರಿವಿಲ್ಲದೆ ಶೋಕಿಸುತ್ತ ಮಗಳು ಕನಕಳನ್ನು ತಬ್ಬಿ ಕಣ್ಣು ಮಿಟುಕಿಸಿದಾಗ ಕಣ್ತುಂಬಿದ್ದ ಅಶ್ರು ದಳದಳನೆ ಇಳಿದು ಎಣ್ಣೆ ಜಿಡ್ಡು ಮೆತ್ತಿ ಕೊಳಕಾಗಿದ್ದ ತಲೆದಿಂಬು ಸಹ ಅದನ್ನು ಹೀರದೆ ಕೆಳಕ್ಕೆ ಹರಿದವು.ನಗೋಲತೆ ಬರೆದ “ಬೆದ್ಲು ಬದ್ಕು” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Mar 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ ಹೆಣ್ಣುಸಿಕಾಡವು ಈ ಆಹ್ವಾನವನ್ನು ಒಪ್ಪಿ ಬಳಿಬಂದರೆ ಆಗ ಗಂಡು ಸಿಕಾಡವು ಹಾಡುವ ಹಾಡೇ ಬೇರೆ, ಅಕಸ್ಮಾತ್ ಆ ಆಹ್ವಾನ ತಿರಸ್ಕೃತಗೊಂಡರೆ ಮತ್ತೊಂದು ಶೋಕರಾಗವನ್ನು ಹೊರಡಿಸುತ್ತದೆ ಗಂಡು ಸಿಕಾಡ.ಕ್ಷಮಾ ವಿ. ಭಾನುಪ್ರಕಾಶ್‌ ಬರೆದ ವಿಜ್ಞಾನ ಲೇಖನಗಳ ಸಂಕಲನ “ಜೀವಿವಿಜ್ಞಾನ”ದಿಂದ ಆಯ್ದ ಲೇಖನ ನಿಮ್ಮ ಓದಿಗೆ + +byಕೆಂಡಸಂಪಿಗೆ|Mar 18, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೆಂಪುಹುಡಿಮಣ್ಣಿನ ಮೂರು ಸುತ್ತು ಎಡಕ್ಕೆ ಹೊರಳುವ ನಾಲ್ಕು ಸುತ್ತು ಬಲಕ್ಕೆ ಹೊರಳುವ ದಾರಿ ಮುಗಿಯಿತು. ಈಗ ಕಪ್ಪುಮಣ್ಣಿನ ಬೇರೆ ತರಹದ ಮರಗಳ ದಟ್ಟಕಾಡುದಾರಿ. ಕಾಲಿಗೋ ಪುಳಕ! ದಾರಿ ಹೊರಳಿದಂತೆ ಹೊರಳುತ್ತಾ ನಡೆದೆ. ಸಣ್ಣ ಸಣ್ಣ ತಿರುವುಗಳು. ಎಡಬಲ ಎದೆಮಟ್ಟದ ಪೊದೆಗಳು. ಸಣ್ಣಸಣ್ಣ ಕಾಡುಹೂಗಳು, ಸಣ್ಣಸಣ್ಣ ಕಾಡುಹಣ್ಣುಗಳು. ಹಾವಿನಂತೆ ಸುರುಳಿಸುರುಳಿ ಸುತ್ತಿಕೊಂಡು ಮರವನ್ನೇ ಬಗ್ಗಿಸಿದಂತೆ ಮೇಲಿಂದ ತೇಲಾಡುವ ಬಳ್ಳಿಗಳು. ದಪ್ಪನೆಯ ಕಾಂಡದ ಮರಗಳ ಮೇಲೆ ಬೇರೆ ತರಹದ ಸಣ್ಣಸಣ್ಣ ಎಲೆಯ ಸಸ್ಯಗಳು. ಜೀವವೈವಿಧ್ಯದ ಸ್ಪಷ್ಟ ಮಾದರಿ.ಇಂದ್ರಕುಮಾರ್ ಎಚ್.ಬಿ. ಹೊಸ ಕಾದಂಬರಿ “ಎತ್ತರ”ದ ಕೆಲ ಪುಟಗಳು ನಿಮ್ಮ ಓದಿಗೆ + +byಪ.ನಾ.ಹಳ್ಳಿ ಹರೀಶ್ ಕುಮಾರ್|Mar 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ನೇರವಾಗಿ ಹೇಳುವ ಗೋಜಿಗೆ ಹೋಗದೆ ಮಕ್ಕಳ ಮೂಲಕವೇ ನಿರೂಪಿಸುವ ಹೊಸತನವನ್ನು ಮಾಡಿರುತ್ತಾರೆ. ಇಲ್ಲಿನ ‘ಐಸ್ ಕ್ರೀಮ್’ ಕಥೆಯು ಬಡ ವಿದ್ಯಾರ್ಥಿಯೊಬ್ಬನ ಐಸ್ ಕ್ರೀಮ್ ಬಗೆಗಿನ ಚಪಲ ಅವನನ್ನು ತನ್ನ ಮನೆಯ ಬಡತನವನ್ನು ಮೀರಿ ಖಾಸಗಿ ಶಾಲೆಯೊಂದಕ್ಕೆ ದಾಖಲಾಗಿ ಕೊನೆಗೆ ಅಲ್ಲಿನ ಆರ್ಥಿಕ ಒತ್ತಡ ಸಹಿಸಲಾರದೆ ಪುನಃ ತನ್ನೂರಿನ ಸರ್ಕಾರಿ ಶಾಲೆಗೆ ಸೇರುವ ಕಥಾ ಹಂದರವನ್ನು ಹೊಂದಿದ್ದು, ಅಗತ್ಯವಿದ್ದಷ್ಟೇ ಆಸೆಪಡು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.ಡಾ.ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕಥಾ ಸಂಕಲನ “ನೋಟ್‌ಬುಕ್‌” ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ + +byಕೆಂಡಸಂಪಿಗೆ|Mar 9, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಕೊಂಡೊಯ್ಯುವ ಕಲೆ ಡಾ. ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಪುಟವಾಗುವುದು ಮಧ್ಯದಲ್ಲಿ, ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಲು ಇದು ಸಿಗಲಾರದೇನೋ ಎನ್ನುವ ಭಾವನೆ ಕೆದಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ.ನವೀನ ಗಂಗೋತ್ರಿ ಕಥಾಸಂಕಲನ “ಕಥಾಗತ”ಕ್ಕೆ ಸದ್ಯೋಜಾತ ಭಟ್ಟ ಬರೆದ ಮುನ್ನುಡಿ + +byಕೆಂಡಸಂಪಿಗೆ|Mar 8, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಹೆಣ್ಣು ಮಾಡುವುದೆಲ್ಲ ಕಾಯಕವೇ ಎಂದು ತಮ್ಮ ಬಾಲ್ಯದಿಂದ ತಾವು ಇಂದಿನವರೆಗೆ ಕಂಡ ಹೆಂಗಸರನ್ನೆಲ್ಲ ಪುರುಷರು ನೆನೆದರು. ಯಾವ ಸ್ವಾರ್ಥವೂ ಇಲ್ಲದೆ, ಕಾಯಕ ಎಂಬ ಹೆಸರಿಲ್ಲದೆ, ಗುರುತಿಲ್ಲದೆ, ಸಂಭಾವನೆಯಿಲ್ಲದೆ, ರಜೆಯಿಲ್ಲದೆ, ವಿರಾಮವಿಲ್ಲದೆ ಸಾಯುವ ತನಕ ಒಂದಲ್ಲ ಒಂದು ಕೆಲಸ ಮೈಮೇಲೆಳೆದುಕೊಂಡು ಮಾಡುವ ಹೆಂಗಸರಿಲ್ಲದಿದ್ದರೆ ಲೋಕ ನಡೆಯುವುದೇ ಇಲ್ಲ ಎಂದ ಮಾರಯ್ಯ. ತನ್ನ ತಾಯಿಯು ಏನಾದರೂ ಮಾತಾಡುವಾಗ, ಕತೆ ಹೇಳುವಾಗ ಕೈಗೊಂದು ಕೆಲಸ ಅಂಟಿಸಿಕೊಂಡುಬಂದು ಕೂರುತ್ತಿದ್ದಳೆಂದೂ, ಕೆಲಸವಿಲ್ಲದಿದ್ದರೆ ಅವಳ ಬಾಯಿಂದ ಮಾತೇ ಬರುತ್ತಿರಲಿಲ್ಲವೆಂದೂ ಉಗ್ಘಡಿಸುವ ಗುಬ್ಬಿದೇವಯ್ಯ ನೆನಪಿಸಿಕೊಂಡು ಹೇಳಿದ.ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಡಾ. ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_114.txt b/Kenda Sampige/article_114.txt new file mode 100644 index 0000000000000000000000000000000000000000..83987ab92b078781bebfbd0051dd7d9d9041a0f0 --- /dev/null +++ b/Kenda Sampige/article_114.txt @@ -0,0 +1,19 @@ +ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗಲೇ ಮಗು ಅದನ್ನು ಸುಲಭವಾಗಿ ಗ್ರಹಿಸಿಕೊಳ್ಳಬಹುದು. ಅದಕ್ಕಾಗಿ ಪ್ರಾಥಮಿಕ ಶಿಕ್ಷಣವಾದರೂ ಮಾತೃಭಾಷೆಯಲ್ಲಿಯೇ ಸಿಗಬೇಕೆಂಬುದು ಎಲ್ಲ ಶಿಕ್ಷಣ ತಜ್ಞರು ಮತ್ತು ಮನೋವಿಜ್ಞಾನಿಗಳು ಹೇಳುವ ಮಾತು. ಹೊಸ ಶಿಕ್ಷಣ ನೀತಿಯಲ್ಲಿ ಕೂಡಾ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ದುರ್ದೈವದ ಸಂಗತಿಯೆಂದರೆ ಇಂಗ್ಲೀಷಿನ ವ್ಯಾಮೋಹದಿಂದಾಗಿ ಇಂದು ಕನ್ನಡದ ಬಗ್ಗೆ ಕೀಳರಿಮೆ ಬೆಳೆಯುತ್ತಿದೆ. ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದೆ. + +(ಅಕ್ಷತಾ ಕೃಷ್ಣಮೂರ್ತಿ) + +ಇಂತಹ ದಿನಮಾನದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಪುಟ್ಟ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು ತನ್ನ ಶಾಲೆ ಮತ್ತು ಮಕ್ಕಳ ಕತೆಯನ್ನು ಹೇಳುವುದರ ಜೊತೆಗೆ ಆ ಪ್ರದೇಶದ ಪ್ರಕೃತಿಯ ಮನೋಹರ ನೋಟವನ್ನೂ, ಅಲ್ಲಿನ ಜನಜೀವನವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ತಮ್ಮ ‘ಇಸ್ಕೂಲು’ ಕೃತಿಯಲ್ಲಿ ಸೊಗಸಾಗಿ ಓದುಗರ ಮುಂದಿಟ್ಟಿದ್ದಾರೆ. ಉತ್ತಮ ಶಿಕ್ಷಕಿಯಾಗಿ, ಶಾಲಾ ಮಕ್ಕಳಿಗೆ ಮಾತೆಯಾಗಿ, ಆ ಊರಿನವರಿಗೆ ಮಗಳಾಗಿ ತನ್ನ ಜೀವನಾನುಭವಗಳನ್ನು “ತುಷಾರ” ಮಾಸಪತ್ರಿಕೆಯಲ್ಲಿ ಅಂಕಣ ಬರಹವಾಗಿ ನೀಡುತ್ತಾ ಬಂದಿದ್ದು ಈಗ ಅದು ಕೃತಿ ರೂಪದಲ್ಲಿ ನಮ್ಮ ಮುಂದಿದೆ. ಶಿಕ್ಷಕಿಯಾಗಿ, ಲೇಖಕಿಯಾಗಿ ಅವರ ಗಾಢ ಅನುಭವಗಳು ಇಲ್ಲಿ ರಸವತ್ತಾಗಿ ಮೂಡಿಬಂದಿವೆ. ಶಾಲೆ ಅನ್ನುವುದು ಇಲ್ಲಿ ಪಠ್ಯದ ಬೋಧನೆಗಷ್ಟೇ ಸೀಮಿತವಾಗಿಲ್ಲ. ಇಲ್ಲಿ ಸರಕಾರ ನಿಗದಿಪಡಿಸಿದ ಸಿದ್ಧ ಮಾದರಿಗಳನ್ನಷ್ಟೇ ಮಕ್ಕಳಿಗೆ ಬೋಧಿಸದೆ ಮಕ್ಕಳ ಕಲಿಕೆಗೆ, ಮನೋವಿಕಾಸಕ್ಕೆ ಪೂರಕವಾದ ಅನೇಕ ಚಟುವಟಿಕೆಗಳನ್ನು ಪ್ರಯೋಗಿಸಿರುವುದನ್ನು ಗಮನಿಸಬಹುದಾಗಿದೆ. ಇಲ್ಲಿ ಮಕ್ಕಳೊಂದಿಗಿನ ರಸಮಯ ಕ್ಷಣಗಳೊಂದಿಗೆ, ರೋಚಕ ಘಟನೆಗಳು, ಆತಂಕದ ಗಳಿಗೆಗಳು, ಹೃದಯ ಮೀಟುವ ಭಾವಪೂರ್ಣ ಸಂಗತಿಗಳೆಲ್ಲವೂ ಹೃದ್ಯವಾಗಿ ದಾಖಲಾಗಿವೆ. + +ಸರಕಾರದ ನೀತಿಯಿಂದಾಗಿ ಒಂದೊಂದೇ ಕನ್ನಡ ಶಾಲೆಗಳು ಜೀವ ಕಳೆದುಕೊಳ್ಳುತ್ತಿದ್ದು ಇರುವ ಕನ್ನಡ ಶಾಲೆಗಳನ್ನು ಉಳಿಸುವುದೇ ಇಂದು ಸವಾಲಿನ ಕಾರ್ಯವಾಗಿದೆ. ವೈಭವದಿಂದ ಮೆರೆದು ನಾಡಿಗೆ ನೂರಾರು ಸಾಧಕರನ್ನು ನೀಡಿದ ಕನ್ನಡ ಶಾಲೆಗಳ ದುಃಸ್ಥಿತಿ ಕಂಡು ಕಣ್ಣೀರು ಹರಿಸಿದ ಶಿಕ್ಷಕರನ್ನು ಕಂಡು ನಾನು ಕೂಡಾ ಮರುಗಿದ್ದೇನೆ. ಶತಮಾನ ಕಂಡ ಅನೇಕ ಶಾಲೆಗಳೂ ಇಂದು ಮುಚ್ಚಿ ಹೋಗಿರುವುದು ಕನ್ನಡದ ಪಾಲಿಗೆ ದುರಂತವೇ ಸರಿ. ಆಂಗ್ಲರ ದಾಸ್ಯದಿಂದ ಮುಕ್ತರಾಗಿ ನಾವು ಸ್ವಾತಂತ್ರವನ್ನೇನೋ ಗಳಿಸಿದ್ದೇವೆ. ಆದರೆ ಇನ್ನೂ ನಾವು ಭಾಷೆಯ ಪಾರತಂತ್ರ್ಯದಲ್ಲಿಯೇ ಇದ್ದೇವೆ. ನಮ್ಮದೇ ಮಾತೃಭಾಷೆ ಮತ್ತು ದೇಶದ ಇತರ ಭಾಷೆಗಳನ್ನು ಗೌರವಿಸದೆ ಇಂಗ್ಲೀಷ್ ಭಾಷೆಯನ್ನು ಮೆರೆಸುತ್ತಿದ್ದೇವೆ. “ಇಂಗ್ಲೀಷ್ ವ್ಯಾಮೋಹ ಬಿಡಿ ನಿಮ್ಮ ಭಾಷೆಯ ಬಗ್ಗೆ ಅಭಿಮಾನ ಪಡಿ” ಎಂದು ಪಾಶ್ಚಾತ್ಯರು ಹೇಳಿದರೂ ನಾವಿಂದು ಕೇಳುವ ಸ್ಥಿತಿಯಲ್ಲಿಲ್ಲ. ಇಂಗ್ಲೀಷ್ ಭಾಷಾ ಜ್ಞಾನ ಇಂದು ಖಂಡಿತಾ ಅವಶ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಜೊತೆಯಲ್ಲಿ ನಮ್ಮ ಮಾತೃಭಾಷೆಯ ಜ್ಞಾನ ಕೂಡ ಅಷ್ಟೇ ಮುಖ್ಯವಾದುದು. ಆ ಸೌಲಭ್ಯ ಇಂದು ಮಕ್ಕಳಿಗೆ ದೊರಕುತ್ತಿರುವುದು ಸರಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿ ಅನ್ನುವುದನ್ನು ಅಲ್ಲಗಳೆಯಲಾಗದು. + + + +ಇದರ ಜೊತೆಗೆ ರಾಜ್ಯದಲ್ಲಿ ಅನೇಕ ಖಾಸಗಿ ವಿದ್ಯಾಸಂಸ್ಥೆಗಳು ಸರಕಾರದ ನೆರವಿಲ್ಲದೆಯೂ ಅತ್ಯುತ್ತಮ ದರ್ಜೆಯ ಕನ್ನಡ ಶಾಲೆಗಳನ್ನು ನಡೆಸುತ್ತಿವೆ. ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ಭಾಷೆಯ ಅವನತಿ ಅಂದರೆ ಅದು ಒಂದು ಸಂಸ್ಕೃತಿಯ ಅವನತಿಯೂ ಹೌದು. ಈ ನಿಟ್ಟಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಶಾಲೆಗಳ ಶಿಕ್ಷಕರ ಕೊಡುಗೆ ಅನನ್ಯವಾದುದು. ಇಂತಹ ಕಾಲಘಟ್ಟದಲ್ಲಿ ಕನ್ನಡ ಶಾಲೆಯ ಉಳಿವಿಗಾಗಿ ಮನಪೂರ್ವಕವಾಗಿ ದುಡಿಯುತ್ತಿರುವ ಅನೇಕ ಶಿಕ್ಷಕರಲ್ಲಿ ಅಕ್ಷತಾ ಕೃಷ್ಣಮೂರ್ತಿಯವರೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕೃತಿಯಲ್ಲಿ “ರಾಧಕ್ಕೋರು” ಆಗಿರುವ ಅಕ್ಷತಾ ಕೃಷ್ಣಮೂರ್ತಿಯವರಂತಹ ಶಿಕ್ಷಕರು ನಮ್ಮ ನಾಡಿನ ಹೆಮ್ಮೆ ಅನ್ನಬಹುದು. ಇಂತಹ ಶಿಕ್ಷಕರ ಸಂಖ್ಯೆ ವೃದ್ಧಿಯಾಗಲಿ ಉಳಿದ ಕನ್ನಡ ಶಾಲೆಗಳಾದರೂ ಅಳಿಯದೆ ಉಳಿದು ಬೆಳಗಲಿ ಎಂದು ಹಾರೈಸೋಣ. + +ಈ ಕೃತಿಯನ್ನು ಅವರು ಜೋಯಿಡಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಎಲ್ಲಾ ಕನ್ನಡ ಶಾಲೆಗಳ ಮಕ್ಕಳಿಗೆ ಅರ್ಪಿಸಿದ್ದಾರೆ. ಇದು ಕೂಡಾ ಅವರ ಕನ್ನಡ ಪ್ರೀತಿಯನ್ನು ಸೂಚಿಸುತ್ತದೆ. ಸಂದರ್ಭನುಸಾರ ಅನೇಕ ಚಿತ್ರಗಳನ್ನು ಇಲ್ಲಿ ಬಳಸಿಕೊಂಡಿರುವುದು ಕೂಡಾ ಕೃತಿಯನ್ನು ಒಂದು ಅಪೂರ್ವ ದಾಖಲಾತಿಯೆನ್ನುವಂತೆ ರೂಪಿಸುವಲ್ಲಿ ನೆರವಾಗಿವೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೃತಿಯನ್ನು ಮೆಚ್ಚಿ ಸೊಗಸಾದ ಮುನ್ನುಡಿ ಬರೆದಿದ್ದು ಬೆಂಗಳೂರಿನ ಜನಪ್ರಕಾಶನ ಇದನ್ನು ಪ್ರಕಟಿಸಿದೆ. + + + +ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಮತ್ತು ಕನ್ನಡದ ಅಭಿಮಾನಿಗಳೆಲ್ಲರೂ ಓದಬೇಕಾದ ಈ ಕೃತಿಯನ್ನು ಸರಕಾರವು ಎಲ್ಲ ಶಾಲಾ ಗ್ರಂಥಾಲಯಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ದೊರೆಯುವಂತೆ ಮಾಡಿದರೆ ಒಳ್ಳೆಯದು. + +ಅಂಚೆ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿ ನಿವೃತ್ತರಾಗಿರುವ ಸದಾನಂದ ನಾರಾವಿಯವರು ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುತ್ತಾರೆ. ‘ಮುತ್ತುಮಲ್ಲಿಗೆ’, ‘ಸಂರಚನೆಯ ಸುತ್ತಮುತ್ತ’, ‘ಉಜ್ರೆ ಈಶ್ವರ ಭಟ್’, ‘ಡಾ.ಕೆ, ಪ್ರಭಾಕರ ಆಚಾರ್’ ಇವರ ಪ್ರಕಟಿತ ಕೃತಿಗಳು. ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ಸೇವೆಯನ್ನು ಪರಿಗಣಿಸಿ ತುಳು ಸಾಹಿತ್ಯ ಅಕಾಡೆಮಿ ಇವರನ್ನು ಗೌರವಿಸಿದೆ. \ No newline at end of file diff --git a/Kenda Sampige/article_115.txt b/Kenda Sampige/article_115.txt new file mode 100644 index 0000000000000000000000000000000000000000..eb88783f91eac52ac95a9cfa8040ae7b04118f98 --- /dev/null +++ b/Kenda Sampige/article_115.txt @@ -0,0 +1,19 @@ +ನಿವೃತ್ತ ಪ್ರಾಂಶುಪಾಲರಾದ ಪ್ರೊಫೆಸರ್ ಕಟಾವೀರನಹಳ್ಳಿ ನಾಗರಾಜುರವರ ಲೇಖನಿಯಿಂದ ಬಹಳ ದಿನಗಳ ನಂತರ ಮೂಡಿಬಂದ ಅದ್ಭುತ ಕಲಾಕೃತಿ ಪುಟ್ಟಮ್ಮಯ್ಯ. ಇದೊಂದು ಸಾಮಾಜಿಕ ಕಾದಂಬರಿ ಆಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ಒಂದು ಕುಟುಂಬ ಅಥವಾ ಮನೆತನಕ್ಕೆ ಸೀಮಿತವಾದ ಕಥಾ ವಸ್ತುವಾಗಬಹುದಾಗಿದ್ದ ಕಾದಂಬರಿಯನ್ನು ಅಂದಿನ ಸಾಮಾಜಿಕ ಸ್ಥಿತಿಗತಿಗಳೊಡನೆ ತುಲನೆ ಮಾಡುತ್ತಾ ಸಾರ್ವಜನಿಕ ಅನುಭವ ಕಥನವಾಗಿಸುವ ಪ್ರಯತ್ನ ಕಾದಂಬರಿಕಾರರದ್ದು. + +(ಪ್ರೊ. ಕಟಾವೀರನಹಳ್ಳಿ ನಾಗರಾಜು) + +ಊರಿಗೊಬ್ಬ ಗೌಡ (ಕರಿಯಪ್ಪ), ಅವನ ವಿಧವಾ ತಂಗಿ (ಕರಿಯಮ್ಮ), ಬೆಳೆದು ನಿಂತ ತಂಗಿಯ ಮಗ (ಚಿಕ್ಕಾವಲ್ಲಪ್ಪ), ಅವರ ಜೀವನ ಹಸನಾಗಿಸುವ ಜವಾಬ್ದಾರಿ ಹೊತ್ತ ಹಿರಿಯ ಗೌಡ. ಪ್ರಾಕೃತಿಕ ಬದಲಾವಣೆಗಳ ಸಂಘರ್ಷಕ್ಕೆ ಸಿಲುಕಿ ಅಪರಿಚಿತ ಅನ್ಯಜಾತಿ ಮಹಿಳೆ ಆಲಮ್ಮನೊಂದಿಗಿನ ಚಿಕ್ಕಾವಲ್ಲಪ್ಪನ ಮಿಲನ. ಸ್ವತಂತ್ರ ಹೋರಾಟದ ಭಾಗವಾಗಿ ಚಿಕ್ಕಾವಲ್ಲಪ್ಪನ ಸೆರೆವಾಸ. ಬಿಡುಗಡೆಯ ನಂತರ ಆಲಮ್ಮನೊಂದಿಗೆ ನಿಶಾಲಗ್ನ, ಸಾಕ್ಷಿಯಾಗಿ ಮಗಳು ಭಂಗಾರಿಯ ಜನನ. ಇದ್ಯಾವುದರ ಪರಿವೇ ಇಲ್ಲದೆ ಸ್ವಂತ ಅಣ್ಣನ ಮಗಳು ಪುಟ್ಟಮ್ಮನೊಂದಿಗೆ ಚಿಕ್ಕಾವಲ್ಲಪ್ಪನ ಮದುವೆ ಮಾಡುವ ತಾಯಿ ಕರಿಯಮ್ಮ, ಆಲಮ್ಮನ ಸಖ್ಯದಲ್ಲಿ ಬಾಲೆ ಪುಟ್ಟಮ್ಮನನ್ನು ಕಡೆಗಣಿಸುವ ಚಿಕ್ಕಾವಲ್ಲಪ್ಪ. ಮುಂದೆ ಪುಟ್ಟಮ್ಮ ಋತುಮತಿಯಾದರೂ ಅವಳನ್ನು ಸೇರದ ಗಂಡ. ಎಲ್ಲವನ್ನೂ ನುಂಗಿಕೊಂಡೇ ಕನ್ಯಾ ಜೀವನ ನಡೆಸುವ ಪುಟ್ಟಮ್ಮ. ತನ್ನ ತಂಗಿ ಹಾಗೂ ಸಹೋದರರ ಮಕ್ಕಳಲ್ಲೇ ತಾಯ್ತನದ ಸಿಹಿ ಉಣ್ಣುವ ಪುಟ್ಟಮ್ಮ ಅವರ ಮೆಚ್ಚಿನ ಪುಟ್ಟಮ್ಮಯ್ಯಳಾಗಿ ಬದಲಾಗುತ್ತಾಳೆ. ಮತ್ತೊಮ್ಮೆ ಪ್ರಾಕೃತಿಕ ಸಂಘರ್ಷದಲ್ಲಿ ಪುಟ್ಟಮ್ಮನೊಂದಿಗೆ ಸೇರುವ ಗಂಡ, ನಾಗಪ್ಪ ಎಂಬ ಗಂಡು ಸಂತಾನ ಉದಯ. + +ಆಲಮ್ಮನೊಂದಿಗಿನ ಸಂಸಾರದ ವಿಷಯ ತಿಳಿಸಲು ಸಾಧ್ಯವಾಗದೇ ಮಾನಸಿಕ ಹೊಯ್ದಟದಲ್ಲೇ ಅಂತ್ಯವಾಗುವ ಚಿಕ್ಕಾವಲ್ಲಪ್ಪ. ಹೀಗೇ ಕಾದಂಬರಿಯ ಕಥೆ ಸಾಗುತ್ತದೆ. + +ವೃದ್ಧೆ ಕರಿಯಮ್ಮ, ನಾಯಕನನ್ನು ಗುಟ್ಟಾಗಿ ಮದುವೆಯಾಗುವ ಆಲಮ್ಮ ಹಾಗೂ ನಾಯಕನನ್ನು ಧಾರ್ಮಿಕ ವಿಧಿವಿಧಾನದಲ್ಲಿ ಮದುವೆಯಾಗಿ ಬರುವ ಪುಟ್ಟಮ್ಮ ಈ ಮೂರೂ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುವ ಕಥೆಯಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವುದು ಮಡದಿ ಪುಟ್ಟಮ್ಮಳ ಪಾತ್ರವಷ್ಟೇ. ಬಾಲಕಿಯಾಗಿ ಏನೊಂದನ್ನೂ ಅರಿಯುವ ಮುನ್ನವೇ ಚಿಕ್ಕಾವಲ್ಲಪ್ಪನನ್ನು ಮದುವೆಯಾಗಿ ಸ್ವಂತ ಅತ್ತೆಯ ಮನೆಗೆ ಬರುವ ಪುಟ್ಟಮ್ಮ ಮನೆ ಹಾಗೂ ಹೊಲದ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುಂದೆ ಕನ್ಯೆಯಾಗಿಯೂ ಗಂಡನೊಂದಿಗೆ ಸೇರಲು ಅವಕಾಶವಿರದೆ ವಯೋಸಹಜ ಕಾಮನೆಗಳನ್ನು ಹತ್ತಿಕ್ಕಿಕೊಂಡು ಸುಮಾರು ಎರೆಡು ದಶಕಗಳ ಕಾಲ ಬಂಜೆ ಎಂಬ ಹಣೆಪಟ್ಟಿ ಹೊತ್ತು ಮುಂದೊಮ್ಮೆ ತಾಯಿಯಾಗುವುದು, ಕೆಳಜಾತಿಯ ಕೆಲಸಗಾರರೊಂದಿಗೆ ಸಲುಗೆಯಿಂದ ಬೆರೆತು ಅಂದಿನ ಆಚರಣೆಯಾದ ವರ್ಣಸಂಘರ್ಷವನ್ನು ನೈತಿಕವಾಗಿ ವಿರೋಧಿಸುವುದು. ಜವಾಬ್ದಾರಿಯುತ ಸೋದರಿಯಾಗಿ ತಮ್ಮನನ್ನು ವಿದ್ಯಾವಂತನನ್ನಾಗಿ ಮಾಡುವುದು. ಮುಂದೆ ಸ್ವಂತ ಮಗನನ್ನು ಓದಿಸುವ ಫಣ ತೊಡುವುದು. ಹೀಗೇ ಕಾದಂಬರಿಯ ತುಂಬಾ ಪುಟ್ಟಮ್ಮಳ ವ್ಯಕ್ತಿತ್ವವೇ ಆವರಿಸಿಕೊಳ್ಳುತ್ತಾ ಸಾಗುತ್ತದೆ. ಇಲ್ಲಿ ಬಾಲಕಿ ಪುಟ್ಟಮ್ಮ ದಿನಕಳೆದಂತೆಲ್ಲ ಮಾತೃ ಹೃದಯದ ಮೇರು ಪರ್ವತವಾಗಿ ಬೆಳೆಯುತ್ತಾ ಹೋಗುತ್ತಾಳೆ. ತಂದೆ ಮನೆಯಲ್ಲಿ ಆದರ್ಶ ಮಗಳಾಗಿ, ಅತ್ತೆ ಮನೆಯಲ್ಲಿ ಮುದ್ದಿನ ಸೊಸೆಯಾಗಿ, ಜವಾಬ್ದಾರಿಯುತ ಗೌಡತಿಯಾಗಿ, ಮಗನಿಗೆ ಭವಿಷ್ಯ ನಿರ್ಮಿಸುವ ತಾಯಿಯಾಗಿ ಪುಟ್ಟಮ್ಮಳ ಪಾತ್ರ ಕಾದಂಬರಿಯ ಉದ್ದಕ್ಕೂ ಓದುಗರನ್ನು ಆವರಿಸಿಕೊಳ್ಳುತ್ತಾ ಸಾಗುತ್ತದೆ. + +ಕಾದಂಬರಿಯ ಕಥಾವಸ್ತು ಸರಳವಾದದ್ದೇ ಆದರೂ ಅದನ್ನು ನಿರೂಪಿಸಿರುವ ಬಗೆ ವಿಶೇಷವಾಗಿದ್ದು ಅದಕ್ಕಾಗಿ ಕಾದಂಬರಿಕಾರರು ಆಯ್ದುಕೊಂಡಿರುವ ಗ್ರಾಮ್ಯ ಭಾಷೆ ಎಲ್ಲಿಯೂ ತನ್ನ ಸೊಗಡನ್ನು ಕಳೆದುಕೊಂಡಿಲ್ಲ. ಕಾದಂಬರಿಯಲ್ಲಿ ಬರುವ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳ ಹಿನ್ನೆಲೆ, ಸ್ಥಳೀಯವಾಗಿ ಪ್ರಖ್ಯಾತವಾದ ಮಾಗೋಡು ಹಾಗೂ ಜುಂಜಪ್ಪನ ಜಾತ್ರೆಗಳ ಉಲ್ಲೇಖ, ಪ್ರಾಕೃತಿಕ ವರ್ಣನೆಗಳು ಓದುಗರಿಗೆ ಓದುತ್ತಿದ್ದೇವೆ ಎನ್ನುವುದರ ಬದಲು ಕಥೆಯನ್ನು ಕೇಳುತ್ತಿರುವಂತೆ ಭಾಸವಾಗಿಸುವುದರಲ್ಲಿ ಆಶ್ಚರ್ಯವಿಲ್ಲ. + +ಎಲ್ಲಾ ಶ್ರೇಷ್ಠತೆಗಳೂ ಒಂದಿಷ್ಟು ಮಿತಿಯನ್ನು ಒಳಗೊಂಡಿರುತ್ತವೆ ಎಂಬಂತೆ ಪುಟ್ಟಮ್ಮಯ್ಯ ಕಾದಂಬರಿಯಲ್ಲಿಯೂ ಕೆಲವೊಂದು ಮಿತಿಗಳಿದ್ದು ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕಾದಂಬರಿಯ ಪ್ರಾರಂಭದಲ್ಲಿ ಬರುವ ಕೊನಪ್ಪ ಮತ್ತು ದೇವೀರಿಯ ದಾಂಪತ್ಯಕ್ಕೆ ಸಂಬಂಧಿಸಿದ ವಿವರಣೆಯು ಇದ್ದಕ್ಕಿದ್ದಂತೆ ಕಾಣೆಯಾಗುವುದು. ಮಕ್ಕಳಿಗಾಗಿ ಪುಟ್ಟಮ್ಮಳು ದೇವರು, ಕಂದಾಚಾರದ ಮೊರೆ ಹೋಗುವುದು… ಅದರ ಬಲದಿಂದಲೇ ಪ್ರಾಕೃತಿಕ ಸಂಘರ್ಷ ಉಂಟಾಗಿ ನಾಯಕ ನಾಯಕಿ ಸೇರಿದರೆಂಬಂತೆ ಬಿಂಬಿಸುವ ಪ್ರಯತ್ನ ಮಾಡಿರುವುದು. ಕಥೆ ನಡೆಯುವುದು ಸ್ವತಂತ್ರ ಪೂರ್ವದ ಸಣ್ಣ ಹಳ್ಳಿಯಲ್ಲಾದರೂ ಸುಮಾರು ಎರಡು ದಶಕಗಳವರೆಗೂ ಕಥಾನಾಯಕ ಚಿಕ್ಕಾವಲ್ಲಪ್ಪ ಹಾಗೂ ಆಲಮ್ಮಳ ಗುಟ್ಟಿನ ಸಂಸಾರದ ವಿಚಾರ ಬಯಲಾಗದೆ ಉಳಿದದ್ದು, ಬೆಳೆದು ನಿಂತ ಮಗಳು ಭಂಗಾರಿ ಹಾಗೂ ಮಗ ನಾಗಪ್ಪನಿಗೂ ಅನುಮಾನ ಬಾರದಿದ್ದುದು. ಅಂದು ಪ್ರಬಲವಾಗಿದ್ದ ವರ್ಣ ಸಂಘರ್ಷವನ್ನು ಮೀರುವ ನಾಯಕ ನಾಯಕಿಯನ್ನು ಯಾರೊಬ್ಬರೂ ವಿರೋಧಿಸದಿರುವುದು. ಗಂಡನ ಗುಟ್ಟಿನ ಸಂಸಾರದ ಸತ್ಯ ಕೊನೆಯವರೆವಿಗೂ ಪುಟ್ಟಮ್ಮಳಿಗೆ ತಿಳಿಯದೇ ಹೋದದ್ದು ನಿಜಕ್ಕೂ ಓದುಗರನ್ನು ಗೊಂದಲಕ್ಕೀಡು ಮಾಡುತ್ತವೆ. + + + +ಇಂತಹ ಸಣ್ಣ ಪ್ರಮಾದಗಳನ್ನು ಹೊರತುಪಡಿಸಿದರೆ ಪುಟ್ಟಮ್ಮಯ್ಯ ಒಮ್ಮೆ ಎಲ್ಲರೂ ಓದಿ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಕಾದಂಬರಿಯಾಗಿದ್ದು. ಓದಿ ಪ್ರೋತ್ಸಾಹಿಸಬೇಕಾಗಿ ಮನವಿ. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_116.txt b/Kenda Sampige/article_116.txt new file mode 100644 index 0000000000000000000000000000000000000000..455b7f99909a09f470264159c871c5dea416d801 --- /dev/null +++ b/Kenda Sampige/article_116.txt @@ -0,0 +1,23 @@ +‘ನಾನೇಕೆ ಬರೆಯುತ್ತೇನೆ’ ಎಂಬುದರ ಬಗ್ಗೆ ಹಲವಾರು ಸಾಹಿತಿಗಳು ಮಾತನಾಡುತ್ತಾರೆ. ಬರೆಯುವುದರ ಹಿಂದಿನ ಪ್ರೇರಣೆಯನ್ನು ವಿವರಿಸುತ್ತಾರೆ. ಮೊನ್ನೆಯಷ್ಟೇ ಜೋಗಿ ಸರ್ ಬರೆದ ಒಂದು ಲೇಖನದಲ್ಲಿ ಬೇಂದ್ರೆಯವರಿಂದ ಹಿಡಿದು ಗಾರ್ಸಿಯಾ ಮಾರ್‌ಕ್ವೆಜ್ ವರೆಗೂ ಬರವಣಿಗೆಯ ಬಗ್ಗೆ ಅನೇಕ ಲೇಖಕರು ಹಂಚಿಕೊಂಡಿದ್ದ ಮಾತುಗಳನ್ನು ಉಲ್ಲೇಖಿಸಿದ್ದರು. ಆದರೆ ‘ನಾನೇಕೆ ಬರೆಯುವುದನ್ನು ನಿಲ್ಲಿಸಿದೆ?’ ಎಂಬ ವಿಷಯದ ಬಗ್ಗೆ ಮಾತನಾಡಿದವರು ಕಡಿಮೆ. ನನ್ನ ತಿಳುವಳಿಕೆಯ ಪ್ರಕಾರ ಹಾಗೆ ಬರವಣಿಗೆಯನ್ನು ನಿಲ್ಲಿಸಿದವರೂ ಸಹ ಕಡಿಮೆಯೇ. ತೀರಾ ಮೊನ್ನೆಯವರೆಗೂ ನನಗೆ ಹೀಗೆ ಏಕಾಏಕಿಯಾಗಿ ಬರೆಯುವುದನ್ನು ನಿಲ್ಲಿಸಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಒಬ್ಬರಿದ್ದಾರೆ, ಒಂದು ಕಾಲಕ್ಕೆ ಅಮೋಘವಾಗಿ ಬರೆಯುತ್ತಿದ್ದವರು ಈಗ ಬರವಣಿಗೆಯನ್ನು ನಿಲ್ಲಿಸಿ ಬಿಟ್ಟಿದ್ದಾರೆ ಎಂದು ತಿಳಿದಾಗ ಹುಟ್ಟಿದ ಸೋಜಿಗ ಇನ್ನೂ ಜೀವಂತವಾಗಿದೆ. + +ರಾಜಲಕ್ಷ್ಮೀ ಎನ್.ರಾವ್ ಅವರ ಹೆಸರನ್ನು ನಾನು ಕೇಳಿಯೇ ಇರಲಿಲ್ಲ. ಇದು ನನ್ನ ಅಲ್ಪ ಜ್ಞಾನವೂ ಇರಬಹುದು ಜೊತೆಗೆ ತಲೆಮಾರುಗಳ ವ್ಯತ್ಯಾಸವೂ ಇರಬಹುದು. ಹೀಗೆ ಅಕಸ್ಮಾತ್ತಾಗಿ ಕಂಡ ರಾಜಲಕ್ಷ್ಮೀ ಅವರ ವಿಡಿಯೋ ನೋಡಿ ನನಗೆ ಎರಡು ದಿನಗಳ ಕಾಲ ತಲೆಯಲ್ಲಿ ಅವರದೇ ಗುಂಗು. ಅದು ಹೇಗೆ ಬರೆಯುವುದನ್ನು ನಿಲ್ಲಿಸಲಿಕ್ಕೆ ಸಾಧ್ಯ ಎಂದು ಅಚ್ಚರಿ ಪಡುತ್ತಲೇ ಇದ್ದೆ. ನಿಜ ಹೇಳ್ತೇನೆ, ಬಹಳ ದಿನಗಳ ಕಾಲ ಬರೆಯದೇ ಹೋದರೆ ನನಗೆ ವಿಚಿತ್ರ ಕನಸುಗಳು ಬೀಳುತ್ತವೆ. ಕತೆಯಾಗಿ ಕಟ್ಟಲು ನಾನು ಅವುಗಳನ್ನು ನೆನಪಿಟ್ಟುಕೊಳ್ಳಲು ಯತ್ನಿಸುತ್ತೇನೆ. ಎಷ್ಟು ನೆನಪಿದೆಯೋ ಅಷ್ಟಕ್ಕೆ ಉಪ್ಪು, ಖಾರ, ಮೆಣಸು, ಬೆಲ್ಲ ಸೇರಿಸಿ ಕತೆಯಾಗಿಸಲು ಯತ್ನಿಸುತ್ತೇನೆ. ಸಣ್ಣ ಪುಟ್ಟ ಲೇಖನ, ಕತೆಗಳನ್ನು ಬರೆಯುವ ನನಗೇ ಹೀಗಾಗುವಾಗ ದೊಡ್ಡವರ ಜೊತೆಗೆ ಒಡನಾಡಿದ, ಸಾಹಿತಿಗಳ ಜೊತೆಗೆನೇ ಬಹುಪಾಲು ಕಳೆಯುತ್ತಿದ್ದ, ಉತ್ತಮ ಕತೆಗಳು ಎಂದು ಓದಿದವರೆಲ್ಲರೂ ಹೇಳುವ ಹಾಗೆ ಕತೆಗಳನ್ನು ಬರೆದ ರಾಜಲಕ್ಷ್ಮಿಯವರಿಗೆ ಹೀಗೆಲ್ಲ ಅನ್ನಿಸಲೇ ಇಲ್ಲವೇ ಎಂದು ಯೋಚಿಸುತ್ತಲೇ ಇದ್ದೆ. + +ಅವರು ಅದೆಂತಹ ಕತೆಗಳನ್ನು ಬರೆದಿದ್ದರು ಎಂಬ ಕುತೂಹಲದಲ್ಲಿಯೇ ಅವರ ಕಥಾ ಸಂಕಲನ ‘ಸಂಗಮ’ ವನ್ನು ಓದಲು ಶುರು ಮಾಡಿದೆ. ಅದರಲ್ಲಿ ಮೊದಲ ಕಥೆಯೇ ಕೆಂಪು ಕಪ್ಪು ಬಿಳುಪು. ಕಪ್ಪು ಹುಬ್ಬಿನ, ಕೆಂಪು ಲಿಪಸ್ಟಿಕ್ಕಿನ, ಬಿಳಿ ಹಲ್ಲಿನ ಒಬ್ಬ ಹೆಂಗಸು. ನೂರಾರಿ ಜನರಾಡಿ ಬಿಸುಟ ಬೊಂಬೆ ಅವಳು. ನೂರಾ ಒಂದನೇ ಗಂಡಸು ಇವನು. ಪ್ರಯೋಗಕ್ಕಾಗಿ ಅವಳೊಡನೆ ಸೇರಿದ, ಕೂಡಿದ ಕತೆಯನ್ನು ಇನ್ನೊಂದು ಹೆಂಗಸಿನ ಮುಂದೆ ಹೇಳುತ್ತಿರುತ್ತಾನೆ. ಈ ಕತೆಯನ್ನು ಕೇಳುವ ಅವಳು ಯಾರು ಎಂಬುದು ಇಡೀ ಕತೆಯಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಯಾವುದೋ ಒಂದು ಹೋಟೆಲಿನಲ್ಲಿ ಈ ಕೆಂಪು ಕಪ್ಪು ಬಿಳುಪಿನ ಹೆಂಗಸಿನ ಜೊತೆಗೆ ಸೇರುವ ಕತೆಗಾರನಿಗೆ ಅವಳಿಂದ ಸಂತೃಪ್ತಿಯಾಗುವುದಿಲ್ಲ. ಆದರೆ ಕತೆ ಕೇಳುತ್ತಿದ್ದ ಹೆಂಗಸಿಗೆ ಕತೆಯ ಕೊನೆಯಲ್ಲಿ ಅವನ ಮೇಲೆ ಮೆಚ್ಚುಗೆ, ಗೌರವ ತೆರೆದಿತ್ತು ಎಂದು ಬರುತ್ತದೆ. ಅವನ ಕತೆಯನ್ನು ಕೇಳುತ್ತಿರುವ ಹೆಂಗಸು ಆ ಕೆಂಪು ಕಪ್ಪು ಬಿಳುಪಿನ ಹೆಂಗಸೇ ಆಗಿರಬಹುದೇ? ‘ಖೂಬ್ ಸೂರತ್ ಹೈ ಲಡಕೀ. ಬುಲಾವೂ?’ ಎಂದು ಹೋಟೆಲಿನಲ್ಲಿ ಕೆಲಸ ಮಾಡುವ ಆ ಪುಟ್ಟ ಹುಡುಗ ಹೇಳಿದಾಗ ಕತೆಗಾರ ‘ಬುಲಾವ್’ ಎನ್ನುತ್ತಾನೆ. ಅವನು ಹೀಗೆ ಹೇಳಿದಾಗ ಕತೆ ಕೇಳುತ್ತಿರುವ ಹೆಂಗಸಿಗೆ ನೋವಾಗುತ್ತದೆ. ಕಣ್ಣು, ಮುಖದಲ್ಲಿ ವೇದನೆ ಕಾಣಿಸುತ್ತದೆ. ಅದನ್ನು ನೋಡಿದ ಕತೆಗಾರ ಮೃದುವಾಗಿ ‘ಹಾಗೇಕೆ ಉತ್ತರ ಕೊಟ್ಟೆನೆಂದು ಗೊತ್ತಿಲ್ಲವೇ ನಿನಗೆ?’ ಎಂದು ಕೇಳುತ್ತಾನೆ. ಈ ಎರಡೇ ಎರಡು ಸಾಲಿನ ಸಂಭಾಷಣೆ ಆಕೆ ಅವಳೇ ಆಗಿರುವ ಸಾಧ್ಯತೆಗೆ ಪುರಾವೆ ನೀಡಿದಂತಿದೆ. + + + +‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ. ಎಂಟು ವರ್ಷಗಳ ಸತತ ಪ್ರಯತ್ನದಿಂದ ಅವನ ಪ್ರಯೋಗ ಕೊನೆಗೂ ಫಲಕಾರಿಯಾಗುತ್ತದೆ. ಆದರೆ ಮುಂದೇನು? ಚಿನ್ನದ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು ಆದರೆ ಚಿನ್ನದ ಅನ್ನವನ್ನು ತಿನ್ನಲಿಕ್ಕಾಗುತ್ತದೆಯೇ? ಹೀಗೆ ಒಂದು ಆಡು ಮಾತನ್ನು ಸಹ ಕತೆಯಾಗಿ ಕಟ್ಟಬಹುದು ಎಂದು ರಾಜಲಕ್ಷ್ಮಿಯವರು ತೋರಿಸಿ ಕೊಟ್ಟಿದ್ದಾರೆ. ಇದರ ಮೂಲಕ ಅವರು ಪ್ರತಿಯೊಂದು ವಿಷಯದ ಬಗ್ಗೆಯೂ ಹೇಗೆಲ್ಲ ಆಳವಾಗಿ ಯೋಚಿಸುತ್ತಿದ್ದರು ಎಂದು ಅರಿಯಬಹುದಾಗಿದೆ. + +‘ಆವೇ ಮರಿಯಾ’ ದಲ್ಲಿ ಮದುವೆ ಮಾಡಿಕೊಳ್ಳುವುದೋ ಬೇಡವೋ ಎಂಬ ಸಂದಿಗ್ಧದಲ್ಲಿರುವ ಯುವಕನ ತಳಮಳ ಕತೆಯಾಗಿ ಬಂದಿದೆ. ಸಂಸಾರದ ತಾಪತ್ರಯ, ರೇಗುವ ಸಿಡುಕುವ ಬಿಗು ಮಾರಿಯ ಯುವಕರು, ಬೇಸತ್ತ ಹೆಂಗಸರು, ತಿಂಗಳ ಮೊದಲ ವಾರದ ಕನಸುಗಳು, ಒಲವಿನ ಮೊದಲ ತಿಂಗಳ ಕನಸುಗಳು ಎಲ್ಲವೂ ಇಲ್ಲಿವೆ. + +ಸಂದರ್ಶನದಲ್ಲಿ ರಾಜಲಕ್ಷ್ಮೀಯವರು ತಾವು ಈಗ ಪ್ರಕೃತಿಯ ಜೊತೆಗೆ ಕಾಲ ಕಳೆಯುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಹೂವುಗಳನ್ನು ನೋಡುವ, ಚಿಗುರೆಲೆಗಳನ್ನು ಗಮನಿಸುವ ಈಗಿರುವ ನಿಸರ್ಗ ತನ್ಮಯತೆ ಮೊದಲಿನಿಂದಲೂ ಇತ್ತು ಎಂದು ಎಲ್ಲಾ ಕತೆಗಳಲ್ಲೂ ಕಾಣಿಸುತ್ತದೆ. ಕತೆಗಳು ಎಷ್ಟು ಕಾವ್ಯಾತ್ಮಕವಾಗಿವೆಯೆಂದರೆ ಒಂದೊಂದು ಸಾಲು ಒಂದೊಂದು ಕವನ ಎಂಬಂತಿವೆ. ಪಾದದ ಬಳಿ ಸುಟ್ಟು ಬಿಸುಡುವ ಸಿಗರೇಟಿನ ಬಿಳಿ ತುಂಡುಗಳನ್ನು ಪೂಜೆಗೆ ಸುರಿದ ಹೂವುಗಳಿಗೆ ಹೋಲಿಸುತ್ತಾರೆ. ಮತ್ತೊಂದು ಕಡೆಗೆ ಅವೇ ತುಂಡುಗಳನ್ನು ಸತ್ತ ಬಿಳಿ ಪತಂಗಗಳಿಗೂ ಹೋಲಿಸುತ್ತಾರೆ. ಕಂದು ಬಣ್ಣದ ಎಲೆಗಳನ್ನು ಚಾಚಿ ನಿಂತಿರುವ ಮರವನ್ನು ಬಟ್ಟೆ ಹರಿದು ಹೋದ ಕೊಡೆಗೆ, ವಸಂತ ಕಾಲವನ್ನು ಬಳೆಗಾರನಿಗೆ, ನೆನಪನ್ನು ಬಳ್ಳಿಗೆ, ಬಿಕ್ಕುಗಳನ್ನು ಬಿರುಕುಗಳಿಗೆ, ಮನಸ್ಸಿನ ಖುಷಿಯನ್ನು ಎಳೆ ಗರಿಕೆ ಹುಲ್ಲಿಗೆ, ಸ್ಪರ್ಶವನ್ನು ಹೂದಳಕ್ಕೆ, ನಿಂಬೆ ಹೂವನ್ನು ಉಸಿರಿಗೆ, ದೇವಕಣಗಿಲೆಯ ಮೊಗ್ಗನ್ನು ಉಗುರಿಗೆ ಹೀಗೆ ಹಲವಾರು ಹೋಲಿಕೆಗಳು ಕಾಣಿಸುತ್ತಲೇ ಹೋಗುತ್ತವೆ. ಅವುಗಳನ್ನು ಓದುವುದೇ ಒಂದು ಸೊಬಗು. ಹೂದೋಟದಲ್ಲಿ ಒಂದು ಸುತ್ತು ಹಾಕಿ ಬಂದಂತೆ. + +‘ನನಗೊಂದು ಬಿಳಿ ಗುಲಾಬಿ’ ಕತೆಯಲ್ಲಿ ಗುಲಾಬಿಯನ್ನು ವರ್ಣಿಸುವ ಏಳೆಂಟು ಸಾಲುಗಳಿವೆ. ಇದನ್ನು ಓದಿದಾಗ ಗುಲಾಬಿ ಹೂವು ಹೊಸದೇ ರೂಪದಲ್ಲಿ ನಮ್ಮ ಕಣ್ಮುಂದೆ ಕಾಣಿಸಿಕೊಳ್ಳುತ್ತದೆ. ಮುಂದಿನ ಸಲ ಗುಲಾಬಿಯನ್ನು ನೋಡಿದಾಗ ಅದರೊಳಗಿನ ಕೇಸರ ಮಗುವಿನ ಗುಂಗುರು ಕೂದಲಿನಂತೆ ಕಾಣಿಸದೇ ಇರಲಾರದು. ಕಂದು ಬಣ್ಣಕ್ಕೆ ತಿರುಗಿದ ಆ ಗುಲಾಬಿ ದಳದ ನರಗಳನ್ನು ನಕಾಶೆಯ ಮೇಲಿನ ನದಿಗಳಿಗೆ ಹೋಲಿಸುತ್ತಾರೆ ಲೇಖಕಿ. ಅದನ್ನು ಓದಿದ ತಕ್ಷಣ ವಾವ್ ಎಷ್ಟು ಅದ್ಭುತ ಪರಿಕಲ್ಪನೆ ಎನ್ನಿಸದೇ ಇರಲಾರದು. ‘ಸಂಗಮ’ ಕತೆಯಲ್ಲಿ ಪತ್ರಿಕೆಯಲ್ಲಿರುವ ಕಪ್ಪು ಅಕ್ಷರಗಳ ಮೇಲೆ ಕಣ್ಣಾಡಿಸುವುದನ್ನು ಜಪಾನಿ ಆಟಗಾರ ತಂತಿಯ ಮೇಲೆ ನಡೆಯುವುದಕ್ಕೆ ಹೋಲಿಸುತ್ತಾರೆ. ಹೀಗೆ ಎತ್ತಣ ಮಾಮರ ಎತ್ತಣ ಕೋಗಿಲೆಗೆ ಸಂಬಂಧ ಕಲ್ಪಿಸಿ ಹೊಸ ಬೆರಗನ್ನು ಸೃಷ್ಟಿಸುವ ರಾಜಲಕ್ಷ್ಮಿಯವರ ಜಾಣ್ಮೆಗೆ ನಾನು ಬೆರಗಾಗಿದ್ದೇನೆ. + +‘ಕಲ್ಯಾಣಿ’ ಕತೆಯಲ್ಲಿ ಪ್ರಪಂಚದಲ್ಲಿರುವ ಗಂಡಸರನ್ನು ಮೂರು ವಿಧಗಳಾಗಿ ವಿಂಗಡಿಸುತ್ತಾರೆ. ಆ ವಯಸ್ಸಿಗೇ ಜಗತ್ತನ್ನು ಇಷ್ಟು ಸ್ಪಷ್ಟವಾಗಿ ಅವಲೋಕಿಸಿದ ರಾಜಲಕ್ಷ್ಮಿಯವರ ಸೂಕ್ಷ್ಮ ಮನಸ್ಸಿಗೆ ಬರೆಯುವುದನ್ನು ಯಾಕೆ ನಿಲ್ಲಿಸಬೇಕು ಎಂಬುದರ ಬಗ್ಗೆಯೂ ಸ್ಪಷ್ಟತೆಯಿತ್ತು ಮತ್ತು ಆ ಸ್ಪಷ್ಟತೆಯಿಂದಲೇ ಅಷ್ಟು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವಾಯಿತು ಎಂದು ಅರ್ಥವಾಗುತ್ತದೆ. ‘ಇಲ್ಲ ಇಲ್ಲಿ..’ ಇದು ಕಮ್ಯುನಿಷ್ಟ್‌ ಆದವನ ಕತೆ. ‘ಫೀಡ್ರಾ’ ಕತೆಯಲ್ಲಿ ತನಗಿಂತ ಎರಡು ವರ್ಷ ದೊಡ್ಡ ಮಗನಿರುವ ಗಂಡಸಿನೊಂದಿಗೆ ಮದುವೆಯಾಗುವ ತರುಣಿಗೆ ಆ ಹುಡುಗನ ಮೇಲೆ ಮೋಹವಾಗುತ್ತದೆ. ಆ ಕಾಲದಲ್ಲಿಯೇ ಖಿನ್ನತೆಯನ್ನು ಗುರುತಿಸಿ ಅದರ ಲಕ್ಷಣಗಳ ಬಗ್ಗೆ ಸರಿಯಾಗಿ ಬರೆದಿದ್ದಾರೆ. ಒಂದೊಂದು ಕತೆಯೂ ಒಂದೊಂದು ಜಗತ್ತು. + + + +ಲಾರ್ಡ್ ಲೇಟನ್ನಿನ ಹೇಲನ್, ಎಲೆಕ್ಟ್ರಾ, ಆಂಟಿಗೊನೆ ಎಂಬ ಇಂಗ್ಲೀಷ್ ನಾಟಕಗಳ ಪಾತ್ರಗಳು. ಮಾರ್ಕ್ಸ್, ರೂಸೋ, ಬ್ರಿಡ್ಜಸ್, ರಸೆಲ್, ಗಾಂಧಿ, ಪ್ಲೆಟೋ ಎಂಬೆಲ್ಲ ವ್ಯಕ್ತಿತ್ವಗಳ ಉಲ್ಲೇಖ. ಭಿನ್ನ ಕಥಾವಸ್ತು. ಸಶಕ್ತ ನಿರೂಪಣೆ. ಬಗೆ ಬಗೆಯ ರೂಪಕಗಳು. ಎಲ್ಲವೂ ರಾಜಲಕ್ಷ್ಮಿಯವರಿಗಿದ್ದ ಅನುಭವದ ಆಳವನ್ನು, ಸೂಕ್ಷ್ಮ ಒಳನೋಟವನ್ನು, ಓದಿನ ವಿಸ್ತಾರವನ್ನು ಸಾರಿ ಹೇಳುತ್ತವೆ. ಅವರೊಳಗೆ ಕತ್ತಲಿನಂತಹ ಮೌನವೊಂದಿದೆ. ಹೂ ದಳಗಳನ್ನು ನೋಡಿ ಕಣ್ಣುಗಳಲ್ಲಿ ಚಂದ್ರಬಿಂಬ ಮೂಡುತ್ತದೆ. ಅವರ ಬೆರಗನ್ನು ಮತ್ತೊಮ್ಮೆ ನಮ್ಮೊಂದಿಗೆ ಹಂಚಿಕೊಳ್ಳುವಂತಾಗಲಿ. ಮತ್ತೆ ಬರೆಯಬೇಕು ಎಂಬ ಆಸೆಯೊಂದು ಅವರೊಳಗೆ ಮೊಳೆಯಲಿ ಎಂಬುದಷ್ಟೇ ಸಾಹಿತ್ಯದ ವಿದ್ಯಾರ್ಥಿಯಾಗಿ ನನ್ನ ಆಶಯ. + +ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ. \ No newline at end of file diff --git a/Kenda Sampige/article_117.txt b/Kenda Sampige/article_117.txt new file mode 100644 index 0000000000000000000000000000000000000000..33ba2b06df221131769acceb4de4a94cdc96eb28 --- /dev/null +++ b/Kenda Sampige/article_117.txt @@ -0,0 +1,21 @@ +ಮತ್ತೆ ಮತ್ತೆ ಕತ್ತ್ಹೊರಳಿಸಿಬೀರುತಿಹಳು ಹೂನಗೆಯಸೂಜಿ ಮೊಗದ ಸುಂದರಿಊಟದ ಪಂಕ್ತಿಯಕಡೆಯ ಸಾಲಿನಲಿ + +(ಚಾಂದಿನಿ ಖಲೀದ್‌) + +ಓದುವ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುವ ಸರಳವಾದ ಚಿತ್ರವತ್ತಾದ ಪಂಕ್ತಿ ಇದು. ಇಲ್ಲಿ ‘ಮತ್ತೆ ಮತ್ತೆ ಕತ್ತು ಹೊರಳಿಸುವ’, ‘ಹೂನಗೆಯ ಬೀರುವ’, ‘ಊಟದ ಪಂಕ್ತಿ’ ಮತ್ತು ‘ಕಡೆಯ ಸಾಲು’ ಈ ನಾಲ್ಕೂ ಸಾಲುಗಳನ್ನು ಬಿಡಿ ಬಿಡಿಯಾಗಿ ನೋಡಿದಾಗ ಇಲ್ಲದ ಧ್ವನಿಯೊಂದು, ಅವೆಲ್ಲವನ್ನು ಒಟ್ಟಿಗೇ ಓದಿದಾಗ ಉಂಟಾಗುತ್ತದೆ. ಇದು ಯಾವುದೇ ಕಾವ್ಯದ ಮುಖ್ಯ ಮತ್ತು ಐಚ್ಛಿಕವಾದ ಲಕ್ಷಣಗಳಲ್ಲಿ ಒಂದು. ಇಂಥ ಲಕ್ಷಣಗಳನ್ನು ತಮ್ಮ ಈ ಮೊದಲ ಸಂಕಲನದ ಕೆಲವು ಕವನಗಳಲ್ಲಿ ಹೊಂದಿರುವ ಚಿತ್ರದುರ್ಗದ ಚಾಂದಿನಿ ಅವರನ್ನು ಕಾವ್ಯಲೋಕಕ್ಕೆ ಈ ಮೂಲಕ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನನ್ನ ಈ ಶುಭಾಶಯದ ಎರಡು ಮಾತುಗಳಿಗಾಗಿ ಹಸ್ತಪ್ರತಿ ಕೊಟ್ಟು ಐದಾರು ವರ್ಷಗಟ್ಟಲೆ ಪಿಟ್ಟೆನ್ನದೆ ಕಾದಿರುವ ಅವರ ತಾಳ್ಮೆ ದೊಡ್ಡದು. ಈ ಅವಧಿಯಲ್ಲಿ ಕೆಲವು ಕವಿತೆಗಳನ್ನು ತಿದ್ದಲು ಅವರು ಹಿಂಜರಿಯಲಿಲ್ಲ. ಈ ಚಡಪಡಿಕೆ ಕವಿಗೆ ಇರಲೇಬೇಕು. ಈ ನಿಷ್ಠೆಗಾಗಿ ಅವರನ್ನು ಅಭಿನಂದಿಸುತ್ತೇನೆ. + +ಕನ್ನಡದಲ್ಲಿ ಇಂದು ಕವಿತೆ ಮತ್ತು ಕಥೆಗಳನ್ನು ಬರೆಯುವವರಲ್ಲಿ ಶಿಕ್ಷಕರು, ಶಿಕ್ಷಕಿಯರು ಹೆಚ್ಚು ಹೆಚ್ಚು ಕಂಡು ಬರುತ್ತಿರುವುದು ತುಂಬಾ ಉತ್ಸಾಹದ ವಿಷಯವಾಗಿದೆ. ಏಕೆಂದರೆ ಇದು ಅವರ ಸಂವೇದನಾಶೀಲತೆಯನ್ನು, ಜೀವನ್ಮುಖಿ ನಿಲುಕುಗಳನ್ನು ವಿಸ್ತರಿಸಿ-ಅವರ ವಿದ್ಯಾರ್ಥಿಗಳನ್ನು ಸಹಜವಾಗಿ ಆಳವಾಗಿ ಪ್ರಭಾವಿಸಬಲ್ಲುದು. ಏಕೆಂದರೆ ಒಬ್ಬ ಶಿಕ್ಷಕಿ ಅಥವಾ ಶಿಕ್ಷಕನ ಮುಂದೆ ನಾಳಿನ ಸಮಾಜವೇ ಪುಟ್ಟ ಕಣ್ಣುಗಳನ್ನು ಅರಳಿಸಿಕೊಂಡು ಕೂತಿರುತ್ತದೆ. ಕವಿಹೃದಯ ಅಂದರೆ ಇನ್ನೇನೂ ಅಲ್ಲ- ಅದೊಂದು ಚಿಂತನಶೀಲ ಮಾನವೀಯ ಹೃದಯ. ಶಿಕ್ಷಕರಿಗೆ ಇರಬೇಕಾದದ್ದೂ ಅದೇ. ಸಮಾಜವನ್ನು ಒಂದು ಕೂಡು ಕುಟುಂಬವಾಗಿಯೇ ಗ್ರಹಿಸುವ, ಪ್ರಕೃತಿಯನ್ನು ಒಂದು ಆದರ್ಶ ಮಾದರಿಯೆಂದು ಆರಾಧಿಸುವ, ಉತ್ತರದ ಹಂಗಿರದ ಪ್ರಶ್ನೆಗಳನ್ನು ಕೇಳುವ, ನಿತ್ಯದ ಬಾಳುವೆಯ ಹೋರಾಟದಲ್ಲಿ ಪ್ರೀತಿಯ ಅಭಯದ ಕಾವಿಗಾಗಿ ಹಂಬಲಿಸುವ ಮನೋಭೂಮಿಕೆ ಇದು. + +ಚಾಂದಿನಿಯವರ ಈ ಕವಿತೆಗಳ ಮುಖ್ಯ ಧಾಟಿ ಬಿಗುಮಾನವಿಲ್ಲದ ನಿವೇದನೆಯದು, ಅವರ ಅನುಭವಜನ್ಯ ಕವಿತೆಗಳಾದ “ಕ್ಲಾಸ್ ರೂಂ”, “ಅವನಾರು”, “ನನ್ನ ಬಾಲ್ಯ”, “ಅಣ್ಣ ಬರಲಿಲ್ಲ”-ಗಳ ಜೀವಂತಿಕೆ ಅನುಭವ ಮೂಲದಿಂದಲೇ ಬರುತ್ತದೆ. ಮುಂದಿನ ಸಾಲಿನ ಮತ್ತು ಹಿಂದಿನ ಸಾಲಿನ ಖಾಲಿ ಬೆಂಚುಗಳ ಲಕ್ಷಣಗಳು “ಕ್ಲಾಸ್ ರೂಂ” ಕವಿತೆಯನ್ನು ರೂಪಿಸಿದ ರೀತಿ, ಬಾಲ್ಯದ ಅನುಭವಗಳು ಹೊಳೆಯಲ್ಲಿ ಹಿಡಿದು ಅಲ್ಲೇ ಸುಟ್ಟು ತಿಂದ ಏಡಿಯಷ್ಟೆ ತಾಜಾ ಆಗಿ ಬರುವ ರೀತಿ ಆಪ್ತವಾಗಿದೆ. “ಅಣ್ಣ ಬರಲಿಲ್ಲ” ಕವಿತೆಗೆ ತಂತಾನೆ ಬಂದಂತಿರುವ ಜನಪದೀಯ ಗುಣ ಅದರ ವಿಷಾದಕ್ಕೆ, ಆತ್ಮಮರುಕವನ್ನು ಮೀರುವ ಸ್ಪರ್ಶವನ್ನು ಕೊಟ್ಟಿದೆ. ಇದೆ ಜಾಡಿಗೆ ಸೇರುವ “ದೀಪಮಾಲೆ” ಎನ್ನುವ ಆರ್ತ ವಚನಗಳ ಗುಚ್ಛಕ್ಕೂ ಒಂದು ಪ್ರಾಮಾಣಿಕ ಭಕ್ತಿಯ ಕಂಪನ ಇದೆ. + +‘ಭಾವಗಳ ಮರಳಲ್ಲಿ ಕಟ್ಟಿದ ಗುಬ್ಬಚ್ಚಿ ಗೂಡ’ ನ್ನು ಸೆಳೆದೊಯ್ಯುವ ಅಲೆಗಳ ಭಯವನ್ನು ಮೀರಲೆಂದೆ ಕವಿ ‘ಬಲಗಾಲಿಟ್ಟು ಬಾರೆ ನೀಲ’-ಎಂದು ಗಗನದ ನೀಲಿಯನ್ನು ಅಂತರಂಗಕ್ಕೆ ಆಹ್ವಾನಿಸುತ್ತಾರೆ. “ಭೇದಭಾವಗಳ ಅಗ್ನಿ ಕಂದಕ”-ವನ್ನು ದಾಟಲೆಂದೇ ‘ನೆಲೆಸು ಮನದಲಿ ಪ್ರೀತಿಯಾಗಿ ನೀ ದೇವಾ’ ಎಂದು “ಅನಂತ ಮಾಯೆ”ಯನ್ನು ಪ್ರಾರ್ಥಿಸುತ್ತಾರೆ. ಈ ಕವಿತೆಗಳ ‘ಉದ್ವಿಗ್ನ ಮನಸು’, ‘ಸೌಗಂಧಿಯ ಕಂಪಿ’ಗಾಗಿ ಹಂಬಲಿಸುತ್ತದೆ. ‘ಮನ್ವಂತರ’, ‘ಭೇದ’-ಕವಿತೆಗಳು ಸಮನ್ವಯದ ಸಹಬಾಳ್ವೆಗಾಗಿ ಮಿಡಿಯುತ್ತವೆ. + +(ಜಯಂತ ಕಾಯ್ಕಿಣಿ) + +ಈ ಸಂಕಲನದ ಇನ್ನು ಕೆಲವು ಕವಿತೆಗಳಲ್ಲಿ ಜೀವನ ಪ್ರೀತಿಯ ವಿಸ್ತರಣೆಯೇ ಆಗಿರುವ ಪ್ರೇಮ ಸಖ್ಯದ ರಮ್ಯ ಪ್ರಲಾಪ ಇದೆ. “ಕಾದಿರುವೆ ನಿನಗಾಗಿ ಓ ಮಾಧವ”, “ಹೊಸ ಅಧ್ಯಾಯ”, “ಮರೆಯಾದೆ ಎಲ್ಲಿ”, “ತಲ್ಲಣ”, “ರಾಧೆಯ ನಿರೀಕ್ಷೆ”-ಈ ಕವಿತೆಗಳಲ್ಲಿ ಹೊಮ್ಮುವ ಪ್ರೀತಿಗಾಗಿನ ಹಂಬಲ, ದೈನಿಕದಿಂದ ಎತ್ತುವ ದೈವಿಕ ಸೆಳೆತದ ಹಂಬಲವೇ ಆಗಿದೆ ಹೊರತು ದೈಹಿಕ ದಾಹವಾಗಿಲ್ಲ. ಅದಕ್ಕೇ ಇಲ್ಲಿ “ನೆನಹುಗಳ ಬೆರಳು ಹಿಡಿದು”-ನಡೆವ ಯತ್ನವಿದೆ. ನೆನಪುಗಳು ಒಂದು ಕಡೆ ಚಿಟ್ಟೆಗಳಾದರೆ, ಇನ್ನೊಂದು ಕಡೆ ಮಿಂಚು ಹುಳುಗಳಾಗುತ್ತವೆ ‘ಒದ್ದೆ ಭಾವಗಳಲ್ಲಿ ಮುದ್ದೆಯಾಗಿರುವ ಮನಸ್ಸಿಗೆ’-“ಬನ ಬನದಾಗಿ ಆಡಿ, ಸದ್ದಿಲ್ಲದೆ ಮುದ್ದು ಮಾಡಿ ಹೂಧೂಳಿಯಲಿ ಮಿಂದ ಪಾತರಗಿತ್ತಿ”-ಯ ಕನಸಾಗುತ್ತದೆ. ‘ಹೂಧೂಳಿ’ ಪದ ಎಷ್ಟು ಚೆನ್ನಾಗಿದೆ! ಇದು ಚಾಂದಿನಿ ಅವರ ‘ಹೂಧೂಳಿ ಮುಹೂರ್ತ’ವೇ ಸರಿ. + + + +ಇಂಥs ತನ್ಮಯಗೊಳಿಸುವ ಬದುಕಿನ ನಡುವೆಯೇ ಹಠಾತ್ತಾನೆ ಎರಗುವ ಸಾವಿನ ಕುರಿತ ಜಿಜ್ಞಾಸೆ ಚಾಂದಿನಿಯವರ “ಮರೀಚಿಕೆ”, “ಅಗಲುವ ಮುನ್ನ”, “ಅಂತಿಮ ಯಾತ್ರೆ” ಮತ್ತು “ಪಯಣ” ಈ ಕವಿತೆಗಳಲ್ಲಿ ಇದೆ. ಸಾವಿನ ಅನಿವಾರ್ಯತೆಯನ್ನು ಮನಗಾಣುತ್ತಲೇ ಬದುಕಿನ ತೀವ್ರತೆಯನ್ನು ಹೆಚ್ಚಿಸುವ ತುಡಿತ ಇಲ್ಲಿದೆ. ರಾಜಕೀಯ ಶಕ್ತಿಗಳು ತಮ್ಮ ಐಹಿಕ ಸ್ವಾರ್ಥಕ್ಕಾಗಿ ಬಹುಮುಖೀ ಸಮಾಜದ ಮಮತೆಯ ನಂಟುಗಳಲ್ಲಿ ವೈಷಮ್ಯದ ವಿಷವನ್ನು ಪಸರಿಸುತ್ತಿರುವ ಇಂದಿನ ಪರೀಕ್ಷಾ ಸಮಯದಲ್ಲಿ, ಶಿಕ್ಷಕರ ಮೇಲಿನ ಜವಾಬ್ದಾರಿ ತುಂಬ ಮಹತ್ವದ್ದಾಗಿದೆ. ಸಮಾಜಶೀಲ ಶಿಕ್ಷಕಿಯಾಗಿರುವ ಚಾಂದಿನಿ ಅವರ ಸಂವೇದನೆ ಅವರ ಕಾವ್ಯಯಾನದಿಂದ ವಿಶಾಲವಾಗಲಿ. ಈ ಯಾನದಲ್ಲಿ ಕನ್ನಡದ ವಿಶಿಷ್ಟ ಕವಿಗಳನ್ನು ಅವರು ಓದಬೇಕು. ತಕ್ಕ ಓದು ಮತ್ತು ತಹತಹಗಳು ಚಾಂದಿನಿ ಅವರ ಮುಂದಿನ ಬರವಣಿಗೆಗೆ ಹೆಚ್ಚಿನ ಕಸುವನ್ನೂ ಹಸಿವನ್ನೂ ಕೊಡಲಿ ಎಂದು ಅಕ್ಕರೆಯಿಂದ ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_118.txt b/Kenda Sampige/article_118.txt new file mode 100644 index 0000000000000000000000000000000000000000..daafe58946cfa2a4940d4d6d0f1b4ad1459db27a --- /dev/null +++ b/Kenda Sampige/article_118.txt @@ -0,0 +1,31 @@ +ಬರವಣಿಗೆಯಲ್ಲಿ ನನಗಿರುವ ಆಸಕ್ತಿಯನ್ನು ಬಲ್ಲವರು ಮತ್ತು ನನ್ನ ವಿದೇಶ ಪ್ರವಾಸಗಳ ಪರಿಚಯವಿರುವವರು ಆಗಾಗ್ಗೆ ಒಂದು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ನೀವೇಕೆ ಪ್ರವಾಸ ಕಥನವನ್ನು ಮತ್ತೆ ಬರೆದಿಲ್ಲವೆಂದು? 1995ರಲ್ಲಿ ಮಾನಸ ಸರೋವರಕ್ಕೆ ಪ್ರವಾಸ ಹೋಗಿ 1998ರಲ್ಲಿ ಪ್ರಕಟಿಸಿದ, ಸದ್ದು! ದೇವರು ಸ್ನಾನ ಮಾಡುತ್ತಿದ್ದಾರೆ, ಪ್ರವಾಸ ಕಥನವು ಜನಪ್ರಿಯವಾಗಿರುವುದು ಕೂಡ ಮೇಲಿನ ಪ್ರಶ್ನೆ ಕೇಳುವವರ ಮನಸ್ಸಿನಲ್ಲಿ ಇರುವುದು ನನಗೆ ಗೊತ್ತಿದೆ. 1995ರ ನಂತರವೂ ನಾನು ದೇಶದೊಳಗೆ ಮತ್ತು ಹೊರಗಡೆ ಸಾಕಷ್ಟು ಪ್ರವಾಸ ಮಾಡಿದ್ದೇನೆ. ಆದರೂ ನನಗೆ ಪ್ರವಾಸ ಕಥನವನ್ನು ಬರೆಯಬೇಕೆನಿಸಲಿಲ್ಲ. ಈಗ ಬರೆಯಬೇಕೆನಿಸಿದರೂ ಬರೆಯಬೇಕಾದರೆ ಈ ಕಾಲದ ಪ್ರವಾಸ ಕಥನದ ಸ್ವರೂಪ ಬೇರೆಯದೇ ರೀತಿಯದು ಎನಿಸಿದೆ. ಈ ಹೊಸ ಸ್ವರೂಪದ ಹುಡುಕಾಟ ಕೂಡ ಇಲ್ಲಿನ ಬರವಣಿಗೆಯ ಉದ್ದೇಶಗಳಲ್ಲೊಂದು. + +(ಕೆ. ಸತ್ಯನಾರಾಯಣ) + +ಪ್ರವಾಸದ ಸಮಯದಲ್ಲಿ ನಾನು ಯಾವ ರೀತಿಯ ಬರವಣಿಗೆಯನ್ನೂ ಮಾಡುವುದಿಲ್ಲ. ಟಿಪ್ಪಣಿಗಳನ್ನು ಕೂಡ ಮಾಡಿಕೊಳ್ಳುವುದಿಲ್ಲ. ಗಮನ ನೋಡುವುದರ ಕಡೆಗಿರಬೇಕು, ಬರವಣಿಗೆಯ ಕಡೆ ಹೋಗಬಾರದು ಎನ್ನುವ ನನ್ನ ನಂಬಿಕೆ ಕೂಡ ಇದಕ್ಕೆ ಕಾರಣ. ಅದೂ ಅಲ್ಲದೆ ಪ್ರವಾಸ ಹೋಗುವ ದೇಶಗಳ, ನಗರಗಳ ಬದುಕು ನಮ್ಮ ಬರವಣಿಗೆಗೇನು ಕಾದುಕೊಂಡು ಕೂತಿರುವುದಿಲ್ಲ. ಪ್ರವಾಸಿಗಳದ್ದು ಯಾವತ್ತೂ ಮೇಲುಮೇಲಿನ ಅನುಭವ. ಒಂದು ದೇಶದ, ನಗರದ ಬದುಕಿನ ಬಗ್ಗೆ ತಿಳಿಯಬೇಕಾದರೆ, ಕೆಲ ವರ್ಷಗಳಾದರೂ ಅಲ್ಲಿ ವಾಸ ಮಾಡಬೇಕು. ದಿನನಿತ್ಯದ ಜೀವನ, ಸಮಸ್ಯೆಗಳೊಡನೆ ಬೆರೆಯಬೇಕು. ನಾನಾ ರೀತಿಯ ಜನರನ್ನು ಭೇಟಿ ಮಾಡಬೇಕು. ಇದೆಲ್ಲ ಎಲ್ಲ ಸಂದರ್ಭದಲ್ಲೂ ಸಾಧ್ಯವಾಗುವುದಿಲ್ಲ. ಯಾವುದೇ ಗ್ರಾಮವಾಗಲೀ ನಗರವಾಗಲೀ ಪೇಕ್ಷಣೀಯ ಸ್ಥಳವಾಗಿ ಮಾತ್ರ ಅಸ್ತಿತ್ವದಲ್ಲಿರುವುದಿಲ್ಲವಷ್ಟೇ! ಅತಿಥಿಗಳಾಗಿ ನಾವು ನೋಡುತ್ತೇವೆ, ಸಂತೋಷ, ತಿಳುವಳಿಕೆ ಪಡೆಯುತ್ತೇವೆ. ಅಷ್ಟು ಸಾಕು. + +ಆದರೂ ಕೆಲವು ಅನುಭವ, ನೆನಪು, ಒಡನಾಟಗಳು ಮನಸ್ಸಿನಲ್ಲಿ ಉಳಿಯುತ್ತವೆ, ಊರುತ್ತವೆ. ಇವುಗಳಲ್ಲಿ ಕೆಲವು ಬರವಣಿಗೆಯಲ್ಲೂ ಸೇರಿಕೊಳ್ಳಬಹುದು. 2001ರಲ್ಲಿ ಥಾರ್‌ ಮರುಭೂಮಿಯ ಪ್ರವಾಸಕ್ಕೆ ಹೋದದ್ದು ಅಂತಹ ಒಂದು ಅನುಭವ. ಕೆಲವು ಮುಖ್ಯ ದೃಶ್ಯಗಳು, ಅಲ್ಲಿ ಕಂಡ ಕೆಲವರ ಮನೋಭೂಮಿಕೆ, “ಕಾಲಜಿಂಕೆ” ಕಾದಂಬರಿಯಲ್ಲಿ, “ಸನ್ನಿಧಾನ” ಕಾದಂಬರಿಯಲ್ಲಿ ಸೇರಿಕೊಂಡು ಬರವಣಿಗೆಯ ಧ್ವನಿಗೆ, ಬಹುಮುಖತೆಗೆ ಕಾರಣವಾಯಿತು. ಅಮೆರಿಕ ಪ್ರವಾಸದ, ವಾಸದ ಅನುಭವ “ಹೀಗಿಲ್ಲಿ ಅಮೆರಿಕ” ಮತ್ತು “ಅಮೆರಿಕನ್‌ ಮನೆ” ನೀಳ್ಗತೆಗಳ ಬರವಣಿಗೆಯಾಯಿತು. ಎಲ್ಲ ಸಂದರ್ಭಗಳು, ಅನುಭವಗಳ ವಿಷಯದಲ್ಲೂ ಹೀಗಾಗುವುದಿಲ್ಲ. ಹೀಗೆ ಆಗಬೇಕೆಂಬ ಹಠವೂ ನನಗಿಲ್ಲ. + +ಅಲ್ಲದೆ ನಾನು ಪ್ರವಾಸವನ್ನು ಸಾಮಾನ್ಯ ನಾಗರಿಕನ ನೆಲೆಯಲ್ಲಿ ಅನುಭವಿಸಲು ಇಷ್ಟಪಡುತ್ತೇನೆ. ಕನ್ನಡ ಲೇಖಕನೆಂಬ ದೃಷ್ಟಿಕೋನದಿಂದ ನಾನು ನೋಡುವುದಿಲ್ಲ. ಹೋದ ಕಡೆಯೆಲ್ಲ ನಾನು ಲೇಖಕನೆಂದು ಹೇಳಿಕೊಳ್ಳುವುದು, ಸ್ಥಳೀಯ ಸಂಘ-ಸಂಸ್ಥೆಗಳನ್ನು ಸಂಪರ್ಕಿಸುವುದು ನನ್ನ ಸ್ವಭಾವಕ್ಕೆ ಒಗ್ಗದ್ದು. ಅದೂ ಅಲ್ಲದೆ ಹಾಗೆಲ್ಲ ಸಂಪರ್ಕ ಸಾಧಿಸಿ ಸಂಬಂಧ ಸ್ಥಾಪಿಸಿಕೊಳ್ಳುವಷ್ಟು ಜನಪ್ರಿಯ ಅಥವಾ ಮಹತ್ವದ ಬರಹಗಾರನೂ ನಾನಲ್ಲ. ಇನ್ನೂ ಮುಖ್ಯವಾಗಿ ಸಾಮಾನ್ಯ, ಸಾಧಾರಣ ನಾಗರಿಕನ ನೆಲೆಯಲ್ಲಿ ಪ್ರವಾಸ ಮಾಡಿದಾಗಲೇ ಒಂದು ದೇಶ, ಒಂದು ಜನರೆಲ್ಲ ಚೆನ್ನಾಗಿ ಪರಿಚಯವಾಗುತ್ತದೆ ಎಂಬುದು ನನ್ನ ನಂಬಿಕೆ. ಒಂದು ಆಸಕ್ತಿ, ಒಂದು ಪ್ರವೃತ್ತಿಯವನು ನಾನು ಎಂದು ಗುರುತಿಸಿಕೊಂಡುಬಿಟ್ಟರೆ, ಹೋದ ಕಡೆಯೆಲ್ಲ ಜನ ನಮ್ಮನ್ನು ಹಾಗೇ ನೋಡುತ್ತಾರೆ. ನಾವೂ ಕೂಡ ಸ್ವಘೋಷಿತ ವ್ಯಕ್ತಿತ್ವದ ಆಯಾಮಗಳಿಗನುಗುಣವಾಗಿಯೇ ಅಲ್ಲಿಯವರನ್ನು ನೋಡುತ್ತೇವೆ. ಈ ಎರಡೂ ಅಪಾಯಗಳಿಂದ ತಪ್ಪಿಸಿಕೊಳ್ಳಲು ನನಗೆ ಇಷ್ಟ. + +ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ. ಗೂಗಲ್‌ ಸಾಮ್ರಾಜ್ಯದ ಈ ದಿನಗಳಲ್ಲಿ, ಎಲ್ಲ ದೇಶಗಳ, ಸಂಸ್ಕೃತಿಗಳ ಬಗ್ಗೆ ಈಗ ಯಾವುದೇ ಮಾಹಿತಿ, ದೃಶ್ಯವಾದರೂ ಸುಲಭವಾಗಿ ಸಿಗುತ್ತದೆ. ಬೇರೆ ದೇಶಗಳಲ್ಲಿ ನಡೆಯುವ ಕ್ರೀಡಾ ಪಂದ್ಯಗಳು, ರಾಜಕೀಯ-ಸಾಮಾಜಿಕ ಸಮ್ಮೇಳನಗಳು, ವೃತ್ತಿ ಸಂದರ್ಶನ, ಮೀಟಿಂಗುಗಳಲ್ಲಿ ನಾವೆಲ್ಲ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗವಹಿಸುತ್ತಲೇ ಇರುತ್ತೇವೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ಇಷ್ಟವಿದ್ದೋ, ಇಲ್ಲದೆಯೋ, ಯಾವುದೇ ದೇಶದ ಬದುಕು ಕೂಡ ಈಗ ಬೇರೆ ದೇಶಗಳ, ವಿಶೇಷವಾಗಿ ಮುಂದುವರೆದ ದೇಶಗಳ ಆರ್ಥಿಕ, ಸಾಮಾಜಿಕ, ಕೈಗಾರಿಕಾ ಬದುಕಿನೊಡನೆ ತಳುಕು ಹಾಕಿಕೊಂಡಿದೆ. ಹೀಗೆ ತಳುಕು ಹಾಕಿಕೊಂಡಿರುವುದರಿಂದ, ಲಾಭ-ನಷ್ಟ, ಎಷ್ಟು, ಹೇಗೆ ಎಂಬುದು ಬೇರೆ ಪ್ರಶ್ನೆ; ಆದರೆ ಅದು ಈ ಕಾಲದ ಅನಿವಾರ‍್ಯತೆ. ಇಲ್ಲ ಹಾಗೆಂದು ನಮ್ಮನ್ನು ನಂಬಿಸಲಾಗಿದೆ. + +ಇಂತಹ ಇನ್ನೂ ಎಷ್ಟೋ ಕಾರಣಗಳಿಗಾಗಿ ಈಗ ಹಿಂದಿನಂತೆ ಮಾಹಿತಿ ಪ್ರಧಾನ, ಅನುಭವ ಪ್ರಧಾನ ಪ್ರವಾಸ ಕಥನಗಳನ್ನು ಬರೆಯುವ ಅವಶ್ಯಕತೆಯಿಲ್ಲ. ಬರೆಯುವುದು ಸಾಧ್ಯವೂ ಇಲ್ಲ. ಇನ್ನೂ ಒಂದು ಮುಖ್ಯ ಕಾರಣವೂ ಇದೆ. ಸಿಯಾಟಲ್‌ನಿಂದ ಮುಕ್ಕಾಲು ಘಂಟೆ ಪ್ರಯಾಣದ ದೂರವಿರುವ ಜಲಪಾತವನ್ನು ನೋಡಲು ಕುಟುಂಬದವರೆಲ್ಲ ಹೋಗಿದ್ದೆವು. ನಗರದ ಹೊರವಲಯ, ಕಾಡು, ಗುಡ್ಡ, ಉದ್ಯಾನವನಗಳ ಮಧ್ಯೆ ಇರುವ ಜಲಪಾತವದು. ಒಂದು ಕಾಲಕ್ಕೆ ಅಲ್ಲಿ ಬುಡಕಟ್ಟಿನವರು ಮಾತ್ರ ವಾಸಿಸುತ್ತಿದ್ದರಂತೆ. ನೀರು ಇಲ್ಲಿ ಧುಮುಕುವ ರೀತಿಯಲ್ಲಿ ಒಂದು ವಿಶಿಷ್ಟತೆಯಿದೆ. ಹಿಂದೆ ಇದು ಜನವಸತಿಯಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಜಲಪಾತದ ಕೆಳಗಡೆ ನೀರಿನ ದಂಡೆಯ ಬಳಿ ಮನೆಗಳಿವೆ. ದೋಣಿ ಓಡಾಟಕ್ಕೆ ವ್ಯವಸ್ಥೆಯಿದೆ. ದೃಶ್ಯ ಸೌಂದರ್ಯದ ಶ್ರೀಮಂತಿಕೆಯನ್ನು ಕಣ್ಣು ತುಂಬಿಕೊಳ್ಳಲು ಕಷ್ಟ. ಯಾವ ಎತ್ತರ, ಕೋನದಿಂದ ನೋಡಿದರೂ ಪ್ರತಿ ಕ್ಷಣವೂ ಬೇರೆ ಬೇರೆಯಾಗಿ ಕಾಣುತ್ತದೆ. ನಾನು ಅಸಹಾಯಕನಾಗಿ ಎಲ್ಲ ಕಡೆಯೂ ಓಡಾಡುತ್ತಾ, ಹತ್ತಿ ಇಳಿಯುತ್ತಾ, ಮಗನಿಗೊಂದು ಪ್ರಶ್ನೆ ಕೇಳಿದೆ – ಇದನ್ನೆಲ್ಲಾ ಪದಗಳಲ್ಲಿ ಹಿಡಿಯುವಷ್ಟು ಶಕ್ತಿ ನನಗಿಲ್ಲ. ಕ್ಯಾಮೆರಾ, ವೀಡಿಯೋ ಮೂಲಕ ತೆಗೆದರೂ ಕೆಲ ಕ್ಷಣ, ಕೆಲ ದೃಶ್ಯಗಳು ಮಾತ್ರ ದಾಖಲಾಗುತ್ತವೆ. ಸುಮ್ಮನೆ ಬಂದು ಇಲ್ಲಿರುವುದೇ ನಿಜವಾದ ಪ್ರವಾಸ ಕಥನವಾಗುತ್ತದೆ, ಅಷ್ಟೇ! ನನ್ನ ಮಾತು ಕೇಳಿ ಮಗ ನಕ್ಕ. ನಿನಗೆ ಮಾತ್ರ ಹೀಗನ್ನಿಸುತ್ತಿರಬೇಕು ಅಷ್ಟೆ. ಸುತ್ತಮುತ್ತ ಸ್ವಲ್ಪ ಗಮನಿಸು. ಇಲ್ಲಿಗೆ ಬಂದಿರುವವರ ಗಮನವೆಲ್ಲ ಇದೆನ್ನೆಲ್ಲ ನೋಡಿ ಅನುಭವಿಸುವುದಕ್ಕಿಂತ ಹೆಚ್ಚಾಗಿ ಇದನ್ನು ನಾವು ನೋಡಿದೆವು ಎಂದು ಅಂದುಕೊಳ್ಳುವುದಕ್ಕೆ, ಹಾಗೆ ನೋಡಿದ್ದನ್ನು, ತಿಳಿದುಕೊಂಡದ್ದನ್ನು ಕುರಿತು ಇನ್ನೊಬ್ಬರನ್ನು ನಂಬಿಸಲು ಫೋಟೋ ತೆಗೆದು ಕಳಿಸುವುದಕ್ಕೇ ಸೀಮಿತವಾಗಿದೆ. ಈಗ ಜನರಿಗೆ ಅನುಭವಿಸುವ, ನೋಡುವ ಕುತೂಹಲವಿಲ್ಲ, ಶ್ರದ್ಧೆಯಿಲ್ಲ. ಸುಮ್ಮನೆ ಕ್ಲಿಕ್ಕಿಸುವುದು, ಕ್ಲಿಕ್ಕಿಸಿದ್ದನ್ನು ರವಾನಿಸುವುದು, ಇದರ ಕಡೆಯೇ ಗಮನ. ನೀನು ಸುಮ್ಮನೆ ಪ್ರವಾಸ ಕಥನವನ್ನು ಬರೆಯುವ ವ್ಯರ್ಥ ಪ್ರಯತ್ನ ಮಾಡಬೇಡ. ಅದು ಈ ಕಾಲದ ಪ್ರಕಾರವಲ್ಲ. ಅಲ್ಲದೆ ಇಲ್ಲಿಗೆ ಬರುವ ಪ್ರವಾಸಿಗರು ಕೂಡ ಬರುವ ಮುನ್ನ ಗೂಗಲ್‌ನಲ್ಲಿ, ಗ್ರಂಥಾಲಯಗಳಲ್ಲಿ, ಪುಸ್ತಕಗಳಲ್ಲಿ, ಯೂ-ಟ್ಯೂಬ್‌ನಲ್ಲಿ ಈ ಜಲಪಾತವನ್ನು ಕುರಿತು ಇರುವ ದೃಶ್ಯ ಮಾಹಿತಿಗಳನ್ನು ನೋಡಿಕೊಂಡೇ ಬಂದಿರುತ್ತಾರೆ. ಈಗಾಗಲೇ ನೋಡಿರುವುದನ್ನು ಇನ್ನೊಂದು ಸಲ ಖಚಿತಪಡಿಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ಇನ್ನು ಮುಂದೆ Primary Experienceಎನ್ನುವುದೇ ಕಡಿಮೆಯಾಗುತ್ತದೆ. ಅದರ ಬಗ್ಗೆ ಆಸಕ್ತಿ ಕೂಡ. ಹೀಗಾಗಿ ಪ್ರವಾಸ ಕಥನಗಳ ಅವಶ್ಯಕತೆಯಿಲ್ಲ. + +ನನ್ನ ಮಗನ ಮಾತು ಸರಿಯಾಗಿಯೇ ಇದೆ. ಆದರೆ ಅವನು ಇದನ್ನು ಹೇಳುತ್ತಿರುವುದು ಮೂರು ವರ್ಷಗಳಿಂದ ಅವನನ್ನು ನೋಡದೇ ಇದ್ದ ತಂದೆ-ತಾಯಿ ಈಗ ಅವನನ್ನು ನೋಡಲು ಪ್ರವಾಸ ಬಂದಿರುವ ಸಂದರ್ಭದಲ್ಲಿ. ಮಗಳ ಎರಡನೆ ಹೆರಿಗೆಗೆಂದು ಹೇಗ್‌ ಪಟ್ಟಣಕ್ಕೆ ಹೋಗಿ, ಅಲ್ಲಿ ಲಾಕ್‌ಡೌನ್‌ನಲ್ಲಿ ಸಿಕ್ಕಿ ಹಾಕಿಕೊಂಡು ಮೂರು ತಿಂಗಳು ಮನೆಯಲ್ಲೇ ಕಳೆದು, ಮತ್ತೆ ವಾಪಸ್‌ ಭಾರತಕ್ಕೆ ಹೊರಡುವ ದಿನ ಸುಂಟರಗಾಳಿಗೆ ಸಿಕ್ಕಿ ಹಾಕಿಕೊಂಡು ಪ್ರಯಾಣವೆಲ್ಲ ಅಸ್ತವ್ಯಸ್ತವಾಗಿ, ಬೆಂಗಳೂರಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ, ನಿಮ್ಮನ್ನು ನೋಡಿ ಮೂರು ವರ್ಷವಾಯಿತು, ಬನ್ನಿ ಬನ್ನಿ ಎಂದು ಆತುರಾತುರವಾಗಿ ಹೊರಡಿಸಿದ್ದು ಕೂಡ ಇದೇ ಮಗನೇ! ನಮ್ಮ ಕುಟುಂಬ ಮಾತ್ರವಲ್ಲ, ನಮಗೆ ಪರಿಚತವಿರುವ ಬಂಧುಮಿತ್ರರ ಬಹುತೇಕ ಕುಟುಂಬಗಳಲ್ಲೂ, ಕೋವಿಡ್‌ನಿಂದ ಸ್ವಲ್ಪ ಬಿಡುಗಡೆ ದೊರಕಿದ ನಂತರ ದೇಶದೊಳಗೆ, ದೇಶ ದೇಶಗಳ ನಡುವೆ ಪ್ರವಾಹದ ರೀತಿಯಲ್ಲಿ ಪ್ರವಾಸದ ನಿರಂತರ ಚಟುವಟಿಕೆ. ಮಕ್ಕಳನ್ನು ಮೂರು ವರ್ಷ ನೋಡದೇ ಇರುವುದು, ಹಾಗೆ ನೋಡದೆ ಇರುವುದೇ ಸಹಜವೆಂದು ಮನಸ್ಸು ಒಪ್ಪಿಕೊಂಡ ರೀತಿ, ಅದರಿಂದೆಲ್ಲ ಯಾವ ರೀತಿಯ ಮುಜುಗರ, ಹಿಂಸೆ ಕೂಡ ಮನಸ್ಸಿಗೆ ಆಗದಿರುವುದು, ಇದರಲೆಲ್ಲ ಏನೋ ತಪ್ಪಿದೆ, ನಮ್ಮ ಬದುಕು ಎಲ್ಲೋ ಆಯ ತಪ್ಪಿದೆ ಎಂಬ ಭಾವನೆ ಕೂಡ ಬಂತು. + +ಪ್ರವಾಸ ಹೋಗದಿದ್ದರೂ ಪ್ರವಾಸದ ಭಾವನೆಗೆ, ಅನುಭವಕ್ಕೆ ಮನಸ್ಸು ಹಪಹಪಿಸುತ್ತಿರುವ ರೀತಿಯನ್ನೇ ಕೆಲವರು ದಾಖಲಿಸಿದ್ದಾರೆ. ಕೋವಿಡ್‌ ಇನ್ನೂ ಪೂರ್ಣವಾಗಿ ಇಳಿಮುಖವಾಗದಿದ್ದಾಗಲೇ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ, ಯುದ್ಧ, ಹಿಂಸೆ ಕೂಡ ನಡೆಯುತ್ತಲೇ ಇತ್ತು. ಪ್ರವಾಸದ ಸ್ವರೂಪ ದಿಕ್ಕು ದೆಸೆ ಬದಲಾಯಿಸಿರುವುದರಿಂದ ಈಗ ಪ್ರವಾಸ ಬರವಣಿಗೆಯ ಸ್ವರೂಪ ಕೂಡ ಬದಲಾಗಬೇಕಾಗುವುದು. ಜಾಗತೀಕರಣದಿಂದ ಪ್ರಾರಂಭವಾಗಿ, ವಲಸೆ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಮೂಡಿರುವ ಬಿಕ್ಕಟ್ಟು, ಎಲ್ಲವನ್ನೂ ಗಣನೆಗೆ ತೆಗೆದುಕೊಂಡೇ ಹೊಸ ರೀತಿಯ ಪ್ರವಾಸ ಕಥನಗಳು ರೂಪುಗೊಳ್ಳಬಹುದೇನೋ ಎನಿಸಿತು. ಈ ಕುರಿತು ಕೂಡ ವಿಚಾರ ವಿನಿಮಯ ನಡೆಯುತ್ತಿರುವುದು ಸತ್ಯ. + + + +Best American Travel Writing ಬರವಣಿಗೆಯ ಸರಣಿ ಸಂಪಾದಕರಾದ ಜೇಸನ್‌ ವಿಲ್ಸನ್‌, ಈ ಕುರಿತು ಮಂಡಿಸಿರುವ ವಿಚಾರಗಳು ಕುತೂಹಲಕಾರಿಯಾಗಿವೆ. ಹೊಸ ರೀತಿಯ ಪ್ರವಾಸ ಬರವಣಿಗೆಯ ಸ್ವರೂಪ ಅರ್ಥಪೂರ್ಣವಾಗಿರಬೇಕಾದರೆ, ಅಂತಹ ಕಥನ ಅಂತರಂಗದ ಪಯಣ, ತಳಮಳವನ್ನು ಕುರಿತು ಕೂಡ ಇರಬೇಕು. ಇಂತಹ ತಳಮಳಕ್ಕೂ, ನಾವು ಬಾಹ್ಯ ಜಗತ್ತಿನಲ್ಲಿ ಮಾಡುವ ಪ್ರಯಾಣಕ್ಕೂ, ಪ್ರಯಾಣದ ವಿವರ, ಆಸೆ, ಆಕಾಂಕ್ಷೆಗಳಿಗೂ ಇರುವ ಸಂಬಂಧವನ್ನು, ಹೆಣಗಾಟವನ್ನು ಕೂಡ ಬರವಣಿಗೆ ಸೂಚಿಸಬೇಕು. ನಾವು ಹೋಗಲಿರುವ ದೇಶಗಳ, ಜಾಗಗಳ ಬಗ್ಗೆ ನಮಗಿದ್ದ ನಿರೀಕ್ಷೆ, ಕನಸುಗಳೇನು? ನಾವು ಅಲ್ಲಿಗೆ ತಲುಪಿದಾಗ ನಾವು ನಿರೀಕ್ಷಿಸಿದ್ದನ್ನು ಕಂಡೆವೇ? ಅದೆಲ್ಲ ಅಲ್ಲಿ ಯಾವತ್ತೂ ಹಿಂದೆ ಇರಲೇ ಇಲ್ಲವೇ? ಹಾಗಿದ್ದರೆ, ಅಲ್ಲಿಗೆ ತಲುಪಿದಾಗ ಕಾಣುವ ವಾಸ್ತವಕ್ಕೂ, ನಮ್ಮ ನಿರೀಕ್ಷೆಗೂ ಇರುವ, ಇರಬೇಕಾದ ಸಂಬಂಧ ಯಾವ ರೀತಿಯದು? ಇಷ್ಟೆಲ್ಲದರ ನಡುವೆ ಮನೆಯೊಳಗೆ, ದೇಶದೊಳಗೆ ಇರುವಾಗ ನಮ್ಮ ವ್ಯಕ್ತಿತ್ವದ ಸ್ವರೂಪ ಹೇಗಿರುತ್ತದೆ? ಪ್ರವಾಸದ ಗುರಿ ತಲುಪಿದಾಗ ಈ ವ್ಯಕ್ತಿತ್ವಕ್ಕೆ ಏನಾಗುತ್ತದೆ? ಎಂಬುದನ್ನು ಕೂಡ ಪರಿಶೀಲಿಸಬೇಕು. ಸದ್ಯಕ್ಕೆ ಇದು ಬರವಣಿಗೆಯಲ್ಲಿ ಆದರ್ಶದ ಸ್ವರೂಪವನ್ನು ಬಯಸಿದಂತೆ ಎಂದು ಮಾತ್ರ ಹೇಳಬಹುದು. + +ವಲಸಿಗರಿಗೂ, ಪ್ರವಾಸಿಗರಿಗೂ ಏನೂ ವ್ಯತ್ಯಾಸವಿಲ್ಲ. ಈವತ್ತಿನ ಪ್ರವಾಸಿಗಳು, ನಾಳಿನ ವಲಸಿಗರು. ಹಾಗಾಗಿ ವಲಸಿಗರು ಬರೆಯುವ ಕಥನಗಳಲ್ಲಿ ಯಾವಾಗಲೂ ಪ್ರವಾಸ ಕಥನದ ಅಂಶಗಳು ಇದ್ದೇ ಇರುತ್ತವೆ ಎಂಬ ಒಂದು ವಾದವೂ ಇದೆ. ಏಕೆಂದರೆ, ವಲಸಿಗರಿಗೆ ಶತಮಾನಗಳೇ ಕಳೆದರೂ ಬಿಟ್ಟು ಬಂದ ಮಾತೃಭೂಮಿಯ, ಬೇರುಗಳ ಕಲ್ಪನೆ, ಕನಸುಗಳು, ಹಂಬಲ ಬಾಧಿಸುತ್ತಲೇ ಇರುತ್ತದೆ. ಈ ಅಭಿಪ್ರಾಯಕ್ಕೆ ಉದಾಹರಣೆಯಾಗಿ ವಿ. ಎಸ್‌. ನೈಪಾಲ್‌ ಕತೆ, ಕಾದಂಬರಿಗಳ ಪ್ರಕಾರದ ಜೊತೆಗೇ ನಿರಂತರವಾಗಿ ಪ್ರವಾಸ ಕಥನಗಳನ್ನು ಬರೆಯುತ್ತಿದ್ದುದನ್ನು ಉಲ್ಲೇಖಿಸುತ್ತಾರೆ. ವಲಸಿಗರ ಬರವಣಿಗೆಗಳಲ್ಲಿ ಯಾವಾಗಲೂ Wish fulfilment ಹಂಬಲ ಇದ್ದೇ ಇರುತ್ತದೆ. ಈ ಹಂಬಲದಲ್ಲಿ ವಾಸ್ತವ ಪ್ರಜ್ಞೆ ಕೂಡ ಕಡಿಮೆಯಿರಬಹುದು. ಝುಂಪಾ ಲಹರಿಯ ಒಂದು ಕಾದಂಬರಿಯ ನಾಯಕಿ ಅಮೆರಿಕೆಗೆ ಬಂದು ಒಂದು ತಲೆಮಾರು ಕಳೆದು, ಗಂಡನ ಸಾವಿನ ನಂತರ ಮತ್ತೆ ಕಲ್ಕತ್ತೆಗೆ ಹೋಗಿ ಸಂಗೀತ ಕಲಿಯುತ್ತಾಳೆ. ಆದರೆ ನಿಜ ಜೀವನದಲ್ಲಿ ಝುಂಪಾ ಲಹರಿಯೇ ಅಮೆರಿಕದಿಂದ ಇಟಲಿಗೆ ವಲಸೆ ಹೋಗುತ್ತಾಳೆ. ಇಟಾಲಿಯನ್‌ ಭಾಷೆ ಕಲಿಯುತ್ತಾಳೆ. ಅನುವಾದಿಸುತ್ತಾಳೆ. ಮತ್ತೆ ಅಮೆರಿಕಕ್ಕೆ ವಾಪಸ್‌ ಬರುತ್ತಾಳೆ. ವಲಸೆ ಹೋಗಿ, ಇನ್ನೊಂದು ದೇಶದಲ್ಲಿ ಬೇರುಬಿಟ್ಟ ಮೇಲೂ ಬರಹಗಾರರು ತಾವು ಬಿಟ್ಟು ಬಂದ ದೇಶದ ಬದುಕು ಕೂಡ ನಿರಂತರವಾಗಿ ಹಸನಾಗಿರಬೇಕೆಂದು ಬಯಸುತ್ತಾರೆ. ಆಫ್ರಿಕಾದಿಂದ ವಲಸೆ ಬಂದ ಕಪ್ಪು ಲೇಖಕರಿಗೆ ಇದೊಂದು ದೊಡ್ಡ ಸಮಸ್ಯೆ. ಮಿತಿಮೀರಿದ ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಕಂಗಾಲಾಗಿರುವ ತಮ್ಮ ದೇಶಗಳ ಆಡಳಿತವನ್ನು ದ್ವೇಷಿಸುತ್ತಾರೆ. ತಮ್ಮ ಇತಿಹಾಸದ ಬಗ್ಗೆ ಗೌರವ, ವರ್ತಮಾನದ ಬಗ್ಗೆ ಅಸಮಾಧಾನ, ನಿರಂತರವಾಗಿ ಇವರನ್ನು ಕಾಡುತ್ತದೆ. ವಲಸಿಗರೇ ಬರೆಯಲಿ, ಪ್ರವಾಸಿಗರೇ ಬರೆಯಲ್ಲಿ, ಅವರ ಕಥನಗಳು ಈ ಅಂಶವನ್ನು ಒಳಗೊಂಡಿರಲೇಬೇಕು, ಎದುರಿಸಲೇಬೇಕು ಎಂದು ಮೀಮಾಂಸಕರು ಹೇಳುತ್ತಾರೆ. ಚಿನುವ ಅಚಿಬೆ ಮತ್ತು ಜೇಮ್ಸ್‌ ಬಾಲ್ಡ್‌ವಿನ್‌ ಇಂಥವರ ಉದಾಹರಣೆಗಳನ್ನು ನೀಡುತ್ತಾರೆ. + +ವಿವೇಕ್‌ ಬಾಲ್ಡ್‌ ಅವರ ಪ್ರಕಾರ ವಲಸಿಗರ, ಅನಿವಾಸಿಗಳ ಪ್ರತಿಯೊಂದು ತಲೆಮಾರು ಎದುರಿಸುವ ಸವಾಲುಗಳು, ಸಮಸ್ಯೆಗಳು ಭಿನ್ನವಾಗಿರುತ್ತವೆ. ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಹೋದಾಗಲೂ, ಹೊಸ ಹೊಸ ಆಯಾಮಗಳು ಸೇರಿಕೊಳ್ಳುತ್ತವೆ. ಈ ಸವಾಲು, ಸಮಸ್ಯೆ, ಆಯಾಮಗಳು ಪ್ರವಾಸಿಗರ ಬರವಣಿಗೆ, ಗ್ರಹಿಕೆಯ ಮೇಲೂ ಪರಿಣಾಮ ಬೀರುತ್ತವೆ. ಇನ್ನು ಮೇಲೆ ಯಾವುದೇ ಪ್ರವಾಸ ಕಥನವು ನೂರಕ್ಕೆ ನೂರರಷ್ಟು ಪ್ರವಾಸ ಕಥನವಾಗಿರುವುದಿಲ್ಲ. ಹತ್ತು ಹಲವು ರೀತಿಯ ಸಂಸ್ಕೃತಿ ಕಥನಗಳು ಅನಾಯಾಸವಾಗಿ ಬೆರೆತುಹೋಗಿರುತ್ತವೆ. ಈ ವಿದ್ಯಮಾನಕ್ಕೆ ಅವರು ಬಾಂಗ್ಲಾ ದೇಶದಿಂದ ಬಂದ ಮುಸಲ್ಮಾನ ಕುಟುಂಬಗಳ ಉದಾಹರಣೆ ನೀಡುತ್ತಾರೆ. 1917ರಲ್ಲಿ ಏಷ್ಯ ಖಂಡದಿಂದ ಬರುವ ವಲಸಿಗರ ಮೇಲೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಲಾಯಿತು. ಇದು 1965ರ ತನಕವೂ ಮುಂದುವರೆಯಿತು. 1965ರಲ್ಲಿ ನಿಯಮಗಳನ್ನು ಸಡಿಲಿಸಿದ್ದರಿಂದ ಭಾರತವೂ ಸೇರಿದಂತೆ ಬೇರೆ ಬೇರೆ ಏಷ್ಯ ದೇಶಗಳಿಂದ ವಲಸೆ ಪ್ರಾರಂಭವಾಯಿತು. ತಂತ್ರಜ್ಞಾನದ ಕ್ಷೇತ್ರದಲ್ಲಿ ಮೂಡಿಬಂದ ವ್ಯಾಪಕ ಸಂಖ್ಯೆಯ ಕಾರ್ಮಿಕರ ಬೇಡಿಕೆಗಳಿಗನುಗುಣವಾಗಿ ಈ ನಿಯಮಾವಳಿಗಳು ಮತ್ತಷ್ಟು ಮತ್ತಷ್ಟು ಸಡಿಲವಾಗಿ, ಈವತ್ತು ಅಮೆರಿಕದಲ್ಲಿ ನಲವತ್ತು ಲಕ್ಷಕ್ಕೂ ಮೀರಿದ ಅನಿವಾಸಿ ಭಾರತೀಯರಿದ್ದಾರೆ. ನಿರ್ಬಂಧಗಳು ಕಠಿಣವಾಗಿದ್ದಾಗ ಬಂದ ಎಲ್ಲ ವಲಸಿಗರ ಪ್ರವೇಶ, ವಾಸ, ಕೌಟುಂಬಿಕ ಜೀವನ ಯಾವುದೂ ಕಾನೂನುಬದ್ಧವಾಗಿರಲಿಲ್ಲ. ಇವರೆಲ್ಲ ಅಧಿಕೃತ ನಾಗರಿಕರಾಗಲಿಲ್ಲ. ಅಮೆರಿಕದ ನಾಗರಿಕರ ಸಮಾಜದ ಜೊತೆ ಬೆರೆಯದೆ ತಮ್ಮ ಹಾಗೆಯೇ ನುಸುಳಿಕೊಂಡ ಬಂದು ಸಮಾಜದ, ನಗರಗಳ ಅಂಚಿನಲ್ಲಿ ವಾಸಿಸುತ್ತಿದ್ದ ಬೇರೆ ಬೇರೆ ದೇಶಗಳ ವಲಸಿಗರ ಜೊತೆ ಬೆರೆತರು. ಆ ದೇಶಗಳ ವಲಸಿಗರ ಜೊತೆಯೇ ಅಂತರ್‌ ಧರ್ಮೀಯ ವಿವಾಹಗಳನ್ನು ಮಾಡಿಕೊಂಡರು. ಆದರೆ ಧಾರ್ಮಿಕವಾಗಿ ಗಂಡಸರಾಗಲೀ, ಹೆಂಗಸರಾಗಲೀ ಪರಿವರ್ತನೆ ಹೊಂದುತ್ತಿರಲಿಲ್ಲ. ಆದರೆ ಮಕ್ಕಳು, ತಾಯಂದಿರ ಧರ್ಮದ ಕಡೆಗೆ, ಅಂದರೆ ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತಗೊಂಡರು. ಆದರೆ ಎಲ್ಲರೂ ಒಟ್ಟಿಗೆ ಸೇರಿ, ಈದ್‌ನಂತಹ ಹಬ್ಬಗಳನ್ನು ಕೂಡ ಆಚರಿಸುತ್ತಿದ್ದರು. ಇವತ್ತು ಎಲ್ಲ ದೇಶಗಳೂ ವಲಸಿಗರ ವಿರುದ್ಧವಾಗಿವೆ. ಆದರೆ ವಲಸಿಗರು ಏಕಕಾಲಕ್ಕೆ ವಿಶ್ವ ಪ್ರಜೆಗಳೂ ಹೌದು, ತಾವು ಬಿಟ್ಟು ಬಂದ ದೇಶದ ಪ್ರಜೆಗಳೂ ಹೌದು, ಹಾಗೆಯೇ ಸ್ಥಳೀಯರೂ ಹೌದು. ಪ್ರವಾಸ ಬರುವವರಲ್ಲೂ ತಾತ್ಕಾಲಿಕವಾಗಿಯಾದರೂ ಈ ಎಲ್ಲ ಅಂಶಗಳು ಕೆಲಸ ಮಾಡುತ್ತಿರುತ್ತವೆ. ಹೊಸ ಕಾಲದ ಪ್ರವಾಸ ಕಥನಗಳು ಈ ಅಂಶಗಳನ್ನೆಲ್ಲ ಪರಿಗಣಿಸಬೇಕಾಗುತ್ತದೆ. + + + +ಈ ವಿಚಾರಗಳಿಗನುಗುಣವಾಗಿ ಪ್ರಸ್ತುತ ಬರವಣಿಗೆಯಿದೆ ಎಂದು ಹೇಳುವುದು ತಪ್ಪಾಗುತ್ತದೆ. ಈ ಪುಸ್ತಕ ಬರೆಯಬೇಕೆ, ಪ್ರಕಟಿಸಬೇಕೆ ಎಂಬುದರ ಬಗ್ಗೆ ಯೋಚಿಸುತ್ತಿದ್ದಾಗ ಮತ್ತು ಅಮೆರಿಕಕ್ಕೆ ಬರುವಾಗ, ಬಂದ ನಂತರವೂ ಈ ದೇಶದೊಳಗಡೆ ಬೇರೆ ಬೇರೆ ಕಡೆ ಓಡಾಡಿದಾಗ, ಜನರನ್ನು ಭೇಟಿ ಮಾಡುತ್ತಿದ್ದಾಗ, ಇದನ್ನೆಲ್ಲ ಬರೆದುಕೊಳ್ಳುವಾಗ, ಇಂತಹ ವಿಚಾರಗಳೆಲ್ಲ ನನ್ನನ್ನು ಬಾಧಿಸಿತು ಎಂದು ಮಾತ್ರ ಹೇಳಬಹುದು. ನಮ್ಮ ಕಾಲಕ್ಕೆ ಬೇಕಾದ ಪ್ರವಾಸ ಕಥನದ ಹೊಸ ಸ್ವರೂಪವು ಇಲ್ಲಿನ ಬರವಣಿಗೆಗೆ ದಕ್ಕಿದೆಯೇ ಎಂಬ ಪ್ರಶ್ನೆಗೆ ಓದುಗರು ಉತ್ತರ ಹೇಳಬೇಕು. ಹೊಸ ಸ್ವರೂಪದ ಅಗತ್ಯವಿದೆ ಎಂದು ಅವರಿಗೆ ಅನಿಸಿದರೂ, ನನ್ನ ಬರವಣಿಗೆ ಸಾರ್ಥಕವಾದಂತೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_119.txt b/Kenda Sampige/article_119.txt new file mode 100644 index 0000000000000000000000000000000000000000..f2ac573f4646cd0466a754f1c6730c5d44481961 --- /dev/null +++ b/Kenda Sampige/article_119.txt @@ -0,0 +1,33 @@ +ಮೂಲತಃ ಶಿವಮೊಗ್ಗದವರಾದ ಡಾ. ಪ್ರಸನ್ನ ಸಂತೆಕಡೂರು ಮೈಸೂರು ವಿ.ವಿ.ಯಿಂದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕಾದಲ್ಲಿ ನೆಲೆಸಿದ್ದರು. ಅಲ್ಲಿನ ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ಹೆಸರಾಂತ ರಾಮಲಿಂಗಸ್ವಾಮಿ ಫೆಲೋಶಿಪ್ಪನ್ನು ಪಡೆದು ಭಾರತಕ್ಕೆ ಹಿಂತಿರುಗಿ ಇದೀಗ ಮೈಸೂರಿನ ಜೆ.ಎಸ್.ಎಸ್.ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಲಿವರ್ ಕ್ಯಾನ್ಸರಿಗೆ ಸಂಬಂಧಿಸಿದಂತೆ ಇವರ ಹಲವಾರು ಸಂಶೋಧನೆಗಳಿಗಾಗಿ ಅಮೆರಿಕದ ಹಲವಾರು ಪ್ರಶಸ್ತಿಗಳು ದೊರಕಿವೆ. ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕ್ಯಾನ್ಸರ್ ಸಂಬಂಧಿತ ಇವರ ಅನೇಕ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಇತ್ತೀಚೆಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಿ.ವಿ.ರಾಮನ್ ಪ್ರಶಸ್ತಿ ದೊರಕಿದೆ. “ಮಾಯಾ ಪಂಜರ” ಮತ್ತು “ಎತ್ತಣ ಅಲ್ಲಮ ಎತ್ತಣ ರಮಣ” ದ ನಂತರದ ಕಿರು ಕಾದಂಬರಿ “ಸು” ಎಂಬತ್ತು ಪುಟಗಳ ಕಿರು ಕಾದಂಬರಿ. ಇದರ ನಂತರ “ಬಾಲಕ ಮತ್ತು ಕಾರಂತಜ್ಜ” ಮತ್ತೊಂದು ಕೃತಿಯೂ ಪ್ರಕಟವಾಗಿದೆ. + +(ಡಾ. ಪ್ರಸನ್ನ ಸಂತೇಕಡೂರು) + +“ಸು” ಕಾದಂಬರಿಯ ಕಥಾನಾಯಕ “ಸು” ಒಬ್ಬ ವಿಜ್ಞಾನಿ. ಪೂರ್ಣ ಹೆಸರು “ಝವ್ ಜೊಂಗ್ ಸು. ಚೀನಾದವನಾದ ಈತನ ಮೊದಲ ಪತ್ನಿ ಮಿಯಾನ್ ಗರ್ಭಕಂಠದ ಕ್ಯಾನ್ಸರಿನಿಂದ ತೀರಿಕೊಂಡಿದ್ದರೆ ಎರಡನೇ ಪತ್ನಿ ಟಿಬೆಟ್ಟಿನ ನೋರ್ಝೋಮ್‌ಳನ್ನು ದೊಡ್ಡ ಕ್ಯಾನ್ಸರ್ ಬಲಿ ತೆಗೆದುಕೊಂಡಿರುತ್ತದೆ. “ಸು” ನ್ಯೂಯಾರ್ಕ್‌ನ ಕೊಲಂಬಿಯಾ ವಿ.ವಿ.ಯಲ್ಲಿ ಕ್ಯಾನ್ಸರ್ ರೋಗಕ್ಕೆ ಔಷಧ ಕಂಡುಹಿಡಿಯುವ ಸಂಶೋಧನೆಯಲ್ಲಿ ನಿರತನಾಗಿ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಾ ಕೊನೆಗೆ ತಾನೇ ಕ್ಯಾನ್ಸರ್‌ಗೆ ಬಲಿಯಾಗುತ್ತಾನೆ. ಒಂದು ವಿಶೇಷ ಸಂಗತಿಯೆಂದರೆ ಈ “ಸು” ಜೊತೆ ಜೊತೆಗೆ ಕೆಲವು ವರ್ಷಗಳ ಕಾಲ ಸಂಶೋಧನೆ ಮಾಡುತ್ತಾ ಸು ಗೆ ಆತ್ಮೀಯ ಸ್ನೇಹಿತನೂ ಆಗಿಬಿಡುವ ಪ್ರಕಾಶ ಎಂಬ ಪಾತ್ರ ಬೇರಾರೂ ಅಲ್ಲ ನಮ್ಮ ಗೆಳೆಯ ಪ್ರಸನ್ನ ಅವರೇ. ಪ್ರಕಾಶನ ಪಾತ್ರದಲ್ಲಿ ಪ್ರಸನ್ನ ಹೇಳುತ್ತಾ ಹೋಗುವ ಕತೆ ಕ್ಯಾನ್ಸರ್ ಬಗ್ಗೆ, ಕ್ಯಾನ್ಸರ್ ಪೀಡಿತರ ಬಗ್ಗೆ ವಿದ್ಯಾರ್ಥಿಗಳಿಗೆ, ಸಂಶೋಧನಾಕಾರರಿಗೆ, ಜನಸಾಮಾನ್ಯರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಕಾದಂಬರಿ ಹೆಣೆದಿದ್ದರೂ… ಎಷ್ಟೋ ಕಡೆ ಕಾವ್ಯಾತ್ಮಕ, ಅಧ್ಯಾತ್ಮಿಕ, ತಾತ್ವಿಕ ಚಿಂತನೆಗಳು ಕಂಡು ಬಂದು ವಿಶಿಷ್ಟ ಮೆರುಗನ್ನು ನೀಡಿವೆ. ಬರಹಗಾರರ ಸೃಜನಶೀಲ ಪ್ರತಿಭೆ ಇಲ್ಲಿ ಕ್ಯಾನ್ಸರಿನಂತಹ ಸಮಸ್ಯೆಯನ್ನು ಕೊಂಚ ಹಗುರಾಗಿಸುತ್ತಲೇ ಆಳದಲ್ಲಿ ಅದರ ಗಂಭೀರತೆಯನ್ನು ಅರ್ಥಮಾಡಿಸುತ್ತಾ ಹೋಗುತ್ತಾರೆ. + +ಈ ಕಾದಂಬರಿ ಓದುವಲ್ಲಿ ಮುಖ್ಯವಾಗಿ ನನಗೆ ಕೆಲವು ಸಂಗತಿಗಳು ಮನ ಸೆಳೆದವು. “ಸು” ತನ್ನ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತನಾಗಿದ್ದ ಹೊತ್ತಿನಲ್ಲಿ ಪೆಟ್ರಿ ತಟ್ಟೆಯೊಳಗಿರುವ ಕ್ಯಾನ್ಸರ್ ಜೀವಕೋಶಗಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸುವಾಗ ಆ ಜೀವಕೋಶಗಳು ಒಂದು ಸುಂದರ ಕರಿಯ ಮಹಿಳೆಯಾಗಿ ರೂಪಾಂತರಗೊಂಡು ಹೊರಗೆ ಬಂದು ಅಡುಗೆಮನೆ ಕಡೆ ಹೋಗುತ್ತಾ “ಸು” ನನ್ನು ಕೈಬೀಸಿ ಕರೆದ ದೃಶ್ಯ ಕಂಡದ್ದಾಗಿ ಸು ತನ್ನ ಗೆಳೆಯ ಪ್ರಕಾಶ ಬಂದ ಮೇಲೆ ಹೇಳುತ್ತಾನೆ. ಹಾಗೆ ಹೇಳುತ್ತಾ ಕಂಪ್ಯೂಟರ್ ತೆರೆದು ಇಂಟರ್ನೆಟ್‌ನಲ್ಲಿ ಒಂದು ಚಿತ್ರ ತೋರಿಸಿ ಇವಳನ್ನೇ ನಾನು ಕಂಡದ್ದು ಎನ್ನುತ್ತಾನೆ. ಆ ಚಿತ್ರದ ಕೆಳಗೆ “ಹೆನ್ರಿಯೆಟ್ಟಾ ಲ್ಯಾಕ್ಸ್” ಎಂದು ಬರೆದಿರುತ್ತದೆ. ಈ ಹೆಸರನ್ನು “ಹೇಲಾ” ಎನ್ನುತ್ತಾರೆ. ಹೇಲಾ ಆಫ್ರೋ ಅಮೇರಿಕನ್ ಮಹಿಳೆ. ಆಕೆ ಕ್ಯಾನ್ಸರ್‌ನಿಂದ ಸತ್ತ ಮೇಲೆ ಅವಳ ಕ್ಯಾನ್ಸರ್ ಜೀವಕೋಶಗಳನ್ನು ತೆಗೆದು ಕ್ಯಾನ್ಸರ್ ರೋಗಕ್ಕೆ ಔಷಧಿ ಕಂಡು ಹಿಡಿಯಲು ಉಪಯೋಗಿಸುತ್ತಿರುವುದರಿಂದ ನೂರು ವರ್ಷಗಳಾದರೂ ಹೇಲಾ ಜೀವಂತವಾಗಿರುವ ಮೃತ್ಯುಂಜಯೆ. ಕಾದಂಬರಿಯ ಕೊನೆಯಲ್ಲಿ “ಸು” ಕ್ಯಾನ್ಸರ್ ಪೀಡಿತನಾಗಿ ಆಸ್ಪತ್ರೆಗೆ ಸೇರಿದಾಗ ಹೇಲಾ ತನ್ನ ಕೊನೆಯ ದಿನಗಳನ್ನು ಕಳೆದ ಆಸ್ಪತ್ರೆ ಅಷ್ಟೇ ಅಲ್ಲ ರೂಮು ಸಹಾ ಒಂದೇ ಆಗಿರುವುದು ಕಾಕತಾಳೀಯವೋ ಅಥವಾ ಹೇಲಾ ಕ್ಯಾನ್ಸರ್ ಜೀವಕೋಶಗಳೊಂದಿಗೆ ಪ್ರಯೋಗಗಳನ್ನು ನಡೆಸುತ್ತಾ ಅವಳೊಂದಿಗೆ ಒಂದು ಆತ್ಮಿಕ ಸಂಬಂಧವನ್ನು ಕಟ್ಟಿಕೊಂಡ ಕಾರಣವೋ ಅಥವಾ ಜನ್ಮಾಂತರಗಳ ನಂಟಿನ ಕಾರಣವೋ…. ಇದೊಂದು ವಿಷಾದನೀಯ ಸೋಜಿಗವೆನಿಸುತ್ತದೆ. + +ಸುʼನ ಎರಡನೇ ಹೆಂಡತಿ ಸುಂದರಿ ನೋರ್ಝೋಮ್ ತೀರಿಕೊಂಡ ನಂತರ ಟಿಬೆಟಿಯನ್ ಶವ ಸಂಸ್ಕಾರ ಬೆಚ್ಚಿಬೀಳಿಸುತ್ತದೆ. ಎತ್ತರದ ಸ್ಥಳಕ್ಕೆ ಕೊಂಡೊಯ್ದು ಅವಳ ಸಹೋದರ ಶವದ ಬೆನ್ನಿನ ಮೇಲೆ ಚಾಕುವಿನಿಂದ ಏನನ್ನೋ ಬರೆದು ಹೆಣದ ಕಾಲಿನ ತೊಡೆಯಿಂದ ಮಾಂಸವನ್ನು ಕಿತ್ತು ಅಲ್ಲಿಯೇ ಇದ್ದ ರಣಹದ್ದುಗಳಿಗೆ ಎಸೆದು ತಲೆಯನ್ನು ಸುತ್ತಿಗೆಯಿಂದ ಹೊಡೆದು ಹಣೆಯ ಮೇಲೆ ಏನೋ ಬರೆದು ದೇಹವನ್ನು ಸೀಳಿ ಇತ್ತ ಮನೆಗೆ ಎಲ್ಲರೂ ಹೊರಟ ನಂತರ ನರಿಗಳು ಹಾಗೂ ರಣಹದ್ದುಗಳು ಆ ಹೆಣದ ಮೇಲೆರಗಿ ಬರೀ ಮೂಳೆಗಳು ಉಳಿದ ವಿವರಣೆ ಕೇಳಿ ತಲೆತಿರುಗಿದ್ದಂತೂ ಈ ಆಚರಣೆ ಸತ್ಯ. “ಮಾನವ ಮೂಳೆ ಮಾಂಸದ ತಡಿಕೆ” ಎನ್ನುವ ನಮ್ಮ ಅಣ್ಣಾವ್ರ ಬಾಯಲ್ಲಿ ದಾಸರ ತಾತ್ವಿಕ ಹೊಳಹುಗಳೇ ಇವೆಯೆನಿಸಿತು. + +ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ. + +ರೋಗದಿಂದ ಮನಸ್ಸು ಜರ್ಜರಿತವಾದಾಗ ಭಯ ಆತಂಕಗಳು ಸಹಜವೇ… ಇಂತಹ ಪರಿಸ್ಥಿತಿಯಲ್ಲಿ “ಸು” ಅವನಿದ್ದ ಸ್ಥಳಕ್ಕೆ ಬಹಳ ಸಮೀಪದಲ್ಲಿದ್ದ ಭಾರತೀಯ ಮೂಲದ ಅಧ್ಯಾತ್ಮಿಕ ಆಶ್ರಮಕ್ಕೆ ಹೋಗಿ ಅಲ್ಲಿನ ಅಧ್ಯಾತ್ಮ ಸಾಧಕರ ಜೊತೆ ಒಡನಾಟ ಬೆಳೆಸಿಕೊಂಡು ಧ್ಯಾನ ಯೋಗ ಭಜನೆ ಮೊದಲಾವುಗಳಲ್ಲಿ ಭಾಗವಹಿಸುತ್ತಾ ಹೋದಂತೆ ಅವನಲ್ಲಿದ್ದ ಭಯಾತಂಕಗಳು ಕ್ರಮೇಣ ಕಡಿಮೆಯಾಗಿ ಮಾನಸಿಕವಾಗಿ ದೃಢಗೊಳ್ಳುತ್ತಾ ಹೋಗುತ್ತಾ “ತಾನು ಹುಯೆನ್ ತ್ಸಾಂಗ್ ಕಾಲದಲ್ಲಿ ಹುಟ್ಟಿದ್ದರೆ ಭಾರತ ಶ್ರೀಲಂಕಾಗಳಿಗೆ ಭೇಟಿ ಕೊಡಬಹುದಿತ್ತು” ಎನ್ನುವ ಆತ್ಮವಿಶ್ವಾಸದ ಮೂಲ ಅಧ್ಯಾತ್ಮವೇ ಆಗಿರುತ್ತದೆ ಎನಿಸುವುದು. + +ಹೀಗೆ ಧೈರ್ಯ ಮತ್ತು ನಿರ್ಭಯನಾದ ಸು ತನ್ನ ಲಿವರ್ ಕ್ಯಾನ್ಸರಿಗೆ ಕಾರಣವನ್ನೂ ಕಂಡುಹಿಡಿದು ಬಿಡುತ್ತಾನೆ. ಆತ ಸತ್ತ ನಂತರ ಸುʼನ ಆರೋಗ್ಯ ಸಹಾಯಕಿ ಅವನು ಬರೆದಿಟ್ಟ ಲಿವರ್ ಕ್ಯಾನ್ಸರ್‌ನ ಕಾರಣ ಕುರಿತ ವಿವರಗಳನ್ನು ಸುʼನ ಒಡನಾಡಿಯಾಗಿದ್ದ ಪ್ರಕಾಶನಿಗೆ ತಲುಪಿಸುತ್ತಾಳೆ. + + + +ಕಾದಂಬರಿಯ ಆರಂಭದಲ್ಲಿ ಪ್ರಕಾಶ “ಸು” ನನ್ನು ನೋಡಿದರೆ ಹುಯೆನ್ ತ್ಸಾಂಗ್ ನೆನಪಾಗುತ್ತಿತ್ತು ಎನ್ನುವುದು, ಕಾದಂಬರಿಯ ಅಂತ್ಯದಲ್ಲಿ ಸು ತಾನೇ ಹುಯೆನ್ ತ್ಸಾಂಗ್‌ನನ್ನು ನೆನಪಿಸಿಕೊಳ್ಳುವುದು ಒಂದು ಅಚ್ಚರಿ. ಆದರೆ ಸು ಕ್ಯಾನ್ಸರ್ ಸಂಬಂಧಿತ ಸಂಶೋಧನೆಗಳಲ್ಲಿ ಮಹಾನ್ ತಪಸ್ವಿ… ಸ್ವತಃ ತಾನೇ ರೋಗಪೀಡಿತನಾದರೂ ಅದರೊಂದಿಗೆ ಹೋರಾಡುತ್ತಲೇ ತನ್ನ ರೋಗದ ಕಾರಣ ಅರಿಯುವ ಸಂಶೋಧನೆಯ ಮಹಾಯಾತ್ರೆ ಕೈಗೊಂಡ ಹುಯೆನ್ ತ್ಸಾಂಗ್ ಎಂದೇ ಅನುಭವವಾಗುತ್ತದೆ. ಲಿವರ್ ಕ್ಯಾನ್ಸರಿಗೆ ಕಡ್ಲೆಕಾಯಿ ಹೆಚ್ಚಾಗಿ ತಿನ್ನುವುದೂ ಒಂದು ಕಾರಣ ಎಂಬ ಹೊಸ ಕಾರಣ “ಸು” ಕಂಡುಕೊಳ್ಳುತ್ತಾನೆ. ಇನ್ನೂ ಹೆಚ್ಚಿನ ವಿವರಗಳಿಗೆ ನೀವು “ಸು” ಕಾದಂಬರಿ ಓದಬೇಕು. + +ಕಾದಂಬರಿಯ ಆರಂಭದಲ್ಲಿ ಸುʼನ ಗೆಳೆಯ ಪ್ರಕಾಶ ಒಮ್ಮೆ ರಾತ್ರಿ ಕಿಟಕಿ ಹತ್ತಿರ ನಿಂತು ಹೊರಗೆ ನೋಡುವಾಗ ದೈತ್ಯಾಕಾರದ ಕೋಣದ ಮೇಲೆ ಕೂತ ದೈತ್ಯ ವ್ಯಕ್ತಿ ತನ್ನ ಕೈಲಿ ಪಾಶವನ್ನು ಹಿಡಿದು ಸುʼನನ್ನು ಓಡಿಸಿಕೊಂಡು ಬರುವುದು ಸು ಕೂಗುತ್ತಾ ತನ್ನನ್ನು ಕಾಪಾಡು ಅವನಿಂದ ಎಂದು ಬೇಡುವ ಆರ್ತನಾದ…,ಈ ಘಟನೆ ಕನಸು ಅಥವಾ ಭ್ರಮೆ ಎಂದೆಣಿಸಿದರೂ ನಂತರದ ದಿನಗಳಲ್ಲಿ ಕ್ಯಾನ್ಸರ್‌ಗೆ ಬಲಿಯಾಗುತ್ತಾ ಹೋಗಿ ಸು ತೀರಿಕೊಂಡಾಗ ಪ್ರಕಾಶ ಕಂಡದ್ದು ಕನಸಲ್ಲ ಬದಲಿಗೆ ಅದು ವಿಜ್ಞಾನದ ಭಾಷೆಯಲ್ಲಿ Intuition ಆಗಿರುತ್ತದೆ. ವಿಜ್ಞಾನಿಗಳು, ಋಷಿಗಳು ಇಬ್ಬರೂ ತಪಸ್ವಿಗಳೆ. ಕವಿಯೂ ಸಹಾ. ಇವರುಗಳು ಸದಾ ತಮ್ಮ ಅಂತರಂಗದೊಳ ಹೊಕ್ಕು ನಿರ್ದಿಷ್ಟ ವಿಷಯಗಳನ್ನು ಧ್ಯಾನಿಸುವಾಗ ಒಂದು ಹೊಸ ಮಾರ್ಗ ಕಾರಣ ಅಥವಾ ಹೊಳಹುಗಳನ್ನು ಕಂಡು ಹಿಡಿಯುವ ಮನಸ್ಸಿನ ಒಂದು ಅದ್ಭುತ ಶಕ್ತಿ. ಆರ್ಕಿಮಿಡೀಸ್ ಅಥವಾ ಗೌತಮ ಬುದ್ಧ ಇವರೆಲ್ಲಾ ಇದೇ ಮಾರ್ಗದಲ್ಲಿ ಜೀವನಕ್ಕೆ ಹೊಸ ಹೊಳಹುಗಳನ್ನು ಕೊಟ್ಟವರು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕವಿವರ್ಯರು ಕಂಡುಕೊಂಡದ್ದು ಸಹಾ ಇದೇ ಇಂಟ್ಯೂಷನ್‌ನಿಂದಲೇ ಎನ್ನಬಹುದೇನೋ. + +ಪ್ರಕಾಶ ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಓದುವಾಗ ಟಿಬೆಟ್ ವಿದ್ಯಾರ್ಥಿಗಳ ಸ್ನೇಹ ದೊರೆಯುತ್ತದೆ. ಮೈಸೂರಿಂದ ಕೆಲವೇ ಕಿ.ಮೀ. ಗಳ ದೂರದಲ್ಲಿರುವ ಬೈಲುಕುಪ್ಪೆ ಗ್ರಾಮ ಟಿಬೆಟಿಯನ್ ನಿರಾಶ್ರತರ ನೆಲ. ಇಲ್ಲಿ ಅಂಗಡಿ ಆಸ್ಪತ್ರೆ ಬ್ಯಾಂಕ್ ಶಾಲೆ ಕಾಲೇಜು ಹೊಲ ಗದ್ದೆ ಎಲ್ಲದರಲ್ಲೂ ಟಿಬೆಟಿಯನ್ ಜನರೇ ಕೆಲಸ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದಾರೆ. ಚೀನಾ ಟಿಬೆಟನ್ನು ಆಕ್ರಮಿಸಿಕೊಂಡಾಗ ಅಲ್ಲಿಂದ ಭಾರತಕ್ಕೆ ಬಂದ ನಿರಾಶ್ರಿತರಿಗೆ ಸಿಕ್ಕ ಭೂಮಿಯಲ್ಲಿ ಒಂದು ಸುಂದರ ಗ್ರಾಮ ನಿರ್ಮಿಸಿಕೊಂಡಿದ್ದು, ಬೈಲುಕುಪ್ಪೆಯ ಸುವರ್ಣ ದೇಗುಲ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಂತಹ ಟಿಬೆಟಿಯನ್ ಸ್ನೇಹಿತರ ಸ್ನೇಹದ ಕಾರಣ ಪ್ರಕಾಶ ಒಮ್ಮೆ ಬೈಲುಕುಪ್ಪೆಗೆ ಹೋಗಿ ಅವರ ಮನೆಯ ಆತಿಥ್ಯ ಸ್ವೀಕರಿಸುವಾಗ ಅವರ ಮನೆಯ ಇಬ್ಬರು ಬೆನ್ನು ಬಾಗಿದ ವಯಸ್ಸಾದ ಮುದುಕಿಯರು ವಾಕಿಂಗ್ ಹೋಗ್ತೇವೆ ಎಂದು ಹೇಳಿ ದಡದಡ ಓಡುವುದನ್ನು ಕಂಡು ಸ್ನೇಹಿತರಲ್ಲಿ ಪ್ರಶ್ನಿಸುತ್ತಾರೆ. ಆಗ ಆ ಟಿಬೆಟಿಯನ್ ಸ್ನೇಹಿತರು ಮುಂದಿನ ದಿನಗಳಲ್ಲಿ ಚೀನಾದ ಅತಿಕ್ರಮಣದಿಂದ ಟಿಬೆಟ್ ಸ್ವತಂತ್ರವಾದರೆ ತಮ್ಮ ದೇಶಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಆಶಾವಾದವಿರಿಸಿಕೊಂಡಿರುವ ಈ ಮುದುಕಿಯರು ಈಗಿನಿಂದಲೇ ಓಡಿ ಓಡಿ ತಮ್ಮ ಕಾಲುಗಳನ್ನು ಬಲಗೊಳ್ಳಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಷಯ ತಿಳಿದು ಪ್ರಕಾಶರೊಂದಿಗೆ ನಾನೂ ಅಚ್ಚರಿಗೊಂಡೆ. ಆ ಮುದುಕಿಯರ ಆತ್ಮವಿಶ್ವಾಸ ಸಂಕಲ್ಪಬಲ ಮತ್ತು ಸಕಾರಾತ್ಮಕ ಚಿಂತನೆಗೆ ಹ್ಯಾಟ್ಸಾಫ್ ಎಂದುಕೊಂಡೆ ಮನಸ್ಸಿನಲ್ಲೇ. + +ಪ್ರಕಾಶ ಟಿಬೆಟಿಯನ್ ಮಿತ್ರರನ್ನು ಕೇಳುತ್ತಾನೆ “ನಿಮ್ಮ ದೇಶ ಸ್ವತಂತ್ರವಾದ ನಂತರ ನಿಮ್ಮ ನಡೆ ಏನು?” ಎಂಬ ಪ್ರಶ್ನೆಗೆ ಅವರಿತ್ತ ಉತ್ತರ ತಾಯ್ನಾಡಿನಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ದೇಶವಾಸಿಯೂ ಆತ್ಮವಿಶ್ಲೇಷಣೆ ಮಾಡಿಕೊಳ್ಳಬೇಕೇನೋ ಎನಿಸಿತು. ತಾಯ್ನೆಲದ ಮಣ್ಣಿನ ಘಮ ಹೊತ್ತ ಉತ್ತರ ಹೀಗಿದೆ.”ಟಿಬೆಟ್ ನಮ್ಮ‌ ಮಾತೃಭೂಮಿ ನಿಜ, ಅದು ಸ್ವತಂತ್ರಗೊಳ್ಳಬೇಕೆನ್ನುವುದು ನಮ್ಮ ಆಶಯವೂ, ಗುರಿಯೂ ಹೌದು. ಭಾರತ ನಮಗೆ ಎರಡನೇ ಮಾತೃಭೂಮಿ ಈ ಭೂಮಿಗೆ ನಾವು ಯಾವತ್ತೂ ಚಿರ ಋಣಿಗಳಾಗಿರುತ್ತೇವೆ.” ಎಂದು ಸ್ವಲ್ಪ ಮಣ್ಣನ್ನು ತನ್ನ‌ ಕೈಯಲ್ಲಿ ಭೂಮಿಯಿಂದ ತೆಗೆದುಕೊಂಡು ಕೆಳಗೆ ಹಾಕಿದ. + +ಕೊನೆಗೂ ತಮ್ಮ ಪ್ರೀತಿ ಮತ್ತು ಬದುಕು ಈ‌ ಮಣ್ಣಿನ ಮೇಲೆಯೇ ಎಂಬಂತೆ ಅವನು ಕೊಟ್ಟ ಉತ್ತರದಿಂದ ಪ್ರಕಾಶನಿಗೆ ಟಿಬೆಟಿಯನ್ ಸ್ನೇಹಿತರೊಂದಿಗೆ ಮತ್ತಷ್ಟು ಆತ್ಮೀಯತೆ ಬೆಳೆಯುತ್ತದೆ. + + + +ಒಟ್ಟಿನಲ್ಲಿ ವಿಜ್ಞಾನ, ತತ್ವಜ್ಞಾನಗಳನ್ನು ರೂಪಕಗಳೊಂದಿಗೆ ಒಡಲಲ್ಲಿರಿಸಿಕೊಂಡೂ ಜನಸಾಮಾನ್ಯರೆಲ್ಲರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ, ಶೈಲಿಯಲ್ಲಿ ಪ್ರಸನ್ನ “ಸು” ಕಾದಂಬರಿ ಬರೆದಿದ್ದಾರೆ. + +ಮೂಲತಃ ಕನಕಪುರದವರಾಧ ಕೆ.ಎನ್.ಲಾವಣ್ಯ ಪ್ರಭಾ ಕವಯತ್ರಿ ಮತ್ತು ಯೂಟ್ಯೂಬರ್.  ಮೈಸೂರಿನ ವಿ.ವಿ.ಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದು ಗೃಹಿಣಿಯಾಗಿ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸ.  “ಹುಟ್ಟಲಿರುವ ನಾಳೆಗಾಗಿ”, “ಗೋಡೆಗಿಡ”, “ನದಿ ಧ್ಯಾನದಲ್ಲಿದೆ” (ಉತ್ತರ ಕರ್ನಾಟಕ ಲೇಖಕಿಯರ ಸಂಘದ ಡಾ.ಲತಾರಾಜಶೇಖರ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ) ಮತ್ತು “ಸ್ಪರ್ಶ ಶಿಲೆ” ಇವರ ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಕವಿತೆಗಳು, ಪ್ರಬಂಧಗಳು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆ ಸಂಗೀತ ಸಿನಿಮಾ ಅಡುಗೆ ಅಧ್ಯಾತ್ಮ ಇವರ ಮೆಚ್ಚಿನ‌ ಹವ್ಯಾಸಗಳು. \ No newline at end of file diff --git a/Kenda Sampige/article_12.txt b/Kenda Sampige/article_12.txt new file mode 100644 index 0000000000000000000000000000000000000000..74b850765d0de3efc0338036b95b7d766b647cce --- /dev/null +++ b/Kenda Sampige/article_12.txt @@ -0,0 +1,43 @@ +ಅಂದು “ದೂರದರ್ಶನ ವೀಕ್ಷಣೆ ಕಲಿಕೆಗೆ ಪೂರಕವೋ? ಮಾರಕವೋ? ಎಂಬ ವಿಷಯದ ಬಗ್ಗೆ ಡಿಬೆಟ್ ನಡೆಯುತ್ತಿತ್ತು. ಹೆಣ್ಣು ಮಕ್ಕಳು ‘ದೂರದರ್ಶನ ವೀಕ್ಷಣೆ ಕಲಿಕೆಗೆ ಮಾರಕ’ ಎಂದು ವಾದ ಮಂಡಿಸುತ್ತಿದ್ದರು. ಗಂಡು ಮಕ್ಕಳು ಇಲ್ಲ ಇಲ್ಲ ‘ದೂರದರ್ಶನ ಕಲಿಕೆಗೆ ಪೂರಕ’ ಎಂದು ವಾದಿಸುತ್ತಿದ್ದರು. ಈ ಮಕ್ಕಳ ವಾದ ಪ್ರತಿವಾದದ ಬಿಸಿ ಬೇಸಿಗೆ ಕಾಲದ ಬೇಗುದಿಯನ್ನು ಮತ್ತಷ್ಟು ಹೆಚ್ಚಿಸಿದ್ದು ತರಗತಿಯಲ್ಲಿ ಇವೆಲ್ಲವನ್ನು ವೀಕ್ಷಣೆ ಮಾಡುತ್ತಿದ್ದ ನನ್ನ ಅನುಭವಕ್ಕೆ ಬಾರದಿರಲಿಲ್ಲ. + +ಈ ದೂರದರ್ಶನ ವೀಕ್ಷಣೆ ಸರಿಯೋ ತಪ್ಪೋ ಎಂಬ ತೀರ್ಪಿಗಿಂತ ನನ್ನ ಮಕ್ಕಳು ವಿಷಯವನ್ನು ಎಷ್ಟು ಆಯಾಮಗಳಲ್ಲಿ ಚಿಂತಿಸುತ್ತಾರೆ ಎಂಬ ಅಚ್ಚರಿ ಮೂಡಿತು. ಆಗಾಗ ವಾದಗಳು ವಿವಾದಗಳಿಗೆ ತಿರುಗುತ್ತಿದ್ದವು. ಆಗೆಲ್ಲ ನಾನು ಮಕ್ಕಳಿಗೆ ವಿಷಯಾಂತರ ಆಗದಂತೆ, ವಸ್ತುವಿಗಿಂತ ವ್ಯಕ್ತಿಯನ್ನು ಟಾರ್ಗೆಟ್ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದೆ‌ನು. + +ಹುಡುಗಿಯರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವಾಗ ಆ ವಿಷಯ ನನ್ನ ಹೃದಯ ತಟ್ಟಿದರೆ ಚಪ್ಪಾಳೆ ಹಾಕಿ ಅಭಿನಂದಿಸುತ್ತಿದ್ದೆ. ಆಗ ಗಂಡು ಮಕ್ಕಳು “ಹೋಗಿ ಮಿಸ್, ನೀವು ಯಾವಾಗಲೂ ಹುಡುಗಿಯರ ಪರ ಎಂದು ಹುಸಿ ಮುನಿಸು ತೋರುತ್ತಿದ್ದರು. ಇಲ್ಲ ಕಣ್ರೋ ಮಕ್ಕಳಾ ನಾನು ನಿಮ್ಮಿಬ್ಬರ ಪರವು ಇರುವೆ ಎಂದು ಹೇಳುತ್ತಾ ಅದನ್ನು ಸಮರ್ಥಿಸಲು ಅವರು ಹೇಳಿದ ಪಾಯಿಂಟ್‌ಗಳಿಗೂ ಚಪ್ಪಾಳೆ ತಟ್ಟಿ ಬೆಂಬಲಿಸುವುದನ್ನು ಮರೆಯಲಿಲ್ಲ.ಅಂತಹ ವಿಚಾರಗಳು ಮಕ್ಕಳ ಮನಸ್ಸಿನಲ್ಲಿ ಉಳಿಯದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ. ಹಾಗೆ ನಾನು ಇವರನ್ನು ಪ್ರೋತ್ಸಾಹಿಸುತ್ತಾ ಡಿಬೆಟ್ ಮುಗಿಸಿದೆ. ಕೊನೆಗೆ ಮಕ್ಕಳು ಹೇಳಿದ ದೂರದರ್ಶನದ ಅನುಕೂಲಗಳು ಮತ್ತು ಅನಾನೂಕೂಲ ಎರಡನ್ನು ವಿಶ್ಲೇಷಿಸುತ್ತಾ ಪ್ರತಿಯೊಂದರಲ್ಲೂ ಒಳಿತು ಕೆಡುಕು ಎರಡು ಇರುತ್ತವೆ. ನಾವು ಅವುಗಳಲ್ಲಿ ಇರುವ ಧನಾತ್ಮಕ ಅಂಶಗಳನ್ನು ಬೆಂಬಲಿಸುತ್ತಾ, ಅವುಗಳನ್ನು ಪಾಲಿಸುತ್ತಾ ಹಾಡಬೇಕೆಂದು ಹೇಳಿದೆ. + +ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಅವರಿಗೆ ಸ್ಟೇಜ್ ಫಿಯರ್ ಕಡಿಮೆಯಾಗಿ ಆತ್ಮವಿಶ್ವಾಸ ಮೂಡುತ್ತದೆ. ಯಾವುದೇ ಒಂದು ವಿಷಯದ ಸುತ್ತಲಿನ ಸಾಧಕಬಾದಕಗಳ ಬಗ್ಗೆ ಚಿಂತಿಸುತ್ತಾರೆ. ಸರಿ ತಪ್ಪುಗಳ ಅರಿವು ಮೂಡುತ್ತದೆ. ತಾವು ಗೆಲ್ಲಲೇಬೇಕು ಎಂಬ ಆರೋಗ್ಯಯುತ ಸ್ಪರ್ಧೆಯಲ್ಲಿ ಹೊಸ ಹುಡುಕಾಟದಲ್ಲಿ ತೊಡಗುವರು. ಇದು ಇಂದಿನ ಶಿಕ್ಷಣದ ತುರ್ತು ಕೂಡ ಹೌದು. + +ಮತ್ತೊಂದು ದಿನ ನಾಟಕ ಅಭಿನಯ ಮಾಡಿಸಿದೆ. ಪಠ್ಯಪುಸ್ತಕದ ಸಂಭಾಷಣೆ ರೂಪದ ಪಾಠ ನೀಡಿ ನಾಟಕ ಅಭಿನಯ ಮಾಡುವ ಚಟುವಟಿಕೆ ನೀಡಿದೆನು. ಅದರಲ್ಲಿ ಗಂಡು ಮತ್ತು ಹೆಣ್ಣು ಪಾತ್ರಗಳೆರಡು ಇದ್ದವು. ಹೆಣ್ಣು ಮಕ್ಕಳು ಗಂಡು ಪಾತ್ರವನ್ನು, ಗಂಡು ಮಕ್ಕಳು ಗಂಡು ಪಾತ್ರವನ್ನು ಗಂಡು ಮಕ್ಕಳು ಮಾಡಿ ಎಂದೆನು. ಆಗ ಹುಡುಗಿಯರೆಲ್ಲ “ಇಲ್ಲ ಮಿಸ್, ನಾವು ಅವರ ಜೊತೆಯಲ್ಲಿ ಪಾತ್ರ ಮಾಡುವುದಿಲ್ಲ. ನಾವೇ ಬೇಕಾದರೆ ಪ್ರತ್ಯೇಕವಾಗಿ ಗಂಡು ಹೆಣ್ಣು ಎರಡು ಪಾತ್ರಗಳನ್ನು ಮಾಡುತ್ತೇವೆ” ಎಂದರು. ಆಗ ಹುಡುಗರು ಹಿಂದೆ ಬೀಳಲಿಲ್ಲ ಹೌದು ಮಿಸ್ ನಾವು ಅಷ್ಟೇ, ಈ ಹುಡುಗಿಯರನ್ನು ಸೇರಿಸಿಕೊಳ್ಳುವುದಿಲ್ಲ ನಾವೇ ಹುಡುಗಿಯರ ಪಾತ್ರವನ್ನು ಮಾಡುತ್ತೇವೆ ಎಂದರು. + +ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ತರ ಬೇಧ ಭಾವ ಏಕೆ ಎಂದು ಪ್ರಶ್ನಿಸಿದೆ. ಆಗ ಹುಡುಗಿಯರು ಹೇಳಿದ್ದು ಮಿಸ್ ಹಿಂದೆ ಒಮ್ಮೆ ನಮ್ಮ ಊರಿನಲ್ಲಿ ಹುಡುಗರು ಹುಡುಗಿಯರು ಸೇರಿ ನಾಟಕ ಮಾಡಿದ್ದರು. ಆಗ ಹೆಂಡತಿ ಪಾತ್ರ ಮಾಡಿದ ಹುಡುಗಿಯನ್ನು ಊರಿನವರೆಲ್ಲ ನಿನ್ನ ಗಂಡ ಎಲ್ಲಿ? ನಿನ್ನ ಗಂಡ ಚೆನ್ನಾಗಿದ್ದಾನಾ? ಎಂದು ತಮಾಷೆ ಮಾಡುತ್ತಾ ಹುಸಿ ಹುಸಿ ನಗುತ್ತಿದ್ದರು. ಆ ವಿಷಯ ಅವರ ಅಪ್ಪನಿಗೆ ಗೊತ್ತಾಗಿ ಆ ಅಕ್ಕನಿಗೆ ಚೆನ್ನಾಗಿ ಥಳಿಸಿದರು ಎಂದು ಅಂದರು. ಈ ಮಾತು ಕೇಳಿ ಸುಧಾರಿಸದ ನಮ್ಮ ಅಸ್ವಸ್ಥ ಸಮಾಜದ ಪೊರೆ ಬಂದ ಕಣ್ಣುಗಳಿಗೆ ಮನಸ್ಸು ಕಣ್ಣೀರಾಯಿತು. ಗಂಡು ಹೆಣ್ಣು ಇಬ್ಬರು ಪಾತ್ರಧಾರಿಗಳಾದರೂ ಸಮಾಜ ಹೆಣ್ಣನ್ನು ಮಾತ್ರ ದೂಷಿಸುವುದಕ್ಕೆ ಮನಸ್ಸು ಖೇದಗೊಂಡಿತು. ಈ ವಯಸ್ಸಿನಲ್ಲಿ ಅವರಿಗೆ ಅದರ ಕುರಿತು ಏನೆ ಬೋಧೆನೆ ಮಾಡಿದರು ಅರ್ಥವಾಗುವುದಿಲ್ಲ ಎಂದು ಅರಿತ ನಾನು ಮಕ್ಕಳ ಇಚ್ಛೆಯಂತೆ ನಾಟಕ ಮಾಡಲು ಹೇಳಿದೆ. ಇಬ್ಬರು ಎರಡು ಪಾಠಗಳನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ನಾಟಕ ಪ್ರಾಕ್ಟೀಸ್ ಮಾಡಿದರು. ಆ ನಾಟಕವನ್ನು ಗಣರಾಜ್ಯೋತ್ಸವ ದಿನಾಚರಣೆಯ ವೇದಿಕೆಯಲ್ಲಿ ಅಭಿನಯಿಸಿದರು. ನಿಜಕ್ಕೂ ನಾಟಕ ನೋಡಿ ನಾವು, ಕಾರ್ಯಕ್ರಮಕ್ಕೆ ಬಂದಿದ್ದ ಪೋಷಕರು, ಎಸ್ ಡಿ ಎಮ್ ಸಿ ಯವರು, ಗ್ರಾಮಸ್ಥರು ಭಾವುಕರಾದರು. ಸ್ತ್ರೀ ಪಾತ್ರಗಳಿಗೆ ಗಂಡು ಮಕ್ಕಳು, ಗಂಡು ಪಾತ್ರಗಳಿಗೆ ಹೆಣ್ಣು ಮಕ್ಕಳು ಅದೆಷ್ಟು ಜೀವ ತುಂಬಿದರು ಎಂದರೇ ಅವರು ವೇಷಭೂಷಣಗಳಲ್ಲಿ ವಿರುದ್ಧ ಲಿಂಗಗಳು ಅಭಿನಯಿಸುತ್ತಿದ್ದಾರೆ ಎಂದು ತಿಳಿಯಲು ಆಗಲಿಲ್ಲ. ಅಷ್ಟು ಸೊಗಸಾಗಿ ಸ್ತ್ರೀ ಮತ್ತು ಪುರುಷ ಸಂವೇದನೆಗಳನ್ನು ಮಕ್ಕಳು ಅನುಸಂದಾನಿಸಿದ್ದರು. + +ಇಂತಹ ನಾಟಕಗಳು ಮಕ್ಕಳ ಭಾಷಾ ಕಲಿಕೆಗೆ ಹಾಗೂ ಮೌಲ್ಯಮಾಪನಕ್ಕೆ ತುಂಬಾ ಸೂಕ್ತವಾದ ತಂತ್ರಗಳಾಗಿವೆ. ಇಲ್ಲಿ ಮಕ್ಕಳು ದೈರ್ಯ ಸಾಹಸದ ಪ್ರವೃತ್ತಿ ಬೆಳೆಸಿಕೊಳ್ಳುವರು. ಹತ್ತಾರು ಜನರ ಮುಂದೆ ಮಾತಾಡುವರು. ಆಗ ಅವರ ಮೌಖಿಕ ಅಭಿವ್ಯಕ್ತಿ ಬೆಳವಣಿಗೆ ಹೊಂದುವುದು. ಸಂಭಾಷಣೆಗಳನ್ನು ದ್ವನಿಯ ಏರಿಳಿತದೊಂದಿಗೆ, ಸೂಕ್ತ ಸ್ವರಬಾರಕ್ಕೆ ಅನುಗುಣವಾಗಿ ಹೇಳುವರು. ಆಂಗಿಕ ಹಾವ ಭಾವಗಳನ್ನು ಕಲಿಯುವರು. + +ಯೋಜನೆಗಳ ತಯಾರಿ, ನಿಯೋಜಿತ ಕಾರ್ಯಗಳನ್ನು ನೀಡಿದಾಗ ಮಕ್ಕಳ ಪರಸ್ಪರ ಸಹಕಾರ, ಹೊಂದಾಣಿಕೆ ಮನೋಭಾವ, ಗುಂಪಿನಲ್ಲಿನ ವರ್ತನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಇವು ಈಗ ಕೇವಲ ಮನೋರಂಜನೆ ಅಥವಾ ಪೂರಕ ಚಟುವಟಿಕೆಗಳಾಗಿ ಉಳಿದಿಲ್ಲ. ಇವು ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಮೌಲ್ಯ ಮಾಪನ ತಂತ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಚಿತ್ರಕಲೆ, ಪದ್ಯಗಳ ಹಾಡುಗಾರಿಕೆ ಒಂದು ರೀತಿಯಲ್ಲಿ ಮಕ್ಕಳನ್ನು ಅಳೆದರೆ, ಪ್ರಯೋಗಗಳು, ಕಲಿಕೋಪಕರಣ ತಯಾರಿಕೆಗಳು ಮಗುವಿನ ಸೃಜನಶೀಲತೆಯನ್ನು ಪ್ರತಿಫಲಿಸುತ್ತವೆ. + + + +ಶಾಲೆಯಲ್ಲಿ ಕನ್ನಡದ ಕೋಟ್ಯಧಿಪತಿ ಮಾದರಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಹೊಸತನ ಇರಲೆಂದು ಶಿಕ್ಷಕರು ಮಕ್ಕಳನ್ನು ಪ್ರಶ್ನಿಸುವುದು, ಮಕ್ಕಳು ಶಿಕ್ಷಕರನ್ನ ಪ್ರಶ್ನಿಸುವುದು ವಿಶೇಷವಾಗಿತ್ತು. ನಿಗದಿತ ಪಾಠಕ್ಕೆ ಸಂಬಂಧಿಸಿದಂತೆ ಅವರವರ ಪ್ರಶ್ನೆ ಪತ್ರಿಕೆಗಳನ್ನ ಅವರೇ ತಯಾರು ಮಾಡಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಪ್ರಶ್ನಿಸುವ ಹಾಗೂ ಪ್ರಶ್ನೆಗಳನ್ನು ತಯಾರಿಸುವ ಕೌಶಲ್ಯವನ್ನ ಬೆಳೆಸುವುದು ಇದರ ಪ್ರಮುಖ ಆಶಯವಾಗಿತ್ತು. ಇಂದಿನ ಮಕ್ಕಳು ಶಿಕ್ಷಕರನ್ನು ಪ್ರಶ್ನಿಸುತ್ತಿದ್ದಾರೆ. ಹಿಂದೆಲ್ಲ ಗುರುಗಳನ್ನು ಪ್ರಶ್ನೆ ಮಾಡುವಂತಿರಲಿಲ್ಲ. ಹಾಗೇನಾದರೂ ಟೀಚರನ್ನು ಪ್ರಶ್ನಿಸಿದರೆ ಅವನು ಆ ತರಗತಿಯಲ್ಲಿ ಒಬ್ಬ ಅವಿಧೇಯ ವಿದ್ಯಾರ್ಥಿ, ನೈತಿಕ ಮೌಲ್ಯಗಳೇ ಇಲ್ಲದವನು ಎಂಬ ಭಾವವಿತ್ತು. ಅದರಿಂದ ಸಿಸಿಇ ಮೌಲ್ಯ ಮಾಪನ ಪ್ರಕ್ರಿಯೆ ಬಂದ ಮೇಲೆ ಮಕ್ಕಳು ಪ್ರಶ್ನಿಸುವುದನ್ನು ಕಲಿಯುವುದೇ ಒಂದು ಕೌಶಲ್ಯವಾಗಿದೆ. ‘ಪ್ರಶ್ನೆಗಳು ಅನೇಕ ಸಮಸ್ಯೆಗಳ, ಸವಾಲುಗಳ, ಸಾಧನೆಗಳ ಕೀಲಿ ಕೈ’ ಗಳಾಗಿವೆ ಇಂತಹ ಹತ್ತು ಹಲವು ಅವಕಾಶಗಳು ಸಿಸಿಇ ಕೊಡುಗೆಗಳಾಗಿವೆ. ಇದು ಸಾಧ್ಯವಾಗಿರುವುದು ಹೊಸ ಮೌಲ್ಯಮಾಪನ ಪದ್ಧತಿಯಾದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದಿಂದ. + +ಸಿಸಿಇ ಯೋಜನೆಗೂ ಪೂರ್ವ ನಾವೆಲ್ಲ ಓದುವಾಗ ಇದ್ದ ಪರೀಕ್ಷಾ ಕ್ರಮಗಳ ಬಗ್ಗೆ ಯೋಚಿಸೋಣ. ಆಗೆಲ್ಲ ಅಂಕಗಳೇ ಪ್ರಧಾನವಾಗಿದ್ದವು. ಲಿಖಿತ ಮತ್ತು ಮೌಖಿಕ ಪರೀಕ್ಷೆಗಳೆರಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ನಿರ್ಧರಿಸುತ್ತಿದ್ದವು. ಆಗ ನಾವೆಲ್ಲ ಪಡುತ್ತಿದ್ದ ಕಷ್ಟ ಅಷ್ಟು ಇಷ್ಟಲ್ಲ. ಕಂಠಪಾಠ ಮಾಡುವುದು, ಪರೀಕ್ಷೆಗಳಲ್ಲಿ ಯಥಾವತ್ತಾಗಿ ಉತ್ತರಿಸಿ ಅಂಕ ಪಡೆಯುತ್ತಿದ್ದೆವು. ಏನಾದರೂ ಕಂಠಪಾಠ ಮಾಡಿದ್ದು ಅಲ್ಲಲ್ಲಿ ಮರೆತು ಹೋದರೆ ಆ ನೆನಪಿಸಿಕೊಳ್ಳುವ ಸಾಹಸ ವರ್ಣಿಸಲು ಸಾಧ್ಯವಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ವಲಯವನ್ನು ಪರೀಕ್ಷಿಸಬಹುದಾಗಿತ್ತು. ಆ ಮಕ್ಕಳು ಪುಸ್ತಕ ಜ್ಞಾನವನ್ನು ಮಾತ್ರ ಹೊಂದಿದ್ದು ಕಲಿಕಾ ಪ್ರಕ್ರಿಯೆಯಲ್ಲಿ ಮುಂದುವರೆಯುತ್ತಿದ್ದರು. ಆದರೀಗ ಮಕ್ಕಳ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳ ಜ್ಞಾನಾತ್ಮಕ ವಲಯದ ಪ್ರಗತಿ ಜೊತೆಗೆ ಅವರ ಭಾವನಾತ್ಮಕ, ಕ್ರಿಯಾತ್ಮಕ ವಲಯವನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಅವಕಾಶ ನೀಡಿದ್ದು ಇದೇ ಸಿಸಿಇ. + +ಲಿಖಿತ ಮತ್ತು ಮೌಖಿತ ಪರೀಕ್ಷೆಗಳೆ ಶೈಕ್ಷಣಿಕ ಪರೀಕ್ಷೆಯ ಮಹಾದಂಡಗಳಾಗಿದ್ದು ಶಿಕ್ಷಕರು ಮತ್ತು ಮಕ್ಕಳಿಗೆ ಇಬ್ಬರಿಗೂ ಕಷ್ಟ ಆಗುತ್ತಿತ್ತು. ಮಕ್ಕಳಿಗೆ ಅಷ್ಟು ಕಲಿಕಾಂಶಗಳನ್ನು ಕಲಿಸಲೇಬೇಕೆಂಬ ನಮ್ಮ ಧಾವಂತದಲ್ಲಿ ಇಬ್ಬರು ಅದೆಷ್ಟು ಪರದಾಡುತ್ತಿದ್ದೆವು. ಮಗ್ಗಿಗಳ ಕಂಠಪಾಠ ನಮ್ಮ ತಾಳ್ಮೆಯನ್ನು ಪರೀಕ್ಷಿಸಿ ಬಿಡುತ್ತಿತ್ತು. ಒಂದು ದಿನ ಹೀಗಾಯಿತು. + +ಆಗ ಸಮಯ ರಾತ್ರಿ 10.30. ಆಗಿ ಪೋಷಕರೊಬ್ಬರಿಂದ ಕಾಲ್ ಬಂತು. ತಡರಾತ್ರಿ ಬಂದ ಪೋನ್ ಕಾಲ್‌ಗೆ ಬಹಳ ಆತಂಕವಾಯಿತು. ಕಾಲ್ ರಿಸೀವ್ ಮಾಡಿದಾಗ ಮೇಡಂ ನನ್ನ ಮಗನಿಗೆ ನೀವು ಏನು ಹೇಳಿದ್ದೀರಿ? ಎಂದರು ಆ ಪೋಷಕರು. ನನಗೆ ಗಾಬರಿಯಾಯಿತು. “ಏನಮ್ಮ, ವಿಷಯ” ಅಂದೆ. ಏನಿಲ್ಲ ಮೇಡಮ್. ಇವತ್ತು ಶನಿವಾರ. ನನ್ನ ಮಗ ಮಧ್ಯಾಹ್ನ ಶಾಲೆಯಿಂದ ಬಂದಾಗಿಂದ ಪುಸ್ತಕಗಳನ್ನು ಬಿಟ್ಟಿಲ್ಲ ಅಂದರು. ನನಗೆ ಬಹಳ ಖುಷಿಯಾಯಿತು. ನಾಳೆ ಪರೀಕ್ಷೆ ಇದೆ ಅದಕ್ಕೆ ಬುಕ್ ಹಿಡಿದು ಓದುತ್ತಿದ್ದಾನೆ. ಸಂತೋಷದ ವಿಷಯವಲ್ಲವೇ ಎಂದಾಗ, ಅಯ್ಯೋ ಮೇಡಮ್ ಅವನು ಪುಸ್ತಕ ತೆರೆದು ಒಂದು ಅಕ್ಷರವನ್ನು ಓದಿಲ್ಲ. ಆದರೆ ಪುಸ್ತಕ ಮಾತ್ರ ಕೆಳಗೆ ಇಟ್ಟಿಲ್ಲ ಎಂದರು. ಅವರಪ್ಪ ಮತ್ತು ನಾನು ಎಷ್ಟು ಹೇಳಿದರು ಪುಸ್ತಕ ಕೆಳಗೆ ಮಡಗಿಲ್ಲ. ಆಟವಾಡಲು ಹೋಗಿದ್ದನು. ಆಗಲು ಪುಸ್ತಕ ಕೈಯಲ್ಲೇ ಇದೆ. ಊಟ ಮಾಡುವಾಗಲೂ ಕೈಯಲ್ಲೆ ಇದೆ. ಹೊಲದ ಬಳಿ ಬಂದಿದ್ದ ಆಗಲು ಪುಸ್ತಕ ಕೈಲೆ ಹಿಡಿದಿದ್ದನು. ಈಗ ನೋಡಿದರೆ ಮಲಗುವಾಗಲೂ ಕೈಯಲ್ಲಿ ಪುಸ್ತಕ ಹಿಡಿದುಕೊಂಡೆ ಮಲಗಿದ್ದಾನೆ. ಕೇಳಿದ್ದಕ್ಕೆ ನೀವೇನೋ ಹೇಳಿದ್ದೀರಂತೆ, ಪುಸ್ತಕ ಕೆಳಗೆ ಇಡಬಾರದು ಅಂತ ಅಂದಾಗ ನನಗೆ ಅರ್ಥವಾಯಿತು. ಅಂದು ನಾನು “ಇದು ಪರೀಕ್ಷಾ ಸಮಯ. ನೀವೆಲ್ಲ ಶಾಲೆಯಿಂದ ಹೋಗಿ ಪುಸ್ತಕ ಮೂಲೆಗೆಸೆದು ತಿರುಗಲು, ಆಡಲು ಹೋಗಬಾರದು. ಇನ್ನು ಪರೀಕ್ಷೆ ಮುಗಿಯುವವರೆಗೂ ಪುಸ್ತಕ ಕೆಳಗೆ ಇಡುವಂತಿಲ್ಲ. ಸದಾ ಕಾಲ ಪುಸ್ತಕವನ್ನು ಕೈಯಲ್ಲೇ ಹಿಡಿದಿರಬೇಕು” ಎಂದಿದ್ದೆ. ನನ್ನ ಮಾತಿನ ಸೂಕ್ಷ್ಮಾರ್ಥವನ್ನು ಗ್ರಹಿಸದ ಆ ಮಗು ಕೇವಲ ಪುಸ್ತಕವನ್ನು ಕೈಯಲ್ಲಿ ಹಿಡಿದು ನನ್ನ ಮಾತಿನ ಪರಿಪಾಲನೆ ಮಾಡಿದ್ದನು. ನನಗಾಗ ಅರ್ಥವಾಯಿತು. ಯಾವುದೇ ವಿಷಯವನ್ನು ಮಕ್ಕಳಿಗೆ ಮಾರ್ಮಿಕವಾಗಿ, ಗೂಡಾರ್ಥದಲ್ಲಿ ಅಸ್ವಷ್ಟವಾಗಿ ಹೇಳಬಾರದು ಎಂದು. ಇಂತಹ ಸವಾಲುಗಳನ್ನ ಎದುರಿಸುವಲ್ಲಿ ಸಿಸಿಇ ಮೌಲ್ಯಮಾಪನ ತಂತ್ರ ಸಾಕಷ್ಟು ಉಪಯುಕ್ತವಾಗುತ್ತದೆ. + +“ವಿದ್ಯಾರ್ಥಿಯ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿನ ಸಾಧನೆ, ಶಾಲಾ ಸನ್ನಿವೇಶದಲ್ಲಿ ವಿವಿಧ ಪಾತ್ರ ನಿರ್ವಹಣೆ, ಪಾಲ್ಗೊಳ್ಳುವಿಕೆ ಮತ್ತು ಪ್ರಗತಿಯನ್ನು ವಿವಿಧ ತಂತ್ರಗಳ ಮೂಲಕ ಸಮಗ್ರವಾಗಿ ದಾಖಲಿಸಿಕೊಂಡು ವಿಶ್ಲೇಷಿಸಿ ಪಡೆದ ಒಳ ನೋಟಗಳಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಅನುಕೂಲಿಸುವ ಪ್ರಕ್ರಿಯೆಗೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ” ಎನ್ನುತ್ತೇವೆ. + +ನಿರಂತರ ಮೌಲ್ಯಮಾಪನ ಎಂದರೆ “ವಿದ್ಯಾರ್ಥಿಗಳ ಶಾಲೆಯಲ್ಲಿನ ಕಲಿಕಾ ಸಂದರ್ಭಗಳು ಹಾಗೂ ತೊಡಗಿಸಿಕೊಳ್ಳುವ ವಿವಿಧ ಚಟುವಟಿಕೆಗಳಲ್ಲಿನ ಅವರ ಸಹಜ ವರ್ತನೆಗಳನ್ನು ನಿರಂತರವಾಗಿ ಗಮನಿಸಿ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳನ್ನು ಪೋಷಿಸುವುದು”.ವ್ಯಾಪಕ ಮೌಲ್ಯಮಾಪನ ಎಂದರೆ “ನಿರ್ದಿಷ್ಟ ಪಡಿಸಿದ ಪಠ್ಯಕ್ಕೆ ಸೀಮಿತವಾಗದೆ ಸಹಪಠ್ಯ ಚಟುವಟಿಕೆಗಳನ್ನು ಒಳಗೊಂಡಂತೆ ಮಗುವಿನ ಎಲ್ಲಾ ವರ್ತನೆಗಳನ್ನು ಅಭಿವೃದ್ಧಿಗೊಳಿಸುವುದಾಗಿದೆ”. + +ನಿರಂತರ ಮೌಲ್ಯಮಾಪನದಿಂದ ಮಗುವಿನ ದೈಹಿಕ, ಬೌದ್ಧಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಯನ್ನು ಗಮನಿಸಿ ಪ್ರಗತಿಯ ನಿರಂತರತೆಯಲ್ಲಿ ಅರ್ಥೈಸಿಕೊಳ್ಳುವುದು”. ಇದರಿಂದ ಮಗುವಿನ ವ್ಯಕ್ತಿತ್ವ ಯಾವ ರೀತಿಯಲ್ಲಿ ವಿಕಸನಗೊಳ್ಳುತ್ತಿದೆ ಎಂದು ಸುಲಭವಾಗಿ ಗುರುತಿಸಬಹುದು. ವ್ಯಾಪಕ ಮೌಲ್ಯಮಾಪನದಿಂದ ಪಠ್ಯ ಸಹಪಠ್ಯ ಸಂಯೋಜಿತ ಹಾಗೂ ಮಗುವಿನ ಸಹಜ ವರ್ತನೆಯ ಕ್ಷೇತ್ರಗಳನ್ನು ಗಮನಿಸಿ ಅವುಗಳನ್ನ ಅಭಿವೃದ್ಧಿ ಪಡಿಸಬಹುದು. ಒಟ್ಟಾರೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದಿಂದ ಮಗುವಿನ ಸರ್ವಾಂಗಣ ಬೆಳವಣಿಗೆಯನ್ನು ನಿರಂತರವಾಗಿ ಅನುಕೂಲಿಸಲು ಸಾಧ್ಯವಾಗುತ್ತದೆ. + +ಹಿಂದಿಗಿಂತ ಇಂದು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಇಂದಿನ ಸಾಂಪ್ರದಾಯಿಕ ಮೌಲ್ಯಮಾಪನ ಪದ್ಧತಿ, ಕೇವಲ ಪಠ್ಯಪುಸ್ತಕಗಳನ್ನು ಓದುವುದು ಕಂಠಪಾಠ ಮಾಡುವುದು ಪಠ್ಯ ವಿಷಯಗಳಿಗೆ ಮಾತ್ರ ಸೀಮಿತವಾಗಿದ್ದರೆ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿದ್ಯಾರ್ಥಿಗಳ ಕಲಿಕೆ ಮಟ್ಟವನ್ನ ಅರ್ಥೈಸಿಕೊಳ್ಳೋದಕ್ಕೆ ಸಹಕಾರ ನೀಡುತ್ತೆ. ಮಕ್ಕಳ ಪ್ರಗತಿಯನ್ನು ಅರ್ಥೈಸಿಕೊಳ್ಳುವ ಸಲುವಾಗಿ ಸಾಧನ ಸಲಕರಣೆಗಳನ್ನು ರಚಿಸಿಕೊಳ್ಳಲು ಮತ್ತು ಪರಿಷ್ಕೃತಗೊಳಿಸಲು ದಾರಿ ಮಾಡಿಕೊಡುತ್ತದೆ. ಸಕಾಲದಲ್ಲಿ ಪೋಷಕರಿಗೆ ಪ್ರಗತಿಯನ್ನು ಅರ್ಥೈಸಿಕೊಳ್ಳಬೇಕು. ನಾನು ಎಲ್ಲಿದ್ದೇನೆ ನಾನು ನೀಡಬೇಕಾದ ಕಲಿಕೆ ಅನುಭವಗಳು ಯಾವುವು? ಎಂದು ಅರಿಯಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗೆ ತನ್ನ ಕಲಿಕೆಯ ಬಗ್ಗೆ ಆತ್ಮ ವಿಶ್ವಾಸವನ್ನು ಮೂಡಿಸಲು ಹಾಗೂ ಅಪೇಕ್ಷಿತ ಬೆಳವಣಿಗೆ ಕಡೆಗೆ ಮಾರ್ಗದರ್ಶಿಸಲು ನೆರವಾಗುತ್ತದೆ. ಯಾವುದೇ ಭಯ ಆತಂಕಗಳಿಲ್ಲದೆ ಸ್ವಚ್ಛ ಪರಿಸರದಲ್ಲಿ ಕಲಿಯಲು ಸಹಕಾರ ನೀಡುತ್ತದೆ. ಅಪೇಕ್ಷಿತ ಶಾಲಾ ಸನ್ನಿವೇಶವನ್ನು ನಿರ್ಮಾಣ ಮಾಡುತ್ತದೆ. ಗುಣಮಟ್ಟದ ಶಿಕ್ಷಣ ಅಭಿವೃದ್ಧಿಯನ್ನ ಕಾಲಕಾಲಕ್ಕೆ ದಾಖಲಿಸುತ್ತದೆ. + +ನಿರಂತರ ವ್ಯಾಪಕ ಮೌಲ್ಯಮಾಪನವು ಭಾಷೆಗಳು, ಲಲಿತ ಕಲೆ, ಜೀವನ ಶಿಕ್ಷಣ, ಮೌಲ್ಯಗಳ ಅರಿವು, ಗುಂಪಿನಲ್ಲಿ ವರ್ತನೆ, ದೈಹಿಕ ಹಾಗೂ ಕ್ರೀಡೆ, ಶಾಲಾ ಚಟುವಟಿಕೆಗಳು, ಇವೆಲ್ಲವನ್ನು ಸಮಗ್ರವಾಗಿ ಒಳಗೊಂಡಿರುತ್ತದೆ. + +ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನವು ಸಂದರ್ಶನ, ಸಮೀಕ್ಷೆ, ಮೌಖಿಕ ಅಭಿವ್ಯಕ್ತಿ, ಸಹವರ್ತಿ ಪರೀಕ್ಷೆ, ಪ್ರತಿಫಲನ, ಅವಲೋಕನ, ವ್ಯಕ್ತಿ ವೃತ್ತಾಂತ ದಾಖಲೆ, ಅಭ್ಯಾಸ ಪುಸ್ತಕ, ಗೃಹ ಪಾಠ, ಘಟಕ ಪರೀಕ್ಷೆ, ಕಿರುಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ವಾರ್ಷಿಕ ಪರೀಕ್ಷೆ, ಆರೋಗ್ಯ ದಾಖಲೆ, ಮಕ್ಕಳ ಅವಲೋಕನ ಹಾಳೆ, ಪ್ರಗತಿಪತ್ರಗಳು, ಪ್ರಗತಿ ನೋಟ, ಸಂಚಿತ ದಾಖಲೆ, ಮಾಹಿತಿ ಹಂಚಿಕೊಳ್ಳುವಿಕೆ, ಗುಂಪು ಚರ್ಚೆ, ಪ್ರಶ್ನೋತ್ತರ, ಆಟ, ನ್ಯಾಯಾಮ, ಆರೋಗ್ಯ, ಕಥೆ ಹೇಳುವುದು, ಕೈಬರಹ ಓದುವುದು, ಸಂಭಾಷಣೆ, ಸಮೀಕ್ಷೆ, ಯೋಜನೆ, ಪ್ರಯೋಗಗಳು, ನಿಯೋಜಿತ ಕಾರ್ಯಗಳೆಲ್ಲವನ್ನು ಒಳಗೊಂಡಿರುತ್ತದೆ. + + + +ಒಟ್ಟಿನಲ್ಲಿ ಸಿಸಿಇ ಮೌಲ್ಯ ಮಾಪನ ಪದ್ಧತಿ ವಿನೂತನವಾಗಿದ್ದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ.‌ ಮಕ್ಕಳಿಗೆ‌ ಬರವಣಿಗೆಯ ಹೊರತಾಗಿ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಲು ಅವಕಾಶ ನೀಡುತ್ತದೆ. ಆ ಮೂಲಕ ಮಕ್ಕಳಲ್ಲಿ ಇರುವ ಪರೀಕ್ಷಾ ಭಯ, ಹಿಂಜರಿಕೆಯನ್ನು ಹೋಗಲಾಡಿಸಿ. ಭಯ ಮುಕ್ತ ಮೌಲ್ಯ ಮಾಪನ ಮಾಡುವ ಮೂಲಕ ಮಕ್ಕಳನ್ನು ಪ್ರೇರೇಪಿಸುತ್ತದೆ. ಪ್ರತಿಯೊಂದು ಮಗುವು ವಿಶಿಷ್ಟ ಹಾಗೂ ವಿಭಿನ್ನ. ಅವರವರ ಆಸಕ್ತಿಗೆ ಅನುಗುಣವಾಗಿ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಚಟುವಟಿಕೆಗಳು ಇದು ಪ್ರೋತ್ಸಾಹಿಸುತ್ತದೆ. ಪಠ್ಯದ ಜ್ಞಾನಕ್ಕಿಂತ ತೊಡಗಿಸಿಕೊಳ್ಳುವಿಕೆ ಬಹುಮುಖ್ಯವಾಗಿದ್ದು ಮಕ್ಕಳು ತಾವು ಶಾಲೆಯಲ್ಲಿ ಕಲಿತಿದ್ದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗುವ ಸಿಸಿಇ ಶಿಕ್ಷಣ ಕ್ಷೇತ್ರದ ಮಹತ್ವದ ಯೋಜನೆಯಾಗಿದೆ. + +ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. \ No newline at end of file diff --git a/Kenda Sampige/article_120.txt b/Kenda Sampige/article_120.txt new file mode 100644 index 0000000000000000000000000000000000000000..a3418a55086f6ac1dea33e323ca00bffda15add4 --- /dev/null +++ b/Kenda Sampige/article_120.txt @@ -0,0 +1,23 @@ +ಪ್ರಸನ್ನರ ʻರಥಸಪ್ತಮಿʼ ಕಥಾ ಸಂಕಲನಕ್ಕೆ ಬಿ. ಎಚ್‌. ಶ್ರೀಧರ ಪ್ರಶಸ್ತಿ ಬಂದಾಗ ಅವರನ್ನು ಮೊದಲ ಸಲ ಭೆಟ್ಟಿಯಾಗಿದ್ದೆ. ಪ್ರಶಸ್ತಿ ಸ್ವೀಕರಿಸಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಕುರಿತು ತುಂಬ ಕಳಕಳಿಯಿಂದ ಅವರು ಆಡಿದ ಮಾತುಗಳು ಮನಸ್ಸಿನಲ್ಲಿ ಇನ್ನೂ ಹಸಿರಾಗಿವೆ. ಮನುಷ್ಯ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾನೆ, ಸಂಬಂಧಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಅನ್ವೇಷಿಸುವ ಒಳ್ಳೆಯ ಕತೆಗಳು ಓದುಗನಲ್ಲಿ ಅರಿವು ಮೂಡಿಸುತ್ತವೆ; ಅವರನ್ನು ಸಹನಶೀಲರನ್ನಾಗಿಸುತ್ತವೆ. ಹೀಗಾಗಿ ಮಕ್ಕಳಿಗೆ ಒಳ್ಳೆಯ ಕತೆಗಳನ್ನು ಓದಿಸುವುದು ಶಿಕ್ಷಣದ ಭಾಗವಾಗಬೇಕು ಎಂದು ಅವರು ಹೇಳಿದ್ದರು. + +(ಎ.ಎನ್. ಪ್ರಸನ್ನ) + +ಮರುವರ್ಷ ಅವರು ಕುಮಟಾಕ್ಕೆ ಬಂದು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಸಿನಿಮಾ ರಸಗ್ರಹಣ ಶಿಬಿರವನ್ನು ನಡೆಸಿಕೊಟ್ಟರು. ಹೀಗೆ ಆರಂಭವಾಗಿ ಆಗೀಗ ಭೆಟ್ಟಿ, ದೂರವಾಣಿ, ಈ-ಮೈಲ್‌ನಲ್ಲಿ ಕತೆ-ಅಭಿಪ್ರಾಯ ವಿನಿಮಯದಿಂದ ಗಟ್ಟಿಯಾದ ಗೆಳೆತನವನ್ನು ಇನ್ನಷ್ಟು ಗಟ್ಟಿಗೊಳಿಸುವ ಉಪಕ್ರಮವಾಗಿ ಅವರ ಹೊಸ ಸಂಕಲನದ ಕತೆಗಳ ಜೊತೆ ನನ್ನ ಎರಡು ಮಾತುಗಳನ್ನು ಜೋಡಿಸುವ ಅವಕಾಶವನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ. ಇದನ್ನೆಲ್ಲ ನೆನಪಿಸಿಕೊಂಡಿದ್ದು ಈಗಾಗಲೇ ಸಮರ್ಥರೂ ಪ್ರಯೋಗಶೀಲರೂ ಆದ ಕತೆಗಾರರೆಂದು ವಿಮರ್ಶಕರ ಮನ್ನಣೆ ಗಳಿಸಿಕೊಂಡಿರುವ ಪ್ರಸನ್ನರ ಕತೆಗಳಿಗೆ ಮುನ್ನುಡಿ ಹಿನ್ನುಡಿಗಳ ಅಗತ್ಯವಿಲ್ಲದಿದ್ದರೂ ಅಪ್ಪಟ ಸ್ನೇಹ ಜೀವಿಯಾದ ಪ್ರಸನ್ನರಿಗೆ ಅವೆಲ್ಲ ಬೇಕು ಎಂದು ಹೇಳಲು ಮಾತ್ರವಲ್ಲ, ಬದಲಾಗಿ ಇದೀಗ ಅವರು ಓದುಗರ ಕೈಯಲ್ಲಿಡುತ್ತಿರುವ ಆರು ನೀಳ್ಗತೆಗಳ ಸಂಗ್ರಹಕ್ಕೆ ಅವರು ಶಿರಸಿಯಲ್ಲಿ ಆಡಿದ ಜೀವೋತ್ಕರ್ಷಿಯಾದ ಮಾತುಗಳೇ ಅತ್ಯುತ್ತಮ ಪ್ರವೇಶಿಕೆಯೊದಗಿಸುತ್ತವೆ ಎನ್ನುವುದಕ್ಕಾಗಿ. + +ಪ್ರತ್ಯೇಕ ವ್ಯಕ್ತಿಗಳು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹೇಗೆ ವರ್ತಿಸುತ್ತಾರೆ ಮತ್ತು ಅವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲವೇ ಪ್ರಸ್ತುತ ಸಂಗ್ರಹದ ‘ಕುಣಿಕೆ’, ‘ಹೊರದಾರಿ’, ‘ನಿರ್ಧಾರ’ ಮತ್ತು ‘ದಾಸವಾಳ’- ಈ ನಾಲ್ಕು ಕತೆಗಳ ಕಥನ ಕಾರಣವಾಗಿದೆ. ಇವು ಮಹಿಳಾ ಕೇಂದ್ರಿತವಾಗಿವೆಯಲ್ಲದೆ ಅವುಗಳ ನಿರೂಪಣೆಯ ದೃಷ್ಟಿಕೋನವೂ ಸಹ ಮಹಿಳೆಯದು, ಇಲ್ಲವೇ ಕೇಂದ್ರ ಪಾತ್ರದ ಪ್ರಜ್ಞೆಯೊಂದಿಗೆ ಶ್ರುತಿಗೊಂಡಿದ್ದು. ಇವರೆಲ್ಲ ನಗರವಾಸಿ, ಮಧ್ಯಮ ವರ್ಗದ ಉದ್ಯೋಗಸ್ಥ ಮಹಿಳೆಯರು; ಮನೆ-ಕಛೇರಿಗಳಿಗೆ ಸೀಮಿತವಾದ ಜಗತ್ತಿನಲ್ಲಿರುವವರು; ಬಹುತೇಕವಾಗಿ ಸ್ವಕ್ಷೇಮದ ಪರಿಧಿಯಲ್ಲಿ ಯೋಚಿಸುವವರು. ಖಂಡಿತಕ್ಕೂ ಇವೆಲ್ಲ ಅವರು ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ, ಸನ್ನಿಹಿತವಾದ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಪ್ರಭಾವಿಸುತ್ತವೆ. ಆದರೆ ಅವರು ಅನುಭವಿಸುವ ತೊಳಲಾಟ, ಸಂಕಟ, ಸಂಭ್ರಮ, ಭಾವೋದ್ವೇಗಗಳು ಸರ್ವಸಾಧಾರಣ. ಅವುಗಳ ಸರ್ವಸಾಧಾರಣತೆಯನ್ನು ಸ್ವತಃ ಅವರು ಕಂಡುಕೊಳ್ಳುವ ಕ್ಷಣವೇ ಅವರು ತಮ್ಮ ಪರಿಧಿಯನ್ನು ಮೀರುವ ಮಾನವೀಯ ಆರ್ದ್ರ ಕ್ಷಣ. ಕಥನ ಮುಖ ಮಾಡಿರುವುದು ಮನುಷ್ಯ ಬದುಕಿನಲ್ಲಿ ಭರವಸೆ ಕುದುರಿಸುವ ಅಂತಹ ಹಗುರಾದ ನವಿರಾದ ಆರ್ದ್ರವಾದ ಅರಿವಿನ ತಂಪು ಘಳಿಗೆಯತ್ತ. ಹೀಗಾಗಿ ಈ ಕತೆಗಳ ವಿನ್ಯಾಸದಲ್ಲಿಯೂ ಸಹ ಸಾಮ್ಯವಿದೆ. ಪ್ರತಿ ಕತೆಯೂ ವರ್ತಮಾನದಲ್ಲಿ ಪ್ರಾರಂಭವಾಗಿ, ಭೂತಕಾಲವನ್ನು ಅಗತ್ಯಕ್ಕೆ ಬೇಕಾದಷ್ಟೇ ಅವಾಹಿಸಿ ಮತ್ತೆ ವರ್ತಮಾನಕ್ಕೆ ವಾಪಸಾಗಿ ಓದುಗನ ಮನಸ್ಸಿನಲ್ಲಿ ಬೆಳೆಯಲು ಅವಕಾಶವಾಗುವಂತೆ ಮುಕ್ತಾಯವಲ್ಲದ ಮುಕ್ತಾಯವನ್ನು ತಲುಪುತ್ತವೆ. + +ಈ ನಾಲ್ಕು ಕತೆಗಳಲ್ಲಿ ‘ದಾಸವಾಳ’ ಕೊಂಚ ಭಿನ್ನವಾಗಿದೆ. ‘ಕುಣಿಕೆ’, ‘ಹೊರದಾರಿ’, ‘ನಿರ್ಧಾರ’ಗಳಲ್ಲಿ ಬಿಕ್ಕಟ್ಟಿನ ಸನ್ನಿವೇಶದಿಂದ ಹೊರದಾರಿ ಕಂಡುಕೊಳ್ಳುವುದು ಕಥಾನಾಯಕಿಯರು ತಮ್ಮನ್ನು ಬಂಧಿಸಿರುವ ‘ಅತಿ ಸಣ್ಣ ಪ್ರಪಂಚ’ದ ಹೊರಗೂ ಸ್ಪಂದಿಸಬಲ್ಲವರಾಗುವುದಷ್ಟೇ ಆಗಿದ್ದರೆ ‘ದಾಸವಾಳ’ದ ನಿರೂಪಕ-ನಾಯಕಿ ತನಗೆ ‘ಬೇಕಾದ ಉಸಿರನ್ನು ಕೊಡಿ ಅಂತ ಇನ್ನೊಬ್ಬರನ್ನು ಕೇಳದೆ ಎಲ್ಲಿ ತಿಳಿಗಾಳಿ ಸಿಗುತ್ತದೆಯೋ ಅಲ್ಲಿಗೆ ಹೋಗಿ ನಿರಾತಂಕದಿಂದ ಉಸಿರಾಡೋ ಅನುಕೂಲಕ್ಕಾಗಿ’ ಹಂಬಲಿಸಿದವಳು; ತನ್ನ ಬದುಕನ್ನು ತಾನೇ ನಿರ್ಮಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದವಳು. ಇಂತಹುದೇ ಹಂಬಲ ಮತ್ತು ಒತ್ತಡದಿಂದ ಪಾರಾದ ಅವಳ ತಾಯಿ ಅವಳಿಗೆ ಪ್ರೇರಣೆ ಮತ್ತು ಆದರ್ಶವೆನ್ನುವುದನ್ನು ಕತೆಯ ವಿವರಗಳು ಸೂಚಿಸುತ್ತವೆ. ಉದ್ದಕ್ಕೂ ಹಾಜರಿರುವ ದಾಸವಾಳದ ಪ್ರತಿಮೆ ದುಡಿಯುವುದೇ ಇದಕ್ಕಾಗಿ. ಆದರೆ ತಾಯಿ ಕಂಡುಕೊಂಡ ಯಶಸ್ಸು ಇವಳದಾಗಿಲ್ಲವೆನ್ನುವುದು ಅವಳು ಆಯ್ದುಕೊಂಡ ದಾರಿಯಲ್ಲೇ ಇರುವ ಇನ್ನೊಂದು ಸಾಧ್ಯತೆಯಷ್ಟೇ. ಹೀಗಾಗಿ “ದಿಕ್ಕುದೆಸೆಯಿಲ್ಲದೆ, ಹೇಳೋರು ಕೇಳೋರು ಯಾರು ಇಲ್ಲದೆ ಇದ್ದದ್ದು ನಾನು” ಎಂದು ತನ್ನ ಕತೆಯನ್ನು ತಾನೇ ಹೇಳಿಕೊಳ್ಳುವ ಕಥಾನಾಯಕಿಯ ನಿರೂಪಣೆ ವಸ್ತುನಿಷ್ಠವಾದ ಆತ್ಮವಿಮರ್ಶೆಯನ್ನು ಸಾಧಿಸುವ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುತ್ತದೆ ಎನ್ನುವುದೇ ಈ ಕತೆಯ ಹೆಚ್ಚಳವಾಗಿದೆ. ಇಷ್ಟಾದರೂ ಕತೆ ಸಂಪೂರ್ಣವಾಗಿ ತೃಪ್ತಿಕರವಾಗಿದೆ ಎನ್ನುವಂತಿಲ್ಲ. ಗತಕಾಲದ ದಿನಗಳನ್ನು ಕಾಲದ ಅಂತರ ಒದಗಿಸುವ ಸೌಲಭ್ಯದಿಂದ ವಸ್ತುನಿಷ್ಠವಾಗಿ ನೋಡಲು ಸಾಧ್ಯವಾಗುವಂತೆ ವರ್ತಮಾನದ ಈ ಕ್ಷಣವನ್ನು ನೋಡಲು ಸಾಧ್ಯವಾಗಬಹುದೇ ಎನ್ನುವುದರ ಕುರಿತು ಸ್ವತಃ ಕತೆಗಾರರಿಗೂ ಸಂದೇಹವಿರುವಂತಿದೆ. ಹೀಗಾಗಿಯೇ ಕತೆಯ ಕೊನೆಯ ಸಾಲು ಉತ್ತಮ ಪುರುಷ ನಿರೂಪಣೆಯನ್ನು ಬಿಟ್ಟುಕೊಟ್ಟು ಸರ್ವಸಾಕ್ಷಿ ನಿರೂಪಕನ ಮಾತಾಗಿದೆ. ಇದರಿಂದಾದ ಲಾಭವೆಂದರೆ ಕಥಾನಾಯಕಿಗೆ ಸ್ಪಷ್ಟವಾಗಿದೆ ಎನ್ನಲಾದ ದಾರಿ ಯಾವುದಿದ್ದೀತು ಎಂದು ಓದುಗನ ಮನಸ್ಸಿನಲ್ಲಿ ಹೊಸದೇ ಕತೆಯೊಂದು ಮೊಳೆಯುವುದಕ್ಕೆ ಬೀಜ ಬಿತ್ತಿದಂತಾಗಿದೆ. + + + +‘ವಿಹಾರ’ ಮತ್ತು ‘ಹದ್ದು ಹಾರುವ ಹೊತ್ತು’ ಭಿನ್ನ ಬಗೆಯ ಕತೆಗಳು. ಅವುಗಳ ಭಿತ್ತಿ ಇದೀಗ ಪ್ರಸ್ತಾವಿಸಿದ ಕತೆಗಳಿಗಿಂತ ಹೆಚ್ಚು ವಿಶಾಲವಾದದ್ದು. ‘ವಿಹಾರ’ ಪ್ರಸನ್ನರ ಆರಂಭಿಕ ಕತೆಗಳಲ್ಲೊಂದಾದ ‘ಹೊಳೆಗೆ ಹೋಗಿದ್ದು’ಗೆ ಹತ್ತಿರವಾಗಿದೆ. ಅಲ್ಲಿಯ ಹಲವು ಆಶಯಗಳು ಇಲ್ಲಿಯೂ ಕಾಣಿಸಿಕೊಳ್ಳುತ್ತವೆ. ಆದರೆ ‘ಹೊಳೆಗೆ ಹೋಗಿದ್ದು’ ಕಥಾನಾಯಕಿಯ ಆತ್ಮನಿರೂಪಣೆಯಾದರೆ ‘ವಿಹಾರ’ ಪ್ರಥಮ ಪುರುಷ ನಿರೂಪಣೆ. ಇಲ್ಲಿ ವಿಹಾರಕ್ಕೆಂದು ಬಂದ ಐದೂ ಜನ ತಮ್ಮ ಬ್ಯಾಗುಗಳೊಂದಿಗೆ ತಮ್ಮದೇ ಆದ ಸಮಸ್ಯೆಗಳನ್ನೂ ಸಂಬಂಧದ ತೊಡಕುಗಳನ್ನೂ ಹೊತ್ತು ತಂದಿದ್ದಾರೆ. ಈ ಸಂಬಂಧ ಹಾಗೂ ಸಮಸ್ಯೆಗಳ ಸ್ವರೂಪವೇ ಅವರ ಮಾತು, ಚಹರೆಗಳನ್ನು ನಿರ್ಧರಿಸುತ್ತವೆಯೆಂದೇ ನಿರೂಪಕ ಕತೆಯ ಹರಿವನ್ನು ಹಿಂತಿರುಗಿಸಿ ಆ ವಿವರಗಳನ್ನು ಒದಗಿಸುತ್ತಾನೆ. ಅವರು ಇಳಿದುಕೊಂಡ ಗೆಸ್ಟ್ ಹೌಸ್‌ನ ದುರವಸ್ಥೆ ಈ ಐವರ ಉತ್ಸಾಹವನ್ನು ತಗ್ಗಿಸುವುದರೊಂದಿಗೆ ವಿಹಾರವು ವಿಕಾರವಾಗುವ ಮುನ್ಸೂಚನೆಯನ್ನೂ ನೀಡುತ್ತದೆ. ನದಿಯಲ್ಲಿ ಮುಳುಗಿದವನ ಹುಡುಕಾಟ ಮುಂದುವರಿದಿದ್ದಾಗಲೇ ಗೆಸ್ಟ್ ಹೌಸಿನಲ್ಲಿ ಕಾದು ಕುಳಿತವರು ನೀರು ಪಾಲದವನು ತಿರುಗಿ ಬಂದಂತೆ, ವಿಹಾರ ಕಾರ್ಯಕ್ರಮ ವಿವಾಹ ಸಂಭ್ರಮವಾಗಿ ಬದಲಾದಂತೆ ಭ್ರಮಿಸುವ ಬೆಳದಿಂಗಳಲ್ಲಿ ಮಿಂದಿರುವ ಇಡೀ ದೃಶ್ಯವು ಮುಂದೆ ಅವರು ಎದುರಿಸಲಿರುವ ವಾಸ್ತವವನ್ನು ದಾರುಣವಾಗಿಸುತ್ತದೆ. ಈ ಕನಸು ವಾಸ್ತವಗಳ ಪ್ರತಿಯೊಂದು ವಿವರದಲ್ಲೂ ವೈದೃಶ್ಯವನ್ನು ಕಡೆದಿರುವುದೂ ಕುಶಲ ಕಲೆಗಾರಿಕೆಯೇ ಸರಿ. ಕತೆಯಲ್ಲಿ ಉದ್ದಕ್ಕೂ ಕಾಣುವ ಸದೃಶ ಮತ್ತು ವಿಷಯ ಸನ್ನಿವೇಶಗಳ ಜೋಡಣೆ ವಿಹಾರದ ಧ್ವನಿಶಕ್ತಿಯನ್ನು ಹೆಚ್ಚಿಸಿದೆ. + +(ಎಂ. ಜಿ. ಹೆಗಡೆ) + +‘ವಿಹಾರ’ಕ್ಕಿಂತ ‘ಹದ್ದು ಹಾರುವ ಹೊತ್ತು’ ಇನ್ನೂ ವಿಸ್ತಾರವಾದ ಕ್ಯಾನ್ವಾಸ್ ಹೊಂದಿರುವ ಕತೆ. ಊರಿಗೆ ಹೊಸತಾಗಿ ಬಂದು ಹೊರವಲಯದಲ್ಲಿ ಬಾಡಿಗೆ ಮನೆ ಮಾಡಿರುವ ಈ ಕತೆಯ ನಿರೂಪಕನು ಬಡಾವಣೆಯ ಪರಿಸರವನ್ನು ತಿಳಿದುಕೊಳ್ಳುವ ಹವಣಿಕೆಯಲ್ಲಿ ಕೇಳಿಸಿಕೊಂಡಿದ್ದೆಲ್ಲ ಕತೆಯ ಪ್ರಥಮಾರ್ಧವಾದರೆ ಉತ್ತರಾರ್ಧದ ಘಟನೆಗಳಿಗೆ ಆತ ಸಾಕ್ಷಿಯಾಗುತ್ತಾನೆ. ಹೀಗೆ ಹೊರಗಿನವನಾದ, ಆದರೆ ಒಂದು ಮಟ್ಟದಲ್ಲಿ ಭಾಗಿಯೂ ಆಗಿರುವ ನಿರೂಪಕನಿಗೆ ಎಲ್ಲಾ ಪಾತ್ರ ಮತ್ತು ಘಟನೆಗಳನ್ನು ಸನಿಹದಿಂದ, ಆದರೆ ವಸ್ತುನಿಷ್ಠವಾಗಿ, ನಿರೀಕ್ಷಿಸುವ ಅನುಕೂಲತೆ ಇದೆ. ನಿರೂಪಣೆಯ ದೃಷ್ಟಿಕೋನದ ಕುಶಲ ನಿರ್ವಹಣೆಯಿಂದಾಗಿ ದೇವಸ್ಥಾನ, ದೇವರು, ಧಾರ್ಮಿಕ ಸಂಕೇತಗಳೆಲ್ಲ ಜೀವನೋಪಾಯವಾಗಿ, ರಾಜಕೀಯ ದಾಳವಾಗಿ ಮಾರ್ಪಾಟಾಗಿರುವುದನ್ನಷ್ಟೇ ಹೇಳಬಹುದಾಗಿದ್ದ ಕತೆಗೆ ಮನುಷ್ಯ ಸಂಬಂಧಗಳ ನಿಗೂಢತೆ ಹಾಗೂ ವರ್ತನೆಗಳ ಅನೂಹ್ಯತೆಯನ್ನು ಕೂಡ ಧ್ವನಿಸಲು ಸಾಧ್ಯವಾಗಿದೆ. + + + +‘ಹದ್ದು ಹಾರುವ ಹೊತ್ತು’ ಕತೆಯ ಭಾಗಿ-ನಿರೂಪಕ ಹೊಸ ಊರಿನಲ್ಲಿ ಮನೆ ಮಾಡಿದ ಮೇಲೆ ತಾನು ಮಾಡಬೇಕಿದ್ದ ಅಗತ್ಯದ ಕೆಲಸಗಳಲ್ಲಿ ಮುಖ್ಯವಾದದ್ದೆಂದರೆ “ಬೇರೆಯ ಪ್ರಪಂಚ ಎಂದು ಭಾವಿಸಿದ್ದ ಊರಿನ ಪರಿಸರಕ್ಕೆ ಹೊಂದಿಕೊಳ್ಳುವುದಷ್ಟೇ” ಎನ್ನುತ್ತಾನೆ. ಗಟ್ಟಿಮುಟ್ಟಾದ ಸಂವಿಧಾನವನ್ನು ಹೊಂದಿರುವ ಪ್ರಸನ್ನರ ಕತೆಗಳು ಓದುಗನನ್ನು ಸಹಯಾತ್ರಿಯಾಗಿ ಜೊತೆಗೂಡಿಸಿಕೊಂಡು ಬೇರೆಯದೆಂದು ಭಾವಿಸಲ್ಪಟ್ಟಿರುವ ಪ್ರಪಂಚಕ್ಕೆ ಕರೆದೊಯ್ಯುತ್ತವೆ; ಅವನ ಕುತೂಹಲವನ್ನು ಪ್ರಚೋದಿಸುತ್ತ ಸದಾ ಕ್ರಿಯಾಶೀಲನಾಗಿರುವಂತೆ ನೋಡಿಕೊಳ್ಳುತ್ತವೆ; ಬೇರೆಯದೆಂದು ಭಾವಿಸಿದ್ದು ನಮ್ಮದೇ ಪ್ರಪಂಚ, ಅಲ್ಲಿಯ ನೋವು, ನಲಿವು, ಆತಂಕಗಳು ಥೇಟ್ ನಮ್ಮದೇ ಅಲ್ಲವೇ ಎನ್ನುವ ಸಹ-ಅನುಭೂತಿ ದೊರಕಿಸಿಕೊಡುತ್ತವೆ. ಕಥನ ಸಾರ್ಥಕವಾಗುವುದೇ ಹೀಗೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_121.txt b/Kenda Sampige/article_121.txt new file mode 100644 index 0000000000000000000000000000000000000000..4d2ad81a96a7712729d5e6e6b3833353137fca00 --- /dev/null +++ b/Kenda Sampige/article_121.txt @@ -0,0 +1,27 @@ +ವಜ್ರವನ್ನೇ “ಕೆಲಸಕ್ಕೆ ಬಾರದ ವಜ್ರದ ಹೊಳಪಿಗೆ ಮಾರು ಹೋಗುತ್ತೇವೆ ನಾವು” ಎಂದುಚ್ಛರಿಸುವ ಧೀಶಕ್ತಿ ಇರುವ ಆಶಾ ಜಗದೀಶರವರ ಎರಡನೆ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” . ಮಧ್ಯಾಹ್ನವೇ ನಡು. ಅಂಥದ್ದರಲ್ಲಿ ಮಧ್ಯಾಹ್ನದ ನಡು ಹೊತ್ತಿಗೆ ಕಣ್ಣು ತೆರೆದು ಅದರ ಝಳದ ಬೆಳಕಿನಲ್ಲಿ ಸ್ಪುರಿಸಿದ ಕವಿತೆಗಳಿವು. ಹಾಗಾಗಿ ಫಳ ಫಳ ಹೊಳೆಯುವ ಹೊಳಪಿನ ಅಂತರಂಗದ ಕವಿತೆಗಳಂತೆ ಭಾಸವಾಗುವುದರಲ್ಲಿ ತಪ್ಪಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಅವರದೇ ಆದ ಖಾಸಗಿ ಬದುಕಿನ ಸ್ವಗತಗಳೆ ಹೆಚ್ಚಿನದೆಲ್ಲ ಕವಿತೆಗಳ ವಸ್ತುಗಳಾಗಿವೆ. ಕವಿತೆ ಎಂದರೆ ಇದೇ ತಾನೇ ಅಲ್ಲವೇ? ನಮ್ಮದೇ ಏಕಾಂತದಲ್ಲಿ ನಾವನುಭವಿಸಿದ ತಲ್ಲಣಗಳು, ಲೋಕದೊಳಗೆ ಗುರುತಿಸಿದ ಸೂಕ್ಷ್ಮಾತಿ ಸೂಕ್ಷ್ಮ ಪದರಗಳು, ಒಟ್ಟಿನಲ್ಲಿ ತನ್ನ ಸ್ವ-ವಿಮರ್ಶೆಗಳೆ ಇಲ್ಲಿ ಕವಿತೆಗಳಾಗಿವೆ ಎನ್ನಬಹುದು. ಕನ್ನಡ ಕವಿತೆಯ ಲೋಕ ಹಿಡಿಯಬೇಕಿರುವ ಸರಿಯಾದ ದಾರಿಯಲ್ಲೇ ಇವರ ಕವಿತೆಗಳು ಚಲಿಸುತ್ತಿವೆ. ನವ್ಯ ಕವಿತೆಗಳ ನಾಡಿಮಿಡಿತವನ್ನು ಕವಯತ್ರಿ ಹೃದ್ಯವಾಗಿ ಧ್ವನಿಸಿದ್ದಾರೆ. ತುಂಬಾ ಆಳವಾದ ಆಲೋಚನೆಗಳೊಂದಿಗೆ ಹೊಸ ಸ್ವರೂಪದ ಕವಿತೆಗಳನ್ನು ನಾವಿಲ್ಲಿ ಕಾಣಬಹುದು. + +(ಆಶಾ ಜಗದೀಶ್‌) + +“ಭೂಮಿ ಮತ್ತು ಆಕಾಶಗಳು /ತಮ್ಮ ಪ್ರೇಮ ಕಿತಾಬಿನಲ್ಲಿ ಇನ್ನೂ ಸ್ಕಲಿಸಬೇಕಿರುವ ಅಸಂಖ್ಯ ಅಸ್ಕಲಿತ/ ಪ್ರೇಮ ನಿವೇದನೆಗಳ/ಅಡಿ ಮತ್ತು ಮುಡಿಗೆ / ನುಡಿ ದಾನ ಮಾಡುತ್ತಿದೆ” ಹೀಗೆ ಸಿಹಿಯಾಗಬೇಕೆಂಬ ಕವಿತೆಯಲ್ಲಿ ಅಗಾಧ ಕಡಲು, ನಿಗೂಢ ಭೂಮಿ ಮತ್ತು ಆಕಾಶಗಳ ಕುರಿತು ಇನ್ನೂ ಆಳವಾಗಿಯೆ ನಮ್ಮೊಡನೆ ತೆರೆದಿಟ್ಟಿದ್ದಾರೆ. ತನ್ನೊಳಗಿನ ಭಾವನೆಗಳನ್ನೆಲ್ಲ ಪ್ರೇಮದ ಪಿಸು ಮಾತಿನಲ್ಲಿ ಅರುಹಿ ಮೈಮನಗಳನ್ನು ಹಗುರಾಗಿಸಿಕೊಂಡ ಕೀರ್ತಿ ಇಲ್ಲಿನ ಕವಿತೆಗಳಿಗೆ ಸಲ್ಲಬೇಕು. ಕವಿತೆಯ ಭಾವವನ್ನು ಸಾರ್ವಕಾಲಿಕ ಮಾಡಿ ತಮ್ಮ ನವಿರು ಪ್ರೀತಿ ಪ್ರೇಮದ ತಲ್ಲಣಗಳನ್ನು ಕಂಡು ಕಾಣದಂತೆ ಸಂವೇದಿಸಿದ್ದಾರೆ. ಕವಿತೆಯ ಸಖ್ಯದಿಂದ, ದಾಂಪತ್ಯ ಸಖ್ಯವನ್ನು ಓದುಗರು ತಮ್ಮ ಬಾಳಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ ಕವಿತೆಗಳು ಅಷ್ಟೊಂದು ಆಪ್ತವಾಗಿ, ಅಪ್ಯಾಯಮಾನವಾಗಿ ನಮ್ಮನ್ನು ತಟ್ಟುತ್ತವೆ. ಇಂಥ ಸಂದರ್ಭದಲ್ಲೇ ಕವಿತೆ ಸಾರ್ಥಕತೆಯನ್ನು ಪಡೆದುಕೊಳ್ಳುವುದು. + +“ರಾತ್ರಿಯ ತಂಪು ಸುಡುತ್ತಿದೆ / ನಿಶ್ಯಬ್ದದ ಗದ್ದಲ ಕಿವಿ ತಮಟೆಯ ಹರಿಯುತ್ತಿದೆ” ಹೀಗೆ ಪ್ರೀತಿ, ಪ್ರೇಮ, ವಿರಹದ ಜಾಡು ಹಿಡಿದು ಅದರ ಚುಂಗು ಬಿಡದೆ ಹರಿಬಿಟ್ಟ ಒಲವಿನ ಸಾಲುಗಳ ಹೂರಣವೆ ಇಲ್ಲಿದೆ. ‘ಸಾವು’ ಎಂಬ ಅರ್ಥಗರ್ಭಿತ ಕವಿತೆಯಲ್ಲಿ, ಕೊನೆಯದಾಗೊಮ್ಮೆ ನಿನ್ನೊಂದಿಗೆ ಕಳೆದ ಪುರಾತನ ಕ್ಷಣವೊಂದನ್ನು/ ಸೋರುವ ಮೊಲೆ ತೊಟ್ಟಿನ ಬುಡದಲ್ಲಿ ಹಚ್ಚಿಟ್ಟು / ಎರಡೆಸಳು ಚಿಗುರುವವರೆಗೂ / ಅದನ್ನು ಕಾಯಿಸಬೇಕೆನಿಸುತ್ತದೆ. ಹೀಗೆ ಮಾರ್ಮಿಕವಾಗಿ ಕವಯತ್ರಿ ಹೇಳುತ್ತಾರೆ. + +ಕವಯತ್ರಿಯ ಪಾಲಿಗೆ, ಕಾವ್ಯವೊಂದು ಪ್ರೀತಿಯ ಸೆಲೆ, ರೂಪಕಗಳ ಮಾಲೆ ಎನ್ನಬಹುದು. ಮನಸ್ಸು ಕೂಡ ಸೂಕ್ಷ್ಮತೆಯ ಕಣಜದ ಭಾರವನ್ನು ಹೊತ್ತಿದೆ. ಇಲ್ಲವೆಂದರೆ ‘ಅಮ್ಮ ಮತ್ತು ಹೊಲಿಗೆ’ ಎಂಬ ಅದ್ಭುತ ಕವಿತೆ ಹುಟ್ಟಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. + +“ಅಮ್ಮ ಮತ್ತೆ ಮತ್ತೆ ಹೇಳಿಕೊಡುತ್ತಾಳೆ/ ಹೊಲಿಗೆ ಹಾದಿಗೆ ಬರುತ್ತದೆ/” ಮೆಷಿನ್ನಿನ ರೂಪಕದೊಂದಿಗೆ ಬದುಕಿನ ಪಾಠವ ತಿಳಿಸುವ ಕಾವ್ಯ ನಾವೆಲ್ಲರೂ ಅತಿಯಾಗಿ ಮೆಚ್ಚುವಂತಿದೆ. ಒಂದು ಕಾವ್ಯಧರ್ಮಕ್ಕೆ ಇರಬೇಕಾದ ನಿಪುಣತೆ ಮತ್ತು ಸೃಜನಶೀಲತೆ ಇವರ ಬರಹದಲ್ಲಿದೆ. ಕಾವ್ಯ ಸಂಯೋಜನೆಯನ್ನು ಕೂಡ ಚೆನ್ನಾಗಿ ಅರಿತಂತಹ ಕೌಶಲ್ಯ ಇವರ ಕವಿತೆಗಳದ್ದು. “ಎಲ್ಲವನ್ನೂ ಕುಬ್ಜ ವಾಗಿಸುತ್ತ ಬೆಳೆದ ಅಮ್ಮ /ಹೆಮ್ಮರದ ಸೂಚನೆಯನ್ನು ನೀಡುತ್ತಾ / ನನ್ನೊಳಗೂ ಬೀಜವಾಗಿದ್ದಾಳೆ / ಅಮ್ಮನಂತಿದ್ದು ಅಮ್ಮನಂತಾಗದಿರುವ / ಎಚ್ಚರವಾಗುಳಿದಿದ್ದಾಳೆ ನನ್ನೊಳಗೆ”. ಹೀಗೆ ಕವಿತೆಯೆಂದರೆ ಕೇವಲ ಕವಿತೆಯಲ್ಲ ಇವರ ಪಾಲಿಗೆ- ಅದು ಬದುಕಿನ ಭಾವವು ಹೌದು, ಬದುಕಿನ ಭಾಗವು ಹೌದು ಎಂಬುದಾಗಿ ಗೋಚರಿಸುತ್ತದೆ. + + + +ನಡು ಮಧ್ಯಾಹ್ನದ ಕಣ್ಣು ಸಂಕಲನದಲ್ಲಿ ಪದಗಳಲ್ಲಿಯೆ ಪದ್ಯವನ್ನು ಅಡಗಿಸಿಟ್ಟು ಹೆಣೆಯುವುದರೊಂದಿಗೆ, ಕನ್ನಡದ ಶಬ್ದಗಳನ್ನು ಜೊತೆಗೆ ಕನ್ನಡ ಭಾಷೆಯನ್ನು ಅಷ್ಟೇ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ನಿಕ್ಕಿಯಾಗಬೇಕು, ಹತ್ಯಾರು, ಅಗೇವು, ಮಿಡಿನಾಗರ, ಶತರಂಗಿ, ಕರತಲಾಮಲಕ, ಗತ್ಯಂತರ, ದೈನೇಸಿತನ, ಅಟೆದಂತಾಗಿ, ಅಂತಃಚಕ್ಷು, ಬಿಸಿಲಕೋಲು, ಈಕ್ಷಿಸು, ಯಮಳ ಯುಗ್ಮ, ಸ್ಪೃಹ, ಚುಚ್ಚುಗವನ್ನೀಗ ಇತ್ಯಾದಿ ಪದಗಳೆಲ್ಲ ಹೊಸ ಅನುಭೂತಿಯನ್ನು ನಮಗೆ ನೀಡುತ್ತದೆ. ಈಗಿನ ಅತ್ಯಾಧುನಿಕ ಕನ್ನಡದ ಕವಿತೆಗಳು ಎಂದು ಕರೆಯಲ್ಪಡುವ ಎಲ್ಲ ಲಕ್ಷಣಗಳೂ ಇಲ್ಲಿವೆ. ಕನ್ನಡದ ವಿಶೇಷ ಪದಗಳೊಂದಿಗೆ ಇಂಗ್ಲಿಷ್ ಮತ್ತು ಹಿಂದಿಯ ಪದಗಳನ್ನು ಸಹ ಕವಿತೆಯ ಸ್ವಾದಕ್ಕೆ ತೊಡಕಾಗದಂತೆ ಲೀಲಾಜಾಲವಾಗಿ ಬಳಸಿಕೊಂಡಿದ್ದಾರೆ. + +ಕೃತಿಯ ಮುನ್ನುಡಿಗೆ ಲಲಿತಾ ಸಿದ್ಧಬಸವಯ್ಯ ಶೀರ್ಷಿಕೆ ಕೊಟ್ಟು ಹೇಳಿದಂತೆ, ‘ಹೊಸ ರೂಪಕಗಳ ಹೊಸ ಪದಕೂಟದ ಕವಿ’ ಎಂಬುದು ಇವರ ಕವಿತೆಗಳಿಗೆ ಚೆನ್ನಾಗಿ ಒಪ್ಪುತ್ತದೆ. ಕವಿತೆಗಳನ್ನು ಭ್ರಮಾ ಲೋಕದ ಸಾಲುಗಳಂತೆ ಬಿಂಬಿಸದೆ ವಾಸ್ತವಕ್ಕೆ ಹತ್ತಿರ ಬಂದು ನಿಲ್ಲಿಸಿದ್ದಾರೆ. ಬದುಕು ಮತ್ತು ಕವಿತೆ ಒಂದಕ್ಕೊಂದು ಮುಖಾಮುಖಿಯಾಗುವಂತೆ ನಮಗಿಲ್ಲಿ ಭಾಸವಾಗುತ್ತದೆ. + +ಸ್ತ್ರೀ ಬದುಕಿನ ಅಗಾಧತೆ ಮತ್ತು ಸ್ತ್ರೀಯ ಇತಿಮಿತಿಯೊಳಗಿನ ಬದುಕು ಅನಾವರಣಗೊಳ್ಳುವ ಕವಿತೆಗಳಾದ ಹೂವಿಡುವಷ್ಟೆ ನಿಧಾನವಾಗಿ, ನಾವು ಸ್ವಲ್ಪ ಹೀಗೆ, ಆಸೀಫಾ, ಅವಳು, ಅಡುಗೆಯಾಟದ ಹುಡುಗಿ ಮುಂತಾದ ಕವಿತೆಗಳು ಮಹಿಳೆಯ ಅಂತರಂಗವನ್ನು ಬಿಂಬಿಸುತ್ತವೆ. ಕವಯತ್ರಿ ಆಶಾ ಅಭಿಮಾನದಿಂದ ಅಭಿವ್ಯಕ್ತಿ ಪಡಿಸಿದ ಸ್ತ್ರೀಯ ಬಗೆಗಿನ ಈ ಸಾಲು ಪ್ರತಿ ಹೆಂಗಳೆಯರ ಹೆಮ್ಮೆ. “ಹೋಗಲಿ ಬಿಡಿ ನೀವವಳನ್ನು ಆಪಾದ ಮಸ್ತಕವೇ/ ನೋಡಿದುದು ಸರಿಯೇ ಏಕೆಂದರೆ/ ದೇವತೆಯನ್ನು ಹಾಗೆಯೇ ನೋಡಬೇಕಂತೆ” + +ನಿಜ ಪ್ರತಿ ಹೆಣ್ಣು ದೇವತೆಯೆ ಆಗಿದ್ದಾಳೆ. + + + +ಇಲ್ಲಿನ ಪ್ರತಿ ಕವಿತೆಯು ಒಂದೊಂದು ಸಂದೇಶ ಸಾರುವಂತಿದೆ. ವಿಷಾದ, ಟೀಕೆಗಳು ಒಂದೊಂದು ಕಡೆ ನಮ್ಮನ್ನು ಎಚ್ಚರಿಸುತ್ತವೆ. ಹೆಚ್ಚಿನ ಕವಿತೆಗಳು ಹೆಣ್ಣಿನ ಭಾವವನ್ನು ಸ್ಪುರಿಸುತ್ತ ವೈಯುಕ್ತಿಕತೆಯನ್ನು, ಸಾಮಾಜಿಕತೆಯನ್ನಾಗಿಸಿ ಸಮಾಜವನ್ನು ಧೈರ್ಯವಾಗಿ ಎದುರಿಸುವ ನೀತಿ ಪಾಠ ಹೇಳಿಕೊಟ್ಟಂತಿದೆ. ಸಂಕಲನವನ್ನು ಓದಿದ ಮೇಲೆ, ನಿಗೂಢವಾಗಿದ್ದ ಹೆಣ್ಣಿನ ಮನಸ್ಸೊಂದು ಈಗ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಾಗಿದೆ ಎಂಬುದಾಗಿ ನಮಗಿಲ್ಲಿ ಭಾಸವಾಗುತ್ತದೆ. ತುಂಬು ಆತ್ಮವಿಶ್ವಾಸದಿಂದ ಬರೆದ ಈ ಕವಿತೆಗಳಿಗೆ ಅಪಾರ ಜನ ಮನ್ನಣೆ ಸಿಗಲಿ ಎಂಬುದಾಗಿ ನಮ್ಮ ಕಾಲದ ಮಹತ್ವದ ಕವಯತ್ರಿ ಆಶಾರವರಿಗೆ ನಾವೆಲ್ಲರೂ ಮನಪೂರ್ವಕವಾಗಿ ಹಾರೈಸೋಣ. + +ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_122.txt b/Kenda Sampige/article_122.txt new file mode 100644 index 0000000000000000000000000000000000000000..4a1b48e9672cb1767c0360ebee00d6eec331049e --- /dev/null +++ b/Kenda Sampige/article_122.txt @@ -0,0 +1,25 @@ +ಮನುಷ್ಯ ಎಂಬ ಪ್ರಾಣಿಯನ್ನು ಹೊರತು ಪಡಿಸದೆ ಸಕಲ ಜೀವಸಂಕುಲಗಳ ಉಳಿವು ನಿರ್ಧಾರಿತವಾಗುವುದು ಯಾವುದೇ ಬೌದ್ಧಿಕನೆಲೆಯಲ್ಲಿ ಆಗಿರದೇ ‘ಅಡಾಪ್ಟಬಿಲಿಟಿ’ಯ ಮೇಲೆ ನಿಂತಿರುತ್ತದೆ ಎನ್ನುವುದು ಡಾರ್ವಿನ್ನಿನ ಉವಾಚ. ಇಂದ್ರಕುಮಾರ್ ಎಚ್.ಬಿ. ಅವರ ಹೊಸ ಕಾದಂಬರಿ ‘ಎತ್ತರ’ ಈ ಥಿಯರಿಯನ್ನು ಕೃತಿಕಾರನ ಕಲ್ಪನೆಯಲ್ಲಿ ಎಲ್ಲ ಪ್ರಯೋಗಗಳನ್ನು ಪಡೆದುಕೊಂಡು ಸೋದಾಹರಣವಾಗಿ ವಿವರಿಸುತ್ತದೆ ಎಂದು ನನಗೆ ಅನಿಸುತ್ತದೆ. ಪ್ರಕೃತಿ ಮತ್ತು ಪ್ರಕೃತಿಯ ಅಂತರ್ಗತ ಸತ್ವವಾದ ಮನಸ್ಸು ಎಂಬುದರ ಜೊತೆ ನಿರಂತರವಾಗಿ ಏರ್ಪಡುವ ಸಂಘರ್ಷವನ್ನು ನಿಭಾಯಿಸಿಕೊಳ್ಳಬೇಕು ಮತ್ತು ಸ್ವಸ್ಥವಾಗಿ ಬದುಕಲು ಬೇಕಾಗಿರುವ ಸಾಮರಸ್ಯವನ್ನು ಕಂಡುಕೊಳ್ಳಲೇ ಬೇಕಾಗಿರುತ್ತದೆ. + +(ಇಂದ್ರಕುಮಾರ್ ಎಚ್.ಬಿ.) + +ಇದು ಕೃಷ್ಣಮೂರ್ತಿ ಮತ್ತು ರವಿಕಿರಣ ಎಂಬ ಎರಡು ಹೆಸರಿರುವ ವ್ಯಕ್ತಿಯ ದಾವಣಗೆರೆ – ಚಿತ್ರದುರ್ಗ ಎಂಬ ನಾಗರೀಕ ಹಾಗೂ ಕತ್ಲೆಕಾನು ಎಂಬ ಪ್ರಾಕೃತಿಕ ಎಂಬ ಎರಡೆರಡು ಜಗತ್ತುಗಳ ನಡುವಿನ ತಾಕಲಾಟದ ವ್ಯಥೆ. ಇದನ್ನು ಕಥೆಯಾಗಿಸುವವರು ಪಾರ್ವತಿ, ಪುಟ್ಟ, ಲಲಿತಾ, ಕಾದಂಬರಿ, ಸರಿತಾ, ವಿಮಲಾ, ಕೌಸಲ್ಯಮ್ಮ, ಗಣಪಯ್ಯಜ್ಜ, ಸರಳಾ… ಇನ್ನಿತರರು. ಅದೃಶ್ಯ ವಿಕಿರಣವನ್ನು ಹೊರಸೂಸಬಲ್ಲ ಲಿಂಗ ಪ್ರಧಾನ ರೂಪಕ. + +ಹೈರಾರ್ಕಿಯನ್ನು ಕಣ್ಣಿಗೊತ್ತಿಕೊಂಡು ಆಚರಿಸುವ ವಿದ್ಯಾವಂತ ಸಮಾಜದ ಸಾಂಸ್ಥಿಕ ರೂಪವಾದ ಕಾಲೇಜೊಂದರಲ್ಲಿ ಶೋಷಿತನಾಗಿ, ಅಸಹಾಯಕನಾಗಿ, ವಂಚಿತನಾಗಿ ಅನ್ಯಾಯಕ್ಕೊಳಗಾಗಿದ್ದ ನಿರೂಪಕನನ್ನು ಅನ್ನ ನೀರಿನ ಜೊತೆ ಅಸ್ತಿತ್ವದ ಅರ್ಥವನ್ನು ಹುಡುಕಿಕೊಳ್ಳುವ ಸಮಯಾವಕಾಶ ನೀಡಿ ‘ಕತ್ಲೆಕಾನು’ ಪೊರೆಯುತ್ತದೆ. ಈ ಕಾನನದ ಬಹುಸ್ತರೀಯ ನಿವಾಸಿಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಲಿಂಗೀಯ ಹೈರಾರ್ಕಿಗಳನ್ನೆಲ್ಲ ಸಲೀಸಾಗಿ ಮತ್ತು ಸಹಜವಾಗಿ ಬದಿಗೆ ಸರಿಸಿ ಅಪರಿಚಿತನೊಡನೆ ಬಾಂಧವ್ಯ ಬೆಳೆಸಿಕೊಳ್ಳಬಲ್ಲವರಾಗಿದ್ದಾರೆ. ಹಾಗಂತ ಇದೇನು ಅಮಾಯಕವಾದ ಪ್ರಪಂಚವಲ್ಲ. ಇಲ್ಲೂ ಆಟವಿದೆ. ಯಾರು ಪ್ರಿಡೇಟರ್ ಯಾರು ಪ್ರೇ ಎಂದು ಕಂಡುಕೊಳ್ಳಲು ಹೆಣಗಾಡುವ ಆಟ. ನಿರೂಪಕ ಏನೆಲ್ಲ ಗೊಂದಲ ದ್ವಂದ್ವಗಳ ಜೊತೆಗೇ ಕತ್ಲೆಕಾನಿನ ಈ ಸೆಟ್ ಆಫ್ ಲೇಡೀಸ್ ಜೊತೆ ಸೆಣಸಾಡಬೇಕು. ಅವರೋ ಸ್ತ್ರೀ ಸಹಜ ಶಿಸ್ತು, ಸಂಯಮ, ಸಂಕಲ್ಪಶಕ್ತಿಗಳ ಗಟ್ಟಿತನದ ಜೊತೆ ಹಲವಾರು ಪಟ್ಟುಗಳನ್ನು ಕಲಿತವರು. ತಮ್ಮ ನಿಗೂಢತೆ, ಕೌಶಲ್ಯ, ತಂತ್ರಗಳಿಂದ ಮಾರ್ವೆಲ್ಲಿನ ಫ್ರಾಂಚೈಸಿಯ ಪಾತ್ರಗಳನ್ನು ನೆನಪಿಸುವಂಥವರು. ಇವರೆಲ್ಲರೂ ಕಥಾನಾಯಕನ ಅನಿಶ್ಚಿತತೆ, ಆ್ಯಂಕ್ಸೈಟಿ, ಆಗಾಗ ಆವರಿಸುವ ಅನಾಸಕ್ತಿ ಮತ್ತು ನಿಶ್ಯಕ್ತಿಯನ್ನು ಚಿತ್ತು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಈ ಅಂತಃಕರಣದ ಗುಣವೇ ಬದುಕಲು ಆಸರೆ ಆಗುವಂಥಹುದು. + +ಮನಸ್ಸಿನ ಮನೋವಿನ್ಯಾಸಗಳ ಪ್ರಕ್ರಿಯೆ ಮತ್ತು ಪರಿಸರದ ಪಾಲ್ಗೊಳ್ಳುವಿಕೆಯಿಂದ ಉಂಟಾಗುವ ತರ್ಕದ ಜೊತೆಗೆ ಊಹೆಗೂ ನಿಲುಕದ ಪರಿಸ್ಥಿತಿಗಳು ಪತ್ತೇದಾರಿಕೆಯಿಂದ ಮಾಂತ್ರಿಕ ವಾಸ್ತವವಾದ, ಅತಿವಾಸ್ತವವಾದದವರೆಗೂ ಶೈಲಿಯನ್ನು ವಿಸ್ತರಿಸುತ್ತವೆ. + +ಪಲಾಯನಗೈದು ಪರಸ್ಥಳಕ್ಕೆ ಬಂದಿರುವ ಕಥಾನಾಯಕ ಎದುರುಗೊಳ್ಳುವುದು ಗಟ್ಟಿಯಾಗಿ ನೆಲೆನಿಂತವರು ಮತ್ತು ಜಿಗುಟುತನದಲ್ಲಿ ಜೀವಿಸುತ್ತಿರುವವರು ಮತ್ತು ಅವರೆಲ್ಲರೂ ಕಥಾನಾಯಕ ಅವರು ಪ್ರತಿನಿಧಿಸುವ ಜೀವನಕ್ರಮದ ಮೇಲೆ ಕಟ್ಟಿಕೊಳ್ಳುವ ಸ್ಟೀರಿಯೋಟೈಪ್‌ಗಳಾಗಿರದೇ ಹಲವಾರು ತಿರುವುಗಳನ್ನು ಅಚ್ಚರಿಯನ್ನುಂಟುಮಾಡುವುದು ಕಥಾಹಂದರವಾಗಿದೆ. ತಾನು ತಯಾರಿಸಿದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲು ಸಿರ್ಸಿ ಯಲ್ಲಾಪುರ ಪೇಟೆಗಳಿಗೆ ಹೋಗಿ ಬಂದಷ್ಟೇ ಸಲೀಸಾಗಿ ಸರಿತಾ ನಿಗೂಢ ಚಕ್ರವ್ಯೂಹದೊಳಗೆ ಹೋಗಿ ಬಂದು ಮಾಡಬಲ್ಲಳು. ಕಾದಂಬರಿ, ಲಲಿತಾ ತಮ್ಮ ಬಗ್ಗೆ ಇತರರಿಗೆ ಅಭಿಪ್ರಾಯ ಮೂಡಿಸಿಕೊಳ್ಳಲು ಅನುವು ಮಾಡಿಕೊಡುತ್ತಲೇ ಹಿಂದಿನಿಂದ ಕೆಡವುತ್ತ ಬರಬಲ್ಲರು. ಪಾರ್ವತಿಯದು ಫೀನಿಕ್ಸ್ ಪ್ರತಿಭೆ. + + + +ಒಟ್ಟಾರೆ ಇವರೆಲ್ಲರೂ ಹಳೆಕಾಲದ ಟ್ರಂಕಿನೊಳಗೆ ಘಾತುಕ ರಹಸ್ಯವನ್ನು ತಣ್ಣಗೆ ಮಡಚಿಡಬಲ್ಲರು. ಹಾಗೆಯೇ ಮಡಿಲಿನಲ್ಲಿ ಮಲಗಿರುವ ಬೆಕ್ಕಿನ ಮರಿಯನ್ನು ಅತಿ ಅನೌಪಚಾರಿಕವಾಗಿ ಕೆಳಗಿಳಿಸುವಂತೆ ಗುಟ್ಟು ಬಿಟ್ಟುಕೊಡಬಲ್ಲವರು. ರಾಜಕಿಶೋರ, ಸರಳ, ಸುಗುಣೇಶ, ಮಾಧವ ಎಂಬ ಚುಕ್ಕಿಪಾತ್ರಗಳೆಲ್ಲ ಇವನನ್ನು ಸುಳಿಯ ಇನ್ನಷ್ಟು ಒಳಗೆ ಸೆಳೆಯಬಲ್ಲವರು. ಇವರೆಲ್ಲರಿಂದ ಸುತ್ತುವರೆದಿರುವ ಕಥಾನಾಯಕನಿಗೆ ಸಾವಯವ ಸಂಬಂಧದ ತಾದ್ಯಾತ್ಮ ಸಾಧ್ಯವಾಗುವುದು ‘ಒಂದು ಸುತ್ತು ಕಡಿಮೆ’ ಇರುವ ವಿಮಲಾಳೊಂದಿಗೆ. ನಾಣ್ಯ ಅವರ ನಡುವಿನ ಸಂವಾದದ ಭಾಷೆ. ವಿಮಲಾಳ ಕೈಯಲ್ಲಿ ನೇರವಾಗಿ ನಿಂತುಬಿಡುವ ನಾಣ್ಯ – ಈ ಕಥಾನಕದ ಅನಿಶ್ಚಿತ ಕ್ಲೈಮ್ಯಾಕ್ಸ್. + +ಮೀನುಸಾರಿನ ಘಮಲು, ಕ್ವಾಂಟಮ್ ಫಿಸಿಕ್ಸ್‌ನ ಜಿಜ್ಞಾಸೆ, ಫಲವತ್ತತೆಗೆ ಆದೀತು, ಚಿರಯೌವನಕ್ಕೆ ಆದೀತು, ಅಮರತ್ವಕ್ಕೆ ಆದರೆ ಆದೀತು ಎನ್ನುವ ‘ಟ್ರಯಲ್ ಅಂಡ್ ಎರರ್ ಮೋಡ್’ನಲ್ಲಿರುವ ಹಸಿರು ಜ್ಯೂಸ್‌ಗಳ ಲೋಕದಲ್ಲಿ ಅಂತಿಮವಾಗಿ ತಾನೇ ಪರಿಸರ, ಪ್ರಜ್ಞೆ, ವಿದ್ಯಮಾನ, ತಾನೇ ಕಾರ್ಯಕಾರಣ ಎಂಬ ತಲ್ಲಣದಿಂದ ‘ತತ್ವಮನೆ’ಯವರೆಗಿನ ರೂಪಾಂತರ ಈ ‘ಎತ್ತರ’. + +ಈ ಕಾದಂಬರಿಯು ಓಪನ್ ಎಂಡೆಡ್ ಆಗಿ ಮುಕ್ತಾಯಗೊಳ್ಳುತ್ತದೆ ಎನ್ನುವುದಕ್ಕಿಂತ ‘ಟು ಬಿ ಕಂಟಿನ್ಯೂಡ್…’ ಮಾದರಿಯದು ಎಂದು ಹೇಳಬಹುದು. ಸೃಜನಶೀಲ ಸಾಹಿತ್ಯದ ಬಗೆಗಿನ ಬದ್ಧತೆ ಮತ್ತು ಜೀವನದ ಡೈನಾಮಿಕ್ಸ್ ಬಗೆಗಿನ ತಣಿಯದ ಕೌತುಕ ಇಂದ್ರಕುಮಾರ್ ಅವರನ್ನು ತೀಕ್ಷ ಮತ್ತು ಸಮೃದ್ಧ ಬರಹಗಾರರನ್ನಾಗಿಸುತ್ತದೆ. + + + +ಎತ್ತರ ಎತ್ತರವಷ್ಟೇ ಅಲ್ಲದೇ ಆಳ, ಅಗಲ… ಎಲ್ಲ ಆಯಾಮಗಳಲ್ಲೂ ಸಮೃದ್ಧವಾಗಿದೆ. ವಿಶೇಷವಾಗಿ ಪ್ರಾಂತೀಯ ಭಾಷಾಬಳಕೆಯನ್ನು ಶ್ಲಾಘಿಸಲೇಬೇಕು. ಇಂದಿನ ಕನ್ನಡ ಸಾಹಿತ್ಯದ ಪ್ರಮುಖ ಕಥೆಗಾರರೆನಿಸಿಕೊಳ್ಳುತ್ತಿದ್ದ ಇಂದ್ರಕುಮಾರ್ ಎಚ್.ಬಿ. ಅವರು ಪ್ರಮುಖ ಕಾದಂಬರಿಕಾರರೂ ಎನ್ನುವ ಪಟ್ಟವನ್ನು ಗಳಿಸಿಕೊಂಡಿರುವುದಕ್ಕೆ ಅಭಿನಂದನೆಗಳು. + +ಮಮತಾ ಆರ್ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದವರು. ಇಂಗ್ಲಿಷ್ ಭಾಷಾ ಸಹಾಯಕ ಪ್ರಾಧ್ಯಾಪಕರು ಹಾಗೂ ಕವಿ, ಕಥೆಗಾರ್ತಿಯಾಗಿದ್ದಾರೆ. ಜಾಗತಿಕ ಸಾಹಿತ್ಯವನ್ನು ಅಪಾರವಾಗಿ ಓದಿಕೊಂಡಿರುವ ಇವರು, ತಮ್ಮ ಕಥೆಗಳಿಗಾಗಿ ಪ್ರಜಾವಾಣಿ, ವಿಜಯವಾಣಿ, ಇನ್ನೂ ಅನೇಕ ಬಹುಮಾನಗಳನ್ನು ಪಡೆದಿದ್ದು, ‘ಅತಿ ತಲ್ಲಣ ಅತಿ ನಿಶಬ್ದ’ ಎನ್ನುವ ಕಥಾಸಂಕಲನವನ್ನು, ‘ಒಂಚೂರು ಅಪಚಾರವೆಸಗದ ಅನುಭವಗಳು’ ಎನ್ನುವ ಕವನಸಂಕಲನವನ್ನು ಪ್ರಕಟಿಸಿದ್ದಾರೆ. ಭಾರತೀಯ ಸಿನಿಮಾಗಳ ಮೇಲೆ ಪಿಎಚ್‌ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. \ No newline at end of file diff --git a/Kenda Sampige/article_123.txt b/Kenda Sampige/article_123.txt new file mode 100644 index 0000000000000000000000000000000000000000..5312ef00d1c6deb8f85b483ea02e305fd20b4b81 --- /dev/null +++ b/Kenda Sampige/article_123.txt @@ -0,0 +1,23 @@ +ಇನ್ನೊಂದು ತಿಂಗಳು ಹುಬ್ಬಳ್ಳೀಲಿ ವಾಸ್ತವ್ಯ… ಹೋದ ಸಲ ಅಲ್ಲಿ ಮಾಡಿದ್ದ ಹೋಟೆಲಿನ ರೂಮು ಸರಿ ಇರಲಿಲ್ಲ… ಹಾಗಂತ ಹೇಳಿದ್ದಕ್ಕೆ ಈ ಸಲ ಯಾರದೋ ಮನೆ ಮೇಲ್ಗಡೆ ರೂಮಿನ ವ್ಯವಸ್ಥೆ ಮಾಡಿದೀನಿ ಅಂದ ನರಸು… ಕ್ಲೀನಾಗಿ ಇದ್ದರಾಯ್ತು… ಅಂದ ಚಂದ ನಾನು ಮಾಡ್ಕೋತೀನಿ. ಮನುಷ್ಯನಿಗೆ ರಸಿಕತೆ ಇರ್ಬೇಕು… ಅಭಿರುಚಿ ಇರ್ಬೇಕು… ತಾನಿರೋ ಪರಿಸರದ ಸುತ್ತಮುತ್ತಲು ಮನಸಿಗೆ ಮುದ ಕೊಡೋ ಹಾಗೆ ಇರೋತರ ಚಂದವಾಗಿಟ್ಟಿರಬೇಕು… ಹ್ಯಾಗಿಟ್ಟಿದೀನಿ ನನ್ನ ‘ಆನಂದ ನಿಲಯ’ ಬಂಗಲೇನ..? ಪ್ರತೀ ರೂಮಿಗೂ ಬೇರೆಬೇರೆ ಬಣ್ಣದ ಕರ್ಟನ್ಸು.. ಮತ್ತೆ ಆ ರೂಮಿನಲ್ಲಿ ಆ ಕರ್ಟನ್ನಿನ ಬಣ್ಣದ್ದೇ ಕಾರ್ಪೆಟ್ಟು… ಅದಕ್ಕೆ ಹೊಂದೋ ಹಾಗೆ ಬೆಡ್ ಸ್ಪ್ರೆಡ್ಡು., ಬ್ಲಾಂಕೇಟುಗಳು… ಮನೆ ಸುತ್ತ ಹೂವಿನ ಗಿಡಗಳು… ಯಾವುದೇ ರೂಮಿನ ಕಿಟಕಿ ತೆರೆದ್ರೂ ಹೊರಗಡೆ ಸೀಲಿಂಗ್‌ನಿಂದ ಕೆಳಗೆ ತೂಗ್ತಾ ಇರೋ ಹ್ಯಾಂಗಿಂಗ್ ಪಾಟ್ಸ್ ಕಾಣಿಸಬೇಕು..! ಚಿಕ್ಕಮ್ಮನ ರೂಮಿನ ಒಳಗಡೆಯಿಂದ ಸ್ಟೋರ್ ರೂಮಿಗೆ ಹೋಗೋಕ್ಕೆ ಒಂದು ಬಾಗಿಲಿದೆ… ಅದೂ ಸ್ವರ್ಗದ ಬಾಗಿಲ ಥರ ‘ಆಂ’ ಅಂತ ಇಷ್ಟಗಲಕ್ಕೆ ಬಾಯಿ ತೆರ್ಕೊಂಡು..! ಅದು ಒಂದು ಚೂರೂ ಚೆನ್ನಾಗಿಲ್ಲ… ಮುಚ್ಚಿಸಿಬಿಡಬೇಕು. ಕಾರ್ಪೆಂಟರಿಗೆ ಕೇಳಿದೀನಿ… ‘ಗೋಡೆ ಕಟ್ಟೋದೇನೂ ಅವಶ್ಯಕತೆ ಇಲ್ಲ. ಪ್ಲೇವುಡ್ಡಲ್ಲಿ ನಾನು ಮಾಡಿಕೊಡ್ತೀನಿ… ಅದಕ್ಕೇ ಗೋಡೇ ಪೇಂಟ್ ಹಾಕಿ, ಫಿನಿಷಿಂಗ್ ಮಾಡಿದ್ರೆ ಗೋಡೆ ಥರಾನೇ ಕಾಣುತ್ತೆ’ ಅಂತ ಹೇಳಿದಾನೆ. ಮಾಡಿಸ್ಬೇಕು… ಊಂ… ಖರ್ಚು..! ಏನ್ಮಾಡೋದು..? ನಮಗೆ ಬೇಕಾದ ಹಾಗೆ ಮನೇನ ಮಾರ್ಪಾಡು ಮಾಡ್ಕೋಬೇಕು ಅಂದ್ರೆ ಖರ್ಚು ಮಾಡ್ಲೇಬೇಕು..! ಈಗಾಗಲೇ ದುಡ್ಡು ನೀರಿನ ಹಾಗೆ ಸುರಿದಿದೀನಿ… ಇನ್ನೂ..! ಈ ಡ್ರೈವರ್ ಯಾಕಿಷ್ಟು ಸ್ಪೀಡಾಗಿ ಗಾಡಿ ಓಡಿಸ್ತಾ ಇದಾನೆ..!? ಮುಂದೆ ಏನಾದ್ರೂ ಟ್ರೋಫಿ ಇಟ್ಟಿದಾರಾ ಇವನ್ಗೆ..? + +(ಆಶಾ ರಘು) + +ತುಸು ಮುಂದೆ ಬಾಗಿ ‘ಏನಪ್ಪಾ… ಹಲೋ., ಟ್ಯಾಕ್ಸಿ ಸ್ವಲ್ಪ ನಿಧಾನವಾಗಿ ಡ್ರೈವ್ ಮಾಡಿ… ಏನೂ ಆತುರವಿಲ್ಲ’ ಎಂದಳು ಕಸ್ತೂರಿ. ಅವನು, ‘ಸಾರಿ ಮೇಡಂ… ಆಯ್ತು ಮೇಡಂ’ ಅಂತಂದು ಟ್ಯಾಕ್ಸಿಯ ವೇಗವನ್ನು ಸ್ವಲ್ಪ ಕಡಿಮೆ ಮಾಡಿಕೊಂಡು ಓಡಿಸತೊಡಗಿದ ಮೇಲೆ ಇವಳು ಪುನಃ ಹಿಂದಕ್ಕೆ ಒರಗಿ, ಆಂತುಕೊಂಡು ಕುಳಿತಳು. + +…ತಿಂಗಳಿಗೊಂದು ಸಲ ಈ ಥರ ಟ್ಯಾಕ್ಸೀಲಿ ದೂರದ ಪ್ರಯಾಣ ಮಾಡೋದು ಈಗ ರೂಢಿನೇ ಆಗೋಯ್ತು. ಹಿಂದೇನೂ ಈ ಥರ ಪ್ರಯಾಣ ಮಾಡೋದು ಇರ್ತಿತ್ತು. ನಟಿ ಅಂದ ಮೇಲೆ ಇಲ್ಲದೆ ಇರುತ್ತಾ..? ಅದರಲ್ಲೂ ಈ ಕಸ್ತೂರಿಯಂಥಾ ಬ್ಯುಸಿ ನಟಿಗೆ..!? ಹ್ಹ… ಹೆಸರು.. ಖ್ಯಾತಿ.. ಹಣದ ಓಡಾಟದಲ್ಲಿ ಆ ಪ್ರಯಾಣಗಳ ಆಯಾಸ ಗೊತ್ತಾಗ್ತಾ ಇರಲಿಲ್ಲ! ಈಗ..!? ಹೂಂ…  ನಾಟಕ ಅಂದ್ರೆ ಅದರ ದರ್ಜೆ ಕಡಿಮೇದು ಅಂತ ನನ್ನ ಅಭಿಪ್ರಾಯವಲ್ಲ. ಇವತ್ತಿನ ನನ್ನ ಸ್ಥಿತೀಲಿ ಕೈ ಹಿಡಿದು ಅನ್ನ ಹಾಕ್ತಾ ಇರೋದೇ ರಂಗಭೂಮಿ! ಇಲ್ಲದೇ ಇದ್ದಿದ್ರೆ ಇರೋ ಕಮಿಟ್ಮೆಂಟಿಗೆ ನೇಣು ಹಾಕ್ಕೊಂಚಿತ್ರರಂಗ ನನ್ನನ್ನ ಮರೆತೇ ಹೋಯ್ತು ಅಂತ ಕಾಣುತ್ತೆ! ಈಗೊಂದು ಮೂರು ವರ್ಷಗಳಿಂದ ಒಂದು ಸಿನಿಮಾನೂ ಇಲ್ಲ..! ಅದಕ್ಕೆ ಹಿಂದಿನ ವರ್ಷ ಎರಡೇ ಸಿನಿಮಾ..! ಅದರಲ್ಲೂ ಕನ್ನಡದ್ದು ಒಂದಾದರೆ, ಮಲಯಾಳಂದು ಒಂದು! ಬರೀ ಕನ್ನಡದ್ದು ಅಂತ ಮಾತ್ರ ಲೆಕ್ಕ ಹಾಕಿದ್ರೆ ಒಂದೇ ಸಿನಿಮಾ! ಚಿತ್ರರಂಗ ನನ್ನನ್ನ ಮರೀದೇ ಹೋಗಿದ್ರೆ ಈ ಥರ ಊರಿಂದೂರಿಗೆ ಅಲ್ಕೊಂಡು ಕನಿಷ್ಟ ಸಂಭಾವನೆಗೆ ಒಪ್ಕೊಂಡು ನಾಟಕಗಳಲ್ಲಿ ಬಣ್ಣ ಹಚ್ಚೋ ಪರಿಸ್ಥಿತಿ ಬರ್ತಾ ಇರಲಿಲ್ಲ!ಡು ಸಾಯಬೇಕಾಗಿತ್ತು! ಏ ಛೀ..! ಅಮ್ಮನ ಎದುರಿಗೆ ಆಡಿದ್ರೆ, ‘ಬಿಡ್ತು ಅನ್ನೇ., ಯಾವುದೇ ಸಂದರ್ಭಕ್ಕೂ ಸಾಯೋ ಮಾತು ಬೇಗ ಬರುತ್ತೆ ನಿನ್ನ ಬಾಯಲ್ಲಿ’ ಅಂತ ಬೈತಿದ್ರು! ಆದ್ರೂ ನಾಟಕದಲ್ಲಿ ಅಭಿನಯಿಸೋದು ಅಂದ್ರೆ ಎಷ್ಟು ಸಮಯ..!? ಶ್ರಮ..!? ನಾನೆಷ್ಟೇ ಹೆಸರು ಮಾಡಿರೋ ನಟಿ ಅಂದ್ರೂನೂ ಎಲ್ಲರ ಹಾಗೆ ರಿಹರ್ಸಲ್ ಮಾಡಲೇ ಬೇಕು. ತಿಂಗಳು ಅಲ್ಲದಿದ್ರೂ ಐದು ದಿನಗಳ ಕಾಲನಾದ್ರೂ! ಇಲ್ಲದೆ ಇದ್ರೆ ಸಹಕಲಾವಿದರ ಜೊತೆಗೆ ಕೋ-ಆರ್ಡಿನೇಷನ್ ಕಷ್ಟ ಆಗೋಗುತ್ತೆ. ಇನ್ನು, ನಿತ್ಯ ಮೇಕಪ್ ಮಾಡ್ಕೊಂಡು ಅದದೇ ಸಂಭಾಷಣೆ ಹೇಳ್ಕೊಂಡು.. ಅದದೇ ಮೂವ್ಮೆಂಟ್ಸ್ ಮಾಡ್ಕೊಂಡು ನಾಟಕದ ಪ್ರದರ್ಶನ ಕೊಡೋದು.. ಆ ಊರಿನಲ್ಲಿ ಎಷ್ಟು ದಿನಗಳ ಕಾಲ ಶೋ ಅಂತ ನರಸು ನಿರ್ಧರಿಸಿರ್ತಾನೋ ಅಷ್ಟು ದಿನಗಳ ಕಾಲ..! ಮತ್ತೆ ಚಿತ್ರರಂಗದಲ್ಲಿ ಇನ್ನೊಂದು ಸಲ ಒಂದೊಳ್ಳೆ ಪಾತ್ರ ಸಿಕ್ಕಿಬಿಟ್ರೆ ಸಾಕು… ಆ ಚಂಗು ಹಿಡಿದು ಇನ್ನಷ್ಟು ಕಾಲ ಮಿಂಚಿಬಿಡ್ತೀನಿ. ಆದರೆ ಯಾರು ಅವಕಾಶ ಕೊಡುವವರು..? + +ನನ್ನ ಸಿನಿಮಾ ಬದುಕಿನದೇ ಒಂದು ಆಸಕ್ತಿಕರ ಗ್ರಾಫ್..! ಕೆಳಗಿನ ಹಂತದಿಂದ ಸ್ವಲ್ಪ ಮೇಲೇರಿ, ಹಿಂದೆಯೇ ಕೆಳಗಿಳಿದು, ಅದೇ ಕೆಳಗಿನ ಹಂತದಲ್ಲೇ ಸ್ವಲ್ಪ ದೂರ ಕ್ರಮಿಸಿ, ನಿಧಾನವಾಗಿ ಮೇಲೇರಿ, ಬಹಳ ಕಾಲ ಆ ಏರಿದ ಮಟ್ಟದಲ್ಲೇ ಮುಂದುವರಿದು, ನಂತರ ಇದ್ದಕ್ಕಿದ್ದಂತೆ ಕೆಳಗೆ ಕುಸಿದು, ಪುನಃ ಸ್ವಲ್ಪ ಚೇತರಿಸಿಕೊಂಡು ಸ್ವಲ್ಪಸ್ವಲ್ಪವೇ ತೆವಳಿದ್ರೂನೂ ಕೆಳಗೇ ಉಳಿದು.. ಈಗ ಏನೂ ಇಲ್ಲವಾಗಿ..! ಶಿವಮೊಗ್ಗದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಚೂಟಿಯಾಗಿ ಓದ್ಕೊಂಡು, ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಭಾಗವಹಿಸ್ತಾ, ಬಹುಮಾನಗಳನ್ನ ಗೆಲ್ತಾ, ಸ್ಕೂಲಿನಿಂದ ಇಳಿಜಾರಿನ ಮಣ್ಣು ರಸ್ತೇಲಿ ಸೀಬೇಹಣ್ಣು ತಿನ್ತಾ ಕುಣ್ಕೊಂಡು ಮನೆ ಕಡೆ ಹೆಜ್ಜೆ ಹಾಕ್ತಾ ಇದ್ದ ಆ ಶಶಿಕಲಾ ಅನ್ನೋ ಹುಡುಗಿ ಎಲ್ಲಿ? ಜಗತ್ತಿನ ಭಾರನೇ ತಲೆ ಮೇಲೆ ಹೊತ್ಕೊಂಡ ಹಾಗೆ, ಕಣ್ಣು ಮುಚ್ಚಿ ಸುಧಾರಿಸಿಕೊಳ್ಳೋಕ್ಕೂ ಬಿಡದೇ ಇರೋ ಚಿಂತೇಲಿ ಬೇಯ್ತಾ ದುಡಿಮೆಯ ಬೆನ್ನು ಹತ್ತಿ ದೂರದ ಊರಿಗೆ ಪ್ರಯಾಣ ಮಾಡ್ತಾ ಇರೋ ಈ ಕಸ್ತೂರಿ ಅನ್ನೋ ನಡುಪ್ರಾಯದ ಹೆಂಗಸೆಲ್ಲಿ..? ಶಿವಮೊಗ್ಗದ ಒಂದು ಪುಟ್ಟ ಊರು ಕಪ್ಪಳ.. ಆ ಕಪ್ಪಳದ ಸರ್ಕಾರಿ ಆಸ್ಪತ್ರೆಯ ಪಕ್ಕದ ಬೀದೀಲಿ ನಮ್ಮದೊಂದು ಪುಟ್ಟಮನೆ. ನಾನು., ಅಪ್ಪ, ಅಮ್ಮ, ಚಿಕ್ಕಮ್ಮ, ತಮ್ಮ, ಅಜ್ಜಿ.. ಆರು ಜನವೂ ಎಷ್ಟು ಅಡಕವಾಗಿ ಬದುಕ್ತಾ ಇದ್ದೆವು ಆ ಪುಟ್ಟ ಬಾಡಿಗೆ ಗೂಡಿನಲ್ಲಿ!? ನನಗೆ ಆಗಿನಿಂದಲೂ ಮನೆಯ ಆವರಣವನ್ನು ಅಂದವಾಗಿ ಇಡುವುದರಲ್ಲಿ ವಿಶೇಷ ಆಸಕ್ತಿ. ಎಲ್ಲೆಲ್ಲಿಂದಲೋ ಬೇಡಿ ತಂದು ಮನೆಯ ಮುಂಭಾಗ ಚಿಕ್ಕಮ್ಮನ ಜೊತೆ ಸೇರಿಕೊಂಡು ಕೈದೋಟ ಮಾಡಿದ್ದೆನಲ್ಲ..! ಆಗಾಗ ಯಾವುದಾದರೂ ಕುರಿಯೋ, ಮೇಕೆಯೋ, ದನವೋ ಗಿಡಗಳನ್ನು ತಿಂದುಕೊಂಡು ಹೋಗಿಬಿಡುತ್ತಿದ್ದುವು… ಆಗೆಲ್ಲಾ ನನ್ನ ಗೋಳಾಟವನ್ನು ಶಮನ ಮಾಡಲು ಮನೆಮಂದಿಯೆಲ್ಲಾ ಹರಸಾಹಸ ಪಡಬೇಕಾಗುತ್ತಿತ್ತು! ‘ಬೇಲಿ ಹಾಕಿದರೂ ದನಗಳು ತುಳಿದು ಮಲಗಿಸಿಬಿಡುತ್ತವೆ. ಇದೇನು ಸ್ವಂತ ಮನೆಯೇ? ಕಾಂಪೌಂಡು ಕಟ್ಟಿಸೋಣ ಅನ್ನೋಕ್ಕೆ..? ಇನ್ನು ಮೇಲೆ ಗಿಡಗಳನ್ನ ಬೆಳೆಸೋದೇ ಬೇಡ’ ಅಂತಿದ್ದರು ಅಜ್ಜಿ. ಆದರೂ ಒಂದು ವಾರದಲ್ಲಿ ಮತ್ತೆ ಅಲ್ಲಿ ಹೊಸ ಸಸಿಗಳು ನಲಿಯುತ್ತಿದ್ದವು..! + +ಅಪ್ಪನ ಹತ್ತಿರ ಒಂದು ಹಳೇ ಸ್ಕೂಟರ್ ಇತ್ತು. ಆಗಾಗ ಅಪ್ಪನ ಹಿಂದೆ ಕೂತು ಶಿವಮೊಗ್ಗ, ಸಾಗರಗಳ ಸುತ್ತು ಹಾಕುತ್ತಿದ್ದೆ. ಮುಂದೆ ಓಡಿಸುತ್ತಾ ಕುಳಿತ ಅಪ್ಪನ ಬೆನ್ನಿಗೆ, ಬೆನ್ನು ತಾಕಿಸಿಕೊಂಡು, ಹಿಮ್ಮುಖವಾಗಿ ಕೂತು ದೂರವಾಗುತ್ತಾ ಸಾಗುವ ಸುತ್ತಲಿನ ಪರಿಸರಾನ, ಬೆಳೆಯುತ್ತಾ ಸಾಗುವ ಕಪ್ಪು ರಸ್ತೇನ ನೋಡುವುದರಲ್ಲಿ ನನಗೆ ಎಲ್ಲಿಲ್ಲದ ಖುಷಿ. ಐವತ್ತು ಪೈಸೆಗೆ ಒಂದು ಪೊಟ್ಟಣದ ಭರ್ತಿ ಪೆಪ್ಪರಿಮೆಂಟು ಸಿಗೋದು..! ಅವನ್ನು ಜೋಬಿನಲ್ಲಿ ತುಂಬಿಕೊಂಡು, ಆಗಾಗ ಒಂದೊಂದು ತೆಗೆದು ಬಾಯಿಗೆ ಹಾಕಿಕೊಂಡು ಚೀಪುತ್ತಿದ್ದೆನಲ್ಲ… ಈಗ ಅಂತಹ ಪೆಪ್ಪರಿಮೆಂಟು ಸಿಕ್ಕೋದೇ ಇಲ್ಲ. ಸಿಟಿಗಳಲ್ಲಿ ಸಿಗೋಲ್ಲ ಅಂತ, ಹಳ್ಳಿಗಳ ಕಡೆ ಶೂಟಿಂಗ್ ಇದ್ದಾಗಲೆಲ್ಲಾ ನಾನೇ ಸಣ್ಣಪುಟ್ಟ ಅಂಗಡಿಮನೆಗಳಿಗೆ ಹೋಗಿ ಚಿಕ್ಕ ಮಕ್ಕಳ ಥರ ಕೇಳಿದೀನಿ..! ತಮ್ಮ ನೆಚ್ಚಿನ ನಟಿ ಹೀಗೆ ಏನನ್ನೋ ಕೇಳುತ್ತಾ ತಮ್ಮಲ್ಲಿಗೆ ಬಂದಳಲ್ಲ ಅನ್ನೋ ಅಭಿಮಾನದಲ್ಲಿ ಅವರುಗಳು ಅಂಗಡಿಯಲ್ಲಿ ಇದ್ದಬದ್ದ ಎಲ್ಲ ಥರದ ಮಿಠಾಯಿಗಳನ್ನೂ ತಂದು ನನ್ನ ಮುಂದೆ ತೋರಿದ್ದಾರೆ..! ಆದರೆ ನನ್ನ ಬಾಲ್ಯದ ದಿನಗಳ ಇಷ್ಟದ ಪೆಪ್ಪರಿಮೆಂಟನ್ನ ಎಲ್ಲೂ ಕಾಣದೆ ಬೇಸರಪಟ್ಟುಕೊಂಡಿದ್ದೀನಿ. ನನಗೆ ಬೇಕಾದುದನ್ನು ಒದಗಿಸಲು ಆಗದುದ್ದಕ್ಕೆ ಅಂಗಡಿ ವ್ಯಾಪಾರಿಗಳೂ ಬೇಸರಪಟ್ಟುಕೊಂಡಿದಾರೆ. ಆಗೆಲ್ಲಾ ಹಳ್ಳಿಯ ಸೊಸೈಟಿಯಲ್ಲಿ ಸಿಗ್ತಾ ಇದ್ದ ಚೀಟಿ ಬಟ್ಟೇಲಿ ಅಮ್ಮ ನನಗೆ ತಾವೇ ಲಂಗ, ಜಾಕೀಟು ಹೊಲಿದು ಹಾಕೋರು. ಒಂದೊಂದು ಬಟ್ಟೆ ತೆಳ್ಳಗೆ ಹತ್ತಿಯ ಹಾಗೆ ಮೈಗಂಟಿಕೊಂಡರೆ, ಒಂದೊಂದು ಬಟ್ಟೆ ಕಲ್ಲಿನ ಹಾಗೆ ಘನವಾಗಿ ಇರೋದು..! ಎಲ್ಲಕ್ಕೂ ಬಣ್ಣಬಣ್ಣದ ಪ್ರಿಂಟೆಂಡ್ ಹೂವುಗಳ ಚಿತ್ತಾರ! ನವಿಲು, ಚಿಟ್ಟೆ, ಗಿಳಿಗಳ ಚಿತ್ರ..! ಅವುಗಳನ್ನ ನೋಡ್ಕೊಂಡು ಹಾಗೇ ಬಿಳೀ ಹಾಳೆ ಮೇಲೆ ಬಿಡಿಸಿ, ಕಲರ್ ಪೆನ್ಸಿಲ್‌ನಿಂದ ಬಣ್ಣ ತುಂಬ್ತಾ ಇದ್ದೆ. + + + +ನಾಲ್ಕಾಣೆ ಕೊಟ್ಟರೆ ಒಂದು ಮಾರು ಹೂ ಸಿಗ್ತಿತ್ತು. ಚಿಕ್ಕಮ್ಮನಿಗೂ ಆ ದಿನಗಳಲ್ಲಿ ಹೂವು ಅಂದರೆ ಇಷ್ಟ. ಕೊಂಡುಕೊಳ್ಳೋರು. ನನಗೂ ಮುಡಿಸಿ, ಅಮ್ಮನಿಗೂ ಕೊಟ್ಟು, ತಾವೂ ಮುಡ್ಕೊಳೋವ್ರು. ನನಗಂತೂ ಜಡೆಗಿಂತಲೂ ಉದ್ದಕ್ಕೆ ಹೂವಿರಬೇಕಿತ್ತು! ‘ಬೇಡ ಕಣೆ ಶಶಿ., ಹಾಗೆ ಮುಡ್ಕೊಂಡ್ರೆ ಎಲ್ಲರೂ ನಗ್ತಾರೆ’ ಅಂತ ಅವರುಗಳು ಎಷ್ಟು ಹೇಳಿದ್ರೂ ಕೇಳ್ತಿರಲಿಲ್ಲ. ಜಡೆಗಿಂತಲೂ ಉದ್ದಕ್ಕೆ ಹೂ ಮುಡಿದುಕೊಂಡೇ ಸ್ಕೂಲಿಗೆ ಹೋಗ್ತಿದ್ದೆ! ನನ್ನ ನೋಡಿ ಯಾರು ನಗಬೇಕು..? ಅವರುಗಳೂ ಹಾಗೇ ನೆತ್ತಿಯ ಮೇಲೆ ಹೂದಂಡೆ ಸಿಕ್ಕಿಸಿಕೊಂಡು ಬರೋ ಅಂಥವರು! ಹಹ್ಹಹ್ಹ… ಸ್ಕೂಲಿನಲ್ಲಿ., ಅಪೂರ್ವಕ್ಕೆ ನಮ್ಮ ಮನೆಯ ಮುಂದೆಯೂ ಗುಲಾಬಿ ಹೂ ಬಿಡ್ತಿತ್ತು. ಕೆಂಪು, ಹಳದಿ, ಬಿಳಿ ಎಲ್ಲ ಬಣ್ಣದ್ದೂ ಇರ್ತಿತ್ತು! ಅದನ್ನ ನಾನು ತೆಲುಗು ನಟಿ ಚಾರುಮತಿಯವರ ಹಾಗೆ ಕಿವಿಯ ಪಕ್ಕಕ್ಕೇ ಮುಡಿದುಕೊಂಡು ಪಿನ್ನು ಚುಚ್ಚಿಕೋತಿದ್ದೆ. ಆಗೆಲ್ಲಾ ನನಗೆ, ನಾನೂ ಚಾರುಮತಿಯವರ ಹಾಗೇ ದೊಡ್ಡ ನಟಿ ಆಗ್ಬೇಕು ಅನ್ನೋ ಆಸೆ ಇತ್ತು! ಸ್ಕೂಲಿನ ನಾಟಕಗಳಲ್ಲಿ ಅಭಿನಯಿಸ್ತಾ ಇದ್ದೆನಲ್ಲ..? ಪ್ರತೀ ವರ್ಷವೂ ಮುಖ್ಯಪಾತ್ರ ನನ್ನನ್ನೇ ಹುಡುಕ್ಕೊಂಡು ಬರೋರು..! ಆ ದಿನಗಳಲ್ಲೆ ಅಲ್ಲವ ನಾನು ಅವರಿಗೆ ಕಾಗದ ಬರೆದಿದ್ದು..? ‘ಪ್ರೀತಿಯ ಚಾರುಮತಿ ಆಂಟಿ…’ ಅಂತೇನೋ ಆರಂಭಿಸಿದ್ದೆ ಅಂತ ನೆನಪು… ‘ನಾನೂ ನಿಮ್ಮ ಹಾಗೇ ನಟಿ ಆಗ್ಲಾ?’ ಅಂತ ಆಪ್ತ ಸಮಾಲೋಚನೆ ನಡೆಸಿದ್ದೆ. ಹತ್ತು ದಿನಗಳಲ್ಲೇ ಅವರಿಂದ ಉತ್ತರ ಬಂತು! ‘ನಟಿಯಾಗಬೇಕು ಅನ್ನೋದು ನಿನ್ನ ಅದೃಷ್ಟದಲ್ಲಿದ್ದರೆ ಅದನ್ನ ಯಾರಿಂದಲೂ ತಪ್ಪಿಸೋಕ್ಕೆ ಆಗಲ್ಲ’ ಅಂತ! ಆ ಪತ್ರ ಎದೆಗೊತ್ತಿಕೊಂಡು ಎಷ್ಟು ಕುಣಿದಾಡಿದ್ದೆ ನಾನು..? ಸ್ಕೂಲಿಗೆಲ್ಲಾ ತೆಗೊಂಡು ಹೋಗಿ ಟೀಚರುಗಳಿಗೂ ತೋರಿಸಿಕೊಂಡು ಬಂದಿದ್ದೆ! ಆಗಲಿಂದ ಸ್ಕೂಲಿನಲ್ಲಿ ನನ್ನನ್ನ ‘ಜೂನಿಯರ್ ಚಾರುಮತಿ’ ಅಂತ ಕರೆಯೋಕ್ಕೆ ಶುರುಮಾಡಿದ್ರಲ್ಲ..? ನಾನೂ ನಾಟಕ, ನೃತ್ಯಗಳನ್ನ ಮನಸ್ಸಿಟ್ಟು ಮಾಡತೊಗಿದೆನಲ್ಲ..? + +ಆಗ ನಾನು ಹತ್ತನೇ ಕ್ಲಾಸಿನಲ್ಲಿ ಓದ್ತಿದ್ದೆ. ಶಾಲೆಯ ವಾರ್ಷಿಕೋತ್ಸವದಲ್ಲಿ ಒಂದು ನಾಟಕವಿತ್ತು. ಅದರಲ್ಲಿ ನಂದು ವಿಶ್ವಾಮಿತ್ರನ ತಪೋಭಂಗ ಮಾಡೋ ಮೇನಕೆಯ ಪಾತ್ರ! ಚೆನ್ನಾಗಿ ರಿಹರ್ಸಲ್ ಮಾಡಿದ್ದೆ. ಮನೆಯವರೆಲ್ಲಾ ಕಾರ್ಯಕ್ರಮದ ಹೊತ್ತಿಗೆ ಬರ್ತೀವಿ ಅಂತ ಹೇಳಿದ್ರು. ಸಂಜೆ ಆಯ್ತು… ಕಾರ್ಯಕ್ರಮ ವೇಳೆ ಸಮೀಪಿಸ್ತಾ ಇದೆ… ಸಾಧಾರಣವಾಗಿ ಮನೆಯವರೆಲ್ಲಾ ಕಾರ್ಯಕ್ರಮಕ್ಕೆ ಬಂದರೆ, ಚಿಕ್ಕಮ್ಮನೋ, ಅಮ್ಮನೋ ಗ್ರೀನ್ ರೂಮಿಗೆ ಬಂದು ಮಾತಾಡಿಸಿಕೊಂಡು ಹೋಗೋದು ವಾಡಿಕೆ. ಆ ದಿನ ಎಷ್ಟು ಹೊತ್ತಾದ್ರೂ ಯಾರೂ ಬರಲಿಲ್ಲ. ನಮ್ಮ ನಾಟಕ ಶುರುವಾಗೇ ಹೋಯ್ತು. ನಾನು, ಜನಜಂಗಳಿ ಜಾಸ್ತಿ ಇದ್ದದ್ದರಿಂದ ಇವರು ಒಳಗೆ ಬರೋಕ್ಕೆ ಆಗಿಲ್ಲದೇ ಇರಬಹುದು, ಪ್ರೇಕ್ಷಕರ ನಡುವೆ ಕೂತ್ಕೊಂಡು ನೋಡ್ತಾ ಇರಬಹುದು ಅಂದ್ಕೊಂಡು, ಪಾತ್ರದಲ್ಲಿ ಎಷ್ಟೇ ಇನ್ವಾಲ್ವ್ ಆಗಿದ್ರೂನೂ ನನ್ನ ಕಣ್ಣುಗಳು ಮಾತ್ರ ಆಗಾಗ ಅಮ್ಮ, ಚಿಕ್ಕಮ್ಮಂದಿರಿಗಾಗಿ ಹುಡುಕ್ತಾ ಇದ್ದುವು. ಕಾರ್ಯಕ್ರಮ ಮುಗೀತು. ಎಲ್ಲಾ ಹೋಗತೊಡಗಿದರು… ಮನೆಯವರು ಯಾರೂ ಬಂದಿಲ್ಲ ಅಂತ ಖಚಿತವಾಯ್ತು. ಆಗೆಷ್ಟು..? ಸುಮಾರು ಒಂಭತ್ತೂವರೆ, ಹತ್ತು ಗಂಟೆ ಇರಬಹುದು. ಮೇಕಪ್ ತೆಗೆದು, ಬಟ್ಟೆ ಬದಲಿಸಿಕೊಂಡು ಮನೆಗೆ ಹೋದೆ. ಬೀಗ..! ಪಕ್ಕದ ಮನೆಯವರಲ್ಲಿ ವಿಚಾರಿಸಿದೆ. ಚಿಕ್ಕಮ್ಮನನ್ನು ತೆರೇಸಾ ನರ್ಸಿಂಗ್ ಹೋಮ್‌ನಲ್ಲಿ ಅಡ್ಮಿಟ್ ಮಾಡಿದಾರೆ ಅಂತ ಗೊತ್ತಾಯಿತು. ಯಾಕೆ… ಏನು… ಅಂತ ಅವರು ಹೇಳಲಿಲ್ಲ. ಪಕ್ಕದ ಬೀದಿಯಲ್ಲೇ ಸರ್ಕಾರಿ ಆಸ್ಪತ್ರೆ ಇದ್ದರೂ, ಸೌಲಭ್ಯ ಕಡಿಮೆಯೆಂದು, ತುರ್ತು ಸಂದರ್ಭಗಳಲ್ಲಿ ಎಲ್ಲರೂ ಊರೊಳಗೆ ಇದ್ದ ತೆರೇಸಾ ನರ್ಸಿಂಗ್ ಹೋಂಗೆ ಹೋಗುತ್ತಿದ್ದರು. ಅಂದರೆ.. ಚಿಕ್ಕಮ್ಮನಿಗೆ ಅಂತಹ ತುರ್ತಾದ ಆರೋಗ್ಯ ಸಮಸ್ಯೆ ಏನಾಗಿರಬಹುದು ಅಂತ ನನಗೆ ಗಾಭರಿಯಾಯ್ತು! ಹೋದರೆ, ಚಿಕ್ಕಮ್ಮ ಚೇತರಿಕೊಂಡಿದ್ದರಾದರೂ, ಉಕ್ಕುತ್ತಿದ್ದ ಕಣ್ಣೀರನ್ನ ಒರೆಸಿಕೊಳ್ಳುತ್ತಾ ಇದ್ದರು. ಅಮ್ಮ, ಅಜ್ಜಿಯರು ಅವರಿಗೆ ಸಮಾಧಾನ ಹೇಳುತ್ತಿದ್ದರು. + +ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ.. ಅವನು ಊರಿಗೆ ಹೋಗಿದ್ದವನು, ಹಿಂದಿರುಗಿ ಬರ್ತಾ ಮದುವೆಯಾಗಿ ಹೆಂಡತಿಯನ್ನೂ ಜೊತೆಗೆ ಕರೆದುಕೊಂಡು ಬಂದು, ಕಪ್ಪಳ ಊರೊಳಗಿದ್ದ ತನ್ನಣ್ಣನ ಮನೆಯಲ್ಲಿ ಸಂಸಾರ ಹೂಡಿದನಂತೆ. ಚಿಕ್ಕಮ್ಮನಿಗೆ ಕೆಲಕಾಲದಿಂದ ಇವನು ಸಂಧಿಸಿರದ ಕಾರಣ ವಿಚಾರಿಸೋಣವೆಂದು ಅವನ ಅಣ್ಣನ ಮನೆಗೆ ಹೋಗಿದ್ದರಂತೆ. ಅಲ್ಲಿ ನೋಡುವುದೇನನ್ನು..? ನವದಂಪತಿಗಳು ಜೊತೆಗೆ ಕೂತು ಸತ್ಯನಾರಾಯಣ ವ್ರತ ಮಾಡಿ, ಊಟಕ್ಕೆ ಕೂತಿದ್ದರಂತೆ! ಚಿಕ್ಕಮ್ಮನಿಗೂ ಅವನಿಗೂ ಎಲ್ಲರೆದುರಿಗೇ ಮಾತುಕತೆಗಳಾದುವಂತೆ. + +ಅವನು ಕೋಪದಿಂದ ಎದ್ದು ಬಂದವನೇ, ಎಂಜಿಲ ಕೈಯಲ್ಲಿ ಚಿಕ್ಕಮ್ಮನ ಕಪಾಳಕ್ಕೆ ನಾಲ್ಕೈದು ಏಟು ಹಾಕಿದನಂತೆ! ನೊಂದು ಅಲ್ಲಿಂದ ಮನೆಗೆ ಬಂದ ಚಿಕ್ಕಮ್ಮ, ಫ್ಯಾನಿಗೆ ಸೀರೆ ಕಟ್ಟಿ..! ಪಾಪ… ಆದರೂ ಚಿಕ್ಕಮ್ಮನಿಗೆ ಅವನನ್ನ ಮರೆಯೋಕ್ಕೆ ಆಗಲೇ ಇಲ್ಲ ನೋಡು..? ಮದುವೆಯನ್ನೇ ಮಾಡಿಕೊಳ್ಳದೆ ಹಾಗೇ ಉಳಿದುಬಿಟ್ಟರು! ಎಷ್ಟಿರಬಹುದು ಅವರಿಗೆ ವಯಸ್ಸೀಗ..? ಐವತ್ತು..? ಊಂ.. ಅಮ್ಮನಿಗೆ ಐವತ್ತೆರಡು ಅಂದರೆ, ಅವರು ಅಮ್ಮನಿಗಿಂತ ಎರಡು ವರ್ಷ ಚಿಕ್ಕವರಿರಬಹುದು ಅಂದುಕೊಂಡರೆ, ಐವತ್ತು ಅಲ್ಲವ!? ಈಗಲೂ ಅವರು ಮನಸ್ಸು ಮಾಡಿದರೆ… ಹುಂ… ಎಲ್ಲಿ..? ಇಬ್ಬರು ಒಂಟಿ ಹೆಂಗಸರು ಒಬ್ಬರಿಗೊಬ್ಬರು ಜೊತೆಯಾಗಿ ಇದ್ದುಬಿಟ್ಟರು! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_124.txt b/Kenda Sampige/article_124.txt new file mode 100644 index 0000000000000000000000000000000000000000..7c51a7895dd4850285fd0cde7058aee312ac8db2 --- /dev/null +++ b/Kenda Sampige/article_124.txt @@ -0,0 +1,19 @@ +2022ನೇ ಸಾಲಿನ ವೀಚಿ ಸಾಹಿತ್ಯ ಪುರಸ್ಕಾರಕ್ಕೆ ಡಾ.ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕಥಾ ಸಂಕಲನ ನೋಟ್‌ಬುಕ್‌’ ಆಯ್ಕೆಯಾಗಿದೆ. ಆಳವಾಗಿ ಚಿಂತಿಸಿ ಕಥೆಗಳನ್ನು ಪರಿಕಲ್ಪಿಸುವ ಗೋಜಿಗೆ ಹೋಗದ ಶಿವಲಿಂಗಪ್ಪ ಅವರು ಕಥೆಗಾಗಿ ಯಾವುದೇ ಚಿಂತನೆಯನ್ನೂ ಮಾಡಿಲ್ಲ, ಯಾವ ಭಾಷಾ ಮಾಧ್ಯಮದಿಂದಲೂ ಹೆಕ್ಕಿ ತಂದಿಲ್ಲ. ತಮ್ಮೂರಿನ ಪರಿಸರದಲ್ಲಿಯೇ ಆಯ್ದುಕೊಂಡಿದ್ದಾರೆ. ಸಂಕಲನದಲ್ಲಿ ಬರುವ ಕಥೆಗಳಲ್ಲಿನ ಪಾತ್ರಗಳೆಲ್ಲ ನಮ್ಮ ಸುತ್ತಲಿನವುಗಳೇ ಆಗಿರುವುದು ವಿಶೇಷ. + +(ಡಾ.ಶಿವಲಿಂಗಪ್ಪ ಹಂದಿಹಾಳು) + +ಎಂಟು ಕಥೆಗಳಿರುವ ಈ ಸಂಕಲನದಲ್ಲಿನ ಕಥೆಗಳು ದೀರ್ಘವಾಗಿ ಹರಡಿಕೊಂಡಿದ್ದರೂ ಬಳ್ಳಾರಿ ಭಾಷೆಯ ಸೊಗಡಿನಲ್ಲಿ ಪ್ರತ್ಯಕ್ಷ ಅನುಭವ ನೀಡುತ್ತವೆಯಾದ್ದರಿಂದ ಓದುಗರಿಗೆ ಎಲ್ಲಿಯೂ ಬೇಸರವಾಗದು. ‘ಮೊದ್ಲು ಈ ತಂದೇ ತಾಯಿಗಳಿಗೆ ಪಾಠ ಕಲಿಸಬೇಕು, ಆವಾಗ ಮಕ್ಕಳನ್ನು ಸಾಲಿಗೆ ಕಳುಸ್ತಾರ’ ಎನ್ನುವ ಖುಷಿ ಎಂಬ ಬಡ ಬಾಲಕಿಯ ಬಾಯಿಂದ ಬರುವ ಸಾಲುಗಳ ಸುತ್ತಲೇ ಇಡೀ ನೋಟ್‌ಬುಕ್‌ನ ಪುಟಗಳಲ್ಲಿನ ಕತೆಗಳು ಗಿರಕಿ ಹೊಡೆಯುತ್ತವೆ. + +ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ನೇರವಾಗಿ ಹೇಳುವ ಗೋಜಿಗೆ ಹೋಗದೆ ಮಕ್ಕಳ ಮೂಲಕವೇ ನಿರೂಪಿಸುವ ಹೊಸತನವನ್ನು ಮಾಡಿರುತ್ತಾರೆ. ಇಲ್ಲಿನ ‘ಐಸ್ ಕ್ರೀಮ್’ ಕಥೆಯು ಬಡ ವಿದ್ಯಾರ್ಥಿಯೊಬ್ಬನ ಐಸ್ ಕ್ರೀಮ್ ಬಗೆಗಿನ ಚಪಲ ಅವನನ್ನು ತನ್ನ ಮನೆಯ ಬಡತನವನ್ನು ಮೀರಿ ಖಾಸಗಿ ಶಾಲೆಯೊಂದಕ್ಕೆ ದಾಖಲಾಗಿ ಕೊನೆಗೆ ಅಲ್ಲಿನ ಆರ್ಥಿಕ ಒತ್ತಡ ಸಹಿಸಲಾರದೆ ಪುನಃ ತನ್ನೂರಿನ ಸರ್ಕಾರಿ ಶಾಲೆಗೆ ಸೇರುವ ಕಥಾ ಹಂದರವನ್ನು ಹೊಂದಿದ್ದು, ಅಗತ್ಯವಿದ್ದಷ್ಟೇ ಆಸೆಪಡು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. + +‘ಹೊಸಬಟ್ಟೆ’ ಎಂಬ ಕಥೆಯಲ್ಲಿನ ಶಾಲಾ ಹೆಣ್ಣು ಮಗುವೊಬ್ಬಳು ತನ್ನ ಅನುಕೂಲಸ್ಥ ಸ್ನೇಹಿತೆಯರಂತೆ ತಾನೂ ಹೊಸ ಬಟ್ಟೆ ತೊಡಬೇಕೆಂಬ ಆಸೆಯಿಂದ ರಜಾದಿನಗಳಲ್ಲಿ ಕೂಲಿ ಮಾಡಿ ಕೂಡಿಟ್ಟ ಹಣವನ್ನು ಕೊನೆಯಲ್ಲಿ ತನ್ನ ತಮ್ಮನ ಚಿಕಿತ್ಸೆಗಾಗಿ ಖರ್ಚು ಮಾಡುವ ಸನ್ನಿವೇಶವು ಪುನೀತ್ ಅಭಿನಯದ ಬೆಟ್ಟದ ಹೂವು ಚಲನಚಿತ್ರದ ಕಥೆಯನ್ನು ಕ್ಷಣ ಕಾಲ ಕಣ್ಮುಂದೆ ತರುತ್ತದೆ. + +‘ನಾನೂ ಶಾಲೆಗೆ ಸೇರಿದೆ’ ಕಥೆಯಂತೂ ತಂದೆಯನ್ನು ಕಳೆದುಕೊಂಡ, ತಾಯಿಯಿಂದಲೂ ದೂರವಾದ ಶಾಲಾ ವಯಸ್ಸಿನ ಹುಡುಗನೊಬ್ಬ ತನ್ನ ಮಾವನ ಮನೆಯಲ್ಲಿ ಜೀತದಾಳುವಿನಂತೆ ಕೆಲಸ ಮಾಡಿಕೊಂಡು ತನ್ನ ಓರಗೆಯವರು ಶಾಲೆಗೆ ಹೋಗುವುದನ್ನು ಕಂಡು ತಾನೂ ಶಾಲೆಗೆ ಸೇರಬೇಕೆಂಬ ಹಂಬಲದಿಂದ ಶಾಲಾ ಶಿಕ್ಷಕರ ಬಳಿಗೆ ಬಂದು, ಅವರ ಮನಗೆದ್ದು, ಸರ್ಕಾರಿ ಶಾಲೆಗೆ ದಾಖಲಾಗುವ ಮನೋಜ್ಞ ಚಿತ್ರಣವನ್ನು ಒಳಗೊಂಡಿದೆ. + + + +ಸಂಕಲನದ ಶೀರ್ಷಿಕೆಯಾಗಿ ಬಳಸಿಕೊಂಡಿರುವ ‘ನೋಟ್‌ಬುಕ್‌’ ಕತೆಯು ಫ್ಯಾಂಟಸಿ ಬಗೆಯದಾಗಿದ್ದು ಓದುಗರಿಗೆ ಆಶ್ಚರ್ಯವೆನಿಸುವ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ, ಬಡ ಮಗುವೊಂದು ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಮನದಲ್ಲೇ ಬಯಸುವ ಅತಿಮಾನ ಸ್ವರೂಪಗಳು ಇಲ್ಲಿದ್ದು ಬೈಸಿಕಲ್‌ನ ಚಿತ್ರವೇ ನಿಜರೂಪ ತಾಳುವ ಮೂಲಕ ಅವು ವ್ಯಕ್ತವಾಗಿವೆ. ಇವಿಷ್ಟೇ ಅಲ್ಲದೇ ಶಿವಣ್ಣ ಮೇಷ್ಟ್ರು ಮತ್ತು ಮಳೆಬಿಲ್ಲು, ಕೂಸುಮೋಡ, ಖುಷಿ ಮತ್ತು ಲೈಟುಕಂಬ ಕಥೆಗಳು ಓದುಗರ ಆಸಕ್ತಿ ಮತ್ತು ಕುತೂಹಲವನ್ನು ಹಿಡಿದಿಡುತ್ತವೆ. + +ಸ್ವತಃ ಶಾಲಾ ಶಿಕ್ಷಕರಾಗಿರುವ ಶಿವಲಿಂಗಪ್ಪ ಅವರು ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು ತಮ್ಮ ಕಥೆಗಳನ್ನು ಮಕ್ಕಳಿಗೆ ವಿಶೇಷವಾಗಿ ತಲುಪಿಸಬೇಕೆಂಬ ಆಸ್ಥೆಯಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಯೂಆರ್ ಕೋಡ್ ಬಳಕೆ ಮಾಡಿದ್ದಾರೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಮಟ್ಟಿಗೆ ಇದೊಂದು ಹೊಸ ಪ್ರಯೋಗವಾಗಿದ್ದು ಕನ್ನಡದ ಪ್ರಖ್ಯಾತ ರಂಗಭೂಮಿ ಕಲಾವಿದರು, ಕಿರುತೆರೆ ಕಲಾವಿದರು ಮತ್ತು ರಂಗಕರ್ಮಿಗಳಿಂದಲೇ ಕಥೆಗಳನ್ನು ಲಯಬದ್ಧವಾದ ಏರಿಳಿತಗಳೊಂದಿಗೆ ವಾಚನ ಮಾಡಿಸಿರುವುದು ಮತ್ತೊಂದು ವಿಶೇಷ. ಹಿರಿಯ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲರ ಹಿನ್ನುಡಿ, ಖ್ಯಾತ ಕಥೆಗಾರ ಕೇಶವ ಮುಳಗಿಯವರ ಬೆನ್ನುಡಿ ಹಾಗೂ ಚಿತ್ರಕಲಾವಿದ ಮುರಳೀಧರ ರಾಥೋಡ್ ಅವರ ಚಿತ್ರಗಳು ಸಂಕಲನಕ್ಕೆ ಮತ್ತಷ್ಟು ಹೊಳಪನ್ನು ತಂದಿವೆ. ಬಳ್ಳಾರಿಯ ಕವನ ಪ್ರಕಾಶನ ಹೊರತಂದಿರುವ, ಪ್ರತೀ ಪುಟವೂ ವರ್ಣಮಯವಾಗಿದೆ. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_125.txt b/Kenda Sampige/article_125.txt new file mode 100644 index 0000000000000000000000000000000000000000..09a6e72694f8808e1a437edcbb421e1f0f79f426 --- /dev/null +++ b/Kenda Sampige/article_125.txt @@ -0,0 +1,17 @@ +ಅಲ್ಪ ಸ್ವಲ್ಪ ಗಿಡಮರಗಳಿಂದ ಕೂಡಿರುವ ಪ್ರಶಾಂತ ಪ್ರದೇಶದ ಪ್ರಶಾಂತತೆಯನ್ನು ಗಮನಿಸಿದರೆ ಅಲ್ಲಿ ನೀರವತೆ ಇರುವುದಿಲ್ಲ; ಬದಲಿಗೆ ಆ ವಾತಾವರಣದಲ್ಲಿ ಹಾಸುಹೊಕ್ಕಾಗಿರುವ ಗುಮ್ ಎನ್ನುವ ಸದ್ದು ಅತ್ಯಂತ ಸಹಜವಾಗಿ ಕೇಳಿಬರುತ್ತದೆ. ಈ ಸದ್ದಿನ ಮೂಲವೇ, ಕೀಟಗಳ ಸಂಗೀತ ಸಾಮ್ರಾಟ ಎನಿಸಿಕೊಂಡಿರೋ ಸಿಕಾಡ ಎಂಬ ಜೀವಿ. ಎತ್ತರಿಸಿದ ಧ್ವನಿಯಲ್ಲಿ ಸದಾ ಹಾಡುತ್ತಿರುವ ಈ ಕೀಟಗಳದ್ದು ಒಂದು ವಿಶಿಷ್ಟ ವಿಚಿತ್ರ ಪ್ರಪಂಚ. ‘ಸಿಕಾಡಿಡೇ’ ಕುಟುಂಬಕ್ಕೆ ಸೇರಿದ ಈ ಕೀಟವು ಭಾರತದಲ್ಲಷ್ಟೇ ಅಲ್ಲದೇ ಆಸ್ಟ್ರೇಲಿಯಾ, ಚೈನಾ, ಜಪಾನ್, ಯೂರೋಪ್‍ನಲ್ಲೂ ಅತೀ ಸಾಮಾನ್ಯವಾಗಿ ಕಂಡುಬರುತ್ತದೆ; ಸಮಶೀತೋಷ್ಣ ಪ್ರದೇಶದಲ್ಲಿ ಕಂಡುಬರುವ ಸಿಕಾಡಗಳಿಗೂ ಉಷ್ಣವಲಯದ ಸಿಕಾಡಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಆದರೆ ಯಾವ ಪ್ರದೇಶದ ಸಿಕಾಡವಾದರೂ ದನಿ ಎತ್ತರಿಸಿ ಹಾಡುವ ವಿಶೇಷತೆ ಇಲ್ಲದೇ ಇಲ್ಲ. + +(ಕ್ಷಮಾ ವಿ. ಭಾನುಪ್ರಕಾಶ್‌) + +ಇವುಗಳ ಹಾಡು ನಮ್ಮಂತೆ ಗಂಟಲಿನೊಳಗಿರುವ ಧ್ವನಿತಂತುವಿನಿಂದ ಹೊರಡುವುದಿಲ್ಲ; ಅದಕ್ಕಾಗೇ ವಿಶೇಷವಾದ ‘ಟಿಂಬಾಲ್’ಗಳೆಂಬ ಸ್ನಾಯುಗಳಿವೆ. ಇವು ಸಿಕಾಡದ ಕಿಬ್ಬೊಟ್ಟೆಯ ಪಕ್ಕದಲ್ಲಿರುತ್ತವೆ. ಇವುಗಳನ್ನು ಕುಗ್ಗಿಸಿದಾಗ ಒಂದು ‘ಕ್ಲಿಕ್’ ಶಬ್ದ ಮತ್ತು ಹಿಗ್ಗಿಸಿದಾಗ ಮತ್ತೊಮ್ಮೆ ಮತ್ತೊಂದು ಬಗೆಯ ‘ಕ್ಲಿಕ್’ ಶಬ್ದ ಉತ್ಪಾದನೆಯಾಗುತ್ತದೆ. ಈ ಸದ್ದು ಉತ್ಪಾದನೆಯಾದಾಗ ಎತ್ತರಿಸಿದ ಪಿಚ್‍ನಲ್ಲಿರುವುದಿಲ್ಲ; ಆದರೆ, ಸಾಮಾನ್ಯವಾಗಿ ಟೊಳ್ಳಾಗಿರುವ ಸಿಕಾಡಗಳ ಹೊಟ್ಟೆ, ಅದರಲ್ಲೂ ಗಂಡು ಸಿಕಾಡದ ಹೊಟ್ಟೆಯು ಅನುರಣನ ಕೊಠಡಿಯಂತೆ ವರ್ತಿಸಿ ಆ ಸದ್ದನ್ನು ಹಲವಾರು ಡೆಸಿಬಲ್‍ಗಳಷ್ಟು ಎತ್ತರಿಸುತ್ತದೆ. ಹೀಗೆ ಎತ್ತರಿಸಿದ ಸದ್ದನ್ನು ಹೊರಡಿಸುವ ಸಿಕಾಡಗಳು ಗುಂಪುಗುಂಪಾಗಿರುವ ಕಾರಣ, ಅವುಗಳ ವೈಯಕ್ತಿಕ ಹಾಡು ಸಾಮೂಹಿಕ ಹಾಡಾಗಿ ಪರಿವರ್ತನೆಗೊಂಡು, ಗುಮ್ ಎನ್ನುತ್ತಾ ಮರಗಿಡಗಳ ನಡುವೆ ಅನುರಣಿಸುತ್ತವೆ. ಹಾಗೆಂದು ಎಲ್ಲಾ ಸಿಕಾಡಗಳೂ ಒಂದೇ ಹಾಡನ್ನು ಹಾಡುತ್ತವೆ ಎಂದರ್ಥವಲ್ಲ. ನಮ್ಮಲ್ಲಿರುವಂತೆ ಇವುಗಳ ಪ್ರಪಂಚದಲ್ಲೂ ಸನ್ನಿವೇಶಕ್ಕೆ, ಭಾವನೆಗೆ ತಕ್ಕಂತೆ ಹಾಡುಗಳೂ ಬದಲಾಗುತ್ತವೆ. + +ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ ಹೆಣ್ಣುಸಿಕಾಡವು ಈ ಆಹ್ವಾನವನ್ನು ಒಪ್ಪಿ ಬಳಿಬಂದರೆ ಆಗ ಗಂಡು ಸಿಕಾಡವು ಹಾಡುವ ಹಾಡೇ ಬೇರೆ, ಅಕಸ್ಮಾತ್ ಆ ಆಹ್ವಾನ ತಿರಸ್ಕೃತಗೊಂಡರೆ ಮತ್ತೊಂದು ಶೋಕರಾಗವನ್ನು ಹೊರಡಿಸುತ್ತದೆ ಗಂಡು ಸಿಕಾಡ. ಇನ್ನು ಅಪಾಯಕ್ಕೆ ಸಿಲುಕಿದಾಗ ಹೊರಡಿಸುವ ಹಾಡೇ ಒಂದು ಬಗೆಯದ್ದಾದರೆ ಸಾಮೂಹಿಕವಾಗಿ ಒಂದು ಕುಟುಂಬದ ಸಿಕಾಡಗಳು ಹಾಡುವ ಹಾಡು ಮತ್ತೊಂದು ರೀತಿಯದ್ದು. ಕೆಲವೊಮ್ಮೆ ಸಿಕಾಡಗಳು ಹೊರಡಿಸುವ ಸದ್ದು ಎಷ್ಟು ಎತ್ತರದ ಪಿಚ್‍ನಲ್ಲಿರುತ್ತದೆಂದರೆ ಹತ್ತಿರದಲ್ಲಿ ಆ ಸದ್ದನ್ನು ಕೇಳಿದರೆ ಒಬ್ಬ ಮನುಷ್ಯನ ಕಿವಿಯು ಶಾಶ್ವತವಾಗಿ ಕಿವುಡಾಗುತ್ತದೆ. ಮತ್ತೂ ಕೆಲವು ಸಿಕಾಡಗಳ ಹಾಡು, ಮನುಷ್ಯನ ಕಿವಿಗಳು ಗುರುತಿಸಲಾಗದಷ್ಟು ಹೆಚ್ಚಿನ ಡೆಸಿಬಲ್‍ಗಳದ್ದಾಗಿರುತ್ತದೆ. ವಿಚಿತ್ರವೆಂದರೆ, ಇಂತಹಾ ಕಿವುಡುತನವು ಹಾಡುವ ಸಿಕಾಡಗಳನ್ನೂ ಕಾಡಬಹುದು. ಹಾಗಾಗಿ ತಮ್ಮ ಕಿವಿಯಂತಹಾ ‘ಟಿಂಪಾನ’ಗಳನ್ನು ಮುಚ್ಚಿಕೊಂಡ ನಂತರವಷ್ಟೇ ತಮ್ಮ ಹಾಡನ್ನು ಪ್ರಾರಂಭಿಸುತ್ತವೆ ಸಿಕಾಡಗಳು. + + + +ಇವುಗಳ ಹಾಡಿನಷ್ಟೇ ವಿಶೇಷ ಇವುಗಳ ಜೀವನಚಕ್ರ ಕೂಡ. ಗಿಡಗಳಮೇಲೆ ಒಂದು ಸಣ್ಣ ಸೀಳನ್ನು ರಚಿಸಿ ಅದರಲ್ಲಿ ನೂರಾರು ಮೊಟ್ಟೆಗಳನ್ನಿಡುತ್ತದೆ ಹೆಣ್ಣು ಸಿಕಾಡ. ಅವುಗಳೊಡೆದು ಹೊರಬರುವ ಅಪಕ್ವ ಮರಿಗಳು ಗಿಡದಮೇಲಿನಿಂದ ನೆಲಕ್ಕೆ ಬೀಳುತ್ತವೆ. ಅವುಗಳಿಗಿರುವ ಚೂಪಾದ ಮತ್ತು ಬಲಿಷ್ಠವಾದ ಮುಂಗೈಗಳಿಂದ ನೆಲವನ್ನು ಅಗೆದು. ಬಿಲ ತೋಡಿ ಬಿಲದೊಳಗೆ ಮರೆಯಾಗುತ್ತವೆ. ಹೀಗೆ ಭೂಗತವಾಗಿ ವರ್ಷಾನುಗಟ್ಟಲೇ ಸಮಯ ದೂಡುವ ಮರಿಗಳು, ಗಿಡಗಳ ಬೇರಿನೊಳಗಿನ ರಸವನ್ನು ಹೀರುತ್ತಾ ಬೆಳೆಯುತ್ತವೆ. 2ರಿಂದ 17 ವರ್ಷಗಳವರೆಗೂ ಭೂಗತವಾಗಿರಬಲ್ಲ ಮರಿಗಳು ಪ್ರಬುದ್ಧ ಕೀಟಗಳಾಗಿ ಹೊರಬರುತ್ತವೆ. ಭೂಗತ ಅಪಕ್ವ ಸ್ಥಿತಿಯಿಂದ ಪ್ರಬುದ್ಧತೆಯ ಸ್ಥಿತಿಯೆಡೆಗೆ ತಲುಪುವ ಮುನ್ನ ಬಿಲದಿಂದ ಹೊರಕ್ಕೆ ಒಂದು ಸುರಂಗ ತೋಡಿ ಹೊರಬರುತ್ತವೆ. ಹೊರಬಂದ ತಕ್ಷಣ ಒಂದು ಗಿಡದ ತೊಗಟೆಗೆ ಅಂಟಿಕೊಂಡು ಪೊರೆ ಕಳಚಲು ಆರಂಬಿಸುತ್ತವೆ. ತನ್ನ ಬೆನ್ನಿನ ಭಾಗದ ಮಧ್ಯದಲ್ಲಿ ಹೊಸದಾಗಿ ಹುಟ್ಟುಹಾಕುವ ಒಂದು ಸೀಳುವಿಕೆಯ ಮುಖಾಂತರ ಹೊರಬರುವ ಪ್ರಬುದ್ಧ ಕೀಟವು ಹೊರಕವಚವನ್ನು ಗಿಡದ ಮೇಲೇ ಬಿಟ್ಟು ಹೊರಕ್ಕೆ ಹಾರುತ್ತವೆ. ಬಹಳ ಕೂಲಂಕುಷವಾಗಿ ಗಮನಿಸದಿದ್ದರೆ ಅದು ಸಿಕಾಡವೋ ಅಥವಾ ಅದರ ಹೊರಕವಚ ಮಾತ್ರವೋ ಎಂಬುದು ತಿಳಿಯುವುದು ಕಷ್ಟಸಾಧ್ಯ. ಹೀಗೆ ಹೊರಕವಚವನ್ನು ಕಳಚಿಕೊಂಡು ಹೊರಬರುವ ಸಿಕಾಡವು ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತವೆ. + + + +ಕೆಲವು ಜಾತಿಯ ಸಿಕಾಡಗಳು ಪಾರಭಾಸಕ ಅಥವಾ ಅರೆಪಾರದರ್ಶಕ ರೆಕ್ಕೆಗಳನ್ನು ಹೊಂದಿರುವುದೂ ಉಂಟು. ಈ ಕೀಟವು ಪ್ರಬುದ್ಧತೆಯನ್ನು ಪಡೆದ ಸ್ಥಿತಿಯಲ್ಲಿ ಇದಕ್ಕೆ ಬಾಯಿಯೇ ಇರುವುದಿಲ್ಲ ಮತ್ತು ಇದು ಆಹಾರವನ್ನೇ ಸೇವಿಸುವುದಿಲ್ಲ ಎಂಬುದು ಒಂದು ಪುರಾಣ ಕಟ್ಟುಕಥೆಯಷ್ಟೇ; ಪ್ರಬುದ್ಧ ಸಿಕಾಡವು ಇತರ ಕೀಟಗಳಂತೆ ಬಾಯನ್ನು ಹೊಂದಿದ್ದು, ಬಾಯಿಯ ಮುಖಾಂತರವೇ ಸಸ್ಯರಸವನ್ನು ಹೀರುತ್ತವೆ. ಈ ಪ್ರಬುದ್ಧ ಸ್ಥಿತಿಯಲ್ಲಿ ಹಾಡನ್ನು ಆರಂಭಿಸಿ, ಸಂಗಾತಿಯನ್ನು ಆರಿಸಿ, ಸಂಗಾತಿ ಕೀಟದೊಡನೆ ಕೆಲವಾರು ದಿನಗಳು ಬದುಕಿ, ಹೆಣ್ಣು ಸಿಕಾಡವು ಮೊಟ್ಟೆಯಿಟ್ಟ ಬಳಿಕ ಅಲ್ಪ ಸಮಯದಲ್ಲಿ ಇವುಗಳ ಜೀವನಚಕ್ರ ನಿಲುಗಡೆಗೆ ಬರುತ್ತದೆ. ಯಾವುದಾದರೂ ಪ್ರಾಣಿಗೋ ಪಕ್ಷಿಗೋ ಆಹಾರವಾಗಿಯೋ, ಅಥವಾ ಸಹಜವಾಗಿಯೋ ಸಾವನ್ನಪ್ಪುತ್ತವೆ. ಹಲವಾರು ಪ್ರಾಣಿ ಪಕ್ಷಿಗಳ ನೆಚ್ಚಿನ ಆಹಾರವಾದ ಸಿಕಾಡವನ್ನು ಮನುಷ್ಯನೂ ಬಿಟ್ಟಿಲ್ಲ. ಚೀನಾ, ಮಲೇಷಿಯಾ, ಬರ್ಮಾ, ದಕ್ಷಿಣ ಅಮೇರಿಕಾ ದೇಶಗಳಲ್ಲಿ ಹಲವಾರು ಬಗೆಯಲ್ಲಿ ಸಿಕಾಡಗಳನ್ನು ಸೇವಿಸುತ್ತಾರೆ. ಪರಿಸರ ಪ್ರೇಮಿಗಳಿಗೆ ಸಿಕಾಡಗಳ ‘ಗುಮ್’ ಸದ್ದು ಇವುಗಳ ಇರುವಿಕೆಯ ಬಗ್ಗೆ ಪುಳಕಿತಗೊಳಿಸಿದರೆ ಮತ್ತೂ ಕೆಲವರ ಬಾಯಲ್ಲಿ ನೀರೂರಿಸುತ್ತದೆ ಎಂಬುದು ವೈಯಕ್ತಿಕತೆಯ ಆಚರಣೆಯ ನಿದರ್ಶನವಷ್ಟೇ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_126.txt b/Kenda Sampige/article_126.txt new file mode 100644 index 0000000000000000000000000000000000000000..50c2ece0623334d70f6cae3cb45cadf8d06c61bc --- /dev/null +++ b/Kenda Sampige/article_126.txt @@ -0,0 +1,35 @@ +byಕೆಂಡಸಂಪಿಗೆ|Mar 6, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನೀರಿಗೆಂದು ಅಗೆದಾಗ ದ್ರವರೂಪದ ಚಿನ್ನ ಎನ್ನಿಸಿದ ಪೆಟ್ರೋಲ್ ಸಿಕ್ಕರೆ? ಕರ್ನಾಟಕದಲ್ಲಿ ಕಂಡಕಂಡೆಡೆ ಬೋರ್‍ವೆಲ್ ತೋಡುತ್ತಿರುವ ನೀರ್ ಸಾಬರು ಎನ್ನಿಸಿರುವ ನಜೀರ್ ಸಾಬರೂ ಕಡಿಮೆ ಆಗುತ್ತಿರುವ ನೀರಿನ ಮಟ್ಟವನ್ನು ಗಣಿಸದೆ ಬೋರ್‍ವೆಲ್ ತೋಡುವ ಕೆಲಸವನ್ನು ಇನ್ನೂ ಚುರುಕುಗೊಳಿಸಿದರೆ ನೀರಿಗೆ ಬದಲು ನಮಗೂ ಪೆಟ್ರೋಲ್ ಸಿಕ್ಕರೆ ನೀರ್‍ಸಾಬರು ಪೆಟ್ರೋಲ್ ಸಾಬ್ ಆಗಬಹುದು. ಕಾವೇರಿ ಬೇಸಿನ್‍ನಲ್ಲಿ ತೈಲ ಸಿಕ್ಕ ಸುದ್ದಿ ಆಗಾಗ್ಗೆ ಬರುತ್ತಿರುವಾಗ ಕರ್ನಾಟಕಕ್ಕೇಕೆ ಈ ದ್ರವರೂಪದ ಚಿನ್ನ ಬೇಡ? `ಬೋರ್‍ವೆಲ್’ ತೋಡುವುದು ಹೆಚ್ಚಾಗಬಹುದು.ಜೋಗಿ ಸಂಪಾದಿಸಿದ “ವೈಯೆನ್ಕೆ UNLIMITED ವಾಚಿಕೆ” ಕೃತಿಯ ಆಯ್ದ ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Mar 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್‌ ಪಾಷಾ ತೋರಿದ್ದಾರೆ.ಚಾಂದ್‌ ಪಾಷ ಎನ್.ಎಸ್. ಕವನ ಸಂಕಲನ “ಒದ್ದೆಗಣ್ಣಿನ ದೀಪ”ಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Mar 3, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೊನೆಯಾಗದ ಕಷ್ಟಗಳು, ಮರೆಯಲಾಗದ ನೋವು, ಸದಾ ಉಳಿಯುವ ಚಡಪಡಿಕೆ, ಹೆದರಿಸುವ ಒಂಟಿತನ- ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣುತ್ತವೆ. ಎದೆಯೊಳಗಿನ ನೋವನ್ನು ಅಂಗೈಲಿ ಹಿಡಿದುಕೊಂಡೇ ವಿನಾಯಕ ಇಲ್ಲಿನ ಕಥೆಗಳಿಗೆ ಅಕ್ಷರ ರೂಪ ನೀಡಿರಬಹುದೇನೋ ಎಂದು ಪದೇ ಪದೇ ಅನಿಸುವಷ್ಟರಮಟ್ಟಿಗೆ ಇಲ್ಲಿನ ಕಥೆಗಳು ಸಂಕಟವನ್ನು ಉಸಿರಾಡಿದೆ. ಒಬ್ಬೊಬ್ಬರ ಬದುಕೂ ಸಂಕಟದ ಸಾಗರವೇ ಆಗಿರುತ್ತದೆ ಎಂಬುದನ್ನು ಎದೆ ಬಗೆದು ತೋರುವಂಥ ಹುಮ್ಮಸ್ಸಿನಲ್ಲಿ ವಿನಾಯಕ ಕಥೆ ಹೇಳಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಗೆಲುವನ್ನು ಕಂಡಿದ್ದಾರೆ.ವಿನಾಯಕ ಅರಳಸುರಳಿ ಕಥಾಸಂಕಲನ “ಮರ ಹತ್ತದ ಮೀನು”ಕ್ಕೆ ಎ.ಆರ್‌. ಮಣಿಕಾಂತ್ ಬರೆದ ಮುನ್ನುಡಿ + +byಮಂಡಲಗಿರಿ ಪ್ರಸನ್ನ|Mar 1, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಜಲ್ ಮೂಲತಃ ಮನುಷ್ಯ ಸಹಜ ಪ್ರೀತಿ, ಪ್ರೇಮ, ಪ್ರಣಯ, ವಿರಹ, ವೇದನೆ, ಏಕಾಂಗಿತನ, ನೋವು, ಹತಾಶೆ, ವಿಪ್ರಲಂಭನ, ಬೇಗುದಿ, ತಳಮಳಗಳನ್ನು ಅಭಿವ್ಯಕ್ತಿಗೊಳಿಸುವ ಕಾವ್ಯವಾದರೂ, ಅದರಾಚೆಯ ವರ್ತಮಾನದ ಸಂಗತಿಗಳನ್ನೂ ಅದು ಪ್ರತಿಧ್ವನಿಸುತ್ತದೆ. ಇಂತಹ ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಇಲ್ಲಿ ಕೆಲ ಗಜಲ್‌ಗಳು ಮೈದಾಳಿವೆ. ಅಂಬಮ್ಮ ಅವರ ಗಜಲ್‌ಗಳಲ್ಲಿ ಪ್ರೇಮ ನಿವೇದನೆ ಇದೆ, ನೋವುಂಡ ಹೃದಯಾಂತರಾಳದ ಯಾತನೆ ಇದೆ. ಜೊತೆಗೆ ಕೆಲವೆಡೆ ಚಡಪಡಿಕೆ, ಕಾತರತೆ, ಆರ್ದ್ರತೆ, ಮನದ ತಾಕಲಾಟಗಳ ತಳಮಳವೂ ಇದೆ.ಅಂಬಮ್ಮ ಪ್ರತಾಪ್‌ ಸಿಂಗ್‌ ಗಜಲ್‌ ಸಂಕಲನ “ಮೌನದೊಡಲ ಮಾತು” ಕುರಿತು ಮಂಡಲಗಿರಿ ಪ್ರಸನ್ನ ಬರಹ + +byಮಹಾಬಲ ಭಟ್|Feb 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ. ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ.ಸುಧಾ ಎಂ. ಚೊಚ್ಚಲ ಕಥಾ ಸಂಕಲನ “ಅಪೂರ್ಣವಲ್ಲ” ಕುರಿತು ಮಹಾಬಲ ಭಟ್‌ ಅವರ ಬರಹ + +byಕೆಂಡಸಂಪಿಗೆ|Feb 27, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ + +byಕೆಂಡಸಂಪಿಗೆ|Feb 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅವರ ಕತೆಗಳಲ್ಲಿ ಸಂಭಾಷಣೆಗಿಂತ ನಿರೂಪಣೆಯೇ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕತೆಯ ಪೂರ್ಣ ಹೆಣಿಗೆ ಆಡುಮಾತಿನಲ್ಲೇ ಇರುತ್ತದೆ. ಆಡುವ ನುಡಿಯಂತೆಯೇ ಬರವಣಿಗೆಯೂ ಇರುತ್ತಾ, ನಿರೂಪಣೆಯಲ್ಲೇ ‘ಹ’ಕಾರ ‘ಅ’ಕಾರಗಳ ಅದಲು ಬದಲುಗಳೂ ಸೇರಿಕೊಂಡು ಇತರ ಸ್ಥಳೀಯ ಪದಗಳ ಬಳಕೆಯೂ ಹಾಗೇ ದಾಖಲಾಗುತ್ತದೆ. ಇದು ಕೆಲವೊಮ್ಮೆ ಭಾಷೆಯ ಬಳಕೆಯ ಬಗೆಗೆ ‘ಮಡಿವಂತಿಕೆ’ ಹೊಂದಿದ್ದು, ತಮ್ಮದೇ ಸರಿ ಕನ್ನಡ, ಇದೆಲ್ಲ ‘ಅಶುದ್ಧ’ ಕನ್ನಡ ಎಂದುಕೊಳ್ಳುವವರಿಗೆ ಇರಿಸು ಮುರಿಸು ಮಾಡಬಹುದು. ಆದರೆ ಇವು ಆಡುಕನ್ನಡದ ಒಂದು ಟಿಸಿಲು ಎಂದು ಅರಿತರೆ ಸಮಸ್ಯೆ ಅನ್ನಿಸದು.ವಿಜಯಾ ಮೋಹನ್‌ ಕಥಾ ಸಂಕಲನ “ಮೇವು”ಗೆ ಡಾ. ಸಬಿತಾ ಬನ್ನಾಡಿ ಬರೆದ ಮುನ್ನುಡಿ + +byಮಾಲಾ ಮ. ಅಕ್ಕಿಶೆಟ್ಟಿ|Feb 23, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ.ಮಲ್ಲಿಕಾರ್ಜುನ್ ಶೆಲ್ಲಿಕೇರಿಯವರ “ದೀಡೆಕರೆ ಜಮೀನು” ಕಥಾ ಸಂಕಲನದ ಕುರಿತು ಮಾಲಾ ಮ. ಅಕ್ಕಿಶೆಟ್ಟಿ ಬರಹ + +byಕೆಂಡಸಂಪಿಗೆ|Feb 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಆ ಚುನಾವಣೆಯಲ್ಲಿ ಸಂಜಯ್ ಸರ್ಕಾರ್ ಸ್ಪರ್ಧಿಸಿದ್ದರೆ ಬಹುಮತದಿಂದ ಗೆದ್ದು ಬರುತ್ತಿದ್ದರು. ಅವರು ಆ ಕೆಲಸ ಮಾಡಲಿಲ್ಲ. ನ್ಯಾಷನಲ್ ಪಾರ್ಟಿಯೇ ಮತ್ತೆ ಅಧಿಕಾರಕ್ಕೆ ಬರುವತನಕ ಕಾದರು. ನಂತರ ಸರ್ಕಾರದ ಲೋಪಗಳನ್ನು ಎತ್ತಿ ತೋರಿದರು. ನ್ಯಾಷನಲ್ ಪಾರ್ಟಿಯ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ, ಸಂಜಯ್ ಸರ್ಕಾರ್ ತಮ್ಮ ಹೊಸ ಪಕ್ಷವನ್ನು ಹುಟ್ಟುಹಾಕಿದರು. ಅದಕ್ಕೆ ಮಾತೃಭೂಮಿ ಎಂದು ಹೆಸರಿಟ್ಟರು. ಸಂಜಯ್ ಸರ್ಕಾರ್ ಜತೆ ಹೋರಾಟದ ಉದ್ದಕ್ಕೂ ಜತೆಗಿದ್ದ ಚಿದಾನಂದ ಪಾಂಡೆಯನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸಿದರು.ನೆನ್ನೆಯಷ್ಟೇ ಬಿಡುಗಡೆಯಾದ ಜೋಗಿಯವರ ಕಾದಂಬರಿ “ಹಸ್ತಿನಾವತಿ”ಯ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_127.txt b/Kenda Sampige/article_127.txt new file mode 100644 index 0000000000000000000000000000000000000000..614fe36e0ae2bc6db2f32b1f329888d2ac217aad --- /dev/null +++ b/Kenda Sampige/article_127.txt @@ -0,0 +1,15 @@ +ಸ್ಪರ್ಶ ಶಿಲೆ ಎಂಬ ವಿನೂತನ ಶೀರ್ಷಿಕೆ ಹೊತ್ತ ಕೃತಿಯ ಕರ್ತೃ, ನಾಡಿನ ಪ್ರಬುದ್ಧ ಕವಯತ್ರಿ ಡಾ. ಕೆ. ಎನ್. ಲಾವಣ್ಯಪ್ರಭಾ. ಅಂತಃಕರಣವನ್ನು ಪ್ರಾಮಾಣಿಕವಾಗಿ ತೆರೆದಿಟ್ಟು ಯಾವುದೇ ವೈಭವೀಕರಣವಿಲ್ಲದ ವಸ್ತುನಿಷ್ಠ ನಿರೂಪಣೆಯ ಕವಿತೆಗಳ ಗುಚ್ಛವಿದು. ಇಲ್ಲಿ ನೆಲದ ನೋವಿದೆ, ಪ್ರೀತಿಯ ಪ್ರತೀಕ ಕೃಷ್ಣನ ಹದವಾದ ನವಿರು ಪ್ರೀತಿಯಿದೆ, ಬುದ್ಧನ ಮೌನಕ್ಕೆ ಅರ್ಥವಿದೆ, ವರ್ಷಧಾರೆಯ ಪುಳಕವಿದೆ, ಪ್ರಕೃತಿಗೂ ಜೀವ ತುಂಬಿ ಭಾಷ್ಯ ಬರೆದಿದ್ದಾರೆ ಜೊತೆಗೆ ವಿಶೇಷವಾಗಿ ಶಿಲೆಗು ಜೀವ ತುಂಬಿ ಭಾವಪರವಶರಾಗಿದ್ದಾರೆ. ತಮ್ಮೊಳಗೆ ಬಚ್ಚಿಟ್ಟ ಮೌನಕ್ಕೆಲ್ಲ ಸಾವಧಾನದಿಂದ ಕವಿತೆಯ ಮೂಲಕ ಅರ್ಥ ನೀಡಿದ್ದಾರೆ. ಕವಿತೆ ಓದಿದ ನಂತರ ಖುಷಿಯ ಅನುಭೂತಿಯ ಅನುಭವವಾಗುತ್ತದೆ. ಮಹಿಳೆಯ ಮನಸ್ಸು ಅನುಭವಿಸುವ ತಣ್ಣನೆಯ ತಲ್ಲಣಗಳ ಸಾಲುಗಳು ಇಲ್ಲಿನ ಕವಿತೆಗಳಲ್ಲಿ ತುಂಬಾ ಅಪ್ಯಾಯಮಾನವಾಗಿದೆ. + +(ಡಾ. ಕೆ. ಎನ್. ಲಾವಣ್ಯಪ್ರಭಾ) + +“ಭೂಮಿ ಇವಳು / ಒಡಲುರಿಗೆ ಒಳಗೆಲ್ಲೋ ಮಾಯಿಗಟ್ಟಿ / ನಿಂತ ಕಣ್ಣ ಹನಿಯನ್ನೆಲ್ಲ ಹಿಂಗಿ ಮುರುಟಿ ತನ್ನೊಳಗೆ ತಾನೆ ಜ್ವಾಲಾಮುಖಿ ಇವಳು / ಮೇಲೆ ತಣ್ಣಗಿನ ಯಮುನೆಯಾದವಳು. ಹೀಗೆ ‘ಇವಳನ್ನು’ ಭೂಮಿಯಾಗಿ ಪರಿವರ್ತಿಸಿ ಹೇಳಿ ಅಚ್ಚರಿಗೊಳಿಸುತ್ತಾರೆ. ಹೆಣ್ಣೆಂಬ ಕ್ಷಮಯಾ ಧರಿತ್ರಿಗೆ ಅನ್ವರ್ಥ ನಾಮವೇ ಈ ಭೂಮಿಯೆಂಬ ಸತ್ಯವನ್ನು “ಭೂಮಿ ಇವಳು” ಎಂಬ ಚಂದನೆಯ ಕವಿತೆಯಲ್ಲಿ ಅನಾವರಣಗೊಳಿಸುತ್ತಾರೆ. ಹೆಣ್ಣು ಮತ್ತು ಪ್ರಕೃತಿಯ ಧ್ಯಾನ ಇಲ್ಲಿನ ಹಲವಾರು ಕವಿತೆಗಳಲ್ಲಿವೆ. ಬೀಸುವ ಗಾಳಿಗೆ ಹಸಿರೆಲೆ ಬಳ್ಳಿ ತೊನೆದಾಡಿ / ಹನಿದ ಸೋನೆ ಮಳೆಗೆ ಮಣ್ಣು ಗಂಧವ ತೀಡಿ ನಿರ್ವಾತದಲ್ಲು ಬೆಳಕ ಝರಿ ಹರಿದಾಡಿ… ಹೀಗೆ ಸಾಗುವ ಪ್ರಕೃತಿ ಲೋಕ ಬೃಂದಾವನಕ್ಕೆ ತೆರಳುತ್ತದೆ. ಬೃಂದಾವನದ ವರ್ಣನೆ ವರ್ಣನಾತೀತ. ಇಲ್ಲಿನ ಮುಖ್ಯ ಕವಿತೆಗಳೆಲ್ಲವೂ ಪ್ರಕೃತಿಯ ವರ್ಣ ರಂಜಿತ ನಿಲುವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನೆದೆಗೆ ಮೊದಲು ತಾಕುವುದೆ ಪ್ರಕೃತಿ ಪ್ರೇಮ ಎಂಬುದು ನಮಗಿಲ್ಲಿ ನಿರೂಪಿತವಾಗುತ್ತದೆ. ಪ್ರಕೃತಿಯೆಂದರೆ ಕೋಗಿಲೆ ಬೇಕು, ಚಂದಿರನಿರಬೇಕು, ನೀಲಿಯಾಕಾಶ, ಕರಿ ಮುಗಿಲು, ಆಷಾಡದ ಮೋಡ, ಸುಖದ ಮಳೆ, ನಿತ್ಯ ಪುಷ್ಪ, ಪಾರಿಜಾತ, ಕಲ್ಪವೃಕ್ಷ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ಇಲ್ಲಿನ ಕವಿತೆಗಳಲ್ಲಿದೆ. ಏನೋ ಒಂದು ತಿಳಿಯಲು ಆಗದಂತಹ ಆಧ್ಯಾತ್ಮಕತೆಯ ದಿವ್ಯ ಸಾನಿಧ್ಯದ ಸೆಳವು ಇಲ್ಲಿನ ಕವಿತೆಗಳು ಎದ್ದು ತೋರಿಸುತ್ತವೆ. ಅಂದರೆ ಪ್ರಕೃತಿಯೆಡೆಗಿನ, ನಮ್ಮನ್ನು ಕಾಯುವ ಶಕ್ತಿಯೆಡೆಗಿನ ಮೋಹದ ಕವಿತೆಗಳು. + +ಕಾವ್ಯದ ಹಲವಾರು ಸವಾಲುಗಳನ್ನು ಮೀರಿ ಬೆಳೆದು ನಿಂತ ಸೃಷ್ಠಿಯೆ ಇವರ ಕವಿತೆಗಳು. ಇಲ್ಲಿನ ರಸ್ತೆ ಕವಿತೆ ಅದಮ್ಯ ಜೀವನಕಾಂಕ್ಷೆಯನ್ನೂ, ಜೀವನೋತ್ಸಾಹವನ್ನು ಹುಟ್ಟು ಹಾಕುವಂತಿದೆ. ಜೀವನದ ಹಾದಿಯ ಸಹಜ ಏರಿಳಿತಗಳನ್ನು, ಸಹಜ ತಾತ್ವಿಕತೆಯೊಂದಿಗೆ ಈ ಕವಿತೆಯಲ್ಲಿ ನಿರೂಪಿಸುತ್ತಾರೆ. ಅದೆಷ್ಟೋ ತಿರುವುಗಳ / ಅಸಂಖ್ಯ ಉಬ್ಬು ತಗ್ಗುಗಳ ಕೊನೆ ಮೊದಲಿಲ್ಲದ ದಾರಿಗಳೊಳಗೆ / ಹೂತು ಹೋದ ಸತ್ಯಗಳ / ಹಾದು ಹೋದ ಹೆಜ್ಜೆಗಳೆಲ್ಲವನ್ನು ಬಲ್ಲ ಮಲ್ಲನಾದರು…. ಹೀಗೆ ಸಾಗುವ ಕವಿತೆಯಲ್ಲಿ ರಸ್ತೆಯನ್ನು “ಈ ಘಳಿಗೆ ರಸ್ತೆ ತನ್ನ ಪಾಲಿಗೆ ಅದ್ಭುತ ತತ್ವಜ್ಞಾನಿ” ಎಂದು ಕರೆದಿದ್ದಾರೆ. ಹೀಗೆ ಇಲ್ಲಿನೆಲ್ಲ ಕವಿತೆಗಳು ಲವಲವಿಕೆಯ ಭಾಷೆಯಿಂದಾಗಿ ಓದುಗ ಸ್ನೇಹಿಯಾಗಿದೆ. ಕವಿತೆಗಳನ್ನು ಓದಿದಾಗ ನಮಗನಿಸುವುದು ಏನೆಂದರೆ, ಆಗ ತಾನೇ ಅನುಭವಿಸಿದ ತಲ್ಲಣಗಳು, ಪ್ರಕೃತಿಯ ಚೆಲುವನ್ನು, ಅಂತರಾಳದ ಭಕ್ತಿ ಇವನ್ನೆಲ್ಲ ತಾಜಾವಾಗಿಯೆ ಕವಿತೆಗಳಿಗೆ ಇಳಿಸಿಬಿಟ್ಟಿದ್ದಾರೆ. ಏಕೆಂದರೆ ಇಲ್ಲಿನ ಕವಿತೆಗಳ ವಸ್ತುಗಳಿಗೆ ಅತ್ಯಂತ ಜೀವಕಳೆ ಇದೆ. ಹಾಗಾಗಿ ಇವು ಯಾವತ್ತಿಗೂ ತನ್ನ ಹೊಸತನವನ್ನು ಹಾಗೆಯೇ ಉಳಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. + + + +“ದಾರಿಯಲ್ಲಿ ಸಾಲು ಸಾಲಾಗಿ ಬರುವ ಎಲ್ಲ ಬೇಸರಗಳು/ ನಲಿವಿಗೆ ದಾರಿಯಂತೆ.. ಹೀಗೆ ಸಾಗುವ ಕವಿತೆಯಲ್ಲಿ, ಯಾಕೆ ನಲಿವಿಗೆ ದಾರಿ ಎಂಬುದಾಗಿ ಹೇಳಿ ನಮ್ಮ ಚಿಂತೆಯನ್ನು ತೇಜೋಹಾರಿಯಾಗಿ ಮಾಡಿ ಬಿಡುತ್ತಾರೆ. ಸಂಕಲನದ ಚೆಲುವ ಕವಿತೆಯಂತು ಮಾರ್ಮಿಕವಾಗಿದೆ. ಅನೂಹ್ಯವಾದ ಚೆಲುವ ನಾರಾಯಣನ ಕರುಣೆಯಲ್ಲಿ ಭಕ್ತಿರಸ ಉಕ್ಕಿ ಬರುತ್ತದೆ. ಇತಿಹಾಸದ ಸಾಕ್ಷ್ಯಗಳಿಲ್ಲದಿದ್ದರೂ ಹೊರಗಮ್ಮ ದೇವಿಯ ವಿಹ್ವಲ ಪ್ರೀತಿ ಮನ ಮಿಡಿಯುವಂತೆ ಇಲ್ಲಿ ಪಡಿಮೂಡಿದೆ. + +ಒಟ್ಟಿನಲ್ಲಿ ಸಂಪೂರ್ಣ ಸ್ಪರ್ಶ ಶಿಲೆಯಲ್ಲಿ ಸತ್ವ ಇದೆ. ಭಾವನಾತ್ಮಕವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಕವಿತೆಯ ಒಳನೋಟವನ್ನು ತಾತ್ವಿಕವಾಗಿ ನಮಗೆ ಹೇಳುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಬದುಕು ಮತ್ತು ಪ್ರಕೃತಿಯನ್ನು ಅನುಸಂಧಾನಿಸುತ್ತಲೆ ರಚಿಸಿದ ಹದವಾದ ಭಾವ, ಭಾಷೆಯ ಕವಿತೆಗಳು ನಮ್ಮಲ್ಲೂ ಹೊಸ ಸಂವೇದನೆಯನ್ನು, ಚೈತನ್ಯವನ್ನು ಹುಟ್ಟು ಹಾಕುತ್ತವೆ. ಮೈಸೂರಿನ ಕವಿತಾ ಪ್ರಕಾಶನದಿಂದ ಈ ಸಂಕಲನ ಪ್ರಕಟಗೊಂಡಿದೆ. + +ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_128.txt b/Kenda Sampige/article_128.txt new file mode 100644 index 0000000000000000000000000000000000000000..5d981681750f3f82632f6fb49aca8adf59ff8f13 --- /dev/null +++ b/Kenda Sampige/article_128.txt @@ -0,0 +1,49 @@ +“ನಿಮಿಗೇನ್ ಒಂದ್ ಎಳ್ ಕಾಳೋಷ್ಟರ ಜವಾಬ್ದಾರಿ ಇಲ್ಲ ವಯಸ್ಸಿಗೆ ಬಂದ್ ಮಗುಳ್ನ ಇನ್ನು ಮನೆಗೆ ಇಟ್ಕಂಡಿದಿರಲ್ಲ. ನನಗಿಂತ ಸಣ್ಣುಡ್ರಿಗೆಲ್ಲ ಮದ್ವೆ ಆಗ್ತೈತಿ. ನನ್ನುನ್ ನೋಡಕ್ ಒಂದೇ ಒಂದ್ ಗಂಡ್ ಕರ್ಕಂಡ್ ಬಂದಿಲ್ಲ ಇನ್ನೂ. ಇಲ್ಲೇ ನಿಮ್ಮ ಚಾಕ್ರಿ ಮಾಡ್ಕೆಂದು ಬಿದ್ದಿರ್ಲಿ ಅಂತನೇನು ನೀವು” ಎಂದು ಅಪ್ಪ ಅವ್ವನಿಗೆ ಮೂದಲಿಸಿ ಜಗಳವಾಡುತಿದ್ದುದನ್ನು ನೆನೆದು ತೊಡೆಯ ಮೇಲೆ ಪವಡಿಸಿದ್ದ ಹೆಣ್ಣು ಕೂಸಿನ ಮೇಲೆ ಗೊತ್ತಿಲ್ಲದೆ ಕಣ್ಣೀರು ಹನಿಕಿಸುತ್ತ ಅಂತರ್ಮುಖಿಯಾಗಿದ್ದಾಳೆ ಸಾವಿತ್ರಿ. + +ಇನ್ನೊಂದು ಮೂರು ಮೂರುವರೆ ವರ್ಷದ ಕೂಸು ಹಿತ್ತಲ ಬಾಗಿಲಿನ ಪಕ್ಕದಲ್ಲಿ ಗುಡ್ಡದಂತೆ ಒಟ್ಟಿದ್ದ ಮೈಲಿಗೆ ಬಟ್ಟೆಯ ಸಂಧಿಯಲ್ಲಿ ತೋಟದ ಕಡೆಯಿಂದ ಬಂದು ಸರಸದಲ್ಲಿದ್ದ ಎರಡು ಕಪ್ಪೆಗಳನ್ನು ಕೈಯಲ್ಲೇ ಹಿಡಿದು ತಾಯಿಗೆ ತೋರಿಸಲೆಂದು ಮನೆಯೊಳಗೆ ತಂದು “ಅಮ್ಮ ಇಲ್ಲಿ ನೋಡು ಕಪ್ಪೆ, ಎರೆಡು ಜಗಳ ಆಡ್ತಿದ್ವು ಅದಿಕ್ಕೆ ಜಗಳ ಬಿಡಿಸಿ ಎತ್ಕೆಂಬಂದೆ” ಎಂದು “ಹಿ ಹಿ ಹಿ” ಎಂದು ಕಿಸಿಯುತ್ತಿದ್ದ ಆ ಹುಡುಗಿಗೆ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಮತ್ತೆ “ಅಮ್ಮಾ….” ಎಂದಳು ಎಳೆ ಕೈಯಿಂದೊಮ್ಮೆ ಸ್ಪರ್ಶಿಸಿ. ಮೈ ಜಲಕಿಸಿ ಎಚ್ಚರಗೊಂಡ ಸಾವಿ ತನ್ನ ದುಖ: ಮಗಳಿಗೆ ತಿಳಿಯಬಾರದೆಂದು ಸೆರಗಿನಲ್ಲಿ ಮುಖ ತಿಕ್ಕಿಕೊಂಡು “ಏನಮ್ಮಾ ಕನಕ ?” ಎಂದಾಗ ಕೈಲಿದ್ದ ಎರಡು ಕಪ್ಪೆಗಳನ್ನು ಮುಂಚಾಚಿ ತೋರಿದಳು. ಕೊರಗಿ ಮಂಕಾಗಿದ್ದ ಮುಖವನ್ನು ಕಿವುಚಿ “ಶೀ….. ಬಿಸಾಕಮ್ಮ ಹಂಗೆಲ್ಲ ಹಿಡಿತಾರೇನೆ ಬರಿಗೈಲಿ” ಅಂದು ಬಿಸಾಕಲೇಳಿ ಈ ದಿನವಾದರು ತನ್ನ ಗಂಡ ಮನೆಗೆ ಬರಬಹುದು ಬೇಗ ಅಡಿಗೆ ಮಾಡೋಣವೆಂದು ತೊಡೆ ಮೇಲಿದ್ದ ಕೂಸನ್ನ ಬಿದಿರ ತೊಟ್ಟಿಲಿಗೆ ಹಾಕಿ ಒಲೆಯ ಕಡೆ ಸಾರಿದಳು. + +(ನಗೋಲತೆ) + +ಆ ಮನೆ, ಅದೊಂದು ಸಣ್ಣ ಕೆಂಪು ಹಂಚಿನ ಕೋಣೆ ಅದಕ್ಕೆ ಅಂಟಿಕೊಂಡೆ ಚಿಕ್ಕ ಅಡಿಗೆ ಮನೆ ಅದರಲ್ಲೆ ಕೈಬಚ್ಚಲು ಒಂದು ಊಡೊಲೆ ಮತ್ತೆ ಹೇಳುವಂತದ್ದೇನು ಇಲ್ಲ. ಸಾವಿತ್ರಿ ಮದುವೆಯಾಗಿ ಬಂದಾಗ ದೊಡ್ಡದಿತ್ತು. ಬರುಬರುತ್ತಾ ಗಂಡ ಮತ್ತೆ ಗಂಡನ ಅಣ್ಣಂದಿರಿಬ್ಬರು ತಂದೆಯ ಎಲ್ಲ ಆಸ್ತಿಯನ್ನು ಪಾಲು ಮಾಡಿಕೊಂಡಾಗ ಅದೇ ಮನೆಯನ್ನು ಮೂರು ಭಾಗ ಮಾಡಿ ಹಂಚಿಕೊಂಡಿದ್ದರಿಂದ ಇವರ ಪಾಲಿಗೆ ಬಂದ ಮನೆಯ ಭಾಗ ತೀರ ಸಣ್ಣದಾಗಿತ್ತು. + +ಆದರೆ ಆ ಉಳ್ಳಾಗಡ್ಡಿ ಹೊನ್ನೂರುನಲ್ಲಿ ಬಹುತೇಕ ಮನೆಗಳ ಪಾಡು ಇದೇ ಆಗಿದ್ದರಿಂದ ಮೊದಮೊದಲು ಸಣ್ಣದಾಗಿ ತೋರುತ್ತಿದ್ದ ಗುಡಿಸಲು ಈಗ ವಾಸಿಸಲು ತೊಂದರೆ ಇಲ್ಲದ ಮನೆಯಾಗಿದೆ. ಮುಂಚೆಯಿಂದಲು ಬಹಳ ಈರುಳ್ಳಿ ಬೆಳೆಯುತ್ತಿದ್ದರಿಂದ ಹೊನ್ನೂರಿಗೆ ಉಳ್ಳಾಗಡ್ಡಿ ಎಂದು ಹೆಸರು ಜೋಡಿಯಾಗಿತಂತೆ. ಸಣ್ಣ ಗ್ರಾಮ, ಊರ ಮಧ್ಯದಲ್ಲೆ ಬಸ್ ಸ್ಟಾಪ್ ಅದರೆದುರು ಗ್ರಾಮ ಪಂಚಾಯತಿ, ಪೊಲೀಸ್ ಠಾಣೆ, ಪೋಸ್ಟ್ ಆಫೀಸ್ ಮೂರೂ ಒಂದೇ ಸೂರಿನಡಿ ಇದ್ದವು. ಇವುಗಳ ಪಕ್ಕದಲ್ಲಿ ಸರಕಾರಿ ಪ್ರಾಥಮಿಕ ಶಾಲೆ. ಊರಿಂದ ಸ್ವಲ್ಪ ದೂರದಲ್ಲಿ ಒಂದು ದನದಾಸ್ಪತ್ರೆಯೂ ಇದೆ ಸುತ್ತಲ ನಾಲ್ಕು ಹಳ್ಳಿಗೂ ಉಪಕಾರವಾಗುವಂತೆ. ಊರ ಹೆದ್ದಾರಿಯಲ್ಲಿ ಬೆಳಗ್ಗೆ ಒಂದು ಬಸ್ಸು ಬಿಟ್ಟರೆ ಸಂಜೆ ಒಂದು ಬಸ್ಸು ಮಾತ್ರ ಓಡಾಡುತ್ತಿದ್ದದ್ದು ಇದು ಬಿಟ್ಟರೆ ಮೂರ್ನಾಲ್ಕು ಪುಟ್ಟ ಗುಡಿಗಳು, ಐದಾರು ಒಣಗಿದ ಬಾವಿಗಳು, ಒಂದು ಕೆರೆಯೂ ಇದೆ, ಆದರೆ ಅದರಲ್ಲೂ ನೀರು ಮಾತ್ರ ಎಂದೆಂದೂ ಇರುವುದಿಲ್ಲ ಸದಾ ಹಸಿರು ಬೆಳೆದಿರುತ್ತದೆ. ದನಗಾಯಿಗಳು, ಕುರುಬರೆಲ್ಲ ಅದರಲ್ಲೆ ತಮ್ಮ ಜಾನುವಾರುಗಳನ್ನೆಲ್ಲಾ ಮೇಯಿಸುತ್ತಿರುತ್ತಾರೆ. ಆ ಊರಿನ ಜನ ಬಸ್ಸಿನಲ್ಲಿ ಓಡಾಡುವುದಕ್ಕಿಂತ ಪಕ್ಕದ ಊರಿನಲ್ಲಿದ್ದ ರೈಲ್ವೆ ಮಾರ್ಗವನ್ನೇ ಹೆಚ್ಚು ಬಳಸುತ್ತಿದ್ದರು. ಹಂಗಾಗಿ ಸಂಪರ್ಕಕ್ಕೇನು ತೊಡಕು ಕಾಣುತ್ತಿರಲಿಲ್ಲ.. + +ಸಾವಿಮನೆ ಊರಿನ ಪೂರ‍್ವದ ಸೆರಗಿನಲ್ಲಿದ್ದು ಮನೆಯ ಹಿಂದೆಯೇ ಒಂದು ಎಕರೆ ತೆಂಗಿನ ತೋಟ. ಹೊರಗಿನಿಂದ ನೋಡಲು ಒಂದೇ ಮನೆಯಂತೆ ಕಂಡರೂ ಅದರಲ್ಲಿ ಮೂರು ಮನೆಗಳಿವೆ. ದೂರದಿಂದ ನೋಡಿದವರಿಗೆ ಅಡಿಗೆ ಕೋಣೆಗಳಿಂದ ಏಳುವ ಹೊಗೆ ಮನೆಯ ಹಂಚಿಗೆ ಮೋಡ ಹತ್ತಿದ ಹಾಗೆ ಕಾಣುತ್ತದೆ. ಸಾವಿಯ ಮಾವ ಸತ್ತು ಮಕ್ಕಳು ಆಸ್ತಿ ಪಾಲು ಮಾಡಿಕೊಂಡಾಗ ಒಬ್ಬೊಬ್ಬರಿಗೆ ಎರಡು ಎಕರೆ ಬೆದ್ದಲು ಹಾಗು ಮನೆ ಹಿಂದೆ ಇರುವ ತೆಂಗಿನ ತೋಟದಲ್ಲಿ ತಲಾ ಇಪ್ಪತ್ಮೂರು ಮರಗಳು ದೊರಕಿದ್ದವು. ತಮ್ಮ ಸುಬ್ಬನನ್ನು ಕಂಡರೆ ಹಿರೆ ಅಣ್ಣನಿಗೂ, ಕಿರೆ ಅಣ್ಣನಿಗೂ ಮೊದಲಿನಿಂದ ತಾತ್ಸಾರ. ಅವನೇನು ದುಡಿಮೆ ಮಾಡದೇ ಹಣ ಹಾಳು ಮಾಡುವುದೆ ಇದಕ್ಕೆ ಕಾರಣ. ಇದೇ ಕಾರಣದಿಂದಲೇ ಜಗಳವಾಡಿ ಭಾಗ ಮಾಡಿಕೊಂಡಿದ್ದು. + +ಒಂದು ವಾರದಿಂದ ಬರದೇ ಸೂಳೆಯ ಮನೆಯಲ್ಲೇ ಟಿಕಾಣಿ ಊಡಿದ್ದ ಗಂಡ ಇವತ್ತು ಬರಬಹುದೆಂಬ ಭ್ರಮೆಯಲ್ಲಿ ಉಣ್ಣದೆ ಕಾಯುತ್ತಿದ್ದ ಸಾವಿಗೆ ಸಮಯ ಜರುಗಿದಂತೆಲ್ಲ ಆಸೆ ಕರಗಿ ಮಕ್ಕಳಿಗೆ ಅನ್ನಕ್ಕೆ ಕೊಂಚ ಹೆಸರಾಕಿ ಕಲಸಿ ಮೆದ್ದಿ ಹಸಿವು ನೀಗಿಸಿ ತಾನು ಒಂದಿಷ್ಟು ತಿಂದು ಉಳಿದ ಅನ್ನವನ್ನು ನಾಯಿಗಾಕಲೆಂದು ಮನೆಯ ಹಿಂದೆ ಹೋಗಿ “ಹುಲಿಯಾ ಬಾ…” ಎಂದು ಕೂಗಿದೊಡನೆ ತೋಟದಲ್ಲಿ ಬೆಳೆದು ನಿಂತಿದ್ದ ಕಾಂಗ್ರೆಸ್ ಗಿಡಗಂಟೆಗಳ ನಡುವೆ ಇಲಿ ಹೆಗ್ಗಣಗಳ ಶೋಧನೆಯಲ್ಲಿದ್ದ ಹುಲಿಯಾ ಚಂಗನೆ ನೆಗೆದು ಹಾರಿ ಚಿರತೆಯ ವೇಗದಲ್ಲಿ, ಬಾಲ ಅಲ್ಲಾಡಿಸುತ್ತ ಸಾವಿಯ ಎದುರು ಹಾಜರಿದ್ದ. ಹೆಸರಿಗೆ ತಕ್ಕ ಹುಲಿಯ ಬಲು ಧೈರ್ಯವಂತ. ಅನ್ನಕ್ಕೆ ಸಾರಾಕಿ ಕಲಸಿ ಕಲ್ಲಿನ ಮೇಲಾಕಿದಳು. ಸಾವಿಯ ಹಿರಿಯ ಕೂಸು ಕನಕ ಹುಲಿಯನ ತಲೆ ಸವರುತ್ತ ಅದು ತಿನ್ನುವುದನ್ನೇ ನೋಡುತ್ತಿದ್ದಳು. + +ತೋಟದಲ್ಲೆಲ್ಲ ನೀರವ ಕತ್ತಲು. ಮನೆಯ ಹಿಂದಿದ್ದ ನೂರು ವ್ಯಾಟ್ ಬಲ್ಬಿನ ಬೆಳಕಿನ ಪ್ರಖರತೆಗೆ ಹತ್ತಿರವಿದ್ದ ಒಂದೆರಡು ಮರಗಳ ಬುಡ ಕಾಣುತಿದ್ದವು ಅದನ್ನು ಹೊರತು ಮತ್ತೇನು ಇಲ್ಲ. ಕನಕ ಒಮ್ಮೆ ತಲೆ ಎತ್ತಿ ನೋಡಿದಳು. ಭಯವಾಗಿ ಅಮ್ಮ ತನ್ನ ಹಿಂದೆ ಇರುವಳೆಂದು ಹಿಂದೆ ನೋಡಿದರೆ ಇರಲಿಲ್ಲ! ಒಮ್ಮೆ ಜೀವ ಬಾಯಿಗೆ ಬಂದಂತಾಯ್ತು, ಆದರು ಹುಲಿಯಾ ಇರುವನಲ್ಲ ಎಂಬ ಧೈರ್ಯ. ಗೂಬೆ ಕೂಗಿದ ಸದ್ದಿಗೆ ಆ ಧೈರ್ಯವೂ ಮಾಯವಾಗಿ ಒಳಗೆ ಓಡಿದಳು. ಆಗಲೇ ತಂಗಿ ನಿಧಿ ತೊಟ್ಟಿಲಲ್ಲಿ ಮಲಗಿದ್ದಾಳೆ. ಅಮ್ಮ ಸಾವಿತ್ರಿ ಮಂಕಾಗಿ ಕಡ್ಡಿ ಚಾಪೆ ಹಾಕಿ ಮಲಗಲು ಹಾಸುತ್ತಿದ್ದಾಳೆ. ಹುಲಿಯ ಹೊರಗೆ ಹಾಕಿದ್ದ ಅನ್ನ ತಿಂದು ಹಿತ್ತಲ ಬಾಗಿಲಿನಿಂದಲೇ ನೆಲ ಮೂಸುತ್ತಾ ಒಳಗೆ ಬಂದುದ್ದನ್ನು ನೋಡಿ ಸಾವಿ “ಹಚ್ಚ ಹಚ್ಚ” ಎಂದು ಗದರಲು ಹಿಂದಿನಿಂದಲೇ ಮತ್ತೆ ತೋಟದ ಪೊದೆಗಳ ನಡುವೆ ಕಾಣದಾಯಿತು. + +ಹಿತ್ತಲ ಬಾಗಿಲಾಕಲೆಂದು ಹೋಗುತ್ತಿದ್ದ ಸಾವಿಯ ಹಿಂದೆ ಹೋಗಿ ನಿಂತ ಕನಕ ಅವಳಮ್ಮನ ಸೆರಗ ಜಗ್ಗಿ “ಉಚ್ಚೆ ಒಯ್ಬೇಕು ಕರ್ಕಂಡೋಗು” ಎಂದಳು. ಬಚ್ಚಲು ಪಾಯಿಖಾನೆ ಇಲ್ಲದ ಮನೆಯಾದ್ದರಿಂದ ಬಾಗಿಲು ತೆಗೆದು ನೂರಡಿ ತೋಟದ ಕಡೆ ಹೋಗಿ ತಾಯಿ ಮಗಳು ಇಬ್ಬರು ಪೊದೆಗಳ ನಡುವೆ ಕೂತು ಮೂತ್ರ ವಿಸರ್ಜನೆ ಮಾಡಿ ಒಳ ನಡೆದು ಬಾಗಿಲ ಅಗಳಿ ಹಾಕಿ ಅರವತ್ತು ವ್ಯಾಟ್‌ನ ಬಲ್ಬನ್ನು ಕಳುಬಿ ಆಗ ತಾನೆ ಬಳಕೆಗೆ ಬಂದ ಪ್ಲಾಸ್ಟಿಕ್ ಚಾಪೆಯ ಮೇಲೆ ಉರುಳಿದರು. + +ಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ‌ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ ಕೇಳುತ್ತಿತ್ತು. ಸಾವಿ ನಿದ್ದೆ ಬಾರದೆ ಗಂಡನನ್ನು ಹೇಗಾದರು ಮಾಡಿ ಸೂಳೆ ಸಹವಾಸ ಬಿಡಿಸಿ ನನ್ನ ಕಡೆ ಸೆಳೆಯಬೇಕೆಂದು ಯೋಚಿಸುತ್ತಿದ್ದಳು. ಪಕ್ಕದ ಮನೆಯಲ್ಲಿ ಮಾವ ಅಕ್ಕಂದಿರು ತನ್ನ ಗಂಡನ ಬಗ್ಗೆ ಪಿಸುಗುಡುವುದು ಗೊತ್ತಾಗುತಿತ್ತು. ಸಾವಿತ್ರಿ ತನಗರಿವಿಲ್ಲದೆ ಶೋಕಿಸುತ್ತ ಮಗಳು ಕನಕಳನ್ನು ತಬ್ಬಿ ಕಣ್ಣು ಮಿಟುಕಿಸಿದಾಗ ಕಣ್ತುಂಬಿದ್ದ ಅಶ್ರು ದಳದಳನೆ ಇಳಿದು ಎಣ್ಣೆ ಜಿಡ್ಡು ಮೆತ್ತಿ ಕೊಳಕಾಗಿದ್ದ ತಲೆದಿಂಬು ಸಹ ಅದನ್ನು ಹೀರದೆ ಕೆಳಕ್ಕೆ ಹರಿದವು. ತೋಟದ ಕಡೆಯಿಂದ ಜೋರಾಗಿ ಬೀಸುವ ಗಾಳಿ ಹಂಚಿನ ಮಧ್ಯೆ ತೂರುವಾಗ “ಶಿಳ್” ಎಂಬ ಶಬ್ದ, ತೆಂಗಿನ ಗರಿಗಳು ಒಂದಕ್ಕೊಂದು ಬಡಿಯುತ್ತಿರುವ “ಪಟಪಟ” ಸದ್ದು, ನಾಯಿಗಳ ಊಳು ಇದ್ಯಾವುದರ ಅರಿವಿಲ್ಲದೆ ಅಂತರ್ಮುಖಿಯಾಗಿದ್ದ ಸಾವಿ ನಿದ್ರಾವಶಳಾದಳು. + +ಬೆಳಗ್ಗೆ ಪಕ್ಕದ ಮನೆಯ ಹಿರಿಮಾವನ ಮನೆಯಲ್ಲಿ ಸಾಕಿದ್ದ ಕೋಳಿಗಳು ಬಿದಿರ ಜಲ್ಲೆಯನ್ನು ಎತ್ತಿದ್ದೆ ತಡ ನಾಮುಂದು ತಾಮುಂದು ಎಂದು ಹಾರಿ ಓಡಿ ಜಿಗಿದು ಆಹಾರ ಶೋಧನೆಗೆ ಶುರುಇಟ್ಟವು. ಹಿಂದೆ ತೊಳೆಯದೆ ಬಿಟ್ಟಿದ್ದ ಪಾತ್ರೆಗಳಲ್ಲಿ ಉಳಿದಿದ್ದ ಮುದ್ದೆಯ ಸೀಕು ಅನ್ನದಗುಳ ತಿನ್ನುತ್ತಾ “ಕೊಕೊಕೋ ಕೋ” ಎಂದು ಕೂಗುತಿದ್ದವು. ನೇಸರನ ಎಳೆ ಬಿಸಿಲಿಗೆ ತೆಂಗಿನ ಮರಗಳ ನೆರಳು ಮನೆಯ ಮೇಲೆ ಬಿದ್ದು ಇನ್ನು ಹೊತ್ತಾಗಿಲ್ಲ ಎಂಬಂತೆ ಒಳಗಿದ್ದವರಿಗೆ ಅನ್ನಿಸುವಂತಿತ್ತು. + + + +ಮೂರು ಮನೆಗಳಲ್ಲಿ ಮೊದಲು ಏಳುತ್ತಿದ್ದವನೇ ಹಿರಿ ಅಣ್ಣ ಹನುಮಂತ. ಬೆಳ್ಳಂಬೆಳ್ಳಗೆಯೇ ಹೋಗಿ ತನ್ನ ಮರಗಳದ್ದಲ್ಲದೆ ತಮ್ಮಂದಿರ ಮರಗಳ ಕೆಳಗೆ ಬಿದ್ದಿರುವ ತೆಂಗಿನಕಾಯಿ ಗರಿಗಳನೆಲ್ಲ ಕದ್ದು ಯಾರಿಗೂ ಗೊತ್ತಾಗದಂತೆ ತಂದಿಟ್ಟುಕೊಳ್ಳುತ್ತಿದ್ದ. ನಂತರ ಆ ವಿಷಯ ಉಳಿದೆರಡು ಮನೆಯವರಿಗೆ ಗೊತ್ತಾಗಿ ಜಗಳವಾದಾಗಿನಿಂದ ತನ್ನ ೨೩ ಮರಗಳದ್ದಷ್ಟೇ ತರುತ್ತಿದ್ದಾನೆ. + +ಸಾವಿತ್ರಿಯ ಸಣ್ಣ ಕೂಸು ನಿಧಿ ತೊಟ್ಟಿಲಲ್ಲಿ ಅಬ್ಬರಿಸುತ್ತಾ ಒದ್ದಾಡುತಿತ್ತು. “ವತ್ತಾರೆ ವತ್ತಾರೆಲೆ ಇದುರ್‌ದೊಂದ್ ಕಾಟ” ಅಂತ ಗೊಣುಗುತ್ತ ಎದ್ದು ನೋಡಿದರೆ ತೊಟ್ಟಿಲೆಲ್ಲ ರಾಡಿ!. ಕಕ್ಕ ಉಚ್ಚೆ ಮಾಡಿಕೊಂಡಿದೆ ಮನೆ ತುಂಬಿದ್ದ ವಾಸನೆ ಹೋಗಲೆಂದು ಮುಂದಿನ ಬಾಗಿಲು ತೆರೆದು ಬಿದಿರ ತೊಟ್ಟಿಲನ್ನು ಹಗ್ಗದಿಂದ ಬಿಡಿಸಿ ಎತ್ತಿಕೊಂಡು ಹೊರಕ್ಕೆ ಹೋದಳು. + +“ಅಯ್ಯೋ… ನಿನ್ನೇನು ಇದುರವ್ ಇಸ್ಸೀ ಬಟ್ಟೆ ತೊಳುದಿಲ್ಲ. ಇವಾಗಿದುರಡಿಗೆ ಏನ್ ಆಕದು?” ಅಂತ ಯೋಚಿಸುತ್ತ ಒಳಗೆ ಹೋಗಿ ಒಂದು ಗಂಟು ಬಿಚ್ಚಿ ಹಳೆ ಸೀರೆ ತಂದು ಗಲೀಜಾಗಿರೋ ಬಟ್ಟೆಗಳನ್ನೆಲ್ಲ ತೆಗೆದು ಆ ಸೀರೆಯನ್ನು ಮಡಿಸಿ ಹಾಕಿ ಕೂಸಿನ ಮುಕಳಿ ತೊಳೆದು ಕಾಲಿಗೆಲ್ಲ ನೀರಾಕಿ ಒರೆಸಿ ಹಾಸಿದ್ದ ಚಾಪೆಯ ಮೇಲೆ ಬಿಟ್ಟು ಮಗುವಿನ ಕಕ್ಕದ ಬಟ್ಟೆ ತೊಳೆಯಲು ಹಿಂದಕ್ಕೆ ಹೋದಳು. + +ಹಿಂದೆ ಸಾವಿಯ ಗಂಡ ಸುಬ್ಬುನ ಅಣ್ಣಂದಿರು ಹನುಮಂತ ಹಾಗು ಗಣೇಶನ ಹೆಂಡತಿಯರು ಸಹ ಪಾತ್ರ‍್ರೆ ತೊಳೆಯುತ್ತಿದ್ದರು ಅವರಿಬ್ಬರು ಕಾಸ ಅಕ್ಕಾ ತಂಗಿಯರು. ಸಾವಿತ್ರಿ ಹೋದ ತಕ್ಷಣ ಗೊತ್ತಿದ್ದರೂ “ಏನೇ ಸಾವಿ ನಿನ್ ಗಂಡ ಸೂಳೆಮನೆಯಿಂದ ಇನ್ನು ಬರ್ಲಿಲ್ವೇನೇ? ಒಬ್ಳೆ ಇಲ್ಲೇನ್ ಮಾಡ್ತಿಯಾ ತವರಿಗಾದ್ರು ಹೋಗ್ಬಾರ್ದಾ?, ಆ ಸಣ್ಣ ಕೂಸುಗಳನ್ನು ಒಬ್ಳೆ ಹೆಂಗ್ ಸಾಕ್ತಿಯ?” ಎಂದೆಲ್ಲ ಪ್ರಶ್ನೆಗಳ ಬಾಣಗಳನ್ನು ಬಿಟ್ಟರು. ಮೊದಲೆ ಇವಳ ಮನಸ್ಸಿನಲ್ಲಾದ ಗಾಯಗಳಿಗೆ ಅವು ನಾಟಿ ಇನ್ನೂ ನೋವಾಯಿತು. ಆದರೆ ಸಾವಿ ಅದನ್ನು ಹೊರ ಹಾಕದೆ ಮೌನಿಯಾಗಿ ಕೂಸಿನ ಹೊಲಸು ಬಟ್ಟೆಯನ್ನು “ಉಸ್‌ ಉಸ್” ಎಂದು ತಿಕ್ಕಿ ತೊಳೆಯುತ್ತಿದ್ದಾಳೆ. + +“ಥೂ..ತೂ, ಹೇ ಸಾವಿ ಮಗಿನ ಉಚ್ಚೆನೆಲ್ಲ ಸಿಡಿಯ ಹಂಗೆ ಶೆಳಿತಿಯಲ್ಲ ನಿಧಾನುಕ್ಕೆ ತೊಳಿಯೇ” ಎಂದಳು ಕಿರಿ ಮಾಮ ಗಣೇಶನ ಹೆಂಡತಿ. ಅಷ್ಟರಲ್ಲೇ ಕನಕ ಎದ್ದು ತಂಗಿಯ ಕೈ ಹಿಡಿದು ಮೆಲ್ಲಗೆ ನೆಡೆಸಿಕೊಂಡು ಬಂದು ಅಮ್ಮನ ಪಕ್ಕ ಕುಂತು ಕಣ್ಣು ತಿಕ್ಕಿಕೊಳ್ಳುತಿದ್ದಳು. ಅವನ್ನು ನೋಡಿದ ಸಾವಿಗೆ ಅಯ್ಯೋ ಕಾಫಿ ಕಾಸಕ್ಕೆ ಹಾಲಿಲ್ಲ, ರಾಗಿ ಗಂಜಿ ಕಾಸನ ಅಂದ್ರೆ ಕಟ್ಗೆನೂ ಇಲ್ಲ ಅಂತ ಆ ಹೇಲಿನ ಅರಿವೆಗಳನ್ನ ಬೇಲಿಯ ಮೇಲೆ ಹಾಕಿ ತೋಟದೊಳಕೆ ಓಡಿ ಒಂದೈದು ನಿಮಿಷದಲ್ಲಿ ಒಂದು ತೆಂಗಿನ ಮಟ್ಟೆಯನ್ನು ಎಳೆದು ತಂದು ಕನಕಳಿಗೆ ಮಚ್ಚು ತರಲು ಹೇಳಿ ಹಿತ್ತಲ ಬಾಗಿಲಲ್ಲಿ ಕುಳಿತು ಕಾಲಿನ ಬಳಿಯಿದ್ದ ಇರುವೆ ಗೂಡನ್ನು ನೋಡುತ್ತಾ ಏನನ್ನೋ ಯೋಚಿಸುತ್ತಿದ್ದಳು. ಕನಕ ಬಂದು ಭಾರದ ಮಚ್ಚನ್ನು ಎರಡು ಕೈಲಿ ಹಿಡಿದು “ಅಮ್ಮ ಹಿಡಿ…” ಎಂದಾಗ ಎಚ್ಚೆತ್ತು ಗರಿಯನ್ನೆಲ್ಲ ಬಿಡಿಸಿ ಮಟ್ಟೆಯ ಕಡಿದು ಒಲೆಯ ಪಕ್ಕ ಹಾಕಿ ನೆಗ್ಗಿದ್ದ ಸಿಲ್ವರ್ ಪಾತ್ರೆಯಲ್ಲಿ ನೀರು ಬೆಲ್ಲ ಒಂದು ಚಿಟಿಗೆ ಉಪ್ಪು ಹಾಕಿ ರಾಗಿ ಹಿಟ್ಟು ಕಲಸಿ ಒಲೆ ಹೊತ್ತಿಸಿದಳು. ತೆಂಗಿನ ಮಟ್ಟೆ ಇನ್ನು ಹಸಿಹಸಿಯಿದ್ದರಿಂದ ಬೆಂಕಿ ಬೇಗ ಕಚ್ಚಿಕೊಳ್ಳದೆ ಹೊಗೆ ದಟ್ಟವಾಯ್ತು ಬದಿಯಲ್ಲಿದ್ದ ಸೀಮೆ ಎಣ್ಣೆ ಸ್ವಲ್ಪ ಹಾಕಿದಾಗ “ದಗ್” ಎಂದು ಹೊತ್ತಿ ಗಂಜಿ ಕುದಿಯಲು ಶುರುವಾಯ್ತ್ತು. ಗಂಜಿ ಕುದ್ದು ಮೇಲೆ ಬರುತ್ತಿದ್ದರು ಸಾವಿಗೆ ಗಮನವಿಲ್ಲದೆ ಒಲೆಯನ್ನೇ ನೋಡುತ್ತಿದ್ದಳು. ಗಂಜಿ ಉಕ್ಕಿ ಒಲೆಯ ಮೇಲೆ “ಚುಸ್ ಚುಸ್” ಎಂದು ಬಿದ್ದಾಗ, ಬರಿಗೈಲಿ ಪಾತ್ರೆ ಇಳಿಸ ಹೋಗಿ ಕೈ ಸುಟ್ಟುಕೊಂಡ ನಂತರ ಮಸಿ ಬಟ್ಟೆಯಿಂದ ಪಾತ್ರೆ ಇಳಿಸಿ ಗಂಜಿ ತಣ್ಣಗಾಗಲೆಂದು ತಟ್ಟೆಗೆ ಹಾಕಿ ಆರಿಸಿ ಲೋಟಕ್ಕೆ ಸರೇ ಹೊಯ್ದು, ಒಂದು ಚಮಚ ಇಟ್ಟು, ಕನಕಳಿಗೆ ಕೊಡುತ್ತ ತಂಗಿಗೂ ತಿನಿಸೆಂದು ಬಾಗಿಲು ಬಳಿಯಲು ಹೋದಳು. + +ಒಂದಿಬ್ಬರು ಕ್ಯಾನ್ ಹಾಗು ಚೀಲ ಹಿಡಿದು ಹೋಗುತ್ತಿದ್ದುದನ್ನು ಕಂಡು ‘ಹೋ ರೇಷನ್ ಕೊಡುತ್ತಿರಬೇಕು’ ಎಂದು ತಿಳಿದು ಹತ್ತಿರ ಹೋಗಿ ದೃಢಪಡಿಸಿಕೊಂಡು ತಾನೂ ಚೀಲ, ಕ್ಯಾನ್ ಹಿಡಿದು ಕಾರ್ಡ್ ಹುಡುಕಿ ಸಣ್ಣ ಕೈ ಚೀಲಕ್ಕೆ ಹಾಕಿಕೊಂಡು “ಹೇ ಕನಕ ತಂಗಿ ಹುಷಾರು” ಎಂದು ಹೇಳಿ ಹೊರಟಳು. + +ನ್ಯಾಯ ಬೆಲೆ ಅಂಗಡಿ ಮುಂದೆ ಜನ ಸಾಗರ. ನೂಕು ನುಗ್ಗಲು, ಇವಳು ಹೋಗಿ ನಿಂತಳು. ಇನ್ನು ಅಂಗಡಿ ತೆಗೆದಿರಲಿಲ್ಲ. ಎಲ್ಲರು ತಮ್ಮ ಚೀಲ ಕ್ಯಾನುಗಳನ್ನು ತಮ್ಮ ಪರವಾಗಿ ಸರದಿ ಸಾಲಿನಲ್ಲಿಟ್ಟು ಹತ್ತಿರದ ನೆರಳಿನಲ್ಲೇ ಕುಳಿತಿದ್ದರು. ಸಾವಿತ್ರಿ ಯಾರೋ ಇಬ್ಬರು ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದಳು:“ಯಾರೋ ನಮ್ಮನಿಗೆ ಮಾಡಿಸಿಬಿಟ್ಟಾರೆ, ನಮ್ಮನೆ ನೆಮ್ಮದಿನೇ ನುಚ್ಚು ನೂರಾಗೈತಿ” ಅಂತ ಒಂದು ಧ್ವನಿ ಹೇಳಿ ಮುಗಿಸುತ್ತಲು ಇನ್ನೊಂದು “ಅಯ್ಯೋ ಅದಿಕ್ಯಾಕೆ ಚಿಂತೆ ಮಾಡ್ತಿಯಾ ಆ ಸರ್ಕಾರಿ ದನಿನ್ ದವಾಖಾನಿ ಐತಲಾ ಅದುರ್ ಪಕ್ಕದಾಗೆ ಒಂದ್ ಕಾಲ್ದಾರಿ ಐತಿ ನೋಡು, ಅದುರಗುಂಟೆ ಸ್ವಲ್ಪ ಮುಂದೋದ್ರೆ ಅಲ್ಲೊಬ್ಬ ಮಂತ್ರವಾದಿ ಅದನೆ ಅವ್ನು ಎಲ್ಲ ಮಂತ್ರನ ನಿವಾಳಿಸಿ ಬಿಸಾಡ್ತಾನೆ” ಎಂದಿತು. ಅದಕ್ಕೆ ಪ್ರತ್ಯುತ್ತರವಾಗಿ “ಹು ನಾನು ಆ ಮಂತ್ರವಾದಿ ಬಗ್ಗೆ ಕೇಳಿದಿನಿ ಅವ್ನ ಹತ್ರ ಹಾಕಿಸಿದ್ ಮಂತ್ರ ತಪ್ದೆ ನೆಡಿತಾವಂತೆ” ಎಂದಿತು. + +ಸಮಾಧಾನದಿಂದ ಕುಳಿತಿದ್ದ ಜನ ಒಂದೇ ಕ್ಷಣದಲ್ಲಿ ದಾಯಾದಿಗಳಂತೆ ನಾಮುಂದೆ ತಾಮುಂದೆ ಎಂದು ತೆರೆದ ನ್ಯಾಯ ಬೆಲೆ ಅಂಗಡಿ ಮುಂದೆ ಕುರಿಗಳಂತೆ ನುಗ್ಗುತ್ತಿದ್ದರು. “ನೀವಿಂಗೆಲ್ಲ ಮಾಡಿದ್ರೆ ನಾನ್ ಯಾ ನನ್ ಮಗ್ನಿಗೂ ಸಾಮಾನ್ ಕೊಡೋದಿಲ್ಲ” ಎಂದು ಅಧಿಕಾರದ ದನಿಯಲ್ಲಿ ಅಂಗಡಿಯವ ನುಡಿದಿದ್ದಕ್ಕೆ ಮತ್ತೆ ಎಲ್ಲರು ಸಾಲಾಗಿ ನಿಂತರು. + +ಸಾವಿ ಅಕ್ಕಿ ಬೇಳೆ ಗೋಧಿಯನ್ನು ತಲೆ ಮೇಲೆ ಹೊತ್ತುಕೊಂಡು ಕೈನಲ್ಲಿ ಸೀಮೆ ಎಣ್ಣೆ ಕ್ಯಾನ್ ಹಿಡಿದು ಇರುವ ಎಲ್ಲ ಶಕ್ತಿ ಬಳಸಿ ಹೆಜ್ಜೆ ಹಾಕುತ್ತ ಮನೆ ತಲುಪಿದಳು. ಪೂರ ದಣಿದಿದ್ದ ಜೀವಕ್ಕೆ ತಲೆ ಮೇಲಿನ ಭಾರ ಇಳಿಸಿದ ತಕ್ಷಣ ಒಂದು ಖುಷಿ ಆವರಿಸಿತು. ಮನದಲ್ಲೆ ನ್ಯಾಯ ಬೆಲೆ ಅಂಗಡಿಯ ಬಳಿ ಆ ದನಿಗಳು ಮಾತಾಡಿಕೊಂಡ ಜಾಗಕ್ಕೆ ಹೋಗಿ ನನ್ನ ಗಂಡ ನನಗೆ ಸಿಗುವಂತೆ ಮಂತ್ರ ಹಾಕಿಸಲೆಬೇಕೆಂದು ನಿಶ್ಚಿಯಿಸಿದಳು. ಕೈಲಿದ್ದ ದುಡ್ಡೆಲ್ಲ ಖಾಲಿ ಆಗಿದೆ. ಮನೆಯಲ್ಲಿ ದುಡಿದು ಹಾಕಬೇಕಾದ ಜವಾಬ್ದಾರಿ ಹೊತ್ತ ಗಂಡ ಸೂಳೆ ಸೆರಗ ಹಿಡಿದಿದ್ದಾನೆ. ಇವತ್ತೊಂದು ದಿನ ಈರುಳ್ಳಿ ಕೊಯ್ಯಲು ಹೋಗಬೇಕು ಎಂದು ಮನದಲ್ಲೇ ಅಂದುಕೊಂಡು, ರೇಷನ್ ಚೀಲ ಮನೆ ಒಳಕ್ಕೆ ಒಯ್ದು ಗಡಿಯಾರ ನೋಡಿದರೆ ಆಗಲೇ ಹನ್ನೊಂದು ಗಂಟೆ ದಾಟಿತ್ತು. ಇನ್ನೇನು ಕೂಲಿ ಹೋಗೋದು ಎಂದು ಅಸೆ ಕೈ ಬಿಟ್ಟಳು. + +ಮಕ್ಕಳೆರಡು ಹಿಂದೆ ಹುಲಿಯನೊಂದಿಗೆ ಆಡುತ್ತಿವೆ. ಅಯ್ಯೋ ಆಗಲೆ ಮಧ್ಯಾಹ್ನ. ಬೆಳಗ್ಗೆಯಿಂದ ತಾನು ಹೊಟ್ಟೆಗೇನು ತಿಂದಿಲ್ಲ ಎಂದು ನೆನಪಿಗೆ ಬಂದು ಅನ್ನಕಿಟ್ಟಳು. ಇವತ್ತು ಮಂತ್ರವಾದಿಯ ಬಳಿಗೆ ಹೋಗಲೆ ಬೇಕೆಂದು ನಿಶ್ಚಯಿಸಿದಳು. + + + +ಅನ್ನ ಬೆಂದ ಮೇಲೆ ಹೊಲೆಯಿಂದ ಇಳಿಸಿ ನಿನ್ನೆಯ ತಂಗಳು ಸಾರಿನಲ್ಲಿ ಅನ್ನ ಮೆದ್ದಿ ತನ್ನೆರಡು ಕೂಸುಗಳಿಗೂ ತಿನಿಸಿ ತಾನು ಉಂಡು ಗಂಡನ ಈ ಕೆಟ್ಟ ಚಪಲವನ್ನು ಹೇಗೆ ಬಿಡಿಸಬೇಕೆಂದು ಯೋಚಿಸುತ್ತ ಕರಿ ಕಡಪದ ಕಲ್ಲಿನ ಮೇಲೆ ತೆಲೆದಿಂಬು ಹಾಕಿ ಹಾಗೆ ಉಶ್ ಎಂದು ಉರುಳಿಕೊಂಡಳು. ಮಕ್ಕಳಿಗೆ ಸ್ನಾನ ಮಾಡಿಸದೆ ಎರಡು ದಿನವಾಯ್ತು, ತಾನು ಮಿಂದು ಮೂರು ದಿನ ಆಗಿರುವುದನ್ನು ಮರೆತು ಗಂಡನ ಚಿಂತೆಯಲ್ಲೆ ಕೊರಗುತ್ತ ನಿದ್ರಾಸಾಗರದಲ್ಲಿ ಮೆಲ್ಲಗೆ ಮುಳುಗಿದಳು ಸಾವಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_129.txt b/Kenda Sampige/article_129.txt new file mode 100644 index 0000000000000000000000000000000000000000..0c3ce05d9a985c74e07f18fd450440f92ec3463d --- /dev/null +++ b/Kenda Sampige/article_129.txt @@ -0,0 +1,105 @@ +ಮಹಾಮನೆಯಲ್ಲಿ ದಾಸೋಹದ ಅಡಿಗೆಯ ಹದ ನೋಡುವ ಹೊಣೆ ಕಾಳವ್ವೆಯದು. ಅವಳೋ ನಿಜ ಕಾಯಕಿ. ಅಡುಗೆಯಾಗುವ ಪ್ರತಿ ಪದಾರ್ಥವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವಳು. ಅನ್ನದಗುಳು ಹಿಸುಕುವಳು. ಸುಟ್ಟ ರೊಟ್ಟಿಯ ದಪ್ಪ ನೋಡುವಳು. ಬೇಳೆ ತೊಗೆಯ ಪರಿಮಳ ಹೇಗಿದೆಯೆಂದು ಕೇಳುವಳು. ಕಾರ ಮಸಾಲೆಯ ಹದ, ಪಲ್ಲೆಗೆ ಬೆಂದ ತರಕಾರಿಗಳ ಗುಣ ಎಲ್ಲವನ್ನೂ ನೋಡಿ, ನೋಡಿ ಚೆನ್ನಾಗಿಲ್ಲವೆನಿಸುವುದನ್ನು ಬಿಟ್ಟುಬಿಡಲು ಸೂಚಿಸುವಳು. ಹುಳಿತ, ಕೊಳೆತ ಹಣ್ಣು, ತರಕಾರಿಗಳನ್ನು ತಿಪ್ಪೆಗೆ ಹಾಕಿಸುವಳು. ಮೊದಲ ಬಾರಿ ಬೆಂದ ಅನ್ನವನ್ನು ಮೊದಲ ಪಂಕ್ತಿಗೇ ಬಡಿಸುವಂತೆ ಹೇಳುವಳು. ಅಡುಗೆ ಮಾಡುವ ತನಕ ಒಲೆಯೆದುರು ಅಡುಗೆಯವರೊಡನೆ, ಅನ್ನಬೇಳೆಯೊಡನೆ, ತಾನೂ ಬೆಂದು, ಉಣಬಡಿಸುವಾಗ ಪ್ರತಿ ಪಂಕ್ತಿಯಲ್ಲೂ ಸುತ್ತಾಡುವಳು. ಯಾರೂ ಎಲೆಯಲ್ಲಿ ಒಂದಗುಳನ್ನೂ ವ್ಯರ್ಥ ಮಾಡಬಾರದು. ಅರ್ಧಹೊಟ್ಟೆಯಲ್ಲೆದ್ದು ಹೋಗುವಂತೆಯೂ ಆಗಬಾರದು. `ಬೇಕಿದ್ದು ಕೇಳರಿ. ನಿಧಾನ ಪ್ರಸಾದ ತಗೋರಿ, ನೀಡಿದ್ನ ಎಲಿಯಾಗ ಚಲ್ಲಬ್ಯಾಡರಿ’ ಮೊದಲಾಗಿ ಪ್ರತಿನಿತ್ಯ ಅವಳು ಕೊಡುವ ಸೂಚನೆಗಳು ಕೇಳುವ ಎಲ್ಲರಿಗೂ ಬಾಯಿಪಾಠವಾಗಿದ್ದವು. + +ಕಾಳವ್ವೆಯು ತಾನೇ ಖುದ್ದಾಗಿ ನಿಂತು ಕಾರ ಕುಟ್ಟುವಳು. ಬೆಳಿಗ್ಗೆ ಮೊದಲ ತಪ್ಪಲೆ ಅನ್ನ ಬೇಯುವುದರಲ್ಲಿ, ಬೇಳೆ ಬೆಂದು ತರಕಾರಿ ಹೆಚ್ಚುವುದರಲ್ಲಿ ಕಾಳವ್ವನ ತಂಡದ ಕಾರ ಕುಟ್ಟಿ, ಅರೆದು ಮುಗಿಯುತ್ತದೆ. ಕಾಳವ್ವೆ ಇಲ್ಲ ಎಂದರೆ ಒಂದು ದಿನ ಮಹಾಮನೆ ಮೌನದಲ್ಲಿ ಸೊರಗುತ್ತದೆ. ಕಾಳವ್ವೆ ಇಲ್ಲದ ದಿನ ಮೇಲೋಗರ ಸಪ್ಪಗೆಟ್ಟಿರುತ್ತದೆ. ಉಳಿದವರು ಸಪ್ಪೆ ತಿನ್ನಿ, ಉಪ್ಪು ಬಿಡಿ ಎಂಬಿತ್ಯಾದಿ ವ್ರತನೇಮಗಳ ಬಗೆಗೆ ಮಾತನಾಡಿದರೆ ಕಾಳವ್ವೆ ಅದಕ್ಕೆ ವಿರುದ್ಧ. ಹೊಟ್ಟೆಯೊಳಗಿನ ಶಿವನನ್ನು ತೃಪ್ತಿಪಡಿಸದೇ ಭಕ್ತಿ ಮಾಡುವುದು ಹೇಗೆ? ಕಾಯಕ, ಸಂಸಾರ ನಡೆಸುವುದು ಹೇಗೆ ಎಂದು ಪ್ರಶ್ನಿಸುವಳು. ಸಪ್ಪೆ ಊಟ, ಉಪ್ಪು ಹಾಳು ಎಂದು ಸದಾ ಊಟದ ವ್ರತದ ಬಗೆಗೆ ಹೇಳುತ್ತಿದ್ದ ಶರಣೆ ಅಕ್ಕಮ್ಮನೊಡನೆ ಒಂದು ದಿನ ಇದೇ ಸಲುವಾಗಿ ಬಿರುಸು ವಾದವೇ ನಡೆದಿತ್ತು. `ಬಾಯಿ ಕಟ್ಟಾಕ ನಾವ್ಯೇನು ಸನ್ಯಾಸಿಗುಳಾ’ ಎನ್ನುವಳು ಕಾಳವ್ವೆ. ಅತಿಯಾಗಿ ತಿನ್ನಬಾರದು, ದನ ಹುಲ್ಲು ಮೇಯುವಂತೆ ಯಾವಾಗಲೂ ಬಾಯಾಡಿಸುತ್ತ ಇರಬಾರದು. ಆದರೆ ತಿನ್ನುವುದನ್ನು ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ಮಾಡಿ, ಉಣಿಸಿ, ಉಣ್ಣಬೇಕು ಎನ್ನುವುದು ಅವಳ ನಿಲುವು. + +(ಡಾ. ಎಚ್.ಎಸ್. ಅನುಪಮಾ) + +ಅವಳು ತಾ ಕುಟ್ಟುವ ಕಾರದಂತೆಯೇ ಸ್ವಲ್ಪ ಕಟು ಮಾತಿನ ಅವ್ವೆ. ಶರಣರಲ್ಲಿ ಅಂಬಿಗರಣ್ಣ ಚೌಡಯ್ಯ, ಶರಣೆಯರಲ್ಲಿ ಕಾಳವ್ವಕ್ಕ ಎಂದು ಎಲ್ಲರೂ ನಗೆಯಾಡಿ ಅವರನ್ನು ಹುರಿದುಂಬಿಸುವರು. ದುರುದ್ದೇಶದಿಂದ ಚುಚ್ಚಬೇಕೆಂದೇ ಮಾತನಾಡುವವರಿಗೆ ಕಾರ ಕುಟ್ಟಿದ ಒನಕೆಯಿಂದ ಬೀಸಿ ಹೊಡೆದರೆ ಎಷ್ಟು ನೋವು, ಉರಿಯಾಗುವುದೋ ಅವಳ ಮಾತಿನಿಂದ ಅಷ್ಟೇ ಉರಿಯಾಗುವುದು. ಒಮ್ಮೆ ಅವಳ ಕಿವಿಗೆ ಬಸವಣ್ಣನಿಗೆ ಯಾರೋ ಏನೋ ಅಂದರೆಂಬ ಸುದ್ದಿ ಬಿದ್ದಿತು. ಬಸವಣ್ಣ ತೋರಿಕೆಗಾಗಿ ದಾಸೋಹ ಮಾಡುತ್ತಾನೆ. ತಾನೇ ರಾಜನಾಗುವ ಇಚ್ಛೆಯಿಂದ ಶರಣರನ್ನು ಗುಡ್ಡೆ ಹಾಕಿಕೊಳ್ಳುತ್ತಿದ್ದಾನೆ; ಬಿಜ್ಜಳನ ವೈರಿಗಳೆಲ್ಲ ಮಹಾಮನೆಯಲ್ಲಿ ಒಟ್ಟುಗೂಡುತ್ತಿದ್ದಾರೆ ಮುಂತಾಗಿ. ಶರಣರನ್ನು ರಾಜನ ಕಡೆಯ ಗೂಢಚಾರರು ನಾನಾರೀತಿಗಳಲ್ಲಿ ಪರೀಕ್ಷಿಸುವ ಕೆಲಸ ನಡೆಯುತ್ತಿದೆ ಎಂದೂ ತಿಳಿಯಿತು. ಕಾಳವ್ವಕ್ಕ ಎಷ್ಟು ಕೋಪಗೊಂಡಳೆಂದರೆ ಮಹಾಮನೆಯ ಕೆಲಸದ ನಡುವೆ ಅನುಭವ ಮಂಟಪಕ್ಕೆ ಸೆರಗಿಗೆ ಕೈಯೊರೆಸಿಕೊಳ್ಳುತ್ತ ಹೋಗಿ ಒಂದು ಗಂಟೆ ಕೂತಳು. + +`ಊರು ಉಪಕಾರ ಅರೀದು, ಹೆಣಾ ಶೃಂಗಾರ ಅರೀದು. ಭಾಗ್ಯವುಳ್ಳ ಪುರುಷಂಗೆ ಕಾಮಧೇನು ಕಾಮಿಸಿದುದನೀವುದಯ್ಯಾ./ನಿರ್ಭಾಗ್ಯ ಪುರುಂಷಗೆ ಕಾಮಧೇನು ತುಡುಗುಣಿಯಾಗಿ ತೋರುವುದಯ್ಯಾ./ಸತ್ಯಪುರುಷಂಗೆ ಕಲ್ಪವೃಕ್ಷ ಕಲ್ಪಿಸಿದುದನೀವುದಯ್ಯಾ./ಅಸತ್ಯಪುರುಷಂಗೆ ಕಲ್ಪವೃಕ್ಷ ಬೊಬ್ಬುಳಿಯಾಗಿ ತೋರುವುದಯ್ಯಾ./ಧರ್ಮಪುರುಷಂಗೆ ಚಿಂತಾಮಣಿ ಚಿಂತಿಸಿದುದನೀವುದಯ್ಯಾ./ಅಧರ್ಮಪುರುಷಂಗೆ ಚಿಂತಾಮಣಿ ಗಾಜಿನಮಣಿಯಾಗಿ ತೋರುವುದಯ್ಯಾ./ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ ಜಂಗಮಲಿಂಗವಾಗಿ ತೋರುವುದಯ್ಯಾ./ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ ಮಾನವನಾಗಿ ತೋರುವುದಯ್ಯಾ./ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ’ + +ಎಂದು ಬಸವಣ್ಣನನ್ನು ಕೊಂಡಾಡಿ ಪದ ಕಟ್ಟಿ ಹೇಳಿದಳು. ಅಸೂಯೆಯಿಂದ ಕುರುಡರಾದವರಿಗೆ ದೀಪ ಬೇಡವಾದರೆ ಊರಿಗೆಲ್ಲ ಬೇಡವೇ? ಅನ್ಯಾಯವಾಗಿ ಬಸವ ಮೂದಲಿಕೆ ನಡೆದರೆ ಸುಮ್ಮನಿರಲಾರೆವೆಂದು ಗುಡುಗಿ ಹೋದಳು. ಕಾಳವ್ವನೆಂಬ ಕಾರದ ಜೊತೆ ರೆಮ್ಮವ್ವಕ್ಕನ ನೂಲೂ ಸೇರಿದರೆ ಮುಗಿಯಿತು, ಮತ್ಯಾರೂ ಸುಲಭಕ್ಕೆ ಬಾಯಿ ತೆಗೆಯಲಾರರು. + +ಕದಿರೆ ರೆಮ್ಮವ್ವೆ ಹೆಂಗಸರ ಪರವಿರುವವಳು ಎಂದು ಪ್ರಸಿದ್ಧಳು. ಅವಳ ಮಾತುಗಳು ಕೈಯೆತ್ತುವ, ದನಿಯೆತ್ತುವ ಪುರುಷರನ್ನು ಚಾಟಿಯಿಂದ ಬಾರಿಸಿ ಸುಮ್ಮನೆ ಕೂರಿಸುವುದಿದೆ. ಆ ದಿನ ಕಾಳವ್ವೆ ಕಾರ ಕುಟ್ಟುತ್ತ ಬುಸುಬುಸು ಉಸುರು ಬಿಡುತ್ತಿದ್ದಳು. ದಪ್ಪ ಕಬ್ಬಿಣದ ಹಾರೆಯನ್ನು ಎರಡೂ ಕೈಯಿಂದ ಎತ್ತಿ ಹಾಕುತ್ತ, ಹಾರುವ ಕಾರ ಮೂಗು, ಬಾಯಿಗಡರದಿರಲೆಂದು ಸೆರಗು ಕಟ್ಟಿಕೊಂಡು ಒಂದೇಸಮ ಏಟು ಹಾಕುತ್ತಿದ್ದಳು. `ಏ, ಇವತ್ ಜಗ್ಗಿ ಕಾರ ಐತಿ ಕುಟ್ಟಾಕ. ಈಸೊಂದು ನಿನಗ ಕುಟ್ಟಾಕಾಗಂಗಿಲ್ಲ ತಗಿ’ ಅಂದ ಅಲ್ಲೇ ಹೋಗುತ್ತಿದ್ದ ಹಂಪಣ್ಣ. + +`ಯಾಕಣಾ, ನಿಂ ಮನೆ ಒಳಗೆ ಕುಟ್ಟೂ ಕೆಲ್ಸಾನೆಲ್ಲಾ ನೀನ ಮಾಡತೀಯ? ಹೋಗ್ ಹೋಗ್, ನಿನ ಕಂಡನಿ’ ರೆಮ್ಮವ್ವೆ ಹಂಗಿಸಿದಳು. + +`ಅಕ್ಕೋ, ನೀವು ಕುಟ್ಟತೀರೋ, ಬೀಸತೀರೋ, ನಾದತೀರೊ. ಏಸರೆ ಗುದ್ಯಾಡ್ರಿ, ಏನರೆ ಹೇಳರಿ. ನಿಮಗಿಂತ ಗಣಸು ಮಕ್ಳ ಒಂದು ತೊಲಿ ಹೆಚ್ಚು. ಒಳ್ಳಿಗಿಂತ ಒನಕಿನ ಹೆಚ್ಚ. ಏಳಬೆ, ನಿಂಗಾಗಂಗಿಲ್ಲ, ನಾ ಕುಟ್ಟತೇನಿ’ ಅಂದ ಹಂಪಣ್ಣ. + +`ಆಂ, ಯಾನಂದೆ ಹಂಪ? ನಮಗ ಆಗಂಗಿಲ್ಲಂದ? ಎತ್ತು ಹೌದು, ಕೋಡು ಅಲ್ಲ ಅಂತೀಯ? ಬಾಯಿಲ್ಲೆ’ ಎಂದು ಕಾಳವ್ವೆ ಸೀರೆ ಮೇಲೆತ್ತಿ ಕಟ್ಟಿ, ಹಾರೆ ಹಿಡಿದು ಸಾಕ್ಷಾತ್ ಕಾಳಿಯಂತೆಯೇ ನಿಂತುಬಿಟ್ಟಳು. ಹಂಪಣ್ಣ ತಪ್ಪಾಯಿತೆಂದು ಕೈಮುಗಿವ ನಾಟಕ ಮಾಡಿದ. ಕೊನೆಗೆ ಹಾರೆ ಬಿಟ್ಟು ಒನಕೆ ತೆಗೆದುಕೊಂಡು ಇಬ್ಬರೂ ಕುಟ್ಟಿ ಮುಗಿಸಿದರು. ಒಬ್ಬರಾದ ಮೇಲೊಬ್ಬರು ಉಸ್‌ಉಸ್ ಎನ್ನುತ್ತ ಲಯಬದ್ಧವಾಗಿ ಕಾರ ಕುಟ್ಟುತ್ತಿರಲು, ಮಹಾದೇವಿಯಕ್ಕ ಬಂದಳು. ಅಂದು ಬೆಳಿಗ್ಗೆ ಮುಂಚೆಯಿಂದಲೇ ಅವಳಿಗೆ ಪುರುಸೊತ್ತು ಇಲ್ಲ. ನಸುಕಿನಲ್ಲೇ ಕಾಳವ್ವನ ಹಟ್ಟಿಯಿಂದ ಬಟ್ಟೆ ಒಯ್ದು ಮಡಿ ಮಾಡಿ ತಂದಿದ್ದಳು. ಹಂಪಣ್ಣನ ಚಪ್ಪಲು ಹರಿದು ಹೋಗಿದ್ದುದನ್ನು ಸಮಗಾರಣ್ಣನ ಬಳಿ ಹೊಲಿಸಿ ತಂದಿದ್ದಳು. ಅನ್ನ ಬಾಗುವ ಬಿದಿರ ತಟ್ಟು ಮುರಿದು ಹೋಗಿತ್ತಾಗಿ ಮ್ಯಾದಾರ ಹಟ್ಟಿಯಿಂದ ಕೇಳಿ ಹೊಸದನ್ನು ತಂದಿದ್ದಳು. ರೊಟ್ಟಿ ಬಡಿಯುವವರಿಗೆ ಒಲೆಗೆ ನೂಕಲು ಮೋಳಿಗಣ್ಣ ತಂದು ಹಾಕಿದ ಕಟ್ಟಿಗೆ ಹೊರೆಯಿಂದ ಸಣ್ಣಸಣ್ಣ ತುಂಡು ಎತ್ತಿ ಆರಿಸಿ ಅವರ ಬುಡಕ್ಕಿಟ್ಟು ಬಂದಿದ್ದಳು. ಮಹಾಮನೆಯ ಬಾಗಿಲಿಗಿದ್ದ ಗಬ್ಬಿದೇವಣ್ಣನ ಮಗುವಿಗೆ ಆರಾಮವಿಲ್ಲವೆಂದು ತಿಳಿದು ವೈದ್ಯ ರಾಮಯ್ಯನ ಬಳಿ ಕಷಾಯ ಪಡೆದು ಮಗುವಿಗೆ ಕೊಟ್ಟು ಬಂದಿದ್ದಳು. ಈಗ ಸರಸರ ತರಕಾರಿ ಹೆಚ್ಚುತ್ತಿದ್ದ ರೆಮ್ಮವ್ವೆಯ ಕೆಲಸಕ್ಕೆ ಸೇರಿಕೊಂಡಳು. + +`ಹಂಪಣ್ಣಾ, ನೀ ಯಾವಾಗೂ ಹೀಂಗ ನೋಡು. ಹೆಂಗಸರಂದ್ರ ಕೈಲಾಗದರು ಅನಕೊಂಡಿರಿ. ಒಳ್ಳುಕಲ್ಲು ಮಿಗಿಲೋ ಒನಕೆ ಮಿಗಿಲೋ ಅಂತ ಕೇಳಿದ್ರೆ ಏನು ಹೇಳದ ಯಣ್ಣ? ಕುಟ್ಟುವ ಕಾರವೇ ಮಿಗಿಲು, ಹಾರುವ ಹೊಟ್ಟು ಮಿಗಿಲು. ಯಾರು ಮಿಗಿಲು ಅಂಬ ಪ್ರಶ್ನೆನೇ ಸರಿ ಅಲ್ಲ. ಎರಡೂ ತತ್ತ್ವ. ಅವೆರೆಡು ಕೂಡಿ ಹುಟ್ಟೋ ರುಚಿ ಇದೆಯಲ್ಲ ಅದೇ ಮಿಗಿಲು. ಒಳ್ಳು ಕಲ್ಲೇ ನೀ ತಳಗದಿ, ನೀನು ಕೀಳು. ನಾ ಮ್ಯಾಲಿಂದ ಕುಟ್ಟತೇನಿ, ನಾ ಒನಕಿ, ನಾನ ಮಿಗಿಲು ಅಂದ್ರ ಏನರ್ಥ? ಹುಚ್ಚರ ಸಂತಿ.’ + +ರೆಮ್ಮವ್ವೆ ಚಟಪಟವೆಂದಳು. + +`ನೀವ್ ಹೆಂಗಸ್ರು ಹೀಂಗ ನೋಡರಿ. ಒಬ್ರಿದ್ರೆ ಹೆದರಿ ಸಾಯದು, ಇಬ್ರಿದ್ರೆ ಜಗಳಾಡಿ ಸಾಯದು’ ಎಂಬ ಹಂಪಣ್ಣನ ಗಾದೆ ಕೇಳಿ ಕಾಳವ್ವಕ್ಕನಿಗೆ ಸಿಟ್ಟು ಬಂತು. `ಗಾದಿ ಹೇಳಾಕ ನಿಂಗೊಬ್ನಿಗೇ ರ‍್ತತಿ ಅಂತ ತಿಳದ್ಯಾ? ಬರೀ ಗಾದಿ ಹೇಳೋ ಬಾಯ್ಗೆ ಬೂದಿ ಬೀಳ್ತಾವ ನೆಪ್ಪಿರ್ಲಿ.’ + +ಈ ಚರ್ಚೆ ಇಲ್ಲಿ ನಡೆದರೆ ಸಾಲದು, ಇದನ್ನೀಗ ನಿಲ್ಲಿಸಬೇಕು ಎಂದು ಅಕ್ಕನಾದ ಮಹಾದೇವಿ ಮಾತು ತೆಗೆದಳು. + +`ಹೆಣ್ಣು ಎಂದರೆ ಕಾಮದ ಬಲೆ, ಸಂಸಾರವೆಂದರೆ ಕಾಮದ ಬಲೆ ಅಂತ ಅಂದ್ಕೊಂಡಿದ್ದೀರಿ. ಅದಕ್ಕೇ ಹೆಚ್ಚುಕಮ್ಮಿ, ಮೇಲೆಕೆಳಗೆ ವಿಚಾರ ಬರತಾವೆ. ಗಂಡಿಗೆ ಹೆಣ್ಣು ಕಾಮದ ಬಲೆ, ಹೆಣ್ಣಿಗೆ ಗಂಡು ಕಾಮದ ಬಲೆ. ಕಾಮವಿಲ್ಲದೆಯೂ ಸಂಸಾರ ಇದೆ. ಇದು ಸೃಷ್ಟಿಯ ನಿಯಮ’ ಎಂದು ಬಿಸಿಯನ್ನು ಕಡಿಮೆ ಮಾಡಿದಳು. ಇದು ಬರಿಯ ಹಂಪಣ್ಣನೊಬ್ಬನ ವಿಚಾರವಲ್ಲ, ಪುರುಷರು ತಾವೇ ಒಂದು ಕೈಮೇಲೆಂಬ ಅಹಮನ್ನು ಒಳಗೇ ಪೋಷಿಸಿಕೊಂಡಿರುತ್ತಾರೆ. ಅದಕ್ಕೇ ಈ ವಿಷಯವನ್ನು ಅನುಭವ ಮಂಟಪದಲ್ಲಿ ಎತ್ತಬೇಕು ಎಂದು ಅಲ್ಲಿದ್ದ ಹೆಣ್ಣುಗಳು ಯೋಜನೆ ಹಾಕಿಕೊಂಡರು. ಅಂದು ರೆಮ್ಮವ್ವೆ, ಕಾಳವ್ವೆ, ಮಹಾದೇವಿಯಕ್ಕ ಮೂವರೂ ಸೇರಿ ಯಾವ ನುಡಿಮಾಲೆಯಿಂದ ಇದನ್ನು ಎತ್ತುವುದು ಎಂದು ಮಾತಾಡಿಕೊಂಡರು. + +ಮರುದಿನ `ಹೆಸರಿಸಲಾಗದ ಎಷ್ಟೆಷ್ಟೋ ಕಾಯಕಗಳಿದಾವೆ. ಹೆಣ್ಣುಕುಲದ ಕಾಯಕನ ಕಾಯಕ ಅಂತ ಯಾರೂ ಹೇಳಲ್ಲ. ಆ ಬಗ್ಗೆ ನುಡಿಮಾಲೆ ಕಟ್ಟರಿ’ ಎಂದು ಕದಿರೆ ರೆಮ್ಮವ್ವೆ ಒಂದು ಮಾತಂದು ಕೂತಳು. ಅದನ್ನೇ ಕಾಯುತ್ತಿದ್ದವಳಂತೆ ಮಹಾದೇವಿ ಎದ್ದಳು.’ + +`ಅಟ್ಟು ಉಣಿಸಿ, ಹೊತ್ತು ಹೆತ್ತು ಮಕ್ಕಳ ಸಂಭಾಳಿಸಿ, ಸಂಸಾರ ನಿಭಾಯಿಸೋ ಕೆಲಸಗಳನ್ನ ಯಾರೂ ಕಾಯಕ ಅನ್ನಲ್ಲ. ಮನೆಗೆಲಸ ಅನ್ನೋದು ಸಂಬಳವೇ ಇಲ್ಲದ ಕೀಳು ಕೆಲಸ ಅನ್ನೋ ಭಾವನೆ ಎಲ್ಲರ ಮನದಲ್ಲಿದೆ. ಸ್ವತಃ ಹೆಣ್ಣುಗಳಿಗೂ ತಾವು ಮಾಡೋ ಕೆಲಸದ ಮೇಲೆ ಗೌರವ ಇಲ್ಲ. ಯಾವ ಹೆಣ್ಣೂ ಮನೆಗೆಲಸಾನ ತನ್ನ ಕಾಯಕ ಅಂತ ಹೆಸರ ಹಿಂದೆ ಸೇರಿಸಿಕೊಳ್ಳಲ್ಲ. ಮನೆಗೆಲಸದ ಮಹಾದೇವಿ, ಮನೆಗೆಲಸದ ಕಾಮಮ್ಮ, ಅಡುಗೆ ಕಾಯಕದ ಬಸಮ್ಮ, ಪಾತ್ರೆ ತೊಳೆಯುವ ಪಂಪಮ್ಮ, ಬಟ್ಟೆ ಒಗೆಯುವ ಬಸಮ್ಮಗಳು ಕಾಣಲ್ಲ. ಆದರೆ ಸಂಸಾರ ನಡೆಸೋರೇ ಹೆಣ್ಣುಗಳು. ಹೆಂಗಸರು ಮಾಡುವುದೆಲ್ಲ ಕಾಯಕವೇ’ ಎಂಬ ದೀರ್ಘ ನುಡಿಮಾಲೆಯನ್ನು ಮಹಾದೇವಿಯಕ್ಕ ಎತ್ತಿದಳು. ಹೆಂಗಸರ ಕಡೆಯಿಂದ ಕರತಾಡನ, ಹರ್ಷೋದ್ಗಾರ. ಕೆಲ ಪುರುಷರೂ ಅದಕ್ಕೆ ದನಿಗೂಡಿಸಿದರು. + +ಹೆಣ್ಣು ಮಾಡುವುದೆಲ್ಲ ಕಾಯಕವೇ ಎಂದು ತಮ್ಮ ಬಾಲ್ಯದಿಂದ ತಾವು ಇಂದಿನವರೆಗೆ ಕಂಡ ಹೆಂಗಸರನ್ನೆಲ್ಲ ಪುರುಷರು ನೆನೆದರು. ಯಾವ ಸ್ವಾರ್ಥವೂ ಇಲ್ಲದೆ, ಕಾಯಕ ಎಂಬ ಹೆಸರಿಲ್ಲದೆ, ಗುರುತಿಲ್ಲದೆ, ಸಂಭಾವನೆಯಿಲ್ಲದೆ, ರಜೆಯಿಲ್ಲದೆ, ವಿರಾಮವಿಲ್ಲದೆ ಸಾಯುವ ತನಕ ಒಂದಲ್ಲ ಒಂದು ಕೆಲಸ ಮೈಮೇಲೆಳೆದುಕೊಂಡು ಮಾಡುವ ಹೆಂಗಸರಿಲ್ಲದಿದ್ದರೆ ಲೋಕ ನಡೆಯುವುದೇ ಇಲ್ಲ ಎಂದ ಮಾರಯ್ಯ. ತನ್ನ ತಾಯಿಯು ಏನಾದರೂ ಮಾತಾಡುವಾಗ, ಕತೆ ಹೇಳುವಾಗ ಕೈಗೊಂದು ಕೆಲಸ ಅಂಟಿಸಿಕೊಂಡುಬಂದು ಕೂರುತ್ತಿದ್ದಳೆಂದೂ, ಕೆಲಸವಿಲ್ಲದಿದ್ದರೆ ಅವಳ ಬಾಯಿಂದ ಮಾತೇ ಬರುತ್ತಿರಲಿಲ್ಲವೆಂದೂ ಉಗ್ಘಡಿಸುವ ಗುಬ್ಬಿದೇವಯ್ಯ ನೆನಪಿಸಿಕೊಂಡು ಹೇಳಿದ. ಒಬ್ಬರಾದ ಮೇಲೊಬ್ಬರು ಹೆಂಗಸರ ಕೆಲಸವನ್ನು ಸ್ಮರಿಸುತ್ತಾ ತಮ್ಮ ತಾಯಿಯನ್ನು ನೆನೆದು ಕಣ್ಣು ಒದ್ದೆ ಮಾಡಿಕೊಂಡರು. ಆಗ ಅದು ಎಲ್ಲಿಂದ, ಯಾರಿಂದ ಬಂತೆಂದು ಗೊತ್ತಾಗದ ಒಂದು ಮಾತು ಕೇಳಿ ಬಂತು. + +`ಹೌದು, ಹೆಂಗಸ್ರು ಅಂದ್ರ ಬರೀ ಅಬ್ಬೇನ ನೆಪ್ಪಾಗತಾಳಲ ನಿಮ್ಗೆ. ಅಪ್ಪ ಅಬ್ಬೆ ಬಿಟ್ಟು ನಿಂ ಹಿಂದ ಬಂದ ಹೇಂತಿ, ಮಗಳು, ಅಕ್ಕ, ತಂಗಿ, ದಾಸಿ, ವೇಶಿ ಮಾಡಿದ್ ಸೇವಾನ ಒಬ್ರರೆ ನೆಪ್ಪು ಮಾಡ್ಕ್ಯಂಡ್ರ ನೋಡ್?’ + +ಯಾರು ಹೇಳಿರಬಹುದು ಇದನ್ನು ಎಂದು ಎಲ್ಲ ನೋಡುತ್ತ, ಹುಡುಕುತ್ತ, ಊಹಿಸುತ್ತ ಇರುವಾಗ ಮತ್ತೊಂದು ದನಿ ಕೇಳಿಬಂತು. + +`ಹೌದೌದು ಹೆಂಗಸರು ಮಾಡೂದೆಲ್ಲ ಕಾಯಕಾನಾ. ಹಂಗಾರ, ವೇಶಿಯರು ಮಾಡೂದು ಕಾಯಕಾನನು? ಗರತೇರು ಹೇಳ್ರಿ’ + +ಹೆಣ್ಣುಗಳನ್ನು ಗರತಿಯರು, ವೇಶ್ಯೆಯರೆಂದು ಇಬ್ಭಾಗಿಸುವ ಈ ವಾಕ್ಯ ಹೊರಬಿದ್ದದ್ದೇ ನಿರ್ಭರ ಮೌನ ಅಲ್ಲಿ ನೆಲೆಸಿತು. ವೇಶ್ಯೆಯರ ಬಗೆಗೆ ಕೆಲವೊಮ್ಮೆ ಹೆಂಗಸರೇ ನಿಕೃಷ್ಟವಾಗಿ ಮಾತನಾಡುವುದಿತ್ತು. ಈಗ ಈ ಸಾಲು ಕೇಳಿದ್ದೇ ಮೌನ ಹೆಪ್ಪುಗಟ್ಟಿ, ದೊಡ್ಡ ಬಂಡೆಯಾಗಿ ಬೆಳೆಯಿತು. ಯಾರೂ ಮಾತನಾಡುತ್ತಿಲ್ಲ, ಎಲ್ಲರಿಗೂ ಅವರವರ ಉಸಿರ ಸದ್ದು ಕೇಳಿಸುತ್ತಿದೆ. ಪಿಸುಪಿಸು ಇಲ್ಲ, ಗುಸುಗುಸುವೂ ಇಲ್ಲ. ಮೌನಬಂಡೆ ಎತ್ತರೆತ್ತರ ಬೆಳೆದು ಶೂನ್ಯ ಸಿಂಹಾಸನದ ಎತ್ತರವನ್ನೂ ಮೀರಿ ಬೆಳೆಯಿತು. ಶೂನ್ಯದಾಚೆಗಿನ ಶೂನ್ಯಪೀಠವಾಗಿ ಮೌನಪೀಠವು ಹುಟ್ಟಿತು. ಅದರ ಮೇಲೆ ವಿರಾಜಿಸಿ ಸಭೆ ಮುನ್ನಡೆಸುವವರಾರಿಲ್ಲ. ಇವತ್ತಿನ ನುಡಿಮಾಲೆಯ ವಾಕ್ಯವೋ ಉರಿಬೆಂಕಿಯ ಜ್ವಾಲೆ. ಅದ ಹಿಡಿದು ನೇವರಿಸಿ ಅನುನಯಿಸಿ ಮುನ್ನಡೆಸುವುದು ಅಲ್ಲಮಯ್ಯನಿಗೇ ಆದರೂ ಸುಲಭವಿಲ್ಲ. ಆಗ ನಿಶ್ಶಬ್ದ ಬಯಲಿನಿಂದ ಒಂದು ಧ್ವನಿ ಕೇಳಿ ಬಂತು. + +`ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ/ಹಿಡಿದೆಡೆ ಬತ್ತಲೆ ನಿಲಿಸಿ ಕೊಲುವರಯ್ಯಾ./ವ್ರತಹೀನನನರಿದು ಬೆರೆದಡೆ/ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರವ್ವಾ/ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ’ + +ನಾಲ್ಕಾರು ಹೆಣ್ಣು ದನಿಗಳು ಸಣ್ಣಕ್ಕೆ ಸಿಳ್ಳು ಹಾಕಿ ತಮ್ಮ ಖುಷಿ, ಸಹಮತ ತೋರಿಸಿದವು. + +`ನೋಡಿದಿರಾ ಅವ್ವ ಈ ಜಗದ ನೀತಿ! ಕದ್ದು ಕುರೀನಾದ್ರೂ ತರತಾರೆ. ಬೇಡಿದ ಕಾಸನ್ನಾದರೂ ತಂದು ಕೊಡತಾರೆ. ಶಿವನಿಷ್ಠೆಯಿಲ್ಲದೆ ಬಸವಣ್ಣ ಕೊಟ್ಟ ಹೊನ್ನು ಇಸಗೋತಾರೆ. ಹೇಗಾದರೂ ಧನಕನಕವಸ್ತು ಒಟ್ಟುಮಾಡಿ ವೇಶಿ ಮನೆಗೆ ಬರೋರು ಎಷ್ಟು ಜನ ಬೇಕು? ಆದರೆ ಇವತ್ತು ಒಬ್ಬೇ ಒಬ್ರೂ ಹೊಟ್ಟೆ ತಣಿಸೋ ದಾಸೋಹ ಕಾಯಕ ಆದ್ರೆ, ತಮ್ಮ ದೇಹದ ಹಸಿವೆ ತಣಿಸೋ ವೇಶಿಯರದೂ ಕಾಯಕಾಂತ ಬಾಯ್ಬಿಟ್ಟಾರಾ? ನೋಡಿದ್ರಾ ಅವ್ವ? ನೋಡಿದ್ರಾ ಅಕ್ಕಮ್ಮ? ಮನೆಯಾಗೆ ಹೆಂಡತಿ ಮುನಿದರೆ, ಮುದುಡಿದರೆ, ಮಡಿದರೆ, ಮರುಳೆಯಾದರೆ, ಮಗು ಹೆತ್ತರೆ, ಮೈದುಂಬಿ ಬಸುರಾದರೆ, ಕೆರಳಿದರೆ, ಒಲ್ಯಾಂದರೆ ಗಂಡರ ಚಿತ್ತ ವೇಶಿಯರತ್ತ. ನಿಮ್ಮ ಗಂಡರ ಕರಾಳ ಮುಖವನ್ನ ತಡಕೊಂಡು ನಿಮ್ಮನ್ನು ರಕ್ಷಿಸೋರು ವೇಶ್ಯೆಯರು. ಆದರೀಗ ನೋಡಿ. ಯಾರಾದರೂ ಬಾಯ್ಬಿಡತಾರೇನ? ಹೆಣ್ಣುಗಳಾದ ನೀವೇ ಸೂಳೆ, ಸೂಳೆಮಕ್ಳು ಅಂತ ಹೀನಾಯವಾಗಿ ಜರೀತೀರಿ. ಅಕ್ಕಗಳಿರಾ, ಅವ್ವಗಳಿರಾ, ನೀವು ಕಾಲಿಂದ ತೊಳೆಯಕ್ಕಾಗದ ಕೊಳೇನ ನಾವು ಮೈಯುಜ್ಜಿ ತೊಳಿತೀವಿ. ನೀವು ತಣಿಸಕ್ಕಾಗದ ವಿಷಮ ಬೆಂಕೀನ ನುಂಗಿ ಒಡಲು ಸುಟಕೊಂಡೀವಿ. ನೀವು ಸಹಿಸಲಾಗದ ಹೊಲಸನ್ನು ಪರಮ ಪ್ರಸಾದ ಅಂತ ಉಂಡೀವಿ. ಸಿಟ್ಟು, ಹೆದ್ರಿಕೆ, ಉದ್ವೇಗ, ಉದ್ರೇಕ, ಯುದ್ಧ, ಸೋಲು, ಅವಮಾನ ಅಂತ ಗಂಡಸಿನ ಆ ಅರ್ಧಮಖಾನ ತಡಕಂಡೀವಿ. ಶಿವಾ ಒಮ್ಮೆ ವಿಷಕಂಠ ಆದ. ನಾವು ಹಂಗಲ್ಲ, ನಿತ್ಯ ಹಾಲಾಹಲ ಕುಡಿದು ನೀಲಿಗಟ್ತಾ ಅದೀವಿ. ನಾನೆಂದಿಗೂ ಹಣಕ್ಕಂತ ಒತ್ತೆ ಹಿಡಿಯೋಳಲ್ಲ. ಒಂದು ದಿನಕ್ಕೆ ಒಬ್ಬ ವ್ರತಿಯ ಒತ್ತೆ ಅಷ್ಟೆ. ಅವ ಕೊಟ್ಟಿದ್ ತಗಂಡು ಹೊಟ್ಟೆಗೆ, ದಾಸೋಹಕ್ಕೆ ಕೊಡತೀನಿ. ನೀವು ಒಪ್ತಿರೋ, ಇಲ್ಲೋ, ಇದು ನನ್ನ ವ್ರತ. ಇದು ನನ್ನ ಕಾಯಕ. ನಾ ಇನ್ನು ಅಂಜಿಕಿಲ್ಲದಂಗೆ ನನ್ನ ಕಾಯಕಾ ಏನಂತ ಹೇಳತೀನಿ. ನಾನು ಸೂಳೆ. ನಾನು ಸೂಳೆ ಸಂಕವ್ವೆ. ನಾನು ಶರಣೆ, ಸೂಳೆ ಸಂಕವ್ವೆ. ನನ್ನ ಕಾಯಕ ಸೂಳೆಯ ಕಾಯಕ.’ + +ಸಂಕವ್ವಕ್ಕ ಹಾಗೆ ಹೇಳಿದ್ದೇ ಮತ್ತೆ ನಾಲ್ಕಾರು ಹೆಣ್ಣುಮಕ್ಕಳು ಒಬ್ಬರಾದ ಮೇಲೊಬ್ಬರು ಎದ್ದುನಿಂತರು. + +`ನಾನು ಶರಣೆ, ಸೂಳೆ ನಂಬಿಯಕ್ಕ. ನನ್ನ ಕಾಯಕ ಸೂಳೆಯ ಕಾಯಕ.’`ನಾನು ಶರಣೆ, ಸೂಳೆ ಬೊಮ್ಮಕ್ಕ. ನನ್ನ ಕಾಯಕ ಸೂಳೆಯ ಕಾಯಕ.’`ನಾನು ಶರಣೆ, ಸೂಳೆ ಚಾಕಲದೇವಿ. ನನ್ನ ಕಾಯಕ ಸೂಳೆಯ ಕಾಯಕ.’`ನಾನು ಶರಣೆ, ಸೂಳೆ ಪದ್ಮಲಾದೇವಿ. ನನ್ನ ಕಾಯಕ ಸೂಳೆಯ ಕಾಯಕ.’`ನಾನು ಶರಣೆ, ಸೂಳೆ ಬೊಪಲದೇವಿ. ನನ್ನ ಕಾಯಕ ಸೂಳೆಯ ಕಾಯಕ.’ + +ದಾಸಿವೇಶಿಯರೆಂದು, ಸೂಳೆಯ ಮಕ್ಕಳು ಎಂದು ಮಾತುಮಾತಿಗೆ ಬೈಯುತ್ತಿದ್ದವರೆಲ್ಲ ಮಾತು ಸತ್ತು ದಂಗು ಬಡಿದು ಕುಳಿತರು. ತಮ್ಮ ನಡುವೆ ಇಷ್ಟು ಜನ ಸೂಳೆ ಕಾಯಕದವರು ಇರಬಹುದೆಂದು ಅಲ್ಲಿದ್ದವರಿಗೆ ತಿಳಿದೇ ಇರಲಿಲ್ಲ. ಸಂಕವ್ವ ಕೂತದ್ದೇ ಮತ್ತೊಬ್ಬ ಅವ್ವ ಎದ್ದು ನಿಂತಳು. + +`ಸಂಕವ್ವಕ್ಕ, ನೀನು ನಿಜ ಶರಣೆ. ನಿಜವನ್ನು ಧೈರ್ಯವಾಗಿ ಹೇಳಿದಿ. ನಿನ್ನ ಧೈರ್ಯಕ್ಕೆ ನಾವು ಮೆಚ್ಚಿದೆವು. ಇತ್ತಲಾಗಿ ಧರ್ಮಪತ್ನಿನೂ ಅಲ್ಲ, ಅತ್ತಲಾಗಿ ವೇಶಿನೂ ಅಲ್ಲದೆ ಇರೋರು ಭಾಳ ಹೆಣ್ಣುಗಳು. ಎರಡನೆ ಹೆಂಡ್ತಿಯಾಗಿ, ಮೂರನೆ ನಾಲ್ಕನೆಯವಳಾಗಿ, ಇಟ್ಟುಕೊಂಡೋಳಾಗಿ, ಕೊಂಡು ತಂದೋಳಾಗಿ, ಮನದನ್ನೆಯರಾಗಿ, ಮನೆಮುರುಕಿ ಅನ್ನೋ ಬೈಗುಳ ಕೇಳ್ತ, ಆಟಕ್ಕುಂಟು ಲೆಕ್ಕಕ್ಕಿಲ್ಲ ಆಗಿ, ಪಣ ಕೊಟ್ಟು ತಂದ ಪುಣ್ಣಸ್ತ್ರೀಯರಾಗಿ ಇರೋರು ನಾವು. ಯಾವುದೋ ಸನ್ನಿವೇಶಕ್ಕೆ ಸಿಕ್ಕಂಡು ಸಂಸಾರ ಕಟ್ಟಿಕೊಳ್ಳಲಾಗದ್ದಕ್ಕೆ ಈ ಹಳ್ಳದಲ್ಲಿ ಬಿದ್ದು ತೊಳಲ್ತ ಇದೀವಮ್ಮಾ. ಮಕ್ಕಳು ಮರಿ, ಅವರ ಉದ್ಧಾರದ ಕನಸು ಕೈಬಿಟ್ಟು ಬದುಕಿದೀವಮ್ಮ. ನಾವೂ ಇನ್ನು ನಮ್ಮ ಹೆಸರಿನ ಹಿಂದೆ ನಮ್ಮ ಅರ್ಧಾಂಗನಾದ ಗಂಡಿನ ಹೆಸರಿನ ಜೊತೆ ನಮ್ಮ ಹೆಸರ ಅಂಟಿಸಿಕೊಳ್ತೀವಿ. ನಾವೂ ಪುಣ್ಯಸ್ತ್ರೀಯರು ಅನಿಸಿಕೊಳ್ತೀವಿ. ಇನ್ನು ನಾವು ಪುಣ್ಯಸ್ತ್ರೀಯರಲ್ಲ, ಪುಣ್ಯಸ್ತ್ರೀಯರು. ನಾನು ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ಕಾಳವ್ವೆ’ + + + +ಈಕೆ ಇಷ್ಟು ಮಾತಾಡಬಲ್ಲಳೇ ಎಂದು ರಾಯಸದ ಮಂಚಣ್ಣನೂ ಸೇರಿದಂತೆ ಎಲ್ಲರೂ ಅಚ್ಚರಿಯಿಂದ ತೆರೆದ ಬಾಯಿ ತೆರೆದೇ ಕುಳಿತುಕೊಂಡಿರಲು ಒಬ್ಬರಾದ ಮೇಲೊಬ್ಬರು ಎದ್ದು ನಿಂತು ಹೇಳತೊಡಗಿದರು: + +`ನಾನು ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮ’.`ನಾನು ಸಿದ್ಧಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ’.`ನಾನು ಹಡಪದ ಅಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ತಾಯಿ’,`ನಾನು ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ’,`ನಾನು ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ಕಾಳವ್ವೆ’,`ನಾನು ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ’,`ನಾನು ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ’,`ನಾನು ಬತ್ತಲೇಶ್ವರಯ್ಯಗಳ ಪುಣ್ಯಸ್ತ್ರೀ ಗುಡ್ಡವ್ವೆ’,`ನಾನು ಬಾಚಿ ಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ’,`ನಾನು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಕೇತಲದೇವಿ’,`ನಾನು ಡೋಹರ ಕಕ್ಕಯ್ಯನವರ ಪುಣ್ಯಸ್ತ್ರೀ ಭಿಷ್ಟಾದೇವಿ’,`ನಾನು ಕೊಂಡೆ ಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ’,`ನಾನು ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ’,`ನಾನು ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ’,`ನಾನು ನಾಗಿಮಯ್ಯಗಳ ಪುಣ್ಯಸ್ತ್ರೀ ಮಸಣಮ್ಮ’ + +ಹೆಣ್ಣುದುಃಖದ ಬಳ್ಳಿ ಕಣ್ಣಿಗೆ ಕಾಣುವಷ್ಟೂ ದೂರ ಎಲ್ಲೆಲ್ಲ ಹಬ್ಬಿರುವುದಲ್ಲ ಎಂದು ನೆರೆದವರು ನಿಟ್ಟುಸಿರಾಗುವಾಗ ಮತ್ತೊಂದು ದನಿ ಕೇಳಿಸಿತು: + +`ಸೂಳೆಯಕ್ಕ, ಪುಣ್ಯಕ್ಕಗಳ ಮಾತು ಆಯಿತು. ಸತಿಯರು, ಅವ್ವಂದಿರದಂತೂ ಆಯಿತೇ ಆಯಿತು. ನೀವೆಲ್ಲ ನಿಮಗಾಗಿ ಒಂದು ಕಾಯ, ಒಂದು ಜೀವ, ಒಂದು ಸಂಸಾರ ಇರೋರು. ಮನೆ, ನಂಟು, ಸಂಬಂಧಗಳ ಹೊಂದಿರೋರು. ಆದರೆ ನನ್ನಂತಹ ಹಲವರಿದೇವೆ. ಒಂಟಿ ಹೆಂಗಸರು. ನಮಗಾವ ನಂಟೂ ಇಲ್ಲ. ಒಂದೇ ನಂಟು, ಗಂಡನೆಂದರೂ ಶಿವನೇ. ಮಿಂಡನೆಂದರೂ ಶಿವನೇ. ಅಯ್ಯನೆಂದರೂ ಶಿವನೇ. ಅವ್ವನೆಂದರೂ ಶಿವನೇ. ಅಣ್ಣನೆಂದರೂ ಶಿವನೇ. ಮಾವನೆಂದರೂ ಶಿವನೇ. ಗುರುವೆಂದರೂ ಶಿವನೇ, ಹರನೆಂದರೂ ಶಿವನೇ. ಅಕ್ಕಗಳಿರಾ, ಅವ್ವಗಳಿರಾ. ನೀವು ಬೇಲಿಯೊಳಗಿನ ತೋಟದ ವೃಕ್ಷಗಳು. ಹಬ್ಬಿದರೂ ಹರಡಿದರೂ ಒಂದು ಬೇಲಿಯೊಳಗೆ ಸುರಕ್ಷಿತ ಎಂದುಕೊಂಡಿರೋರು. ನಾವು ಬಯಲಲ್ಲಿ ನಿಂತ ಒಂಟಿಮರಗಳು. ಬಿರುಗಾಳಿ, ಬಿರುಮಳೆ, ಬಿರುಬಿಸಿಲು, ಯಮಚಳಿಗಳನ್ನೆಲ್ಲ ಸಹಿಸೋರು. ಸಿಡಿಲಿಗೂ ಕೊಡಲಿಗೂ ತಲೆಕೊಟ್ಟು ಯಾರದೂ ಅಲ್ಲದ, ಎಲ್ಲರೂ ತಮ್ಮದು ಅಂದುಕೊಳ್ಳಕ್ಕೆ ಹಾತೊರೆಯೋ ಆಸ್ತಿಯಂತೆ ಇರೋರು. ತಾಪತ್ರಯಗಳು ಸಂಸಾರವಂದಿಗರಿಗೆಷ್ಟೋ ಅಷ್ಟೇ ನಮಗೂ ಇದಾವೆ. ಲೋಕಜಂಜಡಗಳು ಮಕ್ಕಳು ಮರಿ ಇಲ್ಲದ ಬಂಜೆಯೆನಿಸಿಕೊಂಬವರಿಗೂ ಇದಾವೆ. ಒಂಟಿನಿಂತ ಮರಗಳಂತಹ ನಮಗೆ ಹಿಂದೆಮುಂದೆ ಯಾವ ಹೆಸರೂ ಬೇಡ. ಯಾವ ಕಾಯಕದ ಹೆಸರೂ ಬೇಡ. ಅಪ್ಪ, ಗಂಡ, ಕುಲ, ಕಾಯಕ ಯಾವುದರ ಹೆಸರೂ ಬೇಡ. ನಾನು ಸತ್ಯಕ್ಕ. ಬರಿಯ ಸತ್ಯಕ್ಕ ನಾನು.’ + +ಸತ್ಯಕ್ಕ ಇಷ್ಟು ಹೇಳುವುದರಲ್ಲಿ ಉಳಿದವರು ತಮ್ಮ ತಯಾರಿ ನಡೆಸಿಕೊಂಡಿದ್ದಂತೆ ತಾವೂ ಹೇಳಿದರು. + +`ನಾನು ಗೊಗ್ಗವ್ವೆ, ಬರಿಯ ಗೊಗ್ಗವ್ವೆ ನಾನು.’`ನಾನು ಬೊಂತವ್ವೆ, ಬರಿಯ ಬೊಂತವ್ವೆ ನಾನು’`ನಾನು ಮಹಾದೇವಿ. ಮಹಾದೇವಿ ನಾನು.’ + +ಶರಣೆಯರ ನಡುವೆ ನಾನಾ ಸ್ವರೂಪಗಳಲ್ಲಿರುವ ಹೆಣ್ಣು ಜೀವಗಳು ತಂತಮ್ಮ ಒಡಲ ಆಳವನ್ನು ಶರಣ ಪಥಿಕರಿಗೆ ತೆರೆದು ತೋರಿಸಿದವು. ಅನುಭವ ಮಂಟಪವು ಎಲ್ಲರೊಂದಿಗೆ ಕುಳಿತುಕೊಳ್ಳಲು, ಕೇಳಲು, ಹೇಳಲು, ಮಾತನಾಡಲು ಅವರಿಗೆಲ್ಲ ಅವಕಾಶ ಕೊಟ್ಟದ್ದಕ್ಕೆ ಸಾರ್ಥಕವಾಯಿತು ಎಂದು ಬಸವಣ್ಣ ಭಾವಿಸಿದನು. ಒಬ್ಬರಾದ ಮೇಲೊಬ್ಬರು ಶರಣರು ಮೇಲೆದ್ದು ಹೆಣ್ಣಿನ ಬಗೆಗೆ ತಮ್ಮ ನಿಲುವನ್ನು ವಿವಿಧ ಮಾತುಗಳಲ್ಲಿ ಹೊರಗೆಡಹಿದರು. + +`ಅವ್ವಗಳಿರಾ, ಅಕ್ಕಗಳಿರಾ, ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು/ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು/ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು/ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು/ಅದು ಕಾರಣ ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ/ಹೆಣ್ಣು ಪ್ರತ್ಯಕ್ಷ ಕಪಿಲ ಸಿದ್ಧ ಮಲ್ಲಿಕಾರ್ಜುನ ನೋಡಾ’ ಎಂದನು ಸಿದ್ಧರಾಮ. + +`ಸತ್ವಗೆಟ್ಟಲ್ಲಿ ಕಾಷ್ಟವನೂರಿ ನಡೆಯಬೇಕು/ಮಟ್ಟತ್ವದಲ್ಲಿ ನಿಶ್ಚಯವ ಹೇಳಲಾಗಿ/ಮಹಾಪ್ರಸಾದವೆಂದು ಕೈಗೊಳ್ಳಬೇಕು/ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ/ಎನ್ನ ಸತ್ವಕ್ಕೆ ನೀ ಸತಿಯಾದ ಕಾರಣ/ಎನ್ನ ಸುಖದುಃಖ ನಿನ್ನ ಸುಖದುಃಖ ಅನ್ಯವಿಲ್ಲ/ಇದಕ್ಕೆ ಭಿನ್ನ ಭೇದವೇನು ಹೇಳಾ ನಿಃಕಲಂಕ ಮಲ್ಲಿಕಾರ್ಜುನಾ’ ಎಂದು ಮೋಳಿಗೆಯ ಮಾರಯ್ಯ ತನ್ನ ಸತಿ ಮೋಳಿಗೆ ಮಹಾದೇವಿಗೆ ಮತ್ತು ಆ ಮೂಲಕ ಇಡಿಯ ಹೆಣ್ಣುಕುಲಕ್ಕೆ ಶರಣೆಂದನು. + +`ಸತಿಯ ಗುಣವ ಪತಿ ನೋಡಬೇಕಲ್ಲದೆ/ಪತಿಯ ಗುಣವ ಸತಿ ನೋಡಬಹುದೆ ಎಂಬರು/ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ/ಪತಿಯಿಂದ ಬಂದ ಸೋಂಕು ಸಂತಿಯ ಕೇಡಲ್ಲವೆ/ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ/ಭಂಗವಾರಿಗೆಂದು ತಿಳಿದಲ್ಲಿಯೆ/ಕಾಲಾಂತಕ ಭೀಮೇಶ್ವರ ಲಿಂಗಕ್ಕೆ ಸಲೆ ಸಂದಿತ್ತು’ ಎಂದು ಸತಿಪತಿಯರಿಬ್ಬರಿಗೂ ಪರಸ್ಪರರ ಮೇಲೆ ಇರುವ ಅವಲಂಬನೆ, ಹಕ್ಕುಗಳ ಬಗೆಗೆ ಹೇಳಿದ ಢಕ್ಕೆಯ ಬೊಮ್ಮಣ್ಣ. + +`ಶಿವ ಶಿವ ಎಂಬ ವಚನವ ಬಿಡದಿರು, ಮಡದಿಯರೊಲುಮೆಯ ನಚ್ಚದಿರು ಎಂದು ಹೇಳಿದವರು ನಾವು. ಹೆಣ್ಣನ್ನು ಮಾಯೆಯೆಂದವರು. ಈಗ ನಮ್ಮ ಮಾತನ್ನೂ ಬದಲಿಸಿಕೊಳ್ಳಬೇಕಿದೆ. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ/ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ/ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ/ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ’ + +ಎಂದು ಅಲ್ಲಮಯ್ಯ ಹೇಳುವುದರೊಂದಿಗೆ ಅಂದಿನ ನುಡಿಮಾಲೆಯು ಮುಕ್ತಾಯ ಕಂಡಿತು. + + + +ಆದರೆ ಕೆಲವರು ಹೆಣ್ಣುಗಳ ಇರುವಿಕೆಯನ್ನು ಗೌರವಿಸಿ ಮಾತನಾಡಿದರೂ ಮುಕ್ಕಾಲು ಪಾಲು ಜನರ ಮನದಲ್ಲಿ ಅದಕ್ಕೆ ವಿರುದ್ಧ ವಿಚಾರಗಳೇ ತುಂಬಿಕೊಂಡಿದ್ದವು. ಅನುಭವ ಮಂಟಪದಿಂದ ನಿಧಾನಕ್ಕೆ ದಾಸೋಹದ ಮನೆಯತ್ತ ಕಾಲೆಳೆಯುತ್ತ ಹೋಗುತ್ತಿರುವವರು ಅಲ್ಲಲ್ಲಿ ಗುಂಪುಗೂಡಿ ಆಡಿಕೊಂಡ ಮಾತುಗಳನ್ನು ಮಹಾದೇವಿಯೂ, ಶರಣೆಯರೂ ಸೂಕ್ಷ್ಮವಾಗಿ ಗ್ರಹಿಸಿದರು. ಕೆಲವರು ಹೆಣ್ಣನ್ನು ಹಾದರಗಿತ್ತಿಯೆಂಬಂತೆ ಮಾತಾಡಿಕೊಳ್ಳುತ್ತ ಸಾಗಿದರೆ ಚಂದಿಮರಸಯ್ಯನು, `ಕಾಳಕೂಟ ಹಾಳಾಹಳ ವಿಷಂಗಳು ಕುಡಿದವರನಲ್ಲದೆ ಮಿಕ್ಕವರನೇನನೂ ಮಾಡಲಮ್ಮವು. ಸ್ತ್ರೀಯೆಂಬ ಕಡುನಂಜು ನೋಡಿದವರ, ನುಡಿಸಿದವರ, ಕೇಳಿದವರ, ಕೂಡಿದವರ ಗಡಣ ಸಂಗ ಮಾತ್ರದಿಂದ ಮಡುಹಿ ನರಕದಲ್ಲಿ ಕೆಡಹದೆ ಮಾಡಳು’ ಎಂದುಕೊಳ್ಳುತ್ತ ಸಾಗಿದನು. ಹಾದರಗಿತ್ತಿ, ಬೋಸರಗಿತ್ತಿಯೆಂಬ ಪದಗಳನ್ನು ಶರಣೆಯರು ಕೇಳದಿದ್ದೇನಲ್ಲ. ಬಸವಣ್ಣ ಕೂಡ `ಮಾನಿಸಗಳ್ಳಿ’ ಎಂದು, `ಕಂಗಳಲೊಬ್ಬನ ಕರೆವಳು, ಮನದಲೊಬ್ಬನ ನೆರೆವಳು’ ಎಂದು ಮೂದಲಿಸಿದ್ದಿದೆ. ಉರಿಲಿಂಗಪೆದ್ದಿಯು ಒಮ್ಮೆ ನುಡಿಮಾಲೆಯಲ್ಲಿ `ಹೆಣ್ಣ ನಚ್ಚಿ, ಅಶುಭವ ಮಚ್ಚಿ ಮರೆಯಬೇಡ. ಅವಳು ನಿನ್ನ ನಂಬಳು, ನೀನು ತನು ಮನ ಧನವನಿತ್ತಡೆಯೂ ಪರಪುರುಷರ ನೆನೆವುದ ಮಾಣರು’ ಎಂದು ಹೇಳಿ ಸ್ವತಃ ಕಾಳವ್ವೆಯ ಕೋಪಕ್ಕೂ ಗುರಿಯಾಗಿದ್ದಿದೆ. ಪತ್ನಿ ಎಂದರೆ ಪತಿಯನ್ನು ಒಲಿಸಿಕೊಂಡು ವಿನೀತಳಾಗಿ ಬದುಕಬೇಕೆನ್ನುವುದು ಹೆಚ್ಚುಕಡಿಮೆ ಎಲ್ಲರ ಇಂಗಿತಭಾವವಾಗಿದ್ದುದನ್ನು ಮಹಾದೇವಿಯಕ್ಕ ಗಮನಿಸಿದಳು. ಶರಣ ಪಥವು ಇಷ್ಟಲಿಂಗವನರಿತಂತೆ ಹೆಣ್ಣು ಲಿಂಗವನರಿವುದರಲ್ಲಿ ಇನ್ನೂ ಬಹುದೂರವಿದೆ ಎಂದನಿಸಿತು. + +ಅಷ್ಟರಲ್ಲಿ ಹಡಪದ ಲಿಂಗಮ್ಮ ಎದುರಾದಳು. ಇಡಿಯ ದಿನ ಅನುಭವ ಮಂಟಪದಲ್ಲಿ ನಡೆದ ಚರ್ಚೆಯ ಸುತ್ತ ಎಲ್ಲರ ಯೋಚನೆಗಳು ತಿರುಗುತ್ತಿದ್ದವು. ಶರಣರು ಯಾಕೆ ಆ ಪರಿ ಹೆಣ್ಣು ಸ್ವಭಾವದ ಬಗೆಗೆ ಉಗ್ರಟೀಕೆ ಇಟ್ಟುಕೊಂಡಿರುವರೋ ಎಂದು ಮಹಾದೇವಿ ಲಿಂಗಮ್ಮನನ್ನು ಕೇಳಿದಳು. `ಘಟ್ಟಿವಾಳಯ್ನ ಕತಿ ಕೇಳೀಯಲವ್ವ ನೀನು. ಅವ್ನ ಪಾಡ ನೋಡಿ ಎಲ್ಲಾರೂ ಹೆಂಗುಸ್ರು ಮ್ಯಾಲ ಸಿಟ್ಟಾಗ್ಯಾರ. ಆದ್ರ ಅದು ಬಾಳೊತ್ತಿನ ಸಿಟ್ಟಲ್ಲ ತಗ. ಉಣ್ಣಾಕ ಬೇಕಾದ್ದು ಮಾಡಿ ಹಾಕಕಿ ಹೆಣ್ಣೇ. ಉಂಡು ಮಲಗಿದ ಬಳಿಕ ಬೇಕಾಗೂದು ಹೇಂತಿನೆ. ಘಟ್ಟಿವಾಳಯ್ಯಗ ಆದದ್ದೇ ತಮಗು ಆದರ ಗತಿ ಏನಂತ ಹೆರ‍್ಯಾರ ಅಷ್ಟ’ ಎಂದು ಲಿಂಗಮ್ಮ ವಿವರವಾಗಿ ಘಟ್ಟಿವಾಳಯ್ಯನ ವಿಷಯ ತಿಳಿಸಿದಳು. + +ಘಟ್ಟಿವಾಳಯ್ಯನ ಮೊದಲ ಹೆಸರು ಮುದ್ದಣ್ಣ. ಗಂಧ ತೇಯುವುದು, ಭಕ್ತನಾಗಿ ಮದ್ದಳೆಯನ್ನು ಬಾರಿಸುತ್ತ ಶಿವಾನುಭವವನ್ನು ಸಾರುವ ನರ್ತನ ಕಾಯಕವನ್ನು ಮಾಡುತ್ತಿದ್ದ. ಘಟ್ಟಿವಾಳಯ್ಯ ಮದುವೆಯಾದರೂ ಹೆಂಡತಿಯೊಡನೆ ಬಾಳ್ವೆ ಸಾಧ್ಯವಾಗಲಿಲ್ಲ. ಗಂಡನ ಶಿವಭಕ್ತಿ, ಅಧ್ಯಾತ್ಮದ ಹುಚ್ಚು ಅವಳಿಗೆ ಹಿಡಿಸಲಿಲ್ಲ. ಶರಣ ಮಾರ್ಗ ಪ್ರಿಯವಾಗಲಿಲ್ಲ. ಕಾಯಮೋಹಿಯಾಗಿದ್ದ ಅವಳು ಇವನೊಡನೆ ಬಾಳ್ವೆ ಮಾಡಲಾಗದೇ ಅನ್ಯಪುರುಷನಲ್ಲಿ ಅನುರಕ್ತಳಾದಳು. ಅದು ತಿಳಿದ ಘಟ್ಟಿವಾಳಯ್ಯನು ಅವಳ ಮತ್ತೊಂದು ಮದುವೆಗೆ ತಾನೇ ನಿಂತು ಸಹಾಯ ಮಾಡಿದ. ಈ ಘಟನೆಯ ನಂತರ ಘಟ್ಟಿವಾಳಯ್ಯನ ಮನಸ್ಸು ಸಂಪೂರ್ಣವಾಗಿ ವೈರಾಗ್ಯದತ್ತ ತಿರುಗಿತು. + +`ಹೊನ್ನು ಭೂಪಾಲರಿಗೆ, ಹೆಣ್ಣೊಲಿದ ಕಾಮುಕಗೆ, ಮಣ್ಣು ಬಲವಂತಂಗಲ್ಲದೆ ಬರಿಯ ಭ್ರಾಂತಿಯಲ್ಲಿ ಕಣ್ಣುಗೆಟ್ಟರೆ ಬರುವುದೇ? ಎನ್ನ ಧನ ಜ್ಞಾನವೆಂಬಾಗಮದ ವಚನ ನಿನ್ನರಿದುಕೋ’ ಎಂದು ಸಾರುತ್ತ ತನ್ನ ಊರುಬಿಟ್ಟು ಕಲ್ಯಾಣಕ್ಕೆ ಬಂದ. ಇಲ್ಲಿ ಹಗಲಿರುಳು ದಾಸೋಹದ ಮನೆಯಲ್ಲಿ ಕಾಯಕ ಮಾಡುತ್ತಿದ್ದಾನೆ. ಉಚಿತ ಪ್ರಸಾದದ ಆಸೆಗಾಗಿ ಬಂದು ನೆರೆಯುವ ವೇಷಧಾರಿ ಜಂಗಮರನ್ನು, ಕಾಮಿಗಳನ್ನು ಕಂಡರೆ ಅವನಿಗೆ ಕೋಪ. ಅಂಥವರಿಗೆ ನಿಷ್ಠುರವಾಗಿ ನುಡಿದು ಹಲವರ ಕೋಪಕ್ಕೆ ಪಾತ್ರನಾಗುವುದೂ ಇದೆ. ಕಪಟ ಜಂಗಮರು ಅವನ ಹಿತನುಡಿಗಳ, ಸದಾಚಾರದ ಪ್ರಭಾವದಿಂದ ಪ್ರಾಮಾಣಿಕ ಜಂಗಮರಾದದ್ದು ಇದೆ. ಅಂಥವನಿಗೆ ಹೆಂಡತಿ ಮಾಡಿದ ಮೋಸ ನೆನಪಾಗಿ ಶರಣರು ಹೆಂಗಸರ ಮೇಲೆ ಕೆಟ್ಟ ಭಾವನೆ ಇಟ್ಟುಕೊಂಡಿರಬಹುದು ಎನ್ನುವುದು ಲಿಂಗಮ್ಮನ ವಿವರಣೆ. + +`ಘಟ್ಟಿವಾಳಣ್ಣನಿಗೆ ಆಗಿದ್ದು ಒಂದು ಅಪವಾದ ಅವ್ವಾ. ಹಾಗೆ ಎಷ್ಟು ಪುರುಷರು ತಂತಮ್ಮ ಹೆಂಡತಿಯರಿಗೆ ಮೋಸ ಮಾಡಿಲ್ಲ? ಶರಣರೆಲ್ಲ ಏಕಪತ್ನೀ ವ್ರತಸ್ಥರೇ? ಎಷ್ಟು ಜನ ಎರಡು, ಮೂರು ಲಗ್ನವಾದವರಿಲ್ಲ? ಅದರ ನೆನಪೂ ಇವರಿಗೆ ಆಗಬೇಕಲ್ಲ?’ + +`ಪ್ರಶ್ನಿ ಕೇಳೂದು ಸೊಲೂಪ್ ಕಮ್ಮಿ ಮಾಡ್ಕಳೆ ಮಾದೇವಿ. ಹಂಗ ನೋಡಿದರ ಬಸಣ್ಣಾರೂ ಎಡ್ಡ ಲಗ್ಣ ಆಗಿಲ್ಲೆನು? ಮಕಾಮಾರಿ ನೋಡ್ದ ಅಡ್ಡಮಾತ ಎತ್ತಬ್ಯಾಡ. ಅಕ್ಕನ ಚಾಳಿ ಮನೆ ಮಂದೀಗೆಲ್ಲಾ ರ‍್ತಾವ. ನಿನ್ನಂಗೇ ಎಲ್ಲಾ ಹೆಣ್ಣುಗುಳೂ ಪ್ರಶ್ನಿ ಒಗದರ? ಈ ಹೆಣಮಕ್ಳ ಕಾಲದಾಗ ಅನಬವ ಮಂಡಪ ನಡಸಾಕ ಕಠೀಣ ಆಗೇದ. ಬಾಳ ದಿನ ನಡೆಂಗಿಲ್ಲ ಅಂತ ಹಿರೇರು ಅನಾಕತಿದ್ರು’ + +ಲಿಂಗಮ್ಮಕ್ಕ ಪಿಸುಗುಟ್ಟಿದಳು. ಬರಬರುತ್ತ ಅವಳ ದನಿಯಲ್ಲಿ, ಮುಖದಲ್ಲಿ ಅಸಹನೆ ಇಣುಕಿದ್ದನ್ನು ಮಹಾದೇವಿ ಗಮನಿಸಿದಳು. ಈ ಮಾತು ಲಿಂಗಮ್ಮಕ್ಕನ ಬಾಯಿಯಲ್ಲಿ ಬರುವುದರ ಹಿಂದೆ ಹಲವು ಪಿಸುಮಾತುಗಳು ಕೆಲಸ ಮಾಡಿರಬಹುದು ಎಂದು ಮಹಾದೇವಿ ಯೋಚಿಸಿದಳು. ಮೈಯೆಲ್ಲ ಕಿವಿಯಾಗಿ ಕೊನೆತನಕ ಕೂತು ಕೇಳಿ ತಾನು ಪ್ರಶ್ನೆ ಎತ್ತುವುದು ಹಿರಿಯರಿಗೆ ಇರಿಸುಮುರುಸುಂಟಾಗಿದೆಯೇ ಎಂಬ ಅನುಮಾನವಾಯಿತು. + + + +ಹೌದು, ಬಸವಣ್ಣ, ಅಲ್ಲಮಯ್ಯಗಳೂ ತತ್ತರಿಸುವಂತೆ ಕೇಳುವ ಅವಳ ಪ್ರಶ್ನೆಗಳ ಹರಿತ ಅಲಗನ್ನು ಮೊಂಡು ಮಾಡಲೆಂದೇ ಲಿಂಗಮ್ಮ ಆ ಮಾತು ಹೇಳಿದ್ದಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_13.txt b/Kenda Sampige/article_13.txt new file mode 100644 index 0000000000000000000000000000000000000000..a8d05a76e38dac699045cec86119d2ea2ad5ae49 --- /dev/null +++ b/Kenda Sampige/article_13.txt @@ -0,0 +1,35 @@ +byರಾಮ್ ಪ್ರಕಾಶ್ ರೈ ಕೆ.|Sep 27, 2024|ಸರಣಿ| 0 Comments + +ನಾಪತ್ತೆಯಾಗಿದ್ದಾರೆ ಎಂಬ ನೋಟಿಸುಗಳು ಇನ್ನೂ ವಿಲೇವಾರಿಯಾಗದೆ ಕಚೇರಿ ಫಲಕದಲ್ಲಿ ಕುಳಿತುಕೊಂಡಿರುವುದೇ ಆ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಅವನ ಸರಹದ್ದಿನಲ್ಲಿ ಸ್ಲಮ್ಮಿನ ಭಾರವಾದ ಉಸಿರುಗಳೇ ಹೆಚ್ಚಿದ್ದರಿಂದ, ಆ ಜೀವಗಳಿಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ. ಮಾನವೀಯತೆಯ ಬಗ್ಗೆ ಪುಟಗಟ್ಟಲೆ ಮಾತುಗಳು ಕೇಳಿಬಂದರೂ ನಮ್ಮ ಸುತ್ತಮುತ್ತಲೇ ಇರುವ ಖಾಲಿ ಕಿಸೆಯ ಜನರ ಜೀವ-ಜೀವನ ಸದಾ ಅನಾಥವಲ್ಲವೇರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಹಿಂದಿಯ ‘ಸೆಕ್ಟರ್ -36’ ಸಿನಿಮಾದ ವಿಶ್ಲೇಷಣೆ + +byಕೆ. ಸತ್ಯನಾರಾಯಣ|Sep 27, 2024|ಸರಣಿ| 3 Comments + +ಇವರೆಲ್ಲ ಎಷ್ಟು ಸುಖವಾಗಿದ್ದಾರೆ, ಆರಾಮವಾಗಿದ್ದಾರೆ, ಯಾವುದೇ ಗೊಂದಲವಿಲ್ಲ, ತಳಮಳವಿಲ್ಲ. ಮುಖದಲ್ಲಿ ಅದೆಷ್ಟು ಜೀವಂತಿಕೆ, ಆರೋಗ್ಯ, ಉಲ್ಲಾಸ. ಯಾವುದರಲ್ಲೂ ಆತುರವಿಲ್ಲ, ಧಾವಂತವಿಲ್ಲ. ಪ್ರತಿ ಕ್ಷಣವನ್ನೂ ವಿವರವಾಗಿ, ವಿರಾಮವಾಗಿ ಅನುಭವಿಸುತ್ತಿದ್ದಾರೆ. ವಾಯುವಿಹಾರದ ಸಮಯದಲ್ಲಿ. ಟ್ರಾಮ್ ಒಳಗಡೆ ಕುಳಿತಾಗ, ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವಾಗ, ಸ್ಕೂಲ್ ಬಳಿ ಮಕ್ಕಳನ್ನು ಬಿಡಲು ಬರುವಾಗ ನೋಡಿದ್ದೇನೆ. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ?ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ + +byಡಾ. ಚಂದ್ರಮತಿ ಸೋಂದಾ|Sep 27, 2024|ಸರಣಿ| 1 Comment + +ಮನೆಯ ಜನರೆಲ್ಲರಿಗೂ ʻಹೋಗಿ ಬರ್ತೇನೆʼ ಎನ್ನುತ್ತ ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಹೇಳುವುದು, ಅಲ್ಲಿಂದ ನಡುಮನೆಯಲ್ಲಿ ಕೆಲಹೊತ್ತು ಮಾತನಾಡುತ್ತ ನಿಲ್ಲುವುದು, ಅಲ್ಲಿಂದ ಜಗಲಿಗೆ, ಅನಂತರ ಹೆಬ್ಬಾಗಿಲಲ್ಲಿ ತುಸುಹೊತ್ತು ಮಾತನಾಡುತ್ತ ನಿಂತರೆ, ಹೊರಡಲು ಮುಂದಾದವರು ʻಇನ್ನೂ ಮಾತು ಮುಗಿದಿಲ್ವಾ?ʼ ಎಂದು ಕೇಳುತ್ತಲೇ ʻಬಂದೆʼ ಎಂದು ಬಾಯಲ್ಲಿ ಹೇಳಿದರೂ ಅಂಗಳದ ತುದಿಯಲ್ಲಿ ಒಂದು ಗಳಿಗೆಯ ಮಾತುಕತೆ. ಹೀಗೆ ಸಾಗುವ ವಿದಾಯದ ಕ್ಷಣ ನೆನಪಿಡುವಂಥದು. ಕೆಲವೊಮ್ಮೆ ಮನೆಗೆ ಬಂದ ಅಣ್ಣ-ತಮ್ಮಂದಿರು, ಅಥವಾ ಅಕ್ಕ-ತಂಗಿಯರನ್ನು ಕಳುಹಿಸಲು ಊರಬಾಗಿಲತನಕ ಹೋಗುವುದಿದೆ. ಎಲ್ಲರ ಎದುರಿನಲ್ಲಿ ಹಂಚಿಕೊಳ್ಳಲು ಆಗದ ಅದೆಷ್ಟೋ ಸಂಗತಿಗಳು ಅಲ್ಲಿ ವಿನಿಮಯಗೊಳ್ಳುತ್ತಿದ್ದವು.ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಕೊನೆಯ ಕಂತು + +byಗುರುಪ್ರಸಾದ್‌ ಕುರ್ತಕೋಟಿ|Sep 26, 2024|ಸರಣಿ| 0 Comments + +ಅದೇನು ಅದೃಷ್ಟವೋ ಕೂಡಲೇ ಉತ್ತರಿಸಿದ. ಬಾ ಅಂತ ಆಹ್ವಾನಿಸಿದ ಕೂಡ. ಪುಣ್ಯಕ್ಕೆ ಲ್ಯಾಂಡ್ ಲೈನ್‌ನಿಂದ ಕರೆ ಕೂಡ ಮಾಡಿದ. ಅವನ ಜೊತೆಗೆ ನಾನು ಬಹುಶಃ ಪ್ರಥಮ ಬಾರಿಗೆ ಮಾತಾಡಿದ್ದೆ! ನಾನು ಹುಟ್ಟುವುದಕ್ಕಿಂತ ಮೊದಲೆಯೇ ಅವನು ಭಾರತ ಬಿಟ್ಟು ಬಂದಿದ್ದ ಕಾರಣ ನಾನು ಅವನ ಜೊತೆಗೆ ಈಗಾಗಲೇ ಮಾತಾಡಬಹುದಾದ ಅವಕಾಶಗಳು ತೀರಾ ಕಡಿಮೆ ಇದ್ದವು. ಅವನು ಮಾತಾಡುವ ಶೈಲಿ ನನ್ನ ಅಪ್ಪನ ತರಹವೇ ಅನಿಸಿತು. ಬಹಳ ಖುಷಿ ಆಯ್ತು.ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೈದನೆಯ ಬರಹಗದಗ ನನ್ನ ಹೃದಯಕ್ಕೆ ಬಹು ಹತ್ತಿರದ ಊರು. ಅಲ್ಲಿ ನಾನು ಹುಟ್ಟಿದ್ದು ಅಷ್ಟೇ ಆದರೂ ಅಲ್ಲಿ ಕಳೆದ ಕೆಲವೇ ಕೆಲವು + +byಸುಮಾ ಸತೀಶ್|Sep 25, 2024|ಸರಣಿ| 0 Comments + +ಮೈಗೆ ಲೈಫ಼್ ಬಾಯ್ ಸೋಪು.‌ ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು.‌ ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ‌ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ.ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಮನೆ-ಮನೆಯ ಜನಗಳ + +byಬಸವನಗೌಡ ಹೆಬ್ಬಳಗೆರೆ|Sep 24, 2024|ಸರಣಿ| 2 Comments + +ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ.ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ + +byರಂಜಾನ್ ದರ್ಗಾ|Sep 23, 2024|ಸರಣಿ| 0 Comments + +‘ನ್ಯಾಯನಿಷ್ಠುರಿ, ಲೋಕವಿರೋಧಿ, ಶರಣನಾರಿಗೂ ಅಂಜುವವನಲ್ಲʼ ಎಂಬಂಥ ವ್ಯಕ್ತಿತ್ವ ಅವರದು. ಹೀಗೆ ಮಾತನಾಡಿದರೆ ಆಡಳಿತ ವರ್ಗಕ್ಕಾಗಲೀ ರಾಜ್ಯಶಕ್ತಿಗಾಗಲೀ ತಮ್ಮ ಬಗ್ಗೆ ಯಾವ ಭಾವನೆ ಮೂಡಬಹುದು; ಅದರಿಂದ ತಮಗೆ ಯಾವ ತೊಂದರೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಎಂದೂ ಹಾಕಿದವರಲ್ಲ. ಮನುಷ್ಯರ ಬಗ್ಗೆ ಇರುವ ಅವರ ಕಾಳಜಿಯೆ ಅಂಥದ್ದು. ಆ ಕಾಲದಲ್ಲಿ ಅವರು ಒಂದು ರೀತಿಯ ಏಕಾಂಗವೀರರಾಗಿದ್ದರು. ಸದಾ ಕ್ರಿಯಾಶೀಲವಾಗಿರುವ ಅವರ ವ್ಯಕ್ತಿತ್ವ ನನ್ನಂಥವರ ಮೇಲೆ ಆಳವಾದ ಪರಿಣಾಮ ಬೀರಿತು.ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ + +byಕಾರ್ತಿಕ್ ಕೃಷ್ಣ|Sep 21, 2024|ಸರಣಿ| 1 Comment + +ಇಸ್ರೇಲಿ ಕ್ರೀಡಾಪಟುಗಳನ್ನು ಹೇಗಾದರೂ ರಕ್ಷಿಸಬೇಕೆಂದು ಜರ್ಮನ್ ಅಧಿಕಾರಿಗಳು ಫರ್ಸ್ಟೆನ್‌ಫೆಲ್ಡ್‌ಬ್ರಕ್ ವಾಯುನೆಲೆಯಲ್ಲಿ ಒಂದು ರಕ್ಷಣಾ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದರು. ಭಯೋತ್ಪಾದಕರು ಮತ್ತು ಒತ್ತೆಯಾಳುಗಳನ್ನು ಆ ವಾಯುನೆಲೆಯಿಂದ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಆ ಯೋಜನೆಯ ಭಾಗವಾಗಿತ್ತು. ಆಗ ನಡೆಯಿತು ನೋಡಿ ಮತ್ತೊಂದು ದುರಂತ! ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ, ರಕ್ಷಣಾ ಪ್ರಯತ್ನವು ಕಳಪೆಯಾಗಿ ಕಾರ್ಯಗತಗೊಂಡಿತ್ತು. ಜರ್ಮನ್ ಪೊಲೀಸರು ಅಂತಹ ಕಾರ್ಯಾಚರಣೆಯನ್ನು ನಿಭಾಯಿಸಲು ಶಕ್ತರಾಗಿರಲಿಲ್ಲ.ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ + +byಎಚ್. ಗೋಪಾಲಕೃಷ್ಣ|Sep 20, 2024|ಸರಣಿ| 2 Comments + +ನಮ್ಮ ಅಪ್ಪಂಗೆ ಅವರ ಮಕ್ಕಳ ಪರಿಚಯವೇ ಇಲ್ಲ ಅಂತ ಅಮ್ಮ ಆಗಾಗ ಮನೆಗೆ ಬಂದವರೆಲ್ಲರ ಮುಂದೆ ಹೇಳುತ್ತಿದ್ದಳು. ಅಪ್ಪ ನನ್ನ ಗುರುತು ಹಿಡಿತಾನೋ ಇಲ್ಲವೋ ಅಂತ ನನ್ನ ತಲೆಗೆ ಆಗ ಹೊಳಿಬೇಕಾ..? ಅಪ್ಪ ನನ್ನನ್ನು ನೋಡಿದ್ರಾ, ಮುಂದೆ ಸರಿದೆ. ಅಪ್ಪಾ, ನಾನು ಗೋಪಿ ನಿಮ್ಮ ಕೊನೇ ಮಗ.. ಅಂತ ವಿವರಿಸಲು ಹೊರಟೆ.ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ \ No newline at end of file diff --git a/Kenda Sampige/article_130.txt b/Kenda Sampige/article_130.txt new file mode 100644 index 0000000000000000000000000000000000000000..fbffb92b87fe1abd339d9d3ac78ecd33916d1fcc --- /dev/null +++ b/Kenda Sampige/article_130.txt @@ -0,0 +1,17 @@ +‘ಸುರತ್ಕಲಾಲಾಪ-ವಿಲಾಸಕೋಮಲಾ ಕರೋತಿ ರಾಗಂ ಹೃದಿ ಕೌತುಕಾಧಿಕಮ್’ ಇದು ಬಾಣ ಭಟ್ಟನ ಕಾದಂಬರಿಯಲ್ಲಿ ಬರುವ ಒಂದು ಶ್ಲೋಕದ ತುಣುಕು. ಒಮ್ಮೆ ನಮ್ಮನ್ನು ಕಾದಂಬರಿಯ ಲೋಕಕ್ಕೆ ಕೊಂಡೊಯ್ಯುವುದು ಕಥಾಗತ. ಹೌದು ಬಾಣ ಮತ್ತು ಭಾರವಿಯ ಪರಿಚಯವಿದ್ದರೆ ಡಾ. ನವೀನ್ ಗಂಗೋತ್ರಿಯವರಿಗೆ ಆ ಬಾಣ, ಭಾರವಿ ಎನ್ನುವ ಪಿತೃದೇವತೆಗಳು ಆವಾಹಿಸಿರಬಹುದೇನೋ ಎನ್ನುವಷ್ಟರ ಮಟ್ಟಿಗೆ ಕಥಾಗತ ಆವರಿಸಿ ಬಿಡುತ್ತದೆ. ನಾನಿಲ್ಲಿ ಮುಖಸ್ತುತಿಯನ್ನು ಮಾಡುತ್ತಿಲ್ಲ. ಇಲ್ಲಿ ಕಥಾಗತದಲ್ಲಿ ಇವರು ಒಂದಷ್ಟು ಐತಿಹಾಸಿಕ ವಿಷಯಗಳನ್ನು ವಿವರಿಸುತ್ತಾ ಹೋಗುವಾಗ ಗಂಭೀರತೆಯನ್ನು ಅತ್ಯಂತ ಸರಳೀಕರಿಸಿ ಸುಲಲಿತವಾಗಿ ಹೇಳುತ್ತಾ ಸಾಗಿದ್ದಾರೆ. ಆರಂಭದಲ್ಲಿಯೇ ವಡ್ಡಿಸೇನನನ್ನು ಹಿಡಿದು ವಿಷಯವನ್ನು ಹೇಳುತ್ತಾ ಸಾಗಿದ್ದಾರೆ. ಹಾಗಂತ ವಡ್ಡಿಸೇನ ಸಹಜ ಶೈಲಿಯಲ್ಲಿ ಪರಿಸರದ ವರ್ಣನೆ ಮಾಡುವುದಿಲ್ಲ. ಸ್ವತಃ ಕೃತಿಕಾರರು ಮಾಡುವುದು ನಮಗೆ ಅವನೇ ವರ್ಣಿಸಿದಂತೆ ಭಾಸವಾಗುತ್ತದೆ. + +(ನವೀನ ಗಂಗೋತ್ರಿ) + +ಇಲ್ಲಿ ಇನ್ನೊಂದು ನನ್ನನ್ನು ಕಟ್ಟಿ ಹಿಡಿಯಿತು; ವಡ್ಡಿಸೇನ ಎನ್ನುವ ಹೆಸರನ್ನು ಬಳಸಿಕೊಂಡಿರುವುದು. ವಡ್ಡಿ, ವದ್ಧಿ ಮುಂತಾದ ಪದಪ್ರಯೋಗ ಮೊದಲು ಬಳಕೆಗೆ ತಂದದ್ದು ಕದಂಬರು. ಧಾರವಾಡ ಜಿಲ್ಲೆಯ ನಿರ್ಗುಂದದ ಹಳೆವಾಸನ ಶಾಸನದಲ್ಲಿ ಪ್ರಾಯಶಃ ಮೊದಲ ವಡ್ಡಿಯ ಉಲ್ಲೇಖ ಬರುತ್ತದೆ. ಅಂದರೆ ವಡ್ಡಿಯೇ ವರ್ಧಕಿಯಾಗಿ ಮುಂದೆ ಕನ್ನಡದ ಬಡಗಿಯಾಗುತ್ತಾನೆ. ಇಡೀ ಕಥಾಗತವನ್ನು ಇದೇ ವಡ್ಡಿಯಲ್ಲಿ ಹಿಡಿದಿಟ್ಟಿದ್ದಾರೆ. ಕದಂಬರ ಮಯೂರ ಶರ್ಮನ ಕಾಲಕ್ಕಾಗಲೇ ಬೌದ್ಧಧರ್ಮದ ಕೊಂಡಿ ಕಳಚಿಕೊಂಡು ಜೈನಧರ್ಮೀಯರಿಗೆ ರಾಜಧರ್ಮ ಬೋಧಿಸಿದ ಮಯೂರ ಶರ್ಮ ರಾಜಧರ್ಮದಲ್ಲಿ ಹಿಂಸೆಯ ವ್ಯಾಖ್ಯೆಗೆ ಅರ್ಥವಿಲ್ಲವೆಂದು ಜೈನರನ್ನು ದೂರೀಕರಿಸಿದ್ದ, ಹಾಗಂತ ನಂತರದ ರಾಜರು ಜೈನ ಮತ್ತು ಬೌದ್ಧ ಸರಯು ಮಾಡಿದ್ದಿದೆ. ಇಲ್ಲಿ ಡಾ. ನವೀನ್ ಅವರು ತಮ್ಮ ಬರವಣಿಗೆಯಲ್ಲಿ ಪ್ರಾಕೃತದ ಇದು, ಮೂಡಿಸಿ ಕದಂಬ ಮತ್ತು ಅವರಿಗೂ ಪೂರ್ವದ ಶಾತಕರ್ಣಿಗಳ ಕೊಂಡಿ ಭಾಸವಾಗುತ್ತದೆ. + +ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಕೊಂಡೊಯ್ಯುವ ಕಲೆ ಡಾ. ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಪುಟವಾಗುವುದು ಮಧ್ಯದಲ್ಲಿ, ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಲು ಇದು ಸಿಗಲಾರದೇನೋ ಎನ್ನುವ ಭಾವನೆ ಕೆದಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ. ನಾಲಂದಾದ ಅನ್ವೇಷಣೆಗೂ ಮೊದಲು ನಾಲಂದಾ ಹೀಗಿತ್ತು ಎನ್ನುವುದು ನವದ್ವೀಪದಂಥಹ ಅಪ್ಪಟ ವೈದಿಕ ನಗರಿಗಳು. ಅದನ್ನೂ ಮುಂದೆ ನವೀನರು ಬರೆಯಬಹುದೆನ್ನುವ ನಿರೀಕ್ಷೆ ಇದೆ. + + + +ವೈಜಯಂತೀ ಪುರವೆಂದು ಕರೆಸಿಕೊಂಡ ಬನವಾಸಿ ಆಗಾಗ ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತ ಬಂದಿದೆ. ಆದರೆ ಬನವಾಸಿ ಹೆಸರೇ ಕನ್ನಡದ ಕಂಪನ್ನು ಸೂಸುವ ಹೆಸರು ಅನ್ನಿಸಿ ಬಿಡುತ್ತದೆ. ಬನವಾಸಿ ಅಂದಾಕ್ಷಣ ಕನ್ನಡದ ನೆನಪಾಗಿಯೇ ಆಗುತ್ತದೆ. ಅದಕ್ಕೆ ಕೇವಲ ಕದಂಬರು ಮಾತ್ರವೇ ಕಾರಣರು ಅಂತ ನಾನು ಭಾವಿಸುತ್ತಿಲ್ಲ. ಕದಂಬರು ಇದ್ದಲ್ಲೆಲ್ಲಾ ಬನವಾಸಿಯನ್ನು ನೆನಪಿಸಿಕೊಂಡದ್ದಂತೂ ಹೌದು, ದಕ್ಷಿಣದ ಭಾಷೆಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕದಂಬರು ಕನ್ನಡದ ಜೊತೆಗೆ ಸಂಸ್ಕೃತವನ್ನು ಪೋಷಿಸಿಕೊಂಡು ಬಂದರು. ಬನವಾಸಿ ಕದಂಬರ ಕಾಲದ ನಂತರ ಹೊಗಳಿಸಿಕೊಂಡದ್ದು ಬಾದಾಮಿ ಚಾಳುಕ್ಯರ ಕಾಲದಲ್ಲಿ. ಬನವಾಸಿಯನ್ನು ಅದೆಷ್ಟು ಆಪ್ಯಾಯಮಾನವಾಗಿ ಕರೆದರು ಅಂದರೆ “ವರದಾ ತುಂಗ ತರಂಗ’ ಎಂದು ಚಾಳುಕ್ಯರ ಎರಡನೇ ಪೊಲೆಕೇಶಿಯ ಕುರಿತಾದ ಐಹೊಳೆಯ ಮೇಗುಟಿಯ ರವಿಕೀರ್ತಿಯ ಶಾಸನದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿ ಬನವಾಸಿಯ ಕದಂಬರ ವರ್ಣನೆ ಬರುವಾಗ ರವಿಕೀರ್ತಿಯ ಪದ ಪ್ರಯೋಗವಂತೂ ಅಸದೃಶ. ವರದಾ-ತುಂಗ-ತರಂಗ- ವಿಲಸದ್ರಸ್ತಾವಲೀಮೇಖಲಾಮ್ | ವನವಾಸೀಮವದ್ಯತಃ ಸುರಪುರಪ್ರಸ್ಪರ್ಧಿನೀಂ ಸಂಪದಾ ಎಂದು ಕದಂಬರ ಪ್ರದೇಶದ ವರ್ಣನೆ ಮಾಡುತ್ತಾನೆ. ಇಂಥಹ ಒಂದೆರಡು ಶಾಸನಗಳು ಸಿಕ್ಕಿದರೆ ಕಥಾಗತದಂತಹ ಇನ್ನಷ್ಟು ರಸ ಭಕ್ಷಗಳು ಈ ಕೃತಿಕಾರರಿಂದ ಸಿಗುವುದಂತೂ ಸ್ಪಷ್ಟ, ಪ್ರಾಯಶಃ ಹರಿಷೇಣನ ಶಾಸನ ಮತ್ತು ವತ್ಸಭಟ್ಟಿಯ ಶಾಸನವಿಟ್ಟುಕೊಂಡು ಮುಂದೆ ಉದ್ದಂಥವೊಂದನ್ನು ಇದೇ ಕೃತಿಕಾರರು ಕನ್ನಡದಲ್ಲಿ ರಚಿಸಿದರೆ ನಾವು ಧನ್ಯರು. + +(ಸದ್ಯೋಜಾತ ಭಟ್ಟ) + +ಈ ಕಥಾಗತ ಭಾವನೆಗಳೊಂದಿಗೆ ಬಾಂಧವ್ಯ ಬೆಸೆಯುತ್ತದೆ. ಭಾವನೆಗಳನ್ನು ತಡಕಾಡುತ್ತದೆ. ವಿಜಯನಗರದ ಕಡೆ ಬಂದಾಗ ವಿಷಾದವೂ ಬಾಧಿಸುತ್ತದೆ. ಈ ಕೃತಿ ನನ್ನನೆಷ್ಟು ಬಾಧಿಸಿತೆಂದರೆ ಮೂರನೇ ಸಲ ಓದಿಸುವಷ್ಟು ಕಥಾಗತದಲ್ಲಿ ತಥಾಗತನೂ ಹಾಸುಹೊಕ್ಕಾಗಿ ಬಂದು ಬುದ್ಧಿಗೆ ಚುರುಕನ್ನು ಮುಟ್ಟಿಸುತ್ತಾನೆ. ಡಾ. ನವೀನ್ ಭಟ್‌(ಗಂಗೋತ್ರಿ)ಯವರಿಂದ ಇಂಥಹದ್ದೇ ಇನ್ನೂ ಹೆಚ್ಚಿನ ಕೃತಿಗಳು ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿರುವೆ. ಸಮುದ್ರಗುಪ್ತನನ್ನು ತಡಕಾಡಿದರೆ ನಮ್ಮ ಭಾಗ್ಯವದು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_131.txt b/Kenda Sampige/article_131.txt new file mode 100644 index 0000000000000000000000000000000000000000..6e11c7befa5ffdb221413361143e4aa191be2d01 --- /dev/null +++ b/Kenda Sampige/article_131.txt @@ -0,0 +1,39 @@ +ಮುಂಬಯಿ ಕನ್ನಡ ಸಾಹಿತ್ಯದ ವಿಮರ್ಶಾ ಕ್ಷೇತ್ರದಲ್ಲಿ ವಸ್ತುನಿಷ್ಠ, ಕೃತಿನಿಷ್ಠ ವಿಮರ್ಶಕರಲ್ಲಿ ಡಾ. ಕೆ. ರಘುನಾಥ್ ಅವರು ಹೆಸರು ಮುಂಚೂಣಿಯಲ್ಲಿದೆ. ಅದರಲ್ಲೂ ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಸಂಶೋಧಕ, ವಿಮರ್ಶಕ ಡಾ. ಕೆ. ರಘುನಾಥ್ ಅವರ ಇತ್ತೀಚೆಗೆ ಬೆಳಕು ಕಂಡ ಕೃತಿ, “ಮುಂಬಯಿ ಕನ್ನಡ ಲೋಕ”. ಈ ಕೃತಿಯು ‘ಮುಂಬಯಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ’ ಮತ್ತು ‘ಮುಂಬಯಿ ಕನ್ನಡ ದರ್ಶನ’ ಎಂಬ ಎರಡು ಭಾಗಗಳನ್ನೊಳಗೊಂಡಿದೆ. + +(ಡಾ. ಕೆ. ರಘುನಾಥ್‌) + +ಕೈಗಾರಿಕೆ, ಬೃಹತ್ ಉದ್ಯಮಗಳು ಸೃಷ್ಟಿಗೊಂಡು ಒಂದು ಊರು ಪೇಟೆಯಾಗಿ, ಪಟ್ಟಣವಾಗಿ, ನಗರವಾಗಿ ರೂಪಾಂತರಗೊಂಡು; ಅವಕಾಶಗಳನ್ನು ಹುಡುಕುತ್ತಾ ವಲಸೆ ಬಂದ ಜನರನ್ನು ಸೇರಿಸಿಕೊಂಡು ನಗರ-ಮಹಾನಗರವಾಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ ಸೃಷ್ಟಿಗೊಂಡ ಮಹಾನಗರದಲ್ಲಿ ಉಂಟಾಗುವ ಧನಾತ್ಮಕ – ಋಣಾತ್ಮಕ ಅಂಶಗಳು, ಸಾಂಸ್ಕೃತಿಕ ಪಲ್ಲಟಗಳು, ಅಸ್ತಿತ್ವದ ಪ್ರಶ್ನೆ ಮೊದಲಾಗಿ ಕಾಡುವಾಗ ಸಾಹಿತ್ಯದಲ್ಲಿ ನಗರ ಪ್ರಜ್ಞೆ ಕಾಣಿಸಿಕೊಳ್ಳಲು ಪ್ರಾರಂಭವಾಯಿತು. + +ಪ್ರಸ್ತುತ ‘ಮುಂಬಯಿ ಕನ್ನಡ ಲೋಕ’ದಲ್ಲಿ ರಘುನಾಥ್ ಅವರು, ಪ್ರಥಮ ಭಾಗ ‘ಮುಂಬಯಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ’ಯಲ್ಲಿ ವಿಶೇಷವಾಗಿ ಮುಂಬಯಿ ಕನ್ನಡ ಕಾವ್ಯಕ್ಕೆ ಒತ್ತು ನೀಡಿ ಚರ್ಚಿಸಿದ್ದಾರೆ. ಕೃತಿಯ ಪ್ರಾರಂಭದಲ್ಲಿ, ‘ಮಹಾನಗರವೊಂದು ರೂಪುತಳೆದಾಗ ಅವಕಾಶಗಳನ್ನು ಹುಡುಕುತ್ತಾ ಬಂದ ಜನರು ಭಿನ್ನ ವಾತಾವರಣದಲ್ಲಿ ಎದುರಿಸಬೇಕಾದ ಸವಾಲುಗಳು; ಆ ಮೂಲಕ ಹುಟ್ಟಿಕೊಂಡ ಭೌತಿಕ ಮಾತ್ರವಲ್ಲದೆ ಮಾನಸಿಕವೂ ಆದ ಸಂಘರ್ಷ ನಗರ ಪ್ರಜ್ಞೆಯ ಉಗಮ ಮತ್ತು ವಿಕಾಸಕ್ಕೆ ಕಾರಣವಾಯಿತು. ಈ ಬೆಳವಣಿಗೆಗೆ ತೀವ್ರವಾಗಿ ಸ್ಪಂದಿಸಿದ ಬರಹಗಾರರು ತಮಗಾದ ಆಘಾತ ಭ್ರಮನಿರಸನದ ತಲ್ಲಣಗಳನ್ನು ತಮ್ಮ ಸೃಜನಶೀಲ ಕೃತಿಗಳ ಮೂಲಕ ವ್ಯಕ್ತಪಡಿಸಿದ್ದೇ ನಗರ ಪ್ರಜ್ಞೆಯ ಮೂಲವಾಗಿದೆ’ ಎಂದು ನಗರ ಪ್ರಜ್ಞೆ ಹುಟ್ಟುಪಡೆದ ಬಗ್ಗೆ ಡಾ. ಕೆ. ರಘುನಾಥ್ ನಿಖರವಾಗಿ ತಮ್ಮ ನಿಲುವನ್ನು ನಮ್ಮ ಮುಂದಿಡುತ್ತಾರೆ. ಅಮಿತಾವ್ ಘೋಷ್ ಅವರು ಕೃತಿ ಬಿಡುಗಡೆ ಸಂದರ್ಭ ಕೊಟ್ಟ ಮುನ್ನೆಚ್ಚರಿಕೆಯ ಮಾತುಗಳು ರಘುನಾಥ್ ಅವರಲ್ಲಿ ನಗರ ಪ್ರಜ್ಞೆಯ ಬಗ್ಗೆ ಹೊಸ ಅರಿವನ್ನು, ಚಿಂತನೆಯನ್ನು ಮೂಡಿಸಿತು. ಅದರ ಫಲಶ್ರುತಿಯಾಗಿ ಇಲ್ಲಿ ನಗರ ಪ್ರಜ್ಞೆಯ ಹೊಸ ಒಲವುಗಳು ಮೂಡಿ ಬಂದಿರುವುದನ್ನು ಗಮನಿಸಬಹುದು. + +ಅಧ್ಯಾಯ ಒಂದರಲ್ಲಿ, ‘ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವವರು ನಗರಗಳಲ್ಲಿನ ಮೌಲ್ಯಗಳ ಜೊತೆಗೆ ಸಂಘರ್ಷವನ್ನು ಎದುರಿಸುತ್ತಾರೆ’ ಎಂದು ಮೊದಲ್ಗೊಂಡು ನಗರ ಪ್ರಜ್ಞೆಯ ವ್ಯಾಖ್ಯಾನ ನೀಡಲಾಗಿದೆ. ನಗರೀಕರಣದ ಪರಿಣಾಮ, ನಗರೀಕರಣಕ್ಕೆ ಕಾರಣಗಳು ಇತ್ಯಾದಿಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಪೂರ್ಣವಾಗಿ ಇಲ್ಲಿ ಕಟ್ಟಿಕೊಡಲಾಗಿದೆ. + +ನಗರ ಪ್ರಜ್ಞೆಯ ಬಗ್ಗೆ; ಅದೂ ಮುಂಬಯಿ ಕನ್ನಡಿಗರ ಬಗ್ಗೆ ಮಾತನ್ನಾಡುವಾಗ ಇಲ್ಲಿನ ಇತಿಹಾಸದ ಬಗ್ಗೆ ಅರಿವು ಅವಶ್ಯಕ. ಸಪ್ತ ದ್ವೀಪಗಳ ಸಮೂಹವಾಗಿದ್ದ ಮುಂಬಾಪುರಿಯ ಬಗ್ಗೆ ರಘುನಾಥ್ ಅಧ್ಯಯನ ಪೂರ್ಣವಾದ ಇತಿಹಾಸವನ್ನು ಇಲ್ಲಿ ಕಟ್ಟಿಕೊಟ್ಟಿರುವುದು ಈ ಕೃತಿಗೆ ಮಹತ್ವವನ್ನು ತಂದುಕೊಟ್ಟಿದೆ. + +‘ಬೇಂದ್ರೆಯವರು ಕೇಶವ ಸುತರ ಮೂಲಕ (ಮರಾಠಿ) ಮಾಡಿದ ಹೊಸ ಪ್ರಯೋಗಗಳು ಹೊಸ ಕಾವ್ಯಕ್ಕೆ ನಾಂದಿ ಹಾಡಿದವು’ ಎನ್ನುವ ಮೂಲಕ ಹೊಸ ಕಾವ್ಯ ಪಡಿಮೂಡಿದ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ ಲೇಖಕರು. ಮುಂದೆ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಹೀಗೆ ಕನ್ನಡ ಸಾಹಿತ್ಯದಲ್ಲಿ ವಿವಿಧ ಘಟ್ಟಗಳನ್ನು ಸ್ಥೂಲವಾಗಿ ಪರಿಚಯಿಸುತ್ತಾ ಅವುಗಳ ಮೂಲ ಸೆಲೆಗಳನ್ನು ಬಿಚ್ಚಿಡುತ್ತಾರೆ. + +‘ನವ್ಯ ಕಾವ್ಯದ ಅತ್ಯುತ್ತಮ ಪ್ರತಿನಿಧಿಯಾದ ಅಡಿಗರ ನವ್ಯವು ಒಂದು ಬಗೆಯ ನವೋದಯವಾಗಿದೆ’, ‘ಗೋಕಾಕರ ನವ್ಯತೆ ಕಾವ್ಯ ತಂತ್ರದ ಅನ್ವೇಷಣೆಯೇ ಹೊರತು ಬೇರೇನಲ್ಲ’, ‘ನವ್ಯ ಕಾವ್ಯದ ಚಳವಳಿಯು ಅತ್ಯುತ್ತಮ ಕಾವ್ಯದ ನಿರ್ಮಾಣಕ್ಕೆ ಕಾರಣವಾಯಿತು’, ‘ನವೋದಯದ ಮಾನವತಾವಾದದ ಉಪ ಉತ್ಪನ್ನವೇ ಪ್ರಗತಿಶೀಲ’ – ಹೀಗೆ ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳನ್ನು, ಅವು ಸಾಗಿಬರುವ ನಡೆಯನ್ನು ಪ್ರಾತಿನಿಧಿಕ ಕವಿಗಳ ಕವಿತೆಗಳನ್ನು ಉಲ್ಲೇಖಿಸುತ್ತಾ ಕಟ್ಟಿಕೊಡುವ ರೀತಿ ಹೊಸ ತಲೆಮಾರಿನ ಸಂಶೋಧಕರಿಗೆ ಮಾದರಿಯಾಗಿದೆ. + +ಆಧುನಿಕ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆಯು ವಿವಿಧ ಎಂಟು ಆಯಾಮಗಳಲ್ಲಿ ಪ್ರಕಟಗೊಂಡಿರುವುದನ್ನು ಉಲ್ಲೇಖಿಸಿರುವ ಲೇಖಕರು ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಬಗ್ಗೆ ಹೊಸ ಬೆಳಕನ್ನು ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮುಂದಿನ ಅಧ್ಯಯನಕಾರರಿಗೆ ಉಪಯುಕ್ತವಾಗಲಿದೆ. ಕೆ.ಎಸ್.ನ., ಜಿ.ಎಸ್.ಎಸ್., ತೇಜಸ್ವಿ, ಕಣವಿ, ಗೋಪಾಲಕೃಷ್ಣ ಅಡಿಗ, ಕೆ.ವಿ.ತಿರುಮಲೇಶ್, ನಿಸಾರ್, ಕುವೆಂಪು, ಎ.ಕೆ.ರಮಾನುಜನ್, ಗಂಗಾಧರ ಚಿತ್ತಾಲ ಮೊದಲಾದವರ ಕವಿತೆಗಳಲ್ಲಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ ಪಡಿಮೂಡಿರುವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. + + + +‘ಮುಂಬಯಿ ಕನ್ನಡ ಕಾವ್ಯ’ ಶೀರ್ಷಿಕೆಯು ನಾಲ್ಕು ಭಾಗಗಳನ್ನು ಒಳಗೊಂಡಿದೆ. ಪ್ರಾರಂಭದಲ್ಲಿ ಮುಂಬಯಿ ಕನ್ನಡ ಕಾವ್ಯದ ಸ್ಥೂಲ ಸಮೀಕ್ಷೆಯನ್ನು ಲೇಖಕರು ಮಾಡಿದ್ದಾರೆ. ಹಟ್ಟಿಯಂಗಡಿ ನಾರಾಯಣರಾಯರ ‘ಆಂಗ್ಲ ಕವಿತಾವಳಿ’ಯ ಮೂಲಕ ಮುಂಬಯಿ ಕನ್ನಡ ಕಾವ್ಯದ ಉಗಮವನ್ನು ಗುರುತಿಸಿರುವ ಲೇಖಕರು ಅದರ ವೈಶಿಷ್ಟ್ಯ ಹಾಗೂ ಮಿತಿಗಳನ್ನು ವಿವರಿಸಿದ್ದಾರೆ. ಮುಂದೆ ಚುಟುಕು ಬ್ರಹ್ಮ ದಿನಕರ ದೇಸಾಯಿ, ವಿಡಂಬನಾ ಕವಿ ವಿ.ಜಿ‌. ಭಟ್, ಗಂಗಾಧರ ಚಿತ್ತಾಲ, ಬಿ.ಎ. ಸನದಿ, ಬಿ.ಎಸ್. ಕುರ್ಕಾಲ್, ಸುನೀತಾ ಶೆಟ್ಟಿ, ಜಿ.ವಿ. ಕುಲಕರ್ಣಿ, ಅರುಷಾ ಶೆಟ್ಟಿ, ಅಮಿತಾ ಭಾಗವತ್ ಮೊದಲಾದವರ ಕಾವ್ಯಗಳಲ್ಲಿ ರಾಜಕೀಯ ಪ್ರಜ್ಞೆ, ಮಣ್ಣಿನ ಸೆಳೆತ, ನಾಡು-ನುಡಿ, ವ್ಯಕ್ತಿತ್ವದ ಅನಾವರಣ, ಸಮ್ಮಿಶ್ರ ಭಾಷಾ ಸಂಸ್ಕೃತಿ, ಊರಿನಲ್ಲಿ ಆಗುತ್ತಿರುವ ಪಲ್ಲಟಗಳು ಪಡಿಮೂಡಿ ಬಂದಿರುವುದನ್ನು ಗುರುತಿಸಿದ್ದಾರೆ. + +ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ. ಮುಂಬಯಿ ಮತ್ತು ಊರಿನ ಸಂಸ್ಕೃತಿಯನ್ನು ಲೇಖಕರು, ‘ಇದೊಂದು ತೆರೆದ ಸಂಸ್ಕೃತಿಯಾದರೆ ಅದೊಂದು ಮುಚ್ಚಿದ ಸಂಸ್ಕೃತಿ’ ಎಂದಿರುವುದು ಔಚಿತ್ಯಪೂರ್ಣವಾಗಿದೆ. + +‘ಕನ್ನಡ ಕಾವ್ಯದಲ್ಲಿ ಮೊದಲ ಬಾರಿಗೆ ಪರಕೀಯತೆಯನ್ನು ಅನುಭವಿಸಿ ಅದನ್ನು ಕಾವ್ಯದ ಮೂಲಕ ವ್ಯಕ್ತಪಡಿಸಿದ ಕವಿಯೆಂದರೆ ಕುವೆಂಪು’ ಎಂದು ವಿಶ್ಲೇಷಿಸಿರುವ ಡಾ. ರಘುನಾಥ್ ಮುಂಬಯಿ ಕನ್ನಡ ಕಾವ್ಯದಲ್ಲಿ ಪರಕೀಯತೆಯ ಹಲವು ಮುಖಗಳನ್ನು ಕಂಡುಕೊಂಡಿದ್ದಾರೆ. ಅರವಿಂದ ನಾಡಕರ್ಣಿ ಅವರ ‘ಜರಾಸಂಧ’ದಲ್ಲಿ ಬರುವ ಕೌಟುಂಬಿಕ ಪರಕೀಯತೆಯಿಂದ ಮೊದಲ್ಗೊಂಡು ಪರಿಸರದ ಪರಕೀಯತೆ, ಸಾಂಸ್ಕೃತಿಕ ಪರಕೀಯತೆ, ನಿರುದ್ಯೋಗದ ಪರಕೀಯತೆ, ಸಮುದಾಯ ಪರಕೀಯತೆಗಳು ಮುಂಬಯಿ ಕನ್ನಡ ಕಾವ್ಯದಲ್ಲಿ ಪಡಿಮೂಡಿರುವ ಬಗ್ಗೆ ಸವಿವರವಾಗಿ ಗುರುತಿಸಿದ್ದಾರೆ. + +ಮುಂಬಯಿ ಕನ್ನಡ ಕಾವ್ಯದಲ್ಲಿ ಸಂಘರ್ಷದ ಸ್ವರೂಪವನ್ನು ಮುಂದಿನ ಅಧ್ಯಾಯದಲ್ಲಿ ಕಾಣಬಹುದು. ಇಲ್ಲಿ ಲೇಖಕರು ಸ್ವದೊಡನೆ ಸಂಘರ್ಷ, ಮನುಷ್ಯ ಮತ್ತು ಸಮಾಜದೊಡನೆ ಸಂಘರ್ಷ, ಮನುಷ್ಯ ಮತ್ತು ವಿಧಿ, ಮನುಷ್ಯ ಮತ್ತು ನಿಸರ್ಗ, ಮನುಷ್ಯ ಮತ್ತು ತಂತ್ರಜ್ಞಾನ – ಎಂದು ಸಂಘರ್ಷದ ವಿಭಿನ್ನ ನೆಲೆಗಳನ್ನು ಗುರುತಿಸಿರುವುದು ಸಾಹಿತ್ಯದಲ್ಲಿ ನಗರ ಪ್ರಜ್ಞೆಗೆ ಹೊಸ ಆಯಾಮ ಕೊಡಲು ಸಹಕಾರಿಯಾಗಬಲ್ಲುದು. ಈ ಅಧ್ಯಾಯದಲ್ಲಿ ಭೌತಿಕ ಅಸ್ತಿತ್ವಕ್ಕಾಗಿ ನಡೆಸುವ ಸಂಘರ್ಷ, ಅಸ್ಮಿತೆಯ ಸಲುವಾಗಿನ ಸಂಘರ್ಷ ಹಾಗೂ ಮೌಲ್ಯಗಳ ಸಂಘರ್ಷಗಳ ಬಗ್ಗೆ ಕವಿತೆಗಳ ಆಧಾರದಿಂದ ಕಟ್ಟಿಕೊಡಲಾಗಿದೆ. + +ಪರಕೀಯತೆ ಮತ್ತು ಸಂಘರ್ಷಗಳ ಪರಿಣಾಮಗಳನ್ನು ಮುಂದಿನ ಭಾಗದಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ‘ಶಿವಸೇನೆ’ ಎಂಬ ರಾಜಕೀಯ ಪಕ್ಷದ ಉದಯ, ಕೋಮುವಾದ, ವಸತಿ ಸಮಸ್ಯೆ: ಅದರ ಪರಿಣಾಮ, ಜೋಪಡಾ ಪಟ್ಟಿಗಳು – ಇವೆಲ್ಲಕ್ಕೂ ಮುಂಬಯಿ ಕವಿಗಳು, ಅದರ ಪರಿಣಾಮವನ್ನು ತಮ್ಮ ಕವಿತೆಗಳಲ್ಲಿ ವಿವಿಧ ಬಗೆಯಲ್ಲಿ ಚಿತ್ರಿಸಿರುವುದನ್ನು ಸೋದಾಹರಣವಾಗಿ ಕಟ್ಟಿಕೊಡಲಾಗಿದೆ. + +ನಗರೀಕರಣದಿಂದಾಗಿ ಉಂಟಾಗಿರುವ ಸಮಸ್ಯೆಗಳಿಗೆ ಆಧುನಿಕ ಕನ್ನಡ ಕಾವ್ಯ ಮತ್ತು ಮುಂಬಯಿ ಕನ್ನಡ ಕಾವ್ಯಗಳು ಯಾವ ಪರ್ಯಾಯಗಳನ್ನು ಸೂಚಿಸಿವೆ ಎಂಬುವುದನ್ನು ಈ ಭಾಗದ ಏಳನೇ ಅಧ್ಯಾಯದಲ್ಲಿ ಕಾಣಬಹುದು. ‘ಹೋಗುವೆನು ನಾ ಮಲೆನಾಡಿಗೆ’ ಎಂದು ಹೇಳಿರುವ ಕವಿ ಕುವೆಂಪು, ‘ಕಾಡಿನ ಕವಿಯು ನಾನು’ ಎಂದು ಈ ಮೂಲಕ ನಾಗರಿಕ ಜಗತ್ತಿಗೆ ಪರ್ಯಾಯವಾಗಿ ನಿಸರ್ಗ ಸೃಷ್ಟಿಯನ್ನು ನಮ್ಮ ಮುಂದಿಟ್ಟಿರುವುದನ್ನು ಉಲ್ಲೇಖಿಸಿರುವ ಲೇಖಕರು ಸನದಿ, ನಾಡಕರ್ಣಿ, ಎ.ಕೆ. ರಾಮಾನುಜನ್, ಜಯಂತ ಕಾಯ್ಕಿಣಿ, ಕೆ.ಎಸ್.ನ., ಚಿತ್ತಾಲ ಮೊದಲಾದವರು: ‘ಹಸಿರು ಗ್ರಾಮಾಳಿ ಕರೆಯುತಿದೆ’, ‘ಹನೇ ಹಳ್ಳಿಗೆ ರೈಲೇ ಇಲ್ಲ’, ‘ಊರು ನಾನು ಮತ್ತು ಸಾವು’, ‘ಸಂಪರ್ಕ’, ‘ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು’ – ಮೊದಲಾಗಿ ಕೆಲವೊಂದು ಪರ್ಯಾಯಗಳ ಬಾಗಿಲು ಬಡಿದಿರುವುದನ್ನು ಸೋದಾಹರಣವಾಗಿ ಕಟ್ಟಿಕೊಟ್ಟಿದ್ದಾರೆ. + +ಕೃತಿಯ ಭಾಗ – ೨ರಲ್ಲಿ ‘ಮುಂಬಯಿ ಕನ್ನಡ ದರ್ಶನ’ವನ್ನು ನಾವು ಕಾಣಬಹುದು. ಇಲ್ಲಿ ಚಿತ್ತಾಲರ ಸಾಹಿತ್ಯದಲ್ಲಿ ನಗರ ಪ್ರಜ್ಞೆ, ವ್ಯಾಸರಾಯ ಬಲ್ಲಾಳರ ಒಡನಾಟದ ಕ್ಷಣಗಳಿವೆ. ಮಣಿಮಾಲಿನಿ ಅವರ ದೃಷ್ಟಿ ಮತ್ತು ಸೃಷ್ಟಿ, ಗಿರಿಜಾ ಶಾಸ್ತ್ರಿ ಅವರ ಕಥಾಮಾನಸಿ, ಸುನೀತಾ ಶೆಟ್ಟಿ ಅವರ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ರೀ ಪಾತ್ರಗಳು ಮೊದಲಾದ ಕೃತಿಗಳ ಸಮೀಕ್ಷೆ, ಪರಿಚಯಗಳಿವೆ. ಕೆಲವೊಂದು ಕೃತಿಗಳ ಇತಿ ಮಿತಿಗಳನ್ನೂ ಈ ಭಾಗದಲ್ಲಿ ಲೇಖಕರು ಗುರುತಿಸಿದ್ದಾರೆ. ‘ಅಧ್ಯಯನ ವಸ್ತುನಿಷ್ಠ ದೃಷ್ಟಿಕೋನದಿಂದ ಮಾತ್ರ ಸಾಧ್ಯ’ ಎಂದಿರುವ ಲೇಖಕರ ಈ ನಿಲುವು ಕೃತಿಯುದ್ದಕ್ಕೂ ನಮಗೆ ಕಂಡುಬರುತ್ತದೆ. + + + +ರಘುನಾಥರ ಗಂಭೀರವಾದ ಓದು, ಅಧ್ಯಯನಶೀಲತೆ, ಸಂಶೋಧನಾ ಪ್ರವೃತ್ತಿ, ಅಚ್ಚುಕಟ್ಟುತನ ಈ ಕೃತಿಯಲ್ಲಿ ಕಂಡುಬರುತ್ತದೆ. ಮುಂದೆ ಕನ್ನಡ ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಬಗ್ಗೆ ಅಧ್ಯಯನ ಮಾಡುವವರಿಗೆ ಇದೊಂದು ಮಾದರಿ ಕೈಪಿಡಿ ಹಾಗೂ ಆಕರ ಗ್ರಂಥವಾಗಲಿದೆ. + +ಮುಂಬೈ ನಿವಾಸಿಯಾಗಿರುವ ದಯಾನಂದ ಸಾಲ್ಯಾನ್ ಅವರು ಕವಿಯಾಗಿ, ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. ‘ಜಾತ್ರೆಯ ಮರುದಿನ’ ಕವನ ಸಂಕಲನ, ಪೊಸ ಬೊಲ್ಪು ತುಳು ಕವಿತೆಗಳು, ‘ ಒಸರ್’ ತುಳು ನಾಟಕ, ಪಾಟಕ್ ಮತ್ತು ಇತರ ಕತೆಗಳು, ಇವರ ಪ್ರಕಟಿತ ಕೃತಿಗಳು. ‘ಸುರಭಿ’ ಸುರೇಶ್ ಭಂಡಾರಿಯವರ ಅಭಿನಂದನ ಗ್ರಂಥ ಸಂಪಾದನೆ ಮಾಡಿದ್ದು ಇವರ ಕವಿತೆಗಳಿಗೆ ಸಂಕ್ರಮಣ ಬಹುಮಾನ ಪಡೆದಿದ್ದಾರೆ. \ No newline at end of file diff --git a/Kenda Sampige/article_132.txt b/Kenda Sampige/article_132.txt new file mode 100644 index 0000000000000000000000000000000000000000..19cad65330286baea9eaec30e88d4cb6ee21471f --- /dev/null +++ b/Kenda Sampige/article_132.txt @@ -0,0 +1,45 @@ +ಹೆಗ್ಗಾನಿನ ನಡುವಿನ ಸಣ್ಣಕಾಡುಹಳ್ಳಿಯಂಥ ಕತ್ಲೆಕಾನು ಊರಿನ ಜನರ ಮನೆಗಳ ದಾಟಿ, ಮರಗಳ ಮನೆಯ ಕಾಡುದಾರಿಯನ್ನು ಪ್ರವೇಶಿಸಿದ್ದೆ. ಕಾಡಿನ ಮನಮೋಹಕ ದಾರಿ. ಯಾವ ಜೀವಜಂತು ಬೇಕಾದರೂ ಬರಬಹುದು ಎದುರು ನಿಲ್ಲಬಹುದು ಹಿಂದಿನಿಂದ ಕಾಣಿಸಿಕೊಳ್ಳಬಹುದು ಮೇಲಿನಿಂದ ಹಾರಬಹುದು ಅನ್ನುವ ಆತಂಕಿತ ನಿರೀಕ್ಷೆ ವಿಶೇಷ ಸುಖದ್ದು. ಬಹಳ ವರ್ಷಗಳ ಮೇಲೆ ಬಹಳ ದೂರ ಒಬ್ಬನೇ ಕಾಡಿನಲ್ಲಿ ನಡೆಯುತ್ತಿದ್ದೆ. ಬಹಳ ವರ್ಷಗಳ ಮೇಲೆ ನನ್ನನ್ನು ನಾನೇ ಎಚ್ಚರಿಸಿಕೊಂಡು ಕೈಬಾಯಿಮುಖಮೈ ತೊಳೆಸಿಕೊಂಡು ನನ್ನ ಹಸಿವಿಗೆ ನಾನೇ ಉಪಾಹಾರವನ್ನು ಹುಡುಕಿಕೊಂಡು ಹೋಗಿ ದುಡ್ಡಿಗೆ ಆಹಾರವನ್ನು ಖರೀದಿಸಿ ಹೊಟ್ಟೆ ತುಂಬಿಸಿಕೊಂಡು ನಡೆಯುತ್ತಿದ್ದೆ. ಬಹಳ ವರ್ಷಗಳ ಮೇಲೆ ನನ್ನ ಶ್ವಾಸಕೋಶಗಳಲ್ಲಿ ವಾಹನಗಳ ಮಾಲಿನ್ಯವಿರದ ಗಾಳಿ, ಅತಿಹೆಚ್ಚಿನ ಮರಗಳು ಬಿಡುವ ಅತಿಹೆಚ್ಚಿನ ಆಮ್ಲಜನಕವಿರುವ ಗಾಳಿ ತುಂಬಿಕೊಂಡಿತ್ತು. ಆಧುನಿಕತೆಯ ಯಂತ್ರಗಳು ಕರ್ಕಶ ಶಬ್ಧವನ್ನು ಮಾಡದ ಕಾಡಿನ ಸಜೀವ ಸದ್ದು ನನ್ನ ಕಿವಿಗಳಿಗೆ ಬಿದ್ದು ಪುಳಕವನ್ನೆಬ್ಬಿಸುತ್ತಿತ್ತು. + +(ಇಂದ್ರಕುಮಾರ್ ಎಚ್.ಬಿ.) + +ಕೆಂಪುಹುಡಿಮಣ್ಣಿನ ಮೂರು ಸುತ್ತು ಎಡಕ್ಕೆ ಹೊರಳುವ ನಾಲ್ಕು ಸುತ್ತು ಬಲಕ್ಕೆ ಹೊರಳುವ ದಾರಿ ಮುಗಿಯಿತು. ಈಗ ಕಪ್ಪುಮಣ್ಣಿನ ಬೇರೆ ತರಹದ ಮರಗಳ ದಟ್ಟಕಾಡುದಾರಿ. ಕಾಲಿಗೋ ಪುಳಕ! ದಾರಿ ಹೊರಳಿದಂತೆ ಹೊರಳುತ್ತಾ ನಡೆದೆ. ಸಣ್ಣ ಸಣ್ಣ ತಿರುವುಗಳು. ಎಡಬಲ ಎದೆಮಟ್ಟದ ಪೊದೆಗಳು. ಸಣ್ಣಸಣ್ಣ ಕಾಡುಹೂಗಳು, ಸಣ್ಣಸಣ್ಣ ಕಾಡುಹಣ್ಣುಗಳು. ಹಾವಿನಂತೆ ಸುರುಳಿಸುರುಳಿ ಸುತ್ತಿಕೊಂಡು ಮರವನ್ನೇ ಬಗ್ಗಿಸಿದಂತೆ ಮೇಲಿಂದ ತೇಲಾಡುವ ಬಳ್ಳಿಗಳು. ದಪ್ಪನೆಯ ಕಾಂಡದ ಮರಗಳ ಮೇಲೆ ಬೇರೆ ತರಹದ ಸಣ್ಣಸಣ್ಣ ಎಲೆಯ ಸಸ್ಯಗಳು. ಜೀವವೈವಿಧ್ಯದ ಸ್ಪಷ್ಟ ಮಾದರಿ. ನೋಡಿ ಕಣ್ತುಂಬಿಸಿಕೊಳ್ಳುವುದು ದಿನದ ಅಪರೂಪದ ಸಮಯ. ಕಳೆದೆರೆಡು ವಾರಗಳಿಂದ ಅನುಭವಿಸುತ್ತ ಬಂದಿದ್ದೆ. ದೇಹವನ್ನು ಹುರಿಗೊಳಿಸುತ್ತ. ಅನುಭವದ ಹೊಸ ಶಾಖೆ ಬುದ್ಧಿಯಲ್ಲಿ ಆಪ್ತವಾಗಿ ಸ್ಥಾಪಿಸಿತ್ತು. ಹೊಸ ಹೊಸ ಪಕ್ಷಿ ಸದ್ದು ಹೊಸ ಹೊಸ ವಾಸನೆ ನನ್ನ ಗುರುತಿಸು ನನ್ನ ಕಂಡು ಹಿಡಿ ಹೊಸ ಹೊಸ ಎತ್ತರ ನನ್ನ ಕ್ರಮಿಸು ಅಂತ ಪ್ರೇರಣೆ ನೀಡುತ್ತಿತ್ತು. ಪ್ರಕೃತಿ ಸಹಜ ಶುದ್ಧ ಪ್ರೇರಣೆ. ಸ್ಪಂದಿಸುತ್ತಿದ್ದೆ. ಹೊಸ ಮನುಷ್ಯನಾಗುತ್ತಿದ್ದೆ. + +ಎದ್ದ ಮೇಲಿನ ಮುಖತೊಳೆ, ಸ್ನಾನ ಮಾಡು, ಬಟ್ಟೆ ಹಾಕಿಕೋ, ಸಾಮಾನು ಜೋಡಿಸಿಕೋ, ಬೀಗ ಹಾಕು ಕೆಲಸಗಳಿಗೆ ಅರ್ಧ ಗಂಟೆ ಹಿಡಿದರೂ, ತಿಂಡಿ ತಿಂದು ಸಣ್ಣ ಪೇಟೆಯ ಎಡಬಲದ ಅಂಗಡಿಮುಂಗಟ್ಟು ದೇವಸ್ಥಾನ, ಚರ್ಚಿನ ದಾರಿ ಕ್ರಮಿಸಿ ಕಾಡಿಗೆ ಹೊರಳಲು ಮುಕ್ಕಾಲು ಗಂಟೆ ಹಿಡಿದರೂ, ಈ ಕಾಡಿನ ಮಾರ್ಗದಲ್ಲಿ ಕ್ರಮಿಸಿ ನನ್ನ ಪ್ರಕೃತಿ ಸೌಂದರ್ಯದ ಜೀವವೈವಿಧ್ಯದ ಸೃಷ್ಟಿಸೊಬಗಿನ ಕೀಟಹುಳುಗಳ ಲೋಕದ ಸರೀಸೃಪಗಳ ಸಸ್ತನಿಗಳ ಹಕ್ಕಿಗಳ ಪ್ರಪಂಚ ತಡೆದು ನಿಲ್ಲಿಸಿ ನನ್ನ ನೋಡು ನನ್ನ ಮುಟ್ಟು ನನ್ನ ಬಳಸು ನನ್ನ ವಿಶೇಷತೆ ಗಮನಿಸು ಎಂದಂತಾಗಿ ಒಂದೂವರೆ ಗಂಟೆ ಮೀರಿ ಬಿಡುತ್ತಿತ್ತು. ಹತ್ತು ಗಂಟೆಯ ಆಸುಪಾಸಿಗೆ ಈ ಕಾಡು ನನ್ನ ಕೈ ಬಿಡುತ್ತಿತ್ತು. ವಿಶೇಷ ಕಳೆ ಬೆವರಿನ ಮುಖದ ಮೇಲೆ ಆಡುತ್ತಿರುತ್ತಿತ್ತು. + +ಇಂದು ಇಷ್ಟು ದಿನ ಕಾಣಿಸಿರದ ಹೂವೊಂದು ಕಾಣಿಸಿ, ನನ್ನ ಮುಂದೆ ಹೋಗದೆ ತಡೆದು ನಿಲ್ಲಿಸಿತು. ಅದರ ವಿಶೇಷ ನೆರಳೆ ಬಿಳಿ ಮಿಶ್ರಿತ ಬಣ್ಣ ಒಮ್ಮೆಲೆ ಕಣ್‌ಸೆಳೆಯಿತು. ಕಿತ್ತೆ. ಕಿತ್ತ ಮೇಲೆ ಮೂಸಿದೆ, ಹೊರಳಿಸಿ ನೋಡಿದೆ. ಕನಕಾಂಬರ ದಾಸವಾಳದ ಮಿಶ್ರಿತ ಆಕೃತಿಯ ಹೊಸ ಹೂವು. ವಿಶೇಷ ವಾಸನೆ. ಎಲ್ಲ ದಳ ಮುಟ್ಟಿ ಅರಳಿಸಿ ಅಗಲಿಸಿ ನೋಡಿದೆ. ನಡೆದೆ. ಬಿಸಾಡಲು ಮನಸ್ಸು ಬರಲಿಲ್ಲ. ಏನು ಮಾಡಬೇಕೆಂದು ಹೊಳೆಯಲಿಲ್ಲ. ಒಮ್ಮೆಲೆ ಸಣ್ಣ ಜ್ಞಾನೋದಯ. ಹಾಗೇ ಹೂವಿದ್ದಲ್ಲೇ ಗಿಡದ ಬಳಿ ಬಗ್ಗಿ ಅದನ್ನು ಮುಟ್ಟಿ ಹೊರಳಿಸಿ ಮೂಸಿ ನೋಡಬಹುದಿತ್ತಲ್ಲ, ಕೀಳಬಾರದಿತ್ತು. ಇನ್ನು ಸ್ವಲ್ಪ ಹೊತ್ತಾದರೂ ಅದು ತಾನಾಗಿ ಇರುತ್ತಿತ್ತು. ದೊಡ್ಡ ವಿಜ್ಞಾನದ ಸಂಶೋಧಕ, ಲೇಖಕ, ಬೋಧಕನಂತೆ ಕಿತ್ತು ಬಿಟ್ಟೆ. ಈಗಿನಿಂದ ಅದರ ಕೊನೆಯ ಕ್ಷಣಗಳು ಶುರು. ಈಗ ಏನು ಮಾಡಲಿ, ಎಲ್ಲಿ ಇಡಲಿ. ಕಿತ್ತ ಜಾಗದಲ್ಲೀಗ ಇದಕ್ಕೆ ಸ್ಥಾನವಿಲ್ಲ. ಜೇಬಲ್ಲಿಟ್ಟರೆ ಹಾಳಾದೀತೆಂದು, ಕೈಯಲ್ಲೇ ಹಿಡಿದು ನಡೆದೆ. ಕಾಡುದಾರಿ ನಿಧಾನ ಏರುದಾರಿಯಾಗಿ ಸುರುಳಿದಾರಿಯಾಗಿ ಏದುಸಿರಿನ ಸುಸ್ತಿನ ದಾರಿಯಾಯಿತು. ನಡೆದೆ. ಹತ್ತಿದಂತೆ ನಡೆದೆ. ಈಗ ದೊಡ್ಡ ಆವರಣದಲ್ಲಿ ಮಧ್ಯ ನೆಟ್ಟಗೆ ನಿಂತ ಬೃಹತ್ ಬಂಗಲೆಮನೆಯ ತೋರಿಸಿತು. + +ಇಂತಹುದೊಂದು ಕನಸಿನ ಕಟ್ಟಡದಲ್ಲಿ ಕನಸಿನಂತೆ ಜನರು ವಾಸಿಸುತ್ತ ಅವರೊಡನೆ ನಾನು ಒಡನಾಡುತ್ತ ಹೆಚ್ಚು ಅವಸರದಲ್ಲದ ಹೆಚ್ಚು ಒತ್ತಡವಲ್ಲದ ಹೆಚ್ಚು ಮೈಕೈನೋವಿಲ್ಲದ ಬಿಸಲಲ್ಲದ ನೆರಳೇ ಆಗಿರುವ ಗಾಳಿ ಬೆಳಕು ಸುಳಿಯುತ್ತಲೇ ಇರುವ ವಿರಾಮಕ್ಕೆ ಎದ್ದು ಓಡಾಡಿದರೆ ಮತ್ತೆ ಇದೇ ಕಾಡಿನ ಮರಗಳ ನೆತ್ತಿ ಅವುಗಳ ಮೇಲಿನ ನೀರಾವಿಯ ಮಬ್ಬು ಅವುಗಳ ಮೇಲಿನ ಪಶ್ಚಿಮ ಘಟ್ಟಗಳು ಅವುಗಳ ಮೇಲಿನ ನೀಲಿ ನೀಲಿ ನೀಲಿ ಆಕಾಶ. ಸ್ವರ್ಗದ ಬಾಗಿಲಿಗೆ ಬಂದು ನಿಂತಿದ್ದೆ. ಅಡ್ಡಗಲದ ದೊಡ್ಡ ಗೇಟು ತೆರೆದೆ. ಶಬ್ದ ಮಾಡಿತು. ನಾಯಿ ಓಡಿಬರಲಿಲ್ಲ. ದೂರದಲ್ಲಿ ಟೋಪಿ ಗಡ್ಡದ ಮುದಿಕೆಲಸಗಾರ ಕುಕ್ಕುರು ಕೂತು ಬಗ್ಗಿ ಹೂ-ಗಿಡಗಳನ್ನು ಗಮನಿಸುತ್ತಿದ್ದ. ಆವರಣ ಪ್ರವೇಶಿಸಿದೆ. ದುಂಡನೆಯ ಕಲ್ಲುಗಳನ್ನು ಹಾಕಿ ದಾರಿ ಮಾಡಿದ ಜಾಗದಲ್ಲಿ ನಡೆದೆ. ಕಾಲುದಾರಿಯ ಆಚೀಚೆ ಸಣ್ಣಹುಲ್ಲುಗಳು ಇನ್ನಾದರೂ ಇಬ್ಬನಿಯನ್ನು ಇಟ್ಟುಕೊಂಡಿದ್ದವು. ನಾಲ್ಕೇ ಮೆಟ್ಟಲೇರಿ ಬೃಹತ್ ಕಟ್ಟಡದ ಬೃಹತ್‌ಬಾಗಿಲ ಬಳಿ ನಿಂತೆ. ದೀರ್ಘ ಉಸಿರು ತೆಗೆದುಕೊಂಡೆ. ಎತ್ತರದ, ಮೇಲೆ ಕಮಾನಿ ಆಕಾರದಲ್ಲಿರುವ, ಮುಟ್ಟಿದರೆ ತಾನು ನಮ್ಮನ್ನು ಮುಟ್ಟಿ ಖುಷಿಕೊಡುವಂತಹ ಸಾಗುವಾನಿಯ ಕಲಾಕೃತಿಯುಳ್ಳ ಬಾಗಿಲು. ಅದಕ್ಕೆ ತಟ್ಟಲೆಂದೇ ಇಳಿಬಿಟ್ಟಿರುವ ವಿಶೇಷ ವಿನ್ಯಾಸದ ಲೋಹದ ಬಳೆ. ಟಕ್ ಟಕ್ ಎರಡು ಬಾರಿ ತಟ್ಟಿದೆ. ಎರಡು ನಿಮಿಷ ಕಾದೆ. ಬಾಗಿಲು ತೆರೆದುಕೊಳ್ತು. ತಳ್ಳಿ ಒಳ ಹೊಕ್ಕೆ. ಹೊರಗಿನ ಲೋಕ ಮರೆಯಾಯಿತು. ಹೊಸ ಒಳಲೋಕ ಶುರುವಾಯಿತು. ಪ್ರಕೃತಿಸೃಷ್ಟಿಯಿಂದ ಮನುಷ್ಯ ಸೃಷ್ಟಿಗೆ. ಹೊರಗೊಂದು ಲೋಕ, ಒಳಗೊಂದು ಲೋಕ. ಮನುಷ್ಯನ ಆಯ್ಕೆಯ ಮನುಷ್ಯನ ವಾಸದ ಮನುಷ್ಯ ವಾಸನೆಯ – ಸುಖದ ಇರುವಿಕೆಯ ಸೌಲಭ್ಯದ ಲೋಕ. ಕಣ್ಣು ಮೂಗು ಚರ್ಮ ನಾಲಗೆಗಳಿಗೆ ಮತ್ತೊಂಥರ ಸುಖದ ಲೋಕ. ಅದೇ ವಿಶೇಷ ವಾಸನೆ ವಿಶೇಷ ಭಾವವನ್ನು ಸ್ಫುರಿಸಿತು. ಅದೇ ಮೌನ. ಅವವೇ ಕೋಣೆಗಳೊಳಗೆ ನೋಡಲಾರದೆ ನೋಡಲಾಗದೆ ಇರಲಾರದೆ ಕಣ್ಣಂಚಿನಿಂದ ಅಲ್ಲಿಂದ ಹೊರಬಹುದಾದ ಅಥವಾ ಅಲ್ಲಿರಬಹುದಾದ ವಸ್ತುವಿಶೇಷಗಳನ್ನು ಗಮನಿಸುತ್ತ ಡೈನಿಂಗ್ ಟೇಬಲ್ ಇರುವ ಜಾಗದಲ್ಲಿ ನಿಂತೆ. ಮನೆಯ ಕೆಲಸದವಳು ಬಂದಳು. ಕಪ್ಪುಬಣ್ಣದವಳು, ಗುಂಗುರುಗೂದಲಿನವಳು. ಈ ಎರಡು ವಾರಗಳಲ್ಲಿ ನಾಲ್ಕೇ ಬಾರಿ ಮಾತನಾಡಿದವಳು. ಟ್ರೇನಲ್ಲಿ ಜ್ಯೂಸ್ ಹಿಡಿದಿದ್ದಳು. ತೆಳ್ಳನೆಯ ಉದ್ದನೆಯ ಗಾಜಿನ ಲೋಟದಲ್ಲಿನ ಹಸಿರು ಬಣ್ಣದ ಜ್ಯೂಸ್. ಗಾಜಿನ ಲೋಟವನ್ನು ಬಾಯಿಕಚ್ಚಿ ಕುಡಿದು ಟ್ರೇನಲ್ಲೇ ಇಟ್ಟೆ. ಹೊರಳಿದಳು ಕಿಚನ್ನಿನ ಕಡೆ. ಜೀವ ತಣ್ಣಗಾಯಿತು. ಮೈಮೇಲಿನ ಬೆವರೂ ತಣ್ಣಗಾಯಿತು.ಬಾಯೊಳಗೆ ಒಂಥರಾ ಹೊಸ ಸಪ್ಪೆಸಪ್ಪೆ ಸಿಹಿಸಿಹಿ ಒಗರು ಮಿಶ್ರಿತ ರುಚಿ. ಬದಲಾವಣೆ ತರುವ ರುಚಿ ಅಂತಲೇ ಅದಕ್ಕೆ ಹೆಸರಿಟ್ಟಿದ್ದೆ. + +ಬಲಕ್ಕೆ ಹೊರಳಿ ಸುರುಳಿಯಾಕಾರದ ಮೆಟ್ಟಿಲುಗಳನ್ನು ಮರದ ಹ್ಯಾಂಡ್‌ರೇಲಿಂಗ್ ಹಿಡಿದು ನಿಧಾನಕ್ಕೆ ಏರಿದೆ. ಸಂಭ್ರಮವೂ ಏರತೊಡಗಿತು. ಈಗಾಗಲೇ ಕತ್ಲೆಕಾನಿನಿಂದ ಬಹಳಷ್ಟು ದೂರ ಬಂದಿದ್ದೇನೆ. ಬೆಳಕಿನಕಾನು, ಐಷಾರಾಮಿ ಕಾನು ಇದು. ಈಗ ಬಹಳಷ್ಟು ಎತ್ತರಕ್ಕೆ ಹೋಗುತ್ತಿದ್ದೇನೆ. ಇದೊಂಥರ ಸುತ್ತಲೆಕಾನು. ತಿರುಗಲೆ ಕಾನು. ನನ್ನ ದೂರದ ಬಾಡಿಗೆಮನೆ ಗೂಡೇಶಾ, ಸಣ್ಣಚುಕ್ಕೆಯಾಗುವಷ್ಟು ಎತ್ತರ ಮತ್ತು ದೂರ. ಮೊದಲನೆಯ ಮಹಡಿ. ಮೂರುದಿಕ್ಕಿಗೂ ವಿಸ್ತರಿಸಿದ ಸಣ್ಣದಾರಿ, ಎಡಬಲ ಕೋಣೆಗಳು. ಮತ್ತೊಂದು ಮಹಡಿಗೆ ಮೆಟ್ಟಿಲೇರಿದೆ. ಮೆಟ್ಟಿಲ ಪಕ್ಕದ ಒಂದು ಗಾಜಿನಕಿಟಕಿ ಪ್ರಪಾತವನ್ನು ತೋರಿಸಿ ಮನುಷ್ಯನನ್ನು ಸೊಕ್ಕಿಲ್ಲದವನನ್ನಾಗಿ ಮಾಡಿಸುವಂತ ಅದ್ಭುತರಮ್ಯ ದೃಶ್ಯ. ಎರಡು ನಿಮಿಷ ನಿಲ್ಲಲೇಬೇಕು ನೋಡಲೇ ಬೇಕು. ಪಾಚಿಹಸಿರು, ಗಿಣಿಹಸಿರು, ಕೆಂಪಸಿರು, ಕೆಂದಸಿರು, ಕಪ್ಪಸಿರುಗಳ ಅಲೆಅಲೆಅಲೆ ಮರಗಳ ನೆತ್ತಿ.. ಹೊಗೆ-ಆವಿ-ಇಬ್ಬನಿಮಿಶ್ರಿತ ಗಾಳಿಯಾಟ. ಅಲ್ಲೆಲ್ಲೋ ಸಣ್ಣಗೆ ಬೀಳುವ ಜಲಪಾತವೊಂದರ ಬಿಳಿನೊರೆನೀರು. ಮತ್ತೊಂದು ಮಹಡಿ ದಾಟಿದೆ ಮತ್ತೆ ಮೂರು ದಿಕ್ಕಿಗೆ ಹೊರಟ ಎಡಬಲ ಕೋಣೆಗಳ ಜಾಗ. ಮತ್ತೆ ಹೊರಳಿ ಕೊನೆಮಹಡಿಯ ಮೆಟ್ಟಿಲೇರಿದೆ. ಒಮ್ಮೆಲೆ ಒಬ್ಬನೇ ಅನ್ನುವಷ್ಟು ಹೆದರಿಕೆಯಾಗುವ ಜಾಗ. ವಿಲಕ್ಷಣ ಗಾಳಿಯ ಸುಯ್ದಾಟದ ಸದ್ದಿನ ಜಾಗ. ಒಂದೇ ವಿಶಾಲಕೋಣೆ. ಚೂಪುಛಾವಣಿಯ ನಾಲ್ಕು ದಿಕ್ಕಿಗೆ ಬಾಲ್ಕನಿ ತೆರೆಯಲ್ಪಟ್ಟ ದೊಡ್ಡ ಕಿಟಕಿಗಳ ವಿಶೇಷ ವಿನ್ಯಾಸದಲ್ಲಿ ಹಾರಾಡುವ ತೆಳುಬಿಳಿ ಕರ್ಟನ್ನುಗಳ ದೊಡ್ಡಪೇಂಟಿಂಗ್‌ಗಳ ಅಪರೂಪದ ಮರಮುಟ್ಟುಗಳ ಪೀಠೋಪಕರಣಗಳ ನಮ್ಮನ್ನು ಬೇರೆ ಯಾರೋ ಆಗಿಸಿಬಿಡುವಂಥಹ ಜಾಗ. + + + +ಇಲ್ಲಿ, ಈ ಜಾಗದಲ್ಲಿ ನನಗೆ ಒಂದು ಕೆಲಸ ಹುಟ್ಟಿಸಲಾಗಿತ್ತು. ಇದೊಂಥರ ಪುಣ್ಯವೇ ಅಂದುಕೊಂಡರೂ ನಿಜವೆಂದು ನಂಬಲಾಗದ ಸ್ಥಿತಿಯಲ್ಲಿ ನಾನಿದ್ದೆ. ಈ ಕೆಲಸ ನೆಚ್ಚಿಕೊಂಡು, ನಂಬಿಕೊಂಡು ಇನ್ನೂರು ಕಿಲೋಮೀಟರ್ ಕ್ರಮಿಸಿ ಬಂದಿದ್ದೆ. ನನ್ನ ಕೆಲಸದಲ್ಲಿ ಲೋಪವಿರಲಿಲ್ಲ, ಮೊದಲ ದಿನದ ಕೆಲನಿಮಿಷಗಳಲ್ಲೇ ನಾನು ಅವರು ಹುಡುಕುತ್ತಿದ್ದ ಸೂಕ್ತ ವ್ಯಕ್ತಿ ಅನ್ನುವಂತೆ ತಲೆಯಾಡಿಸಿದ್ದರು. ಬದುಕಿನ ವಿಲಕ್ಷಣ ಸನ್ನಿವೇಶದ ವಿಚಿತ್ರ ಸಮಯದಲ್ಲಿ ದೇಹ ಬಲುವಿಕಾರವಾಗಿ ವರ್ತಿಸುತ್ತಿದ್ದ ಕಾಲದಲ್ಲಿ ಈ ಸ್ವರ್ಗವನ್ನು ಕನಸಿನಂತೆ ನನಗೆ ಕೊಡಲಾಗಿತ್ತು. ವಿದೇಶದ ಮಹಾಘನಿ ಮರದ್ದೆನಿಸುವ ಪಕ್ಕಾ ಪಶ್ಚಿಮಘಟ್ಟಗಳ ಬಹಳ ವರ್ಷಗಳ ಸಮೃದ್ಧ ಬೀಟೆಯ ಮರದಿಂದ ನುರಿತ ಬಡಗಿಯಷ್ಟೇ ಮಾಡಲು ಸಾಧ್ಯವಾದ ಮರದ ದೊಡ್ಡ ಟೇಬಲ್ಲು, ಮನಮೋಹಿಸುವ ವಿನ್ಯಾಸದ ಮರದ ಕುರ್ಚಿಗಳು, ಟಿಪಾಯಿ. + +ಮೆಟ್ಟಿಲೇರಿದ ತಕ್ಷಣ ಸಿಗುವ ಜಾಗದಲ್ಲೊಂದು ಗೋಡೆಗೆ ಅಂಟಿಕೊಂಡೇ ಇರುವ ಚೆಸ್ಟ್ ಆಫ್ ಡ್ರಾರ‍್ಸ್ ಇರುವ ಟೇಬಲ್ಲು. ಅದರ ಮೇಲೊಂದು ಅಗಲವಾದ ವೃತ್ತಾಕಾರದ ಹಿತ್ತಾಳೆಯಂಥಹ ಪಾತ್ರೆಯಲ್ಲಿ ನೀರು ತುಂಬಿ ಅದರಲ್ಲಿ ಅಗಲವಾಗಿ ಹರಡಿಕೊಂಡು ಸಮವಿನ್ಯಾಸದಲ್ಲಿ ತೇಲುತ್ತ ನಿಲ್ಲುವ ಆಕರ್ಷಕ ಹೂಗಳನ್ನು ಇಡಲಾಗಿತ್ತು. ಒಂದೊಂದು ದಿನ ಒಂದೊಂದು ತರಹದ ಹೂಗಳು. ಇಂದು ನೇರಳೆ ಬಣ್ಣದ ಐದೈದು ದಳಗಳ ಸಣ್ಣ ಹೂಗಳು ಈಸುವಂತೆ ನೀರಿನೊಳಗೆ ಓಡಿಯಾಡುತ್ತಿದ್ದವು. ಅಂಗಿ ಜೇಬಿನಿಂದ ಕಾಡಿನಲ್ಲಿ ಕಿತ್ತ ಹೂವನ್ನು ಮೃದುವಾಗಿ ತೆಗೆದೆ. ಇದು ಅವುಗಳಿಗಿಂತ ಭಿನ್ನ. ಹೂವಿನ ಹಿತ್ತಾಳೆ ಪಾತ್ರೆಯ ಪಕ್ಕ ಇಟ್ಟೆ. ಅದರ ಮೇಲೊಂದು ದೊಡ್ಡ ಪೇಂಟಿಂಗ್ ಗೋಡೆಗೆ ಅಂಟಿಕೊಂಡಂತೇ ಇತ್ತು. ಇಂದೇ ಕಂಡವನಂತೆ ಗಮನಿಸತೊಡಗಿದೆ. ದೇವರ ಎದುರು ಜನ ನಿಲ್ಲುವ ಭಾವದಲ್ಲಿ ಕೈಕಟ್ಟಿ ನಿಂತೆ. ಅದೆಷ್ಟು ನಾಜೂಕಿನಲ್ಲಿ ಬಣ್ಣಗಳನ್ನು ಬಳಸಿ ಅದೆಷ್ಟು ಏಕಾಗ್ರತೆಯಲ್ಲಿ ಚಿತ್ರಿಸಿದ್ದಾನೆ ಕಲಾವಿದ ಎಂಬ ಗೌರವ. ಅಮೂರ್ತಚಿತ್ರದಲ್ಲಿ ಕಾಡು, ಮರಗಳು, ಬೆಂಕಿ, ಪ್ರಾಣಿಗಳು. ಹಿನ್ನೆಲೆಯಲ್ಲಿ ಮನುಷ್ಯ ಹೀಗೆ. ಒಂದರೊಳಗೊಂದು ಸೇರಿ ಮತ್ತಿನ್ನೇನೋ ಆಗಿ, ಬಣ್ಣಗಳು ಒಂದು ತುದಿಯಲ್ಲಿ ಆಸೆಯನ್ನೂ ಇನ್ನೊಂದು ತುದಿಯಲ್ಲಿ ಕುತೂಹಲವನ್ನೂ ಮತ್ತೊಂದು ತುದಿಯಲ್ಲಿ ವೈಚಿತ್ರ್ಯವನ್ನೂ ಮಗದೊಂದು ತುದಿಯಲ್ಲಿ ಭಯವನ್ನೂ ಮೂಡಿಸುವಂತಿದ್ದವು. ಮಧ್ಯದಲ್ಲಿ ಶಾಂತಿ, ನಾಲ್ಕೂದಿಕ್ಕಿಗೆ ಹರಡುವಂತೆ, ಹೂವು ಅದರ ಕೇಂದ್ರವಾಗಿರುವಂತೆ. ಅಲ್ಲಿಂದ ಬಳ್ಳಿಗಳೋಪಾದಿಯ ತೆಳುಗೆರೆಗಳೂ ಹರಡಿಕೊಂಡಿರುವಂತೆ ಇತ್ತು. ಎಡಕೆಳತುದಿಯ ಭಾಗದಿಂದ ವೃತ್ತಾಕಾರವಾಗಿ ನೋಡುತ್ತ ಬಂದರೆ ಒಂದು ಕಥನ ಒಂದು ಅರ್ಥ, ಬಲಕೆಳತುದಿಯ ಭಾಗದಿಂದ ನೋಡಿದರೆ ಮತ್ತೊಂದು ಕಥನ ಮತ್ತೊಂದು ಅರ್ಥ, ಮಧ್ಯದಿಂದ ಬಳ್ಳಿಗಳು ಸೂಚಿಸಿರುವ ಸೂಕ್ಷ್ಮಗಳನ್ನು ಗಮನಿಸಿದರೆ ಮತ್ತಷ್ಟು ಗೂಢಾರ್ಥಗಳು. ಮುಗಿಯದ ಕಥನ ಮುಗಿಯದ ದಾಹ ಮುಗಿಯದ ಕಲೆಗೆ ತೋರುವ ಗೌರವ. ಒಮ್ಮೆ ಕಣ್ಮುಚ್ಚಿ ಅಂಗೈಗಳಿಂದ ಮುಖವೊರೆಸಿಕೊಂಡೆ. ಉಳಿದ ಕಲಾಸಂಶೋಧನೆ ನಾಳೆಗೆ. ಈಗ ಕೆಲಸ ಎಂದುಕೊಂಡು ಸುತ್ತಲೂ ಕಣ್ಣಾಡಿಸಿದೆ. + +ಎಲ್ಲ ಕಿಟಕಿಗಳು ಎಂದಿನಂತೆ ತೆರೆದಿದ್ದವು. ವುಡನ್ ಫ್ಲೋರಿಂಗ್‌ನ ಕರಾರುವಕ್ ಜೋಡಣೆ ಹೆಜ್ಜೆ ಇಟ್ಟಂತೆ ಹೆಜ್ಜೆಗಳನ್ನು ಸಾಧನೆಯ ನಡಿಗೆಯಂತೆ ಬಿಂಬಿಸುತ್ತಿದ್ದವು. ಸಣ್ಣ ಕಿರಕ್‌ಕಿರಕ್ ಸದ್ದು ಆ ಸುತ್ತಣ ಮೌನದಲ್ಲಿ ಎದೆಯಲ್ಲೊಂದು ಹೆಮ್ಮೆಯನ್ನೇ ಮೂಡಿಸುತ್ತಿದ್ದವು. ಎಲ್ಲ ಕಿಟಕಿಗಳ ಬಳಿ ನಿಂತು, ಅಲ್ಲಲ್ಲಿನ ಆಯಾ ಪಾಲಿನ ಸ್ವರ್ಗವನ್ನು ಅನುಭವಿಸಿದೆ. ಇದರ ನೂರನೆಯ ಒಂದು ಭಾಗದ ಅನುಭವಕ್ಕೆ ದುಡ್ಡು ಕಸಿದುಕೊಳ್ಳುವ ರೆಸಾರ್ಟ್ ಹೊಟೆಲಿನ ಲೋಕ ಬಹುವೇಗದಲ್ಲಿ ಬೆಳೆಯುತ್ತಲಿರುವುದು ನೆನಪಾಯಿತು. ಈ ಅನುಭವಕ್ಕೆ ಈ ಸಮಾಧಾನಕ್ಕೆ ಈ ಎತ್ತರಕ್ಕೆ ಈ ಕಾಡಿಗೆ ಈ ಗಾಳಿಗೆ ಮನಸ್ಸು ದೇಹವನ್ನು ಪ್ರಫುಲ್ಲಗೊಳಿಸುವುದಕ್ಕೆ ನಾನೇ ಹಣ ಕೊಡಬೇಕೇನೋ ಅನ್ನಿಸುತ್ತಿತ್ತು. ಅಧೋಲೋಕದ ತುತ್ತತುದಿಯ ಮೇಲ್ಛಾವಣಿಯ ಸುತ್ತಣ ಚಿತ್ರಕಥನವನ್ನು ನೋಡಲು ಇನ್ನಾದರೂ ಸಾಧ್ಯವಾಗಿರಲಿಲ್ಲ. ತಲೆಯೆತ್ತಿ ಒಂದೆರೆಡು ಸಣ್ಣ ಚಿತ್ರ ಗಮನಿಸುತ್ತಿದ್ದೆಯಷ್ಟೆ. + +ಕೆಳಗಿನಿಂದ ಬೆಡ್‌ರೂಮ್ ಕೋಣೆ ಬಾಗಿಲು ಹಾಕಿಕೊಳ್ಳುವ ಸದ್ದು. ನನ್ನ ಇಲ್ಲಿನ ಕೆಲಸವನ್ನು ಶುರುಮಾಡುವ ಸದ್ದು. ಟೈಪಿಂಗ್ ಕೆಲಸ. ನಾನು ಟೈಪಿಸ್ಟ್. ಸೃಜನಶೀಲ ಬರವಣಿಗೆಗೆ ಮುದ್ರಣ ಮಾರ್ಗ ತೋರಿಸಬಲ್ಲ ನಿರ್ದೇಶಕ. + +ಸರಕ್ಕನೆ ಹೋಗಿ ಟೈಪಿಂಗ್ ಟೇಬಲ್ಲಿಗೆ ಕೂತೆ. ಹಾಳೆ, ಟೈಪ್‌ರೈಟರ್, ಕಂಪ್ಯೂಟರ್, ಕ್ಲಿಪ್‌ಬೋರ್ಡ್, ರೆಡ್ ಇಂಕ್ ಪೆನ್ನು, ಪೆನ್ಸಿಲ್, ಸ್ಪೈರಲ್‌ಬೈಂಡೆಡ್ ಮ್ಯಾನುಸ್ಕಿçಪ್ಟು ನೋಡಿಕೊಂಡೆ. ಕೆಳಗಿನ ಡ್ರಾ ಒಳಗೆ ಎರಡುಮೂರು ವರ್ಷಗಳಿಗಾಗುವಷ್ಟು ಎ-ಫೋರ್ ಸೈಜಿನ ಪೇಪರಿನ ಬಂಡಲ್‌ಗಳು. ಒಂದನ್ನು ಎಳೆದು ಅದರ ಬಿಳಿತನವನ್ನು ನೋಡಿದರೆ ಅದರಲ್ಲೇನೋ ಬರೆದುಬಿಡುವ ಕಪ್ಪನೆ ಪೆನ್ನಿನಲ್ಲಿ ಚಿತ್ರವನ್ನು ಇಳಿಸುವ ಆಸೆ ಮತ್ತೆ ಒತ್ತೊತ್ತಿ ಬಂತು. ಇಲ್ಲಿಗೆ ಬಂದು ಬೀಳುವ ಇಲ್ಲಿನ ಕಿಟಕಿ ಕರ್ಟನ್ನು ಗೋಡೆಯ ಬಣ್ಣಗಳಿಂದ ಪ್ರತಿಫಲಿತವಾದ ಚದುರಿದ ಈ ಬಿಸಿಲು ಅಚ್ಚುಕಟ್ಟಾಗಿ ಯಂತ್ರ ಕತ್ತರಿಸಿಟ್ಟ ಈ ಬಿಳಿಕಾಗದವನ್ನು ಹೆಚ್ಚುಗಾರಿಕೆಯಲ್ಲಿ ತೋರಿಸುತ್ತಿದೆಯೆಂದೆನಿಸುತ್ತಿತ್ತು. ಕೈಗಳು ಕಪ್ಪನೆಯ ಬಣ್ಣದ ಪೆನ್ನಿನಿಂದ ಮೆಲ್ಲಗೆ ಬಳ್ಳಿಗಳಾಕಾರದಲ್ಲಿ ಎಲೆಗಳ ವಿನ್ಯಾಸದಲಿ ಚಿತ್ರಗಳನ್ನು ಮೂಡಿಸಲು ಶುರು ಮಾಡಿದ್ದವು. ಲೋಕ ಸೃಷ್ಟಿಯಾಗತೊಡಗಿತ್ತು. ನಿಶಬ್ದತೆಗೊಂದು ಅಪರೂಪದ ಶಕ್ತಿ. ಬರೆಸತೊಡಗಿತ್ತು. ಬರೆಯತೊಡಗಿದ್ದೆ. ಅಚ್ಚಬಿಳಿಮೈ ಮೇಲೆ ಕಪ್ಪನೆಯ ಗೆರೆಗಳು ಎಲ್ಲಿಬೇಕಲ್ಲಿ ಹೇಗೆಬೇಕೋ ಹಾಗೆ ಓಡಿಯಾಡತೊಡಗಿದ್ದವು. ಉಲ್ಲಾಸ ಎದೆಯೊಳಗೆ ಕಾರಂಜಿಯಂತೆ ಏಳತೊಡಗಿತ್ತು. ನನ್ನ ಬೆರಳುಗಳು ಸೃಷ್ಟಿಸುತ್ತಿದ್ದ ಇಂದಿನ ಈ ಚಿತ್ರವನ್ನು ಹೆಮ್ಮೆಯಲಿ ಸ್ಪರ್ಶಿಸಿ ನೋಡತೊಡಗಿದೆ. + +ವಿದ್ಯುತ್ತೇ ಬಾರದ ಕಗ್ಗಾಡಿನಲ್ಲಿ ಒಂದು ಕ್ಷಣವೂ ನಿಲ್ಲದ ನಿರಂತರ ವಿದ್ಯುತ್ ಸಂಪರ್ಕ! ಪ್ರಶ್ನೆಯೇಳಿಸಿ ಅಚ್ಚರಿ ಮೂಡಿಸುತ್ತಿತ್ತು. ಕಂಪ್ಯೂಟರ್ ಸ್ವಿಚ್ ಆನ್ ಮಾಡಿದೆ. ಡೂಮ್‌ಮಾನೀಟರ್ ಹೊತ್ತಿಕೊಂಡು ಬೆಳಗಿತು. ತನ್ನ ಸೃಷ್ಟಿಪ್ರಕ್ರಿಯೆಯ ಮಾಹಿತಿಯನ್ನು ಪರದೆ ಮೇಲೆ ಪ್ರದರ್ಶಿಸಿಕೊಂಡು ಸಂಪೂರ್ಣ ಚಾಲನೆಗೊಂಡು ವಿದೇಶಿ ಸಪಾಟುಹುಲ್ಲುಗಾವಲಿನ ಸ್ಕ್ರೀನ್‌ಸೇವರಿಗೆ ಬಂದು ನಿಂತಿತು. ಮೈಕ್ರೊಸಾಫ್ಟ್ ವರ್ಡ್ ಫೈಲ್ ತೆರೆದೆ. ನಿನ್ನೆಯ ಟೈಪಿಂಗ್ ಹಂತ ನೋಡಿಕೊಂಡೆ. ಒಮ್ಮೆ ತಪ್ಪುಗಳಿಗೆ ಕಣ್ಣಾಡಿಸಿದೆ.. ಮೊನ್ನೆ ತೆಗೆದ ಪ್ರಿಂಟ್‌ಔಟ್ ಕಾಗದ ಜೋಡಿಸಿಟ್ಟೆ. ಐದು ಹಂತದ ಐದು ಬಣ್ಣದ ಕ್ಲಿಪ್‌ಬೋರ್ಡ್ಗಳಲ್ಲಿ ಸಿಕ್ಕಿಸಿದ ಶಿಸ್ತನ್ನು ಪ್ರಶಂಸೆಯಲಿ ನೋಡಿದೆ. ಟೈಪ್ ಮಾಡಬೇಕಾದ ಕೆಂಪು, ಟೈಪ್ ಮಾಡಿದ ಹಳದಿ, ಟೈಪ್ ಮಾಡಿ ಪ್ರಿಂಟ್‌ಔಟ್ ತೆಗೆದಿಟ್ಟ ನೀಲಿ, ಪ್ರಿಂಟ್‌ಔಟ್ ಓದಿ ಪ್ರೂಫ್ ಹಾಕಿದ ಹಸಿರು, ಪ್ರೂಫ್ ಹಾಕಿದ್ದನ್ನು ಕ್ಯಾರಿ ಮಾಡಿ ಮತ್ತೆ ಪ್ರಿಂಟ್‌ಔಟ್ ತೆಗೆದಿರಿಸಿದ ಫೈನಲ್ ಕಪ್ಪುಬಣ್ಣದ ಕ್ಲಿಪ್‌ಬೋರ್ಡ್ ಸಾಲಾಗಿ ಕ್ರಮವಾಗಿ ಜೋಡಿಸಲಾಗಿತ್ತು. ಪ್ರಾಕೃತಿಕ ಶಿಸ್ತಿನ ಕಾಡಿನಲ್ಲಿ ಈ ಮಾನುಷ ಶಿಸ್ತು ಏನೋ ಕಲಿಸುತ್ತಿತ್ತು. + +‘ನಂಬಿಕೆ ಮುಖ್ಯ’ ಅನ್ನೋ ಸಾಲಿನ ಮುಂದೆ ಕಪ್ಪನೆಯ ಕಡ್ಡಿಯಂತಹ ಕರ್ಸರ್ ನೆಟ್ಟಗೆ ನಿಂತು ಕುಣಿಯುತಿತ್ತು. ಟೈಪಿಸು ಟೈಪಿಸು ಟೈಪಿಸು ಅಂತ. ನಾನೇ ಈ ಬರವಣಿಗೆ ಮುಂದುವರೆಸಿಬಿಡಲೆ ಅನ್ನುವಂತೆ ಕೆಣಕುತ್ತಿತ್ತು. ಇಪ್ಪತ್ತೆರಡು ಪುಟವಷ್ಟೇ ಈ ಹನ್ನೆರಡು ದಿನಗಳಲ್ಲಿ ಟೈಪ್ ಆದದ್ದು. ನಿಧಾನ ಸಾಗಿತ್ತು ಕೆಲಸ. ಯಾರಿಗೂ ಅವಸರವಿರಲಿಲ್ಲ. ಬರೆಸುವವಳಿಗೂ, ಈ ಪಠ್ಯಕ್ಕೂ. ಪಾತ್ರಗಳು ತಮ್ಮ ಸಹಜ ದೈನಿಕದಲ್ಲೇ ಇರುತ್ತಿದ್ದವು. ಮುಂದಕ್ಕೆ ಹೋಗಿ ಹಿಂದಕ್ಕೆ ಬರುವಂಥ ನಿರೂಪಣೆ. ಬರಿ ಚಹಾ-ಕಾಫಿಗಳೇ. + +ಕೆಳಗಿನ ಕೋಣೆಯ ಬಾಗಿಲು ತೆರೆದ ಸದ್ದಿನ ಬಹಳ ಹೊತ್ತಿನ ನಂತರ ಅವಳು ಬಂದಳು. ಮೆಟ್ಟಿಲು ಹತ್ತಿ ಬಂದು ನನ್ನೆಡೆಗೆ ಬಾರದೇ ಅಲ್ಲೇ ನಿಂತಳು. ಕಣ್ಣಂಚಿನಿಂದ ಗಮನಿಸಿದೆ. ಹೊರಳಿ ನೋಡಿದೆ. ರೇಶಿಮೆಯ ಲಿಂಬೆಬಣ್ಣದ ನೈಟಿಯೊಳಗೆ ಬಳಕುವ ದೇಹ. ಉದ್ದನೆಯ ತೆಳ್ಳನೆಯ ತೆಳುದೇಹ. ತಲೆಗೂದಲು ಸುರುಳಿಸುತ್ತಿ ಹಿಂದೆ ಕ್ಲಿಪ್ಪಿನಡಿ ಬಂಧಿಸಿದ್ದಳು. ನಿರಾಭರಣ ಬಿಳಿಚಿಕೊಂಡ ಆಕರ್ಷಕವಲ್ಲದ ಮುಖ. ತೆಳುಬೆರಳು ಉದ್ದ ನೇರಮೂಗು ದೊಡ್ಡಕಣ್ಣು ತೆಳುತುಟಿ ಉದ್ದನೆಯ ಕುತ್ತಿಗೆ. ಮೊದಲನೆಯ ದಿನ ಗಮನಿಸಿದ್ದ ವಿವರಗಳ ಹಾಗೇ ಇದ್ದಳು. ಅವಳ ಧ್ವನಿ ಮಾತ್ರ ಗೌರವ ಪಡೆದುಕೊಳ್ಳುವಂತೆ ಅವಳ ಭಾಷೆ ತುಂಬಾ ಕಲಿತ ಓದಿದವಳ ಮಾದರಿಯದ್ದು. + +ಅಲ್ಲೇ ಇದ್ದ ಟೇಬಲ್ಲಿನ ಮೇಲಿಟ್ಟುಬಂದಿದ್ದ ಆ ಹೂವನ್ನು ಕೈಯಲ್ಲಿ ಹಿಡಿದು ನೋಡಿದಳು. ಹೊರಳಿಸಿ ಹೊರಳಿಸಿ ನೋಡಿದಳು. ತೆಳುಬೆರಳುಗಳ ನಡುವೆ ನಾನು ತಂದಿದ್ದ ಹೂವಿನ ಉದ್ದನೆಯ ತೊಟ್ಟು ಹಿಡಿದು ಹೊರಳಾಡಿಸುತ್ತ ನನ್ನ ಕಡೆ ಹೊರಳಿದಳು. ಸಣ್ಣ ಭಯ. ದಿನದ ಮೊದಲನೆಯ ನಮಸ್ಕಾರ ಗೌರವದ ತರಹ ತಲೆಯನ್ನು ಸಣ್ಣಗೆ ಆಡಿಸಿ, ಕುರ್ಚಿ ಹಿಂದೆ ಸದ್ದಾಗದಂತೆ ಸರಿಸಿ, ಎದ್ದು ನಿಂತೆ. ದೇವಸ್ಥಾನದ ನೈವೇದ್ಯದ ಜಾಗದಲ್ಲಿ ನಾಯಿ ಓಡಾಡಿ ಗಲೀಜು ಮಾಡಿದಂತೆ ಮಾಡಿದಳು ತನ್ನ ಮುಖಭಾವವ. ಅಸಹನೆಯ ಉಸಿರುಗಳನ್ನು ಎಣಿಸುವಂತೆ ಕೇಳಿಸಿಕೊಂಡು ಉಗುಳು ನುಂಗುತ್ತಿದ್ದೆ. ಹೂವು ತಂದಿಡಬಾರದಿತ್ತು. ಅವಳ ಕರಾರುವಕ್ ಆಯ್ಕೆಗಳೇನಿದ್ದವೋ. ಈ ಪೇಂಟಿಂಗನ್ನು ದೇವರಂತೆ ನೋಡುತ್ತಿದ್ದಳೇನೋ ಅಪಚಾರವಾಯಿತೇನೋ. ಹೊರಗಿನದ್ದು ಕಾಡಿನದ್ದು ಏನೂ ಇಲ್ಲಿ ಬರುವಂತಿಲ್ಲವೇನೋ ಗಾಳಿಯೂ. ಇವಳ ಮನೆ ಮುಂದಿನ ವಿಸ್ತಾರ ಅರ್ಧವೃತ್ತಾಕಾರ ಜಾಗದ ಅಂಚಿನುದ್ದಕ್ಕೂ ಬೆಳೆಸಿದ್ದ ಹೂಗಳ ಗಿಡಗಳಿಂದಲೇ ಇಲ್ಲಿಗೆ ಹೂಗಳು ಬರಬೇಕೇನೋ ಪ್ರಮಾದ ಮಾಡಿಬಿಟ್ಟೆನಾ! + +ಹೂವನ್ನು ಬೆಕ್ಕಿನ ಕಿವಿಹಿಡಿದೆತ್ತುವಂತೆ ತೊಟ್ಟುಹಿಡಿದು ಎತ್ತಿದಳು. ಕೆಳಮುಖವಾಗಿ ಹಿಡಿದಿದ್ದಳು. ‘ಲಲಿತಾ…’ ಅರಚಿದಂತೆ ಕೂಗಿದಳು. ನಿಟ್ಟುಬಿದ್ದೆ. ಹೊರಳಿದೆ. + +ನನ್ನೆಡೆಗೇ ನೋಡುತ್ತ ಮತ್ತೆ ಕೂಗಿದಳು. ತಪ್ಪನ್ನು ಆದಷ್ಟು ಬೇಗ ಒಪ್ಪಿಕೊಂಡರೆ ಸರಿ ಎಂದು ನಾನೇ ಎದ್ದು ಅವಳೆಡೆ ತಿರುಗಿ, ‘ಆ ಹೂವನ್ನು ನಾನೇ ತಂದಿದ್ದೆ ಬಿಸಾಕುವೆ ಬಿಡಿ’ ಅಂದೆ. ಮುಂದೆ ನಡೆದು ಕೈ ಮುಂದೆ ಮಾಡಿದೆ. ದೊಡ್ಡಕಣ್ಣುಗಳಲ್ಲಿ ಅರ್ಧಕರಗಿದ ಸಿಟ್ಟಿನಲ್ಲಿ ನೋಡಿ ತನ್ನನ್ನು ತಾನೇ ಸಾವರಿಸಿಕೊಂಡು, ಹೂವು ಹಿಡಿದೇ ಇಳಿಯುತ್ತ ನಡೆದು ಹೋದಳು. ಇವಳು ನಡೆದರೆ ಶಬ್ದವಾಗುವುದಿಲ್ಲ. ಮಾರ್ಗ ಮಧ್ಯೆಯಲ್ಲಿ ಲಲಿತಾ ಸಿಕ್ಕು ಅವಳೊಡನೆ ಮಾತನಾಡಿದ್ದು ಕೇಳಿಸಿತು. + +ಇಲ್ಲಿ ನೂರಕ್ಕೆ ನೂರರಷ್ಟು ಸ್ವಾಂತಂತ್ರ್ಯತೆ ಎಂದುಕೊಂಡು ಬಂದವನಿಗೆ ಒಂದು ಪರ್ಸೆಂಟ್ ಕಡಿಮೆಯಾದಂತೆನಿಸಿತು. ಆದರೂ ಇನ್ನೊಮ್ಮೆ ಹಾಗೆ ಮಾಡದಿದ್ದರಾಯಿತು. ಎಂದುಕೊಂಡು ಟೈಪ್ ಮಾಡಬೇಕಾದ ಪಠ್ಯವನ್ನು ತೆಗೆದಿಟ್ಟುಕೊಂಡೆ. + + + +‘ನಂಬಿಕೆ ಮುಖ್ಯ’ ಸಾಲು ಹಂಗಿಸಿತು. ಕೈಬೆರಳು ಮೂಸಿಕೊಂಡೆ. ಆ ಹೂವಿನ ವಿಲಕ್ಷಣ ಘಮ, ಈ ವಿಲಕ್ಷಣ ಸನ್ನಿವೇಶದಲ್ಲಿ ವಿಚಿತ್ರವೆನ್ನಿಸಿತು. ಮತ್ತೆ ಮತ್ತೆ ಮೂಸುವಂತೆ ಹುಚ್ಚು ಪ್ರಚೋದನೆ, ಪ್ರೇರಣೆ. ತಲೆಕೊಡವಿಕೊಂಡೆ. ಡೆಸ್ಕ್ಟಾಪ್ ಸ್ಕ್ರೀನ್ ನೋಡಿದೆ. ಅದರ ಸ್ಕ್ರೀನಿನ ಕೆಳಗಿನ ಬಲಮೂಲೆಯಲ್ಲಿ ಟೈಮ್ ತೋರಿಸುತ್ತಿತ್ತು. ಹನ್ನೊಂದುವರೆ ಆಗಿಹೋಗಿತ್ತು. ಹೊಟ್ಟೆ ಹಸಿಯಲೂ ಶುರುವಾಗಿತ್ತು. ಕೆಲಸ ಒಂದಕ್ಷರ ಶುರುವಾಗಿರಲಿಲ್ಲ. ತಲೆ ಏನೆಲ್ಲ ಎಷ್ಟೆಲ್ಲ ಯೋಚನೆ ಮಾಡಿಮುಗಿಸಿತ್ತು. ಅಷ್ಟೊಂದು ಯೋಚನೆ ಬೇಕಿಲ್ಲ ಸಾಮಾನ್ಯ ಮನುಷ್ಯನಿಗೆ ಅನ್ನಿಸಿತು. ನಾನು ಸಾಮಾನ್ಯ ಮನುಷ್ಯನಲ್ಲ ಅಂತಲೂ ಅನ್ನಿಸಿತು. ಅಸಾಮಾನ್ಯ ಮನುಷ್ಯನಾಗಲು ಹೋಗಿ ಮಾಡಿಕೊಂಡು ಅವಾಂತರ ನೆನಪಾಯಿತು. ಸರ್ವೇಸಾಮಾನ್ಯ ಮನುಷ್ಯನೇ ಆಗಬೇಕೆಂದು ತೀರ್ಮಾನ ಮಾಡಿದವನಂತೆ ಮಿಸುಕಾಡಿ ಸರಿಯಾಗಿ ಕೂತೆ. ಮೌಸ್‌ನ ಬಾಣದ ಗುರುತನ್ನು ಆ ವಿಹಂಗಮ ಹುಲ್ಲುಗಾವಲಿನ ಮೇಲಾಡಿಸಿದೆ. ಪಕ್ಕದಲ್ಲಿದ್ದ ಬಿಳಿಯ ಕಾಗದದಲ್ಲಿ ಅದರ ಚಿತ್ರ ಮೂಡಿಸಲು ಕೈಬೆರಳು ಹಾತೊರೆದವು. ಡ್ರಾನಲ್ಲಿ ಹತ್ತಾರು ತರಹದ ಪೆನ್ಸಿಲ್, ಬಣ್ಣದ ಪೆನ್‌ಗಳಿದ್ದವು. ತಲೆಗೆ ಟಪ್ಪೆಂದು ಮೊಟಕಿಕೊಂಡು ಮತ್ತೆ ನೇರ ಕೂತೆ. ಕಣ್ಣು ಬಲಕೆಳ ಮೂಲೆಯ ಟೈಮ್‌ಸ್ಟ್ಯಾಂಪ್ ಪಕ್ಕದ ನೆಟ್‌ವರ್ಕ್ ಸಿಂಬಲ್ ಕಡೆ ಹೋಯಿತು. ಪೂರ್ತಿ ಸಿಗ್ನಲ್ಲುಗಳಿರುವ ಇಂಟರ್ನೆಟ್ ಓಡುತ್ತಿದೆ! ನನ್ನ ಬದುಕಿನ ದುಡಿಮೆಯ ಅರ್ಧದಷ್ಟನ್ನು ಇಂಟರ್ನೆಟ್ ಬಾಡಿಗೆಗೆ ಖರ್ಚುಮಾಡಿದ್ದೆ. ಈಗ ಇಲ್ಲಿ ಇಂಟರ್ನೆಟ್ ಇದೆ. ಈ ಕಗ್ಗಾಡಿನಲ್ಲಿ! ನಿಲ್ಲದೆ ಹರಿಯುವ ಸದಾ ಹರಿಯುವ ನೀರಿನ ಒರತೆಯಂತೆ. ಅದರ ಮೇಲೆ ಮೌಸ್‌ನ ಬಾಣ ತೆಗೆದುಕೊಂಡು ಹೋದವನು ಒತ್ತುವಷ್ಟರಲ್ಲಿ ಮೆಟ್ಟಿಲಬಳಿ ಸದ್ದು ಆದಂತಾಯಿತು. ಕೆಮ್ಮಿ ಸರಿಯಾಗಿ ಕೂತು ತೆಗೆದಿರಿಸಿಕೊಂಡಿದ್ದ ಮೈಕ್ರೊಸಾಫ್ಟ್ ವರ್ಡ್ ಫೈಲ್‌ನಲ್ಲಿ ಇವತ್ತಿನ ದಿನಾಂಕ ಹಾಕಿ ಟೈಪ್ ಮಾಡಲು ಶುರುಮಾಡಿದೆ.‘ಬದುಕು ಹೀಗೆ ಇರುತ್ತದೆಂದು ನನಗೆ ಅನ್ನಿಸಿರಲಿಲ್ಲ…’ + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_133.txt b/Kenda Sampige/article_133.txt new file mode 100644 index 0000000000000000000000000000000000000000..2320df473de89d44b96817425ce45b0c87ed7acd --- /dev/null +++ b/Kenda Sampige/article_133.txt @@ -0,0 +1,35 @@ +byರಾಮ್ ಪ್ರಕಾಶ್ ರೈ ಕೆ.|Feb 17, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಜನಸಾಮಾನ್ಯರು ಇಂದಿಗೂ ನಿಗೂಢವೆಂದು ಭಾವಿಸುವ ಶಂಕರ್ ನಾಗ್ ಸಾವಿನ ಸುತ್ತ ಹುಟ್ಟಿಕೊಂಡ ಅನೂಹ್ಯ ಪ್ರಶ್ನೆಗಳಿಗೆ ವಿವಿಧ ದೃಷ್ಟಿಕೋನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ವರುಷಗಳಿಗನುಗುಣವಾಗಿ ಜೋಡಿಸಲ್ಪಟ್ಟ ಶಂಕರ್ ನಾಗ್ ಚಿತ್ರಗಳು, ಅವುಗಳ ಹಿಂದಿರುವ ಕಹಾನಿ, ಪ್ರಮುಖ ಹಾಡುಗಳು, ಅನಂತ್ ನಾಗ್, ರಮೇಶ್ ಭಟ್ ಆದಿಯಾಗಿ ವಿವಿಧ ನಟರೊಂದಿಗಿನ ಕೆಲಸಗಳು ಹಾಗೂ ಬಾಂಧವ್ಯ ಹೀಗೆ ಅನೇಕ ಮಾಹಿತಿಗಳು ದಾಖಲಾಗಿರುವ ಪರಿಯೇ ಈ ಪುಸ್ತಕದ ಹೈಲೈಟು.ಸತೀಶ ಬಳೆಗಾರ ಬರೆದ ‘ಶಂಕರ ನಾಗ್ The Legend’ ಕೃತಿಯ ಕುರಿತು ರಾಮ್‌ ಪ್ರಕಾಶ್‌ ರೈ ಬರಹ + +byಕೆಂಡಸಂಪಿಗೆ|Feb 16, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ, ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸಮಾಡುತ್ತದೆ. ಹೀಗಾಗಿ ಇಲ್ಲಿನ ಸ್ಮೃತಿಚಿತ್ರಗಳು ರೋಚಕವಾದ ಅನುಭವವನ್ನು ಮಂಡಿಸಿ ಓದುಗರನ್ನು ರಂಜಿಸುವುದಕ್ಕೆ ಉತ್ಸುಕವಾಗುವುದಿಲ್ಲ. ಎಲ್ಲ ಭಾಗದ ಜೀವನದಲ್ಲಿರುವ ವಿಷಾದಕರ ದುರಂತಗಳನ್ನು ದಾಖಲಿಸುತ್ತವೆ. ಜನರ ಹಸಿವು ಬಡತನ ದುಡಿಮೆ ಹೋರಾಟ ಜೀವಂತಿಕೆಗಳನ್ನು ತಾಳ್ಮೆಯಿಂದ ಘನತೆಯಿಂದ ಕಾಣಿಸುತ್ತವೆ.ಡಾ. ಲಕ್ಷ್ಮಣ ವಿ.ಎ. ಬರಹಗಳ ಸಂಕಲನ “ಮಿಲ್ಟ್ರಿ ಟ್ರಂಕು”ಕ್ಕೆ ರಹಮತ್‌ ತರೀಕೆರೆ ಬರೆದ ಮುನ್ನುಡಿ + +byರಾಘವೇಂದ್ರ ಈ. ಹೊರಬೈಲು|Feb 15, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ.ಸದಾಶಿವ ಸೊರಟೂರು ಅವರ ಅರ್ಧ ಮಳೆ ಅರ್ಧ ಬಿಸಿಲು ಕಥಾ ಸಂಕಲನದ ಕುರಿತು ರಾಘವೇಂದ್ರ ಈ. ಹೊರಬೈಲು ಬರಹ + +byಡಾ. ಸುಭಾಷ್ ಪಟ್ಟಾಜೆ|Feb 14, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +“ನೋಡಿ ಅವ ಎದ್ದೇ ಬಿಟ್ಟ. ನಾನಿನ್ನು ಕೂತಿರಲು ಸಾಧ್ಯವೇ ಇಲ್ಲ” ಎಂಬ ಸಾಲು ಅಥವಾ ಧ್ವನಿಯು ಏನೆಂದರಿಯದೆ ಏಕೆಂದರಿಯದೆ ಕಚ್ಚಾಡುವ ಮಂದಿಯ ತವಕ, ತಲ್ಲಣ ಮತ್ತು ದಮನಕಾರಿ ಮನೋವೃತ್ತಿಯನ್ನು ಬಯಲಿಗೆಳೆಯುತ್ತದೆ. ಈ ಕಾವ್ಯಕ್ಕೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳ ಕುರಿತು ವಿವಿಧ ನೆಲೆಗಳಲ್ಲಿ ಚಿಂತನೆಗೊಳಪಡಿಸುವ ಧ್ವನಿ ಪ್ರಾಪ್ತವಾಗಿದೆ. ಇಂಗ್ಲೆಂಡಿನಿಂದ ತಂದ ಮಿರಮಿರ ಮಿಂಚುವ ಸ್ವಚ್ಛ ಬೂಟುಗಳು ಊರಿನ ಕೊಳೆತ ಸಸ್ಯಾವಳಿಯ, ನೊಣ ಹಾರುವ ಗಲೀಜು ಬೀದಿಗೆ ಹೊಂದಲಾರದ ಪರಿಸ್ಥಿತಿಯು ಹಳ್ಳಿ ನಗರಗಳ ನಡುವಿನ ಬಿರುಕನ್ನು ಒಂದೇ ಮಾತಿನಲ್ಲಿ ವಿವರಿಸುತ್ತದೆ.ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ ಕೃತಿಯ ಕುರಿತು ಡಾ. ಸುಭಾಷ್‌ ಪಟ್ಟಾಜೆ ಬರಹ + +byವಿಶ್ವ ದೊಡ್ಡಬಳ್ಳಾಪುರ|Feb 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ.ಡಾ. ಕೆ.ಎನ್. ಗಣೇಶಯ್ಯ ಬರೆದ “ಹಾತೆ-ಜತೆ-ಕತೆ” ಕೃತಿಯ ಕುರಿತು ವಿಶ್ವ ದೊಡ್ಡಬಳ್ಳಾಪುರ ಬರಹ + +byಕೆಂಡಸಂಪಿಗೆ|Feb 11, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಜಗತ್ತಿನಲ್ಲಿ ಮೂಡಿದ ಎಲ್ಲ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಈ ನಲವತ್ತು ಸಿನಿಮಾಗಳು ದಾಖಲಿಸುತ್ತವೆ. ಹಾಗಾಗಿ ಈ ಲೇಖನಗಳು ಒಂದು ಸಾರ್ಥಕ ಪ್ರಯತ್ನ ಎಂದು ನನ್ನ ಅನಿಸಿಕೆ. ಹೀಗೆ ಹೇಳುತ್ತಲೇ ಕಳೆದೆರಡು ದಶಕಗಳಲ್ಲಿ ಜಾಗತಿಕ ಸಿನಿಮಾಗಳಲ್ಲಿ ಮೂಡಿಬಂದ ಹೊಸಾ ಶೈಲಿಯಾದ ʻಸ್ಲೋ ಸಿನಿಮಾ ಚಳುವಳಿʼಯ ಒಂದೆರಡು ಕೃತಿಗಳನ್ನು ಪರಿಚಯಿಸಿದ್ದರೆ ಸಾಂದರ್ಭಿಕವಾಗಿ ಇನ್ನಷ್ಟು ಉಪಯುಕ್ತತೆ ಬರುತ್ತಿತ್ತೇನೋ. ಹಾಲಿವುಡ್ ಉದ್ದಿಮೆಯ ಜನಪ್ರಿಯ ಸಿದ್ಧಸೂತ್ರಕ್ಕೆ ಪರ್ಯಾಯವಾಗಿ ಮೂಡಿಬಂದದ್ದೇ ʻಸ್ಲೋ ಸಿನಿಮಾ ಚಳುವಳಿʼ.ಎ.ಎನ್. ಪ್ರಸನ್ನರವರ ಆಯ್ದ ಜಾಗತಿಕ ಸಿನಿಮಾಗಳ ಕುರಿತ ಲೇಖನಗಳ ಸಂಕಲನ “ಸಿನಿ ಲೋಕ 21”ಕ್ಕೆ ಗಿರೀಶ್‌ ಕಾಸರವಳ್ಳಿ ಬರೆದ ಮುನ್ನುಡಿ + +byಸುಮಾವೀಣಾ|Feb 10, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….!ಕೆ.ವಿ. ತಿರುಮಲೇಶರ “ಅನೇಕ” ಕಾದಂಬರಿಯ ಕುರಿತು ಸುಮಾವೀಣಾ ಬರಹ + +byಮಂಜಯ್ಯ ದೇವರಮನಿ, ಸಂಗಾಪುರ|Feb 7, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ. ‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.ದಯಾನಂದ ಅವರ ಕಥಾ ಸಂಕಲನ “ಬುದ್ಧನ ಕಿವಿ”ಯ ಕುರಿತು ಮಂಜಯ್ಯ ದೇವರಮನಿ ಬರಹ + +byಕೆಂಡಸಂಪಿಗೆ|Feb 6, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ.ಸು. ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿ “ಶ್ರೀಕೃಷ್ಣ”ದ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_134.txt b/Kenda Sampige/article_134.txt new file mode 100644 index 0000000000000000000000000000000000000000..6a28629866fd3c4aea84ace36dba46fb18f40b40 --- /dev/null +++ b/Kenda Sampige/article_134.txt @@ -0,0 +1,23 @@ +ಐವತ್ತು ವರ್ಷಗಳ ಹಿಂದೆ ಜಪಾನೀಯರ ನಿಘಂಟಿಗೆ ‘ಕೊಗಾಯ್‌ʼ ಎಂಬ ಹೊಸ ಪದವೊಂದು ಸೇರಿಕೊಂಡಿತು. ಅದರ ಸರಿಯಾದ ಅರ್ಥ ಬೇಕೆಂದರೆ ನಾವು ಕನ್ನಡದಲ್ಲೂ “ದುಸ್ಸುಧಾರಣೆ” ಎಂಬ ಹೊಸ ಪದವನ್ನು ಟಂಕಿಸಬೇಕು. ಅಥವಾ ಅಪಸೌಲಭ್ಯ ಎಂದರೂ ಸರಿ. ಅಭಿವೃದ್ಧಿಯ ಹೆಸರಿನಲ್ಲಿ ಒಂದು ಸಮಾಜ ತನ್ನ ಮೇಲೆ ಎಳೆದುಕೊಳ್ಳುತ್ತಿರುವ ಸಂಕಟಗಳಿಗೆ ‘ಕೊಗಾಯ್‌ʼ ಪದ ಅಲ್ಲಿ ಬಳಕೆಗೆ ಬಂದಿತ್ತು. ಆಕಾಶದಲ್ಲಿ ಕೊಳಕು ಗಾಳಿ, ಸಮುದ್ರದಲ್ಲಿ ಕೊಳಕು ನೀರು, ನದಿಯಲ್ಲಿ ಕೊಳಕು ಧಾರೆ, ಮಣ್ಣೆಂದರೆ ಕೊಳಕು ಮಣ್ಣು. + +(ನಾಗೇಶ ಹೆಗಡೆ) + +ಅಂದು ಜಪಾನಿನಲ್ಲಿ ಎಲ್ಲೆಲ್ಲೂ ಕೈಗಾರಿಕಾ ಕ್ರಾಂತಿಯ ಈ ಎಲ್ಲ ದುರ್ಲಕ್ಷಣಗಳು ಕಾಣುತ್ತಿದ್ದವು. ಪಾದರಸದ ಅತಿ ಬಳಕೆಯಿಂದ ‘ಮಿನಾಮಾಟಾ ಕಾಯಿಲೆʼ ಮೈದಳೆದಿತ್ತು. ಕಡಲಂಚಿನ ಮಿನಾಮಾಟಾ ಎಂಬ ಊರಿನಲ್ಲಿ ಮೀನನ್ನು ತಿನ್ನುವ ಎಲ್ಲ ಜೀವಿಗಳೂ (ಬೆಕ್ಕು, ನಾಯಿ, ಮನುಷ್ಯ ಜೀವಿಗಳು, ಹಾರಾಡುವ ಪಕ್ಷಿಗಳು) ಕುಣಿಕುಣಿದು ತಲೆತಿರುಗಿ ಬಿದ್ದು ಸಾಯುತ್ತಿದ್ದವು. ಅದು ಅಂದಿನ ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ ಸಂಭವಿಸಿ ಎನ್ನಿಸಿತ್ತು. ನಮ್ಮ ಭೋಪಾಲ್‌ ದುರಂತದಂತೆ ಅದೇನೂ ಹಠಾತ್‌ ಸಂಭವಿಸಿರಲಿಲ್ಲ. ಕಾರ್ಖಾನೆಯೊಂದು ಮೀಥೈಲ್‌ ಮರ್ಕ್ಯುರಿ ಹೆಸರಿನ ಕೊಳೆಯನ್ನು ನೀರಿಗೆ ಹರಿಸುತ್ತಿರುವುದೇ ಕಾರಣ ಎಂಬುದು ಗೊತ್ತಾಗಲು ಇಪ್ಪತ್ತು ವರ್ಷಗಳೇ ಬೇಕಾದವು. ಇಂದು ಅಲ್ಲಿ ‘ಕೊಗಾಯ್‌ʼ ಪದ ಬಳಕೆಯಲ್ಲಿಲ್ಲ. ಜಪಾನ್‌ ಅದೆಷ್ಟು ತ್ವರಿತವಾಗಿ, ಅದೆಷ್ಟು ದಕ್ಷತೆಯಿಂದ ಮಾಲಿನ್ಯ ನಿವಾರಣಾ ಕ್ರಮಗಳನ್ನು ಜಾರಿಗೆ ತಂದಿತೆಂದರೆ -ಉದಾಹರಣೆಗೆ, ಕಾರುಗಳ ತಯಾರಿಕೆಗೆ ಬೇಕಿದ್ದ ಎಲ್ಲ ಲೋಹ, ಗಾಜು, ಪ್ಲಾಸ್ಟಿಕ್‌, ರಬ್ಬರ್‌ ಉತ್ಪಾದನಾ ಘಟಕಗಳೂ ಚೊಕ್ಕಟಗೊಂಡವು; ಹಾಗೆ ತಯಾರಾಗಿ ರಸ್ತೆಗಿಳಿಯುವ ಕಾರುಗಳ ಹೊಗೆ ಕೊಳವೆ, ಇಂಧನ ಕ್ಷಮತೆಯೂ ಸುಧಾರಿಸುತ್ತ, ಅಲ್ಲಿ ತಯಾರಾಗುವ ಉತ್ಪನ್ನಗಳು ಇತರ ದೇಶಗಳಿಗೂ ಮಾದರಿಯಾದವು. + +ನಾವೆಲ್ಲಿದ್ದೇವೆ? ನಿನ್ನೆಯ ಪಿಟಿಐ ವರದಿಯ ಪ್ರಕಾರ, ಜಗತ್ತಿನ 180 ದೇಶಗಳ ‘ಪರಿಸರ ನಿರ್ವಹಣಾ ಸೂಚ್ಯಂಕʼದ ಪ್ರಕಾರ ಡೆನ್ಮಾರ್ಕ್‌ ದೇಶ 78 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ, ಇಂಡಿಯಾ 19 ಅಂಕಗಳನ್ನು ಪಡೆದು ಕೊನೆಯ 180ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ಟರ್ಕಿ, ಸುಡಾನ್‌, ಹೈಟಿ, ಇಥಿಯೋಪಿಯಾದಂಥ ದೇಶಗಳು ಭಾರತಕ್ಕಿಂತ ಹೆಚ್ಚು ಗೌರವದ ಸ್ಥಾನದಲ್ಲಿವೆ. ಹಾಗೆಂದು ನಮ್ಮ ಸರಕಾರ ಘೋಷಿಸಿದ ಯೋಜನೆಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಸ್ವಚ್ಛ ಭಾರತ್‌, ಸಶಕ್ತ ಭಾರತ್‌, ಸಕ್ಷಮ ಭಾರತ್‌, ಸಮಗ್ರ ಭಾರತ್‌, ಸನಾತನ ಭಾರತ್‌ ಮುಂತಾದ ಸ-ಕಾರಾತ್ಮಕ ಯೋಜನೆಗಳು ಸಾಲುಗಟ್ಟಿ ಬರುತ್ತಿವೆ. ಆದರೂ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಭಾರತದ ಶ್ರೇಯಾಂಕ ಪದೇ ಪದೇ ಕುಸಿಯುತ್ತಿದೆ ಯಾಕೊ? + +ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ 1984ರಲ್ಲಿ ಭೋಪಾಲ್‌ನಲ್ಲಿ ಸಂಭವಿಸಿತು. ಕೀಟನಾಶಕ ವಿಷಗಳ ಉತ್ಪಾದನೆಗೆ ಬೇಕಿದ್ದ ಮೂಲ ಸಂಯುಕ್ತವನ್ನು (ಮೀಥೈಲ್‌ ಐಸೊಸೈನೇಟ್‌) ಭೋಪಾಲದ ಕಾರ್ಖಾನೆ ತಯಾರಿಸುತ್ತಿತ್ತು. ಅದು ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ ಎನ್ನಿಸಿತು. ಆ ದುರಂತ ನಡೆದ 15 ವರ್ಷಗಳ ನಂತರ ಎಂಡೊಸಲ್ಫಾನ್‌ ದುರಂತವೂ ಕಾಸರಗೋಡಿನಲ್ಲಿ ಬೆಳಕಿಗೆ ಬಂತು. ಅದೂ ಜಗತ್ತಿನ ಅತಿ ದೊಡ್ಡ ಕೃಷಿವಿಷದ ದುರಂತ. ನಾವು ಪಾಠ ಕಲಿತೆವೆ? ಬೇರೆ ದೇಶಗಳಲ್ಲಿ ನಿಷೇಧಿಸಲಾದ 66 ಬಗೆಯ ಕೀಟವಿಷಗಳು ಈಗಲೂ ನಮ್ಮಲ್ಲಿ ಬಳಕೆಯಲ್ಲಿವೆ. ಆ 66ರ ಪೈಕಿ ಮನುಷ್ಯನಿಗೆ ಮತ್ತು ಪ್ರಾಣಿಗಳಿಗೆ ಅಪಾಯ ತರಬಲ್ಲ 27ನ್ನು ನಿಷೇಧಿಸುವ ಪ್ರಸ್ತಾವನೆಯೇನೋ ಇದೆ. ನಿಷೇಧವಾಗಿಲ್ಲ ಇನ್ನೂ. ವಿಷವಸ್ತುಗಳ ಉತ್ಪಾದಕರಿಗೆ ಒಳ್ಳೆಯದಾಗಲೆಂದು ಈ ಪ್ರಸ್ತಾವನೆಯನ್ನೇ ಆದಷ್ಟು ದುರ್ಬಲಗೊಳಿಸುವ ಮತ್ತು ನೆಪಮಟ್ಟಕ್ಕಿಳಿಸುವ ಹುನ್ನಾರ ಕಾಣುತ್ತದೆಂಬ ಟೀಕೆ ಆಗಲೇ ಬಂದಿತ್ತು. ಈಗಂತೂ ನಿಷೇಧ ಎಂದರೆ ಹಿಜಾಬ್‌ ನಿಷೇಧ, ಧ್ವನಿವರ್ಧಕ ನಿಷೇಧದ ಚರ್ಚೆಗಳೇ ಮುನ್ನೆಲೆಗೆ ಬರುತ್ತಿವೆ ವಿನಾ ಜೀವರಕ್ಷಕ ವಿಷಯಗಳೆಲ್ಲ ಹಿನ್ನೆಲೆಗೆ ಹೋಗಿಬಿಟ್ಟಿವೆ. + +ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ. ಹಾಗೆಯೇ ಕೊಳಕು ಗಾಳಿಯ ವಿಸರ್ಜನೆಯ ಪ್ರಮಾಣ ಕಡಿಮೆಯಾಗಿದೆ ಎಂದು ನಮ್ಮ ದೊಡ್ಡ ನಗರಗಳಲ್ಲಿನ ಉಪಕರಣಗಳು ಸಾರುತ್ತವೆ. ಆದರೆ ಲಕ್ಷಾಂತರ ಸಣ್ಣಪುಟ್ಟ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುವವರೇ ಇಲ್ಲ. ಅದರ ಬದಲು ಒಟ್ಟೂ ಎಷ್ಟು ವಾಹನಗಳು ಮಾರಾಟವಾಗಿವೆ, ರಸ್ತೆಯಲ್ಲಿ 15 ವರ್ಷಗಳಿಗಿಂತ ಹಳೇ ವಾಹನಗಳು ಎಷ್ಟಿವೆ ಎಂಬುದರ ಲೆಕ್ಕ ಹಿಡಿದು ಹೊರಟರೆ ಗಾಳಿಯ ಗುಣಮಟ್ಟದ ನೈಜ ಚಿತ್ರಣ ಸಿಗುತ್ತದೆ. ಇಂಥ ಎಲ್ಲ ಲೆಕ್ಕಾಚಾರಗಳಲ್ಲೂ ನಮ್ಮ ದೇಶ ನಪಾಸಾದಂತಿದೆ. + + + +ಈ ವರ್ಷದ ‘ವಿಶ್ವ ಪರಿಸರ ದಿನʼ ಹಿಂದೆಂದಿಗಿಂತ ವಿಶೇಷದ್ದಾಗಿತ್ತು. ಐವತ್ತು ವರ್ಷಗಳ ಹಿಂದೆ, 1972ರಲ್ಲಿ ಸ್ವೀಡನ್ನಿನ ಸ್ಟಾಕ್‌ಹೋಮ್‌ ನಗರದಲ್ಲಿ “ಇರುವುದೊಂದೇ ಭೂಮಿ” ಹೆಸರಿನ ಮೊದಲ ಪರಿಸರ ಸಮ್ಮೇಳನ ನಡೆದಿತ್ತು. ಈ 50ನೇ ವರ್ಷದಲ್ಲಿ ಮತ್ತೊಮ್ಮೆ “ಸ್ಟಾಕ್‌ಹೋಮ್‌+50” ಹೆಸರಿನಲ್ಲಿ ಅಲ್ಲೇ ಅದೇ “ಇರುವುದೊಂದೇ ಭೂಮಿ” ಹೆಸರಿನ ಸಮಾವೇಶ ನಡೆಯಿತು. ಮನುಕುಲ ತನ್ನ ಹೊಣೆಯನ್ನು ಸೂಕ್ತವಾಗಿ ನಿಭಾಯಿಸುವುದನ್ನು ಕಲಿತಿದೆಯೆ ಎಂಬುದರ ಮೌಲ್ಯಮಾಪನ ನಡೆಯಿತು. ಕೆಲವು ರಾಷ್ಟ್ರಗಳು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದು ತಂತಮ್ಮ ನೆಲಜಲವನ್ನು ತಕ್ಕಮಟ್ಟಿಗೆ ಚೊಕ್ಕಟ ಇಟ್ಟುಕೊಂಡಿವೆ. ಯುರೋಪಿನ ಆರು ದೇಶಗಳ ಮೂಲಕ ಹಾದು ಹೋಗುವ ರೈನ್‌ (Rhine) ನದಿ ಸಮುದ್ರಕ್ಕೆ ಸೇರುವವರೆಗೂ ಚೊಕ್ಕಟವಾಗಿಯೇ ಇದೆ. ಆ ನದಿಯ ಒಂದೊಂದು ಹನಿಯೂ ಎಂಬತ್ತು ಬಾರಿ ಬಳಕೆಯಾಗಿ ಮತ್ತೆ ನದಿಗೆ ಸ್ವಚ್ಛ ಸ್ಥಿತಿಯಲ್ಲೇ ಸೇರುತ್ತದೆ ಎಂಬ ಪ್ರತೀತಿ ಇದೆ. ಅಲ್ಲಿನವರ ಆ ಮಟ್ಟಿನ ಪರಿಸರ ಪ್ರಜ್ಞೆಯನ್ನು ಮೆಚ್ಚಲೇಬೇಕು. ಆದರೆ ಇಡೀ ಪೃಥ್ವಿಯ ಸಾಮೂಹಿಕ ಆಸ್ತಿ ಎನಿಸಿದ ವಾಯುಮಂಡಲ ಮತ್ತು ಸಪ್ತಸಾಗರಗಳು ಈ 50 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಳೆಯನ್ನು ಸೇರಿಸಿಕೊಂಡಿವೆ. ಶ್ರೀಮಂತ, ಶಕ್ತಿವಂತ ದೇಶಗಳ ಬೇಜವಾಬ್ದಾರಿ ಜಾಸ್ತಿಯಾಗುತ್ತಿದೆ. ನಮ್ಮ ದೇಶದಲ್ಲೂ ಶ್ರೀಮಂತರು ತುಂಬಾ ದೊಡ್ಡ ಪ್ರಮಾಣದಲ್ಲಿ ಬಿಸಿಗಾಳಿಯನ್ನು ಹೊರ ಹೊಮ್ಮಿಸುತ್ತಾರೆ. ತಾಪಮಾನ ಏರಿಕೆಯ ದುಷ್ಫಲ ಮಾತ್ರ ಜಗತ್ತಿನೆಲ್ಲೆಡೆ ದುರ್ಬಲರಿಗೇ ಹೆಚ್ಚಾಗಿ ಬಡಿಯುತ್ತದೆ. + +ಕಳೆದ ವಾರ ಜಗತ್ತಿನ ಪ್ರತಿಷ್ಠಿತ 17 ವಿಜ್ಞಾನ ಸಂಸ್ಥೆಗಳ ತಜ್ಞರು ಒಂದು ಜಂಟಿ ಹೇಳಿಕೆಯನ್ನು ಪ್ರಕಟಿಸಿದರು. ಭೂಮಿಯನ್ನು ಮತ್ತೆ ಸುಸ್ಥಿತಿಗೆ ತರಲು ಹೆಚ್ಚು ಸಮಯ ಉಳಿದಿಲ್ಲ ಎಂದು ಎಚ್ಚರಿಸಿದರು. ನಾವೆಲ್ಲರೂ “ಉತ್ತಮ ನೆರೆಹೊರೆಯವರಾಗೋಣ, ಉತ್ತಮ ಪೂರ್ವಜರಾಗೋಣ” ಎಂದು ಕರೆ ಕೊಟ್ಟರು. ಪೂರ್ವಜರು ಅಂದಾಕ್ಷಣ ನಮಗಿಂತ ಹಿರಿಯರು ಎಂತಲೋ ಅಥವಾ ಇನ್ನೂ ಹಿಂದಿನ ವಾನರರೋ ಎಂಬ ಭಾವನೆ ಮೂಡುತ್ತದೆ. ಅದು ಹಾಗಲ್ಲ. ಮುಂದಿನ ಪೀಳಿಗೆಯ ಮಟ್ಟಿಗೆ ನಾವೂ ಒಂದಲ್ಲ ಒಂದು ದಿನ ಪೂರ್ವಜರೇ ಆಗುತ್ತೇವೆ ತಾನೆ? + + + +ನಮ್ಮ ಪೂರ್ವಜರ ಸಾಧನೆಗಳನ್ನು ಕೊಂಡಾಡಲು ಈಗೀಗ ನಾಮುಂದು, ತಾಮುಂದು ಎನ್ನುತ್ತ ಅನೇಕ ಸ್ವಯಂಘೋಷಿತ ಇತಿಹಾಸಕಾರರು ಉದ್ಭವಿಸುತ್ತಿದ್ದಾರೆ. ನಾಳಿನ ಇತಿಹಾಸ ನಮ್ಮನ್ನು ಹೇಗೆ ಬಣ್ಣಿಸಬಹುದು? ಉತ್ಖನನ ಮಾಡಿದಲ್ಲೆಲ್ಲ ಪ್ಲಾಸ್ಟಿಕ್‌ ಕಚಡಾ, ಹಳೇ ಟೈರ್‌, ಸ್ಯಾನಿಟರಿ ಪ್ಯಾಡ್‌, ಕಾಂಕ್ರೀಟ್‌ ಕಂಬಿ, ಕೇಬಲ್‌ ತಂತಿಗಳೇ ಸಿಗುತ್ತಿದ್ದರೆ? + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_135.txt b/Kenda Sampige/article_135.txt new file mode 100644 index 0000000000000000000000000000000000000000..d3e1425ff7a0dae150d1475835aa3a6364b4a53c --- /dev/null +++ b/Kenda Sampige/article_135.txt @@ -0,0 +1,45 @@ +ಚಾಂದ್‌ ಪಾಷಾ ಅವರು ತಮ್ಮ ಪದ್ಯಗಳ ಹೊಸ ಸಂಕಲನದ ಕರಡನ್ನು ನನಗೆ ಕಳಿಸಿದರು. ಅವುಗಳನ್ನು ನಾನು ಓದಿದ್ದು ಹೇಗೆಂದರೆ ಒಂದು ಮುಶಾಯಿರಾನಲ್ಲಿ ಉರಿಯುತ್ತಿರುವ ಮೇಣಬತ್ತಿಯನ್ನು ಕವಿಯ ಎದುರಿಗೆ ಹಿಡಿದು ‘ಇರ್ಷಾದ್’ ಎಂದ ಮೇಲೆ ಅವರು ಇಡೀ ಮಹಫಿಲ್‌ಗಾಗಿ ಓದಿದಂತೆ ಈ ಪದ್ಯಗಳನ್ನು ಕೇಳಿಸಿಕೊಂಡೆ. ಕಾರಣವೆಂದರೆ ಚಾಂದ್‌ ಪಾಷಾ ಅವರ ಪದ್ಯಗಳು ಕೇಳುಗಬ್ಬದ ಮಾದರಿಯವು. ಅವುಗಳಲ್ಲಿ ಕವಿಯ ದನಿ ಹಾಗೂ ವ್ಯಕ್ತಿತ್ವಗಳು (ಅಂದರೆ ಕಲ್ಪಿತ ವ್ಯಕ್ತಿತ್ವ) ಬಹುಮುಖ್ಯವಾದುದು. ಇಲ್ಲಿಯ ಅನೇಕ ಪದ್ಯಗಳು ಮುಶಾಯರಾಗಳಲ್ಲಿ ಓದಬೇಕಾದ ಗಜಲ್ ಶೈಲಿಯಲ್ಲಿವೆ. ದ್ವಿಪದಿ, ಛಂದಸ್ಸು ಇವುಗಳನ್ನು ಪಾಲಿಸುತ್ತವೆಯೆಂದಲ್ಲ. ಆದರೆ ಅವುಗಳ ಸತ್ವ ಇರುವುದು ನಿರೀಕ್ಷಿತ ಸ್ಥಾನದಲ್ಲಿ ಅನಿರೀಕ್ಷಿತ ಪದಪುಂಜಗಳು, ಪ್ರತಿಮೆಗಳು ಬಂದು ಅಚ್ಚರಿ, ಖುಷಿ ಹಾಗೂ ಮತ್ತೆ ಮತ್ತೆ ಮೆಲುಕುಹಾರುವಂತೆ ಮಾಡುವ ಲಯೆಗಳು ಹಾಗೂ wit ಎಂದು ಕರೆಯಬಹುದಾದ ಪದ ಮತ್ತು ಅರ್ಥಗಳ ಬಳಕೆಯ ಹಿಂದೆ ಇರುವ ಜಾಣ್ಮೆ ಇವೆಲ್ಲವುಗಳು ಉರ್ದು ಕಾವ್ಯದ ಮೂಲ ಸತ್ವವಾಗಿವೆ. ಇವನ್ನು ಮಹಫಿಲ್‌ನಲ್ಲಿ ಕುಳಿತು ‘ವಾಹ್ ವಾಹ್ʼ ಎಂದು ನಾವೂ ಪುನರುಚ್ಚಿಸಿ ಆಸ್ವಾದಿಸಬೇಕು. + +(ಚಾಂದ್‌ ಪಾಷ ಎನ್.ಎಸ್.) + +ದಖ್ಖಣದಿಂದ ಆರಂಭವಾಗಿ ಮೊಘಲರ ಉತ್ತರ ಭಾರತದಲ್ಲಿ ಹಬ್ಬಿ ಬೆಳೆದ ಈ ಅದ್ಭುತ ಕಾವ್ಯ ಸಂಸ್ಕೃತಿ ವಿಶ್ವ ಸಾಹಿತ್ಯದ ಅಪೂರ್ವ ಸಾಧನೆಗಳಲ್ಲಿ ಒಂದು. ನನ್ನ ದೃಷ್ಟಿಯಲ್ಲಿ ಚಾಂದ್‌ ಪಾಷಾ ಈ ಕಾವ್ಯ ಸಂಸ್ಕೃತಿಯ ವಾರಸುದಾರರಾಗಿರುವ, ಈಗಾಗಲೇ ಜನಪ್ರಿಯರಾಗಿರುವ ನಮ್ಮ ಶಾಯರ್, ವಿವಿಧ ಶೈಲಿಗಳಲ್ಲಿ ಅಷ್ಟೇ ಸಮರ್ಥವಾಗಿ ಬರೆದಾಗಲೂ ಅವರ ಕಾವ್ಯ ಕೇಳುಗರನ್ನು ಉದ್ದೇಶಿಸಿ ‘ಹೇಳುವ’ ಕಾವ್ಯವಾಗಿದೆ. ಹೈಸ್ಕೂಲ್‌ನಲ್ಲಿ ಹಿಂದಿ ಕಲಿತ ಮೇಲೆ ದೇವನಾಗರಿ ಲಿಪಿಯಲ್ಲಿ ಅಚ್ಚಾದ ಉರ್ದು ಕಾವ್ಯವನ್ನು ಹಿಂದ್ ಪಾಕೆಟ್ ಬುಕ್ಸ್‌ನಿಂದ ಪ್ರಕಟವಾದ, ಬಹುಪಾಲು ಪ್ರಕಾಶ್ ಪಂಡಿತರಿಂದ ಸಂಪಾದನೆಯಾದ ಪುಟ್ಟ ಪುಸ್ತಕಗಳಲ್ಲಿ ಓದತೊಡಗಿದೆ. ಅವುಗಳಲ್ಲಿ ಅಪರಿಚಿತ ಪದಗಳ ಅರ್ಥವನ್ನು ವಿವರಿಸುತ್ತಿದ್ದರಿಂದ ಅನುಕೂಲವಾಗುತ್ತಿತ್ತು. ಹೀಗೆ ಮೀರ್, ಝೌಕ್, ಗಾಲಿಬ್, ಜೋಶ್, ಸಾಹಿರ್ ಎಲ್ಲರನ್ನೂ ಓದಲು ಸಾಧ್ಯವಾಯಿತು. ಸಾಹಿರ್ ಈಗಲೂ ನನ್ನ ಆರಾಧ್ಯ ದೈವ. ಇದೆಲ್ಲ ಯಾಕೆ ನೆನಪು ಮಾಡಿಕೊಂಡೆಯೆಂದರೆ ಈ ಕಾವ್ಯವನ್ನು ಓದಿದ ಖುಷಿ, ಅಚ್ಚರಿ, ಮೆಚ್ಚುಗೆ ಇವೆಲ್ಲವೂ ಚಾಂದ್ ಪಾಷಾರ ಪದ್ಯಗಳನ್ನು ಓದಿದಾಗ ಅನ್ನಿಸಿದವು. ದುಂದುಗಾರಿಕೆಯ ಮಟ್ಟದ ಪ್ರತಿಮೆಗಳು ಅನಿರೀಕ್ಷಿತವಾದ ಅರೆಸಾಲುಗಳು ಮತ್ತು ನಾಟಕೀಯವಾದ ಮಾತಿನ ಗತ್ತು ಇವು ಹದಿಹರೆಯವನ್ನು ಮರುಕಳಿಸುವಷ್ಟು ಜೀವಂತವಾಗಿವೆ. ಉದಾಹರಣೆಗೆ ‘ಆಸ್ಮಾಳಿಗೆ’ ಎನ್ನುವ ಪದ್ಯದಲ್ಲಿನ ಈ ಸಾಲುಗಳು:‘ನಿನ್ನ ಅಮಲಿನಲ್ಲಿ ಕಳೆದು ಹೋದ ಎಷ್ಟೋ ಕವಿತೆಗಳು ಹಿಂತಿರುಗಲೇ ಇಲ್ಲಬಹುಶಃ ನನ್ನೆದೆಯ ವಿಳಾಸ ಮರೆತಿರಬಹುದು’ಅಥವಾ‘ದಾವೆ ಹೂಡಿದಾನಂತೆ’ ಪದ್ಯದ ಈ ಸಾಲು:‘ಈ ಗಂಧದ ಗೊಂಬೆಯ ಕಂಡು ಗಂಧರ್ವರೂ ಕೂಡ ಕಾಡುಗಳ್ಳರಾಗಿದ್ದಾರಂತೆ!’ + +ಇವುಗಳಲ್ಲಿ ಉದ್ದೇಶಪೂರ್ವಕವಾದ ಚಮತ್ಕಾರವಿದೆ. ಭಾಷೆಯೊಂದಿಗೆ ಆಟವಾಡುವ ಖುಷಿಯೂ ಇದೆ. ಆದರೆ ಬಹುಮುಖ್ಯವಾದ ಸೃಜನಶೀಲವಾದ ಒಂದು imagination ಇದೆ. ಇದು ಲೋಕವನ್ನು ಕಾಣುವ ದೃಷ್ಟಿಯೇ ಬಹು ವಿಶಿಷ್ಟವಾಗಿದೆ. + +“ಕಂಬಳಿಯ ಹೊದ್ದು ಮಲಗಿದ ನಕ್ಷತ್ರಗಳಿಗೂ ನೆಗಡಿಯಾಗಿದೆ”“ಚಳಿ ಹೆರುವ ಕಾರ್ಖಾನೆಯಾಯಿತೇ ಭೂಮಿ”(‘ಅವಳೆಂದರೆ ವಿಪರೀತ ಚಳಿಗಾಲ’) + +ಇವು ಸಾಂಪ್ರದಾಯಿಕವಾದ ಉಕ್ತಿ ವೈಚಿತ್ರ್ಯಕ್ಕಿಂತ ಭಿನ್ನವಾಗಿವೆ. ಇಡೀ ಪದ್ಯವೇ ಪ್ರೀತಿ ಜೀವನೋತ್ಸಾಹಗಳ ವಿಜೃಂಭಣೆಯಾಗಿದೆ. ಆದ್ದರಿಂದ‘ನೀ ಸಿಗುವ ಮೊದಲು ಚಳಿಗಿಷ್ಟು ಚರಿತ್ರೆ ಇರಲಿಲ್ಲ’ಎನ್ನುವ ಸಾಲು ಕೇಳುವ ಮಹಫಿಲ್ ‘ವಾಹ್’ ಅನ್ನುತ್ತದೆ. + +ಇದು ಕವಿ ವ್ಯಕ್ತಿತ್ವದ ಒಂದು ಮುಖವಾದರೆ ಇನ್ನೊಂದರಲ್ಲಿ ಧರ್ಮ, ಪ್ರಭುತ್ವ, ಗಂಡಾಳ್ವಿಕೆ, ಹಿಂಸೆಗಳಿಗೆ ತೀವ್ರವಾಗಿ ಮಿಡಿಯುವ ಪ್ರತಿಭಟಿಸುವ ಕೆಚ್ಚಿದೆ. ಹಾಗೆ ನೋಡಿದರೆ ಇದು ಉರ್ದು ಕಾವ್ಯಕ್ಕೆ ಹೊಸತಲ್ಲ, ಗಾಲಿಬ್, ಜಿಗರ್ ಮತ್ತು ಸಾಹಿರ್‍ರು ಸಮಕಾಲೀನ ಸಮಾಜದ ಬಗ್ಗೆ ವ್ಯಂಗ್ಯವಾಗಿ, ವ್ಯಗ್ರವಾಗಿ ಸ್ಪಂದಿಸಿದ್ದಾರೆ. ನನಗೆ ನೆನಪಿರುವಂತೆ ನಜ್ಮ ಎಂಬ ಪ್ರಕಾರವು ಇಂಥ ವಸ್ತುವಿಗೆ ಮೀಸಲಾಗಿದ್ದ ಪ್ರಕಾರವಾಗಿದೆ. ಆದರೆ ಚಾಂದ್ ಪಾಷಾರ ಈ ವಸ್ತುವಿನ ಪದ್ಯಗಳ ಹಿಂದೆ ಬಂಡಾಯ-ದಲಿತ ಕಾವ್ಯವಿದೆ. ಅಲ್ಲದೆ ಅವರಿಗೇ ವಿಶಿಷ್ಟವಾದ ವ್ಯಗ್ರತೆ ಇದೆ. ಸುತ್ತು ಬಳಸದೇ ನೇರವಾಗಿ ತಮ್ಮ ಕಾವ್ಯದ ಹತಾರವನ್ನು ಬಳಸುವ ಸ್ವಭಾವವೂ ಇದೆ. + +“ದವಾಖಾನೆಗಳ ತೆರೆಯಲಾಗದ ಈ ಬಡದೇಶದಲ್ಲಿಮುಗಿಲಿಗೆ ಮುತ್ತಿದಂಥ ಪುತ್ಥಳಿ ನಿಲ್ಲಿಸಿಕಾವಲಿಗೆ ಬಡರೋಗಿಯನ್ನೇ ನೇಮಿಸಿದ್ದೇವೆ’.“ಬೆಂಕಿ ಹಚ್ಚುವವರ ಕೈಗೆ ದೇಶ ಕೊಟ್ಟು,ಸುಟ್ಟ ಗಾಯಕ್ಕೆ ಔಷಧಿ ಹುಡುಕುತ್ತಿದ್ದೇವೆ”(‘ಅಲೆಮಾರಿಯ ಅಂಗಾಲು’) + +ಇಂಥ ರಾಜಕೀಯ ಪದ್ಯಗಳು ವೇದಿಕೆಯಿಂದ ನೇರವಾಗಿ ಕೇಳುಗರಿಗೆ ತಲುಪುವಂಥ ಮಾದರಿಯ ಪದ್ಯಗಳು. ಆದರೆ ಇವು ಪ್ರಚಾರ ಪ್ರಿಯತೆಗಾಗಿ ಬರೆದ ಪದ್ಯಗಳಲ್ಲ. ಸದ್ಯದ ಸ್ಥಿತಿಯಲ್ಲಿ ಕಾವ್ಯಕ್ಕೆ ಇರಬೇಕಾದ ಸಮಾಜಮುಖಿ ಬದ್ಧತೆಯ ಎಚ್ಚರದಿಂದ ಬರೆದ ಪದ್ಯಗಳು. ಈ ಪದ್ಯಗಳಲ್ಲಿ ಕೂಡ ಚಾಂದ್‌ ಪಾಷಾ ಭಾಷೆಯನ್ನು ಪ್ರಯೋಗಶೀಲವಾಗಿ ಬಳಸುತ್ತಾರೆ. ಹರಿತವಾದ ವ್ಯಂಗ್ಯದೊಂದಿಗೆ ಪ್ರತಿಮೆಗಳು, ರೂಪಕಗಳು ನುಗ್ಗಿ ಬರುತ್ತವೆ. + + + +“ನಿಮ್ಮ ಧರ್ಮದ ತಕ್ಕಡಿಯಲ್ಲಿ ತೂಗದೇ ಸತ್ತ ನಮ್ಮಹಸಿವಿನ ಗುಜರಿ ಐಟಂಗಳೆಲ್ಲನಿಮ್ಮದೇ, ಶಾಸ್ತ್ರ, ಪುರಾಣಗಳ ಸ್ಮಶಾನದಲ್ಲಿ ಗೋರಿಯಾಗಿವೆ” + +*** + +“ನಾವು ನಿಮ್ಮ ಮುಕ್ಕೋಟಿ ದೇವತೆಗಳನ್ನು ತಿನ್ನುತ್ತಿಲ್ಲನಮ್ಮ ಅನ್ನವನ್ನಷ್ಟೇ ತಿನ್ನುತ್ತಿದ್ದೇವೆ.ಶತಮಾನದಿಂದಲೂ ಹಸಿದ ಬದುಕಿಗೆ ಆಹಾರವಾದದನದ ಮಾಂಸವನ್ನಷ್ಟೇ ತಿನ್ನುತ್ತಿದ್ದೇವೆ.ನಿಮ್ಮ ಕಾಮಧೇನುವನ್ನಲ್ಲ”‘ಹಸಿವು’ + +ಈ ಸಾಲುಗಳನ್ನು ಓದಿದಾಗ ನನಗೆ ಎನ್.ಕೆ. ಹನುಮಂತಯ್ಯನವರ ‘ಗೋವನ್ನು ತಿಂದು’ ಪದ್ಯವು ನೆನಪಾಯಿತು. ಚಾಂದ್‌ ಪಾಷಾ ಅವರ ಕಾವ್ಯ ಸದ್ಯದ ಹಂಗಿನ ಕಾವ್ಯ. ಹೀಗಾಗಿ ಹಿಜಾಬ್, ಆಹಾರ ರಾಜಕೀಯ, ಕೋಮುವಾದ ಇವುಗಳಿಗೆ ಈ ಪದ್ಯಗಳು ತೀವ್ರವಾಗಿ ಸ್ಪಂದಿಸುತ್ತವೆ. ಎದುರಿಸಿ ನಿಲ್ಲುವ, ಸವಾಲು ಹಾಕುವ ದನಿಯ ಪದ್ಯಗಳು ಇವು. ಆದರೆ ಇನ್ನೂ ಅನೇಕ ಪದ್ಯಗಳಲ್ಲಿ ಗಾಢವಾದ ವಿಷಾದವಿದೆ. ಬದುಕಿನ ದುರಂತಗಳ ಗಾಢವಾದ ಅರಿವೂ ಇದೆ. ‘ಬೂದಿಯಾದವರು’ ಇಂಥ ಒಂದು ಪ್ರಭಾವಿಯಾದ ಪದ್ಯ. ಇದರಲ್ಲಿ ಚಂದ್ರಮತಿ, ಪಾಂಚಾಲಿ, ಗಾಂಧಾರಿ, ಅಕ್ಕ, ಅಹಲ್ಯೆ, ಸೀತೆ ಇವರೆಲ್ಲ ಇದ್ದಾರೆ. + +“ತೇಪೆ ಹಚ್ಚಿಕೊಂಡ ಬದುಕಿಗೇನು ಗೊತ್ತು?ಗಾಂಧಾರಿಯ ಕಣ್ಣರೆಪ್ಪೆಯ ಹೊಲಿಗೆ ಎಷ್ಟು ಮಜುಬೂತಾಗಿದೆ ಎಂದು!” + +ಇಡೀ ಪದ್ಯದಲ್ಲಿ ಪ್ರಶ್ನಿಸಿ, ಕಟ್ಟಳೆಗಳನ್ನು ಮುರಿದ ಹೆಣ್ಣು ವ್ಯಕ್ತಿತ್ವಗಳು ಇನ್ನೂ ನೆಲೆಸಿಕ್ಕದೆ, ಚರಿತ್ರೆ, ಪುರಾಣಗಳ ನೆನಪುಗಳಲ್ಲಿ ಅನಾಥ, ಅಲೆಮಾರಿಗಳ ಹಾಗೆ ಅಲೆಯುತ್ತಿವೆ. ಹೆಣ್ಣು, ಬಟ್ಟೆ ತೊಟ್ಟಿದ್ದಕ್ಕಿಂತ ಗಂಡಸಿನ ಕಣ್ಣು ತೊಟ್ಟದ್ದೇ ಹೆಚ್ಚು’ ಆಗಿರುವುದರಿಂದ ಈಗ ಹಿಜಾಬು, ಧರಿಸಿದ್ದಕ್ಕಾಗಿ ಶಾಲೆಯೊಳಗೆ ಹೋಗದೆ ಹೊರಗಾಗಿ ಹೊರಗೆ ಇದ್ದಾಳೆ. ಜೀವ ಜಲ ಹುಡುಕಿ, ಅಗೆದು ಬಾವಿ ತೋಡುವವರಿಗೆ ಬಾಯಾರಿಕೆಗೂ ನೀರಿಲ್ಲ. ಮನುಷ್ಯರಿಗೆ ಸಿಕ್ಕದ ನೀರು ತುಳಸಿಕಟ್ಟೆಗೆ ಹೋಗುತ್ತದೆ. ನಾವೇ ಸೃಷ್ಟಿಸಿರುವ ಈ ನರಕಗಳ ನಡುವೆ ನೆನಪಾಗುವುದು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಮತ್ತು ಬಾಬಾ ಸಾಹೇಬರು. ಒಂದು ಗುಂಡಿಗೆಗೆ ಗುಂಡಿಟ್ಟು ಕೊಂದರೇನಂತೆ ನೂರು ಗುಂಡಿಗೆಗಳು ಸನ್ನದ್ಧವಾಗಿವೆ ಎಂದು ಗೌರಿ ಲಂಕೇಶರ ನೆನಪಿನ ಪದ್ಯದಲ್ಲಿ ಹೇಳುವ ಎದೆಗಾರಿಕೆ ಕವಿಗೆ ಇದೆ. + +ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್‌ ಪಾಷಾ ತೋರಿದ್ದಾರೆ. ಒಂದು ಪದ್ಯದಲ್ಲಿ ಮಮತಾ ಸಾಗರ ಕಾವ್ಯದ ಬಗ್ಗೆ ಹೇಳಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. + +(ಡಾ. ರಾಜೇಂದ್ರ ಚೆನ್ನಿ) + +“ಕವಿತೆ ಹುಟ್ಟುವುದಲ್ಲ ಕಟ್ಟುವುದು, ನೀಲಾಕಾಶದ ನಿಹಾರಿಕೆಗಳನೋವು ಗೊತ್ತಿರಬೇಕು ಅಂದಿದ್ದಿರಿ.ನಾನೀಗ ನೂರು ನೋವಿನ ನೆನಪು ಹೆಣೆದು ಒಂದೇ ಪದ್ಯ ಬರೆಯುತ್ತಿದ್ದೇನೆ” + +ಒಬ್ಬ ಪ್ರತಿಭಾವಂತ ಯುವ ಕವಿಗೆ ಮಮತಾ ಹೇಳಿದ ಮಾತಿಗಿಂತ ಉತ್ತಮ ಮಾರ್ಗದರ್ಶನ ಇರಲಾರದು. ಕವಿತೆ ಕಟ್ಟುವುದು ಅಪಾರವಾದ ತಾಳ್ಮೆ, ಚಿಂತನೆ ಹಾಗೂ ಜೀವನದ ಬಗ್ಗೆ ಗಂಭೀರವಾದ ಚಿಂತನೆಯನ್ನು ಬಯಸುತ್ತದೆ. ಇಂಥ ಪ್ರಯತ್ನವನ್ನು ‘ಒದ್ದೆಗಣ್ಣಿನ ರಾತ್ರಿ’ ಯಂಥ ಪದ್ಯದಲ್ಲಿ ಕಾಣಬಹುದಾಗಿದೆ. ಈ ಪ್ರಯತ್ನವು ಹೀಗೇ ನಡೆಯುತ್ತಿರಲಿ ಎಂದು ಹಾರೈಸುತ್ತೇನೆ. + + + +“ಮಗ್ಗಲು ಬದಲಿಸಿದಂತೆಲ್ಲ ದುಃಖದ ದೋಣಿಗಳು ತೇಲುತ್ತಲೆ ಇವೆ, ಮುಳುಗುವ ಭಯವಿಲ್ಲದೆ” ಎನ್ನುವ ತಿಳುವಳಿಕೆ ಈ ಪದ್ಯದಲ್ಲಿದೆ. ಇದು ಕವಿಯ ಜೊತೆಗೆ ಸದಾ ಇರಲಿ. ಈ ಪದ್ಯಗಳಲ್ಲಿ ಮತ್ತೆ ಮತ್ತೆ ಅವರಿಗೆ ನೆನಪಾಗುವ ವಚನಕಾರರ ‘ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ’ ಪ್ರಜ್ಞೆಯ ವಿಸ್ತಾರವು ಅವರಿಗೆ ಲಭಿಸಲಿ ಎಂದೂ ಆಶಿಸುತ್ತೇನೆ. ಈ ಪದ್ಯಗಳು ನನಗೆ ನೀಡಿದ ಖುಷಿಗಾಗಿ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_136.txt b/Kenda Sampige/article_136.txt new file mode 100644 index 0000000000000000000000000000000000000000..4d846d176bb9660517e476e6a256ee10de7f133c --- /dev/null +++ b/Kenda Sampige/article_136.txt @@ -0,0 +1,11 @@ +ನನಗೆ ಮೊದಲ ಆಶ್ಚರ್ಯ ಮತ್ತು ಇವರ ಬಗ್ಗೆ ವೈಶಿಷ್ಟತೆಯ ಸೋಜಿಗ ಏನೆಂದರೆ ಇವರು ಹೇಗೆ ಕಥೆ ಬರೆಯುವದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂಬುದು. ಯಾಕೆ ಈ ಮಾತು ಅಂದ್ರೆ ಶೆಲ್ಲಿಕೇರಿಯವರು ಕೆ ಎ ಎಸ್ ಪಾಸಾಗಿ ಉನ್ನತ ಹುದ್ದೆಯಲ್ಲಿರುವವರು. ಕಚೇರಿಯ ಕೆಲಸದಿಂದ ವೇಳೆ ಸಿಗುವುದೇ ಕಷ್ಟ ಅನ್ನುವಾಗ ಇವರು ಕಥೆ, ಕವನ ಎಂದು ಬರೆಯುವುದರಲ್ಲಿ ತೊಡಗಿಸಿಕೊಂಡದ್ದು ಸ್ವಲ್ಪ ವಿಸ್ಮಯವೇ ಸರಿ. + +(ಮಲ್ಲಿಕಾರ್ಜುನ ಶೆಲ್ಲಿಕೇರಿ) + +ಸಂಕಲನದಲ್ಲಿರುವ ಎಂಟೂ ಕಥೆಗಳು ಗ್ರಾಮದ ಜೀವನ, ಭಾಷೆ, ವೃತ್ತಿ, ಹವ್ಯಾಸ ಮತ್ತು ಸಂಪ್ರದಾಯಗಳಿಗೆ ಸಂಬಂಧಪಟ್ಟವುಗಳಾಗಿವೆ. ನಾನು ಓದಿದ ಹಲವು ಕಥೆಗಾರರು ಗ್ರಾಮ ಜೀವನವನ್ನು ಬಹಳ ಶಕ್ತಿಯುತವಾಗಿ ಕಥೆಗಳಲ್ಲಿ ಚಿತ್ರಿಸುತ್ತಿದ್ದಾರೆ. ಅವರಲ್ಲಿ ಶೆಲ್ಲಿಕೇರಿಯವರು ಒಬ್ಬರು. ಆ ತರಹದ ಗ್ರಾಮ್ಯ ಜೀವನ ಅನುಭವವಿದ್ದವರಿಗೆ ಮಾತ್ರ ಸಾಧ್ಯವಾಗುತ್ತದೆ. + +ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ. “ದೀಡೆಕರೆ ಜಮೀನು” ಕಥೆಯಲ್ಲಿ ಪಾತ್ರ ಹೆಚ್ಚಿನ ಜಮೀನನ್ನು ನಿರಾಕರಿಸಿ, ಬರೀ ಸ್ವಲ್ಪದರಲ್ಲೇ ತೃಪ್ತಿಹೊಂದುವುದು ಅನುಕರಣೀಯವಾದರೂ ಕೊನೆಗೆ ಪ್ರಾಮಾಣಿಕತೆ ಮತ್ತು ಸರಳತೆಯ ಸೋಲುಂಟಾಗುತ್ತದೆ. + +“ದಿವ್ಯ ಮೌನದ ಸಂತ” ಕಥೆಯಲ್ಲಿ ಕಥೆಗಾರರು ಅಧ್ಯಾತ್ಮದೊಂದಿಗೆ ಮೌನದ ಬಗ್ಗೆ ಅತಿ ವಿವರವಾಗಿ ವಿಶ್ಲೇಷಿಸಿದ್ದು ಸಂತೋಷ ಕೊಡುತ್ತದೆ. ಕೆಲವು ಕಥೆಗಳಲ್ಲಿ ಕಥೆಯ ವಿಷಯ ಕಡಿಮೆ ಅನಿಸಿದರೂ ಅವುಗಳಿಗೆ ಸಂಭಾಷಣೆಯು ಪುಷ್ಟಿ ನೀಡಿದೆ. ಈ ಎಲ್ಲಾ ಕಥೆಗಳಲ್ಲಿ ಇನ್ನೊಂದು ವೈಶಿಷ್ಟವೇನೆಂದರೆ ಎಲ್ಲವೂ ವರ್ತಮಾನದಲ್ಲಿ ಇದ್ದುಕೊಂಡೇ ಭೂತಕಾಲಕ್ಕೆ ಹೋಗಿ ಕಥೆ ಹೇಳುವ ಫ್ಲ್ಯಾಷ್‌ಬ್ಯಾಕ್ ತಂತ್ರವನ್ನು ಕಥೆಗಾರ ಬಳಸಿದ್ದಾರೆ. ಪ್ರತೀ ಕಥೆಯಲ್ಲಿ ನೋವು, ಸಂಕಟ, ಕ್ರೌರ್ಯ, ದುರಂತಗಳೇ ರಾರಾಜಿಸುತ್ತವೆ. ಒಳ್ಳೆತನವೆನ್ನುವುದು ಕಸಕಸೆಯಷ್ಟು ಮಾತ್ರ ಈ ಜಗತ್ತಿನಲ್ಲಿ ಉಳಿಯುತ್ತಿದೆ ಎನ್ನುವುದು ಸಾಬೀತಾಗುತ್ತಿದೆ. ಇದು ಸಮಾಧಾನಕರವೂ ಹೌದು. + +ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ \ No newline at end of file diff --git a/Kenda Sampige/article_137.txt b/Kenda Sampige/article_137.txt new file mode 100644 index 0000000000000000000000000000000000000000..1a23146d507118571a05d95775be70fc65818cf1 --- /dev/null +++ b/Kenda Sampige/article_137.txt @@ -0,0 +1,19 @@ +ಇಲ್ಲಿನ ಹಲವು ಕತೆಗಳು ಕೆಳ ಮಧ್ಯಮ ವರ್ಗದ ದಿನ ದಿನದ ಬದುಕಿನ ಮಂದ್ರ ಸ್ಥಾಯಿಯನ್ನು ನಮ್ಮ ಮುಂದಿಟ್ಟು ಮುಂದಕ್ಕೆ ಹೋಗುತ್ತದೆ. ಹೆಚ್ಚಿನವು ದಂದುಗ, ಬವಣೆ, ಒಂದು ನೋವಿನೆಳೆ, ಒಂದು ನಿಟ್ಟುಸಿರಿನಲ್ಲಿ ಮುಗಿಯುತ್ತದೆ. ಉತ್ತರವಿಲ್ಲದ ಈ ದಿನ ದಿನದ ಬದುಕಿನ ಪುಟಗಳು ವ್ಯಕ್ತಿಗಳ ಸಮಸ್ಯೆಯೋ, ವ್ಯವಸ್ಥೆಯ ಸಮಸ್ಯೆಯೋ ಎಂಬುದನ್ನು ಕತೆ ಹೆಚ್ಚು ಯೋಚಿಸುವುದಿಲ್ಲವಾದರೂ ಅವುಗಳಿಗೊಂದು ಕಿವಿಯಾಗಿ ಕತೆಯ ರೂಪ ಧರಿಸಿದೆ. + +(ವಿಜಯಾ ಮೋಹನ್‌) + +ಇದರಲ್ಲಿ ವ್ಯಕ್ತಿಗಳ ಸಮಸ್ಯೆಯೂ, ವ್ಯವಸ್ಥೆಯ ಅವ್ಯವಸ್ಥೆಯಿಂದಾಗಿ ಹುಟ್ಟಿದ ಸಮಸ್ಯೆಗಳೂ ಕತೆಗಳಾಗಿವೆ. ದನಗಳಿಗೆ ಮೇವು ಇಲ್ಲದಿರುವ ಸಮಸ್ಯೆ, ಕೋವಿಡ್‌ನ ಕಾಲದ ವಲಸೆ ಸಮಸ್ಯೆ, ಸರ್ಕಾರವೇ ಸಬ್ಸಿಡಿ ನೀಡಿದಾಗಲೂ ಹಣಹೊಡೆಯುವ ದುರಾಸೆಗೆ ಬಿದ್ದು ಶೌಚಾಲಯವನ್ನು ಕಟ್ಟಿಕೊಳ್ಳದೆ ಮನೆಯ ಸೊಸೆ ಬೀದಿಯಲ್ಲಿ ಹೆತ್ತ ಮಗು ಬೀದಿನಾಯಿಗಳ ಪಾಲಾಗುವ ದಾರುಣತೆ, ಹೀಗೆ ಹಲವು ಮುಖಗಳು ಇಲ್ಲಿವೆ. ವಿಜ್ಞಾನ ಓದಿಯೂ ಮೌಢ್ಯ ಪೊರೆವ, ಯಾವ ತಪ್ಪು ಮಾಡದೆಯೂ ಮತ್ತೆ ಮತ್ತೆ ತಪ್ಪಿತಸ್ಥನೆನಿಸಿಕೊಳ್ಳುವ ದುರಾದೃಷ್ಟಕ್ಕೆ ಒಳಗಾದ ವ್ಯಕ್ತಿನೆಲೆಯ ಕತೆಯ ಜೊತೆಗೆ ಸಂಬಂಧಗಳ ನಡುವೆ ಬಿರುಕು ಬಂದಿರುವ ಆಧುನಿಕ ಜೀವನಶೈಲಿಯ ಪರಿಣಾಮಗಳನ್ನು ಹೇಳುವ ಕತೆಗಳೆಡೆಗೆ ಲೇಖಕಿಯ ಗಮನವಿದೆ. ತಾಯಿಯನ್ನು ನೋಡಿಕೊಳ್ಳಲು ಲೆಕ್ಕಾಚಾರ ಹಾಕುವ ಮಕ್ಕಳು ಮತ್ತು ಕೊನೆಗೂ ಆ ಬಗ್ಗೆ ಅಪರಾಧಿ ಭಾವ ಹೊಂದಿ ತಾಯಿಗಾಗಿ ಮನೆಯನ್ನೇ ಬಿಡುವ ಮಗನ ಕತೆಯಾದ ‘ನಿರ್ಧಾರ’, ಜೀವನದುದ್ದಕ್ಕೂ ಊರಿನಲ್ಲಿ ಹಲವರಿಗೆ ಪಂಚಾಯಿತಿ ಮಾಡಿ ಪರಿಹಾರದ ಪರೋಪಕಾರ ಮಾಡುತ್ತಾ ಸಣ್ಣ ಮಟ್ಟದಲ್ಲಿ ನಾಯಕನಂತೆ ಬದುಕಿದ ರಂಗಣ್ಣನ ಈ ಗುಣವೇ ಅವನ ಜೀವನ ಸಂಜೆಯಲ್ಲಿ ಅಧಿಕಪ್ರಸಂಗಿತನವಾಗಿ ಸ್ವತಃ ಹೆತ್ತ ಮಗನಿಗೂ, ಊರಿನ ಹೊಸ ತಲೆಮಾರಿನವರಿಗೂ ಕಾಣಿಸುವ, ಸಂಪೂರ್ಣವಾಗಿ ಸಾಮುದಾಯಿಕ ಬದುಕೆಂಬುದು ಅಧಃಪತನಕ್ಕೆ ಹೋಗಿರುವ ಸನ್ನಿವೇಶದಲ್ಲಿ ಅದಕ್ಕಾಗಿ ಪದೇ ಪದೇ ಅವಮಾನಕ್ಕೆ ಒಳಗಾಗುವ ಹಾಗೂ ಅಂತಿಮವಾಗಿ ವೃದ್ಧಾಶ್ರಮಕ್ಕೆ ಆತನನ್ನು ಸೇರಿಸಲು ಅದೇ ನೆಪವಾಗುವ ದುರಂತವನ್ನು ‘ತಪ್ಪು ಕಥೆ’ ಹೇಳುತ್ತದೆ. ಇಲ್ಲೆಲ್ಲಾ ಗಮನಿಸಬೇಕಾದ ಸಂಗತಿಯೆಂದರೆ, ಭೌತಿಕ ಸವಲತ್ತಿನ ಬೆನ್ನು ಬಿದ್ದಿರುವ ಇಂದಿನ ಜೀವನದಲ್ಲಿ, ಮನುಷ್ಯ ಸಂಬಂಧಗಳ ಚೆಲುವಿನೆಡೆಗೆ ಇರುವ ಗಾಢ ಅವಜ್ಞೆಯು ಹೇಗೆ ತಮ್ಮ ಬದುಕುಗಳ ಸುಖವನ್ನು ನುಂಗುತ್ತಿದೆ ಎಂಬುದು ಸ್ವತಃ ಶೋಷಣೆ ಮಾಡುವವರಿಗೇ ತಿಳಿಯದೇ ಹೋಗುವುದು. ಎಲ್ಲೆಲ್ಲೂ ‘ಅನ್ಯತೆ’ ಎಂಬುದು ಮೌಲ್ಯವಾಗಿ ಬದುಕು ದಿಕ್ಕಾಪಾಲಾಗಿರುವುದು. + + + +ವಿಜಯಾ ಮೋಹನ್ ಅವರು ಮಧುಗಿರಿಯ ಅಚ್ಚ ನುಡಿಯಲ್ಲಿ ಬರೆಯುವವರು. ಈ ಸಂಕಲನದಲ್ಲಿ ಸ್ವಲ್ಪ ಭಾಷೆಯನ್ನು ತಿಳಿಯಾಗಿಸಿ ಓದುಗರನ್ನು ತಲುಪುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕೇವಲ ಸಂಭಾಷಣೆಗೆ ಮಾತ್ರ ಆಡುನುಡಿಯನ್ನು ಬಳಸಿಕೊಳ್ಳುವ ಒಂದು ಕ್ರಮ ಕನ್ನಡದಲ್ಲಿದೆ. ಆದರೆ ವಿಜಯಾ ಅವರು ಈ ಮಾದರಿಯಲ್ಲಿ ಬರೆಯುವವರಲ್ಲ. ಅವರ ಕತೆಗಳಲ್ಲಿ ಸಂಭಾಷಣೆಗಿಂತ ನಿರೂಪಣೆಯೇ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕತೆಯ ಪೂರ್ಣ ಹೆಣಿಗೆ ಆಡುಮಾತಿನಲ್ಲೇ ಇರುತ್ತದೆ. ಆಡುವ ನುಡಿಯಂತೆಯೇ ಬರವಣಿಗೆಯೂ ಇರುತ್ತಾ, ನಿರೂಪಣೆಯಲ್ಲೇ ‘ಹ’ಕಾರ ‘ಅ’ಕಾರಗಳ ಅದಲು ಬದಲುಗಳೂ ಸೇರಿಕೊಂಡು ಇತರ ಸ್ಥಳೀಯ ಪದಗಳ ಬಳಕೆಯೂ ಹಾಗೇ ದಾಖಲಾಗುತ್ತದೆ. ಇದು ಕೆಲವೊಮ್ಮೆ ಭಾಷೆಯ ಬಳಕೆಯ ಬಗೆಗೆ ‘ಮಡಿವಂತಿಕೆ’ ಹೊಂದಿದ್ದು, ತಮ್ಮದೇ ಸರಿ ಕನ್ನಡ, ಇದೆಲ್ಲ ‘ಅಶುದ್ಧ’ ಕನ್ನಡ ಎಂದುಕೊಳ್ಳುವವರಿಗೆ ಇರಿಸು ಮುರಿಸು ಮಾಡಬಹುದು. ಆದರೆ ಇವು ಆಡುಕನ್ನಡದ ಒಂದು ಟಿಸಿಲು ಎಂದು ಅರಿತರೆ ಸಮಸ್ಯೆ ಅನ್ನಿಸದು. ಹಾಗೆ ನೋಡಹೋದರೆ, ಅವರು ಬಳಸುವ ದಟ್ಟ ಮಧುಗಿರಿಯ ಭಾಷೆಯೇ ಅವರ ಕತೆಗಳ ವೈಶಿಷ್ಟ್ಯ ಅನ್ನುವುದು ಈ ಸಂಕಲನದ ಭಾಷೆಗೆ ಹೋಲಿಸಿದಾಗ ನಿಚ್ಚಳವಾಗುತ್ತದೆ. ಆದ್ದರಿಂದ ವಿಜಯಾ ಅವರಿಗೆ ಈ ಸವಾಲು ಅವರ ಮುಂದಿದೆ. ಅಂದರೆ, ಕತೆಯು ಬಯಸಿದ ಭಾಷೆಯನ್ನು ಬಳಸಬೇಕೋ, ನಮ್ಮ ಆಯ್ಕೆಯ ಭಾಷೆ ಬಳಸುವುದೇ ಆದರೆ ಕತೆಯ ತಂತ್ರ, ಆಶಯಗಳನ್ನು ಪುನರ್‍ನಿರ್ಮಿಸಿಕೊಳ್ಳಬೇಕೋ ಅನ್ನುವುದು ಆ ಸವಾಲು. ನನಗನಿಸುತ್ತದೆ, ವಿಜಯಾ ಅವರು ಇನ್ನು ಮುಂದೆ ಬದುಕಿನ ಇನ್ನಷ್ಟು ಮಗ್ಗುಲುಗಳನ್ನು ಶೋಧಿಸಬೇಕಾದ ಅನಿವಾರ್ಯತೆಗೆ ಸಿಲುಕುವಷ್ಟರ ಮಟ್ಟಿಗೆ ಈಗಾಗಲೇ ಬರೆದಿರುವ ಕತೆಗಳು ಒಂದು ಹಂತವನ್ನು ದಾಟಿವೆ ಅಂತ. + +(ಡಾ. ಸಬಿತಾ ಬನ್ನಾಡಿ) + +ಈ ಸಂಕಲನದಲ್ಲಿ ಅಂತಹದೊಂದು ಪ್ರಯತ್ನ ನನಗೆ ‘ಹಣೆ ಬರ’ ಕತೆಯಲ್ಲಿ ಕಂಡಿದೆ. ಈ ಕತೆಯಲ್ಲಿ ಎಂದಿನಂತೆ ಬವಣೆ, ಸಂಕಟಗಳಿಗೆ ಕಿವಿಯಾಗುವುದಷ್ಟೇ ಇಲ್ಲದೆ, ಜನಪದರು ಎಷ್ಟೋ ಸಲ ಸಿದ್ಧ ಚೌಕಟ್ಟುಗಳ ಬದುಕಿನ ಎಲ್ಲೆಯನ್ನು ಮೀರಿ ತಮ್ಮದೇ ಬದುಕು ಕಟ್ಟಿಕೊಳ್ಳುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾರೆ ಎನ್ನುವುದರ ಚಿತ್ರಣ ಇದೆ. ಈಗ ನಳಿನಾ ಆಗಿರುವ ನಂಜಮ್ಮ, ಬಾಲ್ಯದಿಂದಲೇ ಕಷ್ಟದ ಬದುಕು ಕಂಡವಳು. ಮದುವೆಯಾಗಿ ಎರಡು ಮಕ್ಕಳಾದ ಮೇಲೂ ವಿಷಮ ದಾಂಪತ್ಯದ ಕಾಠಿಣ್ಯದ ದುಃಖದಲ್ಲಿಯೇ ಇರುವವಳು. ಹೀಗಿರುವಾಗ ಆಕಸ್ಮಿಕವಾಗಿ ಒದಗುವ ರುದ್ರಣ್ಣನ ಪ್ರೇಮ ನಿವೇದನೆಯನ್ನು ಒಪ್ಪಿ ಅವನೊಂದಿಗೆ ತನ್ನೆರಡು ಹೆಣ್ಣು ಮಕ್ಕಳನ್ನೂ ಕರೆದುಕೊಂಡು ಹೋಗಿ ಹೊಸಬದುಕು ಕಟ್ಟಿಕೊಳ್ಳುತ್ತಾಳೆ. ನಿಜ, ಅವನು ಅವಳ ನಂಬಿಕೆ ಮುರಿಯದೇ, ಕೊರತೆಯಾಗದಂತೆ ಅವಳನ್ನು ನಡೆಸಿಕೊಂಡ ಎಂಬುದು ಅವಳ ಅದೃಷ್ಟ ಎಂದೇ ನಂಬಬೇಕಾದ ಸಾಮಾಜಿಕ ವಾಸ್ತವ ನಮ್ಮ ನಡುವೆ ಇದೆ. ಹಾಗಿದ್ದೂ, ಯಾವುದೇ ಗಿಲ್ಟ್‌ಗಳಿಲ್ಲದೆ ಆಕೆ ತನ್ನ ಮಕ್ಕಳನ್ನು ಬೆಳೆಸುತ್ತಾ ಅವನೊಂದಿಗಿನ ಬದುಕಿನ ಸುಖ ಅನುಭವಿಸುತ್ತಾಳೆ ಎಂಬ ವಾಸ್ತವವೂ ಇಲ್ಲಿರುವುದರಿಂದಲೇ ನಿರೂಪಕಿಗೆ, “ಇಷ್ಟು ದಿನಕ್ಕಿಂತ ನನ್ನ ಮನಸ್ಸೆಂಬೋದು ಇವತ್ತು ಸೊಯ್ಯೆಂದು ಬೀಸುತ್ತಿದ್ದ ಗಾಳಿಯ ಜೊತೆ ಸರ ಸರನೆ ತೇಲಾಡಂಗಾಯಿತು.” ಎಂದೆನಿಸುವುದು – ಓದುಗರಿಗೂ ಚೇತೋಹಾರಿಯಾಗಿರುತ್ತದೆ. + + + +ಈ ಚೇತೋಹಾರಿತನ, ಬದುಕಿನ ಕಟುತ್ವವನ್ನೂ ಮೀರಿ ನಲಿವನ್ನು ಅರಸುವ ಅಚ್ಚರಿಯ ಮುಖಗಳು, ಛಲದಿಂದ ಮುನ್ನಡೆಯುವ ಕಥನಗಳು, ಬದುಕಿನ ದುರಂತಗಳಿಗೆ ಇರುವ ಕಾರಣಗಳ ಆಳ ಶೋಧನೆ, ಹೀಗೆ ಭಿನ್ನ ಮಗ್ಗುಲುಗಳೆಡೆಗೆ ವಿಜಯಾ ಅವರ ಕಥಾ ಪ್ರಯಾಣ ಮುಂದುವರೆಯಲಿ ಎಂದು ಹಾರೈಸುತ್ತಾ ಶುಭಕೋರುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_138.txt b/Kenda Sampige/article_138.txt new file mode 100644 index 0000000000000000000000000000000000000000..1e6f9529dc8b87c391317f3302e52cb36f5fb197 --- /dev/null +++ b/Kenda Sampige/article_138.txt @@ -0,0 +1,27 @@ +ಒಮ್ಮೊಮ್ಮೆ ಹಾಗಾಗಿ ಬಿಡುತ್ತದೆ. ನಾವು ಓದಿದ, ದೃಶ್ಯರೂಪದಲ್ಲಿ ನೋಡಿದ ಅಥವಾ ಅವರಿವರಿಂದ ಕೇಳಿದ ಪ್ರಸಂಗಗಳು ನಮ್ಮ ಪರಿಸರದ, ಪರಿಚಯದ, ಬಂಧುಗಳ ಅಥವಾ ಊರಲ್ಲಿರುವ ಕುಟುಂಬದ ಪೈಕಿ ಒಬ್ಬರ ಬದುಕಿನ ಕಥೆಯನ್ನೇ ಹೋಲುವಂತೆ ಇರುತ್ತವೆ. ಓದುತ್ತ/ನೋಡುತ್ತ/ಕೇಳುತ್ತ ಹೋದಂತೆಲ್ಲ ಅರರೆ, ಇದು ಡಿಟ್ಟೊ ಅವರ ಕಥೆಯನ್ನೇ ಹೋಲುವಂತಿದೆಯಲ್ಲ? ಕೆಲವು ಸ್ಥಳಗಳ ಮತ್ತು ಪಾತ್ರಗಳ ಹೆಸರನ್ನು ಬದಲಿಸಿದರೆ ಇವರ ಕಥೆ ಇದ್ದದ್ದು ಅವರ ಕಥೆ ಆಗಿಬಿಡುತ್ತದಲ್ಲ ಅನಿಸುತ್ತದೆ. ಒಂದು ಕಥೆ ಅಥವಾ ಪ್ರಸಂಗ ಓದುಗನಿಗೆ ಇಂಥ ಫೀಲ್‌ ಕೊಟ್ಟರೆ ಅದು ಗೆದ್ದಂತೆ! + +(ವಿನಾಯಕ ಅರಳಸುರಳಿ) + +ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗ ಬೇಕಾಗುತ್ತದೆ. ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ. ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ ಅರಳಸುರಳಿ ಅವರು ಅನುಭವಿಸಿದ್ದಾರೆ. ಅದರ ಪರಿಣಾಮ ಈ ಸಂಕಲನದ ಕಥೆಗಳಲ್ಲಿ ಢಾಳಾಗಿ ಕಾಣಿಸುತ್ತದೆ. ಒಂದೊಂದು ಕಥೆಯನ್ನು ಓದಿ ಮುಗಿಸಿದಾಗಲೂ, ಇಂಥದೇ ಪ್ರಸಂಗ ಅಲ್ಲೆಲ್ಲೋ ನಡೆದಿತ್ತಲ್ಲವಾ ಎಂದು ಯೋಚಿಸುವಂತಾಗುತ್ತದೆ. + +ಹತ್ತು ಕಥೆಗಳ ಈ ಸಂಕಲನದಲ್ಲಿ ಮನುಷ್ಯನ ಅಹಮಿಕೆ, ಅನುಮಾನ, ದರ್ಪ, ಅಸಹಾಯಕತೆ, ತಣ್ಣಗಿನ ಕ್ರೌರ್ಯ, ತಲೆಮಾರು ಕಳೆದರೂ ತಣಿಯದ ದ್ವೇಷ, ಮತ್ತೊಬ್ಬರ ಏಳಿಗೆಯನ್ನು ಕಂಡಾಗ ಇದ್ದಕ್ಕಿದ್ದಂತೆ ಉಂಟಾಗುವ ಅಸಹನೆ, ಹಲವು ಸಂದರ್ಭಗಳಲ್ಲಿ ಎಲ್ಲರ ಮೇಲೂ ಉಂಟಾಗುವ ಅನುಮಾನ, ಪದೇ ಪದೇ ಸುಳ್ಳಾಗಿ ಹೋಗುವ ನಿರೀಕ್ಷೆಗಳು, ಯಾರಿಗೂ ಕಾಯದೆ ಹೋಗಿ ಬಿಡುವ ಪ್ರಾಣ.. ಹೀಗೆ ಮುನುಷ್ಯನ ಮಿತಿಗಳಿಗೆ ಪುರಾವೆ ಒದಗಿಸುವ ಪ್ರಸಂಗಗಳು ಎಲ್ಲಾ ಕಥೆಗಳಲ್ಲೂ ಬರುತ್ತವೆ. ಕೆಲವು ಕಥೆಗಳನ್ನು ಮೊದಲ ಎರಡು ಪುಟ ಓದಿದರೆ ಆನಂತರದಲ್ಲಿ ಕಥೆ ಸಾಗುವ ಹಾದಿಯನ್ನು, ಕಥೆಯ ಅಂತ್ಯವನ್ನು ಊಹಿಸಬಹುದು. ಇಲ್ಲಿ ಹಾಗಾಗುವುದಿಲ್ಲ. ಪ್ರತಿಯೊಂದು ಕಥೆಯೂ ತನ್ನದೇ ರೀತಿಯಲ್ಲಿ ಮುಗಿದು ಲೈಫು ಇಷ್ಟೇನೇ! ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ. + +ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದಾಗ ಮನುಷ್ಯ ಅದೆಷ್ಟು ಅಸಹಾಯಕನಾಗುತ್ತಾನೆ, ಸಿಟ್ಟು ಬಂದಾಗ, ಬೇಸರಗೊಂಡಾಗ ಹೇಗೆ ವ್ಯಗ್ರನಾಗುತ್ತಾನೆ, ಅವಕಾಶ ಸಿಕ್ಕರೆ ಕಾಣದ ದೇವರನ್ನೂ ಹೇಗೆಲ್ಲಾ ನಿಂದಿಸುತ್ತಾನೆ ಎಂಬುದಕ್ಕೆ ‘ಕೆಂಪು ಕುಂಕುಮ, ಕಪ್ಪು ಕುಂಕುಮʼ, ‘ಸಕಲ ಕಲಾವಲ್ಲಭʼ, ‘ಒಣಮರದ ಹಸಿರೆಲೆʼ ಕಥೆಗಳು ಸಾಕ್ಷಿ ಒದಗಿಸಬಲ್ಲವು. ಏಕಕಾಲಕ್ಕೆ ಡಿಫೆರೆಂಟ್‌ ಮತ್ತು ಸಿನಿಮೀಯ ಅನ್ನಿಸಿಬಿಡುವ ‘ಭೂಮಿʼ ಹೆಸರಿನ ಕಥೆಯೊಂದಿದೆ. ತಾಯಿಯನ್ನು ಉಳಿಸಿಕೊಳ್ಳಲು, ಉಡಾಳ ಸ್ವಭಾವದವನನ್ನು ಮದುವೆಯಾಗಲು ಸಮ್ಮತಿಸುವ ಹೆಣ್ಣೊಬ್ಬಳ ಕಥೆ ಅದು. ಅದರಲ್ಲಿ ನಾಯಕಿ ಹೇಳುತ್ತಾಳೆ: + +“ಅಮ್ಮನಿಗೆ ಕ್ಯಾನ್ಸರ್‌ ಎರಡನೇ ಸ್ಟೇಜ್‌ ತಲುಪಿದೆ ಮನೂ. ಅವಳ ಚಿಕಿತ್ಸೆಗೆ ತಿಂಗಳಿಗೆ ನಲವತ್ತು ಸಾವಿರ ಬೇಕು. ಈ ಚಿಕಿತ್ಸೆ ಎಷ್ಟು ವರ್ಷ ಬೇಕಾದರೂ ಮುಂದುವರಿಯಬಹುದಂತೆ. ಮರುಕಳಿಸಲೂಬಹುದಂತೆ. ಇದು ನನ್ನ ಶಕ್ತಿ ಮೀರಿದ ಖರ್ಚು ಕಣೋ. ಇದರಲ್ಲಿ ಅರ್ಧವನ್ನು ಅವರು ಕೊಟ್ಟರೂ ಸಾಕು. ಅಮ್ಮನನ್ನು ಉಳಿಸಿಕೊಳ್ಳಬಹುದು. ಅವತ್ತೇ ಹೇಳಿದ್ದೆನಲ್ಲಾ? ಅವರು ಇದಕ್ಕೆ ಒಪ್ಪಿದ್ದಾರೆ ಪಾಪ ಅಮ್ಮ……. ಇಲ್ಲಿಯತನಕ ಬದುಕಿನಲ್ಲಿ ಸ್ವಲ್ಪ ಖುಷಿಯನ್ನೂ ನೋಡಿಲ್ಲ. ನನಗೋಸ್ಕರ ನನ್ನ ಸುಭದ್ರ ಭವಿಷ್ಯಕ್ಕೋಸ್ಕರ ದೊಡ್ಡಪ್ಪ ಮತ್ತು ಅವನ ಮನೆಯವರ ಹಿಂಸೆಗಳನ್ನು ಸಹಿಸಿಕೊಂಡು ಅವರ ಮನೆಯಲ್ಲಿದ್ದಳು. ಈಗ ಮತ್ತೆ ನನ್ನ ಆಸೆ, ನಿರೀಕ್ಷೆಗಳಿಗೋಸ್ಕರ ಅವಳನ್ನು ಸಾವಿನ ಬಾಯಿಗೆ ದೂಡಲೇನು? ಅವಳು ಜೀವಂತ ಜೊತೆಗಿದ್ದರೆ ಅದಕ್ಕಿಂತ ಬೇರೆ ಸುಖ ನನ್ನ ಪಾಲಿಗೆ ಬೇರೇನಿದೆ ಹೇಳು? ಅದಕ್ಕೆ ಅವರನ್ನು ಒಪ್ಪಿಕೊಂಡೆ….” + +ಅಮ್ಮನನ್ನು ಉಳಿಸಿಕೊಳ್ಳಲು, ಅಮ್ಮನ ಮೊಗದ ನಗೆಯನ್ನು ನೋಡಲು ತನ್ನ ಬದುಕನ್ನೇ ಪಣಕ್ಕಿಡುವ ‘ಭೂಮಿʼ ಹೆಸರಿನ ನಾಯಕಿ, ಇಲ್ಲಿ ಭೂಮಿ ತೂಕದ ಹೆಣ್ಣಾಗಿ ಹೊಳೆಯುತ್ತಾಳೆ. ಮನಸ್ಸಿಗೆ ಇಳಿಯುತ್ತಾಳೆ. ಕಥೆಯನ್ನು ಓದಿ ಮುಗಿಸಿದ ಅದೆಷ್ಟೋ ಸಮಯದವರೆಗೂ ಮನದಲ್ಲೇ ಉಳಿಯುತ್ತಾಳೆ. + +ಇವೆಲ್ಲವೂ ಈ ಸಂಕಲನವನ್ನು ಇಷ್ಟಪಡುವುದಕ್ಕೆ ಇರುವ ಕಾರಣಗಳು. ಹಾಗಂತ ಕೊರತೆಗಳು ಇಲ್ಲವೆಂದಲ್ಲ. ಯಾವುದೇ ಕಥೆಯನ್ನು ಓದಲು ಹೊರಟಾಗ ಅದರ ಪಾತ್ರಗಳು ಹೀಗಿದ್ದರೆ ಚೆನ್ನಾಗಿತ್ತು, ಪಾತ್ರಗಳ ಮಾತು ಹೀಗಿದ್ದರೆ ಚೆನ್ನಾಗಿತ್ತು ಎಂಬ ಯೋಚನೆ ಆಗಾಗ್ಗೆ ಓದುಗರಿಗೆ ಬರುತ್ತದೆ. ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕಥೆಗಳು ಸಾಗಿದಾಗ, ಕಥೆಯನ್ನು ‘ಎಳೆಯಲಾಗುತ್ತಿದೆʼ ಅನ್ನಿಸಿದಾಗ ಸಣ್ಣದೊಂದು ಅಸಹನೆ ಜೊತೆಯಾಗಿ ಬಿಡುತ್ತದೆ. ಒಂದೆರಡು ಕಥೆಗಳನ್ನು ಓದುವಾಗ ಹಾಗೂ ಅನಿಸುತ್ತದೆ. ಆದರೆ, ಓದುಗರ ನಿರೀಕ್ಷೆಗೆ ವಿರುದ್ಧವಾಗಿ ಸಾಗುವುದೇ ಕಥೆಯೊಂದು ಸಾಗಬೇಕಿರುವ ರೀತಿ ಅಂದುಕೊಂಡಾಗ ಈ ಸಂಕಲನದ ಕಥೆಗಳ ಕುರಿತು ಮೆಚ್ಚುಗೆ ಮತ್ತು ಪ್ರೀತಿ ಉಂಟಾಗಲು ಕಾರಣವಾಗುತ್ತದೆ. + +(ಎ.ಆರ್‌. ಮಣಿಕಾಂತ್) + +ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಮತ್ತೊಂದು ವಿಶೇಷವಿದೆ. ಇಲ್ಲಿನ ಪಾತ್ರಗಳೆಲ್ಲ ತಮಗೆ ತಾವೇ ಒಂದು ಚೌಕಟ್ಟು ಹಾಕಿಕೊಂಡಂತೆ ವರ್ತಿಸುತ್ತವೆ. ಸಂದರ್ಭಕ್ಕೆ ತಕ್ಕಂತೆ ಅವುಗಳ ಮಾತು ಮೆದುವಾಗುತ್ತದೆ. ಒರಟಾಗುತ್ತದೆ. ವ್ಯಂಗ್ಯಕ್ಕೆ ತಿರುಗುತ್ತದೆ. ಬಯ್ದು ಬುದ್ಧಿ ಹೇಳುತ್ತದೆ. ಯಾವುದೋ ಒಂದು ಗುರುತರ ಹೊಣೆ ಹೊತ್ತಿವೆಯೇನೋ ಎಂಬಂತೆ ವರ್ತಿಸುತ್ತಾ ತಮ್ಮ ಪಾತ್ರದ ಅವಧಿ ಮುಗಿಯುತ್ತಿದ್ದಂತೆ ಏಕ್ದಂ ಮಾಯವಾಗುತ್ತವೆ. ಚಿಟ್ಟೆಯಂತೆ ಚಿಗರೆಯಂತೆ… + +ಕೊನೆಯಾಗದ ಕಷ್ಟಗಳು, ಮರೆಯಲಾಗದ ನೋವು, ಸದಾ ಉಳಿಯುವ ಚಡಪಡಿಕೆ, ಹೆದರಿಸುವ ಒಂಟಿತನ- ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣುತ್ತವೆ. ಎದೆಯೊಳಗಿನ ನೋವನ್ನು ಅಂಗೈಲಿ ಹಿಡಿದುಕೊಂಡೇ ವಿನಾಯಕ ಇಲ್ಲಿನ ಕಥೆಗಳಿಗೆ ಅಕ್ಷರ ರೂಪ ನೀಡಿರಬಹುದೇನೋ ಎಂದು ಪದೇ ಪದೇ ಅನಿಸುವಷ್ಟರಮಟ್ಟಿಗೆ ಇಲ್ಲಿನ ಕಥೆಗಳು ಸಂಕಟವನ್ನು ಉಸಿರಾಡಿದೆ. ಒಬ್ಬೊಬ್ಬರ ಬದುಕೂ ಸಂಕಟದ ಸಾಗರವೇ ಆಗಿರುತ್ತದೆ ಎಂಬುದನ್ನು ಎದೆ ಬಗೆದು ತೋರುವಂಥ ಹುಮ್ಮಸ್ಸಿನಲ್ಲಿ ವಿನಾಯಕ ಕಥೆ ಹೇಳಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಗೆಲುವನ್ನು ಕಂಡಿದ್ದಾರೆ. + + + +ತೀವ್ರ ಸಂಕೋಚ, ವಿನಯ, ಅತಿಯಾದ ಭಾವುಕತೆ, ಕಳೆದುಕೊಂಡಿದ್ದಕ್ಕೆ ಪರಿತಪಿಸುವ ಮನಸ್ಸಿನ ವಿನಾಯಕರಿಗೆ ಈ ಸಂಕಲನದ ಕಥೆಗಳು ಅವರನ್ನು ಕೈ ಹಿಡಿದು ನಡೆಸಲಿ ಎಂಬುದು ನನ್ನ ಆಶಯ ಮತ್ತು ಹಾರೈಕೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_139.txt b/Kenda Sampige/article_139.txt new file mode 100644 index 0000000000000000000000000000000000000000..17d1f99976d980cd6e402180d7b796f85c286a57 --- /dev/null +++ b/Kenda Sampige/article_139.txt @@ -0,0 +1,29 @@ +ಸುಧಾ ಎಂ. ಅವರ ಚೊಚ್ಚಲ ಕಥಾಸಂಕಲನ ಅಪೂರ್ಣವಲ್ಲ… ಒಂದು ಪೂರ್ಣಪ್ರಮಾಣದ ತೃಪ್ತಿಯನ್ನು ನೀಡುವ ಉತ್ತಮ ಕೃತಿ. ಹಳ್ಳಿಯ ಬದುಕಿನ ಸೊಗಡನ್ನೂ, ಹಳ್ಳಿಗರ ಹೃದಯದ ಭಾವನೆಗಳನ್ನೂ ಹಿಡಿದಿಡುವಲ್ಲಿ ಲೇಖಕಿಯ ಬರಹಗಳು ಸಶಕ್ತವಾಗಿವೆ. ಕಾರ್ತಿಕಾದಿತ್ಯ ಬೆಳ್ಗೋಡು ಅವರು ಬೆನ್ನುಡಿಯಲ್ಲಿ ಹೇಳಿದಂತೆ ‘ಪ್ರತೀ ಕಥೆಯ ಪಾತ್ರಗಳನ್ನು ಅವರು ಯಾಂತ್ರಿಕವಾದ ನೆಲೆಗಟ್ಟಿನಲ್ಲಿ ಕಟ್ಟದೆ, ಭಾವನೆಗಳೊಂದಿಗೆ ಒಂದು ನಮೂನೆಯ ಪ್ರೀತಿಯೊಂದಿಗೆ ಪರಸ್ಪರ ಬೆಸೆಯುತ್ತಾರೆ.’ ಅವರ ಕಥೆಗಳನ್ನು ಒಂದೊಂದಾಗಿ ಬಿಚ್ಚುತ್ತಾ ಹೋಗೋಣ. + +(ಸುಧಾ ಎಂ.) + +ಕೃತಿಯ ಹೆಸರನ್ನೇ ಹೊಂದಿರುವ ಮೊದಲ ಕಥೆ ಒಬ್ಬ ಪ್ರೇಮಿಯದ್ದು. ಅವನ ಪ್ರೇಯಸಿ ಇನ್ನೊಂದು ಮದುವೆಯಾಗಿರುವುದು ಗೊತ್ತಿದ್ದರೂ ಅವನನ್ನು ಭಗ್ನಪ್ರೇಮಿ ಎಂದು ಕರೆಯಲಾಗದು. ಯಾಕೆಂದರೆ ಅವನು ತನ್ನ ಪ್ರೇಮನಿವೇದನೆಯನ್ನೇ ಮಾಡಿಕೊಂಡಿರಲಿಲ್ಲ. ಅಷ್ಟೇ ಅಲ್ಲ ಆ ಪ್ರೇಮ ಇನ್ನೂ ಅವನ ಹೃದಯದಲ್ಲಿ ಸತ್ತಿಲ್ಲ. ಅದರ ಜೀವಂತಿಕೆಯೇ ಅವನನ್ನು ಅವಿವಾಹಿತನನ್ನಾಗಿಯೇ ಇರಿಸಿದೆ. ಒಂದಿನ ಅಚಾನಕ್ಕಾಗಿ ಅವಳೇ ಸಿಕ್ಕಾಗ ಅವನ ಹೃದಯ ಅರಳಿದ ಪರಿಯನ್ನು ಲೇಖಕಿ ಸೊಗಸಾಗಿ ಚಿತ್ರಿಸಿದ್ದಾರೆ. ಹೃದಯದ ಅದೆಷ್ಟೋ ಭಾವನೆಗಳು ಹೀಗೆಯೇ ವ್ಯಕ್ತವಾಗದೆ ಹುದುಗಿಹೋಗಿರುತ್ತವೆ. ಸ್ನೇಹದ ಮಧ್ಯೆ ಪ್ರೇಮದ ಮಾತು ಬಂದರೆ ಅದು ಕೆಟ್ಟ ಭಾವನೆಯೆಂದು ಪರಿಗಣಿತವಾಗುತ್ತದೆ ಎಂಬ ಅಳುಕು ಆ ಸಂದರ್ಭದಲ್ಲಿರುತ್ತದೆ. + +ಎರಡನೆಯ ಕಥೆ ಹಾಳಿ ಹಳ್ಳಿಯ ಬದುಕಿನ ಕರುಣಾಮಯ ಬದುಕನ್ನು ತೆರೆದಿಡುತ್ತದೆ. ನೆರೆಬಂದಾಗ ಹೊಳೆದಾಟುವುದು, ಗದ್ದೆಯ ಹಾಳಿಯ ಮೇಲೆ ನಡೆದುಹೋಗುವುದು ಮುಂತಾದ ಹಳ್ಳಿಯ ಚಿತ್ರಗಳನ್ನು ಈ ಕಥೆ ಕಟ್ಟಿಕೊಡುತ್ತದೆ. + +ಬಿದ್ದಾಗ ಬರದವರು ಎಂಬ ಮೂರನೆಯ ಕಥೆ ಒಂದು ನೀಳ್ಗತೆ. ದಿನಕರನೆಂಬ ಇಂಜಿನಿಯರಿಂಗ್ ಓದಿದ ವ್ಯಕ್ತಿ, ವಿದೇಶದಲ್ಲಿ ಕೆಲಸ ಮಾಡುತ್ತ, ಹಳ್ಳಿಯ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳುವ ಕಥಾನಕ. ಒಂಟಿ ಮನೆಯ ಬದುಕು, ಅಪ್ಪನ ಮೇಲಿನ ಅಪಾರ ಪ್ರೀತಿ ಇವು ಎಳೆ ಎಳೆಯಾಗಿ ಹೆಣೆಯಲ್ಪಟ್ಟಿವೆ. ಜೊತೆಗೆ, ಕಷ್ಟದಲ್ಲಿದ್ದಾಗ ಬರದವರು, ಮಗ ಓದಿ ವಿದೇಶದಲ್ಲಿದ್ದಾನೆ ಎಂದಾಕ್ಷಣ ಜಾತಕ ಹಿಡಿದು ಬರುವ ಸೋಗಲಾಡಿತನವನ್ನೂ ಲೇಖಕಿ ಬಿಚ್ಚಿಟ್ಟಿದ್ದಾರೆ. + +ನಾಲ್ಕನೆಯ ಕಥೆ ಹಿಸೆ, ಗಂಡುಮಕ್ಕಳು ದೊಡ್ಡವರಾದಾಗ ಅಪ್ಪನನ್ನೇ ಹಿಸೆ ಕೇಳುವ ಮಟ್ಟಕ್ಕೆ ಇಳಿಯುತ್ತಾರೆ ಎಂಬ ಕಹಿ ಸತ್ಯವನ್ನು ನಮ್ಮ ಮುಂದಿಡುತ್ತದೆ. ಗಂಡುಮಕ್ಕಳೆಂದು ಬೀಗುವುದು ಮುಖ್ಯವಲ್ಲ, ಅವರಿಗೆ ಬೇಕು ಬೇಕಾದ್ದನ್ನೆಲ್ಲ ಒದಗಿಸುತ್ತ ಜೀವನದ ಕಷ್ಟವೆಂದರೇನು ಎಂಬುದೇ ತಿಳಿಯದಂತೆ ಬೆಳೆಸುವುದು ಸರಿಯಲ್ಲ ಎಂಬ ಪಾಠವನ್ನು ಈ ಕಥೆ ತಿಳಿಸಿಕೊಡುತ್ತದೆ. + +ತಲೆಮಾರು ಎಂಬ ಕಥೆ ಹಳ್ಳಿಯ ಮನೆಯೊಂದರ ಚಿತ್ರಣವನ್ನು ನೀಡುತ್ತದೆ. ತುಂಬಿ ತುಳುಕುತ್ತಿದ್ದ ಮನೆಯೊಂದು ತಲೆಮಾರುಗಳ ನಂತರ ಜೇಡರಬಲೆಯ ಬೀಡಾಗಿ ಹೋಗುವುದಕ್ಕೆ ಕಾರಣ ಏನು? ಪೇಟೆಯ ಥಳುಕು ಬಳುಕಿನ ಜೀವನದ ಆಕರ್ಷಣೆಯೊ, ಹಳ್ಳಿಯ ಜೀವನದ ಬಗೆಗಿನ ತಾತ್ಸಾರವೊ ಎಂಬೆಲ್ಲ ವಿಷಯಗಳ ಚರ್ಚೆ ಈ ಕಥೆಯಲ್ಲಿದೆ. + +ಫಿರ್ಖಾನ್-ಸೋಮಿ ಎಂಬ ಬುಡಕಟ್ಟು ಜನಾಜಂಗದ ಜೋಡಿಯ ಸುತ್ತ ಹೆಣೆದ ಕಥೆ ಬಲಿ. ಕಾಡಿನಲ್ಲಿ ವಾಸಿಸುತ್ತ, ಕಾಡನ್ನು ಪ್ರೀತಿಸುತ್ತ, ಕಾಡನ್ನೇ ಜೀವನವನ್ನಾಗಿಸಿಕೊಂಡ ಈ ಜೋಡಿಯ ಮೂಲಕ ಕಾಡಿನ ಬುಡಕಟ್ಟು ಜನಾಂಗದ ಜೀವನಚಿತ್ರಣವನ್ನು ಲೇಖಕಿ ನೀಡಿದ್ದಾರೆ. ಮಧ್ಯೆ ಮಧ್ಯೆ ಕೊಂಕಣಿ ಭಾಷೆಯ ಸಂಭಾಷಣೆಯನ್ನೂ ಅಳವಡಿಸಿ ಚಿತ್ರಣವನ್ನು ನೈಜವಾಗಿಸಿದ್ದಾರೆ. ಅಂಥವರ ಜೀವನದಲ್ಲಿ ಹೊರಗಿನಿಂದ ಪ್ರವೇಶಿಸುವ ವಿಶಾಲ್ ಎಂಬ ಸ್ವಾರ್ಥಿ, ತನ್ನ ಸ್ಮಗ್ಲಿಂಗ್ ವ್ಯವಹಾರಕ್ಕೆ ವನವಾಸಿಗಳನ್ನು ಬಳಸಿಕೊಳ್ಳುತ್ತಾ, ಅವರಿಗೂ ಕಳ್ಳದಂಧೆಯ ರುಚಿಹತ್ತಿಸಿ ಕೆಡಿಸುತ್ತಾನೆ. ಮತಾಂತರದ ಪ್ರಯತ್ನದ ಬಗ್ಗೆ ಅದರ ವಿರುದ್ಧದ ಹೋರಾಟದ ಬಗ್ಗೆಯೂ ಇಲ್ಲಿ ಉಲ್ಲೇಖ ಇದೆ. ಕೊನೆಗೆ ವಿಶಾಲನ ಸ್ವಾರ್ಥಕ್ಕೆ ಸೋಮಿಯ ಜೀವ ಬಲಿಯಾಗಿ ಹೋಗುತ್ತದೆ. + + + +ಕಣಿ ಎನ್ನುವ ಕಥೆ ಜೀವನದಲ್ಲಿ ನೊಂದ ಹೆಣ್ಣುಮಗಳೊಬ್ಬಳ ಮನೋಗತವನ್ನು ತೆರೆದಿಡುತ್ತದೆ. ಜೋಗತಿಯೊಬ್ಬಳ ಕಣಿಯ ಮಾತಿನ ಮೋಡಿಗೊಳಗಾಗುತ್ತ, ತನ್ನೆಲ್ಲ ನೋವುಗಳನ್ನು ಕಥಾನಾಯಕಿ ತೆರೆದಿಡುತ್ತಾಳೆ. ಕುಟುಂಬದಲ್ಲಿ ಆರ್ಥಿಕ ಕಷ್ಟ ಎದುರಾದಾಗ ಯಾವ ರೀತಿಯಲ್ಲಿ ನಿಭಾಯಿಸಬೇಕು, ಅದು ಜೀವನವನ್ನು ಯಾವರೀತಿ ಜರ್ಜರಿತವನ್ನಾಗಿ ಮಾಡಿಬಿಡುತ್ತದೆ ಎಂಬುದನ್ನು ಕಥೆ ಚಿತ್ರಿಸಿಕೊಡುತ್ತದೆ. + +ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ. + +ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ. ವಿಧವಾ ವಿವಾಹದಂತಹ ಸಾಮಾಜಿಕ ಸುಧಾರಣೆಗಳ ಬಗ್ಗೆ ಭಾಷಣ ಬಿಗಿಯುವ ಮಠ ಮಾನ್ಯಗಳೇ ನಿಜವಾಗಿ ಅಂಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರನ್ನು ಬಹಿಷ್ಕರಿಸುತ್ತದೆ ಎಂಬ ವಿಡಂಬನೆಯನ್ನು ಈ ಕಥೆಯಲ್ಲಿ ಹೊರಗೆಡಹಿದ್ದಾರೆ. + + + +ಹೀಗೆ ಒಂಭತ್ತು ಕಥೆಗಳ ಈ ಸಂಕಲನದ ತುಂಬೆಲ್ಲ ಹಳ್ಳಿಯ ಜೀವನದ ಏಳು-ಬೀಳುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಹಳ್ಳಿಯ ಜೀವನದ ಮೇಲೆ ಲೇಖಕಿಗಿರುವ ಪ್ರೀತಿ, ಇಲ್ಲಿಯ ಸಿರಿಯನ್ನೆಲ್ಲ ತೊರೆದು ತಂದೆ ತಾಯಿಯರನ್ನು ಅನಾಥರನ್ನಾಗಿ ಮಾಡಿ ಹೋಗುವ ಆಧುನಿಕ ಪೀಳಿಗೆಯ ಮೇಲಿರುವ ತಾತ್ಸಾರ ಸ್ಪಷ್ಟವಾಗಿ ವ್ಯಕ್ತವಾಗಿವೆ. ಇಲ್ಲಿನ ಕಥೆಗಳು ಸರಳವಾಗಿ ಹೇಳಲ್ಪಟ್ಟಿವೆ. ಭಾಷೆಯಲ್ಲಿಯೂ ಗ್ರಾಂಥಿಕತೆ ಇಲ್ಲ. ಹಳ್ಳಿಯ ಆಡುಭಾಷೆಯನ್ನೇ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಕಥಾಹಂದರಕ್ಕಿಂತ ಪಾತ್ರಗಳ ಮೂಲಕ ಲೇಖಕಿ ಹೇಳಿಸುವ ವಿಚಾರಗಳು, ಚಿಂತನೆಗಳು ಮುಖ್ಯವೆನಿಸುತ್ತವೆ. ಅವೇ ಇಲ್ಲಿನ ಕಥೆಗಳ ಜೀವ. ಒಟ್ಟಿನಲ್ಲಿ ಲೇಖಕಿ ಒಂದು ಚೆಂದದ ಕಥಾಸಂಕಲನವನ್ನು ಇತ್ತಿದ್ದಾರೆ. ಚೊಚ್ಚಲ ಕೃತಿಯಲ್ಲೇ ಭರವಸೆಯನ್ನು ಮೂಡಿಸಿದ್ದಾರೆ. + +ಮಹಾಬಲ ಭಟ್ಟರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಗೋವಾ ರಾಜ್ಯದ ಮಾಪುಸಾ ನಗರದಲ್ಲಿರುವ ಸೈಂಟ್ ಜೇವಿಯರ್ ಉಚ್ಚಮಾಧ್ಯಮಿಕ ವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರು. ಅನೇಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಇವರು ಸಂಸ್ಕೃತದಲ್ಲಿ ಬರೆದಿರುವ ಎರಡು ಪುಸ್ತಕಗಳು ಪ್ರಕಾಶನಗೊಂಡಿವೆ. \ No newline at end of file diff --git a/Kenda Sampige/article_14.txt b/Kenda Sampige/article_14.txt new file mode 100644 index 0000000000000000000000000000000000000000..85cbada9a2a02836b80f3c997b03614db49e084c --- /dev/null +++ b/Kenda Sampige/article_14.txt @@ -0,0 +1,15 @@ +ಕೂರಾ ಸ್ವಭಾವದಲ್ಲಿ ಸೂಕ್ಷ್ಮ. ಅದರ ಜೊತೆಗೆ ಪುಕ್ಕಲುತನವೂ ಇದೆ. ಸಣ್ಣವನಿದ್ದಾಗ ಅಡುಗೆ ಮನೆಯಲ್ಲಿ ಕುಕ್ಕರ್ ವಿಷಲ್ ಕೂಗಿದರೆ ಓಡಿ ಹೋಗುತ್ತಿದ್ದ. ಅವನು ಮನೆಯನ್ನು ಅಥವಾ ನಮ್ಮನ್ನು ಕಾಯುವ ಬದಲಾಗಿ ಅವನಿಗೆ ಭಯವಾಗಬಾರದು ಎಂದು ನಾವು ಅವನನ್ನು ಕಾಯುವುದೇ ಹೆಚ್ಚಾಗಿತ್ತು. ಅದರಲ್ಲೂ ಅವನು ಮಲಗಿದ್ದಾಗ ಅವನಿಗೆ ಎಚ್ಚರವಾಗದಿರಲಿ ಎಂದು ನಾನು ಮೆಲ್ಲನೆ ಹೆಜ್ಜೆಗಳನ್ನಿಡುತ್ತ ನಡೆಯುತ್ತೇನೆ. ಅವನೋ… ಶನಿವಾರ ಭಾನುವಾರಗಳಲ್ಲು ಸಹ ಬೆಳಗಾಗುವ ಮೊದಲೇ ಬೊಗಳಿ ನನ್ನನ್ನು ಎಬ್ಬಿಸಿ ಬಿಡುತ್ತಾನೆ. ಅದೂ ಅವನು ಬೊಗಳುವುದು ಯಾವುದಕ್ಕೆ? ರಸ್ತೆಯಲ್ಲಿ ಹಾರಿ ಹೋಗುವ ಯಾವುದೋ ಎಲೆಯ, ಪೇಪರಿನ ಸದ್ದಿಗೆ. ಎದುರಿನ ಮನೆಯವರು ಅವರ ಮನೆಯ ಮುಂದೆ ನಡೆದಾಡಿದರೆ ಇವನು ಬೊಗಳುತ್ತಾನೆ. ಪಕ್ಕದ ಮನೆಯ ಮುಂದೆ ಅವರದೇ ಕಾರು ಬಂದು ನಿಂತು ಅವರು ಅದರಿಂದ ಇಳಿಯುವಾಗ ಬೊಗಳುತ್ತಾನೆ. ಯಾವುದಕ್ಕೆ ಬೊಗಳಬೇಕು, ಯಾವುದಕ್ಕೆ ಬೊಗಳಬಾರದು ಎಂದು ನಾಯಿಗಳಿಗೆ ದೇವರು ಟ್ರೇನಿಂಗ್ ಕೊಟ್ಟು ಕಳಿಸೋದಿಲ್ಲವಾ ಅಂತ. ಮನೆಯೊಳಗೆ ಒಂದು ನೊಣ ಬಂದರು ಅವನಿಗೆ ಆಗುವುದಿಲ್ಲ. ತಲೆ ಕೆಟ್ಟು ಬಿಡುತ್ತದೆ. ಮನೆಯೆಲ್ಲ ಓಡಾಡಿ, ಗಾಳಿಯಲ್ಲಿ ಗುದ್ದಾಡಿ, ನೊಣ ಹಿಡಿಯಲು ಹರಸಾಹಸ ಪಟ್ಟು, ತಲೆ ಮೇಲೆ ಮಾಡಿ ಹಾರುವ ನೊಣವನ್ನು ನುಂಗಲು ಯತ್ನಿಸುತ್ತ, ಎಷ್ಟು ಒದ್ದಾಡಿದರು ಅದು ಸಿಕ್ಕದೇ ಹೋದಾಗ ಬಾಲ ಮುದುರಿಸಿಕೊಂಡು ಕೋಣೆಗೆ ಹೋಗಿ ಮಲಗಿ ಬಿಡುತ್ತಾನೆ. ಎಂತೆಂತಹ ದೊಡ್ಡ ನಾಯಿಗಳಿಗು ಸಹ ಹೆದರದೇ ಅವುಗಳ ಮುಂದೆ ಬೊಗಳುತ್ತ ಭಂಡ ಧೈರ್ಯ ತೋರಿಸುವ ನಮ್ಮ ಉತ್ತರಕುಮಾರನಿಗೆ ಈ ನೊಣಕ್ಕಿಂತಲು ಹೆಚ್ಚಿನ ಭಯ ಹುಟ್ಟಿಸುವ ಸಂಗತಿಯೊಂದಿದೆ. ಅದೇನೆಂದರೆ ಅವನ ನಾಲ್ಕು ಕಾಲಿನ ಉಗುರುಗಳು! ಏನಪ್ಪಾ ಇದು ಉಗುರಿನ ಕತೆ ಎಂದಿರೇ.. ಇದಕ್ಕೆ ಉಗುರುಪುರಾಣ ಎಂತಲೂ ಹೇಳಬಹುದು. ಯಕಃಶ್ಚಿತವಾದಂತಹ ಉಗುರಿನಿಂದ ಅದು ಹೇಗೆ ಭಯ ಹುಟ್ಟಲು ಸಾಧ್ಯ ಎಂದು ಉಗುರನ್ನ ಕಡೆಗಣಿಸದಿರಿ. + +ಮನುಷ್ಯರಂತೆಯೇ ನಾಯಿಗಳ ಉಗುರುಗಳನ್ನು ಆಗಾಗ ಕತ್ತರಿಸುತ್ತಿರಬೇಕು. ಇಲ್ಲದೇ ಹೋದರೆ ಉದ್ದಕ್ಕೆ ಚೂಪಾಗಿ ಬೆಳೆದು ಅವು ಮೈ ಮೇಲೆ ಹತ್ತಿ ಬಂದಾಗಲೆಲ್ಲ ಪರಚುತ್ತ ಗಾಯ ಮಾಡುತ್ತವೆ. ಅದಲ್ಲದೇ ಉಗುರುಗಳನ್ನು ಕತ್ತರಿಸುವುದು ಅವುಗಳ ಆರೋಗ್ಯಕ್ಕು ಸಹ ಕ್ಷೇಮ. ಇಲ್ಲದಿದ್ದರೆ ಅವುಗಳಿಗು ನಮ್ಮ ಹಾಗೆಯೇ ಉಗುರು ಸುತ್ತಾಗುತ್ತದೆ. ತೀರಾ ಉದ್ದಕ್ಕೆ ಬಂದರೆ ಅವೇ ತಮ್ಮ ಉಗುರುಗಳನ್ನು ಕಚ್ಚಿಕೊಂಡು ಸಣ್ಣ ಮಾಡಿಕೊಳ್ಳುತ್ತವೆ. ನಮ್ಮದು ಸಾಕುನಾಯಿಯಾಗಿರುವುದರಿಂದ ಇಂತಹ ವಿಷಯಗಳಲ್ಲಿ ಹೆಚ್ಚಿನ ಕಾಳಜಿ. ಆದರೆ ನಾಯಿಗಳ ಉಗುರಿನಲ್ಲಿ ನರವಿರುವುದರಿಂದ ಆ ನರಕ್ಕೆ ತಾಗದಂತೆ ಅದರ ಮುಂದಿನ ಭಾಗವನ್ನು ಮಾತ್ರ ಕತ್ತರಿಸಬೇಕು. ಬೆಳ್ಳಗಿನ ಉಗುರುಗಳಿದ್ದರೆ ಬೆಳಕಿಗೆ ಈ ನರ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಹ ನಾಯಿಗಳ ಉಗುರುಗಳನ್ನು ತೆಗೆಯುವುದು ಸುಲಭ. ನಾಯಿಗಳಿಗೆ ಭಯವಿದ್ದರೂ ಅವುಗಳನ್ನು ತೆಗೆಯುವಾಗ ಎಲ್ಲಿ ನರಕ್ಕೆ ತಗುಲಿ ಬಿಡುತ್ತದೋ ಎಂದು ಮನುಷ್ಯರಿಗೆ ಭಯವಿರುವುದಿಲ್ಲ. ಆದರೆ ಕೂರಾನಂತಹ ಕಪ್ಪು ಉಗುರುಗಳ ನಾಯಿಗಳ ಉಗುರುಗಳನ್ನು ಕತ್ತರಿಸುವುದಕ್ಕೆ ತುಸು ಸಂಯಮ ಮತ್ತು ಜಾಣ್ಮೆಯಿರಬೇಕು. ಈ ಎಲ್ಲ ವಿಷಯ ನಮಗೆ ಗೊತ್ತಾಗಿದ್ದು ಹಲವು ಯೂಟ್ಯೂಬ್ ವಿಡಿಯೋಗಳನ್ನು ನೋಡಿದ ಬಳಿಕ. ಅವರು ತೋರಿಸಿದ ಹಾಗೆ ಉಗುರು ತೆಗೆಯಬೇಕೆಂದು ಅದಕ್ಕೆ ಬೇಕಾದ ಸಲಕರಣೆಗಳನ್ನು ತಂದಿಟ್ಟುಕೊಂಡು ಒಂದು ದಿನ ಸನ್ನದ್ಧರಾಗಿ ಕೂತೆವು. ನಮ್ಮ ಕೈಯ್ಯಲ್ಲಿ ಇಲ್ಲಿಯವರೆಗು ನೋಡಿರದಿದ್ದ ಹೊಸ ಸಾಧನವೊಂದನ್ನು ನೋಡಿ ಕೂರಾನಿಗೆ ಆಗಲೇ ಸಂಶಯ ಶುರುವಾಗಿತ್ತು. ನಮ್ಮನ್ನೇ ಪ್ರಶ್ನಾರ್ಥಕ ಕಣ್ಣುಗಳಿಂದ ನೋಡುತ್ತಿದ್ದ. ಒಬ್ಬರು ಮುಂದೆ ಕೂತು ಅವನಿಗೆ ಟ್ರೀಟ್ ತಿನ್ನಿಸುವುದು ಇನ್ನೊಬ್ಬರು ಅವನಿಗೆ ಗೊತ್ತಾಗದ ಹಾಗೆ ಅವನ ಉಗುರನ್ನು ಕತ್ತರಿಸುವುದು ಎಂಬುದು ನಮ್ಮ ರಣತಂತ್ರವಾಗಿತ್ತು. ಸುಮಾರು ಹತ್ತು ಟ್ರೀಟ್ ತುಂಡುಗಳ ಬಳಿಕ ಯಶಸ್ವಿಯಾಗಿ ಒಂದು ಉಗುರನ್ನು ತೆಗೆದೆವು. ಎರಡನೇ ಉಗುರನ್ನು ತೆಗೆಯುವ ಹೊತ್ತಿಗೆ ಅವನಿಗೆ ಹೊಟ್ಟೆ ತುಂಬಿತ್ತೇನೋ ಕೂತಲ್ಲಿಂದ ಓಡಿ ಬಿಟ್ಟ. ಟ್ರೀಟ್ ತಿಂದು ಅವನಿಗೆ ಶಕ್ತಿ ಬಂದಿತ್ತು, ಮನೆಯೆಲ್ಲ ಓಡಾಡಿಸಿದ. ನಮ್ಮ ಹೊಟ್ಟೆ, ತಾಳ್ಮೆ ಎರಡೂ ಖಾಲಿಯಾಗಿ ಗುಟುರು ಹಾಕುತ್ತಿದ್ದವು. + + + +ಅದಾದ ಮೇಲೆ ಎಷ್ಟೇ ಸಲ ಪ್ರಯತ್ನಿಸಿದರು ಅವನ ಉಗುರುಗಳನ್ನು ತೆಗೆಯಲು ಆಗಲೇ ಇಲ್ಲ. ಓಡಿ ಹೋಗಿ ಮೂಲೆಯಲ್ಲಿ ಕುಳಿತುಕೊಳ್ಳುವುದು, ನಮ್ಮ ಮೇಲೆ ಜಿಗಿದಾಡಿ ರಂಪ ಮಾಡುವುದು, ಸಕ್ಕರೆ ಹಲ್ಲುಗಳಲ್ಲಿ ಕಚ್ಚಲು ಯತ್ನಿಸುವುದು.. ಪ್ರತಿ ಸಲ ಅವನದ್ದೇ ರಣಭೇರಿ. ಎಷ್ಟೇ ಸಿದ್ಧವಾಗಿ ಕೂತರೂ ನಮ್ಮ ಪ್ರಯತ್ನಗಳು ವಿಫಲವಾಗುತ್ತಲೇ ಹೋದವು. ನಮ್ಮ ಕೈಯ್ಯಲ್ಲಿರುವ ಸಾಧನ ಉಗುರುಗಳನ್ನು ತೆಗೆಯುವ ಕ್ಲಿಪ್ಪರ್ ಎಂದು ಅವನಿಗೆ ಗೊತ್ತಾಗಿ ಬಿಟ್ಟಿರುವುದರಿಂದ ನಮ್ಮ ಕೈಯ್ಯಲ್ಲಿ ಅದನ್ನು ನೋಡಿದ ಕೂಡಲೇ ಎಲ್ಲಿದ್ದಲ್ಲಿಂದ ಚೆಂಗನೆಯ ನೆಗೆತ. ಚೂಪಾದ ಉಗುರುಗಳಿದ್ದ ಕಾಲುಗಳನ್ನೆತ್ತಿ ನಮ್ಮ ಮೇಲೆ ಹತ್ತಿದರೆ ಪರಚಿದಂತಾಗುತ್ತಿತ್ತು. ಅದರಲ್ಲೂ ಮೈ ಮೇಲೆ ಹತ್ತುವ ಚಟವೂ ಇರುವುದರಿಂದ ಅವನ ಉಗುರುಗಳು ನಮ್ಮನ್ನು ಪರಚುತ್ತ ಗಾಯ ಮಾಡುತ್ತಲೇ ಇದ್ದವು. ಅದರಿಂದ ಅವನಿಗೆ ಒಳಗೊಳಗೆ ಖುಷಿಯೂ ಆಗುತ್ತಿತ್ತು ಎಂದು ನನಗೆ ಖಂಡಿತವಾಗಿ ಗೊತ್ತಿದೆ. ಇದಕ್ಕೇನು ಪರಿಹಾರ, ಏನು ಮಾಡಿದರೆ ಈ ನಿತ್ಯಸಂಕಟದಿಂದ ಮುಕ್ತಿ ಹೊಂದಬಹುದು ಎಂದು ನಾವು ಎಲ್ಲಾ ದೇವರುಗಳ, ನಾಯಿಪೋಷಕರ, ಯುಟ್ಯೂಬ್ ವಿಡಿಯೋಗಳ ಮೊರೆ ಹೊಕ್ಕಿದ್ದೆವು. + +ಯಾರೋ ಕಾಂಕ್ರೀಟ್ ನೆಲದ ಮೇಲೆ ಓಡಿಸಿದರೆ ಆ ಉಗುರುಗಳು ನೆಲದಿಂದ ಸವೆಯುತ್ತವೆ ಎಂದು ಹೇಳಿದ್ದರಿಂದ ಕೂರಾನನ್ನು ಪ್ರತಿಮುಂಜಾನೆ ಓಡಲು ಕರೆದುಕೊಂಡು ಹೋಗುವ ಕೆಲಸವೂ ಆಯಿತು. ಅದು ಸ್ವಲ್ಪ ಕೆಲಸ ಮಾಡಿತಾದರು ಚೂಪಾದ ಉಗುರುಗಳ ಕಾಟ ಸಂಪೂರ್ಣವಾಗಿ ಮುಗಿಯಲಿಲ್ಲ. ನಾಯಿಗಳ ಸಲೂನಿನಲ್ಲಿ ಉಗುರುಗಳನ್ನು ಕತ್ತರಿಸುತ್ತಾರೆಂದು ಗೊತ್ತಾಗಿ ಅಲ್ಲಿಗೆ ಕರೆದುಕೊಂಡು ಹೋದೆವು. ಅಲ್ಲಿ ಅವನ ಯಾವ ತಂತ್ರಗಳು ನಡೆಯದೇ, ಆಕೆಗಿರುವ ಅನುಭವದಿಂದ ಉಗುರುಗಳನ್ನು ಕತ್ತರಿಸಿಯೇ ತೀರುತ್ತಾಳೆ ಎಂದು ನಾವು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತ ಹೊರಗೆ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಆಕೆಯನ್ನು ನೋಡಿ ಬೆಟ್ಟದ ಚಾಮುಂಡಿದೇವಿಯೇ ದರ್ಶನ ಕೊಟ್ಟಂತಾಯಿತು. ಆದರೆ.. ಅವಳು ಸಹ ತನಗೆ ಆಗಲಿಲ್ಲ ಎಂದು ಕೂರಾನನ್ನು ಕರೆತಂದು ಕೊಟ್ಟು ಬಿಟ್ಟಳು! ಕೂರಾ ವಿಜಯದ ನಗೆ ಬೀರಿದ್ದ. ಆಗ ಅರ್ಥವಾಗಿದ್ದು ಇದು ಮುಗಿಯದ ಸಮಸ್ಯೆ. ಹೀಗೆಯೇ ಮುಂದುವರೆದರೆ ನಮ್ಮ ಜೀವನ ಬಹಳ ಘೋರವಾಗಲಿದೆ ಎಂಬುದನ್ನು ನೆನೆದು ನಡುಕ ಹುಟ್ಟಿತ್ತು. + + + +ನಾನು ಮಾತ್ರ ಛಲ ಬಿಡದ ತ್ರಿವಿಕ್ರಮನ ಹಾಗೆ ಆಗಾಗ ಅವನ ಉಗುರು ತೆಗೆಯುವ ಪ್ರಯತ್ನ ಮಾಡುತ್ತಿರುತ್ತೇನೆ. ಕೆಲವೊಮ್ಮೆ ಮಗನೇ ಎಂದು ಮುದ್ದು ಮಾಡಿ ಇನ್ನು ಕೆಲವೊಮ್ಮೆ ಮಗನೇ! ಎಂದು ಬೈಯ್ಯುತ್ತ ಕಾರ್ಯಸಾಧಿಸಲು ಹೆಣಗುತ್ತೇನೆ. ಅವನು ಮಲಗಿದ್ದಾಗ ಅವನಿಗೆ ಗೊತ್ತಾಗದ ಹಾಗೆ ಅವನ ಪಕ್ಕಕ್ಕೆ ಹೋಗಿ ಕೂತು ಅವನ ಕಾಲು ಹಿಡಿದರೂ ಅವನ ನರಕ್ಕೆ ತಾಕಬಾರದು ಎಂಬ ಕಾರಣಕ್ಕೆ ನನಗು ಪುಕುಪುಕು. ಅಷ್ಟೊತ್ತಿಗೆ ಅವನಿಗೆ ವಾಸನೆ ಬಂದು ಮತ್ತದೇ ಕಥೆ ರಿಪೀಟ್. ಈಗೀಗ ಅವನ ಕಾಲು ಹಿಡಿದರೆ ಸಾಕು ಎದ್ದು ಓಡಲು ಶುರು ಮಾಡಿದ್ದಾನೆ. ಇದನ್ನು ಬರೆಯುವ ಹೊತ್ತಿನಲ್ಲಿ ಇಲ್ಲೇ ಪಕ್ಕದಲ್ಲಿ ಕೂತಿರುವ ಅವನ ಉಗುರುಗಳು ನನ್ನನ್ನು ಪರಚುತ್ತಿವೆ. + +ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ. \ No newline at end of file diff --git a/Kenda Sampige/article_140.txt b/Kenda Sampige/article_140.txt new file mode 100644 index 0000000000000000000000000000000000000000..14a8fc61b99bc0d6f8b7c9f75c7168f5d2fdf6a7 --- /dev/null +++ b/Kenda Sampige/article_140.txt @@ -0,0 +1,129 @@ +ಸಂಜಯ್ ಸರ್ಕಾರ್, ಏಲಿಯಾಸ್, ಸಂಸ ರಾಜಿಯಾಗುವವರಲ್ಲ ಅನ್ನುವುದು ಅವರನ್ನು ಬಲ್ಲ ಯಾರು ಬೇಕಾದರೂ ಹೇಳುತ್ತಾರೆ. ಸಹದೇವನೂ ಅದನ್ನು ಕಳೆದ ಹದಿನೆಂಟು ವರ್ಷಗಳಿಂದ ನೋಡುತ್ತಾ ಬಂದಿದ್ದಾನೆ. ತಪ್ಪು ನಿರ್ಧಾರ ತಗೋಬೇಡ, ಒಂದು ಸಲ ನಿರ್ಧಾರ ತಗೊಂಡ ಮೇಲೆ ಬದಲಾಯಿಸಬೇಡ ಅನ್ನುವ ಮಾತನ್ನು ಸಂಸ ಎಲ್ಲರಿಗೂ ಹೇಳುತ್ತಾ ಇರುತ್ತಾರೆ. ಅವರ ಪ್ರಕಾರ ನಿರ್ಧಾರ ಬದಲಾಯಿಸುವುದಕ್ಕಿಂತ ತಪ್ಪು ತೀರ್ಮಾನವೇ ವಾಸಿ. ಒಂದು ಸಲ ಅಂದುಕೊಂಡದ್ದನ್ನು ನಾವು ಮತ್ತೊಬ್ಬರ ಮಾತು ಕೇಳಿ ಬದಲಾಯಿಸುತ್ತಾ ಹೋದರೆ ಜೀವನ ಪೂರ್ತಿ ನಮ್ಮ ಬದುಕನ್ನು ರಿಪೇರಿ ಮಾಡುತ್ತಲೇ ಇರಬೇಕಾಗುತ್ತದೆ. + +ಸಂಸ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿದ್ದು ಯಾಕೆಂಬುದು ಸಹದೇವನಿಗೆ ಸ್ಪಷ್ಟವಾಗಲಿಲ್ಲ. ಆ ಪ್ರಶ್ನೆಗೆ ಉತ್ತರ ಸಿಕ್ಕರೆ ಕಗ್ಗಂಟು ಸಡಿಲಾಗುತ್ತದೆ. ಒಳಹೊಕ್ಕಲು ಒಂದು ಸಣ್ಣ ಜಾಗ ಸಿಕ್ಕರೂ ಸಾಕು, ಅವರ ಮನಸ್ಸನ್ನು ಪೂರ್ತಿ ಜಾಲಾಡಬಹುದು. ಅಥವಾ ಅವರ ಜತೆ ಮಾತಾಡಲಿಕ್ಕೆ ಒಂದರ್ಧ ಗಂಟೆ ಸಿಕ್ಕರೂ ಸಾಕು. ಆದರೆ ಸಂಸ ಯಾರ ಜತೆಗೂ ಅಷ್ಟೆಲ್ಲ ಮಾತಾಡುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಅವರು ಮೌನವಾಗಿಯೇ ಇದ್ದಿದ್ದನ್ನು ಸಹದೇವ ನೋಡಿದ್ದ. ಅಲ್ಲದೇ ಚೀಫ್ ಕೂಡ ಕಂಗಾಲಾಗಿದ್ದಾರೆ ಅಂದರೆ ಸಂಸ ಖಡಾಖಂಡಿತವಾಗಿಯೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿರಬೇಕು. + +(ಜೋಗಿ) + +ಈ ಸಂಗತಿಯನ್ನು ಯಾರ ಜತೆಗೂ ಚರ್ಚಿಸುವ ಹಾಗೂ ಇಲ್ಲ. ಸಂಸ ಅಧಿಕಾರದಲ್ಲಿ ಇರುವುದಿಲ್ಲ ಅಂತ ಗೊತ್ತಾದ ಮರುಗಳಿಗೆಯೇ ಒಳಜಗಳ ಶುರುವಾಗುತ್ತದೆ. ಪಕ್ಷ ಒಡೆದು ಛಿದ್ರವಾಗುತ್ತದೆ. ಇಷ್ಟು ದಿನಗಳ ಕಾಲ ಅಧಿಕಾರದ ಲಾಲಸೆ ಇದ್ದರೂ ಭಯಭಕ್ತಿಯಿಂದ ಸುಮ್ಮಗಿದ್ದವರು ಶಕ್ತಿ ಪ್ರದರ್ಶನ ಆರಂಭಿಸುತ್ತಾರೆ. ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇದ್ದವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿಯುತ್ತಾರೆ. ಅಂಥವರು ಗೆಲ್ಲುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಇನ್ನು ಮೂರು ತಿಂಗಳಿಗೆ ಪಕ್ಷ ಒಡೆದು ಹೋಗಿ, ಹನ್ನೆರಡು ವರುಷದ ಶ್ರಮ ಸೋರಿಹೋಗುತ್ತದೆ. + +ಹೀಗೆ ಏನೂ ತೋಚದೇ ಹೋದಾಗೆಲ್ಲ ಸಹದೇವ ತನ್ನ ಬಾಲ್ಯದ ಗೆಳೆಯ ನಿರಂಜನನಿಗೆ ಫೋನ್ ಮಾಡುತ್ತಾನೆ. ಅವನ ಬಳಿ ಸಲಹೆ ಕೇಳುತ್ತಾನೆ ಅಂತೇನಲ್ಲ. ಆದರೆ ಅವನ ಜೊತೆ ಮಾತಾಡುತ್ತಾ ಹೋದ ಹಾಗೆ ಅಸ್ಪಷ್ಟವಾಗಿದ್ದದ್ದು ನಿಚ್ಚಳವಾಗುತ್ತಾ ಹೋಗುತ್ತದೆ. ಅಲ್ಲದೇ, ನಿರಾಳವಾಗಿ ಹರಟಲು ಸಹದೇವನಿಗೆ ಇದ್ದದ್ದು ಅವನೊಬ್ಬನೇ. + +ಸಹದೇವನ ಫೋನು ಬರುವ ಹೊತ್ತಿಗೆ ನಿರಂಜನ ಸುರತ್ಕಲ್‍ನ ಟೈಲರ್ ದೇವೇಂದ್ರನ ಅಂಗಡಿಯಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ. ಸಹದೇವನ ಫೋನು ಅಂತ ಗೊತ್ತಾಗುತ್ತಿದ್ದಂತೆ ದೇವೇಂದ್ರ ತರಿಸಿದ್ದ ಚಹಾವನ್ನೂ ಗೋಳಿಬಜೆಯನ್ನೂ ಅರ್ಧಕ್ಕೇ ಬಿಟ್ಟು ರಸ್ತೆಗೆ ಜಿಗಿದ. ಒಂದು ಕಿವಿಗೆ ಸಹದೇವನ ಮಾತು ಕೇಳಿಸುತ್ತಿದ್ದರೂ, ದೇವೇಂದ್ರ ಅಂಗಡಿಯಲ್ಲಿದ್ದ ಯಾರಿಗೋ `ಅದ್ಯಾರದ್ದೋ ಫೋನ್ ಬರ್ತದೆ. ಎಲ್ಲಾ ಬಿಟ್ಟು ಓಡಿ ಹೋಗ್ತಾನೆ. ಯಾವುದೋ ಹುಡುಗಿಯದ್ದೇ ಇರಬೇಕು’ ಎಂದು ತಮಾಷೆ ಮಾಡಿದ್ದು ನಿರಂಜನನಿಗೆ ಕೇಳಿಸದೇ ಹೋಗಲಿಲ್ಲ. + +`ಎಂಥದಾ, ಸುದ್ದಿಯೇ ಇಲ್ಲ, ಭಯಂಕರ ಬಿಜಿಯಾ? ನಮ್ಮ ಗಣಿತದ ಮಾಸ್ಟ್ರಿಗೆ ಹುಚ್ಚು ಹಿಡಿದದ್ದು ಗೊತ್ತುಂಟಾ ನಿಂಗೆ. ಈಗ ಗೋಡೆಯಲ್ಲಿ, ರಸ್ತೆಯಲ್ಲಿ, ಎಲ್ಲೆಂದರಲ್ಲಿ ಗಣಿತದ ಸೂತ್ರ ಬರೆಯುವುದು, ಸಮಸ್ಯೆ ಬಿಡಿಸುವುದು, ಭಯಂಕರ ಉಪದ್ರ ಮಾರಾಯ’ ಎಂದು ನಿರಂಜನ ಎಂದಿನ ಮಾತಿಗಿಳಿದ. ಸಹದೇವನಿಗೂ ಅದೇ ಬೇಕಿತ್ತು. ಮನಸ್ಸು ಜಡವಾಗಿದೆ ಅಂತ ಅನ್ನಿಸಿದಾಗೆಲ್ಲ ನಿರಂಜನನ ಕತೆ, ತಮಾಷೆ, ಹಾಡು, ಅವನು ಹೇಳುತ್ತಿದ್ದ ಊರಿನ ಪ್ರಸಂಗಗಳು, ಯಕ್ಷಗಾನದ ಹೊಸ ಪಟ್ಟುಗಳು ಸಹದೇವನಿಗೆ ಹೊಸ ಚೈತನ್ಯ ತುಂಬುತ್ತಿದ್ದವು. + +ನಿರಂಜನ ಒಂಚೂರೂ ಬದಲಾಗಿರಲಿಲ್ಲ. ಸಹದೇವ ಮತ್ತು ನಿರಂಜನ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಹೇಗಿದ್ದನೋ ಈಗಲೂ ಹಾಗೆಯೇ ಇದ್ದ. ಮದುವೆ ಆಗುವುದಿಲ್ಲ ಅಂತ ತೀರ್ಮಾನ ಮಾಡಿದವನು, ಯಾರೆಷ್ಟೇ ಹೇಳಿದರೂ ಮದುವೆ ಮಾಡಿಕೊಳ್ಳಲಿಲ್ಲ. ಕೊನೆಗೆ ನಲವತ್ತೆಂಟು ವರ್ಷಕ್ಕೆ ಮದುವೆ ಆಗುತ್ತೇನೆ ಅಂದ. ಯಶೋದೆಯೇ ಹುಡುಗಿ ಹುಡುಕುವ ಜವಾಬ್ದಾರಿ ಹೊತ್ತಳು. ಒಬ್ಬಳು ವಿಧವೆಯನ್ನು ಹುಡುಕಿ ನಿರಂಜನನನ್ನು ಒಪ್ಪಿಸಿ ಮದುವೆ ಮಾಡಿದಳು. ಇಬ್ಬರು ಮಕ್ಕಳ ತಂದೆಯೂ ಆದ. ಆದರೆ ಆಮೇಲೂ ಅವನು ಕಿಂಚಿತ್ತೂ ಬದಲಾಗಲಿಲ್ಲ. ಅವನ ಹೆಂಡತಿ ನಾಗವೇಣಿಗೆ ಅಂಥ ನಿರೀಕ್ಷೆಗಳೂ ಇರಲಿಲ್ಲವಾಗಿ, ಆಕೆ ನಿರಂಜನನ ಓಡಾಟವನ್ನೆಲ್ಲ ಒಪ್ಪಿಕೊಂಡಿದ್ದಳು. ಸಹದೇವ ಎಷ್ಟೇ ಕರೆದರೂ ನಿರಂಜನ ದೆಹಲಿಯ ಕಡೆ ತಲೆ ಹಾಕಲಿಲ್ಲ. ತನ್ನ ಮನೆ, ಮೂರೂವರೆ ಎಕರೆ ಅಡಕೆ ತೋಟ, ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿರುವ ಅಮ್ಮ, ಆಗಾಗ ಫೋನ್ ಮಾಡುವ ಸಹದೇವನನ್ನು ಬಿಟ್ಟರೆ ಅವನಿಗೆ ಇಷ್ಟವಾದ ಸಂಗತಿಗಳು- ರುಚಿಯಾದ ಊಟ, ಇಸ್ಪೀಟು ಆಟ, ಈಜು ಮತ್ತು ಯಕ್ಷಗಾನ. ಶ್ರೀಮಂತರ ಮನೆಯ ಊಟಕ್ಕೆ ಹೋದ ಅಮ್ಮ ಮಕ್ಕಳಿಗೆಂದು ಸಿಹಿತಿಂಡಿಗಳನ್ನು ಸೆರಗಿನಲ್ಲಿ ಗಂಟು ಕಟ್ಟಿ ತರುವಂತೆ, ಊರಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಸಹದೇವನಿಗೆ ಹೇಳಲಿಕ್ಕೆಂದೇ ಅವನು ನೆನಪಿನ ಸಂಚಿಯಲ್ಲಿ ಇಟ್ಟುಕೊಳ್ಳುತ್ತಿದ್ದ. + +`ಸಿಕ್ಕಾಪಟ್ಟೆ ಒತ್ತಡದಲ್ಲಿದ್ದೇನೆ ನಿರಂಜನ. ಒಂದು ದೊಡ್ಡ ಸಮಸ್ಯೆ ತಲೆ ಮೇಲೆ ಬಂದು ಕೂತಿದೆ. ಅದನ್ನು ಕೆಳಗಿಳಿಸಲಿಕ್ಕೂ ಆಗುತ್ತಿಲ್ಲ, ಹೊತ್ತುಕೊಂಡು ಓಡಾಡಲಿಕ್ಕೂ ಆಗುತ್ತಿಲ್ಲ. ಸಾವು ಬದುಕಿನ ಪ್ರಶ್ನೆ ಆಗಿಬಿಟ್ಟಿದೆ’ ಅಂತ ಸಹದೇವ ಬಿಟ್ಟುಕೊಡಲಾಗದ ಗುಟ್ಟನ್ನು ಬಚ್ಚಿಟ್ಟುಕೊಂಡು, ಅದು ಉಂಟು ಮಾಡುತ್ತಿರುವ ತಲ್ಲಣಗಳನ್ನು ಮಾತ್ರ ನಿರಂಜನನ ಹತ್ತಿರ ಹೇಳಿಕೊಂಡ. + +`ನಿನ್ನ ಸಮಸ್ಯೆಗೆ ಮನುಷ್ಯರು ಕಾರಣ ಆದ್ರೆ ಅವರ ಹತ್ರ ಮಾತಾಡು. ಗ್ರಹಗಳು ಕಾರಣ ಆದರೆ ಶಾಂತಿ ಹೋಮ ಮಾಡಿಸು. ದುಷ್ಟರು ಕಾರಣ ಆದ್ರೆ ಸಂಹಾರ ಮಾಡು. ನೀನೇ ಕಾರಣ ಆಗಿದ್ರೆ ನೇಣು ಹಾಕ್ಕೊಂಡು ಸಾಯಿ’ ಎಂದು ನಿರಂಜನ ಗಹಗಹಿಸಿ ನಕ್ಕ. ಸಹದೇವನಿಗೂ ನಗು ಉಕ್ಕಿ ಬಂದು `ನೇಣು ಹಾಕ್ಕೊಂಡು ಸಾಯೋ ದಾದರೆ ನಿನ್ನನ್ನು ಕೊಂದೇ ಹೋಗೋದು ನಾನು’ ಅಂದ. + +ಹೀಗೇ ಇಬ್ಬರೂ ಸುಮಾರು ಹೊತ್ತು ಮಾತಾಡಿದರು. ನಿರಂಜನ ಸುರತ್ಕಲ್ಲನ್ನು ಸೀಳಿಕೊಂಡು ಹೋಗುತ್ತಿರುವ ಹೊಸ ಅಷ್ಟಪಥ ರಸ್ತೆ ಇಡೀ ಊರನ್ನೇ ಎರಡು ಭಾಗ ಮಾಡಿದೆ. ಮೊದಲೇ ನಾವು ಹೊಡೆದಾಟಕ್ಕೆ ಎತ್ತಿದ ಕೈ. ಈಗ ಒಂದು ಭಾಗಕ್ಕೆ ಇಂಡಿಯಾ ಇನ್ನೊಂದು ಭಾಗಕ್ಕೆ ಪಾಕಿಸ್ತಾನ ಅಂತ ಹೆಸರಿಟ್ಟು ಹೊಡೆದಾಡಿಕೊಳ್ಳಬಹುದು. ಕ್ರಿಕೆಟ್ ಕೂಡ ಆಡಬಹುದು. ಈಗಂತೂ ಹೆಣ ಬೀಳೋದಕ್ಕೆ ಕಾರಣಗಳೇ ಬೇಕಿಲ್ಲ. ಸಾವು ತುಂಬ ಅಗ್ಗವಾಗಿದೆ ಮಾರಾಯ. ರುಪಾಯಿಗೆರಡು ಕೇಜಿ ಅಂತೆಲ್ಲ ಹೇಳಿದ. ಆ ಕತೆಗಳೆಲ್ಲ ಸಹದೇವನಿಗೂ ಗೊತ್ತಿದ್ದವು. `ಅದು ಆಧುನಿಕ ರಾಜಕಾರಣದ ಅವಿಭಾಜ್ಯ ಅಂಗ. ಸಾವಿಲ್ಲದೇ ಹೋದರೆ ಸಹಬಾಳ್ವೆಗೆ ಅರ್ಥವೇ ಇಲ್ಲ. ಹೊಡೆದಾಡ್ತಾ ಇರಬೇಕು, ಒಂದಾಗುತ್ತಿರಬೇಕು ಅಂತ ರಾಜಕಾರಣ ನಂಬಿದೆ’ ಎನ್ನುವುದನ್ನು ಎಷ್ಟು ಸರಳವಾಗಿ ಹೇಳಲು ಸಾಧ್ಯವೋ ಅಷ್ಟು ಸರಾಗವಾಗಿ ಸಹದೇವ ನಿಧಾನವಾಗಿ ನಿರಂಜನನಿಗೆ ವಿವರಿಸಿದ. + +ಮಾತಾಡುತ್ತಾ ಆಡುತ್ತಾ ತನ್ನ ಸಮಸ್ಯೆಗೆ ನಿರಂಜನನ ಹತ್ತಿರ ಪರಿಹಾರ ಸಿಗುತ್ತದೆ ಅಂತ ಸಹದೇವನಿಗೆ ಗಾಢವಾಗಿ ಅನ್ನಿಸಿತು. ಆದರೂ ನೇರವಾಗಿ ಎಲ್ಲವನ್ನೂ ಅವನಿಗೆ ಹೇಳುವಂತಿರಲಿಲ್ಲ. `ಒಂದು ಪ್ರಶ್ನೆ ಕೇಳ್ತೀನಿ. ಸರಿಯಾಗಿ ಆಲೋಚನೆ ಮಾಡಿ ಉತ್ತರ ಕೊಡು. ನಿಮ್ಮೂರಿನ ಒಂದು ಪಾರ್ಟಿಯಲ್ಲಿ ಒಬ್ಬ ನಾಯಕ ಇದ್ದಾನೆ ಅಂತಿಟ್ಕೋ. ಎಲ್ಲರೂ ಅವನ ವರ್ಚಸ್ಸು, ಒಳ್ಳೇತನ ನೋಡಿ ಅವನಿಗೆ ಮತ ಹಾಕಿ ಗೆಲ್ಲಿಸ್ತಿರ್ತಾರೆ. ಅವನಿಲ್ಲದೇ ಹೋದರೆ ಪಕ್ಷ ಸೋತು ಹೋಗೋದರ ಬಗ್ಗೆ ಯಾರಿಗೂ ಅನುಮಾನವೇ ಇರೋದಿಲ್ಲ. ಹೀಗಿದ್ದಾಗ ಒಂದು ದಿನ ಇದ್ದಕ್ಕಿದ್ದಂತೆ ಅವನು ನಾನು ರಾಜಕೀಯ ಸನ್ಯಾಸ ತಗೋಬೇಕು ಅಂತ ತೀರ್ಮಾನ ಮಾಡ್ತಾನೆ. ಅವನ ಮನಸ್ಸು ಬದಲಾಯಿಸೋದು ಹ್ಯಾಗೆ?’ + +`ದೊಡ್ಡವರು ಒಂದು ಸಲ ತೀರ್ಮಾನ ಮಾಡಿದ ಮೇಲೆ ಅದನ್ನು ಸತ್ತರೂ ಬದಲಾಯಿಸೋದಿಲ್ಲ. ಅವರಿಗೆ ತಾವು ಮಾಡ್ತಿರೋದೇ ಸರಿ ಅನ್ನೋ ಅಹಂಕಾರ.’ ಕೊಂಚ ಒರಟಾಗಿಯೇ ಹೇಳಿದ ನಿರಂಜನ. + +`ಹಾಗಿದ್ದರೆ ಇಂಥ ಪರಿಸ್ಥಿತಿಯಿಂದ ಪಾರಾಗೋದು ಹೇಗೆ?’ + +`ಅಂಥವರನ್ನು ಬಲಿ ಕೊಡಬೇಕು. ಅಂಥವರ ಸಾವಿನ ಅನುಕಂಪದ ಅಲೆಗಳ ಮೇಲೆ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಬಹುದು’ ನಿರಂಜನ ಗಂಭೀರವಾಗಿ ಹೇಳಿದ. ಸಹದೇವನ ಕಡೆಯಿಂದ ಏನೂ ಉತ್ತರ ಬರದೇ ಇದ್ದದ್ದು ನೋಡಿ, ತನ್ನ ಮಾತಿನ ಗಾಂಭೀರ್ಯವನ್ನು ತಾನೇ ಮುರಿಯಲಿಕ್ಕೆಂದು `ಚೆನ್ನಾಗಿಲ್ವಾ ಐಡಿಯಾ? ಇದಕ್ಕಿಂತ ಒಳ್ಳೇ ಪ್ಲಾನು ಆ ದೇವರ ಹತ್ರವೂ ಇರಲಿಕ್ಕೆ ಸಾಧ್ಯವಿಲ್ಲ’ ಅಂತ ಜೋರಾಗಿ ನಕ್ಕ. + +ಸಹದೇವನೂ ನಕ್ಕು `ಇವತ್ತಿಗಿಷ್ಟು ಜ್ಞಾನ ಸಾಕು’ ಅಂದ. ಮಾತು ಮುಗಿದ ಮೇಲೂ ತುಂಬಾ ಹೊತ್ತು ನಿರಂಜನ ಹೇಳಿದ ಮಾತು ಸಹದೇವನ ಕಿವಿಯಲ್ಲಿ ಅನುರಣಿಸುತ್ತಿತ್ತು. `ಬಲಿ, ಸಾವು, ಅನುಕಂಪ, ಸಾಮ್ರಾಜ್ಯ’ ಈ ನಾಲ್ಕು ಪದಗಳನ್ನು ಸಹದೇವ ಹೆಕ್ಕಿ ಜೇಬಿಗೆ ಹಾಕಿಕೊಂಡ. + +***** + +‘ಐ ವಾಂಟ್ ಅನದರ್ ಮೀಟಿಂಗ್ ವಿತ್ ಯೂ. ಸೂನರ್ ದಿ ಬೆಟರ್’ ಎಂಬ ಒಂದು ಸಾಲಿನ ಚೀಟಿಯನ್ನು ಬೆಳಗ್ಗೆ ಪೇಪರ್ ತಲುಪುವ ಮುಂಚೆಯೇ ಸೋನು ಚೀಫ್ ಮನೆಗೆ ತಲುಪಿಸಿಯಾಗಿತ್ತು. ಅದನ್ನು ನೋಡುತ್ತಲೇ ಚೀಫ್ ಮುಖದಲ್ಲಿ ಸಣ್ಣ ನಗು ಅರಳಿತು. ಅವರಿಗೆ ಸಹದೇವ್ ಬಗ್ಗೆ ಯಾವ ಅಪನಂಬಿಕೆಯೂ ಇರಲಿಲ್ಲ. ಒಪ್ಪಿಸಿದ ಕೆಲಸವನ್ನು ಆತನಷ್ಟು ನಿಷ್ಠೆಯಿಂದ ಮಾಡುವ ವ್ಯಕ್ತಿ ಅವರಿಗೆ ಯಾವತ್ತೂ ಸಿಕ್ಕಿರಲಿಲ್ಲ. ತಾನು ಯಾರೆಂಬುದನ್ನು ಯಾವತ್ತೂ ಬಿಟ್ಟುಕೊಡದ, ತಾನು ಮಾಡಿದ ಕೆಲಸವನ್ನು ಕೂಡ ತಾನು ಮಾಡಿದೆ ಎಂದು ಕ್ಲೈಮ್ ಮಾಡಿಕೊಳ್ಳದ ಅನಗತ್ಯವಾಗಿ ಯಾರನ್ನೂ ಭೇಟಿಯಾಗದ ಯಾವ ಸವಲತ್ತನ್ನೂ ಬಯಸದ ದೇವ್ ಬಗ್ಗೆ ಅವರಿಗಿದ್ದ ಏಕೈಕ ತಕರಾರೆಂದರೆ ಅವನನ್ನು ಸಂಪರ್ಕಿಸುವ ಕಷ್ಟ. ಅವನು ಯಾವತ್ತೂ ಫೋನಿನಲ್ಲಿ ಮಾತಾಡುತ್ತಿರಲಿಲ್ಲ. ಯಾವ ಆಧುನಿಕ ತಂತ್ರಜ್ಞಾನವೂ ಇಲ್ಲದ ಬೇಸಿಕ್ ಫೋನ್ ಇಟ್ಟುಕೊಂಡು ಓಡಾಡುತ್ತಿದ್ದ ದೇವ್, ತನ್ನ ಲ್ಯಾಪ್‍ಟಾಪನ್ನು ಮಾತ್ರ ನಂಬುತ್ತಿದ್ದ. ಒಮ್ಮೆ ಭೇಟಿಯಾದ ಜಾಗದಲ್ಲಿ ಮತ್ತೊಮ್ಮೆ ಭೇಟಿಯಾಗುತ್ತಿರಲಿಲ್ಲ. ಭೇಟಿಯಾಗುವಾಗ ಬೇರೆ ಯಾರೂ ಜತೆಗಿರಬಾರದು ಎಂಬುದನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದ. ಫೋನಿನಲ್ಲಿ ಇಪ್ಪತ್ತು ಸೆಕೆಂಡಿನಲ್ಲಿ ಮುಗಿದುಹೋಗುವ ಮಾತುಕತೆಗೂ ಚೀಫ್ ಮೂರು ಗಂಟೆ ಖರ್ಚು ಮಾಡಬೇಕಾಗುತ್ತಿತ್ತು. ಆದರೆ ದೇವ್ ಮಾತ್ರ ಆ ವಿಚಾರದಲ್ಲಿ ರಾಜಿಯಾಗು ತ್ತಿರಲಿಲ್ಲ. ಈಗ ಮೂರು ಗಂಟೆ ಖರ್ಚಾದರೆ ಆಗಲೀ, ನಂತರ ಮೂರು ವರ್ಷ ಖರ್ಚು ಮಾಡಿದರೂ ಆದ ತಪ್ಪನ್ನು ಸರಿಪಡಿಸಲಿಕ್ಕಾಗದು ಎಂದು ವಾದಿಸುತ್ತಿದ್ದ. + +ಅದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ದೆಹಲಿಯ ಶಕ್ತಿ ರಾಜಕಾರಣದ ಪ್ರಭಾವಲಯದಲ್ಲಿ ಎಲ್ಲರಿಗೂ ಎಲ್ಲರೂ ಗೊತ್ತಿದ್ದರು. ಯಾವುದೇ ಪಕ್ಷ ಯಾರೇ ಹೊಸಬರನ್ನು ನೇಮಿಸಿಕೊಂಡರೂ ಅದು ಎರಡೇ ದಿನಕ್ಕೆ ಎಲ್ಲರಿಗೂ ಗೊತ್ತಾಗುತ್ತಿತ್ತು. ಪಕ್ಷದ ರಹಸ್ಯಗಳನ್ನು ಯಾರು ಹೊರಹಾಕುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ಇಬ್ಬರೇ ಕುಳಿತು ಆಡಿದ ಮಾತುಗಳು ಕೂಡ ಎಷ್ಟೋ ಸಲ ಜಗಜ್ಜಾಹೀರಾಗುತ್ತಿದ್ದವು. ಅದರಿಂದಾಗಿಯೇ ಅನೇಕರು ಪಡಬಾರದ ಪಾಡು ಪಟ್ಟದ್ದನ್ನು ಚೀಫ್ ಕಣ್ಣಾರೆ ಕಂಡಿದ್ದರು. + +ಚೀಫ್ ಭೇಟಿಯ ಸಮಯ ಮತ್ತು ಜಾಗವನ್ನು ಒಂದು ಚೀಟಿಯಲ್ಲಿ ಬರೆದು ತಾವೇ ಹೋಗಿ ಮನೆಯಾಚೆ ಕಾಯುತ್ತಿದ್ದ ಸೋನು ಕೈಗೆ ಕೊಟ್ಟು ಬಂದರು. ಅವರು ಹೇಳಿದ ಸಮಯಕ್ಕೆ ಸರಿಯಾಗಿ ಅವರು ಹೇಳಿದ ಜಾಗದಲ್ಲಿ ಸಹದೇವ್ ಕಾಯುತ್ತಿದ್ದ. ಎಂದಿನಂತೆ ಚೀಫ್ ಒಬ್ಬರೇ ಬಂದಿದ್ದರು. + +ಅದೊಂದು ಹಳೆಯ ಕಟ್ಟಡ. ಒಂದು ಕಾಲದಲ್ಲಿ ಆ ಮನೆಯಲ್ಲಿ ಯಾರೋ ಪಂಜಾಬಿ ವಾಸ ಮಾಡುತ್ತಿದ್ದರೆಂದು ಕಾಣುತ್ತದೆ. ಮನೆಯ ಹೊರಗಿನ ತಿಳಿಹಸಿರು ಬಣ್ಣದ ಕಾಂಪೌಂಡಿನ ಮೇಲೆ, ಗೇಟಿನ ಪಕ್ಕದಲ್ಲಿ ನಾರಂಗ್ ಎಂದು ಬರೆದದ್ದು ಕಾಣುತ್ತಿತ್ತು. ಅದರ ಪಕ್ಕದಲ್ಲಿ ಇದ್ದ ಹೆಸರು ಅಳಿಸಿಹೋಗಿತ್ತು. ಗೇಟಿನ ಒಂದು ತುದಿ ತುಂಡಾಗಿದ್ದರಿಂದ ಅದು ನೆಲಕ್ಕೆ ತಾಕಿ ಜೋತಾಡುತ್ತಿತ್ತು. ಅದನ್ನು ಎತ್ತಿ ಪಕ್ಕಕ್ಕೆ ಸರಿಸುತ್ತಾ ಚೀಫ್ ಒಳಗೆ ಕಾಲಿಟ್ಟರು. + +ಮನೆಯೊಳಗೆ ಕುಳಿತುಕೊಳ್ಳಲು ಕುರ್ಚಿಗಳೇ ಇರಲಿಲ್ಲ. ಮನೆಯೊಳಗೇ ಜಗಲಿಯಂತೆ ಮಾಡಿ ಒಂದೂವರೆ ಅಡಿ ಎತ್ತರದ ಕಟ್ಟೆ ಕಟ್ಟಿದ್ದರು. ಇಬ್ಬರೂ ಕಟ್ಟೆಯ ಮೇಲೆ ಕೂತರು. + +`ಇಂಥ ಮನೆಗಳನ್ನು ಎಲ್ಲಿಂದ ಹುಡುಕ್ತೀನಿ ಅಂತ ಆಶ್ಚರ್ಯ ಆಗ್ತಿದ್ಯಾ? ಇದು ನಾನು ದೆಹಲಿಗೆ ಕಾಲಿಟ್ಟಾಗ ವಾಸ ಮಾಡ್ತಿದ್ದ ಮನೆ. ಈ ಮನೆಯಲ್ಲಿ ದೇವಕಿ ನಾರಂಗ್ ವಾಸ ಮಾಡ್ತಿದ್ದಳು. ಗಂಡನನ್ನು ಕಳಕೊಂಡು ಇಬ್ಬರು ಮಕ್ಕಳನ್ನು ಸಾಕ್ತಿದ್ದಳು. ನಾನಿಲ್ಲಿಗೆ ವಿದ್ಯಾಭ್ಯಾಸಕ್ಕೆಂದು ಬಂದೆ. ಅವಳ ಮಗನ ಹಾಗೇ ಇದ್ದು ಓದಿದೆ. ಆ ನೆನಪಿಗೆ ಈ ಮನೇನ ನಾನೇ ಕೊಂಡುಕೊಂಡೆ. ಈಗ ದೇವಕಿ ಬದುಕಿಲ್ಲ. ಅವಳ ಇಬ್ಬರು ಮಕ್ಕಳೂ ಜರ್ಮನಿಯಲ್ಲಿದ್ದಾರೆ. ಈ ಮನೆಯಲ್ಲೇ ನಾನು ಲಾ ಓದಿದ್ದು. ಕಷ್ಟ ಎದುರಾದಾಗೆಲ್ಲ ಇಲ್ಲಿಗೆ ಬರ್ತೀನಿ. ಎಷ್ಟೋ ಪ್ರಶ್ನೆಗಳಿಗೆ ನನಗೆ ಇಲ್ಲಿ ಉತ್ತರ ಸಿಕ್ಕಿವೆ’ ಚೀಫ್ ಎಂದಿಗಿಂತ ಹೆಚ್ಚು ಮಾತಾಡಿದರು. ಅವರು ಹೇಳಿದ ವಿವರಗಳಲ್ಲಿ ಆ ಕ್ಷಣಕ್ಕೆ ಸಹದೇವನಿಗೆ ಯಾವ ಆಸಕ್ತಿಯೂ ಇರಲಿಲ್ಲ. + +`ನನಗೆ ಕೆಲವು ಮಾಹಿತಿಗಳು ಬೇಕು. ಅದಿಲ್ಲದೇ ಮುಂದೆ ಹೋಗೋದಕ್ಕೆ ಸಾಧ್ಯವೇ ಇಲ್ಲ. ಆ ಮಾಹಿತಿ ನಿಮ್ಮಲ್ಲಿದೆ ಅಂದುಕೊಂಡು ಬಂದಿದ್ದೀನಿ. ನಿಮ್ಮಲ್ಲಿಲ್ಲದೇ ಹೋದರೆ ನಾನು ಕಲೆಕ್ಟ್ ಮಾಡಿಕೊಳ್ಳಬಲ್ಲೆ. ಆದರೆ ಅದಕ್ಕೆ ಜಾಸ್ತಿ ಸಮಯ ಹಿಡೀಬಹುದು’ ಸಹದೇವ ನೇರವಾಗಿ ವಿಷಯಕ್ಕೆ ಬಂದ. + +`ಸಂಜಯ್ ಸರ್ಕಾರ್ ಭೇಟಿಯಾಗೋ ವಿಚಾರ ಏನಾಯಿತು? ಆದಷ್ಟು ಬೇಗ ಅವರ ಹತ್ರ ಮಾತಾಡೋದು ಒಳ್ಳೇದು. ತಡವಾದಷ್ಟು ಸುದ್ದಿ ಹಬ್ಬುವ ಸಾಧ್ಯತೆ ಜಾಸ್ತಿ.’ ಹಿಂದಿನ ಭೇಟಿಯಲ್ಲಿ ಹೇಳಿದ ಮಾತುಗಳನ್ನೇ ಚೀಫ್ ಮತ್ತಷ್ಟು ಆತಂಕದಿಂದ ಆಡಿದರು. + +`ನಾವು ನಿನ್ನೆ ಭೇಟಿಯಾದಾಗ ನೀವು `ಮೂರು ತಿಂಗಳ ಹಿಂದೆ ಸರ್ಕಾರ್ ಲವಲವಿಕೆಯಿಂದಲೇ ಇದ್ದರು. ಚುನಾವಣೆ ಗೆಲ್ಲುವ ಉತ್ಸಾಹದ ಮಾತಾಡಿದ್ದರು’ ಅಂತ ಹೇಳಿದ್ರಿ. ನಿಮಗೆ ಅದು ಮೂರು ತಿಂಗಳ ಹಿಂದೆ ಅನ್ನೋದು ಸರಿಯಾಗಿ ನೆನಪಿದೆಯೇ?’ + +`ನೆನಪು ಮಾಡಿಕೊಂಡು ಹೇಳಬಹುದು. ಅವರು ಈ ಮಾತು ಹೇಳಿದ್ದು ನ್ಯಾಷನಲ್ ಪಾರ್ಟಿ ಸಮಾವೇಶ ನಡೀತಲ್ಲ, ಆವತ್ತು. ಅಂದರೆ ಇವತ್ತು ಆಗಸ್ಟ್ ಹದಿನೆಂಟು. ಅವರ ಸಮಾವೇಶ ನಡೆದದ್ದು ಮೇ ಒಂದು. ಮೂರೂವರೆ ತಿಂಗಳಾಗಿರಬಹುದು. ಅದನ್ನು ತಗೊಂಡು ಏನು ಮಾಡೋದಕ್ಕಿದೆ?’ + +`ಸರ್ಕಾರ್ ಮನ ಪರಿವರ್ತನೆ ಯಾವಾಗ ಆಯ್ತು ಅಂತ ಗೊತ್ತಾಗಬೇಕು. ಅವರ ಉತ್ಸಾಹ ಕ್ಷೀಣಿಸೋದಕ್ಕೆ ಒಂದೋ ಒಳಗಿನ ಕಾರಣ ಇರಬೇಕು. ಇಲ್ಲವೇ ಬಲವಾದ ಹೊರಗಿನ ಕಾರಣ ಇರಬೇಕು, ಚೀಫ್, ನನಗೆ ಈ ಮೂರೂವರೆ ತಿಂಗಳಲ್ಲಿ ಅವರು ಎಲ್ಲಿಗೆ ಹೋಗಿದ್ದಾರೆ, ಯಾರನ್ನು ಭೇಟಿ ಮಾಡಿದ್ದಾರೆ, ಅವರನ್ನು ಯಾರು ಭೇಟಿ ಮಾಡಿದ್ದಾರೆ, ಯಾರ ಜತೆ ಎಷ್ಟು ಹೊತ್ತು ಕಳೆದಿದ್ದಾರೆ, ಯಾರ ಜತೆಗೆಲ್ಲ ಫೋನಿನಲ್ಲಿ ಮಾತಾಡಿದ್ದಾರೆ- ಈ ಎಲ್ಲಾ ವಿವರಗಳೂ ಬೇಕು. ವಿಡಿಯೋ ಫೂಟೇಜ್ ಸಮೇತ ಸಿಕ್ಕರೆ ತುಂಬಾ ಒಳ್ಳೇದು. ಹಾಗೇ, ಅವರ ಇಬ್ಬರು ಪರ್ಸನಲ್ ಸೆಕ್ರೆಟರಿಗಳನ್ನೂ ನಾನು ಮಾತಾಡಿಸಬೇಕು’. + + + +ಚೀಫ್ ವಿಷಾದದಿಂದಲೂ ಅನುಕಂಪದಿಂದಲೂ ಸಹದೇವನನ್ನು ನೋಡುತ್ತಾ ಕೂತರು. ಸ್ವಲ್ಪ ಹೊತ್ತು ಏನೂ ಮಾತಾಡಲಿಲ್ಲ. ಅವರ ಮನಸ್ಸಲ್ಲಿ ಏನು ನಡೆಯುತ್ತಿದೆ ಅನ್ನುವುದು ಸಹದೇವನಿಗೆ ಅಲ್ಪಸ್ವಲ್ಪ ಅರ್ಥವಾಗುತ್ತಿತ್ತು. ಅವರೇ ಮಾತಾಡಲಿ ಅಂತ ಸಹದೇವ ಸುಮ್ಮನೆ ಕಾಯುತ್ತಾ ಕೂತ. + +`ಇಷ್ಟೆಲ್ಲ ಸರ್ಕಸ್ ಮಾಡೋ ಅಗತ್ಯ ಇದೆಯಾ? ನೇರವಾಗಿ ಹೋಗಿ ಮಾತಾಡಿದರೆ ಆಗೋದಿಲ್ವಾ? ಈ ವಿವರಗಳನ್ನೆಲ್ಲ ಕಲೆ ಹಾಕೋ ಹೊತ್ತಿಗೆ ತುಂಬ ತಡವಾಗುತ್ತೆ. ಅಷ್ಟು ಟೈಮ್ ಇಲ್ಲ ನಮ್ಮ ಹತ್ರ.’ಸಹದೇವ ತಣ್ಣಗೆ ಹೇಳಿದ. + +`ನಾನೇನು ಹುಡುಕ್ತಿದ್ದೇನೋ ಆ ವಿವರ ಸಿಗದೇ ಮಾತಾಡಿ ಪ್ರಯೋಜನ ಇಲ್ಲ. ನಿಮಗೆ ಆಗ ಹೇಳಿದ್ದನ್ನೇ ಈಗಲೂ ಹೇಳುತ್ತಾರೆ. ನಾವು ಒತ್ತಾಯ ಮಾಡಿದಷ್ಟೂ ಅವರ ನಿರ್ಧಾರ ಬಲವಾಗುತ್ತಾ ಹೋಗುತ್ತದೆ. ಮೂರನೇ ಸಲ ಈ ವಿಚಾರ ಮಾತಾಡ್ತೀವಿ ಅಂತ ಗೊತ್ತಾದರೆ ನಮ್ಮನ್ನು ಭೇಟಿಯಾಗಲಿಕ್ಕೂ ಅವರು ನಿರಾಕರಿಸಬಹುದು. ಒಂದಂತೂ ನಿಜ ಚೀಫ್. ಇದು ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ನಾವು ಅವರ ಫೋನ್ ಟ್ಯಾಪ್ ಮಾಡಬೇಕಾದ ಪ್ರಸಂಗ ಬಂದರೂ ಬರಬಹುದು.’ + +`ವಾಟ್…. ಪ್ರಧಾನಿಯ ಫೋನ್ ಟ್ಯಾಪ್ ಮಾಡೋದಾ? ಇಂಪಾಸಿಬಲ್. ಅವರಿಗೆ ಬರೀ ಫಿಸಿಕಲ್ ಸೆಕ್ಯುರಿಟಿಯಷ್ಟೇ ಇದೆ ಅಂದ್ಕೋಬೇಡ. ಡಿಜಿಟಲೀ ಸೆಕ್ಯೂರ್ಡ್ ಆಫೀಸು ಅವರದ್ದು. ಡಾಟಾ ಸೋರಿಕೆ ಆಗೋದಕ್ಕೆ ಸಾಧ್ಯವೇ ಇಲ್ಲ.’ + +`ಚೀಫ್, ಅವರು ಯಾವ ದಿನ ಬದಲಾದರು ಅನ್ನೋದು ಮೊದಲು ಗೊತ್ತಾಗ ಬೇಕು. ಯಾಕೆ ಬದಲಾದರು ಅಂತ ತಿಳ್ಕೋಬೇಕು. ಆಮೇಲೆ ಅವರನ್ನು ಭೇಟಿಯಾಗಿ ಒಪ್ಪಿಸೋದು ಸುಲಭ. ಮನುಷ್ಯನಿಗೆ ಯಾಕೆ ವೈರಾಗ್ಯ ಬರುತ್ತೆ ಹೇಳ್ಲಾ? ಆರೋಗ್ಯ ಕೆಟ್ಟರೆ, ಇಂತಿಷ್ಟು ದಿನದಲ್ಲಿ ಸಾಯ್ತೀನಿ ಅಂತ ಗೊತ್ತಾದ್ರೆ, ಹೆಂಡ್ತಿ ತನಗೆ ಮೋಸ ಮಾಡ್ತಿದ್ದಾಳೆ ಅನ್ನೋದು ಸಾಬೀತಾದ್ರೆ, ಮಕ್ಕಳಿಗೆ ತನ್ನ ಮೇಲೆ ಪ್ರೀತಿಯಿಲ್ಲ ಅನ್ನೋದು ಖಾತ್ರಿಯಾದ್ರೆ ಗಂಡಸು ಈ ಜೀವನ ಸಾಕು ಅಂದ್ಕೋತಾನೆ. ಇವುಗಳ ಪೈಕಿ ಕೊನೆಯ ಎರಡು ಸಾಧ್ಯತೆಗಳನ್ನು ಬಿಟ್ಟು ಬಿಡಬಹುದು. ಅವರ ಆರೋಗ್ಯ, ಸಾವಿನ ಭಯ- ಎರಡರ ಬಗ್ಗೆ ರಿಪೋರ್ಟ್ ಬೇಕು. ನೀವು ನನಗೆ ಪರ್ಮಿಷನ್ ಕೊಟ್ಟರೆ ಸಾಕು. ಈ ಎಲ್ಲಾ ವಿವರಗಳನ್ನೂ ನಾನೇ ತರಿಸ್ಕೋತೇನೆ’ ಸಹದೇವ ಆತ್ಮವಿಶ್ವಾಸದಿಂದ ಹೇಳಿದ. + +`ಇದೆಲ್ಲ ರಹಸ್ಯವಾಗಿರುತ್ತಾ? ಒಂದು ವೇಳೆ ನಾನೇ ಇದನ್ನು ಮಾಡಿಸಿದೆ ಅಂತ ಯಾರಿಗಾದ್ರೂ ಗೊತ್ತಾದರೆ ನನ್ನ ರಾಜಕೀಯ ಜೀವನ ಮುಗಿದ ಹಾಗೆ. ಯಾರೂ ನನ್ನ ಹತ್ತಿರಕ್ಕೂ ಸೇರಿಸೋದಿಲ್ಲ. ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದರೂ ಆಶ್ಚರ್ಯ ಇಲ್ಲ. ಆ ಶುಭಗಳಿಗೆ ನೋಡೋದಕ್ಕೆ ನಮ್ಮ ಪಾರ್ಟಿಯಲ್ಲೇ ಸುಮಾರು ಜನ ಕಾಯ್ತಿದ್ದಾರೆ.’ + +ಚೀಫ್ ಮಾತಲ್ಲಿ ಸುಳ್ಳಿರಲಿಲ್ಲ. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಒದ್ದಾಡಿದವರನ್ನು, ಹೆಸರು ಕಳಕೊಂಡವರನ್ನು, ಅಧಿಕಾರ ಕಳಕೊಂಡವರನ್ನು ಅವನು ಓದಿ ತಿಳಿದಿದ್ದ. + +`ಚೀಫ್, ನಮ್ಮದೇ ಪಕ್ಷದ ಪ್ರಧಾನಿಯ ಫೋನನ್ನು ನಮ್ಮದೇ ಪಕ್ಷದ ಅಧ್ಯಕ್ಷರು ಟ್ಯಾಪ್ ಮಾಡಿದ್ದಾರೆ ಅನ್ನೋದು ಸುದ್ದಿಯೇ ಅಲ್ಲ. ನಾವಿದನ್ನು ಮಾಡ್ತಿರೋದು ಅವರ ಭದ್ರತೆಗೋಸ್ಕರ ಅಂತ ಹೇಳಿಬಿಡಬಹುದು. ನಾವೇನೂ ಅವರ ಖಾಸಗಿ ಫೋನನ್ನು ಟ್ಯಾಪ್ ಮಾಡ್ತಿಲ್ಲ. ಇದು ಅಫಿಷಿಯಲ್ ನಂಬರ್.’ + +ಚೀಫ್ ಸಂದಿಗ್ಧಕ್ಕೆ ಬಿದ್ದರು. ಒಪ್ಪಿಗೆ ಕೊಡದೇ ಹೋದರೆ ಸರ್ಕಾರ್ ನಿರ್ಧಾರ ಬದಲಾಗಿದ್ದು ಯಾಕೆ ಎನ್ನುವ ಬಗ್ಗೆ ಯಾವುದೇ ಕ್ಲೂ ಸಿಗುವುದಿಲ್ಲ. ಒಪ್ಪಿಗೆ ಕೊಟ್ಟರೆ ಮುಂದೇನಾಗುತ್ತದೋ ಗೊತ್ತಿಲ್ಲ. ಈ ಸಹದೇವನನ್ನು ಎಷ್ಟರ ಮಟ್ಟಿಗೆ ನಂಬಬಹುದು ಎಂಬ ಅನಗತ್ಯ ಅನುಮಾನವೊಂದು ಅವರ ಮುಖದಲ್ಲಿ ಸುಳಿದುಹೋಯಿತು. ಈತ ತನಗಾಗಿ ಕೆಲಸ ಮಾಡುತ್ತಿದ್ದಾನಾ? ಪಕ್ಷಕ್ಕೋಸ್ಕರವೋ? ಸಹದೇವನೇ ಬಾಯಿಬಿಟ್ಟರೆ ಮಾಡುವುದೇನು? + +ಚೀಫ್ ತಲೆಯೆತ್ತಿ ಸಹದೇವನ ಮುಖ ನೋಡಿದರು. ಅಲ್ಲಿ ಯಾವ ಭಾವನೆಯೂ ಇರಲಿಲ್ಲ. ಏನಾದರಾಗಲಿ ಸಹದೇವನನ್ನು ಅರ್ಧ ನಂಬಿದ್ದಾಗಿದೆ, ಪೂರ್ತಿಯಾಗಿಯೇ ನಂಬೋಣ ಅನ್ನಿಸಿ `ಗೋ ಅಹೆಡ್’ ಅಂದರು. + +ಸಹದೇವ `ನಾಳೆಯಿಂದ ನಮ್ಮ ಟೀಮ್ ಕೆಲಸ ಶುರುಮಾಡುತ್ತೆ. ಸೋನು ನಿಮ್ಮ ಜತೆ ಸಂಪರ್ಕದಲ್ಲಿರ್ತಾಳೆ. ಬೇರೆ ಯಾರ ಜತೆಗೂ ನೀವು ಮಾತಾಡಬೇಡಿ. ನಿಮ್ಮ ಹೆಸರು ಎಲ್ಲೂ ಬರದಂತೆ ನೋಡಿಕೊಳ್ಳೋ ಜವಾಬ್ದಾರಿ ನಂದು. ಮುಂದಿನ ಭೇಟಿಯಲ್ಲಿ ಸರ್ಕಾರ್ ಜತೆ ಯಾವಾಗ ಮಾತಾಡೋದು ಅಂತ ತೀರ್ಮಾನ ಮಾಡೋಣ’ ಎಂದು ಹೇಳಿ, ಆವತ್ತಿನ ಮಾತು ಮುಗಿಯಿತು ಎಂಬಂತೆ ಎದ್ದು ನಿಂತ. + +ಚೀಫ್ ಅವನ ಕೈ ಹಿಡಿದು ನಿಲ್ಲಿಸಿ, ಪಿಸುಮಾತಲ್ಲಿ, `ಪ್ರೈವೆಸಿ, ಸೀಕ್ರೆಸಿ ಎರಡೂ ಕಾಪಾಡು. ನಾನಿನ್ನೂ ಪೂರ್ತಿ ಕನ್ವಿನ್ಸ್ ಆಗಿಲ್ಲ’ ಅಂದರು. ಸಹದೇವ ನಂಬುಗೆಯ ಮುಗುಳ್ನಗು ನಕ್ಕ. + +***** + +ಸಾಲೋಮನ್ ನಂಬಿಕೆಗೆ ಅರ್ಹನೋ ಅಲ್ಲವೋ ಅನ್ನುವ ಅನುಮಾನ ಸಹದೇವನಿಗೆ ಇರಲಿಲ್ಲ. ಆದರೆ ಸೋನು ಅವನನ್ನು ಪೂರ್ತಿ ನಂಬಲು ಸಿದ್ಧಳಿರಲಿಲ್ಲ. ಅವನು ಹ್ಯಾಕರ್, ಬ್ಲಾಕ್‍ಮೇಲ್ ಮಾಡುತ್ತಾನೆ, ಆಮ್ರ್ಸ್ ಡೀಲರ್, ಬ್ಯಾಂಕುಗಳಿಂದ ಸಾಲ ಕೊಡಿಸುತ್ತಾನೆ, ಅನೇಕ ರಾಜಕೀಯ ನಾಯಕರ ಪರಿಚಯ ಇದೆ, ಪೊಲೀಸ್ ಡಿಪಾರ್ಟ್‍ಮೆಂಟಲ್ಲಿ ಅವನ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ ಎಂಬ ವಿವರಗಳನ್ನು ಕಳಿಸಿಕೊಟ್ಟ ಸೋನು, ಅವನಿಗೆ ಕೆಲಸ ಒಪ್ಪಿಸುವ ಮುಂಚೆ ಮತ್ತೊಮ್ಮೆ ಯೋಚಿಸೋದು ಒಳ್ಳೆಯದು ಎಂದು ಟಿಪ್ಪಣಿ ಬರೆದಿದ್ದಳು. + +ಸಹದೇವನಿಗೆ ಸಾಲೋಮನ್ ಇಪ್ಪತ್ತು ವರ್ಷಗಳಿಂದ ಗೊತ್ತು. ಸಾಲೋಮನ್, ಸುಲೇಮಾನ್, ಶಾಲಿವಾಹನ- ಹೀಗೆ ಏನೇನೋ ಹೆಸರಿಟ್ಟುಕೊಂಡು ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ. ಅವನಂಥ ಚಾಣಾಕ್ಷ ಕಳ್ಳನನ್ನು ಸಹದೇವ ನೋಡಿರಲೇ ಇಲ್ಲ. ಅನೇಕರು ಅವನೊಬ್ಬ ಮೋಸಗಾರ, ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ ಅಂತ ದೂರುತ್ತಿದ್ದರು. ಸಹದೇವನಿಗೆ ಮಾತ್ರ ಅವನು ಪ್ಯಾಷನ್ನಿಗೋಸ್ಕರ ಅದನ್ನೆಲ್ಲ ಮಾಡುತ್ತಾನೆ ಅನ್ನುವುದು ಗೊತ್ತಿತ್ತು. ಯಾರಾದರೂ ಮನೆಗೆ ಬೀಗ ಹಾಕಿ ನಾವು ಸುರಕ್ಷಿತವಾಗಿದ್ದೇವೆ, ನಮ್ಮ ಮನೆಯಲ್ಲಿ ಕಳ್ಳತನ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಬೀಗುತ್ತಿದ್ದರೆ ಸಾಲೋಮನ್ ಅಂಥ ಮನೆಯಿಂದಲೇ ಕದಿಯುತ್ತಿದ್ದ. ನಮ್ಮ ಸೈಟಿನಿಂದ ಮಾಹಿತಿ ಕದಿಯಲಿಕ್ಕೆ ಸಾಧ್ಯವಿಲ್ಲ ಎಂದು ಯಾವುದಾದರೂ ವೆಬ್‍ಸೈಟ್ ಹೇಳಿಕೊಂಡರೆ ಅದನ್ನು ಸಾಲೋಮನ್ ಹ್ಯಾಕ್ ಮಾಡಿ ಮಾಹಿತಿ ತೆಗೆಯುತ್ತಿದ್ದ. ತಾನೇ ತೋಡಿದ ಸುರಂಗವನ್ನು ಅವನಲ್ಲದೇ ಬೇರೆ ಯಾರಿಗೂ ಮುಚ್ಚುವುದಕ್ಕೆ ಆಗುತ್ತಿರಲಿಲ್ಲ. ಸಾಲೋಮನ್ ಕೈತುಂಬ ಫೀಸ್ ತೆಗೆದುಕೊಂಡು ಅದನ್ನೆಲ್ಲ ಸರಿಮಾಡಿ ಕೊಡುತ್ತಿದ್ದ. ಹೀಗಾಗಿಯೇ ಅವನ ಬಗ್ಗೆ ಗೊತ್ತಿದ್ದ ಎಲ್ಲರಿಗೂ ಅವನ ಬಗ್ಗೆ ಅಚ್ಚರಿಯೂ ಭಯವೂ ಗೌರವವೂ ಇತ್ತು. + +ಅವನು ಸುಳ್ಳು ಹೇಳದೇ ಇದ್ದ ಏಕೈಕ ವ್ಯಕ್ತಿ ಸಹದೇವ. ಅವರಿಬ್ಬರೂ ತಿಂಗಳಿ ಗೊಮ್ಮೆಯಾದರೂ ಭೇಟಿಯಾಗುತ್ತಿದ್ದರು. ಸಹದೇವನಿಗೆ ಬೇಕಾದ ಮಾಹಿತಿಗಳನ್ನೆಲ್ಲ ಅವನೇ ಎಲ್ಲೆಲ್ಲಿಂದಲೋ ಹೆಕ್ಕಿ ತರುತ್ತಿದ್ದ. ಅವನ ಮಾಹಿತಿ ಒಮ್ಮೆಯೂ ಸುಳ್ಳಾದದ್ದಿಲ್ಲ. ಫೋನ್ ಟ್ಯಾಪ್ ಮಾಡುವುದು, ಸಿಸಿಟೀವಿಯ ಮಾಹಿತಿ ಕದಿಯುವುದು, ನಕಲಿ ಪಾಸ್‍ಪೋರ್ಟ್ ಮಾಡಿಕೊಡುವುದು, ವೆಬ್‍ಸೈಟ್ ಹ್ಯಾಕ್ ಮಾಡಿ ಡಾಟಾ ಕದಿಯುವುದು, ತನಗೆ ಬೇಕಾದಂತೆ ಡಾಟಾ ತಿದ್ದುವುದು, ಜಿಪಿಎಸ್ ಮೂಲಕ ವ್ಯಕ್ತಿಯ ಚಲನವಲನ ಕಂಡುಹಿಡಿಯುವುದು, ಪಾಸ್‍ವರ್ಡ್ ಕಂಡುಹಿಡಿದು ಈಮೇಲ್ ಜಾಲಾಡುವುದು, ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಹೊಂದುವುದು – ಹೀಗೆ ಅವನಿಗೆ ಗೊತ್ತಿಲ್ಲದ ವಿದ್ಯೆಯೇ ಇರಲಿಲ್ಲ. ಸಾಲೋಮನ್ ತನ್ನ ಸಾಹಸದ ಕತೆಗಳನ್ನು ಸಹದೇವನಿಗೆ ಹೇಳುತ್ತಿದ್ದ. ಅವರಿಬ್ಬರು ಭೇಟಿಯಾಗುವ ಸಂಗತಿಯನ್ನು ಸಹದೇವ ಸೋನುವಿಗೂ ಗೊತ್ತಾಗದಂತೆ ರಹಸ್ಯವಾಗಿಟ್ಟಿದ್ದ. ಸಾಲೋಮನ್ ಒಬ್ಬ ಮಾಹಿತಿದಾರ ಎನ್ನುವುದಷ್ಟೇ ಅವಳಿಗೆ ಗೊತ್ತಿದ್ದದ್ದು. ಹೀಗಾಗಿಯೇ ಅವಳು ಪ್ರಧಾನ ಮಂತ್ರಿಗಳ ಫೋನ್ ಹ್ಯಾಕ್ ಮಾಡುವ ಗುರುತರ ಜವಾಬ್ದಾರಿಯನ್ನು ಸಾಲೋಮನ್ ಎಂಬ ಅಡಕಸಬಿಗೆ ಒಪ್ಪಿಸುವುದರ ಬಗ್ಗೆ ಅಪನಂಬಿಕೆ ಇಟ್ಟುಕೊಂಡಿದ್ದಳು. + +ಸಹದೇವನ ಲೆಕ್ಕಾಚಾರವೇ ಬೇರೆ ಇತ್ತು. ಈ ಕೆಲಸವನ್ನು ದೊಡ್ಡ ಏಜನ್ಸಿಗೆ ಒಪ್ಪಿಸಿದಷ್ಟೂ ಅಪಾಯ ಜಾಸ್ತಿ. ಡಿಟೆಕ್ಟಿವ್ ಏಜನ್ಸಿಗಳ ಮೇಲೆ ಸರ್ಕಾರ ಒಂದು ಕಣ್ಣಿಟ್ಟಿರುತ್ತದೆ. ಬೇಹುಗಾರಿಕಾ ವಿಭಾಗದವರೂ ನಿಗಾ ಇಟ್ಟಿರುತ್ತಾರೆ. ಡಿಟೆಕ್ಟಿವ್ ಏಜನ್ಸಿಯ ಒಳಗೇ ಒಬ್ಬ ಪೊಲೀಸ್ ಮಾಹಿತಿದಾರ ಇರುತ್ತಾನೆ. ಅಲ್ಲದೇ, ಏಜನ್ಸಿ ಇಂಥ ರಿಸ್ಕೀ ಕಾರ್ಯಾಚರಣೆ ಒಪ್ಪಿಕೊಳ್ಳುವುದಕ್ಕೆ ಹೆದರುತ್ತದೆ. ಒಂದು ವೇಳೆ ಒಪ್ಪಿಕೊಂಡರೂ ಅದಕ್ಕೂ ಮುಂಚೆ ಸಂಸ್ಥೆಯ ಒಳಗಡೆಯೇ ಸಾಕಷ್ಟು ಚರ್ಚೆ ನಡೆದಿರುತ್ತದೆ. ಬೇಕಿದ್ದವರಿಗೂ ಬೇಡದವರಿಗೆಲ್ಲ ವಿಷಯ ಗೊತ್ತಾಗಿರುತ್ತದೆ. ಸಾಲೋಮನ್ ಆದರೆ ಅಂಥ ಯಾವ ಅಪಾಯವೂ ಇಲ್ಲ. ಅವನು ಯೆಸ್ ಅಂದರೆ ಮುಗಿಯಿತು. ಅವನಿಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಅವನ ಮೇಲೆ ಯಾರಿಗೂ ಅನುಮಾನವೂ ಬರುವುದಿಲ್ಲ. ಇದನ್ನೆಲ್ಲ ಅಳೆದೂ ತೂಗಿ ಸಹದೇವ ಈ ಕೆಲಸವನ್ನು ಅವನಿಗೆ ಒಪ್ಪಿಸೋಣ ಎಂದು ಸೋನುಗೆ ಹೇಳಿದ್ದು. ಕೊನೆಗೂ ಸೋನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಳು. + +ಸಾಲೋಮನ್ ಮತ್ತು ಸಹದೇವನ ಭೇಟಿಯನ್ನು ಸೋನು ಪಶ್ಚಿಮ್ ವಿಹಾರ್‍ನ ಅಮರ್ ಪಾಲಿಕ್ಲಿನಿಕ್‍ನಲ್ಲಿ ಅರೇಂಜ್ ಮಾಡಿದ್ದಳು. ಬೆಳಗ್ಗೆ ಒಂಬತ್ತು ಗಂಟೆಗೆ ಫುಲ್ ಬಾಡಿ ಚೆಕಪ್‍ಗೆ ಅಲ್ಲಿಗೆ ಸಹದೇವ್ ಹೋಗುತ್ತಾನೆ. ಅವನ ಜತೆಗೆ ಅಸಿಸ್ಟೆಂಟ್ ಆಗಿ ಸಾಲೋಮನ್ ಹೋಗಬೇಕು. ಅಲ್ಲೇ ಮಾತುಕತೆ ನಡೆದು ಇಬ್ಬರೂ ಬೇರಾಗಬೇಕು. ಹೋಗುವ ಹೊತ್ತಿಗೆ ಇಬ್ಬರೂ ಮೊಬೈಲ್ ಫೋನ್ ಒಯ್ಯಬಾರದು. ಸಾಲೋಮನ್ ಚಪ್ಪಲಿ ಹಾಕಿಕೊಂಡಿರಬೇಕು. ಅವನನ್ನು ಪೂರ್ತಿ ಚೆಕ್ ಮಾಡಿ ಯಾವುದೇ ಹಿಡನ್ ಕ್ಯಾಮರಾ ಇಲ್ಲವೆಂದು ಖಚಿತಪಡಿಸಿಯೇ ಒಳಗೆ ಬಿಡಲಾಗುತ್ತೆ ಮುಂತಾದ ಷರತ್ತುಗಳನ್ನೂ ಸೋನು ಹಾಕಿದ್ದಳು. + +ಸರಿಯಾದ ಸಮಯಕ್ಕೆ ಟೆಸ್ಟ್ ಶುರುವಾಯಿತು. ಪೆಥಾಲಜಿ ಮುಗಿಸಿ, ಇಸಿಜಿ, ಟಿಎಂಟಿ ಮುಗಿಸಿದ ನಂತರ, ಸ್ಕಾ ್ಯನಿಂಗ್ ನಡುವೆ ಸಿಕ್ಕ ಹನ್ನೆರಡು ನಿಮಿಷಗಳ ಬಿಡುವಿನಲ್ಲಿ ಸಾಲೋಮನ್ ಹತ್ತಿರ ಸಹದೇವ ಮಾತಾಡಿದ. + +`ಒಂದು ಫೋನ್ ನಂಬರ್ ಕೊಡ್ತೀನಿ, ಅದು ಯಾರದ್ದು ಅಂತ ಕೇಳಬಾರದು. ಟ್ಯಾಪ್ ಮಾಡಬೇಕು. ಇಡೀ ದಿನದ ಕಾನ್‍ವರ್ಸೇಷನ್ ರೆಕಾರ್ಡ್ ಬೇಕು. ಅದನ್ನು ನೀನು ಮಾಡಿಸ್ತಿದ್ದೀಯ ಅಂತಲೂ ಗೊತ್ತಾಗಬಾರದು. ಕಳೆದ ಮೂರು ತಿಂಗಳಲ್ಲಿ ಅವರಿಗೆ ಯಾರೆಲ್ಲ ಫೋನ್ ಮಾಡಿದ್ದಾರೆ ಅನ್ನುವ ಪಟ್ಟಿಯೂ ಬೇಕು. ಬರೀ ನಂಬರ್ ಕೊಟ್ರೆ ಸಾಲದು, ಹೆಸರು, ಅಡ್ರೆಸ್ ಸಹಿತ ಕೊಡಬೇಕು.’ + +ಸಾಲೋಮನ್ ಕಣ್ಣುಗಳು ಫಳಫಳ ಹೊಳೆದವು. ಮತ್ತೊಂದು ಇಂಪಾಸಿಬಲ್ ಟಾಸ್ಕ್ ಸಿಕ್ಕಿತು ಅನ್ನುವ ಸಂತೋಷದಲ್ಲಿ ಅವನು ಮುಗುಳ್ನಗುತ್ತಾ ಹೇಳಿದ. `ಸಿಕ್ಕಿಬಿದ್ರೆ ಜೈಲೇನಾ?’. ಸಹದೇವ ಕೂಡ ಅವನ ನಗುವನ್ನು ಮರಳಿಸುತ್ತಾ ಹೇಳಿದ; `ಮರ್ಡರ್ ಆಗ್ತೀಯ. ಯಾರು ಕೊಂದರು ಅನ್ನೋದೂ ಗೊತ್ತಾಗೋದಿಲ್ಲ. ಮೊದಲ ಗುಂಡು ನಂದೇ ಆಗಿರುತ್ತೆ’. + +`ಥ್ರಿಲ್ ಅಂದ್ರೆ ಇದು. ರಿಸ್ಕ್ ಜಾಸ್ತಿ ಇದ್ದಷ್ಟೂ ಕೆಲಸ ಮಾಡಕ್ಕೆ ಜಾಸ್ತಿ ಖುಷಿ. ಆ ಹೆಂಗಸಿನ ಹತ್ರ ಹೇಳಿಕಳಿಸಿದ್ರಲ್ಲ. ಏನೋ ಚಿಕ್ಕಪುಟ್ಟ ಕೆಲಸ ಅಂದ್ಕೊಂಡಿದ್ದೆ. ಆ ಲೇಡಿ ಮಾತೇ ಆಡಲ್ಲ. ಫೋನೂ ಇಟ್ಕೊಂಡಿಲ್ಲ. ಬರೀ ಚೀಟೀಲಿ ಬರೆದು ಕೊಡ್ತದೆ. ಅದೂ ಕೂಡ ಥರ್ಟಿ ಸೆಕೆಂಡಲ್ಲಿ ಅಳಿಸಿ ಹೋಗ್ತದೆ. ಫುಟ್ ಪ್ರಿಂಟ್ಸೇ ಬಿಡಲ್ಲ ಅವರು. ಅಂತೋರೇನಾದ್ರೂ ಸಿಕ್ಕಿದ್ರೆ ನಾನು ಸೋತುಬಿಡ್ತೀನಿ. ಅವರ ಡಾಟಾ ಕದಿಯೋದಕ್ಕೆ ಸಾಧ್ಯವೇ ಇಲ್ಲ. ಅವರ ಹೆಸರೇನು?’ ಹುರುಪು ಹೆಚ್ಚಿಸಿಕೊಂಡು ಕೇಳಿದ ಸಾಲೋಮನ್. + +`ಕೆಲಸ ಮುಗೀಲಿ. ಹೆಸರೂ ಹೇಳ್ತೀನಿ, ಅವಳೊಪ್ಪಿದ್ರೆ ಮದುವೇನೂ ಮಾಡಿಸ್ತೀನಿ. ಮೂರೇ ದಿನ ಟೈಮ್ ಇರೋದು’ ಎನ್ನುತ್ತಾ ಸಹದೇವ ಎದ್ದು ನಿಂತ. ಸಾಲೋಮನ್ ಅವನನ್ನೇ ನೋಡ್ತಾ `ಈ ಕ್ಲಿನಿಕ್ಕಲ್ಲೂ ಸೀಸಿ ಟೀವಿ ಹಾಕಿದ್ದಾರೆ. ಹಾರ್ಡ್ ಡಿಸ್ಕ್ ಕ್ರಾ ್ಯಶ್ ಮಾಡಿ, ಒಂದು ವಾರದ ರೆಕಾರ್ಡಿಂಗ್ ಮಾಯ ಮಾಡಿ ಹೊರಡ್ತೀನಿ’ ಎಂದು ತುಂಟತನದ ಕಣ್ಣು ಮಿಟುಕಿಸಿದ. + +ಸಹದೇವ ರಿಪೋರ್ಟ್ ಕಲೆಕ್ಟ್ ಮಾಡಿಕೊಂಡು ಹೊರಗೆ ಬರುವ ಹೊತ್ತಿಗೆ ಸೋನು ಕಾರು ತಂದು ಕಾಯುತ್ತಿದ್ದಳು. ಸಹದೇವ ಕಾರೊಳಗೆ ಕೂರುತ್ತಿದ್ದಂತೆ ಅವನ ಸೀಟಿನ ಪಕ್ಕದಲ್ಲಿಟ್ಟ ಚೀಟಿ ಕಣ್ಣಿಗೆ ಬಿತ್ತು. ಅವಸರದಿಂದ ತೆರೆದು ಓದಿದ. + +`ನಾಡಿದ್ದು ಪಿಎಂ ತವರೂರಿಗೆ ಹೋಗ್ತಿದ್ದಾರೆ. ಅಲ್ಲಿ ಹಳೆಯ ಗೆಳೆಯರನ್ನು ಭೇಟಿ ಆಗ್ತಿದ್ದಾರೆ. ಸಂಗೀತ್ ಉತ್ಸವ್ ಉದ್ಘಾಟಿಸಿ ಅದರಲ್ಲಿ ಭಾಗವಹಿಸ್ತಿದ್ದಾರೆ.’ + +ಸಂದೇಶ ಇದ್ದದ್ದು ಅಷ್ಟೇ. ಆದರೆ, ಅವರು ತವರೂರಿಗೆ ಹೋಗುವುದನ್ನು ತಡೆಯಬೇಕು ಅಂತ ಚೀಫ್ ಬಯಸಿದ್ದಾರೆ ಅನ್ನುವುದು ಸಹದೇವನಿಗೆ ಅರ್ಥವಾಯಿತು. ಇದು ಸಂಸರ ರಾಜಕೀಯ ನಿವೃತ್ತಿಯ ಮೊದಲ ಹೆಜ್ಜೆ. ಪೂರ್ವಮೇದಿನಿಪುರದ ನಂದಿಗ್ರಾಮಕ್ಕೆ ಹೋದರೆ ಅವರಿಗೆ ಹಳೆಯ ಬದುಕು ನೆನಪಾಗುತ್ತದೆ. ನಂದಿಗ್ರಾಮದ ರೈತರು ಕಣ್ಮುಂದೆ ಬರುತ್ತಾರೆ. ಹಳೆಯ ಗೆಳೆಯರೆಂದರೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಜತೆಗೆ ಓದಿದ ಸಹಪಾಠಿಗಳು. ಸಂಸರ ಜತೆಗೇ ಶೈಲೇಂದ್ರ ಸರ್ಕಾರ್ ವಿದ್ಯಾಲಯದಲ್ಲಿ ಜತೆಗೆ ಓದಿದವರು. ಸಂಸ ಕವಿತೆ ಬರೆಯುತ್ತಿದ್ದ ದಿನಗಳಲ್ಲಿ ಅವರ ಜತೆಗಿದ್ದ ಕವಿಗಳೆಲ್ಲ ಸಿಗುತ್ತಾರೆ. ಅವರ ಜತೆ ಮಾತಾಡುವಾಗ ರಾಜಕೀಯ ನಿವೃತ್ತಿಯ ಮಾತು ಬಂದೇ ಬರುತ್ತದೆ. ಅಲ್ಲಿಗೆ ಕತೆ ಮುಗಿದಂತೆ. + +ಸಹದೇವನ ನೆನಪು ತಾನು ಓದಿ, ಕೇಳಿ ತಿಳಿದುಕೊಂಡ ಸಂಸರ ಬದುಕಿನ ಕತೆಯತ್ತ ಹಾಯಿತು. ಸಂಜಯ್ ಸರ್ಕಾರ್ ತಾರುಣ್ಯದಲ್ಲಿ ಮಾವೋವಾದಿ ಎಂದೇ ಹೆಸರಾದವರು. ಪಶ್ಚಿಮ ಬಂಗಾಳದ ಹೆಬ್ಬುಲಿ ಎಂದು ಕರೆಸಿಕೊಂಡವರು. ಅವರು ಹೋರಾಟದ ಮುಂಚೂಣಿಯಲ್ಲಿದ್ದರೆ ಸರ್ಕಾರ ನಡುಗುತ್ತಿತ್ತು. `ಶೈಲೇಂದ್ರ ಸರ್ಕಾರ್ ವಿದ್ಯಾಲಯ’ದಲ್ಲಿದ್ದಾಗಲೇ ವಿದ್ಯಾರ್ಥಿ ಫೆಡರೇಷನ್ನಿನ ನಾಯಕರಾಗಿ ಅನೇಕ ಹೋರಾಟ ಗಳಲ್ಲಿ ತೊಡಗಿಸಿಕೊಂಡವರು. ನಂದಿಗ್ರಾಮದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರ ಮೇಲೆ ಪೊಲೀಸರು ಹಾರಿಸಿದ ಗುಂಡು ಹದಿನೆಂಟು ರೈತರನ್ನು ಬಲಿತೆಗೆದುಕೊಳ್ಳದೇ ಹೋಗಿದ್ದರೆ ರಾಷ್ಟ್ರೀಯ ರಾಜಕಾರಣಕ್ಕೆ ಸಂಜಯ್ ಸರ್ಕಾರ್ ಕಾಲಿಡುತ್ತಲೇ ಇರಲಿಲ್ಲ. ತಮ್ಮ ಭೂಮಿಯನ್ನು ವಿದೇಶಿ ಬಂಡವಾಳಶಾಹಿಗಳಿಗೆ ಮಾರಬೇಡಿ ಎಂದು ಹೇಳಿದ ರೈತರನ್ನು ಕೊಂದದ್ದು ಅವರ ರಕ್ತ ಕುದಿಯುವಂತೆ ಮಾಡಿತ್ತು. ಆವತ್ತು ನಂದಿಗ್ರಾಮದಲ್ಲೇ ಅವರು ಧರಣಿ ಕುಳಿತರು. ಈ ದೇಶದ ಬಡವರನ್ನು, ನೊಂದವರನ್ನು, ದಲಿತರನ್ನು, ರೈತರನ್ನು ಕಾಯುವ ಕೆಲಸಕ್ಕೆ ನನ್ನ ಉಳಿದ ಆಯುಷ್ಯ ಮೀಸಲು ಎಂದು ಘೋಷಿಸಿದರು. ಬರಿಗಾಲಲ್ಲಿ ಇಡೀ ದೇಶ ಸುತ್ತಿದರು. ಪ್ರತಿಯೊಂದು ಊರಿಗೂ ಹೋಗಿ ಜನರನ್ನು ಒಗ್ಗೂಡಿಸಿದರು. ಎರಡು ವರುಷಗಳ ನಿರಂತರ ತಿರುಗಾಟದಲ್ಲಿ ಯಾವತ್ತೂ ಪಂಚತಾರಾ ಹೋಟೆಲಿಗೆ ಕಾಲಿಡಲಿಲ್ಲ. ಶ್ರೀಮಂತರ ಮನೆಗಳನ್ನು ಪ್ರವೇಶಿಸಲಿಲ್ಲ. ಪ್ರತಿ ಊರಿನ ಅತ್ಯಂತ ಬಡವನ ಮನೆಯಲ್ಲಿ ಊಟ ಮಾಡಿದರು. ದಲಿತರ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮಲಗಿದರು. ಅವರು ಕುಡಿಯುತ್ತಿದ್ದ ನೀರನ್ನೇ ಕುಡಿದರು. ಎರಡೇ ಜತೆ ಬಟ್ಟೆ ಇಟ್ಟುಕೊಂಡು, ತಾವೇ ಅದನ್ನು ಒಗೆದು ತೊಟ್ಟುಕೊಳ್ಳುತ್ತಿದ್ದರು. + +ಅವರ ಈ ಪರ್ಯಟನೆಯನ್ನು ನಿಲ್ಲಿಸಲು ರಾಜಕೀಯ ಪಕ್ಷಗಳು ತಂತ್ರ ಪ್ರತಿ ತಂತ್ರಗಳನ್ನು ಹೂಡಿದವು. ನ್ಯಾಷನಲ್ ಪಾರ್ಟಿ ಅವರನ್ನು ಬಂಧಿಸಲು ಯತ್ನಿಸಿತು. ಅವರ ಕಾಲ್ನಡಿಗೆಯನ್ನು ತಡೆಯಲು ಹವಣಿಸಿತು. ಅಂಥ ಪ್ರತಿಯೊಂದು ಪ್ರತಿರೋಧವೂ ಅವರನ್ನು ನಾಯಕನನ್ನಾಗಿ ಮಾಡುತ್ತಾ ಹೋಯಿತು. ಅವರಿದನ್ನು ಚುನಾವಣೆ ಗೆಲ್ಲಲು ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಹೇಳಿಕೆ ಕೊಟ್ಟರು. ಆಗ ಪ್ರಧಾನಿಯಾಗಿದ್ದ ನ್ಯಾಷನಲ್ ಪಾರ್ಟಿಯ ನೇತಾರ ಜಗನ್ಮೋಹನ್ `ಸಂಜಯ್ ಸರ್ಕಾರ್ ಒಬ್ಬ ಜೋಕರ್. ಅವರಿಗಿಂತ ಪಿಸಿ ಸರ್ಕಾರ್ ಎಷ್ಟೋ ವಾಸಿ. ಅವರು ಮ್ಯಾಜಿಕ್ ಮಾಡಬಲ್ಲರು. ಇವರದ್ದು ಅಪಸ್ವರದ ಮ್ಯೂಸಿಕ್’ ಎಂದು ಹೇಳಿಕೆ ಕೊಟ್ಟರು. + +ಆ ಚುನಾವಣೆಯಲ್ಲಿ ಸಂಜಯ್ ಸರ್ಕಾರ್ ಸ್ಪರ್ಧಿಸಿದ್ದರೆ ಬಹುಮತದಿಂದ ಗೆದ್ದು ಬರುತ್ತಿದ್ದರು. ಅವರು ಆ ಕೆಲಸ ಮಾಡಲಿಲ್ಲ. ನ್ಯಾಷನಲ್ ಪಾರ್ಟಿಯೇ ಮತ್ತೆ ಅಧಿಕಾರಕ್ಕೆ ಬರುವತನಕ ಕಾದರು. ನಂತರ ಸರ್ಕಾರದ ಲೋಪಗಳನ್ನು ಎತ್ತಿ ತೋರಿದರು. ನ್ಯಾಷನಲ್ ಪಾರ್ಟಿಯ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ, ಸಂಜಯ್ ಸರ್ಕಾರ್ ತಮ್ಮ ಹೊಸ ಪಕ್ಷವನ್ನು ಹುಟ್ಟುಹಾಕಿದರು. ಅದಕ್ಕೆ ಮಾತೃಭೂಮಿ ಎಂದು ಹೆಸರಿಟ್ಟರು. ಸಂಜಯ್ ಸರ್ಕಾರ್ ಜತೆ ಹೋರಾಟದ ಉದ್ದಕ್ಕೂ ಜತೆಗಿದ್ದ ಚಿದಾನಂದ ಪಾಂಡೆಯನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸಿದರು. + +ನ್ಯಾಷನಲ್ ಪಾರ್ಟಿಯ ಸರ್ಕಾರವನ್ನು ಉರುಳಿಸೋಣ ಅಂತ ಚಿದಾನಂದ ಪಾಂಡೆ ಎಷ್ಟೇ ಹೇಳಿದರೂ ಸಂಜಯ್ ಸರ್ಕಾರ್ ಒಪ್ಪಲಿಲ್ಲ. ಸರ್ಕಾರವನ್ನು ಉರುಳಿಸೋದು ಸುಲಭ. ಆದರೆ ಅವಧಿಗೆ ಮುಂಚೆ ಚುನಾವಣೆ ನಡೆದರೆ ಅದರ ಹೊರೆ ಪ್ರಜೆಗಳ ಮೇಲೆ ಬೀಳುತ್ತದೆ. ಅಲ್ಲದೇ, ಸರ್ಕಾರ ಉರುಳಿಸಿದವರು ಎಂಬ ಕೆಟ್ಟ ಹೆಸರು ನಮ್ಮದಾಗುತ್ತದೆ. ನಾವು ಸರಿಯಾದ ಮಾರ್ಗದಲ್ಲಿ ಹೋಗೋಣ. ಸರ್ಕಾರವನ್ನು ಬೀಳಿಸುವುದು ಬೇಡ, ಜನರೇ ತಮಗೆ ಬೇಕಾದ ಸರ್ಕಾರವನ್ನು ಆರಿಸುವಂತೆ ಮಾಡೋಣ ಎಂದು ಸಾರ್ವಜನಿಕವಾಗಿಯೇ ಹೇಳಿದರು. + +ಅದಾಗಿ ಮೂರು ವರುಷಕ್ಕೆ ಚುನಾವಣೆ ಬಂತು. ನ್ಯಾಷನಲ್ ಪಾರ್ಟಿ ಹೇಳಹೆಸರಿಲ್ಲದಂತೆ ಸೋತಿತು. ಪ್ರಧಾನಿ ಜಗನ್ಮೋಹನ ಠೇವಣಿ ಕಳಕೊಂಡರು. ಅದುವರೆಗೂ ಒಂದೂ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದವರು, ತರುಣರು, ತರುಣಿಯರೆಲ್ಲ ಆರಿಸಿ ಬಂದರು. ಸಂಜಯ್ ಸರ್ಕಾರ್ ಎಲ್ಲರ ಒತ್ತಾಯದ ಮೇಲೆ ಪ್ರಧಾನಿಯಾದರು. ಅವರ ಜನಪ್ರಿಯತೆ ಅಧಿಕಾರಕ್ಕೆ ಬಂದ ನಂತರವೂ ಕುಗ್ಗಲಿಲ್ಲ. ಎರಡನೆಯ ಅವಧಿಯಲ್ಲೂ ಅವರು ಇನ್ನೂ ಹೆಚ್ಚಿನ ಬಹುಮತದಿಂದ ಗೆದ್ದುಬಂದರು. + +ಈಗ ಮೂರನೆಯ ಚುನಾವಣೆಗೆ ಹೋಗುವ ಹೊತ್ತಿನಲ್ಲಿ ಸಂಜಯ್ ಸರ್ಕಾರ್ ನಿವೃತ್ತಿಯ ವೈರಾಗ್ಯದ ವಿದಾಯದ ಮಾತಾಡುತ್ತಿದ್ದಾರೆ. ಅವರೇನಾದರೂ ಪಕ್ಷ ತೊರೆದರೆ, ಮುಂದಿನ ಪ್ರಧಾನ ಮಂತ್ರಿ ಅವರಾಗುವುದಿಲ್ಲ ಎಂದು ಗೊತ್ತಾದರೆ, ಮಾತೃಭೂಮಿ ಪಕ್ಷ ಅಧಿಕಾರಕ್ಕೆ ಬರುವುದು ಅನುಮಾನವೇ.‌ + + + +ಸಹದೇವ ಇದನ್ನೆಲ್ಲ ನೆನಪಿಸಿಕೊಳ್ಳುತ್ತಾ ತುಂಬ ಹೊತ್ತು ಒಬ್ಬನೇ ಕೂತಿದ್ದ. ರಾಜಕಾರಣದಲ್ಲಿ ಗೆಲ್ಲಬೇಕಾದರೆ ಒಬ್ಬ ಮಹಾತ್ಮ ಬೇಕು ಅಥವಾ ಒಬ್ಬ ಹುತಾತ್ಮ ಬೇಕು ಅಂತ ಅವನಿಗೆ ತೀವ್ರವಾಗಿ ಅನ್ನಿಸಿತು. + +ಸದ್ಯಕ್ಕೆ ಸಂಸರ ತವರೂರಿನ ಪ್ರವಾಸವನ್ನು ಹೇಗೆ ತಡೆಯಬಹುದು ಎನ್ನುವ ಪ್ರಶ್ನೆಗೆ ಮಾತ್ರ ಅವನಿಗೆ ಉತ್ತರ ಸಿಗಲಿಲ್ಲ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_141.txt b/Kenda Sampige/article_141.txt new file mode 100644 index 0000000000000000000000000000000000000000..0734b746610987b64f83fe49d6e7a1a7136d5fbf --- /dev/null +++ b/Kenda Sampige/article_141.txt @@ -0,0 +1,59 @@ +ಯು.ಎಫ್.ಒ. – ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್- ಎಂದರೆ ಗುರುತು ಸಿಗದ ಹಾರುವ ವಸ್ತುಗಳು. ಇವುಗಳ ಬಗ್ಗೆ ಅನೇಕ ದಶಕಗಳಿಂದ ಜಿಜ್ಞಾಸೆ ನಡೆದಿದೆ. ಆದರೆ ರಹಸ್ಯ ಗಾಢವಾಗುತ್ತಲೇ ಹೋಗಿದೆ. ಬೇರೆ ಗ್ರಹಗಳಿಂದ ಭೂಮಿಗೆ ಭೇಟಿ ಕೊಡುವ ತುಂಬ ಮುಂದುವರಿದ ನಾಗರಿಕತೆಯ ಈ ಹಾರುವ ವಸ್ತುಗಳು (ಅನೇಕ ವೇಳೆ ಹಾರುವ ತಟ್ಟೆಗಳಂತೆಯೇ ಕಂಡಿವೆ; ಫ್ಲೈಯಿಂಗ್ ಸಾಸರ್ಸ್ ಎಂದೂ ಹೆಸರಾಗಿವೆ.) ಬರಿಯ ಕಲ್ಪನೆ ಎಂದು ಅನೇಕರ ವಾದ. ಮನಶ್ಶಾಸ್ತ್ರಜ್ಞ ಯೂಂಗ್ ಪ್ರಕಾರ ಇದು ಸಾಮೂಹಿಕ ಕಲ್ಪನೆ ಅಥವಾ ಭ್ರಮೆ. ಇನ್ನು ಕೆಲವರು ಸಂಶಯವಾದಿ ವಿಜ್ಞಾನಿಗಳ ಪ್ರಕಾರ ವಾಯುಪಡೆಯ ಸಂಶೋಧನೆಗೆಂದು ಹಾರಿಬಿಟ್ಟ ಬಲೂನ್ ಅಥವಾ ಇತರ ರೀತಿಯ ಯಂತ್ರಗಳು. + +ವಿಶ್ವದಲ್ಲಿ, ಸೌರವ್ಯೂಹದಾಚೆ- ಈ ಭೂಮಿಗಿಂತ ಲಕ್ಷಾಂತರ ವರ್ಷಗಳು ಮುಂದುವರಿದ ಜೀವಿಗಳಿದ್ದಾರೆ. ಅವರು ಸೌರವ್ಯೂಹದಲ್ಲಿ ಜೀವಿಗಳಿರುವ ಬಹುಶಃ ಏಕಮಾತ್ರ ಗ್ರಹವಾದ ಭೂಮಿಯ ಬಗ್ಗೆ ಗಮನ ಹರಿಸಿ ಇಲ್ಲಿಯ ಜನಜೀವನ ಅರಿಯುವ ಉದ್ದೇಶದಿಂದ ಇಂಥ ಯಂತ್ರ ಕಳಿಸಿದ್ದಾರೆ ಎನ್ನುವವರು, `ಅಮೆರಿಕಾದಂಥ ಸರ್ಕಾರಗಳಿಗೆ ಈ ವಿಚಾರ ಗೊತ್ತು; ಯು.ಎಫ್.ಓ ಭೂಮಿಗೆ ಬಿದ್ದು ಅದರಲ್ಲಿದ್ದ ಜೀವಿಗಳು ಸತ್ತುದನ್ನೆಲ್ಲ ಮುಚ್ಚಿಡಲಾಗಿದೆ’ ಎಂದೂ ಹೇಳುತ್ತಾರೆ. ಎಂದರೆ ಯಾರೂ ನಂಬುವಂಥ ಸಾಕ್ಷ್ಯಗಳನ್ನು ಮುಂದಿಡುವುದಿಲ್ಲ. ಊಹಾ ಪ್ರಪಂಚಕ್ಕೇ ಒತ್ತು. + +(ಜೋಗಿ) + +ನಮ್ಮ ಕವಿಯೊಬ್ಬರು ಹೇಳುತ್ತಿದ್ದರು: ನೋಡಿ, ಬೇರೆ ಗ್ರಹಗಳ ಜನ ಎಷ್ಟು ಮುಂದುವರಿದಿದ್ದಾರೆಂದರೆ ಭೂಮಿಯವರಿಗೆ ಕಂಡ ಅವರ ಮಹಾಯಂತ್ರಗಳು ಒಂದೂ ಭೂಮಿಗೆ ಬಿದ್ದಿಲ್ಲ. ಅದಕ್ಕೆ ಪ್ರತಿಯಾಗಿ ಸಂದೇಹವಾದಿಗಳು ಹೇಳುತ್ತಿದ್ದುದು- ಏಕೆ ಒಂದು ಯಂತ್ರವೂ ಕೆಳಗೆ ಬಿದ್ದಿಲ್ಲವೆಂದರೆ ಅಲ್ಲಿ ಯಂತ್ರವೇ ಇಲ್ಲ. ಹಾರುವ ಯಂತ್ರ ಇದ್ದರೆ ತಾನೆ ಕೆಳಗೆ ಬೀಳುವುದಕ್ಕೆ! ಅದೆಲ್ಲ ಬರಿಯ ಕಟ್ಟುಕತೆ. + +(ಬೆಂಗಳೂರಿನಲ್ಲಿ 1982ರವರೆಗೆ ಜೀವಿಸಿದ್ದ ಯೋಗಿ ಅಂಬರೀಶ್ ವರ್ಮರ ಪ್ರಕಾರ ಯು.ಎಫ್.ಓ. ಪೂರ್ತಿ ನಿಜ. ಕಾಶ್ಮೀರದ ಉತ್ತರ ಪಾಮರ್ ಪ್ರಸ್ಥಭೂಮಿಯಲ್ಲಿ ಯು.ಎಫ್.ಓ.ಗಳ ನಿರ್ಮಾಣ ತಾಣ. ನಮ್ಮ ರಥಗಳ ಆಕಾರಕ್ಕೆ ಯು.ಎಫ್.ಓ.ನ ಆಕಾರವೇ ಆಧಾರ. ಆಕಾಶದಲ್ಲಿ ಕಾಣುವ ಎಲ್ಲ ಬೆಂಕಿ ಉಗುಳುವ ವಿಚಿತ್ರ ವಸ್ತುಗಳೂ ಯು.ಎಫ್.ಓ. ಅಲ್ಲ, `ಡಯಾಗನಲ್’ ನಂತೆ ಓರೆಯಾಗಿ ಹಾರುವ ಬೆಳಕಿನ ವಸ್ತುಗಳು ವಾತಾವರಣ ಸರಿಮಾಡುವ `ಮರುತ್ ಕುಮಾರ’ರ ಯಂತ್ರಗಳು. ಆದರೆ `Astral Travel’ ಮುಂತಾದವುಗಳಲ್ಲಿ ನಿರತರಾಗಿದ್ದ, ಹೆಸರು ಮತ್ತು ಹಣಕ್ಕೆ ಆಸೆ ಪಡದೆ ಇದ್ದ ಈ ವರ್ಮರ ಹೇಳಿಕೆ ಸಮರ್ಥಿಸುವ ಬೇರೆ ಯಾವ ಸಾಕ್ಷ್ಯಗಳೂ ಇತರರಿಗೆ ದೊರೆಯಲಿಲ್ಲ. + +ಇಂಥ ವಿಚಾರಗಳಲ್ಲಿ Willing Suspension of disbelief- ಎಂದರೆ ಇದೆಲ್ಲ ಬೊಗಳೆ ಎಂದು ಹೇಳುವುದಕ್ಕಿಂತ ಅಪನಂಬಿಕೆಯನ್ನು ತಾತ್ಕಾಲಿಕವಾಗಿ ಒತ್ತಟ್ಟಿಗೆ ಇಟ್ಟು, ಈ ರಹಸ್ಯದ ಎಳೆಗಳನ್ನು ಅನುಸರಿಸಿ ಶೋಧನೆ ಮುಂದುವರೆಸುವುದು ತೆರೆದ ಮನಸ್ಸಿನ ಲಕ್ಷಣವಾದೀತು, ಆದರೆ ಸ್ಪಷ್ಟ ಸಾಕ್ಷ್ಯ ಸಿಗುವವರೆಗೆ ಯು.ಎಫ್.ಓ. ಅನೇಕ ಲೇಖಕರ ಊಹಾಪ್ರಪಂಚಕ್ಕೆ ಮಾತ್ರವಲ್ಲದೆ, ಸ್ಟೀಲ್‍ಬರ್ಗ್‍ರಂಥ ಸಿನಿಮಾ ತಯಾರಕರಿಗೆ ಒಳ್ಳೆಯ ವಸ್ತುವಾದೀತು.`ಬೋರ್’ `ವೆಲ್’ + +ಆಂಧ್ರದ ಮಚಲೀಪಟ್ಟಣಂ ಬಳಿಯ ಗ್ರಾಮದಲ್ಲಿ, ಬೋರ್‍ವೆಲ್ ತೋಡುತ್ತಿದ್ದಾಗ ತಿಳಿನೀರಿಗೆ ಬದಲಾಗಿ ಮಂದವಾದ ದ್ರವವೊಂದು ಸಿಕ್ಕಿತು. ಅದರ ಮೇಲೆ ಹಚ್ಚಿದ ಬೆಂಕಿಕಡ್ಡಿ ಎಸೆದಾಗ ಪೆಟ್ರೋಲಿಯಂ ಉತ್ಪನ್ನದಂತೆ ಆ ಬಾವಿಯೇ ಉರಿಯಿತು. ಅಗ್ನಿಶಾಮಕದಳದ ನೆರವಿನಿಂದ ಆ ಜ್ವಾಲೆ ಆರಿಸಬೇಕಾಯಿತು. + +ನೀರಿಗೆಂದು ಅಗೆದಾಗ ದ್ರವರೂಪದ ಚಿನ್ನ ಎನ್ನಿಸಿದ ಪೆಟ್ರೋಲ್ ಸಿಕ್ಕರೆ? ಕರ್ನಾಟಕದಲ್ಲಿ ಕಂಡಕಂಡೆಡೆ ಬೋರ್‍ವೆಲ್ ತೋಡುತ್ತಿರುವ ನೀರ್ ಸಾಬರು ಎನ್ನಿಸಿರುವ ನಜೀರ್ ಸಾಬರೂ ಕಡಿಮೆ ಆಗುತ್ತಿರುವ ನೀರಿನ ಮಟ್ಟವನ್ನು ಗಣಿಸದೆ ಬೋರ್‍ವೆಲ್ ತೋಡುವ ಕೆಲಸವನ್ನು ಇನ್ನೂ ಚುರುಕುಗೊಳಿಸಿದರೆ ನೀರಿಗೆ ಬದಲು ನಮಗೂ ಪೆಟ್ರೋಲ್ ಸಿಕ್ಕರೆ ನೀರ್‍ಸಾಬರು ಪೆಟ್ರೋಲ್ ಸಾಬ್ ಆಗಬಹುದು. ಕಾವೇರಿ ಬೇಸಿನ್‍ನಲ್ಲಿ ತೈಲ ಸಿಕ್ಕ ಸುದ್ದಿ ಆಗಾಗ್ಗೆ ಬರುತ್ತಿರುವಾಗ ಕರ್ನಾಟಕಕ್ಕೇಕೆ ಈ ದ್ರವರೂಪದ ಚಿನ್ನ ಬೇಡ? + +`ಬೋರ್‍ವೆಲ್’ ತೋಡುವುದು ಹೆಚ್ಚಾಗಬಹುದು. `ಬೋರ್’ `ವೆಲ್’ ಎಂದರೆ ಚೆನ್ನಾಗಿ ಬೋರ್ ಮಾಡು ಎಂದೂ ಅರ್ಥವಾಗುವುದರಿಂದ ಎಲ್ಲ ಸಚಿವರಿಗೂ ಈ `ಬೋರ್’ `ವೆಲ್’ ಚಾನ್ಸ್ ಸಿಕ್ಕೀತೆಂದು ಶ್ರೀಮಾನ್ ಘಾ ಹೇಳುತ್ತಾರೆ. + +ನಗದು ನವಾಬರು + +ಬ್ರಿಟನ್ನಿನಲ್ಲೂ `ಚೆಕ್‍ಬುಕ್ ಅರಿಸ್ಟೋಕ್ರಾಟ್’ ಎಂಬ ಒಂದು ಹೊಸ ತಂಡ ತಯಾರಾಗಲಿದೆ. `ಲಾರ್ಡ್’, `ಲೇಡಿ’ ಪದವಿಗಳಂಥ `ಟೈಟಲ್’ಗಳು ಮಾರಾಟಕ್ಕಿವೆ. `ಲೇಡಿ ಗೋಡಿವಾ’ ಆಗಬೇಕೆಂದು ಶ್ರೀಮಂತೆ ಆಸೆಪಟ್ಟರೆ ಸಾಕಷ್ಟು ಹಣ ಕೊಟ್ಟು ಆ ಪದವಿ ಪಡೆಯಬಹುದು. ವಂಶಾವಳಿಗಳೇ ಹರಾಜಿಗಿವೆ. + +ಪಿ.ಜಿ. ವುಡ್‍ಹೌಸ್‍ರಂಥ ಹಾಸ್ಯಸಾಮ್ರಾಟನ ವಿಡಂಬನೆಗೆ ಮೂಲವಸ್ತು ಎಂದರೆ ಹಣವಾಗಲೀ ತಲೆಯೊಳಗೆ ಮಿದುಳಾಗಲೀ ಇರದ ಲಾರ್ಡ್ ಎಮ್ಸ್‍ವರ್ಥ್‍ರಂಥ ಶ್ರೀಮಂತರು. ಹಳೆಯ `ಕ್ಯಾಸಲ್’ಗಳಿದ್ದರೂ ಅದನ್ನು ನೋಡಿಕೊಳ್ಳಲು ಸಾಕಷ್ಟು ಹಣವಿರದ, ಈಗ ಹೆಸರಿಗೆ ಮಾತ್ರ `ಲಾರ್ಡ್’ ಎನಿಸಿದವರು ವಿದೇಶಿಯರ ಭೇಟಿ ಕೊಡುವ ಪ್ರದರ್ಶನ ಕೇಂದ್ರ ಮಾಡಿ ಹಣ ಗಳಿಸುತ್ತಾರೆ. + +ಈ ಹೊಸ `ನಗದು ನವಾಬರು’ ಹೊಸ ಪದವಿ ಪಡೆದು ಏನು ಮಾಡುತ್ತಾರೋ ನೋಡಬೇಕು. + +`ಕೊರವಂಜಿ’ಯ ರಾ.ಶಿ. ಹಿಂದೆ ಬರೆದ ಕತೆಯ ಸಾರಾಂಶವಿದು: ಸೋಪಿನ ವ್ಯಾಪಾರ ಮಾಡಿ ಅಪಾರ ಹಣ ಗಳಿಸಿ ಸೋಪಿನ ಶಾಮಿ ಎಂದು ಹೆಸರಾದ ಶಾಮಿಗೆ, ರಾವ್ ಬಹಾದೂರ್, ರಾವ್ ಸಾಹೇಬ್‍ಗಳಂಥ `ಟೈಟಲ್’ ಪಡೆದು ಗೌರವಸ್ಥನಾಗ ಬೇಕೆಂದು ಆಸೆ. ಕಡೆಗೆ ಸರ್ವಪ್ರಯತ್ನಗಳಿಂದ ಆ ಟೈಟಲ್ ಪಡೆಯುತ್ತಾನೆ. ಆದರೆ ಅವನನ್ನು ಎಲ್ಲರೂ ಕರೆಯಲಾರಂಭಿಸಿದ್ದು ರಾವ್ ಬಹಾದ್ದೂರ್ ಸೋಪಿನ ಶಾಮಿ. (ಸೋಪೇ ಜಿಡ್ಡಿನಂತೆ ಅಂಟಿಬಿಟ್ಟಿತ್ತು.) + +ತಥಾಸ್ತು- ತಥಾಸ್ತ್ರೀ + +ಪುರುಷರೊಡನೆ ಸಮಾನತೆಗೆಂದು ಶುರುವಾದ ನಾರೀ ವಿಮೋಚನಾ ಚಳವಳಿ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದರೆ ಪುರುಷ ವಿಮೋಚನಾ ಚಳವಳಿ ಅಗತ್ಯವಾಗಿದೆ ಎಂದು ಸಿನಿಕರು ಹೇಳಿಯಾರು. ಪುರುಷಪ್ರಧಾನ ಸಮಾಜದಲ್ಲಿ ಪುರುಷನಿಗೆ ಅನ್ವಯವಾದದ್ದು ಸ್ತ್ರೀಗೂ ಅನ್ವಯ ಎಂದು ಭಾವಿಸಿಕೊಂಡೇ ಮುಂದುವರಿಯು ತ್ತಿದ್ದಾಗ(?) ಪ್ರತಿ ಹಂತದಲ್ಲೂ ಸ್ತ್ರೀಗೆ ಸಮಾನ ಸ್ಥಾನ ಬೇಕೆಂದು `ವಿಮೆನ್ಸ್ ಲಿಬ್’ ಅಥವಾ ನಾರೀ ವಿಮೋಚನಾವಾದಿಗಳ ಹೋರಾಟ ಆರಂಭವಾಯಿತು. + +ಚೇರ್‍ಮನ್ ಎಂದೇಕೆ? ಚೇರ್‍ವುಮನ್ ಎಂದು ಕರೆಯಿರಿ ಎಂದರು. ಆದರೆ ಈಗ `ಚೇರ್‍ಪರ್ಸನ್’ ಎಂದು ಕರೆದು ಉಭಯ ಲಿಂಗಿಗಳಿಗೂ ಅನ್ವಯಿಸಲಾಗಿದೆ. ಆದರೆ `ಮ್ಯಾನ್’ ಬಂದ ಕಡೆ `ವುಮನ್’ ಎನ್ನಬೇಕಾದರೆ, `ಹಿಸ್’ ಬಂದ ಕಡೆ `ಹರ್’ ಎನ್ನಬೇಕಾದರೆ ಅನೇಕ ವಿನೋದಕರ ಪದಗಳು ಉದ್ಭವಿಸುವುದೆಂದು ತರಲೆಗಳು (ತರಳೆ ಅಲ್ಲ) ಹೇಳುತ್ತಾರೆ. ಹಾಗಾದರೆ `ಮ್ಯಾನ್‍ಡೇಟ್’ `ವುಮನ್‍ಡೇಟ್’ ಆಗಿ, `ಹಿಸ್ಟರಿ’ `ಹರ್‍ಟರಿ’ ಆಗಬೇಕೆ? `ಮ್ಯಾನ್‍ಷನ್’ `ವುಮನ್‍ಷನ್’ ಆಗಬೇಕೆ? ಮ್ಯಾನ್ ಹೋಲ್ ಗತಿ ಏನು?- ಹೀಗೆಲ್ಲ. ಇದೆಲ್ಲ ಇಂಗ್ಲಿಷ್ ಭಾಷೆಯ ತರಲೆ. + +ಹಿಂದೆ ಕೈಲಾಸಂ ತಮ್ಮ ಭಾಷಣ ಮುಗಿಸಿ, ಗಂಡಸರ ಕಡೆ ತಿರುಗಿ, `ಆ ಮೆನ್’ -ತಥಾಸ್ತು ಎಂದರು. ಮಹಿಳೆಯರ ಕಡೆ ತಿರುಗಿ `ಆ ವಿಮೆನ್’- ತಥಾಸ್ತ್ರೀ ಎಂದಿದ್ದರು. + + + +`ಕೇಕೆ’ಗೆ ಕತ್ತರಿ + +ಜನಶಾಂತಿ ಕದಡುವ ಭಾಷಣ ಕೊಡಬಾರದು; ಧ್ವನಿವರ್ಧಕ ಬಳಸಿ ಮೌನ ಭಂಗ ಮಾಡಬಾರದು- ಇತ್ಯಾದಿ `ಕೂಡದು’ ಆಜ್ಞೆಗಳನ್ನು ಎಲ್ಲ ಸರ್ಕಾರಗಳೂ ಹೊರಡಿಸುತ್ತವೆ. (`ನಗಿ’ ಎನ್ನಲಿಕ್ಕೀ ಪರವಾನಗಿ ಬೇಕಾದೀತು.) ಆದರೆ ನಗಬಾರದು, ಹಾಡಬಾರದು, ಓಡಬಾರದು ಎಂದು ಹೇಳುವಂತೆ ಈಗ ನವಿಲಿನ ಕೇಕೆಗೂ ಜರ್ಮನಿಯ ನ್ಯಾಯಾಲಯ ಕತ್ತರಿ ಹಾಕಿದೆ. + +ಅಲ್ಲಿ `ಆಡಾಡು ಬಾ ನವಿಲೆ, ತೆರೆದೆರಡು ಸಾವಿರದೆರಡು ಕಣ್ಣ’ ಎಂದು ಕವಿ ಕೂಗುವಂತಿಲ್ಲ. ಮೇ- ಜೂನ್ ತಿಂಗಳ `ಬೇಟದ ಕೂಟ’ದ ಕಾಲದಲ್ಲಿ ಪ್ರಣಯ ಕಾತರದಿಂದ ನವಿಲು ಹಾಕಿದ ಕೇಕೆ ನಿದ್ರಾ ಗ್ರಾಮದ ನಿದ್ರೆ ಹಾಳುಮಾಡಿತೆಂದು ನ್ಯಾಯಾಲಯಕ್ಕೆ ದೂರು ಬಂದ ಮೇಲೆ, ಮಾನವನ ಕಿವಿಗೆ ಅಪಾಯಕರವಾಗಿ 70 ಡೆಸಿಬಲ್ ಮಟ್ಟದಲ್ಲಿ ಕೇಕೆ ಹಾಕಿ ನವಿಲು ಕೂಗುವಂತಿಲ್ಲ ಎಂದು ಆಜ್ಞೆಯಾಗಿದೆ. + +ಭಾರತದ ರಾಷ್ಟ್ರಪಕ್ಷಿ ಮಯೂರದ `ವಾಕ್’ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ನಾಟ್ಯಮಯೂರಿಯ ದೇಶವಾದ ಭಾರತವು ಜರ್ಮನಿಗೆ ರಾಜತಾಂತ್ರಿಕವಾಗಿ ಪ್ರತಿಭಟನೆ ಸಲ್ಲಿಸಬೇಕೆಂದು ಪ್ರಾಣಿದಯಾಸಂಘದವರು ಒತ್ತಾಯ ತಂದಾರೆ? ನಮ್ಮ ನವಿಲೂರಿನ ಕವಿಗಳು ಈ ಪಕ್ಷಿ ಸ್ವಾತಂತ್ರ್ಯದ ಬಗ್ಗೆ ಪದ್ಯ ಬರೆಯಬಹುದೆ? ನಿರೀಕ್ಷಿಸಿ. + +ಹೊಸ ಹೆಸರು + +ಬೆಂಗಳೂರು ನಗರದಲ್ಲಿ ಅನೇಕ ಬಡಾವಣೆಗಳಿಗೆ ಹೆಸರನ್ನು ಬದಲಾಯಿಸಿ ನೂತನ ನಾಮಕರಣಗಳಾಗಿವೆ. ರಿಚ್‍ಮಂಡ್ ಟೌನ್, ಸರ್ ಮಿರ್ಜಾ ಇಸ್ಮಾಯಿಲ್ ನಗರವಾಗಿದೆ. ಬೆನ್‍ಸನ್ ಟೌನ್ ಕದಂಬ ನಗರವಾಗಿ, ಆಸ್ಟಿನ್ ಟೌನ್ ಕಿಟ್ಟಲ್ ನಗರವಾಗಿ, ದೊಡ್ಡ ಕುಂಟೆ ಸರ್ವಜ್ಞ ನಗರವಾಗಿ, ಆನೆಪಾಳ್ಯ ಗಜೇಂದ್ರ ನಗರವಾಗಿದೆ. ಪಾಳ್ಯ ನಗರವಾಗುವುದರ ಜೊತೆಗೆ ಆನೆ ಸಂಸ್ಕೃತೀಕರಣಕ್ಕೆ ಒಳಗಾಗಿ ಗಜೇಂದ್ರವಾಗಿದೆ. + +ಹಿಂದೆ ಬೌರಿಂಗ್ ಪೇಟೆ ಬಂಗಾರು ಪೇಟೆಯಾಗಿ, ಕಾನ್‍ಕಾನ್ ಹಳ್ಳಿ (ಖಾನ್‍ಖಾನ್ ಹಳ್ಳಿ?) ಕನಕಪುರವಾಯಿತು. ಹೆಮ್ಮಡು ಆಳ ಎನ್ನುವ ಸುಂದರ ಕನ್ನಡದ ಹೆಸರು ಸಂಸ್ಕೃತದ ಧಾಳಿಗೆ ಒಳಗಾಗಿ ಹೇಮದಳವಾಯಿತು. ಸಂಸ್ಕೃತದ ಮೋಹ ಕನ್ನಡದ ಮೂಲದ ನಾಮವನ್ನೇ ನಿರ್ನಾಮ ಮಾಡಿತು. `ಕೋಗಿಲೆ, ಕೋಗಿಲೆ ಎಂಥ ಹೆಸರು ಊರಿಗೆ’ ಎಂದು ಮಲೆನಾಡ ಹಳ್ಳಿಗಳ ಹೆಸರಿನ ಮೋಹಕತೆಗೆ ಮಾರುಹೋದ ಮಾಸ್ತಿ ಪದ್ಯ ಬರೆದರು. ಎಳನಡು ಸಿರಿಗಳಲೆ….ಒಂದೇ ಎರಡೇ? ನೂರಾರು. ಮೂಲದ ಸುಂದರ ಕನ್ನಡ ಹೆಸರುಗಳನ್ನು ಮಾರ್ಪಡಿಸುವುದು ಅನಗತ್ಯವಲ್ಲವೇ? + + + +ಕೊನೆ ಸಿಡಿ + +ಕಳಲೆ, ಸೋಸಲೆ ಎಂಬ ಊರುಗಳಿಲ್ಲವೇ? `ಕಳಲೆ?’ ಎಂಬುದನ್ನು ಪ್ರಶ್ನೆಯೆಂದು ಪರಿಗಣಿಸಿಯೇ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನದ ಉತ್ತರ ತಯಾರಾಯಿತೆಂದು ಶ್ರೀಮಾನ್ ಘಾ ಹೇಳುವುದು ಶುದ್ಧ ತರಲೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_142.txt b/Kenda Sampige/article_142.txt new file mode 100644 index 0000000000000000000000000000000000000000..c9ec1b3b79cc4d3deb881cc203c7875713c493ab --- /dev/null +++ b/Kenda Sampige/article_142.txt @@ -0,0 +1,55 @@ +‘ಜಗದ ಕತ್ತಲೆಯನು ಕಳೆಯಲು ದೀಪ ಹಚ್ಚೋಣಮನದ ಅಂಧಕಾರವ ತೊಳೆಯಲು ದೀಪ ಹಚ್ಚೋಣ’(ಗಜಲ್-6) + +ಎನ್ನುವ ಆಶಯದೊಂದಿಗೆ ಗಜಲ್ ಲೋಕವನ್ನು ಪ್ರವೇಶಿಸುತ್ತಿರುವ ಕವಯಿತ್ರಿ ಅಂಬಮ್ಮ ಪ್ರತಾಪ್ ಸಿಂಗ್ ದಶಕಗಳಿಂದ ಗಜಲ್ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ ತಡವಾಗಿ ತಮ್ಮ ಚೊಚ್ಚಲ ಗಜಲ್ ಸಂಕಲನ `ಮೌನದೊಡಲ ಮಾತುʼ ಪ್ರಕಟಿಸುತ್ತಿದ್ದಾರೆ. + +ರಾಯಚೂರು ಜಿಲ್ಲೆ, ಬಿಸಿಲ ಹನಿಗಳ ನೆಲ. ಈ ನೆಲ ವಿಶಿಷ್ಟ ಬಗೆಯ ಕಾವ್ಯ ಪರಂಪರೆಯದು. ಇಲ್ಲಿನ ಕವಿಗಳು ನವೋದಯ, ನವ್ಯ, ದಲಿತ, ಬಂಡಾಯದ ಕಾಲ ಘಟ್ಟದಲ್ಲೂ ತೀವ್ರವಾಗಿ ಸ್ಪಂದಿಸಿ ಕಾವ್ಯ ಕಟ್ಟಿಕೊಟ್ಟಿದ್ದು, ಅದು ಗಟ್ಟಿಯಾದ ಕಾವ್ಯ ಎಂಬುದನ್ನು ಅನೇಕರು ಸಾಬೀತು ಪಡಿಸಿದ್ದಾರೆ. + +(ಅಂಬಮ್ಮ ಪ್ರತಾಪ್‌ ಸಿಂಗ್‌) + +ಈ ನೆಲದ ಮೂಲಕ ಹುಟ್ಟಿ ಬಂದ ಮತ್ತೊಂದು ಕಾವ್ಯ ಪ್ರಕಾರ ಕನ್ನಡ ಗಜಲ್‌ಗಳು. ಉರ್ದು ಸಾಹಿತ್ಯದ ಮೂಲ ಬೇರುಗಳ ಶಕ್ತಿಯನ್ನು ಹೀರಿಕೊಂಡು ಬೆಳೆದ ಇಲ್ಲಿನ ಗಜಲ್‌ಗಳು ಅಷ್ಟೇ ಸತ್ವಯುತ. ಕರ್ನಾಟಕದ ಬೇರೆ ಭಾಗದಿಂದಲೂ ಗಜಲ್ ರಚನೆಗಳು ಹೊರಹೊಮ್ಮಿದ್ದರೂ ರಾಯಚೂರು ನೆಲದ ಗಜಲ್‌ಗೆ, ಇಲ್ಲಿನ ಗಜಲ್ ಕವಿಗಳಿಗೆ ಒಂದು ವಿಭಿನ್ನವಾದ ಸಂವೇದನಾಶೀಲತೆ ಇದೆ. ಆ ಕಾರಣಕ್ಕಾಗಿಯೆ ಇಲ್ಲಿನ ಗಜಲ್ ಕವಿಗಳನ್ನು ಕುತೂಹಲದ ದೃಷ್ಟಿಯಿಂದ ನೋಡುವುದು. ಶಾಂತರಸರು ಹೈ-ಕ ಬಗೆಗಿನ ಚಿಂತನೆಯನ್ನು, ಕಾಳಜಿಯನ್ನು, ಕಳವಳವನ್ನು ತಮ್ಮ ಗಜಲ್ ಮೂಲಕ ಬಹು ಹಿಂದೆಯೆ ಅಭಿವ್ಯಕ್ತಿಗೊಳಿಸಿದರು. ರಾಯಚೂರಿನ ನೆಲದ ಕಾವ್ಯ ಸತ್ವವನ್ನು, ಅದರಲ್ಲೂ ಕನ್ನಡ ಗಜಲ್ ಸಾಹಿತ್ಯವನ್ನು ಜಗದಗಲ, ಮುಗಿಲಗಲ ಬೆಳೆಸಿದ ಅನೇಕರಲ್ಲಿ ಅವರು ಪ್ರಮಥರು. + +***** + +`ಗಜಲ್’ ಎಂಬುದು ಅರಬ್ಬಿ ಶಬ್ದ. ಹೆಂಗಸರೊಡನೆ, ಪ್ರೇಯಸಿಯೊಡನೆ ಮಾತನಾಡುವುದು ಎಂದು ಅದರ ಅರ್ಥ. ಗಜಲ್ ಅರಬ್ಬಿ ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆಯಲಿಲ್ಲ. ಬದಲಿಗೆ ಅದು ಇರಾನ್ ದೇಶಕ್ಕೆ ವಲಸೆಗೊಂಡು ಪಾರ್ಸಿ ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆಯಿತು. ಪಾರ್ಸಿ ಭಾಷೆಯಲ್ಲಿ ಗಜಲ್ ಎಂದರೆ ಭಾವಗೀತೆ, ಪ್ರೇಮಗೀತೆ, ಹಾಡು ಇತ್ಯಾದಿ…. ಅರ್ಥ. ಅಲ್ಲಿಂದ ಇದು ಭಾರತದ ಉರ್ದುವಿಗೆ ಬಂತು. ಭಾರತೀಯತೆಯನ್ನು ಮೈಗೂಡಿಸಿಕೊಂಡು ಭಾರತದ ಇತರೆ ಭಾಷೆಗೂ ವ್ಯಾಪಿಸಿತು. + +ಗಜಲ್‌ನಲ್ಲಿ ಇರುವ ಪ್ರಬೇಧ, ಅದರ ಸಾಂಸ್ಕೃತಿಕ ಹಿನ್ನೆಲೆ, ಅದರ ವ್ಯಾಕರಣ, ಅಲಂಕಾರಗಳ ಬಗ್ಗೆ ನಾವಿಲ್ಲಿ ಚರ್ಚೆ ಮಾಡುವುದು ಬೇಡ. ಕನ್ನಡದ ಇತರ ಕಾವ್ಯದಷ್ಟೇ ಸಮರ್ಥವಾಗಿ ಬೆಳೆದಿರುವ ಕನ್ನಡ ಗಜಲ್ ಲೋಕದ ಚಿಂತನೆಗೆ ಬಂದಾಗ ಅದು ಕೇವಲ ಪ್ರೀತಿ, ಪ್ರೇಮ, ವಿರಹ, ಪ್ರೇಮಿಗಳ ಮಾತು, ಅಷ್ಟಕ್ಕೆ ಮಾತ್ರ ಸೀಮಿತವಾಗದೆ, ರಸಿಕತೆಯ ಮಾತಿನಿಂದ ಹಿಡಿದು ಪ್ರತಿಭಟನೆಯವರೆಗೂ ಬೆಳೆದಿದೆ. ಅಲ್ಲಿನ ಪ್ರತಿರೋಧ, ಬಂಡಾಯದ ಕಾವನ್ನೂ ನಾವು ನೋಡಬಹುದಾಗಿದೆ. + +ಅತ್ಯುತ್ತಮ ಸಣ್ಣಕಥೆ, ಕಾವ್ಯ, ಗಜಲ್‌ಗಳನ್ನು ನೀಡಿದ ರಾಯಚೂರ ನೆಲದಲ್ಲಿ ಇಂದು ನೂರಾರು ಗಜಲ್ ಕವಿಗಳು ಅರಳಿರುವುದು ನೋಡಿದರೆ ಅಚ್ಚರಿಯಾಗುತ್ತದೆ. ಆದರೆ, ಮಹಿಳಾ ಗಜಲ್‌ಕಾರರ ತೀವ್ರ ಕೊರತೆ ತುಂಬಾ ಎದ್ದು ಕಾಣುತ್ತದೆ. ಹಿರಿಯ ಕವಯಿತ್ರಿ ಎಚ್.ಎಸ್. ಮುಕ್ತಾಯಕ್ಕ ಅವರ ನಂತರ ರಾಯಚೂರು ಜಿಲ್ಲೆಯಲ್ಲಿ ಪ್ರಸ್ತುತ ಮಹಿಳಾ ಗಜಲ್‌ಕಾರರ ಸಂಖ್ಯೆ ಬೆರಳೆಣಿಕೆಯಷ್ಟು! ಗಜಲ್‌ನ ಮೋಹಕತೆಗೆ ಶರಣಾಗಿ, ಗಜಲ್ ಕಾವ್ಯವನ್ನೆ ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡ ಬರಹಗಾರರು ತೀರ ಕಡಿಮೆ, ಅದರಲ್ಲೂ ಮಹಿಳಾ ಬರಹಗಾರ್ತಿಯರು ಇನ್ನೂ ಅಪರೂಪ. ಇಂತಹ ಸಂದರ್ಭದಲ್ಲೆ ಅಂಬಮ್ಮ ಪ್ರತಾಪ್ ಸಿಂಗ್ `ಮೌನದೊಡಲ ಮಾತುʼ ಗಜಲ್ ಸಂಕಲನ ಪ್ರಕಟಿಸುತ್ತಿರುವುದು ಮಹತ್ವದ ಸಂಗತಿ. ವೃತ್ತಿಯಿಂದ ಶಿಕ್ಷಕಿಯಾಗಿರುವ ಅಂಬಮ್ಮ ಪ್ರತಾಪ್ ಸಿಂಗ್ ಪ್ರವೃತ್ತಿಯಿಂದ ಬರಹಗಾರ್ತಿ. ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ 4-5 ಕೃತಿಗಳನ್ನು ಪ್ರಕಟಿಸಿರುವ ಅವರು ಪ್ರಸ್ತುತ ಗಜಲ್ ಸಂಕಲನದಲ್ಲಿ 60 ಗಜಲ್‌ಗಳಿವೆ. ದಶಕಗಳಿಂದ ಕಾವ್ಯ ರಚನೆಯಲ್ಲಿ ತೊಡಗಿಕೊಂಡಿರುವ ಅವರು ವಿಶೇಷವಾಗಿ ರಾಯಚೂರು ಜಿಲ್ಲಾ ಕೆಲವೆ ಕೆಲವು ಮಹಿಳಾ ಗಜಲ್‌ಕಾರ್ತಿಯರ ಪೈಕಿ ಮುಂಚೂಣಿಯಲ್ಲಿದ್ದಾರೆ. + + + +ಉರ್ದು ಸಾಹಿತ್ಯ ಪರಂಪರೆಯ ʻಗಜಲ್ʼ ಸೃಷ್ಟಿಸಿರುವ ಸೋಜಿಗ, ರಸಾನುಭವ, ಚಮತ್ಕಾರ, ಪತಂಗದ ಆಕರ್ಷಣೆ ಹೀರಿಕೊಂಡು ಬೆಳೆದ ಕನ್ನಡ ಗಜಲ್‌ಗಳು ಉರ್ದು ಭಾಷೆಯಷ್ಟು ಸತ್ವಯುತವಾಗಿ ಅಲ್ಲದಿದ್ದರೂ ಇಲ್ಲಿನ ಪ್ರಾದೇಶಿಕತೆ, ಜನಜೀವನ, ಜೀವನ ಶೈಲಿ, ಭಾಷೆ, ಸಂಸ್ಕೃತಿ, ಇರುವಿಕೆಯ ಹಿನ್ನೆಲೆಯಲ್ಲಿ ಮೂಡಿಬಂದಿವೆಯಾದರೂ ಗಟ್ಟಿತನಕ್ಕೆ ಕಡಿಮೆಯಿಲ್ಲ. ಇದಕ್ಕೆ ಅಂಬಮ್ಮ ಅವರ ಕೆಲ ಗಜಲ್‌ಗಳ ಆಶಯವೂ ಹೊರತಲ್ಲ. + +`ಬದುಕಿದರೂ ಜೀವಚ್ಛವವಾಗಿತ್ತು ಪ್ರೀತಿಯಿಲ್ಲದೆನಿನ್ನ ಪ್ರೀತಿಯು ಸಂಜೀವಿನಿಯಾಯಿತು ಜೀವನದಲ್ಲಿ(ಗಜಲ್-4)ಎನ್ನುವಲ್ಲಿ ಮನುಷ್ಯ ಪ್ರೀತಿಯ ಸಹಜತೆಯ ಬಯಕೆಯನ್ನು ಪ್ರಕಟಿಸುವ ಈ ಕವಯಿತ್ರಿ, ಅಗಾಧವಾದ ಜೀವನ ಪೀತಿ ಪ್ರಕಟಿಸುತ್ತಾರೆ. ಇಲ್ಲಿನ ಹಲವು ಗಜಲ್‌ಗಳಲ್ಲಿ ಅಂತಹ ಅಂತರ್ಮುಖಿ ಮಾತುಗಳ, ಮೌನ ಆದ್ರತೆಯ ವಿಚಕ್ಷಣ ಸಂಗತಿಗಳನ್ನು ಹೇಳುತ್ತವೆ. + +ತಾವು ಕಂಡುಂಡ ಅನೇಕ ವಿಷಯಗಳನ್ನು ಕವಯಿತ್ರಿ ಅವನ್ನು ಕಾವ್ಯದ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಒಂದು ಮಾತು, ಎಲ್ಲ ಅನುಭವಗಳೂ ಕಾವ್ಯವಲ್ಲ. ಅದೂ ಅಲ್ಲದೆ ಒಂದು ವಿಷಯವನ್ನು ಗಜಲ್ ಆಗಿ ಪರಿವರ್ತಿಸುವ ಕಾವ್ಯಕಾರಣ ಕೆಲವಕ್ಕೆ ಸಲ್ಲುತ್ತದೆ, ಕೆಲ ಮನೋಧರ್ಮ ಎಲ್ಲಕ್ಕೂ ಸಲ್ಲದು. ಈ ಸಂಕಲನದಲ್ಲಿ ಕಾತರತೆಯ ಮಾತುಗಳಿವೆ, ಪ್ರೀತಿ-ಪ್ರೇಮದ ಉಸಿರಾಟವಿದೆ, ಹತಾಶೆಗಳಿವೆ, ಸುಖದ ಕನಸುಗಳಿವೆ, ವ್ಯವಸ್ಥೆಯ ತಾಕಲಾಟಗಳಿವೆ, ವರ್ತಮಾನದ ಹಲಬಗೆಯ ಸಂಕಟಗಳಿವೆ, ತವಕಗಳಿವೆ, ತಲ್ಲಣಗಳಿವೆ, ಬಂಧನಗಳಿವೆ-ಬಿಡುಗಡೆಗಳಿವೆ. ಬದುಕಿನ ಸಾವಿರ ಬವಣೆಗಳನ್ನು ಕವಿ ಹೇಗೆ ತನ್ನ ಕಾವ್ಯಕುಂಚಕ್ಕೆ ಇಳಿಸುವ ಪ್ರಯತ್ನ ಮಾಡಬಲ್ಲ ಎಂಬುದಕ್ಕೆ ಈ ಗಜಲ್ ಉದಾಹರಣೆ: + +`ಬಾಳ ಕಡಲ ಪಯಣದಲಿ ಬಿರುಗಾಳಿಯೇ ಹೆಚ್ಚುಬದುಕಲಿ ನಿನ್ನ ಜೊತೆಗೆ ಮುಳ್ಳುರಾಶಿಯೇ ಹೆಚ್ಚು’(ಗಜಲ್-54)ಎನ್ನುವ ರೂಪಕದ ಮತ್ಲದಲ್ಲಿ ಬರಿ ಸುಖದ ಕಲ್ಪನೆಯ ಜೀವನದಲಿ ಸಾಗುವ, ದಾಟುವ ಮುಳ್ಳಿನ ರಾಶಿಯ ವಾಸ್ತವ ಸಂಗತಿ ಇಲ್ಲಿ ಪ್ರಕಟಗೊಂಡಿದ್ದು, ಮುಂದುವರೆದ ಈ ಗಜಲ್‌ನ ನಾಕನೆ ಶೇರ್ ಹೇಳುವ ಮಾತು ಕವಯಿತ್ರಿಯ ಕಲ್ಪನಾ ಶಕ್ತಿಗೆ ಹಿಡಿದ ಸಾಣೆಯಂತಿದೆ. ಮುಂದುವರೆದ ಈ ಗಜಲ್‌ನ ಶೇರ್:`ಮೆಹಂದಿ ರಂಗು ಕರಗುವ ಮೊದಲೆ ಬದುಕು ಭಾರನಿಶ್ಯಬ್ದ ರಾತ್ರಿಯಲಿ ವಿರಹದ ಬಿಕ್ಕಳಿಕೆಯೇ ಹೆಚ್ಚು’ಎಂದು ಹೇಳುವ ಮೂಲಕ ಹೆಣ್ಣು ಮನಸೊಂದು ಮೆಹಂದಿ ಕರಗುವ ಮೊದಲೆ ವಿರಹದ ಬಿಕ್ಕಳಿಕೆಯಲಿ ಬೇಯುವ ಛಾಯೆ ದುರಂತ ಕಥೆಯ ಪ್ರತಿಬಿಂಬವಾಗಿದೆ.ನಮ್ಮ ಸಮಾಜದಲ್ಲಿ ಜಾತಿ, ಧರ್ಮಗಳ ಹಂಗು ತೊರೆದು ಅಂತರ್ಜಾತಿ, ಧರ್ಮಗಳ ವಿವಾಹ ನಡೆದಿವೆ. ಅದರ ವಿರುದ್ಧ ಮರ್ಯಾದ ಹತ್ಯೆಯಂಥಹ ಪ್ರಕರಣಗಳೂ ನಡೆದಿರುವುದು ದುರಂತವೆ! ಇಂತಹ ನಾಡಿನಲ್ಲಿ ವೈರುಧ್ಯ ಎಂಬಂತೆ ಕೃಷ್ಣ ರಾಧೆಯರ ಪ್ರೇಮವನ್ನು ನಾವು ಆದರ್ಶವಾಗಿ ನೋಡುತ್ತೇವೆ. ಆ ಮಿಡಿತದ ಒಂದು ಗಜಲ್‌ನ ಶೇರ್ ನೋಡುವುದಾದರೆ: + +`ಕೃಷ್ಣ ರಾಧೆಯ ಪ್ರೇಮವ ಆದರ್ಶ ಎಂದು ಪೂಜಿಸುವ ಜನರಿಹರುಯುವ ಮನಸಿನ ಒಲವಿಗೆ ಜಾತಿ ನೆರಳಿನ ಕತ್ತಿ ಮಸೆಯುತ್ತಿದೆ’(ಗಜಲ್-36)ಎನ್ನುವ ಗಜಲ್‌ನಲ್ಲಿ ರಾಧೆ ಕೃಷ್ಣ ಸೇರಿದಂತೆ, ಲೈಲಾ ಮಜನೂ, ಸಲೀಂ ಅನಾರ್ಕಲಿ, ರೋಮಿಯೋ ಜೂಲಿಯಟ್‌ರನ್ನು ಆದರ್ಶವಾಗಿ ನೋಡುವ ದೇಶದಲ್ಲಿ ಒಲವಿಗೆ ವಿಷ ಉಣಿಸುವ ಕಾರಣವನ್ನು ಕವಯತ್ರಿ ಪ್ರಶ್ನಿಸುತ್ತಾ, ಪ್ರೀತಿಯ ಉದಾತ್ತತೆ ತೋರುತ್ತಾ, ಅದೆ ಒಲವನ್ನು ಹೀಗೆ ಮಧುರವಾಗಿಸುತ್ತಾರೆ:`ನಿನ್ನೊಲವಿನ ಕರೆಗೆ ಸರ್ವಸ್ವವನ್ನೂ ತ್ಯಜಿಸಿ ಬಂದಿಹಳು ವನಿತಾಒಲವಿನ ಹಾದಿಯಲ್ಲಿ ಮಧುರ ಪ್ರೀತಿಯ ಪಲ್ಲಕ್ಕಿ ಸಾಗುತ್ತಿದೆ’ಎಂದು ಒಲವಿಗೆ ಸೋಲುತ್ತಾರೆ. + +***** + +ಈ ಸಂಕಲನದ ಎಲ್ಲ ಗಜಲ್‌ಗಳು ಶ್ರೇಷ್ಠ ಕಾವ್ಯಗುಣ ಹೊಂದಿದ ಗಜಲ್‌ಗಳೆಂದು ಹೇಳಲಾಗದು. ಆದರೆ ಕವಿಯೊಬ್ಬರ ಮನದಾಳದ ಮಾತುಗಳು ಅಲ್ಲಲ್ಲಿ ಕೆಲ ಸಾಲುಗಳಲ್ಲಿ ನಿಖರವಾಗಿ ಪ್ರಕಟಗೊಂಡಿವೆ. ಅದಕ್ಕೆ ಉದಾಹರಣೆಯಾಗಿ ಈ ಶೇರ್‌ಗಳನ್ನು ಗಮನಿಸಬಹುದು. + +`ಮನವು ನೊಂದು ಬೇಯುತ್ತಿದೆ ನಿನ್ನ ಮೌನಕ್ಕೆ ಗೆಳೆಯನೆನಪು ಸತ್ತು ಸಮಾಧಿಯಾಗಿದೆ ನಿನ್ನ ಮೌನಕ್ಕೆ ಗೆಳೆಯ’(ಗಜಲ್-10) + +*** + +`ಕೊನೆಗೊಮ್ಮೆ ನನ್ನ ಶವವನ್ನಾದರೂ ತೋರಿಸಿಬಿಡಿವನಿತಾ ಹೇಗೆ ಕಾಣುವಳೆಂದು ನೋಡುವೆ ನಾನು’(ಗಜಲ್-14) + +*** + +`ನೀನು ಆಲಾಪಗೈಯ್ಯುತ್ತಿರುವ ಗಾಯನದಲಿನನ್ನ ಹೃದಯದ ಬಡಿತವು ತಾಳ ಹಾಕುತ್ತಿರಲಿ’(ಗಜಲ್-21) + +*** + +ಗಜಲ್ ಮೂಲತಃ ಮನುಷ್ಯ ಸಹಜ ಪ್ರೀತಿ, ಪ್ರೇಮ, ಪ್ರಣಯ, ವಿರಹ, ವೇದನೆ, ಏಕಾಂಗಿತನ, ನೋವು, ಹತಾಶೆ, ವಿಪ್ರಲಂಭನ, ಬೇಗುದಿ, ತಳಮಳಗಳನ್ನು ಅಭಿವ್ಯಕ್ತಿಗೊಳಿಸುವ ಕಾವ್ಯವಾದರೂ, ಅದರಾಚೆಯ ವರ್ತಮಾನದ ಸಂಗತಿಗಳನ್ನೂ ಅದು ಪ್ರತಿಧ್ವನಿಸುತ್ತದೆ. ಇಂತಹ ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಇಲ್ಲಿ ಕೆಲ ಗಜಲ್‌ಗಳು ಮೈದಾಳಿವೆ. ಅಂಬಮ್ಮ ಅವರ ಗಜಲ್‌ಗಳಲ್ಲಿ ಪ್ರೇಮ ನಿವೇದನೆ ಇದೆ, ನೋವುಂಡ ಹೃದಯಾಂತರಾಳದ ಯಾತನೆ ಇದೆ. ಜೊತೆಗೆ ಕೆಲವೆಡೆ ಚಡಪಡಿಕೆ, ಕಾತರತೆ, ಆರ್ದ್ರತೆ, ಮನದ ತಾಕಲಾಟಗಳ ತಳಮಳವೂ ಇದೆ. ಮನುಷ್ಯ ಸಮಾಜ ಕುರಿತ ವಿವೇಚನೆಯುಕ್ತ ಪ್ರಶ್ನೆಗಳಿವೆ, ಕುತೂಹಲಗಳಿವೆ. ಗಂಡು-ಹೆಣ್ಣಿನ ನಡುವಿನ ಅಗಣಿತ ನೋವಿನ ಗೆರೆಗಳನ್ನು ಇಲ್ಲಿನ ಕೆಲ ಗಜಲ್‌ನಲ್ಲಿ ಕಂಡುಬಂದ ಅಂಶ. + +ಕೊನೆಗೊಂದು ಮಾತು, ಹೊಸಪೀಳಿಗೆಯ ಕನ್ನಡ ಗಜಲ್‌ಕಾರರನ್ನು ಕುರಿತು ಗಜಲ್ ಸಾಹಿತ್ಯ ಲೋಕದ ಗಂಭೀರ ಬರಹಗಾರರಲ್ಲಿ ಒಂದು ಆರೋಪವಿದೆ. ಈ ಮಾತನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಅದೆಂದರೆ, ಇಂದಿನ ಬಹುತೇಕರು ಗಜಲ್‌ಕಾರರು ಛಂದೋಬದ್ಧ ಲಕ್ಷಣಗಳನ್ನಿಟ್ಟುಕೊಂಡು ಆ ಚೌಕಟ್ಟಿನಲ್ಲಿ ಮಾತ್ರ ಗಜಲ್ ಎಂದು ಕೆಲ ಶಬ್ದಗಳನ್ನು ತುರುಕುತ್ತಾರೆ. ಗಜಲ್‌ಗೆ ಅನಿವಾರ್ಯವಾದ ಕಾವ್ಯಗುಣ, ಭಾಷಾ ಸಂಪತ್ತು, ಲಯಗಾರಿಕೆ, ಪ್ರತಿಮೆ-ರೂಪಕಗಳ ಮುಖ್ಯ ಭೂಮಿಕೆಯನ್ನು ಮರೆಯುತ್ತಾರೆ ಎಂಬ ಅಂಶ. ಬಹುತೇಕರು ತಾವು ಬರೆದುದೆ ಗಜಲ್ ಎಂದು ಗಜಲ್‌ನ ಗಾಂಭೀರ್ಯತೆಗೆ ಧಕ್ಕೆ ತರುತ್ತಿರುವುದು ಆತಂಕದ ವಿಷಯ. ಕಾವ್ಯದ ಗುಣ ಗಜಲ್‌ನಲ್ಲಿ ಅವಿರ್ಭವಿಸದೆ ಸಾವಿರ ಗಜಲ್ ಬರೆದರೂ ಆ ಗಜಲ್ ರುಚಿ ನೀಡದು. ಇಂತಹ ಅಂಶಗಳನ್ನು ಹೊಸ ಗಜಲ್ ಕವಿಗಳು ಗಮನದಲ್ಲಿಟ್ಟಿಕೊಂಡು ಗಜಲ್ ರಚನೆ ಮಾಡುವ ಅಗತ್ಯವಿದೆ. + + + +ಭರವಸೆಯ ಕವಯಿತ್ರಿಯಾಗಿ ಪ್ರಕಟಗೊಳ್ಳುವ ಸೂಚನೆ ನೀಡಿರುವ ಈ ಕವಯಿತ್ರಿಯಿಂದ ಇನ್ನಷ್ಟು ಉತ್ತಮ ಸಾಹಿತ್ಯ ಕನ್ನಡಕ್ಕೆ ಲಭಿಸಲಿ, ಎನ್ನುತ್ತಾ ಅಂಬಮ್ಮ ಪ್ರತಾಪ್ ಸಿಂಗ್ ಅವರನ್ನು ಹೃತ್ಪೂರ್ವಕ ವಾಗಿ ಅಭಿನಂದಿಸುವೆ. + +ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ \ No newline at end of file diff --git a/Kenda Sampige/article_143.txt b/Kenda Sampige/article_143.txt new file mode 100644 index 0000000000000000000000000000000000000000..f1e50c96fa7cd19d42139468e91f1ee0343b826b --- /dev/null +++ b/Kenda Sampige/article_143.txt @@ -0,0 +1,115 @@ +ಹಕ್ಕಿಗಳ ಚಿಲಿಪಿಲಿ ಸದ್ದಿನಿಂದ ಎಚ್ಚರಗೊಂಡೆ. ಮೈಯೆಲ್ಲ ಹಗುರವಾದಂತೆನಿಸಿತು. ಎದ್ದು ಕೂಡುವುದು ಸಾಧ್ಯವಾಯಿತು. ಅಬ್ಬ! ಮರಣಕ್ಕೆ ಮೊದಲು ಈ ಜರಾ ತನ್ನ ಅದ್ಭುತ ಚಿಕಿತ್ಸೆಯಿಂದ ನನ್ನನ್ನು ಬದುಕಿಸಿದ! ಮರಣಕ್ಕೆ ಎಲ್ಲ ರೀತಿಯಿಂದಲೂ ಹತ್ತಿರ ವಾಗಿದ್ದು, ಜರೆಯಿಂದ ಜರ್ಝರಿತನಾದ ನನ್ನನ್ನು ಇವನು ಕೆಲವು ದಿನಗಳ ಮಟ್ಟಿಗೆ ಬದುಕಿಸಿದ. ಹೌದು, ಅವನು ಸೊಪ್ಪಿನ ರಸ, ಬೇರಿನ ರಸದ ಮದ್ದು ನೀಡಿದ; ಮರಣವೇ ಇಲ್ಲದ ಅಮೃತ ನೀಡಲಿಲ್ಲ; ನೀಡಲು ಸಾಧ್ಯವೂ ಇಲ್ಲ.ಒಂದು ಕ್ಷಣ, ಅವನು ಬಾಣ ಬಿಟ್ಟೊಡನೆ ಪ್ರಾಣ ಹೋಗಿಬಿಡಬೇಕಾಗಿತ್ತು + +ಎನಿಸಿತು. ಅವನ ಔಷಧಿಯ ಪ್ರಭಾವದಿಂದ ನಾನು ಸುಮಾರು ಒಂದು ದಿನ ಪ್ರಜ್ಞಾಹೀನ ನಿದ್ರೆಯಲ್ಲಿ ಮುಳುಗಿದ್ದೆ. ಹೌದು, ಮುಸ್ಸಂಜೆ ಸಮುದ್ರ ತೀರದಿಂದ ಹೊರಟಿದ್ದೆ. ತಾವು ಹಚ್ಚಿಕೊಂಡಿದ್ದ ಕೃತಕ ದೀಪಗಳ ಬೆಳಕಿನಲ್ಲಿ ಯಾದವ ಪ್ರಮುಖರು ಮದ್ಯಪಾನದ ಲೀಲಾವಿನೋದದಲ್ಲಿ ತೊಡಗಿದ್ದರು. ಇಲ್ಲಿ ಎಚ್ಚರವಾದ ಸ್ವಲ್ಪ ಹೊತ್ತಿಗೆ ಜರಾ ಬಂದು ಕುಟೀರದ ಬಾಗಿಲು ತೆರೆದಾಗ ಮುಸ್ಸಂಜೆಯಾಗಿತ್ತು. ಅಂದರೆ ಅಖಂಡವಾಗಿ ಒಂದು ದಿನ ನಾನು ಎಚ್ಚರವಿಲ್ಲದಂತಿದ್ದೆ. ಅಂದರೆ, ಸತ್ತಂತೆ ಮಲಗಿದ್ದೆ. ಹೌದು ನಿದ್ರೆ ಒಂದು ತಾತ್ಕಾಲಿಕ ಸಾವು. ಸಾವೂ ಈ ನಿದ್ರೆಯಂತಿರಬಹುದೆ? ಅದು ನಿಜವಾದರೆ ಮಾನವರೆಲ್ಲ ಸಾಯಲು ಏಕೆ ಹೆದರುತ್ತಾರೆ? ಇಲ್ಲ, ಸಾವು ನಿಗೂಢವೇ! ಅದರ ರಹಸ್ಯ ಕೈವಶವಾದರೆ ಈ ಮನುಷ್ಯನನ್ನು ಹಿಡಿಯುವವರಾರು? + +(ಸು. ರುದ್ರಮೂರ್ತಿ ಶಾಸ್ತ್ರಿ) + +ಕುಳಿತವನು ಎದ್ದು ನಿಂತೆ. ನಿಧಾನವಾಗಿ ಕುಂಟುತ್ತಾ ನಡೆದು, ಬಾಗಿಲು ತೆರೆದು ಹೊರಬಂದು ಮೂತ್ರ ಬಾಧೆ ತೀರಿಸಿಕೊಂಡೆ. ಮತ್ತೆ ಒಳಬಂದು, ಮಣ್ಣಿನ ತಂಬಿಗೆಯಲ್ಲಿ ನೀರು ತುಂಬಿಕೊಂಡು ಬಂದು ಮುಖ ಕೈಕಾಲು ತೊಳೆದುಕೊಂಡೆ. ಗಾಯದ ಕಾಲಿಗೆ ನೀರು ಸೋಕಿಸಲಿಲ್ಲ. ಮತ್ತೆ ಕುಟೀರದ ಒಳಗೆ ಹೋಗದೆ ಹೊರಗಿನ ಒಂದು ಬಂಡೆಯ ಮೇಲೆ ಕುಳಿತುಕೊಂಡೆ. ಎಡಗಾಲಿನ ನೋವು ಎಷ್ಟೋ ಕಡಿಮೆಯಾಗಿತ್ತು. ಪಕ್ಷಿಗಳ ಕಲರವವನ್ನು ಕೇಳುತ್ತಾ, ಗಿಡಮರಗಳನ್ನು ನೋಡುತ್ತಾ, ಪ್ರಕೃತಿ ಎಷ್ಟು ರಮಣೀಯವಾಗಿದೆ, ಎಂದುಕೊಂಡೆ. + +ಆಕಸ್ಮಿಕವಾಗಿ ನನ್ನ ದೃಷ್ಟಿ ನನ್ನ ಕೈಗಳ ಮೇಲೆ ಬಿತ್ತು. ಮುಂಗೈಗಳ ಮೇಲೆ ನರಗಳು ಎದ್ದು ಕಾಣುತ್ತಿದ್ದವು. ಚರ್ಮ ಸುಕ್ಕಾಗಿರುವುದು ಸ್ಪಷ್ಟವಾಗಿ ಕಂಡಿತು. ಇದು ಜರೆಯ ಪ್ರಭಾವ. ಅದರಿಂದ ಪಾರಾಗಬಲ್ಲವರು ಯಾರು? ದೇವಲೋಕದ ಅಮೃತದ ಕನಸು ಕಂಡಾಕ್ಷಣಕ್ಕೆ ನಾವು ಅಮರರಾಗುವುದು ಸಾಧ್ಯವೆ? ಜರೆಯ ಲಕ್ಷಣಗಳು ಮರಣದ ಮಹಾನೆಲೆಗೆ ಕರೆದೊಯ್ಯುವ ಸಂದೇಶಗಳಲ್ಲವೆ? + +ಹಸಿವಿನ ಅನುಭವವಾಗತೊಡಗಿತು. ಅಷ್ಟರಲ್ಲಿ ಜರಾ ಆತುರಾತುರವಾಗಿ ಬಂದ. “ಒಡೆಯ ತಡ ಆಯ್ತು. ನನಗೆ ಗೊತ್ತು ನಿಮಗೆ ಹಸಿವಾಗರ‍್ತದೆ ಅಂತ. ಅದಕ್ಕೇ ಹತ್ತಿರದಲ್ಲೇ ನನ್ನ ಪರಿಚಯದವರ ಕುಟೀರ ಇದೆ. ಆ ಮನೇಲಿ ಹೆಂಗಸರೂ ಇದ್ದಾರೆ. ನಿಮಗೊಂದಿಷ್ಟು ರೊಟ್ಟಿ, ಬೆಣ್ಣೆ, ಕುಡಿಯಕ್ಕೆ ಹಾಲು ತಂದಿದ್ದೀನಿ. ಬನ್ನಿ ಒಳಗೆ ಹೋಗೋಣ.” + +“ಖಂಡಿತ ಹಸಿವಾಗಿದೆ. ಅದೇನನ್ನು ತಂದಿರುವೆಯೋ, ಅದನ್ನು ಇಲ್ಲೇ ಕೊಡು” ಎಂದೆ ನಾನು. + +ಅವನು ಎಲೆಯಲ್ಲಿ ಮುದುರಿ ತಂದಿದ್ದ ಎರಡು ರೊಟ್ಟಿ, ಬೆಣ್ಣೆ ಕೊಟ್ಟ. ನಾನು ಆತುರದಿಂದ ತಿನ್ನತೊಡಗಿದೆ. ಅದು ಆ ಕ್ಷಣದಲ್ಲಿ ಯಾವ ರಾಜಭೋಜನಕ್ಕೂ ಕಡಿಮೆ ಯಾಗಿರಲಿಲ್ಲ. ಹೌದು, ಅದೊಂದು ಸ್ವಭಾವ ನನ್ನಲ್ಲಿದೆ. ಅರಮನೆಯ ಮೃಷ್ಟಾನ್ನವನ್ನು ಚಪ್ಪರಿಸಿಕೊಂಡು ತಿನ್ನುವಂತೆ, ಬಡವನಾದ ಮಿತ್ರ ಕುಚೇಲನ ಮನೆಯ ಅವಲಕ್ಕಿಯನ್ನೂ ಅಷ್ಟೇ ರುಚಿಕರವಾಗಿ ಆಸ್ವಾದಿಸಬಲ್ಲೆ. ವಿದುರನ ಮನೆಯ ಸರಳ ಆಹಾರವೂ ಅಷ್ಟೇ ಸವಿಯಾಗಿರುತ್ತದೆ. ಇಷ್ಟರಿಂದಲೇ ನಾನು ಸ್ಥಿತಪ್ರಜ್ಞ ಎನ್ನುವುದಾದರೆ, ಖಂಡಿತ ನಾನು ಸ್ಥಿತಪ್ರಜ್ಞನೇ! + +ರೊಟ್ಟಿ ತಿಂದು ಹಾಲು ಕುಡಿದ ಮೇಲೆ ಜರಾ ನನ್ನ ಎಡ ಪಾದವನ್ನು ತನ್ನ ತೊಡೆಯ ಮೇಲಿರಿಸಿಕೊಂಡು, ಪಟ್ಟಿಯನ್ನು ಬಿಚ್ಚಿ ನೋಡಿದ. “ಒಡೆಯ, ಗಾಯ ಮಾಯ್ತಾ ಇದೆ. ಇನ್ನು ಎರಡು ಮೂರು ದಿನ ಮದ್ದು ಮಾಡಿದ್ರೆ ಪೂರ್ತಿ ಗುಣ ಆಗುತ್ತೆ” ಎಂದು ಸೊಪ್ಪನ್ನು ಮತ್ತೆ ಅರೆದು ಕಟ್ಟಿದ. ನಾನು ಸದ್ಯದಲ್ಲಿ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು ನಂತರ ಕುಟೀರದೊಳಗೆ ಹೋಗಿ ಮಲಗುವುದಾಗಿ ಹೇಳಿದೆ. ಅವನು ನಿನ್ನೆ ತಂದಿದ್ದ ಮೊಲದ ದೇಹವನ್ನು ಹೆಗಲ ಮೇಲೆ ಹಾಕಿಕೊಂಡು, ಬಿಲ್ಲು ಬಾಣ ಹಿಡಿದು, ಸಂಜೆ ಬೇಗ ಬರುವುದಾಗಿ ಹೇಳಿ ಹೊರಟುಹೋದ. ಮೊಲದ ಮಾಂಸವನ್ನು ನನ್ನೆದುರು ಬೇಯಿಸಿ ತಿನ್ನಲು ಸಂಕೋಚ ಪಟ್ಟುಕೊಂಡು ತನ್ನ ಪರಿಚಿತರ ಮನೆಗೆ ತೆಗೆದುಕೊಂಡು ಹೋದನೆಂದು ನಾನು ಅರ್ಥ ಮಾಡಿಕೊಂಡೆ. + +ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ. ಮುಪ್ಪು ಬಂದು ಹಲವು ವರ್ಷಗಳು ಕಳೆದರೂ, ಅದನ್ನು ಮರೆತು, ಸೋಗಿನ ಸ್ಥಿತಪ್ರಜ್ಞತೆಯಲ್ಲಿ ಕೆಲವು ಕಾಲ ಕಳೆದದ್ದಾಯಿತು. ಹೌದು, ಒಂದು ರೀತಿಯಲ್ಲಿ ನನ್ನ ಇಡೀ ಬದುಕು, ನನಗೇ ಈಗ ಸೋಗಿನ ಪ್ರದರ್ಶನವಿರಬಹುದೇ ಎಂಬ ಸಂದೇಹ ಮೂಡಿಸುತ್ತಿದೆ. + +ನನ್ನ ಬದುಕು ಸಾಗಿ ಬಂದ ದಾರಿಯನ್ನು ಒಮ್ಮೆ ಹಿಂದಿರುಗಿ ನೋಡಬೇಕೆಂದು ಪ್ರೇರಣೆಯಾಯಿತು. ನನ್ನ ಕಥೆ ಎಲ್ಲಿಂದ ಆರಂಭಗೊಂಡಿತು! ನನಗೆ ಬುದ್ಧಿ ತಿಳಿದಾಗಿನ ನೆನಪು ಗೋಕುಲಕ್ಕೇ ಕರೆದೊಯ್ಯುತ್ತದೆ…… + +ಎರಡು + +ನನಗಾಗ ಐದಾರು ವರ್ಷ ವಯಸ್ಸಿರಬೇಕು. ಬಲರಾಮ ಬಹುಶಃ ನನಗಿಂತ ಎರಡು ಮೂರು ವರ್ಷ ದೊಡ್ಡವನಿರಬಹುದು. ಬಲರಾಮ ಬೆಳ್ಳಗಿದ್ದ. ನಾನು ಶಾಮಲ ವರ್ಣದವನು. ಅದಕ್ಕೇ ನನಗೆ ‘ಕೃಷ್ಣ’ ಎಂದು ಹೆಸರಿಟ್ಟರಂತೆ. ಬಲರಾಮ ಹೆಸರಿಗೆ ತಕ್ಕಂತೆ ಬಲವಾಗಿಯೂ ಇದ್ದ, ಗಾತ್ರವಾಗಿಯೂ ಇದ್ದ. + +ಒಂದು ರೀತಿಯಲ್ಲಿ ಗೋಕುಲದ ಹುಡುಗರಿಗೆಲ್ಲ ನಾವೇ ನಾಯಕರು. ಎಷ್ಟೋ ಸಲ ಎಲ್ಲರ ತುಂಟಾಟಗಳಿಗೆ ನಾವೇ ಹೊಣೆಯಾಗಬೇಕಾಗಿತ್ತು. ಅದರಲ್ಲೂ, ಹೆಚ್ಚಾಗಿ ನಾನೇ ಗುರಿಯಾಗುತ್ತಿದ್ದೆ. ಆದರೆ ಅಮ್ಮ ಯಶೋದೆಗೆ ನನ್ನ ಮೇಲೆ ಎಷ್ಟು ಅಕ್ಕರೆ ಯಿತ್ತೆಂದರೆ, ನನ್ನ ಎಲ್ಲ ತಪ್ಪುಗಳನ್ನೂ ಸಾಮಾನ್ಯವಾಗಿ ಕ್ಷಮಿಸಿಬಿಡುತ್ತಿದ್ದಳು. ತೀರ ಕೋಪ ಬಂದಾಗ ಒಂದೆರಡು ಏಟು ಕೊಟ್ಟರೂ, ಮರುಕ್ಷಣದಲ್ಲಿ ತಬ್ಬಿಕೊಂಡು “ನನ್ನನ್ನು ಏಕೆ ಗೋಳಾಡಿಸುತ್ತೀಯೋ ಕೃಷ್ಣ? ನಿನಗೆ ಹೊಡೆದರೆ ನನ್ನ ಕರುಳು ಸುಟ್ಟು ಹೋಗುತ್ತದೆ ಎಂದು ನಿನಗೇಕೋ ಅರ್ಥವಾಗುವುದಿಲ್ಲ? ತುಂಟ ಹುಡುಗರ ಸಹವಾಸ ಮಾಡಬೇಡವೆಂದರೆ ಕೇಳುವುದಿಲ್ಲ” ಎಂದು ಜೋರಾಗಿ ಅತ್ತುಬಿಡುತ್ತಿದ್ದಳು. + +ಅವಳ ಸಂಕಟವನ್ನು ನೋಡಲಾರದೆ ನಾನೂ ಅವಳ ತೊಡೆಯಲ್ಲಿ ಮುಖ ಹುದುಗಿಸಿ, “ಅಳಬೇಡಮ್ಮ, ನಾನು ಇನ್ನು ಮೇಲೆ ಯಾವ ತಪ್ಪನ್ನೂ ಮಾಡುವುದಿಲ್ಲ” ಎಂದು ಬಿಕ್ಕಳಿಸುತ್ತಿದ್ದೆ. + +ಎಂಥ ವಾತ್ಸಲ್ಯ! ಸಾಗರದಷ್ಟು ಸಮೃದ್ಧವಾದ ಯಶೋದೆಯ ವಾತ್ಸಲ್ಯವನ್ನು ನೆನಪು ಮಾಡಿಕೊಂಡರೆ, ಈಗಲೂ ನಾನೊಂದು ಪುಟ್ಟ ಮಗುವಾಗಿ, ಮತ್ತೆ ಅವಳ ಮಡಿಲಲ್ಲಿ ಮಲಗಿರುವಂತೆ ಭ್ರಮೆಯಾಗುತ್ತದೆ. ನಾನು ಅವಳೇ ನನ್ನ ಹೆತ್ತ ತಾಯಿಯೆಂದು ಕೊಂಡಿದ್ದೆ, ಆದರೆ ಅವಳು ನನ್ನ ಸಾಕುತಾಯಿ, ಮಥುರೆಯ ವಸುದೇವ, ದೇವಕಿಯರು ನನ್ನ ಹೆತ್ತ ತಂದೆ ತಾಯಿಗಳೆಂದು ನನಗೆ ಆರೇಳು ವರ್ಷವಾದ ಮೇಲೆ ತಿಳಿಯಿತು. + +ಒಂದು ದಿನ ರಾಜಧಾನಿ ಮಥುರೆಯಿಂದ ವಸುದೇವ, ಅಕ್ರೂರ ಕುದುರೆಗಳ ಮೇಲೆ ಬಂದರು. ವಸುದೇವ ಅಪ್ಪ ನಂದನಿಗೆ ಪ್ರಾಣಮಿತ್ರನಂತೆ. ಇಬ್ಬರೂ ಸಾಂದೀಪನೀ ಮುನಿಗಳ ಆಶ್ರಮದಲ್ಲಿ ನಾಲ್ಕೈ ವರ್ಷ ಜತೆಯಲ್ಲೇ ಕಲಿಯುತ್ತಿದ್ದರಂತೆ. ಅಕ್ರೂರ ಸುಮಾರು ಇಪ್ಪತ್ತೈದು ವರ್ಷದ ತರುಣ. ಅವನು ಅಪ್ಪನಿಗೆ ದಾಯಾದಿ ಎಂದು ಆಮೇಲೆ ಗೊತ್ತಾಯಿತು. + +ಅಮ್ಮನ ತೊಡೆಯ ಮೇಲೆ ನಾನು ಮಲಗಿದ್ದೆ. ಬಲರಾಮ ಹತ್ತಿರದಲ್ಲೇ ಚಿಕ್ಕಮ್ಮ ರೋಹಿಣಿಯ ತೊಡೆಯ ಮೇಲೆ ಮಲಗಿದ್ದ. ಎದುರಿಗೆ ಅಮ್ಮ, ಅಪ್ಪ ನಂದ, ವಸುದೇವ, ಅಕ್ರೂರ ಮಾತನಾಡುತ್ತ ಕುಳಿತಿದ್ದರು. ವಸುದೇವ ಮಥುರೆಯ ರಾಜ ಕಂಸನ ತಂಗಿಯ ಗಂಡನೆಂಬುದೂ ನನಗೆ ಮೊದಲು ಗೊತ್ತಿರಲಿಲ್ಲ. + +“ಇವರ ಬಳಿಗೆ ಹೋಗು ಮಗು” ಎಂದಳು ಅಮ್ಮ ವಸುದೇವನನ್ನು ತೋರಿಸಿ. ಬಾಲ್ಯದಲ್ಲಿ ನನ್ನನ್ನು ಯಾರು ಪ್ರೀತಿಸಿದರೂ, ನಾನು ಅವರ ಬಳಿಗೆ ಹೋಗುತ್ತಿದ್ದೆ. ಈಗಲೂ ಹೋದೆ. ನಾನು ಮೊದಲು ಒಂದೆರಡು ಸಲ ವಸುದೇವನನ್ನು ನಮ್ಮ ಗೋಕುಲದ ಮನೆಯಲ್ಲಿ ಕಂಡಿದ್ದೆ. ನಾನು ಅವನನ್ನು ಯಾವ ಶಬ್ದದಿಂದಲೂ ಸಂಬೋಧಿಸುತ್ತಿರಲಿಲ್ಲ. ವಸುದೇವ ನನ್ನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮುದ್ದು ಮಾಡಿದ. ನನಗೆ ಒಂದಿಷ್ಟು ಮುಜುಗರವಾಯಿತು. “ಇವರು ಯಾರು ಗೊತ್ತೆ?” ಎಂದು ಅಪ್ಪ ನಂದ ಕೇಳಿದ. + +“ನಿನ್ನ ಮಿತ್ರ ಎಂದು ನನಗೆ ಗೊತ್ತು” ಎಂದೆ. + +“ಹೌದು ವಸುದೇವ ನನ್ನ ಪ್ರಾಣಮಿತ್ರ ನಿಜ. ಇವನು ನಿನ್ನ ತಂದೆಯೆಂಬುದೂ ಅಷ್ಟೇ ನಿಜ” ಅಪ್ಪ ಹೇಳಿದ. + +ನಾನು ಆಘಾತಗೊಂಡೆ, “ಏನಿಲ್ಲ, ನೀನು ಸುಳ್ಳು ಹೇಳುತ್ತಿರುವೆ” ಎಂದು ನಾನು ಯಶೋದೆಯ ಬಳಿಗೆ ಧಾವಿಸಿ, “ಅಮ್ಮ, ನೀನೇ ಹೇಳು, ನೀನು ತಾನೇ ನನ್ನ ಅಮ್ಮ” ಎಂದು ಅವಳ ತೊಡೆಯಲ್ಲಿ ಮುಖ ಹುದುಗಿಸಿದೆ. + +ಅಮ್ಮ ಮೊದಲು ಮಾತಾಡಲಿಲ್ಲ. ಆದರೆ ಕಂಬನಿ ಧಾರಾಕಾರವಾಗಿ ಧುಮುಕುತ್ತಿತ್ತು. “ಹೌದು ಕಂದ, ನಾನೇ ನಿನ್ನ ಅಮ್ಮ, ನಿನಗೆ ಹಾಲೂಡಿ ಬೆಳೆಸಿದವಳು, ಆದರೆ ನಿನ್ನ ಹೆತ್ತಮ್ಮ ಈ ವಸುದೇವಣ್ಣನ ಹೆಂಡತಿ ದೇವಕಿ. ಇವರೇ ನಿನ್ನ ತಂದೆ. ನಾವಿಬ್ಬರೂ ನಿನ್ನ ಸಾಕು ತಂದೆ ತಾಯಿ, ಅಷ್ಟೆ” ಎಂದಳು ಅಮ್ಮ. + +“ಹೌದು ಮಗು” ನಂದ ಹೇಳಿದ, “ನಾವಿಬ್ಬರೂ ನಿನ್ನ ಸಾಕು ತಂದೆ ತಾಯಿಗಳು.” + +“ಹಾಗಾದರೆ, ನಾನು ಇಲ್ಲಿಂದ ಹೊರಟುಹೋಗಬೇಕೆ?” ನಾನು ಹತಾಶೆಯಿಂದ ಕೇಳಿದೆ. + +ಅಳುತ್ತಲೇ ಯಶೋದೆ ನನ್ನ ತಲೆಯನ್ನು ತನ್ನ ಎದೆಗೆ ಅಪ್ಪಿಕೊಂಡು, ನನ್ನ ತಲೆಯ ಮೇಲೆ ತನ್ನ ಕಣ್ಣೀರಿನ ಅಭಿಷೇಕ ಮಾಡುತ್ತ ಹೇಳಿದಳು, “ನಿನ್ನನ್ನು ಹೆತ್ತ ತಾಯಿ ದೇವಕಿ. ದೇವತೆಯಂಥ ಹೆಂಗಸು ಮಗು. ನನಗೆ ಹುಟ್ಟಿದ ಮಗು ಸತ್ತುಹೋಗಿ, ಸನ್ನಿ ಹಿಡಿದು ನಾನು ಹುಚ್ಚಿಯಂತಾಗಿದ್ದೆ. ಆಗ, ಇನ್ನೂ ಎದೆಹಾಲು ಕುಡಿಯುತ್ತಿದ್ದ, ಇನ್ನೂ ಒಂದು ವರ್ಷ ತುಂಬಿರದ ತನ್ನ ಕರುಳ ಕುಡಿಯನ್ನು ನನಗೆ ಕಳಿಸಿಕೊಟ್ಟು ನನ್ನನ್ನು ಬದುಕಿಸಿದಳು. ಹೌದು ಕೃಷ್ಣ, ನೀನು ಬಾರದಿದ್ದರೆ ನಾನು ಸತ್ತು ಹೋಗುತ್ತಿದ್ದೆ. ನಿನ್ನನ್ನು ಪ್ರೀತಿಸುವ ಅಧಿಕಾರ ನನಗಿದೆ. ಆದರೆ ನೀನು ಸಂಪೂರ್ಣವಾಗಿ ನನ್ನ ಮಗ ಎಂದು ಹೇಳಿಕೊಂಡರೆ ಅದು ನಿನ್ನ ತಾಯಿಗೆ ದ್ರೋಹ ಮಾಡಿದಂತಾಗುತ್ತದೆ. ಎಂದಿದ್ದರೂ ನೀನು ಆ ಮಹಾತಾಯಿ ದೇವಕಿಯ ಮಗನೇ.” + +ಆ ವಯಸ್ಸಿನ ನನ್ನ ಅರಿವಿಗೆ ಅದೆಲ್ಲ ವಿಚಿತ್ರವಾಗಿ ಕಂಡಿರಬಹುದು. ಯಶೋದೆ ಯನ್ನೇ ತಾಯಿಯೆಂದು ಭಾವಿಸಿಕೊಂಡಿದ್ದ ನನಗೆ, ನನ್ನ ಹೆತ್ತ ತಾಯಿ ಬೇರೆಯವಳು, ವಸುದೇವ ನನ್ನ ತಂದೆ ಎಂದಾಗ ನಂಬಲಾಗದ ಆಘಾತವಂತೂ ಉಂಟಾಯಿತು. ಆದರೆ ದಿನ ಕಳೆದಂತೆ, ವಯಸ್ಸು ಬೆಳೆದಂತೆ ದೇವಕಿ ಎಂಥ ಉದಾತ್ತಳು ಎಂಬ ಅಪರಿಮಿತ ಗೌರವ ಭಾವನೆಯುಂಟಾಯಿತು. ಯಾವ ತಾಯಿ ತಾನೆ ತನ್ನ ವರ್ಷ ತುಂಬದ ಮಗುವನ್ನು, ಗಂಡನ ಗೆಳೆಯನ ಹೆಂಡತಿಗೆ ಕೊಡುತ್ತಾಳೆ? ಅಂಥ ಔದರ‍್ಯ ಬರಬೇಕಾದರೆ ದೇವಕಿ ನಿಜವಾಗಲೂ ದೇವತೆಯೇ ಎಂಬ ಭಾವನೆ ಸ್ಥಿರವಾಯಿತು. + +ಬಾಲ್ಯದ ಭಾವುಕತೆಯನ್ನು ಮೀರಿದ, ವಯಸ್ಸಿಗೆ ಮೀರಿದ ಆಲೋಚನಾ ಶಕ್ತಿ ನನ್ನಲ್ಲಿತ್ತು. ವಾಸ್ತವವನ್ನು ಬಹು ಬೇಗನೆ ಅರ್ಥ ಮಾಡಿಕೊಂಡೆ. ಆದರೂ ನಂದ ಯಶೋದೆಯರ ಪ್ರೀತಿ ವಾತ್ಸಲ್ಯದ ಮುಂದೆ ನಾನು ಕರಗಿ ಹೋಗುತ್ತಿದ್ದೆ. ಅದು ಅಪರಿಮಿತವಾದ ವಾತ್ಸಲ್ಯ! ಹೆತ್ತವರು, ಅಂಥ ಪ್ರೀತಿ ವಾತ್ಸಲ್ಯ ತೋರಿಸುತ್ತಿದ್ದರೇ ಎಂದು ಸಂದೇಹ ಪಡುವಷ್ಟು ಅಗಾಧವಾದ ಅಕ್ಕರೆ! + +ಗೋಕುಲದಲ್ಲಿ ನಾನು ಗೋಪಾಲಕನಂತೆಯೇ ಬೆಳೆದೆ. ಬಲರಾಮ ಸದಾ ನನ್ನ ಜೊತೆಯಲ್ಲಿರುತ್ತಿದ್ದ. ಚಿಕ್ಕಮ್ಮ ರೋಹಿಣಿ ಆಗಾಗ ಬಂದು ತನ್ನ ಮಗನನ್ನು ನೋಡಿ ಕೊಂಡು, ದೇವಕಿ ವಸುದೇವರ ವಾರ್ತೆಯನ್ನು ತಿಳಿಸಿ, ಕೆಲವು ದಿನವಿದ್ದು, ಇಲ್ಲಿಂದ ನನ್ನ ಮತ್ತು ನಂದ ಯಶೋದೆಯರ ವಾರ್ತೆಯನ್ನು ತೆಗೆದುಕೊಂಡು ಹೋಗುತ್ತಿದ್ದಳು. ನನಗೂ ಬಲರಾಮನಿಗೂ ವಸುದೇವನೇ ತಂದೆ, ತಾಯಿಯರು ಮಾತ್ರ ಬೇರೆ. ಅವನು ನನ್ನ ಸ್ವಂತ ಅಣ್ಣ ಎಂದು ಅರ್ಥವಾದ ದಿನದಿಂದ ನಾನು ಅವನನ್ನು ಪ್ರೀತಿ ಗೌರವಗಳಿಂದ ಕಾಣತೊಡಗಿದೆ. + +ಆಟಪಾಟಗಳೆಂದರೆ ನನಗೆಷ್ಟು ಇಷ್ಟವೋ, ಹಾಲು ಬೆಣ್ಣೆಗಳೆಂದರೂ ಅಷ್ಟೇ ಇಷ್ಟ. ನಂದಗೋಪ ಇಡೀ ಗೋಕುಲದ ಗೋಪಾಲಕರ ನಾಯಕನೆಂದ ಮೇಲೆ ಅವನಲ್ಲಿ ಗೋಸಂಪತ್ತಿಗೆ ಕೊರತೆಯೇ? ಮನೆಯಲ್ಲಿ ಹಾಲು ಮೊಸರು ಬೆಣ್ಣೆಗಳ ಸಮೃದ್ಧಿ. ವಾರಕ್ಕೊಮ್ಮೆ ಬೆಣ್ಣೆಯನ್ನು ಪೂರೈಸಲು, ಇತರ ಗೋಪಾಲಕರ ಬಂಡಿಗಳೊಂದಿಗೆ ನಮ್ಮ ಬಂಡಿಯೂ ಮಥುರೆಗೆ ಹೋಗಿ ಬರುವುದಿತ್ತು. ತುಸು ದೂರದ ಕೆಲವು ಪಟ್ಟಣಗಳಿಗೂ ಗೋಕುಲದಿಂದ ಬೆಣ್ಣೆ ಪೂರೈಕೆಯಾಗುತ್ತಿತ್ತು. ಕೆಲವರು ಬೆಣ್ಣೆ ಕಾಯಿಸಿದ ತುಪ್ಪವನ್ನು ಜಾಡಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು. ಒಟ್ಟಾರೆ ಸಾಕಷ್ಟು ಗೋಪಾಲಕರ ಕುಟುಂಬಗಳಿದ್ದ ನಮ್ಮ ಗೋಕುಲ ಸಂಪತ್ಸಮೃದ್ಧಿಯಿಂದ ಕೂಡಿತ್ತು.ವಿಶೇಷವಾಗಿ ತನ್ನ ಮಿತ್ರ ವಸುದೇವ ಮತ್ತು ಅವನ ಕುಟುಂಬಕ್ಕೆಂದು, ಅಪ್ಪ ನಂದ ಪ್ರತಿದಿನ ಅರಮನೆಗೆ ಸಮೃದ್ಧವಾಗಿ ಹಾಲನ್ನು ಕಳಿಸಿಕೊಡುತ್ತಿದ್ದ. ತಿಂಗಳಿಗೊಮ್ಮೆ ಯಾದರೂ ತಾನೇ ಅರಮನೆಗೆ ಹೋಗಿ ಮಿತ್ರನನ್ನು ಮಾತಾಡಿಸಿಕೊಂಡು ಬರುತ್ತಿದ್ದ. ಆದರೆ ನನ್ನನ್ನು ಮಾತ್ರ ಕರೆದುಕೊಂಡು ಹೋಗುತ್ತಿರಲಿಲ್ಲ. ಆಕಸ್ಮಿಕವಾಗಿ ಹೆತ್ತ ತಂದೆ ತಾಯಿಗಳ ಮೋಹದಿಂದ ನಾನು ಅಲ್ಲೇ ಉಳಿದುಬಿಟ್ಟರೆ? ಎಂದು ಯಶೋದೆಗೆ ಅಳುಕಿದ್ದಂತಿತ್ತು. ಅಂಥ ಸಂದಿಗ್ಧ ಸ್ಥಿತಿ ಬರಬಾರದೆಂದು, ಅಮ್ಮ ದೇವಕಿಯೂ ನನ್ನನ್ನು ನೋಡಲು ಒಮ್ಮೆಯೂ ಗೋಕುಲಕ್ಕೆ ಬರಲಿಲ್ಲ. ಆದರೆ ಬಲರಾಮ ಮಾತ್ರ ಒಂದೆರಡು ಸಲ ಹೋಗಿ ಬಂದಿದ್ದ. ಅಂಥ ಒಂದು ದಿನ ನಾನು ಅವನನ್ನು ಕೇಳಿದೆ, “ಅಣ್ಣ, ಅರಮನೆ ಹೇಗಿದೆ? ಬಹಳ ವೈಭವದಿಂದ ಕೂಡಿದೆಯೇ?” + +“ಹೌದು, ವೈಭವದಿಂದ ಕೂಡಿದೆ. ನಮ್ಮ ಸೋದರ ಮಾವ, ಅಂದರೆ, ನಿನ್ನ ತಾಯಿ ದೇವಕಿಯ ಅಣ್ಣ ಕಂಸನೇ ಈಗ ರಾಜನಂತೆ” ಎಂದ ಬಲರಾಮ.“ಅಣ್ಣ, ನನ್ನ ಹೆತ್ತಮ್ಮ ಹೇಗಿದ್ದಾಳೆ? ನಿನ್ನ ಅಮ್ಮ ರೋಹಿಣಿಯಷ್ಟು ಸುಂದರ ವಾಗಿದ್ದಾಳೆಯೆ? ಅಥವಾ ಈ ಅಮ್ಮ ಯಶೋದೆಗಿಂತ ಚೆನ್ನಾಗಿದ್ದಾಳೆಯೆ? ಅಥವಾ ನನ್ನ ಹಾಗೆ ಕಪ್ಪಗಿದ್ದಾಳೆಯೆ?” + +“ಕಪ್ಪಗಿರುವವರೆಲ್ಲ ನಿನ್ನಷ್ಟು ಸುಂದರವಾಗಿರುವುದಿಲ್ಲ ಕೃಷ್ಣ!” ಎಂದು ಅಮ್ಮ ಯಶೋದೆ ಹತ್ತಿರ ಬಂದು ನನ್ನನ್ನು ತಬ್ಬಿಕೊಂಡಳು. ನನಗೆ ಮುಜುಗರವಾಯಿತು. “ಅಮ್ಮ, ನಾನು ಆ ಅಮ್ಮನನ್ನು ನೋಡೇ ಇಲ್ಲವಲ್ಲ, ಅದಕ್ಕೇ, ಅವಳು ಹೇಗಿದ್ದಾಳೆ, ಎಂದು ಕೇಳುತ್ತಿದ್ದೆ” ಎಂದೆ. + +“ನಿನ್ನ ಅಮ್ಮ” ಯಶೋದೆ ಹೇಳಿದಳು, “ನನಗಿಂತ, ಬಲರಾಮನ ತಾಯಿ ರೋಹಿಣಿಗಿಂತ, ಲೋಕದ ಎಲ್ಲ ತಾಯಂದಿರಿಗಿಂತ ಸುಂದರವಾಗಿದ್ದಾಳೆ. ಇಲ್ಲವಾದರೆ ನಿನ್ನಂಥ ಸುಂದರವಾದ ಮಗು ಹುಟ್ಟಲು ಸಾಧ್ಯವೆ?” + +“ಹಾಗಾದರೆ, ಅವಳು ನನ್ನ ಹಾಗೆ ಕಪ್ಪು, ಎಂದಾಯಿತು.” + +“ಇಲ್ಲ, ದೇವಕಿ ಅಪರಂಜಿ ಚಿನ್ನದಂತಿದ್ದಾಳೆ. ಅವಳ ಗುಣ ಆ ಚಿನ್ನಕ್ಕಿಂತ ಶ್ರೇಷ್ಠ. ಇಲ್ಲವಾದರೆ ನನ್ನ ಜೀವವುಳಿಸಲು, ವರ್ಷ ತುಂಬದ ತನ್ನ ಕರುಳ ಕುಡಿಯನ್ನು ನನಗೆ ಕೊಡುತ್ತಿದ್ದಳೆ? ನೀನು ನನ್ನ ಮಗನಲ್ಲ ಎಂಬ ಭಾವನೆ ಬರಬಾರದೆಂದು ಅವಳು ನಿನ್ನನ್ನು ನೋಡಲು ಒಮ್ಮೆಯೂ ಇಲ್ಲಿಗೆ ಬರಲಿಲ್ಲ ಕೃಷ್ಣ, ಅಂಥ ಮಹಾಸಾಧ್ವಿ. + +ದೇವಕಿಯ ವಾತ್ಸಲ್ಯ, ಹರಕೆ ಆಶೀರ್ವಾದವೂ ನಿನಗೆ ದೊರೆಯಬೇಕು. ಈ ಸಲ ಅಪ್ಪನೊಂದಿಗೆ ನೀನೂ ಮಥುರೆಯ ಅರಮನೆಗೆ ಹೋಗಿ ಬಾ ಕಂದ.”“ಬೇಡ ಬಿಡಮ್ಮ, ನಿನ್ನ ಮನಸ್ಸಿಗೆ ನೋವಾಗುತ್ತದೆ.” + + + +“ಇಲ್ಲ ಕೃಷ್ಣ, ಸತ್ಯವನ್ನು ಅಂಗೀಕರಿಸಿದಂತೆ, ಅದನ್ನು ನಾವು ಗೌರವಿಸಲೂ ಬೇಕು. ನೀನು ದೇವಕಿಯ ಮಗನೆಂಬುದು ನನಗೂ ಗೊತ್ತು, ಅವಳಿಗೂ ಗೊತ್ತು, ಈಗ ನಿನಗೂ ಗೊತ್ತು. ನಿನಗೆ ಯಾರು ಬೇಕೆಂದು ಆಯ್ಕೆ ಮಾಡಿಕೊಳ್ಳುವ ಸಂದಿಗ್ಧ ವಂತೂ ಇಲ್ಲ. ನಿನಗೆ ದೇವಕಿ, ನಾನು ತಾಯಿಯಾದಂತೆ, ಈ ಗೋಕುಲದ ಎಲ್ಲ ಹೆಂಗಸರೂ ತಾಯಂದಿರೇ. ಅವರೆಲ್ಲ ನಿನ್ನನ್ನು ಎಷ್ಟು ಪ್ರೀತಿಸುತ್ತಾರೆಂದು ನಿನಗೂ ಗೊತ್ತಲ್ಲ. ಜೊತೆಗೆ ನೀನು ಕೆಚ್ಚಲಿಗೇ ಬಾಯಿ ಹಾಕಿ ಹಾಲು ಕುಡಿಯಲು ಬಿಟ್ಟ ಗಂಗೆ ಹಸು ನಿನ್ನ ತಾಯಿಯಲ್ಲ ಎಂದು ಹೇಗೆ ಹೇಳುವುದು?” + +ಅದು ಮಾತ್ರ ನೂರಕ್ಕೆ ನೂರು ಸತ್ಯ. ಗೋಕುಲದ ಎಲ್ಲ ತಾಯಂದಿರ ವಾತ್ಸಲ್ಯದ ಸೆರಗಿನ ವಾಸನೆ ನನ್ನ ಉಸಿರಿನಲ್ಲಿ ಬೆರೆತುಹೋಗಿದೆ. ಅಷ್ಟೊಂದು ಜನರ ಅಕ್ಕರೆಯ ಒಂದೊAದು ಬಿಂದು ನನ್ನ ವ್ಯಕ್ತಿತ್ವದಲ್ಲಿ ಸೇರಿಕೊಂಡು, ನನ್ನನ್ನು ನಿಜದ ಮನುಷ್ಯನಾಗು ವಂತೆ ಮಾಡಿವೆ ಎಂದು ಈಗ ಅನ್ನಿಸುತ್ತಿದೆ. ನಾನು ಅರಮನೆಯ ಅರೆಬೆಂದ ನಾಗರಿಕರ ನಡುವಿನಿಂದ, ಮುಕ್ತವಾಗಿ ಪ್ರಾಣಿ, ಪ್ರಕೃತಿಗಳೊಂದಿಗೆ ಸಮಾಹಿತವಾಗಿ ತೃಪ್ತಿಯಿಂದ ಬದುಕುವ ಈ ಗೋಕುಲದ ಜನರ ನಡುವೆ ಬಂದು ಬಿದ್ದೆನೆಂದು ಈಗ ಹೆಮ್ಮೆಯೆನಿಸುತ್ತಿದೆ; ಮನಸ್ಸು ಕೃತಜ್ಞತೆಯಿಂದ ಮೃದುವಾಗುತ್ತದೆ. + +ನಾನು ಯಶೋದೆಯ ಮಡಿಲು ಸೇರಿದ ಹೊಸದರಲ್ಲಿ ಇಡೀ ಗೋಕುಲದ ಹೆಂಗಸರೆಲ್ಲ ನಮ್ಮ ಮನೆಗೆ ದಾಳಿಯಿಡುತ್ತಿದ್ದರಂತೆ. “ಎಂಥ ಮುದ್ದು ಮಗು! ಯಶೋದೆ, ಇಂಥ ಮಗುವನ್ನು ಪಾಲಿಸಲು ನೀನು ಎಷ್ಟು ಪುಣ್ಯ ಮಾಡಿದ್ದೆಯೋ!” “ಇಂಥ ಕಂದನನ್ನು ಸಾಕಲು ನಿನಗೆ ಕೊಟ್ಟ ಆ ದೇವಕಿ ತಾಯಿಯದು ಎಷ್ಟು ದೊಡ್ಡ ಮನಸ್ಸಮ್ಮ!” ಇತ್ಯಾದಿ ಬಂದವರೆಲ್ಲ ಉದ್ಗರಿಸುತ್ತಿದ್ದರಂತೆ. ಸದಾ ಒಬ್ಬರಲ್ಲ ಒಬ್ಬರು, ನನ್ನನ್ನು ಎತ್ತಿ ಕೊಂಡೇ ಇರುತ್ತಿದ್ದರಂತೆ! ಕೆಲವು ಸಲ ಅವರ ಕೈಯಿಂದ ಇನ್ನೊಬ್ಬರ ಕೈಗೆ ವರ್ಗಾವಣೆ ಯಾಗುತ್ತ, ಅಮ್ಮ ಯಶೋದೆ, ನಾನು ಯಾರ ಮನೆಯಲ್ಲಿ, ಯಾರ ಮಡಿಲಲ್ಲಿರುವೆನೆಂದು ಹುಡುಕುತ್ತಾ ಎಲ್ಲ ಮನೆಗಳನ್ನೂ ಇಣುಕಿ ನೋಡಬೇಕಾಗಿತ್ತಂತೆ. ಪ್ರತಿದಿನ ಮನೆಗೆ ಎತ್ತಿಕೊಂಡು ಬಂದು, ಅಮ್ಮ ದೃಷ್ಟಿ ತೆಗೆಯುತ್ತಿದ್ದಳಂತೆ. “ನೀನು ಎಷ್ಟು ಬೇಕಾದರೂ ಬೈಯಿ ಯಶೋದೆ, ನಿನ್ನ ಕೃಷ್ಣನ ಮುಖ ನೋಡದೆ ನನಗೆ ದಿನದ ಕೆಲಸ ಮಾಡಲು ಉತ್ಸಾಹವೇ ಇರುವುದಿಲ್ಲ” ಎಂದು ಎಲ್ಲ ಹೆಂಗಸರೂ ಹೇಳುತ್ತಿದ್ದರಂತೆ. + +ಗೋಕುಲದ ಸಮೀಪದ ಗುಡ್ಡದಲ್ಲಿ ನವಿಲುಗಳು ಹಿಂಡು ಹಿಂಡಾಗಿದ್ದವು. ದನಕರುಗಳನ್ನು ಮೇಯಿಸಲು ಹೋದ ಗೋಪಾಲಕರು ನಿತ್ಯ ಅವುಗಳನ್ನು ನೋಡು ತ್ತಿದ್ದರಂತೆ. ಅವುಗಳ ದೇಹದಿಂದ ಬಿದ್ದ ಸುಂದರವಾದ ಕಣ್ಣುಳ್ಳ ಗರಿಗಳನ್ನು ತಂದು ಯಶೋದೆಗೆ ಕೊಡುತ್ತಿದ್ದರು. ಯಶೋದೆ ನನ್ನ ಉದ್ದ ಕೂದಲನ್ನು ನಯವಾಗಿ ಬಾಚಿ, ಹಣೆಯಿಂದ ಬರುವಂತೆ, ಕೂದಲು ಕೆದರದಂತೆ ಒಂದು ಪಟ್ಟಿ ಕಟ್ಟುತ್ತಿದ್ದಳು. ಆ ಪಟ್ಟಿಗೆ ಕಣ್ಣಿನ ಭಾಗವಿರುವಂತೆ ನವಿಲು ಗರಿಯನ್ನು ಸಿಕ್ಕಿಸುತ್ತಿದ್ದಳು. ಅದೇ ನನ್ನ ಪರಿಚಿತ ಅಲಂಕಾರವಾಯಿತು. ನಾನು ಗೋಕುಲವನ್ನು ಬಿಡುವವರೆಗೆ ನವಿಲುಗರಿಯ ಅಲಂಕಾರ ನನ್ನ ತಲೆಯಲ್ಲಿತ್ತು. + +ಹಾಲು ಮೊಸರು ಬೆಣ್ಣೆಗಳೆಂದರೆ ಬಾಲ್ಯದಿಂದಲೂ ನನಗೆ ಹೆಚ್ಚಿನ ಪ್ರೀತಿಯಿತ್ತಂತೆ. ಗೋಕುಲದ ಎಲ್ಲರ ಮನೆಯಲ್ಲೂ ಸಮೃದ್ಧವಾಗಿ ಹಸುಕರುಗಳಿದ್ದವು. ಎಲ್ಲರ ಮನೆಯಲ್ಲೂ ಹಾಲು ಮೊಸರು ಬೆಣ್ಣೆಗಳಿಗೆ ಕೊರತೆಯಿಲ್ಲ. ಜೊತೆಗೆ ನನ್ನ ಮೇಲಿನ ಪ್ರೀತಿಯಿಂದ ಗೋಕುಲದ ಹೆಂಗಸರು ಹಿಡಿ ಹಿಡಿ ಬೆಣ್ಣೆ ತಿನ್ನಿಸುತ್ತಿದ್ದರಂತೆ. ನನಗೆ ಆರೋಗ್ಯ ಕೆಟ್ಟರೇನು ಗತಿಯೆಂದು ಅಮ್ಮ ಯಶೋದೆ ಆತಂಕ ಪಡುವುದು ಸಹಜವಾಗಿತ್ತು. ಆದರೆ ಅಷ್ಟನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಪ್ರಕೃತಿದತ್ತವಾಗಿ ನನಗಿತ್ತು. ಗೋಕುಲದ ತಾಯಂದಿರ ವಾತ್ಸಲ್ಯ, ಅವರು ತಿನ್ನಿಸಿದ ಬೆಣ್ಣೆಯ ಶಕ್ತಿ, ಕುಡಿದ ಹಾಲಿನ ಶಕ್ತಿ ಮುಂದಿನ ನನ್ನ ದೇಹ ಸಾಮರ್ಥ್ಯಕ್ಕೆ ಮೂಲವಾಯಿತೆಂದು ಧರ‍್ಯವಾಗಿ ಹೇಳಬಲ್ಲೆ. + +ನನಗೆ ನಾಲ್ಕು ವರ್ಷಗಳಾಗುವಷ್ಟರಲ್ಲಿ ನನ್ನದೇ ವಯಸ್ಸಿನ ಗೋಕುಲದ ಮಕ್ಕಳ ಸ್ನೇಹವೂ ಆಯಿತು. ಸಂಜೆಯ ವೇಳೆ ಎಲ್ಲ ತಾಯಂದಿರೂ ತಮ್ಮ ಮಕ್ಕಳನ್ನು ಎತ್ತಿ ಕೊಂಡು ನಮ್ಮ ಮನೆಗೆ ಬಂದುಬಿಡುತ್ತಿದ್ದರು. ಅಮ್ಮನೊಂದಿಗೆ ಅವರೆಲ್ಲ ವಿನೋದದಿಂದ ಮಾತನಾಡುತ್ತಿದ್ದರು. ನಾನು ಅವರ ಮಕ್ಕಳೊಂದಿಗೆ ಆಟವಾಡುತ್ತಿದ್ದೆ. ಹಸುಕರುಗಳೂ ನಮ್ಮನ್ನು ಪ್ರೀತಿಸುತ್ತಿದ್ದವು. ಕರುಗಳು ನನ್ನ ಬಳಿಗೆ ಬಂದು ತಮ್ಮ ನಾಲಿಗೆಯಿಂದ ನನ್ನನ್ನು ನೆಕ್ಕುತ್ತಿದ್ದವು. ನಾನು ಬೇರೆ ಮಕ್ಕಳಂತೆ ಹೆದರದೆ ಹಸುಗಳ ಬಳಿಗೆ ಹೋಗಿಬರುತ್ತಿದ್ದೆ. ಅವು ನನ್ನನ್ನು ತಮ್ಮ ಒರಟು ನಾಲಿಗೆಯಿಂದ ನೆಕ್ಕುತ್ತಿದ್ದವು. ನಾನು ಅವುಗಳ ಕೆಚ್ಚಲಿಗೇ ಬಾಯಿ ಹಾಕಿ ಹಾಲು ಕುಡಿಯುತ್ತಿದ್ದೆ. ಆದರೆ ಹಾಗೆ ಹೆಚ್ಚು ಹಾಲು ಕುಡಿದದ್ದು ಗಂಗೆ ಹಸುವಿನಲ್ಲಿ. ಅದು ಅತ್ಯಂತ ಸಾಧು ಮತ್ತು ವಾತ್ಸಲ್ಯಮಯಿ ಹಸು! ಹಸು ಒದ್ದರೆ ಏನು ಗತಿ, ಎಂದು ಅಮ್ಮ ಹೆದರುತ್ತಿದ್ದಳು. ಆದರೆ ಅದು ಒರಟು ಹಸುವಿಗಿಂತ ಹೆಚ್ಚಾಗಿ ಅಕ್ಕರೆಯ ತಾಯಿಯಾಗಿತ್ತು. ಆ ವಯಸ್ಸಿ ನಲ್ಲಿ ನಾನು ಎಷ್ಟೊಂದು ಹಸುಗಳ ಹಾಲು ಕುಡಿದಿರಬಹುದು! ಅಷ್ಟು ಹಸುಗಳ ಅಕ್ಕರೆಯೂ ಇಲ್ಲಿಯವರೆಗೆ ಸಂಜೀವಿನಿಯಂತೆ ನನ್ನನ್ನು ಕಾಪಾಡಿದೆ. + +ನಾನು ಎರಡು ವರ್ಷವಾಗುತ್ತಿದ್ದಂತೆಯೇ ಅಚ್ಚುಕಟ್ಟಾಗಿ ಮಾತಾಡಲು ಆರಂಭಿಸಿದೆ ನಂತೆ. ಬೇರೆ ನನ್ನ ವಯಸ್ಸಿನ ಮಕ್ಕಳು ಇನ್ನೂ ಶಬ್ದಗಳನ್ನು ತೊದಲುತ್ತಿರುವಾಗ ನಾನು ಅರಳು ಹುರಿದಂತೆ ಮಾತಾಡುತ್ತಿದ್ದೆನಂತೆ. ದಾರಿಯಲ್ಲಿ ಹೋಗುವವರನ್ನೆಲ್ಲ ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅಕ್ಕ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅಣ್ಣ ಎಂದು ಬಾಯಿ ತುಂಬ ಕರೆದರೆ, ಎಲ್ಲ ಒಂದು ಕ್ಷಣ ನಿಂತು, ನನ್ನನ್ನು ಎತ್ತಿಕೊಂಡು ಮುದ್ದಿಸಿ ಹೋಗುತ್ತಿದ್ದರಂತೆ. ‘ನಂದ, ನಮ್ಮ ಗೋಕುಲದ ರಾಜನೆಂದರೆ ನಿನ್ನ ಮಗ ಕೃಷ್ಣನೇ! ಯಾರ ಬಾಯಲ್ಲಿ ನೋಡಿದರೂ ಅವನ ಹೆಸರೇ. ಎಲ್ಲರೂ ಏನಾದರೂ ನೆಪ ಮಾಡಿಕೊಂಡು ಅವನನ್ನು ನೋಡಿ ಹೋಗಲು ನಿನ್ನ ಮನೆಯ ಬಳಿಗೆ ಬರುತ್ತಾರೆ’ ಎಂದು ಅಪ್ಪನ ಆಪ್ತರು ಹೇಳುತ್ತಿದ್ದರಂತೆ. + +ಮೊದಮೊದಲು ಸ್ವಲ್ಪ ಹೊತ್ತು ನಾನು ಕಣ್ಣಿಗೆ ಮರೆಯಾದರೂ ಆತಂಕಪಡುತ್ತಿದ್ದ ಅಮ್ಮ, ಆಮೇಲೆ ನಿರಾಳವಾದಳು. ಗೋಕುಲದಲ್ಲಿ ಎಲ್ಲೋ ಒಂದು ಕಡೆ ಯಾರದೋ ಮನೆಯಲ್ಲಿ, ಯಾವುದೋ ತಾಯಿಯ ಮಡಿಲಿನಲ್ಲಿ ತನ್ನ ಮಗ ಹಾಯಾಗಿರುತ್ತಾನೆ, ಎಂದು ಅವಳು ನಿಶ್ಚಿಂತಳಾದಳು. + +ಸ್ವಲ್ಪ ಬೆಳೆದ ಮೇಲೆ ನನ್ನ ವಯಸ್ಸಿನ ಹುಡುಗರ ಜೊತೆ ಆಟದಲ್ಲಿ ಜಗತ್ತೇ ಮರೆತು ಹೋಗುತ್ತಿತ್ತು. ಬೀದಿಯ ಮಣ್ಣು, ಕಲ್ಲು, ಎಲ್ಲ ನಮ್ಮ ಆಟದ ವಸ್ತುಗಳೇ. ಮಗುವಿನ ಮುಗ್ಧ ಮನಸ್ಸು ಪ್ರಕೃತಿಯ ಎಲ್ಲದರೊಂದಿಗೂ ತಾರತಮ್ಯವಿಲ್ಲದೆ ಬೆರೆಯುತ್ತದೆ. ವಯಸ್ಸು ಬೆಳೆದಂತೆ ಹಿರಿಯರು ಎಲ್ಲ ತಾರತಮ್ಯಗಳನ್ನು ಮಕ್ಕಳಿಗೆ ಕಲಿಸುತ್ತಾರಲ್ಲವೆ? ಆ ಎಳೆಯ ವಯಸ್ಸಿನಲ್ಲಿ ತಿನ್ನಲು ಮಣ್ಣೂ ರುಚಿಯಾಗಿತ್ತು ಅಥವಾ ರುಚಿಗಳನ್ನು ವರ್ಗೀಕರಿಸಿ ಆಸ್ವಾದಿಸುವ ಜ್ಞಾನ ಆಗ ಇರಲಿಲ್ಲವೆಂದೂ ಹೇಳ ಬಹುದು. ಹಾಗೆ ಮಣ್ಣು ತಿಂದ ಒಂದು ದಿನ, ಅಮ್ಮ ನನಗೆ ಬಲವಾಗಿಯೇ ಬಡಿದು, ಯಥಾಪ್ರಕಾರ ಅಳುತ್ತಾ ನೆಲದ ಮೇಲೆ ಮಲಗಿಬಿಟ್ಟಳಂತೆ. ಯಥಾಪ್ರಕಾರ ನಾನು ಅವಳ ಮೇಲೆ ಬಿದ್ದು, ಇನ್ನೆಂದೂ ಮಣ್ಣು ತಿನ್ನುವುದಿಲ್ಲವೆಂದು ಗೋಳಾಡಿದೆನಂತೆ. ಅಮ್ಮ ಸಮಾಧಾನಗೊಂಡು, ನನಗೆ ಹೊಡೆದೆನಲ್ಲಾ ಎಂದು ಪಶ್ಚಾತ್ತಾಪ ಪಟ್ಟು ನನ್ನನ್ನು ಸಂತೈಸಿದಳಂತೆ. + +ಐದಾರು ವರ್ಷ ವಯಸ್ಸಾದ ಮೇಲಿನ ನೆನಪುಗಳು ಸಾಕಷ್ಟು ಪ್ರಖರವಾಗಿಯೇ ಇದ್ದರೂ, ಅದಕ್ಕೆ ಹಿಂದಿನ ಪ್ರಸಂಗಗಳು, ನಂತರ ನಾನು ಬೇರೆಯವರಿಂದ ಕೇಳಿ ತಿಳಿದದ್ದು. ಮಣ್ಣು ತಿಂದು ಅಮ್ಮನಿಂದ ಏಟು ತಿಂದಂತೆ, ಬೆಣ್ಣೆ ತಿಂದೂ ಏಟು ತಿಂದಿದ್ದೇನೆ. ಗೋಕುಲದಲ್ಲಿ ಹಾಲು ಮೊಸರು ಬೆಣ್ಣೆಗಳಿಗೆ ಕೊರತೆಯಂತೂ ಇರಲಿಲ್ಲ. ಯಾರ ಮನೆಯಲ್ಲೂ ಮಕ್ಕಳಿಗೆ ಕೊರತೆ ಮಾಡಿ ಬೆಣ್ಣೆಯನ್ನು ಮಾರಾಟ ಮಾಡುತ್ತಿರಲಿಲ್ಲ. ಎಲ್ಲ ಮಕ್ಕಳೂ ತಮ್ಮ ತಮ್ಮ ಮನೆಗಳಲ್ಲಿ ಸಮೃದ್ಧವಾಗಿ ಬೆಣ್ಣೆ ತಿನ್ನುತ್ತಿದ್ದರು. ಆದರೆ ಆ ಅಮಾಯಕ ಮನಸ್ಸಿನ ವಯಸ್ಸಿನಲ್ಲಿ ಕದ್ದು ತಿನ್ನುವ ಚಾಪಲ್ಯವುಂಟಾಗಿರಬೇಕು ಅಥವಾ ಆ ವಯಸ್ಸಿನ ಮಕ್ಕಳ ಹುಚ್ಚು ಸಾಹಸವಾಗಿರಬೇಕು. ನಮ್ಮ ಮನೆಯಲ್ಲಿ ಬೆಣ್ಣೆ ಕದ್ದು ತಿಂದಿದ್ದರೆ ಅಮ್ಮ ಕ್ಷಮಿಸಿಬಿಡುತ್ತಿದ್ದಳೇನೋ! ಆದರೆ ಗೆಳೆಯರನ್ನು ಕಟ್ಟಿಕೊಂಡು ಬೇರೆಯವರ ಮನೆಯಲ್ಲಿ ಬೆಣ್ಣೆ ಕದ್ದು ತಿಂದು, ಆ ಮನೆಯ ಗೋಪಮ್ಮ, ಅಮ್ಮನಿಗೆ ದೂರು ಹೇಳಿದಾಗ ಮಾತ್ರ ಅಮ್ಮನ ಕೋಪ ಮಿತಿಮೀರಿತು. ತುಂಟತನವನ್ನು ಅವಳು ಸಹಿಸುತ್ತಿದ್ದಳು, ಆದರೆ ಬೇರೆಯವರು ಬಂದು ದೂರು ಹೇಳುವಂಥ ತಪ್ಪು ನಡವಳಿಕೆ ಯನ್ನು ಅವಳಿಂದ ಸಹಿಸುವುದು ಸಾಧ್ಯವಾಗಲಿಲ್ಲ. ಬಲವಾಗಿಯೇ ಬಾರಿಸಿಬಿಟ್ಟಳು. ಮೈಮೇಲೆ ಬಾಸುಂಡೆ ಬರುವಷ್ಟು ಬಲವಾದ ಹೊಡೆತಗಳು! ಅಪ್ಪ ನಂದ ಬಂದು ತಡೆಯದಿದ್ದರೆ ಆ ಹೊತ್ತು ಇನ್ನಷ್ಟು ಹೊಡೆತಗಳು ಬೀಳುತ್ತಿದ್ದವು. ಅಪ್ಪ ಅಡ್ಡ ಬಂದು ಬಿಡಿಸಿ ನನ್ನನ್ನು ಎತ್ತಿಕೊಂಡು “ಸಾಕು ನಿಲ್ಲಿಸು, ಮಗುವನ್ನು ಕೊಂದುಬಿಡುತ್ತೀಯೇನು?” ಎಂದು ಗದರಿದ. + +“ಇಲ್ಲ, ನಾನು ಇವನನ್ನು ಕೊಲ್ಲುವುದಿಲ್ಲ, ನಾನೇ ಕೊಂದುಕೊಳ್ಳುತ್ತೇನೆ.” + +“ಕೃಷ್ಣ ಅಂಥ ಮಹಾಪರಾಧ ಏನು ಮಾಡಿದ?” + +“ಕಂಡವರ ಮನೆಯಲ್ಲಿ ಬೆಣ್ಣೆ ಕದ್ದು ತಿನ್ನಬೇಕೆ? ನಮ್ಮ ಮನೆಯಲ್ಲಿ ದರಿದ್ರ ಬಂದಿದೆಯೆ? ಆ ಚಂಪ ಬಂದು ದೂರು ಹೇಳಿದಾಗ ನನಗೆ ಕುತ್ತಿಗೆ ಕೊಯ್ದುಕೊಳ್ಳು ವಂತಾಯಿತು. ಈ ವಯಸ್ಸಿಗೇ ಬೆಣ್ಣೆ ಕದ್ದವನು ನಾಳೆ ದೊಡ್ಡ ಕಳ್ಳನಾಗುತ್ತಾನೆ, ಅಷ್ಟೆ.” + +“ಹಾಗಿದ್ದರೆ, ನಾನು ಈಗ ಚೋರಾಗ್ರೇಸರನಾಗಬೇಕಿತ್ತು. ಏಕೆಂದರೆ ನಾನೂ ಬಾಲ್ಯದಲ್ಲಿ ತಿನಿಸುಗಳನ್ನು ಕದಿಯುವುದರಲ್ಲಿ ನಿಸ್ಸೀಮನಾಗಿದ್ದೆನಂತೆ” ಎಂದು ಅಪ್ಪ ನಂದ ಜೋರಾಗಿ ನಕ್ಕುಬಿಟ್ಟ. ಅಮ್ಮನೂ ನಕ್ಕುಬಿಟ್ಟಳು. ಏನೇ ಆದರೂ ತನ್ನ ಮಗನನ್ನು ಯಾರಾದರೂ ಕೆಟ್ಟವನೆಂದು ಕರೆದರೆ ಮಾತ್ರ, ಅವಳಿಗೆ ಸಹಿಸುವುದು ಬಹಳ ಕಷ್ಟವಾಗುತ್ತಿತ್ತು. + +ಒಂದು ಸಲ ಇನ್ನೊಬ್ಬಳು ಗೋಪಿ, “ಯಶೋದ, ನೋಡು ನಿನ್ನ ಮಗ ಕೃಷ್ಣ ತನ್ನ ತುಂಟ ಗೆಳೆಯರೊಂದಿಗೆ ಯಾರೂ ಇಲ್ಲದಾಗ ಮನೆಗೆ ನುಗ್ಗಿ, ನೆಲುವಿನ ಮೇಲಿರಿಸಿದ್ದ ಬೆಣ್ಣೆಯ ಮಡಕೆಯನ್ನು ಒಡೆದು, ಒಂದು ದೊಡ್ಡ ಮುದ್ದೆಯಷ್ಟು ಬೆಣ್ಣೆಯನ್ನು ತಿಂದಿದ್ದಾನೆ” ಎಂದು ದೂರಿದಳು. + +ಅಮ್ಮನಿಗೆ ವಿಪರೀತ ಬೇಸರವಾಗಿ, ಒಂದು ದೊಡ್ಡ ಮಡಕೆಯಲ್ಲಿ ಬೆಣ್ಣೆಯನ್ನು ತೆಗೆದುಕೊಂಡು ಹೋಗಿ ಅವಳಿಗೆ ಕೊಟ್ಟು ಬಂದಳು. ಅವಳಿಗೆ ಮುಖಕ್ಕೆ ಹೊಡೆದಂತಾಗಿ, ಅದೇ ಬೆಣ್ಣೆಯ ಮಡಕೆಯನ್ನು ಹಿಂದಿರುಗಿಸಲು ಹೊತ್ತು ತಂದಳು. ಕ್ಷಮೆ ಕೇಳಿದಳು. ಆದರೆ ಅಮ್ಮ “ನಾನು ಒಮ್ಮೆ ಕೊಟ್ಟದ್ದನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ನನ್ನ ಮಗ ಮಾಡಿದ ತಪ್ಪಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ” ಎಂದುಬಿಟ್ಟಳು. + +ಆ ತಾಯಿಯ ಸ್ವಾಭಿಮಾನ ನನ್ನ ಮೇಲೆ ಚಿಕ್ಕಂದಿನಿಂದಲೇ ಪ್ರಭಾವ ಬೀರುವುದು ಸಹಜವಾಗಿತ್ತು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಂದ ಯಶೋದೆಯರ ಅಕ್ಕರೆಯ ಅಮೃತವುಂಡು ನಾನು ಕೆಟ್ಟವನಾಗಿ ಬೆಳೆಯಲು ಸಾಧ್ಯವೇ? ಆಮೇಲೆ ನಾನು ಬೆಣ್ಣೆ ಕದಿಯುವ ಧರ‍್ಯ ತೋರಲಿಲ್ಲ. ಅಮ್ಮನ ಹೊಡೆತ, ಅವಳ ದುಃಖ, ಎರಡನ್ನೂ ಸಹಿಸುವುದು ನನ್ನಿಂದಾಗುತ್ತಿರಲಿಲ್ಲ. ಕೆಲವು ಸಲ ನಾನಿಲ್ಲದಾಗ ನನ್ನ ಗೆಳೆಯರು ಮಾಡಿದ ತುಂಟಾಟಕ್ಕೆ ನನ್ನನ್ನೇ ಹೊಣೆ ಮಾಡಿ ಆಕ್ಷೇಪಿಸುವುದೂ ನಡೆಯಿತು.ಒಂದು ವಿಚಿತ್ರವೆಂದರೆ, ನಾನು ಗೆಳೆಯರೊಂದಿಗೆ ಬೆಣ್ಣೆ ಕದ್ದೆನೆಂದು ದೂರು ಹೇಳಿದವರೇ, ನನ್ನನ್ನು ಕಂಡಾಗ ಎತ್ತಿ ಮುದ್ದಿಸಿ ಬೆಣ್ಣೆ, ಸಿಹಿ ತಿನಿಸುಗಳನ್ನು ಕೊಡುತ್ತಿದ್ದರು. “ನನಗೇನೂ ಬೇಡ, ನೀವು ಅಮ್ಮನಿಗೆ ದೂರು ಹೇಳಿದರೆ, ಅಮ್ಮ ನನಗೆ ಹೊಡೆಯುತ್ತಾಳೆ” ಎಂದು ಅರೆಮನಸ್ಸಿನಿಂದ ಹೇಳುತ್ತಿದ್ದೆ. + +“ನಾನು ಖಂಡಿತ ನಿನ್ನ ಅಮ್ಮನಿಗೆ ಹೇಳುವುದಿಲ್ಲ” ಎಂದು ಅವಳು ಆಶ್ವಾಸನೆ ನೀಡಿದ ಮೇಲೆ ನಾನು ತಿನ್ನುತ್ತಿದ್ದೆ. ಈಗಲೂ ನನಗೆ, ಗೋಕುಲದಲ್ಲಿ ಎಷ್ಟು ಮನೆಗಳಿದ್ದವು, ಯಾವ ಮನೆಯ ಗೋಪಮ್ಮ ಯಾವ ತಿನಿಸನ್ನು ರುಚಿಯಾಗಿ ಮಾಡುತ್ತಿದ್ದಳು, ಎಂದು ಚೆನ್ನಾಗಿ ನೆನಪಿದೆ. ಅವರೆಲ್ಲರ ಪ್ರೀತಿ ವಾತ್ಸಲ್ಯಗಳ ನೂರಾರು, ಸಾವಿರಾರು ಪ್ರಸಂಗಗಳು ನೆನಪಾಗುತ್ತವೆ. ಈಗಲೂ ಅವರೆಲ್ಲರ ಪ್ರೀತಿಯ ಋಣವನ್ನು ಹೊತ್ತು ನಾನು ಬೆಳೆದೆನೆಂದು ವಿನೀತನಾಗುತ್ತೇನೆ. ಮನುಷ್ಯನ ಬದುಕೇ ಸಾವಿರಾರು ಋಣಗಳಿಂದ ಪಾಲನೆ ಪೋಷಣೆ ಪಡೆಯುತ್ತದೆ. ನಾನೇ, ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ, ಎಂದು ಅಹಂಕಾರದಿಂದ ಮೆರೆಯುವ ಉದ್ಧಟ ಅಹಂಕಾರಿ, ಕ್ಷಣ ಹೊತ್ತು ತನ್ನ ಬದುಕಿನ ಭೂತಕಾಲವನ್ನು, ವರ್ತಮಾನವನ್ನು ತೆರೆದ ಮನಸ್ಸಿನಿಂದ ಅವಲೋಕಿಸಿದರೆ ತಾನು ಏನೂ ಅಲ್ಲ, ತನ್ನ ಅಹಂಕಾರಕ್ಕೆ ಅರ್ಥವೇ ಇಲ್ಲವೆಂದು ಅರಿವಾಗುತ್ತದೆ. ಸಹ ಮಾನವರ ಋಣ ಮಾತ್ರವಲ್ಲದೆ ಭೂಮಿ, ಗಾಳಿ, ಬೆಳಕು, ನೀರು, ದವಸ ಧಾನ್ಯ, ಹಣ್ಣು ಹಂಪಲು, ಪ್ರಾಣಿ ಪಕ್ಷಿಗಳ ಋಣಭಾರವೂ ನಮ್ಮ ಬೆನ್ನ ಮೇಲಿದೆ ಎಂಬ ಅರಿವಿರದ ಮನುಷ್ಯ ನನ್ನ ದೃಷ್ಟಿಯಲ್ಲಿ ಮನುಷ್ಯನೇ ಅಲ್ಲ. + + + +ಗೋಕುಲದ ನನ್ನ ಜೀವನ ವ್ಯಾಕುಲರಹಿತವಾಗಿತ್ತೆಂದೇ ಹೇಳಬಹುದು. ನನ್ನ ಭಾವಕೋಶ ಬೆಳೆಯಲು, ಬುದ್ಧಿ ವಿಕಸನವಾಗಲು, ದೇಹದ ಕ್ಷಮತೆ ಹೆಚ್ಚಾಗಲು ಗೋಕುಲ ಕಾರಣವಾಯಿತು. ಆ ನೆನಪುಗಳನ್ನು ಒಂದೊಂದಾಗಿ ಹೆಕ್ಕಿ ತೆಗೆದು, ಕೃತಜ್ಞತೆ ಯಿಂದ ಸ್ಮರಿಸಬೇಕೆಂದು ಪ್ರೇರಣೆಯಾಗುತ್ತದೆ. ಹೌದು, ಭೂತಕಾಲವನ್ನು ಮರೆತವನಿಗೆ ವರ್ತಮಾನ ಅರ್ಥವಾಗುವುದಿಲ್ಲ, ಭವಿಷ್ಯ ಕೈಗೆಟುಕುವುದಿಲ್ಲ. ಅಂಥ ಜೀವನ ಬೇರಿಲ್ಲದ ಮರದಂತೆ, ಅಲ್ಲವೆ? ಅದರಲ್ಲಿ ಮರದ ಲಕ್ಷಣವಿರುತ್ತದೆ. ಆದರೆ ಅದರಲ್ಲಿ ಹೂ ಅರಳುವುದಿಲ್ಲ, ಹಣ್ಣುಗಳು ತೂಗುವುದಿಲ್ಲ. ಹಸಿರಿನಿಂದ ನಳನಳಿಸಿ, ಆಸರೆ ನೀಡಲು ಪಕ್ಷಿಗಳನ್ನು ಕರೆಯುವುದಿಲ್ಲ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_144.txt b/Kenda Sampige/article_144.txt new file mode 100644 index 0000000000000000000000000000000000000000..0bfdd4a2868d8909f451b111f327358c76898119 --- /dev/null +++ b/Kenda Sampige/article_144.txt @@ -0,0 +1,19 @@ +ಕನ್ನಡ ಕಥಾಲೋಕ ಅನೇಕ ಮಹಾನ್ ಕಥೆಗಾರರ ಕಥೆಗಳ ಕೊಡುಗೆಯಿಂದ ಶ್ರೀಮಂತವಾಗಿದೆ. ಮಾಸ್ತಿಯವರು ಹುಟ್ಟುಹಾಕಿದ ಸಣ್ಣಕಥೆಗಳ ಸಂಸ್ಕೃತಿ ಅಮೋಘವಾಗಿ ಮುಂದುವರಿದು, ಚಿರಂತನವಾಗಿ ಉಳಿಯುವ ಭರವಸೆ ನೀಡಿದೆ. ಇಂದಿನ ತಲೆಮಾರಿನ ಅನೇಕ ಯುವ ಬರಹಗಾರರೊಳಗೆ ಗಟ್ಟಿ ಕತೆಗಾರನನ್ನು ಕಾಣಬಹುದು. ವಿಶಿಷ್ಟವಾದ ಸಣ್ಣ ಕತೆಗಳ ಬಗ್ಗೆ ಭರವಸೆಯನ್ನು ಹೊಂದಬಹುದು. ಇತ್ತೀಚಿನ ಅಂತಹ ಗಟ್ಟಿ ಕತೆಗಾರರ ಸಾಲಿನಲ್ಲಿ ಸದಾಶಿವ ಸೊರಟೂರರ ಹೆಸರನ್ನು ಖಂಡಿತಾ ಸೇರಿಸಬಹುದು. + +(ಸದಾಶಿವ ಸೊರಟೂರು) + +ಸಾಕಷ್ಟು ಬಿಡಿ ಲೇಖನಗಳನ್ನು ಬರೆದಿರುವ ಸದಾಶಿವ್ ಸೊರಟೂರು ಅವರು ಮೊದಲ ಬಾರಿಗೆ ಕಥೆಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ‘ಅರ್ಧ ಬಿಸಿಲು ಅರ್ಧ ಮಳೆ’ ಎನ್ನುವ ಆಕರ್ಷಕ ಶೀರ್ಷಿಕೆಯಡಿಯಲ್ಲಿ ಬಂದಿರುವ ಈ ಕಥೆ ಪುಸ್ತಕವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಕಥೆಯೂ ಭಿನ್ನ, ಪ್ರತಿಯೊಂದೂ ಚೆನ್ನ. ಮೊದಲ ಕಥಾಸಂಕಲನ ಎನ್ನುವ ಯಾವ ವಿನಾಯಿತಿಯನ್ನೂ ಕೊಡದೆ ಓದುಗರು ಮೆಚ್ಚಬಹುದು. + +‘ಈ ಜಗತ್ತಿನಲ್ಲಿ ಯಾರ ಉಸಾಬರಿ ಯಾರಿಗೂ ಇರುವುದಿಲ್ಲ..’ ಎನ್ನುವ ಸಾಲೊಂದು ‘ನೀಲಿ’ ಕಥೆಯಲ್ಲಿ ಬರುತ್ತದೆ. ನೀಲಿ ಎಂಬ ಪಾತ್ರದ ಮೂಲಕ ಜಗತ್ತಿನ ಪ್ರತಿಯೊಬ್ಬರು ಯಾವ ಉಸಾಬರಿಗೆ ಹೋರಾಡುತ್ತಾರೆ ಎಂಬುದನ್ನು ವಿಭಿನ್ನವಾದ ಕಥಾತಂತ್ರದ ಮೂಲಕ ಹೇಳಿದ್ದಾರೆ. ಬಯಲು ಕಥೆಯಲ್ಲಿ ಹೆಣ್ಣು ಮೀರುವ ಗೆರೆ, ವಿದಾಯ ಕಥೆಯಲ್ಲಿ ಗೆರೆಯೊಳಗೇ ಉಳಿದು ಹೋಗುವ ಹೆಣ್ಣಿನ ಪರಿ, ನೀಲಿ ಕಥೆಯಲ್ಲಿ ಅದೇ ಗೆರೆ ಅವಳನ್ನು ಆಪೋಶನ ತೆಗೆದುಕೊಂಡ ರೀತಿ, ‘ಕನಸಿನಲ್ಲಿ ಸುರಿದ ಕೆಂಪು ಮಳೆ’ ಕಥೆಯಲ್ಲಿ ಪೋರಿಯೊಬ್ಬಳು ಆ ಗೆರೆಯ ಮುಂದೆ ನಿಂತದ್ದು ಅದು ಹಂಬಲವೊ, ಪರಿತಾಪವೊ ಎಂಬುದು ಅರಿವಾಗದೆ ಉಳಿದು ಹೋಗುವ ರೀತಿ ಎಲ್ಲವೂ ಮನೋಜ್ಞವಾಗಿದೆ. + +ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ. + + + +ನವಿರು ಶೈಲಿಯ, ಕವಿತೆಯಂತಹ ಭಾಷೆಯ, ತೀರಾ ತಿರುವುಗಳಿಂದ ಕೂಡಿ ಓದುಗರನ್ನು ತಬ್ಬಿಬ್ಬುಗೊಳಿಸದೆ, ಸರಾಗವಾಗಿ ಓದಿಸುವ ಬರಹಗಳ ಕಥೆಗಳು ಓದುಗರನ್ನು ಕಾಡುತ್ತವೆ. ತೀರಾ ವಿಶೇಷವಾದ, ವಿಭಿನ್ನವಾದ ವಿಷಯಗಳನ್ನು ಹೊಂದಿರದಿದ್ದರೂ ತಮ್ಮ ಗಟ್ಟಿತನದಿಂದ, ನಮ್ಮ ನಡುವಿನ ಕಥೆಗಳಾಗಿ ಗಮನ ಸೆಳೆಯುತ್ತವೆ. ಯಾವುದೊ ಒಂದು ಧೋರಣೆ ಇಟ್ಟುಕೊಂಡು, ಬಲವಾದ ಸಿದ್ಧಾಂತ ಹೇರುವ ವಿಚಿತ್ರ ಹುಕಿ ಇಲ್ಲಿನ ಕಥೆಗಳಲ್ಲಿ ಇಲ್ಲ. ಯಾವುದೇ ಸಿದ್ಧಾಂತದ ಹಂಗಿಲ್ಲದೆ ಸಾಮಾನ್ಯರ ಸಾಮಾನ್ಯ ವಿಷಯ ಇಟ್ಟುಕೊಂಡು ಬರೆದ ಅಸಾಮಾನ್ಯ ಕಥೆಗಳಿವು. + + + +ದಟ್ಟ ಸಂವೇದನೆ, ಬದುಕಿನ ಆಳ ಮತ್ತು ಸಂಕೀರ್ಣತೆ ಗಟ್ಟಿಯಾಗಿ ಬಂದಿದೆ. ಚಂದದ ರೂಪಕಗಳಿವೆ. ವಿಷಯ ಮತ್ತು ವಿಷದ ಭಿನ್ನವಾಗಿ ಹೇಳುವ ಕಲೆಯಿದೆ. ಚಿಕಿತ್ಸಕ ಗುಣವಿದೆ. ಮನೋವೈಜ್ಞಾನಿಕ ಲೇಪನವಿದೆ. ಕಲಾತ್ಮಕತೆ ಇದೆ. ಸುಲಲಿತ ಭಾಷೆ, ವಾಸ್ತವ ಲೋಕದ ತಲ್ಲಣಗಳಿವೆ. “ನೀಲಿ, ಬಿಸಿಲು ಕೋಲು, ಮುಗಿಲ ದುಃಖ, ವಿದಾಯ, ಹುಚ್ಚು” ಕಥೆಗಳು ಹೊಲದ ಗೊಬ್ಬರದ ಗುಡ್ಡಗಳಡಿಯ ‘ಮಂದಹಸುರು’ ಪೈರುಗಳಂತಿವೆ. ಇವು ಸಂಕಲನದ ಗಟ್ಟಿ ಕಥೆಗಳಷ್ಟೇ ಆಗಿರದೆ ಸೊರಟೂರರು ಕಥನಗಳ ದೋಣಿಗೆ ಸರಿದಿಕ್ಕು ಹಿಡಿಯುವ ಹುಟ್ಟು ಹಾಕಿದರೆ ಚುಳುಗುಟ್ಟುವ ಮೀನುಗಳಿರುವ ನೀರ್ಬಯಲಿಗೆ ನೇರ ಹೋಗುವ ನುರಿತ ಬೆಸ್ತನಾಗಬಹುದು” ಎಂದು ಮುನ್ನುಡಿಕಾರರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ. ಈ ಕಥಾ ಸಂಕಲನವನ್ನು ಓದಿದರೆ ಸದಾಶಿವ್ ಸೊರಟೂರವರು ಖಂಡಿತ ಕನ್ನಡ ಕಥನ ಲೋಕಕ್ಕೆ ಹೊಸ ಭರವಸೆಯಾಗಬಲ್ಲರು ಎಂದು ಖಡಾಖಂಡಿತವಾಗಿ ಹೇಳಬಹುದು. + +ರಾಘವೇಂದ್ರ ಈ ಹೊರಬೈಲುರವರು ಶಿವಮೊಗ್ಗ ಜಿಲ್ಲೆಯ, ಅದೇ ತಾಲೂಕಿನ ಹೊರಬೈಲು ಗ್ರಾಮದವರು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಎಂಬಲ್ಲಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕರಾಗಿದ್ದಾರೆ. ಗಾಯನ, ಚಿತ್ರಕಲೆ, ನಟನೆ, ಭಾಷಣಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ‘ಅಂತರಂಗದುಲಿ’ (ಕವನ ಸಂಕಲನ ೨೦೧೩), ‘ಚೊಂಬೇಶ ಮುಕ್ತಕ'(ಚುಟುಕು ಸಂಕಲನ ೨೦೧೭) ಹಾಗೂ ‘ಬದುಕು ಪುಕ್ಸಟ್ಟೆ ಅಲ್ಲ’ (ಲೇಖನ ಸಂಕಲನ ೨೦೧೯) ಇವರ ಪ್ರಕಟಿತ ಕೃತಿಗಳು \ No newline at end of file diff --git a/Kenda Sampige/article_145.txt b/Kenda Sampige/article_145.txt new file mode 100644 index 0000000000000000000000000000000000000000..f6a0235db0a4855a14fc6b0c7666d19bd78927fe --- /dev/null +++ b/Kenda Sampige/article_145.txt @@ -0,0 +1,25 @@ +“…ವಾಸ್ತವದಲ್ಲಿ, ಕಲ್ಪನೆ ಎಂಬುದೇ ಬಹುದೊಡ್ಡ ಉಲ್ಲಂಘನೆ ಅಲ್ಲವೇ? ವಾಸ್ತವ, ವರ್ತಮಾನ ಎಂಬುದನ್ನೆಲ್ಲ ಉಲ್ಲಂಘಿಸದೆ ಕಲ್ಪನೆ ಬೆಳೆಯುವುದಿಲ್ಲ. ಕಲ್ಪನೆ ಬೆಳೆಯದೆ ಮಕ್ಕಳ ಮನಸ್ಸು ಬೆಳೆಯುವುದಿಲ್ಲ”. ಇವು ಒಂದೆಡೆ ಹಿರಿಯ ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ ಅವರು ಹೇಳಿದ ಮಾತುಗಳು. ಈ ಮಾತುಗಳನ್ನು ನೆನಪಿಸಿದ್ದು ಇಂತಹ ಹಲವು ಉಲ್ಲಂಘನೆಗಳನ್ನು ‘ಉಡಿ’ಯಲ್ಲಿ ತುಂಬಿಕೊಂಡಿರುವ ಗಣೇಶಯ್ಯನವರ ಇತ್ತೀಚಿನ ಪುಸ್ತಕ ಹಾತೆ-ಜತೆ-ಕತೆ. + +ನಮ್ಮೆಲ್ಲರ ನಡುವೆ ಕಾಣಿಸುವ ಇರುವೆ, ಮಿಡತೆ, ಚಿಟ್ಟೆ ಮುಂತಾದ ಕೀಟಗಳೆಂದರೆ ನಮಗೆ ಕಿರಿ ಕಿರಿ ಅಥವಾ ತಿರಸ್ಕಾರ ಭಾವ. ಆದರೆ ಅವುಗಳ ಪ್ರಪಂಚದಲ್ಲಿ ವಿಸ್ಮಯಗಳ ಭಂಡಾರವೇ ಇದೆ ಎಂಬುದು ನಾವು ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಅವಜ್ಞೆ ತೋರುವ ಸಂಗತಿ! ನಮ್ಮ ಕುತೂಹಲದ ಕಣ್ಣಿಗೆ ನಾವೇ ಕಟ್ಟಿಕೊಂಡ ‘ಬಟ್ಟೆ’ಯೇ ಅದಕ್ಕೆ ಕಾರಣವಿರಬಹುದು. ಅಂಥ ಕೀಟ ಜಗತ್ತಿನ ಭಂಡಾರದಿಂದ ‘ಹೆಕ್ಕಿ’ ತಂದ ಹಲವು ಕುತೂಹಲಕಾರಿ ಅಂಶಗಳಿಗೆ ಒಂದಿಷ್ಟು ‘ಕೀಟಲೆ’ಗಳನ್ನು ಪೂರಕವಾಗಿ ಸೇರಿಸಿ, ಅಚ್ಚರಿಯ (ಹುಟ್ಟು ಹಾಕುವ ಮೂಲಕ) ನಮ್ಮನ್ನು ಜಾಗೃತಗೊಳಿಸಿ, ಕತೆ ಹೇಳುತ್ತಾ ನಮ್ಮ ಕಣ್ಣ ‘ಬಟ್ಟೆಯ ಕಳಚುವ’ ಪುಸ್ತಕವಿದು. + +(ಡಾ. ಕೆ.ಎನ್. ಗಣೇಶಯ್ಯ) + +ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ. ಅಷ್ಟೇ ಅಲ್ಲದೆ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆ ಘಟನೆಗಳ ಹಿಂದಿನ ವೈಜ್ಞಾನಿಕ ವಿವರಣೆ, ವಿಧಾನವನ್ನು (‘ಏಕೆ? ಏನು? ಹೇಗೆ? ಎಲ್ಲಿ? ಯಾವಾಗ?’) ಸ್ವಾರಸ್ಯಕರವಾಗಿ ತಿಳಿಸಲು ಈ ‘ಉಲ್ಲಂಘನೆ’ (ಕಲ್ಪನೆ) ಯ ತಂತ್ರವನ್ನೇ ಬಳಸಿಕೊಳ್ಳುತ್ತಾರೆ. ಬಹುಶಃ ಕತೆ ಹೇಳುವಲ್ಲಿನ ಈ ‘ದ್ವಂದ್ವ’ (‘ಕಲ್ಪನೆ-ವಾಸ್ತವ’ದ ಪರಿಣಾಮಕಾರಿ ಮಿಳಿತ) ಎಲ್ಲಾ ವಯೋಮಾನದವರಿಗೂ ರುಚಿಸುವುದರಿಂದ, ಎಲ್ಲರನ್ನ ತಲುಪುವುದರಲ್ಲಿ ಪುಸ್ತಕ ಯಶಸ್ವಿ ಕೂಡ ಆಗುತ್ತದೆ ಎನ್ನಬಹುದು. ಅದೇ ಕಾರಣಕ್ಕೆ ಉಪಶೀರ್ಷಿಕೆ “ಹಿರಿಯರಿಗೆ ಕಿರಿಯರಿಗೆ” ಪುಸ್ತಕಕ್ಕೆ ಒಪ್ಪುತ್ತದೆ ಕೂಡ. + +“ಹಿರಿಯರಿಗಾಗಿ ಬರೆಯುವುದು ಸುಲಭ, ದಾಕ್ಷಿಣ್ಯಕ್ಕಾದರೂ, ಶಿಷ್ಟಾಚಾರಕ್ಕಾದರೂ ಅವರು ಒಪ್ಪಿಕೊಂಡಾರು ಆದರೆ ಮಕ್ಕಳು ಹಾಗಲ್ಲ, ಇಷ್ಟವಿಲ್ಲವೆಂದರೆ ಆಕಳಿಸಲು ಹಿಂಜರಿಯುವುದಿಲ್ಲ!”… ಇದು ಸಾಹಿತ್ಯ ರಚನೆಯಲ್ಲಿ ಎದುರಾಗುವ ಸವಾಲಿನ ಕುರಿತ ಪ್ರಶ್ನೆಯೊಂದಕ್ಕೆ ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಐಸಾಕ್ ಸಿಂಗರ್, ನೀಡಿದ್ದ ಅವರ ಅನುಭವದ ಉತ್ತರ. ಬಹುಶಃ ಹಾತೆ-ಜತೆ-ಕತೆ ಪುಸ್ತಕ ಈ ಅಭಿಪ್ರಾಯಕ್ಕೆ ‘ಅಪವಾದ’ ಹಾಗೆಯೇ ಗಣೇಶಯ್ಯನವರರಿಗೆ ಸಿಂಗರ್ ರವರ ಈ ಅನುಭವ ‘ಅನ್ವಯಿಸುವುದಿಲ್ಲ’ ಎಂದೆನಿಸುತ್ತದೆ! ಏಕೆಂದರೆ ಇಲ್ಲಿ ಕತೆ ಕಟ್ಟಿಕೊಡುವ ಪ್ರಯತ್ನದಲ್ಲಿನ ಬರಹಗಾರನ ‘ಖುಷಿ’ಯ ಅನುಭಾವವನ್ನು ನಾವು ಕಾಣಬಹುದು. ಆ ಕಾರ್ಯದಲ್ಲಿನ ಸರಳತೆಯನ್ನೂ ನೋಡಬಹುದು. ಹಾಗೆಯೇ ಹಲವು ವಿಸ್ಮಯ ವಿಚಾರಗಳ ಹೂರಣವನ್ನು ಕಥಾ ಹಂದರದಲ್ಲಿ ಜಾಣ್ಮೆಯಿಂದ ತುಂಬಿ, ಹದವಾಗಿ ಬೆರೆಸಿ, ಮಕ್ಕಳಷ್ಟೇ ಅಲ್ಲದೆ ಹಿರಿಯರೂ ತಲೆದೂಗುವಂತೆ ಮಾಡುವ ಕಲೆಯನ್ನೂ ಆಸ್ವಾದಿಸಬಹುದು… ಹೀಗಿರುವಾಗ ಮತ್ತಿನ್ನೆಲ್ಲಿಯ ಕೃತಿಕಾರನ ಕಷ್ಟ?… ಓದುಗನ ತೂಕಡಿಕೆಯ ಪ್ರಶ್ನೆ? + +ಇದಕ್ಕೆ ಪುಸ್ತಕದ ಬರಹ ‘ತಮಸೋಮಾ’ ಉತ್ತಮ ನಿದರ್ಶನ. ಇಲ್ಲಿನ ಕತೆ ಎರಡು ಭಿನ್ನ ಕಾಲಘಟ್ಟಗಳಲ್ಲಿ ನಡೆಯುತ್ತದೆ. ಘಟನೆಗಳ ಪಾತ್ರಗಳ ಕಾಲ, ಸ್ಥಳ ಹಾಗೂ ನಂಬಿಕೆಗಳು ಬೇರೆ ಬೇರೆ. ಒಂದೆಡೆ ಕ್ರಿ.ಪೂ.ದ ಸಮಯ, ಅಜಂತಾ ಗುಹೆಯಲ್ಲಿ ಬಿಕ್ಕುಗಳು. ಮತ್ತೊಂದೆಡೆ ಇತ್ತೀಚಿನ ದಿನಗಳು, ಪಶ್ಚಿಮ ಘಟ್ಟಗಳ ಕಾಡಿನಲ್ಲಿ ವಿಜ್ಞಾನಿಗಳು. ಆದರೆ ಇವರಿಬ್ಬರ ಯೋಚನಾಲಹರಿಯ ಹಿಂದಿನ ಉದ್ದೇಶ ಒಂದೇ, ‘ಮೂಲ’ವನ್ನು ಹುಡುಕುವುದು, ಅರ್ಥಮಾಡಿಕೊಳ್ಳುವುದು. ಹೀಗೆ ಕಾಲಮಾನಗಳ (ಕ್ರಿ.ಪೂ ಮತ್ತು ಕ್ರಿ.ಶ) ‘ನಡುವೆ’ ಗಣೇಶಯ್ಯನವರು ಸ್ವಾರಸ್ಯಕರವಾಗಿ ಚಿಟ್ಟೆಗಳ ವರ್ತನೆಯ ಬಗ್ಗೆ ಚರ್ಚೆ, ಚಿಂತನೆ ನಡೆಸುತ್ತಾ ಕತೆ ಹೇಳುತ್ತಾರೆ. ವಿಶೇಷವೆಂದರೆ ಇಲ್ಲಿ ಚಿಟ್ಟೆಗಳೂ ಅವುಗಳ ಮನೋಗತವನ್ನೂ ಹೇಳಿಕೊಳ್ಳುತ್ತವೆ. ಹೀಗೆ ಹಲವು ದೃಷ್ಟಿಕೋನಗಳ ಜೊತೆಗೆ ಧಾರ್ಮಿಕ ಚಿಂತನೆ, ತಾತ್ವಿಕವಾದ ಮತ್ತು ವಿಜ್ಞಾನ ಪ್ರಯೋಗಗಳ ವಿವರಗಳನ್ನೂ ಬೆರೆಸಿ ನಮ್ಮನ್ನು ಬೆರಗುಗೊಳಿಸುತ್ತಾರೆ. ಇಲ್ಲಿ ಸಾಹಿತ್ಯ ಇದೆ, ವಿಜ್ಞಾನ ಸಹ ಇದೆ, ಒಂದಕ್ಕೊಂದು ಪೂರಕವಾಗಿ… “ಸಾಹಿತ್ಯವಿಲ್ಲದೆ ವಿಜ್ಞಾನ ಕುಂಟು; ವಿಜ್ಞಾನವಿಲ್ಲದ ಸಾಹಿತ್ಯ ಕುರುಡು”… ಎಂಬ ಮಾತಿನಂತೆ (ಧರ್ಮ ಮತ್ತು ವಿಜ್ಞಾನ ಕುರಿತ ಐನ್‌ಸ್ಟೀನ್‌ರವರ ಜನಪ್ರಿಯ ಹೇಳಿಕೆಯನ್ನು ಸ್ವಲ್ಪ ಬದಲಿಸಿ, ನನ್ನ ಗುರುಗಳು ಹೇಳುತ್ತಿದ್ದ ಮಾತು). + +ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಲೇಖಕರು ಯಾವುದೇ ‘ವಿಸ್ಮಯದ’ ಬಗ್ಗೆ ಹೇಳುವಾಗ ನಿಖರತೆಗೆ ನೀಡುವ ಒತ್ತು, ಮಹತ್ವ. ಅದು ಕಲ್ಪನೆಯ ಛಾವಡಿಯಡಿಯ ಸಣ್ಣ ವಿಷಯದ ವಿವರಣೆಯೇ ಆದರೂ ಅಸಡ್ಡೆ ತೋರಿದಂತೆ ಕಾಣುವುದಿಲ್ಲ. ಉದಾಹರಣೆಗೆ ಅಮೃತ ಸರೋವರ ಕತೆಯ ಮೊದಲ ಭಾಗದ ಘಟನೆಯೊಂದರ ವಿವರಣೆ. ಅಲ್ಲಿ ಬರುವ ಕೆಲಸಗಾರರೆಲ್ಲರೂ ‘ಹೆಣ್ಣುಮಕ್ಕಳು’ ಅಥವಾ ‘ಮಹಿಳೆಯರು!’ ಇದು ವಾಸ್ತವ ಹಾಗೂ ಸತ್ಯ ಕೂಡ. ಇರುವೆಗಳ ಸಮುದಾಯದಲ್ಲಿ ಕೆಲಸದ ಹೊರೆ ಹೊರುವ ಜಾತಿ ಹೆಣ್ಣು! + +ಹಾಗೆಯೇ ಅವುಗಳ ‘ಅಪಾರ್ಟ್‌ಮೆಂಟ್’ (ಮನೆ/ಗೂಡಿನ) ವಿವರಗಳ ನಿರೂಪಣೆ ಮತ್ತು ಅದಕ್ಕೆ ಪೂರಕವಾದ ಚಿತ್ರದ ಬಳಕೆ, ಎಲ್ಲವೂ ‘ನೈಜತೆಗೆ’, ಕತೆಯ ಓಘಕ್ಕೆ ಒಪ್ಪುತ್ತದೆ ಕೂಡ. ಇದೇ ರೀತಿ ಸೂಕ್ಷ್ಮ ಮತ್ತು ಸೂಕ್ತ ವಿವರಗಳನ್ನೂ ಅಚ್ಚುಕಟ್ಟಾಗಿ ಬಳಸಿಕೊಂಡಿರುವುದು ಉಳಿದ ಕತೆಗಳಲ್ಲೂ ಕಂಡು ಬರುತ್ತದೆ. ಅಲ್ಲದೆ ಕೆಲವೆಡೆ (‘ಆಹುತಿಯಾದ ಹತ್ಯೆ’) ಉದ್ದೇಶವನ್ನು ಉಪೇಕ್ಷಿಸದೇ, ಉತ್ಪ್ರೇಕ್ಷೆಯನ್ನು ಬಳಸಿಕೊಂಡಿರುವ ರೀತಿ ಕೂಡ ಮೆಚ್ಚತಕ್ಕದ್ದೇ! + +ಆರಂಭದಲ್ಲಿ ಲೇಖಕರು ಹೇಳುವಂತೆ ‘ಕಲ್ಪನಾಲೋಕದ ಬೆರಗನ್ನು ಬಳಸಿಕೊಂಡು ನೈಜತೆಯನ್ನು ಬಿಂಬಿಸುವ ಮಕ್ಕಳ ಕತೆ ಹೆಣೆಯುವ ಪ್ರಯತ್ನ’ ಈ ಪುಸ್ತಕ. ಇದು ಇಲ್ಲಿನ ಎಲ್ಲಾ ಬರಹಗಳಲ್ಲೂ ನಮ್ಮ ಗಮನಕ್ಕೆ ಬರುತ್ತದೆ ಕೂಡ. ಆದರೆ ಇಲ್ಲಿ ವಾಸ್ತವದಿಂದ ‘ದೂರ’ವ (ಕಲ್ಪನೆ) ಸೃಷ್ಟಿಸುವ ಪ್ರಯತ್ನದಲ್ಲಿ ನೈಜತೆಗೆ ಸ್ವಲ್ಪ ಪ್ರಾಧಾನ್ಯತೆ ಕಡಿಮೆಯಾಯಿತೇನೋ ಎನ್ನಿಸುತ್ತದೆ! ಒಂದು ವೇಳೆ ಇನ್ನಷ್ಟು ಸ್ವಾರಸ್ಯಕರ ಸತ್ಯ ಸಂಗತಿಗಳ ಸರಕನ್ನು ಇಲ್ಲಿನ ‘ಉಲ್ಲಂಘನೆಗಳ’ ಮಧ್ಯದಲ್ಲಿ ಸೇರಿಸಿದ್ದರೆ, ಓದಿನ ಆನಂದದ ಜೊತೆಗೆ ಜ್ಞಾನದ ವೃದ್ಧಿಗೂ ಮತ್ತಷ್ಟು ಉಪಯುಕ್ತವಾಗುತ್ತಿತ್ತು ಎಂದೆನಿಸುತ್ತದೆ. ಹಾಗೆಯೇ ಇಲ್ಲಿನ ಚಿತ್ರಗಳಲ್ಲೂ ಈ ಕೊರತೆ ಎದ್ದು ಕಾಣುತ್ತದೆ. ಉಳಿದಂತೆ ಚಿತ್ರಗಳು ವಿಭಿನ್ನ ಮತ್ತು ಆಕರ್ಷಕವಾಗಿವೆಯಾದರೂ ಮಾಹಿತಿಯನ್ನು ‘ಬಿಂಬಿಸುವುದಿಲ್ಲ’. ಇರುವೆ ಗೂಡಿನ ಚಿತ್ರ ಹಾಗೂ ‘ಗಣಕ ಸೌಂದರ್ಯ’ ಬರಹದಲ್ಲಿ ಬರುವ ಕೆಲವು ರೇಖಾ ಚಿತ್ರಗಳು ಇದಕ್ಕೆ ಅಪವಾದ. + +ಬಳಸಿರುವ ಭಾಷೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆಯಾದರೂ ಮಧ್ಯೆ ಮಧ್ಯೆ ‘ನಾನ್ಯಾಕಿಲ್ಲಾ’ ಎಂಬಂತೆ ಬರುವ ಹಲವು ಇಂಗ್ಲಿಷ್ ಪದಗಳು ಮೊಸರಿನಲ್ಲಿ ‘ಕಲ್ಲು’ ಸಿಕ್ಕ ಹಾಗೆನಿಸುತ್ತದೆ. ಒಂದೆಡೆ ಪೂರ್ಣ ಪರಿಚ್ಛೇದ (ಪ್ಯಾರಾಗ್ರಾಫ್) ಇಂಗ್ಲೀಷ್ ಭಾಷೆಯಲ್ಲಿದೆ, ಕನ್ನಡದ ತರ್ಜುಮೆ ‘ತಪ್ಪಿ’ಹೋದಂತೆ ಕಾಣುತ್ತದೆ. ಬಹುಶಃ ಕನ್ನಡದ ಪದಗಳನ್ನು ಅಥವಾ ಇಂಗ್ಲಿಷ್ ಪದಗಳನ್ನೇ ಕನ್ನಡದಲ್ಲಿ ಬರೆದಿದ್ದರೂ ಅಡ್ಡಿಯಿರಲಿಲ್ಲ. ಕನ್ನಡದಲ್ಲಿ ವಿಜ್ಞಾನದ ಪದಗಳ ಬೆಳವಣಿಗೆಗೆ ಹಾಗೂ ಜನಪ್ರಿಯಗೊಳಿಸಲು ಇದು ಮುಖ್ಯ, ಕೊಡುಗೆ ಕೂಡ ಆಗಬಲ್ಲದು.‘ಮಕ್ಕಳಿಗಾಗಿ ಬರೆಯಬೇಕಾದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು’ ಎಂಬ ಮಾತಿದೆ. ಬಹುಶಃ ಆ ಮಾತಿಗನುಗುಣವಾಗಿಯೇ ಬರೆದಂತೆ ಕಾಣುವ ಇಲ್ಲಿನ ಬರಹಗಳು, ಬಹುತೇಕ ಚಿತ್ರಗಳು ಮಕ್ಕಳನ್ನಷ್ಟೇ ಅಲ್ಲದೆ ದೊಡ್ಡವರ ಮನವ ಕೂಡ ಅರಳಿಸಿ ಮುದ ನೀಡುತ್ತವೆ. ಆರು ವಿಸ್ಮಯ ವಿಚಾರಗಳ ಸಂಕಲನವಾಗಿರುವ ಈ ಪುಸ್ತಕದಲ್ಲಿ, ಹಿರಿಯರಿಯರನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದಿರುವ ‘ಗಣಕ ಸೌಂದರ್ಯ’ ಕೃತಿಯ ಮೌಲ್ಯವನ್ನು ಕೂಡ ಹೆಚ್ಚಿಸುತ್ತದೆ. + + + +ಒಟ್ಟಾರೆಯಾಗಿ ಹೇಳುವುದಾದರೆ, ಕೀಟ ಲೋಕದ ವಿಸ್ಮಯಗಳನ್ನು ರೋಚಕವಾಗಿ ಚಿತ್ರಿಸಿ ರಂಜಿಸುವ, ಕುತೂಹಲವ ಕೆರಳಿಸಿ ತಣಿಸುವ, ಮಕ್ಕಳು ಹಾಗೂ ದೊಡ್ಡವರಿಬ್ಬರೂ ಒಟ್ಟಿಗೆ ಓದಿಬಹುದಾದ ಅರಿವಿನ ಪುಸ್ತಕ ಹಾತೆ ಜತೆ ಕತೆ. + +ವಿಶ್ವ ದೊಡ್ಡಬಳ್ಳಾಪುರ ಹುಟ್ಟಿ, ಬೆಳೆದ ಊರು ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರ. ಓದಿದ್ದು ಇಂಜಿನಿಯರಿಂಗ್. ಸದ್ಯದ ನೆಲೆ ಪುಣೆ. ಅಲ್ಲಿನ ಪ್ರತಿಷ್ಟಿತ ಖಾಸಗಿ ಸಂಸ್ಥೆಯೊಂದರ ಸಂಶೋಧನಾ ವಿಭಾಗದಲ್ಲಿ ಕೆಲಸ. ಜನಪ್ರಿಯ ವಿಜ್ಞಾನ ಸಾಹಿತ್ಯ ಆಸಕ್ತಿಯ ವಿಷಯ. ಬರವಣಿಗೆ, ಓದು, ಚಾರಣ ಇತ್ಯಾದಿ ನೆಚ್ಚಿನ ಹವ್ಯಾಸಗಳು. \ No newline at end of file diff --git a/Kenda Sampige/article_146.txt b/Kenda Sampige/article_146.txt new file mode 100644 index 0000000000000000000000000000000000000000..1cea281f917e7dc35b813b3e335bb08671ea1446 --- /dev/null +++ b/Kenda Sampige/article_146.txt @@ -0,0 +1,18 @@ +“ಸತ್ತ ಮೇಲೆ ಮಲಗೋದು ಇದ್ದೇ ಇದೆ, ಎದ್ದಿರುವಾಗ ಏನಾದರೂ ಸಾಧಿಸು” ಇದು ಖ್ಯಾತ ನಟ, ನಿರ್ದೇಶಕ, ಕರಾಟೆ ಕಿಂಗ್, ಅಭಿಮಾನಿಗಳ ಆಟೋರಾಜ ಶಂಕರ್ ನಾಗ್ ರವರ ಮಾತು. ಅಕ್ಷರಶಃ ತಾನು ನುಡಿದಂತೆ ನಡೆದವರು, ಸಾಹಸ, ಸಾಧನೆಗಳೆಂಬ ಶರಧಿಯನ್ನು ದಾಟಿದವರು ಶಂಕರ್ ನಾಗ್. ಪ್ರಾಯಶಃ ಅವರಿಗೆ ಅರಿವಿತ್ತೋ ಏನೋ, ತನ್ನ ಬದುಕಿನ ಪಯಣ ಕಿರು ಮೈಲಿಗಳದ್ದೆಂದು.‌ ಅದಕ್ಕೆಂದೇ, ಜಿದ್ದಿಗೆ ಬಿದ್ದವರಂತೆ ಅನಂತ ಅಸಾಧಾರಣ ಮೈಲಿಗಲ್ಲುಗಳನ್ನು ಪ್ರತಿಷ್ಟಾಪಿಸಿ ಹಾಗೆ ಸುಮ್ಮನೆ ಎದ್ದು ನಡೆದು ಹೋದರು. ಇಂತಹ ಒಂದು ಸ್ಫೂರ್ತಿಗಾಥೆಯ ಸಾರೋಟು ಹಿಡಿದು ಬಂದವರು ಲೇಖಕರಾದ ಸತೀಶ ಬಳೆಗಾರ ‘ಶಂಕರನಾಗ್ The Legend’ ಎನ್ನುವ ಪುಸ್ತಕದ ಮುಖಾಂತರ. ಮನೋಹರ ಮುಖಪುಟ, ಮುದ್ರಣವುಳ್ಳ ಈ ಪುಸ್ತಕವನ್ನು ‘ಸಾವಣ್ಣ ಪ್ರಕಾಶನ’ ಪ್ರಕಟಿಸಿದೆ. + +(ಸತೀಶ ಬಳೆಗಾರ) + +ಶಂಕರ್ ನಾಗ್ ಎಂದರೆ ಪ್ರಥಮತಃ ನೆನಪಾಗುವುದು ಅವರ ವೇಗೋತ್ಕರ್ಷ, ಕ್ರಿಯಾಶೀಲತೆ, ತಾಜಾತನ, ಸಮಯ ನಿಷ್ಟೆ ಮತ್ತು ಸರಳತೆ. ನಿಲುಗಡೆ ಇಲ್ಲದ ಮಳೆಯಂತೆ, ಎಲ್ಲೂ ನಿಲ್ಲಿಸದ Non Stop ಬಸ್ಸುಗಳಂತೆ ಅವರ ವೇಗ. ಕೇವಲ 13 ವರುಷಗಳ ಅವಧಿಯಲ್ಲಿ ಅವರು ಕೆಲಸ ಮಾಡಿದ್ದು ಬರೋಬ್ಬರಿ 96 ಸಿನೆಮಾಗಳಲ್ಲಿ ಎನ್ನುವುದೇ ಅವರ ವೇಗಕ್ಕೆ ಹಿಡಿದ ಕೈಗನ್ನಡಿ. ತಾಂತ್ರಿಕತೆ ಉತ್ತುಂಗದ ಶಿಖರದಲ್ಲಿರುವ ಈ ಕಾಲಘಟ್ಟದಲ್ಲಿಯೂ ಒಂದು ಸಂವತ್ಸರದಲ್ಲಿ, ಒಂದು ಸಿನಿಮಾ ಮಾಡಲು ಕಷ್ಟವೆನ್ನುವ ಅಭಿಪ್ರಾಯಗಳನ್ನು ಕೇಳಿದಾಗ ಶಂಕರ್ ನಾಗ್‌ಅವರಿಗೆ 24 ಗಂಟೆಗಳನ್ನು ಮೀರಿದ ಸಮಯವಿತ್ತೇ ಎಂದು ಅಚ್ಚರಿಯಾಗುತ್ತದೆ. ಸಿನಿಮಾದ ದೃಶ್ಯವೊಂದರ ಚಿತ್ರೀಕರಣ ಮುಗಿದ ತಕ್ಷಣ ಕಾಡುಹರಟೆಗಳಿಗೆ ಕಾಲಿಡದೆ, ತನ್ನ ಮೆಟಾಡೋರಿನಲ್ಲಿ ಕುಳಿತು ಓದು ಬರಹಗಳಲ್ಲಿ, ನವೀನ ವಿಚಾರಗಳು, ಸಮಾಜದ ಕುರಿತಾದ ಚಿಂತನೆಗಳಲ್ಲಿ ಮಗ್ನರಾಗುತ್ತಿದ್ದ ಶಂಕರನಾಗ್, ಅರೆನಿಮಿಷವೂ ಅಸಮಾಧಾನಗೊಳ್ಳದಂತೆ ಬದುಕಿದವರು. ಬಹುಶಃ ಸಮಯವೇನಾದರೂ ವ್ಯಕ್ತಿಯಾಗಿದ್ದರೆ, ಅವರ ವ್ಯಕ್ತಿತ್ವಕ್ಕೊಂದು ಸಾವಿರ ಸಲಾಮನ್ನು ಸಲ್ಲಿಸುತ್ತಿತ್ತೋ ಏನೋ. + +ಇನ್ನು ಸಿನಿಮಾ ಜಗತ್ತಿನತ್ತ ದಿಟ್ಟಿ ಹಾಯಿಸಿದರೆ, ಚಿತ್ರರಂಗಕ್ಕೆ ಹೊಸತನದ ಹಾದಿ ತೋರಿದವರು ಶಂಕರನಾಗ್. ಅವರ ನಿರ್ದೇಶನದ ‘ಆಕ್ಸಿಡೆಂಟ್’ ಎನ್ನುವ ಚಿತ್ರವೇ ಸಾಕು, ಯಾಕೆ ಶಂಕರನಾಗ್ ‘ahead of the times’ ವ್ಯಕ್ತಿ ಎನ್ನಲು. ಸಿರಿವಂತಿಕೆಯ ಅಮಲಿನಲ್ಲಿ ತೇಲುತ್ತಿದ್ದ ರಾಜಕೀಯ ಪುಢಾರಿಯ ಮಗನೊಬ್ಬ ಫುಟ್‌ಪಾತ್‌ನಲ್ಲಿ ಮಲಗಿರುವವರ ಮೇಲೆ ಕಾರು ಹಾಯಿಸಿ, ಮಾರಣ ಹೋಮ ಮಾಡಿ, ಕೊನೆಗೆ ತಾನೇ ಅಪಘಾತದಲ್ಲಿ ಸಾಯುವ ಆ ಕಥಾನಕದ ಚಿತ್ರಣವೇ, ಮನವನ್ನು ಅರೆಕ್ಷಣ ಮೌನಕ್ಕೆ ದೂಡುವಂಥದ್ದು. ಇಂದು ಸಮಾಜದಲ್ಲಿ ಆಗುತ್ತಿರುವ, ಆಗಿ ಹೋಗಿರುವ ಸಿರಿವಂತರ ದರ್ಪ ದಬ್ಬಾಳಿಕೆ, ಫುಪ್‌ಪಾತ್‌ ಇತ್ಯಾದಿ ಹಿಟ್ ಅಂಡ್ ರನ್ ಕೇಸುಗಳು, ಶ್ರೀಸಾಮಾನ್ಯನಿಗಾಗುವ ಅನ್ಯಾಯ ಇವೆಲ್ಲಾ ಅನಾಮತ್ತು 38 ವರ್ಷಗಳ ಹಿಂದೆಯೇ ರಿಯಲಿಸ್ಟಿಕ್ ಆಗಿ ತೆರೆಯ ಮೇಲೆ ಮೂಡಿಬಂದಿತ್ತು. ಹಾಡುಗಳೇ ಇಲ್ಲದ ಈ ಸಿನಿಮಾದಲ್ಲಿ ಇಳಯರಾಜರ ನೈಜ ಹಿನ್ನೆಲೆ ಸಂಗೀತ ಮಿನುಗುವ ತಾರೆಗೆ ಹೊಳಪಿನ ಸಂಕಲನ ಎಂದೇ ಹೇಳಬೇಕು. ಇನ್ನು ಮಧ್ಯಮ ವರ್ಗದ ಬದುಕು-ಬವಣೆಗಳನ್ನು ಹಾಸ್ಯರಸದೊಂದಿಗೆ ಬೆರೆಸಿ ಉಣಬಡಿಸಿದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ಆರ್ ಕೆ ನಾರಾಯಣ್ ವಿರಚಿತ ‘ಮಾಲ್ಗುಡಿ ಡೇಸ್’ ಸರಣಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂಡರ್ ವಾಟರ್ ಶೂಟಿಂಗ್ ಮಾಡಿದ ನಟಸಾರ್ವಭೌಮ ಡಾ|ರಾಜಕುಮಾರ್ ಅಭಿನಯದ ‘ಒಂದು ಮುತ್ತಿನ ಕಥೆ’ ಅವರ ನಿರ್ದೇಶನದ ‘ಮಿಂಚಿನ ಓಟ’ಕ್ಕೆ ಸಾಕ್ಷಿ. ಅಭಿನಯದ ವಿಚಾರಕ್ಕೆ ಬಂದರೆ, ವೈಯಕ್ತಿಕವಾಗಿ ಒಂದಾನೊಂದು ಕಾಲದಲ್ಲಿ, S P ಸಾಂಗ್ಲಿಯಾನ, CBI ಶಂಕರ್, ಆಟೋ ರಾಜ, ಗೀತಾ, ನಿಗೂಢ ರಹಸ್ಯ ಇವೆಲ್ಲವೂ ಬಹುಬಾರಿ ಮರಳಿ ವೀಕ್ಷಿಸಿದ ಚಿತ್ರಗಳು. ಅವರ ಆಂಗಿಕ ಅಭಿನಯ, ಆಕ್ಷನ್ ಸೀಕ್ವೆನ್ಸುಗಳು ನಮ್ಮ ಬಾಲ್ಯದ ದಿನಗಳಿಗೆ ರಂಗು ತುಂಬಿದುದನ್ನು ಮರೆಯುವಂತಿಲ್ಲ. ಹಾಡುಗಳೂ ಅಷ್ಟೇ. ಭಾವತೀರದಲ್ಲಿ ವಿಹರಿಸಿದ ಅನುಭವವನ್ನು ನೀಡುವಂತಹದ್ದು. ಬೇಸರದ ಭಾವಕ್ಕೆ ‘ನಗುವ ಗುಲಾಬಿ ಹೂವೇ‘, ಪ್ರೇಮ ಪರವಶರಾದವರಿಗೆ ಗೀತಾಂಜಲಿ, ಜೊತೆಯಲಿ ಜೊತೆ ಜೊತೆಯಲಿ, ಹೆಜ್ಜೆ ಹಾಕಲು ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’, ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ರಾಗರಸಧಾರೆಯಲ್ಲಿ ಮಿಂದೇಳಲು ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ಇಹದ ಇರುವಿಕೆಯ ಮರೆಸಲು ‘ಅನಾಥ ಮಗುವಾದೆ ನಾನು’ ಹೀಗೆ ಪಟ್ಟಿ ಪೂರ್ಣ ವಿರಾಮವಿಲ್ಲದೆ ಬೆಳೆಯುತ್ತಲೇ ಹೋಗುತ್ತದೆ. + +ಇದೆಲ್ಲಕ್ಕಿಂತ ಶಂಕರ್ ನಾಗ್ ಇಂದಿಗೆ ಅತ್ಯಂತ ಪ್ರಸ್ತುತ ಎನ್ನಿಸುವುದು ಅವರ ಚಿಂತನೆಗಳ ಮುಖಾಂತರ. ಬೆರಳೆಣಿಕೆಯ ಬಸ್ಸು, ಕಾರು, ಆಟೋರಿಕ್ಷಾಗಳಿದ್ದ ಕಾಲದಲ್ಲಿ ಮೆಟ್ರೋ ರೈಲಿನ ಬಗೆಗಿನ ಯೋಚನೆ- ಯೋಜನೆ, ನಂದಿ ಬೆಟ್ಟಕ್ಕೆ ರೋಪ್ ವೇ, ಕಡಿಮೆ ಖರ್ಚಿನ ಮನೆ ನಿರ್ಮಾಣ ಇತ್ಯಾದಿ ಆ ಕಾಲಕ್ಕೆ advanced ಅನ್ನಿಸುವಂತಹ ವಿಷಯಗಳ ಕುರಿತು ಅವರು ಕಂಡ ಕನಸುಗಳು ಇಂದಿನ ಆಡಳಿತಗಾರರಿಗೆ ಮಾದರಿ. ಅಷ್ಟೇ ಅಲ್ಲ, ತಾಂತ್ರಿಕ ಕೆಲಸಗಳಿಗೆ ಮದ್ರಾಸಿನ ಮರ್ಜಿಯಲ್ಲಿರಬೇಕಾಗಿದ್ದ ಕನ್ನಡ ಚಿತ್ರರಂಗಕ್ಕೆ ಬದಲಾವಣೆಯ ಇಶಾರೆಯಾಗಿ ನೀಡಿದ ‘ಸಂಕೇತ್ ಸ್ಟುಡಿಯೋ’ ಕೂಡ ಅವರ ಅನನ್ಯ ಆಲೋಚನೆಗೆ ಸಾಕ್ಷಿಯಾಗಿದೆ. + +ಹೀಗೆ ಸಮಾಜ, ಚಿತ್ರರಂಗಕ್ಕೆ ಅಸಂಖ್ಯ ಉಡುಗೊರೆಗಳನ್ನು ನೀಡಿದ ಶಂಕರನಾಗ್ ದೈಹಿಕವಾಗಿ ಬದುಕಿದ್ದು ಕೇವಲ 36 ವರ್ಷ. ಇಂತಹ ಶ್ರೇಷ್ಟ ಬಾಳುವಿಕೆಯನ್ನು ಸಂಕ್ಷಿಪ್ತವೂ, ಅತಿ ವಿವರವೂ ಅಲ್ಲದಂತೆ, ಹಿತ ಮಿತವಾಗಿ ಬಳೆಗಾರರು ‘ಶಂಕರ್ ನಾಗ್ The Legened’ ಪುಸ್ತಕದಲ್ಲಿ ಸೆರೆಹಿಡಿದಿದ್ದಾರೆ. ಶಂಕರ್ ನಾಗ್ ಕುರಿತಾಗಿ ಬಂದಂತಹ ಮೂರನೇ ಪುಸ್ತಕವಿದು.(ಅನಂತ್ ನಾಗ್ ರವರ ‘ನನ್ನ ತಮ್ಮ ಶಂಕರ’, ಗಣೇಶ್ ಕಾಸರಗೋಡುರವರ ‘ನೆನಪಿನಂಗಳದಲ್ಲಿ ಶಂಕರನಾಗ್’ ಉಳಿದೆರಡು ಪುಸ್ತಕಗಳು)ಇಲ್ಲಿ ಶಂಕರನಾಗ್ ರವರ ಜನನದಿಂದ ಮರಣದವರೆಗಿನ ವೈಯಕ್ತಿಕ ಬದುಕು, ಸಿನಿಮಾ, ಸಾಮಾಜಿಕ ಕಾರ್ಯಗಳು ಇತ್ಯಾದಿಗಳೆಲ್ಲವನ್ನೂ ಅಚ್ಚು ಕಟ್ಟಾಗಿ, ಕ್ರಮಬದ್ಧವಾಗಿ ಜೋಡಿಸಿದ್ದಾರೆ ಲೇಖಕರು. + + + +ಜನಸಾಮಾನ್ಯರು ಇಂದಿಗೂ ನಿಗೂಢವೆಂದು ಭಾವಿಸುವ ಶಂಕರ್ ನಾಗ್ ಸಾವಿನ ಸುತ್ತ ಹುಟ್ಟಿಕೊಂಡ ಅನೂಹ್ಯ ಪ್ರಶ್ನೆಗಳಿಗೆ ವಿವಿಧ ದೃಷ್ಟಿಕೋನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ವರುಷಗಳಿಗನುಗುಣವಾಗಿ ಜೋಡಿಸಲ್ಪಟ್ಟ ಶಂಕರ್ ನಾಗ್ ಚಿತ್ರಗಳು, ಅವುಗಳ ಹಿಂದಿರುವ ಕಹಾನಿ, ಪ್ರಮುಖ ಹಾಡುಗಳು, ಅನಂತ್ ನಾಗ್, ರಮೇಶ್ ಭಟ್ ಆದಿಯಾಗಿ ವಿವಿಧ ನಟರೊಂದಿಗಿನ ಕೆಲಸಗಳು ಹಾಗೂ ಬಾಂಧವ್ಯ ಹೀಗೆ ಅನೇಕ ಮಾಹಿತಿಗಳು ದಾಖಲಾಗಿರುವ ಪರಿಯೇ ಈ ಪುಸ್ತಕದ ಹೈಲೈಟು. ಒಟ್ಟಾರೆಯಾಗಿ ಹೇಳಬೇಕೆಂದರೆ, ಹೊಸ ವಿಚಾರಗಳನ್ನು ತಿಳಿಯಲು ಅಂತರ್ಜಾಲವನ್ನು ಹೇಗೆ ನಾವು ಅವಲಂಬಿಸುತ್ತೇವೆಯೋ, ಹಾಗೆಯೇ ಶಂಕರನಾಗ್ ಅವರ ಅನುಕರಣೀಯ ಬದುಕನ್ನು ಅಭ್ಯಸಿಸಲು ಸತೀಶ ಬಳೆಗಾರರ ‘ಶಂಕರ ನಾಗ್ The Legend’ ಪುಸ್ತಕವನ್ನು ಆಶ್ರಯಿಸಬಹುದು. + +ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು…. + diff --git a/Kenda Sampige/article_147.txt b/Kenda Sampige/article_147.txt new file mode 100644 index 0000000000000000000000000000000000000000..b5c5a1ac0f862c0743e710569aba262fe9c76205 --- /dev/null +++ b/Kenda Sampige/article_147.txt @@ -0,0 +1,35 @@ +byಡಾ.ಎಲ್ .ಸಿ ಸುಮಿತ್ರಾ|Feb 3, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅಕ್ಕಮಹಾದೇವಿಯದು ಅಭಾವ ವೈರಾಗ್ಯಅಲ್ಲ. ಅವಳದು ಸ್ವಭಾವ ವೈರಾಗ್ಯ ಎಲ್ಲ ಇದ್ದು ಅದರ ಕುರಿತು ಆಕರ್ಷಣೆ ಇಲ್ಲದಿರುವುದು ಅವಳ ವ್ಯಕ್ತಿತ್ವವೇ ವಿಶಿಷ್ಟ ಚೈತನ್ಯ ಉಳ್ಳದ್ದು. ಮಠದ ಗುರು ಲಿಂಗ ಶರಣರು ಅವಳಿಗೆ ಲಿಂಗ ದೀಕ್ಷೆ ನೀಡುತ್ತಾರೆ. ದಿಗಂಬರ ಸನ್ಯಾಸಿಗಳನ್ನು ನೋಡಿ ಎಲ್ಲವನ್ನು ಕಳಚಿ ಇರುವುದರ ಕುರಿತು ಯೋಚಿಸುತ್ತಾಳೆ. ಲಿಂಗ ಶರಣರು ಕಲ್ಯಾಣಕ್ಕೆ ಹೋಗಿ ಬಂದು ಬಸವಣ್ಣನ ಮಹಾಮನೆಯ ವಿಷಯ ಹೇಳುತ್ತಾರೆ. ಕಸಪಯ್ಯ ರಾಯ ಇವನ ಗುಡಿ ಕಟ್ಟಿಸುವಾಗ ಅವನ ಸತಿಗೂ ಗುಡಿ ಕಟ್ಟಲು ಹೇಳುತ್ತಾಳೆ.ಡಾ. ಎಚ್.ಎಸ್. ಅನುಪಮಾ ಅವರ ಹೊಸ ಕಾದಂಬರಿ “ಬೆಳಗಿನೊಳಗು” ಕುರಿತು ಡಾ. ಎಲ್.ಸಿ. ಸುಮಿತ್ರಾ ಬರಹ + +byಕೆಂಡಸಂಪಿಗೆ|Jan 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ.ಮಂಡಲಗಿರಿ ಪ್ರಸನ್ನ ಅವರ “ನಿದಿರೆ ಇರದ ಇರುಳು” ಗಜಲ್‌ ಸಂಕಲನಕ್ಕೆ ಡಾ. ರಮೇಶ ಅರೋಲಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Jan 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ!ಡಾ. ಗಜಾನನ ಶರ್ಮ ಹೊಸ ಕಾದಂಬರಿ “ಪ್ರಮೇಯ”ದ ಕೆಲವು ಪುಟಗಳು ನಿಮ್ಮ ಓದಿಗೆ + +byನಾರಾಯಣ ಯಾಜಿ|Jan 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಾಂಧೀಜಿಯವರ ಕುರಿತು ಆಕ್ಷೇಪಗಳು ಬಂದಾಗ ಇದರಲ್ಲಿ ಅವರ ನಡೆ ಆ ಕಾಲದಲ್ಲಿ ಎಷ್ಟು ಸೂಕ್ತವಾಗಿತ್ತು ಎನ್ನುವದನ್ನು ಇಲ್ಲಿ ವಿವರಿಸಲಾಗಿದೆ. ಖಿಲಾಪತ್ ಚಳುವಳಿಯನ್ನು ಗಾಂಧಿ ಸಂಪೂರ್ಣವಾಗಿ ಒಪ್ಪಿಲ್ಲ; ಆದರೆ ಆ ಧರ್ಮದ ಬಗೆಗೆ ಅವರಿಗಿರುವ ಆಳ ದೃಷ್ಟಿಕೋನದಿಂದ ಮುಸಲ್ಮಾನರ ಭಾವನೆಗಳನ್ನು ಗಾಂಧಿ ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ. ಹಾಗೇ ನೋಡಿದರೆ ಖಿಲಾಪತ್ ಚಳುವಳಿಯನ್ನು ಗಾಂಧಿ ಬೆಂಬಲಿಸಿದ ಕಾರಣದಿಂದಲೇ ಗಾಂಧಿ ರಾಷ್ಟ್ರೀಯ ನಾಯಕರಾಗಿ ಹೊಮ್ಮಿದ್ದು ಮತ್ತು 1920ರ ನಾಗಪುರ ಅಧಿವೇಶನದ ನಂತರ ತೀವ್ರವಾದಿಗಳನ್ನು ಬದಿಗೆ ಸರಿಸಿ ಅನಭಿಷಕ್ತ ನಾಯಕರಾಗಿರುವುದು.ರಾಮಚಂದ್ರ ಹಬ್ಬು ಅನುವಾದಿಸಿರುವ “ಮಹಾತ್ಮ ಗಾಂಧಿ ಜೀವನ ಚರಿತೆ” ಕೃತಿಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ + +byಸುಮಿತ್‌ ಮೇತ್ರಿ|Jan 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು.ರವಿಕುಮಾರ್ ಹಂಪಿ ಅನುವಾದಿತ “ನದಿಯೊಂದು ನಿದ್ರಿಸಿದಾಗ” ಕಾದಂಬರಿಯ ಕುರಿತು ಸುಮಿತ್‌ ಮೇತ್ರಿ ಬರಹ + +byಕೆಂಡಸಂಪಿಗೆ|Jan 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕಚೇರಿಗೆ ಬಂದಾಗ ಡಾಕ್ಟರ್ ಕಿರ್ಕಿಗೆ ಕರೆ ಬಂದು ಅಗತ್ಯ ವೈದ್ಯಕೀಯ ನೆರವಿಗಾಗಿ ಅವಘಡ ನಡೆದ ಜಾಗಕ್ಕೆ ಹೋದನೆಂದು ಗೊತ್ತಾಯ್ತು. ಇಂತಹ ಪ್ರಮುಖ ಅವಘಡಗಳಾದಾಗ ಕ್ಯಾಂಪಿನಲ್ಲಿನ ಇಂತಹ ಖಾಸಗಿ ವೈದ್ಯರನ್ನು ಘಟನೆಯ ಜಾಗಕ್ಕೆ ನೆರವಿಗಾಗಿ ಕರೆಸಲಾಗುತ್ತದೆ. ನಾನು ನೋಡಿದ ವಿವರಗಳನ್ನು ಆಂಟೋನಿಯೋ ಮತ್ತು ಅಲ್ಲಿದ್ದ ಇತರೆ ಆಲ್ಬೇನಿಯನ್ ಜನರಿಗೆ ವಿವರಿಸಿದೆ. ಎಲ್ಲರೂ ಆಘಾತಕ್ಕೊಳಗಾದಂತೆ ದೊಡ್ಡ ನಿಟ್ಟುಸಿರುಬಿಟ್ಟರು. ಆಂಟೋನಿಯೋ ಮಾತ್ರ ತುಂಬಾ ಕಂಗಾಲಾದವನಂತೆ ತಲೆಮೇಲೆ ಕೈಹೊತ್ತು ಏನೇನೋ ಮನಸ್ಸಿಗೆ ಬಂದಂತೆ ಅವನ ಭಾಷೆಯಲ್ಲಿ ಗೊಣಗಲು ಶುರುಮಾಡಿದ.ಮಂಜುನಾಥ್‌ ಕುಣಿಗಲ್‌ ಬರೆದ “ಕುಣಿಗಲ್‌ ಟು ಕಂದಹಾರ್” ಕೃತಿಯಿಂದ ಆಯ್ದ ಲೇಖನ ನಿಮ್ಮ ಓದಿಗೆ + +byನಾಗರಾಜ ಎಂ ಹುಡೇದ|Jan 16, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮಂಜುನಾಥ ಶಾಲೆಗೆ ಹೋಗುವಾಗ ದಿನಾಲೂ ಅವನ ತಾಯಿಯನ್ನು ತಬ್ಬಿ ಮುದ್ದಾಡುತ್ತಿದ್ದ. ಅಷ್ಟೊಂದು ಪ್ರೀತಿ ವಾತ್ಸಲ್ಯ ಇಬ್ಬರಲ್ಲೂ ತುಂಬಿತ್ತು. ‘ತಾಯಿ ವಾತ್ಸಲ್ಯ ಮತ್ತು ಮಗನ ಮಂದಹಾಸ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ’ ಎನ್ನುವ ಶಿರ್ಷಿಕೆಯೊಂದಿಗೆ ಅದು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಅಷ್ಟೊಂದು ಅಮೋಘವಾದ ಪ್ರೀತಿ ಇವರದಾಗಿತ್ತು. ಅದನ್ನು ನೋಡಿ ಮಗ ಫೋಟೋದಂತೆ ಕಟ್ಟು ಹಾಕಿಸಲು ತಾಯಿಗೆ ಹೇಳಿದ. ಬಾಲ್ಯದ ಆ ಅಮೂಲ್ಯ ನೆನಪನ್ನು ಗೆಳೆಯರಾದ ಪಲ್ಲವಿ, ಪವನ, ಆಕಾಶ ನೆನಪಿಸಿಕೊಳ್ಳುತ್ತಾರೆ.ಡಾ. ಬಸು ಬೇವಿನಗಿಡದ ಬರೆದ “ಒಳ್ಳೆಯ ದೆವ್ವ” ಮಕ್ಕಳ ಕಾದಂಬರಿಯ ಕುರಿತು ನಾಗರಾಜ ಎಂ ಹುಡೇದ ಬರಹ + +byಅಕ್ಷತಾ ಕೃಷ್ಣಮೂರ್ತಿ|Jan 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಆರನೆಯ ವರ್ಗದ ಕನ್ನಡ ವಿಷಯದಲ್ಲಿ ಇರುವ `ಮಲ್ಲಜ್ಜನ ಮಳಿಗೆ’ ಎಂಬ ಪಾಠದ ರೀತಿಯಲ್ಲಿ ಇರುವ ಅಂಗಡಿಯಂತೆ ಒಂದೇ ಒಂದು ಅಂಗಡಿ ಅಣಶಿಯಲ್ಲಿಯೂ ಇದೆ. ಅಲ್ಲಿ ತೋರಣ ಕಟ್ಟಲು ಬೇಕಾದ ಸುತ್ಲಿ ಬಳ್ಳಿಯೂ ಸಿಗುತ್ತದೆ. ಬಣ್ಣದ ಕಾಗದಗಳು ಸಿಗುತ್ತವೆ. ಎಲ್ಲ ಒಂದೇ ಅಂಗಡಿಯಲ್ಲಿ ಲಭ್ಯ. ಆ ರಾಮಚಂದ್ರ ಕಾಜೂಗಾರನ ಅಂಗಡಿ ಅಣಶಿಯಲ್ಲಿಯೇ ಫೇಮಸ್. ಅಲ್ಲಿ ಸಿಗುವ ಬಣ್ಣದ ಕಾಗದಗಳು ಕೂಡ ಮೂರೇ ಬಣ್ಣದಲ್ಲಿ ಸಿಕ್ಕಿ ಸುತ್ತಲೂ ಪರಪರೆ ಹಚ್ಚಲು ಸಾಕಾಗದೆ ಚೂರು ಬೇಜಾರಾಗಿದೆ. ಮಕ್ಕಳ ಬೇಜಾರಿಗೆ ರಾಧಕ್ಕೋರು ಒಂದು ಪರಿಹಾರ ಸೂಚಿಸಿದ್ದಾರೆ.ನಾಳೆ ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಅಂಕಣ ಬರಹಗಳ ಸಂಕಲನ ಬಿಡುಗಡೆಯಾಗುತ್ತಿದೆ. ಈ ಹೊತ್ತಿನಲ್ಲಿ ಇಸ್ಕೂಲಿನ ಕುರಿತ ಅವರ ಮಾತುಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Jan 12, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಯಾಜಿಯವರು ಸರ್ಚ್‌ಲೈಟ್‌ ಬೀರದ ಸಂಗತಿಗಳು ವಿರಳ. ನಾವೆಲ್ಲ ಮರೆತೇ ಬಿಟ್ಟಿರುವ ವೇದಕಾಲದ ಮಹಾಜ್ಞಾನಿ, ಗಾರ್ಗಿ ವಾಚಕ್ನವಿ ಎಂಬ ಮಹಾಪಂಡಿತೆಯ ಬಗೆಗೂ ಬೆಳಕು ಚೆಲ್ಲುತ್ತಾರೆ. ಗೌತಮ ಬುದ್ಧ ಕರ್ಮಯೋಗವನ್ನು ಪ್ರತಿಪಾದಿಸಿದವನು ಎಂದು ಹೇಳುತ್ತಾ ಬುದ್ಧನೂ ನಮ್ಮ ಪರಂಪರೆಯ ಜತೆಗೆ ಹೊಂದಿರುವ ಸಾಂಗತ್ಯವನ್ನು ಗುರುತಿಸುತ್ತಾರೆ. ಶಂಕರಾಚಾರ್ಯರ ಅದ್ವೈತ ವಿಚಾರದ ವಿಲಾಸವನ್ನು ಬೆರಗಾಗುವಂತೆ ಕಟ್ಟಿಕೊಡುತ್ತಾರೆ. ಹಾಗೆಯೇ ಪುರಾಣದ ಹತಭಾಗ್ಯ ಸ್ತ್ರೀ ಪಾತ್ರಗಳ ಬಗ್ಗೆ ತುಂಬಾ ಮಮತೆಯಿಂದ ಅವರು ಬರೆಯುತ್ತಾರೆ. ಉದಾಹರಣೆಗೆ, ಮಹಾಭಾರತದ ಅಂಬೆ, ಕುಂತಿ, ರಾಮಾಯಣದ ಕೈಕೇಯಿ ಮುಂತಾದವರು.ನಾರಾಯಣ ಯಾಜಿಯವರ “ನೆಲ ಮುಗಿಲು” ಅಂಕಣ ಬರಹಗಳ ಸಂಕಲನಕ್ಕೆ ಹರಿಪ್ರಕಾಶ್‌ ಕೋಣೆಮನೆ ಬರೆದ ಮುನ್ನುಡಿ \ No newline at end of file diff --git a/Kenda Sampige/article_148.txt b/Kenda Sampige/article_148.txt new file mode 100644 index 0000000000000000000000000000000000000000..12ffa9ee2bee7ad2fe179353780d887383a71492 --- /dev/null +++ b/Kenda Sampige/article_148.txt @@ -0,0 +1,21 @@ +ಸಿನಿಲೋಕ-21 ಕೃತಿಯು ಇಪ್ಪತ್ತೊಂದನೆ ಶತಮಾನದ ಮೊದಲಿನ ಈ ಎರಡು ದಶಕಗಳಲ್ಲಿ ಜಗತ್ತಿನಲ್ಲಿ ಮೂಡಿಬಂದ ಚಿತ್ರಗಳಲ್ಲಿ ಆಯ್ದ ನಲವತ್ತು ಚಿತ್ರಗಳ ಕುರಿತ ಲೇಖನ ಮಾಲೆ. ಇಪ್ಪತ್ತೊಂದನೆ ಶತಮಾನದ ಈ ಸಿನಿಮಾಗಳು ಇತ್ತೀಚಿನ ಹೊಸ ಅನ್ವೇಷಣೆಯಾದ ಡಿಜಿಟಲ್‌ ತಂತ್ರಗಳ ಬಳಕೆಯಿಂದಾಗಿ ಮಾತ್ರ ಭಿನ್ನವಾಗಿಲ್ಲ, ಬದುಕನ್ನು ದಾಖಲಿಸುವ ಭಿನ್ನ ಮಾದರಿಯಾಗಿಯೂ ವಿಶಿಷ್ಟವಾಗಿದೆ. ಕಳೆದ ಶತಮಾನದ ಎರಡನೆ ದಶಕದಲ್ಲಾದ ರಷ್ಯಾದ ಕ್ರಾಂತಿಯು ಸೋವಿಯತ್‌ ಸಿನಿಮಾದ ಗತಿ ತಾರ್ಕಿಕ ಕಟ್ಟುವಿಕೆಗೆ ಕಾರಣವಾದರೆ, ಫ್ಯಾಸಿಸಂ ಬೆಳವಣಿಗೆಯ ಮುನ್ಸೂಚನೆಯಾಗಿ ಮೂರನೆಯ ದಶಕದಲ್ಲಿ ಜರ್ಮನ್‌ ಎಕ್ಸಪ್ರೆಷನಿಸಂ ಹುಟ್ಟಿಗೆ ಕಾರಣವಾಯಿತು. ನಲವತ್ತರ ದಶಕದಲ್ಲಿ ಸಿನಿಮಾ ಭಾಷೆಯಲ್ಲಿನ ಹೊಸ ದೃಶ್ಯಬಿಂಬದ ಕ್ರಮವಾದ ನವವಾಸ್ತವವಾದ(ನಿಯೋರಿಯಲಿಸಂ) ಶೈಲಿಯ ಹುಟ್ಟಿಗೆ ದ್ವಿತೀಯ ಮಹಾಯುದ್ಧವು ಕಾರಣವಾದರೆ, ಅರವತ್ತರ ದಶಕದಲ್ಲಿ ಎಲ್ಲೆಡೆ ಹರಡಿದ ಮನುಷ್ಯನ ಅಸ್ಮಿತೆಯ ಹುಡುಕಾಟವು ಫ್ರೆಂಚ್ ನ್ಯೂ ವೇವ್‌ಗೆ ಮೂಲವಾಯಿತು. ಎಂಬತ್ತರ ದಶಕದಲ್ಲಿ ತೃತೀಯ ಜಗತ್ತಿನ ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು ಮೂರನೆ ಜಗತ್ತಿನ ರಾಜಕೀಯ ಸಿನಿಮಾಗಳ ಪಂಥಕ್ಕೆ ಅಡಿಪಾಯ ಹಾಕಿತು. ಅವುಗಳ ಮುಂದುವರಿಕೆಯಾಗಿ ಇಪ್ಪತ್ತೊಂದನೇ ಶತಮಾನದ ಚಿತ್ರಗಳು ತನ್ನ ಕ್ಷೇತ್ರದಲ್ಲಾದ ಡಿಜಿಟಲ್ ಬೆಳವಣಿಗೆಯನ್ನು ಬಳಸಿಕೊಂಡು ಮನುಕುಲದ ಹೊಸಾ ಬಿಕ್ಕಟ್ಟುಗಳನ್ನು ಅನನ್ಯವಾದ ಸಿನಿಮಾಭಾಷೆಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಹೊಸ ಸಿನಿಮಾ ಪರಿಭಾಷೆಯನ್ನು ಹುಟ್ಟುಹಾಕುತ್ತಿವೆ. ಎ. ಎನ್. ಪ್ರಸನ್ನ ಅವರು ಈ ಬೆಳವಣಿಗೆಯ ಪೂರ್ವಾಪರವನ್ನು ಕೆಲವು ವಿಶಿಷ್ಟ ಸಿನಿಮಾ ಕೃತಿಗಳ ಮೂಲಕ ಅರ್ಥೈಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. + +(ಎ.ಎನ್. ಪ್ರಸನ್ನ) + +ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಸಿನಿಮಾ ಇನ್ನೂ ಹರೆಯದಲ್ಲಿದೆ. ಕೇವಲ ನೂರಾಮೂವತ್ತು ವರ್ಷಗಳ ಪರಂಪರೆ ಇರುವ ಈ ಮಾಧ್ಯಮವು ಪ್ರತಿ ಹದಿನೈದು-ಇಪ್ಪತ್ತು ವರ್ಷಗಳಿಗೊಮ್ಮ ಭಾಷೆ-ಸಂವಹನ ಕುರಿತ ಚಿಂತನೆಗಳನ್ನು ಪರಿಷ್ಕರಿಸುತ್ತಾ, ಅವುಗಳಿಗೆ ಅನುಗುಣವಾಗಿ ನುಡಿಗಟ್ಟುಗಳನ್ನು ಹೊಸದಾಗಿ ರೂಪಿಸುತ್ತಾ ಸಾಗಿದೆ. ಅದರ ಜೊತೆಗೇ ಉಳಿದ ಮಾಧ್ಯಮಗಳ ಜೊತೆ ಅನುಸಂಧಾನ ನಡೆಸುತ್ತಾ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳತ್ತಾ ಸಾಗಿದೆ. ಪ್ರಧಾನವಾಹಿನಿಯ ಸಿನಿಮಾಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಪ್ರೇಕ್ಷಕನನ್ನು ಸೆರೆಹಿಡಿದಿಟ್ಟುಕೊಳ್ಳಲು ಹೊಸಾ ಹೊಸಾ ತಂತ್ರಗಳನ್ನು, ಆಕರ್ಷಣೆಗಳನ್ನು ಬಳಸತೊಡಗಿದರೆ, ಉಪವಾಹಿನಿಯಲ್ಲಿ ಸಾಗುತ್ತಿರುವ ಕೆಲವರು ತಮ್ಮ ರಾಜಕೀಯ ಚಿಂತನೆಗಳನ್ನು, ತಾತ್ವಿಕ ನೆಲೆಗಳನ್ನು, ದರ್ಶನವನ್ನು ಹಂಚಿಕೊಳ್ಳಲು ಹೊಸ ಅಭಿವ್ಯಕ್ತಿ ಕ್ರಮವನ್ನು ಬಳಸತೊಡಗಿದ್ದಾರೆ. ಇನ್ನೂ ಕೆಲವರು ಪ್ರೇಕ್ಷಕರ ಗ್ರಹಣಗುಣವನ್ನು ಧ್ಯಾನಸ್ಥ ನೆಲೆಗೆ ಏರಿಸುವ ಪ್ರಯತ್ನ ಮಾಡುತ್ತಾ ಸಿನಿಮಾದಲ್ಲಿ ಸಂವಹನ ಶಕ್ತಿಯನ್ನು ಹರಿತಗೊಳಿಸುತ್ತಿದ್ದಾರೆ. + +ಇಪ್ಪತ್ತನೆಯ ಶತಮಾನದ ಅಂತ್ಯ, ಇಪ್ಪತ್ತೊಂದನೆಯ ಆರಂಭ ಒಂದು ಸಮಸ್ಯಾತ್ಮಕ ತಿರುವು ಪಡೆದ ಕಾಲ. ಎಲ್ಲ ರೀತಿಯ ಪರ‍್ಯಾಯ ಚಿಂತನೆಗಳೂ ಬದಿಗೆ ತಳ್ಳಲ್ಪಟ್ಟು, ಗ್ರಾಹಕ ಸಂಸ್ಕೃತಿಯೊಂದೇ ಮುನ್ನೆಲೆಗೆ ಬರತೊಡಗಿದ ಕಾಲ. ತನ್ನ ವೈಯಕ್ತಿಕ ದರ್ಶನ ಹಂಚಿಕೊಳ್ಳುವುದಕ್ಕೆ, ನಿಕಷಕ್ಕೆ ಒಡ್ಡುವುದಕ್ಕೆ, ಸಿನಿಮಾ ಸಂಸ್ಕೃತಿಯನ್ನು ಬಳಸಿಕೊಳ್ಳುತ್ತಿದ್ದ ನಿರ್ದೇಶಕರಂತೂ ನಿಬ್ಬೆರಗಾದ ಕಾಲ. ಈ ಸುನಾಮಿ ಅಲೆಯಲ್ಲಿ ಕೊಚ್ಚಿಹೋಗಿ, ನಿರ್ದಿಷ್ಟ ಕಾಲ, ದೇಶಗಳ ಹಂಗಿಲ್ಲದೇ, ಸಮುದಾಯದ ಒಳತಿನ ಬಗ್ಗೆ ಕಾಳಜಿ ಇಲ್ಲದೇ, ಲಾಭದ ಬಗ್ಗೆ ಮಾತ್ರ ಗಮನವಿಟ್ಟು ಸಿನಿಮಾ ನಿರ್ಮಾಣಕ್ಕೆ ಇಳಿವ, ಬಹು ಬಂಡವಾಳ ಸುರಿಯುವ ಚಿತ್ರ ನಿರ್ಮಾಪಕರ ಹಾಗೂ ಬಹುರಾಷ್ಟ್ರೀಯ ಚಿತ್ರ ನಿರ್ಮಾಣ ಸಂಸ್ಥೆಗಳು ಒಡ್ಡುವ ಆಮಿಷಕ್ಕೆ ಸಿಲುಕಿ ತೇಲಿ ಹೋದವರ ಸಂಖ್ಯೆಯೇ ಜಾಸ್ತಿ. ತನ್ನತನದ ಬಣ್ಣ, ರುಚಿ, ವಾಸನೆ, ಚಹರೆ ಕಳೆದುಕೊಂಡ ಇಂತಹ ಚಿತ್ರಗಳಿಗೆ ವ್ಯಾಪಕ ಪ್ರಚಾರ ಕೂಡ ಮಾಡುವ ಕಾರ್ಪೊರೇಟ್ ಹಾಗೂ ಸತ್ತೆಯ ಹುನ್ನಾರವೂ ಸೇರಿದಾಗ ಚಿತ್ರಗಳು ಸಪಾಟಾಗಿ, ಏಕರೂಪ ಪಡೆಯುವತ್ತ ಹೆಜ್ಜೆ ಹಾಕತೊಡಗಿದ್ದು ದೊಡ್ಡ ದುರಂತ. ಇಂತಹ ದುರಿತ ಕಾಲದಲ್ಲಿ ಪ್ರವಾಹದ ವಿರುದ್ಧ ಈಜಾಡುವ ಸಾಹಸ ಮಾಡುವವರ ಸಂಖ್ಯೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಾ ಇರುವುದು ಸಂತಸದ ವಿಷಯ. ಉದ್ಯಮದ ಹಿಡಿತ ಬಲವಾದಷ್ಟೂ ಅದನ್ನು ವಿರೋಧಿಸುವ, ಪ್ರತಿರೋಧ ವ್ಯಕ್ತಪಡಿಸುವ ಹಲವು ಅನ್ಯ ಮಾರ್ಗಗಳನ್ನು, ಭಿನ್ನರೀತಿಯ ಅಭಿವ್ಯಕ್ತಿ ಕ್ರಮಗಳನ್ನು ಕಂಡುಕೊಳ್ಳುತ್ತಾ ಹೋದ ನಿರ್ದೇಶಕರ ಕಾಣಿಕೆ ಅಮೋಘ. ಎ. ಎನ್. ಪ್ರಸನ್ನರವರು ಆರಿಸಿದ ಈ ನಲವತ್ತು ಚಿತ್ರಗಳು ಅಂತಹ ಪ್ರಯತ್ನಗಳ ಪರಿಚಯವಾಗಿದೆ. + + + +ಪ್ರಸನ್ನರ ವಿಶೇಷಣೆಯ ಹಿರಿಮೆ ಎಂದರೆ ಒಂದು ಸಿನಿಮಾ ಕೃತಿಯನ್ನು ಸಮುದಾಯದಿಂದ ಬೇರ್ಪಡಿಸಿ ನಿರ್ವಾತದಲ್ಲಿಟ್ಟು ನೋಡುವುದಿಲ್ಲ. ಒಂದು ಕೃತಿಯನ್ನು ವಿಶ್ಲೇಷಣೆ ಮಾಡುವಾಗ ಆ ಕೃತಿ ನಿರ್ಮಾಣವಾದ ದೇಶದ ಹಿನ್ನೆಲೆ, ಅದರ ರಾಜಕೀಯ-ಸಾಂಸ್ಕೃತಿಕ ತುಮುಲಗಳನ್ನು ಪರಿಗಣಿಸಿ ಅದರ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಅಕಿ ಕೌರಸ್ಮಕಿಯ ʻಮ್ಯಾನ್‌ ವಿತೌಟ್‌ ಎ ಪಾಸ್ಟ್‌ʼ ಬಗ್ಗೆ ಬರೆಯುತ್ತ ಫಿನ್‌ಲ್ಯಾಂಡ್ ದೇಶ ಎದುರಿಸುತ್ತಿರುವ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ವಿಶ್ಲೇಷಿಸುತ್ತಾರೆ. ʻಎ ಸೆಪರೇಷನ್ʼ ಬಗ್ಗೆ ಬರೆಯುತ್ತ ಇರಾನಿನ ಉಸಿರುಗಟ್ಟಿಸುವ ವಾತಾವರಣ ಹೇಗೆ ನಿರ್ದೇಶಕ ಅಸ್ಗರ್‌ ಫರ್ಹಾದಿ ಹೊಸತೇ ಆದ ಶೈಲಿಯನ್ನು ಸೃಷ್ಟಿಸಬೇಕಾಯಿತೆಂದು ದಾಖಲಿಸುತ್ತಾರೆ. ಹಿಯಾ ಯಾಂಗ್ಕೆನ ʻಸ್ಟಿಲ್ ಲೈಫ್‌ʼ ಬಗ್ಗೆ ಬರೆಯುತ್ತ ಚೀನಾ ದೇಶದಲ್ಲಿ ಸರ್ಕಾರದ ತೀರ್ಮಾನಗಳು ಜನವಿರೋಧಿಯಾದರೂ‌ ಅವುಗಳನ್ನು ಜನ ಪ್ರತಿಭಟಿಸಲಾಗದ ದುಃಸ್ಥಿತಿಯಲ್ಲಿರುವುದನ್ನು ದಾಖಲಿಸುತ್ತಾರೆ. ಸತ್ತ/ಸರ್ಕಾರದೊಂದಿಗಿನ ತಿಕ್ಕಾಟದ ರಾಜಕೀಯ ಸ್ವರೂಪವನ್ನು ಕಥಾ ಹಂದರದಲ್ಲಿ ಮಾತ್ರ ಪ್ರಸನ್ನ ಅವರು ದಾಖಲಿಸುವುದಿಲ್ಲ. ಸಿನಿಮಾ ಕೃತಿಯೊಂದರಲ್ಲಿ ಆಕೃತಿಯೂ ಆ ಪ್ರತಿರೋಧ ವ್ಯಕ್ತಪಡಿಸುತ್ತದೆ. ಆದರೆ ಸೂಚ್ಯವಾಗಿ. ಸಬ್ ಲಿಮಿನಲ್ ಆಗಿ. ಪ್ರಸನ್ನರ ಕಣ್ಣು ಅಂತಹ ವಿಷಯಗಳನ್ನು ಗಮನಿಸಿ ವಿಶ್ಲೇಷಿಸುವುದರಿಂದ ಈ ಲೇಖನಗಳು ಕೇವಲ ಕಥಾವಸ್ತುವನ್ನು ಮಾತ್ರ ವಿಶ್ಲೇಷಿಸುವ ವಿಮರ್ಶೆಯಾಗದೆ ವಸ್ತು ಮತ್ತು ಅದನ್ನು ಮಂಡಿಸುವ ಕ್ರಮ ಎರಡರ ವಿಶ್ಲೇಷಣೆಯೂ ಆಗಿವೆ. ಆ ಕಾರಣಕ್ಕಾಗಿ ಈ ಬರಹಗಳು ಆಯಾ ಕೃತಿಗಳ ಪರಿಪೂರ್ಣ ಹಾಗೂ ಸಮಗ್ರ ವಿಶ್ಲೇಷಣೆಯೂ ಆಗಿವೆ. + +(ಗಿರೀಶ್‌ ಕಾಸರವಳ್ಳಿ) + +ಜಗತ್ತಿನಲ್ಲಿ ಮೂಡಿದ ಎಲ್ಲ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಈ ನಲವತ್ತು ಸಿನಿಮಾಗಳು ದಾಖಲಿಸುತ್ತವೆ. ಹಾಗಾಗಿ ಈ ಲೇಖನಗಳು ಒಂದು ಸಾರ್ಥಕ ಪ್ರಯತ್ನ ಎಂದು ನನ್ನ ಅನಿಸಿಕೆ. ಹೀಗೆ ಹೇಳುತ್ತಲೇ ಕಳೆದೆರಡು ದಶಕಗಳಲ್ಲಿ ಜಾಗತಿಕ ಸಿನಿಮಾಗಳಲ್ಲಿ ಮೂಡಿಬಂದ ಹೊಸಾ ಶೈಲಿಯಾದ ʻಸ್ಲೋ ಸಿನಿಮಾ ಚಳುವಳಿʼಯ ಒಂದೆರಡು ಕೃತಿಗಳನ್ನು ಪರಿಚಯಿಸಿದ್ದರೆ ಸಾಂದರ್ಭಿಕವಾಗಿ ಇನ್ನಷ್ಟು ಉಪಯುಕ್ತತೆ ಬರುತ್ತಿತ್ತೇನೋ. ಹಾಲಿವುಡ್ ಉದ್ದಿಮೆಯ ಜನಪ್ರಿಯ ಸಿದ್ಧಸೂತ್ರಕ್ಕೆ ಪರ್ಯಾಯವಾಗಿ ಮೂಡಿಬಂದದ್ದೇ ʻಸ್ಲೋ ಸಿನಿಮಾ ಚಳುವಳಿʼ. ಇವು ಮಂದಗತಿಯ ಚಿತ್ರಗಳಲ್ಲ, ಮಂದಶೈಲಿಯ ಚಿತ್ರಗಳು. ಧಾವಂತದ ಇಂದಿನ ಬದುಕಿನಲ್ಲಿ ಘಟನೆಗಳನ್ನು, ವಿವರಗಳನ್ನು ಗಮನಿಸಲೇ ಅಸಾಧ್ಯವಾದ ಇಂದಿನ ದಿನಗಳಲ್ಲಿ ಘಟನೆಗಳನ್ನೆ ಮಂದ ಶೈಲಿಯಲ್ಲಿ ಚಿತ್ರಿಸಿ, ಧ್ಯಾನಸ್ಥ ಸ್ಥಿತಿಯಲ್ಲಿ ವಿಷಯ ಗ್ರಹಿಸುವಂತೆ ಮಾಡುವುದು ಈ ಶೈಲಿಯ ಹೆಗ್ಗಳಿಕೆ. ಇಪ್ಪತ್ತನೆಯ ಶತಮಾನದಲ್ಲಿ ಕಾರ್ಲ್‌ ಡ್ರೈಯರ್‌, ರಾಬರ್ಟ್ ಬ್ರೆಸ್ಸೋನ್, ತಾರ್ಕೋವಸ್ಕಿ ಮುಂತಾದ ಕೆಲವರೇ ಬಳಸಿದ ಈ ಶೈಲಿಯಲ್ಲಿ ಇತ್ತೀಚಿಗೆ ಅನೇಕ ಚಿತ್ರಗಳು ತಯಾರಾಗುತ್ತಿದ್ದು, ಬಹು ಪ್ರಭಾವ ಬೀರುತ್ತಿರುವ ಹೊಸಾ ಶೈಲಿಯಾಗಿದೆ. ಮೆಕ್ಸಿಕೋದ ಕಾರ್ಲೋಸ್‌ ರೆಗೆಡೋಸ್‌, ಫಿಲಿಪೈನ್ಸ್ ದೇಶದ ಲವ್‌ ಡಯಾಸ್, ಮಲೇಷಿಯಾ ಸಂಜಾತ ತೈವಾನ್‌ನ ತ್ಸಾಯಿ ಮಿಂಗ್‌ ಲಿನ್‌ರ ಚಿತ್ರಗಳಲ್ಲಿ ಇವನ್ನು ಕಾಣಬಹುದು. ಹಾಗೆಯೇ ಭಾರತವೂ ಸೇರಿದಂತೆ ಈ ಶೈಲಿಯನ್ನು ಬಳಸುತ್ತಿರುವ ಚಿತ್ರ ನಿರ್ದೇಶಕರು ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟವಾದ ಚಿತ್ರಗಳಿಂದ ಪ್ರಭಾವ ಬೀರುತ್ತಿದ್ದಾರೆ. + + + +ಕೆ.ಪಿ.ಟಿ.ಸಿ.ಎಲ್‌ನಲ್ಲಿ ಅಭ್ಯಂತರರಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಶ್ರೀಯುತ ಎ. ಎನ್‌. ಪ್ರಸನ್ನರವರು ಕಥೆಗಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಮಕ್ಕಳ ಸಾಹಿತ್ಯದ ಅಧ್ವರ್ಯರಾಗಿ ಸಾಹಿತ್ಯ ಕೃಷಿ ಮಾಡುತ್ತ ಬಂದವರು. ಇತ್ತೀಚಿನ ಕೆಲವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲೂ ಕೃಷಿ ಮಾಡುತ್ತಿದ್ದಾರೆ. ಸ್ವತಃ ಚಿತ್ರ ನಿರ್ದೇಶನ, ದೂರದರ್ಶನ ಧಾರಾವಾಹಿಯೂ ಮಾಡುತ್ತಾ ಗಣನೀಯ ಸೇವೆ ನೀಡಿದ್ದಾರೆ. ಸಿನಿಮಾ ಕುರಿತಾಗಿ ಅವರು ಬರೆದ ನಾಲ್ಕನೆಯ ಪುಸ್ತಕವಿದು. ಈ ಪ್ರಸ್ತುತ ಪುಸ್ತಕವು ಇಪ್ಪತ್ತೊಂದನೆಯ ಶತಮಾನದ ಈ ಮೊದಲೆರಡು ದಶಕಗಳಲ್ಲಿ ಜಗತ್ತಿನಾದ್ಯಂತ ಸೃಷ್ಟಿಯಾದ ಸಿನಿಮಾಗಳಲ್ಲಿ ಮುಖ್ಯವಾದ ನಲವತ್ತು ಕೃತಿಗಳನ್ನು ಸಮರ್ಥವಾಗಿ ಕನ್ನಡಿಗರಿಗೆ ಪರಿಚಯಿಸುತ್ತದೆ. ಇಂಗ್ಲಿಷಿನಲ್ಲಿ ವಿಕಿಪೀಡಿಯಾ, ಐ.ಎಂ.ಡಿ.ಬಿ ಮೊದಲಾದ ಜಾಲತಾಣಗಳು ಮಾಡುತ್ತಿರುವ ಕೆಲಸವನ್ನು ಕನ್ನಡದಲ್ಲಿ ಆರಂಭಿಸಿದ ಸಾಧನೆ ಈ ಕೃತಿಯದು. ಅದಕ್ಕಾಗಿ ಪ್ರಸನ್ನ ಅವರನ್ನು ಅಭಿನಂದಿಸುತ್ತೇನೆ. ಸುಮಾರು ನಾಲ್ಕು ದಶಕಗಳ ಒಡನಾಟ, ಸ್ನೇಹ ನಮ್ಮದು. ನನಗೆ ಮುನ್ನುಡಿ ಬರೆಯುವ ಸೌಭಾಗ್ಯ ದೊರಕಿಸಿದ ಪ್ರಸನ್ನರಿಗೆ ವಂದನೆಗಳನ್ನು ಹೇಳುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_149.txt b/Kenda Sampige/article_149.txt new file mode 100644 index 0000000000000000000000000000000000000000..11b6ce74360b203be27193a569c0dfb4f5642a6f --- /dev/null +++ b/Kenda Sampige/article_149.txt @@ -0,0 +1,35 @@ +ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ವು ಕನ್ನಡ ಸಾಹಿತ್ಯದಲ್ಲೇ ಹೊಸ ಪ್ರಯೋಗ. ಧುಮ್ಮಿಕ್ಕಿ ಹರಿಯುವ ನದಿಯು ತನ್ನ ಸೆಳೆತಕ್ಕೆ ಸಿಕ್ಕಿದ್ದೆಲ್ಲವನ್ನೂ ಸ್ವೀಕರಿಸುವಂತೆ ಈ ಕಾವ್ಯ ನದಿಯು ಹಿರಿಕಿರಿದೆಂಬ ಭೇದವಿಲ್ಲದೆ ಸಕಲ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ರಭಸದಿಂದ ಹರಿದಿದೆ. ಎಲ್ಲೂ ನಿಲ್ಲದ ಈ ಪ್ರವಾಹವು ಒಂದರ್ಥದಲ್ಲಿ ಬತ್ತಲಾರದ ಗಂಗೆ. ಹಾಗಾಗಿ ಇದು ‘ಅಕ್ಷಯ ಕಾವ್ಯ’ + +ಈ ಕಾವ್ಯಕ್ಕೆ ಕೇಂದ್ರವಸ್ತು ಇಲ್ಲ. ಕಾವ್ಯವಿಡೀ ಕೇಂದ್ರವೇ. ಕ್ರಮಬದ್ಧತೆ-ಕಟ್ಟುಪಾಡುಗಳಿಗೆ ಒಗ್ಗದ, ಪ್ರತ್ಯೇಕ ಸೂತ್ರ-ಶೀರ್ಷಿಕೆಗಳಿಲ್ಲದ ಈ ಕಾವ್ಯವನ್ನು ಓದಿ ಆಸ್ವಾದಿಸಲು ಯಾವ ತೊಡಕೂ ಇಲ್ಲ. ಎಲ್ಲೇ ಓದನ್ನು ಆರಂಭಿಸಿ ಎಲ್ಲೇ ನಿಲ್ಲಿಸಿದರೂ ಕಾವ್ಯದ ಆಸ್ವಾದನೆಗೆ ತೊಂದರೆಯಾಗುವುದಿಲ್ಲ. ಕಾವ್ಯವನ್ನು ಇಡಿಯಾಗಿ ಅಥವಾ ಬಿಡಿಬಿಡಿಯಾಗಿ ಓದಿದರೂ ಕಾವ್ಯದ ತಾತ್ವಿಕತೆಯನ್ನು ಗ್ರಹಿಸಲು ಕಷ್ಟವಾಗುವುದಿಲ್ಲ. + +‘ಅಕ್ಷಯ ಕಾವ್ಯ’ ಹೇಗಿದೆ? ಅದರೊಳಗೆ ಏನಿದೆ? ಎಂಬ ಪ್ರಶ್ನೆಗೆ ಎಲ್ಲವೂ ಇದೆ ಎಂಬುದೇ ಉತ್ತರ. ಮನುಕುಲದ ವರ್ತನೆ, ಅವರ ಚರ್ಯೆಗಳು, ಕರ್ಮಪ್ರವೃತ್ತಿ, ಮನುಷ್ಯ ನಡೆದು ಬಂದ ದಾರಿ ಮತ್ತು ಇನ್ನು ಮುನ್ನಡೆಯಬೇಕಾದ ಹಾದಿಗಳನ್ನು ಕುರಿತ ಚಿಂತನೆ ದೇಶ ಕಾಲಾತೀತ ನೆಲೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಈ ಕಾವ್ಯವು ಮನುಷ್ಯ ಜೀವನದ ಆಗುಹೋಗುಗಳು ಮತ್ತು ವಾಸ್ತವದ ಪ್ರತಿರೂಪವಾಗಿದೆ. ಕೇವಲ ಭ್ರಮೆಯಲ್ಲಿ ಕಳೆದುಹೋಗುವ, ಮಹಾ ಮಹಾ ಸಿದ್ಧಾಂತಗಳಿಂದ ಭಾರವಾಗಿರುವ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಜೀವನೋತ್ಸಾಹ ಮತ್ತು ಪ್ರೀತಿಗಳನ್ನು ಪ್ರತಿಬಿಂಬಿಸುವ ಇಂಥ ಕಾವ್ಯದ ಅಗತ್ಯವಿದೆ. + +ಕಾವ್ಯದ ಭಿತ್ತಿಯಲ್ಲಿ ಜೀವನದರ್ಶನ ಅರಳಿದೆ. ಸಿದ್ಧಶೈಲಿಗೆ ಜೋತುಬೀಳದ ಕಾವ್ಯದಲ್ಲಿ ಸಂದರ್ಭಕ್ಕೆ ತಕ್ಕಂತೆ ಪಾತ್ರ, ಶೈಲಿ ಮತ್ತು ವಿವರಗಳು ಬದಲಾಗುತ್ತಾ ಹೋಗುತ್ತವೆ. ಪಾಶ್ಚಾತ್ಯ ಸಾಹಿತ್ಯ ಕೃತಿ-ಕರ್ತೃಗಳ ಪ್ರಸ್ತಾಪ ಬಹಳಷ್ಟಿದೆ. “ಇಲ್ಲಿನ ಕಾವ್ಯ ಖಂಡಗಳನ್ನು ಓದುತ್ತ ಓದುತ್ತ ಜೀವನವೆಂಬ ಮಹಾಕಾವ್ಯದ ದರುಶನ ಸಿಕ್ಕಿದರೆ ಆಶ್ಚರ್ಯವಿಲ್ಲ. ಅದರಲ್ಲಿ ಈ ಬದುಕಿನ ಗೂಢಗಳ ವಿಸ್ಮಯದ ಬಗ್ಗೆ ಚಿಂತಿಸಿದ ಜಗತ್ತಿನ ಅನೇಕಾನೇಕ ದಾರ್ಶನಿಕ ಹೊಳಹುಗಳ ಉಲ್ಲೇಖವೂ ಇದೆ. ಶೋಧನೆ ಮಾತ್ರ ಮುಂದುವರಿಯುತ್ತಲೇ ಇರುತ್ತದೆ. ಯಾವ ದರ್ಶನವೂ ಸಮಗ್ರವಾಗಲಾರದು. ಪರಿಪೂರ್ಣವಾಗಲಾರದು. ಅದಕ್ಕೆ ಕೊನೆಯೆಂಬುದೇ ಇಲ್ಲ. ಈ ಕಾರಣದಿಂದ ‘ಅಕ್ಷಯ ಕಾವ್ಯ’ದ ಓದು ಪರಿಪೂರ್ಣವಾದ ಅನುಭವವನ್ನು ಕೊಡುತ್ತದೆ. ಅನುಭಾವವನ್ನು ಕಲಿಸುತ್ತದೆ. ಕವಿಯೊಳಗಿನ ದಾರ್ಶನಿಕ, ದಾರ್ಶನಿಕನೊಳಗಿನ ಕವಿ ಸಮರಸದಿಂದ ಬೆರೆತ ಹದ ಈ ಕಾವ್ಯದ್ದು” ಎನ್ನುವ ಡಾ. ಯು. ಮಹೇಶ್ವರಿ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು (ಗಡಿನಾಡಿನ ಬಾನಾಡಿ ಪ್ರತಿಭೆ ಡಾ. ಕೆ.ವಿ. ತಿರುಮಲೇಶ್- ಪುಟ ೧೩) ಹೋಮರ್, ದೋಸ್ತೋವ್‌ಸ್ಕಿ, ಕಾಫ್ಕ, ಯೇಟ್ಸ್, ಬ್ರಾಖ್, ಷಿಲ್ಲರ್ ಮೊದಲಾದವರು ತಮ್ಮ ತತ್ವ ಚಿಂತನೆಗಳೊಂದಿಗೆ ಬಂದು ಹೋಗುತ್ತಾರೆ. ಈ ಸಾಹಿತಿಗಳ ಕೃತಿಗಳನ್ನು ಓದುವ ಮೂಲಕ ಇವರ ತತ್ವಚಿಂತನೆಗಳನ್ನು ಅರಗಿಸಿಕೊಳ್ಳುವುದು ಸಾಮಾನ್ಯ ಜನರ ಪಾಲಿಗೆ ತೀರಾ ಕಷ್ಟ. ಇಂಥ ಸಂದರ್ಭದಲ್ಲಿ ಅವರ ಬರಹಗಳ ಮರ್ಮವನ್ನರಿತ ತಿರುಮಲೇಶರು ಕೃತಿಗಳಲ್ಲಿ ಅಡಕಗೊಂಡ ತತ್ವಗಳನ್ನು ಸರಳವಾಗಿ ನಿರೂಪಿಸುವಾಗ ಪಾಶ್ಚಾತ್ಯ-ಪೌರಾತ್ಯ ಭೇದವಿಲ್ಲದೆ ಇವರೆಲ್ಲರೂ ಓದುಗರಿಗೆ ಹತ್ತಿರವಾಗುತ್ತಾರೆ. + +‘ಅಕ್ಷಯ ಕಾವ್ಯ’ವನ್ನು ರಚಿಸುವುದರ ಮೊದಲೇ ತಿರುಮಲೇಶರು ಪ್ರಯೋಗಶೀಲರಾಗಿಯೇ ಮುಂದುವರಿದವರು ಎಂದು ಅವರ ಹಿಂದಿನ ಸಂಕಲನಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ. ‘ಅವಧ’ ಮತ್ತು ‘ಪಾಪಿಯೂ’-ಈ ಎರಡು ಕೃತಿಗಳನ್ನು ಮುಖ್ಯವಾಗಿಟ್ಟುಕೊಂಡು ಡಾ. ಸಿ. ಎನ್. ರಾಮಚಂದ್ರನ್ ಅವರು ತಿರುಮಲೇಶರ ಕಾವ್ಯದ ಮುಖ್ಯ ಕಾಳಜಿಗಳನ್ನು ಹೀಗೆ ಗುರುತಿಸುತ್ತಾರೆ. “ಕಾಲ ಮತ್ತು ವ್ಯಕ್ತಿಗಳ ನಡುವಿನ ಸಂಕೀರ್ಣ ಸಂಬಂಧ ಅಥವಾ ಸಂಬಂಧವಿಲ್ಲದಿರುವುದು ಇವರನ್ನು ಕಾಡುವ ಪ್ರಶ್ನೆ” (ಕೆ.ವಿ.ತಿರುಮಲೇಶರ ಸಾಹಿತ್ಯ- ಪುಟ ೬೭ ಸಂ: ಗಿರಡ್ಡಿ ಗೋವಿಂದರಾಜ) ಇದಕ್ಕೆ ಸಮರ್ಥನೆಯನ್ನು ಒದಗಿಸುವ ಕವಿತೆಗಳು ಈ ಕೃತಿಗಳಲ್ಲಿ ಹೇರಳವಾಗಿ ದೊರಕುತ್ತವೆ. + +ತಿರುಮಲೇಶರ ಕವಿತೆಗಳಲ್ಲಿ ಬರುವ ಕಾಲ-ದೇಶಗಳ ವ್ಯಾಪ್ತಿ ವಿಸ್ತಾರಗಳ ಬಗ್ಗೆ ಓ. ಎಲ್. ನಾಗಭೂಷಣ ಸ್ವಾಮಿಯವರು ಹೇಳಿದ ಮಾತುಗಳು ಪರಿಶೀಲನಾರ್ಹವಾಗಿವೆ. + + + +“ಅವರ ಕವಿತೆಯಲ್ಲಿ ದೇಶವಿಸ್ತಾರ ಮತ್ತು ಕಾಲವಿಸ್ತಾರಗಳೆರಡೂ ಓದುಗರಿಗೆ ಎದುರಾಗುತ್ತವೆ. ದೇಶವೆನ್ನುವುದು ಮೊದಮೊದಲ ನವ್ಯಚಹರೆಯ ಪದ್ಯಗಳಲ್ಲಿ ಕೇವಲ ಅಂತರಂಗದ ಭಾವದೇಶಕ್ಕಷ್ಟೇ ಸೀಮಿತವಾಗಿದ್ದರೆ ಅದೇ ಕಾಲದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಂಡು ಮುಂದೆ ಹೇರಳವಾಗಿ ದೊರೆಯುವ ಪ್ರದೇಶ ವಿಸ್ತಾರವಿದೆ. ಕುಂಬಳೆಯಂಥ ಪುಟ್ಟ ಊರು, ಪಟ್ಟಣದಿಂದ ಆರಂಭವಾಗಿ ಕೇರಳದ ನಾಡನ್ನೂ ಒಳಗೊಂಡು ಹೈದರಾಬಾದ್, ಹಿಮಾಲಯದ ಹೃಷಿಕೇಶ, ಇಂಗ್ಲೆಂಡ್, ಯುರೋಪಿನ ದೇಶಗಳವರೆಗೆ ಈ ದೇಶ ವಿಸ್ತಾರ ಹಬ್ಬುತ್ತದೆ. ಮಹಾಭಾರತದ ಕಾಲ, ಗೌತಮ ಅಹಲ್ಯೆಯರ ಪೌರಾಣಿಕ ಕಾಲ, ಈಜಿಪ್ತು ಮೆಸಪೊಟೋಮಿಯಾಗಳ ನಾಗರಿಕತೆಯ ಆರಂಭದ ಕಾಲ ಈ ಎಲ್ಲಾ ವಿಸ್ತಾರಗಳಲ್ಲಿ ತಿರುಮಲೇಶರ ಕಾವ್ಯ ವ್ಯವಹರಿಸುತ್ತದೆ. ಕಾಲ ಯಾವುದಾದರೂ ದೇಶ ಯಾವುದಾದರೂ ವಸ್ತುವನ್ನು ಗ್ರಹಿಸುವ ಪ್ರಜ್ಞೆಯ ಸಂದಿಗ್ಧ ಸ್ಥಿತಿ ಮತ್ತು ತೀರ್ಮಾನದ ನೆಲೆಯನ್ನು ಒಲ್ಲದ ಮನೋಭಾವ ಹಾಗೆಯೇ ಇರುತ್ತದೆ” (ಕೆ.ವಿ. ತಿರುಮಲೇಶರ ಸಾಹಿತ್ಯ- ಪುಟ ೫- ಸಂ: ಗಿರಡ್ಡಿ ಗೋವಿಂದರಾಜ) + +ಇಂಥ ಕಾವ್ಯ ಪ್ರಜ್ಞೆಯನ್ನು ಹೊಂದಿರುವ ತಿರುಮಲೇಶರ ‘ಅಕ್ಷಯ ಕಾವ್ಯ’ವು ತನ್ನದೇ ಆದ ‘ತಿರುಮಲೇಶತನ’ದಿಂದ ಸಮೃದ್ಧವಾಗಿದೆ. + +‘ಅಕ್ಷಯ ಕಾವ್ಯ’ವು ತಿರುಮಲೇಶರ ಕಾವ್ಯದ ಕಾಳಜಿಯನ್ನು ವಿಸ್ತಾರವಾಗಿ ಬಿಚ್ಚಿಡುತ್ತದೆ. ಮನುಷ್ಯ ಪ್ರಪಂಚವೇ ಇಲ್ಲಿನ ವಸ್ತು. ಇವರ ‘ಮುಖಾಮುಖಿ’, ‘ಪಾಪಿಯೂ’ ಸಂಕಲನಗಳನ್ನು ಓದಿದವರಿಗೆ ‘ಅಕ್ಷಯ ಕಾವ್ಯದ ವಸ್ತು ಪ್ರಪಂಚ, ಕವಿತೆಯನ್ನು ಹೇಳುವ ರೀತಿ ಅಪರಿಚಿತವೆನಿಸಲಾರದು. ವಿಶಾಲವಾದ ಓದು ಮತ್ತು ತತ್ವಚಿಂತನೆಗಳಿಂದ ಪಕ್ವಗೊಂಡ ಕವಿಯ ಮನಸ್ಸು ಈ ಬೃಹತ್ ಕಾವ್ಯವನ್ನು ಸೃಷ್ಟಿಸಿದೆ. + +ಓದು ಈ ಕಿಡಿಗೇಡಿಗಳ ಬರಹಅರಸರ ಶಾಸನಗಳಂತಿರುವ ಗ್ರಾಫಿಟಿಗಳಸತ್ಯವಾಕ್ಯಗಳಾಗಿದ್ದರೆ ಅವನ್ನುಶಿಲೆಯಲ್ಲಿ ಯಾಕೆ ಬರೆಯಬೇಕಿತ್ತು ನೀರಲ್ಲಿಬರೆಯಬೇಕಿತ್ತು ಶಾಶ್ವತ(ಪುಟ ೧೫) + +ಎಂದು ಬರೆಯುವ ತಿರುಮಲೇಶರ ಕಾವ್ಯವು ಪುರಾಣ, ಇತಿಹಾಸ, ಮಹಾಕಾವ್ಯ, ತತ್ವಜ್ಞಾನ, ಸಮುದ್ರ, ಅನೇಕ ದೇಶ ಭೂಖಂಡಗಳನ್ನೊಳಗೊಂಡು ಅವರವರ ಓದು, ಅನುಭವ ಮತ್ತು ಸಂವೇದನೆಗೆ ತಕ್ಕಂತೆ ರೂಪುಗೊಳ್ಳುತ್ತಾ ಹೋಗುತ್ತದೆ. ಇದುವರೆಗಿನ ಕನ್ನಡದ ಮಹಾಕಾವ್ಯಗಳಲ್ಲಿರುವಂತೆ ಒಂದು ಕತೆ ಇಲ್ಲ. ಆದ್ದರಿಂದ ಇದು ಓದುಗರ ಮನದಲ್ಲಿ ರೂಪುಗೊಳ್ಳಬಹುದಾದ ಕತೆಯೂ ಹೌದು; ಕವಿತೆಯೂ ಹೌದು. + +“ನೋಡಿ ಅವ ಎದ್ದೇ ಬಿಟ್ಟ. ನಾನಿನ್ನು ಕೂತಿರಲು ಸಾಧ್ಯವೇ ಇಲ್ಲ” ಎಂಬ ಸಾಲು ಅಥವಾ ಧ್ವನಿಯು ಏನೆಂದರಿಯದೆ ಏಕೆಂದರಿಯದೆ ಕಚ್ಚಾಡುವ ಮಂದಿಯ ತವಕ, ತಲ್ಲಣ ಮತ್ತು ದಮನಕಾರಿ ಮನೋವೃತ್ತಿಯನ್ನು ಬಯಲಿಗೆಳೆಯುತ್ತದೆ. ಈ ಕಾವ್ಯಕ್ಕೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳ ಕುರಿತು ವಿವಿಧ ನೆಲೆಗಳಲ್ಲಿ ಚಿಂತನೆಗೊಳಪಡಿಸುವ ಧ್ವನಿ ಪ್ರಾಪ್ತವಾಗಿದೆ. ಇಂಗ್ಲೆಂಡಿನಿಂದ ತಂದ ಮಿರಮಿರ ಮಿಂಚುವ ಸ್ವಚ್ಛ ಬೂಟುಗಳು ಊರಿನ ಕೊಳೆತ ಸಸ್ಯಾವಳಿಯ, ನೊಣ ಹಾರುವ ಗಲೀಜು ಬೀದಿಗೆ ಹೊಂದಲಾರದ ಪರಿಸ್ಥಿತಿಯು ಹಳ್ಳಿ ನಗರಗಳ ನಡುವಿನ ಬಿರುಕನ್ನು ಒಂದೇ ಮಾತಿನಲ್ಲಿ ವಿವರಿಸುತ್ತದೆ. ಕಾಚಿಗುಡ ನಿಲ್ದಾಣದಲ್ಲಿನ ಎಲ್ಲ ಹೊಸ ಯಾತ್ರಿಕರು, ಆದರೂ ಹೊಸದಾಗಿರದ ಅವರ ಮುಖಭಾವ ಎಲ್ಲೆಲ್ಲೋ ಎಷ್ಟೋ ಸಾರಿ ಕಂಡಂತೆನಿಸುವ ಭಾವಗಳೆಲ್ಲವೂ ಹೇಳಿಕೊಳ್ಳಲಾಗದ ತುಡಿತ, ಸಂಬಂಧಕ್ಕೆ ತೆರೆದುಕೊಳ್ಳಬಯಸುವವನ ಎದೆಯ ಮಿಡಿತಗಳನ್ನು ದಾಖಲಿಸುತ್ತದೆ. ಅಂತೆಯೇ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಮನೋಸ್ಥಿತಿಯನ್ನೂ, ಗುಂಪಿನಲ್ಲಿ ಏಕಾಕಿಯೆನಿಸಿಕೊಳ್ಳುವ ಅವಸ್ಥೆಯನ್ನೂ ಕಟ್ಟಿಕೊಡುತ್ತದೆ. ಮಗಳ ಸ್ಕೂಲ್ ಬ್ಯಾಗಿನೊಳಗಿನ ಹಕ್ಕಿಯ ಗರಿ, ಒಣಹೂವಿನ ದಳ, ಪರಿಮಳದ ರಬ್ಬರ್‌ಗಳು ಬದಲಾಗಿ ಕ್ರಮೇಣ ಬೇರೇನೋ ವಸ್ತುಗಳು ಬರುವುದು ಜಗತ್ತಿನ ಬೆಡಗು ಬೆರಗುಗಳು ಮತ್ತು ಮಾನವೀಯ ಸಂಬಂಧಗಳತ್ತ ವ್ಯಕ್ತಿಯೊಬ್ಬನು ತೋರುವ ಅಗಾಧ ವಿಸ್ಮಯದ ಪ್ರತೀಕ. ಅಂತೆಯೇ ಪ್ರತಿ ತಂದೆಯೂ ಜೋಕರ್ ಎನಿಸಿಕೊಳ್ಳುವುದು, ಜೊತೆಯಾಗಿ ಬಂದ ರಾಜ ಮತ್ತು ವಿದೂಷಕ ಕೊನೆಗೆ ಒಬ್ಬನೇ ಆಗಿಬಿಡುವುದು ಬದುಕಿನ ವ್ಯಂಗ್ಯ. + +ಹಾದಿಯ ನಡುವೆ ರೋಡ್ ರೋಲರ್ ನಿಂತು ಬಿಡುವುದು, ಎಷ್ಟು ಎಳೆದರೂ ಬರದೇ ಇದ್ದಾಗ “ಕ್ರಮೇಣ ಮಾರ್ಗ ಕ್ರಮಿಸದೆ ಇದ್ದೀತೆ” ಎಂಬ ಒಂದೇ ನಂಬಿಕೆಯಲ್ಲಿ ವ್ಯಕ್ತಿಯು ದೂರಕ್ಕೆ ದೃಷ್ಟಿ ಹಾಯಿಸುವುದು- ಮನುಷ್ಯರ ತಟಸ್ಥ ಬದುಕಿಗೊಡ್ಡಿದ ಸಮರ್ಥ ರೂಪಕ. ಜೀವನದ ಹಾದಿಯಲ್ಲಿ ಎದುರಾಗುವ ಒತ್ತಡಗಳ ನಡುವೆ ಎದ್ದು ಕಾಣುವ ಭರವಸೆಯ ಪ್ರತೀಕ. ಬದುಕಿನಲ್ಲಿ ನಿತ್ಯವೂ ಕಾಣುವ ಇಂಥ ಅನುಭವಗಳು ಪರಿಚಿತವೆಂದೆನಿಸಿದರೂ ಸಾಮಾನ್ಯ ಸಂಗತಿಯ ಮೂಲಕ ಜೀವನಕ್ಕೆ ಬೇಕಾದ ದಾರ್ಶನಿಕ ಹೊಳಹುಗಳನ್ನು ಹೊಳಪಿಸುವ ಕ್ರಮ ನಿಜಕ್ಕೂ ಬೆರಗುಗೊಳಿಸುವಂಥದ್ದು. ಸದಾ ಆಶಾವಾದಿಯಾಗಿರುವ ತಿರುಮಲೇಶರೊಳಗಿನ ದಾರ್ಶನಿಕ ಯಾವತ್ತೂ ಜಾಗೃತನಾಗಿರುತ್ತಾನೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ. + +ನೆನಪುಗಳು ಬೆಚ್ಚಗೆ ಉಳಿಯುತ್ತವೆ. ಗತವೊಂದೇ ನಿರ್ದಿಷ್ಟ. ಭವಿಷ್ಯವೆಂಬುದು ಒಣಕಲ್ಪನೆ. ವರ್ತಮಾನವು ಹಿಡಿಯಲು ಅಸಾಧ್ಯವಾದ ಮಹಾಮಾಯೆ ಎಂಬ ವಿಚಾರಗಳು ‘ಅಕ್ಷಯ ಕಾವ್ಯ’ದ ಸಾಲುಗಳಲ್ಲಿ ಮೂಡಿವೆ. ಸೋಗಲಾಡಿಗಳ, ಗೋಮುಖ ವ್ಯಾಘ್ರರ ನಡುವೆ ಬದುಕುವ ಕಷ್ಟ ಇಲ್ಲಿದೆ. ಕವಿತೆಯು ಅಸಾಧ್ಯತೆಗಳಿಂದ ಉಂಟಾಗುತ್ತದೆ ಎಂಬ ಮಾತು ಕಾವ್ಯ ಸತ್ಯವಾಗಿ ಪರಿಣಮಿಸಿದೆ. + + + +‘ಅಕ್ಷಯ ಕಾವ್ಯ’ವನ್ನು ಓದಿದಾಗ ಮನುಕುಲದ ಜೀವನ ಚಿತ್ರಣ ಲಭಿಸುತ್ತದೆ. ಕಾವ್ಯವನ್ನು ಓದಿ ಸವಿಯುವುದರೊಂದಿಗೆ ಅದರ ಅರ್ಥವನ್ನರಿತುಕೊಳ್ಳಲು ಒತ್ತಾಯಿಸುವ ಮಹತ್ವದ ಕೃತಿ ಇದು. + +ಡಾ. ಸುಭಾಷ್‌ ಪಟ್ಟಾಜೆ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ  ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದು, ಪ್ರಸ್ತುತ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಕತೆಗಾರರಾದ ಇವರ ಕತೆ, ಕವಿತೆ, ಲೇಖನ ಮತ್ತು 200ಕ್ಕೂ ಮಿಕ್ಕಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನ ಪತ್ರಿಕೆ, ಮಾಸ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಬಿತ್ತರಗೊಂಡಿವೆ. ‘ಗೋಡೆ ಮೇಲಿನ ಗೆರೆಗಳು’  (ಕಥಾ ಸಂಕಲನ) ‘ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್’ ಹಾಗೂ  ‘ಕಥನ ಕಾರಣ’ (ಸಂಶೋಧನ  ಕೃತಿ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_15.txt b/Kenda Sampige/article_15.txt new file mode 100644 index 0000000000000000000000000000000000000000..e4b19653eadd263043d86e2d5c80e200699443ec --- /dev/null +++ b/Kenda Sampige/article_15.txt @@ -0,0 +1,83 @@ +ಅದೂ ದೇಶ ನವ ಆರ್ಥಿಕತೆಗೆ, ಕಂಪ್ಯೂಟರ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಆರಂಭಿಕ ವರ್ಷಗಳಲ್ಲಿ! ನಾನು ಅದೆಷ್ಟು ಪುಳಕಿತನೂ ಆನಂದ ತುಂದಿಲನೂ ಆಗಿದ್ದಿರಬಹುದೆಂದು ನೀವು ಯೋಚಿಸಬಹುದಲ್ಲವೇ!? + +ಆದರೆ, ವಾಸ್ತವವಾಗಿ ಆ ದಿನ ನಾನು ಕಂಪ್ಯೂಟರ್ ಕ್ಲಾಸ್‌ಗೆ ಹೋಗದೆ ಹೊಟ್ಟೆ ನೋವಿನ ಸುಳ್ಳು ನೆಪ ಹೇಳಿ ‘ಕಳ್ ಪೇಷಂಟ್’ಗಳ ಪಟ್ಟಿ ಸೇರಿ ಡಾರ್ಮಿಟರಿಯಲ್ಲೇ ಉಳಿದು ಬಿಟ್ಟಿದ್ದೆ! + +ಇದಕ್ಕೆಲ್ಲಾ ಕಾರಣ, ನಮ್ಮ ಬ್ಯಾಚಿನ ಕೊನೆಯವನಾಗಿ ಶಾಲೆಗೆ ಸೇರಿದ ನನಗೆ ಈ ಮೊದಲೇ ಶಾಲೆಗೆ ಸೇರಿ ನನ್ನ ಪಾಲಿಗೆ ‘ಸೀನಿಯರ್’ಗಳಂತಾಗಿದ್ದ ನನ್ನ ತರಗತಿ ಮಿತ್ರರು ‘ಕಂಪ್ಯೂಟರ್ ಸರ್’ರನ್ನೂ ಅವರ ತರಗತಿಯನ್ನೂ ವರ್ಣಿಸಿದ ಪರಿ ಹಾಗಿತ್ತು! + +ಅವರ ವರ್ಣಿಕೆಯಲ್ಲೇನೂ ಅನೈಜತೆಯಾಗಲಿ, ಉತ್ಪ್ರೇಕ್ಷೆಯಾಗಲಿ ಇರಲಿಲ್ಲ ಬಿಡಿ. ಕಂಪ್ಯೂಟರ್ ತರಗತಿಯೆಂಬುದನ್ನು ಅಟೆಂಡ್ ಮಾಡುವುದಕ್ಕಿಂತ ‘ಕಳ್ ಪೇಷಂಟ್’ಗಳ ಪಟ್ಟಿ ಸೇರುವುದು ಎಷ್ಟೋ ವಾಸಿ ಎಂಬ ಅನುಭವ ಮೊದಲ ತರಗತಿಯನ್ನು ಅಟೆಂಡ್ ಮಾಡಿದ ಯಾರಿಗಾದರೂ ಆಗುವಂತದ್ದೇ ಆಗಿತ್ತು. + +***** + +ಮೊದಲನೆಯದಾಗಿ, ನಮ್ಮ ಕಂಪ್ಯೂಟರ್ ಸರ್ ಸರಿಸುಮಾರು ಆರು ಅಡಿಗೂ ಎತ್ತರದ ನೂರರ ಲೆಕ್ಕದ ತೂಕದ ಅಜಾನುಬಾಹುವಾಗಿದ್ದರು. ನೋಡುತ್ತಿದ್ದರೆ ನಾವು ಶಾಲಾ ಲೈಬ್ರರಿಯಲ್ಲಿ ಕುಳಿತು, ವೀಡಿಯೋ ಕ್ಯಾಸೆಟ್ ಹಾಕಿ ಬಿಟ್ಟ ಕಣ್ಣು ಬಿಟ್ಟಂತಹೇ ನೋಡುತ್ತಿದ್ದ “ಗಲಿವರ ಲಿಲಿಪುಟ್” ಸಿನೆಮಾದ ಗಲಿವರನನ್ನೇ ನೆನಪಿಸುವಂತಿದ್ದರು. + +ಇಂತಹ ದೈತ್ಯದೇಹಿ ಗಲಿವರ ಜಗದೆಲ್ಲಾ ಗಂಭೀರತೆ, ರೌದ್ರವತೆ, ಕಠೋರತೆಗಳನ್ನು ಆವಾಹಿಸಿಕೊಂಡವರಂತೆ ತರಗತಿಯೊಳಗೆ ಬಂದರೆ, ಬಂದವರೇ ತಮ್ಮ ಬಿಗು ಮುಖವನ್ನು ಮತ್ತಷ್ಟು ಬಿಗಿಯಾಗಿಸಿಕೊಂಡು ಪಾಠ ಬೋಧನೆ ಆರಂಭಿಸಿದರೆ ಲಿಲಿಪುಟ್‌ಗಳಾಗಿದ್ದ ನಮ್ಮ‌ ಕತೆ ಏನಾಗಿರಬೇಡ!? + +ಅದೂ ಹೇಳಿ ಕೇಳಿ ಈಗಿನಂತೆ ಮೌಸ್ ಕ್ಲಿಕ್, ಸ್ಕ್ರೀನ್ ಟಚ್ ಗಳ ಅಥವಾ ಪೆನ್ ಡ್ರೈವ್, ಸಿ.ಡಿ ಗಳ ಜಮಾನವಲ್ಲ! ಮಾತೆತ್ತಿದರೆ ಪ್ರತಿಯೊಂದಕ್ಕೂ ಉದ್ದುದ್ದನೆಯ ಪ್ರೋಗ್ರಾಂಗಳು, ಫ್ಲೋಚಾರ್ಟ್‌ಗಳು, ಶಾರ್ಟ್ ಕಟ್ ಕೀಗಳು, ಕಂಟ್ರೋಲ್ ಕೀಗಳು, ಕಮಾಂಡ್‌ಗಳು ಎಂದು ತಲೆ ಕೆಡಿಸಿಕೊಳ್ಳಬೇಕಿದ್ದ, ಪ್ರತಿಯೊಂದಕ್ಕೂ ಹೆಚ್ಚಿನ ವಿವರಣೆ ಬೇಕಿದ್ದ ಕಾಲ! + +ಇಂತಹ ಕಾಲದಲ್ಲಿ ನಮ್ಮ ಕಂಪ್ಯೂಟರ್ ಸರ್ ಪಾಠ ಬೋಧನೆ ಎಂದರೆ ತಾನು ಹೇಳ ಬೇಕಿಂದಿರುವುದನ್ನೆಲ್ಲಾ ತನ್ನ ಪಾಡಿಗೆ ತಾನು ಹೇಳಿಬಿಡುವುದೆಂದು ದೃಢವಾಗಿ ನಂಬಿದಂತಿತ್ತೇ ವಿನಃ ಕೇಳುಗರ ಸ್ಥಿತಿಗತಿಗಳ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಂತಿರಲಿಲ್ಲ. ಅದಕ್ಕೆಂದೇ ತಾನು ಬೋಧನೆ ಮಾಡುತ್ತಿರುವುದು ಬಹುತೇಕ ಕನ್ನಡ ಮಾಧ್ಯಮ ಶಾಲೆಗಳಿಂದ ಬಂದ, ಸರಿಯಾಗಿ ಇಂಗ್ಲಿಷ್ ಬಾರದ ಮಕ್ಕಳ ಮುಂದೆ ಎಂಬ ಅರಿವಿದ್ದರೂ ಅಪ್ಪಿ ತಪ್ಪಿಯೂ ಕನ್ನಡ ಪದವೊಂದನ್ನು ಬಳಸನೆಂದು ಪ್ರತಿಜ್ಞೆ ಮಾಡಿದವರಂತೆ ಪಾಠ ಬೋಧಿಸುತ್ತಿದ್ದರು. + +ಅಷ್ಟೇ ಆಗಿದ್ದರೆ ಪರ್ವಾಗಿರಲಿಲ್ಲವೇನೋ! ಮುಂದುವರೆದು, ‘ತಮ್ಮ ವಿದ್ಯಾರ್ಥಿ ಮಹಾಶಯರು ಪ್ರಶ್ನೆಯನ್ನೇ ಸರಿಯಾಗಿ ಅರ್ಥಮಾಡಿಕೊಳ್ಳದೆ ಉತ್ತರವನ್ನು ಹೇಗೆ ತಾನೇ ನೀಡುವರು!’ ಎಂಬ ಸಾಮಾನ್ಯ ತಿಳುವಳಿಕೆಯನ್ನೂ ಮೀರಿ ಪಾಠದ ಮಧ್ಯೆ ಮಧ್ಯೆ ಪ್ರಶ್ನೆ ಕೇಳಿ ಸರಿಯಾಗಿ ಬಾರಿಸುತ್ತಿದ್ದರು. + +ಬಾರಿಸುವುದೆಂದರೆ ಸಾಮಾನ್ಯವೇನಲ್ಲ. ತಮ್ಮ ಕೈಯ ಮುಷ್ಟಿಯನ್ನು ಬಿಗಿದು ಸುತ್ತಿಗೆಯಂತೆ ಮಾಡಿ ಥೇಟು ಆನೆಯೊಂದು ಸೊಂಡಿಲ ತುದಿ ಮಡುಚಿ ಹಿಡಿದು ತಲೆ ಮೇಲೆ ಬಡುಚುವಂತೆ ಸರಿಯಾಗಿ ನೆತ್ತಿಯ ಮೇಲೆ ಕುಟುಕುತ್ತಿದ್ದರು. ಹೀಗೆ ಕುಟುಕಿಸಿ ಕೊಂಡವರಿಗೋ ಯಾವುದೋ ಬಂಡೆ ಜಾರಿ ಥಟ್ಟನೆ ತಲೆಯ ಮೇಲೆ ಬಿದ್ದಂತೆ ಅನುಭವವಾಗುತಿತ್ತು. ಅದು ಅಲ್ಲಿಗೆ ನಿಲ್ಲದೇ ‘ಏನಾಯ್ತು!’ ಎಂದು ಯೋಚಿಸುವಷ್ಟರಲ್ಲಿ ಮತೊಮ್ಮೆ ಮಗದೊಮ್ಮೆ ಅದೇ ಅನುಭವವಾಗುತ್ತಾ ಸಾಗಿ ಕಣ್ಣು ಕತ್ತಲಾದಂತಾಗಿ ಅಕ್ಷರಶಃ ನರಕ ಯಾತನೆ ಎಂದರೇನೆಂಬುದರ ಅನುಭವವಾಗುತಿತ್ತು. + +ಆ ನರಕ ಯಾತನೆ ಅನುಭವಿಸಿದವರು ಒಬ್ಬಿಬ್ಬರಾಗಿದ್ದರೆ ಅನುಭವಿಸಿದವರಿಗೇ ಗೊತ್ತು ಎನ್ನಬಹುದಾಗಿತ್ತಾದರೂ ಅನುಭವಿಸಿದವರ ಸಂಖ್ಯೆ ಸಚಿನ್ ಸಿಡಿಸಿದ ಸೆಂಚುರಿಗಳ ಪಟ್ಟಿಯನ್ನೂ ಮೀರಿಸುವಂತಿದ್ದರಿಂದ ಅನುಭವಿಸಿದವರೆಲ್ಲರಿಗೂ ಗೊತ್ತು ಎನ್ನುವುದೇ ಸೂಕ್ತವೆನಿಸೀತು. + +ಸರಿ, ಈ ಕತೆ ಪಾಠ ಬೋಧನೆಗಷ್ಟೇ ಸೀಮಿತಗೊಂಡಿದ್ದರೆ ‘ಸದ್ಯ ಪರ್ವಾಗಿಲ್ಲ!’ ಎಂದು ಖುಷಿ ಪಡುತ್ತಿದ್ದೆವೇನೋ! ಆದರೆ, ಅದು ಅಷ್ಟು ಸುಲಭವಾಗಿ ಮುಗಿಯಬೇಕಲ್ಲ! ಟೆಸ್ಟ್, ಎಕ್ಸಾmffಗಳು, ಅವನ್ನೂ ಮೀರಿ ಅಂಕ ವಿತರಣೆಯವರೆಗೂ ಮುಂದುವರೆಯುತಿತ್ತು. + +***** + +ಪ್ರಶ್ನೆ ಪತ್ರಿಕೆ ಎಂದರೆ ಅದರಲ್ಲಿ ರ್ಯಾಮ್, ರೋಮ್, ಬೇಸಿಕ್ ಇತ್ಯಾದಿಗಳ ವಿಸ್ತರಣೆ ಮಾಡುವ ಮಟ್ಟಿಗಿದ್ದ ನಮ್ಮ ಜ್ಞಾನ ಮಟ್ಟಕ್ಕೆ ಅಥವಾ ಪಾರ್ಟ್ಸ್ ಆಫ್ ದ ಕಂಪ್ಯೂಟರ್, ಯೂಸಸ್ ಆಫ್ ದ ಕಂಪ್ಯೂಟರ್ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸುವ ನಮ್ಮ ತಿಳುವಳಿಕೆ ಮಟ್ಟಕ್ಕೆ ನಿಲುಕುವ ಪ್ರಶ್ನೆಗಳನ್ನು ಕೇಳುವರೆಂದು ನಿರೀಕ್ಷಿಸುತ್ತಿದ್ದೆವು. ಆದರೆ ಅವರೋ ಹೊಸ ವಿಷಯ ನೀಡಿ ಅದಕ್ಕೆ ಸಂಬಂಧಿಸಿದಂತೆ ಫ್ಲೋಚಾರ್ಟ್, ಪ್ರೋಗ್ರಾಂಗಳ ರಚನೆಯಂತಹ ಬಹುತೇಕ ಅಪ್ಲಿಕೇಶನ್ ಮಟ್ಟದ ಪ್ರಶ್ನೆಗಳ ಬ್ರಹ್ಮಾಸ್ತ್ರಗಳನ್ನು ತುಂಬಿ, ನಮ್ಮತ್ತ ತೂರಿ ನಮ್ಮನ್ನು ಅಕ್ಷರಶಃ ನಿಶಸ್ತ್ರಗೊಳಿಸಿ ಅಧೀರರನ್ನಾಗಿಸಿ ಬಿಡುತ್ತಿದ್ದರು. + +ಇನ್ನೂ ಮುಂದುವರೆದು ಅಂಕ ವಿತರಣೆ ಎಂಬುದು ಈಗಾಗಲೇ ಅಪರಾಧಿಗಳೆಂದು ಸಾಬೀತಾಗಿರುವ ಖೈದಿಗಳಿಗೆ ನ್ಯಾಯಾಧೀಶನೊಬ್ಬ ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಘನ ಘೋರ ಗಳಿಗೆಯಂತಿರುತಿತ್ತು. ಅಂತಿದ್ದಾಗ ಮುಖದ ಮೇಲೆ ಉತ್ತರ ಪತ್ರಿಕೆ ಎಸೆಯುವುದು, ಬೈಯುವುದು, ಹೀಯಾಳಿಸುವುದು, ಕುಟುಕುವುದು, ಚೀರಾಡುವುದು, ಗೋಳಾಡುವುದು ಇವಕ್ಕೇನೂ ಕಡಿಮೆ ಇರದೆ ತರಗತಿ ಕೋಣೆ ಎಂಬುದು ಒಂದು ರೀತಿಯ ರಣಾಂಗಣವಾಗಿಬಿಡುತಿತ್ತು. + +‘ಪರೀಕ್ಷೆಗಳಲ್ಲಿ ಫೇಲಾದವರಿಗೆ, ಕಡಿಮೆ ಅಂಕ ತೆಗೆದವರಿಗೆ ಈ ರೀತಿಯ ಶಿಕ್ಷೆ ನೀಡುವುದು ಮಾಮೂಲಲ್ಲವೇ’ ಎಂದು ನಿಮಗನಿಸಬಹುದು. ಆದರೆ, ನಮ್ಮ ಕಂಪ್ಯೂಟರ್ ವಿಷಯದಲ್ಲಿನ ಪಾಸ್ ಪರ್ಸೆಂಟೇಜ್ ನಾವು ಆ ಕಾಲಕ್ಕೆ ಕಡಿಮೆ ಪರ್ಸೆಂಟೇಜ್ ನ ಪರೀಕ್ಷೆಗಳೆಂದು ಕೇಳಿ ತಿಳಿದಿದ್ದ ಸಿ.ಎ, ಐ.ಎ.ಎಸ್, ಐ.ಐ.ಟಿ ಗಳಿಗಿಂತಲೂ ಹೆಚ್ಚಿರುತ್ತಿರಲಿಲ್ಲ. ಹೋಗಲಿ, ಪಾಸಾದವರು, ಹೆಚ್ಚು ಅಂಕ ತೆಗೆದವರಾದರೂ ಪ್ರಶಂಸೆಗೆ ಪಾತ್ರರಾಗುತ್ತಿದ್ದರ, ಕುಟಕುವಿಕೆಯಿಂದ ವಿನಾಯಿತಿ ಪಡೆದುಕೊಳ್ಳುತ್ತಿದ್ದರ ಎಂದರೆ ಅದೂ ಸುಳ್ಳಾಗಿತ್ತು. ಪಾಸಾದ, ಹೆಚ್ಚು ಅಂಕ ತೆಗೆದ ಕಾರಣಕ್ಕಾಗಿಯೂ ಪೆಟ್ಟು ತಿಂದ ಮಹನೀಯರಿರುತ್ತಿದ್ದರು!.ಪಾಪ, ಸೇಠು! ಬೇರೆ ವಿಷಯಗಳಲ್ಲಿ ಅವರೇಜ್ ಅಂಕ ತೆಗೆಯುತ್ತಿದ್ದವನು ಅದ್ಯಾವ ಗಳಿಗೆಯಲ್ಲಿ ಕಂಪ್ಯೂಟರ್ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡನೋ! ವಿಶೇಷ ಆಸಕ್ತಿಯಿಂದ ತರಗತಿಯಲ್ಲಿ ಪಾಠ ಕೇಳಲಾರಂಭಿಸಿದ್ದ. ಕಂಪ್ಯೂಟರ್ ಒರೆಸುವುದರಿಂದ ಹಿಡಿದು ಕಂಪ್ಯೂಟರ್ ರೂಮಿನ ಕಸ ಗುಡಿಸುವವರೆಗೆ ಅವಕಾಶ ಸಿಕ್ಕಾಗಲೆಲ್ಲಾ ಕಂಪ್ಯೂಟರ್ ಸಹವಾಸ ಮಾಡ ತೊಡಗಿದ್ದ. ಈ ಒಲವು, ಆಸಕ್ತಿ, ಸಹವಾಸದ ಫಲವೆಂಬಂತೆ ಕಂಪ್ಯೂಟರ್‌ನಲ್ಲಿ ಪಾಸಾಗಿದುದಲ್ಲದೇ ಒಮ್ಮೆ ಹೆಚ್ಚು ಅಂಕಗಳನ್ನು ತೆಗೆದುಬಿಟ್ಟಿದ್ದ. ಹೆಚ್ಚು ಅಂಕವನ್ನೇನೋ ತೆಗೆದಿದ್ದನಾದರೂ “ಹೇಗೆ ತೆಗೆದೆ?” ಎಂಬ ಸರ್ ರ ಇಂಗ್ಲಿಷ್ ಪ್ರಶ್ನೆಯನ್ನು ಅರ್ಥೈಸಿಕೊಳ್ಳಬಲ್ಲನಾದನೇ ಹೊರತು ಇಂಗ್ಲಿಷ್ ನಲ್ಲೇ ಉತ್ತರಿಸ ಬಲ್ಲವನಾಗದೆ ಸರ್ ಕುಟುಕುವಿಕೆಯ ಪ್ರಯೋಗಕ್ಕೆ ತಲೆ ಕೊಡಬೇಕಾಯಿತು. ಫೇಲಾದವರೆಲ್ಲ ಒಂದೆರಡು ಬಾರಿ ತಲೆ ಕೊಟ್ಟು ಖುಷಿಯಿಂದಲೇ ಇದ್ದರೆ, ಪಾಪ ಸೇಠು ತಾನು ಪಾಸಾದದಕ್ಕೆ ನಾಲ್ಕಾರು, ಹೆಚ್ಚು ತೆಗೆದದ್ದಕ್ಕೆ ನಾಲ್ಕಾರು ಎನ್ನುತ್ತಾ ಡಜನ್‌ಗಟ್ಟಲೆ ಬಾರಿ ತಲೆ ಕೊಟ್ಟುದಲ್ಲದೇ ಕಂಪ್ಯೂಟರ್‌ನಲ್ಲಷ್ಟೇ ಅಲ್ಲ, ಜೀವನದಲ್ಲಿ ಮತ್ತೆಂದೂ ಮತ್ತ್ಯಾವ ವಿಷಯದಲ್ಲೂ ಹೆಚ್ಚು ಅಂಕ ತೆಗೆಯುವುದಿರಲಿ ಪಾಸಾಗಲೂಬಾರದು ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದ! + +ಹೇಳಲೊರಟರೆ, ತರಗತಿಗೆ ತಡವಾಗಿ ಬಂದುದರಿಂದ ಹಿಡಿದು ಬೇಗ ಬೇಗನೆ ಓಡಿ ಬಂದದ್ದಕ್ಕೆ, ಮಳೆ ಎಂಬ ಕಾರಣಕ್ಕೆ ನಿಂತು ಬಂದುದರಿಂದ ಹಿಡಿದು ಮಳೆಯಲ್ಲೇ ನೆನೆದು ಬಂದದ್ದಕ್ಕೆ, ಗಾಂಧಿ ಸ್ಮರಣೆಯ ಮೌನಾಚರಣೆಯಲ್ಲಿ ತೂಕಡಿಸಿದ್ದರಿಂದ ಹಿಡಿದು ಮುಸಿ ಮುಸಿ ನಕ್ಕಿದ್ದಕ್ಕೆ.. ಹೀಗೆ ಸಾಲು ಸಾಲು ಕತೆಗಳು ಬಿಚ್ಚಿಕೊಳ್ಳುತ್ತವೆ! + +ಒಟ್ಟಿನಲ್ಲಿ, ಕಂಪ್ಯೂಟರ್ ಸರ್ ರ ಕುಟುಕುವಿಕೆಯ ಪ್ರಯೋಗಕ್ಕೆ ಕಾರಣಗಳು ಬೇಕೆಂದೇನೂ ಇರಲಿಲ್ಲ ಅಷ್ಟೇ. ಹೀಗಾಗಿಯೇ ಕಂಪ್ಯೂಟರ್ ಪೀರಿಯಡ್ ಎಂದೊಡನೆ ಎಲ್ಲರೂ ಬಗೆ ಬಗೆಯಾಗಿ ವರ್ಣಿಸುತ್ತಿದ್ದದ್ದು! + +ನಮ್ಮ ಪುಣ್ಯಕ್ಕೆ ಕಂಪ್ಯೂಟರ್ ಪೀರಿಯಡ್ ಎಂಬುದು ಇರುತಿದ್ದದ್ದು ವಾರಕ್ಕೊಮ್ಮೆ ಮಾತ್ರ. ಆದರೆ, ಕಂಪ್ಯೂಟರ್ ಪೀರಿಯಡ್ ಮತ್ತೆ ಬಂದಾಗ ವಾರ ಎಂಬುದು ನಮ್ಮ ಪಾಲಿಗೆ ಅರೆ ಗಳಿಗೆಯಲ್ಲೇ ಮರುಕಳಿಸಿದಂತಾಗುತಿತ್ತು! ಅದಕ್ಕೆಂದೇ ಯಾರಾದರೂ ಮಹನೀಯರು ಸತ್ತು ರಜೆ ಘೋಷಣೆಯಾದಾಗ ‘ಛೇ! ಸಾಯೋರು ಸತ್ತರು, ಕಂಪ್ಯೂಟರ್ ಪೀರಿಯಡ್ ಇದ್ದ ದಿನವಾದರೂ ರಜೆ ಸಿಗುವಂತೆ ಸಾಯಬಾರದಿತ್ತೆ ದೇವರೇ!’ ಎಂದು ದೇವರಲ್ಲಿ ಮೊರೆ ಇಡುತಿದ್ದೆವು. ಆದರೇನು ಮಾಡುವುದು! ಪ್ರತಿದಿನವೂ ಒಂದಲ್ಲ ಒಂದು ತರಗತಿಗೆ ಕಂಪ್ಯೂಟರ್ ಪೀರಿಯಡ್ ಇರುತ್ತಿದುದರಿಂದ, ಪ್ರತಿಯೊಂದು ತರಗತಿಯವರೂ ಹೀಗೆಯೇ ದೇವರ ಮೊರೆ ಹೋಗುತ್ತಿದುದರಿಂದ ದೇವರೆಂಬ ದೇವರು ಯಾರ ಮೊರೆಯನ್ನು ತಾನೇ ಕೇಳಿಯಾನು! + +ಮತ್ತೆ ಇನ್ನೇನು ಮಾಡುವುದು! ವೃತ್ತಪತ್ರಿಕೆಗಳಲ್ಲಿ ಅದೆಲ್ಲೋ ದೂರದಲ್ಲಿ ಭೂಕಂಪವಾಗಿ ಕಟ್ಟಡಗಳು ನೆಲ ಸಮವಾದವು, ಪ್ರವಾಹಕ್ಕೆ ಕಟ್ಟಡಗಳು ಕೊಚ್ಚಿ ಹೋದವು ಎಂದೆಲ್ಲಾ ಓದುವಾಗ ‘ಕನಿಷ್ಟ ಪಕ್ಷ ಅಂತಹ ಲೀಲೆಯನ್ನಾದರೂ ನಮ್ಮ ಕಂಪ್ಯೂಟರ್ ಲ್ಯಾಬ್‌ನ ಮೇಲೆ ನೀನು ತೋರಬಾರದೆ ದೇವ!’ ಎಂದು ನಾವೆಲ್ಲ ದೇವರ ಮೇಲೆ ಮುನಿಸಿಕೊಳ್ಳುತ್ತಿದ್ದೆವು. + +ಹಾಗೆಂದು ಕಂಪ್ಯೂಟರ್ ಸರ್ ಮೇಲೆ ನಮಗೆ ದ್ವೇಷವಿತ್ತೆಂದಾಗಲಿ, ಅವರಿಗೆ ಏನಾದರೂ ಆಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವೆಂದಾಗಲಿ ತಪ್ಪಾಗಿ ಯೋಚಿಸ ಹೋಗಬೇಡಿ. ಎಷ್ಟಾದರೂ ಗಲಿವರನ ಮುಂದೆ ಲಿಲಿಪುಟ್‌ಗಳಂತಿದ್ದ ಅಥವಾ ಆನೆಯ ಮುಂದೆ ಕೋಳಿ ಪಿಳ್ಳೆಗಳಂತಿದ್ದ ನಮಗೆ ಕಂಪ್ಯೂಟರ್ ಸರ್ ರ ದೇಹಸಿರಿಯ ಬಗ್ಗೆ ಅದೇನೋ ವಿಶೇಷ ಬೆರಗು, ಅಭಿಮಾನ! + +ಈ ಅಭಿಮಾನದಿಂದಲೇ ಕಂಪ್ಯೂಟರ್ ಸರ್ ಅವರನ್ನೂ ಮತ್ತು ಅವರ ದೇಹಸಿರಿಯನ್ನೂ ಮೀರಿಸುವಂತಿದ್ದ, ಕನ್ನಡ, ಹಿಂದಿ, ಇಂಗ್ಲಿಷ್ ಎಂದರೆ ನಾವು ಅಂದಾಜಿಸ ಬಹುದೆಂದು ತಮಿಳು, ತೆಲುಗು ಸಿನಿಮಾಗಳಲ್ಲಿ ತಾನು ಹೀರೋ ಪಾತ್ರ ಮಾಡಿರುವವನೆಂದು ಫೈಟಿಂಗ್ ಸೀನ್‌ಗಳ ಸಮೇತ ವರ್ಣಿಸುತ್ತಿದ್ದ, ಬೆಳಿಗ್ಗೆ ಸಂಜೆ ಶಾಲಾ ಮೈದಾನದ ನಡುವೆ ಇದ್ದ ಮಾಸ್ತಿಕಲ್ಲಿನ ಮೇಲೆ ಕುಳಿತು ನಮ್ಮಂತಹ ನಾಲ್ಕಾರು ಹುಡುಗರಿಂದ ಕೈಕಾಲು ಒತ್ತಿಸಿಕೊಳ್ಳುತ್ತಿದ್ದ ಪೀಟೀ ಸರ್ ರನ್ನು ಒಂದುಗೂಡಿಸಿ, ಇಬ್ಬರ ತಲೆ ಬೋಳಿಸಿ, ಕೈಗೆ ಒಂದೊಂದು ಹಾಕಿ ಸ್ಟಿಕ್‌ಗಳನ್ನು ಕೊಟ್ಟು ನಿಲ್ಲಿಸಿದರೆ ಹಾಲಿವುಡ್ ವಿಲನ್‌ಗಳನ್ನೂ ಮೀರಿಸುವಂತಹ ಜಗದ್ವಿಖ್ಯಾತ ವಿಲನ್‌ಗಳಾಗಬಲ್ಲರೆಂದೂ ಸಿನೆಮಾ ಸೂಪರ್ ಹಿಟ್ ಆಗ ಬಲ್ಲದೆಂದೂ ನಮ್ಮ ನಮ್ಮ ನಡುವೆಯೇ ಮಾತನಾಡಿಕೊಳ್ಳುತ್ತಿದ್ದೆವು. ಆದರೆ ಈ ಅಭಿಮಾನದ ಮಾತುಗಳನ್ನು ಅವರೆದುರು ಬಿಚ್ಚಿಡುವ ಧೈರ್ಯ ಯಾರಿಗೂ ಇರಲಿಲ್ಲವಾಗಿ ಅಮೆರಿಕ ಅಮೆರಿಕ ಸಿನೆಮಾದ ರಮೇಶನ ಪ್ರೀತಿಯಂತೆ ಅದು ಎದೆಯಲ್ಲಿಯೇ ಉಳಿದು ಬಿಟ್ಟಿತ್ತು. + +ಇನ್ನೂ ಕಂಪ್ಯೂಟರ್ ಸರ್‌ರ ವರ್ಣನೆಯನ್ನೆಲ್ಲಾ ಕೇಳಿ ಅವರೆಂದೂ ನಗು ಮೊಗದಿಂದ ಪಾಠ ಮಾಡಲೇ ಇಲ್ಲವೆಂದು ತಿಳಿಯಬೇಡಿ. ನಮ್ಮ ಕಂಪ್ಯೂಟರ್ ಸರ್‌ರಂತಹ ಕಂಪ್ಯೂಟರ್ ಸರ್ ಕೂಡ ನಗು ಮೊಗದೊಂದಿಗೆ ಪಾಠ ಹೇಳಿ ಕೊಡುವ ರಸ ಗಳಿಗೆಗಳಿಗೆ ನಾವು ಸಾಕ್ಷೀಭೂತರಾಗಿದ್ದೆವು. ಆದರೆ, ಆ ಅದೃಷ್ಟ ಇದ್ದದ್ದು ಮಾತ್ರ ನಮಗಲ್ಲ. ಬದಲಿಗೆ, ಕೆಲದಿನಗಳ ಮಟ್ಟಿಗೆ ಪಕ್ಕದ ಶೃಂಗೇರಿಯಿಂದ ಬರುತ್ತಿದ್ದ, ನೋಡಲು ಸುರಸುಂದರಿಯಂತಿದ್ದ ಅತಿಥಿ ಶಿಕ್ಷಕಿಯೊಬ್ಬರಿಗೆ ಮಾತ್ರ! ಆಗೆಲ್ಲಾ ನಾವು ‘ ಅಯ್ಯೋ! ನಮಗೂ ಹಾಗೆಯೇ ಕಂಪ್ಯೂಟರ್ ಮುಂದೆ ಕುಳ್ಳಿರಿಸಿ ನಗು ಮೊಗದಿಂದ ಪಾಠ ಹೇಳಿ ಕೊಡವಂತಿದ್ದರೇ..’ ಎಂದು ಯೋಚಿದರೆ ಕೆಲ ಕಿರಾತಕರು ಅದನ್ನು ಮೀರಿ‘ಅಯ್ಯೋ! ಅತಿಥಿ ಶಿಕ್ಷಕಿಗೆ ಪಾಠ ಹೇಳಿಕೊಡುವ ಕಂಪ್ಯೂಟರ್ ಸರ್ ನಾವೇ ಆಗಿದ್ದರೇ..’ ಎಂದು ವೇದನೆ ತೋಡಿಕೊಳ್ಳುತ್ತಿದ್ದರು. + + + +ಆದರೆ, ನಮ್ಮ ನತದೃಷ್ಟತನಕ್ಕೆ ಈ ಯಾವ …ರೇ ಗಳು ಈಡೇರುವಂತಿರಲಿಲ್ಲ. ಹಾಗಾಗಿ ನಮ್ಮ ಈ ಸಮಸ್ಯೆಗೆ ನಾವೇ ಪರಿಹಾರ ಕಂಡು ಹಿಡಿಯಬೇಕಾಗಿತ್ತು. ಅದಕ್ಕಾಗಿ ಈ ಕಂಪ್ಯೂಟರ್ ತಜ್ಞರು ವೈಟುಕೆ ಬಗ್ ನಂತಹ ಸಮಸ್ಯೆ ಎದುರಾಗಬಹುದೆಂದು ತಲೆ ಕೆಡಿಸಿಕೊಂಡಿದ್ದಕ್ಕಿಂತಲೂ ಹೆಚ್ಚು ತಲೆ ಕೆಡಿಸಿಕೊಳ್ಳಲಾರಂಭಿಸಿದೆವು. ತರಗತಿಗೆ ತರಗತಿಯೇ ತಲೆ ಕೆಡಿಸಿಕೊಂಡ ಮೇಲೆ ಪರಿಹಾರ ಸಿಗದಿರುವುದೇ. ಅಂತೂ ಸಿಕ್ಕಿತು. ಅದು ಸರಳವೂ ಆಗಿದ್ದಂತೆ ತೋರಿತು. ಅದು ‘ಮಾಸ್ ಕಾಪಿ’ ಮಾಡುವುದಾಗಿತ್ತು! + +ಎಷ್ಟಾದರೂ ನಾವು ಮಿತಿ ಮೀರಿ ಪ್ರಾಮಾಣಿಕರಾಗಿದ್ದವರು. ಹೆಚ್ಚು ಅಂಕ ತೆಗೆಯುತ್ತೇವೆಂದು ಮೈಸೂರು ಪಾಕ್, ಹಾಲು ಕೋವಾಗಳನ್ನೆಲ್ಲಾ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಿದ್ದವರು, ಅರ್ಧ ಅಂಕ, ಕಾಲು ಅಂಕಕ್ಕೂ ಶಿಕ್ಷಕರೊಡನೆ ಚೌಕಾಸಿ ಮಾಡಿ ಕಣ್ಣೀರು ಹಾಕುತ್ತಿದ್ದವರು, ಪದೇ ಪದೇ ಒಬ್ಬರು ಹೆಚ್ಚು ಅಂಕ ತೆಗೆದರೆಂದರೆ ಶಿಕ್ಷಕರು ಪಾರ್ಷಿಯಾಲಿಟಿ ಮಾಡುತ್ತಿರುವರೆಂದು ದೂರುತ್ತಿದ್ದವರೂ ಆಗಿದ್ದೆವು. ಹೀಗಿರುವಾಗ ಯಾರಾದರೂ ಕಾಪಿ ಮಾಡುವುದಿರಲಿ ಅತ್ತಿತ್ತ ತಿರುಗಿದರೂ ‘ಚೀಟಿಂಗ್ ಚೀಟಿಂಗ್’ ಎಂದು ಅವರ ಉತ್ಸಾಹ ಭಂಗಗೊಳಿಸಿಬಿಡುತ್ತಿದ್ದೆವು. + +ಆದರೆ, ಕಂಪ್ಯೂಟರ್ ವಿಚಾರದಲ್ಲಿ ಮಾತ್ರ ಈ ಎಲ್ಲಾ ರಗಳೆಗಳಿಂದ ನಮಗೆ ನಾವೇ ವಿನಾಯಿತಿ ಕೊಟ್ಟು ಕೊಳ್ಳಲು ನಿರ್ಧರಿಸಿ ಬಿಟ್ಟಿದ್ದೆವು. ಹೇಳಿಕೇಳಿ ಕಂಪ್ಯೂಟರ್ ವಿಷಯ ಪಾರ್ಟ್ ಬಿ ಯಲ್ಲಿ ಬರುತ್ತಿದ್ದು, ಅದರಲ್ಲಿನ ಅಂಕಗಳು ಗ್ರೇಡ್ ಗಷ್ಟೇ ಸೀಮಿತವಾಗಿದ್ದವೇ ವಿನಃ ರ್ಯಾಂಕ್ ಗೆ ಕೌಂಟ್ ಆಗುತ್ತಿರಲಿಲ್ಲ. ಈ ಅಂಶವೂ ವಿನಾಯಿತಿ ಕೊಟ್ಟುಕೊಳ್ಳುವ ನಮ್ಮ ನಿರ್ಧಾರಕ್ಕೆ ಅನುಕೂಲಕರವಾಗಿ ಪರಿಣಮಿಸಿತ್ತು. + +ಸರಿ, ಮಾಸ್ ಕಾಪಿಯ ನಿರ್ಧಾರ ಮಾಡಿದರಷ್ಟೇ ಸಾಕೆ, ಕಾರ್ಯರೂಪಕ್ಕೆ ತರಬೇಡವೇ. ಆ ಗಳಿಗೆಗಾಗಿಯೇ ಕಾದು ಕುಳಿತೆವು. ಅದೊಂದು ಕಿರು ಪರೀಕ್ಷೆಯ ದಿನ ಆ ಗಳಿಗೆಯೂ ಬಂದು ಬಿಟ್ಟಿತ್ತು. + +ಆದರೆ, ಆ ಗಳಿಗೆಯಲ್ಲಿ ನಾವು ನಿರೀಕ್ಷಿಸದೆ ಇದ್ದ ಘಟನೆಯೊಂದು ಘಟಿಸಿಬಿಟ್ಟಿತು. ಪರೀಕ್ಷೆ ಆರಂಭವಾಗಿ ನಾವೆಲ್ಲಾ ‘ಕಾಪಿ ಮಾಡಿವುದಾ ಬೇಡವಾ, ಮಾಡುವುದಾದರೆ ಕಂಪ್ಯೂಟರ್ ಸರ್ ಕಣ್ತಪ್ಪಿಸಿ ಕಾಪಿ ಮಾಡುವುದಾದರೂ ಹೇಗೆ’ ಎಂಬ ಆಲೋಚನೆ, ಅಂಜಿಕೆ, ಅಳುಕಿನಲ್ಲಿರುವಾಗಲೇ ಮೃತ್ಯುಂಜಯ ಡೆಸ್ಕ್ ಅಡಿಯಲ್ಲಿನ ಬುಕ್ ತೆಗೆದು ನಮ್ಮ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ಕಂಪ್ಯೂಟರ್ ಸರ್ ಜೊತೆಗೇ ಮಾಡಿಕೊಂಡಿರುವೆನೋ ಎಂಬಂತೆ, ಸರ್ಕಾರ ಈಗ ಜಾರಿಗೆ ತರಲು ಯೋಚಿಸುತ್ತಿರುವ ‘ಓಪನ್ ಬುಕ್ ಎಕ್ಸಾಮ್’ ಅನ್ನು ಅದಾಗಲೇ ಜಾರಿಗೆ ತಂದವನಂತೆ ಕಾಪಿ ಮಾಡಲಾರಂಭಿಸಿದ್ದ. ಇದನ್ನು ಕಂಪ್ಯೂಟರ್ ಸರ್ ಅವರ ಹದ್ದಿನ ಕಣ್ಣು ಹಿಂದಿನಿಂದ ಗಮನಿಸಿಬಿಡಬೇಕೆ! + +ಗಮನಿಸಿದೊಡನೆಯೇ ‌ಮೃತ್ಯುವನ್ನು ಹಿಡಿದೆಳೆದು ಮುಂದಕ್ಕೆ ತಂದು ನಿಲ್ಲಿಸಿದರು. ಅಲ್ಲದೇ ಡಾಕ್ಟರನೊಬ್ಬ ಸ್ಟ್ರಾಂಗ್ ಡೋಸೇಜ್‌ನ ಇಂಜೆಕ್ಷನ್ ನೀಡುವ ಮುನ್ನ ಸಣ್ಣದೊಂದು ಟೆಸ್ಟ್ ಡೋಸ್ ನೀಡುವಂತೆ ತಲೆಗೆ ಒಮ್ಮೆ ಸರಿಯಾಗಿ ಕುಟುಕಿದರು. ಮೃತ್ಯು ಕುಸಿದು ಬಿದ್ದ! + +ನಾವುಗಳೋ ಗಾಬರಿಯಿಂದ ಎದ್ದು ಹೋಗಿ ‘ಮೃತ್ಯು ಮೃತ್ಯು’ ಎನ್ನುತ್ತಾ ಮುಖ ತಟ್ಟಿದೆವು. ಎಚ್ಚರಾಗಲಿಲ್ಲ. ಮುಖಕ್ಕೆ ನೀರು ಚುಮುಕಿಸಿದೆವು. ಎಚ್ಚರಾಗಲಿಲ್ಲ. ಕೊನೆಗೆ ಜಿಗುಟುವಂತೆ ಮಾಡಿದೆವು. ಆದರೂ ಎಚ್ಚರಾಗದೇ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದ. ಇನ್ನೇನು ತಾನೇ ಮಾಡುವುದು! ಕಂಪ್ಯೂಟರ್ ಸರ್ ಕೊಟ್ಟ ‘ಮೆಡಿಕಲ್ ರೂಮ್ ಗೆ ಕರೆದುಕೊಂಡು ಹೋಗಿ’ ಎಂಬ ಸೂಚನೆ ಮೇರೆಗೆ ಅವನ ಎರಡು ಭುಜಗಳಿಗೆ ಇಬ್ಬರು ಹೆಗಲು ಕೊಟ್ಟು, ಇನ್ನಿಬ್ಬರು ಎರಡು ಕಾಲುಗಳನ್ನೊತ್ತು, ಒಬ್ಬ ತಲೆ ಹಿಡಿದು ಥೇಟು ಚಟ್ಟ ಹೊತ್ತಂತೆಯೇ ಹೊತ್ತು ನಡೆದೆವು. + +ಕಂಪ್ಯೂಟರ್ ಸರ್ ಮಾತ್ರ ಅಂತಹ ವಿಷಮ ಪರಿಸ್ಥಿತಿಯಲ್ಲೂ ತರಗತಿಯಲ್ಲೇ ಉಳಿದರು. ತಮ್ಮ ಅನುಪಸ್ಥಿತಿಯಲ್ಲಿ ಪರೀಕ್ಷೆ ಬರೆದು ಯಾರಾದರೂ ಪಾಸಾಗಿ ಬಿಟ್ಟರೆ ಎಂಬ ಚಿಂತೆ ಅವರನ್ನು ಕಾಡಿರಬಹುದು! + +ಸರಿ, ನಾವುಗಳು ಮೃತ್ಯುವನ್ನು ಹೊತ್ತು ಆತಂಕಿತರಾಗಿಯೇ ನಿಧಾನವಾಗಿ ಮೆಡಿಕಲ್ ರೂಮಿನತ್ತ ಸಾಗಲಾರಂಭಿಸಿದ್ದೆವು. ತರಗತಿ ಕೋಣೆ ಮರೆಯಾಗಿ ನಾಲ್ಕು ಹೆಜ್ಜೆ ಸಾಗಿರಬಹುದು ಅಷ್ಟರಲ್ಲಿ ಮೃತ್ಯು ಒಡನೆಯೇ ತಲೆ ಎತ್ತಿ ಕಣ್ಣು ಹೊಡೆಯಬೇಕೆ! ಹೆಣವೊಂದು ದಾರಿ ಮಧ್ಯೆ ಎದ್ದು ಕೂತರೆ ಆಗಬಹುದಾದಷ್ಟೇ ಅಚ್ಚರಿ ಪಡುವ ಸರದಿ ನಮ್ಮದಾಗಿತ್ತು. ಈ ಅಚ್ಚರಿಯಿಂದ ಉಕ್ಕಿ ಬಂದ ನಗುವನ್ನು ಯಾರಿಂದಲೂ ತಡೆಯಲು ಸಾಧ್ಯವಾಗದೇ, ಪಕ್ಕದಲ್ಲೇ ಇದ್ದ ತರಗತಿಗೆ ಕೇಳಿಸಿದರೆಂದು ಜೋರಾಗಿ ನಗಲೂ ಆಗದೆ ಮುಸಿ ಮುಸಿ ನಗುತ್ತಾ ಮೃತ್ಯುವನ್ನು ಹಾಗೆಯೇ ಹೊತ್ತು ಅಕ್ಷರಶಃ ಓಡುತ್ತಾ ಮೆಡಿಕಲ್ ರೂಮ್ ತಲುಪಿದೆವು. + +ನಾವು ಹೊತ್ತು ಹೊಯ್ದ ಧಾಟಿ ನೋಡಿ ನರ್ಸ್ ಆಂಟಿ ಇದೇನೋ ಭಾರಿ ಸೀರಿಯಸ್ ಕೇಸ್ ಇರಬಹುದೆಂದು ಎಣಿಸಿ ವಿಚಾರಿಸಿದರು. ಮೃತ್ಯುವೋ ಮೊದಲೇ ಒಂದು ಒಂದೂವರೆ ಗಂಟೆಗಳ ಇಂಗ್ಲಿಷ್ ಸಿನೆಮಾಗಳನ್ನು ನೋಡಿ ಬಂದು ವಾರಗಟ್ಟಲೆ ಆ್ಯಕ್ಷನ್, ಡಿಟಿಎಸ್ ಎಫೆಕ್ಟ್, ಗ್ರಾಫಿಕ್ಸ್ ಎಫೆಕ್ಟ್ಸ್‌ಗಳೊಂದಿಗೆ ವರ್ಣಿಸುವ ಕೆಪಾಸಿಟಿ ಇದ್ದಾತ. ಅವನು ಹೇಳಿದ ಸ್ಟೋರಿ ಕೇಳಿಸಿಕೊಂಡು ಅದೆಷ್ಟೋ ಕಾಲವಾದ ಮೇಲೆ ಟರ್ಮಿನೇಟರ್, ಮ್ಯಾಡ್ ಮ್ಯಾಕ್ಸ್ ನಂತಹ ಸಿನೆಮಾ ನೋಡ ಹೊರಟರೆ ಸಿನೆಮಾಗಿಂತಲೂ ಮೃತ್ಯು ಹೇಳುತ್ತಿದ್ದ ಸ್ಟೋರೀನೆ ಭಾರಿ ಇಂಟರೆಸ್ಟಿಂಗ್ ಆಗಿತ್ತಲ್ಲ ಎಂದು ನಮಗೆಲ್ಲಾ ಅನಿಸಿದ್ದಿದೆ. ಇಂತಹ ಮೃತ್ಯು ಇರುವೆ ಕಚ್ಚಿದಷ್ಟರ ಮಟ್ಟಿಗಿನ ತನ್ನ ನೋವನ್ನು ಆನೆ ತುಳಿತದ ರೇಂಜಿಗೆ ವರ್ಣಿಸಲು ಕಷ್ಟಪಡುವುದುಂಟೆ. ಒಂದಕ್ಕೆ ನಾಲ್ಕು ಸೇರಿಸಿ ಹೇಳಿದ. + +ಪಾಪ ನರ್ಸ್ ಆಂಟಿ, ಕೆಲ ಹೊತ್ತಿನ ಮುಂಚೆ ಮೃತ್ಯು ನಿಜವಾಗಿಯೂ ಮರಣಶಯ್ಯೆಯಲ್ಲಿದ್ದನೆಂದೇ ನಂಬಿ ಕನಿಕರ ಪಟ್ಟರು. ಅಲ್ಲದೇ ಮೃತ್ಯುವಿನ ಆಯಾಸಕ್ಕೆ ಗ್ಲುಕೋಸ್ ಪುಡಿಯ ಟ್ರೀಟ್ ಮೆಂಟ್ ನೀಡಿರೆಂಬ ನಮ್ಮ ಸಲಹೆಯನ್ನೂ ಒಪ್ಪಿ ಪೂರಾ ಪ್ಯಾಕೆಟ್ ಒಂದನ್ನು ನೀಡಿದರು. ನಾವುಗಳು ಪಡೆದ ಪ್ಯಾಕೆಟ್‌ನಲ್ಲಿ ಗುಟುಕಿನಷ್ಟನ್ನು ಮಾತ್ರ ಮೃತ್ಯುವಿನ ಬಾಯಿಗೆ ಸುರಿದು ಉಳಿದದ್ದನ್ನು ಸ್ಪರ್ಧೆ ನಡೆಸುವವರಂತೆ ನಮ್ಮಗಳ ಬಾಯಿಗೇ ಸುರಿದುಕೊಂಡೆವು. + +ಅಹಾ, ಒಂದೆಡೆ ಕಂಪ್ಯೂಟರ್ ಪರೀಕ್ಷೆ ನಡುವಿನ ಅಪರೂಪದ ಬ್ರೇಕ್ ಮತ್ತೊಂದೆಡೆ ಗ್ಲುಕೋಸ್ ಪುಡಿಯ ಬೋನಸ್ ನ ಸಂಭ್ರಮ. ಆ ಸಂಭ್ರಮದಲ್ಲಿ ನಾವು ಹೋಗಿ ಪರೀಕ್ಷೆ ಬರೆಯಲಿರುವವರೆಂಬ ಅರಿವೂ ನಮಗಿರದಾಗಿತ್ತು! + +ಇನ್ನೂ ಮೆಡಿಕಲ್ ರೂಮಿನಿಂದ ಹೊರ ಬಂದವರು ಒಬ್ಬರ ಮುಖ ಒಬ್ಬರು ನೋಡುತ್ತಲೇ ಉಕ್ಕಿ ಬರುತ್ತಿದ್ದ ನಗುವನ್ನು ತಡೆಯಲಾರದೇ ಹೊಟ್ಟೆ ಹುಣ್ಣಾಗುವಂತೆಂಬಂತೆ ಜೋರಾಗಿ ಮತ್ತೆ ಮತ್ತೆ ನಗುತ್ತಾ ಹೊಟ್ಟೆ ಹಿಡಿದು ಕುಳಿತೆವು. ಸಂಭ್ರಮದಿಂದಾದ ಆಯಾಸವನ್ನು ಸುಧಾರಿಸಿಕೊಳ್ಳಲೂ ಸಾಕಷ್ಟು ಸಮಯ ಬೇಕೆನಿಸಿತ್ತು. ಆದರೆ, ಪರೀಕ್ಷೆ ಬರೆಯುವುದಿನ್ನೂ ಬಾಕಿ ಇತ್ತಲ್ಲ. ಹಾಗಾಗಿ ತರಗತಿಯೆಡೆಗೆ ಹೊರಟೆವು. ಹೋಗುವಾಗ ಮೃತ್ಯುವನ್ನು ಚಟ್ಟದಂತೆ ಹೊತ್ತೊಯ್ದಿದ್ದ ನಾವು ಈಗ ಹಿಂದಿರುಗುವಾಗ ಹೆಗಲಿಗೆ ಆಸರೆಯಾದವರಂತೆ ನಿಧಾನವಾಗಿ ನಡೆಸಿಕೊಂಡು ಕೊಠಡಿ ಪ್ರವೇಶಿಸಿದೆವು. + + + +ಕಂಪ್ಯೂಟರ್ ಪರೀಕ್ಷೆ ಎಂದರೆ ಮೊದಲೇ ಪ್ರಪಂಚ ತಲೆ ಮೇಲೆ ಹೊತ್ತವರಂತೆ ಇರುತ್ತಿದ್ದವರೆಲ್ಲಾ ಈಗ ಮೃತ್ಯುವಿನ ಸ್ಥಿತಿ ನೆನೆ ನೆನೆದು ಶೋಕತಪ್ತರಂತೆ ಮುಖ ಭಾವ ಹೊತ್ತು ಪರೀಕ್ಷೆ ಬರೆಯುತ್ತಿದ್ದಾರೆ. ನಮಗೋ ಇತ್ತ, ಒಬ್ಬರ ಮುಖ ಒಬ್ಬರು ನೋಡಿದಾಗೆಲ್ಲಾ ಒಳಗೊಳಗೆ ಉಕ್ಕಿ ಬರುತ್ತಿರುವ ಸಂಭ್ರಮದ ನಗು! ಅತ್ತ, ಎಲ್ಲಿ ನಗುವಿನ ಕಟ್ಟೆ ಹೊಡೆದು ಕಂಪ್ಯೂಟರ್ ಸರ್ ರ ಕಿವಿ ತಲುಪಿ ಕುಟುಕುವಿಕೆಗೆ ತಲೆ ಕೊಡಬೇಕಾದೀತೊ ಎಂಬ ಸಂಕಟ! + +ಹೀಗೆ ಸಂಭ್ರಮ, ಸಂಕಟಗಳೆರಡೂ ಮಿಶ್ರಿತಗೊಂಡ ವಿವರಿಸಲಾಗದ ವಿಚಿತ್ರ ಮನಸ್ಥಿತಿಯಲ್ಲಿ ಪರೀಕ್ಷೆ ಬರೆಯ ಕೂತೆವು.ಈ ಸಂದರ್ಭದಲ್ಲೂ ನಮ್ಮ ಕಂಪ್ಯೂಟರ್ ಸರ್ ತಮ್ಮ ಬಿಗುಮೊಗವನ್ನಾಗಲಿ, ಕಣ್ಗಾವಲನ್ನಾಗಲಿ ಸಡಿಲಗೊಳಿಸಿದಂತಿರಲಿಲ್ಲ. ಆದರೆ, ಅಂದಿನಿಂದ ತಮ್ಮ ಕುಟುಕುವಿಕೆಯ ಪ್ರಯೋಗವನ್ನು ಮಾತ್ರ ಸಂಪೂರ್ಣ ಎಂಬಂತೆ ಕಡಿಮೆ ಮಾಡಿ ಬಿಟ್ಟಿದ್ದರು. + +ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. “ದೇವರಿದ್ದಾನೆ! ಎಚ್ಚರಿಕೆ!!” ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ.. \ No newline at end of file diff --git a/Kenda Sampige/article_150.txt b/Kenda Sampige/article_150.txt new file mode 100644 index 0000000000000000000000000000000000000000..04be3aa69b83db275b0436631285d209f622dab7 --- /dev/null +++ b/Kenda Sampige/article_150.txt @@ -0,0 +1,27 @@ +ಕೆ ವಿ. ತಿರುಮಲೇಶರ ಇನ್ನೊಂದು ಮಹತ್ವದ ಮನುಕುಲದ ವೈರುಧ್ಯಗಳನ್ನು ಧ್ವನಿಸುವ ಕಾದಂಬರಿ ಎಂದರೆ ಅನೇಕ. ಕಾದಂಬರಿಯ ನಾಯಕನ ಹೆಸರೇ ಅನೇಕ. ಈತ ದ್ವೀಪವಾಸಿ. ದ್ವೀಪದಲ್ಲಿ ಏಕಾಂಗಿಯಾಗಿ ಇದ್ದು ಅವನ ಮನಸ್ಸು ಹಾಗು ಬುದ್ಧಿ ಎರಡೂ ಬಂಧಿಯಾಗಿದ್ದುವೇ? ಏಕೆ ಹೀಗೆ? ಎಂಬ ಪ್ರಶ್ನೆಗಳು ಕಾಡುತ್ತವೆ. ಏಕವ್ಯಕ್ತಿಯಾದರೂ ಬದುಕಿನ ಅನೇಕ ಪರಿಪ್ರೇಕ್ಷಗಳನ್ನು ಒಟ್ಟಿಗೆ ಕ್ರಿಯೆಯಲ್ಲಿ ಹೇಳುವ ಪಾತ್ರ ‘ಅನೇಕ’; ಕಾದಂಬರಿಯ ಪುಟ ಸಂ. 2-3 ರಲ್ಲಿ ಬರುವ “ನಂತರ ಅವನು ಮತ್ತೆ ಅದೇ ತಾಣಕ್ಕೆ ಹೋಗಿ ನೋಡಿದಾಗ ಅಣಬೆಗಳೆಲ್ಲಾ ಬಿಸಿಲಲ್ಲಿ ಒಣಗಿ ಬೂದು ಬಣ್ಣಕ್ಕೆ ತಿರುಗಿದ್ದವು. ಯಾವ ಪ್ರಾಣಿಗಳು ತನ್ನು ಗೊಡವೆಗೆ ಹೋಗದಿರುವಾಗ ತಾನೇಕೆ ತಿನ್ನುವ ಚಪಲ ತೋರಿಸಿದೆ” ಎಂದು ತನಗೇ ಕೇಳಿಕೊಳ್ಳುವ ವಾಕ್ಯ “ಪ್ರಾಣಿಗಳೆ ಮನುಷ್ಯನಿಗೆ ಗುರು” ಎಂಬುದನ್ನು ಸಾಬೀತು ಮಾಡುತ್ತವೆ. ಕ್ರೌರ್ಯ ಅಪರಾಧವಲ್ಲ ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಪರಿ ಎಂಬುದನ್ನು ಅನೇಕ ಹಾವು ಮುಂಗುಸಿಯ ಹೋರಾಟದಲ್ಲಿ ಕಲಿತಿರುತ್ತಾನೆ. ಇಲ್ಲಿ ಲಾಭದ ಹೋರಾಟ ಅಲ್ಲವೇ ಅಲ್ಲ, ಅಸ್ತಿತ್ವದ ಹೋರಾಟ ಎಂಬುದು ಸತ್ಯ. ಕೆಲವೊಮ್ಮೆ ಬೇಟೆಯಾಡುವುದನ್ನೂ ಕಲಿತ ಎಂಬುದು ಬದುಕಿಗೆ ಇರಬೇಕಾದ ಕಟ್ಟುಜಾಣ್ಮೆಯನ್ನು ಕುರಿತು ಹೇಳುವಂಥದ್ದಾಗಿದೆ. + +ಮಾತನಾಡಬೇಕು ಅನ್ನಿಸುತ್ತದೆ ಏನನ್ನೋ ಹೇಳಬೇಕು ಅನ್ನಿಸುತ್ತದೆ. ಬಂಡೆಯನ್ನೇರಿ ಆದರೆ ಯಾರಿಗೆ? ಎಂಬುದು ಒಂಟಿತನ ಕ್ರೂರ, ಮತ್ತು ವಿಚಿತ್ರ ಎಂಬ ಸತ್ಯದ ಅರಿವು ಮೂಡಿಸುತ್ತದೆ. ಇಲ್ಲಿ ಆಮೆಯನ್ನು ಹಿಡಿದ ಎನ್ನುವುದೂ ಪ್ರತಿಮೆಯೇ! ದೀರ್ಘಕಾಲ ಬದುಕಬಲ್ಲ ಆಮೆಯನ್ನು ಹಿಡಿದ “ಅನೇಕ” ಅದೇಕೆ ಮನುಷ್ಯಾಕೃತಿಯನ್ನು ಕಂಡಾಗ ಬದುಕಿಸಬೇಕೆನ್ನಿಸಿತು? ಬೆಂಕಿ ಮಾಡಿ ಅವನ ಚಳಿಯನ್ನು ಹೋಗಲಾಡಿಸಬೇಕೆನ್ನಿಸಿತು… ಅವನ ಎದೆ ಸೇರಿದ್ದ ನೀರನ್ನು ಹೊರತೆಗೆಯಬೇಕಾಗಿತ್ತು ಎಂಬ ಪ್ರಶ್ನೆಗಳು ಮನುಷ್ಯ ಕರುಣಾಮಯಿಯೂ ಹೌದು ಅನ್ನಿಸುತ್ತದೆ. ಆದರೆ ನಿರ್ಜೀವಿಯಂತೆ ಬಿದ್ದಿದ್ದ ವಿಶಾಲ ಎಂಬ ಅನೇಕ ಕಾದಂಬರಿಯ ಪಾತ್ರ ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಮನುಷ್ಯ ನರಭಕ್ಷಕ, ರಾಕ್ಷಸ… ಕ್ರೂರಿ ಎಂಬ ಪೂರ್ವಾಗ್ರಹ ಪೀಡಿತ ಮನಸ್ಸನ್ನಿರಿಸಿಕೊಂಡು ಈ ಕ್ಷಣ ಅಲ್ಲದೇ ಇದ್ದರೆ ಮರುಕ್ಷಣ ಈತ ನನ್ನ ಮೇಲೆ ಹಲ್ಲೆ ಮಾಡುತ್ತಾನೆ ಎಂದು ಮನಸ್ಸಿನಲ್ಲೇ ಹೋರಾಟಕ್ಕೆ ಸಿದ್ಧನಾಗಿರುತ್ತಿದ್ದುದು ಅದೇ ಮನುಷ್ಯನ ಸಂಕುಚಿತತೆಯನ್ನು ಹೇಳುತ್ತದೆ. ಇಲ್ಲಿ ಕಾದಂಬರಿಕಾರರು ಏಕಕಾಲಕ್ಕೆ ಮನುಷ್ಯನ ವ್ಯಕ್ತಿತ್ವದ ಅಗಾಧತೆಯನ್ನೂ ಸಂಕುಚಿತತೆಯನ್ನು ಒಂದೇ ಚೌಕಟ್ಟಿನಲ್ಲಿ ಒದಗಿಸಿಕೊಡುತ್ತಿರುವುದು ವಿಶೇಷವೆ! + +ವಿಶಾಲ ಹೆಸರಿನ ಪಾತ್ರ ಅಸೌಖ್ಯದ ಪರಿಸ್ಥಿತಿಯಲ್ಲು ಬೆಲ್ಟ್‌ನಲ್ಲಿ ಇರಿಸಿಕೊಂಡಿದ್ದ ಚೂರಿಯನ್ನು ನೆನಪು ಮಾಡಿಕೊಳ್ಳುವುದು “ಹೆಣ ಶೃಂಗಾರವರಿಯದು” ಎಂಬ ಮಾತನನ್ನು ನೆನಪಿಸುತ್ತದೆ. ಆತ ಅದ್ಯಾವುದೋ ವ್ಯಾಪಾರಿಗಳ, ಏಜೆಂಟರುಗಳ ವ್ಯೂಹಕ್ಕೆ ಸಿಲುಕಿ ಕಡೆಗೆ ತಪ್ಪಿಸಿಕೊಂಡು ಅನೇಕ ಇದ್ದ ದ್ವೀಪದ ಬುಡಕ್ಕೆ ಬಂದು ಬೀಳುತ್ತಾನೆ.. ಕಾಮಾಲೆ ಕಣ್ಣಿಗೆ ಕಾಣುವುದು ಹಳದಿಯೇ ಎಂಬ ಮಾತು ನೆನಪಿಗೆ ಬರುತ್ತದೆ. ನೀರನ್ನು ಕೊಟ್ಟಾಗ ಕುಡಿದವನು ಆಹಾರವನ್ನು ಆತ ಕೊಟ್ಟಾಗ ಅದನ್ನು ಅಪನಂಬಿಕೆಯಿಂದಲೇ ನೋಡುತ್ತಾನೆ. + +ಇಲ್ಲಿ ತಿರುಮಲೇಶರು ನೆಪೋಲಿಯನ್ನನ ಯುದ್ಧ ರೀತಿಯನ್ನು ಕುರಿತು ಮಾಹಿತಿ ನೀಡುತ್ತಾರೆ. ಅದೇನೆಂದರೆ ವೈರಿಯನ್ನು ನಾನೇ ಮೊದಲು ಆಕ್ರಮಿಸಬೇಕು ವೈರಿಯೇ ಮೊದಲು ಆಕ್ರಮಿಸುವವರೆಗೂ ಕಾಯಬಾರದು ಎಂಬುದಾಗಿ. ವಿಶಾಲ ತನ್ನಲ್ಲಿದ್ದ ಚೂರಿಯನ್ನು ಅನೇಕನ ಮೇಲೆ ಬಲಪ್ರಯೋಗ ಮಾಡಿ ಬಿಡುತ್ತಾನೆ. ಆಯುಧಗಳು ಕೊಲ್ಲುವುದಕ್ಕೆ ಅಲ್ಲ ಆತ್ಮ ರಕ್ಷಣೆಗೆ ಎಂಬ ಮಾತು ಇಲ್ಲಿ ಸಹಜವಾಗಿ ಬಂದಿವೆ. ತನ್ನಲ್ಲಿ ಚಾಕು ಇದೆ ಎಂದು ಹೇಳದ ವಿಶಾಲ ಆ ಚಾಕು ಮೊಲವನ್ನು ಭೇಟೆಯಾಡಲು ವಿಫಲವಾಗಿ ಕಳೆದುಹೋದಾಗ ಅದರ ಬಗ್ಗೆ ಪ್ರಸ್ತಾಪಿಸಲು ಪ್ರಯತ್ನ ಮಾಡುತ್ತಾನೆ, ಅನೇಕನ ಬಳಿಯೂ ಕಲ್ಲಿನಿಂದ ಮಾಡಿದ ಚೂಪಾದ ಆಯುಧವಿರುತ್ತದೆ. ಇಲ್ಲಿ ಆಯುಧಗಳು ಹರಿತವಾಗಿವೆ ಆದರೆ ಮನುಷ್ಯನ ನಡವಳಿಕೆಯೂ ಹಾಗೆಯೇ ಅಲ್ಲವೆ! ಕೆಲವೊಮ್ಮೆ ಧನಾತ್ಮಕ, ಕೆಲವೊಮ್ಮೆ ಋಣಾತ್ಮಕ ಎಂಬುದನ್ನು ಓದುಗರು ಅಧ್ಯಾಹಾರ ಮಾಡಿಕೊಳ್ಳಬಹುದು. + +ಕಾದಂಬರಿಯ ಪ್ರಮುಖಘಟ್ಟ ಅನೇಕ ಹಾಗು ವಿಶಾಲನ ನಡುವೆ ನಡೆಯುವ ಸಂಭಾಷಣೆ. ಅವರಿಬ್ಬರೂ ಪರಸ್ಪರ ಮಾತನಾಡುವಾಗ “ನಾಗರಿಕ ಸಮಾಜದಿಂದ ಎಷ್ಟು ವರ್ಷ ಹೀಗೆ ಇದ್ದೆ ಎನ್ನುವುದಕ್ಕಿಂತ ಇನ್ನೂ ಎಷ್ಟು ವರ್ಷ ಹೀಗೆ?” ಎಂಬ ಮೌಲ್ಯಯುತವಾದ ಪ್ರಶ್ನೆಗೆ ಬಂದು ಆಲೋಚನಾ ಬಂಧಿಯಾಗುತ್ತದೆ ಪರಿವರ್ತನೆ, ಸುಧಾರಣೆ ಬದಲಾವಣೆ ಬೇಕಿಲ್ಲವೇ ನಿರಂತರ ನಿಂತ ನೀರಿನಂತೆಯೇ ಹಾಗಿದ್ದರೆ ಎಂಬ ಜಿಜ್ಞಾಸೆಯನ್ನು ಹೊರಹಾಕುತ್ತದೆ. “ಉಪಯೋಗಿಸಿದ ಮೇಲೆ ನಂದಿಸಬೇಕು ಎಂಬ ಮಾತು ಇಲ್ಲಿ ಬೆಂಕಿಯನ್ನು ಕುರಿತು ಹೇಳಿರುವುದಾದರೂ ಬಳಸಿದ ವಸ್ತುಗಳನ್ನು ಎಸೆಯುವಂತೆ ಮನುಷ್ಯ ಅವಶ್ಯಕತೆ ತೀರಿದ ಬಳಿಕ ಎಂಥವರನ್ನೂ ವರ್ಜಿಸುತ್ತಾನೆ ಎಂಬ ಸತ್ಯವನ್ನು ಪರಾಮರ್ಶಿಸುವಂತೆ ಮಾಡುತ್ತದೆ. + + + +ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….! ಎಂದು ಸುಳ್ಳುಗಳಿಂದಲೇ ತನ್ನನ್ನು ರಕ್ಷಿಸಿಕೊಳ್ಳಲು ಹವಣಿಸುವುದು ಮನುಷ್ಯನ ಸಹಜ ಗುಣಕ್ಕೆ ಹಿಡಿದಿರುವ ಕನ್ನಡಿಯಾಗಿದೆ. + +ಹೆಸರನ್ನು ಬದಲಾಯಿಸುವುದು ಅಸಾಧ್ಯ ಎಂಬುದು ನಂಬಿಕೆ ಆದರೆ ಇಟ್ಟುಕೊಂಡ ಹೆಸರನ್ನೂ ಸಮಯಾನುಸಾರ ಬದಲಾವಣೆ ಮಾಡಿಕೊಳ್ಳುವ ವೇಶ್ಯೆಯರ ಅಸಹಾಯಕತೆಯ ಪ್ರಸಂಗವೂ ಇಲ್ಲಿ ಬರುತ್ತದೆ. ಇದು ಮನರಂಜನೆಯಲ್ಲ ಬದಲಾಗಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಇರಬೇಕಾದ ಸೂಕ್ಷ್ಮ. ನಂತರ ಬರುವುದು ಯಾರ ಮೇಲೆ ಯಾರಿಗೆ ನಂಬಿಕೆ ಇರುವುದು ಗಂಡ -ಹೆಂಡಿರ, ಗಂಡ-ಹೆಂಡಿರ ಅಂದರೆ ಇಬ್ಬರು ಮಹಿಳೆಯರು ಇಬ್ಬರು ಪುರುಷರು ನಂಬಿಕೆಯ ಹೆಸರಿನಲ್ಲಿ ನಡೆಸುವ ಕೊಲೆ ಸಂಚು ಇಲ್ಲಿ ಕುತೂಹಲವಾಗಿ ಬರುತ್ತದೆ. ಶವದ ಪೆಟ್ಟಿಗೆಯಲ್ಲಿ ಒಬ್ಬರನ್ನೊಬ್ಬರು ಮಲಗಿಸುವುದು ಮರಳು ಮುಚ್ಚುವುದು, ಎದ್ದು ಬರುವುದು ಜೀವಂತವಾಗಿರುವುದು ಇದೇ ಪ್ರತ್ಯಯ ಎಂದು ವ್ಯಕ್ತಿಯೊಬ್ಬನನ್ನು ಬೇಕಂತಲೇ ಮರಳಲ್ಲಿ ಹೂತು ಅವನನ್ನು ಅಲ್ಲೇ ಬಿಟ್ಟು ಬಂದು ಮತ್ತೆ ಅವನ್ನು ತಿರುಗಿ ಎದ್ದು ಬಂದಾಗ ಏನೂ ಆಗದಂತೆ ವರ್ತಿಸುವುದು ವ್ಯಕ್ತಿ ವ್ಯಕ್ತಿಗಳ ನಡುವಿನ ತಿರಸ್ಕಾರದ ಪ್ರಾತ್ಯಕ್ಷಿಕೆ ಅನ್ನಿಸುತ್ತದೆ. + +ಅನೇಕ ಕಾದಂಬರಿ ಬಂಧಿತವಾಗಿರುವುದೇ ಕಾದಂಬರಿಯ ಪುಟ ಸಂ 41 ರಲ್ಲಿ ಉಲ್ಲೇಖವಾಗಿರುವ ಪರಾಕ್ರಮ ಶಕ್ತಿ ಎಂಬ ಕತೆಯ ಮೇಲೆ ನಾವು ಯಾರನ್ನು ಕೊಲ್ಲುತ್ತೇವೆಯೋ ಅವರ ಶಕ್ತಿ ತಮಗೆ ಬರುತ್ತದೆ ಎಂಬ ಹುಚ್ಚು ನಂಬಿಕೆಯಿಂದಲೆ. ಅದನ್ನು ಹೇಳಿಕೊಟ್ಟ ದೇವರನ್ನೇ ಕಡೆಗೆ ಶಕ್ತಿಗೋಸ್ಕರ ಕೊಲ್ಲಲು ಹಿಂಬಾಲಿಸುವುದು ಅಸಂಗತತೆಯ ಛಾಯೆಯನ್ನು ದರ್ಶಿಸುತ್ತದೆ. ಮುಂದಿನ ಜನ್ಮದಲ್ಲಿ ರಾಜನಾಗುತ್ತೇನೆ ಎಂಬ ನಂಬಿಕೆಯಿಂದ ಕಳ್ಳನ ಸಾವಿಗೆ ಪರಿಹಾರ್ಯ ಸಾವು ಕಂಡುಕೊಳ್ಳುವ ಬೇಂದ್ರೆಯವರ ‘ಸಾಯೋ ಆಟ’ ನಾಟಕದ ಪಾತ್ರಗಳು ಇಲ್ಲಿ ನೆನಪಾಗುತ್ತವೆ. + +ಅನೇಕನ ಜೊತೆ ವಿಶಾಲನಿಗೆ ಇರಲು ಸಾಧ್ಯವಾಗುವುದಿಲ್ಲ ಅವನೊಡನೆ ಹೊಂದಿಕೆ ಆಗುವ ಮನಸ್ಸು ಇರುವುದಿಲ್ಲ. ಅನೇಕ ಹಾಗಲ್ಲ ಅವನು ವಿಷಯುಕ್ತ ಕಾಯಿಗಳನ್ನು ತಿನ್ನಲು ಮನಸ್ಸು ಮಾಡಿದಾಗ ಅವನನ್ನು ತಡೆಯುತ್ತಾನೆ. ಆದರೆ ವಿಶಾಲ ಅವನ ವಿರುದ್ಧ ಆಕ್ರಮಣಕ್ಕೆ ಸಮಯ ಸಾಧಿಸುತ್ತಾನೆ. ಇನ್ನು ಹೆಚ್ಚು ಸಮಯ ಇಲ್ಲಿರಲು ಅಸಾಧ್ಯಎಂದು ತೀರ್ಮಾನಿಸಿ ಬೆಂಕಿಯನ್ನು ಮಾಡುತ್ತಾನೆ ಅದನ್ನು ಹೆಚ್ಚಿಸಿ ಹೆಚ್ಚಿಸಿ ಉರಿಯುವಂತೆ ಮಾಡುತ್ತಾನೆ ಕಡಲ ತುದಿಯಲ್ಲಿ ಇದ್ದ ಮರದ ಕೊರಡನ್ನು ಆಶ್ರಯ ಎಂದು ತಿಳಿದು ಅದನ್ನೇ ನಂಬುತ್ತಾನೆ. ಒಂದು ನಿರ್ಜೀವ ವಸ್ತುವನ್ನು ನಂಬುವಂತೆ ಮನುಷ್ಯ ಸಜೀವಿಗಳನ್ನು ಅರ್ಥಾತ್ ಸಹಜೀವಿಗಳನ್ನು ನಂಬದಿರಲು ಕಾರಣವೇನು? ಎಂಬುದು ಎಂದಿಗೂ ಪ್ರಶ್ನಾರ್ಥಕವೇ. + +ಅನೇಕ ತಾನು ಹೊಡೆದ ಹಕ್ಕಿಯ ಮಾಂಸವನ್ನು ವಿಶಾಲನೊಂದಿಗೆ ಹಂಚಿಕೊಳ್ಳಲು ತೆರಳಿದಾಗಲೆ ಅವನು ನಾಪತ್ತೆಯಾಗಿರುವ ವಿಚಾರವೂ ತಿಳಿಯುತ್ತದೆ. ಕಡೆಗೆ ಅವನು ದ್ವೀಪದಲ್ಲಿ ಕಂಡ ಬೆಂಕಿಯನ್ನು ಗಮನಿಸಿದಾಗ ಬೆಂಕಿ ಹೊತ್ತಿಸುವ ತಯಾರಿಯಲ್ಲಿದ್ದ ವಿಶಾಲನ್ನು ನೆನಪಿಸಿಕೊಳ್ಳುತ್ತಾನೆ. ದ್ವೀಪದ ತುಂಬೆಲ್ಲಾ ಬೆಂಕಿ ಆವರಿಸುತ್ತದೆ. ಅಂದರೆ ಬೆಳಕು ಸಮುದ್ರದ ನೀರಿನಲ್ಲಿ ಬಣ್ಣದೋಕುಳಿಯನ್ನಾಡುವಂತೆ ಕಾಣುತ್ತದೆ. ಅದನ್ನೂ ಸಂಭ್ರಮಿಸುತ್ತಾನೆ. ಆದರೆ ಅವನಿಗೆ ಕಳೆದುಕೊಂಡ ಅನನ್ಯ ಜೀವರಾಶಿಗಳ ಬಗ್ಗೆ ಬೇಸರವಾಗುತ್ತದೆ. ಇನ್ನೆರಡು ದಿನ ಕಳೆದ ಬಳಿಕ ವಿಶಾಲ ದಡ ದಾಟದೆ ಅದೇ ದ್ವೀಪದ ಬುಡದಲ್ಲಿ ಹೆಣವಾಗಿ ಮೀನುಗಳ ಆಹಾರವಾಗಿ ಗೋಚರಿಸಿದಾಗ ಅನೇಕ ಅವನನ್ನು ಹಿಂದೆ ಜೀವ ಇದೆಯಾ ಎಂದು ನೋಡಿದಂತೆ ಇನ್ನೊಮ್ಮೆ ಪರೀಕ್ಷೆ ಮಾಡಲು ಹೋಗುವುದಿಲ್ಲ ಬದಲಾಗಿ ಆ ಶವವವನ್ನು ಹೊತ್ತುಕೊಂಡು ಇಡೀ ದ್ವೀಪಕ್ಕೆ ಕೊಡಬಹುದಾದ ಬಲಿಯಂತೆ ಬಯಲಿನಲ್ಲಿಯೇ ಇಡುತ್ತಾನೆ. ನಂಬಿಕೆ ಮೈಮರೆತರೆ ದುಸ್ಸಾಹಸ ಮಾಡಿದರೆ ಏನಾಗುತ್ತದೆ ಎಂಬುದನ್ನು ತಿರುಮಲೇಶರು ಎತ್ತುಗೆಗಳ ಮೂಲಕ ಇಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ. + + + +ಅನೇಕ ಕಾದಂಬರಿಯಲ್ಲಿ ಏಕ ಅನೇಕ ಪಾತ್ರಗಳು ಅನ್ನುವ ಹಾಗೆ ಇಲ್ಲ. ಬರುವುದೇ ಎರಡು ಪಾತ್ರಗಳು ಮನುಷ್ಯನ ಮನಸ್ಥಿತಿಯನ್ನು ಚುಟುಕಾಗಿ ನೇರವಾಗಿ ಹೇಳುವುದಕ್ಕೆ ಅಗತ್ಯದಷ್ಟೇ ಪಾತ್ರಗಳನ್ನು ಸೃಷ್ಟಿಮಾಡಿರುವುದು ತಿರುಮಲೇಶರ ನಿರಾಡಂಬರ ಹಾಗು ಸ್ಪಷ್ಟಗುಣಕ್ಕೆ ಉದಾಹರಣೆಯಾಗಿದೆ. ಒಂದು ಜಾಗರೂಕ ಇನ್ನೊಂದು ಅಜಾಗರೂಕ ಪಾತ್ರ ಸ್ವಾರ್ಥಕ್ಕೆ ಇಡೀ ದ್ವೀಪಕ್ಕೆ ಬೆಂಕಿ ಇಟ್ಟು ವ್ಯಕ್ತಿತ್ವ ದಹಿಸಿಕೊಂಡು ನೀರಲ್ಲಿ ಸತ್ತ ಪಾತ್ರ. ಅಸ್ತಿತ್ವ ಕಂಡುಕೊಳ್ಳಹೋಗಿ ಜೀವ ಕಳೆದುಕೊಂಡವನು. ತಾರ್ಕಿಕ ಚಿಂತನೆಯನ್ನು ಓದುಗರಿಗೆ ಬಿಡುವ ಈ ಕಾದಂಬರಿ ಸಾರ್ವಕಾಲಿಕವಾದದ್ದು. + +ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_151.txt b/Kenda Sampige/article_151.txt new file mode 100644 index 0000000000000000000000000000000000000000..03d044ffa1bac0811fcdfc6a8d68f991cab8ac38 --- /dev/null +++ b/Kenda Sampige/article_151.txt @@ -0,0 +1,19 @@ +ಕತೆಗಾರ, ಮಾಧ್ಯಮ ಅಧ್ಯಾಪಕ ದಯಾನಂದ ಅವರ ಎರಡನೇ ಕಥಾ ಸಂಕಲನ ‘ಬುದ್ಧನ ಕಿವಿ’. ಸಮಕಾಲೀನ ಸಂಗತಿಗಳಿಗೆ ಧ್ವನಿಯಾಗುವ ಕತೆಗಾರ ದಯಾನಂದ ಅವರು ಈ ಸಂಕಲನದ ಕಥೆಗಳಲ್ಲಿ ಅದನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. + +(ದಯಾನಂದ) + +‘ದೇವರ ಮಗು’ ಕಥೆ ಇದಕ್ಕೆ ಉತ್ತಮ ಉದಾರಹಣೆ. ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ. + +‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ. ಕತೆಯ ಕೊನೆ ಸಾಲು ‘ಗಂಟಲಲ್ಲಿ ಒತ್ತುತ್ತಿದ್ದ ಮುಳ್ಳು ಎದೆಯಲ್ಲೂ ಒತ್ತುತ್ತಿತ್ತು’ ಚಿಂತನೆಗೆ ಹಚ್ಚುತ್ತದೆ. + +‘ಮಡ್ಳಕ್ಕಿ’ ಕಥೆಯಲ್ಲಿ ಜಬೀನಕ್ಕ ತನ್ನ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಆಫೀಸಿಗೆ ಅಲೆಯುವ ಸನ್ನಿವೇಶ, ನಮ್ಮ ಈಗಿನ ವ್ಯವಸ್ಥೆ ಹಾಗೂ ಭ್ರಷ್ಟಾಚಾರವನ್ನು ಒಂಟಿ ಕಾಗೆಯಂತೆ ಅರಚುವ ಮೂಲಕ ಕಟ್ಟಿಕೊಟ್ಟಿದ್ದಾರೆ. + +‘ವಾಟ್ಸ್ ಇನ್ ಎ ನೇಮ್’ ಕಥೆಯಂತೂ ತುಂಬಾ ಮೆಚ್ಚುಗೆ ಆಯಿತು. ತುಂಬಾ ಸಂಕೀರ್ಣವಾದ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಅತ್ಯಂತ ನಾಜೂಕಾಗಿ ಕೆತ್ತಿ ನಿಲ್ಲಿಸಿದ್ದಾರೆ‌ ಈ ಕಥೆಯಲ್ಲಿ. ಸೂಕ್ಷ್ಮವೊಂದನ್ನು ಮನವರಿಕೆ ಮಾಡಿದ ಸಂಗತಿ ಇಷ್ಟವಾಯಿತು. + + + +‘ಜಗತ್ತಿನ ಕೊನೇ ದಿನಗಳ ಒಂದು ಬೆಳಗು’ ಎಂಬ ಕಥೆಯಲ್ಲಿ ಪ್ರೀತಿಸಿ, ಮನೆಬಿಟ್ಟ ಹುಡುಗ- ಹುಡುಗಿ ಸಾಮಾಜಿಕ ವ್ಯವಸ್ಥೆಯಿಂದ ನಿಸರ್ಗದ ಮಡಿಲಲ್ಲಿ ಪ್ರಣಯ ಪಕ್ಷಿಗಳಂತೆ ವಿಹರಿಸುವ ಭಾವಲೋಕ ಸೊಗಸಾಗಿ, ಕಾವ್ಯಾತ್ಮಕವಾಗಿ ಚಿತ್ರಿತವಾಗಿದೆ. ಕತೆಯ ಅಂತ್ಯ ವಿನೋದವೋ… ಇಲ್ಲವೇ ವಿಷಾದವೋ… ಎಂಬುದನ್ನು ನೀವು ಕಥೆ ಓದಿಯೇ ತಿಳಿಯಬೇಕು. ನನ್ನನ್ನು ತುಂಬಾ ಕಾಡಿದ ಕಥೆ ಇದು. ಉಳಿದಂತೆ ‘ಬೈಬಲ್ ಬಂಪ್’, ‘ಸರ್ವೈವಲ್ ಬೆನಿಫಿಟ್’, ‘ಬುದ್ಧನ ಕಿವಿ’ ಒಪ್ಪುವಂಥ ಕಥೆಗಳು. + +ದಯಾನಂದ ಅವರು ತುಂಬಾ ಸೂಕ್ಷ್ಮ ಸಂವೇದಿ ಕಥೆಗಾರರು. ಅವರು ಕಥೆಯನ್ನು ನಿಭಾಯಿಸುವ ಶೈಲಿ ಮೆಚ್ಚುಗೆಯಾಯಿತು. ಈ ಕಥೆಗಳು ನಮ್ಮ ಜೊತೆಗೆ ಮಾತನಾಡುತ್ತವೆ. ಕೆ.ವಿ. ನಾರಾಯಣ ಅವರು ಹೇಳಿರುವಂತೆ ನಿಜಕ್ಕೂ ಯಾವ ನೆರವಿನ ಅಗತ್ಯವೂ ಈ ಕತೆಗಳಿಗಿಲ್ಲ! + +ಮಂಜಯ್ಯ ದೇವರಮನಿ ರಾಣೇಬೆನ್ನೂರಿನವರು. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಕರಿಜಾಲಿ ಮರ’ ಪ್ರಕಟಿತ ಕಥಾಸಂಕಲನ.  ಚಾರಣ ಮತ್ತು ಚಿತ್ರಕಲೆ ಇವರ ಹವ್ಯಾಸಗಳು. \ No newline at end of file diff --git a/Kenda Sampige/article_152.txt b/Kenda Sampige/article_152.txt new file mode 100644 index 0000000000000000000000000000000000000000..9fe6c7e7e15f0c0e3e96f58ca8a31651ba1540b7 --- /dev/null +++ b/Kenda Sampige/article_152.txt @@ -0,0 +1,21 @@ +ಮೂಲತಃ ವೈದ್ಯರಾದ ಲಕ್ಷ್ಮಣ ಅವರು, ತಮ್ಮ ನೆನಪುಗಳನ್ನು ಪುಟ್ಟಪುಟ್ಟ ಲೇಖನಗಳಲ್ಲಿ ಹಿಡಿದಿಟ್ಟಿದ್ದಾರೆ. ಈ ಸ್ಮೃತಿಚಿತ್ರಗಳು ಹಲವು ಕಾರಣಗಳಿಂದ ವಿಶಿಷ್ಟವಾಗಿವೆ: ಕರ್ನಾಟಕದ ಎರಡು ತುದಿಯಲ್ಲಿರುವ ಅಥಣಿಸೀಮೆ ಹಾಗೂ ಬೆಂಗಳೂರು ಸೀಮೆಯ ಬದುಕನ್ನು ಒಟ್ಟಿಗೆ ಹಿಡಿದುಕೊಡುವುದಕ್ಕೆ; ಪುಟ್ಟ ಹಳ್ಳಿಯ ಮತ್ತು ಧಾರವಾಡ ಬೆಂಗಳೂರುಗಳಂತಹ ಮಹಾ ನಗರಗಳ ಬದುಕನ್ನು ಜತೆಗಿಟ್ಟು ನೋಡುವುದಕ್ಕೆ; ಹಳ್ಳಿಯ ಕೃಷಿಕ ಸಂಸ್ಕೃತಿಯನ್ನು ಮತ್ತು ವೈದ್ಯಕೀಯ ಕ್ಷೇತ್ರ ಅನುಭವಗಳನ್ನು ಬೆರೆಸುವುದಕ್ಕೆ; ಬಾಲ್ಯದ ಅನುಭವಗಳ ಜತೆ ಪ್ರಾಯದ ಚಿಂತನೆಗಳ ಅಭಿನ್ನಗೊಳಿಸಿರುವುದಕ್ಕೆ. + +(ಡಾ. ಲಕ್ಷ್ಮಣ ವಿ.ಎ.) + +ಸಾಮಾನ್ಯವಾಗಿ ಆತ್ಮಕಥೆಗಳಲ್ಲಿ, ಬಾಲ್ಯದ ನೆನಪುಗಳು ಬಂದಾಗ ಆಪ್ತವೂ ಗಾಢವೂ ಆಗುವ ಬರೆಹ, ವೃತ್ತಿಬದುಕಿನ ಅಥವಾ ನಡುವಯಸ್ಸಿನ ಬದುಕಿನ ದಾಖಲೆಯಾಗುವಾಗ ಅಳ್ಳಕಗೊಳ್ಳುವುದು; ಕಳೆದುಹೋದ ಬದುಕಿನ ನೆನಪುಗಳು ರಮ್ಯವಾಗಿ ಸಿಹಿಯಾಗಿ, ಬಾಳಿನ ವೈರುಧ್ಯಗಳನ್ನು ಕಳೆದುಕೊಳ್ಳುವುದೂ ಉಂಟು. ಆದರೆ ಇಲ್ಲಿ ಹಾಗಾಗಿಲ್ಲ. ಬಾಲ್ಯಕಾಲದ ಸಿಹಿ ನೆನಪುಗಳ ಜತೆಗೆ ಅಲ್ಲಿನ ದಾರುಣವಾದ ಚಿತ್ರಗಳೂ ಸೇರಿಕೊಳ್ಳುತ್ತವೆ. ಎಂತಲೇ ಇಲ್ಲಿನ ಚಿತ್ರಗಳು ಮತ್ತು ಪಾತ್ರಗಳು ಸಂಕೀರ್ಣವಾಗಿವೆ. ಇಲ್ಲಿರುವ ಅನುಭವವನ್ನು ಪಡೆದ ಪ್ರದೇಶ, ಕಾಲ, ಸಂಸ್ಕೃತಿ, ಸನ್ನಿವೇಶಗಳು ಬೇರೆಬೇರೆಯಾದರೂ, ಪ್ರೀತಿ ದ್ವೇಷ ಸಿಟ್ಟು ಅಸೂಯೆ ದೊಡ್ಡತನ ಸಣ್ಣತನವುಳ್ಳ ಇಲ್ಲಿನ ಮನುಷ್ಯರು ಮಾತ್ರ ಒಂದೇ. ಅವರನ್ನು ಅವರ ಸ್ವಭಾವದ ಅರೆಕೊರೆಗಳೊಂದಿಗೆ ಹಿಡಿಯುವುದರಿಂದ ಪಾತ್ರಗಳು ಜೀವಂತವಾಗಿವೆ. + +ಅದರಲ್ಲೂ ಘನವಾದ ಪಾತ್ರಗಳಾಗಿ ನಿಲ್ಲುವವರು ಲೇಖಕರ ಅಪ್ಪ ಮತ್ತು ಅಮ್ಮ. ಇಲ್ಲಿನ ಪಂಡರಪುರದ ಯಾತ್ರೆ, ಅಪ್ಪ ಅಮ್ಮನ ಸಂಬಂಧವನ್ನು ಚಿತ್ರಿಸುವ ನೆನಪುಗಳು ಸಣ್ಣಕತೆಗಳೂ ಆದಂತಿವೆ. ಜಾತ್ರೆಯ ದಿನ ಅಪ್ಪ ಅಮ್ಮ ನಿಗೂಢವಾಗಿ ಕಣ್ಮರೆಯಾಗಿ ಮತ್ತೆ ಪ್ರತ್ಯಕ್ಷವಾಗುವುದನ್ನು ವಾಚ್ಯಗೊಳಿಸದೆ ಚಿತ್ರಿಸಲಾಗಿದೆ. ಯಾವುದಾದರೂ ಕಾದಂಬರಿಯೊಳಗೆ ಮೈತಳೆಯಬೇಕಾದ ಅನುಭವಲೋಕವು ಹೀಗೆ ಬಿಡಿಚಿತ್ರಗಳಾಗಿ ಪರ್ಯವಸಾನಗೊಂಡಿತೇ ಎಂದು ಅನಿಸುವುದುಂಟು. + + + +ಇಲ್ಲಿರುವ ಮೊದಲ ನೆನಪು, ಮಲೆನಾಡಿನ ಸ್ನೇಹಿತೆಯೊಬ್ಬಳು ಗುಬ್ಬಿಕಾಯುವುದು ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸುವ ಪ್ರಸಂಗದಿಂದ ಆರಂಭವಾಗುವುದು ಸಾಂಕೇತಿಕವಾಗಿದೆ. ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ, ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸಮಾಡುತ್ತದೆ. ಹೀಗಾಗಿ ಇಲ್ಲಿನ ಸ್ಮೃತಿಚಿತ್ರಗಳು ರೋಚಕವಾದ ಅನುಭವವನ್ನು ಮಂಡಿಸಿ ಓದುಗರನ್ನು ರಂಜಿಸುವುದಕ್ಕೆ ಉತ್ಸುಕವಾಗುವುದಿಲ್ಲ. ಎಲ್ಲ ಭಾಗದ ಜೀವನದಲ್ಲಿರುವ ವಿಷಾದಕರ ದುರಂತಗಳನ್ನು ದಾಖಲಿಸುತ್ತವೆ. ಜನರ ಹಸಿವು ಬಡತನ ದುಡಿಮೆ ಹೋರಾಟ ಜೀವಂತಿಕೆಗಳನ್ನು ತಾಳ್ಮೆಯಿಂದ ಘನತೆಯಿಂದ ಕಾಣಿಸುತ್ತವೆ. ತನ್ನನ್ನು ರಕ್ಷಿಸಿಕೊಳ್ಳದ ಊರದೇವರನ್ನು ಕುರಿತು ದುಃಖಿಸುವ ಜನರ ಬಗ್ಗೆ ವ್ಯಂಗ್ಯ ಮಾಡುತ್ತವೆ. ಕಾಣೆಯಾದ ಗುಬ್ಬಿಗಳನ್ನು ಮತ್ತು ಊರವರೆಲ್ಲ ಸೇರಿ ಕೊಲ್ಲುವ ಹುಲಿಯನ್ನು ವಿಷಾದದಲ್ಲಿ ಕಾಣಿಸುತ್ತವೆ. ವೈರುಧ್ಯಗಳನ್ನು ಮುಂದಿಡುವ ಮೂಲಕ ಸುಡುಬಾಳಿನ ಬಗ್ಗೆ ಚಿಂತಿಸಲು ಪ್ರೇರೇಪಿಸುತ್ತವೆ. + +(ರಹಮತ್‌ ತರೀಕೆರೆ) + +ಬಾಲ್ಯಕಾಲದ ಮುಗ್ಧ ನಂಬಿಕೆಗಳು ಭಗ್ನವಾದ ಬಳಿಕ ಮತ್ತು ವೈಚಾರಿಕ ದೂರದಿಂದ ಪರಿಸರವನ್ನು ನೋಡುವುದರಿಂದ ಹುಟ್ಟಿರುವ ಚಿಂತನಶೀಲತೆ, ಇಲ್ಲಿನ ಬರೆಹವನ್ನು ರೂಪಿಸಿದೆ. ಅನುಭವವು ಚಿಂತನೆಗೆ ಬುನಾದಿಯಾಗುವ ಅಥವಾ ಚಿಂತನೆಯು ಅನುಭವಕ್ಕೆ ಚೌಕಟ್ಟೊಂದನ್ನು ಕಟ್ಟುವ ಕಡೆಯಲ್ಲೆಲ್ಲ ಬರೆಹ ದಾರ್ಶನಿಕವಾಗುತ್ತದೆ. ಸಹಜವಾದ ವಿವರಗಳು ದೊಡ್ಡ ಅರ್ಥವನ್ನು ಕೊಡುವ ಸಂಕೇತಗಳಾಗುತ್ತವೆ. ಉದಾ.ಗೆ, ಮಗನನ್ನು ಆಸ್ಪತ್ರೆಗೆ ಕರೆದೊಯ್ಯುವ ತಂದೆ ರಸ್ತೆಬದಿ ವಾಹನಕ್ಕೆ ಕಾಯುವ ಪ್ರಸಂಗವನ್ನು ಗಮನಿಸಬಹುದು. ಬುತ್ತಿಕಟ್ಟುವ, ಚಪ್ಪಲಿ ಕಳೆದುಹೋಗದಂತೆ ವಿಶಿಷ್ಟ ಗುರುತು ಮಾಡುವ, ಪಂಡರಪುರಕ್ಕೆ ಯಾತ್ರೆ ಹೋಗುವ, ಹೈನ ಮುಗಿದರೂ ಹಾಲುತುಪ್ಪದ ವಾಸನೆ ಪರಿಮಳ ಬೀರುವ ಕಪಾಟುಗಳು, ಪರಿಮಳ ಬೀರುವ ಮಿಲಿಟರಿ ಟ್ರಂಕು ಇತ್ಯಾದಿ ಪ್ರಸಂಗಗಳಲ್ಲಿ, ವಿವರಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಶ್ರದ್ಧೆಯಿಂದ ಇಲ್ಲಿನ ನೆನಪುಗಳಿಗೆ ಒಂದು ಬಗೆಯ ಜೈವಿಕ ಸಮೃದ್ಧತೆ ಒದಗಿದೆ. ಕೆಲವು ನೆನಪುಗಳಂತೂ ಕಾವ್ಯಾತ್ಮಕವಾಗಿಯೂ ದಾರ್ಶನಿಕವಾಗಿಯೂ ಆಗಿದ್ದು, ಸುಂದರ ಪ್ರಬಂಧಗಳಾಗಿವೆ. ಆದರೆ ನೆನಪುಗಳ ಜತೆ ಜೀವನದ ಅರ್ಥವೊಂದನ್ನು ಹುದುಗಿಸುವ ವಿಷಯದಲ್ಲಿ ನಿರಾಸಕ್ತವಾಗಿರುವ ಲೇಖನಗಳೂ ಇಲ್ಲಿವೆ. ಅವು ಲಘುವಾಗಿವೆ, ವಾಚಾಳಿಯಾಗಿವೆ ಮತ್ತು ಶಿಥಿಲವಾಗಿವೆ. + + + +ಇಲ್ಲಿನ ನೆನಪುಗಳು ಲವಲವಿಕೆಯಿಂದ ಕೂಡಿದ್ದು, ಪುಸ್ತಕವೂ ಬಿಡದೆ ಓದಿಸಿಕೊಳ್ಳುತ್ತದೆ. ಇದಕ್ಕೆ ಲೇಖಕರ ವಿನೋದಪ್ರಜ್ಞೆಯೂ ಆ ಪ್ರಜ್ಞೆಯ ಹಿಂದಿರುವ ಜೀವನಪ್ರೀತಿಯೂ ಕಾರಣವಾಗಿದೆ. ಬದುಕನ್ನು ಅದರ ಸಮೃದ್ಧಿ ವೈರುಧ್ಯ ದುರಂತಗಳ ಸಮೇತ ಹಿಡಿದಿಡುವ ಸಹನೆ ಮತ್ತು ಪ್ರತಿಭೆಯುಳ್ಳ ಲೇಖಕರಿಗೆ, ಇಂತಹ ಬಿಡಿಬಿಡಿ ನೆನಪುಗಳಾಚೆ ದೊಡ್ಡದಾದ ಬರೆಹವನ್ನು ಮಾಡುವ ಶಕ್ತಿಯಿದೆ. ಅಂತಹ ಬರೆಹಕ್ಕೆ ಈ ಪುಸ್ತಕ ಪೂರ್ವಪೀಠಿಕೆ ಆದರೂ ಆದೀತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_153.txt b/Kenda Sampige/article_153.txt new file mode 100644 index 0000000000000000000000000000000000000000..8f87e30664c3d2cd30bb1b9114de74d94c33a163 --- /dev/null +++ b/Kenda Sampige/article_153.txt @@ -0,0 +1,89 @@ +ತನ್ನ ಕಣ್ಣೆದುರಿನ ಸಂಕಟಗಳಿಗೆ ಸ್ಪಂದಿಸದ ವಿಜ್ಞಾನಿ, ಕಲಾವಿದ, ರಾಜಕಾರಣಿ, ನಟ, ಹಾಡುಗಾರ, ಕವಿ ಮತ್ತು ಒಬ್ಬ ನಾಗರಿಕ ಒಂದು ಅಪ್ರಸ್ತುತ ಬದುಕನ್ನು ಜೀವಿಸುವ ಅಪಾಯಕ್ಕೆ ಈಡಾಗಬೇಕಾಗುತ್ತದೆ. ಕಾಲದ ದಂದುಗಗಳಿಗೆ ಮಿಟುಕುವ ಜವಾಬುದಾರಿ ಎಲ್ಲರ ಮೇಲೂ ಒಂದಲ್ಲಾ ಒಂದು ರೂಪದಲ್ಲಿ ಇರುತ್ತದೆ. ಮತ್ತದಕ್ಕೆ ನಾವೆಲ್ಲ ಭಾಗೀದಾರರೇ ಅನಿಸಿತು. ಮಂಡಲಗಿರಿ ಪ್ರಸನ್ನ ಅವರ ಇಲ್ಲಿನ ಗಜಲ್‌ಗಳನ್ನು ಓದಿ ನನ್ನ ಎರಡು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇದನ್ನು ಯಾವ ಅರ್ಥದಲ್ಲೂ ಮುನ್ನುಡಿ ಅಂತಲೋ, ಇಲ್ಲ ವಿಮರ್ಶೆ ಅಂತಲೋ ಭಾವಿಸುವ ಅಗತ್ಯವಿಲ್ಲ. ಈ ಬರಹ ಕೇವಲ ಒಬ್ಬ ಸಹ ಬರಹಗಾರನ ಅನಿಸಿಕೆ ಎಂದಷ್ಟೇ ಇಲ್ಲಿ ಹೇಳುವ ಮೂಲಕ ನಾನು ವಿಮರ್ಶಕ ಅಲ್ಲ ಅನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಇಲ್ಲಿಯ ಗಜಲ್‌ಗಳಲ್ಲಿ ಮೂಲ ವ್ಯಾಕರಣ, ಛಂದಸ್ಸಿನ ಸಮರ್ಪಕ ಬಳಕೆ ಇರುವುದರಿಂದ ಆ ಕುರಿತು ನಾನೇನೂ ಹೇಳುವುದಿಲ್ಲ. ಇಲ್ಲಿನ ರಚನೆಗಳನ್ನು ಗಜಲ್ ಅನ್ನುವುದರ ಜೊತೆ ಜೊತೆಗೆ ಮುಕ್ತ ಕವಿತೆಗಳಂತೆ ಓದಿಕೊಂಡಿದ್ದೇನೆ. ಹೀಗೆ ಅಂದುಕೊಂಡೇ ಪ್ರತಿಕ್ರಿಯಿಸುತ್ತಿದ್ದೇನೆ. + +೬೧ ಗಜಲ್ ರಚನೆಗಳ “ನಿದಿರೆ ಇರದ ಇರುಳು” ಈ ಗುಚ್ಛವು ಮಂಡಲಗಿರಿ ಪ್ರಸನ್ನ ಅವರ ಈ ಮುಂಚಿನ ಸಾಹಿತ್ಯ ಪ್ರಕಾರಗಳಿಗೆ ಹೊಸ ಸೇರ್ಪಡೆಯಾದರೂ, ಈಗಾಗಲೇ ಅವರು ಕವಿತೆ ರಚನೆಯಲ್ಲಿ ತೊಡಗಿದ ಕಾರಣ ಕಾವ್ಯ ಓದುಗರಿಗೆ ಪರಿಚಿತರು. ಓದಿದ್ದು ಇಂಜಿನಿಯರಿಂಗ್ ಆದರೂ ಅವರ ಆಸಕ್ತಿ ಕಾವ್ಯ, ಲಲಿತ ಪ್ರಬಂಧ, ಮಕ್ಕಳ ಕಾವ್ಯ, ಮಕ್ಕಳ ನಾಟಕಗಳಂತಹ ಸೃಜನಶೀಲ ಬರವಣಿಗೆಯ ಕಡೆಗೆ ವಾಲಿದ್ದು ಅವರಿಗೂ ಖುಷಿ ನೀಡಿದೆ ಎಂದು ನಂಬುತ್ತೇನೆ. + +(ಮಂಡಲಗಿರಿ ಪ್ರಸನ್ನ) + +ಮನುಷ್ಯ ಮತ್ತು ಪರಿಸರದ ಸಾವಯವ ಸಂಬಂಧವನ್ನು ಸಾರುವ ಅನೇಕ ಗಜಲ್ ರಚನೆಗಳು ಈ ಸಂಕಲನದಲ್ಲಿವೆ. ನೆನಪಿನ ಬಗ್ಗೆ, ಪ್ರಕೃತಿಯ ವಿಸ್ಮಯಗಳ ಬಗ್ಗೆ, ಬೆಳಗಿನ ರಂಗೋಲಿ, ಹೂವುಗಳ ಮೇಲೆ, ಪ್ರೇಮ, ವಿರಹ, ತ್ಯಾಗ, ವಂಚನೆ, ತೃಪ್ತಿಯ ಕುರಿತು ಬರೆದ ಗಜಲ್ ಗಳಿವೆ. ಒಂದು ಗಜಲ್‌ನ ಸಾಲು ನೋಡುವುದಾದರೆ: + +ಭೋರ್ಗರೆವ ಕಡಲುಕ್ಕಿ ಕಿನಾರೆಗೆ ಮುತ್ತಿಡುತಿರಲು `ಗಿರಿ’ಸುಳಿಯಪ್ಪುಗೆ ನೆನಪಿಸಿಕೊಂಡಾಗೊಮ್ಮೆ ನಿನ್ನ ನೆನಪು(ಗಜಲ್-೩) + +ಗಜಲಿನಲ್ಲಿ ಮನುಷ್ಯನ ಇಂದ್ರೀಯಗಳಿಗೆ (ಪ್ರಾಣಿ ಪಕ್ಷಿಗಳಷ್ಟು ನಾವು ನಿಸರ್ಗಕ್ಕೆ ಹತ್ತಿರವಿಲ್ಲ ಎಂದಾಗಲೂ) ಪರಿಸರ ಸದಾ ಒಂದಲ್ಲಾ ಒಂದು ವಿಶೇಷತೆಯನ್ನು ದಾಖಲಿಸಬಲ್ಲ ಅನುಭೂತಿಯನ್ನು ನಮಗೆ ನೀಡುತ್ತದೆ ಎಂಬುದನ್ನು ಇಲ್ಲಿ ನೆನಪಿಸಿದ್ದಾರೆ. ಇಂತಹ ಅನುಭವಗಳನ್ನು ಒಳಮನಸಿಗೆ ಇಳಿಸಿಕೊಂಡು, ಸರಿ ಸಮಯಕ್ಕೆ ಕಾದು ಯಾವುದೋ ಕ್ರಿಯಾಶೀಲ ರೂಪದಲ್ಲಿ ವ್ಯಕ್ತಪಡಿಸುತ್ತೇವಷ್ಟೆ. ಹಾಗೆ ದಕ್ಕಿಸಿಕೊಳ್ಳುವ ಸಾಮರ್ಥ್ಯ ಇರಬೇಕು. + +ನಮ್ಮತನವ ತಿಳಿಯಲೆಂದೆ ಮೈಯ ತುಂಬ ಕಣ್ಣುತಿರುತಿರುಗಿ ಆಗಾಗ ನೋಡಲಿದೆ ಅರಿವಿನ ಬೆನ್ನುಡಿ(ಗಜಲ್-೧) + +ಹೀಗೆ ಮೈಯೆಲ್ಲಾ ಕಣ್ಣಾದಾಗ ಮಾತ್ರ ನಮ್ಮ ಅನುಭವದ ರೆಟೀನಾದಲ್ಲಿ ಒಂದಷ್ಟು ಉಳಿಯಬಲ್ಲ ಸಂಗ್ರಹಯೋಗ್ಯ ಚಿತ್ರಗಳು ಸೆರೆಯಾಗಬಲ್ಲವು. ಹಾಗಾದರೆ ನಮಗೆ ಖುಷಿ ಕೊಡಬಲ್ಲುವಷ್ಟೇ ನೆನಪಿಟ್ಟುಕೊಳ್ಳಬೇಕೆ? ಅದಾಗದು. + +ಇಲ್ಲಿನ ಗಜಲ್‌ಗಳಲ್ಲಿ ನಿದ್ದೆಗೆಡಿಸುವ ಯಾತನೆಗಳು ಸಹ ಇವೆ. ಇಂತಹ ಒಳ ಸಂಕಟಗಳು ಮನುಷ್ಯರಾದ ನಮ್ಮನ್ನು ಸೋಲಿಸುತ್ತವೆ; ಆದರೆ ಕಾವ್ಯಕ್ಕೆ ಅವೇ ಅಸಲು ಮಾಲು. ಇದೊಂದು ವಿಪರ್ಯಾಸವು ಹೌದು. ಒಳ್ಳೆಯ ಕಾವ್ಯ ಬದುಕಿನ ಕೆಟ್ಟ ಅನುಭವಗಳಿಂದ ರೂಪ ತಾಳುತ್ತದೆ. ಬಹುಶಃ ಒಂದು `ಸಂತೃಪ್ತ’ ಭಾವದ ಬದುಕಿನಿಂದ ನಮಗಷ್ಟೇ ತೃಪ್ತ ಅನಿಸಬಹುದಾದ ಕವಿತೆ ಹುಟ್ಟಬಹುದು. ಆದರೆ ಬದುಕು ಸುಟ್ಟುಕೊಂಡು ಕಟ್ಟಿದ ಕಾವ್ಯಕ್ಕೆ ಮಿಡಿವ ತಾಕತ್ತು ಎಲ್ಲಾ ಕಾಲಕ್ಕು ಪ್ರಸ್ತುತ ಅನಿಸುತ್ತದೆ. ಸಾವಯವ ಸಂಬಂಧದ ಜರೂರು ಇಲ್ಲಿ ಕೆಲಸ ಮಾಡುತ್ತದೆ. + +ನಯನಗಳೀಗ ಸೋತಿವೆ ದಣಿವು ಮರೆತು ನಿದಿರೆಗೆ ಜಾರಬೇಕೆಂದಿದ್ದೆಹಾಸಿಗೆಯಲೂ ಮುಳ್ಳು ಕಾಣುತಿದ್ದೇನೆ ಈ ಯಾತನೆಗೆ ಕೊನೆಯೆಂದು(ಗಜಲ್-೪) + +ಮಾರುಕಟ್ಟೆಯ ಈ ದಿನಗಳಲ್ಲಿ ನಿದಿರೆಯೆಂಬುದು ಸಹ ಸರಕು ಆದ ಈ ಹೊತ್ತಲ್ಲಿ, ನಿದ್ದೆಗೆ ಜಾರುವುದು ಸಹ ಸುಲಭದ ಮಾತಲ್ಲ. ಉಂಡು ಗಡದ್ದು ನಿದ್ದೆ ಮಾಡುವವರನ್ನು ಕಂಡು ಹೇಳುವ `ಎಂಥಾ ಅದೃಷ್ಟವಂತನಪ್ಪ ನೀನು’ ಮಾತು ಕೇವಲ ಹಾಸಿಗೆಯಲಿ ಚೆಲ್ಲಿದ ದೇಹಕ್ಕೆ ಹೇಳುವುದಲ್ಲ. ಅದು ಅಂತಹ ವ್ಯಕ್ತಿಯ ಮಾನಸಿಕ ಸ್ಥಿತಿಗೂ ಹೇಳಿದ ಮಾತಾಗುವುದು. ನಿದ್ದೆ ಹತ್ತುವುದಿಲ್ಲ ಅಂದರೆ ಅದಕ್ಕೆ ಬಾಹ್ಯ ಕಾರಣ ಎಷ್ಟಿರುತ್ತವೋ; ಅಷ್ಟೇ ಪ್ರಮಾಣದ ಆಂತರಿಕ ಸಂಗತಿಗಳು ಸಹ ನಮ್ಮನ್ನು ಕದಡಿಬಿಡಬಲ್ಲವಾಗಿರುತ್ತವೆ. ಇದರಲ್ಲಿ ಸಾಮಾಜಿಕ ಕಾರಣವೋ ಅಥವಾ ವೈಯಕ್ತಿಕ ಕಾರಣವೋ ಅಂತು ನಾವು ಅವುಗಳ ಶಿಕಾರಿಯಾಗಬೇಕಾಗುತ್ತದೆ. ಈ ಸ್ಥಿತಿ ಒಬ್ಬ ಕ್ರಿಯಾಶೀಲ ಮನಸು ಉಳ್ಳಾತನಿಗೆ ಆದಲ್ಲಿ ಮೇಲಿನಂತಹ ಸಾಲು ಹುಟ್ಟಬಲ್ಲವು. ನಿದಿರೆ ಎಂಬುದು ಸರಕು ಅಂದೆ. ಹೌದು ಈಗಾಗಲೇ ಐರೋಪ್ಯ ದೇಶಗಳು ಸೇರಿದಂತೆ ಒತ್ತಡದಲ್ಲಿ ದಿನಗೆಲಸ ಮಾಡುವ ನೌಕರರು ಮಧ್ಯಾಹ್ನದ ಹೊತ್ತು ಲಘು ನಿದ್ರೆಗಾಗಿ `ಸ್ಲೀಪಿಂಗ್ ಪಾರ್ಲರ್’ ಅಥವಾ `ನ್ಯಾಪಿಂಗ್ ಸೆಂಟರ್’ ಗಳಲ್ಲಿ ಅರ್ಧ ಗಂಟೆ, ಒಂದು ತಾಸಿನ ನಿದ್ದೆ ಮಾಡಿ ಬರುತ್ತಾರೆ, ಇವೆಲ್ಲವೂ `ಪೇಡ್’-ಹಣ ಕೊಟ್ಟು ಮಲಗುವ ಕೇಂದ್ರಗಳು. ನಮ್ಮ ದೇಶದಲ್ಲಿ ಸಾರ್ವಜನಿಕ ಪಾರ್ಕು, ಬಸ್ ಸ್ಟ್ಯಾಂಡ್ ರೈಲು ನಿಲ್ದಾಣಗಳಲ್ಲಿ ಅಡ್ಡಾದಿಡ್ಡಿ ಮಲಗಿ ಜಗದ ಜಂಜಡಗಳನ್ನು ಮರೆವ ರೀತಿಯವು. ಆದರೆ ಮಂಡಲಗಿರಿ ಪ್ರಸನ್ನ ಅವರು ಹೇಳುವ ಈ ಶೇರ್‌ನಲ್ಲಿ: + +ಕಾಯುತಿವೆ ಪ್ರತಿಕ್ಷಣ ಮುಪ್ಪಡರದ ಭರವಸೆಗಳು `ಗಿರಿ’ಕನಸುಗಳು ಕಣ್ಣೊಳಗೆ ಉಳಿದು ಬಿಟ್ಟಿವೆ ಸಾಯದೆ ಹಾಗೆ(ಗಜಲ್-೧೨)ಎಂಬ ಗಜಲಿನಲ್ಲಿ ಇನ್ನೂ ಕಾಣಲಾರದ ಕನಸು ಎಂದೆಂದಿಗೂ ಜೀವಂತ ಎಂಬುದನ್ನು ಸೊಗಸಾಗಿ ಹೇಳಿದ್ದಾರೆ. ಮತ್ತೊಂದು ಗಜಲ್‌ನಲ್ಲಿ ಮುಂದುವರೆದ ಅವರ ಭಾವ: + +ಸತ್ತ ದೇಹದ ಮುಂದೆ ಕೂತು ಅಳುವಲ್ಲಿ ಅರ್ಥವೇನಿದೆಇರುವಾಗ ಪ್ರೀತಿ ತೋರದೆ ಕಣ್ಣೀರಿಡುವಲ್ಲಿ ಅರ್ಥವೇನಿದೆ(ಗಜಲ್-೧೩)ಅನ್ನುವಾಗಲೂ ಸಾವೆಂಬುದು ಸತ್ತವರ ವಿಷಯವಲ್ಲ; ಅದೆಂದಿಗೂ ಇನ್ನು ಬದುಕುಳಿದವರ ಮಾತಿನ ವಸ್ತು ಮತ್ತು ಅದರ ಅಂದಾಜು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ, ಎಂಬ ತಾತ್ಪರ್ಯ ನೀಡುತ್ತದೆ. + +ಸುಖದ ನಿದಿರೆಯಲಿಹಳು ನಲ್ಲೆ ಹಾಡಬೇಡ ಕೋಗಿಲೆಎದೆಗೆ ತಲೆಯಿಟ್ಟು ಮಲಗಿಹಳು ಕಾಡಬೇಡ ಕೋಗಿಲೆ(ಗಜಲ್-೨೨)ಮೇಲಿನ ಸಾಲು ಥಟ್ಟನೆ ನನಗೆ ತೆಲುಗು ಚಿತ್ರವೊಂದರ `ಓ ಪಾಪ ಲಾಲಿ’ ಹಾಡು ನೆನಪಿಸಿತು. ಎಸ್.ಪಿ. ಬಾಲಸುಬ್ರಮಣ್ಯ ಹಾಡಿರುವ ಆ ಗೀತೆಯಲ್ಲಿ `ಓ ಕೋಯಿಲಾ ಪಾಡವೆ ನಾ ಪಾಟಾನಿ’- ಓ ಕೋಗಿಲೆಯೇ ನೀನೆ ನನ್ನ ಹಾಡನ್ನು ಹಾಡಿ ನನ್ನ ಪ್ರೇಯಸಿಗೆ ಹಿತ ನೀಡು ಅಂದಂತೆ, ಇಲ್ಲಿ ಪ್ರಿಯಕರ ಎದೆ ಮೇಲೆ ಒರಗಿ ನಿದ್ದೆಗೆ ಜಾರಿದ ಪ್ರೇಯಸಿಗೆ ಭಂಗ ಬಾರದಿರಲೆಂದು ಕೋಗಿಲೆ ಹಾಡದಂತೆ ವಿನಂತಿಸಿಕೊಂಡ ಪರಿ ಒಬ್ಬ ಕವಿಗೆ ಸಾಧುವೇ. ದೇವರಲ್ಲಿ ಪ್ರೀತಿಗಾಗಿ, ನಿದಿರೆಗಾಗಿ ಪ್ರಾರ್ಥಿಸುತ್ತ, ಏಕ್ ದಮ್ ಬಯಲು ಸೀಮೆಯಿಂದ ಕಡಲಿಗೆ ಹಾತೊರೆವ, ಬೆಟ್ಟ-ಕಣಿವೆ ಸುತ್ತಲು ಹಂಬಲಿಸುವ ರೀತಿ ಏಕಕಾಲಕ್ಕೆ ಭವೊಲ್ಲಂಘನೆಯಂತೆಯು ಮತ್ತು ಭಾವೋಲ್ಲಂಘನೆಯಂತೆಯೂ ಗೋಚರಿಸುತ್ತದೆ. ಇಂತಹ ತದ್ವಿರುದ್ಧತೆ ಕಾವ್ಯಕ್ಕೆ ಅನುಚಿತವೇನಲ್ಲ. ಹಾಗೆಯೆ, ಓದಲು ಮುದನೀಡುವ ಇನ್ನೊಂದು ಗಜಲ್ ಮನ ಸೆಳೆಯುತ್ತದೆ: + +(ರಮೇಶ ಅರೋಲಿ) + +ಸೂರ್ಯನನ್ನೇ ಕಣ್ಣಲಿ ತಂದಿಟ್ಟು ಬಯಕೆ ದೀಪ ಹಚ್ಚಿದಳುನಲುಮೆ ಮಾತಿಂದ ಒಡಲುತಣಿಸಿ ನೂರು ನವಿಲ ಕುಣಿಸಿದಳು(ಗಜಲ್-೬)ಎಂಬಲ್ಲಿ `ಬಯಕೆ ದೀಪ’ ದ ರೂಪಕ ಅದ್ಭುತವಾಗಿ ಪ್ರಕಟಗೊಂಡಿದೆ. ಇಲ್ಲಿಯ ರಚನೆಗಳನ್ನು ಓದುತ್ತಾ `ಮದಿರೆ ಇರದ ಗಜಲ್’ ಎಂಬ ಅಭಿಪ್ರಾಯಕ್ಕೆ ಬರುವ ಹೊತ್ತಿಗೆ ಅಲ್ಲೆರಡು ಮದಿರೆ ಕುರಿತಾದ ರಚನೆ ಎದುರಾದವು. + +ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ ಎಂದು ಆಶಿಸುತ್ತ….. ಈ ಗಜಲ್ ಸಂಕಲನಕ್ಕಾಗಿ ಕವಿಮಿತ್ರ ಮಂಡಲಗಿರಿ ಪ್ರಸನ್ನ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. + + + +ಗಜಲ್-೧ + +ಬದುಕಿನ ರಮ್ಯತೆ ಭಗ್ನಗೊಳಿಸಿದ ನಿನಗೆ ಕೃತಜ್ಞತೆಗಳುಮಲ್ಲಿಗೆ ಮನಕೆ ಕೊಳ್ಳಿಯಿರಿಸಿದ ನಿನಗೆ ಕೃತಜ್ಞತೆಗಳು + +ಜಗದ ಚೆಲುವಿಗೆ ಬೀಗಿ ಬಿಳಿಯದೆಲ್ಲ ಹಾಲೆಂದುಕೊಂಡೆನೊರೆ ಹಾಲಿಗೂ ಹುಳಿ ಹಿಂಡಿದ ನಿನಗೆ ಕೃತಜ್ಞತೆಗಳು + +ಋತುಗಳ ಸಹಜಗುಣ ತಿಳಿಯದೆ ಸುಮ್ಮನೆ ದೂರಿದೆನಲ್ಲಉಸುರಿಗೂ ಕೆಂಡದ ಲೇಪನೀಡಿದ ನಿನಗೆ ಕೃತಜ್ಞತೆಗಳು + +ಇರುಳ ನಿದಿರೆಯನು ದೂರವಿರಿಸಿ ನಕ್ಷತ್ರವೆಣಿಸುತ ಕುಳಿತೆಸವಿಗನಸ ನೆಮ್ಮದಿಗೂ ಕನ್ನವಿರಿಸಿದ ನಿನಗೆ ಕೃತಜ್ಞತೆಗಳು + +ಮಾಸಿದ ಮುಖದಲೂ ಚೆಲುವು ಮೂಡಿಸುವ ಹುಂಬತನನನ್ನೊಳಗೆ ನಗೆ ಕಾರಂಜಿ ಬತ್ತಿಸಿದ ನಿನಗೆ ಕೃತಜ್ಞತೆಗಳು + +ಊಹಿಸಲಾಗದ ತಿರುವಿನ ಹಾದಿಯ ಚಮತ್ಕಾರವೆ ಅದುನೆನಪಿನ ಸೋನೆಗೂ ನೋವುಣಿಸಿದ ನಿನಗೆ ಕೃತಜ್ಞತೆಗಳು + +ಬಿಡದ ವ್ಯಾಮೋಹವೆ ಕೊನೆಗೆ ಮುಳುವಾಯಿತಲ್ಲ `ಗಿರಿ’ಇತಿಹಾಸದ ದುರಂತಕಥೆ ನೆನಪಿಸಿದ ನಿನಗೆ ಕೃತಜ್ಞತೆಗಳು + +ಗಜಲ್-೨ + +ನಿನ್ನೆದೆಗೆ ತಲೆಯಿಟ್ಟು ನನ್ನೆದೆ ತೊಳಲಾಟ ಹೇಳಲು ಬಿಡುನನ್ನಂತರಂಗವು ನಿನ್ನ ಸಂಕಟಗಳ ಏನೆಂದು ಕೇಳಲು ಬಿಡು + +ಎಷ್ಟುದಿನ ಅದನು ಹೀಗೆ ಅದುಮಿ ಇಡುವುದು ಹೇಳುಒಡಲ ಭಾವಗಳ ಗುದ್ದಾಟದ ಪೆಟ್ಟುಗಳ ತೋರಲು ಬಿಡು + +ಕತ್ತಲೆಯ ಗೂಡಲಿ ಉಳಿದು ಉಸಿರುಗಟ್ಟುತಿದೆ ಪ್ರತಿದಿನಬೆಳಗಿನ ಉದಯಿಸುವ ಸೂರ್ಯಕಿರಣ ನೋಡಲು ಬಿಡು + +ಸೆರೆಮನೆಯಾಗಿದೆ ನಾಕು ಗೋಡೆಗಳ ನಡುವಿನ ಬದುಕುಮನಕೆ ಮುದನೀಡುವ ಆಹ್ಲಾದಕರ ಗಾಳಿ ತೂರಲು ಬಿಡು + +ಕಣ್ಣಾಲಿ ನೀರು ಮಡುಗಟ್ಟಿ ಕತಕತನೆ ಕುದ್ದು ಆವಿಯಾಗುತಿದೆ`ಗಿರಿ’ ಒಡಲ ಗಾಯಗಳನು ಒಂದಷ್ಟಾದರೂ ಮಾಯಲು ಬಿಡು + +ಗಜಲ್-೩ + +ಇಂದಿನ ಸಂಜೆ ಅದೇಕೊ ಕಳೆಗಟ್ಟಿದೆ ಅವಳು ಬರಬಹುದೇನೊದಿನನಿತ್ಯದ ಬೇಸರವನು ದೂರಕಟ್ಟಿದೆ ಅವಳು ಬರಬಹುದೇನೊ + +ಪಡುವಣದ ಗಳಿಗೆ ರಮ್ಯಗೊಂಡು ಹೊಸತು ಹುರುಪಿನಿಂದಿದೆಮೌನಹೃದಯ ಶೃಂಗಾರ ಕಾವ್ಯಕಟ್ಟಿದೆ ಅವಳು ಬರಬಹುದೇನೊ + +ಇರುಳಿಗೂ ಇಂದು ಹತ್ತಿರ ಸುಳಿಯಲು ಹೆದರಿಕೆ ಎನಿಸಿದಂತಿದೆದೀವಟಿಗೆಯ ಜೋಡಿಕಣ್ಣು ಬೆಳಕಿಟ್ಟಿದೆ ಅವಳು ಬರಬಹುದೇನೊ + +ನೂರು ನವಿಲ ನರ್ತನ ಏಕಕಾಲದಿ ಮನ ಕುಣಿಸಿ ತಣಿಸಿವೆಭೂರಮೆಯಂತೆ ಒಡಲು ಚೆಲುವಿಟ್ಟಿದೆ ಅವಳು ಬರಬಹುದೇನೊ + +ಆಸೆ ಕಂಗಳು ಹುಣ್ಣಿಮೆ ಚಂದಿರನಂತೆ ಅರಳಿ ನಿಂತಿವೆ `ಗಿರಿ’ಎದೆಯೊಳಗೆ ನಲ್ಮೆ ಬೀಜಗಟ್ಟಿದೆ ಅವಳು ಬರಬಹುದೇನೊ + +ಗಜಲ್-೪ + +ಕತ್ತಲಾಗುತಿದೆ ಮೇಲೊಂದು ಮನೆಯಿದೆ ಹೋಗಬೇಕುಕಾಯುತ ಕುಳಿತಿಹೆ ಸುಮ್ಮನೆ ಹೋಗಲಿದೆ ಹೋಗಬೇಕು + +ಸಾಕು ನೋಡಲೇನಿದೆ ವೃಥಾ ಕಾಲ ತಳ್ಳುತ್ತಾ ಕೂಡಲುಬಂದ ಕೆಲಸ ಪೂರ್ಣವೇನಲ್ಲ ಸಾಗುತಿದೆ ಹೋಗಬೇಕು + +ಮಿಂಚುಳ್ಳಿ ಬದುಕಲಿ ನೂರಾರು ಆಸೆ ಕೆಲ ಉಳಿದಿವೆ ನಿಜಹಿಂದಿನವರಿಗೆ ದಾರಿಬಿಡುವ ಕ್ಷಣ ಬಂದಿದೆ ಹೋಗಬೇಕು + +ಬದುಕಿನ ಜೊತೆ ಹರಿದ ನಗುಅಳುವಿನ ಹೊಳೆ ಸಾಲುಆಗಾಗ ಬಿಸಿಲ್ಗುದುರೆ ಮಿಂಚು ಕಂಡಿದೆ ಹೋಗಬೇಕು + +ಏಸೋ ವಸಂತ ಕಳೆದಿವೆ ಹಗಲಿನಂತಲ್ಲ ಇರುಳೀಗ ದೀರ್ಘʻಗಿರಿʼ ಸಾಕಿನ್ನು ಪ್ರಯಾಸ ದೇಹ ಬಳಲಿದೆ ಹೋಗಬೇಕು + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_154.txt b/Kenda Sampige/article_154.txt new file mode 100644 index 0000000000000000000000000000000000000000..f1a07be1b8e519ca7e1b19065b4fc62a975a7a52 --- /dev/null +++ b/Kenda Sampige/article_154.txt @@ -0,0 +1,41 @@ +ಡಾ. ಬಸು ಬೇವಿನಗಿಡದ ಅವರು ಮಕ್ಕಳ ಸಾಹಿತ್ಯಕ್ಕೆ ಕಥೆ, ಕಾದಂಬರಿಯಂತಹ ಮಹತ್ವದ ಕೃತಿಗಳನ್ನು ನೀಡಿದ್ದಾರೆ. ಇವರ ‘ಓಡಿ ಹೋದ ಹುಡುಗ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರವೂ ದೊರೆತಿದೆ. ಇವರ ಇತ್ತೀಚಿನ ಮಹತ್ವದ ಕಾದಂಬರಿ ‘ಒಳ್ಳೆಯ ದೆವ್ವ’. + +ಈ ಕಾದಂಬರಿಯ ಕೇಂದ್ರಬಿಂದು ಮುಖ್ಯ ಪಾತ್ರದಾರಿ ಮಂಜುನಾಥ. ಅವನಿಗೆ ದೆವ್ವ ಹಿಡಿದಿದೆ ಎಂಬುದೇ ಮುಖ್ಯ ಕಥೆ. ದೆವ್ವದ ಕುರಿತು ಇಲ್ಲಿಯವರೆಗೂ ನಾನಾ ಕಥೆಗಳು, ಚಲನಚಿತ್ರಗಳು ಬಂದಿವೆ. ಅವೆಲ್ಲ ನಮ್ಮನ್ನು ರೋಮಾಂಚನಗೊಳಿಸಿದ್ದಲ್ಲದೆ, ಅಂಜುಬುರುಕರನ್ನಾಗಿಸಿವೆ. ಆದರೆ ಇಲ್ಲಿ ಡಾ.ಬಸು ಬೇವಿನಗಿಡದ ಅವರು ದೆವ್ವವನ್ನು ನಂಬುತ್ತಿದ್ದವರನ್ನು ದೆವ್ವವೇ ಇಲ್ಲ ಎಂದು ಹೇಳುವಂತೆ ಮಾಡಿದ್ದಾರೆ. ಓದುಗರಿಗೆ ಸ್ಪಷ್ಟವಾಗುವಂತೆ ಹಲವಾರು ಅಂಶಗಳನ್ನು ನಿರೂಪಿಸಿದ್ದಾರೆ. ಎಳೆಯ ಓದುಗರಲ್ಲಿ ಧೈರ್ಯದ ಕಿಚ್ಚು ತುಂಬಿದ್ದಾರೆ. + +(ಡಾ. ಬಸು ಬೇವಿನಗಿಡದ) + +ಮಂಜುನಾಥ ಧಾರವಾಡದ ಹತ್ತಿರವಿರುವ ಪ್ರೌಢಶಾಲೆಗೆ ಸೈಕಲ್ ಮೇಲೆ ಹೋಗಿ ಬರುತ್ತಿದ್ದ. ಕ್ರೀಯಾಶೀಲತೆಯಿಂದಿದ್ದ ಮಂಜುನಾಥ ಒಳ್ಳೆಯ ವಿದ್ಯಾರ್ಥಿಯಾಗಿದ್ದ. ಇವರದು ಬಡ ಕುಟುಂಬ ಆದರೂ ತಾಯಿ ನೀಲವ್ವ ಅವನನ್ನು ಮುದ್ದಿನಿಂದ ಸಾಕಿದ್ದಳು. ಒಂದು ದಿನ ಸಾಯಂಕಾಲ ಮಂಜುನಾಥ ಅದೇಕೋ ಏನೇನೋ ಮಾತನಾಡೋದು, ಒಂದುತರಹ ವರ್ತನೆಯಲ್ಲಿ ವಿಚಿತ್ರವಾಗಿ ಕಾಣಿಸತೊಡಗಿದ. ಆಗ ಮಂಜುನಾಥನಿಗೆ ದೆವ್ವ ಹೊಕ್ಕಿದೆ ಎಂಬ ಮಾತು ಕೇಳಿ ನೀಲವ್ವಳಿಗೆ ದಿಕ್ಕೆ ತೋಚದಂತಾಯಿತು. ಹೀಗೆ ಕಾದಂಬರಿ ಆರಂಭವಾಗುತ್ತದೆ. + +ಮಗನ ಬಗ್ಗೆ ತಾಯಿ ತೋರುವ ಕಕ್ಕುಲತೆಯನ್ನು ಲೇಖಕರು ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ. ‘ಇಷ್ಟು ಸಣ್ಣ ಹುಡುಗನೇ ಬೇಕಾಗಿತ್ತಾ? ಮಲ್ಲಿಗೆ ಅರಳಿದಂತೆ ಮೆಲ್ಲಗೆ ಮಾತನಾಡುವ ಈ ಕಂದನೆ ಅದಕ್ಕೆ ಸಿಗಬೇಕಾಗಿತ್ತಾ? ದಪ್ಪನವರು, ತೆಳ್ಳಗಿರೋರು, ಎತ್ತರೆತ್ತದವರು ಹೀಗೆ ವಿವಿಧ ತರಹದ ಜನ ಬೇಕಾದ್ರು ಇದ್ರು. ಅವರನ್ನು ಹಿಡಿದುಕೊಳ್ಳಬಹುದಿತ್ತು’. ಎಂದು ತಾಯಿ ದೆವ್ವನಿಗೆ ಪರಿಪರಿಯಾಗಿ ಕೇಳುತ್ತಾಳೆ. + +ಹಾಗೆಯೇ ದೆವ್ವ ಮಂಜುನಾಥನಿಗೆ ಹಿಡಿದುಕೊಳ್ಳಲೂ ಕಾರಣವನ್ನು ಊಹಿಸುತ್ತಾಳೆ. ‘ಹುಡುಗ ತನಗೇನು ಅಪಾಯ ಮಾಡೋದಿಲ್ಲ ಅನಿಸಿರಬೇಕು. ಅದು ಅವನಂತೆ ಆಟ ಆಡಬೇಕು, ಕುಣಿಬೇಕು, ಸೈಕಲ್ ಹೊಡಿಬೇಕು, ಗಿರಿ-ಗವ್ಹರಗಳನ್ನು ಸುತ್ತಬೇಕು ಎಂದು ಕನಸು ಕಂಡಿರಬೇಕು’ ಎಂದು ತಾಯಿ ನೀಲವ್ವ ಮಂಜುನಾಥನ ಸ್ವಭಾವ ಮತ್ತು ಒಳ್ಳೆಯತನವನ್ನು ಈ ಮೂಲಕ ಹೇಳುತ್ತಾರೆ. ಅಂದರೆ ಲೇಖಕರು ಕಾದಂಬರಿಯನ್ನು ಮುಗ್ಧ ಮಗುವಿನಂತೆ ಪೋಷಣೆ ಮಾಡುತ್ತಾ ಹೋಗಿದ್ದಾರೆ. ಪ್ರತಿಯೊಂದನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. + +ಮಂಜುನಾಥ ಶಾಲೆಗೆ ಹೋಗುವಾಗ ದಿನಾಲೂ ಅವನ ತಾಯಿಯನ್ನು ತಬ್ಬಿ ಮುದ್ದಾಡುತ್ತಿದ್ದ. ಅಷ್ಟೊಂದು ಪ್ರೀತಿ ವಾತ್ಸಲ್ಯ ಇಬ್ಬರಲ್ಲೂ ತುಂಬಿತ್ತು. ‘ತಾಯಿ ವಾತ್ಸಲ್ಯ ಮತ್ತು ಮಗನ ಮಂದಹಾಸ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ’ ಎನ್ನುವ ಶಿರ್ಷಿಕೆಯೊಂದಿಗೆ ಅದು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಅಷ್ಟೊಂದು ಅಮೋಘವಾದ ಪ್ರೀತಿ ಇವರದಾಗಿತ್ತು. ಅದನ್ನು ನೋಡಿ ಮಗ ಫೋಟೋದಂತೆ ಕಟ್ಟು ಹಾಕಿಸಲು ತಾಯಿಗೆ ಹೇಳಿದ. ಬಾಲ್ಯದ ಆ ಅಮೂಲ್ಯ ನೆನಪನ್ನು ಗೆಳೆಯರಾದ ಪಲ್ಲವಿ, ಪವನ, ಆಕಾಶ ನೆನಪಿಸಿಕೊಳ್ಳುತ್ತಾರೆ. ಅವ್ವ ಬಹಳ ಸಂತೋಷ ಪಡುವ ರೀತಿಯನ್ನು ಲೇಖಕರು ಬಹಳ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ತಾಯಿಯು ಮಾಡುವ ಹುಗ್ಗಿ, ತಾಲಿಪಟ್ಟು, ಸವತಿಬೀಜದ ಪಾಯಸ ಮತ್ತು ತಿಂಡಿ ತಿನಿಸುಗಳ ಸವಿಯನ್ನು ಕಾದಂಬರಿಯಲ್ಲಿ ಸವಿಯುವಂತೆ ಮಾಡಿದ್ದಾರೆ. ಉಂಡವರಿಗೆ ಅವುಗಳ ರುಚಿ ಮತ್ತೊಮ್ಮೆ ಬಾಯಲ್ಲಿ ನೀರೂರಿಸುತ್ತವೆ. ಬದಲಾದ ಈಗಿನ ಆಹಾರ ಪದ್ಧತಿಯನ್ನು ತುಲನೆ ಮಾಡುವಂತೆ ಮಾಡಿದ್ದಾರೆ. ಅವನ ಗೆಳೆಯರ ಒಡನಾಟ, ಆತ್ಮೀಯತೆ ನಮ್ಮ ಗೆಳೆಯರ ಗುಂಪನ್ನು ನೆನಪಿಸುತ್ತವೆ. + +ಇಂತಹ ಮಂಜುನಾಥನಿಗೆ ದೆವ್ವ ಬಡಿದಿದೆ ಎಂದರೆ ಆಶ್ಚರ್ಯ. ಮಕ್ಕಳು ಕ್ಲಾಸ್ ರೂಂನಲ್ಲಿ ತರ್ಲೆ ಮಾಡೋದು ಇದ್ದೇ ಇರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಹೆಸರಿಡೋದು, ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳೋದು ಮಂಜುನಾಥನ ಗೆಳೆಯರ ಗುಂಪಿನಲ್ಲಿಯೂ ಇತ್ತು. + +ಈಗ ದೆವ್ವ ಬಿಡಿಸುವ ಕಾರ್ಡನ್ನು ಮಾಡಿಕೊಂಡಿರುವ ಗಾಳೆಪ್ಪ ಮಹಾರಾಜ ಮಂಜುನಾಥನಿಗೆ ಹಿಡಿದ ದೆವ್ವ ಬಿಡಿಸಲು ಬರುತ್ತಾನೆ. ಅವನ ಆಕಾರವೂ ದೆವ್ವನ ತರಹವೇ ಇತ್ತು. ಅವನು ಮಂಜುನಾಥನಿಗೆ ಹೊಡಿಯೋದು ನೋಡಿದ್ರ ಹೊಟ್ಟೆಯ ಕರುಳು ಕಿತ್ತು ಬರುತ್ತಿತ್ತು. ಇಲ್ಲಿ ನಡೆಯುವ ಘಟನೆಗಳನ್ನು ಓದುತ್ತಾ ಹೋದಂತೆ ಮೈ ಜುಮ್ಮೆನ್ನುತ್ತದೆ. ಮಗ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿದ್ದಾನೆ. ಏನೂ ಊಟ ಮಾಡಿಲ್ಲ ಮತ್ತು ಮಾತನಾಡುವುದಿಲ್ಲ. ಮಗನ ಈ ಸ್ಥಿತಿಯನ್ನು ನೋಡಿ ಮಮ್ಮಲ ಮರುಗುತ್ತಾಳೆ. + +ಕಾದಂಬರಿಯಲ್ಲಿ ಹಾಸ್ಯದ ಲೇಪನ ಹಚ್ಚಿದ ಬೆಚ್ಚಪ್ಪ ಕಾಕಾ ವಿಶೇಷ ಪಾತ್ರವಹಿಸುತ್ತಾನೆ. ಹಾಗೆಯೇ ಧಾರವಾಡದ ಗೋಡೆ ಗಡಿಯಾರ ತಯಾರಿಸುವ ಕಾರ್ಖಾನೆ ಕುರಿತು ಇದ್ದ ನಂಬಿಕೆಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನೀರಸಾಗರದಂತ ಪ್ರದೇಶಗಳಿಗೆ ಭೇಟಿ ನೀಡಿದಾಗ ಇರಬೇಕಾದ ಎಚ್ಚರವನ್ನು ನಮಗೆ ತಿಳಿಸುತ್ತದೆ. ಮಕ್ಕಳ ಅಜಾಗೂರಕತೆಯಿಂದ ನಡೆದ ನೀರಿನಲ್ಲಿ ಮುಳುಗಿಹೋದ ಘಟನೆಯನ್ನೂ ನೆನಪಿಸುತ್ತಾರೆ. ಮನೆಯಲ್ಲಿ ಹಿರಿಯರು, ಓಣಿಯಲ್ಲಿ ಜನರು ಮಾತನಾಡುವುದನ್ನು ಮಕ್ಕಳೂ ಆಲಿಸುತ್ತಾರೆ. ಅವೆಲ್ಲವೂಗಳನ್ನೂ ಪಲ್ಲವಿ, ಆಕಾಶ, ದುರ್ಗಾ, ಪವನ ಮಾತಾಡಿಕೊಳ್ಳುವದು ಮತ್ತು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಲೇಖಕರು ಅರ್ಥವತ್ತಾಗಿ ಬರಹಕ್ಕಿಳಿಸಿದ್ದಾರೆ. + + + +ನಮ್ಮ ಸಮಾಜದಲ್ಲಿ ಅನೇಕ ಕ್ಷುಲ್ಲಕ ವಿಚಾರಗಳೂ ಗಾಳಿಸುದ್ದಿಯಾಗಿ ಹರಡುವುದನ್ನು ನಾವು ಕಾಣುತ್ತೇವೆ. ಇಲ್ಲಿಯೂ ಸಹಿತ ಕರೆನೋ-ಸುಳ್ಳೋ ಗೊತ್ತಿಲ್ಲ ಆ ಸಂದರ್ಭಕ್ಕಾದರೂ ನಂಬಿ ಬಿಡುವ ಪ್ರಸಂಗಗಳಿವೆ. ಹಾಗಾಗಿ ದೆವ್ವದ ಬಗ್ಗೆ ಅನೇಕ ಅವರವರ ಜೀವನದ ಘಟನೆಗಳು, ಅನಿಸಿಕೆಗಳು ವ್ಯಕ್ತವಾಗಿವೆ. + +ಭಗವತಿ ಗುರುಗಳ ಮೂಲಕ ವೈದ್ಯರ ಕಡೆ ಕರೆದುಕೊಂಡು ಹೋಗಲು ಹೇಳಿದರು. ವೈಜ್ಞಾನಿಕ ಕಾರಣಗಳನ್ನು ಹುಡುಕಿ ಪರಿಹಾರ ನೀಡುವ ಅವಶ್ಯಕತೆಯನ್ನೂ ಮತ್ತು ಮಕ್ಕಳಲ್ಲಿ ಬೆಳೆಸಲು ಲೇಖಕರು ಪ್ರಯತ್ನಿಸಿರುವುದು ಕೃತಿಗೆ ಮೆರಗು ತಂದಿದೆ ಎನ್ನಬಹುದು. ದೆವ್ವ, ಭೂತ ಕೇವಲ ನಮ್ಮ ಭ್ರಮೆ ಎಂಬುದನ್ನು ದೃಢಪಡಿಸುತ್ತದೆ. + +ಅಂತಿಮವಾಗಿ ಮಂಜುನಾಥ ಅವನ ತಾಯಿಯ ಕನಸಿನಲ್ಲಿ ಬರುತ್ತಾನೆ. ಅಲ್ಲಿ ನಡೆದ ಭಯಾನಕ ದೃಶ್ಯದಿಂದ ನಲುಗಿಹೋಗುತ್ತಾಳೆ. ನಿಜ ಜೀವನದಲ್ಲಿ ನಡೆಯದಿರಲಿ ಎಂದು ಕೈ ಕೈ ಹಿಚುಕಿಕೊಳ್ಳುತ್ತಾಳೆ. ಕೊನೆಗೂ ಮಂಜುನಾಥ ಗೆಳೆಯರೊಂದಿಗೆ ಮಾತನಾಡತೊಡಗಿದ. ಆರಾಮವಾದ. ಆದರೆ ನೀಲವ್ವಳಿಗೆ ತಲೆತಿರುಗಿ ಬಿದ್ದದ್ದು ಆ ಇಡೀ ಓಣಿಯ ಜನ ನೋಡಲು ಬಂದರು. ಆಗ ಅವರು ನೀಲವ್ವಳ ಸಹಾಯಕ್ಕೆ ನಿಂತು ಉಪಚಾರ ಮಾಡಿದರು. ಅದು ಅವರ ಅನ್ಯೋನ್ಯ ಪ್ರೀತಿಗೆ, ಸಾಮರಸ್ಯಕ್ಕೆ ಗೆಲುವಾಗುತ್ತದೆ. ಕಾದಂಬರಿ ಇಂತಹ ಬದುಕು ಇಂದಿನ ಜೀವನಕ್ಕೂ ಬೇಕೆಂಬ ಸಂದೇಶವನ್ನು ಸಾರುತ್ತದೆ. + +ಕೊನೆಯಲ್ಲಿ ಕಾರವಾರದಲ್ಲಿದ್ದ ಮಂಜುನಾಥನ ತಂದೆಯನ್ನು ಸಂಪರ್ಕಿಸಿ ಊರಿಗೆ ಕರೆಸಿದರು. ಆಗ ಅವನ ತಂದೆ ತಾನು ಒಂದು ಸಾರಿ ಮಂಜುನಾಥನ ತಲೆಗೆ ಹೊಡೆದಿದ್ದರಿಂದ ಪೆಟ್ಟಾಗಿ ಅವನು ಈ ರೀತಿಯಾಗಿ ವರ್ತಿಸಿದನೆಂದು, ತನ್ನ ತಪ್ಪನ್ನು ಅಂದು ಬಿಚ್ಚಿಟ್ಟ. ಪ್ರತಿ ಸಂಸಾರಕ್ಕೂ ಅನ್ಯೋನ್ಯತೆ, ಒಬ್ಬರನ್ನೊಬ್ಬರು ಅರಿತು ನಡೆಯಬೇಕೆಂಬುದನ್ನು ಕಾದಂಬರಿ ಸೂಚ್ಯವಾಗಿ ಹೇಳಿದೆ. + +ಕಾದಂಬರಿಗುಂಟ ಗೆಳೆಯರ ಹಾಸ್ಯ, ಪ್ರಶ್ನೆ ಮಾಡುವುದು ಹಾಗೂ ಕೀಟಲೆ ಮಾಡುವ ಸ್ವಭಾವ ಓತಪ್ರೋತವಾಗಿ ಹರಿದಿದೆ. ಹಾಗಾಗಿ ಮಕ್ಕಳಿಗೆ ಇಷ್ಟವಾಗುತ್ತದೆ. ಮೊದ ಮೊದಲು ಓದುವಾಗ ಭಯವೆನಿಸಿದರೂ ಓದುತ್ತಾ ಹೋದಂತೆ ಕಾದಂಬರಿ ಓದಿ ಮುಗಿಸುವಷ್ಟರಲ್ಲಿ ದೆವ್ವಕ್ಕೆ ಅಂಜುವ ಮಕ್ಕಳೂ ಕೂಡ ಧೈರ್ಯವಂತರಾಗಿ ಬದಲಾಗುವುದರಲ್ಲಿ ಸಂದೇಹವಿಲ್ಲ. ಅಂತಹದೊಂದು ಶಕ್ತಿ ಈ ಕೃತಿಗಿದೆ. ಇದು ಈ ಕಾದಂಬರಿಯ ಯಶಸ್ಸೂ ಕೂಡಾ ಆಗಿದೆ. + +“ಡಾ. ಬಸು ಬೇವಿನಗಿಡದ ಮಕ್ಕಳಿಗಾಗಿ ಬರೆದ ಅದ್ಭುತ ರಮ್ಯ ಕಾದಂಬರಿ ‘ಒಳ್ಳೆಯ ದೆವ್ವ’. ಹೆಜ್ಜೆ ಹೆಜ್ಜೆಗೂ ಮೈ ನವಿರೇಳುವಂತೆ ನಿರೂಪಿತವಾಗಿರುವ ಕಾದಂಬರಿ ಕೊನೆಗೆ ದೆವ್ವದ ಕಲ್ಪನೆ ಹುಸಿ ಎಂಬುದನ್ನು ರೋಚಕವಾಗಿ ಸ್ಫೋಟಿಸಿ ಮೂಢನಂಬಿಕೆಗಳನ್ನು ಉಚ್ಛಾಟಿಸುವ ರೀತಿ ಆಕರ್ಷಕವಾಗಿದೆ. ಲವಲವಿಕೆಯ ಗದ್ಯ, ಮಕ್ಕಳಿಗೆ ಹಿತವಾಗುವಂಥ ತಮಾಷೆ, ಪುಟ್ಟ ಪುಟ್ಟ ವಾಕ್ಯಗಳಿಂದ ಕೂಡಿರುವ ಈ ಕೌತುಕದ ಕಥೆ ಮಕ್ಕಳ ಮನಸ್ಸನ್ನು ಸೂರೆಗೊಳ್ಳುವುದರೊಂದಿಗೆ ಅವರ ವೈಚಾರಿಕ ಜಗತ್ತನ್ನೂ ಜಾಗೃತಗೊಳಿಸುತ್ತದೆ” ಎಂದು ಖ್ಯಾತ ಮಕ್ಕಳ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಯವರು ಕೃತಿ ಕುರಿತು ನುಡಿದಿದ್ದಾರೆ. + +ಡಾ.ಬಸು ಬೇವಿನಗಿಡದ ಅವರು ಬಳಸಿರುವ ಸಹಜ ಸಂಭಾಷಣೆಗಳು, ನುಡಿಗಟ್ಟುಗಳು, ನಾಣ್ಣುಡಿಗಳು ಕಾದಂಬರಿಗೆ ಗಟ್ಟಿತನ ತುಂಬಿವೆ. ಹೀಗೆ ‘ಒಳ್ಳೆಯ ದೆವ್ವ’ ಕಾದಂಬರಿ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಹಿರಿಮೆ ಗರಿಮೆಯಾಗಿದೆ. + + + +ವಸಂತ ಬಾಲ ಸಾಹಿತ್ಯ ಮಾಲೆ -2 ರ ಅಡಿಯಲ್ಲಿ ಈ ಕೃತಿ ಪ್ರಕಟವಾಗಿದೆ. ಆಕರ್ಷಕ ಮುಖಪುಟ ಮತ್ತು ಒಳಚಿತ್ರಗಳನ್ನು ಸಂತೋಷ ಸಸಿಹಿತ್ಲು ಅವರು ರಚಿಸಿದ್ದಾರೆ. ಅಚ್ಚುಕಟ್ಟಾದ ಮುದ್ರಣದಿಂದಾಗಿ ಕೃತಿ ಓದಲು ಕೈಗೆತ್ತಿಕೊಳ್ಳಲು ಪ್ರೇರಣೆ ನೀಡುತ್ತದೆ. + +ನಾಗರಾಜ ಎಂ ಹುಡೇದ ಹಾವೇರಿಯವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದುವುದು, ಕವನ, ಕಥೆ ರಚನೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ನಗುವ ತುಟಿಗಳಲ್ಲಿ, ಭರವಸೆ (ಕವನ ಸಂಕಲನಗಳು), ಅವತಾರ್ ಮತ್ತು ಹಾರುವ ಕುದುರೆ  (ಮಕ್ಕಳ ಕಥಾ ಸಂಕಲನ), ಕಿರುಗೊಂಚಲು (ಕವನಗಳ ಸಂಪಾದಿತ ಕೃತಿ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ) ಸೇರಿದಂತೆ ಇವರ ಹಲವು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_155.txt b/Kenda Sampige/article_155.txt new file mode 100644 index 0000000000000000000000000000000000000000..aaa6350eaea1f7849623842ad41c8a6314b01133 --- /dev/null +++ b/Kenda Sampige/article_155.txt @@ -0,0 +1,21 @@ +ಅಕ್ಕಮಹಾದೇವಿಯ ‘ಮಹಾಪ್ರಸ್ಥಾನʼವನ್ನು ಆಧರಿಸಿ ಬರೆದ 775 ಪುಟಗಳ ಮಹಾ ಕಾದಂಬರಿಯನ್ನು ಓದಿದಾಗ ಹನ್ನೆರಡನೇ ಶತಮಾನದ ಅಕ್ಕಮಹಾದೇವಿಯ ಜತೆಗೆ ನಾನು ಕದಳಿಯ ಗುಹೆಗಳವರೆಗೆ ಹೋದ ಅನುಭವ ಆಯ್ತು. ಜತೆಗೆ ಅನುಪಮಾ ಅವರ ವೈದ್ಯ ವೃತ್ತಿಯ ನಡುವೆ ಇದಕ್ಕೆಲ್ಲ ಸಮಯ ಹೇಗೆ ಹೊಂದಿಸುತ್ತಾರೆ ಎಂದು ಅಚ್ಚರಿಯೂ ಆಯ್ತು. + +(ಡಾ. ಎಚ್.ಎಸ್. ಅನುಪಮಾ) + +ಡಾಕ್ಟರ್ ಎಚ್ ಎಸ್ ಅನುಪಮಾ ಹೊನ್ನಾವರದ ಕವಲಕ್ಕಿಯಲ್ಲಿ ವೈದ್ಯೆ. ಅವರ ಪತಿ ಕೃಷ್ಣ ಗಿಳಿಯಾರ್ ಸಹ ಹೊನ್ನಾವರದಲ್ಲಿ ವೈದ್ಯರು. ಚಿತ್ರ ಕಲಾವಿದರು. ನನ್ನ ಎರಡು ಪುಸ್ತಕಗಳಿಗೆ ಕೃಷ್ಣ ಗಿಳಿಯಾರ್ ಬರೆದ ಚಿತ್ರಗಳೇ ಮುಖಪುಟವಾಗಿವೆ. 2008 /09 ರಲ್ಲಿ ಕೆಂಡಸಂಪಿಗೆಯಲ್ಲಿ ಅನುಪಮಾ ಬರೆಯುತ್ತಿದ್ದಾಗ ಅವರ ಬರವಣಿಗೆ ನನ್ನ ಗಮನ ಸೆಳೆಯಿತು. ಅವರು ಮಹಿಳಾ ದೌರ್ಜನ್ಯ ವಿರೋಧಿ ಹೋರಾಟದಲ್ಲಿಯೂ ಸಕ್ರಿಯರಾಗಿದ್ದಾರೆ. ಯುವಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಾರೆ. ಇದೆಲ್ಲದರ ನಡುವೆ ಸಾಹಿತ್ಯ ರಚನೆ ಮಾಡುತ್ತಾರೆ. ಮೌಲಿಕವಾದ ಪುಸ್ತಕ ಬರೆಯುತ್ತಾರೆ. ಚೆಗೆವಾರನ ಜೀವನ ಚರಿತ್ರೆಯಿಂದ ಪ್ರಾರಂಭಿಸಿ, ನಾನು ಕಸ್ತೂರ್, ಯಶೋಧರ ದಾಸಪ್ಪ, ಸ್ವಾತಂತ್ರ್ಯದ ಬೆಳಗಿನಲ್ಲಿ ಗಡಿ ದಾಟಿದ ಸಾಧಕಿಯರು, (ಅಚ್ಚಿನಲ್ಲಿ) ಪುಸ್ತಕಗಳನ್ನು ಗಮನಿಸಿದರೆ ಅನುಪಮಾ ಅವರ ಆಸಕ್ತಿ ಅವರ ಬರವಣಿಗೆಯ ಉದ್ದೇಶ ಅರಿವಾಗುತ್ತದೆ. ಕೋವಿಡ್ ಡೈರಿ ಅವರ ಇನ್ನೊಂದು ಮುಖ್ಯ ಪುಸ್ತಕ. ಮುಟ್ಟು, ಪುಸ್ತಕ ಸಹ ಹೆಣ್ಣು ಮಕ್ಕಳು ಅನುಭವಿಸುವ ಕೊನೆಯಿಲ್ಲದ ಸಂಕಟವನ್ನು ತೆರೆದಿಡುತ್ತದೆ. ಪ್ರಸ್ತುತ ಬೆಳಗಿನೊಳಗು ಕಾದಂಬರಿ‌ ಅವರ ೫೬ ನೆಯ ಪುಸ್ತಕ. + +ಈಗ ಹೊಸದಾಗಿ ಬಂದಿರುವ ಬೆಳಗಿನೊಳಗು ಎಂಬ ಬೃಹತ್ ಕಾದಂಬರಿ ಅಕ್ಕಮಹದೇವಿಯ ಜೀವನವನ್ನು, ಕುರಿತು ಬರೆದಿದ್ದು. ಇತಿಹಾಸ, ಕಾವ್ಯ, ಶಾಸನಗಳಲ್ಲಿ ಸಿಗುವ ಮಹಾದೇವಿಯ ಕುರಿತ ಆಕರಗಳನ್ನು ಬಳಸಿಕೊಂಡಿದ್ದಾರೆ. ಕಲ್ಲರಳಿ, ಹೂವಾಗಿ, ಎಲ್ಲರಿಗೂ ಬೇಕಾಗಿ, ಶಿಖರಕ್ಕೆ ಬೆಳಕಾಗಿ, ಬಲ್ಲವರಿದ ಪೇಳಿ, ಐಕ್ಯ ಎಂಬ ಆರು ಭಾಗಗಳು ಇದ್ದು ಐದು ಜನ ಚಿತ್ರಕಾರರು ಚಿತ್ರ ಬರೆದಿದ್ದಾರೆ. + +ಕೆರೆ ಗೌರವ್ವ ಎಂಬ ಅಧ್ಯಾಯದಲ್ಲಿ ಕೌಳ ಪಂಥದವರು ಪೂಜಿಸುವ ಲಜ್ಜಾಗೌರಿ ಪ್ರತಿಮೆ ಕೆರೆ ಶುದ್ಧೀಕರಣದಲ್ಲಿ ಸಿಗುವುದರೊಂಡಿಗೆ ಉಡುತಡಿಯ ಕತೆ ತೆರೆದುಕೊಳ್ಳುತ್ತದೆ. ಸೋಮಯ್ಯ ಶೆಟ್ಟಿ ಲಿಂಗಮ್ಮನವರ ಮಗಳು ಮಾದೇವಿ ಬಹಳ ಚುರುಕು ಕುತೂಹಲಿ. ಸದಾ ಕೆಲಸದಲ್ಲಿ ತೊಡಗಿರುವ ಹುಡುಗಿ ಎಲ್ಲದರಲ್ಲೂ ಕುತೂಹಲ, ಪ್ರಶ್ನೆ. ಬೆಳೆಯುವಾಗಲೇ ಭಿನ್ನ. ಎಲ್ಲದಕ್ಕೂ ಯಾಕೆ ಯಾಕೆ ಎಂದು ಪ್ರಶ್ನಿಸುತ್ತಲೇ ಬೆಳೆದವಳು. + + + +ಅಕ್ಕಮಹಾದೇವಿಯದು ಅಭಾವ ವೈರಾಗ್ಯಅಲ್ಲ. ಅವಳದು ಸ್ವಭಾವ ವೈರಾಗ್ಯ ಎಲ್ಲ ಇದ್ದು ಅದರ ಕುರಿತು ಆಕರ್ಷಣೆ ಇಲ್ಲದಿರುವುದು ಅವಳ ವ್ಯಕ್ತಿತ್ವವೇ ವಿಶಿಷ್ಟ ಚೈತನ್ಯ ಉಳ್ಳದ್ದು. ಮಠದ ಗುರು ಲಿಂಗ ಶರಣರು ಅವಳಿಗೆ ಲಿಂಗ ದೀಕ್ಷೆ ನೀಡುತ್ತಾರೆ. ದಿಗಂಬರ ಸನ್ಯಾಸಿಗಳನ್ನು ನೋಡಿ ಎಲ್ಲವನ್ನು ಕಳಚಿ ಇರುವುದರ ಕುರಿತು ಯೋಚಿಸುತ್ತಾಳೆ. ಲಿಂಗ ಶರಣರು ಕಲ್ಯಾಣಕ್ಕೆ ಹೋಗಿ ಬಂದು ಬಸವಣ್ಣನ ಮಹಾಮನೆಯ ವಿಷಯ ಹೇಳುತ್ತಾರೆ. ಕಸಪಯ್ಯ ರಾಯ ಇವನ ಗುಡಿ ಕಟ್ಟಿಸುವಾಗ ಅವನ ಸತಿಗೂ ಗುಡಿ ಕಟ್ಟಲು ಹೇಳುತ್ತಾಳೆ. ಎರಡೇ ಭೇಟಿಗಳಲ್ಲಿ ರಾಯನು ಮಾದೇವಿಯು ಪರಸ್ಪರ ಒಲಿದು ಮದುವೆಯು ಆಗುತ್ತದೆ. ಆದರೆ ಅರಮನೆಯ ಕಟ್ಟುಕಟ್ಟಲೆಗಳು ಮಾದೇವಿಗೆ ಬಂಧನವಾಗುತ್ತದೆ. ಒಮ್ಮೆ ಮಹಾದೇವಿಯ ತಂದೆ ತಮ್ಮ ಮನೆಯಿಂದ ಮಗಳಿಗಾಗಿ ತಿಂಡಿಗಳನ್ನು ಬಿಳಿ ಬುತ್ತಿ ಕರಿ ಬುತ್ತಿ ಎಂಬ ಭಕ್ಷಗಳನ್ನು ತಂದಾಗ ಮಹದೇವಿಯ ಅತ್ತೆ ಆ ಆ ತಿಂಡಿಗಳ ಬೆಳ್ಳುಳ್ಳಿಯ ಈರುಳ್ಳಿಯ ವಾಸನೆಗೆ ಅಸಹಿಸಿಕೊಂಡು ಮಡಿಹಾಳಾಯಿತು ಎಂದು ಅದನ್ನು ಎಸೆಯುತ್ತಾರೆ. ರಾಯನು ಕೋಪಿಸಿಕೊಂಡು ನೀರಿನ ತಂಬಿಗೆಯನ್ನು ಅಡುಗೆಯ ಮೇಲೆ ಬೀಸಿ ಒಗೆಯುತ್ತಾನೆ. ಮೊದಲೇ ಜಿನಮತ್ತಕ್ಕೂ ಶಿವ ಭಕ್ತಿಗೂ ಹೊಂದಾಣಿಕೆ ಮನೆಯಲ್ಲಿ ಇರಲಿಲ್ಲ. ಕಸಪ್ಪಯ್ಯನ ಕ್ರೌರ್ಯ ಅಧಿಕಾರ ಶಾಹಿಯನ್ನು ಸಹಿಸದೆ ಅವನು ಮತ್ತೆ ಮತ್ತೆ ದೈಹಿಕ ಹಲ್ಲೆಯನ್ನು ಮಾಡಿದಾಗ ಮಹಾದೇವಿ ಆ ಪಂಜರದಿಂದ ಹೊರ ಹೋಗುತ್ತಾಳೆ. ತೊಟ್ಟ ತೊಡುಗೆಗಳನ್ನು ಉಟ್ಟ ಬಟ್ಟೆಗಳನ್ನು ಕಿತ್ತೆಸೆದು ಹೋಗುತ್ತಾಳೆ. ಕುರುಬರ ಚಂದ್ರಿ ಅವಳಿಗೆ ಹೊದೆದುಕೊಳ್ಳಲು ಕಂಬಳಿ ಒಂದನ್ನು ಕೊಡುತ್ತಾಳೆ. ಮಹಾದೇವಿಯ ಪ್ರಕಾರ ಧರ್ಮವೆಂದರೆ ದೇವಲೋಕದತ್ತ ಮುಖ ಮಾಡುವುದಲ್ಲ, ಮನುಷ್ಯ ಲೋಕವನ್ನು ಹಸನುಗೊಳಿಸುವುದು. ಕೂದಲು ಬಿಚ್ಚಿಕೊಂಡು ಅರೆ ನಗ್ನಳಾಗಿ ಹೋಗುವ ಅಕ್ಕನನ್ನು ಹುಚ್ಚಿ ಎಂದು ಕೆಲವರು ಭಾವಿಸುತ್ತಾರೆ. ಆದರೆ ಲಕ್ಕುಂಡಿಯಲ್ಲಿ ಅವಳು ಶಾಸನವನ್ನು ಓದಿದಾಗ ಅವಳು ಹೇಳುವ ಪದಗಳನ್ನು ಕೇಳಿದಾಗ ಜನರು ಅವಳನ್ನು ಜ್ಞಾನಿ ಎಂದು ತಿಳಿಯುತ್ತಾರೆ. ಗೌರವಿಸುತ್ತಾರೆ ಪ್ರೀತಿ ತೋರುತ್ತಾರೆ. ಅವಳಿಗೆ ಪಯಣದ ಉದ್ದಕ್ಕೂ ಕೌಳ ಗೋರಖನಾಥ ಭೈರವಿ ಕಾಳ ಮುಖ ಹಲವು ಸಂಪ್ರದಾಯದ ಸಂತರು ಭೇಟಿಯಾಗುತ್ತಾರೆ. + +ಕಪ್ಪಡಿ ಸಂಗಮದಲ್ಲಿ ಅಕ್ಕನಾಗಮ್ಮ ಚೆನ್ನಬಸವಣ್ಣ ಇವರನ್ನು ಭೇಟಿಯಾಗುತ್ತಾಳೆ. ಕಲ್ಯಾಣದಲ್ಲಿ ಮಹಾಮನೆಯಲ್ಲಿ ಕೆಲವು ಕಾಲ ಇರುತ್ತಾಳೆ. ಅಲ್ಲಮ, ಬಸವಣ್ಣ ಅವರ ಜೊತೆ ವಿಚಾರ ವಿನಿಮಯ ಮಾಡುತ್ತಾಳೆ. ಅಲ್ಲಿ ಕೆಲವು ಕಾಲ ಇದ್ದು ಶ್ರೀಶೈಲಕ್ಕೆ ಹೊರಡುತ್ತಾಳೆ. ಈ ದೀರ್ಘ ಪ್ರಯಾಣವೇ ಅವಳ ಅರಿವನ್ನು ವಿಸ್ತರಿಸುತ್ತದೆ. ಕೃಷ್ಣಾ ನದಿ ತೀರದಲ್ಲಿ ನಡೆದು ಹೋಗುವಾಗ ಒಮ್ಮೆ ಅವಳನ್ನು ಹುಡುಕಿಕೊಂಡು ರಾಯ ಬರುತ್ತಾನೆ. ಕ್ಷಮೆ ಕೇಳುತ್ತಾನೆ. ಚೆಂಚು ಆದಿವಾಸಿಗಳ ಸಹಾಯದಿಂದ ಶ್ರೀಶೈಲ ಗಿರಿಯನ್ನು ಏರುತ್ತಾಳೆ. ಅವರು ಆಹಾರ ನೀರು ಒದಗಿಸಿ ಸಹಾಯ ಮಾಡುತ್ತಾರೆ. ಚೇಳು ಕಚ್ಚಿ ಪ್ರಜ್ಞೆ ತಪ್ಪಿದಾಗ ತಮ್ಮ ಗುಡಿಸಲಿಗೆ ಕರೆದೊಯ್ದು ಉಪಚರಿಸುತ್ತಾರೆ. ಪೆದ್ದನ ಎಂಬ ಚಿಂಚು ಯುವಕ ಅವಳಿಗೆ ಚಪ್ಪಲಿಯನ್ನು, ಊರೆಗೋಲನ್ನೂ ಕೊಡುತ್ತಾನೆ. ಅವಳು ಕೃಷ್ಣಾ ನದಿ ದಾಟಿ ಕದಳಿ ಗುಹೆಗಳನ್ನು ತಲುಪಲು ಸಹಾಯ ಮಾಡುತ್ತಾನೆ. ಐಕ್ಯ ಎಂಬ ಅಧ್ಯಾಯದಲ್ಲಿ ಅವಳ ಕೊನೆಯ ಚಿತ್ರ ತುಂಬಾ ತೀವ್ರವಾಗಿ ಮೂಡಿದೆ. + + + +ಗುರುಮನೆಯಲ್ಲಿ ಕಲಿತ ವಿದ್ಯೆಯನ್ನು ಅಕ್ಕಮಹಾದೇವಿ ತನ್ನ ಪಯಣದ ದಾರಿಯಲ್ಲಿ ಬೇಟಿಯಾದ ಜನರಿಂದ ಕಲಿಯುತ್ತ ಬೆಳೆಯುತ್ತಾ ಮಾಗುತ್ತ ಹೋಗುತ್ತಾಳೆ. ಇವತ್ತಿನ ಭೋಗಜೀವನವೆ ಅಂತಿಮ ಎಂದು ಭಾವಿಸುವ ಕಾಲದಲ್ಲಿ ಅಕ್ಕಮಹಾದೇವಿಯ ಬದುಕು ವಿಚಾರ ತುಂಬಾ ಪ್ರಸ್ತುತವಾಗಿವೆ. ಕಾದಂಬರಿ ಓದಿ ಮುಗಿಸಿದಾಗ ನಾವು ಅಕ್ಕನ ಜತೆ ಕದಳಿ ಗುಹೆಗಳನ್ನು ಕಂಡ ಅನುಭವ ಆಗುತ್ತದೆ. 12ನೇ ಶತಮಾನದ ಚಾರಿತ್ರಿಕ ಸಂಗತಿಗಳನ್ನು ವಚನ ಸಾಹಿತ್ಯವನ್ನು ಶಾಸನದ ಮಾಹಿತಿಗಳನ್ನು ಲೇಖಕಿ ಸಮರ್ಥವಾಗಿ ಬಳಸಿಕೊಂಡು ಆ ಕಾಲದ ಪರಿಸರವನ್ನು ಸೃಷ್ಟಿಸಿದ್ದಾರೆ. ವಚನಗಳ ಜೊತೆಗೆ ಆ ಕಾಲದ ಜನಪದವನ್ನು, ಗಾದೆಗಳನ್ನು ಬಳಸಿಕೊಂಡಿದ್ದಾರೆ.ಒಂದು ಉತ್ತಮ ಓದಿನ ಅನುಭವಕ್ಕಾಗಿ ಅನುಪಮಾ ಅವರಿಗೆ ಅಭಿನಂದನೆಗಳು. + +ಲೇಖಕಿ ಸುಮಿತ್ರ ಎಲ್.ಸಿ ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ತುಂಗಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ, ಕಾಡು ಕಡಲು, ವಿಭಾವ (ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ) ಹೂ ಹಸಿರಿನ ಮಾತು (ಪಶ್ಚಿಮ ಘಟ್ಟದ ಹೂ ಸಸ್ಯಗಳ ಕುರಿತು) ಇವು ಸುಮಿತ್ರ ಅವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_156.txt b/Kenda Sampige/article_156.txt new file mode 100644 index 0000000000000000000000000000000000000000..daad587ee45c366d8da9ba7701520fdaa7a0145b --- /dev/null +++ b/Kenda Sampige/article_156.txt @@ -0,0 +1,35 @@ +byಕೆಂಡಸಂಪಿಗೆ|Jan 10, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸ್ತ್ರೀಯರ ಸ್ವಾತಂತ್ರ್ಯದ ಕುರಿತೇ ಇಲ್ಲಿ ಮಾತನಾಡಿರುವ ಲೇಖಕ, ಯಾಕೆ ಸ್ತ್ರೀಯರಿಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬ ಪ್ರಶ್ನೆ ಕಾಡಿ ಅದಕ್ಕೆ ಉತ್ತರ ಹುಡುಕುವಾಗ ಕಂಡ ಸಂಗತಿಗಳನ್ನು ಇಲ್ಲಿ ಕತೆಯಾಗಿಸಿದ್ದಾರೆ. “ದೇಹಕ್ಕಾಗಿ ಮೋಹಿಸುವ ಹವ್ಯಾಸವನ್ನೇ ಯುವಜನತೆ ಪ್ರೀತಿಯೆಂದು ಭಾವಿಸಿರುವುದು ವಿಷಾದನೀಯ” ಎಂಬ ಅವರ ಮಾತು ಮನು ಮನಸ್ಸು ಎಷ್ಟು ಸೂಕ್ಷ್ಮಗ್ರಾಹಿ ಎಂಬುದನ್ನು ಸೂಚಿಸುತ್ತದೆ. ಒಬ್ಬ ಗ್ರಾಮೀಣ ಹುಡುಗಿ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕತೆಯನ್ನು ಓದುಗರ ಮುಂದೆ ತೆರೆದಿಟ್ಟಿರುವುದಾಗಿ ಹೇಳುತ್ತಾರೆ ಮನು. ಇಂದಿಗೂ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಎಷ್ಟು ಅಡೆತಡೆಗಳನ್ನು ದಾಟಬೇಕಾಗಿದೆ.ಮನು ಗುರುಸ್ವಾಮಿ ಬರೆದ “ಅವಳೂ ಕತೆಯಾದಳು” ಕೃತಿಗೆ ಡಾ. ವಿಜಯಕುಮಾರಿ ಎಸ್ ಕರಿಕಲ್ ಬರೆದ ಮುನ್ನುಡಿ + +byಕೆಂಡಸಂಪಿಗೆ|Jan 9, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಡದ್ದಾಗಿ ತಿಂದು, ಕಾಲು ನೀಡಿ ಲೋಕದ ಪರಿವೇ ಇಲ್ಲದೆ ಗೊರಕೆ ಹೊಡೆಯುತ್ತಿದ್ದ ಸಿದ್ದಣ್ಣನಿಗೆ, ಪೊನ್ನಪ್ಪ ಕಾಲಲ್ಲಿ ಎರಡು ಬಾರಿ ತಿವಿದು ಎಚ್ಚರಿಸಿದ. ಚಕ್ಕನೆ ಎಚ್ಚರಗೊಂಡ ಸಿದ್ದಣ್ಣ, ಮರಗಳ್ಳರು ಬಂದಿದ್ದರಿಂದ ಫಾರೆಸ್ಟರ್ ನನ್ನನ್ನು ಎಬ್ಬಿಸಿರಬಹುದು ಎಂದು ಕಣ್ಣು ಬಿಟ್ಟವನೇ ಗಾಬರಿಯಿಂದ ಸುತ್ತಲೂ ನೋಡತೊಡಗಿದ. ಪೊನ್ನಪ್ಪ ಮೆಲ್ಲನೆ ಅವನ ಕೈಯನ್ನು ಅದುಮಿ, “ಏನೂ ಇಲ್ಲ, ಆತಂಕ ಪಡಬೇಡ, ನಾನು ಸ್ವಲ್ಪಹೊತ್ತು ಮಲಗುತ್ತೇನೆ. ಯಾರಾದರೂ ಬಂದ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸು” ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ.ನೌಶಾದ್‌ ಜನ್ನತ್ತ್‌ ಹೊಸ ಕಾದಂಬರಿ “ಫಾರೆಸ್ಟರ್‌ ಪೊನ್ನಪ್ಪ” ಇಂದ ಆಯ್ದ ಭಾಗ ನಿಮ್ಮ ಓದಿಗೆ + +byಕೆಂಡಸಂಪಿಗೆ|Jan 6, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪ್ರಕೃತಿಯ ಮೊದಲ ಪಾಠಗಳನ್ನು ನಾನು ಕಲಿತದ್ದು ಆ ಹಕ್ಕಲಿನಲ್ಲಿ ಎಂದು ಹೇಳಿದರೆ ತಪ್ಪಾಗದು. ಹಾಗೆ ನೋಡಿದರೆ, ನಮ್ಮ ಹಳ್ಳಿಯ ಮನೆಯ ಪರಿಸರವೇ ಒಂದು ಒಳ್ಳೆಯ ಪಾಠಶಾಲೆ. ಮನೆ ಎದುರು ಗದ್ದೆ, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಚಾಚಿಕೊಂಡ ಭಾರೀ ಗಾತ್ರದ ಹಲಸಿನ ಮರ, ಇಪ್ಪತ್ತು ಅಡಿ ದೂರದಲ್ಲಿರುವ ಬೃಹತ್ ಗಾತ್ರದ ಎರಡು ತಾಳೆ ಮರಗಳ ಒಣಗಿದ ಎಲೆಗಳು ಮಾಡುವ ಬರಬರ ಸದ್ದು, ಅಂಗಳದ ಅಂಚಿನ ಹೂಗಿಡಗಳು, ಬಳ್ಳಿಗಳು, ದಾಸವಾಳ, ಬೆಟ್ಟ ತಾವರೆ – ಪಟ್ಟಿ ಮಾಡುತ್ತಾ ಹೋದರೆ ಬೇಗನೆ ಮುಗಿಯದು. ಜತೆಗೆ ನಾವು ಶಾಲೆಗೆ ಹೋಗುತ್ತಿದ್ದ ದಾರಿಯೂ ಇನ್ನೊಂದು ಪಾಠಶಾಲೆ.ಇತ್ತೀಚೆಗಷ್ಟೇ ಬಿಡುಗಡೆಯಾದ ಶಶಿಧರ ಹಾಲಾಡಿಯವರ “ನಾ ಸೆರೆಹಿಡಿದ ಕನ್ಯಾಸ್ತ್ರೀ” ಪ್ರಬಂಧ ಸಂಕಲನದ ಒಂದು ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Jan 3, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ.ಮಂಜಯ್ಯ ದೇವರಮನಿ ಕಥಾ ಸಂಕಲನ “ದೇವರ ಹೊಲ”ಕ್ಕೆ ಎಸ್. ಗಂಗಾಧರಯ್ಯ ಬರೆದ ಮುನ್ನುಡಿ + +byಗೀತಾ ಹೆಗಡೆ|Dec 30, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ + +byಕೆಂಡಸಂಪಿಗೆ|Dec 28, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕವಿತೆ ಪ್ರಣಾಳಿಕೆಯೋ ವಾಗ್ವಾದವೋ ಉತ್ತರವೋ ಪ್ರತಿಭಟನೆಯೋ ಆಗಿ ಮೆರೆಯುತ್ತಿರುವ ದಿನಗಳಲ್ಲಿ ರಾಜು ಹೆಗಡೆ ಬರೆಯುತ್ತಿರುವ ಪದ್ಯಗಳಿಗೆ ವಿಶಿಷ್ಟವಾದ ಸ್ಥಾನವಿದೆ ಎಂದು ಹೇಳಲು ಅಂಜಿಕೆಯಾಗುತ್ತದೆ. ನಮ್ಮ ಕಾವ್ಯದ ಓದನ್ನು ರಾಜಕೀಯ ನಿಲುವು, ಸೈದ್ಧಾಂತಿಕತೆ ಮತ್ತು ಸಾಮಾಜಿಕನಿಲುವುಗಳು ನಿರ್ಧರಿಸುವ ಕಾಲ ಇದು. ಶುದ್ಧಕವಿತೆ ಎಂಬ ಮಾತನ್ನು ಗೇಲಿ ಮಾಡಲಾಗುತ್ತದೆ ಮತ್ತು ಶುದ್ಧ ಸಾಹಿತ್ಯವನ್ನು ಅಪರಾಧವೆಂಬಂತೆ ನೋಡಲಾಗುತ್ತಿದೆ. ಯಾವುದಾದರೊಂದು ರಾಜಕೀಯ ಪಕ್ಷದ ಅಘೋಷಿತ ಗೊತ್ತುವಳಿಯಂಥ ಸಾಲುಗಳನ್ನು ಪದ್ಯಗಳೆಂದು ಕರೆಯಲಾಗುತ್ತಿದೆ.ರಾಜು ಹೆಗಡೆ ಕವನ ಸಂಕಲನ “ಕಣ್ಣಿನಲಿ ನಿಂತ ಗಾಳಿ” ಗೆ ಜೋಗಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Dec 27, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಆಶಾ ತೀರಾ ವಾಚ್ಯವಾಗಿಸಿ ಯಾವುದನ್ನೂ ಹೇಳುವುದಿಲ್ಲ. ಬಹುಶಃ ಬಂಡಾಯ, ದಲಿತ, ಸ್ತ್ರೀವಾದದ ಘೋಷಣಾ ಸಾಹಿತ್ಯ ಮುಗಿದಂತೆ ಕಾಣುತ್ತಿದೆ. ಆ ಎಲ್ಲ ಚಳುವಳಿಗಳು ಕನ್ನಡದ ಒಟ್ಟೂ ಸಮಾಜದ ಮೇಲೆ, ಸಾಹಿತ್ಯದ ಮೇಲೆ ಉಂಟುಮಾಡಿದ ಅದ್ಭುತ ಚಾಲನಾ ಪ್ರಭಾವವನ್ನು ಅರ್ಥೈಸಿಕೊಂಡು, ಮನದಲ್ಲೂ ಇಟ್ಟುಕೊಂಡು, ಅದೇ ಕಾಲಕ್ಕೆ ಘೋಷಣೆಯ ಕಾಲ್ತೊಡಕುಗಳನ್ನೂ ಕಳಚಿ ಬರೆಯುವ ಹೊಸ ಯುವ ಸಮೂಹವೊಂದು ಕನ್ನಡದಲ್ಲಿ ತಯಾರಾಗಿದೆ. ನಿರ್ವಿವಾದವಾಗಿ ಆಶಾ ಕೂಡಾ ಆ ಪಡೆಯ ಉತ್ತಮ ಸದಸ್ಯೆ.ಆಶಾ ಜಗದೀಶ್‌ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕೃತಿಗೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ + +byಕೆ.ಆರ್.ಉಮಾದೇವಿ ಉರಾಳ|Dec 23, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಿರರ್ಗಳ ನಿರೂಪಣೆ ಕರಗತವಾಗಿರುವ ಲೇಖಕಿಯ ಕತೆಗಳು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿರೂಪಣೆಯ ಉತ್ಸಾಹದಿಂದ ಮುಂದುವರಿಯುವ ಲೇಖಕಿ ಕೆಲವು ಕತೆಗಳ ಅಂತ್ಯದಲ್ಲಿ ತೀರ್ಪುಗಾರಿಕೆ ಕೈಗೆತ್ತಿಕೊಳ್ಳುತ್ತಾರೆ. ಉದಾಹರಣೆಗೆ “ಸಿಂಗಾರಳ್ಳಿ ಗಣಪತಿ” “ಕಾಣೆ” ಕತೆಗಳ ಅಂತ್ಯದಲ್ಲಿ ಪಾತ್ರಗಳ ಕುರಿತ ವ್ಯಾಖ್ಯೆ. ಈ ವಾಚ್ಯತೆ ಅದುವರೆಗಿನ ಕಥನ ಶೈಲಿಯ ನವಿರುಗಾರಿಕೆಯನ್ನು ಮೊಂಡಾಗಿಸಿ ವರದಿಯ ಸ್ವರೂಪ ತಳೆಯುತ್ತದೆ. ಹಾಗೆಯೇ ಕಥನ ಪ್ರಸ್ತುತಪಡಿಸುವಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವೈವಿಧ್ಯತೆ ಲಭಿಸುತ್ತದೆ.ಶಾರದಾ ಮೂರ್ತಿ ಬರೆದ “ ಪಲಾಯನ ಮತ್ತು ಇತರೆ ಕಥೆಗಳು” ಕಥಾಸಂಕಲನದ ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ + +byನಾರಾಯಣ ಯಾಜಿ|Dec 20, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ವಿಜಯ ಮತ್ತು ಮಂಗಳಾ ಪದ್ಮಿನಿ ಮತ್ತು ಪ್ರಕಾಶರನ್ನು ಕಾಡುತ್ತಿರುವಂತೆ ಆಕೆಯ ತಾಯಿ ತನ್ನ ಇಳಿ ವಯಸ್ಸಿನಲ್ಲಿ ವಿಧುರ ಅಶೋಕನನ್ನು ಸೇರಿ ಇಬ್ಬರೂ ವಿದೇಶಕ್ಕೆ ಹಾರುವದು ಸಲಿಸಾಗಿ ನಡೆಯುತ್ತದೆ. ಜೀವನದಲ್ಲಿ ಗುರಿ ಇರದೇ ಇದ್ದಾಗಲೂ ಕೆಲವೊಮ್ಮೆ ಅವಕಾಶಗಳು ಹಾದುಹೋಗುತ್ತವೆ. ಅದನ್ನು ತಮ್ಮ ತಮ್ಮ ಅನುಕೂಲತೆಯನ್ನಾಗಿ ಬಳಸಿ ಬದುಕನ್ನು ಹಸನುಗೊಳಿಸಬಹುದೆನ್ನುವದನ್ನು ಅಪರವಯಸ್ಕರ ಕಹಾನಿ ತಿಳಿಸುತ್ತದೆ. ವಿಷಾದವೆನ್ನುವದು ತೀವ್ರವಾದಾಗ ಗುರುವಿನ ಮಾರ್ಗದರ್ಶನವಿದ್ದರೆ ಅದರಿಂದ ಹೊರಬರುವದು ಸಾಧ್ಯವೆನ್ನುವದು ಪದ್ಮಿನಿ ಕಂಡುಕೊಂಡಿದ್ದು ಮತ್ತೋರ್ವ ಗುರು ಪುರುಷೋತ್ತಮನಲ್ಲಿ.ಕುಸುಮಾ ಆಯರಹಳ್ಳಿ ಕಾದಂಬರಿ “ದಾರಿ”ಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ \ No newline at end of file diff --git a/Kenda Sampige/article_157.txt b/Kenda Sampige/article_157.txt new file mode 100644 index 0000000000000000000000000000000000000000..4e120357f05ddc4377c9b827820f50caa4928818 --- /dev/null +++ b/Kenda Sampige/article_157.txt @@ -0,0 +1,37 @@ +ಪರ್ವತಾಗ್ರದ ಅವಘಡ + +ನಿದ್ದೆಯ ಮಂಪರಿನಲ್ಲಿ ಗಾಯಗೊಂಡಿದ್ದ ಕಾಲನ್ನು ಹೊರಳಿಸಲೆತ್ನಿಸಿ ಉಂಟಾದ ನೋವಿಗೋ, ಪೆಟ್ಟುಬಿದ್ದು ಊದಿಕೊಂಡಿದ್ದ ತೋಳು ಟೆಂಟಿನ ಗುಡಾರಕ್ಕೆ ತಾಕಿ ಉಂಟಾದ ಬಾಧೆಗೋ ಸಾಹೇಬರು ನರಳಿದ ಸದ್ದು ಕೇಳಿಸಿ, ಮಂಚದ ಬದಿಗೆ ನೆಲದಲ್ಲಿ ಹುಲ್ಲುಚಾಪೆಯ ಮೇಲೆ ಗುಡಾರಹಾಸಿ ಕಂಬಳಿಹೊದ್ದು ಮಲಗಿದ್ದ ಐವಾನ್ ದಡಬಡಿಸಿ ಮೇಲೆದ್ದು ಕುಳಿತ. ಕಣ್ಣುಜ್ಜಿಕೊಂಡು ಟೆಂಟಿನ ಮೂಲೆಯಲ್ಲಿ ಸಣ್ಣಗೆ ಉರಿಯುತ್ತಿದ್ದ ಲಾಂದ್ರದ ಬತ್ತಿಯನ್ನು ತುಸು ಮುಂದೆ ಮಾಡಿ ಲಾಂದ್ರವನ್ನು ಎತ್ತಿ ಹಿಡಿದು ಸಾಹೇಬರನ್ನು ಗಮನಿಸಿದ. ನೋವಿನ ತೀವ್ರತೆಗೆ ಕಿವುಚಿಕೊಂಡಿದ್ದ ಮುಖದ ನಿರಿಗೆಗಳು ಸಡಿಲಗೊಳ್ಳುತ್ತಿದ್ದವು. ಅರೆತೆರೆದಿದ್ದ ಕಣ್ಣುಗಳು ಮೆಲ್ಲಗೆ ಮುಚ್ಚಿಕೊಳ್ಳುತ್ತಿದ್ದವು. ಲಾಂದ್ರವನ್ನು ಮಂಚದ ಪಟ್ಟಿಯ ಮೇಲಿಟ್ಟು ಬಲಗೈಯಿಂದ ಹೊದಿಕೆಯನ್ನು ಮೆಲ್ಲಗೆ ಬದಿಗೆ ಸರಿಸಿದ ಐವಾನ್, ತೋಳು ಮತ್ತು ಕಾಲಿಗೆ ವೈದ್ಯರು ಕಟ್ಟಿದ್ದ ಕಟ್ಟನ್ನು ಪರೀಕ್ಷಿಸಿದ. ಹಸಿರೌಷಧ ಲೇಪಿಸಿ, ಬಿಳಿಬಟ್ಟೆಯನ್ನು ಸುತ್ತಿ ಅದರ ಮೇಲೆ ಮೊಳದುದ್ದದ ದೇವದಾರು ಕಟ್ಟಿಗೆಯನ್ನಿಟ್ಟು ಕಟ್ಟಿದ್ದ ಕಟ್ಟುಗಳು ಸುಸ್ಥಿತಿಯಲ್ಲಿದ್ದವು. `ಅಕಸ್ಮಾತ್ ನಿದ್ದೆಗಣ್ಣಲ್ಲಿ ಹೊರಳಿ ಕಟ್ಟು ಸಡಿಲವಾದರೆ ವಾಸಿಯಾಗುವುದು ನಿಧಾನವಾಗುತ್ತದೆ, ಜಾಗ್ರತೆಯಿಂದ ಗಮನಿಸುತ್ತಿರಬೇಕು’ ಎಂದು ವೈದ್ಯ ಕೈವಲ್ಯನಾಥ ಮಟ್ಟು ಮೊದಲ ದಿನವೇ ತಾಕೀತು ಮಾಡಿದ್ದ. + +(ಡಾ. ಗಜಾನನ ಶರ್ಮ) + +ನೋವಿನಿಂದ ನರಳಿದರೆ ಕುಡಿಸಲೆಂದು ವೈದ್ಯರು ಕೊಟ್ಟಿದ್ದ ಔಷಧವನ್ನು ಕುಡಿಸುವುದೋ ಬಿಡುವುದೋ ಎಂದು ಯೋಚಿಸುತ್ತ ತುಸುಹೊತ್ತು ಅವರನ್ನೇ ಗಮನಿಸುತ್ತ ಕುಳಿತಿದ್ದ ಐವಾನ್, ಸದ್ದಿಲ್ಲದೆ ಅವರು ಕಣ್ಮುಚ್ಚಿ ನಿದ್ರಿಸತೊಡಗಿದ್ದನ್ನು ಕಂಡು ಔಷಧ ಬೇಡವೆಂದು ನಿರ್ಧರಿಸಿ, ಮಲಗಲು ಸಿದ್ಧನಾಗುವಷ್ಟರಲ್ಲಿ ಅವನನ್ನು ಮೂತ್ರಶಂಕೆ ಬಾಧಿಸತೊಡಗಿತು. ಆ ಚಳಿರಾತ್ರಿಯಲ್ಲಿ ನಂದಕೋಲ್ ಸರೋವರದ ಮೇಲಿನಿಂದ ಬೀಸಿಬರುವ ತಣ್ಣನೆ ಗಾಳಿಯ ನೆನಪಾಗಿ ಹೊರಗೆ ಹೋಗುವುದು ಬೇಡವೆಂದು ಮಲಗಲು ಹೊರಟವನಿಗೆ ಮೂತ್ರಬಾಧೆ ಇನ್ನಷ್ಟು ಒತ್ತರಿಸತೊಡಗಿತು. ‘ದರಿದ್ರ, ಒಮ್ಮೆ ಬರುತ್ತಿದೆಯೆಂಬ ಶಂಕೆ ಆರಂಭವಾದರೆ ಸಾಕು, ಕ್ರಮೇಣ ತಡೆಯಲಾಗದ ಒತ್ತಡವೇ ಶುರುವಿಟ್ಟುಕೊಳ್ಳುತ್ತದೆ’ ಎಂದು ಬೈದುಕೊಂಡವನಿಗೆ ಒಂದು ಆಲೋಚನೆ ಬಂತು. ಟೆಂಟಿನ ಬಲಮೂಲೆಯಲ್ಲಿ ಪರದೆಯೊಂದನ್ನು ಮರೆಮಾಡಿ ಸಾಹೇಬರ ಶೌಚಕ್ಕೆ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಕಲ್ಪಿಸಲಾಗಿತ್ತು. ಹೇಗೂ ಅವರು ನಿದ್ದೆಯಲ್ಲಿರು ವುದರಿಂದ ಅಲ್ಲಿ ಮೂತ್ರವಿಸರ್ಜನೆ ಮಾಡಲು ಅಡ್ಡಿಯಿಲ್ಲವೆಂಬ ಉಪಾಯ ಹೊಳೆಯಿತಾದರೂ, ಅದು ಸಾಹೇಬರಿಗಾಗಿ ಮೀಸಲಿಟ್ಟ ವಿಶೇಷ ವ್ಯವಸ್ಥೆ, ಸಹಾಯಕರು ಅದನ್ನು ಬಳಸಕೂಡದು ಎಂದು ಜಾನ್ಸನ್ ಸಾಹೇಬ ಕಟ್ಟುನಿಟ್ಟಾಗಿ ಆದೇಶಿಸಿದ್ದು ನೆನಪಿಗೆ ಬಂತು. ಹಾಗೆ ಆತ ಆಜ್ಞೆ ಮಾಡಲೂ ಕಾರಣವಿತ್ತು. ಎಲ್ಲರೂ ಅಲ್ಲೆ ಮಲಮೂತ್ರ ವಿಸರ್ಜಿಸಿದರೆ ಟೆಂಟಿನೊಳಗೆ ಇರುವುದು ಕಷ್ಟವಾಗುತ್ತಿತ್ತು. ಮಲಮೂತ್ರ ವಿಸರ್ಜಿಸಿದ ನಂತರ ಮುಚ್ಚಲೆಂದು ಬುಟ್ಟಿಯಲ್ಲಿ ಹುಡಿ ಮಣ್ಣು ಇಡಲಾಗಿತ್ತಾದರೂ ಒಟ್ಟಾರೆ ವ್ಯವಸ್ಥೆ ಸಾಹೇಬರಿಗಷ್ಟೇ ಮೀಸಲಾಗಿತ್ತು. ಕಳೆದ ಮೂರು ವರ್ಷಗಳಿಂದ ಮಾಂಟ್ಗೊಮರಿ ಸಾಹೇಬರ ನೆಚ್ಚಿನ ಶಿಷ್ಯನಾಗಿದ್ದ ಐವಾನ್ ಎಂದೂ ಸಾಹೇಬರುಗಳ ಆದೇಶವನ್ನು ಮೀರಿದವನಲ್ಲ. ಜೊತೆಗೆ ಶಿಸ್ತಿಗೆ ಕಟ್ಟುಬೀಳುವ ಪರಂಗಿ ಸಾಹೇಬರುಗಳ ಗುಣವೂ ಅವನಿಗೆ ಚೆನ್ನಾಗಿ ತಿಳಿದಿತ್ತು. ಅದರಲ್ಲೂ ಅಪ್ಪಿತಪ್ಪಿ ತಮ್ಮ ಆದೇಶವನ್ನು ಮೀರಿದ್ದು ಗೊತ್ತಾದರೆ, ಮಾಂಟ್ಗೊಮರಿ ಸಾಹೇಬರು ಕ್ಷಮಿಸಿದರೂ, ಕಠಿಣ ಶಿಸ್ತಿನ ಜಾನ್ಸನ್ ಕ್ಷಮಿಸಲಾರರೆಂಬುದು ಆತನಿಗೆ ತಿಳಿದಿತ್ತು. `ಇನ್ನೇನು, ಹೇಗೂ ಒಂದೆರಡು ತಾಸಿನಲ್ಲಿ ಬೆಳಗಾದೀತು, ಸುಮ್ಮನೆ ಈ ತಗಾದೆಯೆಲ್ಲ ಯಾಕೆ’ ಎಂದು ಗಟ್ಟಿಮನಸ್ಸು ಮಾಡಿ ಮುಸುಕೆಳೆದು ಮಲಗಿಬಿಟ್ಟ. ಆತನ ದುರಾದೃಷ್ಟಕ್ಕೆ ನಿದ್ದೆಮಾಡಲು ಯತ್ನಿಸಿದಷ್ಟೂ ಮೂತ್ರದೊತ್ತಡ ಹೆಚ್ಚಿದಂತೆ ಅನ್ನಿಸತೊಡಗಿತ್ತು. ತಾನೇಕೆ ಹೀಗೆ ಹೊರಗೆ ಹೋಗಿ ಹತ್ತುಹೆಜ್ಜೆ ನಡೆದು ಮೂತ್ರವಿಸರ್ಜನೆ ಮಾಡಿಬರಲು ಹಿಂಜರಿಯುತ್ತಿದ್ದೇನೆಂಬುದು ಆತನಿಗೇ ಅರ್ಥವಾಗಲಿಲ್ಲ. + +ಈ ಚಳಿ ತನಗೇನು ಹೊಸದೇ? ಕೇವಲ ಐದು ವಾರಗಳ ಹಿಂದೆ ಇದೇ ಸಾಹೇಬರ ತಂಡ ಮೂರು ವಾರಗಳ ಕಾಲ ಹರ್ಮುಖ ಪರ್ವತದ ನೆತ್ತಿಯ ಮೇಲಿನ ಭೀಕರ ಚಳಿಯಲ್ಲಿ ತಮ್ಮನ್ನೆಲ್ಲ ಕೊಳೆಹಾಕಿರಲಿಲ್ಲವೇ? ಅಲ್ಲಿದ್ದ ಚಳಿಗೆ ಹೋಲಿಸಿದರೆ ಇದೇನು ಮಹಾ, ಇದಕ್ಕೆಲ್ಲ ತಾನು ಹೆದರುವವನೇ ಎಂದು ಹುಂಬಧೈರ್ಯವನ್ನು ಆವಾಹಿಸಿಕೊಂಡು ಹೊರಗೆ ಹೋಗಲು ನಿರ್ಧರಿಸಿ ಎದ್ದು ಕುಳಿತ. ಟೆಂಟಿನ ಮೂಲೆಯಲ್ಲಿದ್ದ `ಕಾಂಗಾರ’ನ್ನು ಹತ್ತಿರಕ್ಕೆಳೆದು ಅದರ ಕೆಂಡ ಕೆದರಿ ಅದಕ್ಕೊಂದಿಷ್ಟು ಚೀಡ್ ಮರದ ಚಕ್ಕೆಪುಡಿ ಸುರಿದು ಗಾಳಿಯೂದಿದ. ಚಕ್ಕೆಪುಡಿಯ ಉರಿಗೆ ಕೆಂಡಗಳು ಕೆಂಪಾಗಿ ಕಾಂಗಾರ್ ಸಾಕಷ್ಟು ಬೆಚ್ಚಗಾಗಿದ್ದೇ ತಡ, `ಫಿರಾನ್’ ಮೇಲಕ್ಕೆತ್ತಿ ಪಾಯಿಜಾಮ ಸಡಿಲಿಸಿ ಅದನ್ನು ಕಿಬ್ಬೊಟ್ಟೆಯ ಅಡಿಗೆ ಸೇರಿಸಿ ಅದರ ಕಂಠದ ಹುರಿಯನ್ನು ಸೊಂಟಕ್ಕೆ ಬಿಗಿದು ಕಟ್ಟಿಕೊಂಡ. ಕಿವಿಮುಚ್ಚುವಂತೆ ತಲೆಗೆ ಪಗ್ರಿ, ಅದರ ಮೇಲೆ ಕಬ್ಬಿಣದ ಟೊಪ್ಪಿಗೆಯಿಟ್ಟು, ಕೈಗವಸು ತೊಟ್ಟ. ಕಾಲಿಗೆ ಚರ್ಮದ ಪಟ್ಟಿಸುತ್ತಿ, ಹುಲ್ಲುಕಡ್ಡಿಯ ಪಾದರಕ್ಷೆ ತೊಟ್ಟು ಟೆಂಟಿನಿಂದ ಹೊರಹೋಗಲು ಬಿಟ್ಟಿದ್ದ ಗುಡಾರದ ಸೀಳಿನ ಕಟ್ಟುಬಿಚ್ಚಿ ಅದನ್ನು ತುಸು ಓರೆಮಾಡಿ ಮೊದಲಿಗೆ ಮಂಡೆಯನ್ನು ಮಾತ್ರ ಹೊರಗೆ ಹಾಕಿ ಇಣುಕಿದ. ಹಿಂದಿನ ರಾತ್ರಿ ಬಹುಹೊತ್ತು ಮಂಜಿನಮಳೆ ಸುರಿಸುತ್ತಿದ್ದ ಮೋಡಗಳು ಮರೆಯಾಗಿ ತೊಳೆದಿಟ್ಟಂತೆ ತಿಳಿಗೊಂಡಿದ್ದ ಆಕಾಶದಲ್ಲಿ ಅರ್ಧಚಂದ್ರ ಮುಖ ತೋರಿಸಿ, ಹೊರಗೆ ಲಾಂದ್ರದ ಅವಶ್ಯಕತೆಯಿಲ್ಲವೆಂದು ಖಚಿತ ಪಡಿಸಿದ. ಗಟ್ಟಿ ಮನಸ್ಸುಮಾಡಿ ಟೆಂಟಿನ ಹೊರಗೆ ಅಡಿಯಿಡುತ್ತಿದ್ದಂತೆಯೇ ಬಾಗಿಲು ಬಳಿ ಆತನ ಬರುವಿಕೆಯನ್ನೇ ಕಾದು ಕುಳಿತಿದ್ದ ಚಳಿ ಅವನನ್ನು ಗಬಕ್ಕನೆ ಹಿಡಿದು ನಖಶಿಖಾಂತ ನಡುಗಿಸಿಬಿಟ್ಟಿತು. + +ತೊಟ್ಟಬಟ್ಟೆಯನ್ನೂ ಲೆಕ್ಕಿಸದೆ ಸೀದ ಚರ್ಮದೊಳಗೆ ತೂರಿ, ಮಾಂಸಖಂಡಗಳ ಆಳಕ್ಕೆ ನುಗ್ಗಿ, ಮೂಳೆಯ ಒಳತಳಕ್ಕಿಳಿದು ಕೊರೆಯತೊಡಗಿದ ಶೀತಲಗಾಳಿಯ ಪರಿಣಾಮಕ್ಕೆ ಇಡೀ ಮೈ ಮರಗೆಟ್ಟು ಮಂಜುಗಡ್ಡೆಯ ಶಿಲ್ಪವಾದಂತೆ ಭಾಸವಾಯಿತು. ಹಲ್ಲುಗಳೆಲ್ಲ ಕಳಚಿ ಬಿದ್ದೇ ಹೋದವೆಂಬತೆ ದವಡೆಗಳೆರಡೂ ಅನಿಯಂತ್ರಿತವಾಗಿ ಕಂಪಿಸತೊಡಗಿದವು. ತಣ್ಣನೆಯ ಗಾಳಿಗೆ ತೆರೆದುಕೊಂಡ ದೇಹದ ಭಾಗಗಳು ಸ್ಪರ್ಶಜ್ಞಾನವನ್ನೇ ಕಳೆದುಕೊಂಡು ಕೊರಡಾದಂತೆ ಅನ್ನಿಸಿತು. ಸ್ವಲ್ಪಹೊತ್ತು ಹೊರಬಿದ್ದ ಜಾಗದಲ್ಲೇ ನಿಂತು ತಿಂಗಳ ಬೆಳಕಿಗೆ ಕಣ್ಣನ್ನು ಒಗ್ಗಿಸಿಕೊಂಡು ನೆಲದಲ್ಲಿ ಉದ್ದಕ್ಕೂ ಹಾಸಿಬಿದ್ದ ಕಲ್ಲುಗಳನ್ನು ಎಡವದಂತೆ ಟೆಂಟಿನ ಬದಿಯಲ್ಲಿ ನಿಧಾನಕ್ಕೆ ಹತ್ತೆಂಟು ಹೆಜ್ಜೆ ನಡೆದು, ನಿಂತಲ್ಲೇ ಫಿರಾನ್ ನೆಲಕ್ಕೆ ತಾಗುವಷ್ಟು ತಗ್ಗಿ ಮುಂಭಾಗವನ್ನು ಎತ್ತಿ ಹಿಡಿದುಕೊಂಡು, ಕಾಂಗಾರ್ ಕೆಳಗೆ ಬೀಳದಂತೆ ಜಾಗ್ರತೆಯಿಂದ ಪಾಯಿಜಾಮದ ಲಾಡಿಯನ್ನು ಸಡಿಲಿಸಿ ಲಂಗೋಟಿ ಬದಿಗೆ ಸರಿಸಿ ಕುಕ್ಕರುಗಾಲಿನಲ್ಲಿ ಕೂತು ಮೂತ್ರ ವಿಸರ್ಜನೆಗೆ ಯತ್ನಿಸಿದರೆ ಜಠರದ ಸ್ನಾಯುಗಳು ಮೂತ್ರಕೋಶದ ಮೇಲೆ ಒತ್ತಡ ಹೇರಿ ಮೂತ್ರವನ್ನು ಹೊರದಬ್ಬುವ ಶಕ್ತಿಯನ್ನೇ ಕಳೆದುಕೊಂಡಂತೆ ಭಾಸವಾಯಿತು. ಐವಾನನಿಗೆ ಇಂತಹ ಅನುಭವ ಇದು ಮೊದಲೇನೂ ಅಲ್ಲ. ಹಾಗಾಗಿ ಪಕ್ಕದಲ್ಲಿದ್ದ ಬಂಡೆಗಲ್ಲಿಗೆ ಒರಗಿ ತುಸುಹೊತ್ತು ಅಲ್ಲಾಡದೇ ನಿಂತು, ಆದಷ್ಟೂ ದೀರ್ಘವಾಗಿ ಉಸಿರಾಡಿ ಸಾಕಷ್ಟು ಸುಧಾರಿಸಿಕೊಂಡು ಮತ್ತೆ ಕುಕ್ಕುರುಗಾಲಿನಲ್ಲಿ ಕೂತು ಸಾಕಷ್ಟು ಒತ್ತಡಹಾಕಿ ಹನಿಹನಿಯಾಗಿ ಮೂತ್ರ ವಿಸರ್ಜಿಸಿ ಮುಗಿಸುವ ಹೊತ್ತಿಗೆ ಜೀವ ಬಾಯಿಗೆ ಬಂದಿತ್ತು. ಬಗ್ಗಿ ಪಾಯಿಜಾಮ ಮೇಲೆತ್ತಿ ಲಂಗೋಟಿ ಸರಿಸಿ ಸಡಿಲಿಸಿದ ಲಾಡಿಯನ್ನು ಬಿಗಿದು ಕಟ್ಟಲು ಹವಣಿಸಿದರೆ ಇದುವರೆಗೂ ಗವಸಿನೊಳಗೇ ಇದ್ದಿದ್ದರೂ, ಈಗ ಬೆರಳನ್ನು ಆಡಿಸಲಾಗದ ಮಟ್ಟಿಗೆ ಕೈಗಳು ಮರಗಟ್ಟು ಹೋಗಿದ್ದವು. ಸ್ವಲ್ಪಹೊತ್ತು ಕೈಗಳನ್ನು ಕಿಬ್ಬೊಟ್ಟೆಗೆ ಕಟ್ಟಿದ್ದ ಕಾಂಗಾರ್ ಮೇಲಿಟ್ಟು ಬೆರಳಾಡುವಷ್ಟು ಬಿಸಿಮಾಡಿಕೊಂಡು ಲಾಡಿಬಿಗಿದು ಮೇಲೇಳಲು ಹೊರಟರೆ ಕುಳಿತಲ್ಲಿಂದ ಏಳುವುದೂ ಸುಲಭವಿರಲಿಲ್ಲ. ಅಂತೂ ಇಂತೂ ಕಷ್ಟಪಟ್ಟು ಪಕ್ಕದಲ್ಲಿದ್ದ ಬಂಡೆಯ ಮೇಲೆ ಕೈಯೂರಿ ಮೆಲ್ಲಗೆ ಮೇಲೆದ್ದು ಮುಖವೆತ್ತಿ ಆಕಾಶವನ್ನು ದಿಟ್ಟಿಸಿದರೆ ಬೆಳಗಾಗಲು ಕನಿಷ್ಟವೆಂದರೂ ಎರಡು ತಾಸು ಇದ್ದಂತೆನ್ನಿಸಿತ್ತು. ವಿಶಾಲವಾಗಿ ಹರಡಿಕೊಂಡಿದ್ದ ನೀಲಾಗಸದ ಟೆಂಟಿನಡಿಯಲ್ಲಿ ಲಕ್ಷೋಪಲಕ್ಷ ನಕ್ಷತ್ರಗಳು ಚಳಿಗೆ ಗಡಗಡ ನಡುಗುತ್ತ ಮುದುಡಿ ಕುಳಿತು ಅಸಹಾಯಕವಾಗಿ ಕಣ್ಣು ಪಿಳುಕಿಸುತ್ತಿದ್ದುದನ್ನು ಕಂಡ ಐವಾನ ಚಳಿಗಾಳಿಯ ಚಿತ್ರಹಿಂಸೆಗೆ ತುತ್ತಾದವನು ತಾನೊಬ್ಬನೇ ಅಲ್ಲವೆಂದು ಸಮಾಧಾನ ಪಟ್ಟುಕೊಂಡ. ಅಪರಾತ್ರಿಯ ಘನಘೋರ ನೀರವವನ್ನು ಭೇದಿಸಿ ನಂದಕೋಲ್ ಕೊಳದ ನೀರು ದಡಕ್ಕೆ ಬಡಿದು ಹಿಂದಿರುಗುವ ಸದ್ದು ಸುಸ್ಪಷ್ಟವಾಗಿ ಕೇಳಿಸುತ್ತಿತ್ತು. ಪಕ್ಕದಲ್ಲಿದ್ದ ಹರ್ಮುಖ ಪರ್ವತ ಶಿಖರವೂ ಹಿಮದಹೊದಿಕೆ ಹೊದ್ದು ಚಳಿಗಾಳಿಗೆ ಹೆದರಿ ಮುಡಿಯನ್ನು ಮೋಡದ ಮುಸುಕಿನೊಳಗೆ ಹುದುಗಿಸಿಕೊಂಡಿತ್ತು. ಅದರ ಭುಜಪ್ರದೇಶದಲ್ಲಿ ಹರಡಿಕೊಂಡಿದ್ದ ಬೃಹತ್ ಹಿಮನದಿಯ ಹರಹು ಪರ್ವತದ ಎದೆಗೆ ಬಿಳಿಯ ದುಪ್ಪಟವನ್ನು ಹೊದೆಸಿದಂತೆ ಕಾಣುತಿತ್ತು. + +ಪರ್ವತದ ಮೇಲ್ಮೈಯಲ್ಲಿ ಗುಂಡಿಗಳಿರುವ ಪ್ರದೇಶದಲ್ಲೆಲ್ಲ ಚೆಲ್ಲಿಕೊಂಡ ಬೆಳ್ಳನೆಯ ಹಿಮರಾಶಿ ಮತ್ತು ಉಬ್ಬುದಿಬ್ಬಗಳಲ್ಲಿ ಎದ್ದುತೋರುವ ಕಪ್ಪುಶಿಲೆಗಳು ತಿಂಗಳ ಬೆಳಕಿನಲ್ಲಿ, ಕಪ್ಪುಬಿಳಿ ಚಿತ್ತಾರದ ಫಿರಾನ್ ತೊಟ್ಟ ದಢೂತಿ ಮುದುಕಿಯೊಬ್ಬಳು ಚಳಿಯಲ್ಲಿ ಮುದುಡಿ ಕುಳಿತಂತೆ ಕಾಣುತ್ತಿತ್ತು. ಪರ್ವತ ತಪ್ಪಲಿನ ಹಿಮಮೌನವನ್ನು ಸೀಳಿ ಬರುತ್ತಿದ್ದ ಕೊಳದ ಅಲೆಗಳ ಲಯಬದ್ಧ ಸದ್ದಿನ ಜೊತೆಗೆ ಬಿಟ್ಟುಬಿಟ್ಟು ಬರುತ್ತಿದ್ದ ಇನ್ನೊಂದು ಸದ್ದು ಯಾವುದೆಂಬ ಕುತೂಹಲ ಹುಟ್ಟಿ, ಆತ ನಾಲ್ಕಾರು ಹೆಜ್ಜೆ ಮುಂದಿಟ್ಟು ಸರೋವರವನ್ನೇ ಗಮನಿಸುತ್ತ ನಿಂತ. ಕಿವಿಗೊಟ್ಟು ಆಲಿಸಿದಾಗ ಅದು ಮೀನು, ಕಪ್ಪೆಗಳೇ ಮೊದಲಾದ ಜಲಚರಗಳು ಮುಳುಗೇಳುವ ಸದ್ದು ಎನ್ನಿಸಿತು. ಕೊರೆಯುವ ಚಳಿಯಲ್ಲಿ ತಣ್ಣೀರಿನೊಳಗೆ ಜಲಚರಗಳು ಅಷ್ಟೊಂದು ಚಟುವಟಿಕೆಯಿಂದ ಹೇಗಿರುವವೋ ಎಂಬ ಹುಚ್ಚು ಪ್ರಶ್ನೆ ಹುಟ್ಟಿಕೊಂಡಿತು. ಇದ್ದಕ್ಕಿದ್ದಂತೆ ಆತನಿಗೆ ಬಾಲ್ಯದಲ್ಲಿ ತಾನು ತನ್ನಪ್ಪನೊಂದಿಗೆ ಬಂದು ಇದರಲ್ಲಿ ಮತ್ತು ಇದರ ಮೇಲ್ಭಾಗದಲ್ಲಿರುವ ಗಂಗಬಾಲ್ ಸರೋವರದಲ್ಲಿ ಕಂದು ಮೀನುಗಳನ್ನು ಹಿಡಿಯುತ್ತಿದ್ದುದು ನೆನಪಾಗಿ ಬಾಯಲ್ಲಿ ನೀರೂರಿತು. ನಾಳೆ ಮಾಂಟ್ಗೊಮರಿ ಸಾಹೇಬರ ಒಪ್ಪಿಗೆ ಪಡೆದು ದಡೂತಿ ಕಂದು ಮೀನು ಹಿಡಿದು ಅಡುಗೆ ಮಾಡಿಸಿ ಅವರಿಗೂ ಈ ಸರೋವರದ ಮೀನುಗಳ ವಿಶೇಷ ರುಚಿ ತೋರಿಸಬೇಕು ಎಂದುಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಜೋರಾಗಿ ಚಳಿಗಾಳಿ ಬೀಸಿತು. ಮೀನು ಹಿಡಿಯುವ ಯೋಚನೆಯನ್ನು ಅಲ್ಲಿಗೇ ಕೈಬಿಟ್ಟು ಮೊದಲು ಒಳಗೆ ಹೋಗಿ ಬೆಚ್ಚಗೆ ಮಲಗಲು ನಿರ್ಧರಿಸಿ, ಗಡಗಡ ನಡುಗುತ್ತ ಅವಸರದಲ್ಲಿ ಟೆಂಟಿನತ್ತ ನಡೆದು ಒಳಸೇರಿಕೊಳ್ಳುವ ಹೊತ್ತಿಗೆ ಆತನಿಗೆ ಸಾಕುಸಾಕಾಗಿತ್ತು. ಪಾದರಕ್ಷೆಗಳನ್ನು ಕಳಚಿ, ಪಗ್ರಿ, ಟೊಪ್ಪಿಯನ್ನು ತೆಗೆದಿಟ್ಟು ಕಿಬ್ಬೊಟ್ಟೆಯಲ್ಲಿದ್ದ ಕಾಂಗಾರನ್ನು ತೆಗೆಯದೇ ಹಾಗೇ ಇರಿಸಿಕೊಂಡು ಕಂಬಳಿ ಹೊದ್ದು ನಿಶ್ಚಲನಾಗಿ ಕುಳಿತ. ತುಸುಹೊತ್ತಿನ ನಂತರ ಕುಳಿತಲ್ಲೇ ಮತ್ತೊಮ್ಮೆ ಲಾಟೀನು ಎತ್ತಿ ಹಿಡಿದು ಕಣ್ಮುಚ್ಚಿ ಮಲಗಿದ್ದ ಸಾಹೇಬರನ್ನು ಗಮನಿಸಿದ. ಹೊರಜಗತ್ತಿನ ಪರಿವೆಯಿಲ್ಲದೆ ನಿದ್ರಿಸಿದ್ದ ಅವರನ್ನು ನೋಡಿ ನಿದ್ದೆಯಲ್ಲಿ ಅದ್ಯಾವ ಶಿಖರದ ಎತ್ತರವನ್ನು ಅಳೆಯುತ್ತಿದ್ದಾರೋ ಪುಣ್ಯಾತ್ಮ ಎಂಬ ಯೋಚನೆ ಬಂದು ತನ್ನೊಳಗೇ ಮುಗುಳ್ನಕ್ಕ. ಇನ್ನೇನು ನಿದ್ದೆ ಬರುತ್ತಿದೆ ಎನ್ನಿಸಿದಾಗ ಕಾಂಗಾರನ್ನು ಕಳಚಿ ಬದಿಗಿಟ್ಟು ಕಂಬಳಿ ಹೊದ್ದು ಕಣ್ಮುಚ್ಚಿ ಮಲಗಿದ. + +ಅಂದಿಗೆ ಮಾಂಟ್ಗೊಮರಿ ಸಾಹೇಬರಿಗೆ ಪೆಟ್ಟುಬಿದ್ದ ದುರ್ಘಟನೆ ಸಂಭವಿಸಿ ಏಳು ದಿನ ಕಳೆದಿತ್ತು. ಅಂದಿನ ಅವಘಡದ ಭಯಾನಕ ಸನ್ನಿವೇಶ ನೆನಪಾದರೆ ಐವಾನನಿಗೆ ದುಃಸ್ವಪ್ನವೊಂದನ್ನು ಕಂಡಂತೆ ಈಗಲೂ ಮೈನಡುಕ ಹುಟ್ಟುತ್ತಿತ್ತು. ತಾವೆಲ್ಲ ಅಂದು ಬದುಕಿ ಬಂದದ್ದು ಅಲ್ಲಾನ ಕೃಪೆಯಿಂದ ಮಾತ್ರ ಎಂಬುದು ಆತನ ಗಟ್ಟಿ ನಂಬಿಕೆಯಾಗಿತ್ತು. + +ಸರಿಸುಮಾರು ಎರಡು ವಾರಗಳ ಹಿಂದೆ, ಇಪ್ಪತ್ತು ದಿನಗಳ ಕಾಲ ದುರ್ಗಮ ಹರ್ಮುಖ ಪರ್ವತದ ನೆತ್ತಿಯಲ್ಲಿ ಉಳಿದುಕೊಂಡಾಗಿನ ಕಡುಸಂಕಷ್ಟಗಳು ಆತನಿಗೆ ನೆನಪಾಗತೊಡಗಿದವು. ಪರ್ವತದ ನೆತ್ತಿಯಲ್ಲಿ ಹೂಡಿಕೊಂಡಿದ್ದ ಶಿಬಿರಗಳನ್ನೇ ಕಿತ್ತು ಹೊತ್ತೊಯ್ಯುವ ವೇಗದಲ್ಲಿ ಬೀಸುತ್ತಿದ್ದ ಬಿರುಗಾಳಿ, ಸಂಜೆ ಮುಂಜಾನೆ ಬಿಡುವಿಲ್ಲದೆ ಸುರಿಯುತ್ತಿದ್ದ ಹಿಮ, ಸದಾ ಸುತ್ತುವರಿದಿರುತ್ತಿದ್ದ ದಟ್ಟಮಂಜು, ಇದ್ದಕ್ಕಿದ್ದಂತೆ ಆಗಸವನ್ನೆಲ್ಲ ಆವರಿಸಿಕೊಳ್ಳುತ್ತಿದ್ದ ಕಾರ್ಮೋಡ, ತಲೆಗೂದಲನ್ನು ನೆಟ್ಟಗಾಗಿಸಿ, ಮೈಮೇಲಿನ ಬಟ್ಟೆಗಳು ಅಲ್ಲಾಡಿದರೂ ಕಿಡಿಗೆದರಿಸುತ್ತಿದ್ದ ವಿದ್ಯುದಾವೇಶಿತ ಮೋಡ, ಹಗಲೆಲ್ಲ ನೆತ್ತಿಸುಡುವ ಉರಿಬಿಸಿಲಿನ ಝಳ, ಸಂಜೆಯಾದೊಡನೆ ಮೈಕೊರೆಯುತ್ತಿದ್ದ ಚಳಿ, ಬಾಯಾರಿಕೆ ನೀಗಿಕೊಳ್ಳಲೂ ಮಂಜುಗಡ್ಡೆಯನ್ನು ಕರಗಿಸಿ ಕುಡಿಯಬೇಕಿದ್ದ ಅನಿವಾರ್ಯ ಪರಿಸ್ಥಿತಿ, ಶಿಬಿರದೊಳಗೆ ಉರಿಹೊತ್ತಿಸಲು ಪಡಬೇಕಿದ್ದ ಪಾಡು, ಹೊತ್ತಿಸಿದಷ್ಟೂ ಆರಿಹೋಗುತ್ತಿದ್ದ ಬೆಂಕಿ, ಸ್ಟವ್ ಮೇಲಿಂದ ಕೆಳಗಿಳಿಸಿದ ಮರುಗಳಿಗೆಯಲ್ಲೇ ತಣ್ಣಗಾಗುತ್ತಿದ್ದ ಅಡುಗೆ, ಹೀಗೆ ಅಲ್ಲಿದ್ದ ಸಂಕಷ್ಟ ಒಂದೆರಡಲ್ಲ. ಎಷ್ಟೋ ರಾತ್ರಿ ಬೀಸುವ ಗಾಳಿಯ ರಭಸಕ್ಕೆ ಟೆಂಟಿನ ಗುಡಾರ ಹಾರಿಹೋಗಬಹುದೆಂಬ ಆತಂಕ, ಗಾಢನಿದ್ದೆಗೂ ಆಸ್ಪದ ನೀಡುತ್ತಿರಲಿಲ್ಲ. + + + +ಹಲ್ಲುಜ್ಜುವುದು, ಮುಖ ತೊಳೆಯುವುದು, ಮಲಮೂತ್ರ ವಿಸರ್ಜನೆ ಮೊದಲಾದ ನೈಸರ್ಗಿಕ ಕ್ರಿಯೆಗಳೂ ಸುಲಭವಿರಲಿಲ್ಲ. ಮೂಗಿನಲ್ಲಿ ಸದಾ ಸುರಿಯುತ್ತಿದ್ದ ನೀರು, ದವಡೆಗಳ ಅನಿಯಂತ್ರಿತ ಕಂಪನ, ಅವಯವಗಳ ಸೆಳೆತ, ಅಂಗಾಲು ಅಂಗೈಗಳ ನವೆ, ಮೂಗು ಮತ್ತು ಕಣ್ಣುಗಳ ಉರಿ ಸಾಮಾನ್ಯವಾಗಿದ್ದವು. ಉಸಿರಾಡುವುದೂ ಚಿತ್ರಹಿಂಸೆ ಯಾಗಿತ್ತು. ಸೂರ್ಯಕಿರಣವನ್ನು ಪ್ರತಿಫಲಿಸುತ್ತಿದ್ದ ಹಿಮಶಿಖರಗಳ ಪ್ರಭೆ, ಕಣ್ಣುಗಳ ದೃಷ್ಟಿಯನ್ನೇ ಮಂದವಾಗಿಸಿ ಹಿಮಗುರುಡುತನಕ್ಕೆ ಈಡುಮಾಡುವಂತಿತ್ತು. ಸುತ್ತಿದ್ದ ಚರ್ಮದ ಪಟ್ಟಿಗಳ ಹೊರತಾಗಿಯೂ ಕಾಲುಗಳಿಗೆ ಹಿಮಹುಣ್ಣು ಹತ್ತುತ್ತಿತ್ತು. ಮೈಚರ್ಮ ವೆಲ್ಲ ಬಿರುಕುಬಿಟ್ಟು ತೇವಾಂಶ ತುಂಬಿದ ಚಳಿಗಾಳಿ ತಾಗಿದರೆ ಪ್ರಾಣವೇ ಹೋದಷ್ಟು ಬಾಧೆಯಾಗುತ್ತಿತ್ತು. ಸುಂಯ್ ಎಂದು ಸದಾ ಬೀಸುತ್ತಿದ್ದ ಗಾಳಿಯ ಸದ್ದಿಗೆ ಕಿವಿಗಳು ಡಬ್ಬು ಹಾಕಿಕೊಂಡಿದ್ದವು. ಇಂತಹ ತೊಂದರೆಗಳ ನಡುವೆ ಆ ದುರ್ಗಮ ಪರ್ವತಗಳ ನೆತ್ತಿಯಲ್ಲಿ ಅದೇಕೆ ಅಷ್ಟೊಂದು ಕಷ್ಟಪಡಬೇಕೆಂಬುದೇ ಅರ್ಥವಾಗುತ್ತಿರಲಿಲ್ಲ. ಆದರೆ ಪರಂಗಿ ಸಾಹೇಬರು ಮಾತ್ರ ಮೈಯಲ್ಲಿ ಸೈತಾನ ಹೊಕ್ಕವರಂತೆ ಸದಾ ಒಂದಿಲ್ಲೊಂದು ಕೆಲಸದಲ್ಲಿ ತಾವೂ ತೊಡಗಿರುತ್ತಿದ್ದರು, ಸಿಬ್ಬಂದಿಗಳನ್ನೂ ತೊಡಗಿಸುತ್ತಿದ್ದರು. ಒಬ್ಬರು ಪ್ರಿಸ್ಮಾಟಿಕ್ ಕಂಪಾಸ್ ತರಲು ಹೇಳುತ್ತಿದ್ದರೆ, ಇನ್ನೊಬ್ಬರು ಕುದಿದು ಆವಿಯಾಗುವ ನೀರಿಗೆ ಥರ್ಮಾಮೀಟರ್ ಅದ್ದಲು, ಮತ್ತೊಬ್ಬರು ದೂರ ಪರ್ವತದ ರೀಡಿಂಗ್ ತೆಗೆದುಕೊಳ್ಳಲು ಥಿಯೋಡಲೈಟ್ ಸೆಟ್ ಮಾಡಲು ಹೇಳುತ್ತಿದ್ದರು. ಮಗದೊಬ್ಬರು ಪರ್ವತ ಶ್ರೇಣಿಯಲ್ಲಿ ಸಿಗ್ನಲ್ಮನ್ಗಳು ಹಿಡಿದ ಬಾವುಟ ಅಥವಾ ದೀಪಗಳನ್ನು ಟೆಲಿಸ್ಕೋಪ್ ಮೂಲಕ ಗುರುತಿಸಿ, ಶಿಖರಗಳ ಸಂಖ್ಯೆ ಬರೆದುಕೊಂಡು ಡ್ರಾಯಿಂಗ್ ಬೋರ್ಡ್ ಮೇಲೆ ಅದರ ರೇಖಾಚಿತ್ರ ಬಿಡಿಸಿದರೆ, ಇನ್ನೊಬ್ಬರು ಕ್ರೋನೋಮೀಟರ್ ಹಿಡಿದು ಓಡಾಡುತ್ತಿದ್ದರು. ಮಾಡಿದ್ದನ್ನೇ ಬೆಳಿಗ್ಗೆ ಒಮ್ಮೆ ಮಧ್ಯಾಹ್ನ ಒಮ್ಮೆ, ರಾತ್ರಿ ಇನ್ನೊಮ್ಮೆ ಮಾಡಿಸುತ್ತಿದ್ದರು. ಇಷ್ಟೂ ಸಾಲದೆಂಬಂತೆ ಉದ್ದಕೊಳವೆಯ ಝೆನಿತ್ ಟೆಲಿಸ್ಕೋಪ್ ಇಟ್ಟುಕೊಂಡು ಇಡೀ ರಾತ್ರಿ ನಕ್ಷತ್ರಗಳನ್ನು ಗುರುತಿಸಿ ನೋಟ್ ಮಾಡಿಕೊಳ್ಳುತ್ತಿದ್ದರು. ಇಂದಲ್ಲ ನಾಳೆ ಮುಗಿದೀತೆಂದು ತಾವೆಲ್ಲ ಕಾಯುತ್ತಿದ್ದರೆ ಸಾಹೇಬರುಗಳ ಕೆಲಸಕ್ಕೆ ತುದಿಮೊದಲೆಂಬುದೇ ಇರಲಿಲ್ಲ. ತಮಗೆಲ್ಲ ಸಿಟ್ಟು ಬರುತ್ತಿತ್ತು. `ದುರ್ಗಮ ಪರ್ವತದ ನೆತ್ತಿಗೆ ಕರೆತಂದು ನಮ್ಮನ್ನು ಹೀಗೆ ಗೋಳು ಹೊಯ್ದುಕೊಳ್ಳುವುದಲ್ಲದೆ ತಾವೂ ಇಷ್ಟೆಲ್ಲ ಕಷ್ಟಪಡಲು ಇವರಿಗೆ ತಲೆಕೆಟ್ಟಿರಬೇಕು. ಕೆಳಗೇ ಕುಳಿತು ಏನೋ ಒಂದು ಲೆಕ್ಕಬರೆದು ತೋರಿಸಿದರೆ ಇಲ್ಲಿಗೆ ಬಂದು ಪರೀಕ್ಷಿಸಿ ಸುಳ್ಳು ಎನ್ನಲು ಯಾರಿಗೆ ಸಾಧ್ಯವಿತ್ತು? ಇವರಂತೂ ಹೆಂಡಿರು ಮಕ್ಕಳನ್ನು ಬಿಟ್ಟುಬಂದ ಪರದೇಶಿಗಳು, ನಾವೇನು ಎಲ್ಲವನ್ನೂ ಬಿಟ್ಟ ಸನ್ಯಾಸಿಗಳೇ’ ಎಂದು ತಾವೆಲ್ಲ ಸಾಹೇಬರನ್ನು ಬೈದುಕೊಳ್ಳುತ್ತಿದ್ದುದು ಆತನಿಗೆ ನೆನಪಾಯಿತು. + +ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ! ಇವರಜ್ಜಿ ಪಿಂಡ. ಆ ಪರ್ವತದ ಹತ್ತಿರ ಇದ್ದವರು ಇವರಿಗಿಂತ ಮೊದಲು ಆ ಶಿಖರಗಳನ್ನು ಕಂಡಿರಲಿಲ್ಲವೇ? ಇವರು ನೋಡುವುದಕ್ಕೂ ಮೊದಲು ಆ ಶಿಖರಗಳು ತಲೆಮರೆಸಿಕೊಂಡಿದ್ದವೇ? ಇವರು ಬಂದು ನೋಡುವವರೆಗೆ ಯಾರಿಗೂ ಮುಖ ತೋರಿಸಬಾರದೆಂದು ನಾಚಿಕೊಂಡಿ ದ್ದವೇ? ತಾವೇ ಕಂಡುಹಿಡಿದಿದ್ದೇವೆ ಎಂಬುದು ಇವರ ಬೊಗಳೆ’ ಎಂದು ನಾಸಿರ್ ಹಾಸ್ಯ ಮಾಡಿಕೊಂಡು ನಕ್ಕಿದ್ದ. `ಪರ್ವತ ಶಿಖರವನ್ನು ಯಾರೋ ಕಂಡು ಹಿಡಿಯು ತ್ತಾರೆಂದರೆ ಅದು ಹೇಗೆ, ಅದು ಮೊದಲಿನಿಂದ ಅಲ್ಲೇ ಇದ್ದಿತ್ತಲ್ಲವೇ’ ಎಂದು ತನಗೂ ಅನ್ನಿಸಿದ್ದು ನೆನಪಾಗಿ ಆತ ಮುಗುಳ್ನಕ್ಕ. + +ಅಂತೂ ಹರ್ಮುಖದ ನೆತ್ತಿಯ ನರಕವಾಸ ಮುಗಿಯುತ್ತಿದೆಯೆಂದು ತಾವೆಲ್ಲ ಖುಷಿಯಾಗಿದ್ದರೆ ಸಾಹೇಬರುಗಳ ಅತೃಪ್ತ ಆತ್ಮಗಳಿಗಿನ್ನೂ ತೃಪ್ತಿಯಾದಂತಿರಲಿಲ್ಲ. ಒಂದು ಮಧ್ಯಾಹ್ನ, ಪರ್ವತದ ನೆತ್ತಿಯಲ್ಲಿದ್ದ ಬಂಡೆಯೊಂದನ್ನು ಹತ್ತಿ ಕಾರಕೋರಂ ಶ್ರೇಣಿಯ ಅವೆರಡೂ ಶಿಖರಗಳಿಗೆ ಹೀಲಿಯೋಟ್ರೋಪಿನಿಂದ ಬೆಳಕನ್ನು ಬಿಡಿಸಿ ಮತ್ತೊಂದಿಷ್ಟು ರೀಡಿಂಗ್ ತೆಗೆದುಕೊಳ್ಳಲು ಮಾಂಟ್ಗೊಮರಿ ಸಾಹೇಬರು ನಿಶ್ಚಯಿಸಿ ಕೊಂಡಿದ್ದರು. ಅವರ ದುರಾದೃಷ್ಟವೋ ನಮ್ಮ ಗ್ರಹಚಾರವೋ ಮತ್ತೆ ನಾಲ್ಕೈದು ದಿನ ಕಳೆದರೂ ಮೋಡಮುಸುಕಿದ ವಾತಾವರಣ ತಿಳಿಯಾಗದೆ ಬಂಡೆಗಲ್ಲಿನ ಮೇಲೇರಿ ರೀಡಿಂಗ್ ತೆಗೆದುಕೊಳ್ಳುವ ಅವರ ಆಸೆ ಈಡೇರಿರಲಿಲ್ಲ. ಸರಿ, ಸಾಹೇಬರ ತಲೆಗೆ ಇನ್ನೇನೋ ಉಪಾಯ ಹೊಳೆದು, ಸರ್ವೆತಂಡಕ್ಕೆ ಇಳಿಯಲು ಅನುಮತಿ ಕೊಟ್ಟರಲ್ಲದೆ ಇಡೀ ತಂಡಕ್ಕೆ ಒಂದು ವಾರದ ರಜೆ ಘೋಷಿಸಿದ್ದರು. + +ದುರದೃಷ್ಟವೆಂದರೆ ತಾವೆಲ್ಲ ರಜೆ ಮುಗಿಸಿ ಹಿಂದಿರುಗಿದರೂ ಮಾಂಟ್ಗೊಮರಿ ಸಾಹೇಬರ ಹರ್ಮುಖದ ಹುಚ್ಚು ಬಿಟ್ಟಿರಲಿಲ್ಲ. ಹಾಗಾಗಿ ಮೊದಲಿನ ಜಾಗ ಬಿಟ್ಟು, ವಾಂಗಟ್ ಕಣಿವೆಯ ನಾರಾನಾಗ್ ಗ್ರಾಮದ ಮೂಲಕ ಪುನಃ ಹರ್ಮುಖ ಪರ್ವತ ಹತ್ತಿ ಸರ್ವೆ ನಡೆಸಲು ಅವರು ನಿಶ್ಚಯಿಸಿಕೊಂಡಿದ್ದರು. ಸರಿ, ಎಲ್ಲರೂ ಕಂಗನ್ ಪಟ್ಟಣದ ಮೂಲಕ ನಾರಾನಾಗ್ ಗ್ರಾಮವನ್ನು ತಲುಪಿ, ಅದರ ಬೆನ್ನಿಗೆ ಆತುಕೊಂಡಂತಿದ್ದ ಭೂತೇಸರ್ ಪರ್ವತವನ್ನು ಹತ್ತಿ ಟ್ರಂಕೋಲ್ ಮೂಲಕ ಇದೇ ನಂದಕೋಲ್ ಸರೋವರವನ್ನು ದಾಟಿ ಗಂಗಬಾಳ್ ಸರೋವರದ ದಿಬ್ಬದಂತಿದ್ದ ಬೆಟ್ಟದ ಏಣಿನ ಮೇಲೆ ನಡೆದು, ನಡುವೆ ಹರಡಿಕೊಂಡಿದ್ದ ನೀರ್ಗಲ್ಲನ್ನು ಕಷ್ಟಪಟ್ಟು ದಾಟಿ, ಹಗ್ಗದ ಮೂಲಕ ಹರ್ಮುಖದ ಬಲಭಾಗದ ನಂದಿಪರ್ವತವನ್ನು ಏರಿದ್ದೆವು. ಹರ್ಮುಖ ಪರ್ವತದ ಆ ಭಾಗದಲ್ಲಿ ಮತ್ತೆ ನಮ್ಮ ಸರ್ವೆ ಕೆಲಸಗಳ ಪುನರಾರಂಭವಾಗಿತ್ತು. ಅದರ ಮರುದಿನವೇ ಸಂಭವಿಸಿತ್ತು ಮಹಾ ಅವಘಡ. + +ನಾವು ಸರ್ವೆ ಆರಂಭಿಸಿದ್ದ ಜಾಗದಲ್ಲೊಂದು ದೊಡ್ಡ ಬಂಡೆ ಆಕಾಶದತ್ತ ಕೋಡಿನಂತೆ ಚಾಚಿಕೊಂಡಿತ್ತು. ಅದರ ಮೇಲಿನಿಂದ ಕಾರಕೋರಂ ಶಿಖರದ ನಿಖರ ಅಳತೆ ಸಾಧ್ಯವಾಗುವುದೆಂಬ ನಿರೀಕ್ಷೆಯಲ್ಲಿ ಮಾಂಟ್ಗೊಮರಿ ಸಾಹೇಬರು, ಅಂದು ಮಧ್ಯಾಹ್ನದ ಊಟದ ನಂತರ, ಆ ಕೋಡುಗಲ್ಲಿಗೆ ಏಣಿಯನ್ನು ಒರಗಿಸಲು ಸೂಚಿಸಿ, ಜಬ್ಬಾರ್, ಖಾಸಿಂ, ಖಾದರ್ ಮುಂತಾದ ಕೆಲಸಗಾರರ ಜೊತೆಗೆ ಬಂಡೆಯ ಮೇಲೇರಿ ಸಹಾಯಕರ ಜೊತೆಗೆ ಥಿಯೋಡಲೈಟ್ ರೀಡಿಂಗ್ ತೆಗೆದುಕೊಳ್ಳುವುದರಲ್ಲಿ ನಿರತ ರಾಗಿದ್ದರು. ಕ್ರಮೇಣ ಕಾರ್ಮೋಡಗಳು ಶಿಖರದ ನೆತ್ತಿಯನ್ನು ಮುತ್ತಿ ಸಂಜೆಗತ್ತಲು ಆವರಿಸತೊಡಗಿತ್ತು. ವಿಪರೀತ ಹಿಮಪಾತ ಆರಂಭವಾಗಿತ್ತು. ವಾತಾವರಣ ವಿದ್ಯುದಾವೇಶ ಗೊಂಡು ತಲೆಗೂದಲೆಲ್ಲ ಮೇಲೆದ್ದು ನಿಂತಿತ್ತು. ಥಿಯೋಡಲೈಟ್ ಮೇಲೆ ಹಿಮ ಸುರಿಯದಂತೆ ಛತ್ರಿ ಹಿಡಿದಿದ್ದ ಜಬ್ಬಾರ್ ತುಸು ಅಲ್ಲಾಡಿದರೂ ಜುಮ್ಮೆನ್ನುತ್ತಿದ್ದ ಅದರ ಲೋಹದ ಹಿಡಿಕೆಯನ್ನು ಹಿಡಿದುಕೊಳ್ಳಲು ತಿಣುಕುತ್ತಿದ್ದ. ಪರಿಸ್ಥಿತಿಯನ್ನು ಗಮನಿಸಿದ ಸಾಹೇಬರು, `ವಾತಾವರಣ ವಿದ್ಯುತ್ ಪ್ರೇರಿತವಾಗಿದೆ. ಇಲ್ಲಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ತಕ್ಷಣ ಕೆಲಸ ನಿಲ್ಲಿಸಿ, ಉಪಕರಣಗಳನ್ನು ಎತ್ತಿಕೊಂಡು ಎಲ್ಲರೂ ಕೆಳಗಿಳಿಯಿರಿ’ ಎಂದರು. ಅಷ್ಟರಲ್ಲಾಗಲೇ ಗುಡುಗು ಮಿಂಚುಗಳ ಆರ್ಭಟ ಆರಂಭವಾಗಿತ್ತು. ಕೆಳಗಿಳಿಯುವ ಅವಸರದಲ್ಲಿ ಹುಸೇನ್ ಮೊದಲು ಲೈಟ್ನಿಂಗ್ ಕಂಡಕ್ಟರ್ ಕಂಬವನ್ನು ಭೂ-ಸಂಪರ್ಕಕ್ಕೆ ಜೋಡಿಸಿದ್ದ ತಂತಿಯನ್ನು ಬಿಚ್ಚಿ, ನಂತರ ಕಂಬವನ್ನು ಮೇಲೆತ್ತಲು ಎರಡೂ ಕೈಯಲ್ಲಿ ಹಿಡಿದು ಅಲ್ಲಾಡಿಸತೊಡಗಿದ್ದ. ಉಪಕರಣ ಹೊತ್ತು ಇಳಿಯುತ್ತಿದ್ದವರಿಗೆ ಆಧಾರವಾಗಿ ಖಾಸಿಂ ಕೋಡುಗಲ್ಲಿಗೆ ಒರಗಿಸಿದ್ದ ಲೋಹದ ಏಣಿಯನ್ನು ಹಿಡಿದು ನಿಂತಿದ್ದ. ಛತ್ರಿಯನ್ನು ಮಡಚಿ ಕೆಳಗಿಟ್ಟು ಜಬ್ಬಾರ್ ಥಿಯೋಡಲೈಟಿನ ಟ್ರೈಪಾಡ್ ಸ್ಟ್ಯಾಂಡ್ ಬಿಚ್ಚುತ್ತಿದ್ದ. ಹುಸೇನ್ ಟೆಲಿಸ್ಕೋಪನ್ನು ಎತ್ತಿಕೊಳ್ಳಲು ಕೈಯಿಕ್ಕುವಷ್ಟರಲ್ಲಿ ಇದ್ದಕ್ಕಿದ್ದಂತೆ ಕಣ್ಣುಕೋರೈಸಿ ಇಡೀ ಪ್ರದೇಶವನ್ನು ಬೆಳ್ಳಂಬೆಳಗಿಸಿ ಭಾರೀ ಮಿಂಚೊಂದು ಅಪ್ಪಳಿಸಿತ್ತು. ಶಿಖರವೇ ಸೀಳಿ ಹೋಯಿತೆನ್ನುವಂತಹ ಅಬ್ಬರ. ಕ್ಷಣಾರ್ಧದಲ್ಲಿ ಲೈಟ್ನಿಂಗ್ ಪೋಲ್ ಕೀಳುತ್ತಿದ್ದ ಹುಸೇನನ ಕೈಗಳೆರಡೂ ಸುಟ್ಟು ಕರಕಲಾಗಿ ಆತ ಕಿರಿಚಿಕೊಂಡು ಎಚ್ಚರದಪ್ಪಿ ಕೆಳಗುರುಳಿ ಬಿದ್ದಿದ್ದ. ಏಣಿ ಹಿಡಿದಿದ್ದ ಖಾಸಿಂ ಅದನ್ನು ಕಿತ್ತೆಸೆದು ಅಯ್ಯೋ ಎಂದು ಕೈಕೊಡವುತ್ತ ಬಂಡೆಯಿಂದ ಉರುಳಿದ್ದ. + +ಜಬ್ಬಾರನ ಕೈಯಿಂದ ಕಿತ್ತೆಸೆಯಲ್ಪಟ್ಟ ಥಿಯೋಡಲೈಟಿನ ಸ್ಟಾ÷್ಯಂಡು ಮಾಂಟ್ಗೊಮರಿ ಸಾಹೇಬರ ಭುಜ ಮತ್ತು ಕಾಲಿಗೆ ಬಡಿದು ಅವರೂ ನರಳುತ್ತ ಕೆಳಗುರುಳಿ ಸ್ಮೃತಿತಪ್ಪಿ ಬಿದ್ದಿದ್ದರು. ಹುಸೇನ ವಿಲವಿಲನೆ ಒದ್ದಾಡುತ್ತ ಅರಚಿಕೊಳ್ಳುತ್ತಿದ್ದ. ಮಿಂಚಿನ ಪ್ರಖರತೆಗೆ ಕಣ್ಣು ಕುರುಡಾಗಿ ಹೋಯಿತೆಂದು ಪೀಟರ್ ಕುಣಿಯುತ್ತಿದ್ದರು. ಕಣ್ಣುಗುಡ್ಡೆ ಸಿಡಿದು ಹೋದಂತಾಗಿ ಬೆಚ್ಚಿ ತಾನೂ ನರಳುತ್ತ ಮಂಜಿನ ರಾಶಿಯ ಮೇಲೆ ಬಿದ್ದು ಒದ್ದಾಡುತ್ತಿದ್ದುದನ್ನು ಐವಾನ್ ನೆನೆಸಿಕೊಂಡ. ಎದೆಯ ಮಾಂಸಖಂಡಗಳು ಬಿಗಿದು ಡಗ್ಲಾಸ್ ಉಸಿರುಗಟ್ಟಿ ಬಿದ್ದು ಹೊರಳಾಡುತ್ತಿದ್ದರು. ಇದೆಲ್ಲಕ್ಕಿಂತ ಭಯಾನಕವಾಗಿ ಶಿಖರದ ಬಲತುದಿಯ ಬಂಡೆಯ ಪಕ್ಕ ನಿರ್ಮಿಸಿದ್ದ ಅಡುಗೆ ಡೇರೆಯಲ್ಲಿ ಸ್ಟವ್ ಉರಿಸಿ ಚಹಾ ಮಾಡುತ್ತಿದ್ದ ಉಮ್ಮರ್ ಹೊರಗೆ ಬಂದು ನಡುಗುತ್ತ ಬಾಯ್ಬಡಿದುಕೊಳ್ಳುತ್ತಿದ್ದ. ಮಿಂಚಿನ ಹೊಡೆತಕ್ಕೆ ಲೋಹದ ಸ್ಟವ್ ಸಿಡಿದು ಎರಡು ಹೋಳಾಗಿ ಸೀಮೆಯೆಣ್ಣೆ ಎರಚಿ ಡೇರೆಯ ಗುಡಾರವೇ ಹೊತ್ತಿ ಉರಿಯ ತೊಡಗಿತ್ತು. ಸಕಾಲದಲ್ಲಿ ಉಮ್ಮರ್ ಹೊರಗೋಡಿ ಬರದಿದ್ದರೆ ಕ್ಷಣಾರ್ಧದಲ್ಲಿ ಬೆಂಕಿಯ ಝಳಕ್ಕೆ ಸಿಲುಕಿ ಕರಕಲಾಗಿ ಹೋಗುತ್ತಿದ್ದ. ಅವನ ಸಹಾಯಕನಿಗೆ ಸ್ಟವ್‌ನಿಂದ ಸಿಡಿದ ಲೋಹದ ಚೂರು ಬಡಿದು ಭುಜದಿಂದ ಎದೆಯವರೆಗೆ ಕತ್ತರಿಸಿ ರಕ್ತ ಸೋರುತಿತ್ತು. ಕಣ್ಮುಚ್ಚಿ ತೆರೆಯುವುದರೊಳಗೆ ಎಲ್ಲಿ ನೋಡಿದರೂ ನೋವಿನಿಂದ ಅರಚುವವರೇ, ಬಿದ್ದು ಒದ್ದಾಡುವವರೇ. ಒಂದರೆ ಕ್ಷಣದಲ್ಲಿ ಪರಿಸ್ಥಿತಿ ಅಯೋಮಯವಾಗಿತ್ತು. ಇಲ್ಲಿ ನಡೆದಿದ್ದ ಕಿರಿಚಾಟ ಕೇಳಿ ಶಿಖರದ ಇನ್ನೊಂದು ದಿಕ್ಕಿನಲ್ಲಿ ಸರ್ವೆ ನಡೆಸುತ್ತಿದ್ದ ಜಾನ್ಸನ್ ಸಾಹೇಬರ ತಂಡ ಗಾಬರಿಯಿಂದ ಓಡಿಬಂದಿತ್ತು. ಅಲ್ಲಾನ ಕೃಪೆಯಿಂದ ಎತ್ತರದ ಬಂಡೆಯೊಂದರ ಕೆಳಗಿದ್ದ ಅವರ್ಯಾರೂ ಸಿಡಿಲಿನ ಆಘಾತಕ್ಕೆ ಸಿಲುಕಿರಲಿಲ್ಲ. ಇಲ್ಲಿ ನಡೆದಿದ್ದ ಅನಾಹುತವನ್ನು ಕಂಡು ಹೌಹಾರಿದ್ದ ಅವರು ಬಿದ್ದು ಒದ್ದಾಡುತ್ತಿದ್ದವರ ಸಹಾಯಕ್ಕೆ ಧಾವಿಸಿದ್ದರು. ವಿಷಮ ಪರಿಸ್ಥಿತಿಯನ್ನು ನಿಭಾಯಿಸಿ ಅನುಭವವಿದ್ದ ಜಾನ್ಸನ್ ಸಾಹೇಬರು ತಮ್ಮ ತಂಡದವರನ್ನು ಕರೆದು, ಸುಟ್ಟು ಗಾಯಗೊಂಡವರನ್ನು ಮತ್ತು ಪೆಟ್ಟು ತಿಂದವರನ್ನು ಮೊದಲು ಉಪಚರಿಸಿ ಟೂಲ್ ಕಿಟ್ಟಿನಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ತೆರೆದು ಚಿಕಿತ್ಸೆ ನೀಡಲು ಸೂಚಿಸುತ್ತ ಒಬ್ಬೊಬ್ಬರನ್ನೇ ನಿಧಾನಕ್ಕೆ ನಂದಕೋಲ್ ಸರೋವರದ ಸಮೀಪಕ್ಕೆ ಒಯ್ಯಲು ಸಿದ್ಧತೆ ನಡೆಸಿದ್ದರು. ಅಡುಗೆ ಮತ್ತು ಉಗ್ರಾಣ ಶಿಬಿರಗಳೆರಡೂ ಸುಟ್ಟು ಕರಕಲಾಗಿ ಹೋಗಿದ್ದರಿಂದ ಜೋಲಿ ಮಾಡಿ ಕರೆದೊಯ್ಯಲು ಬೇಕಾದ ಕಂಬಳಿ, ಚಾದರ, ಹುರಿ, ಹಗ್ಗ, ಗಳಗಳೂ ಸುಟ್ಟು ಹೋಗಿದ್ದವು. + + + +ಇದ್ದುದರಲ್ಲೇ ವ್ಯವಸ್ಥೆ ಮಾಡಿಕೊಂಡು ಮೊದಲು ತೀವ್ರ ಪೆಟ್ಟಾದವರನ್ನು, ಎಚ್ಚರತಪ್ಪಿದವರನ್ನು ಒಬ್ಬೊಬ್ಬರನ್ನಾಗಿ ಸಾಗಿಸಿ ನಂತರ ಉಳಿದವರನ್ನು ಕೆಳಗೊಯ್ಯುವುದೆಂದು ನಿರ್ಧರಿಸಿದ ಜಾನ್ಸನ್, ಒಂದೊಂದಾಗಿ ಅಗತ್ಯಕ್ರಮ ಕೈಗೊಳ್ಳತೊಡಗಿದ್ದರು. ಮಾಂಟ್ಗೊಮರಿ ಸಾಹೇಬರು ಎಚ್ಚರದಪ್ಪಿ ಬಿದ್ದಿದ್ದರು. ಡಗ್ಲಾಸ್ ಮತ್ತು ಪೀಟರ್ ಪೆಟ್ಟು ತಿಂದು ಕಂಗೆಟ್ಟಿದ್ದರು. ಆಪತ್ತುಗಳ ನಿರ್ವಹಣೆಯಲ್ಲಿ ಅಪಾರ ಅನುಭವವಿದ್ದ ಜಾನ್ಸನ್ ಕುದುರೆ ಸವಾರಿಯಲ್ಲಿ ಚುರುಕಾಗಿದ್ದ ಮಕ್ಬುಲ್ ಹುಸೇನನ ಮೂಲಕ ಟ್ರಂಕಾಲ್ ಕಣಿವೆಯಲ್ಲಿದ್ದ ಬೇಸ್‌ಕ್ಯಾಂಪಿಗೆ, ತುರ್ತು ಅಗತ್ಯವಿದ್ದ ಟೆಂಟು, ಕಂಬಳಿ, ಹುರಿ, ಹಗ್ಗ, ಆಹಾರ, ಪಾನೀಯವೇ ಮುಂತಾದ ಅಗತ್ಯ ಸಾಮಗ್ರಿ ಒದಗಿಸಲು ಹಾಗೂ ಒಂದಿಷ್ಟು ಸಹಾಯಕರನ್ನು ಕೂಡಲೇ ಕಳಿಸಿ ನಂದಕೋಲ್ ತೀರದಲ್ಲಿ ಟೆಂಟ್ ಹಾಕಲು ಸೂಚನೆ ರವಾನಿಸಿದ್ದರು. ಅವಘಡಕ್ಕೆ ತುತ್ತಾದವರನ್ನು ಶಿಖರದ ತುದಿಯಿಂದ ಜೋಲಿಗಳಲ್ಲಿ ಹೊತ್ತು ತರುವ ಹೊತ್ತಿಗಾಗಲೇ ಬೇಸ್ ಕ್ಯಾಂಪಿನ ಸಿಬ್ಬಂದಿ ಧಾವಿಸಿ ಬಂದು ನಂದಕೋಲ್ ತೀರದಲ್ಲಿ ಟೆಂಟ್ ಹಾಕ ತೊಡಗಿದ್ದರು. ಜಾನ್ಸನ್ನರ ಸೂಚನೆಯಂತೆ ಬೇಸ್ ಕ್ಯಾಂಪಿಗೆ ಸಂದೇಶ ತಲುಪಿಸಿದ ಹುಸೇನ, ಅಲ್ಲಿಂದ ಸೀದ ನಾರಾನಾಗ್ ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ಕುಂದನ್ ಗ್ರಾಮದಿಂದ ವೈದ್ಯರೊಬ್ಬರನ್ನು ತಲಾಷ್ ಮಾಡಿ ಕರೆತಂದಿದ್ದ. ತೀವ್ರ ಪೆಟ್ಟಾಗಿದ್ದ ಐವರು ಸಹಾಯಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಹಾಯಕರ ಜೊತೆಗೂಡಿಸಿ ಪೋನಿಗಳ ಮೇಲೆ ಶ್ರೀನಗರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿತ್ತು. ಇಡೀ ಘಟನೆಯಲ್ಲಿ ಸಾವು ಸಂಭವಿಸಲಿಲ್ಲ ಎಂಬುದೊಂದೇ ಸಮಾಧಾನದ ಸಂಗತಿಯಾಗಿತ್ತು. ತನಗೂ ಎರಡು ಮೂರು ದಿನ ಕಣ್ಣುಗುಡ್ಡೆ ತೊಂದರೆ ಕೊಟ್ಟಿದ್ದನ್ನು ಐವಾನ್ ನೆನಪಿಸಿಕೊಂಡ. ಆ ದುರ್ಘಟನೆಯ ನೆನಪಿನಲ್ಲಿ ಬಹುಹೊತ್ತು ನಿದ್ದೆ ಬಾರದೆ ಒದ್ದಾಡುತ್ತಿದ್ದವನಿಗೆ, `ಒಂದು ರೀತಿಯಲ್ಲಿ ಮಾಂಟ್ಗೊಮರಿ ಸಾಹೇಬರಿಗೆ ಪೆಟ್ಟು ಬಿದ್ದದ್ದೇ ಒಳ್ಳೆಯದಾಯಿತು, ಅವರೇನಾದರೂ ಎದ್ದು ಓಡಾಡುವಂತಿದ್ದಿದ್ದರೆ ತಮಗೆಲ್ಲ ಇಷ್ಟು ವಿಶ್ರಾಂತಿಯೂ ದೊರೆಯುತ್ತಿರಲಿಲ್ಲ’ ಎಂಬ ಹುಸೇನನ ಕುಚೇಷ್ಟೆಯ ಮಾತು ನೆನಪಾಗಿ, ನಾಳೆ ಬೆಳಿಗ್ಗೆ ಗೆಳೆಯರ ಜೊತೆ ಚಹಾ ಕುಡಿಯುವಾಗ ಅದನ್ನು ಹೇಳಿ ಎಲ್ಲರನ್ನೂ ನಗಿಸಬೇಕೆಂದು ಯೋಚಿಸುತ್ತ ಕಂಬಳಿಯನ್ನು ಮತ್ತಷ್ಟು ಬಿಗಿಯಾಗಿ ಮುಚ್ಚಿಕೊಂಡು ಮುರುಟಿ ಮಲಗಿದ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_158.txt b/Kenda Sampige/article_158.txt new file mode 100644 index 0000000000000000000000000000000000000000..a2d87056dd1366b8dd86f62f094e5c079c9f572b --- /dev/null +++ b/Kenda Sampige/article_158.txt @@ -0,0 +1,45 @@ +ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಪಾಳಿಯಂತೆ ಮಿಲಿಟರಿ ಪಡೆಯ ಕ್ಯಾರವಾನು ಹತ್ತಿರದ ಕಂದಹಾರ್ ಪಟ್ಟಣದ ಕಡೆಗೋ, ಸುತ್ತ-ಮುತ್ತಲ ಹಳ್ಳಿಗಳ ಕಡೆಗೋ ಅಥವಾ ತಮಗೆ ಆದೇಶ ಬಂದ ಕಡೆಗೋ ಹೊರಡುತ್ತಿತ್ತು. ಮುಂದೆ ಹತ್ತು ಮಾರುದ್ದದ ತ್ರಿಕೋಣಾಕಾರದ ಮೂತಿಯಿದ್ದ, ಆ ಮೂತಿಯ ತುದಿಗೊಂದು ಚಕ್ರ ಅಳವಡಿಸಿದ್ದ ಬಾಂಬ್ ಡಿಟೆಕ್ಟರ್ ವಾಹನ. ವಿಶೇಷ ಎಂದರೆ ಅದೇ ರೀತಿಯಿದ್ದ ಮತ್ತೊಂದು ವಾಹನಕ್ಕೆ ಬೆಂಕಿಯನ್ನು ನೂರು ಮಾರು ದೂರಕ್ಕೆ ಉಗುಳುವ ಸಾಮರ್ಥ್ಯವಿದ್ದದ್ದು. ಅದರ ಹಿಂದೆ ನೋಡಲು ಯುದ್ಧಟ್ಯಾಂಕಿನಂತಿದ್ದ ಆಧುನಿಕ ಶಸ್ತ್ರಸಜ್ಜಿತವಾದ ಹತ್ತಾರು ಆರ್ಮಡ್ ಮಿಲಿಟರಿ ವಾಹನಗಳು. + +(ಮಂಜುನಾಥ್‌ ಕುಣಿಗಲ್‌) + +ಶಸ್ತ್ರ-ಸಲಕರಣೆಗಳನ್ನು ತಮ್ಮ ವಾಹನಗಳಿಗೆ ಅಳವಡಿಸುತ್ತಿದ್ದ ರೀತಿ, ತಾವೇ ಯಂತ್ರಗಳಂತೆ ಅವರು ತಯಾರಾಗುತ್ತಿದ್ದ ಶಿಸ್ತು ನನ್ನನ್ನು ಬೆರಗುಗೊಳಿಸುತ್ತಿತ್ತು. ತುಂಬಾ ಹೊತ್ತು ನಿಂತು ನೋಡಿದರೆ ಅಲ್ಲಿಂದ ಜಾಗ ಖಾಲಿ ಮಾಡಿರೆಂದು ಮೆಲ್ಲನೆ ಗದರುತ್ತಿದ್ದರು. ಅವರ ಪಾಳಿಯು ಮುಗಿದು ಸಮಯಕ್ಕೆ ಸರಿಯಾಗಿ ಅದೇ ಶಿಸ್ತಿನ ಸಾಲು ಧೂಳನ್ನೆಬ್ಬಿಸಿ ಹಿಂತಿರುಗುತ್ತಿದ್ದದ್ದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಇದು ಅವರ ದೈನಂದಿನ ಕೂಂಬಿಂಗ್ ಮತ್ತು ಪ್ಯಾಟ್ರೋಲ್ ವ್ಯವಸ್ಥೆ! + +ಅದೆಲ್ಲಿ ಹೋಗಿ ಯುದ್ಧ ಮಾಡಿ ಬರುತ್ತಾರೋ? ಇಷ್ಟೇ ಜನ ಸಾಕೇ? ದಿನಾಲೂ ಯುದ್ಧ ಇರುತ್ತದೆಯೇ? ಅಥವಾ ಸುಮ್ಮನೆ ಊರು ಸುತ್ತಾಡಿ ಬರುತ್ತಾರೋ ಏನೋ? ಹೀಗೆ ಎಲ್ಲರಂತೆ ನನಗೂ ಪ್ರಶ್ನೆಗಳು. ಹೊರಗೆ ಅದೆಲ್ಲಿ ,ಅದೇನು ಘರ್ಷಣೆಗಳು ನಡೆಯುತ್ತಿದ್ದವೋ ಕಾಣೆ? ಆಗ್ಗಾಗ್ಗೆ ಮಿಲಿಟರಿ ಆಫೀಸುಗಳ ಮೇಲೆ ಎತ್ತರಕ್ಕೆ ಹಾರುತ್ತಿದ್ದ ಧ್ವಜಗಳು ಅರ್ಧಕ್ಕೆ ಜಾರುತ್ತಿದ್ದವು, ಊಟದ ಹಾಲಿನಲ್ಲಿ ಮಿಲಿಟರಿ ಜನರ ದೇಹ ಭಾಷೆ ಬೇರೆ ಕಥೆ ಏನನ್ನೋ ಹೇಳುತ್ತಿದ್ದವು. ಆ ಸಮಯದಲ್ಲಿ ಗಾಳಿಗೂ ಕೇಳದ ಪಿಸುಮಾತಿನಲ್ಲೋ ಅಥವಾ ಸಂಜ್ಞೆಗಳಲ್ಲೋ ಪರಸ್ಪರ ಸಂವಹನ. ಅಪ್ಪಿತಪ್ಪಿಯೂ ಯಾರೂ ಸಹ ಘಟಿಸಿದ ವಿಷಯವನ್ನು ಬಾಯಿ ಬಿಡುತ್ತಿರಲಿಲ್ಲ. ನನಗೆ ಪರಿಚಿತ ಮಿಲಿಟರಿ ಇಂಜಿನಿಯರುಗಳೂ ಸಹ ಏನೂ ಕೇಳಬೇಡಿರೆಂದು ಖಡಕ್ಕಾಗಿ ಹೇಳಿಬಿಡುತ್ತಿದ್ದರು. ಸಾವು-ನೋವುಗಳು ಅಲ್ಲಿ ವಿಶೇಷವೇನಲ್ಲ. ಆದರೆ ಅವರು ಅದನ್ನು ಗೌಪ್ಯವಾಗಿ ಕಾಪಾಡಿಕೊಳ್ಳುತ್ತಿದ್ದ ರೀತಿ, ಗಾಯಾಳುವಾದ ಇಲ್ಲಾ ಗತಿಸಿದ ತನ್ನ ಸಹ ಯೋಧನಿಗೆ ಅವರದೇ ರೀತಿಯಲ್ಲಿ ಸಲ್ಲಿಸುತ್ತಿದ್ದ ಗೌರವ ನನಗೆ ಅತೀವ ಹೆಮ್ಮೆ ಅನಿಸುತ್ತಿತ್ತು. + +ಪ್ರಮುಖ ಮಿಲಿಟರಿ ಬೇಸ್ ಗಳಿಂದ ಸೈನಿಕರು ಏರ್-ಸ್ಟ್ರಿಪ್ ಇಲ್ಲದ ಯಾವುದೇ ಉಪ-ಕ್ಯಾಂಪುಗಳಿಗೆ ಸಾಮಾನ್ಯವಾಗಿ ಚಾಪರುಗಳಲ್ಲಿ ಹೋಗುತ್ತಿದ್ದುದನ್ನು ಗಮನಿಸಿದ್ದೇನೆ. ಇಂತಹ ಮಿಲಿಟರಿ ಚಾಪರುಗಳಲ್ಲಿ ಕ್ಯಾಂಪಿನಲ್ಲಿದ್ದ ನನ್ನಂತಹ ಸಿವಿಲಿಯನ್ಸ್ ಗಳನ್ನೂ ಅಗತ್ಯಕ್ಕೆ ತಕ್ಕಂತೆ ತಮ್ಮೊಡನೆ ಕರೆದುಕೊಂಡು ಹೋಗುತ್ತಿದ್ದುದೂ ಹೌದು. ಒಂದು ವೇಳೆ ಸರಕು-ಸರಂಜಾಮು ಹೆಚ್ಚಿದ್ದರೆ ಅಥವಾ ಬೇರಾವುದೇ ಕಾರಣಗಳಿದ್ದಲ್ಲಿ ಮಾತ್ರ ಮಿಲಿಟರಿ ಕಾರವಾನ್ ರಸ್ತೆಯಲ್ಲಿ ಹೋಗುತ್ತಿತ್ತು. ಇದೊಂದು ತುಂಬಾ ಅಪಾಯಕಾರಿ ಪ್ರಯಾಣವೇ! ಅಂತಹ ಒಂದು ಅಪಾಯಕಾರಿ ಸನ್ನಿವೇಶಕ್ಕೆ ನಾನು ಸಾಕ್ಷಿಯಾಗುತ್ತೇನೆಂದು ಗೊತ್ತಿದ್ದರೆ ಅದೆಷ್ಟೇ ಡಾಲರುಗಳ ಸಂಬಳ ಕೊಟ್ಟಿದ್ದರೂ ನಾನಿಲ್ಲಿಗೆ ಬರುವ ಯೋಚನೆಯನ್ನೂ ಮಾಡುತ್ತಿರಲಿಲ್ಲವೇನೋ? ಮಿಲಿಟರಿ ಚಾಪರುಗಳಷ್ಟೇ ಅಲ್ಲದೆ ಕೆಲವು ಖಾಸಗಿ ‘ಚಾರ್ಟರ್ ಚಾಪರುಗಳು’ ಕೂಡ ಉಪ-ಕ್ಯಾಂಪುಗಳಿಗೆ ಜನರನ್ನು ತೆಗೆದುಕೊಂಡು ಹೋಗುತ್ತಿದ್ದವು. ಇದರ ಪ್ರಯಾಣ ವೆಚ್ಚ ಕೂಡ ಸಾಮಾನ್ಯಕ್ಕಿಂತ ಹತ್ತಾರು ಪಟ್ಟು ಹೆಚ್ಚು. ತುಂಬಾ ಅಗತ್ಯವಿದ್ದಲ್ಲಿ ಕಂಪನಿಗಳ ಕೆಲಸಗಾರರಿಗಾಗಿ ಮಾಡಿದ್ದ ಪರ್ಯಾಯ ವ್ಯವಸ್ಥೆಯದು. ಒಮ್ಮೆಗೆ ೧೦ ರಿಂದ ೩೦ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಹೋಗುವ ದೊಡ್ಡ ಚಾಪರುಗಳವು. ಕಂದಹಾರ್ ಕ್ಯಾಂಪಿನಲ್ಲಿ ಒಮ್ಮೆ ಜನ ತುಂಬಿದ್ದ ಇಂತಹ ಒಂದು ಚಾಪರ್ ನೆಲಕ್ಕೆ ಬಿದ್ದ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾದದ್ದು ನನ್ನನ್ನು ಎಷ್ಟೋ ವರ್ಷಗಳವರೆಗೆ ತೀವ್ರವಾಗಿ ಕಾಡಿಬಿಟ್ಟಿತ್ತು. + +ಅಂದು ಬಹುಶಃ ಬೆಳಗ್ಗೆ ೧೧ರ ಸಮಯ. ದಿನನಿತ್ಯದ ಕೆಲಸದ ಭಾಗವಾಗಿ, ಕಂದಹಾರ್ ಕ್ಯಾಂಪಿನ ಏರ್-ಸ್ಟ್ರಿಪ್ ಬಳಿಯ ನಿರ್ಮಾಣ ಹಂತ ಮುಕ್ತಾಯದಲ್ಲಿದ್ದ ಎರಡಂತಸ್ತಿನ ಕಟ್ಟಡದ ಮೇಲೆ ನ್ಯಾಟೋ ಮಿಲಿಟರಿ ಇಂಜಿನಿಯರ್ ಜೊತೆ ನಾನು ನಿಂತು ತಾಂತ್ರಿಕ ವಿಷಯಗಳ ಬಗ್ಗೆ ವಿವರಣೆ ನೀಡುತ್ತಿದ್ದೆ. ನಮ್ಮೊಡನೆ ಕೆಲವು ಅಲ್ಬೇನಿಯನ್ ಕಾರ್ಮಿಕರಿದ್ದರು. ನಾವಿದ್ದ ಕಟ್ಟಡದ ಒಂದು ಸಮಾನಾಂತರ ಪಾರ್ಶ್ವಕ್ಕೆ ಏರ್-ಸ್ಟ್ರಿಪ್ ಕಾಣಿಸುತ್ತಿತ್ತು. ಏರ್-ಸ್ಟ್ರಿಪ್ಪಿನಲ್ಲಿ ಅಂತಿಂದಿತ್ತ ಇಳಿಯುವ ಮತ್ತು ಮೇಲೇರುವ ಯುದ್ಧ ವಿಮಾನಗಳು, ಎಂದಿನಂತೆ ಕ್ಪಣಕ್ಕೊಮ್ಮೆ ಆ ವಿಮಾನಗಳ ಹಾರಾಟದ ಅದೇ ಕಿವಿಗಡಚಿಕ್ಕುವ ಸದ್ದಿನ ಏಕತಾನತೆ! ಈ ಮಧ್ಯೆ ಏರ್-ಸ್ಟ್ರಿಪ್ಪಿನ ಪಕ್ಕದ ಚಾಪರುಗಳ ನಿಲ್ದಾಣದ ಜಾಗದಲ್ಲಿ ದೈತ್ಯ ಚಾರ್ಟರ್ ಚಾಪರೊಂದು ನಾಲ್ಕು ರೆಕ್ಕೆಗಳನ್ನು ಸುತ್ತಲೂ ರಭಸದಿಂದ ಆಡಿಸುತ್ತಾ ನಿಧಾನವಾಗಿ ಆನೆಯಂತೆ ಮೆಲ್ಲನೆ ಏಳುತ್ತಿದ್ದುದು ತುಂಬಾ ಹತ್ತಿರದಲ್ಲಿ ಕಾಣಿಸುತ್ತಿತ್ತು. ಇವೆಲ್ಲ ಅಲ್ಲಿ ಉಸಿರಾಟದಷ್ಟೇ ಸಾಮಾನ್ಯ ಸಂಗತಿಗಳಾದರೂ ನಾನಿದ್ದ ಎತ್ತರದಲ್ಲಿ ಏರ್-ಸ್ಟ್ರಿಪ್ಪಿನಲ್ಲಿ ಕಾಣುತ್ತಿದ್ದ ಆ ಸ್ಪಷ್ಟ ದೃಶ್ಯಗಳು ಅಪರೂಪವೇನೋ ಎಂದು ನನಗೆ ಅನಿಸುತಿತ್ತು. ಮೆಲ್ಲನೆ ಮೇಲಿರಿದ್ದ ಆ ಚಾಪರ್ ಕೆಲವು ನೂರಡಿಗಳ ಮೇಲೇರಿರಬಹುದಷ್ಟೇ. ಏನಾಯಿತೆಂದು ಗೊತ್ತಿಲ್ಲ, ಇದ್ದಕ್ಕಿದ್ದ ಹಾಗೆ ರೆಕ್ಕೆಯ ವೇಗ ಕಡಿಮೆಯಾದಂತೆ ಕಾಣಿಸಿತು. ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಒಂದಿಬ್ಬರು ಕೆಳಗೆ ಧುಮುಕಿದ್ದು ಮತ್ತು ಬೀಳುವಾಗ ಪ್ಯಾರಾಚೂಟ್ ತೆರೆದಿದ್ದು ಕಾಣಿಸಿತು. ನನ್ನ ಜೊತೆ ಇದ್ದ ಮಿಲಿಟರಿ ಇಂಜಿನಿಯರ್ ಕೂಡ ‘ಹೋ…’ ಎಂದು ಉದ್ಗಾರ ತೆಗೆದು ಅವಕ್ಕಾಗಿ ನಿಂತುಬಿಟ್ಟ! ‘ಎಂಥದೋ ಅವಘಡ ಘಟಿಸಲಿಕ್ಕಿದೆ!’ ತಣ್ಣಗೆ ಅವ ಹೇಳಿದ್ದಷ್ಟೇ. ಜೊತೆಗಿದ್ದ ಕೆಲಸಗಾರರೂ ಅಪರೂಪದ ದೃಶ್ಯವೇನೋ ಎಂಬಂತೆ ಕಣ್ಣಗಲಿಸಿ ಅತ್ತಲೇ ನೋಡುತ್ತಾ ‘ಹಾಯ್ದೆ.. ಹಾಯ್ದೇ…’ ಎಂದು ಅವರ ಭಾಷೆಯಲ್ಲಿ ಜೋರಾಗಿ ಕಿರುಚುತ್ತಾ ನಿಂತರು. ಹಿಂದೆಯೇ ಮತ್ತೊಂದಷ್ಟು ಜನ ತಮ್ಮ ಹಿಂದೆ ಬ್ಯಾಗುಗಗಳಂತಹ ವಸ್ತುಗಳನ್ನು ನೇತುಹಾಕಿಕೊಂಡು ಧುಮುಕುವ ದೃಶ್ಯ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು. ಇವರ ಪ್ಯಾರಾಚೂಟ್ ತೆರೆದುಕೊಳ್ಳಲಿಲ್ಲವೋ ಅಥವಾ ಇರಲೇ ಇಲ್ಲವೋ ಗೊತ್ತಾಗಲಿಲ್ಲ. ನಾವಿದ್ದ ದೂರಕ್ಕೆ ಅವರು ನೆಲಕ್ಕೆ ತೊಪ್ಪೆಯಂತೆ ಬಿದ್ದಂತೆ ಕಾಣಿಸಿತಷ್ಟೆ ಹೊರತು ಯಾವ ಶಬ್ದವೂ ಕೇಳುತ್ತಿರಲಿಲ್ಲ. + + + +ನೋಡನೋಡುತ್ತಿದ್ದ ಹಾಗೆ ಚಾಪರ್ ನಿಧಾನಕ್ಕೆ ಕುಸಿಯುತ್ತಿತ್ತು. ನಮಗೆ ಅಪಾಯದ ಅರಿವಾಗಿಹೋಯ್ತು! ಅದಿನ್ನೂ ಕೆಳಗೆ ಬರುತ್ತಿದ್ದಂತೆ ಮತ್ತೊಂದಷ್ಟು ಜನ ಧುಮುಕಿ ಕೆಳಗೆ ಧೊಪ್ಪನೆ ಬಿದ್ದರು. ಆಗ ಪ್ಯಾರಾಚೂಟ್ ತೆರೆದುಕೊಳ್ಳುವ ಎತ್ತರ ಮತ್ತು ಸಾಧ್ಯತೆ ಅಲ್ಲಿರಲಿಲ್ಲ. ಜನ ಬೀಳುತ್ತಲೇ ಇದ್ದರು. ರೆಕ್ಕೆಗಳ ವೇಗ ತುಂಬಾ ನಿಧಾನವಾಗಿಬಿಟ್ಟಿತ್ತು. ನಿಯಂತ್ರಣ ಕಳೆದುಕೊಂಡು ಗಾಳಿಯಲ್ಲಿ ಡೋಲಾಯಮಾನವಾಗಿ ಹೊಯ್ದಾಡುತ್ತಲೇ ನೆಲಕ್ಕೆ ರೊಪ್ಪನೆ ಬಿದ್ದ ತಕ್ಷಣವೇ ಬಾಂಬು ಹಾಕಿದ ಹಾಗೆ ‘ಬ್ಲ್ಯಾಮ್’ ಎನ್ನುವ ಶಬ್ದದೊಂದಿಗೆ ಬೆಂಕಿಯ ವಿಸ್ಫೋಟವಾಯ್ತು. ಇವೆಲ್ಲಾ ಕೆಲವೇ ನಿಮಿಷಗಳಲ್ಲಿ ಆಗಿಹೋಗಿತ್ತು. ನಾವು ಅಲ್ಲಿಗೆ ಓಡಿಹೋಗಿ ನೋಡುವಂತಹ ಸಾಮಾನ್ಯ ಪ್ರದೇಶವಲ್ಲ ಅದು. ಸ್ವಲ್ಪ ಕಾಲ ಅಲ್ಲಿಯೇ ನಿಂತು ನೋಡುತ್ತಿದ್ದೆವು. ಆಗ ಒಮ್ಮೆಗೇ ‘ಎಮರ್ಜೆನ್ಸಿ’ ಎನ್ನುವ ಸೈರನ್ ಕೂಗಲು ಶುರುವಾಯ್ತು. ಅಂತಹ ‘ತುರ್ತು ಘೋಷಣೆ ಸಂದರ್ಭ’ಗಳಲ್ಲಿ ಯಾರೂ ಕೂಡ ಹೊರಗೆ ಬರಬಾರದು ಎನ್ನುವುದು ಅಲ್ಲಿನ ಶಿಷ್ಟಾಚಾರಗಳಲ್ಲೊಂದು. ಕೆಲವು ಅಗ್ನಿಶಾಮಕ ಟ್ರಕ್ಕುಗಳು ಅತ್ತ ಹೋಗುತ್ತಿದ್ದುದು ಕಾಣಿಸುತ್ತಿತ್ತು. ಅಲ್ಲಿ ಇನ್ನೇನು ನಡೆಯುತ್ತದೆಯೋ ನೋಡಲಿಕ್ಕೆ ನನಗೆ ಇಷ್ಟವಿರಲಿಲ್ಲ. ಎದೆ ಗಟ್ಟಿಯಾಗಿ ಕಟ್ಟಿಕೊಂಡ ನೋವಾಗಿ ದುಃಖ ಉಮ್ಮಳಿಸಿ ಬಂದಂತಾಯ್ತು. ಅವರೆಲ್ಲರ ಮುಂದೆ ಅಳಲು ನಾಚಿಕೆಯಾಗಿ ಬಿಗಿಹಿಡಿದುಕೊಂಡೆ. ನಾವೆಲ್ಲರೂ ಕೆಳಗೆ ಇಳಿದು ಆ ಕಟ್ಟಡದ ನೆಲ ಅಂತಸ್ತಿನ ಒಳ ಹೊಕ್ಕೆವು. ಏನಾಗುತ್ತಿದೆಯೆಂಬ ಸ್ಪಷ್ಟ ಅರಿವಿಲ್ಲದ ಕ್ಯಾಂಪಿನ ಇತರೆ ಜನರಲ್ಲಿ ಕೆಲವರು ಬಂಕರಿನತ್ತಲೋ ಇನ್ನು ಕೆಲವರು ಹತ್ತಿರವಿದ್ದ ಕಟ್ಟಡದ ಒಳಗೋ ಓಡುತ್ತಿದ್ದರು. + +ಕಚೇರಿಗೆ ಬಂದಾಗ ಡಾಕ್ಟರ್ ಕಿರ್ಕಿಗೆ ಕರೆ ಬಂದು ಅಗತ್ಯ ವೈದ್ಯಕೀಯ ನೆರವಿಗಾಗಿ ಅವಘಡ ನಡೆದ ಜಾಗಕ್ಕೆ ಹೋದನೆಂದು ಗೊತ್ತಾಯ್ತು. ಇಂತಹ ಪ್ರಮುಖ ಅವಘಡಗಳಾದಾಗ ಕ್ಯಾಂಪಿನಲ್ಲಿನ ಇಂತಹ ಖಾಸಗಿ ವೈದ್ಯರನ್ನು ಘಟನೆಯ ಜಾಗಕ್ಕೆ ನೆರವಿಗಾಗಿ ಕರೆಸಲಾಗುತ್ತದೆ. ನಾನು ನೋಡಿದ ವಿವರಗಳನ್ನು ಆಂಟೋನಿಯೋ ಮತ್ತು ಅಲ್ಲಿದ್ದ ಇತರೆ ಆಲ್ಬೇನಿಯನ್ ಜನರಿಗೆ ವಿವರಿಸಿದೆ. ಎಲ್ಲರೂ ಆಘಾತಕ್ಕೊಳಗಾದಂತೆ ದೊಡ್ಡ ನಿಟ್ಟುಸಿರುಬಿಟ್ಟರು. ಆಂಟೋನಿಯೋ ಮಾತ್ರ ತುಂಬಾ ಕಂಗಾಲಾದವನಂತೆ ತಲೆಮೇಲೆ ಕೈಹೊತ್ತು ಏನೇನೋ ಮನಸ್ಸಿಗೆ ಬಂದಂತೆ ಅವನ ಭಾಷೆಯಲ್ಲಿ ಗೊಣಗಲು ಶುರುಮಾಡಿದ. ಅಂದು ಆ ಚಾಪರಿನಲ್ಲಿ ನಮ್ಮ ಕಂಪನಿಯ ನಾಲ್ಕು ಹುಡುಗರೂ ಕೂಡ ಇದ್ದರು ಎಂದು ಆ ನಂತರವೇ ಗೊತ್ತಾಗಿದ್ದು! ಅಂಟೋನಿಯೋ ಗಾಡಿಯನ್ನು ಚಲಾಯಿಸಿ ಮಿಲಿಟರಿ ಆಸ್ಪತ್ರೆ ಕಡೆ ಹೊರಟ. ನಾನೂ ಬರಲೇ ಅಂದದ್ದಕ್ಕೆ ಬೇಡ ಎಂದ. ಸಂಜೆ ಆಂಟೋನಿಯೋ ಮತ್ತು ಕಿರ್ಕಿ ಒಟ್ಟಿಗೇ ಬಂದಾಗ ನಮಗೆ ಸಿಕ್ಕ ವಿವರವಿಷ್ಟು… ‘ಆ ಚಾಪರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಲಾಗಿತ್ತು. ಸರಿಯಾದ ತಾಂತ್ರಿಕ ನಿರ್ವಹಣೆಯಿಲ್ಲದ ಹಳೆಯ ಚಾಪರಂತೆ ಅದು. ಪ್ಯಾರಚೂಟುಗಳು ಸಮಯಕ್ಕೆ ಸರಿಯಾಗಿ ತೆರೆದುಕೊಳ್ಳಲಿಲ್ಲ. ಕೆಳಗೆ ಧುಮುಕಿದವರಲ್ಲಿ ಕೆಲವರು ಮಾತ್ರ ಕೈಕಾಲು ಸೊಂಟ ಮುರಿದುಕೊಂಡು ಜೀವಂತವಾಗಿದ್ದಾರಷ್ಟೇ. ಮಿಕ್ಕವರೆಲ್ಲಾ ದೇವರ ಪಾದಕ್ಕೆ! ಬಹುತೇಕ ಎಲ್ಲರೂ ಸುಟ್ಟು ಕರಕಲಾಗಿದ್ದಾರೆ. ಉಳಿದ ನಾಲ್ಕೈದು ಜನ ಅದ್ಯಾವ ಪವಾಡ ನಡೆದು ಬದುಕಿದರೋ ಗೊತ್ತಿಲ್ಲ. ಪ್ಯಾರಾಚೂಟ್ ಜೊತೆ ಹಾರಿದ ಪೈಲಟ್ ಬದುಕಿಕೊಂಡ. ನಮ್ಮ ಕಂಪನಿಯ ಕೆಲಸಗಾರರು ಗುರುತು ಸಿಗದ ಹಾಗೆ ಸೀದುಹೋಗಿದ್ದಾರೆ. ಶವಗಳನ್ನು ಅವರ ಮನೆಗಳಿಗೆ ತಲುಪಿಸುತ್ತಾರಂತೆ’. ಅಂದು ಸುಟ್ಟು ಕರಕಲಾದ ನಮ್ಮ ಕಂಪನಿಯ ಆ ನಾಲ್ಕು ಜನರೂ ಸೇರಿ ಇತರೆ ಎಲ್ಲರ ಬಗೆಗಿನ ಯಾವ ವಿಷಯವನ್ನೂ ಹೊರಗೆ ಬಿಟ್ಟುಕೊಡದೆ ರಹಸ್ಯವಾಗಿ ಇಟ್ಟುಬಿಟ್ಟರು. ಸತ್ತವರು ಯಾರು? ಯಾವ ದೇಶದವರು? ಯಾವ ವಿವರಗಳೂ ಸಿಗಲಿಲ್ಲ. ‘ಅವರೆಲ್ಲರೂ ಆಫ್ಘಾನಿ ಕೆಲಸಗಾರರಂತೆ’ ಎಂದು ಅಲ್ಲಿ ಕೆಲವರು ಮಾತಾಡಿಕೊಂಡರು. ಹೌದು, ಇಲ್ಲಿ ಎಲ್ಲರಿಗೂ ಎಲ್ಲಾ ಮಾಹಿತಿಗಳು ಸುಲಭಕ್ಕೆ ಎಟಕುವಂತದ್ದಲ್ಲ ಎಂಬುದು ನನಗೆ ಅನೇಕ ಸಂದರ್ಭಗಳಿಂದ ವೇದ್ಯವಾಗಿತ್ತು! + +ನನ್ನಂತಹ ಕೆಲಸಗಾರ ಜನಗಳಿಗೆ ಮಿಲಿಟರಿ ಕ್ಯಾರವಾನಿನೊಡನೆ ಹೋಗುವ ಕೆಲ ವಿಶೇಷ ಸಂದರ್ಭಗಳು ಉಂಟು. ಆ ವಿಶೇಷ ದಿನವೂ ಬೇಗನೇ ಬಂದಿತು. ಕಂದಹಾರ್, ಕಾಬುಲ್(HKIA), ಬಗ್ರಾಮ್, ಮಝರ್-ಇ-ಶರಿಫ್, ಕ್ಯಾಂಪ್ ಬ್ಯಾಷನ್ ಮತ್ತು ಹೇರತ್ ನಂತಹ ಏರ್-ಬೇಸುಗಳು ಆಫ್ಘಾನಿಸ್ತಾನದ ಪ್ರಮುಖ ಯುದ್ಧ ನಗರಿಗಳು. ಈ ಯುದ್ಧಕೇಂದ್ರ ನಗರಗಳ ಸುತ್ತ ಮಿಲಿಟರಿಯವರ ಜಾಲ ಇನ್ನೂ ಆಳ ಮತ್ತು ಅಗಲವಾಗಿ ಹಳ್ಳಿ-ಪಟ್ಟಣ, ಬೆಟ್ಟ-ಗುಡ್ಡ, ಮರುಭೂಮಿ-ಗೊಂಡಾರಣ್ಯ ಹೀಗೆ ಎಲ್ಲಾ ಕಡೆಗೂ ವ್ಯವಸ್ಥಿತವಾಗಿ ಹರಡಿಕೊಂಡಿತ್ತು. ಪ್ರತಿ ಪ್ರಮುಖ ಯುದ್ಧಕೇಂದ್ರ ಮಿಲಿಟರಿ ಕ್ಯಾಂಪುಗಳಿಗೆ ಹೊಂದಿಕೊಂಡಂತೆ ಹಲವಾರು ಉಪಕ್ಯಾಂಪುಗಳು. ಅತಿ ಅಪಾಯಕಾರಿ ಎಂದೂ, ಯೋಧರೂ ಸಹ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ ಎಂದೂ ಕುಖ್ಯಾತಿ ಗಳಿಸಿದ್ದ ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ‘ಸ್ಪಿನ್ ಬೋಲ್ದಾಕ್’ ಪ್ರಾಂತ್ಯದ ‘ಕ್ಯಾಂಪ್ ಡ್ವಯರ್’ ನೆಡೆಗೆ ನಾವು ಹೋಗಬೇಕಿತ್ತು. ಜಲಾಲಾಬಾದ್, ನಂಗಹಾರ್ ಮತ್ತು ಸ್ಪಿನ್ ಬೋಲ್ಡಾಕ್ ಪ್ರಾಂತ್ಯಗಳು ಆಫ್ಘಾನಿಸ್ತಾನದಲ್ಲೇ ಅತಿ ಹೆಚ್ಚು ಸಾವು ನೋವು ಘಟಿಸುವ ಪ್ರದೇಶಗಳು. ಕಂದಹಾರ್ ಕ್ಯಾಂಪಿಗೆ ಕೆಲವೇ ಮೈಲುಗಳ ಸಮೀಪದಲ್ಲಿದ್ದ ‘ಹೌಸ್-ಇ-ಮದದ್’ ಎನ್ನುವ ಉಪ ಕ್ಯಾಂಪಿಗೆ ಹೋಗಿ ಕೆಲವರನ್ನು ಅಲ್ಲಿ ಇಳಿಸಿ ಅಲ್ಲಿಂದ ‘ಕ್ಯಾಂಪ್ ಡ್ವಯರ್’ ಕಡೆಗೆ ನಮ್ಮ ಪ್ರಯಾಣದ ರೂಪುರೇಷೆಗಳು ಸಿದ್ಧವಾದವು. ದಕ್ಷಿಣಕ್ಕಿದ್ದ ಕ್ಯಾಂಪ್ ಡ್ವಯರ್ ಗೆ ಹೋಗಲು ಇವರು ಉತ್ತರಕ್ಕಿದ್ದ ಕಂದಹಾರ್ ಕಡೆ ಹೋಗಿ ಅದೇಕೆ ಸುತ್ತು ಬಳಸಿ ಬರುತ್ತಾರೋ? ಎಂದು ‘ಅಮೀರ್ ಅರಿಫಿ’ ಗೊಣಗುತ್ತಿದ್ದ. ನನಗೆ ಇದ್ಯಾವುದರ ಭೌಗೋಳಿಕ ಜ್ಞಾನವಿರಲಿಲ್ಲ. ಅಮೀರ್ ಅರಿಫಿ ಎನ್ನುವ ಅಲ್ಬೇನಿಯನ್ ಕ್ಯಾಂಪ್ ಮ್ಯಾನೇಜರ್ ನಮ್ಮ ನೇತೃತ್ವ ವಹಿಸಿದ್ದ ಆಗ. ಆತ ಮತ್ತು ನಾನೂ ಸೇರಿದಂತೆ ಒಟ್ಟು ಎಂಟು ಜನರು ಮಿಲಿಟರಿ ಕ್ಯಾರವಾನಿನಲ್ಲಿ ಹೊರಟೆವು. ನನ್ನನ್ನು ಅಲ್ಲಿಗೆ ಹೊರಡಿಸಲು ಅಂಟೊನಿಯೋ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ನನ್ನನ್ನು ಹೆಣವಾಗಿಸಿಯೇ ಊರಿಗೆ ಕಳಿಸಬೇಕೆಂದು ತೀರ್ಮಾನಿಸಿದ್ದೀಯಾ ಎಂದು ನಾನು ವಾಗ್ವಾದಕ್ಕಿಳಿದಿದ್ದೆ. ನಾನು ಹೋಗಲೇಬೇಕೆಂದೂ, ಅದರ ಅನುಭವ ನನಗೆ ಆಗಬೇಕೆಂದೂ ನಮ್ಮ ದುಬೈ ಕಚೇರಿಯ ಮುಖ್ಯಸ್ಥ ತೀರ್ಮಾನಿಸಿಯಾಗಿತ್ತು. ಅಂದು ನಾನು ಹೊರಡದಿದ್ದಿದ್ದರೆ ಜೀವನದ ಅತಿ ವಿಶೇಷ ಅನುಭವದಿಂದ ವಂಚಿತನಾಗುತ್ತಿದ್ದೇನೇನೋ. + +ಮಿಲಿಟರಿಯವರು ಸುಮಾರು ೪೪ ಜನರಿದ್ದರು. ನಾವು ಹೊರಟಿರುವ ಉದ್ದೇಶವಿಷ್ಟೆ, ಕ್ಯಾಂಪ್ ಡ್ವಾಯರಿನ ಸಮೀಪ ಇನ್ನೊಂದು ಉಪ-ಕ್ಯಾಂಪಿನ ನಿರ್ಮಾಣ. ಹತ್ತಾರು ಯುದ್ಧಟ್ಯಾಂಕ್ ನಂತಹ ವಾಹನಗಳು ಮತ್ತು ಮಿಲಿಟರಿ ಟ್ರಕ್ಗಳು ಸಾಮಾನು ಸರಂಜಾಮುಗಳನ್ನು ಹೇರಿಕೊಂಡು ಹೊರಡಲು ಸಿದ್ಧವಾದವು. ನಮ್ಮನ್ನೆಲ್ಲ ಯುದ್ಧಟ್ಯಾಂಕಿನಂತಿದ್ದ ಗಾಡಿಗಳಲ್ಲಿ ತುರುಕಿದರು. ಒಳಗೆ ಅದೆಂತಹುದೋ ವಿಚಿತ್ರ ಘಾಟು. ಮೊದಮೊದಲು ಉಸಿರಾಡಲು ಕಷ್ಟವಾಯ್ತು. ಹೊರಗೆ ಇಣುಕಲು ಕಾಲು-ಚದುರ ಅಡಿಯಷ್ಟು ಕಿರಿದಾದ ಎರಡು ಪುಟ್ಟ ಗುಂಡು ನಿರೋಧಕ ಕಿಟಕಿಗಳು. ಒಳಗೆ ಸಾವಿರ ಜನರನ್ನು ಕೆಡವಬಹುದಾದಷ್ಟು ಅಧುನಿಕ ಶಸ್ತ್ರಗಳು. ನೀಳವಾದ ದೂರಗ್ರಾಹಿ ಯಂತ್ರಗಳು, ಒಂದಷ್ಟು ಆಹಾರ ಪೊಟ್ಟಣಗಳು, ನೀರಿನ ಬಾಟಲ್ಗಳು. ಬಂಕರುಗಳಲ್ಲಿ ಕುಳಿತಾಗಲೂ ಇಷ್ಟು ಕುಬ್ಜರಾದೆವೆಂದು ಅನಿಸಿರಲಿಲ್ಲ, ಕಿಷ್ಕಿಂದೆಯಂತಹ ಜಾಗ. ಅಮೀರ್ ಅರಿಫಿ, ನಾನು ಮತ್ತು ಇನ್ನಿಬ್ಬರು ಮಿಲಿಟರಿಯವರೊಡನೆ ಒಂದು ವಾಹನದಲ್ಲಿ ಕುಳಿತೆವು. ಮಿಕ್ಕವರು ಅದೆಲ್ಲಿ ಹೇಗೆ ಜಾಗ ಮಾಡಿಕೊಂಡರೋ ಏನೋ ಗಮನಕ್ಕೆ ಬಾರಲಿಲ್ಲ. ವಿಚಾರಿಸೋಣವೆಂದರೆ ಆ ಮಿಲಿಟರಿಯವರೋ ಬಾಯಿ ಬಿಟ್ಟು ನಾಲ್ಕು ಮಾತನಾಡಲು ತಯಾರಿಲ್ಲ, ವಿಚಿತ್ರ ಶಿಸ್ತು ಮಾರಾಯ ಇವರದ್ದು ಎಂದು ಗೊಣಗಿ ಕೂತದ್ದಷ್ಟೇ. + + + +ನಮ್ಮ ವಾಹನಗಳ ಸಾಲು ಕ್ಯಾಂಪಿನ ಚಕ್ರವ್ಯೂಹದಂತಿದ್ದ ಬಾಗಿಲುಗಳನ್ನು ನಿಧಾನವಾಗಿ ಭೇಧಿಸಿ ಹೊರಬಂದಿತು. ಹೊರ ಹೊರಟ ಮಿಲಿಟರಿ ವಾಹನಕ್ಕೂ ಅದೆಂತಹ ತಪಾಸಣೆ? ಅರ್ಧ ತಾಸಿಗೂ ಹೆಚ್ಚಾಯ್ತು ಅನಿಸಿತ್ತು. ನಾನಂತೂ ಆ ಸಣ್ಣ ಕಿಟಕಿಯಲ್ಲಿ ಪಿಳಿಪಿಳಿ ಕಣ್ಣು ಬಿಟ್ಟು ಹೊರನೋಟವನ್ನು ಆಸ್ವಾದಿಸುತ್ತಿದ್ದೆ. ಇದೇ ಮೊದಲ ಬಾರಿಗೆ ಕಂದಹಾರ್ ಕ್ಯಾಂಪಿನ ಸುರಕ್ಷಿತ ವಲಯದಿಂದ ಬಹುದೂರ ಆಚೆಗೆ ಕಂದಹಾರ್ ಪಟ್ಟಣದ ಕಡೆ ಹೊರಟಿದ್ದೆ. ನಾವಿದ್ದ ವಾಹನದ ಚಾವಣಿಯ ಸಣ್ಣ ಭಾಗವನ್ನು ಸರಿಸಿದ ಒಬ್ಬ ಮಿಲಿಟರಿಯವ ಸರಪಟಾಕಿಯಂತಿದ್ದ ಗುಂಡುಗಳ ಸರವನ್ನು ಮಶೀನ್ ಗನ್ನಿಗೆ ಪೇರಿಸಿ ಗಕ್ಕನೆ ಅರ್ಧ ಮೇಲೇರಿ ತಲೆಹೊರಹಾಕಿ ನಿಂತುಬಿಟ್ಟ! ರಸ್ತೆ ಉತ್ತಮವಾಗಿಯೇ ಇತ್ತು. ನಮ್ಮ ಮುಂದೆ ನಮ್ಮದೇ ರೀತಿಯ ವಾಹನಗಳು ಸಾಲಾಗಿ ನಿಧಾನವಾಗಿ ಚಲಿಸುತ್ತಿದ್ದವು. ಇಕ್ಕೆಲಗಳಲ್ಲಿ ದಿಗಂತದವರೆಗೂ ಬರಡು ನೆಲದಂತೆ ಕಂಡರೂ ಕಲ್ಲಂಗಡಿ ಬಳ್ಳಿಯ ಹಸಿರು ಹಾಸು ಅಲ್ಲಲ್ಲಿ. ದೂರದಲ್ಲೆಲ್ಲೋ ಕುರಿಗಳು, ಒಂಟೆಗಳು ಮೇಯುತ್ತಿದ್ದವು. ರಸ್ತೆಯಲ್ಲಿ ಟ್ರಕ್ಕುಗಳು, ಮೋಟಾರು ಬೈಕುಗಳು, ಜನರನ್ನು ತುಂಬಿಕೊಂಡ ಪಿಕ್-ಅಪ್ ನಂತಹ ವಾಹನಗಳು ಮಿಲಿಟರಿ ಕ್ಯಾರವಾನ್ ಬರುವುದನ್ನು ಗಮನಿಸಿ ಆಂಬುಲೆನ್ಸ್ ಗಾಡಿಗೆ ಜಾಗ ಬಿಡುವವರಂತೆ ಪಕ್ಕಕ್ಕೆ ಸರಿದುಬಿಡುತ್ತಿದ್ದರು. ಇವರೆಲ್ಲಾ ಇಂತಹದ್ದುಕ್ಕೆ ಸಾಕಷ್ಟು ಪಳಗಿದ್ದಾರೆ ಅನಿಸುತ್ತಿತ್ತು. ಅದು ಭಯಪೂರ್ವಕ ಶಿಸ್ತಿನ ಅಭಿವ್ಯಕ್ತಿಯೇನೋ ಎಂಬಂತಿತ್ತು. ಕೆಲ ಹೊತ್ತಿನ ನಂತರ ಇದಕ್ಕೆಲ್ಲ ಕಾರಣ ನನಗೆ ಸ್ಪಷ್ಟವಾಯ್ತು ಕೂಡ. + +ಬೆಳಗ್ಗೆ ಹತ್ತು-ಹನ್ನೊಂದರ ಸಮಯವಿದ್ದಿರಬಹುದು. ಕಂದಹಾರ್ ಪಟ್ಟಣದ ತುಂಬಾ ಕಿಕ್ಕಿರಿದ ಜನ. ರಸ್ತೆಯ ಎರಡೂ ಬದಿಯಲ್ಲಿ ಸಂತೆ ನಡೆಯುತ್ತಿದೆಯೇನೋ ಎಂಬ ನೋಟ. ನೋಟ-ವಿನ್ಯಾಸದಲ್ಲಿ ಕಾಬುಲ್ ನಗರಕ್ಕಿಂತ ಕೊಂಚ ವಿಭಿನ್ನ ಷಹರವಾದರೂ ಬೇರೆಯ ವ್ಯತ್ಯಾಸವೇನೂ ಇರಲಿಲ್ಲ. ಜನರೂ ಕೂಡ ಅಲ್ಲಿಯ ಹಾಗೆಯೇ. ಕಾಬುಲ್ನಲ್ಲಿ ನೋಡಿದಂತಹುದೇ ರೊಟ್ಟಿ, ತರಕಾರಿ, ಹಣ್ಣು, ಮಾಂಸದಂಗಡಿಗಳ ಸಾಲು. ಬಿಸಿಲು ಮತ್ತು ಧೂಳಿನ ಪರಕಾಷ್ಟೆ. ಕ್ಯಾರವನಿನತ್ತ ಬೆರಗುಗಣ್ಣಿಂದ ನೋಡುತ್ತಿದ್ದ ಮುಗ್ಧ ಜನಗಳು. ಪ್ರತಿನಿತ್ಯದ ಗೋಳಿದು ಎಂದೋ, ನಮಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತಿದ್ದ ಜನಗಳೂ ಕಮ್ಮಿಯಿರಲಿಲ್ಲ ಅಲ್ಲಿ. ರಸ್ತೆಯ ಮೇಲಿದ್ದ ಎಲ್ಲರೂ ಗಾಬರಿಗೊಂಡವರಂತೆ ಪಕ್ಕಕ್ಕೆ ಸರಿದುಬಿಡುತ್ತಿದ್ದರು. ಕಂದಹಾರ್ ನಗರದ ಹೊರವಲಯಕ್ಕೆ ಬಂದಿದ್ದೆವು. ರಸ್ತೆಯ ಮುಂದೆ ಅದೇನೋ ಢಾಂ ಎನ್ನುವ ಶಬ್ದ ದಿಢೀರನೆ ಬಂದು ಬೆಂಕಿಯ ಉರಿ ಒಮ್ಮೆಗೆ ಒಂದಷ್ಟು ಜಾಗದಲ್ಲಿ ಆವರಿಸಿಕೊಂಡಿತು. ಇದ್ದಕ್ಕಿದ್ದ ಹಾಗೆ ಗುಂಡಿನ ಮೊರೆತ ಶುರುವಾಯ್ತು. ವಾಕೀ-ಟಾಕಿಯಂತಿದ್ದ ರೇಡಿಯೋ ಸಾಧನದಲ್ಲಿ ಅದೇನೇನೋ ಶಬ್ದವಾಗಿ ಗೊಂದಲದ ಗೂಡಾಗಿತ್ತು . ನಮ್ಮ ವಾಹನದಲ್ಲಿದ್ದ ಸೈನಿಕನೂ ಅದೆಲ್ಲಿಗೋ ಗುರಿಯಿಟ್ಟು ಗುಂಡಿನ ಸುರಿಮಳೆಗೈಯುತ್ತಿದ್ದ. ಒಮ್ಮೆಲೇ ಗುಂಡಿನ ಜೋರು ಮೊರೆತ. ನನಗಂತೂ ಕಿವಿ ಕಿತ್ತು ಹೊಯ್ತೆನೋ ಅನ್ನುವಷ್ಟು ಭೀಕರ ಶಬ್ಧ. ಇಷ್ಟು ಹತ್ತಿರದಿಂದ ಗುಂಡಿನ ಮೊರೆತ ಎಂದೂ ಕೇಳಿರಲಿಲ್ಲ. ಏನೋ ಅಚಾತುರ್ಯವಾಗ್ತಿದೆ ಎಂದು ಎದೆ ಬಡಿತ ಎರಡಷ್ಟಾಗಿತ್ತು. ನನ್ನ ಪುಕ್ಕಲುತನವನ್ನ ಮೊಂಡುಧೈರ್ಯಕ್ಕೆ ತಿರುಗಿಸುವ ವಿಫಲ ಯತ್ನ ಮಾಡುತ್ತಿದ್ದೆ. ಅಪಾಯ ಅದೇನು ಎಂದು ಗೊತ್ತಾದಾಗ ಮೊಂಡು ಧೈರ್ಯದ ವಿವೇಚನೆ. ಆದರೆ ಹೊರಗೆ ಆದೇನಾಗುತ್ತಿದೆಯೋ ಒಂದೂ ಸುಳಿವಿಲ್ಲ. ಒಬ್ಬ ಬಂಡಿಯನ್ನು ಓಡಿಸುತ್ತಿದ್ದ ಮತ್ತೊಬ್ಬ ಮದ್ದುಗುಂಡಿನ ಯಂತ್ರವನ್ನು! ನಾನು ಮತ್ತು ಅಮೀರ್ ಅರಿಫಿ ನಮ್ಮ ಸೋತ ಮುಖಗಳನ್ನು ನೋಡಿಕೊಂಡು ಬೆಪ್ಪರಂತೆ ಕೂತಿದ್ದೆವು. ಹೆದರಿಕೆಯಿಂದ ನಾನು ಬೆವರಿನ ತೊಪ್ಪೆಯಾಗಿದ್ದೆ. + +ಇದೆಲ್ಲಾ ಮುಗಿದು ತಣ್ಣಗಾಗಲು ಸುಮಾರು ಇಪ್ಪತ್ತು ನಿಮಿಷಗಳು ಬೇಕಾದವು. ಎಲ್ಲರಿಗಿಂತ ಮುಂದಿದ್ದ ವಾಹನ ದೂರ ದೂರಕ್ಕೆ ಬೆಂಕಿಯನ್ನುಗುಳುತ್ತಾ ಹೊರಟಿತ್ತು. ಎಲ್ಲವೂ ನಿಶಬ್ಧವಾಗಿರಲಿಲ್ಲ! ಸಣ್ಣ ಸಣ್ಣ ಊರು ಸಮೀಪಿಸಿದಾಗಲೆಲ್ಲಾ ಆಗಾಗ ಸಣ್ಣ ಸುತ್ತಿನ ಗುಂಡಿನ ಮೊರೆತ ಚಾಲ್ತಿಯಲ್ಲಿತ್ತು. ವಾಹನ ಚಲಾಯಿಸುತ್ತಿದ್ದ ಸೈನಿಕನನ್ನು ಅಮೀರ್ ಇಷ್ಟವಿಲ್ಲದಿದ್ದರೂ ಮಾತಿಗೆಳೆದ. “ಏನು ನಡೆದದ್ದು? ನಮಗೆ ತುಂಬಾ ಗಾಬರಿಯಾಗಿದೆ”, ಎಂದ. “ಇದೆಲ್ಲಾ ಮಾಮೂಲಿ, ನೀವು ಇದೆ ಮೊದಲ ಬಾರಿಗೆ ಕ್ಯಾರವಾನಿನಲ್ಲಿ ಹೊರಟಿರುವುದೋ” ಎಂದು ಕೇಳಿದ ಸೈನಿಕ. ಅಮೀರ್ ಹೌದೆಂದು ಹೂಂಗುಟ್ಟಿದ. “ಅದ್ದದ್ದು ಏನು”? ಮತ್ತೆ ಅಮೀರ್ ಕುತೂಹಲ ಪ್ರಶ್ನೆ. ಗಂಭೀರವಾಗಿಯೇ ಮಾತು ಶುರುಮಾಡಿದ ಆ ಸೈನಿಕ “ಯಾವುದೋ ಎಳಸು ಹುಡುಗ ನಮ್ಮ ಕಡೆ ಪೆಟ್ರೋಲ್ ಬಾಂಬ್ ಎಸೆದ. ಹಾಗಾಗಿ ಇಷ್ಟೆಲ್ಲಾ! ಅವ ಸರಿಯಾಗಿ ಗುರಿ ಬೀಸಲಿಲ್ಲ. ಗುರಿ ತಲುಪಿದ್ದರೂ ನಮಗೆ ಏನೂ ಆಗುತ್ತಿರಲಿಲ್ಲ. ಭಯ ಪಡುವಂತಹುದ್ದು ಏನೂ ಇಲ್ಲ, ಇದೆಲ್ಲ ನಮಗೆ ದಿನನಿತ್ಯದ ಅನುಭವ”. ಇಷ್ಟೇ ಹೇಳಿದ್ದು.ತಾಲಿಬಾನಿಗಳು ಈ ಹುಡುಗರನ್ನು ಮುಂದೆ ಬಿಟ್ಟು ಮಿಲಿಟರಿ ಪಡೆಯನ್ನು ಗೊಂದಲಗೊಳಿಸಿ ಆಕ್ರಮಣ ಮಾಡುವುದು ಅವರ ಗೆರಿಲ್ಲಾ ಯುದ್ಧ ನೀತಿಗಳಲ್ಲಿ ಒಂದು. ಪೆಟ್ರೋಲ್ ಬಾಂಬುಗಳನ್ನೋ, ಗ್ರೇನೆಡ್ ಗಳನ್ನೋ ಇಲ್ಲ ಅಂದರೆ ಕಲ್ಲುಗಳನ್ನೋ ತೂರಿ ಇವರ ಸೇನಾ ವಾಹನ ಸಾಲನ್ನು ಧೃತಿಗೆಡಿಸಲು ಪ್ರಯತ್ನಿಸುವುದು ಸಾಮಾನ್ಯವಂತೆ. ಅಂದು ಪೆಟ್ರೋಲ್ ಬಾಂಬ್ ಎಸೆದು ಓಡಿ ಹೋದ ಸಣ್ಣ ಹುಡುಗರ ಹಿಂದೆ ಮರೆಯಲ್ಲಿ ಅವಿತುಕುಳಿತ ದೊಡ್ಡ ಉಗ್ರಗಾಮಿ ಪಡೆಯೇ ಇತ್ತಂತೆ. ಭಾರಿ ಗುಂಡಿನ ಚಕಮಕಿಯಲ್ಲಿ ಆ ಕಡೆ ಹಲವು ಹೆಣಗಳು ಉರುಳಿ, ಇನ್ನುಳಿದವರು ಓಡಿಹೋದ ಮೇಲೆ ಇವರು ಮುಂದೆ ಹೋದರಂತೆ. ಮಿಲಿಟರಿಯವರ ಕಡೆ ಎನೊಂದೂ ಸಾವು-ನೋವು ಆಗಲಿಲ್ಲ ಎಂದು ಗೊತ್ತಾಯ್ತು. ಇವೆಲ್ಲ ಸಂಘರ್ಷಗಳ ವಿವರಣೆಯನ್ನು ಮಿಲಿಟರಿಯವರು ಕೊಡುವುದಿಲ್ಲ. ನಮ್ಮ ಹಾಗೆ ಬೇರೆ ವಾಹನಗಳಲ್ಲಿ ಕುಳಿತಿದ್ದ ನಮ್ಮ ಹುಡುಗರು ತಾವು ಕಿಟಕಿಯಲ್ಲಿ ಇಣುಕಿ ನೋಡಿದ ವಿವರಗಳನ್ನು ಹೇಳುತ್ತಿದ್ದರು. ನಾವು ಇದ್ದ ಜಾಗದಿಂದ ಇಷ್ಟೆಲ್ಲ ನಡೆದಿರುವುದು ಕಾಣಲಿಲ್ಲ. ನನಗಂತೂ ಇದನ್ನೆಲ್ಲ ಕೇಳಿ ಎದೆ ಧಸಕ್ಕನೆ ಬಿದ್ದ ಹಾಗಾಯ್ತು! ಆ ಕ್ಷಣದಲ್ಲಿ ಎಲ್ಲ ದೇವರೂ ಒಮ್ಮೆ ಕಣ್ಮುಂದೆ ಬಂದು ಹೋಗಿದ್ದರು! ನೆನೆಸಿಕೊಂಡರೆ ಇಂದಿಗೂ ಎದೆ ಬಡಿದುಕೊಳ್ಳುವಂತಹ ಅನುಭವ ಅದು. ನಾವು ಹೋದ ನಂತರ ಆ ಜಾಗಕ್ಕೆ ಮತ್ತೊಂದು ಕೂಂಬಿಂಗ್ ತಂಡ ಬಂದಿತ್ತು ಎಂದು ತಡವಾಗಿ ಗೊತ್ತಾದದ್ದು. + + + +‘ಹೌಸ್-ಇ-ಮದದ್’ ದಾಟಿ ಕ್ಯಾಂಪ್ ಡ್ವಾಯರನ್ನು ತಲುಪ ಹೊತ್ತಿಗೆ ಸಂಜೆ ೪ ಅನಿಸುತ್ತೆ. ಆ ರಾತ್ರಿ ಅಲ್ಲಿ ತಂಗಿದ ನಂತರ ಬೆಳಗ್ಗೆ ಎದ್ದು ಅಲ್ಲಿಂದ ಹತ್ತು ಮೈಲುಗಳು ದಾಟಿ ಒಂದು ನಿರ್ಜನ ಪ್ರದೇಶದಲ್ಲಿ ಹೊಸ ಉಪಕ್ಯಾಂಪ್ ನಿರ್ಮಿಸುವ ಕೆಲಸ ನಮ್ಮದು. ಕೇವಲ ೪ ದಿನಗಳಲ್ಲಿ ಮುಗಿಸುವ ತೀವ್ರತರವಾದ ಜವಾಬ್ದಾರಿ. ಆ ರಾತ್ರಿ ನಮ್ಮೆಲ್ಲ ೮ ಜನಕ್ಕೂ ಮಿಲಿಟರಿ ಟೆಂಟಿನಲ್ಲಿ ವಾಸ. ಸುರೇಶ್ ಎನ್ನುವ ಅತ್ಯಂತ ನುರಿತ ಎಲೆಕ್ಟ್ರಿಷಿಯನ್ ರಾಜಸ್ಥಾನದವ. ಈಗಾಗಲೇ ೬-೭ ವರ್ಷಗಳ ಸುದೀರ್ಘ ಅನುಭವ ಇರಾಕ್ ಮತ್ತು ಇಲ್ಲಿನ ರಣಭೂಮಿಗಳಲ್ಲಿ. ಒಂದು ಕ್ಯಾಂಪಿನಿಂದ ಇನ್ನೊಂದು ಕ್ಯಾಂಪುಗಳಿಗೆ ಹಲವಾರು ಬಾರಿ ಈ ರೀತಿ ಓಡಾಡಿದ ಅನುಭವವಿದೆ. ಕೆಲವು ಬಾರಿ ಮಿಲಿಟರಿ ಚಾಪರ್ ನಲ್ಲಿ ಓಡಾಡಿದ್ದನ್ನು ಹೇಳಿದ್ದಾನೆ. ಆ ದಿನ ನಡೆದ ಪುಟ್ಟ ಯುದ್ಧದ ಘಟನೆಯನ್ನು ಎಲ್ಲರ ಬಾಯಲ್ಲಿ ಅವರವರಿಗೆ ಇಣುಕಿದಷ್ಟನ್ನೂ ಕೇಳಿ ಹೀಗೆಯೇ ಆಗಿದೆ ಎಂದು ಕರಾರುವಾಕ್ಕಾಗಿ ವಿವರಿಸಿದ್ದೂ ಈತನೇ. ಹೀಗೆ ಹೆಲಿಕಾಪ್ಟರುಗಳಲ್ಲಿ ಓಡಾಡುವಾಗ ಬಾಗಿಲಿಗೆ ಆತುಕೊಂಡು ದೂರ್ಬಿನ್ನಿನಲ್ಲಿ ಕೆಳಗೆ ನೋಡುತ್ತ ನಿಲ್ಲುವ ಮಿಲಿಟರಿಯವರು ಕಾರಣವಿಲ್ಲದೆ ಕೆಳಗೆ ಕಾಣುವ ಊರಿನೆಡೆಗೋ ಅಥವಾ ಜನ ಹೆಚ್ಚು ಸೇರಿದ್ದ ಜಾಗದೆಡೆಗೋ ಗುರಿಯಿಟ್ಟು ಗುಂಡಿನ ಮೊರೆತವನ್ನು ಮಾಡುತ್ತಾರೆ, ಕೆಟ್ಟ ಮಾತುಗಳಲ್ಲಿ ಬೈಯುತ್ತಾರೆ ಎಂದು ಹೇಳಿದ್ದು ನನಗೆ ವಿಪರೀತ ನೋವನ್ನೂ ಗೊಂದಲವನ್ನೂ ಉಂಟುಮಾಡಿತ್ತು. ಅದೆಂತಹ ಚೇಷ್ಟೆ ಇದು ಎನಿಸಿತ್ತು. ಒಂದು ವೇಳೆ ಗುಂಡು ತಗುಲಿ ಅಮಾಯಕರು ಸತ್ತರೆ? ನೂರಾರು ದಿನಗಳು ಮನೆಯ ಸೌಖ್ಯದಿಂದ ಹೊರ ಇದ್ದು ಇಷ್ಟೊಂದು ಅಪಾಯವನ್ನು ಎದುರಿಸುತ್ತಿರುವ ಇವರ ಮನಸ್ಥಿತಿ ಹೀಗಾಗಿದೆಯೇ? ಅಥವಾ ಅದು ಅವರ ಯುದ್ಧ ನೀತಿಯ ಭಾಗವೇ? ಯುದ್ಧ ಭೂಮಿಯ ಕರಾಳ ಸತ್ಯಗಳು ಇನ್ನೂ ನೂರಾರಿವೆಯೇನೋ? ನನಗೆ ಕೊನೆಯಿಲ್ಲದ ಪ್ರಶ್ನೆಗಳು ಮನದಲ್ಲಿ. + +ರಾತ್ರಿ ಸರಿಯಾಗಿ ನಿದ್ದೆ ಹತ್ತಲಿಲ್ಲ. ಏನೇನೋ ತಾತ್ವಿಕ ಯೋಚನೆಗಳು ಮನಸ್ಸಿನಲ್ಲಿ ಹಾಯ್ದು ಹೋಗುತ್ತಿತ್ತು. ಮಧ್ಯರಾತ್ರಿ ‘ರಾಕೆಟ್ ಅಟ್ಯಾಕ್’ ಎಂದು ಸ್ಪೀಕರ್ ಕಿರುಚಿ ಇನ್ನಷ್ಟು ಗಾಬರಿ ಮಾಡಿಟ್ಟಿತ್ತು. ಬಂಕರ್ ನೆಡೆಗೆ ಓಡುವುದೇ ಆಯ್ತು ರಾತ್ರಿಪೂರ. ಬೆಳಗ್ಗೆ ಆದರೆ ಸಾಕು ಎಂದುಕೊಂಡೆ. ಬೆಳಗ್ಗೆ ಬೇಗ ತಿಂಡಿ ತಿಂದು ಹೊರಟು ನಿಂತೆವು. ಈಗ ನಮ್ಮ ಸಂಖ್ಯೆ ಸ್ವಲ್ಪ ಕರಗಿತ್ತು. ಕೆಲವರು’ ಹೌಸ್-ಇ-ಮದದ್ ‘ಕ್ಯಾಂಪಿನಲ್ಲಿ ಉಳಿದರೆ ಮತ್ತೊಂದಷ್ಟು ಜನ ಕ್ಯಾಂಪ್ ಡ್ವಾಯರಿನಲ್ಲಿ ಉಳಿದುಕೊಂಡರು. ಈಗ ನಾವು ೮ ಜನ ಮತ್ತು ಮಿಲಿಟರಿಯ ೨೮ ಜನರು. ನಮ್ಮ ಕ್ಯಾರವಾನ್ ಹೊರಟಿತು. ಸ್ಪಿನ್ ಬೋಲ್ದಾಕ್ ಪ್ರಾಂತ್ಯ ಅತ್ಯಂತ ಅಪಾಯಕಾರಿ ಎಂದು ಗೊತ್ತಿದ್ದರಿಂದಲೇ ಅತೀವ ಭಯ ಮನದಲ್ಲಿ. ಯಾವಾಗ ಹೇಗೆ ಧಾಳಿಯಾಗಬಹುದೋ ಎಂಬ ಭಯ ತೀವ್ರ ಕಾಡತೊಡಗಿತು. ನಾವು ಹೊರಟಿರುವುದು ಯಾವುದೇ ಮಿಲಿಟರಿ ಸುರಕ್ಷಾ ವ್ಯವಸ್ಥೆಯಿರದ ತೆರೆದ ಬಯಲು ಪ್ರದೇಶ. ಅದೂ ಕೂಡ ಸುತ್ತ ಬೆಟ್ಟ ಗುಡ್ಡಗಳಿಂದ ಆವೃತ ಜಾಗ. ಯಾವ ಬೆಟ್ಟದ ಕಡೆಯಿಂದ ರಾಕೆಟ್ ನುಗ್ಗಿ ಬರುವುದೋ, ಯಾವ ಭಾಗದಿಂದ ನೂರಾರು ಉಗ್ರರು ನುಗ್ಗಿ ಬಂದಾರೋ ಎಂಬ ಭಯ. + +ಕೇವಲ ೩೦-೪೦ನಿಮಿಷಗಳ ಪ್ರಯಾಣ ಅಷ್ಟೇ. ರಸ್ತೆ ಕಡಿದಾಗಿತ್ತು ಮತ್ತು ಕೆಟ್ಟದಾಗಿತ್ತು. ಬರೀ ಧೂಳು. ಮೊದಲು ಶಸ್ತ್ರ-ಸಜ್ಜಿತ ಮಿಲಿಟರಿಯವರು ಕೆಳಗೆ ಇಳಿದು ಸುತ್ತಮುತ್ತ ಓಡಾಡುತ್ತಿದ್ದುದು ಒಳಗಿಂದಲೇ ನೋಡುತ್ತಿದ್ದೆವು. ಸುಮಾರು ಹೊತ್ತಿನ ನಂತರ ನಮ್ಮನ್ನು ಕೆಳಗಿಳಿಯಲು ಸೂಚಿಸಿದರು. ಮೊದಲು ಹತ್ತು ನಿಮಿಷಗಳು ನಮಗೆ ಸೂಚನೆಗಳನ್ನು ಹೇಳಿಕೊಡಲು ಆಯ್ತು. ನಾವು ಅಲ್ಲಿ ಯಾವ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ವಿಶದವಾದ ವಿವರಣೆಗಳು ಮತ್ತು ನಮಗೆ ಯಾವುದೇ ಅಪಾಯವಾಗದಂತೆ ನಮ್ಮನ್ನು ನೋಡಿಕೊಳ್ಳುವಿರೆಂಬ ಅಭಯ. ಇಲ್ಲಿ ಕೆಲಸ ಮುಗಿಸಿ ಆದಷ್ಟು ಬೇಗ ಹೊರಡಬೇಕು, ನಿಗದಿಗಿಂತ ಇನ್ನೂ ಬೇಗ ಮುಗಿದರೆ ಒಳ್ಳೆಯದೇ ಎಂದೆಲ್ಲಾ ನಮ್ಮನ್ನು ನಾವು ಹುರಿದುಂಬಿಸಿಕೊಂಡೆವು. ಅವರೆಲ್ಲ ನಮ್ಮ ಸುತ್ತ ಪಹರೆಗೆ ನಿಂತರು. ಕೆಲಸ ಶುರುವಾಯ್ತು. ನಾನು, ಅಮೀರ್ ಮತ್ತು ಆ ಮಿಲಿಟರಿ ಪಡೆಯ ಮುಖ್ಯಸ್ಥ ‘ಸಾರ್ಜಂಟ್ ಜೆಫ್’ ಯೋಜಿಸಿದಂತೆ ಮೊದಲ ದಿನ ಅಗತ್ಯವಿರುವ ಟೆಂಟುಗಳನ್ನು ಜೋಡಿಸಿ ನಿಲ್ಲಿಸಿ ವಿದ್ಯುತ್ ಮತ್ತು ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು. ಎರಡನೇ ದಿನ ಅಡುಗೆ ಮಾಡುವ ಮಾಡ್ಯುಲರ್ ಕ್ಯಾಬಿನ್, ಲಾಂಡ್ರಿ ಕ್ಯಾಬಿನ್ ಮತ್ತು ಇತರೆ ಅಗತ್ಯ ವ್ಯವಸ್ಥೆ. ಮೂರನೇ ದಿನ ಕ್ಯಾಂಪಿನ ಸುತ್ತ ತಂತಿ ಸುರುಳಿ ಬೇಲಿಯನ್ನು ಹಾಕುವುದು. ಅಷ್ಟರಲ್ಲಿಯೇ ಪಕ್ಕದ ಕ್ಯಾಂಪ್ ಡ್ವಾಯರಿನಿಂದ ಕಾಂಕ್ರೀಟ್ ಟಿ-ವಾಲ್ ಗಳು ಬಂದಿರುತ್ತೆ. ಅವನ್ನು ಅಂದೇ ಸುತ್ತ ಜೋಡಿಸುವುದು ಎಂದು. ಅಂದುಕೊಂಡ ಹಾಗೆ ಮೊದಲ ದಿನದ ಕೆಲಸ ಮುಗಿಯಿತು, ಟೆಂಟ್ ವ್ಯವಸ್ಥೆಯಾಯ್ತು. ಒಂದು ಪುಟ್ಟ ಮಾಡ್ಯುಲರ್ ಜೆನರೇಟರ್ ಮತ್ತು ನೀರಿನ ಟ್ಯಾಂಕುಗಳನ್ನು ಕ್ಯಾರವಾನಿನಲ್ಲಿ ಈಗಾಗಲೇ ತಂದಿದ್ದೆವು. ಹಲವಾರು ತಿಂಗಳಿಗೆ ಸಾಕಾಗುವಷ್ಟು ಟ್ರಕ್ಕುಗಟ್ಟಲೆ ಕುಡಿಯುವ ನೀರಿನ ಬಾಟಲುಗಳು. ಬಳಸುವ ನೀರನ್ನು ಹತ್ತಿರದ ಕ್ಯಾಂಪ್ ಡ್ವಾಯರಿನಿಂದ ಟ್ಯಾಂಕರಿನಲ್ಲಿ ಪ್ರತಿನಿತ್ಯ ತಂದು ಟ್ಯಾಂಕುಗಳಿಗೆ ತುಂಬಿ ಹೋಗುತ್ತಿದ್ದರು. ಸ್ನಾನಕ್ಕೆ ಮತ್ತು ಮುಖ ತೊಳೆಯಲು ಬಳಸಿದ ನೀರು ಅಲ್ಲಿಯೇ ತೆಗೆದ ಇಂಗುಗುಂಡಿಗೆ ಹೋಗುತ್ತಿತ್ತು. ಕಕ್ಕಸ್ಸು ಕ್ಯಾಬಿನ್ನುಗಳಿಂದ ಶೇಖರವಾದ ಗಲೀಜನ್ನು ತೆಗೆಯಲು ದಿನಾಲೂ ಸಿವೇಜ್ ಟ್ರಕ್ಕುಗಳು ಬರುತ್ತಿದ್ದವು. ಒಂದು ಕ್ಯಾಂಪಿನಿಂದ ಇನ್ನೊಂದು ಕ್ಯಾಂಪಿಗೆ ಬರುವ ಆಹಾರ, ನೀರು ಮತ್ತು ಸಿವೇಜ್ ಟ್ರಕ್ಕುಗಳನ್ನು ರಸ್ತೆ ಮಧ್ಯದಲ್ಲಿ ಉಗ್ರರು ಉಡಾಯಿಸಿಬಿಡುತ್ತಿದ್ದರು ಇಲ್ಲವೇ ಟ್ರಕ್ ಸಮೇತ ಅಪಹರಿಸಿಬಿಡುತ್ತಿದ್ದರು. ಹಾಗಾಗಿ ಮಿಲಿಟರಿ ಎಸ್ಕಾರ್ಟ್ ಜೊತೆಯಲ್ಲೇ ಸರಬರಾಜಿನ ಸಾಗಣೆ ಮಾಡುತ್ತಿದ್ದರು. + +ಅಂದು ರಾತ್ರಿ ತೀವ್ರ ಚಳಿಯಿತ್ತು. ಯುದ್ಧಟ್ಯಾಂಕ್ ವಾಹನಗಳನ್ನು ಟೆಂಟುಗಳ ಸುತ್ತ ವೃತ್ತಾಕಾರವಾಗಿ ನಿಲ್ಲಿಸಿ ಸುರಕ್ಷಾ ಕವಚವನ್ನು ನಿರ್ಮಿಸಿದ ರೀತಿ ನನಗೆ ತುಂಬಾ ಇಷ್ಟವಾಯ್ತು. ತಂದಿದ್ದ ಆಹಾರ ಪೊಟ್ಟಣಗಳನ್ನು ಬಿಚ್ಚಿ ತಿಂದೆವು. ಕೆಲವು ಪ್ರೊಟೀನ್ ಬಾರ್ಗಳನ್ನು ತಿಂದು ಅದೆಂತಹುದೋ ಸೂಪಿನ ಪೌಡರನ್ನು ನೀರಿಗೆ ಬೆರೆಸಿ ಕುಡಿದೆವು. ಮೊದಲ ಬಾರಿಗೆ ಆ ತರಹದ ಊಟ, ವಿಚಿತ್ರ ಅನಿಸಿತ್ತು. ಕೆಲವರು ಟೆಂಟಿನೊಳಗೆ, ಕೆಲವರು ವಾಹನದೊಳಗೆ ಮಲಗಿದರು. ಪಾಳಿಯಂತೆ ಕೆಲವರು ರಾತ್ರಿಯೆಲ್ಲ ಪಹರೆ ಕಾಯ್ದರು. ನಿಜವಾಗಿಯೂ ನಾವು ಅತಿ ಅಪಾಯದ ಜಾಗದಲ್ಲಿದ್ದೆವು. ನಮ್ಮ ದುರಾದೃಷ್ಟಕ್ಕೆ ಉಗ್ರರಿಗೆ ಈ ವಿಷಯ ತಿಳಿದಿದ್ದರೆ ನಮ್ಮ ಮೇಲೆ ಧಾಳಿ ಖಂಡಿತ ಎಂದು ಮಾತಾಡಿಕೊಂಡೆವು. ಸರ್ವಸಜ್ಜಿತ ಮಿಲಿಟರಿ ಕ್ಯಾಂಪಿನೊಳಗೆ ಕೆಲಸ ಮಾಡುವುದು ಹೆಚ್ಚುಗಾರಿಕೆಯೇನಲ್ಲ. ಇಂತಹ ಹೊಸ ಕ್ಯಾಂಪ್ ನಿರ್ಮಾಣ ಅತಿ ಅಪಾಯಕಾರಿ ಹಾಗೂ ಚಾಲೆಂಜ್ ನಿಂದ ಕೂಡಿದ್ದು. ಹೆಚ್ಚು ಧಾಳಿಗಳು ಇಂತಹ ಸಂದರ್ಭದಲ್ಲೇ ಆಗುವುದು ಎಂದು ನಂತರ ನನಗೆ ಹಲವರು ಹೇಳಿದರು. ಕೆಲವರು ತುಂಬಾ ಹೆದರಿದ್ದರು. ಆ ರಾತ್ರಿ ಕೂಡ ನಿದ್ದೆ ಹತ್ತಲಿಲ್ಲ. + + + +ಬೆಳಗ್ಗೆಯಾಗಿತ್ತು. ಇನ್ನೂ ಬದುಕಿದ್ದೀವಿ ಎಂದು ವಿಚಿತ್ರ ಖುಷಿಯಿಂದ ನಾವೆಲ್ಲ ಪರಸ್ಪರ ನಕ್ಕು ಶುಭಾಶಯ ವಿನಿಮಯ ಮಾಡಿಕೊಂಡೆವು. ಇನ್ನೆರೆಡು ದಿನ ಅಷ್ಟೇ, ವಾಪಸ್ ಹೊರಡೋಣ ಎಂದೆಲ್ಲಾ ಮಾತಾಡಿದೆವು. ಪಕ್ಕದ ಕ್ಯಾಂಪ್ ಡ್ವಾಯರಿನಿಂದ ಆಹಾರ ಸಾಮಗ್ರಿಯಿದ್ದ ಒಂದು ಸಣ್ಣ ಕಂಟೈನರ್ ಬಂದಿತ್ತು. ನಮ್ಮಲ್ಲಿದ್ದ ಒಬ್ಬ ಅಡುಗೆಯವ ಅಂದು ಅಡುಗೆ ಮಾಡಿದ. ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾ ಹರಟುತ್ತಾ ಬಿಸಿ ಊಟವನ್ನು ಸವಿದೆವು. ಇನ್ನೊಂದು ರಾತ್ರಿ ಕೂಡ ಹೀಗೆಯೇ ಕಳೆಯಿತು. ಅಂದು ಗಡದ್ದಾಗಿ ನಿದ್ದೆ ಹೋದೆವು. ಕೊನೆಯ ದಿನವೂ ಎಲ್ಲ ಅಂದುಕೊಂಡಂತೆ ಆಯ್ತು. ಬಹು ಶಿಸ್ತಿನ ಪೂರ್ವ ಸಿದ್ಧತೆಯ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ ಆದ್ದರಿಂದ ಎನೊಂದೂ ಸಮಸ್ಯೆ ಆಗಲಿಲ್ಲ. ಮೂರನೇ ರಾತ್ರಿಯೂ ಹೀಗೇ ಕಳೆಯಿತು. ನಾಲ್ಕನೆಯ ದಿನ ಮಧ್ಯಾಹ್ನ ನಮ್ಮನ್ನು ಕ್ಯಾಂಪ್ ಡ್ವಾಯರಿಗೆ ತಂದು ಇಳಿಸಿದರು. ಅಡುಗೆಯವ ಸೇರಿ ಒಂದಿಬ್ಬರು ಅಲ್ಲೇ ಉಳಿದರು. ಕ್ಯಾಂಪ್ ಡ್ವಾಯರ್ ಏರ್-ಸ್ಟ್ರಿಪ್ ಹೊಂದಿರುವ ಸುಸಜ್ಜಿತ ಮಿಲಿಟರಿ ಕ್ಯಾಂಪ್. ಯೂ‌ಎಸ್ ಮರೀನ್ಸ್ ಪಡೆ ಆ ಕ್ಯಾಂಪನ್ನು ನಿರ್ವಹಿಸುತ್ತಿತ್ತು. ಅಮೆರಿಕೆಯ ಸೇನೆಯಲ್ಲೇ ಅತಿ ಸಮರ್ಥ ಪಡೆಯೆಂಬ ಹೆಗ್ಗಳಿಕೆ ಅವರದ್ದು. ಈ ಶಿಸ್ತಿನ ಸಿಪಾಯಿಗಳೇ ಪ್ರಧಾನವಾಗಿ ಇದ್ದ ಇನ್ನೊಂದು ಕ್ಯಾಂಪ್ ‘ಲೆದೆರ್ನೆಕ್’ ಬಗ್ಗೆ ಮುಂದೆ ಸಾಕಷ್ಟು ಅತಿ ವಿಶೇಷವಾದ ವಿಷಯಗಳನ್ನು ತಿಳಿಸುವುದಿದೆ. ಅಲ್ಲಿಂದ ನಾವು ಕಂದಹಾರ್ ಕ್ಯಾಂಪ್ ಕಡೆಗೆ ಮಿಲಿಟರಿ ವಿಮಾನದಲ್ಲಿ ವಾಪಸಾದೆವು. ಕಂದಹಾರಿನಿಂದ ಯಾಕೆ ನಮಗೆ ವಿಮಾನದಲ್ಲೇ ಕಳುಹಿಸಲಿಲ್ಲವೋ ಎಂದು ಗೊಣಗಿದ್ದೂ ಕೂಡ ನಿಜ. ಇನ್ನೊಂದೆಡೆ ನಾವೇ ಯುದ್ಧ ಜಯಿಸಿದ ಹಾಗೆ ಬೀಗಿ ಪ್ರಾಣ ಉಳಿಸಿಕೊಂಡು ಬಂದೆವಲ್ಲ ಎನ್ನುವ ಸಂತೋಷ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_159.txt b/Kenda Sampige/article_159.txt new file mode 100644 index 0000000000000000000000000000000000000000..b83d79b7872302107ad4a92fd0d8103b822a16a0 --- /dev/null +++ b/Kenda Sampige/article_159.txt @@ -0,0 +1,33 @@ +ರವಿಕುಮಾರ್ ಹಂಪಿ ಅವರ ಅನುವಾದಿತ ಕಾದಂಬರಿ “ನದಿಯೊಂದು ನಿದ್ರಿಸಿದಾಗ” ಒಂದೇ ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಿದೆ. ಆದರೆ ಈಗಾಗಲೇ ಒಂದು ಬಾರಿ ಓದಿದರೂ ಎರಡನೇ ಸುತ್ತಿನ ಓದಿಗೆ ತೆರೆದುಕೊಂಡಿದ್ದೇನೆ ಈ ಬರೆಹದ ಜೊತೆಗೆ… ಕಾದಂಬರಿ ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೊಂದು ಅನುವಾದವೇ? ಎನಿಸುವಷ್ಟು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ. + +ಏನೋ ಸದ್ದಾಯಿತು! ಕಾಳರಾತ್ರಿಯ ಒಂಟಿತನದ ಸದ್ದು ಸತ್ತವರನ್ನು ಎದ್ದು ಕೂರುವಂತೆ ಮಾಡುತ್ತದೆ ಅನ್ನುತ್ತಾರಲ್ಲ ಹಾಗೆ ಆಯಿತು ಈ ನಡುರಾತ್ರಿ 01:43 ಸಮಯ, ಓದಿನ ನಡುವೆಯೇ ಖುಷಿ ತಾಳಲಾರದೆ ನಿಮಗೆ ಹೀಗೆ ಹೇಳಲು ಬಯಸುತ್ತಿದ್ದೇನೆ. + +(ರವಿಕುಮಾರ್ ಹಂಪಿ) + +ಜನರಿಂದಲೇ ಸಾಧ್ಯವಾದಷ್ಟು ದೂರ ಇರಲು ಇಚ್ಚಿಸುವ ನಾನು, ನಾನು ವೀಲಿ ನಾ? ನನ್ನ ಬಾಲ್ಯದ ಕನಸುಗಳ ಪ್ರತಿಬಿಂಬದಂಥ ಈ ಕಾದಂಬರಿ ಕುರಿತು ನಾನಾದರೂ ಏನು ಹೇಳಲು ಸಾಧ್ಯ ಹೇಳಿ? ಈಗ ಈ ಕತ್ತಲೆ ಸಾಮ್ರಾಜ್ಯದ ಕಾಡಿನಲ್ಲಿ ನಾನಿದ್ದೇನೆ. ಕೇಡು, ಅಸೂಯೆ, ಹೊಟ್ಟೆ ಕಿಚ್ಚಿನಿಂದ ಉರಿಯುವ ಜನರಿಂದ ದೂರವಿರಲು ಓದು ಮತ್ತು ಕಾಡು ನಿಜವಾಗಿಯೂ ಎಷ್ಟೊಂದು ಸೂಕ್ತ ಅನಿಸುವುದರ ಜೊತೆಗೆ ಈ ನಿಟ್ಟಿನಲ್ಲಿ ಸದಾಕಾಲವೂ ನೀರಡಿಕೆ. + +ಎಲೆಗಳ ಮೇಲಿನ ನಡಿಗೆ ಯಾವಾಗಲೂ ಖುಷಿ ಕೊಡುತ್ತದೆ. ಹಳ್ಳಿದಾರಿಗಿಂತಲೂ ಕಾಡಿನ ಹಾದಿ ನಡೆಯುತ್ತಾ, ನಡೆಯುತ್ತಾ, ಓಡುತ್ತಾ, ಓಡುತ್ತಾ, ಆಕಾಶವೂ ಕಾಣಿಸದಂಥ ಕೆಟ್ಟಕಾಡಿನೊಳಗೆ ಮೈಲಿಗಟ್ಟಲೆ ದೂರ ಹೊಕ್ಕು ಕಳೆದು ಹೋಗಿ ಬಿಡಬೇಕು. ನನಗೆ ನಾನೇ ಕಳೆದು ಹೋದೆ ಅನಿಸುವಂತೆ. ಮೊದಲೇ ನನಗೆ ಕಾಡು ಎಂದರೆ ತುಂಬಾ ಇಷ್ಟ, ಅದೊಂದು ನನಗೆ ಹೊಕ್ಕುಳುಬಳ್ಳಿ ಸಂಬಂಧದಂತೆ. ಅದು ಇಂತಹಾ ಈ ಸಂದರ್ಭದಲ್ಲಿ “ನದಿಯೊಂದು ನಿದ್ರಿಸಿದಾಗ” ಕಾದಂಬರಿ ಓದು ಇನ್ನಷ್ಟು ಮತ್ತಷ್ಟು ರೋಮಾಂಚನವನ್ನು ತಂದಿದ್ದು, ನಾನು ಮತ್ತೆ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ಸಾಧ್ಯವಾಗಿದ್ದು ಕಾಕತಾಳೀಯವೇ ಸರಿ. ಅಲೌಕಿಕ ಹುಡುಕಾಟದಲ್ಲಿ ಯಾವಾಗಲೂ ಅಲೆಯುವ ನಾನು, ಪೂರ್ಣಚಂದ್ರ ತೇಜಸ್ವಿ ಅವರ ಕಡೆ ಒಂದು ಬೆರಗು ಕಣ್ಣಿನಿಂದಲೇ ನೋಡುತ್ತೇನೆ. ಈಗ ನೀವು ಜೊತೆಯಾದರಿ, ಆಗಾಗ ನಿಮ್ಮ ಜೊತೆಗೆ ಮಾತನಾಡಬಹುದು ಎಂಬ ಸಂತೋಷ ಮನೆ ಮಾಡಿದೆ. ಈಗ ನಾನು ಯಾವುದೋ ಒಂದು ಹೊಸ ಕಾಡಿಗೆ ಪ್ರವೇಶಿಸಿದ್ದೇನೆ. ಅಲ್ಲಿ ಆ ಹಂದಿ, ಕಾಡೆಮ್ಮೆ, ಕರಡಿ, ಅಳಿಲು, ಕೋತಿ, ಹುಲಿ, ಕಾಡುಕೋಣ, ಕಾಡುನಾಯಿ, ಎಮ್ಮೆಗಳು, ಹಾಗೆ ವೀಲಿ, ಆ ಕಾಡು ಜನರ ಜೊತೆ ನಾನು ಹೆಜ್ಜೆ ಹಾಕುತ್ತಿದ್ದೇನೆ ಎಂದೇ ಎನ್ನಿಸುತ್ತಿದೆ. + +ಕಾಡಿನ ಮಧ್ಯೆ ಬೆಂಕಿಗಿಡ, ಜೋತೋ ಸಸ್ಯ, ಗಾರಾ (ಬ್ರಾಹ್ಮಿಸೊಪ್ಪು), ಜರಿಗಿಡ, ಗಾಪಾ (ಕಾಡುಬಾಳೆ), ಟಿರುಟಿಫು, ವಿಲ್ಹುಲಿ ನಾ ಸೊಪ್ಪು, ಇನ್ನಿತರ ಸಸ್ಯ ಜೊತೆಗೆ ಒಂದು ಟೆಂಟು ಹಾಕಿಕೊಂಡು ನಾನು ಇರುವ ಆಶೆ ಜೀವಂತವಾಗಿದೆ. “ಏಳು, ತಕ್ಷಣ ಹೊರಡು, ಅಪಾಯ, ಅಪಾಯ…” ಮನಸು ಗಂಟೆ ಹೊಡೆಯುತ್ತಲೇ ಇದೆ. ನಾನು ಈಗ ಈ‌ ಓದು ಮುಗಿಸಿ ವಾಪಾಸು ಕಾಡಿಗೆ ಹೋಗ್ಬೇಕು “ಮೆಕಸೇನೋ” ಳನ್ನು ನಾನು ಭೇಟಿಯಾಗಬೇಕು. ನನಗೆ ಸಿಗಬಹುದು ಅಲ್ವಾ? ಹಂಪಿ ಮಾಸ್ಟರ್! “ನನ್ನ ಪ್ರಿಯ ಆತ್ಮವೇ ನಿನಗೆ ನನ್ನ ನೆನಪು, ಆತ್ಮವೇ ನಿನಗೆ ಧನ್ಯವಾದ!” + + + +“ಆತ್ಮದ ಹುಲಿ, ಹೃದಯದ ಕಲ್ಲು” ನನ್ನ ಆತ್ಮದ ಹುಡುಕಾಟದಲ್ಲಿ ನಾನು ಇದ್ದೇನೆ. ನೀವು? ನಿಮ್ಮ ಮಗಳಿಗೆ ಅನಿಸಿದಂತೆ ನನಗೆ ಪ್ರತಿ ಕ್ಷಣವೂ ಹಾಗೆ ಅನಿಸಿದೆ, ಅನಿಸುತ್ತದೆ ಹಾಗೂ ನಾನು ಅದೇ ಮಂಪರಿನಲ್ಲಿ ಮುಳುಗಿರುತ್ತೇನೆ. ಯಾವುದಾದರೊಂದು ಆತ್ಮ ನನಗೆ ಎದುರಾಗಬಹುದು ಎಂದು ಮತ್ತು ಆತ್ಮಗಳ ಕಾಡಿಗೆ ಹೊಕ್ಕು ಬಿಡಬೇಕೆಂಬ ಆಶೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೆಲುವಾದ, ಜೋಂಪು ಹತ್ತಿಸುವ ಕಾಡಿನ ಹಾಡು ಹಾಡಿ, ಆತ್ಮದ ಹಾಡು ಕೇಳಿ, ಕರುಣೆ ತುಂಬಿದ ಮೋಹಕ, ಪರಮ ಆತ್ಮಸುಂದರಿ ಜೊತೆಗೆ ಕಾಡಿನ ಹಾಡಿಗೆ ಹೆಜ್ಜೆ ಹಾಕಬೇಕು. ಏಕಾಂಗಿ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸಿಸಬೇಕು. + +“ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು. ಒಳ್ಳೆಯ ಆಲೋಚನೆ, ಶುದ್ಧ ಹೃದಯ ಇದ್ದವರು ಮಾತ್ರ ನಿದ್ರಿಸುವ ನದಿಯ ಸಮೀಪ ಹೋಗಲು ಸಾಧ್ಯ. ಅದನ್ನು ಮುಟ್ಟಲು ಸಾಧ್ಯ. ಇಲ್ಲದಿದ್ದರೆ ಸತ್ತು ಹೋಗುತ್ತಾರೆ. ನಿನ್ನಲ್ಲಿ ದುರಾಸೆ, ಕೆಟ್ಟತನ ಇದ್ದರೆ ನಿದ್ರಿಸುವ ನದಿ ಮುಟ್ಟುವ ಆಸೆ ಬಿಡುವುದು ಒಳ್ಳೆಯದು” ಈಗ ಹೇಳಿ ನಾನು ನಿದ್ರಿಸುವ ನದಿಯನ್ನು ಸೇರಲು ಬಯಸದೇ ಹೋದರೆ ಏನಿದೆ ಈ ಬದುಕಿಗೆ ಅರ್ಥ? + +ಇನ್ನೂ ಓಕ್, ಸಿಲ್ವರ್ ಓಕ್ ಮರಗಳು, ಹುಳಿ, ರುಚಿ ಮೆಜೋಸಿ ಹಣ್ಣುಗಳು, ಬಾಳೆ ಹಣ್ಣುಗಳು, ಕಾಡುಬಾಳೆಯಂತೆ ವೀಲಿ, ಇಡಿಲಿ, ತೀಸೋಯೋಕೋ, ಸುಬಾಲೆ, ಏಟಿ, ಸೆಲೋನಾ, ಪೆಲೋನಾ, ವಿಭು, ಅಸಾಕೋ, ರೋಕೋ, ಬೆರಳ ತುದಿಯಲ್ಲಿ ಸಾವು ತರುವ ಶಕ್ತಿ ಇರುವ ಜೊತೆಗೆ ಔಷಧಿ ಸಸ್ಯಗಳ ಬಗೆಗಿನ ತಿಳುವಳಿಕೆಯ “ಕರ್ಫ್ಯೂಮಿಯಾ” ಬಗ್ಗೆ ನಾವು ಈ ಕಾದಂಬರಿ ಓದಿಯೇ ತಿಳಿಯಬೇಕು. ಅಲ್ಲದೆ “ನನಗೆ ಖಂಡಿತ ಗೊತ್ತು ನಿನ್ನಲ್ಲೇನೋ ಮಹತ್ವದ್ದಿದೆ. ಅದು ಯಾರ ಬಳಿಯೂ ಇರಲಾರದ್ದು, ಆದ್ದರಿಂದ ಅದನ್ನು ಪಡೆಯಲು ಜನ ನಿನಗೆ ಮೋಸ ಮಾಡಬಹುದು. ಅದರ ಕುರಿತು ಜಾಗ್ರತೆ ವಹಿಸು. ಯಾರಿಗೂ ಮೋಸ ಮಾಡಬೇಡ, ನೀನೂ ಮೋಸ ಹೋಗಬೇಡ. ಹೃದಯ ಶುದ್ಧತೆ ಬಹಳ ಮುಖ್ಯವಾದುದು.” ಹೌದೇ? + + + +ನಿಜಾ ಎನಿಸುತ್ತದೆ ನನಗೆ:“ತುಂಬಾ ಜಾಗ್ರತೆ ಮಗನೇ, ಅಪಾರ ತಾಳ್ಮೆ ಇದ್ದವರಿಗೆ ಮಾತ್ರ ನಿದ್ರಿಸುವ ನದಿಯ ಆಶೀರ್ವಾದ ಸಿಗುತ್ತದೆ, ಕಾಯಬೇಕು, ಕಾಯಬೇಕು ನೀನು ತಯಾರಾಗುವವರೆಗೆ ಕಾಯಬೇಕು…” ಹೌದು ಹಾಗೆಯೇ ಅನಿಸುತ್ತಿದೆ ನನಗೆ “ನದಿಯೊಂದು ನಿದ್ರಿಸಿದಾಗ; ಕನಸೊಂದು ನನಸಾದಾಗ” ಅದನ್ನು ಕಾಣಲು ಧ್ಯಾನಸ್ಥ ಸ್ಥಿತಪ್ರಜ್ಞೆರಿಗೆ ಮಾತ್ರ ದಕ್ಕುವುದು ಎಂದು. + +“ಇದು ನನ್ನ ದಿನನನ್ನದು ಪರಮ ಆತ್ಮಈ ನದಿಯ ಸಂಪತ್ತು ನನಗೂ ಸೇರಿದೆಈ ಕಲ್ಲು ನನ್ನ ಆತ್ಮಕ್ಕೆ ಸೇರಿದೆ + +ಆತ್ಮಗಳೊಂದಿಗಿನ ಹೋರಾಟಆತ್ಮವೊಂದು ಇನ್ನೊಂದು ಆತ್ಮಕ್ಕೆ ಮಾತ್ರಸ್ಪಂದಿಸುತ್ತದೇ ಅಂತೆ + +ಆತ್ಮದ ಜಯಅಂತಿಮ ವಿದಾಯ ಹೇಳಲಾದರೂಆ ಆತ್ಮ ನನ್ನ ಮತ್ತೊಮ್ಮೆ ಹುಡುಕಿಕೊಂಡು ಬರಲಿನಾನು ಕಾಯುತ್ತೇನೆ ಕಾಯುತ್ತಲೇ ಇರುತ್ತೇನೆ + +ಹಾಲು ಕುಡಿಸುತ್ತಾಮಗುವನ್ನು ಬೆಚ್ಚಗಿಡಲುಎದೆಗೊತ್ತಿಕೊಂಡಂತೆನನ್ನ ಎದೆ ಒತ್ತಿಕೋ ಆತ್ಮದ ಹುಲಿ!” + +ಸುಮಿತ್ ಮೇತ್ರಿ ವಿಜಯಪುರ ಜಿಲ್ಲೆಯ ಹಲಸಂಗಿಯವರು. ಕವಿತೆ/ಲಹರಿ/ಕಥೆ/ಪ್ರಬಂಧಗಳು ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ. ಫೋಟೋಗ್ರಾಫಿ ಅವರ ಮೆಚ್ಚಿನ ಹವ್ಯಾಸ. ಸದ್ಯ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ (ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಕೃತಿ ಪ್ರಶಸ್ತಿ ಪುರಸ್ಕೃತ) ಮತ್ತು ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಇವರ ಪ್ರಕಟಿತ ಕವನ ಸಂಕಲನಗಳು. \ No newline at end of file diff --git a/Kenda Sampige/article_16.txt b/Kenda Sampige/article_16.txt new file mode 100644 index 0000000000000000000000000000000000000000..04926150799b95b1ea353227bc188afd658bfa14 --- /dev/null +++ b/Kenda Sampige/article_16.txt @@ -0,0 +1,20 @@ +ಮೊದಲ ಮಳೆಯಂತೆಎದೆಗೆ ಇಳಿದೆ ಮೆಲ್ಲಗೆಮೊದಲ ಕನಸಂತೆಒಲವೇ ಒಲಿದೆ ಮೆಲ್ಲಗೆ…..-ಜಯಂತ ಕಾಯ್ಕಿಣಿ + +ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ನಿಖರ ಟಿಪ್ಪಣಿಯಿಲ್ಲ. ಕಣ್ಣುಗಳಿಂದ ಕಣ್ಣುಗಳಿಗೆ, ಹೃದಯದಿಂದ ಹೃದಯಕ್ಕೆ ಆ ರೂಪಕ ಥರಾವರಿಯಾಗಿ ಬದಲಾಗುತ್ತದೆ. ಘಟ್ಟದ ಮಡಿಲಲ್ಲಿ ಸಿಗುವ ಮಳೆ, ಹಣೆಯಲ್ಲಿ ಮಾಯವಾಗಿ ಕೆಂಪಗಿನ ಕೆಂದಾವರೆಯ ದರ್ಶನವಾದಂತೆ, ಹನಿಗಳ ಕಿರುನಗೆಯಿಂದ ಆರಂಭವಾಗಿ ಎಕರೆಗಟ್ಟಲೆ ಆಪೋಶನ ತೆಗೆದುಕೊಳ್ಳುವ ನದಿಯಂತೆಯೇ ಪ್ರೀತಿ, ಕನ್ನಡಿ ಸೆರೆಹಿಡಿಯಲಾಗದ ಪ್ರತಿಬಿಂಬ. ಅನಂತ ಅಲಗುಗಳು, ತಿರುವುಗಳಿರುವ ರಾಗಮಾಲಿಕೆ. ಪದಗಳು ಒಲಿಯದ ಕವಿತೆ. ಒಲವಿನ ಜನನವೇ ಜಗದಲ್ಲಿರುವ ಒಂದು ಸುಂದರ ಬೆರಗು. ವಿಭಿನ್ನ ಕಾರಣಗಳು, ವೈವಿಧ್ಯಮಯ ಅನುಭಾವಗಳು. ಅನೂಹ್ಯತೆ, ಅಚ್ಚರಿಗಳ ಮೂಟೆಯದು. ಎಲ್ಲವುಗಳ ಆಚೆ, ಪ್ರೀತಿ ಎಂದರೆ ಭಾವನೆಗಳಿಗೆ ಮೀಸಲಾದ ಶಬ್ದವೆಂದರೆ ಅತಿಶಯೋಕ್ತಿಯಲ್ಲ. ಇಂತಹ ಒಂದು ದೇಹದ ಭಾಷೆಗೂ ಮಿಗಿಲಾದ, ಪರಿಶುದ್ಧ ಭಾವಗಳ ಅತ್ಯಂತಿಕ ಚಿತ್ರಣವೇ ನಾಗಶೇಖರ್ ನಿರ್ದೇಶನದ ‘ಮೈನಾ’. + + + +ಅವನು ಸತ್ಯ. ಕಾಸಲ್ ರಾಕ್ ಬಳಿ ಮಲಗಿರುವ ರೈಲ್ವೆ ಹಳಿಯ ಮಗ್ಗುಲಲ್ಲಿ ನಡೆಯುತ್ತಿದ್ದ ರಿಯಾಲಿಟಿ ಶೋವೊಂದರ ಸ್ಪರ್ಧಿ. ಮಳೆಯ ಮಧ್ಯೆ ಹಾಲಿನ ಅಭಿಷೇಕ ಮಾಡುತ್ತಿದ್ದ ಜಲಪಾತದ ನಾಭಿಯ ಮೇಲೆ ಉಗಿಬಂಡಿ ಓಡುತ್ತಿದ್ದಂತಹ, ಪರಿಸರವೇ ಪರವಶಗೊಳಿಸುವ ಭೂರಮೆಯದು. ಆ ರೈಲಿನಲ್ಲಿ ಸ್ಪರ್ಧೆಯೊಂದರ ಸಲುವಾಗಿ, ಭಿಕ್ಷುಕನ ನೆಪದಲ್ಲಿ ಬಂದಾಗ ಅವಳ ಕಣ್ಣುಗಳು ಕಾಣುತ್ತವೆ ಸತ್ಯನಿಗೆ. ಸುಳ್ಳಿಗೂ ಹೃದಯಘಾತವಾಗುವಂತಹ ನೋಟವದು. ಅವಳು ಮೈನಾ. ಪ್ರತಿ ದಿನ ಅದೇ ರೈಲಿನಲ್ಲಿ, ಅದೇ ಸೀಟಿನಲ್ಲಿ ಪಯಣ ಬೆಳೆಸುವುದು ಅವಳ ದಿನಚರಿ. ಅವಳ ಹುಮ್ಮಸ್ಸು, ಉತ್ಸುಕತೆ ಎಲ್ಲವೂ ನಿಲ್ಲದ ಮಳೆಯ ಹೆಗಲು ಹಚ್ಚಿ ಸುರಿವ ಜಲಪಾತದಂತೆಯೇ. ಅವಳ ಕಣ್ಣುಗಳಿಗೆ ಎಲ್ಲವೂ ಸುಂದರ, ಸಂಭ್ರಮ. ಸತ್ಯ ಅವಳ ಜೀವಂತಿಕೆಗೆ ಸೋತು ಹೋಗುತ್ತಾನೆ. ರಿಯಾಲಿಟಿ ಶೋ ಸಹವಾಸ ತೊರೆದು, ಕಾಲಿಲ್ಲದ ವ್ಯಕ್ತಿಯಂತೆ ರೈಲಿನಲ್ಲಿ ದಿನಂಪ್ರತಿ ಭಿಕ್ಷೆಯನ್ನು ಬೇಡುತ್ತಾನೆ, ಅವಳನ್ನು ನೋಡುವ ನೆಪದಲ್ಲಿ. ಅವಳು ಇವನಿಗೆ ಒಂದಿಷ್ಟು ಹಣವನ್ನು ನೀಡಿ, ಬೇಡುವ ಕಾಯಕದ ಬದಲು, ಕೆಲಸವನ್ನು ಮಾಡಿ ಸ್ವಾಭಿಮಾನದ ಬದುಕನ್ನು ಬಾಳಬೇಕು ಎಂದು ತಿಳಿ ಹೇಳುತ್ತಾಳೆ. ಅದರಂತೆಯೇ, ಆತ ಅದೇ ರೈಲಿನಲ್ಲಿ ಪತ್ರಿಕೆ ಮಾರಾಟವನ್ನು ಆರಂಭಿಸುತ್ತಾನೆ. ಅವರಿಬ್ಬರ ಮಧ್ಯೆ ಮಾತು ದ್ವಿಗುಣಗೊಂಡು ಒಲವಿನ ವಿನಿಮಯಕ್ಕೆ ಮುನ್ನುಡಿ ಬರೆಯುತ್ತದೆ. ಇನ್ನೇನು ಮುಂಜಾನೆ ನೇಸರ ಅರಳುವಂತೆಯೇ, ಪ್ರೇಮಧಾರೆಯೆರೆಯಬೇಕು ಅನ್ನುವಾಗಲೇ, ಮೈನಾಳ ಕೈಚೀಲವನ್ನು ಕಳ್ಳನೊಬ್ಬ ಕದಿಯುತ್ತಾನೆ. ಆತನನ್ನು ಹಿಡಿಯಲು, ಸತ್ಯ ತಾನು ಕಾಲಿಲ್ಲದ ವ್ಯಕ್ತಿಯಂತೆ ನಟಿಸುತ್ತಿದ್ದೇನೆ ಎಂಬುವುದನ್ನು ಮರೆತು ಅವನ ಹಿಂದೆ ಓಡುತ್ತಾನೆ. ಆತನನ್ನು ಬೆನ್ನಟ್ಟಿ, ಕೈಚೀಲ ವಶಪಡಿಸಿ, ಮರಳುತ್ತಿರಬೇಕಾದರೆ, ಮೈನಾ ರೈಲಿನಿಂದ ಇಳಿಯುತ್ತಿರುವ ದೃಶ್ಯ ಕಾಣಿಸುತ್ತದೆ. ಕಣ್ಣುಗಳು ಅರೆಕ್ಷಣ ಆಘಾತದ ಹನಿಗಳಲ್ಲಿ ಮಿಂದೇಳುತ್ತದೆ. ಕಾರಣ ಅವಳಿಗೂ ಕಾಲಿನ ಶಕ್ತಿ ತೊರೆದು ಹೋಗಿರುತ್ತದೆ. ಕೈಗಳನ್ನು ಭೂಮಿಗೆ ಒತ್ತಿ ಮುಂದೆ ಸಾಗುತ್ತಿರುತ್ತಾಳೆ ಅವಳು. ಮುಂದೆ ಈರ್ವರ ಮಧ್ಯೆ ಒಲವು ಖಾಯಂಗೊಳ್ಳುತ್ತದೆ. ಇಬ್ಬರೂ ಕಾಯಕದ ದಾರಿ ಹಿಡಿಯುತ್ತಾರೆ. ಆಕೆಯ ಕಾಲಿನ ಶಕ್ತಿಯ ಪುನರಪಿ ತುಂಬಲು, ವೈದ್ಯರೊಬ್ಬರು ಮುಂದೆ ಬರುತ್ತಾರೆ. ಬಹಳಷ್ಟು ನಂಬಿಕೆಯಿಟ್ಟು ಚಿಕಿತ್ಸೆಗೆಂದು ಮುಂದುವರೆದಾಗ, ಆ ಡಾಕ್ಟರ್ ಬಹುದೊಡ್ಡ ವಿಶ್ವಾಸದ್ರೋಹವನ್ನು ಮಾಡುತ್ತಾನೆ. ಮೈನಾಳ ಖಾಸಗಿ ಕ್ಷಣಗಳನ್ನು ಸೆರೆ ಹಿಡಿಯುತ್ತಾನೆ ಮತ್ತು ಅಂತರ್ಜಾಲದಲ್ಲಿ ಹರಿಬಿಡುವುದಾಗಿ ಹೆದರಿಸುತ್ತಾನೆ. ಮುಂದೆ ಪ್ರೇಮದ ಕೆಂಪು ನೆತ್ತರಿನ ರೂಪ ಧರಿಸುತ್ತದೆ. ಬದುಕು ಘೋರ ತಿರುವಿನ ಕಣಿವೆಗೆ ಬಿದ್ದು ನಜ್ಜು ಗುಜ್ಜಾಗುತ್ತದೆ. ಮಾತ್ರವಲ್ಲ, ಅಂತ್ಯವೇ ಇಲ್ಲದ ಚಿರಂಜೀವಿ ಸ್ವರೂಪವನ್ನು ತಾಳುತ್ತದೆ ಅವರಿಬ್ಬರ ಒಲವು. ಉಸಿರು ನಿಂತರೂ, ಪ್ರೇಮಧಾರೆ ಹಸಿರಾಗಿ ಸುಶೋಭಿಸುತ್ತಲೇ ಇರುತ್ತದೆ. ಒಟ್ಟಾರೆಯಾಗಿ, ಎಲ್ಲಾ ಇರುವಿಕೆ-ಇಲ್ಲದಿರುವಿಕೆಗಳ ಮಧ್ಯೆ, ಅವಳು ನನ್ನವಳು, ಅವನು ನನ್ನವನು ಎಂದು ಯಾವ ಸಂದೇಹಗಳ ಸುಳಿವೇ ಇಲ್ಲದೇ, ಪರಿಧಿಯ ಮೀರಿ, ಆತ್ಮಾನುಸಂಧಾನಗೊಂಡ ಜೇವವೆರಡರ, ಭಾವ ತೇರ ಪಯಣವೇ ‘ಮೈನಾ’ + +ನಾಗಶೇಖರ್ ಎಂದರೆ ಕನ್ನಡ ಚಿತ್ರ ಜಗತ್ತಿನ ಭಾವಪೂರಿತ ಪ್ರೇಮ ಕಥೆಗಳ ಸರದಾರ. ‘ಅರಮನೆ’, ‘ಮೈನಾ’ ಮತ್ತು ‘ಸಂಜು ಮತ್ತು ಗೀತಾ’ ಅದಕ್ಕೆ ಸಾದೃಶ್ಯ. ಅವರ ಬರವಣಿಗೆಯಲ್ಲಿ ಅರಳುವ ದೃಶ್ಯಗಳು ಬಿರಿಯುವ ಹೂವಿನಂತೆಯೇ ಅತೀ ಮಧುರ. ಬಿಡುವಿಲ್ಲದೆ ಓಟ ಕೀಳುವ ಮಳೆ, ಗಾಢ ಹಸಿರು ವಸ್ತ್ರ ಧರಿಸಿ ಮಿಂಚುವ ಪ್ರಕೃತಿ, ಬದುಕನ್ನು ಗಾಢವಾಗಿ ಪ್ರೀತಿಸುವ ನಾಯಕಿ, ತುಸು ಭಾವುಕತೆಯ ನೆರಳಿನಲ್ಲಿಯೇ ಕನಸು ಕಾಣುವ ನಾಯಕ ಇವೆಲ್ಲವೂ ಅವರ ಚಿತ್ರಗಳಲ್ಲಿ ಗೈರು ಹಾಜರಾಗದ ಸಂಗತಿಗಳು. ‘ಮೈನಾ’ ಚಿತ್ರವೊಂದು ಪ್ರಥಮಾರ್ಧದಲ್ಲಿ ಸುಂದರ ಪ್ರೇಮ ಕವಿತೆಯಾಗಿ, ಮಧ್ಯಂತರ ದಾಟುತ್ತಿದ್ದಂತೆಯೇ ಕೆಂಪು ಸಮುದ್ರವಾಗುತ್ತದೆ. ಅಂತ್ಯದಲ್ಲಿ ನೋವಿನ ಆರ್ತನಾದ ಕಾಡುತ್ತದೆ. ಚಿತ್ರದ ಮುಗಿತಾಯ ನೀಡುವುದು ನಿರ್ಮಾನುಷ ಬೀದಿಯಲ್ಲಿನ ಪಯಣದ ಭಾವ. ಈ ತೆರನಾದ ಭಾವಗಳ ಹದವಾದ ಮಿಶ್ರಣದಿಂದಾಗಿ, ಕಾಡುವ ಕಥನವಾಗಲು ಸಾಧ್ಯವಾಗಿದೆ ಮೈನಾ. + +(ನಾಗಶೇಖರ್) + +ಚಿತ್ರದಲ್ಲಿ ಮೈನಾ ಸತ್ಯನಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅದನ್ನು ಕಂಡು ಬೇಸರದಿಂದ ಇದೆಂಥಾ ಉಡುಗೊರೆ ಎಂದು ಸತ್ಯ ಎಸೆಯುತ್ತಾನೆ. ಅನಂತರ ಕಾಲಿಲ್ಲದೇ ನೆಲಕ್ಕೆ ಕೈಯ್ಯಿಟ್ಟು ನಡೆಯುವಾಗ ನೋವನುಭವಿಸಬಾರದು ಎಂದು ಇದನ್ನು ನೀಡಿದ್ದಾಳೆ ಎಂದು ತಿಳಿದು ಖೇದಗೊಳ್ಳುತ್ತಾನೆ ಆತ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಥೆಯು ಸೆರೆ ಹಿಡಿದ ಸೂಕ್ಷ್ಮತೆ. ಈ ದೃಶ್ಯವೇನೂ ಕಥೆಯ ಮುಖ್ಯ ಭಾಗವಲ್ಲದಿದ್ದರೂ, ಅದೆಷ್ಟು ಅಧ್ಯಯನದ ದೃಷ್ಟಿಕೋನ ಈ ದೃಶ್ಯದಲ್ಲಿ ಅಡಗಿದೆ ಎಂಬುದು ಅಚ್ಚರಿಯ ಸಂಗತಿ. ಇನ್ನು ನಾಯಕಿಯ ಪಾತ್ರಧಾರಿಯಲ್ಲಿರುವ ‘ನಾಗಶೇಖರ್’ ಮ್ಯಾಜಿಕ್. ‘ಸಂಜು ಮತ್ತು ಗೀತಾ’ ಚಿತ್ರದಲ್ಲಿ ‘ಬ್ಯೂಟಿ’ ಎಂಬ ಪದ ಸಂತಸದ ಉತ್ಕಟತೆಗೆ ಬಳಕೆಯಾಗಿದ್ದರೆ, ಮೈನಾ ‘ಕಲರ್ಫುಲ್’ ನಿಂದ ತುಂಬಿದೆ. ಕಥೆಯ ಎರಡು ಭಾಗ ಅಂದರೆ ಪ್ರೇಮಗಾಥೆ ಮತ್ತು ಕ್ರೈಮ್ ಸರಣಿಯು ಭಾವ ಉದ್ದೀಪನ ಮಟ್ಟದಲ್ಲಿ ಒಂದೇ ಸೇತುವೆಯಲ್ಲಿ ಚಲಿಸುವುದರಿಂದ ಕಥೆಯ ತೀವ್ರತೆ ಗಾಢವಾಗಿ ನೋಡುಗನ ಮನಸ್ಸಿಗೆ ವರ್ಗಾವಣೆಗೊಳ್ಳುತ್ತದೆ. + +ಕರ್ನಾಟಕ ಕಂಡ ದಕ್ಷ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಅನುಭವದಿಂದ ಆಯ್ದ ಸಾಲಿನ ವಿಸ್ತೃತ ರೂಪವಾದ ಈ ಚಿತ್ರದ ಆವರಿಸುವಿಕೆಗೆ ಇನ್ನೊಂದು ಮುಖ್ಯ ಕಾರಣ ಜೆಸ್ಸಿ ಗಿಫ್ಟ್ ಸಂಗೀತ. ಜಯಂತ ಕಾಯ್ಕಿಣಿ ಸಾಹಿತ್ಯದ ‘ಮೊದಲ ಮಳೆಯಂತೆ’ ಹಾಡು ಚಂದಿರನಿಗೆ ಉಡಿಸಿದ ಶ್ವೇತವಸ್ತ್ರ. ‘ಮೈನಾ’ ಹಾಡು ಹೂದೋಟಕ್ಕೆ ಪ್ರಜ್ಞೆ ತಪ್ಪಿಸುವ ಸುಗಂಧ. ಹಿನ್ನೆಲೆ ಸಂಗೀತದಲ್ಲಿ ವಿಶೇಷತಃ, ರಾಗ ಮಾಲಿಕೆಯೊಂದರ ಬಳಕೆ ತೀರಕ್ಕೊಂದು ಸಿಹಿ ನೀರಿನ ಅಭಿಷೇಕ. ಮುಂದೆ ನಟನೆಯಲ್ಲಿ ಚೇತನ್ ಗಮನ ಸೆಳೆದರೆ ‘ನಿತ್ಯಾ ಮೆನನ್’ ಭಾವ ನಡಿಗೆಯು ತನಗೆ ನಿತ್ಯ ನೂತನ ಎನ್ನುವಂತೆಯೇ ಜೀವಿಸಿದ್ದಾರೆ ಮೈನಾ ಪಾತ್ರದಲ್ಲಿ. ಈ ಎರಡು ದಶಕ ಕಂಡ, ಅತ್ಯುತ್ತಮ ನಟಿ ಅವರು… ಭಾಷೆ, ಪ್ರಾಂತ್ಯಗಳೆಲ್ಲದರ ಎಲ್ಲೆ ಮೀರಿ, ಎಂದರೆ ಅತಿ ವರ್ಣನೆಯಲ್ಲ. ಸಿಹಿ ವಾಸ್ತವ. ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಆಗಿ ಶರತ್ ಕುಮಾರ್ ಗಂಭೀರ, ತೂಕಬದ್ಧ ನಟನೆ. ಇನ್ನುಳಿದಂತೆ ಮಾಳವಿಕಾ ಅವಿನಾಶ್, ಸಾಧು ಕೋಕಿಲ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಸೇರಿದಂತೆ ಎಲ್ಲರದ್ದೂ ಪಾತ್ರೋಚಿತ ಅಭಿವ್ಯಕ್ತಿ. + + + +ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು…. + diff --git a/Kenda Sampige/article_160.txt b/Kenda Sampige/article_160.txt new file mode 100644 index 0000000000000000000000000000000000000000..0f0c7e2a29a34e8472c11744dae7e3feca54b8e5 --- /dev/null +++ b/Kenda Sampige/article_160.txt @@ -0,0 +1,43 @@ +ಜೋಯಿಡಾದ ಕಾನನದಲ್ಲಿ ವರ್ಷದ ಆರು ತಿಂಗಳು ಮಳೆ, ಮಳೆಯ ಎಲ್ಲಾ ರೂಪಗಳನ್ನು ತೆರೆದಿಡುವ ಹಗಲು, ಮನ ತುಂಬಿ ತನ್ನದೆ ಹೊಸ ಹೊಸ ಸ್ವರ ಸಂಯೋಜನೆಯೊಂದಿಗೆ ಹರಿಯುವ ನದಿ, ಹಳ್ಳಗಳ ಸೊಬಗು, ಆಗಾಗ ಏಳುವ ಝರಿಗಳೊಂದಿಗೆ ನಿಚ್ಚ ತನಮನದಲ್ಲಿ ಅಚ್ಚಳಿಯದೆ ಉಳಿಯುವ ಜಲಪಾತಗಳ ಭೋರ್ಗರೆತ, ಇಲ್ಲಿ ಪ್ರತಿ ಕಲ್ಲು ಒಂದೊಂದು ಶಿಲ್ಪ ರೂಪ, ಕಲ್ಲರಳುವ ಸೊಬಗು ನಿತ್ಯ ನಿರಂತರ, ಇಂತಹ ತಪೋಭೂಮಿ ನನ್ನ ಜೋಯಿಡಾ. ಉತ್ತರಕನ್ನಡ ಜಿಲ್ಲೆ ಭೌಗೋಳಿಕವಾಗಿ ಬಹು ದೊಡ್ಡದಾದ ತಾಲೂಕು. ಮರಗಳೆ ಸಂಗಾತಿಗಳಾಗುವ, ಗೆಳತಿಯಾಗುವ, ಮಾತಾಡುವ, ಮೌನವಾಗುವ, ನಲಿವುಕ್ಕಿಸುವ, ಕಣ್ಣೀರೊರೆಸುವ, ಶಕ್ತಿ ತುಂಬುವ, ಹುರುಪು ಸೃಷ್ಟಿಸುವ ವಿಸ್ಮಯದ ಗೂಡು. ಜೋಯಿಡಾ ಎಂದರೆ ಪ್ರವಾಸಿ ತಾಣ, ಪ್ರೇಕ್ಷಣೀಯ ಸ್ಥಳ. ಅದರ ಜೊತೆ ಜೊತೆಗೆ ಮುಗ್ಧ ಕುಣಬಿ, ಗೌಳಿ ಮುಂತಾದ ಬುಡಕಟ್ಟು ಜನಾಂಗದ ಹಾಡು ಪಾಡು. + +ಈ ಗೂಡಿನೊಳಗೆ ವಿದ್ಯಾದೇವಿಯ ಗಂಟೆ ಬಾರಿಸುತ್ತದೆ, ನಿಧಾನ ಒಂದೊಂದಾಗಿ ಶಾಲೆಯ ಬಾಗಿಲು ತೆರೆದುಕೊಳ್ಳುತ್ತದೆ, ಕಿಟಕಿಯೂ ತಾನೇ ಮುಂದಾಗಿ ತನ್ನ ತಾ ತೆರೆದುಕೊಂಡು ಬೆಳಕು ಹರಡುತ್ತದೆ. ಹರಡಿದ ಬೆಳಕಲ್ಲಿ ಎಲ್ಲ ಮುಖಗಳು ಸ್ಪಷ್ಟವಾಗಿ ಕಾಣುತ್ತವೆ. ಮುಖದ ಮೇಲಿದ್ದ ಗುರುತುಗಳು ತಮ್ಮ ಪರಿಚಯವನ್ನು ನೀಡುತ್ತವೆ, ತಮ್ಮ ಕಥೆಗಳನ್ನು ಹೇಳುತ್ತಾ ಇತಿಹಾಸ ಸೃಷ್ಟಿಸುತ್ತವೆ. ಇಂತಹ ಕಥೆಯನ್ನು ಕೇಳುತ್ತ, ಕಥೆಯ ಕೆಲವರು ಪಾತ್ರಧಾರಿಗಳಾಗುತ್ತಾರೆ, ಕೆಲವರು ಕಣ್ಣಲ್ಲಿ ತುಂಬಿಕೊಳ್ಳುತ್ತಾರೆ. ಇನ್ನೂ ಹಲವರು ಕಿವಿಯಾಗುತ್ತಾರೆ. ಕುತೂಹಲ ಬೆಳೆಸಿಕೊಳ್ಳುತ್ತಾರೆ. ವಿದ್ಯಾದೇವಿ ಇರುವಲ್ಲಿ ಸದಾ ಖುಷಿ, ನೆಮ್ಮದಿಯೆ ಇರುತ್ತದೆ. ಆತ್ಮತೃಪ್ತಿ ಕೆಲಸಗಳು ನಡೆಯುತ್ತವೆ. ಸುತ್ತ ಹರಡಿದ ಬೆಳಕಲ್ಲಿ ಕಂಡ ಮುಖಗಳು ತಮ್ಮ ತಮ್ಮ ಕಥೆ ಹೇಳುತ್ತಾ ಸರಕಾರಿ ಶಾಲೆಯ ಶಿಕ್ಷಕಿಯಾದ ನನ್ನಲ್ಲಿ ಬಂದು ಸೇರಿಕೊಳ್ಳುತ್ತವೆ. ಹೀಗೆ ಸೇರಿದ ಕಥೆಗಳು ಜೋಯಿಡಾದ ಕಾಳಿ ನದಿಯನ್ನು ಬಳಸಿ ಸುತ್ತುವರಿದು ನಿಮ್ಮೊಳಗು ದಾಖಲಾಗುತ್ತವೆ. ಇಸ್ಕೂಲು ಬಾಗಿಲು ತೆರೆಯುತ್ತದೆ. ಸೌತೆ ಬಳ್ಳಿ ಚಿಗುರುವವರೆಗೂ ಮುಂದುವರೆಯುತ್ತದೆ. + +***** + +ಇಂದು ನನ್ನೆಲ್ಲ ಇಸ್ಕೂಲಿನ ವಿಷಯಗಳು ತುಷಾರದಲ್ಲಿ ದಾಖಲಾಗಿ, ತುಷಾರ ಓದುಗ ಬಳಗದವರ ಮನಸ್ಸಿನಲ್ಲಿ ಜಾಗ ಪಡೆದಿವೆ. ಈಗ ಪುಸ್ತಕ ರೂಪದಲ್ಲಿ ನಿಮಗೆ ಸಿಕ್ಕಿ ಇಸ್ಕೂಲು ನಿಮ್ಮದಾಗುವ ಕಾಲಕ್ಕೆ ಬಂದು ನಿಂತಿದೆ. ಈ ಅಂಕಣ ಆರಂಭವಾದಾಗ ಅದು ಇಷ್ಟೆಲ್ಲ ಬರೆಸುತ್ತದೆ ಎಂದು ನನಗೆ ಅನಿಸಿರಲಿಲ್ಲ, ಕಾಳಿ ತೀರದ ಗೀತಗಳು, ನನ್ನ ಜೋಯಿಡಾ ತಾಲೂಕಿನ ಮಕ್ಕಳ ರೀತಿನೀತಿಗಳು ಏನನ್ನೆಲ್ಲಾ ನನಗೆ ಕಲಿಸಿಕೊಟ್ಟವು ಎಂದು ನನಗೆ ಒಮ್ಮೆ ಅಚ್ಚರಿಯಾಗುತ್ತದೆ, ನಿಜ, `ಮಕ್ಕಳಿಂದ ಕಲಿಯುವುದಿರುತ್ತದೆ’ ಎಂದು ಹೇಳಿದ ಮಾತು ಈಗ ದಕ್ಕಿತು ಅನಿಸುತ್ತದೆ. ಜೋಯಿಡಾ ಗಡಿ ತಾಲೂಕು. ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ತಾಲೂಕು. ಇಂದಿಗೂ ಪಟ್ಟಣ ಪಂಚಾಯತಿ ಹೊಂದಿರದ ರಾಜ್ಯದ ಏಕೈಕ ತಾಲೂಕು. ಇಲ್ಲಿನ ಬಹುತೇಕ ಹಳ್ಳಿಗಳಿಗೆ ಮಳೆಗಾಲದಲ್ಲಿ ತಲುಪಲು ಇಂದಿಗೂ ಕೂಡ ಸಾಧ್ಯವಿಲ್ಲ. ಇಂತಹ ಗಡಿ ತಾಲೂಕಿನಲ್ಲಿ ವರ್ಷದುದ್ದಕ್ಕೂ ಸಂಭ್ರಮದಿಂದ ತೆರೆದುಕೊಳ್ಳುವುದು ಸರ್ಕಾರಿ ಶಾಲೆಗಳು ಮಾತ್ರ. ಇಲ್ಲಿನ ಶಿಕ್ಷಕರು ಮೂಲಭೂತ ಸೌಲಭ್ಯದ ಕೊರತೆಯ ನಡುವೆಯೂ, ಉತ್ತಮ ದವಾಖಾನೆ ಇಲ್ಲದ ಜೋಯಿಡಾ ತಾಲೂಕಿನಲ್ಲಿ ತಮ್ಮ ಆರೋಗ್ಯ ಪಣವಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ಕಾಡಿನ ನಡುವೆ, ಸಮಸ್ಯೆಗಳ ನಡುವೆ ಸರ್ಕಾರದ ಯೋಜನೆಗಳನ್ನು ಸಫಲಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಎಲ್ಲರಿಂದ ತಿರಸ್ಕೃತಗೊಂಡಂತಿರುವ ಈ ಜೋಯಿಡಾದಲ್ಲಿ ವರ್ಷಗಟ್ಟಲೆ ನಮ್ಮ ಶಿಕ್ಷಕರು ಅಕ್ಷರ ಬೀಜ ಸದ್ದಿಲ್ಲದೆ ಬಿತ್ತುತ್ತಿದ್ದಾರೆ. ಅವರೆಲ್ಲರ ಕೆಲಸಗಳ ಬಗ್ಗೆ ನನಗೆ ರಾಶಿ ಹೆಮ್ಮೆಯಿದೆ. ಹಾಗಾಗಿ ಈ ಕೃತಿ ನಾನು ಜೋಯಿಡಾದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಮಾತ್ರ ಅರ್ಪಿಸಬಯಸುತ್ತೇನೆ. ಅಂಕಣ ಬರೆಯುತ್ತಿದ್ದ ಒಂದುವರೆ ವರ್ಷದ ಯಾನದಲ್ಲಿ ಇಸ್ಕೂಲಿನ ಅಂಗಳದಲ್ಲಿ ಕಂಡ ಚಿತ್ರಗಳನ್ನು ದಾಖಲಿಸಿರುವುದು ನಿಜ. ಆದರೆ ಇಸ್ಕೂಲಿನ ಹೊರಗೆ ನಿಂತು ಬರೆದವುಗಳನ್ನು ನಾವು ನೋಡುವ ರೀತಿಗಿಂತ ಭಿನ್ನವಾಗಿ ನೋಡಿದವರು ಇಸ್ಕೂಲಿನ ಓದುಗರು. ತುಷಾರದಲ್ಲಿ ಕೆಲವರಿಗೆ ಇಸ್ಕೂಲು ಬಹಳವಾಗಿ ತೆರೆದುಕೊಂಡರೆ, ಇನ್ನೂ ಕೆಲವರಿಗೆ ಏನೂ ಕಾಣದೆ ಕೂಡ ಹೋಗಿರಬಹುದು. + +ಆದರೂ `ಚಂದ ಬರುತ್ತಿದೆ, ಬರಿ. ಈ ಅನುಭವವೇ ಹೊಸದು. ಜೊತೆಗೆ ಕವಿತೆ ಕಥೆ ಬರೆಯುವುದನ್ನು ನಿಲ್ಲಿಸಬೇಡ’ ಎಂದು ಎಚ್ಚರಿಸಿದ ಮಿತ್ರರಿದ್ದಾರೆ. `ಬೇಗ ಇಸ್ಕೂಲಿನ ಅಂಕಣಗಳ ಸೇರಿಸಿ ಪುಸ್ತಕ ಮಾಡಿ ಕೊಡು’ ಎಂದು ಕೇಳುವ ಜೀವಗಳಿವೆ. `ನಮ್ಮೆಲ್ಲರ ಬಾಲ್ಯ ನೆನಪಿಸಿತು’ ಎಂದು ಓದುವ ಓದುಗರಿದ್ದಾರೆ. ಸಕ್ಕರೆ ಕಾಯಿಲೆಯಿಂದ ದೃಷ್ಟಿ ದೋಷ ಅನುಭವಿಸುತ್ತಿದ್ದಾಗಲೂ ಮನೆಗೆ ಬಂದ ಅತಿಥಿಗಳಿಂದ ಇಸ್ಕೂಲು ಓದಿಸಿಕೊಂಡು ಪ್ರತಿ ತಿಂಗಳು ಫೋನಾಯಿಸುವ ಕಸ್ತೂರಿ ಬಾಯೇರಿ ಅವರಂತಹ ಹಿರಿಯ ಲೇಖಕಿಯ ಮಾತುಗಳು, ಇಸ್ಕೂಲನ್ನು ಪ್ರತಿ ತಿಂಗಳು ಓದಿ, ಕಥೆಯ ರೂಪದಲ್ಲಿ ತನ್ನ ಮೊಮ್ಮಕ್ಕಳಿಗೆ ಹೇಳುವ ಅದೆಷ್ಟೊ ಜನ ಅಮ್ಮಂದಿರ ಮೇಲ್‌ಗಳು, `ಓದುತ್ತಾ ಹೋದರೆ ಬೇರೆಯದೆ ಅನುಭೂತಿ ನೀಡಿ ನೆಮ್ಮದಿ ಸಿಗುತ್ತದೆ’ ಎನ್ನುವ ಬರಹಗಾರರು, ಶಿಕ್ಷಕರು, ಖಾಸಗಿ ಬಸ್ ಚಾಲಕರು, ಕಂಡೆಕ್ಟರಗಳು, ಬ್ಯಾಂಕಿನವರು, ವೈದ್ಯರು… ಬರೆಯುತ್ತ ಹೋದರೆ ದೊಡ್ಡದಾಗಿ ಬೆಳೆಯುವ ಅನೇಕ ವೃತ್ತಿಯ ಓದುಗರು ಬಹುಬಗೆಯಾಗಿ ಪ್ರತಿ ತಿಂಗಳು ಮೇಲ್ ಮೂಲಕ ಪತ್ರ ಬರೆಯುತ್ತಿದ್ದಾರೆ. ಫೋನ್ ನಂಬರ್‌ ಸಿಕ್ಕಿದರೆ ಫೋನಾಯಿಸುತ್ತಾರೆ, ಮೇಸೆಜಿಸುತ್ತಾರೆ. ಕೊನೆ ಕೊನೆಗೆ ಕರ್ನಾಟಕದ ದೂರದೂರುಗಳಿಂದ ಇಸ್ಕೂಲಿನ ಮುಖಗಳನ್ನು ನೋಡಲು, ರಾಧಕ್ಕೋರನ್ನು ನೋಡಲು ಬಂದ ಅನೇಕ ಶ್ರೀಮಂತ ಮನಸುಗಳ ಪ್ರೀತಿಗೆ ಏನೆನ್ನಲಿ. ಇವರೆಲ್ಲರ ಹೆಸರು ಇಸ್ಕೂಲಿನ ಅಂಗಳ ಖಂಡಿತ ಮರೆತಿಲ್ಲ. ಅವರೆಲ್ಲರ ಒಂದೊಂದು ಪತ್ರ ಬಂದಾಗ ಆಗುವ ಖುಷಿಯನ್ನು, ಮಕ್ಕಳೆದುರು ಪತ್ರ ಓದಿ, ಮಕ್ಕಳೊಂದಿಗೆ ನಾನು ರೋಮಾಂಚಿತಳಾಗುವ ಘಳಿಗೆಯ ಸುಖವನ್ನು ಉಂಡಿದ್ದೇನೆ. ತುಷಾರದಲ್ಲಿ ಮಕ್ಕಳು ತಮ್ಮ ಫೋಟೋಗಳನ್ನು ನೋಡಿ ಕಣ್ಣರಳಿಸುವ ವಿಸ್ಮಯದ ಅವ್ಯಕ್ತ ಭಾವವನ್ನು ಅನುಭವಿಸಿದ್ದೇನೆ. ನನ್ನೂರು ಅಂಕೋಲೆಯ ಬೇಲೇಕೇರಿಗೆ ಹೋದಾಗ `ನಿನ್ನ ಅಮ್ಮನ ನಮೂನಿಯೆ ಲೈಕ್ ಮಾಸ್ತರ್ಣಿ ಆಗಿಬಿಟ್ಟಿ’ ಎಂದಾಗ ಅಮ್ಮನ ಮಡಿಲಿನ ಗುಬ್ಬಿಮರಿಯಾಗಿ ಬಿಡುತ್ತೇನೆ. ಇಸ್ಕೂಲು ಬರಿ ಅಂಕಣವಲ್ಲ ನನಗೆ. ನನ್ನ ವೃತ್ತಿ ಮತ್ತು ಪ್ರೀತಿ ಅದು. ನನ್ನ ಸುತ್ತ ಮುತ್ತ ಓಡಾಡುವ ಚಿಗರೆ ಕಣ್ಣಿನ ಮಕ್ಕಳ ಭರವಸೆ ಅದು. ಅಂದಹಾಗೆ, ಇಸ್ಕೂಲು ಅಂಕಣ ಮುಗಿದು ಈ ಪುಸ್ತಕ ಪ್ರಕಟವಾಗುವ ಹೊತ್ತಿನವರೆಗೆ ನನ್ನ ಶಾಲೆಗೆ ಸಹಾಯ ಮಾಡುತ್ತಿರುವ ಮನಸುಗಳ ಪ್ರೀತಿಗೆ ರಾಶಿ ಧನ್ಯವಾದ. ಇಸ್ಕೂಲನ್ನು ನೋಡಲು ಬೆಳಗಾವಿ, ಠಾಣಾ, ಬೆಂಗಳೂರಿನಿಂದ ಬರುವ ಹೂ ಮನಸುಗಳ ಪ್ರೀತಿಗೆ ಅಣಶಿ ಹಾಗೂ ನಾನು ಋಣಿಯಾಗಿದ್ದೇವೆ. + +***** + +ಈ ಸಂದರ್ಭದಲ್ಲಿ ವಿಶೇಷವಾಗಿ ಕೆಲವರಿಗೆ ಧನ್ಯವಾದ ಹೇಳಲೇಬೇಕು. ಅವರೆಲ್ಲ ನನ್ನ ಶಾಲೆಗೆ ಸಹಾಯ ಮಾಡಿದವರು. ಇಸ್ಕೂಲು ಅಂಕಣ ಓದಿ ಶಾಲೆಗೆ ಏನಾದರೂ ನೆರವು ಬೇಕೆ ಎಂದು ಕೇಳಿದವರು. ಅವರೆಲ್ಲರ ಮೂಲಕ ಇಂದು ಸುಮಾರು 23,000 ರೂ. ಮೌಲ್ಯದ ಪುಸ್ತಕಗಳು ನನ್ನ ಶಾಲೆಯ ಗ್ರಂಥಾಲಯಕ್ಕೆ ಸೇರಿವೆ. ಇವೆಲ್ಲ ಪುಸ್ತಕಗಳನ್ನು ಮಕ್ಕಳು ಓದುವಂತಹದ್ದು, ಮಕ್ಕಳ ಜ್ಞಾನ ಹೆಚ್ಚಿಸುವ ಪುಸ್ತಕಗಳಿವು. ಇಸ್ಕೂಲನ್ನು ಓದಿ ದೂರದ ಕೋಲಾರದಿಂದ ಇಸ್ಕೂಲು ನೋಡಲು ಬಂದ ಬಂದ ನಿವೃತ್ತಿ ಜೀವನ ನಡೆಸುತ್ತಿರುವ ವೇಣುಗೋಪಾಲ, ಬೆಂಗಳೂರಿನ ಸಂಜಯ ಹಾಗೂ ಅವರ ಮಗ ತೇಜಸ್ವಿ ಶಾಲೆಗೆ ಬಂದು ಇಸ್ಕೂಲಿನೊಂದಿಗೆ ಮನದಣಿಯೆ ಮಾತಾಡಿಹೋಗಿದ್ದಾರೆ. ಇನ್ನೂ ಅನೇಕ ಶಿಕ್ಷಕರು ಶಾಲೆಗೆ ಬರುವವರಿದ್ದಾರೆ. + +ತುಷಾರಕ್ಕಾಗಿ ಕಾಯುತ್ತಾ ಸಿಕ್ಕಿದ ಕೂಡಲೆ ಇಸ್ಕೂಲನ್ನು ಮೊಟ್ಟ ಮೊದಲು ತೆರೆದು ನೋಡುವ ಸಹೃದಯರು ಬಹಳಷ್ಟು ಜನರಿದ್ದಾರೆ. ನನ್ನ ಜಿಲ್ಲೆಯವರು, ಜಿಲ್ಲೆಯ ಹೊರಗಿನವರು, ರಾಜ್ಯದ ಹೊರಗಿನವರು… ಹೀಗೆ ಅನೇಕರು. ಇಸ್ಕೂಲನ್ನು ಓದುವುದಕ್ಕಾಗಿಯೆ ತುಷಾರ ಚಂದಾದಾರರಾದವರು ನನ್ನ ಕಣ್ಣೆದುರು ಇದ್ದಾರೆ. ನಿಮ್ಮೆಲ್ಲರ ಇಂತಹ ಪ್ರೀತಿಗೆ ಏನೆನ್ನಲಿ. ಧನ್ಯವಾದವೆಂದರೆ ಕಡಿಮೆ ಅನಿಸುತ್ತೆ. ನಿಮ್ಮ ಅಮೂಲ್ಯ ಸಮಯ ಮೀಸಲಿಟ್ಟು ಪ್ರತಿಬಾರಿ ಇಸ್ಕೂಲನ್ನು ಓದಿ ಮೇಲ್ ಕಳಿಸುವ ನಿಮ್ಮ ಮನಸ್ಸಿಗೆ ಶರಣು. + +ಪುಸ್ತಕ ಪ್ರಕಟವಾಗುತ್ತಿರುವ ಈ ಹೊತ್ತಿನವರೆಗೂ ಇಸ್ಕೂಲು ನೋಡಲು ಬರುವವರ ಪಟ್ಟಿಯಿದೆ. ಇಸ್ಕೂಲು ಅವರಿಗಾಗಿ ಸದಾ ಕಾಯುತ್ತಿರುತ್ತದೆ. ಇಸ್ಕೂಲು ಪ್ರಕಟ ಮಾಡಿದ ಜನ ಪ್ರಕಾಶನಕ್ಕೆ ಈ ಸಂದರ್ಭದಲ್ಲಿ ವಂದಿಸುತ್ತೇನೆ. ಪುಸ್ತಕವನ್ನು ನೀವೆಲ್ಲ ಕೊಂಡು ಓದುವಿರಿ ಎಂಬ ನಂಬಿಕೆ ಖಂಡಿತ ಇದೆ. ರಾಶಿ ಧನ್ಯವಾದಗಳು ನಿಮಗೆ. + +-ಅಕ್ಷತಾ ಕೃಷ್ಣಮೂರ್ತಿ + + + +ಬಾವುಟ ಹಾರುವ ಹೊತ್ತು + +ಉತ್ತರಕನ್ನಡ ಜಿಲ್ಲೆಯ ದಟ್ಟ ಅರಣ್ಯ ಗಡಿ ತಾಲೂಕು ಜೋಯಿಡಾದ ಬೇರೆ ಬೇರೆ ಹಳ್ಳಿಯಲ್ಲಿ ರಾಷ್ಟ್ರೀಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಕನ್ನಡ ಹಾಗೂ ಮರಾಠಿ ಮಾಧ್ಯಮದ ಗಡಿಭಾಗದ ಶಾಲೆಗಳಾಗಿರುವ ಕಾರಣದಿಂದ ಶಾಲೆಯ ಹಬ್ಬಗಳು, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಆ ಇಡೀ ಊರಿಗೆ ಊರೇ ಸಂಭ್ರಮದಿಂದ ತಯಾರಿಗೊಳ್ಳುತ್ತದೆ. ಗಣರಾಜ್ಯ ದಿನಾಚರಣೆಗೆ ಒಂದು ವಾರದ ಹಿಂದಿನಿಂದಲೂ ತಯಾರಿ ಜೋರಾಗಿರುತ್ತದೆ. ಕರ್ನಾಟಕದ ನಕಾಶೆಯಲ್ಲಿ `ಕಾಳಿ ಹುಲಿ ಸಂರಕ್ಷಿತ ಪ್ರದೇಶ’ವೆಂದು ಗುರ್ತಿಸಿಕೊಂಡ `ಅಣಶಿ’ ಊರಿನ ಶಾಲೆಯಲ್ಲಿ ಆ ದಿನ ಹೊಸ ಸಂಭ್ರಮ ಪ್ರತಿ ಬೆಳಕಿನ ಕಿರಣದಲ್ಲೂ ಅಡಗಿದೆ. ಸುತ್ತ ಹಸಿರು ಗುಡ್ಡ, ಒತ್ತೊತ್ತಾದ ಮರಗಳ ನಡುವೆ ಸಣ್ಣ ಮೈದಾನ ಹೊಂದಿದ ಆ ಶಾಲೆಯ ಎದುರಿಗೆ ಗ್ರಾಮ ಪಂಚಾಯತಿ ಇದೆ. ಕುಣಬಿಗಳು, ದೇಸಾಯಿಗಳು, ಮಡಿವಾಳರು ಒಂದೆರಡು ಮುಸ್ಲಿಂ ಕುಟುಂಬಗಳು ಪ್ರೀತಿಯಿಂದ ವಾಸಿಸುವ ಹಳ್ಳಿ ಇದು. ಇಂತಿರ್ಪ ಕನ್ನಡ ಶಾಲೆಯಲ್ಲಿ ಹಬ್ಬ ಬಂತೆಂದರೆ ಶಿಕ್ಷಕರೇ ವಿದ್ಯಾರ್ಥಿಗಳಾಗಿ ತಯಾರಿಯಲ್ಲಿ ತೊಡಗಿಬಿಡುತ್ತಾರೆ. ಸರ್ಕಾರದಿಂದ ಶಾಲೆಗೆ ಸಿಗುವ ಅನುದಾನ ಕಡಿಮೆಯಿರುವುದರಿಂದ ಮಾಸ್ತರುಗಳು, ಬಾಯೋರು ಸೇರಿ ಹೆಡ್ ಬಾಯೋರ ಸಮ್ಮುಖದಲ್ಲಿ ಧ್ವಜದ ಕಟ್ಟೆಯ ಮುಂದೆ ಕುಳಿತು ಸಣ್ಣ ಮೀಟಿಂಗ್ ನಡೆಯುತ್ತದೆ. ಇರುವ ಹಣದಲ್ಲಿ ಶಾಲೆಗೆ ಸುಣ್ಣ ಬಣ್ಣ ಬಳಿಯಬೇಕಾಗಿದೆ. ಹಳ್ಳಿಯ ಕಡೆಗೆಲ್ಲ ಕಟ್ಟಡಕ್ಕೆ ಬಣ್ಣ ಮಾಡಿಕೊಡುವವರು ಬಹಳ ಕಡಿಮೆಯಿರುವುದರಿಂದ ತುರ್ತಾಗಿ ಬಣ್ಣ ಬಳಿಯಲು ಸಿಕ್ಕವರು ಸಿಕ್ಕಾಪಟ್ಟೆ ಹಣ ಕೇಳುತ್ತಾರೆ. ಹೀಗಾಗಿ, ಏಳನೆಯ ವರ್ಗದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತಾವೇ ಬಣ್ಣ ಬಳಿದು ಒಂದೊಂದೇ ಕೋಣೆಯನ್ನು ಮಕ್ಕಳಿಗೆ ಇಷ್ಟವಾದ ಬಣ್ಣದಿಂದಲೇ ಶೃಂಗರಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾರೆ. ಹಣ ಉಳಿತಾಯವಾಗಿದೆ ಎಂದು ಹೆಡ್ ಬಾಯಿ ಕೂಡ ಖುಷಿಯಾಗಿದ್ದಾರೆ. + +ಮೊನ್ನೆ ತಾನೆ ಸಂಕ್ರಾಂತಿಯ ಎಳ್ಳು, ಬೆಲ್ಲ, ಚಿರಮುರಿ ಹಂಚಿ ಖುಷಿಯಲ್ಲಿದ್ದ ಊರಿನ ಹಿರೀಕರೆಲ್ಲ ಗಣರಾಜ್ಯ ದಿನಾಚರಣೆ ಹತ್ತಿರ ಬರುತ್ತಿದೆ ಎಂದೇ ಅವರ ವೈಯಕ್ತಿಕ ಕೆಲಸ ಕಾರ್ಯ ಬೇಗ ಮುಗಿಸಿಕೊಳ್ಳುತ್ತಾರೆ. ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಪಾಲಕರು ಮಕ್ಕಳ ಜೊತೆಗೂಡಿ ಶಾಲಾ ಆವರಣ ಸ್ವಚ್ಛತೆಯ ಕೆಲಸ ಮಾಡಿದರೆ, ಅಡುಗೆಯವರು ತಲೆಗೊಂದು ಟೋಪಿ ತೊಟ್ಟು ಏಪ್ರಾನ್ ಹಾಕಿಕೊಂಡು, ಬಳಸದೇ ಇದ್ದ ದೊಡ್ಡ ಪಾತ್ರೆಗಳನ್ನೆಲ್ಲ ತೊಳೆಯುತ್ತಿದ್ದಾರೆ. ಕಳೆದ ರವಿವಾರ ಊರಿಗೆ ಹೋಗಿದ್ದ ಮೋಹನ ಸರ್ ಖುಷಿಯಿಂದ ಮೂವರಿಗೂ ದೊಡ್ಡ ಟೋಪಿ ತಂದು ಕೊಟ್ಟಿದ್ದಾರೆ. ಒಂದೇ ನಮೂನಿಯ ಮೂರು ಟೋಪಿಗಳು ಅದಲು ಬದಲಾಗಬಾರದು ಎಂದು ಬೇರೆ ಬೇರೆ ರೀತಿ ಬಣ್ಣದ ದಾರದಿಂದ ಹೊಲಿದುಕೊಂಡಿದ್ದಾರೆ. ಮುಖ್ಯ ಮತ್ತು ಸಹಾಯಕ ಅಡುಗೆಯವರ ಈ ಟೋಪಿಗಳು ಹೊಸತಾಗಿರುವುದರಿಂದ ಬಣ್ಣ ಎದ್ದು ಕಂಡು ಅವರ ಮುಖವು ಒಂದು ನಮೂನಿ ಹೊಳೆಯುತ್ತಿದೆ. ತಾಲೂಕು ಪಂಚಾಯಿತ ಅನುದಾನದಿಂದ ಕಟ್ಟುತ್ತಿರುವ ಹೊಸ ವರ್ಗಕೋಣೆಯ ಕಟ್ಟಡ ಕೆಲಸಕ್ಕೆ ತಂದ ಕಂಬಗಳ ಮೇಲೆ ಮೋಹನ ಮಾಸ್ತರರ ದೃಷ್ಟಿ ಬಿದ್ದಿದೆ. + +ಧ್ವಜದ ಸುತ್ತ ಕಂಬ ನೆಟ್ಟು ಪತಾಕೆ ಹಚ್ಚಲು ಎರಡು ದಿನದ ಮಟ್ಟಿಗೆ ಕಂಬ ಬೇಡಿ ಪಡೆದಿದ್ದಾರೆ. ತರಗತಿಯ ದೊಡ್ಡ ಹುಡುಗರು ದೇಸಾಯಿ ಮನೆಯಿಂದ ಎರಡು ಮೂರು ಹಾರೆ ತಂದು ಹೊಂಡ ತೆಗೆದು ಕಂಬ ನೆಟ್ಟು ಕಂಬ ಗಟ್ಟಿಯಾಗಿದೆಯೆ ಎಂದು ಪರೀಕ್ಷಿಸಲು ಮಲ್ಲ ಕಂಬದ ಮೊದಲ ಪಾಠ ಕಲಿತಿದ್ದಾಗಿದೆ. ಹಳೆ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳೆಲ್ಲ ಬಂದು ಬಾಯೋರಿಗೆ `ತಮ್ಮಿಂದ ಏನಾದರೂ ಕೆಲಸವಾಗಬೇಕೇ?’ ಎಂದು ಪ್ರಶ್ನಿಸಿದ್ದಾರೆ. ರಾಧಕ್ಕೋರು ನಗುತ್ತ ಅವರಿಗೊಂದು ಚಂದದ ಕೆಲಸ ಹೇಳಿದ್ದಾರೆ. ಊರಿನ ಸುತ್ತ ತಿರುಗಿ ಬಿದ್ದ ಸಗಣಿಯನ್ನೆಲ್ಲ ಆರಿಸಿ ತಂದು ಧ್ವಜ ಕಟ್ಟೆಯ ಸುತ್ತ ಸಾರಿಸಲು ಸೂಚಿಸಿದ್ದಾರೆ. ಆ ಕೆಲಸವನ್ನು ಮಾಡಲು ಖುಷಿಯಿಂದಲೇ ಹಳೆ ವಿದ್ಯಾರ್ಥಿಗಳು ತೆರಳಿದ್ದಾರೆ. ಅವರ ಕೈಯಲ್ಲಿ ಖಾಲಿಯಾದ ಬಣ್ಣದ ಡಬ್ಬಗಳಿವೆ. ಪೇಯಿಂಟ್ ತುಂಬಿದ್ದ ಖಾಲಿಯಾದ ಆ ಡಬ್ಬಗಳು ಬಕೇಟುಗಳಾಗಿ ಮಕ್ಕಳ ಕೈಯಿಂದ ಜಾರಿ ಬಿದ್ದರೂ ಒಡೆಯದೆ ಬಹುಕಾಲ ಬಾಳಿಕೆ ಬರುವಂತದು ಎಂದು ತಿಳಿದ ಕಾರಣದಿಂದ ಬಾಯೋರು ಮಕ್ಕಳಿಗೆ ಬಳಸಲು ಅಂತಹ ಹಳೆಯ ಬಕೇಟುಗಳನ್ನೇ ಕೊಡುತ್ತಾರೆ. ಮೂರನೆಯ ವರ್ಗದ ಸ್ನೇಹ ವೇಳಿಪ, ಗಿಡಕ್ಕೆ ನೀರು ಹಾಕುತ್ತೇನೆ ಎಂದು ಮೂರು ಬಕೇಟು ಒಡೆದದ್ದು, ಅಕ್ಕೋರಿಗೆ ತಲೆಬಿಸಿ ಆಗಿದ್ದು ಎಲ್ಲ ಮಕ್ಕಳಿಗೆ ಅರಿವಿದೆ. ಮಕ್ಕಳೆಲ್ಲ ಸೇರಿ ಕೆಲಸ ಮಾಡುವಾಗ ಇಂತಹ ಬಕೇಟುಗಳ ಅಗತ್ಯ ತೀರಾ ಇದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಊರಿನ ಸುತ್ತ ಬಿದ್ದ ಎಲ್ಲ ಸೆಗಣಿ ಹೆಕ್ಕಿ ಹಳೆಯ ವಿದ್ಯಾರ್ಥಿಗಳು ಹಾಡು ಹೇಳುತ್ತ ಸಾರಿಸಲು ಶುರು ಮಾಡಿದ್ದಾರೆ. `ದಶಮಿಚ ಫೂಲಗೋ ಮಗೇಲ್ ಬೈಣ ರೂಪಾಗೋ’ ಎಂದು ಒಬ್ಬೊಬ್ಬರ ಹೆಸರು ಹೇಳುತ್ತ ಮುಂದುವರೆಯುವ ಕುಣಬಿಗಳ ಸಾಂಪ್ರದಾಯಿಕ ಹಾಡು ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ರಾಧಕ್ಕೋರು ಕೂಡ ಮಕ್ಕಳ ಜೊತೆ ಹಾಡುತ್ತ ಹಿಡಿಯನ್ನು ತಿರುಗಿಸುತ್ತ ಮಣ್ಣಿನಂಗಳಕ್ಕೆ ಸಗಣಿಯ ಮೆತ್ತುತ್ತ ಖುಷಿಯನ್ನು ಹೆಚ್ಚಿಸುತ್ತಿದ್ದಾರೆ. ಮಕ್ಕಳ ಖುಷಿ ಕಂಡು ಸಗಣಿಯೂ ತನ್ನ ವಾಸನೆ ಮರೆತಂತಿದೆ. ಧ್ವಜದ ಕಟ್ಟೆ ಹಾಗೂ ಕಂಬಗಳು ಏಳನೇ ವರ್ಗದವರ ಕೈ ಸ್ಪರ್ಷಕ್ಕೆ ಪುಳಕಗೊಂಡು ಬಿಳಿ ಬಣ್ಣ ಮೆತ್ತಿಕೊಂಡಿದೆ. + +ಆರನೆಯ ವರ್ಗದ ನಾಗವೇಂದ್ರ ಹಾಗೂ ಅವನ ಗೆಳೆಯರು ಶಾಲೆಯ ಆವರಣದಲ್ಲಿರುವ ಮಾವಿನ ಮರದ ಎಲೆಯನ್ನು ಹೊತ್ತು ತರುತ್ತಿದ್ದಾರೆ. ಶಾಲೆಯ ಸುತ್ತ ಮಾವಿನ ತೋರಣ ಹಾಕುವ ಅವರ ಯೋಜನೆಗೆ ರಾಧಕ್ಕೋರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆರನೆಯ ವರ್ಗದ ಕನ್ನಡ ವಿಷಯದಲ್ಲಿ ಇರುವ `ಮಲ್ಲಜ್ಜನ ಮಳಿಗೆ’ ಎಂಬ ಪಾಠದ ರೀತಿಯಲ್ಲಿ ಇರುವ ಅಂಗಡಿಯಂತೆ ಒಂದೇ ಒಂದು ಅಂಗಡಿ ಅಣಶಿಯಲ್ಲಿಯೂ ಇದೆ. ಅಲ್ಲಿ ತೋರಣ ಕಟ್ಟಲು ಬೇಕಾದ ಸುತ್ಲಿ ಬಳ್ಳಿಯೂ ಸಿಗುತ್ತದೆ. ಬಣ್ಣದ ಕಾಗದಗಳು ಸಿಗುತ್ತವೆ. ಎಲ್ಲ ಒಂದೇ ಅಂಗಡಿಯಲ್ಲಿ ಲಭ್ಯ. ಆ ರಾಮಚಂದ್ರ ಕಾಜೂಗಾರನ ಅಂಗಡಿ ಅಣಶಿಯಲ್ಲಿಯೇ ಫೇಮಸ್. ಅಲ್ಲಿ ಸಿಗುವ ಬಣ್ಣದ ಕಾಗದಗಳು ಕೂಡ ಮೂರೇ ಬಣ್ಣದಲ್ಲಿ ಸಿಕ್ಕಿ ಸುತ್ತಲೂ ಪರಪರೆ ಹಚ್ಚಲು ಸಾಕಾಗದೆ ಚೂರು ಬೇಜಾರಾಗಿದೆ. ಮಕ್ಕಳ ಬೇಜಾರಿಗೆ ರಾಧಕ್ಕೋರು ಒಂದು ಪರಿಹಾರ ಸೂಚಿಸಿದ್ದಾರೆ. ಅಣಶಿಯ ಮೂಲಕ ಹಾದುಹೋಗುವ ಸಹೇಲಿ ಟೇಂಪೋದ ಮಾಲೀಕ ಹಾಗೂ ಚಾಲಕ ಅನ್ವರ ಬಯ್ಯಾನಿಗೆ ಹೇಳಿದರೆ ಅವನು ತಂದು ಮುಟ್ಟಿಸುತ್ತಾನೆಂಬ ನಂಬಿಕೆ ಇದೆ. ದಾಂಡೇಲಿಯಿಂದ ಉಳವಿ ಮಾರ್ಗವಾಗಿ ಅಣಶಿಯಿಂದ ಕಾರವಾರಕ್ಕೆ ಹಾದು ಹೋಗುವಾಗ ನಡುವೆ ಸಿಕ್ಕ ಹಳ್ಳಿಗರಿಗೆ ಅವಶ್ಯವಿದ್ದ ಕೆಲವು ಸಾಮಾನು, ಔಷಧಿಗಳನ್ನು ಅವನೇ ತಂದುಕೊಡುತ್ತಾನೆ. ಅವನ ಈ ಸೇವೆ ಮಕ್ಕಳಿಗೆ ಬಣ್ಣ ಬಣ್ಣದ ಕಾಗದ ತಂದು ಕೊಡುವಲ್ಲಿಯವರೆಗೆ ಮುಂದುವರೆದಿದೆ. ಏಳನೆಯ ವರ್ಗದ ಹುಡುಗಿಯರೆಲ್ಲ ಕಾಗದವನ್ನು ಮಡಚಿ ಚಂದವಾಗಿ ಕತ್ತರಿಸುತ್ತಿದ್ದಾರೆ. ರಾಧಕ್ಕೋರು ಅವರಿಗೆ ಪರಪರೆ ಕತ್ತರಿಸುವ ವಿಧಾನ ಹೇಳಿಕೊಟ್ಟಿದ್ದಾರೆ. ಇನ್ನು ಕೆಲವು ಹುಡುಗಿಯರು ಕಂಬಕ್ಕೆ ದಾರವನ್ನು ಕಟ್ಟಿ ಅಡುಗೆಯವರು ಮಾಡಿಕೊಟ್ಟ ಮೈದಾ ಹಿಟ್ಟಿನ ಅಂಟನ್ನು ನಾಜೂಕಾಗಿ ಬಣ್ಣದ ಹಾಳೆಗೆ ಹಾಕಿ ಕಟ್ಟಿದ ದಾರಕ್ಕೆ ಅಂಟಿಸುತ್ತಿದ್ದಾರೆ. ಎಂತಹ ಮರವನ್ನಾದರು ಕ್ಷಣ ಮಾತ್ರದಲ್ಲಿ ಮೇಲೇರುವ ಪ್ರಜ್ವಲ್ ಹಾಗು ಪ್ರವೀಣ ನೆಟ್ಟ ಕಂಬ ಹತ್ತುವುದರಲ್ಲೂ ಮುಂದೆ. ಕಂಬದ ತುದಿಯವರೆಗೂ ಹತ್ತಿ ಪರಪರೆಯ ದಾರ ಕಟ್ಟುವರು. ಹೆಡ್ ಬಾಯೋರು `ನಿಧಾನ ಹತ್ತು, ನಿಧಾನ’ ಎಂದು ಹೆದರಿಕೆಯನ್ನು ಹೊತ್ತಿದ್ದಾರೆ. ಆದರೆ ರಾಧಕ್ಕೋರು ಮಕ್ಕಳ ಮರ ಹತ್ತುವ ಕೌಶಲ್ಯ ಹತ್ತಿರದಿಂದ ಕಂಡವರು. ಖಂಡಿತ ಅವರು ಬೀಳಲಾರರು ಎಂಬ ನಂಬಿಕೆ ಅವರಿಗಿದೆ. ಅಷ್ಟೇ ಅಲ್ಲ, ಅನೇಕ ಸಲ ಮರ ಹತ್ತುವ ಆಟವನ್ನು ಕೂಡ ರಾಧಕ್ಕೋರು ಮಕ್ಕಳಿಗೆ ಆಡಿಸಿದ್ದಿದೆ. ಹುಡುಗಿಯರು ಪರಪರೆ ಅಂಟಿಸಿದ ದಾರವೀಗ ಕಂಬದ ತುದಿಯೇರಿ ನಗುತ್ತಿದೆ. ಮಕ್ಕಳ ಕಣ್ಣಲ್ಲಿ ಆಕಾಶಕ್ಕೊಂದು ತೂಗುಸೇತುವೆ ಕಟ್ಟಿದ ರೀತಿಯಲ್ಲಿ ಅದು ಕಂಡು ಹಾರಿ ಹಾರಿ ಕುಣಿಯುತ್ತಿದ್ದಾರೆ. ಪರಪರೆಯ ಚಪ್ಪರ ಶಾಲೆಗೊಂದು ಹೊಸ ಮೆರಗು ತಂದಿದೆ. ಸಣ್ಣ ಗಾಳಿ ಬಂದಾಗ ಪರಪರೆಯು ಅಲುಗಿ ಪಿಸುಮಾತನಾಡುತ್ತದೆ. ಇದೆಲ್ಲ ಸಡಗರ ತನ್ನಿಂದ ಎಂದು ಧ್ವಜದ ಕಟ್ಟೆಯೂ ಜಂಭ ತೋರುತ್ತಿದೆ. + +ಶಾಲೆಯ ಚಿತ್ರ ಕಲಾವಿದರ ಕೈಯಲ್ಲೀಗ ಬಿಳಿ ಬಣ್ಣದ ಶೇಡಿಯ ಗಟ್ಟಿಗಳು. ಶೇಡಿಯನ್ನು ನೀರಿನಲ್ಲಿ ಕಲಿಸಿ ಅಡಿಕೆ ಸಿಪ್ಪೆಯ ಸಹಾಯದಿಂದ ಗೆರಕಿ( ನಾಲ್ಕು ರೇಖೆ ಒಂದೇ ಬಾರಿ ಮೂಡಿಸಲು ತಯಾರಿಸಿಕೊಂಡ ಬೆರಳಿನಾಕಾರದಂತೆ ಕಾಣುವ ಬ್ರಷ್) ತಯಾರಿಸಿಕೊಂಡು ಅಂಗಳದ ತುಂಬ ಹಲಿ ಹಾಕುತ್ತಿದ್ದಾರೆ. ಯಾವುದೇ ಖರ್ಚಿಲ್ಲದೇ ಅಣಶಿಯಲ್ಲಿ ಸಿಗುವ ಶೇಡಿಯಿಂದ(ಒಂದು ರೀತಿಯ ಬಿಳಿ ಮಣ್ಣು) ಮಕ್ಕಳು ಚಿತ್ರ ರಚಿಸುತ್ತಿದ್ದಾರೆ. ಅದು ಒಣಗಿದ ನಂತರ ಬಿಳಿ ಬಣ್ಣ ಅಚ್ಚಾಗಿ ಕಂಡು ಹಲಿ(ರಂಗೋಲಿ) ಎದ್ದು ಕಾಣುತ್ತದೆ. ರಾಧಕ್ಕೋರು ಈ ಹಿಂದೆಯೇ ಹಲಿ ತೆಗೆಯುವ ವಿಧಾನ ಕಲಿಸಿದ್ದಾರೆ. ಟಾಟಾ ಫೆಲೋಶಿಫ್ ಪಡೆದ ಹೊನ್ನಾವರದ ಹನುಮಿ ಗೌಡ ಶೇಡಿ ಬಳಸಿ ಚಂದದ ಚಿತ್ರ ತೆಗೆಯುತ್ತಾರೆ. ಅವರ ಜಾನಪದ ಕಲೆಗೆ ಹಲವಾರು ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಹನುಮಿಯವರಿಂದ ಹಲಿ ತೆಗೆಯುವುದನ್ನು ಕಲಿತ ರಾಧಕ್ಕೋರು ಅಣಶಿ ಶಾಲೆಯ ಎಲ್ಲ ಮಕ್ಕಳಿಗೆ ಹಲಿ ತೆಗೆಯುವುದನ್ನು ಕಲಿಸಿದ್ದಾರೆ. ಮಕ್ಕಳ ಕಲಿಕೆಯ ಫಲವೀಗ ಜನವರಿ ಇಪ್ಪತ್ತೈದರಿಂದಲೇ ದಾಖಲಾಗುತ್ತಿದೆ. ಶಾಲೆಯ ಚಿಟ್ಟಿ ಮೇಲೆ ಹಲಿ ಮೈ ಅರಳಿಸಿಕೊಂಡು ಕಣ್ಣು ಹೊಡೆಯುತ್ತಿದೆ. + +ಗಣರಾಜ್ಯ ದಿನಾಚರಣೆಯ ಪೂರ್ವಭಾವಿ ತಯಾರಿ, ಮಕ್ಕಳ ಉತ್ಸಾಹ ನೋಡಲು ಬಂದ ಗ್ರಾಮ ಪಂಚಾಯತಿಯ ಪಿ.ಡಿ.ಓ ಎನ್.ಆರ್.ಅಕ್ಕಿ ಸಾಹೇಬರು ಖುಷಿಗೊಂಡು ಜಾನಪದ ಕಲೆ ಬಿಡಿಸಿದ ಮಕ್ಕಳಿಗೆ ಬಹುಮಾನ ಘೋಷಿಸಿದ್ದಾರೆ. ಶಾಲೆಯ ಕೆಲವು ಮಕ್ಕಳು ಕಳೆದ ಒಂದು ವಾರದಿಂದ ತಮ್ಮಷ್ಟಕ್ಕೆ ತಾವೇ ಗುಣುಗುಡುತ್ತ ಭಾಷಣ ಬಾಯಿಪಾಠ ಮಾಡುವ ತುರ್ತಿನಲ್ಲಿದ್ದಾರೆ. ಗಟ್ಟು ಹಾಕಿದಷ್ಟೂ ಹೊತ್ತು ಸರಿ ಹೇಳಿ ಮಾರನೆಯ ದಿನ ಮತ್ತೆ ಕೇಳಿದರೆ ತಪ್ಪುವ ಮೂರನೇ ವರ್ಗದ ಆಯೇರಾಳ ಉರ್ದು ಭಾಷಣ ಕೇಳಿದಷ್ಟು ನಗು ಹುಟ್ಟಿಸುತ್ತದೆ. ಶಾಲೆಯ ಪ್ರಸಿದ್ಧ ಗಾಯಕರು ಸಂಗೀತ ವಿದ್ವಾಂಸರಂತೆ ದೇಶಭಕ್ತಿಗೀತೆ ಹೊಸಬಗೆಯಲ್ಲಿ ಹಾಡಲು ತಾಲೀಮು ನಡೆಸಿದ್ದಾರೆ. + + + +ಇಂತಹ ಹಬ್ಬಗಳಲ್ಲಂತೂ ಮಕ್ಕಳು ಶಾಲೆಗೆ ಬರುವ ಸನ್ನಿವೇಶವಂತೂ ಮರೆಯಲಾಗದು. ಸಂಕ್ರಾಂತಿ ಕಳೆದರೂ ಚಳಿ ಕಡಿಮೆಯಾಗದ ಹೊತ್ತು ಇದು. ಶಾಲೆಗೆ ಆರು ಕಿ.ಮೀ ನಡೆದು ಬರುವ ಮಕ್ಕಳು, ಎರಡು ಕಿ.ಮೀ ಮಣ್ಣಿನ ರಸ್ತೆಯಲ್ಲಿ ನಡೆದು ನಂತರ ಮುಖ್ಯ ರಸ್ತೆಗೆ ಬಂದು ಬೆಳಿಗ್ಗಿನ ಬಸ್ ಹತ್ತಿ ಶಾಲೆಗೆ ಬರುವ ಮಕ್ಕಳಿಗೆಲ್ಲ ಬೆಳಕು ಹರಿದು ಬಿಡಬಹುದೆಂದು ರಾತ್ರಿ ಸರಿ ನಿದ್ದೆಯೇ ಬಾರದು. ರಾಧಕ್ಕೋರು ತರಗತಿಯಲ್ಲಿ ಓದಿದ `ಎಲ್ಲರು ಸರಿಯಾಗಿ 7-30 ಕ್ಕೆ ಬರಬೇಕು’ ಎಂಬ ನೋಟಿಸು ಕನಸಲ್ಲೂ ನಕ್ಕಂತೆ ಕಾಣುವುದು. ಅಮ್ಮ ಹಚ್ಚಿದ ಒಲೆಯಲ್ಲಿ ಕರಗುವ ಕಟ್ಟಿಗೆ ತುಂಡುಗಳ ಸದ್ದು ಅಲಾರಾಂ ಆಗಿ ಮಕ್ಕಳನ್ನು ಎಬ್ಬಿಸಿವೆ. ವಿದ್ಯುತ್ ಸಂಪರ್ಕವಿಲ್ಲದ ಇಲ್ಲಿನ ಕೆಲ ಊರುಗಳಲ್ಲಿ ಒಂದೇ ಚಿಮಣಿಯಿರುವ ಕುಟುಂಬಗಳಲ್ಲಿ ಹೀರೋಗಳಂತೆ ತಯಾರಾಗುವ ಕನಸು ಕಂಡ ಮಕ್ಕಳು ಕತ್ತಲೆಯ ಗವಿಯಲ್ಲಿ ಒಂದು ಕಾಲಿಗೆ ನೀಲಿ, ಇನ್ನೊಂದು ಕಾಲಿಗೆ ಕರಿ ಬಣ್ಣದ ಸಾಕ್ಸ ಧರಿಸಿ ಬರುವ ಪ್ರಸಂಗಗಳು, ದೂರದೂರಿನಿಂದ ನಡೆದು ಬರಲಾಗದೆ ಅಣಶಿಯಲ್ಲಿ ಸಂಬಂಧಿಕರ ಮನೆಯಲ್ಲಿ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡವರು, ರಾತ್ರಿ, ಕೈಯಲ್ಲಿ ಒತ್ತಿ ಒತ್ತಿ ಗರಿಮುರಿಯಾದ ಸಮವಸ್ತ್ರ ಮತ್ತೆ ಮುದ್ದೆಯಾಗಿ ಉಸಿರುಗಟ್ಟಿ ಬಾಡಿದ ಘಟನೆಗಳು, ಎರಡನೆಯ ಸೆಮಿಸ್ಟರ್‌ಗೆ ಕೊಟ್ಟ ಸಮವಸ್ತ್ರ ಇನ್ನೂ ಹೊಲಿಸಿಕೊಳ್ಳಲಾಗದೆ ಹಳೆಯದನ್ನೆ ಹಾಕಿ ಬಂದ ಮಕ್ಕಳ ನೋವು ದೊಡ್ಡ ತರಗತಿಯವರು ಬಾರಿಸುತ್ತಿದ್ದ ಶಾಲೆಯ ಬ್ಯಾಂಡ್ ಸೆಟ್ಟಿನ ಖುಷಿ, ಶಬ್ದಕ್ಕೆ ಹೆದರಿ ಮರದಿಂದ ಮರಕ್ಕೆ ಬಳ್ಳಿಗಳ ಹಿಡಿದು ಹಾರುವ ಮಂಗಗಳ ಹಗ್ಗ ಜಗ್ಗಾಟ, ಮಂಗನ ಕಂಡೊಡನೆ ಕರ್ನಾಟಕದ ಕೆಲವು ಅರಣ್ಯ ಇರುವ ಊರಲ್ಲಿ ಹರಡುತ್ತಿರುವ ಮಂಗನ ಕಾಯಿಲೆ ಹಾಗೂ ಅದರಿಂದಾಗಿ ಜನ ಸತ್ತುಹೋಗಿರುವುದೆಲ್ಲ ರಾಧಕ್ಕೋರಿಗೆ ನೆನಪಾಗಿ `ಅಣಶಿ ಸುರಕ್ಷಿತವಾಗಿರಲಿ’ ಎಂದು ಊರಿನ ಸಿದ್ದೇಶ್ವರನಿಗೆ ಅರ್ಪಿಸಿದ ಒಂದು ಬೇಡಿಕೆ, ಕಾಡಿನ ನೀರವತೆ ಮೀರಿ ಅರಣ್ಯ ಇಲಾಖೆಯವರ ಆಫೀಸಿನ ಮೈಕೋದಲ್ಲಿ ಕೇಳಿ ಬರುವ `ಹಿಂದ್ ದೇಶಕೆ ನಿವಾಸಿ ಸಭಿ ಜನ ಏಕ ಹೈ’ ಎಂಬ ಹಾಡು, ಧ್ವಜ ಹಾರಿಸಲು ಈ ಬಾರಿ ಸೀರೆಗೆ ಸ್ಪೇಷಲ್ ಇಸ್ತ್ರಿ ಕುಂಬಾರವಾಡಾದಿಂದ ಮಾಡಿಸಿಕೊಂಡು ಬಂದ ಎಸ್.ಡಿ.ಎಮ್.ಸಿ ಅಧ್ಯಕ್ಷೆ, ತಾವು ಕಟ್ಟಿದ ಧ್ವಜ ಹಾರುವವರೆಗೂ ಆತಂಕದಲ್ಲಿರುವ ರಾಧಕ್ಕೋರು, ಧ್ವಜ ಹಾರಿದ ಕೂಡಲೇ ರಾಷ್ಟ್ರಗೀತೆ ಪಟ್ ಅಂತ ಹಾಡಬೇಕು ಎಂದು ತಲೆಯಲ್ಲಿ ತುಂಬಿಕೊಂಡ ಶಾಲೆಯ ಮುಖ್ಯಮಂತ್ರಿ, ಅಧ್ಯಕ್ಷೆ ಧ್ವಜ ಕಟ್ಟೆಯ ಮುಂದೆ ಬಂದು ನಿಲ್ಲುವ ಮುನ್ನವೇ ಗಡಿಬಿಡಿಯಲ್ಲಿ `ಹಿಲೋ ಮತ್’ ಎಂದ ಪ್ರಭಾತಫೇರಿಗೆ ಹೊರಡುವ ತಂಡದ ನಾಯಕನ ಆದೇಶಕ್ಕೆ ನಕ್ಕ ಮಕ್ಕಳ ಖುಷಿ, ಧ್ವಜಾರೋಹಣದ ನಂತರ ಕೊಡುವ ಚಾಕೋಲೇಟ್ ಆಸೆ, ಕೆಲವರಿಗೆ ಅರಣ್ಯ ಇಲಾಖೆಯವರು, ಗ್ರಾಮ ಪಂಚಾಯತಿಯವರು ಕೊಡುವ ಬೂಂಧಿ ಲಾಡು ಬಾಯಲ್ಲಿ ನೀರು, ದಾರಿಯುದ್ದಕ್ಕೂ ಮಕ್ಕಳ ಚಡ್ಡಿಕಿಸೆಯಲ್ಲಿ ಸದ್ದಿಡುವ ಚಾಕಲೇಟ್ ರ್ಯಾಪರ್, ಪದೇ ಪದೇ ಮುಟ್ಟಿ `ಬಿದ್ದಿಲ್ಲ ತಾನೇ’ ಎಂದು ನೋಡಿಕೊಳ್ಳುವ ಮಕ್ಕಳ ಹೂವಿನಂತಹ ಕೈಗಳು.. ಹೀಗೆ ವಿಧವಿಧದ ಚಿತ್ರಗಳು.. ಊರಿನ ತುಂಬ ಬಣ್ಣಗಳು.. ಎಲ್ಲರೆದೆಯಲ್ಲಿ ಜನವರಿ ಇಪ್ಪತ್ತಾರರ ಸಂತಸಗಳು.. ಬನ್ನಿ, ನಾವು ಸೇರಿಕೊಳ್ಳೋಣ `ಈ-ಸ್ಕೂಲಿ’ನೊಳಗೆ. + +(ಪುಸ್ತಕ ಬಿಡುಗಡೆ ಸಮಾರಂಭ-  ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಬೆಂಗಳೂರು, 14/01/2023 ಶನಿವಾರ, ಸಂಜೆ 4:30ಕ್ಕೆ) + +ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ \ No newline at end of file diff --git a/Kenda Sampige/article_161.txt b/Kenda Sampige/article_161.txt new file mode 100644 index 0000000000000000000000000000000000000000..fa033c17ad1adc659744ffad552c9f3bb445c9dc --- /dev/null +++ b/Kenda Sampige/article_161.txt @@ -0,0 +1,23 @@ +ಸನ್ಮಿತ್ರ ಶ್ರೀ ನಾರಾಯಣ ಯಾಜಿ ಅವರ ಅಂಕಣ ಬರಹಗಳನ್ನು ಓದುವುದೇ ಒಂದು ಹಿತದ ಅನುಭವ. ಸಂಸ್ಕೃತದ ಕಾವ್ಯ ಪುರಾಣ ಉಪನಿಷತ್ತುಗಳು, ಕನ್ನಡ ಹಾಗೂ ಆಂಗ್ಲ ಸಾಹಿತ್ಯದ ಆಳವಾದ ಓದಿನಿಂದ ಪಡೆದ ಜ್ಞಾನದ ಸಾರ್ಥಕ ಅವತರಣಿಕೆಯಾಗಿ ಈ ಕೃತಿ ಮೂಡಿಬಂದಿದೆ. ಜತೆಗೆ ಯಕ್ಷಗಾನ ಅರ್ಥಧಾರಿಯಾಗಿ ಅವರು ಪಡೆದ ಅನುಭವವೂ ಇಲ್ಲಿನ ಬರಹಗಳಲ್ಲಿ ಕೈಗೂಡಿಸಿದೆ. + +(ನಾರಾಯಣ ಯಾಜಿ) + +ಸಾಮಾನ್ಯವಾಗಿ ಅಂಕಣ ಬರಹಗಳು ಆಯಾ ಕ್ಷಣದ ದಾಖಲೆಗಳಾಗಿರುತ್ತವೆ. ಒಂದು ಕಾಲದ ಬಳಿಕ ಅವು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಆದರೆ ಯಾಜಿಯವರು ಅಂಥ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಸಾರ್ವಕಾಲಿಕವಾದ ಕೆಲವು ಸಂಗತಿಗಳನ್ನು ಎತ್ತಿಕೊಂಡು ಬರೆದಿದ್ದಾರೆ. ಇದು ಅವುಗಳನ್ನು ಕ್ಷಣಿಕತೆಯಿಂದ ಪಾರು ಮಾಡಿವೆ. ಆದರೆ ಸಮಕಾಲೀನ ಸ್ಪರ್ಶವೂ ಇವುಗಳಿಗೆ ಇದೆ. ಅವರ ಹೆಚ್ಚಿನ ಬರಹಗಳು ಉಪನಿಷತ್ತುಗಳು, ಪುರಾಣಗಳು, ಆದಿಕಾವ್ಯಗಳ ಆಟದ ಅಂಗಳಲ್ಲಿ ಕುಣಿದಾಡುತ್ತದೆ. ಅಲ್ಲಿಂದ ಕತೆಗಳನ್ನು ಎತ್ತಿಕೊಂಡು ಬಂದು ನಮ್ಮ ಮುಂದಿಟ್ಟು ಅವುಗಳಲ್ಲಿ ಹೊಸ ವಿಚಾರಗಳನ್ನು ಯಾಜಿ ನಮಗೆ ಕಾಣಿಸುತ್ತಾರೆ. ಆದರೆ ಆಂಗ್ಲ ಸಾಹಿತ್ಯದ ‘ಮಹಾ ಭಿಕ್ಷುಕʼನೆಂದೇ ಹೆಸರಾದ ವಿಲಿಯಂ ಹೆನ್ರಿ ಡೇವಿಸ್‌ ಬಗೆಗೂ ಬರೆದು ಅಚ್ಚರಿ ಮೂಡಿಸುತ್ತಾರೆ. + +ಯಾಜಿಯವರು ಸರ್ಚ್‌ಲೈಟ್‌ ಬೀರದ ಸಂಗತಿಗಳು ವಿರಳ. ನಾವೆಲ್ಲ ಮರೆತೇ ಬಿಟ್ಟಿರುವ ವೇದಕಾಲದ ಮಹಾಜ್ಞಾನಿ, ಗಾರ್ಗಿ ವಾಚಕ್ನವಿ ಎಂಬ ಮಹಾಪಂಡಿತೆಯ ಬಗೆಗೂ ಬೆಳಕು ಚೆಲ್ಲುತ್ತಾರೆ. ಗೌತಮ ಬುದ್ಧ ಕರ್ಮಯೋಗವನ್ನು ಪ್ರತಿಪಾದಿಸಿದವನು ಎಂದು ಹೇಳುತ್ತಾ ಬುದ್ಧನೂ ನಮ್ಮ ಪರಂಪರೆಯ ಜತೆಗೆ ಹೊಂದಿರುವ ಸಾಂಗತ್ಯವನ್ನು ಗುರುತಿಸುತ್ತಾರೆ. ಶಂಕರಾಚಾರ್ಯರ ಅದ್ವೈತ ವಿಚಾರದ ವಿಲಾಸವನ್ನು ಬೆರಗಾಗುವಂತೆ ಕಟ್ಟಿಕೊಡುತ್ತಾರೆ. ಹಾಗೆಯೇ ಪುರಾಣದ ಹತಭಾಗ್ಯ ಸ್ತ್ರೀ ಪಾತ್ರಗಳ ಬಗ್ಗೆ ತುಂಬಾ ಮಮತೆಯಿಂದ ಅವರು ಬರೆಯುತ್ತಾರೆ. ಉದಾಹರಣೆಗೆ, ಮಹಾಭಾರತದ ಅಂಬೆ, ಕುಂತಿ, ರಾಮಾಯಣದ ಕೈಕೇಯಿ ಮುಂತಾದವರು. ಹಾಗೇ ಕಿಬ್ಬಚ್ಚಲ ಮಂಜಮ್ಮ ಎಂಬ ಅಜ್ಞಾತ ಅಪರೂಪದ ಯಕ್ಷಗಾನ ಕೃತಿಕಾರ್ತಿಯ ಬಗೆಗೂ ಬೆಳಕು ಚೆಲ್ಲುತ್ತಾರೆ. ‘ರಾಷ್ಟ್ರವೆನ್ನುವುದು ಅಸ್ಮಿತೆಯ ಭಾವನಾತ್ಮಕ ಅನುಬಂಧʼ ಎನ್ನುವ ಮೂಲಕ ಹೊಸ ಬಗೆಯ ವ್ಯಾಖ್ಯಾನವನ್ನೇ ನೀಡುತ್ತಾರೆ. ಮಹಾಕವಿ ಪಂಪನ ಬಗ್ಗೆ ಬರೆದಂತೆಯೇ ಇತಿಹಾಸದಲ್ಲಿ ಮರೆಯಾದ ಎರಡನೇ ಸಿಪಾಯಿ ಕ್ರಾಂತಿಯ ಬಗ್ಗೆಯೂ ಅಷ್ಟೇ ಅಥೆಂಟಿಕ್‌ ಆಗಿ ಬರೆಯುತ್ತಾರೆ. + + + +ಇಲ್ಲಿ ಭೂಮಿಯನ್ನು ಮೇಲಿದ್ದುಕೊಂಡು ಕಾಪಾಡುವ, ‘ದ್ಯುಲೋಕʼ ಕರೆಯಲಾಗುವ ಸ್ವರ್ಗೀಯ ಸಂಗತಿಗಳಿಗೆ ಸಂಬಂಧಪಟ್ಟ, ಹಾಗೇ ಈ ಮಣ್ಣಿಗೂ ಮನುಷ್ಯರ ಭಾವನೆಗಳಿಗೂ ಸಂಬಂಧಿಸಿದ ಬರಹಗಳೂ ಇವೆ. ಹೀಗಾಗಿಯೇ ‘ನೆಲ ಮುಗಿಲುʼ ಎಂಬ ಹೆಸರು ಈ ಕೃತಿಗೆ ಅರ್ಥಪೂರ್ಣವಾಗಿದೆ. ಯಾಜಿಯವರು ಇಲ್ಲಿನ ಬರಹಗಳನ್ನು ‘ಅಂಬರದಿಂದʼ ಮತ್ತು ‘ಅವನಿಯ ತನಕʼ ಎಂಬ ಎರಡು ವಿಭಾಗಗಳನ್ನು ಮಾಡಿದ್ದಾರೆ. ಮನುಷ್ಯನ ಬದುಕು ಈ ಭೂಮಿಯ ಸಂಗತಿಗಳಿಗೆ ಹೊಂದಿಕೊಂಡಿರುವಂತೆಯೇ, ಅಮೂರ್ತವಾದ ಅನೇಕ ಸಂಗತಿಗಳಿಗೂ ಕೃತಜ್ಞವಾಗಿದೆ ಎಂಬುದನ್ನು ಇದು ಸಾರುತ್ತದೆ. ಉದಾಹರಣೆಗೆ ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ಅಯತಾತ್ಮಾ ಬ್ರಹ್ಮ ಎಂಬ ಉಪನಿಷತ್ತಿನ ವಾಕ್ಯಗಳಿಗೆ ಇವರು ಮಾಡುವ ವ್ಯಾಖ್ಯಾನಗಳನ್ನೇ ಪರಿಶೀಲಿಸಬಹುದು. ಅಂಥ ಇನ್ನಷ್ಟು ಗಾಢವಾದ ಓದಿಗಾಗಿ ಓದುಗನನ್ನು ಸಜ್ಜುಮಾಡುವ ಬಗೆಯ ಬರಹಗಳು ಇವು. + +ಇಲ್ಲಿ ಎರಡು ಮೂರು ಬಾರಿ ಓದಿ ಅರ್ಥಮಾಡಿಕೊಳ್ಳಬೇಕಾದಂಥ ಬರಹಗಳು, ವಾಕ್ಯಗಳು ಇವೆ. ಉದಾಹರಣೆಗೆ, ನಚಿಕೇತನ ಬಗೆಗಿನ ಬರಹದಲ್ಲಿ ಬರುವ “ಹುಟ್ಟು ಸಾವುಗಳು ಕೇವಲ ಕರ್ತೃ ಮತ್ತು ಕರ್ಮಗಳಿಲ್ಲದ ಕ್ರಿಯೆ ಆಗಬೇಕು” ಎಂಬ ಮಾತು. ಹಾಗೇ ಈಶಾವಾಸ್ಯ ಉಪನಿಷತ್ತಿನ ಬಗ್ಗೆ ಬರೆದ ಬರಹದಲ್ಲಿ ಬರುವ “ನಮ್ಮೊಳಗಿನ ಆತನನ್ನು ಅರಿಯಲು ಹೊರಗಡೆ ಕಟ್ಟಿದ ನಮ್ಮದೇ ಆವರಣವನ್ನು ನಾವು ಮುರಿಯಬೇಕು” ಎಂಬ ಮಾತು. ಹಾಗೇ ಮಹಾತ್ಮ ಗಾಂಧಿಯವರ ಬಗ್ಗೆ ಹೇಳುವ ‘ಭಯವಿಲ್ಲದ ಅಸ್ತ್ರದಿಂದಲೇ ಭಯ ಹುಟ್ಟಿಸಿದ ಸಂತʼ ಎಂಬ ಮಾತು. ಇಂಥ ಸಾಲುಗಳನ್ನು ತೀರಾ ಮಗ್ನವಾಗಿ ಓದದೇ ಹೋದ ಹೊರತು ಅರ್ಥ ಮಾಡಿಕೊಳ್ಳಲಾಗದು. + +(ಹರಿಪ್ರಕಾಶ್‌ ಕೋಣೆಮನೆ) + +ಹಾಗೇ ಇವೆಲ್ಲವನ್ನೂ ಅವರು ಈ ಕಾಲದ ಜ್ಞಾನದ ಜತೆಗೆ ಸೊಗಸಾಗಿ ತಳುಕು ಹಾಕುತ್ತಾರೆ. ಉದಾಹರಣೆಗೆ, ಕಠೋಪನಿಷತ್ತಿನ ನಚಿಕೇತನ ವಿನಯವನ್ನು ಬಸವಣ್ಣನವರ ‘ಎನಗಿಂತ ಕಿರಿಯರಿಲ್ಲʼ ಎಂಬ ವಚನದ ಜತೆಗೆ ಹೋಲಿಸಿ ಅವರು ನೀಡುವ ಹೋಲಿಕೆ ಇಡೀ ಬರಹಕ್ಕೇ ಒಂದು ಹೊಸ ಆಯಾಮವನ್ನು ನೀಡುತ್ತದೆ. ಹಾಗೆಯೇ, ಈಶಾವಾಸ್ಯೋಪನಿಷತ್ತಿನ ‘ತೇನ ತ್ಯಕ್ತೇನ ಭುಂಜೀಥಾʼ (ತ್ಯಾಗದಿಂದಲೇ ಅನುಭವಿಸಬೇಕು) ಎಂಬ ಮಾತನ್ನು ಇವರು ಇಸ್ಲಾಂನ ಕುರಾನ್‌ನ ‘ನಿನ್ನ ನೆರೆಮನೆಯವರು ಉಪವಾಸವಿದ್ದಾಗ ನೀನು ಹಬ್ಬ ಮಾಡಕೂಡದುʼ ಎಂಬ ಮಾತಿಗೆ, ‘ಎಲ್ಲ ಉತ್ತಮ ಉಡುಗೊರೆಗಳೂ ನಮಗೆ ಸ್ವರ್ಗದಿಂದ ಕೊಡಲ್ಪಟ್ಟಿವೆʼ ಎಂಬ ಬೈಬಲ್‌ಗೆ ಮಾತಿಗೆ ಹೋಲಿಸುತ್ತಾರೆ. ಇದು ಎಷ್ಟು ಸೊಗಸಾಗಿದೆ ಅಲ್ಲವೇ? + + + +ಹೀಗೆ ನಮ್ಮನ್ನು ಪುರಾಣ- ಉಪನಿಷತ್ತು- ಇತಿಹಾಸ- ವರ್ತಮಾನಗಳ ಕೋಣೆ ಕೋಣೆಗಳಲ್ಲಿ ಸುತ್ತಾಡಿಸುವ ಇವರ ಬರಹಗಳು ನನಗಂತೂ ತುಂಬಾ ತಿಳಿವನ್ನೂ ಆನಂದವನ್ನೂ ಕೊಟ್ಟಿವೆ. ನಿಮಗೂ ನೀಡಲಿದೆ ಎಂಬ ದೃಢವಿಶ್ವಾಸ ನನ್ನದು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_162.txt b/Kenda Sampige/article_162.txt new file mode 100644 index 0000000000000000000000000000000000000000..a2964c9979a60cea8385275b5f001f14f312050d --- /dev/null +++ b/Kenda Sampige/article_162.txt @@ -0,0 +1,37 @@ +ಮಹಾತ್ಮಾ ಗಾಂಧಿ ಎನ್ನುವ ಹೆಸರು ಮೂಡಿಸುವ ಭಾವನೆಗಳೇ ಬೇರೆ. ತುಂಡು ಬಟ್ಟೆಯ ಫಕೀರ ತನಗಾಗಿ ಅಂತ ಗಳಿಸಿರುವದು ಏನೂ ಇಲ್ಲ. ಆದರೆ ಆತ ಕೊಟ್ಟುಹೋದ ಮೌಲ್ಯಗಳ ಮೌಲ್ಯವನ್ನು ಮಾತ್ರ ಸರಿಗಟ್ಟಲಾಗದು. ಗಾಂಧಿಯವರ ವಿಷಯವನ್ನು ಓದುವದೆಂದರೆ ಅದೊಂದು ಸೊಗಸು, ಬೆರಗು ಮತ್ತು ಅಚ್ಚರಿಗಳ ಮಿಶ್ರಣದ ಭಾವ. ಅವರ ವ್ಯಕ್ತಿತ್ವದ ಕುರಿತು ಹೇಳುವಾಗ ಸತ್ಯ ಮತ್ತು ಅಹಿಂಸೆಯನ್ನು ಬಿಟ್ಟು ಸಾಗುವುದೇ ಇಲ್ಲ. ಭಾರತಕ್ಕೆ ಸ್ವಾತಂತ್ರ್ಯವನ್ನು ತರಲು ಅವರು ಮಾಡಿದ ಹೋರಾಟಗಳು ಸಾಮಾನ್ಯವೇನಲ್ಲ. 1915ರಲ್ಲಿ ಭಾರತಕ್ಕೆ ಗೋಪಾಲಕೃಷ್ಣ ಗೋಖಲೆಯವರ ಆಗ್ರಹದ ಮೇರೆಗೆ ಗಾಂಧಿ ಮುಂಬಯಿಗೆ ಬಂದು ಇಳಿದು ಇಲ್ಲಿನ ಸ್ವಾತಂತ್ರ್ಯದ ಹೋರಾಟದ ನೇತೃತ್ವವನ್ನು ವಹಿಸಿಕೊಂಡಮೇಲೆ ಕಾಂಗ್ರೆಸ್ಸಿನ ಹೋರಾಟಕ್ಕೆ ಒಂದು ನಿರ್ದಿಷ್ಟಸ್ವರೂಪ ಬಂದಿರುವುದು. ಇಂಥಹ ಗಾಂಧಿಯವರ ಕುರಿತು ನೂರಾರು ಪುಸ್ತಕಗಳು ಪರವಾಗಿ ಮತ್ತು ವಿರೋಧವಾಗಿ ಬಂದಿವೆ. ಕನ್ನಡದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ ಅನುವಾದಿಸಿದ “ನನ್ನ ಆತ್ಮ ಕಥೆ ಅಥವಾ ನನ್ನ ಸತ್ಯಶೋಧನೆಯ ಕಥೆ” ಗಾಂಧಿಯ ಓದುಗರಿಗೆ ಒಂದು ಕೈಪಿಡಿ. ಗಾಂಧಿಯೆನ್ನುವ ಸಂಕೀರ್ಣ ವ್ಯಕ್ತಿತ್ವವನ್ನು ಸಮಗ್ರವಾಗಿ ಓದಲು ಈ ಕೈಪಿಡಿ ಅಪೂರ್ಣವೆಂದು ಅನೇಕಸಲ ಅನಿಸಿದೆ. ಗಾಂಧಿ ತನ್ನನ್ನು ತಾನು ನೋಡಿಕೊಂಡು ಬರೆದಿರುವುದಕ್ಕೂ ಅವರನ್ನು ಇನ್ನೊಬ್ಬರು ಭೂತಕನ್ನಡಿಯಲ್ಲಿ ನೋಡಿ ಆ ವ್ಯಕ್ತಿತ್ವವನ್ನು ಅಳೆಯುವುದಕ್ಕೂ ವ್ಯತ್ಯಾಸವಿದೆ. ಯಾವ ವ್ಯಕ್ತಿಯೇ ಆಗಲಿ, ಆತ್ಮಕಥೆ ಬರೆಯುವಾಗ ಆತ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಲೇ ಇರುತ್ತಾನೆ. ಇದು ಆತ್ಮ ಕಥೆಯ ಮಿತಿಯೂ ಹೌದು. ಆದರೆ ಇನ್ನೊಬ್ಬರು ಅಳೆಯುವಾಗ ಅದು ಮಾನಸಹಿತವಾಗಿರುತ್ತದೆ. ಮಾನವೆನ್ನುವುದು ಅಳತೆ ಎನ್ನುವ ಅರ್ಥ. ನಾನು ಹೀಗಿದ್ದೇನೆ ಎಂದು ನಮಗೆ ನಾವೇ ಹೇಳಿಕೊಳ್ಳುವುದಕ್ಕಿಂತ ಇನ್ನೊಬ್ಬರು ನಮ್ಮ ಕುರಿತು ಯಾವ ಅಭಿಪ್ರಾಯ ಪಟ್ಟಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಇದು ವ್ಯಕ್ತಿಯ ಮುಖಕ್ಕೆ ಹಿಡಿದ ಕನ್ನಡಿಯೂ ಹೌದು. + +(ರಾಮಚಂದ್ರ ಹಬ್ಬು) + +ಗಾಂಧಿಯ ಕುರಿತು ಇಷ್ಟೊಂದು ಆಸಕ್ತಿ ಮತ್ತೆ ಹುಟ್ಟಿಸಿರುವುದಕ್ಕೆ ಕಾರಣ ಗಾಂಧೀಜಿಯ ಕುರಿತಾದ ಹೊಸತೊಂದು ಕೃತಿ “ಮಹಾತ್ಮಾ ಗಾಂಧಿ; ಜೀವನ ಚರಿತೆ”. ಶ್ರೀ. ರಾಮಚಂದ್ರ ಹಬ್ಬು ಅವರು ಈ ಕೃತಿಯನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಬರಹ ಖ್ಯಾತ ಗಾಂಧಿವಾದಿಗಳಾದ ಮತ್ತು ಇತಿಹಾಸ ತಜ್ಞರಾದ ಬಲ ರಾಮ ನಂದಾ ಅವರು 1958ರಲ್ಲಿ ಬರೆದ Mahatma Gandhi: A biography ಎನ್ನುವ ಕೃತಿ. ಬಿ. ಆರ್. ನಂದಾ ಅವರು ಓರ್ವ ಮಹತ್ವದ ಇತಿಹಾಸ ತಜ್ಞರಾಗಿ ಗುರುತಿಸಲ್ಪಡುತ್ತಾರೆ. ಅವರು ನವದೆಹಲಿಯ ನೆಹರು ಸ್ಮಾರಕ ಗ್ರಂಥಾಲಯದ ಮೊದಲ ನಿರ್ದೇಶಕರಾಗಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮಹತ್ವದ ಸಾಧನೆಗಾಗಿ ಅವರಿಗೆ ಭಾರತಸರ್ಕಾರದಿಂದ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿದೆ. + +ನಂದಾ ಅವರು ಮಾಮೂಲಿನಂತೆ ಗಾಂಧೀಜಿಯವರನ್ನು ವೈಭವೀಕರಿಸಿ ಅಟ್ಟಕ್ಕೇರಿಸಲಿಲ್ಲ. ಹಾಗಂತ ಅವರನ್ನು ಟೀಕಿಸುವ ಸಂದರ್ಭಗಳಲ್ಲಿ ಗಾಂಧಿ ಎನ್ನುವ ಗೌರವವು ಮುಕ್ಕಾಗದಂತೇ ನೋಡಿಕೊಂಡಿದ್ದಾರೆ. 20ನೆಯ ಶತಮಾನರ್ಧದ ಮೊದಲಾರ್ಧದ ಭಾರತೀಯ ಇತಿಹಾಸದ ವಿಹಂಗಮ ನೋಟ ಇಲ್ಲಿದೆ. ಗಾಂಧೀಜಿಯವರ ತತ್ತ್ವಶಾಸ್ತ್ರ ಮತ್ತು ಅಹಿಂಸೆ. ಧರ್ಮ ಲೈಂಗಿಕತೆ, ಅರ್ಥಶಾಸ್ತ್ರ ಮತ್ತು ಕಮ್ಯುನಿಸಂನ ದೃಷ್ಟಿಕೋನಗಳ ಕುರಿತು ಗಾಂಧೀಜಿಯವರಿಗೆ ಇರುವ ದೃಷ್ಟಿಕೋನವನ್ನು ಇಲ್ಲಿ ವಿವರಿಸಲಾಗಿದೆ. ಈ ಕಾರಣದಿಂದ ಹಲ ಗಾಂಧೀಜಿಯವರ ಕೃತಿಗಳ ನಡುವೆ ಇಂತಹದ್ದೊಂದು ಕೃತಿಯ ಅವಶ್ಯಕತೆ ಕನ್ನಡಕ್ಕೆ ಅಗತ್ಯವಿತ್ತು. ಈ ಕಾರ್ಯವನ್ನು ಕನ್ನಡದ ಓರ್ವ ಶ್ರೇಷ್ಠ ವಿದ್ವಾಂಸರಾದ ಮತ್ತು ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಅದರ ಪ್ರಾಚಾರ್ಯರಾಗಿ ನಿವೃತ್ತರಾದ ಶ್ರೀಯುತ ರಾಮಚಂದ್ರ ಹಬ್ಬು ಅವರು ಅಷ್ಟೇ ಸಮರ್ಥವಾಗಿ ಮಾಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹಬ್ಬು ಸಹೋದರರ ಹೆಸರು ಚಿರಪರಿಚಿತ. ಅವರು ಒಟ್ಟೂ ಆರು ಜನ; ಈ ಆರುಮಂದಿ ಸಹೋದರರ ಜೊತೆಗೆ ಇವರ ತಂದೆ ಸಗುಣ ಶಂಕರ ಹಬ್ಬು ಅವರೂ ಸಾಹಿತ್ಯಕ್ಕೆ ಸಂಬಂಧಿಸಿದಂತಹ ಕೃತಿಗಳನ್ನು ತೊಡಗಿಸಿಕೊಂಡಿದ್ದರು. ಅದನ್ನು ವಿವರಿಸ ಹೊರಟರೆ ಅದೇ ಒಂದು ಸಾಹಿತ್ಯಿಕ ವಿಶೇಷವಾಗುತ್ತದೆ. ಶ್ರೀ ರಾಮಚಂದ್ರ ಹಬ್ಬು ನಂದಾ ಅವರ ಕೃತಿಯನ್ನು ಮೂಲತಃ ಕನ್ನಡದ್ದೇನೋ ಎನ್ನುವ ರೀತಿಯಲ್ಲಿ ಅನುವಾದಿಸಿದ್ದಾರೆ. + +ಗಾಂಧೀಜಿಯಂತಹ ಸಂಕೀರ್ಣ ವ್ಯಕ್ತಿತ್ವವನ್ನು ಬರೆಯುವಾಗ ಲೇಖಕರಿಗೆ ಅನೇಕ ಸವಾಲುಗಳು ಎದುರಾಗುತ್ತದೆ. ಅವರ ಬದುಕಿನ ವಿವಿಧ ಮಜಲುಗಳ ಅರಿವು ಮತ್ತು ಅದಕ್ಕಿರುವ ಗಾಂಧಿಜಿಯವರ ತಾತ್ವಿಕ ನಿಲುವು ಏನಾಗಿತ್ತು ಎನ್ನುವ ಪ್ರಜ್ಞೆಯಿಲ್ಲದೇ ಬರೆಯಲು ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ಇಲ್ಲಿ ಅನುವಾದಕರು ತುಂಬಾ ಸುಲಭವಾಗಿ ಮಾಡಿದ್ದಾರೆ. 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆಯಾಗಿದ್ದರೂ ಈ ಸಂಸ್ಥೆ ಭಾರತದ ಜನಸಾಮಾನ್ಯರ ಹೋರಾಟವಾಗಿ ಗುರುತಿಸಿಕೊಂಡಿರಲಿಲ್ಲ. 1917ರವರೆಗೂ ನಗರ ಪ್ರದೇಶದ ಮತ್ತು ನವ ಇಂಗ್ಲೀಷ್‌ ಪ್ರಜೆಗಳನ್ನಷ್ಟೇ ಸೆಳೆಯುವಲ್ಲಿ ಇದು ಯಶಸ್ವಿಯಾಗಿತ್ತು. ಕಾಂಗ್ರೆಸ್ಸಿನಲ್ಲಿ ಸೌಮ್ಯವಾದಿಗಳ ಗುಂಪು ಮತ್ತು ತೀವ್ರವಾದಿಗಳ ಗುಂಪುಗಳಾಗಿ ತಮ್ಮ ತಮ್ಮಲ್ಲೇ ತಿಕ್ಕಾಟವನ್ನು ನಡೆಸಿದ್ದರು. ಇಂಥ ಹೊತ್ತಿನಲ್ಲಿ ದಕ್ಷಿಣ ಆಫ್ರಿಕಾದಿಂದ ಗೋಖಲೆಯವರ ಆಗ್ರಹಕ್ಕೆ ಮಣಿದು ಬಂದ ಗಾಂಧೀಜಿ ಈ ಹೋರಾಟಕ್ಕೆ ಹೊಸ ಅಸ್ಮಿತೆಯನ್ನು ಒದಗಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಕೈಗೊಂಡು ಯಶಸ್ಸನ್ನು ಪಡೆದ ಸತ್ಯಾಗ್ರಹದ ಶಕ್ತಿಯ ಪೂರ್ಣ ಪರಿಚಯವನ್ನು ಈ ದೇಶದ ಜನತೆಗೆ ಪರಿಚಯಿಸಿದರು. ಜನ ಜಾಗ್ರತೆಯೆನ್ನುವುದು ಗಾಂಧಿಯವರಿಗೆ ಸುಲಭದ ಮಾರ್ಗವಾಗಿರಲಿಲ್ಲ. + +ಸ್ವತಃ ವಲ್ಲಭಬಾಯಿ ಪಟೇಲರು ತಮ್ಮ ವಕೀಲಿವೃತ್ತಿ ದಿನಗಳಲ್ಲಿ ಗಾಂಧಿಯವರ ಸತ್ಯಾಗ್ರಹದ ಕುರಿತು “ಗಾಂಧಿಯವರ ಭಾಷಣವೆಂದರೆ ಗೋಧಿಯಲ್ಲಿನ ಬೆಣಚುಕಲ್ಲನ್ನು ಆರಿಸಿರಿ; ಅದರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ” ಎಂದು ಗೇಲಿಮಾಡುತ್ತಿದ್ದರು. ಆಮೇಲೆ ಅವರೇ ಗಾಂಧೀಜಿಯವರ ಅಪ್ಪಟ ಶಿಷ್ಯರಾದರು ಎನ್ನುವುದು ಬೇರೆಯ ವಿಷಯ. ಗಾಂಧೀಜಿಯವರಿಗೆ ಸ್ವಾತಂತ್ರ್ಯ ಮುಖ್ಯವಾಗಿತ್ತು. ಅದು ಅವರ ಗುರಿಯೂ ಆಗಿತ್ತು. ಆದರೆ ಅದನ್ನು ಸಾಧಿಸಲು ಸತ್ಯ ಮತ್ತು ಅಹಿಂಸೆಯ ಹೊರತಾಗಿ ಬೇರೆ ಯಾವ ವಿಧಾನಗಳಿಂದ ಪಡೆಯುಬಹುದಾದ್ದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಈ ಕಾರಣಗಳಿಂದಾಗಿ ಅನೇಕ ಬಾರಿ ಅವರು ಟೀಕಾಕಾರರಿಗೆ ಆಹಾರವಾಗಿದ್ದಾರೆ. ಅವರ ಕೆಲ ನಿರ್ಧಾರಗಳು ವಿವಾದಾತ್ಮಕವಾಗಿರುವದೂ ಹೌದು. ಉದಾಹರಣೆಗೆ ಮೋಪ್ಲಾ ದಂಗೆಯಲ್ಲಿ ಮತ್ತು ಭಗತ್ ಸಿಂಗರನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿನ ಅವರ ಮೌನ, ಚೌರೀ ಚೌರಾ ಹಿಂಸಾಚಾರದ ನಂತರ ಏಕಾಏಕಿ ಹೋರಾಟವನ್ನು ಹಿಂದೆತೆಗೆದುಕೊಂಡಿರುವದು, ದೇಶ ವಿಭಜನೆ ಮತ್ತು ಪಾಕಿಸ್ಥಾನಕ್ಕೆ ನೆರವು ನೀಡುವಕುರಿತು ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಗೇ ಇನ್ನೂ ಅನೇಕ ವಿಷಯಗಳಿವೆ. ಇವು ಸತ್ಯವೂ ಕೂಡ. ಆದರೆ ಗಾಂಧೀಯೆನ್ನುವ ವ್ಯಕ್ತಿತ್ವ ದೇಶ ಕಾಲವನ್ನು ಮೀರಿ ವ್ಯಾಪಿಸಿರುವ ಒಂದು ದೊಡ್ಡ ಸಂದೇಶ. ಅವರ ಬದುಕೇ ಅನೇಕ ವಿಸ್ಮಯ, ಗೂಢ ಮತ್ತು ಪ್ರಭಾವಳಿಗಳಿಂದ ತುಂಬಿಹೋಗಿದೆ ಎನ್ನುವದೂ ಸಹ ಅಷ್ಟೇ ಸತ್ಯವೂ ಹೌದು. + +ಇಂತಹ ಅನೇಕ ಸಂಕೀರ್ಣ ವಿಷಯಗಳನ್ನು ಅದಕ್ಕೆ ಕಾರಣ ಮತ್ತು ಗಾಂಧೀಜಿಯವರು ಯಾವ ಕಾರಣಕ್ಕಾಗಿ ಈ ನಿಲುವುಗಳನ್ನು ತೆಗೆದುಕೊಂಡರು ಎನ್ನುವುದನ್ನು ಅರಿಯಲು ಈ ಪುಸ್ತಕ ಉಪಯುಕ್ತವಾಗಿದೆ. ಒಂದು ಉದಾಹರಣೆಯನ್ನು ಹೇಳಬೇಕೆಂದರೆ ಗಾಂಧೀಜಿಯವರ ಮೇಲೆ ಭಗವದ್ಗೀತೆ ಬೀರಿದ ಪ್ರಭಾವ. ಗಾಂಧೀಜಿಯವರು ಏಕಾಏಕಿ ಗೀತೆಯನ್ನು ಓದಲು ಪ್ರಾರಂಭಿಸಿರಲಿಲ್ಲ. ಲಂಡನ್ನಿನಲ್ಲಿ ಇರುವಾಗ ಅವರಮೇಲೆ ಕೃೈಸ್ತಧರ್ಮದ ಪ್ರಭಾವ ಆಗತೊಡಗಿತು. ಹೊಸ ಒಡಂಬಡಿಕೆಯನ್ನು ಅವರು ಓದತೊಡಗಿದರು. ಕ್ರೈಸ್ತರಾಗುವಂತೆ ಅವರಿಗೆ ಅನೇಕ ಬಗೆಯ ಒತ್ತಡಗಳು ಬರತೊಡಗಿತು. ಈ ಹೊತ್ತಿನಲ್ಲಿ ಅವರಿಗೆ ಅವರ ತಾಯಿ ಪುತಲೀಬಾಯಿಯವರಿಗೆ ಕೊಟ್ಟ ಭಾಷೆ ನೆನಪಿಗೆ ಬಂದು ತೊಳಲಾಡತೊಡಗಿರುತ್ತಾರೆ. ಅದನ್ನು ಬಿಟ್ಟರೆ ಅವರಿಗೆ ಹಿಂದುಧರ್ಮದ ಕುರಿತು ಅತ್ಯಲ್ಪ ಪರಿಚಯವಿತ್ತು. ಈ ಸಂದರ್ಭದಲ್ಲಿ ಸರ್ ಎಡ್ವಿನ್ ಆರ್ನಾಲ್ಡ್‌ ಅವರ “ಸಾಂಗ್ ಆಫ್ ಸೆಲೆಸ್ಟಿಯಲ್” ಓದಲು ಆಮಂತ್ರಿಸಿದಾಗ ಅವರಿಗೆ ಭಗವದ್ಗೀತೆಯನ್ನು ತಾನೂ ಅದುತನಕವೂ ಓದೇ ಇಲ್ಲ ಎನ್ನುವುದು ಅರಿವಾಗಿ ಮುಜುಗರವಾಯಿತು. ಸರ್. ಎಡ್ವಿನ್ ಅವರು ಬುದ್ಧನ ಕುರಿತು ಬರೆದ “ಲೈಟ್ ಆಫ್ ಏಶಿಯಾ” ಕೃತಿಯೂ ಅವರನ್ನು ಮೋಡಿಮಾಡಿತು. ಈ ನಡುವೆ ಗುಜರಾತಿನ ಕವಿ ಶಾಮಲಾಲ್ ಭಟ್ಟರು ಗುಣುಗುಣುಸುತ್ತಿದ್ದ ಕವನಗಳು ನೆನಪಾದವು. ಹೀಗೆ ಬೈಬಲ್, ಬುದ್ಧ ಮತ್ತು ಭಟ್ಟರ ಬೋಧನೆಗಳು ಗಾಂಧಿಯವರ ಮನಸ್ಸಿನಲ್ಲಿ ಒಂದಾದವು. ಈ ಪ್ರಭಾವದ ಹಿಂದೆ ಬೈಬಲ್ಲಿನ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎನ್ನುವ ಮಾತುಗಳು ಅವರನ್ನು ಕಾಡುತ್ತಿದ್ದವು. + + + +ಗಾಂಧಿಯವರ ಮೇಲಿನ ಗೀತೆಯ ಪ್ರಭಾವದ ಹಿಂದೆ ಈ ಅಂಶಗಳಿದ್ದವು ಎನ್ನುವುದು ಬೇರೆಲ್ಲಿಯೂ ವ್ಯಕ್ತವಾಗದ ನಿಲುವು. ಮೂಲದ ನಂದಾ ಅವರ ನಿಲುವನ್ನು ಹಬ್ಬು ಅನುವಾದಿಸುವದು ಹೀಗೆ “ಗೀತೆಯ ಕುರಿತಾಗಿ ಗಾಂಧಿಯವರ ತಿಳುವಳಿಕೆಯು, ಸಾಂಪ್ರದಾಯಕ ತಿಳುವಳಿಕೆಗಳಿಗಿಂತ ಮತ್ತು ಟಿಳಕ ಮತ್ತು ಅರಬಿಂದೋ ಘೋಷರಂಥ ಘನ ವಿದ್ವಾಂಸರ ವಿಶ್ಲೇಷಣೆಗಿಂತ ತುಂಬಾ ಭಿನ್ನವಾಗಿತ್ತು. ಕುರುಕ್ಷೇತ್ರದ ಯುದ್ಧದ ಐತಿಹಾಸಿಕ ವಿವರಣೆಯನ್ನು ಅಲ್ಲಗೆಳೆಯುವದೆಂದರೆ, ಸತ್ಯಸಂಗತಿಗಳನ್ನು ನಿರ್ಲಕ್ಷಿಸಿದಂತೆ” (ಪು. 66) ಎಂದು ಅನುವಾದ ಮಾಡಿದ್ದಾರೆ. ಮಹತ್ವದ ಅಂಶವಿದು. ಗಾಂಧಿಯವರ ಗೀತೆಯ ಮೇಲಿನ ವಿಶ್ಲೇಷಣೆ ಕ್ರಿಶ್ಚಿಯನ್ ಪ್ರಭಾವಕ್ಕೆ ಒಳಗಾಗಿರುವುದು ಎನ್ನುವ ವಿರೋಧಿಗಳ ಟೀಕೆಯನ್ನು ಇಲ್ಲಿ ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಇದಕ್ಕೆ ವಿನ್ಸ್ಂಟ್ ಶೀನ್ ಅವರ ಅಭಿಪ್ರಾಯವನ್ನು ಕೊಟ್ಟು ನಂದಾ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಅನೇಕ ವಿವರಗಳನ್ನು ಈ ಕೃತಿಯಲ್ಲಿ ಆಧಾರಸಹಿತವಾಗಿ ವಿವರಿಸಲಾಗಿದೆ. ಮೂಲದ ಸೊಗಸನ್ನು ಇಟ್ಟುಕೊಂಡೇ ಹಬ್ಬು ಅವರು ಕನ್ನಡೀಕರಿಸಿದ್ದಾರೆ. + +ಈ ಕೃತಿಯಲ್ಲಿ ಗಾಂಧೀಜಿಯ ಜೀವನ ಚರಿತ್ರೆ ತೆರೆದುಕೊಳ್ಳುವುದು ನಾಲ್ಕು ಭಾಗಗಳಲ್ಲಿ. ಮೊದಲ ಭಾಗ ಗಾಂಧಿಯ ಬಾಲ್ಯದಿಂದ. ಇಲ್ಲಿ ತಮ್ಮೆಲ್ಲಾ ಹೋರಾಟದ ಧಾತುಗಳಿಗೆ ಕಾರಣವಾದ ದಕ್ಷಿಣ ಆಫ್ರಿಕಾ-ಒಂದು ಪ್ರಯೋಗಾಲಯ ಎನ್ನುವಲ್ಲಿಂದ. ಅತ್ಯಂತ ಲಜ್ಜೆಯ ಸ್ವಭಾವದ ಮೋಹನದಾಸ ಎನ್ನುವ ಬಾಲಕ, ಬದುಕಿನುದ್ದಕ್ಕೂ ಓರ್ವ ವಿಫಲ ವಕೀಲನಾಗಿ ನಂತರ ಹೋರಾಟಗಾರನಾಗಿ ಬೆಳೆದ ಹಂತಹಂತಗಳೆಲ್ಲವೂ ಕಾವ್ಯಾತ್ಮಕ ಮತ್ತು ವಿಮರ್ಶಾತ್ಮಕವಾಗಿ ವಿವರಿಸಲಾಗಿದೆ. ದಕ್ಷಿಣಾಫ್ರಿಕಾ ಅವರಿಗೆ ನಿರಾಶೆ, ಅವಮಾನ, ಬೇಸರ, ಹೋರಾಟಕ್ಕೆ ಸ್ಪೂರ್ತಿ, ಗುರಿಯೆಡೆಗೆ ಸ್ಪಷ್ಟ ನಿದರ್ಶನ ಎಲ್ಲ ಭಾವನೆಗಳನ್ನೂ ಕೊಟ್ಟ ಮತ್ತು ಕೆಡಕು ಒಳಿತುಗಳೆಡೆಯಲ್ಲಿ ಸಿಲುಕಿಯೂ ಅದರಿಂದ ಹೇಗೆ ಹೊರಬರಬಹುದೆನ್ನುವ ಪಾಠವನ್ನು ಕಲಿಸಿದ ಕುಲುಮೆ. ಇಂಗ್ಲೆಂಡಿನಲ್ಲಿ ಅಪರಿಚಿತನಾದ ಗಾಂಧಿ ಇಲ್ಲಿ ಹೋರಾಟಗಾನಾಗಿ ಬೆಳೆದ ಬಗೆ ಮಹಾದೇವ ದೇಸಾಯಿಯವರ ಆತ್ಮಚರಿತ್ರೆಗಿಂತಲೂ ಭಿನ್ನವಾಗಿವೆ. ಧರ್ಮಗಳ ನಡುವಿನ ತುಲನಾತ್ಮಕ ಅಧ್ಯಯನಕ್ಕೆ ಆಫ್ರಿಕಾ ಒಂದು ವೇದಿಕೆಯಾಯಿತು. ಜಗತ್ತಿನ ಇನ್ನಿತರ ಧರ್ಮಗಳ ತಿರುಳನ್ನು ತೌಲಿನಿಕವಾಗಿ ಅಧ್ಯಯನ ಮಾಡಲು ಸಾಧ್ಯವಾಯಿತು. ಅವರ ಮೇಲೆ ಕ್ರಿಶ್ಚಿಯನ್ ಆಗೆಂದು ಒತ್ತಾಯಿಸಿದವರಿಗೆ “ತಿಜೋರಿಯ ಚಿಕ್ಕ ರಂದ್ರದೊಳಗೆ ತೂರಿಕೊಂಡು, ದೇವರನ್ನು ಸಮೀಪಿಸಲು ಅವನೇನು ಆ ತಿಜೋರಿಯಲ್ಲಿ ಮುಚ್ಚಿಡಲ್ಪಟ್ಟಿಲ್ಲ. ಶುದ್ಧ ಹೃದಯವುಳ್ಳವರಿಗೆ ಮತ್ತು ವಿನೀತರಿಗೆ ದೇವರನ್ನು ಸಮೀಪಿಸಲು ಕೋಟ್ಯಾವದಿ ರಂದ್ರಗಳಿವೆ” ಎನ್ನುವ ಮೂಲಕ ತಾನೋರ್ವ ಸನಾತನಿ ಹಿಂದು ಎನ್ನುವುದನ್ನು ಗಟ್ಟಿಗೊಳಿಸುತ್ತಲೇ ಹಿಂದು ಧರ್ಮದ ನಿಜ ತಿರುಳನ್ನು ತೆರೆದಿಟ್ಟರು. ಇಂಗ್ಲೀಷಿನಲ್ಲಿರುವ ಮೂಲಕ್ಕಿಂತ ಹಬ್ಬು ಕನ್ನಡದಲ್ಲಿ ಗಾಂಧಿಯವರ ಭಾವನೆಯನ್ನು ಅಭಿವ್ಯಕ್ತಿಸಿದ್ದಾರೆ. + +ಎರಡನೇ ಭಾಗ ಗಾಂಧಿ ಉತ್ಥಾನ, ಅಪರಿಚಿತ ದೇಶವಾದ ಭಾರತಕ್ಕೆ ಗಾಂಧಿ ಅಪರಿಚಿತರಾಗಿರಲಿಲ್ಲ ಎನ್ನುವ ಮೂಲಕ ಗಾಂಧಿಯವರನ್ನು ಭಾರತಕ್ಕೆ ಬರಮಾಡಿಕೊಳ್ಳುತ್ತಾರೆ. 1915 ರಿಂದ 1920 ರತನಕ ಗಾಂಧಿ ಭಾರತೀಯ ಕಾಂಗ್ರೇಸ್ಸಿನ ಅಗ್ರಪಂಕ್ತಿಯ ನಾಯಕರಾಗಿರಲಿಲ್ಲವೆನ್ನುವ ಸತ್ಯವನ್ನು ಹೊರಹಾಕುತ್ತಾರೆ. ಟಿಳಕರು ಮತ್ತು ಅನಿಬೆಸೆಂಟ್ ಪ್ರಭಾವಶಾಲಿಯಾದ ನಾಯಕರಾಗಿದ್ದರು. ಗೋಪಾಲಕೃಷ್ಣ ಗೋಖಲೆಯವರು ಟಿಳಕರ ಈ ಪ್ರಭಾವವನ್ನು ತಗ್ಗಿಸಲೆಂದೇ ಗಾಂಧಿಯವರನ್ನು ಭಾರತಕ್ಕೆ ಕರೆಸಿರುವದು ಎನ್ನುವುದನ್ನು ಪರೋಕ್ಷವಾಗಿ ಸೂಚಿಸುತ್ತಾರೆ. ಅನಿಬೆಸೆಂಟ್ ಅವರ ಹೋಂರೂಲ್ ಚಳುವಳಿಯಿಂದ ಗಾಂಧಿಯವರನ್ನು ಹೊರಗಿಡುವ ವಿಷಯವನ್ನು ಎತ್ತಿಹೇಳುತ್ತಾರೆ. 1919ರಲ್ಲಿ ಆರಂಭವಾದ ಖಿಲಾಫತ್ ಚಳುವಳಿ ಗಾಂಧಿ ಬೆಂಬಲಿಸಿರುವುದು ಅವರ ವಿರುದ್ಧ ಇರುವ ಪ್ರಬಲ ಟೀಕೆಗಳಲ್ಲೊಂದು. ಇಲ್ಲೆಲ್ಲ ನಂದಾ ಜಾಣ ನಡೆಯನ್ನು ಅನುಸರಿಸಿ “ಹಿಂದುಗಳು ಮುಸಲ್ಮಾನ್ ಬಾಂಧವರ ಪರವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು, ಆ ಸಮುದಾಯದ ದುಃಖವನ್ನು ತಮ್ಮ ದುಃಖವೆಂದೇ ತಿಳಿಯಬೇಕು” ಎನ್ನುವ ಮೂಲಕ ಗಾಂಧಿಯವರನ್ನು ಸಮರ್ಥಿಸಿಕೊಳ್ಳುತ್ತಾರೆ. + +ಗಾಂಧೀಜಿಯವರ ಕುರಿತು ಆಕ್ಷೇಪಗಳು ಬಂದಾಗ ಇದರಲ್ಲಿ ಅವರ ನಡೆ ಆ ಕಾಲದಲ್ಲಿ ಎಷ್ಟು ಸೂಕ್ತವಾಗಿತ್ತು ಎನ್ನುವದನ್ನು ಇಲ್ಲಿ ವಿವರಿಸಲಾಗಿದೆ. ಖಿಲಾಪತ್ ಚಳುವಳಿಯನ್ನು ಗಾಂಧಿ ಸಂಪೂರ್ಣವಾಗಿ ಒಪ್ಪಿಲ್ಲ; ಆದರೆ ಆ ಧರ್ಮದ ಬಗೆಗೆ ಅವರಿಗಿರುವ ಆಳ ದೃಷ್ಟಿಕೋನದಿಂದ ಮುಸಲ್ಮಾನರ ಭಾವನೆಗಳನ್ನು ಗಾಂಧಿ ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ. ಹಾಗೇ ನೋಡಿದರೆ ಖಿಲಾಪತ್ ಚಳುವಳಿಯನ್ನು ಗಾಂಧಿ ಬೆಂಬಲಿಸಿದ ಕಾರಣದಿಂದಲೇ ಗಾಂಧಿ ರಾಷ್ಟ್ರೀಯ ನಾಯಕರಾಗಿ ಹೊಮ್ಮಿದ್ದು ಮತ್ತು 1920ರ ನಾಗಪುರ ಅಧಿವೇಶನದ ನಂತರ ತೀವ್ರವಾದಿಗಳನ್ನು ಬದಿಗೆ ಸರಿಸಿ ಅನಭಿಷಕ್ತ ನಾಯಕರಾಗಿರುವುದು. ಅದೇ ರೀತಿ ಮೂರು ಮತ್ತು ನಾಲ್ಕನೆಯ ಭಾಗಗಳಾದ ಯುದ್ಧ ಮತ್ತು ಶಾಂತಿ ಹಾಗೂ ಅಂತಿಮ ಮಜಲಿನಲ್ಲಿಯೂ ಗಾಂಧೀಜಿಯವರ ಜೀವನ ವಿಧಾನಗಳನ್ನು ಚನ್ನಾಗಿ ವಿವೇಚಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ಅದರಲ್ಲಿ ಗಾಂಧೀಜಿ ಹೇಗೆ ತನ್ನ ನಿಲುವನ್ನು ಸ್ವಲ್ಪವೂ ರಾಜಿ ಮಾಡಿಕೊಳ್ಳದೇ ಪಕ್ಷವನ್ನು ತನ್ನತ್ತ ಸೆಳೆದುಕೊಂಡರು ಎನ್ನುವುದರ ವಿವರಣೆ ಇದೆ. + +ಮಹಾತ್ಮಾ ಗಾಂಧೀಜಿಯವರ ಕುರಿತಾದ ಹಲವು ಗ್ರಂಥಗಳಿಗಿಂತ ಈ ಕೃತಿಯು ಭಿನ್ನವಾಗಿರುವುದು ಗಾಂಧಿ ಹಲ ಸವಾಲುಗಳನ್ನು ನಿಭಾಯಿಸಿದ ರೀತಿಯಿಂದಾಗಿ. ಗಾಂಧಿ-ಅಂಬೇಡ್ಕರ ಅವರ ನಡುವಿನ ಚರ್ಚೆಯ ಸಂದರ್ಭಗಳಲ್ಲಿ ಹಿಂದು ಧರ್ಮದ ಕುರಿತು ಅಂಬೇಡ್ಕರರಿಗಿರುವ ಆಕ್ಷೇಪಗಳಿಗೆ ಸಂಯಮದಿಂದಲೇ ಎತ್ತಿ ಅಲ್ಲಿಗೇ ಮುಗಿಸಿಬಿಡುತ್ತಾರೆ. ಇನೊಮ್ಮೆ 1934ರಲ್ಲಿ ಗಾಂಧೀಜಿಯವರು ಗ್ರಾಮೀಣ ಕೈಗಾರಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ಸಿನೊಡನೆ ಭಿನ್ನಾಭಿಪ್ರಾಯ ಬಂದು ಸ್ವಾತಂತ್ರ್ಯ ಹೋರಾಟದಿಂದ ಸಕ್ರಿಯವಾಗಿ ಹಿಂದೆಸರಿಯುವ ಘೋಷಣೆಗಳಿಗೆ ಸಂಬಂಧಿಸಿದ ಕಾರಣಗಳ ಕುರಿತು ಕಾಂಗ್ರೆಸ್‌ನ ಬಲಪಂಥೀಯ ಪ್ರಭಾವವನ್ನು ವಿವರಿಸದೆ, ಕಾಂಗ್ರೆಸ್‌ನೊಳಗಿನ ಸಮಾಜವಾದಿಗಳು ಮತ್ತು ಗಾಂಧಿಯವರ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯವನ್ನು ಒಂದೇ ಸಾಲಿನಲ್ಲಿ ವಿವರಿಸುತ್ತಾರೆ. + +(ಬಿ. ಆರ್. ನಂದಾ) + +ಸುಭಾಸಚಂದ್ರ ಭೋಸರ ಅಧ್ಯಕ್ಷಗಿರಿಗೆ ಗಾಂಧೀಜಿಯವರಿಗಿರುವ ಸಮಸ್ಯೆಗಳನ್ನು ಇಲ್ಲಿ ವಿವರವಾಗಿ ಚರ್ಚಿಸುವದಿಲ್ಲ. ಹಾಗಂತ ಈ ಕೃತಿಯಲ್ಲಿ ಮಹಾತ್ಮಾಗಾಂಧಿಯವರನ್ನು ದಂತಕಥೆಯಂತೆಯೂ ವೈಭವೀಕರಿಸುವುದಿಲ್ಲ. ಅವರಲ್ಲಿರುವ ಜೀವ ಕಾರುಣ್ಯವನ್ನು ತಪ್ಪದೇ ಪ್ರಸ್ಥಾಪಿಸುತ್ತಾರೆ. ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಜ್‌ಬರ್ಗ್‌ನಲ್ಲಿನ ರೈಲಿನಿಂದ ಅವರನ್ನು ಹೊರದೂಡಿದ ಪ್ರಕರಣ ಒಂದು ಪ್ರಮುಖವಾದ ವಿಷಯ. ಇಲ್ಲಿ ನಂದಾ ಈ ವಿಷಯವನ್ನು ವಿವರಿಸುವಾಗ ಗಂಧೀಜಿಯವರ ಪ್ರತಿಕ್ರಿಯೆಗಿಂತ ಅದು ಅವರೊಳಗೆ ಅವರು ಮಾಡಿಕೊಂದ ಆತ್ಮಶೋಧನೆಯೆನ್ನುವಂತೆ ವಿವರಿಸುತ್ತಾರೆ. ಇದು ಗಾಂಧಿಯವರ ಪ್ರಕಾರ ಯುರೋಪಿಯನ್ನರ ದುರಹಂಕಾರಕ್ಕಿಂತ ತಾನು ಇತ್ತೀಚೆಗೆ ಲಂಡನ್ನಿನಿಂದ ಹಿಂದಿರಿಗಿದ ಬ್ಯಾರಿಷ್ಟರ್ ಎನ್ನುವ ಅಹಂಕಾರವನ್ನು ತಳೆದಿರುವದೇ ಮುಖ್ಯವಾಗಿರಬಹುದೇ ಎನ್ನುವ ಪ್ರಶ್ನೆಯನ್ನು ಎತ್ತುತ್ತಾರೆ. + +572 ಪುಟಗಳಿರುವ ಈ ಕೃತಿಯಲ್ಲಿ ಗಾಂಧೀಜಿಯವರ ಕುರಿತಂತೆ ವೀಕ್ಷಕರಾಗಿ ನೋಡಿದ ವಿವರಗಳಿವೆ. ಗಾಂಧಿಯವರ ಕುರಿತು ಆಕ್ಷೇಪ ಬರುವ ಸಂದರ್ಭಗಳಲ್ಲಿ ಅದನ್ನು ನವಿರಾಗಿ ನಿಭಾಯಿಸಿ ಹೊಳಪುಕೊಡುವ ಪ್ರಯತ್ನಗಳಾಗಿವೆ. ಮಹಾತ್ಮರ ಬದುಕಿನ ಯಾವ ಮಹತ್ವದ ವಿವರಗಳನ್ನೂ ಈ ಕೃತಿ ಮರೆಮಾಚಲು ಪ್ರಯತ್ನಿಸುವುದಿಲ್ಲ. ಪಾಕಿಸ್ತಾನದ ಹುಟ್ಟು ಎನ್ನುವದು ಈ ಕೃತಿಯಲ್ಲಿನ ತುಂಬಾ ಮಹತ್ವದ ಅಧ್ಯಾಯ. ಕೊನೆಯವರೆಗೂ ದೇಶವಿಭಜನೆಗೆ ಒಪ್ಪದಿರುವ ಗಾಂಧೀಜಿಯವರಿಗೆ ವಿಭಜನೆಯನ್ನುವುದು ಯಾಕೆ ಅನಿವಾರ್ಯವಾದ ವಿಕಲ್ಪವಾಯಿತು ಎನ್ನುವುದನ್ನು ವಿಶ್ಲೇಷಣಾತ್ಮಕವಾಗಿ ಚರ್ಚಿಸಲಾಗಿದೆ. ದೇಶ ವಿಭಜನೆಗೆ ತನ್ನ ಸ್ಪಷ್ಟವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದ ಗಾಂಧಿ 1940 ಎಪ್ರಿಲ್ 6ರ ಹರಿಜನ ಪತ್ರಿಕೆಯಲ್ಲಿ “ಮುಸಲ್ಮಾನರಿಗೆ ತಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳಲು ದೇಶದ ಇತರ ಜನರಿಗೆ ಇರುವಷ್ಟೇ ಹಕ್ಕು ಇದೆ. ನಾವು ಈಗ ಒಂದು ಅವಿಭಕ್ತ ಕುಟುಂಬವಾಗಿದ್ದೇವೆ. ಕುಟುಂಬದ ಯಾವುದೇ ಸದಸ್ಯನೂ ಭಾಗವನ್ನು ಕೇಳಬಹುದು” ಎಂದಿರುವುದನ್ನು ಪ್ರಸ್ತಾಪಿಸುವುದರ ಮೂಲಕ ಗಾಂಧಿಯವರಿಗೆ ಮುಂದಿನ ಭಾರತದ ದಿಕ್ಸೂಚಿಯ ಸ್ಪಷ್ಟವಾದ ಅರಿವಿತ್ತು ಎನ್ನುವುದನ್ನು ವಿವರಿಸುತ್ತಾರೆ. + + + +ಮಹಾತ್ಮಾಗಾಂಧಿ ಎನ್ನುವ ಸಂಕೀರ್ಣ ಮತ್ತು ಬೆರಗಿನ ವ್ಯಕ್ತಿತ್ವವನ್ನು ಕನ್ನಡಿಕರಿಸಿರುವ ಪ್ರಾ. ರಾಮಚಂದ್ರ ಹಬ್ಬು ಅವರು ಈ ಕೃತಿಯ ಮೂಲಕ ಕನ್ನದ ಸಾಹಿತ್ಯಕ್ಕೆ ಒಂದು ಹೊಸ ಕೊಡುಗೆಯನ್ನು ನೀಡಿದ್ದಾರೆ. ಗಾಂಧೀಜಿಯವರ ಕುರಿತು ಅನೇಕ ಓದುಗಳಿಲ್ಲದ ವ್ಯಕ್ತಿ ಇಂತಹ ಒಂದು ಪ್ರೌಢವಾದ ಕೃತಿಯೊಂದನ್ನು ಅನುವಾದ ಮಾಡಲು ಸಾಧ್ಯವಿಲ್ಲ. ಈ ಕೃತಿ ಓದುಗರನ್ನು ಆಕರ್ಷಿಸುವುದು ಇಲ್ಲಿ ಉಪಯೋಗಿಸಿರುವ ಕಾವ್ಯಮಯ ಕನ್ನಡ ಭಾಷೆಗಳ ಮೂಲಕ. ಇಲ್ಲಿ ಉಪಯೋಗಿಸಿದ ಕ್ಷಿತಿಜ, ನರಭಕ್ಷರ ರೌದ್ರತೆಯೊಂದಿಗೆ ಹೀಗೆ ಹಲವಾರು ಸಂದರ್ಭಗಳಲ್ಲಿ ಆಯಾ ಘಟನೆಗಳಿಗೆ ಸಂಬಂಧಿಸಿದಂತೆ ಸರಳ ಮತ್ತು ಪ್ರತಿಮಾರೂಪವಾಗಿರಬೇಕಾದ ಶಬ್ಧಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಹಾಗಾಗಿ ಇದೊಂದು ಸ್ವತಂತ್ರ ಕೃತಿಯಾಗಿದೆ. ಸುಂದರ ಮುದ್ರಣ ಮತ್ತು ಹಲವು ಚುಕ್ಕಿಗಳು ಸೇರಿ ಆದ ಮಹಾತ್ಮಾ ಗಾಂಧೀಜಿಯವರ ಮುಖಪುಟ ಅರ್ಥಪೂರ್ಣವಾಗಿದೆ. ಗಾಂಧೀಜಿಯವರ ಜೀವನ ಚರಿತ್ರೆಯನ್ನು ಅಭ್ಯಸಿಸುವವರಿಗೆ ಇದೊಂದು ಮಾರ್ಗದರ್ಶಿ. ಅಭಿನಂದನೆಗಳು ಪ್ರಾ. ರಾಮಚಂದ್ರ ಹಬ್ಬು ಅವರಿಗೆ. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_163.txt b/Kenda Sampige/article_163.txt new file mode 100644 index 0000000000000000000000000000000000000000..b8d28e6d549c414c17a1574cb02e0289693a7c73 --- /dev/null +++ b/Kenda Sampige/article_163.txt @@ -0,0 +1,33 @@ +ಶಿಥಿಲಗೊಂಡ ಮಾನವೀಯ ಸಂಬಂಧಗಳ ನಡುವೆ ಗಾಂಧೀಜಿಗಾಗಿ ಹಂಬಲಿಸುವ ಕನಸುಗಳು + +ದಾರಿಯಿದೆ ಎಂದ ಮೇಲೆ ಅಲ್ಲಿ ಯಾರಾದರು ಕೆಲವೊಂದಿಷ್ಟು ಜನ ಕೆಲವೊಂದಿಷ್ಟು ಕಾಲ ನಿರಂತರವಾಗಿ ಓಡಾಡುತ್ತಿರಬೇಕು. ಯಾರೋ ಒಬ್ಬನೇ ಹೋಗುವದು ದಾರಿಯಾಗುವದಿಲ್ಲ. ಹಾಗಂತ ಎಲ್ಲಾ ದಾರಿಯೂ ಗುರಿಯನ್ನು ತಲುಪುತ್ತದೆ ಅಂತಲೂ ಅರ್ಥವಲ್ಲ. ಇದ್ದಲ್ಲೇ ಇರುವ ದಾರಿ ಹಲವು ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ. ಸುಮ್ಮನೆ ಬಿದ್ದೂ ಇರುತ್ತದೆ. ಗುರಿಯನ್ನು ತಲುಪುವ ದಾರಿಯೋ ಹಾದಿ ತಪ್ಪಿಸಿದ ದಾರಿಯೋ; ಅದು ಯಾವುದೇ ಆದರೂ ಆ ದಾರಿಯಮೇಲೆ ಹುಲ್ಲೂ ಸಹ ಬೆಳೆಯುವದಿಲ್ಲ. ಹಾಗೆ ಬೆಳೆದರೆ ಅದು ದಾರಿಯಾಗುವದಿಲ್ಲ. ಒಮ್ಮೊಮ್ಮೆ ದಾರಿ ಗೊಂದಲವನ್ನು ಉಂಟು ಮಾಡುತ್ತದೆ. ಹಲವಾರು ದಾರಿಗಳು ಒಂದನ್ನೊಂದು ಅಡ್ಡವೋ ಓರೆಯಾಗಿಯೋ ಸಾಗಿದಾಗ ಎಲ್ಲಿಗೆ ಯಾವದಿಕ್ಕಿಗೆ ಹೋಗಬೇಕೆನ್ನುವದನ್ನು ಅವು ತಿಳಿಸುವದಿಲ್ಲ. ನಾವೇ ಊಹಿಸಿ ಇಲ್ಲವೇ ದಾರಿಯನ್ನು ತಿಳಿದವರ ಹತ್ತಿರ ಕೇಳಿ ತಿಳಿದು ಸಾಗಬೇಕಾಗುತ್ತದೆ. ನಾವೇ ಸ್ವತಃ ದಾರಿಯನ್ನು ನಿರ್ಮಿಸಲೂಬಹುದು. ಅಂತಹ ದಾರಿ ತನ್ನ ಗುರುತನ್ನು ಇರಿಸಿಕೊಳ್ಳಬೇಕಾದರೆ ಆ ದಾರಿಯಮೇಲೆ ನಮ್ಮನ್ನು ಹಿಂಬಾಲಿಸುವ ಪ್ರಾಣಿಯೋ ಮನುಷ್ಯನೋ ಇರಬೇಕಾಗುತ್ತದೆ. ಗುರಿಯ ಅರಿವಿರುವವನಿಗೂ ದಾರಿಯ ಪರಿಚಯ ಬೇಕೇ ಬೇಕು. ಆತ ಹಾರಿ ತನ್ನ ಗುರಿ ಮುಟ್ಟಲಾರ. ದಾರಿಯನ್ನುವದು ತುಳಿದ ಪಾದಗಳ ಒಂದಿಷ್ಟು ಮೊತ್ತವೂ ಹೌದು. ಉತ್ತರ ಸಿಕ್ಕಿತೋ ಇಲ್ಲವೋ ಅದನ್ನು ತಿಳಿಯುವದು ವರ್ತಮಾನದಲ್ಲಿ ಅಲ್ಲ. ಭೂತಕಾಲಕ್ಕೆ ಸರಿದು ಹೋದ ಇತಿಹಾಸಗಳ ಓದಿನಿಂದ. ಅದರ ಕುರಿತು ಆಸಕ್ತಿ ಇರುವವರಿಗೆ ಮಾತ್ರ; ಅದಿಲ್ಲದೇ ಇರುವವರು ಕುರಿ ಕುರುಬನನ್ನು ಅನುಸರಿಸಿದಂತೆ ಸರಿಸಿ ಸಾಗುವುದಷ್ಟೆ. + +ಕುಸುಮಾ ಆಯರಹಳ್ಳಿಯವರ ಚೊಚ್ಚಲ ಕಾದಂಬರಿ “ದಾರಿ” (ಛಂದ ಪ್ರಕಾಶನ) ಓದಿದಾಗ ಅನಿಸಿದ ಭಾವನೆಗಳು ಇವು. ಒಂದು ಅರ್ಥದಲ್ಲಿ ಲೇಖಕಿಯೇ ಅನೇಕ ರೂಪಗಳನ್ನು ತಳೆದು ಗುರಿ ಮುಟ್ಟುವ ದಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಲೇಖಕರ ಮಾತಿನಲ್ಲಿ ಅವರೇ ಹೇಳಿಕೊಂಡಂತೆ ಅವರ ಈ ಹುಡುಕಾಟ ಅವರ ಕಾಲೇಜುದಿನಗಳಿಂದಲೂ ಆರಂಭವಾಗಿದೆ. ಹಲವಾರು ಸಿದ್ಧಾಂತಗಳ ಸಮೂಹವನ್ನು ಸೇರಿ ತೊಡಗಿಕೊಂಡ ಅವರ ಹುಡುಕಾಟ ಇನ್ನೂ ಮುಂದುವರಿದಿದೆ. ಈ ಹುಡುಕಾಟ ಅವರದ್ದೊಂದೇ ಅಲ್ಲ. ನಾನೂ ಸಹ ಇಂತಹುದೇ ಹುಡುಕಾಟದಲ್ಲಿ ತಲೆಕೆಡಿಸಿಕೊಂಡ ದಿನಗಳ ನೆನಪಾಯಿತು. ಸಿದ್ಧಾಂತಗಳ ಕುರುಡು ನಂಬಿಕೆಯಲ್ಲಿ ಸಾಗಿದಾಗ ಅದು ತೋರಿಸಿದ ಯಾವುದನ್ನೋ ನಮ್ಮ ಗುರಿಯೆಂದು ಭಾವಿಸುತ್ತೇವೆ. ಕೆಲಕಾಲ ಕಳೆದಮೇಲೆ ನಮ್ಮ ಸ್ವಂತಿಕೆಯನ್ನು ಉಪಯೋಗಿಸಿ ಈ ಸಿದ್ಧಾಂತಗಳ ಬೇಲಿಯಾಚೆ ಬಂದು ಅವಲೋಕಿಸಿದಾಗ ಅದುತನಕದ ನಮ್ಮ ಅರಸುವಿಕೆಯೆನ್ನುವುದು ನಾವು ಏರಿದ ಬಿಸಿಲು ಕುದುರೆಯಾಗಿ ತೋರುತ್ತದೆ. ಕಾದಂಬರಿಯನ್ನು ಬರೆಯುವಾಗ ಕಥೆಯನ್ನು ಹಿಡಿದು ಅದರ ಭಾವದ ಮೂಲಕ ಸಾಗುವ ಕ್ರಿಯೆಯೊಂದಿದೆ. ಈ ಮಾರ್ಗದಲ್ಲಿ ಕಥೆಯೇ ಕರ್ತೃವಿಗೆ ಮಾರ್ಗವನ್ನು ತೋರಿಸುತ್ತಾ ಹೋಗುತ್ತದೆ. ಇನ್ನೊಂದು ಹಲವು ಆದರ್ಶಗಳನ್ನು ತುಂಬಿಕೊಂಡ ವ್ಯಕ್ತಿ ಅದರ ಒಂದು ಆದರ್ಶದ ಥೀಮನ್ನು ಹಿಡಿದು ಅದರಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಂಡು ಹೋಗುವದೊಂದು. ಇಲ್ಲಿ ಕುಸುಮಾ ಎರಡನೆಯ ಮಾರ್ಗವನ್ನು ಹಿಡಿದಿದ್ದಾರೆ. ನಗರದ ಥಳುಕಿನ ಬಳುಕಿನ ಬದುಕನ್ನು ಅನುಭವಿಸಿ ಮತ್ತೆ ಹಳ್ಳಿಗೆ ಹೋಗಿ ತಣ್ಣಗೆ ಬದುಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಗರಕ್ಕೆ ಹೊಂದಿಕೊಂಡಿರುವ ಹಳ್ಳಿ ಈಗ ಮೊದಲಿನ ಸಹಬಾಳ್ವೆಯ ಹಳಿಯಾಗಿ ಉಳಿದಿಲ್ಲ. ಇಲ್ಲಿನ ಕತೆಯಲ್ಲಿ ಬರುವ ನಂಜನಗೂಡಿನ ಸಮೀಪದ ಬಿಳಿಕೆರೆಯೆನ್ನುವ ಹಳ್ಳಿಯೊಂದೇ ಅಲ್ಲ. ಬಿಜಾಪುರ ಜಿಲ್ಲೆಯ ತುತ್ತತುದಿಯ ಚಾಂದಕವಟೆಯಂತ ಕುಗ್ರಾಮದ ಸ್ಥಿತಿಯೂ ಹೌದು. ಮೊದಲೆಲ್ಲ ಊರಿಗೆ ಅಪರಿಚತರು ಯಾರಾದರೂ ಸಂಜೆವೇಳೆಗೆ ಬಂದರೆ ತಮ್ಮ ಮನೆಗೆ ಕರೆದೊಯ್ದು ಉಪಚರಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಈಗ ಪ್ರೇಕ್ಷಣೀಯ ಸ್ಥಳದ ಪ್ರತಿಮನೆಯೂ ಹೋಮ್ ಸ್ಟೇ ಆಗಿದೆ. ಮನೆಯ ಮಕ್ಕಳೇ ಬಂದರೂ ಪುಕ್ಕಟೇ ಕೊಡಬೇಕಲ್ಲ ಎನ್ನುವ ಮನೋಭಾವವನ್ನು ಗಮನಿಸಬಹುದು. + +ಈ ಕಾದಂಬರಿಯಲ್ಲಿ ನಾಯಕ ಮತ್ತು ಕೇಂದ್ರೀಕೃತ ಪಾತ್ರಗಳು ಇಂತವೇ ಅಂತ ಇಲ್ಲ. ಪ್ರಕಾಶ ಪತ್ರಕರ್ತನಾಗಿದ್ದು ಕೆಲಸ ಕಳೆದುಕೊಂಡು ತಮ್ಮ ಹಳ್ಳಿ ಬಿಳಿಕೆರೆಗೆ ಬಂದಿದ್ದಾನೆ. ಆತನ ಹೆಂಡತಿ ಪದ್ಮಿನಿ ಕಿರುತೆರೆಯಲ್ಲಿ ಖ್ಯಾತ ನಟಿ, ಪ್ರತಿಭಾನ್ವಿತೆ ಕೂಡಾ. ಆಕೆಯ ತಾಯಿ ರಮಾ, ಪದ್ಮಿನಿಯ ತಂದೆ ಚಂದ್ರಣ್ಣ, ಜನಪರನಾಯಕ ದಲಿತ ಎನ್ನುವ ಕಾರಣಕ್ಕೆ ಸ್ವಲ್ಪ ಕೀಳರಿಮೆ ಇರುವ ಜವರಪ್ಪ ಈ ಎಲ್ಲರ ನಡುವೆ ಕಥೆ ಸಾಗುತ್ತದೆ. ಈ ಕಾದಂಬರಿಯ ಪ್ರತಿ ಪಾತ್ರಗಳೂ ಹೀಗೆ ಯಾರ ಯಾರದೋ ಹಿಂದೆ ಸಾಗಿ ನಂತರ ಅದಲ್ಲ ತಮ್ಮ ಪಥ ಎಂದು ಸರಿದು ಮತ್ತೆ ಗುರಿ ಮುಟ್ಟದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಚಂದ್ರಣ್ಣನಂತಹ ಕೆಲವರಿಗೆ ತಮ್ಮ ಮಿತಿಯ ಅರಿವಾಗಿ ಸರಿದು ಮೌನದಲ್ಲಿ ಸವೆದು ಹೋದ ದಾರಿಯನ್ನು ಸರಿಮಾಡುವತ್ತ ಲಕ್ಷ ಹರಿಸುತ್ತಾರೆ. + +(ಕುಸುಮಾ ಆಯರಹಳ್ಳಿ) + +ಪ್ರಕಾಶನದು ಮತ್ತು ಪದ್ಮಿನಿಯದು ಪ್ರೇಮವೋ ಅಥವಾ ಆಕರ್ಷಣೇಯೋ ಎನ್ನುವದು ಗೊತ್ತಾಗುವದರೊಳಗೆ ಅವರ ಮದುವೆ ಆಗಿಹೋಗಿದೆ. ಪದ್ಮಿನಿ ಅನೇಕ ಸಲ ಈ ಸಂಬಂಧವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಾಗಂತ ಪ್ರಕಾಶನ ಕುರಿತು ಆಕೆಗೆ ತಿರಸ್ಕಾರವೂ ಇಲ್ಲ. ಅವನ ಬದುಕಿನ ರೀತಿಯನ್ನು ಬದಲಾಯಿಸಲೂ ಆಕೆ ಪ್ರಯತ್ನ ಪಡುತ್ತಿಲ್ಲ. ಹಾಗಾಗಿ ಆತ ಬೆಂಗಳೂರನ್ನು ಬಿಟ್ಟು ಊರಿನಲ್ಲಿ ನೆಲೆಸುವ ನಿರ್ಧಾರವನ್ನು ಕೈಗೊಂಡಾಗ ಅದನ್ನು ಪ್ರತಿಭಟಿಸುವದಿಲ್ಲ. “ಪದ್ಮಿನಿಗೆ ಪ್ರಕಾಶ ಹೋದಮೇಲೆ ಹೊಸದೊಂದು ನಿರಾಳ ಉಂಟಾದದ್ದು ಯಾಕೆಂದೂ ಹೊಳೆಯುವದಿಲ್ಲ. ತಾವಿಬ್ಬರೂ ಮದುವೆಯಾದದ್ದು ವಯೋಸಹಜ ಮೋಹ ಮತ್ತು ಪರಸ್ಪರರಿಗಿದ್ದ ತಾತ್ಕಾಲಿಕ ತಪ್ಪು ಲೆಕ್ಕಾಚಾರಗಳಿಂದ ಅಂತ ಬಹಳಸಲ ಅನಿಸಿದೆ ಇಬ್ಬರಿಗೂ” ಎನ್ನುವಲ್ಲಿ ಇಡೀ ಕಾದಂಬರಿಯ ಕಥಾ ಹಂದರವನ್ನು ಬಿಡಿಸಿಟ್ಟಿದ್ದಾರೆ. ಆಕೆಗೆ ಅದಾಗಲೇ ಜೈಸನ್ ಎನ್ನುವ ಪ್ಯಾಷನ್ ಶೋ ಸಂಘಟಿಸುವನ ಜೊತೆ ಬ್ರೇಕ್-ಅಪ್ ಆಗಿ ಬಳಲಿದ ಮನಕ್ಕೆ ಸಿಕ್ಕವ ಪ್ರಕಾಶನಾಗಿದ್ದ. + +ಊರಿಗೆ ಬಂದ ಪ್ರಕಾಶ ಅಲ್ಲೇ ಇರುತ್ತೇನೆ ಎಂದಾಗ ಮೊದಲು ಶಾಕ್ ಆಗುವದು ಅವರ ಮನೆಮಂದಿಗೆ. ಊರಿನಿಂದ ಬೆಂಗಳೂರಿಗೆ ಹೋದವರು ಎಂದರೆ ಅವರು ತಿರುಗಿ ಬರಲಾರರು ಹಾಗಾಗಿ ಅವರ ಪಾಲಿನ ಆಸ್ತಿ ತಮಗೇ ಎಂದುಕೊಂಡವರಿಗೆ ಆತ ಊರಲ್ಲೇ ಖಾಯಂ ಆಗಿ ಉಳಿಯುತ್ತಾನೆ ಎಂದಾಗ ತಮ್ಮ ತುತ್ತನ್ನು ಕಸಿಯಲು ಬಂದವನಾಗಿ ಕಾಣಿಸುತ್ತಾನೆ. ಪ್ರಕಾಶನಿಗೆ ಊರಲ್ಲಿ ಸುಧಾರಣೆ ಮಾಡಬೇಕು ಎನ್ನುವ ಆದರ್ಶದ ವಿನಾಃ ಬೇರೇನೂ ಮನಸ್ಸಿನಲ್ಲಿಲ್ಲ. ತನ್ನೂರಿನ ಜನರಿಗೆ ಕಾಡುವ ವೃದ್ಧಾಪ್ಯವೇತನ, ಉತ್ತಮ ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು ಇಂತಹ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೊಂದು ನೆಮ್ಮದಿಯ ಬದುಕನ್ನು ಕಲ್ಪಿಸುವುದು ಉದ್ದೇಶ. ಇಲ್ಲಿ ಆತನಿಗೆ ಪದ್ಮಿನಿಯ ಮಾವ ಚಂದ್ರಣ್ಣ ಹಿಂದಿನಿಂದ ಸ್ಪೂರ್ತಿಯಾಗುತ್ತಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರಿಗೆ ಅವರ ಮಕ್ಕಳೇ ವಂಚಿಸಿ ಆಸ್ತಿ ಲಪಟಾಯಿಸಿದಾಗ ಬೇಸರಪಟ್ಟು ಹೊನ್ನಕುಡುಕಿ ಎನ್ನುವ ಹಳ್ಳಿಯಲ್ಲಿ ಸ್ನೇಹಿತನೇ ಕೊಟ್ಟ ತೋಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇಲ್ಲೆಲ್ಲಾ ಆಗಾಗ ಬರುವ ಗುರುಗಳು ಮತ್ತು ಸ್ವಾಮಿಗಳು ಬೈರಪ್ಪನವರ ಗೃಹಭಂಗದ ಪ್ರಭಾವವನ್ನು ಸೂಕ್ಷ್ಮವಾಗಿ ಬೀರಿದರೂ ಅದರ ಅರಿವಾಗಿ ತಕ್ಷಣ ಈ ಪ್ರಭಾವವಲಯದಿಂದ ಕುಸುಮಾ ತಪ್ಪಿಸಿಕೊಳ್ಳುತ್ತಾರೆ. ಪ್ರಕಾಶ ಪದ್ಮಿನಿಯನ್ನು ಮದುವೆಯಾಗುವ ಹಿಂದಿನ ಪ್ರಾಮಾಣಿಕ ನಿಲುವನ್ನು ತಿಳಿದ ತಕ್ಷಣ ಚಂದ್ರಣ್ಣ ಆತನನ್ನು ಅಪ್ಪಿ ಬೀಳ್ಕೊಡುವ ಸನ್ನಿವೇಶದಲ್ಲಿಯೇ ಪ್ರಕಾಶನ ಬದುಕಿನಲ್ಲಿ ಚಂದ್ರಣ್ಣನ ಆದರ್ಶಗಳು ಹೊಕ್ಕಿಕೊಂಡವೆನಿಸುತ್ತದೆ. + +ಈ ಅನೇಕ ಸಮಸ್ಯೆಗಳು ಮತ್ತು ಆಗಾಗ ಪವರ್-ಕಟ್ಟಿನಲ್ಲಿಯೇ ಬದುಕು ಸವೆಸುವ ಹಳ್ಳಿಯ ಜನರಿಗೆ ನಗರದ ತಳಕು ಬೆಳಕಿನ ಕನಸು ಸಹಜ. ಹಾಗಂತೆ ಸರಕಾರ ಕೊಡುವ ಎಲ್ಲವೂ ಅನುಭವಿಸುವದು ತಮ್ಮ ಹಕ್ಕು; ಕೊನೆಗೆ ಪುಕ್ಕಟೇ ಸಿಗುವ ಕುಡಿಯುವ ನೀರನ್ನೂ ಸಹ ಪೋಲುಮಾಡಬಹುದು ಎನ್ನುವ ಮನೋಭಾವ ಹಳ್ಳಿಗಳಲ್ಲಿದೆ ಎನ್ನುವುದನ್ನು ಲೇಖಕಿ ಸೂಕ್ಷ್ಮವಾಗಿ ತೆರೆದಿಡುತ್ತಾ ಹೋಗುತ್ತಾರೆ. ಹಳ್ಳಿಗರಿಗೆ ಇದು ತಪ್ಪು ಎಂದು ಯಾವತ್ತಿಗೂ ಅನಿಸುತ್ತಿಲ್ಲ. ಕಾರಣ ಅಜ್ಞಾನ. ಗೆಳೆಯ ರಾಜಣ್ಣ ಹಳ್ಳಿಗಳಲ್ಲಿರುವ ಜಾತಿ ರಾಜಕೀಯದ ಸೂಕ್ಷ್ಮತೆಯನ್ನು ತಿಳಿಸಿ ಅದರ ಸಹವಾಸ ಬೇಡವೆಂದರೂ ಅದನ್ನು ಸುಧಾರಿಸುವ ಹುಚ್ಚು ಪ್ರಕಾಶನಿಗೆ. ತನ್ನೂರಿನ ಜನರ ನಿಜವಾದ ಬವಣೆಗಳ ಬಗ್ಗೆ ಜಾಗೃತಿಮೂಡಿಸಿ ಅವರನ್ನು ಗಾಂಧೀಜಿ ಕಂಡ ಕನಸಿನ ಕಡೆಗೆ ಒಯ್ಯಬೇಕೆನ್ನುವದು ಆತ ಕಂಡ ಕನಸು. ಹಳ್ಳಿಗಳಲ್ಲಿ ಯಾರ ಯಾರ ಸಮಸ್ಯೆಗಳು ಯಾವ ರೀತಿಯವು ಎನ್ನುದು ತಿಳಿದಿರುವದು ಅಂಗನವಾಡಿ ಕಾರ್ಯಕರ್ತೆಯರಿಗೆ. ಹಾಗಾಗಿ ಅಲ್ಲಿ ಸಿಗುವ ಮಂಗಳ ಲಗ್ನವಾಗಿ ಅಷ್ಟೇ ಶೀಘ್ರವಾಗಿ ಗಂಡನನ್ನು ಕಳೆದುಕೊಂಡು ತವರುಮನೆ ಸೇರಿದವಳು. ಮೊದಲೊಮ್ಮೆ ಪ್ರಕಾಶನಿಗಾಗಿ ಮನಸ್ಸಿನಲ್ಲಿಯೇ ಮಂಡಿಗೆ ತಿಂದವಳು. ಆತ ಗಗನ ಕುಸುಮ ಎಂದು ಮೌನವಾಗಿ ಇದ್ದು ಬೇಜವಾಬುದಾರಿ ಅಣ್ಣನಿರುವ ತವರುಮನೆಯಲ್ಲಿ ಅತ್ತಿಗೆಯೊಂದಿಗೆ ಹೊಂದಿಕೊಂಡು ಇರುವವಳು. ಕ್ಯಾಮರಾ ಮುಂದೆ ಅಭಿನಯಿಸುವ ಕಲಾವಿದೆ ನಿರ್ದೇಶಕಕ ಕೈಗೊಂಬೆ; ಅಭಿನಯವೆಲ್ಲ ಪರಪುಟ್ಟ. ಆದರೆ ಸ್ವಚ್ಛಂದವಾಗಿ ಹಾಡುವ ಮನಸ್ಸಿನ ನೋವುಗಳನ್ನು ಮರೆಯುವ ಹಳ್ಳಿಯ ಕುಸುಮ ಪ್ರಕಾಶನ ಎದೆಯೊಳಗೆ ಅವಿತುಕೊಳ್ಳಲು ಪ್ರಾರಂಭಿಸುತ್ತಾಳೆ. + +ಪದ್ಮಿನಿಗೆ ಹಿಂದಿಯಿಂದ ಬಂದ ನಿರ್ದೇಶಕ ವಿಜಯ ಇಷ್ಟವಾಗುತ್ತಾನೆ. ಆತ ಈಕೆಯ ಜೊತೆ ವೃತ್ತಿಬಾಂಧವ್ಯದ ಹೊರತೂ ಬೇರೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳುವದಿಲ್ಲ. ಆತನಿಗೆ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರಬೇಕಿದೆ. ಅವಕಾಶಕ್ಕಾಗಿ ಕಾದಿದ್ದಾನೆ. ತನಗೆ ಇಷ್ಟವಾದವರನ್ನೆಲ್ಲ ಸೆಳೆಯುವ ಪದ್ಮಿನಿಗೆ ಆತ ಒಗಟಾಗಿಬಿಡುತ್ತಾನೆ. ಆತನನ್ನು ಒಲಿಸಿಕೊಳ್ಳುವದಕ್ಕಾಗಿ ಈಕೆ ಪ್ರಯತ್ನಿಸಿದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲಾರಳು. ಜೊತೆಯಾಗಿ ಹೋಗುವ, ಕೃಷ್ಣ ಭವನದ ಕಾಪಿಕುಡಿಯುವ, ಸೆಲ್ಫಿ ತೆಗೆದುಕೊಳ್ಳುವ ಹೀಗೆ ಪದ್ಮಿನಿಗೆ ವಿಜಯನ ಹುಚ್ಚು ಏರಿಬಿಡುತ್ತದೆ. ಒಮ್ಮಿಂದೊಮ್ಮೆಲೇ ಆತನಿಗೆ ತನ್ನ ಕನಸಿನ ಅವಕಾಶ ಸಿಕ್ಕಿದಾಗ ಈಕೆಗೆ ಪಾರ್ಟಿಕೊಟ್ಟು ಉತ್ತರಾಖಂಡಕ್ಕೆ ಹಾರಿಬಿಡುತ್ತಾನೆ. ವಿಜಯ ಇಲ್ಲದ ಬದುಕು ಪದ್ಮಿನಿಗೆ ಶೂನ್ಯವಾಗಿಬಿಡುತ್ತದೆ. ಹೀಗೆ ಎರಡು ಕೋನಗಳಿಂದ ಕಥೆ ಸಾಗುತ್ತಿದ್ದರೂ ಮೂಲ ಆಶಯವಾದ ಗ್ರಾಮವೃದ್ಧಿಯ ದಿಕ್ಕಿನಲ್ಲಿ ಸ್ವಲ್ಪವೂ ಅಲುಗಾಡುವದಿಲ್ಲ. ಪ್ರಕಾಶನಿಗೆ ಜೊತೆಗೂಡುವ ದಲಿತ ಜವರಪ್ಪ ಕೊನೆಯವರೆಗೂ ಇಷ್ಟವಾಗುತ್ತಾನೆ. ದಲಿತತನವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಶಿಕ್ಷಕ ಶಂಕರರಿನಿಗೆ ತನ್ನ ಮಗಳು ಇನ್ನೊಂದು ಬಣವಾದ ಹುಡುಗ ಮಂಜನೊಡನೇ ಓಡಿಹೋಗಿರುವದನ್ನು ಸಹಿಸಿಕೊಳ್ಳಲಾಗುವದಿಲ್ಲ. ಜಾತಿ ರಾಜಕಾರಣ ಹಳ್ಳಿಯನ್ನು ವಿಷಮಯ ಮಾಡಿರುವದನ್ನು ಅಂಬೇಡ್ಕರ ಮತ್ತು ಬಸವಣ್ಣನ ಪ್ರತಿಮೆಗೆ ಅದೇ ಸಮಾಜದವರು ಮಾಡಿ ಅದನ್ನು ಕೋಮುಗಲಭೆಗೆ ಅಸ್ತ್ರವಾಗಿಸುವ ವಸ್ತು ಸಹಜವಾಗಿ ಮೂಡಿಬಂದಿದೆ. + +ಈ ನಡುವೆ ಹಳ್ಳಿಯಲ್ಲಿಯೂ ವ್ಯಾಪಿಸಿರುವ ಕೈಗಾರಿಕೆಗಳು ತಮ್ಮ ಜವಾಬುದಾರಿಯನ್ನು ಮರೆತು ಹಳ್ಳಿಯ ನೀರು ಮತ್ತು ಮಣ್ಣನ್ನು ವಿಷಮಯವಾಗಿಸುತ್ತಿವೆ. ಅವುಗಳ ಭೂಮಿಯ ದಾಹದಿಂದ ಇನ್ನುಳಿದ ಭೂಮಿಯನ್ನು ಹಣದ ಆಮಿಷವನ್ನು ಒಡ್ಡಿ ವಶಪಡಿಸಿಕೊಳ್ಳುತ್ತಾ ಇವೆ. ಈ ಎಲ್ಲ ಸಮಸ್ಯೆಗಳಿಗೆ ಸಹಜ ಕೃಷಿಯೇ ಉತ್ತರ ಎನ್ನುವದನ್ನು ತೋರಿಸಿಕೊಡಬೇಕೆನ್ನುವದು ಪ್ರಕಾಶನ ಇಚ್ಚೆ. ಆ ಕಾರಣಕ್ಕಾಗಿಯೇ ಪ್ರಕಾಶ ಮನೆಯ ಪಾಲನ್ನು ತೆಗೆದುಕೊಳ್ಳಲು ಬಯಸುವದು; ಆಗ ಮನೆಯವರು ಮತ್ತು ಮದುವೆಯಾದ ಅತ್ತೆ ಎಲ್ಲ ಒಂದಾಗಿ ಪ್ರಕಾಶನಿಗೆ ಕೇವಲ ಒಂದೆಕರೆ ಜಮೀನು ಸಿಗುವಂತೆ ನೋಡಿಕೊಳ್ಳುತ್ತಾರೆ. ಈ ಮದ್ಯೆ ಸಮಾನ ಮನಸ್ಕರೆಲ್ಲರ ಧಾರವಾಡದ ಸಮಾವೇಶ, ಅಲ್ಲಿ ಪತ್ರಕರ್ತೆ ಚರಿತಾಳ ಪ್ರವೇಶ ಇವೆಲ್ಲ ಮಂಗಳಳ ಬದುಕಿನಲ್ಲಿ ಹೊಸ ಬೆಳಕನ್ನು ತೋರಿಸಿ ಧೈರ್ಯವನ್ನು ತುಂಬುವ ಕೆಲಸವಾಗುತ್ತದೆ. ಹಳ್ಳಿಯಲ್ಲಿ ಇದ್ದವರಿಗೆ ನಗರಕ್ಕೆ ವಲಸೆ ಹೋಗುವ ತಲಬು. ಅವರೆಲ್ಲರೂ ತಮ್ಮ ಪಾಲಿನ ಆಸ್ತಿಯನ್ನು ಕೈಗಾರಿಕೆಗೆ ಮಾರಿ ನಗರ ಸೇರುತ್ತಾರೆ. ರಿಯಲ್ ಎಸ್ಟೇಟ್ ದಂಧೆಯ ಕರಾಳ ಮುಖ ದೇವಿಕೆರೆ ಸ್ವಾಮಿಯ ಕೊಲೆಯೋ ಆತ್ಮಹತ್ಯೆಯವರೆಗೂ ತಂದು ನಿಲ್ಲಿಸುತ್ತದೆ. + +ವಿಜಯ ಮತ್ತು ಮಂಗಳಾ ಪದ್ಮಿನಿ ಮತ್ತು ಪ್ರಕಾಶರನ್ನು ಕಾಡುತ್ತಿರುವಂತೆ ಆಕೆಯ ತಾಯಿ ತನ್ನ ಇಳಿ ವಯಸ್ಸಿನಲ್ಲಿ ವಿಧುರ ಅಶೋಕನನ್ನು ಸೇರಿ ಇಬ್ಬರೂ ವಿದೇಶಕ್ಕೆ ಹಾರುವದು ಸಲಿಸಾಗಿ ನಡೆಯುತ್ತದೆ. ಜೀವನದಲ್ಲಿ ಗುರಿ ಇರದೇ ಇದ್ದಾಗಲೂ ಕೆಲವೊಮ್ಮೆ ಅವಕಾಶಗಳು ಹಾದುಹೋಗುತ್ತವೆ. ಅದನ್ನು ತಮ್ಮ ತಮ್ಮ ಅನುಕೂಲತೆಯನ್ನಾಗಿ ಬಳಸಿ ಬದುಕನ್ನು ಹಸನುಗೊಳಿಸಬಹುದೆನ್ನುವದನ್ನು ಅಪರವಯಸ್ಕರ ಕಹಾನಿ ತಿಳಿಸುತ್ತದೆ. ವಿಷಾದವೆನ್ನುವದು ತೀವ್ರವಾದಾಗ ಗುರುವಿನ ಮಾರ್ಗದರ್ಶನವಿದ್ದರೆ ಅದರಿಂದ ಹೊರಬರುವದು ಸಾಧ್ಯವೆನ್ನುವದು ಪದ್ಮಿನಿ ಕಂಡುಕೊಂಡಿದ್ದು ಮತ್ತೋರ್ವ ಗುರು ಪುರುಷೋತ್ತಮನಲ್ಲಿ. ಪದ್ಮಿನಿಗೆ ಬದುಕಿನ ವಾಸ್ತವದ ಅರಿವು ಬರುವದು ಆತ ನಡೆಸುವ ಅನಾಥಮಕ್ಕಳ ಆಶ್ರಮವನ್ನು ನೋಡಿದಾಗ. ಮಕ್ಕಳ ಆನಂದದಲ್ಲಿ ಆಕೆಯ ಚೆಲ್ಲುಚೆಲ್ಲಿನ ಜೀವನ ಒಂದು ಸ್ಥಿರತೆಗೆ ಬರುತ್ತದೆ. ಇತ್ತ ಪ್ರಕಾಶನಿಗೆ ತನ್ನ ಹೋರಾಟದ ಹಾದಿಯಲ್ಲಿಯೇ ಮಂಗಳಾ ಸಹ ಹತ್ತಿರವಾಗುತ್ತಾಳೆ. ಪ್ರಕಾಶ ತನ್ನ ಈ ಸಂಬಂಧವನ್ನು ಮಗ ನಿನಾದನ ಆಲೋಚನೆಯಿಂದ ಹೆಂಡತಿಗೆ ಹೇಳುವ ಧೈರ್ಯ ಮಾಡಲಾರ. ಇತ್ತ ಮಂಗಳಳನ್ನೂ ಬಿಡಲಾರ. ಈ ಧ್ವಂದ್ವವೇ ಆತನ ಹೋರಾಟದ ಬದುಕಿನಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. + +ಪ್ರಕಾಶ ಇಷ್ಟವಾಗುವದು ಆತ ತಾನೇ ನಾಯಕನಾಗಬೇಕೆಂದು ಹೊರಟಿಲ್ಲ. ಆತನಿಗೆ ಊರವರೇ ಅವರ ಸಮಸ್ಯೆಗಳ ಕುರಿತು ಹೋರಾಡಬೇಕಾಗಿದೆ. ಈತ ಕೇವಲ ಮಾರ್ಗದರ್ಶಕನಾಗಿರಬೇಕೆಂದುಕೊಳ್ಳುತ್ತಾನೆ. ಊರವರಿಗೆ ಕಾರ್ಖಾನೆಯ ವಿಷದಿಂದ ಚರ್ಮರೋಗ ಕಾಣಿಸಿಕೊಂಡಾಗ ಮಲಗಿದ್ದ ಜನರನ್ನು ಎತ್ತಿ ಅವರಲ್ಲಿ ವಿಷಮ ಪರಿಸ್ಥಿತಿಯ ಅರಿವು ಮೂಡಿಸುವ ಯತ್ನಮಾಡುತ್ತಾನೆ. ಸರಕಾರ ಮತ್ತು ವ್ಯವಸ್ಥೆ ಎಲ್ಲವೂ ಕಾರ್ಖಾನೆಯ ಒಟ್ಟಿಗೆ ಇರುವದರಿಂದ ಮಾಹಿತಿಗಳು ಸುಲಭವಾಗಿ ಸಿಗುವದಿಲ್ಲ. ಈ ನಡುವೆ ಪ್ರಕಾಶನ ಮೇಲೆ ಹಲ್ಲೆಯಾಗುತ್ತದೆ. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದ್ದರೂ ಚಳುವಳಿಯ ದಿಕ್ಕು ತಪ್ಪಬಾರದೆನ್ನುವ ಕಾರಣಕ್ಕೆ ಆತ ಅದು ತಾನೇ ಬೈಕಿನಿಂದ ಬಿದ್ದ ಅಪಘಾತ ಎಂದೇ ಹೇಳುತ್ತಾನೆ. ಪರಿಸರದ ಅನಾಹುತಕ್ಕೆ ಈ ಸಾರಿ ಮಂಗಳಾಳ ಸರದಿ. ಆಕೆಯೂ ವಾಂತಿ ಬೇಧಿಗೆ ಬಲಿಯಾಗುತ್ತಾಳೆ. + +ಕುಸುಮಾ ಅವರದು ಇದು ಚೊಚ್ಚಲ ಕಾದಂಬರಿ. ಆದರೆ ಅವರ ಬರಹಗಳನ್ನು ಮತ್ತು ಅಂಕಣಗಳನ್ನು ಓದುತ್ತಿರುವ ನನಗೆ ಅವರ ನಿರೂಪಣೆಯ ಪ್ರಕಾರವನ್ನು ಆಯ್ದುಕೊಂಡಿರುತ್ತಾರೆ. ಎಲ್ಲಿಯೋ ನೀರಸವಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ ಯಾವುದೋ ಒಂದು ವಿಷಯಗಳನ್ನು ಎತ್ತಿಕೊಂಡು ಪರಿಣಾಮವನ್ನು ಇಮ್ಮಡಿಗೊಳಿಸುವದು ಅವರ ಶೈಲಿ. ಮೈಸೂರಿನ ಗ್ರಾಮ್ಯ ಭಾಷೆಯ ಸೊಗಸನ್ನು ಚನ್ನಾಗಿ ದುಡಿಸಿಕೊಳ್ಳಬಲ್ಲರು. ಇಲ್ಲಿ ಗ್ರಾಮ್ಯ ಭಾಷೆಯೂ ಇದೆ; ಮತ್ತು ಬೆಂಗಳೂರಿನ ಕನ್ನಡವೂ ಇದೆ. ಇಡೀ ಕಾದಂಬರಿಯಲ್ಲಿ ಪಾತ್ರಗಳು ಮುಖಾಮುಖಿಯಾಗುವ ಸನ್ನಿವೇಶದಲ್ಲಿ ಇನ್ನೇನು ಸ್ಪೋಟಗೊಂಡು ಬಿಡುತ್ತದೆ ಎನ್ನುವಾಗ ಅದು ಅಲ್ಲಿಂದ ಜಾರಿ ಬಿಡುತ್ತದೆ. ಮಂಗಳಾ ಮತ್ತು ಪ್ರಕಾಶನ ಸಂಬಂಧ ಬಹಿರಂಗವಾಗುವ ಸನ್ನಿವೇಶವಿರಬಹುದು ಇಲ್ಲವೇ ಪದ್ಮಿನಿಗೆ ಅವರಿಬ್ಬರ ವಿಷಯದ ಕುರಿತು ದ್ಯಾವಮ್ಮ ಹೇಳಿದಾಗ ಆಕೆ ಮಂಗಳಳನ್ನು ಭೇಟಿಯಾಗುವ ಸನ್ನಿವೇಶವಿರಬಹುದು. ಪಾತ್ರಗಳು ಇಡೀ ಕಾದಂಬರಿಯುದ್ದಕ್ಕೂ ಆ ರೀತಿಯ ಸಂಗರ್ಷಕ್ಕೆ ಕಾರಣವಾಗುವದೇ ಇಲ್ಲ. ತಣ್ಣಗೆ ಕಥೆಯನ್ನು ಸಾಗಿಸಿಬಿಡುತ್ತಾರೆ. ಇದಕ್ಕೆ ಕಾರಣ ಕಥೆಯನ್ನು ತೆಗೆದುಕೊಂಡು ಹೀಗೆ ಹೋಗಬೇಕೆನ್ನುವ ಕಥೆಗಾರನ ನಿಲುವು. + +ಕಥಾ ಹಂದರವನ್ನು ನಿರ್ಮಿಸಿಕೊಂಡಿರುವದು ಗಾಂಧೀಜಿಯ ಕನಸಿನ ಗ್ರಾಮರಾಜ್ಯವನ್ನು ಕಟ್ಟಿಕೊಳ್ಳಬೇಕೆಂದು. ಹಾಗಂತ ಆಧುನಿಕ ಭಾರತಕ್ಕೆ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರಾಕರಿಸುವದಿಲ್ಲ. ಪರಿಸರಕ್ಕೆ ಮತ್ತು ಮನುಕುಲದ ಬದುಕಿಗೆ ಆಪತ್ತು ಬರಲೇ ಬಾರದಂತೆ ಕಾಳಜಿವಹಿಸಬೇಕೆನ್ನುತ್ತಾನೆ. ಕೈಗಾರಿಕೆಗಳನ್ನು ಸ್ಥಾಪಿಸುವಾಗ ಕಟ್ಟುನಿಟ್ಟಾದ ನಿಯಮಗಳನ್ನು ಮತ್ತು ತ್ಯಾಜ್ಯ ವಿಲೇವಾರಿಯನ್ನು ಅದು ಎಷ್ಟೇ ಖರ್ಚಿನದಾದರೂ ಅಳವಡಿಸಿಕೊಳ್ಳಬೇಕೆನ್ನುವದು ಪ್ರಕಾಶನ ಮತ. ತನ್ನ ಗಂಡನ ಕನಸಿಗೆ ಮಂಗಳ ಸರಿಯಾದ ಜೊತೆಯಾಗಬಹುದೆನ್ನುವದು ಅರಿವಾದಾಗ ಪದ್ಮಿನಿ ತೋರುವ ಸಹನೆ ಮತ್ತು ನಿಲುವು ಅದುತನಕದ ಆಕೆಯ ವ್ಯಕ್ತಿತ್ವವನ್ನು ಬದಲಾಯಿಸಿ ಪ್ರಕಾಶನೇ ಆಕೆಯ ಎದುರು ಕುಬ್ಜನಾಗಿಬಿಡುತ್ತಾನೆ. ಆಕೆಯೊಳಗಿನ ವಿಜಯ ಅಚ್ಚಳಿಯದೇ ಉಳಿದಿದ್ದಾನೆ. ಆಕೆಯ ಈ ಪ್ರೇಮದ ಮುಂದೆ “ನನ್ನ ಕಲ್ಪನೆಯ ವಿಜಯ ಎಷ್ಟೊಂದು ಅಗಾಧವಾಗ್ ಬೆಳ್ದಿದಾನೆ ಅಂದ್ರೆ ನಿಜವಾದ ಅವನು ಬಂದ್ರೂ ಒಂತರಾ ಕುಬ್ಜನಾಗಿ ಕಂಡುಬಿಡಬಹುದಾ?” ಎನ್ನುವಲ್ಲಿ ಪದ್ಮಿನಿ ಕಾದಂಬರಿಯನ್ನು ಮೀರಿ ಬೆಳೆದುಬಿಡುತ್ತಾಳೆ. ಹೆತ್ತು ಸಾಕಲು ಕಷ್ಟಪಟ್ಟ ಅಮ್ಮ ದೂರಸಾಗಿದ್ದಾಳೆ. ಕಟ್ಟಿಕೊಂಡ ಗಂಡನ ಎದೆಯಲ್ಲಿ ತನಗೆ ಜಾಗವಿಲ್ಲ. ಆದರೆ ಬಾಲ್ಯದಲ್ಲಿ ತನ್ನಿಂದ ದೂರವಿದ್ದ ಅಪ್ಪ ಹತ್ತಿರವಾಗುತ್ತಿದ್ದಾನೆ. ಅನಾಥ ಮಕ್ಕಳ ಖುಷಿಯಲ್ಲಿ ತನ್ನ ಅನಾಥಪ್ರಜ್ಞೆಯನ್ನು ಮರೆಯುವ ಭಾಗ ಪರಿಣಾಮಕಾರಿಯಾಗಿದೆ. ಇಡೀ ಕಾದಂಬರಿಯುದ್ದಕ್ಕೂ ಮೊಬೈಲ್ ತುಂಬಾ ಸಾಂಕೇತಿಕವಾಗಿ ತನ್ನ ಇರವನ್ನು ಗುರುತಿಸಿಕೊಳ್ಳುತ್ತದೆ. ಬಾಹ್ಯಸ್ವರೂಪದ ವಿಜಯನ ಗುರುತಿನ ಮೊಬೈಲ್ ಕಳೆದುಹೋಗಿದೆ. ಎದೆಯಗೂಡಿನಲ್ಲಿ ಉಳಿಸಿಕೊಳ್ಳುವದು ಆಕೆಗಿಷ್ಟ. ಹೊಸದೊಂದು ಸಿನೇಮಾದಲ್ಲಿನ ನಾಯಕಿಯ ಪಾತ್ರದ ಹೊಸ ಕರೆ ಬಂದಾಗ ತಾನೇ ಆ ಮೊಬೈಲನ್ನು ಎಸೆದು ಬಂಧನವನ್ನು ಕಳೆದುಕೊಳ್ಳುತ್ತಾಳೆ. ಇತ್ತ ಪ್ರಕಾಶ ಮತ್ತು ಮಂಗಳ ಇಬ್ಬರ ಬದುಕಿನಲ್ಲಿಯೂ ಮೊಬೈಲ್ ಸೇತುವಾಗಿದೆ. ಆದರೆ ಇಲ್ಲಿ ಮೊಬೈಲಿನ ಒಡತಿ ಮಂಗಳ ಇನ್ನಿಲ್ಲ. ಪ್ರಕಾಶ ಮಾತಾಡಬೇಕೆಂದು ಕರೆಮಾಡಿದರೆ ಒಡತಿಯಿಲ್ಲದ ಮೊಬೈಲ್ ಪ್ರಕಾಶನ ಪಕ್ಕದಲ್ಲೇ ರಿಂಗಣಿಸುತ್ತದೆ. ಸಿದ್ಧಾಂತವನ್ನು ಹೇಳಬೇಕೆನ್ನುವ ಕತೆಗಾರ್ತಿಯನ್ನು ಮೀರಿ ಕಥೆ ಬೆಳೆಯುವದು ಈ ಸಂದರ್ಭದಲ್ಲಿಯೇ. ಸಂಸಾರದಲ್ಲಿ ಏರುಪೇರಾದರೆ ವಿರಕ್ತರೇ ಅದಕ್ಕೆ ಪರಿಹಾರ ನೀಡಬಲ್ಲರೆನ್ನುವದು ಅವರ ನಿಲುವು. ವಿವರಗಳಿರಬೇಕಾದ ಕಡೆ ಕಥೆಯನ್ನು ಹಾರಿಸುವದು ಸೀದಾ ಹೇಳಬಹುದಾದ ಕಡೆ ಸುತ್ತುಬಳಸಿ ಹೇಳುವ ಅನೇಕ ಸಂಗತಿಗಳು ನಡುವೆಯೂ ಕಥೆಯನ್ನು ಬಿಗಿಯಾಗಿಸಿಕೊಳ್ಳಲು ಮುಂದಾಗುತ್ತಾರೆ. + + + +ಗ್ರಾಮ ಬದುಕಿನಲ್ಲಿ ಪ್ರೇಮಚಂದ ಮುನ್ಷಿಯವರ ಕಾದಂಬರಿ “ಸದ್ಗತಿ” ಎನ್ನುವದನ್ನು ಸತ್ಯಜಿತ್ ರೇಯವರ ನಿರ್ದೇಶನದಲ್ಲಿ ನಿರ್ಮಿಸಿದ Deliverance ಎನ್ನುವ ಚಲನಚಿತ್ರ ನೆನಪಿಗೆ ಬಂತು. 1935ರ ಸುಮಾರಿಗೆ ಇದ್ದ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಭೀಕರತೆ ಮರೆಯಲಾರದ್ದು. ಇಂದಿಗೂ ಅದರ ಕೆಲ ಬೇರುಗಳು ಹಳ್ಳಿಯಲ್ಲಿ ಹಾಗೇ ಉಳಿದು ಸಾಮಾಜಿಕ ಸ್ವಾಸ್ಥ್ಯವನ್ನು ಹೇಗೆ ಹಾಳುಮಾಡುತ್ತಿವೆ ಎನ್ನುವ ಕಳಕಳಿ ಈ ಕಾದಂಬರಿಯನ್ನು ಓದಿದಾಗ ನೆನಪಾಗಿ ಸುಮ್ಮನೆ ಪುಸ್ತಕವನ್ನು ಮಡಚಿಟ್ಟೆ. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_164.txt b/Kenda Sampige/article_164.txt new file mode 100644 index 0000000000000000000000000000000000000000..eb14731184c82942689aecc5cc508eb3cf6515a8 --- /dev/null +++ b/Kenda Sampige/article_164.txt @@ -0,0 +1,15 @@ +ಶಾರದಾ ಮೂರ್ತಿಯವರ ವಿವಿಧ ಲೇಖನಗಳು ಕತೆ ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ, ಅವುಗಳ ವಿಶೇಷಾಂಕಗಳಲ್ಲಿ ಬೆಳಕು ಕಾಣುತ್ತಲೇ ಇರುತ್ತವೆ. ಆಕಾಶವಾಣಿಯಲ್ಲೂ ಇವರ ಹಲವಾರು ಕತೆಗಳು ಪ್ರಸಾರವಾಗಿವೆ. ಹಲವಾರು ದೇಶಗಳನ್ನೂ ಕುಟುಂಬದವರೊಂದಿಗೆ ಸುತ್ತಿ ಬಂದಿರುವವರು ಶಾರದಾ ಮೂರ್ತಿಯವರು. ಬರವಣಿಗೆಯ ಕ್ಷೇತ್ರಕ್ಕೆ ತಡವಾಗಿ ಪಾದಾರ್ಪಣೆ ಮಾಡಿದವರು. ಆದರೂ ಆತ್ಮವಿಶ್ವಾಸದಿಂದ ಭರವಸೆ ಉತ್ಸಾಹದಿಂದ ಮುಂದುವರಿಯುತ್ತಾ ಬಂದು “ಪಲಾಯನ ಮತ್ತು ಇತರ ಕಥೆಗಳು” ಎಂಬ ಮೊದಲ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ + +“ಪಲಾಯನ ಮತ್ತು ಇತರ ಕತೆಗಳು” ಕಥಾ ಸಂಕಲನದಲ್ಲಿ ಒಟ್ಟು ಹತ್ತೊಂಬತ್ತು ಕತೆಗಳಿವೆ. ಲೇಖಕಿಯ ಲವಲವಿಕೆಯ ನಿರೂಪಣಾ ಶೈಲಿಯಿಂದಾಗಿ ಎಲ್ಲವೂ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಲೇಖಕಿ ತಮ್ಮ ಬಾಳಿನ ಗತಕಾಲದ ಅವಲೋಕನದಿಂದ ಹೆಕ್ಕಿ ತೆಗೆದ ಘಟನಾವಳಿಗಳು, ಪಾತ್ರಗಳು, ಅಂದಿನಕಾಲದ ಸನ್ನಿವೇಶ ಪರಿಸ್ಥಿತಿ ಮೌಲ್ಯಗಳು, ಸಂಬಂಧಗಳ ನಡುವಿನ ಬಂಧ, ಆ ಕಾಲದ ಜನರ ನಿರೀಕ್ಷೆಗನುಗುಣವಾದ ನಿರ್ಣಯಗಳು ಇವನ್ನೆಲ್ಲ ಕತೆಯಲ್ಲಿ ಸೂಕ್ತವಾಗಿ ಹೆಣೆದು ಸಮಂಜಸವಾದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಇದರಿಂದಾಗಿ ಈ ಕತೆಗಳ ಓದು ಆಪ್ಯಾಯಮಾನವಾಗಿಯೇ ಸಾಗುತ್ತದೆ. ಈ ಕತೆಗಳ ಕತಾ ನಾಯಕಿಯರು ಹೆಣ್ಣು ಕುಟುಂಬಕ್ಕೆ ಹೊರೆ, ಬೇಗ ಮದುವೆ ಮಾಡಿ ಕಳಿಸಿಕೊಡಬೇಕು ಎಂಬಂತಹ ಲಿಂಗ ಅಸಮಾನತೆಯ ವಾತಾವರಣದಲ್ಲಿ ಬೆಳೆದವರಾದರೂ ತಂತಮ್ಮ ಬಾಳಿನ ಬವಣೆಗಳಿಂದ ಬಸವಳಿದಾಗ ಸಾಂಪ್ರದಾಯಿಕ ಸಮಾಜದ ಕಟ್ಟುಪಾಡುಗಳನ್ನು ತಣ್ಣಗೆ ಬದಿಗೆ ಸರಿಸಿ ಆತ್ಮ ವಿಶ್ವಾಸದಿಂದ ಮುಂದೆ ಸಾಗಿದವರು. + +(ಶಾರದಾ ಮೂರ್ತಿ) + +“ತಪ್ಪಿಲ್ಲ” ಕತೆಯ ನಾಯಕಿಯರಾದ ಸಾವಿತ್ರಿ ಮತ್ತು ಮೀನಾ ಇಂತಹ ಶೋಷಣೆಯ ಬಲಿಪಶುಗಳು. ಅವರಲ್ಲಿ ಮೀನಾ ಸಂಪ್ರದಾಯದ ಶೃಂಖಲೆಗೆ ತಲೆ ಬಾಗದೇ ತನ್ನ ಸುಖ ತಾನು ಕಂಡುಕೊಳ್ಳುವ ದಾರಿಯಲ್ಲಿ ಮುನ್ನಡೆಯುತ್ತಾಳೆ. ಸಾವಿತ್ರಿ ಅದೇ ವ್ಯವಸ್ಥೆಯ ಬಲಿಪಶುವಾಗಿದ್ದವಳು. ಆದರೆ ಅವಳು ಹೃತ್ಪೂರ್ವಕವಾಗಿ ಮೀನಾಳ ದಿಟ್ಟತನವನ್ನು ಬೆಂಬಲಿಸುತ್ತಾಳೆ. ಶೀರ್ಷಿಕೆಯ ಕತೆ “ಪಲಾಯನ” ದ ನಾಯಕಿ ಪತಿ ವಿಧಿಸುವ ಕಟ್ಟುಪಾಡುಗಳಿಗೆ ತಲೆಬಾಗಿ ಬಾಳು ಸಾಗಿಸುತ್ತಿದ್ದವಳು. ಶೋಷಣೆಯಿಂದಾಗಿ ಬಾಗಿದ ಬೆನ್ನನ್ನು ಬಾಗುವವರೆಗೂ ಬಾಗಿಸಿ, ಇನ್ನು ಬಾಗಲಾರೆನೆಂದಾದಾಗ ಎದೆ ಸೆಟೆಸಿ ಎದ್ದು ನಿಲ್ಲುತ್ತಾಳೆ. ಅವಳ ಮಗಳು ಅವಳನ್ನು ಬೆಂಬಲಿಸುತ್ತಾಳೆ. ಹೆಂಡತಿಯನ್ನು ಹದ್ದುಬಸ್ತಿನಲ್ಲಿಡುವುದೇ ತನ್ನ ವ್ಯಕ್ತಿತ್ವದ ಸಾರ ಎಂಬಂತಿದ್ದ ಪತಿ ಶೇಷಯ್ಯ ಹೆಂಡತಿ ಮಗಳ ಈ ಆತ್ಮಪ್ರತ್ಯಯದ ಪ್ರಭೆಯ ಝಳ ತಾಳಲಾರದೆ ಪಲಾಯನ ಮಾಡುತ್ತಾನೆ. + +“ಭರವಸೆ” ಕತೆಯ ನಾಯಕಿ ಕವಿತಾ ಮನೆಯ ಒಳಗೂ ಹೊರಗೂ ಸಮರ್ಥವಾಗಿ ದುಡಿಯುತ್ತಾ ಅತ್ತೆ ಮಾವನ ಸೇವೆಯನ್ನೂ ನಿರ್ವಹಿಸುತ್ತಿದ್ದವಳು. ಗಂಡ ಮಾವನಿಂದ ಇವಳ ಮೇಲೆ ದಬ್ಬಾಳಿಕೆ. ಕ್ಲೀನರ್ ಪಾರ್ವತಿ ಇದೇ ವಿಧದ ಒತ್ತಡವನ್ನು ತಾನು ಚಾಣಾಕ್ಷತನದಿಂದ ಎದುರಿಸಿದ್ದನ್ನು ಹೇಳಿದಾಗ ಅವಳಿಂದ ಪ್ರೇರಿತಳಾಗುವ ಕವಿತಾಳನ್ನು ಅವಳ ಸ್ನೇಹಿತೆ ಮತ್ತು ಅತ್ತೆ ಬೆಂಬಲಿಸುತ್ತಾರೆ‌. ಇಲ್ಲಿ ಹೆಣ್ಣಿಗೆ ಹೆಣ್ಣೇ ಒತ್ತಾಸೆಯಾಗುವ ಚಿತ್ರಣವಿದೆ. ತನ್ನಾತ್ಮ ಬಲವೇ ತನಗೆ ಭರವಸೆಯ ಬೆಳಕಾಗುವುದನ್ನು ಕಾಣುತ್ತಾಳೆ ಕವಿತಾ. + +“ಚೌಕಳಿ ಸೀರೆ” ಯುವಪಡೆಯ ಸಂಘ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಚಂದದ ನಿರೂಪಣೆಯಿಂದ ಪ್ರಾರಂಭವಾಗಿ ಚೌಕಳಿ ಸೀರೆಯೊಂದಕ್ಕಾಗಿ ಬಲಿಯಾದ ತುಂಗಾಳ ಸಾವಿನೊಂದಿಗೆ ಓದುಗರ ಮನ ಮಿಡಿಯುತ್ತದೆ. “ಕಾಣೆ” ಕತೆ ಆಧುನಿಕ ಬದುಕಿನ ವಂಚನೆಯ ಜಾಲವನ್ನು ತೆರೆದಿಡುತ್ತಾ, ಮಾನವೀಯತೆಯ ಸೆಲೆ ಇನ್ನೂ ಒಸರುತ್ತಿರುವ ಆಶಾವಾದಿತ್ವವನ್ನು ಬಿಂಬಿಸುತ್ತದೆ. “ಅಮ್ಮ” ಕತೆಯಲ್ಲಿ ತಾಯಿಯ ಕುರಿತ ಮಗಳ ಮಮತೆ ಉಕ್ಕಿ ಹರಿಯಲು ಕೇವಲ ಒಂದು ಸಂಭಾಷಣೆ, ಅದು ಪ್ರೇರಿಸಿದ ಗತ ಕಾಲದ ನೆನಪು ಕಾರಣವಾಗಿ ಅದೇ ಒಂದು ಕತೆ ಆಗಿದೆ. + +ನಿರರ್ಗಳ ನಿರೂಪಣೆ ಕರಗತವಾಗಿರುವ ಲೇಖಕಿಯ ಕತೆಗಳು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿರೂಪಣೆಯ ಉತ್ಸಾಹದಿಂದ ಮುಂದುವರಿಯುವ ಲೇಖಕಿ ಕೆಲವು ಕತೆಗಳ ಅಂತ್ಯದಲ್ಲಿ ತೀರ್ಪುಗಾರಿಕೆ ಕೈಗೆತ್ತಿಕೊಳ್ಳುತ್ತಾರೆ. ಉದಾಹರಣೆಗೆ “ಸಿಂಗಾರಳ್ಳಿ ಗಣಪತಿ” “ಕಾಣೆ” ಕತೆಗಳ ಅಂತ್ಯದಲ್ಲಿ ಪಾತ್ರಗಳ ಕುರಿತ ವ್ಯಾಖ್ಯೆ. ಈ ವಾಚ್ಯತೆ ಅದುವರೆಗಿನ ಕಥನ ಶೈಲಿಯ ನವಿರುಗಾರಿಕೆಯನ್ನು ಮೊಂಡಾಗಿಸಿ ವರದಿಯ ಸ್ವರೂಪ ತಳೆಯುತ್ತದೆ. ಹಾಗೆಯೇ ಕಥನ ಪ್ರಸ್ತುತಪಡಿಸುವಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವೈವಿಧ್ಯತೆ ಲಭಿಸುತ್ತದೆ. ಯಶಸ್ವೀ ಕತೆಗಾರ್ತಿಯಾಗಿ ರೂಪುಗೊಂಡಿರುವ ಲೇಖಕಿಯ ಮುಂದಿನ ಪ್ರಯತ್ನಗಳು ಇಂತಹ ಪ್ರಯೋಗಶೀಲತೆಯಿಂದ ಮತ್ತಷ್ಟು ಸಂಪನ್ನಗೊಳ್ಳಲಿ. + +ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_165.txt b/Kenda Sampige/article_165.txt new file mode 100644 index 0000000000000000000000000000000000000000..0f5ff30892fa5e7199c066088ef1d73b16bd741d --- /dev/null +++ b/Kenda Sampige/article_165.txt @@ -0,0 +1,35 @@ +ಮನು ನನ್ನ ವಿದ್ಯಾರ್ಥಿ. ಆತ ನೋಡುವುದಕ್ಕೆ ಅಷ್ಟೇನೂ ಅಬ್ಬರವಲ್ಲ. ಕುಳ್ಳಗೆ ತೆಳ್ಳಗೆ ಸೌಮ್ಯವಾಗಿ ಇರುವ ಈ ಹುಡುಗನ ಒಳಗೊಬ್ಬ ಕಲಾವಿದ ಇದ್ದಾನೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಒಂದು ದಿನ ಅವನೊಂದು ಕಥೆ ತಂದು ಮುನ್ನುಡಿ ಬರೆದು ಕೊಡಿ ಎಂದು ಕೇಳುವವರೆಗೆ ಅವನು ಎಲ್ಲರೊಳಗೆ ಒಬ್ಬನಾಗಿದ್ದ. ಕಥೆ ತಂದು ಕೈಗಿತ್ತಾಗ ಮತ್ತೇನು ಬರೆದಿದ್ದೀಯ ಎಂದು ಕೇಳಲು ಕವಿತೆ, ನಾಟಕ ಇತ್ಯಾದಿ ಬರೆದಿರುವುದಾಗಿ ತನ್ನ ಸಾಹಿತ್ಯ ಕೃಷಿಯ ಬಗೆಗೆ ಹೇಳಿಕೊಂಡ. + +ಈ ನೀಳ್ಗತೆಗೆ ಮುನ್ನುಡಿ ಬರೆದು ಕೊಡುವಂತೆ ಬಂದು ನನಗೆ ಕತೆಯ ಪ್ರತಿಯನ್ನು ಕೊಟ್ಟಾಗ, ಒಂದೇ ಕತೆಯನ್ನು ಪುಸ್ತಕ ಮಾಡುವ ಈ ಹುಡುಗನದು ಹುಚ್ಚುತನವೆ ಎಂದುಕೊಂಡೆ. ನನ್ನ ಕೆಲಸ ಕಾರ್ಯಗಳ ಮಧ್ಯೆ ಓದಲು ಕೆಲದಿನ ತೆಗೆದುಕೊಂಡೆ. ಆಗಾಗ ಬಂದು ಮೇಡಂ ಕಥೆ ಓದಿದ್ದೀರಾ ಎಂದು ಕೇಳಿ ನೆನಪಿಸುತ್ತಿದ್ದ. ಕಥೆಯೇನೋ ಓದಿದೆ ಆದರೆ ಬರೆಯುವಲ್ಲಿ ಮತ್ತೆ ವಿಳಂಬವಾಯಿತು. ನನ್ನ ಈ ವಿಳಂಬ ಮನೋಭಾವವನ್ನು ಸಹಿಸಿಕೊಂಡ ಮನು ಅವರ ತಾಳ್ಮೆಗೆ ಮೊದಲು ಒಂದು ಸಲಾಂ ಹೇಳಲೇಬೇಕು. ಬಹುಶಃ ನನಗೆ ಮುನ್ನುಡಿ ಬರೆಯಲು ಕೊಟ್ಟದ್ದು ಬಿಸಿ ತುಪ್ಪದಂತಾಗಿರಬೇಕು. ಆಡಲಾರ ಅನುಭವಿಸಲಾರ ಇದೀಗ ಆ ಕತೆಯೇ ನನ್ನನ್ನು ಕಾಡಿ ಬರೆಯುವುದಕ್ಕೆ ಪ್ರೇರೇಪಿಸಿದೆ. ಆದರೆ ಒಳಗಿನ ಪಾತ್ರಗಳು ಕಣ್ಣ ಮುಂದೆ ಕುಣಿಯತೊಡಗಿದಾಗ ಇನ್ನು ಬರೆಯದೇ ಇರಲಾರೆ ಎನಿಸಿ ಬರೆಯಲು ಕುಳಿತೆ. + +(ಮನು ಗುರುಸ್ವಾಮಿ) + +ಅವಳು ಕತೆಯಾದಳು ಎಂಬುದು ಈ ಕಥೆಯ ಹೆಸರು. ಹೆಸರಿನಿಂದಲೇ ಇದೊಂದು ಸ್ತ್ರೀ ಕೇಂದ್ರಿತ ಕತೆಯೆಂಬುದು ತಿಳಿದುಬಿಡುತ್ತದೆ. ಅಂತೆಯೇ ಇಲ್ಲಿ ಒಬ್ಬ ಹುಡುಗಿಯ ಕತೆಯಿದೆ. ಬಹುಶಃ ಯಶವಂತ ಚಿತ್ತಾಲರ ಕತೆಯಾದಳು ಹುಡುಗಿ ಎಂಬ ಹೆಸರೂ ನೆನಪಿಗೆ ಬರುತ್ತದೆ. ಆದರೆ ಇಲ್ಲಿಯ ಕತೆಯೇ ಬೇರೆ. ಮನುವಿನ ಈ ವಯಸ್ಸು ಪ್ರೇಮಕತೆಗಳನ್ನು ಬರೆಯುವಂಥದ್ದು. ಹಾಗಾಗಿ ಯಾವುದೋ ಪ್ರೇಮಕಥೆಯೇ ಇರಬಹುದು ಎಂದುಕೊಂಡರೆ ಅದು ಸುಳ್ಳು ಎಂಬುದು ಕತೆ ಓದುತ್ತಾ ಹೋದಂತೆ ಗಮನಕ್ಕೆ ಬರುತ್ತದೆ. + +ಲೇಖಕ ‘ಮನು’ ಕತೆಯ ಆರಂಭದಲ್ಲಿಯೇ ಕತೆಯ ಕುರಿತು ಆಡಿರುವ ‘ಮನದ ಮಾತು’ ಈ ಕತೆಯ ಉದ್ದೇಶವನ್ನು ತೆರೆದಿಟ್ಟಿದೆ. ಸ್ತ್ರೀಯರ ಸ್ವಾತಂತ್ರ್ಯದ ಕುರಿತೇ ಇಲ್ಲಿ ಮಾತನಾಡಿರುವ ಲೇಖಕ, ಯಾಕೆ ಸ್ತ್ರೀಯರಿಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬ ಪ್ರಶ್ನೆ ಕಾಡಿ ಅದಕ್ಕೆ ಉತ್ತರ ಹುಡುಕುವಾಗ ಕಂಡ ಸಂಗತಿಗಳನ್ನು ಇಲ್ಲಿ ಕತೆಯಾಗಿಸಿದ್ದಾರೆ. “ದೇಹಕ್ಕಾಗಿ ಮೋಹಿಸುವ ಹವ್ಯಾಸವನ್ನೇ ಯುವಜನತೆ ಪ್ರೀತಿಯೆಂದು ಭಾವಿಸಿರುವುದು ವಿಷಾದನೀಯ” ಎಂಬ ಅವರ ಮಾತು ಮನು ಮನಸ್ಸು ಎಷ್ಟು ಸೂಕ್ಷ್ಮಗ್ರಾಹಿ ಎಂಬುದನ್ನು ಸೂಚಿಸುತ್ತದೆ. ಒಬ್ಬ ಗ್ರಾಮೀಣ ಹುಡುಗಿ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕತೆಯನ್ನು ಓದುಗರ ಮುಂದೆ ತೆರೆದಿಟ್ಟಿರುವುದಾಗಿ ಹೇಳುತ್ತಾರೆ ಮನು. ಇಂದಿಗೂ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಎಷ್ಟು ಅಡೆತಡೆಗಳನ್ನು ದಾಟಬೇಕಾಗಿದೆ. ಅದರಲ್ಲೂ ಹಳ್ಳಿಗಳಲ್ಲಿ ಇದು ಇನ್ನೂ ಕಷ್ಟದ ಕೆಲಸ ಎಂಬುದು ನಮಗೆಲ್ಲ ತಿಳಿದ ವಿಷಯ. ಹುಡುಗಿಗೆ ಹದಿನೆಂಟು ತುಂಬುವುದನ್ನೇ ಕಾಯುವ ತಂದೆ ತಾಯಿಗಳು ಮಗಳಿಗೆ ಮದುವೆ ಮಾಡಿ ಅವಳನ್ನೊಂದು ದಡಕ್ಕೆ ಸೇರಿಸಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವುದೇ ಹೆಚ್ಚು. ಪ್ರೀತಿ ಪ್ರೇಮ ಎಂಬ ಹುಚ್ಚಿನಲ್ಲಿ ಮಕ್ಕಳು ಮನೆತನದ ಮರ್ಯಾದೆಗೆ ದಕ್ಕೆ ತಂದಾರೊ ಎಂಬ ಆತಂಕ ಮಕ್ಕಳು ಹೊರಗೆ ಕಾಲಿಟ್ಟಾಗ ಏನಾದರೂ ಅವಘಡ ಸಂಭವಿಸುತ್ತದೆಯೋ ಎಂಬ ಭಯ ತಂದೆ ತಾಯಿಯರನ್ನು ಕಾಡುತ್ತಿರುತ್ತದೆ. ಇದೇ ಅಂಶವನ್ನು ಬಹಳ ನಾಜೂಕಾಗಿ ಹೆಣಿದಿರುವುದೇ ಈ ಕತೆಯ ವಿಶೇಷ. ಇದಿಷ್ಟೇ ಅಲ್ಲ ದೇವಿಕ ಎಂಬ ಹುಡುಗಿಯ ಬದುಕು ಕಥೆಯಾಗುವ ಮಟ್ಟಿಗೆ ಆಕೆಯ ಜೀವನದಲ್ಲಿ ನಡೆಯುವ ಘಟನೆಗಳಿವೆಯಲ್ಲ ಅವು ಅನಿರೀಕ್ಷಿತವಾದವು. ಒಂದು ಸಣ್ಣಕತೆಯ ವೈಶಿಷ್ಟ್ಯವೇ ಅದು. ಅನಿರೀಕ್ಷಿತ ತಿರುವಿನಲ್ಲಿ ಕತೆ ಸಮಾಪ್ತಿಗೊಳ್ಳುವುದು. ಕತೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಸಂಬಂಧಗಳ ಸಂಕೀರ್ಣ ಜಾಲವನ್ನು ನಿಭಾಯಿಸುವ ರೀತಿ ಈ ಕತೆಯಲ್ಲಿ ಸಹಜವಾಗಿ ಮೂಡಿಬಂದಿದೆ. + +ಚಿಕ್ಕಚೊಕ್ಕದಾದ ಎರಡು ಕುಟುಂಬಗಳ ಚಿತ್ರಣದೊಂದಿಗೆ ಕತೆ ಬಿಚ್ಚಿಕೊಳ್ಳುತ್ತದೆ. ಅಣ್ಣ ತಂಗಿಯರು ಒಂದೇ ಊರಿನಲ್ಲಿ ವಾಸಿಸುತ್ತಿದ್ದಾರೆ. ತಂಗಿಯ ಗಂಡ ತೀರಿಹೋಗಿದ್ದಾನೆ. ಅವಳ ಒಬ್ಬನೇ ಮಗ ಬೆಳೆದು ನಿಂತಿದ್ದಾನೆ. ತಂದೆ ತಾಯಿ ಇಲ್ಲದ ಕಾರಣ ಓದನ್ನು ಮೊಟಕುಗೊಳಿಸಿ ಉದ್ಯೋಗಕ್ಕೆ ಸೇರಿರುವ ಆತ ತಾಯಿಯ ಮಾತು ಮೀರದವನು. ತಾಯಿಗೆ ಮಗನ ಮೇಲೆ ಸಹಜವಾಗಿ ಅತಿಶಯ ಪ್ರೀತಿ ಇದೆ. + +ಅಣ್ಣ ಬಸವಗೌಡನ ಮನೆಯಲ್ಲಿ ಅವನ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳು. ತಂದೆ ತಾಯಿ ಇಬ್ಬರಿಗೂ ತಮ್ಮ ಮಕ್ಕಳ ಮೇಲೆ ಅಪಾರ ಪ್ರೀತಿಯಿದೆ. ಮಕ್ಕಳು ಕೂಡ ತಮ್ಮ ತಂದೆ ತಾಯಿಯ ಮಾತಿನೊಳಗೆ ಕಣ್ಣಂಜಿಕೆಯಲ್ಲಿದ್ದರೂ ಪ್ರೀತಿಗೇನೂ ಕೊರತೆ ಇಲ್ಲ. ಇಬ್ಬರೂ ಶಾಲೆಗೆ ಹೋಗುವವರು. ಹಿರಿಯ ಮಗಳು ದೇವಿಕಳನ್ನು ತನ್ನ ತಂಗಿಯ ಮಗನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಸೆ ಬಸವೇಗೌಡನಿಗೆ. ಆದರೆ ತಾನು ಚೆನ್ನಾಗಿ ಓದಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ಏನಾದರೂ ಸಾಧಿಸಬೇಕೆಂಬ ಹಠ ದೇವಿಕಳದು. ಅವಳಿಗೆ ತಾಯಿಯ ಬೆಂಬಲವೂ ಇದೆ. ಇತ್ತ ಸೋದರತ್ತೆಗೆ ದೇವಿಕಳನ್ನು ತನ್ನ ಮಗನಿಗೆ ತಂದುಕೊಳ್ಳುವ ಇಚ್ಛೆಯಿದೆಯಾದರೂ ತನ್ನ ಅತ್ತಿಗೆಗೆ ಅದು ಇಷ್ಟವಿಲ್ಲ ಎಂಬ ಮನದಾಳದ ಮಾತು ಅರಿವಿರುವುದರಿಂದ ಏನನ್ನೂ ಮಾತನಾಡಲಾಗದೆ ಮನದ ಉಮ್ಮಾಳದಲ್ಲಿದ್ದಾಳೆ. ಆಕೆಯ ಮಗನಿಗೂ ದೇವಿಕಳನ್ನು ಮದುವೆಯಾಗಬೇಕೆಂಬ ಹಂಬಲವಿದ್ದರೂ ಅದನ್ನು ಮಾತನಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾನೆ. ಇದ್ಯಾವುದರ ಪರಿವೆಯೂ ಇಲ್ಲದ ದೇವಿಕಳ ತಂಗಿ ಆರಾಮಾಗಿದ್ದಾಳೆ. + +ಈ ಕಣ್ಣಮುಚ್ಚಾಲೆಯಾಟದಲ್ಲಿ ದೇವಿಕ ಮತ್ತು ಅವಳ ತಾಯಿ ಗೆಲುವು ಪಡೆಯುತ್ತಾರೆ. ದೇವಿಕ ಮುಂದೆ ಓದುವುದಕ್ಕೆ ತಂದೆ ಬಸವಗೌಡನ ಅನುಮತಿ ಸಿಗುತ್ತದೆ. ಕಾಲೇಜು ಸೇರಿದ ದೇವಿಕ ಓದು ಬರಹದಲ್ಲಿ ತಲ್ಲೀನಳಾದರೂ ಅವಳದೇ ಮನಸ್ಥಿತಿಯ ರಾಜಶೇಖರನೆಂಬ ಯುವಕನೊಂದಿಗೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗುತ್ತದೆ. ಆದರೆ ದೇವಿಕ ಸಂದಿಗ್ಧತೆಯಲ್ಲಿದ್ದಾಳೆ. ಅವಳಿಗೆ ತನ್ನ ಪ್ರೀತಿಗಿಂತ ಜವಾಬ್ದಾರಿ ದೊಡ್ಡದೆನಿಸುತ್ತದೆ. ಪ್ರೀತಿಯನ್ನು ನಯವಾಗಿ ನಿರಾಕರಿಸುತ್ತಾಳೆ. ಪದವಿ ಮುಗಿದೊಡನೆ ತಂದೆ ಅವಳ ಮದುವೆಗೆ ಅವಸರಿಸುತ್ತಾನೆ. ಅಂತೆಯೇ ಲಾಯರ್ ವರನಿಗೆ ಕೊಟ್ಟು ಮಗಳ ಮದುವೆ ಮಾಡಿ ನಿರಾಳವಾಗುತ್ತಾನೆ. ಅವಳ ಬದುಕು ಸುಖವಾಗಿ ಸಾಗಿದೆ. ವರ್ಷ ತುಂಬುವುದರಲ್ಲಿ ಮಗು ಮಡಿಲು ತುಂಬಿದೆ. ಒಳ್ಳೆಯ ಮನೆತನದ ಯಾವುದಕ್ಕೂ ಕೊರತೆಯಿಲ್ಲದ ಜೀವನ. ಈ ಮಧ್ಯೆ ಪತಿಗೆ ಅನಾರೋಗ್ಯ ಕಾಡುತ್ತದೆ. ಅದನ್ನು ತೋರಗೊಡವುದಿಲ್ಲ. ಆದರೆ ದೇವಿಕಳ ಮುಂದಿನ ಭವಿಷ್ಯವೇನು ಎಂಬ ಚಿಂತೆ ಆವರಿಸಿ ಆತ ಅವಳ ಮನದಾಳ ತಿಳಿಯುತ್ತಾನೆ. ಆಕೆಗೆ ಐಎಎಸ್ ಮಾಡುವ ಅಪೇಕ್ಷೆ ಇದ್ದುದ್ದನ್ನು ತಿಳಿದ ಆತ ಅವಳ ಗುರಿ ಸೇರಿಸಲು ನಿರ್ಧರಿಸುತ್ತಾನೆ. ಆಕೆಯ ಓದಿನ ಹಂಬಲ ಅರಿತ ಪತಿ ಅವಳಿಚ್ಛೆಯಂತೆ ಐಎಎಸ್ ಗೆ ಸಿದ್ಧತೆ ಮಾಡಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡುತ್ತಾನೆ. ಪತಿಯ ಈ ಬಗೆಯ ಬದಲಾವಣೆಯ ಹಿಂದಿರುವ ಕಾರಣವನ್ನರಿಯದೆ ದೇವಿಕ ತನ್ನ ಓದಿನಲ್ಲಿ ಮಗ್ನಳಾಗಿ ಹಿಡಿದ ಛಲ ಸಾಧಿಸಿದಳು. ಅಷ್ಟರಾಗಲೇ ಅವಳ ಕಾಲೇಜು ಜೀವನದ ಗುಟ್ಟು ಪತಿಗೆ ತಿಳಿದಾಗ ಆತನಿಗೆ ಸಮಾಧಾನವಾಗುತ್ತದೆ. ರಾಜಶೇಖರನೊಂದಿಗೆ ಅವಳನ್ನು ಸೇರಿಸಬೇಕೆಂದು ಯೋಚಿಸುವಷ್ಟರಲ್ಲಿ ಆತ ತೀರಿಹೋದ ಸುದ್ದಿ ತಿಳಿದು ಆಘಾತಕ್ಕೊಳಗಾಗುತ್ತಾನೆ. + +ಅಂದು ಜಡಿಮಳೆ ಸುರಿಯುವ ಹೊತ್ತು. ದೇವಿಕಳ ಅತ್ತೆ ಹುಷಾರಿಲ್ಲದೆ ಮಲಗಿರುವುದರಿಂದ ಡಾಕ್ಟರನ್ನು ಕರೆತರಲು ಹೊರಟ ಪತಿರಾಯ. ಮನೆಯಲ್ಲಿ ಅತ್ತೆ ಆರೈಕೆ ಮಾಡುತ್ತಿರುವ ದೇವಿಕ ಅಡುಗೆ ಮನೆಯ ಒಳಗಿದ್ದಾಳೆ. ಒಂದೆಡೆ ಕಾಲಿಂಗ್ ಬೆಲ್ ಮೊಳಗಿದರೆ ಇನ್ನೊಂದೆಡೆ ಪೋನ್ ರಿಂಗಣಿಸಿದೆ. ಈ ಎರಡನ್ನೂ ದೇವಿಕ ಅಟೆಂಡ್ ಮಾಡಬೇಕು. ಮೊದಲು ಬಾಗಿಲು ತೆರೆದು ಪೋಸ್ಟ್ ಮ್ಯಾನ್‌ನಿಂದ ಕವರ್ ಪಡೆದಿದ್ದಾಳೆ. ಅದು ಅವಳ ಐಎಎಸ್ ಅಧಿಕಾರಿಯಾಗಿ ನೇಮಕವಾದ ಆದೇಶಪತ್ರ. ಇತ್ತ ಫೋನಿನಲ್ಲಿ ತನ್ನ ಪತಿ ತೀರಿಹೋದ ಸುದ್ದಿ; ಈ ಎರಡೂ ಏಕಕಾಲಕ್ಕೆ ಅಪ್ಪಳಿಸಿದ ಹೊತ್ತು ಕತೆ ಮುಗಿದಿದೆ. + +ಇದು ಒಂದು ಹೆಣ್ಣಿನ ಸಾಹಸಗಾಥೆಯನ್ನು ಚಿತ್ರಿಸುತ್ತದೆ. ಭಾರತದ ಗ್ರಾಮೀಣ ಪ್ರದೇಶದ ಅನೇಕ ಹೆಣ್ಣುಮಕ್ಕಳ ಜೀವನವನ್ನು ಪ್ರತಿನಿಧಿಸುವ ಕತೆಯಿದು. ಬಹುಶಃ ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಬಗೆಯ ವಿಧಿಯಾಟ. ಹೆಣ್ಣುಮಕ್ಕಳಿಗೆ ಓದು, ವಿದ್ಯೆ, ಉದ್ಯೋಗದ ಅವಕಾಶಗಳು ಎಷ್ಟು ಮಹತ್ವದ್ದು ಎನ್ನುವುದನ್ನು ಬಹಳ ನವಿರಾಗಿ ಈ ಕತೆ ನಿರೂಪಿಸುತ್ತದೆ. + +ಕತೆಯ ಗತಿ ನಿಧಾನವಾಗಿದೆ. ಒಂದೊಂದೇ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಕತೆ ಕೇವಲ ವರದಿಯಾಗದೆ ಕಲಾತ್ಮಕ ರೂಪ ಪಡೆಯುವಲ್ಲಿ ಯಶಸ್ವಿಯಾಗಿದೆ. ಒಂದೊಂದು ಸಂದರ್ಭದಲ್ಲೂ ಒಂದೊಂದು ರೂಪಕ ಆ ಹೊತ್ತಿನ ಮುನ್ಸೂಚನೆಯನ್ನು ಕೊಡುವಂತಿರುವುದು ಅದರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಕತೆ ಆರಂಭವಾಗುವುದು ಅದು ಪುಟ್ಟಕ್ಕನ ಹಟ್ಟಿ ಎಂಬುವುದರಿಂದ. ಬಸವೇಗೌಡನ ಪತ್ನಿ ದೇವಿಕಳ ತಾಯಿ ಪುಟ್ಟಕ್ಕ. ಇಲ್ಲಿ ಆ ಮನೆ ಪುಟ್ಟಕ್ಕನದು. ಬಸವೇಗೌಡ ಮತ್ತು ಪುಟ್ಟಕ್ಕನ ನಡುವೆ ಮಗಳ ಭವಿಷ್ಯ ಕುರಿತಂತೆ ನಡೆಯುವ ವಾಗ್ವಾದ, ಅದರಲ್ಲಿ ಪುಟ್ಟಕ್ಕನ ಗೆಲುವು ಕಾಣುತ್ತದೆ. ಇತ್ತ ಪ್ರೀತಿ, ತ್ಯಾಗ ಮುಂತಾದ ಸಂಗತಿಗಳು ಸಂದರ್ಭಕ್ಕನುಗುಣವಾಗಿ ಬರುತ್ತವೆ. ಬಸವೇಗೌಡನ ತಂಗಿ ತಾಯವ್ವನ ಮಗ ಅರುಣ ದೇವಿಕಳನ್ನು ಮದುವೆಯಾಗ ಬಯಸುವ ಗುಪ್ತಪ್ರೇಮಿ. ಆದರೆ ಆತ ದೇವಿಕಳ ಮನದ ಆಸೆ ತಿಳಿದು ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾನೆ. ತಾನು ಇನ್ಯಾರನ್ನೊ ಮೆಚ್ಚಿರುವುದಾಗಿ ಸುಳ್ಳು ಹೇಳಿ ಬಸವೇಗೌಡನನ್ನು ನಂಬಿಸುತ್ತಾನೆ. + +ದೇವಿಕಳೇನೂ ಭಾವನೆಗಳಿಲ್ಲದ ಕೊರಡಲ್ಲ. ಕಾಲೇಜಿನಲ್ಲಿ ತನ್ನ ಮನೋಧರ್ಮವನ್ನು ಹೋಲುವ ರಾಜಶೇಖರನಲ್ಲಿ ಒಲವು ಮೂಡುತ್ತದೆ. ಇಬ್ಬರಲ್ಲೂ ಪ್ರೇಮವಂಕುರಿಸಿದರೂ ತನ್ನ ತಂದೆಯ ಅನುಮಾನ ನಿಜವಾಗಬಾರದು ಎಂಬ ಕಾರಣಕ್ಕೆ ಪ್ರೇಮ ನಿರಾಕರಿಸುವ ದೇವಿಕಳ ಅಸಹಾಯಕ ಸ್ಥಿತಿ ಮನಕರಗಿಸುತ್ತದೆ. ರಾಜಶೇಖರನ ತ್ಯಾಗ ಇಲ್ಲಿ ಎದ್ದು ಕಾಣುತ್ತದೆ. ತಂದೆಗೆ ಕೊಟ್ಟ ಮಾತಿನಂತೆ ತಾನಾಯಿತು ತನ್ನ ಓದಾಯ್ತು ಎಂದು ಬದುಕುವ ಬದ್ಧತೆ ದೇವಿಕಳದು. + +ಈ ಎಲ್ಲವನ್ನೂ ಮೀರಿದ ವಿಧಿಲಿಖಿತವೆಂಬುದೊಂದಿದೆಯಲ್ಲ…. ಅದು ದೇವಿಕಳ ಬಾಳಿನಲ್ಲಿ ಆಟವಾಡಿದ ಪರಿಗೆ ಅವಳ ಬದುಕು ಛಿದ್ರವಾಗಬೇಕು. ಆದರೆ ಅಷ್ಟರಲ್ಲಿ ಈ ವಿಧಿಲಿಖಿತ ಮುನ್ಸೂಚನೆ ಪಡೆದ ಆಕೆಯ ಪತಿ ಅದಕ್ಕೊಂದು ಸರಿಯಾದ ದಾರಿ ಹುಡುಕಿ ದೇವಿಕಳ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರೂ ಆತ ಮಾತ್ರ ವಿಧಿವಶನಾಗುತ್ತಾನೆ. ಹೀಗೆ ಕತೆ ಮುಕ್ತಾಯಗೊಳ್ಳುತ್ತದೆ. ಒಂದು ಕೈಯಲ್ಲಿ ಉಜ್ವಲ ಭವಿಷ್ಯವಿದೆ ಇನ್ನೊಂದು ಕೈಯಲ್ಲಿ ಬದುಕು ಮುರುಟಿಹೋದ ವಿಚಾರವಿದೆ. ಇವೆರಡರ ಮಧ್ಯದಲ್ಲಿ ದೇವಿಕ ದಿಕ್ಕುತೋಚದೆ ನಿಂತಿದ್ದಾಳೆ. ಸಂಭ್ರಮ ಮತ್ತು ಸಂಕಟಗಳೆರಡೂ ಒಟ್ಟಿಗೆ ಅಪ್ಪಳಿಸಿದ ಸ್ಥಿತಿಯಿದು. + +(ಡಾ. ವಿಜಯಕುಮಾರಿ ಎಸ್ ಕರಿಕಲ್) + +ಈ ಕತೆಯು ಸರ್ವಸಾಕ್ಷಿ ಪ್ರಜ್ಞೆಯಲ್ಲಿ ನಿರೂಪಣೆಗೊಂಡಿದೆ. ಕತೆಗಾರ ಕತೆಯ ಹೊರಗೆ ನಿಂತು ಘಟನೆಗಳನ್ನು ನಿರೂಪಿಸುತ್ತಾನೆ. ಈ ಕತೆಗೆ ಒಂದು ನಿರ್ದಿಷ್ಟ ಉದ್ದೇಶವಿರುವುದು ಸ್ಪಷ್ಟ. ಆ ಉದ್ದೇಶ ಈಡೇರಿಕೆಗಾಗಿ ಘಟನೆಗಳು ದುಡಿಯುತ್ತವೆ. ಇಲ್ಲಿಯ ಪಾತ್ರಗಳು ಕತೆಗಾರನ ಉದ್ದೇಶಕ್ಕೆ ತಕ್ಕಂತೆ ಬೆಳೆಯುತ್ತವೆ. ಹಾಗೆಂದು ಕತೆಗಾರನ ಉದ್ದೇಶ ಅಲ್ಪತನದಲ್ಲ. ಸ್ತ್ರೀಪರವಾದ ಕಾಳಜಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ತನ್ನ ಆಸೆ ಆಕಾಂಕ್ಷೆಗಳನ್ನು ಬಲಿ ಕೊಡಬೇಕಾದ ಪ್ರಸಂಗ, ಇಂತವುಗಳ ಸೂಕ್ಷ್ಮ ನಿರೂಪಣೆ ಇಂತವುಗಳ ಸೂಕ್ಷ್ಮ ನಿರೂಪಣೆಯಿರುವುದನ್ನು ಇಲ್ಲಿ ಕಾಣಬಹುದು. + +ಕತೆಯ ಮುಖ್ಯ ಗುಣವೆಂದರೆ ಕತೆಯ ಘಟನೆಗಳಿಗೆ ಸಮಾನಾಂತರವಾಗಿ ಬರುವ ಕೆಲವು ಸಂಗತಿಗಳು. ಬೆಣ್ಣೆಗಾಗಿ ಕಾಯುವ ಬೆಕ್ಕು, ಬಲಿಯನ್ನು ಹಿಡಿಯಲು ಯತ್ನಿಸುವ ಹಲ್ಲಿ, ಇತ್ತ ಕತೆಯ ಪಾತ್ರವಾದ ಪುಟ್ಟಕ್ಕ ಸಿಟ್ಟಿನ ರಭಸದಲ್ಲಿ ಎದ್ದಾಗ ಆ ಎರಡೂ ತಮ್ಮ ಗುರಿ ಮರೆತು ಓಟ ಕೀಳುವ ಚಿತ್ರಣ, ಬಸವೇಗೌಡ ಹಾಗೂ ತಾಯವ್ವನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹೀಗೆ ವಸ್ತುಪ್ರತಿರೂಪವನ್ನು ಈ ಕತೆ ತುಂಬ ಚೆನ್ನಾಗಿ ಒಳಗೊಂಡಿರುವುದು ಕತೆಯ ಓಟ ಅನಿರೀಕ್ಷಿತ ಅಂತ್ಯ, ದ್ವಂದ್ವಗಳಲ್ಲಿ ಸಿಲುಕಿದ ಮನಸ್ಥಿತಿ ಇದೆಲ್ಲವೂ ಈ ನೀಳ್ಗತೆಯ ಜೀವಾಳವಾಗಿದೆ. + +ಒಟ್ಟಾರೆ ಮನು ಅವರ ಈ ಕತೆ ಭರವಸೆ ಹುಟ್ಟಿಸುತ್ತದೆ. ಮುಂದಿನ ದಿನಗಳಲ್ಲಿ ಒಬ್ಬ ಉತ್ತಮ ಕಥೆಗಾರನಾಗುವ ಲಕ್ಷಣಗಳು ಈ ಕತೆಯಲ್ಲಿ ಕಾಣಿಸುತ್ತಿದೆ. ಮನು ಈ ಕೃತಿಯ ಮೂಲಕ ಕನ್ನಡ ಕಥಾಲೋಕ ಪ್ರವೇಶಿಸುತ್ತಿದ್ದಾರೆ. ಅವರನ್ನು ಕನ್ನಡ ಓದುಗಲೋಕ ಹಾರ್ದಿಕವಾಗಿ ಬರಮಾಡಿಕೊಳ್ಳಲೆಂದು ಹಾರೈಸುತ್ತೇನೆ. ಉತ್ತಮ ಕತೆಗಳು ಮನು ಅವರಿಂದ ಮೂಡಿಬರಲಿವೆ ಎಂಬ ಆಶಾಭಾವನೆಯಲ್ಲಿ ಅವರ ಉತ್ತರೋತ್ತರ ಬೆಳವಣಿಗೆಗೆ ಹಾರೈಸುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_166.txt b/Kenda Sampige/article_166.txt new file mode 100644 index 0000000000000000000000000000000000000000..38305f734efc0557af6872f851b266ee4b04ab37 --- /dev/null +++ b/Kenda Sampige/article_166.txt @@ -0,0 +1,35 @@ +ಬರವಣಿಗೆ ಅನ್ನುವುದು ಒಂದು ವಿಸ್ಮಯ. ಕೈ ಕುದುರುವರೆಗೂ ಮೊದ ಮೊದಲು ಬೇರೆಯವರಿಗಾಗಿ, ಹೆಸರಿಗಾಗಿ ಬರೆಯುತ್ತೇವೆ. ಒಮ್ಮೆ ಈ ಹಂತವನ್ನು ಮೀರಿದ ಮೇಲೆ ನಮ್ಮನ್ನು ನಾವು ಸಂತೈಸಿಕೊಳ್ಳುವ ಸಲುವಾಗಿ, ಲೋಕದ ಒಲವು ಚೆಲುವು, ದುಃಖ ದುಮ್ಮಾನಗಳಿಗೆ ದನಿಯಾಗಬಯಸುವ ಸಲುವಾಗಿ ಬರೆಯುತ್ತೇವೆ. ಹೀಗೆ ಒಮ್ಮೆ ಬರೆಯುವ ಬದುಕಿನ ಲಯಕ್ಕೆ ಬಿದ್ದ ಮೇಲೆ ಬರಬರುತ್ತಾ ಬರವಣಿಗೆ ಎಂಬುದು ಒಂದು ಕಲಾತ್ಮಕ ಅಭಿವ್ಯಕ್ತಿಯಾಗಿಬಿಡುತ್ತದೆ. ಹಂಗಾಗಿ ಅದನ್ನು ಕಲಾತ್ಮಕವಾಗಿ ಕಟ್ಟಬೇಕು ಅನ್ನುವ ಅರಿವಿಗೆ ಒಳಗಾಗುತ್ತೇವೆ. ಏಕೆಂದರೆ ನಾವು ಕಟ್ಟಿ ಕೊಡುವ ಕಥೆ ಓದುಗನೊಳಗೆ ಒಂದು ಚಿತ್ರವಾಗಿ,ಆ ಚಿತ್ರ ಓದುಗ ಸ್ಮೃತಿಯನ್ನು ತಾಕುತ್ತಾ ಬೆಳೆಯುತ್ತಾ ಹೋಗುವಂತಿರಬೇಕು. ಹೀಗೆ ನಿಜವಾದ ಕಥೆಯೊಂದು ಕಾಲಾತೀತವಾಗುತ್ತದೆ. + +(ಮಂಜಯ್ಯ ದೇವರಮನಿ) + +ಲೋಕದ ಸಂಕಟಗಳಿಗೆ ಮುಖಾಮುಖಿಯಾಗುವ ಲೇಖಕನಿಗೆ ಬಹುಮುಖ್ಯವಾಗಿ ಸಾಮಾಜಿಕ ಜವಾಬ್ದಾರಿ ಅನ್ನುವುದು ಇರಬೇಕಾಗುತ್ತದೆ. ಯಾಕೆಂದರೆ ಅದು ಅವನು ತಾನು ಬದುಕುತ್ತಿರುವ ಲೋಕಕ್ಕೆ ತೀರಿಸಬಹುದಾದ ಋಣ ಕೂಡಾ ಆಗಿರುತ್ತದೆ. ಇಲ್ಲಿನ ಅಸಮಾನತೆ,ಅಸ್ಪೃಶ್ಯತೆ, ಹೆಣ್ಣಿನ ಶೋಷಣೆ,ಜಾತಿ ಧರ್ಮಗಳ ಕೇಡುಗಳು ಕಾಡದೇ ಹೋದರೆ,ಅಂದರೆ ಲೋಕದ ನೋವಿಗೆ ತುಡಿಯಲಾರದ, ಸಮಕಾಲೀನ ಸಮಸ್ಯೆಗಳಿಗೆ ಕಿವಿಕೊಡಲಾಗದ ಲೇಖಕನೊಬ್ಬನ ಬರವಣಿಗೆ ಅಪ್ರಮಾಣೀಕವಾಗಿರುವುದಷ್ಟೇ ಅಲ್ಲ, ಆತ್ಮವಂಚಕವೂ ಆಗಿರುತ್ತದೆ. ಜೀವಪರ ತುಡಿತ ನಿಜವಾದ ಲೇಖಕನೊಬ್ಬನ ನಿಜ ಕಾಳಜಿಯಾಗಿರುತ್ತದೆ. + +ಅಂತೆಯೇ ಬಾಲ್ಯವಿಲ್ಲದವನು ಲೇಖಕನಾಗಲಾರ. ಆದರೂ ತುಂಬಾ ನೀರಸ ಚಿತ್ರವನ್ನು ಮಾತ್ರ ಕಟ್ಟಿ ಕೊಡಬಲ್ಲ. ಲೋಕದ ಯಾವುದೇ ದೊಡ್ಡ ಲೇಖಕನ ಬಾಲ್ಯವನ್ನು ನೋಡಿದಾಗ ಈ ಮಾತು ಅರಿವಿಗೆ ಬರುತ್ತದೆ. ಹಂಗಂತ ಕೇವಲ ನೆನಪಿಗೇ ಜೋತು ಬೀಳಲಾಗದು. ಆ ನೆನಪುಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡುತ್ತಾ, ಸಮಕಾಲೀನ ಸಮಸ್ಯೆಗಳೊಂದಿಗೆ ಬೆಸೆಯಬೇಕಾಗುತ್ತದೆ. ಅದು ಓದುಗನೊಳಗೊಂದು ಮಾನವೀಯ ಲೋಕವೊಂದು ಅನುರಣಿಸುತ್ತಾ ಹೋಗುತ್ತದೆ. + +ಇಲ್ಲಿನ ಈ ಸಂಕಲನದಲ್ಲಿ ಮಂಜಯ್ಯದೇವರಮನಿಯವರು ಹೀಗೆ ತಾನು ಹುಟ್ಟಿ ಬೆಳೆದ ಹಾಗೂ ತನ್ನೊಳಗೆ ಈಗಲೂ ಬೆಚ್ಚಗೆ ಕೂತಿರುವ ಸ್ನೃತಿಗಳನ್ನು ವಾಸ್ತವದ ಸತ್ಯಗಳೊಂದಿಗೆ ಒರೆ ಹಚ್ಚುತ್ತಾ ಓದುಗನನ್ನು ತಮಾಮ್‌ ತನ್ನ ಹಳ್ಳಿಯ ಬದುಕಿಗೆ ಕರೆದೊಯ್ದು, ಅಲ್ಲಿನ ನೋವು ನಲಿವು, ಕೆರೆ ತೊರೆ, ಬಾವಿ ಬಂಕಗಳನ್ನು ಇಣುಕಾಕುವಂತೆ ಮಾಡಿದ್ದಾರೆ. ಅಂತೆಯೇ ಅಲ್ಲಿನ ಮುಗ್ಧತೆ, ಗೌಡಿಕೆ, ಕಾಮ,ಪ್ರೇಮ,ಸಣ್ಣತನ, ಉದಾರತೆ,ಕ್ರೌರ್ಯಗಳನ್ನುಹಾಗೂ ಒಕ್ಕಲುತನವನ್ನು ಕಣ್ಣಿಗೆ ಕಟ್ಟುವಂತೆ ತೋರಾಕುತ್ತಾರೆ. ಹಂಗಾಗಿ ಇಡೀ ಸಂಕಲನದ ಕಥೆಗಳು ಆತ್ಮಕಥೆಯ ಆತ್ಮದಿಂದ ನಡೆದು ಬಂದಿರುವ ತುಣುಕುಗಳಂತೆ ಭಾಸವಾಗುತ್ತವೆ. + +ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ. ಜೊತೆಗಿಲ್ಲಿ ಬುದ್ಧಿವಾದ ಹೇಳುವ ಇರಾದೆ ಇಲ್ಲದಿರುವುದರಿಂದ ಸನ್ನಿವೇಶಗಳು ಹಾಗೂ ಪಾತ್ರಗಳಿಗೆ ಸಹಜ ನಡಿಗೆಯ ಸೌಭಾಗ್ಯ ದಕ್ಕಿದೆ. + +ಸಂಕಲನದ ಶೀರ್ಷಿಕೆಯ ಕಥೆʻದೇವರ ಹೊಲʼ ಸಾಂಕೇತಿಕವಾದರೂ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಊರ ಗೌಡ ಶಿವರುದ್ರಯ್ಯನ ಹಿಕ್ಮತ್ತು,ಸಂಗಪ್ಪ ಮತ್ತವನ ಕುಟುಂಬದ ಕಡು ಕಷ್ಟ, ಅದನ್ನೇ ಬಂಡವಾಳ ಮಾಡಿಕೊಳ್ಳಲು ಹವಣಿಸುವ ಗೌಡ,ಇದರೊಂದಿಗೆ ಬೆಸಗೊಳ್ಳುವ ಹಳ್ಳಿಯ ರಾಜಕಾರಣ ಹೀಗೆ ಅನಾವರಣಗೊಳ್ಳುವ ಈ ಕಥೆಯಲ್ಲಿ ಒಂದು ರೀತಿಯಲ್ಲಿ ಸಂಗಪ್ಪನ ಹೆಂಡತಿಯ ಧೈರ್ಯʻಬಗ್ಗುವುದಕ್ಕೂ ಒಂದು ಮಿತಿ ಇದೆ. ಅದು ಮೀರಿದರೆ ಬಗ್ಗಿಸ ಬಂದವನಿಗೆ ಅದೇ ತಿರುಗು ಬಾಣವಾಗುತ್ತದೆʼಅನ್ನುವ ಸಂದೇಶವನ್ನು ಹೇಳುತ್ತದೆ. ಇದರ ಜೊತೆ ಜೊತೆಗೇ ಕಥೆಗಾರ ಕಟ್ಟಿಕೊಡುವ ಕಣ್ಮರೆಯಾಗುತ್ತಿರುವ ಹಳ್ಳಿಗಾಡಿನ ಬದುಕು ಮುದಕೊಡುತ್ತದೆ. ಅಕಸ್ಮಾತ್ತಾಗಿ ಸಾಯುವ ʻದ್ಯಾವ್ರ ಎತ್ತುʼವಿನ ಸಾವನ್ನೇ ಕಾರಣವಾಗಿಸಿಕೊಂಡು ʻದೇವರ ಹೊಲʼವನ್ನು ತನ್ನ ಗುಪ್ತ ಆಸೆಯ ಈಡೇರಿಕೆಗಾಗಿ ಕೊಡಿಸಿದ್ದ ಕಾರಣಕ್ಕೆ ಸಂಗಪ್ಪನ ಹೆಂಡತಿ ಶಾರವ್ವನನ್ನು ಬುಟ್ಟಿಗಾಕಿಕೊಳ್ಳಲು ಯತ್ನಿಸುವ ಗೌಡ ಶಿವರುದ್ರಯ್ಯ, ಅದೇ ಶಾರವ್ವನ ರೋಷಕ್ಕೆ ತುತ್ತಾಗಿ ಚಾಟಿ ಏಟಿನಿಂದ ಅವಳಿಂದಲೇ ಸಾಯುವ ದೃಶ್ಯ ಗೌಡಿಕೆ ಕಾಲದ ಹಳ್ಳಿಗೆ ಕರೆದೊಯ್ಯುವುದಲ್ಲದೆ , ಇಂದಿಗೂ ಉಳ್ಳವರು ಬಡವರ ಹೆಣ್ಣು ಮಕ್ಕಳನ್ನು ಹುರಿದು ಮುಕ್ಕುವುದಕ್ಕೆ ಒಂದು ಪ್ರಾತಿನಿಧಿಕ ಸತ್ಯದಂತೆ ರೂಪುಗೊಂಡಿದೆ. + + + +ʻನಾಯಿ ಬುಡ್ಡನ ಪವಾಡʼಅನ್ನುವ ಕಥೆ ಪ್ರಜಾಪ್ರಭುತ್ವದ ಆಶಯದಂತೆ ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಬಡವನೊಬ್ಬಗ್ರಾಮ ಪಂಚಾಯಿತಿ ಅಧ್ಯಕ್ಷನಾಗುವುದು, ಅವನು ತನ್ನ ಕೇರಿಯ ಒಳಿತಿಗಾಗಿ ದುಡಿಯುವುದು, ʻಪ್ರಜಾಪ್ರಭುತ್ವ ಇರಬೇಕಾದ್ದು ಹೀಗೇಯೇ,ʼಅನ್ನುವ ಸಂಗತಿಯನ್ನು ತೋರಾಕುತ್ತದೆ. ಇಲ್ಲಿ ನಡೆಯುವ ಹಳ್ಳಿಯ ರಾಜಕಾರಣ ನಾಡಿನ ಯಾವುದೇ ಹಳ್ಳಿಯಲ್ಲೂ ನಡೆಯಬಹುದಾದ್ದದ್ದು. ಹಂಗಾಗಿ ಈ ಕಥೆಗೊಂದು ಸಾರ್ವತ್ರಿಕತೆ ದಕ್ಕಿದೆ. + +ʻಮುತ್ತಿನ ರಾಶಿʼಅನ್ನುವ ಕಥೆ ಕೂಡಾ ಹಳ್ಳಿಯ ರಾಜಕಾರಣ ಹಾಗೂ ಅದರ ಪರಿಣಾಮವನ್ನು ಚಂದವಾಗಿ ಚಿತ್ರಿಸುತ್ತದೆ.ಇಲ್ಲಿ ವೈಯಕ್ತಿಕ ದ್ವೇಷದಿಂದಾಗಿ ಗೌರಕ್ಕನ ಜೋಳದ ರಾಶಿಗೆ ಬೆಂಕಿಯಿಕ್ಕಿ ಸರ್ವ ನಾಶ ಮಾಡುವುದು, ಹಳ್ಳಿಗಳಲ್ಲಿ ಇರುವ ಒಳಿತಿನ ಜೊತೆಗಿನ ಕೇಡನ್ನು ಅನಾವರಣಗೊಳಿಸುತ್ತದೆ. ಕಡೆಗೆ ಮಂತ್ರ ಮಾಂಗಲ್ಯದ ಮೂಲಕ ಆದರ್ಶದ ಮದುವೆ ಮಾಡಿಕೊಳ್ಳುವ ಗುರುಬಸವ ಹಾಗೂ ಇಮ್ಲಿ, ಅಂತೆಯೇ ತನ್ನ ಮಗನೇ ಆ ಕೆಲಸ ಮಾಡಿದ್ದಾನೆಂದು ಗೊತ್ತಾದ ಕೂಡಲೇ ಬಸವಣ್ಣೆಪ್ಪ ಸೀದಾ ಗೌರಕ್ಕನ ಮನೆಗೆ ಹೋಗಿ ಅವಳ ಕಷ್ಟಕ್ಕೆ ಆಗುವುದು ಈಗಲೂ ಹಳ್ಳಿಗಳಲ್ಲಿರುವ ಉದಾರತೆ ಹಾಗೂ ಮಾನವೀಯ ತುಡಿತಕ್ಕೆ ಮಾದರಿಯಂತೆ ಗೋಚರಿಸುತ್ತದೆ. ಇದರ ಜೊತೆಗೆ ಹಳ್ಳಿಯೊಂದರ ದಿನಂಪ್ರತಿ ಬದುಕು ತಂತಾನೇ ಅರಳಿಕೊಳ್ಳುವ ಪರಿ ಸೊಗಸಾಗಿದೆ. + +ʻಅಗಸಿ ಹೆಣʼಒಂದು ದುರಂತ ಕಥೆ. ಹೋರಿ ಹಬ್ಬದಲ್ಲಿ ತನ್ನ ಹೋರಿ ಕಾಳಿಂಗನನ್ನು ಸೋಲಿಸಿದ ಅನ್ನುವ ಕಾರಣಕ್ಕೆ ಕುಸ್ಲೆವ್ವಳ ಮಗ ಕಾಂತನನ್ನು ಕೊಲೆ ಮಾಡಿಸುವ ಪುಟ್ಟಾಲಯ್ಯನ ಕ್ರೌರ್ಯ ಗೌಡಿಕೆಯ ಇತಿಹಾಸ ಗೊತ್ತಿರುವವರಿಗೆ ಹೊಸದು ಅನಿಸದಿದ್ದರೂ ಈಗಿನ ಕಾಲಮಾನದಲ್ಲೂ ಹಲವು ಕಾರಣಕ್ಕೆ ಇಂಥ ಕೊಲೆಗಳಿಗೆ ಹಳ್ಳಿಗಳು ಸಾಕ್ಷಿಯಾಗುತ್ತಿವೆ ಅನ್ನುವುದು ಮತ್ತೊಂದು ದುರಂತ. ಇಂಥ ಕೊಲಗಡುಕತನದ ಜೊತೆಗೇ ಬಿಚ್ಚಿಕೊಳ್ಳುವ ಹೋರಿ ಹಬ್ಬದಚಿತ್ರಣ ಸಾಂಸ್ಕೃತಿಕ ವೈಭವಕ್ಕೆ ಕನ್ನಡಿ ಹಿಡಿದಂತಿದೆ. + +ಇಂಥದ್ದೇ ಪರಿಸರದಲ್ಲಿ ನಡೆಯುವ ʻಕಾಡ್ಕೋಣ ಭೂತಲಿಂಗʼಅನ್ನುವ ಕಥೆ ಸಾಂಸಾರಿಕ ಏರುಪೇರುಗಳನ್ನುಹಾಗೂ ಅದರಿಂದಾದ ತಾಪತ್ರಯಗಳನ್ನು ತೋರಾಕುತ್ತದೆ. ಇಬ್ಬರು ಹೆಂಡಿರ ಕಾಟದಲ್ಲಿ ಹೈರಾಣಾಗುವ ಭೂತಲಿಂಗ, ಅವನ ಮಗನೇ ಅವನ ಮೇಲೆ ಟ್ರ್ಯಾಕ್ಟರ್‌ ಹತ್ತಿಸಿ ಕೊಲ್ಲಲೆತ್ನಿಸುವುದು,ಆದರೆ ಭೂತಲಿಂಗ ಸಾಯದೆ ಒಂದು ಕಾಲನ್ನು ಕಳೆದುಕೊಳ್ಳುವ ಸಂಗತಿ ಮೈ ಜುಮ್ಮೆನಿಸುತ್ತದೆ.ಕಥೆಯ ಕೊನೆಯ ವಾಕ್ಯʻಆದರೆ ಬೀಜದ ಕೋಣ ಮಾತ್ರ ಹತ್ತದಾಗಿತ್ತುʼಅನ್ನುವುದು ತುಂಬಾ ಸಾಂಕೇತಿಕವಾಗಿ ಧ್ವನಿಸುತ್ತದೆ. + +(ಎಸ್. ಗಂಗಾಧರಯ್ಯ) + +ಇಂಥ ಕ್ರೌರ್ಯದ ಕೊಪ್ಪೆಯಾಗಿರುವ ಹಳ್ಳಿಗಳಲ್ಲಿ ಮಾನವೀಯತೆಗೇನೂ ಕಡಿಮೆಯಿಲ್ಲಅನ್ನುವುದು ʻಲೆಕ್ಕ ಪುಸ್ತಕʼಅನ್ನುವ ಕಥೆಯಲ್ಲಿ ನಿರೂಪಿತವಾಗಿದೆ. ಊರಿಗೆ ಊರೇ ಬರಗಾಲದ ಬೇಗೆಯಲ್ಲಿ ಬೇಯುತ್ತಿರುವಂಥ ಹೊತ್ತಲ್ಲಿ ತಾನು ಕೂಡಿಟ್ಟ ಕಾಸನ್ನು ಬ್ಯಾಂಕಿನಿಂದ ಬಿಡಿಸಿ ಅದರಿಂದ ತಾನು ಇಟ್ಟುಕೊಂಡಿದ್ದ ಅಂಗಡಿಗೆ ಧಿನಸಿಗಳನ್ನು ತಂದು, ಅದನ್ನು ಸಾಲವಾಗಿ ಕೊಟ್ಟು ತನ್ನೂರಿನ ಹಸಿವನ್ನು ಇಂಗಿಸಲು ಯತ್ನಿಸುವ ಜಗದಣ್ಣ ಹಾಗೂ ತನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ಇಟ್ಟುಕೊಂಡಿದ್ದ ಔಷಧಿಯನ್ನು ಜಗದಣ್ಣನಿಗಾಗಿ ಕೊಟ್ಟು ತಾನು ಸಾಯುವ ಗಂಗಜ್ಜಿ ಅಪರೂಪದ ಪಾತ್ರಗಳುಅನಿಸುತ್ತವೆ. + +ಅಣ್ಣ ತಮ್ಮಂದಿರ ವೈಷಮ್ಯದ ಸುತ್ತಾ ನಡೆಯುವ ʻಕಪಲಿ ಬಾನಿʼ,ಭಜನೆ ಭಕ್ತಿಯ ಲೋಕವನ್ನು ಅನಾವರಣಗೊಳಿಸುವ ʻಸುದ್ದಿಗಾರ ಕೆಂಪಣ್ಣʼ,ಹಳ್ಳಿ ಹೆಂಗಸಿನ ಬದುಕಿನ ಕಾರ್ಪಣ್ಯವನ್ನೂ ಹಾಗೂ ಗಂಡನ ಬೇಜವಾಬ್ದಾರಿತನದಿಂದಾಗಿ ಇಡೀ ಕುಟುಂಬವೇ ಕಷ್ಟದಲ್ಲಿ ಮುಳುಗಿರುವʻಕೂಗುʼ,ತೋಟದ ಕಾವಲುಗಾರನೊಬ್ಬನ ಸಾವನ್ನು ಸಂಭ್ರಮಿಸುವ ಪಡ್ಡೆ ಹುಡುಗರ ವಿಕ್ಷಿಪ್ತ ಲೋಕದ ʻಹುಳಿ ಮಾವುʼ,ಮುಂತಾದ ಕಥೆಗಳು ಓದುಗರನ್ನು ಒಂದು ಆಪ್ತ ವಲಯಕ್ಕೆ ಸೆಳೆದುಕೊಂಡು,ತಾವು ಕಂಡುಂಡ ಸಂಗತಿಗಳೇನೋ ಅನ್ನುವಷ್ಟರ ಮಟ್ಟಿಗೆ ಒಳಗಿಳಿದು ಆಲೋಚನೆಗೆ ಹಚ್ಚುತ್ತವೆ. + + + +ಮತ್ತೊಂದು ಮುಖ್ಯ ಸಂಗತಿ ಅಂದರೆ, ಕಥೆಗಳಲ್ಲಿ ಬರುವ ಪಾತ್ರಗಳ ಹೆಸರುಗಳು ಒಂದು ರೀತಿಯಲ್ಲಿ ಆ ಪಾತ್ರಗಳ ಒಟ್ಟು ಚಲವ ವಲನ ಹಾಗೂ ಅವುಗಳ ಮನಸ್ಥಿತಿಗೆ ಪೂರಕಾವಾಗಿವೆ. ಅಂತೆಯೇ ಭಾಷೆ ಹಾಗೂ ನಿರೂಪಣೆಗಳು ಕಥೆಗಳ ಒಟ್ಟು ಬಂಧಕ್ಕೆ ಹಾಗೂ ಅವುಗಳ ಸಾಪಲ್ಯತೆಗೆ ಪೂರಕವಾಗಿ ಒದಗಿ ಬಂದಿವೆ. ಮಂಜಯ್ಯನವರು ಶಿಷ್ಟ ಭಾಷೆಯ ಹಂಗಿಗೆ ಬೀಳದೆ ತನ್ನ ನಾಲಿಗೆ ಮೇಲೆ ನುಡಿಯುವ ಪದಗಳನ್ನೇ ಇಲ್ಲಿ ನುಡಿಸಿರುವುದು ಕಥನ ಕಲೆಯ ಸೊಗಸನ್ನು ಹೆಚ್ಚಿಸಿದೆ. ಹೀಗೆ ಇಲ್ಲಿನ ಎಲ್ಲ ಕಥೆಗಳು ಒಟ್ಟಾರೆಯಾಗಿ ಹಳ್ಳಿಯ ಮನದ ಅಂಗಳದಲ್ಲೇ ಜರುಗುತ್ತಾ, ಕಥೆಗಳ ಬಿಡಿಬಿಡಿ ಶೀರ್ಷಿಕೆಗಳನ್ನು ತೆಗೆದಾಕಿ ಓದಿದರೆ,ಒಂದು ಕಾದಂಬರಿಯಂತೆ ಕಾಣುತ್ತಾ ಗಮನ ಸೆಳೆಯುತ್ತವೆ. ಆದರೂ ಮಂಜಯ್ಯನವರ ಮುಂದಿನ ಬರವಣಿಗೆಗಾಗಿ, ಮತ್ತಷ್ಟು ಕೌಶಲ್ಯಭರಿತ ಕಲಾತ್ಮಕ ಲೋಕ ಅರಳುವ ಪರಿಗಾಗಿ ನಿಸ್ಸಂಶಯವಾಗಿ ಕಾಯಬಹುದು ಅನ್ನುವ ನಂಬಿಕೆ ನನ್ನದು. ಯಾಕೆಂದರೆ ಮಂಜಯ್ಯನವರು ಮೊದಲ ಸಂಕಲನವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ಬರೆಯುವ ಬದುಕಿನಲ್ಲಿ ʻತೃಪ್ತಿʼಗೊಂಡ ಲೇಖಕ ಅಥವಾ ತನ್ನ ಬರವಣಿಗೆಯ ಬಗ್ಗೆಯೇ ಅತಿಯಾದ ಮೋಹ ಇಟ್ಟುಕೊಂಡ ಲೇಖಕ ತನಗೆ ಅರಿವಿಲ್ಲದಂತೆಯೇ ತನ್ನೊಳಗಿನ ಲೇಖಕನನ್ನು ತಾನೇ ಕೈಯ್ಯಾರೆ ಸಾಯಾಕಿರುತ್ತಾನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_167.txt b/Kenda Sampige/article_167.txt new file mode 100644 index 0000000000000000000000000000000000000000..5653e540ca84c1abdf2c0d9278814ec78bac7c7c --- /dev/null +++ b/Kenda Sampige/article_167.txt @@ -0,0 +1,25 @@ +“ಸುಶ್ರಾವ್ಯವಾದ ನಿಃಶ್ಶಬ್ದವಿತ್ತುಹೆಜ್ಜೆ ಇಡದ ಜಾಗದಲ್ಲಿಹಿಡಿಯಹೋದರೆ ಹೊರಟುಬಿಡುತ್ತಿತ್ತು”(‘ಹಿಡಿಯಹೋದರೆ’) + +ಬಹುಶಃ ಇದೊಂದು ವ್ಯಾಖ್ಯಾನದಂತೆ ಸಲ್ಲಬಹುದು; ಎಲ್ಲ- ಕವಿಗಳ, ಕವಿತೆಗಳ ಸಂಭಾವ್ಯ, ಅಸಂಭಾವ್ಯ ಅಂತರಂಗ-ಬಹಿರಂಗಗಳ ನಿಷ್ಪನ್ನ ತೊಳಲಾಟಗಳ, ನಿಗೂಢದ ಅನ್ವೇಷಣೆಗಳ ಕಷ್ಟ-ಸುಖದ ಬಗ್ಗೆ! ಅದೆಷ್ಟೋ ಚುಕ್ಕಿಗಳು ಚೆಲ್ಲಾಡಿರುತ್ತವೆ- ಒಂದು ವಿಶಾಲವಾದ ಅವ್ಯಕ್ತದಲ್ಲಿ; ಮತ್ತದರಲ್ಲಿ ಯಾವ್ಯಾವುದೋ ಚುಕ್ಕಿಗಳನ್ನು, ಯಾವ್ಯಾವುದೋ ಆಕಾರದಲ್ಲಿ, ವಿನ್ಯಾಸದಲ್ಲಿ, ಕಲ್ಪನಾವಿಲಾಸದಲ್ಲಿ, ಜೋಡಿಸಿ, ಜೋಡಿಸಲೇಬೇಕೆಂದೇನೂ ಇಲ್ಲ; ಜೋಡಿಸಿದಂತೆ ಭಾಸವಾದರೂ ಸಾಕು; ಅಲ್ಲಿ ಪ್ರತ್ಯಕ್ಷವಾಗುವ ರೂಪವೇ ಆಗುವುದೊಂದು ಕಾವ್ಯಸೃಷ್ಟಿ! ಅದೊಂದು, ಮುಟ್ಟದೇ, ಮೆಟ್ಟದೇ ಅನುಭವಿಸಬಹುದಾದ ಆನಂದ. “ಹಿಡಿಯಹೋದರೆ ಹೊರಟೇಬಿಡುವ” ಚಕ್ಕಂದ! + +(ಜಯಂತ ಕಾಯ್ಕಿಣಿ) + +ಒಂದು ಉಕ್ಕಂದದಲ್ಲಿ, ಉತ್ಕಟವಾಗಿ ಹೊಮ್ಮುವ ಜಯಂತ್ ಕವಿತೆಗಳು, ‘ವಿಚಿತ್ರಸೇನನ ವೈಖರಿ’ ಯಲ್ಲಿ ಮಾತ್ರ ಅಂತಲ್ಲ; ‘ಆಡುಮಾತಿ’ನಂತೆ ‘ಆಡುದಿನ’ದ- ಎನ್ನಬಹುದಾದ ಸೂಕ್ಷ್ಮಾತಿಸೂಕ್ಷ್ಮ ವಿದ್ಯಮಾನಗಳ ಪ್ರತಿಮಾತ್ಮಕ ರೂಪಣೆಯಲ್ಲಿ ಅವರ ಸಾಹಿತ್ಯಸೃಷ್ಟಿಯಲ್ಲಿ ಇನ್ನೊಂದೇ ಅವ್ಯಕ್ತವನ್ನು ಸಾಂಕೇತಿಸುತ್ತವೆ. ಆ ಕವಿತೆಗಳ ಸಮುದ್ರ, ಅಲೆಗಳ ಉಪ್ಪಿನ ರುಚಿ ನೋಡುತ್ತ ಕಡಲ ಉಪ್ಪಿನ ಸಾಂದ್ರತೆಯ ಬಗೆಗೆ ಯೋಚಿಸಹೊರಡುವ, ಕವಿತೆಯ ಹೀರುಗೊಳವೆಯಂಥ ಓದುಗನೆದೆಯೊಳಗೆ ಅಲೆ-ದಾಟ ಶುರು ಹಚ್ಚಿಕೊಳ್ಳುತ್ತದೆ! ಎಷ್ಟೋ ಸಲ ಹೈರಾಣಾಗಿಸಲೂಬಹುದು! ಸಾಲುಗಳೆಲ್ಲ ಪ್ರತಿಮೆಗಳಾಗಿ, ಸಂಗತಿಗಳೆಲ್ಲ ರೂಪಕಗಳಾದರೆ, ದೈನಿಕದಲ್ಲೇ ದೈವಿಕತೆ ಕಾಣುವ ಜಯಂತರ ಕಾವ್ಯಗಳಲ್ಲಿ ಯಾವುದೇ ಸೈದ್ಧಾಂತಿಕ ಘೋಷಣೆಗಳನ್ನು ನೀವು ಕಾಣಲಾಗದು. ಸೀದಾ-ಸಾದಾ ಆಗಿ, ಜೀವಗಳನ್ನು ದಡ ದಾಟಿಸಲೆಂಬಂಥ ಜವಾಬ್ದಾರಿ ಹೊತ್ತ ಬಸ್ಸು, ಲಾರಿ, ಟ್ರಕ್, ಟ್ರಾಕ್ಟರ್, ಟಪಾಲು ಗಾಡಿಗಳು, ಅವುಗಳ ನಿರುಮ್ಮಳ ಸಂಚಾರಕ್ಕೆ ಹಾಸಿಕೊಂಡಂಥ- ಹೆದ್ದಾರಿಗಳು, ಆ ಲಯಕ್ಕೆ ದನಿಗೂಡಿಸುವ, ಹಲಬಗೆಯ ಪಥಿಕರ. ದಾರಿಹೋಕರ- ಹಸಿವು, ಬಡತನ, ಬೆವರು-ಬವಣೆಗಳು; ಮತ್ತದರಲ್ಲೇ ಕುಡಿಯೊಡೆದು, ದಾಂಗುಡಿಯಿಟ್ಟ, ಪಲ್ಲವಿಸಿ- ಫುಲ್ಲವಿಸುವ ಬದುಕೆಂಬ ತಾಯ ಮೆಲ್ದನಿಯ, ಇನಿದನಿಯ ಜೋಗುಳಗಳು! ಕಾವ್ಯ-ಕಥಾನಕದ ಹಿನ್ನೆಲೆಯಲ್ಲಿ ರೂಪ-ರೂಪಕವಾಗಿ ಮೊರೆವ ಸಮುದ್ರಗಳು, ಮೆರೆಯುವ ಸಂತೆಗಳು!.. ಹಾಗೆ ನೋಡಿದರೆ, ಬರವಣಿಗೆ- ಎಂದರೆ ಕವಿಗೆ, ಅಮ್ಮ ರುಚಿ ಹದಗೊಳಿಸಿ, ‘ಕಂದನ ಬಾಯಲ್ಲಿ ಅದು ವಿಲೀನಗೊಳ್ಳುವ/ ಪರೋಕ್ಷ ಸುಖದ ಬಗೆ’(ರಹಸ್ಯ). ‘ಸದ್ದಿಲ್ಲದೆ ಆಗುವ ಆ ಅಗೋಚರ ತುತ್ತಿನ/ ಜೀವನ ಸತ್ವವೇ ಬೇರೆ..’/‘ಎಲ್ಲಾ ಒಂದನ್ನೊಂದು ಸೇರಿಯೇ/ ಒಂದನ್ನೊಂದು ಮೀರುವ ಈ ಭಂಗುರ ಚಣದಲ್ಲೇ ಇದೆ/ ಅಗೋಚರ ಮಮತಾ ರಹಸ್ಯ..’ ಈ ಸಮೂಹ-ಪ್ರಜ್ಞೆ ಕವಿಯ ಇತರ ಕೃತಿಗಳಲ್ಲೂ ಸಾಕಷ್ಟು ಸಲ ವ್ಯಕ್ತಗೊಳ್ಳುತ್ತದೆ- ಉದಾಹರಣೆಗೆ ಅವರ ‘ಟೂರಿಂಗ್ ಟಾಕೀಸ್’ ಕೃತಿಯಲ್ಲಿ ಪ್ರತಿಪಾದಿಸಲ್ಪಡುವ, ಯಾವುದೇ ಸಿನೆಮಾವೊಂದರ ಸಾಮೂಹಿಕ ದೇಖಾವೆಗೂ- ಬಿಡಿ-ಖಾಸಗೀ ವೀಕ್ಷಣೆಗೂ ತೋರಿಬರುವ ವ್ಯತ್ಯಾಸ!.. + +ಇನ್ನೊಂದೆಡೆ, ಬದುಕು ಮತ್ತು ಬರಹ ಹೇಗೆ ಸಮೀಕರಿಸಿಬಿಡುತ್ತವೆ!- ಇಲ್ಲಿ ನೋಡಿ; ‘ಸಂಸಾರವೇ ತಿದ್ದಿಕೊಳುವ ಆಂತರಿಕ ಒಕ್ಕಣೆ’ ಬದುಕಿನ ಪ್ರೂಫು ಆಗಾಗ ತಿದ್ದುಪಡಿಗಾಗಿ ಕೈಗೆ/ ಬರುತ್ತಲೇ ಇರುತ್ತದೆ/ ಆಯಾ ಕ್ಷಣದಲ್ಲೆ ಮಾಡಿಕೊಂಡರೆ ಒಳಿತು/ ಆ ಅಲ್ಲಿಂದಲೇ ಎಲ್ಲ ಹಗುರಾದೀತು….ʼ ಮರುಛಾವಣಿಗೆಂದು ಹುಲ್ಲಿನ ಮಾಡು ತೆಗೆಸಿಕೊಂಡ ಮನೆಯೊಂದು, ನುಗ್ಗಿ ಆವರಿಸಿದ ಬೆಳಕಿನಲ್ಲಿ ಬೆತ್ತಲಾಗಿಬಿಟ್ಟಂತೆ, ‘ಅಡಗಿ ಕೂತವನ ಮುಖಕೆ ಬ್ಯಾಟರಿ ಬಿಟ್ಟಂತೆ’ ತೋರುತ್ತದೆ: ಅಲ್ಲದೆ, ‘ಬೆಳಕು ಬದಲಾದಾಗ ಕಥೆಯೆ ಬದಲಾದೀತೆ/ ಎಲ್ಲ ಅವಾಕ್ಕಾಗಿ ನಿಂತು ಮುಂದಿನ ಇಶಾರೆಗೆ/ ಕಾಯುತಿವೆ…/ (‘ತಿದ್ದುಪಡಿ’). + +ಕವಿಗೆ ಅಕ್ಷರಗಳು ಮತ್ತು ಬದುಕು ಬೇರೆ-ಬೇರೆಯಲ್ಲ: ಸ್ಥಾವರ-ಜಂಗಮ… ಅಣು-ರೇಣು-ತೃಣ-ಕಾಷ್ಠಗಳಲ್ಲೂ ತಮ್ಮ ಅವಿನಾಭಾವ ಸಂಬಂಧವನ್ನವು ಸೂಚಿಸುತ್ತಲೇ ಇರುತ್ತವೆ!- ಚಲಿಸುವ ಕವಿತೆಗೆ ಕಾದ ನಿಶ್ಚಲ ಪದಗಳಂತೆ…’ (ಇಶಾರೆ). ಇಸ್ತ್ರಿ ಅಂಗಡಿಯವನ ಕಪಾಟಿನ ನಿಶ್ಚಲ ಬಟ್ಟೆಗಳು, “ಶಬ್ದಕೋಶದಲ್ಲಿ ಕಾದು ಕೂತ ಪದಗಳಂತೆ”, “ತೊರೆದ ಕ್ರಿಯಾಪದದಂತೆ ಅವನ ಬಳಕೆಯ ಉಡುಪು ನನ್ನ ಕೈಲಿ’ (ಗಾಳಿಯ ಕೈಗೆ ಸಿಕ್ಕ ದನಿ) ಇಲ್ಲೆಲ್ಲ ವಸ್ತುಗಳು ಪದಗಳಾಗಿ ಮೂಡಿದರೆ, ಪದಗಳೇ ಸಜೀವಾಗಿ ಮರ‍್ತಗೊಳ್ಳುವ ಘಳಿಗೆಗೆ “ಶ್ರುತಿ ಮಿಡಿವ ನೀಳ ಬೆರಳುಗಳು ಆಗಾಗ ಹಾಡುಗಳ ನಡುವೆ/ ಈ ಪುಸ್ತಕಎತ್ತಿ ಪುಟಗಳನ್ನು ತಿರುವುವಾಗ/ ಅದರೊಳಗಿನ ಎಲ್ಲ ಪದಗಳಿಗೂ ರೋಮಾಂಚನವಾಗುತ್ತದೆ/ ಶಿಶುವಿಹಾರದ ಮಕ್ಕಳು ಅಮ್ಮನನ್ನು ಕಂಡಿದ್ದೇ/ ಎತ್ತಿಕೋ ಎತ್ತಿಕೋ ಎಂದು ಕೈ ಚಾಚುವಂತೆ ಅವು ವಿಚಲಿತಗೊಳ್ಳುತ್ತವೆ”, ಸಾಕ್ಷಿಯಾಗುತ್ತವೆ(ಹಾಡುಗರ‍್ತಿಯ ಹಾಡಿನ ಪಟ್ಟಿ)! ‘ಪುಟಗಳ ಮರೆಯಲ್ಲೊಂದು ಪರ‍್ಯಾಯ ಜೀವನ ಕದ್ದು ನಡೆಸಿದ ಮಾಯಾಸಮಯ’, ಮತ್ತದರ ದಾತಾರರಾದ, ‘ಆತ್ಮಿಕ ನೆಂಟಸ್ತನ ಕುದುರಿಸುವ ತವರುಮನೆಗಳಂಥʼ, ‘ಅಭಯದಾಯೀ’- ‘ಹಳೆಪುಸ್ತಕ’- ಕವಿತೆ, ತುದಿಯಲ್ಲಿ ಒಂದು ರಮ್ಯವ್ಯಾಖ್ಯೆಯನ್ನು ಹೇಳಲು ಹಿಂಜರಿಯುವುದಿಲ್ಲ; ಅದೆಂದರೆ, ‘ಹಳೆಯ ಮಾಗಿದ ಪುಸ್ತಕ/ ಕಾಯುತ್ತ ಇರುತ್ತದೆ ಹೀಗೆ/ ತಕ್ಕ ಸಮಯಕ್ಕೆ ಬರಲು ಕೈಗೆ/ ನಮ್ಮ ಶಾಪವಿಮೋಚನೆಗೆ’! ‘ಖೋಡಿ ಬೈರಾಗಿ’ ಕವಿತೆಯಲ್ಲೊಂದು ವಿಷಾದದ ಗೆರೆ ಬಣ್ಣಿಸಲೆಳಸುವದು- ದಶಕಗಳ ಹಿಂದಿನ ಧಾರವಾಡದ ನಚ್ಚುಗೆಯ ಚಿತ್ರಣವನ್ನು. ‘ಡಿಲೀಟ್ ಮಾಡಿದಂತೆ ಮಾಯವಾದ’– ದಶಕಗಳ ಹಿಂದಿನ ಧಾರವಾಡದ ಹತ್ತು ಹಲವು ಸ್ಮೃತಿಚಿತ್ರಗಳಲ್ಲಿ, ‘ಬಟ್ಟೆ-ಬುಟ್ಟಿಯ ಹೊತ್ತ ಇಳಕಲ್‍ ಸೀರಿ ಉಟ್ಟವರು’, ಹೊಟ್ಟೆಪಾಡಿಗಾಗಿ ಪಟ್ಟಣಕ್ಕೆ ಗುಳೆಹೋದವರು, ಹಸಿ-ಹಸಿರು ಹೊಲದಿಂದ ಉಚ್ಚಾಟಿತಗೊಂಡಂಥ ಟ್ರಾಕ್ಟರ್, ‘ಶಾಪವಿಮೋಚನೆಗೆ ಕಾದ ವಿಗ್ರಹಗಳಂತೆ ವಿಹ್ವಲಗೊಂಡ ಕೂಲಿಕುಟುಂಬ.. ಏನೆಲ್ಲ!.. ಆದರೆ.. ಬದುಕಿನ ಪುಸ್ತಕದಲ್ಲಿ ಅಚ್ಚೊತ್ತಿ, ಮನಕೆ ಹತ್ತಿರವಾಗಿ, ಮಾಯವಾದವರು.. ಪುಟವಿಕ್ಕಿ ಪ್ರತ್ಯಕ್ಷರಾಗುವ ಕವಿತೆಗಳಾಗಿ, ಮತ್ತೆ ಸಾಲಾಗಿ ಹೊಳೆವರು..’ ಒಂದು ಸಣ್ಣ ನೀರವ’, ‘ಗಾಳಿಯ ಕೈಗೆ ಸಿಕ್ಕ ದನಿ’, ‘ಮಂಜುನಾಥನ ಕವಿತೆ’, ‘ಎಂ.ವ್ಯಾಸ, ‘ಚಿಹ್ನೆ’..‘ನೆಲಗುಣ’..ದಂಥ ಕವಿತೆಗಳಲ್ಲಿ. + + + +ಓದುವಿಕೆ, ಒಂದು ‘ಸದೇಹ ಸ್ವರ್ಗಾರೋಹಣ’ದಂತೆ(‘ಅದು’) ಆದರೆ, ‘ಅಂಗಿ’ ಒಂದು ಕೇವಲ ಅಂಗಸೌಷ್ಟವ ಕಾಪಾಡುವ ವಸ್ತುವಾಗಿರದೇ, ಬದುಕಿನ ಹತ್ತು-ಹಲವು ಮಜಲುಗಳಲ್ಲಿ ಆತ್ಮೀಯ ಅತಿಶಯಗಳಲ್ಲಿ ಜೀವಕ್ಕೆ ಆತುಕೊಂಡು, ‘ರೆಪ್ಪೆ ಸವರಿ ಕೆನ್ನೆಯೊರೆಸಿ ಪ್ರತೀಕವಾಗುವುದು-(‘ಅಂಗಿ’), ಸದೇಹ ಸ್ವಪ್ನಾರೋಹಣಕ್ಕೆʼ! ‘ಮರ’ ದಲ್ಲಿ, ವಿಹಂಗಮ ಬಣ್ಣನೆಯ ‘ಹೂ-ಸ್ಪರ್ಷ’ವನ್ನೂ, ‘ಆದರೂ ಇರಲಿ’ ತನ್ನ ತೆಳು ಹಾಸ್ಯ, ಮೃದು ವಿಡಂಬನೆಯ ಜೊತೆಜೊತೆಗೇ, ದೈನಿಕದಲ್ಲೇ ಹುಟ್ಟಿಕೊಳ್ಳುವ ತತ್ವದೊಂದು ಅವ್ಯಕ್ತ ಒಕ್ಕಣೆಯೊಂದರ ‘ಭೂಸ್ಪರ್ಶ’ ವನ್ನೂ ಓದುಗನನ್ನು ಸೋಕಬಲ್ಲದು. ವಿಚಿತ್ರಸೇನ ಒಳಹೊಕ್ಕ ಚಾ-ದುಕಾನಿನ ಗೋಡೆಯ ಮೇಲಿನ ಬಾಬಣ್ಣನ ಚಿತ್ರ(ಣ)ದೊಂದಿಗೇ ತೆರೆದುಕೊಳ್ಳುವ ಕವನ, ತನ್ನ ನಾಟಕೀಯತೆಯ ಚೌಕಟ್ಟುಗಳಾಚೆಗೆ ಅನಾವರಣಗೊಳಿಸುವ ಪ್ರಪಂಚ- ಬೇರೆಯದೇ ಇದೆ’- ‘ಜಗತ್ತು ಹಗಲಲ್ಲಿ ಗುರುತು ಬಹಳ ಮುಂದೆ ಹೋಗುತಿತ್ತು..’ ಎಂದ ಹಾಗೆ’! (‘ಕಾಳಗ’). + +ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ. ಅಥವಾ ಕೆಲವೊಮ್ಮೆ, ಜೀವಸಂಕುಲದೆಡೆಗಿನ ನಮ್ಮದೇ ಕಕ್ಕುಲಾತಿ, ಒಳಗುದಿಯಲ್ಲೇ- ನಿಚ್ಚಳವಾಗಿ ವ್ಯಕ್ತಗೊಳಿಲಾಗದಂಥ ಮಾನವಿಕ ಭಾವದಲೆಗಳು, ಅದ್ಯಾವುದೋ ಒಂದು ರೂಪಕದಲ್ಲಿ ರೂಹುತಳೆದಂತೆ ಅನಿಸಿದರೂ ಅಚ್ಚರಿಯಲ್ಲ. ಒಬ್ಬಾತನಿಗೆ, ಎದುರಿವನ ಕೈಗಡಿಯಾರದಲ್ಲಿ ಓಡುತ್ತಿರುವ ಸಮಯ- ತನ್ನದೇ ಅಥವಾ ಆತನದೇ? ಎಂಬ ಗೊಂದಲ; ಇನ್ನೊಬ್ಬನಿಗೆ, ತನ್ನ ಟಿಕೆಟ್ ತೆಗೆದುಕೊಳ್ಳುವಾಗಲೂ ಪರಿವೆಯಿದೆ- ತನ್ನ ಉಳಿದರ್ಧ ಇನ್ನೆಲ್ಲೋ ಇದೆ; ಅಥವಾ ಎಲ್ಲರಲ್ಲೂ ಹಂಚಿಹೋಗಿರಲೂಬಹುದು.. ಇಂಥ, ಅಮರ‍್ತ ಪ್ರತೀಕಗಳು ಶಬ್ದದಾಚೆಗೂ ಇನ್ನೇನನ್ನೋ ಹೇಳುತ್ತವೆ.. ಒಟ್ಟಾರೆ, ಜಯಂತ ಕಾಯ್ಕಿಣಿವರ ಸಾಹಿತ್ಯಕೃಷಿಯ ಬಾಹುಳ್ಯದೃಷ್ಟಿಯಿಂದ ನೋಡಿದಾಗ, ಅವುಗಳ ವಸ್ತು, ವಿನ್ಯಾಸ, ವೈವಿಧ್ಯತೆಗಳು ಅಷ್ಟೇ ಹರಹು ಹೊಂದಿವೆ; ಮತ್ತು ಓದುಗವಲಯದ ಇನ್ನಷ್ಟು ಒಳನೋಟಗಳ ಕಾಯುತ್ತಿವೆ- ಎಂದು ಹೇಳಬಹುದು. ಪ್ರತೀ ಕವಿತೆಯೂ ತನ್ನ ಓದಿಗಷ್ಟಷ್ಟು, ಅಷ್ಟಷ್ಟೇ ಅಥವಾ, ಅಷ್ಟನ್ನೂ!- ಓದಿದಾಗಷ್ಟೇ ವಿನಿಮಯ ಮಾಡಿಕೊಳ್ಳುವುದು. ‘ಆದರೆ’, ಈ ಸಾಲುಗಳನ್ನು ‘ ಓದಿ’….‘ಬಸ್ಸೊಂದು ಪಾಸಾಗಿ ಎಬ್ಬಿಸಿದ ಧೂಳಿನ ಹೆಮ್ಮೋಡದಲ್ಲಿಬಸ್ಸಿನೊಡಗೂಡಿ ಎಲ್ಲವೂ ಮಾಯ..ಒಂದು ಸಣ್ಣ ನೀರವದ ನಂತರ ಮತ್ತೆಚಿತ್ರಕ್ಕೆ ಜೀವ ಬಂದು ಎಲ್ಲ ಮುಂದೆ ಚಲಿಸುತ್ತದೆ’ + +‘….ಹೊರಗಡೆಯಿಂದ ಕೆತ್ತುತ್ತಾರಲ್ಲ ಶಿಲ್ಪಿಹಾಗೆ ಹಾಗೆ ಒಳಗಡೆಯಿಂದಲೇ ಕೆತ್ತುತ್ತ ಕೆತ್ತುತ್ತನಮ್ಮನ್ನು ಬಿಡುಗಡೆ ಮಾಡುತ್ತದೆ ಬೆಳಕುಸದ್ದಿಲ್ಲದೆ..’(‘ಒಂದು ಸಣ್ಣ ನೀರವ’) + + + +ಆಧ್ಯಾತ್ಮಿಕ ಪರಿಪ್ರೇಕ್ಷ್ಯದಲ್ಲಿ ಬಣ್ಣಿಸುವುದಾದರೆ, ಜೀವಯಾತ್ರೆಯ ಯಾತ್ರಿಕ ಜೀವಗಳ ಅಲೆಮಾರಿತನ, ಪರಮಗಮ್ಯವ ಅನ್ವೇಷಿಸುವಲ್ಲಿ, ಅಥವಾ ಅನ್ವೇಷಿಸದೇ ಹೋಗುವ/ಇರುವ ಜಂಜಾಟಗಳಲ್ಲಿ, ಸಿಕ್ಕುಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಅನುಪಾಧಿಕ ಅಸಂಗತ ಲೌಕಿಕ ವ್ಯಾಪಾರಗಳು, ಒಂದು ವರ್ತಮಾನ; ಆದರೂ- ಅದರಲ್ಲೇ ಮಿಡಿಯುವ, ದೈನಿಕವೆ ದೈವಿಕವಾಗಿ ತೋರ್ಪಡಬಲ್ಲಂತ ಒಂದು ಜೀವನಾಡಿ-ಅಂಥದೊಂದು ವಿದ್ಯಮಾನ: ಇದು ಯಾವುದೇ ಒಂದು ದೇಶ-ಕಾಲ-ಜನಾಂಗದ ಸಹೃದಯ ಸಾಹಿತ್ಯದಲ್ಲಿ, ವಿಚಾರಶೀಲತೆಯ ಸೊಬಗಿನಿಂದಲೂ, ಅಂತಃಕರಣದಿಂದಲೂ ಪ್ರತಿಫಲನವಾಗುತ್ತದೆ; ಆಗಬೇಕು. + +ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ. \ No newline at end of file diff --git a/Kenda Sampige/article_168.txt b/Kenda Sampige/article_168.txt new file mode 100644 index 0000000000000000000000000000000000000000..00d9f7762327d90fdd818cd20530796ec00ac77c --- /dev/null +++ b/Kenda Sampige/article_168.txt @@ -0,0 +1,27 @@ +ಆಶಾ ಅವರ ಕವಿತೆಗಳಿಗೆ ಶಿಫಾರಸ್ಸು ಬೇಕಿಲ್ಲ. ಅವರು ಪ್ರತಿಭೆಯನ್ನು ಮಾತ್ರ ನಂಬಿಕೊಂಡು ಓದುಗರ ಜೊತೆ ಸಂವಾದಕ್ಕಿಳಿದಿಲ್ಲ. ಶ್ರದ್ಧೆ ಮತ್ತು ಶಿಸ್ತುಗಳನ್ನು ಪ್ರತಿ ಪದದ ಬಳಕೆಯಲ್ಲೂ ಅಳವಡಿಸಿಕೊಂಡು ತನಗಾಗುವಷ್ಟೂ ತನ್ನ ಪ್ರತಿಭೆಯನ್ನು ಸಾಣೆಗೊಳಪಡಿಸಿಕೊಂಡಿದ್ದಾರೆ. ಉತ್ಸಾಹ ಇಲ್ಲದೆ ಕವನ ರಚನೆ ಸಾಧ್ಯವಿಲ್ಲ, ಆದರೆ ಉತ್ಸಾಹವನ್ನೇ ದೊಡ್ಡ ಆಕರವೆಂದು ನಂಬಿ ಹೊರಟಾಗ ನಾವು ಬರಹಗಾರ/ರ್ತಿ ಯರು ಕೆಲವೆ ಹೊತ್ತಲ್ಲಿ ಪುನರಾವರ್ತನೆಯ ಚಾಳಿಗೆ ಬೀಳುತ್ತೇವೆ, ಕಾರಣ ಒಂದು ಪೂರ್ವಸಿದ್ಧತೆಯ ಅಭಾವ. ಎರಡು ತಿದ್ದುವ ಕೆಲಸಕ್ಕೇ ಕೈಯೇ ಇಡದೆ ನಮ್ಮ ಬರಹ ಅಪರೂಪ ರತ್ನವೆಂಬ ಟೊಳ್ಳು ಆತ್ಮವಿಶಾಸವನ್ನು ಪೋಷಿಸಿಕೊಳ್ಳುವುದು. ವಾಸ್ತವವಾಗಿ ಉತ್ಸಾಹವನ್ನು ಬಳಸಿಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳುವುದು ಎಲ್ಲಾ ಉತ್ತಮ ಕತೃಗಳ ಲಕ್ಷಣ, ಅದು ಅವಮಾನವಲ್ಲ. ಇದ್ದಕ್ಕಿದ್ದಂತೆ ಸ್ಫೂರ್ತಿ ಬಂದಮರಿಕೊಂಡು ಬರೆದುಬಿಟ್ಟೆ ಎನ್ನುವುದು ಅರ್ಧ ಸತ್ಯದ ಮಾತು. ನಿಜ, ಇದ್ದಕ್ಕಿದ್ದಂತೆಯೇ ಕವಿತೆ ಹೊಳೆಯುತ್ತದೆ. ಆದರೆ ಹೊಳೆದದ್ದೆಲ್ಲ ಓದುಗರ ಮುಂದಿಡುವ ಮೊದಲು ಕೊಂಚ ಸಮಾಧಾನದಿಂದ ಅದರ ಅರಗು ಮೂಲೆಗಳನ್ನು ಕೊರೆದು ಏಣುಗಳು ಸ್ಫುಟವಾಗುವಂತೆ ಮಾಡುವುದು ಬರಹಗಾರ/ರ್ತಿಯ ಕರ್ತವ್ಯ. ಈ ಕರ್ತವ್ಯವನ್ನು ಆಶಾ ಅವರು ಅದೆಷ್ಟು ಶ್ರದ್ಧೆಯಿಂದ ಮಾಡಿದ್ದಾರೆಂದರೆ, ಹೊಸ ರೂಪಕಗಳನ್ನು, ಹೊಸ ನಿರೂಪಣಾ ಶೈಲಿಯನ್ನು, ಹೊಸ ಪದಕೂಟಗಳನ್ನು ಹುಟ್ಟುಹಾಕಿದ್ದಾರೆ. + +(ಆಶಾ ಜಗದೀಶ್‌) + +ಪ್ರಪಂಚದ ಮೇಲೆ ಎರಡೇ ವಸ್ತುಗಳಿರುವುದು ಕವಿಗಳಿಗೆ ಎಂದು ಛೇಡಿಸುತ್ತಾನೆ ಆಧುನಿಕ ಅಸಂಗತ ನಾಟಕವೊಂದರ ವಿದೂಷಕ. ಮೊದಲನೆಯದು ಗಂಡು ಹೆಣ್ಣಿನ ನಡುವಿನ ಕೆಮಿಸ್ಟ್ರಿ, ಇನ್ನುಳಿದಿದ್ದೆಲ್ಲ ಆ ಕೆಮಿಸ್ಟ್ರಿಯ ಉಪ ಉತ್ಪನ್ನಗಳು! ಹೌದು, ಅದಕ್ಕೆ ನಾಚಿಕೆ ಪಡುವಂಥದ್ದೇನಿಲ್ಲ. ಆಡಮ್ ಮತ್ತು ಈವಳ ನಡುವೆ ಹುಟ್ಟಿದ ಕೆಮಿಸ್ಟ್ರಿಯೇ ತಾನೇ ಜಗತ್ ಸೃಷ್ಟಿ. ಆದರೆ ಮೂಲ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಬರಹಗಳಲ್ಲಿ ತಂದಾಗ ಪ್ರತಿ ಬರಹಗಾರರೂ ಅದನ್ನೊಂದು ಹೊಸ ಬಗೆಯಲ್ಲಿ ಹೇಳಲು ಪ್ರಯತ್ನಿಸುತ್ತಾರೆ. ಅದು ಭಾಷೆಯಲ್ಲೋ, ಸನ್ನಿವೇಶ ಸೃಷ್ಟಿಯಲ್ಲೋ, ಬಂಧದಲ್ಲೋ, ಪ್ರಕಾರದಲ್ಲೋ…. ಹೀಗೆ ತಂತಮ್ಮ ಕೈ ಆನಿಸುವಷ್ಟು ಹೊಸದು ಕೊಡಲು ಪ್ರಯತ್ನಿಸುವ ಬರಹಗಳೇ ಇಂದು ಶಾಶ್ವತವಾಗಿ ಉಳಿದಿರುವಂತಹವು. ಆಶಾ ಕೂಡಾ ಅಷ್ಟೇ, ಇಲ್ಲಿನ ಹೆಚ್ಚಿನ ಕವಿತೆಗಳಲ್ಲಿ ಅವರು ಅದೇ ಗಂಡು ಹೆಣ್ಣಿನ ಮನೋಸಾಂಗತ್ಯದ ಬಗೆಬಗೆಗಳನ್ನು ಪರಿಕಿಸಲು ತೊಡಗಿದ್ದರೂ, ಎಲ್ಲಿಯೂ ಓದುಗರಿಗೆ ಇದೂ ಅದೇ ರಾಗವೆಂದೋ ಗೋಳೆಂದೋ ಅನಿಸದಂತೆ ಹೊಸತನ ತಂದಿದ್ದಾರೆ. ಉದಾಹರಣೆಗೆ ಇಲ್ಲಿಯ ‘you were blockedʼ ಎನ್ನುವ ಕವನ ನಿಮ್ಮ ಮುಂದಿಡುವೆ. + +ಈ ಕವನದ ವಸ್ತು ಅನಾದಿಯಾದ ಪ್ರೇಮದ್ರೋಹ! ಅದನ್ನು ಹೇಳಲು ಕವಿಯಿತ್ರಿ ಫೇಸ್ ಬುಕ್ಕಿನಿಂದ ಒಲ್ಲದವರನ್ನು ಬ್ಲಾಕ್ ಮಾಡುವ ಈ ಕಾಲದ ತಂತ್ರವನ್ನು ರೂಪಕ ಮಾಡಿಕೊಳ್ಳುತ್ತಾರೆ. ದ್ರೋಹಿಸಿದವರು ದ್ರೋಹಕ್ಕೊಳಗಾದವರು ಮುಖ ತಪ್ಪಿಸಿ ಓಡಾಡುವ, ಕೊಂಡ ಉಡುಗೊರೆಗಳನ್ನು ಮರಳಿಸುವ ಚೇಷ್ಟೆಗಳು ಹಳೆ ಕಾಲದವಾದರೆ, ಈಗ ಫೇಸ್ಬುಕ್ಕಿನಿಂದ ಬ್ಲಾಕ್ ಮಾಡಿಬಿಡುವ Sizzling ice cream ತೆರದ ಇಬ್ಬಂದಿ ಮಾರ್ಗಗಳಿವೆ. ಅದನ್ನು ಕವಿತೆ ರೂಪಕವಾಗಿಸುವಲ್ಲಿ ಗೆದ್ದಿದೆ. + +ಅರೆಈ ಹೆಜ್ಜೆಗಳಾದರೂ ಎಷ್ಟುಸಮಯಸಾಧಕ….ಯಾವುದನ್ನು ಯಾರನ್ನು ಯಾವಾಗಹೇಗೆ ಬ್ಲಾಕ್ ಮಾಡಬೇಕೆನ್ನುವಎಲ್ಲ ಪಾಠಗಳನ್ನೂಅದೆಲ್ಲಿ ಕಲಿತು ಬರುತ್ತವೋ + +ಹೀಗೆಯೇ ಇಲ್ಲಿ ‘ಪಾರ್ಕಿಂಗ್ ಲಾಟ್’ ಎನ್ನುವ ಕವಿತೆಯೊಂದಿದೆ. ಆಶಾ ಖಾಲಿ ಪಾರ್ಕಿಂಗ್ ಲಾಟಿನ ಕಾರು ಮತ್ತದರ ಚಾಲಕನನ್ನಿಟ್ಟುಕೊಂಡು ಗಂಡು ಹೆಣ್ಣಿನ ನಡುವಿನ ಆಪ್ತಸಾಂಗತ್ಯದ ಕ್ಷಣ ದಾಖಲಿಸುವ ವಿಧಾನವೂ ಅವರ ಹೊಸ ರೂಪಕಗಳ ಬೆಳೆಗೆ ಸೊಗಸಾದ ಉದಾಹರಣೆ. ‘ಮದ್ದು ಬದಲಾಯಿಸುತ್ತಾಳೆ’ ಎನ್ನುವ ಕವಿತೆ ಬಲು ಸೂಕ್ಷ್ಮವಾಗಿ ಭಂಗಿತ ಪ್ರೇಮಿಕೆಯೊಬ್ಬಳ ಎದೆಗುದಿ ಒಣಕೆಮ್ಮಾಗಿ ಕಾಣಿಸಿಕೊಳುವ ಬಗೆಯನ್ನು ಹೇಳುತ್ತದೆ. ಅದು ಗೊತ್ತಿದ್ದೂ ಅಮ್ಮ ಕೇವಲ ಮಗಳ ಹೊರಕೆಮ್ಮಿಗೆ ದಿನದಿನವೂ ಮದ್ದು ಬದಲಾಯಿಸುವ ವ್ಯರ್ಥವನ್ನು ರೂಪಕವನ್ನಾಗಿಸಿ, ಕೊನೆಯೆರಡು ಸಾಲಿನಲ್ಲಿ ಎಲ್ಲ ಹೆತ್ತವರ ಅಸಹಾಯಕತೆಯನ್ನು ಘನವಾಗಿ ಹಿಡಿದಿದೆ. + + + +ಇಂತಹ ಅನೇಕ ಉದಾಹರಣೆಗಳು ಬೇಕೆಂದರೆ, ಆಶಾ ಅವರನ್ನು ಓದಿ! ಪ್ರೇಮಭಂಗದ, ದ್ರೋಹದ, ಜಡಗಟ್ಟುವಿಕೆಯೆ ಮುಂತಾದ ಜಗತ್ತಿನ ಅತಿ ಹಳೆಯ ತಲ್ಲಣಗಳನ್ನು, ಹೊಸ ಕಾಲವು ಕೊಟ್ಟ ದಿಟ್ಟತೆಯಿಂದ ಮುಖಾಮುಖಿಯಾಗುವ ಹುಡುಗಿಯೊಬ್ಬಳಿದ್ದಾಳಿಲ್ಲಿ ! ನೀನೂ ನೋಡಮ್ಮ – look here you, great venus – ನಿನ್ನ ಕುಚೇಷ್ಟೆಗಳನ್ನು ಜೀರ್ಣಿಸಿಕೊಳ್ಳಬಲ್ಲ ಆಧುನಿಕ ಯುವತಿ ಪಡೆ ತಯಾರಾಗಿದೆ ! (ವೀನಸ್ ಗ್ರೀಕ್ ಪುರಾಣದ ಪ್ರೇಮ ಕಾಮಗಳ ದೇವತೆ) + +ಅಮ್ಮನ ಮೇಲೆ ಕವಿತೆ ಬರೆಯದೆ ಯಾವ ಕವಿಗಳ ಸಂಕಲನವೂ ಪೂರ್ತಿಯಾಗದೆಂಬ ಷರಾವನ್ನು ಅದು ಹೇಗೆ ಎಲ್ಲಿ ಯಾರು ಬರೆದರೋ ತಿಳಿಯದು, ಯುವಕರಂತೂ ಜಿದ್ದಿಗೆ ಬಿದ್ದಂತೆ ಅಮ್ಮನನ್ನು ತಂದು ಸಂಕಲನದೊಳಗೆ ನೇಣುಹಾಕುವುದು ಅತ್ಯುಚಿತ ಕ್ರಿಯೆಯೆಂದು ಇತ್ತೀಚೆಗೆ ಎದೆ ಮೇಲೆ ಬರಕೊಂಡ ಹಾಗಿದೆ. ಹೀಗೆ ಮಾಡುತ್ತ ಅವರು ತಮ್ಮದೇ ಕಟ್ಟುಕಲ್ಪನೆಗಳ ಅಮ್ಮನನ್ನು ಕಡೆದುಕೊಂಡುಬಿಟ್ಟು ವಾಸ್ತವದ ಅಮ್ಮ ಆ ಕಲ್ಪನೆಯೊಳಗೆ ಅಮುಕಿಕೊಂಡಾದರೂ ಸರಿ ಅಡ್ಜಸ್ಟ್ ಆಗಲೇಬೇಕೆನ್ನುವ ಒತ್ತಡವನ್ನುಂಟು ಮಾಡುತ್ತಿದ್ದಾರೆ, ಆಧುನಿಕ ಸಾಹಿತ್ಯಿಕ ಭಯೋತ್ಪಾದನೆ ಇದು! ಆಶಾ ಕೂಡಾ ಅಮ್ಮನ ಕುರಿತೊಂದು ಪದ್ಯ ಬರೆದಿದ್ದಾರೆ. ಸಂಕಲನದ ಅತ್ಯುತ್ತಮ ಕವಿತೆಗಳಲ್ಲೊಂದಿದು. ಅಮ್ಮನ ಪ್ರಸ್ತಾಪವನ್ನೇ ಮಾಡದೆ ಅವರೂ ಸೇರಿದಂತೆ ಎಲ್ಲ ಕಾಲದ ಅಮ್ಮಂದಿರೂ ‘ಆತ್ಮದ ಜರೂರತ್ತಲ್ಲದಿದ್ದರೂʼ ಬಹುಕಾಲದಿಂದ ಘೋಸ್ಟ್ ರೈಟರುಗಳು ಬರೆದಿಟ್ಟ ಅಮ್ಮನ ಚಿತ್ರದ ಸಾಕಾರಕ್ಕಾಗಿ ಕಲ್ಲಾಗಲೇ ಬೇಕಾದ ಅನಿವಾರ್ಯತೆಯನ್ನು ಪದ್ಯ ಮಿತಪದಗಳಲ್ಲಿ ಹೇಳಿದೆ. ಮೂಗ ಮೇಲಿನ black heads ಹುತ್ತಗಟ್ಟುವ ಪ್ರತಿಮೆ ನಾನು ಇಲ್ಲೆ ಮೊದಲು ಓದಿದ್ದು. ಆಶಾ ತೀರಾ ವಾಚ್ಯವಾಗಿಸಿ ಯಾವುದನ್ನೂ ಹೇಳುವುದಿಲ್ಲ. ಬಹುಶಃ ಬಂಡಾಯ, ದಲಿತ, ಸ್ತ್ರೀವಾದದ ಘೋಷಣಾ ಸಾಹಿತ್ಯ ಮುಗಿದಂತೆ ಕಾಣುತ್ತಿದೆ. ಆ ಎಲ್ಲ ಚಳುವಳಿಗಳು ಕನ್ನಡದ ಒಟ್ಟೂ ಸಮಾಜದ ಮೇಲೆ, ಸಾಹಿತ್ಯದ ಮೇಲೆ ಉಂಟುಮಾಡಿದ ಅದ್ಭುತ ಚಾಲನಾ ಪ್ರಭಾವವನ್ನು ಅರ್ಥೈಸಿಕೊಂಡು, ಮನದಲ್ಲೂ ಇಟ್ಟುಕೊಂಡು, ಅದೇ ಕಾಲಕ್ಕೆ ಘೋಷಣೆಯ ಕಾಲ್ತೊಡಕುಗಳನ್ನೂ ಕಳಚಿ ಬರೆಯುವ ಹೊಸ ಯುವ ಸಮೂಹವೊಂದು ಕನ್ನಡದಲ್ಲಿ ತಯಾರಾಗಿದೆ. ನಿರ್ವಿವಾದವಾಗಿ ಆಶಾ ಕೂಡಾ ಆ ಪಡೆಯ ಉತ್ತಮ ಸದಸ್ಯೆ. + +(ಲಲಿತಾ ಸಿದ್ಧಬಸವಯ್ಯ) + +ಆಶಾ ಇತ್ತೀಚೆಗೆ ಮಗಳನ್ನು ಪಡೆದ ಹೊಸ ತಾಯಿ. ತಾಯಿಯಾಗುವ, ಮತ್ತಾ ಎಳೆಕೂಸಿನ ಜೊತೆಗೆ ತಾಯಿಯೂ ಬೆಳೆಯುವ ಕವಿತೆಯನ್ನು ನಾವೆಲ್ಲರೂ ಬರೆದವರೇ, ಕ್ಲೀಷೆಯೆನಿಸುವಷ್ಟು! ಆದರಿಲ್ಲಿ ಹೊಸ ತಂದೆಯೊಬ್ಬನ ಪುಳಕ ವರ್ಣಿಸುವ ಕವಿತೆಯೊಂದಿದೆ. ಮಗುವನ್ನು ಎತ್ತಿಕೊಂಡಾಗ ಆ ಹೊಸತಂದೆಗೆ ತನ್ನಪ್ಪ ಇದ್ದಿದ್ದರೆ ಎನ್ನುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆಯಂತೆ! ಮಾಮೂಲಿನ ಹಾಗೆ ಅವನು ಅಮ್ಮನನ್ನು ನೆನಪು ಮಾಡಿಕೊಂಡಿಲ್ಲ. ತಾತನಾಗುವ ಬಯಕೆಯೂ ಅಷ್ಟೇ ಬೆಲೆಯುಳ್ಳದ್ದೆಂದು ನಮ್ಮ ಕವಿಗಳಿಗೆ ಅರ್ಥಾಯಿತು ಸದ್ಯ! + + + +ಬರೆಯುತ್ತ ಹೋದಂತೆ ಅನೇಕ ಕವಿತೆಗಳ ಸಾಲನ್ನು ಉದ್ಧರಿಸಬಹುದು. ಆದರೆ ಓದುಗರ ತೆರೆದ ಅವಕಾಶಕ್ಕೆ ಮುನ್ನುಡಿಯು ಹಾಕುವ ಕತ್ತರಿ ಅದು. ನನಗೆ ಆಶಾ ಜಗದೀಶ್ ಅವರ ಕವಿತೆಗಳು ಇಷ್ಟವಾಗಿವೆ. ನಿಮಗೂ ಇಷ್ಟವಾಗುತ್ತವೆ. ಅವರಿಂದ ಇನ್ನೂ ಒಳ್ಳೆಯ ಕವಿತೆಗಳು ಕನ್ನಡದ ಓದುಗರಿಗೆ ಲಭ್ಯವಾಗಲಿ. ಆಶಾ ಸೊಗಸಾದ ಗದ್ಯವನ್ನೂ ಬರೆಯುತ್ತಾರೆ. ಅವರ ಲಲಿತ ಪ್ರಬಂಧಗಳು ಹೆಸರಾಗಿವೆ. ಅವೂ ಮತ್ತವರ ಕಥೆಗಳು ಬಹುಮಾನ ಪಡೆದಿವೆ. ಗದ್ಯ ಪದ್ಯಗಳೆರಡನ್ನೂ ಸಮರ್ಥವಾಗಿ ನಿಭಾಯಿಸುವ ಈ ಯುವ ಪ್ರತಿಭೆ ಕನ್ನಡ ಓದುಗರಿಂದ ಪ್ರಂಶಂಸೆ ಪಡೆಯಲೆಂದು ಬಯಸುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_169.txt b/Kenda Sampige/article_169.txt new file mode 100644 index 0000000000000000000000000000000000000000..6b36d047727e5337f0749d1ee53a9bd94653cb9f --- /dev/null +++ b/Kenda Sampige/article_169.txt @@ -0,0 +1,39 @@ +ಪ್ರತಿವರ್ಷ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ವಿದ್ಯಾರ್ಥಿಗಳಿಗೆ ರಜಾ – ಮೊದಲು ಪರೀಕ್ಷೆಗೆ ಓದಲು ರಜಾ, ನಂತರ ಪರೀಕ್ಷೆ ಮುಗಿದ ನಂತರದ ರಜಾ! ಪ್ರಾಥಮಿಕ ಶಾಲೆಗಾದರೆ ಎಪ್ರಿಲ್ ೧೦ರಂದು ಫಲಿತಾಂಶ, ನಂತರ ರಜಾ. ಎಸ್.ಎಸ್. ಎಲ್.ಸಿ. ಮತ್ತು ನಂತರದ ತರಗತಿಗಳಿಗೆ, ಎಪ್ರಿಲ್‌ನಲ್ಲಿ ಪರೀಕ್ಷೆ ಬರೆದ ನಂತರ ರಜೆಗಳೇ ತಾನೆ! ರಣ ರಣ ಬಿಸಿಲಿಗೂ, ರಜೆಗಳಿಗೂ ಅದೇನೋ ಮಧುರ ನಂಟು! + +(ಶಶಿಧರ ಹಾಲಾಡಿ) + +ಇದೇ ರೀತಿಯ ರಜೆಗೂ ಮುಂಚೆ, ಪರೀಕ್ಷೆಗೆ ಓದಿಕೊಳ್ಳಲು ರಜಾ ಎಂದು ಎರಡರಿಂದ ನಾಲ್ಕು ವಾರ ರಜ ನೀಡಿದಾಗ, ನಮಗೆ ಮಕ್ಕಳಿಗೆ ಖುಷಿಯೋ ಖುಷಿ! ಓದಲಿಕ್ಕೋ, ಆಟವಾಡಲಿಕ್ಕೋ ಒಟ್ಟಿನಲ್ಲಿ ರಜಾ ತಾನೆ! ಆದರೆ, ನಮಗೆಲ್ಲಾ ಪರೀಕ್ಷೆಗೆ ಓದಲು ರಜಾ ಕೊಟ್ಟರು ಎಂದರೆ ಪೋಷಕರು ಒಂದು ಕಣ್ಣನ್ನು ನಮ್ಮ ಮೇಲೆಯೇ ಇಟ್ಟಿರುತ್ತಾರೆ. ಅಂತಹ ರಜಾದಿನಗಳಲ್ಲಿ, ನಾನು ಸರಿಯಾಗಿ ಓದುತ್ತಿದ್ದೆನೋ ಇಲ್ಲವೋ ಎಂದು ನನ್ನನ್ನು ಗಮನಿಸುತ್ತಿದ್ದವರೆಂದರೆ ನಮ್ಮ ಅಮ್ಮಮ್ಮ! ನನ್ನ ತಂಗಿಯರೂ ಸೇರಿದಂತೆ ನಮ್ಮ ಮನೆಯಲ್ಲಿ ಒಟ್ಟು ನಾಲ್ಕು ಜನ ವಿದ್ಯಾರ್ಥಿಗಳು – ಮನೆಯಲ್ಲಿ ನಮಗೆಲ್ಲಾ ಅಮ್ಮಮ್ಮನೇ ಹೆಡ್‌ಮೇಡಂ. ಪ್ರತಿ ದಿನ ಬೆಳಗ್ಗೆ ಐದು ಗಂಟೆಗೆ ಎದ್ದೇಳಿಸಿ, ಕಾಫಿ ಮಾಡಿಕೊಡುತ್ತಿದ್ದರು. ದಿನವಿಡೀ ಪರೀಕ್ಷೆಗೆ ಸರಿಯಾಗಿ ಸಿದ್ಧತೆ ಮಾಡುತ್ತಿದ್ದಾರಾ ಇಲ್ಲವಾ ಎಂದು, ನಾವು ಕುಳಿತ ಜಾಗದ ಸುತ್ತ ಮುತ್ತ ಅವರು ಆಗಾಗ ಠಳಾಯಿಸುತ್ತಿದ್ದರು. ಅದರಲ್ಲೂ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆ ಎಂದರೆ ಇನ್ನಷ್ಟು ಪ್ರಾಮುಖ್ಯತೆಯನ್ನು ಅವರೇ ಆರೋಪಿಸಿಕೊಂಡು, ಮನೆಯ ಇಡೀ ವಾತಾವರಣಕ್ಕೆ ಪರೀಕ್ಷೆಗಳ ಬಿಗುವನ್ನು ತಂದಿಡುಬಿಡುತ್ತಿದ್ದರು. + +ಸದುದ್ದೇಶದ್ದೇ ಆದರೂ, ಅವರ ಈ ಮೇಡಂಗಿರಿಯ ಬಿಸಿಯಿಂದ ಸ್ವಲ್ಪ ದೂರ ಇರಲು ನಾನು ಕಂಡುಕೊಂಡ ಉಪಾಯವೆಂದರೆ `ಓದಲಿಕ್ಕೆ ಹಕ್ಕಲಿಗೆ ಹೋಗುವುದು!’ ಬೆಳಗ್ಗೆ ತಿಂಡಿ ತಿಂದು, ಕೈಯಲ್ಲಿ ಒಂದು ಪುಸ್ತಕ ಹಿಡಿದು (ಇದು ಹೆಚ್ಚು ದಪ್ಪ ಇದ್ದಷ್ಟೂ ಅನುಮತಿ ಸಿಗುವುದು ಬೇಗ), ಮನೆ ಹಿಂದಿನ ದರೆಯ ದಾರಿಯನ್ನು ಹತ್ತಿ ಹಾಡಿಗೋ, ಹಕ್ಕಲಿಗೋ ಹೊರಡುವುದು ನನ್ನ ನೆಚ್ಚಿನ ಹವ್ಯಾಸ. `ಎಲ್ಲಿಗೆ ಹೊರಟಿತು ನಿನ್ನ ಸವಾರಿ?’ ಎಂದು ನಿಧಾನವಾಗಿ ನಡೆಯುತ್ತಾ ಗುಡ್ಡೆಯ ಕಡೆ ಹೊರಟ ನನ್ನನ್ನೇ ನೋಡುತ್ತಾ ಅವರು ಕೇಳುವುದುಂಟು. `ಓದಲಿಕ್ಕೆ ಹಕ್ಕಲಿಗೆ ಹೊರಟೆ. ನನಗೆ ಓದಲಿಕ್ಕೆ ಎಷ್ಟು ಪೋರ್ಷನ್ ಇದೆ, ಗೊತ್ತುಂಟಾ?’ ಎಂದು ಕೈಲಿದ್ದ ಪುಸ್ತಕವನ್ನು ತೋರಿಸಿ, ಅವರಿಗೇ ತಿರುಪ್ರಶ್ನೆ ಎಸೆದು, ಮನೆ ಹಿಂದಿನ ಹಕ್ಕಲಿಗೆ ಹೋಗುತ್ತಿದ್ದೆ. + +ಇಪ್ಪತ್ತು ಅಡಿ ಎತ್ತರದ ದರೆಯ ಏರು ದಾರಿಯನ್ನು ಏರಿ ಸಾಗಿದರೆ, ಐದು ನಿಮಿಷದಲ್ಲಿ ಹಕ್ಕಲು ಸಿಗುತ್ತದೆ. ಅದು ಇತ್ತ ದಟ್ಟ ಹಾಡಿಯೂ ಅಲ್ಲ, ಅತ್ತ ಹಕ್ಕಲೂ ಅಲ್ಲ ಎನ್ನಬಹುದು. ಅಲ್ಲಿದ್ದದ್ದು ಸಣ್ಣ ಗಾತ್ರದ ಮರಗಳು ಮಾತ್ರ. ಆ ಜಾಗವು ನಮ್ಮದೇ ಕುಮ್ಕಿ ಜಾಗವಾದ್ದರಿಂದ, ಪ್ರತಿ ಇಪ್ಪತ್ತು ಅಥವಾ ಮೂವತ್ತು ವರ್ಷಗಳಿಗೊಮ್ಮೆ ಅಲ್ಲಿನ ಮರಗಳನ್ನು ಕಡಿಸಿ, ಮಾರುತ್ತಿದ್ದರು. ಗದ್ದೆ, ಗುಡ್ಡ, ಕಾಡುಗಳ ನಡುವೆ ತಾತ್ಕಾಲಿಕ ರಸ್ತೆ ನಿರ್ಮಿಸಿ, ಲಾರಿ ತಂದು `ಹಾಡಿ ಕಡಿಯುವ ಕಂಟ್ರಾಕ್ಟರು’ಗಳು ಮರಗಳನ್ನು ಪೇಟೆಗೆ ಸಾಗಿಸುತ್ತಿದ್ದರು. ನಮ್ಮೂರಿನ ಕೃಷಿಕರಿಗೆ ಅದೊಂದು ಪ್ರಮುಖ ಆದಾಯ. ಈ ರೀತಿ ಎರಡು ಅಥವಾ ಮೂರು ದಶಕಗಳಿಗೊಮ್ಮೆ ಹಾಡಿ ಮಾರಿದಾಗ ಸಿಗುವ ದುಡ್ಡಿನಲ್ಲಿ, ಮದುವೆ ಮಾಡುವುದೋ, ಮನೆ ಕಟ್ಟುವುದೋ, ಬಾವಿ ತೋಡುವುದನ್ನೋ ಮಾಡುತ್ತಿದ್ದರು. ಈ ರೀತಿ ಆಗಾಗ ಅಲ್ಲಿನ ಮರಗಳನ್ನು ಕಡಿದು ಮಾರುತ್ತಿದ್ದುರಿಂದಾಗಿ, ಆ ಜಾಗದಲ್ಲಿ ದೊಡ್ಡ ಗಾತ್ರದ, ಎತ್ತರದ ಮರಗಳು ಬೆಳೆಯುವ ಅವಕಾಶವೇ ಇರಲಿಲ್ಲ. ಆದ್ದರಿಂದ ಅದೊಂದು ಖಾಯಂ ಹಕ್ಕಲು. + +ಆ ಹಕ್ಕಲಿನ ಕೆಳ ಭಾಗದಲ್ಲಿ, ಅಂದರೆ, ಆ ಕುಮ್ಕಿ ಜಾಗಕ್ಕೆ ತಾಗಿಕೊಂಡ ಗದ್ದೆಯ ಹತ್ತಿರ ನಾಲ್ಕಾರು ಗೋವೆ ಮರಗಳಿದ್ದವು. ಇಳಿಜಾರು ಗುಡ್ಡದಲ್ಲಿ ಆ ಹಕ್ಕಲು ಬೆಳೆದಿತ್ತು. ಹಕ್ಕಲಿನ ಮಧ್ಯಭಾಗದಲ್ಲಿ ಮುರಿನ ಮರ, ಸಳ್ಳೆ ಮರ, ನೇರಳೆ ಮರ, ದೂಪದ ಮರ, ಮುಳ್ಳುಹರಳಿನ ಮರ, ಕೆಲವು ಕಿರಾಲು ಬೋಗಿ ಮರಗಳಿದ್ದವು. ಹಕ್ಕಲಿನ ಎತ್ತರದ ಭಾಗದಲ್ಲಿ ಕಂಕುಳು ಮರ, ಹಿರಾಲು ಬೋಗಿ ಮತ್ತಿತರ ಮರಗಳು, ಹಲವು ಮುಳ್ಳುಗಿಡಗಳು, ಬಳ್ಳಿಗಳು ಬೆಳೆದಿದ್ದು, ಅವುಗಳ ನಡುವೆ ಒಂದು ಬಾಗಾಳು ಮರವಿತ್ತು. + +ಅಲ್ಲೆಲ್ಲಾ ಮಧ್ಯಮ ಗಾತ್ರದ ಮರಗಳು ಒತ್ತೊತ್ತಾಗಿ ಬೆಳೆದಿದ್ದರಿಂದಾಗಿ, ಸುತ್ತಲೂ ನೆರಳು, ನಡು ಮಧ್ಯಾಹ್ನವಾದರೂ ಸೂರ್ಯ ಕಿರಣಗಳು ನೆಲಕ್ಕೆ ಬೀಳುತ್ತಿರಲಿಲ್ಲ. ಇವುಗಳ ಪೈಕಿ ನನಗೆ ಇಷ್ಟವೆಂದರೆ ಬಾಗಾಳು ಮರ. ಇಪ್ಪತ್ತು ಅಡಿ ಎತ್ತರದ ಆ ಮರದ ತುಂಬಾ ಹಸಿರು ಎಲೆಗಳು; ಅದರ ಕೊಂಬೆಗಳು ಅಡ್ಡಡ್ಡ ಬೆಳೆದಿದ್ದರಿಂದ ಕುಳಿತುಕೊಳ್ಳಲು ಅನುಕೂಲ. ಬೆಳಗ್ಗೆ ತಿಂಡಿ ತಿಂದು ಹೊರಟವನೇ ಆ ಮರ ಹತ್ತಿ ಕುಳಿತುಕೊಂಡು, ಪುಸ್ತಕ ಬಿಡಿಸುತ್ತಿದ್ದೆ. ಮಧ್ಯಾಹ್ನದ ಊಟದ ತನಕ ಆ ಬಾಗಾಳು ಮರವೇ ನನ್ನ ರೀಡಿಂಗ್ ಡೆಸ್ಕ್, ರೀಡಿಂಗ್ ರೂಂ ಎಲ್ಲವೂ. + +ಇತ್ತ ಪುಸ್ತಕದ ಹಾಳೆಗಳನ್ನು ತಿರುವುತ್ತಾ, ಪ್ರಶ್ನೋತ್ತರಗಳನ್ನು ಮನನ ಮಾಡುತ್ತಿರುವಾಗ, ಅತ್ತಲಿಂದ ತಣ್ಣಗೆ ಗಾಳಿ ಬೀಸುತ್ತಿತ್ತು. ಆ ನಡುವೆ ಹಕ್ಕಿಗಳು ಹಾರಿ ಬರುತ್ತಿದ್ದವು. ಹಕ್ಕಿಗಳ ಆ `ಮಿಕ್ಸ್ಡ್ ಹಂಟಿಂಗ್’ ಪಾರ್ಟಿಯಲ್ಲಿ ನಾಲ್ಕಾರು ಪ್ರಭೇದದ ಹಕ್ಕಿಗಳು ಮಿಡತೆಗಳ ಬೇಟೆಯಾಡುತ್ತಿದ್ದವು. ತರಲೆ ಹಕ್ಕಿಗಳು ಹಕ್ಕಿಗಳು ನೆಲದಲ್ಲಿ ಆಹಾರ ಹುಡುಕಿದರೆ, ಕೊಂಬೆಯಲ್ಲಿ ನಾಲ್ಕಾರು ಹಕ್ಕಿಗಳು ಕೀಟಗಳನ್ನು ಹುಡುಕುತ್ತಿದ್ದವು, ಇನ್ನೂ ಒಂದೆರಡು ಹಕ್ಕಿಗಳು ಮರದ ತುದಿಯಲ್ಲಿರುವ ಎಲೆಗಳ ಅಡಿಯಲ್ಲಿ ತಪಾಸಣೆ ಮಾಡುತ್ತಿದ್ದವು. ವಿಶೇಷ ಎಂದರೆ, ಬೇರೆ ಬೇರೆ ಪ್ರಭೇದದ ಹಕ್ಕಿಗಳು ಈ ರೀತಿ ಪರಸ್ಪರ ಸಹಾಯ ಮಾಡುವ ತತ್ವದಲ್ಲಿ ಒಂದು ಗುಂಪನ್ನು ರೂಪಿಸಿಕೊಂಡಿದ್ದು! ಪಿಕಳಾರ, ಬುಲ್‌ಬುಲ್, ನೀಲ ಸಾಮ್ರಾಟ ಹಕ್ಕಿ (ಬ್ಲಾಕ್ ನೇಪ್ಡ್ ಫ್ಲೈಕ್ಯಾಚರ್), ಟಿಕೆಲ್ಸ್ ಫ್ಲೈಕ್ಯಾಚರ್, ಕಾಜಾಣ, ಗೋಲ್ಡನ್ ಓರಿಯಲ್, ಬ್ಲಾಕ್ ಹೆಡೆಡ್ ಓರಿಯಲ್, ಅಯೋರಾ ಮೊದಲಾದ ಹಕ್ಕಿಗಳು ಒಟ್ಟು ಗೂಡಿ ಈ ರೀತಿ ಕೀಟಗಳ ಬೇಟೆಯಾಡುವುದನ್ನು ನೋಡುವುದೇ ಒಂದು ಆಪ್ತ ಅನುಭವ. ಹಕ್ಕಲಿನ ಒಂದು ತುದಿಯಿಂದ ಹೊರಟ ಈ ಮಿಕ್ಸ್ಡ್‌ ಹಂಟಿಂಗ್ ಪಾರ್ಟಿಯು, ನಿಧಾನವಾಗಿ ನಾನು ಕುಳಿತ ಬಾಗಾಳು ಮರದ ಹತ್ತಿರ ಬಂದ ಕೂಡಲೆ, ಅಲ್ಲಿ ಕುಳಿತ ಈ ಮನುಷ್ಯ ಪ್ರಾಣಿಯನ್ನು ಕಂಡು, ಸಣ್ಣಗೆ ದಿಗಿಲಾಗಿ ಮೆತ್ತಗೆ ಸ್ವಲ್ಪ ದೂರ ಸರಿದು, ನನ್ನ ಕಡೆ ಒಂದೆರಡು ಬಾರಿ ಕತ್ತು ತಿರುಗಿಸಿ ನೋಡಿ, ತಮ್ಮ ಬೇಟೆಯನ್ನು ಮುಂದುವರಿಸುತ್ತಿದ್ದವು. + + + +ಹಕ್ಕಲಿನ ತುದಿಯಲ್ಲಿದ್ದ ಆ ಬಾಗಾಳು ಮರದ ಮೇಲೆ ಹೆಚ್ಚು ಸಮಯ ನಾನು ಕಳೆದದ್ದು ಡಿಗ್ರಿ ಪರೀಕ್ಷೆಯ ಸಮಯದಲ್ಲಿ. ಒಂದು ದಪ್ಪನೆಯ ಇಂಗ್ಲಿಷ್ ಪುಸ್ತಕ ಹಿಡಿದು ಹಕ್ಕಲಿನತ್ತ ನಾನು ಹೊರಟೆನೆಂದರೆ, ಅಮ್ಮಮ್ಮನೂ ಹೆಚ್ಚು ಪ್ರಶ್ನೆ ಮಾಡುತ್ತಿರಲಿಲ್ಲ. ಹಕ್ಕಲಿನ ಮರದ ಮೇಲೆ ಕುಳಿತು, ದಪ್ಪನೆಯ ಪುಸ್ತಕ ಓದುತ್ತಿದ್ದಾನೆ ಎಂದು, ಹೆಮ್ಮೆಯಿಂದಲೋ ಏನೋ, ಸುಮ್ಮನಿರುತ್ತಿದ್ದರು. ಆ ರೀತಿ ಕುಳಿತಾಗ ಒಮ್ಮೊಮ್ಮೆ ಅಪರೂಪದ ಹಕ್ಕಿಗಳನ್ನು ನಾನು ಕಂಡದ್ದುಂಟು. ಪ್ಯಾರಡೈಸ್ ಫ್ಲೈ ಕ್ಯಾಚರ್‌ನ ಗಂಡು ಹಕ್ಕಿಯು ಹಾರಿ ಬಂದರಂತೂ, ಆ ಹಗಲಿನಲ್ಲೂ ಅಲ್ಲೆಲ್ಲಾ ಮಿಂಚಿನ ಸಂಚಾರ. ಹಕ್ಕಲಿನ ನಸು ನೆರಳಿನಲ್ಲಿ ಆ ಹಕ್ಕಿಯು ತನ್ನ ಒಂದಡಿ ಉದ್ದದ ಬಾಲವನ್ನು ಬಳುಕಿಸುತ್ತಾ ಹಾರಿ ಬಂದರಂತೂ, ಆ ನೋಟವು ಪುಟ್ಟ ಕಾವ್ಯಾನುಭವ. ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಿ ಹೋಗಿ ಕುಳಿತ ಅದರ ಬಾಲವು, ಆ ಇಡೀ ಪರಿಸರಕ್ಕೆ ಹೊಸ ಭಾಷ್ಯವನ್ನೇ ಬರೆಯುತ್ತದೆ. ಅದರ ಜತೆ, ಜುವನೈಲ್ ಪ್ಯಾರಡೈಸ್ ಫ್ಲೈ ಕ್ಯಾಚರ್ ಕಂಡರೆ, ಅದರ ನಸುಗೆಂಪು ಬಾಲದ ನೋಟ ಮೂಡಿಸುವ ಅನುಭವವೇ ವಿಶಿಷ್ಟ, ವಿಭಿನ್ನ. ಆ ಹಕ್ಕಲಿಗೆ ಪ್ರತಿದಿನ ಭೇಟಿಕೊಡುತ್ತಿದ್ದ ಇನ್ನೊಂದು ಬಾಲದ ಹಕ್ಕಿ ಎಂದರೆ ಉದ್ದ ಬಾಲದ ಕಾಜಾಣ. ಕುವೆಂಪು ಅವರ ಕಾದಂಬರಿಯ ಮುಖಪುಟದಲ್ಲಿ ರಾರಾಜಿಸುತ್ತಿರುವುದು ಇದೇ ಕಾಜಾಣ. + +ಪ್ರಕೃತಿಯ ಮೊದಲ ಪಾಠಗಳನ್ನು ನಾನು ಕಲಿತದ್ದು ಆ ಹಕ್ಕಲಿನಲ್ಲಿ ಎಂದು ಹೇಳಿದರೆ ತಪ್ಪಾಗದು. ಹಾಗೆ ನೋಡಿದರೆ, ನಮ್ಮ ಹಳ್ಳಿಯ ಮನೆಯ ಪರಿಸರವೇ ಒಂದು ಒಳ್ಳೆಯ ಪಾಠಶಾಲೆ. ಮನೆ ಎದುರು ಗದ್ದೆ, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಚಾಚಿಕೊಂಡ ಭಾರೀ ಗಾತ್ರದ ಹಲಸಿನ ಮರ, ಇಪ್ಪತ್ತು ಅಡಿ ದೂರದಲ್ಲಿರುವ ಬೃಹತ್ ಗಾತ್ರದ ಎರಡು ತಾಳೆ ಮರಗಳ ಒಣಗಿದ ಎಲೆಗಳು ಮಾಡುವ ಬರಬರ ಸದ್ದು, ಅಂಗಳದ ಅಂಚಿನ ಹೂಗಿಡಗಳು, ಬಳ್ಳಿಗಳು, ದಾಸವಾಳ, ಬೆಟ್ಟ ತಾವರೆ – ಪಟ್ಟಿ ಮಾಡುತ್ತಾ ಹೋದರೆ ಬೇಗನೆ ಮುಗಿಯದು. ಜತೆಗೆ ನಾವು ಶಾಲೆಗೆ ಹೋಗುತ್ತಿದ್ದ ದಾರಿಯೂ ಇನ್ನೊಂದು ಪಾಠಶಾಲೆ. ನಾಲ್ಕನೆಯ ತರಗತಿಯ ತನಕ ಓದಿದ ಗೋರಾಜಿ ಶಾಲೆ, ೫ರಿಂದ ೭ರ ತನಕ ಓದಿದ ಹಾಲಾಡಿ ಶಾಲೆ, ನಂತರ ಓದಿದ ಶಂಕರನಾರಾಯಣ ಹೈಸ್ಕೂಲು – ಇವೆಲ್ಲಕ್ಕೂ ಹೋಗಬೇಕೆಂದರೆ, ಗದ್ದೆ ಬಯಲು ಮತ್ತು ಕಾಡಿನ ನಡುವೆ ಸಾಗುವ ದಾರಿಯಲ್ಲಿ ನಮ್ಮ ಪ್ರತಿದಿನದ ಪಯಣ. + +ದಿನವೂ ಒಂದೇ ದಾರಿಯಾ ದರೂ, ತಿಂಗಳುಗಟ್ಟಲೆ ಪ್ರತಿದಿನ ಅಂತಹ ದಾರಿಯಲ್ಲಿ ಸಾಗುವಾಗ, ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ಕಾಲದಿಂದ ಕಾಲಕ್ಕೆ ಆಗುತ್ತಿರುವ ಬದಲಾವಣೆಯನ್ನು ಗುರುತಿಸುವ ಅಪೂರ್ವ ಅವಕಾಶ. ಮಳೆಗಾಲದಲ್ಲಿ ಗಿಡಗಳು ಹೇಗಿವೆ, ಬೇಸಗೆಯಲ್ಲಿ ಹೇಗೆ ಒಣಗುತ್ತವೆ, ಚಳಿಗಾಲದಲ್ಲಿ ಹಾಡಿ, ಹಕ್ಕಲಿನ ತುಂಬಾ ಉದುರುವ ಎಲೆಗಳಿಂದ ಸಿಗುವ ದರಲೆ, ಅದನ್ನು ರೈತರು ಗುಡ್ಡೆ ಮಾಡಿ ಮನೆಗೆ ಸಾಗಿಸಿ, ಹಟ್ಟಿಯಲ್ಲಿ ಹರಡಿ ಗೊಬ್ಬರ ಮಾಡುವ ಪರಿ, ಇವೆಲ್ಲವನ್ನೂ ಆ ದಾರಿಯಲ್ಲಿ ದಿನಾ ನಡೆಯುವ ನಮಗೆ ನೋಡುವ ಅವಕಾಶ! ಇದೂ ಸಹ ಎಷ್ಟು ಉತ್ತಮ ಪರಿಸರ ಪಾಠ ಅಲ್ಲವೆ! + +ಕಾಡು, ಹಾಡಿ, ಹಕ್ಕಲು, ಗುಡ್ಡ ಇಲ್ಲೆಲ್ಲಾ ಒಬ್ಬನೇ ಸುತ್ತುವುದೆಂದರೆ ನನಗೆ ಅದೆಲ್ಲಿಯದೋ ಉತ್ಸಾಹ, ಉಲ್ಲಾಸ. ಆದರೆ, ನಮ್ಮೂರಿನ ರೈತರಿಗೆ ನನ್ನ ಈ ಹವ್ಯಾಸದ ಮೇಲೆ ಸಣ್ಣ ಅಪನಂಬಿಕೆ! ಒಂದು ದಿನ ಹೀಗಾಯ್ತು. ಡಿಗ್ರಿಗೆ ಮಣ್ಣು ಹೊತ್ತಿದ್ದು ಮುಗಿದಿತ್ತು. ಆ ನಂತರ ಒಂದು ವರ್ಷ ನಿರುದ್ಯೋಗಿಯಾಗಿ ಮನೆಯಲ್ಲೇ ಇದ್ದೆನಲ್ಲ – ಅಂತಹ ದಿನಗಳ ಒಂದು ಸಂಜೆ, ಐದು ಗಂಟೆಯ ಸಮಯಕ್ಕೆ ನಮ್ಮ ಮನೆ ಪಶ್ಚಿಮ ದಿಕ್ಕಿನಲ್ಲಿ ಒಂದು ಕಿ.ಮೀ. ದೂರದಲ್ಲಿದ್ದ ಸೊಪ್ಪಿನ ಅಣೆಯ ಕಡೆ ಹೊರಟೆ. ಸೊಪ್ಪಿನ ಅಣೆಯ ತುಂಬಾ ಎತ್ತರವಾದ ಮರಗಳು ದಟ್ಟವಾಗಿ ಬೆಳೆದಿದ್ದವು. ಹಿಂದೆ ಅಲ್ಲಿ ಹುಲಿಗಳಿದ್ದವಂತೆ. ಆ ಬೆಟ್ಟದ ತುದಿಗೆ ಹೋದರೆ, ದೂರದಲ್ಲಿ ಪಶ್ಚಿಮಘಟ್ಟಗಳ ಸಾಲು ಕಾಣಿಸುತ್ತಿತ್ತು. ಹಾಗೇ ನೋಡಿಕೊಂಡು, ಅದಕ್ಕೆ ತಾಗಿಕೊಂಡು ಒಂದು ಕಿ.ಮೀ. ಉತ್ತರ ದಿಕ್ಕಿನಲ್ಲಿದ್ದ ಕಲ್ಲಕಟ್ರ ಅಣೆಯತ್ತ ನಡೆದೆ. ಅವತ್ತಿನ ಮುಖ್ಯ ಉದ್ದೇಶವೆಂದರೆ, ಸಂಜೆಯ ಹೊತ್ತಿನಲ್ಲಿ ಅಲ್ಲಿ ಕಾಣಿಸುವ ಎರಡು, ಮೂರು ಪ್ರಭೇದದ ಗೂಬೆಗಳನ್ನು ನೋಡಿ, ಗುರುತಿಸುವುದು. ಸಂಜೆ ಆರರ ಸಮಯಕ್ಕೆ ಒಂದು ಗೂಬೆ ಸಿಳ್ಳೆ ಹಾಕಿದಂತೆ ಕೂಗತೊಡಗಿತು. ನಮ್ಮೂರಿನಲ್ಲಿ ಸಾಮಾನ್ಯ ಎನಿಸಿದ್ದ ಮೀನು ಗೂಬೆ ಅದು. ಇದು ಎರಡು ಶೈಲಿಯಲ್ಲಿ ಕೂಗುತ್ತದೆ. ಇನ್ನೊಂದು ಶೈಲಿ ಎಂದರೆ ಊಂ ಹೂಂ ಊಂ. ನಸುಗತ್ತಲಿನಲ್ಲಿ, ಎತ್ತರದ ಬೋಗಿಮರದ ಮೇಲಿನಿಂದ ಬಂದ ಶಿಳ್ಳೆಯಂತಹ ದನಿಯನ್ನು ಅನುಸರಿಸುತ್ತಾ, ಆ ದಿಕ್ಕಿಗೆ ನೋಡುತ್ತಾ, ಹಾಡಿಯ ನಡುವೆ ನಿಧಾನವಾಗಿ ನಡೆಯುತ್ತಿದ್ದೆ. + +`ಹ್ವಾಯ್, ಇಲ್ಲಿ ಎಂತ ಮಾಡ್ತಿದ್ದೀರಿ?’ ಎಂದು ಕೇಳುತ್ತಾ ಗಿಡ್ಡ ನಾಯಕ ಒಮ್ಮೆಲೇ ಪ್ರತ್ಯಕ್ಷನಾದ. ಅವನು ಸೌದೆ ತರಲು ಬಂದಿರಬೇಕು. ಅವನ ಮನೆ ಅಲ್ಲೇ ಕೆಳಗಿನ ಕಂಬಳಗದ್ದೆಯ ಬಳಿ. `ಹೀಗೆ ಸುಮ್ಮನೆ ಮಾರಾಯ.. ಈ ಹಾಡಿ, ಗುಡ್ಡ ನೋಡುವಾ ಅಂತ’ ಎಂದೆ. + +`ನೀವು ಹೀಂಗೆಲ್ಲಾ ಸುಮ್ಮನೆ ಓಡಾಡುತ್ತೀರಿ ಎಂದರೆ ನಾನು ನಂಬುವುದಿಲ್ಲ. ನಿಮ್ಮನೆಯ ದನವೋ, ಗುಡ್ಡವೋ ತಪ್ಪಿಸಿಕೊಂಡಿರಬೇಕು, ಅದಕ್ಕೇ ಹುಡುಕಿಕೊಂಡಿ ಬಂದಿದ್ದೀರಿ, ಅಲ್ದಾ?’ ಎಂದು ಆತ ನಗುತ್ತಾ ಕೇಳಿದ. ಪಾಪ, ಅವನ ಕುತೂಹಲಕ್ಕೇಕೆ ನಿರಾಸೆ ಮಾಡುವುದು ಎಂದು `ಹೌದು..’ ಎಂದು ಕಲ್ಲಕಟ್ರ ಅಣೆಯತ್ತ ಸಾಗಿದೆ. ಅದರ ತುದಿಯನ್ನೇರಿದರೆ, ನಮ್ಮೂರಿನ ಒಟ್ಟು ನೋಟ ಮತ್ತು ದೂರ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಆಗುಂಬೆ ಘಾಟಿ ಸುತ್ತಲಿನ ಶ್ರೇಣಿ, ಅಲ್ಲೆಲ್ಲೋ ಪರ್ವತ ಕಮರಿಯ ಸಂದಿಯಲ್ಲಿ ನೆಗೆಯುವ ಒಂದು ಜಲಪಾತ ಎಲ್ಲವೂ ಕಾಣಿಸುತ್ತಿತ್ತು. ಅದನ್ನು ಒಂದಷ್ಟು ಹೊತ್ತು ನೋಡಿ, ಆ ದಿನ ನಿಧಾನವಾಗಿ ಮನೆಗೆ ವಾಪಸಾಗುವಾಗ ಪೂರ್ತಿ ಕತ್ತಲಾಗಿತ್ತು. + + + +`ನಿನ್ನ ಪರೀಕ್ಷೆ ಎಲ್ಲಾ ಮುಗಿತಲ್ಲಾ, ಇನ್ನೂ ಓದುವುದಕ್ಕೆ ಹೋಗಿದ್ದೆಯಾ?’ ಎಂದು ಒಂದೊಂದು ದಿನ ನನ್ನ ಬರವನ್ನೇ ಕಾಯುತ್ತಿದ್ದ ಅಮ್ಮಮ್ಮ ಕೇಳುತ್ತಿದ್ದರು. `ಪರೀಕ್ಷೆ ಎಲ್ಲಾ ಮುಗಿಯಿತು ಅಮ್ಮಮ್ಮ, ಮುಂದಿನ ವಾರ ರಿಸಲ್ಟ್’ ಎಂದು, ಅವರನ್ನು ತಬ್ಬಿಬ್ಬುಗೊಳಿಸಲು ಯತ್ನಿಸಿದೆ. ಆದರೆ, ಮುಂದಿನ ವಾರ ಬೇಸ್ತು ಬೀಳುವ ಸರದಿ ನನ್ನದಾಗಿತ್ತು. ಡಿಗ್ರಿ ಪರೀಕ್ಷೆಗಳಲ್ಲಿ ಕಬ್ಬಿಣದ ಕಡಲೆ ಎನಿಸಿದ್ದ ಮ್ಯಾಥಮ್ಯಾಟಿಕ್ಸ್ನಲ್ಲಿ ನನಗೆ ಸಿಕ್ಕಿದ್ದ ಅಂಕ ಕೇವಲ ೩೫! ನಮ್ಮೂರಿನ ಹಕ್ಕಲಿನಲ್ಲಿ ಹಕ್ಕಿಯ ಹಾಡನ್ನು ಕೇಳುತ್ತಾ, ಬಾಗಾಳು ಮರದ ಮೇಲೆ ಕುಳಿತು ಅದನ್ನೇ ರೀಡಿಂಗ್ ಡೆಸ್ಕ್ ಮಾಡಿಕೊಂಡು, ಮರದ ಕೆಳಗೆ ಹರಿದಾಡುತ್ತಿದ್ದ ನಕ್ಷತ್ರ ಆಮೆಯನ್ನು ಗಮನಿಸುತ್ತಾ, ತನ್ನ ಬಾಲದಿಂದಲೇ ಕಾವ್ಯ ಬರೆಯುತ್ತಿದ್ದ ಪ್ಯಾರಡೈಸ್ ಫ್ಲೈ ಕ್ಯಾಚರ್ ಹಾರುವುದನ್ನು ನೋಡುತ್ತಾ, ಆಗೊಮ್ಮೆ ಈಗೊಮ್ಮೆ ಮರದ ತರಗಲೆಯ ಅಡಿ ಸರಿಯುತ್ತಿದ್ದ ನಾಗರಹಾವನ್ನು ಕಂಡು ಬೆರಗಾಗಿದ್ದಕ್ಕೆ, ಮೌಲ್ಯ ಮಾಪಕರು ಆ ವರ್ಷದ ಪರೀಕ್ಷೆಯಲ್ಲಿ ನನಗೆ ನೀಡಿದ್ದ ಅಂಕಗಳು ಅಷ್ಟೇ! + +(ಗುಡ್ಡ = ಗಂಡು ಕರು. ಹಕ್ಕಲು = ಮರಗಿಡಗಳು ವಿರಳವಾಗಿ ಬೆಳೆದ ಕಾಡು. ಬಾಗಾಳು ಮರ = ರಂಜದ ಹೂವಿನ ಮರ.) + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_17.txt b/Kenda Sampige/article_17.txt new file mode 100644 index 0000000000000000000000000000000000000000..d0f455bee5871acde762cfb33d2a0f833f94270a --- /dev/null +++ b/Kenda Sampige/article_17.txt @@ -0,0 +1,17 @@ +ಯಾವುದಾದರೂ ಸಂದರ್ಶನವನ್ನು ಕೊಡುವಾಗ ಅಥವಾ ಸಭೀಕರೆದುರು ಮಾತನಾಡುವಾಗ ನರ್ವಸ್ ಆಗುವ ಸಮಸ್ಯೆ ಬಹಳ ಮಂದಿಗಿದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಮನಶಾಸ್ತ್ರಜ್ಞರು ಬಗೆ ಬಗೆಯ ಮಾರ್ಗಗಳನ್ನು ಸೂಚಿಸುತ್ತಾರೆ. ಸರಿಯಾದ ತಯಾರಿ ನಡೆಸಿ, ಕನ್ನಡಿಯ ಮುಂದೊಮ್ಮೆ ಪ್ರಾಕ್ಟಿಸ್ ಮಾಡಿ ಇತ್ಯಾದಿ ಇತ್ಯಾದಿ. ಅವೆಷ್ಟು ಪರಿಣಾಮಕಾರಿ ಎಂಬುದು ಅಂತಹ ಸಲಹೆಗಳನ್ನು ಅನುಸರಿಸುವರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ನನಗೆ ವೈಯಕ್ತಿವಾಗಿ ಇಷ್ಟವಾಗುವ ಸಲಹೆಗಳೆಂದರೆ “make a great entrance” ಎಂಬುದು. ಒಳಗೆ ಎಂತಹದೇ ಭಯವಿದ್ದರೂ, ಮುಖದ ಮೇಲೊಂದು ನಗು ಹಾಗೂ ಕಾನ್ಫಿಡೆಂಟ್ ಆಗಿರುವ ಹಾವಭಾವದೊಂದಿಗೆ ನೀನು ಎಂಟ್ರಿ ಕೊಟ್ಟರೆ ಅರ್ಧ ಕೆಲಸ ಆದ ಹಾಗೆಯೇ ಎಂದು ನನ್ನ ಸಹೋದ್ಯೋಗಿಯೊಬ್ಬರು ನಾನು ವೃತ್ತಿ ಜೀವನ ಶುರುಮಾಡುವ ಸಮಯದಲ್ಲಿ ಹೇಳಿದ್ದರು. ಅದು ಎಷ್ಟೋ ಬಾರಿ ಸಾಬೀತಾಗಿದೆ ಕೂಡ. ಪ್ರೆಸೆಂಟೇಷನ್‌ನ ಮುಂಚೆ ಸಾಕಷ್ಟು ಭಯವಾಗುತ್ತಿದ್ದರೂ, ಮೀಟಿಂಗ್ ಶುರುವಾದಾಗ ಧೈರ್ಯ ತುಂಬಿದ ದನಿಯಲ್ಲಿ, ಮಂದಸ್ಮಿತನಾಗಿ ‘ಹಲೋ ಎವೆರಿನ್’ ಎಂದು ಹೇಳುತ್ತಿದ್ದರೆ, ಅದೆಂತದೋ ಧೈರ್ಯ ತುಂಬಿ ಪ್ರೆಸೆಂಟೇಷನ್ ಸಾಂಗವಾಗಿ ಮುಗಿಯುತ್ತದೆ. + +ಕ್ರೀಡಾಪಟುಗಳೂ ಕೂಡ ಎದುರಾಳಿಯ ಮೇಲೆ ಒಂದು ತೆರನಾದ ಪ್ರೆಷರ್ ಹೇರುವುದು ಇಂತಹ ಎಂಟ್ರಿಯಿಂದಲೇ. ನಾನು ಈ ಮೊದಲು ಅಮೆರಿಕಾದ ಸ್ಪ್ರಿಂಟರ್ ನೋವಾ ಲೈಲ್ಸ್ ಕ್ರೀಡಾಂಗಣ ಪ್ರವೇಶಿಸುವ ಬಗೆಯನ್ನು ಹೇಳಿದ್ದೆ. ವೇಗವಾಗಿ ಓಡಿ ಬಂದು, ಗಾಳಿಯಲ್ಲಿ ಗಿರಕಿ ಹೊಡೆದು, ಎಲ್ಲರ ಗಮನ ಸೆಳೆಯುವ ಈತನ ಕಾನ್ಫಿಡೆನ್ಸ್ ನಮ್ಮೊಳಗೂ ಇರಬೇಕು. ಇನ್ನು ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಬಂದರೆ ಕರೋಲಿನಾ ಮೆರಿನ್ ಹೆಸರನ್ನು ನೀವು ಕೇಳಿರಬಹುದು. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಈಕೆ ತನ್ನ ಆಟದ ವೈಖರಿಯೆಂದಲೇ ಎದುರಾಳಿಯ ಪ್ರಭುತ್ವ ಸಾಧಿಸುತ್ತಾಳೆ. ನಮ್ಮ ಪಿ.ವಿ ಸಿಂಧುವಿನ ಅಪ್ಪಟ ಎದುರಾಳಿಯಾಗಿರುವ ಈಕೆಯ ಆಟವನ್ನು ನೀವೊಮ್ಮೆ ನೋಡಬೇಕು. ಸದಾ ಗಂಭೀರವದನಳಾಗಿದ್ದು, ಗೆದ್ದ ಪ್ರತೀ ಅಂಕವನ್ನು ಜೋರಾಗಿ ಕಿರುಚಿ ಸೆಲೆಬ್ರೇಟ್ ಮಾಡುವ ಮೆರಿನ್‌ಳ ಆಟವನ್ನು ಎಷ್ಟು ಜನ ಹೊಗಳುತ್ತಾರೋ ಅಷ್ಟೇ ಜನ ದ್ವೇಷಿಸುತ್ತಾರೆ ಕೂಡ! + + + +ಬ್ಯಾಡ್ಮಿಂಟನ್‌ನಲ್ಲಿ ಕೆಲವೊಂದು ಶಿಷ್ಟಾಚಾರದ ನಿಯಮಗಳಿವೆ. ಅಂಕವನ್ನು ಗಳಿಸಿದ ನಂತರ ವಿನಾಕಾರಣ ಜೋರಾಗಿ ಕಿರುಚಬಾರದೆಂಬುದು ಅವುಗಳಲ್ಲಿ ಪ್ರಮುಖವಾದದ್ದು. ಎದುರಾಳಿಯ ಏಕಾಗ್ರತೆಗೆ ಭಂಗತರಬಾರದೆಂಬ ಕಾರಣಕ್ಕೆ ಈ ನಿಯಮ. ಮೆರಿನ್ ಹಾಗೂ ಸಿಂಧುವಿನ ನಡುವೆ ನಡೆದ ಒಂದು ಆಟದಲ್ಲಿ, ಇಬ್ಬರೂ ಈ ನಿಯಮ ಮೀರಿ, ರೆಫರಿಯಿಂದ ವಾರ್ನಿಂಗ್ ಪಡೆದುಕೊಂಡಿದ್ದರು. ಮೊದಲ ಎರಡು ಸೆಟ್ಟಿನಲ್ಲಿ ಸಮಬಲದ ಹೋರಾಟ ನಡೆಸಿದ ಇಬ್ಬರೂ ಮೂರನೇ ಸೆಟ್‌ನಲ್ಲಿ ಗೆಲ್ಲಲು ಛಲಬಿಡದೆ ಹೋರಾಡುತ್ತಿದ್ದರು. ಆದರೆ ಮೆರಿನ್ ತನ್ನ ಮೈಂಡ್ ಗೇಮ್‌ನಿಂದ ಪ್ರಾಬಲ್ಯ ಸಾಧಿಸಿ ಗೆದ್ದಿದ್ದು ಈಗ ಇತಿಹಾಸ. ಜೋರಾಗಿ ಕಿರುಚುವುದು, ಅಂಕವನ್ನು ಸೋತ ಎದುರಾಳಿಯು, ಶಟಲ್ ಕಾಕನ್ನು ಅವಳತ್ತ ತಳ್ಳುವ ಮೊದಲೇ ಓಡಿಬಂದು ತನ್ನ ರಾಕೆಟ್‌ನಿಂದ ತನ್ನತ್ತ ಎಳೆದುಕೊಳ್ಳುವುದು… ಅವಳ ಆಟದಲ್ಲಿ ಇವೆಲ್ಲ ಸಾಮಾನ್ಯವಾಗಿ ಕಂಡುಬರುವ ತಂತ್ರಗಳು. + +ಇಂತಿಪ್ಪ ಮೆರಿನ್, 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಚಿನ್ನ ಗೆಲ್ಲುವ ಫೇವರೇಟ್ ಆಗಿದ್ದಳು. ತನ್ನ ಚುರುಕಿನ ಆಟದಿಂದ ಸೆಮಿಫೈನಲ್ ತಲುಪಿ, ಎದುರಾಳಿ ಹೇ ಬಿಂಗ್ಜಿಯಾವ್‌ಳನ್ನು ನೇರ ಸೆಟ್‌ನಿಂದ ಮಣಿಸಿ ಇನ್ನೇನು ಫೈನಲ್ ತಲುಪಬೇಕು… ಆಗ ಸಂಭವಿಸಿತು ನೋಡಿ ಒಂದು ದುರಂತ! ಹೇ ಕೊಟ್ಟ ಸ್ಮಾಷನ್ನು ಹಿಂದಿರಿಗಿಸುವ ಯತ್ನದಲ್ಲಿ ಹಿಂದೆ ಸರಿಯುವಾಗ ಅಕಸ್ಮಾತ್ ಜಾರಿ ಬಿದ್ದ ಮೆರೀನ್‌ಳ ಬಲಗಾಲಿನ ಲಿಗಮೆಂಟ್ ಘಾಸಿಗೊಳ್ಳುತ್ತದೆ. ಮೆರಿನ್ ಜಾರಿ ಬಿದ್ದಾಗ ಎಲ್ಲರಿಗಿಂತ ಮೊದಲು ಆಘಾತಗೊಳಗಾಗಿದ್ದು ಕಾಮೆಂಟರಿ ಮಾಡುತ್ತಿದ್ದಾಕೆಗೆ… ಮೆರಿನ್ ಬಿದ್ದ ಕೂಡಲೇ ಓಹ್ ನೋ ನೋ.. ಎಂದು ಅರಚಿದ್ದನ್ನು ಕೇಳಿಯೇ ವೀಕ್ಷಕರಿಗೆ ಮೆರೀನ್ ಆಟ ಮುಂದುವರೆಸುವುದು ದುಸ್ಸಾಧ್ಯ ಎಂದು ಖಚಿತವಾಗಿತ್ತು. + +(ಹೇ ಬಿಂಗ್ಜಿಯಾವ್‌) + +ಯಶಸ್ವೀ ಕ್ರೀಡಾಪಟುಗಳ ಒಂದು ಪ್ರಮುಖ “ಅಟ್ರಿಬ್ಯೂಟ್” ಏನು ಗೊತ್ತೇ? ಅವರೆಂದಿಗೂ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಬಲಗಾಲಿನ ನೋವನ್ನೂ ಲೆಕ್ಕಿಸದ ಮೆರಿನ್ ಕಾಲಿಗೊಂದು ಕ್ರೇಪ್ ಬ್ಯಾಂಡ್ ಸುತ್ತಿಕೊಂಡು ಮತ್ತೆ ಕಣಕ್ಕಿಳಿದಳು. ಅಂಕಗಳು ಸೋರಿಹೋಗುತ್ತಿದ್ದರೂ ಎದೆಗುಂದದೆ ಆಡುತ್ತಿದ್ದ ಮೆರಿನ್ ಕೆಲವೇ ಘಳಿಗೆಯಲ್ಲಿ ನೋವನ್ನು ತಾಳಲಾರದೆ ಮತ್ತೆ ಕುಸಿದಳು. ಈ ಬಾರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳ ನೋವಿಗೆ ಇಡೀ ಕ್ರೀಡಾಂಗಣ ಮರುಗುತ್ತಿತ್ತು. ಕುಸಿದಲ್ಲೇ ಅಳುತ್ತಿದ್ದ ಮೆರಿನ್‌ಳನ್ನು ತಬ್ಬಿ ಸಮಾಧಾನ ಮಾಡುತ್ತಿದ್ದ ಅವಳ ಕೋಚ್‌ಗೂ ಕೂಡ ತನ್ನ ಕಣ್ಣೀರನ್ನು ತಡೆಹಿಡಿಯಲಾಗಿರಲಿಲ್ಲ. ಎದುರಾಳಿ ಹೇ ಗೆ ತಾನು ಫೈನಲ್ ತಲುಪಿದ್ದಕ್ಕೆ ಖುಷಿಪಡುವುದೋ, ಅಥವಾ ಮೆರಿನ್‌ಳ ಸ್ಥಿತಿಯನ್ನು ನೋಡಿ ಮರುಗುವುದೋ, ಒಂದೂ ತಿಳಿಯದೆ ಮೆರೀನಳ ಬಳಿ ಬಂದು ವಿಷಾದದ ನೋಟ ಬೀರುತ್ತಾ ನಿಂತಿದ್ದಳು. + + + +ಮೆರೀನ್‌ಗೆ ಈ ರೀತಿಯಾಗಿದ್ದು ಅವಳ ಕರ್ಮದ ಫಲ ಎಂದು ಹಲವರು ಕೊಂಕು ನುಡಿದರು. ಅವಳ ಗರ್ವಕ್ಕೆ ಸಿಕ್ಕ ತಕ್ಕ ಗೌರವ ಎಂದು ಎಷ್ಟೋ ಜನ ಅಣಕಿಸಿದರು. ಆದರೆ ಮೆರಿನ್‌ಳ ಇಂಜುರಿಯಿಂದ, ಪುಕ್ಕಟೆಯಾಗಿ ಫೈನಲ್ ತಲುಪಿ ಅಲ್ಲಿ ಬೆಳ್ಳಿ ಗೆದ್ದ ಹೇ ಬಿಂಗ್ಜಿಯಾವ್ ಏನು ಮಾಡಿದಳು ಗೊತ್ತೆ? ಪದಕ ಸಮಾರಂಭದಲ್ಲಿ ಬೆಳ್ಳಿ ಪದಕವನ್ನು ತೊಡಿಸಿಕೊಂಡು ಜೇಬಿನಿಂದ ಸ್ಪೇನ್‌ನ ಸಣ್ಣ ಬಾವುಟದ ಸ್ಟಿಕರ್ ಹೊರತೆಗೆದು ಪದಕದೊಡನೆ ಹಿಡಿದಳು. ಇಡೀ ಕ್ರೀಡಾಂಗಣ ಅವಳ ಕ್ರೀಡಾ ಮನೋಭಾವವನ್ನು ಮೆಚ್ಚಿ ಕರತಾಡನ ಮಾಡಿತು. ಸ್ವತಃ ಚೀನಾದವಳಾದ ಬಿಂಗ್ಜಿಯಾವ್ ಸ್ಪೇನ್‌ನ ಧ್ವಜದ ಸ್ಟಿಕ್ಕರನ್ನು ಹಿಡಿದ್ದಾದರೂ ಏನಕ್ಕೆ ಗೊತ್ತಾ? ಸೆಮಿಫೈನಲಿನಲ್ಲಿ ಗೆಲ್ಲುವ ಪಂದ್ಯವನ್ನು ಗಾಯದ ಸಮಸ್ಯೆಯಿಂದ ಅರ್ಧಕ್ಕೆ ಕೈ ಬಿಟ್ಟ ಮೆರಿನ್ ಸ್ಪೇನ್ ದೇಶದವಳು. ಆ ಪೋಡಿಯಂ ಮೇಲೆ ಮೆರಿನ್ ಇದ್ದರೇನೆ ಶೋಭೆ ಎಂದುಕೊಂಡ ಬಿಂಗ್ಜಿಯಾವ್, ಮೆರಿನ್‌ನ ದೇಶದ ಧ್ವಜವನ್ನು ಸಾಂಕೇತಿಕವಾಗಿ ಹಿಡಿದು ಎಲ್ಲರ ಮನವನ್ನು ಗೆದ್ದಿದ್ದಳು! \ No newline at end of file diff --git a/Kenda Sampige/article_170.txt b/Kenda Sampige/article_170.txt new file mode 100644 index 0000000000000000000000000000000000000000..f138e5977ad89a5ced41dc121678de0a1ea13fab --- /dev/null +++ b/Kenda Sampige/article_170.txt @@ -0,0 +1,35 @@ +ಕವಿತೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಏನೇ ಹೇಳಿದರೂ ಅದು ಉತ್ತರಿಸಿದವನ ಅಪೇಕ್ಷೆ ಮತ್ತು ಮಿತಿಯಷ್ಟೇ ಆಗಿರುತ್ತದೆ. ಆದರೆ ಕವಿತೆ ಹೇಗಿರಬೇಕು ಅನ್ನುವುದು ಅಪೇಕ್ಷೆಯೂ ಹೌದು. ಅದನ್ನು ನಿರ್ಧರಿಸುವುದು ಕೇವಲ ಅಪೇಕ್ಷೆಯಲ್ಲ, ಕವಿತೆಯ ನಿರಂತರ ಓದು. + +ಪ್ರತಿಯೊಂದು ಹೊಸ ಕವಿತೆಯ ಓದಿನ ಮೇಲೂ ನಾವು ಈ ಹಿಂದೆ ಓದಿದ ಮೆಚ್ಚಿದ ಮತ್ತು ನಿರಾಕರಿಸಿದ ಕವಿತೆಯ ಪ್ರಭಾವ ಇದ್ದೇ ಇರುತ್ತದೆ. ನಾವು ಸಾಹಿತ್ಯದ ಯಾವ ಚಳವಳಿಯ ಕಾಲಾವಧಿಯಲ್ಲಿ ಕವಿತೆ ಓದಲು ಆರಂಭಿಸಿದೆವು ಅನ್ನುವುದನ್ನೂ ಅದು ಅವಲಂಬಿಸಿರುತ್ತದೆ. ನವೋದಯದ ಕವಿತೆಗಳಿಂದ ತಮ್ಮ ಕಾವ್ಯಲೋಕ ಕಟ್ಟಿಕೊಂಡವರಿಗೆ, ನವ್ಯೋತ್ತರದ ತನಕವೂ ಅದನ್ನು ಅಷ್ಟೇ ಅಕ್ಕರೆಯಿಂದ ವಿಸ್ತರಿಸಿಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹೊಸ ಕಾಲದ ಕವಿಗಳು ಕೇಳಿಕೊಳ್ಳಬೇಕಾಗುತ್ತದೆ. + +ರಾಜು ಹೆಗಡೆ ಅವರ ಹೊಸ ಕವಿತಾ ಸಂಕಲನ ‘ಕಣ್ಣಿನಲಿ ನಿಂತ ಗಾಳಿ’ ಈ ಎಲ್ಲಾ ಪ್ರಶ್ನೆಗಳನ್ನು ತನ್ನ ಪ್ರಾಂಜಲ ಕಾವ್ಯಗುಣ, ಅಪೂರ್ವ ತಾಜಾತನ ಮತ್ತು ನಿರರ್ಗಳ ಅರ್ಥಪೂರ್ಣತೆಯ ಮೂಲಕ ಎದುರಿಸಿದೆ. + +(ರಾಜು ಹೆಗಡೆ) + +ಕಣ್ಣಿನಲಿ ನಿಂತ ಗಾಳಿ ಎಂಬ ಶೀರ್ಷಿಕೆಯೇ ರಾಜು ಹೆಗಡೆಯವರ ಕವಿತೆಗೆ ರೂಪಕದಂತಿದೆ. ನಮ್ಮ ಸಿದ್ಧಮಾದರಿಯ ಕವಿತೆಗಳನ್ನೂ ಕವಿತೆಯ ಸಿದ್ಧಮಾದರಿಗಳನ್ನೂ ಪಕ್ಕಕ್ಕೆ ತಳ್ಳಿ, ಕವಿಮನಸ್ಸಿಗೆ ಕಂಡ ಚಿತ್ರಗಳನ್ನು ಮಾತ್ರ ಅವರು ನಮ್ಮ ಮುಂದಿಡುತ್ತಾ ಹೋಗುತ್ತಾರೆ. ಪದ್ಯ ಇರುತ್ತದೆ, ಹೇಳುವುದಿಲ್ಲ. ಇವು ಆಗಿಹೋದ ಪದ್ಯಗಳಲ್ಲ, ಆಗುತ್ತಲೇ ಇರುವ ಕವಿತೆಗಳು. ಒಂದೊಂದು ಸಲ ಓದಿದಾಗಲೂ ಒಂದೊಂದು ಸ್ಮೃತಿಯನ್ನೋ ಸಂಹಿತೆಯನ್ನೋ ನಮ್ಮಲ್ಲಿ ಮೂಡಿಸುವ ಈ ಸಂಕಲನದ ಯಾವ ಪದ್ಯವೂ ಸುದೀರ್ಘವಾಗಿಲ್ಲ. ಯಾವ ಕವಿತೆಯೂ ಕವಿ ನಿಲ್ಲಿಸಿದಲ್ಲಿಗೆ ಮುಗಿಯುವುದಿಲ್ಲ. + +ಉದಾಹರಣೆಗೆ ಹಕ್ಕಿಯ ಕುರಿತು ಎಂಬ ಕವಿತೆ ಹಕ್ಕಿಯಂತೆ ಹುಟ್ಟಿ, ಹಕ್ಕಿಯಂತೆಯೇ ಹಾರಿಹೋಗುತ್ತದೆ.ಹಕ್ಕಿಗಳು ವಾಕಿಂಗ್ ಮಾಡುವುದಿಲ್ಲಆಹಾರಕ್ಕಾಗಿ ವಿಹರಿಸುತ್ತವೆಯೋಗ ಗೀಗಕ್ಕೆ ಹೋಗುವುದಿಲ್ಲಎಂದು ಶುರುವಾಗಿ, ಒಂದು ಮಾಯಕದಲ್ಲಿ ಕೊನೆಗೊಳ್ಳುತ್ತದೆಆದರೆ ಹಕ್ಕಿಗಳುಇಲ್ಲವಾಗುವವರೆಗೆಇರುತ್ತವೆ. + +ಇದನ್ನೇ ಅವರು ಕವಿತೆಗೂ ಅನ್ವಯಿಸುತ್ತಾರೆ. ಕವಿತೆಯ ಕುರಿತು ಬರೆಯುತ್ತಾರೆಂದುಕೊಂಡರೆ ರಾಜು ಹೆಗಡೆ ಬದುಕಿನ ಕುರಿತು ಬರೆದಿರುತ್ತಾರೆ. ಇರುವುದು ಇಲ್ಲವಾಗುವುದು ಮತ್ತು ಇಲ್ಲವಾಗುವುದು ಇರುವುದರ ಕುರಿತು ಅವರ ಜಿಜ್ಞಾಸೆ ಎಲ್ಲ ಕವಿತೆಗಳಲ್ಲೂ ಬೇರೆ ಬೇರೆ ರೂಪಗಳಲ್ಲಿ ಪ್ರತ್ಯಕ್ಷವಾಗುತ್ತವೆ. ಹೀಗಾಗಿಯೇ ಈ ಕವಿತೆಗಳಿಗೆ ವಿಶಿಷ್ಟವಾದ ಹೊಳಪೊಂದು ದಕ್ಕಿದೆ. + +ಕೆವಿ ತಿರುಮಲೇಶರ ಕುರಿತ ಒಂದು ಪದ್ಯ ಈ ಸಂಕಲನದಲ್ಲಿದೆ. ಅದು ಕವಿಯ ಕುರಿತು ಹೇಳುತ್ತಲೇ ಅವರ ಪದ್ಯವೊಂದು ಸಾಲಾರ್ ಜಂಗ್ ಮ್ಯೂಸಿಯಮ್ಮಿನಲ್ಲಿ ಕಂಡಂತಾಗುವುದನ್ನೂ ಹೇಳುತ್ತದೆ. ಅಲ್ಲಿಂದಾಚೆ ಪದ್ಯ ಸದ್ಯದಲ್ಲಿ ಕುಣಿದವರು ಸದ್ದಿಲ್ಲದೇ ಎದ್ದು ಹೋದದ್ದನ್ನು ಸೂಚಿಸುತ್ತಾ ಅವಾಕ್ಕಾಗುತ್ತದೆ. + + + +ಒಂದು ವಿಲಕ್ಷಣ ಆವರ್ತನದಲ್ಲಿ ಹುಟ್ಟುವ ಅರ್ಥಗಳನ್ನು ರಾಜು ಹೆಗಡೆ ಶೋಧಿಸುವ ಕ್ರಮ ಈ ಕವಿತೆಗಳ ವಿಶೇಷ. ಹೀಗಾಗಿ ಈ ಪದ್ಯಗಳನ್ನು ಒಮ್ಮೆ ಓದಿ ಪಕ್ಕಕ್ಕಿಡುವಂತಿಲ್ಲ. ಹೆಸರಿಲ್ಲದ ಪದ್ಯವೊಂದುಇದ್ರು ಸೈಬ್ರು ಸತ್ರು ಸೈಬ್ರುಇದ್ರು ಸೈಬ್ರುಸತ್ರು ಸೈಬ್ರುಎಂಬ ಬೀಯಿಂಗಿನಿಂದಇದ್ರು ಸೈಬ್ರು ಕಾಣ್ತಿಲ್ಲಸತ್ರು ಸೈಬ್ರು ಕಾಣ್ತಿಲ್ಲಎಂಬ ನಾನ್ ಬೀಯಿಂಗಿಗೆ ಚಲಿಸುತ್ತಲೇ ಯಾವುದು ಬೀಯಿಂಗ್ ಯಾವುದು ನಾನ್ ಬೀಯಿಂಗ್ ಎಂಬ ಪ್ರಶ್ನೆಯನ್ನು ಥಟ್ಟನೆ ಹುಟ್ಟಿಸಿ ಮೌನವಾಗುತ್ತದೆ. + +ನಾಲ್ಕು ಭಾಗಗಳಲ್ಲಿ ಇಲ್ಲಿಯ ಪದ್ಯಗಳನ್ನು ರಾಜು ಹೆಗಡೆ ವಿಭಾಗಿಸಿದ್ದಾರೆ. ಅವರು ಕವಿಯ ವಿಭಾಗೀಕರಣ ಮಾತ್ರ. ಓದುತ್ತಾ ಹೋದರೆ ನಾಲ್ಕೂ ಭಾಗಗಳೂ ಒಂದೇ ಅನ್ನಿಸುತ್ತಾ ಓದಿಸಿಕೊಳ್ಳುತ್ತವೆ. ಆದರೆ ಅವಕ್ಕಿರುವ ವ್ಯತ್ಯಾಸವೂ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹೊಳೆಯುತ್ತದೆ. ಉದಾಹರಣೆಗೆ ಮೊದಲ ಭಾಗದಯಾವುದು ಕವಿತೆಕವಿತೆಯೆಂದರೆ ಏನುಹೇಗಿರುತ್ತದೆಯಾವುದೂಕವಿತೆಗೆ ಗೊತ್ತಿಲ್ಲಹಾಗೆ ನೋಡಿದರೆಕವಿತೆಯಲ್ಲದಿದ್ದರೆಕವಿತೆಯೇಇರುವುದಿಲ್ಲ! + +ಎರಡನೆಯ ಭಾಗದ-ಕವಿತೆಕೊಡೆಯ ಹಾಗೆಆಗಾಗ,ಕಡ್ಡಿ ಬದಲಾಯಿಬೇಕುಹಿಡಿ ಬೇರೆ ಹಾಕಬೇಕುಕಾವು ಬೇರೆಯಾಗಬೇಕುಅರಿವೆಯನ್ನೂ ಚೇಂಜ್ಮಾಡಬೇಕು…..ಇವೆರಡನ್ನೂ ನಾವು ಒಟ್ಟಿಗೆ ಓದುವುದಿಲ್ಲ. ಮೊದಲ ಕವಿತೆಯನ್ನು ಓದಿ ಮುಂದೆಲ್ಲೋ ಎರಡನೆಯ ಕವಿತೆಯನ್ನು ಪ್ರವೇಶಿಸುವ ಹೊತ್ತಿಗೆ ರಾಜು ಹೆಗಡೆ ಕವಿತೆಗಳ ಕುರಿತೂ ನಮ್ಮ ಅಪೇಕ್ಷೆ ಬದಲಾಗಿರುತ್ತವೆ. ಹಾಗೆ ಬದಲಾದ ಓದುಗನನ್ನು ರಾಜು ಹೆಗಡೆ ನಿರೀಕ್ಷಿಸಿರುತ್ತಾರೆ ಎನ್ನುವುದನ್ನು ಕೂಡ ಅವರು ಕವಿತೆಗಳನ್ನು ಅಳವಡಿಸಿಕೊಂಡ ಕ್ರಮವನ್ನು ಗಮನಿಸಿದರೆ ಹೇಳಬಹುದು. + +(ಜೋಗಿ) + +ಕವಿತೆ ಪ್ರಣಾಳಿಕೆಯೋ ವಾಗ್ವಾದವೋ ಉತ್ತರವೋ ಪ್ರತಿಭಟನೆಯೋ ಆಗಿ ಮೆರೆಯುತ್ತಿರುವ ದಿನಗಳಲ್ಲಿ ರಾಜು ಹೆಗಡೆ ಬರೆಯುತ್ತಿರುವ ಪದ್ಯಗಳಿಗೆ ವಿಶಿಷ್ಟವಾದ ಸ್ಥಾನವಿದೆ ಎಂದು ಹೇಳಲು ಅಂಜಿಕೆಯಾಗುತ್ತದೆ. ನಮ್ಮ ಕಾವ್ಯದ ಓದನ್ನು ರಾಜಕೀಯ ನಿಲುವು, ಸೈದ್ಧಾಂತಿಕತೆ ಮತ್ತು ಸಾಮಾಜಿಕನಿಲುವುಗಳು ನಿರ್ಧರಿಸುವ ಕಾಲ ಇದು. ಶುದ್ಧಕವಿತೆ ಎಂಬ ಮಾತನ್ನು ಗೇಲಿ ಮಾಡಲಾಗುತ್ತದೆ ಮತ್ತು ಶುದ್ಧ ಸಾಹಿತ್ಯವನ್ನು ಅಪರಾಧವೆಂಬಂತೆ ನೋಡಲಾಗುತ್ತಿದೆ. ಯಾವುದಾದರೊಂದು ರಾಜಕೀಯ ಪಕ್ಷದ ಅಘೋಷಿತ ಗೊತ್ತುವಳಿಯಂಥ ಸಾಲುಗಳನ್ನು ಪದ್ಯಗಳೆಂದು ಕರೆಯಲಾಗುತ್ತಿದೆ. + +ನಮ್ಮ ಸಾವಧಾನ ಮತ್ತು ಅವಧಾನವನ್ನು ಉದ್ದಕ್ಕೂ ಬಯಸುವ ಈ ಪದ್ಯಗಳ ಸಂಕಲನದ ಕುರಿತು ಪ್ರೀತಿಯಿಂದ ನಾಲ್ಕು ಮಾತು ಬರೆದಿದ್ದೇನೆ. ರಾಜು ಹೆಗಡೆ ಕವಿತೆಗಳನ್ನು ಒಪ್ಪಿಸುತ್ತಾ ಹೋಗುತ್ತಾರೆ. ಒಪ್ಪಿಗೆಗಾಗಿ ಕಾಯುವುದಿಲ್ಲ. ಅವರ ಕವಿತೆಗಳೂ ಕೂಡ ತಮ್ಮನ್ನು ಪೂರ್ತಿಯಾಗಿ ಒಪ್ಪಿಸಿಕೊಂಡು ಸುಮ್ಮನುಳಿಯುತ್ತವೆ. + +ಕೆವಿ ತಿರುಮಲೇಶರ ಪದ್ಯಗಳ ನಿರಾವಲಂಬ, ಎಸ್ ಮಂಜುನಾಥ್ ಕವಿತೆಗಳ ನಿರ್ಭಾರ ಮತ್ತು ರಾಮು ಕವಿತೆಗಳ ನಿರುಮ್ಮಳ ಈ ಕವಿತೆಗಳಲ್ಲೂ ಬಹಳಷ್ಟು ಕಡೆ ನನಗೆ ಕಾಣಿಸಿದೆ. ಇವರನ್ನೆಲ್ಲ ಓದಿಕೊಂಡ ಕಾವ್ಯಾಸಕ್ತರಿಗೂ ಅದು ಕಂಡೀತು. ಅದು ರಾಜು ಹೆಗಡೆಯವರ ಕಾವ್ಯದ ಗೆಲುವೆಂದೇ ನಾನಂತೂ ಭಾವಿಸುತ್ತೇನೆ. + +ಕಣ್ಣಿನಲಿ ನಿಂತ ಗಾಳಿ ಕವಿತೆಗಳ ಉಸಿರಾಡಲಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_171.txt b/Kenda Sampige/article_171.txt new file mode 100644 index 0000000000000000000000000000000000000000..2735536376016222617fd2fa5cea6f48c1d550bb --- /dev/null +++ b/Kenda Sampige/article_171.txt @@ -0,0 +1,35 @@ +byಕೆಂಡಸಂಪಿಗೆ|Dec 17, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ.ಯೋಗೀಂದ್ರ ಮರವಂತೆ ಪ್ರಬಂಧಗಳ ಸಂಕಲನ “ನನ್ನ ಕಿಟಕಿ”ಗೆ ರಘುನಾಥ ಚ.ಹ. ಬರೆದ ಮುನ್ನುಡಿ + +byನಾಗರೇಖಾ ಗಾಂವಕರ|Dec 16, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ.ವಿವೇಕ ಶಾನಭಾಗ ಬರೆದ “ಸಕೀನಾಳ ಮುತ್ತು” ಕಾದಂಬರಿಯ ಕುರಿತು ನಾಗರೇಖಾ ಗಾಂವಕರ ಬರಹ + +byನಾಗರಾಜ ಎಂ ಹುಡೇದ|Dec 14, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಸಂಕಲನದ ಮೊದಲ ಕಥೆ ‘ಎಗ್ ರೈಸ್ ಮಂತ್ರಿ’ ಹಾಸ್ಯದ ಜೊತೆಗೆ ಎಚ್ಚರವನ್ನೂ ಮೂಡಿಸುತ್ತದೆ. ಶಾಲಾ ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿಯೊಬ್ಬ ಮಂತ್ರಿಯಾಗುವ ಆತುರದಲ್ಲಿ ಪೊಳ್ಳು ಭರವಸೆ ನೀಡಿ, ಗೆದ್ದಮೇಲೆ ಎಗ್ ರೈಸ್ ಕೊಡಿಸಲಾಗದೇ ಇರುವ ಸ್ಥಿತಿ, ಅದನ್ನು ಪಡೆಯಲು ಪ್ರಯತ್ನಿಸುವ ಅವನ ಗೆಳೆಯರು ಮಾಡುವ ಸತತ ಪ್ರಯತ್ನ ಹಾಸ್ಯವನ್ನುಕ್ಕಿಸುತ್ತದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ನಾಗ ‘ನನಗೆ ಅಷ್ಟು ದುಡ್ಡು ಎಲ್ಲಿಂದ ಬರತೈತಿ, ಆಗಲ್ಲ ಬೇಕಾದ್ರ ಶಾಲಿಗೆ ಒಳ್ಳೆ ಕೆಲ್ಸ ಮಾಡ್ತೇನಿ’ ಅಂತ ಹೇಳಿದ್ದು ಅವನ ಪ್ರಾಮಾಣಿಕತೆಯಾದರೆ, ಆಸೆಗೆ ಬಲಿಯಾಗಬೇಡಿ ಎಂಬುದನ್ನೂ ಕಥೆ ಸೂಚ್ಯವಾಗಿ ಹೇಳುತ್ತದೆ.ಗುಂಡುರಾವ್ ದೇಸಾಯಿ ಬರೆದ “ಮಕ್ಕಳೇನು ಸಣ್ಣವರಲ್ಲ” ಮಕ್ಕಳ ಕಥಾ ಸಂಕನದ ಕುರಿತು ನಾಗರಾಜ ಎಂ ಹುಡೇದ ಬರಹ + +byಬಿ.ಕೆ. ಮೀನಾಕ್ಷಿ|Dec 12, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 3 Comments + +ಹಿರೇಕಲ್ಲುಗುಡ್ಡ ಅನೇಕ ವಿಷಯಗಳನ್ನು ಸಾಕ್ಷೀಕರಿಸುವ ಸಾಕ್ಷಾತ್ ಸಾಕ್ಷಿಕಲ್ಲೆಂದರೂ ಆದೀತು. ದೇವಸ್ಥಾನ, ಜೀವವೈವಿಧ್ಯತೆ, ಪಾಳುಬಂಗಲೆ, ಸನ್ಯಾಸಿಗಳ ಆಶ್ರಮತಾಣ, ಮುಕುಂದೂರುಸ್ವಾಮಿಗಳು ಬಂದು ಹೋಗುವ ಸ್ಥಳ, ಹಣದ ವ್ಯಾಮೋಹಕ್ಕೆ ಬಿದ್ದು, ಯಾವುದರ ಬೆಲೆಯನ್ನೂ ಅರಿಯದೆ ಚಿಪ್ಪುಹಂದಿ, ಹಾವುಗಳು ಇನ್ನಿತರ ಪ್ರಾಣಿಗಳನ್ನು ಹಿಡಿದು ಕಳ್ಳಸಾಗಣೆ ಮಾಡುವ ಪೆದ್ದು ಮುಖವಾಡದ ನಿರ್ದಯೀ ಪ್ರವೃತ್ತಿಯ ಕೆಂಚಪ್ಪನ ಕಾರಸ್ಥಾನ…. ಹೀಗೆ ಹಿರೇಕಲ್ಲುಗುಡ್ಡ ಕೆಟ್ಟ ರಾಜಕೀಯ, ಅಧ್ಯಾತ್ಮ, ಐತಿಹ್ಯ, ದುರಾಸೆಗಳ ಪ್ರತೀಕವಾಗಿ ನಿಲ್ಲುತ್ತದೆ.ಶಶಿಧರ ಹಾಲಾಡಿ ಕಾದಂಬರಿ “ಅಬ್ಬೆ” ಕುರಿತು ಬಿ.ಕೆ. ಮೀನಾಕ್ಷಿ ಬರಹ + +byಕೆಂಡಸಂಪಿಗೆ|Dec 9, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ದಾರಿ ಸಾಗುತ್ತಾ ನಾವು ಪೊಲೀಸ್ ಸ್ಟೇಷನ್‌ ಬಳಿ ಬಂದಾಗ “ಅದೋ ಅಲ್ಲಿ ಮುಂದೆ ಬಲಕ್ಕೆ ತಿರುಗಿ ಅಲ್ಲೇ ಮನೆ” ಅಂದೆ. ಡ್ರೈವರ್ “ಒಹ್ ಸಾರ್ ಆ ಜ್ಯೂಸು ಮಾಡ್ತಾರಲ್ಲ ಅವರ ಮನೆಹತ್ರನಾ?” ಅಂತ ಕೇಳಿದ್ದನ್ನು ಕಂಡು ನಾನು ಅವಾಕ್ಕಾದೆ! “ಹೌದು ಅವರೇ ಇವರು, ನಮ್ಮಪ್ಪ!” ಅಂದೆ. ಅವನು ಕೊಂಚ ಸುಮ್ಮನಾದಂತೆ ಕಂಡು ನಂತರ “ಹೌದು ಸಾರ್, ಅದೇ ಅನ್ಕೊಂಡೆ ಈಗ ಒಂದು ೨-೩ ವರ್ಷಗಳಿಂದ ಅಂಗಡಿ ತಗಿತಾ ಇಲ್ವಲ್ಲ ಅಂತ, ಪಾಪ ಸಾರ್” ಅಂದ.ದರ್ಶನ್‌ ಜಯಣ್ಣ ಬರೆದ ಪ್ರಬಂಧಗಳ ಸಂಕಲನ “ಅಪ್ಪನ ರ್ಯಾಲೀಸ್‌ ಸೈಕಲ್‌” ನಿಂದ ಒಂದು ಪ್ರಬಂಧ + +byಕೆಂಡಸಂಪಿಗೆ|Dec 7, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?!ಭಾರತಿ ಬಿ.ವಿ.ಯವರ “ಈ ಪ್ರೀತಿ ಒಂಥರಾ” ಕೃತಿಯ ಒಂದು ಬರಹ ನಿಮ್ಮ ಓದಿಗೆ + +byಪ.ನಾ.ಹಳ್ಳಿ ಹರೀಶ್ ಕುಮಾರ್|Dec 6, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್‌ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್‌ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್‌ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್‌ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆಯೂ ಬರೆಯುತ್ತಾರೆ.ಪ್ರಕಾಶ್ ಕೆ ನಾಡಿಗ್ ಬರೆದ “ನಾ ಕಂಡ ಯೂರೋಪ್ ಖಂಡ” ಪ್ರವಾಸ ಕಥನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ + +byಕೆಂಡಸಂಪಿಗೆ|Dec 3, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು?ಎನ್. ಸಂಧ್ಯಾ‌ ರಾಣಿ ಹೊಸ ಕಾದಂಬರಿ “ಇಷ್ಟುಕಾಲ ಒಟ್ಟಿಗಿದ್ದು” ಯಿಂದ ಆಯ್ದ ಭಾಗ ನಿಮ್ಮ ಓದಿಗೆ + +byಕೆಂಡಸಂಪಿಗೆ|Dec 2, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪೂರ್ಣಿಮಾ ತನ್ನ ಹುಟ್ಟೂರಿನ ನೆಲದ ಮನುಷ್ಯರನ್ನು ಕತೆಯೊಳಗೆ ತಂದಿದ್ದಾರೆ. ಬರಿಯ ಪಾತ್ರಗಳನ್ನಷ್ಟೇ ಅವರು ತಂದಿಲ್ಲ, ಅವರ ಬದುಕಿನ ಎಳೆಗಳನ್ನು ತಂದಿದ್ದಾರೆ. ಕತೆಗಾರ್ತಿ ಮಾಡಬೇಕಾದ ಕೆಲಸವಿದು. ಕತೆಯ ಮೂಲಕ ಬದುಕನ್ನು, ಭ್ರಮೆಗಳನ್ನು, ನಂಬಿಕೆಗಳನ್ನು, ಅವತಾರಗಳನ್ನು, ಆಕಸ್ಮಿಕಗಳನ್ನು, ಅರ್ಥವಂತಿಕೆಯನ್ನು ವಿವರಿಸುತ್ತಾ ಹೋಗುವುದು, ಇಷ್ಟನ್ನೂ ಪೂರ್ಣಿಮಾ ಸರಳವಾಗಿ ಮಾಡಿದ್ದಾರೆ. ಹಾಗಾಗಿ ಈ ಕತೆಗಳು ನಮ್ಮನ್ನು ಸೆಳೆಯುತ್ತವೆ.ಪೂರ್ಣಿಮಾ ಮಾಳಗಿಮನಿ ಬರೆದ “ಡೂಡಲ್‌ ಕಥೆಗಳು” ಕೃತಿಗೆ ಗೋಪಾಲ ಕೃಷ್ಣ ಕುಂಟಿನಿ ಬರೆದ ಮುನ್ನುಡಿ \ No newline at end of file diff --git a/Kenda Sampige/article_172.txt b/Kenda Sampige/article_172.txt new file mode 100644 index 0000000000000000000000000000000000000000..e58f5ace26bbf15a65ade128ba6b694deedfd29c --- /dev/null +++ b/Kenda Sampige/article_172.txt @@ -0,0 +1,69 @@ +ಸಮಯ ಸರಿಯುತ್ತಿದ್ದಂತೆ ಕಪ್ಪಿಟ್ಟಿದ್ದ ಮೋಡಗಳೆಲ್ಲ ಸರಿದು, ಮೋಡದೆಡೆಯಲ್ಲಿ ಬಂಧಿಯಾಗಿದ್ದ ಚಂದಮಾಮ ಬೆಳಕನ್ನು ಸೂಸಲು ಶುರುಮಾಡಿದ್ದ. ತಾರೆಗಳೆಲ್ಲ ಮಿನುಗತೊಡಗಿದ್ದವು. ಬಹು ಸಮಯದಿಂದ ಒಂಟಿಸಲಗವೊಂದು ಘೀಳಿಡುತ್ತಿರುವ ಶಬ್ದ ದೂರದಿಂದ ಕೇಳಿಬರುತ್ತಿರುವುದನ್ನು ಬಿಟ್ಟರೆ ಉಳಿದಂತೆ ಕಾಡುಪ್ರಾಣಿಗಳೆಲ್ಲಾ ಅಂದ್ಯಾಕೋ ಮೌನವಾಗಿರುವಂತೆ ತೋಚುತ್ತಿತ್ತು. ‘ಸಲಗ ಯಾಕೆ ಒಂದೇ ಸಮನೆ ಘೀಳಿಡುತ್ತಿದೆ! ಒಂದು ವೇಳೆ ಅದರ ಜೊತೆಗಾರರು ಎಲ್ಲಾದರು ಕಳೆದುಹೋಗಿದ್ದು, ಅವರ ಹುಡುಕಾಟ ನಡೆಸುತ್ತಿರಬಹುದಾ? ಅಥವಾ ಕಾಡೊಳಗೆ ನರಮನುಷ್ಯರು ಲಗ್ಗೆಯಿಟ್ಟಿದ್ದಾರೆ ಎಂಬ ವಾಸನೆ ಮೂಗಿಗೆ ಬಡಿದು, ಆಕ್ರಮಣ ಮಾಡಲೆಂದೇ ನಮ್ಮ ಜಾಡು ಹಿಡಿದು ಇತ್ತಕಡೆ ಏನಾದರು ಬರುತ್ತಿದೆಯ!’ ಎಂದು ಆ ಆನೆಯ ಆಕ್ರಂದನ ಕೇಳಿ ಪೊನ್ನಪ್ಪನ ಮನಸ್ಸಿಗೆ ಅನ್ನಿಸತೊಡಗಿತು. ಆದರೆ ಇದ್ಯಾವುದರ ಪರಿವೆ ಇಲ್ಲದೇ ಸಿದ್ದಣ್ಣ ಮಾತ್ರ ಕಾಲು ನೀಡಿ ಮೆಲ್ಲನೆ ಗೊರಕೆ ಹೊಡೆಯಲು ಶುರು ಮಾಡಿದ್ದ. ಎಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡು ಕಳ್ಳರಿಗಾಗಿ ಕಾದು ಕುಳಿತಿರುವ ಈ ಸಂದರ್ಭದಲ್ಲೂ, ಅದು ಒಂದು ಮರದ ಮೇಲೆ ಕುಳಿತು ಇವನಿಗೆ ಇಷ್ಟು ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿದೆಯಲ್ಲ! ಎಂದು ಪೊನ್ನಪ್ಪ ಆಶ್ಚರ್ಯಪಟ್ಟುಕೊಂಡು ಮನಸ್ಸಲ್ಲೆ ನಕ್ಕ. + +ಹೊತ್ತು ಕಳೆದಂತೆ ಪೊನ್ನಪ್ಪನ ಹೊಟ್ಟೆ ಕೂಡ ತಾಳ ಹಾಕಲು ಪ್ರಾರಂಭಮಾಡಿತು. ಮೆಲ್ಲನೇ ಶಬ್ದ ಮಾಡದೇ ಕೈಚೀಲದಿಂದ ರೊಟ್ಟಿಯನ್ನು ತೆಗೆದು ಮೆಲ್ಲಲು ಶುರುಮಾಡಿದ. ಸಮಯ ಸುಮಾರು ಹನ್ನೆರಡು ಗಂಟೆಯಾಗಿರಬಹುದು, ಮರಗಳ್ಳರು ಬರುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ. ಸೊಳ್ಳೆ ಕಡಿತ ಮಾತ್ರ ವಿಪರೀತವಾಗಿತ್ತು. ಪೊನ್ನಪ್ಪ ಕುಳಿತಲ್ಲಿಂದಲೆ ಸುತ್ತಲೂ ಕಣ್ಣಾಡಿಸುತ್ತಲಿದ್ದ. ಕಾಡಿನ ಉದ್ದಗಲಕ್ಕೂ ನೀರವಮೌನ ಆವರಿಸಿತ್ತು. ‘ಉಳಿದ ಎರಡು ತಂಡಗಳ ಕಥೆಯೇನೋ, ಅವರು ಎಲ್ಲಿ ಬಚ್ಚಿಟ್ಟುಕೊಂಡಿದ್ದಾರೋ, ಅವರಿಗೆ ಸಮಸ್ಯೆ ಏನಾದರು ಆಗಿರಬಹುದಾ?’ ಎಂಬ ನೂರೆಂಟು ಪ್ರಶ್ನೆಗಳು ಪೊನ್ನಪ್ಪನ ತಲೆಯಲ್ಲಿ ಕಾಡುತ್ತಲೆ ಇದ್ದವು. + +(ನೌಶಾದ್‌ ಜನ್ನತ್ತ್‌) + +ಮಧ್ಯರಾತ್ರಿ ಒಂದೂವರೆ ಘಂಟೆ ಕಳೆಯುತ್ತಾ ಇದ್ದ ಹಾಗೆ, ಪೊನ್ನಪ್ಪನಿಗೆ ನಿದ್ದೆಮಂಕು ಆವರಿಸಲು ಶುರುವಾಯಿತು. ಗಡದ್ದಾಗಿ ತಿಂದು, ಕಾಲು ನೀಡಿ ಲೋಕದ ಪರಿವೇ ಇಲ್ಲದೆ ಗೊರಕೆ ಹೊಡೆಯುತ್ತಿದ್ದ ಸಿದ್ದಣ್ಣನಿಗೆ, ಪೊನ್ನಪ್ಪ ಕಾಲಲ್ಲಿ ಎರಡು ಬಾರಿ ತಿವಿದು ಎಚ್ಚರಿಸಿದ. ಚಕ್ಕನೆ ಎಚ್ಚರಗೊಂಡ ಸಿದ್ದಣ್ಣ, ಮರಗಳ್ಳರು ಬಂದಿದ್ದರಿಂದ ಫಾರೆಸ್ಟರ್ ನನ್ನನ್ನು ಎಬ್ಬಿಸಿರಬಹುದು ಎಂದು ಕಣ್ಣು ಬಿಟ್ಟವನೇ ಗಾಬರಿಯಿಂದ ಸುತ್ತಲೂ ನೋಡತೊಡಗಿದ. ಪೊನ್ನಪ್ಪ ಮೆಲ್ಲನೆ ಅವನ ಕೈಯನ್ನು ಅದುಮಿ, “ಏನೂ ಇಲ್ಲ, ಆತಂಕ ಪಡಬೇಡ, ನಾನು ಸ್ವಲ್ಪಹೊತ್ತು ಮಲಗುತ್ತೇನೆ. ಯಾರಾದರೂ ಬಂದ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸು” ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ. + +“ಆಯ್ತು ಸರ್” ಎಂದ ಸಿದ್ದಣ್ಣ, ತೇಗದ ನಾಟಾ ಜೋಡಿಸಿದ್ದ ಕಡೆಗೆ ದೃಷ್ಟಿ ಹಾಯಿಸುತ್ತಾ ಕುಳಿತ. ಮರದ ಮೇಲೆ ಕುಳಿತು ಪಹರೆ ಶುರುಮಾಡಿದ ಸುಮಾರು ಆರೇಳು ಗಂಟೆಗಳಿಂದಲೂ ಒಂದೇ ಭಂಗಿಯಲ್ಲಿ ಕುಳಿತಿದ್ದ ಪೊನ್ನಪ್ಪನಿಗೆ ಕಾಲು ಮರಗಟ್ಟಿದಂತಾಗಿತ್ತು. ಕಾಲು ನೀಡಿ, ಹಾಗೆ ಬೆನ್ನೊರಗಿಸಿ ಕಣ್ಣು ಮುಚ್ಚಿದ. ತುಂಬಾ ಆಯಾಸವಾಗಿದ್ದರಿಂದಲೋ ಏನೋ, ಕಣ್ಣು ಮುಚ್ಚಿದ ಕ್ಷಣಾರ್ಧದಲ್ಲಿ ನಿದ್ದೆಯ ಮಂಪರು ಆವರಿಸಿಬಿಟ್ಟಿತು. ಸಿದ್ದಣ್ಣನಿಗೆ ಒಂದು ಬೀಡಿ ಸೇದಬೇಕು ಎಂದು ಮನಸೆಳೆಯುತ್ತಿತ್ತು. ಆದರೆ ಹೊಗೆಯ ವಾಸನೆಯಿಂದಾಗಿ ಮರಗಳ್ಳರಿಗೆ ತಾವು ಕಾವಲು ಕಾಯುತ್ತಿರುವುದು ಗೊತ್ತಾಗಿ ಬಿಡಬಹುದು ಮತ್ತು ಪೊನ್ನಪ್ಪನವರ ಬೈಗಳ ತಿನ್ನಬೇಕಾಗುತ್ತದೆ ಎಂಬ ಭಯದಿಂದ ತನ್ನ ಬೀಡಿ ಚಟವನ್ನು ನಿಯಂತ್ರಿಸಿಕೊಂಡು ಹಾಗೇ ಕುಳಿತಿದ್ದ. + +ತುಸು ಹೊತ್ತಿನ ಬಳಿಕ ‘ಚರ್ರ್ ಪರ್ರ್’ ಎಂದು ಹುಣ್ಣಿಗುತ್ತಿಗಳನ್ನು ಸರಿಸಿ, ಯಾರೋ ತಮ್ಮತ್ತ ನಡೆದು ಬರುತ್ತಿರುವ ಶಬ್ದ ಕೇಳಿಸತೊಡಗಿತು. ಸಿದ್ದಣ್ಣ ಭಯದಿಂದ ಶಬ್ದ ಕೇಳಿ ಬರುತ್ತಿದ್ದ ದಿಕ್ಕಿನ ಕಡೆಗೆ ದಿಟ್ಟಿಸಿ ನೋಡತೊಡಗಿದ. ದೂರದಿಂದ ಭಾರವಾದ ಹೆಜ್ಜೆಗಳನ್ನಿಡುತ್ತಾ ತಮ್ಮತ್ತ ಯಾರೋ ಬರುತ್ತಿದ್ದಾರೆ. ಆದರೆ ಈ ಕಗ್ಗತ್ತಲಿನಲ್ಲಿ ಯಾವುದೂ ಸ್ಪಷ್ಟವಾಗಿ ಸಿದ್ದಣ್ಣನಿಗೆ ಕಾಣುತ್ತಿಲ್ಲ. ಪೊನ್ನಪ್ಪನನ್ನು ಎಬ್ಬಿಸಬೇಕು ಅನ್ನುವಷ್ಟರಲ್ಲಿ ಮತ್ತೆ ನಿಶ್ಶಬ್ದ! + +ಸಿದ್ದಣ್ಣ ಸೂಕ್ಷ್ಮವಾಗಿ ಕಿವಿಗೊಟ್ಟು ಕೇಳತೊಡಗಿದ. ಬಿದಿರು ಮೆಳೆಗಳು ‘ಕರ್ರ್ ಕರ್ರ್’ ಎಂದು ಒರೆಸಿಕೊಳ್ಳುವ ಶಬ್ದವನ್ನು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ. ಒಂದು ವೇಳೆ ನನಗೆ ಹಾಗೆ ಅನ್ನಿಸಿದ್ದಾ! ಎಂದು ತನ್ನನ್ನು ತಾನೆ ಪ್ರಶ್ನೆ ಮಾಡಿಕೊಂಡ. ಅಷ್ಟರಲ್ಲಿ ದಡೂತಿ ದೇಹದ ಮೂರು ನಾಲ್ಕು ಜನ ಏಕಕಾಲದಲ್ಲಿ, ಒಂದೇ ರೀತಿಯಲ್ಲಿ ಶಿಸ್ತಾಗಿ ಹೆಜ್ಜೆ ಹಾಕುತ್ತ, ತಮ್ಮತ್ತ ಬರುತ್ತಿರುವಂತೆ ಮತ್ತೆ ಶಬ್ದ ಕೇಳಿಬರತೊಡಗಿತು. ಯಾವುದಕ್ಕೂ ಒಮ್ಮೆ ಖಾತರಿಪಡಿಸಿಕೊಂಡ ನಂತರವೇ ಫಾರೆಸ್ಟರ್ ಅವರನ್ನು ಎಬ್ಬಿಸಿದರೆ ಸಾಕು ಎಂದು ಶಬ್ದ ಕೇಳಿಬರುತ್ತಿದ್ದ ದಿಕ್ಕಿನೆಡೆಗೆ ನೋಡುತ್ತಾ ಕುಳಿತ. + +ಒಂದತ್ತು ನಿಮಿಷ ಕಳೆದಿರಬಹುದು. ‘ಬುಸ್ ಬುಸ್’ ಎನ್ನುತ್ತಾ, ತಾವು ಕುಳಿತಿದ್ದ ಹೊನ್ನೆ ಮರದೆಡೆಗೆ ಕಪ್ಪಗಿನ ದೈತ್ಯಾಕೃತಿಯೊಂದು ನಡೆದು ಬರುತ್ತಿತ್ತು. ಕಾಡಿನಲ್ಲೆ ಓಡಾಡಿಕೊಂಡಿದ್ದ ಸಿದ್ದಣ್ಣನಿಗೆ ಬಳಿ ಬರುತ್ತಿರುವುದು ಯಾರೆಂದು ಕ್ಷಣಮಾತ್ರದಲ್ಲಿ ಖಾತರಿಯಾಯಿತು. ಹೌದು! ‘ತಾಸುಗಳ ಮೊದಲು ಅಲ್ಲೆಲ್ಲೋ ದೂರದಲ್ಲಿ ಘೀಳಿಡುತ್ತಿದ್ದ ಒಂಟಿಸಲಗವೇ ಈಗ ನಮ್ಮತ್ತ ಬರುತ್ತಿರುವುದು’ ಆ ಕಗ್ಗತ್ತಲಿನಲ್ಲೂ ಮೇಲಿಂದ ಸೂಸುತ್ತಿದ್ದ ಚಂದಿರನ ಬೆಳಕಿನಲ್ಲಿ ಸಲಗದ ಚೂಪಾದ ಎರಡು ಉದ್ದನೆಯ ಕೊಂಬುಗಳು ನಳನಳಿಸುತ್ತಿದ್ದವು. ನಾವು ಮರದ ಮೇಲೆ ಕುಳಿತಿರುವುದನ್ನೇನಾದ್ರೂ ಆನೆ ನೋಡಿದ್ದರೆ ಅಥವಾ ಅದಕ್ಕೆ ಸಂಶಯ ಮೂಡಿದ್ದರೆ, ಸಲಗ ಮರಕ್ಕೆ ಗುದ್ದಿ, ನಮ್ಮನ್ನು ಕೆಳಕ್ಕೆ ಬೀಳಿಸಿ, ನಮ್ಮ ಮೇಲೆ ಆಕ್ರಮಣ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭಯಗೊಂಡು, ಆನೆ ಹತ್ತಿರತ್ತಿರ ತಲುಪಿದರೂ ಪೊನ್ನಪ್ಪನನ್ನು ಕರೆಯುವುದನ್ನು ಮರೆತ ಸಿದ್ದಣ್ಣ ಭಯದಿಂದ ಅದನ್ನೆ ದಿಟ್ಟಿಸುತ್ತಾ ಕುಳಿತ. + +ಹೊನ್ನೆ ಮರದ ಬುಡಕ್ಕೆ ಬಂದ ಒಂಟಿಸಲಗ, ಇಲ್ಲಿ ಯಾರೋ ಇದ್ದಾರೆ ಎಂಬ ಸಂಶಯ ಮೂಡಿದಂತೆ ಸುತ್ತಲೂ ಒಮ್ಮೆ ಕಣ್ಣಾಡಿಸಿತು. ನಂತರ ಮರಕ್ಕೆ ಒಂದು ಸುತ್ತು ಬಂದು ಯಾರೂ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಮರಕ್ಕೊರಗಿತು. ಅದಾಗಲೇ ಎಲ್ಲೊ ಕೆಸರಲ್ಲಿ ಮುಳುಗಿ ಎದ್ದು ಬಂದಿದ್ದ ಆ ಸಲಗ ಮೈಯ್ಯಲ್ಲಾಗುತ್ತಿದ್ದ ತುರಿಕೆಗಳನ್ನು ಸಹಿಸಿಕೊಳ್ಳಲಾಗದೇ ಬೃಹದ್ದಾಗಿ ಬೆಳೆದಿದ್ದ ಆ ಹೊನ್ನೆಮರಕ್ಕೆ ತನ್ನ ಮೈಯನ್ನು ಮೆಲ್ಲನೆ ಒರೆಸಿ, ತುರಿಕೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿತ್ತು. ಆನೆ ತನ್ನೆಲ್ಲಾ ಬಲವನ್ನು ಪ್ರಯೋಗಿಸಿ, ಮರಕ್ಕೆ ಮೈಯ ಚರ್ಮವನ್ನು ಒರೆಸಿಕೊಳ್ಳುತ್ತಿದ್ದರೆ, ಹೊನ್ನೆ ಮರ ಅತ್ತಿಂದಿತ್ತ ಅಲುಗಾಡಲು ಪ್ರಾರಂಭವಾಯಿತು. + +ನಿದ್ದೆಯಲ್ಲಿದ್ದ ಪೊನ್ನಪ್ಪನಿಗೆ ಯಾಕೋ ಗಾಳಿಯಲ್ಲಿ ತೇಲುತ್ತಾ, ಅಲುಗಾಡಿದ ಅನುಭವವಾಗತೊಡಗಿತು. ಎಚ್ಚರಗೊಂಡ ಪೊನ್ನಪ್ಪ, ದೇಹವನ್ನು ಅಲುಗಾಡಿಸದೇ, ಹಾಗೆಯೇ ಕಣ್ಣುಬಿಟ್ಟು ಸುತ್ತಲೂ ಕಿವಿಗೊಡತೊಡಗಿದ. ನಾವು ಕುಳಿತ ಮರದ ಬುಡದಲ್ಲಿ ‘ಸರ್ರ್ ಸರ್ರ್’ ಎಂದು ಶಬ್ದ ಕೇಳಿಬರುವುದರ ಜೊತೆಗೆ ಮರ ಮೆಲ್ಲನೇ ಅಲುಗಾಡುತ್ತಿದೆ ಎಂಬುದು ಅವನಿಗೆ ಖಾತರಿಯಾಯಿತು. ಒಂದು ವೇಳೆ ಮರಗಳ್ಳರೇನಾದ್ರೂ ಬಂದು, ತಾವು ಕುಳಿತ ಮರಕ್ಕೆ ಗರಗಸ ಹಾಕಲು ಪ್ರಾರಂಭಮಾಡಿಬಿಟ್ಟರಾ! ಎಂದು ಸಂಶಯ ಮೂಡಿ, ಸಿದ್ದಣ್ಣನ ಕಡೆಗೆ ನೋಡಿದ. + +ಒಂದು ಬದಿಯಲ್ಲಿ ಕುಳಿತಿದ್ದ ಸಿದ್ದಣ್ಣ. ಮರ ಅಲುಗಾಡಿದಂತೆ ತಾನು ಕೂಡ ಹಿಂದೆಮುಂದೆ ವಾಲುತ್ತಾ, ಕತ್ತು ಬಗ್ಗಿಸಿ ಕೆಳಭಾಗಕ್ಕೆ ತದೇಕಚಿತ್ತದಿಂದ ನೋಡುತ್ತಿದ್ದ. ತಲೆಯ ಬದಿಯಲ್ಲಿ ಇಟ್ಟಿದ್ದ ಜೋಡಿ ನಳಿಕೆಯ ಕೋವಿಯನ್ನು ಕ್ಷಣಮಾತ್ರದಲ್ಲಿ ಕೈಗೆತ್ತಿಕೊಂಡ ಪೊನ್ನಪ್ಪ, ಕೋವಿಯ ನಳಿಕೆಯಿಂದ ಸಿದ್ದಣ್ಣನ ಬೆನ್ನಿಗೆ ತಿವಿದ, ಮರದ ಕೆಳಬದಿಯಲ್ಲಿ ಸಲಗದ ಕೀಟಲೆಯನ್ನು ನೋಡುತ್ತಾ ಕುಳಿತಿದ್ದ ಸಿದ್ದಣ್ಣನಿಗೆ ಹಿಂಬದಿಯಿಂದ ಯಾರೋ ಚುಚ್ಚಿದ ಅನುಭವ ಆದ ತಕ್ಷಣ ಒಮ್ಮೆಲೆ ಬೆಚ್ಚಿ ತಿರುಗಿ ನೋಡಿದ. ಕುಳಿತಲ್ಲಿಂದಲೇ ಕೋವಿಯನ್ನು ಭುಜಕ್ಕೊರಗಿಸಲು ಸಿದ್ಧವಾಗುತ್ತಿದ್ದ ಪೊನ್ನಪ್ಪನ ಕಣ್ಣುಗಳು ಆ ಕಗ್ಗತ್ತಲಿನಲ್ಲೂ ಕೆಂಡದಂತೆ ಹೊಳೆಯುತ್ತಿದ್ದವು. + +ಪೊನ್ನಪ್ಪ, ‘ಕಳ್ಳರೇನಾದರೂ ಬಂದರಾ?’ ಎಂದು ಸಿದ್ದಣ್ಣನೆಡೆಗೆ ಕಣ್ಸನ್ನೆ ಮಾಡಿದ. ಸಿದ್ದಣ್ಣ ‘ಸಾ.. ಸಾ..’ ಎಂದು ಭಯದಿಂದ ತೊದಲತೊಡಗಿದ. “ಏನೋ ಹೇಳ್ತಾ ಇದ್ದೀಯಾ ನೀನು?” ಎಂದು ಪೊನ್ನಪ್ಪ ಮೆಲ್ಲನೆ ಪಿಸುಗುಟ್ಟಿದ. ಸಿದ್ದಣ್ಣ, ಮತ್ತೆ ‘ಆ.. ಆ..’ ಎಂದು ಕೆಳಗೆ ಕೈ ತೋರಿಸುತ್ತಿದ್ದನೆ ಹೊರತು ಅವನ ಬಾಯಿಂದ ಸ್ಪಷ್ಟವಾಗಿ ಮಾತುಗಳು ಹೊರಬರುತ್ತಿರಲಿಲ್ಲ. ಅವನು ಏನು ಹೇಳುತ್ತಿದ್ದಾನೆ ಎಂದು ಅರ್ಥವಾಗದ ಪೊನ್ನಪ್ಪ, ಬಂದೂಕನ್ನು ಕೆಳಭಾಗಕ್ಕೆ ಗುರಿಮಾಡಿ ದಿಟ್ಟಿಸಿ ನೋಡಿದರೆ, ದೈತ್ಯಕಾರದ ಒಂಟಿಸಲಗವೊಂದು ಹೊನ್ನೆಮರದ ಬುಡಕ್ಕೆ ತನ್ನ ಮೈ ಒರೆಸಿಕೊಂಡು ಪ್ರಪಂಚದ ಶ್ರೇಷ್ಠ ಸುಖಗಳಲ್ಲಿ ಒಂದಾದ ತುರಿಕೆಯನ್ನು ಆಸ್ವಾದಿಸುತ್ತಿತ್ತು. ಪೊನ್ನಪ್ಪ ತನ್ನ ಗುರಿ ಬದಲಿಸದೆ ಹಾಗೆಯೇ ಬಾಗಿ ಕುಳಿತ. ಒಂದು ವೇಳೆ ನಾವು ಮರದ ಮೇಲೆ ಕುಳಿತಿರುವುದನ್ನು ಏನಾದರೂ ಆನೆ ಗಮನಿಸಿದ್ದರೆ, ಈ ವೇಳೆಗಾಗಲೇ ಮರಕ್ಕೆ ಗುದ್ದಿ, ನಮ್ಮನ್ನು ಕೆಳಕ್ಕೆ ಬೀಳಿಸಿ ಆಕ್ರಮಣ ಮಾಡಿಯಾಗಿರುತ್ತಿತ್ತು. ಅದು ನಮ್ಮನ್ನು ನೋಡದಿರುವುದರಿಂದಲೇ ಇನ್ನೂ ಕೂಡ ಮೈಮರೆತು ತನ್ನ ತುಂಟಾಟಗಳನ್ನು ಮುಂದುವರೆಸುತ್ತಾ ಅಲ್ಲಿಯೇ ನಿಂತಿದೆ ಎಂದು ಪೊನ್ನಪ್ಪನಿಗೆ ಅನಿಸಿತು. + +ಭಯದಿಂದ ಸಿದ್ದಣ್ಣನ ಕೈಕಾಲುಗಳು ಅದುರುತ್ತಿರುವುದನ್ನು ಕಂಡ ಪೊನ್ನಪ್ಪ, ‘ಭಯಪಡಬೇಡ ಏನು ಆಗಲ್ಲ’ ಎಂದು ಸಿದ್ದಣ್ಣನ ಕೈಯನ್ನು ಅದುಮಿದ. ಅವನ ಕೈ ನಡುಗುತ್ತಲೇ ಇತ್ತು. ಒಂದರ್ಧ ಗಂಟೆ ಕಳೆದ ನಂತರದಲ್ಲಿ ಆನೆ, ಹೊನ್ನೆ ಮರವನ್ನು ಬಿಟ್ಟು ಮುಂದಕ್ಕೆ ಹೆಜ್ಜೆಹಾಕತೊಡಗಿತು. ಆನೆ ಒಂದು ವೇಳೆ ಉಳಿದ ತಂಡಗಳು ಕುಳಿತಿರುವ ಜಾಗಕ್ಕೆ ಹೋಗಿ ಏನಾದ್ರು ದಾಂಧಲೆ ಮಾಡಿಬಿಡಬಹುದೇನೋ ಎಂದು ಪೊನ್ನಪ್ಪನಿಗೆ ಮತ್ತೆ ಆತಂಕ ಶುರುವಾಯಿತು. ಬಹುಶಃ ಅವರು ಮರದ ಮೇಲೆ ಅಟ್ಟಣೆ ಕಟ್ಟದೆ, ನೆಲದ ಮೇಲೆ ಕುಳಿತಿದ್ದರೆ ಈ ಒಂಟಿಸಲಗದ ಕಣ್ಣಿಗೆ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆನೆ ಹೋಗುವ ದಾರಿಯಲ್ಲಿ ಅಡ್ಡಲಾಗಿ ನಮ್ಮ ತಂಡದವರು ಸಶ್ತ್ರಸಜ್ಜಿತರಾಗಿ ಕುಳಿತಿರುವುದನ್ನು ಅದು ಗಮನಿಸಿದರೆ, ಅವರ ಮೇಲೆರಗುವುದಂತು ನಿಚ್ಚಳ! ಎಂದು ಪೊನ್ನಪ್ಪ ಯೋಚಿಸುತ್ತಿರುವಾಗಲೇ ಆನೆ, ತೇಗದ ನಾಟಾಗಳನ್ನು ಜೋಡಿಸಿ, ಮುಳ್ಳುಬಳ್ಳಿಗಳಿಂದ ಮುಚ್ಚಿದ್ದ ಪ್ರದೇಶಕ್ಕೆ ತಲುಪಿತು. + +ತಾನು ಸಾಧಾರಣವಾಗಿ ಓಡಾಡುವ ಈ ಜಾಗದಲ್ಲಿ, ಹಿಂದೆಂದೂ ಈ ರೀತಿಯ ಒಂದು ಅನಧಿಕೃತ ಪೊದೆಯನ್ನು ನಾನು ನೋಡಿರಲಿಲ್ಲವಲ್ಲ! ಎಂದು ಅನುಮಾನಗೊಂಡ ಒಂಟಿಸಲಗ ಕೋಪದಿಂದ ‘ಬುಸ್ ಬುಸ್’ ಎನ್ನುತ್ತಾ ಅದರ ಸುತ್ತಲು ಓಡಾಡತೊಡಗಿತು. ಒಂದ್ಹತ್ತು ನಿಮಿಷಗಳ ನಂತರ, ಆ ಜಾಗದಲ್ಲಿ ಕೃತಕವಾದ ಪೊದೆಯೊಂದನ್ನು ನಿರ್ಮಿಸಿ, ತನ್ನ ಮೇಲೆರಗಲು ಯಾರೋ ಸಂಚು ಮಾಡುತ್ತಿದ್ದಾರೆ ಎಂಬ ಸಂಶಯ ಅದಕ್ಕೆ ಕಾಡಿತೊ ಏನೋ! ಕೆಲಹೊತ್ತು ಅಲುಗಾಡದೇ ಆ ಪೊದೆಯನ್ನೆ ದಿಟ್ಟಿಸುತ್ತಾ ನಿಂತಲ್ಲಿಯೇ ನಿಂತಿತು. + +ಮರದ ಮೇಲೆ ಕುಳಿತಿದ್ದ ಪೊನ್ನಪ್ಪ ಮತ್ತು ಸಿದ್ದಣ್ಣನಿಗೆ, ಮರಗಳ್ಳರು ಜೋಡಿಸಿದ್ದ ತೇಗದ ದಿಮ್ಮಿಗಳ ಬಳಿ ಮಿಸುಕಾಡದೇ ನಿಂತು, ಕಿವಿನಿಮಿರಿಸಿ ಸುತ್ತಲೂ ಯಾರಾದರೂ ಇದ್ದಾರಾ ಎಂದು ಆಲಿಸುತ್ತಿರುವ, ಒಂಟಿಸಲಗದ ಕರ್ರಗಿನ ನೆರಳಿನ ಆಕೃತಿ ತಿಂಗಳ ಬೆಳಕಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ಆನೆ ಸಾಮಾನ್ಯದ್ದಲ್ಲ! ಬದಲಿಗೆ, ಅದು ಬಲು ಬುದ್ಧಿವಂತ ಪುಂಡ ಆನೆ ಎಂಬುದು ಪೊನ್ನಪ್ಪನಿಗೆ ಅರಿವಾಯಿತು, ಕಾರಣ, ಅದೆಷ್ಟು ನಿಶ್ಶಬ್ದವಾಗಿ ನಿಂತು, ಸುತ್ತಲೂ ಕಿವಿಗೊಡುತ್ತಿತ್ತು ಅಂದರೆ, ಅಲ್ಲೊಂದು ಪ್ರಾಣಿ ನಿಂತಿದೆ ಎನ್ನುವುದು ಕೂಡ ಯಾರಿಗೂ ಅನುಮಾನ ಬರದಿರುವಷ್ಟರ ಮಟ್ಟಿಗೆ ಶಬ್ದ ಮಾಡದೆ ನಿಂತಿತ್ತು. ಇದರ ಜೊತೆಗೆ ಸುಮಾರು ಒಂದು ತಾಸಿನಿಂದ ಆನೆಯ ಉಪಟಳವನ್ನು ಗಮನಿಸುತ್ತಿದ್ದ ಸಿದ್ದಣ್ಣನಂತೂ ಭಯದಿಂದ ಅವನು ಬಿಡುತ್ತಿರುವ ಉಸಿರಿನ ಶಬ್ದ ಅವನಿಗೆ ಕೇಳಿಸದಿರುವಷ್ಟರ ಮಟ್ಟಿಗೆ ಶಾಂತವಾಗಿ ಬಿಟ್ಟಿದ್ದ. + +ಕೆಲಹೊತ್ತು ಮೌನವಾಗಿ ತೇಗದ ದಿಮ್ಮಿಗಳ ಬಳಿ ನಿಂತಿದ್ದ ಸಲಗಕ್ಕೆ ತನ್ನ ಸೂಕ್ಷ್ಮ ಗ್ರಹಿಕೆಯ ಶಕ್ತಿಯ ಮೂಲಕ ತನ್ನನ್ನು ಮುಖಾಮುಖಿ ಎದುರಿಸಲಾಗದೇ, ಅಲ್ಲೆಲ್ಲೋ ದೂರದಲ್ಲಿ ಹೊಂಚುಹಾಕಿ ಕುಳಿತಿರುವ ನರಮನುಷ್ಯರು ನನ್ನನ್ನೆ ದಿಟ್ಟಿಸುತ್ತಿರುವ ರೀತಿಯಲ್ಲಿ ಭಾಸವಾಗತೊಡಗುತ್ತಿದ್ದಂತೆ ಕೋಪದಿಂದ ಮುಂಬದಿಯ ತನ್ನೆರಡು ಪಾದಗಳನ್ನು ಸ್ವಲ್ಪ ಮೇಲೆಕೆತ್ತಿ, ಕಾಡೆ ನಡುಗಿ ಹೋಗುವಂತೆ ಭಯಂಕರ ಶಬ್ದದೊಂದಿಗೆ ಘೀಳಿಡಲು ಪ್ರಾರಂಭ ಮಾಡಿತು. ಅಷ್ಟುಹೊತ್ತು, ಕಾಡೊಳಗಡೆ ನರಮನುಷ್ಯರು ಬೇಟೆಗಾಗಿ ಕಾದುಕುಳಿತಿದ್ದ ವಾಸನೆ ಮೂಗಿಗೆ ಬಡಿದು, ಆತಂಕದಿಂದ ತೆಪ್ಪಗೆ ಕುಳಿತಿದ್ದ ಪ್ರಾಣಿಗಳೆಲ್ಲ ಆನೆಯ ಆಕ್ರಂದನವನ್ನು ಕೇಳಿದ್ದೆ ತಡ ಒಮ್ಮೆಲೆ ವಿಚಿತ್ರವಾಗಿ ಕಿರುಚಲು ಪ್ರಾರಂಭಮಾಡಿದವು. + +ಅಲ್ಲೆ ಪಕ್ಕದ ಪೊದೆಯೊಳಗೆ ಅವಿತು ಕುಳಿತಿದ್ದ ಗುಳ್ಳೆನರಿಯೊಂದು ಕೂಗುತ್ತಾ ಕಾಡಿನ ಉಳಿದ ಪ್ರಾಣಿಗಳಿಗೆ ಅಪಾಯದ ಮುನ್ಸೂಚನೆ ನೀಡುತ್ತಾ, ಹೊನ್ನೆಮರದ ಪಕ್ಕದಿಂದ ಓಡಿ ಕತ್ತಲಲ್ಲಿ ಕಣ್ಮರೆಯಾಯಿತು. ಒಂದಷ್ಟು ನಿಮಿಷಗಳಿಗೆ ಮೊದಲು ಮೌನವಾಗಿದ್ದ ಕಾಡು, ಪ್ರಾಣಿಗಳ ವಿಚಿತ್ರ ಕೂಗಿನೊಂದಿಗೆ ಎಚ್ಚೆತ್ತುಕೊಂಡು ಕ್ಷಣಮಾತ್ರದಲ್ಲಿ ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿಮಾಡಿತು. ಒಂಟಿಸಲಗ ಮಾತ್ರ ಗುಟುರು ಹಾಕುತ್ತಾ ಮದವೇರಿದಂತೆ ದಿಮ್ಮಿಯ ಸುತ್ತಲು ಓಡಾಡುತ್ತಲೇ ಇತ್ತು. + + + +ಇತ್ತ ಪೊನ್ನಪ್ಪನನ್ನು ಹೊರತುಪಡಿಸಿ, ಮರವೇರಿದ್ದ ಮತ್ತೊಂದು ತಂಡ ಎಚ್ಚರದಿಂದ ಮಧ್ಯರಾತ್ರಿಯವರೆಗೂ ಪಹರೆಗೆ ಕುಳಿತಿದ್ದು, ಒಂದು ಗಂಟೆಯ ನಂತರ ಇನ್ನು ಕಳ್ಳರು ಬರುವುದು ಸಂಶಯ ಎಂದು ಮನಗಂಡು ಒಬ್ಬ ನಿದ್ರೆಗೆ ಜಾರಿದರೆ, ಮತ್ತೊಬ್ಬ ತನ್ನ ಕಾವಲಿನ ಭಾಗವಾಗಿ ಕಣ್ಣರಳಿಸಿ, ಕಾಡಿನ ಧ್ವನಿಗಳಿಗೆ ಕಿವಿಗೊಟ್ಟು ಕುಳಿತಿದ್ದ. ನೆಲದ ಮೇಲೆ ಕುಳಿತಿದ್ದ ಮತ್ತೊಂದು ತಂಡ ಕೂಡ ಎಚ್ಚರವಾಗಿಯೇ ಇತ್ತು. ಹೀಗಿರುವಾಗ ಒಂಟಿಸಲಗ ಬಂದು ಪೊನ್ನಪ್ಪನವರು ಕುಳಿತಿದ್ದ ಹೊನ್ನೆಮರಕ್ಕೆ ‘ಸರ್ರ್ ಸರ್ರ್’ ಎಂದು ಮೈಯೊರೆಸಿಕೊಳ್ಳಲು ಶುರುಮಾಡಿದಾಗ ಎಲ್ಲರೂ ಎಚ್ಚರಗೊಂಡು, ಪೊನ್ನಪ್ಪ ಊಹಿಸಿದಂತೆಯೇ, ಕಳ್ಳರು ಅಕ್ಕಪಕ್ಕದಲ್ಲೆಲ್ಲೋ ಗರಗಸದಿಂದ ಮರ ಕುಯ್ಯಲು ಯತ್ನಿಸುತ್ತಿದ್ದಾರೆ ಎಂದು ತಿಳಿದು, ಕಳ್ಳರನ್ನು ಕಣ್ಣಾರೆ ಕಂಡ ಉಳಿದ ತಂಡದವರ್ಯಾರಾದರೂ ಮಂಗಗಳಂತೆ ಧ್ವನಿ ಹೊರಡಿಸಿ ಸಂದೇಶ ನೀಡಿದರೆ, ಮುನ್ನುಗ್ಗಿ ಕಳ್ಳರನ್ನು ಕೈಯಾರೆ ಹಿಡಿಯಬೇಕು ಎಂದು ಕಿವಿನಿಮಿರಿಸಿ ಕಾಯುತ್ತಾ ಕುಳಿತರು. + +ಆದರೆ ತೇಗದ ತುಂಡುಗಳನ್ನು ಜೋಡಿಸಿದ್ದಲ್ಲಿಗೆ ಬಂದ ಒಂಟಿಸಲಗ, ಘೀಳಿಟ್ಟು ಯಾವಾಗ ಕಾಡಿನ ಶಾಂತತೆಯನ್ನು ಕದಡಿತೋ, ಬಂದಿರುವುದು ಕಳ್ಳರಲ್ಲ, ಅದು “ಗಜರಾಜ” ಎಂಬುದು ಎಲ್ಲರಿಗು ಮನವರಿಕೆಯಾಗಿತ್ತು. ಸ್ವಲ್ಪ ಏರುಪೇರಾದರು ಆನೆ ನಮ್ಮ ಮೇಲೆರಗುವುದರಲ್ಲಿ ಯಾವುದೇ ಸಂಶಯವಿಲ್ಲ! ಜೊತೆಗೆ ಅವಿತು ಕುಳಿತಿದ್ದ ಮೂರು ತಂಡಗಳಿಗೂ ಒಂಟಿಸಲಗ ತೇಗದ ದಿಮ್ಮಿಗಳನ್ನು ಮುಚ್ಚಿಟ್ಟಿದ್ದ ಕೃತಕ ಪೊದೆಯ ಸುತ್ತಲೂ ನಡೆಸುತ್ತಿದ್ದ ದಾಂಧಲೆಗಳನ್ನು ಕುಳಿತಲ್ಲಿಂದಲೇ ಕಾಣಬಹುದಾಗಿತ್ತು. ಹೀಗೆ ಪ್ರತಿ ತಂಡದವರು, ಉಳಿದವರ ಕಥೆ ಏನಾಗಿರಬಹುದು? ಎಂಬ ಆತಂಕದಿಂದ ಚಿಂತಾಕ್ರಾಂತರಾಗಿ ಕುಳಿತಿದ್ದರು. + +ಎರಡನೆ ತಂಡದವರ ಅವಸ್ಥೆಯಂತು ಹೇಳತೀರದ್ದಾಗಿತ್ತು. ಕಾರಣ, ಅವರು ಆನೆ ನಿಂತಿರುವ ಕೇವಲ ಐವತ್ತು ಅಡಿ ಅಂತರದಲ್ಲಿ ನೆಲದ ಮೇಲೆ ಕುಳಿತಿದ್ದರು. ಸಲಗ ಏನಾದರು ನಾವು ಕುಳಿತಿರುವ ಬಂಡೆಗಳ ಕಡೆ ಬಂದು, ನಾವೇನಾದರೂ ಅದರ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಅದು ನಮ್ಮನ್ನು ತನ್ನ ಬಲವಾದ ಕೋರೆಗಳಿಂದ ತಿವಿದು, ಅಗಲವಾದ ಅದರ ಪಾದಗಳಿಂದ ತುಳಿದು ಅಪ್ಪಚ್ಚಿ ಮಾಡಿಬಿಡಬಹುದೇನೋ ಎಂಬ ಭಯ ಅವರಿಗೆ ಶುರುವಾಗಿಬಿಟ್ಟಿತ್ತು. ಒಂದು ವೇಳೆ ಒಂಟಿಸಲಗ ನಮ್ಮ ಮೇಲೆ ದಾಳಿ ಮಾಡಲು ಮುಂದೆ ಬಂದರೆ ಆತ್ಮರಕ್ಷಣೆಗಾಗಿ ಒಂದು ಸುತ್ತು ಗುಂಡು ಹಾರಿಸಿ, ಎರಡನೆ ಸುತ್ತಿಗೆ ಮದ್ದು ತುಂಬಿಸುವ ವೇಳೆಗಾಗಲೇ ಅದು ನಮ್ಮನ್ನು ಚೆಂಡಾಡಿರುತ್ತೆ! ಓಡಿ ತಪ್ಪಿಸಿಕೊಳ್ಳುವ ಎಂದರೆ, ಅದು ಈ ಕಗ್ಗತ್ತಲಿನಲ್ಲಿ ಸಾಧ್ಯವಾಗದ ಮಾತು. ಇನ್ನುಳಿದಿರುವ ಏಕೈಕ ದಾರಿಯೆಂದರೆ ಅದು ‘ಆ ಸಲಗದ ಕಣ್ಣಿಗೆ ನಮ್ಮನ್ನು ಕಾಣದೆ ಇರುವ ರೀತಿ ಕಾಪಾಡಪ್ಪ ಎಂದು ತಮಗೆ ಗೊತ್ತಿರುವ ಅಷ್ಟೂ ದೇವರುಗಳ ಹೆಸರನ್ನು ಕರೆಯುವುದು’ ಎಂದು ದೇವನಾಮಗಳನ್ನು ಜಪಮಾಡಲು ಪ್ರಾರಂಭ ಮಾಡಿದರು. + +ಇತ್ತ ಒಂಟಿ ಸಲಗಕ್ಕೆ ‘ಆ ಪೊದೆಯೊಳಗೆ ಯಾರೋ ದುಷ್ಕರ್ಮಿಗಳು ಕುಳಿತಿರಬಹುದು’ ಎಂಬ ಸಂಶಯ ಬಲವಾಗಿ ಕಾಡತೊಡಗಿತು. ಒಂದು ವೇಳೆ ಆ ಪೊದೆಯೊಳಗಡೆ ಕುಳಿತಿರುವ ವೈರಿಗಳು ಎಲ್ಲಾದರು ನನ್ನ ಮೇಲೆ ದಾಳಿ ಮಾಡಿಬಿಡಬಹುದಾ? ಎಂಬ ಭಯದಿಂದಾಗಿ, ಸಲಗ ನಿಂತಲ್ಲಿ ನಿಲ್ಲಲಾಗದೇ ನಾಲ್ಕು ಹೆಜ್ಜೆ ಹಿಂದೆ ಸರಿಯುತ್ತಿತ್ತು, ಮತ್ತೆ ಪುನಃ ಮುಂದೆ ಬಂದು ಸೊಂಡಿಲಿನಿಂದ ಮುಳ್ಳುಗಿಡಗಳನ್ನು ಸರಿಸಿ ಮೂಸುತ್ತಿತ್ತು. ಆನೆಯ ಈ ವಿಚಿತ್ರ ವರ್ತನೆಯನ್ನು ಮರದ ಮೇಲೆ ಮತ್ತು ಬಂಡೆಯ ಹಿಂದೆ ಕುಳಿತಿದ್ದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ಕುಳಿತಿದ್ದರು. + +ಸಮಯ ಸರಿಯಾಗಿ ತಡರಾತ್ರಿ ಮೂರುವರೆ ಗಂಟೆ ಆಗಿರಬಹುದು. ಕೆಲ ತಾಸುಗಳಿಂದ ಒಂದೇ ಸಮನೆ ರಾದ್ಧಾಂತ ಮಾಡಿ ಬಳಲಿದ್ದ ಸಲಗ ಮೆಲ್ಲನೆ ಬಂದ ದಾರಿಯಲ್ಲೆ ಮರಳಿ ಹೆಜ್ಜೆ ಹಾಕತೊಡಗಿತು. ಆನೆ ಮರಳುವುದನ್ನು ಎಲ್ಲರೂ ನೋಡಿದರಾದರೂ, ಮತ್ತೆ ಮರಳಿ ಬರಬಹುದೇನೋ ಎಂಬ ಆತಂಕದಿಂದ ಮಿಸುಕಾಡದೆ ಹಾಗೆಯೇ ಕುಳಿತುಕೊಂಡಿದ್ದರು. ಹೊತ್ತು ಸರಿದು ತಂಗಾಳಿ ಬೀಸತೊಡಗಿದರು, ಅವಿತು ಕುಳಿತವರ ನೆತ್ತಿಯ ಮೇಲೆ ಬೆವರಿನ ಹನಿಗಳು ಜಿನುಗುತ್ತಲೆ ಇದ್ದವು. ಇನ್ನೇನು ಬೆಳಕ್ಹರಿಯಲಿದೆ ಎಂಬುದಕ್ಕೆ ಪೂರಕವಾಗಿ ಕಾಡುಕೋಳಿಗಳು ಕೂಗುತ್ತಾ, ಓಡಾಡುವ ಶಬ್ದ ಕಾಡಿನ ನಾಲ್ಕು ದಿಕ್ಕುಗಳಿಂದ ಕೇಳಿಬರತೊಡಗಿತು. ಮರದ ಎಲೆಗಳ ಮೇಲೆ ಕುಳಿತ ಇಬ್ಬನಿಗಳು ತಲೆಯ ಮೇಲೆ ತೊಟ್ಟಿಕ್ಕತೊಡಗಿದವು. ಮೂಡಣದಲ್ಲಿ ನೇಸರ ಕೆಂಪಗೆ ಹೊಳೆಯತೊಡಗಿದಂತೆ ಸೂರ್ಯರಶ್ಮಿಯ ಕಿರಣಗಳು ನೆಲಕ್ಕೆ ಚುಂಬಿಸುವ ಸಲುವಾಗಿ ಕಾಡುಮರಗಳ ನಡುವಿನಿಂದ ಇಣುಕತೊಡಗಿದವು. + +ಪೊನ್ನಪ್ಪ ಮರದಿಂದ ಕೆಳಗಿಳಿದು, ಕೈಕಾಲುಗಳನ್ನೆಲ್ಲಾ ಒಮ್ಮೆ ಉದ್ದನೆ ಚಾಚಿ, ಮೈಮುರಿಯತೊಡಗಿದ. ಒಂದೇ ಭಂಗಿಯಲ್ಲಿ ಕುಳಿತು ಬೆಳಕರಿಸಿದ್ದರಿಂದ ಅವನಿಗೆ ಮೈಯೆಲ್ಲ ಹೆಪ್ಪುಗಟ್ಟಿದಂತಾಗಿತ್ತು. ಸಿದ್ದಣ್ಣ ಕೂಡ ಅವನ ಹಿಂದಿನಿಂದಲೆ ಮರದಿಂದ ಇಳಿದು ಪಕ್ಕದ ಪೊದೆಯ ಬಳಿಗೆ ಹೋಗಿ ಮೂತ್ರ ಮಾಡಿದ. ಪೊನ್ನಪ್ಪ ನಾಟಾದ ಬಳಿಗೆ ಹೋಗಿ ನೋಡುವಾಗ, ರಾತ್ರಿ ಒಂಟಿ ಸಲಗ ದಾಂಧಲೆ ನಡೆಸಿದ್ದರಿಂದಾಗಿ ನಾಟಾದ ಸುತ್ತಲೂ ಆನೆಯ ದೊಡ್ಡ ದೊಡ್ಡ ಹೆಜ್ಜೆಗಳು ಮೂಡಿರುವುದು ಎದ್ದು ಕಾಣುತ್ತಿದ್ದವು. ಪೊದೆಯೊಳಗೆ ಯಾರೋ ಕುಳಿತಿದ್ದಾರೆ ಎಂಬ ಸಂಶಯದಿಂದ ಆನೆ ತನ್ನ ಸೊಂಡಿಲಿನಿಂದ ಮುಚ್ಚಿದ್ದ ಸೊಪ್ಪುಸದೆಗಳನ್ನು ಎಳೆದಾಡಿದ್ದರಿಂದ ಒಂದು ಬದಿಯಲ್ಲಿ ನಾಟಾದ ತುಂಡುಗಳು ಕೂಡ ಜರುಗಿದ್ದವು. ಪೊನ್ನಪ್ಪ ಅಡಗುತಾಣದಿಂದ ಹೊರಬಂದು, ಮರದ ದಿಮ್ಮಿಗಳನ್ನು ಜೋಡಿಸಿದ್ದ ಸ್ಥಳವನ್ನು ಪರಿಶೀಲನೆ ಮಾಡುತ್ತಿರುವುದನ್ನು ನೋಡಿದ ಉಳಿದ ಎರಡು ತಂಡಗಳು, ಮೆಲ್ಲನೆ ಕುಳಿತಲ್ಲಿಂದ ಎದ್ದು ಅವರ ಬಳಿಗೆ ಬಂದರು. ಅವರನ್ನು ಕಂಡಿದ್ದೆ ತಡ ಹತ್ತಿರಕ್ಕೆ ಬರಬೇಡಿ ಎಂದು ಸನ್ನೆ ಮಾಡಿದ ಪೊನ್ನಪ್ಪ, ಅವರ ಬಳಿ ತೆರಳಿ, “ದಿಮ್ಮಿಗಳ ಬಳಿ ಹೋಗಬೇಡಿ. ಅಲ್ಲಿ ಆನೆಯ ಹೆಜ್ಜೆಗುರುತು ಮತ್ತು ಲದ್ದಿ ಬಿದ್ದಿದೆ. ಅದರ ಮೇಲೆ ನಾವು ಓಡಾಡಿದರೆ ನಮ್ಮ ಕಾಲ್ಗುರುತುಗಳು ಅಲ್ಲಿ ಅಚ್ಚೊತ್ತುವ ಸಾಧ್ಯತೆ ಇದೆ” ಎಂದು ಹೇಳಿದ. + +ಎಲ್ಲರೂ ‘ಸರಿ, ಸರಿ’ ಎಂದು ರಾತ್ರಿಪೂರ ನಿದ್ದೆಗೆಟ್ಟು ಕೆಂಪಗೆ ಕಾಂತಿಹೀನವಾಗಿದ್ದ ಕಣ್ಣುಗಳಿಂದ ಸನ್ನೆ ಮಾಡಿ ಸರಿದು ನಿಂತರು. ರಾತ್ರಿ ಒಂಟಿಸಲಗ ಅಚಾನಕ್ಕಾಗಿ ಬಂದು ಕಾಟ ಕೊಟ್ಟಿದ್ದರಿಂದ ಎಲ್ಲರೂ ಬಸವಳಿದು ಹೋಗಿದ್ದರು. + +“ಕಳ್ಳರಂತು ಬೆಳಿಗ್ಗೆ ಬರುವ ಯಾವುದೇ ಸಾಧ್ಯತೆ ಇಲ್ಲವಾದ್ದರಿಂದ ನೀವೆಲ್ಲ ಕ್ವಾಟ್ರಸ್‍ಗೆ ಹೋಗಿ ವಿಶ್ರಾಂತಿ ತೆಗೆದುಕೊಂಡು ಸಂಜೆಯ ವೇಳೆಗೆ ಮರಳಿ ಬಂದರೆ ಸಾಕು” ಎಂದು ಐದೂ ಜನರನ್ನು ಕಳುಹಿಸಿದ ಪೊನ್ನಪ್ಪ, ಕಾಡಿನ ನಡುಭಾಗದಲ್ಲಿದ್ದ ಕೆರೆಯ ಬಳಿಗೆ ಹೆಜ್ಜೆ ಹಾಕಿದ. + +ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಲು ಕೆರೆಯ ಬಳಿಗೆ ಹೋದ ಪೊನ್ನಪ್ಪನಿಗೆ, ರಾತ್ರಿ ನೀರು ಕುಡಿಯಲು ಬಂದ ಒಂಟಿಸಲಗ ಕೆರೆಯ ಬದಿಯ ಕೆಸರಲ್ಲಿ ಸಿಲುಕಿಕೊಂಡು ಪರದಾಡಿದ ಕುರುಹನ್ನು ಕಾಣಲು ಸಾಧ್ಯವಾಯಿತು. ‘ಹೊ, ಹೋ ಇಲ್ಲಿಂದ ಹೇಗೊ ತಪ್ಪಿಸಿಕೊಂಡು ಆ ಆನೆ ನಾವು ಕುಳಿತಿದ್ದ ಮರದತ್ತ ಬಂದಿರಬೇಕು’. ಪುಣ್ಯಕ್ಕೆ ನಮ್ಮವರು ಯಾರೂ ಆ ಒಂಟಿಸಲಗದ ಕಣ್ಣಿಗೆ ಬಿದ್ದಿಲ್ಲ. ಒಂದುವೇಳೆ ನಾವೇನಾದರು ಅದರ ಕಣ್ಣಿಗೆ ಬಿದ್ದಿದ್ದರೆ ಕೆಸರಲ್ಲಿ ಸಿಕ್ಕಿಕೊಂಡು ಕೊಸರಾಡಿದ ಕೋಪವನ್ನೆಲ್ಲ ನಮ್ಮ ಮೇಲೆ ತೀರಿಸಿಕೊಂಡು ಬಿಡುತ್ತಿತ್ತು ಎಂದು ಮನದಲ್ಲಿ ಅಂದುಕೊಂಡ. + +ಮರಳಿ ಹೋದ ಅರಣ್ಯ ಸಿಬ್ಬಂದಿಗಳು, ‘ಮರಗಳ್ಳರು ರಾತ್ರಿ ಬರದೇ ಇದ್ದದ್ದು ಮತ್ತು ತಡರಾತ್ರಿಯಲ್ಲಿ ಆನೆ ಬಂದು ಕೊಟ್ಟ ಪರಿಪಾಟಲಗಳನ್ನು’ ಚಾಚುತಪ್ಪದೆ ರೇಂಜರ್ ಅಚ್ಚಯ್ಯನವರಿಗೆ ವಿವರಿಸಿದರು. ‘ಛೇ’ ಈ ಮರಗಳ್ಳರಿಂದಾಗಿ ನಮ್ಮ ಸಿಬ್ಬಂದಿ ಎಷ್ಟೊಂದು ಸಮಸ್ಯೆಗಳನ್ನು ಅನುಭವಿಸುವಂತಾಯ್ತಲ್ಲ. “ಕಳ್ಳ ಬಡ್ಡಿಮಕ್ಕಳು, ಸಿಕ್ಕಿ ಹಾಕಿಕೊಳ್ಳಲಿ ಅವರನ್ನು ಜೀವನಪೂರ್ತಿ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡುತ್ತೇನೆ” ಎಂದು ಹೇಳುತ್ತಾ, ವಾಕಿಟಾಕಿಯನ್ನು ಆನ್ ಮಾಡಿ, “ಹಲೋ ಹಲೋ, ಅಚ್ಚಯ್ಯ ಹಿಯರ್” ಎಂದರು. + +ಅತ್ತ ‘ಕರ್ರ್ ಕರ್ರ್’ ಎಂದು ಶಬ್ದವಾಗುತ್ತಿದ್ದಂತೆ ವೈರ್‍ಲೆಸನ್ನು ಪೊನ್ನಪ್ಪ ಆನ್ ಮಾಡಿದ. “ನೀವು ಬೇರೆ ಒಬ್ಬರೇ ಇದ್ದೀರ, ಸ್ವಲ್ಪ ಹುಷಾರಾಗಿರಿ” ಎಂಬ ಅಚ್ಚಯ್ಯನವರ ಧ್ವನಿ ಕೇಳಿಸಿತು. + +“ನನ್ನ ವಿಚಾರವಾಗಿ ನೀವು ಚಿಂತೆ ಮಾಡಬೇಡಿ ಸರ್, ಇನ್ನೆರಡು ದಿನ ತಡವಾದರೂ ಪರ್ವಾಗಿಲ್ಲ, ಈ ಕಳ್ಳರನ್ನು ಹಿಡಿದು ಅವರಿಗೆ ಒಂದು ಗತಿ ಕಾಣಿಸಲೇಬೇಕು” ಎಂದೆನ್ನುತ್ತಾ ‘ಸಿಬ್ಬಂದಿಯನ್ನು ಸಂಜೆಯ ವೇಳೆಗೆ ಅಗತ್ಯ ಸಾಮಗ್ರಿಗಳೊಂದಿಗೆ ಮರಳಿ ಕಳುಹಿಸಿಕೊಡಿ. ಅದರ ನಡುವಲ್ಲಿ ಏನಾದರು ಮರಗಳ್ಳರು ಬರುವ ಲಕ್ಷಣ ಕಂಡರೆ, ನಾನು ನಿಮಗೆ ಮಾಹಿತಿ ನೀಡುತ್ತೇನೆ’ ಎಂದು ಅಚ್ಚಯ್ಯನವರ ಬಳಿಹೇಳಿ ವೈರ್‍ಲೆಸನ್ನು ಪೊನ್ನಪ್ಪ ಆಫ್ ಮಾಡಿದ. ನಂತರ ಮರಗಳ್ಳತನಕ್ಕೆ ಸಂಬಂಧಪಟ್ಟ ಬೇರೇನಾದರು ಕುರುಹುಗಳು ಸಿಗಬಹುದಾ? ಎಂದು ಕಾಡಿನ ಸುತ್ತಲೂ ಎಚ್ಚರಿಕೆಯಿಂದ ಒಂದಷ್ಟು ಸುತ್ತಾಡಿ, ಹನ್ನೆರಡು ಗಂಟೆಯ ವೇಳೆಗೆ ಮರಳಿ ಮಚ್ಚಾನಿನತ್ತ ಬಂದು, ಮರದ ಮೇಲೆ ಹತ್ತಿ, ನಿನ್ನೆ ಬರುವಾಗ ಕಟ್ಟಿಕೊಂಡು ಬಂದಿದ್ದ ಒಣರೊಟ್ಟಿಯನ್ನು ಬಾಯಿಗೆ ಹಾಕಿಕೊಂಡು ಜಗಿಯತೊಡಗಿದ. ಕೆಲಸಮಯಗಳ ತರುವಾಯ, ರಾತ್ರಿ ಪೂರ ಆನೆ ಅವಾಂತರದಿಂದ ನಿದ್ರೆಗೆಟ್ಟು ಬಳಲಿದ್ದರಿಂದ ಹಾಗೆಯೇ ಕಾಲು ನೀಡಿ ನಿದ್ರೆಗೆ ಜಾರಿದ. + +ಸಮಯ ಸರಿಸುಮಾರು ನಾಲ್ಕು ಗಂಟೆಯಾಗಿರಬಹುದು. ‘ಚರ್ರ್ ಪರ್ರ್’ ಎಂದು ತರಗೆಲೆಗಳ ಮೇಲೆ ಹೆಜ್ಜೆ ಹಾಕುತ್ತಾ, ತನ್ನತ್ತ ಯಾರೋ ನಡೆದು ಬರುತ್ತಿರುವಂತೆ ಪೊನ್ನಪ್ಪನಿಗೆ ನಿದ್ದೆಮಂಪರಿನಲ್ಲಿ ಭಾಸವಾಗತೊಡಗಿತು. ತಕ್ಷಣ ಎಚ್ಚರಗೊಂಡ ಪೊನ್ನಪ್ಪ, ಯಾರಿರಬಹುದು? ಎಂದು ಮಲಗಿದ್ದಲ್ಲಿಂದಲೆ ಯೋಚಿಸಿ, ಪಕ್ಕದಲ್ಲಿದ್ದ ಕೋವಿಯನ್ನು ಶಬ್ದ ಕೇಳಿಬರುತ್ತಿರುವೆಡೆಗೆ ಗುರಿಯಿಟ್ಟು ನೋಡಿದ. ಬೆಳಿಗ್ಗೆ ವಿಶ್ರಾಂತಿಗೆ ತೆರಳಿದ್ದ ತಮ್ಮದೆ ತಂಡ ಬೆನ್ನಿಗೆ ಬಂದೂಕು ನೇತು ಹಾಕಿಕೊಂಡು, ಒಂದು ಕೈಯಲ್ಲಿ ರಾತ್ರಿ ಪಾಳಿಗೆ ಬೇಕಾದ ಸಾಮಗ್ರಿ ಮತ್ತು ನೀರಿನ ಕ್ಯಾನ್‍ಗಳನ್ನು ಹಿಡಿದು ಮೆಲ್ಲಮೆಲ್ಲನೆ ಹೆಜ್ಜೆಗಳನ್ನು ಹಾಕುತ್ತಾ ಪೊನ್ನಪ್ಪ ಕುಳಿತಿದ್ದ ಹೊನ್ನೆ ಮರದೆಡೆಗೆ ನಡೆದುಕೊಂಡು ಬರುತ್ತಿತ್ತು. ಅವರೆಷ್ಟೇ ಶಬ್ದಬಾರದಂತೆ ಎಚ್ಚರಿಕೆಯಿಂದ ಹೆಜ್ಜೆಹಾಕುತ್ತಿದ್ದರೂ ಕಾಲೆಜ್ಜೆ ಸದ್ದು ಮಾತ್ರ ಕೇಳಿ ಬರುತ್ತಲೆ ಇತ್ತು. + +ಅರಣ್ಯ ಸಿಬ್ಬಂದಿಯ ತಲೆ ಕಂಡ ತಕ್ಷಣ, ಮರದ ಕೊಂಬೆಗೆ ಕಟ್ಟಿದ್ದ ಹಗ್ಗವನ್ನು ಇಳಿಬಿಟ್ಟು ಪೊನ್ನಪ್ಪ ಕೆಳಗಿಳಿದು ಬಂದು, ನಾವು ಕಾವಲು ಕುಳಿತಿರುವ ವಿಚಾರವಾಗಿ ಹೊರಗಡೆ ಯಾರಿಗಾದರು ಸಂಶಯ ಮೂಡಿದೆಯ? ಎಂದು ಸಿಬ್ಬಂದಿಗಳ ಬಳಿ ಕೇಳಿದ. “ಇಲ್ಲ ಸರ್, ಯಾರಿಗೂ ಸಂಶಯ ಬಂದಿಲ್ಲ. ಆದರೆ ನಿನ್ನೆ ರಾತ್ರಿ ನಡೆದ ಆನೆಯ ಕಥೆ ಕೇಳಿದ ಸಾಹೇಬ್ರು, ಇವತ್ತು ಒಂದು ದಿನ ನೋಡಿ, ಮರಗಳ್ಳರು ಬರದೇ ಹೋದರೆ, ನಾಳೆಯಿಂದ ಬೇರೆಯೇನಾದ್ರು ಉಪಾಯ ಹೂಡುವ, ನೀವು ಸುಮ್ಮನೇ ಕಾಡಿನಲ್ಲಿ ಕುಳಿತು ರಿಸ್ಕ್ ತಗೋಬೇಡಿ” ಎಂದು ಹೇಳಿದ್ದಾರೆ ಎಂದರು. ಅಚ್ಚಯ್ಯನವರು ಆ ರೀತಿಯಾಗಿ ಹೇಳುವುದಕ್ಕಿಂತ ಮಿಗಿಲಾಗಿ ‘ಪಹರೆಗೆಂದು ಬಂದಿದ್ದ ಅಷ್ಟು ಜನ ಅರಣ್ಯ ಸಿಬ್ಬಂದಿಗೆ, ಈ ರೀತಿ ಜೀವವನ್ನು ಪಣಕ್ಕಿಟ್ಟು, ಕಾದುಕುಳಿತು ಕಳ್ಳರನ್ನು ಹಿಡಿಯಲು ಸುತಾರಂ ಇಷ್ಟವಿರಲಿಲ್ಲ’ ಎಂಬುದು ಅವರ ಮುಖಲಕ್ಷಣ ನೋಡಿದಾಗಲೆ ಪೊನ್ನಪ್ಪನಿಗೆ ಅರ್ಥವಾಗಿತ್ತು. ಹೆಚ್ಚೆಂದರೆ ಇವತ್ತು ಒಂದು ದಿನ ಮರಗಳ್ಳರಿಗಾಗಿ ನಾವು ಇಲ್ಲಿ ಕಾವಲು ಕಾಯಬಹುದು, ನಾಳೆಯಿಂದ ನಾವು ಕೂರುತ್ತೇವೆ ಎಂದರೂ ಅಚ್ಚಯ್ಯನವರು ಒಪ್ಪುವುದಿಲ್ಲ. ‘ಒಂದು ವೇಳೆ ಈ ರೀತಿ ಕಾವಲುಕುಳಿತು ಏನಾದರು ಸಮಸ್ಯೆ ಎದುರಾದರೆ, ಅದು ಅಚ್ಚಯ್ಯನವರ ತಲೆಗೆ ಬಂದುಬಿಡಬಹುದು ಎಂಬ ಕಳವಳ ಕೂಡ ಅವರಲ್ಲಿರುತ್ತೆ’ ಎಂದು ಪೊನ್ನಪ್ಪನಿಗೆ ಅನ್ನಿಸತೊಡಗಿತು. ‘ಕೊನೆಯದಾಗಿ ಇವತ್ತು ಒಂದು ದಿನ ಪ್ರಯತ್ನ ಮಾಡಿ ನೋಡುವ!’ ಎಂದು ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟ ಪೊನ್ನಪ್ಪ, ‘ಹೆಚ್ಚು ಹೊತ್ತು ಇಲ್ಲೆ ಮಾತನಾಡಿಕೊಂಡು ನಿಲ್ಲುವುದು ಬೇಡ ಎಲ್ಲರೂ ಅವರವರ ಸ್ಥಳಕ್ಕೆ ಹೋಗಿ ಕಾವಲು ಕೂರಲು ಬೇಕಾದ ಸಿದ್ಧತೆಗಳನ್ನು ಮಾಡಿ’ ಎಂದು ತಿಳಿಸಿ, ತನ್ನೊಂದಿಗೆ ರಾತ್ರಿ ತಂಗಿದ್ದ ಸಿದ್ದಣ್ಣನೊಂದಿಗೆ ಊಟದ ಸಾಮಗ್ರಿಗಳು ಮತ್ತು ನೀರಿನ ಕ್ಯಾನ್‍ಗಳನ್ನು ಹಗ್ಗದ ಮೂಲಕ ಮರದ ಮೇಲಕ್ಕೆ ಸಾಗಿಸತೊಡಗಿದ. ನಿನ್ನೆ ರಾತ್ರಿ ಒಂಟಿಸಲಗದ ಕಾಟಕ್ಕೆ ಬೆಚ್ಚಿದ್ದ ಎರಡನೆಯ ತಂಡದವರು ಇಂದು ಬಂದ ಕೂಡಲೇ ತಡಮಾಡದೆ ಒಂದು ಬೀಟೆ ಮರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಮಚ್ಚಾನು ಕಟ್ಟಲು ಶುರುಮಾಡಿದರು. ಉಳಿದಂತೆ ಮೂರನೆ ತಂಡ ಕೂಡ ಮರವೇರಿ ಕುಳಿತುಕೊಂಡಿತು. + + + +ಮಧ್ಯಾಹ್ನ ಬಿಸಿಲಿನ ಧಗೆ ಕೊಂಚ ಹೆಚ್ಚಿದ್ದರಿಂದ, ಸಾಯಂಕಾಲವಾಗುತ್ತಿದ್ದಂತೆ ಮೋಡಗಳು ಕಪ್ಪಿಡಲು ಶುರುವಾಗಿ, ತಣ್ಣನೆಯ ಗಾಳಿ ಬೀಸತೊಡಗಿತು. ಪೊನ್ನಪ್ಪನಿಗೆ ಕಳೆದೆರಡು ದಿನಗಳಿಂದ, ಮರಗಳ್ಳರ ಹಿಂದೆ ಬಿದ್ದಿದ್ದರಿಂದಾಗಿ ಮರೆತು ಹೋಗಿದ್ದ, ಮನೆ ಮತ್ತು ಹೆಂಡತಿ ಮಕ್ಕಳ ನೆನಪು ಮೆಲ್ಲನೆ ಕಣ್ಣ ಮುಂದೆ ಬರತೊಡಗಿತು. ತಾನು ವಾಸ ಮಾಡುತ್ತಿರುವ ಕಾನೂರಿನ ಪರಿಸರ, ಕಾಲೇಜು ದಿನಗಳಲ್ಲಿ ಪ್ರೀತಿಸಿ ಮದುವೆಯಾದ ಬೊಳ್ಳವ್ವ. ಕೆಲವರ್ಷಗಳಲ್ಲಿ ಪ್ರೀತಿಯ ಸಂಕೇತವಾಗಿ ಹುಟ್ಟಿದ ಇಬ್ಬರು ಗಂಡು ಮಕ್ಕಳು, ಅರಣ್ಯ ಇಲಾಖೆಯ ಕೆಲಸದಿಂದಾಗಿ ಕುಟುಂಬದೊಂದಿಗೆ ಅನ್ಯೋನ್ಯವಾಗಿ ಕಳೆಯಬೇಕಾದಂತಹ ಸಮಯದಲ್ಲಿ ಅವರನ್ನು ಅಗಲಿ ಇರಬೇಕಾಗಿ ಬಂದದ್ದು, ಎಲ್ಲವೂ ನೆನಪಿನ ಬುತ್ತಿಯಿಂದ ತೆರೆದುಕೊಳ್ಳಲು ಪ್ರಾರಂಭವಾಯಿತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_173.txt b/Kenda Sampige/article_173.txt new file mode 100644 index 0000000000000000000000000000000000000000..e8e4ec610eaa00c5139ec894a30f7cd102878d91 --- /dev/null +++ b/Kenda Sampige/article_173.txt @@ -0,0 +1,19 @@ +‘ದೇಶ ಸುತ್ತು ಕೋಶ ಓದು’ ಎಂಬುದೊಂದು ಬಹುಪ್ರಚಲಿತ ಮಾತು. ಅದನ್ನೇ ನಂಬಿ ಅನೇಕರು ಸುತ್ತಾಟಗಳಲ್ಲಿ ತೊಡಗಿದರೆ ಮತ್ತೂ ಹಲವರು ಸುತ್ತಾಡಿ ಬಂದವರ ಅನುಭವ ಕಥನಗಳನ್ನೇ ಕೇಳಿಯೋ ಅಥವಾ ಓದಿಯೋ ತಮ್ಮ ಭ್ರಮಾಲೋಕದಲ್ಲಿ ತಾವೂ ಪ್ರವಾಸದ ಅನುಭವ ಹೊಂದುತ್ತಾರೆ. ಈ ಮಾತನ್ನು ಪ್ರಸ್ತಾಪಿಸಲು ಕಾರಣ ನಮ್ಮ ಆತ್ಮೀಯ ಕವಿಮಿತ್ರ, ಪರಿಸರ ಪ್ರೇಮಿ, ಬರಹಗಾರ ಹಾಗೂ ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ಪ್ರಕಾಶ್ ಕೆ ನಾಡಿಗ್ ರವರು ಮತ್ತೊಂದು ಸುತ್ತು ಯೂರೋಪ್ ಪ್ರವಾಸ ಮುಗಿಸಿ ಬಂದಿದ್ದಾರೆ. ಸ್ನೇಹಿತನ ಒತ್ತಾಸೆಗೆ ಹೋಗಿಬಂದೆನೆಂದು ಹೇಳಿಕೊಂಡಿದ್ದರೂ ಅವರೊಳಗೊಬ್ಬ ಹವ್ಯಾಸಿ ‘ಪ್ರವಾಸಿ’ ಇರುವುದನ್ನು ಗುರ್ತಿಸಬಹುದಾಗಿದೆ. + +(ಪ್ರಕಾಶ್ ಕೆ ನಾಡಿಗ್) + +ಅದಾಗಲೇ ಒಂದು ಬಾರಿ ಯೂರೋಪ್ ಪ್ರವಾಸ ಹೋಗಿಬಂದು ತಾವು ನೋಡಿದ ಕೆಲವೇ ದೇಶಗಳ ಪರಿಚಯವನ್ನು ರಸವತ್ತಾಗಿ ಕಟ್ಟಿಕೊಟ್ಟು ಓದುಗ ಪ್ರಭುವಿಗೂ ಯೂರೋಪನ್ನು ಕುಳಿತಲ್ಲೇ ಪರಿಚಯಿಸಿದ್ದ ಪ್ರಕಾಶ್ ರವರು ಮತ್ತೊಮ್ಮೆ ಅಂಥಹದ್ದೇ ರಸಾನುಭವವನ್ನು ಕಟ್ಟಿಕೊಡುವಲ್ಲಿ ಹಿಂದೆಬಿದ್ದಿಲ್ಲ. ಹನ್ನೆರೆಡು ದಿನಗಳ ತಮ್ಮ ಪ್ರವಾಸದುದ್ದಕ್ಕೂ ಅವರು ಯೂರೋಪಿನ ಪ್ರಮುಖ ದೇಶಗಳಾದ ಜರ್ಮನಿ, ಬೆಲ್ಜಿಯಂ, ಸ್ವಿಡ್ಜರ್ಲ್ಯಾಂಡ್, ಹಾಲೆಂಡ್ (ನೆದರ್ಲ್ಯಾಂಡ್) ಮತ್ತು ಸ್ವೀಡನ್‌ನಲ್ಲಿನ ತಮ್ಮ ಪ್ರವಾಸಾನುಭವಗಳನ್ನು ಕಟ್ಟಿಕೊಟ್ಟಿದ್ದು. ಅಲ್ಲಿ ತಾವು ಕಂಡುಂಡ ಎಲ್ಲವನ್ನೂ ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿರುವುದು ಓದುಗನನ್ನು ಸ್ವತಃ ಯೂರೋಪಿಗೆ ಕರೆದೊಯ್ದ ಅನುಭವ ನೀಡುತ್ತದೆ. + +ಪ್ರವಾಸ ಕಥನಗಳೆಂದರೆ ಕೇವಲ ಅಲ್ಲಿಗೆ ತೆರಳುವ ವಿಧಾನ, ಸಿದ್ಧತೆ, ಪ್ರಮುಖ ಆಕರ್ಷಣೀಯ ಸ್ಥಳಗಳು, ಅವುಗಳ ಒಂದಷ್ಟು ಫೋಟೋಗಳು ಇವಿಷ್ಟೇ ಎಂಬ ಭ್ರಮಾಲೋಕದಿಂದ ಹೊರಬರುವಂತೆ ತಮ್ಮ ಪ್ರವಾಸ ಕಥನವನ್ನು ಹಂತಹಂತವಾಗಿ ನಿರೂಪಿಸಿರುವ ಪ್ರಕಾಶ್ ಅವರು, ಪ್ರವಾಸಕ್ಕೆ ಹೊರಡಲು ಮಾಡಿಕೊಂಡ ಮುನ್ನೆಚ್ಚರಿಕಾ ಸಿದ್ಧತೆಗಳೊಂದಿಗೆ ಆರಂಭದಲ್ಲೇ ಉಂಟಾದ ಸ್ಪೈಸ್ ಜೆಟ್ ಏರ್ವೇಸ್‌ನ ಕಿರಿಕಿರಿಯಿಂದಿಡಿದು, ವಿಮಾನಯಾನದಲ್ಲಿನ ಸಹಪ್ರಯಾಣಿಕನ ಸಮಸ್ಯೆಗೆ ಮಾತ್ರೆ ನೀಡಿ ಸ್ಪಂದಿಸಿದ್ದು ಹಾಗೂ ಅಳುತ್ತಿದ್ದ ಮಗುವನ್ನು ಸಂತೈಸಿ, ಸಹ ಪ್ರಯಾಣಿಕರಿಗೆ ಮುದನೀಡಿದ್ದು ಹೀಗೆ ಎಲ್ಲವನ್ನೂ ಮುಕ್ತವಾಗಿ ಓದುಗನೊಂದಿಗೆ ಹಂಚಿಕೊಂಡಿದ್ದಾರೆ. + +ತಮ್ಮ ಪ್ರವಾಸ ಕಥನದುದ್ದಕ್ಕೂ ಯೂರೋಪಿನ ಸಂಸ್ಕೃತಿ, ಆಚಾರ ವಿಚಾರಗಳು, ಅಲ್ಲಿನ ವೈಭವೋಪೇತ ಜೀವನದತ್ತಲೇ ಗಮನಹರಿಸಿರುವ ಪ್ರಕಾಶ್‌ರವರು ತಾವು ಕಣ್ತುಂಬಿಕೊಂಡ ಕೋಪನ್ ಹೇಗನ್‌ನಲ್ಲಿನ ರೋಸ್ ಗಾರ್ಡನ್ ಅರಮನೆಯ ವೈಭವ, ಪ್ರವಾಸಿಗರ ಸ್ವರ್ಗ ಸ್ವಿಡ್ಜರ್ಲ್ಯಾಂಡ್‌ನ ಶೆಮೊನಿಕ್ಸ್‌ನಲ್ಲಿ ಹಿಮದಲ್ಲಿ ಹೊರಳಾಡಿದ್ದು, ಫ್ರಾನ್ಸ್ ಮತ್ತು ಸ್ವಿಡ್ಜೆ ರ್ಲ್ಯಾಂಡ್‌ಗಳೆರೆಡರಲ್ಲೂ ವ್ಯಾಪಿಸಿರುವ ಜಿನೀವಾ ಸರೋವರ, ಆಲ್ಫ್ಸ್ ಪರ್ವತ ಶ್ರೇಣಿ, ಕೆಥಡ್ರೆಲ್ ಚರ್ಚ್, ಪ್ಲವರ್ ಕ್ಲಾಕ್, ರಷ್ಯನ್ ಚರ್ಚ್, ಬೆಲ್ಜಿಯಂನ ರಾಯಲ್ ಅರಮನೆ, ಬ್ರೂಸೆಲ್ಸ್‌ನ ಆಟೋಮಿಯಂ, ಆನ್ ಫ್ರಾಂಕ್‌ಳ ಮನೆ, 32 ಹೆಕ್ಟೇರ್ ವಿಸ್ತಾರದ ಕ್ಯೂಕೆನ್ ಹಾಫ್ ಹೂದೋಟ, ಸ್ಕಿನ್ನೀ ಬ್ರಿಡ್ಜ್… ಹೀಗೆ ಹೇಳುತ್ತಾ ಹೋದರೆ ಒಂದೆರೆಡಲ್ಲಾ, ಅರ್ಧ ಯೂರೋಪನ್ನೇ ನಮಗೆ ಪರಿಚಯಿಸುವಲ್ಲಿ ಪ್ರಕಾಶ್‌ರವರು ಬಹುತೇಕ ಯಶಸ್ವಿಯಾಗಿದ್ದಾರೆ. + +ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್‌ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್‌ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್‌ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್‌ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆ, ಪಾರಿವಾಳಗಳಿಗೆ ಭಾರತದ ಪಾರ್ಲೇಜಿ ಬಿಸ್ಕೇಟ್ ತಿನ್ನಿಸಿ ರೋಮಾಂಚನಗೊಂಡಿದ್ದು, ಹಾಲೆಂಡಿನ ಸೈಕಲ್ ಪಥಗಳು ಹಾಗೂ ಸೈಕಲ್ ನಿಲ್ದಾಣಗಳ ಕುರಿತು, ಐಷಾರಾಮಿ ಕ್ರೂಸ್‌ನಲ್ಲಿನ ಪಯಣದ ಅನುಭವಗಳು ಮುಖ್ಯವಾದವುಗಳೆನಿಸಿಕೊಳ್ಳುತ್ತವೆ. + +ಪ್ರವಾಸದ ಪ್ರತೀ ಕ್ಷಣವನ್ನೂ ಸಾಕಷ್ಟು ಅನುಭವಿಸಿದವರಂತೆ ಕಂಡುಬರುವ ಲೇಖಕರು ಮೋಡಕವಿದ ವಾತಾವರಣದ ಸಂದರ್ಭದಲ್ಲಿ ಪ್ರವೇಶಕ್ಕೆ ಮೊದಲೇ ಸಾಂದರ್ಭಿಕ ಅಪ್ರಾಮುಖ್ಯತೆಯ ಬಗ್ಗೆ ಮಾಹಿತಿ ತಿಳಿಸುವ ಅಲ್ಲಿನ ಅಧಿಕಾರಿಗಳ ಪ್ರಾಮಾಣಿಕತೆಯನ್ನು, ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿ ನಿರಾಕರಿಸಿದ ಫಾರ್ಮಾಸಿಸ್ಟ್‌ಳ ಕಾಳಜಿಯ ಕುರಿತು, ದುಬಾರಿ ನಗರದಲ್ಲಿ ಉಚಿತವಾಗಿ ಚಾಕೋಲೇಟ್ ನೀಡಿ “ದುಬಾರಿ ನಗರ ಕೇವಲ ಪ್ರವಾಸಿಗರಿಗೆ ಮಾತ್ರ, ಸ್ಥಳೀಯರಿಗಲ್ಲ” ಎಂದ ಅನಾಮಿಕ ಮಹಿಳೆಯ ಬಗ್ಗೆ, ಮೈಗೆ ಬಣ್ಣ ಬಳಿದುಕೊಂಡು ಸಂಗೀತೋಪಕರಣ ಕೈಲಿಡಿದು ನುಡಿಸುತ್ತಾ, ದಾರಿಹೋಕರಿಗೆ ಮುದ ನೀಡಿ ಭಿಕ್ಷೆ ಬೇಡುವ ಯೂರೋಪಿನ ಭಿಕ್ಷುಕರ ಬಗ್ಗೆ, ತನ್ನ ಮಾತೃಭೂಮಿ ಕರ್ನಾಟಕವನ್ನು ‘ಐಟಿ ರಾಜಧಾನಿ’ ಎಂದ ಚೆಕಿಂಗ್ ಅಧಿಕಾರಿಯ ಬಗ್ಗೆ ಹೇಳುತ್ತಾ ಓದುಗರಲ್ಲಿ ರೋಮಾಂಚಕ ಅನುಭವವನ್ನು ಉಂಟುಮಾಡಿದ್ದಾರೆ. + + + +ಎಷ್ಟೆಲ್ಲಾ ಹಾರಾಡಿ, ಪ್ರಪಂಚವನ್ನೇ ಸುತ್ತಿ ಬಂದರೂ ತಮ್ಮೂರೇ ತಮಗೆ ಮೇಲು ಎಂಬಂತೆ ಮನೆಗೆ ಬಂದು ಹೆಂಡತಿ ಕೈರುಚಿಯ ಉಪ್ಪಿಟ್ಟು ತಿನ್ನುವವರೆಗೂ ಅವರ ಪ್ರವಾಸದ ಅನುಭವವನ್ನು ಯಾವುದೇ ಮುಜುಗರವಿಲ್ಲದೇ ಓದುಗರ ಮುಂದೆ ಅಕ್ಷರಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಂದೆ ಯೂರೋಪಿನ ದೇಶಗಳಿಗೆ ಪ್ರವಾಸ ಹೋಗುವವರಿಗೆ ಈ ಕೃತಿಯು ಮಾರ್ಗದರ್ಶಿ ಕೈಪಿಡಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_174.txt b/Kenda Sampige/article_174.txt new file mode 100644 index 0000000000000000000000000000000000000000..48b45ca9c44068c9c9e36334b134624f91fb5a57 --- /dev/null +++ b/Kenda Sampige/article_174.txt @@ -0,0 +1,41 @@ +ಯೋಗೀಂದ್ರ ಮರವಂತೆ ಅವರ ‘ನನ್ನ ಕಿಟಕಿ’ ಪ್ರಬಂಧ ಪ್ರಕಾರದ ಬಗ್ಗೆ ಪ್ರೀತಿಯುಕ್ಕಿಸುವ ಪ್ರಬಂಧಗಳ ಸಂಕಲನ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಕಲೆಹಾಕಿದ ವಿವರಗಳ ಆಕರ್ಷಕ ಜೋಡಣೆಯೇ ಪ್ರಬಂಧ ಎನ್ನುವಂತಾಗಿರುವ ದಿನಗಳಲ್ಲಿ, ರಮ್ಯ ಭಾಷೆಯಲ್ಲಿ ರೂಪುಗೊಂಡ ಬರವಣಿಗೆಯನ್ನು ಪ್ರಬಂಧವೆಂದು ಪ್ರಕಟಿಸುತ್ತಿರುವ ಸಂದರ್ಭದಲ್ಲಿ, ಯೋಗೀಂದ್ರರ ಪ್ರಬಂಧಗಳು ‘ಪ್ರಬಂಧ ಧ್ವನಿ’ಯ ಮೂಲಕ ಗಮನಸೆಳೆಯುತ್ತವೆ. ಪ್ರಬಂಧದ ಶಿಲ್ಪ ಹಾಗೂ ಧ್ವನಿಯ ಕಸುಬುದಾರಿಕೆಯ ಬಗ್ಗೆ ಗಮನಕೊಡುವ ನಿಜ ಪ್ರಬಂಧಗಳ ಕಾರಣದಿಂದಾಗಿ ‘ನನ್ನ ಕಿಟಕಿ’ ಗಮನಸೆಳೆಯುತ್ತದೆ. ಯೋಗಿಂದ್ರರ ಪ್ರಬಂಧಗಳಲ್ಲೂ ವಿವರಗಳಿವೆ. ಆಕರ್ಷಕ ಹೆಣಿಗೆಯೂ ಇದೆ. ಆದರೆ, ಈ ವಿವರಗಳು ಮಾಹಿತಿಯಾಗಿಯಷ್ಟೇ ಉಳಿಯದೆ, ಮೋಹಕ ಭಾಷೆ ಬಣ್ಣದ ಹೊದಿಕೆಯಾಗಿಯಷ್ಟೇ ಉಳಿಯದೆ, ಹೊಸ ನೋಟವೊಂದನ್ನು ಕಟ್ಟಿಕೊಡುವ ಮೂಲಕ ಪ್ರಬಂಧದ ಸಾರ್ಥಕ ಕ್ಷಣಗಳನ್ನು ದಕ್ಕಿಸಿಕೊಂಡಿವೆ. + +‘ನನ್ನ ಕಿಟಕಿ’ ಸಂಕಲನದ ೨೬ ಪ್ರಬಂಧಗಳು ಎರಡು ಭಾಗಗಳಲ್ಲಿ ವಿಂಗಡಣೆಗೊಂಡಿವೆ. ಮೊದಲ ಭಾಗದ ಪ್ರಬಂಧಗಳು ಪ್ರಬಂಧಕಾರರ ಊರು-ತವರಿನ ಭಿತ್ತಿಯಲ್ಲಿ ರೂಪುಗೊಂಡಿದ್ದರೆ, ಎರಡನೇ ಭಾಗದ ರಚನೆಗಳ ಕೇಂದ್ರದಲ್ಲಿರುವುದು ಪ್ರಬಂಧಕಾರರ ಕರ್ಮಭೂಮಿ ಇಂಗ್ಲೆಂಡು. ಈ ಪ್ರಬಂಧಗಳನ್ನು ‘ಕಿಟಕಿಯೊಳಗಿನ ರಚನೆಗಳು’ ಹಾಗೂ ‘ಹೊರಗಿನ ರಚನೆಗಳು’ ಎಂದೂ ಹೇಳಬಹುದು. ಊರ ಹಿನ್ನೆಲೆಯ ನೆನಪುಗಳು ಸಹಜವಾಗಿಯೇ ಆರ್ದ್ರತೆಯನ್ನು ಹೊಂದಿದ್ದು ನೆನಪುಗಳಿಗೆ ಹೆಚ್ಚು ಆತುಕೊಂಡಿದ್ದರೆ, ಉತ್ತರಾರ್ಧದ ರಚನೆಗಳು ವರ್ತಮಾನದ ನೆಲೆಗಟ್ಟಿನವು ಹಾಗೂ ಬೌದ್ಧಿಕತೆಯನ್ನು ಹೆಚ್ಚು ಅವಲಂಬಿಸಿದವು. + +(ಯೋಗೀಂದ್ರ ಮರವಂತೆ) + +ಸಂಕಲನದ ಮೊದಲ ರಚನೆ ‘ಮತ್ತೆ ಹಾಡಾಗಿದೆ ಮಳೆಸಂಗೀತ’ ಯೋಗೀಂದ್ರರ ಪ್ರಬಂಧ ಕೌಶಲ್ಯಕ್ಕೆ ನಿದರ್ಶನದಂತಿರುವ ರಚನೆ. ಭಾವಗೀತದಂಥ ಭಾಷೆ, ಓದಿನ ಅನುಭವ, ಆ ಅನುಭವ ಕರುಣಿಸಿದ ಒಳನೋಟ – ಎಲ್ಲವೂ ಹದವಾಗಿ ಒದಗಿಬಂದ ರಚನೆಯಿದು. ಭಾರತದಲ್ಲಿ ಆರಂಭವಾಗಿರುವ ಮಳೆಗಾಲವನ್ನು ನೆಪವಾಗಿಟ್ಟುಕೊಂಡು, ಬರಹಗಾರರನ್ನು ಮಳೆ ಯಾವೆಲ್ಲ ಬಗೆಯಲ್ಲಿ ಕಾಡಿದೆ ಎನ್ನುವುದನ್ನು ಚಿತ್ರಿಸುವ ಈ ಪ್ರಬಂಧ ತಾನೇ ಒಂದು ಶಬ್ದಚಿತ್ರವಾಗಿ ರೂಪುಗೊಂಡಿದೆ. ಟ್ಯಾಗೋರರ ಮಳೆ ರಚನೆಗಳನ್ನು ನೆನಪಿಸುವ ಪ್ರಬಂಧ, ಮಳೆಯ ಸ್ವಾಗತಕ್ಕೆ ಶಾಂತಿನಿಕೇತನದಲ್ಲಿ ಅವರು ಆರಂಭಿಸಿದ ‘ಬರ್ಷ ಮಂಗಲ್’ ಎನ್ನುವ ಹಬ್ಬವೀಗ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾಗಳಲ್ಲಿ ಆಚರಣೆಗೊಳ್ಳುತ್ತಿದ್ದು, ಈ ಮಳೆಹಬ್ಬ ಬಂಗಾಳಿ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ತಂತುವಾಗಿರುವುದನ್ನು ಗುರ್ತಿಸುತ್ತದೆ. ರವೀಂದ್ರರ ಮಳೆಕವಿತೆಗಳು ನಮ್ಮನ್ನು ಭಾವನಾತ್ಮಕವಾಗಿ ಮಾತ್ರವಲ್ಲದೆ, ವೈಚಾರಿಕ ನೆಲೆಯಲ್ಲೂ ಕಾಡಬೇಕಾಗಿದೆ ಎನ್ನುವ ಅರಿವು ಹಾಗೂ ಅವರ ಕವಿತೆಗಳ ನಿಸರ್ಗಪ್ರೇಮ ರಮ್ಯ ಕಾವ್ಯವೊಂದರ ಓದಿನ ಖುಷಿಗಷ್ಟೇ ಸೀಮಿತವಾಗದೆ ಪ್ರಾಕೃತಿಕ ಎಚ್ಚರವನ್ನು ನಮ್ಮೊಳಗೆ ಹೊತ್ತಿಸಬೇಕಾಗಿದೆ ಎನ್ನುವ ಕಳಕಳಿಯಲ್ಲಿ ಪ್ರಬಂಧ ಕೊನೆಗೊಳ್ಳುತ್ತದೆ. ಮಳೆಯ ನೆಪದ ಈ ಪಯಣ ಅರಿವಿನ ನೆಲೆಯಲ್ಲಿ ಕೊನೆಗೊಳ್ಳುವುದು ಪ್ರಬಂಧದ ಸಾರ್ಥಕಕ್ಷಣ. + +‘ಮುಂಗಾರಿನ ಮಂದ ಬಣ್ಣಗಳು ಅಘನಾಶಿನಿಯ ಮೀನುದೋಣಿಗಳು’ ಛಾಯಾಗ್ರಾಹಕ ದಿನೇಶ್ ಮಾನೀರರ ಕುಮಟಾದ ಛಾಯಾಚಿತ್ರಗಳಿಗೆ ಸಂವಾದಿಯಾಗಿ ಮೂಡಿರುವ ಪ್ರಬಂಧ. ಮೋನೊಕಲರ್ ಚಿತ್ರಗಳ ನೆಪದಲ್ಲಿ ಪ್ರಬಂಧ ಕಟ್ಟಿಕೊಡುವ ಬಹುವರ್ಣದ ಬಿಂಬಗಳು ಅದೆಷ್ಟು ಮೋಹಕವಾಗಿವೆಯೆಂದರೆ, ಹಿಂದೆಂದೂ ಕಂಡಿರದವರ ಎದೆಯಲ್ಲೂ ಕುಮಟಾ ಹಾಗೂ ಅಘನಾಶಿಯ ನಕಾಶೆ ಅಚ್ಚಾಗಿಬಿಡುತ್ತದೆ. + +ಶಬ್ದಚಿತ್ರಗಳನ್ನು ಕಟ್ಟುವ ಯೋಗೀಂದ್ರರ ಶೈಲಿಗೆ ಒಂದು ಉದಾಹರಣೆ ನೋಡಿ: + +“ಮುಂಗಾರಿನ ಸಮಯದಲ್ಲಿ ಇಲ್ಲಿ ವ್ಯವಸಾಯದ ಜೊತೆಗೆ ಮೀನುಗಾರಿಕೆಯೂ ಸಾಗುತ್ತದೆ; ಭತ್ತವೂ ಬೆಳೆಯುತ್ತದೆ, ಹೊಳೆಮೀನೂ ಸಿಗುತ್ತದೆ! ಭತ್ತ ಬೆಳೆಯುವುದೂ ನೀರಲ್ಲಿ ಮೀನು ಹಿಡಿಯುವುದೂ ನೀರಲ್ಲೆ. ಅಘನಾಶಿನಿಯಲ್ಲಿ ದೋಣಿ ಸಂಚಾರ ನಿರಂತರ. ಸ್ಥಳೀಯ ಮೀನುಗಾರರು ಹತ್ತಿರದ ಐಗಳಕುರ್ವೆ ದ್ವೀಪಕ್ಕೆ ಹೋಗಿಬರುತ್ತಿರುತ್ತಾರೆ. ದೋಣಿ ನಿರ್ವಾಹಕರು ಬಲಿಷ್ಠ ಪುರುಷರೇ ಆಗಿರಬೇಕಾಗಿಲ್ಲ. ಇಲ್ಲಿನ ಮಕ್ಕಳು ಹೆಮ್ಮಕ್ಕಳು ದೋಣಿ ನಡೆಸುವುದು ಕಾಣಿಸುತ್ತದೆ. ಸಣ್ಣ ಮಕ್ಕಳೂ ದೋಣಿಯನ್ನು ತಾವು ಬಯಸಿದಂತೆ ಚಲಾಯಿಸಬಲ್ಲರು ತಾವು ನುಡಿಯುವಂತೆ ನಡೆಸಬಲ್ಲರು. ಹೀಗೆ ನೋಡುತ್ತಾ ಸಾಗುವಾಗ ನೂರಾರು ದೋಣಿಗಳು ಅಘನಾಶಿನಿಯಲ್ಲಿ ಕಾಣಿಸುತ್ತವೆ. ಕೆಲವು ಚಲಿಸುವವುಗಳು ಕೆಲವು ಕಟ್ಟಿಹಾಕಲ್ಪಟ್ಟುವುಗಳು. ದೋಣಿಗಳನ್ನು ಬಂಧಿಸಿದ ಗೂಟಕ್ಕೆ ಸಾವಿರ ಸಾವಿರ ಮೀನುಗಳನ್ನು ಮೋಸದಲ್ಲೊ ಸಾಹಸದಲ್ಲೊ ಹಿಡಿದ ಬಲೆಗಳನ್ನು ನೇತು ಹಾಕಿರುವುದೂ ಕಂಡೀತು. ದೋಣಿ ಮತ್ತು ಬಲೆಗಳನ್ನು ನಿಭಾಯಿಸುವ ಯಜಮಾನರು ಇಲ್ಲದ ಹೊತ್ತಲ್ಲಿ ಅವನ್ನು ಕಟ್ಟಿದ ಗೂಟವೇ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿರುತ್ತದೆ. ಕೆಲವು ಒಂಟಿ ದೋಣಿಗಳು ಕೆಲವು ಸಂಸಾರಸ್ಥ ದೋಣಿಗಳು ಮತ್ತೆ ಕೆಲವು ಯುಗಳಗೀತೆ ಹಾಡುವ ನಾವೆಗಳು. ಇಲ್ಲಿ ವಿಹರಿಸುವ ದೋಣಿಗಳು ಮತ್ತು ದೋಣಿಯನ್ನು ತೇಲಿಸುತ್ತ ಮೆಲ್ಲಗೆ ಹರಿಯುವ ನದಿಯೂ ಒಂದು ಇನ್ನೊಂದರ ಮುಖ ನೋಡಿ ಸನ್ನೆ ಮಾಡುತ್ತವೆ, ಮಾತನಾಡುತ್ತವೆ, ಸುಖ ದುಃಖ ಕಷ್ಟ ಸುಖ ಹಂಚಿಕೊಳ್ಳುತ್ತವೆ. ಅಘನಾಶಿನಿಯ ಹರಿವಿನ ಮೇಲಿನ ದೋಣಿಗಳು, ದೋಣಿಯ ಮೇಲಿನ ಮೋಡಗಳು ಕೈ ಕೈ ಹಿಡಿದು ಚಲಿಸಿದಂತೆ ಭಾಸವಾಗುತ್ತದೆ. ಪುರಾತನ ಪರಿಚಯದ ಪಾರಂಪರಿಕ ಗೆಳೆತನದ ಸಖಸಖಿಯರಂತೆ ಯಾವುದೊ ಕಾಲದ ಒಡನಾಡಿಗಳಂತೆ ನಗೆಬೀರುತ್ತವೆ.” + +ಮೇಲಿನ ಶಬ್ದಚಿತ್ರ ಅಘನಾಶಿನಿಯ ಪರಿಸರದ ಚೆಲುವನ್ನಷ್ಟೇ ಕಟ್ಟಿಕೊಡುವುದಿಲ್ಲ. ಆ ಪರಿಸರದಲ್ಲಿ ಬದುಕು ಕಂಡುಕೊಂಡ ಜೀವಗಳ ಸೌಂದರ್ಯವನ್ನೂ ಅವುಗಳ ತವಕ ತಲ್ಲಣಗಳನ್ನೂ ಕಾವ್ಯಕ್ಕೆ ಸಮೀಪವಾದ ಭಾಷೆಯಲ್ಲಿ ಪ್ರಬಂಧಕಾರರು ಕಾಣಿಸುತ್ತಾರೆ. + +ಯೋಗೀಂದ್ರರ ಪ್ರಬಂಧಗಳ ಕಟ್ಟುವಿಕೆ ಹಾಗೂ ನುಡಿಗಟ್ಟು ಜಯಂತ ಕಾಯ್ಕಿಣಿಯವರ ಕಥೆಗಳನ್ನು ನೆನಪಿಸುವಂತಹದ್ದು. ಯಾವುದೋ ಒಂದು ಕ್ಷಣ ಅಥವಾ ಒಂದು ಅನುಭವದ ಬೆನ್ನತ್ತಿ ನಡೆಸುವ ಪಯಣದಲ್ಲಿ ಓದುಗನನ್ನೂ ಅವನಿಗರಿವಿಲ್ಲದಂತೆಯೇ ಸಹಪಯಣಿಗನನ್ನಾಗಿಸಿಕೊಳ್ಳುವ ಕಾಯ್ಕಿಣಿಯವರ ಕಥೆಗಳ ಗಾಳಿ ಇಲ್ಲಿನ ಪ್ರಬಂಧಗಳಿಗೂ ಸೋಕಿದೆ. ಬಹುತೇಕ ಸಂದರ್ಭಗಳಲ್ಲಿ ನಿರ್ದಿಷ್ಟ ಉದ್ದೇಶವಿಲ್ಲದೆ ಸಾಗುವ ಅಥವಾ ಲಘುವಾದ ಎಳೆಯೊಂದರ ಚುಂಗು ಹಿಡಿದು ಪ್ರಾರಂಭವಾಗುವ ಈ ಅಲೆದಾಟ, ದಾರಿಯುದ್ದಕ್ಕೂ ಎಡತಾಕುವ ಅಗಣಿತ ಬಿಂಬಗಳನ್ನು ತನ್ನದಾಗಿಸಿಕೊಳ್ಳುತ್ತ ಕೊಲಾಜ್ ರೂಪ ಪಡೆದುಕೊಳ್ಳುತ್ತದೆ. ಈ ಬಗೆಯ ಅಲೆದಾಟ, ಬಹುತೇಕ ಸಂದರ್ಭಗಳಲ್ಲಿ ಸಾವಯವ ಅನುಭವವಾಗಿ ಮೈದಾಳುವ ಬದಲು, ಬಿಡಿ ಬಿಡಿ ಬಿಂಬಗಳ ರೂಪದಲ್ಲಿ ಕಳೆದುಹೋಗಿ, ಅಂತಿಮವಾಗಿ ಮೋಹಕ ಭಾಷೆಯ ಅನುರಣನವಾಗಿಯಷ್ಟೆ ಉಳಿದುಬಿಡುತ್ತದೆ. ಆದರೆ, ಯೋಗೀಂದ್ರರ ರಚನೆಗಳಲ್ಲಿ ಈ ಅಲೆದಾಟ ಮೋಹಕ ಭಾಷೆಯಲ್ಲಿ ಕಳೆದುಹೋಗದೆ, ಅರ್ಥಸಾಧ್ಯತೆಗಳ ಬೆಳಕನ್ನು ಓದುಗರ ಮನಸ್ಸಿಗೆ ಹಾಯಿಸುತ್ತದೆ. ಆ ಬೆಳಕಿನಲ್ಲಿ ಓದುಗ ತನ್ನ ಕೈಲಾದಷ್ಟು ದೂರ ಸಾಗಲಿಕ್ಕೂ ಅವಕಾಶ ಕಲ್ಪಿಸುತ್ತದೆ. ಈ ಬಗೆಯ ಅಲೆದಾಟಕ್ಕೆ ಉದಾಹರಣೆಗಳಾಗಿ, ‘ನನ್ನ ಕಿಟಕಿ’, ‘ಕಚೇರಿಯೊಂದರ ಕಿಚನ್ ಕಥನ’ ಹಾಗೂ ‘ಪಾಪಡಂ ಪುರಾಣ’ಗಳನ್ನು ಗಮನಿಸಬಹುದು. ಸಂಕಲನದ ಅತ್ಯಂತ ಯಶಸ್ವಿ ರಚನೆಗಳೂ ಆದ ಈ ಪ್ರಬಂಧಗಳನ್ನು, ಪ್ರಬಂಧಕಾರರಾಗಿ ಯೋಗೀಂದ್ರ ಅವರು ರೂಢಿಸಿಕೊಂಡಿರುವ ಶೈಲಿಯ ಚೆಲುವಿನ ಹಿನ್ನೆಲೆಯಲ್ಲೂ ಗಮನಿಸಬಹುದು. + +ಸಂತೆಯ ಬಯೋಸ್ಕೋಪ್ ಡಬ್ಬಿ ವಿಶ್ವರೂಪ ತೋರಿಸಿದಂತೆ, ‘ನನ್ನ ಕಿಟಕಿ’ ಪ್ರಬಂಧದ ಕಿಟಕಿ ಮಾಯಾಲೋಕಕ್ಕೆ ಬೆಳಕಿಂಡಿ. ‘ನನ್ನ ಕಿಟಕಿ’ ಬರಹಗಳ ಪ್ರಬಂಧಕಾರರಾಗಿ ಯೋಗಿಂದ್ರರ ಪ್ರಾತಿನಿಧಿಕ ಪ್ರಬಂಧವಾಗಿಯೂ ನೋಡಬಹುದು. ‘ಒಳಗೇ ಇದ್ದು ಹೊರಜಗತ್ತಲ್ಲಿ ಇಣುಕುವವರಿಗೆ ಈ ಕಿಟಕಿಯೇ, ಬಾಗಿಲು ರಸ್ತೆ ಸೇತುವೆ ಎಲ್ಲವೂ.’ ಈ ಕಿಟಕಿ ಯೋಗಿಂದ್ರರ ಬಹುತೇಕ ಪ್ರಬಂಧಗಳಲ್ಲಿ ದರ್ಶನದ ರೂಪದಲ್ಲಿ ಮರುಕಳಿಸುತ್ತದೆ. ‘ಕಿಟಕಿಯ ಚೌಕದ ಒಂದು ಬದಿಯಿಂದ ಯಾವ ಆಕೃತಿಯ ಪ್ರವೇಶವಾದರೂ ಅದರ ಮುನ್ನೋಟ ಮೊದಲು ಸಿಗುತ್ತದೆ, ಮತ್ತೆ ಅದು ಕಿಟಕಿಯಿಂದ ನಿರ್ಗಮಿಸುವಾಗ ಹಿನ್ನೋಟದ ದರ್ಶನವಾಗುತ್ತದೆ. ಒಂದೇ ವ್ಯಕ್ತಿಯ ಎರಡು ಆಯಾಮಗಳು ಎರಡು ವಿಭಿನ್ನ ವ್ಯಕ್ತಿಗಳಾಗಿ ಕಾಣಿಸುವುದೂ ಇದೆ.’ + +ಕಿಟಕಿಯ ಒಳ-ಹೊರಗಿನ ನೋಟ ಮತ್ತಷ್ಟು ವಿಸ್ತಾರಗೊಂಡಿರುವ ‘ಕಚೇರಿಯೊಂದರ ಕಿಚನ್ ಕಥನ’ – ಕಾರ್ಪೊರೇಟ್ ಕಚೇರಿಯ ಸೃಜನಶೀಲ ಸಂಘರ್ಷ ಮತ್ತು ಸಂಬಂಧಗಳಿಗೆ ಅಲ್ಲಿನ ಪುಟ್ಟ ಅಡುಗೆಮನೆ ವೇದಿಕೆಯಾಗುವುದನ್ನು ಸೂಚಿಸುವ ಪ್ರಬಂಧ. ಅಡುಗೆಮನೆಯ ಚೌಕಟ್ಟಿನಲ್ಲಿ ಮನೆಮಂದಿಯ ಸಂಬಂಧಗಳ ಹರಳುಗಟ್ಟುವ ಕೌಟುಂಬಿಕ ತಾತ್ವಿಕತೆಯನ್ನು ಬಹುರಾಷ್ಟ್ರೀಯ ಕಂಪನಿಯೊಂದರ ಕಿಚನ್ ಮೂಲಕ ಅನ್ವಯಿಸುವ ಈ ಪ್ರಬಂಧ, ಬಹುತ್ವದ ಪ್ರಯೋಗಶಾಲೆಯ ರೂಪದಲ್ಲಿ ಕಿಚನ್ ಅನ್ನು ಗುರ್ತಿಸುತ್ತದೆ. “ಅಡುಗೆಮನೆಯ ಉದಾತ್ತತೆ ಹೆಮ್ಮೆ ಹೊಣೆಗಾರಿಕೆಗಳು ನಮ್ಮ ಕಿಚನ್‌ಗೆ ಇಲ್ಲದಿದ್ದರೂ ನಮ್ಮ ಕಚೇರಿಯ ಮಟ್ಟಿಗೆ ಈ ಕಿಚನ್ ‘ಲಬ್ ಡಬ್’ ಒದಗಿಸುತ್ತದೆ. ಮತ್ತೆ ಇಲ್ಲಿ ರುಚಿ, ಹದ ಬೆರಸುವುದು, ತೊಳೆಯುವುದು, ಒರಸುವುದು ಎಲ್ಲವೂ ನಮ್ಮದೇ ಉಸಾಬರಿ; ಚಾಕರರೂ ಯಜಮಾನರೂ ನಾವೇ” ಎನ್ನುವ ಪ್ರಬಂಧ, ಅಡುಗೆಮನೆಯ ಜೀವಶಕ್ತಿಯನ್ನು ಮನಗಾಣಿಸುತ್ತದೆ. ಇಲ್ಲಿನ ಅಡುಗೆಮನೆ ಹಲವು ತಿನಿಸು ಪಾನೀಯಗಳ ಸಂಗಮ. ಹತ್ತಿಪ್ಪತ್ತು ದೇಶ ಊರುಗಳ ಪ್ರಾಣಿ ಸಸ್ಯಗಳನ್ನು ಮೂಲವಾಗಿ ಹೊಂದಿದ ಆಹಾರ ಕಿಚನ್‌ನಲ್ಲಿ ಬಿಸಿಯಾಗುತ್ತದೆ. ‘ಇಂಗ್ಲಿಷರಿಗೆ ಅತಿ ಪ್ರಿಯವಾದ ಬೇಕನ್, ಬೀಫ್, ಲ್ಯಾಂಬ್, ಚಿಕನ್‌ಗಳಿಂದ ಸುಪುಷ್ಟವಾದ ಆಹಾರದ ಜೊತೆ ಎಳೆಎಳೆಗಳು ಅಪ್ಪಿತಬ್ಬಿಕೊಂಡ ಚೈನಾದ ನೂಡಲ್ಸ್, ಇಟಾಲಿಯನ್ನರ ವಿಶಿಷ್ಟ ಆಕಾರದ ಪಾಸ್ತಾ, ಇನ್ನೆಲ್ಲಿಯದೋ ತೆಳುದಪ್ಪದ ಸೂಪುಗಳ ಆತ್ಮಗಳೂ ಸೇರಿ ಹುಟ್ಟಿದ ಹೊಸ ಜೀವಿಯೊಂದು ಬಂಧಿಸಿಟ್ಟ ಭೂತದಂತೆ ಕಿಚನ್ನಿನಲ್ಲಿ ಸುಳಿಯುತ್ತದೆ.’ ಮನೆಯ ಅಡುಗೆಮನೆಯಲ್ಲಿ ಸಂಬಂಧಗಳು ಸೊಗಸುಗೊಳ್ಳುವ ಬಗೆ ಬಹುರಾಷ್ಟ್ರೀಯ ಕಂಪನಿಯ ಕಿಚನ್‌ನಲ್ಲೂ ನಿಜವೆನ್ನಿಸುತ್ತದೆ. ಅಡುಗೆಮನೆಯ ಕೇಂದ್ರದೊಳಗೆ ಭೂಗೋಳ ದರ್ಶನ ಮಾಡಿಸುವ ಈ ವಿಶಿಷ್ಟ ಪ್ರಬಂಧ ಸೃಜನಶೀಲ ಪ್ರಬಂಧಕಾರನೊಬ್ಬ ಮಾಡಬಹುದಾದ ಸಾರ್ಥಕ ವಿಹಾರದಂತಿದೆ. + + + +ಕಿಚನ್ ಕಥನದ ಕವಲಿನ ರೂಪದಲ್ಲಿ ‘ಪಾಪಡಂ ಪುರಾಣ’ ಪ್ರಬಂಧವನ್ನು ಓದಿಕೊಳ್ಳಬಹುದು. ಭಾರತ ಉಪಖಂಡದಲ್ಲಿ ‘ಕಿರುಸಹಾಯಕ’ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹಪ್ಪಳ, ಬ್ರಿಟನ್ ಪರಿಸರದಲ್ಲಿ ಸಂಸ್ಕೃತಿಯ ಚಹರೆಯಾಗಿ ಚಲಾವಣೆಗೊಳ್ಳುತ್ತದೆ. ‘ಬಿಗ್ ಬ್ರದರ್’ ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿಯನ್ನು ಪರಕೀಯಳು, ಭಾರತೀಯ ಮೂಲದವಳು ಎಂದು ಹೀಗಳೆಯಲು ಬ್ರಿಟನ್‌ನ ಸಹಸ್ಪರ್ಧಿಗೆ ಒದಗಿಬಂದ ಪದ ಹಪ್ಪಳವೇ! ‘ಶಿಲ್ಪಾ ಪಾಪಡಂ’ ಎನ್ನುವ ಲೇವಡಿ, ಜನಾಂಗೀಯ ನಿಂದನೆಯ ವಿಷಯವಾಗಿ ಇಂಗ್ಲಿಷ್‌ನ ಪಾರ್ಲಿಮೆಂಟ್‌ನಲ್ಲೂ ಚರ್ಚೆಗೊಳಗಾಯಿತು. ಕಣ್ಣುಗಳಲ್ಲಿ ನೀರು ತುಂಬಿಕೊಂಡು ‘ಇಂದಿನ ಬ್ರಿಟನ್ ಹೀಗಿದೆಯೇ?’ ಎಂದು ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿ ಕೇಳಿದ ಪ್ರಶ್ನೆ, ಶಿಸ್ತು, ಪರಂಪರೆ ಮತ್ತು ಸಂಸ್ಕೃತಿಯಲ್ಲಿ ತಮ್ಮನ್ನು ಶ್ರೇಷ್ಠರು ಎಂದು ತಿಳಿಯುವ ಇಂಗ್ಲಿಷರಿಗೆ ತಲೆ ತಗ್ಗಿಸಲು ಕಾರಣವಾಯಿತು. ಹಪ್ಪಳದ ಪ್ರಸ್ತಾಪ ಬ್ರಿಟಿಷರನ್ನು ಲಜ್ಜೆಗೀಡು ಮಾಡಿತ್ತು. ಕೊನೆಗೆ, ತಮ್ಮೂರಿನ ಹೆಣ್ಣುಮಗಳನ್ನು ಸೋಲಿಸುವ ಮೂಲಕ ಭಾರತೀಯಳನ್ನು ಗೆಲ್ಲಿಸಿದರು. ಬ್ರಿಟಿಷರ ಸಂಸ್ಕಾರಕ್ಕೆ ಉದಾಹರಣೆಯಂತೆ ಕಾಣಿಸುವ ಈ ಪಾಪಡಂ ಪುರಾಣ, ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಭಾರತವನ್ನು ನೆನಪಿಸುವ ಮತ್ತು ಅವರು ಇದ್ದಲ್ಲಿಂದಲೇ ಇಂಡಿಯಾಕ್ಕೊಂದು ಸೇತುವೆ ಕಟ್ಟುವ ಸಾಮರ್ಥ್ಯ ಹಪ್ಪಳಕ್ಕಿರುವುದನ್ನು ಸೂಚಿಸುತ್ತದೆ. ಮಹಿಳಾ ಉದ್ಯೋಗದ ಯಶಸ್ಸಿನ ಉದಾಹರಣೆಯಾದ ‘ಲಿಜ್ಜತ್ ಪಾಪಡ್’ನ ಯಶೋಗಾಥೆಯೊಂದಿಗೆ ಕೊನೆಗೊಳ್ಳುವ ಈ ಪ್ರಬಂಧದೊಂದಿಗೆ, ‘ಒಂದು ನೂರು ವರ್ಷಗಳ ಹಿಂದಿನ ಒಂದು ಹತ್ಯಾಕಾಂಡದ ಕುರಿತು ಕ್ಷಮೆ’ ರಚನೆಯನ್ನು ಜೊತೆಗಿಟ್ಟು ನೋಡಬಹುದು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲು ಹಿಂಜರಿಯುತ್ತಲೇ ಇರುವ ಬ್ರಿಟಿಷ್ ಪ್ರಭುತ್ವದ ಸೋಗಲಾಡಿತನವನ್ನು ಈ ಬರಹ ಪ್ರಶ್ನಿಸುತ್ತದೆ. ಹಪ್ಪಳದ ವಿಷಯದಲ್ಲಿ ತೋರುವ ಸಂವೇದನೆ ಸಾಮೂಹಿಕ ಹತ್ಯಾಕಾಂಡದ ವಿಷಯದಲ್ಲಿ ಕುಂಟತೊಡಗಿದೆೆ. ಈ ಘಟನೆಯೊಂದಿಗೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಪರವಾಗಿ ಹೋರಾಡಿ ಸಾವಿಗೀಡಾದ ತೊಂಬತ್ತು ಸಾವಿರ ಯೋಧರ ಬಲಿದಾನದ ಬಗ್ಗೆ ಬ್ರಿಟಿಷರು ಕೃತಘ್ನರಾಗಿರುವುದನ್ನೂ ಪ್ರಬಂಧಕಾರರು ಗುರ್ತಿಸುತ್ತಾರೆ. ೧೮೬೦ರ ನಂತರ ಪೂರ್ವ ಮತ್ತು ದಕ್ಷಿಣ ಭಾರತ ತೀವ್ರ ಬರದ ದವಡೆಗೆ ಸಿಲುಕಿದ್ದಾಗಲೂ, ಭಾರತದಿಂದ ಬ್ರಿಟನ್‌ಗೆ ಧಾನ್ಯಗಳನ್ನು ಸಾಗಿಸುವುದನ್ನು ಮುಂದುವರಿಸಿದ ‘ಬ್ರಿಟಿಷ್ ರಾಜ್’ ಕ್ರೌರ್ಯದಿಂದ ಲಕ್ಷಾಂತರ ಜನ ಸಾವಿಗೀಡಾದುದನ್ನೂ ಪ್ರಬಂಧ ಸ್ಮರಿಸಿಕೊಳ್ಳುತ್ತದೆ. ಇತಿಹಾಸದ ಸಾಧನೆಗಳನ್ನು ಹೆಮ್ಮೆಯಿಂದ ಬಿಂಬಿಸಿಕೊಳ್ಳುವ, ದುಷ್ಕೃತ್ಯಗಳ ಹೊಣೆಗಾರಿಕೆಯನ್ನು ಮಾತ್ರ ನಿರಾಕರಿಸುವ ಸೋಗಲಾಡಿತನವನ್ನು ಈ ಪ್ರಬಂಧ ಸೂಕ್ಷ್ಮವಾಗಿ ಚಿತ್ರಿಸುತ್ತದೆ. + +ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ. ‘ರಜೆ, ರೈಲು ಗಾಲಿಗಳು ಮತ್ತು ಸುಬ್ರಹ್ಮಣ್ಯ ಕ್ರಾಸ್’ – ರೈಲು ಪ್ರಯಾಣವೊಂದರ ಅನುಭವ. ‘ರಿಕ್ಷಾ ಯಶವಂತಪುರ ನಿಲ್ದಾಣವನ್ನು ತಲುಪುವ ಹೊತ್ತಿಗೆ, ಜೀವನಚಕ್ರದೊಳಗಿನ ಬಾಲ್ಯ, ಯೌವನ, ಮುಪ್ಪು ಇವು ಯಾವುದನ್ನೂ ತಿಳಿಯದ ರೈಲುಚಕ್ರಗಳು ಹಳಿಯ ಮೇಲೆ ನನಗಿಂತ ಮೊದಲೇ ಬಂದು ನಿಂತಾಗಿದೆ.’ + +‘ರಜೆ, ರೈಲು ಗಾಲಿಗಳು ಮತ್ತು ಸುಬ್ರಹ್ಮಣ್ಯ ಕ್ರಾಸ್’ ಪ್ರಬಂಧದಲ್ಲಿ, ‘ಸಮುದ್ರ ಖಾಲಿ ಆದರೆ, ಸಮುದ್ರ ಇದ್ದ ಜಾಗದಲ್ಲಿ ದಿನವೂ ಸ್ವಲ್ಪ ಸ್ವಲ್ಪ ನೀರು ಹಾಕಿ ಮತ್ತೆ ಸ್ವಲ್ಪ ಉಪ್ಪು ಹಾಕಿ ಕದಡಿ ಹೊಸ ಸಮುದ್ರ ತಯಾರಿ ಮಾಡುತ್ತೇನೆ ಎಂದು ಹೇಳಿ ಸಣ್ಣ ಹುಡುಗ ನಿರಾಳವಾಗಿದ್ದಾನೆ. ಯಾವತ್ತು ಊರಿಗೆ ಬಂದರೂ, ಸಮುದ್ರವನ್ನು ಯಾರು ಕದ್ದುಕೊಂಡು ಹೋದರೂ, ಸಮುದ್ರವೇ ಇಲ್ಲ ಆಗುವ ಸಂದರ್ಭ ಇಲ್ಲ ಎಂದು ತಿಳಿದು ನಾನೂ ಸಮಾಧಾನವಾಗಿದ್ದೇನೆ’ ಎನ್ನುವ ಮಾತು ಬರುತ್ತದೆ. ಯಾರೂ ಕದಿಯಲಾಗದ ಈ ಸಮುದ್ರ ಭೌತಿಕವಾದುದಷ್ಟೇ ಅಲ್ಲ, ಮಾನಸಿಕವಾದುದೂ ಹೌದು. ಯೋಗೀಂದ್ರರ ಪ್ರಬಂಧಗಳಲ್ಲಿನ ಊರು ಬದಲಾವಣೆಗೊಡ್ಡಿಕೊಂಡ ಭೌತಿಕ ಪ್ರದೇಶವೂ ಹೌದು, ಭಾವಕೋಶದಲ್ಲಿನ ಬದಲಾಗದ ಪರಿಸರವೂ ಹೌದು. ಮರವಂತೆಯ ಕುರಿತಾದ ‘ಬೇಲೆಬದಿಯ ಆಮೆಪುರಾಣ’ ಪ್ರಬಂಧ ವ್ಯಕ್ತಿಚಿತ್ರದಂಥ ರಚನೆ. ಊರಿನ ಕುರಿತ ಯೋಗಿಂದ್ರರ ಪ್ರಬಂಧಗಳನ್ನು ಒಂದೇ ಕಥನದ ಹಲವು ತುಣುಕುಗಳಂತೆ ಜೋಡಿಸಿಕೊಂಡು ಓದಬಹುದು. ಎತ್ತ ಮುಖ ಮಾಡಿ ಬಿಟ್ಟರೂ ಕಡಲಿನತ್ತ ಮುಖ ಮಾಡುತ್ತಾ ಹೊರಡುವ ಆಮೆ ಮರಿಗಳಂತೆ ಪ್ರಬಂಧಕಾರರು ಮರಳುವುದೂ ಊರಿಗೆ, ಸಮುದ್ರದ ಮೊರೆತಕ್ಕೆ. ನಮ್ಮ ಬದುಕು ಮಹಾವೃಕ್ಷವಾಗಿ ಕೊಂಬೆರೆಂಬೆಗಳನ್ನು ಆಕಾಶಕ್ಕೆ ಹರಡಿಕೊಂಡಿದ್ದರೂ ಮಣ್ಣಮರೆಯಲ್ಲಿ ಬೇರುಗಳು ಹುದುಗಿರುವಂತೆ ನಮ್ಮ ಬದುಕೂ ಇರುವುದನ್ನು ಪ್ರಬಂಧಕಾರರು ಸೂಚಿಸುತ್ತಿರುವಂತಿದೆ. + +(ರಘುನಾಥ ಚ.ಹ.) + +ಅಪ್ಪಟ ಪ್ರಬಂಧಗಳ ಜೊತೆಗೆ, ಪ್ರಬಂಧಗಳಾಗಲು ಹವಣಿಸುವ ರಚನೆಗಳೂ ಈ ಸಂಕಲನದಲ್ಲಿವೆ. ‘ಖಾಲಿ ಕುರ್ಚಿ’ ಬರಹವನ್ನು ಕಥೆಯಂತೆಯೂ, ಡೈರಿಯ ಪುಟವೊಂದರ ದಾಖಲಾತಿಯಂತೆಯೂ ಓದಿಕೊಳ್ಳಬಹುದು. ಸಹೋದ್ಯೋಗಿಯೊಬ್ಬಳ ಗೈರುಹಾಜರಿಯಲ್ಲಿ ಅವಳು ಕೂರುತ್ತಿದ್ದ ಕುರ್ಚಿಯ ಖಾಲಿತನದಲ್ಲಿ ಅವಳ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ತಂತ್ರ ಚೆನ್ನಾಗಿದೆ. ಅವಳ ಹಾಜರಿಯಲ್ಲಿ ಆಕೆಯ ಬಗೆಗಿದ್ದ ಪೂರ್ವಗ್ರಹಗಳು, ಈಗ ಗೈರುಹಾಜರಿಯಲ್ಲಿ ತಿಳಿಯಾಗಿ, ಆಕೆಯನ್ನು ಕಚೇರಿಯಲ್ಲಿನ ಎಲ್ಲರೂ ತಮಗರಿವಿಲ್ಲದಂತೆಯೇ ಹಚ್ಚಿಕೊಂಡಿದ್ದಾರೆ. ಸಹೋದ್ಯೋಗಿಯ ಗೈರುಹಾಜರಿಯಲ್ಲಿ, ಆಕೆ ಕಳುಹಿಸಿದ ಕೇಕುಗಳನ್ನು ತಿನ್ನುತ್ತ ಅವಳ ಹುಟ್ಟುಹಬ್ಬದ ಆಚರಣೆ ನಡೆಯುತ್ತದೆ. ಆ ಸಂಭ್ರಮದಲ್ಲಿ, ಚಿನ್ನದ ಕೂದಲುಗಳನ್ನು ಇಳಿಬಿಟ್ಟಿದ್ದ ಅವಳ ತಲೆಯಲ್ಲಿ ಕೂದಲಿನ ಕುರುಹೇ ಇಲ್ಲದ್ದನ್ನು ಮೆಲುಗಾಳಿಗೆ ನಕ್ಕು ಹಾಡಿ ತೊನೆದು ತೂಗುತ್ತಿದ್ದ ಬಂಗಾರದ ಕೇಶ ರಾಶಿ ಮಾಯವಾದುದನ್ನು ಸಹೋದ್ಯೋಗಿಯೊಬ್ಬ ಕೇಕು ತಿನ್ನುತ್ತಲೇ ತಿಳಿಸುವ ಕ್ರೌರ್ಯದ ಕಥನವೂ ಇಲ್ಲಿದೆ. + +‘ಸೈಬರ್ ಯುದ್ಧ’ ಬರಹ ಗುಂಪಿಗೆ ಸೇರದ ಪದದಂತಿದೆ. ‘ಶಿಕ್ಷಕರ ದಿನ ಅಕ್ಷರ ನಮನ’, ‘ಸ್ಕೂಲ್ ಬ್ಯಾಗ್ ರೂಪಕ’ ಬರಹಗಳು ಭಾರತ ಮತ್ತು ಬ್ರಿಟನ್‌ನಲ್ಲಿನ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಚಿತ್ರಗಳನ್ನು ನೀಡುವಂತಹವು. ‘ಕೇಟಿಯ ಹೆರಿಗೆ ರಜೆ’, ‘ಬ್ರಿಸ್ಟಲ್ ಬಾನಿನಲ್ಲಿ ಬಿಸಿಗಾಳಿ ಬಲೂನುಗಳು’, ‘ಸೆಪ್ಟೆಂಬರ್ ಎನ್ನುವ ತಲ್ಲಣದ ಮಾಸ’ – ಇವೆಲ್ಲವೂ ಅನಿವಾಸಿ ಭಾರತೀಯ ಲೇಖಕನ ಅಂಕಣ ಬರಹಗಳಾಗಿ ಗಮನಸೆಳೆಯುತ್ತವೆ. ಪ್ರಬಂಧ ಧ್ವನಿ ಕಡಿಮೆ ಇರುವ ಲಹರಿಗಳ ರೂಪದಲ್ಲಿ ಇವು ಓದಿಸಿಕೊಳ್ಳುತ್ತವೆ. ಜಾವೇದ್ ಅಬಿದಿ ಅವರ ಕುರಿತಾದ ‘ತನ್ನಂತಿರುವವರ ಒಳಿತಿಗಾಗಿಯೇ ಬದುಕಿದ್ದ ವಿಶಿಷ್ಟ ಚೇತನ’ ಹಾಗೂ ‘ಸುಳಿಗಾಳಿಯಂತಿದ್ದ ಸುಧೀರನ ನೆನಪು’ ವ್ಯಕ್ತಿಚಿತ್ರ ಬರಹಗಳಾಗಿವೆ. ‘ಮೊಘಲ್ ಎ ಆಜಮ್’, ‘ಜೀರ್ಜಿಂಬೆ’, ‘ರಿಸರ್ವೇಷನ್’ ಸಿನಿಮಾಗಳ ಕುರಿತ ವಿಶ್ಲೇಷಣೆಗಳು ದೃಶ್ಯಮಾಧ್ಯಮದ ಬಗೆಗಿನ ಯೋಗಿಂದ್ರರ ಆಸಕ್ತಿಯ ಫಲಶ್ರುತಿಗಳಿಂತಿವೆ. + + + +ಅಂಕಣ ಬರಹಗಳ ರೂಪದ ರಚನೆಗಳನ್ನು ಹೊರತುಪಡಿಸಿ ನೋಡಿದರೆ, ‘ನನ್ನ ಕಿಟಕಿ’ ಸೊಗಸಾದ ಪ್ರಬಂಧಗಳ ಸಂಕಲನ. ಹೊಸ ಬೆಳಕಿಗೆ ಹಂಬಲಿಸುತ್ತಿರುವ ಕನ್ನಡ ಪ್ರಬಂಧ ಪ್ರಕಾರಕ್ಕೆ ದೊರೆತಿರುವ ಹೊಸ ಕಿಟಕಿಯ ರೂಪದಲ್ಲಿ ಈ ಕೃತಿ ಮುಖ್ಯವಾದುದು. ಯೋಗೀಂದ್ರರ ಪ್ರಬಂಧ ಕೌಶಲ ಮುಂದಿನ ದಿನಗಳಲ್ಲಿ ಪಡೆಯಬಹುದಾದ ರೂಪದ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಾಗಿ ನಾನಂತೂ ತೆರೆದಕಣ್ಣಾಗಿರುವೆ. ಅರ್ಥಪೂರ್ಣ ಪ್ರಬಂಧಗಳನ್ನು ನೀಡಿದ್ದಕ್ಕಾಗಿ ಮರವಂತೆಯ ಯೋಗೀಂದ್ರರಿಗೆ ಅಭಿನಂದನೆ. ಈ ಸಂಕಲನ, ಓದುಗರಿಗೆ ಹೊಸ ಅನುಭವದ ಕಿಟಕಿಗಳನ್ನು ತೆರೆಯುತ್ತದೆಂದು ನಂಬುವೆ. ಹಾಗೆಯೇ, ಓದುಗರ ಪ್ರೀತಿಯ ಕಾವು ಪ್ರಬಂಧಕಾರರಿಗೆ ಸಾಧ್ಯತೆಗಳ ಹೊಸ ಬೆಳಕಿಂಡಿಗಳನ್ನು ಕಾಣಿಸಲೆಂದು ಪ್ರೀತಿಯಿಂದ ಹಾರೈಸುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_175.txt b/Kenda Sampige/article_175.txt new file mode 100644 index 0000000000000000000000000000000000000000..acbc5bb0783c0f030490a17e8cae43df18561ab3 --- /dev/null +++ b/Kenda Sampige/article_175.txt @@ -0,0 +1,39 @@ +ನನ್ನ ಶಾಲೆ ಇದ್ದಿದ್ದು ರಾಜಾಜಿನಗರ ಮೊದಲ ಬ್ಲಾಕ್‌ನಲ್ಲಿ. ಅದು ಶುರುವಾಗುತ್ತಿದ್ದುದು ನಡು ಮಧ್ಯಾಹ್ನ 12ಕ್ಕೆ ಮತ್ತು ಮುಗಿಯುತ್ತಿದ್ದುದು ಸಂಜೆ 5.30 ಕ್ಕೆ. ಬೆಳಿಗ್ಗೆ 10 ಗಂಟೆಗೆ ಊಟ ಮಾಡಿ ಶಾಲೆಗೆ ನಡೆದರೆ ಮತ್ತೆ ಸಂಜೆಯವರೆಗೆ ಖಾಲಿ ಹೊಟ್ಟೆ. ದಿನವೂ ವಾಪಸ್ ಬರುವಷ್ಟರಲ್ಲಿ ಹಸಿವಿನಿಂದ ಸುಸ್ತಾಗಿ ಜೋಲು ಮೋರೆ ಹೊತ್ತು ವಾಪಸ್ ಬರುತ್ತಿದ್ದೆ. ‘ಹಾಳು ಹೊಟ್ಟೆಯಲ್ಲಿ ಯಾಕಿರಬೇಕು, ಸ್ಕೂಲಿಗೆ ಡಬ್ಬಿ ಕಟ್ಟಿಕೊಂಡು ಹೋಗಲೇನು ಧಾಡಿ’ ಎಂದು ಅಮ್ಮ ದಿನವೂ ಹೇಳುತ್ತಲೇ ಇದ್ದರೂ ಕೇಳುವವಳಾ ನಾನು? ಚಂಡಿಯ ವಂಶಜಳು! ಶಾಲೆಯ ಬಳಿಯೂ ತಿನ್ನಲು ಏನೂ ಸಿಗುತ್ತಿರಲೂ ಇಲ್ಲ… ಶಾಲೆಯ ಎದುರಿಗೆ ಇದ್ದ ಒಂದೇ ಬೇಕರಿಯಲ್ಲಿ ವೆಜ್ ಪಫ್ ಬಿಟ್ಟು. ಈಗ ಅಲ್ಲಿನ ಅಂಗಡಿಗಳ ಸಾಲು ನೋಡಿದರೆ ಹೊಟ್ಟೆ ಉರಿಯುತ್ತದೆ ‘ಆಗ ಎಲ್ಲಿ ಹಾಳಾಗಿಹೋಗಿದ್ರು ಇವರೆಲ್ಲ’ ಎಂದು! ಒಮ್ಮೊಮ್ಮೆ ಪಫ್ ತಿನ್ನುತ್ತಿದ್ದೆವಾದರೂ ದಿನವೂ ತಿನ್ನಲು ಹಾಗೆಲ್ಲ ಹಣವಿರುತ್ತಿರಲಿಲ್ಲ. ಅವೆಲ್ಲ ಎಂದೋ ಒಮ್ಮೆ ಸ್ಪೆಷಲ್ ಸಂದರ್ಭಗಳಿಗೆ ಮಾತ್ರ ಮೀಸಲು. ಉಳಿದಂತೆ ಮನೆಯದ್ದು ತಿನ್ನಬೇಕು, ಇಲ್ಲವಾದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ… ಎರಡೇ ಆಯ್ಕೆ… ನನಗೆ ಮಾತ್ರವಲ್ಲ, ಮಧ್ಯಮ ವರ್ಗದ ಎಲ್ಲ ಮಕ್ಕಳಿಗೂ. + +(ಭಾರತಿ ಬಿ.ವಿ.) + +ಇದು ಸಾಲದು ಎಂದು ಮತ್ತೊಂದು ತಲೆಹರಟೆ ಎಂದರೆ ಬಸ್ ಪಾಸ್ ಬೇಡವೆಂದು ನಿರಾಕರಿಸಿ ಶಾಲೆಗೆ ನಡೆದು ಹೋಗಿ ಬರುವುದು. ಬೆಳಿಗ್ಗೆ ನಡೆಯಲು ಹೊಟ್ಟೆ ಭಾರ ಮತ್ತು ಹಿಂದಿರುಗುವಾಗ ಖಾಲಿ ಹೊಟ್ಟೆಯ ಸಂಕಟ. ಹೀಗಿದ್ದೂ ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ನಂತರ ರೂಪ, ನಂತರ ಶೈಲಾ ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ನಾನು ಅವರ ಕಡೆಗೆಲ್ಲ ಒಂದು ಕೆಂಗಣ್ಣಿನ ನೋಟ ಬೀರುತ್ತಾ ಸಾಗುವುದು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?! ಇದ್ದಿದ್ದರಲ್ಲಿ ನನ್ನ ಗೆಳತಿ ಗೀತಾ ಮಾತ್ರ ಧೈರ್ಯ ತಾಳಿ ಮೆಲ್ಲನೆ ದನಿಯಲ್ಲಿ ‘ಹೋಗಪ್ಪ ತಿಂದ್ಕೊಂಡು ಬಾ’ ಎನ್ನುತ್ತಿದ್ದಳು. ನಾನು ಕೆಕ್ಕರಿಸಿ ಅವಳನ್ನು ನೋಡುತ್ತಾ ನಡೆಯುತ್ತಿದ್ದೆ ‘ತಿಂದ್ಕೊಂಡು ಬರುವುದರಲ್ಲಿ ಕತ್ತಲಾಯಿತು ಎಂದು ಏನೋ ಓದಿ ಕಡೆದು ಕಟ್ಟೆ ಹಾಕುವವರಂತೆ ಮನೆ ಸೇರುತ್ತಾಳೆ… ತಿಂದ್ಕೊಂಡು ಬರಬೇಕಂತೆ… ಗರ್ರ್ ರ್ರ್ ರ್ರ್ ರ್ರ್ ರ್ರ್… ಒಟ್ಟಿನಲ್ಲಿ ಆಂಗ್ರಿ ಯಂಗ್ ಗರ್ಲ್. ಯಾತಕ್ಕೋ ಯಾರ ಮೇಲೋ ಸಿಟ್ಟು ಮಾಡಿಕೊಳ್ಳುವುದು ನನ್ನ ಹಕ್ಕು! + +ಆಯ್ತು ಇಷ್ಟೆಲ್ಲ ಸುಸ್ತಿರುವಾಗ ತೆಪ್ಪಗೆ ಮನೆಯೊಳಗೆ ಹೋಗಿ ತಿನ್ನಬೇಕು ತಾನೇ? ಆದರೆ ಅದು ಹೇಗಾಗುತ್ತದೆ ನಾನಿಲ್ಲದೇ ಸಂಸಾರ ನಡೆದುಬಿಡುತ್ತದಾ ನೀವೇ ಹೇಳಿ! ಊರ ಉಸಾಬರಿಯೆಲ್ಲ ಬೇಕು ನನಗೆ. ನಾನು ಗಮನಿಸದಿದ್ದರೆ ಮನೆ ಹಾಳಾಗಿ ಹೋಗುತ್ತದೆ ಎನ್ನುವ ಭ್ರಮೆ. ಮನೆಗೆ ಬಂದ ಕೂಡಲೆ ಬದಿಯ ಬಾಗಿಲು ಹಾಕಿದೆಯಾ. ರಾತ್ರಿ ಮಲಗುವಾಗ ಮನೆಯ ಮುಂಬಾಗಿಲು ಹಾಕಿದೆಯಾ, ದೀಪಗಳು ಆರಿಸಿದೆಯಾ, ನಲ್ಲಿಗಳು ಬಂದ್ ಆಗಿದೆಯಾ (ಏನೋ ನೀರು ಸುರಿದು ಹೋಗುವಂತೆ!) ಎಂದು ಖುದ್ದು ನೋಡುವವರೆಗೆ ನೆಮ್ಮದಿ ಇರುತ್ತಿರಲಿಲ್ಲ. + +ಅವತ್ತೂ ಹಾಗೆಯೇ… ಸುಸ್ತಾಗಿ ಮನೆಯೊಳಗೆ ಇನ್ನೇನು ಕಾಲಿಡಬೇಕು ಅನ್ನುವಷ್ಟರಲ್ಲಿ, ಸೈಡಿನ ಬಾಗಿಲು ಹಾಕಿದೆಯಾ ಎಂದು ಬಗ್ಗಿ ನೋಡಿದರೆ ಅಷ್ಟಗಲಕ್ಕೂ ಹಾರು ಹೊಡೆದಿದೆ! ನೋಡಿದ್ದೇ ನಖಶಿಖಾಂತ ಉರಿದು ಹೋಯಿತು. ‘ಹಾಳು ಶನಿಗಳು ಹೋಗುವಾಗ ಹೇಳಿ ಬಾಗಿಲು ಹಾಕಿಸಿ ಹೋಗಿ ಎಂದು ಬಾಯಿ ಬಡಿದುಕೊಂಡರೂ ತಮ್ಮ ಕೆಲಸವಾದ ಕೂಡಲೇ ಹೇಳದೇ ತೊಲಗುವುದು ನೋಡು’ ಎಂದು ಬಯ್ದುಕೊಂಡೆ. ನಾನು ಹಸಿದಿರುವಾಗ ಒಂದು ರೀತಿಯಲ್ಲಿ ಶ್! ಸಿನೆಮಾದ ಬ್ಯಾಂಕ್ ಜನಾರ್ಧನ್ ಥರ ಆರಿಸಿ ಆರಿಸಿದ ಪದಗಳಲ್ಲಿ ಒಂದೇ ಸಮನೆ ಬಯ್ಯುವುದು! ಆ ಶನಿಗಳು ಯಾರೆಂದರೆ ನಮ್ಮ ಮನೆಯ ಬಾವಿಯಲ್ಲಿ ನೀರು ಸೇದಲು ಬರುತ್ತಿದ್ದ ಅಕ್ಕಪಕ್ಕದ ಮನೆಯವರು. ಅದೇನಾಗಿತ್ತೆಂದರೆ ಆಗ ಬೆಂಗಳೂರಿನಲ್ಲಿ ನೀರಿಗೆ ಅಸಾಧ್ಯ ಬರ. ದಿನಕ್ಕೆ ಅರ್ಧ ಘಂಟೆ ಸಹಾ ನೀರು ಬರುತ್ತಿರಲಿಲ್ಲ. ಆ ನೀರು ಬರುತ್ತಿದ್ದುದೂ ನಡುರಾತ್ರಿಯಲ್ಲಿ. ಕುಡಿಯಲು ನಾಲ್ಕು ಕೊಡ ನೀರು ತುಂಬಿಟ್ಟುಕೊಳ್ಳುವುದರಲ್ಲಿ ನಲ್ಲಿ ಆಸ್ತಮಾ ಬಂದಂತೆ ಗೊರಗೊರ ಎನ್ನುತ್ತ ನಿಂತು ಹೋಗುತ್ತಿತ್ತು. ಹಾಗಾಗಿ ಉಳಿದ ಕೆಲಸಕ್ಕೆಲ್ಲ ಬಾವಿಯ ನೀರೇ ಗತಿ. + + + +ನಾವಿದ್ದ ಬಡಾವಣೆ ಶಿವನ ಹಳ್ಳಿ ಹೆಸರಿಗೆ ತಕ್ಕಂತೆ ಹಳ್ಳಿಯೇ. ನಯನಾಜೂಕಿಲ್ಲದ ಜನರು ನಾವೆಲ್ಲ. ಒಬ್ಬರ ಮನೆಯಲ್ಲಿ ನೀರಿದ್ದರೆ ಮುಗಿಯಿತು. ಇಡೀ ರಸ್ತೆಯ ಜನರೆಲ್ಲ ಹಕ್ಕಿನಿಂದೆಂಬಂತೆ ಒಬ್ಬರಾದ ನಂತರ ಒಬ್ಬರು ಬಂದು ನೀರು ಸೇದಿಕೊಳ್ಳುವುದೇ ಕೆಲಸ. ಬಾವಿಯ ಪಕ್ಕ ಒಂದು ಬಾಗಿಲು ಇತ್ತು. ಆಗೆಲ್ಲ ಮನೆಯ ಹಿಂಬಾಗಿಲು ಹಾಕುವ ಅಭ್ಯಾಸವೇ ಇಲ್ಲ ನಮಗೆ. ಎತ್ತರದ ಗೋಡೆ ಇದ್ದುದರಿಂದ ಕಳ್ಳ ಬರುವುದಿಲ್ಲ ಎಂದು ನಾವು ತೀರ್ಮಾನಿಸಿ ಆಗಿತ್ತು! ಆದರೆ ಈ ಸೈಡಿನ ಬಾಗಿಲಿನಿಂದ ಯಾರಾದರೂ ಬಂದರೆ, ತೆಗೆದು ಬಿದ್ದಿರುವ ಹಿಂದಿನ ಬಾಗಿಲಿನ ಮೂಲಕ ಆರಾಮವಾಗಿ ಮನೆಯೊಳಕ್ಕೇ ಬಂದುಬಿಡಬಹುದು. ಹಾಗಾಗಿ ನಾವು ಬಾಗಿಲು ತೆರೆದು ‘ವಾಪಸ್ ಹೋಗುವಾಗ ಹೇಳಿ ಹೋಗಿ, ಬಾಗಿಲು ಹಾಕಿಕೊಳ್ಳುತ್ತೇನೆ’ ಎಂದು ಬೇಜಾರಿಲ್ಲದೆ ಹೇಳುತ್ತಿದ್ದೆವು ಮತ್ತು ಅವರೂ ಶಿಸ್ತಾಗಿ ತಲೆ ಆಡಿಸುತ್ತಿದ್ದರು. ಆದರೆ ನೀರು ಸೇದಿದ ನಂತರ ಯಾರೂ ಹೇಳಿ ಹೋಗುತ್ತಿರಲಿಲ್ಲ. ಹಾಗಾಗಿ ಆ ಬಾಗಿಲು ಹಾರು ಹೊಡೆದೇ ಬಿದ್ದಿರುತ್ತದೆ ಮತ್ತು ಇಡೀ ಬೀದಿಯ ಜನ ಒಬ್ಬರಾದ ಮೇಲೆ ಒಬ್ಬರಂತೆ ಬಂದು ಹೋಗುತ್ತಲೇ ಇರುತ್ತಿದ್ದರು. ಬಹುಶಃ ಅವರು ಹೇಳಿದ್ದರೂ ಅಮ್ಮ ಹಾಕುವುದು ಕಷ್ಟವೇ ಇತ್ತು. ಏಕೆಂದರೆ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಹಿಂದಿನ ಬಾಗಿಲು ತೆಗೆಯುವ ತಾಳ್ಮೆ ಯಾರಿಗಿತ್ತು! ಆದರೂ ನನಗೆ ಆ ತೆರೆದಿಟ್ಟ ಬಾಗಿಲು ಕಂಡರೆ ಪಿತ್ತ ನೆತ್ತಿಗೇರುತ್ತಿತ್ತು. + +ಹೋಗುವಾಗ ಹೇಳಿ ಹೋಗದ ದರಿದ್ರದವರಿಗೆ ನೀರು ಯಾಕೆ ಕೊಡುತ್ತಿ ಎಂದು ದಿನವೂ ಜಗಳವಾಡಿದರೂ ಅಮ್ಮ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ನೀರು ಇಲ್ಲ ಅಂದರೆ ಮುಂದಿನ ಜನ್ಮದಲ್ಲಿ ಹಲ್ಲಿಯಾಗೋ, ಕೋತಿಯಾಗೋ ಹುಟ್ಟುತ್ತೇವೆ ಎನ್ನುವ ಭಯ ಅವಳಿಗೆ. ನನಗೆ ಇದೊಂದೇ ಜನ್ಮವಾಗಿರುವುದರಿಂದ ಹೆಚ್ಚಿನ ಸಮಸ್ಯೆಯೇನೂ ಇಲ್ಲ. ಆದರೆ ಅಮ್ಮನಿಗೆ ಈ ಜನ್ಮಕ್ಕಿಂತ ಮುಂದಿನ ಜನ್ಮದ ಮೇಲೆ ಗಮನ ಹೆಚ್ಚು. ಈ ಮನುಷ್ಯ ಜನ್ಮ ಹೇಗೂ ಅನುಭವಿಸಿ ಆಗಿರುತ್ತದಲ್ಲ, ಮುಂದಿನ ಜನ್ಮದಲ್ಲಿ vertical ಆಗಿ ಗೋಡೆ ಏರುವ, ಕಟ್ ಆದ ಬಾಲ ಬೆಳೆಸಿಕೊಳ್ಳುವ, ಕೊಂಬೆಯಿಂದ ಕೊಂಬೆಗೆ ಆರಾಮವಾಗಿ ಹಾರುವ, ಬೀದಿ ಬೀದಿಯಲ್ಲಿ ಹೇನು ತೆಗೆದುಕೊಳ್ಳುವ ಸುಖವನ್ನೂ ಅನುಭವಿಸಬೇಕೆನ್ನುವ ಸುಖದ ಪರಿಕಲ್ಪನೆಯಿಲ್ಲದ ಅಮ್ಮನಿಗೆ ಮುಂದಿನ ಜನ್ಮದಲ್ಲೂ ಇದೇ ಮನುಷ್ಯ ಜನ್ಮವೇ ಆಗಬೇಕು! ಹಾಗಾಗಿ ಅದು ದಿನನಿತ್ಯದ ಮುಗಿಯದ ಗೋಳು. ‘ಇವತ್ತೂ ನೀರು ಕೊಟ್ಟಿರಬೇಕು ಅಮ್ಮ, ಹೋಗುವಾಗ ಆ ಕೃತಘ್ನರು ಹೇಳದೇ ಹಾಗೆಯೇ ಹೋಗಿದ್ದಾರೆ’ ಎಂದು ಹಲ್ಲು ಮಸೆಯುತ್ತಾ, ಸೈಡ್ ಬಾಗಿಲಿನತ್ತ ಉರಿಮಾರಿಯ ಮುಖದಲ್ಲಿ ನಡೆದೆ. + +ಬಯ್ದುಕೊಳ್ಳುತ್ತಲೇ ಒಳಗೆ ಹೋಗಿ ಚಿಲಕ ಹಾಕಿ, ಮನೆಯ ಒಳ ಹೋಗಲು ತಿರುಗಿದವಳು ಅವಮಾನದಿಂದ ನಿಂತುಬಿಟ್ಟೆ… ಎದುರಲ್ಲಿ ಅಪರಿಚಿತನೊಬ್ಬ ನೀರು ಸೇದಿ ಕೊಡದ ಕುಣಿಕೆ ಬಿಚ್ಚುತ್ತಾ ನಿಂತಿದ್ದ, ಅವಳನ್ನೇ ನೋಡುತ್ತಾ… ನಗುತ್ತಾ! + +ಇಡೀ ಹಿತ್ತಲಿನಲ್ಲಿ ನಾವಿಬ್ಬರೇ… + +ನನಗೆ ಹಾಳಾದ್ದು ‘ಹಂ ತುಂ ಏಕ್ ಕಮರೇ ಮೆ ಬಂದ್ ಹೋ’ ಹಾಡು ಆ ಘಳಿಗೆಯಲ್ಲಿ ಅದ್ಯಾಕೆ ನೆನಪಾಯ್ತೋ! + +ಅವಮಾನದಿಂದ ಕೆಂಪಗಾಗಿ ಅವನತ್ತ ನೋಡಿದರೆ, ಅವನು ಮೀಸೆಯಡಿಯಲ್ಲಿ ನಗುತ್ತಾ ನನ್ನತ್ತಲೇ ನೋಡುತ್ತಿದ್ದ. + +‘ಸಾರಿ, ನಂಗೆ ನೀವಿರೋದು ಗೊತ್ತಿರಲಿಲ್ಲ’ ಎಂದು ತೊದಲಿದವಳೇ ಮನೆಯೊಳಕ್ಕೆ ಓಡಿದ್ದೆ. + +ರೂಮಿನೊಳಗೆ ನುಗ್ಗಿ ಬ್ಯಾಗ್ ಎಸೆದವಳೇ ಸೋಫಾದ ಮೇಲೆ ಆರಾಮವಾಗಿ ಕುಳಿತಿದ್ದ ಅಮ್ಮನ ಪಕ್ಕ ಕುಳಿತು ಶೂ ಬಿಚ್ಚುತ್ತಾ ‘ಅದ್ಯಾರೇ ಅಮ್ಮ ಆ ಹೊಸಬ’ ಎಂದು ಕೇಳಿದ್ದೆ. ಅಮ್ಮ ಆರಾಮವಾಗಿ ‘ಅವರಾ! ಎದುರು ಮನೆಗೆ ಹೊಸದಾಗಿ ಬಂದಿದ್ದಾರಂತೆ ಕಣೇ ಪಾಪ. ನೆನ್ನೆ ಶಿಫ್ಟ್ ಮಾಡಿದ್ದಾರೆ… ಇವತ್ತು ಒಂದೇ ಒಂದು ಹನಿ ನೀರು ಬಂದಿಲ್ಲ’ ಅಮ್ಮ ರಾಗವಾಗಿ ವರದಿ ಒಪ್ಪಿಸಿದಳು. ಉಳಿದೆಲ್ಲ ಮಾತೂ ಗಾಳಿಯಲ್ಲಿ ಲೀನವಾಗಿ ‘ಎದುರು ಮನೆಗೆ ಬಂದಿದ್ದಾನೆ… ಎದುರು ಮನೆಗೆ ಬಂದಿದ್ದಾನೆ… ಎದುರು ಮನೆಗೆ ಬಂದಿದ್ದಾನೆ!’ ಎನ್ನುವ ಮಾತಷ್ಟೇ ಗೋಳ ಗುಮ್ಮಟದ ಒಳಗಿನಂತೆ ಏಳೇಳು ಸಲ ಎದೆಯೊಳಗೆಲ್ಲ ಪ್ರತಿಧ್ವನಿಸಿತು! + +‘ಯಾವ ಮನೆ?’ + +‘ಎದುರು ಮೇಷ್ಟರ ಮನೆ ಇದೆಯಲ್ಲ… ಅವರ ಚಿಕ್ಕ ಔಟ್‌ಹೌಸ್ ಮನೆಗೆ’ + +ಓಹ್! ಎದುರು ಮನೆಯಲ್ಲಿದ್ದಾನೆ… ಅಂದರೆ ದಿನವೂ ಎದುರಾಗುತ್ತಾನೆ… ಚಂದಕ್ಕಿದ್ದಾನೆ ಡುಮ್ಮ ಮೀಸೆಯ ಹುಡುಗ… + + + +ಮತ್ತೆ ಏನಾದರೂ ನೆಪ ಹೂಡಿ ಮನೆಯ ಹಿಂಭಾಗಕ್ಕೆ ಹೋಗಿ ಅವನನ್ನು ನೋಡಬೇಕು ಎನ್ನಿಸಿ ಸರಸರನೆ ಯೂನಿಫಾರ್ಮ್ ಬದಲಿಸಿ ಒಗೆಯಲು ಹಾಕಲು ಹೋದರೆ ಖಾಲಿ ಜಾಗ ನನ್ನನ್ನು ಸ್ವಾಗತಿಸಿ ನಿರಾಶೆಯೆನಿಸಿತ್ತು… ಛೇ ನಿನ್ನೆ ಬಂದಿದ್ದಾರೆ. ಮತ್ತಿಷ್ಟು ನೀರು ಬೇಡವಾ? ಸ್ನಾನಕ್ಕೆ ನೀರು? ಕುಡಿಯೋದಿಕ್ಕೆ? ಬಟ್ಟೆ ಒಗೆಯೋದಿಲ್ವಾ? ಪಾತ್ರೆ ತೊಳೆಯೋದಿಕ್ಕೆ? ‘ಸೋಮಾರಿ ನನ್ಮಗ’ ಎಂದು ಬಯ್ದುಕೊಂಡೆ! ಆವರೆಗೆ ‘ಗಂಡು ಹುಡುಗಿಯಂತಿದ್ದ’ ನನಗೆ ಮೊದಲ ಸಲ ನಾನು ‘ಹೆಣ್ಣು ಹುಡುಗಿ’ ಅನ್ನಿಸಿತ್ತು!! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_176.txt b/Kenda Sampige/article_176.txt new file mode 100644 index 0000000000000000000000000000000000000000..d136cb18d445e1894223d86a4e4ef04b45380349 --- /dev/null +++ b/Kenda Sampige/article_176.txt @@ -0,0 +1,29 @@ +ನನ್ನ ಹುಟ್ಟಿದೂರು ಅರಸಿಕೆರೆ, ಬೆಳೆದ ಬಾಣಾವರದ ಪರಿಸರದಲ್ಲಿ ನಾವು ಬಾಲ್ಯದಲ್ಲಿ ಆಡಿದ ಆಟಗಳನ್ನು ಒಂದು ಪ್ರಬಂಧವಾಗಿ ಬರೆದಿದ್ದೆನಷ್ಟೆ. ಆಗ ಹಾಲಾಡಿಯವರು ನಿಮ್ಮೂರಿನಲ್ಲಿ ಅಬ್ಬೆಗಳಿವೆಯಂತೆ ಅದರ ಬಗ್ಗೆ ಗೊತ್ತೇ ಎಂದರು. ನನಗೆ ನಿಜಕ್ಕೂ ಅಬ್ಬೆ ಗೊತ್ತಿರಲಿಲ್ಲ. ಆದರೆ ಮಯೂರದಲ್ಲಿ ಅದ್ಭುತವಾದ ಒಂದು ಪತ್ತೇದಾರಿ ಕಥೆ ಓದಿದ್ದೆ. ಅದರ ಬಗ್ಗೆ ಹೇಳಿದೆ. ಅಲ್ಲಿಗೆ ಅಬ್ಬೆಯ ಬಗ್ಗೆ ಮಾತುಕತೆ ಮುಗಿಯಿತು. + +ನೋಡಿದರೆ ಅಬ್ಬೆಯನ್ನೇ ಕಥಾವಸ್ತುವಾಗುಳ್ಳ ಕಾದಂಬರಿಯನ್ನೇ ಪ್ರಕಟಿಸಿದ್ದಾರೆ ಶ್ರೀಯುತ ಶಶಿಧರ ಹಾಲಾಡಿಯವರು.. ಸೋಜಿಗ ಸಂತೋಷಗಳ ಜೊತೆಗೆ ಕುತೂಹಲವೂ ಉಂಟಾಯಿತು. ಹಾಗಾದರೆ ಅಬ್ಬೆಯ ಬಗ್ಗೆ ಕೂಲಂಕುಷವಾದ ವಿವರಣೆ ತಿಳಿವಳಿಕೆ ಇದರಲ್ಲಿ ಸಿಗುತ್ತದೆ. ಅಬ್ಬೆಯ ಬೆನ್ನುಹತ್ತಿ ಅಬ್ಬೆಯ ಜನ್ಮ ಜಾಲಾಡಿದ್ದಾರೆ ಎಂದುಕೊಂಡೆ. ಅಂತೆಯೇ ಅಬ್ಬೆ ಓದುತ್ತಾ ಹೋದೆ. + +(ಶಶಿಧರ ಹಾಲಾಡಿ) + +ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರಲೂ ಸಮಯವಿರದಷ್ಟು ಬೇಗ ಕಚ್ಚಿಸಿಕೊಂಡವನು ಜೀವ ಬಿಡುತ್ತಾನೆ ಎಂಬ ವ್ಯಾಖ್ಯಾನವನ್ನೇ ಆಧಾರವಾಗಿಟ್ಟುಕೊಂಡು, ನಮ್ಮ ಪಕ್ಕದಲ್ಲೇ ಇರುವ ನೀಚ ಮನುಷ್ಯರಿಗೆ ರೂಪಕವಾಗಿಸಿ ಮನುಷ್ಯನ ಗುಣಸ್ವಭಾವವನ್ನು ಕಥಾನಾಯಕ ಶಿವರಾಂನ ಮೂಲಕ ಬಿಚ್ಚಿಡುತ್ತಾ ಹೋಗುತ್ತಾರೆ ಕಾದಂಬರಿಕಾರರು. ಹಳ್ಳಿಯ ಜೀವನ, ಪರಿಸರ ಕಾಳಜಿ, ಅಲ್ಲಿಯ ಕೆಟ್ಟ ರಾಜಕೀಯ, ದುಷ್ಟ ಜನರ ಸ್ವಭಾವವನ್ನು ಅನಾವರಣಗೊಳಿಸುತ್ತಲೇ. ಕತೆ ಬೆಳೆದುಕೊಂಡು ಹೋಗುತ್ತದೆ. ಅಬ್ಬೆಯ ಬೆನ್ನು ಹತ್ತಿದ ಕಥಾನಾಯಕ, ಹಳ್ಳಿಯಲ್ಲಿ ನಡೆಯುವ ದೌರ್ಜನ್ಯ, ಕಳ್ಳಸಾಗಣೆ, ಯುವಶಕ್ತಿಯ ನಷ್ಟಗಳನ್ನು ಗಮನಿಸುತ್ತಲೇ ತನಗಾಗುತ್ತಿರುವ ಅನ್ಯಾಯದ ವಿರುದ್ಧದ ತಿಕ್ಕಾಟದಲ್ಲಿ ಸೌಮ್ಯವಾದ ಪ್ರತಿಭಟನೆ ಪ್ರಾರಂಭಿಸುತ್ತಾನೆ. ಮೂರ್ತದಿಂದ ಅಮೂರ್ತದೆಡೆಗೆ ಸಾಗುವ ಈ ಕತೆ ಕಡೆಯವರೆಗೂ ಕುತೂಹಲಕಾರಿ ಚಿತ್ರಣವಾಗಿಯೇ ಉಳಿಯುತ್ತದೆ. + +ಅಬ್ಬೆ ಕಾದಂಬರಿ, ನಿರ್ಮಲವಾದ ತಿಳಿನೀರ ಅಲೆಯಂತೆ ನಿಧಾನವಾಗಿ ಸಾಗಿಬಂದು ಮನಸ್ಸನ್ನು ಆಗಾಗ ತಟ್ಟಿ ಮತ್ತೆ ಹಿಂದೆ ಸರಿಯುತ್ತದೆ. ಉಬ್ಬರವಿಳಿತಗಳ ರೋಚಕ ಸನ್ನಿವೇಶಗಳನ್ನು ಕೂಡ ಯಾವುದೇ ಉದ್ವೇಗಕ್ಕೊಳಗಾಗದೆ ದೂರನಿಂತು ವಿವರಿಸುವ ಕಾದಂಬರಿಕಾರರಿಗೆ ಓದುಗರನ್ನು ಹಿಡಿದಿಡುವ ಕಲೆ ಸಿದ್ಧಿಸಿದೆ. ಕಾದಂಬರಿಯ ಪುಟ ತೆರೆದಂತೆ, ನೀರವತೆ ತಾನೇತಾನಾಗಿ ಜನ್ಮ ತಳೆದು ಕಥಾಲೋಕದ ಬಾಗಿಲು ತೆರೆದುಕೊಳ್ಳುತ್ತದೆ.. + +ಹಾಲಾಡಿಯವರ ಶಶಾಂಕಣದ ಸುಮಾರು ಲೇಖನಗಳನ್ನು ಓದಿದಾಗ ಇವರ ಪರಿಸರ ಪ್ರೀತಿ, ಅದರ ಬಗೆಗಿನ ಕಾಳಜಿ, ಲೇಖನಿಯ ಮೂಲಕವೇ ತಮ್ಮ ಸಶಕ್ತ ಹೋರಾಟವನ್ನು ಮುಂದುವರೆಸುತ್ತಲೇ ಬಂದಿದ್ದಾರೆನ್ನುವುದು ಅವರ ಓದುಗರೆಲ್ಲರಿಗೂ ಅರಿವಿಗೆ ಬಂದಿರುವ ವಿಷಯ. ಅಂತೆಯೇ ಅಬ್ಬೆ ಕೂಡ ಅನ್ವೇಷಣೆಗೊಳಪಟ್ಟೂ ನಿರ್ಣಯವನ್ನೀಯಲಾಗದ ಅತಂತ್ರ ಮನಃಸ್ಥಿತಿಯಲ್ಲೇ ಪರಸ್ಥಳಕ್ಕೆ ಕಥಾನಾಯಕ ಸಾಗಬೇಕಾಗುತ್ತದೆ. + +ದಟ್ಟ ಮಲೆನಾಡಿನ ಪರಿಸರದಿಂದ ಬಯಲುಸೀಮೆಗೆ ಉದ್ಯೋಗಾರ್ಥಿಯಾಗಿ ಬಂದ ಕಥಾನಾಯಕ ಶಿವರಾಂ, ಬರಗಾಲ ಕಾಲುಮುರಿದು ಬಿದ್ದ ಬಯಲು ಸೀಮೆಯಲ್ಲೂ ಜೀವವೈವಿಧ್ಯವನ್ನರಸಿ ಹೋಗುವ ಆತನ ಸಂಶೋಧನಾ ಮನಸ್ಸಿಗೆ ಗರುಡನಗಿರಿ, ಹಿರೇಕಲ್ಲುಗುಡ್ಡ, ಅಲ್ಲಿಯ ಬಂಡೆಗಳು, ಪುತ್ರಜಾಜಿಗಳೇ ಪಾತ್ರಗಳಾಗಿ ರೂಪುಗೊಂಡು, ಓದುಗರ ಕುತೂಹಲಕ್ಕೆ ಪಕ್ಕಾಗುತ್ತವೆ. ಕಾಡಿನ ನಾಶಕ್ಕೆ ಕಾರಣವನ್ನು ಕಂಡುಕೊಳ್ಳುವ ಶಿವರಾಂ ಕಡೆಗೆ ಅದಕ್ಕೊಂದು ಪರಿಹಾರವನ್ನೂ ಸೂಚಿಸಿ ಅರಣ್ಯನಾಶವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಕಾದಂಬರಿಯ ಸಾರ್ಥಕತೆಯನ್ನು ಸಾರುತ್ತದೆ. + + + +ತಂತ್ರಜ್ಞಾನ ಮುಂದುವರೆಯದ ಕಾಲಘಟ್ಟದಲ್ಲಿ ನಡೆಯುವ ಈ ಕತೆಯಲ್ಲಿ ಡಾ. ಕಲ್ಲೂರಾಯರು ಕಲ್ಕೆರೆಯ ಖಾಸಗಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿಕೊಳ್ಳುತ್ತಲೇ ತಮ್ಮ ಪರಿಸರಪ್ರೀತಿ ಮತ್ತು ಕಾಳಜಿಯ ಕಾರಣ, ಶಿವರಾಂನ ಜೊತೆಗೂಡಿ ಗರುಡನಗಿರಿ, ಹಿರೇಕಲ್ಲುಗುಡ್ಡಗಳಿಗೆ ಭೇಟಿ ಕೊಡುವುದು, ಅಲ್ಲಿನ ವಿಶೇಷತೆ ಮತ್ತು ಇತಿಹಾಸಗಳನ್ನರಿಯಲು ಪ್ರಯತ್ನಿಸುವುದು ಕಾದಂಬರಿಯ ತಿರುವೊಂದರಲ್ಲಿ ನಮ್ಮನ್ನು ತಂದು ನಿಲ್ಲಿಸುತ್ತದೆ. ಹಾಗೆಯೇ ಗ್ರಾಮದ ನಿರುದ್ಯೋಗಿ ಪಡ್ಡೆ ಹುಡುಗರ ಕ್ರಿಕೆಟ್ ಟೀಮಿಗೆ, ಬ್ಯಾಂಕ್ ಉದ್ಯೋಗಿಯಾಗಿಯೂ ಅವರ ನಡುವೆ ಅಂತರ ಕಾಪಾಡಿಕೊಳ್ಳದೆ, ಈ ಹುಡುಗರ ಜೊತೆ ಸೇರಿ ಕ್ರಿಕೆಟ್ ಆಡುವ ಶಿವರಾಂ ಬಗ್ಗೆ ಬ್ಯಾಂಕಿನವರ ಕೋಪದ ಮೂರನೇ ಕಣ್ಣು ತೆರೆಯುತ್ತದೆ. ಆ ಹುಡಗರ ದಂಡನ್ನೇ ಕಟ್ಟಿಕೊಂಡು ಗರುಡನಗಿರಿಗೆ ಪ್ರವಾಸ ಹೋಗುವ ಶಿವರಾಂ ಮ್ಯಾನೇಜರರ ರೋಷದ ಕಹಿಯನನುಭವಿಸಲು ಸಿದ್ಧನಾಗಬೇಕಾಗುತ್ತದೆ. ತಾವು ನಿಷ್ಪ್ರಯೋಜಕರೆಂದು ಭಾವಿಸಿದ್ದ ಆ ಯುವಕರು, ಶಿವರಾಂ ತಮ್ಮ ಜೊತೆ ಸೇರಿಕೊಳ್ಳುವುದರಿಂದ ತಮ್ಮಲ್ಲೇ ಹೊಸ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಅಂತೆಯೇ ಭಾಸ್ಕರನು ಕೂಡ ಮುಂದೆ ಡಿಗ್ರಿ ಕಟ್ಟಲು ಶಿವರಾಂ ಪ್ರಚೋದನೆ ನೀಡುವುದು ಧನಾತ್ಮಕ ಪರಿವರ್ತನೆಗೆ ಕಾರಣವಾಗುತ್ತದೆ. + +ಪೂಚಂತೇಯವರು ಹಾರುವ ಓತಿಯ ಹಿಂದೆ ನಮ್ಮನ್ನು ಕರೆದೊಯ್ದಂತೆ, ಕಾದಂಬರಿಕಾರರು ಜೀವನದ ಸಂಕಷ್ಟಗಳ ನಡುನಡುವೆಯೇ ನಮ್ಮನ್ನು ಅಬ್ಬೆಯ ಬೆನ್ನಿಗೆ ದುಂಬಾಲು ಬೀಳುವಂತೆ ಮಾಡುತ್ತಾರೆ. ಅಬ್ಬೆ ಕಚ್ಚಿ ಸತ್ತವರ ನಿಜಕಾರಣವನ್ನರಸುತ್ತಾ ಅಬ್ಬೆಯನ್ನು ನಿಗೂಢವಾಗಿಯೇ ಓದುಗರ ಮನದಲ್ಲಿ ಉಳಿಯುವಂತೆ ಬಲೆ ನೇಯುತ್ತಾರೆ. ಎಲ್ಲಿಯೋ ಏನನ್ನೋ ಓದಿ ನಂಬಿಕೊಂಡಿದ್ದ ಸಾಕ್ಷಿಗಳೆಲ್ಲ ಬುಡಮೇಲಾಗುವಂತೆ ಮಾಡುತ್ತಾರೆ. + +ಹಿರೇಕಲ್ಲುಗುಡ್ಡ ಅನೇಕ ವಿಷಯಗಳನ್ನು ಸಾಕ್ಷೀಕರಿಸುವ ಸಾಕ್ಷಾತ್ ಸಾಕ್ಷಿಕಲ್ಲೆಂದರೂ ಆದೀತು. ದೇವಸ್ಥಾನ, ಜೀವವೈವಿಧ್ಯತೆ, ಪಾಳುಬಂಗಲೆ, ಸನ್ಯಾಸಿಗಳ ಆಶ್ರಮತಾಣ, ಮುಕುಂದೂರುಸ್ವಾಮಿಗಳು ಬಂದು ಹೋಗುವ ಸ್ಥಳ, ಹಣದ ವ್ಯಾಮೋಹಕ್ಕೆ ಬಿದ್ದು, ಯಾವುದರ ಬೆಲೆಯನ್ನೂ ಅರಿಯದೆ ಚಿಪ್ಪುಹಂದಿ, ಹಾವುಗಳು ಇನ್ನಿತರ ಪ್ರಾಣಿಗಳನ್ನು ಹಿಡಿದು ಕಳ್ಳಸಾಗಣೆ ಮಾಡುವ ಪೆದ್ದು ಮುಖವಾಡದ ನಿರ್ದಯೀ ಪ್ರವೃತ್ತಿಯ ಕೆಂಚಪ್ಪನ ಕಾರಸ್ಥಾನ…. ಹೀಗೆ ಹಿರೇಕಲ್ಲುಗುಡ್ಡ ಕೆಟ್ಟ ರಾಜಕೀಯ, ಅಧ್ಯಾತ್ಮ, ಐತಿಹ್ಯ, ದುರಾಸೆಗಳ ಪ್ರತೀಕವಾಗಿ ನಿಲ್ಲುತ್ತದೆ. ಅಲ್ಲದೆ ಅಂಜುಬುರುಕ ಕೆಂಚಪ್ಪನ ಚಾಣಾಕ್ಷತನ ಕುಟಿಲತೆ ಅವನು ಬ್ಯಾಂಕಿನಲ್ಲಿ ಹಣ ವಿನಿಯೋಗಿಸುವುದರ ಮೂಲಕ ತೆರೆದುಕೊಳ್ಳುತ್ತದೆ. + +ಇಲ್ಲಿ ಕಾದಂಬರಿ ಕಲ್ಕೆರೆಯೆಂಬ ಕಲ್ಪಿತ ಗ್ರಾಮದ ಘಾಟಿ ಜನರ ನಡುವೆಯೆ, ಅಬ್ಬೇಪಾರಿಯಂಥ ಶಿವರಾಮನ ಜೀವನ ಕಲ್ಕೆರೆಗೆ ಬೆಸೆದುಕೊಂಡರೂ ಬೆಸೆಯದಂತೆ, ಮಲೆನಾಡಿನ ತನ್ನ ಮಣ್ಣಿನ ಸತ್ವ ಹಾಗೂ ಬಯಲು ಮಣ್ಣಿನ ಸತ್ವವನ್ನು ತಾಳೆ ಹಾಕುತ್ತಾ ಅವುಗಳನ್ನೇ ಸಮೀಕರಿಸಿಕೊಂಡು ಬದುಕುವ ಕಥಾನಾಯಕ ಬದುಕಿನ ಬದಲಾವಣೆಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳುವ ಜಾಣತನ ತೋರುತ್ತಾನೆ. ಮನರಂಜನೆಯೆಂದರೆ ಕೇವಲ ಇಸ್ಪೀಟು ಕುಡಿತ ಎಂದು ತಿಳಿದವರ ಮನಸ್ಸುಗಳಲ್ಲಿ, ಹೀಗೂ ಒಂದು ಬದುಕನ್ನು ರೂಢಿಸಿಕೊಳ್ಳಬಹುದೆಂಬ ಜಾಗೃತಿಯನ್ನು ಶಿವರಾಂ ಮೂಡಿಸುತ್ತಾನೆ. ಜೀವನದ ಏರುಪೇರುಗಳ ನಡುವೆಯೂ, ಸ್ವಭಾವದ ಮೂಲಗುಣವನ್ನು ಅದರ ತುಡಿತವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಜಯಶೀಲನಾಗುವ ಕಥಾನಾಯಕ ಆದರ್ಶಗಳ ಪ್ರತೀಕವಾಗಿ ನಿಲ್ಲುತ್ತಾನೆ. ಕಲ್ಕೆರೆಯಲ್ಲೂ ಪರಿಸರವನ್ನು ಪ್ರೀತಿಸುವ ಜನರಿದ್ದರು ಎಂಬುದನ್ನು ಭಾಸ್ಕರನ ತಂದೆ ಪ್ರತಿನಿಧಿಸುತ್ತಾರೆ. ಹಳ್ಳಿಯ ಕೆಟ್ಟ ರಾಜಕೀಯ, ಅದಕ್ಕೆ ಪೂರಕವಾದ ಪಾತ್ರಗಳು, ಬ್ಯಾಂಕ್ ಎಂಬ ಬ್ಯಾಂಕಿನಲ್ಲೂ ಕೆಟ್ಟ ಹುಳುವೊಂದರಿಂದ ನಡೆವ ಅಪಚಾರಗಳು ಆರೋಪಗಳು, ಸಾಲಮೇಳದ ರಾಜಕೀಯಗಳು ಅಬ್ಬೆ ಕಾದಂಬರಿಯನ್ನು ಸಮಕಾಲೀನ ವಿಷಯ ವೈವಿಧ್ಯತೆಯ ಆಗರವನ್ನಾಗಿಸುತ್ತದೆ. + + + +ಬದುಕು, ಪರಿಸರ, ಪರಿಸರಕಾಳಜಿ, ದುಷ್ಟರ ಮಧ್ಯೆಯೂ ದುಷ್ಟತನ ತೋರದೆ ಸನ್ನಡತೆ ಕಾಪಾಡಿಕೊಳ್ಳುವ, ಜೀವನದ ಮೂಲಭೂತ ಸೌಕರ್ಯಗಳಾದ ಅನ್ನ, ವಸತಿ, ವಸನಗಳನ್ನು ದೊರಕಿಸಿಕೊಳ್ಳುವಲ್ಲಿ ಪ್ರಾಮಾಣಿಕತೆ ಬಿಡದ, ದುಶ್ಚಟಗಳನ್ನು ಅಂಟಿಸಿಕೊಳ್ಳದೆ. ಶಾಂತ ಬದುಕನ್ನು ಬಯಸುತ್ತಾ ಹಾಗೇ ನಡೆಯಬಯಸುವ ಶಿವರಾಂ ಎಲ್ಲ ಕಾಲಕ್ಕೂ ಸಲ್ಲುತ್ತಾನೆ. ಗಾಢ ಪರಿಸರ ಪ್ರೇಮಿ, ಪರಿಸರಕತೆಗಳ ಪೂಚಂತೆಯವರು ಕಾದಂಬರಿಯಲ್ಲಿ ಆಗಾಗ ಗೋಚರಿಸುತ್ತಾರೆ. ಅಂದರೆ, ಅವರ ಜಾಡಿನಲ್ಲೇ ಹೆಜ್ಜೆ ಹಾಕುತ್ತಿರುವ ಶ್ರೀಯುತ ಶಶಿಧರ ಹಾಲಾಡಿಯವರು ಪೂಚಂತೆಯವರ ಪ್ರತಿನಿಧಿಯಾಗಿ ನಿಲ್ಲುತ್ತಾರೆಂದರೆ ಅಬ್ಬೆ ಪರಿಸರಪ್ರೀತಿಯನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದೆ ಎಂದರ್ಥ. + +ಬಿ.ಕೆ. ಮೀನಾಕ್ಷಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬರಹಗಾರ್ತಿ. ಹಲವು ಪತ್ರಿಕೆಗಳಲ್ಲಿ ನನ್ನ ಲೇಖನಗಳು, ಕವನಗಳು ಪ್ರಬಂಧಗಳು, ಕತೆಗಳು, ಮಕ್ಕಳ ಕತೆಗಳು ಪ್ರಕಟಗೊಂಡಿವೆ. ಇದುವರೆಗೂ ಇವರ ಹನ್ನೊಂದು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_177.txt b/Kenda Sampige/article_177.txt new file mode 100644 index 0000000000000000000000000000000000000000..5346b51777e7c8672caa242b591dec2937c0cdfe --- /dev/null +++ b/Kenda Sampige/article_177.txt @@ -0,0 +1,35 @@ +byಆಶಾ ಜಗದೀಶ್|Nov 30, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಒಮ್ಮೆ ದೊಡ್ಡಮ್ಮನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದೆ. ಎಲ್ಲ ಅಸ್ಪಷ್ಟ ನೆನಪುಗಳು.ಇತ್ತೀಚೆಗೆ ಬಿಡುಗಡೆಯಾದ ಆಶಾ ಜಗದೀಶ್‌ ಅವರ “ಕಾಣೆಯಾದವರು” ಲಲಿತ ಪ್ರಬಂಧಗಳ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ + +byಕೆಂಡಸಂಪಿಗೆ|Nov 28, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮಗುವಿನ ಮುಗ್ಧತೆಯ ಸಂಪಾದಿಸುವವರೆಗೂ ಈ ಸಾಧನೆಯ ಯಾನ ನಿರಂತರವಾಗಿ ಮುಂದುವರಿಯುತ್ತಿರಬೇಕು. ಲೋಕದ ಉಪಾಧಿಗಳ ಅಂಟಿನಿಂದ ಬಿಡುಗಡೆಯಾಗುವ ಹಾದಿಯಲ್ಲಿ ಈ ಕವಿ ದಿಟ್ಟ ಹೆಜ್ಜೆ ಇರಿಸಿದ್ದಾನೆ ಎಂಬುದು ಖುಷಿಯ ಸಂಗತಿ. ಅಲ್ಲಲ್ಲಿ ಹಳಹಳಿಕೆಯ ಧ್ವನಿಯೂ, ತಿರಸ್ಕಾರ ಭಾವವೂ, ಆಕ್ರೋಶವೂ ವ್ಯಕ್ತವಾಗಿದೆಯಾದರೂ ಅವರ ತಾತ್ವಿಕ ಹಾದಿಗೆ ಅವು ತೊಡಕಾಗಿ ಉಳಿದಿಲ್ಲ. ನಿರ್ವಾಣನಾಗುವುದರಲ್ಲಿ ಅದಮ್ಯ ಸುಖವಿದೆ ಎಂದು ಸಾರುವ ಅವರ ಕವಿತೆಗಳು ಈ ಸಂಕಲನಕ್ಕೆ ಇಟ್ಟ ಹೆಸರಿಗೆ ಅನ್ವರ್ಥವಾಗಿವೆ.ಜಿ.ಆರ್. ರೇವಣಸಿದ್ದಪ್ಪನವರ ‘ಬಾಳನೌಕೆಗೆ ಬೆಳಕಿನ ದೀಪ’ ಕವನ ಸಂಕಲನಕ್ಕೆ ಡಾ.ಲೋಕೇಶ್ ಅಗಸನಕಟ್ಟೆ ಬರೆದ ಮುನ್ನುಡಿ + +byನಾಗರೇಖಾ ಗಾಂವಕರ|Nov 23, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.ಎನ್.ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳ ಸಂಕಲನ “ಅಂದದ ಹೆಣ್ಣಿನ ನಾಚಿಕೆ”ಯ ಕುರಿತು ನಾಗರೇಖಾ ಗಾಂವಕರ ಬರಹ + +byಪ.ನಾ.ಹಳ್ಳಿ ಹರೀಶ್ ಕುಮಾರ್|Nov 22, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಲೇಖಕನೊಬ್ಬ ತಾನು ಏನನ್ನೇ ಬರೆಯುವಾಗಲೂ ಅದಕ್ಕೊಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಾನೆ. ಅದೇ ರೀತಿ ಹನಿಗವನಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಮನ್ನಂಗಿಯವರೂ ತಮ್ಮ ಸುಧೀರ್ಘ ವೃತ್ತಿ ಬದುಕಿನುದ್ದಕ್ಕೂ ತಾವು ಕಂಡುಂಡ ಅನೇಕ ಬಗೆಯ ರಸಾನುಭವಗಳನ್ನು ಚುಟುಕು ಚುಟುಕಾಗಿ ತಿಳಿಸುವ ಪ್ರಯತ್ನದಲ್ಲಿ ಓದುಗರ ಬೌದ್ಧಿಕತೆಯನ್ನು ಚುರುಕಾಗಿಸುವಲ್ಲಿ ಸಫಲವಾಗಿದ್ದಾರೆಂದೇ ಹೇಳಬಹುದು. ಅವರ ನೂರಾ ಒಂದು ಹನಿಗವನಗಳೂ ಓದುಗರನ್ನು ಆಸಕ್ತಿದಾಯಕವಾಗಿ ಓದಿಸಿಕೊಳ್ಳುವಲ್ಲಿ ಸಫಲವಾಗಿದ್ದು, ನವರಸಗಳ ಅನುಭೂತಿಯನ್ನು ಕಟ್ಟಿಕೊಡುತ್ತವೆ.ಪ್ರಕಾಶ್ ಎಸ್ ಮನ್ನಂಗಿ ಬರೆದ “ನೂರೊಂದು ಝೇಂಕಾರ” ಹನಿಗವನಗಳ ಸಂಕಲನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಲೇಖನ + +byಕೆಂಡಸಂಪಿಗೆ|Nov 19, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಮ್ಮಂತಹ ಎಳೆಯ ಹುಡುಗರಿಗೆ ಬಸ್ಸಿನಲ್ಲಿ ಹೋಗುವ ಸಂದರ್ಭಗಳು ಬಂತೆಂದರೆ ಎಲ್ಲಿಲ್ಲದ ಆನಂದ. ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೋಗುವ ಬಸ್ಸಿಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಒಂದರ್ಧ ಗಂಟೆ ಮುಂಚೆಯೇ ಬಂದು, ಅದಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದೆವು. ಮಲೆನಾಡಿನ ದಾರಿಯಲ್ಲಿ ಬರುವ ಬಸ್ಸಿನ ಪ್ರತಿಧ್ವನಿಯನ್ನು ಆಲಿಸುತ್ತ ಕಾಯುತ್ತಿದ್ದೆವು. ಮೂರು ನಾಲ್ಕು ಕಿ.ಮಿ ಮೊದಲೇ ಇದು ಇಲ್ಲಿಬರುತ್ತಿದೆ ಎಂದು ರೆಡಾರ್ ನಂತೆ ಹೇಳುವುದಕ್ಕೆ ಸಾಧ್ಯವಾಗುವುದು ನಮಗೆ ಮಾತ್ರ.ನಾಳೆ ರವಿ ಮಡೋಡಿ ಬರೆದ “ನಮ್ಮಲ್ಲೇ ಮೊದಲು” ಲಘು ಬರಹಗಳ ಸಂಕಲನ ಹಾಗೂ ಪೂರ್ಣಿಮಾ ಹೆಗಡೆ ಬರೆದ “ಅಂತರ್ವೀಕ್ಷಣೆ” ಗೀತಾ ಕಥಾಯಾನ ಕೃತಿಗಳು ಬಿಡುಗಡೆಗೊಳ್ಳಲಿದ್ದು, ಎರಡೂ ಕೃತಿಗಳ ಆಯ್ದ ಭಾಗಗಳನ್ನು ನಿಮ್ಮ ಓದಿಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ. + +byಕೆ.ಆರ್.ಉಮಾದೇವಿ ಉರಾಳ|Nov 18, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು.ಸುಚಿತ್ರಾ ಹೆಗಡೆ ಪ್ರವಾಸ ಕಥನ “ಜಗವ ಸುತ್ತುವ ಮಾಯೆ” ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ + +byಕೆಂಡಸಂಪಿಗೆ|Nov 14, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ.ವಸಂತಕುಮಾರ್ ಕಲ್ಯಾಣಿ ಅವರ ಕಥಾಸಂಕಲನ “ಪರ್ಯಾಪ್ತ”ಕ್ಕೆ ಜಿಎಸ್ ಸುಶೀಲಾದೇವಿ ಆರ್ ರಾವ್ ಬರೆದ ಮುನ್ನುಡಿ + +byನಾಗರಾಜ ಎಂ ಹುಡೇದ|Nov 7, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ.ವೈ.ಜಿ. ಭಗವತಿ ಬರೆದ ಮಕ್ಕಳ ಕಾದಂಬರಿ “ಮಕ್ಕಳು ಓದಿದ ಟೀಚರ್ ಡೈರಿ”ಕೃತಿಯ ಕುರಿತು ನಾಗರಾಜ್‌ ಎಂ. ಹುಡೇದ್‌ ಬರಹ + +byಕೆಂಡಸಂಪಿಗೆ|Nov 4, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಸದಾಶಿವ ಸೊರಟೂರು ಕಥಾಸಂಕಲನ “ಅರ್ಧ ಬಿಸಿಲು ಅರ್ಧ ಮಳೆ”ಗೆ ಸ. ರಘುನಾಥ ಬರೆದ ಮುನ್ನುಡಿ \ No newline at end of file diff --git a/Kenda Sampige/article_178.txt b/Kenda Sampige/article_178.txt new file mode 100644 index 0000000000000000000000000000000000000000..094e2f577da534ff3a3f9b266d77ef360ffe1bb0 --- /dev/null +++ b/Kenda Sampige/article_178.txt @@ -0,0 +1,31 @@ +ಸ್ನೇಹಿತೆ ಪೂರ್ಣಿಮಾ ಮಾಳಗಿಮನಿ ‘ಡೂಡಲ್ ಕತೆ’ಗಳನ್ನು ಬರೆದಿದ್ದಾರೆ. ಡೂಡಲಿಂಗ್ ಎನ್ನುವುದು ಸೃಜನಶೀಲ ಚಿಂತನೆಯನ್ನು ಮಾಸುವ ಒಂದು ಕಲೆ. ಈ ಸಂಕಲನದಲ್ಲಿ ಬರುವ ಅಷ್ಟೂ ಕತೆಗಳು ಒಂದು ರೀತಿಯಲ್ಲಿ ಜೀವನದ ಬೃಹತ್ ಕ್ಯಾನ್ವಾಸ್ ಮೇಲೆ ನಾವಿಡುವ ಒಂದೊಂದು ಹೆಜ್ಜೆಯೂ ಮತ್ತೆ ತಿದ್ದಲಾಗದ ಡೂಡಲ್ ಮಾದರಿಯ ಚದುರಿದ ಚಿತ್ರಗಳಾಗಿಬಿಡುತ್ತವೆ ಎನ್ನುವುದನ್ನೇ ಹೇಳಿದಂತಿವೆ. ಆದರೆ ಎಲ್ಲಾ ಚಿತ್ರಗಳೂ ಒಂದಕ್ಕೊಂದು ಅಂಟಿಕೊಂಡು ಮತ್ತೊಂದು ಅರ್ಥವನ್ನು ಹುಟ್ಟಿಸಿ ಓದುಗನ ತಾದಾತ್ಮ್ಯವನ್ನು ಬಯಸುವಂತೆ ಮಾಡುತ್ತಿವೆ. ಹಾಗಾಗಿ ಇಲ್ಲಿನ ಒಂದೊಂದು ಕತೆಯೂ ಮತ್ತೊಂದರ ಕೊಂಡಿಯೋ ಎಂಬಂಥ ಸೂಕ್ಷ್ಮ ನೇಯ್ಗೆ. + +(ಪೂರ್ಣಿಮಾ ಮಾಳಗಿಮನಿ) + +ಪೂರ್ಣಿಮಾ ತನ್ನ ಹುಟ್ಟೂರಿನ ನೆಲದ ಮನುಷ್ಯರನ್ನು ಕತೆಯೊಳಗೆ ತಂದಿದ್ದಾರೆ. ಬರಿಯ ಪಾತ್ರಗಳನ್ನಷ್ಟೇ ಅವರು ತಂದಿಲ್ಲ, ಅವರ ಬದುಕಿನ ಎಳೆಗಳನ್ನು ತಂದಿದ್ದಾರೆ. ಕತೆಗಾರ್ತಿ ಮಾಡಬೇಕಾದ ಕೆಲಸವಿದು. ಕತೆಯ ಮೂಲಕ ಬದುಕನ್ನು, ಭ್ರಮೆಗಳನ್ನು, ನಂಬಿಕೆಗಳನ್ನು, ಅವತಾರಗಳನ್ನು, ಆಕಸ್ಮಿಕಗಳನ್ನು, ಅರ್ಥವಂತಿಕೆಯನ್ನು ವಿವರಿಸುತ್ತಾ ಹೋಗುವುದು, ಇಷ್ಟನ್ನೂ ಪೂರ್ಣಿಮಾ ಸರಳವಾಗಿ ಮಾಡಿದ್ದಾರೆ. ಹಾಗಾಗಿ ಈ ಕತೆಗಳು ನಮ್ಮನ್ನು ಸೆಳೆಯುತ್ತವೆ. ಸೆಳೆದರಷ್ಟೇ ಸಾಕೇ, ಕತೆ ನಮ್ಮಲ್ಲಿ ಬಹುಕಾಲ ಉಳಿಯಬೇಡವೇ? ಅದನ್ನೂ ಅವರು ಕತೆಯ ಪಾತ್ರಗಳ ಮೂಲಕ ಉಳಿಸಿಕೊಟ್ಟಿದ್ದಾರೆ. ಒಬ್ಬಳು ಪಾರವ್ವ, ಒಂದು ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಹೋಗುವ ಸೈಕಲ್ಲು, ಮನೆಗೆಲಸದವಳಿಗೆ ಮನೆಯ ಕಸದ ಬುಟ್ಟಿಯಲ್ಲಿ ಸಿಗುವ ಕಾಂಡೋಮ್… ಹೀಗೇ ಕತೆಯ ಆಗುಹೋಗುಗಳೇ ಕತೆಯನ್ನು ಓದುಗರಲ್ಲಿ ಉಳಿಸಿಕೊಳ್ಳುತ್ತವೆ. + +ಕೆಲವು ಕತೆಗಳನ್ನು ಓದುಗರು ಹೀಗೂ ಪ್ರವೇಶಿಸಬಹುದು ಎಂಬುದಕ್ಕೆ ಈ ಸಂಕಲನದಲ್ಲಿ ನಿದರ್ಶನಗಳಿವೆ. + +‘ಸೂರೊಳೊಂದು ಕಿಟಕಿ’ ಕತೆಯಲ್ಲಿ ಮನುಷ್ಯನ ಹಸಿವಿಗೂ ಹಂಬಲಕ್ಕೂ ಮೂಲ ಕಾರಣ ಭ್ರಮೆ ಎಂಬುದನ್ನು ಪೂರ್ಣಿಮಾ ಸರಳವಾಗಿ ಪ್ರತಿಪಾದಿಸುತ್ತಾರೆ. ಭ್ರಮಾಧೀನ ಜಗತ್ತಿನ ಪ್ರತಿನಿಧಿಯಾದ ಹೆಣ್ಮಗಳು ಆ ಭ್ರಮೆಯನ್ನು ಹೊತ್ತುಕೊಂಡೇ ಹಳ್ಳಿಯಿಂದ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲಕ್ಕೆ ಕಾರಣವಾಗಿದ್ದು, ಕೊನೆಗೂ ಬದುಕು ಭ್ರಮೆಯೇ ಎಂದು ವಿವರಿಸುತ್ತಾ ಕತೆಯಲ್ಲಿ ಭ್ರಮೆ ಕರಗಿಸುತ್ತಾರೆ. “ಇಷ್ಟೊಂದು ಬೆಳಕಿದ್ದರೆ ರಾತ್ರಿ ನಿದ್ದೆ ಬರುವುದೋ ಇಲ್ಲವೋ ಎಂದು ಯೋಚಿಸುತ್ತಿದ್ದವಳಿಗೆ ಆ ಕಿಟಕಿಯ ಮೇಲೆ ನೆರಳು ಬಿದ್ದಂತೆಲ್ಲಾ ತನ್ನ ಪ್ರತಿಬಿಂಬ ಕಾಣಿಸಿತು” ಎನ್ನುವುದರಿಂದ ಹಿಡಿದು, ತಾನಾಗಿಯೇ ಒಳಗೆ ಹೋಗಿ ಕುಳಿತುಕೊಂಡು, “ಆ ಮೇಲಿರೋ ಕಿಟಕಿಯಿಂದ ನನ್ನ ರೂಮಲ್ಲಿ ತುಂಬಾ ಜನ ಬಂದು ಬಂದು ಸೇರ್ಕೋತಾ ಇದಾರೆ. ಅದನ್ನು ಮುಚ್ಚಬೇಕು, ಇನ್ನಷ್ಟು ಟ್ರಂಕ್‌ಗಳು ಇದ್ರೆ ಕೊಡಿ, ಪ್ಲೀಸ್” ಎಂದು ಬಡಬಡಿಸಿದಳು, ಎನ್ನುವವರೆಗೂ ಈ ಭ್ರಮಾಲೋಕದ ಚಿತ್ರಣಗಳಿವೆ. + +“ರನ್” ಎಂಬ ಕತೆಯಲ್ಲಿ ಪ್ರೀತಿ ಮತ್ತು ವಂಚನೆಯ ಕತೆ ಇದೆ. ಎಲ್ಲರೂ ಈ ರೀತಿಯ ಕತೆ ಬರೆದುಬಿಡಬಹುದು. ಆದರೆ ಪೂರ್ಣಿಮಾ ಕತೆಯಲ್ಲಿ ಬೇರೆಯೇ ಒಂದು ಸ್ವಾದವಿದೆ. ಓಟ ಬದುಕಿನ ಆಚೆಗೆ ಇದೆ. ಪ್ರೇಮದ ಹೊರ ವರ್ತುಲಕ್ಕೆ, ಜೀವದ ಗೆರೆಯ ದೂರಕ್ಕೆ ಎಂದು ಕತೆಗಾರ್ತಿ ತೋರಿಸುತ್ತಾರೆ. ಕೊನೆಗೂ ಓಟ ಅಂದರೆ ಇರುವುದರಿಂದ ಕಳಚಿಕೊಳ್ಳುವುದೇ ಅಲ್ಲವೇ ಎಂಬ ಸತ್ಯವನ್ನು ಪ್ರತಿಪಾದಿಸುತ್ತಾರೆ. + + + +‘ರಾಜಿಯ ಲೋಲಾಕುಗಳು’ ಕತೆಯಲ್ಲಿ ಒಂದು ಸರಳ ಪ್ರೀತಿ ಮತ್ತು ಒಂದು ಜೊತೆ ಲೋಲಾಕುಗಳಿವೆ. ಆ ಲೋಲಾಕುಗಳು ಎಳೆ ಪ್ರೀತಿಗೂ, ಕಳ್ಳತನಕ್ಕೂ ಕಾರಣವಾಗಿ ಒಂದು ಮನೆಯನ್ನೂ, ಮೂರು ಮನಸ್ಸುಗಳನ್ನೂ ಆಕ್ರಮಿಸುತ್ತವೆ. ಕೊನೆಯಲ್ಲಿ ಲೋಲಾಕುಗಳು ತೊನೆಯುವಂತೆ ಇಬ್ಬರ ಪ್ರೀತಿಯೂ ತೊನೆದು ಸುಮ್ಮನಾಗುತ್ತದೆ. ಪ್ರತಿಮಾ ಮಾದರಿಯ ಕಥಾನಕಕ್ಕೆ ರಾಜಿಯ ಲೋಲಾಕು ಆಪ್ತ ಉದಾಹರಣೆ. + +‘ಶರದೃತು’ ಎಂಬ ಕತೆಯಲ್ಲಿ ಮನುಷ್ಯ ಸಂಬಂಧದ ಅನುಲೋಮ ವಿಲೋಮಗಳಿವೆ. ಮನುಷ್ಯನ ಈಗೋ ಕೇಂದ್ರದಲ್ಲಿ ಸುತ್ತುತ್ತಾ ಮತ್ತೆ ಅಲ್ಲಿಗೆ ಬಂದು ನಿಲ್ಲುತ್ತದೆ. + +‘ವುಮನೈಸರ್’ ಮನುಷ್ಯ ಸಂಬಂಧಗಳು ಹೇಗೆ ಸಮಾಜದಲ್ಲಿ ವ್ಯಕ್ತಿ ಸ್ತರಗಳನ್ನು ನಿರ್ಮಿಸುತ್ತವೆ, ಅಸಲಿ ವ್ಯಕ್ತಿತ್ವಗಳ ಖುಲಾಸೆಯಾದಾಗ ಹೇಗೆ ಆಘಾತಗಳನ್ನು ಉಂಟುಮಾಡುತ್ತವೆ ಎಂದು ಹೇಳುತ್ತದೆ. + +(ಗೋಪಾಲಕೃಷ್ಣ ಕುಂಟಿನಿ) + +‘ಕೆಂಪು ನೈಟಿ’ ಕತೆಯ ಪಾರವ್ವ ಬಹಳ ಪ್ರತಿಭಾವಂತೆ. ಅವಳ ವಿದ್ವತ್ ಮತ್ತು ಜಾಣ್ಮೆಗೆ ಎಲ್ಲರೂ ತಲೆದೂಗುವವರೇ. ಆದರೆ ಅವಳೊಳಗಿನ ಹೆಣ್ತನವನ್ನು ಮಾತ್ರ ಅವಳೇ ಮೆಚ್ಚಿಕೊಳ್ಳಬೇಕು. ಮದುವೆ ಮನೆಯಲ್ಲಿ ಕೆಂಪು ನೈಟಿ ಹಾಕಿಕೊಂಡು, ಆಭರಣ ತೊಟ್ಟುಕೊಂಡು, ವ್ಯಾನಿಟಿ ಬ್ಯಾಗ್ ಹೆಗಲಿಗೆ ತೂಗು ಹಾಕಿಕೊಂಡು, ಕನ್ನಡಿ ಮುಂದೆ ನಿಂತುಕೊಂಡು… ಅದು ಯಾವುದೂ ಅವಳದ್ದಲ್ಲ, ಕೆಂಪು ನೈಟಿಯೂ, ಆಭರಣವೂ, ಕನ್ನಡಿಯೂ… ಯೌವನವೂ ಕೂಡಾ! + +‘ಜೀವದಾನ’ ಕತೆಯ ಹುಡುಗನಿಗೆ ಬಂಧುಗಳಿಲ್ಲ. ಮನೆಯಲ್ಲಿ ಅಮ್ಮ ಒಂಟಿ, ಅಪ್ಪನೂ ಒಂಟಿ. ಈ ಒಂಟಿಗಳ ನಡುವೆ ಮಗನೂ ಒಂಟಿ. ಅಸ್ವಸ್ಥ ಮನೆ ಮತ್ತು ಮನಸ್ಸು. ಇದರ ಮೂಲ ಹೇಳುವುದು ಸೂಳೆಮನೆಯ ಅಜ್ಜಿ. ತನ್ನ ಹುಟ್ಟಿನ ಮೂಲ ಗೊತ್ತಾದ ಮೇಲೆ ಊರು ತೊರೆಯಬೇಕಾದರೂ ತೊರೆಯದೇ ಬರಬೇಕಾದ ಕೆಟ್ಟ ಸ್ಥಿತಿ. ವಾಪಸ್ಸು ಬಂದಾಗ ಅಪ್ಪನನ್ನು ಬದುಕಿಸಲು ಅಮ್ಮ ಮಗನನ್ನೇ ಋಣಸಂದಾಯಕ್ಕೆ ಒಡ್ಡುತ್ತಾಳೆ! + + + +ಇಂಥ ಅನೇಕ ಸೆಲೆಗಳನ್ನು ಕತೆಗಾರ್ತಿ ಬಿಡಿಸುತ್ತಾ ಹೋಗುತ್ತಾರೆ. ಕತೆಗಳ ರಹಸ್ಯಗರ್ಭಗಳಲ್ಲಿ ಅವುಗಳನ್ನು ಮತ್ತೆ ಮತ್ತೆ ಹುದುಗಿಸಿಡುತ್ತಾರೆ. “ನೆನಪಿಗೆ ಜಿನುಗಿ, ಸ್ಪರ್ಶಕೆ ನಲುಗಿ, ಬಿರಿವ ಎರಡೇ ಪಕಳೆಗಳು” ಎಂದು ಒಂದೆಡೆ ಅವರೇ ಬರೆದುಕೊಂಡಂತೆ, ಈ ಕತೆಗಳು ಓದುಗರನ್ನು ನೆನಪಲ್ಲಿ ಜಿನುಗಿಸಿ, ಸ್ಪರ್ಶದಲ್ಲಿ ನಲುಗಿಸಿ, ಬಿರಿಯುವಂತೆ ಮಾಡಿ ಹೋಗುತ್ತವೆ. “I would like to say that, I haven’t sold my soul; merely licensed it” ಎಂಬಂತೆ ಡೂಡಲ್ ಕತೆಗಳ ಒಂದೊಂದು ಪಾತ್ರಗಳೂ ಕತೆಯ ಹೂರಣವನ್ನು ನಮ್ಮ ಕಲ್ಪನೆಯ ಲೋಕದಾಚೆಗೂ, ಲೋಕದ ಸುತ್ತಲೂ ತಿರುಗಿಸಿ ಬಿಟ್ಟು ಬಿಡುತ್ತವೆ! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_179.txt b/Kenda Sampige/article_179.txt new file mode 100644 index 0000000000000000000000000000000000000000..bff5e7d1b43bcc7becd7a6a6e2e506f292d07fb1 --- /dev/null +++ b/Kenda Sampige/article_179.txt @@ -0,0 +1,13 @@ +ಸರೋಜಿನಿ + +(ಎನ್. ಸಂಧ್ಯಾ‌ ರಾಣಿ) + +ಯಾವುದೋ ಹಳೆಯ ಕಾಲದ ಮನೆ. ಮನೆಯ ಹೊರತು ಸುತ್ತಮುತ್ತಲಿನ ಮಿಕ್ಕೆಲ್ಲಾ ಅಸ್ಪಷ್ಟ. ದಪ್ಪಮರದ ತಲೆಬಾಗಿಲು, ಕಬ್ಬಿಣದ ಚಿಲಕ. ಇಷ್ಟೆತ್ತರದ ಹೊಸ್ತಿಲು. ಹೊಸ್ತಿಲ ಎರಡೂ ಕಡೆ ಹಚ್ಚಿದ ಅರಸಿನ, ಕುಂಕುಮ, ಇಟ್ಟಿದ್ದ ಕಾಡುಹೂವು, ಕಟ್ಟಿದ್ದ ತೋರಣ. ಮನೆಯ ತಲೆಬಾಗಿಲಿಗೆ ಅಂಟಿಕೊಂಡಂತೆ ಆಕಡೆ, ಈಕಡೆ ಉದ್ದನೆಯ ಜಗಲಿಗಳು. ಜಗಲಿಗಳ ಮೇಲೆ, ಆಚೆಗೊಂದು, ಈಚೆಗೊಂದು ಎರಡು ಪುಟ್ಟಪುಟ್ಟ ಕಿಟಕಿಗಳು. ಜಗಲಿಗಳ ತುದಿಗೆ ಸ್ವಲ್ಪ ಎತ್ತರಿಸಿದ ಭಾಗ ತಲೆದಿಂಬಿನಂತೆ ಕಾಣುತ್ತಿತ್ತು. ಬಾಗಿಲಿನಿಂದ ಕೆಳಕ್ಕಿಳಿವ ಮೂರು-ನಾಲ್ಕು ಎತ್ತರೆತ್ತರದ ಮೆಟ್ಟಿಲುಗಳು. ಅದರ ಎದುರಿನಲ್ಲಿ ಸಗಣಿ ಹಾಕಿ ಸಾರಿಸಿದ ನೆಲ. ದೊಡ್ಡದೊಂದು ರಂಗೋಲಿ. ಅಂಚಿನಲ್ಲಿ ಕೆಮ್ಮಣ್ಣು. ಆ ರಂಗೋಲಿಯ ಆಚೆಗೆ ಹುಡುಗಿಯೊಬ್ಬಳು ನಿಂತಿದ್ದಾಳೆ. 14-15 ವರ್ಷಗಳಿರಬೇಕು. ಕೂದಲನ್ನು ತಿರುಗಿಸಿ, ಕೈಯಿಂದಲೇ ಸಿಂಬೆ ಸುತ್ತಿದ್ದ ಗಂಟು ಕಳಚಿ ಕೂದಲು ಹಾರಾಡುತ್ತಿವೆ. ಹುಡುಗಿ ಸಿಟ್ಟಿನಿಂದ ಬೆನ್ನು ನೇರವಾಗಿಸಿ ನಿಂತ ನಿಲುವಿಗೆ ಅವಳ ಸಹಜ ಎತ್ತರಕ್ಕಿಂತ ಉದ್ದ ಕಾಣುತ್ತಿದ್ದಾಳೆ. ಉಟ್ಟ ಮಾಸಲು ಸೀರೆ. ಎಡಗೈ ಕಂಕುಳಿನಲ್ಲಿ ಒಂದು ಬಟ್ಟೆಯ ಗಂಟು. ಮುಖ ಕಲಸಿದಂತೆ ಅಸ್ಪಷ್ಟ, ಕಣ್ಣುಗಳಿರಬೇಕಾದ ಕಡೆ ಎರಡು ಕೆಂಡದುಂಡೆಗಳು. ಮುಚ್ಚಿದ ಬಾಗಿಲನ್ನೇ ಸುಡುವಂತೆ ನೋಡುತ್ತಿದ್ದಾಳೆ. ನೆಲಕ್ಕೆ ಬಗ್ಗಿದವಳು ಒಂದು ಹಿಡಿ ಮಣ್ಣು ಗೋಚಿಕೊಂಡು, ಕಣ್ಣೀರು ಸುರಿಸುತ್ತಾ, ಬಾಗಿಲ ಕಡೆ ತೂರಿ ಹೇಳುತ್ತಾಳೆ,‘ಈ ಮನೆ ಹೆಣ್ಣುಮಕ್ಕಳು ಯಾವತ್ತಿಗೂ ಸುಖವಾಗಿರದಿರಲಿ. ಇದು ನನ್ನ ಶಾಪ!’ + +`ಶಾಪ!’ – ಉಸಿರು ಕಟ್ಟಿದಂತಾಗಿ ಸರೋಜಿನಿ ತಟ್ಟನೆ ಎದ್ದು ಕುಳಿತಳು. ಫ್ಯಾನ್ ಕ……ರ್, ಕ……ರ್ ಎಂದು ಸದ್ದು ಮಾಡುತ್ತಾ ತಿರುಗುತ್ತಿತ್ತು. ಆದರೂ ಮುಖವೆಲ್ಲಾ ಬೆವರಿನಿಂದ ತೊಯ್ದು ಹೋಗಿದೆ. ಕಂಕುಳು ಒದ್ದೆಮುದ್ದೆ. ಅದೇ ಕನಸು. ಅವಳು ಸಣ್ಣವಳಾಗಿದ್ದಾಗ ಆ ಕಥೆ ಕೇಳಿದಾಗಿನಿಂದ ಸರಿರಾತ್ರಿಗಳಲ್ಲಿ ಕನಸಾಗಿ, ಎಚ್ಚರವಿದ್ದಾಗ ನೆನಪಾಗಿ ಹೆದರಿಸುವ ಅದೇ ಶಾಪದ ಕನಸು. ಇದನ್ನು ಮೊದಲು ಯಾರು ಹೇಳಿದರು ಎನ್ನುವುದು ಅವಳಿಗೆ ನೆನಪಿಲ್ಲ. ಯಾವಾಗಲೂ ಏನಾದರೊಂದು ಹಳೆಯ ಕಥೆ ಹೇಳುತ್ತಿದ್ದ ದೊಡ್ಡಮ್ಮ ಹೇಳಿದ್ದರೆ, ಅಳುವನ್ನೇ ಕಣ್ಣಕಾಡಿಗೆ ಮಾಡಿಕೊಂಡಿದ್ದ ಸೋದರತ್ತೆ ಹೇಳಿದ್ದರೆ ಅಥವಾ ಯಾವುದೋ ಸಮಾರಂಭದಲ್ಲಿ ರಾತ್ರಿ ಜಮಖಾನ ಹಾಸಿಕೊಂಡು ಹೆಂಗಸರೆಲ್ಲಾ ಉದ್ದಕ್ಕೂ ಮಲಗಿದ್ದಾಗ ಯಾವುದೋ ದನಿ ಹೇಳಿದ್ದ ಕಥೆಯೇ …ನೆನಪಿಗೆ ಬರುತ್ತಿಲ್ಲ. ಆದರೆ ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು? ಹಾಗಾಗಿ ಅಕಸ್ಮಾತ್ ಒಂದು ವೇಳೆ ಯಾವುದೇ ಕಾರಣಕ್ಕೆ ಮದುವೆ ತಡವಾದಾಗ ಕೆಲವರು ಹುಡುಗಿ ನೆರೆದಿದ್ದಾಳೆ ಎನ್ನುವುದನ್ನು ಮುಚ್ಚಿಟ್ಟು, ಮದುವೆ ಮಾಡಿಬಿಟ್ಟು ಮದುವೆಯಾಗಿ ಒಂದು ವರ್ಷವಾದ ನಂತರ ಹುಡುಗಿ ದೊಡ್ಡವಳಾದಳು ಎಂದು ಹೇಳಿಕಳಿಸುತ್ತಿದ್ದರಂತೆ. + + + +ಅದು ಸ್ವಂತ ಮಕ್ಕಳ ವಿಷಯಕ್ಕಾಯಿತು. ಆದರೆ ಮನೆಯಲ್ಲಿ ಎಲ್ಲ ಕೆಲಸಕ್ಕೂ ಒದಗುತ್ತಿದ್ದ ಈ ಹುಡುಗಿಗೆ ಬೇಗನೆ ಮದುವೆ ಮಾಡುವ ಆತುರ ಯಾರಿಗಿದ್ದೀತು? ಒಂದಾದ ಮೇಲೆ ಒಂದರಂತೆ ಮನೆ ಹೆಣ್ಣುಮಕ್ಕಳ ಮದುವೆಗಳಾಗುತ್ತಿವೆ. ಈ ಹುಡುಗಿ ಎಲ್ಲಾ ಮದುವೆಗಳಲ್ಲೂ ನೀರು ಸೇದುವ, ಹೂ ಕಟ್ಟುವ, ಕಸಮುಸುರೆ ಬಳಿಯುವ, ಒಲೆ ಎದುರಲ್ಲಿ ಬೇಯುವವಳಾದಳೇ ಹೊರತು ಮದುಮಗಳಾಗಲೇ ಇಲ್ಲ. ಕಡೆಗೊಮ್ಮೆ ಅವಳೂ ನೆರೆದಿದ್ದಾಳೆ. ಮನೆಯವರು ಅದನ್ನು ಮುಚ್ಚಿಡುವ ಯಾವುದೇ ಪ್ರಯತ್ನ ಮಾಡದೆ, ಸಂಪ್ರದಾಯದ ಹೆಸರು ಹೇಳಿ, ಅವಳ ಬಟ್ಟೆ ಗಂಟು ಕಟ್ಟಿ, ಬುತ್ತಿ ಕೊಟ್ಟು ಅವಳನ್ನು ಮನೆಯಿಂದ ಕಳಿಸಿಬಿಟ್ಟರಂತೆ. ಅಷ್ಟು ವರ್ಷಗಳು, ಅಷ್ಟು ಕೆಲಸ ಮಾಡುತ್ತಿದ್ದ ಇವಳನ್ನು ಹೊರಕ್ಕೆ ದಬ್ಬುವಾಗ ಮನೆಯ ಹೆಣ್ಣುಮಕ್ಕಳಲ್ಲಿ ಯಾರೂ ಪಿಟ್ ಎನ್ನಲಿಲ್ಲ, ಒಬ್ಬೊಬ್ಬರ ಕಾಲಿನ ಬಳಿ ಬಿದ್ದು ಬೇಡಿಕೊಂಡರೂ ಕರಗಲಿಲ್ಲ. ಕಣ್ಣೀರು ಹಾಕುತ್ತಾ ಹೋದ ಹುಡುಗಿ,‘ಈ ಮನೆಯ ಹೆಣ್ಣುಮಕ್ಕಳು ಎಂದಿಗೂ ಸುಖವಾಗಿರದಿರಲಿ’ಎಂದು ಶಾಪ ಕೊಟ್ಟು ಹೋದಳಂತೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_18.txt b/Kenda Sampige/article_18.txt new file mode 100644 index 0000000000000000000000000000000000000000..c5a9415d02be062b74b821b6be5c3f36abdf76b8 --- /dev/null +++ b/Kenda Sampige/article_18.txt @@ -0,0 +1,35 @@ +byಗುರುಪ್ರಸಾದ್‌ ಕುರ್ತಕೋಟಿ|Sep 12, 2024|ಸರಣಿ| 2 Comments + +ಆ ಅಂಗಡಿಯ ಹೆಸರು ಡಾಲರ್ ಟ್ರೀ ಅಂತ. ಅಲ್ಲಿ ಯಾವುದೇ ಸಾಮಾನು ಕೊಂಡರೂ ಅದಕ್ಕೆ ಒಂದು ಡಾಲರ್ ಮಾತ್ರ ಬೆಲೆ. ಪೆನ್ನು, ನೋಟ್ ಬುಕ್, ಆಟಿಗೆ ಸಾಮಾನು ಹೀಗೆ ಎಲ್ಲವೂ ಒಂದೇ ಡಾಲರ್. ಯಾರಿಗುಂಟು ಯಾರಿಗಿಲ್ಲ ಅಂತ ಜನರೂ ಕೂಡ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುತ್ತಿದ್ದರು. ಎಷ್ಟೋ ಸಾಮಾನುಗಳು ಒಂದೇ ಡಾಲರಿಗೆ ಇಷ್ಟೆಲ್ಲಾ!? ಅನ್ನಿಸುವಷ್ಟು ಇದ್ದವಾದರೂ, ಅದರ ಜೊತೆಗೆ ತೆಗೆದುಕೊಳ್ಳುವ ಎಷ್ಟೋ ಇನ್ನಿತರ ವಸ್ತುಗಳು ಡಾಲರಗಿಂತ ಕಡಿಮೆ ಬೆಲೆಯವೇ ಆಗಿದ್ದವು.ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ + +byಸುಮಾ ಸತೀಶ್|Sep 11, 2024|ಸರಣಿ| 0 Comments + +ಅಲ್ಲಾ ನಮ್‌ ಮೇಷ್ಟ್ರು ಹೇಳಿರೋ ಸಿನ್ಮಾ‌ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು.ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮಕ್ಕಳು ಸಿನಿಮಾ ನೋಡಿದ ಪ್ರಸಂಗ ನಿಮ್ಮ ಓದಿಗೆ + +byಬಸವನಗೌಡ ಹೆಬ್ಬಳಗೆರೆ|Sep 10, 2024|ಸರಣಿ| 6 Comments + +ಒಂಬತ್ತನೇ ಕ್ಲಾಸಲ್ಲಿ ನಾನು ಸಾಕಷ್ಟು ಓದುತ್ತಿದ್ದೆ. ಈ ಓದಿನ ಫಲ ನನಗೆ ಫಲಿತಾಂಶದಲ್ಲಿ ಸಿಕ್ಕಿತ್ತು. ಮೂರೂ ಸೆಕ್ಷನ್‌ಗಳಿಗೂ ಸೇರಿ ಕೊಡುತ್ತಿದ್ದ ರ್ಯಾಂಕಿನಲ್ಲಿ ನನಗೆ ಎರಡನೇ ರ್ಯಾಂಕ್ ಲಭಿಸಿತ್ತು. ಕನ್ನಡ ಮೀಡಿಯಂನ ಶಿವಶಂಕರ್ ಪ್ರಥಮ ರ್ಯಾಂಕ್ ಪಡೆದಿದ್ದ. ನನಗೆ ಎರಡು ಅಂಕಗಳಲ್ಲಿ‌ ಪ್ರಥಮ ರ್ಯಾಂಕ್ ಮಿಸ್ಸಾಗಿತ್ತು. ಇದರ ಬಗ್ಗೆ ಅಷ್ಟು ಫೀಲ್ ಆಗಿರಲಿಲ್ಲ.ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ + +byರಂಜಾನ್ ದರ್ಗಾ|Sep 9, 2024|ಸರಣಿ| 0 Comments + +ಎಲ್ಲ ಜಾತಿ ಜನಾಂಗಗಳ ಮಕ್ಕಳ ಶೈಕ್ಷಣಿಕ ಏಳ್ಗೆಯೆ ಅವರ ಬಹುದೊಡ್ಡ ಗುರಿಯಾಗಿತ್ತು. ಪ್ರತಿ ವರ್ಷ ಹತ್ತುಸಾವಿರ ಮಕ್ಕಳನ್ನು ಸಾಕುತ್ತ, ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತ, ಶೈಕ್ಷಣಿಕವಾಗಿ ಅವರನ್ನು ಉನ್ನತ ಸ್ಥಾನಕ್ಕೇರಿಸುವುದು ಸಾಮಾನ್ಯ ಮಾತಲ್ಲ. ಅವರ ಮಠದ ಎಲ್ಲ ವಿಭಾಗಗಳಲ್ಲಿ ನಿಷ್ಠೆಯಿಂದ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ. ಅವರ ಮಠದ ಆವರಣವು ಪುಟ್ಟ ಭಾರತವೇ ಆಗಿದೆ.ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ + +byಕಾರ್ತಿಕ್ ಕೃಷ್ಣ|Sep 7, 2024|ಸರಣಿ| 0 Comments + +ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು.ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ + +byಎಚ್. ಗೋಪಾಲಕೃಷ್ಣ|Sep 6, 2024|ಸರಣಿ| 6 Comments + +ಸಂಸ್ಥೆಯ ಹಿಂದಿರುವ ವಿವೇಕಾನಂದರ ಒತ್ತಾಸೆಯ ಸ್ಪೂರ್ತಿದಾಯಕ ನಿಲುವು ಸಾರ್ವಜನಿಕರಲ್ಲಿ ಹೆಚ್ಚು ಪ್ರಚಾರ ಪಡೆದಿಲ್ಲ ಮತ್ತು ಸಹೋದರಿ ನಿವೇದಿತಾ ಅವರ ಕೊಡುಗೆಯನ್ನು ಸಂಪೂರ್ಣವಾಗಿ ಮರೆತುಬಿಡಲಾಗಿದೆ. ಅದೇ ರೀತಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ೩೭೦ಎಕರೆ ಜಮೀನು ದಾನವಾಗಿ ನೀಡಿದ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ್ ಒಡೆಯರ್ ಅವರನ್ನು ಸಹ ಸಂಪೂರ್ಣವಾಗಿ ಮರೆಯಲಾಗಿದೆ.ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ + +byಡಾ. ಚಂದ್ರಮತಿ ಸೋಂದಾ|Sep 6, 2024|ಸರಣಿ| 0 Comments + +ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ…ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ನಾಲ್ಕನೆಯ ಕಂತು + +byಪೂರ್ಣೇಶ್ ಮತ್ತಾವರ|Sep 4, 2024|ಸರಣಿ| 2 Comments + +ಪಾಪ! ‘ಹನಿಮೂನ್’ ಪದವನ್ನು ತಾನು ನೋಡಿದ್ದ ರವಿಚಂದ್ರನ್ ಸಿನಿಮಾಗಳ “ಹನಿಮೂನ್ ಗೆ ಹೋಗಿ ಬರೋಣ…” ಎಂಬಂತಹ ಡೈಲಾಗ್‌ಗಳಲ್ಲಿ ಮಾತ್ರ ಕೇಳಿದ್ದ, ಅಮಾಯಕರಲ್ಲಿ ಅಮಾಯಕನಂತಿದ್ದ ರುದ್ರಸ್ವಾಮಿ, ‘ಹನಿಮೂನ್’ ಎಂದರೆ ಅಮೆರಿಕ, ಇಂಗ್ಲೆಂಡ್ ನಂತಹ ಯಾವುದೋ ಸುಂದರ ದೇಶವೋ ಇಲ್ಲ ಲಂಡನ್, ಪ್ಯಾರಿಸ್ ನಂತಹ ಸುಂದರ ನಗರವೋ ಇರಬೇಕೆಂದು ಆ ಕ್ಷಣದವರೆಗೂ ಪರಿಭಾವಿಸಿದ್ದ!ನವೋದಯ ಶಾಲಾ ದಿನಗಳ ನೆನಪುಗಳ ಕುರಿತು ಪೂರ್ಣೇಶ್‌ ಮತ್ತಾವರ ಬರೆಯುವ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ + +byಸಂಜೋತಾ ಪುರೋಹಿತ|Sep 4, 2024|ಸರಣಿ| 0 Comments + +ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ.ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ \ No newline at end of file diff --git a/Kenda Sampige/article_180.txt b/Kenda Sampige/article_180.txt new file mode 100644 index 0000000000000000000000000000000000000000..7e181bfacdf7c364bc0866cac7dfe308a330f5d2 --- /dev/null +++ b/Kenda Sampige/article_180.txt @@ -0,0 +1,25 @@ +ಇತ್ತೀಚಿನ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಶುಕ್ರದೆಸೆ ತಿರುಗಿದೆ ಎನ್ನಬಹುದು. ಹಲವು ಅಗತ್ಯತೆಗಳನ್ನು ಅದು ನೀಗಿಸಿಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಹಾಸ್ಯ ಸಾಹಿತ್ಯಕ್ಕೆ ಮತ್ತೊಂದು ಕೃತಿ ಸೇರ್ಪಡೆಯಾಗಿದೆ. ಗುಂಡುರಾವ್ ದೇಸಾಯಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ಶಿಕ್ಷಕರಾಗಿ ಮಕ್ಕಳ ಒಡನಾಡಿಯಾಗಿ ಮಕ್ಕಳ ಒಳಿತನ್ನೆ ಬಯಸುವ, ಅವರು ಮಕ್ಕಳಿಗಾಗಿ ‘ಮಕ್ಕಳೇನೂ ಸಣ್ಣವರಲ್ಲ’ ಎಂಬ ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಮಕ್ಕಳಿಗೆಂದೇ ಆದರೂ ಎಲ್ಲರೂ ಓದುವಂತ ಹಾಸ್ಯಭರಿತ ಕಥೆಗಳನ್ನು ರಚಿಸಿದ್ದಾರೆ. + +ಇಲ್ಲಿಯ ಎಲ್ಲ ಕಥೆಗಳಲ್ಲೂ ಗುಂಡುರಾವ್ ಅವರು ತಮ್ಮ ಪರಿಸರದ ಸುತ್ತಲಿನ ಘಟನೆಗಳಲ್ಲಿ ಹಾಸ್ಯದ ಎಳೆಯನ್ನು ಹಿಡಿದು ಸುಂದರ ಕಥೆಯಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ವಿಭಿನ್ನ ವಿಷಯವಸ್ತು, ಸಂಭಾಷಣೆ, ಸರಳ ಆಡು ಭಾಷೆ ಮೂಲಕ ಚೇತೋಹಾರಿಯಾಗಿವೆ. ಹಾಗೆಯೇ ಇಲ್ಲಿ ಕಥೆಯ ನಿರೂಪಣೆಗಿಂತ ಸಂಭಾಷಣೆಯ ರೂಪದಲ್ಲಿ ಸಾಗಿರೋದು ಆಪ್ತಭಾವ ಮೂಡಿಸುತ್ತವೆ. + +(ಗುಂಡುರಾವ್ ದೇಸಾಯಿ) + +ಸಂಕಲನದ ಮೊದಲ ಕಥೆ ‘ಎಗ್ ರೈಸ್ ಮಂತ್ರಿ’ ಹಾಸ್ಯದ ಜೊತೆಗೆ ಎಚ್ಚರವನ್ನೂ ಮೂಡಿಸುತ್ತದೆ. ಶಾಲಾ ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿಯೊಬ್ಬ ಮಂತ್ರಿಯಾಗುವ ಆತುರದಲ್ಲಿ ಪೊಳ್ಳು ಭರವಸೆ ನೀಡಿ, ಗೆದ್ದಮೇಲೆ ಎಗ್ ರೈಸ್ ಕೊಡಿಸಲಾಗದೇ ಇರುವ ಸ್ಥಿತಿ, ಅದನ್ನು ಪಡೆಯಲು ಪ್ರಯತ್ನಿಸುವ ಅವನ ಗೆಳೆಯರು ಮಾಡುವ ಸತತ ಪ್ರಯತ್ನ ಹಾಸ್ಯವನ್ನುಕ್ಕಿಸುತ್ತದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ನಾಗ ‘ನನಗೆ ಅಷ್ಟು ದುಡ್ಡು ಎಲ್ಲಿಂದ ಬರತೈತಿ, ಆಗಲ್ಲ ಬೇಕಾದ್ರ ಶಾಲಿಗೆ ಒಳ್ಳೆ ಕೆಲ್ಸ ಮಾಡ್ತೇನಿ’ ಅಂತ ಹೇಳಿದ್ದು ಅವನ ಪ್ರಾಮಾಣಿಕತೆಯಾದರೆ, ಆಸೆಗೆ ಬಲಿಯಾಗಬೇಡಿ ಎಂಬುದನ್ನೂ ಕಥೆ ಸೂಚ್ಯವಾಗಿ ಹೇಳುತ್ತದೆ. + +‘ಮಗ ಮತ್ತು ಗಾಳಿಪಟ’ ಕಥೆಯಲ್ಲಿ ಮಕ್ಕಳ ಸಹಜ ಸ್ವಭಾವ ವ್ಯಕ್ತವಾಗಿದೆ. ಮಕ್ಕಳು ಸದಾ ಉತ್ಸಾಹದ ಬುಗ್ಗೆಯಂತಿರುತ್ತಾರೆ. ಅವರ ಕಾರ್ಯಕ್ಕೆ ದೊಡ್ಡವರು ಪ್ರೋತ್ಸಾಹಿಸಬೇಕು. ಇಲ್ಲಿ ಮಗ ಸಮುದು ನಿತ್ಯ ಹೊಸ ಹೊಸ ಪ್ರಯತ್ನ ಮಾಡುತ್ತಲೇ ಇರುವನು. ಛಲ ಬಿಡದೆ ಗಾಳಿಪಟ ಹಾರಿದಾಗ ಎಲ್ಲರೂ ಖುಷಿ ಪಡುತ್ತಾರೆ. ಹಾಗೆಯೇ ಮಕ್ಕಳು ಸ್ವ ಅನುಭವದ ಮೂಲಕ ತಾವೇ ಪಡೆಯುವಂತಾದರೆ ಅವರ ಬುದ್ದಿಮಟ್ಟವೂ ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. + +ಈ ಸಂಕಲನದ ಶಿರ್ಷಿಕೆಯ ಕಥೆ ‘ಮಕ್ಕಳೇನು ಸಣ್ಣವರಲ್ಲ’ ಕಥೆಯು ನಮ್ಮ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಘಟನೆಯೇ ಆಗಿದೆ. ಕೆಲವು ಸಾರಿ ಮಕ್ಕಳು ದೊಡ್ಡವರಿಗಿಂತಲೂ ಹೆಚ್ಚಿನ, ದೊಡ್ಡವರಿಗೆ ಗೊತ್ತಿಲ್ಲದ ವಿಷಯಗಳನ್ನೂ ತಿಳಿದುಕೊಂಡಿರೋದು ಸೋಜಿಗವೆನಿಸುತ್ತದೆ. ಅದಕ್ಕೆ ಅವರ ಪ್ರಾಂಜಲ ಮನಸ್ಸು, ಪ್ರಶ್ನಿಸುವಿಕೆಯೂ ಕಾರಣವಾಗಿರುತ್ತದೆ. ಪಾರಿವಾಳಗಳನ್ನು ಸಾಕುವುದು ಒಂದು ಹವ್ಯಾಸ. ಅದರ ಜೊತೆಗೆ ಲಾಭದಾಯಕವೂ, ಅವುಗಳ ವಿಶಿಷ್ಟ ಗುಣಗಳು, ಪಾರಿವಾಳಗಳ ಉಪಯೋಗಗಳನ್ನು ಮಕ್ಕಳು ತಿಳಿಯಲು ಪ್ರಯತ್ನಿಸುತ್ತಾರೆಂಬ ವಿಷಯವನ್ನು ಕಥೆಯಲ್ಲಿ ಸುಂದರವಾಗಿ ಆಸಕ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ. + + + +ಇನ್ನೊಂದು ಚೆಂದದ ಕಥೆ ‘ನಾಯಿಯೊಂದಿಗಿನ ಸಖ್ಯ’. ನಾಯಿ ಮತ್ತು ಮರಿಗಳೆಂದರೆ ಮಕ್ಕಳಿಗೆ ತುಂಬಾ ಇಷ್ಟ. ಕೆಲವು ಮಕ್ಕಳಂತೂ ಚಿಕ್ಕಂದಿನಲ್ಲಿಯೇ ಹಚ್ಚಿಕೊಂಡರೆ ಬಿಟ್ಟಿರುವುದೇ ಇಲ್ಲ. ಅಷ್ಟೊಂದು ಅನ್ಯೋನ್ಯತೆ ಉಂಟಾಗಿಬಿಡುತ್ತದೆ. ಆದರೆ ಮೈಡಿ ಮೈಲಿಗೆಯ ಧರ್ಮಾಚರಣೆಯ ಸಂದರ್ಭದಲ್ಲಿ ಹಿರಿಕಳಾದ ಅಜ್ಜಿಯ ಮಡಿವಂತಿಕೆ ಮತ್ತು ಮಕ್ಕಳ ಪ್ರೀತಿ ಇಕ್ಕಟ್ಟಿನಲ್ಲಿ ಸಿಲುಕುವ, ಮಕ್ಕಳ ಮನಸ್ಸನ್ನು ಕದಡುವ ಪ್ರಸಂಗವನ್ನು ಈ ಕಥೆ ಕಟ್ಟಿಕೊಡುತ್ತದೆ. ಈ ಕಥೆ ಓದುತ್ತಾ ನಮ್ಮ ನಮ್ಮ ಬಾಲ್ಯದ ಪ್ರಸಂಗಗಳೂ ತೆರೆದುಕೊಳ್ಳುತ್ತವೆ. + +ಇನ್ನು ‘ಚಿರತೆ ಮತ್ತು ಸ್ನ್ಯಾಕ್ಸ್‌’ ಕಥೆಯಲ್ಲಿ ಮಕ್ಕಳ ಸಾಹಸಗಾಥೆ, ಮಗುವಿನ ಮುಗ್ಧತೆ ವ್ಯಕ್ತವಾಗುತ್ತದೆ. ಇಲ್ಲಿ ಕಾಡು ಬೆಳೆಸಲು ಮಕ್ಕಳು ತಾವು ಸಂಗ್ರಹಿಸಿದ ಬೀಜದುಂಡೆಗಳನ್ನು ಮಸ್ಕಿ ಗುಡ್ಡಕ್ಕೆ ಹೋಗಿ ಒಗೆದು ಬರುವ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡು ಅವರನ್ನು ಅಟ್ಟಿಸಿಕೊಂಡು ಓಡತೊಡಗಿತು. ಮಕ್ಕಳು ಹಗ್ಗದ ಸಹಾಯದಿಂದ ಬಂಡೆಗಲ್ಲೊಂದನ್ನು ಏರಿ ಕುಳಿತುಕೊಳ್ಳುತ್ತಾರೆ. ಅಲ್ಲಿ ಅವರು ಚಿರತೆಯಿಂದ ಪಾರಾಗಲು ಹಲವು ಪ್ರಯತ್ನಗಳನ್ನು ಮಾಡುವ ಪ್ರಯತ್ನದಲ್ಲಿ, ತಮ್ಮ ಬಳಿಯಿದ್ದ ಸ್ನ್ಯಾಕ್ಸನ್ನು ಚೂರು ಚೂರು ಮಾಡಿ ಅದರತ್ತ ಎಸೆಯುತ್ತಾರೆ. ಮಸಾಲೆ ರುಚಿ ತಾಗಿ, ಅದನ್ನು ಚಿರತೆ ತಿಂದದನ್ನು ನೋಡಿ ಮಕ್ಕಳು ಒಳಗೊಳಗೇ ಸಂತೋಷಡುತ್ತಾರೆ. ಸಮುದು ಬಲು ತುಂಟ. ಅದರ ಕಣ್ಣಿಗೆ ಖಾರ ಬಿದ್ದರೆ ಓಡಿ ಹೋಗುತ್ತದೆ ಎಂದು ಹಾಗೆ ಮಾಡುತ್ತಿದ್ದ. ಭಯದ ನಡುವೆ ಸಮುದು ಹಾಸ್ಯಮಯವಾಗಿ ಕೀಟಲೇ ಮಾಡುತ್ತಿರುತ್ತಾನೆ. ಕೊನೆಗೂ ಮಕ್ಕಳೆಲ್ಲ ಸುರಕ್ಷಿತವಾಗಿ ಮನೆ ತಲಪುತ್ತಾರೆ. ಹೀಗೆ ಕಥೆ ಕುತೂಹಲ ಮೂಡಿಸುತ್ತದೆ. ಮಕ್ಕಳಲ್ಲಿ ಜಾಗೃತೆ ಕುರಿತು ಮಾಹಿತಿ ತಿಳಿಯಪಡಿಸುತ್ತದೆ. + +ಹಾಗೆಯೇ ‘ದೆವ್ವ ಬಂತು ದೆವ್ವ’, ‘ನಾನು ನೀರಿನ ಮೇಲೆ ನಡೆಯುವೆ’, ‘ರಾಮುವಿನ ನಾಯಿ’, ಮತ್ತು ‘ಪ್ಲಾಸ್ಟಿಕಾಯಣ’ ಕಥೆಗಳು ಗಮನ ಸೆಳೆಯುತ್ತವೆ. ಮಕ್ಕಳ ನಡುವೆಯೇ ನಡೆಯುವ ನೈಜ ಸಂಭಾಷಣೆ ಇಲ್ಲಿಯ ಕಥೆಗಳ ಯಶಸ್ಸಾಗಿದೆ. ಸ್ಥಳೀಯ ಭಾಷಾ ಸೊಗಡು ಕತೆಯನ್ನು ಮತ್ತಷ್ಟು ಚೆಂದಗಾಣಿಸಿದೆ. ಕಲಾವಿದ ಸಂತೋಷ ಸಸಿಹಿತ್ಲು ಅವರು ರಚಿಸಿದ ಅತ್ಯಾಕರ್ಷಕವಾದ ಮುಖಪುಟ ಮತ್ತು ಒಳ ಚಿತ್ರಗಳು ಚೆಂದಕಿಂತ ಚೆಂದ ಇವೆ. ನೋಡಿದ ತಕ್ಷಣ ಓದಲು ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ. ಈ ಕೃತಿಯನ್ನು ಕೀರ್ತಿ ಪ್ರಕಾಶನ ಮಸ್ಕಿ ಇವರು ಪ್ರಕಟಿಸಿದ್ದಾರೆ. ಒಟ್ಟು ಹನ್ನೆರೆಡು ಕಥೆಗಳಿರುವ ಈ ಸಂಕಲನ ಓದಲು ಖುಷಿ ನೀಡುತ್ತದೆ. + +ಈ ಕೃತಿಗೆ ಮುನ್ನುಡಿ ಬರೆದಿರುವ ಹಿರಿಯ ಸಾಹಿತಿಗಳಾದ ಆನಂದ ಪಾಟೀಲ ಅವರು ‘ಇಲ್ಲಿನ ಕಥಾ ಬಗೆಗಳಿಗೆ ಅಗತ್ಯವಾಗುವ ಸಹಜದ ಆಡುಮಾತಿನ ವರಸೆಗಳನ್ನು ಗುಂಡುರಾವ್ ಬಹಳ ಸೊಗಸಾಗಿ ತಂದುಕೊಂಡಿದ್ದಾರೆ. ಅದರಲ್ಲೂ ಅವರ ರಾಯಚೂರಿನ ಕಡೆಯ ಘಾಟು ಇಲ್ಲಿ ಮೂಗಿಗೆ ಚೆನ್ನಾಗಿಯೇ ಬಡಿಯುತ್ತದೆ. ಬಲು ದೊಡ್ಡ ಯಶಸ್ಸು ಈ ಭಾಷಾ ಪರಿಕರದಲ್ಲಿಯೇ ಅವರಿಗೆ ಸರಳವಾಗಿ ಸಾಧ್ಯವಾಗಿದೆ. ಹಾಸ್ಯ ಗುಂಡುರಾಯರ ಸ್ವಭಾವದ ಆಯ್ಕೆಯಾಗಿರುವಂತೆಯೇ ಇಲ್ಲಿನ ಮಕ್ಕಳ ಲೋಕದ ಆಯ್ಕೆ ಬಲು ಅಂಟಿಕೊಂಡೇ ಬಂದುದಾಗಿ ಭಾರಿ ಹೊಂದಿಕೊಂಡು ಬಿಟ್ಟಿದೆ.’ ಎಂದು ಹೇಳಿದ್ದಾರೆ. + +ಹಾಸ್ಯಕ್ಕೆ ಆಯಸ್ಸು ವೃದ್ಧಿಸುವ ಶಕ್ತಿಯಿದೆ. ಹಾಗಾಗಿಯೇ ಹಾಸ್ಯ ಸಾಹಿತ್ಯ ನಮ್ಮ ಮಕ್ಕಳಿಗೂ ದೊರೆಯಲಿ. ಈ ಕಥೆ ಓದುತ್ತಾ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿ, ರಂಜಿಸಿದರೆ ಲೇಖಕರ ಸಂತೋಷಕ್ಕೆ ಪಾರವೇ ಇಲ್ಲ. ಆ ಕಾರ್ಯ ಕೈಗೂಡಲು ಮಕ್ಕಳ ಕೈಗೆ ಈ ಕೃತಿಯನ್ನು ಓದಲು ನೀಡೋಣ. ಸಾಂದರ್ಭಿಕವಾಗಿಯಾದರೂ ಇಲ್ಲಿಯ ಕಥೆಗಳನ್ನು ಮಕ್ಕಳಿಗೆ ಹೇಳೋಣ. + +ನಾಗರಾಜ ಎಂ ಹುಡೇದ ಹಾವೇರಿಯವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದುವುದು, ಕವನ, ಕಥೆ ರಚನೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ನಗುವ ತುಟಿಗಳಲ್ಲಿ, ಭರವಸೆ (ಕವನ ಸಂಕಲನಗಳು), ಅವತಾರ್ ಮತ್ತು ಹಾರುವ ಕುದುರೆ  (ಮಕ್ಕಳ ಕಥಾ ಸಂಕಲನ), ಕಿರುಗೊಂಚಲು (ಕವನಗಳ ಸಂಪಾದಿತ ಕೃತಿ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ) ಸೇರಿದಂತೆ ಇವರ ಹಲವು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_181.txt b/Kenda Sampige/article_181.txt new file mode 100644 index 0000000000000000000000000000000000000000..3b1526c74cae34b1437c3c13ff728fba2ef39df8 --- /dev/null +++ b/Kenda Sampige/article_181.txt @@ -0,0 +1,23 @@ +“ಕಾಕತಾಳೀಯವೆಂಬುದಿಲ್ಲ. ಕೆಲವು ಘಟನೆಗಳ ಹಿಂದಿನ ಸಂಬಂಧ ಸೂತ್ರಗಳು ನಮಗೆ ಗೋಚರಿಸುವುದಿಲ್ಲ ಅಷ್ಟೇ” ಇದು ಕಾದಂಬರಿಯ ಮೊದಲ ಸಾಲು. ಇಡೀ ಕಾದಂಬರಿ ಅರಳಿದ್ದು ಇದೇ ಸಿದ್ಧಾಂತದ ಮೇಲೆಯೇ ಎಂಬುದು ಕಾದಂಬರಿ ಓದಿದ ಮೇಲಿನ ಅಭಿಪ್ರಾಯ. + +ಕೌಂಟ್ ಲಿಯೋ ಟಾಲ್ಸಟಾಯ್ ತನ್ನ “ಅನ್ನಾ ಕರೆನಿನಾ”ದ ಮೊದಲ ಸಾಲನ್ನು ಹೀಗೇ ಬಳಸಿದ್ದಾರೆ. ಕಾದಂಬರಿಯ ಒಟ್ಟೂ ಆಶಯ ಆ ಸಾಲಲ್ಲೇ ಅಡಗಿದೆ. “Happy families are all alike: every unhappy family is unhappy in its own way”. ಇದು ಕಾದಂಬರಿ ಹೇಳ ಹೊರಟ ಕೌಟುಂಬಿಕ ಸತ್ವವನ್ನು ಎರಡೇ ವಾಕ್ಯಗಳಲ್ಲಿ ಹಿಡಿದಿಟ್ಟ ಅಪೂರ್ವ ನುಡಿ. + +(ವಿವೇಕ ಶಾನಭಾಗ) + +ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ. ಇನ್ನು ಪ್ರತಿ ಸಂಗತಿಯೊಂದಿಗೂ ಅಗೋಚರ ಎನ್ನುವಂತೆ ತಳಕು ಹಾಕಿಕೊಂಡಿರುವ ವಿರೋಧಾಭಾಸದ ಚಹರೆಗಳನ್ನು ಗುರುತಿಸುವುದು ಎಷ್ಟು ಆಭಾಸವೋ, ಅಷ್ಟೇ ಸಾಂದರ್ಭಿಕವೂ, ಅನಿವಾರ್ಯವೂ ಆಗುವಂತದ್ದು. + +“ಸಕೀನಾಳ ಮುತ್ತು” ಮನದಲ್ಲೆಬ್ಬಿಸುವ ವಿಶೇಷ ಚಿಂತನೆ ಅಸ್ತಿತ್ವದ ಕುರಿತಾದದ್ದು. ಗಂಟುಗಂಟಾದ ಸಿಕ್ಕುಗಳ ಹೊದ್ದ, ಭಿನ್ನ ವಿಭಿನ್ನ ನಿಗೂಢ ಎನಿಸುವ ಮನೋ ಚಹರೆಗಳು ಇಲ್ಲಿ ಮಾತನಾಡುತ್ತವೆ. ‘ಸಾವಿನಂದ ಮುಕ್ತಿ” ಎನ್ನುವ ಪದವೊಂದು ಕೋರೆ ಬರವಣಿಗೆಯ ಕಾರಣ ‘ಸಕೀನಾಳ ಮುತ್ತುʼ ಎಂಬಂತಾಗಿ, ಮನೆ ಮಂದಿಯೇ ಗುರುತು ಹತ್ತದಂತೆ ಬರೆದ ಕೈ ಬರೆಹವನ್ನು ಗುರುತಿಸುವಲ್ಲೇ ವಿಫಲವಾಗುವುದು, ವ್ಯಕ್ತಿತ್ವ ಅಳೆಯುವಲ್ಲಿ ಸೋಲುವ ಕಾರಣದಿಂದ. ಮನುಷ್ಯ ವ್ಯಕ್ತಿತ್ವದಲ್ಲಿನ ನಿಗೂಢತೆಗೆ ಮಾನದಂಡವಾಗಿ ಈ ಸಂದರ್ಭ ಅಮೋಘವಾಗಿದೆ. ಬದುಕಿನ ಹತ್ತಾರು ದರ್ಶನಗಳನ್ನು ನಿರೂಪಿಸುತ್ತಾ, ಸರಳ ನಿರೂಪಣೆಯಲ್ಲಿ ಸಂಕೀರ್ಣ ಕಥನವೊಂದು ಬೆಳಗಿದೆ. ನಾಯಕ ವೆಂಕಟರಮಣನ ಹೆಸರೇ ಅಪಭ್ರಂಶಗೊಂಡು ವೆಂಕಟ್ ಆಗಿ, ವೆಂಕಿಯಾಗಿ, ವೆಂಕಟ್ ರಾಮನ್ ಆಗಿ ಇನ್ನೇನೋ ಆಗಿ ಹೋಗಬಹುದಾದ ಸಂಘರ್ಷದ ಸಂದರ್ಭವಿದು. ಆಧುನಿಕ ಬದುಕಿನಲ್ಲಿ ಮೂಲವ್ಯಕ್ತಿತ್ವ ಮತ್ತು ಜಗ ತೊಡಿಸಿದ ವ್ಯಕ್ತಿತ್ವಗಳಲ್ಲಿ ಕುಬ್ಜನಾಗುವ ವೆಂಕಟರಮಣ ತಾನೊಬ್ಬ ಪ್ರಗತಿಪರ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲೇ ತನ್ನ ಸನಾತನತೆಯನ್ನು ಬಚ್ಚಿಡಬಯಸುತ್ತಾ ತಿಳಿಯದೇ ಬಿಚ್ಚಿಡುತ್ತಾನೆ. ಇಂತಹ ಹಲವು ಸೂಕ್ಷ್ಮಗಳನ್ನು ಈ ಕಾದಂಬರಿ ವಿಫುಲವಾಗಿ ತೆರೆದುತೋರುತ್ತದೆ. + +ಉದ್ಯೋಗಸ್ಥ ದಂಪತಿಗಳಾದ ವೆಂಕಟರಮಣ ಮತ್ತು ಪತ್ನಿ ವಿಜಿಯವರದು “ಸಮರಸದ ಜೀವನ”. ಸದಾ ಒಬ್ಬರನ್ನೊಬ್ಬರು ಬೆಂಬಲಿಸುತ್ತಾ, ಮಾದರಿ ದಂಪತಿಗಳಂತೆ ಬದುಕುವವರು. ಹಾಗಾಗಿ ಎಲ್ಲದರಲ್ಲೂ ಅವರು “ಪರ್ಫೆಕ್ಟ್‌ ಪ್ಲಾನಿಂಗ್” ಎಂದು ಸ್ನೇಹಿತರ ಹೊಗಳಿಕೆ ಕಾರಣವಾಗುವವರು. ಆದರೆ ಈ ಸಮರಸವೆಂಬುದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಕಾದಂಬರಿ ಓದುತ್ತಾ ಅರಿವಾಗುತ್ತದೆ. “ಅನಘನ ಗಂಡನ ಥರ ಎಲ್ಲಾ ಬಿಚ್ಚಿಡೋದು ಒಂದು ರೀತಿ. ಏನನ್ನಾ ಸಹಿಸ್ಕೋತಾ ಇದೀವಿ ಅನ್ನೋದಾದರೂ ಗೊತ್ತಿರುತ್ತೆ. ಗುಟ್ಟಾಗಿ ಸೆಗಣಿ ತಿನ್ನೋ ದ್ರೋಹಿಗಳು ಹೆಚ್ಚು ಅಸಹ್ಯ. ಬಾಯಿ ವಾಸನೆ ಹೊಡೀತಿದ್ರೂ ತಿಂದಿಲ್ಲವೆಂದು ನಾಚಿಕೆಯಿಲ್ಲದೇ ಸುಳ್ಳು ಹೇಳಿ ಸಾಧಿಸುತ್ತಾರೆ” ಎಂಬ ವಿಜಿಯ ಮಾತಲ್ಲಿ ಈ ಸಮರಸದ ವ್ಯಾಖ್ಯಾನವಿದೆ. ಪರಸ್ಪರ ಗೌರವಿಸುವ ಗುಣವಿದೆಯೆಂಬುದನ್ನು ಉಲ್ಲೇಖಿತ ಧ್ವನಿಯಾಗಿ ಪದಗಳಲ್ಲಿ ಮೂರ್ತವಾಗಿ ವ್ಯಕ್ತಪಡಿಸುವ ಲೇಖಕರು ಅಷ್ಟೇ ಅಮೂರ್ತವಾಗಿ ನಾಯಕನ ಒಳಮನಸ್ಸಿನ ನಿಜರೂಪಕ್ಕೆ ಆಕಾರವನ್ನು ಕೊಡುತ್ತಾರೆ. + +ಕಾದಂಬರಿಯ ಉದ್ದಕ್ಕೂ ದ್ವಂದ್ವ ನಿಲುವುಗಳಲ್ಲಿ ವ್ಯಕ್ತವಾಗುತ್ತಾ ಅಸ್ಥಿರ ನಿಲುವಿನ ಕಂದಾಚಾರಗಳಿಂದ ಹೊರಬರಲಾಗದ, ನಾಯಕ ಸ್ಪಷ್ಟವಾಗುತ್ತಾನೆ. ವೆಂಕಟರಮಣ ಹಳ್ಳಿಯಲ್ಲಿ ಬೆಳೆದರೂ ಪಟ್ಟಣದ ಐಶಾರಾಮಿನ, ಆಡಂಬರದ ಜೀವನಕ್ಕೆ ಮರಳಾದವನು, ಕಾರ್ಪೋರೆಟ್ ಜಗತ್ತಿನ ವ್ಯೂಹದಲ್ಲಿ ತನ್ನತನವನ್ನೇ ಮರೆತವನಂತೆ, ಸಮಾಜದ ಸಿದ್ಧ ಮಾದರಿಯ, ಸೀಮಿತ ನೆಲೆಯಲ್ಲೇ ಸಂಭ್ರಮಿಸುವ, ಒಂದು ಸಮೂಹದ ಪ್ರತಿನಿಧಿಯಂತೆ ಕಾಣುತ್ತಾನೆ. ಆದರೆ ಪತ್ನಿ ವಿಜಿ ತನ್ನ ಪರಧಿಯಲ್ಲೇ ಸುತ್ತುತ್ತಾಳಾದರೂ, ಆದರ್ಶದ ಪೊರೆಯನ್ನು, ಸನಾತನತೆಯ ಹೊರೆಯನ್ನು ಕಳಚಿಕೊಂಡ, ಪಕ್ವ ವ್ಯಕ್ತಿತ್ವವಾಗಿ ವಿಸ್ತೃತ ದೃಷ್ಟಿಕೋನದವಳಾಗಿ ಕಂಡುಬರುತ್ತಾಳೆ. + +ಊರಿಗೆ ಹೋದ ಮಗಳು ರೇಖಾಳನ್ನು ಹುಡುಕಿಕೊಂಡು ಬರುವ ಆಕೆಯ ಕಾಲೇಜಿನ ಸಹಪಾಠಿ ಹುಡುಗರು, ಅವರ ವೇಷಭೂಷಣ, ಪ್ರೀತಿ ಪ್ರೇಮವನ್ನು ತಲೆಗೇರಿಸಿಕೊಂಡು, ಈ ಕುಟುಂಬವನ್ನು ಪೇಚಿಗೆ ಸಿಲುಕಿಸುವುದು, ಸಾಮಾನ್ಯ ಸಂಗತಿಯೆನಿಸಿದರೂ, ಅವರ ಬೆಂಗಾವಲಿಗರು, ರೇಖಾ ಯಾರ ಜೊತೆ ಮಾತನಾಡಬೇಕು, ಮಾತನಾಡಬಾರದು ಎಂಬುದನ್ನೆಲ್ಲಾ ತಾವೇ ನಿರ್ಧರಿಸುವವರಂತೆ ವರ್ತಿಸುವುದು ಪುರುಷ ಪಾರಮ್ಯದ ಒಳಧೋರಣೆಯನ್ನು ವಿಡಂಬಿಸುತ್ತದೆ. ಈ ಹುಡುಗರಿಗೆ ಬೆಂಬಲಕ್ಕೆ ನಿಲ್ಲುವ ಅಲ್ಲಿಯ ಮರಿ ಫುಡಾರಿಗಳು ಎಲ್ಲವನ್ನೂ ರಾಜಕೀಯದ ಕಲಸುಮೇಲೋಗರ ಮಾಡುವಂತೆ ಪ್ರಯತ್ನಿಸುವುದು ಪರಿಣಾಮಕಾರಿಯಾಗಿ ಮೂಡಿದೆ, ಕಲಿಕೆಯ ದಿನಗಳಲ್ಲಿ ಹೋರಾಟ, ಬಂಡಾಯ ಇತ್ಯಾದಿಗಳನ್ನು ತಲೆಗೇರಿಸಿಕೊಳ್ಳುವಂತೆ ಮಾಡಿ, ಯುವ ಜನತೆಯನ್ನು ತಮ್ಮ ದಾಳವಾಗಿ ಬಳಸಿಕೊಳ್ಳುವ ದುಷ್ಟ ಕೂಟಗಳ ಹುನ್ನಾರವನ್ನೂ, ರಾಜಕೀಯದ ಕುಟಿಲ ಹಿತಾಸಕ್ತಿಗಳನ್ನೂ ಲೇಖಕರು ಸೂಚ್ಯವಾಗಿ ವಿಡಂಬಿಸಿದ್ದಾರೆ. ಬದುಕಿನ ಸುರಕ್ಷತೆ ಮತ್ತು ಸ್ವಾಸ್ತ್ಯ ಎರಡನ್ನೂ ಉಳಿಸಿಕೊಳ್ಳಲಾಗದ ಯುವ ಜನತೆ, ಹೇಗೆ ಬದುಕನ್ನು ನಾಶಮಾಡಿಕೊಳ್ಳುತ್ತಾರೆ ಎಂಬುದಕ್ಕೆ ನಾಯಕನ ತಾಯಿಯ ತಮ್ಮ ರಮಣ ಉದಾಹರಣೆಯಾದರೂ ಮತ್ತದೇ ದಾರಿಯಲ್ಲಿ ಸಾಗುವ ರೇಖಾ ಮುಂದಿನ ಬಂಡಾಯದ ಪ್ರತಿನಿಧಿಯಾಗಿ ವ್ಯಕ್ತಗೊಳ್ಳುತ್ತಾಳೆ. ಒಟ್ಟಾರೆ ಬದುಕಿನ ಹಲವು ಚಿತ್ರಗಳು, ಅದೇ ಚಕ್ರದಲ್ಲಿ ಮತ್ತೆ ಮತ್ತೆ ಸುತ್ತುವುದನ್ನು ನಾವಿಲ್ಲಿ ಕಾಣುತ್ತೇವೆ. + +ಸಾಮಾಜಿಕ ಕಳಕಳಿಯುಳ್ಳ ಮನಸ್ಸುಗಳು ಒಂದೆಡೆಯಾದರೆ, ಪ್ರತಿ ಸಂಗತಿಯನ್ನು ತಮ್ಮ ಲಾಭದ ಉದ್ದೇಶಕ್ಕಾಗಿಯೇ ಬಳಸಿಕೊಳ್ಳುವ ಇನ್ನೊಂದು ವರ್ಗ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಲೇ ಗೆದ್ದು ಬರುವುದು ವ್ಯವಸ್ಥೆಯ ವಿಪರ್ಯಾಸ. ಚುನಾವಣೆಯಲ್ಲಿ ಸುಬ್ಬು ಗೆದ್ದು ಬರುವುದು ರೇಖಾಗೆ ಹಿತವಾಗುವುದಿಲ್ಲ. ಭ್ರಷ್ಟ ಅಧಿಕಾರ ಹಿಡಿಯುವುದು ನಮ್ಮ ಚುನಾವಣಾ ವ್ಯವಸ್ಥೆಯ ಅತಿ ದೊಡ್ಡ ದುರಂತ. ಒಂದೇ ಸೂರಡಿಯಲ್ಲಿ ಪತ್ನಿ ವಿಜಿ, ಮಗಳು ರೇಖಾ ಸುಬ್ಬುವಿನ ಗೆಲುವನ್ನು ಸ್ವೀಕರಿಸುವ ರೀತಿ ಭಿನ್ನವಾದರೆ, ಅದೇ ವೆಂಕಟರಮಣ ಅದನ್ನು ವ್ಯಾಖ್ಯಾನಿಸುವ ಧಾಟಿಯಲ್ಲಿ ಆ ಗೆಲುವನ್ನು ಆತ ಸಂಭ್ರಮಿಸಿದಂತಿದೆ. ಗೂಂಡಾ ಸಾಮ್ರಾಜ್ಯದ ಪರ್ತಕರ್ತ ರಂಗಣ್ಣನೂ ಸಮಾಜದ ಉದ್ಧಾರದ ಕನಸುಳ್ಳ ಪತ್ರಕರ್ತ ಸುರೇಶನೂ ಎರಡು ದಡಗಳಂತೆ ಚಿತ್ರಿಸಲಾಗಿದೆ. ಇದು ಪ್ರಸ್ತಾಪಿಸುವುದು ಒಂದೇ ವಸ್ತು, ಸಂಗತಿಯೊಳಗಿರುವ ದ್ವಂದ್ವ ನೋಟಗಳನ್ನು. + + + +ನಿಶ್ಚಲವಾದ ಸಂವೇದನೆಗಳು ಇಲ್ಲವೇ ಇಲ್ಲ. ನಿತ್ಯ ರೂಪಾಂತರಗೊಳ್ಳುವ ಭಾವ- ಭಾವನೆಗಳನ್ನು ಸಾಂಘಿಕ ನೆಲೆಯಲ್ಲಿ ಗ್ರಹಿಸುತ್ತಾ, ಸಂವೇದನೆಗಳಿಗೆ ಏಕಮುಖ ವ್ಯಾಖ್ಯಾನ ನೀಡುವ ಪ್ರಯತ್ನ ಮನುಷ್ಯ ಜಗತ್ತಿನದು. ಇದನ್ನೆ ಸಮಕಾಲೀನ ಸಮಾಜದ ದ್ವಂದ್ವ ಮನಸ್ಥಿತಿಯನ್ನು, ಜೀವನದ ಆಶಯ ಮತ್ತು ಧ್ಯೇಯಗಳಲ್ಲಿಯ ಭಿನ್ನತೆಯನ್ನು, ಆಧುನಿಕತೆ ಮತ್ತು ಸಂಪ್ರದಾಯಶೀಲತೆ ಇವೆರಡರ ಮಧ್ಯೆ ನಲಗುವ ಆಧುನಿಕರೆನಿಸಿಕೊಳ್ಳುವವರ ತುಮುಲಗಳನ್ನು ಈ ಕಥಾನಕ ನಿರೂಪಿಸುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ತಲೆ ಎತ್ತುತ್ತಿರುವ ಸ್ತ್ರೀ ದನಿಗಳಲ್ಲಿ ಗುರುತರವಾಗಿ ಇರಬೇಕಾದ ಧಾಡಸಿತನ ಇದೆಯಾ? ನಾವೆಲ್ಲ ಸತ್ಯ ಎಂದು ಒಪ್ಪಿ ನಡೆಯುತ್ತಿರುವ ಅನುಸರಿಸುತ್ತಿರುವ ಎಲ್ಲ ಆಚಾರ ವಿಚಾರಗಳ ಮೂಲ ಮತ್ತು ಹೊಸ ಜಗತ್ತು ಸೃಷ್ಟಿಸುತ್ತಿರುವ ಹೊಸ ಸತ್ಯಗಳು ಎಲ್ಲವೂ ಅಸಂಗತವೇ? ಹೀಗೆ ಹತ್ತಾರು ಅಸಂಗತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಕಾದಂಬರಿ. ಸಂಪೂರ್ಣ ಕಾದಂಬರಿಯುದ್ದಕ್ಕೂ ಹಲವು ನೆನಪಿನಿಂದ ಹೆಕ್ಕಿದ ಘಟನೆಗಳನ್ನು ಹೇಳುತ್ತಾ ನಾಯಕನ “ಸ್ವಗತದ ಸುಖ”ದ ಮುಖಾಂತರವೇ ಕಾದಂಬರಿ ಹಿಗ್ಗುತ್ತಾ ಹೋಗುವುದು ವಿಶಿಷ್ಟ ಶೈಲಿಯ ಕಾದಂಬರಿಯನ್ನೋದಿದ ಅನುಭವ ನೀಡುತ್ತದೆ. + +ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ) \ No newline at end of file diff --git a/Kenda Sampige/article_182.txt b/Kenda Sampige/article_182.txt new file mode 100644 index 0000000000000000000000000000000000000000..5a13811c65b46ec6c5d840d0c1cd45313d86717b --- /dev/null +++ b/Kenda Sampige/article_182.txt @@ -0,0 +1,15 @@ +ಅಪ್ಪ ಇಲ್ಲವಾಗಿ ಐದು ನಿಮಿಷಗಳಾಗಿತ್ತು. ಆಸ್ಪತ್ರೆಯಲ್ಲಿ ಬಿಲ್ಲು ಕಟ್ಟಲು ಕರೆದರು. ವಾಸ್ತವತೆ ಅಪ್ಪಳಿಸುವುದೇ ಹೀಗೆ. ಅಲ್ಲಿ ಎಲ್ಲವೂ ಸರಿ ಮತ್ತು ಸಕಾಲಿಕ. ಬಿಲ್ಲು ಕಟ್ಟಿ ಅಲ್ಲೇ ಮೆಟ್ಟಿಲಿನ ಮೇಲೆ ಕುಂತೆ, ಅಮ್ಮನನ್ನು ಮಾವ ಸಂತೈಸುತ್ತಿದ್ದರು. ಅಪ್ಪ ಹೋದದ್ದು ಧಿಡೀರನೆ ಅಲ್ಲವಾದರೂ ೬೨ ಸಾಯುವ ವಯಸ್ಸಾಗಿರಲಿಲ್ಲ. ೫೭ ಕ್ಕೆ ಅವರಿಗೆ ಬಡಿದ ಸ್ಟ್ರೋಕ್ ಮುಂದೆ Parkinson’s ಮತ್ತು Dementia ಎಂದು ತಿಳಿದಾಗ, ಇವೆರಡೂ ಸಂಕೀರ್ಣ ಸ್ಥಿತಿಗಳು ಅವರಿಗೆ ಏಕೆ ಬಂದವು ಎಂದು ಮರುಗಿದೆವು? ಅತ್ಯಂತ ಲವಲವಿಕೆಯಿಂದಿದ್ದ ಅವರನ್ನು ಹೀಗೆ ಮೂಲೆಗುಂಪು ಮಾಡಿದ ಖಾಯಿಲೆಗಳ ಬಗ್ಗೆ ನನಗೂ, ಅಮ್ಮನಿಗೂ ಮತ್ತು ಅಪ್ಪನನ್ನು ನೋಡಿದೆಲ್ಲರಿಗೂ ಬೇಸರವಿತ್ತು. ಮೆಟ್ಟಿಲುಗಳಮೇಲೆ ಕುಂತು ಖಾಲಿ ಖಾಲಿ ಅನ್ನಿಸತೊಡಗಿರುವಾಗಲೇ, ಇಂದು ನಾನು ಕಟ್ಟಿದ್ದು ಅಪ್ಪನ ಕಡೆಯ ಬಿಲ್ಲು ಎಂದು ಹೊಳೆದು ಅಳು ಒತ್ತರಿಸಿ ಬಂತು. ಅಪ್ಪನ ಐದು ವರ್ಷದ ಡಿಪೆಂಡೆಂಟ್ ಸ್ಥಿತಿ ಅವರಿಗೂ, ಅಮ್ಮನಿಗೂ ಮತ್ತು ನಮಗೂ ಸುಖಕರವಾಗಿ ಖಂಡಿತವಾಗಿಯೂ ಇರಲಿಲ್ಲ. ಆದರೆ ನಾವು ಅವರ ಇಲಾಜಿಗಾಗಿ ನಮ್ಮ ಕೈಲಾದ ಎಲ್ಲ ಪ್ರಯತ್ನವೆಲ್ಲ ಮಾಡಿದೆವು. ಯಾರೋ “ಮೇಲೆ ಬರಬೇಕಂತೆ” ಅಂತ ಕರೆದರು, ಹೋದೆ. “ನಿಮ್ಮಲ್ಲಿ ಕಾಲುಕೈ ಮಡಿಸಬೇಕಾ?” ಎಂದು ಕೇಳಿದರು. “ಹೌದು” ಎಂದೆ. ಮಡಿಸಿದವರು, ತಲೆಯನ್ನು ಬಾಯಿ ಜಾರದ ಹಾಗೆ ಕಟ್ಟಿದರು. ಅರ್ಧ ಗಂಟೆಯ ಮುಂಚೆ ಕಡೆಯ ಬಾರಿ ಅಪ್ಪ ಪೈಪ್‌ನ ಮೂಲಕ ‘ರವೆ’ಗಂಜಿ ಕುಡಿದಿದ್ದರು. ಎರಡೇ ನಿಮಿಷದಲ್ಲಿ ICU ಖಾಲಿ ಮಾಡಿಸಿ ಮತ್ತೊಬ್ಬರಿಗೆ ಬೆಡ್ಡು ಅಣಿಮಾಡಲಾಯಿತು. ಅಪ್ಪನನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಆಸ್ಪತ್ರೆ ಮುಂದೆ ಕರೆತರಲಾಯಿತು. ಆಂಬುಲೆನ್ಸ್ ರೆಡಿ ಇತ್ತು, ಶಿಫ್ಟ್ ಮಾಡಿದೆವು. ಅಮ್ಮ ಮತ್ತು ಇನ್ನೊಬ್ಬರು ಹತ್ತಿದರು. + +(ದರ್ಶನ್‌ ಜಯಣ್ಣ) + +ಆಸ್ಪತ್ರೆಯ ಮಾಲಕರೂ ಆಗಿದ್ದ ಮತ್ತು ಅಪ್ಪನನ್ನು ನೋಡಿದ ವೈದ್ಯರು “ನಿಮ್ಮ ಕೈಲಾದಷ್ಟು ನೋಡಿಕೊಂಡಿದ್ದೀರ, ಈ ಸ್ಥಿತಿಯೇ ಹೀಗೆ ಏನೂ ಮಾಡಲಿಕ್ಕಾಗುವುದಿಲ್ಲ, ಇಟ್ಸ್ ಆ ಡಿಜೆನೆರೆಟಿವ್ ಡಿಸ್ಆರ್ಡರ್” ಅಂದರು. ಜೊತೆಗೆ “ನಾವೆಲ್ಲಾ ಚಿಕ್ಕವರಿರುವಾಗ ನಿಮ್ಮ ಅಂಗಡಿಗೆ ಬಂದು ಜ್ಯೂಸು ಕುಡಿಯುತ್ತಿದ್ದೆವು. ಒಳ್ಳೆಯ ಮನುಷ್ಯ” ಅಂದರು. ಆಂಬುಲೆನ್ಸ್‌ನ ಮುಂದಿನ ಸೀಟಿನಲ್ಲಿ ನಾನು ಕುಳಿತುಕೊಂಡೆ, ಡ್ರೈವರ್‌ಗೆ ಮನೆಯದಾರಿ ತೋರಿಸಬೇಕಿತ್ತು. + +ಅಮ್ಮ ಅಳು ನಿಲ್ಲಿಸಿದ್ದಂತಿತ್ತು. ನಾನು ಹಿಂದಿರುಗಿ ನೋಡಲು ಹೆದರಿದೆ. ನನ್ನೊಳಗೆ ಏನಾಗುತ್ತಿತ್ತೋ ಹೇಳುವುದು ಕಷ್ಟ. ಡ್ರೈವರ್ ದಾರಿ ಕೇಳಿದ. “ದ್ವಾರಕಾ ಹೋಟೆಲ್ಲಿನ ಹತ್ತಿರ ಮನೆ” ಅಂದೆ. B H ರಸ್ತೆಯ ರಾಂಗ್ ಸೈಡ್‌ನಲ್ಲಿ ಹೊರಟ. “ಬೇಡಪ್ಪ ಸರಿಯಾದ ಕಡೆ ಹೋಗೋಣ, ಜನ ಬೈಕೋತಾರೆ” ಅಂದೆ. “ಇಲ್ಲ ಬಿಡಿ ಸಾರ್ ಆಂಬುಲೆನ್ಸ್‌ಗೆ ಯಾರೂ ಬೈಕಳಲ್ಲ” ಅಂದ, ನಾನು ಸುಮ್ಮನಾದೆ. ದಾರಿ ಸಾಗುತ್ತಾ ನಾವು ಪೊಲೀಸ್ ಸ್ಟೇಷನ್‌ ಬಳಿ ಬಂದಾಗ “ಅದೋ ಅಲ್ಲಿ ಮುಂದೆ ಬಲಕ್ಕೆ ತಿರುಗಿ ಅಲ್ಲೇ ಮನೆ” ಅಂದೆ. ಡ್ರೈವರ್ “ಒಹ್ ಸಾರ್ ಆ ಜ್ಯೂಸು ಮಾಡ್ತಾರಲ್ಲ ಅವರ ಮನೆಹತ್ರನಾ?” ಅಂತ ಕೇಳಿದ್ದನ್ನು ಕಂಡು ನಾನು ಅವಾಕ್ಕಾದೆ! “ಹೌದು ಅವರೇ ಇವರು, ನಮ್ಮಪ್ಪ!” ಅಂದೆ. ಅವನು ಕೊಂಚ ಸುಮ್ಮನಾದಂತೆ ಕಂಡು ನಂತರ “ಹೌದು ಸಾರ್, ಅದೇ ಅನ್ಕೊಂಡೆ ಈಗ ಒಂದು ೨-೩ ವರ್ಷಗಳಿಂದ ಅಂಗಡಿ ತಗಿತಾ ಇಲ್ವಲ್ಲ ಅಂತ, ಪಾಪ ಸಾರ್” ಅಂದ. ಅಮ್ಮ “ಐದು ವರ್ಷ ಆಯ್ತಪ್ಪ” ಅಂದಳು, ಅವನು ತಲೆಯಾಡಿಸಿದ. + +ಮನೆಯಹತ್ತಿರ ಬಂದಾಗ ಅಕ್ಕಪಕ್ಕದವರೆಲ್ಲಾ ಸೇರಿದ್ದರು. ಚಿಕ್ಕಪ್ಪ ಅಪ್ಪನನ್ನು ಒಳಗಡೆ ಮಲಗಿಸಲು ಎಲ್ಲ ವ್ಯವಸ್ಥೆ ಮಾಡಿದ್ದರು. ಅವರನ್ನು ಒಳಗೆ ಮಲಗಿಸಿದ ನಂತರ ಆಂಬುಲೆನ್ಸ್ ನವನೂ ಅವರನ್ನೊಮ್ಮೆ ನೋಡಿ ಹೊರಟ. ನಾನು ಹೊರಬಂದು “ದುಡ್ಡು ಎಷ್ಟು ಕೊಡಬೇಕು?” ಕೇಳಿದೆ. “ಸಾರ್ ಅಲ್ಲಿ ಇದ್ದಾರಲ್ಲ ಆಗ್ಲೇ ಕೊಟ್ಟಿದ್ದಾರೆ” ಅಂತ ನನ್ನ ಸ್ನೇಹಿತನ ಕಡೆ ಕೈ ಮಾಡಿದ. ಅವನು ಅದಕ್ಕೆ ಸಮ್ಮತಿಸಿದ. ಅಪ್ಪನನ್ನು ಆಸ್ಪತ್ರೆಯಲ್ಲಿ, ಮನೆಯಲ್ಲಿ ಕಡೆಗೆ ಸಮಾಧಿಯ ಬಳಿ ತುಂಬಾ ಜನ ನೋಡಲು ಬಂದರು. ಊಹಿಸಲಾರದವರೆಲ್ಲ ಬಂದು ಅಮ್ಮನಿಗೆ ಸಾಂತ್ವನ ಹೇಳಿದರು. ಆದರೆ ನನ್ನನ್ನು ಕಾಡಿದ್ದು ಅವರನ್ನು ಟ್ರೀಟ್ ಮಾಡಿದ ವೈದ್ಯರಿಂದ ಹಿಡಿದೂ ಕಡೆಗೆ ಬಿಟ್ಟು ಹೋದ ಆಂಬುಲೆನ್ಸ್ ನ ಡ್ರೈವರ್‌ನವರೆಗೂ ಅಪ್ಪ ಮುಟ್ಟಿದ್ದರು! ಹುಟ್ಟಿದ್ದು, ಆಡಿ ಬೆಳೆದದ್ದು, ವ್ಯಾಪಾರ ಸಂಸಾರ ಮಾಡಿದ್ದು ಅದೇ ಪೇಟೆ ಅದೇ ಬೀದಿ, ಕಡೆಗೆ ತೀರಿದ್ದೂ ಅಲ್ಲಿಯೇ. ಅಪ್ಪ ಯಾವತ್ತೂ ಬದುಕು ಏಕತಾನ ಅನ್ನಲಿಲ್ಲ. ಅಪ್ಪ ಓದಿದ್ದು S S L C (ಸೆಕೆಂಡ್ ಕ್ಲಾಸ್). ಮುಂದೆ ಓದಲಿಕ್ಕಾಗದೆ ಮಾಡಿದ್ದು ನಾನಾ ಉದ್ಯೋಗ.. ಸೌದೆ ಕಂಟ್ರಾಕ್ಟರ್, ಗ್ರಂಥಿಗೆ ಅಂಗಡಿ, ಗುಲ್ಕನ್ ಫ್ಯಾಕ್ಟರಿ, ಸ್ಪಿರಿಟ್ ಮತ್ತು ಪಟಾಕಿ ವ್ಯಾಪಾರ, ಪೂಜಾ ಸಾಮಗ್ರಿ ಮತ್ತು ಸಮಿತ್ತು, ಪಂಚಲೋಹದ ವಿಗ್ರಹಗಳ ವ್ಯಾಪಾರ, ಡ್ರೈ fruits, ಜ್ಯೂಸು ಅಂಗಡಿ, ಪಾರ್ಟಿ ಹಾಲ್, ಆಯುರ್ವೇದ ಪಂಡಿತ ಹೀಗೆ ಭುಜಂಗಯ್ಯನದ್ದು ದಶಾವತಾರವಾದರೆ ಅಪ್ಪನದ್ದು ಶತಾವತಾರ! + + + +ಯಾರ ಮಾತೂ ಕೇಳದ, ಯಾವುದಕ್ಕೂ ಅಂಟಿಕೊಳ್ಳದ, ಯಾರ ಮರ್ಜಿಗೂ ಸಿಗದ, ಅವರಿವರೆನ್ನದೆ ಎಲ್ಲರನ್ನೂ ನಮ್ಮವರೆಂದುಕೊಂಡ, ಸದಾ ಕಾಯಕ ಮತ್ತು ಶ್ರಮವನ್ನು ಮಾತ್ರ ನಂಬಿದ ಅಪ್ಪ ನನ್ನ ಪಾಲಿಗಂತೂ ಅಚ್ಚರಿಯ ದಾರಿ ದೀಪ. ಅವರ ಬಗ್ಗೆ ಬರೆದು ನೀಗಿಸಿಕೊಳ್ಳುವುದು ಸಾಕಷ್ಟಿದೆ ಅನಿಸತೊಡಗಿತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_183.txt b/Kenda Sampige/article_183.txt new file mode 100644 index 0000000000000000000000000000000000000000..19743d1480d291d7ba64382aa42aa50824874074 --- /dev/null +++ b/Kenda Sampige/article_183.txt @@ -0,0 +1,27 @@ +ಮಕ್ಕಳ ಸಾಹಿತ್ಯದಲ್ಲಿ ಹೊಸ ಹೊಸ ಪ್ರಯೋಗ ಗೈಯುತ್ತಿರುವ ವೈ.ಜಿ. ಭಗವತಿಯವರು ಮಕ್ಕಳಿಗಾಗಿ ಕಥೆ ಕಾದಂಬರಿಗಳನ್ನು ರಚಿಸಿ ಸೈ ಎನಿಸಿಕೊಂಡವರು. ಮಕ್ಕಳ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ. ‘ಮಕ್ಕಳು ಓದಿದ ಟೀಚರ್ ಡೈರಿ’ ಎಂಬ ಕಾದಂಬರಿ ಮೂಲಕ ಮಕ್ಕಳ ಸಾಹಿತ್ಯವನ್ನು ಸಂಪದ್ಭರಿತವಾಗಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ಹೊಸತನದಿಂದ ಹೊಸ ಹರವನ್ನು ಪಡೆದುಕೊಳ್ಳುತ್ತಿದೆ. + +(ವೈ.ಜಿ. ಭಗವತಿ) + +ಈ ಕಾದಂಬರಿಗೆ ವೈ.ಜಿ. ಭಗವತಿಯವರು ಆಯ್ದುಕೊಂಡಿರುವ ಕಥಾವಸ್ತು ವಿಭಿನ್ನ ಮತ್ತು ವಿನೂತನ. ಟೀಚರೊಬ್ಬರು ತಮ್ಮ ಬಾಲ್ಯ ಜೀವನದಲ್ಲಿ ಎದುರಿಸಿದ ಸವಾಲುಗಳು, ರೋಚಕ ಘಟನೆಗಳನ್ನಾಧರಿಸಿದೆ. ಬಹಳ ಕುತೂಹಲಭರಿತವಾದ ಸನ್ನಿವೇಶಗಳನ್ನು ಸೃಷ್ಠಿಸಿರುವ ಭಗವತಿಯವರು ವಾಸ್ತವತೆಯೊಂದಿಗೆ ಬೆಸೆದಿದ್ದಾರೆ. ಭಾವೈಕ್ಯತೆಯ ಭಾವವನ್ನು ಹದಬೆರೆಸಿ ಹುರಿಗೊಳಿಸಿದ್ದಾರೆ. ಓದುಗರಲ್ಲಿ ಒಂದಿಷ್ಟು ಧೈರ್ಯ, ಆತ್ಮವಿಶ್ವಾಸ, ಸಾಧಿಸುವ ಛಲವನ್ನು ಈ ಕೃತಿ ತುಂಬುತ್ತದೆ. ವಿಭಿನ್ನವಾದ ಬಯಲುಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಬೆಸೆಯುವ ತಂತ್ರಗಾರಿಕೆಯೂ ಇಲ್ಲಿದೆ. + +ಭಾಷಾ ಪ್ರಯೋಗದಲ್ಲೂ ಈ ಕೃತಿ ವಿಶೇಷವಾಗಿದೆ. ಮಕ್ಕಳಿಗೆ ಮುದ ನೀಡುವ ಸರಳ ಪದಬಳಕೆ ಸೊಗಸಾಗಿದೆ. ದಡಲ್ ಬಡಲ್, ದಡಾ ದಡಾ, ನಿಗಿನಿಗಿ, ಭರ ಭರನೆ ಎಂಬಂತಹ ಪದಗಳನ್ನು ಬಳಸಿರೊದರಿಂದ ಓದಲು ಮಜಾ ನೀಡುತ್ತವೆ. ಇಲ್ಲಿ ಮಕ್ಕಳೇ ಕುತೂಹಲದಿಂದ ಡೈರಿಯನ್ನು ಓದುತ್ತಾ ಹೋಗುತ್ತಾರೆ. ಕಾದಂಬರಿಯ ಪ್ರವೇಶವೂ ಅಷ್ಟೇ ಸೊಗಸಾಗಿದೆ. + +ಮಲೆನಾಡಿನ ಭಾವೈಕ್ಯದ ಬೀಡಾದ ಮುಂಡಗೋಡ ತಾಲೂಕಿನ ಇಂದೂರ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಶಾಲಿನಿ ಮಕ್ಕಳ ಅಚ್ಚುಮೆಚ್ಚಿನ ಟೀಚರ್. ಟೀಚರ್ ಸ್ವಂತ ಊರು ಬಯಲು ಸೀಮೆಯ ಬೀಳಗಿ. ಟೀಚರ್ ಯಾವಾಗಲಾದರೊಮ್ಮೆ ತಮ್ಮ ಊರಿಗೆ ಬಂದು ಹೋಗುತ್ತಿರುತ್ತಾರೆ. ಟೀಚರ್ ಊರಿಗೆ ಹೋದಾಗ ಅವರ ಮನೆಯನ್ನು ಸ್ವಚ್ಛಗೊಳಿಸಲು ಬಂದ ಗೆಳೆಯರಿಗೆ ಸಿಕ್ಕ ದಪ್ಪನೆಯ, ಕಪ್ಪನೆಯ ಪ್ಲಾಸ್ಟಿಕ್ ಕವರ್ ಹೊದಿಕೆ ಇದ್ದ ಪುಸ್ತಕ ಸಿಕ್ಕಿತು. ಹೀಗೆ ಮಕ್ಕಳು ಆಸಕ್ತಿಯಿಂದ ಓದುತ್ತಾ ಹೋಗುತ್ತಾರೆ. + +ಶಾಲಿನಿ ಚಿಕ್ಕವಳಿದ್ದಾಗ ಬೋರ್‍ವೆಲ್ ನಲ್ಲಿ ಪಾಳಿ ಹಚ್ಚಿ ನೀರು ತುಂಬುತ್ತಿದ್ದ ಘಟನೆಯು ಮಕ್ಕಳಿಗೆ ಅಂದಿನ ಸ್ಥಿತಿಯ ಅರಿವಾಗುತ್ತದೆ. ಟೀಚರ್ ಅಪ್ಪನಿಗಿಂತಲೂ ಮಿಗಿಲಾಗಿರುವ ರುಸ್ತುಂ ಪಪ್ಪಾನ ಕುರಿತು ಓದುವಾಗ ಮಕ್ಕಳ ಕುತೂಹಲ ಓದುಗರಲ್ಲಿಯೂ ಉಂಟಾಗುತ್ತದೆ. ಪ್ರತಿ ಅಧ್ಯಾಯಕ್ಕೂ ಹೋಗುವಾಗ ಮಕ್ಕಳು ಕಾತರದಿಂದಿರುವುದು ಕಂಡುಬರುತ್ತದೆ. ಶಾಲಿನಿ ಟೀಚರ್ ಬಾಲ್ಯದಲ್ಲಿ ತುಂಬಾ ಹಟವಾದಿ, ಓದುವುದರಲ್ಲಿ ತುಂಬಾ ಪ್ರತಿಭಾನ್ವಿತೆಯಾಗಿದ್ದರು. ಮನೆಯಲ್ಲಿ ಏನೂ ಕೆಲಸ ಮಾಡುತ್ತಿದ್ದಿಲ್ಲ. ಅವಳ ಸಹೋದರಿಯರು ಮತ್ತು ತಮ್ಮ ಎಲ್ಲ ಕೆಲಸ ಮಾಡುತ್ತಿದ್ದರು. ಮುಂದೆ ಅವಳು ತನ್ನ ಮುಂಗೋಪಿತನವನ್ನು ಬಿಟ್ಟು, ತಪ್ಪನ್ನು ತಿಳಿದು ಮನೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾಳೆ. ಬರೀ ಪುಸ್ತಕದ ಹುಳುವಾಗಿದ್ದ ಇವಳು ಶಾಲೆಯಲ್ಲಿ ಖೋ ಖೋ ಆಟಕ್ಕೆ ಬರುತ್ತೇನೆಂದಾಗ ಇನ್ನುಳಿದ ಮಕ್ಕಳು ಅವಳನ್ನು ಹೀಯಾಳಿಸುತ್ತಾರೆ. ಅವಳು ಛಲ ಬಿಡದೆ ನಿರಂತರ ಪ್ರ್ಯಾಕ್ಟಿಸ್ ಮಾಡಿ ಖೋಖೋ ಆಟ ಮತ್ತು ಓಟದಲ್ಲಿ ಮಣ್ಣಿಕೇರಿ ಶಾಲೆಯ ಕೀರ್ತಿಯನ್ನು ಎತ್ತರಿಸುತ್ತಾಳೆ. ಇದು ಪ್ರತಿಯೊಬ್ಬರಲ್ಲೂ ಕ್ರೀಡಾಸ್ಫೂರ್ತಿ ತುಂಬುವ ಘಟನೆಯಾಗಿದೆ. + + + +ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ. ಈ ಘಟನೆ ಇಡಿ ಕಾದಂಬರಿಯ ಹೃದಯವಾಗಿದೆ. ಯಲ್ಲಮ್ಮನ ಗುಡ್ಡದ ಜಾತ್ರೆಯಲ್ಲಿ ಆಚರಿಸುವ ಸಂಪ್ರದಾಯಗಳು ದೇವಿಯ ವೈಶಿಷ್ಟತೆಯ ದರ್ಶನ ಮಾಡಿಸಿದ್ದಾರೆ. + +ಡೈರಿ ಓದುವ ಮಕ್ಕಳು ಮಧ್ಯದಲ್ಲಿ ಹಾಸ್ಯ ಮಾಡುತ್ತಾ ಮತ್ತೆ ವಾಸ್ತವಕ್ಕೆ ಮರಳಿ ಮತ್ತೆ ಡೈರಿ ಓದುವಲ್ಲಿ ಲೀನವಾಗುವುದು ಆಯಾಸವನ್ನು ಕಡಿಮೆ ಮಾಡಿ, ಮತ್ತೆ ಓದಿಗೆ ಅಣಿಗೊಳಿಸಿರುವುದು ಲೇಖಕರ ತಂತ್ರಗಾರಿಕೆ. + +ಅವಳು ಓದಿ ಟೀಚರ್ ಆದ ಮೇಲೆ ನೊಂದವರ ಬಾಳಿಗೆ ಮುಲಾಮಾಗುತ್ತಾಳೆ. ಶಾಲಿನಿ ಟೀಚರ್ ಅಕ್ಕರೆಯ ಬೋಧನೆಯಿಂದ ಎಲ್ಲರ ಮೆಚ್ಚುಗೆಗಳಿಸುತ್ತಾಳೆ. ವಿಶೇಷ ಅಗತ್ಯವುಳ್ಳ ಮಗು ಫಕೀರ ಓದಿನಲ್ಲಿ ಬದಲಾದದ್ದು, ಫಕೀರನ ತಾಯಿ ಶಾಂತಮ್ಮಳ ಮುಖಚರ್ಯೆ ಶಾಲಿನಿ ಟೀಚರ್ ತರಹನೇ ಇದ್ದದ್ದು ಕಾದಂಬರಿಯ ಇನ್ನೊಂದು ಮಗ್ಗಲಿಗೆ ಹೊರಳುತ್ತದೆ. ಇಂತಹ ಅನೇಕ ತಿರುವುಗಳಿಂದ ಕಾದಂಬರಿ ಮಕ್ಕಳಲ್ಲಿ ವಿಚಾರಶಕ್ತಿ, ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವಂತೆ ಮಾಡುತ್ತದೆ. + +ಜೀವನಯಾನ ಅನೇಕ ಅನೀರಿಕ್ಷಿತ ತಿರುವುಗಳಿಂದ ಕೂಡಿರುತ್ತದೆ. ಅವುಗಳನ್ನು ಎದುರಿಸುವ ಸಾಮರ್ಥ್ಯಗಳನ್ನು ಪಡೆಯಲು ಇಂತಹ ಸಾಹಿತ್ಯ ಕೃತಿಗಳನ್ನು ಓದುವುದರಿಂದ ಬರುತ್ತದೆ. ಕಾದಂಬರಿಯ ಕೊನೆಯಲ್ಲಿ ಮಕ್ಕಳು ತಮ್ಮ ಜೀವನದ ಘಟನೆಗಳನ್ನೆ ಬರೆದು ಓದಿ ಡೈರಿಯನ್ನು ಬಹುಮಾನವಾಗಿ ಪಡೆದದ್ದು ಸಾರ್ಥಕವೆನಿಸಿದೆ. ನಾವೂ ನಮ್ಮ ಜೀವನದ ಅಮೂಲ್ಯ ಘಟನೆಗಳ್ನು ಬರೆದಿಟ್ಟರೆ ಅದೇ ಮುಂದೆ ಅಮೂಲ್ಯ ಸಾಹಿತ್ಯವಾಗುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಮಕ್ಕಳಿಗೆ ಪ್ರೇರಣಾದಾಯಕವಾದ ಈ ಕೃತಿಯನ್ನು ನೀವು ಓದಿ, ನಿಮ್ಮ ಮಕ್ಕಳಿಗೂ ಓದಿಸಿ. + + + +2021 ರ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ಪುರಸ್ಕಾರ ಪಡೆದಿರುವ ಈ ಕೃತಿ ಭಗವತಿಯವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿದೆ. ಮಕ್ಕಳ ಮನೋಭಿತ್ತಿಯನ್ನು ಒಂದು ವಿಶಾಲ ದೃಷ್ಟಿಕೋನದಲ್ಲಿ ಚಿಂತಿಸುವ, ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ನಡೆಯುವ ಭಾವನೆಗಳ ಸಂಘರ್ಷವನ್ನು, ಎಳೆಯ ಹೃದಯಗಳಲ್ಲಿ ಕುದಿಯುತ್ತಿರುವ ಸಂಕಟ, ಉಕ್ಕುವ ಸಂಭ್ರಮ, ಹೊಯ್ದಾಡುವ ಅನುಮಾನಗಳನ್ನು ಗಾಢವಾಗಿ ತೆರೆದಿಡುತ್ತದೆ” ಎಂದು ಡಾ. ಬಸು ಬೇವಿನಗಿಡದ ಮುನ್ನುಡಿಯಲ್ಲಿ ನುಡಿದಿದ್ದಾರೆ. ಆಕರ್ಷಣೀಯ ಮುಖಪುಟ, ಮಕ್ಕಳ ಸಾಹಿತಿ ಆನಂದ ಪಾಟೀಲ ಅವರು ರಚಿಸಿದ ಸುಂದರ ಮತ್ತು ಅರ್ಥಪೂರ್ಣವಾದ ಒಳಚಿತ್ರಗಳು ಮತ್ತು ಗುಣಮಟ್ಟದ ಮುದ್ರಣ ಕೃತಿಗೆ ಮೆರಗು ತಂದಿವೆ. + +ನಾಗರಾಜ ಎಂ ಹುಡೇದ ಹಾವೇರಿಯವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದುವುದು, ಕವನ, ಕಥೆ ರಚನೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ನಗುವ ತುಟಿಗಳಲ್ಲಿ, ಭರವಸೆ (ಕವನ ಸಂಕಲನಗಳು), ಅವತಾರ್ ಮತ್ತು ಹಾರುವ ಕುದುರೆ  (ಮಕ್ಕಳ ಕಥಾ ಸಂಕಲನ), ಕಿರುಗೊಂಚಲು (ಕವನಗಳ ಸಂಪಾದಿತ ಕೃತಿ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ) ಸೇರಿದಂತೆ ಇವರ ಹಲವು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_184.txt b/Kenda Sampige/article_184.txt new file mode 100644 index 0000000000000000000000000000000000000000..614f8da6594d82d805e69ed8484a1869f3ec5ce3 --- /dev/null +++ b/Kenda Sampige/article_184.txt @@ -0,0 +1,23 @@ +‘ನೂರೊಂದು ಝೇಂಕಾರ’ ಕೃತಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀಯುತ ಪ್ರಕಾಶ್ ಎಸ್ ಮನ್ನಂಗಿ ವಿರಚಿತ ನೂರ ಒಂದು ಹನಿಗವನಗಳ ಸಂಕಲನವಾಗಿದ್ದು, ಮೇಲ್ನೋಟಕ್ಕೆ ಇದೊಂದು ನಗೆಹನಿಗಳ ಗುಚ್ಛದಂತೆ ಕಂಡರೂ ಹನಿಗಳಲ್ಲಿನ ವಿಶಾಲಾರ್ಥವನ್ನು ಕೆದಕಿದಾಗ ಅವುಗಳ ಸಾಮಾಜಿಕ ಮಹತ್ವದ ಅರಿವಾಗುತ್ತದೆ. + +ಲೇಖಕನೊಬ್ಬ ತಾನು ಏನನ್ನೇ ಬರೆಯುವಾಗಲೂ ಅದಕ್ಕೊಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಾನೆ. ಅದೇ ರೀತಿ ಹನಿಗವನಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಮನ್ನಂಗಿಯವರೂ ತಮ್ಮ ಸುಧೀರ್ಘ ವೃತ್ತಿ ಬದುಕಿನುದ್ದಕ್ಕೂ ತಾವು ಕಂಡುಂಡ ಅನೇಕ ಬಗೆಯ ರಸಾನುಭವಗಳನ್ನು ಚುಟುಕು ಚುಟುಕಾಗಿ ತಿಳಿಸುವ ಪ್ರಯತ್ನದಲ್ಲಿ ಓದುಗರ ಬೌದ್ಧಿಕತೆಯನ್ನು ಚುರುಕಾಗಿಸುವಲ್ಲಿ ಸಫಲವಾಗಿದ್ದಾರೆಂದೇ ಹೇಳಬಹುದು. ಅವರ ನೂರಾ ಒಂದು ಹನಿಗವನಗಳೂ ಓದುಗರನ್ನು ಆಸಕ್ತಿದಾಯಕವಾಗಿ ಓದಿಸಿಕೊಳ್ಳುವಲ್ಲಿ ಸಫಲವಾಗಿದ್ದು, ನವರಸಗಳ ಅನುಭೂತಿಯನ್ನು ಕಟ್ಟಿಕೊಡುತ್ತವೆ. + +ಮನ್ನಂಗಿಯವರ ಹನಿಗವನಗಳಲ್ಲಿ ವಿರಹವಿದೆ, ವಾಸ್ತವದ ಕಟುಸತ್ಯಗಳಿವೆ, ಹದಿಹರೆಯದವರಿಗಾಗಿ ಪ್ರಣಯ ಪ್ರಸಂಗಗಳಿವೆ, ನಗಿಸುತ್ತಲೇ ವ್ಯವಸ್ಥೆಯ ನಗ್ನತೆಯನ್ನು ಹೊರಹಾಕುವ ಸಾಮರ್ಥ್ಯ ಈ ಸಂಕಲನದಲ್ಲಿನ ಹನಿಗವನಗಳಿಗಿದೆ. + +‘ಕುಳಿತರೂನಿಂತರೂನೋಟದಲ್ಲೂ,ಆಟದಲ್ಲೂ,ಮನದಲ್ಲೂ,ಎಲ್ಲೆಲ್ಲೂತಹತಹ + +ಈ ವಿರಹ’- ಎಂದೆನ್ನುತ್ತಾ ವಿರಹವೊಂದು ಮನವನ್ನು ಸುಡುವ ಕೆಂಡವಿದ್ದಂತೆ ಎಂದು ಒತ್ತಿ ಹೇಳುತ್ತಾ, ನಲ್ಲೆಯ ವಾರೆನೋಟ, ಐಹಿಕಸುಖ, ಸಾಂಗತ್ಯದ ನೆನಪುಗಳ ನೆಪದಿ ವಿರಹದಳ್ಳುರಿಯನ್ನು ಬಹಿರಂಗಗೊಳಿಸಿರುವ ಲೇಖಕರು ತಮ್ಮ ವಿರಹವನ್ನು ಪ್ರೇಯಸಿಯೊಂದಿಗಿನ ಪ್ರಣಯ ಸಲ್ಲಾಪಗಳ ಸವಿನೆನಪುಗಳ ಮಾಲೆಯನ್ನು ಹನಿರೂಪದಲ್ಲಿ ಕಟ್ಟುತ್ತಾ ಮರೆಯುವ ಪ್ರಯತ್ನವನ್ನು ಮಾಡಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ. + +‘ನಲ್ಲೆ ನೀ ಉರುಳಿದರೆನನ್ನೆದೆಯಲ್ಲಿಇನ್ನೆಲ್ಲಿ ಕಾಡೀತುಮಾಗಿಯ ಚಳಿ?’– ಎಂದು ಪ್ರಶ್ನಿಸುತ್ತಾ ‘ರಾತ್ರಿ ಬೀಳುವ ನಿನ್ನ ಕನಸುಗಳ ನೆನೆಯುತ್ತ ಹಗಲು ಕಳೆಯುವೆ, ಮತ್ತೆ ರಾತ್ರಿಗಾಗಿ ಕನವರಿಸುವೆ’ ಎಂದು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವುದನ್ನೂ ಕಾಣಬಹುದಾಗಿದೆ. + + + +ಕೇವಲ ವಿರಹಾಗ್ನಿಯನ್ನು ನಂದಿಸುವ ಪ್ರಣಯ ರೂಪಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಕವಿಗಳು ಸಮಾಜದ ಕಟುಸತ್ಯಗಳನ್ನು ವಾಸ್ತವಿಕ ನೆಲೆಯಲ್ಲಿ ಕಟ್ಟಿಕೊಡುವ ಅನೇಕ ಹನಿಗವನಗಳನ್ನು ಇಲ್ಲಿ ಸಂಕಲಿಸಿದ್ದು ಅವುಗಳಲ್ಲಿ ಅವರ ವೃತ್ತಿ ಜೀವನದಲ್ಲಿ ಕಂಡಂತ ಅವಿದ್ಯಾವಂತ ಜನಪ್ರತಿನಿಧಿಗಳನ್ನು‘ಆಪ್ತಕಾರ್ಯದರ್ಶಿಗಳಬೆಳಕಿನಲ್ಲಿಪ್ರಜ್ವಲಿಸುವಸ್ವಂತಬೆಳಕಿಲ್ಲದ ಗ್ರಹ..’ವಿದ್ದಂತೆ ಎಂದು ವ್ಯಂಗ್ಯವಾಗಿ ಬಣ್ಣಿಸಿದ್ದಾರೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಕಲ್ಪನೆಯಲ್ಲಿ ‘ಬದುಕಿನ ಬ್ಯಾಲೆನ್ಸ್’ ತಿಳಿಸುವ ಚುಟುಕು ಓದುಗರ ಮನಗೆಲ್ಲುತ್ತದೆ.‘ವೇದಿಕೆಯ ತುಂಬಕವಿಗಳುಸಭಾಂಗಣದಲ್ಲಿಲ್ಲಕೇಳುವ ಕಿವಿಗಳು‘ ಎನ್ನುತ್ತಾ ಇಂದಿನ ಸಾಹಿತ್ಯ ಕವಿಗೋಷ್ಠಿಗಳ ಬಣ್ಣ ಬಯಲು ಮಾಡಿರುವ ಮನ್ನಂಗಿಯವರು,‘ನಮ್ಮೂರಲ್ಲಿನಿತ್ಯವೂ ನಡೆಯುತ್ತದೆಸಾಹಿತ್ಯಿಕ ಪ್ರೋಗ್ರಾಂಅಳೆದು ತೂಗಿನೋಡಿದರೆಸಾಹಿತ್ಯವಿರುವುದಿಲ್ಲಒಂದೂ ಗ್ರಾಂ..’ಎಂದೆನ್ನುತ್ತಾ ಜೊಳ್ಳು ಸಾಹಿತ್ಯದ ಗುಣಮಟ್ಟವನ್ನು ವಿಡಂಬಿಸಿದ್ದಾರೆ. + +ಜೀವನದಲ್ಲಿ ಬರುವ ಅನೇಕ ಹಾಸ್ಯ ಸನ್ನಿವೇಶಗಳನ್ನೇ ಚುಟುಕಾಗಿ ಹೊಂದಿಸಿ ಓದುಗರ ತುಟಿಯಂಚಲ್ಲಿ ನಗೆಯುಕ್ಕಿಸುವ ಶಕ್ತಿ ಇಲ್ಲಿನ ಅನೇಕ ಹನಿಗಳಿಗಿದ್ದು ಅವುಗಳು ಹೆಚ್ಚಾಗಿ ದಂಪತಿಗಳ ನಡುವಿನ ಸನ್ನಿವೇಶಗಳಿಂದಲೇ ಹೆಕ್ಕಿದವಾಗಿವೆ. ಉದಾಹರಣೆಗೆ‘ದಂಪತಿಗಳಲ್ಲಿಹೊಂದಾಣಿಕೆಇರಲೇಬೇಕುಈಗ ನೋಡಿ, ನಾನುಅಡುಗೆ ಮಾಡುತ್ತೇನೆನನ್ನವಳು ಬಡಿಸುತ್ತಾಳೆ’ಎಂದೆನ್ನುತ್ತಾ ಕಚಗುಳಿಯಿಡುವ ಕವಿಗಳು ‘ಮಂತ್ರಿಗಳಿಗೆ ಎಷ್ಟೇ ಹಾಕಿದರೂ ಹಾರ, ಬಡವರಿಗೆ ಸಿಗುವುದಿಲ್ಲ ಪರಿಹಾರ’ ಎಂದೆನ್ನುತ್ತಾ ಹಾಸ್ಯದಲ್ಲಿಯೇ ವಾಸ್ತವಿಕತೆಯ ಗಂಭೀರತೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಾರೆ. + + + +ಕೆಲವೆಡೆ ಪ್ರಾಸಗಳಿಗೆ ಒತ್ತು ಕೊಟ್ಟಿರುವ ಮನ್ನಂಗಿಯವರು ಹಲವೆಡೆ ಪ್ರಾಸಗಳ ತ್ರಾಸೇ ಬೇಡವೆಂದು ಸರಳ ಉಪಮೆಗಳ ಮೊರೆ ಹೋಗಿದ್ದು ಅಲ್ಲಿಯೂ ಅವರು ಗೆದ್ದಿರುವುದನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ತಮ್ಮ ಮಾಗಿದ ಜೀವನಾನುಭವಗಳನ್ನು ಇಂದಿನ ಯುವಕರಿಗೆ ಕಟ್ಟಿಕೊಡಲು ಮನ್ನಂಗಿಯವರು ಆಯ್ದುಕೊಂಡಿರುವ ಈ ಹನಿಗವನಗಳೆಂಬ ಚುಟುಕು ಸಾಹಿತ್ಯ ಪ್ರಕಾರವು ಸಮಾಜಹಿತಕ್ಕಾಗಿ ದುಡಿಯುವ ವ್ಯವಸ್ಥಿತ ಮಾಧ್ಯಮದಂತೆ ಕೆಲಸ ನಿರ್ವಹಿಸಿದಲ್ಲಿ ಅವರ ಉದ್ದೇಶವೂ ಸಾರ್ಥಕವಾದೀತು. ಅಂತಹ ಸಾರ್ಥಕತೆಗಾಗಿ ಯುವಜನತೆ ಹೆಚ್ಚಾಗಿ ಸಂಕಲನವನ್ನು ಕೊಂಡು ಓದುವುದರ ಮೂಲಕ ಝೇಂಕರಿಸಲೆಂಬುದು ಈ ಟಿಪ್ಪಣಿಯ ಆಶಯವಾಗಿದೆ. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_185.txt b/Kenda Sampige/article_185.txt new file mode 100644 index 0000000000000000000000000000000000000000..48ff31199ae8f4b5df71ba3e32b40894677d2c8c --- /dev/null +++ b/Kenda Sampige/article_185.txt @@ -0,0 +1,35 @@ +ಖುಷ್ಕಿ ಬೇಸಾಯವೋ, ತರಿ ಬೇಸಾಯವೋ, ಬಾಗಾಯಿತಿ ಬೇಸಾಯವೋ ನೆಲ, ನೀರಿರದೆ ಸಾಗದು, ಆಗದು. ತೇವದ ಹದವರಿತರೆ ಹಸನಾದ ಉಳುಮೆ ಹಾಗು ಬಿತ್ತನೆ. ಸಾರವಿದ್ದಂತೆ ಬೆಳೆ. ನೆಲದ ಸಾರದ ಏರಿಳಿಕೆಯ ಅರಿವೂ ರೈತನಿಗೆ ಮುಖ್ಯ. ನಾಟಿ ತಳಿಗೂ, ಸಂಕರ ತಳಿಗೂ ಸಾರವೇ ತ್ರಾಣ ಪ್ರಾಣ. ಇದರಲ್ಲಿ ಬೀಜತ್ರಾಣವೂ ಲೆಕ್ಕವೇ. + +ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಬೀಡಿನಲ್ಲಿ ಬಿತ್ತನೆಯಾಗದು. ಆಗಬಾರದೇಕೆಂದು ಬಿತ್ತಿದರೆ ಅದನ್ನು ಬೆಳೆ ಎನ್ನುವುದಿಲ್ಲ. ಅದು ಕೃಷಿಕನಲ್ಲದವನ ಕೆಲಸವಲ್ಲದ ಕೆಲಸ. ಅಲ್ಲಿ ಬಳ್ಳ ಬಿತ್ತಿದರೆ ಬೆಳೆಯುದು ಸೊಲಿಗೆಯಷ್ಟೇ. ಆ ಸೊಲಿಗೆಯೂ ಜೊಳ್ಳಾದರೂ ಆದೀತು. ಯಾವುವನ್ನು ಸೃಜನಶೀಲ ಸಾಹಿತ್ಯವೆನ್ನುವೆವೋ ಅವೆಲ್ಲ ಸರಿಬೆಳೆಯಾಗುವುದು ಹೀಗೆಯೇ ಎಂದು ನನಗನ್ನಿಸುತ್ತದೆ. + +(ಸದಾಶಿವ ಸೊರಟೂರು) + +ಈ ಮಾತುಗಳನ್ನು ವಿವರಿಸುವ ಅವಕಾಶ ಈ ಮುನ್ನುಡಿಯಲ್ಲಿರುವುದೆಂದು ಭಾವಿಸುವೆ. ಹೊಲವೆಂದರೆ ಕಥೆ ಹುಟ್ಟುವ ಮನಸ್ಸು. ಉಳುಮೆಯೆಂದರೆ ಅದಕ್ಕೆ ಬೇಕಾದ ‘ಹದ’ವನ್ನು ಕಂಡುಕೊಳ್ಳುವುದು. ಬೀಜಗಳು ಕಥಾ ವಸ್ತು. ಬಿತ್ತುವುದು ಅನುಭವ. ಬೆಳೆಯೆಂಬುದು ಕಥನ, ವೈಖರಿ. ತೆನೆಗಟ್ಟುವುದು ವಸ್ತು ಕಥೆಯಾಗುವ ಪರಿ. ಕಳೆ ತೆಗೆಯವುದೆಂದರೆ ಪುನರ್ ಓದು ಮತ್ತು ತಿದ್ದುವುದು. ಕಥೆಯಾದದ್ದು ಸುಗ್ಗಿ. ಸುಗ್ಗಿಯಾದವನ್ನು ಕೊಟ್ಟರೆ ಅದು ಕಥೆ. ರಾಶಿ ಅಳೆಯುವುದು ವಿಮರ್ಶೆ. ಇದು ಸ್ವವಿಮರ್ಶೆಯೂ ಆಗಿದ್ದೀತು. ಸ್ವವಿಮರ್ಶೆ ಒಳ ವಿಮರ್ಶೆಯೂ ಹೌದು. ಯಾವದು ಸೃಜನವೋ ಅದು ಸ್ವ(ಒಳ)ವಿಮರ್ಶೆಯ ತೂರಿಕೆಗೆ ಸಿಕ್ಕಬೇಕು. ಆಗ ಜೊಳ್ಳಾಗಿದ್ದರೆ ತಂತಾನೇ ತೂರಿ ಹೋಗುತ್ತದೆ. ತೂರಿ ಹೋಯಿತೋ ಹೋಗಲಿ. ಮುಂದಿನ ಬೆಳೆಗೆ ಅಣಿ ಮಾಡುವುದು ಇದ್ದೇ ಇರುತ್ತದೆ. ಇದು ರೈತನಾದವನಲ್ಲಿರುವ ಮನದರಿವು. + +ಮುಂದಿನ ಬೇಸಾಯವೆಂದರೆ ಮಳೆಗೆ ಕಾಯುವುದು. ಅದರ ಯೋಗವರಿತು ಸಲಕರಣೆಗಳನ್ನು ಕುಲುಮೆಯಲ್ಲಿ, ಬಡಗಿಯ ಬಳಿ ಯೋಗ್ಯಗೊಳಿಸುವುದು. ನದಿ ನಾಲೆ ನೀರಿನ ಬೇಸಾಯ ಬೇರೆ ರೀತಿಯದು. ಕತೆಗಾರನದಂತೂ ಮಳೆನೀರಿನ ಬೇಸಾಯವೆಂದೇ ನಂಬುವೆ. ಇದು ರೂಪುಗೊಳ್ಳುವುದು ಪರಂಪರೆಯ ಅರಿವಿನಿಂದ. ಬೀಜವನ್ನು ಸಂಕರಿಸಿ ಹುಟ್ಟಿಸುವ ಬೀಜವೂ ಮೂಲ ಬೀಜದಿಂದಲೇ. ನೆಲವನ್ನಂತೂ ಲ್ಯಾಬುಗಳಲ್ಲಿ ಸೃಷ್ಟಿಸಲಾಗದಲ್ಲ! ನೀರೂ ಅಷ್ಟೇ. ದದ್ರೂಪಿ ಸೃಷ್ಟಿಗೂ ಮೂಲವಿದ್ದದ್ದೇ. ಪ್ರಣಾಳ ಶಿಶು ಜನನಕ್ಕೂ ವೀರ್ಯ, ಕಾಪಿನ ಗರ್ಭಬೇಕು. ಅಥವಾ ಗರ್ಭಕೋಶದ ಜೀವಾವರಣ ನಿರ್ಮಿಸಬೇಕು. ಇದು ಗೊತ್ತಿದ್ದೂ ಹುಟ್ಟಿಸುವ ವಾದಕ್ಕೆ ಪ್ರತಿವಾದ ಹೂಡುವುದು ಸೃಜನ ಕಾಲವನ್ನು ವ್ಯರ್ಥ ಮಾಡುವುದಾಗುತ್ತದೆ ಮತ್ತು ಸೃಜನ ಬಸಿರನ್ನು ಕಿತ್ತು ಹಾಕಲು ಬಳಸಿದಂತಾಗುತ್ತದೆ. + +ಈ ಆಲೋಚನಾ ತರಂಗಗಳೇಳಲು ಯುವ ಕತೆಗಾರ ಗೆಳೆಯ ಸದಾಶಿವ ಸೊರಟೂರು ತಮ್ಮ ಕಥೆಗಳ ಪ್ರತಿಯನ್ನು ಓದಲು ಕೊಟ್ಟದ್ದು ಕಾರಣವಾಗಿದೆ. ಇದಕ್ಕಾಗಿ ನಾನವರಿಗೆ ಋಣಿ. + +ಸದಾಶಿವ ಸೊರಟೂರು ತಮ್ಮಲ್ಲಿ ಕತೆಗಾರ, ಕವಿಯನ್ನು ಕಂಡುಕೊಳ್ಳುತ್ತಿರುವ ಲೇಖಕ. ತಾನು ಮೊದಲಿಗೆ ಯಾರನ್ನು ಗಟ್ಟಿಯಾಗಿ ಅಪ್ಪಿಕೊಳ್ಳಲಿ ಎಂಬ ಆಯ್ಕೆಯಲ್ಲಿದ್ದಂತಿದೆ ಎಂಬುದು ಅವರ ಕವಿತೆ, ಕಥೆಗಳನ್ನು ಓದಿದಾಗ ಅನ್ನಿಸಿದ್ದುಂಟು. ಇಬ್ಬರನ್ನೂ ಅವರು ಒಟ್ಟಿಗೆ ಬಲವಾಗಿ ಅಪ್ಪಿಕೊಳ್ಳುವ ಬಾಹುಬಂಧ ಅವರದಾದರೆ ಸಂತೋಷವೇ. + + + +ಅವರ ರಚನೆಗಳ ಓದುವಿಕೆಯನ್ನು ಮುಂದುವರೆಸಿದಾಗ ಇಬ್ಬರ ಅಪ್ಪುವಿಕೆಗಾಗಿ ಅವರು ತಹತಹಿಸುತ್ತಿದ್ದಾರೆ ಅನ್ನಿಸುತ್ತದೆ. ಇದಕ್ಕೆ ಅವರ ಕೆಲವು ಕವಿತೆಗಳು, ಕಥೆಗಳು ಸಾಕ್ಷಿಯ ದೀಪ ಹಿಡಿಯುತ್ತವೆ. ಯಾವುದು ಅವರ ಬಿಗಿಯಪ್ಪುಗೆಯಲ್ಲಿದೆ, ಯಾವುದು ಸಡಿಲ ಅಪ್ಪುಗೆಯಲ್ಲಿದೆ, ಯಾವುದು ಅಪ್ಪುಗೆಗೆ ಸಿಕ್ಕಿಲ್ಲ ಅನ್ನುವುದನ್ನು ಸಾಕ್ಷಿದೀಪದ ಬೆಳಕು ಅವರಿಗೂ ನಮಗೂ ಕಾಣಿಸಿಕೊಡುತ್ತದೆ. ಈ ಕಾಣಿಸುವಿಕೆಯಲ್ಲಿ ಇಲ್ಲಿನ ಕಥೆಗಳಿವೆ. + +‘ಅರ್ಧ ಬಿಸಿಲು ಅರ್ಧ ಮಳೆ’ ಸಂಕಲನದಲ್ಲಿರುವ, ಸಂಕಲನದ ಶೀರ್ಷಿಕೆಯ ಕಥೆಯೊಂದಿಗೆ ‘ನೀಲಿ, ಬಿಸಿಲು ಕೋಲು, ಮುಗಿಲ ದುಃಖ, ವಿದಾಯ, ಹುಚ್ಚು’ ಕಥೆಗಳು ಹೊಲದ ಗೊಬ್ಬರದ ಗುಡ್ಡೆಗಳಡಿಯ ‘ಮಂದಹಸುರು’ ಪೈರುಗಳಂತಿವೆ. ಇವು ಸಂಕಲನದ ಗಟ್ಟಿ ಕಥೆಗಳಷ್ಟೇ ಆಗಿರದೆ ಸೊರಟೂರರು ಕಥನಗಳ ದೋಣಿಗೆ ಸರಿದಿಕ್ಕು ಹಿಡಿಯುವ ಹುಟ್ಟು ಹಾಕಿದರೆ ಚುಳುಗುಟ್ಟುವ ಮೀನುಗಳಿರುವ ನರ‍್ಬಯಲಿಗೆ ನೇರ ಹೋಗುವ ನುರಿತ ಬೆಸ್ತನಾಗಬಹುದು. + +ಕಥೆ ನೆಲದ ಬೇಸಾಯವೂ ಹೌದು, ಮೀನು ಹಿಡಿಯುವ ಕುಶಲತೆಯೂ ಅಹುದು. ಬೇಸಾಯ ಹರಗಿ ಬಿತ್ತಿ, ಫಸಲು ಕಾಣುವುದು. ಮೀನುಗಾರಿಕೆ ದೋಣಿಯನ್ನು ಸಾಗಿಸಿ, ಬಲೆ ಬೀಸಿ, ಸೆಳೆಸಳೆದು ದೋಣಿಗೆ ತರುವುದು. ಎರಡೂ ಶ್ರಮದ ಕ್ರಿಯೆಯೇ. ಈ ಶ್ರಮದಿಂದಲೆ ‘ಫಸಲು’ ಕೈ ಹತ್ತುವುದು. ಹೀಗೆ ಕೈಗೆ ಹತ್ತಿದ ಕಥೆಗಳೇ ಹೇಳುತ್ತವೆ, ಯಾವ ಕಥೆ ಕೈವರೆಗೆ ಬರದೆ ಜಾರಿದೆ ಎಂಬುದನ್ನು. ಇದಕ್ಕೆ ಉದಾಹರಣೆಯಾಗಿ ‘ಬಯಲು, ಕನಸಲ್ಲಿ ಸುರಿದ ಕೆಂಪು ಮಳೆ’ ಕಥೆಗಳು ಸಿಗುತ್ತವೆ. ಇಂತಹ ಕಥೆಗಳಲ್ಲಿ ಅಲ್ಲಲ್ಲಿ ಮೂಡುವ ನೆರಳುಗಳು ಕಥನಕ್ಕೆ ಅಡ್ಡವಾಗಿ ನಿಂತಂತೆ ಕಂಡರು ನೆರಳಲ್ಲಿ ಅಳಿಸಿ ಕೊನೆಗೆ ಬೆಳಕೊಂದು ಮೂಡುತ್ತದೆ. ಆ ತಾವುಗಳಲ್ಲಿ ನೆರಳುಗಳನ್ನು ಸರಿಸುವ ಬೆಳಕು ಹರಿಯಬೇಕು. ಆಗ ಆ ಭಾಗ ಕಥೆಯಲ್ಲಿ ಕಾಣಿಸಿಕೊಳ್ಳುತ್ತದೆ. + +ಸದಾಶಿವ ಸೊರಟೂರು ಯುವಕ. ಕಥಿಸುವ ಹುರುಪಿರುವ ಯುವಕ. ಆ ಹುರುಪಿನಲ್ಲಿ ಅವಸರವೂ ಆತುರವೂ ಕಾಣಿಸುತ್ತದೆ. ಇದು ಈ ವಯಸ್ಸಿಗೆ ಸಹಜವೆನ್ನಿಸಿದರೂ ಕತೆಗಾರನಾಗಿ ಕಥೆಯನ್ನು ಕಥನ ಮಗ್ಗಕ್ಕಿಡುತ್ತಲೇ ಬಟ್ಟೆಯಾಯಿತೆಂದುಕೊಳ್ಳಲಾಗದು. ನೂಲು ತುಂಡಾಗಬಹುದು, ಸಿಕ್ಕಾಗಬಹುದು. ಲಾಳಿ ಆಡದೆ ನಿಂತರೂ ನಿಂತೀತು. ಇಂತಹ ತಡೆಗಳನ್ನು ನಿವಾರಿಸಿಕೊಂಡು ನೂತ ಮೇಲೆಯೇ ಬಟ್ಟೆ, ಅರ್ಥಾತ್ ಕಥೆ. ಸೊರಟೂರರೂ ತಾವೇ ಬಿಡಿಸಿಕೊಳ್ಳಬೇಕಾದ ಸಿಕ್ಕುಗಳಿವೆ. ಅವರು ಬಿಡಿಸಿಕೊಳ್ಳವ ಸೂಚನೆಗಳೂ ಇವೆ. + +(ಸ. ರಘುನಾಥ) + +ಆತುರ, ಅವಸರ ಎಂಬ ಮಾತು ಕಾಣಿಸಿಕೊಳ್ಳುವುದು ಕಥಿಸುವ ಸಮಯಕ್ಕೆ ಸಂಬಂಧಿಸಿದ್ದು. ಅದು ‘ಕಥನಧ್ಯಾನಭಂಗ.’ ಅದು ಯಾವ ಕತೆಗಾರನಿಗೂ ಆಗುವಂತಹುದು. ಗಾಯಕನಿಗೆ ಶ್ರುತಿಜ್ಞಾನವಿದ್ದೂ ಒಮ್ಮೊಮ್ಮೆ ತಪ್ಪುವಂತೆಯೇ ಇದೂ ಸಹ. ಅವನು ಈ ಲೋಪ ಅಥವಾ ದೋಷವನ್ನು ತನ್ನ ಮರು ಗಾಯನದಲ್ಲಿ ಸರಿಪಡಿಸಿಕೊಳ್ಳುವಂತೆ ಕತೆಗಾರ ಸರಿಪಡಿಸಿಕೊಂಡರೆ, ಅಂದರೆ ಕಥೆಯನ್ನು ತಿದ್ದಿದರೆ ಸಮಸ್ಯೆ ತೀರುತ್ತದೆ. ಸಂಗೀತ ಸಂಗೀತಗಾರನ ಮನೋಭಾವದ್ದು ಹೇಗೋ ಹಾಗೆಯೇ ಕಥೆಯೂ ಕಥೆಗಾರನ ಮನೋಭಾವದ್ದೇ. ಸೊರಟೂರು ಅವರ ಕಥೆಗಳು ಕರುಣೆ, ಪ್ರೀತಿ, ಆರ್ದ್ರ ಮನೋಭಾವದವು. ಅವು ಧ್ವನಿಪೂರ್ಣವಾಗಲು ಮುಂದಿನ ಬರವಣಿಗೆಗಾಗಿ ಅವರಲ್ಲಿರುವ ಕಥೆಗಳು ಒದಗಿ ಬರುವುದುಂಟು. ಇದಕ್ಕಾಗಿ ಅವರು ಅವರಲ್ಲಿನ ಕವಿ, ಕತೆಗಾರನ ಸಹಾಯದ ಮೊರೆ ಹೋಗಲೇಬೇಕಿದೆ. + +ಸೊರಟೂರರಲ್ಲಿರುವ ಕತೆಗಾರ ಮುಖ್ಯವಾಗಿ ಭಾವಜೀವಿಯೆಂದು ಅವರ ಕಥೆಗಳು ಸೂಚಿಸುತ್ತವೆ. ‘ಬಯಲು, ಹೆಸರು ಬೇಡ ಊರು ಬೇಡ, ವಿದಾಯ’ದಂತಹ ಕಥೆಗಳಿಗೆ ವೈಚಾರಿಕತೆಯ ಹೊದಿಕೆ ಹಾಕಲು ಹೋಗಿ ಕಥೆಯಾಗಿಸುವಿಕೆಯನ್ನು ಜಾರುಬಂಡೆ ಏರಿಸಿದ್ದಾರೆ ಅನ್ನಿಸಿತು. ಕಥೆಯಲ್ಲಿ ವೈಚಾರಿಕತೆ ನಿಷಿದ್ಧವೇನಲ್ಲ. ಆದರೆ ಅದು ವಸ್ತುವಿನಲ್ಲಿಯೇ ಅರಳಬೇಕಷ್ಟೆ. ಹೊದಿಕೆಯಾಗಬಾರದು. ಇದರ ನಿವಾರಣೆಯೂ ಸೊರಟೂರರಲ್ಲಿ ಇಲ್ಲದಿಲ್ಲ. ಗುರುತಿಸಿಕೊಳ್ಳಬೇಕಿದೆ. ಕಥೆಗಳಿವೆ. ಆ ಕಥೆಗಳನ್ನು ಕಥಿಸುವಾಗ ಎಲ್ಲಿ ಧ್ಯಾನಭಂಗಕ್ಕೆ ಒಳಗಾಗುವರೋ ಅಲ್ಲಿ ವೈಚಾರಿಕತೆಯ ಮೊರೆ ಹೋಗಿಬಿಡುತ್ತಾರೆ. + + + +ಕನ್ನಡ ಕತೆಗಾರರೂ ಸಾಮಾಜಿಕರಾಗಿಯೇ ಕಥೆಗಳನ್ನು ಕಟ್ಟಿದವರು. ರಮ್ಯ ಕಥೆಗಾರರೂ ಸಾಮಾಜಿಕತನದಿಂದೇನೂ ದೂರಸರಿದವರಲ್ಲ. ಸಾಹಿತ್ಯ ಚಳವಳಿಗಳು ಇದನ್ನೇ ಒತ್ತಿ ಹೇಳಿವೆ. ಇದು ಸಾಹಿತ್ಯದ ಜೀವಧ್ವನಿ. ಇದನ್ನು ಕನ್ನಡ ಸಾಹಿತ್ಯ ಆದಿಕವಿ ಪಂಪನಿಂದಲೇ ಮೈಗೂಡಿಸಿಕೊಂಡಿದೆ. ಆದುನಿಕ ಕನ್ನಡ ಸಾಹಿತ್ಯ ಇದಕ್ಕೆ ಗಟ್ಟಿ ಧ್ವನಿ ಕೊಟ್ಟಿತು. ಈ ಧ್ವನಿ ಸೊರಟೂರರ ಕಥೆಗಳಲ್ಲಿಯೂ ಇದೆ. ಇದನ್ನು ತನ್ನ ಧ್ವನಿಶೈಲಿಯಾಗಿಸಿಕೊಳ್ಳಲು ಹಿಂದಿನ ಧ್ವನಿಗಳನ್ನು ಇನ್ನೂ ಸ್ಪಷ್ಟವಾಗಿ ಎದೆಯಿಂದ ಕೇಳಿಸಿಕೊಂಡರೆ, ಅವುಗಳ ನಡುವೆ ತನ್ನ ಧ್ವನಿಸ್ಥಾನವನ್ನು ಗುರುತಿಸಿಕೊಳ್ಳಲು ಅನುಕೂಲವಾಗುತ್ತದೆ. ಈಗಿನ ಕನ್ನಡ ಕಥಾ ಸಾಹಿತ್ಯದ ಕೃಷಿ ಬಯಲಿನಲ್ಲಿ ಬಹಳಷ್ಟು ಯುವಕತೆಗಾರರ ಬೇಸಾಯ ಸಾಗಿದೆ. ನೆಲ ಹಿಡಿದ ದುಡಿಮೆದಾರರಿಂದ ಒಳ್ಳೆಯ ಫಸಲು ಬರುತ್ತಿದೆ. ಸೊರಟೂರರೂ ಅಂತಹ ಬೆಳೆಗಾರನಾಗಲೆಂಬ ಆಸೆ ನನ್ನಲ್ಲಿಯೂ ಇದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_186.txt b/Kenda Sampige/article_186.txt new file mode 100644 index 0000000000000000000000000000000000000000..8c4b817889cba36c2dbd8ecd20ffbd5845ec6f22 --- /dev/null +++ b/Kenda Sampige/article_186.txt @@ -0,0 +1,35 @@ +byಕೆಂಡಸಂಪಿಗೆ|Oct 31, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಈ ಪೊಕ್ಕಣ್ಣ ಶತ ತುಂಟ, ಕಣ್ಣಲ್ಲೇ ಅವನ ತುಂಟತನ ಇಣಕುತ್ತಿತ್ತು. ಒಂದು ಕಿವಿ ನೆಟ್ಟಗೆ ಮಾಡಿ, ಮತ್ತೊಂದನ್ನು ಮಡಿಸಿದ ಅಂದರೆ ಅವನೇನೋ ತರಲೆ ಮಾಡುತ್ತಾನೆಂದು ನಮಗೆ ಖಾತ್ರಿಯಾಗಿತ್ತು. ಮಟ ಮಟ ಮಧ್ಯಾಹ್ನ ಎಣ್ಣೆ ಪಳಚಿಕೊಂಡು ಹಂಡೆತುಂಬಾ ಬೀಸಿನೀರನ್ನು ಸ್ನಾನ ಮಾಡಿ, ಒದ್ದೆ ಸೀರೆಯನ್ನುಟ್ಟು ಬರುವ ಅಜ್ಜಿಗೆ ಅಡ್ಡಲಾಗಿಯೇ ಮಲಗುತ್ತಿದ್ದ ಪೊಕ್ಕಣ್ಣ. ಅವನು ಮಲಗಬಾರದೆಂದು ಕೊಡಪಾನಗಟ್ಟಲೆ ನೀರು ಹೊಯ್ದಿಟ್ಟು ಸ್ನಾನಕ್ಕೆ ಹೋಗುತ್ತಿದ್ದರು. ಆದರೂ ಕಾಲು ಒರೆಸುವ ಗೋಣಿಚೀಲವನ್ನೆಳೆದುಕೊಂಡು ಬೇಕಂತಲೇ ಬಚ್ಚಲಮನೆ ಬುಡದಿ ಮಲಗಿ ಸತಾಯಿಸುತ್ತಿದ್ದ ಅಂವ.ಶುಭಶ್ರೀ ಭಟ್ಟ ಲಲಿತ ಪ್ರಬಂಧಗಳ ಸಂಕಲನ “ಹಿಂದಿನ ನಿಲ್ದಾಣ” ದಿಂದ ಒಂದು ಪ್ರಬಂಧ ನಿಮ್ಮ ಓದಿಗೆ + +byಕೆಂಡಸಂಪಿಗೆ|Oct 29, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೇವಲ ನಿರೂಪಕಿ ಆಗದೆ ಕತೆಗಳ ಒಳಗಿನಿಂದ ಬಂದು ಮಾತನಾಡುವ ಕತೆಗಾರ್ತಿಗೆ ಆ ಕಾರಣಕ್ಕೆ ಒಂದು ರೀತಿಯ ಸಹಜ ಯಜಮಾನಿಕೆ ಪ್ರಾಪ್ತವಾಗಿದೆ. ಭಾರತದ ಮಹಾವ್ಯಾಖ್ಯಾನಗಳನ್ನು ನೀಡಿದ ವಾಲ್ಮೀಕಿ ವ್ಯಾಸರು ಕತೆಯ ಒಳಗಿನವರು. ತಾವೂ ತಮ್ಮ ಕತೆಯಲ್ಲಿ ಪಾತ್ರಧಾರಿಗಳು ಅಥವಾ ತಮ್ಮಿಂದಲೇ ಕತೆಗಳನ್ನು ಆರಂಭಿಸಿದವರು. ಕತೆಗಾರಿಕೆಗೆ ಇದೊಂದು ಅತ್ಯುತ್ತಮ ಮಾದರಿ. ತಾನೇ ಊರಾಡಿ ಎತ್ತಿಕೊಂಡು ಬಂದ ಕತೆಗಳಂತಿರುವ ಸಮೂಹ ಪ್ರಜ್ಞೆ ಈ ಕತೆಗಳ ಸತ್ವ. ಕತೆಗಳು ಸಮೂಹದ ಸ್ವತ್ತು. ಸಮೂಹ ಕೊಡುತ್ತಿರುವ ಸಮಸ್ತ ಬೈಗುಳಗಳಾದಿಯಾಗಿ ಯಾವುದನ್ನೂ ಸೋಸದೆ ಇಡಿಯಾಗಿ ನಮಗೆ ತಲುಪಿಸಲಾಗಿದೆ.ದಯಾ ಗಂಗನಘಟ್ಟ ಕಥಾ ಸಂಕಲನ “ಉಪ್ಪುಚ್ಚಿ ಮುಳ್ಳು”ಗೆ ನಟರಾಜ್‌ ಬೂದಾಳು ಬರೆದ ಮುನ್ನುಡಿ + +byಕೆಂಡಸಂಪಿಗೆ|Oct 26, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಿನಿಕತನದಲ್ಲಾಗಲೀ, ಅಸಹಾಯಕತೆಯಲ್ಲಾಗಲೀ ಇವರು ಅಳುತ್ತಾ, ಹಣೆಬರೆಹವನ್ನು ಹಳಿಯುತ್ತಾ ಕೂಡುವುದಿಲ್ಲ. ಹೀಗಿದ್ದಾಗಲೂ ಬಿಗಿಹುಬ್ಬಿನ ಕಾರ್ಪಣ್ಯದ, ಶಠತ್ವದ ಬದುಕನ್ನೂ ಇವರು ನಡೆಸುವುದಿಲ್ಲ. ಬದಲಿಗೆ ಅದೇ ಜೀವನೋತ್ಸಾಹದ, ಲವಲವಿಕೆಯ ವ್ಯಕ್ತಿತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ತಿಳಿಗೇಡಿಯನ್ನು ಕಟ್ಟಿಕೊಂಡೇ ಬದುಕನ್ನು ಗೆಲ್ಲುತ್ತಾ ಹೋಗುವ ಈ ಹೆಣ್ಣು ಮಕ್ಕಳು ಇವರಿಬ್ಬರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತ ಮಿತಿಮೀರಿ ತಿಂದ ಜಾಮೂನಿನ ಕಾರಣಕ್ಕೆ ಕಳೆದುಕೊಳ್ಳುವುದು ವಿಕಟ ವ್ಯಂಗ್ಯದಂತೆ ನಮಗೆ ಕಾಣಿಸುತ್ತದೆ.ಶೋಭಾ ಗುನ್ನಾಪೂರ ಕಥಾ ಸಂಕಲನ “ಭೂಮಿಯ ಋಣ”ಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ + +byಪ.ನಾ.ಹಳ್ಳಿ ಹರೀಶ್ ಕುಮಾರ್|Oct 25, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮೂಲ ಲೇಖಕರ ಒಪ್ಪಿಗೆಯಿರಲಿ, ಅವರ ಗಮನಕ್ಕೂ ತಾರದೇ ನೇರವಾಗಿ ಕವಿತೆಯ ಸಾಲುಗಳನ್ನು ನಕಲು ಮಾಡಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತಾವೇ ರಚಿಸಿದ್ದೆಂದು ಪ್ರಚಾರ ಪಡೆಯುವ ಕಪಟ ಸಾಹಿತಿಗಳನ್ನು ಕೆಣಕಿದ್ದಾರೆ. ‘ಇರಬೇಕು, ಇದ್ದೇ ಇರುತ್ತಾರೆ, ಒಬ್ಬಿಬ್ಬರಲ್ಲ ಒಂದಷ್ಟು ಜನ, ಇರುವಿಕೆಯ ಅರಿವನ್ನಷ್ಟೇ ಉಳಿಸಿ, ಎಲ್ಲರೊಳಗೂ ಸಾಲವಾಗಿಯೇ ಉಳಿಯುವವರು..’ ಎಂದೆನ್ನುತ್ತಾ ಪ್ರತಿಯೊಂದರಲ್ಲೂ ಮೂಗು ತೋರಿಸುವವರ ಸಂಖ್ಯೆ ಈಗ ಅಧಿಕ. ಅದರ ಬಗ್ಗೆ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೂ ಒಂದು ಅಭಿಪ್ರಾಯವಿರಲಿ ಎನ್ನುವವರೇ ಹೆಚ್ಚಾಗಿದ್ದಾರೆ.ಸೌಜನ್ಯ ದತ್ತರಾಜ ಕವನ ಸಂಕಲನ “ಭಾವನೌಕೆಯನೇರಿ” ಕುರಿತು ಪ ನಾ ಹಳ್ಳಿ ಹರೀಶ್ ಕುಮಾರ್ ಬರಹ + +byಸಿಂಧು ಜಗನ್ನಾಥ್‌|Oct 18, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಇಲ್ಲಿರುವ ಕಥೆಗಳ ಕಥಾವಸ್ತು ಬಹುತೇಕ ಮನುಷ್ಯರ ಕಷ್ಟ ಸುಖ ನೋವು ನಲಿವಿನದೇ ಆಗಿದ್ದರೂ, ಕಥೆಗಳ ಮೂಲಕ ಹೊರಬರುವ ವ್ಯಾಕುಲತೆ ಸ್ಪಂದನೆ ಲೇಖಕರಿಗೆ ಇರುವ ಬದುಕಿನ ಅನುಭವಗಳಿಂದಲೇ ಮೂಡಿರಬಹುದು, ಹಾಗಾಗಿ ಅವುಗಳು ಗಟ್ಟಿ ಕಥೆಗಳಾಗಿ ರೂಪುಗೊಂಡಿವೆ. ಇನ್ನು ನಿರೂಪಣೆಗೆ ಬಂದರೆ ಬಹುಶಃ ಮಾಸ್ತಿಯವರಂತೆ ಲೇಖಕಿಯು ಕವಯಿತ್ರಿಯೂ ಆಗಿರುವುದರಿಂದ ಇರಬೇಕು ಕಥೆಗಳನ್ನು ನಿರೂಪಿಸುವುದಕ್ಕೆ ಬಳಸುವ ಉಪಮೆಗಳು ಸಂದರ್ಭೋಚಿತವಾಗಿದ್ದು ಇವುಗಳಿಂದ ಹೊರಹೊಮ್ಮುವ ಭಾವನೆಗಳು ನೇರವಾಗಿ ಓದುಗರನ್ನು ತಟ್ಟುತ್ತವೆ.ತೇಜಸ್ವಿನಿ ಹೆಗಡೆ ಕಥಾ ಸಂಕಲನ “ಜೋತಯ್ಯನ ಬಿದಿರು ಬುಟ್ಟಿ”ಯ ಕುರಿತು ಸಿಂಧು ಜಗನ್ನಾಥ್‌ ಬರಹ + +byಕೆಂಡಸಂಪಿಗೆ|Oct 7, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ʻನಿಮ್ಮ ಕಾವ್ಯದಲ್ಲಿ ನೀವು ಬರೆಯಲೇಬೇಕೆಂಬ ಮಾತುಗಳು ಇರುವಂತೆಯೇ ನೀವು ಬರೆದೂ ಬರೆದೂ ಜಾಳಾಗಬಹುದಾದ ಕೆಲವು ಸಂವೇದನೆಗಳು ಸಹ ಜಾಗ ಪಡೆದಿವೆ. ಇದು ಪ್ರತಿ ಕವಿಗೂ ಇರುವ ತೊಡಕು. ನೀವು ಬರೆಯಲಾರಂಭಿಸಿದ ತಕ್ಷಣ ನಿಮಗೆ ಒಂದು ಶೈಲಿಯು ಸಿದ್ಧಿಸುತ್ತದೆ. ಅದನ್ನು ಬಳಕೆ ಮಾಡುತ್ತಾ ಹೋದಂತೆ ಅದರ ಸಾರ ಕಡಿಮೆಯಾದಂತೆ ಅನ್ನಿಸುತ್ತದೆ. ಪ್ರಾಯಶಃ ನೀವು ಆವಾಹಿಸಿಕೊಳ್ಳುವ ಪ್ರೀತಿಯ ವ್ಯಾಮೋಹ ಅನೇಕ ಕವಿತೆಗಳಲ್ಲಿ ಪುನಾರಾವರ್ತನೆ ಆಗುವ ಅಪಾಯದಲ್ಲಿವೆ. ಒಂದು ವಿಷಯವನ್ನು ವೃತ್ತಾಕಾರವಾಗಿ ನಿಧನಿಧಾನವಾಗಿ ಪ್ರವೇಶಿಸಿ ಅದರ ಗಾಢತೆಯನ್ನು ಅರಿಯುವುದು ಒಂದು ತಂತ್ರʼ.ಚೈತ್ರ ಶಿವಯೋಗಿಮಠ ಕವನ ಸಂಕಲನ “ಪೆಟ್ರಿಕೋರ್‌”ಗೆ ತಾರಿಣಿ ಶುಭದಾಯಿನಿ ಬರೆದ ಮಾತುಗಳು + +byಡಾ. ರಾಜಶೇಖರ ಜಮದಂಡಿ|Oct 6, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಮಾಜ ʻಕುರೂಪಿʼ ಗುರುತಿಸಿದ,  ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ ನಿರ್ಮಲವಾದ ಭಾವನೆ ಪರಿಗಣನೆಗೆ ಬಾರದ ಸಮಾಜದಲ್ಲಿ ನಿರುಪಮಾಳ ಭವಿಷ್ಯದ ಕನಸು ನುಚ್ಚು ನೂರಾಗುವ ಚಿತ್ರಣವನ್ನು ವ್ಯಾಸರಾಯ ಬಲ್ಲಾಳರು ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ‘ವಿವಾಹ’ವೆಂಬುದು ತುಂಬಾ ಅಗತ್ಯವೆಂಬ ಚೌಕಟ್ಟು ನಿರ್ಮಾಣವಾಗಿ ಹೋಗಿದೆ. ಬದ್ದ ಕಲ್ಪನೆಗಳ ನೆಲೆಯಲ್ಲಿ ನಿರುಪಮಾ ತನ್ನ ಆಸಕ್ತಿ ಮತ್ತು ಆಶಯಗಳತ್ತ ಗಮನ ಹರಿಸುತ್ತಾಳೆ. ನಿರುಪಮಗೆ ಸಮಾಜದ ಈ ಕ್ರೌರ್ಯ ವ್ಯವಸ್ಥೆಯನ್ನು ಎದುರಿಸಲಾಗುವುದಿಲ್ಲ.  ವ್ಯಾಸರಾಯ ಬಲ್ಲಾಳರ ʻಅವಿವಾಹಿತೆʼ ಕತೆಯ ಕುರಿತು ರಾಜಶೇಖರ ಜಮದಂಡಿ ಅವರು ಬರೆದ ವಿಮರ್ಶೆ ಇಲ್ಲಿದೆ. + +byಕೆ.ಆರ್.ಉಮಾದೇವಿ ಉರಾಳ|Oct 3, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.ಮಿತ್ರಾ ವೆಂಕಟ್ರಾಜ ಅವರ ʻಪಾಚಿಗಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ + +byಕೆಂಡಸಂಪಿಗೆ|Sep 24, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು ಸಾಧ್ಯವಿತ್ತೇ? ಇದು ದಾದಾನ ನಿರ್ವಿಕಾರವೇ ಅಥವಾ ಇದೇ ಜೀವನದ ಬಗೆಗಿರುವ ಸಮತೋಲವೇ? ಅಮ್ಮನ ಸಾವಿನ ಬಳಿಕ ಅವರು ಬಂದು ತಲುಪಿದರು, ಆಗವಳು ಭೇಟಿಯಾದಾಗ ಅವರೇನೂ ವ್ಯಕ್ತ ಮಾಡಿರಲಿಲ್ಲ. ಅವಳು ಮಲಗಿದ್ದಾಗ ಮಾತ್ರ ಹೊದಿಕೆಯನ್ನು ಸರಿಪಡಿಸಿದರು. ಹಣೆಯ ಮೇಲಿನ ತಲೆಗೂದಲನ್ನು ಸರಿಪಡಿಸಿ, ಎಲ್ಲರ ಎದುರಿಗೆ ಕೂದಲಲ್ಲಿ ಬೆರಳಾಡಿಸಿದರು…ಚಂದ್ರಕಾಂತ ಪೋಕಳೆ ಅನುವಾದಿಸಿದ ಆಶಾ ಬಗೆಯವರ ಮರಾಠಿ ಕಾದಂಬರಿ “ಸೇತು” ಇಂದ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_187.txt b/Kenda Sampige/article_187.txt new file mode 100644 index 0000000000000000000000000000000000000000..f05797b20e5f3483d39e99338e976014b8f4e667 --- /dev/null +++ b/Kenda Sampige/article_187.txt @@ -0,0 +1,103 @@ +ಕವಿತೆ ಯಾಕಾಗಿ ಮತ್ತು ಯಾವಾಗ ಎಂಬ ಪ್ರಶ್ನೆಗಳನ್ನು ಕಾವ್ಯಮೀಮಾಂಸೆ ಸಾವಿರಾರು ವರ್ಷಗಳಿಂದ ಕೇಳುತ್ತಲೇ ಬಂದಿದೆ ಮತ್ತು ಅದಕ್ಕೆ ಸಮಾನಾಂತರವಾಗಿ ಕಾಲಧರ್ಮದ ನೆಲೆಯಲ್ಲಿ ಉತ್ತರಗಳನ್ನೂ ಅದು ಕಂಡುಕೊಂಡಿದೆ. ಈ ಉತ್ತರ ಸಾಪೇಕ್ಷ ಹಾಗೂ ಕಾಲಧರ್ಮ. ‘ಅದು’ ಎಂದರೆ ‘ಇದು’ ಎಂದು ಖಚಿತವಾಗಿ ಯಾರೂ ಹೇಳಲಾಗದ್ದನ್ನು ನಾವು ಒಪ್ಪಿಕೊಂಡೇ ಮುಂದುವರಿಯುತ್ತಲೇ ಬಂದಿದ್ದೇವೆ. ಇದು ನಿಗೂಢ ಪರತತ್ವವನ್ನು ಕುರಿತ ಮಾತೂ ಹೌದು. ಕಾವ್ಯವೂ ನಿಗೂಢವೇ. ಆದುದರಿಂದಲೇ ಅದು ಸೂಕ್ಷ್ಮದೇಹಿ. ಭಾವನೆಗೆ ನಿಲುಕಿಯೂ ನಿಲುಕದಂತದ್ದು. ಅದು ಅನುಭವಕ್ಕೆ ಮಾತ್ರ ನಿಲುಕುವಂತದ್ದು. ಇಂಥಾ ಅನುಭಾವವನ್ನು ಪದಗಳಲ್ಲಿ ಹಿಡಿಯುವುದೂ ಆ ಕ್ಷಣದ ಸತ್ಯ ಮಾತ್ರವೇ ವಿನಾ ಅದು ಶಾಶ್ವತವೂ ಅಲ್ಲ, ಸರ್ವಗ್ರಾಹಿಯೂ ಅಲ್ಲ. ಅವರವರ ಸಂಸ್ಕಾರ ಸಾಮರ್ಥ್ಯಕ್ಕೆ ದಕ್ಕಿದ್ದಷ್ಟೇ ಪುಣ್ಯಫಲ. + +ಪ್ರತಿ ಓದು ಕೂಡ ಇಂಥಾ ಪ್ರಶ್ನೆಗಳನ್ನು ನನ್ನಲ್ಲಿ ಎತ್ತುತ್ತಲೇ ಅದರಲ್ಲಿ ನನಗೆ ದಕ್ಕಿದ್ದೆಷ್ಟು.., ಅದು ನನ್ನೊಳಗಿನ ಅರಿವಿನ ಪರದೆಯ ಸರಿಸಿದ್ದೆಷ್ಟು ಎಂದು ಕೇಳಿಕೊಳ್ಳುತ್ತೇನೆ‌. ಬಹಳ ಬಾರಿ ಈ ಬಗೆಯ ಓದು ನಿರಾಸೆಯನ್ನೂ ಖುಷಿಯನ್ನೂ ಬೆರಗನ್ನೂ ಹುಟ್ಟಿಸಿದ್ದಿದೆ. ಅಂಥಾ ಕ್ಷಣಗಳಲ್ಲಿ ಆ ಬರವಣಿಗೆಯ ಬರಹಗಾರನನ್ನು ಮೆಚ್ಚಿದ್ದೂ, ಕರುಣೆಯಿಂದ ನೋಡಿದ್ದೂ ಇದೆ. ಇದು ನನ್ನ ಮಿತಿಯೂ ಇದ್ದಿರಬಹುದೆಂಬ ಎಚ್ಚರವೂ ನನಗೆ ಇದ್ದೆ ಇದೆ; ಅದು ಸತ್ಯ ಕೂಡ. ಈ ಮಾತು ಈ ಸಂಕಲನದ ಪದ್ಯಗಳ ಕುರಿತೂ ಹೌದು. + +(ಜಿ.ಆರ್. ರೇವಣಸಿದ್ದಪ್ಪ) + +ಜಿ.ಆರ್. ರೇವಣಸಿದ್ದಪ್ಪನವರ ಇಲ್ಲಿನ ಕವಿತೆಗಳನ್ನು ಓದುತ್ತಾ ಹೋದಂತೆ ಸಾಮಾನ್ಯತೆಯಿಂದ ಅಸಾಮಾನ್ಯತೆಗೆ, ಅಮಾನವೀಯ ನೆಲೆಯಿಂದ ಮಾನವೀಯತೆಯ ನೆಲೆಗೆ ಏರುವ ಸಾಧಾರಣೀಕೃತವಾದ ಅನುಭಾವವೊಂದನ್ನು ಪ್ರತಿ ಕ‌ವಿತೆಯ ಪ್ರಭಾವಳಿಯಾಗಿ ರೂಪಿಸುವ ಕುಶಲತೆಯೊಂದು ನನಗೆ ಎದುರಾಗಿದೆ. ಇದು ಬುದ್ದಿ ಪೂರ್ವಕವಾದ ಪ್ರಕ್ರಿಯೆಯೋ ಅಥವ ಅದೊಂದು ಸಹಜ ನಡಿಗೆಯೋ ಎಂದು ಪ್ರತಿ ಪದ್ಯದ ಓದಿನ ನಂತರ ನಿಂತು ಧ್ಯಾನಿಸಿದ್ದೇನೆ. ಅದು ಅವರು ಲೋಕವನ್ನು ಮುಗ್ಧಭಾವದ ನೆಲೆಯಲ್ಲಿ ನಿಂತು ನೋಡಿದಾಗ ಅವರೊಳಗೆ ಪ್ರಕ್ಷುಬ್ಧ ಅಲೆಯನ್ನು ಎಬ್ಬಿಸಿದ್ದ ಕ್ರಿಯೆಗೆ ಪ್ರತಿಕ್ರಿಯಾರೂಪವಾದುದು ಎಂದು ಅನ್ನಿಸಿದೆ. ಆದರೆ ಅದು ಕೇವಲ ಪ್ರತಿಕ್ರಿಯೆ ಮಾತ್ರವಾಗದೆ ಪ್ರಕ್ರಿಯಾತ್ಮಕವಾದ ಚಲನೆಯನ್ನು ಹೊಂದಿರುವುದರಿಂದ ಇಡೀ ಸಂಕಲನದಲ್ಲಿ ಒಂದು ಸಾತತ್ಯತೆ ಒದಗಿ ಬಂದಿದೆ. ಇಲ್ಲಿ ಹೆಸರಿಗೆ ಹಲವು ಪದ್ಯಗಳಿದ್ದರೂ ಅದು ಒಂದೇ ಪದ್ಯದಂತೆ, ಧ್ವನಿಯಂತೆ ಭಾವಿತವಾಗುವುದು ಈ ಸಂಕಲನದ ಧನಾತ್ಮಕ ಅಂಶ. + +ಗೋಪಾಲಕೃಷ್ಣ ಅಡಿಗರ ಮಾತು ‘ಇರುವುದೆಲ್ಲವ ಬಿಟ್ಟು ಇರದುದರೆಡೆ ಸಾಗುವ…’ ಒಂದು ಪ್ರಯತ್ನದ ಆಶಯದಂತೆ ಇಲ್ಲಿಯ ಕವಿತೆಗಳನ್ನು ನಿರ್ವಚಿಸಲಾಗಿದೆ. ಅಂದರೆ ಲೋಕವನ್ನು ಅದು ಇರುವ ಹಾಗೆಯೇ ಗ್ರಹಿಸುವ, ಮತ್ತು ಅದರ ವ್ಯವಹಾರಗಳ ಮಿತಿಗಳನ್ನು ಗುರುತಿಸುತ್ತಾ ಅದರಾಚೆಗೆ ದಾಟಿಕೊಳ್ಳುವ ಒಂದು ಆಶಯವನ್ನು, ತುಡಿತವನ್ನು ಇಲ್ಲಿನ ಬಹುತೇಕ ಪದ್ಯಗಳು ಮಾಡುತ್ತವೆ. ಗೃಹೀತಗಳಾಚೆ ಹೋಗಬೇಕೆನ್ನುವ ವಾಂಛೆಯು ರಚನೆಗಳನ್ನು ನಿರಚನಗೊಳಿಸಲೇಬೇಕೆನ್ನುವ ಬೌದ್ಧಮೀಮಾಂಸೆಯ ತಾತ್ವಿಕತೆಗೆ ತೀರಾ ಹತ್ತಿರವಾದುದು. ಇದೆಲ್ಲವನ್ನು ನಿರ್ವಹಿಸುವಾಗ ಆಪ್ತತೆಯಿಂದ ಗೆಳೆಯನಂತೆ ಮಾತಾಡುವ ‘ಮಿತ್ರಸಂಹಿತೆ’ ಭಾವಸ್ಥಿತಿಯನ್ನು ಇವರ ಪದ್ಯಗಳು ಹೊಂದಿರುವುದರಿಂದ ಸಹ್ಯ ಓದಿಗೆ; ಹೃದ್ಯ ಸಂವೇದನೆಗೆ ಕಾರಣೀಭೂತವಾಗುತ್ತವೆ. ಇದು ಕವಿಯೊಬ್ಬನ ನಿಜದ ನಡಿಗೆಯನ್ನು ಪ್ರಕಟಿಸುವಂತಾದ್ದು. ಆದುದರಿಂದ ಈ ಪದ್ಯಗಳ ಪಿಸುದನಿಯನ್ನು ಆಲಿಸಿ ಮುನ್ನಡೆದಾಗ ಓದು ಸಾರ್ಥಕವೆನ್ನಿಸುತ್ತದೆ. + +ಹತ್ತಿರ ಸೆಳೆದೂದೂರ ನಿಲ್ಲುವ,ದೂರ ಸರಿದೂಹತ್ತಿರವಾಗುವ,ಮೋಡಿಯೀಗಸಾಕೆನಿಸಿದೆ(ಇರುವುದೊಂದೇ ಭೂಮಿಯ ಮೇಲೆ) + +ಒಳಗೂ ಬೆಂಕಿ;ಹೊರಗೂ ಬೆಂಕಿ;ನಡುವೆ ಆತ್ಮದ ಆರ್ತನಾದ.(ಬೆಂಕಿ) + +ಈ ಹೊತ್ತುನಾನು ಜೀವಂತವಾಗಿದ್ದೇನೆ.ನಿಮ್ಮ ನಾಗರಿಕತೆಯಗಂಧವಿಲ್ಲದನಾನೋರ್ವ ಮನುಷ್ಯ ಮಾತ್ರ.(ಕೋರಿಕೆ) + +ಲೋಕದ ದಂದುಗ ಮತ್ತು ಅದರ ಮಿತಿಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುತ್ತ ಸೋತಭಾವದಲ್ಲಿ ವ್ಯಕ್ತವಾಗುವ ಭಾವವೇ ವ್ಯಕ್ತಿಯನ್ನು ದೃಢಗೊಳಿಸುವ ನಿರ್ಧಾರವಾಗಿ ಬದಲಾಗುವುದು ಧನಾತ್ಮಕ ಅಂಶವೇ. ತನ್ನೊಳಗಿನ ತಾಕಲಾಟಗಳು ಮನುಷ್ಯನನ್ನು ಅರಿವಿನ ಎತ್ತರಕ್ಕೆ ಕೊಂಡೊಯ್ಯುವ ಸೋಪಾನವಾದಾಗಲೇ ನಿಜ ಬದುಕಿನ ದರ್ಶನವಾಗುವುದು. ಆ ನಂಬುಗೆ ಕವಿಯಲ್ಲಿ ಗಾಢವಾಗಿರುವುದರಿಂದಲೇ ಲೋಕದ ಜಂಜಡತೆಯಿಂದ ದೂರ ನಿಲ್ಲುವ ‘ಕೇವಲ ಮನುಷ್ಯನಾಗುವ’ ನಿರ್ವಾಣದ ಮಾತುಗಳನ್ನು ಆಡುತ್ತಾನೆ. + +ಮನುಷ್ಯನ ವರ್ತನೆ ಈತನಿಗೆ ಅಪರಿಚಿತವೇನಲ್ಲ. ಏಕೆಂದರೆ ಈತನೊಬ್ಬ ಸೂಕ್ಷ್ಮ ಸಂವೇದನೆಯ ಸೃಜನಶೀಲ ವ್ಯಕ್ತಿ. ಅದಕ್ಕೆಂದೆ ಈತ ಹೇಳುತ್ತಾನೆಈಗೀಗಹೃದಯತುಂಬಿಬರಮಾಡಿಕೊಳ್ಳುವುದುಆಸಹಜವಾಗಿದೆ!(ಈಗೀಗ) + +ಶ್ರೇಷ್ಠ ನಿಕೃಷ್ಟಚಿಕ್ಕದು ದೊಡ್ಡವುಗಳೆಲ್ಲಕರಗಿಹೋಗಿರುವಾಗಈ ನಾನು ಅಷ್ಟೇ ತಾನೇ?(ಕೋರಿಕೆ) + +ತನ್ನೊಳಗೇ ನಡೆಸುವ ಆತ್ಮ ಸಂವಾದದಂತೆ ಕಾಣುವ ಈ ಮಾತುಗಳಲ್ಲಿ ‘ನಾನು’ ಎನ್ನುವುದು ಕರಗಿ ಹೋಗದೆ ಇರುವತನಕ ಈ ಲೋಕದ ವ್ಯಾಮೋಹ ತೀರುವುದಿಲ್ಲ. ನಾನು, ನನ್ನದು, ನಮ್ಮವರು ಎಂಬ ಭಾವ ಅಳಿದಾಗಲೇ ನಿಜದ ಸುಖ ಕಂಡುಕೊಳ್ಳಲು ಸಾಧ್ಯ. ಇಲ್ಲವೆಂದರೆ ದಿನವೂ ದುಃಖಿಸುತ್ತಾ, ಹತಾಶನಾಗುತ್ತ ಹೋಗುವುದೇ ಬದುಕಿನ ರೀತಿಯಾಗಿ ಬಿಡುತ್ತದೆ. ಅದಕ್ಕೆ ತಾನೇ ಅಂದುಕೊಳ್ಳುತ್ತಾನೆ… + +ಎಷ್ಟಂತ ಹನಿಯ ಹನಿಸಿಕಣ್ಣ ಕಡಾಯಿಯಬತ್ತಿಸಿಕೊಳ್ಳುವೆ?(ಇನ್ನಿಲ್ಲವಾದಾಗ)ಇದ್ದೂ ಇಲ್ಲದಂತೆಇಲ್ಲದೆಯೂ ಇರುವಂತೆ(ಇನ್ನಿಲ್ಲವಾದಾಗ) + +ನಿರ್ಲಿಪ್ತ ಭಾವಸ್ಥಿತಿಗೇರುವ ತನಕ ಇದಕ್ಕೆ ಬಿಡುಗಡೆಯಿಲ್ಲ ಎಂಬ ಅರಿವನ್ನು ಕಂಡುಕೊಳ್ಳುವ ಕವಿಗೆ ಇದು ಕಷ್ಟದ ದಾರಿಯೆಂಬುದೂ ತಿಳಿಯದಿಲ್ಲ.ಅದು ಸರಾಗವಾಗಿ ನಡೆಯಲ್ಲ,ಮತ್ತೆ ಮತ್ತೆ ಚಲಿಸುತ್ತೇನೆ.ಓಡುತ್ತಿಲ್ಲ ನಾನು;ತೆವಳುತ್ತಲೂ ಇಲ್ಲ;ನಡೆಯುತ್ತಿದ್ದೇನೆ,ನನ್ನದೇ ವೇಗದಲ್ಲಿ.ನಡೆಯುತ್ತಲೇ ಇರುತ್ತೇನೆ,ಗಮ್ಯವ ಸೇರುವ ತನಕಇಲ್ಲಾ ಕಾಲುಗಳು ಸೋಲುವ ತನಕ.(ಎಲ್ಲಿಂದಲೋ ಬಂದವನು) + +ಅದಮ್ಯವಾದ ಈ ನಂಬುಗೆಯ ಹಾದಿಯಲ್ಲಿ ವಿವೇಚನಾಯುತವಾಗಿ, ಸಂಯಮದಿಂದ ಬದುಕಿನ ನಡೆಯನ್ನು ಗಮನಿಸುವ ಪ್ರಯತ್ನ ಮುಂದಿನದು. ಅಲ್ಲೂ ಪರಂಪರೆಯ ವಿವೇಚನೆಯೊಂದಿಗೆ ಹೊರಡುವಂತಾದ್ದು. + +ಹಾಗೆ ಬಂದುದು,ಇಂತು ನಿಂದುದು,ಇಲ್ಲಿಗೇ ಅಂತ ಕಾಣುವುದೇ?(ಇರುವುದೊಂದೇ ಭೂಮಿಯ ಮೇಲೆ) + +ಅಂಟು ಆರಿ,ನಂಟು ಕಳಚಿ,ಸೂಕ್ಷ್ಮದೇಹಿಯಾದರಿಲ್ಲ(ಇರುವುದೊಂದೇ ಭೂಮಿಯ ಮೇಲೆ) + + + +ತತ್ಕಾಲಿನತೆಯನ್ನೇ ಪರಮವೆಂಬ ಮಾಯಕ ಕನ್ನಡಿಯ ಮುಂದೆ ನಿಂತು ನಟಿಸುವುದರಾಚೆಗೆ, ಬಿಂಬರಹಿತರಾಗಿ-ನಿರಾಕಾರ-ಸ್ಥಿತಿ ತಲುಪಬೇಕಾದ ಗಮ್ಯವನ್ನು ಶ್ರಮಣ ಪರಂಪರೆಗಳೂ ಸೇರಿದಂತೆ ಭಾರತೀಯ ತತ್ವಚಿಂತನೆಗಳು ಮುಂದಿರಿಸಿರುವ ಅರಿವು ಈ ಕವಿತೆಯ ನಾಯಕನಿಗೆ ಬಂದಿರುವಂತಾದ್ದೆ. ಮತ್ತು ಸಕಲ ಚರಾಚರಗಳಲ್ಲಿ ಸಾಮ್ಯ ದೃಷ್ಟಿಗತವಾಗುವವರೆಗೂ ಈ ಪಯಣ ಕೊನೆಗೊಳ್ಳಲಾರದೆಂಬ ಅರಿವು ಬಂದು ಹೋಗುವುದು ಅನೇಕ ಬಾರಿ. + +ದೇವರ ಕುಲುಮೆಯಲ್ಲಿಸೃಜಿಸಿದಅಗಣಿತ ಜೀವಿಗಳಲ್ಲಿನಾಯಿಯೂ ಒಂದು;ಮನುಷ್ಯನೂ ಹೌದು!(ನಾಯಿಪಾಡು) + +ಇದೆಲ್ಲವೂ ಸಾಧ್ಯವಾಗುವುದು ತನ್ನದೇ ಅರಿವಿನ ಮಾರ್ಗದಲ್ಲಿ, ಬೆಳಕಿನ ಹಾದಿಯಲ್ಲಿ ಮುನ್ನಡೆದಾಗ. ಯಾರದೋ ಮಾತು, ಹೇಳಿಕೆಗಳೂ ನನ್ನ ‘ಬಾಳನೌಕೆಗೆ ಬೆಳಕಾಗದು.’ ತಾನೇ ತನ್ನ ಹಾದಿಯ ದಾತಾರನಾದಾಗ ಮಾತ್ರ ಸಾಧ್ಯ ಎನ್ನುವ ತಿಳುವಳಿಕೆಯ ಬೆಳಕಿನಲ್ಲಿ ಈ ನಾಯಕ ಹೆಜ್ಜೆ ಇರಿಸುತ್ತಾನೆ. ಬೇರೆಯವರ ಹಾದಿಯ ಅನುಕರಿಸಬಹುದು ಆದರೆ, ಅದು ತಾನೇ ಕೈಗೊಳ್ಳುವ, ತನ್ನ ಅರಿವಿನಿಂದಲೇ ಮೂಡಿದ ನಿಲುವಾಗಿರುವುದಿಲ್ಲ… + +ಪಲಾಯನಗೈಯಬಹುದುಸಿದ್ಧಾರ್ಥ ಮಧ್ಯ ರಾತ್ರಿಯಲ್ಲಿಎದ್ದು ಹೋದಂತೆ(ಪಲಾಯನ) + +ಸಿದ್ಧಾರ್ಥ ತಥಾಗತನಾಗುವ ಮೊದಲು ತಾನು ಕಂಡುಕೊಂಡ ಹಾದಿ ಇದು. ಇದು ತನಗೂ ಅನ್ವಯವಾಗುವುದು ಯಾವಾಗ ಎಂದರೆ, ‘ಸ್ವತಃ ಬುದ್ಧನಾಗದೆ’ನಮ್ಮನಮ್ಮಬುದ್ಧರು, ಬಸವರು, ಅಂಬೇಡ್ಕರ್ಗಳು,ಗಾಂಧಿಗಳುತಮ್ಮತಮ್ಮಲ್ಲೇಘರ್ಷಣೆಗಿಳಿದಾಗಬುದ್ಧ, ಬಸವ, ಅಂಬೇಡ್ಕರ್, ಗಾಂಧಿ,ನಿಜಕ್ಕೂಹೋಗುತ್ತಾರೆ!(ಬುದ್ಧ, ಬಸವ…..) + +ಬರಿದೇ ಬಾಯಚಪಲಕ್ಕೆ ತತ್ವಾರಾಧನೆ, ಭಜನೆಮಾಡುತ್ತಾ ನಿಲ್ಲದೆ ಇವೆಲ್ಲ ಬಂಧನಗಳ ಕಳಚುವ ಪ್ರಕ್ರಿಯೆ ತನ್ನೊಳಗೇ ಮಥಿಸಿದಾಗ ತನ್ನ ದಾರಿಗೆ ಹೊಸ ಪರಿದಿಯೊಂದು ಅನಾವರಣವಾಗುತ್ತದೆ – ಎಂಬ ಚಿಂತನೆ ಕವಿಯ ನಡೆಯ ಸಾರ್ಥಕತೆಯನ್ನು ಸೂಚಿಸುತ್ತದೆ. + +(ಡಾ. ಲೋಕೇಶ್ ಅಗಸನಕಟ್ಟೆ) + +ಅಂತಿಮವಾಗಿ ಯಾವ ಬರವಣಿಗೆಯಾಗಲಿ, ಬದುಕಾಗಲಿ ಅದು ತನ್ನನ್ನು ತಾನು ಕಂಡುಕೊಂಡು ಹಾಗೆ ಮುನ್ನಡೆಯುವ ಒಂದು ಕ್ರಿಯೆ. ಅದು ಸಾರ್ಥಕ. ಈ ಎಚ್ಚರ ಇಡೀ ಸಂಕಲನದುದ್ದಕ್ಕೂ ಮೈಚಾಚಿಕೊಂಡಿದೆ.’ಸಾಗರ’ ‘ಅಯೋಮಯ’ ‘ಪ್ರಕೃತಿ’ ‘ಅಪರಿಚಿತರು’ ‘ಮಗುವಾದರೂ ಆಗದೇ?’ ‘ಯಂತ್ರಜೀವಿ’ ‘ಬೆಂಕಿ’ ‘ಎಳೆಗಾಯಿ’ – ಪದ್ಯಗಳನ್ನು ಈ ಹಿನ್ನೆಲೆಯಲ್ಲಿ ಎದುರಾಗಬಹುದು. + +ಮನುಷ್ಯನಾದರೆ ಸಾಲದೇ?ಮಗುವಾದರೂ ಆಗದೇ?(ಮಗುವಾದರೂ ಆಗದೇ?) + +ಮಗುವಿನ ಮುಗ್ಧತೆಯ ಸಂಪಾದಿಸುವವರೆಗೂ ಈ ಸಾಧನೆಯ ಯಾನ ನಿರಂತರವಾಗಿ ಮುಂದುವರಿಯುತ್ತಿರಬೇಕು. ಲೋಕದ ಉಪಾಧಿಗಳ ಅಂಟಿನಿಂದ ಬಿಡುಗಡೆಯಾಗುವ ಹಾದಿಯಲ್ಲಿ ಈ ಕವಿ ದಿಟ್ಟ ಹೆಜ್ಜೆ ಇರಿಸಿದ್ದಾನೆ ಎಂಬುದು ಖುಷಿಯ ಸಂಗತಿ. ಅಲ್ಲಲ್ಲಿ ಹಳಹಳಿಕೆಯ ಧ್ವನಿಯೂ, ತಿರಸ್ಕಾರ ಭಾವವೂ, ಆಕ್ರೋಶವೂ ವ್ಯಕ್ತವಾಗಿದೆಯಾದರೂ ಅವರ ತಾತ್ವಿಕ ಹಾದಿಗೆ ಅವು ತೊಡಕಾಗಿ ಉಳಿದಿಲ್ಲ. ನಿರ್ವಾಣನಾಗುವುದರಲ್ಲಿ ಅದಮ್ಯ ಸುಖವಿದೆ ಎಂದು ಸಾರುವ ಅವರ ಕವಿತೆಗಳು ಈ ಸಂಕಲನಕ್ಕೆ ಇಟ್ಟ ಹೆಸರಿಗೆ ಅನ್ವರ್ಥವಾಗಿವೆ. + +ಒಬ್ಬರಕೈಕುಲುಕುವುದುಆಲಂಗಿಸುವುದುಹಗುರಾಗುವುದುಎಷ್ಟು ಸಲೀಸು!(ಅಪರಿಚಿತರು) + + + +ಇಂತಹ ಸಂಕಲನ ನೀಡಿದ ಜಿ.ಆರ್. ರೇವಣಸಿದ್ದಪ್ಪನವರ ಕಾವ್ಯಯಾನ ಇನ್ನಷ್ಟು ಕಾಣ್ಕೆಗಳನ್ನು ನೀಡಲೆಂದು ಆಶಿಸುತ್ತೇನೆ.ಡಾ.ಲೋಕೇಶ್ ಅಗಸನಕಟ್ಟೆ + +ಜಿ.ಆರ್. ರೇವಣಸಿದ್ದಪ್ಪನವರ ಕೆಲವು ಕವಿತೆಗಳು + +ಇನ್ನಿಲ್ಲವಾದಾಗ + +ಇಂದು,ನಾಳೆ,ಇಲ್ಲಾ ನಾಳಿದ್ದು,ಈ ಕ್ಷಣ,ಮರುಕ್ಷಣ,ಅಥವಾಆ ಒಂದು ಕ್ಷಣನಾನು ಇಲ್ಲವಾದಾಗಎಲ್ಲಾ ಇರುವಂತೆಎಲ್ಲವೂ ಸಾಂಗವಾಗಿಸಾಗುತ್ತವೆ. + +ಲೋಕದ ಮೋಟಾರುಯಾರೊಬ್ಬರ ಉಸಿರುಹೋದಾಗಲೂಪಂಕ್ಚರ್ ಆಗುವುದಿಲ್ಲ;ಯಾರೊಬ್ಬರ ಕಣ್ಣೀರಿಗೂಪ್ರವಾಹವಾಗುವ ಶಕ್ತಿಯಿಲ್ಲ;ಯಾರೊಬ್ಬರ ನಿಟ್ಟುಸಿರುಬಿರುಗಾಳಿ ಎಬ್ಬಿಸುವುದಿಲ್ಲ;ಯಾರೊಬ್ಬರ ಹೃದಯಛಿದ್ರವಾಗಿಭೂಕಂಪನವಾಗುವುದಿಲ್ಲ. + +ಗತಿಸಿದವರಿಗೆಬದುಕಿದವರುಸಾಥ್ ಕೊಡುವಂತಿದ್ದರೆಪಂಚಭೂತಗಳೂಗುದ್ದು ಸೇರುತ್ತಿದ್ದವು.ಎಷ್ಟಂತ ಹನಿಯ ಹನಿಸಿಕಣ್ಣ ಕಡಾಯಿಯಬತ್ತಿಸಿಕೊಳ್ಳುವೆ?ಎದೆ ನಗಾರಿಯಎನಿತು ಬಡಿದುರೋಧಿಸುವೇ?ಎಷ್ಟು ಕಾಲನಿನ್ನೊಳಗಿನನನ್ನ ನೆನಪಿನ ಗಿಡಕ್ಕೆನೀರೆರೆದುಹಸಿರಾಗಿಡುವೆ?ಸತ್ತವರಿಗೆಲ್ಲಾಸ್ಮಾರಕ ಕಟ್ಟಿಸುವಂತಿದ್ದರೆಬದುಕುವವರಿಗೆಜಾಗವೇ ಇರುತ್ತಿರಲಿಲ್ಲ. + +ತನುತೊರೆದವನಆಸೆ ನಿರಾಸೆನೋವು ನಲಿವುದುಗುಡ ದುಮ್ಮಾನಅವನೊಂದಿಗೇಮಸಣ ಸೇರಿಇರುವವರಆಡಿಸುತ್ತವೆಇನ್ನಿಲ್ಲದಂತೆ.ಇದ್ದೂ ಇಲ್ಲದಂತೆಇಲ್ಲದೆಯೂ ಇರುವಂತೆಭಾಸವಾಗುವಮಾಯಕ ಜಗದಿಅಂತೆಯೇಒಪ್ಪಿಕೊಂಡುಅಪ್ಪಿಕೊಂಡುಮುಪ್ಪುರಿಗೊಳ್ಳಬೇಕು. + +ಜ್ಯೋತಿರ್ವರ್ಷಗಳ ದೂರದಲ್ಲಿಇರುವುದಅರುಹುಹರಿಲ್ಲ;ಜ್ಯೋತಿರ್ವರ್ಷಗಳುಉರುಳುರುಳಿ ಪೋಗಲುಏನಿರ್ಪುದೋ ಬಲ್ಲವರಿಲ್ಲ;ಇಂದಿರುವುದೇನೋ ಒಂದುಆ ಒಂದರೊಳಗೊಂದಾಗಿಬಾಳಬೇಕು ಎಂದೂ. + +*** + +ಇವಳು ಸುಳಿದಾಗ + +ಇವಳು ಸುಳಿದಾಗಕಾಮ ಕೆರಳುವುದಿಲ್ಲ;ಮೋಹ ಸೆಳೆಯುವುದಿಲ್ಲ;ಕೈಮುಗಿಯಬೇಕೆಂಬ ಭಾವ. + +ಇವಳು ಮುಖಾಮುಖಿಯಾದಾಗಮಾತು ಹೊರಡುವುದಿಲ್ಲ;ಮನವು ಕಲಕುವುದಿಲ್ಲ;ಮೌನದಾನಂದದನುಭವ. + +ಇವಳು ಹಾಜರಾದಾಗಕತ್ತಲು ಕವಿಯುವುದಿಲ್ಲ;ಬೆಳಕು ಸರಿಯುವುದಿಲ್ಲ;ಪರಂಜ್ಯೋತಿಯ ಭವ್ಯ ಪ್ರಸರಣ. + +ಇವಳು ಪ್ರತ್ಯಕ್ಷವಾದಾಗದೇಹ ಬಾಧಿಸುವುದಿಲ್ಲ;ಪ್ರಪಂಚ ಕಾಡಿಸುವುದಿಲ್ಲ;ಇದುವೆ ದಿವ್ಯ ಶಕ್ತಿಯ ಭವ್ಯ ಸನ್ನಿಧಾನ. + +*** + +ಅಪರಿಚಿತರು + +ಇವ ಬಾರಿನಲ್ಲಿ ಕುಳಿತುಬೀರು ಹೀರುತ್ತಿದ್ದ.ಎದುರು ಕುಳಿತಿದ್ದಅಪರಿಚಿತ ಕುಡುಕನೊಬ್ಬಪರಿಚಿತ ನಗೆ ನಕ್ಕುಒಂದು ಸಿಗರೇಟಿಗೆಬೇಡಿಕೆ ಇಟ್ಟ.ಬೇಡಿದವನುಭಿಕಾರಿಯಾಗಿರಲಿಲ್ಲ.ಬಾಲ್ಯದ ಸ್ನೇಹಿತನಿಗೆಕೊಡುವಂತೆಇವ ಅವಗೆಸಿಗರೇಟೊಂದ ಕೊಟ್ಟುಪುಳಕಿತನಾದ. + +ಸುರುಳಿಯಾಗಿ ತೇಲುತ್ತಿದ್ದಹೊಗೆಯಂತೆ ಹರಿಯತೊಡಗಿತ್ತುಮಾತಿನ ಲಹರಿ ಈರ್ವರ ಮಧ್ಯೆ.ಅವರ ಮಾತಿನಲ್ಲಿಬಂದು ಹೋದರುಅವರವರಹೆಂಡತಿ ಮಕ್ಕಳುಬಂಧು ಬಳಗ;ಬಂದು ಹೋದವುವೃತ್ತಿ ಪ್ರವೃತ್ತಿ ಎಲ್ಲಾ. + +ಕೊನೆಯ ಗುಟುಕುಕುಡಿದು ಇವನು ಮೇಲೆದ್ದಾಗಅವನು ಮರೆಯಲಿಲ್ಲಹುಷಾರಾಗಿ ಹೋಗಿರೆಂದುಹೇಳಲುಮತ್ತೆ ಸಿಗೋಣವೆಂದುಕೈಕುಲುಕಲು.ಮಂದ ಬೆಳಕಿನಲ್ಲಿಮನುಷ್ಯತ್ವಹೇಗೆ ತೆರೆದುಕೊಳ್ಳುತ್ತದೆ ನೋಡಿ! + +ಒಬ್ಬರಕೈಕುಲುಕುವುದುಆಲಂಗಿಸುವುದುಹಗುರಾಗುವುದುಎಷ್ಟು ಸಲೀಸು! + +ಒಮ್ಮೊಮ್ಮೆಅಂದುಕೊಳ್ಳುತ್ತೇನೆರಣರಂಗದಲ್ಲಿಎದುರಾಗುವ ಅಪರಿಚಿತರುತಮ್ಮತಮ್ಮಬಂದೂಕು ಬದಿಗಿಟ್ಟುಪರಸ್ಪರಸುಖದುಃಖವಿಚಾರಿಸುವಂತಾದರೆಪಾಪಾಸ್ ಕಳ್ಳಿಯ ಜಾಗದಲ್ಲಿಗುಲಾಬಿ ನಳನಳಿಸುತ್ತದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_188.txt b/Kenda Sampige/article_188.txt new file mode 100644 index 0000000000000000000000000000000000000000..a72201ff74ef6763fe927931a2d003b901365765 --- /dev/null +++ b/Kenda Sampige/article_188.txt @@ -0,0 +1,35 @@ +ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಚಂಪೂ ಕಾವ್ಯ, ಷಟ್ಪದಿ, ಹರಿಹರನ ರಗಳೆ.. ಇವುಗಳಿಂದ ಬರೆದ ಕಾವ್ಯಗಳೇ ಎದುರಾಗುತ್ತವೆ. ‘ವಡ್ಡಾರಾಧನೆ’ಯಂತಹ ಕಥೆ ಹೇಳುವ ಗದ್ಯ ಕೃತಿಗಳ ಸಂಖ್ಯೆ ಕಡಿಮೆ. ಈ ಮಹಾಕಾವ್ಯಗಳು ಕಥೆಯನ್ನೇ ಹೇಳುತ್ತವಾದರೂ ಅವು ಕಾವ್ಯ ಪ್ರಕಾರದ ಕೃತಿಗಳು. ಸಾಹಿತ್ಯದಲ್ಲಿ ಬರೀ ಕಾವ್ಯವೇ ತುಂಬಿದ್ದನ್ನು ಕಂಡು ಮುದ್ದಣ ‘ಪದ್ಯಂ ವಧ್ಯಂ, ಗದ್ಯಂ ಹೃದ್ಯಂ’ ಎಂದು ಹೇಳಿದ್ದಾನೆ. + +ಗದ್ಯದಲ್ಲಿ ಕಥೆ ಹೇಳಿದವರು ‘ವಡ್ಡಾರಾಧನೆ’ ಶಿವಕೋಟ್ಯಾಚಾರ್ಯ ,’ಚಾವುಂಡರಾಯಪುರಾಣ’ದ ಚಾವುಂಡರಾಯ, ‘ಜೀವಸಂಬೋಧನಂ’ ಬರೆದ ಬಂಧುವರ್ಮ, ‘ಧರ್ಮಾಮೃತ’ ದ ನಯಸೇನ, ‘ಸಮಯ ಪರೀಕ್ಷೆ’ಯ ಬ್ರಹ್ಮಶಿವ.. ಹೀಗೆ ಕೆಲವು ಜನ ಮಾತ್ರ. + +(ವಸಂತಕುಮಾರ್ ಕಲ್ಯಾಣಿ) + +ಕಥೆಗಳಿಗೆ ತಮ್ಮದೇ ಆದ ವೈಶಿಷ್ಟ್ಯ, ಮೆಚ್ಚುವ ಓದುಗರು ಇದ್ದೇ ಇದ್ದಾರೆ. ‘ಜಾನಪದ ಕಥೆಗಳು’, ರಾಜಕುಮಾರರಿಗೆ ಶಿಕ್ಷಣ ನೀಡಿದ ‘ಪಂಚತಂತ್ರ’ ಕಥೆಗಳು, ತೆನಾಲಿ ರಾಮನ ಕತೆಗಳು, ಶಿವಶರಣರ ಕಥೆಗಳು.. ಇವೆಲ್ಲ ಕಥಾ ಸಾಹಿತ್ಯಕ್ಕೆ ಮೆರಗುಕೊಟ್ಟಿವೆ. ಆಧುನಿಕ ಕನ್ನಡ ಕಥಾ ಸಾಹಿತ್ಯ ಇಪ್ಪತ್ತನೆಯ ಶತಮಾನದಲ್ಲಿ ಒಂದು ನಿರ್ದಿಷ್ಟ ರೂಪವನ್ನು ತಾಳಿತು ಎನ್ನಬಹುದು. 1920ರಲ್ಲಿ ಪ್ರಕಟವಾದ ಮಾಸ್ತಿಯವರ ಸಣ್ಣ ಕತೆಗಳಿಂದ ಆಧುನಿಕ ಕಥಾ ಸಾಹಿತ್ಯದ ಬಾಗಿಲು ತೆರೆಯಿತು. + +ಸಣ್ಣಕತೆಗಳನ್ನು ಅಪಾರ ಆಸಕ್ತಿಯಿಂದ ಓದುತ್ತಲೇ ಬೆಳೆದು, ಸಣ್ಣ ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯಿಟ್ಟವರು- ವಸಂತಕುಮಾರ ಕಲ್ಯಾಣಿ. ಇವರು ಮೂಲತಃ ಕರಾವಳಿಯ ಕಾರ್ಕಳದವರಾದರೂ, ಬೆಳೆಸಿ, ಬದುಕನ್ನು ಕಟ್ಟಿ ಕೊಟ್ಟ ಬೆಂಗಳೂರು ನಗರ, ಇವರ ಕಾರ್ಯಕ್ಷೇತ್ರ. ಜಯಂತ ಕಾಯ್ಕಿಣಿಯವರು, ಮುಂಬಯಿಯ ಮಧ್ಯಮ ವರ್ಗದ ಕಾರ್ಮಿಕರ ಬದುಕನ್ನು, ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟಂತೆ, ‘ವಸಂತಕುಮಾರ್ ಕಲ್ಯಾಣಿ’ ಯವರು ಬೆಂಗಳೂರು ನಗರದ, ಕಾರ್ಮಿಕ, ಮಧ್ಯಮ, ಕೆಳಮಧ್ಯಮ ಜನರ ಬದುಕನ್ನು ತಮ್ಮ ಕಥೆಗಳ ವಸ್ತುವಾಗಿಸಿಕೊಂಡಿದ್ದಾರೆ. + +“ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗಿ…” ಎಂಬಂತೆ ಇವರು ಕಂಡ ಬದುಕೆಲ್ಲ ಚೆಂದದ ಕಥೆಗಳಾಗಿ ಅರಳಿವೆ. 2012ರಲ್ಲಿ’ ಕಾಂಚನ ಮಿಣಮಿಣ’ ಕಥಾ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಅವರು, ಇದೀಗ ಎರಡನೆಯ ಕಥಾಸಂಕಲನ ‘ಪರ್ಯಾಪ್ತ ಮತ್ತು ಇತರ ಕಥೆಗಳು…” ಕೃತಿಯನ್ನು ಹೊರತರುತ್ತಿದ್ದಾರೆ. ಇಪ್ಪತ್ತೊಂದು ಕಥೆಗಳು ಈ ಕಥಾಸಂಕಲನದಲ್ಲಿವೆ. ಬೆಂಗಳೂರು ನಗರದ ಕಾರ್ಮಿಕ ವರ್ಗ ಮಧ್ಯಮ ವರ್ಗ ಕೆಳ ಮಧ್ಯಮವರ್ಗ ಮತ್ತು ಕೊಳಗೇರಿಯ ಜನರ ಬದುಕನ್ನು ಅವರು ಅತ್ಯಂತ ಸಹಜವಾಗಿ ನಿರೂಪಿಸುತ್ತಾರೆ. ಅವರು ನಿರೂಪಕರಾಗಿ ಅವರ ಕಥೆಗಳ ಪಾತ್ರಗಳು ತಮ್ಮ ಬದುಕು, ಬವಣೆ, ಶೋಷಣೆ, ಹೋರಾಟ.. ಎಲ್ಲವನ್ನೂ ಸಹಜವಾಗಿ ತಾವಾಗಿ ಬಂದು ಹೇಳುತ್ತವೆ. + +ಇಲ್ಲಿನ ಕತೆಗಳು, ಅತ್ಯಂತ ಆಳಕ್ಕಿಳಿದು ಮಾನಸಿಕ ಹೋರಾಟ, ತುಮುಲಗಳನ್ನು ಹೇಳಿಕೊಳ್ಳುವುದಿಲ್ಲ. ಹೊಸಬಗೆಯ ಕಥಾತಂತ್ರ, ಧ್ವನಿ, ಇವುಗಳ ತಂಟೆಗೆ ಹೋಗದೆ, ಸಹಜವಾಗಿ ಮತ್ತು ನೇರವಾಗಿ, ತಮ್ಮ ಸುತ್ತಮುತ್ತಲಿನ, ಅಕ್ಕಪಕ್ಕದ ಮನೆಗಳ ಜನರ, ಬದುಕು, ಹೋರಾಟ, ಶೋಷಣೆ, ಬವಣೆಗಳನ್ನು ಚಿತ್ರಿಸುತ್ತಾ.. ಆಧುನಿಕ ಕಾಲದ, ಬೆಂಗಳೂರು ನಗರದ, ಇತ್ತೀಚಿನ ದಶಕಗಳ ಜನಸಾಮಾನ್ಯರ, ತವಕ-ತಲ್ಲಣಗಳನ್ನು, ಹೋರಾಟಗಳನ್ನು ಬಿಂಬಿಸಿವೆ. ಇದು ಅವರ ಕಥೆಗಳ ಮಹತ್ತ್ವವನ್ನು ಹೆಚ್ಚಿಸಿದೆ. ಕಥೆಗಳ ವಸ್ತು ಪ್ರಬುದ್ಧವಾಗಿದ್ದರೂ, ಕಥೆಗಾರರು ತಾವು ಪಾತ್ರವಾಗದೆ, ಹೊರಗೆ ನಿಂತು ಕತೆಗಳನ್ನು ಹೇಳುವ ಕ್ರಮ ಮೆಚ್ಚುಗೆಗೆ ಪಾತ್ರವಾದರೂ, ಇದರಿಂದ ‘ಆಳಕ್ಕಿಳಿಯದೆ ಶ್ರೇಷ್ಠ ಕಥೆಯಾಗುವ ಅವಕಾಶ ತಪ್ಪಿದೆ’ ಎನಿಸುತ್ತದೆ. ಆದರೂ ಈ ಕತೆಗಳು ಕಾರ್ಮಿಕ ಜನರ ಬದುಕನ್ನು, ಅವರ ಆಸೆ, ಬದುಕು, ಶೋಷಣೆ, ಸ್ವಾರ್ಥ, ಹೋರಾಟ.. ಎಲ್ಲವನ್ನೂ ಕಟ್ಟಿಕೊಡುವಲ್ಲಿ ಸಫಲವಾಗಿರುವುದು ಸತ್ಯ. + +‘ಪರ್ಯಾಪ್ತ’ ಕಥೆ ಈ ಸಂಕಲನದ ಉತ್ತಮ ಕಥೆಗಳಲ್ಲೊಂದು. ಆಧ್ಯಾತ್ಮದ ಪುಸ್ತಕಗಳು, ರಾಮಕೃಷ್ಣಾಶ್ರಮದ ಪ್ರಭಾವಕ್ಕೊಳಗಾದ ವಿವೇಕಾನಂದ, ಹೆತ್ತವರಿಗಾಗಿ, ತಮ್ಮನಿಗಾಗಿ ದುಡಿಯುತ್ತಾ, ಬ್ರಹ್ಮಚಾರಿಯಾಗಿರಲು ನಿರ್ಧರಿಸಿದ್ದರೂ.. ಉನ್ನತಿಯ ಪರಿಚಯವಾದಾಗ ಅವಳನ್ನು ಲಗ್ನವಾಗಿ ಬಾಳು ಕೊಡಲು ಅಪೇಕ್ಷಿಸುತ್ತಾನೆ. ಇಬ್ಬರ ಹೆತ್ತವರು ಅವರ ಅನುಕೂಲಕ್ಕಾಗಿ ಸ್ವಾರ್ಥಿಗಳಾದಾಗ ಇವರಿಬ್ಬರೂ ತೆಗೆದುಕೊಂಡ ನಿರ್ಧಾರ ಮನಸೆಳೆಯುತ್ತದೆ. + +‘ತಾಯತ’ ಕಥೆ, ಅಪರೂಪದ ಕಥಾವಸ್ತು. ನಿವೃತ್ತರಾದ ಶ್ರೀನಿವಾಸಮೂರ್ತಿಗಳಿಗೆ ಪಾರ್ಕನಲ್ಲಿ ಗೆಳೆಯರು ಜೊತೆಯಾದರು. ಪರಸ್ಪರ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಶ್ರೀನಿವಾಸಮೂರ್ತಿಗಳು ಸ್ಥಿತಪ್ರಜ್ಞರು. ಗೆಳೆಯರಿಗೆ ತಾಯಿತಗಳನ್ನು ಕೊಟ್ಟು, ಹೇಳುವ ಪರಿಹಾರವು, ಕೊನೆಯಲ್ಲಿ ಕಥೆಗೊಂದು ತಿರುವು ನೀಡಿ ಕಥೆ ಮನಮುಟ್ಟುತ್ತದೆ. + +‘ಕಾಲಿಂಗ್ ಬೆಲ್’ ಕಥೆಯಲ್ಲಿ, ಮಧ್ಯಮವರ್ಗದ ‘ಚಲಪತಿ’ ಕಾಲಿಂಗ್ ಬೆಲ್ ನ ‘ಡಿಂಗ್- ಡಾಂಗ್’ ಶಬ್ದಕ್ಕೆ ಆಸೆಪಟ್ಟರೂ, ಎಲ್ಲಿಯೂ ಆಶಿಸಿದ ಧ್ವನಿಯ ‘ಕಾಲಿಂಗ್ ಬೆಲ್’ ಸಿಗದೆ, ನಿರಾಶನಾಗುತ್ತಾನೆ. ಕೊನೆಗೆ ಅವನು ಕೆಲಸಕ್ಕೆ ಹೋದಾಗ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಕಾಲಿಂಗ್ ಬೆಲ್ ಅಳವಡಿಸಿ ಹೋಗುತ್ತಾರೆ. ನಂತರ ಚಲಪತಿಯ ಚಿಕ್ಕ ಆಸೆಗೂ ವಿಷಾದದ ಅಂತ್ಯ ಎದುರಾಗುವುದು ಅನಿರೀಕ್ಷಿತ. + +“ಸ್ವಾಮಿಯೇ ಶರಣಂ..” ಕಥೆಯಲ್ಲಿ, ನಿಖಿಲ್ ಗೆಳೆಯ ಜಗ್ಗಿ, ಕುಡಿತದ ಮತ್ತಿನಲ್ಲಿ ರಾಜಕೀಯ, ಸಿನಿಮಾ.. ಮಾತಾಡುತ್ತಾ ಆಡಿದ ಅಶ್ಲೀಲವಾದ ಮಾತಿಗೆ ಕೆರಳಿದ ಜಗ್ಗಿ, ನಿಖಿಲ್ ನ ಕೊಲೆಗೆ ರೆಡಿಯಾಗಿ ಮಾರೇನಹಳ್ಳಿಯ ಕೆರೆಯ ದಂಡೆಯ ಬಳಿ ಕಾದು ಕೂರುತ್ತಾನೆ. ಆದರೂ, ಗೆಳೆಯರ ನಡುವೆ ಉಂಟಾಗುವ ಒಡಕುಗಳಿಗೆ ಸಿಗುವ, ಆಕಸ್ಮಿಕ ತಿರುವು ಮುದ ನೀಡುತ್ತದೆ. ಹೀಗೆ ವಸಂತಕುಮಾರ್ ಕತೆ ನಿರೂಪಿಸುವಲ್ಲಿ ಗೆಲ್ಲುತ್ತಾ ಹೋಗುತ್ತಾರೆ. + +‘ಝಂಡಾ ಊಂಚಾ..’ ಕತೆಯಲ್ಲಿ, ರಾಜಧಾನಿಯ ಕೊಳಗೇರಿಯಲ್ಲಿ ಗೆಳೆಯ ಫಣಿರಾಜನ ಆಹ್ವಾನಕ್ಕೆ ಒಪ್ಪಿ, ‘ಸ್ವಾತಂತ್ರ್ಯ ದಿನಾಚರಣೆ’ಗೆ ಅತಿಥಿಯಾಗಿ ಹೋದ ಸದಾಶಿವನಿಗೆ, ಕೊಳಗೇರಿಯಲ್ಲಿನ ರಾಜಕೀಯ ಡ್ರಾಮಾದ ಪರಿಚಯವಾಗುತ್ತದೆ. ‘ಮಾಯೆ ನಿನ್ನೊಳಗೋ..’ ಕಥೆಯಲ್ಲಿ ಮೆತ್ತನೆಯ ಮನಸ್ಸಿನ, ದೈವಭೀರು ನಾಯಕ, ಹೆಣ್ಣುಮಗಳೊಬ್ಬಳಿಗೆ ಅನಿವಾರ್ಯವಾಗಿ ಡ್ರಾಪ್ ಕೊಡಬೇಕಾಗಿ ಬಂತು. ಅದು ನಿತ್ಯವೂ ಮುಂದುವರೆದು, ಅಭ್ಯಾಸವಾಗಿ, ಅವನಲ್ಲಿ ತಾಕಲಾಟ, ತಳಮಳ.. ಕೊನೆಗೆ ಸಮಸ್ಯೆಗೆ ಹೇಗೋ ಸಿಗುವ ಪರಿಹಾರ, ಕಥೆಗೆ ಸೂಕ್ತ ಅಂತ್ಯ ಒದಗಿಸುತ್ತದೆ. + +(ಜಿಎಸ್ ಸುಶೀಲಾದೇವಿ ಆರ್ ರಾವ್) + +ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ. ಕಥೆ ನಿರೂಪಣೆಯಲ್ಲಿ ಆಕರ್ಷಣೀಯವಾಗಿದ್ದು ಮಧ್ಯಮ ವರ್ಗದ ಕಾರ್ಮಿಕರ ಕೊಳಗೇರಿಯ ಜನರ ಬದುಕನ್ನು ವಸಂತಕುಮಾರ್ ಕಲ್ಯಾಣಿ ಅವರು ಸಮರ್ಥವಾಗಿ ಬರೆಯುತ್ತಾರೆ. ಆದರೆ ಅವರು ವರದಿಯಂತೆ ನಿರೂಪಿಸುತ್ತಾ ಹೋಗುತ್ತಾರೆ. ಓದುಗರ ಗಮನ ಸೆಳೆದು ಮೆಚ್ಚುಗೆ ಪಡೆದರೂ ಇನ್ನಷ್ಟು ಪರಿಣಾಮಕಾರಿಯಾಗಿ ಚಿತ್ರಿಸಬಹುದಾದ ಅವಕಾಶದಿಂದ ಕಥೆಗಳು ವಂಚಿತವಾಗುತ್ತವೆ. ದಟ್ಟವಾದ ಜೀವನಾನುಭವ ಇದ್ದರೂ, ಸರಳವಾದ ನಿರೂಪಣೆಯಿಂದ ‘ಇದೇ ಕಥಾವಸ್ತು ಇನ್ನಷ್ಟು ಪರಿಣಾಮಕಾರಿಯಾಗಿ ಬರಬಹುದಿತ್ತು’ ಎನಿಸುತ್ತದೆ. + +‘ಮಳೆರಾಯನ ಸ್ವಗತ’ ಅಪರೂಪದ ಥೀಮ್. ಕಥೆ ಕಾಳಿದಾಸನ ‘ಮೇಘಸಂದೇಶ’ವನ್ನು ನೆನಪಿಸುತ್ತದೆ. ಮಳೆರಾಯ ಬೆಂಗಳೂರಿನ ಬೀದಿಗಳಲ್ಲಿ ವಾಕಿಂಗ್ ಹೊರಟಿದ್ದಾನೆ. ಹಲವರಿಗೆ ಮಳೆಬೇಕು, ಹಲವರಿಗೆ ಮಳೆ ಬೇಡ, ಕೊನೆಗೆ ಮಳೆರಾಯ ತಬ್ಬಿಬ್ಬಾಗಿ ಹೈಕಮಾಂಡ್ ಆದೇಶದಂತೆ ನಡೆಯಲು ನಿರ್ಧರಿಸುತ್ತಾನೆ. ಇದೊಂದು ಸಫಲವಾದಕಥೆ. ‘ಕಳ್ಳರ ಸಂತೆ’ ಕಥೆಯಲ್ಲಿ, ಪ್ರಾಮಾಣಿಕ ಆಟೊ ಡ್ರೈವರ್, ಪ್ರಯಾಣಿಕರು ಬಿಟ್ಟುಹೋದ ಕಿಟ್ ಬ್ಯಾಗ್ ಹಿಂದಿರುಗಿಸಲು ಹೋದಾಗ, ನಡೆದ ಘಟನೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತಿದೆ. + + + +ಈ ಕಥಾಸಂಕಲನದ ಇಪ್ಪತ್ತೊಂದು ಕಥೆಗಳು ವಸ್ತು ವೈವಿಧ್ಯತೆಯಿಂದ ಓದುಗರ ಮನ ಗೆಲ್ಲುವತ್ತ ಸಾಗಿವೆ. ‘ವಸಂತಕುಮಾರ್ ಕಲ್ಯಾಣಿ’ ಯವರ ಕಥಾಶೈಲಿ ಸರಳವಾದುದು. ‘ನೇರವಾಗಿ ಕಥೆ ಹೇಳಬೇಕು’ ಎಂಬುದು ಅವರ ಆಶಯ. ಹಾಗಾಗಿ ಅವರ ಕಥೆಗಳು ಸರಳವಾಗಿ ಓದುಗರ ಮನಸ್ಸನ್ನು ತಟ್ಟುತ್ತವೆ, ರಂಜಿಸುತ್ತವೆ, ಆದರೆ ಆಳಕ್ಕೆ ಇಳಿಯುವುದಿಲ್ಲ. ಇದು ಅವರ ಕತೆಗಳ ಮಿತಿಯೂ ಹೌದು. ಅವರ ಅನುಭವ, ಕಂಡ ಜಗತ್ತು, ಜನರ ತವಕ- ತಲ್ಲಣಗಳು ಇಲ್ಲಿಯ ಕಥೆಗಳ ಎಲ್ಲ ಪಾತ್ರೆಗಳಲ್ಲಿ ತುಂಬಿ ಕೊಂಡಿವೆ. ಅಲ್ಲದೆ ಸಮರ್ಥವಾಗಿ ನಿರೂಪಿಸಲ್ಪಟ್ಟಿವೆ. ಮುಂದಿನ ಅವರ ಹೆಜ್ಜೆಗಳಲ್ಲಿ, ಇನ್ನಷ್ಟು ಉತ್ತಮ ಕಥೆಗಳನ್ನು ಬರೆದು, ಮಹತ್ವದ ಕಥೆಗಾರರಾಗಿ ಹೆಸರು ಪಡೆಯಲಿ, ಎಂದು ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_189.txt b/Kenda Sampige/article_189.txt new file mode 100644 index 0000000000000000000000000000000000000000..cb53a9ce669d4162ca27c2220bc84fb1d526565a --- /dev/null +++ b/Kenda Sampige/article_189.txt @@ -0,0 +1,23 @@ +ಇವತ್ತು ಪ್ರವಾಸ ಕೈಗೊಳ್ಳುವುದು ಜನರ ಜೀವನ ಶೈಲಿಯ ಒಂದು ಭಾಗವೇ ಆಗಿದೆ. ಕುಟುಂಬದೊಂದಿಗೆ, ಗೆಳೆಯರೊಂದಿಗೆ, ಪ್ರವಾಸಿ ಸಂಸ್ಥೆಗಳು ಏರ್ಪಡಿಸುವ ಪ್ರವಾಸ, ಕೊನೆಗೆ ಒಬ್ಬರೇ ಪ್ರವಾಸ ಹೋಗುವುದು, ಚಾರಣ ಎಂದು ಪ್ರವಾಸ ಹೋಗಲು ತುಡಿಯುವ ಮನೋಭಾವ ಜನರದು. “ಜಗವ ಸುತ್ತುವ ಮಾಯೆ” ಪ್ರವಾಸ ಕಥನದ ಲೇಖಕಿ ಸುಚಿತ್ರಾ ಹೆಗಡೆಯವರಿಗಂತೂ ಪ್ರವಾಸ ಅವರ ಜೀವಕಣಗಳಲ್ಲೇ ಬೆರೆತು ಹೋಗಿದೆ. ಅದರೊಂದಿಗೆ ಅವರದು ಅವಿನಾಭಾವ ಸಂಬಂಧ. ಅದರಲ್ಲೂ ಅವರು ಪ್ರವಾಸಿ ಸಂಸ್ಥೆಗಳು ಏರ್ಪಡಿಸುವ ನಿಗದಿತ ಅವಧಿಯಲ್ಲಿ ಹತ್ತು ಹಲವಾರು ಸ್ಥಳಗಳಿಗೆ ‘ನಾ ಹೋದೆ ನೋಡಿದೆ ಬಂದೆ’ ಎಂಬಂತೆ ನೋಡುವವರಲ್ಲ. ಸ್ವತಃ ತಾವೇ ಪ್ರವಾಸ ಕೈಗೊಂಡು, ಹೋದ ಸ್ಥಳದಲ್ಲಿ ಸಾಕಷ್ಟು ಸುದೀರ್ಘ ಸಮಯವೇ ತಂಗಿದ್ದು, ಅಲ್ಲಿನ ವೈಶಿಷ್ಟ್ಯತೆಗಳು, ಇತಿಹಾಸ, ಸಾಹಿತ್ಯ, ಪ್ರಕೃತಿ ಸೌಂದರ್ಯ, ಜನರು, ಅವರ ಜೀವನ ಶೈಲಿ, ಭಾಷೆ ಕೊನೆಗೆ ಅವರ ಆಹಾರ ಪದ್ಧತಿ ಎಲ್ಲವನ್ನೂ ಬೆರಗುಗಣ್ಣಿನಿಂದ ವೀಕ್ಷಿಸುವವರು. ಹಾಗೆ ವೀಕ್ಷಿಸಿದ್ದನ್ನು ಬರಹದ ಮೂಲಕ ಅಭಿವ್ಯಕ್ತಿಸಲು ಅವರು ಕಂಡುಕೊಂಡಿರುವುದು ಕೂಡ ಸ್ವಲ್ಪ ಮಟ್ಟಿಗೆ ವಿಭಿನ್ನವಾದ ರೀತಿ. + +(ಸುಚಿತ್ರಾ ಹೆಗಡೆ) + +ಎಲ್ಲರಂತೆ ಆಯಾ ಸ್ಥಳದ ವಿವರ ಕೊಡುವುದಕ್ಕಿಂತ ಆ ಸ್ಥಳ ತಮ್ಮ ಭಾವಕೋಶ ಮನೋಕೋಶ ತುಂಬಿದ ಬಗೆಯನ್ನು ಲಲಿತಪ್ರಬಂಧವೊಂದರ ರೀತಿಯಲ್ಲಿ ಅನಾವರಣಗೊಳಿಸುತ್ತಾರೆ, ಸುಚಿತ್ರಾ. ಹಾಗೆಂದು ಅವು ಬರಿಯ ಭಾವಪೂರ್ಣ ಲಹರಿಗಳಾಗಿ ಮಾತ್ರ ಉಳಿಯದೆ, ವಸ್ತುನಿಷ್ಠತೆಗೂ ಒತ್ತು ನೀಡಲು ಮರೆಯುವುದಿಲ್ಲ. ಹೀಗಾಗಿ ಇವರ ಪ್ರವಾಸ ಕಥನದ ಶೈಲಿ ಕೂಡ ಎಲ್ಲರೂ ತುಳಿದ ಹಾದಿಯಾಗಿರದೇ, ಯಾರೂ ತುಳಿಯದ ಹೊಸ ಹಾದಿಯಲ್ಲಿ ಇಷ್ಟಪಟ್ಟು ಹೆಜ್ಜೆಯಿಟ್ಟಿದ್ದಾರೆ ಎನ್ನಬಹುದು. + +“ಎಲ್ಲೆಗಳ ಮೀರಿದ ಎಲ್ಲೋರಾ” ಎಂಬ ಅಧ್ಯಾಯದಲ್ಲಿ ಎಲ್ಲೋರಾದ ಗುಹಾಂತರ್ದೇವಾಲಯಗಳ ಶಿಲ್ಪಕಲಾ ವೈಶಿಷ್ಟ್ಯತೆ ಲೇಖಕಿಯಲ್ಲಿ ಮೂಡಿಸಿರುವ ಬೆರಗು ಓದುಗರನ್ನೂ ಆವಾಹಿಸುತ್ತದೆ. ಕನ್ನಡನಾಡಿನ ರಾಷ್ಟ್ರಕೂಟರ ಈ ಸಾಂಸ್ಕೃತಿಕ ಲೋಕದ ಅಚ್ಚಳಿಯದ ಕೊಡುಗೆಯ ಕುರಿತು, ಅದರಲ್ಲೂ ಸುಪ್ರಸಿದ್ಧ ಕಲಾನಿರ್ಮಿತಿ ಕೈಲಾಸನಾಥ ದೇವಾಲಯದ ಕುರಿತು ಲೇಖಕಿ ತನ್ಮಯರಾಗಿ ನೀಡಿರುವ ವಿವರಣೆಗಳು ಓದುಗರನ್ನು ಅಲ್ಲೆಲ್ಲಾ ಓಡಿಯಾಡಿಸಿಬಿಡುವಷ್ಟು ಜೀವಂತಿಕೆಯಿಂದ ತುಂಬಿವೆ. ಹಾಗೆಯೇ ಕಾಶಿಯಲ್ಲಿ ಕೂಡ ಲೇಖಕಿ ಬಹುಶಃ ಅದುವರೆಗೆ ಯಾರೂ ಕಾಣದ ಲೋಕಕ್ಕೆ ಓದುಗರನ್ನು ಕರೆದೊಯ್ಯುತ್ತಾರೆ. ಅದೇ ಕಾಶಿಯ ಅತಿ ರುಚಿಕರ ಹಾಗೂ ವಿಶಿಷ್ಟವಾದ ಬೇರಿನ್ನೆಲ್ಲೂ ಸಿಗದ ಖಾದ್ಯ ಪ್ರಪಂಚ. ಬಂಗಾಳದ ಜಾನಪದ ಜಗತ್ತಿನ ಕುರಿತು, ಜೊರಾಸಂಕೋದ ಟಾಗೋರರ ಮನೆ ಬಿಂಬಿಸುವ ಬಂಗಾಲಿ ಸಂಸ್ಕೃತಿಯ ಕುರಿತ ಅಧ್ಯಾಯವಿದೆ. + +“ನದಿ ಹೇಳುವ ಕಥೆ” ಅಧ್ಯಾಯದಲ್ಲಿ ನಮ್ಮ ದೇಶ, ಯೂರೋಪ್, ಆಫ್ರಿಕಾಗಳ ನದಿಗಳು, ಅವುಗಳ ದಡದಲ್ಲಿ ಕುಳಿತು ಲೇಖಕಿ ಆಸ್ವಾದಿಸಿದ ಸೂರ್ಯೋದಯ ಸೂರ್ಯಾಸ್ತಗಳು, ನದಿಗಳ ಹರಿವು ಮನದ ಹಳಹಳಿಕೆಯನ್ನು ಕೊಚ್ಚಿಕೊಂಡು ಹೋಗುವ ಪರಿ, ನದಿಗಳು ಮೂಡಿಸುವ ಅನುಭಾವದ ಭಾವ, ಕವಿಗಳ ಕಣ್ಣಲ್ಲಿ ಕಂಡ ನದಿಗಳನ್ನು ಮುಂದಿಡುತ್ತಲೇ ನದಿಗಳು ಮಾಲಿನ್ಯಭರಿತವಾಗುತ್ತಿರುವುದರ ಕುರಿತು ಸಂಕಟವನ್ನನುಭವಿಸುತ್ತಾರೆ. + + + +ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು. “ಫ್ರೆಂಚ್ ಮಹಾಕ್ರಾಂತಿಯ ಅಂಗಳದಲ್ಲಿ” ಅಧ್ಯಾಯದಲ್ಲಿ ಜಾಗತಿಕವಾಗಿ ರಾಜಕೀಯ ಚಟುವಟಿಕೆಗಳಿಗೆ ಪರಿವರ್ತನೆಗಳಿಗೆ ಪ್ರೇರಕವಾಗಿದ್ದ ಫ್ರೆಂಚ್ ಮಹಾಕ್ರಾಂತಿಯ ಕುರಿತು ಹೇಳುತ್ತಲೇ ಲೇಖಕಿ ಅಲ್ಲಿನ ವಸ್ಸಾಯ್ ಅರಮನೆಯನ್ನು ಪರಿಚಯಿಸುತ್ತಾರೆ. + +ಅರಮನೆಯ ಹಾಲ್ ಆಫ್ ಮಿರರ್ಸ್ ನೋಡುತ್ತಲೇ ಜೈಪುರದ ಶೀಷ್ ಮಹಲನ್ನು ನೆನೆಯುತ್ತಾರೆ. ಜಗದ್ವಂದ್ಯವಾದ ಐಫೆಲ್ ಟವರ್ ಕುರಿತು ಲೇಖಕಿಯದು ಮತ್ತೆ ವಿಭಿನ್ನವಾದ ವಾರೆ ನೋಟ. ಜೀವಂತಿಕೆ ಐತಿಹಾಸಿಕತೆ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ನಳನಳಿಸುವ ಪ್ಯಾರಿಸಿಗೆ ಈ ಕಬ್ಬಿಣದ ಕಟಕಟೆಯ ಗೋಪುರ ಹೊಂದುವುದಿಲ್ಲ ಎನ್ನುತ್ತಾರೆ. ಹಾಗೆಯೇ ಮೊನಾಲಿಸಾ ನೋಡಿಯೂ ಭ್ರಮನಿರಸನ ಹೊಂದಿದ ಲೇಖಕಿ ಆ ಅಧ್ಯಾಯಕ್ಕೆ ಕೊಟ್ಟಿರುವ ಶೀರ್ಷಿಕೆಯೇ “ನಾ ನೋಡಿದ ಮೋ (ನಾಲಿ)ಸಾ!” ಎಂದು! + +ಇಂಗ್ಲಿಷ್ ಸಾಹಿತ್ಯದ ಓದು ಪರಿಚಯಿಸಿದ್ದ ಇಂಗ್ಲೆಂಡ್ ನಿಂದಾಗಿ ಲಂಡನ್ ಲೇಖಕಿಗೆ ನೋಡುವ ಮೊದಲೇ ಚಿರಪರಿಚಿತವೆನಿಸಿತ್ತು. ಪ್ಯಾರಿಸ್ ಮತ್ತು ಲಂಡನ್‌ನ ವೈದೃಶ್ಯತೆಗಳನ್ನು ಹೇಳುತ್ತಾ “ಪ್ರಜಾಸತ್ತೆಯ ತೊಟ್ಟಿಲಲ್ಲಿ ಮಹಾರಾಣಿ ವೈಭವ” ಎಂಬ ಅಧ್ಯಾಯದಲ್ಲಿ ಬಕಿಂಗ್ ಹ್ಯಾಮ್ ಅರಮನೆ, ಇಂಗ್ಲಿಷರ ಪ್ರಭುತ್ವ ಪ್ರೀತಿಯ ಕುರಿತು ಹೇಳುತ್ತಾರೆ. ಇಂಗ್ಲಿಷರ ಚಹಾಪ್ರೀತಿಯ ಪ್ರಸ್ತಾಪವಿದೆ. ಅತಿಮುಖ್ಯ ಸ್ಥಳದಲ್ಲಿ ಪ್ರತಿಷ್ಠಾಪಿಸಿರುವ ಗಾಂಧೀಜಿ ಪ್ರತಿಮೆ ತಮ್ಮಲ್ಲಿ ಮೂಡಿಸಿದ ಭಾವ, ಕ್ರಿಕೆಟ್ ಕಾಶಿ ಲಾರ್ಡ್ ಸ್ಟೇಡಿಯಂ, ಷೇಕ್ಸ್‌ಪಿರಯನ ಹುಟ್ಟೂರು ಇವುಗಳ ಕುರಿತು ಸುಚಿತ್ರಾ ಮನದುಂಬಿ ತಮ್ಮ ಭಾವನಾ ಲಹರಿಯನ್ನು ಹರಿಯಬಿಡುತ್ತಾ ಅದರಲ್ಲಿ ಓದುಗರನ್ನು ಮುಳುಗೇಳಿಸುತ್ತಾರೆ. ಜರ್ಮನಿ, ವಿಯೆಟ್ನಾಂ ಪ್ರವಾಸದ ಕುರಿತೂ ಈ ಪುಸ್ತಕದಲ್ಲಿ ಅಧ್ಯಾಯಗಳಿವೆ. + + + +ಒಂದು ಪ್ರವಾಸ ಮಾಡುವಾಗ ಅಲ್ಲಿನ ಸಾಂಸ್ಕೃತಿಕತೆ ಐತಿಹಾಸಿಕತೆ ಭೌಗೋಳಿಕತೆ ಜನಜೀವನ ಇವೆಲ್ಲದರ ಕುರಿತು ಅರಿಯಬೇಕಾದುದನ್ನು ತಿಳಿಸುತ್ತಲೇ ಪ್ರವಾಸದಿಂದ ನಾವು ಹೇಗೆ ಆನಂದ ಪಡಬಹುದೆಂಬುದನ್ನೂ ಮನಗಾಣಿಸುವ ಈ ಕೃತಿ ಪ್ರವಾಸ ಹೋಗಬಯಸುವವರಿಗಂತೂ ಅತ್ಯಪಯುಕ್ತವಾದುದು. + +ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು. \ No newline at end of file